Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೨ — ಪಾರಿಭಾಷಿಕ ಪದಗಳ ಬಳಕೆ
ಪಾರಿಭಾಷಿಕ ಪದಗಳ ಬಳಕೆ
೨.೧ ಪೀಠಿಕೆ
ಸಂಸ್ಕೃತ ಮತ್ತು ಹಳೆಗನ್ನಡಗಳ ನಡುವೆ ಅವು ಬಳಸುವ ವ್ಯಾಕರಣದ ಮೂಲ ತತ್ವಗಳಲ್ಲೆ €ನೇ ಹಲವು ಮುಖ್ಯವಾದ ವ್ಯತ್ಯಾಸಗಳಿವೆ ಎಂಬುದನ್ನು ನಾವು ಮುಂದಿನ ಅಧ್ಯಾಯಗಳಲ್ಲಿ ನೋಡಲಿರುವೆವು. ವ್ಯಾಕರಣಗಳಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳಲ್ಲಿ ಹೆಚ್ಚಿನವೂ ಇಂತಹ ಮೂಲತತ್ವಗಳ ಮೇಲೆ ಅವಲಂಬಿಸಿರುತ್ತವೆ. ಹಾಗಾಗಿ, ಒಂದು ಭಾಷೆಯ ವ್ಯಾಕರಣದಲ್ಲಿ ಬಳಕೆಯಾಗಿರುವ ಪಾರಿಭಾಷಿಕ ಪದಗಳಲ್ಲಿ ಎಲ್ಲವನ್ನೂ ಹಾಗೆಯೇ ಇನ್ನೊಂದು ಭಾಷೆಯ ವ್ಯಾಕರಣದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ 4
ಆದರೆ, ಹಳೆಗನ್ನಡದ ವೈಯಾಕರಣಿಗಳು ಸಂಸ್ಕೃತದ ಪಾರಿಭಾಷಿಕ ಪದಗಳಲ್ಲಿ ತಮಗೆ ಬೇಕಾದುವನ್ನು ಮತ್ತು ಹಲವೆಡೆಗಳಲ್ಲಿ ಬೇಡವಾದವುಗಳನ್ನೂ ತಾವು ಬರೆದಿರುವ ಹಳೆಗನ್ನಡ ವ್ಯಾಕರಣಗಳಲ್ಲಿ ಹೆಸರಿಸಿ ವಿವರಿಸಿದ್ದಾ ರೆ. ಇವುಗಳಲ್ಲಿ ಕೆಲವು ನಿಜಕ್ಕೂ ಅವರು ರಚಿಸಿರುವ ವ್ಯಾಕರಣಗಳಿಗೆ ಅವಶ್ಯವಿಲ್ಲ; ಹಾಗಾಗಿ, ಆ ವ್ಯಾಕರಣಗಳು ಅನವಶ್ಯಕವಾಗಿ ತುಂಬಾಕ್ಷಿ ಷ್ಟವಾಗಿವೆ.
ಇನ್ನು ಕೆಲವು ಪಾರಿಭಾಷಿಕ ಪದಗಳಿಗೆ ಅವುಗಳ ಈ ಬಳಕೆಯಲ್ಲಿ ಸಂಸ್ಕೃತದಲ್ಲಿಲ್ಲದ ಅರ್ಥಗಳೂ ಬಂದಿರುವ ಹಾಗೆ ಕಾಣಿಸುತ್ತದೆ. ಹಳೆಗನ್ನಡದಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ವಗಳು ಸಂಸ್ಕೃತದವಕ್ಕಿಂತ ತೀರ ಭಿನ್ನವಾಗಿರುವುದೇ ಇದಕ್ಕೆ ಕಾರಣ. ಇದರಿಂದಾಗಿಯೂ ಈ ಪಾರಿಭಾಷಿಕ ಪದಗಳ ಬಳಕೆ ಹಳೆಗನ್ನಡ ವ್ಯಾಕರಣಗಳಲ್ಲಿ ಗೊಂದಲಕ್ಕೆಡೆಮಾಡಿದೆ.
೨.೨ ಲೋಪ, ಆಗಮ ಮತ್ತು ಆದೇಶ
ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ, ಇಲ್ಲವೇ ಎರಡು ಪದಗಳನ್ನು ಒಟ್ಟಿಗೆ ಸೇರಿಸಿದಾಗ, ಆ ಪದ ಇಲ್ಲವೇ ಪ್ರತ್ಯಯಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಅವುಗಳಲ್ಲಿ ನಡೆಯುವ “ಬದಲಾವಣೆ’ಗಳೆಂಬುದಾಗಿ ವರ್ಣಿಸಿ ಹೇಳಲು ಸಾಧ್ಯವಿದೆ. ಪದ ಮತ್ತು ಪ್ರತ್ಯಯಗಳಲ್ಲಿ ಮುಖ್ಯವಾಗಿ ಇಂತಹ ಮೂರು ರೀತಿಯ ಬದಲಾವಣೆಗಳನ್ನು ಕಾಣಲು ಸಾಧ್ಯವಿದ್ದು, ಇವನ್ನು ಲೋಪ, ಆಗಮ ಮತ್ತು ಆದೇಶಗಳೆಂಬ ಹೆಸರಿನಿಂದ ಗುರುತಿಸಲಾಗುತ್ತದೆ.
ಉದಾಹರಣೆಗಾಗಿ, ಕಾಡನ್ ಎಂಬುದರಲ್ಲಿ ಕಾಡು ನಾಮಪದಕ್ಕೆ ಅನ್ ಪ್ರತ್ಯಯವನ್ನು ಸೇರಿಸಲಾಗಿದ್ದು, ಅದರ ಕೊನೆಯ ಉಕಾರ ಬಿದ್ದುಹೋಗಿದೆ; ಇದು “ಲೋಪ’. ತುಜುವನ್ ಎಂಬುದರಲ್ಲೂ ತುಜು ನಾಮಪದಕ್ಕೆ ಇದೇ ಅನ್ ಪ್ರತ್ಯಯವನ್ನು ಸೇರಿಸಲಾಗಿದೆಯಾದರೂ, ಅದರ ಕೊನೆಯ ಉಕಾರ ಬಿದ್ದು ಹೋಗುವ ಬದಲು, ಅದಕ್ಕೂ ಪ್ರತ್ಯಯಕ್ಕೂ ನಡುವೆ ವಕಾರವೊಂದು ಹೊಸದಾಗಿ ಬಂದು ಸೇರಿದೆ; ಇದು “ಆಗಮ’. ಮಾಟಾಕ್ಕಿ ಎಂಬುದರಲ್ಲಿ ಮಾಡು ಕ್ರಿಯಾ ಪದಕ್ಕೆ
ಕೆ ಪ್ರತ್ಯಯವನ್ನು ಸೇರಿಸಲಾಗಿದ್ದು, ಆ ಕ್ರಿಯಾಪದದ ಕೊನೆಯ ಉಕಾರ ಲೋಪಗೊಂಡಿದೆಯಲ್ಲದೆ ಅದರ ಹಿಂದಿನ ವ್ಯಂಜನ ಡ್ ಇದ್ದುದು ಲ್ ಎಂದಾಗಿದೆ; ಇದು “ಆದೇಶ’.
ಪದ ಮತ್ತು ಪ್ರತ್ಯಯಗಳು ಒಟ್ಟಿಗೆ ಸೇರುವಾಗ ಅವುಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಈ ರೀತಿ ಅವುಗಳಲ್ಲಿ ನಡೆಯುವ “ಬದಲಾವಣೆ’ಗಳೆಂಬುದಾಗಿ ವಿವರಿಸುವ ಬದಲು, ಬೇರೆ ಬೇರೆ ಸಂದರ್ಭಗಳಲ್ಲಿ ಅವಕ್ಕಿರುವ “ರೂಪಭೇದ’ಗಳೆಂಬುದಾಗಿಯೂ ವಿವರಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಕಣ್ಣೆ, ಮಕ್ಕಳ್ಗೆ, ನನ್ನಿಗೆ ಮೊದಲಾದ ಪದರೂಪಗಳಲ್ಲಿ ಕಾಣಿಸುವ ಗೆ ಪ್ರತ್ಯಯ ನೆಲಕೆ, ಇದರ್ಕೆ ಮೊದಲಾದ ಕೆಲವು ಪದರೂಪಗಳಲ್ಲಿ ಕೆ ಎಂದಾಗುತ್ತದೆ (ಗೆ ಎಂಬುದಕ್ಕೆ ಕೆ ಎಂಬುದು ಆದೇಶವಾಗಿ ಬರುತ್ತದೆ), ಮತ್ತು ಓಲಗಕ್ಕೆ, ಮರಕ್ಕೆ ಮೊದಲಾದ ಬೇರೆ ಕೆಲವು ಪದರೂಪಗಳಲ್ಲಿ ಕ್ಕೆ ಎಂದಾಗುತ್ತದೆ (ಗೆ ಎಂಬುದಕ್ಕೆ ಕೈ ಆದೇಶವಾಗಿ ಬರುತ್ತದೆ) ಎಂದು ಹೇಳುವುದು “ಬದಲಾವಣೆ’ಗಳ ಮೂಲಕ ಅವುಗಳ ನಡುವಿರುವ ವ್ಯತ್ಯಾಸವನ್ನು ವಿವರಿಸುವ ವಿಧಾನ.
ಇದಕ್ಕೆ ಬದಲು, ಆ ಪ್ರತ್ಯಯಕ್ಕೆ ಗೆ, ಕೆ ಮತ್ತು ಕ್ಕೆ ಎಂಬುದಾಗಿ ಮೂರು ರೂಪಗಳಿದ್ದು, ಅವುಗಳಲ್ಲಿ ಮೊದಲನೆಯದು ಕಣ್, ಮಕ್ಕಳ್, ನನ್ನಿ, ಪಗೆ ಮೊದಲಾದ ಪದಗಳ ಅನಂತರ ಬರುತ್ತದೆ, ಎರಡನೆಯದು ನೆಲ, ಇದು (ಈ ಪದದ ಇದಲು್‌್ ಎಂಬ ರೂಪ), ನೆಲ ಮೊದಲಾದ ಪದಗಳ ಅನಂತರ ಬರುತ್ತದೆ, ಮತ್ತು ಮೂರನೆಯದು ಮರ, ಓಲಗ, ಗೂಂಟ ಮೊದಲಾದ ಪದಗಳ ಅನಂತರ ಬರುತ್ತದೆಯೆಂದೂ ಹೇಳಲು ಸಾಧ್ಯವಿದೆ. ಇದು “ರೂಪಭೇದ’ಗಳ ಮೂಲಕ ಅದೇ ವ್ಯತ್ಯಾಸವನ್ನು ವಿವರಿಸುವ ವಿಧಾನ. ಈ ವಿಧಾನವನ್ನು ಬಳಸಿದಲ್ಲಿ ಲೋಪ, ಆಗಮ ಮತ್ತು ಆದೇಶಗಳೆಂಬ ಪಾರಿಭಾಷಿಕ ಪದಗಳ ಅವಶ್ಯಕತೆಯಿಲ್ಲ.
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಪದ ಇಲ್ಲವೇ ಪ್ರತ್ಯಯಗಳಲ್ಲಿ ಕಾಣಿಸುವ ಈ ಬದಲಾವಣೆ (ಇಲ್ಲವೇ ವ್ಯತ್ಯಾಸ)ಗಳಿಗೂ ಮತ್ತು ಅವುಗಳ ಅರ್ಥಕ್ಕೂ ನಡುವೆ ಯಾವ ಸಂಬಂಧವೂ ಇಲ್ಲ. ಕಾಡು ಎಂಬುದರ ಕೊನೆಯ ಅಕಾರ ಬಿದ್ದುಹೋದುದರಿಂದಾಗಿ, ಇಲ್ಲವೇ ತುಜು ನಾಮಪದದ ಅನಂತರ ವಕಾರವೊಂದು ಸೇರಿಕೊಂಡುದರಿಂದಾಗಿ ಅದರ ಅರ್ಥದಲ್ಲಿ ಹೆಚ್ಚು ಕಡಿಮೆಯಾಗಿಲ್ಲ; ಅದರ ಅರ್ಥ ಮೊದಲಿದ್ದ ಹಾಗೆಯೇ ಇದೆ.
ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಲೋಪ, ಆಗಮ ಮತ್ತು ಆದೇಶಗಳೆಂಬ ಪಾರಿಭಾಷಿಕ ಪದಗಳನ್ನು ಈ ರೀತಿ ಪದ ಮತ್ತು ಪ್ರತ್ಯಯಗಳು ಒಂದರೊಡನೊಂದು ಸೇರುವಾಗ ಅವುಗಳಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳನ್ನು ವಿವರಿಸುವಲ್ಲಿ ಮಾತ್ರವಲ್ಲದೆ, ಬೇರೆಯೂ ಕೆಲವು ಸಂದರ್ಭಗಳಲ್ಲಿ ಬಳಸಿದ್ದಾರೆ. ಆದರೆ, ಇದರಿಂದಾಗಿ ಅವರ ವ್ಯಾಕರಣಗಳಲ್ಲಿ ಹಲವು ಹೊಸ ಸಮಸ್ಯೆಗಳು ತಲೆದೋರಿವೆ.
ಸಂಸ್ಕೃತ ವ್ಯಾಕರಣದ ನಿಯಮಗಳನ್ನು ನೇರವಾಗಿ ತಮ್ಮ ಹಳೆಗನ್ನಡ ವ್ಯಾಕರಣಗಳಲ್ಲಿ ಅಳವಡಿಸಲು ಪ್ರಯತ್ನಿಸಿರುವುದೇ ಅವರು ಈ ರೀತಿ ಮಾಡಬೇಕಾಗಿ ಬಂದಿರುವುದಕ್ಕೆ ಮುಖ್ಯ ಕಾರಣ ಎಂಬುದು ಕೆಳಗಿನ ಪರಿಶೀಲನೆಯಿಂದ ಸ್ಪಷ್ಟವಾಗುತ್ತದೆ.
೨.೨.೧ ಬಹುವಚನ ಪ್ರತ್ಯಯ
ನಾಮಪದಗಳೊಂದಿಗೆ ಬಹುವಚನವನ್ನು ಸೂಚಿಸುವುದಕ್ಕಾಗಿ ಬರುವ ಗಳ್ ಪ್ರತ್ಯಯವನ್ನು (ತೊಡೆಗಳ್, ತೋಳ್ಗಳ್) ಕೇಶಿರಾಜನು ವಿಭಕ್ತಿ ಪ್ರತ್ಯಯಗಳ ಮೊದಲು ಬರುವ “ಆಗಮ’ವೆಂದು
ಪ pT es ಲಿ ಕರೆದಿದ್ದಾನೆ (ಸೂ. ೧೦೫). ಆದರೆ ಹಳೆಗನ್ನಡದಲ್ಲಿ ಇವು ಪ್ರತ್ಯಯಗಳಲ್ಲದೆ ಆಗಮಗಳಲ್ಲ.
