← Ch 5  ·  Contents  ·  Ch 7 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 6 — ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳು

↑ ಒಳಪಿಡಿಗೆ ಹಿಂತಿರುಗಿ

ಉಚ್ಚಾರಣೆಗನುಸಾರವಾಗಿ ಬರಹವನ್ನು ಬದಲಾಯಿಸಿಕೊಳ್ಳುವ ಸಂದರ್ಬಗಳಲ್ಲೆಲ್ಲ ಈ ರೀತಿ ಮೊದಲ ಬಾರಿಗೆ ಅನಿಶ್ಚಿತತೆ ಕಾಣಿಸಿಕೊಳ್ಳುವುದಾದರೂ ಸಮಯ ಕಳೆದಂತೆ ಈ ಅನಿಶ್ಚಿತತೆ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಒಂದು ರೀತಿಯ ಸ್ತಿರತೆಯುಂಟಾಗುತ್ತದೆ. ಕನ್ನಡದ ಚರಿತ್ರೆಯಲ್ಲಿ ಪಕಾರ ಹಕಾರವಾದಾಗ ಮತ್ತು ¾-ರ ಹಾಗೂ ¿-ಳಗಳ ನಡುವಿನ ವ್ಯತ್ಯಾಸ ಇಲ್ಲವಾದಾಗ ಅದಕ್ಕೆ ಅನುಸಾರವಾಗಿ ಶಾಸನಗಳ ಬರಹದಲ್ಲೂ ಬದಲಾವಣೆಗಳನ್ನು ಮಾಡಲಾಗಿತ್ತು. ಆ ಸಮಯದಲ್ಲಿ ಮೊದಲಿಗೆ ಇಂತಹದೇ ಅನಿಶ್ಚಿತತೆಗಳು ಕಾಣಿಸಿಕೊಂಡಿದ್ದುವು (ನರಸಿಂಹಯ್ಯ 1941 ನೋಡಿ). ಆದರೆ ಈಗ ಅವೊಂದೂ ಉಳಿದಿಲ್ಲ. 4.3.9 ಆಡುನುಡಿ ಮತ್ತು ಬರಹದ ಓದು ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸುವ ಅವಶ್ಯಕತೆಯಿದೆ. ಕನ್ನಡದಲ್ಲಿ ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಆಡುನುಡಿ ಬೇರಾಗಿರುವುದು ನಿಜವಾದರೂ ಆ ಎಲ್ಲ ಊರು ಮತ್ತು ಜಾತಿಗಳಿಗೂ ಸಮಾನವಾಗಿರುವಂತಹ ಬರಹ ಕನ್ನಡ ಎಂಬುದೊಂದಿದೆ. ಉದಾಹರಣೆಗಾಗಿ, ಹುಬ್ಬಳ್ಳಿಯಿಂದ ಹೊರಬರುವ ಸಂಯುಕ್ತ ಕರ್ನಾಟಕದಲ್ಲಿ, ಬೆಂಗಳೂರಿನಿಂದ ಹೊರಬರುವ ವಿಜಯ ಕರ್ನಾಟಕ ಇಲ್ಲವೇ ಪ್ರಜಾವಾಣಿಯಲ್ಲಿ ಮತ್ತು ಮಣಿಪಾಲದಿಂದ ಹೊರಬರುವ ಉದಯವಾಣಿಯಲ್ಲಿ ಹೆಚ್ಚುಕಡಿಮೆ ಒಂದೇ ರೀತಿಯ ಬರಹ ಕನ್ನಡ ಬಳಕೆಯಾಗುತ್ತದೆ. ಇದೇ ರೀತಿಯಲ್ಲಿ ಹುಬ್ಬಳ್ಳಿಯ ಕರ್ಮವೀರ ಇಲ್ಲವೇ ಕಸ್ತೂರಿಯಲ್ಲಿ, ಬೆಂಗಳೂರಿನ ಸುದಾ ಇಲ್ಲವೇ ಮಯೂರದಲ್ಲಿ ಮತ್ತು ಮಣಿಪಾಲದ ತರಂಗ ಇಲ್ಲವೇ ತುಶಾರದಲ್ಲಿ ಹೆಚ್ಚುಕಡಿಮೆ ಒಂದೇ ರೀತಿಯ ಬರಹ ಕನ್ನಡ ಬಳಕೆಯಾಗುವುದನ್ನು ಕಾಣಬಹುದು. ಈ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿ ಬರುವ ಬರಹಗಳನ್ನು ಕನ್ನಡಿಗರು ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಓದುತ್ತಾರೆ. ಈ ಓದುವಿಕೆ ಅವರ ಆಡುನುಡಿಗಿಂತ ಬೇರಾಗಿರುತ್ತದೆ.

