← Ch 4  ·  Contents  ·  Ch 6 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 5 — ಕನ್ನಡ ಬರಹದ ಪದಸಮಸ್ಯೆ

↑ ಒಳಪಿಡಿಗೆ ಹಿಂತಿರುಗಿ

ರುಶಿ ÀIJ IJ ² ಕೃಷ್ಣ ಕ್ರುಶ್ಣ ಕೃಷ್ಣ ಕ್ರುಶ್ಣ ಕೃಷ್ಣ ಕ್ರುಶ್ಣ Àೃಷ್ಣ ಕ್ರುಶ್ಣ ೃಷ್ಣ ಕ್ರುಶ್ಣ ಷ್ಣ ಕ್ರುಶ್ಣ À್ಣ ಕ್ರುಶ್ಣ ್ಣ ಕ್ರುಶ್ಣ ಕ್ರುಶ್ಣ ಕ್ರುಶ್ಣ ಕ್ರುಶ್ಣ À್ರುಶ್ಣ ್ರುಶ್ಣ ್ರಶ್ಣ ±ÀÚ ÀÚ Ú ವಿಷ ವಿಶ ವಿಷ ವಿಶ ವಿಷ ವಿಶ ಷ ವಿಶ À ವಿಶ «±À «±À

ವಿಶ ±À À ಕ್ಷಣ ಕ್ಶಣ ಕ್ಷಣ ಕ್ಶಣ ಕ್ಷಣ ಕ್ಶಣ À್ಷಣ ಕ್ಶಣ ët PÀêt t PÀêt PÀêt PÀêt PÀêt Àêt êt t ಪಕ್ಷ ಪಕ್ಶ ಪಕ್ಷ ಪಕ್ಶ ಪಕ್ಷ ಪಕ್ಶ Àಕ್ಷ ಪಕ್ಶ ಕ್ಷ ಪಕ್ಶ À್ಷ ಪಕ್ಶ ್ಷ ಪಕ್ಶ ಪಕ್ಶ ಪಕ್ಶ ಪಕ್ಶ ÀPÀê PÀê Àê

್ಶ ಐಹಿಕ ಅಯ್ಹಿಕ ಕೈಮುಗಿ ಕಯ್ಮುಗಿ ಔತಣ ಅವ್ತಣ ಕೌರವ ಕವ್ರವ ನೌಕೆ ನವ್ಕೆ ದುಃಖ ದುಕ್ಕ ಬಹುಶಃ ಬಹುಶಹ ಕನ್ನಡ ಬರಹದಲ್ಲಿರುವ ಙಞಣನಮಗಳೆಂಬ ಅಯ್ದು ಅನುನಾಸಿಕಗಳಲ್ಲಿ ಮೊದಲಿನವೆರಡನ್ನು (ಮತ್ತು ಅವುಗಳ ಚಿಕ್ಕ ರೂಪಗಳಾದ Ð ಮತ್ತು ್ಞ ಎಂಬವುಗಳನ್ನು) ಬದಿಗಿರಿಸಬಹುದು. ಕನ್ನಡ ಪದಗಳಲ್ಲಿ ಅವು ಬೇರೆ ವ್ಯಂಜನಗಳ ಮೊದಲು ಮಾತ್ರ ಬರುತ್ತವೆ ಮತ್ತು ಆ ಜಾಗದಲ್ಲಿ ಅವುಗಳ ಬದಲು ಅನುಸ್ವಾರ(ಂ)ವೇ ಬಳಕೆಯಾಗುತ್ತದೆ. ಅವು ತಮ್ಮದೇ ಆದ ರೂಪದಲ್ಲಿ ಕಾಣಿಸುವುದು ಸಂಸ್ಕ್ರುತದಿಂದ ಎರವಲಾಗಿ ಪಡೆದ ಅಜ್ಞಾನ, ವಾಙ್ಮಯ ಮೊದಲಾದ ಕೆಲವೇ ಕೆಲವು ಪದಗಳಲ್ಲಿ ಮಾತ್ರ. ಇಂತಹ ಪದಗಳಲ್ಲಿ ಞಕಾರವನ್ನು ನಕಾರವಾಗಿ (ಅಜ್ನಾನ, ಜ್ನಾತಿ) ಮತ್ತು ಙಕಾರವನ್ನು ಗಕಾರವಾಗಿ (ವಾಗ್ಮಯ) ಬರೆಯಬಹುದು. ಇದಲ್ಲದೆ ಕನ್ನಡ ಬರಹದಲ್ಲಿ ರಕಾರಕ್ಕಿರುವ ರ, ್ರ ಮತ್ತು ್ರ ಎಂಬ ಮೂರು ರೂಪಗಳಲ್ಲಿ ಕೊನೆಯದನ್ನು ಬಿಟ್ಟುಕೊಟ್ಟು ಅದರ ಬದಲು ರ ಎಂಬುದನ್ನೇ ಬಳಸಬಹುದು. ಈ ರೀತಿಯ ಬಳಕೆ ಕನ್ನಡಿಗರಿಗೆ ಈಗಾಗಲೇ ಪರಿಚಿತವಾಗಿಯೂ ಇದೆ. ಹಳೆ ಬರಹ ಹೊಸ ಬರಹ ಸೂಯ್ರ ಸೂರ್ಯ ಪೂಣ್ರ ಪೂರ್ಣ

ದುಬ್ರಲ ದುರ್ಬಲ ಅಥ್ರ ಅರ್ತ ಕತ್ರೃ ಕರ್ತ್ರು ಈ ಬದಲಾವಣೆಗಳ ಮೂಲಕ ಕನ್ನಡದ ಹೆಚ್ಚಿನ ಬರಹಗಳಲ್ಲೂ 34 ಕಡಿಮೆ ಅಕ್ಶರ ಸನ್ನೆಗಳು ಕಾಣಿಸಿಕೊಳ್ಳುವ ಹಾಗೆ ಮಾಡಬಹುದು! ಕನ್ನಡ ಬರಹವನ್ನು ಎಲ್ಲಾ ವರ್ಗದ ಜನರೂ ಕಲಿತು ಬಳಸಬೇಕಾಗಿರುವ ಇವತ್ತಿನ ಸಂದರ್ಬದಲ್ಲಿ ಇದು ತುಂಬಾ ಉಪಕಾರಿಯಾಗಬಲ್ಲುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಬದಲಾವಣೆಗಳ ಸ್ವರೂಪವನ್ನು ಮತ್ತು ಸಾದ್ಯತೆಯನ್ನು ಕೆಳಗಿನ ಕೆಲವು ವಿಬಾಗಗಳಲ್ಲಿ (4.2.1-6) ಹೆಚ್ಚು ವಿವರವಾಗಿ ವರ್ಣಿಸಲಾಗಿದೆ. 4.2.1 ಮಹಾಪ್ರಾಣಾಕ್ಶರಗಳು ಕನ್ನಡ ಬರಹವನ್ನು ಬಳಸುವವರಲ್ಲಿ ಹೆಚ್ಚಿನವರಿಗೂ ಮಹಾಪ್ರಾಣಾಕ್ಶರಗಳು ಯಾವಾಗಲೂ ತೊಂದರೆ ಕೊಡುತ್ತಿರುತ್ತವೆ. ಉದಾಹರಣೆಗಾಗಿ ಇವತ್ತು ಪ್ರಕಟವಾಗುತ್ತಿರುವ ದಿನಪತ್ರಿಕೆಗಳಲ್ಲಿ ಮತ್ತು ಕತೆ-ಕಾದಂಬರಿಗಳಲ್ಲಿ ಅತಿ ಹೆಚ್ಚು ಮುದ್ರಣದ (ಮತ್ತು ಕಯ್ಬರಹದ) ತಪ್ಪುಗಳಿರುವುದು ಈ ಅಕ್ಶರಗಳ ಬಳಕೆಯಲ್ಲಿ. ಕನ್ನಡದಲ್ಲಿ ಬರೆಯುವಾಗ `ಅರ್ತಕೋಶ’ಗಳ ಮೊರೆಹೊಗಬೇಕಾ ಗುವುದೂ ಹೆಚ್ಚಾಗಿ ಈ ಅಕ್ಶರಗಳು ಎಲ್ಲಿ ಬರುತ್ತವೆ ಮತ್ತು ಎಲ್ಲಿ ಬರುವುದಿಲ್ಲ ಎಂಬುದನ್ನು ತಿಳಿಯುವುದಕ್ಕಾಗಿ. ಈ ಅಕ್ಶರಗಳು ನಮ್ಮ ಉಚ್ಚಾರಣೆಯಲ್ಲಿಲ್ಲದಿರುವುದೇ ಈ ರೀತಿ ಅವು ನಮಗೆ ತೊಂದರೆ ಕೊಡುತ್ತಿರುವುದಕ್ಕೆ ಮುಕ್ಯ ಕಾರಣ. ಉಚ್ಚಾರಣೆಯಲ್ಲಿರುವ ಅಕ್ಶರಗಳನ್ನು ಬರೆಯುವಲ್ಲಿ ನಾವು ತಪ್ಪು ಮಾಡುವುದು ಕಡಿಮೆ; ಮಾಡಿದರೂ ಅದನ್ನು ಸುಲಬವಾಗಿ ನಾವೇ ತಿದ್ದಿಕೊಳ್ಳಬಲ್ಲೆವು. ಉಚ್ಚಾರಣೆಯಲ್ಲಿಲ್ಲದ ಅಕ್ಶರಗಳೇ ನಮಗೆ ಯಾವಾಗಲೂ ತೊಂದರೆ ಕೊಡುವ ಅಕ್ಶರಗಳು.

ಕನ್ನಡದವೇ ಆದ ಪದಗಳ ಬಳಕೆಯಲ್ಲೂ ಇಂತಹ ಕೆಲವು ಅಕ್ಶರಗಳು ಒಮ್ಮೊಮ್ಮೆ ಬಳಕೆಯಾಗುತ್ತವೆ. ಉದಾಹರಣೆಗಾಗಿ ಛಟಛಟನೆ, ಧಡಧಡನೆ, ಭಗಭಗನೆ ಮೊದಲಾದ ಅಣಕಿಸುವ ಪದಗಳಲ್ಲಿ ಇವುಗಳ ಬಳಕೆಯನ್ನು ಕಾಣಬಹುದು. ಆದರೆ ಇವನ್ನು ಅಲ್ಪಪ್ರಾಣಾಕ್ಶರಗಳಾಗಿ (ಚಟಚಟನೆ, ದಡದಡನೆ, ಬಗಬಗನೆ ಎಂಬುದಾಗಿ) ಬರೆದಲ್ಲಿ ತೊಂದರೆಯೇನೂ ಇಲ್ಲ. ಉತ್ತರ ಕರ್ನಾಟಕದ ಜನರ ಮಾತಿನಲ್ಲಿ ಮರಾಟಿ ನುಡಿಯ ಪ್ರಬಾವದಿಂದಾಗಿ ಕೆಲವು ಮಹಾಪ್ರಾಣಾಕ್ಶರಗಳು ಕಾಣಿಸಿಕೊಳ್ಳುತ್ತವೆ. ಆದರೆ ಇದು ಕನ್ನಡದ ಪ್ರಾದೇಶಿಕ ವ್ಯತ್ಯಾಸವಾದ ಕಾರಣ, ಎಲ್ಲಾ ಪ್ರದೇಶಗಳಿಗೂ ಸಮಾನವಾಗಿರುವ ಕನ್ನಡ ಬರಹದಲ್ಲಿ ಅದನ್ನು ಉಳಿಸಿಕೊಳ್ಳಬೇಕಾಗಿಲ್ಲ. ಇಂಗ್ಲಿಶ್ನಿಂದ ಎರವಲಾಗಿ ಪಡೆದ ಥಿಯೇಟರ್, ಥಿಯರಿ, ಥೀಮ್ ಮೊದಲಾದ ಕೆಲವು ಪದಗಳನ್ನು ಬರೆಯುವಲ್ಲಿ ನಾವು ಥಕಾರವನ್ನು ಬಳಸುತ್ತೇವೆ. ಇಂಗ್ಲಿಶ್ನಲ್ಲಿ ಮಾತನಾಡುವಾಗ ಇಲ್ಲವೇ ಇಂಗ್ಲಿಶ್ ಬರಹವನ್ನು ಓದುವಾಗ ಈ ಪದಗಳ ಮೊದಲಿಗೆ ಬರುವ ಉಜ್ಜುಲಿಯನ್ನು ನಾವು ಮಹಾಪ್ರಾಣಾಕ್ಶರವಾಗಿ ಉಚ್ಚರಿಸುವುದೇ ಇದಕ್ಕೆ ಕಾರಣ. ಆದರೆ ಈ ಪದಗಳನ್ನು ಕನ್ನಡ ವಾಕ್ಯಗಳಲ್ಲಿ ಬಳಸುವಾಗ ಮತ್ತು ಹಾಗೆ ಬಳಸಿರುವ ನನಗವರು ಥಿಯೇಟರಿನಲ್ಲಿ ಕಾಣಲು ಸಿಕ್ಕಿದರು ಎಂಬಂತಹ ವಾಕ್ಯಗಳನ್ನು ಓದುವಾಗ, ಅವುಗಳಲ್ಲಿ ಬರುವ ಥಕಾರವನ್ನು ಆ ರೀತಿ ಮಹಾಪ್ರಾಣಾಕ್ಶರವಾಗಿ ಉಚ್ಚರಿಸುವ ಬದಲು ಅಲ್ಪಪ್ರಾಣಾಕ್ಶರವಾಗಿಯೇ ಉಚ್ಚರಿಸುತ್ತೇವೆ. ಹಾಗಾಗಿ ಇಂತಹ ಇಂಗ್ಲಿಶ್ ಎರವಲು ಪದಗಳಲ್ಲಿ ಕಾಣಿಸುವ ಮಹಾಪ್ರಾಣಾಕ್ಶರಗಳನ್ನೂ ನಾವು ಓದುವ ಹಾಗೆ ಅಲ್ಪಪ್ರಾಣಾಕ್ಶರಗಳಾಗಿ ಬರೆಯುವುದರಲ್ಲಿ ಯಾವ ತೊಂದರೆಯೂ ಇಲ್ಲ. ಉರ್ದು ಇಲ್ಲವೇ ಅರೇಬಿಕ್-ಪರ್ಶಿಯನ್ಗಳಿಂದ ಎರವಲಾಗಿ ಪಡೆದ ದಾಖಲೆ, ಠಾಣೆ, ಘರಾನಾ ಮೊದಲಾದ ಪದಗಳಲ್ಲೂ ಈ ರೀತಿ ಕೆಲವು ಮಹಾಪ್ರಾಣಾಕ್ಶರಗಳು ಕಾಣಿಕೊಳ್ಳುತ್ತವೆ. ಆದರೆ

ಉಚ್ಚಾರಣೆಯಲ್ಲಿ ಇವೂ ಕೂಡ ಅಲ್ಪಪ್ರಾಣಾಕ್ಶರಗಳಾಗಿಬಿಡುತ್ತವೆ. ಹಾಗಾಗಿ ಅವನ್ನೂ ಮಹಾಪ್ರಾಣಾಕ್ಶರಗಳಾಗಿ ಬರೆಯಬೇಕೆಂದಿಲ್ಲ. 4.2.2 ಅನುನಾಸಿಕಾಕ್ಶರಗಳು ಕನ್ನಡ ಬರಹದಲ್ಲಿ ಙಞಣನಮ ಎಂಬ ಅಯ್ದು ಅನುನಾಸಿಕಾಕ್ಶರಗಳಿವೆ. ಪದಗಳ ಮೊದಲಿಗೆ (ಮಗ, ನಾವು), ಎರಡು ಸ್ವರಗಳ ನಡುವೆ (ಅಮುಕು, ಕನಸು, ಹಣ) ಮತ್ತು ಕೆಲವು ವ್ಯಂಜನಗಳ ಮೊದಲಿಗೆ (ರಮ್ಯ, ಅನ್ಯ) ಅವಕ್ಕೆ ದೊಡ್ಡ ರೂಪವಿದೆ ಮತ್ತು ವ್ಯಂಜನಗಳ ಅನಂತರ ಅವಕ್ಕೆ ಚಿಕ್ಕ ರೂಪಗಳಿವೆ (ನಮ್ಮ, ನಿನ್ನೆ, ಅಣ್ಣ). ಆದರೆ ಬೇರೆ ಕೆಲವು ವ್ಯಂಜನಗಳ ಮೊದಲಿಗೆ ಇವಕ್ಕೆ ಅನುಸ್ವಾರ (ಂ) ಎಂಬ ಮೂರನೆಯದೊಂದು ರೂಪವೂ ಇದೆ (ಸಂಶಯ, ಸಂಹಾರ, ಕಂಸ). ಇದು ಎಲ್ಲಾ ಅನುನಾಸಿಕಗಳಿಗೂ ಸಮಾನವಾಗಿರುವ ರೂಪ. ಉದಾಹರಣೆಗಾಗಿ ಅಂಕೆ, ಅಂಜಿಕೆ, ಅಂದ, ಗಂಡ, ನಂಬಿಕೆ ಎಂಬ ಅಯ್ದು ಪದಗಳಲ್ಲಿ ಬಂದಿರುವ ಅನುಸ್ವಾರಕ್ಕೆ ಅಯ್ದು ಬೇರೆ ಬೇರೆ ಅನುನಾಸಿಕಗಳ ಉಚ್ಚಾರಣೆಯಿದೆ (ಅಙõÉ್ಕ, ಅಞÂ್ಜಕೆ, ಅನ್ದ, ಗಣ್ಡ, ನಮ್ಬಿಕೆ). ಅನುನಾಸಿಕಗಳಿಗಿರುವ ಈ ಮೂರನೆಯ ರೂಪವನ್ನು ನಮ್ಮ ಬರಹಗಳಲ್ಲಿ ಬಳಸದಿರಬಹುದು. ಆದರೆ ಆ ರೀತಿ ಮಾಡದೆ ಅದನ್ನು ಉಳಿಸಿಕೊಳ್ಳುವುದರಿಂದ ಬೇರೊಂದು ಪ್ರಯೋಜನವಿದೆ. ಅದೇನೆಂದರೆ, ಮೇಲೆ (4.2)ರಲ್ಲಿ ಸೂಚಿಸಿದ ಹಾಗೆ ಙ ಮತ್ತು ಞ ಎಂಬ ಎರಡು ಅಕ್ಶರಗಳನ್ನು ಬಿಟ್ಟುಕೊಡಬಹುದು. ಇದಲ್ಲದೆ ಮೇಲೆ (4.2)ರಲ್ಲಿ ಸೂಚಿಸಿದ ಹಾಗೆ, ಕನ್ನಡ ಬರಹಗಳಲ್ಲಿ ಙಕಾರ ಮತ್ತು ಞಕಾರಗಳು (ಅವುಗಳ ದೊಡ್ಡ ಮತ್ತು ಚಿಕ್ಕ ರೂಪಗಳಲ್ಲಿ) ಬಹಳ ಅಪರೂಪವಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ವಾಙ್ಮಯ, ಜ್ಞಾನ, ಜ್ಞಾತಿ ಮೊದಲಾದ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಇವನ್ನು ಕಾಣಬಹುದು.

