← Ch 8  ·  Contents  ·  Ch 10 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 9 — ಕನ್ನಡ ಪದಗಳ ಬಳಕೆ

↑ ಒಳಪಿಡಿಗೆ ಹಿಂತಿರುಗಿ

ಆದರೆ ಇಂಗ್ಲಿಶ್ನಲ್ಲಿ ಈ ವ್ಯತ್ಯಾಸ ಇದೆಯಾದ ಕಾರಣ ಮತ್ತು ಕನ್ನಡಕ್ಕೂ ಅದು ಬೇಕಾಗಿದೆಯಾದ ಕಾರಣ, ಸಂಸ್ಕ್ರುತದಲ್ಲಿಲ್ಲದ ಈ ವ್ಯತ್ಯಾಸವನ್ನು ವಿಜ್ನಾನದ ತ್ರಿಶಂಕು ಪದಗಳಲ್ಲಿ ಕಾಣಿಸಬೇಕಾಗಿದೆ. ಇದು ಅಶ್ಟು ಸುಲಬದ ಕೆಲಸವೇನಲ್ಲ. ಇದನ್ನು ಮಾಡಹೊರಟ ವಿದ್ವಾಂಸರು ಹಲವೆಡೆಗಳಲ್ಲಿ ಎಡವಿದ್ದಾರೆ. ಉದಾಹರಣೆಗಾಗಿ, ಈಯ ಪ್ರತ್ಯಯವಿರುವ ಪದಗಳನ್ನು ಕನ್ನಡದಲ್ಲಿ ನಾಮಪದಗಳಾಗಿ ಬಳಸುವುದು ಅಪರೂಪ. ಇತ ಪ್ರತ್ಯಯವಿರುವ ಪದಗಳೂ ಗುಣಪದಗಳಾಗಿ ಮಾತ್ರವೇ ಬಳಕೆಯಾಗುತ್ತವೆಯೆಂದು ಹೇಳಬಹುದು. ಇದಕ್ಕೆ ವಿರುದ್ದವಾಗಿ ತೆ ಪ್ರತ್ಯಯವಿರುವ ಪದಗಳನ್ನು ಕನ್ನಡದಲ್ಲಿ ನಾಮಪದಗಳ ವಿಶೇಶಣಗಳಾಗಿ (ಗುಣಪದಗಳಾಗಿ) ಬಳಸುವುದಿಲ್ಲ. ಆದರೆ, ಕ ಪ್ರತ್ಯಯದ ಮಟ್ಟಿಗೆ ಇಂತಹ ವ್ಯತ್ಯಾಸವನ್ನು ತಮ್ಮ ತ್ರಿಶಂಕು ಪದಗಳಲ್ಲಿ ಉಂಟುಮಾಡಲು ವಿಜ್ನಾನ ಬರಹಗಾರರಿಗೆ ಸಾದ್ಯವಾಗಿಲ್ಲ. ಆ ಪ್ರತ್ಯಯವನ್ನು ಬಳಸಿ ರಚಿಸಿರುವ ಹಲವು ಪದಗಳು ಈಗಾಗಲೇ ಕನ್ನಡ ಬರಹಗಳಲ್ಲಿ ಈ ಎರಡು ಕೆಲಸಗಳಲ್ಲೂ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ, ಆ ಪ್ರತ್ಯಯವನ್ನು ಮೇಲೆ ಕೊಟ್ಟಿರುವ (ಕ) ಪಟ್ಟಿಯಲ್ಲಿ ಮಾತ್ರವಲ್ಲದೆ (ಸಾಂದ್ರಕ, ಪ್ರವಧ್ರಕ, ಪ್ರೇರಕ) (ಗ) ಪಟ್ಟಿಯಲ್ಲೂ ಕಾಣಬಹುದು (ವಿಶ್ಲೇಷಕ, ವಿರೇಚಕ, ಶಾಮಕ, ವಿಕಷ್ರಕ). 7.3.3 ನ/ಣ ಪ್ರತ್ಯಯದ ಸಮಸ್ಯೆ ಸಂಸ್ಕ್ರುತದಲ್ಲಿ ನ ಮತ್ತು ಣ ಎಂಬವುಗಳು ಒಂದೇ ಪ್ರತ್ಯಯದ ಎರಡು ರೂಪಗಳು. (ಕನ್ನಡದಲ್ಲಿ ಇವು ಕೆಲವೊಮ್ಮೆ ನೆ/ಣೆ ಎಂಬ ರೂಪದಲ್ಲೂ ಬರುತ್ತವೆ). ಒಂದು ಪದಕ್ಕೆ ಈ ಪ್ರತ್ಯಯವನ್ನು ಸೇರಿಸುವಾಗ, ಅದರ ಮೊದಲಿಗೆ ರಕಾರ, ಋಕಾರ ಇಲ್ಲವೇ ಷಕಾರ ಇದೆಯಾದಲ್ಲಿ ಅದು ಣ (ಕನ್ನಡದ ಣ/ಣೆ) ರೂಪವನ್ನು ಪಡೆಯುತ್ತದೆ ಮತ್ತು ಇತರ ಕಡೆಗಳಲ್ಲಿ ನ (ಕನ್ನಡದ ನ/ನೆ) ರೂಪವನ್ನು ಪಡೆಯುತ್ತದೆ

ಎಂಬುದೇ ಈ ಎರಡು ರೂಪಗಳ ಬಳಕೆಗೆ ಸಂಸ್ಕ್ರುತದಲ್ಲಿರುವ (ಮತ್ತು ತ್ರಿಶಂಕು ಪದಗಳಲ್ಲಿ ಕಾಣಿಸುವ) ನಿಯಮ. ರ, ಋ, ಷ ಬಂದಿರುವಲ್ಲಿ ಣ/ಣೆ ರ, ಋ, ಶ ಇಲ್ಲದಲ್ಲಿ ನ/ನೆ ಅಂಕುರಣ ಅವಕಲನ ಮಿಶ್ರಣ ವಿಜ್ಞಾನ ವೀಕ್ಷಣ ಪತನ ಚೂಷಣ ಮಾಪನ ಪ್ರೇರಣೆ ಭಾವನೆ ಶೋಷಣೆ ಕಲ್ಪನೆ ಈ ಪ್ರತ್ಯಯಕ್ಕೂ ರಕಾರ, ಋಕಾರ ಇಲ್ಲವೇ ಷಕಾರಗಳಿಗೂ ನಡುವೆ ನಾಲಿಗೆಯ ಮುಂಬಾಗದಿಂದ ಉಚ್ಚರಿಸುವ ವ್ಯಂಜನವಿದ್ದಲ್ಲಿ ನಕಾರವೇ ಬರುತ್ತದೆಯೆಂಬುದು ಈ ನಿಯಮಕ್ಕೆ ಒಂದು ಅಪವಾದ. ಉದಾಹರಣೆಗಾಗಿ ಆವತ್ರನೆ, ವಧ್ರನೆ, ಪರಿವತ್ರನೆ, ಪರಿಚಲನೆ ಮೊದಲಾದ ಪದಗಳಲ್ಲಿ ನೆ ಬಂದಿದೆಯಲ್ಲದೆ ಣೆ ಬಂದಿಲ್ಲ. ಇಂತಹ ಪದಗಳಲ್ಲಿ ರಕಾರಕ್ಕೂ ನಕಾರಕ್ಕೂ ನಡುವೆ ನಾಲಿಗೆಯ ಮುಂಬಾಗದಿಂದ ಉಚ್ಚರಿಸುವ ತ್, ಧ್ ಮತ್ತು (ಚ್)ಲ್ ವ್ಯಂಜನಗಳಿರುವ ಕಾರಣ ನಕಾರ ಬರುತ್ತದಲ್ಲದೆ ಣಕಾರ ಬರುವುದಿಲ್ಲ. ಇದಕ್ಕೆ ಬದಲು, ಅವುಗಳ ನಡುವೆ ಬೇರೆ ವ್ಯಂಜನಗಳು ಬಂದಿವೆಯಾದಲ್ಲಿ ಣಕಾರವೇ ಬರುತ್ತದೆ. ಇದಕ್ಕೆ ಉದಾಹರಣೆಯಾಗಿ ದ್ರಾವಣ, ಅಕ್ಷೇಪಣೆ, ಸಂಗ್ರಹಣೆ ಮೊದಲಾದ ಪದಗಳನ್ನು ಗಮನಿಸಬಹುದು. ಈ ಪದಗಳಲ್ಲಿ ರಕಾರ ಇಲ್ಲವೇ ಷಕಾರ ಮತ್ತು ನಕಾರಗಳ ನಡುವೆ ನಾಲಿಗೆಯ ಮುಂಬಾಗದಿಂದ ಉಚ್ಚರಿಸದ (ಎಂದರೆ ತುಟಿಗಳಿಂದ ಉಚ್ಚರಿಸುವ ವ್, ಪ್ ಮತ್ತು ಗಂಟಲಿನಿಂದ ಉಚ್ಚರಿಸುವ ಹ್) ವ್ಯಂಜನಗಳು ಬಂದಿವೆ; ಹಾಗಾಗಿ ಇಲ್ಲಿ ನಕಾರದ ಬದಲು ಣಕಾರ ಬಂದಿದೆ.

ಈ ನ/ಣ ಪ್ರತ್ಯಯವನ್ನು ಮೇಲೆ (7.3.2)ರ (ಕ) ಪಟ್ಟಿಯಲ್ಲಿ ಮಾತ್ರ ಕಾಣಿಸಲಾಗಿದೆ. ಇದು ನಾಮಪದಗಳ ರಚನೆಯನ್ನು ವಿವರಿಸುವ ಪಟ್ಟಿ ಎಂಬುದನ್ನು ಗಮನಿಸಬಹುದು. ಆದರೆ ನಿಜಕ್ಕೂ ಈ ಪ್ರತ್ಯಯವನ್ನು ವಿಜ್ನಾನ ಪದಕೋಶಗಳಲ್ಲಿ ಇಂಗ್ಲಿಶ್ ನುಡಿಯ ನಾಮಪದಗಳಿಗೆ ಮಾತ್ರವಲ್ಲದೆ ಗುಣಪದಗಳಿಗೆ ಸಮಾನಪದಗಳನ್ನು ತಯಾರಿಸುವಲ್ಲೂ ಬಳಸಲಾಗಿದೆ ಮತ್ತು ಇದರಿಂದಾಗಿ ಹಲವು ರೀತಿಯ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ. (1) ನಾಮಪದಗಳ ರಚನೆಯಲ್ಲಿ ಮಾತ್ರವಲ್ಲದೆ ಗುಣಪದಗಳ ರಚನೆಯಲ್ಲೂ ಈ ನ/ಣ ಪ್ರತ್ಯಯವನ್ನು ಬಳಸಬೇಕಾಗಿದೆಯಾದ ಕಾರಣ, ಕನ್ನಡಕ್ಕೆ ಮತ್ತು ಇಂಗ್ಲಿಶ್ಗೆ ಬೇಕಾಗಿರುವ ಅವೆರಡರ ನಡುವಿನ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಕೆಲವೊಮ್ಮೆ ಆ ಪ್ರತ್ಯಯದ ನೆ/ಣೆ ರೂಪವನ್ನು ನಾಮಪದಗಳಲ್ಲಿ ಮತ್ತು ನ/ಣ ರೂಪವನ್ನು ಗುಣಪದಗಳಲ್ಲಿ ಬಳಸಲಾಗಿದೆ. ನಾಮಪದದಲ್ಲಿ ನೆ/ಣೆ ಗುಣಪದದಲ್ಲಿ ನ/ಣ ರೆಸೊನೆನ್್ಸ ಅನುರಣನೆ ರೆಸೊನೆಂಟ್ ಅನುರಣನ ಡೆವಲಪ್ಮೆಂಟ್ ಅಭಿವಧ್ರನೆ ಡೆವಲಪ್ಮೆಂಟಲ್ ಅಭಿವಧ್ರನ ಡಿಸ್ಟ್ರಿಬ್ಯೂಶನ್ ವಿತರಣೆ ಡಿಸ್ಟ್ರಿಬ್ಯೂಟಿವ್ ವಿತರಣ ರಿಪೆÇ್ರಡಕ್ಶನ್ ಪುನರುತ್ಪಾದನೆ ರಿಪೆÇ್ರಡಕ್ಟಿವ್ ಪುನರುತ್ಪಾದನ ಆದರೆ ತ್ರಿಶಂಕು ಪದಗಳಲ್ಲಿ ಕಾಣಿಸುವ ಈ ನ/ಣ-ನೆ/ಣೆ ವ್ಯತ್ಯಾಸಕ್ಕೆ ಸಂಸ್ಕ್ರುತದಲ್ಲಿ ಯಾವ ಆದಾರವೂ ಇಲ್ಲ. ನ/ಣ ಪ್ರತ್ಯಯವಿರುವ ಪದಗಳಲ್ಲಿ ಕೆಲವಕ್ಕೆ ಸಂಸ್ಕ್ರುತದಲ್ಲಿ ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಲ್ಲಿ ಬಳಕೆಯಿದ್ದು, ಸ್ತ್ರೀಲಿಂಗ ಪದಗಳಲ್ಲಿ ಅದು ನಾ/ಣಾ ರೂಪದಲ್ಲಿ ಬರುತ್ತದೆ ಮತ್ತು ನಪುಂಸಕಲಿಂಗ ಪದಗಳಲ್ಲಿ ಅದು ನಂ/ಣಂ ರೂಪದಲ್ಲಿ ಬರುತ್ತದೆ. ಇವುಗಳಲ್ಲಿ ಸಂಸ್ಕ್ರುತದ ನಾ/ಣಾ ರೂಪ ಕನ್ನಡದಲ್ಲಿ ನೆ/ಣೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ನಂ/ಣಂ ರೂಪ ನ/ಣ

ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಸಂಸ್ಕ್ರುತದಲ್ಲಿ ಈ ಎರಡು ರೀತಿಯ ಪದಗಳೂ ನಾಮಪದಗಳೇ. ಸ್ತ್ರೀಲಿಂಗಪದ ನಪುಂಸಕಲಿಂಗ ಪದ ಪ್ರೇಷಣಾ ಪ್ರೇಷಣೆ ಪ್ರೇಷಣಂ ಪ್ರೇಷಣ ಪ್ರೇರಣಾ ಪ್ರೇರಣೆ ಪ್ರೇರಣಂ ಪ್ರೇರಣೆ ಅನುಸರಣಾ ಅನುಸರಣೆ ಅನುಸರಣಂ ಅನುಸರಣ ಇದಲ್ಲದೆ ಬೇರೆ ಹಲವು ಕಡೆಗಳಲ್ಲಿ ಸಂಸ್ಕ್ರುತದ ನಪುಂಸಕ ಪದಗಳೂ ಕನ್ನಡದಲ್ಲಿ ನೆ/ಣೆ ರೂಪದಲ್ಲೇ ಬರುತ್ತವೆ (ಅನುಕರಣೆ, ಅಭಿನಂದನೆ, ಆಕಷ್ರಣೆ, ಉಚ್ಚಾರಣೆ). ಹಾಗಾಗಿ ನ/ಣ ಮತ್ತು ನೆ/ಣೆ ಪ್ರತ್ಯಯಗಳ ನಡುವೆ ವಿಜ್ನಾನದ ಪಾರಿಬಾಶಿಕ ಪದಗಳಲ್ಲಿ ಮಾಡಿರುವಂತಹ ಈ ಗುಣಪದ-ನಾಮಪದ ವ್ಯತ್ಯಾಸ ಕನ್ನಡದ ತ್ರಿಶಂಕು ಪದಗಳಿಗಾಗಿ ಕಲ್ಪಿತವಾದುದು ಮಾತ್ರ; ಸಂಸ್ಕ್ರುತದಲ್ಲಿ ಅದಕ್ಕೆ ಯಾವ ಆದಾರವೂ ಇಲ್ಲ ಎಂದೇ ಹೇಳಬೇಕಾಗುತ್ತದೆ. (2) ನೆ/ಣೆ ಮತ್ತು ನ/ಣ ಪ್ರತ್ಯಯಗಳ ನಡುವಿನ ಈ ನಾಮಪದ-ಗುಣಪದ ವ್ಯತ್ಯಾಸವನ್ನು ವಿಜ್ನಾನ ಪದಕೋಶಗಳಲ್ಲಿ ಎಲ್ಲಾ ಕಡೆಯಲ್ಲೂ ಬಳಸಿಲ್ಲ. ಕೆಲವು ಕಡೆಗಳಲ್ಲಿ ನ/ಣ ಪ್ರತ್ಯಯವಿರುವ ಪದವನ್ನೇ ನಾಮಪದವಾಗಿಯೂ ಬಳಸಲಾಗಿದೆ, ಗುಣಪದವಾಗಿಯೂ ಬಳಸಲಾಗಿದೆ. ಎಂದರೆ, ಕನ್ನಡಕ್ಕೆ ಅವಶ್ಯವಿರುವ ನಾಮಪದ-ಗುಣಪದ ವ್ಯತ್ಯಾಸವನ್ನು ಈ ಸಂದರ್ಬಗಳಲ್ಲಿ ಮಾಡಿಯೇ E®è! ನಾಮಪದದಲ್ಲಿ ನ/ಣ ಗುಣಪದದಲ್ಲೂ ನ/ಣ ಕನ್ವರ್ಜೆನ್್ಸ ಅಭಿಸರಣ ಕನ್ವರ್ಜೆಂಟ್ ಅಭಿಸರಣ ಡಿ¥sóÀರೆನ್ಶಿ0iÉುೀಶನ್ ಅವಕಲನ ಡಿ¥sóÀರೆನ್ಶಿಯಲ್ ಅವಕಲನ ಡಯ್ಜೆಶನ್ ಪಚನ ಡಯ್ಜೆಸ್ಟಿವ್ ಪಚನ ಡಯಸ್ಟೋಲ್ ವ್ಯಾಕುಂಚನ ಡಯಸ್ಟೋಲಿಕ್ ವ್ಯಾಕುಂಚನ

(3) ಇನ್ನು ಕೆಲವು ಕಡೆಗಳಲ್ಲಿ ನ/ಣ ಪ್ರತ್ಯಯವನ್ನು ನಾಮಪದದ ರಚನೆಗೆ ಮತ್ತು ಅದಕ್ಕಿಂತ ಬೇರಾಗಿರುವ ಕ ಪ್ರತ್ಯಯವನ್ನು ಗುಣಪದದ ರಚನೆಗೆ ಬಳಸಲಾಗಿದೆ. ನಾಮಪದದಲ್ಲಿ ನ/ಣ ಗುಣಪದದಲ್ಲಿ ಕ ಕೆತೇರ್ಸಿಸ್ ವಿರೇಚನ ಕತೇರ್ಟಿಕ್ ವಿರೇಚಕ ಎಬ್ರೇಶನ್ ಘಷ್ರಣ ಎಬ್ರೇಸಿವ್ ಘಷ್ರಕ ಎಬೋರ್ಶನ್ ಸ್ತಬ್ಧನ ಅಬೊರ್ಟಿವ್ ಸ್ತಬ್ಧಕ ಮೋಶನ್ ಚಾಲನ ಮೋಟಿವ್ ಚಾಲಕ ಡಯ್ಜೆಶನ್ ಪಚನ ಡಯ್ಜೆಸ್ಟಿವ್ ಪಾಚಕ ಸಿಂತೆಸಿಸ್ ಸಂಶ್ಲೇಷಣ ಸಿಂತೆಟಿಕ್ ಸಂಶ್ಲೇಷಕ (4) ಇದಲ್ಲದೆ, ನ/ಣ ಮತ್ತು ಕ ಎಂಬ ಈ ಎರಡು ಪ್ರತ್ಯಯಗಳನ್ನು ನಾಮಪದಗಳಲ್ಲೇನೇ ಕಾಣಿಸುವಂತಹ ಅರ್ತವ್ಯತ್ಯಾಸವೊಂದನ್ನು ಸೂಚಿಸುವುದಕ್ಕಾಗಿಯೂ ಬಳಸಲಾಗಿದೆ. ಉದಾಹರಣೆಗಾಗಿ, ಕ್ರಿಯಾಪದಗಳಿಂದ ಪಡೆದಿರುವ ನಾಮಪದಗಳಲ್ಲಿ ಮುಕ್ಯವಾಗಿ ಎರಡು ಬಗೆಯವಿರುತ್ತವೆ. (ಕ) ಒಂದು ಕೆಲಸವನ್ನು ಹೆಸರಿಸುವವುಗಳು ಮತ್ತು (ಗ) ಆ ಕೆಲಸದಲ್ಲಿ ನಿರತರಾಗಿರುವ ಇಲ್ಲವೇ ಆ ಕೆಲಸಕ್ಕೆ ಒಳಪಟ್ಟಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಹೆಸರಿಸುವವುಗಳು ಸಾಮಾನ್ಯವಾಗಿ ಇವುಗಳಲ್ಲಿ ಮೊದಲನೆಯದನ್ನು ನ/ಣ ಪ್ರತ್ಯಯದ ಮೂಲಕ ಮತ್ತು ಎರಡನೆಯದನ್ನು ಕ ಪ್ರತ್ಯಯದ ಮೂಲಕ ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ (1990) ಪದಕೋಶದಲ್ಲಿ ಸೂಚಿಸಲಾಗಿದೆ. ಕೆಲಸವನ್ನು ಹೆಸರಿಸಲು ನ/ಣ ವ್ಯಕ್ತಿ/ವಸ್ತುವನ್ನು ಹೆಸರಿಸಲು ಕ ಕಂಡಕ್ಶನ್ ವಹನ ಕಂಡಕ್ಟರ್ ವಾಹಕ ಇನ್ಸುಲೇಶನ್ ನಿರೋಧನ ಇನ್ಸುಲೇಟರ್ ನಿರೋಧಕ ಓಸಿಲೇಶನ್ ದೋಲನ ಓಸಿಲೇಟರ್ ದೋಲಕ

ಪೆÇೀಲರಯ್ಸೇಶನ್ ಧ್ರುವೀಕರಣ ಪೆÇೀಲರಂiÀi್ಸರ್ ಧ್ರುವೀಕಾರಕ ಪೆÇ್ರಪಲ್ಶನ್ ನೋದನ ಪೆÇ್ರಪೆಲರ್ ನೋದಕ ಆಲ್ಟರ್ನೇಶನ್ ಪಯ್ರಯನ ಆಲ್ಟರ್ನೇಟರ್ ಪಯ್ರಯಕ ಟ್ರಾನ್್ಸಮಿಶನ್ ಪ್ರೇಷಣೆ ಟ್ರಾನ್್ಸಮಿಟರ್ ಪ್ರೇಷಕ (5) ನಾಮಪದ ಮತ್ತು ಗುಣಪದಗಳೆರಡಕ್ಕೂ ಕ ಪ್ರತ್ಯಯವನ್ನೇ ಬಳಸಿರುವ (ಎಂದರೆ ಅವುಗಳ ನಡುವೆ ಇಂಗ್ಲಿಶ್ನಲ್ಲಿರುವ ಮತ್ತು ಕನ್ನಡಕ್ಕೂ ಬೇಕಾಗಿರುವ ವ್ಯತ್ಯಾಸವನ್ನು ಕಾಣಿಸದಿರುವ) ಸಂದರ್ಬಗಳೂ ಹಲವಿವೆ. ನಾಮಪದದಲ್ಲಿ ಕ ಗುಣಪದದಲ್ಲೂ ಕ ಕ್ರಯೋಜೆನ್ ಶೈತ್ಯಜನಕ ಕ್ರಯೋಜನಿಕ್ ಶೈತ್ಯಜನಕ ಸಪ್ಲಿಮೆಂಟ್ ಪರಿಪೂರಕ ಸಪ್ಲಿಮೆಂಟರಿ ಪರಿಪೂರಕ ರಿ¥sóÉ್ಲಕ್ಟರ್ ಪ್ರತಿಫಲಕ ರಿ¥sóÉ್ಲಕ್ಟಿವ್ ಪ್ರತಿಫಲಕ ರೆಸಿಸ್ಟರ್ ರೋಧಕ ರೆಸಿಸ್ಟೆಂಟ್ ರೋಧಕ ಪೆÇ್ರಜೆಕ್ಟರ್ ಪ್ರಕ್ಷೇಪಕ ಪೆÇ್ರಜೆಕ್ಟಿವ್ ಪ್ರಕ್ಷೇಪಕ ರೆಸೊನೇಟರ್ ಅನುರಣಕ ರೆಸೊನೆಂಟ್ ಅನುರಣಕ (6) ನಾಮಪದ ರಚನೆಗೆ ಸಂಸ್ಕೃತದ ನ/ಣ ಪ್ರತ್ಯಯವನ್ನು ಮತ್ತು ಗುಣಪದ ರಚನೆಗೆ ಕನ್ನಡದ ಗುಣ(ಶಶ್ಟೀ)ರೂಪವನ್ನು ಬಳಸಿರುವುದೂ ಇದೆ. ನಾಮಪದದಲ್ಲಿ ನ ಗುಣಪದದಲ್ಲಿ (ದ್)ಅ ಡಯಸ್ಟೋಲ್ ವ್ಯಾಕೋಚನ ಡಯಸ್ಟೋಲಿಕ್ ವ್ಯಾಕೋಚನದ ವಿಜ್ನಾನ ಪದಕೋಶಗಳು ನಡೆಸಿರುವ ಸಂಸ್ಕ್ರುತ ಪ್ರತ್ಯಯಗಳ ಬಳಕೆಯಲ್ಲಿ ಈ ರೀತಿ ಹಲವು ರೀತಿಯ ಅನಿಶ್ಚಿತತೆ ಮತ್ತು ವಯ್ರುದ್ಯಗಳು ಕಾಣಿಸಿಕೊಳ್ಳಲು ನಾಮಪದ ಮತ್ತು ಗುಣಪದಗಳ ನಡುವಿನ ವ್ಯತ್ಯಾಸವನ್ನು ಸಂಸ್ಕ್ರುತ ಪ್ರತ್ಯಯಗಳು ತಾವಾಗಿ ಸೂಚಿಸಲಾರವೆಂಬುದೇ ಮುಕ್ಯ ಕಾರಣ. ಸಂಸ್ಕ್ರುತದಲ್ಲಿ ಬಳಕೆಯಲ್ಲಿರುವ ಪ್ರತ್ಯಯಗಳು ಸಂಸ್ಕ್ರುತ ವಾಕ್ಯರಚನೆಗೆ ಬೇಕಾಗುವ ಪದವ್ಯತ್ಯಾಸಗಳನ್ನು ಮಾತ್ರ

