← Ch 7  ·  Contents  ·  Ch 9 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 8 — ಕನ್ನಡ ಪ್ರತ್ಯಯಗಳ ಬಳಕೆ

↑ ಒಳಪಿಡಿಗೆ ಹಿಂತಿರುಗಿ

ನುಡಿಗಳು ಬಳಸುವ ಪದರಚನೆಯ ನಿಯಮಗಳಿಂದ ಹಲವು ವಿಶಯಗಳಲ್ಲಿ ಬೇರಾಗಿವೆ. ಉದಾಹರಣೆಗಾಗಿ ಇದಿರರ್ತವನ್ನು ಕೊಡುವುದಕ್ಕಾಗಿ ಸಂಸ್ಕ್ರುತದಲ್ಲಿ ಪದಗಳ ಮುಂದೆ ಅ (ಅನ್) ಪ್ರತ್ಯಯವನ್ನು ಸೇರಿಸುವ ವಿದಾನ ಬಳಕೆಯಲ್ಲಿದೆ (ಸತ್ಯ-ಅಸತ್ಯ, ಜ್ಞಾನ-ಅಜ್ಞಾನ, ಅಕ್ಷರಸ್ಥ- ಅನಕ್ಷರಸ್ಥ, ಆಪೇಕ್ಷಿತ-ಅನಪೇಕ್ಷಿತ). ಇಂತಹದೇ ವಿದಾನ ಇಂಡೋ-ಯುರೋಪಿಯನ್ ನುಡಿ ಕುಟುಂಬಕ್ಕೆ ಸೇರಿದ ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಇತರ ನುಡಿಗಳಲ್ಲೂ ಬಳಕೆಯಲ್ಲಿದೆ (true-untrue, educated-uneducated, known-unknown, fair- uಟಿಜಿಚಿiಡಿ, imಠಿoಡಿಣಚಿಟಿಣ- uಟಿimಠಿoಡಿಣಚಿಟಿಣ). ಈ ಎಲ್ಲಾ ನುಡಿಗಳಿಗೂ ಮೂಲನುಡಿ ಒಂದೇ ಆಗಿದ್ದು ಅವೆಲ್ಲವೂ ಈ ವಿದಾನವನ್ನು ಸಮಾನವಾಗಿ ಆ ಮೂಲನುಡಿಯಿಂದ ಪಡೆದುಕೊಂಡಿರುವುದೇ ಇದಕ್ಕೆ PÁgÀt. ಕನ್ನಡದಲ್ಲಿ ಈ ವಿದಾನ ಬಳಕೆಯಲ್ಲಿಲ್ಲ. ಇಂಡೋ- ಯುರೋಪಿಯನ್ಗಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬದಿಂದ ಬೆಳೆದು ಬಂದಿರುವ ತಮಿಳು, ತೆಲುಗು, ತುಳು ಮೊದಲಾದ ಬೇರೆ ನುಡಿಗಳಲ್ಲೂ ಈ ವಿದಾನ ಬಳಕೆಯಲ್ಲಿಲ್ಲ. ಆದರೆ ಈ ನುಡಿಗಳಲ್ಲಿ ಮೇಲಿನ ಅರ್ತವನ್ನು ಸೂಚಿಸುವ ಸಾದ್ಯತೆಯೇ ಇಲ್ಲವೆಂದೇನೂ ಇದರ ಅರ್ತವಲ್ಲ. ಇವುಗಳಲ್ಲಿ ಇದಕ್ಕಾಗಿ ಬೇರೆಯೇ ವಿದಾನಗಳು ಬಳಕೆಯಲ್ಲಿವೆ ಅಶ್ಟೆ. ನಾಮಪದಗಳಿಗೆ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ ಮೇಲಿನ ಅರ್ತವನ್ನು ಸೂಚಿಸುವುದು ಕನ್ನಡದಲ್ಲಿರುವ ಒಂದು ವಿದಾನ (ಅದ್ವಿತೀಯ - ಎಣೆಯಿಲ್ಲದ, ಅನಂತ - ಕೊನೆಯಿಲ್ಲದ, ಅನವಶ್ಯಕ - ಬೇಕಿಲ್ಲದ, ಅಪರಿಚಿತ - ಗುರುತಿಲ್ಲದ). ಕ್ರಿಯಾಪದಗಳಿಗೆ ಅಲ್ಲಗಳೆಯುವ ಅ ಪ್ರತ್ಯಯವನ್ನು ಮತ್ತು ಅದನ್ನು ನಾಮಪದವಾಗಿ ಬದಲಾಯಿಸುವ ಮೆ ಪ್ರತ್ಯಯವನ್ನು ಸೇರಿಸುವುದು ಇನ್ನೊಂದು ವಿದಾನ (ಅನುಕ್ತಿ - ಸೊಲ್ಲಮೆ, ಅಜ್ನಾನ - ಅರಿಯಮೆ, ಅಜೀರ್ಣ - ಅರಮೆ).

ಕ್ರಿಯಾಪದಗಳ ಗುಣರೂಪಗಳಲ್ಲಿ ಅದ ಪ್ರತ್ಯಯವನ್ನು ಸೇರಿಸಿಯೂ ಅವುಗಳ ಇದಿರರ್ತವನ್ನು ಸೂಚಿಸಲು ಸಾದ್ಯವಿದೆ (ಅನ್ಕಮಿಟೆಡ್ - ಕಟ್ಟುಬೀಳದ, ಅನ್ಎಡುಕೇಟೆಡ್ - ಓದುಬಾರದ, ಅನ್ಮೂವ್್ಡ - ಕದಲದ). ಇದಕ್ಕೆ ಇಕೆ ಪ್ರತ್ಯಯವನ್ನು ಸೇರಿಸಿ ಕನ್ನಡದಲ್ಲಿ ನಾಮಪದಗಳನ್ನೂ ತಯಾರಿಸಿಕೊಳ್ಳಬಹುದು (ಕಟ್ಟುಬೀಳದಿಕೆ, ಓದುಬಾರದಿಕೆ, ಕದಲದಿಕೆ). ನಿಜಕ್ಕೂ ಕನ್ನಡದ ವಿದಾನಗಳು ಸಂಸ್ಕ್ರುತದ ವಿದಾನಗಳಿಗಿಂತ ಕೆಲವು ವಿಶಯಗಳಲ್ಲಿ ಉತ್ತಮವಾದುವೆಂದು ಹೇಳಲು ಸಾದ್ಯವಿದೆ. ಯಾಕೆಂದರೆ, ಕನ್ನಡದಲ್ಲಿ ವಸ್ತು, ಗುಣ ಮತ್ತು ಕೆಲಸಗಳನ್ನು ಬೇರೆ ಬೇರೆ ರೀತಿಯಲ್ಲಿ ಅಲ್ಲಗಳೆಯಲು ಸಾದ್ಯವಿದೆ. ಇದಲ್ಲದೆ, ಕನ್ನಡದ ಅಲ್ಲ ಮತ್ತು ಇಲ್ಲ ಪದಗಳ ಮೂಲಕ ಸೂಚಿಸಲು ಸಾದ್ಯವಾಗುವ ಅರ್ತವ್ಯತ್ಯಾಸವನ್ನು ಸಂಸ್ಕ್ರುತದ ಅ (ಅನ್) ಪ್ರತ್ಯಯದ ಮೂಲಕ ನೇರವಾಗಿ ಸೂಚಿಸಲು ಸಾದ್ಯವಾಗುವುದಿಲ್ಲ. ಸಂಸ್ಕ್ರುತದಲ್ಲಿ ಮಾತ್ರವಲ್ಲದೆ ಇಂಗ್ಲಿಶ್ ಮೊದಲಾದ ಇತರ ಇಂಡೋ- ಯುರೋಪಿಯನ್ ನುಡಿಗಳಲ್ಲೂ ಈ ಅರ್ತವ್ಯತ್ಯಾಸವನ್ನು ಕನ್ನಡದ ಹಾಗೆ ನೇರವಾಗಿ ಸೂಚಿಸಲು ಸಾದ್ಯವಾಗುವುದಿಲ್ಲ (8.2.3 ನೋಡಿ). ಇಂತಹ ಇನ್ನೂ ಕೆಲವು ಪದರಚನೆಯ ವ್ಯತ್ಯಾಸಗಳು ಕನ್ನಡ ಮತ್ತು ಇಂಗ್ಲಿಶ್ ಇಲ್ಲವೇ ಸಂಸ್ಕ್ರುತ ನುಡಿಗಳ ನಡುವೆ ಇವೆ. ಅವುಗಳಿಂದಾಗಿಯೂ ಕನ್ನಡದಲ್ಲಿ ಹೊಸ ಪದಗಳನ್ನು ತಯಾರಿಸಲು ಕನ್ನಡದವೇ ಆದ ಪದಗಳನ್ನು ಹುಡುಕಿಕೊಂಡು ಹೋಗುವ ಬದಲು ಸಂಸ್ಕ್ರುತ ಪದಗಳನ್ನು ಎರವಲಾಗಿ ಪಡೆಯುವುದೇ ಸುಲಬ ಎಂಬುದಾಗಿ ನಮ್ಮ ವಿದ್ವಾಂಸರಿಗೆ ಅನಿಸುತ್ತದೆ. ಆದರೆ ಕನ್ನಡಕ್ಕೆ ಬೇಕಾಗುವ ಅರ್ತವ್ಯತ್ಯಾಸಗಳನ್ನು ಅವು ಸೂಚಿಸಲಾರವಾದ ಕಾರಣ, ಕನ್ನಡದ ಮಟ್ಟಿಗೆ ಅವು ಅರ್ತಸಂದಿಗ್ದತೆಯನ್ನು ತಂದುಹಾಕುತ್ತವೆ. ಇಂಗ್ಲಿಶ್ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಪ್ರತ್ಯಯಗಳನ್ನು ಪದಗಳ ಮೊದಲಿಗೂ ಸೇರಿಸಬಹುದು, ಅನಂತರವೂ ಸೇರಿಸಬಹುದು. ಆದರೆ ಕನ್ನಡದಲ್ಲಿ ಪ್ರತ್ಯಯಗಳನ್ನು ಪದಗಳ ಅನಂತರ ಮಾತ್ರ ಸೇರಿಸಲು ಸಾದ್ಯ. ಇಂಗ್ಲಿಶ್ನಲ್ಲಿ ಪದಗಳ ಮೊದಲಿಗೆ ಈ ರೀತಿ ಹಲವಾರು

