Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10
ಅಧ್ಯಾಯ 3 — ಕನ್ನಡದಲ್ಲಿ ಸ್ಪೆಲ್ಲಿಂಗ್ ಸಮಸ್ಯೆ
ಬಂದವುಗಳೆಂಬುದಾಗಿ ವಾದಿಸಲು ಸಾದ್ಯವಾಗಿರುವ ಹಾಗೆ ಸಂಸ್ಕ್ರುತ, ಲ್ಯಾಟಿನ್, ಗ್ರೀಕ್ ಮೊದಲಾದ ನುಡಿಗಳನ್ನು ಮೂಲ-ಇಂಡೋ- ಯುರೋಪಿಯನ್ ಎಂಬ ಇನ್ನೊಂದು ಕಲ್ಪಿತವಾದ ನುಡಿಯಿಂದ ಬೆಳೆದು ಬಂದವುಗಳೆಂಬುದಾಗಿ ವಾದಿಸಲು ಸಾದ್ಯವಾಗಿದೆ. ಉದಾಹರಣೆಗಾಗಿ, ಸಂಸ್ಕ್ರುತ, ಲ್ಯಾಟಿನ್ ಮತ್ತು ಗ್ರೀಕ್ ನುಡಿಗಳಲ್ಲಿ ಬಳಕೆಯಲ್ಲಿರುವ ಕೆಲವು ದಿನಬಳಕೆಯ ಪದಗಳನ್ನು ಹೋಲಿಸಿ ನೋಡಬಹುದು. ಸಂಸ್ಕ್ರುತ ಗ್ರೀಕ್ ಲ್ಯಾಟಿನ್ ಕನ್ನಡ (1) ಸಪ್ತನ್ ಹೆಪ್ತ ಸೆಪ್ತೆಮ್ ಏಳು (2) ದಶನ್ ದೆಕ ದೆಕೆಮ್ ಹತ್ತು (3) ದಂತಸ್ ಒದೊಂತೊಸ್ ದೆಂತಿನ್ ಹಲ್ಲು (4) ಪದಸ್ ಪೆದೊಸ್ ಪೆದಿಸ್ ಕಾಲು (5) ಅಷ್ಟನ್ ಒಕ್ತೊ ಒಚ್ತೊ ಎಂಟು (6) ಮಾತರ್ ಮೆತ್ರೊಸ್ ಮಾತೆರ್ ತಾಯಿ (7) ಅಸ್ತಿ ಎಸ್ತಿ ಎಸ್್ತ ಇದೆ (8) ವೃಕಸ್ ಲುಕೊಸ್ ಸುಪುಸ್ ತೋಳ (9) ಪಂಚನ್ ಪೆಂತೆ ಕಿಂಕೆ ಅಯ್ದು (10) ಅಜ್ರಸ್ ಅಗ್ರೊಸ್ ಅಗೆರ್ ಹೊಲ (11) ಭ್ರಾತರ್ ಫ್ರಾತೆರ್ ¥sóÁ್ರತೆರ್ ಅಣ್ಣ (12) ಘಮ್ರಸ್ ಥೆಮ್ರೊಸ್ ¥sóÉÇಮ್ರಸ್ ಬಿಸಿ (13) ಸ್ವಪ್ನಸ್ ಹಿಪೆÇ್ನಸ್ ಸುಮ್ನುಸ್ ಕನಸು (14) ಧೂಮಸ್ ಥೋಮೊಸ್ ¥sóÀÇಮಸ್ ಹೊಗೆ (15) ದ್ವಾ ದುಓ ದುಓ ಎರಡು (16) ತ್ರಯಸ್ ತ್ರಿಇಸ್ ತ್ರೇಸ್ ಮೂರು ಸಂಸ್ಕ್ರುತ, ಗ್ರೀಕ್ ಮತ್ತು ಲ್ಯಾಟಿನ್ ನುಡಿಗಳಲ್ಲಿ ಬಳಕೆಯಲ್ಲಿರುವ ಇಂತಹ ನೂರಾರು ಪದಗಳ ನಡುವಿರುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಆ ಮೂರು ನುಡಿಗಳ ಚರಿತ್ರೆಯಲ್ಲಿ ಕಟ್ಟಿನಿಟ್ಟಾಗಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗಿದೆ ಮತ್ತು ಇದರ ಮೂಲಕ ಅವೆಲ್ಲವೂ ಒಂದೇ ಮೂಲನುಡಿಯ
ಪದಗಳಿಂದ ಬೆಳೆದು ಬಂದವುಗಳೆಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಿದೆ. ಉದಾಹರಣೆಗಾಗಿ, ಗ್ರೀಕ್ ಮತ್ತು ಲ್ಯಾಟಿನ್ ಪದಗಳಲ್ಲಿ ಕಾಣಿಸುವ ಎಕಾರ ಮತ್ತು ಒಕಾರಗಳು ಸಂಸ್ಕ್ರುತ ಪದಗಳಲ್ಲಿ ಅಕಾರವಾಗಿ ಕಾಣಿಸಿಕೊಳ್ಳುತ್ತವೆ. ಮೇಲೆ ಕೊಟ್ಟಿರುವ 1-8, 12 ಮತ್ತು 14ನೇ ಪದಗಳಲ್ಲಿ ಈ ವ್ಯತ್ಯಾಸವನ್ನು ಕಾಣಬಹುದು. ಮೂಲನುಡಿಯ ಎಕಾರ-ಒಕಾರಗಳೆಲ್ಲ ಸಂಸ್ಕ್ರುತದಲ್ಲಿ ಅಕಾರವಾಗಿ ಬದಲಾಗಿವೆ, ಆದರೆ ಗ್ರೀಕ್ ಮತ್ತು ಲ್ಯಾಟಿನ್ ನುಡಿಗಳಲ್ಲಿ ಆ ರೀತಿ ಬದಲಾಗಿಲ್ಲ ಎಂಬ ನಿಯಮದ ಮೂಲಕ ಈ ವ್ಯತ್ಯಾಸವನ್ನು ವಿವರಿಸಬಹುದು. ಆದರೆ, ಈ ಸಂಸ್ಕ್ರುತ-ಲ್ಯಾಟಿನ್-ಗ್ರೀಕ್ ಪದಗಳಿಗೂ ಅವುಗಳ ಎದುರು ಕೊಟ್ಟಿರುವ ಕನ್ನಡ ಪದಗಳಿಗೂ ನಡುವಿರುವ ವ್ಯತ್ಯಾಸಗಳನ್ನು ಆ ರೀತಿ ಕಟ್ಟುನಿಟ್ಟಾದ ಬದಲಾವಣೆಗಳ ಮೂಲಕ ವಿವರಿಸಲು ಸಾದ್ಯವಾಗುವುದಿಲ್ಲ. ಹಾಗಾಗಿ, ಕನ್ನಡ ಈ ನುಡಿಗಳ ಮೂಲನುಡಿಯಿಂದ ತೀರ ಬೇರಾಗಿರುವ ಬೇರೊಂದು ಮೂಲನುಡಿಯಿಂದ ಬೆಳೆದು ಬಂದಿದೆ0iÉುಂಬ ವಾದವನ್ನು ಒಪ್ಪಿ ಕೊಳ್ಳಲೇಬೇಕಾಗುತ್ತದೆ. 2.3.5 ವ್ಯಾಕರಣಗಳ ನಡುವಿನ ವ್ಯತ್ಯಾಸ ಕನ್ನಡ ಮತ್ತು ಸಂಸ್ಕ್ರುತ ವ್ಯಾಕರಣಗಳ ನಡುವೆ ಕಾಣಿಸುವ ವ್ಯತ್ಯಾಸಗಳೂ ಮೇಲೆ ವಿವರಿಸಿರುವ ಪದಗಳ ನಡುವಿರುವ ವ್ಯತ್ಯಾಸಗಳ ಹಾಗೆ0iÉುೀ ಇವೆ. ಅವುಗಳಲ್ಲಿ ಹೆಚ್ಚಿನವೂ ವ್ಯಾಕರಣದ ಮೂಲತತ್ವಗಳಿಗೇನೇ ಸಂಬಂದಿಸಿರುವಂತಹ ವ್ಯತ್ಯಾಸಗಳು (ಬಟ್ 2005 ನೋಡಿ). ಹಾಗಾಗಿ ಅವನ್ನು ಕನ್ನಡದ ಇತಿಹಾಸದಲ್ಲಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಿ ಹೇಳಲು ಸಾದ್ಯವಾಗುವುದಿಲ್ಲ. ಈ ವಿಶಯದಲ್ಲೂ ಮರಾಟಿಯಿಂದ (ಮತ್ತು ಹಿಂದಿ, ಗುಜರಾತಿ, ಪಂಜಾಬಿ, ಸಿಂದಿ ಮೊದಲಾದ ಇಂಡೋ-ಆರ್ಯನ್ ನುಡಿಗಳಿಂದ) ಕನ್ನಡ ತೀರಾ ಬೇರಾಗಿದೆ. ಮರಾಟಿ ಮತ್ತು ಸಂಸ್ಕ್ರುತ ನುಡಿಗಳ
ನಡುವೆ ಅವುಗಳ ವ್ಯಾಕರಣದಲ್ಲಿ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದ ಪ್ರಾಕ್ರುತಕ್ಕೆ, ಪ್ರಾಕ್ರುತದಿಂದ ಹಳೆ ಮರಾಟಿಗೆ ಮತ್ತು ಹಳೆ ಮರಾಟಿಯಿಂದ ಇವತ್ತಿನ ಮರಾಟಿಗೆ ಎಂಬುದಾಗಿ ಬೇರೆ ಬೇರೆ ಹಂತಗಳಲ್ಲಿ ನಡೆದ ಬದಲಾವಣೆಗಳ ಮೂಲಕ ವಿವರಿಸಬಹುದು. ಆದರೆ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ವ್ಯಾಕರಣದಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಆ ರೀತಿ ಸಂಸ್ಕ್ರುತದಿಂದ ಪ್ರಾಕ್ರುತಕ್ಕೆ, ಪ್ರಾಕ್ರುತದಿಂದ ಹಳೆಗನ್ನಡಕ್ಕೆ ಮತ್ತು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಎಂಬುದಾಗಿ ಬೇರೆ ಬೇರೆ ಹಂತಗಳಲ್ಲಿ ಬದಲಾವಣೆಗಳನ್ನು ಕಲ್ಪಿಸಿಕೊಳ್ಳುವುದರ ಮೂಲಕ ವಿವರಿಸಿ ಹೇಳಲು ಸಾದ್ಯವಾಗುವುದಿಲ್ಲ. ಉದಾಹರಣೆಗಾಗಿ, ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳೆಂಬ ಮೂರು ಲಿಂಗಗಳಲ್ಲಿ ಹಂಚುವ ಕ್ರಮ ಈ ಮೂರು ನುಡಿಗಳಲ್ಲೂ ಇದೆ. ಇವುಗಳಲ್ಲಿ ಮರಾಟಿಯಲ್ಲಿರುವ ಲಿಂಗ ವ್ಯವಸ್ತೆಯನ್ನು ಬಹಳ ಸುಲಬವಾಗಿ ಸಂಸ್ಕ್ರುತದಲ್ಲಿರುವ ಲಿಂಗ ವ್ಯವಸ್ತೆಯಿಂದ ಬೆಳೆದು ಬಂದುದೆಂಬುದಾಗಿ ವಿವರಿಸಿ ಹೇಳಬಹುದು. ಆದರೆ, ಕನ್ನಡದಲ್ಲಿರುವ ಲಿಂಗ ವ್ಯವಸ್ತೆಯನ್ನು ಆ ರೀತಿ ಸಂಸ್ಕ್ರುತದ ಲಿಂಗ ವ್ಯವಸ್ತೆಯಿಂದ ಬೆಳೆದುಬಂದಿರುವ ವ್ಯವಸ್ತೆ0iÉುಂಬುದಾಗಿ ವಿವರಿಸಲು ಸಾದ್ಯವಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಕನ್ನಡದ ಲಿಂಗ ವ್ಯವಸ್ತೆ ಸಂಸ್ಕ್ರುತದ ಲಿಂಗ ವ್ಯವಸ್ತೆಯಿಂದ ತೀರ ಬೇರಾಗಿದೆ. ಕನ್ನಡದಲ್ಲಿ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ಹಂಚುವುದಕ್ಕೆ ನಾಮಪದಗಳ ಅರ್ತವೇ ಮುಕ್ಯ ಆದಾರ. ಮನುಶ್ಯರನ್ನು ಸೂಚಿಸುವ ಪದಗಳು ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಿರುತ್ತವೆ (ಗಂಡಸರನ್ನು ಸೂಚಿಸುವ ಪದಗಳು ಪುಲ್ಲಿಂಗದಲ್ಲಿರುತ್ತವೆ ಮತ್ತು ಹೆಂಗಸರನ್ನು ಸೂಚಿಸುವ ಪದಗಳು ಸ್ತ್ರೀಲಿಂಗದಲ್ಲಿರುತ್ತವೆ) ಮತ್ತು ಉಳಿದ (ಮನುಶ್ಯರನ್ನು ಸೂಚಿಸದ) ಪದಗಳು ನಪುಂಸಕ ಲಿಂಗದಲ್ಲಿರುತ್ತವೆ.
ಕನ್ನಡ ವ್ಯಾಕರಣದ ಈ ನಿಯಮಕ್ಕೆ ಕೆಲವೇ ಕೆಲವು ಅಪವಾದಗಳು ಮಾತ್ರ ಇವೆ. ಇವಕ್ಕೆ ಕಾರಣವೇನೆಂದರೆ, ಕೆಲವು ಪದಗಳ ಬಳಕೆಯಲ್ಲಿ ಅವು ಸೂಚಿಸುವ ಪ್ರಾಣಿ ಇಲ್ಲವೇ ವಸ್ತುಗಳಿಗೆ ಮನುಶ್ಯತ್ವದ ಆರೋಪವಾಗಿರುವುದರಿಂದ ಅವು ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಿ ಬರುತ್ತವೆ ಮತ್ತು ಬೇರೆ ಕೆಲವು ಪದಗಳ ಬಳಕೆಯಲ್ಲಿ ಅವು ಸೂಚಿಸುವ ಮನುಶ್ಯರಿಗೆ ತಿರಸ್ಕಾರಾರ್ತದಲ್ಲಿ ಪ್ರಾಣಿತ್ವದ ಆರೋಪವಾಗಿರುವುದರಿಂದ ಅವು ನಪುಂಸಕ ಲಿಂಗದಲ್ಲಿ ಬರುತ್ತವೆ. ಮರಾಟಿಯಲ್ಲೂ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ಹಂಚಲಾಗುತ್ತದೆ. ಆದರೆ ಈ ಹಂಚಿಕೆಗೆ ಹೆಚ್ಚಿನೆಡೆಗಳಲ್ಲೂ ನಾಮಪದಗಳ ಅರ್ತವನ್ನು ಆದಾರವಾಗಿ ಕೊಡಲು ಸಾದ್ಯವಾಗುವುದಿಲ್ಲ. ಮರಾಟಿಯ ಯಾವ ನಾಮಪದ ಯಾವ ಲಿಂಗದಲ್ಲಿ ಬಳಕೆಯಾಗುತ್ತದೆ ಎಂಬುದನ್ನು ತಿಳಿಯಲು ಆ ನುಡಿಯ ಶಬ್ದಕೋಶವನ್ನು ತೆರೆದು ನೋಡುವುದೊಂದೇ ನಮಗಿರುವ ದಾರಿ. ಮರಾಟಿಯ ಈ ಲಿಂಗ ವ್ಯವಸ್ತೆ ಸಂಸ್ಕ್ರುತದ ಲಿಂಗ ವ್ಯವಸ್ತೆಯನ್ನು ಹೋಲುತ್ತದೆ. ಸಂಸ್ಕ್ರುತದಲ್ಲಿಯೂ ಮೂರು ಲಿಂಗಗಳಿದ್ದು, ಒಂದು ನಾಮಪದದ ಲಿಂಗ ಯಾವುದೆಂಬುದನ್ನು ತಿಳಿಯಲು ಹೆಚ್ಚಿನೆಡೆಗಳಲ್ಲೂ ಅದರ ಅರ್ತ ಆದಾರವಾಗಲಾರದು. ಇದಲ್ಲದೆ, ಮರಾಟಿಯ ಪದಗಳನ್ನು ಸಂಸ್ಕ್ರುತ ಪದಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳಲ್ಲಿ ಕಾಣಿಸುವ ಲಿಂಗಬೇದ ನೇರವಾಗಿ ಸಂಸ್ಕ್ರುತ ಪದಗಳ ಲಿಂಗಬೇದದಿಂದಲೇನೇ ಬೆಳೆದುಬಂದುದೆಂಬ ವಿಶಯ ಸ್ಪಶ್ಟವಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಮರಾಟಿ, ಸಂಸ್ಕ್ರುತ ಮತ್ತು ಕನ್ನಡ ಪದಗಳಲ್ಲಿ ಕಾಣಿಸುವ ಲಿಂಗ ವ್ಯವಸ್ತೆಯನ್ನು ಹೋಲಿಸಿ ನೋಡಬಹುದು. ಈ ಪದಗಳು ಸಂಸ್ಕ್ರುತ ಮತ್ತು ಮರಾಟಿ ನುಡಿಗಳಲ್ಲಿ ಮೂರು ಬೇರೆ ಬೇರೆ ಲಿಂಗಗಳಲ್ಲಿ ಬಳಕೆಯಾಗುತ್ತವೆ; ಆದರೆ ಕನ್ನಡದಲ್ಲಿ ಇವೆಲ್ಲವೂ ನಪುಂಸಕವೆಂಬ ಒಂದೇ ಲಿಂಗದಲ್ಲಿ ಬರುತ್ತವೆ. ಇದಲ್ಲದೆ, ಈ ಮರಾಟಿ ಪದಗಳಲ್ಲಿ ಕಾಣಿಸುವ ಲಿಂಗಬೇದ ಬಹಳ ಸ್ಪಶ್ಟವಾಗಿ ಸಂಸ್ಕ್ರುತ ಪದಗಳ ಲಿಂಗಬೇದ ದಿಂದಲೇನೇ ಬೆಳೆದುಬಂದಿದೆ.
