← Ch 9 · Contents · ↑ Contents
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10
ಅಧ್ಯಾಯ 10 — ಮುಕ್ತಾಯ
ಪರಿವರ್ತನಾತ್ಮಕ ವ್ಯಾಕರಣ ಪರಿವರ್ತಿಸುವ ವ್ಯಾಕರಣ ವಣ್ರನಾತ್ಮಕ ವ್ಯಾಕರಣ ವಣ್ರಿಸುವ ವ್ಯಾಕರಣ ವಣ್ರನಾತ್ಮಕ ವಿದಾನ ವಣ್ರಿಸುವ ವಿದಾನ ನಿದ್ರೇಶಾತ್ಮಕ ಸರ್ವನಾಮ ನಿದ್ರೇಶಿಸುವ ಸರ್ವನಾಮ ಇವೆಲ್ಲವುಗಳಿಗಿಂತಲೂ, ಮೇಲೆ ಸೂಚಿಸಿದ ಹಾಗೆ, ಸಂಸ್ಕ್ರುತ ಪದಗಳ ಮತ್ತು ಪ್ರತ್ಯಯಗಳ ಬದಲು ನೇರವಾಗಿ ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಇಂಗ್ಲಿಶ್ ಪದಗಳಿಗೆ ಸಮಾನವಾದ ಪಾರಿಬಾಶಿಕ ಪದಗಳನ್ನು ಉಂಟುಮಾಡಿಕೊಳ್ಳುವುದೇ ಕನ್ನಡಕ್ಕೆ ಹೆಚ್ಚು ಅನುಕೂಲವಾಗಬಲ್ಲ ದಾರಿಯಾಗಿದೆ (9.3 ನೋಡಿ). 7.6 ಸಂಸ್ಕ್ರುತದ ಹೆಚ್ಚುಗಾರಿಕೆ ಎಲ್ಲಿಗೆ ಹೋಯಿತು? ಜಗತ್ತಿನ ಇನ್ನಾವುದೇ ನುಡಿಗಿಲ್ಲದ ತಾಕತ್ತು ಸಂಸ್ಕ್ರುತಕ್ಕಿದೆ; ಯಾವುದೇ ಅನಿಸಿಕೆಯನ್ನು ಇಲ್ಲವೇ ಅರ್ತವನ್ನು ಎಶ್ಟು ಸೂಕ್ಶ್ಮವಾಗಿ ಬೇಕಿದ್ದರೂ ತಿಳಿಸುವ ಕಸುವು ಅದಕ್ಕಿದೆ; ಅದರ ದಾತುಗಳನ್ನು, ಉಪಸರ್ಗಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ಕೋಟಿಗಟ್ಟಲೆ ಪದಗಳನ್ನು ರಚಿಸಬಹುದು ಎಂಬುದಾಗಿ ಸಂಸ್ಕ್ರುತದ ಹೆಚ್ಚುಗಾರಿಕೆಯನ್ನು ಹೊಗಳುವ ಪ್ರಚಾರಕರು ಹಲವರಿದ್ದಾರೆ. ಆದರೆ, ಜಗತ್ತಿನಲ್ಲಿ ಒಟ್ಟು ನಾಲ್ಕಯ್ದು ಸಾವಿರ ನುಡಿಗಳಿದ್ದು, ಇವುಗಳಲ್ಲಿ ಬೆರಳೆಣಿಕೆಯಶ್ಟು ನುಡಿಗಳ ಕುರಿತಾಗಿ ಮಾತ್ರ ನಮಗೆ ಆಳವಾದ ಸಂಶೋದನೆಗಳನ್ನು ನಡೆಸಲು ಇದುವರೆಗೆ ಸಾದ್ಯವಾಗಿದೆ. ಉಳಿದ ನುಡಿಗಳ ಕುರಿತು ಇವತ್ತು ನಾವು ಹೆಚ್ಚೇನನ್ನೂ ಹೇಳಲಾರೆವು. ಹಾಗಾಗಿ ಯಾವುದೇ ವಿಶಯದಲ್ಲಾಗಲಿ ಸಂಸ್ಕ್ರುತ ನುಡಿ ಅವೆಲ್ಲಕ್ಕಿಂತಲೂ ಹೆಚ್ಚು ತಾಕತ್ತುಳ್ಳದೆಂದು ಹೇಳುವುದು ನಿಜಕ್ಕೂ ಅರ್ತವಿಲ್ಲದ ಮಾತು. ತಿಳಿಸಬೇಕೆಂದಿರುವ ವಿಶಯಗಳನ್ನೆಲ್ಲ ತಿಳಿಸಬಲ್ಲ ಕಸುವು ಸ್ವಾಬಾವಿಕವಾಗಿ ಬೆಳೆದು ಬಂದಿರುವ ಎಲ್ಲಾ ನುಡಿಗಳಿಗೂ ಇದೆ. ಇದರಲ್ಲಿ ಸಂಸ್ಕ್ರುತಕ್ಕೆ ಯಾವ ರೀತಿಯ ಹೆಚ್ಚುಗಾರಿಕೆಯೂ ಇಲ್ಲ. ಇನ್ನು
ಯಾವುದೇ ಒಂದು ನುಡಿಯಲ್ಲಿ ಎಶ್ಟು ಪದಗಳನ್ನು ತಯಾರಿಸಿಕೊಳ್ಳಲು ಸಾದ್ಯ ಎಂಬುದು ಅಶ್ಟೊಂದು ಮುಕ್ಯವಾದ ವಿಶಯವೇ ಅಲ್ಲ. ನಿಜಕ್ಕೂ ಸಂಸ್ಕ್ರುತಕ್ಕಿಂತ ಹತ್ತು ಪಾಲು ಹೆಚ್ಚು ಪ್ರತ್ಯಯಗಳನ್ನು ಬಳಸಬಲ್ಲ ಮತ್ತು ಅವುಗಳ ಮೂಲಕ ಇನ್ನೂ ಹೆಚ್ಚು ಪದಗಳನ್ನು ತಯಾರಿಸಬಲ್ಲ ಬುಡಕಟ್ಟಿನ ನುಡಿಗಳು ಹಲವಿವೆ. ಇದಲ್ಲದೆ, ಹೆಚ್ಚು ಹೆಚ್ಚು ಪದಗಳನ್ನು ಉಂಟುಮಾಡಲು ಹೋಗದೆ, ಪದಕಂತೆಗಳ ಮೂಲಕವೇನೇ ಹೆಚ್ಚಿನ ಅರ್ತಗಳನ್ನೂ ಸೂಚಿಸಹೋಗುವ ನುಡಿಗಳೂ ಹಲವಿವೆ. ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನಾವು ಗಮನಿಸುವುದು ಅವಶ್ಯ. ಸಂಸ್ಕ್ರುತದ ಹೆಚ್ಚುಗಾರಿಕೆ ಎಂತಹದೇ ಇರಲಿ, ಅದು ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸಿದ ಪದಗಳನ್ನು ಸಂಸ್ಕ್ರುತ ವಾಕ್ಯಗಳಲ್ಲಿ ಬಳಸುವುದರಲ್ಲಲ್ಲದೆ ಕನ್ನಡದಂತಹ ತೀರ ಬೇರಾಗಿರುವ ಇನ್ನೊಂದು ನುಡಿಯ ವಾಕ್ಯಗಳಲ್ಲಿ ಬಳಸುವುದರಲ್ಲಲ್ಲ. ವಿಜ್ನಾನದ ಪಾರಿಬಾಶಿಕ ಪದಗಳನ್ನು ಕನ್ನಡದಲ್ಲಿ ತಯಾರಿಸುವುದಕ್ಕಾಗಿ ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳನ್ನು ಬಳಸಹೊರಟಿರುವ ಕನ್ನಡ ವಿದ್ವಾಂಸರು ಈ ಅತ್ಯಂತ ಮುಕ್ಯವಾದ ವಿಶಯವನ್ನು ಗಮನಿಸಿರಲಿಲ್ಲವೆಂಬುದು ಸ್ಪಶ್ಟ. ಇದರಿಂದಾಗಿ ಅವರು ಹೇಗೆ ಎಡವಿದ್ದಾರೆ, ಅವರು ತಯಾರಿಸಿರುವ ಪಾರಿಬಾಶಿಕ ಪದಗಳು ಹೇಗೆ ಗೊಂದಲದ ಗೂಡಾಗಿವೆ ಎಂಬುದನ್ನು ಮೇಲಿನ ಪರಿಶೀಲನೆ ಸ್ಪಶ್ಟಪಡಿಸಿದೆ. ಹಾಗಾಗಿ, ನಿಜಕ್ಕೂ ಸಂಸ್ಕ್ರುತಕ್ಕಿಲ್ಲದ ಹೆಚ್ಚುಗಾರಿಕೆ ಅದಕ್ಕಿದೆಯೆಂದು ಬ್ರಮಿಸಿ ಕನ್ನಡಕ್ಕೆ ಬೇಕಾಗುವ ಪಾರಿಬಾಶಿಕ ಪದಗಳಿಗಾಗಿ ತ್ರಿಶಂಕು ಪದಗಳನ್ನು ಹುಟ್ಟುಹಾಕುವ ಬದಲು ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸುವ ಮೂಲಕ ಅಂತಹ ಪದಗಳನ್ನು ಉಂಟುಮಾಡಿಕೊಳ್ಳುವುದೇ ನಮಗಿರುವ ಸರಿಯಾದ ದಾರಿ. 7.7 ತಿರುಳು
ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ತಯಾರಿಸಿರುವ ವಿದ್ವಾಂಸರಲ್ಲಿ ಹೆಚ್ಚಿನವರೂ ಅದಕ್ಕಾಗಿ ಸಂಸ್ಕ್ರುತದ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಹಾಗೆ ಮಾಡದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಅವರೆಲ್ಲ ಬಾವಿಸಿರುವ ಹಾಗೆ ಕಾಣಿಸುತ್ತದೆ. ಆ ರೀತಿ ಸಂಸ್ಕ್ರುತ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸಿದ ಪಾರಿಬಾಶಿಕ ಪದಗಳು ಅರ್ತದ ಮಟ್ಟಿಗೆ ಹೆಚ್ಚು ಕಟ್ಟುನಿಟ್ಟಾಗಿರಬಲ್ಲುವೆಂಬುದಾಗಿಯೂ ಅವರು ತಿಳಿದುಕೊಂಡಿದ್ದಾರೆ. ಆದರೆ ನಿಜಕ್ಕೂ ಇದು ಸರಿಯಲ್ಲ, ತಪ್ಪು ಎಂಬುದನ್ನು ಮೇಲಿನ ಪರಿಶೀಲನೆ ಸ್ಪಶ್ಟಪಡಿಸಿದೆ. ಸಂಸ್ಕ್ರುತದ ಪದಕಾಂಡಗಳ ಮತ್ತು ಪ್ರತ್ಯಯಗಳ ಮೂಲಕ ಸಿದ್ದವಾಗಿರುವ ವಿಜ್ನಾನ ಪದಗಳು ಕನ್ನಡದ ಮಟ್ಟಿಗೆ ಅನವಶ್ಯಕವಾಗಿ ಹೆಚ್ಚು ತೊಡಕಿನದಾಗಿವೆ. ಇದಲ್ಲದೆ ಅರ್ತದ ಮಟ್ಟಿಗೂ ಅವು ಹೆಚ್ಚು ಸಂದಿಗ್ದವಾಗಿವೆ! ಅವುಗಳ ಬಳಕೆಯಿಂದಾಗಿ ಈ ಪದಗಳಿಗೆ ಬೇಕಾಗಿರುವ ಕಟ್ಟುನಿಟ್ಟು ಇಲ್ಲವೇ ನಿಕರತೆ ಹಲವೆಡೆಗಳಲ್ಲಿ ಇಲ್ಲವಾಗಿದೆ. ಇವುಗಳ ಬದಲು ಕನ್ನಡದವೇ ಆದ ಪದಗಳ ಮತ್ತು ಪ್ರತ್ಯಯಗಳ ಬಳಕೆ ಹೇಗೆ ಸಾದ್ಯ ಮತ್ತು ಅದು ಯಾಕೆ ಉತ್ತಮ ಎಂಬುದನ್ನು ಮುಂದಿನ ಎರಡು (ಎಂಟು-ಒಂಬತ್ತನೇ) ಅದ್ಯಾಯಗಳಲ್ಲಿ ವಿವರಿಸಲಾಗುವುದು.
- ಕನ್ನಡ ಪ್ರತ್ಯಯಗಳ ಬಳಕೆ 8.1 ಪದಗಳು ಮತ್ತು ವ್ಯಾಕರಣ ನಿಯಮಗಳು ಬೇರೆ ಬೇರೆ ನುಡಿಗಳ ನಡುವೆ ಅವು ಬಳಸುವ ಪದಗಳ ಸ್ವರೂಪದಲ್ಲಿ ಹೇಗೆ ವ್ಯತ್ಯಾಸಗಳಿರುತ್ತವೆಯೋ ಹಾಗೆಯೇ ಅವು ಬಳಸುವ ಪದರಚನೆಯ ಮತ್ತು ವ್ಯಾಕರಣದ ನಿಯಮಗಳಲ್ಲೂ ವ್ಯತ್ಯಾಸಗಳಿರುತ್ತವೆ. ಈ ಕಾರಣಕ್ಕಾಗಿ, ಒಂದು ನುಡಿಯಲ್ಲಿ ಬಳಕೆಯಲ್ಲಿರುವ ಎಲ್ಲಾ ರೀತಿಯ ಪದಗಳಿಗೂ ಸಮಾನ ವಾಗಿರುವಂತಹ ಪದಗಳನ್ನು ಅದಕ್ಕಿಂತ ತೀರ ಬೇರಾಗಿರುವ ಇನ್ನೊಂದು ನುಡಿಯಲ್ಲಿ ತಯಾರಿಸಿಕೊಳ್ಳಲು ಬರುವುದಿಲ್ಲ. ಹಾಗೆ ತಯಾರಿಸುವ ಅವಶ್ಯಕತೆಯೂ ಸಾಮಾನ್ಯವಾಗಿ ಇರುವುದಿಲ್ಲ. ಉದಾಹರಣೆಗಾಗಿ, ಒಂದು ನುಡಿ ಎರಡು ಬೇರೆ ಬೇರೆ ಪದಗಳನ್ನು ಬಳಸಿಕೊಳ್ಳುವ ಕಡೆಗಳಲ್ಲಿ ಇನ್ನೊಂದು ನುಡಿ ಒಂದೇ ಪದದ ಎರಡು ಪದರೂಪಗಳನ್ನು ಬಳಸುತ್ತಿರಲು ಸಾದ್ಯವಿದೆ. ಇಂಗ್ಲಿಶ್ನ ನೋಸ್ ಮತ್ತು ನೇಸಲ್ ಎಂಬ ಎರಡು ಪದಗಳಿಗೆ ಬದಲಾಗಿ ಕನ್ನಡದಲ್ಲಿ ಮೂಗು ಎಂಬ ಒಂದೇ ಪದವನ್ನು (ಅದರ ಎರಡು ಪದರೂಪಗಳನ್ನು) ಬಳಸಲು ಸಾದ್ಯವಿದೆ. ಯಾಕೆಂದರೆ ಇಂಗ್ಲಿಶ್ನ ನೇಸಲ್ ಪದವನ್ನು ಬಳಸುವಲ್ಲಿ ಕನ್ನಡದ ಮೂಗು ಪದದ ಮೂಗಿನ ಎಂಬ (ಶಶ್ಟೀ ವಿಬಕ್ತಿ ರೂಪವನ್ನು) ಬಳಸಬಹುದು (ನೇಸಲ್ ಬೋನ್ - ಮೂಗಿನ ಎಲುಬು). ಹಾಗಾಗಿ ಇಂಗ್ಲಿಶ್ನ ನೇಸಲ್ ಪದಕ್ಕೆ ಸಮಾನವಾಗಿರುವ ಪದವೊಂದನ್ನು ಕನ್ನಡದಲ್ಲಿ ತಯಾರಿಸಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ.