ಉದಾಹರಣೆಗಾಗಿ ಬಡಗು ಕರ್ನಾಟಕದ ಆಡುನುಡಿಗಳಲ್ಲಿ ಮನೆ, ಕತೆ, ಬರೆ, ಹೊಗೆ ಮೊದಲಾದ ಪದಗಳ ಕೊನೆಯ ಎಕಾರ ಇಕಾರವಾಗಿರುತ್ತದೆ. ಆದರೆ ಬರಹ ಕನ್ನಡದಲ್ಲಿ ಅದು ಎಕಾರವಾಗಿಯೇ ಉಳಿದಿರುತ್ತದೆ ಮತ್ತು ಈ ಬರಹಗಳನ್ನು ಓದುವವರು ಅದನ್ನು ಎಕಾರವಾಗಿಯೇ ಓದುತ್ತಾರೆ. ತೆಂಕು ಕರ್ನಾಟಕದ ಹಲವು ಆಡುನುಡಿಗಳಲ್ಲಿ ಹಕಾರ ಬಿದ್ದುಹೋಗಿದೆಯಾದರೂ ಅಲ್ಲಿಂದ ಹೊರಬರುವ ಬರಹಗಳಲ್ಲಿ ಅದನ್ನು ಉಳಿಸಲಾಗುತ್ತದೆ ಮತ್ತು ಹೆಚ್ಚಿನ ಓದುಗರೂ ಅದನ್ನು ಸರಿಯಾಗಿಯೇ ಉಚ್ಚರಿಸುತ್ತಾರೆ. ಹಾಗೆ ಉಚ್ಚರಿಸದವರನ್ನು ಶಾಲೆಗಳಲ್ಲಿ ತಿದ್ದಲಾಗುತ್ತದೆ. ಕರಾವಳಿಯ ಆಡುಗನ್ನಡದಲ್ಲಿ ಕಿವಿ, ಬಿಳಿ, ಬಿಸಿ, ಬಿದಿರು ಮೊದಲಾದ ಹಲವು ಪದಗಳ ಮೊದಲನೆಯ ಇಕಾರ ಎಕಾರವಾಗಿ ಕಾಣಿಸುತ್ತದೆ. ಆದರೆ ಬರಹದಲ್ಲಿ ಅದು ಇಕಾರವಾಗಿಯೇ ಇದೆ ಮತ್ತು ಓದುವವರು ಅದನ್ನು ಇಕಾರವಾಗಿಯೇ ಓದುತ್ತಾರೆ. ಆದರೆ ಇಂತಹ ಬರಹಗಳಲ್ಲಿ ಬರುವ ಮಹಾಪ್ರಾಣಾಕ್ಶರಗಳು, ಷಕಾರ ಇಲ್ಲವೇ ಋಕಾರ ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವನ್ನು ಸರಿಯಾಗಿ ಉಚ್ಚರಿಸಬೇಕೆಂದು ಯಾರೂ ಮಕ್ಕಳಿಗೆ ಹೇಳಿಕೊಡುವುದೂ ಇಲ್ಲ. ಕೆಲವರು ಸಂಸ್ಕ್ರುತದ ಅಬಿಮಾನಿಗಳು ಮಾತ್ರ ಇದಕ್ಕೆ ಅಪವಾದವಾಗಿರಬಹುದು. ಆದರೆ ಅವರೂ ಕೂಡ ಕನ್ನಡ ಬರಹಗಳನ್ನು ಓದುವಾಗ ಈ ಅಕ್ಶರಗಳನ್ನು ಸರಿಯಾಗಿ ಉಚ್ಚರಿಸದಿರುವುದೇ ಜಾಸ್ತಿ. ಹಲವು ಮಂದಿ ಪಂಡಿತರ ಕನ್ನಡ ಉಚ್ಚಾರಣೆಯನ್ನು ಪರಿಶೀಲಿಸಿಯೇ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಬರಹದ ಓದಿಗೂ ಆಡುಮಾತಿಗೂ ನಡುವಿರುವ ಈ ವ್ಯತ್ಯಾಸ ನುಡಿಗೂ ಬರಹಕ್ಕೂ ನಡುವಿರುವ ವ್ಯತ್ಯಾಸದ ಹಾಗೆಯೇ ಇದೆ. ಆಡುಮಾತನ್ನು ಮಕ್ಕಳು ತಾವಾಗಿಯೇ ತಮ್ಮ ಬೆಳವಣಿಗೆಯ ಅಂಗವಾಗಿ ಕಲಿಯುತ್ತಾರೆ. ಅದನ್ನು ಅವರಿಗೆ ಯಾರೂ ಕಲಿಸಬೇಕಾಗುವುದಿಲ್ಲ. ಹಾಗಾಗಿ ಅದರ ಮೇಲೆ ಯಾರ ಹತೋಟಿಯೂ ಇರುವುದಿಲ್ಲ. ಅದು ಊರಿನಿಂದ ಊರಿಗೆ ಮತ್ತು

ಜಾತಿಯಿಂದ ಜಾತಿಗೆ ಬೇರೆ ಬೇರಾಗಿ ಬದಲಾಗುತ್ತಿರುವುದಕ್ಕೆ ಇದೇ PÁgÀt. ಆದರೆ ಬರಹವನ್ನು ಓದುವುದು ಹೇಗೆ ಎಂಬುದನ್ನು ಮಕ್ಕಳು ಶಾಲೆಯಲ್ಲಿ ಕಲಿಯುತ್ತಾರೆ. ಅದನ್ನು ಸರಿಯಾಗಿ ನಡೆಸುವಂತೆ ಅಲ್ಲಿ ಕಲಿಸಲಾಗುತ್ತದೆ. ಮಕ್ಕಳು ತಮ್ಮ ಓದಿನಲ್ಲಿ ತಪ್ಪುಮಾಡಿದಾಗಲೆಲ್ಲ ಅವರನ್ನು ತಿದ್ದಲಾಗುತ್ತದೆ. ಈ ಕಾರಣಕ್ಕಾಗಿ, ಎಲ್ಲಾ ಮಕ್ಕಳೂ ಹೆಚ್ಚುಕಡಿಮೆ ಒಂದೇ ರೀತಿಯ ಓದನ್ನು ಪಡೆಯಬಲ್ಲವರಾಗುತ್ತಾರೆ. ಕನ್ನಡದವೇ ಆದ ಪದಗಳ ಬರಹಕ್ಕೂ ಈ ಓದಿಗೂ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಆದರೆ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ವಿಶಯದಲ್ಲಿ ಮಾತ್ರ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ತೆಗೆದುಹಾಕಿದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುತ್ತದೆ. ಈ ರೀತಿ ಬರಹ ಕನ್ನಡದ ಓದಿನಲ್ಲಿ (ಎಂದರೆ ಉಚ್ಚಾರಣೆಯಲ್ಲಿ) ಕಾಣಿಸದಿರುವ ಅಕ್ಶರಗಳನ್ನು ಬರಹದಲ್ಲಿ ಬಳಸಬೇಕಾಗಿಲ್ಲ ಎಂಬುದಾಗಿ ನಾನು ಇಲ್ಲಿ ಹೇಳುತ್ತಿರುವೆನಲ್ಲದೆ, ಆಡುನುಡಿಗಳಲ್ಲಿ ಕನ್ನಡ ಹೇಗಿದೆಯೋ ಹಾಗೆಯೇ ಬರೆಯಬೇಕೆಂದು ನಾನೇನೂ ಹೇಳುತ್ತಾ ಇಲ್ಲ. 4.3.10 ಅರ್ತಸಂದಿಗ್ದತೆ ಉಂಟಾಗಬಹುದೇ? ಮಹಾಪಾಣಾಕ್ಶರ, ಷಕಾರ, ಋಕಾರ ಮೊದಲಾದವುಗಳನ್ನು ಬಿಡುವುದರಿಂದ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಹಲವು ಸಂಸ್ಕ್ರುತ ಪದಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ. ಕೆಲವು ಸಂಸ್ಕ್ರುತ ಮತ್ತು ಕನ್ನಡ ಪದಗಳ ನಡುವಿರುವ ವ್ಯತ್ಯಾಸಗಳೂ ಇಲ್ಲವಾಗುತ್ತವೆ. ಇದರಿಂದ ಬರಹದಲ್ಲಿ ಅರ್ತಸಂದಿಗ್ದತೆ ತಲೆದೋರಬಹುದಲ್ಲವೇ ಮತ್ತು ಗೊಂದಲವುಂಟಾಗಬಹುದಲ್ಲವೇ ಎಂಬುದಾಗಿ ಕೆಲವರು ಕೇಳಬಹುದು.