ಪುಲ್ಲಿಂಗದ ಪದಗಳು ಮರಾಟಿ ಸಂಸ್ಕ್ರುತ ಕನ್ನಡ ಓಠ್ ಓಷ್ಠಃ ತುಟಿ ಕಂಠ್ ಕಂಠಃ ಕುತ್ತಿಗೆ ಕಾನ್ ಕಣ್ರಃ ಕಿವಿ ಕುವಾ ಕೂಪಃ ಬಾವಿ ತೀಳ್ ತಿಲಃ ಎಳ್ಳು ದೇಸ್ ದೇಶಃ ನಾಡು ದಿವಾ ದೀಪಃ ದೀಪ ನಾಸ್ ನಾಶಃ ನಾಶ ಸ್ತ್ರೀಲಿಂಗದ ಪದಗಳು ಜೀಭ್ ಜಿಹ್ವಾ ನಾಲಿಗೆ ತುಳಸ್ ತುಲಸೀ ತುಲಸಿ ದೀಠ್ ದೃಷ್ಟಿಃ ನೋಟ ಪ್ಯಾಸ್ ಪಿಪಾಸಾ ಬಾಯಾರಿಕೆ ಬುಧ್ ಬುದ್ಧಿಃ ಬುದ್ದಿ ಜಾಂಗ್ ಜಂಘಾ ತೊಡೆ ಕಹ್ರಾಡ್ ಕುಠಾರೀ ಕೊಡಲಿ ಜಾಟ್ ಜಟಾ ಜಡೆ ನಪುಂಸಕಲಿಂಗದ ಪದಗಳು ಕಾಜ್ ಕಾಯ್ರಂ ಕೆಲಸ ಚಾಕ್ ಚಕ್ರಂ ಗಾಲಿ ಚಾಮ್ ಚಮ್ರನ್ ಚರ್ಮ ರಹಸ್ ರಹಸ್ಯಂ ರಹಸ್ಯ ಪೀಠ್ ಪಿಷ್ಟಂ ಹಿಟ್ಟು ತಣ್ ತೃಣಂ ಹುಲ್ಲು ದೂಧ್ ದುಗ್ಧಂ ಹಾಲು
ಕಾಮ್ ಕಮ್ರನ್ ಕೆಲಸ ಮೇಲೆ ಕೊಟ್ಟಿರುವ ಕನ್ನಡ ಪದಗಳಲ್ಲಿ ದೀಪ, ನಾಶ, ಬುದ್ದಿ, ಜಡೆ, ಚರ್ಮ ಮೊದಲಾದ ಕೆಲವು ಪದಗಳು ಸಂಸ್ಕ್ರುತದಿಂದ ಎರವಲಾಗಿ ಬಂದವುಗಳು; ಉಳಿದವುಗಳನ್ನು ಕನ್ನಡ ನುಡಿ ತನ್ನ ಮೂಲ ನುಡಿಯಿಂದ ಪಡೆದುಕೊಂಡಿದೆ. ಹೀಗಿದ್ದರೂ ಈ ಎಲ್ಲಾ ಪದಗಳೂ ಕನ್ನಡದಲ್ಲಿ ನಪುಂಸಕ ಲಿಂಗದಲ್ಲೇನೇ ಬಳಕೆಯಾಗುತ್ತವೆ. ಆದರೆ ಮರಾಟಿಯಲ್ಲಿ ಈ ಪದಗಳು ಸಂಸ್ಕ್ರುತದ ಹಾಗೆ ಬೇರೆ ಬೇರೆ ಲಿಂಗಗಳಲ್ಲಿ ಬಳಕೆಯಾಗುತ್ತವೆ ಮತ್ತು ಅದರಲ್ಲಿ ಕಾಣಿಸುವ ಈ ಲಿಂಗಬೇದ ಸಂಸ್ಕ್ರುತದಲ್ಲಿರುವ ಲಿಂಗಬೇದದ ಹಾಗೆ0iÉುೀ ಇದೆ. ಇದಲ್ಲದೆ, ಸಂಸ್ಕ್ರುತದಲ್ಲಿ ಕಾಣಿಸುವಂತಹ ಈ ಅರ್ತವನ್ನವಲಂಬಿಸದ ಲಿಂಗ ವ್ಯವಸ್ತೆ ಲ್ಯಾಟಿನ್, ಗ್ರೀಕ್ ಮೊದಲಾದ ಇತರ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಬಳಕೆಯಲ್ಲಿದ್ದು, ಅದು ಮೂಲ ಇಂಡೋ-ಯುರೋಪಿಯನ್ ನುಡಿಯಿಂದ ಬೆಳೆದುಬಂದಿದೆ0iÉುಂಬುದಾಗಿ ಕಲ್ಪಿಸಿಕೊಳ್ಳಲು ಸಾದ್ಯವಾಗಿದೆ. ಇಂಗ್ಲಿಶ್, ಆರ್ಮೇನಿಯನ್, ಇವತ್ತಿನ ಪರ್ಶಿಯನ್ನಂತಹ ಕೆಲವೇ ಕೆಲವು ಇಂಡೋ-ಯುರೋಪಿಯನ್ ನುಡಿಗಳು ಮಾತ್ರ ಈ ವ್ಯವಸ್ತೆಯನ್ನು ಬಿಟ್ಟುಕೊಟ್ಟು ಅರ್ತವನ್ನವಲಂಬಿಸಿದ ಲಿಂಗವ್ಯವಸ್ತೆಯನ್ನು ತಮ್ಮದಾಗಿಸಿ ಕೊಂಡಿವೆ. 2.4 ಬೇರೆ ಆದಾರಗಳ ಸಾದ್ಯತೆ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬ ನಂಬಿಕೆಗೆ ಈ ರೀತಿ ನೇರವಾಗಿ ನುಡಿಗೆ ಸಂಬಂದಿಸಿದಂತಹ ಆದಾರವನ್ನು ಕೊಡಲು ಸಾದ್ಯವಿಲ್ಲದಿದ್ದರೂ ಬೇರೆ ಯಾವುದಾದರೂ ಆದಾರವನ್ನು ಕೊಡಲು ಸಾದ್ಯವೇ ಎಂಬುದನ್ನೂ ಇಲ್ಲಿ ಪರಿಶೀಲಿಸುವ ಅವಶ್ಯಕತೆಯಿದೆ. ಕನ್ನಡದ ಸಾಹಿತ್ಯ ಪರಂಪರೆಯ ಮೇಲೆ ಮತ್ತು ವ್ಯಾಕರಣ, ವೇದಾಂತ ಮೊದಲಾದ ಶಾಸ್ತ್ರ ಪರಂಪರೆಯ ಮೇಲೆ ಸಂಸ್ಕ್ರುತ ಸಾಕಶ್ಟು ಪ್ರಬಾವ ಬೀರಿದೆ0iÉುಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಆದರೆ ಈ ಪ್ರಬಾವದ ಹೊರಗೂ ಕನ್ನಡದಲ್ಲಿ ಸಾಕಶ್ಟು ಸಾಹಿತ್ಯರಚನೆಗಳು ಮತ್ತು ಶಾಸ್ತ್ರ ವಿಶಯಗಳಲ್ಲಿ ಸಂಶೋದನೆಗಳು ನಡೆದಿವೆ. ಕನ್ನಡದ ವಚನ ಸಾಹಿತ್ಯ ಮತ್ತು ಇತ್ತೀಚೆಗೆ ಕನ್ನಡದಲ್ಲಿ ಬರೆಯಲಾಗಿರುವ ಬೇರೆ ಬೇರೆ ರೀತಿಯ ಕತೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಕ್ರುತಿಗಳು ಬರಹಗಾರರದೇ ಆದ ಅನುಬವಗಳ ಮೇಲೆ ಅವಲಂಬಿಸಿವೆ. ಇದಲ್ಲದೆ ಮೇಲೆ ಸೂಚಿಸಿದ ಹಾಗೆ, ಕನ್ನಡದ ಮೇಲೆ ಸಂಸ್ಕ್ರುತಕ್ಕಿರುವ ಈ ಪ್ರಬಾವ ಕಳೆದ ಒಂದೆರಡು ಸಾವಿರ ವರ್ಶಗಳಲ್ಲಿ ನಡೆದಿರುವಂತಹದು; ನುಡಿಯೊಂದರ ಚರಿತ್ರೆ0iÉುಂಬುದು ಹಲವಾರು ಸಾವಿರ ವರ್ಶಗಳಶ್ಟು ಹಿಂದಕ್ಕೆ ಹೋಗುವಂತಹದಾದ ಕಾರಣ, ಈ ಪ್ರಬಾವ ಕನ್ನಡದ ಮೂಲನುಡಿ ಯಾವುದೆಂಬುದನ್ನು ನಿರ್ದರಿಸುವಲ್ಲಿ ಸಹಾಯಕವಾಗಲಾರದು. 2.5 ತಿರುಳು ಕನ್ನಡವನ್ನು ತಕ್ಕಶ್ಟು ಬಲ್ಲ ಹಲವು ಮಂದಿ ಕನ್ನಡಿಗರು ಇವತ್ತಿಗೂ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬ ಅಬಿಪ್ರಾಯದಲ್ಲಿದ್ದಾರೆ. ಈ ಅಬಿಪ್ರಾಯ ತಪ್ಪು, ಅದಕ್ಕೆ ಯಾವ ಆದಾರವೂ ಇಲ್ಲ ಎಂಬುದನ್ನು ಈ ಅದ್ಯಾಯದಲ್ಲಿ ಬಹಳ ಸ್ಪಶ್ಟವಾಗಿ ತೋರಿಸಿಕೊಡಲಾಗಿದೆ. ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದಾಗಿ ವಾದಿಸಬೇಕಿದ್ದಲ್ಲಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನೆಲ್ಲ ಕನ್ನಡದ ಇತಿಹಾಸದಲ್ಲಿ ನಡೆದ ಬದಲಾವಣೆಗಳ ಪರಿಣಾಮ ಎಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಬೇಕು. ಆದರೆ, ಹಾಗೆ ತೋರಿಸಿಕೊಡಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ. ಇಲ್ಲಿ ಒಂದು ಮುಖ್ಯವಾದ ವಿಶಯವನ್ನು ಗಮನಿಸುವುದು ಅವಶ್ಯ. ಸಂಸ್ಕ್ರುತ ಮತ್ತು ಕನ್ನಡ ನುಡಿಗಳು ಎರಡು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರುತ್ತವೆಯಲ್ಲದೆ ಒಂದೇ ನುಡಿಕುಟುಂಬದೊಳಗೆ ಬರುವುದಿಲ್ಲ ಎಂಬ ನಿರ್ದಾರಕ್ಕೆ ಬಹಳ
ದೀರ್ಗವಾದ ಮತ್ತು ವಿಸ್ತಾರವಾದ ಸಂಶೋದನೆ ಆದಾರವಾಗಿದೆ. ಇದನ್ನು ಸಮರ್ತಿಸುವ ನೂರಾರು ಬರಹಗಳು (ಮುಕ್ಯವಾಗಿ ಇಂಗ್ಲಿಶ್ನಲ್ಲಿ) ಈಗಾಗಲೇ ಪ್ರಕಟವಾಗಿವೆ ಮತ್ತು ಈಗಲೂ ಪ್ರಕಟವಾಗುತ್ತಿವೆ. ಆದರೆ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬ ವಾದಕ್ಕಾಗಲಿ ಇಲ್ಲವೇ ಎಲ್ಲಾ ನುಡಿಗಳಿಗೂ ಸಂಸ್ಕ್ರುತವೇ ಮೂಲ ಎಂಬ ವಾದಕ್ಕಾಗಲಿ ಯಾವುದೊಂದು ಸಂಶೋದನೆಯೂ ಆದಾರವಾಗಿಲ್ಲ. ಅದೊಂದು ಹಳೇ ನಂಬಿಕೆಯ ಮೇಲೆ ನಿಂತಿರುವ ವಾದ ಮಾತ್ರ. ನಮ್ಮಲ್ಲಿರುವ ಕೆಲವರು ವಿದ್ವಾಂಸರಿಗೆ ಸಂಸ್ಕ್ರುತದ ಮೇಲಿರುವ ಅಬಿಮಾನ ಮತ್ತು ಆದರಗಳು ಮಾತ್ರ ಅದಕ್ಕೆ ಇವತ್ತು ಆದಾರವಾಗಬಲ್ಲುವು.
ಒಂದನೇ ವಿಬಾಗ ಕನ್ನಡಕ್ಕೆ ಬೇಕಾಗಿರುವ ಲಿಪಿಕ್ರಾಂತಿ
- ಕನ್ನಡದ ಸ್ಪೆಲ್ಲಿಂಗ್ ಸಮಸ್ಯೆ 3.1 ಉಚ್ಚಾರಣೆ ಮತ್ತು ಬರಹ ಕನ್ನಡ ಬರಹ ಮೇಲ್ವರ್ಗದವರ ಬಳಕೆಯಲ್ಲಿ ಮಾತ್ರವೇ ಉಳಿಯದೆ ಇಡೀ ಸಮಾಜದ ಬಳಕೆಗೆ ಒಳಪಡಬೇಕಾಗಿದ್ದಲ್ಲಿ ಮತ್ತು ಅದು ಎಲ್ಲಾ ಕನ್ನಡಿಗರ ಸೊತ್ತಾಗಬೇಕಿದ್ದಲ್ಲಿ ಹೆಚ್ಚಿನ ಜನರ ಕನ್ನಡ ಮಾತಿಗೂ ಕನ್ನಡ ಬರಹಕ್ಕೂ ನಡುವಿರುವ ಅಂತರ ಸಾಕಶ್ಟು ಕಡಿಮೆಯಾಗುವುದು ಅವಶ್ಯ. ಹೀಗಾಗಬೇಕಿದ್ದಲ್ಲಿ ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳನ್ನು ಅತಿಯಾಗಿ ಬಳಸುವ ಚಾಳಿಯನ್ನು ಕನ್ನಡ ಬರಹಗಾರರು ಬಿಟ್ಟುಕೊಡಬೇಕು ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವ ಪ್ರಯತ್ನ ನಡೆಸಬೇಕು ಎಂಬುದನ್ನು ಮೇಲೆ ಮೊದಲನೆಯ ಅದ್ಯಾಯದಲ್ಲಿ ನೋಡಿರುವೆವು. ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲೇಬೇಕಾಗುವಂತಹ ಸಂದರ್ಬಗಳು ಹಲವು ಬರಬಹುದು. ಈಗಾಗಲೇ ಬರಹದಲ್ಲಿ ಮತ್ತು ಮಾತಿನಲ್ಲಿ ನೂರಾರು ಸಂಸ್ಕ್ರುತ ಪದಗಳು ಬಳಕೆಗೆ ಬಂದಿವೆ. ಇವನ್ನೆಲ್ಲ ಒಂದೇ ಬಾರಿಗೆ ಬದಲಿಸಲು ಸಾದ್ಯವಾಗದು ಮತ್ತು ಹಾಗೆ ಬದಲಿಸುವ ಅವಶ್ಯಕತೆಯೂ ಇಲ್ಲ. ಆದರೆ ಈ ಪದಗಳ ಉಚ್ಚಾರಣೆಗೂ ಬರವಣಿಗೆಗೂ ನಡುವೆ ಕಾಣಿಸುವ ಹಲವು ರೀತಿಯ ಅವಶ್ಯವಿಲ್ಲದ ವ್ಯತ್ಯಾಸಗಳನ್ನು ಇಲ್ಲವಾಗಿಸಲು ಸಾದ್ಯವಿದೆ. ಸಂಸ್ಕ್ರುತ ಪದಗಳ ಬಳಕೆಯಲ್ಲಿ ಉಚ್ಚಾರಣೆ ಮತ್ತು ಬರವಣಿಗೆಗಳ ನಡುವೆ ಕಾಣಿಸುವ ಈ ವ್ಯತ್ಯಾಸಗಳಿಂದಾಗಿ ಕನ್ನಡ
ಬರಹದಲ್ಲಿ ಹಲವು ರೀತಿಯ ಸ್ಪೆಲ್ಲಿಂಗ್ ಸಮಸ್ಯೆಗಳು ಮೂಡಿಬಂದಿವೆ. ಈ ಸ್ಪೆಲ್ಲಿಂಗ್ ಸಮಸ್ಯೆಗಳೆಲ್ಲವನ್ನೂ ಬಹಳ ಸುಲಬವಾಗಿ ಹೋಗಲಾಡಿಸಬಹುದು. ಅದಕ್ಕಾಗಿ ಸಂಸ್ಕ್ರುತ ಪದಗಳನ್ನು ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆಯೇ ಬರೆಯ ತೊಡಗಿದರೆ ಸಾಕು. ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವುದಕ್ಕಾಗಿ ಕನ್ನಡ ಬರಹವನ್ನು ಕಲಿಯುವವರು ಅನವಶ್ಯಕವಾಗಿ ಬೇಕಾದುದಕ್ಕಿಂತ ಹೆಚ್ಚು ಅಕ್ಶರಗಳನ್ನು ಕಲಿಯಬೇಕಾಗಿದೆ. ಯಾಕೆಂದರೆ ಖಛಠಥಫ, ಘಝಢಧಭ, ಋಕಾರ, ಷಕಾರ, ವಿಸರ್ಗ ಮೊದಲಾದವು ಕನ್ನಡದವೇ ಆದ ಪದಗಳನ್ನು ಬರೆಯುವುದಕ್ಕೆ ಬೇಕಾಗಿಲ್ಲವಾದರೂ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವುದಕ್ಕಾಗಿ ಅವನ್ನು ನಮ್ಮ ಬರಹದಲ್ಲಿ ಇರಿಸಿಕೊಳ್ಳಲಾಗಿದೆ. ಕನ್ನಡ ಬರಹ ಎಲ್ಲರ ಸೊತ್ತಾಗಬೇಕಿದ್ದಲ್ಲಿ ಉಚ್ಚಾರಣೆಗೆ ಮಹತ್ವ ಕೊಡುವ ಮತ್ತು ಅವಶ್ಯವಿಲ್ಲದ ಇಂತಹ ಅಕ್ಶರಗಳನ್ನು ನಮ್ಮ ಬರಹದಿಂದ ತೆಗೆದುಹಾಕುವ ಒಂದು `ಲಿಪಿಕ್ರಾಂತಿ’ ನಡೆಯಬೇಕಾಗಿದೆ. ಈ ಕ್ರಾಂತಿಯ ಸ್ವರೂಪವೇನು ಮತ್ತು ಅದನ್ನು ನಡೆಸುವ ಸಾದ್ಯತೆಯೆಂತಹದು ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. 3.2 ಕನ್ನಡ ಬರಹದಲ್ಲಿ ಸಂಸ್ಕ್ರುತ ಪದಗಳು ಮೇಲೆ ಸೂಚಿಸಿದ ಹಾಗೆ, ಸಂಸ್ಕ್ರುತ ಪದಗಳನ್ನು ಕನ್ನಡ ಬರಹಗಳಲ್ಲಿ ಬಳಸುವಾಗಲೆಲ್ಲ ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬುದಾಗಿ ಕನ್ನಡ ಬರಹಗಾರರು ಒಂದು ಕಟ್ಟಲೆಯನ್ನು ಮಾಡಿಕೊಂಡಿದ್ದಾರೆ. ಈ ಬರಹಗಾರರಲ್ಲಿ ಹೆಚ್ಚಿನವರೂ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿಕೊಂಡಿರುವರಾದ ಕಾರಣ, ಹೀಗೆ ಮಾಡುವುದು ಅವರಿಗೆ ಹೆಚ್ಚು ಕಶ್ಟವೆಂದೆನಿಸುವುದಿಲ್ಲ.
ಆದರೆ ಕನ್ನಡ ಬರಹಗಳನ್ನು ಬಳಸಬೇಕಾಗಿರುವ ಜನಸಾಮಾನ್ಯರ ಮಟ್ಟಿಗೆ ಇದು ಒಂದು ತುಂಬಾ ತೊಡಕಿನ ಹೊರೆಯಾಗಿದೆ. ಯಾಕೆಂದರೆ, ಎರವಲಾಗಿ ಪಡೆದಿರುವ ಈ ಸಂಸ್ಕ್ರುತ ಪದಗಳನ್ನು ಉಚ್ಚರಿಸುವಾಗ ಯಾರೂ (ಮೇಲ್ವರ್ಗದ ಬರಹಗಾರರೂ) ಇಂತಹ ಕಟ್ಟಲೆಯನ್ನು ಪಾಲಿಸುವುದಿಲ್ಲ. ಅವುಗಳಲ್ಲಿ ಕಾಣಿಸುವ ಹಲವು ರೀತಿಯ ವ್ಯತ್ಯಾಸಗಳನ್ನು ಹೆಚ್ಚಿನ ಕನ್ನಡಿಗರೂ ತಮ್ಮ ಉಚ್ಚಾರಣೆಯಲ್ಲಿ ತೋರಿಸುವುದಿಲ್ಲ. ಹಾಗಾಗಿ ಹೆಚ್ಚಿನ ಕನ್ನಡಿಗರಿಗೂ ಸಂಸ್ಕ್ರುತ ಪದಸ್ವರೂಪ ಪರಿಚಿತವಾದುದಲ್ಲ. ಕನ್ನಡ ಬರಹಗಳನ್ನು ಓದಲು ಕಲಿಯುವುದಕ್ಕಾಗಿ ಮತ್ತು ಕನ್ನಡದಲ್ಲಿ ಬರೆಯುವುದಕ್ಕಾಗಿ ಮಾತ್ರ ಅವರು ಈ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಸಂಸ್ಕ್ರುತ ಪದಗಳಲ್ಲಿ ಬರುವ ಅಲ್ಪಪ್ರಾಣ- ಮಹಾಪ್ರಾಣ ವ್ಯತ್ಯಾಸ ನೂರರಲ್ಲಿ ತೊಂಬತ್ತೊಂಬತ್ತು ಮಂದಿ ಕನ್ನಡಿಗರ ಉಚ್ಚಾರಣೆ ಯಲ್ಲೂ ಕಾಣಿಸುವುದಿಲ್ಲ. ಮುಖ್ಯಮಂತ್ರಿ ಎಂಬುದು ಎಲ್ಲರ ಉಚ್ಚಾರಣೆಯಲ್ಲೂ ಮುಕ್ಯಮಂತ್ರಿ ಎಂದಾಗುತ್ತದೆ, ಪ್ರಧಾನ ಮತ್ತು ಪ್ರದಾನಗಳು ಒಂದೇ ರೀತಿಯಾಗಿ ಕೇಳಿಸುತ್ತವೆ. ಕೆಲವರು ವಿದ್ವಾಂಸರು ಮಾತ್ರ ಇಂತಹ ಪದಗಳಲ್ಲಿ ಬರುವ ಮಹಾಪ್ರಾಣಾಕ್ಶರಗಳನ್ನು ಸರಿಯಾಗಿ ಉಚ್ಚರಿಸುತ್ತಿರಬಹುದು; ಆದರೆ ಈ ಉಚ್ಚಾರಣೆ ಇತರರಿಗೆ ಸ್ವಲ್ಪ ವಿಚಿತ್ರವಾಗಿ ತೋರದಿರದು. ಇದಲ್ಲದೆ ಅಂತಹ ಜನರೂ ಎಲ್ಲಾ ಸಂದರ್ಬಗಳಲ್ಲೂ ಈ ರೀತಿ ಮಹಾಪ್ರಾಣಾಕ್ಶರಗಳನ್ನು ಸರಿಯಾಗಿ ಉಚ್ಚರಿಸುವುದಿಲ್ಲ; ಎಚ್ಚರದಿಂದ ಈ ಪದಗಳನ್ನು ಬಳಸುವ ಸಂದರ್ಬಗಳಲ್ಲಿ ಮಾತ್ರ ಹಾಗೆ ಉಚ್ಚರಿಸುತ್ತಾರೆ. ಇನ್ನು ಕೆಲವರು ತಾವು ಅವನ್ನು ಸರಿಯಾಗಿ ಉಚ್ಚರಿಸುತ್ತೇವೆಂದು ಬಾವಿಸುತ್ತಾರೆ. ಆದರೆ ನಿಜಕ್ಕೂ ಅವರು ಹಾಗೆ ಉಚ್ಚರಿಸುವುದಿಲ್ಲ. ಅವರ ಉಚ್ಚಾರಣೆಯಲ್ಲಿ ಅವು ಅಲ್ಪಪ್ರಾಣಾಕ್ಶರಗಳಾಗಿಯೇ ಉಳಿಯುತ್ತವೆ.