ಇಂತಹ ಸಂಸ್ಕ್ರುತ ಪದಗಳಲ್ಲಿ ಙಕಾರದ ಬದಲು ಗಕಾರವನ್ನು ಮತ್ತು ಞಕಾರದ ಬದಲು ನಕಾರವನ್ನು ಬಳಸಿದಲ್ಲಿ (ವಾಗ್ಮಯ, ಜ್ನಾನ, ಜ್ನಾತಿ) ಮಕ್ಕಳಿಗೆ ಕಲಿಸಲು ಕಶ್ಟವಾಗುವ ಙ ಮತ್ತು ಞಗಳನ್ನು ಬಿಟ್ಟುಕೊಡಬಹುದು. ಜ್ಞಾನ, ಅಜ್ಞಾನ, ಜ್ಞಾತಿ ಮೊದಲಾದವುಗಳಲ್ಲಿ ಬರುವ ಜ್್ಞ ಒತ್ತಕ್ಶರವನ್ನು ಹಲವು ಮಂದಿ ಗ್್ನ ಎಂಬುದಾಗಿ ಉಚ್ಚರಿಸುತ್ತಾರೆ. ಅದನ್ನು ಆ ರೀತಿಯೇ ಬರೆಯುವುದಿದ್ದರೂ ತೊಂದರೆಯಿಲ್ಲ. ಇಲ್ಲವೇ ಮೇಲೆ ಸೂಚಿಸಿದ ಹಾಗೆ ಅದನ್ನು ಜ್್ನ ಎಂಬುದಾಗಿಯೂ ಬರೆಯಬಹುದು. ಉಳಿದೆಲ್ಲಾ ಪದಗಳಲ್ಲೂ ಈ ಎರಡು ಅನುನಾಸಿಕಗಳು ಅನುಸ್ವಾರ (ಂ) ರೂಪದಲ್ಲಿ ಮಾತ್ರ ಬರುತ್ತವೆ. ಹಾಗಾಗಿ ಕನ್ನಡದ ಹೊಸ ಬರಹದಲ್ಲಿ ಅನುಸ್ವಾರವನ್ನು ಉಳಿಸಿಕೊಂಡೆವಾದರೆ ಙಕಾರ ಮತ್ತು ಞಕಾರಗಳನ್ನು ಬಿಟ್ಟುಕೊಡಬಹುದು. 4.2.3 ಐ ಮತ್ತು ಔಗಳು ಕನ್ನಡ ಬರಹದಲ್ಲಿ ಐ ಮತ್ತು ಔಗಳೆಂಬ ಎರಡು ಸ್ವರಾಕ್ಶರಗಳು ಅನವಶ್ಯಕವಾಗಿ ಸೇರಿಕೊಂಡಿವೆ. ಉಚ್ಚಾರಣೆಯಲ್ಲಿ ಅವು ಅಯ್ ಮತ್ತು ಅವ್ ಎಂಬ ಸ್ವರ ಮತ್ತು ವ್ಯಂಜನಗಳ ಸೇರಿಕೆಯಿಂದ ಬೇರಾಗಿಲ್ಲ. ಹಾಗಾಗಿ ಅವನ್ನು ಬಳಸಬೇಕಾಗಿರುವ ಸಂದರ್ಬಗಳಲ್ಲೆಲ್ಲ ಅಯ್ ಮತ್ತು ಅವ್ ಎಂಬವುಗಳನ್ನೇ ಬಳಸಲು ಸಾದ್ಯವಿದೆ. ಈ ಕಾರಣಕ್ಕಾಗಿ ಈ ಎರಡು ಹೆಚ್ಚಿನ ಅಕ್ಶರಗಳನ್ನು ಮತ್ತು ವ್ಯಂಜನಗಳ ಅನಂತರ ಅವುಗಳಿಗಿರುವ Éೈ ಮತ್ತು Ë ಎಂಬ ಎರಡು ಸನ್ನೆಗಳನ್ನು `ಹೊಸ ಬರಹ’ದಲ್ಲಿ ಬಳಸಬೇಕಾಗಿಲ್ಲ. ಸಂಸ್ಕ್ರುತದಲ್ಲಿ ಅಯ್ ಮತ್ತು ಅವ್ ಎಂಬವುಗಳಿಗೆ ಒಂದು ವಿಶಿಶ್ಟವಾದ ಸ್ತಾನವಿದೆ. ಉಚ್ಚಾರಣೆಯಲ್ಲಿ ಅವು ಸ್ವರ-ವ್ಯಂಜನ ಜೋಡಿಗಳಾಗಿದ್ದರೂ ಪದಗಳಲ್ಲಿ ಮತ್ತು ಸೇರಿಕೆಯ ನಿಯಮಗಳಲ್ಲಿ ಅವು ಇತರ ಸ್ವರಗಳ ಹಾಗಿವೆಯಲ್ಲದೆ ಸ್ವರ-ವ್ಯಂಜನ ಜೋಡಿಗಳ

ಹಾಗಿಲ್ಲ. ಹಾಗಾಗಿ ಸಂಸ್ಕ್ರುತ ವ್ಯಾಕರಣಗಳಲ್ಲಿ ಅವನ್ನು ಸ್ವರಗಳೆಂದು ಕರೆಯಲಾಗಿದೆ. ಇದಲ್ಲದೆ ಸಂಸ್ಕ್ರುತದಲ್ಲಿ ಯಕಾರ-ವಕಾರಗಳು ಅಯ್ ಮತ್ತು ಅವ್ ಎಂಬ ಈ ಎರಡು ಸ್ವರ-ವ್ಯಂಜನ ಜೋಡಿಗಳಲ್ಲಿ ಮಾತ್ರ ಬರುತ್ತವಲ್ಲದೆ ಕನ್ನಡದ ಹಾಗೆ ಆಯ್, ಎಯ್, ಉಯ್ ಮೊದಲಾದ ಬೇರೆ ಸ್ವರ-ವ್ಯಂಜನ ಜೋಡಿಗಳಲ್ಲಿ ಬರುವುದಿಲ್ಲ. ಹಾಗಾಗಿ ಈ ಎರಡು ಸ್ವರ-ವ್ಯಂಜನ ಜೋಡಿಗಳನ್ನು ಬರೆಯುವುದಕ್ಕಾಗಿ ಐ ಮತ್ತು ಔ ಎಂಬ ಎರಡು ಸ್ವರಾಕ್ಶರ’ಗಳನ್ನು ಬಳಸುವುದು ಸಂಸ್ಕ್ರುತದ ಮಟ್ಟಿಗೆ ಸರಿಯಾದ ಕ್ರಮ. ಆದರೆ ಕನ್ನಡದಲ್ಲಿ ಯಕಾರ ಮತ್ತು ವಕಾರಗಳು ಅಯ್ (ಕಯ್ಗಳು) ಮತ್ತು ಅವ್ (ಅವ್ತಣ)ಗಳೆಂಬ ಎರಡು ಸ್ವರ- ವ್ಯಂಜನ ಜೋಡಿಗಳಲ್ಲಿ ಮಾತ್ರವಲ್ಲದೆ ಎಯ್ (ಗೆಯ್ಮೆ, ನೆಯ್ಗೆ, ಕೆಯ್, ಗೆಯ್), ಒಯ್ (ಕೊಯ್ದಾಗ, ಹೊಯ್ದಾಡು, ಹೊಯ್ಗೆ), ಆಯ್ (ತಾಯ್ತಂದೆ), ಇವ್ (ಕಿವ್ಡು) ಮೊದಲಾದ ಬೇರೆಯೂ ಹಲವು ಜೋಡಿಗಳಲ್ಲಿ ಬರುತ್ತವೆ. ಇದಲ್ಲದೆ ಕನ್ನಡದ ಸೇರಿಕೆಯ ನಿಯಮಗಳಲ್ಲಿ ಅಯ್ ಮತ್ತು ಅವ್ ಎಂಬವುಗಳಿಗೆ ವಿಶಿಶ್ಟವಾದ ಸ್ತಾನವೇನೂ ಇಲ್ಲ, ಅವುಗಳ ಬಳಕೆಯಲ್ಲಿ ಸ್ವರಸಂದಿಯೂ ಕಾಣಿಸುವುದಿಲ್ಲ. ಹಾಗಾಗಿ ಅಯ್ ಮತ್ತು ಅವ್ ಎಂಬವುಗಳಿಗೆ ಮಾತ್ರ ಐ ಮತ್ತು ಔ ಎಂಬುದಾಗಿ ಎರಡು ಸ್ವರಾಕ್ಶರ’ಗಳನ್ನು ಬಳಸುವುದಕ್ಕೆ ಕನ್ನಡದಲ್ಲಿ ಯಾವ ಆದಾರವೂ ಇಲ್ಲ. ಆ ಎರಡು ಅಕ್ಶರಗಳನ್ನು ಮತ್ತು ಅವುಗಳ ವಿಶಿಶ್ಟವಾದ ಸನ್ನೆಗಳನ್ನು ಬಿಟ್ಟುಕೊಟ್ಟಲ್ಲಿ ಕನ್ನಡ ಬರಹವನ್ನು ಕಲಿಯುವ ಕೆಲಸ ಅಶ್ಟರ ಮಟ್ಟಿಗೆ ಸುಲಬವಾಗಬಲ್ಲುದು. ಇದಲ್ಲದೆ ಈ ರೀತಿ ಅನವಶ್ಯಕವಾಗಿ ಅಯ್ ಎಂಬುದನ್ನು ಐ ಎಂಬುದಾಗಿ ಬರೆದಿರುವುದು ಕನ್ನಡದ ಕೆಲವು ವಿದ್ವಾಂಸರನ್ನೇ ಗೊಂದಲಕ್ಕೆ ಒಳಪಡಿಸಿದ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ ಕನ್ನಡದ ಕಯ್ (ಕೈ) ಎಂಬುದನ್ನು ಕೆಲವೊಮ್ಮೆ ಕೆಯ್ ಎಂಬುದಾಗಿ ಬರೆಯಲಾಗುತ್ತದೆ ಮತ್ತು ಗೆಯ್ ಎಂಬುದನ್ನು ಕೆಲವೊಮ್ಮೆ ಗೈ ಎಂಬುದಾಗಿಯೂ ಬರೆಯಲಾಗುತ್ತದೆ. ಮಯ್, ಕೆಯ್ ಮೊದಲಾದ

ಪದಗಳ ಬರವಣಿಗೆಯಲ್ಲೂ ಇಂತಹದೇ ಗೊಂದಲ ಕಾಣಿಸಿಕೊಳ್ಳುತ್ತದೆ. ವ್ಯಂಜನಗಳ ಅನಂತರ ಬಂದಾಗ ಐ ಎಂಬುದಕ್ಕೆ ಎ ಎಂಬುದರ ಹಾಗೆಯೇ ಕಾಣಿಸುವಂತಹ ರೂಪ ಇರುವುದು (ಕೈ, ಮೈ, ಗೈ ಮೊದಲಾದವುಗಳಿಗೂ ಕೆ, ಮೆ, ಗೆ ಮೊದಲಾದವುಗಳಿಗೂ ನಡುವೆ ಸಾಮ್ಯ ಇರುವುದು) ಈ ಗೊಂದಲಕ್ಕೆ ಕಾರಣವಿರಬೇಕು. ಐ ಮತ್ತು ಔ ಅಕ್ಶರಗಳನ್ನು ಬಿಟ್ಟುಕೊಡುವುದರ ಮೂಲಕ ಈ ಗೊಂದಲವನ್ನು ಇಲ್ಲವಾಗಿಸಬಹುದು. 4.2.4 ಋಕಾರ, ಷಕಾರ ಮತ್ತು ವಿಸರ್ಗಗಳು ಈ ಮೂರು ಅಕ್ಶರಗಳೂ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವುದಕ್ಕಾಗಿ ಕನ್ನಡ ಬರಹದಲ್ಲಿ ಸೇರಿಕೊಂಡಿವೆ. ಸಂಸ್ಕ್ರುತ ಪದಗಳನ್ನು ಕನ್ನಡದಲ್ಲಿ ಅವುಗಳ ಉಚ್ಚಾರಣೆ ಹೇಗಿದೆಯೋ ಆ ರೀತಿ ಬರೆಯುವುದಿದ್ದಲ್ಲಿ ಅವು ಕನ್ನಡ ಬರಹಕ್ಕೆ ಬೇಕಾಗುವುದಿಲ್ಲ. ಋಕಾರ ಒಂದು ಸ್ವರಾಕ್ಶರವಾಗಿ ಕನ್ನಡ ಬರಹದಲ್ಲಿ ಸೇರಿಕೊಂಡಿದೆ. ಸಂಸ್ಕ್ರುತದಲ್ಲಿ ಅದು ಒಂದು ಸ್ವರವಾಗಿ ಬಳಕೆಯಾಗುತ್ತಿದ್ದುದೇ ಇದಕ್ಕೆ ಕಾರಣ. (ಸಂಸ್ಕ್ರುತದಲ್ಲಿ ಅದಕ್ಕೆ Iೂ ಎಂಬ ಉದ್ದ ರೂಪವೂ ಇದೆ). ಆದರೆ ಕನ್ನಡಿಗರು ಅದನ್ನು ರು ಇಲ್ಲವೇ ರಿ ಎಂಬುದಾಗಿ ರಕಾರಕ್ಕೆ ಉಕಾರ ಇಲ್ಲವೇ ಇಕಾರವನ್ನು ಸೇರಿಸಿ ಉಚ್ಚರಿಸುತ್ತಾರೆ. ಬೇರೆ ಕೆಲವರು ರಕಾರಕ್ಕೆ ಬೇರೊಂದು ರೀತಿಯ (ತುಟಿಯನ್ನು ಅಗಲಿಸಿ ಉಚ್ಚರಿಸುವ) ಉಕಾರವನ್ನು ಸೇರಿಸಿಯೂ ಅದನ್ನು ಉಚ್ಚರಿಸುತ್ತಾರೆ. ಆದರೆ ಈ ರೀತಿ ಋಕಾರಕ್ಕೆ ಒಂದು ವಿಶಿಶ್ಟ ಉಚ್ಚಾರಣೆಯನ್ನು ಕೊಡುವವರೂ ಕೃತಿ ಮತ್ತು ಕ್ರುದ್ಧ ಪದಗಳ ಮೊದಲ ಅಕ್ಶರದಲ್ಲಿ ಕಾಣಿಸುವ ವ್ಯತ್ಯಾಸವನ್ನು ಸಾಮಾನ್ಯವಾಗಿ ತಮ್ಮ ಉಚ್ಚಾರಣೆಯಲ್ಲಿ ಕಾಣಿಸುವುದಿಲ್ಲ. ನನಗೆ ತಿಳಿದ ಹಾಗೆ ಯಾರೂ (ಸಂಸ್ಕ್ರುತ ಪಂಡಿತರೂ) ಋಕಾರವನ್ನು ಒಂದು ಸ್ವರವಾಗಿ ಉಚ್ಚರಿಸುವುದಿಲ್ಲ.

ಆಡುಗನ್ನಡದಲ್ಲಿ ಬರುವ ಬತ್್ರ, ಹ್ವಾತ್್ರ ಎಂಬಂತಹ ಪದಗಳಲ್ಲಿ ಋಕಾರದ ಉಚ್ಚಾರಣೆಯಿದೆಯೆಂದು ಕೆಲವರು ಬಾವಿಸುತ್ತಾರೆ. ಆದರೆ ನಿಜಕ್ಕೂ ಅಲ್ಲಿ ರಕಾರದ ಅನಂತರ ಮೇಲೆ ವಿವರಿಸಿದಂತಹ ತುಟಿ ಅಗಲಿಸಿದ ಉಕಾರದ ಉಚ್ಚಾರಣೆಯಿದೆಯಲ್ಲದೆ ಋ ಎಂಬ ಸ್ವರದ ಉಚ್ಚಾರಣೆಯಿಲ್ಲ. ಸಂಸ್ಕ್ರುತದ ಕೃತಿ ಪದವನ್ನು ಇಲ್ಲಿ ಪರಿಶೀಲಿಸಬಹುದು. ಈ ಪದದ ಉಚ್ಚಾರಣೆಯಲ್ಲಿ ಋ ಸ್ವರ ಬಂದಿದೆಯೆಂದು ಹೇಳಬೇಕಾದರೆ ಕಕಾರ ಮತ್ತು ತಕಾರಗಳ ನಡುವೆ ರಕಾರ ಮಾತ್ರ ಇರಬೇಕು ಮತ್ತು ಆ ಪದ ಎರಡು ಉಲಿಕಂತೆ(sಥಿಟಟಚಿbಟe)ಗಳಿಂದ ಕೂಡಿರಬೇಕು. ಕನ್ನಡಿಗರ (ಮತ್ತು ಸಂಸ್ಕ್ರುತ ಪಂಡಿತರ ಉಚ್ಚಾರಣೆಯಲ್ಲಿ ಈ ಪದ ಎರಡು ಉಲಿಕಂತೆಗಳಿಂದ ಕೂಡಿರುತ್ತದೆಯೇನೋ ನಿಜ; ಆದರೆ ಕಕಾರ ಮತ್ತು ತಕಾರಗಳ ನಡುವೆ ರಕಾರದೊಂದಿಗೆ ಒಂದು ಸ್ವರವೂ (ದುಂಡಗಿನ ಉಕಾರ, ತುಟಿ ಅಗಲಿಸಿದ ಉಕಾರ ಇಲ್ಲವೆ ಇಕಾರ) ಬಂದಿರುತ್ತದೆ. ಸಂಸ್ಕ್ರುತದಲ್ಲಿ ಮೇಲೆ ವಿವರಿಸಿದಂತಹ ಋ ಸ್ವರ ಉಚ್ಚಾರಣೆಯಲ್ಲಿತ್ತು ಎಂಬುದಕ್ಕೆ ಅದರ ವಯ್ಯಾಕರಣಿಗಳು ಕೊಡುವ ಋಕಾರದ ವರ್ಣನೆ ಮತ್ತು ಸೇರಿಕೆಯ (ಸಂದಿಯ) ನಿಯಮಗಳನ್ನು ಆದಾರವಾಗಿ ಕೊಡಬಹುದು. ನಮ್ಮ ಉಚ್ಚಾರಣೆಯನ್ನನುಸರಿಸಿ ಸಂಸ್ಕ್ರುತದ ಎರವಲುಗಳಲ್ಲಿ ಕಾಣಿಸುವ ಋಕಾರವನ್ನು ರು (ಇಲ್ಲವೇ ರಿ) ಎಂಬುದಾಗಿ ಬರೆಯಲು ಸಾದ್ಯವಿದೆಯಾದ ಕಾರಣ ಆ ಅಕ್ಶರವನ್ನು ಮತ್ತು ಅದರ ಕಿರುಸನ್ನೆ ( ೃ ಎಂಬುದನ್ನು) ಹೊಸ ಬರಹದಲ್ಲಿ ಬಳಸಬೇಕಾಗಿಲ್ಲ. ಷಕಾರವೂ ಇದೇ ರೀತಿಯಲ್ಲಿ ಹೆಚ್ಚಿನವರ ಮಾತಿನಲ್ಲೂ ಶಕಾರವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರ ಮಾತಿನಲ್ಲಿ ಷಕಾರ ಮತ್ತು ಶಕಾರಗಳೆರಡೂ ಸಕಾರವಾಗಿ ಕಾಣಿಸಿಕೊಳ್ಳುತ್ತವೆಯೆಂಬುದು ಬೇರೆಯೇ ವಿಶಯ; ಅದು ತಪ್ಪು ಎಂಬುದಾಗಿ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ; ಆದರೆ, ಶಕಾರ ಮತ್ತು ಷಕಾರಗಳ ನಡುವಿನ ವ್ಯತ್ಯಾಸವನ್ನು ಉಚ್ಚಾರಣೆಯಲ್ಲಿ ಕಾಣಿಸದಿರುವುದನ್ನು ತಪ್ಪೆಂಬುದಾಗಿ ತಿದ್ದುವುದಿಲ್ಲ.