ಪ್ರತ್ಯಯಗಳನ್ನು ಸೇರಿಸಲು ಸಾದ್ಯವಿದ್ದು, ಅವುಗಳ ಮೂಲಕ ನೂರಾರು ಹೊಸ ಪದಗಳನ್ನು ಆ ನುಡಿಯಲ್ಲಿ ತಯಾರಿಸಿಕೊಳ್ಳಲಾಗಿದೆ. ಅಂತಹವೇ ಪದಗಳನ್ನು ಸಂಸ್ಕ್ರುತದಲ್ಲೂ ಸುಲಬವಾಗಿ ತಯಾರಿಸಿಕೊಳ್ಳಲು ಸಾದ್ಯವಿದೆಯಾದ ಕಾರಣ ನಮ್ಮ ವಿದ್ವಾಂಸರು ಕನ್ನಡ ಪದಗಳ ಬದಲು ಅಂತಹ ಸಂದರ್ಬಗಳಲ್ಲೆಲ್ಲ ಸಂಸ್ಕ್ರುತದ ಮೊರೆಹೊಗುತ್ತಾರೆ. ಆದರೆ ಕನ್ನಡದಲ್ಲಿ ಬೇರೆ ವಿದಾನಗಳ ಮೂಲಕ ಇಂತಹ ಸಂದರ್ಬಗಳಲ್ಲೆಲ್ಲ ಸಮಾನ ಪದಗಳನ್ನು ತಯಾರಿಸಿಕೊಳ್ಳಲು ಸಾದ್ಯವಿದೆ. ಇದಕ್ಕಾಗಿ ಅವರು ಸ್ವಲ್ಪ ಕಶ್ಟಪಡಬೇಕಾಗುತ್ತದೆ, ಅಶ್ಟೆ. ಹಾಗೆ ಕಶ್ಟಪಡುವುದರ ಮೂಲಕ ಕನ್ನಡ ವಾಕ್ಯಗಳಲ್ಲಿ ಹೆಚ್ಚು ಚನ್ನಾಗಿ ಹೊಂದಿಕೊಳ್ಳುವ ವಿಜ್ನಾನ ಪದಗಳನ್ನು ಅವರು ತಯಾರಿಸಬಲ್ಲರು (ಹೆಚ್ಚಿನ ವಿವರಗಳಿಗೆ ಎಂಟನೇ ಅದ್ಯಾಯ ನೋಡಿ). 5.4 ಬರಹದ `ಮಟ್ಟ’ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವಾಗ ಕನ್ನಡದ ಪದ ಮತ್ತು ಪ್ರತ್ಯಯಗಳನ್ನು ಬಳಸುವ ಬದಲು ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸುವುದರಿಂದಾಗಿ ಹೇಗೆ ಕನ್ನಡ ಬರಹ ಜನಸಾಮಾನ್ಯರಿಂದ ದೂರವಾಗುತ್ತಿದೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಇಂತಹ ಚಾಳಿ ಮಾತ್ರವಲ್ಲದೆ ಸಂದರ್ಬಕ್ಕೆ ತಕ್ಕುದಾದ ಪದಗಳು ಕನ್ನಡದಲ್ಲಿ ಇದ್ದರೂ ಅವನ್ನು ಬಳಸದೆ ಸಂಸ್ಕ್ರುತ ಪದಗಳನ್ನು ಎರವಲಾಗಿ ಪಡೆದು ಬಳಸುವ ಚಾಳಿಯೂ ಹಲವು ಮಂದಿ ಕನ್ನಡ ಬರಹಗಾರರಲ್ಲಿ ಕಾಣಿಸುತ್ತದೆ. ಹಾಗೆ ಮಾಡುವುದರಿಂದ ತಮ್ಮ ಬರಹದ ಮಟ್ಟ ಮೇಲೇರುತ್ತದೆಯೆಂಬ ಅನಿಸಿಕೆ ಈ ಬರಹಗಾರರಲ್ಲಿ (ಮತ್ತು ಓದುಗರಲ್ಲಿ) ಇರುವುದೇ ಇದಕ್ಕೆ ಮುಕ್ಯ ಕಾರಣ. ಆದರೆ ಹೀಗೆ ಮಾಡುವುದರಿಂದಾಗಿ ತಮ್ಮ ಬರಹ ಹೆಚ್ಚಿನ ಓದುಗರಿಂದಲೂ ದೂರವಾಗಬಲ್ಲುದೆಂಬುದನ್ನು ಈ ಬರಹಗಾರರು ಗಮನಿಸುವ ಹಾಗೆ