ಇದೇ ರೀತಿಯಲ್ಲಿ ಒಂದು ನುಡಿ ಎರಡು ಇಲ್ಲವೇ ಹೆಚ್ಚು ಪ್ರತ್ಯಯಗಳನ್ನು ಬಳಸಿಕೊಳ್ಳುವಲ್ಲಿ ಇನ್ನೊಂದು ನುಡಿ ಒಂದೇ ಪ್ರತ್ಯಯವನ್ನು ಬಳಸುತ್ತಿರಲು ಸಾದ್ಯವಿದೆ. ಉದಾಹರಣೆಗಾಗಿ ಇಂಗ್ಲಿಶ್ನಲ್ಲಿ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುವ ಶನ್, ಸಿಸ್ ಮತ್ತು ಎನ್್ಸ ಪ್ರತ್ಯಯಗಳ ಬದಲು ಕನ್ನಡದಲ್ಲಿ ಇಕೆ ಎಂಬ ಒಂದೇ ಪ್ರತ್ಯಯವನ್ನು ಬಳಸಿದರೆ ಸಾಕಾಗುತ್ತದೆ. ಪರ್ಸ್ಪಿರೇಶನ್ ಬೆವರಿಕೆ ಸಿಂತೆಸಿಸ್ ಕೂಡಿಕೆ ಎಫೆÇೀರಸೆನ್್ಸ ಅರಳಿಕೆ ಈ ಕಾರಣಕ್ಕಾಗಿ ಒಂದು ನುಡಿಯಲ್ಲಿ ಎಶ್ಟು ಪ್ರತ್ಯಯಗಳು ಬಳಕೆಯಲ್ಲಿರುತ್ತವೆಯೋ ಅಶ್ಟೇ ಪ್ರತ್ಯಯಗಳನ್ನು ಇನ್ನೊಂದು ನುಡಿಯಲ್ಲೂ ಬಳಸುವ ಅಗತ್ಯವಿರುವುದಿಲ್ಲ (7.4 ನೋಡಿ). ಒಂದು ನುಡಿಯ ಒಂದು ಪದಕ್ಕೆ ಬದಲಾಗಿ ಇನ್ನೊಂದು ನುಡಿಯಲ್ಲಿ ಎರಡು ಇಲ್ಲವೇ ಹೆಚ್ಚು ಪದಗಳನ್ನು ಸೇರಿಸಿರುವ ಒಂದು ಪದಕಂತೆಯನ್ನೇ ಬಳಸಬೇಕಾಗುವ ಕಡೆಗಳೂ ಕೆಲವಿರಬಹುದು. ಉದಾಹರಣೆಗಾಗಿ ಇಂಗ್ಲಿಶ್ನ ಗುಣಪದವೊಂದಕ್ಕೆ ಅನ್ ಪೂರ್ವಪ್ರತ್ಯಯವನ್ನು ಸೇರಿಸುವ ಮೂಲಕ ಅದು ಸೂಚಿಸುವ ಗುಣದರ್ಮವನ್ನು ಅಲ್ಲಗಳೆಯುವ ಅರ್ತವಿರುವ ಇಲ್ಲವೇ ಅದಕ್ಕೆ ವಿರುದ್ದವಾದ ಅರ್ತವಿರುವ ಪದವನ್ನು ಉಂಟುಮಾಡಬಹುದು. ಆದರೆ ಕನ್ನಡದಲ್ಲಿ ಇಂತಹ ಪೂರ್ವಪ್ರತ್ಯಯಗಳ ಬಳಕೆಯಿಲ್ಲವಾದ ಕಾರಣ, ಅದಕ್ಕೆ ಬದಲು ಇಲ್ಲದ ಇಲ್ಲವೇ ಅಲ್ಲದ ಎಂಬ ಪದರೂಪವನ್ನು ಸೇರಿಸಿರುವ ಪದಕಂತೆಗಳನ್ನು ಬಳಸಬೇಕಾಗುತ್ತದೆ (ಅನ್ಟ್ರೂ - ಸತ್ಯವಲ್ಲದ, ಅನೋನಿಮಸ್ - ಹೆಸರಿಲ್ಲದ). 8.1.1 ವ್ಯಾಕರಣಗಳ ಪರ್ಯಾಪ್ತತೆ
ನಾವಿಲ್ಲಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ನಮ್ಮ ಮನಸ್ಸಿನಲ್ಲಿರುವ ಯಾವುದೇ ರೀತಿಯ ಅರ್ತವ್ಯತ್ಯಾಸವನ್ನು ಸೂಚಿಸಬೇಕಿದ್ದರೂ ಅದಕ್ಕೆ ಬೇಕಾಗುವ ಪದಗಳನ್ನು ಇಲ್ಲವೇ ಪದರೂಪಗಳನ್ನು ತಯಾರಿಸಲು ಬೇಕಾಗುವ ಒಂದಲ್ಲ ಒಂದು ರೀತಿಯ ಪದರಚನೆಯ ವಿದಾನ ಇಲ್ಲವೇ ವ್ಯಾಕರಣ ವಿದಾನ ಎಲ್ಲಾ ನುಡಿಗಳಲ್ಲೂ ಇದ್ದೇ ಇರುತ್ತದೆ. ಯಾಕೆಂದರೆ ಎಲ್ಲಾ ನುಡಿಗಳೂ ವ್ಯಾಕರಣದ ಮಟ್ಟಿಗೆ ಸಂಪೂರ್ಣವಾಗಿ ಪರ್ಯಾಪ್ತವಾಗಿರುತ್ತವೆ. ಎರಡು ನುಡಿಗಳಲ್ಲಿ ಒಂದರ ವ್ಯಾಕರಣ ಇನ್ನೊಂದರ ವ್ಯಾಕರಣಕ್ಕಿಂತ ಬೇರಾಗಿದೆಯೆಂದು ಹೇಳಲು ಸಾದ್ಯವಿದೆಯಲ್ಲದೆ ಅವುಗಳಲ್ಲಿ ಒಂದರ ವ್ಯಾಕರಣ ಇನ್ನೊಂದರ ವ್ಯಾಕರಣಕ್ಕಿಂತ ಹೆಚ್ಚು ಪರ್ಯಾಪ್ತವಾದುದು ಎಂದಾಗಲಿ ಇಲ್ಲವೇ ಅವೆರಡರ ವ್ಯಾಕರಣಗಳು ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿವೆಯೆಂದಾಗಲಿ ಹೇಳಲು ಯಾವ ಆದಾರವೂ ದೊರಕುವುದಿಲ್ಲ. ಗುಡ್ಡಗಾಡುಗಳಲ್ಲಿ ವಾಸಿಸುವ ಗಿರಿಜನರ ನುಡಿಗಳೂ ವ್ಯಾಕರಣದ ಮಟ್ಟಿಗೆ ಪೂರ್ತಿ ಪರ್ಯಾಪ್ತ ವಾಗಿರುತ್ತವೆ ಮತ್ತು ಬೆಳವಣಿಗೆಯ ಕೊನೆಯ ಹಂತವನ್ನು ತಲಪಿರುತ್ತವೆ (ಬಟ್ 2008ಕ ನೋಡಿ). ಕನ್ನಡದಲ್ಲಿ ಹೊಸ ಪದಗಳನ್ನು ತಯಾರಿಸಬೇಕಾಗಿರುವ ಸಂದರ್ಬದಲ್ಲಿ ಈ ವಿಶಯವನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಇಂಗ್ಲಿಶ್ನಲ್ಲಿ ಬಳಕೆಯಾಗಿರುವ ಎಲ್ಲಾ ಪದಗಳಿಗೂ ಸಮಾನವಾಗಿರುವಂತಹ ಪದಗಳನ್ನು ಕನ್ನಡದಲ್ಲಿ ತಯಾರಿಸಲು ಸಾದ್ಯವಾಗದಿರಬಹುದು; ಆದರೆ ಅವು ಸೂಚಿಸುವ ಯಾವುದೇ ಒಂದು ಅರ್ತವನ್ನೂ ಕನ್ನಡದಲ್ಲಿ ಸೂಚಿಸಲು ಸಾದ್ಯವೇ ಇಲ್ಲ ಎಂಬಂತಹ ಸಂದರ್ಬ ಎಂದಿಗೂ ಬರಲಾರದು. ಕನ್ನಡದಲ್ಲಿ ಮಾತ್ರವಲ್ಲ ಯಾವೊಂದು ನುಡಿಯಲ್ಲಿಯೂ ಅಂತಹ ಸಂದರ್ಬ ಬರಲಾರದು. ಹಾಗಾಗಿ ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ಉಂಟುಮಾಡುವವರು ಇಂಗ್ಲಿಶ್ನಂತಹ ಬೇರೊಂದು ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಸಮಾನವಾಗಿರುವ ಪದಗಳನ್ನು ಕನ್ನಡದಲ್ಲಿ ಉಂಟುಮಾಡುವುದು ಹೇಗೆ ಎಂಬುದಕ್ಕಿಂತಲೂ ಆ ನುಡಿಯ ಬರಹಗಳಲ್ಲಿ ವಿವರಿಸಿರುವ ವಿಶಯಗಳನ್ನು ಕನ್ನಡದಲ್ಲಿ ವಿವರಿಸಿ
ಹೇಳುವುದು ಹೇಗೆ ಎಂಬುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕಾಗಿದೆ. ಯಾಕೆಂದರೆ ಕೆಲವು ಸಂದರ್ಬಗಳಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಹೊಸ ಪದವೊಂದನ್ನು ಉಂಟುಮಾಡುವುದಕ್ಕಿಂತಲೂ ಬಳಕೆಯಲ್ಲಿರುವ ಪದದ ಪದರೂಪವೊಂದನ್ನು ಬಳಸುವುದೇ ಕನ್ನಡದ ಮಟ್ಟಿಗೆ ಹೆಚ್ಚು ಹಿತವಾದ ದಾರಿಯಾಗಿರಲು ಸಾದ್ಯವಿದೆ. ಇದನ್ನು ನಾವು ಮೇಲೆ ಇಂಗ್ಲಿಶ್ನ ನೋಸ್ ಮತ್ತು ನೇಸಲ್ ಪದಗಳ ವಿಶಯದಲ್ಲಿ ನೋಡಿದ್ದೇವೆ. 