ಸಂಸ್ಕ್ರುತದ ಮಧ್ಯ ಮತ್ತು ಮದ್ಯ ಪದಗಳ ನಡುವೆ, ಸಂಘ ಮತ್ತು ಸಂಗ ಪದಗಳ ನಡುವೆ, ಸಂಸ್ಕ್ರುತದ ಧನ ಮತ್ತು ಕನ್ನಡದ ದನ (ತದ್ಬವ) ಪದಗಳ ನಡುವೆ ಈಗಿನ ಕನ್ನಡ ಬರಹಗಳಲ್ಲಿ ಕಾಣಿಸುವ ವ್ಯತ್ಯಾಸ ಹೊಸ ಬರಹದಲ್ಲಿ ಇಲ್ಲವಾಗುತ್ತದೆ. ಇದರಿಂದಾಗಿ ಈ ಹೊಸ ಬರಹದಲ್ಲಿ ಪದಗಳ ಇಲ್ಲವೇ ಅವನ್ನು ಬಳಸಿರುವ ವಾಕ್ಯಗಳ ಅರ್ತವನ್ನು ತಿಳಿದುಕೊಳ್ಳುವಲ್ಲಿ ತೊಂದರೆಯಾಗಬಲ್ಲುದು ಎಂಬುದೇ ಇವರ ವಾದ. ಇದಕ್ಕೆ ಎರಡು ರೀತಿಯ ಉತ್ತರಗಳನ್ನು ಕೊಡಬಹುದು. (1) ಈ ಪದಗಳ ನಡುವೆ ನಮ್ಮ ಓದಿನಲ್ಲಿ (ಉಚ್ಚಾರಣೆಯಲ್ಲಿ) ಯಾವ ವ್ಯತ್ಯಾಸವೂ ಇಲ್ಲ. ಮಧ್ಯದಲ್ಲಿ ಎಂಬುದಾಗಿ ಬರೆದರೂ ಅದನ್ನು ಮದ್ಯದಲ್ಲಿ ಎಂಬುದಾಗಿಯೇ ಉಚ್ಚರಿಸುತ್ತೇವೆ. ಕನ್ನಡ ಸಂಘ ಎಂಬುದಾಗಿ ಬರೆಯುತ್ತೇವೆ, ಕನ್ನಡ ಸಂಗ ಎಂಬುದಾಗಿ ಓದುತ್ತೇವೆ. ಓದಿನಲ್ಲಿ ಈ ರೀತಿ ಮೇಲಿನ ವ್ಯತ್ಯಾಸಗಳನ್ನು ಕಾಣಿಸದಿರುವುದರಿಂದ ತೊಂದರೆಯೇನೂ ಉಂಟಾಗುವುದಿಲ್ಲ. ಹಾಗಾಗಿ ಬರಹದಲ್ಲಿ ಅವನ್ನು ಕಾಣಿಸದಿರುವುದರಿಂದಲೂ ತೊಂದರೆಯೇನೂ ಉಂಟಾಗದು. (2) ನಾವು ಬರಹದಲ್ಲಿ ಬಳಸುವ ಪದಗಳಲ್ಲಿ ಹೆಚ್ಚಿನವಕ್ಕೂ ಒಂದಕ್ಕಿಂತ ಹೆಚ್ಚು ಅರ್ತಗಳಿವೆ. ಸಂಸ್ಕ್ರುತ ಪದಗಳಲ್ಲಿ ಇದು ಇನ್ನೂ ಹೆಚ್ಚು. ಆದರೆ ಪದಗಳಿಗೆ ಈ ರೀತಿ ಒಂದಕ್ಕಿಂತ ಹೆಚ್ಚು ಅರ್ತ ಇರುವುದರಿಂದಾಗಿ ಹೆಚ್ಚಿನ ಸಂದರ್ಬಗಳಲ್ಲೂ ಅವುಗಳ ಬಳಕೆಯಲ್ಲಿ ಗೊಂದಲವುಂಟಾಗುವುದಿಲ್ಲ. ಕನ್ನಡದ ಕಡಿ ಪದಕ್ಕೆ ಕಿಟ್ಟೆಲ್ ಡಿಕ್್ಶನರಿಯಲ್ಲಿ ಒಟ್ಟು ಒಂಬತ್ತು ಅರ್ತಗಳನ್ನು ಕೊಡಲಾಗಿದೆ. ಹಾಲು ಪದಕ್ಕೆ ದನದ ಹಾಲು’ ಎಂಬ ಅರ್ತವೂ ಇದೆ, ಕಬ್ಬಿನ ಹಾಲು’ ಎಂಬ ಅರ್ತವೂ ಇದೆ. ಇದಲ್ಲದೆ ಕೆಲವು ಗಿಡಗಳ ಸೊನೆ’ ಎಂಬ ಅರ್ತವೂ ಇದೆ. ಅರವೆ ಪದಕ್ಕೆ ಜೀರ್ಣ’ ಎಂಬ ಅರ್ತವೂ ಇದೆ `ಅಜೀರ್ಣ’ ಎಂಬ ಅರ್ತವೂ ಇದೆ! ಆದರೆ ಇಂತಹ ಹಲವು ಅರ್ತಗಳಿರುವ ಮತ್ತು ಇದಿರರ್ತಗಳಿರುವ ಪದಗಳನ್ನು ಮಾತಿನಲ್ಲಿ ಇಲ್ಲವೇ ಬರಹದಲ್ಲಿ