ಕಾಣಿಸುವುದಿಲ್ಲ. ಹೆಚ್ಚು ಹೆಚ್ಚು ಓದುಗರನ್ನು ತಲಪಬೇಕೆಂಬ ಕಳಕಳಿಯಿರುವ ಕರ್ನಾಟಕದ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲೂ ಈ ಚಾಳಿ ಕಂಡುಬರುವುದು ನಿಜಕ್ಕೂ ಆಶ್ಚರ್ಯವೇ (6.3 ನೋಡಿ). ಮಿತಿ ಮೀರಿ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಮಂತ್ರಮುಗ್ದರ’ನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನು ಉಂಟುಮಾಡುವುದಿಲ್ಲ. ಯಾವುದಾದರೂ ಒಂದು ಹೊಸ ವಿಶಯವನ್ನು ತನ್ನ ಓದುಗರೊಂದಿಗೆ ಹಂಚಿಕೊಳ್ಳಬೇಕೆಂಬ ಆಶಯ ಬರಹಗಾರನಿಗೆ ಇದೆಯಾದಲ್ಲಿ ಅವನು ಇಂತಹ ಬರಹದ ಮೂಲಕ ಅದನ್ನು ಸಾದಿಸಲು ಸಾದ್ಯವಾಗದು. ಮೇಲ್ವರ್ಗದ ಬರಹಗಾರರು ತಮ್ಮ ಬರಹಗಳ ಮೂಲಕ ವರ್ಗಬೇದವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆಂಬುದಾಗಿ ಅವರನ್ನು ದೂರುವ ಬಂಡಾಯ ಬರಹಗಾರರಿಗೂ ತಮ್ಮ ಬರಹಗಳಲ್ಲಿ ಅವುಗಳ ಮಟ್ಟ’ವನ್ನು ಮೇಲೇರಿಸುವುದಕ್ಕಾಗಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಬೇಕಾಗುತ್ತಿದೆಯೆಂಬುದು ನಿಜಕ್ಕೂ ಆಶ್ಚರ್ಯವೇ. ಉದಾಹರಣೆಗಾಗಿ ಜವರಯ್ಯ ಅವರು ಬಂಡಾಯ ಸಾಹಿತ್ಯದ ಕುರಿತಾಗಿ ಬರೆದ ಪುಸ್ತಕದಲ್ಲಿ (ಜವರಯ್ಯ 1994) ಸಂಸ್ಕ್ರುತ ಪದಗಳು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಈ ವಿಶಯದಲ್ಲಿ ಅವರು ಬೇರೆ ಬರಹಗಾರರೊಂದಿಗೆ ಪಯ್ಪೋಟಿಗೆ ನಿಂತಿರುವ ಹಾಗೆ ಕಾಣಿಸುತ್ತದೆ. ಅನವಶ್ಯಕವಾಗಿ ತಮ್ಮ ಬರಹಗಳಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವ ಮೂಲಕ ಮೇಲ್ವರ್ಗದ ಬರಹಗಾರರು ಕೆಳವರ್ಗದ ಜನರನ್ನು ಕನ್ನಡ ಬರಹದಿಂದ ದೂರ ಉಳಿಯುವ ಹಾಗೆ ಮಾಡುತ್ತಾರೆ. ಬಂಡಾಯ ಬರಹಗಾರರು ಈ ಚಾಳಿಯನ್ನು ಪೆÇೀಶಿಸುವ ಬದಲು ಅದನ್ನು ಯಾಕೆ ಎದುರಿಸಲು ಪ್ರಯತ್ನಿಸುವುದಿಲ್ಲ? ನಿಜಕ್ಕೂ ಒಂದು ಕನ್ನಡ ಬರಹದ ಮಟ್ಟ ಅದರಲ್ಲಿ ಬರುವ ಸಂಸ್ಕ್ರುತ ಪದಗಳ ಎಣಿಕೆಯ ಮೇಲೆ ಅವಲಂಬಿಸಿಲ್ಲ. ಕನ್ನಡದವೇ ಆದ ಪದಗಳನ್ನು ಬಳಸಿಯೂ ಅವುಗಳ ಮಟ್ಟವನ್ನು ಉಳಿಸಿಕೊಳ್ಳಲು ಮತ್ತು ಇನ್ನಶ್ಟು ಹೆಚ್ಚಿಸಿಕೊಳ್ಳಲು ಸಾದ್ಯವಿದೆ. ಇದನ್ನು ಬಹಳ ಸ್ಪಶ್ಟವಾಗಿ ತೋರಿಸಿಕೊಟ್ಟವರೆಂದರೆ ಕನ್ನಡದ ದಾಸರು ಮತ್ತು ವಚನಕಾರರು. ಕನ್ನಡದ ಕವಿಗಳಲ್ಲಿ ಮತ್ತು ಪಂಡಿತರಲ್ಲಿ ತುಂಬಾ

ಹೆಚ್ಚು ಸಂಸ್ಕ್ರುತ ಪ್ರೇಮ ಇದ್ದ ಸಮಯದಲ್ಲೇನೇ ಈ ಬರಹಗಾರರು ಇದನ್ನು ಮಾಡಿ ತೋರಿಸಿದ್ದಾರೆ (ಸಿದ್ದಲಿಂಗಯ್ಯ 1975 ನೋಡಿ). 5.5 ತಿರುಳು ದಿನದಿಂದ ದಿನಕ್ಕೆ ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳ ಬಳಕೆ ಹೆಚ್ಚುತ್ತಿದ್ದು ಇದರಿಂದಾಗಿ ಕನ್ನಡ ಬರಹ ಸಾಮಾನ್ಯ ಕನ್ನಡಿಗರಿಂದ ದೂರವಾಗುತ್ತಿದೆ. ಇಂತಹ ಬಳಕೆ ಹಿಂದಿನ ಕಾಲದಿಂದಲೂ ಕನ್ನಡ ಬರಹಗಾರರಲ್ಲಿ ಕಾಣಿಸಿಕೊಂಡು ಬಂದಿರುವ ಒಂದು ಚಾಳಿ. ಆದರೆ ಇವತ್ತು ಕನ್ನಡ ಬರಹ ಎಲ್ಲರ ಸೊತ್ತಾಗಬೇಕಾಗಿದೆಯಾದ ಕಾರಣ ಈ ಚಾಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಕನ್ನಡದಲ್ಲಿ ಬಳಕೆಯಾಗುವ ಸಂಸ್ಕ್ರುತ ಪದಗಳು ಸಂಸ್ಕ್ರುತದವೇ ಆದ ಪದರಚನೆಯ ಕಟ್ಟಲೆಗಳನ್ನು ಬಳಸಬೇಕಾಗಿದೆಯಾದ ಕಾರಣ, ಅವುಗಳಿಂದಾಗಿ ಕನ್ನಡ ಬರಹ ತನ್ನ ಸ್ವಂತಿಕೆಯನ್ನು ಮತ್ತು ಸೊಗಡನ್ನು ಕಳೆದುಕೊಳ್ಳುತ್ತಿದೆ ಮತ್ತು ಹೆಚ್ಚು ಹೆಚ್ಚು ಕ್ರುತಕತೆಯನ್ನು ತುಂಬಿಕೊಳ್ಳುತ್ತಿದೆ. ತುಂಬಾ ಹೆಚ್ಚು ಸಂಸ್ಕ್ರುತ ಪದಗಳನ್ನು ಪಾರಿಬಾಶಿಕ ಪದಗಳಾಗಿ ಬಳಸಿಕೊಂಡಿರುವ ಕನ್ನಡದ ವಿಜ್ನಾನ ಬರಹಗಳನ್ನು ಓದಿ ನೋಡಿದಲ್ಲಿ ಅವು ಹೇಗೆ ಈ ಕಾರಣದಿಂದಾಗಿ ತೀರಾ ಕ್ರುತಕವಾಗಿವೆ ಮತ್ತು ಹೇಗೆ ಈ ಪದಗಳು ಅವುಗಳಲ್ಲಿ ಗೊಂದಲ ಮತ್ತು ಅರ್ತಸಂದಿಗ್ದತೆಗಳನ್ನು ತಂದುಹಾಕಿವೆ ಎಂಬುದನ್ನು ತಿಳಿಯಬಹುದು.

