Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?
ಲೇಖಕರು: ಡಿ. ಎನ್. ಶಂಕರ ಭಟ್ ಪ್ರಕಟಣೆ: ೨೦೦೫ (ಮೊದಲ ಮುದ್ರಣ)
ಮೂಲ ಪುಸ್ತಕದ ಸಂಪೂರ್ಣ ಪಠ್ಯ:
raw.md
ಒಳಪಿಡಿ
- ಪ್ರಕಾಶಕರ ಮಾತು
- ಅಧ್ಯಾಯ ೧ — ಪೀಠಿಕೆ
- ಅಧ್ಯಾಯ ೨ — ಪಾರಿಭಾಷಿಕ ಪದಗಳ ಬಳಕೆ
- ಅಧ್ಯಾಯ ೩ — ವರ್ಣಗಳ ಬಳಕೆ
- ಅಧ್ಯಾಯ ೪ — ಪದವರ್ಗಗಳು
- ಅಧ್ಯಾಯ ೫ — ಪದಗಳ ಒಳರಚನೆ
- ಅಧ್ಯಾಯ ೬ — ನಾಮಪದಗಳ ಸ್ವರೂಪ
- ಅಧ್ಯಾಯ ೭ — ಲಿಂಗ ಮತ್ತು ವಚನಗಳು
- ಅಧ್ಯಾಯ ೮ — ವಿಭಕ್ತಿಗಳು ಮತ್ತು ಕಾರಕಗಳು
- ಅಧ್ಯಾಯ ೯ — ಕ್ರಿಯಾರೂಪಗಳು
- ಅಧ್ಯಾಯ ೧೦ — ವಾಕ್ಯಗಳ ಜೋಡಣೆ
- ಅಧ್ಯಾಯ ೧೧ — ವಿಷಯವಾಕ್ಯಗಳು
- ಅಧ್ಯಾಯ ೧೨ — ಮುಕ್ತಾಯ
- ಆಕರಸೂಚಿ
ಪ್ರಕಾಶಕರ ಮಾತು
೫೦ ವರ್ಷಗಳ ಹಿಂದೆ ಸರಕಾರಿ ನೌಕರಿ ಮಾಡಿಕೊಂಡಿದ್ದ ನಾನು ಅದರ ಜೊತೆಗೆ ಸಾಹಿತ್ಯದ ಗೀಳನ್ನು ಹಚ್ಚಿಸಿಕೊಂಡು ನನ್ನದೇ ಒಂದು ಪ್ರಕಾಶನ ಸಂಸ್ಥೆಯ ಮೂಲಕ ಹಲವಾರು ಮೌಲ್ಯಾಧಾರಿತ ಕೃತಿಗಳನ್ನು ಪ್ರಕಟಿಸಿ ನಾಡಿನ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನಿಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಹೇಳಿಕೊಳ್ಳುವಂತಹ ಯಾವುದೇ ಪ್ರಕಟಣೆಗೆ ನಾನು ಕೈ ಹಾಕಿರಲಿಲ್ಲ. ಕೆಲ ದಿನಗಳ ಹಿಂದೆ ನಾನು ನನ್ನ ಮಗಳ ಮನೆಗೆ ತೀರ್ಥ ಹಳ್ಳಿಗೆ ಹೋಗಿದ್ದಾಗ ಪುಟ್ಟ ಶಾಲಾ ಬಾಲಾಕಿಯೊಬ್ಬಳು ಒಂದು ಹಳೆಯ ಚಲನಚಿತ್ರಗೀತೆ ಅ ಆ ಇ ಈ ಕನ್ನಡದ ಅಕ್ಷರಮಾಲೆ ಎಂಬ ಹಾಡನ್ನು ತನ್ನಷ್ಟಕ್ಕೇ ತಾನೇ ಗುನುಗುನಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದಳು. ಎಷ್ಟು ಸುಂದರವಾದ ಅರ್ಥಗರ್ಭಿತ ಹಾಡು. ಕನ್ನಡದ ಅಕ್ಷರಗಳಿಗೆ ತಮ್ಮದೇ ಆದ ವಿವರಣೆಯನ್ನು ಕೊಡುವ ಆ ಹಾಡು ಮತ್ತೆ ಮತ್ತೆ ನನ್ನ ಮನಸ್ಸಿನಲ್ಲಿ ಮೂಡಿ ಕನ್ನಡ ಭಾಷೆಯ ಬಗ್ಗೆ ಮತ್ತಷ್ಟು ಹೆಮ್ಮೆಪಡುವಂತೆ ಮಾಡಿತು. ಈಗಾಗಲೇ ಕನ್ನಡದ ಹಲವಾರು ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದ ಸಂತೋಷ ಒಮ್ಮೆ ಮನಸ್ಸಿನಲ್ಲಿ ಮೂಡಿಸಿತು. ಮತ್ತೆ ನನ್ನಲ್ಲಿ ಪ್ರಕಟಣೆಯ ಗರಿಗೆದರಿಸಿತು.