ಶ ಮತ್ತು ಷಗಳ ನಡುವೆ ಉಚ್ಚಾರಣೆಯಲ್ಲಿ ವ್ಯತ್ಯಾಸವನ್ನು ಕಾಣಿಸುವವರು ಕೆಲವೇ ಕೆಲವು ಮಂದಿಯಾದ ಕಾರಣ ಆ ಅಕ್ಶರವನ್ನು ಮತ್ತು ಅದರ ಕಿರುಸನ್ನೆಯನ್ನು ( ್ಷ ಎಂಬುದನ್ನು) ಹೊಸ ಬರಹದಲ್ಲಿ ಬಳಸಬೇಕಾಗಿಲ್ಲ. ಇಂಗ್ಲಿಶ್ ನುಡಿಯಿಂದ ಎರವಲಾಗಿ ಪಡೆದ ಕೆಲವು ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಷಕಾರವನ್ನು ಬಳಸುವ ಕ್ರಮ ರೂಡಿಗೆ ಬಂದಿದೆ. ಇಂಗ್ಲಿಷ್ ಎಂಬ ಆ ನುಡಿಯ ಹೆಸರಿನಲ್ಲೇ ಇದನ್ನು ಕಾಣಬಹುದು. ಆದರೆ ಇವುಗಳ ಉಚ್ಚಾರಣೆಯಲ್ಲೂ ಶಕಾರವೇ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂತಹ ಪದಗಳಲ್ಲೂ ಷಕಾರವನ್ನು ಬಳಸಬೇಕಾಗಿಲ್ಲ. ಉಚ್ಚಾರಣೆಯಲ್ಲಿ ಶಕಾರ ಮತ್ತು ಷಕಾರಗಳ ನಡುವೆ ವ್ಯತ್ಯಾಸವಿದೆಯೆಂದು ಹೇಳಬೇಕಿದ್ದಲ್ಲಿ ತಕಾರ ಮತ್ತು ಟಕಾರಗಳನ್ನು ಉಚ್ಚರಿಸುವಾಗ ಯಾವ ರೀತಿಯಲ್ಲಿ ನಾಲಿಗೆ ಬಾಯಿಯ ಮೇಲ್ಬಾಗದ (ಅಂಗುಳಿನ) ಹತ್ತಿರ ಹೋಗುತ್ತದೆಯೋ ಅದೇ ರೀತಿಯಲ್ಲಿ ಶಕಾರ- ಷಕಾರಗಳನ್ನು ಉಚ್ಚರಿಸುವಾಗಲೂ ಹೋಗಬೇಕು. ತಕಾರ ಮತ್ತು ಟಕಾರಗಳ ನಡುವಿನ ವ್ಯತ್ಯಾಸವೇನೆಂದರೆ, ತಕಾರವನ್ನು ಉಚ್ಚರಿಸುವಾಗ ಅಂಗುಳನ್ನು ನಾಲಿಗೆಯ ಮೇಲ್ಬಾಗ ಮುಟ್ಟುತ್ತದೆ ಮತ್ತು ಟಕಾರವನ್ನು ಉಚ್ಚರಿಸುವಾಗ ನಾಲಿಗೆಯ ಅಡಿಬಾಗ ಮುಟ್ಟುತ್ತದೆ. ಇದಕ್ಕಾಗಿ ಟಕಾರವನ್ನು ಉಚ್ಚರಿಸುವಾಗ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ ಎಂಬುದನ್ನು ಗಮನಿಸಬಹುದು. ಆದರೆ ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಶಕಾರ ಮತ್ತು ಷಕಾರಗಳ ಉಚ್ಚಾರಣೆಯಲ್ಲಿ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ. ಅವೆರಡನ್ನು ಒಂದೇ ರೀತಿಯಲ್ಲಿ ಉಚ್ಚರಿಸಲಾಗುತ್ತದೆ. ವಿಷ, ವಿಶೇಷ, ಆಕಷ್ರಕ ಮೊದಲಾದ ಪದಗಳಲ್ಲಿ ಬರುವ ಷಕಾರವನ್ನು ಉಚ್ಚರಿಸುವಾಗ ಟಕಾರದ ಉಚ್ಚಾರಣೆಯಲ್ಲಿ ಕಾಣಿಸುವ ಹಾಗೆ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುವುದಿಲ್ಲ. ಹಾಗಾಗಿ ಅವನ್ನು ವಿಶ, ವಿಶೇಶ, ಆಕರ್ಶಕ ಎಂಬುದಾಗಿ ಬರೆಯುವುದರಲ್ಲಿ ಯಾವ ತೊಂದರೆಯೂ E®è.

ಕಷ್ಟ, ನಷ್ಟ, ಕೃಷ್ಣ ಮೊದಲಾದ ಪದಗಳು ಇದಕ್ಕೆ ಅಪವಾದಗಳು. ಅವುಗಳಲ್ಲಿ ಬರುವ ಷಕಾರವನ್ನು ಉಚ್ಚರಿಸುವಾಗ ಹಲವರಲ್ಲಿ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ. ಆದರೆ ಇದಕ್ಕೆ ಷಕಾರದ ಅನಂತರ ಬರುವ ಟಕಾರ ಮತ್ತು ಣಕಾರಗಳು ಕಾರಣ. ಕೆಲವರ ಉಚ್ಚಾರಣೆಯಲ್ಲಿ ಇಲ್ಲಿಯೂ ಶಕಾರ ಇಲ್ಲವೇ ಸಕಾರ ಕಾಣಿಸಿಕೊಳ್ಳುತ್ತದೆ. ಟಕಾರ ಮತ್ತು ಣಕಾರಗಳ ಮೊದಲಿಗೆ ಷಕಾರದ ಬದಲು ಶಕಾರ ಬೇರಾವ ಪದದಲ್ಲೂ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಇಂತಹ ಪದಗಳಲ್ಲಿ ಕಶ್ಟ, ನಶ್ಟ, ಕ್ರುಶ್ಣ ಎಂಬುದಾಗಿ ಶಕಾರವನ್ನು ಬಳಸುವುದರಿಂದ ತೊಂದರೆಯಾಗದು. ವಿಸರ್ಗವೂ ದುಃಖ, ಅಂತಃಕರಣ, ಬಹುಶಃ ಮೊದಲಾದ ಕೆಲವು ಸಂಸ್ಕ್ರುತ ಎರವಲುಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಅಕ್ಶರವಾಗಿದೆ. ಕನ್ನಡಿಗರು ಇದನ್ನು ವ್ಯಂಜನದೆದುರು ಬಂದಾಗ ಒತ್ತಕ್ಶರವಾಗಿ ಮತ್ತು ಪದದ ಕೊನೆಯಲ್ಲಿ ಬಂದಾಗ ಹಕಾರವಾಗಿ ಉಚ್ಚರಿಸುತ್ತಾರೆ. ಹಾಗಾಗಿ ಈ ಅಕ್ಶರವನ್ನು ಬಿಟ್ಟುಕೊಡುವುದು ಸುಲಬ. ಮೇಲಿನ ಪದಗಳನ್ನು ದುಕ್ಕ, ಅಂತಕ್ಕರಣ ಮತ್ತು ಬಹುಶಹ ಎಂಬುದಾಗಿ ಅವುಗಳ ಉಚ್ಚಾರಣೆ ಹೇಗಿದೆಯೋ ಹಾಗೆ ಬರೆದರೆ ಸರಿ. 4.2.5 ರಕಾರದ ಮೂರು ರೂಪಗಳು ಕನ್ನಡ ಬರಹದಲ್ಲಿ ಹೆಚ್ಚಿನ ವ್ಯಂಜನಗಳಿಗೂ ದೊಡ್ಡ ರೂಪ ಮತ್ತು ಚಿಕ್ಕ ರೂಪ ಎಂಬುದಾಗಿ ಎರಡೆರಡು ರೂಪಗಳು ಮಾತ್ರ ಇವೆ. ಇವುಗಳಲ್ಲಿ ದೊಡ್ಡ ರೂಪ ಈ ವ್ಯಂಜನಗಳು ಪದಗಳ ಮೊದಲಿಗೆ (ನೀ, ರೀ), ಸ್ವರಗಳ ನಡುವೆ (ಅವನು, ಇಲಿ) ಮತ್ತು ಸ್ವರ ಮತ್ತು ವ್ಯಂಜನಗಳ ನಡುವೆ (ಅಣ್ಣ, ಅಕ್ಕ, ಉಕ್ತಿ) ಬರುವಾಗ ಕಾಣಿಸುತ್ತದೆ. ಈ ನಿಯಮಕ್ಕೆ ಅನುನಾಸಿಕಗಳು ಮತ್ತು ರಕಾರ ಅಪವಾದಗಳು. ಅನುನಾಸಿಕಗಳಿಗೆ ್ನ ್ಣ ್ಮ ಎಂಬಂತಹ ಒಂದು ಚಿಕ್ಕ ರೂಪ ಮತ್ತು ಎರಡು ದೊಡ್ಡ ರೂಪಗಳು (ಅವುಗಳದೇ ಆದ ಮ, ನ, ಣ ಎಂಬಂತಹ ರೂಪ ಮತ್ತು ಎಲ್ಲವಕ್ಕೂ ಒಂದೇ ಆಗಿರುವ ಂ ರೂಪ) ಇವೆಯೆಂಬುದನ್ನು ನಾವು ಮೇಲೆ (4.2.2)ರಲ್ಲಿ ನೋಡಿರುವೆವು. ರಕಾರಕ್ಕೂ ಇದೇ ರೀತಿಯಲ್ಲಿ ಒಂದು ಚಿಕ್ಕ ರೂಪ ಮತ್ತು ಎರಡು

ದೊಡ್ಡ ರೂಪಗಳು ಇವೆ. ಆದರೆ ಇವುಗಳ ಬಳಕೆ ಮಾತ್ರ ಅನುನಾಸಿಕರೂಪಗಳ ಬಳಕೆಯ ಹಾಗಿಲ್ಲ. ಪದಗಳ ಮೊದಲಿಗೆ ಮತ್ತು ಎರಡು ಸ್ವರಗಳ ನಡುವೆ ರಕಾರ ಇತರ ವ್ಯಂಜನಗಳ ಹಾಗೆ ರ ಎಂಬ ದೊಡ್ಡ ರೂಪದಲ್ಲೇ ಬರುತ್ತದೆ (ರಾಮ, ಅರಸ, ಬರು); ವ್ಯಂಜನಗಳ ಅನಂತರವೂ ಇತರ ವ್ಯಂಜನಗಳ ಹಾಗೆ ಅದು ಚಿಕ್ಕ ರೂಪದಲ್ಲೇ ಬರುತ್ತದೆ (ಪ್ರತಿಮೆ, ಪತ್ರಿಕೆ). ಆದರೆ ಸ್ವರ ಮತ್ತು ವ್ಯಂಜನಗಳ ನಡುವೆ ಇದು ್ರ ಎಂಬ ಬೇರೊಂದು ದೊಡ್ಡ ರೂಪದಲ್ಲಿ ಬರುತ್ತದೆ (ಮಾಪ್ರಾಡು, ಆಯ್ರರು). ಈ ಅಪವಾದಕ್ಕೆ ಇನ್ನೊಂದು ಅಪವಾದವೂ ಇದೆ! ರಕಾರ ಒಂದು ವ್ಯಂಜನವೇ ಆದರೂ ಸ್ವರ ಮತ್ತು ರಕಾರಗಳ ನಡುವೆ ಇದು ್ರ ಎಂಬ ಎರಡನೇ ದೊಡ್ಡ ರೂಪದಲ್ಲಿ ಬರುವ ಬದಲು ರ ಎಂಬ ಮೊದಲನೇ ದೊಡ್ಡ ರೂಪದಲ್ಲಿ ಬರುತ್ತದೆ (ಬರ್ರೀ, ಕರ್ರಗೆ). ಸಂಸ್ಕ್ರುತದ ನಾಗರಿ ಲಿಪಿಯ ಬಳಕೆಯಲ್ಲೂ ರಕಾರಕ್ಕೆ ಮೂರು ರೂಪಗಳಿವೆ. ಗೆಡೆೃ, ಟ್ಷ್ಕೆiÉಡೆÉ ಮತ್ತು ಥ್ಝೆಡಿÉïೃ ಪದಗಳಲ್ಲಿ ಇವನ್ನು ಕಾಣಬಹುದು. ಕನ್ನಡ ಬರಹವನ್ನು ಕಲಿಯುವವರಿಗೆ ರಕಾರದ ಈ ಮೂರನೆಯ ರೂಪ (್ರ ಎಂಬುದು) ತೊಂದರೆ ಕೊಡಬಲ್ಲುದು. ಯಾಕೆಂದರೆ ಉಚ್ಚಾರಣೆಯಲ್ಲಿ ಅದು ಇನ್ನೊಂದು ವ್ಯಂಜನದ ಮೊದಲು ಬರುವುದಾದರೂ ಬರಹದಲ್ಲಿ ಆ ವ್ಯಂಜನದ ಅನಂತರ ಬರುತ್ತದೆ! ಉದಾಹರಣೆಗಾಗಿ ಮಾಪ್ರಾಡು ಪದದ ಉಚ್ಚಾರಣೆಯಲ್ಲಿ ರಕಾರ ಪಕಾರದ ಮೊದಲು ಬರುತ್ತದೆ ಆದರೆ ಬರಹದಲ್ಲಿ ಅದು ಪಕಾರದ ಅನಂತರ ಬರುತ್ತದೆ. ಕನ್ನಡ ಬರಹವನ್ನು ಸರಿಪಡಿಸುವ ಈ ಸಂದರ್ಬದಲ್ಲಿ ಅದರಲ್ಲಿ ಕಾಣಿಸುವ ಈ ರಕಾರದ ಸಮಸ್ಯೆಯನ್ನೂ ಸುಲಬವಾಗಿ ಬಗೆಹರಿಸಬಹುದು. ಇದಕ್ಕಾಗಿ ಸ್ವರ ಮತ್ತು ವ್ಯಂಜನಗಳ ನಡುವೆ ಬರುವ ರಕಾರವನ್ನು ಇತರ ವ್ಯಂಜನಗಳ ಹಾಗೆ ಅದರ ಮೊದಲನೆಯ ದೊಡ್ಡ ರೂಪದಲ್ಲೇ ಬರೆಯಬೇಕೆಂಬ ನಿಯಮ ವನ್ನು ಮಾಡಬೇಕು. (ಮಾಪ್ರಾಡು ಎಂಬುದನ್ನು ಮಾರ್ಪಾಡು ಎಂಬುದಾಗಿ

ಬರೆಯಬೇಕು). ಈಗಲೂ ಕೆಲವರು ರಕಾರವನ್ನು ಆ ರೀತಿ ಬರೆಯುತ್ತಾರೆ. ಹೀಗೆ ಮಾಡಿದಲ್ಲಿ ಅದರ ್ರ ಎಂಬ ದೊಡ್ಡರೂಪ ಬೇಕಾಗುವುದಿಲ್ಲ. 4.2.6 ಬೇರೆ ಸಾದ್ಯತೆಗಳು ಕನ್ನಡ ಬರಹದಲ್ಲಿ ಮೇಲೆ ಸೂಚಿಸಿರುವ ಬದಲಾವಣೆಗಳನ್ನು ಮಾಡಲು ಕನ್ನಡದ ಬೆರಳಚ್ಚು ಯಂತ್ರಗಳಲ್ಲಿ ಇಲ್ಲವೇ ಕಂಪ್ಯೂಟರಿನ ಸೋಫ್್ಟವೇರ್ಗಳಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ. ಅವನ್ನು ಬಳಸುವಾಗ ಈಗಿರುವ ಅಕ್ಶರಗಳಲ್ಲಿ 34 ಅಕ್ಶರ ಸನ್ನೆಗಳನ್ನು ಮೇಲೆ ಸೂಚಿಸಿದ ಹಾಗೆ ಬಳಸದಿದ್ದರೆ ಮುಗಿಯಿತು. ಕನ್ನಡ ಬರಹವನ್ನು ಇನ್ನಶ್ಟು ಸುಲಬವಾಗಿ ಮಾಡಲು ಸಾದ್ಯವಿದೆ. ಆದರೆ ಇದಕ್ಕಾಗಿ ಬೆರಳಚ್ಚು ಯಂತ್ರ ಇಲ್ಲವೇ ಕಂಪ್ಯೂಟರ್ ಸೋಫ್್ಟವೇರ್ಗಳಲ್ಲಿ ಹಲಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಅಂತಹ ಬದಲಾವಣೆಗಳನ್ನು ಈ `ಹೊಸ ಬರಹ’ದಲ್ಲಿ ಸೇರಿಸಿಕೊಂಡಿಲ್ಲ. ಉದಾಹರಣೆಗಾಗಿ ಕನ್ನಡದ ಸ್ವರಗಳಿಗೆ ಎರಡೆರಡು ರೂಪಗಳಿವೆ. ವ್ಯಂಜನಗಳ ಎದುರು ಬರುವಾಗ ಅವಕ್ಕೆ ಅ, ಆ, ಇ, ಈ, ಉ, ಊ, ಎ, ಏ, ಒ, ಓ ಎಂಬ ದೊಡ್ಡ ರೂಪಗಳಿವೆ (ಅಕ್ಕ, ಇಲಿ, ಉಳಿ, ಎದೆ, ಒಬ್ಬ, ಆಟ, ಈಟಿ, ಊಟ) ಮತ್ತು ವ್ಯಂಜನಗಳ ಅನಂತರ ಬರುವಾಗ ಅಕಾರಕ್ಕೆ ಸೊನ್ನೆ ರೂಪವಿದೆ (ಕರ, ಬಲ) ಮತ್ತು ಉಳಿದುವಕ್ಕೆ Á, Â, Âೀ, ು, ೂ, É, Éೀ, Éೂ, Éೂೀ ಎಂಬ ಚಿಕ್ಕ ರೂಪಗಳಿವೆ (ಕಾಲು, ಬಾಲ, ಬಿಳಿ, ಕಿವಿ, ಕೀಳು, ಕುರು, ಬುಗರಿ). ವ್ಯಂಜನಗಳ ಮೊದಲು (ಇಲ್ಲವೇ ಸ್ವತಂತ್ರವಾಗಿ) ಸ್ವರಗಳನ್ನು ಬಳಸ ಬೇಕಾದಾಗಲೆಲ್ಲ ಅವಕ್ಕೆ ಅ ಎಂಬ ಅಕ್ಶರವನ್ನೇ ಮೂಲ ರೂಪವಾಗಿ ಬಳಸಿ, ಅದರೊಂದಿಗೆ ಮೇಲಿನ ಚಿಕ್ಕ ರೂಪಗಳನ್ನು ಸೇರಿಸಿ ಆ ಎಂಬ ಸ್ವರದಿಂದ ಓ ಎಂಬ ಸ್ವರದ ವರೆಗಿನವನ್ನು ಅÁ,