ಸೂಚಿಸಬಲ್ಲುವಲ್ಲದೆ ಅದಕ್ಕಿಂತ ತೀರ ಬೇರಾಗಿರುವ ಕನ್ನಡದ ವಾಕ್ಯರಚನೆಗೆ ಬೇಕಾಗುವ ಪದವ್ಯತ್ಯಾಸಗಳನ್ನು ಸೂಚಿಸಲಾರವು. ಅವು ಹಾಗೆ ಸೂಚಿಸಬೇಕೆಂದು ನಾವು ಬಯಸುವುದೂ ತಪ್ಪು. ಕನ್ನಡದ ವಿಜ್ನಾನ ಬರಹಗಳಿಗಾಗಿ ತ್ರಿಶಂಕು ಪದಗಳನ್ನು ರಚಿಸಲು ಹೊರಟಿರುವ ಕನ್ನಡ ವಿದ್ವಾಂಸರು ಈ ವ್ಯತ್ಯಾಸವನ್ನು ತಾವೇ ಅವುಗಳ ಮೇಲೆ ಹೊರಿಸಬೇಕಾಗಿದೆ. ಆದರೆ ಇದು ಅಶ್ಟು ಸುಲಬದ ಕೆಲಸವೇನಲ್ಲ ಎಂಬುದು ಹಾಗೆ ಮಾಡಲು ಹೊರಟಿರುವಲ್ಲಿ ಅವರು ಎಂತಹ ಗೊಂದಲಗಳಿಗೆಲ್ಲ ಒಳಗಾಗಿದ್ದಾರೆ ಎಂಬುದನ್ನು ಪರಿಶೀಲಿಸಿದಾಗ ಸ್ಪಶ್ಟವಾಗುತ್ತದೆ. ಈ ರೀತಿ ತ್ರಿಶಂಕು ಪದಗಳ ಮೇಲೆ ನಾಮಪದ-ಗುಣಪದ ವ್ಯತ್ಯಾಸವನ್ನು ಹೊರಿಸುವಾಗ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಸಂಸ್ಕ್ರುತ (ತತ್ಸಮ) ಪದಗಳನ್ನು ಮತ್ತು ಅವುಗಳ ಅರ್ತವನ್ನು ಅವರು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ0iÉುಂಬುದು ಈ ಪದಗಳ ಬಳಕೆಯಲ್ಲಿ ಇನ್ನಶ್ಟು ಅನಿಶ್ಚಿತತೆ ಮತ್ತು ಗೊಂದಲಗಳನ್ನು ಉಂಟುಮಾಡುತ್ತದೆ. 7.4 ಅರ್ತವ್ಯತ್ಯಾಸ ಒಂದೇ ಪದವರ್ಗಕ್ಕೆ ಸೇರಿರುವ ಪದಗಳಲ್ಲಿ ಎರಡು ಇಲ್ಲವೇ ಹೆಚ್ಚು ಪ್ರತ್ಯಯಗಳನ್ನು ಬಳಸಲಾಗಿದೆಯಾದಲ್ಲಿ ಅವು ಒಂದೇ ಅರ್ತದಲ್ಲಿ ಬಳಕೆಯಾಗಿರಬಹುದು ಇಲ್ಲವೇ ಬೇರೆ ಬೇರೆ ಅರ್ತಗಳಲ್ಲಿ ಬಳಕೆಯಾಗಿರಬಹುದು. ಅವು ಒಂದೇ ಅರ್ತದಲ್ಲಿ ಬಳಕೆಯಾಗಿವೆಯಾದರೆ, ಆ ವ್ಯತ್ಯಾಸವನ್ನು ಇನ್ನೊಂದು ನುಡಿಯಲ್ಲಿ ಸಮಾನ ಪದಗಳನ್ನು ತಯಾರಿಸುವಾಗ ತೋರಿಸಿಕೊಡಬೇಕಾಗುವು ¢®è. ನಿಜಕ್ಕೂ ಒಂದೇ ಕೆಲಸವನ್ನು ನಡೆಸುವ ಹಲವು ಪ್ರತ್ಯಯಗಳ ಬದಲು ಕನ್ನಡದ ಪಾರಿಬಾಶಿಕ ಪದಗಳಲ್ಲಿ ಒಂದೇ ಪ್ರತ್ಯಯವನ್ನು ಬಳಸುವ ಹಾಗಿದ್ದರೆ, ಅವನ್ನು ಕಲಿಯುವುದು ಮತ್ತು ಬಳಸುವುದು ಹೆಚ್ಚು ಸುಲಬದ ಕೆಲಸವಾಗ ಬಲ್ಲುದು.

ಒಂದೇ ಪದವರ್ಗದ ಪ್ರತ್ಯಯಗಳು ಸಮಾನವಾದ ಅರ್ತವನ್ನು ಮಾತ್ರವಲ್ಲದೆ ತಮ್ಮವೇ ಆದ ಅರ್ತವನ್ನೂ ಸೂಚಿಸುತ್ತಿರುವಲ್ಲಿ ಮಾತ್ರ ಅವುಗಳ ನಡುವಿರುವ ವ್ಯತ್ಯಾಸವನ್ನು ಕನ್ನಡದ ಪಾರಿಬಾಶಿಕ ಪದಗಳಲ್ಲೂ ಬೇರೆ ಬೇರೆ ಪ್ರತ್ಯಯಗಳನ್ನು ಬಳಸುವ ಮೂಲಕ ಸೂಚಿಸಬೇಕಾಗುತ್ತದೆ. 7.4.1 ಅರ್ತವ್ಯತ್ಯಾಸವಿಲ್ಲದ ಗುಣಪದದ ಪ್ರತ್ಯಯಗಳು ಕೆಳಗೆ ಕೊಟ್ಟಿರುವ ಇಂಗ್ಲಿಶ್ ಗುಣಪದಗಳಲ್ಲಿ ಬೇರೆ ಬೇರೆ ಪ್ರತ್ಯಯಗಳು ಬಳಕೆಯಾಗಿದ್ದು, ಅವುಗಳಿಗೆ ಸಮಾನವಾಗಿರುವ ತ್ರಿಶಂಕು ಪದಗಳಲ್ಲಿ ಒಂದೇ ಪ್ರತ್ಯಯ ಬಳಕೆಯಾಗಿದೆ. ಇಂಗ್ಲಿಶ್ ಪದಗಳಲ್ಲಿ ಬರುವ ಈ ಬೇರೆ ಬೇರೆ ಪ್ರತ್ಯಯಗಳಿಗೆ ಅವುಗಳದೇ ಆದ ಅರ್ತವಿಲ್ಲವಾದ ಕಾರಣ ಅವುಗಳ ಬದಲು ಈ ರೀತಿ ಒಂದೇ ಪ್ರತ್ಯಯವನ್ನು ಬಳಸಿರುವುದು ಸರಿಯಾಗಿದೆ. ಇಂಗ್ಲಿಶ್ ಪದ ತ್ರಿಶಂಕು ಪದ ಪೆÇ್ರಜೆಕ್ಟಿವ್ ಪ್ರಕ್ಷೇಪಕ ಎಬ್ರೇಸಿವ್ ಘಷ್ರಕ ಅನಲಿಟಿಕ್ ವಿಶ್ಲೇಷಕ ಓರ್ಗೇನಿಕ್ ಜೈವಿಕ ಡ್ರಯ್ವಿಂಗ್ ಚಾಲಕ ಓಸ್ಕ್ಯುಲೇಟಿಂಗ್ ಚುಂಬಕ ರೆಸಿಸ್ಟೆಂಟ್ ರೋಧಕ ರೆಸೊನೆಂಟ್ ಅನುರಣಕ ಮೇಲೆ ಇಂಗ್ಲಿಶ್ ಗುಣಪದಗಳಲ್ಲಿ ಇವ್, ಕ್, ಇಂಗ್ ಮತ್ತು ಎಂಟ್ ಎಂಬ ನಾಲ್ಕು ಪ್ರತ್ಯಯಗಳನ್ನು ಬಳಸಲಾಗಿದೆ; ಆದರೆ ಕನ್ನಡದ

ವಿಜ್ನಾನ ಪದಕೋಶಗಳಲ್ಲಿ ಅವುಗಳಿಗೆ ಸಮಾನಪದಗಳಾಗಿ ಕೊಟ್ಟಿರುವ ತ್ರಿಶಂಕು ಪದಗಳಲ್ಲಿ ಕ ಎಂಬ ಒಂದೇ ಪ್ರತ್ಯಯವನ್ನು ಬಳಸಲಾಗಿದೆ. ಈ ಎಲ್ಲಾ ಕಡೆಗಳಲ್ಲೂ ನಾಮಪದ ಇಲ್ಲವೇ ಕ್ರಿಯಾಪದದಿಂದ ಗುಣಪದವನ್ನು ತಯಾರಿಸಿಕೊಳ್ಳುವುದೆಂಬ ಒಂದೇ ಕೆಲಸವನ್ನು ಇಂಗ್ಲಿಶ್ನ ಈ ಪ್ರತ್ಯಯಗಳು ನಡೆಸಬೇಕಾಗಿದೆಯಾದ ಕಾರಣ, ಅವುಗಳ ಬದಲು ಈ ರೀತಿ ಸಂಸ್ಕ್ರುತದ ಒಂದೇ ಪ್ರತ್ಯಯವನ್ನು ಬಳಸಿರುವುದು ಸರಿಯಾಗಿದೆ. ಆದರೆ ಮೇಲೆ ಸೂಚಿಸಿದ ಹಾಗೆ ಸಂಸ್ಕ್ರುತದ ಕ ಪ್ರತ್ಯಯ ನಿಜಕ್ಕೂ ಈ ಕೆಲಸವನ್ನು ಸರಿಯಾಗಿ (ಎಂದರೆ ಅರ್ತಸಂದಿಗ್ದತೆಯಿಲ್ಲದೆ) ಕನ್ನಡದಲ್ಲಿ ನಡೆಸಲಾರದು. ಯಾಕೆಂದರೆ ಕನ್ನಡದ ತ್ರಿಶಂಕು ಪದಗಳಲ್ಲಿ ಅದನ್ನು ಈ ರೀತಿ ಗುಣಪದಗಳನ್ನು ರಚಿಸುವಲ್ಲಿ ಮಾತ್ರವಲ್ಲದೆ ನಾಮಪದಗಳನ್ನು ರಚಿಸುವಲ್ಲೂ ಬಳಸಲಾಗುತ್ತದೆ ಎಂಬುದನ್ನು ನಾವು ಮೇಲೆ (7.3.2)ರಲ್ಲಿ ನೋಡಿರುವೆವು (ಡ್ರಯ್ವರ್ - ಚಾಲಕ, ಕಂಡಕ್ಟರ್ - ಪ್ರೇರಕ, ಎಕ್ಸಿಲರೇಟರ್ - ವೇಗವಧ್ರಕ). ಇದಲ್ಲದೆ, ಸಂಸ್ಕ್ರುತದಲ್ಲಿ ನಾಮಪದಗಳನ್ನು ರಚಿಸುವುದಕ್ಕಾಗಿ ಬೇರೆಯೂ ಹಲವು ಪ್ರತ್ಯಯಗಳು ಬಳಕೆಯಲ್ಲಿವೆಯಾದ ಕಾರಣ, ಅಂತಹ ಬೇರೆ ಪ್ರತ್ಯಯಗಳನ್ನೂ ಇಂಗ್ಲಿಶ್ನ ಗುಣಪದಗಳಿಗೆ ಸಮಾನಪದಗಳನ್ನು ರಚಿಸುವಲ್ಲಿ ಬಳಸಲಾಗಿದ್ದು (7.4.3 ನೋಡಿ), ಇದರಿಂದಾಗಿ ಈ ಪದಗಳ ಒಳರಚನೆ ಅನವಶ್ಯಕವಾಗಿ ಕನ್ನಡದ ಮಟ್ಟಿಗೆ ತೊಡಕಿನದಾಗಿದೆ. ಉದಾಹರಣೆಗಾಗಿ ಇಂಗ್ಲಿಶ್ನ ಸೆಂಟ್ರಲ್ ಮತ್ತು ಸೆಂಟ್ರಿಕ್ ಗುಣಪದಗಳ ನಡುವೆ ಅರ್ತದಲ್ಲಿ ವ್ಯತ್ಯಾಸವಿರುವ ಹಾಗೆ ಕಾಣಿಸುವುದಿಲ್ಲ. ಸೆಂಟ್ರಲ್ ¥sóÉÇೀರ್್ಸ ಎಂಬುದು ಒಂದು ಸ್ತಿರ ಬಿಂದುವಿನತ್ತ ನಿರ್ದೇಶಿತವಾಗಿರುವ ಬಲ’ವನ್ನು ಸೂಚಿಸುತ್ತದೆ ಮತ್ತು ಸೆಂಟ್ರಿಕ್ ಲೀವ್್ಸ ಎಂಬುದು ಕೇಂದ್ರದಲ್ಲಿರುವ ಉರುಳೆಯನ್ನು ಸುತ್ತುವರಿದಿರುವ ಎಸಳುಗಳ’ನ್ನು ಸೂಚಿಸುತ್ತದೆ (ನಾರಾಯಣ ರಾವ್ 2001:88).