ಹೀಗೆ ನನ್ನಲ್ಲಿ ಮೂಡಿದ ಭಾಷೆಯ ಅಭಿಮಾನ ನನ್ನನ್ನು ಈ ಕೃತಿಯ ಪ್ರಕಟಣೆಗೆ ಕೈ ಹಾಕುವಂತೆ ಮಾಡಿತು. ನಾಡೋಜ ಮತ್ತು ಪಂಪ ಪ್ರಶಸ್ತಿ ಪಡೆದ ಶ್ರೀಯುತ ಡಿ. ಎನ್. ಶಂಕರ ಭಟ್ ಅವರು ಈಗಾಗಲೇ ಸುಮಾರು ೨೦ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಟ್ಟಿದ್ದಾರೆ. ಅವೆಲ್ಲವೂ ಕನ್ನಡ ಭಾಷೆಯ ಕುರಿತಾದ ಕೃತಿಗಳೇ ಆಗಿರುವುದು ಹೆಮ್ಮೆಯ ವಿಷಯ. ಅಷ್ಟೇ ಅಲ್ಲದೆ ಅಷ್ಟೂ ಕೃತಿಗಳನ್ನು ಅವರೇ ಕಷ್ಟಪಟ್ಟು ಪ್ರಕಟಪಡಿಸಿದ್ದಾರೆ ಕೂಡ. ಇಂತಹ ವಿದ್ವಾಂಸರ ಒಂದು ಕೃತಿಯನ್ನು ನಮ್ಮ ಪ್ರಕಾಶನದಿಂದ ಪ್ರಕಟಪಡಿಸಬೇಕೆಂಬ ಹಂಬಲ ನನ್ನದಾಗಿತ್ತು. ಈ ಆಸೆಗೆ ಅವರು ನೀರೆರೆದು ಈ ಮೊದಲೇ ೨೦೦೫ರಲ್ಲಿ ಪ್ರಕಟವಾಗಿದ್ದ “ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?” ಎ೦ಬ ಕೃತಿಯನ್ನು ಮರು ಪ್ರಕಟಿಸಲು ಹೇಳಿ ನಮಗೆ ಪ್ರೋತ್ಸಾಹಿಸಿದ್ದಾರೆ. ಪ್ರಕಾಶನ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಸ೦ಭ್ರಮೋತ್ಸವದಲ್ಲಿ ಈ ಕೃತಿ ಪ್ರಕಟವಾಗುತ್ತಿರುವುದು ನಮಗೆ ಮತ್ತಷ್ಟು ಸ೦ತಸ ತ೦ದಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಶ್ರೀಮತಿ ಮತ್ತು ಶ್ರೀ ಡಿ. ಎನ್. ಶ೦ಕರ ಭಟ್ ಅವರಿಗೆ ಪ್ರಕಾಶನ ಸಂಸ್ಥೆಯಿಂದ ತುಂಬು ಹೃದಯದ ವಂದನೆಗಳು.
ಎಂದಿನಂತೆ ಕೃತಿಯನ್ನು ಅಂದವಾಗಿ ಮುದ್ರಿಸಿದ ಲಕ್ಷ್ಮೀ ಮುದ್ರಣಾಲಯದವರಿಗೆ, ಪುಸ್ತಕ ವಿನ್ಯಾಸ ಮಾಡಿದ ಆರ್.ಎಸ್. ಶ್ರೀಧರ ಅವರಿಗೆ ಮತ್ತು ನಮ್ಮ ಕೃತಿಗಳನ್ನು ಕೊಂಡು ಓದಿ ಬೆಂಬಲಿಸುತ್ತಿರುವ ಎಲ್ಲ ಓದುಗರಿಗೂ ಅನಂತಾನಂತ ಧನ್ಯವಾದಗಳು.
ವೈ. ಎ. ದಂತಿ ಪ್ರಕಾಶನದ ಪರವಾಗಿ
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12