  1. ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳು 6.1 ಮುನ್ನೋಟ ಹಿಂದಿನ (ಅಯ್ದನೆಯ) ಅದ್ಯಾಯದಲ್ಲಿ ವಿವರಿಸಿದ ಹಾಗೆ, ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವುದರಿಂದಾಗಿ ಕನ್ನಡದ ಬರಹಗಳು ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರವಾಗುತ್ತಿವೆ. ಓದಲು-ಬರೆಯಲು ಕಲಿತ ಮೇಲೂ ಕನ್ನಡದ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಏನು ಹೇಳುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅವನ್ನು ಓದಿ ಆನಂದಿಸಲು ಸಾಮಾನ್ಯ ಕನ್ನಡಿಗರಿಗೆ ತೊಂದರೆಯಾಗುತ್ತಿದೆ. ಚಿಕ್ಕ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬರಹವನ್ನು ಕಲಿಸುವ ಕೆಲಸವೂ ಇದರಿಂದಾಗಿ ತೊಡಕಿನದಾಗುತ್ತಿದೆ. ಸಂಸ್ಕ್ರುತ ಪದಗಳ ಅತಿಯಾದ ಬಳಕೆ ಎರಡು ಮುಕ್ಯ ಕಾರಣಗಳಿಗಾಗಿ ಕನ್ನಡ ಬರಹವನ್ನು ಜನಸಾಮಾನ್ಯರಿಂದ ದೂರಮಾಡುತ್ತವೆ. ಮೊದಲನೆಯದಾಗಿ ಕನ್ನಡ ಬರಹಗಳಲ್ಲಿ ಬರುವ ಸಂಸ್ಕ್ರುತ ಪದಗಳನ್ನು ನಾವು ನಮ್ಮ ಉಚ್ಚಾರಣೆಯಲ್ಲಿರುವ ಹಾಗೆ ಬರೆಯುವ ಬದಲು ಸಂಸ್ಕ್ರುತ ಬರಹಗಳಲ್ಲಿರುವ ಹಾಗೆ ಬರೆಯುತ್ತಿದ್ದೇವೆ ಮತ್ತು ಇದಕ್ಕಾಗಿ ಕನ್ನಡ ಬರಹಗಳಲ್ಲಿ ಹಲವಾರು ಹೆಚ್ಚಿನ ಅಕ್ಶರಗಳನ್ನು ಅನವಶ್ಯಕವಾಗಿ ಬಳಸಿಕೊಳ್ಳುತ್ತಿದ್ದೇವೆ. ಈ ಹೆಚ್ಚಿನ ಅಕ್ಶರಗಳನ್ನು ಕಲಿಯುವ ಕೆಲಸ ಮಾತ್ರವಲ್ಲದೆ, ಅವನ್ನು ಅನಂತರ ಬರಹಗಳಲ್ಲಿ ಬಳಸುವ ಕೆಲಸವೂ ತುಂಬಾ ತೊಡಕಿನದಾಗಿದೆ. ಯಾಕೆಂದರೆ, ಪದಗಳ ಉಚ್ಚಾರಣೆಗೂ ಅವುಗಳ ಬರವಣಿಗೆಗೂ ನಡುವಿರುವ ವ್ಯತ್ಯಾಸಗಳಿಂದಾಗಿ ಕನ್ನಡ ಬರಹದಲ್ಲಿ ಹಲವಾರು ಸ್ಪೆಲ್ಲಿಂಗ್ ಸಮಸ್ಯೆಗಳು ತಲೆದೋರಿವೆ. ಇವುಗಳಿಂದಾಗಿ

ಕನ್ನಡ ಬರಹ ಸಾಮಾನ್ಯ ಜನರಿಗೆ ಬಹಳ ತೊಡಕಿನದಾಗಿ ಕಾಣಿಸುತ್ತದೆ. ಎರಡನೆಯದಾಗಿ, ಜನಸಾಮಾನ್ಯರ ಮಾತಿನಲ್ಲಿ ಸಂಸ್ಕ್ರುತ ಪದಗಳ ಬಳಕೆಯಾಗುವುದು ತುಂಬಾ ಕಡಿಮೆ. ಬಳಕೆಯಾಗುವವುಗಳೂ ಕನ್ನಡದ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಹಲವಾರು ರೀತಿಗಳಲ್ಲಿ ಬದಲಾಗಿರುತ್ತವೆ. ಆದರೆ ಬರಹದಲ್ಲಿ ಬರುವ ಹೆಚ್ಚಿನ ಸಂಸ್ಕ್ರುತ ಪದಗಳೂ ಬದಲಾಗದೆ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿದಿರುತ್ತವೆ. ಹಾಗಾಗಿ ಸಾಮಾನ್ಯ ಜನರಿಗೆ ಅವು ತೀರ ಅಪರಿಚಿತ ಪದಗಳಾಗಿ ಕಾಣಿಸುತ್ತವೆ. ಜನಸಾಮಾನ್ಯರನ್ನು ತಲಪಬೇಕೆಂದಿರುವ ಬರಹಗಳಲ್ಲಿ ಮತ್ತು ಕನ್ನಡ ಬರಹವನ್ನು ಕಲಿಯ ಹೊರಟಿರುವ ಮಕ್ಕಳ ಪಟ್ಯಪುಸ್ತಕಗಳಲ್ಲಿ ಹೇಗೆ ಈ ರೀತಿ ಸಂಸ್ಕ್ರುತ ಪದಗಳ ಬಳಕೆ ತುಂಬಾ ಹೆಚ್ಚಾಗಿದೆ ಮತ್ತು ಹೇಗೆ ಇದರಿಂದಾಗಿ ಕನ್ನಡ ಬರಹ ಸಾಮಾನ್ಯ ಕನ್ನಡಿಗರಿಂದ ದೂರ ಹೋಗುತ್ತಿದೆ ಎಂಬುದನ್ನು ಈ ಅದ್ಯಾಯದಲ್ಲಿ ವಿವರಿಸಲಾಗಿದೆ. 6.2 ಸಾಮಾನ್ಯ ಜನರ ಮಾತಿನಲ್ಲಿ ಸಂಸ್ಕ್ರುತ ಪದಗಳು ಸಾಮಾನ್ಯ ಕನ್ನಡಿಗರ ಮಾತಿನಲ್ಲಿ ಸಂಸ್ಕ್ರುತ ಪದಗಳು ಎಶ್ಟು ಬರುತ್ತವೆ ಎಂಬುದನ್ನು ತಿಳಿಯಲು ಅವರ ಬಾಳ್ವೆಯನ್ನು ಚಿತ್ರಿಸುವ ಕತೆ- ಕಾದಂಬರಿಗಳನ್ನು ಪರಿಶೀಲಿಸಬಹುದು. ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಶೇಕಡಾ 5ರಶ್ಟು ಸಂಸ್ಕ್ರುತ (ತತ್ಸಮ) ಪದಗಳು ಬಳಕೆಯಾಗಿವೆ; ಇನಾಂದಾರ್ ಅವರ ಸ್ವರ್ಗದ ಬಾಗಿಲು ಕಾದಂಬರಿಯಲ್ಲಿ ಇದಕ್ಕಿಂತ ತುಸು ಹೆಚ್ಚು ಎಂದರೆ ಶೇಕಡಾ 6ರಶ್ಟು ಸಂಸ್ಕ್ರುತ ಪದಗಳಿವೆ; ಗೋಕಾಕ್ ಅವರ ಇಜ್ಜೋಡಿ ಕಾದಂಬರಿಯಲ್ಲಿ ಇನ್ನೂ ತುಸು ಹೆಚ್ಚು ಎಂದರೆ ಶೇಕಡಾ 10ರಶ್ಟು ಸಂಸ್ಕ್ರುತ ಪದಗಳಿವೆ. ಸಂಸ್ಕ್ರುತದಿಂದ ಎರವಲಾಗಿ ಬಂದಿರುವ ಇಂತಹ ತತ್ಸಮ ಪದಗಳ ಬಳಕೆ ಮೇಲ್ವರ್ಗದವರ ಬಾಳ್ವೆಯನ್ನು ಚಿತ್ರಿಸುವ ಕಾದಂಬರಿಗಳಲ್ಲಿ ಹೆಚ್ಚು ಮತ್ತು ಕೆಳವರ್ಗದವರ ಬಾಳ್ವೆಯನ್ನು ಚಿತ್ರಿಸುವ