ಹೀಗಿದ್ದರೂ ನಾರಾಯಣರಾವ್ ಅವರು ತಮ್ಮ ವಿಜ್ನಾನ ಪದಕೋಶದಲ್ಲಿ ಸೆಂಟ್ರಲ್ ಎಂಬುದಕ್ಕೆ ಬದಲಾಗಿ ಕೇಂದ್ರೀಯ ಎಂಬ ಪದವನ್ನು ಮತ್ತು ಸೆಂಟ್ರಿಕ್ ಪದಕ್ಕೆ ಬದಲಾಗಿ ಕೇಂದ್ರಕ ಎಂಬ ಪದವನ್ನು ಬಳಸಿದ್ದಾರೆ. ಇಂಗ್ಲಿಶ್ ಗುಣಪದಗಳಲ್ಲಿ ಈ ರೀತಿ ಒಂದೇ ಅರ್ತದಲ್ಲಿ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳು ಬಳಕೆಯಾಗುವುದಕ್ಕೆ ಚಾರಿತ್ರಿಕ ಕಾರಣಗಳಿವೆ. ಉದಾಹರಣೆಗಾಗಿ, ಗ್ರೀಕ್ ಮೂಲದ ನಾಮಪದಗಳಿಂದ ಗುಣಪದಗಳನ್ನು ತಯಾರಿಸಬೇಕಾದಾಗ ಇಂಗ್ಲಿಶ್ನಲ್ಲಿ ಇಕ್ ಪ್ರತ್ಯಯವನ್ನು ಬಳಸಲಾಗುತ್ತದೆ ಮತ್ತು ಲ್ಯಾಟಿನ್ ಇಲ್ಲವೇ ¥sóÉ್ರಂಚ್ ಮೂಲದ ನಾಮಪದಗಳಿಂದ ಗುಣಪದಗಳನ್ನು ತಯಾರಿಸಬೇಕಾದಾಗ ಅಲ್ ಪ್ರತ್ಯಯವನ್ನು ಬಳಸಲಾಗುತ್ತದೆ. ಇದಲ್ಲದೆ, ¥sóÉ್ರಂಚ್ನಿಂದಲೇ ನಡು-ಇಂಗ್ಲಿಶ್ ಮೂಲಕ ಬಂದಿರುವ ಅಸ್ ಎಂಬ ಇನ್ನೊಂದು ಪ್ರತ್ಯಯದ ಮೂಲಕವೂ ನಾಮಪದಗಳಿಂದ ಗುಣಪದಗಳನ್ನು ತಯಾರಿಸಲಾಗುತ್ತದೆ. ನಾಮಪದಗಳ ಬದಲು ಕ್ರಿಯಾಪದಗಳಿಂದ ಗುಣಪದಗಳನ್ನು ತಯಾರಿಸಬೇಕಿದ್ದಲ್ಲಿ ಅದಕ್ಕಾಗಿ ಲ್ಯಾಟಿನ್ ಮೂಲದ ಇವ್ ಎಂಬ ಬೇರೊಂದು ಪ್ರತ್ಯಯ ಬಳಕೆಯಾಗುತ್ತದೆ (ಹೆಚ್ಚಿನ ವಿವರಗಳಿಗೆ ಮರ್ಚಂದ್ 1969 ನೋಡಿ). ಈ ರೀತಿ ಚಾರಿತ್ರಿಕ ಕಾರಣಗಳಿಂದಾಗಿ ಇಂಗ್ಲಿಶ್ ಗುಣಪದಗಳ ರಚನೆಯಲ್ಲಿ ಕಾಣಿಸಿಕೊಳ್ಳುವ ಪ್ರತ್ಯಯ ಬಾಹುಳ್ಯವನ್ನು ಆ ಗುಣಪದಗಳಿಗೆ ಸಮಾನವಾದ ಗುಣಪದಗಳನ್ನು ಕನ್ನಡದಲ್ಲಿ ತಯಾರಿಸುವವರು ತಮ್ಮ ಪದಗಳಲ್ಲೂ ಕಾಣಿಸುವ ಅವಶ್ಯಕತೆಯಿಲ್ಲವೆಂಬುದು ಸ್ಪಶ್ಟ. ಈ ಪ್ರತ್ಯಯಗಳ ಬಳಕೆಯ ಮೂಲಕ ಯಾವುದಾದರೂ ಅರ್ತ ವ್ಯತ್ಯಾಸವನ್ನು ಸೂಚಿಸಲಾಗುತ್ತಿದೆಯಾದರೆ ಮಾತ್ರ ಕನ್ನಡದಲ್ಲಿ ಬೇರೆ ಬೇರೆ ಪ್ರತ್ಯಯಗಳನ್ನು (ಇಲ್ಲವೇ ಆ ಅರ್ತವ್ಯತ್ಯಾಸವನ್ನು ಸೂಚಿಸುವ ಬೇರೆ ವಿದಾನಗಳನ್ನು) ಬಳಸಬೇಕಾಗುತ್ತದೆ (7.4.2 ನೋಡಿ). ಆದರೆ ಸಂಸ್ಕ್ರುತದ ಪ್ರತ್ಯಯಗಳನ್ನು ಬಳಸಿ ಇಂಗ್ಲಿಶ್ ಗುಣಪದಗಳಿಗೆ ಸಮಾನ ಪದಗಳನ್ನು ತಯಾರಿಸಿರುವ ಕನ್ನಡದ

ವಿದ್ವಾಂಸರು ಅರ್ತ ಒಂದೇ ಇದ್ದರೂ ಅದನ್ನು ಸೂಚಿಸುವಲ್ಲಿ ಹಲವು ಪ್ರತ್ಯಯಗಳನ್ನು ಬಳಸಿದ್ದಾರೆ. ಕೆಲವು ಕಡೆಗಳಲ್ಲಿ ಇದು ಇಂಗ್ಲಿಶ್ನಲ್ಲಿ ಕಾಣಿಸುವ ಪ್ರತ್ಯಯ ಬಾಹುಳ್ಯವನ್ನು ಸೂಚಿಸುತ್ತದೆ; ಆದರೆ ಬೇರೆ ಕೆಲವು ಕಡೆಗಳಲ್ಲಿ ಇಂಗ್ಲಿಶ್ನಲ್ಲಿ ಒಂದೇ ಪ್ರತ್ಯಯ ಬಳಕೆಯಾಗಿರುವಲ್ಲೂ ಅವುಗಳಿಗೆ ಸಮಾನವಾಗಿರುವ ಪದಗಳನ್ನು ತಯಾರಿಸುವಲ್ಲಿ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಬಳಸಲಾಗಿದೆ. ಇವೆರಡೂ ಕನ್ನಡದ ಮಟ್ಟಿಗೆ ಅನವಶ್ಯಕವಾದ ಪ್ರತ್ಯಯಬಾಹುಳ್ಯವಾಗಿದೆ. ಇಂತಹ ಪದಗಳಲ್ಲಿ ಬಳಕೆಯಾಗಿರುವ ಪ್ರತ್ಯಯಗಳೆಲ್ಲ ಸಂಸ್ಕ್ರುತದಲ್ಲಿ ನಾಮಪದಗಳನ್ನು ರಚಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳಲ್ಲದೆ ನಾಮಪದಗಳಿಗಿಂತ ಬೇರಾಗಿರುವ ಗುಣಪದಗಳನ್ನು ರಚಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳಲ್ಲ (ಅಂತಹ ಪ್ರತ್ಯಯಗಳು ಸಂಸ್ಕ್ರುತದಲ್ಲಿಲ್ಲ) ಎಂಬುದು ಈ ಗೊಂದಲವನ್ನು ಇನ್ನಶ್ಟು ಹೆಚ್ಚಿಸಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಇಂಗ್ಲಿಶ್ ಗುಣಪದಗಳನ್ನು ವಿಜ್ನಾನ ಪದಕೋಶಗಳಲ್ಲಿ ಅವಕ್ಕೆ ಸಮಾನ ಪದಗಳಾಗಿ ಕೊಟ್ಟಿರುವ ತ್ರಿಶಂಕು ಪದಗಳೊಂದಿಗೆ ಹೋಲಿಸಿ ನೋಡಬಹುದು. (ಕ) ಎನಲಿಟಿಕ್ ವಿಶ್ಲೇಷಕ ಸಯ್್ಕಲಿಕ್ ಚಕ್ರೀಯ ಡಯ¥sóÉÇೀರೆಟಿಕ್ ಸ್ವೇದಕಾರಿ (ಗ) ಓಕ್ಯುಪೇಶನಲ್ ಔದ್ಯೋಗಿಕ ಓರ್ಬಿಟಲ್ ಕಕ್ಷೀಯ ಏಂಟಿಕ್ಲಿನಲ್ ಅಪನತ ಲೆಬ್ರಿಮಲ್ ಅಶ್ರುಕಾರೀ, ಅಶ್ರುಕಾರಕ (ಚ) ಎಮಿಸಿವ್ ಉತ್ಸಜ್ರಕ ಎಡಿಟಿವ್ ಸಂಕಲನೀಯ, ಸಂಕಲ್ಯ

ಫಿûಕ್ಸೇಟಿವ್ ಸ್ಥಾಯಿಕಾರಿ ಡಿಸ್ಟ್ರಿಬ್ಯೂಟಿವ್ ವಿತರಣ ಎ¥sóÉÇ್ಯೀಸಿವ್ ನಿಸೃತ (ಜ) ಅಗಮಸ್ ನಿಲ್ರಿಂಗೀ, ನಿಲ್ರಿಂಗ ಕೊಂಟೇಜಿಯಸ್ ಸೋಂಕುಕಾರೀ ಅಯ್ಸೋಕ್ರೊನಸ್ ಸಮಕಾಲೀಯ ಕಂಟಿನ್ಯುವಸ್ ಅವಿಚ್ಛಿನ್ನ ಇಲ್ಲಿ ನಾವು ಗಮನಿಸಬೇಕಾಗಿರುವ ವಿಶಯವೇನೆಂದರೆ, ಇಂಗ್ಲಿಶ್ ಗುಣಪದಗಳಲ್ಲಿ ಕಾಣಿಸುವ ಇಕ್, ಅಲ್, ಇವ್ ಮತ್ತು ಅಸ್ ಎಂಬ ಈ ನಾಲ್ಕು ಪ್ರತ್ಯಯಗಳಿಗೆ ಮೇಲೆ ಕೊಟ್ಟಿರುವ ಬಳಕೆಗಳಲ್ಲಿ ನಾಮಪದ ಇಲ್ಲವೇ ಕ್ರಿಯಾಪದವೊಂದನ್ನು ಗುಣಪದವಾಗಿ ಬದಲಾಯಿಸುವ ಒಂದೇ ಒಂದು ಕೆಲಸವಿದೆ. ಹಾಗಾಗಿ ಕನ್ನಡದಲ್ಲಿ ಇವಕ್ಕೆ ಸಮಾನವಾಗಿರುವ ಪಾರಿಬಾಶಿಕ ಪದಗಳನ್ನು ತಯಾರಿಸುವವರು ಈ ಎಲ್ಲಾ ಕಡೆಗಳಲ್ಲೂ ಒಂದೇ ಪ್ರತ್ಯಯವನ್ನು ಬಳಸುವ ಹಾಗಿದ್ದಲ್ಲಿ ಆ ಪದಗಳನ್ನು ಕಲಿಯುವ ಕೆಲಸ ಮತ್ತು ಅವನ್ನು ಬಳಸಿರುವ ವಿಜ್ನಾನ ಬರಹಗಳನ್ನು ಓದಿ ಅರ್ತಮಾಡಿಕೊಳ್ಳುವ ಕೆಲಸ ಹೆಚ್ಚು ಸುಲಬವಾಗಬಲ್ಲುದು. ಆದರೆ, ಸಂಸ್ಕ್ರುತ ಪ್ರತ್ಯಯಗಳನ್ನು ಬಳಸಿ ರಚಿಸಿರುವ ಮೇಲಿನ ಪದಗಳಲ್ಲಿ ಹಲವಾರು ಪ್ರತ್ಯಯಗಳು ಬಳಕೆಯಾಗಿವೆ. ಇಂಗ್ಲಿಶ್ನ ಒಂದೇ ಪ್ರತ್ಯಯಕ್ಕೆ ಬದಲಾಗಿಯೂ ಸಂಸ್ಕ್ರುತದ ಹಲವು ಪ್ರತ್ಯಯಗಳು ಬಳಕೆಯಾಗಿವೆ. ಉದಾಹರಣೆಗಾಗಿ ಮೇಲೆ (ಚ) ಪದಗಳಲ್ಲಿರುವ ಇಂಗ್ಲಿಶ್ನ ಇವ್ ಎಂಬ ಒಂದೇ ಪ್ರತ್ಯಯಕ್ಕೆ ಬದಲಾಗಿ ಸಂಸ್ಕ್ರುತದ ಕ, ಈಯ, ಯ, ಇ, ಣ ಮತ್ತು ತ ಪ್ರತ್ಯಯಗಳ ಬಳಕೆಯಾಗಿದೆ. ಇಂಗ್ಲಿಶ್ ಪದಗಳ ಹಾಗೆ ಸಂಸ್ಕ್ರುತ ಪದಗಳಲ್ಲಿಯೂ ಒಂದೇ ಅರ್ತವನ್ನು ಸೂಚಿಸುವುದಕ್ಕಾಗಿ ಹಲವು ಪ್ರತ್ಯಯಗಳು ಬಳಕೆಯಾಗುತ್ತವೆ. ಇದಕ್ಕೆ ಇಂಗ್ಲಿಶ್ನ ಹಾಗೆ ಸಂಸ್ಕ್ರುತದಲ್ಲಿಯೂ ಹಲವಾರು ಚಾರಿತ್ರಿಕ ಕಾರಣಗಳಿವೆ. ಆದರೆ ಈ ಪ್ರತ್ಯಯ

