← Ch 6  ·  Contents  ·  Ch 8 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 7 — ವಿಜ್ನಾನ ಬರಹಗಳಲ್ಲಿ ಸಂಸ್ಕ್ರುತ ಪದಗಳು

↑ ಒಳಪಿಡಿಗೆ ಹಿಂತಿರುಗಿ

ಮತ್ತು ಸಂಸ್ಕ್ರುತ ಪದಗಳನ್ನು ಬಳಸುವುದಿದ್ದರೂ ಅವನ್ನು ಕನ್ನಡದ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾಯಿಸಿ ಬಳಸಿದಲ್ಲಿ ಕನ್ನಡದ ಸೊಬಗು ಉಳಿಯುತ್ತದೆ ಎಂಬುದನ್ನು ತನ್ನ ಬರವಣಿಗೆಗಳ ಮೂಲಕ ತೋರಿಸಿ ಕೊಟ್ಟಿದ್ದ. ಇದಕ್ಕೂ ಹಿಂದೆ ಒಂಬತ್ತನೇ ಶತಮಾನದಲ್ಲಿ ಬರೆದ ಕವಿರಾಜಮಾರ್ಗದಲ್ಲಿ, ಕೋತಿನ (1985:56) ಅವರು ವಿವರಿಸಿದ ಹಾಗೆ, `ಸಕ್ಕದದ ಅತಿಯಾದ ಸಂಬಂದ ಕನ್ನಡಕ್ಕೆ ಕಕ್ಕಸ (ಕರ್ಕಶ)ವಾಗು’ತ್ತಿರುವುದನ್ನು ಮತ್ತು ಕನ್ನಡ ನುಡಿಗೆ ಮುಳುವಾಗುತ್ತಿರುವುದನ್ನು ಗಮನಿಸಲಾಗಿತ್ತು. ಇದನ್ನು ತಡೆ ಯುವುದಕ್ಕಾಗಿ ಕಕ್ಕಸವಾಗದಂತೆ ಬರುವ ಸಕ್ಕದ ಪದಗಳಿಗೆ ಮಾತ್ರ ಅನುಮತಿಯನ್ನು ಕೊಡಲಾಗಿತ್ತು. ಅತಿಯಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಕನ್ನಡ ಬರಹಗಾರರ ಈ ಚಾಳಿಗೆ ಇನ್ನೊಂದು ಕಾರಣವೂ ಇದೆ. ಹಿಂದಿನ ಕಾಲದಲ್ಲಿ ಕನ್ನಡ ಬರಹಗಳನ್ನು ಮತ್ತು ಗ್ರಂತಗಳನ್ನು ಬರೆಯುತ್ತಿದ್ದವರಲ್ಲಿ ಹೆಚ್ಚಿನವರೂ ವಯ್ದಿಕ ಬ್ರಾಹ್ಮಣರಾಗಿದ್ದರು ಇಲ್ಲವೇ ವಯ್ದಿಕ ದರ್ಮದಿಂದ ಜಯ್ನ ದರ್ಮಕ್ಕೆ ದಾಟಿದ ಬ್ರಾಹ್ಮಣರಾಗಿದ್ದರು. ಇವರಿಗೆ ಸಂಸ್ಕ್ರುತ ಉಚ್ಚಮಟ್ಟದ ಪ್ರತಿಶ್ಟೆಯ ನುಡಿಯಾಗಿತ್ತು ಮತ್ತು ಕನ್ನಡ ಕೆಳಮಟ್ಟದ ಮ್ಲೇಚ್ಚ ನುಡಿಯಾಗಿತ್ತು. ಬ್ರಾಹ್ಮಣರು ಆರ್ಯಮೂಲದವರಾಗಿದ್ದುದು ಇದಕ್ಕೆ ಕಾರಣವಿರಬಹುದು (ಕಲಬುರ್ಗಿ 1967, ಕೋತಿನ 1985:299 ನೋಡಿ). ಇವತ್ತಿನ ಕಾಲದಲ್ಲೂ ಪೂಜೆ ಮಾಡುವ ಸಮಯದಲ್ಲಿ ಕನ್ನಡ ನುಡಿಯನ್ನು ಬಳಸಿದರೆ ಅಶುದ್ದವಾಗುತ್ತದೆಯೆಂದು ನಂಬುವ ಬ್ರಾಹ್ಮಣರು ಕೆಲವರಿದ್ದಾರೆ. ಕನ್ನಡದ ಹೆಚ್ಚಿನ ಬರಹಗಾರರಿಗೂ (ಮತ್ತು ಅವರ ಓದುಗರಿಗೂ) ಈ ರೀತಿ ಸಂಸ್ಕ್ರುತದ ಮೇಲೆ ಒಂದು ವಿಶಿಶ್ಟವಾದ ಆದರ ಮತ್ತು ಅಬಿಮಾನಗಳಿದ್ದುದರಿಂದಾಗಿ ಮತ್ತು ಕನ್ನಡದ ಕುರಿತಾಗಿ ಕೀಳು ಬಾವನೆಯಿದ್ದುದರಿಂದಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿ ಬೆಳೆಯಿತು. ಕನ್ನಡ ಪದಗಳನ್ನು ಯಾವ ರೀತಿ ಬೇಕಿದ್ದರೂ ಬದಲಾಯಿಸಿಕೊಳ್ಳಬಹುದು, ಆದರೆ ಸಂಸ್ಕ್ರುತ ಪದಗಳನ್ನು ಮಾತ್ರ ಸ್ವಲ್ಪವೂ ಬದಲಾಯಿಸದೆ ಎರಡು

ಸಾವಿರ ವರ್ಶಗಳಶ್ಟು ಹಿಂದೆ ಅವು ಹೇಗಿದ್ದುವೋ ಹಾಗೆಯೇ ಇವತ್ತೂ ಉಳಿಸಿಕೊಳ್ಳಬೇಕೆಂಬ ಆಗ್ರಹವೂ ಬೆಳೆದು ಬಂತು. 5.1.2 ಚಾಳಿಯಿಂದಾಗುವ ತೊಂದರೆ ತಮ್ಮ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವ ಈ ಚಾಳಿಯಿಂದಾಗಿ ಹಿಂದಿನ ಕಾಲದಲ್ಲಿ ಹೆಚ್ಚಿನ ತೊಂದರೆಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ ಆಗಿನ ಕಾಲದಲ್ಲಿ ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸುತ್ತಿದ್ದರು ಮತ್ತು ಇವರೆಲ್ಲ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಚನ್ನಾಗಿ ಕಲಿಯುತ್ತಿದ್ದರು. ನಿಜಕ್ಕೂ ಆವತ್ತಿನ ಕಲಿಕೆಯಲ್ಲಿ ಕನ್ನಡಕ್ಕಿಂತಲೂ ಸಂಸ್ಕ್ರುತಕ್ಕೇನೇ ಹೆಚ್ಚಿನ ಮಹತ್ವವಿತ್ತು. ಆದರೆ ಇವತ್ತು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಬರಹವನ್ನು ಬಳಸುವಂತಾಗಬೇಕಾಗಿದೆ. ದಿನಪತ್ರಿಕೆ, ವಾರಪತ್ರಿಕೆಗಳಂತಹ ಬರಹಗಳ ಮೂಲಕ ತಮ್ಮ ಹೊಣೆಗಾರಿಕೆ ಮತ್ತು ಹಕ್ಕುಬಾದ್ಯತೆಗಳನ್ನು ಅರಿತುಕೊಂಡು ಅವನ್ನನುಸರಿಸಿ ಎಲ್ಲರೂ ನಡೆದುಕೊಳ್ಳಲು ಸಾದ್ಯವಾದಾಗ ಮಾತ್ರ `ಪ್ರಜಾಪ್ರಬುತ್ವ’ ತನ್ನ ನಿಜವಾದ ಅರ್ತದಲ್ಲಿ ಉಳಿಯಬಲ್ಲುದು. ಇಲ್ಲವಾದರೆ ಇವತ್ತಿನ ಹಾಗೆ ಹೆಸರಿಗೆ ಮಾತ್ರ ಪ್ರಜಾಪ್ರಬುತ್ವವೆಂದಿದ್ದು ದೇಶದ ನಿಜವಾದ ಆಳ್ವಿಕೆ ಓದುಬರಹಗಳಲ್ಲಿ ನಿಪುಣರಾಗಿರುವ ಕೆಲವೇ ಕೆಲವು ಮಂದಿಯ ಹಿಡಿತದಲ್ಲೇ ಉಳಿದೀತು. ಇದಲ್ಲದೆ ಅಸ್ಪ್ರುಶ್ಯತೆಯಂತಹ ಸಾಮಾಜಿಕ ಅನಿಶ್ಟಗಳನ್ನು ತೊಡೆದುಹಾಕಬೇಕಿದ್ದಲ್ಲಿ ಮತ್ತು ಕೆಳವರ್ಗದವರು ಕೆಳಗೆಯೇ ಉಳಿಯದೆ ಮೇಲೆ ಬರಬೇಕಿದ್ದಲ್ಲಿ ಎಲ್ಲರೂ ಬರಹವನ್ನು ಬಳಸುವಂತಾಗುವುದು ಅತ್ಯವಶ್ಯ. ಈ ರೀತಿ ಎಲ್ಲರೂ ಮುಂದೆ ಬಂದಾಗ ಮಾತ್ರ ನಮ್ಮ ನಾಡು ಬೆಳವಣಿಗೆ ಪಡೆದ ನಾಡೆಂದೆನಿಸಬಲ್ಲುದು. ಹಿಂದಿನ ಕಾಲದಲ್ಲಿ ತಾವು ತಿಳಿಸಲಿರುವ ವಿಶಯಗಳು ಸಮಾಜದಲ್ಲಿ ಹೆಚ್ಚಿನವರಿಗೂ ಅರ್ತವಾಗಬೇಕೆಂಬ ಕಳಕಳಿಯಿರುವವರು ಆದಶ್ಟು ಮಟ್ಟಿಗೆ ತಮ್ಮ ಬರಹಗಳಲ್ಲಿ ಮತ್ತು ಕಾವ್ಯಗಳಲ್ಲಿ

ಹೆಚ್ಚಿನವರಿಗೂ ಅರ್ತವಾಗುವಂತಹ ಪದಗಳನ್ನೇ ಬಳಸಲು ಪ್ರಯತ್ನಿಸಿರುವುದನ್ನು ಕಾಣಬಹುದು. ದಾಸರ ಪದಗಳಲ್ಲಿ ಮತ್ತು ಶಿವಶರಣರ ವಚನಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳ ಮತ್ತು ಪದರೂಪಗಳ ಬಳಕೆಯಾಗಿದೆ. ವಿದ್ವಾಂಸರನ್ನು ಮೆಚ್ಚಿಸುವುದಕ್ಕಾಗಿ ಬರೆದಂತಹ ಕಾವ್ಯ ಮತ್ತು ಶಾಸ್ತ್ರ ಗ್ರಂತಗಳಲ್ಲಿ ಮಾತ್ರ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳ ಬಳಕೆಯಾಗಿದೆ. ಆದರೆ ಇವತ್ತು ಹೆಚ್ಚಿನವರಿಗೂ ಅರ್ತವಾಗಬೇಕಾಗಿರುವಂತಹ ಕನ್ನಡ ಬರಹಗಳಲ್ಲೂ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳು ಬಳಕೆಯಾಗುತ್ತಿವೆ. ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ, ವಾರ್ತೆ’ಗಳನ್ನು ತಿಳಿಸುವ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಮತ್ತು ಕನ್ನಡವನ್ನು ಇಲ್ಲವೇ ಇತರ ವಿಶಯಗಳನ್ನು ಎಲ್ಲಾ ವರ್ಗದ ಮಕ್ಕಳಿಗೂ ಕಲಿಸುವುದಕ್ಕಾಗಿ ತಯಾರಾಗಿರುವ ಪಟ್ಯಪುಸ್ತಕಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸಂಸ್ಕ್ರುತ ಪದಗಳನ್ನು ತುಂಬುವ ಚಾಳಿ ಕಾಣಿಸುತ್ತಿದೆ. ಪಾರಿಬಾಶಿಕ ಪದಗಳನ್ನು ಉಂಟುಮಾಡುವಲ್ಲೂ ಕನ್ನಡ ವಿದ್ವಾಂಸರು ಸಂಸ್ಕ್ರುತ ಪದ ಇಲ್ಲವೇ ಪದಕಾಂಡಗಳನ್ನು ಬಳಸುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇವುಗಳಲ್ಲಿ ಹಲವು ಪದಗಳು ಎಲ್ಲಾ ವರ್ಗದ ಜನರನ್ನೂ ತಲಪಬೇಕಾಗಿರುವಂತಹ ಬರಹಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಇವುಗಳ ಮೂಲಕವೂ ಕನ್ನಡ ಬರಹ ಹೆಚ್ಚು ಹೆಚ್ಚು ತೊಡಕಿನದಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ, ಕನ್ನಡ ಬರಹಗಳು ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಸಾಮಾನ್ಯ ಕನ್ನಡಿಗರಿಂದ ದೂರವೇ ಉಳಿದಿವೆ. ಶಾಲೆಯಲ್ಲಿ ಓದು-ಬರಹ ಕಲಿತ ಹುಡುಗ- ಹುಡುಗಿಯರು ಶಾಲೆ ಬಿಟ್ಟಮೇಲೆ ತಮ್ಮ ಓದನ್ನು ದಿನಪತ್ರಿಕೆ, ಕತೆ- ಕಾದಂಬರಿ, ಬೇರೆ ಬೇರೆ ರೀತಿಯ ಪ್ರಬಂದಗಳು ಮೊದಲಾದವುಗಳನ್ನು ಓದುವ ಮೂಲಕ ಬೆಳೆಸಿಕೊಳ್ಳುವ ಬದಲು ಮರೆತು ಬಿಡುತ್ತಿದ್ದಾರೆ. ಸಾಕ್ಶರ’ರೆಂದೆನಿಸಿಕೊಳ್ಳುವ ವ್ಯಕ್ತಿಗಳ ಎಣಿಕೆ ನಮ್ಮ ನಾಡಿನಲ್ಲಿ ಶೇಕಡಾ ಅಯ್ವತ್ತಕ್ಕಿಂತಲೂ ಹೆಚ್ಚಿದೆಯೆಂದು ಸಮೀಕ್ಶೆಗಳು ತಿಳಿಸಬಹುದು; ಆದರೆ ಈ ವ್ಯಕ್ತಿಗಳಲ್ಲಿ ನಿಜಕ್ಕೂ

ಓದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳುವವರ ಎಣಿಕೆ ಇದಕ್ಕಿಂತ ಎಶ್ಟೋ ಕಡಿಮೆಯಿದೆ. ಈ ರೀತಿ ಓದಲು ಬಂದರೂ ಓದದಿರುವುದಕ್ಕೆ ಹಲವು ಸಾಮಾಜಿಕ ಮತ್ತು ಆರ್ತಿಕ ಕಾರಣಗಳಿವೆಯೇನೋ ನಿಜ. ಆದರೆ ಕನ್ನಡ ಬರಹಗಳಲ್ಲಿ ಅತಿಯಾಗಿ ಸಂಸ್ಕ್ರುತ ಪದಗಳ ಬಳಕೆಯಾಗುತ್ತಿರುವುದೂ ಇದಕ್ಕೆ ಒಂದು ಕಾರಣವೆಂದು ನನಗೆ ಅನಿಸುತ್ತದೆ. ಸುಲಬವಾಗಿ ಅರ್ತವಾಗದ ಈ ಬರಹಗಳನ್ನು ಕಶ್ಟಪಟ್ಟು ಓದಿ ಅರ್ತಮಾಡಿಕೊಳ್ಳುವುದಕ್ಕೆ ಬೇಕಾಗುವ ತಾಳ್ಮೆ ಹೆಚ್ಚಿನವರಲ್ಲೂ ಇರುವುದಿಲ್ಲ. ಇದಲ್ಲದೆ ಬರಹವನ್ನು ಕಲಿಯುವ ಸಮಯದಲ್ಲಿ ಚಿಕ್ಕ ಮಕ್ಕಳು ಪಡುವ ಹಿಂಸೆ ಮುಂದೆ ದೊಡ್ಡವರಾದಾಗ ಬರಹವೆಂದರೇನೇ ಅಸ್ವಸ್ತರಾಗುವ ಹಾಗೆ ಮಾಡುತ್ತದೆ. ಶಾಲೆ ಬಿಟ್ಟಮೇಲೆ ಇವರು ಬರಹವನ್ನು ಮುಟ್ಟಿಯೂ ನೋಡುವುದಿಲ್ಲ. ಹೆಬ್ಬೆಟ್ಟು ಒತ್ತುವ ಬದಲು ಸಹಿ ಹಾಕುವ ಒಂದು ಕೆಲಸವನ್ನು ಬಿಟ್ಟರೆ ಬೇರೆ ಯಾವುದಕ್ಕೂ ಶಾಲೆಯಲ್ಲಿ ಕಲಿತ ಬರಹ ಅವರಿಗೆ ನೆರವಾಗುವುದಿಲ್ಲ. ಸಂಸ್ಕ್ರುತದಿಂದ ಇಲ್ಲವೇ ಇಂಗ್ಲಿಶ್, ಹಿಂದಿ, ಮರಾಟಿ ಮೊದಲಾದ ಇತರ ನುಡಿಗಳಿಂದ ಪದಗಳನ್ನು ಎರವಲಾಗಿ ಪಡೆಯಲೇ ಬಾರದೆಂದೇನೂ ಇದರ ಅರ್ತವಲ್ಲ. ನಿಜಕ್ಕೂ ಅವು ಬೇಕಾಗಿವೆಯಾದಲ್ಲಿ ದಾರಾಳವಾಗಿ ಅಂತಹ ಪದಗಳನ್ನು ಎರವಲಾಗಿ ಪಡೆದು ಬಳಸಬಹುದು. ಈ ಸ್ವಾತಂತ್ರ್ಯ ನಮಗೆ ಯಾವಾಗಲೂ ಇದ್ದೇ ಇರುತ್ತದೆ. ಆದರೆ ಈ ಸ್ವಾತಂತ್ರ್ಯದ ಮೇಲೆ ಸ್ವಲ್ಪ ಮಟ್ಟಿ ಗಾದರೂ ಹತೋಟಿಯನ್ನು ಇರಿಸಿಕೊಳ್ಳುವ ಅವಶ್ಯಕತೆಯಿದೆ. ಸಂಸ್ಕ್ರುತದ ಮಟ್ಟಿಗೆ ಈ ಸ್ವಾತಂತ್ರ್ಯ ಇವತ್ತು ಮಿತಿಮೀರಿರುವ ಹಾಗೆ ಕಾಣಿಸುತ್ತದೆ. ಸಂಸ್ಕ್ರುತ ಪದಕೋಶಗಳಲ್ಲಿರುವ ಪದಗಳೆಲ್ಲವೂ ಕನ್ನಡದವು, ಅವನ್ನು ಕನ್ನಡ ಅಕ್ಶರಗಳಲ್ಲಿ ಬರೆದೊಡನೆ ಕನ್ನಡದವಾಗಿಬಿಡುತ್ತವೆ ಎಂಬ ಹಲವು ಬರಹಗಾರರಲ್ಲಿರುವ ಬ್ರಮೆಗೆ ಬೇರೇನು ಹೇಳಬೇಕು? 5.1.3 ಮಾತು ಮತ್ತು ಬರಹ

ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸಬೇಕಾಗಿರುವ ವಿಶಯಗಳನ್ನು ಹಾಗೆ ತಿಳಿಸಲು ಸಾದ್ಯವಿಲ್ಲದಂತಹ ಹಲವು ರೀತಿಯ ಸಂದರ್ಬಗಳಲ್ಲಿ ನಾವು ಬರಹವನ್ನು ಬಳಸುತ್ತೇವೆ. ಬರಹಕ್ಕಿರುವ ಈ ಅತ್ಯಂತ ಮುಕ್ಯವಾದ ಗುರಿಯನ್ನು ಅದು ಮುಟ್ಟಬೇಕಿದ್ದಲ್ಲಿ ಮಾತಿಗೂ ಬರಹಕ್ಕೂ ನಡುವೆ ವ್ಯತ್ಯಾಸಗಳು ಕಡಿಮೆಯಿದ್ದಶ್ಟೂ ಒಳ್ಳೆಯದು. ಆದರೆ ಕನ್ನಡದಂತಹ ಹಲವಾರು ಆಡುನುಡಿಗಳಿರುವ ನುಡಿಗಳಲ್ಲಿ ಮಾತಿಗೂ ಬರಹಕ್ಕೂ ನಡುವೆ ವ್ಯತ್ಯಾಸಗಳು ಇರಲೇಬೇಕಾಗುತ್ತದೆ. ಯಾಕೆಂದರೆ, ಎಲ್ಲಾ ಊರುಗಳ ಮತ್ತು ಪಂಗಡಗಳ ಜನರನ್ನು ತಲಪಬೇಕಾಗಿರುವ ಬರಹ ಎಲ್ಲರಿಗೂ ಒಂದೇ ಆಗಿರಬೇಕಾಗುತ್ತದೆ ಮತ್ತು ಇದಕ್ಕಾಗಿ ಅದು ಎಲ್ಲರ ಆಡುನುಡಿಗಳಿಂದಲೂ ಬೇರಾಗಿರಬೇಕಾಗುತ್ತದೆ. ಇದಲ್ಲದೆ, ಆಡುನುಡಿಗಳಲ್ಲಿಲ್ಲದ ಹಲವು ಗುಣಗಳನ್ನು ಬರಹದಲ್ಲಿ ಕಾಣಿಸಬೇಕಾಗುತ್ತದೆ. ಯಾಕೆಂದರೆ ಮಾತನ್ನು ಕೇಳುವ ವ್ಯಕ್ತಿ ಸಾಮಾನ್ಯವಾಗಿ ಮಾತನಾಡುವವನ ಎದುರಿಗೇನೇ ಇರುತ್ತಾನೆ ಮತ್ತು ಮಾತನ್ನು ಕೇಳುವಾಗ ಆತನಿಗೆ ಸಂಶಯಗಳೇನಾದರೂ ಉಂಟಾದಲ್ಲಿ ಅವನ್ನು ಕೇಳ್ವಿಗಳ ಮೂಲಕ ಆತನು ಬಗೆಹರಿಸಿಕೊಳ್ಳಬಲ್ಲನು. ಆದರೆ ಒಂದು ಬರಹವನ್ನು ಓದುವವನ ಎದುರಿಗೆ ಅದನ್ನು ಬರೆದವನು ಇರುವುದು ತುಂಬಾ ಅಪರೂಪ. ಹಾಗಾಗಿ, ಓದುವ ವ್ಯಕ್ತಿಯಲ್ಲಿ ಸ್ವಲ್ಪವೂ ಸಂಶಯವೇಳದ ಹಾಗೆ ಬರಹಗಾರನು ತನ್ನ ಬರಹದಲ್ಲಿ ಬಳಸುವ ವಾಕ್ಯಗಳನ್ನು ರಚಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಬರಹದ ವಾಕ್ಯಗಳು ಮಾತಿನ ವಾಕ್ಯಗಳಿಗಿಂತ ಹೆಚ್ಚು ಸ್ಪಶ್ಟವಾಗಿರಬೇಕಾಗುತ್ತದೆ. ಇನ್ನೊಂದು ಸಮಸ್ಯೆಯೇನೆಂದರೆ ಮಾತಿನಲ್ಲಿ ಕಾಣಿಸುವ ಹಲವು ವ್ಯತ್ಯಾಸಗಳನ್ನು ಮತ್ತು ಮಾತನಾಡುವಾತನ ಮೋರೆಯಲ್ಲಿ ಕಾಣಿಸುವ ಹಲವು ಅನಿಸಿಕೆಗಳನ್ನು ಬರಹದಲ್ಲಿ ಕಾಣಿಸಲು ಬರುವುದಿಲ್ಲ. ಬೆರಗು (!), ಕೇಳ್ವಿ (?), ವಿರಾಮ (.) ಅರೆವಿರಾಮ (;) ಮೊದಲಾದ ಕೆಲವೇ ಕೆಲವು ಗುರುತುಗಳು ಮಾತ್ರ ಈ ವಿಶಯದಲ್ಲಿ ಓದುಗನ ಸಹಾಯಕ್ಕೆ ಬರಬಲ್ಲುವು.

ಮಾತಿನಲ್ಲಿ ಕಾಣಿಸುವ ಬೇರೆ ಹಲವು ವ್ಯತ್ಯಾಸಗಳನ್ನು ನೇರವಾಗಿ ಬರಹದಲ್ಲಿ ಆ ರೀತಿಯಲ್ಲೂ ಸೂಚಿಸಲು ಸಾದ್ಯವಾಗುವುದಿಲ್ಲ. ಒಂದು ಮಾತನ್ನು ಒಬ್ಬ ಆಡುಗನು ಬೇಸರದಿಂದ ಇಲ್ಲವೇ ಸಿಟ್ಟಿನಿಂದ ಹೇಳಿರುವನಾದರೆ, ಅದು ಮಾತಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಬರಹದಲ್ಲಿ ಅದನ್ನು ಆ ರೀತಿ ನೇರವಾಗಿ ಸೂಚಿಸಲಾರೆವು. ಅಂತಹ ಸಂದರ್ಬಗಳಲ್ಲಿ ಬರಹಗಾರರು ತಮ್ಮ ಬರಹಗಳಲ್ಲಿ ಕೆಲವು ವಿಶಿಶ್ಟವಾದ ವಾಕ್ಯರಚನೆಗಳನ್ನು ಬಳಸಬೇಕಾಗುತ್ತದೆ ಇಲ್ಲವೇ ಕೆಲವು ಹೆಚ್ಚಿನ ವಿವರಣೆಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿಯೂ ಬರಹದಲ್ಲಿ ಬರುವ ವಾಕ್ಯಗಳು ಮಾತಿನಲ್ಲಿ ಬರುವ ವಾಕ್ಯಗಳಿಂದ ಬೇರಾಗಿರಬೇಕಾಗುತ್ತದೆ. ಇದಲ್ಲದೆ ಚಿತ್ರಗಳು, ನಕ್ಶೆಗಳು, ಪಟ್ಟಿಗಳು, ಪಾರಾಗಳು, ಅದ್ಯಾಯಗಳು ಮೊದಲಾದವುಗಳ ಮೂಲಕವೂ ಬರಹಕ್ಕಿರುವ (ಆದರೆ ಮಾತಿಗಿಲ್ಲದ) ಕೆಲವು ಕೊರತೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕಾಗುತ್ತದೆ. ಇವೂ ಕೂಡ ಮಾತಿನಿಂದ ಬರಹ ಬೇರಾಗುವ ಹಾಗೆ ಮಾಡುತ್ತವೆ. ಮಾತು ಮತ್ತು ಬರಹಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳೆಲ್ಲ ಬರಹದ ಮಟ್ಟಿಗೆ ಬಿಟ್ಟುಕೊಡಲಾಗದಂತಹವು. ಹಾಗಾಗಿ, ಅವುಗಳ ವಿಶಯದಲ್ಲಿ ನಾವು ಏನೂ ಮಾಡಲಾರೆವು. ಬರಹದ ರೂಪದಲ್ಲಿರುವ ಕನ್ನಡವನ್ನು ಕಲಿಯುವ ಸಮಯದಲ್ಲಿ ಮಕ್ಕಳು ಅವನ್ನೆಲ್ಲ ಕಡ್ಡಾಯವಾಗಿ ಕಲಿತುಕೊಳ್ಳಲೇಬೇಕಾಗುತ್ತದೆ. ಆದರೆ, ಮಾತಿನ ಕನ್ನಡಕ್ಕೂ ಬರಹದ ಕನ್ನಡಕ್ಕೂ ನಡುವೆ ಕಾಣಿಸುವ ಬೇರೆ ಹಲವು ವ್ಯತ್ಯಾಸಗಳು ಆ ರೀತಿ ಬಿಟ್ಟುಕೊಡಲು ಆಗದಂತಹವಲ್ಲ. ಅವನ್ನು ನಾವು ಕಡಿಮೆ ಮಾಡಬಲ್ಲೆವು ಮತ್ತು ಹಾಗೆ ಕಡಿಮೆ ಮಾಡುವುದರ ಮೂಲಕ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇವತ್ತಿಗಿಂತ ಹೆಚ್ಚು ಸುಲಬವಾಗುವ ಹಾಗೆ ಮಾಡಬಲ್ಲೆವು. ಕನ್ನಡ ಬರಹದಲ್ಲಿ ಹಲವು ಕನ್ನಡಕ್ಕೆ ಬೇಕಾಗಿಲ್ಲದ ಅಕ್ಶರಗಳು ಕಡ್ಡಾಯವಾಗಿ ಬಳಕೆಯಾಗುತ್ತಿವೆ. ಅಂತಹ ಅಕ್ಶರಗಳ ಬಳಕೆ ಕಡ್ಡಾಯವಾಗಿಲ್ಲದಿರುವ `ಹೊಸ ಬರಹ’ವೊಂದನ್ನು ಬಳಸುವ

ಮೂಲಕ ಹೇಗೆ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವ ಹಾಗೆ ಮಾಡಬಲ್ಲೆವು ಎಂಬುದನ್ನು ನಾವು ಮೇಲೆ ಒಂದನೇ ವಿಬಾಗದಲ್ಲಿ ನೋಡಿರುವೆವು. ಕನ್ನಡಿಗರ ಮಾತು ಮತ್ತು ಬರಹಗಳ ನಡುವೆ ಕಾಣಿಸುವ ಇನ್ನೊಂದು ಮುಕ್ಯವಾದ ಮತ್ತು ಬಿಟ್ಟುಕೊಡಬಹುದಾದ ವ್ಯತ್ಯಾಸವೆಂದರೆ, ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವುದು ಮತ್ತು ಇವನ್ನು ಸಂಸ್ಕ್ರುತದಲ್ಲಿರುವ ಹಾಗೇನೆ, ಎಂದರೆ ತತ್ಸಮ ರೂಪದಲ್ಲಿ ಬಳಸುವುದು. ಹೊಸಪದಗಳನ್ನು ಬಳಸಬೇಕಾದಾಗಲೂ ಕನ್ನಡದ ಪದ ಮತ್ತು ಪ್ರತ್ಯಯಗಳನ್ನು ಬಳಸದೆ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸುವುದು. ನಿಜಕ್ಕೂ ಇದು ಕನ್ನಡಕ್ಕೆ ಬೇಕಾಗಿಲ್ಲದಂತಹ ಕೆಟ್ಟ ಚಾಳಿ. ಇದನ್ನು ಬಿಟ್ಟುಕೊಡುವ ಮೂಲಕ ಕನ್ನಡಿಗರ ಮಾತು ಮತ್ತು ಬರಹಗಳ ನಡುವಿನ ಅಂತರ ತುಂಬಾ ಕಡಿಮೆಯಾಗುವ ಹಾಗೆ ಮಾಡಬಹುದು. ಇದಕ್ಕಾಗಿ ಕನ್ನಡ ಬರಹದಲ್ಲಿ ಒಂದು `ಪದಕ್ರಾಂತಿ’ಯನ್ನು ನಡೆಸಬೇಕಾಗಿದೆ. ಈ ಕ್ರಾಂತಿ ಯಾಕೆ ಬೇಕು ಮತ್ತು ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಮೂರನೇ ವಿಬಾಗದ ಅಯ್ದು ಅದ್ಯಾಯಗಳಲ್ಲಿ (5- 9) ಪರಿಶೀಲಿಸಲಾಗುವುದು. 5.2 ಎರವಲು ಪದಗಳ ಸಮಸ್ಯೆ ಎಲ್ಲಾ ನುಡಿಗಳಲ್ಲೂ ಬೇರೆ ನುಡಿಗಳಿಂದ ಪದಗಳು ಎರವಲಾಗಿ ಬರುತ್ತಲೇ ಇರುತ್ತವೆ. ಕೆಲವು ಸಂದರ್ಬಗಳಲ್ಲಿ ಈ ರೀತಿ ಹೊರಗಿನಿಂದ ಬಂದು ಸೇರುವ ಪದಗಳು ಹೆಚ್ಚು ಇರುತ್ತವೆ ಮತ್ತು ಬೇರೆ ಕೆಲವು ಸಂದರ್ಬಗಳಲ್ಲಿ ಕಡಿಮೆ ಇರುತ್ತವೆ. ಇದಲ್ಲದೆ ನುಡಿಯ ಇಲ್ಲವೇ ಬರಹದ ಬಗೆಯನ್ನು ಹೊಂದಿಕೊಂಡೂ ಇಂತಹ ಎರವಲು ಪದಗಳು ಹೆಚ್ಚು ಇಲ್ಲವೇ ಕಡಿಮೆ ಇರುತ್ತವೆ. ಶಾಸ್ತ್ರೀಯ ಬರಹಗಳಲ್ಲಿ ಇವು ಹೆಚ್ಚು ಇರುತ್ತವೆ ಮತ್ತು ಇತರ ಬರಹಗಳಲ್ಲಿ ಕಡಿಮೆ ಇರುತ್ತವೆ.

ಎರವಲಾಗಿ ಬರುವ ಪದಗಳು ಸಾಮಾನ್ಯವಾಗಿ ಎರವಲು ಪಡೆಯುವ ನುಡಿಯ ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾಗುತ್ತವೆ. ಸಂಸ್ಕ್ರುತದಿಂದ ಎರವಲಾಗಿ ಬಂದ ಹಲವು ಪದಗಳು ತದ್ಬವಗಳಾಗಿ ಮಾರ್ಪಟ್ಟಿರುವುದು (ಪಕ್ಷಿ>ಹಕ್ಕಿ, ಪಿಷ್ಟ>ಹಿಟ್ಟು, ವರ್ತಿ>ಬತ್ತಿ) ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಆದರೆ ಒಂದೇ ನುಡಿಯಿಂದ ಹೆಚ್ಚು ಹೆಚ್ಚು ಪದಗಳನ್ನು ಎರವಲಾಗಿ ಪಡೆದಂತೆ ಆ ಪದಗಳಲ್ಲಿ ಇಂತಹ ಬದಲಾವಣೆಗಳು ಕಡಿಮೆಯಾಗುತ್ತಾ ಬರುತ್ತವೆ. ಮೇಲೆ ಸೂಚಿಸಿದ ಹಾಗೆ, ಶಾಸ್ತ್ರೀಯ ಬರಹಗಳಲ್ಲಿ ಎರವಲು ಪದಗಳ ಎಣಿಕೆ ಹೆಚ್ಚು ಮತ್ತು ಈ ಕಾರಣಕ್ಕಾಗಿ ಅವುಗಳಲ್ಲಿ ಇಂತಹ ಪದಗಳು ಹೆಚ್ಚು ಬದಲಾಗದೆಯೂ ಉಳಿಯುತ್ತವೆ. ಇದಲ್ಲದೆ, ಇಂತಹ ಬದಲಾವಣೆಗಳು ಮಾತಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ ಮತ್ತು ಬರಹಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೇನೆಂದರೆ ಬರಹಗಾರರು ಎರವಲಾಗಿ ಪಡೆದ ಪದಗಳನ್ನು ಆದಶ್ಟು ಮಟ್ಟಿಗೆ ಮೂಲನುಡಿಯಲ್ಲಿ ಇರುವ ಹಾಗೆಯೇ ಬರೆಯಲು ಪ್ರಯತ್ನಿಸುತ್ತಾರೆ. ಆದರೆ ಮಾತಿನಲ್ಲಿ ಆ ರೀತಿ ಮೂಲನುಡಿಯಲ್ಲಿ ಇರುವ ಹಾಗೆಯೇ ಅವನ್ನು ಉಳಿಸಿಕೊಳ್ಳಲು ಹೆಚ್ಚಿನವರಿಗೂ ಸಾದ್ಯವಾಗುವುದಿಲ್ಲ. ಯಾಕೆಂದರೆ, ಎರವಲು ಪದಗಳನ್ನು ಆ ರೀತಿ ಬರಹದಲ್ಲಿ ಕಾಣಿಸುವುದು ಸುಲಬ; ಆದರೆ ಮಾತಿನಲ್ಲಿ ಕಾಣಿಸುವುದು ತುಂಬಾ ಕಶ್ಟ. ಮಾತಿನ ಬಳಕೆಯಲ್ಲಿ ಬದಲಾವಣೆಗೊಂಡ ಪದಗಳು ಸಮಯ ಕಳೆದಂತೆಲ್ಲ ಬರಹದಲ್ಲೂ ಸೇರಿಕೊಂಡು ಅಲ್ಲಿಗೂ ಅಂತಹ ಬದಲಾವಣೆಗಳನ್ನು ತಲಪಿಸುತ್ತವೆ. ನುಡಿಯ ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾಗಿರುವ ಈ ಎರವಲು ಪದಗಳು ಕೊನೆಗೆ ಆ ನುಡಿಯ ಪದಗಳೇ ಆಗಿಬಿಡುತ್ತವೆ ಮತ್ತು ಆ ನುಡಿಯವೇ ಆದ ಇತರ ಪದಗಳಿಂದ ಅವನ್ನು ಬೇರ್ಪಡಿಸಲು ಸಾದ್ಯವಾಗದ ಹಾಗಾಗುತ್ತದೆ. ಹಾಗೆ ಅವನ್ನು ಬೇರ್ಪಡಿಸಬೇಕಿದ್ದಲ್ಲಿ ಅವುಗಳ ಚರಿತ್ರೆಯನ್ನು ಅರಸುತ್ತಾ ಹೋಗಬೇಕಾಗುತ್ತದೆ. ಅವು ಆ ನುಡಿಯ ಕುಟುಂಬಕ್ಕೇನೇ