ಅÂ, ಅÂೀ, ಅು, ಅೂ, ಅÉ, ಅÉೀ, ಅÉೂ, ಅÉೂೀ ಎಂಬುದಾಗಿ ಸೂಚಿಸಲು ಸಾದ್ಯವಿದೆ. ಮರಾಟಿ ನುಡಿ ಬಳಸುವ ನಾಗರಿ ಲಿಪಿಯಲ್ಲಿ ಇಂತಹದೇ ಒಂದು ಬದಲಾವಣೆಯನ್ನು ತರಲು ಪ್ರಯತ್ನಿಸಲಾಗಿತ್ತು. ಆದರೆ ಅದು ಹೆಚ್ಚು ರೂಡಿಗೆ ಬರಲಿಲ್ಲ. ಇಂತಹ ಇನ್ನೂ ಕೆಲವು ಬದಲಾವಣೆಗಳ ಮೂಲಕ ಕನ್ನಡ ಬರಹ ಇನ್ನಶ್ಟು ಸುಲಬವಾಗುವ ಹಾಗೆ ಮಾಡಲು ಸಾದ್ಯವಿದೆ. ಆದರೆ ಇದು ನಿಜಕ್ಕೂ ಅಶ್ಟೊಂದು ಅವಶ್ಯವೇನಲ್ಲ. ಮೇಲೆ `ಹೊಸ ಬರಹ’ಕ್ಕಾಗಿ ನಾನು ಸೂಚಿಸಿರುವ ಬದಲಾವಣೆಗಳನ್ನು ನಡೆಸುವುದು ಸುಲಬ ಮತ್ತು ಅದರಿಂದ ನಾವು ಪಡೆಯಬಹುದಾದ ಪ್ರಯೋಜನಗಳೂ ತುಂಬಾ ಹೆಚ್ಚು. ಉದಾಹರಣೆಗಾಗಿ ಹಳೆ ಬರಹವನ್ನು ಕಂಪ್ಯೂಟರಿನಲ್ಲಿ ಹಾಕಬೇಕಿದ್ದರೆ ಹಲವು ಬಾರಿ ಶಿಫ್್ಟ ಕೀಯನ್ನು ಒತ್ತಬೇಕಾಗುತ್ತದೆ. ಆದರೆ ಹೊಸ ಬರಹವನ್ನು ಹಾಕುವವರು ಶಿಫ್್ಟ ಕೀಯನ್ನು ಅದಕ್ಕಿಂತ ಕಡಿಮೆ ಬಾರಿ ಒತ್ತಿದರೆ ಸಾಕಾಗುತ್ತದೆ. 4.2.7 ಬದಲಾವಣೆ ಆಯ್ಕೆಯಾಗಿ ಮೇಲೆ ಸೂಚಿಸಿರುವ ಬದಲಾವಣೆಗಳನ್ನು ಎಲ್ಲರೂ ಕಡ್ಡಾಯವಾಗಿ ಬಳಸಲೇಬೇಕೆಂಬುದಾಗಿ ನಿಯಮವನ್ನು ಮಾಡುವ ಬದಲು ಆಯ್ಕೆಯನ್ನು ಬರಹಗಾರರಿಗೆ ಬಿಡುವುದು ಒಳ್ಳೆಯದೆಂದು ನನಗೆ ಅನಿಸುತ್ತದೆ. ಹಳೆ ಬರಹವೇ ಕನ್ನಡಕ್ಕೆ ಯೋಗ್ಯವಾದುದೆಂದು ನಂಬುವವರು ತಮ್ಮ ಬರಹಗಳಲ್ಲಿ ಅದನ್ನೇ ಬಳಸುತ್ತಿರಬಹುದು ಮತ್ತು ಅದಕ್ಕಿಂತ ಹೊಸ ಬರಹ ಉತ್ತಮವೆಂದು ನಂಬುವವರು ಅದನ್ನು ಬಳಸುತ್ತಿರಬಹುದು. ಸಮಯ ಕಳೆದಂತೆಲ್ಲ ಹೆಚ್ಚು ಹೆಚ್ಚು ಮಂದಿ ಕನ್ನಡದ ಮಟ್ಟಿಗೆ ಹೊಸ ಬರಹವೇ ಸರಿಯಾದುದೆಂಬುದನ್ನು ಕಂಡುಕೊಳ್ಳದಿರರು ಮತ್ತು ಅದನ್ನು ಬಳಸುವವರ ಎಣಿಕೆ ಹೆಚ್ಚುತ್ತಾ ಹೋಗಿ ಕೊನೆಗೆ ಅದು ಹಳೆಯದರ ಜಾಗವನ್ನು ಅಕ್ರಮಿಸದಿರದು. ಇದು ನನ್ನ ನಂಬಿಕೆ.

ಎರಡು ಸಾವಿರ ವರ್ಶಗಳಿಂದಲೂ ಕನ್ನಡ ಬರಹಗಳಲ್ಲಿ ಬಳಕೆಯಲ್ಲಿರುವ ಮಹಾಪ್ರಾಣಾಕ್ಶರಗಳು, ಷಕಾರ, ಋಕಾರ, ವಿಸರ್ಗ, ಙಕಾರ, ಞಕಾರ ಮೊದಲಾದುವನ್ನು ಕನ್ನಡ ಬರಹದಿಂದ ಸಂಪೂರ್ಣವಾಗಿ ತೆಗೆದುಹಾಕಬೇಕೆಂದೇನೂ ಇಲ್ಲಿ ವಾದಿಸುತ್ತಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಾಗ ಅವನ್ನು ಬಳಸಲೇ ಬೇಕು, ಬಳಸದಿರುವುದು ತಪ್ಪು, ಬಳಸದಿದ್ದಲ್ಲಿ ಅದು ಬರಹಗಾರನ ಅಜ್ನಾನವನ್ನು ಸೂಚಿಸುತ್ತದೆ ಎಂಬ ಇವತ್ತಿನ ನಿಯಮವನ್ನು ತೆಗೆದುಹಾಕಬೇಕೆಂದಿಶ್ಟೇ ಇಲ್ಲಿ ವಾದಿಸಲಾಗಿದೆ. ಈ ಹೆಚ್ಚಿನ ಅಕ್ಶರಗಳೂ ಕನ್ನಡದವೇ ಆದ ಇತರ ಅಕ್ಶರಗಳ ಹಾಗೆ ಕನ್ನಡಿಗರ ಸೊತ್ತು. ಅವು ನಮ್ಮ ಸಂಸ್ಕ್ರುತಿಯ ಒಂದು ಅಂಶ. ಹಳೆಗನ್ನಡದ ¾ ಮತ್ತು ¿ಗಳನ್ನು ಹೇಗೆ ನಾವು ನಮ್ಮ ಸಾಮಾನ್ಯ ಬರಹಗಳಲ್ಲಿ ಬಳಸದಿದ್ದರೂ ಅವಶ್ಯವಿದ್ದಲ್ಲಿ ಬಳಸಲು ಸಾದ್ಯವಿರುವ ಹಾಗೆ ಉಳಿಸಿಕೊಂಡಿದ್ದೇವೆಯೋ ಹಾಗೆಯೇ ಈ ಅಕ್ಶರಗಳನ್ನೂ ಉಳಿಸಿಕೊಳ್ಳಬಹುದು. ಆದರೆ ಮಕ್ಕಳಿಗೆ ಮತ್ತು ವಯಸ್ಕರಿಗೆ ಕನ್ನಡ ಬರಹವನ್ನು ಕಲಿಸುವ ಮೊದಲನೆಯ ತರಗತಿಯಲ್ಲಿಯೇ ಅವನ್ನೆಲ್ಲ ಕಲಿಸಬೇಕಾಗಿಲ್ಲ ಮತ್ತು ಎಲ್ಲಾ ವರ್ಗದ ಜನರೂ ಓದಬೇಕಾಗಿರುವ ದಿನಪತ್ರಿಕೆ, ಕತೆ-ಕಾದಂಬರಿಗಳು, ಸರಕಾರಕ್ಕೆ ಸಂಬಂದಿಸಿದ ಬರಹಗಳು ಮೊದಲಾದವುಗಳಲ್ಲಿ ಅವನ್ನೆಲ್ಲ ಇವತ್ತಿನ ಹಾಗೆ ಕಡ್ಡಾಯವಾಗಿ ಬಳಸಬೇಕಾಗಿಲ್ಲ. ಕನ್ನಡ ಬರಹದಲ್ಲಿ ಈ ರೀತಿ ಬೇಕಿದ್ದವರು ಬೇಕಿದ್ದಾಗ ಮಾತ್ರ ಬಳಸಬಹುದಾದ ಬೇರೆಯೂ ಕೆಲವು ಅಕ್ಶರಗಳಿವೆ. ಉದಾಹರಣೆಗಾಗಿ ಇಂಗ್ಲಿಶ್ನ ಸೋಫ್್ಟವೇರ್ ಪದವನ್ನು ಕೆಲವರು ಅದರ ಉಚ್ಚಾರಣೆ ಹೆಚ್ಚು ಸ್ಪಶ್ಟವಾಗಿ ತಿಳಿಯುವ ಹಾಗೆ ಅದರಲ್ಲಿ ಬರುವ ಫ್್ಟ ಎಂಬುದರ ಕೆಳಗೆ ಎರಡು ಚುಕ್ಕೆಗಳನ್ನು ಸೇರಿಸಿ ಸೋ¥sóï್ಟವೇರ್ ಎಂಬುದಾಗಿ ಬರೆಯುತ್ತಾರೆ. ಇದೇ ರೀತಿಯಲ್ಲಿ ಬಜಾರ್ ಎಂಬುದನ್ನು ಕೆಲವರು ಬeóÁರ್ ಎಂಬುದಾಗಿ ಬರೆಯುತ್ತಾರೆ. ಆದರೆ ಈ ರೀತಿ ಚುಕ್ಕೆಗಳನ್ನು ಸೇರಿಸದೆ ಬರೆಯುವುದನ್ನು ಯಾರೂ ತಪ್ಪು ಎಂಬುದಾಗಿ ತಳ್ಳಿಹಾಕುವುದಿಲ್ಲ.

ಹಳೆಗನ್ನಡದ ¾ಕಾರ ಮತ್ತು ¿ಕಾರಗಳನ್ನೂ ನಾವು ಅವಶ್ಯಬಿದ್ದಾಗ ಇವತ್ತೂ ಬಳಸುತ್ತೇವೆ. ಉದಾಹರಣೆಗಾಗಿ ಇವತ್ತು ಕನ್ನಡದಲ್ಲಿ ಎರಡೆರಡು ಹುರುಳುಗಳನ್ನು ಕೊಡುವ ಕೆಲವು ಪದಗಳಿಗೆ ಹಳೆಗನ್ನಡದಲ್ಲಿ ಎರಡು ಬೇರೆ ಬೇರೆ ರೂಪಗಳಿದ್ದುವೆಂಬುದನ್ನು ವಿವರಿಸಬೇಕಿದ್ದಲ್ಲಿ ಈ ಅಕ್ಶರಗಳು ನಮಗೆ ಬೇಕಾಗುತ್ತವೆ. ಹೊಸಗನ್ನಡದಲ್ಲಿ ಕರೆ ಪದಕ್ಕೆ ಎರಡು ಅರ್ತಗಳಿವೆ. ಹಾಲನ್ನು ಕರೆ ಮತ್ತು ಹುಡುಗನನ್ನು ಕರೆ ಎಂಬ ವಾಕ್ಯಗಳಲ್ಲಿ ಇದನ್ನು ಕಾಣಬಹುದು. ಹಳೆಗನ್ನಡದಲ್ಲಿ ಈ ಪದ ಕ¾õÉ ಮತ್ತು ಕರೆ ಎಂಬ ಎರಡು ಬೇರೆ ಬೇರೆ ರೂಪಗಳಲ್ಲಿ ಬಳಕೆಯಾಗುತ್ತಿತ್ತು. ಮಹಾಪ್ರಾಣಾಕ್ಶರಗಳು, ಷಕಾರ, ಋಕಾರ, ವಿಸರ್ಗ ಮೊದಲಾದವುಗಳೂ ಅಕ್ಶರಗಳ ಕೆಳಗಿನ ಚುಕ್ಕೆಗಳ ಹಾಗೆ ಮತ್ತು ಹಳೆಗನ್ನಡದ ¾-¿ಗಳ ಹಾಗೆ ಅವಶ್ಯವಿರುವಲ್ಲಿ ಮಾತ್ರ ಬಳಸುವಂತಹವಾಗಿರಬೇಕು. ಉದಾಹರಣೆಗಾಗಿ, ಸಂಸ್ಕ್ರುತದ ಶ್ಲೋಕವೊಂದನ್ನು ಕನ್ನಡ ಬರಹದ ನಡುವೆ ಕೊಡಬೇಕಾಗಿದೆಯಾದರೆ ಅಲ್ಲಿ ಈ ಎಲ್ಲಾ ಅಕ್ಶರಗಳನ್ನೂ ಬಳಸಬಹುದು. 4.3 ಮಾತು ಮತ್ತು ಬರಹ ಕನ್ನಡ ಬರಹದಲ್ಲಿ ಬದಲಾವಣೆಗಳನ್ನು ಮಾಡಬೇಕೆಂಬ ಯಾವುದೇ ಒಂದು ಸೂಚನೆಗೂ ಇವತ್ತು ಬಳಕೆಯಲ್ಲಿರುವ ಬರಹದಲ್ಲಿ ಈಗಾಗಲೇ ಚನ್ನಾಗಿ ಪಳಗಿರುವ ವಿದ್ವಾಂಸರಲ್ಲಿ ಮತ್ತು ಹಿರಿಯ ಬರಹಗಾರರಲ್ಲಿ ಕೆಲವರದ್ದಾದರೂ ಅಡ್ಡಿಯಿದ್ದೇ ಇರುತ್ತದೆ. ಹಳೆಯ ವಿದಾನವನ್ನು ಬಿಟ್ಟುಕೊಟ್ಟು ಹೊಸ ವಿದಾನಕ್ಕೆ ಹೊಂದಿಕೊಳ್ಳಲು ಇಂತಹ ಜನರಿಗೆ ಸಾದ್ಯವಾಗದಿರುವುದು ಇದಕ್ಕೆ ಒಂದು ಕಾರಣ. ಈ ವಿಶಯದಲ್ಲಿ ನಾವೇನೂ ಮಾಡಲಾರೆವು. ಬದಲಾವಣೆ ಅವಶ್ಯವೆಂದು ಕಂಡುಬಂದಲ್ಲಿ ಅದಕ್ಕೆ ಹೊಂದಿಕೊಳ್ಳಲು ಕಶ್ಟವಾಗುವವರ ವಿರೋದವನ್ನು ಲೆಕ್ಕಿಸದೆ ಬದಲಾವಣೆಯನ್ನು ಮಾಡಿಕೊಳ್ಳುವುದೊಂದೇ ನಮಗಿರುವ ದಾರಿ. ಅಪ್ಪ ನೆಟ್ಟ ಆಲದಮರವೆಂದು ನೇತುಹಾಕಿಕೊಳ್ಳಬೇಕಾಗಿಲ್ಲವಲ್ಲ! ಸಮಯ ಕಳೆದ ಹಾಗೆ ಉಳಿದವರೂ ಈ ಬದಲಾವಣೆಗೆ ಹೊಂದಿಕೊಳ್ಳುತ್ತಾರೆ.

ಮಾತು ಮತ್ತು ಬರಹಗಳ ನಡುವಿನ ಸಂಬಂದ ನಿಜಕ್ಕೂ ಎಂತಹದು ಎಂಬ ವಿಶಯದಲ್ಲಿ ಹೆಚ್ಚಿನ ಸಾಹಿತಿಗಳಲ್ಲಿ ಮತ್ತು ವಿದ್ವಾಂಸರಲ್ಲಿ ಇರುವ ಅಜ್ನಾನ ಇಂತಹ ವಿರೋದಕ್ಕೆ ಇನ್ನೊಂದು ಕಾರಣ. ಇದನ್ನು ಹೋಗಲಾಡಿಸಬೇಕಿದ್ದಲ್ಲಿ ಈ ಸಂಬಂದ ಎಂತಹದು ಎಂಬುದನ್ನು ಸ್ವಲ್ಪ ವಿವರವಾಗಿ ಬಿಡಿಸಿ ಹೇಳಬೇಕಾಗುತ್ತದೆ. 4.3.1 ಮಾತು ಮೊದಲು, ಬರಹ ಅನಂತರ ನುಡಿಯೊಂದರ ಚರಿತ್ರೆಯಲ್ಲಿ ಮೊದಲು ಕಾಣಿಸುವುದು ದಿನಬಳಕೆಯ ಮಾತಲ್ಲದೆ ಬರಹವಲ್ಲ. ಕನ್ನಡಿಗರ ಮಾತನ್ನು ಬರಹಕ್ಕಿಳಿಸುವ ಕೆಲಸ ಹೆಚ್ಚೆಂದರೆ ಎರಡು ಸಾವಿರ ವರ್ಶಗಳಶ್ಟು ಹಿಂದೆ ನಡೆದಿರಬಹುದು. ಕನ್ನಡಿಗರ ಮಾತು ಇದಕ್ಕಿಂತಲೂ ಕೆಲವು ಸಾವಿರ ವರ್ಶಗಳಶ್ಟಾದರೂ ಹಿಂದೆಯೇ ಸ್ವತಂತ್ರ ನುಡಿಯಾಗಿ ಬಳಕೆಯಲ್ಲಿದ್ದಿರಬೇಕು. ನುಡಿಗಳಿಗೆ ಬರಹವನ್ನು ಅಳವಡಿಸುವ ಕೆಲಸವೂ ಹೆಚ್ಚೆಂದರೆ ಅಯ್ದು ಸಾವಿರ ವರ್ಶಗಳಶ್ಟು ಹಳೆಯದು. ಆದರೆ ನುಡಿಗಳ ಇರವು ಇದಕ್ಕಿಂತಲೂ ಎಶ್ಟೋ ಮಿಲಿಯ ವರ್ಶಗಳಶ್ಟು ಹಳೆಯದು. ಮನುಶ್ಯ ಮಂಗನಿಂದ ಬೇರಾದಾಗಲೇ ಅವನಲ್ಲಿ ನುಡಿಯೂ ಹುಟ್ಟಿಕೊಂಡಿರಬೇಕು. ನುಡಿಯ ಚರಿತ್ರೆ ಮತ್ತು ಬರಹದ ಚರಿತ್ರೆಗಳ ನಡುವೆ ಯಾವ ಸಂಬಂದವೂ ಇಲ್ಲ. ಬಾರತದಲ್ಲಿ ಬಳಕೆಯಲ್ಲಿರುವ ನುಡಿಗಳು ನಾಲ್ಕು ಮುಕ್ಯ ಮೂಲಗಳಿಂದ ಬೆಳೆದು ಬಂದಿವೆ ಮತ್ತು ಇದನ್ನನುಸರಿಸಿ ಅವನ್ನು ನಾಲ್ಕು ಮುಕ್ಯ ನುಡಿಕುಟುಂಬಗಳಲ್ಲಿ ವಿಂಗಡಿಸಲು ಸಾದ್ಯ ಎಂಬುದನ್ನು ನಾವು ಎರಡನೆಯ ಅದ್ಯಾಯದಲ್ಲಿ (2.2.2) ನೋಡಿರುವೆವು. ಆದರೆ ಬಾರತದ ನುಡಿಗಳು ಬಳಸುವ ಲಿಪಿಗಳು ಈ ನಾಲ್ಕು ಮೂಲಗಳಿಂದ ಬೆಳೆದುಬಂದಿಲ್ಲ. ಅವುಗಳಲ್ಲಿ ಹೆಚ್ಚಿನವೂ ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಮೊದಲಿಗೆ ಪ್ರಾಕ್ರುತವನ್ನು ಮತ್ತು ಅನಂತರ ಸಂಸ್ಕ್ರುತ ಮತ್ತು ಪಾಲಿ ನುಡಿಗಳನ್ನು ಬರೆಯುವುದಕ್ಕಾಗಿ ಬಳಕೆಗೆ ಬಂದ ಬ್ರಾಹ್ಮೀ ಲಿಪಿಯಿಂದ ಬೆಳೆದುಬಂದಿವೆ. ಬಾರತದ ಹೊರಗಿರುವ ಟಿಬೆಟನ್, ಬರ್ಮೀಸ್, ತಾಯಿ, ಕಂಬೋಡಿಯನ್,