ಬಾಹುಳ್ಯವನ್ನು ಕನ್ನಡದ ವಿಜ್ನಾನ ಬರಹಗಾರರು ತಾವು ಉಂಟು ಮಾಡುವ ಪಾರಿಬಾಶಿಕ ಪದಗಳಲ್ಲಿ ಕಾಣಿಸುವ ಅವಶ್ಯಕತೆಯಿರಲಿಲ್ಲ. ಹಾಗೆ ಮಾಡಿದುದರಿಂದಾಗಿ ಅವರು ಉಂಟುಮಾಡಿರುವ ತ್ರಿಶಂಕು ಪದಗಳು ಕನ್ನಡದ ಮಟ್ಟಿಗೆ ಅನವಶ್ಯಕವಾಗಿ ತೊಡಕಿನವಾಗಿವೆ. 7.4.2 ಅರ್ತವ್ಯತ್ಯಾಸವಿರುವ ಗುಣಪದದ ಪ್ರತ್ಯಯಗಳು ಇಂಗ್ಲಿಶ್ ಗುಣಪದಗಳಲ್ಲಿ ಕಾಣಿಸುವ ಬೇರೆ ಕೆಲವು ಪ್ರತ್ಯಯಗಳಿಗೆ ಅವುಗಳದೇ ಆದ ಅರ್ತವಿರುತ್ತದೆ. ಅಂತಹ ಪ್ರತ್ಯಯಗಳನ್ನು ಬಳಸಿರುವಲ್ಲಿ ಮಾತ್ರ ಅವುಗಳಿಗೆ ಬದಲಾಗಿ ನಾವು ರಚಿಸುವ ಸಮಾನ ಪದಗಳಲ್ಲಿ ಬೇರೆ ಪ್ರತ್ಯಯಗಳನ್ನು ಬಳಸುವ ಮೂಲಕ ಇಲ್ಲವೇ ಬೇರೆ ವಿದಾನಗಳನ್ನು ಬಳಸುವ ಮೂಲಕ ಆ ಅರ್ತವನ್ನು ಸೂಚಿಸುವ ಅವಶ್ಯಕತೆಯುಂಟಾಗುತ್ತದೆ. ಉದಾಹರಣೆಗಾಗಿ ಇಂಗ್ಲಿಶ್ನಲ್ಲಿ ಎಬ್್ಲ (ಇಬ್್ಲ) ಪ್ರತ್ಯಯವನ್ನು ಬಳಸಿ ಕ್ರಿಯಾಪದಗಳಿಂದ ಇಲ್ಲವೇ ನಾಮಪದಗಳಿಂದ ಗುಣಪದಗಳನ್ನು ಪಡೆಯಲು ಸಾದ್ಯವಿದೆ. ಈ ಪ್ರತ್ಯಯಕ್ಕೆ ಕ್ರಿಯಾಪದ ಇಲ್ಲವೇ ನಾಮಪದಗಳಿಂದ ಗುಣಪದಗಳನ್ನು ಉಂಟುಮಾಡುವ ಕೆಲಸ ಮಾತ್ರವಲ್ಲದೆ `ಆ ಕ್ರಿಯಾಪದ ಇಲ್ಲವೇ ನಾಮಪದ ಯಾವ ಕೆಲಸವನ್ನು ಸೂಚಿಸುತ್ತದೆಯೋ ಅದನ್ನು ನಡೆಸುವ ಅರ್ಹತೆ ಇಲ್ಲವೇ ಒಲವು ವಿಶೇಶ್ಯದಲ್ಲಿದೆ’ ಎಂಬ ಹೆಚ್ಚಿನ ಅರ್ತವನ್ನು ಕೊಡುವ ಕೆಲಸವೂ ಇದೆ. ಹಾಗಾಗಿ ಈ ಎಬ್್ಲ ಇಲ್ಲವೇ ಇಬ್್ಲ ಪ್ರತ್ಯಯವಿರುವ ಪದಗಳಿಗೆ ಸಮಾನ ಪದಗಳನ್ನು ತಯಾರಿಸಬೇಕಿದ್ದಲ್ಲಿ ಈ ಹೆಚ್ಚಿನ ಅರ್ತವನ್ನು ಕೊಡುವಂತಹ ಪ್ರತ್ಯಯ ಇಲ್ಲವೇ ವಿದಾನವನ್ನು ಬಳಸಬೇಕಾಗುತ್ತದೆ. ಕನ್ನಡದಲ್ಲಿ ವಿಜ್ನಾನ ಪದಗಳನ್ನು ತಯಾರಿಸಿದವರು ಮುಕ್ಯವಾಗಿ ಸಂಸ್ಕ್ರುತದ ಈಯ ಮತ್ತು ಯ ಎಂಬ ಎರಡು ಪ್ರತ್ಯಯಗಳನ್ನು ಇದಕ್ಕಾಗಿ ಬಳಸಿರುವುದನ್ನು ಕಾಣಬಹುದು. ಇನ್¥sóÉ್ಲಮೆಬ್್ಲ ಜ್ವಲನೀಯ ಇಂಟೆಗ್ರೆಬ್್ಲ ಅನುಕಲನೀಯ

ಕೋಆಗ್ಯ್ಲೆಬ್್ಲ ಆತಂಚನೀಯ ಕನ್ವರ್ಟಿಬ್್ಲ ಪರಿವತ್ರನೀಯ ಪರ್ಮಿಯೆಬ್್ಲ ವ್ಯಾಪ್ಯ ಕಂಬಸ್ಟಿಬ್್ಲ ದಹ್ಯ ಮೆಲ್ಲೆಬ್್ಲ ಕುಟ್ಯ ¥sóÉ್ಲಕ್ಸಿಬ್್ಲ ನಮ್ಯ ಆದರೆ ಸಂಸ್ಕ್ರುತದ ಈಯ ಮತ್ತು ಯ ಪ್ರತ್ಯಯಗಳನ್ನು ಈ ಹೆಚ್ಚಿನ ಆರ್ತವಿಲ್ಲದ ಕಡೆಗಳಲ್ಲೂ ಗುಣಪದವನ್ನು ರಚಿಸುವುದಕ್ಕಾಗಿ ಬಳಸಲಾಗಿದೆ. ಹಾಗಾಗಿ ಅದು ಇಂಗ್ಲಿಶ್ನ ಎಬ್್ಲ (ಇಬ್್ಲ) ಪ್ರತ್ಯಯದಶ್ಟು ಸ್ಪಶ್ಟವಾಗಿ ಮೇಲಿನ ಅರ್ತವನ್ನು ಸೂಚಿಸಲಾರದು. ಉದಾಹರಣೆಗಾಗಿ, ಇಂಗ್ಲಿಶ್ನಲ್ಲಿ ಇಕ್ ಪ್ರತ್ಯಯವನ್ನು ಬಳಸಿ ರಚಿಸಿದ ಗುಣಪದಗಳಿಗೆ ಸಮಾನ ಪದಗಳನ್ನು ರಚಿಸುವಲ್ಲಿ ಹಲವೆಡೆ ಈಯ ಪ್ರತ್ಯಯವನ್ನು ಬಳಸಲಾಗಿದೆ. ಇಲ್ಲಿ ಮೇಲೆ ಸೂಚಿಸಿದಂತಹ ಅರ್ಹತೆ’ಯ ಇಲ್ಲವೇ ಒಲವಿ’ನ ಅರ್ತವಿರುವ ಹಾಗೆ ಕಾಣಿಸುವುದಿಲ್ಲ. ಡಯ್ಕೋಟೊಮಿಕ್ ದ್ವಿಪಕ್ಷೀಯ ಮೆಟೇಲಿಕ್ ಲೋಹೀಯ ಮೇಗ್ನೆಟಿಕ್ ಕಾಂತೀಯ ಎಕ್ವೇಟಿಕ್ ಜಲೀಯ ಆಲ್ಜಿಬ್ರೇಯಿಕ್ ಬೀಜಗಣಿತೀಯ ಎಸಿಡಿಕ್ ಆಮ್ಲೀಯ ಇಂಗ್ಲಿಶ್ನ ಎಕ್್ಸಪೆಕ್ಟೆಬ್್ಲ ಪದಕ್ಕೆ ಬದಲಾಗಿ ಸ್ವೀಕಾರಾಹ್ರ ಎಂಬುದನ್ನು ಬಳಸಿರುವಲ್ಲಿ ಮಾತ್ರ, ಸಂಸ್ಕ್ರುತದ ಅಹ್ರ ಪದದ ಮೂಲಕ ಈ ಅರ್ತವನ್ನು ಸ್ಪಶ್ಟವಾಗಿ ಸೂಚಿಸಲಾಗಿದೆ. 7.4.3 ನಾಮಪದಗಳಲ್ಲಿ ಬರುವ ಪ್ರತ್ಯಯಗಳು

ಇಂಗ್ಲಿಶ್ ನಾಮಪದಗಳಲ್ಲಿ ಬಳಕೆಯಾಗುವ ಒಟ್ಟು ಅಯ್ವತ್ತಕ್ಕಿಂತಲೂ ಹೆಚ್ಚು ಪ್ರತ್ಯಯಗಳನ್ನು ಮರ್ಚಂದ್ (1969) ಅವರು ಪಟ್ಟಿ ಮಾಡಿದ್ದಾರೆ. ಇವುಗಳಲ್ಲಿ ಕೆಲವು ಅನಿಯಮಿತವಾಗಿ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು ಹೆಚ್ಚಿನ ಅರ್ತಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಉಳಿದ ಪ್ರತ್ಯಯಗಳೆಲ್ಲ ಒಂದೇ ಅರ್ತದಲ್ಲಿ ಬರುತ್ತವೆ. ಉದಾಹರಣೆಗಾಗಿ, ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುವಂತಹ ಒಟ್ಟು ಇಪ್ಪತ್ತೆರಡು ಪ್ರತ್ಯಯಗಳನ್ನು ಮರ್ಚಂದ್ ಅವರು ಪಟ್ಟಿಮಾಡಿದ್ದಾರೆ. ಇವುಗಳಲ್ಲಿ ಹಲವು ಬೇರೆ ಬೇರೆ ಕ್ರಿಯಾಪದಗಳೊಂದಿಗೆ ಬರುತ್ತಿದ್ದು, ಅವನ್ನು ನಾಮಪದಗಳಾಗಿ ಬದಲಾಯಿಸುವುದಶ್ಟೇ ಈ ಪ್ರತ್ಯಯಗಳ ಕೆಲಸ. ಹಾಗಾಗಿ ಅವಕ್ಕೆ ಬದಲಾಗಿ ಕನ್ನಡದಲ್ಲಿ ಸಮಾನ ಪದಗಳನ್ನು ತಯಾರಿಸುವವರು ಒಂದೇ ಒಂದು ಪ್ರತ್ಯಯವನ್ನು ಬಳಸಿದರೆ ಸಾಕಾಗುತ್ತದೆ. ಕೆಳಗೆ ಕೊಟ್ಟಿರುವ ಇಂಗ್ಲಿಶ್ ನಾಮಪದಗಳಲ್ಲಿ ಇಂತಹ ಬೇರೆ ಬೇರೆ ಪ್ರತ್ಯಯಗಳು ಬಳಕೆಯಾಗಿದ್ದು, ಅವುಗಳ ಸಮಾನ ಪದಗಳಾಗಿ ಕೊಟ್ಟಿರುವ ತ್ರಿಶಂಕು ಪದಗಳಲ್ಲಿ ಒಂದೇ ನ/ಣ ಪ್ರತ್ಯಯವನ್ನು ಬಳಸಲು ಸಾದ್ಯವಾಗಿದೆ ಎಂಬುದನ್ನು ಗಮನಿಸಬಹುದು. ಹಲವು ಪ್ರತ್ಯಯಗಳು ಒಂದೇ ನ/ಣ ಪ್ರತ್ಯಯ ಮೆಶರ್ಮೆಂಟ್ ಮಾಪನ ಎಬ್ರಿಜ್ಮೆಂಟ್ ಸಂಕ್ಷೇಪಣ ಡಯಲಿಸಿಸ್ ಅಪೆÇೀಹನ ಸಿಂತೆಸಿಸ್ ಸಂಶ್ಲೇಷಣ ಡಯ್ವರ್ಜೆನ್್ಸ ಅಪಸರಣ ಟೋಲರೆನ್್ಸ ಸಹನ