ಸೇರಿದ ಬೇರೆ ನುಡಿಗಳಲ್ಲಿ ಬಳಕೆಯಲ್ಲಿವೆಯೇ ಎಂಬುದನ್ನು ಇಲ್ಲವೇ ಎರವಲು ಕೊಟ್ಟಿರಬಹುದಾದ ನುಡಿಯ ಕುಟುಂಬಕ್ಕೆ ಸೇರಿದ ಬೇರೆ ನುಡಿಗಳಲ್ಲಿ ಬಳಕೆಯಲ್ಲಿವೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಇಂತಹ ಪರಿಶೀಲನೆಯ ಮೂಲಕ ಅವು ಮೊದಲಿಗೆ ಯಾವ ನುಡಿಕುಟುಂಬಕ್ಕೆ ಸೇರಿದ್ದುವು ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಆದರೆ ನಿಜಕ್ಕೂ ಒಂದು ಪದ ಯಾವ ನುಡಿಕುಟುಂಬಕ್ಕೆ ಸೇರಿದೆ ಎಂಬ ವಿಶಯ ಅಶ್ಟೊಂದು ಮುಕ್ಯವಾದುದಲ್ಲ. ಅದು ನುಡಿಯನ್ನು ಬಳಸುತ್ತಿರುವ ಜನರಲ್ಲಿ ಹೆಚ್ಚಿನವರಿಗೂ ಅರ್ತವಾಗುತ್ತಿದೆಯೇ ಮತ್ತು ಆ ನುಡಿಯ ಸ್ವರೂಪಕ್ಕೆ ಹೊಂದಿಕೊಳ್ಳುತ್ತಿದೆಯೇ ಎಂಬ ಈ ಎರಡು ಅಂಶಗಳು ಮಾತ್ರ ಮುಕ್ಯವಾದ ವಿಶಯಗಳು. ಬರಹಗಳಲ್ಲಿ ಪದಗಳನ್ನು ಬಳಸುವವರು ಈ ಎರಡು ವಿಶಯಗಳನ್ನು ಗಮನದಲ್ಲಿರಿಸಿಕೊಂಡಲ್ಲಿ ಅವರ ಬರಹ ಹೆಚ್ಚು ಮಂದಿ ಓದುಗರನ್ನು ತಲಪಬಲ್ಲುದು. 5.2.1 ಕನ್ನಡ ಪದಗಳ ಸೊಗಡು ಕನ್ನಡಕ್ಕೆ ತನ್ನದೇ ಆದ ಒಂದು `ಸೊಗಡು’ ಎಂಬುದಿದೆ. ಇದು ಕನ್ನಡದಲ್ಲಿ ಬಳಕೆಯಾಗುವ ಪದಗಳ, ಪದಕಂತೆಗಳ ಮತ್ತು ವಾಕ್ಯಗಳ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕನ್ನಡದ್ದೇ ಆದ ಸೊಗಡನ್ನು ಕನ್ನಡ ಬರಹಗಳು ಉಳಿಸಿಕೊಳ್ಳುವುದು ಅತ್ಯವಶ್ಯ. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ ಮತ್ತು ಸಾಮಾನ್ಯ ಕನ್ನಡಿಗರಿಂದ ದೂರವಾಗುತ್ತವೆ. ಕನ್ನಡ ಪದಗಳ ಸ್ವರೂಪ ಸಂಸ್ಕ್ರುತ ಪದಗಳ ಸ್ವರೂಪಕ್ಕಿಂತ (ಮತ್ತು ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ನುಡಿಗಳು ಬಳಸುವ ಪದಗಳ ಸ್ವರೂಪಕ್ಕಿಂತ) ಹಲವು ವಿಶಯಗಳಲ್ಲಿ ಬೇರಾಗಿದೆ. ಕನ್ನಡ ಪದಗಳನ್ನು ಸಂಸ್ಕ್ರುತ ಪದಗಳೊಡನೆ ಹೋಲಿಸಿ ನೋಡಿದಾಗ ಈ ವಿಶಯ ಸ್ಪಶ್ಟವಾಗುತ್ತದೆ.

(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಮಹಾಪ್ರಾಣಾಕ್ಶರಗಳು ಕನ್ನಡ ಪದಗಳಲ್ಲಿಲ್ಲ. ಆದರೆ ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ. ಆದರೆ ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೆ ವಕಾರಗಳ ಜೋಡಿಗಳು ಕನ್ನಡದಲ್ಲಿವೆ. ಸಂಸ್ಕ್ರುತದಲ್ಲಿ ಅಯ್ (ಐ) ಮತ್ತು ಅವ್ (ಔ) ಎಂಬ ಇಂತಹ ಎರಡು ಜೋಡಿಗಳು ಮಾತ್ರ ಇವೆ. (2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಕಚಟತಪ, ಗಜಡದಬ ಮತ್ತು ಯರಲವಶಸಹಗಳು ಕನ್ನಡದಲ್ಲೂ ಇವೆ, ಸಂಸ್ಕ್ರುತದಲ್ಲೂ ಇವೆ. ಆದರೆ ಇವು ಪದಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬ ವಿಶಯದಲ್ಲಿ ಈ ಎರಡು ನುಡಿಗಳ ನಡುವೆ ಹಲವು ವ್ಯತ್ಯಾಸಗಳಿವೆ. ಸಂಸ್ಕ್ರುತದಲ್ಲಿ ಎರಡು ವ್ಯಂಜನಗಳಿಂದ (ಒತ್ತಕ್ಶರಗಳಿಂದ) ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್್ತ, ಜ್್ಞ, ತ್್ಸ, ತ್್ಸ್ಯ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ. (3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿದಾನ ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿದೆ. ಸಂಸ್ಕ್ರುತ ದಲ್ಲಿ ಸಾಮಾನ್ಯವಾಗಿ ನಾಮಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ. ಆದರೆ ಕನ್ನಡದಲ್ಲಿ ನಾಮಪದ (ತಲೆಗೂದಲು, ಬಯಲಾಟ), ಕ್ರಿಯಾಪದ

(ಚುಚ್ಚುಮದ್ದು, ಕಡೆಗೋಲು) ಮತ್ತು ಗುಣಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ವರ್ಗಗಳಿಗೆ ಸೇರಿರುವ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಬಹುದು. (4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ. ಆದರೆ ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂವ್ರ ಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ). (5) ಪ್ರತ್ಯಯಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ. ಆದರೆ ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಪ್ರತ್ಯಯಗಳು ಸೇರಿರುವುದನ್ನು ಕಾಣಬಹುದು (ಅ- ಜ್ಞಾನ್-ಇ, ಕರ್-ತೃ-ತ್ವ). ಇದಲ್ಲದೆ ಕನ್ನಡದಲ್ಲಿ ಪ್ರತ್ಯಯಗಳು ಪದಗಳ ಕೊನೆಯಲ್ಲಿ ಮಾತ್ರ ಬರುತ್ತವೆ. ಆದರೆ ಸಂಸ್ಕ್ರುತದಲ್ಲಿ ಅವು ಪದಗಳ ಮೊದಲಿಗೂ ಬರಲ್ಲುವು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ- ನಿಜ್ರೀವಿ, ರಕ್ಷಣೆ-ಸಂರಕ್ಷಣೆ). (6) ಪದಗಳೆರಡು ಒಟ್ಟು ಸೇರಿದಾಗ ಇಲ್ಲವೇ ಪದವೊಂದಕ್ಕೆ ಪ್ರತ್ಯಯ ಸೇರಿದಾಗ ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು (ಸಂದಿ ನಿಯಮಗಳು) ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ. ಉದಾಹರಣೆಗಾಗಿ, ಇಕಾರದ ಅನಂತರ ಅಕಾರ ಬಂದಾಗ ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ). ಆದರೆ ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ (ಅಕಾರ) ಬಿದ್ದುಹೋಗಿ ಎರಡನೆಯದು (ಇಕಾರ) ಉಳಿಯುವ ಬದಲಾವಣೆ ನಡೆಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು). ಆದರೆ ಸಂಸ್ಕ್ರುತದಲ್ಲಿ

ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ). (7) ಪ್ರತ್ಯಯಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ. ಉದಾಹರಣೆಗಾಗಿ ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಪ್ರತ್ಯಯವನ್ನು ಸೇರಿಸಿದಾಗ ಇಂತಹ ಹಲವು ತೊಡಕಾದ ಸೇರಿಕೆಯ ನಿಯಮಗಳು ಸಂಸ್ಕ್ರುತದಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲೇನೇ ಕಾಣಬಹುದು. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸಗ್ರ-ನೈಸಗ್ರಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂವ್ರಾಹ್ನ-ಪೌವ್ರಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು. ಆದರೆ ಕನ್ನಡದಲ್ಲಿ ಪ್ರತ್ಯಯಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಪ್ರತ್ಯಯವನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಪ್ರತ್ಯಯದ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ- ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ). ಇಂತಹ ಇನ್ನೂ ಹಲವು ಸಂದರ್ಬಗಳಲ್ಲಿ ಕನ್ನಡ ಪದಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಸಂಸ್ಕ್ರುತ ಪದಗಳಲ್ಲಿ ನಡೆಯುವ ಬದಲಾವಣೆಗಳಿಗಿಂತ ಬೇರಾಗಿರುವುದನ್ನು ಕಾಣಬಹುದು.

ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ. ಮೇಲೆ ಸೂಚಿಸಿದ ಹಾಗೆ ಈ ರೀತಿ ಸಾಮಾನ್ಯ ಜನರ ಮಾತಿಗೂ ಬರಹಕ್ಕೂ ನಡುವಿರುವ ವ್ಯತ್ಯಾಸಗಳು ಹೆಚ್ಚಿದಂತೆಲ್ಲ ಸಾಮಾನ್ಯ ಜನರಿಗೆ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳಲು ಕಶ್ಟವಾಗುತ್ತಾ ಹೋಗುತ್ತದೆ. ಯಾಕೆಂದರೆ ಇಂತಹ ಬರಹಗಳನ್ನು ಅವರು ಬಳಸಬೇಕಿದ್ದಲ್ಲಿ ಓದಲು ಕಲಿತರೆ ಮಾತ್ರ ಸಾಲದು, ಈ ಬರಹಗಳಲ್ಲಿ ಬರುವ ತೀರ ಬೇರಾಗಿರುವ ಸಂಸ್ಕ್ರುತದ ಪದಸ್ವರೂಪವನ್ನೂ ಕಲಿಯಬೇಕು ಎನ್ನುವ ಒಂದು ಹೆಚ್ಚಿನ ಹೊರೆ ಅವರ ಮೇಲೆ ಬೀಳುತ್ತದೆ. ಇದರಿಂದಾಗಿ ಕನ್ನಡವನ್ನು ಓದಲು ಕಲಿತಿದ್ದರೂ ಆ ಓದಿನ ಪ್ರಯೋಜನವನ್ನು ಸರಿಯಾಗಿ ಪಡೆದುಕೊಳ್ಳಲು ಹೆಚ್ಚಿನವರಿಗೂ ಸಾದ್ಯವಾಗುವುದಿಲ್ಲ. 5.2.2 ಅಬಿಮಾನದ ಕೊರತೆ ಕನ್ನಡಿಗರಿಗೆ ತಮ್ಮ ನುಡಿಯ ಮೇಲೆ ಅಬಿಮಾನವಿರುವುದು ತುಂಬಾ ಕಡಿಮೆ ಎಂದು ಹೆಚ್ಚಿನವರೂ ಹೇಳುತ್ತಾರೆ. ನಾವು ಬೇರೆಯವರ ಮೇಲೆ ನಮ್ಮ ನುಡಿಯನ್ನು ಹೇರಲು ಹೋಗುವುದಿಲ್ಲ. ಆದಶ್ಟು

ಮಟ್ಟಿಗೆ ಬೇರೆಯವರ ನುಡಿಯನ್ನು ನಾವೇ ಕಲಿತುಕೊಳ್ಳಲು ಪ್ರಯತ್ನಿಸುತ್ತೇವೆ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಹಲವು ನುಡಿಗಳನ್ನಾಡುವ ಜನರು ಒಟ್ಟಿಗೆ ಹೊಂದಿಕೊಂಡಿರಲು ಕನ್ನಡಿಗರ ಈ ಸ್ವಬಾವವೇ ಕಾರಣವೆಂದು ಹೇಳಬಹುದು. ಬೇರೆ ನುಡಿಗಳನ್ನಾಡುವ ಜನರಿಗೆ ಬೆಂಗಳೂರು ಇಶ್ಟವಾಗುವುದೂ ಇದೇ ಕಾರಣಕ್ಕಾಗಿ. ನಾಲ್ಕು ಜನ ಸೇರಿರುವಲ್ಲಿ ಒಬ್ಬ ಕನ್ನಡಿಗನಿಗೆ ಇನ್ನೊಬ್ಬ ಕನ್ನಡ ಗೊತ್ತಿರುವವನಿದ್ದಾನೆಂದು ತಿಳಿದಾಗಲೂ ಉಳಿದವರಿಗೆ ಕನ್ನಡ ಬಾರದಿದ್ದಲ್ಲಿ ಆತ ಕನ್ನಡದಲ್ಲಿ ಮಾತನಾಡಲು ಹೋಗುವುದಿಲ್ಲ. ಹಾಗೆ ಮಾಡಿದಲ್ಲಿ ಕನ್ನಡ ಬಾರದ ಉಳಿದ ಜನರಿಗೆ ಇರಿಸುಮುರಿಸಾದೀತೆಂದು ಆತ ಎಲ್ಲರಿಗೂ ಅರ್ತವಾಗುವ ನುಡಿಯಲ್ಲೇ (ಇಂಗ್ಲಿಶ್ ಇಲ್ಲವೇ ಹಿಂದಿಯಲ್ಲಿ) ತನ್ನ ಮಾತನ್ನು ಮುಂದುವರಿಸುತ್ತಾನೆ. ಬಂಗಾಲಿ, ಕೊಂಕಣಿ ಇಲ್ಲವೇ ತಮಿಳು ನುಡಿಯನ್ನಾಡುವವರು ಇಂತಹ ಸಂದರ್ಬಗಳಲ್ಲಿ ತಮ್ಮ ನುಡಿಯಲ್ಲೇ ಮಾತನಾಡಲು ತೊಡಗುತ್ತಾರೆ. ಹಿಂದಿ ನುಡಿಯವರಂತೂ ಎಲ್ಲರೊಡನೆಯೂ, ಅವರಿಗೆ ಹಿಂದಿ ಬರಲಿ ಬಾರದಿರಲಿ, ಹಿಂದಿಯಲ್ಲೇ ಮಾತನಾಡುತ್ತಾರೆ. ಕನ್ನಡಿಗರ ಈ ಸ್ವಬಾವ ಅವರ ನುಡಿತಾಳ್ಮೆಯನ್ನು ಸೂಚಿಸುತ್ತದೆ. ಇದು ಒಳ್ಳೆಯದೇ. ಆದರೆ ಈ ಸ್ವಬಾವ ತಮ್ಮ ನುಡಿಯನ್ನೇ ಮರೆತುಬಿಡುವಶ್ಟು ಮುಂದೆ ಹೋಗಬಾರದು. ಯಾಕೆಂದರೆ ತಮ್ಮ ತಾಯ್ನುಡಿಯನ್ನು ಕಳೆದುಕೊಂಡವರು ತನ್ನ ಬೇರುಗಳನ್ನೆಲ್ಲ ಕಳೆದುಕೊಂಡಿರುವ ಮರದ ಹಾಗಾಗುತ್ತಾರೆ. ತಮ್ಮ ತಾಯ್ನುಡಿಯ ಮೇಲೆ ಅಬಿಮಾನವಿಲ್ಲದವರಿಗೆ ತಮ್ಮ ಮೇಲೂ ಅಬಿಮಾನವಿರುವುದಿಲ್ಲ. ನುಡಿಯ ಅಬಿಮಾನವೆಂಬುದು ದುರಬಿಮಾನ ವಾಗಬಾರದು ಅಶ್ಟೆ. ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಿಗೆ ತಿಳಿಸುವುದಕ್ಕಾಗಿ ಯಾವ ನುಡಿಯನ್ನು ಬಳಸಿದರೇನು ಎಂದು ಹೇಳುವವರೇ ತಮ್ಮ ನುಡಿಯಲ್ಲಿ ಯಾವ ಪದವನ್ನು ಬಳಸಿದರೇನು, ಅರ್ತ ಸ್ಪಶ್ಟವಾದರೆ ಸಾಕು ಎಂದು ವಾದಿಸುತ್ತಾರೆ. ತಮ್ಮ ನುಡಿಯ ಮೇಲೆ ಅಬಿಮಾನ ಇರುವವರಿಗೆ