ಬಳಸುವಾಗ ಸಾಮಾನ್ಯವಾಗಿ ಯಾವ ಗೊಂದಲವೂ ಉಂಟಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಹೆಚ್ಚಿನೆಡೆಗಳಲ್ಲೂ ಈ ಪದಗಳನ್ನು ಬಳಸಿರುವ ಸಂದರ್ಬವೇ ಅವನ್ನು ಯಾವ ಅರ್ತದಲ್ಲಿ ಬಳಸಲಾಗಿದೆ ಎಂಬುದನ್ನು ಸ್ಪಶ್ಟಪಡಿಸುತ್ತದೆ. ಇದಲ್ಲದೆ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯವಿದ್ದಲ್ಲಿ ಮಾತನಾಡುವವರು ಇಲ್ಲವೇ ಬರಹಗಾರರು ಅದನ್ನು ನಿವಾರಿಸುವುದಕ್ಕಾಗಿ ಆ ಪದದೊಂದಿಗೆ, ದನದ ಹಾಲು ಮತ್ತು ಕಬ್ಬಿನ ಹಾಲು ಎಂಬವುಗಳಲ್ಲಿ ಕಾಣಿಸಿದ ಹಾಗೆ, ಗೊಂದಲವನ್ನು ಹೋಗಲಾಡಿಸಬಲ್ಲ ಬೇರೆ ಪದಗಳನ್ನು ಸೇರಿಸಿಕೊಳ್ಳುತ್ತಾರೆ. 4.3.11 ಹಳೆ ಬರಹಗಳ ಸಮಸ್ಯೆ ಕನ್ನಡ ಬರಹವನ್ನು ಮೇಲೆ ಸೂಚಿಸಿದ ಹಾಗೆ ಬದಲಾಯಿಸಿದಲ್ಲಿ ಈಗಾಗಲೇ ಅಚ್ಚಾಗಿರುವಂತಹ ಬರಹಗಳನ್ನು ಓದಲು ಜನರಿಗೆ ಕಶ್ಟವಾಗಬಹುದೆಂದು ಹಲವರಿಗೆ ಅನಿಸಬಹುದು. ಬದಲಾವಣೆಯನ್ನು ನಡೆಸುವ ಮೊದಲ ಕೆಲವು ವರ್ಶಗಳಲ್ಲಿ ಇದು ಸ್ವಲ್ಪ ಮಟ್ಟಿಗೆ ನಿಜವಿರಬಹುದು. ಆದರೆ ಸಮಯ ಕಳೆದಂತೆಲ್ಲ ಹಳೆಯ ಬರಹಗಳನ್ನು ಓದಬೇಕಾಗುವ ಸಂದರ್ಬಗಳೂ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಅಪರೂಪಕ್ಕೆ ಕೆಲವರು ಮಾತ್ರ ಈ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಇದಲ್ಲದೆ ಹೊಸ ಬರಹವನ್ನು ಓದಿ ಅಬ್ಯಾಸವಾದವರಿಗೆ ಹಳೆ ಬರಹದಲ್ಲಿರುವ ಪುಸ್ತಕಗಳನ್ನು ಓದಲು ಹೆಚ್ಚು ಕಶ್ಟವಾಗಲಾರದು. ಒಂದೆರಡು ಗಂಟೆಗಳಲ್ಲೇ ಅವರು ಇದನ್ನು ಸಾದಿಸಿಕೊಳ್ಳಬಲ್ಲರು. ಉದಾಹರಣೆಗಾಗಿ ಕನ್ನಡ ಬರಹವನ್ನು ಕಲಿತಿರುವವರು ಹೆಚ್ಚು ಕಶ್ಟವಿಲ್ಲದೆ ತೆಲುಗು ಬರಹವನ್ನೂ ಓದಬಲ್ಲರು. ಕನ್ನಡ ಮತ್ತು ತೆಲುಗು ಬರಹಗಳ ನಡುವಿರುವ ವ್ಯತ್ಯಾಸಕ್ಕಿಂತ ಕನ್ನಡದ ಈ ಹೊಸ ಮತ್ತು ಹಳೆ ಬರಹಗಳ ನಡುವಿನ ವ್ಯತ್ಯಾಸ ಹೆಚ್ಚಿನದೇನಲ್ಲ. ನಾವು ಹೊಸ ಬರಹದಿಂದ ತೆಗೆದು ಹಾಕಬೇಕೆಂದಿರುವ ಅಕ್ಶರಗಳಲ್ಲಿ ಹೆಚ್ಚಿನವೂ ಬಹಳ ಅಪರೂಪವಾಗಿ ಮಾತ್ರ ಬರಹದಲ್ಲಿ

ಕಾಣಿಸಿಕೊಳ್ಳುತ್ತವೆ. ಮಹಾಪ್ರಾಣಾಕ್ಶರಗಳಲ್ಲಿ ಫ, ಭ ಮತ್ತು ಧಗಳು ಮಾತ್ರ ಹೆಚ್ಚಿನ ಸಂಕ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇವಕ್ಕೂ ಅಲ್ಪಪ್ರಾಣಾಕ್ಶರಗಳಿಗೂ ನಡುವೆ ಸಾಮ್ಯವಿದೆಯಾದ ಕಾರಣ, ಹಳೆ ಬರಹಗಳನ್ನು ಓದುವವರಿಗೆ ಅವು ಯಾವ ತೊಂದರೆಯನ್ನೂ ಕೊಡಲಾರವು. ಉಳಿದ ಅಕ್ಶರಗಳನ್ನು ಕಲಿಯದಿದ್ದರೂ ಅವು ಬರುವ ಸಂದರ್ಬದಿಂದ ಓದುವವರು ಅರ್ತವನ್ನು ಊಹಿಸಿಕೊಳ್ಳಬಲ್ಲರು. ಹಾಗಾಗಿ ಅವುಗಳಿಂದ ಹೆಚ್ಚಿನ ತೊಂದರೆಯೇನೂ ಆಗಲಾರದು. ಹಾಗಾಗಿ ಈ ಸಮಸ್ಯೆ ಮೇಲ್ನೋಟಕ್ಕೆ ಕಾಣಿಸುವಶ್ಟು ತೊಡಕಿನದೇನೂ C®è. ಇದಲ್ಲದೆ ನಿಜಕ್ಕೂ ಈ ಅಕ್ಶರಗಳು ಹೆಚ್ಚಿನ ತೊಂದರೆ ಕೊಡುವುದು ಬರಹಗಾರರಿಗೆ ಮಾತ್ರ. ಯಾಕೆಂದರೆ ಅವರು ಯಾವ ಪದಗಳಲ್ಲಿ ಯಾವ ಅಕ್ಶರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಓದುವವರಿಗೆ ಈ ಸಮಸ್ಯೆಯಿಲ್ಲ. ಅವನ್ನು ಬಳಸಿರುವ ಪದಗಳನ್ನು ಅರ್ತಮಾಡಿಕೊಳ್ಳುವುದಶ್ಟೇ ಅವರಿಗಿರುವ ಸಮಸ್ಯೆ. ಹಳೆಬರಹವನ್ನು ಬಳಸಿ ಅಬ್ಯಾಸವಾದವರಿಗೆ ಹೊಸ ಬರಹವನ್ನು ಬಳಸಲು ಮೊದಲಿಗೆ ಸ್ವಲ್ಪ ತೊಂದರೆಯೆಂದೆನಿಸಬಹುದು. ಮಹಾಪ್ರಾಣಾಕ್ಶರಗಳು, ಋಕಾರ, ಷಕಾರ, ಐ, ಔ, ಅರ್ಕಾವೊತ್ತು (್ರ) ಮೊದಲಾದುವೆಲ್ಲ ಬರೆಯುವಾಗ ತಾವಾಗಿ ಬಂದುಬಿಡುತ್ತವೆ. ಹಾಗಾಗಿ ಒಮ್ಮೆ ಬರೆದ ಮೇಲೆ ಅವನ್ನೆಲ್ಲ ಹುಡುಕಿ ಹುಡುಕಿ ತಿದ್ದಬೇಕಾದೀತು. ಆದರೆ ಕೆಲವೇ ದಿನಗಳಲ್ಲಿ ಹಾಗೆ ಬರೆಯುವುದು ರೂಡಿಯಾಗಿ ಅನಂತರ ಹಳೆ ಬರಹದಲ್ಲಿ ಬರೆಯುವುದೇ ತೊಂದರೆಯೆಂದೆನಿಸದಿರದು. ಇದೇ ರೀತಿಯಲ್ಲಿ ಹೊಸ ಬರಹವನ್ನು ಬಳಸಿರುವ ಬರಹವನ್ನು ಓದುವಾಗ ಹಲವರಿಗೆ ಅದು ಮೊದಲಿಗೆ ತಪ್ಪು ತಪ್ಪಾಗಿರುವಂತೆ ಕಾಣಿಸಬಹುದು. ಕ್ರುಶ್ಣ, ಶ್ರೀಕಂಟಯ್ಯ, ಗವ್ಡ, ಜಯ್ನ ಮೊದಲಾದ ಕೆಲವು ಹೆಸರುಗಳನ್ನು ಆ ಬರಹದಲ್ಲಿ ಕಾಣುವಾಗಲಂತೂ ಕೆಲವರಿಗೆ