8.1.2 ವ್ಯಾಕರಣಗಳ ನಡುವಿನ ವ್ಯತ್ಯಾಸ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಪದಗಳನ್ನು ಇಲ್ಲವೇ ಪದರೂಪಗಳನ್ನು ಕನ್ನಡದಲ್ಲಿ ತಯಾರಿಸಿಕೊಳ್ಳಲು ಕೆಲವು ಸಂದರ್ಬಗಳಲ್ಲಿ ಸಾದ್ಯವಾಗುವುದೇ ಇಲ್ಲ ಮತ್ತು ಈ ಕಾರಣಕ್ಕಾಗಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ನಮ್ಮಲ್ಲಿ ಕೆಲವು ವಿದ್ವಾಂಸರಿಗೆ ಅನಿಸಬಹುದು. ಇದಕ್ಕೆ ಕಾರಣವೇನೆಂಬುದೂ ಮೇಲಿನ ಪರಿಶೀಲನೆಯಿಂದ ಸ್ಪಶ್ಟವಾಗುತ್ತದೆ. ಸಂಸ್ಕ್ರುತ ಮತ್ತು ಇಂಗ್ಲಿಶ್ ನುಡಿಗಳಿಂದ ಕನ್ನಡ ನುಡಿ ವ್ಯಾಕರಣದಲ್ಲಿ ತೀರಾ ಬೇರಾಗಿರುವುದೇ ಅದಕ್ಕೆ ಕಾರಣ. ಇಂಗ್ಲಿಶ್, ಸಂಸ್ಕ್ರುತ, ಲ್ಯಾಟಿನ್, ಗ್ರೀಕ್, ಜರ್ಮನ್ ಮೊದಲಾದವುಗಳೆಲ್ಲ ಇಂಡೋ-ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು. ಬಾರತದಲ್ಲಿ ಬಳಕೆಯಲ್ಲಿರುವ ಹಿಂದಿ, ಪಂಜಾಬಿ, ಮರಾಟಿ, ಗುಜರಾತಿ ಮೊದಲಾದ ನುಡಿಗಳೂ ಇದೇ ನುಡಿಕುಟುಂಬಕ್ಕೆ ಸೇರುತ್ತವೆ. ಹಾಗಾಗಿ, ಈ ನುಡಿಗಳಲ್ಲೆಲ್ಲ ಪದಗಳನ್ನು ರಚಿಸುವ ವಿದಾನಗಳು ಮತ್ತು ವಾಕ್ಯಗಳಲ್ಲಿ ಅವನ್ನು ಬಳಸುವ ವಿದಾನಗಳು ಹೆಚ್ಚು ಕಡಿಮೆ ಒಂದೇ ರೀತಿಯವಾಗಿವೆ. ಆದರೆ ಕನ್ನಡ ಇವಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿ (2.5 ನೋಡಿ). ಹಾಗಾಗಿ,
ಅದರಲ್ಲಿ ಬಳಕೆಯಾಗುವ ಪದರಚನೆಯ ವಿದಾನಗಳು ಮತ್ತು ವಾಕ್ಯದಲ್ಲಿ ಪದಗಳನ್ನು ಬಳಸುವ ವಿದಾನಗಳು (ವ್ಯಾಕರಣ ವಿದಾನಗಳು) ಮೇಲಿನ ನುಡಿಗಳಲ್ಲಿ ಬಳಕೆಯಾಗುವ ವಿದಾನಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ತಯಾರಿಸುವವರು ಈ ವಿಶಯವನ್ನು ಸರಿಯಾಗಿ ಮನದಟ್ಟುಮಾಡಿಕೊಳ್ಳುವ ಅವಶ್ಯಕತೆಯಿದೆ. ಇಂಗ್ಲಿಶ್ ಪದ ಮತ್ತು ಪದರೂಪಗಳಿಗೆ ಸಮಾನವಾಗಿರುವಂತಹ ಪದ ಮತ್ತು ಪದರೂಪಗಳನ್ನು ಸಂಸ್ಕ್ರುತದ ಪದಕಾಂಡಗಳ ಮತ್ತು ಪ್ರತ್ಯಯಗಳ ಮೂಲಕ ತಯಾರಿಸಿಕೊಳ್ಳುವುದು ಬಹಳ ಸುಲಬವಾದ ದಾರಿಯೇನೋ ನಿಜ; ಆದರೆ ಆ ರೀತಿ ತಯಾರಿಸಿದ ಪದಗಳು ಕನ್ನಡದ ಮಟ್ಟಿಗೆ ಇಂಗ್ಲಿಶ್ ಪದಗಳಶ್ಟೇ (ಕೆಲವೊಮ್ಮೆ ಅವುಗಳಿ ಗಿಂತಲೂ ಹೆಚ್ಚು) ತೊಡಕಿನವುಗಳಾಗಿರುತ್ತವೆ. ಹಾಗೆ ಮಾಡುವ ಬದಲು, ಅವುಗಳ ಮೂಲಕ ತಿಳಿಸಬೇಕಾಗಿರುವ ವಿಶಯಗಳನ್ನು ಕನ್ನಡದಲ್ಲೇನೇ (ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸದೆ) ತಿಳಿಸುವ ಬಗೆ ಹೇಗೆ ಎಂಬುದನ್ನು ಕಂಡುಹಿಡಿಯುವಂತಹ ಸ್ವಲ್ಪ ಮಟ್ಟಿಗೆ ತೊಡಕಿನದಾಗಿ ಕಾಣಿಸುವ ದಾರಿಯನ್ನು ಇವರು ಹಿಡಿಯಬೇಕಾಗಿದೆ. ಈ ದಾರಿಯನ್ನು ಹಿಡಿದಲ್ಲಿ ಕನ್ನಡಿಗರ ಮಟ್ಟಿಗೆ ಹೆಚ್ಚು ತೊಡಕಿನವಲ್ಲದ ಬರಹಗಳು ಸಿದ್ದವಾಗಬಲ್ಲುವು. ಈ ವಿದಾನದಿಂದ ನಮಗೆ ಇನ್ನೊಂದು ಪ್ರಯೋಜನವೂ ದೊರಕುತ್ತದೆ. ಕನ್ನಡದ ವ್ಯಾಕರಣ ನಿಯಮಗಳು ಸಂಸ್ಕ್ರುತದ ವ್ಯಾಕರಣ ನಿಯಮಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿರುವ ಕಾರಣ, ಕನ್ನಡ ವಾಕ್ಯಗಳಲ್ಲಿ ಸಂಸ್ಕ್ರುತ ಪದ ಮತ್ತು ಪದರೂಪಗಳನ್ನು ಬಳಸಿದಾಗ ಹಲವು ರೀತಿಯ ಅರ್ತಸಂದಿಗ್ದತೆಗಳು ಮೂಡಿಬರುತ್ತವೆ. ಕನ್ನಡದವೇ ಆದ ಪದ ಮತ್ತು ಪದರೂಪಗಳನ್ನು ಬಳಸುವುದರ ಮೂಲಕ ಇಂತಹ ಅರ್ತಸಂದಿಗ್ದತೆಗಳು ಹುಟ್ಟಿಕೊಳ್ಳದ ಹಾಗೆ ಮಾಡಬಹುದು. 8.2 ಅರ್ತಸಂದಿಗ್ದತೆಯ ಸಮಸ್ಯೆ
ಕನ್ನಡಕ್ಕಾಗಿ ಪಾರಿಬಾಶಿಕ ಪದಗಳನ್ನು ತಯಾರಿಸುವವರು ಸಂಸ್ಕ್ರುತ ಪ್ರತ್ಯಯಗಳನ್ನು ಬಳಸಿದುದರಿಂದಾಗಿ ಹೇಗೆ ಹಲವು ರೀತಿಯ ಅರ್ತಸಂದಿಗ್ದತೆಗಳಿಗೊಳಗಾಗಿದ್ದಾರೆ ಮತ್ತು ಅವನ್ನು ಪರಿಹರಿಸುವುದಕ್ಕಾಗಿ ಅವರು ಮಾಡಿರುವಂತಹ ಪ್ರಯತ್ನಗಳೆಲ್ಲ ಹೇಗೆ ಅವರನ್ನು ಗೊಂದಲಗಳಲ್ಲಿ ಸಿಲುಕಿಸಿವೆ ಎಂಬುದನ್ನು ನಾವು ಹಿಂದಿನ ಅದ್ಯಾಯದಲ್ಲಿ ನೋಡಿರುವೆವು. ಅಂತಹ ಸಂದರ್ಬಗಳಲ್ಲೆಲ್ಲ ಕನ್ನಡದವೇ ಆದ ಪ್ರತ್ಯಯಗಳನ್ನು ಬಳಸುವ ಮೂಲಕ ಗೊಂದಲವನ್ನುಂಟುಮಾಡದೇನೇ ಅರ್ತಸಂದಿಗ್ದತೆಯನ್ನು ಇಲ್ಲವಾಗಿಸಬಹುದು ಎಂಬುದನ್ನು ಕೆಳಗಿನ ವಿಬಾಗಗಳಲ್ಲಿ ತೋರಿಸಿಕೊಡಲಾಗಿದೆ. ಇದಲ್ಲದೆ, ಇಂಗ್ಲಿಶ್ ಮತ್ತು ಸಂಸ್ಕ್ರುತ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸದ ಮತ್ತು ಕನ್ನಡಕ್ಕೆ ಬೇಕಾಗಿರುವ ಬೇರೆ ಕೆಲವು ಅರ್ತವ್ಯತ್ಯಾಸಗಳನ್ನೂ ಕನ್ನಡದವೇ ಆದ ಪ್ರತ್ಯಯಗಳ ಬಳಕೆಯಿಂದ ಸರಿಯಾಗಿ ಸೂಚಿಸಲು ಸಾದ್ಯವಾಗುತ್ತದೆ ಎಂಬುದನ್ನೂ ಕೆಳಗೆ ತೋರಿಸಿಕೊಡಲಾಗಿದೆ. 8.2.1 ಪದವರ್ಗಗಳಲ್ಲಿ ವ್ಯತ್ಯಾಸ ಇಂಗ್ಲಿಶ್ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಪದವರ್ಗಗಳ ಮಟ್ಟಿಗೆ ಒಂದು ಮುಕ್ಯವಾದ ವ್ಯತ್ಯಾಸವಿದೆ : ಇಂಗ್ಲಿಶ್ನಲ್ಲಿ ನಾಮಪದಕ್ಕಿಂತ ಬೇರಾಗಿರುವ ಗುಣಪದವೆಂಬ ಪದವರ್ಗವಿದೆ; ಆದರೆ ಸಂಸ್ಕ್ರುತದಲ್ಲಿ ಅಂತಹ ಪದವರ್ಗವಿಲ್ಲ. ಹಾಗಾಗಿ, ನಾಮಪದಗಳಿಂದ ಬೇರಾಗಿರುವ ಗುಣಪದಗಳನ್ನು ಉಂಟುಮಾಡಲು ಬೇಕಾಗುವಂತಹ ಯಾವ ಪ್ರತ್ಯಯವೂ ಸಂಸ್ಕ್ರುತದಲ್ಲಿಲ್ಲ. ಆದರೆ ಇಂಗ್ಲಿಶ್ನ ಹಾಗೆ ಕನ್ನಡದಲ್ಲೂ ನಾಮಪದದಿಂದ ತೀರ ಬೇರಾಗಿರುವ ಗುಣಪದವೆಂಬ ಪದವರ್ಗ ಇದೆ. ಹಾಗಾಗಿ ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ಉಂಟುಮಾಡುವವರು ಇಂಗ್ಲಿಶ್ ಪಾರಿಬಾಶಿಕ ಪದಗಳಲ್ಲಿ ಕಾಣಿಸುವ ನಾಮಪದ-ಗುಣಪದ ವ್ಯತ್ಯಾಸವನ್ನು ತಾವು ತಯಾರಿಸುವ ಪಾರಿಬಾಶಿಕ ಪದಗಳಲ್ಲೂ ತೋರಿಸಬೇಕಾಗುತ್ತದೆ.