ಸಕಿಂಗ್ ಚೂಷಣ ಪೆÇ್ರೀಸೆಸಿಂಗ್ ಸಂಸ್ಕರಣ ಡಿ¥sóÀರೆನ್ಸಿಯೇಶನ್ ಅವಕಲನ ಪೆÇಲಿನೇಶನ್ ಪರಾಗಣ ಮೇಲೆ ಕೊಟ್ಟಿರುವ ಇಂಗ್ಲಿಶ್ ಪದಗಳಲ್ಲಿ ಮೆಂಟ್, ಇಸ್, ಎನ್್ಸ, ಇಂಗ್ ಮತ್ತು ಏಶನ್ ಎಂಬ ಅಯ್ದು ಪ್ರತ್ಯಯಗಳು ಬಳಕೆಯಾಗಿವೆ; ಅವುಗಳ ಸಮಾನ ಪದಗಳಾಗಿ ವಿಜ್ನಾನ ಪದಕೋಶಗಳಲ್ಲಿ ಕೊಟ್ಟಿರುವ ತ್ರಿಶಂಕು ಪದಗಳಲ್ಲಿ ನ/ಣ ಎಂಬ ಒಂದೇ ಪ್ರತ್ಯಯ ಬಳಕೆಯಾಗಿದೆ. ಕನ್ನಡದ ಮಟ್ಟಿಗೆ ಇದು ಸರಿಯಾದ zÁj. ಆದರೆ ಕನ್ನಡದ ವಿಜ್ನಾನ ಬರಹಗಾರರು ಎಲ್ಲಾ ಕಡೆಗಳಲ್ಲೂ ಈ ವಿದಾನವನ್ನು ಬಳಸಿಲ್ಲ. ಬೇರೆ ಹಲವು ಕಡೆಗಳಲ್ಲಿ ಸಂಸ್ಕ್ರುತದಲ್ಲಿರುವ ಪ್ರತ್ಯಯಗಳ ಬಾಹುಳ್ಯ ಅವರು ತಯಾರಿಸಿರುವ ಪಾರಿಬಾಶಿಕ ಪದಗಳಲ್ಲೂ ಕಾಣಿಸಿಕೊಳ್ಳುತ್ತದೆ (ಸಪ್ಲಿಮೆಂಟ್ - ಪರಿಪೂರಕ, ಕನ್ವರ್ಜೆಂಟ್ - ಅಭಿಸಾರಿ, ಒಪೇಸಿಟಿ - ಅಪಾರಕತೆ). ಇದಲ್ಲದೆ ಈ ಪ್ರತ್ಯಯಗಳಲ್ಲಿ ಕೆಲವನ್ನು ಗುಣಪದಗಳಲ್ಲೂ ಬಳಸಲಾಗಿದೆಯಾದ ಕಾರಣ (7.3.2-3 ನೋಡಿ), ಇಂಗ್ಲಿಶ್ ಪದಗಳಲ್ಲಿಲ್ಲದ ಅರ್ತಸಂದಿಗ್ದತೆ ಈ ತ್ರಿಶಂಕು ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂಗ್ಲಿಶ್ನ ಬೇರೆ ಕೆಲವು ಪ್ರತ್ಯಯಗಳನ್ನು ಒಂದೇ ಕ್ರಿಯಾಪದದ ಅನಂತರವೂ ಬಳಸಲು ಸಾದ್ಯವಿದ್ದು, ಅವನ್ನು ಬಳಸಿ ರಚಿಸಿದ ನಾಮಪದಗಳಿಗೆ ಬೇರೆ ಬೇರೆ ಅರ್ತಗಳನ್ನು ಕೊಡುವ ಶಕ್ತಿ ಆ ಪ್ರತ್ಯಯಗಳಿಗಿದೆ. ಉದಾಹರಣೆಗಾಗಿ ಏಶನ್ ಮತ್ತು ಅರ್ ಪ್ರತ್ಯಯಗಳು ಹಲವು ಕಡೆಗಳಲ್ಲಿ ಒಂದೇ ಕ್ರಿಯಾಪದದೊಂದಿಗೆ ಬರಬಲ್ಲುವಾಗಿದ್ದು, ಬೇರೆ ಬೇರೆ ಅರ್ತಗಳನ್ನು ಸೂಚಿಸಬಲ್ಲುವು. ಏಶನ್ ಪ್ರತ್ಯಯದ ಮೂಲಕ ರಚಿಸಲಾಗಿರುವ ನಾಮಪದಗಳು ಒಂದು ಕೆಲಸವನ್ನು ಹೆಸರಿಸುತ್ತವೆ ಮತ್ತು ಅರ್ ಪ್ರತ್ಯಯದ ಮೂಲಕ

ರಚಿಸಲಾಗಿರುವ ನಾಮಪದಗಳು ಅಂತಹ ಕೆಲಸವನ್ನು ಮಾಡುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ (ಎಕ್ಯುಸೇಶನ್ ತೆಗಳುವಿಕೆ’, ಎಕ್ಯೂಸರ್ ತೆಗಳುವವನು’; ಕಂಡೆನ್ಸೇಶನ್ ಕುಂದಿಸುವಿಕೆ’, ಕಂಡೆನ್ಸರ್ ಕುಂದಿಸುವ ವಸ್ತು’). ಅರ್ತವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಕೆಯಾಗಿರುವ ಮೇಲಿನ ಎರಡು ಪ್ರತ್ಯಯಗಳಲ್ಲಿ ಏಶನ್ ಎಂಬುದಕ್ಕೆ ಬದಲಾಗಿ ಸಂಸ್ಕ್ರುತದ ನ/ಣ (ನೆ/ಣೆ) ಪ್ರತ್ಯಯವನ್ನು ಮತ್ತು ಅರ್ ಎಂಬುದಕ್ಕೆ ಬದಲಾಗಿ ಸಂಸ್ಕ್ರುತದ ಕ ಪ್ರತ್ಯಯವನ್ನು ಕನ್ನಡದ ವಿಜ್ನಾನ ಪದಕೋಶಗಳಲ್ಲಿ ಬಳಸಲಾಗಿದೆ. ಕೆಲಸದ ಹೆಸರು ವ್ಯಕ್ತಿ, ವಸ್ತುವಿನ ಹೆಸರು ಇನ್ಸುಲೇಶನ್ ನಿರೋಧನ ಇನ್ಸುಲೇಟರ್ ನಿರೋಧಕ ಕಮ್ಯುಟೇಶನ್ ವ್ಯತ್ಯಯನ ಕಮ್ಯುಟೇಟರ್ ವ್ಯತ್ಯಯಕ ಆಲ್ಟರ್ನೇಶನ್ ಪಯ್ರಯನ ಆಲ್ಟರ್ನೇಟರ್ ಪಯ್ರಯಕ ಕನ್ವರ್ಶನ್ ಪರಿವತ್ರನೆ ಕನ್ವರ್ಟರ್ ಪರಿವತ್ರಕ ಟ್ರಾನ್ಮಿಶನ್ ಪ್ರೇಷಣೆ ಟ್ರಾನ್ಸ್ಮಿಟರ್ ಪ್ರೇಷಕ ಪೆÇ್ರಪಲ್ಶನ್ ನೋದನ ಪೆÇ್ರಪೆಲರ್ ನೋದಕ ಕಂಡಕ್ಶನ್ ವಹನ ಕಂಡಕ್ಟರ್ ವಾಹಕ ಓಸಿಲೇಶನ್ ದೋಲನ ಓಸಿಲೇಟರ್ ದೋಲಕ ಆದರೆ ಮೇಲೆ (7.3.3)ರಲ್ಲಿ ವಿವರಿಸಿದ ಹಾಗೆ, ಸಂಸ್ಕ್ರುತದ ನ/ಣ (ನೆ/ಣೆ) ಪ್ರತ್ಯಯದ ಬಳಕೆ ಹಲವು ರೀತಿಯ ಸಮಸ್ಯೆಗೊಳಗಾಗಿದೆಯಾದ ಕಾರಣ, ಅದು ವ್ಯವಸ್ತಿತವಾಗಿ ಕೆಲಸವೊಂದನ್ನು ಹೆಸರಿಸಲಾರದು. ನಾಮಪದಗಳಲ್ಲಿ ಮಾತ್ರವಲ್ಲದೆ ಗುಣಪದಗಳಲ್ಲೂ ಅದನ್ನು ಬಳಸಲಾಗಿದೆಯೆಂಬುದು ಅದರ ಬಳಕೆಯಲ್ಲಿರುವ ಒಂದು ಸಮಸ್ಯೆ. ನಾಮಪದಗಳಲ್ಲಿ ಬಳಸಿದಾಗಲೂ ಅದಕ್ಕೆ ಕ್ರಿಯೆಯನ್ನು ಸೂಚಿಸುವ ಅರ್ತವನ್ನು ಮಾತ್ರವಲ್ಲದೆ ಬೇರೆ ಅರ್ತಗಳನ್ನೂ ಕೊಡಲಾಗಿದೆಯೆಂಬುದು ಇನ್ನೊಂದು ಸಮಸ್ಯೆ. ಉದಾಹರಣೆಗಾಗಿ, ವಾಹನ ಪದದಲ್ಲಿ ಅದು ಕ್ರಿಯೆಯನ್ನು ಸಾದಿಸಬಲ್ಲ ಒಂದು

ವಸ್ತುವನ್ನು ಸೂಚಿಸುತ್ತದೆ; ದ್ರಾವಣ ಪದದಲ್ಲಿ ಕ್ರಿಯೆಯಿಂದ ಸಿದ್ದವಾದ ವಸ್ತುವನ್ನು ಸೂಚಿಸುತ್ತದೆ; ಮತ್ತು ಮಿಶ್ರಣ ಪದದಲ್ಲಿ ಅದು ಕ್ರಿಯೆಯನ್ನೂ ಸೂಚಿಸಬಲ್ಲುದು ಮತ್ತು ಅದರಿಂದ ಸಿದ್ದವಾದ ವಸ್ತುವನ್ನೂ ಸೂಚಿಸಬಲ್ಲುದು. ಸಂಸ್ಕ್ರುತದ ಕ ಪ್ರತ್ಯಯವೂ ಅಂತಹದೇ. ಎಲ್ಲಾ ಬಳಕೆಗಳಲ್ಲೂ ಮೇಲಿನ ಪದಗಳಲ್ಲಿ ಕಾಣಿಸಿದ ಹಾಗೆ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಅರ್ತ ಅದಕ್ಕಿಲ್ಲ. ಉದಾಹರಣೆಗಾಗಿ, ಕಂಟಯ್್ನಮೆಂಟ್ - ಪ್ರತಿಬಂಧಕ, ಕಂಟಿನ್ಯುಅಮ್ - ಸಾಂತತ್ಯಕ ಎಂಬಂತಹ ಸಂದರ್ಬಗಳಲ್ಲಿ ಅದು ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಬದಲು ಬೇರೆ ಅರ್ತದಲ್ಲಿ ಬಳಕೆಯಾಗಿದೆ. ಇಲ್ಲಿಯೂ ವಿಜ್ನಾನದ ಪಾರಿಬಾಶಿಕ ಪದಗಳಿಗೆ ಬೇಕಾಗುವ ಕಟ್ಟುನಿಟ್ಟು ಉಳಿದಿಲ್ಲ. 7.4.4 ಕ್ರಿಯಾಪದಗಳ ಸಮಾನಪದಗಳು ನಾಮಪದಗಳಿಂದ ಇಲ್ಲವೇ ಗುಣಪದಗಳಿಂದ ಕ್ರಿಯಾಪದಗಳನ್ನು ತಯಾರಿಸುವುದಕ್ಕಾಗಿ ಇಂಗ್ಲಿಶ್ನಲ್ಲಿ ಮುಕ್ಯವಾಗಿ ಅಯ್್ಸ, ಏಟ್ ಮತ್ತು ಇ¥sóÀಯ್ ಎಂಬ ಮೂರು ಪ್ರತ್ಯಯಗಳು ಬಳಕೆಯಾಗುತ್ತವೆ. ಕನ್ನಡದಲ್ಲಿ ವಿಜ್ನಾನ ಪದಗಳನ್ನು ರಚಿಸಿರುವವರು ಇವುಗಳಿಗೆ ಬದಲಾಗಿ ಹೆಚ್ಚಿನೆಡೆಗಳಲ್ಲೂ ಸಂಸ್ಕ್ರುತದ ಕೃ `ಮಾಡು’ ಕ್ರಿಯಾಪದವನ್ನು ಮತ್ತು ಅದರೊಂದಿಗೆ ಕನ್ನಡದ ಇಸು ಪ್ರತ್ಯಯವನ್ನು ಬಳಸಿದ್ದಾರೆ. ಪೆÇೀಲರಯ್್ಸ ಧ್ರುವೀಕರಿಸು ಮೆಕ್ಸಿಮಯ್್ಸ ಗರಿಷ್ಠೀಕರಿಸು ಅಲ್ಯೂಮಿನಯ್್ಸ ಅಲ್ಯೂಮಿನೀಕರಿಸು ಅನೊಡಯ್್ಸ ಅನೊಡೀಕರಿಸು ಲೇಮೆನೇಟ್ ಪಟಲೀಕರಿಸು ¥sóÉ್ರೀಕ್ಶನೇಟ್ ಅಂಶೀಕರಿಸು ಅಮಾಲ್ಗಮೇಟ್ ಅಮಾಲ್ಗಮೀಕರಿಸು