ಹಿಂಸೆಯೂ ಆಗಬಹುದು. ಆದರೆ ಇವನ್ನೂ ಕೂಡ ನೋಡಿ ರೂಡಿಯಾದಾಗ ಹಿಂಸೆಯೆಂದೆನಿಸಲಾರದು. ಉದಾಹರಣೆಗಾಗಿ ಕಪ್ಪುಬಿಳುಪು ಚಿತ್ರದಲ್ಲಿ ಕೆಂಪು ತುಟಿ ಕಪ್ಪಾಗಿ ಕಾಣಿಸುತ್ತದೆ; ಕೆಂಪು ಬೊಟ್ಟು ಕಪ್ಪು ಬೊಟ್ಟಾಗಿ ಕಾಣಿಸುತ್ತದೆ; ನಮ್ಮ ದೇಶದ ಬಾವುಟದಲ್ಲಿರುವ ಹಸಿರು ಬಣ್ಣ ಕಪ್ಪು ಬಣ್ಣವಾಗಿ ಕಾಣಿಸುತ್ತದೆ. ಆದರೆ ಇದಾವುದೂ ನಮಗೆ ಇವತ್ತು ವಿಚಿತ್ರವೆಂದೆನಿಸುವುದಿಲ್ಲ. ಹಿಂಸೆಯೆಂದೆನಿಸುವುದೂ ಇಲ್ಲ. ಅವನ್ನು ನೋಡಿ ನಮಗೆಲ್ಲ ರೂಡಿಯಾಗಿರುವುದೇ ಇದಕ್ಕೆ ಕಾರಣ. ಹೊಸ ಬರಹವೂ ಹೀಗೆಯೇ; ರೂಡಿಯಾದಾಗ ಅದು ತಪ್ಪೆಂದು ಎನಿಸಲಾರದು. 4.3.12 ಆಯ್ಕೆಯಾಗಿ ಹೆಚ್ಚಿನ ಅಕ್ಶರಗಳ ಬಳಕೆ ಕನ್ನಡದ ಸಾಮಾನ್ಯ ಬರಹಕ್ಕೆ ಮೇಲೆ ಸೂಚಿಸಿದ ಹಾಗೆ ಮೂವತ್ತೊಂದು ಅಕ್ಶರಗಳು (ಹತ್ತು ಸ್ವರಗಳು ಮತ್ತು ಇಪ್ಪತ್ತೊಂದು ವ್ಯಂಜನಗಳು) ಮಾತ್ರ ಬೇಕಾಗುತ್ತವೆ. ಆದರೆ ಕೆಲವು ವಿಶಿಶ್ಟವಾದ ಬರಹಗಳಲ್ಲಿ ಹೆಚ್ಚಿನ ಅಕ್ಶರಗಳನ್ನು ಬಳಸುವ ಅವಶ್ಯಕತೆ ತೋರಬಹುದು. ಇಂತಹ ಅವಶ್ಯಕತೆ ಹೊಸ ಬರಹದಲ್ಲಿ ಮಾತ್ರವಲ್ಲದೆ ಹಳೆ ಬರಹದಲ್ಲೂ ಉಂಟಾಗುತ್ತದೆ. ಉದಾಹರಣೆಗಾಗಿ ಈ ಪುಸ್ತಕದಲ್ಲಿ ನಾನು ಹೊಸ ಬರಹವನ್ನು ಬಳಸಿದ್ದೇನಾದರೂ ಮೇಲಿನ ಮೂವತ್ತೊಂದು ಅಕ್ಶರಗಳನ್ನು ಮಾತ್ರವಲ್ಲದೆ ಬೇರೆಯೂ ಹಲವು ಅಕ್ಶರಗಳನ್ನು ಬಳಸಿದ್ದೇನೆ. ಯಾಕೆಂದರೆ, ಸಂಸ್ಕ್ರುತ, ಮರಾಟಿ, ಪಂಜಾಬಿ ಮೊದಲಾದ ನುಡಿಗಳ ಪದಗಳನ್ನು ಎತ್ತಿ (ಉದ್ದರಿಸಿ) ಹೇಳಬೇಕಾದಾಗ ಅವನ್ನು ಹೆಚ್ಚುಕಡಿಮೆ ಆ ನುಡಿಗಳಲ್ಲಿರುವ ಹಾಗೆಯೇ ಬರೆದು ತೋರಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ಮಹಾಪ್ರಾಣಾಕ್ಶರಗಳು, ಷಕಾರ, ಋಕಾರ ಮೊದಲಾದುವನ್ನು ಬಳಸಬೇಕಾಗುತ್ತದೆ. ಇಂಗ್ಲಿಶ್ ಪದಗಳನ್ನು ಆ ರೀತಿ ಎತ್ತಿಹೇಳಲು ಸಾದ್ಯವಾಗುವುದಿಲ್ಲವಾದ ಕಾರಣ, ಅವನ್ನು ಕೆಲವೊಮ್ಮೆ ಇಂಗ್ಲಿಶ್