ಕನ್ನಡದಲ್ಲಿ ವಿಜ್ನಾನದ ಪಾರಿಬಾಶಿಕ ಪದಗಳನ್ನು ಉಂಟುಮಾಡುವುದಕ್ಕಾಗಿ ಸಂಸ್ಕ್ರುತದ ಪ್ರತ್ಯಯಗಳನ್ನೇ ಬಳಸಹೊರಟಿರುವ ವಿದ್ವಾಂಸರು ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವಿರುವ ಈ ವ್ಯತ್ಯಾಸದಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ಸಂಸ್ಕ್ರುತದಲ್ಲಿಲ್ಲದಂತಹ ಈ ನಾಮಪದ-ಗುಣಪದ ವ್ಯತ್ಯಾಸವನ್ನು ಸಂಸ್ಕ್ರುತದ ಪ್ರತ್ಯಯಗಳ ಮೂಲಕವೇನೇ ಸೂಚಿಸುವ ಅವರ ಪ್ರಯತ್ನಗಳು ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಿವೆ. ಇದನ್ನು ನಾವು ಮೇಲೆ (7.3.1-3)ರಲ್ಲಿ ನೋಡಿರುವೆವು. ಉದಾಹರಣೆಗಾಗಿ, ಇಂಗ್ಲಿಶ್ನಲ್ಲಿ ಎಡ್, ಅಸ್, ಇಕ್, ಇವ್ ಮೊದಲಾದ ಕೆಲವು ಪ್ರತ್ಯಯಗಳ ಮೂಲಕ ಕ್ರಿಯಾಪದ ಇಲ್ಲವೇ ನಾಮಪದಗಳನ್ನು ಗುಣಪದಗಳನ್ನಾಗಿ ಬದಲಾಯಿಸಲಾಗುತ್ತದೆ. ಇದಕ್ಕೆ ಬದಲು ಎನ್್ಸ, ಏಶನ್, ಆರ್, ಇಂಗ್, ಇಟಿ, ಅಲ್ ಮೊದಲಾದ ಬೇರೆ ಕೆಲವು ಪ್ರತ್ಯಯಗಳನ್ನು ಬಳಸುವುದರ ಮೂಲಕ ಕ್ರಿಯಾಪದ ಇಲ್ಲವೇ ಗುಣಪದಗಳನ್ನು ನಾಮಪದಗಳನ್ನಾಗಿ ಬದಲಾಯಿಸಲಾಗುತ್ತದೆ. ಸಂಸ್ಕ್ರುತ ಪ್ರತ್ಯಯಗಳನ್ನು ಬಳಸಿ ಇಂಗ್ಲಿಶ್ ಪದಗಳಿಗೆ ಸಮಾನವಾದ ಪಾರಿಬಾಶಿಕ ಪದಗಳನ್ನು ಕನ್ನಡದಲ್ಲಿ ತಯಾರಿಸಹೊರಟಿರುವ ವಿದ್ವಾಂಸರು ಇಂಗ್ಲಿಶ್ ಪದಗಳಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಕನ್ನಡದಲ್ಲಿ ಕಾಣಿಸಲು ಪ್ರಯತ್ನಿಸಿದ್ದಾರೆ; ಆದರೆ ಈ ಕೆಲಸದಲ್ಲಿ ಅವರು ಹಲವು ರೀತಿಯ ಸಮಸ್ಯೆಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ, ಸಂಸ್ಕ್ರುತದಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ವ್ಯತ್ಯಾಸವಿಲ್ಲ. ಹಾಗಾಗಿ ನ/ಣ, ಕ, ತ, ಇ ಮೊದಲಾದ ಸಂಸ್ಕ್ರುತದ ಪ್ರತ್ಯಯಗಳನ್ನು ಬಳಸಿ ತಯಾರಿಸಿದ ಪದಗಳನ್ನು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಸಬಹುದು, ನಾಮಪದಗಳ ವಿಶೇಶಣಗಳಾಗಿಯೂ (ಗುಣಪದಗಳಾಗಿಯೂ) ಬಳಸಬಹುದು. ಆದರೆ ಸಂಸ್ಕ್ರುತದ ಪ್ರತ್ಯಯಗಳನ್ನು ಈ ರೀತಿ ಕನ್ನಡದಲ್ಲಿ ಬಳಸಿದಾಗ ಅರ್ತಸಂದಿಗ್ದತೆಯುಂಟಾಗುತ್ತದೆ. ಇದು ಈ ವಿದ್ವಾಂಸರ
ಗಮನಕ್ಕೆ ಬಂದಿರುವ ಹಾಗೆ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಸಂಸ್ಕ್ರುತದ ವಿಶ್ಲೇಷಕ ಪದಕ್ಕೆ ವಿಶ್ಲೇಶಿಸುವ’ ಎಂಬ ಅರ್ತವನ್ನೂ ಕೊಡಬಹುದು, ವಿಶ್ಲೇಶಿಸುವುದು’ ಎಂಬ ಅರ್ತವನ್ನೂ ಕೊಡಬಹುದು. ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ (1990) ಅವರು ಈ ಪದಕ್ಕೆ ವಿಶ್ಲೇಶಿಸುವ’ ಎಂಬ ಅರ್ತವನ್ನು ಕೊಟ್ಟಿದ್ದಾರೆ; ಆದರೆ ಇದೇ ಪ್ರತ್ಯಯವಿರುವ ಉತ್ಪ್ರೇರಕ ಎಂಬ ಪದವನ್ನು ಉತ್ಪ್ರೇರಿಸುವುದು (ಉತ್ಪ್ರೇರಿಸುವ ಸಾದನ)’ ಎಂಬ ಅರ್ತದಲ್ಲಿ ಬಳಸಿದ್ದಾರೆ. ಉತ್ಪ್ರೇರಿಸುವ’ ಎಂಬ ಇದಕ್ಕಿಂತ ಬೇರಾಗಿರುವ ಅರ್ತವನ್ನು ಸೂಚಿಸುವುದಕ್ಕಾಗಿ ಅವರು ಉತ್ಪ್ರೇರಣ ಎಂಬ ಬೇರೆಯೇ ಒಂದು ಪದವನ್ನು ಬಳಸಿದ್ದಾರೆ. ಸಂಸ್ಕ್ರುತದ ನ/ಣ ಪ್ರತ್ಯಯದ ಬಳಕೆಯಲ್ಲೂ ಇಂತಹದೇ ಅರ್ತಸಂದಿಗ್ದತೆಯನ್ನು ಕಾಣಬಹುದು. (ಕನ್ನಡದಲ್ಲಿ ಈ ಪ್ರತ್ಯಯ ಕೆಲವೊಮ್ಮೆ ನೆ/ಣೆ ರೂಪದಲ್ಲೂ ಬರುತ್ತದೆ.) ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ (1990) ಅವರು ಈ ಪ್ರತ್ಯಯವಿರುವ ಪಾರಿಬಾಶಿಕ ಪದಗಳನ್ನು ಹೆಚ್ಚಿನೆಡೆಗಳಲ್ಲೂ ನಾಮಪದದ ಅರ್ತದಲ್ಲೇನೇ ಬಳಸಿದ್ದಾರೆ (ಆತಂಚನ ಆತಂಚಿಸುವಿಕೆ’, ವಿಸರಣ ವಿಸರಿಸುವಿಕೆ’); ಆದರೆ ಸಂಪೀಡನ ಎಂಬುದನ್ನು ಸಂಪೀಡಿಸುವ’ ಎಂಬ ಅರ್ತದಲ್ಲಿ ಬಳಸಿದ್ದಾರೆ; ಪ್ರಜನನ ಎಂಬುದನ್ನು ಪ್ರಜನಿಸುವಿಕೆ’ ಮತ್ತು ಪ್ರಜನಿಸುವ’ ಎಂಬ ಎರಡು ಅರ್ತಗಳಲ್ಲೂ ಬಳಸಿದ್ದಾರೆ! ಸಂಸ್ಕ್ರುತದ ಕ್ರಿಯಾಪದಗಳಿಂದ ಪಡೆಯಬಲ್ಲ ಇತರ ನಾಮಪದಗಳ ಬಳಕೆಯಲ್ಲಿಯೂ ಇಂತಹದೇ ಅರ್ತಸಂದಿಗ್ದತೆ ಮತ್ತು ಗೊಂದಲಗಳು ಕಾಣಿಸುತ್ತಿವೆಯಾದ ಕಾರಣ, ಕನ್ನಡದ ವಿಜ್ನಾನ ಬರಹಗಳಿಗೆ ಅವುಗಳಿಗಿಂತಲೂ ಮೇಲೆ ಕೊಟ್ಟಿರುವ ಆತಂಚಿಸುವ, ಸಂಪೀಡಿಸುವ ಎಂಬಂತಹ ಕನ್ನಡ ಪ್ರತ್ಯಯವನ್ನು ಬಳಸಿರುವ ರೂಪಗಳೇ ಹೆಚ್ಚು ಅನುಕೂಲವಾದವುಗಳು. ಉದಾಹರಣೆಗಾಗಿ ವಿಜ್ನಾನ ಪದಕೋಶಗಳಲ್ಲಿ ಸಂಸ್ಕ್ರುತದ ಯ ಪ್ರತ್ಯಯವನ್ನು ಬಳಸಿ ರಚಿಸಿರುವ ಪಾರಿಬಾಶಿಕ ಪದಗಳನ್ನು ಅದಕ್ಕೆ