ಮಂಗೋಲಿಯನ್ ಮೊದಲಾದ ಬೇರೆ ಹಲವು ನುಡಿಗಳು ಬಳಸುವ ಲಿಪಿಗಳೂ ಇದೇ ಬ್ರಾಹ್ಮೀ ಲಿಪಿಯಿಂದ ಬೆಳೆದುಬಂದಿವೆ. ಆದರೆ ಈ ಎಲ್ಲಾ ನುಡಿಗಳಿಗೂ ಮೂಲ ಒಂದೇ ಅಲ್ಲ. ಇಂಡೋ-ಆರ್ಯನ್ ಕುಟುಂಬಕ್ಕೆ ಸೇರಿದ ಸಿಂದಿ, ಕಾಶ್ಮೀರಿ, ಉರ್ದು ಮೊದಲಾದ ಬೇರೆ ಕೆಲವು ನುಡಿಗಳು ಅರೇಬಿಕ್ ಮೂಲದ ಲಿಪಿಯನ್ನು ಬಳಸುತ್ತಿವೆ. ಈಶಾನ್ಯ ಬಾರತದ ಕೆಲವು ನುಡಿಗಳು ರೋಮನ್ ಲಿಪಿಯನ್ನೇ ತಮ್ಮ ಬರಹಕ್ಕಾಗಿ ಅಳವಡಿಸಿಕೊಂಡಿವೆ. ಬ್ರಾಹ್ಮೀ, ರೋಮನ್ ಮತ್ತು ಅರೇಬಿಕ್ಗಳೆಂಬ ಈ ಮೂರು ಲಿಪಿಗಳೂ ಮಸೊಪೆÇಟೇಮಿಯಾದ ಸುಮೇರಿಯನ್ ಲಿಪಿಯಿಂದಲೇ ಬೆಳೆದುಬಂದಿವೆ ಎಂಬುದಾಗಿ ಹೆಚ್ಚಿನ ವಿದ್ವಾಂಸರೂ ಒಂದು ನಿರ್ದಾರಕ್ಕೆ ಬಂದಿದ್ದಾರೆ. ಆದರೆ ಬ್ರಾಹ್ಮೀ ಲಿಪಿಗೆ ಸಿಂದೂ ಕಣಿವೆಯಲ್ಲಿ ದೊರೆತಿರುವ ಬರಹವೇ ಮೂಲ ಎಂಬುದಾಗಿ ವಾದಿಸುವವರೂ ಕೆಲವು ಮಂದಿ ಇದ್ದಾರೆ (ರೋಜರ್್ಸ 2005 ನೋಡಿ). ಹಲವು ನುಡಿಗಳು ಒಂದೇ ಲಿಪಿಯನ್ನು ಬರಹಕ್ಕಾಗಿ ಬಳಸುತ್ತಿರಲು ಸಾದ್ಯವಿದೆ. ಇಂಗ್ಲಿಶ್, ಫ್ರೆಂಚ್, ಜರ್ಮನ್ ಮೊದಲಾದ ಯುರೋಪಿನ ಹಲವು ನುಡಿಗಳು ರೋಮನ್ ಲಿಪಿಯನ್ನು ಬಳಸುತ್ತಿವೆ. ಸಂಸ್ಕ್ರುತ ಮಾತ್ರವಲ್ಲದೆ ಹಿಂದಿ, ಮರಾಟಿ ಮತ್ತು ನೆಪಾಲಿ ನುಡಿಗಳು ನಾಗರಿ ಲಿಪಿಯನ್ನು ಬಳಸುತ್ತಿವೆ. ಒಂದೇ ನುಡಿ ಹಲವು ಲಿಪಿಗಳನ್ನು ಬಳಸುತ್ತಿರಲು ಸಾದ್ಯವಿದೆ. ಕೊಂಕಣಿ ನುಡಿ ಕರ್ನಾಟಕದಲ್ಲಿ ಕನ್ನಡ ಲಿಪಿಯನ್ನು, ಕೇರಳದಲ್ಲಿ ಮಲಯಾಳ ಲಿಪಿಯನ್ನು ಮತ್ತು ಗೋವಾದಲ್ಲಿ ನಾಗರಿ ಮತ್ತು ರೋಮನ್ ಲಿಪಿಗಳನ್ನು ಬಳಸುತ್ತದೆ. ಸಿಂದಿ ನುಡಿಯನ್ನು ಕೆಲವರು ಅರೇಬಿಕ್ ಮೂಲದ ಲಿಪಿಯಲ್ಲಿ ಮತ್ತು ಬೇರೆ ಕೆಲವರು ನಾಗರಿ ಮೂಲದ ಲಿಪಿಯಲ್ಲಿ ಬರೆಯುತ್ತಾರೆ. ಹೀಗಿದ್ದರೂ ಒಂದು ಸಮಾಜದಲ್ಲಿ ಬಳಕೆಯಲ್ಲಿರುವ ನುಡಿಯ ಹಾಗೆ ಅದು ಬಳಸುವ ಲಿಪಿಯೂ ಆ ಸಮಾಜದ ಸಂಸ್ಕ್ರುತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲು ಸಾದ್ಯವಿದೆ. ಆ ನುಡಿಯದೇ ಆದ ಒಂದು ವಿಶಿಶ್ಟವಾದ ಲಿಪಿಯೊಂದಿದ್ದರಂತೂ ಅದು ಇನ್ನಶ್ಟು ಸ್ಪಶ್ಟವಾಗಿ ಆ ಸಮಾಜದ ಸಂಸ್ಕ್ರುತಿಯ ಒಂದು ಬಾಗವಾಗುತ್ತದೆ.

ತಮ್ಮದೇ ಆದ ವಿಶಿಶ್ಟ ಲಿಪಿಯಿಲ್ಲದವರೂ ತಾವು ಬಳಸುವ ಲಿಪಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಮೇಲೆ ಸೂಚಿಸಿದ ಹಾಗೆ ನೆಪಾಲಿ, ಮರಾಟಿ, ಹಿಂದಿ, ಸಂಸ್ಕ್ರುತ ಮೊದಲಾದ ಹಲವು ನುಡಿಗಳು ಒಂದೇ (ನಾಗರಿ) ಲಿಪಿಯನ್ನು ಬಳಸುವುದು ನಿಜವಾದರೂ ಅವು ಬಳಸುವ ಲಿಪಿಗಳ ಸ್ವರೂಪದಲ್ಲಿ ಕೆಲವು ವ್ಯತ್ಯಾಸಗಳೂ ಇವೆ. ಆದರೆ ಯಾವುದೇ ಒಂದು ಸಮಾಜಕ್ಕೆ ತನ್ನ ನುಡಿಯೊಂದಿಗಿರುವಶ್ಟು ಹತ್ತಿರದ ಸಂಬಂದ ಲಿಪಿಯೊಂದಿಗಿಲ್ಲ ಎಂಬುದು ಮೇಲಿನ ಪರಿಶೀಲನೆಯಿಂದ ಸ್ಪಶ್ಟವಾಗಿರಬಹುದು. ಲಿಪಿಯಿಲ್ಲದ ಎಂದರೆ ತಮ್ಮ ನುಡಿಯನ್ನು ಬರಹಕ್ಕಿಳಿಸದಿರುವ ಸಮಾಜಗಳು ಸಾವಿರಾರು ಸಂಕ್ಯೆಗಳಲ್ಲಿವೆ. ಆದರೆ ನುಡಿಯಿಲ್ಲದ ಸಮಾಜ ಒಂದೂ ಇಲ್ಲ. ಮೊನ್ನೆ ಮೊನ್ನೆಯ ವರೆಗೂ ಬರಹವನ್ನು ಬಳಸುತ್ತಿದ್ದವರು ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ. ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಜಗತ್ತಿನ ಜನಸಂಕ್ಯೆಯಲ್ಲಿ ಬರಹಬಲ್ಲವರ ಎಣಿಕೆ ನೂರಕ್ಕೆ ಅಯ್ವತ್ತರಶ್ಟು ಸಿಗುವುದು ಕಶ್ಟವೇ. ಬಳಕೆಯಲ್ಲಿರುವ ಲಿಪಿಯನ್ನು ಬಿಟ್ಟುಕೊಟ್ಟು ಬೇರೊಂದು ಲಿಪಿಯನ್ನು ಅಳವಡಿಸಿಕೊಳ್ಳುವುದು ಅಶ್ಟೊಂದು ಕಶ್ಟದ ಕೆಲಸವೇನಲ್ಲ. ಹಲವು ನುಡಿಗಳಲ್ಲಿ ಇಂತಹ ಬದಲಾವಣೆಗಳು ನಡೆದಿರುವುದನ್ನು ಕಾಣಬಹುದು. ಉದಾಹರಣೆಗಾಗಿ ಮಲಯಾಳ ನುಡಿಯ ಬರಹಗಾರರು ತಾವು ಮೊದಲು ಬಳಸುತ್ತಿದ್ದ ವಟ್ಟೆಳುತ್ತು ಲಿಪಿಯನ್ನು ಬಿಟ್ಟುಕೊಟ್ಟು ಗ್ರಂತ ಲಿಪಿಯನ್ನು ಬಳಸಲು ತೊಡಗಿದ್ದರು. ಇದೇ ರೀತಿಯಲ್ಲಿ ಮಣಿಪುರಿ ನುಡಿಯ ಬರಹಗಾರರು ತಾವು ಮೊದಲಿಗೆ ಬಳಸುತ್ತಿದ್ದ ತಮ್ಮದೇ ಆದ ಮಣಿಪುರಿ ಲಿಪಿಯನ್ನು ಬಿಟ್ಟುಕೊಟ್ಟು ಬಂಗಾಲಿ ಲಿಪಿಯನ್ನು ಬಳಸಲು ತೊಡಗಿದ್ದರು. ಸುಮಾರು ಎಪ್ಪತ್ತಯ್ದು ವರ್ಶಗಳಶ್ಟು ಹಿಂದೆ ಟರ್ಕಿಶ್ ನುಡಿಯನ್ನಾಡುವವರು ತಮ್ಮ ಬರಹಗಳಲ್ಲಿ ಮುಕ್ಯವಾಗಿ ಅರೇಬಿಕ್ ಲಿಪಿಯನ್ನು ಬಳಸುತ್ತಿದ್ದರು. ಈ ಲಿಪಿ ಟರ್ಕಿಶ್ ನುಡಿಗೆ

ಅನುಕೂಲವಾಗಿರಲಿಲ್ಲ. ಅದರಲ್ಲಿ ಹಲವಾರು ಸ್ಪೆಲ್ಲಿಂಗ್ ಸಮಸ್ಯೆಗಳಿದ್ದುವು. ಇದಲ್ಲದೆ ಅರೇಬಿಕ್ನಿಂದ ಎರವಲಾಗಿ ಬಂದ ಪದಗಳನ್ನು ಅರೇಬಿಕ್ನಲ್ಲಿ ಇರುವ ಹಾಗೆಯೇ ಬರೆಯಬೇಕೆಂಬ ನಿಯಮವೂ ಆ ಲಿಪಿಯ ಬಳಕೆಯಲ್ಲಿತ್ತು. ಇದರಿಂದಾಗಿ ಟರ್ಕಿಶ್ ಬರಹವನ್ನು ಕಲಿಯುವ ಕೆಲಸ ತುಂಬಾ ತೊಡಕಿನದಾಗಿತ್ತು. ಹಾಗಾಗಿ ಮೊದಲಿದ್ದ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟುಕೊಟ್ಟು ಹೆಚ್ಚು ಸ್ಪೆಲ್ಲಿಂಗ್ ಸಮಸ್ಯೆಯನ್ನು ಉಂಟುಮಾಡದಿರುವ ರೋಮನ್ ಲಿಪಿಯನ್ನು ಟರ್ಕಿಶ್ ನುಡಿಗೆ ಅಳವಡಿಸಿಕೊಳ್ಳುವ ನಿರ್ದಾರವನ್ನು ಮಾಡಲಾಯಿತು. ಈ ಬದಲಾವಣೆಯಿಂದಾಗಿ ಇವತ್ತು ಟರ್ಕಿಶ್ ಬರಹವನ್ನು ಓದುವ ಮತ್ತು ಬರೆಯುವ ಕೆಲಸ ಬಹಳಶ್ಟು ಸುಲಬವಾಗಿದೆ. 4.3.2 ಲಿಪಿಯಲ್ಲಿ ವಯ್ಜ್ನಾನಿಕತೆ’‘ ಬ್ರಾಹ್ಮೀ ಲಿಪಿಯಿಂದ ಬೆಳೆದು ಬಂದಿರುವ ಬಾರತದ ಲಿಪಿಗಳೆಲ್ಲ ಅತ್ಯಂತ ವಯ್ಜ್ನಾನಿಕ’ವಾದ ಲಿಪಿಗಳೆಂಬುದಾಗಿ ಹಲವು ಮಂದಿ ಹೇಳುತ್ತಾರೆ. ಕನ್ನಡ ಲಿಪಿಯೂ ಇದೇ ರೀತಿಯಲ್ಲಿ `ವಯ್ಜ್ನಾನಿಕ’ವಾಗಿರುವ ಕಾರಣ ಅದರಲ್ಲಿ ಬದಲಾವಣೆಗಳನ್ನು ಮಾಡಹೊರಡುವುದು ಮೂರ್ಕತನವಲ್ಲವೇ ಎಂಬುದಾಗಿ ಕೆಲವರು ಕೇಳಬಹುದು. ಆದರೆ ನಿಜಕ್ಕೂ ಈ ಲಿಪಿಗಳು ಯಾವ ಅರ್ತದಲ್ಲಿ ವಯ್ಜ್ನಾನಿಕವೆಂದೆನಿಸಬಲ್ಲುವು ಎಂಬುದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಿದಲ್ಲಿ ಮೇಲಿನ ಹೇಳಿಕೆಯಲ್ಲಿ ಎದೆಯುಬ್ಬಿಸುವಂತಹದೇನೂ ಇಲ್ಲ ಎಂಬುದು ಸ್ಪಶ್ಟವಾದೀತು. ಬಾರತದ ಈ ಲಿಪಿಗಳಲ್ಲಿ ಬರುವ ವರ್ಗೀಯ ವ್ಯಂಜನಗಳನ್ನು ಅವುಗಳ ಉಚ್ಚಾರಣೆಯ ಆದಾರದ ಮೇಲೆ ಪಟ್ಟಿಮಾಡಲಾಗಿದೆಯಾದ ಕಾರಣ ಅದು ಮೇಲ್ನೋಟಕ್ಕೆ ವಯ್ಜ್ನಾನಿಕವಾಗಿ ಕಾಣಿಸುತ್ತದೆ. ಆದರೆ ಅವುಗಳಲ್ಲಿ ಬರುವ ಅವರ್ಗೀಯ ವ್ಯಂಜನಗಳನ್ನಾಗಲಿ ಇಲ್ಲವೇ ಸ್ವರಗಳನ್ನಾಗಲಿ ಆ ರೀತಿ ಉಚ್ಚಾರಣೆಯ ಆದಾರದ ಮೇಲೆ