ಶ-ಷ, ಋ-ರು ಮೊದಲಾದ ಬೇರೆ ಕೆಲವು ವ್ಯತ್ಯಾಸಗಳೂ ಇದೇ ರೀತಿಯಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಬರವಣಿಗೆಯಲ್ಲಿ ಕಾಣಿಸುತ್ತವೆ; ಆದರೆ ಅವುಗಳ ಉಚ್ಚಾರಣೆಯಲ್ಲಿ ಕಾಣಿಸುವುದಿಲ್ಲ. ವಿಶೇಷ ಎಂಬುದಾಗಿ ಬರೆಯುತ್ತೇವೆ; ಆದರೆ ವಿಶೇಶ ಎಂಬುದಾಗಿ ಓದುತ್ತೇವೆ. ಋಷಿ ಎಂಬುದಾಗಿ ಬರೆಯುತ್ತೇವೆ; ಆದರೆ ರುಶಿ ಎಂಬುದಾಗಿ ಓದುತ್ತೇವೆ (ಕೆಲವು ಮಂದಿ ಋಕಾರದ ಬದಲು ರು ಎಂಬುದನ್ನು ಬಳಸುವಾಗ ಅದರಲ್ಲಿರುವ ಉಕಾರವನ್ನು ತುಟಿಯನ್ನು ದುಂಡಗಾಗಿಸಿ ಉಚ್ಚರಿಸುವ ಬದಲು ಅಗಲಿಸಿ ಉಚ್ಚರಿಸುತ್ತಾರೆ; ಆದರೆ ಯಾರೂ (ಸಂಸ್ಕ್ರುತ ಪಂಡಿತರೂ) ಋಕಾರವನ್ನು ಒಂದು ಸ್ವರವಾಗಿ ಉಚ್ಚರಿಸುವುದಿಲ್ಲ). ಸಂಸ್ಕ್ರುತ ಪದಗಳಲ್ಲಿ ಕಾಣಿಸುವ ವಿಸರ್ಗವೂ ಹೀಗೆಯೇ. ಪದಗಳ ಕೊನೆಯಲ್ಲಿ ಅದು ಹಕಾರವಾಗಿ ಅದರ ಹಿಂದಿರುವ ಸ್ವರಕ್ಕೆ ಸಮನಾಗಿರುವ ಸ್ವರದೊಂದಿಗೆ ಉಚ್ಚಾರಣೆಯಾಗುತ್ತದೆ (ಬಹುಶಃ - ಬಹುಶಹ, ಕೃತಿಃ - ಕ್ರುತಿಹಿ), ಮತ್ತು ಪದಗಳ ನಡುವೆ ಅದರ ಅನಂತರ ಬರುವ ವ್ಯಂಜನದ ಹಾಗೆಯೇ ಇರುವ ಇನ್ನೊಂದು ವ್ಯಂಜನವಾಗಿ (ಇಲ್ಲವೇ ಹಕಾರವಾಗಿ) ಉಚ್ಚಾರಣೆಯಾಗುತ್ತದೆ (ದುಃಖ - ದುಕ್ಕ, ಅಂತಃಪುರ - ಅಂತಪ್ಪುರ, ಅಂತಹ್ಪುರ). ಈ ರೀತಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೆಲ್ಲ ನಾವು ಉಚ್ಚಾರಣೆಯ ಮಟ್ಟಿಗೆ ಕನ್ನಡ ಪದಗಳ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಹಲವು ರೀತಿಯಲ್ಲಿ ಬದಲಾಯಿಸಿಕೊಂಡಿದ್ದೇವೆ; ಆದರೆ ಬರಹದಲ್ಲಿ ಮಾತ್ರ ಇವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಕನ್ನಡಿಗರ ಉಚ್ಚಾರಣೆಯಲ್ಲಿ ಮಹಾಪ್ರಾಣ ವ್ಯಂಜನಗಳು, ಋಕಾರ, ಷಕಾರ, ವಿಸರ್ಗ ಮೊದಲಾದವುಗಳು ಕಾಣಿಸುವುದಿಲ್ಲವೆಂಬ ಮೇಲಿನ ಮಾತನ್ನು ನಾನು ವಿಸ್ತಾರವಾದ ಸಂಶೋದನೆಯ ಆದಾರದ ಮೇಲೆ ಹೇಳುತ್ತಿದ್ದೇನಲ್ಲದೆ ಮೇಲ್ಮೇಲಿನ ಅವಲೋಕನದ ಮೇಲೆ ಇಲ್ಲವೇ ಊಹೆಯ ಮೇಲೆ ಹೇಳುತ್ತಿಲ್ಲ. ನಾನು ಉಲಿಯರಿಮೆಯಲ್ಲಿ (¥sóÉÇನೆಟಿಕ್್ಸನಲ್ಲಿ) ಸಾಕಶ್ಟು ಪರಿಣತಿಯನ್ನು ಪಡೆದಿದ್ದೇನೆ ಮತ್ತು
ಹಲವು ವರ್ಶ ಅದನ್ನು ಕಲಿಗರಿಗೆ ಕಲಿಸಿದ್ದೇನೆ. ಅದರ ಮೇಲೆ ಹಲವು ಸಂಶೋದನೆಗಳನ್ನೂ ನಡೆಸಿದ್ದೇನೆ. ಇದಲ್ಲದೆ ಸುಮಾರು ಒಂದೂವರೆ ತಿಂಗಳಶ್ಟು ಸಮಯ ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಮಾತುಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಎಂತಹ ಸ್ವರ ಮತ್ತು ವ್ಯಂಜನಗಳು ಬಳಕೆಯಾಗುತ್ತವೆ ಎಂಬುದನ್ನು ಪರಿಶೀಲಿಸಿದ್ದೇನೆ. ಹೆಚ್ಚುಕಡಿಮೆ ಇಂತಹದೇ ಪರಿಶೀಲನೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ. ಮೇಲಿನ ವ್ಯಂಜನಗಳನ್ನು ತಾವು ಸರಿಯಾಗಿಯೇ ಉಚ್ಚರಿಸುತ್ತೇವೆಂದು ಹೇಳಿಕೊಳ್ಳುವ ಹಲವು ಮಂದಿ ಪಂಡಿತರ ಮಾತನ್ನೂ ಗಮನವಿಟ್ಟು ಪರೀಕ್ಶಿಸಿದ್ದೇನೆ. ಹಾಗಾಗಿ ಮೇಲೆ ಕೊಟ್ಟಿರುವ ನನ್ನ ತೀರ್ಮಾನವನ್ನು ಅಂತಹದೇ ಪರಿಣತಿಯನ್ನು ಪಡೆಯದೆ ಮತ್ತು ಪರಿಶೀಲನೆಯನ್ನು ನಡೆಸದೆ ಸುಲಬವಾಗಿ ತಳ್ಳಿಹಾಕಲು ಸಾದ್ಯವಾಗದು. ಉಚ್ಚಾರಣೆಗೂ ಬರಹಕ್ಕೂ ನಡುವೆ ವ್ಯತ್ಯಾಸಗಳು ಕಾಣಿಸುವ ಕಡೆಗಳಲ್ಲೆಲ್ಲ ಸ್ಪೆಲ್ಲಿಂಗ್’ ಸಮಸ್ಯೆಯಿದೆಯೆಂದು ಹೇಳಬಹುದು. ಇದನ್ನು ಹೋಗಲಾಡಿಸಬೇಕಾದಲ್ಲಿ ಉಚ್ಚಾರಣೆ ಹೇಗಿದೆಯೋ ಹಾಗೆ ಬರಹವನ್ನೂ ಬದಲಾಯಿಸಿಕೊಳ್ಳುವುದೊಂದೇ ದಾರಿ. ಬರಹವನ್ನು ಆ ರೀತಿ ಬದಲಾಯಿಸಿಕೊಳ್ಳದಿದ್ದರೆ ಅದರಲ್ಲಿ ಕಾಣಿಸಿಕೊಳ್ಳುವ ಸ್ಪೆಲ್ಲಿಂಗ್’ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ಯಾಕೆಂದರೆ ಬದಲಾಗುತ್ತಾ ಹೋಗುವುದು ಜೀವಂತ ನುಡಿಯ ಒಂದು ಮುಕ್ಯವಾದ ಸ್ವಬಾವ. ನುಡಿ ಬದಲಾದರೂ ಬರಹ ಬದಲಾಗದೆ ಉಳಿದಲ್ಲಿ ನುಡಿ ಮತ್ತು ಬರಹಗಳ ನಡುವಿನ ವ್ಯತ್ಯಾಸ ಹೆಚ್ಚುತ್ತಾ ಹೋಗುತ್ತದೆ ಮತ್ತು ಕೊನೆಗೆ ಇವತ್ತು ಇಂಗ್ಲಿಶ್ನಲ್ಲಿ ಕಾಣಿಸುವ ಹಾಗೆ ಆ ವ್ಯತ್ಯಾಸವನ್ನು ಹೋಗಲಾಡಿಸಲು ಮತ್ತು ಅದರಿಂದುಂಟಾಗುವ ಸ್ಪೆಲ್ಲಿಂಗ್ ಸಮಸ್ಯೆಯನ್ನು ಇಲ್ಲವಾಗಿಸಲು ಸಾದ್ಯವೇ ಆಗದಂತಹ ಪರಿಸ್ತಿತಿಯುಂಟಾಗುತ್ತದೆ.
ಕನ್ನಡ ಬರಹದಲ್ಲಿ ಸದ್ಯಕ್ಕೆ ಹೆಚ್ಚು ಸ್ಪೆಲ್ಲಿಂಗ್ ಸಮಸ್ಯೆಗಳಿಲ್ಲ. ಕನ್ನಡದವೇ ಆದ ಪದಗಳನ್ನು ಬರೆಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಂತಹ ಪದಗಳನ್ನೆಲ್ಲ ನಾವು ಹೆಚ್ಚು ಕಡಿಮೆ ಉಚ್ಚರಿಸುವ ಹಾಗೆಯೇ ಬರೆಯುತ್ತೇವೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಲ್ಲಿ ಮಾತ್ರ ಕೆಲವು ಸಮಸ್ಯೆಗಳಿವೆ. ಅವನ್ನೆಲ್ಲ ಹೋಗಲಾಡಿಸಿಕೊಂಡಲ್ಲಿ ನಮ್ಮ ಬರಹ ಬಹಳ ಮಟ್ಟಿಗೆ ಸ್ಪೆಲ್ಲಿಂಗ್ ಸಮಸ್ಯೆಯಿಲ್ಲದ ಬರಹವಾಗಬಲ್ಲುದು. 3.2.1 ಕನ್ನಡ ಲಿಪಿ ಕನ್ನಡ ಬರಹದಲ್ಲಿ ಮೇಲೆ ವಿವರಿಸಿದ ಹಾಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಾಗುತ್ತಿರುವುದಕ್ಕೆ ಕನ್ನಡ ಲಿಪಿಯ ಇತಿಹಾಸವೂ ಒಂದು ಕಾರಣ. ಸಂಸ್ಕ್ರುತ, ಪಾಲಿ, ಪ್ರಾಕ್ರುತ ಮೊದಲಾದ ಇಂಡೋ-ಆರ್ಯನ್ ನುಡಿಗಳನ್ನು ಬರಹಕ್ಕಿಳಿಸುವುದಕ್ಕಾಗಿ ತಯಾರಾಗಿದ್ದಂತಹ ಬ್ರಾಹ್ಮೀ ಲಿಪಿಯಿಂದ ಕನ್ನಡ ಲಿಪಿ ಬೆಳೆದು ಬಂದಿದೆ. ಇದನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ಕನ್ನಡ ಬರಹಗಾರರು ಅದರಲ್ಲಿ ತಮ್ಮ ನುಡಿಗೆ ಬೇಕಾಗುವ ಕೆಲವು ಹೆಚ್ಚಿನ ಅಕ್ಶರಗಳನ್ನು (ಏ, ಓ, ¾ ಮತ್ತು ¿ಗಳನ್ನು) ಹೊಸದಾಗಿ ಉಂಟುಮಾಡಿ ಸೇರಿಸಿಕೊಂಡಿದ್ದರು. ಆದರೆ ಇವುಗಳೊಂದಿಗೆ ಕನ್ನಡಕ್ಕೆ (ಹಳೆಗನ್ನಡಕ್ಕೆ) ಬೇಡವಾದರೂ ಸಂಸ್ಕ್ರುತ ಪದಗಳನ್ನು ಬರೆಯಲು ಬೇಕಾಗುವ ಮಹಾಪ್ರಾಣಾಕ್ಶರಗಳು (ಖಛಠಥಫ ಮತ್ತು ಘಝಢಧಭ), ಋ, ಶ, ಷ, ಐ, ಔ, ಅನುಸ್ವಾರ (ಂ) ಮತ್ತು ವಿಸರ್ಗ (ಃ) ಎಂಬವುಗಳನ್ನೂ ಉಳಿಸಿಕೊಂಡಿದ್ದರು. ಇದರಿಂದಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆದ (ತತ್ಸಮ) ಪದಗಳನ್ನು ಕನ್ನಡ ಬರಹಗಳಲ್ಲಿ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಾಗುತ್ತಿದೆ. ಕನ್ನಡ ಬರಹಗಾರರ ಈ ಆಯ್ಕೆಯಿಂದಾಗಿ ಇವತ್ತಿನ ಕನ್ನಡ ಬರಹದಲ್ಲಿ ಪದಗಳ ಉಚ್ಚಾರಣೆಗೂ ಅವುಗಳ ಬರವಣಿಗೆಗೂ ನಡುವೆ ಹಲವು ರೀತಿಯ ವ್ಯತ್ಯಾಸಗಳು ಕಾಣಿಸುವ ಹಾಗಾಗಿದೆ. ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ಉಚ್ಚರಿಸುವಾಗ ಕನ್ನಡ ಪದಗಳ
ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಅವುಗಳಲ್ಲಿ ಹಲವು ರೀತಿಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಆದರೆ ಬರೆಯುವಾಗ ಮಾತ್ರ ಅವನ್ನು ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುತ್ತೇವೆ. ಇಂಗ್ಲಿಶ್ನಂತಹ ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ನಾವು ಹೀಗೆ ಮೂಲ ನುಡಿಯಲ್ಲಿರುವ ಹಾಗೆ ಬರೆಯುವುದಿಲ್ಲ. ಹಾಗೆ ಮಾಡಲು ಅದಕ್ಕೆ ಅವಶ್ಯವಿರುವ ಅಕ್ಶರಗಳು ನಮ್ಮ ಲಿಪಿಯಲ್ಲಿಲ್ಲದಿರುವುದು ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಆ ಪದಗಳನ್ನು ನಾವು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯುತ್ತೇವೆ. ಉದಾಹರಣೆಗಾಗಿ ಟಯ್್ಪ, ಟೀವಿ, ರೇಡಿಯೋ, ಡಾಕ್ಟರ್, ಡ್ಯೂಟಿ ಮೊದಲಾದ ಪದಗಳಲ್ಲಿ ಕಾಣಿಸುವ ಟಕಾರ-ಡಕಾರಗಳು ಇಂಗ್ಲಿಶ್ ಬರಹದಲ್ಲಿಲ್ಲ. ಈ ಪದಗಳನ್ನು ನಾವು ಟಕಾರ- ಡಕಾರಗಳನ್ನು ಬಳಸಿ ಉಚ್ಚರಿಸುತ್ತೇವೆ, ಮತ್ತು ಹಾಗೆಯೇ ಬರೆಯುತ್ತೇವೆ. ಮದರ್, ಬ್ರದರ್, ವೆದರ್ ಮೊದಲಾದ ಬೇರೆ ಕೆಲವು ಪದಗಳಲ್ಲಿ ನಾವು ದಕಾರವನ್ನು ಬಳಸುತ್ತೇವೆ; ಆದರೆ ಇಲ್ಲೂ ದಕಾರ ನಮ್ಮ ಉಚ್ಚಾರಣೆಯಲ್ಲಿ ಇದೆಯಲ್ಲದೆ ಇಂಗ್ಲಿಶ್ನಲ್ಲಿಲ್ಲ. ವಯ್ರಸ್ ಮತ್ತು ವಯ್ಪರ್ ಪದಗಳ ಮೊದಲನೆಯ ಅಕ್ಶರವನ್ನು ನಾವು ಒಂದೇ ರೀತಿಯಲ್ಲಿ ಉಚ್ಚರಿಸುತ್ತೇವೆ ಮತ್ತು ಒಂದೇ ರೀತಿಯಾಗಿ ಬರೆಯುತ್ತೇವೆ. ಆದರೆ ಇಂಗ್ಲಿಶ್ನ viಡಿus ಮತ್ತು ತಿiಠಿeಡಿ ಎಂಬ ಈ ಎರಡು ಪದಗಳಲ್ಲಿ ಮತ್ತು ಇಂತಹವೇ ಬೇರೆ ಹಲವು ಪದಜೋಡಿಗಳಲ್ಲಿ ಮೊದಲಿಗೆ ಬರುವ ಅಕ್ಶರಗಳು ಬೇರೆ ಬೇರಾಗಿವೆ. ಹಿಂದಿ, ಮರಾಟಿ, ಉರ್ದು, ತಮಿಳು ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನೂ ನಾವು ಹೆಚ್ಚುಕಡಿಮೆ ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯುತ್ತೇವಲ್ಲದೆ ಆ ನುಡಿಗಳಲ್ಲಿ ಹೇಗೆ ಬರೆಯುತ್ತಾರೋ ಹಾಗೆ ಬರೆಯುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಮಾತ್ರ ನಾವು ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯದೆ ಸಂಸ್ಕ್ರುತ ನುಡಿಯಲ್ಲಿ