ಮಾತ್ರ ಆ ನುಡಿಯ ಸ್ವಂತಿಕೆ ಮತ್ತು ಸೊಗಡು ಅಳಿದುಹೋಗಬಾರದೆಂಬ ಕಳಕಳಿಯಿರುತ್ತದೆ. ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿಗೆ ಮತ್ತು ಆಂಡಯ್ಯನ ಹಾಗೆ ಇವತ್ತು ಆ ಚಾಳಿಯನ್ನು ಎದುರಿಸಿ ನಿಲ್ಲುವವರು ಯಾರೂ ಇಲ್ಲದಿರುವುದಕ್ಕೆ ಕನ್ನಡಿಗರಲ್ಲಿ ತಮ್ಮ ತಾಯ್ನುಡಿಯ ಮೇಲೆ ಅಬಿಮಾನ ಇಲ್ಲದಿರುವುದೂ ಒಂದು ಕಾರಣವಿರಬಹುದು. ಇದಲ್ಲದೆ ಮೇಲೆ ವಿವರಿಸಿದ ಹಾಗೆ, ಕನ್ನಡ ಬರಹ ತನ್ನದೇ ಆದ ಸೊಗಡನ್ನು ಕಳೆದುಕೊಂಡರೂ ಚಿಂತಿಲ್ಲ, ಕನ್ನಡ ಬರಹಗಳಲ್ಲಿ ಬರುವ ಸಂಸ್ಕ್ರುತ ಪದಗಳ ಸೊಗಡು ಮಾತ್ರ ಸ್ವಲ್ಪವೂ ಕೆಡದೆ ಉಳಿಯಬೇಕೆಂಬ ವಿಚಿತ್ರವಾದ ಅನಿಸಿಕೆ ನಮ್ಮ ಬರಹಗಾರರಲ್ಲಿದೆ. ಸಂಸ್ಕ್ರುತ ಪದಗಳನ್ನು ನಾವು ಯಾವಾಗ ಮತ್ತು ಹೇಗೆ ಎರವಲಾಗಿ ಪಡೆಯುತ್ತಿದ್ದೇವೆ ಮತ್ತು ಆ ರೀತಿ ಎರವಲಾಗಿ ಪಡೆದ ಪದಗಳನ್ನು ನಾವು ನಮ್ಮ ಬರಹಗಳಲ್ಲಿ ಹೇಗೆ ಬಳಸುತ್ತಿದ್ದೇವೆ ಎಂಬುದನ್ನು ಪರಿಶೀಲಿಸಿದಲ್ಲಿ ಈ ವಿಶಯ ಸ್ಪಶ್ಟವಾಗುತ್ತದೆ. 5.2.3 ತಕ್ಕ ಪದಗಳಿಲ್ಲದಾಗ ಕೆಲವು ಸಂದರ್ಬಗಳಲ್ಲಿ ನಾವು ತಿಳಿಸಬೇಕಾದ ವಿಶಯಗಳನ್ನು ತಿಳಿಸಲು ಇಲ್ಲವೇ ಹೆಸರಿಸಬೇಕಾದ ವಸ್ತುಗಳನ್ನು ಹೆಸರಿಸಲು ತಕ್ಕುದಾದ ಪದವೇ ನಮ್ಮ ನುಡಿಯಲ್ಲಿ ಇಲ್ಲವೆಂದು ಅನಿಸುವುದಿದೆ. ಇದಕ್ಕೆ ನಮ್ಮ ನುಡಿಯ ಬಡತನ’ವೇನೂ ಕಾರಣವಲ್ಲ. ಎಲ್ಲಾ ನುಡಿಗಳಲ್ಲೂ ಅಂತಹ ಸಂದರ್ಬಗಳು ಬರುತ್ತಲೇ ಇರುತ್ತವೆ. ಅತ್ಯಂತ ಶ್ರೀಮಂತ’ವೆನಿಸಿದ ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳಲ್ಲೂ ಅವು ಬರುತ್ತಿರುತ್ತವೆ. ಸಾಮಾನ್ಯವಾಗಿ ಒಂದು ಪಂಗಡದಲ್ಲಿ ಬಾಳ್ವೆಯ ಯಾವ ಅಂಶಗಳು ಬೆಳೆಯುತ್ತಾ ಹೋಗುತ್ತವೆಯೋ ಆ ಅಂಶಗಳಿಗೆ ಸಂಬಂದಿಸಿದ ಪದಗಳು ಅದರ ನುಡಿಯಲ್ಲಿ ಹೆಚ್ಚು ಹೆಚ್ಚು ಉಂಟಾಗುತ್ತಾ ಹೋಗುತ್ತವೆ. ಮೀನುಗಾರಿಕೆ ಒಂದು ಪಂಗಡದ ಮುಕ್ಯ

ಕಸುಬಾಗಿ ಬೆಳೆದಾಗ, ಮೀನುಗಳಿಗೆ, ಅವು ವಾಸಿಸುವ ಹಳ್ಳ, ಕೊಳ ಇಲ್ಲವೇ ಕಡಲಿಗೆ ಮತ್ತು ಅವನ್ನು ಹಿಡಿಯಲು ಬಳಸುವ ಉಪಕರಣಗಳಿಗೆ ಸಂಬಂದಿಸಿದ ನೂರಾರು ಪದಗಳು ಆ ಪಂಗಡದ ನುಡಿಯಲ್ಲಿ ತುಂಬಿಕೊಳ್ಳುತ್ತವೆ. ಇದಕ್ಕೆ ಬದಲು ಕಾಡಿನಲ್ಲಿ ಬೇಟೆಯಾಡಿ ಬದುಕುವುದು ಒಂದು ಪಂಗಡದ ಕಸುಬಾದಾಗ ಬೇಟೆಗೆ, ಬೇಟೆಯಾಡುವ ಪ್ರಾಣಿಗಳಿಗೆ ಮತ್ತು ಅವು ವಾಸಿಸುವ ಕಾಡಿಗೆ ಸಂಬಂದಿಸಿದಂತಹ ಪದಗಳ ಅವಶ್ಯಕತೆ ಅವರಿಗೆ ಉಂಟಾಗುತ್ತದೆ ಮತ್ತು ಕ್ರಮೇಣ ಅಂತಹ ನೂರಾರು ಪದಗಳು ಆ ಪಂಗಡದ ನುಡಿಯಲ್ಲಿ ತುಂಬಿಕೊಳ್ಳುತ್ತವೆ. ಒಂದು ನುಡಿಯ ಬಳಕೆಯಲ್ಲಿ ಈ ರೀತಿ ಹೊಸ ಪದಗಳ ಅವಶ್ಯಕತೆಯುಂಟಾಗುವುದು ಬಹಳ ಅಪರೂಪ. ದಿನನಿತ್ಯದ ಜೀವನಕ್ಕೆ ಬೇಕಾಗುವ ಪದಗಳೆಲ್ಲ ಅದರಲ್ಲಿ ಮೊದಲಿಗೇನೇ ತಯಾರಾಗಿರುತ್ತವೆ. ಮಾತನಾಡುವ ಸಂದರ್ಬ ಬಂದಾಗಲೆಲ್ಲ ಅವನ್ನು ನೆನಪಿಸಿಕೊಂಡು ಸರಿಯಾದ ರೂಪಗಳಲ್ಲಿ ಬಳಸುವುದಶ್ಟೇ ಆ ನುಡಿಯನ್ನಾಡುವ ಜನರು ಮಾಡಬೇಕಾಗಿರುವ ಕೆಲಸ. ಆದರೆ ಕೆಲವೊಮ್ಮೆ ಅದುವರೆಗೆ ಆ ಪಂಗಡದಲ್ಲಿ ಯಾರೂ ನೋಡಿಲ್ಲದಂತಹ ಒಂದು ಹೊಸ ವಸ್ತು ಕಣ್ಣಿಗೆ ಬಿದ್ದಾಗ, ಇಲ್ಲವೇ ಯಾರೂ ಅದುವರೆಗೆ ಆಲೋಚಿಸಿಲ್ಲದಂತಹ ಒಂದು ಹೊಸ ವಿಶಯ ಮನಸ್ಸಿಗೆ ಬಂದಾಗ, ಅದನ್ನು ಹೆಸರಿಸುವುದಕ್ಕಾಗಿ ತಮ್ಮ ನುಡಿಯಲ್ಲಿ ಸರಿಯಾದ ಪದವೇ ಇಲ್ಲವೆಂದು ಅನಿಸಲು ಸಾದ್ಯವಿದೆ. ಅಂತಹ ಸಂದರ್ಬದಲ್ಲಿ ಆ ವಸ್ತು ಇಲ್ಲವೇ ವಿಶಯವನ್ನು ಹೆಸರಿಸುವುದಕ್ಕಾಗಿ ಹೊಸತೊಂದು ಪದವನ್ನು ಉಂಟುಮಾಡುವ ಅವಶ್ಯಕತೆ ಉಂಟಾಗುತ್ತದೆ. ಆದರೆ ಸಾಮಾನ್ಯವಾಗಿ ಇಂತಹ ಸಂದರ್ಬಗಳು ತುಂಬಾ ಅಪರೂಪವಾಗಿ ಕೆಲವರ ಜೀವನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ನುಡಿಗಳ ಈ ಸಾಮಾನ್ಯ ಸ್ತಿತಿಗೆ ಕೆಲವು ಅಪವಾದಗಳೂ ಇವೆ. ಒಂದು ನುಡಿಯನ್ನಾಡುವ ಜನರು ತಾವು ಮೊದಲಿದ್ದ ಜಾಗದಿಂದ ತೀರ ಬೇರಾಗಿರುವ ದೂರದ ಒಂದು ಜಾಗಕ್ಕೆ ವಲಸೆ ಹೋದಲ್ಲಿ ಅವರಿಗೆ ಆ ಜಾಗದಲ್ಲಿ ನೂರಾರು ಹೊಸ ಹೊಸ ವಸ್ತು ಮತ್ತು

ಸಂಗತಿಗಳು ಎದುರಾಗಬಹುದು ಮತ್ತು ಅವನ್ನೆಲ್ಲ ಹೆಸರಿಸಲು ಅವರ ನುಡಿಯಲ್ಲಿ ಸರಿಯಾದ ಪದಗಳೇ ಇಲ್ಲವೆಂದೆನಿಸಬಹುದು. ಇಂತಹ ಸಂದರ್ಬಗಳಲ್ಲಿ ಒಂದೇ ಬಾರಿಗೆ ನೂರಾರು ಪದಗಳನ್ನು ಆ ನುಡಿಯಲ್ಲಿ ಹೊಸದಾಗಿ ಉಂಟುಮಾಡುವ ಅವಶ್ಯಕತೆಯುಂಟಾಗಬಹುದು. ಆ ಹೊಸ ಜಾಗದಲ್ಲಿ ಬೇರೊಂದು ನುಡಿಯನ್ನಾಡುವ ಜನರು ಆಗಲೇ ನೆಲೆಸಿರುವರಾದರೆ, ಅವರ ನುಡಿಯಲ್ಲಿ ಅಂತಹ ವಸ್ತು ಮತ್ತು ಸಂಗತಿಗಳನ್ನು ಹೆಸರಿಸುವ ಪದಗಳು ಸಾಕಶ್ಟಿರಬಹುದು. ಹೀಗಿದ್ದಲ್ಲಿ ಅವನ್ನೇ ಈ ನುಡಿಯ ಜನರೂ ಎರವಲಾಗಿ ಪಡೆದು ಬಳಸಬಹುದು. ಆ ನುಡಿಯ ಪದಗಳ ಸ್ವರೂಪ ತಮ್ಮ ನುಡಿಯಲ್ಲಿ ಬಳಕೆಯಲ್ಲಿರುವ ಪದಗಳ ಸ್ವರೂಪಕ್ಕಿಂತ ತೀರ ಬೇರಾಗಿದೆಯಾದರೆ, ಎರವಲಾಗಿ ಪಡೆಯುವಾಗ ಅವುಗಳಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಅವು ತಮ್ಮ ನುಡಿಯ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಿಕೊಳ್ಳಬಹುದು ಇಲ್ಲವೇ ಆ ಪದಗಳಿಗೆ ಮತ್ತು ಅವು ಹೆಸರಿಸುವ ವಸ್ತುಗಳಿಗೆ ಹೊಂದಿಕೆಯಾಗುವಂತಹ ಪದಗಳನ್ನು ತಮ್ಮ ನುಡಿಯಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳ ಬಹುದು. ಒಂದು ನುಡಿಯನ್ನಾಡುವ ಜನರು ದೂರದ ಊರಿಗೆ ವಲಸೆಹೋಗುವ ಬದಲು ಬೇರೊಂದು ನುಡಿಯನ್ನಾಡುವ ಜನರು ಇವರಿದ್ದಲ್ಲಿಗೆ ವಲಸೆ ಬಂದಾಗಲೂ ಇಂತಹದೇ ಪರಿಸ್ತಿತಿಯುಂಟಾಗುತ್ತದೆ. ಇವರ ಸಂಪರ್ಕಕ್ಕೆ ಬಂದ ಜನರ ಮತ, ಸಂಸ್ಕ್ರುತಿ, ಸಾಹಿತ್ಯ ಮೊದಲಾದವುಗಳು ತೀರ ಬೇರಾಗಿರಲು ಸಾದ್ಯವಿದ್ದು, ಅವನ್ನೆಲ್ಲ ಪರಿಚಯಿಸಿಕೊಳ್ಳುವುದಕ್ಕಾಗಿ ಹಲವಾರು ಹೊಸ ಪದಗಳನ್ನು ಉಂಟುಮಾಡಿಕೊಳ್ಳುವ ಇಲ್ಲವೇ ಎರವಲಾಗಿ ಪಡೆಯುವ ಅವಶ್ಯಕತೆ ಈ ಜನರಿಗುಂಟಾಗುತ್ತದೆ. ಹಿಂದಿನ ಕಾಲದಲ್ಲಿ ಇಂತಹ ಸಂದರ್ಬಗಳು ಜನರ ಜೀವನದಲ್ಲಿ ಬಹಳ ಅಪರೂಪವಾಗಿ ಮಾತ್ರವೇ ಎದುರಾಗುತ್ತಿದ್ದಿರಬೇಕು. ಆದರೆ ಇವತ್ತಿನ ದಿನಗಳಲ್ಲಿ ಟಿವಿ, ರೇಡಿಯೋ, ಇಂಟರ್ನೆಟ್ ಮೊದಲಾದವುಗಳಿಂದಾಗಿ, ಮತ್ತು ಉಗಿಬಂಡಿ, ಹಡಗು, ವಿಮಾನ ಮೊದಲಾದವುಗಳಿಂದಾಗಿ ಜಗತ್ತಿನ ಬೇರೆ ಬೇರೆ ಪ್ರದೇಶಗಳ ನಡುವಿನ

ಅಂತರ ಕಡಿಮೆಯಾಗುತ್ತಾ ಬರುತ್ತಿದೆ. ಇದರಿಂದಾಗಿ ಇವತ್ತಿನ ದಿನಗಳಲ್ಲಿ ಹೊಸ ಹೊಸ ವಸ್ತುಗಳಿಗೆ ಮತ್ತು ಸಂಗತಿಗಳಿಗೆ ಹೆಸರುಗಳನ್ನು ಎರವಲಾಗಿ ಪಡೆಯುವ ಇಲ್ಲವೇ ಹೊಸದಾಗಿ ಉಂಟುಮಾಡಿಕೊಳ್ಳುವ ಸಮಸ್ಯೆಯೂ ನಮ್ಮನ್ನು ಯಾವಾಗಲೂ ಹೆಚ್ಚು ಹೆಚ್ಚಾಗಿ ಕಾಡುತ್ತಿರುತ್ತದೆ. ಕನ್ನಡದ ಚರಿತ್ರೆಯಲ್ಲಿ ಮೇಲೆ ಸೂಚಿಸಿದಂತಹ ಹಲವು ಹೊಸ ಪದಗಳನ್ನು ಉಂಟುಮಾಡುವ ಇಲ್ಲವೇ ಎರವಲು ಪಡೆಯುವ ಸಂದರ್ಬ ಒದಗಿಬಂದುದು ಮೊದಲಿಗೆ ಆರ್ಯ ಜನಾಂಗದ ಜನರ ಮತ್ತು ಅವರು ಬಳಸುತ್ತಿದ್ದ ಸಂಸ್ಕ್ರುತ, ಪಾಲಿ ಮತ್ತು ಪ್ರಾಕ್ರುತ ನುಡಿಗಳ ಸಂಪರ್ಕ ಕನ್ನಡಿಗರಿಗುಂಟಾದಾಗ ಎಂದು ಹೇಳಬಹುದು. ಕನ್ನಡಿಗರಲ್ಲಿ ಕೆಲವರು ಈ ಸಂಪರ್ಕವುಂಟಾದಾಗ ಮೊದಲಿಗೆ ಆ ಜನರ ನುಡಿಗಳನ್ನು ಕಲಿತು ಅವುಗಳಲ್ಲಿ ಪರಿಣತಿಯನ್ನು ಪಡೆದಿರಬೇಕು. ಆಮೇಲೆ ಆ ನುಡಿಗಳನ್ನು ಕಲಿಯದಿರುವ ಇತರ ಕನ್ನಡಿಗರಿಗೆ ಅವುಗಳಲ್ಲಿರುವ ದರ್ಮ, ಪುರಾಣ, ಶಾಸ್ತ್ರ, ಕಾವ್ಯ ಮೊದಲಾದವುಗಳ ಮೇಲಿನ ಬರಹಗಳನ್ನು ಪರಿಚಯಿಸುವುದಕ್ಕಾಗಿ ಆ ನುಡಿಯಲ್ಲಿರುವ ಗ್ರಂತಗಳನ್ನು ಅನುವಾದಿಸುವ ಇಲ್ಲವೇ ತಮ್ಮ ನುಡಿಯಲ್ಲಿ ಅಂತಹವೇ ಬೇರೆ ಸ್ವತಂತ್ರವಾದ ಗ್ರಂತ ಗಳನ್ನು ಬರೆಯುವ ಕೆಲಸದಲ್ಲಿ ತೊಡಗಿರಬೇಕು. ಈ ಎರಡು ಬಗೆಯ ಕೆಲಸಗಳನ್ನು ನಡೆಸುವಲ್ಲೂ ಅವರಿಗೆ ಹಲವಾರು ಹೊಸ ಪದಗಳ ಅವಶ್ಯಕತೆಯುಂಟಾಗಿರಬೇಕು. ಇದಕ್ಕಾಗಿ ಅವರು ಹಳೆಗನ್ನಡದ ಕಾಲದಲ್ಲಿ ಹಲವು ಪದಗಳನ್ನು ಸಂಸ್ಕ್ರುತ, ಪಾಲಿ ಮತ್ತು ಪ್ರಾಕ್ರುತಗಳಿಂದ ಕನ್ನಡಕ್ಕೆ ಎರವಲಾಗಿ ಪಡೆದಿದ್ದರು ಮತ್ತು ಈ ಪದಗಳ ಸ್ವರೂಪವನ್ನು ಕನ್ನಡ ಪದಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಹಲವು ರೀತಿಗಳಲ್ಲಿ ಬದಲಾಯಿಸಿಕೊಂಡಿದ್ದರು. ಇದಲ್ಲದೆ ಹಲವು ಪದಗಳನ್ನು ಎರವಲಾಗಿ ಪಡೆಯುವ ಬದಲು ಅವಕ್ಕೆ ಸಮನಾದ ಕನ್ನಡದವೇ ಆದ ಪದಗಳನ್ನೂ ಆ ಕಾಲದಲ್ಲಿ ಉಂಟುಮಾಡಿಕೊಂಡಿದ್ದರು. ಇದರ ಅನಂತರ ಬೇರೆಯೂ ಹಲವು ರೀತಿಯ ಸಂಪರ್ಕಗಳು ಕನ್ನಡ ಜನರಿಗೆ ಉಂಟಾಗಿದ್ದು ಅವುಗಳಿಂದಾಗಿ ಕನ್ನಡ ಹಲವು