ಕಾದಂಬರಿಗಳಲ್ಲಿ ಕಡಿಮೆ. ಇದು ಸಹಜವಾಗಿಯೂ ಈ ಜನರ ಮಾತಿನಲ್ಲಿ ಕಾಣಿಸುವ ಸಂಸ್ಕ್ರುತ ಪದಗಳ ಪ್ರಮಾಣವನ್ನೂ ಸೂಚಿಸುತ್ತಿವೆಯೆಂದು ಹೇಳಬಹುದು. ರಾಜೇಗವ್ಡ ಹೊಸಹಳ್ಳಿ ಅವರು ಬರೆದ ಅಕ್ಕಯ್ಯಮ್ಮನ ಸಂಸಾರ ಎಂಬ ಸಣ್ಣ ಕತೆಗಳ ಪುಸ್ತಕದಲ್ಲಿ ಶೇಕಡಾ 2ಕ್ಕಿಂತಲೂ ಕಡಿಮೆ ಸಂಸ್ಕ್ರುತ (ತತ್ಸಮ) ಪದಗಳು ಕಾಣಿಸುತ್ತವೆ. ಗೀತಾ ನಾಗಬೂಶಣ ಅವರ ಚಯ್ತ್ರದ ಹಾಡು ಕಾದಂಬರಿಯಲ್ಲಿ ಅವು ಇನ್ನಶ್ಟು ಕಡಿಮೆ ಕಾಣಿಸುತ್ತವೆ. ಇದಲ್ಲದೆ ಕೆಳವರ್ಗದ ಜನರ ಬಾಳ್ವೆಯನ್ನು ಚಿತ್ರಿಸುವ ಕಾದಂಬರಿಗಳಲ್ಲಿ ಬರುವ ಸಂಸ್ಕ್ರುತ ಎರವಲುಗಳಲ್ಲಿ ಹೆಚ್ಚಿನವೂ ಉಚ್ಚಾರಣೆಗನುಸಾರವಾಗಿ ತುಂಬಾ ಬದಲಾಗಿರುತ್ತವೆ. ಗೀತಾ ನಾಗಬೂಶಣ ಅವರ ಕಾದಂಬರಿಗಳಲ್ಲಿ ಕಾಣಿಸುವ ಇಂತಹ ಕೆಲವು ಬದಲಾವಣೆಗಳನ್ನು ಕೆಳಗೆ ಕೊಟ್ಟಿರುವ ಪದಗಳಲ್ಲಿ ನೋಡಬಹುದು. ರೇಶ್ಮೆ - ರೇಸ್ಮೆ ವಿಚಿತ್ರ - ಇಚಿತ್ತರ ಬ್ರಾಹ್ಮಣರು - ಬ್ರಾಂಬ್ರು ಮನುಷ್ಯ - ಮನಶ ವಿಷ - ಇಸ ಪತಿವ್ರತೆ - ಪತಿವರತ ಪ್ರಪಂಚ - ಪರಪಂಚ ಕುಲಕಣ್ರಿ - ಕುಕ್ಕಣ್ಣಿ ಶಬ್ದ - ಶಬುದ ರಾತ್ರಿ - ರಾತರಿ ಮುಖಂಡ - ಮುಕಂಡ ಪ್ರೀತಿ - ಪಿರೀತಿ ವಯಸ್ಸು - ವೈಸು ಮುಖ - ಮೊಕ ಮೇಲ್ವರ್ಗದವರ ಮಾತಿನಲ್ಲಿ ಬರುವ ಸಂಸ್ಕ್ರುತ ಪದಗಳು ಇಶ್ಟೊಂದು ಬದಲಾಗದಿರಬಹುದು. ಆದರೆ ಬರಹದಲ್ಲಿ ಕಾಣಿಸುವ ಈ ಪದಗಳ ಸ್ವರೂಪಕ್ಕೂ ಮಾತಿನಲ್ಲಿ (ಉಚ್ಚಾರಣೆಯಲ್ಲಿ) ಇರುವ ಅವುಗಳ ಸ್ವರೂಪಕ್ಕೂ ನಡುವೆ ಸಾಕಶ್ಟು ವ್ಯತ್ಯಾಸಗಳು ಮೇಲ್ವರ್ಗದವರ ಮಾತಿನಲ್ಲೂ ಇವೆ ಎಂಬುದನ್ನು ನಾವು ಮೇಲೆ ಮೂರನೆಯ ಅದ್ಯಾಯದಲ್ಲಿ (3.2) ನೋಡಿರುವೆವು.

ಕರ್ನಾಟಕದಲ್ಲಿ ಬಳಕೆಯಲ್ಲಿರುವ ಆಡುನುಡಿಗಳನ್ನು ವರ್ಣಿಸಿರುವ ಆಚಾರ್ಯ (1967), ಉಪಾದ್ಯಾಯ (1968), ಚಂದ್ರಯ್ಯ (1987) ಮೊದಲಾದವರ ಬರಹಗಳನ್ನು ಪರಿಶೀಲಿಸಿದಾಗಲೂ ಇದೇ ವಿಶಯ ಸ್ವಶ್ಟವಾಗುತ್ತದೆ. ಇವರು ವರ್ಣಿಸಿರುವ ಯಾವ ಆಡುನುಡಿಯಲ್ಲೂ ಶೇಕಡಾ 5ಕ್ಕಿಂತ ಹೆಚ್ಚು ಸಂಸ್ಕ್ರುತ ಪದಗಳು ಬಳಕೆಯಲ್ಲಿಲ್ಲ ಮತ್ತು ಈ ಪದಗಳು ಈ ಆಡುನುಡಿಗಳಲ್ಲೆಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಚ್ಚಾರಣೆಯಲ್ಲಿಲ್ಲ. 6.3 ದಿನಪತ್ರಿಕೆಗಳಲ್ಲಿ ಸಂಸ್ಕ್ರುತ ಪದಗಳು ಸಮಾಜದಲ್ಲಿ ಎಲ್ಲಾ ವರ್ಗದ ಜನರನ್ನೂ ತಲಪಬೇಕಾಗಿರುವಂತಹ ಬರಹಗಳೆಂದರೆ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು. ತಿಳುವಳಿಕೆಯನ್ನು ಕೊಡುವುದು ಮತ್ತು ಸಂತೋಶಪಡಿಸುವುದು ಎಂಬುದಾಗಿ ಇವಕ್ಕೆ ಎರಡು ಮುಕ್ಯ ಉದ್ದೇಶಗಳಿವೆ. ಇವುಗಳ ಮೂಲಕ ಜನರು ತಮ್ಮ ಹಕ್ಕುಬಾದ್ಯತೆಗಳನ್ನು ಮತ್ತು ಹೊಣೆಗಾರಿಕೆಗಳನ್ನು ಅರಿತುಕೊಳ್ಳಬಲ್ಲರು ಮಾತ್ರವಲ್ಲ ದಿನನಿತ್ಯದ ಆಗುಹೋಗುಗಳನ್ನು ತಿಳಿಯುವ ಮೂಲಕ ಹೊಸ ದಿವಸವನ್ನು ಅವರು ಹೆಚ್ಚು ಸುಲಬವಾಗಿ ಎದುರಿಸಬಲ್ಲರು. ಇದಲ್ಲದೆ ಇವುಗಳಲ್ಲಿ ಬರುವ ಕತೆ, ಹರಟೆ, ಹಾಸ್ಯ ಮೊದಲಾದವುಗಳ ಮೂಲಕ ಜನರು ಮನೋರಂಜನೆಯನ್ನೂ ಪಡೆಯಬಲ್ಲರು ಮತ್ತು ಮನೋರಂಜನೆಯ ಮೂಲಕ ಜೀವನದಲ್ಲಿ ತಾವು ಸಾಗಬೇಕಿರುವ ದಾರಿಗಳನ್ನೂ ಸರಿಯಾಗಿ ತಿಳಿದುಕೊಳ್ಳಬಲ್ಲರು. ಹಾಗಾಗಿ ಬರಹವನ್ನು ತಿಳಿದಿರುವ ಮತ್ತು ಅದನ್ನು ಜೀವನದಲ್ಲಿ ಬಳಸಿಕೊಳ್ಳಲು ಕಲಿತಿರುವ ಜನರು ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳನ್ನು ಓದುವುದರ ಮೂಲಕ ತಮ್ಮ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಲ್ಲರು. ಈ ಎರಡು ಕಾರಣಗಳಿಗಾಗಿ, ದಿನಪತ್ರಿಕೆ ಮತ್ತು ವಾರಪತ್ರಿಕೆಗಳು ಹೆಚ್ಚು ಹೆಚ್ಚು ಜನರನ್ನು ಮಾತ್ರವಲ್ಲ, ಎಲ್ಲಾ ವರ್ಗಗಳಿಗೆ ಸೇರಿದ ಜನರನ್ನೂ ತಲಪುವಂತಾಗುವುದು ಅತ್ಯವಶ್ಯ. ಹೀಗಾಗುವುದು ಇವನ್ನು ಪ್ರಕಟಿಸುತ್ತಿರುವವರಿಗೂ ಲಾಬದಾಯಕವಾದ ಸಂಗತಿಯೇ.