ಯಾಕೆಂದರೆ, ತೊಡೆಗಳ್ ಎಂಬಂತಹ ಪದಗಳಲ್ಲಿ ಗಳ್ ಎಂಬುದು ಅರ್ಥವಿಲ್ಲದ ಸೇರಿಕೆಯಲ್ಲ; ಅದಕ್ಕೆ ಬಹುವಚನವನ್ನು ಸೂಚಿಸುವ ಅರ್ಥವಿದೆ. ತೊಡೆ ರೂಪ ಒಂದು ತೊಡೆಯನ್ನು ಸೂಚಿಸುತ್ತದೆಯಾದರೆ, ತೊಡೆಗಳ್ ರೂಪ ಒಂದಕ್ಕಿಂತ ಹೆಚ್ಚು (ಎರಡು) ತೊಡೆಗಳನ್ನು ಸೂಚಿಸುತ್ತದೆ. ತುಜುವಿನ್ ಎಂಬುದರಲ್ಲಿ ಬಂದ ವಕಾರದ ಹಾಗೆ, ಇಲ್ಲವೇ ಮರದೊಳ್ ಎಂಬುದರಲ್ಲಿ ಬಂದ ದಕಾರದ ಹಾಗೆ ಅದು ಅರ್ಥವಿಲ್ಲದ ಸೇರಿಕೆಯಲ್ಲ.
ಇದಕ್ಕೆ ಬದಲು, ಸಂಸ್ಕೃತದಲ್ಲಿ ನಾಮಪದಗಳ ಅನಂತರ ಬರುವ ವಿಭಕ್ತಿ ಪ್ರತ್ಯಯಗಳೇ ವಚನವನ್ನೂ ಸೂಚಿಸುತ್ತವೆ. ಉದಾಹರಣೆಗಾಗಿ, ಸ್ತ್ರೀ ನಾಮಪದಕ್ಕೆ ಸಪ್ತಮೀ-ದ್ವಿವಚನದಲ್ಲಿ ಸ್ತ್ರಿಯೋಃ ಎಂಬ ರೂಪವಿದ್ದು, ಇದರಲ್ಲಿ ಓಃ ಪ್ರತ್ಯಯ ಸಪ್ತಮೀ ವಿಭಕ್ತಿಯನ್ನು ಮಾತ್ರವಲ್ಲದೆ ದ್ವಿವಚನವನ್ನೂ ಸೂಚಿಸುತ್ತದೆ. ಹಾಗಾಗಿ, ಈ ರೂಪದಲ್ಲಿ ಬರುವ ಸ್ತಿಯ್ ಎಂಬುದನ್ನು ಸ್ತ್ರೀ ಎಂಬುದರ ರೂಪಭೇದವೆಂದಾಗಲೀ, ಇಲ್ಲವೇ ಅದರ ಕೊನೆಯ ಈಕಾರಕ್ಕೆ ಅಯ್ ಎಂಬುದು ಆದೇಶವಾಗಿ ಬಂದುದರಿಂದಾಗಿ ಸಿದ್ದವಾದ ರೂಪವೆಂದಾಗಲೀ ಹೇಳುವುದರಲ್ಲಿ ಔಚಿತ್ಯವಿದೆ (ಹೆಚ್ಚಿನ ವಿವರಗಳಿಗೆ ೭.೨ ನೋಡಿ).
ವಿಭಕ್ತಿ ಮತ್ತು ವಚನಗಳ ಸೂಚನೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳು ಈ ರೀತಿ ಎರಡು ತೀರ ಭಿನ್ನವಾದ ವ್ಯಾಕರಣ ವಿಧಾನಗಳನ್ನು ಬಳಸುತ್ತ ವೆ. ಹಳೆಗನ್ನಡದಲ್ಲಿ ಅವೆರಡನ್ನು ಎರಡು ಬೇರೆ ಬೇರೆ ಪ್ರತ್ಯಯಗಳ ಮೂಲಕ ಸೂಚಿಸಲಾಗುತ್ತದೆ; ಆದರೆ, ಸಂಸ್ಕೃತದಲ್ಲಿ ಎರಡನ್ನೂ ಒಂದೇ ಪ್ರತ್ಯಯದ ಮೂಲಕ ಸೂಚಿಸಲಾಗುತ್ತದೆ.
ಈ ಮೂಲಭೂತ ವ್ಯತ್ಯಾಸವನ್ನು ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಗಮನಿಸಿರಲಿಲ್ಲ. ಹಾಗಾಗಿ, ಈ ಸಂದರ್ಭದಲ್ಲಿ ಸಂಸ್ಕೃತದ ವ್ಯಾಕರಣ ವಿಧಾನವನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸುವುದು ಸರಿಯಲ್ಲವೆಂಬ ವಿಷಯ ಅವರ ಗಮನಕ್ಕೆ ಬರಲಿಲ್ಲ, ಮತ್ತು ಇದರಿಂದಾಗಿ ಪ್ರತ್ಯಯವೊಂದನ್ನು ಆಗಮವೆಂದು ಕರೆಯುವ ಸಮಸ್ಯೆಗೆ ಸಿಕ್ಕಿ ಬೀಳಬೇಕಾಯಿತು.
೨.೨.೨ ಆಗಮದ ಮೇಲೆ ಆದೇಶ
ಈ ರೀತಿ ಪ್ರತ್ಯಯಗಳನ್ನು ಆಗಮಗಳೆಂದು ಪರಿಗಣಿಸಿದುದರಿಂದಾಗಿ, ಕೇಶಿರಾಜನು ಬೇರೆಯೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಉದಾಹರಣೆಗಾಗಿ, ಸರ್ವನಾಮ ಮತ್ತು ಗುಣವಚನಗಳಿಗೆ ಬಹುವಚನದಲ್ಲಿ ಬರುವ ಈ ಗಳ್ “ಆಗಮ’ಕ್ಕೆ ಅವು ಎಂಬುದು “ಆದೇಶ’ವಾಗಿ ಬರುತ್ತದೆ (ಸೂ.೧೦೫) ಎಂಬ ಇನ್ನಷ್ಟು ವಿಚಿತ್ರವಾದ ವ್ಯಾಕರಣ ನಿಯಮವನ್ನು ಆತನು ಸೃಷ್ಟಿಸಬೇಕಾಗಿದೆ.
ಗಳ್ ಮತ್ತು ಅವು ಎಂಬವುಗಳ ನಡುವೆ ಅರ್ಥದಲ್ಲಿ ಅಷ್ಟೊಂದು ಸ್ಪಷ್ಟವಾದ ವ್ಯತ್ಯಾಸವಿಲ್ಲವಾದ ಕಾರಣ, ಇಲ್ಲಿ “ಆದೇಶ’ ಎಂಬ ಪದದ ಬಳಕೆ ಉಚಿತವಾಗಬಲ್ಲುದಾದರೂ, ಅದು ಒಂದು ಆಗಮದ ಮೇಲೆ ಬಂದಿದೆ ಎಂಬುದು ವಿಚಿತ್ರ.
ಕೇಶಿರಾಜನ ಈ ಬಳಕೆಯಿಂದಾಗಿ, ಅವನ ವ್ಯಾಕರಣದಲ್ಲಿ ಆಗಮ ಮತ್ತು ಪ್ರತ್ಯಯಗಳ ನಡುವೆ ವ್ಯತ್ಯಾಸವೇ ಇಲ್ಲವಾದ ಹಾಗಾಗಿದೆ. ಒಂದು ಅರ್ಥವನ್ನು ಇಲ್ಲವೇ ವ್ಯಾಕರಣ ಕಾರ್ಯವನ್ನು ಸೂಚಿಸುವುದಕ್ಕಾಗಿ ಬರುವ ಒಂದು ಅಥವಾ ಜಾಸ್ತಿ ವರ್ಣಗಳ ಅನುಕ್ರಮಕ್ಕೆ ಪ್ರತ್ಯಯವೆಂದು ಹೆಸರು. ಅಂತಹದಾವುದೂ ಇಲ್ಲದೆ, ಒಂದು ಪದದೊಂದಿಗೆ ಇನ್ನೊಂದು ಪದ ಇಲ್ಲವೇ ಪ್ರತ್ಯಯ ಸೇರಿದಾಗ ಅವುಗಳ ನಡುವೆ ಬರುವ ಒಂದು ಅಥವಾ ಜಾಸ್ತಿ ವರ್ಣಗಳ ಅನುಕ್ರಮಕ್ಕೆ ಆಗಮವೆಂದು ಹೆಸರು. |
ಪ್ರತ್ಯಯಗಳಿಗೆ ತಮ್ಮದೇ ಆದ ಅರ್ಥ ಇಲ್ಲವೇ ವ್ಯಾಕರಣ ಕಾರ್ಯವಿದೆಯಾದ ಕಾರಣ, ಅವನ್ನು ಪ್ರತಿನಿಧೀಕರಿಸುವ ವರ್ಣಗಳನ್ನು ಹೊರತು ಪಡಿಸಿಯೂ ಅವಕ್ಕೆ ಒಂದು ಅಸ್ತಿತ್ವವಿದೆ. ಹಾಗಾಗಿ, ಅವಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪಗಳಿವೆಯೆಂದಾಗಲಿ, ಇಲ್ಲವೇ ಕೆಲವು ಸಂದರ್ಭಗಳಲ್ಲಿ ಅವುಗಳ ಒಂದು ರೂಪದ ಬದಲು ಇನ್ನೊಂದು ರೂಪ ಆದೇಶವಾಗಿ ಬರುತ್ತದೆಯೆಂದಾಗಲಿ ಹೇಳಲು ಸಾಧ್ಯವಾಗುತ್ತದೆ.
ಆಗಮಗಳಿಗೆ ಈ ರೀತಿ ತಮ್ಮವೇ ಆದ ಅರ್ಥ ಇಲ್ಲವೇ ವ್ಯಾಕರಣ ಕಾರ್ಯವಿಲ್ಲವಾದ ಕಾರಣ, ಅವನ್ನು ಪ್ರತಿನಿಧೀಕರಿಸುವ ವರ್ಣಗಳನ್ನು ಹೊರತುಪಡಿಸಿ ಬೇರೆ ಸ್ವತಂತ್ರವಾದ ಅಸ್ತಿ ತ್ವ ಅವಕ್ಕಿಲ್ಲ. ಹಾಗಾಗಿ, ಅವುಗಳಿಗೆ ಒಂದಕ್ಕಿಂತ ಹೆಚ್ಚು ರೂಪಗಳಿವೆಯೆಂದಾಗಲಿ, ಇಲ್ಲವೇ ಅವುಗಳ ಒಂದು ರೂಪದ ಬದಲು ಆದೇಶವಾಗಿ ಇನ್ನೊಂದು ರೂಪ ಬರುತ್ತದೆಯೆಂದಾಗಲಿ ಹೇಳುವುದು ಸರಿಯಲ್ಲ.
ಸೂತ್ರ ೨೫೭ರ ವೃತ್ತಿಯಲ್ಲಿ ಇನೆಗಂ, ಉದುಂ, ಅನ್ನಂ, ಅಲೊಡಂ ಮೊದಲಾದ “ಶಬ್ದಗಳು’ ಸತಿಸಪ್ತಮಿಯ ಎಕಾರಕ್ಕೆ ಆದೇಶವಾಗಿ ಬರುತ್ತವೆ ಎಂದು ಕೇಶಿರಾಜನು ಹೇಳಿರುವುದು ಇನ್ನೊಂದು ವಿಚಿತ್ರವಾದ ವ್ಯಾಕರಣ ನಿಯಮ. ಆಗಮದ ಹಾಗೆ ಆದೇಶವೂ ಪದಗಳ ಬಳಕೆಯಲ್ಲಿ ಕಾಣಿಸುವ “ಅರ್ಥಹೀನ’ವಾದ ವ್ಯತ್ಯಾಸಗಳನ್ನು ಇಲ್ಲವೇ ಬದಲಾವಣೆಗಳನ್ನು ಸೂಚಿಸಬೇಕಲ್ಲದೆ, ಈ ರೀತಿ ಒಂದು ಪದದೊಂದಿಗೆ ಬರುವ ಇನ್ನೊಂದು ಪದ ಇಲ್ಲವೇ, ಪದರೂಪವನ್ನು ಸೂಚಿಸಬಾರದು.
೨.೨.೩ ಪ್ರತ್ಯಯ ಮತ್ತು ಲೋಪ
ದುಕಾರಾಂತವಾದ ಗುಣವಚನಗಳಿಗೆ ಬಹುವಚನದಲ್ಲಿ ಅವು ಎಂಬುದು (ಗಳ್ “ಆಗಮ’ದ ಮೇಲಿನ “ಆದೇಶ’) ಸೇರಿದಾಗ ಅವುಗಳ ಕೊನೆಯ ಅಕ್ಬರ (ದು ಎಂಬುದು) ಲೋಪವಾಗುತ್ತದೆ (ಕರಿಯದು-ಕರಿಯವು, ಬಿಳಿಯದು-ಬಿಳಿಯವು) ಎಂದು ಕೇಶಿರಾಜನು ಹೇಳಿರುವಲ್ಲಿಯೂ (ಸೂ.೧೦೬) ಅರ್ಥವತ್ತಾದ ವ್ಯತ್ಯಾಸವನ್ನು ಸಂಧಿನಿಯಮದ ಮೂಲಕ ವಿವರಿಸುವ ಪ್ರಯತ್ನ ನಡೆದಿದೆ. ಹಳೆಗನ್ನಡದ ಗುಣವಚನಗಳಲ್ಲಿ ಬರುವ ದು (ಇಲ್ಲವೇ ಅದು) ಎಂಬುದು ನಪುಂಸಕ- ಏಕವಚನವನ್ನು ಸೂಚಿಸುವ ಲಿಂಗ-ವಚನ ಪ್ರತ್ಯಯ; ಇಂತಹವೇ ಗುಣವಚನಗಳಲ್ಲಿ ಬರುವ ವು (ಇಲ್ಲವೇ ಅವು) ಎಂಬುದು ನಪುಂಸಕ-ಬಹುವಚನವನ್ನು ಸೂಚಿಸುವ ಬೇರೊಂದು ಪ್ರತ್ಯಯ. ಇಲ್ಲಿ ಒಂದು ಪ್ರತ್ಯಯದ ಬದಲು ಇನ್ನೊಂದು ಪ್ರತ್ಯಯ ಬಂದಿದೆಯಲ್ಲದೆ ಸಂಧಿಕಾರ್ಯವಾದ “ಲೋಪ’ ನಡೆದಿಲ್ಲ.
ಹೀಗಿದ್ದರೂ ಇಲ್ಲಿ ಲೋಪವಾಗಿದೆಯೆಂದು ಕೇಶಿರಾಜ ಹೇಳಿರುವುದಕ್ಕೆ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೇನೇ ವ್ಯತ್ಯಾಸವಿರುವುದನ್ನು ಆತ ಗಮನಿಸದಿರುವುದೇ ಕಾರಣ. ಮೇಲೆ (೨.೨.೧)ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ವಚನ- ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುವುದಾದ ಕಾರಣ, ಆ ಭಾಷೆಯ ವಿಭಕ್ತಿರೂಪಗಳಲ್ಲಿ ಕಾಣಿಸುವ ಇಂತಹ ವ್ಯತ್ಯಾಸಗಳನ್ನೆಲ್ಲ ಸಂಧಿನಿಯಮಗಳ ಮೂಲಕವೇ ವಿವರಿಸಬೇಕಾಗುತ
po)
ಆದರೆ ಹಳೆಗನ್ನಡದಲ್ಲಿ ವಚನ ಪ್ರತ್ಯಯ ವಿಭಕ್ತಿ ಪ್ರತ್ಯಯಕ್ಕಿಂತ ಭಿನ್ನವಾಗಿರುವ ಕಾರಣ, ಅಂತಹ
ವಿವರಣೆ ಹಳೆಗನ್ನಡದ ಮಟ್ಟಿಗೆ ಉಚಿತವಲ್ಲ.