ಪಟ್ಟಿಮಾಡಿಲ್ಲ. ಇದಲ್ಲದೆ, ಯಾವ ಲಿಪಿಯ ಅಕ್ಶರಗಳನ್ನು ಬೇಕಿದ್ದರೂ ಆ ರೀತಿ ಪಟ್ಟಿ ಮಾಡಿಕೊಳ್ಳಬಹುದು. ನಿಜಕ್ಕೂ ಈ ಲಿಪಿಗಳಲ್ಲಿ ಬರುವ ವರ್ಣಗಳ ಪಟ್ಟಿ ಸಂಸ್ಕ್ರುತದ ವಯ್ಯಾಕರಣಿಗಳು ಆ ನುಡಿಯ ಸೇರಿಕೆಯ (ಸಂದಿ) ನಿಯಮಗಳನ್ನು ಸೂತ್ರ ರೂಪದಲ್ಲಿ ವರ್ಣಿಸಲು ಸಾದ್ಯವಾಗುವ ಹಾಗೆ ತಯಾರಿಸಿರುವಂತಹ ಪಟ್ಟಿಯಾಗಿದೆ. ಉದಾಹರಣೆಗಾಗಿ ಈ ಲಿಪಿಗಳಲ್ಲಿರುವ ಸ್ವರಗಳ ಪಟ್ಟಿಯ ಮೂಲವಾಗಿರುವ ಅಇಉಣ್, ಋಲೃಕ್, ಏಓಙõï, ಐಔಚ್ ಎಂಬ ನಾಲ್ಕು ಮಾಹೇಶ್ವರ’ ಸೂತ್ರಗಳನ್ನು ಪರಿಶೀಲಿಸಬಹುದು. ಇವುಗಳಲ್ಲಿ ಮೊದಲನೇ ಸೂತ್ರದ ಮೊದಲನೇ ಅಕ್ಶರದೊಂದಿಗೆ ನಾಲ್ಕನೇ ಸೂತ್ರದ ಕೊನೆಯ ಅಕ್ಶರವನ್ನು ಸೇರಿಸಿ ರಚಿಸಿದ ಅಚ್ ಎಂಬ ಸಂಜ್ನೆಯ ಮೂಲಕ ಎಲ್ಲಾ ಸ್ವರಗಳನ್ನೂ ಒಟ್ಟಾಗಿ ಹೆಸರಿಸಲಾಗುತ್ತದೆ. ಇದೇ ರೀತಿಯಲ್ಲಿ ಮೊದಲನೆಯ ಅಕ್ಶರದೊಂದಿಗೆ ಎರಡನೇ ಸೂತ್ರದ ಕೊನೆಯ ಅಕ್ಶರವನ್ನು ಸೇರಿಸಿ ರಚಿಸಿದ ಅಕ್ ಸಂಜ್ನೆಯ ಮೂಲಕ ಸಂಸ್ಕ್ರುತದಲ್ಲಿ ಉದ್ದ-ಗಿಡ್ಡ ವ್ಯತ್ಯಾಸವನ್ನು ತೋರಿಸುವ ಸ್ವರಗಳನ್ನು ಹೆಸರಿಸಲಾಗುತ್ತದೆ. ಸಂಸ್ಕ್ರುತ ನುಡಿಯ ಸವರ್ಣದೀರ್ಗ’ವೆಂಬ ಸೇರಿಕೆಯ ನಿಯಮಕ್ಕೊಳಗಾಗುವ ಸ್ವರಗಳನ್ನೂ ಈ ಸಂಜ್ನೆ ಹೆಸರಿಸುತ್ತದೆ. ಆದರೆ ಈ ಪಟ್ಟಿ ಸಂಸ್ಕ್ರುತದ ಮಟ್ಟಿಗೆ ವಯ್ಜ್ನಾನಿಕವಲ್ಲದೆ ಕನ್ನಡದ ಮಟ್ಟಿಗೆ ವಯ್ಜ್ನಾನಿಕವಲ್ಲ. ಯಾಕೆಂದರೆ ಕನ್ನಡದಲ್ಲಿ ಎಕಾರ ಒಕಾರಗಳೂ ಉದ್ದ-ಗಿಡ್ಡ ವ್ಯತ್ಯಾಸವನ್ನು ತೋರಿಸುತ್ತವೆ ಮತ್ತು ಸವರ್ಣದೀರ್ಗವೆಂಬುದು ಕನ್ನಡದ ಸೇರಿಕೆಯ ನಿಯಮವಲ್ಲ. ಬೇರೆಯೂ ಹಲವು ವಿಶಯಗಳಲ್ಲಿ ಈ ಪಟ್ಟಿ ಕನ್ನಡದ ಮಟ್ಟಿಗೆ ವಯ್ಜ್ನಾನಿಕವಲ್ಲ (ಬಟ್ 2005:59 ನೋಡಿ). ಒಂದು ಲಿಪಿಯ ವಯ್ಜ್ನಾನಿಕತೆಯನ್ನು ಬೇರೆಯೂ ಹಲವು ವಿಶಯಗಳ ಆದಾರದ ಮೇಲೆ ನಿರ್ದರಿಸಲು ಬರುತ್ತದೆ. ಅದರಲ್ಲಿ ಬರುವ ಅಕ್ಶರಗಳ ಸ್ವರೂಪ, ಅವುಗಳಿಗಿರುವ ಒಳಸಂಜ್ನೆಗಳ ಎಣಿಕೆ, ಎಶ್ಟು ಬೇಗನೆ ಅವನ್ನು ಬರೆಯಬಹುದು ಇಲ್ಲವೇ ಟಯ್್ಪ

ಮಾಡಬಹುದು, ಎಶ್ಟು ಚಿಕ್ಕದಾಗಿ ಮತ್ತು ಎಶ್ಟು ಹತ್ತಿರ ಹತ್ತಿರ ಅವನ್ನು ಅಚ್ಚುಹಾಕಬಹುದು, ಆ ಲಿಪಿಯನ್ನು ಯಾವ ರೀತಿಯಲ್ಲಿ ನುಡಿಗೆ ಅಳವಡಿಸಲಾಗಿದೆ ಮೊದಲಾದ ವಿಶಯಗಳನ್ನು ಬಳಸಿಯೂ ಅದರ ವಯ್ಜ್ನಾನಿಕತೆಯನ್ನು ನಿರ್ದರಿಸಲು ಬರುತ್ತದೆ (ಬಟ್ 2008ಕ ನೋಡಿ). ನಿಜಕ್ಕೂ ಇಂತಹ ವಿಶಯಗಳೇ ಒಂದು ನುಡಿಯ ಶ್ರೇಶ್ಟತೆಯನ್ನು ನಿರ್ದರಿಸುವಲ್ಲಿ ಮುಕ್ಯವಾದ ಪಾತ್ರವನ್ನು ವಹಿಸುತ್ತವೆ. ಆದರೆ ಇಂತಹ ವಿಶಯಗಳನ್ನು ಪರಿಶೀಲಿಸಿದಾಗ ಬಾರತದ ಎಲ್ಲಾ ಲಿಪಿಗಳಲ್ಲೂ ಒಂದೇ ರೀತಿಯ ವಯ್ಜ್ನಾನಿಕತೆಯಿರುವ ಹಾಗೆ ಕಾಣಿಸುವುದಿಲ್ಲ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಅದರ ಹಳೆ ಬರಹಕ್ಕಿಂತಲೂ `ಹೊಸ ಬರಹ’ವೇ ಹೆಚ್ಚು ವಯ್ಜ್ನಾನಿಕವಾದುದು. ಯಾಕೆಂದರೆ, ಅದರಲ್ಲಿ ಬಳಕೆಯಾಗುವ ಅಕ್ಶರಗಳಿಗೂ ಅವುಗಳ ಉಚ್ಚಾರಣೆಗೂ ನಡುವೆ ನೇರವಾದ ಹೊಂದಾಣಿಕೆಯನ್ನು ಕಲ್ಪಿಸಲಾಗಿದೆ. 4.3.3 ಬರಹದ ಕ್ಲಿಶ್ಟತೆಯನ್ನು ಯಾಕೆ ಕಡಿಮೆ ಮಾಡಬೇಕು? ಇಂಗ್ಲಿಶ್ ಇಲ್ಲವೇ ಚಯ್ನೀಸ್ ಬರಹಕ್ಕೆ ಹೋಲಿಸಿದೆವಾದರೆ, ಕನ್ನಡ ಬರಹ ನಿಜಕ್ಕೂ ತುಂಬಾ ಸುಲಬವಾದುದು. ಯಾಕೆಂದರೆ, ಇಂಗ್ಲಿಶ್ನಲ್ಲಿರುವಶ್ಟು ಕ್ಲಿಶ್ಟವಾದ ಸ್ಪೆಲ್ಲಿಂಗ್ ಸಮಸ್ಯೆ ಕನ್ನಡದಲ್ಲಿಲ್ಲ ಮತ್ತು ಚಯ್ನೀಸ್ ನುಡಿಯ ಹಾಗೆ ಕನ್ನಡಕ್ಕೆ ಸಾವಿರಾರು ಅಕ್ಶರಗಳು ಬೇಕಾಗುವುದಿಲ್ಲ. ಚಯ್ನೀಸ್ ನುಡಿಯ ಬರಹದಲ್ಲಿ ಉಚ್ಚಾರಣೆ ಒಂದೇ ಇದ್ದರೂ ಪದಗಳು ಬರಹದಲ್ಲಿ ಬಿನ್ನವಾಗಿರಬೇಕಾಗುತ್ತದೆ. ಉದಾಹರಣೆಗಾಗಿ ಹೆಂಡತಿ, ಸಮಯ, ಅಳಲು, ಏಳು ಮತ್ತು ಮೋಸಮಾಡು ಎಂಬ ಹುರುಳುಗಳನ್ನು ಕೊಡುವ ಅಯ್ದು ಪದಗಳನ್ನು ಛೀ ಎಂಬುದಾಗಿಯೇ ಓದಲಾಗುತ್ತದೆ; ಆದರೆ ಬರೆಯುವಾಗ ಮಾತ್ರ ಅವನ್ನೆಲ್ಲ ಬೇರೆ ಬೇರೆಯಾಗಿ ಬರೆಯಲಾಗುತ್ತದೆ. ಚಯ್ನೀಸ್ ಅಕ್ಶರಗಳು ಉಚ್ಚಾರಣೆಯನ್ನು ಸೂಚಿಸುವ ಬದಲು ನೇರವಾಗಿ ಪದಗಳನ್ನು ಸೂಚಿಸುತ್ತಿರುವುದೇ ಇದಕ್ಕೆ ಕಾರಣ.

ಈ ರೀತಿ ಚಯ್ನೀಸ್ ಬರಹದಲ್ಲಿ ಪದಕ್ಕೊಂದು ಅಕ್ಶರವಿರುವ ಕಾರಣ (ಇದಕ್ಕೆ ಹಲವು ಅಪವಾದಗಳೂ ಇವೆ) ಅದರಲ್ಲಿ ಬರೆದ ಪುಸ್ತಕಗಳನ್ನು ಓದಬೇಕಿದ್ದಲ್ಲಿ ಕಡಿಮೆಯೆಂದರೆ ಏಳೆಂಟು ಸಾವಿರ ಗುರುತು(ಅಕ್ಶರ)ಗಳನ್ನಾದರೂ ಕಲಿತುಕೊಳ್ಳಬೇಕಾಗುತ್ತದೆ. ಅದರ ಸಂಪೂರ್ಣ ಪದಕೋಶದಲ್ಲಿ ಒಟ್ಟು ಅರುವತ್ತು ಸಾವಿರ ಗುರುತುಗಳಿವೆ! ಚಯ್ನೀಸ್ ಬರಹದ ಈ ಕ್ಲಿಶ್ಟತೆಯಿಂದ ಒಂದು ಪ್ರಯೋಜನವೂ ಇದೆ. ಮಂದಾರಿನ್, ಕಂಟೊನೀಸ್ ಮೊದಲಾದ ಬೇರೆ ಬೇರೆ ಚಯ್ನೀಸ್ ನುಡಿಗಳನ್ನಾಡುವ ಜನರು ಒಂದು ಪದವನ್ನು ಉಚ್ಚರಿಸುವ (ಓದುವ) ಬಗೆ ಬೇರೆ ಬೇರಾದರೂ ಅದನ್ನು ಬರೆಯುವ ಬಗೆ ಒಂದೇ ಆಗಿರುತ್ತದೆ. ಇದರಿಂದಾಗಿ ಹಲವು ನುಡಿಗಳಿರುವ ಚೀನಾದಲ್ಲಿ ಒಂದೇ ಬರಹ ಬಳಕೆಯಲ್ಲಿರಲು ಸಾದ್ಯವಾಗಿದೆ. ಇಂಗ್ಲಿಶ್ ಸ್ಪೆಲ್ಲಿಂಗ್ನಲ್ಲಿರುವ ಕ್ಲಿಶ್ಟತೆಯೂ ಸ್ವಲ್ಪಮಟ್ಟಿಗೆ ಇಂತಹದೇ ಒಂದು ಪ್ರಯೋಜನವನ್ನು ಅದನ್ನು ಬಳಸುತ್ತಿರುವವರಿಗೆ ಒದಗಿಸುತ್ತದೆ. ಉದಾಹರಣೆಗಾಗಿ ಇಂಗ್ಲಿಶ್ ಬರಹವನ್ನು ಓದುವ ಬಗೆ ಇಂಗ್ಲೆಂಡ್, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೇಂಡ್ ಮೊದಲಾದ ಕಡೆಗಳಲ್ಲಿ ಬೇರೆ ಬೇರಾಗಿದ್ದರೂ ಬರೆಯುವ ಬಗೆ ಒಂದೇ ಆಗಿದೆ (ಅಮೆರಿಕಾದ ಇಂಗ್ಲಿಶ್ ಇದಕ್ಕೆ ಸ್ವಲ್ಪ ಮಟ್ಟಿಗೆ ಅಪವಾದವಾಗಿದೆ). ಅಶ್ಟೊಂದು ಕ್ಲಿಶ್ಟವಾಗಿರುವ ಚಯ್ನೀಸ್ ಬರಹವನ್ನು ಕೋಟಿಗಟ್ಟಲೆ ಜನ ಕಲಿಯುತ್ತಿದ್ದಾರಲ್ಲ? ಇಂಗ್ಲಿಶ್ ಸ್ಪೆಲ್ಲಿಂಗ್ ತುಂಬಾ ಕ್ಲಿಶ್ಟವಾಗಿದ್ದರೂ ಆ ನುಡಿ ಇವತ್ತು ಜಗತ್ತಿನ ನುಡಿಯಾಗಿ ಹೊರಹೊಮ್ಮಿದೆಯಲ್ಲ? ಹಾಗಿರುವಾಗ ಕನ್ನಡ ಬರಹದಲ್ಲಿರುವ ಸ್ವಲ್ಪವೇ ಸ್ವಲ್ಪ ಕ್ಲಿಶ್ಟತೆಯ ಕುರಿತಾಗಿ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು? ಈ ಕೇಳ್ವಿಗೆ ಉತ್ತರವಾಗಿ ಇಲ್ಲಿ ಒಂದು ಉದಾಹರಣೆಯನ್ನು ಕೊಡಬಹುದು. ಬೆಂಗಳೂರಿನ ಹೊಲಗೇರಿಗಳಲ್ಲಿ ವಾಸಿಸುವುದು ತುಂಬಾ ಕಶ್ಟದ ಕೆಲಸ. ಹಾಗಿದ್ದರೂ ಲಕ್ಶಗಟ್ಟಲೆ ಜನ ಅಲ್ಲಿ ವಾಸಿಸುತ್ತಿದ್ದಾರೆ ಮತ್ತು ಇನ್ನೂ ಹೆಚ್ಚು ಹೆಚ್ಚು ಮಂದಿ ಅಲ್ಲಿ ತುಂಬಿಕೊಳ್ಳುತ್ತಲೇ ಇದ್ದಾರೆ. ಹಾಗೆಂದು ಅವರಿಗಿಂತ ಎಶ್ಟೋ ಹೆಚ್ಚು

ಸವ್ಕರ್ಯಗಳಿರುವವರು ತಮ್ಮ ಸವ್ಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು ತಪ್ಪೇ? ರಾಜಸ್ತಾನದ ಕೆಲವೆಡೆಗಳಲ್ಲಿ ಮೂರು ನಾಲ್ಕು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರಬೇಕಾಗುತ್ತದೆ. ಮನೆಯ ಅಂಗಳದಲ್ಲೇ ಬಾವಿಯಿರುವವರು ಇದಕ್ಕಿಂತ ಎಶ್ಟೋ ವಾಸಿ. ಹಾಗಿದ್ದರೂ ಈ ಮಂದಿ ಬಾವಿಗೆ ಪಂಪು ಹಾಕಿ ನೀರನ್ನು ಎತ್ತರದ ಟೇಂಕ್ಗಳಲ್ಲಿ ತುಂಬಿಸಿ ಮನೆಯೊಳಗೆ ಕೊಳಾಯಿಗಳಲ್ಲಿ ಬರುವ ಹಾಗೆ ಮಾಡುತ್ತಾರಲ್ಲ? ಇದೆಲ್ಲ ಯಾಕೆ? ಇದನ್ನು ಸರಿಯಾಗಿ ಅರ್ತಮಾಡಿಕೊಂಡವರಿಗೆ ನಾವು ಯಾಕೆ ಕನ್ನಡ ಬರಹವನ್ನು ಇನ್ನಶ್ಟು ಸುಲಬವಾಗುವ ಹಾಗೆ ಮಾಡಬೇಕು ಎಂಬುದೂ ಸರಿಯಾಗಿ ಅರ್ತವಾಗುತ್ತದೆ. ಕೆಳವರ್ಗದ ಜನರು ಓದುಬರಹವನ್ನು ಕಲಿಯುವುದು ಇವತ್ತು ಅತ್ಯಂತ ಅವಶ್ಯವಾದರೂ ಆ ವಿಶಯದಲ್ಲಿ ನಮ್ಮ ರಾಜ್ಯದ ಮಂದಿ ತಾವಾಗಿ ಮುಂದೆ ಬರುವ ಹಾಗೆ ಕಾಣಿಸುವುದಿಲ್ಲ. ಹಾಗಾಗಿ, ಅದಕ್ಕಿರುವ ತಡೆಗಳನ್ನೆಲ್ಲ ಸಾದ್ಯವಿರುವಶ್ಟು ಕಡಿಮೆಮಾಡಲು ನಾವು ಪ್ರಯತ್ನಿಸಬೇಕು. 4.3.4 ಬರಹದ ಪ್ರಬೇದ ಎಲ್ಲಿಂದ ಬರುತ್ತದೆ? ಮಾತು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಪಂಗಡದಿಂದ ಪಂಗಡಕ್ಕೆ ಬೇರೆ ಬೇರಾಗಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಪ್ರದೇಶದ ಮತ್ತು ಪಂಗಡದ ಮಾತನ್ನು ಬರಹಕ್ಕಿಳಿಸಲಾಗುತ್ತದೆ. ಸಾಮಾನ್ಯವಾಗಿ ಯಾವ ಪ್ರದೇಶದ ಮತ್ತು ಪಂಗಡದ ಜನರು ಆ ನುಡಿಯ ಮುಕ್ಯ ಬರಹಗಾರರಾಗಿ ಮುಂದೆ ಬರುತ್ತಾರೋ ಅವರ ಮಾತು ಆ ನುಡಿಯ ಬರಹದಲ್ಲಿ ಬಳಕೆಯಾಗಿ ರೂಡಿಗೆ ಬರುತ್ತದೆ. ಉದಾಹರಣೆಗಾಗಿ, ಹಳೆಗನ್ನಡದ ಕಾಲದಲ್ಲಿ ಮೇಲ್ವರ್ಗದ ಜಯ್ನರು ಮುಕ್ಯ ಬರಹಗಾರರಾಗಿ ಮುಂದೆ ಬಂದರು. ಈ ಬರಹಗಾರರ ಮಾತು ಕರಾವಳಿಯಲ್ಲಿ ಬಳಕೆಯಲ್ಲಿದ್ದ ಮೇಲ್ವರ್ಗದವರ ಮಾತಾಗಿದ್ದು, ಅದೇ ಮಾತು ಹಳೆಗನ್ನಡದ ಬರಹದ ಪ್ರಬೇದವಾಗಿ ರೂಡಿಗೆ ಬಂತು. ಹಳೆಗನ್ನಡಕ್ಕೂ ಇವತ್ತು ಕರಾವಳಿಯಲ್ಲಿ ಬಳಕೆಯಲ್ಲಿರುವ ಹವ್ಯಕ, ಹಾಲಕ್ಕಿ, ಗವ್ಡ ಮೊದಲಾದ ಕನ್ನಡ ಪ್ರಬೇದ