ಲಿಪಿಯಲ್ಲೇ ಕೊಡಬೇಕಾಗುತ್ತದೆ. ಹಳೆಗನ್ನಡ ಪದಗಳನ್ನು ಎತ್ತಿಕೊಡಬೇಕಾದಾಗ ¾-¿ಗಳನ್ನು ಬಳಸಬೇಕಾಗುತ್ತದೆ. ¥sóÀ, ಜû ಮೊದಲಾದ ಬೇರೆಯೂ ಕೆಲವು ಅಕ್ಶರಗಳನ್ನು ಬೇರೆ ಕಡೆಗಳಲ್ಲಿ ಬಳಸಬೇಕಾಗುತ್ತದೆ. ಕನ್ನಡದ ಒಳನುಡಿಗಳಲ್ಲಿ ಬರುವ ಪದಗಳನ್ನು ಬರೆಯಬೇಕಾದಾಗ ಬೇರೆಯೂ ಕೆಲವು ಅಕ್ಶರಗಳನ್ನು ಇಲ್ಲವೇ ಗುರುತುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಹವ್ಯಕದಲ್ಲಿ ಅಬ್ಬೆ ಬಂದ ಮತ್ತು ಅಣ್ಣ ಬಂದ ಎಂಬೆರಡು ವಾಕ್ಯಗಳಲ್ಲಿ ಎರಡು ರೀತಿಯ ಬಂದ ಪದರೂಪಗಳು ಬಳಕೆಯಾಗುತ್ತವೆ. ಈ ವ್ಯತ್ಯಾಸವನ್ನು ಸೂಚಿಸಬೇಕಿದ್ದಲ್ಲಿ ಅವುಗಳಲ್ಲಿ ಒಂದರ ಕೊನೆಯ ಅಕಾರಕ್ಕೆ ಯಾವುದಾದರೂ ಒಂದು ಗುರುತನ್ನು ಸೇರಿಸಿ ಅದು ಇನ್ನೊಂದಕ್ಕಿಂತ ಬೇರೆ ಎಂಬುದನ್ನು ಸೂಚಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ಕತ್ತೆ ಪದದ ಕೊನೆಯ ಎಕಾರ ಇಕಾರವಾಗಿ ಬದಲಾದುದರಿಂದ ಗುಲ್ಬರ್ಗ ಕನ್ನಡದಲ್ಲಿ ಅದರ ಎರಡನೆಯ ಅಕ್ಶರ ಕತ್ತಿ (ಮರ ಕಡಿಯುವ ಕತ್ತಿ) ಪದದಲ್ಲಿರುವ ಅಕ್ಶರದ ಹಾಗೆಯೇ ಆಗಿದೆ. ಆದರೆ ಈ ಎರಡು ಪದಗಳ ಮೊದಲನೆಯ ಅಕ್ಶರದಲ್ಲಿ (ಕ ಎಂಬುದರಲ್ಲಿ) ವ್ಯತ್ಯಾಸ ಕಾಣಿಸಿಕೊಂಡಿದೆ. ಅವೆರಡರಲ್ಲಿ ಕಕಾರದ ಅನಂತರ ಒಂದೇ ರೀತಿಯ ಅಕಾರ ಬರುವುದಿಲ್ಲ. ಹಾಗಾಗಿ ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಈ ಎರಡು ಕತ್ತಿ ಪದಗಳನ್ನು ಬರೆಯುವಾಗ ಅವುಗಳಲ್ಲಿ ಯಾವುದಾದರೂ ಒಂದರಲ್ಲಿ ಬರುವ ಕ ಎಂಬುದಕ್ಕೆ ಏನಾದರೂ ಒಂದು ಗುರುತನ್ನು ಸೇರಿಸಿಕೊಳ್ಳಬೇಕಾಗು vÀÛzÉ. ಹಾಗಾಗಿ ಹೊಸ ಬರಹದ ವರ್ಣಮಾಲೆಯಲ್ಲಿ 31 ಅಕ್ಶರಗಳು ಮಾತ್ರ ಇರುತ್ತವೆಯಾದರೂ ಅದರ ಕೆಲವು ವಿಶಿಶ್ಟ ಬರಹಗಳಲ್ಲಿ ಅದಕ್ಕಿಂತ ಹೆಚ್ಚು ಅಕ್ಶರಗಳನ್ನು ಬಳಸುವುದರಲ್ಲಿ ಯಾವ ತೊಂದರೆಯೂ ಇಲ್ಲ. ಮಹಾಪ್ರಾಣಾಕ್ಶರ, ಋಕಾರ, ಶಕಾರ ಮೊದಲಾದವುಗಳು ಇಂತಹ ಹೆಚ್ಚಿನ ಅಕ್ಶರಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತವಲ್ಲದೆ ಹೊಸ ಬರಹದ ವರ್ಣಮಾಲೆಯಲ್ಲಿ ಬರುವು

ದಿಲ್ಲವೆಂಬುದೇ ಹೊಸ ಬರಹಕ್ಕೂ ಈಗ ಬಳಕೆಯಲ್ಲಿರುವ ಬರಹಕ್ಕೂ ನಡುವಿರುವ ವ್ಯತ್ಯಾಸ. 4.4 ತಿರುಳು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು’ ಎಂಬ ನಿರ್ಬಂದವನ್ನು ತೆಗೆದುಹಾಕುವ ಮೂಲಕ ಮತ್ತು ಅಂತಹ ಪದಗಳನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುವ ಮೂಲಕ ಹೊಸ ಬರಹ’ವನ್ನು ಉಂಟುಮಾಡಲಾಗಿದೆ. ಇದರಲ್ಲಿ ಒಟ್ಟು 31 ಅಕ್ಶರಗಳು ಮಾತ್ರ ಕಡ್ಡಾಯವಾಗಿ ಬಳಕೆಯಾಗುತ್ತವೆ. ಇಂಗ್ಲಿಶ್ನ ಕಾಫಿû, ಸಂಸ್ಕ್ರುತದ ಭಯಂಕರ, ಉರ್ದುವಿನ ಜûಮೀನ್ ಮೊದಲಾದ ಕೆಲವು ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ಕೆಲವು ಹೆಚ್ಚಿನ ಅಕ್ಶರಗಳು ಬೇಕಾಗಬಹುದು. ಆದರೆ ಇವುಗಳ ಬಳಕೆ ಕಡ್ಡಾಯವಲ್ಲ. ಯಾಕೆಂದರೆ, ಹಲವರು ಇವನ್ನು ಕಾಪಿ, ಬಯಂಕರ, ಜಮೀನು ಎಂಬುದಾಗಿಯೂ ಓದುವ ಕಾರಣ ಹಾಗೆಯೂ ಅವನ್ನು ಬರೆಯಬಹುದು. ಹೊಸ ಬರಹವನ್ನು ಬಳಸತೊಡಗಿದಲ್ಲಿ ನಾವು ಹಲವು ಪ್ರಯೋಜನಗಳನ್ನು ಪಡೆಯಬಲ್ಲೆವು. ಹಾಗೆ ಮಾಡದಿರುವುದರಿಂದ ನಮಗೆ ದೊರಕಬಹುದಾದ ಪ್ರಯೋಜನಗಳೊಂದಿಗೆ ಇವನ್ನು ಹೋಲಿಸಿ ನೋಡಿದಲ್ಲಿ ನಿಜಕ್ಕೂ ಇದು ಯಾಕೆ ಅವಶ್ಯ ಎಂಬುದು ಸ್ಪಶ್ಟವಾಗುತ್ತದೆ. ಹೊಸ ಬರಹದ ಬಳಕೆಯಿಂದ ನಾವು ಪಡೆಯಬಹುದಾದ ಪ್ರಯೋಜನಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ : (1) ಚಿಕ್ಕ ಮಕ್ಕಳಿಗೆ (ಅದರಲ್ಲೂ ಕೆಳವರ್ಗದ ಮಕ್ಕಳಿಗೆ) ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಸುಲಬವಾಗುತ್ತದೆ. ಅವರಿಗೆ 50 ಅಕ್ಶರಗಳ ಬದಲು ಬರೇ 31 ಅಕ್ಶರಗಳನ್ನು ಕಲಿಸಿದರೆ ಸಾಕು. ಇವನ್ನೆಲ್ಲ ಓದುವ ಹಾಗೆಯೇ ಬರೆಯುವ ಕಾರಣ, ಕಲಿಯುವುದೂ ಸುಲಬ.