೨.೨.೪ ಪ್ರತ್ಯಯ ಮತ್ತು ಆಗಮ
ಕೇಶಿರಾಜನು ಹಳೆಗನ್ನಡದ ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಅಮ್, ಅರ್, ಅಯ್, ಇರ್ ಮೊದಲಾದುವನ್ನು ವಿಭಕ್ತಿ(ಪ್ರತ್ಯಯ)ಗಳೆಂದು ಕರೆದಿದ್ದಾನೆ (ಸೂ. ೨೨೮). ಆದರೆ ಕ್ರಿಯಾಪದಗಳಿಗೂ ಈ ಪ್ರತ್ಯಯಗಳಿಗೂ ನಡುವೆ ಬರುವ ದ, ದಪ ಮತ್ತು ವ ಎಂಬವುಗಳನ್ನು “ಆಗಮ’ಗಳೆಂದು ಕರೆದಿದ್ದಾನೆ (ಸೂ. ೨೩೨).
ಇದಲ್ಲದೆ, ಈ ಆಗಮಗಳು “ಪೋದ ವರ್ತಿಸುವ ಬರ್ಪ ಕಾಲಂಗಳ್ಗೆ ಸೂಚಕಂಗಳ್’ ಎಂದೂ ಹೇಳಿದ್ದಾ ನೆ! ಎಂದರೆ ಈ ಆಗಮಗಳಿಗೆ ಕಾಲಭೇದವನ್ನು ಸೂಚಿಸುವ ಅರ್ಥವಿದೆಯೆಂದೂ ಹೇಳಿದ ಹಾಗಾಯಿತು. ಹಾಗಿದ್ದ ರೆ ಅವನ್ನು ಪ್ರತ್ಯಯಗಳೆಂದು ಕರೆಯದೆ ಆಗಮಗಳೆಂದು ಕರೆದಿರುವುದು ಯಾಕೆ?
ಇದಕ್ಕೆ ಉತ್ತರ ಸಂಸ್ಕೃತ ವ್ಯಾಕರಣದಲ್ಲಿದೆ: ಸಂಸ್ಕೃತದ ಕ್ರಿಯಾರೂಪಗಳಲ್ಲಿ ಕ್ರಿಯಾಪದದ (ಧಾತುವಿನ) ಬಳಿಕ ಪುರುಷ-ವಚನಗಳನ್ನು ಸೂಚಿಸುವ ಪ್ರತ್ಯಯ ಮಾತ್ರ ಬರುತ್ತದೆ. ಕಾಲಭೇದವನ್ನು ಸೂಚಿಸುವುದಕ್ಕಾಗಿ ಅದರಲ್ಲಿ, ಹಳೆಗನ್ನಡದ ಹಾಗೆ, ವಿಶಿಷ್ಟವಾದ ಪ್ರತ್ಯಯಗಳ ಬಳಕೆಯಿಲ್ಲ. ಕ್ರಿಯಾಪದದಲ್ಲೇನೇ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಕಾಲಭೇದವನ್ನು ಸೂಚಿಸಲಾಗುತ್ತದೆ (೯.೨ ನೋಡಿ).
ಹಾಗಾಗಿ, ಸಂಸ್ಕೃತದ ಕ್ರಿಯ್ಕಾಪದಗಳಿಗೆ ಆಖ್ಯಾತ (ತಿಜ್‌್) ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನೆಲ್ಲ ಸಂಧಿಯ ನಿಯಮಗಳ ಮೂಲಕವೇನೇ ವಿವರಿಸಬೇಕಾಗುತ್ತದೆ. ಉದಾಹರಣೆಗಾಗಿ, ರುಧ್ “ತಡೆ’ ಕ್ರಿಯಾಪದಕ್ಕೆ ಅಪೂರ್ಣಾರ್ಥದಲ್ಲಿ ಪ್ರಥಮಪುರುಷ-ಏಕವಚನದ ತಿಜತ್ ಪ್ರತ್ಯಯವನ್ನು ಸೇರಿಸಿದಾಗ, ಆ ಕ್ರಿಯಾಪದದೊಳಗೆ ಣಕಾರವೊಂದು ಸೇರಿಕೊಂಡು ರುಣದ್ದಿ ಎಂಬ ರೂಪ ಸಿದ್ಧಿಸುತ್ತದೆ. ಈ ಣಕಾರವನ್ನು ಅಪೂರ್ಣಾರ್ಥವನ್ನು ಸೂಚಿಸುವ ಪ್ರತ್ಯಯವೆಂದು ಕರೆಯುವುದಕ್ಕಿಂತಲೂ ಆಗಮವೆಂದು ಕರೆಯುವುದೇ ಸಂಸ್ಕೃತದ ಮಟ್ಟಿಗೆ ಸರಿಯಾದ ಕ್ರಮ.
ಯಾಕೆಂದರೆ, ಬೇರೆ ಕ್ರಿಯಾಪದಗಳನ್ನು ಬಳಸಿ ಅಪೂರ್ಣಾರ್ಥದ ಕ್ರಿಯಾರೂಪಗಳನ್ನು ತಯಾರಿಸುವಲ್ಲಿ ಈ ರೀತಿ ಕ್ರಿಯಾಪದದೊಳಗೆ ಣ ಇಲ್ಲವೇ ಬೇರೆ ಅಕ್ಷರಗಳು ಸೇರಿಕೊಳ್ಳುವುದಿಲ್ಲ ಕ ಉದಾಹರಣೆಗಾಗಿ, ಪಚ್ “ಅಡಿಗೆ ಮಾಡು’ ಧಾತುವಿಗೆ ಅಪೂರ್ಣಾರ್ಥದಲ್ಲಿ ತಿಜ್ ಪ್ರತ್ಯಯವನ್ನು ಸೇರಿಸಿದಾಗ ಪಚತಿ ರೂಪ ಸಿದ್ಧಿಸುತ್ತದೆ.
ಆದರೆ, ಹಳೆಗನ್ನಡದ ಕ್ರಿಯಾರೂಪಗಳ ಒಳರಚನೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಕ್ರಿಯಾಪದಗಳ ಬಳಿಕ ಎರಡು ಪ್ರತ್ಯಯಗಳು ಬರುತ್ತಿ ದ್ದು , ಅವುಗಳಲ್ಲಿ ಒಂದು ಕಾಲಭೇದವನ್ನು ಸೂಚಿಸುತ್ತದೆಯಾದರೆ, ಇನ್ನೊಂದು ಪುರುಷ-ವಚನ ಭೇದವನ್ನು ಸೂಚಿಸುತ್ತದೆ. ಉದಾಹರಣೆಗಾಗಿ,
ಪೇಟ್ಬನ್ ಕ್ರಿಯಾರೂಪದಲ್ಲಿ ಪೇಟ್ ಕ್ರಿಯಾಪದದ ಬಳಿಕ ಹಿಂದಿನ (ಭೂತ)ಕಾಲವನ್ನು ಸೂಚಿಸುವ ದ್ ಮತ್ತು ಪ್ರಥಮ ಪುರುಷ ಪುಲ್ಲಿಂಗ ಏಕವಚನವನ್ನು ಸೂಚಿಸುವ ಅನ್ ಎಂಬುದಾಗಿ ಎರಡು ಪ್ರತ್ಯಯಗಳು ಬಂದಿವೆ. |
ಇದು ಹಳೆಗನ್ನಡಕ್ಕೂ ಸಂಸ್ಕೃತಕ್ಕೂ ನಡುವೆ ವ್ಯಾಕರಣದ ಮೂಲ ತತ್ವದಲ್ಲೇನೇ ಇರುವ ವ್ಯತ್ಯಾಸ. ಎರಡು ಭಾಷೆಗಳ ನಡುವೆ ಇಂತಹ ಮೂಲಭೂತ ವ್ಯತ್ಯಾಸಗಳಿರಲು ಸಾಧ, ಮತ್ತು
ಇಂತಹ ವೃತ್ತಾಸಗಳನು ಅವುಗಳ ವಾಕರಣ ನಿಯಮಗಳು ಪತಿಬಿಂಬಿಸುವುದು ಅವಶ. ಎಂಬುದನು
ಗ್ರಹಿಸಲು ಸಾಧ್ಯವಾಗದುದರಿಂದಾಗಿ, ಕೇಶಿರಾಜನು ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದ ಕಾಲಪ್ರತ್ಯಯಗಳನ್ನು “ಆಗಮ’ಗಳೆಂದು ಕರೆಯಬೇಕಾಗಿದೆ.
ಸೂ. ೪೫ರಲ್ಲಿ ಕೇಶಿರಾಜನು “ಪ್ರತ್ಯಯ’ ಮತ್ತು “ವಿಭಕ್ತಿ’ ಇವೆರಡೂ ಪರ್ಯಾಯ ಪದಗಳು ಎಂಬ ಅಭಿಪ್ರಾಯ ಬರುವ ಹಾಗೆ ಬರೆದಿರುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ (ಬಿಳಿಗಿರಿ ೧೯೬೯:೧೨೯ ನೋಡಿ). ಗಳ್ ಮತ್ತು ದ, ದಪ, ವಗಳನ್ನು ಪ್ರತ್ಯಯಗಳೆಂದು ಕರೆಯದಿರಲು ಇದೂ ಒಂದು ಕಾರಣವಿರಬಹುದು. ಆದರೆ ಇಸು ಎಂಬುದನ್ನು (ಸೂ. ೬೪), ಮತ್ತು ತದ್ಧಿತ ಪ್ರಕರಣದಲ್ಲಿ ಬರುವ ಇಗ, ವಳ ಮೊದಲಾದುವನ್ನು (ಸೂ. ೨೦೮-೯) ಪ್ರತ್ಯಯಗಳೆಂದು ಕರೆದಿರುವುದು ಈ ಅಭಿಪ್ರಾಯಕ್ಕೆ ವಿರುದ್ಧ ವಾಗಿದೆ.
ಸಮಯವನ್ನು ಸೂಚಿಸುವ ದ, ದಪ, ವಗಳನ್ನು ಈ ರೀತಿ ಕೇಶಿರಾಜನು ಪ್ರತ್ಯಯಗಳೆಂದು ಪರಿಗಣಿಸದೆ ಆಗಮಗಳೆಂದು ಕರೆದುದರಿಂದ, ಇನ್ನೊಂದು ಸಮಸ್ಯೆಯನ್ನೂ ಎದುರಿಸಬೇಕಾಗಿದೆ. ಒಂದು ಕ್ರಿಯಾರೂಪದಲ್ಲಿ ಬರುವ ಕ್ರಿಯಾಪದದ (ಕ್ರಿಯಾಧಾತುವಿನ) ಸ್ವರೂಪ ಎಂತಹದು ಎಂಬುದನ್ನು ಸೂಚಿಸುವುದಕ್ಕಾಗಿ ಆತನು ಮಾಡಿದನ್, ಮಾಡುವನ್ ಎಂಬಂತಹ ಸಾಮಾನ್ಯ ರೂಪಗಳನ್ನು ಬಳಸುವ ಬದಲು, ಮಾಡನ್ ಎಂಬಂತಹ ಅಲ್ಲಗಳೆಯುವ ರೂಪಗಳನ್ನು ಬಳಸಬೇಕಾಗಿದೆ (ಸೂ. ೨೨೭)
ಯಾಕೆಂದರೆ, ಮಾಡಿದನ್ ಎಂಬುದರಿಂದ ಆಖ್ಯಾತ ಪ್ರತ್ಯಯವನ್ನು (ಅನ್ ಎಂಬುದನ್ನು) ತೆಗೆದಾಗ, ಮಾಡಿದ ಎಂಬುದು ಸಿಗುತ್ತದಲ್ಲದೆ ಮಾಡು ಸಿಗುವುದಿಲ್ಲ.
ಆದರೆ, ಈ ರೀತಿ ಅಲ್ಲಗಳೆಯುವ ಕ್ರಿಯಾರೂಪದಿಂದ ಧಾತುವಿನ ಸ್ವರೂಪವನ್ನು ನಿರ್ಧರಿಸಹೊರಟಲ್ಲಿ ಬೇರೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ; ಆದರೆ, ಈ ವಿಷಯವನ್ನು ಕೇಶಿರಾಜನು ಗಮನಿಸಿರುವ ಹಾಗೆ ತೋರುವುದಿಲ್ಲ.
ಉದಾಹರಣೆಗಾಗಿ, ಧಾತುಪ್ರಕರಣದಲ್ಲಿ ತರ್ ಮತ್ತು ಬರ್ ಎಂಬುದಾಗಿ ಎರಡು ಧಾತುಗಳನ್ನು ಹೆಸರಿಸಲಾಗಿದೆ; ಆದರೆ, ಇವನ್ನು ತಾರನ್ ಮತ್ತು ಬಾರನ್ ಎಂಬ ಅಲ್ಲಗಳೆಯುವ ರೂಪಗಳಿಂದ ಸಾಧಿಸಲು ಸಾಧ್ಯವಾಗದು. ತಾರನ್ ರೂಪದಿಂದ ಅನ್ ಪ್ರತ್ಯಯವನ್ನು ಕಳೆದರೆ ಉಳಿಯುವುದು ತಾರ್ ಅಲ್ಲದೆ ತರ್ ಅಲ್ಲ.
ಇದಲ್ಲದೆ, ಸೂ. ೨೪೯ರಲ್ಲಿ ಈ ಎರಡು ಅಲ್ಲಗಳೆಯುವ ಕ್ರಿಯಾರೂಪಗಳನ್ನು ಸಾಧಿಸಬೇಕಾದಾಗ, ತರ್ ಮತ್ತು ಬರ್ ಕ್ರಿಯಾಪದಗಳ ಮೊದಲ ಅಕಾರ ದೀರ್ಥವಾಗುತ್ತದೆಯೆಂದು ಹೇಳಿರುವುದನ್ನು ನೋಡಿದರೆ, ನಿಜಕ್ಕೂ ಅಲ್ಲ ಗಳೆಯುವ ಕ್ರಿಯಾರೂಪಗಳಿಂದ ಆಖ್ಯಾತ ಪ್ರತ್ಯಯವನ್ನು ತೆಗೆದು ಉಳಿಯುವ ಅಂಶ ಧಾತು ಎಂದುದು ೨೨೭ನೇ ಸೂತ್ರಕ್ಕೆ ಮಾತ್ರ ಸೀಮಿತವಾಗಿರುವ ಅಭಿಪ್ರಾಯವೆಂಬುದು ಸ್ಪಷ್ಟವಾಗುತ್ತದೆ.