ಗಳಿಗೂ ನಡುವೆ ಕಾಣಿಸುವ ಸಾಮ್ಯಗಳು ಈ ವಿಶಯವನ್ನು ಸ್ಪಶ್ಟಪಡಿಸುತ್ತವೆ (ಬಟ್ 1995, 2007 ನೋಡಿ). ನಡುಗನ್ನಡದ ಸಮಯದಲ್ಲಿ ಉತ್ತರ ಕರ್ನಾಟಕದ ವೀರಶಯ್ವರು ಮುಕ್ಯ ಬರಹಗಾರರಾಗಿ ಮುಂದೆ ಬಂದರು ಮತ್ತು ಅವರ ಮಾತು ನಡುಗನ್ನಡಕ್ಕೆ ಮಾದರಿಯಾಯಿತು. ಮುಂದೆ ಹೊಸಗನ್ನಡದ ಸಮಯದಲ್ಲಿ ಮಯ್ಸೂರಿನ ಮಹಾರಾಜರ ಆಸ್ತಾನ ವಿದ್ವಾಂಸರು ಮುಕ್ಯ ಬರಹಗಾರರಾಗಿ ಮುಂದೆ ಬಂದರು ಮತ್ತು ಮಯ್ಸೂರಿನ ಮೇಲ್ವರ್ಗದ ಜನರ ಮಾತು ಇವತ್ತಿನ ಹೊಸಗನ್ನಡಕ್ಕೆ ಆದಾರವಾಯಿತು. ಯಾವ ಪ್ರದೇಶದ ಮತ್ತು ಪಂಗಡದ ಮಾತು ಬರಹದ ಪ್ರಬೇದವಾಗಿ ಬಳಕೆಗೆ ಬರುತ್ತದೆ ಎಂಬುದು ಈ ರೀತಿ ಆಕಸ್ಮಿಕವಾಗಿ ಜರಗುವ ಕೆಲವು ಆಗುಹಗಳ ಮೇಲೆ ಅವಲಂಬಿಸಿರುತ್ತದೆ. ಅದಕ್ಕೂ ಮಾತಿನ ಯೋಗ್ಯತೆಗೂ ನಡುವೆ ಯಾವ ಸಂಬಂದವೂ ಇಲ್ಲ. ಯಾವುದೇ ಒಂದು ಪ್ರದೇಶ ಮತ್ತು ಪಂಗಡದ ಆಡುನುಡಿಗೂ ಬರಹದ ಪ್ರಬೇದವಾಗಿ ಬಳಕೆಗೆ ಬರುವ ಯೋಗ್ಯತೆಯಿದೆ. ಒಂದು ಪ್ರದೇಶದ ಇಲ್ಲವೇ ಪಂಗಡದ ಜನರು ಆಡುವ ಮಾತು ಮೇಲು ಮತ್ತು ಇನ್ನೊಂದು ಪ್ರದೇಶದ ಇಲ್ಲವೆ ಪಂಗಡದ ಜನರು ಆಡುವ ಮಾತು ಕೀಳು ಎಂಬುದಾಗಿ ಹೇಳಲು ನುಡಿಗೆ ಸಂಬಂದಿಸಿದಂತಹ ಯಾವ ಆದಾರವೂ ಇಲ್ಲ. ಮಾತು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಪಂಗಡದಿಂದ ಪಂಗಡಕ್ಕೆ ಬೇರೆಬೇರಾಗಿರುತ್ತದೆ, ಅಶ್ಟೆ. ಈ ವ್ಯತ್ಯಾಸ ಅವು ಬೇರೆ ಬೇರೆ ದಿಕ್ಕುಗಳಲ್ಲಿ ಬದಲಾಗುವುದರಿಂದಾಗಿ ಮೂಡಿಬರುತ್ತದೆ. ಅವುಗಳಲ್ಲಿ ನಡೆಯುವ ಯಾವ ಬದಲಾವಣೆಯೂ ಅವುಗಳ ಕೀಳ್ತನವನ್ನು (ಇಲ್ಲವೇ ಮೇಲ್ತನವನ್ನು) ಸೂಚಿಸುವುದಿಲ್ಲ. ಈ ವಿಶಯ ಹೆಚ್ಚಿನವರಿಗೂ ಸರಿಯಾಗಿ ಅರ್ತವಾಗುವುದಿಲ್ಲ. ಉದಾಹರಣೆಗಾಗಿ, ಪದಗಳ ಮೊದಲಿಗೆ ಬರುವ ಹಕಾರವನ್ನು ಉಚ್ಚರಿಸದಿರುವುದು (ಹಾಲು ಎಂಬುದನ್ನು ಆಲು ಎನ್ನುವುದು, ಹೇಳಿ ಎಂಬುದನ್ನು ಏಳಿ ಎನ್ನುವುದು) ಇಂತಹ ಒಂದು ಬದಲಾವಣೆ. ಹಳೆಗನ್ನಡದ ಕಾಲದಲ್ಲಿ ಪಕಾರ ಹಕಾರವಾಗಿತ್ತು; ಹಾಗೆ ಬದಲಾದ

ಹಕಾರ ಅನಂತರ ಬಿದ್ದು ಹೋಗಿರುವ ಈ ಬದಲಾವಣೆಯೂ ಅಂತಹದೇ. ಕರ್ನಾಟಕದ ಕೆಲವು ಪ್ರದೇಶಗಳ ಮತ್ತು ಪಂಗಡಗಳ ಮಾತಿನಲ್ಲಿ ಅದು ನಡೆದಿದೆ. ಆದರೆ ಈ ಬದಲಾವಣೆ ಹೊಸಗನ್ನಡವನ್ನು ಬರಹದ ಪ್ರಬೇದವಾಗಿ ಬಳಕೆಗೆ ತಂದ ಮಯ್ಸೂರಿನ ಮೇಲ್ವರ್ಗದವರ ಮಾತಿನಲ್ಲಿ ನಡೆದಿರಲಿಲ್ಲವಾದ ಕಾರಣ ಅದು ಇವತ್ತು ಹೊಸಗನ್ನಡ ಬರಹದ ಬದಲಾವಣೆಯಾಗಿ ಕಾಣಿಸುತ್ತಿಲ್ಲ. ಇದೇ ರೀತಿಯಲ್ಲಿ ಶಕಾರ ಮತ್ತು ಸಕಾರಗಳ ನಡುವಿನ ವ್ಯತ್ಯಾಸ ಹಲವು ಮಂದಿ ಕನ್ನಡಿಗರ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೊಸಗನ್ನಡ ಸಾಹಿತ್ಯವನ್ನು ಬಳಕೆಗೆ ತರುವಲ್ಲಿ ಈ ಮಾತನ್ನು ಬಳಸುವ ಜನರು ಮುಂದಾಳ್ತನ ವಹಿಸಿದ್ದರಾದರೆ, ಹೊಸಗನ್ನಡಕ್ಕೂ ಈ ಶ-ಸ ವ್ಯತ್ಯಾಸ ಅವಶ್ಯವಿಲ್ಲವೆಂದಾಗುತ್ತಿತ್ತು. ಹಳೆಗನ್ನಡದಲ್ಲಿ ಶ-ಸ ವ್ಯತ್ಯಾಸ ಇರಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದು. ಆದರೆ ಇದರಿಂದಾಗಿ ಹಳೆಗನ್ನಡಕ್ಕೆ ಕೀಳ್ತನವೇನೂ ಬಂದಿಲ್ಲ. ನುಡಿಗಳಲ್ಲಿ ಬರುವ ಪದಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತಿರುತ್ತವೆ. ಇವುಗಳಲ್ಲಿ ಮೇಲ್ತನ- ಕೀಳ್ತನವೇನಿಲ್ಲ. 4.3.5 ಮಾತನ್ನನುಸರಿಸಿ ಬರಹ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವುದು ಮಾತಿನ ಸ್ವಬಾವ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾತಿನ ವರ್ಗಾವಣೆಯಾಗುವಾಗಲೆಲ್ಲ ಇಂತಹ ಬದಲಾವಣೆಗಳು ಅದರಲ್ಲಿ ನಡೆಯುತ್ತಿರುತ್ತವೆ. ಈ ರೀತಿ ಮಾತು ಬದಲಾಗಲು ಕಾರಣವೇನೆಂದರೆ ಮಕ್ಕಳಿಗೆ ಮಾತನ್ನು ಯಾರೂ ಕಲಿಸಲು ಹೋಗುವುದಿಲ್ಲ. ಕೆಲವೊಮ್ಮೆ ತಾಯಿತಂದೆಯರು ತಮ್ಮ ಮಕ್ಕಳಿಗೆ ಮಾತನ್ನು ಕಲಿಸಲು ಮತ್ತು ಅವರಾಡುವ ಮಾತನ್ನು ತಿದ್ದಲು ಪ್ರಯತ್ನಿಸುವುದಿದೆ. ಆದರೆ ಮಕ್ಕಳು ಇದಕ್ಕೆ ಗಮನವನ್ನೇ ಕೊಡುವುದಿಲ್ಲ. ಮಕ್ಕಳ ಬೆಳವಣಿಗೆಯ ಒಂದು ಅಂಗವಾಗಿ ಮಾತು ತಾನಾಗಿಯೇ ಅವರ

ಸೊತ್ತಾಗುತ್ತದೆ. ಹೀಗೆ ಅದು ಅವರ ಸೊತ್ತಾಗುತ್ತಿರುವಾಗ ಅದರಲ್ಲಿ ನಡೆಯುವ ಬದಲಾವಣೆಗಳನ್ನು ಯಾರೂ ತಡೆಯಲಾರರು (ಬಟ್ 2008ಕ ನೋಡಿ). ಮಾತು ಬದಲಾಗುತ್ತಿರುವ ಸಮಯದಲ್ಲಿ ಬರಹ ಬದಲಾಗುವುದಿಲ್ಲ. ಯಾಕೆಂದರೆ ಮಾತಿನ ಹಾಗೆ ಅದನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ. ಅದನ್ನು ಅವರು ಶಾಲೆಗೆ ಹೋಗಿ ಕಲಿಯಬೇಕಾಗುತ್ತದೆ. ಶಾಲೆಯಲ್ಲಿ ಅವರಿಗೆ ಬರಹವನ್ನು ಕಲಿಸುವವರು ಅದು ಸ್ವಲ್ಪವೂ ಬದಲಾಗದ ಹಾಗೆ ಜಾಗ್ರತೆ ವಹಿಸುತ್ತಾರೆ. ಹಾಗಾಗಿ ಮಾತು ಬದಲಾದ ಹಾಗೆ ಬರಹ ಬದಲಾಗುವುದಿಲ್ಲ. ಬರಹದಲ್ಲಿ ಬದಲಾವಣೆಯಾಗಬೇಕಿದ್ದಲ್ಲಿ ಯಾರಾದರೂ ಬರಹಗಾರರು ಬುದ್ದಿಪೂರ್ವಕವಾಗಿ ಅದರಲ್ಲಿ ಬದಲಾವಣೆಗಳನ್ನು ನಡೆಸಲು ಪ್ರಯತ್ನಿಸಬೇಕು. ಹಳೆಗನ್ನಡ ಬರಹ ನಡುಗನ್ನಡ ಬರಹವಾಗಿ ಬದಲಾಗಲು ದಾಸರು ಮತ್ತು ವಚನಕಾರರು ಮಾಡಿರುವಂತಹ ಇಂತಹ ಒಂದು ಪ್ರಯತ್ನ ಕಾರಣ. ನಡುಗನ್ನಡ ಬರಹ ಹೊಸಗನ್ನಡ ಬರಹವಾಗಿ ಬದಲಾಗಲು ಮಯ್ಸೂರಿನ ಬರಹಗಾರರು ಮಾಡಿರುವ ಅಂತಹದೇ ಇನ್ನೊಂದು ಪ್ರಯತ್ನ ಕಾರಣ. ಆದರೆ ಈ ರೀತಿ ಬದಲಾಗುವ ಸಂದರ್ಬಗಳಲ್ಲೆಲ್ಲ ಬರಹ ಮಾತನ್ನನುಸರಿಸುತ್ತದೆ ಎಂಬುದನ್ನು ಗಮನಿಸಬೇಕು. ಮಾತಿನ ಬದಲಾವಣೆ ನಿರಂತರವಾಗಿ ತಲೆಮಾರಿನಿಂದ ತಲೆಮಾರಿಗೆ ನಡೆಯುತ್ತಲೇ ಇರುತ್ತದೆ. ಇದು ಬೇರೆ ಬೇರೆ ಊರುಗಳಲ್ಲಿ ಮತ್ತು ಪಂಗಡಗಳಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯುವುದಾದ ಕಾರಣ, ಮಾತಿನಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ವ್ಯತ್ಯಾಸಗಳು ಮೂಡಿಬರುತ್ತವೆ. ಈ ರೀತಿ ಬದಲಾಗುತ್ತಾ ಇರುವುದು ಮಾತಿನ ಜೀವಂತಿಕೆಯನ್ನು ಸೂಚಿಸುತ್ತದೆ. ಮಾತನ್ನನುಸರಿಸಿ ಬರಹ ಬದಲಾಗದೆ ಉಳಿದಲ್ಲಿ, ಅದು ನಿಂತ ನೀರಿನ ಹಾಗೆ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ವೇದ ಕಾಲದ ಸಂಸ್ಕ್ರುತದಲ್ಲಿದ್ದ ಜೀವಂತಿಕೆ ಕಾವ್ಯಗಳ ಕಾಲದ ಸಂಸ್ಕ್ರುತದಲ್ಲಿ ಕಾಣಿಸದಿರುವುದಕ್ಕೆ ಅದರಲ್ಲಿ ಬದಲಾವಣೆಗಳಾಗುವುದು

ನಿಂತುಹೋಗಿದ್ದುದೇ ಮುಕ್ಯ ಕಾರಣ. ಕಾವ್ಯಗಳ ಕಾಲದ ಸಂಸ್ಕ್ರುತವನ್ನು ಆಳವಾಗಿ ಪರಿಶೀಲಿಸಿದವರಿಗೆ ಅದರಲ್ಲಿ ಬಹಳಶ್ಟು ಕ್ರುತಕತೆ ತುಂಬಿರುವುದು ಅರಿವಿಗೆ ಬರುತ್ತದೆ. ಈ ವಿಶಯವನ್ನು ಕನ್ನಡದಲ್ಲಿ ಜೀವಂತವಾದ ಕ್ರುತಿಗಳನ್ನು ರಚಿಸಬೇಕೆಂದು ಬಯಸುವ ಸಾಹಿತಿಗಳು ಕಂಡುಕೊಂಡಿದ್ದಾರೆ. ಕತೆ- ಕಾದಂಬರಿಗಳಲ್ಲಿ ಬರುವ ಸಂಬಾಶಣೆಗಳನ್ನು ಅವರು ಆಡುನುಡಿಯಲ್ಲಿ ಬರೆಯುತ್ತಾರೆ. ಯಾಕೆಂದರೆ ಆ ರೀತಿ ಬರೆದರೇನೇ ಅವು ಜೀವಂತವಾಗಿ ಕಾಣಿಸುತ್ತವೆ. ಬರಹದ ಪ್ರಬೇದದಲ್ಲಿ ಬರೆದರೆ ಅವು ಕ್ರುತಕವಾಗಿ ತೋರುತ್ತವೆ. 4.3.6 ಬರಹದಲ್ಲಿ ತಪ್ಪು-ಸರಿ ಕನ್ನಡ ಬರಹದಲ್ಲಿ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತಲ್ಲಿರುವ ಹಾಗೆ ಬರೆದರೆ ಮಾತ್ರ ಅದು ಸರಿಯಾದ ಬರಹ, ಮಹಾಪ್ರಾಣಾಕ್ಶರಗಳನ್ನು ಅಲ್ಪಪ್ರಾಣಾಕ್ಶರಗಳನ್ನಾಗಿ (ಅಧಿಕಾರಿ ಎಂಬುದನ್ನು ಅದಿಕಾರಿ ಎಂಬುದಾಗಿ ಇಲ್ಲವೇ ಪ್ರಧಾನ ಎಂಬುದನ್ನು ಪ್ರದಾನ ಎಂಬುದಾಗಿ) ಬರೆದಲ್ಲಿ, ಇಲ್ಲವೇ ಷಕಾರವನ್ನು ಶಕಾರವಾಗಿ (ಅವಶೇಷ ಎಂಬುದನ್ನು ಅವಶೇಶ ಎಂಬುದಾಗಿ) ಇಲ್ಲವೇ ಋಕಾರವನ್ನು ರು ಎಂಬುದಾಗಿ (ಕೃತಿ ಎಂಬುದನ್ನು ಕ್ರುತಿ ಎಂಬುದಾಗಿ) ಬರೆದಲ್ಲಿ ಅದು ತಪ್ಪು ಬರಹ ಎಂಬುದಾಗಿ ಶಾಲೆಗಳಲ್ಲಿ ಓದುಬರಹವನ್ನು ಕಲಿತಿರುವವರಿಗೆ ಕನ್ನಡದ ಈ `ಹೊಸ ಬರಹ’ ತಪ್ಪು ಬರಹವಾಗಿ ಕಾಣಿಸದಿರದು. ಆದರೆ ಬರಹದಲ್ಲಿ ತಪ್ಪು-ಸರಿ ಎನ್ನುವುದು ನಾವು ನಮ್ಮೊಳಗೆ ಮಾಡಿ ಕೊಂಡಿರುವ ಒಂದು ಸಂಪ್ರದಾಯ ಇಲ್ಲವೇ ಒಡಂಬಡಿಕೆಯನ್ನು ಅವಲಂಬಿಸಿದೆ. ಇವತ್ತಿಗೆ ತಪ್ಪೆಂದು ತೋರುವ ಬರಹ ಇನ್ನೊಂದು ದಿವಸಕ್ಕೆ ಸರಿಯಾಗಲು ಸಾದ್ಯವಿದೆ. ಕೇಶಿರಾಜನ ಕಾಲದಲ್ಲಿ ಬೆರಲ್, ಕೊರಲ್ ಮೊದಲಾದ ಕೆಲವು ಪದಗಳ ಲಕಾರವನ್ನು ಳಕಾರವಾಗಿ ಬರೆಯುವ ಒಲವು ಕೆಲವರಲ್ಲಿದ್ದಿರಬೇಕು. ಈ ಪದಗಳಲ್ಲಿರುವ ಲಕಾರ ಳಕಾರವಾಗುವ