ರೀತಿಯಲ್ಲಿ ತನ್ನ ಪದಕೋಶವನ್ನು ದೊಡ್ಡದುಮಾಡಿಕೊಂಡಿದೆ. ಆದರೆ ಇತ್ತೀಚೆಗೆ ಇಂಗ್ಲಿಶ್ ನುಡಿಯ ಸಂಪರ್ಕದಿಂದಾಗಿ ಕನ್ನಡದಲ್ಲಿ ಪದಗಳ ಮಟ್ಟಿಗೆ ಒಂದು ದೊಡ್ಡ ಕ್ರಾಂತಿಯೇ ಉಂಟಾಗಿದೆ. ಈ ಸಂಪರ್ಕದಿಂದಾಗಿ ನೂರಾರು ಹೊಸ ವಿಶಯಗಳು ನಮ್ಮೆದುರು ಬಂದಿದ್ದು, ಅವುಗಳಲ್ಲಿ ಪ್ರತಿಯೊಂದು ವಿಶಯದಲ್ಲೂ ಸಾವಿರಾರು ಹೊಸ ಪದಗಳನ್ನು ಮತ್ತು ಪದರೂಪಗಳನ್ನು ಬಳಸಬೇಕಾಗಿರುವ (ಎರವಲಾಗಿ ಪಡೆಯುವ ಇಲ್ಲವೇ ಹೊಸದಾಗಿ ಉಂಟುಮಾಡಿಕೊಳ್ಳುವ) ಅವಶ್ಯಕತೆ ನಮಗೀಗ ಉಂಟಾಗಿದೆ. 5.2.4 ಸಂಸ್ಕ್ರುತದ ವಿಶಿಶ್ಟ ಸ್ತಾನ ನುಡಿಯೊಂದಕ್ಕೆ ಹೊಸ ಪದಗಳ ಅವಶ್ಯಕತೆಯುಂಟಾದಾಗ ತನ್ನ ಸಂಪರ್ಕಕ್ಕೆ ಬಂದಿರುವ ನುಡಿಯಿಂದ ಪದಗಳನ್ನು ಎರವಲಾಗಿ ಪಡೆದುಕೊಳ್ಳುವುದು ಮತ್ತು ತನ್ನಲ್ಲೇ ಪದಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬುದಾಗಿ ಎರಡು ದಾರಿಗಳಿವೆಯೆಂಬುದನ್ನು ನಾವು ಮೇಲೆ ನೋಡಿರುವೆವು. ಸಂಪರ್ಕಕ್ಕೆ ಬಂದಿರುವ ನುಡಿ ತೀರ ಬೇರಾಗಿದೆಯಾದರೆ, ಅದರಲ್ಲಿರುವ ಪದಗಳಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಅವು ತನ್ನಲ್ಲಿರುವ ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಮಾಡುವ ಸ್ವಾತಂತ್ರ್ಯ ಪದಗಳನ್ನು ಎರವಲಾಗಿ ಪಡೆಯುವ ನುಡಿಗಿದೆ. ಮೊತ್ತ ಮೊದಲಿಗೆ ಸಂಸ್ಕ್ರುತ ನುಡಿಯ ಸಂಪರ್ಕವುಂಟಾದಾಗ, ಎಂದರೆ ಹಳೆಗನ್ನಡದ ಕಾಲದಲ್ಲಿ, ಕನ್ನಡ ನುಡಿ ಮೇಲೆ ಸೂಚಿಸಿದ ಎರಡು ದಾರಿಗಳನ್ನೂ ಬಳಸಿರುವುದನ್ನು ಕಾಣಬಹುದು. ಹಲವು ಸಂಸ್ಕ್ರುತ ಪದಗಳಿಗೆ ಬದಲಾಗಿ ಕನ್ನಡದ್ದೇ ಆದ ಹೊಸ ಪದಗಳನ್ನು ಉಂಟುಮಾಡಿಕೊಳ್ಳಲಾಯಿತು ಮತ್ತು ಬೇರೆ ಹಲವು ಪದಗಳನ್ನು ಸಂಸ್ಕ್ರುತದಿಂದ ಎರವಲಾಗಿ ಪಡೆದುಕೊಳ್ಳಲಾಯಿತು. ಇದಲ್ಲದೆ ಈ ಎರವಲಾಗಿ ಪಡೆದ ಪದಗಳಲ್ಲಿ ಕನ್ನಡದ ಪದಸ್ವರೂಪಕ್ಕೆ ಹೊಂದಿಕೊಳ್ಳುವಂತೆ ಹಲವು ರೀತಿಯ ಬದಲಾವಣೆಗಳನ್ನೂ ಮಾಡಿಕೊಳ್ಳಲಾಯಿತು.

ಆದರೆ ಅನಂತರ ಕಾವ್ಯ ಮತ್ತು ಶಾಸ್ತ್ರ ಗ್ರಂತಗಳನ್ನು ರಚಿಸುವ ಸಮಯದಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಎಣಿಕೆ ಹೆಚ್ಚುತ್ತಾ ಹೋಯಿತು ಮತ್ತು ಇದರಿಂದಾಗಿ ಹಾಗೆ ಎರವಲಾಗಿ ಪಡೆದ ಸಂಸ್ಕ್ರುತ ಪದಗಳಲ್ಲಿ ಕನ್ನಡ ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯೂ ಕಡಿಮೆಯಾಗುತ್ತಾ ಹೋಯಿತು. ಇದಕ್ಕೆ ಕಾರಣವೇನೆಂದರೆ, ಬಹಳಶ್ಟು ಸಂಸ್ಕ್ರುತ ಪದಗಳನ್ನು ಎರವಲಾಗಿ ಪಡೆದುದರಿಂದಾಗಿ ಈ ಗ್ರಂತಗಳಲ್ಲಿ ಬಳಕೆಯಾಗುವ ಕನ್ನಡ ಪ್ರಬೇದವನ್ನು ಬಳಸುವ ಬರಹಗಾರರಿಗೆ ಮತ್ತು ಓದುಗರಿಗೆ ಸಂಸ್ಕ್ರುತದ ಪದಸ್ವರೂಪವನ್ನೇ ತಮ್ಮದಾಗಿಸಿಕೊಳ್ಳಲು ಸಾದ್ಯವಾಗಿತ್ತು. ಆದರೆ ನಿಜಕ್ಕೂ ಈ ಪ್ರಬೇದದ ಪದಸ್ವರೂಪ ಎರಡು ರೀತಿಯ ಪದಸ್ವರೂಪಗಳ ಬೆರಕೆಯಾಗಿದೆ. ಕನ್ನಡ ಪದಗಳ ಮಟ್ಟಿಗೆ ಅದು ಕನ್ನಡದ್ದೇ ಆದ ಪದಸ್ವರೂಪವನ್ನು ಉಳಿಸಿಕೊಂಡಿದೆ. ಸಂಸ್ಕ್ರುತದಿಂದ ಎರವಲಾಗಿ ಪಡೆದಿರುವ ಪದಗಳಲ್ಲಿ ಹಲವು ಪದಗಳು ಈ ಪದಸ್ವರೂಪಕ್ಕೆ ಹೊಂದಿಕೆಯಾಗುವಂತೆ ತದ್ಬವಗಳಾಗಿರುವುದು ಮತ್ತು ಈ ಪದಗಳ ಬಳಕೆಯಲ್ಲಿ ಕನ್ನಡದ್ದೇ ಆದ ಸೇರಿಕೆ(ಸಂದಿ)ಯ ನಿಯಮಗಳು ಕಾಣಿಸಿಕೊಳ್ಳುವುದು ಇದನ್ನು ಸ್ಪಶ್ಟಪಡಿಸುತ್ತದೆ. ಆದರೆ ಇವುಗಳೊಂದಿಗೆ ಬಳಕೆಯಾಗುವ ಬೇರೆ ಹಲವು ಸಂಸ್ಕ್ರುತ (ತತ್ಸಮ) ಪದಗಳಲ್ಲಿ ಈ ಬರಹದ ಪ್ರಬೇದ ಸಂಸ್ಕ್ರುತದ ಪದಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆ. ಇವುಗಳ ಬಳಕೆಯಲ್ಲಿ ಕನ್ನಡದ ಸೇರಿಕೆಯ ನಿಯಮಗಳಿಗಿಂತ ತೀರ ಬೇರಾಗಿರುವ ಸಂಸ್ಕ್ರುತದ್ದೇ ಆದ ಸವರ್ಣದೀರ್ಗ, ಗುಣ, ವ್ರುದ್ದಿ, ಮೊದಲಾದ ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಬರಹವನ್ನು ಬಳಸುವ ಕನ್ನಡ ವಿದ್ವಾಂಸರು ಸಂಸ್ಕ್ರುತದ ಪದಸ್ವರೂಪವನ್ನೇ ತಮ್ಮದಾಗಿಸಿಕೊಂಡುದರಿಂದಾಗಿ, ಕನ್ನಡದಲ್ಲಿ ಒಂದು ವಿಚಿತ್ರವಾದ ಪರಿಸ್ತಿತಿ ಬೆಳೆದುಬಂದಿದೆ. ಇಂಗ್ಲಿಶ್ನಂತಹ ಬೇರೆ ನುಡಿಗಳ ಸಂಪರ್ಕದಿಂದಾಗಿ ಹೊಸ ಪದಗಳ ಅವಶ್ಯಕತೆಯುಂಟಾದಾಗ ಕನ್ನಡದ ವಿದ್ವಾಂಸರು ಮೇಲೆ ಸೂಚಿಸಿದ

ಎರಡು ವಿದಾನಗಳೊಂದಿಗೆ ಮೂರನೆಯದೊಂದು ವಿದಾನವನ್ನೂ ಬಳಸತೊಡಗಿದ್ದಾರೆ. (1) ಇವತ್ತಿನ ಬರಹ ಕನ್ನಡದಲ್ಲಿ ಬಸ್ಸು, ಕಾರು, ಪೆನ್ನು, ಟೆಲಿವಿಶನ್ ಮೊದಲಾದ ಹಲವು ಇಂಗ್ಲಿಶ್ ಪದಗಳನ್ನು ಕೆಲವು ಬದಲಾವಣೆಗಳೊಂದಿಗೆ ನೇರವಾಗಿ ಎರವಲು ಪಡೆಯಲಾಗಿದೆ. ಇದು ಅವರು ಬಳಸುತ್ತಿರುವ ಮೊದಲನೆಯ ವಿದಾನಕ್ಕೆ ಉದಾಹರಣೆ. (2) ಇಂಗ್ಲಿಶ್ನ ಬೇರೆ ಹಲವು ಪದಗಳಿಗೆ ಬದಲಾಗಿ ಕನ್ನಡದವೇ ಆದ ಉಗಿಬಂಡಿ, ತಾಯ್ನಾಡು, ಬಾನುಲಿ, ಸೆರೆಮನೆ, ನಿಲುಗಡೆ ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡ ವಿದ್ವಾಂಸರು ಬಳಸುತ್ತಿರುವ ಎರಡನೆಯ ವಿದಾನಕ್ಕೆ ಉದಾಹರಣೆ. (3) ಇನ್ನು ಹಲವು ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಎರವಲಾಗಿ ಪಡೆಯಲಾಗಿದೆ. ಅಂತಹ ಪದಗಳು ಸಂಸ್ಕ್ರುತದಲ್ಲೂ ಇಲ್ಲವಾದರೆ, ಸಂಸ್ಕ್ರುತ ಪದಕಾಂಡಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಲಾಗಿದೆ. ದೂರದರ್ಶನ, ಆರಕ್ಶಕ, ಆಕಾಶವಾಣಿ, ದೂರವಾಣಿ ಮೊದಲಾದ ಹಲವಾರು ಪದಗಳನ್ನು ಈ ಮೂರನೆಯ ವಿದಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಕನ್ನಡದ ವಿದ್ವಾಂಸರು ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿಕೊಂಡಿರುವುದೇ ಈ ರೀತಿ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವುದಕ್ಕಾಗಿ ಸಂಸ್ಕ್ರುತ ಪದ ಮತ್ತು ಪದಕಾಂಡಗಳ ಮೊರೆಹೊಗುವ ಈ ಮೂರನೆಯ ವಿದಾನ ಬಳಕೆಗೆ ಬರಲು ಮುಕ್ಯ ಕಾರಣ. ಈ ವಿದಾನವನ್ನು ಬಳಸುವಾಗ ಅವರಿಗೆ ತಾವು ಸಂಸ್ಕ್ರುತವೆಂಬ ಬೇರೊಂದು ನುಡಿಯಲ್ಲಿ ಪದಗಳನ್ನು ಉಂಟುಮಾಡಿಕೊಳ್ಳುತ್ತಿದ್ದೇವೆಂದೇ ಅನಿಸುವುದಿಲ್ಲ. ಕನ್ನಡದಲ್ಲೇನೇ ಪದಗಳನ್ನು ಉಂಟುಮಾಡುತ್ತಿದ್ದೇವೆಂದು ಅನಿಸುತ್ತದೆ. ಇದಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ವಿದ್ವಾಂಸರು ಎರಡನೆಯ ವಿದಾನಕ್ಕಿಂತಲೂ ಈ ಮೂರನೆಯ ವಿದಾನಕ್ಕೇನೇ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದಾರೆ. ಹೊಸ ಪದಗಳನ್ನು ಉಂಟುಮಾಡುವುದಕ್ಕೆ ಬೇಕಾಗುವ ಪದ ಇಲ್ಲವೇ ಪದಕಾಂಡಗಳು

ಕನ್ನಡದಲ್ಲಿ ಇದ್ದರೂ ಅವನ್ನು ಬಳಸದೆ ಸಂಸ್ಕ್ರುತದ ಪದ ಇಲ್ಲವೇ ಪದಕಾಂಡಗಳನ್ನು ಬಳಸುತ್ತಿದ್ದಾರೆ. ಎಂದರೆ ಎರಡನೆಯ ವಿದಾನಕ್ಕಿಂತಲೂ ಮೂರನೆಯ ವಿದಾನವನ್ನು ಬಳಸುವುದೇ ಹೆಚ್ಚಾಗಿದೆ. ಈ ಮೂರನೆಯ ವಿದಾನದಿಂದ ತಯಾರಾಗಿರುವ ಪದಗಳು ನಿಜಕ್ಕೂ ಸಂಸ್ಕ್ರುತ ಪದಗಳೂ ಅಲ್ಲ (ಈ ಪದಗಳು ಸಂಸ್ಕ್ರುತ ಪದಕೋಶಗಳಲ್ಲಿ ಕಾಣಿಸುವುದಿಲ್ಲ) ಮತ್ತು ಕನ್ನಡದವೂ ಅಲ್ಲ. ಅವನ್ನು ನಾವು `ತ್ರಿಶಂಕು’ ಪದಗಳೆಂದು ಕರೆಯಬಹುದು. ಇಂತಹ ತ್ರಿಶಂಕು ಪದಗಳು ಇವತ್ತು ಕನ್ನಡ ಬರಹಗಳಲ್ಲಿ ತುಂಬಿ ತುಳುಕುತ್ತಿವೆ. ಈ ಮೂರನೆಯ ವಿದಾನದ ಬಳಕೆಯಿಂದಾಗಿ ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರ ಸರಿಯುತ್ತಿದೆ. ಯಾಕೆಂದರೆ ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಸಂಸ್ಕ್ರುತ ಪದಗಳು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಹೆಚ್ಚಿನ ಕನ್ನಡಿಗರೂ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿಕೊಂಡಿರುವುದಿಲ್ಲ. ಕನ್ನಡ ವಿದ್ವಾಂಸರ ಈ ಚಾಳಿಯಿಂದಾಗಿ ಇವತ್ತು ಕನ್ನಡದ ಬರಹಗಳನ್ನು ಓದಬೇಕೆಂದಿರುವವರೆಲ್ಲ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಇದು ಅವರ ಮೇಲೆ ಬೀಳುವ ಒಂದು ಅನವಶ್ಯಕವಾದ ಹೊರೆ. ಈ ಹೊರೆಯನ್ನು ಹೊರಲಾರದವರೆಲ್ಲ ಕನ್ನಡ ಬರಹದಿಂದ ದೂರವೇ ಉಳಿಯಬೇಕಾಗುತ್ತದೆ. ಇದಲ್ಲದೆ ಎರಡು ಪದಸ್ವರೂಪಗಳ ಬೆರಕೆಯಾಗಿರುವ ಕನ್ನಡ ಬರಹ ತನ್ನ ಸೊಗಡನ್ನು ಕಳೆದುಕೊಂಡು ತೀರಾ ಕ್ರುತಕವಾಗಿ ಕಾಣಿಸುತ್ತಿದೆ. 5.2.5 ಕನ್ನಡ ಪದಗಳು ಮುಟ್ಟಬಾರದ (ಅಸ್ಪ್ರುಶ್ಯ) ಪದಗಳೇ? ಒಂದು ಹೊಸ ಮನೆಯನ್ನು ಕಟ್ಟಿದಾಗ, ಒಂದು ಹೊಸ ಹೂದೋಟವನ್ನು ನಿರ್ಮಿಸಿದಾಗ, ಒಂದು ಹೊಸ ಆಟದ ಬಯಲನ್ನು ಉಂಟುಮಾಡಿದಾಗ, ಒಂದು ಹೊಸ ಅಂಗಡಿಯನ್ನು ತೆರೆದಾಗ, ಒಂದು ಹೊಸ ಸಂಸ್ತೆಯನ್ನು ಕಟ್ಟಿದಾಗ - ಇಂತಹ ಹಲವಾರು ಸಂದರ್ಬಗಳಲ್ಲಿ