ಕೇಶಿರಾಜನ ಈ ವಿಧಾನವನ್ನು ಬಳಸಿದಾಗ ಉಂಟಾಗುವ ಬೇರೆ ಕೆಲವು ಸಮಸ್ಯೆಗಳನ್ನು ಸೀತಾರಾಮಯ್ಯ (೧೯೭೯:೨೦೩) ವಿವರಿಸಿದ್ದಾ ರೆ.
೨.೨.೫ ಆಖ್ಯಾತ ಪ್ರತ್ಯಯಗಳಲ್ಲಿ ಲಿಂಗಭೇದ
ಹಳೆಗನ್ನಡ ಕ್ರಿಯಾರೂಪಗಳ ಕೊನೆಯಲ್ಲಿ ಬರುವ ಆಖ್ಯಾತ ಪ್ರತ್ಯಯಗಳು ಪುರುಷ
ಇ)
ಮತ್ತು ವಚನ ಭೇದಗಳನ್ನು ಮಾತ್ರವಲ್ಲದೆ, ಪ್ರಥಮಪುರುಷದಲ್ಲಿ ಲಿಂಗ ಭೇದವನ್ನೂ ಸೂಚಿಸುತ್ತವೆ.
ಗೆ
ಏಕವಚನದಲ್ಲಿ ಈ ಲಿಂಗಭೇದ ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕ ಲಿಂಗ
[ae
ಎಂಬುದಾಗಿದ್ದು, ಇದನ್ನು ಸೂಚಿಸುವುದಕ್ಕಾಗಿ ಅಮ್, ಅಳ್, ಮತ್ತು ಉದು ಎಂಬ ಮೂರು
ಪ್ರತ್ಯಯಗಳು ಬಳಕೆಯಾಗುತ್ತವೆ; ಬಹುವಚನದಲ್ಲಿ ಈ ಲಿಂಗಭೇದ ಮನುಷ್ಯ-ಮನುಷ್ಯೇತರ ಎಂಬುದಾಗಿದ್ದು, ಇದನ್ನು ಸೂಚಿಸುವು ದಕ್ಕಾಗಿ ಅರ್ ಮತ್ತು ಉವು ಎಂಬ ಎರಡು ಪ್ರತ್ಯಯಗಳು ಬಳಕೆಯಾಗುತ್ತವೆ (೯.೩ ನೋಡಿ).
ಆದರೆ, ಕೇಶಿರಾಜನು ಇವುಗಳಲ್ಲಿ ಏಕವಚನದ ಅಮ್ ಮತ್ತು ಬಹು ವಚನದ ಅರ್ ಎಂಬವುಗಳನ್ನು ಮಾತ್ರ ಪ್ರಥಮ ಪುರುಷದ ಆಖ್ಯಾತ ಪ್ರತ್ಯಯಗಳೆಂದು ಕರೆದು (ಸೂ. ೨೨೮), ಉಳಿದ ಪ್ರತ್ಯಯಗಳನ್ನು ಅವುಗಳ ಮೇಲೆ ಬರುವ “ಆದೇಶ’ಗಳೆಂದು ಕರೆದಿದ್ದಾನೆ (ಸೂ. ೨೩೬- ೭). ಇಲ್ಲೂ ಪ್ರತ್ಯಯ ಮತ್ತು ಆದೇಶಗಳ ನಡುವೆ ವ್ಯತ್ಯಾಸವೇ ಇಲ್ಲದಂತಾಗಿದೆ.
ಆತ ಹೀಗೆ ಮಾಡಿರುವುದಕ್ಕೂ ಸಂಸ್ಕೃತ ವ್ಯಾಕರಣದ ಮೂಲತತ್ವವನ್ನು ಹಳೆಗನ್ನಡದ ಮೇಲೆ ಹೊರಿಸಿರುವುದೇ ಕಾರಣ. ಸಂಸ್ಕೃತದ ಕ್ರಿಯಾರೂಪಗಳಲ್ಲಿ ಬರುವ ತಿಜ್ ಪ್ರತ್ಯಯಗಳು ಲಿಂಗಭೇದವನ್ನು ಸೂಚಿಸುವುದಿಲ್ಲ.
ಉದಾಹರಣೆಗಾಗಿ, ಪ್ರಥಮ ಪುರುಷ ಏಕವಚನದ ತಿ ಪ್ರತ್ಯಯ (ಗಚ್ಛತಿ, ಭವತಿ) ಲಿಂಗಭೇದವನ್ನು ಸೂಚಿಸಲಾರದು. ಅದು ಎಲ್ಲಾ ಲಿಂಗಗಳಲ್ಲೂ ಬದಲಾಗದೆ ಹಾಗೆಯೇ ಉಳಿಯುತ್ತದೆ (“ಹೋಗುತ್ತಾನೆ’, “ಹೋಗುತ್ತಾಳೆ’ ಮತ್ತು “ಹೋಗುತ್ತದೆ’ ಎಂಬ ಮೂರು ಅರ್ಥಗಳಲ್ಲೂ ಸಂಸ್ಕೃತದಲ್ಲಿ ಗಚ್ಛತಿ ಎಂಬುದನ್ನೇ ಬಳಸಬೇಕಾಗುತ್ತದೆ).
ಕೇಶಿರಾಜನು ಸಂಸ್ಕೃತದ ಈ ನಿಯಮವನ್ನು ಹಾಗೆಯೇ ಹಳೆಗನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿದ್ದಾನೆ; ಸಂಸ್ಕೃತದಲ್ಲಿರುವ ಹಾಗೆ, ಪುರುಷ ಮತ್ತು ವಚನ ಭೇದವನ್ನು ಸೂಚಿಸುವ ಪ್ರತ್ಯಯಗಳನ್ನು ಮಾತ್ರ ಆಖ್ಯಾತ ಪ್ರತ್ಯಯಗಳೆಂದು ಕರೆದು, ಪ್ರಥಮ ಪುರುಷದಲ್ಲಿ ಲಿಂಗ ಭೇದವನ್ನು ಸೂಚಿಸುವ ಪ್ರತ್ಯಯಗಳನ್ನು ಆದೇಶಗಳೆಂದು ಕರೆದಿದ್ದಾನೆ; ಎಂದರೆ, ಸಂಸ್ಕೃತದ ನಿಯಮಕ್ಕೆ ಹೊಂದಿಕೆಯಾಗದ ಹಳೆಗನ್ನಡದ ವೈಶಿಷ್ಟ $ವನ್ನು ಪ್ರತ್ಯಯಗಳ ಮೂಲಕ ವರ್ಣಿಸುವ ಬದಲು, ಆದೇಶಗಳ ಮೂಲಕ ವರ್ಣಿಸಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ “ಆದೇಶ’ವೆಂಬುದಕ್ಕೆ ವಿಚಿತ್ರವಾದ ಅರ್ಥ ಬಂದಿದೆ ಮಾತ್ರವಲ್ಲ, ಹಳೆಗನ್ನಡ ವ್ಯಾಕರಣವೂ ಅನವಶ್ಯಕವಾಗಿ ಹೆಚ್ಚು ಕ್ಲಿಷ್ಟವಾಗಿದೆ.
೨.೨.೬ ಗುಣಪದಗಳಲ್ಲಿ ಲಿಂಗಭೇದ
ಹಳೆಗನ್ನಡದಲ್ಲಿ ಗುಣಪದಗಳು ಬೇರೆಯೇ ಪದವರ್ಗದಲ್ಲಿ ಬರುತ್ತಿದ್ದು, ಅವುಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಅವಕ್ಕೆ ಅನ್, ಅಳ್, ಅರ್, ಉದು ಮತ್ತು ಉವು ಎಂಬ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (೫.೨.೧ ನೋಡಿ).
ಆದರೆ, ಸಂಸ್ಕೃತದಲ್ಲಿ ಗುಣಪದಕ್ಕೂ ನಾಮಪದಕ್ಕೂ ನಡುವೆ ವ್ಯತ್ಯಾಸವಿಲ್ಲ; ಅವುಗಳೊಂದಿಗೆ ಲಿಂಗ-ವಚನ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಪ್ರತ್ಯಯಗಳೂ ಬರುವುದಿಲ್ಲ; ವಿಭಕ್ತಿ ಪ್ರತ್ಯಯಗಳ ರೂಪಭೇದಗಳ ಮೂಲಕವೇನೇ ಇಂತಹ ವ್ಯತ್ಯಾಸಗಳನ್ನು ಸೂಚಿಸಬೇಕಾಗುತ್ತದೆ.
ಉದಾಹರಣೆಗಾಗಿ, ಕೃಷ್ಣ “ಕಪ್ಪು’ ಪದ ಸಂಸ್ಕೃತದಲ್ಲಿ ಮೂರು ಲಿಂಗಗಳಲ್ಲೂ ಬರಬಲ್ಲ ನಾಮಪದವಾಗಿದ್ದು, ವಿಶಿಷ್ಟವಾದ ಒಂದು ಬಳಕೆಯಲ್ಲಿ ಅದು ಯಾವ ಲಿಂಗದಲ್ಲಿದೆ ಎಂಬುದನ್ನು ಅದರೊಂದಿಗೆ ಬರುವ ವಿಭಕ್ತಿಪ್ರತ್ಯಯಗಳ ಸ್ವರೂಪದಲ್ಲಿ ಮಾತ್ರವೇ ಕಾಣಲು ಸಾಧ್ಯ. ಉದಾಹರಣೆಗಾಗಿ, ಅದರ ದ್ವಿತೀಯಾ ವಿಭಕ್ತಿ ರೂಪ ಕೃಷ್ಣಂ ಎಂದಿದ್ದರೆ ಅದು ಪುಲ್ಲಿಂಗದಲ್ಲಿದೆಯೆಂದೂ, ಕೃಷ್ಣಾಂ ಎಂದಿದ್ದರೆ ಸ್ವೀಲಿಂಗದಲ್ಲಿದೆಯೆಂದೂ ತಿಳಿದುಕೊಳ್ಳಬಹುದು.
ಕೇಶಿರಾಜನು ಹಳೆಗನ್ನಡದ ಗುಣಪದಗಳನ್ನು ಸಂಸ್ಕೃತದ ಗುಣಪದಗಳ ಹಾಗೆ ವರ್ಣಿಸಲು
ಯತ್ನಿಸಿದ್ದಾನೆ, ಮತ್ತು ಈ ಕಾರಣಕ್ಕಾಗಿ ಅವುಗಳೊಂದಿಗೆ ಬರುವ ಲಿಂಗ-ವಚನ ಪ್ರತ್ಯಯಗಳನ್ನು ತ್ಯಯಗಳೆಂದು ಪರಿಗಣಿಸದೆ ಆದೇಶಗಳೆಂದು ಪರಿಗಣಿಸಿದ್ದಾನೆ.
ಇದಲ್ಲದೆ, ಇಂತಹ “ಗುಣವಚನ’ಗಳಲ್ಲಿ ನಪುಂಸಕ-ಏಕವಚನದ ರೂಪಗಳನ್ನು ಮೂಲರೂಪಗಳೆಂಬುದಾಗಿ ಕಲ್ಪಿಸಿಕೊಂಡು, ಅವುಗಳಿಂದ ಉಳಿದ ರೂಪಗಳನ್ನು ಪಡೆಯುವ ಪ್ರಯತ್ನವನ್ನು ಅವನು ನಡೆಸಿದ್ದಾನೆ. ಉದಾಹರಣೆಗಾಗಿ, ಕಿಜುದು ಎಂಬುದರ ಕೊನೆಯ ದುವಿಗೆ ಅಕಾರವನ್ನು ಆದೇಶವಾಗಿ ಮಾಡುವ ಮೂಲಕ, ಆತನು ಕಿ೫ಯಂ ಎಂಬುದನ್ನು ಸಾಧಿಸಲು ಪ್ರಯತ್ನಿಸಿದ್ದಾನೆ (ಸೂ. ೧೬೩).
ಇದೇ ರೀತಿಯಲ್ಲಿ, ಅವನ್, ಆತನ್, ಅವರ್ ಮೊದಲಾದವುಗಳನ್ನು ಅದು ಎಂಬುದರಿಂದಲೂ, ಆವನ್, ಆವಳ್, ಆರ್ ಮೊದಲಾದುವನ್ನು ಆವುದು ಎಂಬುದರಿಂದಲೂ, ಬೇರೆ ಬೇರೆ ರೀತಿಯ ಆದೇಶಗಳ ಮೂಲಕ ಪಡೆದಿದ್ದಾನೆ (ಸೂ. ೧೬೧-೨). ಇಲ್ಲೂ ಆದೇಶ ಮತ್ತು ಪ್ರತ್ಯಯಗಳ ನಡುವೆ ವ್ಯತ್ಯಾಸವೇ ಇಲ್ಲವಾದ ಹಾಗಾಗಿದೆ.
ಸಂಸ್ಕೃತದಲ್ಲಿ ಹಳೆಗನ್ನಡದ ಹಾಗೆ ವಿಭಕ್ತಿ ಪ್ರತ್ಯಯಗಳಿಗಿಂತ ಭಿನ್ನವಾದ ಲಿಂಗ-ವಚನ ಪ್ರತ್ಯಯಗಳು ಇಂತಹ ಪದಗಳೊಂದಿಗೆ ಬರುವುದಿಲ್ಲವಾದ ಕಾರಣ, ಅವುಗಳ ವಿಭಕ್ತಿರೂಪಗಳಲ್ಲಿ ತೋರಿಬರುವ ವ್ಯತ್ಯಾಸಗಳನ್ನು ಆ ಭಾಷೆಯ ವ್ಯಾಕರಣದಲ್ಲಿ ಆಗಮ ಮತ್ತು ಆದೇಶಗಳೆಂಬ ಸಂಧಿನಿಯಮಗಳ ಮೂಲಕ ವಿವರಿಸಲಾಗುತ್ತದೆ. ಆದರೆ ಹಳೆಗನ್ನಡದಲ್ಲಿ ವಿಶಿಷ್ಟವಾದ ಲಿಂಗ- ವಚನ ಪ್ರತ್ಯಯಗಳಿದ್ದು, ಅವು ವಿಭಕ್ತಿ ಪ್ರತ್ಯಯಗಳಿಗಿಂತ ಭಿನ್ನವಾಗಿವೆ. ಹಾಗಾಗಿ, ಗುಣವಚನ, ಸರ್ವನಾಮ, ಸಂಖ್ಯೆ ಮೊದಲಾದವುಗಳಲ್ಲಿ ಕಾಣಿಸುವ ಲಿಂಗ-ವಚನ ಪ್ರತ್ಯಯಗಳನ್ನು ಆಗಮ ಇಲ್ಲವೇ ಆದೇಶಗಳೆಂದು ಪರಿಗಣಿಸುವುದು ಹಳೆಗನ್ನಡದ ಮಟ್ಟಿಗೆ ಉಚಿತವಲ್ಲ.