ಬದಲು ಕನ್ನಡದ ತೆ ಮತ್ತು (ವ್)ಅ ಪ್ರತ್ಯಯಗಳನ್ನು ಬಳಸಿ ರಚಿಸಲು ಸಾದ್ಯವಾಗುವ ಪದಗಳೊಂದಿಗೆ ಹೋಲಿಸಿ ನೋಡಬಹುದು. ಸಂಸ್ಕ್ರುತದ ಯ ಪ್ರತ್ಯಯ ಕನ್ನಡದ ತೆ ಮತ್ತು ಅ ಪ್ರತ್ಯಯಗಳು ತಾಟಸ್ಥ್ಯ ತಟಸ್ಥತೆ ಸಾತತ್ಯ ಸತತತೆ ವೈವಿಧ್ಯ ವಿವಿಧತೆ ಮಾಲಿನ್ಯ ಮಲಿನತೆ ವ್ಯಾಪ್ಯ ವ್ಯಾಪಿಸುವ ದ್ರಾವ್ಯ ದ್ರವಿಸುವ ಸಂಕಲ್ಯ ಸಂಕಲಿಸುವ ದಹ್ಯ ದಹಿಸುವ ತೆ ಪ್ರತ್ಯಯ ನಿಜಕ್ಕೂ ಕನ್ನಡದ್ದಲ್ಲ; ಸಂಸ್ಕ್ರುತದ ತಾ ಪ್ರತ್ಯಯದ ಕನ್ನಡ ರೂಪ. ಆದರೆ ಇಲ್ಲಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಸಂಸ್ಕ್ರುತದ ಯ ಪ್ರತ್ಯಯವಿರುವ ಪದಗಳಿಗೆ ಕನ್ನಡದಲ್ಲಿ ಕೆಲವೊಮ್ಮೆ ತೆ ಪ್ರತ್ಯಯವಿರುವ ನಾಮಪದದ ಮೂಲಕ ಮತ್ತು ಕೆಲವೊಮ್ಮೆ (ವ್)ಅ ಪ್ರತ್ಯಯವಿರುವ ಗುಣರೂಪದ ಮೂಲಕ ಅರ್ತ ಹೇಳಲು ಸಾದ್ಯವಿದೆಯಾದ ಕಾರಣ, ಕನ್ನಡದ ಮಟ್ಟಿಗೆ ಯ ಪ್ರತ್ಯಯದ ಬಳಕೆ ಅರ್ತಸಂದಿಗ್ದತೆಯನ್ನು ತಂದುಹಾಕುತ್ತದೆ. 8.2.2 ಗುಣಪದಗಳ ಬಳಕೆಯಲ್ಲಿ ಇಂಗ್ಲಿಶ್ನದೇ ಸಮಸ್ಯೆ ಇಂಗ್ಲಿಶ್ ನುಡಿಯಲ್ಲಿ ನಾಮಪದಗಳನ್ನು ನೇರವಾಗಿ ಯಾವ ಪ್ರತ್ಯಯವನ್ನೂ ಸೇರಿಸದೆ ಇನ್ನೊಂದು ನಾಮಪದದ ವಿಶೇಶಣವನ್ನಾಗಿ ಮಾಡಲು ಸಾದ್ಯವಿದೆ (ಸೆಲ್ ಡಿವಿಶನ್, ಲಯ್¥sóï ಸಯ್ಕ್್ಲ). ಆದರೆ ಗುಣಪದಗಳನ್ನು ನಾಮಪದವಾಗಿ ಬಳಸಲು ಸಾದ್ಯವಾಗದು.
ಎಂದರೆ, ನಾಮಪದ ಮತ್ತು ಗುಣಪದಗಳ ನಡುವಿನ ವ್ಯತ್ಯಾಸವನ್ನು ಕಾಣಿಸುವುದರಲ್ಲಿ ಇಂಗ್ಲಿಶ್ ಸಂಸ್ಕ್ರುತದಿಂದ ಬೇರಾಗಿದೆಯಾದರೂ ಕನ್ನಡದಶ್ಟು ಸ್ಪಶ್ಟವಾಗಿ ಅದು ಈ ವ್ಯತ್ಯಾಸವನ್ನು ಕಾಣಿಸುವುದಿಲ್ಲ. ಅದರ ಈ ಸ್ವಬಾವದಿಂದಾಗಿ ಕೆಲವೆಡೆಗಳಲ್ಲಿ ಇಂಗ್ಲಿಶ್ ನುಡಿಯಲ್ಲೇನೇ ನಾಮಪದ ಮತ್ತು ಗುಣಪದಗಳ ಬಳಕೆಯಲ್ಲಿ ಅನಿಯಮಿತತೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಆಟಂ ಬಾಂಬ್ ಎಂಬುದರಲ್ಲಿ ಆಟಂ ನಾಮಪದವನ್ನು ನೇರವಾಗಿ ಇನ್ನೊಂದು ನಾಮಪದದೊಂದಿಗೆ (ಅದರ ವಿಶೇಶಣವಾಗಿ) ಬಳಸಲಾಗಿದೆ; ಇದಕ್ಕೆ ಬದಲು ಅಟೋಮಿಕ್ ಕ್ಲೋಕ್ ಎಂಬುದರಲ್ಲಿ ಆ ನಾಮಪದವನ್ನು ಆ ರೀತಿ ನೇರವಾಗಿ ಬಳಸುವ ಬದಲು, ಅದರಿಂದ ತಯಾರಾಗಿರುವ ಗುಣಪದವನ್ನು (ಅಟೋಮಿಕ್ ಎಂಬುದನ್ನು) ಬಳಸಲಾಗಿದೆ. ಆದರೆ ಈ ಎರಡು ಬಳಕೆಗಳ ನಡುವೆ ಅರ್ತದಲ್ಲಿ ಯಾವ ವ್ಯತ್ಯಾಸವೂ ಇರುವ ಹಾಗೆ ಕಾಣಿಸುವುದಿಲ್ಲ. ಇದೇ ರೀತಿಯಲ್ಲಿ ಸ್ಕೇಲ್ ಹೇರ್ ಎಂಬುದರಲ್ಲಿ ಸ್ಕೇಲ್ ನಾಮಪದವನ್ನು ನೇರವಾಗಿ ಹೇರ್ ನಾಮಪದದೊಂದಿಗೆ ಬಳಸಲಾಗಿದೆ ಮತ್ತು ಸ್ಕೇಲೀ ಬಾರ್್ಕ ಎಂಬುದರಲ್ಲಿ ಅದರಿಂದ ತಯಾರಿಸಿದ ಗುಣಪದವನ್ನು ಬಳಸಲಾಗಿದೆ. ಇಲ್ಲೂ ಅರ್ತವ್ಯತ್ಯಾಸವಿರುವ ಹಾಗೆ ಕಾಣಿಸುವುದಿಲ್ಲ. ಈ ಅನಿಯಮಿತತೆಯನ್ನು ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳನ್ನು ಬಳಸಿರುವಲ್ಲೂ ಅನವಶ್ಯಕವಾಗಿ ಉಳಿಸಿಕೊಳ್ಳಲಾಗಿದೆ. ಉದಾಹರಣೆಗಾಗಿ, ನಾರಾಯಣರಾವ್ (2001) ಅವರು ಪರಮಾಣು ಗಡಿಯಾರ ಎಂಬಲ್ಲಿ ಪರಮಾಣು ನಾಮಪದವನ್ನು ನೇರವಾಗಿ ಗುಣಪದದ ಜಾಗದಲ್ಲಿ (ವಿಶೇಶಣವಾಗಿ) ಬಳಸಿದ್ದಾರೆ ಮತ್ತು ಪರಮಾಣವಿಕ ಉಷ್ಣ ಎಂಬಲ್ಲಿ ಅದಕ್ಕಿಂತ ಬೇರಾಗಿರುವ ಇನ್ನೊಂದು ಪದವನ್ನು ಬಳಸಿದ್ದಾರೆ. ಸಂಸ್ಕ್ರುತದಲ್ಲಿ ಪರಮಾಣು ಪದದ ಹಾಗೆ ಪರಮಾಣವಿಕ ಎಂಬುದೂ ಒಂದು ನಾಮಪದವೇ; ಆದರೆ ಮೇಲೆ ಅದನ್ನು ಗುಣಪದವಾಗಿ ಕನ್ನಡದಲ್ಲಿ ಬಳಸಲಾಗಿದೆ.