(ಬೆರಳ್, ಕೊರಳ್ ಎಂದಾಗುವ) ಬದಲಾವಣೆ ಆ ಕಾಲದ ಜನರ ಮಾತಿನಲ್ಲಿ ನಡೆದಿದ್ದುದೇ ಈ ಒಲವಿಗೆ ಮುಕ್ಯ ಕಾರಣ. ಈ ಬದಲಾವಣೆಯನ್ನು ಬರಹದಲ್ಲಿ ತೋರಿಸಬಾರದು, ಬೆರಲ್, ಕೊರಲ್ ಮೊದಲಾದುವಾಗಿ ಬರೆಯುವುದೇ ಸರಿಯಾದ ಕ್ರಮ ಎಂಬುದಾಗಿ ಕೇಶಿರಾಜನು ನಿಯಮವನ್ನು ಮಾಡಿದ್ದನು. ಆದರೆ ಅನಂತರದ ಕಾಲದಲ್ಲಿ ಕನ್ನಡದ ಬರಹಗಾರರು ತಮ್ಮ ಬರಹವನ್ನು ಮಾತಿಗೆ ಹೊಂದಿಕೊಳ್ಳುವ ಹಾಗೆ ಬದಲಾಯಿಸಿದುದರಿಂದಾಗಿ ಇವತ್ತು ಹೊಸಗನ್ನಡದ ಬರಹದಲ್ಲಿ ಬೆರಳು, ಕೊರಳು ಮೊದಲಾದುವೇ ಸರಿಯಾದ ರೂಪಗಳೆಂದೆನಿಸಿವೆ. ನಿಜಕ್ಕೂ ಬೆರಲು, ಕೊರಲು ಎಂಬುದಾಗಿ ಇವತ್ತು ಯಾರೂ ಬರೆಯುವುದಿಲ್ಲ. ಎಂದರೆ, ಆವತ್ತಿನ ಕಾಲದಲ್ಲಿ ತಪ್ಪಾಗಿದ್ದುದು ಇವತ್ತು ಸರಿಯಾಗಿದೆ ಮತ್ತು ಸರಿಯಾಗಿದ್ದುದು ತಪ್ಪಾಗಿದೆ. ಇದೇ ರೀತಿಯಲ್ಲಿ ಕೇಶಿರಾಜನು ಹಳೆಗನ್ನಡ ಬರಹದಲ್ಲಿ ¿ಕಾರವನ್ನು ಬರೆಯಬೇಕಿದ್ದಲ್ಲಿ ಳಕಾರವನ್ನು ಬರೆಯುವುದು ತಪ್ಪು ಎಂಬುದಾಗಿ ಸಾರಿದ್ದನು ಮತ್ತು ಯಾವ ಯಾವ ಪದಗಳಲ್ಲೆಲ್ಲ ¿ಕಾರವನ್ನು ಬಳಸಬೇಕು ಎಂಬುದಕ್ಕೆ ಒಂದು ಪಟ್ಟಿಯನ್ನೂ ಮಾಡಿದ್ದನು. ಆದರೆ ಅನಂತರದ ಬರಹಗಾರರು ¿ ಮತ್ತು ಳಗಳ ನಡುವಿನ ವ್ಯತ್ಯಾಸ ಮಾತಿನಲ್ಲಿ (ಉಚ್ಚಾರಣೆಯಲ್ಲಿ) ಉಳಿದಿಲ್ಲ ವೆಂಬುದನ್ನು ಗಮನಿಸಿ ಅದನ್ನು ಬರಹದಿಂದಲೂ ತೆಗೆದುಹಾಕುವ ಕೆಚ್ಚು ತೋರಿಸಿದರು. ಇದರ ಪಲವನ್ನು ನಾವೀಗ ಉಣ್ಣುತ್ತಿದ್ದೇವೆ. ಅವರು ಆ ರೀತಿ ಕನ್ನಡ ಬರಹವನ್ನು ಬದಲಾಯಿಸುವ ಎದೆಗಾರಿಕೆಯನ್ನು ತೋರಿಸದಿದ್ದಲ್ಲಿ ಮತ್ತು ¿ಕಾರವನ್ನು (ಮತ್ತು ¾ಕಾರವನ್ನು) ಮೊದಲಿದ್ದ ಹಾಗೆಯೇ ಉಳಿಸಿಕೊಂಡಿದ್ದಲ್ಲಿ ಇವತ್ತು ನಾವು ಕನ್ನಡ ಬರಹದಲ್ಲಿ ಇನ್ನಶ್ಟು ಸ್ಪೆಲ್ಲಿಂಗ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಉದಾಹರಣೆಗಾಗಿ ಎಳೆ ಪದವನ್ನು ಎಳೆದಾಡು’ ಎಂಬರ್ತದಲ್ಲಿ ಎ¿õÉ ಎಂಬುದಾಗಿ ಮತ್ತು ಎಳತು’ ಎಂಬರ್ತದಲ್ಲಿ ಎಳೆ ಎಂಬುದಾಗಿ ಬರೆಯಬೇಕಾಗುತ್ತಿತ್ತು. ಸಂಸ್ಕ್ರುತದಿಂದ ಕನ್ನಡಕ್ಕೆ ಎರವಲಾಗಿ ಪಡೆದ ಪದಗಳಲ್ಲಿರುವ ಮಹಾಪ್ರಾಣಾಕ್ಶರಗಳು, ಷಕಾರ, ಋಕಾರ ಮೊದಲಾದುವನ್ನು

ಉಚ್ಚಾರಣೆಗೆ ಅನುಸಾರವಾಗಿ ಬದಲಾಯಿಸುವುದರಿಂದ ಆ ಪದಗಳ ಸ್ವರೂಪ ಈಗಿನವರಿಗೆ ತಪ್ಪಾಗಿ ಕಾಣಿಸಬಲ್ಲುದಾದರೂ ಸಮಯ ಕಳೆದ ಹಾಗೆ ಈ ಬದಲಾಯಿಸಿದ ಸ್ವರೂಪವೇ ಕನ್ನಡ ಬರಹದ ಮಟ್ಟಿಗೆ ಸರಿಯಾದ ರೂಪವೆಂದು ತೋರದಿರದು. 4.3.7 ಬದಲಾವಣೆ ಮಾತನ್ನು ಕೆಡಿಸುವುದಿಲ್ಲ ಮಾತಿನಲ್ಲಿ ನಡೆದಿರುವ ಕೆಲವು ಬದಲಾವಣೆಗಳನ್ನು ನೋಡಿದಾಗ ಅವು ನುಡಿಯನ್ನು ಕೆಡಿಸುವಂತಹ ಬದಲಾವಣೆಗಳೆಂದು ಜನರಿಗೆ ಅನಿಸುತ್ತದೆ. ಉದಾಹರಣೆಗಾಗಿ ಮೇಲೆ ಸೂಚಿಸಿದ ಹಾಗೆ ಕನ್ನಡದ ಕೆಲವು ಆಡುನುಡಿಗಳಲ್ಲಿ ಹಕಾರ ಬಿದ್ದುಹೋಗಿದೆ. ಈ ಬದಲಾವಣೆಯಿಂದಾಗಿ ಅವರ ಕನ್ನಡ ಮಾತು ಕೆಟ್ಟುಹೋಗಿದೆಯೆಂಬುದಾಗಿ ಹಲವರಿಗೆ ಅನಿಸುತ್ತದೆ. ಹಾಲು ಎಂಬಲ್ಲಿ ಆಲು ಎನ್ನುವುದು, ಹೇಳು ಎಂಬಲ್ಲಿ ಏಳು ಎನ್ನುವುದು, ಹೂವು ಎಂಬಲ್ಲಿ ಊವು ಎನ್ನುವುದು - ಇದೆಲ್ಲ ಮಾತಿನಲ್ಲಿ ಕನ್ನಡ ಕೆಟ್ಟುಹೋಗಿರುವುದನ್ನು ಸೂಚಿಸುತ್ತದೆಯೆಂದು ಇವರು ಬಾವಿಸುತ್ತಾರೆ. ಆದರೆ ನಿಜಕ್ಕೂ ಇಂತಹ ಬದಲಾವಣೆಗಳು ಮಾತನ್ನು ಜೀವಂತವಾಗಿ ಇರಿಸುತ್ತವಲ್ಲದೆ ಅವನ್ನು ಕೆಡಿಸುವುದಿಲ್ಲ. ಹಳೆಗನ್ನಡದ ಕಾಲದಲ್ಲಿ ಇಂತಹದೇ ಒಂದು ಬದಲಾವಣೆ ಜನರ ಮಾತಿನಲ್ಲಿ ನಡೆದಿತ್ತು. ಆಗ ಪದಗಳ ಮೊದಲಿದ್ದ ಪಕಾರ ಹಕಾರವಾಗಿ ಬದಲಾಗಿತ್ತು (ಪಾಲ್>ಹಾಲು, ಪೇಳ್>ಹೇಳು, ಪೂ>ಹೂವು). ಆದರೆ ಹಳೆಗನ್ನಡ ಕಾವ್ಯಗಳಲ್ಲಿ ಪಕಾರ ಬದಲಾಗದೆ ಉಳಿದಿತ್ತು. ಅನಂತರ ಈ ಬದಲಾಗಿದ್ದ ಮಾತನ್ನನುಸರಿಸಿ ಬರಹವನ್ನೂ ಬದಲಾಯಿಸಲಾಯಿತು. ಇವತ್ತು ಹೊಸಗನ್ನಡದಲ್ಲಿ ಇಂತಹ ಬದಲಾಗಿರುವ ಪದಗಳನ್ನೇ ನಾವು ಬಳಸುತ್ತಿದ್ದೇವೆ. ಅದರಿಂದಾಗಿ ನಮ್ಮ ನುಡಿಯೇನೂ ಕೆಟ್ಟುಹೋಗಿಲ್ಲ. ಸಾಮಾನ್ಯ ಜನರ ಮಾತಿನಲ್ಲಿ ಕಾಣಿಸುವ ಇಂತಹ ಬೇರೆ ಯಾವ ರೀತಿಯ ಬದಲಾವಣೆಯನ್ನೂ ಮಾತನ್ನು ಕೆಡಿಸುವ ಬದಲಾವಣೆಯೆಂದು ತಳ್ಳಿಹಾಕಲು ಸಾದ್ಯವಾಗದು. ಅವು ಮೇಲ್ವರ್ಗದಲ್ಲಿರುವ ಜನರ ಮಾತಿನಲ್ಲಿ ನಡೆದಿರಬಹುದು ಇಲ್ಲವೇ

ಅತ್ಯಂತ ಕೆಳಗಿನ ವರ್ಗದಲ್ಲಿರುವ ಜನರ ಮಾತಿನಲ್ಲಿ ನಡೆದಿರಬಹುದು. ಸ್ವಾಬಾವಿಕವಾಗಿ, ಮಾತನಾಡುವವರ ಅರಿವಿಗೆ ಬಾರದ ಹಾಗೆ ನಡೆಯುವ ಇಂತಹ ಬದಲಾವಣೆಗಳೆಲ್ಲ ಮಾತನ್ನು ಜೀವಂತವಾಗಿರಿಸುವ ಸಾದನಗಳಲ್ಲದೆ ಕೆಡಿಸುವ ತಪ್ಪುಗಳಲ್ಲ. ಮಾತಿನಲ್ಲಿ ನಡೆದಿರುವ ಇಂತಹ ಕೆಲವು ಬದಲಾವಣೆಗಳನ್ನು ಗಮನಿಸಿದೆವಾದರೆ ಅವು ನಿಜಕ್ಕೂ ಮಾತನ್ನು ಕೆಡಿಸದೆ ಉಳಿಸಬಲ್ಲುವೇ ಎಂಬ ವಿಶಯದಲ್ಲಿ ಆಶ್ಚರ್ಯವುಂಟಾಗುತ್ತದೆ. ಉದಾಹರಣೆಗಾಗಿ ಸಂಸ್ಕ್ರುತದಿಂದ ಪ್ರಾಕ್ರುತ ಮತ್ತು ಅಪಬ್ರಂಶಗಳು ಬೆಳೆದುಬಂದಾಗ ಇಂತಹ ಹಲವಾರು ರೀತಿಯ ಬದಲಾವಣೆಗಳು ನಡೆದಿದ್ದುವು ಮತ್ತು ಅವು ನಿಜಕ್ಕೂ ಮಾತನ್ನು ಪೂರ್ತಿ ಕೆಡಿಸಿ ಹಾಕುವಂತೆ ಕಾಣಿಸುತ್ತಿದ್ದುವು (ವಿವರಗಳಿಗೆ 2.3.1 ನೋಡಿ). ಇಂತಹ ಬದಲಾವಣೆಗಳನ್ನು ಗಮನಿಸಿದ ಸಂಸ್ಕ್ರುತ ಪಂಡಿತರು ಈ ಮಾತುಗಳನ್ನು ಪ್ರಾಕ್ರುತ’ ಇಲ್ಲವೇ ಅಪಬ್ರಂಶ’ ಎಂಬುದಾಗಿ, ಎಂದರೆ ಅಶಿಕ್ಶಿತರ ಬಾಯಿಯಲ್ಲಿ `ಕೆಟ್ಟುಹೋಗಿರುವ’ ಮಾತುಗಳೆಂಬುದಾಗಿ ಹೆಸರಿಸಿದರು. ಆದರೆ ನಿಜಕ್ಕೂ ಅನಂತರ ಜೀವಂತವಾಗಿ ಉಳಿದಿರುವವು ಈ ರೀತಿ ಬದಲಾದ ಮತ್ತು ಅನಂತರ ಇನ್ನಶ್ಟು ಬದಲಾದ ಹಿಂದಿ, ಮರಾಟಿ, ಬಂಗಾಲಿ ಮೊದಲಾದ ಮಾತುಗಳಲ್ಲದೆ ಸ್ವಲ್ಪವೂ ಬದಲಾಗದೆ ಉಳಿದ ಸಂಸ್ಕ್ರುತ ನುಡಿಯಲ್ಲ. ಬದಲಾಗದೆ ಉಳಿಯುವ ಬರಹದ ನುಡಿ ತನ್ನ ಜೀವಂತಿಕೆಯನ್ನು ಕಳೆದುಕೊಂಡು ಕ್ರುತಕತೆಯನ್ನು ತುಂಬಿಕೊಳ್ಳುತ್ತದೆ. ಕನ್ನಡ ಬರಹ ಈ ರೀತಿ ಬದಲಾಗದೆ ಉಳಿಯಲಿಲ್ಲ. ಹಳೆಗನ್ನಡವಿದ್ದುದು ವಚನಕಾರರ ಪ್ರಯತ್ನದಿಂದಾಗಿ ನಡುಗನ್ನಡವಾಗಿ ಬದಲಾಯಿತು ಮತ್ತು ಅನಂತರದ ಸಾಹಿತಿಗಳ ಪ್ರಯತ್ನದಿಂದಾಗಿ ಹೊಸಗನ್ನಡವಾಗಿ ಬದಲಾಯಿತು. 4.3.8 ಗೊಂದಲವುಂಟಾಗುವ ಸಾದ್ಯತೆ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಎಲ್ಲರೂ ಅವರವರ ಉಚ್ಚಾರಣೆಗನುಸಾರವಾಗಿ ಬರೆಯ ಹೊರಟಲ್ಲಿ ಅನಿಶ್ಚಿತತೆ ಇಲ್ಲವೇ ಗೊಂದಲವುಂಟಾಗಬಲ್ಲುದು ಎಂಬುದಾಗಿ ಹಲವರು ಬಾವಿಸುತ್ತಾರೆ.

ಆದರೆ ಇಂತಹ ಪದಗಳನ್ನು ಉಚ್ಚರಿಸುವ ಹಾಗೆಯೇ ಬರೆಯುವ ತಮಿಳು, ಪಂಜಾಬಿ ಮೊದಲಾದ ಬರಹಗಳಲ್ಲಿ ಗೊಂದಲವೇನೂ ಕಾಣಿಸುತ್ತಿಲ್ಲ ಎಂಬುದರಿಂದ ಈ ಬಾವನೆಗೆ ಆದಾರವೇನೂ ಇಲ್ಲ ಎಂಬುದು ಸ್ಪಶ್ಟವಾಗುತ್ತದೆ. ಕನ್ನಡದಲ್ಲೂ ಇಂಗ್ಲಿಶ್, ಹಿಂದಿ, ಪರ್ಶಿಯನ್, ಅರೇಬಿಕ್ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಬರಹಗಾರರು ಅವರವರ ಉಚ್ಚಾರಣೆಯ ಆದಾರದ ಮೇಲೇನೇ ಬರೆಯುತ್ತಿದ್ದಾರೆ. ಈ ಬರವಣಿಗೆಯಲ್ಲಿ ಕೆಲವು ವಯ್ಯಕ್ತಿಕ ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಕಾಣಿಸುತ್ತಿವೆಯಾದರೂ ಇದರಿಂದಾಗಿ ಕನ್ನಡ ಬರಹದಲ್ಲಿ ಗೊಂದಲವೇನೂ ಉಂಟಾಗಿರುವ ಹಾಗೆ ಕಾಣಿಸುವುದಿಲ್ಲ. ಉದಾಹರಣೆಗಾಗಿ ಇಂಗ್ಲಿಶ್ನಲ್ಲಿ ಎರಡು ರೀತಿಯ ಓಕಾರ ಮತ್ತು ಏಕಾರಗಳಿವೆ. ಇವುಗಳಲ್ಲಿ ಒಂದನ್ನು ಕನ್ನಡದಲ್ಲಿ ಓಕಾರ (ಹೋಟೆಲ್, ¥sóÉÇೀಲ್ಡರ್, ಬೋಲ್್ಟ) ಮತ್ತು ಏಕಾರಗಳಾಗಿ (ನೇಶನ್, ಕೇಸ್, ಪೇಮೆಂಟ್) ಬರೆಯಲಾಗುತ್ತದೆ. ಆದರೆ ಇನ್ನೊಂದನ್ನು ಬರೆಯಲು ಕೆಲವರು ಓಕಾರ ಮತ್ತು ಏಕಾರಗಳನ್ನೇ ಬಳಸುತ್ತಾರಾದರೆ ಇನ್ನು ಕೆಲವರು ಆ ಮತ್ತು ಯಾಗಳನ್ನು ಬಳಸುತ್ತಾರೆ (ಕೋಟೇಜ್-ಕಾಟೇಜ್, ಹೋಸ್ಟೆಲ್-ಹಾಸ್ಟೆಲ್, ಬೋಡಿ-ಬಾಡಿ; ಕೇಂಪ್-ಕ್ಯಾಂಪ್, ಬೇಂಕ್-ಬ್ಯಾಂಕ್, ಡೇಮ್- ಡ್ಯಾಮ್). ವ್ಯಂಜನಗಳಲ್ಲಿ ಕೊನೆಗೊಳ್ಳುವ ಹಲವು ಇಂಗ್ಲಿಶ್ ಪದಗಳನ್ನು ಕರ್ನಾಟಕದ ದಕ್ಶಿಣ ಬಾಗದಲ್ಲಿ ಅದೇ ರೀತಿಯಲ್ಲಿ ಬರೆಯುತ್ತಾರೆ; ಆದರೆ ಉತ್ತರ ಬಾಗದಲ್ಲಿ ಅವಕ್ಕೆ ಅಕಾರವನ್ನು ಸೇರಿಸಿ ಬರೆಯುತ್ತಾರೆ (ಇಂಗ್ಲಿಷ್-ಇಂಗ್ಲಿಷ). ಇಂಗ್ಲಿಶ್ ಪದಗಳ ಕನ್ನಡ ರೂಪಗಳಲ್ಲಿ ಕಾಣಿಸುವ ಇಂತಹ ವ್ಯತ್ಯಾಸಗಳಿಂದ ಗೊಂದಲವೇನೂ ಉಂಟಾಗುವ ಹಾಗೆ ಕಾಣಿಸುವುದಿಲ್ಲ. ಇವುಗಳಲ್ಲಿ ಕೆಲವು ವ್ಯತ್ಯಾಸಗಳು ಪ್ರಾದೇಶಿಕ ವ್ಯತ್ಯಾಸಗಳಾಗಿ ಉಳಿಯಬಹುದು ಮತ್ತು ಬೇರೆ ಕೆಲವು ವ್ಯತ್ಯಾಸಗಳು ಅಳಿದುಹೋಗಿ ಯಾವುದಾದರೂ ಒಂದು ರೂಪ ಎಲ್ಲಾ ಕಡೆಗಳಲ್ಲೂ ಬಳಕೆಗೆ ಬರಬಹುದು. —