(EL EL
೨.೩ ವ್ಯಾಕರಣ ಸಂಜ್ಞೆಗಳು
ವ್ಯಾಕರಣಗಳಲ್ಲಿ ಹಲವು ರೀತಿಯ ಸಂಜ್ಞೆ; ಗಳನ್ನು ಬಳಸುವ ಅವಶ್ಯಕತೆಯಿದ್ದು, ಅವುಗಳಲ್ಲಿ ಕೆಲವು ಒಂದು ಭಾಷೆಯ ವ್ಯಾಕರಣಕ್ಕಷ್ಟೇ ಸೀಮಿತವಾಗಿರುತ್ತವೆ; ಅವು ಆ ಭಾಷೆಯ ಪದ ಇಲ್ಲವೇ ಪ್ರತ್ಯಯಗಳ ಸ್ವರೂಪವನ್ನವಲಂಬಿಸಿರಬಹುದು, ಇಲ್ಲ ವೇ ಆ ಭಾಷೆಯ ಸಂಧಿನಿಯಮಗಳ ಸ್ವರೂಪವನ್ನವಲಂಬಿಸಿರಬಹುದು.
ಇಂತಹ ಸಂಜ್ಞೆ ಗಳನ್ನು ಹಾಗೆಯೇ ಇನ್ನೊಂದು ಭಾಷೆಯ ವ್ಯಾಕರಣದಲ್ಲಿ ಬಳಸಲು ಸಾಧ್ಯವಾಗದು. ಹಳೆಗನ್ನಡ ವೈಯಾಕರಣಿಗಳು ಇಂತಹ ಹಲವು ಸಂಜ್ಞೆಗಳನ್ನು ಅವು ತಮ್ಮ ವ್ಯಾಕರಣಕ್ಕೆ ಅವಶ್ಯವೋ ಅಲ್ಲ ವೋ, ತಮ್ಮ ವ್ಯಾಕರಣಕ್ಕೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಹೋಗದೆ ಹಾಗೆಯೇ ಬಳಸಿಕೊಂಡಿದ್ದಾರೆ.
೨.೩.೧ ಸಂಕ್ಷಿಪ್ತ ರೂಪಗಳು
ಸಂಸ್ಕೃತ ವ್ಯಾಕರಣದಲ್ಲಿ ಬರುವ ಹಲವು ಸಂಜ್ಞೆಗಳು ಪ್ರತ್ಯಯಗಳ ಇಲ್ಲವೇ ಪದಗಳ ಪಟ್ಟಿಯನ್ನು ಸಂಕ್ಲಿಪ್ರವಾಗಿ ಸೂಚಿಸುವುದಕ್ಕಾಗಿ ತಯಾರಿಸಿರುವ ಸಂಕೇತಗಳು. ಅಂತಹ ಪ್ರತ್ಯಯ ಲ್ಲವೇ ಪದಗಳನ್ನು ಬಳೆಸದಿರುವ ಬೇರೊಂದು ಭಾಷೆಯ ವ್ಯಾಕರಣದಲ್ಲಿ ಅವಕ್ಕೆ ಯಾವ
23
ಸ್ಥಾನವೂ ಇಲ್ಲ. ಆದರೆ, ಹಳೆಗನ್ನಡದ ವೈಯಾಕರಣಿಗಳು ಇಂತಹ ಸಂಜ್ಞೆಗಳನ್ನೂ ತಮ್ಮ ವ್ಯಾಕರಣಗಳಲ್ಲಿ ಬಳಸಿಕೊಂಡಿದ್ದಾರೆ.
ಉದಾಹರಣೆಗಾಗಿ, ಸಂಸ್ಕೃತದ ನಾಮಪದಗಳ ಅನಂತರ ಸು, ಔ, ಜಸ್, ಅಂ, ಔಟ್, ಶಸ್ ಮೊದಲಾದ ಒಟ್ಟು ೨೧ ವಿಭಕ್ತಿ ಪ್ರತ್ಯಯಗಳು ಬರಲು ಸಾಧ್ಯವಿದ್ದು (೮.೩ ನೋಡಿ), ಇವನ್ನೆಲ್ಲ ಚುಟುಕಾಗಿ ಸೂಚಿಸಲು ಸುಪ್ ಸಂಜ್ಞೆಯನ್ನು ಬಳಸಲಾಗಿದೆ. ಇದು ಈ ಪ್ರತ್ಯಯಗಳ ಪಟ್ಟಿಯಲ್ಲಿ ಮೊದಲನೆಯದಾಗಿರುವ ಸು ಪ್ರತ್ಯಯದೊಂದಿಗೆ ಅದೇ ಪಟ್ಟಿಯ ಕೊನೆಯ ಪ್ರತ್ಯಯವಾದ ಸುಪ್ ಎಂಬುದರ ಕೊನೆಯ ಅಕ್ಷರವನ್ನು ಸೇರಿಸಿ ತಯಾರಿಸಿದ ಸಂಜ್ಞೆ
ಇದೇ ರೀತಿಯಲ್ಲಿ, ಕ್ರಿಯಾಪದಗಳ ಅನಂತರ ತಿಪ್, ತಸ್ ಮೊದಲಾದ ಪ್ರತ್ಯಯಗಳು ಬರಲು ಸಾಧ್ಯವಿದ್ದು, ಇವನ್ನೆಲ್ಲ ಚುಟುಕಾಗಿ ಸೂಚಿಸಲು ತಿಜು್ ಸಂಜ್ಞೇಃ ಯನ್ನು ಬಳಸಲಾಗಿದೆ. ಇದು ಈ ಪ್ರತ್ಯಯಗಳ ಪಟ್ಟಿಯಲ್ಲಿ ಮೊದಲನೆಯದಾಗಿರುವ ತಿಪ್ ಪ್ರತ್ಯಯದ ಮೊದಲನೆಯ ಅಕ್ಷರದೊಂದಿಗೆ ಕೊನೆಯದಾಗಿರುವ ಮಹಿಜ್‌್ ಪ್ರತ್ಯಯದ ಕೊನೆಯ ಅಕ್ಷರವನ್ನು ಸೇರಿಸಿ ತಯಾರಿಸಿದ ಸಂಜ್ಞೆ
ಹಳೆಗನ್ನಡದ ನಾಮಪದ ಮತ್ತು ಕ್ರಿಯಾಪದಗಳ ಅನಂತರ ಇವಕ್ಕಿಂತ ತೀರ ಬೇರಾಗಿರುವ ಪ್ರತ್ಯಯಗಳು ಬಳಕೆಯಾಗುತ್ತವೆ: ನಾಮಪದಗಳ ಅನಂತರ ಮ್, ಅಮ್, ಇಮ್ ಮೊದಲಾದ ಪ್ರತ್ಯಯಗಳೂ, ಕ್ರಿಯಾಪದಗಳ ಅನಂತರ ಅಮ್, ಅರ್, ಅಯ್, ಇರ್ ಮೊದಲಾದ ಪ್ರತ್ಯಯಗಳೂ ಬರುವುವೆಂದು ಕೇಶಿರಾಜನು (ಸೂ. ೧೦೩, ೨೨೮) ಹೇಳಿರುವುದನ್ನು ಇಲ್ಲಿ ಗಮನಿಸಬಹುದು. ಹಾಗಾಗಿ, ಮೇಲೆ ಕೊಟ್ಟಿರುವ ಸಂಸ್ಕೃತ ವ್ಯಾಕರಣದ ಸುಪ್ ಮತ್ತು ತಿಜ್‌್ ಸಂಜ್ಞೆಗಳನ್ನಾಗಲಿ, ಇಲ್ಲವೇ ಅವನ್ನು ಬಳಸಿ ರಚಿಸಿದ ಸುಬಂತ ಮತ್ತು ತಿಜಂತ ಪದಗಳನ್ನಾಗಲಿ ಹಾಗೆಯೇ ಹಳೆಗನ್ನಡ ವ್ಯಾಕರಣದಲ್ಲಿ ಬಳಸುವುದು ಉಚಿತವಾಗಲಾರದು.
ಆದರೆ, ಭಟ್ಟಾಕಳಂಕನು ತನ್ನ ವ್ಯಾಕರಣ(ಶಬ್ದಾನುಶಾಸನ)ದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಸೂಚಿಸಲು ಸುಪ್ ಸಂಜ್ಞೆಯನ್ನೂ (ಸೂ. ೨೦೨), ಆಖ್ಯಾತ ಪ್ರತ್ಯಯಗಳನ್ನು ಸೂಚಿಸಲು ತಿಜ್‌್ ಸಂಜ್ಞೆಯನ್ನೂ (ಸೂ. ೪೪೬) ಹಾಗೆಯೇ ಬಳಸಿದ್ದಾನೆ. ಹಳೆಗನ್ನಡದಲ್ಲಿ ಇಂತಹ ಸಂಜ್ಞೆಗಳನ್ನು ಬಳಸಬೇಕಿದ್ದರೂ ಅವನ್ನು ಹಳೆಗನ್ನಡದ ಪ್ರತ್ಯಯಗಳಿಂದ (ಅವುಗಳ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಒಟ್ಟುಸೇರಿಸಿ) ತಯಾರಿಸಿದ್ದರೆ ಒಳ್ಳೆಯದಿತ್ತು.
ಹಳೆಗನ್ನಡ ವೈಯಾಕರಣಿಗಳ ಮೇಲೆ ಸಂಸ್ಕೃತ ವ್ಯಾಕರಣ ಎಂತಹ ಪ್ರಭಾವವನ್ನು ಬೀರಿತ್ತು ಎಂಬುದನ್ನು ಈ ವಿಷಯ ಸ್ಪಷ್ಟಪಡಿಸುತ್ತದೆ.
೨.೩.೨ ಕಾರಕಗಳು
ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳಿಗೂ ವಿಭಕ್ತಿ ಪ್ರತ್ಯಯಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿಲ್ಲವಾದ ಕಾರಣ, ಅಂತಹ ಸಂಬಂಧಗಳನ್ನು ಸೂಚಿಸಲು “ಕಾರಕ’ಗಳೆಂಬ ಕೆಲವು ವ್ಯಾಕರಣ ಸಂಬಂಧಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ (೮.೬ ನೋಡಿ).
ಆದರೆ ಹಳೆಗನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಡುವಿನ ಸಂಬಂಧಕ್ಕೂ ವಿಭಕ್ತಿ ಪ್ರತ್ಯಯಗಳಿಗೂ ನಡುವೆ ಹೆಚ್ಚು ಕಡಿಮೆ ನೇರವಾದ ಹೊಂದಾಣಿಕೆಯಿದೆ; ಹಾಗಾಗಿ, ಇಂತಹ ಕಲ್ಪಿತ ಸಂಬಂಧಗಳ ಅವಶ್ಯಕತೆ ಹಳೆಗನ್ನಡ ವ್ಯಾಕರಣಕ್ಕಿಲ್ಲ. ಹೀಗಿದ್ದರೂ, ಸಂಸ್ಕೃತದಲ್ಲಿ
ಕಾರಕಗಳ ಬಳಕೆಯಾಗಿರುವುದನ್ನು ಗಮನಿಸಿ, ಹಳೆಗನ್ನಡದ ವೈಯಾಕರಣಿಗಳು ಅವನ್ನು ತಮ್ಮ ವ್ಯಾಕರಣಗಳಲ್ಲೂ ಬಳಸಿದ್ದಾ ರೆ.
ಇದಲ್ಲದೆ, ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧಗಳನ್ನು ಹಳೆಗನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ರೀತಿಯಲ್ಲಿ ವಿಭಜಿಸುತ್ತದೆ; ಹಾಗಾಗಿ, ಕಾರಕಗಳೆಂಬ ವ್ಯಾಕರಣ ಸಂಬಂಧಗಳನ್ನು ಹಳೆಗನ್ನಡ ವ್ಯಾಕರಣದಲ್ಲಿ ಬಳಸುವುದಿದ್ದರೂ ಅವು ಸಂಸ್ಕೃತದ ಕಾರಕಗಳಿಂದ ತೀರ ಭಿನ್ನವಾಗಿರುವ ಅವಶ್ಯಕತೆಯಿದೆ. ಹಳೆಗನ್ನಡದ ವೈಯಾಕರಣಿಗಳು ಇದನ್ನು ಗಮನಿಸದೆ ಸಂಸ್ಕೃತದ ಕಾರಕಗಳೆಲ್ಲವೂ ಹಳೆಗನ್ನಡದಲ್ಲೂ ಇರಬೇಕೆಂದು ತೀರ್ಮಾನಿಸಿ, ಅವನ್ನು ಸೂಚಿಸುವುದಕ್ಕಾಗಿ ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಹುಡುಕಲು ಹೊರಟಿದ್ದಾರೆ.
ಉದಾಹರಣೆಗಾಗಿ, ಅತ್ತಣಿಂ ಎಂಬ ವಾಕ್ಯಾಂಶವನ್ನು ಇವರು ಒಂದು ವಿಭಕ್ತಿ ಪ್ರತ್ಯಯವೆಂದು ಕರೆದಿರುವುದು (ಭಟ್ಟಾಕಳಂಕ, ಸೂ. ೨೨೦ ನೋಡಿ) ಹಳೆಗನ್ನಡದಲ್ಲಿ “ಅಪಾದಾನ’ ಕಾರಕವನ್ನು ಸೂಚಿಸಲು “ಕರಣ’ವನ್ನು ಸೂಚಿಸುವ ಇಂ ಪ್ರತ್ಯಯಕ್ಕಿಂತ ಭಿನ್ನವಾದ ಪ್ರತ್ಯಯವಿಲ್ಲದಿರುವುದೇ ಕಾರಣ. ಆದರೆ, ನಿಜಕ್ಕೂ ಅತ್ತಣಿಂ ಎಂಬುದು ಒಂದು ಪ್ರತ್ಯಯವೇ ಅಲ್ಲ; ಅದು ಅತ್ತಣ ಎಂಬ ಸರ್ವನಾಮ ರೂಪಕ್ಕೆ ಇಂ ಎಂಬ ವಿಭಕ್ತಿ ಪ್ರತ್ಯಯವನ್ನು ಸೇರಿಸಿ ರಚಿಸಿರುವ ಪದರೂಪ.
ಕೇಶಿರಾಜನು ಬಹುಶಃ ಈ ಸಮಸ್ಯೆಯನ್ನು ಗಮನಿಸಿ, ಈ ಪ್ರತ್ಯಯವನ್ನು ಅತ್ ಎಂಬುದಾಗಿ ನಿರೂಪಿಸಿದ್ದಾನೆ (ಸೂ. ೧೦೩). ಆದರೆ ಮುಂದೆ ಸೂ. ೧೨೬ರಲ್ಲಿ ಈ ಪ್ರತ್ಯಯಕ್ಕೆ ಅತ್ತ ಣಿಂಎಂಬ “”ನಿಜರೂಪ’ವಿದೆಯೆಂದು ಮತ್ತು ಇದರೊಂದಿಗೆ ತೃತೀಯೆಯ ಇಂ, ಇಂದಂ ಮತ್ತು ಇಂದೆ ಎಂಬವು ಬರುವುವೆಂದು ಆತ ಹೇಳಬೇಕಾಗಿದೆಯಾದ ಕಾರಣ, ಸಮಸ್ಯೆ ಬಗೆಹರಿದಿಲ್ಲ. ಪಂಚಮೀ ವಿಭಕ್ತಿ ಪ್ರತ್ಯಯದಲ್ಲಿ ತೃತೀಯಾ ವಿಭಕ್ತಿ ಪ್ರತ್ಯಯಕ್ಕೆ ಏನು ಕೆಲಸ?