ಕ್ಲೋರಿನೇಟ್ ಕ್ಲೋರಿನೀಕರಿಸು ಲಿಕ್ವಿ¥sóÀಯ್ ದ್ರವೀಕರಿಸು ಎಲೆಕ್ಟ್ರಿ¥sóÀಯ್ ವಿದ್ಯುದೀಕರಿಸು ಎಸಿಡಿ¥sóÀಯ್ ಆಮ್ಲೀಕರಿಸು ಕ್ವಾಂಟಿ¥sóÀಯ್ ಪರಿಮಾಣೀಕರಿಸು ನಿಜಕ್ಕೂ ಈ ಸಮಾನ ಪದಗಳಲ್ಲಿ ಸಂಸ್ಕ್ರುತದ ಕೃ `ಮಾಡು’ ಕ್ರಿಯಾಪದವನ್ನು ಬಳಸುವ ಅವಶ್ಯಕತೆಯೇ ಇಲ್ಲ. ಕನ್ನಡದ ಇಸು ಪ್ರತ್ಯಯವನ್ನೇ ನೇರವಾಗಿ ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳಿಗೆ ಸೇರಿಸಿ ಇಂತಹ ಕ್ರಿಯಾಪದಗಳನ್ನು ರಚಿಸಲು ಸಾದ್ಯವಿದೆ (ಧ್ರುವಿಸು, ಪಟಲಿಸು, ದ್ರವಿಸು, ಅಲ್ಯೂಮಿನಿಸು, ಅನೋಡಿಸು, ಕ್ಲೋರಿನಿಸು). ಸಂಸ್ಕ್ರುತದ ಕೃ ಕ್ರಿಯಾಪದವನ್ನು ಇಂತಹ ಕಡೆಗಳಲ್ಲಿ ಬಳಸುವುದರಿಂದ ಇನ್ನೊಂದು ಸಮಸ್ಯೆಯೂ ಉಂಟಾಗುತ್ತದೆ. ಇಂಗ್ಲಿಶ್ನ ಅಯ್್ಸ ಪ್ರತ್ಯಯವನ್ನು ಬಳಸಿ ಸಕರ್ಮಕ ಕ್ರಿಯಾಪದಗಳನ್ನು ಮಾತ್ರವಲ್ಲದೆ ಅಕರ್ಮಕ ಕ್ರಿಯಾಪದಗಳನ್ನೂ ರಚಿಸಲು ಸಾದ್ಯವಿದೆ (ಎಪೆÇಲೊಜಯ್್ಸ, ತಿಯೊರಯ್್ಸ, ಪೇಟ್ರೊನಯ್್ಸ). ಆದರೆ ಸಂಸ್ಕ್ರುತದ ಕೃ ಕ್ರಿಯಾಪದದ ಮೂಲಕ (ಅದರೊಂದಿಗೆ ಕನ್ನಡದ ಇಸು ಪ್ರತ್ಯಯವನ್ನು ಬಳಸಿದರೂ) ಸಕರ್ಮಕ ಕ್ರಿಯಾಪದಗಳನ್ನು ಮಾತ್ರ ರಚಿಸಲು ಸಾದ್ಯವಿದೆ. ಹಾಗಾಗಿ ಇಂಗ್ಲಿಶ್ ಪದಗಳಲ್ಲಿ ಕಾಣಿಸುವ ಸಕರ್ಮಕ-ಅಕರ್ಮಕ ವ್ಯತ್ಯಾಸ ಕನ್ನಡದಲ್ಲಿ ರಚಿಸಿರುವ ಈ ತ್ರಿಶಂಕು ಪದಗಳಲ್ಲಿ ಇಲ್ಲವಾಗುತ್ತದೆ. ಕನ್ನಡದ ಇಸು ಪ್ರತ್ಯಯ ಈ ಎರಡು ಅರ್ತಗಳನ್ನೂ ಕೊಡಬಲ್ಲುದಾದ ಕಾರಣ, ಅದನ್ನು ಮಾತ್ರವೇ ಬಳಸುವ ಮೂಲಕ ಇಂಗ್ಲಿಶ್ನ ವ್ಯತ್ಯಾಸವನ್ನೂ ಉಳಿಸಿಕೊಳ್ಳಬಹುದು. 7.5 ವ್ಯಾಕರಣ ಮತ್ತು ಬಾಶಾವಿಜ್ನಾನದ ಕನ್ನಡ ಕನ್ನಡದ ವ್ಯಾಕರಣದ ಪರಂಪರೆಯೆಂಬುದು ಬಹಳ ಮಟ್ಟಿಗೆ ಸಂಸ್ಕ್ರುತ ವ್ಯಾಕರಣ ಪರಂಪರೆಯ ಮುಂದುವರಿಕೆಯಾಗಿರುವ ಕಾರಣ, ಅದರಲ್ಲಿ

ಬಳಕೆಯಾಗುವ ಪಾರಿಬಾಶಿಕ ಪದಗಳೆಲ್ಲವನ್ನೂ ನೇರವಾಗಿ ಸಂಸ್ಕ್ರುತದಿಂದ ಎರವಲು ಪಡೆದುಕೊಳ್ಳಲಾಗಿದೆ. ಇವುಗಳಲ್ಲಿ ಹಲವು ನಿಜಕ್ಕೂ ಕನ್ನಡ ವ್ಯಾಕರಣಕ್ಕೆ ಬೇಕಾಗಿಲ್ಲ. ಉಳಿದವುಗಳಲ್ಲಿ ಹಲವು ಬೇಕಾಗಿದ್ದರೂ ಕನ್ನಡಿಗರ ಮಟ್ಟಿಗೆ ಅವು ತುಂಬಾ ತೊಡಕು ತೊಡಕಾಗಿವೆ. (1) ಸಂಸ್ಕ್ರುತ ವ್ಯಾಕರಣಗಳಲ್ಲಿ ಪದ ಮತ್ತು ಶಬ್ದ ಎಂಬ ಎರಡು ಪಾರಿಬಾಶಿಕ ಪದಗಳು ಬಳಕೆಯಾಗುತ್ತವೆ. ಸುಪ್ ಮತ್ತು ತಿಙõï ಪ್ರತ್ಯಯಗಳನ್ನು ಸೇರಿಸಿರುವವು ಪದಗಳು ಮತ್ತು ಹಾಗೆ ಸೇರಿಸದವುಗಳು ಶಬ್ದಗಳು ಎಂಬುದಾಗಿ ಸಂಸ್ಕ್ರುತ ವ್ಯಾಕರಣದಲ್ಲಿ ಈ ಎರಡು ಪದಗಳನ್ನು ಬೇರ್ಪಡಿಸಲಾಗುತ್ತದೆ. ಆದರೆ ಕನ್ನಡ ವ್ಯಾಕರಣದ ಮಟ್ಟಿಗೆ ಪದ ಎಂಬ ಒಂದು ಪಾರಿಬಾಶಿಕ ಪದ ಮಾತ್ರ ಇದ್ದರೆ ಸಾಕು. ಅದಕ್ಕಿಂತ ಬೇರಾಗಿರುವ ಶಬ್ದ ಎಂಬ ಪದ ಕನ್ನಡಕ್ಕೆ ಬೇಕಾಗಿಲ್ಲ. ಕನ್ನಡ ವ್ಯಾಕರಣಗಳಲ್ಲಿ ಇವೆರಡು ಪದಗಳು ಮಾತ್ರವಲ್ಲದೆ ಲಿಂಗ ಎಂಬ ಇನ್ನೊಂದು ಪದವೂ ಬಳಕೆಯಾಗುತ್ತಿದ್ದು ಗೊಂದಲಕ್ಕೆಡೆಯಾಗಿದೆ (ಬಟ್ 2005 ನೋಡಿ). ಸಂಸ್ಕ್ರುತ ವ್ಯಾಕರಣದ ಸವರ್ಣ, ನಾಮಿ (ಅನುಲೋಮ- ವಿಲೋಮ) ಮೊದಲಾದ ಬೇರೆಯೂ ಹಲವು ಪಾರಿಬಾಶಿಕ ಪದಗಳು ಕನ್ನಡದ ವ್ಯಾಕರಣಕ್ಕೆ ಬೇಕಾಗುವುದಿಲ್ಲ. ಸಂಸ್ಕ್ರುತದ ಕಾರಕ ಮತ್ತು ಕತ್ರೃ, ಕರ್ಮ ಮೊದಲಾದ ಪದಗಳೂ ಹೀಗೆಯೇ. ಅವುಗಳೂ ಕನ್ನಡ ವ್ಯಾಕರಣಕ್ಕೆ ಬೇಕಾಗಿಲ್ಲ. (2) ಬೇರೆ ಕೆಲವು ಪಾರಿಬಾಶಿಕ ಪದಗಳು ಸಂಸ್ಕ್ರುತ ವ್ಯಾಕರಣದ ಮೂಲತತ್ವಗಳನ್ನು ಅವಲಂಬಿಸಿವೆ. ಕನ್ನಡ ವ್ಯಾಕರಣದ ಮೂಲತತ್ವಗಳು ಇವಕ್ಕಿಂತ ತೀರ ಬೇರಾಗಿರುವ ಕಾರಣ, ಅಂತಹ ಪದಗಳನ್ನು ಕನ್ನಡ ವ್ಯಾಕರಣದಲ್ಲಿ ಬಳಸದಿರುವುದೇ ಒಳ್ಳೆಯದು. ಸಂಸ್ಕ್ರುತದ ತತ್ಪುರುಷ, ಬಹುವ್ರೀಹಿ, ಅವ್ಯಯೀಭಾವ ಮೊದಲಾದ ಸಮಾಸಗಳ ಹೆಸರುಗಳು, ಪ್ರಥಮಾ, ದ್ವಿತೀಯಾ, ತೃತೀಯಾ ಮೊದಲಾದ ವಿಬಕ್ತಿಗಳ ಹೆಸರುಗಳು ಮತ್ತು ಸುಬಂತ, ಅಕಮ್ರಕ, ಸಕಮ್ರಕ ಮೊದಲಾದ ಬೇರೆ ಹಲವು ಪಾರಿಬಾಶಿಕ