ಯಾಕೆಂದರೆ ಹೆಚ್ಚು ಹೆಚ್ಚು ಜನರನ್ನು ತಲಪಿದಶ್ಟೂ ಅವರು ಗಳಿಸುವ ಲಾಬ ಹೆಚ್ಚಬಲ್ಲುದು. ಆದರೆ ಈ ಉದ್ದೇಶವನ್ನು ಸಾದಿಸುವಲ್ಲಿ ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳು ಬಳಸುವ ಬರಹದ ಸ್ವರೂಪವೂ ಒಂದು ಮುಕ್ಯ ಅಂಶ ಎಂಬುದನ್ನು ಅವನ್ನು ನಡೆಸುವವರು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಕನ್ನಡದ ಈ ಪತ್ರಿಕೆಗಳಲ್ಲಿ ಬಳಕೆಯಾಗುವ ಬರಹಗಳನ್ನು ಪರಿಶೀಲಿಸಿದಾಗ ಈ ವಿಶಯ ಸ್ಪಶ್ಟವಾಗುತ್ತದೆ. ಸುಲಬವಾಗಿ ಸಿಗುವ ಕನ್ನಡ ಪದಗಳಿದ್ದರೂ ಅವುಗಳ ಬದಲು ತೊಡಕು ತೊಡಕಾದ ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿ ಇವುಗಳಲ್ಲೆಲ್ಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಾಣಿಸುತ್ತದೆ. ಇದರಿಂದಾಗಿ ಇವುಗಳಲ್ಲಿ ಬರುವ ಕೆಲವು ಬರಹಗಳಂತೂ ಮೇಲ್ವರ್ಗದ ಓದುಗರಿಗೂ ಅರ್ತವಾಗದಂತಹ ಸ್ವರೂಪದಲ್ಲಿರುತ್ತವೆ. ಈ ಪತ್ರಿಕೆಗಳಲ್ಲಿ ಬರೆಯುವವರು ತಮ್ಮ ಬರಹಗಳು ಎಲ್ಲಾ ವರ್ಗದ ಜನರಿಗೂ ತಿಳಿಯುವ ಹಾಗೆ ಮಾಡಲು ಪ್ರಯತ್ನಿಸುವ ಬದಲು ಅವು ಹೆಚ್ಚು `ಮೇಲ್ಮಟ್ಟ’ದವಾಗಿ ಕಾಣಿಸುವ ಹಾಗೆ ಮಾಡಲು ಪ್ರಯತ್ನಿಸುತ್ತಾರೆ ಮತ್ತು ಅವುಗಳ ಮೂಲಕ ತಮ್ಮ ಪಾಂಡಿತ್ಯವನ್ನು ಮೆರೆಯಿಸಲು ಪ್ರಯತ್ನಿಸುತ್ತಾರೆ. ಸುಲಬವಾದ ಮತ್ತು ಎಲ್ಲರಿಗೂ ತಿಳಿಯುವ ಕನ್ನಡ ಪದಗಳು ಇರುವಲ್ಲೂ ತೊಡಕುತೊಡಕಾದ ಸಂಸ್ಕ್ರುತದ ಪದಗಳನ್ನು ಬಳಸುವುದು ಮತ್ತು ಅವುಗಳಲ್ಲಿ ಎರಡೆರಡು ಅರ್ತಗಳು ಕಾಣಿಸಿಕೊಳ್ಳುವ ಹಾಗೆ ಮಾಡುವುದು ಇವೆಲ್ಲ ತಮ್ಮ ಪಾಂಡಿತ್ಯವನ್ನು ಮೆರೆಯಿಸುವ ಪ್ರಯತ್ನಗಳಲ್ಲದೆ ತಮ್ಮ ಬರಹ ಎಲ್ಲರಿಗೂ ತಿಳಿಯುವ ಹಾಗೆ ಮಾಡುವ ಪ್ರಯತ್ನಗಳಲ್ಲ. ದಿನಪತ್ರಿಕೆಗಳ ತಲೆಬರಹಗಳಲ್ಲೇನೇ ಕಾಣಿಸಿಕೊಳ್ಳುವ ಇಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಪರಿಶೀಲಿಸಬಹುದು. ಇವುಗಳಿಗೆ ಸಮನಾದ ಕನ್ನಡ ಪದಗಳನ್ನು ಕಂಸದೊಳಗೆ ಕೊಡಲಾಗಿದೆ.

ಆಹ್ವಾನ (ಕರೆ) ಅಧ್ಯಯನ (ಕಲಿಕೆ) ಅಂತ್ಯ (ಕೊನೆ) ಅನುಪಸ್ಥಿತಿ (ಇಲ್ಲದಿರುವಿಕೆ) ಅಭಾವ (ಕೊರತೆ) ಮೃತ (ಸತ್ತ, ಮಡಿದ) ಹತ್ಯೆ (ಕೊಲೆ) ಅಪಜಯ (ಸೋಲು) ಆಗ್ರಹ (ಒತ್ತಾಯ) ಶೋಧ (ಹುಡುಕಾಟ) ಲಭ್ಯ (ಸಿಗುತ್ತದೆ) ಶೀಘ್ರ (ಕೂಡಲೇ) ಅನುಮತಿ (ಒಪ್ಪಿಗೆ) ವೃದ್ಧಿ (ಹೆಚ್ಚಳ) ಬಂಧನ (ಸೆರೆ) ಅಪಹರಣ (ಕಳವು) ಪ್ರಥಮ (ಮೊದಲಿನ) ಚಾಲನೆ (ತೊಡಗಿಕೆ) ಮಾರಕ (ಕೊಲ್ಲುವ) ಅಸ್ತು (ಒಪ್ಪಿಗೆ) ಮಧ್ಯಂತರ (ನಡುವಿನ) ಪ್ರದಾನ (ಕೊಡುಗೆ) ಭೀತಿ (ಹೆದರಿಕೆ) ಪುಷ್ಪ (ಹೂವು) ಪುನರಾಯ್ಕೆ (ಮರುಆಯ್ಕೆ) ಸೂಕ್ತ (ಸರಿ) ಆಬಾಧಿತ (ಬದಲಾಗದ) ದೃಷ್ಟಿ (ನೋಟ) ಬೃಹತ್ (ದೊಡ್ಡ) ತಕ್ಷಣ (ಕೂಡಲೇ) ಅನುಮೋದನೆ (ಒಪ್ಪಿಗೆ) ಕ್ರೀಡೆ (ಆಟ) ಪ್ರಶಂಸೆ (ಹೊಗಳಿಕೆ) ಶ್ರೇಷ್ಠ (ಒಳ್ಳೆ) ಲಿಖಿತ (ಬರೆದ) ಸಂಭವಿಸಿದ (ನಡೆದ) ಅಪರಿಚಿತ (ಗುರುತಿಲ್ಲದ) ವಂಚಕ (ಮೋಸಗಾರ) ಮೇಲೆ ಸೂಚಿಸಿದ ಹಾಗೆ, ಜನಸಾಮಾನ್ಯರ ಬಾಳ್ವೆಯನ್ನು ಚಿತ್ರಿಸುವ ಕತೆ-ಕಾದಂಬರಿಗಳಲ್ಲಿ ಸಂಸ್ಕ್ರುತ (ತತ್ಸಮ) ಪದಗಳು ಶೇಕಡಾ ಹತ್ತಕ್ಕಿಂತ ಕಡಿಮೆ ಕಾಣಿಸುವುದಾದರೆ, ದಿನಪತ್ರಿಕೆಗಳಲ್ಲಿ ಅವುಗಳ ಪ್ರಮಾಣ ಶೇಕಡಾ 30ಕ್ಕಿಂತಲೂ ಹೆಚ್ಚಿದೆ! ಇವುಗಳಲ್ಲಿ ಪ್ರಕಟವಾಗುವ ಕೆಲವು ಲೇಕನಗಳಲ್ಲಂತೂ ಇದು ಶೇಕಡಾ 80ರಶ್ಟಿರುವುದನ್ನು ಕಾಣಬಹುದು! ಉದಾಹರಣೆಗಾಗಿ 1.8.2005ರ ಪ್ರಜಾವಾಣಿಯಲ್ಲಿ ಕಲಿಕೆಯ ಕುರಿತಾಗಿ ಅಚ್ಚಾಗಿರುವ ಅರವಿಂದ ಚೊಕ್ಕಾಡಿ ಅವರ ಲೇಕನದ ಒಂದು ವಾಕ್ಯ ಹೀಗಿದೆ: ಭಾಷೆಯು ಸಂಸ್ಕೃತಿಯ ಪ್ರಧಾನ ಚಾಲಕ ಶಕ್ತಿಯಾಗಿದ್ದು ಕನ್ನಡ ಮಾಧ್ಯಮದ ಅವಜ್ಞೆಯು ಭಾವೀ