೨.೩.೩ ಉಪಯೋಗಿಸದ ಸಂಜ್ಞೆಗಳು
ಹಳೆಗನ್ನಡದ ವೈಯಾಕರಣಿಗಳು ಬೇರೆ ಕೆಲವು ಸಂಜ್ಞೆ; ಗಳನ್ನು ತಮ್ಮ ವ್ಯಾಕರಣದಲ್ಲಿ ಬಳಸುವ ಸಂದರ್ಭವಿಲ್ಲದಿದ್ದರೂ ಅವು ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗಿವೆ ಎಂಬ ಒಂದು ಕಾರಣಕ್ಕಾಗಿ ಮಾತ್ರ ಅವನ್ನು ತಮ್ಮ ವ್ಯಾಕರಣಗಳಲ್ಲೂ ಉದ್ದ ರಿಸಿ ವಿವರಿಸಲು ಪ್ರಯತ್ನಿಸಿದ್ದಾ ರೆ.
ಉದಾಹರಣೆಗಾಗಿ, ಕೇಶಿರಾಜನು ಉದ್ಧರಿಸಿ ವಿವರಿಸಿರುವ ಸಮಾನ, ಸವರ್ಣ (ಅನುಲೋಮ-ವಿಲೋಮ), ನಾಮಿ ಮೊದಲಾದ ಹಲವು ಸಂಜ್ಞೆಗಳಿಗೆ ಅವನ ಹಳೆಗನ್ನಡ ವ್ಯಾಕರಣದಲ್ಲಿ ಯಾವ ಕೆಲಸವೂ ಇಲ್ಲ (ಬಿಳಿಗಿರಿ ೧೯೬೯:೩೭ ನೋಡಿ).
ಸಂಸ್ಕೃತ ವ್ಯಾಕರಣದಲ್ಲಿ ಅ-ಆ, ಇ-ಈ, ಉ-ಊ, ಯ-ಖಯೂ ಎಂಬ ನಾಲ್ಕು ಸ್ವರಗಳ ಜೋಡಿಗಳನ್ನು ಸವರ್ಣಗಳೆಂದು ಕರೆಯಲಾಗಿದೆ; ಈ ಸಂಜ್ಞೆ: ಯಿಂದ ಆ ವ್ಯಾಕರಣಕ್ಕಿರುವ ಪ್ರಯೋಜನವೇನೆಂದರೆ, ಅದರ ಮೂಲಕ ಸಂಸ್ಕೃತಕ್ಕೆ ಬೇಕಾಗುವ ಹಲವು ಸಂಧಿ ನಿಯಮಗಳನ್ನು ಸುಲಭವಾಗಿ ವಿವರಿಸಲು ಸಾಧ್ಯವಾಗುತ್ತದೆ, ಮತ್ತು ಅಂತಹ ನಿಯಮಗಳನ್ನೆಲ್ಲ ಒಟ್ಟಿಗೆ “ಸವರ್ಣ ದೀರ್ಥ’ವೆಂಬ ಹೆಸರಿನಿಂದ ಕರೆಯಲು ಸಾಧ್ಯವಾಗುತ್ತದೆ.
ಸವರ್ಣ ಜೋಡಿಗಳಲ್ಲಿರುವ ಸ್ವರಗಳಲ್ಲಿ ಯಾವುದಾದರೂ ಒಂದರ ಅನಂತರ ಅದೇ ಸ್ವರ ಇಲ್ಲ ವೇ ಜೋಡಿಯ ಇನ್ನೊಂದು ಸ್ವರ ಬಂದಿದೆಯಾದರೆ, ಅವೆರಡರ ಬದಲು ಉದ್ದ (ದೀರ್ಥ) ಸ್ವರ ಬರುತ್ತ ದೆಯೆಂಬುದೇ ಈ ನಿಯಮದ ಸಾರ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸೇರಿಕೆಗಳನ್ನು ಗಮನಿಸಬಹುದು.
(೧ಕ) ಅತ್ರಅಸ್ತಿ ಅತ್ರಾಸ್ತಿ ಅತ್ರ ಆಸೀತ್ ಅತ್ರಾಸೀತ್ ಯದಾ- ಅಸ್ತಿ ಯದಾಸ್ತಿ
(೧ಖ) ಅಸ್ತಿಇಹ ಅಸ್ತೀಹ ನದೀಇಹ ನದೀಹ
(೧ಗ) ಗುರುಉಪದೇಶ ಗುರೂಪದೇಶ ಸಾಧು-ಊಚುಃ ಸಾಧೂಚುಃ
(೧ಕ)ದಲ್ಲಿ ಕೊಟ್ಟಿರುವ ಸೇರಿಕೆಗಳಲ್ಲಿ ಅ-ಆ ಜೋಡಿಯ ಸ್ವರಗಳೆರಡು ಒಟ್ಟು ಸೇರಿ ಉದ್ದಸ್ವರ (ಆ ಎಂಬುದು) ಸಿದ್ದ ವಾಗಿದೆ; ಇದಕ್ಕೆ ಬದಲು, (೧ಖ)ದಲ್ಲಿ ಕೊಟ್ಟಿರುವ ಸೇರಿಕೆಗಳಲ್ಲಿ ಇ-ಈ ಜೋಡಿಯೂ, (೧ಗ)ದಲ್ಲಿ ಕೊಟ್ಟಿರುವ ಸೇರಿಕೆಗಳಲ್ಲಿ ಉ-ಊ ಜೋಡಿಯೂ ಈ ರೀತಿ ಸಂಧಿಯಾಗಿರುವುದನ್ನು ಕಾಣಬಹುದು..
ಕೇಶಿರಾಜನು ಈ ಜೋಡಿಗಳೊಂದಿಗೆ ಹಳೆಗನ್ನಡದಲ್ಲಿ ಕಾಣಿಸುವ (ಮತ್ತು ಸಂಸ್ಕೃತದಲ್ಲಿ ಕಾಣಿಸದ) ಎ-ಏ ಮತ್ತು ಒ-ಓ ಜೋಡಿಗಳಿಗೂ ಸವರ್ಣ ಸಂಜ್ಞೆ ಬರುತ್ತ ದೆಯೆಂದು ತಿಳಿಸಿದ್ದಾನೆ (ಸೂ. ೧೮). ಆದರೆ ಕನ್ನಡದ ಸಂಧಿ ನಿಯಮಗಳು ಸಂಸ್ಕೃತದ ಸಂಧಿ ನಿಯಮಗಳಿಂದ ತೀರ ಭಿನ್ನವಾಗಿವೆಯಾದ ಕಾರಣ, ಅವನ್ನು ವಿವರಿಸುವಲ್ಲಿ ಈ ಸಂಜ್ಞೆ: ಯಿಂದ ಯಾವ ಪ್ರಯೋಜನವೂ ಇಲ್ಲ.
ನಿಜಕ್ಕೂ ಹಳೆಗನ್ನಡದ ಸಂಧಿನಿಯಮಗಳಲ್ಲಿ ಗಿಡ್ಡ (ಹ್ರಸ್ವ) ಮತ್ತು ಉದ್ದ (ದೀರ4) ಸ್ವರಗಳೆರಡೂ ಒಂದೇ ರೀತಿಯಲ್ಲಿ ಬದಲಾಗುವುದಿಲ್ಲ. ಗಿಡ್ಡ ಸ್ವರಗಳು ಲೋಪಗೊಳ್ಳುತ್ತವೆ; ಆದರೆ, ಉದ್ದ ಸ್ವರಗಳು ಲೋಪಗೊಳ್ಳುವುದಿಲ್ಲ. ಕೇಶಿರಾಜನೇ ಹೇಳಿರುವ ಹಾಗೆ (ಸೂ. ೬೫) ಈ “ಇದು ಎಂಬುದು ಈವಿದು ಎಂದಾಗುತ್ತದಲ್ಲದೆ ಈದು ಎಂದಾಗುವುದಿಲ್ಲ. ಹಾಗಾಗಿ, “ಸವರ್ಣ’ ಎಂಬ ಈ ಪಾರಿಭಾಷಿಕ ಪದ ಹಳೆಗನ್ನಡದ ವ್ಯಾಕರಣಕ್ಕೆ ಅನವಶ್ಯಕ ಮಾತ್ರವಲ್ಲ, ಪ್ರತಿಕೂಲವಾಗಿದೆ.
“ನಾಮಿ’ ಎಂಬ ಇನ್ನೊಂದು ಪಾರಿಭಾಷಿಕ ಪದದ ಅವಶ್ಯಕತೆಯೂ ಹಳೆಗನ್ನಡಕ್ಕಿಲ್ಲ. ಸಂಸ್ಕೃತದಲ್ಲಿ ಅಕಾರ ಮತ್ತು ಆಕಾರಗಳನ್ನು ಬಿಟ್ಟು ಇತರ ಸ್ವರಗಳನ್ನು ನಾಮಿಗಳೆಂದು ಕರೆಯಲಾಗಿದೆ; ಈ ಎರಡು ಸ್ವರಗಳನ್ನು ಬಿಟ್ಟು ಇತರ ಸ್ವರಗಳ ಸಾಹಚರ್ಯದಲ್ಲಿರುವ ಸಕಾರ ಸಂಸ್ಕೃತದಲ್ಲಿ ಷಕಾರವಾಗುತ್ತದೆ (ಹರಿಷು, ಗುರುಷು, ಕತಣೃಷು, ನೌಷು) ಎಂಬ ನಿಯಮವೇ ಈ ಪದದ ಬಳಕೆಗೆ ಆಧಾರ. ಆದರೆ ಹಳೆಗನ್ನಡದ ಸಂಧಿಕಾರ್ಯಗಳಲ್ಲಿ ಈ ಪದದ ಬಳಕೆಗೆ ಯಾವ ಆಧಾರವೂ ಇಲ್ಲ (ವೆಂಕಟಾಚಲ ಶಾಸ್ತ್ರೀ ೧೯೯೪:೯-೧೦ ನೋಡಿ).
೨.೪ ಪ್ರತ್ಯಯ ಮತ್ತು ಪದರೂಪ
ಪದಗಳನ್ನು ಮತ್ತು ಪದರೂಪಗಳನ್ನು ವಿವರಿಸುವಾಗ ಆದಷ್ಟು ಮಟ್ಟಿಗೆ ಅವುಗಳ ಒಳರಚನೆಯೇನು ಎಂಬುದನ್ನು ವಿವರಿಸಿ ಹೇಳುವುದು ವ್ಯಾಕರಣದ ಉದ್ದೇಶ. ಹಳೆಗನ್ನಡ ವೈಯಾಕರಣಿಗಳು “ಪ್ರತ್ಯಯ’ಗಳೆಂದು ಕರೆದಿರುವ ಕೆಲವು ವಾಕ್ಯಾಂಶಗಳಲ್ಲಿ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳು, ಸೇರಿರುವುದನ್ನು ಮತ್ತು ಇನ್ನು ಕೆಲವು ವಾಕ್ಯಾಂಶಗಳಲ್ಲಿ ಪ್ರತ್ಯಯಗಳೊಂದಿಗೆ ಇಡೀ ಪದರೂಪಗಳೇ ಸೇರಿಕೊಂಡಿರುವುದನ್ನೂ ಕಾಣಬಹುದು. ನಿಜಕ್ಕೂ ಇವು ಪ್ರತ್ಯಯಗಳಲ್ಲ.
ಪಾರಿಭಾಷಿಕ ಪದಗಳ ಬಳಕೆ
83 ([ >
ಇವುಗಳ ಒಳರಚನೆಯೆಂತಹದು ಎಂಬುದನ್ನು ವ್ಯಾಕರಣಗಳು ಸ್ಪಷ್ಟವಾಗಿ “ವಿವರಿಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ವರ್ತಮಾನ ಕಾಲವನ್ನು ಸೂಚಿಸುವುದಕ್ಕಾಗಿ ಬರುವ ದಪ ಎಂಬುದು ಒಂದು ಪ್ರತ್ಯಯವಲ್ಲ. ಹೀಗಿದ್ದರೂ ಭಟ್ಟಾಕಳಂಕನು ಇದನ್ನು ಪ್ರತ್ಯಯವೆಂದು ಕರೆದಿದ್ದಾನೆ (ಸೂ. ೪೪೬), ಮತ್ತು ಕೇಶಿರಾಜನು (ಸೂ. ೨೩೨) ಆಗಮವೆಂದು ಕರೆದಿದ್ದಾ ನೆ. ನಿಜಕ್ಕೂ ಇದರಲ್ಲಿ ಭೂತ ಮತ್ತು ಭವಿಷ್ಯತ್‌ಗಳೆಂಬ ಎರಡು ಪ್ರತ್ಯಯಗಳ ಸೇರಿಕೆಯಿದೆ. ಇದಲ್ಲದೆ, ಈ ಎರಡನೆಯ ಭವಿಷ್ಯತ್ ಪ್ರತ್ಯಯದಲ್ಲಿ ಆಗು ಎಂಬ ಕ್ರಿಯಾಪದದ ಪದರೂಪವೂ ಅಡಗಿಕೊಂಡಿದೆ (ವಿವರಗಳಿಗೆ ೯.೨.೧ ನೋಡಿ).
ಮೇಲೆ (೨.೩.೨)ರಲ್ಲಿ ಸೂಚಿಸಿದ ಹಾಗೆ ಅತ್ತಣಿಂ ಎಂಬುದನ್ನು (ಮರದತ್ತಣಿಂ, ಕೆಣ್‌ಯತ್ತಣಿಂ) ಒಂದು ವಿಭಕ್ತಿ ಪ್ರತ್ಯಯವೆಂದು ಪರಿಗಣಿಸಿರುವುದು ಮೇಲೆ ವಿವರಿಸಿದ ಪರಿಸ್ಥಿತಿಗೆ ಇನ್ನೊಂದು ಉದಾಹರಣೆ. ನಿಜಕ್ಕೂ ಇದು ಅತ್ತ ಸರ್ವನಾಮದ ಸಂಬಂಧಿಸುವ ರೂಪಕ್ಕೆ (ಅತ್ತಣ ಎಂಬುದಕ್ಕೆ) ಇಂ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಪದರೂಪ. ಇದನ್ನು ನಾಮಪದದ ಸಂಬಂಧಿಸುವ ರೂಪದೊಂದಿಗೆ ಬಳಸಲಾಗುತ್ತದೆ (ಮರದತ್ತಣಿಂ ಎಂಬುದರಲ್ಲಿ ಅತ್ತಣಿಂ ಪದವನ್ನು ಮರದ ಎಂಬುದಕ್ಕೆ ಸೇರಿಸಲಾಗಿದೆ).