ಅವಕ್ಕೆಲ್ಲ ನಾವೊಂದು ಹೊಸ ಹೆಸರನ್ನು ಉಂಟುಮಾಡಿ ಕೊಡಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸುವ ಬದಲು ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಲಾಗುತ್ತದೆ. ಇಂತಹ ಸಂದರ್ಬಗಳಿಗೆ ಕನ್ನಡ ಪದಗಳು ಉಚಿತವಲ್ಲ ಎಂಬುದಾಗಿ ನಮಗೆ ಅನಿಸುತ್ತದೆ. ಇದು ಯಾಕೆ ಹೀಗೆ? ಮದುವೆಯ ಹೇಳಿಕೆಯನ್ನು ಅಚ್ಚುಮಾಡುವವರು ಅದರಲ್ಲಿ ವಿವಾಹ ಆಮಂತ್ರಣವೆಂಬುದಾಗಿ ಬರೆಸುತ್ತಾರಲ್ಲದೆ ಮದುವೆಯ ಕರೆಯೋಲೆ ಎಂಬುದಾಗಿ ಬರೆಸುವುದು ಅಪರೂಪ. ಮದುವೆ ಎಂಬ ಕನ್ನಡ ಪದಕ್ಕಿಂತ ವಿವಾಹ ಎಂಬ ಸಂಸ್ಕ್ರುತ ಪದಕ್ಕೆ ಹೆಚ್ಚಿನ ಬೆಲೆಯಿದೆ; ಅದಕ್ಕಿರುವ ಮೇಲ್ಮೆ ಕನ್ನಡ ಪದಕ್ಕಿಲ್ಲ ಎಂಬ ಅನಿಸಿಕೆ ಅವರಲ್ಲಿರುವುದೇ ಇದಕ್ಕೆ ಕಾರಣ. ಈ ಅನಿಸಿಕೆಗೆ ಹಿಂದಿನಿಂದಲೂ ಕನ್ನಡ ವಿದ್ವಾಂಸರು ನಮ್ಮಲ್ಲಿ ಮೂಡಿಸಿಕೊಂಡು ಬಂದಿರುವ ಸಂಸ್ಕ್ರುತದ ಮೇಲಿನ ಪೂಜ್ಯಬಾವ ಮತ್ತು ಕನ್ನಡದ ಮೇಲಿನ ಕೀಳರಿಮೆ ಕಾರಣ. ಕನ್ನಡದ ಪದಗಳು ಸಂಸ್ಕ್ರುತ ಪದಗಳ ವಿಕ್ರುತ ರೂಪಗಳು ಎಂಬ ತಪ್ಪು ತಿಳುವಳಿಕೆ ಅವರಲ್ಲಿತ್ತು. ಇದರಿಂದಾಗಿ ಅವರು ಸಾಂಸ್ಕ್ರುತಿಕ ಮತ್ತು ಸಾಂಪ್ರದಾಯಿಕ ಸಂದರ್ಬಗಳಿಗೆ ಕನ್ನಡ ಪದಗಳು ತಕ್ಕುವಲ್ಲ ಎಂಬ ನಿರ್ದಾರಕ್ಕೆ ಬಂದಿದ್ದರು. ಆದರೆ ಅವರಲ್ಲಿದ್ದ ಈ ತಿಳುವಳಿಕೆ ಪೂರ್ತಿ ತಪ್ಪು ಎಂಬುದು ಈಗ ಸ್ಪಶ್ಟವಾಗಿದೆ. ಕನ್ನಡ ಯಾವ ವಿಶಯದಲ್ಲೂ ಸಂಸ್ಕ್ರುತಕ್ಕಿಂತ ಕೀಳಲ್ಲ; ಅದು ಸಂಸ್ಕ್ರುತದ ವಿಕ್ರುತ ರೂಪವೂ ಅಲ್ಲ. ಅದರ ಸಾಹಿತ್ಯ ಮತ್ತು ಶಾಸ್ತ್ರ ಗ್ರಂತಗಳು ಮೊದಲಿಗೆ ಸಂಸ್ಕ್ರುತದಲ್ಲಿದ್ದ ಗ್ರಂತಗಳ ಮೇಲೆ ಅವಲಂಬಿಸಿದ್ದುವಾದರೂ ಅನಂತರ ಅವು ತಮ್ಮದೇ ಆದ ದಾರಿಯನ್ನು ಕಂಡುಕೊಂಡಿದ್ದುವು. ಇದಲ್ಲದೆ ಇವತ್ತು ಜೀವಂತವಾಗಿ ಉಳಿದಿರುವುದು ಕನ್ನಡವಲ್ಲದೆ ಸಂಸ್ಕ್ರುತವಲ್ಲ. ಹಾಗಿರುವಾಗ ಕನ್ನಡ ಪದಗಳನ್ನು ಎಂತಹ ಸಂದರ್ಬಗಳಲ್ಲಿ ಬಳಸುವುದಕ್ಕೂ ನಾವು ಹಿಂಜರಿಯಬೇಕಾಗಿಲ್ಲ. ಕನ್ನಡ ಪದಗಳ ಕುರಿತಾಗಿ ಕನ್ನಡ ವಿದ್ವಾಂಸರು ನಮ್ಮಲ್ಲಿ ಉಂಟುಮಾಡಿರುವ

ಈ ಕೀಳರಿಮೆಯನ್ನು ತೊಡೆದು ಹಾಕುವ ಸಮಯ ಈಗ ಬಂದಿದೆ. ಕನ್ನಡ ಪದಗಳ ಈ ಅಸ್ಪ್ರುಶ್ಯತೆಯನ್ನು ನಾವು ಹೋಗಲಾಡಿಸಲೇ ಬೇಕು. ಇಲ್ಲವಾದರೆ ಕನ್ನಡ ಬರಹಗಳ ಸೊಗಡು ಮತ್ತು ಜೀವಂತಿಕೆ ಹೆಚ್ಚು ಸಮಯ ಉಳಿಯಲಾರದು ಮತ್ತು ನಮ್ಮದೇ ಆದ ನುಡಿಯ ಮೇಲೆ ನಮಗೆ ಅಬಿಮಾನ ಬೆಳೆಯಲಾರದು. 5.3 ಪಾರಿಬಾಶಿಕ ಪದಗಳ ತಯಾರಿಕೆ ಕನ್ನಡ ಬರಹಗಳೊಳಗೆ ಅತಿ ಹೆಚ್ಚು ಸಂಸ್ಕ್ರುತ ಪದಗಳನ್ನು ತುರುಕಿಸುವವರೆಂದರೆ ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ಹೊಸದಾಗಿ ಉಂಟುಮಾಡುತ್ತಿರುವ ಬೇರೆ ಬೇರೆ ಶಾಸ್ತ್ರಗಳ ಮತ್ತು ವಿಜ್ನಾನಗಳ ವಿದ್ವಾಂಸರುಗಳು. ಸಂಸ್ಕ್ರುತವನ್ನು ಬಿಟ್ಟರೆ ಇಂತಹ ಪದಗಳನ್ನು ತಯಾರಿಸಲು ಕನ್ನಡದಲ್ಲಿ ಬೇರೆ ದಾರಿಯೇ ಇಲ್ಲ ಎಂಬುದಾಗಿ ಈ ವಿದ್ವಾಂಸರಲ್ಲಿ ಹೆಚ್ಚಿನವರೂ ಬಾವಿಸುತ್ತಾರೆ. ಇವರಿಗೆಲ್ಲ ಅವರವರ ಶಾಸ್ತ್ರದಲ್ಲಿ ಇಲ್ಲವೇ ವಿಜ್ನಾನದಲ್ಲಿ ಪರಿಣತಿಯಿದೆಯಲ್ಲದೆ ಕನ್ನಡ ನುಡಿಯಲ್ಲಿ ಇಲ್ಲವೇ ಕನ್ನಡ ವ್ಯಾಕರಣದಲ್ಲಿ ಹೆಚ್ಚಿನ ಪರಿಣತಿಯಿಲ್ಲ. ನಿಜಕ್ಕೂ ಈ ಶಾಸ್ತ್ರ ಮತ್ತು ವಿಜ್ನಾನಗಳಲ್ಲಿ ಬರುವ ವಿಶಯಗಳನ್ನು ವಿವರಿಸಿ ಹೇಳಲು ಎಂತಹ ಪದಗಳೆಲ್ಲ ಬೇಕಾಗುತ್ತವೆ ಮತ್ತು ಅವನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಎಂತಹ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಸಾದ್ಯತೆಯಿದೆ ಎಂಬುದನ್ನು ಇವರು ಆಳವಾಗಿ ವಿಚಾರಿಸಿಲ್ಲ. ವ್ಯಾಕರಣ, ಅಲಂಕಾರ, ಜ್ಯೋತಿಶ್ಯ, ತತ್ವಶಾಸ್ತ್ರ ಮೊದಲಾದ ಹಲವಾರು ವಿಶಯಗಳಲ್ಲಿ ಸಾಕಶ್ಟು ಗ್ರಂತಗಳು ಸಂಸ್ಕ್ರುತದಲ್ಲಿವೆ. ಹಾಗಾಗಿ ಈ ವಿಶಯಗಳನ್ನು ಕನ್ನಡದಲ್ಲಿ ವಿವರಿಸುವುದಕ್ಕಾಗಿ ಸಂಸ್ಕ್ರುತದಿಂದ ಪಾರಿಬಾಶಿಕ ಪದಗಳನ್ನು ಎರವಲಾಗಿ ಪಡೆದು ಬಳಸುವ ಕ್ರಮ ನೂರಾರು ವರ್ಶಗಳಿಂದಲೂ ನಮ್ಮಲ್ಲಿ ಬೆಳೆದುಬಂದಿದೆ. ಇದೇ ಕ್ರಮವನ್ನು ಇವರು ಇಂಗ್ಲಿಶ್ ನುಡಿಯ ಪಾರಿಬಾಶಿಕ ಪದಗಳಿಗೆ ಸಮನಾದ ಪದಗಳನ್ನು ಕನ್ನಡದಲ್ಲಿ ಬಳಸಬೇಕಾದಾಗಲೂ ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ತಮಗೆ ಬೇಕಾದ ಪಾರಿಬಾಶಿಕ ಪದ ಸಂಸ್ಕ್ರುತದಲ್ಲಿಲ್ಲವಾದರೆ ಅದನ್ನು

ಸಂಸ್ಕ್ರುತದಲ್ಲೇನೇ ತಯಾರಿಸಿಕೊಳ್ಳುವಂತಹ ವಿಚಿತ್ರವಾದ ವಿದಾನವನ್ನು ಅವರು ಇದಕ್ಕಾಗಿ ಕಂಡುಕೊಂಡಿದ್ದಾರೆ. ಆದರೆ ಹೀಗೆ ಮಾಡುವುದರಿಂದಾಗಿ ಕನ್ನಡ ಬರಹಗಳನ್ನು ಓದುವವರು ಮತ್ತು ಅವುಗಳ ಮೂಲಕ ಕ್ಲಿಶ್ಟವಾದ ವಿಜ್ನಾನ ವಿಶಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವವರು ಅನವಶ್ಯಕವಾಗಿ ಎಂತಹ ಸಮಸ್ಯೆಗಳನ್ನೆಲ್ಲ ಎದುರಿಸಬೇಕಾಗುತ್ತದೆ ಎಂಬುದನ್ನು ಇವರು ಪರಿಶೀಲಿಸಿಲ್ಲ. ಕನ್ನಡ ಬರಹಗಳು ಹೇಗೆ ಇದರಿಂದಾಗಿ ಕನ್ನಡದ ಜನಸಾಮಾನ್ಯರಿಂದ ದೂರವಾಗುತ್ತಿವೆ ಎಂಬುದನ್ನೂ ಇವರು ಆಳವಾಗಿ ವಿಚಾರಿಸಿಲ್ಲ. ವಿಜ್ನಾನ ವಿಶಯಗಳನ್ನು ಕನ್ನಡದಲ್ಲಿ ವಿವರಿಸಲು ಬೇಕಾಗುವ ಪದಗಳನ್ನು ಮಾತ್ರವಲ್ಲದೆ ಆಡಳಿತ, ರಾಜಕೀಯ, ಸಾಹಿತ್ಯ ಮೊದಲಾದ ಬೇರೆ ವಿಶಯಗಳನ್ನು ವಿವರಿಸಲು ಬೇಕಾಗುವ ಪದಗಳನ್ನೂ ಸಂಸ್ಕ್ರುತ ಪದಗಳ ಮತ್ತು ಪದಕಾಂಡಗಳ ಸಹಾಯದಿಂದ ತಯಾರಿಸಿಕೊಳ್ಳುವ ಚಾಳಿ ನಮ್ಮ ವಿದ್ವಾಂಸರಲ್ಲಿ ಬೆಳೆದು ಬಂದಿದೆ. ಇಂತಹ ಪದಗಳು ವಿಜ್ನಾನ ಪದಗಳಿಗಿಂತಲೂ ಹೆಚ್ಚಾಗಿ ನಮ್ಮ ದಿನಬಳಕೆಯ ಬರಹಗಳಲ್ಲಿ ಸೇರಿಕೊಳ್ಳಬೇಕಾಗಿದೆ. ಹಾಗಾಗಿ ಅವು ಕನ್ನಡ ಬರಹವನ್ನು ಜನಸಾಮಾನ್ಯರಿಂದ ದೂರ ಹೋಗುವ ಹಾಗೆ ಮಾಡುವಲ್ಲಿ ಇನ್ನಶ್ಟು ಹೆಚ್ಚಿನ ಪಾತ್ರ ವಹಿಸುತ್ತವೆ. 5.3.1 ಹಳೆಗನ್ನಡ ಪದಗಳನ್ನು ಬಳಸುವ ಸಾದ್ಯತೆ ಕನ್ನಡಕ್ಕಾಗಿ ಹೊಸ ಪಾರಿಬಾಶಿಕ ಪದಗಳನ್ನು ಉಂಟುಮಾಡುವವರು ಅದಕ್ಕಾಗಿ ಸಂಸ್ಕ್ರುತ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸಿಕೊಳ್ಳುವಾಗ ಅವುಗಳಿಗೆ ಸಂಸ್ಕ್ರುತದಲ್ಲಿ ಎಂತಹ ಅರ್ತವಿದೆ ಎಂಬುದಕ್ಕೆ ಪ್ರಾಶಸ್ತ್ಯ ಕೊಡುವುದಿಲ್ಲ. ತಮಗೆ ಬೇಕಾಗಿರುವ ಅರ್ತ ಅವಕ್ಕಿಲ್ಲವಾದರೂ ಆ ಅರ್ತವನ್ನು ಸ್ವಲ್ಪ ಮಟ್ಟಿಗೆ ಸೂಚಿಸುವ ಹಾಗಿದ್ದರೆ ಸಾಕು, ಅವನ್ನು ಎರವಲಾಗಿ ಪಡೆದು ತಮಗೆ ಬೇಕಾಗಿರುವ ಅರ್ತದಲ್ಲಿ ಬಳಸಿಕೊಳ್ಳಲು ಅವರು ಹಿಂದೆಮುಂದೆ ನೋಡುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಅವರಿಗೆ ಬೇಕಾಗುವಂತಹ ಅರ್ತವನ್ನು