ಅವು ಹೇಗೆ ಇವೆಯೋ ಹಾಗೆ ಬರೆಯಬೇಕಾಗಿದೆ. ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರ ಉಳಿಯುತ್ತಿರುವುದಕ್ಕೆ ಅದರಲ್ಲಿ ಸಂಸ್ಕ್ರುತ ಪದಗಳಿಗೆ ಈ ರೀತಿ ಅನವಶ್ಯಕವಾಗಿ ಒಂದು ವಿಶಿಶ್ಟವಾದ ಸ್ತಾನವನ್ನು ಕೊಟ್ಟಿರುವುದು ಒಂದು ಮುಕ್ಯವಾದ ಕಾರಣ. ಯಾಕೆಂದರೆ, ಕನ್ನಡ ಬರಹವನ್ನು ಕಲಿಯುವಾಗ ಹಲವಾರು ಉಚ್ಚಾರಣೆಯಲ್ಲಿ ಕಾಣಿಸದಿರುವ ಅಕ್ಶರಗಳನ್ನು ಅವರು ಕಲಿಯಬೇಕಾಗಿದೆ. ಇದರಿಂದಾಗಿ ಕನ್ನಡ ಬರಹವನ್ನು ಕಲಿತು ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಕೆಲಸ ಅವರ ಮಟ್ಟಿಗೆ ಹೆಚ್ಚು ತೊಡಕಿನದಾಗಿದೆ. ಉದಾಹರಣೆಗಾಗಿ, ಶಾಲೆಗಳಲ್ಲಿ ಕನ್ನಡ ಬರಹವನ್ನು ಕಲಿಯಹೊರಡುವ ಚಿಕ್ಕ ಮಕ್ಕಳಿಗೆ ಕನ್ನಡಕ್ಕೆ ಅವಶ್ಯವಿಲ್ಲದ ಛ, ಝ, ಠ ಮೊದಲಾದ ಅಕ್ಶರಗಳನ್ನು ಕಲಿಸುವುದಕ್ಕಾಗಿ ಕನ್ನಡದಲ್ಲೆಲ್ಲೂ ಕಾಣಿಸದಂತಹ ಛಗ ಹೋತ’, ಛದ ಮುಚ್ಚಳ’, ಖರ ಹೇಸರಗತ್ತೆ’ ಮೊದಲಾದ ಪದಗಳನ್ನು ಕಲಿಸಬೇಕಾಗಿದೆ (3.5.2 ನೋಡಿ). ಈ ಪದಗಳನ್ನು ಅವರು ಮುಂದೆಂದೂ ತಮ್ಮ ಜೀವನದಲ್ಲಿ ಓದುವ ಇಲ್ಲವೇ ಬರೆಯುವ ಸಂದರ್ಬಗಳು ಬರಲಾರವೆಂದೇ ಹೇಳಬಹುದು. 3.2.2 ಬರಹ ಮತ್ತು ಸಂಸ್ಕ್ರುತಿ ಸಂಸ್ಕ್ರುತ ಪದಗಳನ್ನು ’ಸರಿಯಾಗಿ’ ಉಚ್ಚರಿಸದಿದ್ದರೂ ಬರೆಯುವಾಗ ಮಾತ್ರ ಅವನ್ನು ಸಂಸ್ಕ್ರುತ ಬರಹಗಳಲ್ಲಿ ಇರುವ ಹಾಗೆಯೇ ಬರೆಯಬೇಕು, ಹಾಗೆ ಬರೆಯದಿದ್ದರೆ ನಮ್ಮ ಸಂಸ್ಕ್ರುತಿಯೇ ನಶ್ಟವಾಗಿ ಹೋಗುತ್ತದೆಯೆಂಬುದಾಗಿ ಇತ್ತೀಚೆಗೆ ಋಕಾರದ ವಿಶಯದಲ್ಲಿ ನಡೆದ ಚರ್ಚೆಯ ಸಮಯದಲ್ಲಿ ಕೆಲವರು ಕನ್ನಡ ವಿದ್ವಾಂಸರು ಹೆದರಿಕೆಯನ್ನು ಹುಟ್ಟಿಸಿದ್ದರು. ಇಂತಹ ಆದಾರವಿಲ್ಲದ ಹೆದರಿಕೆಯೇ ಕನ್ನಡ ಬರಹದ ಮಟ್ಟಿಗೆ ಅವಶ್ಯವಿಲ್ಲದಿರುವ ಮೇಲಿನ ನಿರ್ಬಂದದಿಂದ ಹೊರಬರಲು ನಮಗೆ ಸಾದ್ಯವಾಗದಿರುವುದಕ್ಕೆ ಮೂಲ ಕಾರಣ. ನಿಜಕ್ಕೂ ಪದಗಳ ಉಚ್ಚಾರಣೆ ಇಲ್ಲವೇ ಬರವಣಿಗೆ ಮತ್ತು ಸಂಸ್ಕ್ರುತಿ’ಗಳ ನಡುವೆ ಯಾವ ಸಂಬಂದವೂ ಇಲ್ಲ. ಮೇಲೆ
ಸೂಚಿಸಿದ ಹಾಗೆ ಪದಗಳ ಉಚ್ಚಾರಣೆ ಬದಲಾಗುತ್ತಾ ಹೋಗುವುದು ನುಡಿಯೊಂದರ ಜೀವಂತಿಕೆಯನ್ನು ಸೂಚಿಸುತ್ತದೆ. ಎರಡು ಸಾವಿರ ವರ್ಶಗಳಶ್ಟು ಹಿಂದೆ ಸಂಸ್ಕ್ರುತದಲ್ಲಿ ಪದಗಳ ಉಚ್ಚಾರಣೆ ಮತ್ತು ಬರವಣಿಗೆ ಹೇಗಿತ್ತೋ ಹಾಗೆಯೇ ಇವತ್ತೂ ಅದನ್ನು ಉಳಿಸಿಕೊಳ್ಳಬೇಕೆಂದು ಬಯಸುವುದು ಜೀವಂತಿಕೆಯ ಲಕ್ಶಣವಲ್ಲ. ಇದಲ್ಲದೆ ನುಡಿಯಲ್ಲಿ ಬರಹಕ್ಕಿಂತಲೂ ಮಾತಿಗೆ ಹೆಚ್ಚಿನ ಮಹತ್ವವಿದೆ. ಸಾಮಾನ್ಯವಾಗಿ ಮಾತನ್ನನುಸರಿಸಿ ಬರಹ ಬದಲಾಗುತ್ತಾ ಹೋಗುತ್ತದೆ. ಹೀಗೆ ಮಾತನ್ನನುಸರಿಸಿ ಬದಲಾಗದೆ ಉಳಿದಾಗಲೆಲ್ಲ ಬರಹ ಜನಸಾಮಾನ್ಯರಿಂಂದ ದೂರವಾಗುತ್ತದೆ. ಸಂಸ್ಕ್ರುತ ನುಡಿ ಈ ರೀತಿ ಜನ ಸಾಮಾನ್ಯರಿಂದ ದೂರವಾಗಿರುವುದನ್ನು ಗಮನಿಸಿ ಜಯ್ನರು ಪ್ರಾಕ್ರುತವನ್ನು ಮತ್ತು ಬವ್ದ್ದರು ಪಾಲಿಯನ್ನು ತಮ್ಮ ಮತಪ್ರಚಾರಕ್ಕಾಗಿ ಬಳಸಹೊರಟರು. ಬದಲಾಗದೆ ಉಳಿಯುವುದರ ಮೂಲಕ ಒಂದು ನುಡಿ ಉಳಿಸಿಕೊಳ್ಳುವ ಸಂಸ್ಕ್ರುತಿ ಆ ಸಮಾಜದ್ದಾಗಲಾರದೆಂಬುದು ಇದರಿಂದ ಸ್ಪಶ್ಟವಾಗುತ್ತದೆ. ಹಳೆಗನ್ನಡದಲ್ಲಿ ರ-¾ ಮತ್ತು ಳ-¿ಗಳ ನಡುವೆ ಉಚ್ಚಾರಣೆಯಲ್ಲಿ ವ್ಯತ್ಯಾಸವಿತ್ತು. ಬರಹದಲ್ಲೂ ಇದನ್ನು ತೋರಿಸಲಾಗುತ್ತಿತ್ತು. ಹಳೆಗನ್ನಡದ ಕಾಲದಲ್ಲೇನೇ ಉಚ್ಚಾರಣೆಯಲ್ಲಿ ಈ ವ್ಯತ್ಯಾಸ ಇಲ್ಲವಾಗತೊಡಗಿತ್ತು. ಆಮೇಲಿನ ಕಾಲದಲ್ಲಿ ಇದು ಪೂರ್ತಿ ಇಲ್ಲವಾಯಿತು ಮತ್ತು ಬರಹದಲ್ಲೂ ಅದನ್ನು ತೋರಿಸುವ ಕ್ರಮ ಇಲ್ಲವಾಯಿತು. ಈಗ ಹಳೆಗನ್ನಡ ಗ್ರಂತಗಳಲ್ಲಿ ಮಾತ್ರ ಈ ಅಕ್ಶರಗಳ ನಡುವಿರುವ ವ್ಯತ್ಯಾಸವನ್ನು ತೋರಿಸಲಾಗುತ್ತದೆ. ಈ ಅಕ್ಶರಗಳ ನಡುವಿನ ವ್ಯತ್ಯಾಸ ಎಂತಹದು ಎಂಬುದನ್ನು ಕೆಳಗೆ ಕೊಟ್ಟಿರುವ ಹಳೆಗನ್ನಡ ಪದಗಳಲ್ಲಿ ಕಾಣಬಹುದು. ಅರಿ ತುಂಡುಮಾಡು’ ಅ¾ô ತಿಳಿ, ಅರಿ’ ಕರೆ ಬರಹೇಳು’ ಕ¾õÉ ಹಾಲು ಕರೆ’ ಊರು ಹಳ್ಳಿ’ ಊ¾ು ನಿಲ್ಲಿಸು’ ಕೆರೆ ಪರಚು’ ಕೆ¾õÉ ನೀರಿನ ಕೆರೆ’
ತೆರೆ ಸಮುದ್ರದ ತೆರೆ’ ತೆ¾õÉ ಬಾಗಿಲು ತೆರೆ’ ಉಳಿ ಕೆತ್ತುವ ಸಾದನ’ ಉ¿ô ಉಳಿಯು’ ಎಳೆ ಎಳತು’ ಎ¿õÉ ಎಳೆಯು’ ಬಳಸು ನೇರವಲ್ಲದ’ ಬ¿ಸು ಉಪಯೋಗಿಸು’ ಪುಳಿ ಹುಳಿ’ ಪು¿ô ಹುಳ’ ಹಳೆಗನ್ನಡದ ನೂರಾರು ಪದಗಳಲ್ಲಿ ಕಾಣಿಸುತ್ತಿದ್ದ ರ-¾ ಮತ್ತು ಳ-¿ಗಳ ನಡುವಿನ ವ್ಯತ್ಯಾಸವನ್ನು ನಾವು ಇವತ್ತು ನಮ್ಮ ಹೊಸಗನ್ನಡ ಬರಹದಲ್ಲಿ ತೋರಿಸುವುದಿಲ್ಲ. ಕನ್ನಡ ನುಡಿ ಬದಲಾಗಿರುವುದನ್ನು ಗಮನಿಸಿ ಕನ್ನಡ ಬರಹಗಾರರು ತಮ್ಮ ಬರಹವನ್ನೂ ಬದಲಾಯಿಸಿಕೊಂಡುದೇ ಇದಕ್ಕೆ ಕಾರಣ. ಹೀಗೆ ಬದಲಾಯಿಸುವ ಮೂಲಕ ಅವರು ಕನ್ನಡ ಬರಹ ಜೀವಂತವಾಗಿ ಉಳಿಯುವಂತೆ ಮಾಡಿದ್ದಾರಲ್ಲದೆ ಕನ್ನಡದ ಸಂಸ್ಕ್ರುತಿ’ಯನ್ನು ನಾಶಮಾಡಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ನಮ್ಮ ಉಚ್ಚಾರಣೆಗೆ ಹೊಂದಿಕೊಳ್ಳುವಂತೆ ಬದಲಾಯಿಸಿಕೊಳ್ಳುವುದರಿಂದ (ಎಂದರೆ ಎರವಲಾಗಿ ಪಡೆಯುವ ಪದಗಳನ್ನು ನಮ್ಮ ನುಡಿಗೆ ಹೊಂದಿಕೆಯಾಗುವ ಹಾಗೆ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವನ್ನು ಎಗ್ಗಿಲ್ಲದೆ ಬಳಸಿಕೊಳ್ಳುವುದರಿಂದ) ಸಂಸ್ಕ್ರುತಿ ನಾಶವಾಗುವುದಿಲ್ಲವೆಂಬುದಕ್ಕೆ ಕನ್ನಡದ ಚರಿತ್ರೆಯಿಂದಲೇನೇ ಹಲವು ಉದಾಹರಣೆಗಳನ್ನು ಕೊಡಬಹುದು. ಹಳೆಗನ್ನಡ ಕಾವ್ಯಗಳಲ್ಲಿ ನೂರಾರು ಸಂಸ್ಕ್ರುತ ಪದಗಳನ್ನು ತದ್ಬವ’ಗಳನ್ನಾಗಿ ಬದಲಾಯಿಸಿ ಬಳಸಲಾಗಿದೆ (ಇಲ್ಲವೇ ಹಾಗೆ ಬದಲಾಯಿಸಿದ ಪ್ರಾಕ್ರುತದಿಂದ ಅವನ್ನು ಎರವಲಾಗಿ ಪಡೆಯಲಾಗಿದೆ). ಹಳೆಗನ್ನಡ ಬರಹಗಳಲ್ಲಿ ಬಳಕೆಯಾಗಿರುವ ಇಂತಹ ನೂರಾರು ಪದಗಳನ್ನು ಕಿಟ್ಟೆಲ್ ಅವರು ತಮ್ಮ ಕನ್ನಡ ವ್ಯಾಕರಣದಲ್ಲಿ (ಕಿಟ್ಟೆಲ್ 1903:433) ಮತ್ತು ಡಿಕ್್ಶನರಿಯಲ್ಲಿ ಪಟ್ಟಿಮಾಡಿದ್ದಾರೆ. ಇವುಗಳಲ್ಲಿ
ಕಾಣಿಸುವ ಬದಲಾವಣೆಗಳೆಲ್ಲವೂ ಸಂಸ್ಕ್ರುತ ಪದಗಳ ಬಳಕೆಯಿಂದ ಕನ್ನಡ ನುಡಿಯ ಸೊಗಡು ನಾಶವಾಗದ ಹಾಗೆ ಅದನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳಾಗಿವೆ. ಉದಾಹರಣೆಗಾಗಿ, ಸಂಸ್ಕ್ರುತದ ಸ, ಶ, ಷಗಳಿಗೆ ಬದಲಾಗಿ ಹಳೆಗನ್ನಡದಲ್ಲಿ ಸಕಾರ ಮಾತ್ರ ಇತ್ತು. ಹಾಗಾಗಿ ಸಂಸ್ಕ್ರುತ (ತತ್ಸಮ) ಪದಗಳಲ್ಲಿ ಬರುವ ಶಕಾರ ಮತ್ತು ಷಕಾರಗಳನ್ನು ತದ್ಬವ ಪದಗಳಲ್ಲಿ ಸಕಾರವಾಗಿ ಬದಲಾಯಿಸಲಾಗಿತ್ತು. ತತ್ಸಮ ಪದಗಳು ತದ್ಬವ ಪದಗಳು ಅಂಕುಶ ಅಂಕುಸ ನಿಶ್ಶಂಕ ನಿಸ್ಸಂಕ ಪಶು ಪಸು ಶಕ್ರರ ಸಕ್ಕರೆ ಆಕಾಶ ಆಗಸ ಆಮಿಷ ಆಮಿಸ ದೋಷ ದೋಸ ನಿಮಿಷ ನಿಮಿಸ ಷಣ್ಣ ಸಣ್ಣ ಶೇಷ ಸೇಸ ಭಾಷೆ ಬಾಸೆ ಹಳೆಗನ್ನಡದಲ್ಲಿ ಮಹಾಪ್ರಾಣಾಕ್ಶರಗಳಿರಲಿಲ್ಲ. ಹಾಗಾಗಿ ಸಂಸ್ಕ್ರುತ ಪದಗಳಲ್ಲಿ ಕಾಣಿಸುವ ಮಹಾಪ್ರಾಣಾಕ್ಶರಗಳನ್ನು ಇಂತಹ ಹಲವು ಪದಗಳಲ್ಲಿ ಅಲ್ಪಪ್ರಾಣಾಕ್ಶರಗಳನ್ನಾಗಿ ಬದಲಾಯಿಸಲಾಗಿತ್ತು. ತತ್ಸಮ ಪದಗಳು ತದ್ಬವ ಪದಗಳು ಶೃಂಖಲೆ ಸಂಕಲೆ ಸಂಘ ಸಂಗ ಛಾನ್ದಸ ಚಾನ್ದಸ
ಶುಣ್ಠಿ ಸುಂಟಿ ಮಠ ಮಟ ಢಕ್ಕೆ ಡಕ್ಕೆ ಕಥೆ ಕತೆ ಧಾರೆ ದಾರೆ ಕಫ ಕಪ ಭಕ್ತಿ ಬಕ್ತಿ ಹಳೆಗನ್ನಡದಲ್ಲಿ ಋಕಾರವಿರಲಿಲ್ಲವಾದ ಕಾರಣ, ಸಂಸ್ಕ್ರುತ ಪದಗಳಲ್ಲಿದ್ದ ಋಕಾರವನ್ನು ರಿ ಎಂಬುದಾಗಿ ಬದಲಾಯಿಸಲಾಗಿತ್ತು. ತತ್ಸಮ ಪದಗಳು ತದ್ಬವ ಪದಗಳು IĶ j¹ ಋತು ರಿತು IÄt jt IÄdÄ jdÄ ಈ ಋಕಾರ ವ್ಯಂಜನದ ಅನಂತರ ಬಂದಿದೆಯಾದರೆ ಅದನ್ನು ಇಕಾರವಾಗಿ (ಮತ್ತು ಕೆಲವು ಕಡೆಗಳಲ್ಲಿ ಅಕಾರವಾಗಿ) ಬದಲಾಯಿಸಲಾಗಿತ್ತು. ತತ್ಸಮ ಪದಗಳು ತದ್ಬವ ಪದಗಳು vÀÈt wt ವೃತ್ತಿ ವಿತ್ತಿ ವೃದ್ಧಿ ವಿದ್ದಿ ಶೃಂಗಾರ ಸಿಂಗಾರ ಶೃಂಗಿ ಸಿಂಗಿ ಸೃಷ್ಟಿ ಸಿಟ್ಟಿ ಭೃಂಗಾರ ಬಿಂಗಾರಿ
ಹಳೆಗನ್ನಡದಲ್ಲಿಲ್ಲದಿದ್ದ ಹಲವು ರೀತಿಯ ಒತ್ತಕ್ಶರಗಳು ಸಂಸ್ಕ್ರುತದಲ್ಲಿವೆ. ಇವುಗಳಲ್ಲಿ ಕೆಲವು ಪದಗಳ ಮೊದಲಿಗೂ ಬರಬಲ್ಲುವು. ಇಂತಹ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳ ಮೂಲಕ ಈ ಪದಗಳು ಹಳೆಗನ್ನಡ ಪದಸ್ವರೂಪಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿತ್ತು. ತತ್ಸಮ ಪದಗಳು ತದ್ಬವ ಪದಗಳು ರಾಕ್ಷಸ ರಕ್ಕಸ ಸಂಸ್ಕೃತ ಸಕ್ಕದ CVß CVÎ ಅಧ್ಯಕ್ಷ ಅದ್ದಿಕ ಉತ್ಕಟ ಉಗ್ಗಟ ಕ್ಷೀರ ಕೀರ dégÀ dgÀ ಧ್ವನಿ ದನಿ ಸ್ಥಾನ ತಾಣ ಪ್ರಜ್ವಲ ಪಜ್ಜಳ ತಂತ್ರ ತಂತುರ ಸ್ಪರ್ಶ ಪರುಸ ಭ್ರಷ್ಟ ಬಟ್ಟ ಲಕ್ಷ್ಮಣ ಲಕುಮಣ DeÉÕ DuÉ ಕಷ್ಟ ಕಟ್ಟ ಗ್ರಂಥ ಗಂತ ಸಂಸ್ಕ್ರುತ ಪದಗಳನ್ನು ಬದಲಾಯಿಸಿಕೊಳ್ಳದೆ ಹಾಗೆಯೇ ಬಳಸುವುದರಿಂದ ಕನ್ನಡದ ಸೊಗಡು ನಾಶವಾಗುತ್ತದೆಯೆಂಬುದನ್ನು ಕಂಡುಕೊಂಡ ಹದಿಮೂರನೇ ಶತಮಾನದ ಕವಿ ಆಂಡಯ್ಯನು ತನ್ನ ಕಬ್ಬಿಗರ ಕಾವದಲ್ಲಿ ತತ್ಸಮ ಪದಗಳ ಬದಲು ಎಲ್ಲೆಡೆಯಲ್ಲೂ ತದ್ಬವ ಪದಗಳನ್ನು ಬಳಸುವ ಪ್ರಯತ್ನ ನಡೆಸಿದ್ದ.