ಜನಾಂಗವನ್ನು ಕನ್ನಡ ಸಂಸ್ಕೃತಿಯಿಂದ ವಿಮುಖರನ್ನಾಗಿ ಮಾಡಿ ಸಾಂಸ್ಕ್ರುತಿಕ ಶೈಥಿಲ್ಯಕ್ಕೆ ಕಾರಣವಾಗುತ್ತದೆ. ಈ ವಾಕ್ಯದಲ್ಲಿ ಆಗು, ಮಾಡು ಮತ್ತು ಕನ್ನಡ ಎಂಬ ಮೂರು ಪದಗಳನ್ನು ಬಿಟ್ಟರೆ ಬೇರೆಲ್ಲವೂ ಸಂಸ್ಕ್ರುತ (ತತ್ಸಮ) ಪದಗಳೇ. ಇಂತಹ ಲೇಕನಗಳನ್ನು ನೋಡಿದಾಗ ಎಲ್ಲೋ ಸಂಸ್ಕ್ರುತದಲ್ಲಿ ಬರೆಯಲು ಹೊರಟು ಮರೆತು ಕನ್ನಡದ ಪ್ರತ್ಯಯಗಳನ್ನು ಹತ್ತಿಸಿದ ಹಾಗೆ ಕಾಣುತ್ತದೆ ಎಂಬ ಬಿಎಂಶ್ರೀಯವರ ಮಾತು (ಶ್ರೀಕಂಟಯ್ಯ 1983) ನೆನಪಿಗೆ ಬರುತ್ತದೆ. ಈ ರೀತಿ ಸಂಸ್ಕ್ರುತ ಪದಗಳನ್ನು ಅವಶ್ಯವಿಲ್ಲದಲ್ಲೂ ಬಳಸುವುದರಿಂದಾಗಿ ಕನ್ನಡದ ದಿನಪತ್ರಿಕೆಗಳನ್ನು ಓದಿ ಅರ್ತಮಾಡಿಕೊಳ್ಳಲು ಸಾಮಾನ್ಯ ಕನ್ನಡಿಗರಿಗಂತೂ ಸಾದ್ಯವಾಗಲಾರದೆಂದೇ ಹೇಳಬಹುದು. ಕನ್ನಡದಲ್ಲಿ ವಿದ್ವಾಂಸರೆನ್ನಿಸಿ ಕೊಂಡವರಿಗೂ ಈ ಪತ್ರಿಕೆಗಳಲ್ಲಿ ಬರುವ ಕೆಲವು ಬರಹಗಳು ತುಂಬಾ ತೊಡಕಿನವೆಂದು ಅನಿಸದಿರದು. ಇದಲ್ಲದೆ ಈ ಚಾಳಿ ಅದರಲ್ಲಿ ತೊಡಗಿರುವ ಬರಹಗಾರರನ್ನೂ ಆಗಾಗ ತೊಂದರೆಯಲ್ಲಿ ಸಿಲುಕಿಸುವುದನ್ನು ಕಾಣಬಹುದು. ಉದಾಹರಣೆಗಾಗಿ ಪ್ರಜಾವಾಣಿಯ 12.7.05ರ ಸಂಚಿಕೆಯ ಪುಟ 8ರಲ್ಲಿ ಯಾರನ್ನೋ ಕಚ್ಚಿದ ಹಾವು ಸತ್ತುಹೋಯಿತು’ ಎಂಬುದನ್ನು ತಿಳಿಸುವ ಸುದ್ದಿಗೆ ಕಚ್ಚಿದ ಹಾವೇ ಇಹಲೋಕಕ್ಕೆ’ ಎಂಬುದಾಗಿ ತಲೆಬರಹವನ್ನು ಕೊಡಲಾಗಿದೆ! ಸುಲಬವಾದ ಕನ್ನಡ ಪದ ಇರುವಾಗಲೂ ಈ ರೀತಿ ತಮಗೆ ತಿಳಿಯದಿರುವ ಸಂಸ್ಕ್ರುತ ಪದವನ್ನು ಬಳಸಹೋಗಿ ಅಪಹಾಸ್ಯಕ್ಕೆಡೆಯಾಗುವ ಕೆಲಸ ಈ ಪತ್ರಕರ್ತರಿಗೆ ಯಾಕೆ ಬೇಕು? ಕನ್ನಡದ ವ್ರುತ್ತಪತ್ರಿಕೆಗಳು ಮತ್ತು ಆಕಾಶವಾಣಿಯ ವಾರ್ತಾವಿಬಾಗ ಮುಕ್ಯವಾಗಿ ವಿದ್ವಾಂಸರತ್ತ ಮುಕಮಾಡಿ ನಿಂತಿವೆಯೆಂದೂ, ತಮ್ಮ ಬಾಶೆಗೆ ವಯ್ವಿದ್ಯಪೂರ್ಣ ಉಪಬಾಶೆಗಳ ಹಿನ್ನೆಲೆಯಿದೆಯೆಂಬುದನ್ನು ಅವು ಸ್ವಲ್ಪ ಮಟ್ಟಿಗೆ ಮರೆತಿವೆಯೆಂದೂ ಹೇಳದೆ ಗತ್ಯಂತರವಿಲ್ಲ ಎಂಬ ಚಿದಾನಂದ ಮೂರ್ತಿಯವರ ಹೇಳಿಕೆ

ಮೇಲಿನ ಚಾಳಿಯನ್ನು ಚನ್ನಾಗಿ ವಿವರಿಸುತ್ತದೆ (ಚಿದಾನಂದ ಮೂರ್ತಿ 1981:146). ಇದೇ ಸಂದರ್ಬದಲ್ಲಿ ಫಿಲಿಪಯ್ನ್್ಸನ `ತಲಿಬ’ ಎಂಬ ಹೆಸರಿನ ವ್ರುತ್ತಪತ್ರಿಕೆಯು ಸಾಮಾನ್ಯರ ಬಾಶೆಯನ್ನು ಬಳಸುವುದರ ಮೂಲಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಂಡಿರುವ ನಿದರ್ಶನವನ್ನು ಚಿದಾನಂದ ಮೂರ್ತಿಯವರು ಕೊಟ್ಟಿದ್ದಾರೆ. ಕನ್ನಡದಲ್ಲೂ ಲಂಕೇಶ್ ಪತ್ರಿಕೆ ಪಡೆದಿರುವ ಜನಪ್ರಿಯತೆಗೆ ಅದು ಇಂತಹದೇ ವಿದಾನವನ್ನು ಅನುಸರಿಸಿರುವುದು ಒಂದು ಕಾರಣವಿರಬಹುದು ಎಂಬುದಾಗಿಯೂ ಅವರು ಸೂಚಿಸಿದ್ದಾರೆ. 6.4 ಹೊಸಪದಗಳ ಮತ್ತು ಹೊಸರಚನೆಗಳ ಬಳಕೆ ಬೇರೆ ನುಡಿಗಳಲ್ಲಿ ಬಂದಿರುವ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಬರಹಗಾರರ ಒಂದು ಮುಕ್ಯ ಸಮಸ್ಯೆಯೇನೆಂದರೆ, ಅಂತಹ ಸುದ್ದಿಗಳಲ್ಲಿ ಬರುವ ಬೇರೆ ನುಡಿಗಳ ಪದಗಳಿಗೆ ಬದಲಾಗಿ ಬಳಸಲು ಅವರು ಕನ್ನಡದಲ್ಲಿ ಪದಗಳನ್ನು ಕಂಡುಹಿಡಿಯಬೇಕಾಗುತ್ತದೆ ಇಲ್ಲವೇ ಹೊಸದಾಗಿ ತಯಾರಿಸಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆ ಬರುವಲ್ಲೆಲ್ಲ ಹೆಚ್ಚಿನ ಬರಹಗಾರರೂ ಒಂದು ವಿಚಿತ್ರವಾದ ಚಾಳಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂಗ್ಲಿಶ್ ಮೊದಲಾದ ನುಡಿಗಳಲ್ಲಿರುವ ಪದಗಳಿಗೆ ಕನ್ನಡದಲ್ಲಿ ಹೊಸದಾಗಿ ಸಮಾನ ಪದಗಳನ್ನು ತಯಾರಿಸಬೇಕಾದಾಗ ಇವರು ಕನ್ನಡದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಬದಲು ಸಂಸ್ಕ್ರುತದ ಮೊರೆಹೊಗುತ್ತಾರೆ. ಇದು ವಿಚಿತ್ರ ಯಾಕೆಂದರೆ, ಕನ್ನಡದಲ್ಲಿ ಹೊಸ ಪದಗಳನ್ನು ತಯಾರಿಸುವ ಮೂಲಕ ನಾವು ನಿಜಕ್ಕೂ ಯಾವ ಉದ್ದೇಶವನ್ನು ಸಾದಿಸಬೇಕಾಗಿದೆಯೋ ಅದನ್ನು ಈ ವಿದಾನದ ಮೂಲಕ ಸಾದಿಸಲು ಸ್ವಲ್ಪಮಟ್ಟಿಗೂ ಸಾದ್ಯವಾಗುವುದಿಲ್ಲ! ಬೇರೆ ನುಡಿಗಳಲ್ಲಿರುವ ಪದಗಳಿಗೆ ಬದಲಾಗಿ ಕನ್ನಡದಲ್ಲಿ ನಮ್ಮವೇ ಆದ ಪದಗಳನ್ನು ನಾವು ಯಾಕೆ ಬಳಸಬೇಕಾಗಿದೆಯೆಂದರೆ,