ಇದಕ್ಕೆ ಬದಲು ಸ್ಕೇಲ್ ಹೇರ್ ಮತ್ತು ಸ್ಕೇಲೀ ಬಾರ್್ಕ ಎಂಬೆರಡು ಕಡೆಗಳಲ್ಲಿ ಸ್ಕೇಲ್ ಮತ್ತು ಸ್ಕೇಲೀ ಎಂಬ ಬೇರೆ ಬೇರೆ ಪದಗಳಿದ್ದರೂ ಅವಕ್ಕೆ ಬದಲಾಗಿ ಶಲ್ಕ (ಸ್ಕೇಲ್) ನಾಮಪದದಿಂದ ಸಿದ್ದವಾಗಿರುವ ಶಲ್ಕೀ ಎಂಬ ಒಂದೇ ನಾಮಪದವನ್ನು (ಗುಣಪದವಾಗಿ) ಬಳಸಿದ್ದಾರೆ (ಶಲ್ಕೀ ರೋಮ ಮತ್ತು ಶಲ್ಕೀ ತೊಗಟೆ). ಕನ್ನಡದಲ್ಲಿ ಈ ರೀತಿ ನಾಮಪದಗಳನ್ನು ನೇರವಾಗಿ ಇನ್ನೊಂದು ನಾಮಪದದ ವಿಶೇಶಣವನ್ನಾಗಿ ಮಾಡಲು ಸಾದ್ಯವಾಗದು. ಜೋಡುಪದಗಳಾಗಿ ಬಳಕೆಗೆ ಬಂದಿರುವ ಆನೆಕಾಲು, ಮರಕಾಲು ಮೊದಲಾದ ಪದಗಳಲ್ಲಿ ಮಾತ್ರ ಎರಡು ನಾಮಪದಗಳು ಆ ರೀತಿ ಒಟ್ಟಾಗಿ ಬರಬಲ್ಲುವು. ಒಂದು ನಾಮಪದವನ್ನು ಇನ್ನೊಂದು ನಾಮಪದದ ವಿಶೇಶಣವನ್ನಾಗಿ ಮಾಡಬೇಕಿದ್ದಲ್ಲಿ ಕನ್ನಡದಲ್ಲಿ ಆ ನಾಮಪದಕ್ಕೆ ಸಂಬಂದವನ್ನು ಸೂಚಿಸುವ ಅ ಎಂಬ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ (ಕಣ್ಣಿನ ಪೆÇರೆ, ಮರದ ಪೆಟ್ಟಿಗೆ, ಮೂಗಿನ ಸೊಳ್ಳೆ). ಇದಲ್ಲದೆ, ಇಂತಹ (ಶಶ್ಟೀ) ರೂಪಗಳು ಕನ್ನಡದಲ್ಲಿ ನಾಮಪದಗಳ ವಿಶೇಶಣಗಳಾಗಿ ಮಾತ್ರ ಬರಬಲ್ಲುವು. ಹಾಗಾಗಿ, ಮೇಲೆ ಕೊಟ್ಟಿರುವಂತಹ ಕಡೆಗಳಲ್ಲಿ ಸಂಸ್ಕ್ರುತದ ಪ್ರತ್ಯಯಗಳ ಬದಲು ಕನ್ನಡದ ಅ ಪ್ರತ್ಯಯವನ್ನು ಬಳಸಿದಲ್ಲಿ ಮೇಲೆ ವಿವರಿಸಿದಂತಹ ಅನಿಯಮಿತತೆ ಕಾಣಿಸಿಕೊಳ್ಳಲಾರದು. ಈ ಪ್ರತ್ಯಯವನ್ನು ನಾಮಪದಗಳಿಗೆ ಸೇರಿಸಬೇಕಿದ್ದಲ್ಲಿ ಅದಕ್ಕಿಂತ ಮೊದಲು ಮರದ, ಕಾಡಿನ, ಎರಡರ ಮೊದಲಾದ ಪದಗಳಲ್ಲಿ ಕಾಣಿಸುವ ಹಾಗೆ ದ್, ಇನ್, ಅರ್ ಮೊದಲಾದ ಕೆಲವು ಆಗಮಗಳನ್ನು ಸೇರಿಸಬೇಕಾಗುತ್ತದೆಯೇನೋ ನಿಜ; ಆದರೆ ಇದು ಕನ್ನಡಿಗರಿಗೆ ಪರಿಚಿತವಾಗಿರುವ ನಿಯಮವಾದ ಕಾರಣ, ಇದರ ಬಳಕೆಯಿಂದಾಗಿ ಹೆಚ್ಚಿನ ತೊಡಕೇನೂ ಉಂಟಾಗುವುದಿಲ್ಲ. ಕ್ರಿಯಾಪದಗಳೊಂದಿಗೆ ಈ ಪ್ರತ್ಯಯವನ್ನು ಬಳಸಬೇಕಿದ್ದಲ್ಲಿ ಅದಕ್ಕಿಂತ ಮೊದಲು, ಸೂಚಿಸಬೇಕಾಗಿರುವ ಅರ್ತವನ್ನವಲಂಬಿಸಿ, ಮಾಡಿದ, ಮಾಡುವ, ಮಾಡದ ಮೊದಲಾದ ಕ್ರಿಯಾರೂಪಗಳಲ್ಲಿ
ಕಾಣಿಸುವ ಹಾಗೆ, ದ್, ವ್ ಮತ್ತು ಅದ್ ಎಂಬ ಮೂರು ಪ್ರತ್ಯಯಗಳಲ್ಲೊಂದನ್ನು ಸೇರಿಸಬೇಕಾಗುತ್ತದೆ. ಈ ನಿಯಮವೂ ಕನ್ನಡಿಗರಿಗೆ ಪರಿಚಿತವಾದುದೇ ಆದ ಕಾರಣ, ಅದರಿಂದಾಗಿ ತೊಡಕೇನೂ ಉಂಟಾಗುವುದಿಲ್ಲ. ಇದಲ್ಲದೆ, ಈ ಪ್ರತ್ಯಯಗಳ ಮೂಲಕ ಹಿಂದಿನ ಕೆಲಸ’ (ಮಾಡಿದ ಕೆಲಸ), ಮುಂದಿನ ಕೆಲಸ’ (ಮಾಡುವ ಕೆಲಸ) `ಅಲ್ಲಗಳೆದ ಕೆಲಸ’ (ಮಾಡದ ಕೆಲಸ) ಎಂಬ ಹೆಚ್ಚಿನ ಅರ್ತವ್ಯತ್ಯಾಸಗಳನ್ನೂ ಸೂಚಿಸಲು ಸಾದ್ಯವಾಗುತ್ತದೆ. ಇದು ಈ ಕನ್ನಡ ಪ್ರತ್ಯಯಗಳ ಬಳಕೆಯಿಂದ ನಮಗೆ ಸಿಗುವ ಒಂದು ಹೆಚ್ಚಿನ ಪ್ರಯೋಜನವಾಗಿದೆ. ಕನ್ನಡದ ಅ ಪ್ರತ್ಯಯದ ಬಳಕೆಗೆ ಸಂಬಂದಿಸಿದ ಮೇಲಿನ ನಿಯಮಗಳಿಗೆ ಅಪವಾದಗಳಿಲ್ಲ; ಇದಲ್ಲದೆ, ಅದನ್ನು ಬಳಸಿ ರಚಿಸಿದ ಪದರೂಪಗಳನ್ನು ನಾಮಪದಗಳ ವಿಶೇಶಣಗಳಾಗಿ ಮಾತ್ರ (ಎಂದರೆ ಗುಣಪದಗಳ ಜಾಗದಲ್ಲಿ ಮಾತ್ರ) ಬಳಸಲು ಸಾದ್ಯವಿದೆ; ಹಾಗಾಗಿ, ಸಂಸ್ಕ್ರುತ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಅರ್ತಸಂದಿಗ್ದತೆ ಮತ್ತು ಗೊಂದಲಗಳು ಈ ಪ್ರತ್ಯಯದ ಬಳಕೆಯಲ್ಲಿಲ್ಲ. ಕನ್ನಡದ ಅ ಪ್ರತ್ಯಯದ ಬಳಕೆಯನ್ನು ವಿಜ್ನಾನ ಪದಕೋಶಗಳಲ್ಲೇನೇ ಕೆಳಗೆ ಕೊಟ್ಟಿರುವ ಕೆಲವು ಉದಾಹರಣೆಗಳಲ್ಲಿ ಕಾಣಬಹುದು. (ಕ) ನಾಮರೂಪಗಳು: ಹರ್ಬೇಶಿಯಸ್ ಮೂಲಿಕೆಯ ಡಯಸ್ಟೋಲಿಕ್ ವ್ಯಾಕೋಚನದ ರ್ಯುಮೇಟಿಕ್ ಸಂದಿವಾತದ ಕಂಡೀಶನಲ್ ಶರತ್ತಿನ ಅಲ್ಯೂವಿಯಲ್ ನೆರೆಮಣ್ಣಿನ ನೇಸಲ್ ಮೂಗಿನ