ಕೊಡಬಲ್ಲ ಪದಗಳು ಸಂಸ್ಕ್ರುತದಲ್ಲಿಯೂ ಬಳಕೆಯಲ್ಲಿರುವುದಿಲ್ಲ (9.2.2 ನೋಡಿ) ಆದರೆ ಈ ರೀತಿ ಪದಗಳ ಅರ್ತವನ್ನು ತಮಗೆ ಬೇಕಾದ ಹಾಗೆ ಬದಲಾಯಿಸಿಕೊಳ್ಳುತ್ತಾರಾದರೂ ಅವುಗಳ ಸ್ವರೂಪವನ್ನು ಸ್ವಲ್ಪವೂ ಬದಲಾಯಿಸದೆ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಬರುವ ಕ್ಲಿಶ್ಟವಾದ ಒತ್ತಕ್ಶರಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆ. ತಮಗೆ ಬೇಕಾಗುವ ಹೊಸ ಪದಗಳನ್ನು ತಯಾರಿಸುವಲ್ಲಿ ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ತಪ್ಪದೆ ಬಳಸುತ್ತಾರೆ ಮತ್ತು ಅವುಗಳಲ್ಲಿ ಸಂಸ್ಕ್ರುತದವೇ ಆದ ಸೇರಿಕೆಯ (ಸಂದಿಯ) ಬದಲಾವಣೆಗಳನ್ನೂ ಮಾಡಿಕೊಳ್ಳುತ್ತಾರೆ. ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕು ಎಂಬುದಾಗಿ ಕನ್ನಡ ವಿದ್ವಾಂಸರು ಕನ್ನಡ ಬರಹದ ಮೇಲೆ ಹೊರಿಸಿರುವ ನಿರ್ಬಂದವೇ ಅವರು ಈ ರೀತಿ ಜಾಗ್ರತೆ ವಹಿಸಲು ಮುಕ್ಯ ಕಾರಣ. ಆದರೆ ಹೀಗೆ ಮಾಡುವುದರಿಂದಾಗಿ ಅವರು ತಯಾರಿಸುವ ಪಾರಿಬಾಶಿಕ ಪದಗಳು ಅನವಶ್ಯಕವಾಗಿ ಕನ್ನಡಿಗರಿಗೆ ಇನ್ನಶ್ಟು ತೊಡಕಿನವಾಗುತ್ತವೆ. ಹಲವು ಸಂದರ್ಬಗಳಲ್ಲಿ ಅವು ಇಂಗ್ಲಿಶ್ ಪದಗಳಿಗಿಂತಲೂ ಕನ್ನಡದ ಮಟ್ಟಿಗೆ ಹೆಚ್ಚು ತೊಡಕಿನವಾಗುತ್ತವೆ. ಈ ರೀತಿ ಪಾರಿಬಾಶಿಕ ಪದಗಳನ್ನು ತಯಾರಿಸುವಲ್ಲಿ ಸಂಸ್ಕ್ರುತ ಪದಗಳ ಮೊರೆಹೊಗಲು ಇವರು ಕೊಡುವ ಒಂದು ಕಾರಣವೇನೆಂದರೆ ಇದಕ್ಕಾಗಿ ಕನ್ನಡದ ದಿನಬಳಕೆಯ ಪದಗಳನ್ನು ಬಳಸಿದಲ್ಲಿ ಅವಕ್ಕೆ ದಿನಬಳಕೆಯ ಅರ್ತವಿರುವ ಕಾರಣ ಗೊಂದಲವುಂಟಾಗಬಲ್ಲುದು ಎಂಬುದು. ಆದರೆ ಇಂತಹ ಸಂದರ್ಬಗಳಲ್ಲಿ ದಿನಬಳಕೆಯಲ್ಲಿಲ್ಲದ ಹಳೆಗನ್ನಡ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸುವ ಸಾದ್ಯತೆಯಿದೆಯೆಂಬುದನ್ನು ಈ ವಿದ್ವಾಂಸರು ಗಮನಿಸುವುದೇ ಇಲ್ಲ. ಸಂಸ್ಕ್ರುತ ಪದಗಳ ಬದಲು ಹಳೆಗನ್ನಡ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸಿದಲ್ಲಿ ಅವು ಹೊಸಗನ್ನಡದ ಪ್ರತ್ಯಯಗಳೊಂದಿಗೆ ಸುಲಬವಾಗಿ ಹೊಂದಿಕೊಳ್ಳಬಲ್ಲುವು. ಸಂಸ್ಕ್ರುತ ಪದಗಳ ಹಾಗೆ ಅವುಗಳ ಬಳಕೆಯಲ್ಲಿ ಸ್ಪೆಲ್ಲಿಂಗ್ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಅವುಗಳಿಗೆ ಪ್ರತ್ಯಯವನ್ನು ಸೇರಿಸುವಾಗ

ಸಂಸ್ಕ್ರುತ ಪದಗಳ ಹಾಗೆ ಕನ್ನಡದ ಸೇರಿಕೆಯ (ಸಂದಿ) ನಿಯಮ ಗಳಿಂತ ತೀರ ಬೇರಾಗಿರುವ ಸಂಸ್ಕ್ರುತದ ನಿಯಮಗಳನ್ನು ಬಳಸುವ ಅವಶ್ಯಕತೆಯೂ ಬರುವುದಿಲ್ಲ. ಹಳೆಗನ್ನಡ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸುವುದಿದ್ದಲ್ಲಿ ನಮ್ಮ ಉಚ್ಚಾರಣೆಗೆ ಹೊಂದಿಕೊಳ್ಳುವಂತೆ ಅವುಗಳಲ್ಲಿ ಬದಲಾವಣೆಗಳನ್ನು ಮಾಡುವ ಸ್ವಾತಂತ್ರ್ಯವೂ ನಮಗಿದೆ. ಹಳೆಗನ್ನಡ ಪದಗಳಲ್ಲಿ ಬರುವ ರ-¾, ಳ-¿ ವ್ಯತ್ಯಾಸವನ್ನು ಬರಹದಲ್ಲಿ ತೋರಿಸಬೇಕಾಗಿಲ್ಲ; ಪದಗಳ ಕೊನೆಯಲ್ಲಿ ವ್ಯಂಜನ ಬರುವುದಿದ್ದರೆ ಹೊಸಗನ್ನಡ ಪದಗಳ ಹಾಗೆ ಅವಕ್ಕೆ ಉಕಾರವನ್ನು ಸೇರಿಸಿಕೊಳ್ಳಬಹುದು. ಹೊಸಗನ್ನಡದಲ್ಲಿಲ್ಲದ ಒತ್ತಕ್ಶರಗಳು ಈ ಪದಗಳಲ್ಲಿ ಕಂಡುಬರುವುವಾದರೆ ಅವನ್ನು ಹೊಸಗನ್ನಡದ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾಯಿಸಿಕೊಳ್ಳಬಹುದು. ಯಾಕೆಂದರೆ, ಹಳೆಗನ್ನಡದ ಪದ ಮತ್ತು ಪದಕಾಂಡಗಳನ್ನು ಆ ರೀತಿ ಬದಲಾಯಿಸಿಕೊಳ್ಳುವುದು ತಪ್ಪು ಎಂಬುದಾಗಿ ಹೇಳುವವರು ಯಾರೂ ಇಲ್ಲ! (9.2.3 ನೋಡಿ). ಸಂಸ್ಕ್ರುತ ಪದಗಳ ಬದಲು ಹಳೆಗನ್ನಡ ಪದಗಳನ್ನು ಬಳಸುವುದರ ಮೂಲಕ ಪಾರಿಬಾಶಿಕ ಪದಗಳಲ್ಲಿ ಕನ್ನಡದ ಪದಸ್ವರೂಪವನ್ನು ಮತ್ತು ಸೊಗಡನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತದೆ. ಇದರಿಂದಾಗಿ ಅವನ್ನು ಕಲಿಯುವ ಮತ್ತು ನೆನಪಿನಲ್ಲಿರಿಸಿಕೊಳ್ಳುವ ಕೆಲಸವೂ ಸುಲಬವಾಗುತ್ತದೆ. 5.3.2 ದಿನಬಳಕೆಯ ಪದಗಳು ಮೇಲೆ ಸೂಚಿಸಿದ ಹಾಗೆ, ದಿನಬಳಕೆಯಲ್ಲಿರುವ ಕನ್ನಡ ಪದಗಳನ್ನು ಇಲ್ಲವೇ ಅವುಗಳನ್ನು ಬಳಸಿ ತಯಾರಿಸಿದ ಹೊಸ ಪದಗಳನ್ನು ಪಾರಿಬಾಶಿಕ ಪದಗಳಾಗಿ ಬಳಸಿದಲ್ಲಿ ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಿದ್ವಾಂಸರು ಹೇಳುತ್ತಾರೆ (ಲಕ್ಶ್ಮಣ ರಾವ್ 1990:11 ನೋಡಿ). ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ತಯಾರಿಸುವುದಕ್ಕಾಗಿ ಕನ್ನಡ ಪದಗಳ ಬದಲು ಸಂಸ್ಕ್ರುತ ಪದಗಳನ್ನು

ಬಳಸುತ್ತಿರುವುದಕ್ಕೆ ಈ ಅನಿಸಿಕೆಯನ್ನು ಒಂದು ಕಾರಣವಾಗಿ ಕೊಡಲಾಗುತ್ತದೆ. ಇಂಗ್ಲಿಶ್ನಲ್ಲಿ ಜಿಡಿuiಣ, ತಿoಡಿಞ, sಚಿಟಣ, bಚಿse ಮೊದಲಾದ ಕೆಲವು ದಿನಬಳಕೆಯ ಪದಗಳು ಪಾರಿಬಾಶಿಕ ಪದಗಳಾಗಿ ಬಳಕೆಯಲ್ಲಿವೆ. ವಿಜ್ನಾನ ಬರಹಗಳಲ್ಲಿ ಇವುಗಳಿಗೆ ಎಂತಹ ಅರ್ತವಿದೆ ಎಂಬುದನ್ನು ಗೊಂದಲವಾಗದ ಹಾಗೆ ವಿದ್ಯಾರ್ತಿಗಳಿಗೆ ತಿಳಿಸಿಕೊಡುವುದು ಬಹಳ ಕಶ್ಟ ಎಂಬುದಾಗಿ ಲಕ್ಶ್ಮಣರಾವ್ ಅವರು ವಾದಿಸುತ್ತಾರೆ. ಆದರೆ ಮೇಲಿನ ಈ ಅನಿಸಿಕೆ ಪೂರ್ತಿ ಸರಿಯಲ್ಲ. ಯಾಕೆಂದರೆ ಇತ್ತೀಚೆಗೆ ಕಂಪ್ಯೂಟರಿಗೆ ಸಂಬಂದಿಸಿದ ಹಾಗೆ ಹೊಸ ಪಾರಿಬಾಶಿಕ ಪದಗಳನ್ನು ಉಂಟಮಾಡಬೇಕಾದಾಗಲೆಲ್ಲ ಹಿಂದಿನ ವಿಜ್ನಾನಿಗಳ ಹಾಗೆ ಗ್ರೀಕ್ ಇಲ್ಲವೆ ಲ್ಯಾಟಿನ್ ನುಡಿಗಳ ಮೊರೆಹೊಗುವ ಬದಲು ಹೆಚ್ಚಿನೆಡೆಗಳಲ್ಲೂ ದಿನಬಳಕೆಯಲ್ಲಿರುವ ಇಂಗ್ಲಿಶ್ ಪದಗಳನ್ನೇ ಬಳಸಿಕೊಂಡಿರುವುದನ್ನು ಕಾಣಬಹುದು. ಮವ್್ಸ ಇಲಿ’, ಟ್ರೀ ಮರ’, ಫೆÇೀರೆಸ್್ಟ ಕಾಡು’, ವಿಂಡೋಸ್ ಕಿಟಿಕಿಗಳು’’ ವೆಬ್ ಬಲೆ’ ಮೊದಲಾದ ಹಲವಾರು ದಿನಬಳಕೆಯ ಪದಗಳು ಈ ರೀತಿ ಪಾರಿಬಾಶಿಕ ಪದಗಳಾಗಿ ಇವತ್ತು ಇಂಗ್ಲಿಶ್ನಲ್ಲಿ ಬಳಕೆಗೆ ಬಂದಿವೆ. ಇವಗಳಿಂದಾಗಿ ಕಂಪ್ಯೂಟರ್ ಕ್ಶೇತ್ರದಲ್ಲಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ. ಮವ್್ಸ ಇಲಿ’ ಎಂಬಂತಹ ಕೆಲವು ಪದಗಳು ಮೊದಲಿಗೆ ಸ್ವಲ್ಪ ತಮಾಶೆಯಾಗಿ ಕಾಣಿಸಿರಬಹುದು, ಅಶ್ಟೆ. ಇದರಿಂದ ಸಿದ್ದವಾಗುವುದೇನೆಂದರೆ, ಒಂದು ಬಗೆಯ ಅರ್ತವಿರುವ ದಿನಬಳಕೆಯ ಪದಗಳು ಮಾತ್ರ ಪಾರಿಬಾಶಿಕ ಪದಗಳಾಗಿ ಬಳಕೆಯಾದಲ್ಲಿ ಗೊಂದಲವನ್ನುಂಟುಮಾಡುತ್ತವಲ್ಲದೆ ಎಲ್ಲಾ ಬಗೆಯ ಪದಗಳೂ ಗೊಂದಲವನ್ನುಂಟುಮಾಡುವುದಿಲ್ಲ. ಹಾಗಾಗಿ ಗೊಂದಲವನ್ನುಂಟುಮಾಡದಿರುವಂತಹ ದಿನಬಳಕೆಯ ಪದಗಳನ್ನು ಪಾರಿಬಾಶಿಕ ಪದಗಳಾಗಿ ಬಳಸುವುದರಲ್ಲಿ ಯಾವ ತೊಂದರೆಯೂ E®è.

ಎಂತಹ ಪದಗಳ ಪಾರಿಬಾಶಿಕ ಬಳಕೆಯಿಂದ ಗೊಂದಲವುಂಟಾಗಬಲ್ಲುದು ಎಂಬುದನ್ನು ಪದಗಳ ಆಳವಾದ ಪರಿಶೀಲನೆಯಿಂದ ತಿಳಿದುಕೊಳ್ಳಲು ಸಾದ್ಯವಿದೆ. ಉದಾಹರಣೆಗಾಗಿ sಚಿಟಣ ಪದಕ್ಕೆ ದಿನಬಳಕೆಯಲ್ಲಿ ಅದರ ಪಾರಿಬಾಶಿಕ ಅರ್ತಕ್ಕಿಂತ ತೀರ ಕಿರಿದಾದ (ಒಂದು ಬಗೆಯ ಸಾಲ್ಟನ್ನು ಮಾತ್ರ ಸೂಚಿಸುವ) ಅರ್ತವಿರುವುದೇ ಅದರ ಪಾರಿಬಾಶಿಕ ಬಳಕೆ ಗೊಂದಲವನ್ನುಂಟು ಮಾಡುವುದಕ್ಕೆ ಕಾರಣವಿರಬೇಕು. ಇದಲ್ಲದೆ ಆ ರೀತಿ ಗೊಂದಲವನ್ನುಂಟುಮಾಡಬಲ್ಲ ಇಂಗ್ಲಿಶ್ ಪಾರಿಬಾಶಿಕ ಪದಗಳಿಗೆ ಸಮಾನ ಪದಗಳನ್ನು ಸಂಸ್ಕ್ರುತದಿಂದ ಎರವಲಾಗಿ ಪಡೆಯುವ ಬದಲು ಇಂಗ್ಲಿಶ್ನಿಂದಲೇ ಎರವಲು ಪಡೆಯುವುದು ಕನ್ನಡಕ್ಕೆ ಅನುಕೂಲ. ಉದಾಹರಣೆಗಾಗಿ ವಿಜ್ನಾನ ಬರಹಗಳಲ್ಲಿ ಬರುವ ಸಾಲ್್ಟ ಪದದ ಬದಲು ಕನ್ನಡದಲ್ಲಿ ಉಪ್ಪು ಪದವನ್ನು ಬಳಸಿದಲ್ಲಿ ಇಂಗ್ಲಿಶ್ನ ಹಾಗೆ ಕನ್ನಡದಲ್ಲೂ ಗೊಂದಲವುಂಟಾಗುವ ಸಾದ್ಯತೆ ಇದೆಯಾದರೆ, ಅದಕ್ಕೆ ಬದಲು ಸಂಸ್ಕ್ರುತದ ಲವಣ ಪದವನ್ನು ಎರವಲಾಗಿ ಪಡೆದು ಬಳಸುವ ಬದಲು ಇಂಗ್ಲಿಶ್ನ ಸಾಲ್್ಟ ಪದವನ್ನೇ ಬಳಸಬಹುದಲ್ಲವೇ? ಯಾಕೆಂದರೆ, ಕನ್ನಡದಲ್ಲಿ ವಿಜ್ನಾನವನ್ನು ಕಲಿತ ವಿದ್ಯಾರ್ತಿಗಳು ಮುಂದೆ ಹೆಚ್ಚಿನ ಕಲಿಕೆಗಾಗಿ ಇಂಗ್ಲಿಶ್ ಗ್ರಂತಗಳನ್ನು ಓದಬೇಕಿದ್ದಲ್ಲಿ ಸಾಲ್್ಟ ಪದ ಅವರಿಗೆ ಸಹಾಯಕವಾಗಬಲ್ಲುದು; ಆದರೆ ಲವಣ ಪದ ಯಾವ ಸಹಾಯವನ್ನೂ ಒದಗಿಸಲಾರದು. ಒಂದು ವಸ್ತು ಇಲ್ಲವೇ ವಿಶಯವನ್ನು ಸೂಚಿಸಲು ಒಂದೇ ದಿನಬಳಕೆಯ ಪದ ದೊರೆಯದಿದ್ದಾಗ ಹೆಚ್ಚು ಪದಗಳನ್ನು (ಎಂದರೆ ಪದಕಂತೆಯೊಂದನ್ನು) ಬಳಸಿ, ಆಮೇಲೆ ಅವುಗಳ ಮೊದಲಿಗೆ ಬರುವ ಅಕ್ಶರಗಳ ಸಹಾಯದಿಂದ ಅಡಕವಾದ ರೂಪವೊಂದನ್ನು ತಯಾರಿಸಿಕೊಳ್ಳುವ ಇನ್ನೊಂದು ವಿದಾನವೂ ಕಂಪ್ಯೂಟರ್ ಕ್ಶೇತ್ರದಲ್ಲಿ ಸಾಕಶ್ಟು ಬಳಕೆಯಲ್ಲಿದೆ. ಬಯೋಸ್ (ಬೇಸಿಕ್ ಇನ್ಪುಟ್-ಅವ್್ಟಪುಟ್ ಸರ್ವಿಸಸ್), ¥sóÉೀಟ್ (¥sóÀಯ್್ಲ ಅಲೊಕೇಶನ್ ಟೇಬ್್ಲ), ಟಿಸಿಪಿ (ಟ್ರಾನ್್ಸಮಿಶನ್ ಕಂಟ್ರೋಲ್ ಪೆÇ್ರಟೊಕೋಲ್) ಮೊದಲಾದುವನ್ನು ಈ ವಿದಾನಕ್ಕೆ