ಇತ್ತೀಚೆಗೆ ಕೊಳಂಬೆ ಪುಟ್ಟಣ್ಣ ಗವ್ಡರು ಇಂತಹದೇ ಕಳಕಳಿಯಿಂದ ತತ್ಸಮ ಪದಗಳನ್ನು ಹೊರಗಿರಿಸಿರುವ (ಇಲ್ಲವೇ ಕಂಸದೊಳಗಿರಿಸಿರುವ) ಮತ್ತು ಆದಶ್ಟು ಹೆಚ್ಚು ಕನ್ನಡದವೇ ಆದ ಪದಗಳನ್ನು ಕೊಟ್ಟಿರುವ ಅಚ್ಚಗನ್ನಡ ನುಡಿಕೋಶವೊಂದನ್ನು ರಚಿಸಿದ್ದಾರೆ (ಪುಟ್ಟಣ್ಣಗವ್ಡ 1993). ಇಂತಹ ಪ್ರಯತ್ನಗಳೆಲ್ಲ ಕನ್ನಡದ ಸೊಗಡನ್ನು ಎಂದರೆ ಕನ್ನಡದ್ದೇ ಆದ ಸಂಸ್ಕ್ರುತಿ’ಯನ್ನು ಉಳಿಸುವ ಪ್ರಯತ್ನಗಳಲ್ಲದೆ ಅಳಿಸಿಹಾಕುವ ಪ್ರಯತ್ನಗಳಲ್ಲ. ಆದರೆ ಇವತ್ತಿನ ಕನ್ನಡ ಬರಹಗಳಲ್ಲಿ ಇಂತಹ ಕನ್ನಡದ ಸೊಗಡನ್ನು ಉಳಿಸಿಕೊಳ್ಳುವ ತದ್ಬವ ಪದಗಳಲ್ಲಿ ಪಕ್ಷಿ-ಹಕ್ಕಿ, ಪಿಷ್ಟ- ಹಿಟ್ಟು, ಕಥೆ-ಕತೆ, ಶರ್ಕರ-ಸಕ್ಕರೆ, ವೀಥಿ-ಬೀದಿ ಮೊದಲಾದ ಕೆಲವೇ ಕೆಲವು ಪದಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದೆಡೆಗಳಲ್ಲೆಲ್ಲ ನಾವು ಅವುಗಳ ಬದಲು ಜ್ವರ, ಸ್ಥಾನ, ಋಷಿ, ಋತು, ದೋಷ, ಧಾರೆ, ಅಗ್ನಿ ಮೊದಲಾದ ತತ್ಸಮ ಪದಗಳನ್ನೇ ಬಳಸುತ್ತಿದ್ದೇವೆ. ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗುವ ಮತ್ತು ಕನ್ನಡಿಗರಿಗೆ ಕಲಿಯಲು ಮತ್ತು ಬಳಸಲು ಸುಲಬವಾಗುವ ತದ್ಬವ ಪದಗಳನ್ನು ಕಳೆದುಕೊಂಡಿದ್ದೇವೆ. ಇದಲ್ಲದೆ ಮೇಲೆ ಸೂಚಿಸಿದ ಹಾಗೆ, ಸಂಸ್ಕ್ರುತ ಪದಗಳನ್ನು ಹೊಸದಾಗಿ ಎರವಲು ಪಡೆಯುವುದಿದ್ದಲ್ಲಿ, ಹಾಗೆ ಪಡೆದ ಮೇಲೆ ಅವನ್ನು ಸಂಸ್ಕ್ರುತ ಬರಹಗಳಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ಕಟ್ಟುಪಾಡನ್ನೂ ನಾವು ನಮ್ಮ ಮೇಲೆ ಹೊರಿಸಿಕೊಂಡಿದ್ದೇವೆ. ಅವುಗಳಲ್ಲಿ ಕನ್ನಡ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನೇನಾದರೂ ಮಾಡಿದಲ್ಲಿ ಅವನ್ನು ತಪ್ಪು’ ಎಂಬುದಾಗಿ ತಿರಸ್ಕರಿಸಲಾಗುತ್ತದೆ. ಪದಗಳ ಕೊನೆಯಲ್ಲಿ ಮಾಡುವ ಕೆಲವೇ ಕೆಲವು ಬದಲಾವಣೆಗಳು (ಕಥಾ-ಕಥೆ, ಛಂದಸ್-ಛಂದಸ್ಸು, ಯೋಗಿನೀ- ಯೋಗಿನಿ ಎಂಬಂತಹವುಗಳು) ಮಾತ್ರ ಇದಕ್ಕೆ ಅಪವಾದಗಳು. ಈ ನಿರ್ಬಂದದಿಂದಾಗಿ ಹಳೆಗನ್ನಡ ಕಾಲದ ಬರಹಗಾರರಿಗಿದ್ದಂತಹ ಸಂಸ್ಕ್ರುತ ಪದಗಳನ್ನು ತದ್ಬವಗಳಾಗಿ ಬದಲಾಯಿಸುವ ಸ್ವಾತಂತ್ರ್ಯವೂ ಇವತ್ತು ನಮಗೆ ಇಲ್ಲವಾಗಿದೆ.
ಇವೆಲ್ಲ ನಮ್ಮ ಸಂಸ್ಕ್ರುತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳಲ್ಲ. ನಿಜಕ್ಕೂ ಸಂಸ್ಕ್ರುತದ ಮೇಲೆ ಕುರುಡು ಅಬಿಮಾನವಿರುವ ಕನ್ನಡ ಬರಹಗಾರರ ಈ ನಿರ್ದಾರದಿಂದಾಗಿ ನಮ್ಮದೇ ಆದ ಕನ್ನಡ ಸಂಸ್ಕ್ರುತಿ ಕನ್ನಡ ಬರಹಗಳಲ್ಲಿ ಇಲ್ಲವಾಗುತ್ತಿದೆ. 3.3 ಬೇರೆ ಬರಹಗಳಲ್ಲಿ ಸಂಸ್ಕ್ರುತದ ಎರವಲುಗಳು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಈ ನಿರ್ಬಂದ ನಮ್ಮ ದೇಶದ ಎಲ್ಲಾ ನುಡಿಗಳಲ್ಲೂ ಕಾಣಿಸುವುದಿಲ್ಲ. ತಮಿಳು, ಪಂಜಾಬಿ, ಸಿಂದಿ, ಕಾಶ್ಮೀರಿ, ಉರ್ದು ಮೊದಲಾದ ನುಡಿಗಳನ್ನಾಡುವ ಜನರು ತಮ್ಮ ಬರಹಗಳಲ್ಲಿ ಸಂಸ್ಕ್ರುತ ಪದಗಳನ್ನು ತಮ್ಮ ಉಚ್ಚಾರಣೆ ಹೇಗಿದೆಯೋ ಹಾಗೆ ಬರೆಯುತ್ತಾರಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ. ಇದಲ್ಲದೆ ಹೀಗೆ ಬರೆಯುವುದರಿಂದಾಗಿ ತಮ್ಮ `ಸಂಸ್ಕ್ರುತಿ’ ನಶ್ಟವಾಗಿದೆಯೆಂದು ಅವರು ಬಾವಿಸುವ ಹಾಗೂ ಕಾಣಿಸುವುದಿಲ್ಲ. 3.3.1 ತಮಿಳು ಬರಹ ಬ್ರಾಹ್ಮೀ ಲಿಪಿಯನ್ನು ತಮಿಳಿಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ತಮಿಳಿನ ಬರಹಗಾರರು ಆ ನುಡಿಗೆ ಬೇಕಾಗುವ ಅಕ್ಶರಗಳನ್ನು ಮಾತ್ರ ಆರಿಸಿಕೊಂಡಿದ್ದರು. ಕನ್ನಡದ ಬರಹಗಾರರ ಹಾಗೆ ತಮ್ಮ ನುಡಿಯನ್ನು ಬರೆಯಲು ಅವಶ್ಯವಿಲ್ಲದಿದ್ದರೂ ಸಂಸ್ಕ್ರುತ ಪದಗಳನ್ನು ಬರೆಯಲು ಬೇಕಾಗುತ್ತದೆಂದು ಮಹಾಪ್ರಾಣಾಕ್ಶರಗಳು, ಋಕಾರ, ಷಕಾರ, ಅನುಸ್ವಾರ, ವಿಸರ್ಗ ಮೊದಲಾದುವನ್ನು ಆರಿಸಿಕೊಂಡಿರಲಿಲ್ಲ. ತಮಿಳು ಲಿಪಿಯಲ್ಲಿ ಕ, ಙ; ಚ, ಞ; ಟ, ಣ; ತ, ನ ಮತ್ತು ಪ, ಮ ಎಂಬುದಾಗಿ ಹತ್ತು ವರ್ಗಾಕ್ಶರಗಳು ಮಾತ್ರ ಇವೆ. ಮಹಾಪ್ರಾಣಾಕ್ಶರಗಳು ಒಂದೂ ಇಲ್ಲ. ಎರವಲಾಗಿ ಬಂದ ಪದಗಳಲ್ಲಿ ಬಳಸುವುದಕ್ಕಾಗಿ ಜ ಅಕ್ಶರವನ್ನು ಮಾತ್ರ ಇರಿಸಿಕೊಳ್ಳಲಾಗಿದೆ. ಉಳಿದಂತೆ ಗಡದಬಗಳು ತಮಿಳಿಗೆ ಬೇಕಾಗುವುದಿಲ್ಲವಾದ ಕಾರಣ ಅವನ್ನು ತಮಿಳು ಲಿಪಿಯಲ್ಲಿ ಉಳಿಸಿಕೊಂಡಿಲ್ಲ.
ತಮಿಳು ಪದಗಳನ್ನು ಬರೆಯಲು ಕಚಟತಪಗಳೆಂಬ ಅಯ್ದು ತಡೆಯುಲಿಗಳು ಮಾತ್ರ ಬೇಕಾಗುತ್ತವೆ. ಉಚ್ಚಾರಣೆಯಲ್ಲಿ ಇವು ಕೆಲವು ಕಡೆಗಳಲ್ಲಿ ಗಜಡದಬಗಳಾಗುತ್ತವೆ ಮತ್ತು ಬೇರೆ ಕೆಲವು ಕಡೆಗಳಲ್ಲಿ ಕಚಟತಪಗಳಾಗಿಯೇ ಉಳಿಯುತ್ತವೆ. ಇನ್ನು ಕೆಲವು ಕಡೆಗಳಲ್ಲಿ ಕ, ಚ ಮತ್ತು ಪಗಳು ಹಸ(ಶ)ವಗಳಾಗಿ ಇಲ್ಲವೇ ಅವಕ್ಕೆ ಹತ್ತಿರದ ಬೇರೆ ಉಜ್ಜುಲಿಗಳಾಗಿ ಬದಲಾಗುತ್ತವೆ. ಉದಾಹರಣೆಗಾಗಿ, ಙಞಣನಮಗಳ ಅನಂತರ ಇವೆಲ್ಲವೂ ಗಜಡದಬಗಳಾಗಿ ಉಚ್ಚಾರಣೆಯಾಗುತ್ತವೆಯೆಂಬುದನ್ನು ಕೆಳಗೆ ಕೊಟ್ಟಿರುವ ಪದಗಳಲ್ಲಿ ಕಾಣಬಹುದು. ತಮಿಳು ಬರಹ ತಮಿಳು ಉಚ್ಚಾರಣೆ ನೀಙ್ಕ ನೀಙ್ಗ ಮಞ್ಚಳ್ ಮಞ್ಜಳ್ ವೇಣ್ಟುಮ್ ವೇಣ್ಡುಮ್ ಇನ್ತ ಇನ್ದ ತಮ್ಪಿ ತಮ್ಬಿ ಎರಡುಸ್ವರಗಳ ನಡುವೆ ಬಂದಾಗಲೂ ಟತಗಳು ತಮಿಳಿನಲ್ಲಿ ಡದಗಳಾಗಿ ಉಚ್ಚಾರಣೆಯಾಗುತ್ತವೆ. ಆದರೆ ಕಚಪಗಳು ಮಾತ್ರ ಮೇಲೆ ಸೂಚಿಸಿದ ಹಾಗೆ ಹಶವಗಳಾಗಿ (ಇಲ್ಲವೇ ಅವಕ್ಕೆ ಹತ್ತಿರದ ಉಜ್ಜುಲಿಗಳಾಗಿ) ಉಚ್ಚಾರಣೆಯಾಗುತ್ತವೆ. ಚಕಾರ ಪದದ ಮೊದಲಿಗೂ ಶಕಾರವಾಗಿಯೇ ಉಚ್ಚಾರಣೆಯಾಗುತ್ತದೆ. ತಮಿಳು ಬರಹ ತಮಿಳು ಉಚ್ಚಾರಣೆ ಆಟುತ್ತ ಆಡುತ್ತ ಇತೆಲ್ಲಾಮ್ ಇದೆಲ್ಲಾಮ್ ಪಕಲ್ ಪಹಲ್ ಪಚಿ ಪಸಿ(ಶಿ) ಚೆಯ್ ಸೆ(ಶೆ)ಯ್
ಇತರ ಕಡೆಗಳಲ್ಲಿ, ಎಂದರೆ ಪದಗಳ ಮೊದಲಿಗೆ ಮತ್ತು ಪದಗಳ ಒಳಗೆ ಙಞಣನಮಗಳಿಲ್ಲದ ಒತ್ತಕ್ಶರಗಳಲ್ಲಿ ಕಚಟತಪಗಳು ಕಚಟತಪಗಳಾಗಿ ಮಾತ್ರವೇ ಉಚ್ಚಾರಣೆಯಾಗುತ್ತವೆ. ತಮಿಳು ಬರಹ ತಮಿಳು ಉಚ್ಚಾರಣೆ ಕಟ್ಟಿಲ್ ಕಟ್ಟಿಲ್ ತಮಿ¿õï ತಮಿ¿õï ಪತ್ತಿ ಪತ್ತಿ ಎಪ್ಪಟಿ ಎಪ್ಪಡಿ ಕೂಟ್ಟಮ್ ಕೂಟ್ಟಮ್ ತಕ್ಕಾಳಿ ತಕ್ಕಾಳಿ ಪಚ್ಚಯ್ ಪಚ್ಚಯ್ ಈ ರೀತಿ, ಈ ವರ್ಗಾಕ್ಶರಗಳಿಗೆ ಬೇರೆ ಬೇರೆ ಸಂದರ್ಬಗಳಲ್ಲಿ ಬೇರೆ ಬೇರೆ ಉಚ್ಚಾರಣೆಗಳಿದ್ದರೂ ಅವುಗಳ ಬಳಕೆಯ ಹಿಂದೆ ಒಂದು ನಿಶ್ಚಿತವಾದ ನಿಯಮವಿದೆಯಾದ ಕಾರಣ, ತಮಿಳು ಪದಗಳನ್ನು ಬರೆಯುವಲ್ಲಿ ಗಜಡದಬ ಗಳನ್ನು ಬಳಸುವ ಅವಶ್ಯಕತೆಯೇ ಇರುವುದಿಲ್ಲ. ಆದರೆ ತಮಿಳಿನಲ್ಲಿ ಎರಡು ರೀತಿಯ ನಕಾರಗಳು ಬಳಕೆಯಲ್ಲಿದ್ದು ಅದಕ್ಕಾಗಿ ಎರಡು ರೀತಿಯ ’ನ್’ ಅಕ್ಶರಗಳು ತಮಿಳು ಲಿಪಿಯಲ್ಲಿವೆ. ಹೆಚ್ಚಿನ ಪದಗಳಲ್ಲೂ ಒಂದು ರೀತಿಯ ನಕಾರ ಪದದ ಮೊದಲಿಗೆ ಮತ್ತು ತಕಾರದೆದುರು ಬರುತ್ತದೆ ಮತ್ತು ಇನ್ನೊಂದು ರೀತಿಯದು ಉಳಿದೆಡೆಗಳಲ್ಲಿ ಬರುತ್ತದೆ. ಆದರೆ ಕೆಲವು ಪದಜೋಡಿಗಳಲ್ಲಿ ಈ ಎರಡು ನಕಾರಗಳೂ ಒಂದೇ ರೀತಿಯ ಜಾಗದಲ್ಲಿ ಬರುವುವಾದ ಕಾರಣ ಅವುಗಳಿಗಾಗಿ ತಮಿಳು ಬರಹದಲ್ಲಿ ಬೇರೆ ಬೇರೆ ಅಕ್ಶರಗಳನ್ನು ಬಳಸಲಾಗುತ್ತದೆ. ಅವರ್ಗೀಯ ವ್ಯಂಜನಗಳಲ್ಲಿ ತಮಿಳು ಪದಗಳನ್ನು ಬರೆಯಲು ಬೇಕಾಗುವ ಯರಲವಳ¿¾ಗಳು ಮಾತ್ರವಲ್ಲದೆ ಎರವಲಾಗಿ ಪಡೆದ
ಪದಗಳನ್ನು ಬರೆಯಲು ಬೇಕಾಗುವ ಷಸಹಗಳೆಂಬ ಮೂರು ಹೆಚ್ಚಿನ ಅಕ್ಶರಗಳೂ ತಮಿಳು ಲಿಪಿಯಲ್ಲಿವೆ. ಈ ರೀತಿ, ತಮಿಳು ಲಿಪಿಯಲ್ಲಿ ಬರುವ ಅಕ್ಶರಗಳ ಬಳಕೆ ಬಹಳ ಮಟ್ಟಿಗೆ ಅವುಗಳ ಉಚ್ಚಾರಣೆಯ ಮೇಲೆ ಅವಲಂಬಿಸಿದೆಯಾದ ಕಾರಣ, ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳನ್ನು ತಮಿಳಿನಲ್ಲಿ ಬರೆಯುವಾಗ ಅವು ಸಂಸ್ಕ್ರುತ ಬರಹದಲ್ಲಿ ಹೇಗೆ ಕಾಣಿಸುತ್ತವೆ ಎಂಬುದಕ್ಕಿಂತಲೂ ಉಚ್ಚಾರಣೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಉದಾಹರಣೆಗಾಗಿ, ಸಂಸ್ಕ್ರುತ ಪದಗಳಲ್ಲಿ ಬರುವ ಮಹಾಪ್ರಾಣಾಕ್ಶರಗಳನ್ನು ತಮಿಳರ ಉಚ್ಚಾರಣೆಯಲ್ಲಿರುವ ಹಾಗೆ ಎಲ್ಲೆಡೆಯಲ್ಲೂ ಅಲ್ಪಪ್ರಾಣಾಕ್ಶರಗಳನ್ನಾಗಿಯೇ ಬರೆಯಲಾಗುತ್ತದೆ. ಸಂಸ್ಕ್ರುತ ಪದ ತಮಿಳು ಬರಹ ಬುದ್ಧಿ ಪುತ್ತಿ ಭಕ್ತಿ ಪಕ್ತಿ ಧಾನ್ಯ ತಾನಿಯ ಅಧಿಕ ಅತಿಕ ಶೀಘ್ರ ಚೀಕ್ಕಿರ ಗೋಷ್ಠಿ ಕೋಷ್ಟಿ ಮುಖ್ಯ ಮುಕ್ಕಿಯ ಅನುಸ್ವಾರದ ಅನಂತರ ಬರುವ ಗಜಡದಬಗಳನ್ನು ಕಚಟತಪಗಳಾಗಿ ಬರೆಯುವುದೂ ತಮಿಳರ ಉಚ್ಚಾರಣೆಗೆ ಸರಿಯಾಗಿಯೇ ಇದೆ. ಯಾಕೆಂದರೆ ಮೇಲೆ ಸೂಚಿಸಿದ ಹಾಗೆ, ತಮಿಳು ಪದಗಳಲ್ಲಿಯೂ ಅನುಸ್ವಾರದ ಅನಂತರ ಬರುವ ಕಚಟತಪ ಎಂಬ ವ್ಯಂಜನಗಳು ಗಜಡದಬ ಎಂಬವುಗಳಾಗಿಯೇ ಉಚ್ಚಾರಣೆಯಾಗುತ್ತವೆ. ಸಂಸ್ಕ್ರುತ ಪದ ತಮಿಳು ಬರಹ