(ಗ) ಕ್ರಿಯಾರೂಪಗಳು: ಈಗಿನ ಕೆಲಸ ಕ್ಯುರೇಟಿವ್ ವಾಸಿಮಾಡುವ ಕೊರೋಸಿವ್ ಕೊರೆಯುವ ಎಕ್ರೂಯಿಂಗ್ ಕೂಡಿಬರುವ ಸಸ್ಪೆಂಡೆಡ್ ತೂಗಾಡುವ (ಚ) ಕ್ರಿಯಾರೂಪಗಳು: ಹಿಂದಿನ ಕೆಲಸ ಪರಾಲಿಟಿಕ್ ಲಕ್ವಹೊಡೆದ ಕನೆಕ್ಟೆಡ್ ಕೂಡಿಸಿದ ಒಕ್ಲೂಡೆಡ್ ಮುಚ್ಚಿದ ರೆಡ್ಯೂಸ್್ಡ ಇಳಿಸಿದ ಈ ರೀತಿ ಕೆಲವು ಪದಗಳ ರಚನೆಯಲ್ಲಿ ಮಾತ್ರ ಕನ್ನಡದ ಅ ಪ್ರತ್ಯಯವನ್ನು ಬಳಸುವ ಬದಲು ಎಲ್ಲಾ ಕಡೆಗಳಲ್ಲೂ ಬಳಸುವ ಮೂಲಕ, ಕನ್ನಡದ ವಿಜ್ನಾನ ಪದಕೋಶಗಳಲ್ಲಿರುವ ಪಾರಿಬಾಶಿಕ ಪದಗಳ ತೊಡಕನ್ನು ಬಹಳಶ್ಟು ಕಡಿಮೆ ಮಾಡಬಹುದು. ಇದಲ್ಲದೆ, ಆ ರೀತಿ ಎಲ್ಲಾ ಕಡೆಗಳಲ್ಲೂ ಈ ಪ್ರತ್ಯಯವನ್ನು ಬಳಸುವುದಿದ್ದಲ್ಲಿ ಕ್ರಿಯಾರೂಪಗಳಲ್ಲಿ ಅದು ಕೊಡುವ ಹಿಂದಿನ ಕೆಲಸ’ - ಮುಂದಿನ ಕೆಲಸ’ ಎಂಬಂತಹ ಅರ್ತಬೇದವನ್ನು (ಮತ್ತು `ಮಾಡದಿರುವ ಕೆಲಸ’ ಎಂಬಂತಹ ಅಲ್ಲಗಳೆಯುವ ಅರ್ತವನ್ನು) ಸರಿಯಾಗಿ ಬಳಸಿಕೊಳ್ಳಲು ಸಾದ್ಯವಿದೆ. ವಿಜ್ನಾನ ಪದಕೋಶಗಳಲ್ಲಿ ಬಳಕೆಯಾಗಿರುವ ಮೇಲಿನ ಪದಗಳಲ್ಲಿ ಅದನ್ನು ಸರಿಯಾಗಿ ಬಳಸಿಕೊಂಡಿರುವ ಹಾಗೆ ಕಾಣಿಸುವುದಿಲ್ಲ. 8.2.3 ಎದುರರ್ತದ ಪದಗಳು ಇಂಗ್ಲಿಶ್ ಪಾರಿಬಾಶಿಕ ಪದಗಳಲ್ಲಿ ಎದುರರ್ತ ಇಲ್ಲವೇ ಅಲ್ಲಗಳೆಯುವ ಅರ್ತದ ಅ (ಅನ್) ಪ್ರತ್ಯಯವಿರುವ ಪದಗಳನ್ನು ಸಂಸ್ಕ್ರುತದಲ್ಲಿ ಸುಲಬವಾಗಿ ಅಂತಹದೇ ಪ್ರತ್ಯಯವಿರುವ ಪದಗಳ ಮೂಲಕ
ಅನುವಾದಿಸಲು ಸಾದ್ಯವಾಗುತ್ತದೆ (ಟ್ರುತ್-ಅನ್ಟ್ರುತ್ : ಸತ್ಯ- ಅಸತ್ಯ). ಈ ಎರಡು ನುಡಿಗಳೂ ಇಂಡೋ-ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವುದೇ ಇದಕ್ಕೆ ಕಾರಣ. ಕನ್ನಡದಲ್ಲಿ ಇಂತಹ ಪ್ರತ್ಯಯ ಬಳಕೆಯಲ್ಲಿಲ್ಲ. ಆದರೆ ಸಂಸ್ಕ್ರುತದಲ್ಲಿ (ಮತ್ತು ಇತರ ಇಂಡೋ- ಯುರೋಪಿಯನ್ ನುಡಿಗಳಲ್ಲಿ) ಬಳಕೆಯಾಗುವ ಈ ಪ್ರತ್ಯಯ ಕನ್ನಡದ ಮಟ್ಟಿಗೆ ಒಂದು ರೀತಿಯ ಅರ್ತಸಂದಿಗ್ದತೆಗೆ ಎಡೆಕೊಡುತ್ತದೆ. ಕೆಲವು ಕಡೆಗಳಲ್ಲಿ ಅದು ಒಂದು ಗುಣ ಇಲ್ಲ’ ಎಂಬ ಅರ್ತವನ್ನು ಸೂಚಿಸುತ್ತದೆ ಮತ್ತು ಬೇರೆ ಕೆಲವು ಕಡೆಗಳಲ್ಲಿ ಒಂದು ಗುಣದ ಬದಲು ಇನ್ನೊಂದು (ಅದಕ್ಕೆ ಎದುರಿನದಾಗಿರುವ) ಗುಣ ಇದೆ’ ಎಂಬ ಅರ್ತವನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಸಂಸ್ಕ್ರುತದ (ಮತ್ತು ಇಂಗ್ಲಿಶ್ನ) ಈ ಪ್ರತ್ಯಯಕ್ಕೆ ಬದಲಾಗಿ ಕೆಲವು ಕಡೆಗಳಲ್ಲಿ ಕನ್ನಡದ ಇಲ್ಲದ ಎಂಬುದನ್ನು ಬಳಸಬೇಕಾಗುತ್ತದೆ ಮತ್ತು ಬೇರೆ ಕೆಲವು ಕಡೆಗಳಲ್ಲಿ ಕನ್ನಡದ ಅಲ್ಲದ ಎಂಬುದನ್ನು ಬಳಸಬೇಕಾಗುತ್ತದೆ. ಈ ರೀತಿ ಸಂಸ್ಕ್ರುತದ ಅ ಪ್ರತ್ಯಯದ ಬಳಕೆ ಕನ್ನಡದಲ್ಲಿ ಹುಟ್ಟುಹಾಕುವ ಈ ಅರ್ತಸಂದಿಗ್ದತೆಯನ್ನು ಹೋಗಲಾಡಿಸುವುದಕ್ಕಾಗಿ ಕನ್ನಡದ್ದೇ ಆದ ಇಲ್ಲದ ಮತ್ತು ಅಲ್ಲದ ಪದಗಳನ್ನು ಬಳಸುವುದೇ ಒಳ್ಳೆಯದು. ಇಂಗ್ಲಿಶ್ ಪದಗಳು ತ್ರಿಶಂಕು ಪದಗಳು ಕನ್ನಡ ಪದಗಳು (ಕ) ಅಫಿûಲಸ್ ಅಪರ್ಣೀ ಎಲೆಯಿಲ್ಲದ ಅಪೆÇೀಡಲ್ ಅಪಾದ ಕಾಲಿಲ್ಲದ ಅಪೆಟಲಸ್ ಅದಳ ಎಸಳಿಲ್ಲದ ಅದ್ಸೋಯಿಕ್ ಅಜೀವಿ ಉಸಿರಿಲ್ಲದ (ಗ) ಅಸ್ಟಾಟಿಕ್ ಅಸ್ಥಾಯಿ ಸ್ಥಾಯಿಯಲ್ಲದ ಅಮೋರ್ಫಸ್ ಅಸ್ಫಟಿಕ ಸ್ಫಟಿಕವಲ್ಲದ ಅಕ್ರೊಮೇಟಿಕ್ ಅಲೈಂಗಿಕ ಲೈಂಗಿಕವಲ್ಲದ ಅಕ್ರೊಮೇಟಿಕ್ ಅವಣ್ರಕ ವಣ್ರಕವಲ್ಲದ