(2) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತದೆ. (3) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆಕಾದಂಬರಿಗಳಲ್ಲಿ ಅತಿ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣಾಕ್ಶರ, ಷಕಾರ, ಮತ್ತು ಋಕಾರಗಳ ಬಳಕೆಯಲ್ಲಿ. ಇವು ಸಾಮಾನ್ಯವಾಗಿ ಹೊಸ ಬರಹದಲ್ಲಿ ಬರುವುದಿಲ್ಲವಾದ ಕಾರಣ, ಈ ತಪ್ಪುಗಳೆಲ್ಲವೂ ಇಲ್ಲವಾಗುತ್ತವೆ. (ಹಲವು ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು). (4) ಬರಹಗಾರರಿಗೆ ಎಲ್ಲಿ ಯಾವ ಅಕ್ಶರಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಅಕ್ಶರಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ಹೊಸ ಬರಹದಲ್ಲಿ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ. (5) ಕೆಳವರ್ಗದ ಮಕ್ಕಳಿಗೆ ಉಚ್ಚಾರಣೆಯಲ್ಲಿಲ್ಲದ ಈ ಹೆಚ್ಚಿನ ಅಕ್ಶರಗಳನ್ನು ಕಲಿಯಲು ತುಂಬಾ ಕಶ್ಟವೆಂದೆನಿಸುವ ಕಾರಣ, ಅವರಲ್ಲಿ ಕೀಳರಿಮೆಯುಂಟಾಗುತ್ತದೆ ಮತ್ತು ಅವರು ತಮ್ಮ ಕಲಿಕೆಯನ್ನೇ ಬಿಟ್ಟು ಬಿಡುತ್ತಾರೆ. ಹೊಸ ಬರಹದ ಬಳಕೆಯಾದಲ್ಲಿ ಈ ತೊಂದರೆಯಿಲ್ಲ. (6) ಹೊಸ ಬರಹದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ ಬರೆಯುವುದು ಸುಲಬ; ಶಿ¥sóï್ಟ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗುತ್ತದೆ. (7) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ ಆಡುಮಾತಿಗೂ ನಡುವಿರುವ ಅಂತರ ಕಡಿಮೆಯಾಗುತ್ತದೆ. (8) ಬರಹದ ಕ್ಲಿಶ್ಟತೆ ಮತ್ತು ಕ್ರುತಕತೆಗಳು ಕಡಿಮೆಯಾಗುತ್ತವೆ ಮತ್ತು ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.

ಮೇಲಿನ ಬದಲಾವಣೆಯನ್ನು ಮಾಡದಿರುವುದರಿಂದ ನಾವು ಪಡೆಯಬಹುದಾದ ಪ್ರಯೋಜನಗಳು ನನ್ನ ಅನಿಸಿಕೆಯಂತೆ ಕೆಳಗಿನವು ಮಾತ್ರ : (1) ಸಂಸ್ಕ್ರುತದ ಮೇಲೆ ಹೆಚ್ಚಿನ ಅಬಿಮಾನ ಮತ್ತು ಪೂಜ್ಯಬಾವವಿರುವ ಕೆಲವು ಮಂದಿ ವಿದ್ವಾಂಸರಿಗೆ ಸಂತೋಶವಾಗಬಹುದು. (2) ಬದಲಾವಣೆಗಳಿಂದ ದೂರ ನಿಲ್ಲುವ ಸೋಮಾರಿಗಳಿಗೂ ಸಂತೋಶವಾಗಬಹುದು. ಆದರೆ ಇಶ್ಟಕ್ಕಾಗಿ ಮೇಲೆ ಸೂಚಿಸಿದ ಹಲವು ಪ್ರಯೋಜನಗಳನ್ನು ನಾವು ಬಿಟ್ಟುಕೊಡಬೇಕೇನು?