ಮಾಂಗಲ್ಯ ಮಾಙ್ಕಲ್ಯ ಸಂದೇಹ ಚನ್ತೇಕ ಪೂಜಾರಿ ಪೂಚಾರಿ ತಾಂಬೂಲ ತಾಮ್ಪೂಲ ತಾಂಡವ ತಾಣ್ಟವ ಸಂಸ್ಕ್ರುತದ ಋಕಾರವನ್ನು ರಿ ಇಲ್ಲವೇ ರು ಎಂಬುದಾಗಿ ಬರೆಯಲಾಗುತ್ತದೆ ಮತ್ತು ಪದಗಳ ಮೊದಲಿಗೆ ಬರುವ ಒತ್ತಕ್ಶರಗಳನ್ನು ಬಿಡಿಸಿ ಬರೆಯಲಾಗುತ್ತದೆ. ಈ ಬರವಣಿಗೆಯೂ ಉಚ್ಚಾರಣೆಯನ್ನು ಅವಲಂಬಿಸಿದೆಯೆಂದು ಹೇಳಬಹುದು. ಸಂಸ್ಕ್ರುತ ಪದ ತಮಿಳು ಬರಹ IĶ j¶ ಕೃಷ್ಣ ಕಿರುಷ್ಣ ತೃಪ್ತಿ ತಿರುಪ್ತಿ ದುರದೃಷ್ಟ ತುರತಿರುಷ್ಟ ಪ್ರಯಾಣ ಪಿರಯಾಣ ಪ್ರಯೋಗ ಪಿರಯೋಕ ದ್ವಾಪರ ತುವಾಪರ ಧ್ಯಾನ ತಿಯಾನ ಬ್ರಹ್ಮ ಪಿರಮ್ಮ ಇಂತಹ ಇನ್ನೂ ಹಲವು ವಿಶಯಗಳಲ್ಲಿ ಸಂಸ್ಕ್ರುತ ಪದಗಳ ಬರವಣಿಗೆ ತಮಿಳು ಬರಹದಲ್ಲಿ ತಮಿಳರ ಉಚ್ಚಾರಣೆಯನ್ನವಲಂಬಿಸಿದ್ದು, ಕನ್ನಡ ಬರಹದಲ್ಲಿರುವ ಹಾಗೆ ಸ್ಪೆಲ್ಲಿಂಗ್ ಸಮಸ್ಯೆಯನ್ನು ಹುಟ್ಟಿಸುವುದಿಲ್ಲ. ಆದರೆ ಸಂಸ್ಕ್ರುತ ಪದಗಳನ್ನು ಬರೆಯುವ ಬೇರೆ ಕೆಲವು ಸಂದರ್ಬಗಳಲ್ಲಿ ತಮಿಳರ ಉಚ್ಚಾರಣೆಯಲ್ಲೇನೇ ಕಾಣಿಸುವಂತಹ ವ್ಯತ್ಯಾಸಗಳನ್ನೂ ತಮಿಳು ಬರಹದಲ್ಲಿ ತೋರಿಸಲು
ಸಾದ್ಯವಾಗುವುದಿಲ್ಲ. ಹೀಗೆ ಮಾಡಲು ಬೇಕಾಗುವ ಅಕ್ಶರಗಳು ತಮಿಳು ಲಿಪಿಯಲ್ಲಿಲ್ಲದಿರುವುದೇ ಇದಕ್ಕೆ ಕಾರಣ. ಉದಾಹರಣೆಗಾಗಿ, ಸಂಸ್ಕ್ರುತದ ಚಕಾರವನ್ನು ಮಾತ್ರವಲ್ಲದೆ ಶಕಾರವನ್ನೂ ತಮಿಳು ಲಿಪಿಯಲ್ಲಿ ಚ ಅಕ್ಶರದ ಮೂಲಕವೇ ಸೂಚಿಸಲಾಗುತ್ತದೆ. ಸಂಸ್ಕ್ರುತ ಪದ ತಮಿಳು ಬರಹ ಉಪದೇಶ ಉಪತೇಚ ದಶ್ರನ ತರಿಚನ ಅತಿಶಯ ಅತಿಚಯ ದಿಶಾ ತಿಚೈ ಪದಗಳ ಮೊದಲಿಗೆ ಬರುವ ಗಡದಬಗಳನ್ನು ಕಟತಪಗಳಾಗಿಯೇ ಬರೆಯಬೇಕಾಗುತ್ತದೆ. ಜಕಾರವನ್ನು ಮಾತ್ರ ಚಕಾರಕ್ಕಿಂತ ಬೇರಾಗಿ ತೋರಿಸಲು ಸಾದ್ಯವಾಗುತ್ತದೆ (ಅದಕ್ಕಾಗಿ ಒಂದು ಹೆಚ್ಚಿನ ಅಕ್ಶರ ತಮಿಳು ಲಿಪಿಯಲ್ಲಿದೆ). ಸಂಸ್ಕ್ರುತ ಪದ ತಮಿಳು ಬರಹ ಗೌರವ ಕೌರವ ಗುಣ ಕುಣ ಬುದ್ಧಿ ಪುತ್ತಿ ದುಃಖ ತುಕ್ಕ ದೀಪ ತೀಪ ಜಾತಕ ಜಾತಕ ಇಂತಹ ಕೆಲವು ಸಂದರ್ಬಗಳಲ್ಲಿ ಎರವಲಾಗಿ ಬಂದ ಸಂಸ್ಕ್ರುತ ಪದಗಳನ್ನು ತಮಿಳು ಬರಹಗಳಲ್ಲಿ ಓದುವುದು ಸ್ವಲ್ಪ ತೊಡಕಿನದೆಂದು ಕೆಲವರಿಗೆ ಅನಿಸಬಹುದು. ಆದರೆ ಹೆಚ್ಚಿನೆಡೆಗಳಲ್ಲೂ ಈ ಪದಗಳು ಬರುವ ಸಂದರ್ಬವೇ ಅವುಗಳ ಸ್ವರೂಪ ಎಂತಹದೆಂಬುದನ್ನು
ಓದುಗರಿಗೆ ಸೂಚಿಸುತ್ತದೆ. ಹಾಗಾಗಿ, ನಿಜಕ್ಕೂ ತಮಿಳು ಬರಹವನ್ನು ಓದುವವರಿಗೆ ಸಂಸ್ಕ್ರುತ ಪದಗಳ ಉಚ್ಚಾರಣೆಗೂ ಬರಹಕ್ಕೂ ನಡುವಿರುವ ಈ ವ್ಯತ್ಯಾಸಗಳಿಂದಾಗಿ ಅಂತಹ ತೊಂದರೆಯೇನೂ ಆಗುವುದಿಲ್ಲ. ಈ ರೀತಿ ತಮಿಳು ಲಿಪಿಯಲ್ಲಿ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಾಗುವುದಿಲ್ಲವಾದ ಕಾರಣ (ಇದಕ್ಕೆ ಬೇಕಾಗುವ ಅಕ್ಶರಗಳು ಆ ಲಿಪಿಯಲ್ಲಿ ಇಲ್ಲವಾದ ಕಾರಣ), ಸಂಸ್ಕ್ರುತ ನುಡಿಯ ಗ್ರಂತಗಳನ್ನು ಬರೆಯುವುದಕ್ಕಾಗಿ ತಮಿಳು ನಾಡಿನ ಸಂಸ್ಕ್ರುತ ವಿದ್ವಾಂಸರು ಬೇರೆಯೇ ಒಂದು ಲಿಪಿಯನ್ನು ಬಳಕೆಗೆ ತಂದಿದ್ದಾರೆ. ಈ ಲಿಪಿಗೆ ಗ್ರಂತಲಿಪಿ’ (ಎಂದರೆ ಸಂಸ್ಕ್ರುತ ಗ್ರಂತ’ಗಳನ್ನು ಬರೆಯಲು ಬಳಸುವ ಲಿಪಿ) ಎಂಬ ಹೆಸರಿದೆ. ತಮಿಳು ಲಿಪಿಯಲ್ಲಿ ಬರೆದ ಕೆಲವು ಹಳೆಯ ತಮಿಳು ಶಾಸನಗಳಲ್ಲಿ ತಮಿಳು ಲಿಪಿ ಮತ್ತು ಗ್ರಂತಲಿಪಿಗಳೆರಡನ್ನೂ ಒಟ್ಟಾಗಿ ಬಳಸಲಾಗಿದೆ. ಅವುಗಳಲ್ಲಿ ಬರುವ ತಮಿಳು ಪದಗಳನ್ನೆಲ್ಲ ತಮಿಳು ಲಿಪಿಯಲ್ಲಿ ಬರೆಯಲಾಗಿದೆ, ಆದರೆ ಸಂಸ್ಕ್ರುತ ಪದಗಳನ್ನು ಮಾತ್ರ ಗ್ರಂತಲಿಪಿಯಲ್ಲಿ ಬರೆಯಲಾಗಿದೆ (ಮಂಗಲಮ್ 1988). ಇಲ್ಲಿ ನಾವು ಮುಕ್ಯವಾಗಿ ಗಮನಿಸಬೇಕಾದ ವಿಶಯವೇನೆಂದರೆ, ಸಂಸ್ಕ್ರುತ ಪದಗಳನ್ನು ತಮ್ಮ ಬರಹಗಳಲ್ಲಿ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಾಗದಿರುವುದರಿಂದ ತಾವು `ಸಂಸ್ಕ್ರುತಿಹೀನ’ರಾಗಿದ್ದೇವೆಂದೇನೂ ತಮಿಳರು ಬಾವಿಸುವುದಿಲ್ಲ. ಹಾಗೆ ಬರೆಯದಿರುವುದೇ ತಮ್ಮ ಸಂಸ್ಕ್ರುತಿ ಎಂಬುದಾಗಿ ಅವರು ಬಾವಿಸುತ್ತಾರೆ. 3.3.2 ಮಲಯಾಳ ಬರಹ ಮಲಯಾಳದ ಬರಹಗಳನ್ನು ಮೊದಲಿಗೆ ವಟ್ಟೆಳುತ್ತು ಎಂಬ ಹೆಸರಿನ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಪಾಂಡ್ಯ ಮತ್ತು ಚೇರ ರಾಜ್ಯಗಳ ತಮಿಳು ಬರಹಗಳಲ್ಲೂ ಇದೇ ಲಿಪಿಯನ್ನು ಬಳಸಲಾಗುತ್ತಿತ್ತು. ಇದಲ್ಲದೆ ಕೆಲವೆಡೆಗಳಲ್ಲಿ ವಟ್ಟೆಳುತ್ತು ಲಿಪಿಯಿಂದಲೇ ಸಿದ್ದವಾದ
ಕೋಲೆಳುತ್ತು ಎಂಬ ಇನ್ನೊಂದು ಲಿಪಿಯಲ್ಲೂ ಮಲಯಾಳದ ಬರಹಗಳನ್ನು ಬರೆಯಲಾಗುತ್ತಿತ್ತು. ಈ ಎರಡು ಲಿಪಿಗಳಲ್ಲೂ ಮಹಾಪ್ರಾಣಾಕ್ಶರಗಳು ಮತ್ತು ಗಜಡದಬಗಳು ಇರಲಿಲ್ಲವಾದ ಕಾರಣ, ಇಂತಹ ಅಕ್ಶರಗಳಿರುವ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಿರಲಿಲ್ಲ. ತಮಿಳು ಬರಹಗಳಲ್ಲಿ ಕಾಣಿಸುವ ಹಾಗೆ ಅವನ್ನು ಹೆಚ್ಚಿನ ಮಲಯಾಳಿಗಳೂ ತಮ್ಮ ಉಚ್ಚಾರಣೆಯಲ್ಲಿರುವ ಹಾಗೆಯೇ ಬರೆಯಬೇಕಾಗಿತ್ತು. ಆದರೆ ಕೆಲವು ಮಲಯಾಳ ಬರಹಗಳಲ್ಲಿ ಮಾತ್ರ, ತಮಿಳು ಬರಹಗಳಲ್ಲಿ ಮಾಡಿದ ಹಾಗೆ, ಸಂಸ್ಕ್ರುತ ಪದಗಳನ್ನು ಬರೆಯುವುದಕ್ಕಾಗಿ ವಟ್ಟೆಳುತ್ತಿನ ಬದಲು ಗ್ರಂತಲಿಪಿಯನ್ನು ಬಳಸಲಾಗುತ್ತಿತ್ತು. ಇದಲ್ಲದೆ, ಸಂಸ್ಕ್ರುತದಲ್ಲಿ ಮಾತ್ರವೇ ರಚಿಸಿರುವ ಗ್ರಂತಗಳನ್ನು ಬರೆಯುವುದಕ್ಕಾಗಿ ಈ ಸಮಯದಲ್ಲಿ ಮಲಯಾಳಿ ಸಂಸ್ಕ್ರುತ ವಿದ್ವಾಂಸರು ಗ್ರಂತಲಿಪಿಯನ್ನು ಬಳಸುತ್ತಿದ್ದರು. ಈ ಲಿಪಿಯಲ್ಲಿ ಸಂಸ್ಕ್ರುತ ಪದಗಳನ್ನು ಬರೆಯಲು ಬೇಕಾಗುವ ಮಹಾಪ್ರಾಣಾಕ್ಶರ, ಗಜಡದಬ ಮತ್ತು ಇತರ ಅಕ್ಶರಗಳನ್ನು (ಋ, ಶ, ಷ ಮೊದಲಾದವುಗಳನ್ನು) ಉಳಿಸಿಕೊಳ್ಳಲಾಗಿತ್ತು. ಹದಿನೇಳನೇ ಶತಮಾನಕ್ಕಾಗುವಾಗ ಮಲಯಾಳ ಸಾಹಿತ್ಯ ರಚನೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು. ಈ ಬರಹಗಾರರಿಗೆ ಸಂಸ್ಕ್ರುತದಲ್ಲೂ ಪಾಂಡಿತ್ಯವಿತ್ತು ಮತ್ತು ಮಲಯಾಳಕ್ಕಿಂತಲೂ ಇವರಿಗೆ ಸಂಸ್ಕ್ರುತ ನುಡಿಯ ಮೇಲೆ ಹೆಚ್ಚಿನ ಆದರ ಮತ್ತು ಅಬಿಮಾನಗಳಿದ್ದುವು. ಹಾಗಾಗಿ ಇವರು ಸಂಸ್ಕ್ರುತ ಗ್ರಂತಗಳನ್ನು ಬರೆಯುವುದಕ್ಕಾಗಿ ಮಾತ್ರವಲ್ಲದೆ ಮಲಯಾಳ ಗ್ರಂತಗಳನ್ನು ಬರೆಯುವುದಕ್ಕಾಗಿಯೂ ಗ್ರಂತಲಿಪಿಯನ್ನೇ ಬಳಸಲು ತೊಡಗಿದರು. ಅನಂತರ ಹದಿನೆಂಟನೇ ಶತಮಾನದಲ್ಲಿ ಈ ವಿದಾನ ಹೆಚ್ಚು ಹೆಚ್ಚು ಬಳಕೆಗೆ ಬಂದು, ಕೊನೆಗೆ ಮಲಯಾಳ ಬರಹಗಳಲ್ಲಿ ವಟ್ಟೆಳುತ್ತಿನ ಬಳಕೆ ಪೂರ್ತಿ ಇಲ್ಲವಾಯಿತು.
ಈ ಕಾರಣಕ್ಕಾಗಿ, ಗ್ರಂತಲಿಪಿಯಿಂದ ಬೆಳೆದು ಬಂದಿರುವ ಇವತ್ತಿನ ಮಲಯಾಳ ಲಿಪಿಯಲ್ಲಿ ಸಂಸ್ಕ್ರುತ ಪದಗಳನ್ನು ಬರೆಯಲು ಬೇಕಾಗುವ ಅಕ್ಶರಗಳೆಲ್ಲವೂ ಕಾಣಿಸಿಕೊಳ್ಳುತ್ತಿವೆ ಮತ್ತು ಕನ್ನಡದ ಬರಹಗಾರರ ಹಾಗೆ ಮಲಯಾಳ ಬರಹಗಾರರಿಗೂ ಸಂಸ್ಕ್ರುತ ಪದಗಳನ್ನು ತಾವು ಉಚ್ಚರಿಸುವ ಹಾಗೆ ಬರೆಯುವ ಬದಲು ಸಂಸ್ಕ್ರುತ ಬರಹಗಳಲ್ಲಿರುವ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಮಾಡಲು ಸಾದ್ಯವಾಗಿದೆ. ಇದೇ ಕಾರಣದಿಂದಾಗಿ, ಕನ್ನಡ ಬರಹದ ಹಾಗೆ ಮಲಯಾಳ ಬರಹವೂ ಇವತ್ತು ಸಂಸ್ಕ್ರುತ ಪದಗಳ ಮಟ್ಟಿಗೆ ಸ್ಪೆಲ್ಲಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ (ಹೆಚ್ಚಿನ ವಿವರಗಳಿಗೆ ಮಂಗಲಂ 1988 ನೋಡಿ). 3.3.3 ಪಂಜಾಬಿ ಬರಹ ಪಂಜಾಬಿ ನುಡಿಯನ್ನು ಬರೆಯಲು ಬಾರತದಲ್ಲಿ ಮುಕ್ಯವಾಗಿ ಗುರ್ಮುಕಿ ಎಂಬ ಹೆಸರಿನ ಲಿಪಿಯನ್ನು ಬಳಸಲಾಗುತ್ತದೆ. ಇದಕ್ಕೆ ಬದಲು ಪಾಕಿಸ್ತಾನದಲ್ಲಿ ಇದೇ ನುಡಿಯನ್ನು ಬರೆಯುವುದಕ್ಕಾಗಿ ಅರೇಬಿಕ್ ಮೂಲದ ಶಹಾಮುಕಿ (ವ್ಯಾಪಾರಿಗಳ ಲಿಪಿ) ಎಂಬ ಲಿಪಿಯನ್ನು ಬಳಸಲಾಗುತ್ತದೆ. ಇದನ್ನು ಮೊದಲಿಗೆ ವ್ಯಾಪಾರಿಗಳು ತಮ್ಮ ಬರಹಗಳನ್ನು ಇತರರಿಗೆ ಗೊತ್ತಾಗದ ಹಾಗೆ ಗುಟ್ಟಾಗಿರಿಸಲು ಬಳಸುತ್ತಿದ್ದರು. ಗುರ್ಮುಕಿ ಲಿಪಿ ಬ್ರಾಹ್ಮೀ ಲಿಪಿಯಿಂದಲೇ ಬೆಳೆದುಬಂದಿದೆಯಾದರೂ ಅದರಲ್ಲಿ ಪಂಜಾಬಿ ಪದಗಳನ್ನು ಬರೆಯಲು ಬೇಕಾಗುವ ಅಕ್ಶರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ಬೇಕಾಗುವ ಅಕ್ಶರಗಳನ್ನು ಉಳಿಸಿಕೊಂಡಿಲ್ಲ. ಪಂಜಾಬಿ ಪದಗಳನ್ನು ಬರೆಯಲು ಬೇಕಾಗುವ ಬೇರೆ ಕೆಲವು ಅಕ್ಶರಗಳನ್ನೂ ಈ ಲಿಪಿಯಲ್ಲಿ ಹೊಸದಾಗಿ ರಚಿಸಿ ಸೇರಿಸಿಕೊಳ್ಳಲಾಗಿದೆ. ಈ ಲಿಪಿಯನ್ನು ಹದಿನಾರನೇ ಶತಮಾನದ ಸಿಕ್ ಗುರು ಅಂಗದ್ ಎಂಬವರು ಬ್ರಾಹ್ಮೀ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸಿಕೊಳ್ಳುವ ಮೂಲಕ ಉಂಟುಮಾಡಿದ್ದರೆಂದು ನಂಬಲಾಗಿದೆ.