ಕೇಶಿರಾಜನು ಶಬ್ದ ಮಣಿದರ್ಪಣದ ೧೬೨ನೇ ಸೂತ್ರದಲ್ಲಿ ಆವುದು ಎಂಬ ಇಡೀ ಪದಕ್ಕೇನೇ ಪುಲ್ಲಿಂಗ ಏಕವಚನದಲ್ಲಿ ಆವನ್ ಎಂಬುದು, ಮತ್ತು ಪುಲ್ಲಿಂಗ ಬಹುವಚನದಲ್ಲಿ ಆರ್ ಎಂಬುದು “ಆದೇಶ’ವಾಗಿ ಬರುತ್ತದೆ ಎಂದು ಹೇಳಿದ್ದಾನೆ. ಆತನು ಈ ರೀತಿ ಹೇಳುವಾಗ, ಈ ಮೂರು ರೂಪಗಳಲ್ಲೂ ಆ ಎಂಬುದು ಬದಲಾಗದೆ ಉಳಿದಿದೆ ಎಂಬುದನ್ನು ಗಮನಿಸಿದ ಹಾಗಿಲ್ಲ.
ನಿಜಕ್ಕೂ ಇಲ್ಲಿ ಆ ಎಂಬುದು ಅನಿಶ್ಚಿತತೆಯನ್ನು ಸೂಚಿಸುವ ಸರ್ವನಾಮದ (ಸರ್ವಪದದ) ಒಂದು ಅಂಗ. ಅದರೊಂದಿಗೆ ಅನ್, ಅರ್, ಉದು ಮೊದಲಾದ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯಗಳಲ್ಲೊಂದನ್ನು ಬಳಸುವ ಮೂಲಕ ಆ ಸರ್ವನಾಮದ ವ್ಯಾಪ್ತಿಯನ್ನು ಸೂಚಿಸಲಾಗುತ್ತದೆ. ಇವು ಬೇರೆ ಬೇರೆ ಪ್ರತ್ಯಯಗಳಲ್ಲದೆ, ಒಂದೇ ಪ್ರತ್ಯಯದ ರೂಪಭೇದಗಳಲ್ಲ. ಹಾಗಾಗಿ, ಆದೇಶ ಪದದ ಬಳಕೆಯೂ ಇಲ್ಲಿ ಉಚಿತವಲ್ಲ (೪.೫ ನೋಡಿ).
ಪ್ರಾಚೀನ ಹಳೆಗನ್ನಡ ವ್ಯಾಕರಣಗಳಲ್ಲಿ ಆಗಮ, ಆದೇಶ, ಪ್ರತ್ಯಯ ಮೊದಲಾದ ಪಾರಿಭಾಷಿಕ ಪದಗಳನ್ನು ಈ ರೀತಿ ತಪ್ಪಾಗಿ ಬಳಸಿರುವುದಕ್ಕೆ ಬೇರೆಯೂ ಹಲವು ಉದಾಹರಣೆಗಳನ್ನು ಕಾಣಬಹುದು. ಭಟ್ಟಾಕಳಂಕನ ಸೂ. ೫೮೮ರಲ್ಲಿ ಪಾಡುವನ್ನಂ, ಪಾಡುವುದುಂ, ಪಾಡುವಿನೆಗಂ ಎಂಬವುಗಳಲ್ಲಿ ವನ್ನಂ, ವುದುಂ, ವನ್ನೆಗಂ, ವಿನೆಗಂ ಎಂಬ ಪ್ರತ್ಯಯಗಳು ಬಂದಿವೆಯೆಂದು ಹೇಳಲಾಗಿದೆ; ಆದರೆ, ನಿಜಕ್ಕೂ ಈ ಪದರೂಪಗಳಲ್ಲಿ ಕ್ರಿಯಾಪದಗಳ ಬಳಿಕ ಭವಿಷ್ಯದರ್ಥದ ವ್ ಪ್ರತ್ಯಯವೂ, ಸರ್ವಪದಗಳ ಅನ್ನೆಗಂ, ಅನ್ನಂ, ಉದುಂ ಮೊದಲಾದ ರೂಪಗಳೂ ಬಂದಿವೆ.
೨.೫ ಹಳೆಗನ್ನಡದ ವ್ಯಾಪ್ತಿ
ಕೇಶಿರಾಜನು ವ್ಯಾಕರಣವನ್ನು ರಚಿಸಿದ ಕಾಲದಲ್ಲಿ, ಗ್ರಂಥರಚನೆಯಲ್ಲಿ ಬಳಕೆಯಾಗುತ್ತಿ ದ್ದ ಹಳೆಗನ್ನಡ ಭಾಷಾಪ್ರಭೇದ ಮಾತಿನಲ್ಲಿ ಬಳಕೆಯಲ್ಲಿದ್ದ ಪ್ರಭೇದಕ್ಕಿಂತ ಭಿನ್ನವಾಗಿದ್ದಿರಬೇಕು. ಈ ಕಾರಣಕ್ಕಾಗಿ, ಆತನು ತನ್ನ ವ್ಯಾಕರಣ ನಿಯಮಗಳಿಗೆ ಮಾತಿನಲ್ಲಿ ಬಳಕೆಯಾಗುವ ವಾಕ್ಯಗಳನ್ನು
ಆಧಾರವಾಗಿ ಕೊಡುವ ಬದಲು, ಗ್ರಂಥಗಳಲ್ಲಿ ಕಂಡುಬರುವ ಪ್ರಯೋಗಗಳನ್ನು ಆಧಾರವಾಗಿ ಕೊಡುವ ಅವಶ್ಯಕತೆಯುಂಟಾಗಿತ್ತು.
ಬಿಳಿಗಿರಿ (೧೯೬೪:೧೨) ಸೂಚಿಸಿದ ಹಾಗೆ, ಸುಮಾರು ೩೫೦ ವರ್ಷಗಳಷ್ಟು ದೀರ್ಫವಾದ ಅವಧಿಯಲ್ಲಿ ರಚಿತವಾದ ಹಳೆಗನ್ನಡ ಗ್ರಂಥಗಳನ್ನು ಆತನು ತನ್ನ ವ್ಯಾಕರಣಕ್ಕೆ ಆಕರಗಳನ್ನಾಗಿ ಬಳಸಿದ್ದಾನೆ. ಈ ದೀರ್ಫವಾದ ಅವಧಿಯಲ್ಲಿ ಹಳೆಗನ್ನಡ ಹಲವು ರೀತಿಯ ಬದಲಾವಣೆಗಳನ್ನು ಕಂಡಿದ್ದು, ಅವುಗಳಲ್ಲಿ ಕೆಲವು ಈ ಗ್ರಂಥಗಳನ್ನೂ ಬಾಧಿಸಿವೆ. ಆದರೆ, ಕೇಶಿರಾಜನಿಗೆ ಇವನ್ನು “ಭಾಷೆಯಲ್ಲಿ ನಡೆದ ಬದಲಾವಣೆ’ಗಳೆಂಬುದಾಗಿ ಪರಿಗಣಿಸಲು ಸಾಧ್ಯವಾಗಿರಲಿಲ್ಲ.
ಅಂತಹ ಐತಿಹಾಸಿಕ ದೃಷ್ಟಿಯಿಲ್ಲದಿದ್ದುದು ಆತನ ವ್ಯಾಕರಣಕ್ಕೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡಿ ದೆ. ಆತನು ತನ್ನ ವ್ಯಾಕರಣಕ್ಕೆ ಆಧಾರವಾಗಿ ಬಳಸಿದಂತಹ ಗ್ರಂಥಗಳಲ್ಲಿ ಕಾಣಿಸುವ “ಬದಲಾವಣೆ’ಗಳಲ್ಲಿ ಕೆಲವನ್ನು ವಿಕಲ್ಪಗಳೆಂದು ಪರಿಗಣಿಸಿರುವನಾದರೆ ಇನ್ನು ಕೆಲವನ್ನು ತಪ್ಪು ಎಂದು ಸಾರಿದ್ದಾನೆ; ವಿಕಲ್ಪಗಳೆಂದು ಪರಿಗಣಿಸಿರುವಲ್ಲೆಲ್ಲ ಅನವಶ್ಯಕವಾಗಿ ವ್ಯಾಕರಣ ನಿಯಮಗಳನ್ನು ಕಲ್ಪಿಸಬೇಕಾಗಿದೆಯಾದ ಕಾರಣ, ಅದರಿಂದಾಗಿ ಆತನ ವ್ಯಾಕರಣ ಕ್ಲಿ ಷ್ಟವಾಗಿದೆ.
ಉದಾಹರಣೆಗಾಗಿ, ಪಕಾರ ಹಕಾರವಾಗುವ ಬದಲಾವಣೆ ಕೆಲವು ಹಳೆಗನ್ನಡ ಗ್ರಂಥಗಳನ್ನು ಬಾಧಿಸಿದೆ; ಆದರೆ, ಬೇರೆ ಕೆಲವು ಗ್ರಂಥಗಳನ್ನು ಬಾಧಿಸಿಲ್ಲ. ಪಂಪಭಾರತದ ಕನ್ನಡ ಪದಗಳಲ್ಲಿ ಈ ಬದಲಾವಣೆ ಕಾಣಿಸುವುದಿಲ್ಲ; ಆದರೆ, ಅನಂತರದ ಗ್ರಂಥಗಳಲ್ಲಿ ಕಾಣಿಸಿಕೊಳ್ಳುತ್ತ ದೆ. ಕೇಶಿರಾಜನು ಈ ರೀತಿ ಪಕಾರಕ್ಕೆ ಬದಲಾಗಿ ಹಕಾರ ಬಳಕೆಯಾಗುವುದನ್ನು ವಿಕಲ್ಪವೆಂದು ಪರಿಗಣಿಸಿದ್ದಾನೆ, ಮತ್ತು ದೇಶಿಯಲ್ಲಿ ಅದು ಚೆಲ್ವು ಎಂದೂ ಹೇಳಿದ್ದಾನೆ (ಸೂ. ೧೭೦).
ಆದರೆ ಬೆರಲ್, ಕೊರಲ್, ಸರಲ್, ಒರಲ್ ಮೊದಲಾದ ಪದಗಳಲ್ಲಿ ರಕಾರದ ಅನಂತರ ಬರುವ ಲಕಾರವನ್ನು ಳಕಾರವಾಗಿ (ಬೆರಳ್, ಕೊರಳ್, ಸರಳ್, ಒರಳ್ ಇತ್ಯಾದಿಯಾಗಿ) ಉಚ್ಚರಿಸುವುದನ್ನು ಆತನು ನಿಷೇಧಿಸಿದ್ದಾ ನೆ (ಸೂ. ೩೮). ನಿಜಕ್ಕೂ ಇದು ಪಕಾರ ಹಕಾರವಾಗಿರುವ ಹಾಗೆ ಕನ್ನಡದ ಇತಿಹಾಸದಲ್ಲಿ ನಡೆದಿರುವ ಇನ್ನೊಂದು ಬದಲಾವಣೆ.
ಮರಂಗಳ್, ಪೊಲಂಗಳ್, ಕೆಲಂಗಳ್, ಪಯಂಗಳ್ ಮೊದಲಾದ ಪದಗಳಲ್ಲಿ ಕಾಣಿಸುವ ಬಿಂದು ಲೋಪಗೊಳ್ಳುವುದೂ (ಮರಗಳ್, ಪೊಲಗಳ್, ಕೆಲಗಳ್, ಪಯಗಳ್ ಎಂದಾಗುವುದೂ) ಕನ್ನಡದ ಇತಿಹಾಸದಲ್ಲಿ ಕಾಣಿಸುವ ಒಂದು ಬದಲಾವಣೆ. ಆದರೆ, ಕೇಶಿರಾಜನು ಇದನ್ನು ವಿಕಲ್ಪವೆಂದು ಪರಿಗಣಿಸಿ, ಅದಕ್ಕಾಗಿ ವ್ಯಾಕರಣ ನಿಯಮವೊಂದನ್ನು ಕಲ್ಪಿ ಸಿಕೊಂಡಿದ್ದಾನೆ (ಸೂ. ೧೧೩). ಇಂತಹ ಬೇರೆಯೂ ಹಲವು “ವ್ಯಾಕರಣ ನಿಯಮ’ಗಳನ್ನು ಆತನ ವ್ಯಾಕರಣದಲ್ಲಿ ಕಾಣಬಹುದು.
೨.೬ ಪಾರಿಭಾಷಿಕ ಪದಗಳಲ್ಲಿ ಕನ್ನಡತನ
ಹಳೆಗನ್ನಡ ವ್ಯಾಕರಣಗಳ ಮೇಲೆ ಸಂಸ್ಕೃತ ವ್ಯಾಕರಣಕ್ಕೆ ಎಂತಹ ಹಿಡಿತವಿತ್ತು ಎಂಬುದನ್ನು, ಮೇಲೆ (೨.೧)ರಲ್ಲಿ ಸೂಚಿಸಿದ ಹಾಗೆ, ಈ ವ್ಯಾಕರಣಗಳಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳೇ ಸಾರಿ ಹೇಳುತ್ತವೆ; ಇವು ನೂರಕ್ಕೆ ನೂರೂ ಸಂಸ್ಕೃತ ವ್ಯಾಕರಣದಿಂದ ಎರವಲಾಗಿ ಪಡೆದ ಪದಗಳು.
ವ್ಯಾಕರಣವೊಂದನ್ನು ಸಂಸ್ಕೃತದಲ್ಲಿ ಬರೆದಿದೆಯಾದರೆ, ಅದರಲ್ಲಿ ಈ ರೀತಿ ಸಂಸ್ಕೃತದವೇ
ಶಿ ಆದ ಪಾರಿಭಾಷಿಕ ಪದಗಳನ್ನು ಬಳಸುವುದರಲ್ಲಿ ಔಚಿತ್ಯವಿದೆ. ಆದರೆ, ಕನ್ನಡದಲ್ಲಿ ವ್ಯಾಕರಣವನ್ನು
ಬರೆಯುವವರು ಅವಶ್ಯವಿರುವ ಪಾರಿಭಾಷಿಕ ಪದಗಳನ್ನೆಲ್ಲ ಆದಷ್ಟು ಮಟ್ಟಿಗೆ ಕನ್ನಡದಲ್ಲೇನೇ ತಯಾರಿಸಿಕೊಳ್ಳುವ ಅವಶ್ಯಕತೆಯಿದೆಯಲ್ಲವೇ? ಹಾಗೆ ತಯಾರಿಸಲು ಸಾಧ್ಯವಿಲ್ಲದಲ್ಲಿ ಮಾತ್ರ, ಅವನ್ನು ಸಂಸ್ಕೃತದಿಂದ ಇಲ್ಲವೇ ಬೇರೊಂದು ಭಾಷೆಯಿಂದ ಎರವಲಾಗಿ ಪಡೆದುಕೊಳ್ಳಬೇಕು.
ಕನ್ನಡದಲ್ಲಿ ಹಳೆಗನ್ನಡಕ್ಕೆ ಇಲ್ಲವೇ ಹೊಸಗನ್ನಡಕ್ಕೆ ವ್ಯಾಕರಣವನ್ನು ಬರೆಯಲು ಪ್ರಯತ್ನಿಸುವವರೆಲ್ಲರೂ ಈ ವಿಷಯವನ್ನು ಗಮನದಲ್ಲಿರಿಸುವುದು ಅವಶ್ಯ ಎಂದು ನನ ತೋರುತ್ತದೆ. ಹೀಗೆ ಮಾಡುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.