ಎರಡನೇ ವಿಬಾಗ ಕನ್ನಡಕ್ಕೆ ಬೇಕಾಗಿರುವ ಪದಕ್ರಾಂತಿ

5 ಕನ್ನಡ ಬರಹದ ಪದಸಮಸ್ಯೆ 5.1 ಪದಕ್ರಾಂತಿಯ ಅವಶ್ಯಕತೆ ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತ ಪದಗಳ ಬಳಕೆ ತುಂಬಾ ಹೆಚ್ಚಾಗುತ್ತಿದ್ದು, ಇದರಿಂದಾಗಿ ಕನ್ನಡ ಬರಹಗಳನ್ನು ಓದಿ ಅರ್ತಮಾಡಿಕೊಳ್ಳುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗುತ್ತಿದೆ. ಯಾಕೆಂದರೆ ಬರಹದಲ್ಲಿ ಬಳಕೆಯಾಗುವ ಹಾಗೆ ಮಾತಿನಲ್ಲಿ ಅಶ್ಟೊಂದು ಸಂಸ್ಕ್ರುತ ಪದಗಳು ಬಳಕೆಯಾಗುವುದಿಲ್ಲ. ಹಾಗಾಗಿ, ಕನ್ನಡ ಗೊತ್ತಿರುವವರಿಗೂ ಈ ಬರಹಗಳು ತಮಗೆ ತಿಳಿದಿಲ್ಲದಂತಹ ಮತ್ತು ತಮ್ಮ ನುಡಿಗಿಂತ ತೀರ ಬೇರಾಗಿರುವ ಇನ್ನಾವುದೋ ನುಡಿಯಲ್ಲಿ ಬರೆದಿರುವವುಗಳ ಹಾಗೆ ಕಾಣಿಸುತ್ತವೆ. ಈ ಸಂಸ್ಕ್ರುತ ಪದಗಳ ಸ್ವರೂಪ ಮತ್ತು ಒಳರಚನೆಯ ನಿಯಮಗಳು ಕನ್ನಡದ್ದೇ ಆದ ಪದಗಳ ಸ್ವರೂಪ ಮತ್ತು ಒಳರಚನೆಯ ನಿಯಮಗಳಿಂದ ತೀರ ಬೇರಾಗಿರುವುದೇ ಇದಕ್ಕೆ ಕಾರಣ. ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿರುವ ಕನ್ನಡ ಬರಹವನ್ನು ಕಲಿಯಬೇಕೆಂದಿರುವವರು ಎರಡು ರೀತಿಯ ಪದಸ್ವರೂಪಗಳನ್ನು ಮತ್ತು ಪದರಚನೆಯ ನಿಯಮಗಳನ್ನು ಕಲಿಯಬೇಕಾಗುತ್ತದೆ. ಇದಲ್ಲದೆ ಈ ರೀತಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳ ಬಳಸುವುದರಿಂದಾಗಿ ಕನ್ನಡ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತಿದೆ. ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ನಮ್ಮ

ಬರಹಗಾರರು ಕನ್ನಡದ ಬದಲು ಸಂಸ್ಕ್ರುತದ ಮೊರೆಹೊಗುತ್ತಿದ್ದಾರೆ. ನಮಗೆ ಅವಶ್ಯವಿರುವ ಹೊಸ ಪದಗಳನ್ನು ಉಂಟುಮಾಡುವ ಶಕ್ತಿಯೇ ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆಯೂ ಇದರಿಂದಾಗಿ ಜನರಲ್ಲಿ ಬೆಳೆಯುತ್ತಿದೆ. 5.1.1 ಚಾಳಿಯ ಇತಿಹಾಸ ತಮ್ಮ ಬರಹಗಳಲ್ಲಿ ಬೇಕಾಗಿರುವಲ್ಲೂ ಬೇಡದಿರುವಲ್ಲೂ ಸಂಸ್ಕ್ರುತ ಪದಗಳನ್ನು ಬಳಸುವ ಈ ಚಾಳಿ ನಮ್ಮ ಬರಹಗಾರರಲ್ಲಿ ಕನ್ನಡ ಬರಹ ಸುರುವಾದಂದಿನಿಂದಲೂ ಇದೆ. ಹಿಂದಿನ ಕಾಲದಲ್ಲಿ ಈ ಬರಹಗಳನ್ನು ಮೇಲ್ವರ್ಗದ ಕೆಲವೇ ಕೆಲವು ಮಂದಿ ಮಾತ್ರ ಓದುತ್ತಿದ್ದರು ಮತ್ತು ಅವರೆಲ್ಲರೂ ಸಂಸ್ಕ್ರುತ ನುಡಿಯನ್ನು ಚನ್ನಾಗಿ ಕಲಿಯುತ್ತಿದ್ದರು. ಹಾಗಾಗಿ ಅಂದಿನ ಕಾಲದಲ್ಲಿ ಈ ಚಾಳಿಯಿಂದ ತೊಂದರೆಯೇನೂ ಆಗುತ್ತಿರಲಿಲ್ಲ. ಇದಲ್ಲದೆ ಕನ್ನಡದಲ್ಲಿ ಕಾವ್ಯ ಮತ್ತು ಶಾಸ್ತ್ರಗ್ರಂತಗಳನ್ನು ರಚಿಸುವವರಿಗೆ ಸಂಸ್ಕ್ರುತ ಪದಗಳು ಬಹಳ ಸುಲಬವಾಗಿ ದೊರಕುತ್ತಿದ್ದುವು. ಯಾಕೆಂದರೆ, ಕನ್ನಡದಲ್ಲಿ ತಯಾರಾಗುತ್ತಿದ್ದ ಅಂತಹ ರಚನೆಗಳಿಗೆಲ್ಲ ಸಂಸ್ಕ್ರುತದ ಕಾವ್ಯ ಮತ್ತು ಶಾಸ್ತ್ರಗ್ರಂತಗಳೇ ಮಾದರಿಯಾಗಿದ್ದುವು. ಆ ಪದಗಳಿಗೆ ಸಮನಾದ ಕನ್ನಡ ಪದಗಳನ್ನು ಕಂಡುಹಿಡಿಯುವುದಕ್ಕಿಂತ ಇಲ್ಲವೇ ಕನ್ನಡದಲ್ಲಿ ಹೊಸದಾಗಿ ಉಂಟುಮಾಡುವುದಕ್ಕಿಂತ ಅವನ್ನು ಹಾಗೆಯೇ ಬಳಸುವುದು ಸುಲಬ ಎಂಬುದು ಈ ಚಾಳಿ ಬೆಳೆಯಲು ಕಾರಣವಾಗಿತ್ತು. ಇದಲ್ಲದೆ, ಕನ್ನಡ ಪದಗಳ ಬದಲು ಸಂಸ್ಕ್ರುತ ಪದಗಳನ್ನು ಬಳಸಿದಲ್ಲಿ ಬರಹದ ಮಟ್ಟ ಮೇಲೇರುತ್ತದೆಯೆಂಬ ಅನಿಸಿಕೆಯೂ ಬರಹಗಾರರಲ್ಲಿತ್ತು. ಆದರೆ ಈ ಚಾಳಿ ಅತಿಯಾದುದನ್ನು ಗಮನಿಸಿ ಅದನ್ನು ವಿರೋದಿಸಿದ ಬರಹಗಾರರೂ ಹಿಂದಿನ ಕಾಲದಲ್ಲಿ ಕೆಲವರಿದ್ದರು. ಹದಿಮೂರನೇ ಶತಮಾನದಲ್ಲಿದ್ದ ಆಂಡಯ್ಯನು ಕನ್ನಡ ಕಾವ್ಯಗಳಲ್ಲಿ ಈ ರೀತಿ ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆ ಮಾಡದೆ ಹಾಗೆಯೇ ತಂದು ತುರುಕುವುದು ಸರಿಯಲ್ಲ, ಕನ್ನಡ ಬರಹಗಳಲ್ಲಿ ಕಾಣಿಸುವ ಕನ್ನಡದವೇ ಆದ ಪದಗಳನ್ನು ಬಳಸಿದಲ್ಲಿ —