ಈ ರೀತಿ ಸಿಕ್ಕರ ದರ್ಮದೊಂದಿಗೆ ನೇರ ಸಂಬಂದವಿರುವುದೂ ಇದರಲ್ಲಿ ಸಂಸ್ಕ್ರುತಕ್ಕೆ ಬೇಕಾಗುವ (ಆದರೆ ಪಂಜಾಬಿಗೆ ಬೇಡವಾಗಿರುವ) ಹೆಚ್ಚಿನ ಅಕ್ಶರಗಳನ್ನು ಉಳಿಸಿಕೊಳ್ಳದಿರುವುದಕ್ಕೆ ಕಾರಣವಿರಬಹುದು. ಪಂಜಾಬಿ (ಗುರ್ಮುಕಿ) ಲಿಪಿಯಲ್ಲಿ ಸ ಮತ್ತು ಶಗಳನ್ನು ಸೂಚಿಸಬಲ್ಲ ಅಕ್ಶರಗಳು ಮಾತ್ರ ಇವೆಯಲ್ಲದೆ, ಷವನ್ನು ಸೂಚಿಸಬಲ್ಲ ಅಕ್ಶರವಿಲ್ಲ. ಹಾಗಾಗಿ ಸಂಸ್ಕ್ರುತ ಪದಗಳಲ್ಲಿ ಬರುವ ಷವನ್ನು ಅದರ ಪಂಜಾಬಿ ಉಚ್ಚಾರಣೆಯನ್ನನುಸರಿಸಿ ಪಂಜಾಬಿ ಲಿಪಿಯಲ್ಲಿ ಶ ಎಂಬುದಾಗಿಯೇ ಬರೆಯಲಾಗುತ್ತದೆ. ಸಂಸ್ಕ್ರುತ ಪದಗಳು ಪಂಜಾಬಿ ಬರಹ ವಿಷ ವಿಶ ಪ್ರದೂಷಣ ಪ್ರದೂಶಣ ದ್ರುಷ್ಟಿ ದ್ರಿಶಟೀ ಪುರುಷ ಪುರುಶ ವಿಶೇಷ ವಿಶೇಶ ಋವನ್ನು ಸೂಚಿಸಬಲ್ಲ ಅಕ್ಶರವೂ ಪಂಜಾಬಿ ಲಿಪಿಯಲ್ಲಿಲ್ಲ. ಹಾಗಾಗಿ ಸಂಸ್ಕ್ರುತ ಪದಗಳಲ್ಲಿ ಬರುವ ಈ ಅಕ್ಶರವನ್ನು ರಿ ಎಂಬುದಾಗಿ ಬರೆಯಲಾಗುತ್ತದೆ. ಸಂಸ್ಕ್ರುತ ಪದಗಳು ಪಂಜಾಬಿ ಬರಹ ಕೃಪಾ ಕ್ರಿಪಾ ಕೃಷ್ಣ ಕ್ರಿಶಣ ದೃಷ್ಟಿ ದ್ರಶಟಿ ಸಂಸ್ಕೃತ ಸಂಸಕರಿತ ಋಷಿ ರಿಶೀ ಇದಲ್ಲದೆ ಸಂಸ್ಕ್ರುತದಲ್ಲಿ ಬರುವ ಹಲವು ರೀತಿಯ ಒತ್ತಕ್ಶರಗಳನ್ನು ಸೂಚಿಸಲು ಪಂಜಾಬಿ ಲಿಪಿಯಲ್ಲಿ
ಸಾದ್ಯವಾಗುವುದಿಲ್ಲ. ಅವನ್ನು ಒತ್ತಕ್ಶರಗಳಾಗಿ ಪಂಜಾಬಿ ಜನರು ಉಚ್ಚರಿಸುವುದೂ ಇಲ್ಲ. ಇವನ್ನೆಲ್ಲ ಉಚ್ಚಾರಣೆಯಲ್ಲಿರುವ ಹಾಗೆ ಬಿಡಿಸಿ ಇಲ್ಲವೇ ಒತ್ತಕ್ಶರಗಳಲ್ಲಿರುವ ವ್ಯಂಜನಗಳಲ್ಲೊಂದನ್ನು ಬಿಟ್ಟು ಬರೆಯಲಾಗುತ್ತದೆ. ಉದಾಹರಣೆಗಾಗಿ, ಪದಗಳ ನಡುವೆ ಬರುವ ಒತ್ತಕ್ಶರಗಳೆಲ್ಲ ಬೇರೆ ಬೇರೆ ವಿದಾನಗಳ ಮೂಲಕ ಉಚ್ಚಾರಣೆಗನುಸಾರವಾಗಿ ಬರಹದಲ್ಲೂ ಬದಲಾಗುತ್ತವೆ. ಸಂಸ್ಕ್ರುತ ಪದಗಳು ಪಂಜಾಬಿ ಬರಹ ಶಬ್ದ ಶಬದ ಶಕ್ತಿ ಶಕತಿ ಭಕ್ತಿ ಭಕತಿ ವಿದ್ಯಾ ವಿದಿಅ ಅಧ್ಯಾಯ ಅಧಿಆಯ ಅತ್ಯಂತ ಅತಿಅಂತ ಸಂಸ್ಕ್ರುತದ ಒತ್ತಕ್ಶರಗಳಲ್ಲಿ ಬರುವ ಯಕಾರ ಪಂಜಾಬಿ ಲಿಪಿಯಲ್ಲಿ ಇಕಾರವಾಗುತ್ತದೆ. ಸಂಸ್ಕ್ರುತ ಪದಗಳು ಪಂಜಾಬಿ ಬರಹ ವ್ಯಾಸ ವಿಆಸ ವ್ಯಥ್ರ ವಿಅರಥ ತ್ಯಾಗ ತಿಆಗ ನ್ಯಾಯ ನಿಆಯ ಧ್ಯಾನ ಧಿಆನ ಪದಗಳ ನಡುವಿನ ಒತ್ತಕ್ಶರಗಳಲ್ಲಿ ಒಂದೇ ವ್ಯಂಜನ ಎರಡು ಬಾರಿ ಬರುವಂತಹವುಗಳನ್ನು ಮಾತ್ರ ಈ ಬರಹದಲ್ಲಿ ಸರಿಯಾಗಿ ಸೂಚಿಸಲು ಸಾದ್ಯವಾಗುತ್ತದೆ. ಆದರೆ ಅಂತಹ ಕಡೆಗಳಲ್ಲಿ ಅವನ್ನು
ಒತ್ತಕ್ಶರಗಳಾಗಿ ಬರೆದು ಸೂಚಿಸುವ ಬದಲು ಅವುಗಳ ಮೊದಲಿಗೆ ಬರುವ ಅಕ್ಶರದ ಮೇಲೆ ಒಂದು ಅರ್ದಚಂದ್ರವನ್ನು ಇರಿಸುವುದರ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗಾಗಿ ಸಂಸ್ಕ್ರುತದ ಮತ್ತ ಪದವನ್ನು ಪಂಜಾಬಿ ಬರಹದಲ್ಲಿ ‰ಮತ ಎಂಬುದಾಗಿ ಬರೆಯಲಾಗುತ್ತದೆ. ಇದಲ್ಲದೆ ಇನ್ನೊಂದು ರೀತಿಯ ಒತ್ತಕ್ಶರವನ್ನೂ ಪಂಜಾಬಿ ಬರಹದಲ್ಲಿ ಬರೆಯಲು ಸಾದ್ಯವಿದೆ. ಯಾವುದಾದರೊಂದು ವ್ಯಂಜನದೊಂದಿಗೆ ರಕಾರ, ವಕಾರ ಇಲ್ಲವೇ ಹಕಾರ ಬಂದಿದೆಯಾದರೆ ಅದನ್ನು ಸೂಚಿಸುವುದಕ್ಕಾಗಿ ಆ ವ್ಯಂಜನದ ಕೆಳಗೆ ರ, ವ ಇಲ್ಲವೇ ಹ ಅಕ್ಶರವನ್ನು ಚಿಕ್ಕ ರೂಪದಲ್ಲಿ (ಕನ್ನಡದ ಅಣ್ಣ, ತೊವ್ವೆ ಮತ್ತು ಕೆಚ್ಚು ಪದಗಳಲ್ಲಿ ಬರುವ ್ಣ ್ವ ್ಚ ಗಳ ಹಾಗೆ) ಇರಿಸಿ ಸೂಚಿಸಬಹುದು. ಸಾಮಾನ್ಯವಾಗಿ ಇಂತಹ ಒತ್ತಕ್ಶರಗಳು ಪಂಜಾಬಿ ನುಡಿಯಲ್ಲಿ ಪದಗಳ ಮೊದಲಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಆದರೆ ಒತ್ತಕ್ಶರಗಳ ವಿಶಯದಲ್ಲಿ ಬರಹಗಾರರಿಗೆ ಅವನ್ನು ಉಚ್ಚಾರಣೆಯಲ್ಲಿರುವ ಹಾಗೆ ಬದಲಾಯಿಸುವ ಇಲ್ಲವೇ ಸಂಸ್ಕ್ರುತದಲ್ಲಿರುವ ಹಾಗೆ ಉಳಿಸಿಕೊಳ್ಳುವ ಆಯ್ಕೆಯಿದೆ. ಕೆಲವರಿಗೆ ಇವನ್ನು ಸಂಸ್ಕ್ರುತದಲ್ಲಿರುವ ಹಾಗೆ ಉಚ್ಚರಿಸಲು ಸಾದ್ಯವಾಗುತ್ತಿರುವುದೇ ಇದಕ್ಕೆ ಕಾರಣ. ಈ ಆಯ್ಕೆಯನ್ನು ಸೂಚಿಸುವುದಕ್ಕಾಗಿ ಪಂಜಾಬಿ ಪದಕೋಶಗಳಲ್ಲಿ ಇಂತಹ ಪದಗಳಿಗೆ ಎರಡೆರಡು ರೂಪಗಳನ್ನು ಕೊಡಲಾಗಿದೆ (ಜೋಶಿ ಮತ್ತು ಗಿಲ್ 1994 ನೋಡಿ). ಸಂಸ್ಕ್ರುತ ಪದಗಳು ಪಂಜಾಬಿ ಬರಹ ಸ್ವರ ಸವರ/ಸ್ವರ ಸ್ವಾಥ್ರಿ ಸವಾರಥೀ/ಸ್ವಾರಥೀ ದ್ವೇಷ ದವೇಶ/ದ್ವೇಶ ದ್ವೈತ ದವೈತ/ದ್ವೈತ ಪ್ರೇಮ ಪರೇಮ/ಪ್ರೇಮ
ಪ್ರವೇಶ ಪರವೇಶ/ಪ್ರವೇಶ ದ್ರುಷ್ಟಿ ದರಿಶಟೀ/ದ್ರಿಶಟೀ ದ್ರವ ದರವ/ದ್ರವ ದೃಷ್ಟಾಂತ ದರಿಶಟಾಂತ/ದ್ರಿಶಟಾಂತ ಕ್ರೋಧ ಕರೋಧ/ಕ್ರೋಧ ತೃಪ್ತಿ ತರಿಪತೀ/ತ್ರಿಪತೀ ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ತಮ್ಮ ಉಚ್ಚಾರಣೆಗನುಸಾರವಾಗಿ ಬರಹದಲ್ಲೂ ಬದಲಾಯಿಸುವುದರ ಮೂಲಕ ಪಂಜಾಬಿ ಜನರು ತಮ್ಮದೇ ಆದ ಸಂಸ್ಕ್ರುತಿಯನ್ನು ಉಳಿಸಿಕೊಂಡಿದ್ದಾರಲ್ಲದೆ ಏನನ್ನೂ ಕಳೆದುಕೊಂಡಿಲ್ಲ ಎಂಬುದು ಸ್ಪಶ್ಟ. 3.3.4 ಸಿಂದಿ ಬರಹ ಸಿಂದಿ ನುಡಿಯ ಹೆಚ್ಚಿನ ಬರಹಗಳೂ ಅರೇಬಿಕ್ ಲಿಪಿಯಿಂದ ಬೆಳೆದು ಬಂದಿರುವಂತಹ ’ಸಿಂದಿ-ಅರೇಬಿಕ್’ ಲಿಪಿಯಲ್ಲಿವೆ. ಇದರಲ್ಲಿ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಸಾದ್ಯವಾಗದು. ಅವುಗಳನ್ನು ಸಿಂದಿ ಜನರು ಹೇಗೆ ಉಚ್ಚರಿಸುತ್ತಾರೋ ಹಾಗೆ ಮಾತ್ರ ಬರೆಯಲು ಸಾದ್ಯ. ಈ ನುಡಿಯನ್ನು ನಾಗರಿ ಲಿಪಿಯಲ್ಲಿ ಬರೆಯುವ ಪ್ರಯತ್ನವೂ ನಡೆಯುತ್ತಿದೆ ಮತ್ತು ಇದಕ್ಕಾಗಿ ನಾಗರಿ ಲಿಪಿಯಲ್ಲಿ ಸಿಂದಿ ನುಡಿಗೆ ಬೇಕಾಗುವಂತಹ ಕೆಲವು ಹೆಚ್ಚಿನ ಅಕ್ಶರಗಳನ್ನೂ ಸೇರಿಸಿಕೊಳ್ಳಲಾಗಿದೆ. ಕೆಲವು ಸಿಂದಿ ಪುಸ್ತಕಗಳೂ ಈ ಲಿಪಿಯಲ್ಲಿ ಈಗಾಗಲೇ ಅಚ್ಚಾಗಿವೆ. ಬಾರತ ಸರಕಾರ ಸಿಂದಿ ನುಡಿಗಾಗಿ ಈ ಎರಡು ಲಿಪಿಗಳನ್ನೂ ಅಂಗೀಕರಿಸಿದೆ. ಇದಲ್ಲದೆ ಗುಜರಾತಿನ ಕಚ್ ಪ್ರಾಂತದಲ್ಲಿ ಸಿಂದಿ ನುಡಿಯನ್ನು ಬಳಸುವವರು ತಮ್ಮ ಬರಹಗಳಲ್ಲಿ ಗುಜರಾತಿ ಲಿಪಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಲಿಪಿಯಲ್ಲೂ ಕೆಲವು ಪುಸ್ತಕಗಳು ಈಗಾಗಲೇ ಅಚ್ಚಾಗಿವೆ. ನಾಗರಿ ಮತ್ತು ಗುಜರಾತಿ ಲಿಪಿಗಳಲ್ಲಿ ಮಾತ್ರ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ಸಾದ್ಯ.
3.3.5 ಬಾರತದ ಬೇರೆ ಬರಹಗಳು ಬಾರತದಲ್ಲಿ ಬಳಕೆಯಲ್ಲಿರುವ ಬೇರೆ ಬರಹಗಳಲ್ಲೂ ಇದೇ ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಉದಾಹರಣೆಗಾಗಿ ಉರ್ದು ಮತ್ತು ಕಾಶ್ಮೀರಿ ನುಡಿಗಳನ್ನು ಬರೆಯುವುದಕ್ಕಾಗಿ ಸಿಂದಿ ನುಡಿಯ ಹಾಗೆ ಅರೇಬಿಕ್ ಲಿಪಿಯಿಂದ ಬೆಳೆದುಬಂದಿರುವಂತಹ ಲಿಪಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ಬೇಕಾಗುವ ಅಕ್ಶರಗಳೆಲ್ಲವೂ ಇಲ್ಲವಾದ ಕಾರಣ, ಅವನ್ನು ಉಚ್ಚಾರಣೆಯಲ್ಲಿರುವ ಹಾಗೆಯೇ ಬರೆಯಲಾಗುತ್ತದೆ. ಆದರೆ ಅರೇಬಿಕ್ ಮತ್ತು ಪರ್ಶಿಯನ್ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಆ ನುಡಿಗಳ ಬರಹಗಳಲ್ಲಿರುವ ಹಾಗೆಯೇ ಉರ್ದು ಇಲ್ಲವೇ ಕಾಶ್ಮೀರಿ ಬರಹಗಳಲ್ಲೂ ಬರೆಯಲಾಗುತ್ತದೆ. ಈ ಕಾರಣಕ್ಕಾಗಿ ಉರ್ದು ಇಲ್ಲವೇ ಕಾಶ್ಮೀರಿ ಬರಹಗಳಲ್ಲೂ ಆ ನುಡಿಗೆ ಅವಶ್ಯವಿಲ್ಲದಂತಹ ಹಲವು ಅಕ್ಶರಗಳು ಕಾಣಿಸಿಕೊಳ್ಳುತ್ತವೆ. ಕನ್ನಡದ ಬರಹಗಾರರು ಸಂಸ್ಕ್ರುತ ಪದಗಳ ವಿಶಯದಲ್ಲಿ ಮಾಡಿರುವಂತಹ ತಪ್ಪನ್ನು ಉರ್ದು ಮತ್ತು ಕಾಶ್ಮೀರಿ ಬರಹಗಾರರು ಅರೇಬಿಕ್ ಮತ್ತು ಪರ್ಶಿಯನ್ ಪದಗಳ ವಿಶಯದಲ್ಲಿ ಮಾಡಿದ್ದಾರೆ. ಇದರಿಂದಾಗಿ ಈ ಬರಹಗಳನ್ನು ಕಲಿಯುವ ಕೆಲಸವೂ ಅನವಶ್ಯಕವಾಗಿ ತುಂಬಾ ತೊಡಕಿನದಾಗಿದೆ. ಮೇಲಿನ ಸಮಸ್ಯೆಗಿಂತ ತುಸು ಬೇರಾಗಿರುವ ಸಮಸ್ಯೆ ಬಂಗಾಲಿ ಬರಹದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬರಹದಲ್ಲಿ ಬಳಕೆಯಾಗುವ ಲಿಪಿ ಬ್ರಾಹ್ಮೀ ಲಿಪಿಯಿಂದ ಬೆಳೆದು ಬಂದಿದ್ದು, ಅದರಲ್ಲಿ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಅಕ್ಶರಗಳೆಲ್ಲವೂ ಇವೆ. ಆದರೆ ಈ ಅಕ್ಶರಗಳನ್ನು ಬರಹದಲ್ಲಿ ಬಳಸುವಾಗ, ಸಂಸ್ಕ್ರುತದಿಂದ ಎರವಲಾಗಿ ಪಡೆದ ತತ್ಸಮ ಪದಗಳ ಬರವಣಿಗೆಯಲ್ಲಿ ಮಾತ್ರವಲ್ಲದೆ ಬಂಗಾಲಿಯವೇ ಆದ ಪದಗಳ ಬರವಣಿಗೆಯಲ್ಲೂ ಅವುಗಳ ಮೂಲ (ಸಂಸ್ಕ್ರುತ) ಪದಗಳ ಹಲವು ಪಳೆಯುಳಿಕೆಗಳನ್ನು
ಉಳಿಸಿಕೊಳ್ಳಲಾಗಿದೆ. ಇವುಗಳಿಂದಾಗಿ ಬಂಗಾಲಿ ಬರಹದ ಸ್ಪೆಲ್ಲಿಂಗ್ ಸಮಸ್ಯೆ ಕನ್ನಡ ಬರಹದ ಸ್ಪೆಲ್ಲಿಂಗ್ ಸಮಸ್ಯೆಗಿಂತ ಹೆಚ್ಚು ತೊಂದರೆ ಕೊಡುವಂತಹದಾಗಿದೆ. ಅದು ಸ್ವಲ್ಪ ಮಟ್ಟಿಗೆ ಇಂಗ್ಲಿಶ್ ಇಲ್ಲವೆ ಅಸಮೀಸ್ ಬರಹಗಳ ಸ್ಪೆಲ್ಲಿಂಗ್ ಸಮಸ್ಯೆಯನ್ನು (3.4.1-2 ನೋಡಿ) ಹೋಲುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸುವುದಕ್ಕಾಗಿ ಬಂಗಾಲಿ ಬರಹದಲ್ಲಿ ಸುದಾರಣೆಗಳನ್ನು ಮಾಡುವ ಪ್ರಯತ್ನ ನಡೆದಿದೆ. ಆದರೆ ಸಂಸ್ಕ್ರುತ ನುಡಿಯ ಮೇಲೆ ಹೆಚ್ಚಿನ ಅಬಿಮಾನವಿರುವ ವಿದ್ವಾಂಸರು ಮತ್ತು ಈಗಾಗಲೇ ಬಳಕೆಯಲ್ಲಿರುವ ಪದಸ್ವರೂಪಕ್ಕೆ ಹೊಂದಿಕೊಂಡಿರುವವರು ಇದಕ್ಕೆ ತಡೆಯಾಗಿದ್ದಾರೆ. 3.4 ಸ್ಪೆಲ್ಲಿಂಗ್ ಸಮಸ್ಯೆಯ ಮೂಲ ಮೇಲೆ (3.2)ರಲ್ಲಿ ಸೂಚಿಸಿದ ಹಾಗೆ, ಪದಗಳ ಉಚ್ಚಾರಣೆಗೂ ಬರಹದಲ್ಲಿ ಅವುಗಳಿಗಿರುವ ರೂಪಕ್ಕೂ ನಡುವೆ ವ್ಯತ್ಯಾಸಗಳಿದ್ದಲ್ಲಿ ಅದು ಸ್ಪೆಲ್ಲಿಂಗ್ ಸಮಸ್ಯೆಯನ್ನು ತಂದೊಡ್ಡುತ್ತದೆ. ಇಂತಹ ವ್ಯತ್ಯಾಸಗಳು ಹುಟ್ಟಿಕೊಳ್ಳಲು ಎರಡು ಮುಕ್ಯ ಕಾರಣಗಳಿವೆ. (1) ಒಂದು ನುಡಿಯಲ್ಲಿರುವ ಪದಗಳ ಉಚ್ಚಾರಣೆ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಎಲ್ಲಾ ಜೀವಂತ ನುಡಿಗಳೂ ಆ ರೀತಿ ಬದಲಾಗುತ್ತಲೇ ಇರುತ್ತವೆ. ಇದನ್ನು ಯಾರೂ ತಡೆಯಲಾರರು. ಯಾಕೆಂದರೆ ಇದು ನುಡಿಗಳಲ್ಲಿ ಸಹಜವಾಗಿ ಅವನ್ನು ಬಳಸುವವರ ಅರಿವಿಗೆ ಬಾರದ ಹಾಗೆ ನಡೆಯುತ್ತಿರುವ ಬದಲಾವಣೆಗಳು. ಆದರೆ ಒಂದು ನುಡಿಯ ಪದಗಳನ್ನು ಬರಹದಲ್ಲಿ ಯಾವ ರೀತಿ ಬರೆಯಬೇಕೆಂಬುದು ಬರಹಗಾರರ ಹಿಡಿತದಲ್ಲಿರುತ್ತದೆ. ನುಡಿ ಬದಲಾದಾಗ ಅದಕ್ಕನುಸಾರವಾಗಿ ಬರಹವನ್ನವರು ಬದಲಾಯಿಸಿಕೊಳ್ಳಬಲ್ಲರು ಇಲ್ಲವೇ ಹಾಗೆ ಬದಲಾಯಿಸದೆ ಮೊದಲಿದ್ದ ಹಾಗೆಯೇ ಉಳಿಸಿಕೊಳ್ಳಬಲ್ಲರು. ತಮ್ಮ ಬರಹವನ್ನು ಬದಲಾಯಿಸಿಕೊಳ್ಳದೆ ಉಳಿಸಿಕೊಂಡಿರುವವರ ಬರಹದಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಹುಟ್ಟಿಕೊಳ್ಳುತ್ತದೆ.