(೧) ಈ ರೀತಿ ಸಾಧ್ಯವಿರುವಲ್ಲೆಲ್ಲ ಕನ್ನಡದವೇ ಆದ ಪಾರಿಭಾಷಿಕ ಪದಗಳನ್ನು ಬಳಸುವುದರಿಂದ ಸಂಸ್ಕೃತ ಗೊತ್ತಿಲ್ಲದವರಿಗೆ ಕನ್ನಡ ವ್ಯಾಕರಣವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಉದಾಹರಣೆಗಾಗಿ, ಹ್ರಸ್ವ ಮತ್ತು ದೀರ್ಫ್ಥ ಸ್ವರಗಳನ್ನು ಉದ್ದ ಮತ್ತು ಗಿಡ್ಡ ಸ್ವರಗಳೆಂದು ಕರೆದಲ್ಲಿ ಇವುಗಳ ಅರ್ಥ ಸಂಸ್ಕೃತ ಗೊತ್ತಿಲ್ಲದವರಿಗೂ ಸುಲಭವಾಗಿ ತಿಳಿಯುತ್ತದೆ. ಸಮಸ್ತಪದಗಳನ್ನು ಜೋಡುಪದಗಳೆಂದು ಕರೆದರೂ ಇಂತಹದೇ ಪ್ರಯೋಜನವಿದೆ.
(೨) ಕೆಲವು ಪಾರಿಭಾಷಿಕ ಪದಗಳು ಸಂಸ್ಕೃತದಲ್ಲಿ ಬಳಕೆಯಾಗುವ ವ್ಯಾಕರಣದ ಮೂಲ ತತ್ವಗಳ ಮೇಲೆ ಅವಲಂಬಿತವಾಗಿದ್ದು, ಕನ್ನಡ ವ್ಯಾಕರಣಕ್ಕೆ ಅನುಕೂಲವಾದುವಲ್ಲ. ಅವನ್ನು ಬಳಸುವುದರಿಂದ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಈ ಮೂಲತತ್ವಗಳ ಮಟ್ಟಿಗೆ ವ್ಯತ್ಯಾಸವಿದೆಯೆಂಬ ವಿಷಯ ಸ್ಪಷ್ಟವಾಗುವುದಿಲ್ಲ.
ಉದಾಹರಣೆಗಾಗಿ, ತತ್ಪುರುಷ, ಬಹುವ್ರೀಹಿ, ಅವ್ಯಯೀಭಾವ, ದ್ವಂದ್ವ ಮೊದಲಾದ ಸಂಸ್ಕೃತ ಸಮಾಸಗಳ ಹೆಸರುಗಳು ಆ ಭಾಷೆ ಸಮಸ್ತಪದಗಳನ್ನು ರಚಿಸುವಲ್ಲಿ ಬಳಸುವ ಮೂಲತತ್ವವನ್ನವಲಂಬಿಸಿವೆ. ಅಂಗವಾಗಿ ಬಂದಿರುವ ಪದಗಳಲ್ಲಿ ಯಾವುದು ಪ್ರಧಾನ ಎಂಬುದರ ಮೇಲೆ ಈ ಪಾರಿಭಾಷಿಕ ಪದಗಳನ್ನು ತಯಾರಿಸಲಾಗಿದೆ. ಆದರೆ ಕನ್ನಡ ಸಮಸ್ತಪದಗಳ ರಚನೆಯಲ್ಲಿ ಇದಕ್ಕಿಂತ ತೀರ ಭಿನ್ನವಾದ ಮೂಲತತ್ವ ಬಳಕೆಯಾಗುವುದಾದ ಕಾರಣ (೫.೩.೨ ನೋಡಿ), ಅದರ ಸಮಾಸಗಳನ್ನು ಹೆಸರಿಸುವಲ್ಲಿ ಬೇರೆಯೇ ಪಾರಿಭಾಷಿಕ ಪದಗಳನ್ನು ಬಳಸುವುದು ಒಳ್ಳೆಯದು.
ಇದೇ ರೀತಿಯಲ್ಲಿ, ಸಂಸ್ಕೃತ ವಿಭಕ್ತಿಗಳ ಹೆಸರುಗಳು (ಪ್ರಥಮಾ, ದ್ವಿತೀಯಾ ಇತ್ಯಾದಿ), ಕಾರಕಗಳ ಹೆಸರುಗಳು (ಕತನೃ, ಕರ್ಮ, ಕರಣ ಇತ್ಯಾದಿ), ನಾಮಪದಗಳ ರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳ ಹೆಸರುಗಳು (ಕೃತ್ ಮತ್ತು ತದ್ಧಿ ತ) ಮೊದಲಾದ ಪಾರಿಭಾಷಿಕ ಪದಗಳು ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುವ ಮೂಲತತ್ವಗಳ ಮೇಲೆ ಅವಲಂಬಿಸಿವೆ. ಕನ್ನಡ ಇವಕ್ಕಿಂತ ತೀರ ಭಿನ್ನವಾದ ಮೂಲತತ್ವಗಳನ್ನು ಬಳಸುತ್ತಿದೆಯಾದ ಕಾರಣ, ಅವು ಕನ್ನಡ ವ್ಯಾಕರಣಕ್ಕೆ ಅನುಕೂಲವಾದ ಪಾರಿಭಾಷಿಕ ಪದಗಳಲ್ಲ.
(೩) ಪದ ಮತ್ತು ಶಬ್ದ ಎಂಬೆರಡು ಪಾರಿಭಾಷಿಕ ಪದಗಳ ನಡುವಿರುವ ವ್ಯತ್ಯಾಸ ಇನ್ನೊಂದು ರೀತಿಯದು. ಸಂಸ್ಕೃತ ವ್ಯಾಕರಣದಲ್ಲಿ ಸುಪ್ ಮತ್ತು ತಿಜ್ ಎಂಬ ಎರಡು ರೀತಿಯ ಪ್ರತ್ಯಯಗಳೊಂದಿಗೆ ಬರುವವುಗಳನ್ನು ಮಾತ್ರ ಪದಗಳೆಂದು ಕರೆಯಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಈ ಪ್ರತ್ಯಯಗಳು ಸೇರಿಲ್ಲ ವಾದರೆ, ಅದನ್ನು ಶಬ್ದ ಎಂದು ಕರೆಯಬಹುದು. ಆದರೆ, ಸಂಸ್ಕೃತದಲ್ಲೇನೇ ಈ ನಿಯಮವನ್ನು ಅಷ್ಟೊಂದು ಕಟ್ಟುನಿಟ್ಟಾಗಿ ಅನುಸರಿಸಿಲ್ಲ. ಕೆಲವೆಡೆಗಳಲ್ಲಿ ಶಬ್ದ ಎಂಬರ್ಥದಲ್ಲೂ ಪದ ಎಂಬುದನ್ನು ಬಳಸಲಾಗುತ್ತದೆ.
ಕನ್ನಡ ವ್ಯಾಕರಣದ ಮಟ್ಟಿಗೆ ಪದ ಎಂಬ ಒಂದು ಪಾರಿಭಾಷಿಕ ಪದ ಮಾತ್ರ ಸಾಕು.
ಅದಕ್ಕಿಂತ ಭಿನ್ನವಾದ ಶಬ್ದ ಪದದ ಅವಶ್ಯಕತೆ ಅದಕ್ಕಿಲ್ಲ (ಭಟ್ ೨೦೦೨:೧೯ ನೋಡಿ). ಪದದೊಂದಿಗೆ “ಪದರೂಪ ಪ್ರತ್ಯಯ’ ಬಂದಿದೆಯಾದರೆ ಅವನ್ನು ಪದರೂಪಗಳೆಂದು ಕರೆಯಲು ಸಾಧ್ಯವಿದೆ, ಮತ್ತು ಹಾಗೆ ಕರೆಯುವುದು ಕನ್ನಡ ವ್ಯಾಕರಣದ ಮಟ್ಟಿಗೆ ಹೆಚ್ಚು ಅನುಕೂಲವಾದುದು.
(೪) ಕನ್ನಡದಲ್ಲಿ ಬಳಕೆಯಾಗುವ ಪದಗಳಲ್ಲಿ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬ ವಿಷಯದಲ್ಲೂ ಕನ್ನಡದ್ದೇ ಆದ ನಿಯಮಗಳಿವೆ. ಇವು ಸಂಸ್ಕೃತದ ನಿಯಮಗಳಿಂದ ಭಿನ್ನವಾಗಿರಲು ಸಾಧ್ಯವಿದೆಯಾದ ಕಾರಣ, ಕನ್ನಡ ಬರಹಗಳ ಮೇಲೆ ಸಂಸ್ಕೃತದ ನಿಯಮಗಳನ್ನು ಹೇರುವುದು ಸರಿಯಲ್ಲ. ಹಲವರು ಸಂಸ್ಕೃತ ವಿದ್ವಾಂಸರು ಈ ವಿಷಯವನ್ನು ಗಮನಿಸುವುದಿಲ್ಲ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ವೈಯಾಕರಣ ಮತ್ತು ವೆ ಟಯಾಕರಣಿ ಎಂಬ ಪದಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ. ವೈಯಾಕರಣ ಎಂಬುದು ಪುಲ್ಲಿಂಗ ರೂಪವಾಗಿದ್ದು, ಒಬ್ಬ ಗಂಡಸನ್ನು ಸೂಚಿಸುತ್ತದೆ, ಮತ್ತು ವೈಯಾಕರಣಿ ಎಂಬುದು ಅದರ ಸ್ತ್ರ ಲಿಂಗ ರೂಪವಾಗಿದ್ದು ಒಬ್ಬ ಹೆಂಗಸನ್ನು ಸೂಚಿಸುತ್ತದೆ.
ಆದರೆ, ಕನ್ನಡದಲ್ಲಿ ಈ ವ್ಯತ್ಯಾಸವಿಲ್ಲ; ಅದರಲ್ಲಿ ಈ ಎರಡು ಪದಗಳನ್ನೂ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ (ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಷ್ ಡಿಕ್ಟ್‌ನರಿ ನೋಡಿ). ಇದನ್ನು ಗಮನಿಸದ ವಿದ್ವಾಂಸರು ವೈಯಾಕರಣಿ ಎಂಬ ಪದವನ್ನು ವೈಯಾಕರಣ ಎಂಬರ್ಥದಲ್ಲಿ (ಕನ್ನಡದಲ್ಲಿ) ಬಳಸುವವರು ಅಜ್ಞಾನಿಗಳು ಎಂಬುದಾಗಿ ಅಪ್ಪ ಣೆ ಕೊಡಿಸುತ್ತಾರೆ (ರಂಗನಾಥ ಶರ್ಮಾ ೨೦೦೨:೨ ನೋಡಿ).
ಕನ್ನಡ ಭಾಷೆಗೆ ಎರವಲಾಗಿ ಬಂದಿರುವ ಪದಗಳಿಗೆ ಈ ರೀತಿ ಕನ್ನಡದ್ದೆ € ಆದ ವ್ಯಾಕರಣ ನಿಯಮಗಳು ಅನ್ವಯಿಸುತ್ತವೆಯಲ್ಲ ದೆ ಅವನ್ನು ಎರವಲು ಕೊಟ್ಟಿರುವ ಸಂಸ್ಕೃತ, ಇಂಗ್ಲಿಷ್ ಮೊದಲಾದ ಭಾಷೆಗಳ ವ್ಯಾಕರಣ ನಿಯಮಗಳು ಅನ್ವಯಿಸುವುದಿಲ್ಲ. ಇಂತಹ ಪದಗಳಿಗೆ ಬೇರೆ ಬೇರೆ ರೂಪಗಳು ಬಳಕೆಯಲ್ಲಿರಲು ಸಾಧ್ಯವಿದ್ದು, ಅವುಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಕನ್ನಡದ ವ್ಯಾಕರಣ ನಿಯಮವನ್ನು (ಇಲ್ಲವೇ ಶಿಷ್ಟ ಸಂಪ್ರದಾಯವನ್ನು) ಅನುಸರಿಸಿ ನಿರ್ಧರಿಸಬೇಕಲ್ಲದೆ, ಎರವಲು ಕೊಟ್ಟಿರುವ ಭಾಷೆಗಳ ನಿಯಮಗಳನ್ನು ಕನ್ನಡದ ಮೇಲೆ ಹೇರುವುದು ಸರಿಯಲ್ಲ.
೨.೭ ಸಾರಾಂಶ
ಹಳೆಗನ್ನಡ ವ್ಯಾಕರಣಗಳಲ್ಲಿ ಬಳಕೆಯಾಗಿರುವ ಪಾರಿಭಾಷಿಕ ಪದಗಳೆಲ್ಲವೂ ಸಂಸ್ಕೃತ ವ್ಯಾಕರಣದಿಂದ ಪಡೆದವುಗಳು. ಇವು ಸಂಸ್ಕೃತ ವ್ಯಾಕರಣವನ್ನು ವಿವರಿಸಿ ಹೇಳುವುದಕ್ಕೆ ಅನುಕೂಲವಾದಂತಹ ಕಲ್ಪನೆಗಳನ್ನು ಪ್ರತಿಬಿಂಬಿಸುತ್ತವೆ. ಹಳೆಗನ್ನಡ ವ್ಯಾಕರಣವನ್ನು ವಿವರಿಸಿ ಹೇಳುವುದಕ್ಕೂ ಇವು ಅನುಕೂಲವಾಗಿರಬೇಕೆಂದೇನೂ ಇಲ್ಲ.
ಇಂತಹ ಪಾರಿಭಾಷಿಕ ಪದಗಳಲ್ಲಿ ಹಲವು ಸಂಸ್ಕೃತದಲ್ಲಿ ಮಾತ್ರವೇ ಕಾಣಿಸುವಂತಹ ವ್ಯಾಕರಣ ನಿಯಮಗಳನ್ನು ವರ್ಣಿಸುವುದಕ್ಕಾಗಿ ಸಿದ್ಧ ವಾಗಿವೆ. ಅವು ನಿಜಕ್ಕೂ ಹಳೆಗನ್ನಡ ವ್ಯಾಕರಣಕ್ಕೆ ಅವಶ್ಯವಿಲ್ಲದವುಗಳು.
ಇನ್ನು ಕೆಲವನ್ನು ಬಳಸುವ ಅವಶ್ಯಕತೆ ಹಳೆಗನ್ನಡ ವ್ಯಾಕರಣಕ್ಕಿದ್ದರೂ ಅವುಗಳ ವ್ಯಾಪ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಅವಶ್ಯಕತೆಯಿದೆ. ಅವನ್ನು ಹಾಗೆಯೇ ಬಳಸಿದೆವಾದರೆ,
ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಳೆಗನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ವ್ಯಾಕರಣದ ಮೂಲತತ್ವಗಳನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ.
ಇಂತಹ ಬದಲಾವಣೆಗಳನ್ನು ಮಾಡಿಕೊಳ್ಳದೆ ಸಂಸ್ಕ ಲತೆ ವ್ಯಾಕರಣದ ಪಾರಿಭಾಷಿಕ ಪದಗಳನ್ನು ನೇರವಾಗಿ ಹಳೆಗನ್ನಡ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲಿ ಬಳಸಿರುವ ಕಾರಣ, ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಹೇಗೆ ತೊಂದರೆಗೀಡಾಗಿದ್ದಾರೆ ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.