ಪದಗಳು ಇಂತಹವು. ಇವನ್ನು ಬಳಸಿ ಕನ್ನಡ ವ್ಯಾಕರಣವನ್ನು ತ್ರುಪ್ತಿಕರವಾಗಿ ವಿವರಿಸಲು ಸಾದ್ಯವಾಗದು. ಹಾಗಾಗಿ, ಕನ್ನಡದ ಸಮಾಸ, ವಿಬಕ್ತಿ ಮೊದಲಾದವುಗಳನ್ನು ಹೆಸರಿಸುವುದಕ್ಕಾಗಿ ಕನ್ನಡದಲ್ಲೇನೇ ಪಾರಿಬಾಶಿಕ ಪದಗಳನ್ನು ತಯಾರಿಸಿಕೊಳ್ಳುವುದು ಒಳ್ಳೆಯದು. ಅವು ಕನ್ನಡ ವ್ಯಾಕರಣದ ನಿಯಮಗಳನ್ನು ಹೆಚ್ಚು ಸ್ಪಶ್ಟವಾಗಿ ತಿಳಿಸಬಲ್ಲುವು. (3) ಇನ್ನು ಬೇರೆ ಕೆಲವು ಸಂಸ್ಕ್ರುತದ ಪಾರಿಬಾಶಿಕ ಪದಗಳು ಕನ್ನಡ ವ್ಯಾಕರಣಕ್ಕೆ ಅವಶ್ಯವಿದ್ದರೂ ಅವು ತುಂಬಾ ತೊಡಕು ತೊಡಕಾಗಿರುವ ಕಾರಣ, ಅವಕ್ಕೆ ಬದಲು ಬೇರೆ ಕನ್ನಡದವೇ ಆದ ಪದಗಳನ್ನು ತಯಾರಿಸಿಕೊಳ್ಳುವುದು ಒಳ್ಳೆಯದು. ಉದಾಹರಣೆಗಾಗಿ ಸಂಸ್ಕ್ರುತದ ಸ್ವರ ಮತ್ತು ವ್ಯಂಜನ ಪದಗಳ ಬದಲು ಕನ್ನಡದಲ್ಲಿ ತೆರೆಯುಲಿ ಮತ್ತು ಮುಚ್ಚುಲಿ ಎಂಬ ಪದಗಳನ್ನು ಬಳಸಬಹುದು. ಯಾಕೆಂದರೆ, ಈ ಎರಡು ಪದಗಳು ಕನ್ನಡ ವಾಕ್ಯಗಳಲ್ಲಿ ಹೆಚ್ಚು ಚನ್ನಾಗಿ ಹೊಂದಿಕೊಳ್ಳಬಲ್ಲುವು ಮಾತ್ರವಲ್ಲ ಅವು ಹೆಸರಿಸಬೇಕಾಗಿರುವ ಉಲಿಗಳ ನಡುವಿನ ವ್ಯತ್ಯಾಸವನ್ನು ಸ್ವರ ಮತ್ತು ವ್ಯಂಜನ ಪದಗಳಿಗಿಂತ ಹೆಚ್ಚು ಸ್ಪಶ್ಟವಾಗಿ ಸೂಚಿಸಬಲ್ಲುವು. ಇ, ಉ, ಎ, ಒ ಮೊದಲಾದವು ತೆರೆಯುಲಿ(ಸ್ವರ)ಗಳು. ಇವುಗಳ ಉಚ್ಚಾರಣೆಯಲ್ಲಿ ಬಾಯಿ ತೆರೆದಿರುತ್ತದೆ. ಹೀಗೆ ತೆರೆದಿರುವಾಗ ಬಾಯಿಯೊಳಗೆ ಉಂಟಾಗುವ ಟೊಳ್ಳಿನ ರೂಪವನ್ನು ಬೇರೆ ಬೇರೆ ರೀತಿಯಲ್ಲಿ ಬದಲಾಯಿಸುವ ಮೂಲಕ ಇ, ಉ, ಎ ಮೊದಲಾದ ಈ ಉಲಿಗಳ ನಡುವಿನ ವ್ಯತ್ಯಾಸವನ್ನು ಉಂಟುಮಾಡಲಾಗುತ್ತದೆ. ಇದಕ್ಕೆ ಬದಲು ಕ್, ಟ್, ತ್, ಮ್, ನ್, ರ್, ಲ್ ಮೊದಲಾದವು ಮುಚ್ಚುಲಿ(ವ್ಯಂಜನ)ಗಳು. ಇವುಗಳ ಉಚ್ಚಾರಣೆಯಲ್ಲಿ ಬಾಯಿ ಹೆಚ್ಚುಕಡಿಮೆ ಮುಚ್ಚಿರುತ್ತದೆ. ಹೀಗೆ ಮುಚ್ಚಿರುವ ಬಾಯಿಯ ಬೇರೆ ಬೇರೆ ಕಡೆಗಳಲ್ಲಿ ಉಸಿರನ್ನು ತಡೆಹಿಡಿದು ಬಿಡುವ ಮೂಲಕ ಇಲ್ಲವೇ ಅದು ಕಶ್ಟದಿಂದ ಹೊರ ಹೋಗುವ ಹಾಗೆ ಮಾಡುವುದರ ಮೂಲಕ ಕ್, ಚ್, ಮ್, ಸ್ ಮೊದಲಾದ ಮುಚ್ಚುಲಿಗಳನ್ನು ಉಂಟುಮಾಡಲಾಗುತ್ತದೆ (9.3 ನೋಡಿ).

ಸಂಸ್ಕ್ರುತದ ಭೂತಕಾಲ, ವತ್ರಮಾನಕಾಲ ಮತ್ತು ಭವಿಷ್ಯತ್ಕಾಲ ಎಂಬವುಗಳನ್ನೂ ಇದೇ ರೀತಿಯಲ್ಲಿ ಹಿಂದಿನ ಹೊತ್ತು, ಈಗಿನ ಹೊತ್ತು ಮತ್ತು ಮುಂದಿನ ಹೊತ್ತು ಎಂಬುದಾಗಿ (ಇಲ್ಲವೇ ಹಿಂಬೊತ್ತು, ಈಪೆÇತ್ತು ಮತ್ತು ಮುಂಬೊತ್ತು ಎಂಬುದಾಗಿ) ಬದಲಾಯಿಸುವ ಮೂಲಕ ಕನ್ನಡದ ವಿದ್ಯಾರ್ತಿಗಳಿಗೆ ಅವು ಸೂಚಿಸುವ ಅರ್ತ ಸುಲಬವಾಗಿ ಗೊತ್ತಾಗುವ ಹಾಗೆ ಮಾಡಬಹುದು. (4) ಇತ್ತೀಚೆಗೆ ಬಾಶಾವಿಜ್ನಾನದಲ್ಲಿ ನಡೆದಿರುವ ಹೆಚ್ಚಿನ ಸಂಶೋದನೆಗಳೂ ಇಂಗ್ಲಿಶ್ ನುಡಿಯಲ್ಲೇ ವರದಿಯಾಗಿರುವ ಕಾರಣ, ನೂರಾರು ಹೊಸ ಪಾರಿಬಾಶಿಕ ಪದಗಳು ಇಂಗ್ಲಿಶ್ನಲ್ಲಿ ಬಳಕೆಗೆ ಬಂದಿವೆ. ಇವಕ್ಕೆ ಸಮನಾದ ಪದಗಳನ್ನು ಕನ್ನಡದಲ್ಲಿ ತಯಾರಿಸಿಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಕೆಲವರು ವಿದ್ವಾಂಸರು ಪಾರಿಬಾಶಿಕ ಪದಕೋಶಗಳನ್ನು ರಚಿಸುವ ಕೆಲಸಕ್ಕೆ ಕಯ್ಯಿಕ್ಕಿದ್ದಾರೆ (ಕೆಂಪೇಗವ್ಡ 1976, ಆಚಾರ್ಯ 2003). ಆದರೆ ಈ ಕೋಶಗಳಲ್ಲೂ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸ ಪದಗಳನ್ನು (ತ್ರಿಶಂಕು ಪದಗಳನ್ನು) ಉಂಟುಮಾಡುವ ವಿದಾನವನ್ನೇ ಅನುಸರಿಸಲಾಗಿದೆ. ಕನ್ನಡದವೇ ಆದ ಪದಗಳನ್ನು ಉಂಟುಮಾಡುವ ಪ್ರಯತ್ನ ತುಂಬಾ ಅಪರೂಪವಾಗಿ ಮಾತ್ರ ನಡೆದಿದೆ. ಈಗಾಗಲೇ ಬಳಕೆಗೆ ಬಂದಿರುವ ಇಂತಹ ಪದಗಳ ಮಟ್ಟಿಗೆ ಹೇಳುವುದಾದರೆ, ಆದಶ್ಟು ಮಟ್ಟಿಗೆ ಅವುಗಳೊಂದಿಗೆ ಕನ್ನಡದವೇ ಆದ ಪ್ರತ್ಯಯಗಳನ್ನು ಮತ್ತು ಪದಕಾಂಡಗಳನ್ನು ಬಳಸುವ ಮೂಲಕ ಅವು ಕನ್ನಡಕ್ಕೆ ಹೆಚ್ಚು ಹೊಂದಿಕೊಳ್ಳುವಂತೆ ಮಾಡಬಹುದು. ಉದಾಹರಣೆಗಾಗಿ, ಇತ್ತೀಚೆಗೆ ಆಚಾರ್ಯ ಅವರು ಸಂಪಾದಿಸಿದ ಇಂಗ್ಲಿಶ್-ಕನ್ನಡ ಬಾಶಾವಿಜ್ನಾನಕೋಶದಲ್ಲಿ (ಆಚಾರ್ಯ 2003) ಒಟ್ಟು 70 ಪುಟಗಳಶ್ಟು (ಸುಮಾರು 3,300) ಪಾರಿಬಾಶಿಕ ಪದಗಳಿವೆ. ಇವುಗಳಲ್ಲಿ ಹೆಚ್ಚಿನವೂ ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳನ್ನು ಬಳಸಿ ತಯಾರಿಸಿದವುಗಳು.

ಇವುಗಳನ್ನು ರಚಿಸುವಲ್ಲಿ ಅನವಶ್ಯಕವಾಗಿ ಹಲವು ತೊಡಕುಗಳನ್ನು ತಂದುಹಾಕಲಾಗಿದೆ. ಉದಾಹರಣೆಗಾಗಿ, ಸುಮಾರು 250ಕ್ಕಿಂತಲೂ ಹೆಚ್ಚು ಇಂಗ್ಲಿಶ್ ಪದಗಳಿಗೆ ಸಮಾನ ಪದಗಳನ್ನು ತಯಾರಿಸುವಲ್ಲಿ ಸಂಸ್ಕ್ರುತದ ಆತ್ಮಕ ಪದವನ್ನು ಬಳಸಲಾಗಿದೆ! ಇಂತಹ ಹೆಚ್ಚಿನ ಕಡೆಗಳಲ್ಲೂ ಈ ಆತ್ಮಕ ಪದದ ಅವಶ್ಯಕತೆಯೇ ಇಲ್ಲ. ಅದು ಕೊಡಬಹುದಾದ ಅರ್ತವನ್ನು ಯಾವ ಪ್ರತ್ಯಯವನ್ನೂ ಬಳಸದೆಯೇ ಸೂಚಿಸಲು ಸಾದ್ಯವಿದೆ. ಇನ್ನು ಕೆಲವು ಕಡೆಗಳಲ್ಲಿ ಅದಕ್ಕೆ ಬದಲು ಕನ್ನಡದ ಇಸು ಪ್ರತ್ಯಯವನ್ನು ಬಳಸುವ ಮೂಲಕ ಈ ಪದಗಳು ಕನ್ನಡಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಬಹುದು. ಮುಕ್ಯವಾಗಿ ಇಂಗ್ಲಿಶ್ ನುಡಿಯ ಇವ್, ಅಲ್, ಇಕ್ ಮತ್ತು ಅರೀ ಪ್ರತ್ಯಯಗಳಿಗೆ ಬದಲಾಗಿ ಈ ರೀತಿ ಸಂಸ್ಕ್ರುತದ ಆತ್ಮಕ ಎಂಬುದನ್ನು ಬಳಸಲಾಗಿದೆ. ಕೆಳಗಿನ ಉದಾಹರಣೆಗಳು ಇದನ್ನು ಬಳಸಲೇಬೇಕಾಗಿಲ್ಲ ಎಂಬುದನ್ನು ತೋರಿಸಿಕೊಡುತ್ತವೆ. ಕ್ರಿಯಾತ್ಮಕ ವಿಶೇಷಣ ಕ್ರಿಯಾವಿಶೇಷಣ ಉದ್ದೇಶಾತ್ಮಕ ವಿಭಕ್ತಿ ಉದ್ದೇಶ ವಿಭಕ್ತಿ ವ್ಯಾಕರಣಾತ್ಮಕ ವಿಶ್ಲೇಷಣೆ ವ್ಯಾಕರಣ ವಿಶ್ಲೇಷಣೆ ಆಕೃತಿಮಾತ್ಮಕ ರಚನೆ ಆಕೃತಿಮ ರಚನೆ ಧ್ವನ್ಯಾತ್ಮಕ ರಚನೆ ಧ್ವನಿರಚನೆ ಪ್ರೇರಣಾತ್ಮಕ ವಾಕ್ಯ ಪ್ರೇರಣವಾಕ್ಯ ನಿಷೇಧಾತ್ಮಕ ವಾಕ್ಯ ನಿಷೇಧವಾಕ್ಯ ಧ್ವನ್ಯಾತ್ಮಕ ವಗ್ರ ಧ್ವನಿವಗ್ರ ವಾಕ್ಯಾತ್ಮಕ ಘಟಕ ವಾಕ್ಯಘಟಕ ವಿಶಿಷ್ಟಾತ್ಮಕ ನಿಯಮ ವಿಶಿಷ್ಟ ನಿಯಮ ವ್ಯಾಕರಣಾತ್ಮಕ ನಿಯಮ ವ್ಯಾಕರಣ ನಿಯಮ ಆತ್ಮಕ ಎಂಬ ಪದ ಸೂಚಿಸಬೇಕಾದ ಅರ್ತವನ್ನು ಕನ್ನಡದ ಇಸು ಪ್ರತ್ಯಯದ ಮೂಲಕ ಸೂಚಿಸುವ ಸಾದ್ಯತೆಯನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು. —