(2) ಒಂದು ನುಡಿಗೆ ಹೊಸದಾಗಿ ಒಂದು ಲಿಪಿಯನ್ನು ಅಳವಡಿಸಿಕೊಳ್ಳುವಾಗ ಬರಹಗಾರರು ಬೇರೆ ಬೇರೆ ರೀತಿಯ ತಪ್ಪುಗಳನ್ನು ಮಾಡಲು ಸಾದ್ಯವಿದೆ. ಇಂತಹ ತಪ್ಪುಗಳಿಂದಾಗಿಯೂ ಒಂದು ನುಡಿಯ ಬರಹದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಗಳು ಹುಟ್ಟಿಕೊಳ್ಳಬಲ್ಲುವು. ಉದಾಹರಣೆಗಾಗಿ ಮಣಿಪುರಿ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಅದರ ಪಂಡಿತರು ಹಲವಾರು ತಪ್ಪುಗಳನ್ನು ಮಾಡಿದ್ದರು. ವೇದಕಾಲದ ಸಂಸ್ಕ್ರುತ ಪದಗಳ ಹಾಗೆ ಮಣಿಪುರಿ ನುಡಿಯಲ್ಲಿ ಉದಾತ್ತ-ಅನುದಾತ್ತ ವ್ಯತ್ಯಾಸವಿದೆ. ಇದನ್ನು ಬರಹದಲ್ಲಿ ಕಾಣಿಸುವುದಕ್ಕಾಗಿ ಮಣಿಪುರಿ ಪಂಡಿತರು ಎಲ್ಲಾ ಕಡೆಗಳಲ್ಲೂ ಒಂದೇ ವಿದಾನವನ್ನು ಬಳಸುವ ಬದಲು ಹಲವು ವಿದಾನಗಳನ್ನು ಬಳಸಿದ್ದಾರೆ. ಬಂಗಾಲಿ ಲಿಪಿಯಲ್ಲಿ ಇದಕ್ಕೆ ಬೇಕಾಗುವ ಅಕ್ಶರಗಳಿಲ್ಲದ್ದುದೇ ಇದಕ್ಕೆ ಕಾರಣ. ಕೆಲವು ಪದಗಳಲ್ಲಿ ಉದಾತ್ತ-ಅನುದಾತ್ತ ವ್ಯತ್ಯಾಸವನ್ನು ಸೂಚಿಸಲು ಉದ್ದಸ್ವರ-ಗಿಡ್ಡಸ್ವರ ವ್ಯತ್ಯಾಸವನ್ನು ಬಳಸಲಾಗಿದೆ. ಈ ಉದ್ದಸ್ವರ-ಗಿಡ್ಡಸ್ವರ ವ್ಯತ್ಯಾಸ ಮಣಿಪುರಿ ನುಡಿಯಲ್ಲಿ ಕಾಣಿಸುವುದಿಲ್ಲವಾದ ಕಾರಣ ಅದನ್ನು ಉದಾತ್ತ-ಅನುದಾತ್ತ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಸಲು ಮಣಿಪುರಿ ಪಂಡಿತರಿಗೆ ಸಾದ್ಯವಾಗಿದೆ. ಆದರೆ ಬೇರೆ ಕೆಲವು ಪದಗಳಲ್ಲಿ ಮಣಿಪುರಿಗೆ ಅವಶ್ಯವಿಲ್ಲದ ಅನುನಾಸಿಕ ಮತ್ತು ಅನುಸ್ವಾರಗಳ ನಡುವಿನ ವ್ಯತ್ಯಾಸವನ್ನು ಮತ್ತು ಇನ್ನು ಕೆಲವು ಪದಗಳಲ್ಲಿ ಒಂದು ಮತ್ತು ಎರಡು ಸ್ವರಗಳ ನಡುವಿನ ವ್ಯತ್ಯಾಸವನ್ನು ಇದೇ ಉದಾತ್ತ-ಅನುದಾತ್ತ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಇವರು ಬಳಸಿದ್ದಾರೆ! ಉದಾತ್ತ-ಅನುದಾತ್ತ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಈ ಬೇರೆ ಬೇರೆ ವಿದಾನಗಳನ್ನು ಬಳಸುವಲ್ಲಿ ಮಣಿಪುರಿ ಪಂಡಿತರು ಯಾವುದೇ ಒಂದು ನಿಶ್ಚಿತವಾದ ನಿಯಮವನ್ನೂ ಅನುಸರಿಸಿಲ್ಲ. ಹಾಗಾಗಿ ಈ ಹಲವು ವಿದಾನಗಳ ಬಳಕೆ ಮಣಿಪುರಿ ಬರಹದಲ್ಲಿ ಒಂದು ದೊಡ್ಡ ಗೊಂದಲವನ್ನೇ ತಂದುಹಾಕಿದೆ ಮತ್ತು ಅದರಿಂದಾಗಿ
ತುಂಬಾ ತೊಡಕು-ತೊಡಕಾದ ಸ್ಪೆಲ್ಲಿಂಗ್ ಸಮಸ್ಯೆಯನ್ನೂ ತಂದೊಡ್ಡಿದೆ. ಬಂಗಾಲಿ ಲಿಪಿಯನ್ನು ಮಣಿಪುರಿ ನುಡಿಗೆ ಅಳವಡಿಸುವ ಸಮಯದಲ್ಲಿ ಇಂತಹ ಇನ್ನೂ ಹಲವಾರು ತಪ್ಪುಗಳನ್ನು ಈ ಪಂಡಿತರು ಮಾಡಿದ್ದರು. ಮಣಿಪುರಿ ಪದಗಳನ್ನು ಬರೆಯಲು ನಿಜಕ್ಕೂ ಬೇಕಾಗುವುದು 24 ವ್ಯಂಜನಾಕ್ಶರಗಳು ಮಾತ್ರ. ಆದರೆ ಈ ಪಂಡಿತರು ಬಂಗಾಲಿ ಲಿಪಿಯಲ್ಲಿರುವ ಎಲ್ಲಾ 35 ವ್ಯಂಜನಾಕ್ಶರಗಳನ್ನೂ ಬಳಸಹೋಗಿ ಇನ್ನೂ ಹಲವಾರು ಸ್ಪೆಲ್ಲಿಂಗ್ ಸಮಸ್ಯೆಗಳು ತಮ್ಮ ಬರಹವನ್ನು ಕಾಡುವ ಹಾಗೆ ಮಾಡಿದ್ದಾರೆ. ಉದಾಹರಣೆಗಾಗಿ ಮಣಿಪುರಿಯಲ್ಲಿ ಒಂದು ಸಕಾರ ಮಾತ್ರ ಇದೆ. ಆದರೆ ಬಂಗಾಲಿ ಲಿಪಿಯಲ್ಲಿ ಸಕಾರಕ್ಕೆ ಸಂಬಂದಿಸಿದಂತೆ ಸಶಷಗಳೆಂಬ ಮೂರು ಅಕ್ಶರಗಳಿವೆ. ಮಣಿಪುರಿ ಪಂಡಿತರು ಈ ಮೂರು ಅಕ್ಶರಗಳನ್ನೂ ಮಣಿಪುರಿಯ ಸಕಾರವನ್ನು ಬರೆಯುವುದಕ್ಕಾಗಿ ಬಳಸಿದ್ದಾರೆ. ಆದರೆ ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕೆಂಬುದರಲ್ಲಿ ಯಾವ ನಿಯಮವನ್ನೂ ಇಟ್ಟುಕೊಂಡಿಲ್ಲ. ತಮ್ಮ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸುವಲ್ಲಿ ಮಣಿಪುರಿ ಪಂಡಿತರು ಮಾಡಿದ ಇಂತಹ ಹಲವು ತಪ್ಪುಗಳಿಂದಾಗಿ ಮಣಿಪುರಿ ಬರಹದಲ್ಲಿ ಇವತ್ತು ಹಲವಾರು ಸ್ಪೆಲ್ಲಿಂಗ್ ಸಮಸ್ಯೆಗಳು ತುಂಬಿಕೊಂಡಿವೆ (ಬಟ್ ಮತ್ತು ನಿಂಗೊಂಬ 1997 ನೋಡಿ). ಮೇಲೆ ವಿವರಿಸಿದಂತಹ ಎರಡು ರೀತಿಯ ಸ್ಪೆಲ್ಲಿಂಗ್ ಸಮಸ್ಯೆಗಳನ್ನೂ ಬಗೆರಿಹರಿಸುವುದು ಬಹಳ ಸುಲಬ. ಪದಗಳನ್ನು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯತೊಡಗಿದಲ್ಲಿ ಅವೆಲ್ಲವೂ ಇಲ್ಲವಾಗುತ್ತವೆ. ಆದರೆ ಒಂದು ನುಡಿಯಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚಿದ ಹಾಗೆಲ್ಲ ಅದನ್ನು ಬಗೆಹರಿಸುವ ಕೆಲಸವೂ ತೊಡಕಿನದಾಗುತ್ತಾ ಹೋಗುತ್ತದೆ. ಇದಕ್ಕೆ ಕಾರಣವೇನೆಂದರೆ, ಈಗಾಗಲೇ ಬರಹವನ್ನು ಬಳಸುತ್ತಿರುವವರಿಗೆ ಸ್ಪೆಲ್ಲಿಂಗ್ ಸಮಸ್ಯೆಯಿಲ್ಲದಿರುವ ಹೊಸ ವಿದಾನವೇ ವಿಚಿತ್ರವಾಗಿ ಕಾಣಿಸುತ್ತದೆ. ಬರಹವನ್ನು ಹೊಸದಾಗಿ ಕಲಿಯುವವರಿಗೆ ಮಾತ್ರ ಅದು ಸರಿಯಾದ ವಿದಾನ ಮತ್ತು ಈಗಿರುವ
ವಿದಾನ ವಿಚಿತ್ರವಾದುದು ಎಂದು ಅನಿಸುತ್ತದೆ. ಬರಹವನ್ನು ಕಲಿತಿರುವವರಿಗೆ ಈಗಿರುವ ಪದಗಳ ಸ್ಪೆಲ್ಲಿಂಗ್ ಪರಿಚಿತವಾಗಿದೆಯಾದ ಕಾರಣ, ಅವರಿಗದು ಸಮಸ್ಯೆಯೆಂದೇ ಅನಿಸುವುದಿಲ್ಲ. ಹಾಗಾಗಿ ಹೊಸ ಸ್ಪೆಲ್ಲಿಂಗನ್ನು ಕಲಿಯುವುದೇ ಅವರಿಗೆ ಸಮಸ್ಯೆಯಾಗುತ್ತದೆ. ಇದಲ್ಲದೆ ಈಗಾಗಲೇ ಹಳೇ ಸ್ಪೆಲ್ಲಿಂಗ್ನಲ್ಲಿ ಅಚ್ಚಾಗಿರುವ ಸಾವಿರಾರು ಬರಹಗಳನ್ನು ಓದಬೇಕಿದ್ದಲ್ಲಿ ಹಳೇ ಬರಹವನ್ನು ಕಲಿಯುವ ಅವಶ್ಯಕತೆಯಿದೆಯಾದ ಕಾರಣ, ಅದನ್ನು ಬದಲಾಯಿಸಹೋಗದೆ ಹಾಗೆಯೇ ಉಳಿಸಿಕೊಳ್ಳುವುದೇ ಒಳ್ಳೆಯದೆಂಬ ವಾದವೂ ಮುಂದೆ ಬರುತ್ತದೆ. ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನೆನಪಿನಲ್ಲಿರಿಸಿಕೊಳ್ಳುವುದು ಅವಶ್ಯ. ನಾವು ತಿಳಿಯಬೇಕೆಂದಿರುವ ವಿಶಯವನ್ನು ಮಾತಿನ ಮೂಲಕ ತಿಳಿಸಲು ಸಾದ್ಯವಿಲ್ಲದಿರುವ ಸಂದರ್ಬಗಳಲ್ಲಿ ಬರಹದ ಮೊರೆಹೊಗುತ್ತೇವೆ. ಎಂದರೆ, ಮುಕ್ಯವಾಗಿ ಮಾತು ಮಾಡಬೇಕಾಗಿರುವ ಕೆಲಸವನ್ನೇ ಬರಹವೂ ಮಾಡ ಬೇಕಾಗಿದೆ. ಬರಹದ ಈ ಗುರಿಯನ್ನು ನಾವು ತಲಪಬೇಕಿದ್ದಲ್ಲಿ ಮಾತು ಮತ್ತು ಬರಹಗಳ ನಡುವೆ ವ್ಯತ್ಯಾಸ ಕಡಿಮೆಯಿದ್ದಶ್ಟೂ ಒಳ್ಳೆಯದು. ಹಾಗಾಗಿ ಬರಹದಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚಿದ ಹಾಗೆಲ್ಲ ಅದು ತನ್ನ ಮೂಲ ಗುರಿಯನ್ನು ತಲಪುವುದರಲ್ಲಿ ಸೋಲುತ್ತಾ ಹೋಗುತ್ತದೆ. ಈ ಸಮಸ್ಯೆಗೆ ಸಂಬಂದಿಸಿದ ಹಾಗೆ ಎರಡು ಉದಾಹರಣೆಗಳನ್ನು ಕೆಳಗೆ ತುಸು ಹೆಚ್ಚು ವಿವರವಾಗಿ ಪರಿಶೀಲಿಸಲಾಗಿದೆ. 3.4.1 ಇಂಗ್ಲಿಶ್ ನುಡಿಯ ಸ್ಪೆಲ್ಲಿಂಗ್ ಸಮಸ್ಯೆ ಕನ್ನಡ ಬರಹಕ್ಕೆ ಹೋಲಿಸಿದೆವಾದರೆ, ಇಂಗ್ಲಿಶ್ ಬರಹದಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ತುಂಬಾ ಹೆಚ್ಚು ತೊಡಕಿನದು ಮತ್ತು ಈ ಕಾರಣಕ್ಕಾಗಿ ಇಂಗ್ಲಿಶ್ ನುಡಿಯನ್ನಾಡುವವರಿಗೆ ಬರಹವನ್ನು ಕಲಿಯುವುದೆಂದರೆ ಹೆಚ್ಚುಕಡಿಮೆ ಒಂದು ಹೊಸ ನುಡಿಯನ್ನು ಕಲಿತಶ್ಟೇ ಕಶ್ಟದ ಕೆಲಸವೆಂದೆನಿಸುತ್ತದೆ.
ಉದಾಹರಣೆಗಾಗಿ, ಇಂಗ್ಲಿಶ್ನಲ್ಲಿ ಞಟಿoತಿ ಮತ್ತು ಟಿo ಎಂಬ ಎರಡು ಪದಗಳ ನಡುವೆ ಬರಹದಲ್ಲಿ ವ್ಯತ್ಯಾಸವಿದೆ, ಆದರೆ ಉಚ್ಚಾರಣೆಯಲ್ಲಿ ವ್ಯತ್ಯಾಸವಿಲ್ಲ; heಚಿಡಿಜ, biಡಿಜ, ಛಿuಡಿಜ ಮತ್ತು ತಿoಡಿಜ ಪದಗಳಲ್ಲಿ eಚಿ, i, u, o ಎಂಬ ಬೇರೆ ಬೇರೆ ಸ್ವರಗಳು ಬರವಣಿಗೆಯಲ್ಲಿ ಕಾಣಿಸುತ್ತವೆ; ಆದರೆ ಉಚ್ಚಾರಣೆಯಲ್ಲಿ ಒಂದೇ ಸ್ವರವಿದೆ; ಜoubಣ, ಜebಣ, ಛಿಟimb, ಣhumb ಮೊದಲಾದ ಹಲವು ಪದಗಳಲ್ಲಿ b ವ್ಯಂಜನವೊಂದು ಬರಹದಲ್ಲಿದೆ, ಆದರೆ ಉಚ್ಚಾರಣೆಯಲ್ಲಿಲ್ಲ; miಟಿuಣe ಪದವನ್ನು ಒಂದು ಅರ್ತದಲ್ಲಿ ಮಿನಿಟ್ ಎಂಬುದಾಗಿ ಉಚ್ಚರಿಸಲಾಗುತ್ತದೆ ಮತ್ತು ಇನ್ನೊಂದು ಅರ್ತದಲ್ಲಿ ಮಯ್ ನ್ಯೂಟ್ ಎಂಬುದಾಗಿ ಉಚ್ಚರಿಸಲಾಗುತ್ತದೆ. ಇಂತಹ ಹಲವು ರೀತಿಯ ಸ್ಪೆಲ್ಲಿಂಗ್ ಸಮಸ್ಯೆಯಿರುವ ಇಂಗ್ಲಿಶ್ ಬರಹವನ್ನು ಬದಲಾಯಿಸಲು ಹಲವರು ಪ್ರಯತ್ನಪಟ್ಟಿದ್ದಾರೆ ಮತ್ತು ಈಗಲೂ ಪ್ರಯತ್ನಪಡುತ್ತಿದ್ದಾರೆ. ಆದರೆ ಈಗಾಗಲೇ ಇಂಗ್ಲಿಶ್ ಬರಹವನ್ನು ಕಲಿತು ಅದರಲ್ಲಿ ಪಳಗಿರುವ ಬರಹಗಾರರಿಗೆ ಮತ್ತು ಓದುಗರಿಗೆ ಉಚ್ಚಾರಣೆಗೆ ಅನುಸಾರವಾಗಿ ಸಿದ್ದಪಡಿಸಿದ ಹೊಸ ಸ್ಪೆಲ್ಲಿಂಗ್ ಪದ್ದತಿಯನ್ನು ಬಳಸುವುದಕ್ಕಿಂತಲೂ ಈಗ ಬಳಕೆಯಲ್ಲಿರುವ ಪದ್ದತಿಯನ್ನು ಬಳಸುವುದೇ ಹೆಚ್ಚು ಸುಲಬವಾದುದೆಂದು ಅನಿಸುತ್ತದೆ. ಹಾಗಾಗಿ ಅವರು ಈಗಿರುವ ಬರಹದ ವಿದಾನವನ್ನು ಬಿಟ್ಟುಕೊಡಲು ಸಿದ್ದರಿಲ್ಲ. ಬರಹಕ್ಕೂ ಮಾತಿಗೂ ನಡುವೆ ತುಂಬಾ ಅಂತರವಿರುವುದು ಈ ರೀತಿ ಇಂಗ್ಲಿಶ್ನಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ತೊಡೆದು ಹಾಕಲು ಸಾದ್ಯವಾಗದಿರುವುದಕ್ಕೆ ಮುಕ್ಯ ಕಾರಣ. ಉಚ್ಚಾರಣೆಗೆ ಸರಿಹೊಂದುವ ಹಾಗೆ ಇಂಗ್ಲಿಶ್ ಬರಹವನ್ನು ಬದಲಾಯಿಸಿದಲ್ಲಿ ಅದು ಈಗ ಬಳಕೆಯಲ್ಲಿರುವ ಬರಹಕ್ಕಿಂತ ತೀರ ಬೇರಾಗಿ ಕಾಣಿಸಬಹುದಾದ ಕಾರಣ, ಈಗಿರುವ ಬರಹವನ್ನು ಕಲಿತವರೆಲ್ಲರೂ ಹೊಸದಾಗಿ ಓದಲು ಮತ್ತು ಬರೆಯಲು ಕಲಿಯಬೇಕಾದೀತು. ಇದಲ್ಲದೆ ಹೊಸದಾಗಿ ಓದಲು ಕಲಿತವರಿಗೂ ಈಗಾಗಲೇ ಹಳೆಯ ವಿದಾನದಲ್ಲಿ ಅಚ್ಚಾಗಿರುವ ಬರಹಗಳನ್ನು ಓದಲು ತುಂಬಾ ಕಶ್ಟವಾದೀತು. —