ಉದಾಹರಣೆಗಳನ್ನಾಗಿ ಕೊಡಬಹುದು. ಇದರಿಂದಾಗಿಯೂ ಗ್ರೀಕ್ ಇಲ್ಲವೇ ಲ್ಯಾಟಿನ್ ನುಡಿಗಳಿಂದ ಪದಗಳನ್ನು ಎರವಲಾಗಿ ಪಡೆಯುವ ಅವಶ್ಯಕತೆ ಕಂಪ್ಯೂಟರ್ ಕ್ಶೇತ್ರದ ಬರಹಗಾರರಿಗೆ ಇಲ್ಲವಾಗಿದೆ. ಕನ್ನಡದಲ್ಲೂ ಇಂತಹದೇ ವಿದಾನವನ್ನು ಬಳಸಲು ಸಾದ್ಯವಿದೆ. ಬರಹಗಾರರ ಹೆಸರುಗಳಲ್ಲಿ (ಕುವೆಂಪು, ಅನಕ್ರು, ತರಾಸು), ರಾಜಕೀಯ ಪಕ್ಶಗಳ ಹೆಸರುಗಳಲ್ಲಿ (ಬಿಜೆಪಿ, ಎನ್ಡಿಎ, ಡಿಅಯ್ಎಮ್ಕೆ), ಊರುಗಳ ಮತ್ತು ಬೀದಿಗಳ ಹೆಸರುಗಳಲ್ಲಿ (ಕೆಆರ್ನಗರ, ಎಮ್ಜಿರೋಡ್) ನಾವು ಈಗಾಗಲೇ ಈ ವಿದಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಹಾಗಾಗಿ ಇದನ್ನು ಪಾರಿಬಾಶಿಕ ಪದಗಳ ರಚನೆಗೂ ವಿಸ್ತರಿಸುವುದು ಕಶ್ಟವೇನಲ್ಲ. 5.3.3 ಅರ್ತಸಂದಿಗ್ದತೆ ಪಾರಿಬಾಶಿಕ ಪದಗಳು ಅರ್ತವನ್ನು ಕಟ್ಟುನಿಟ್ಟಾಗಿ ಸೂಚಿಸುವ ಅವಶ್ಯಕತೆಯಿದೆ. ವಿಜ್ನಾನ ಬರಹಗಳಿಗೆ ಬೇಕಾಗುವ ಇಂತಹ ಕಟ್ಟುನಿಟ್ಟಾದ ಅರ್ತವನ್ನು ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳ ಬಳಕೆಯಿಂದ ಪಡೆಯಲು ಸಾದ್ಯ ಎಂಬುದಾಗಿ ಕನ್ನಡದ ವಿದ್ವಾಂಸರು ಹೇಳಿಕೊಳ್ಳುತ್ತಿದ್ದಾರೆ. ಆದರೆ ವಸ್ತುಸ್ತಿತಿ ಇದಕ್ಕಿಂತ ತೀರ ಬೇರಾಗಿದೆ. ಅವರು ತಯಾರಿಸಿರುವ ಪಾರಿಬಾಶಿಕ ಪದಗಳನ್ನು ಸ್ವಲ್ಪ ಆಳವಾಗಿ ಪರಿಶೀಲಿಸಿದಾಗ ಇದು ಸ್ಪಶ್ಟವಾಗುತ್ತದೆ. ಎರಡು ಬೇರೆ ಬೇರೆ ಕಾರಣಗಳಿಗಾಗಿ ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳು ಕನ್ನಡದಲ್ಲಿ ಅರ್ತ ಸಂದಿಗ್ದತೆಯನ್ನು ತಂದುಹಾಕುತ್ತವೆ. ಮೊದಲನೆಯದಾಗಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೇನೇ ಹಲವಾರು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳಿಂದಾಗಿ ಕನ್ನಡ ವಾಕ್ಯಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಪದಗಳು ಅರ್ತಸಂದಿಗ್ದತೆಗೆ ಎಡೆಮಾಡಿಕೊಡುತ್ತವೆ. ಉದಾಹರಣೆಗಾಗಿ, ಇಂಗ್ಲಿಶ್ನ ಪಾರಿಬಾಶಿಕ ಪದಗಳಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ರೂಪದಲ್ಲಿ ಮತ್ತು ಅರ್ತದಲ್ಲಿ ವ್ಯತ್ಯಾಸವಿದೆ. ರೆಸೊನೆನ್್ಸ, ಡೆವಲಪ್ಮೆಂಟ್, ಡಿಸ್ಟ್ರಿಬೂಶನ್, ರೆಪೆÇ್ರಡಕ್ಶನ್ ಮೊದಲಾದವು ನಾಮಪದಗಳು

ಮತ್ತು ರೆಸೊನೆಂಟ್, ಡೆವಲಪ್ಮೆಂಟಲ್, ಡಿಸ್ಟ್ರಿಬ್ಯೂಟಿವ್, ರೆಪೆÇ್ರಡಕ್ಟಿವ್ ಮೊದಲಾದವು ಗುಣಪದಗಳು. ಕನ್ನಡದಲ್ಲೂ ನಾಮಪದ ಮತ್ತು ಗುಣಪದಗಳ ನಡುವೆ ಅಂತಹವೇ ವ್ಯತಾಸಗಳಿವೆ. ಹುಳು, ಕಳೆತ, ಹಿಡಿಕೆ, ತೆಳುಪು, ಕೆಡುಕು ಮೊದಲಾದುವು ನಾಮಪದಗಳು ಮತ್ತು ಹುಳುಕಲು, ಕಳೆತದ, ಹಿಡಿಕೆಯ, ತೆಳು, ಕೆಟ್ಟ ಮೊದಲಾದವು ಗುಣಪದಗಳು (ಇಲ್ಲವೇ ನಾಮಪದಗಳ ಗುಣರೂಪಗಳು). ಆದರೆ ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾಗಿರುವ ಗುಣಪದಗಳೆಂಬ ಪದಗಳಾಗಲಿ ಪದರೂಪಗಳಾಗಲಿ ಬಳಕೆಯಲ್ಲಿಲ್ಲ. ಅದರ ವಾಕ್ಯಗಳಲ್ಲಿ ಒಂದೇ ಪದವನ್ನು ಯಾವ ವ್ಯತ್ಯಾಸವನ್ನೂ ಮಾಡದೆ ವಿಶೇಶಣವಾಗಿಯೂ ಬಳಸಬಹುದು, ವಿಶೇಶ್ಯವಾಗಿಯೂ ಬಳಸಬಹುದು. ಅವೆರಡೂ ಒಂದೇ ಲಿಂಗ-ವಚನ-ವಿಬಕ್ತಿಗಳಲ್ಲಿರುವ ಕಾರಣ, ಕೃಷ್ಣಃ ಸಪ್ರಃ ಎಂಬಂತಹ ಪದಕಂತೆಗಳಲ್ಲಿ ಬರುವ ಎರಡು ಪದಗಳಲ್ಲಿ ಯಾವುದು ಗುಣಪದ ಮತ್ತು ಯಾವುದು ನಾಮಪದ ಎಂಬುದಾಗಿ ಬೇರ್ಪಡಿಸಿ ಹೇಳಲು ಸಾದ್ಯವಾಗುವುದಿಲ್ಲ. ಇಂಗ್ಲಿಶ್ ಪಾರಿಬಾಶಿಕ ಪದಗಳಿಗೆ ಸಮನಾಗಿರುವ ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡ ಹೊರಟ ವಿದ್ವಾಂಸರು ಅದಕ್ಕಾಗಿ ಸಂಸ್ಕ್ರುತದ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಹೋದುದರಿಂದಾಗಿ ಮೇಲಿನ ವಿಶಯದಲ್ಲಿ ತೊಂದರೆಗೆ ಬಿದ್ದಿದ್ದಾರೆ. ಇಂಗ್ಲಿಶ್ನಲ್ಲಿರುವ ಮತ್ತು ಕನ್ನಡಕ್ಕೂ ಬೇಕಾಗಿರುವ ನಾಮಪದ-ಗುಣಪದ ವ್ಯತ್ಯಾಸವನ್ನು ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸಿರುವ ಪದಗಳಲ್ಲಿ ಸರಿಯಾಗಿ ಸೂಚಿಸಲು ಇವರಿಗೆ ಸಾದ್ಯವಾಗಿಲ್ಲ. ಸಂಸ್ಕ್ರುತದಲ್ಲಿಲ್ಲದ ಅರ್ತವ್ಯತ್ಯಾಸವನ್ನು ಅವರು ಈ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸಬೇಕಾಗಿದೆ. ಇದನ್ನು ಅವರು ಒಂದೊಂದು ಕಡೆಯಲ್ಲಿ ಒಂದೊಂದು ರೀತಿ ಕಾಣಿಸಹೋಗಿ (ಮತ್ತು ಕೆಲವು ಕಡೆಗಳಲ್ಲಿ ಯಾವ ವ್ಯತ್ಯಾಸವನ್ನೂ ಕಾಣಿಸದೆ) ದೊಡ್ಡ ಗೊಂದಲವನ್ನೇ ಉಂಟುಮಾಡಿದ್ದಾರೆ (ಹೆಚ್ಚಿನ ವಿವರಗಳಿಗೆ ಏಳನೇ ಅದ್ಯಾಯ ನೋಡಿ).

ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ವ್ಯಾಕರಣದ ಮಟ್ಟಿಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆ. ಅವೆಲ್ಲವೂ ಕನ್ನಡ ವಿದ್ವಾಂಸರು ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸುವ ಪಾರಿಬಾಶಿಕ ಪದಗಳಲ್ಲಿ ಒಂದಲ್ಲ ಒಂದು ರೀತಿಯ ಗೊಂದಲವನ್ನು ಉಂಟುಮಾಡದಿರವು. ಇದಕ್ಕೆ ಬದಲು ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿದೆವಾದರೆ ಅಂತಹ ಪಾರಿಬಾಶಿಕ ಪದಗಳಲ್ಲಿ ಯಾವ ಗೊಂದಲವೂ ಇರಲಾರದು. ಕನ್ನಡಕ್ಕೆ ಬೇಕಾಗುವ ಪಾರಿಬಾಶಿಕ ಪದಗಳಲ್ಲಿ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸುವುದರಿಂದ ಉಂಟಾಗಬಲ್ಲ ಇನ್ನೊಂದು ರೀತಿಯ ಗೊಂದಲಕ್ಕೆ ಅಂತಹ ಪದಗಳ ಉಚ್ಚಾರಣೆಗೂ ಬರಹಕ್ಕೂ ನಡುವಿರುವ ವ್ಯತ್ಯಾಸ ಕಾರಣವಾಗಬಲ್ಲುದು. ಉದಾಹರಣೆಗಾಗಿ ಕನ್ನಡ ಬರಹಗಳಲ್ಲಿ ಕಾಣಿಸುವ ಮಹಾಪ್ರಾಣ ಮತ್ತು ಅಲ್ಪಪ್ರಾಣಾಕ್ಶರಗಳ ನಡುವಿನ ವ್ಯತ್ಯಾಸ ಕನ್ನಡಿಗರ ಉಚ್ಚಾರಣೆಯಲ್ಲಿ ಕಾಣಿಸುವುದು ಅಪರೂಪ. ಹೆಚ್ಚಿನವರ ಮಾತಿನಲ್ಲೂ ಅವೆರಡು ಅಲ್ಪಪ್ರಾಣಾಕ್ಶರಗಳಾಗಿಯೇ ಉಚ್ಚಾರಣೆಯಾಗುತ್ತವೆ. ಪಾರಿಬಾಶಿಕ ಪದಗಳಲ್ಲಿ ಈ ವ್ಯತ್ಯಾಸವನ್ನು ಬಳಸಿಕೊಂಡೆವಾದರೆ ಅದು ವಿಜ್ನಾನ ವಿಶಯವನ್ನು ಕಲಿಸುವ ಸಂದರ್ಬದಲ್ಲಿ ಗೊಂದಲವನ್ನು ಉಂಟುಮಾಡಬಲ್ಲುದು. ಉದಾಹರಣೆಗಾಗಿ, ವಿಜ್ನಾನ ಪದಕೋಶಗಳಲ್ಲಿ ಲಂಬಿಸು (eಟoಟಿgಚಿಣe) ಮತ್ತು ಲಂಭಿಸು (ಜeಣeಛಿಣ) ಎಂಬಂತಹ ಪದಜೋಡಿಗಳು ಕೆಲವಿವೆ. ಇವುಗಳಲ್ಲಿ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವನ್ನು ಅರ್ತವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ. ಬರವಣಿಗೆಯಲ್ಲಿ ಇವು ಬೇರೆ ಬೇರಾಗಿ ಕಾಣಿಸುತ್ತವೆಯೇನೋ ನಿಜ. ಆದರೆ ಉಚ್ಚಾರಣೆಯಲ್ಲಿ ಇವನ್ನು ಯಾವಾಗಲೂ ಬೇರೆ ಬೇರಾಗಿ ಉಳಿಸಿಕೊಳ್ಳುವುದು ಕಶ್ಟ. ಯಾಕೆಂದರೆ ಕನ್ನಡದಲ್ಲಿ ಮಾತನಾಡುವಾಗ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವನ್ನು ಕಾಣಿಸದಿರುವುದೇ ಹೆಚ್ಚು. ಹೆಚ್ಚಿನೆಡೆಗಳಲ್ಲೂ ಇಂತಹ ಪದಗಳಲ್ಲಿ ಯಾವುದನ್ನು ಬಳಸಲಾಗಿದೆ ಎಂಬುದನ್ನು ಸಂದರ್ಬದಿಂದ ಊಹಿಸಿಕೊಳ್ಳಲು ಸಾದ್ಯವಾಗಬಹುದು. ಆದರೆ ವಿಜ್ನಾನ ಪದಗಳ ಅರ್ತ ಊಹೆಯ

ಮೂಲಕ ನಿರ್ದರಿಸುವಂತಹದಾಗಿರಬಾರದಲ್ಲವೇ? ಇಂತಹ ಪದಗಳ ಬಳಕೆಯಿಂದಾಗಿ ವಿಜ್ನಾನದ ಉಪನ್ಯಾಸಗಳು ತಮಗೆ ಅವಶ್ಯವಿರುವ ಕಟ್ಟುನಿಟ್ಟನ್ನು ಕಳೆದುಕೊಳ್ಳಬಲ್ಲುವು. ಶ-ಷ, ರು-ಋ ಮೊದಲಾದ ಇತರ ವ್ಯತ್ಯಾಸಗಳೂ ಇಂತಹವೇ. ಅವು ಬರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತವೆ ಆದರೆ ಉಚ್ಚಾರಣೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಅವುಗಳನ್ನು ಅವಲಂಬಿಸಿರುವ ಪಾರಿಬಾಶಿಕ ಪದಗಳ ನಡುವಿನ ವ್ಯತ್ಯಾಸಗಳು ಬರವಣಿಗೆಯಲ್ಲಿ ಉಳಿಯುತ್ತವೆ, ಉಪನ್ಯಾಸಗಳಲ್ಲಿ ಇಲ್ಲವಾಗುತ್ತವೆ. ಪಾರಿಬಾಶಿಕ ಪದಗಳ ತಯಾರಿಕೆಯಲ್ಲಿ ಸಂಸ್ಕ್ರುತ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಮೂಲಕ ಈ ಎರಡು ರೀತಿಯ ಗೊಂದಲಗಳನ್ನೂ ಇಲ್ಲವಾಗಿಸಬಹುದು. 5.3.4 ವ್ಯಾಕರಣದಲ್ಲಿ ವ್ಯತ್ಯಾಸ ಹಲವು ಸಂದರ್ಬಗಳಲ್ಲಿ ಇಂಗ್ಲಿಶ್ ನುಡಿಯಲ್ಲಿ ಬಳಕೆಯಲ್ಲಿರುವ ಪಾರಿಬಾಶಿಕ ಪದಗಳಿಗೆ ಸಮಾನವಾಗಿರುವಂತಹ ಅಂತಹವೇ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಸಾದ್ಯವಾಗುವುದಿಲ್ಲ. ಈ ಎರಡು ನುಡಿಗಳು ಪದರಚನೆಗಾಗಿ ತೀರ ಬೇರಾಗಿರುವ ವ್ಯಾಕರಣ ನಿಯಮಗಳನ್ನು ಬಳಸುತ್ತಿರುವುದು ಇದಕ್ಕೆ ಮುಕ್ಯ ಕಾರಣ. ಸಂಸ್ಕ್ರುತ, ಇಂಗ್ಲಿಶ್, ಲ್ಯಾಟಿನ್, ಗ್ರೀಕ್ ಮೊದಲಾದ ನುಡಿಗಳು ಇಂಡೋ-ಯುರೋಪಿಯನ್ ಎಂಬ ಒಂದೇ ಮೂಲನುಡಿಯಿಂದ ಬೆಳೆದು ಬಂದಿವೆ (2.5 ನೋಡಿ). ಹಾಗಾಗಿ ಈ ಎಲ್ಲಾ ನುಡಿಗಳೂ ಹೆಚ್ಚು ಕಡಿಮೆ ಒಂದೇ ರೀತಿಯ ಪದರಚನೆಯ ನಿಯಮಗಳನ್ನು ಬಳಸುತ್ತವೆ. ಆದರೆ ಕನ್ನಡ ಇವಕ್ಕಿಂತ ತೀರ ಬೇರಾಗಿರುವ ದ್ರಾವಿಡ ಮೂಲನುಡಿಯಿಂದ ಬೆಳೆದುಬಂದಿದೆ. ಹಾಗಾಗಿ ಅದು ಬಳಸುವ ಪದರಚನೆಯ ನಿಯಮಗಳು ಸಂಸ್ಕ್ರುತ, ಇಂಗ್ಲಿಶ್ ಮೊದಲಾದ —