ಬೇರೆ ನುಡಿಗಳ ಪದಗಳು ನಮ್ಮ ನುಡಿಯ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಅವನ್ನು ಓದಲು ಮತ್ತು ನೆನಪಿನಲ್ಲಿರಿಸಿಕೊಳ್ಳಲು ನಮಗೆ ಕಶ್ಟವಾಗುತ್ತದೆ. ಅವುಗಳ ಪದಸ್ವರೂಪ ಕನ್ನಡದ ಪದಸ್ವರೂಪಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಮುಕ್ಯ ಕಾರಣ. ಸಂಸ್ಕ್ರುತ ಪದಗಳ ಸ್ವರೂಪವೂ ಕನ್ನಡ ಪದಗಳ ಸ್ವರೂಪಕ್ಕಿಂತ ತೀರ ಬೇರಾಗಿದೆ (5.2.1 ನೋಡಿ). ಹಾಗಾಗಿ ಆ ನುಡಿಯ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ಹೊಸದಾಗಿ (`ತ್ರಿಶಂಕು’) ಪದಗಳನ್ನು ರಚಿಸಿದಲ್ಲಿ ಅಂತಹ ಪದಗಳೂ ಇಂಗ್ಲಿಶ್ ಮೊದಲಾದ ಬೇರೆ ನುಡಿಗಳ ಪದಗಳ ಹಾಗೆಯೇ ಕನ್ನಡ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಕೆಲವೊಮ್ಮೆ ಅವು ಇಂಗ್ಲಿಶ್ ಪದಗಳಶ್ಟೂ ಹೊಂದಿಕೊಳ್ಳುವುದಿಲ್ಲ. ಇಂಗ್ಲಿಶ್ ಹೊರಗಿನಿಂದ ಬಂದ ಪರಕೀಯ ನುಡಿ ಮತ್ತು ಸಂಸ್ಕ್ರುತ ನಮ್ಮದೇ ಆದ ನುಡಿ ಎಂಬ ಕುರುಡು ನಂಬಿಕೆಯೊಂದೇ ಇಲ್ಲಿ ಇಂಗ್ಲಿಶ್ ಪದಗಳಿಗೆ ಬದಲು ಸಂಸ್ಕ್ರುತ ಪದಗಳನ್ನು ಬಳಸಿ ಅವನ್ನು ತಮ್ಮದಾಗಿಸಿಕೊಂಡಿದ್ದೇವೆಂದು ಹೇಳಿಕೊಳ್ಳಲು ಆದಾರವಾಗಬಲ್ಲುದು. ಆದರೆ ಇದು ನಿಜಕ್ಕೂ ತಪ್ಪು ಅನಿಸಿಕೆ. ಯಾಕೆಂದರೆ, ಇಂಗ್ಲಿಶ್ನ ಹಾಗೆ ಸಂಸ್ಕ್ರುತವೂ ಕನ್ನಡದ ಮಟ್ಟಿಗೆ ಹೊರಗಿನಿಂದ ಬಂದ ನುಡಿಯೇ. ಇಂಗ್ಲಿಶ್ ಇತ್ತೀಚೆಗೆ ಹೊರಗಿನಿಂದ ಬಂದುದು ಮತ್ತು ಸಂಸ್ಕ್ರುತ ಕೆಲವು ಸಾವಿರ ವರ್ಶಗಳಶ್ಟು ಹಿಂದೆ ಹೊರಗಿನಿಂದ ಬಂದುದು. ನಿಜಕ್ಕೂ ಯಾವುದು ಹೊರಗಿನ ನುಡಿ ಮತ್ತು ಯಾವುದು ಒಳಗಿನ ನುಡಿ ಎಂಬುದು ಇಲ್ಲಿ ಮುಕ್ಯವಲ್ಲ. ನಾವು ಎರವಲಾಗಿ ಪಡೆಯುವ ಪದಗಳು ನಮ್ಮ ನುಡಿಯ ಪದಸ್ವರೂಪಕ್ಕೆ ಹೊಂದಿಕೆಯಾಗುತ್ತವೆಯೋ ಇಲ್ಲವೋ ಎಂಬುದೇ ಮುಕ್ಯವಾದುದು. ಕನ್ನಡದ ಬರಹಗಾರರಿಗೆ ತೀರ ಹತ್ತಿರದ ನುಡಿಯೆಂದೆನಿಸುವ ಸಂಸ್ಕ್ರುತದ ಪದಗಳೂ ನಮ್ಮ ನುಡಿಯ ಪದಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲವಾದರೆ ಅವು ಅದರ ಸೊಗಡನ್ನು ಹೊರಗಿನ ನುಡಿಯ ಪದಗಳ ಹಾಗೆಯೇ ಹಾಳುಗೆಡವ ಬಲ್ಲುವು.

ಉದಾಹರಣೆಗಾಗಿ, ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದ ಬರಹಗಾರರು ಬಳಸಹೊರಟಿರುವ ಕೆಲವು ಪದಗಳನ್ನು ಗಮನಿಸಬಹುದು. ಇವನ್ನು ಉಂಟುಮಾಡುವಲ್ಲಿ ಸಂಸ್ಕ್ರುತವನ್ನು ಅವಲಂಬಿಸಲಾಗಿದ್ದು, ನಿಜಕ್ಕೂ ಇವು ಕನ್ನಡದ ಮಟ್ಟಿಗೆ ಮೂಲ ಇಂಗ್ಲಿಶ್ ಪದಗಳಿಗಿಂತಲೂ ಹೆಚ್ಚು ಪರಕೀಯವಾಗಿ ಕಾಣಿಸುತ್ತವೆ! ಪೆÇೀಲೀಸ್ ಆರಕ್ಷಕ ಇಂಜಿನಿಯರ್ ಅಭಿಯಂತ ಅಬ್ಲೇಶನ್ ಅಪಕ್ಷರಣ ಚೆಯ್್ನ ಶೃಂಖಲೆ ಕೋಮಾ ಪ್ರಜ್ಞಾಶೂನ್ಯತೆ ಕೊಲಿಶನ್ ಸಂಘಟ್ಟನೆ ಟಂಗ್ ಜಿಹ್ವೆ ಸಿಲೆಬ್ಲ್ ಅಕ್ಷರಾಘಾತ ಡಯ್ರೆಕ್್ಟ ಪ್ರತ್ಯಕ್ಷ ಕಾಸಲ್ ಪ್ರೇರಣಾರ್ಥಕ ಇವತ್ತು ಕನ್ನಡ ಬರಹಗಾರರಿಗೆ ಹೊಸಪದಗಳನ್ನು ಉಂಟುಮಾಡುವಲ್ಲಿ ಎಶ್ಟರ ಮಟ್ಟಿಗೆ ಸಂಸ್ಕ್ರುತದ ನೆರವನ್ನು ಪಡೆಯಬೇಕಾಗುತ್ತಿದೆಯೆಂದರೆ ಅದಿಲ್ಲದೆ ಅವರು ಒಂದು ಹೆಜ್ಜೆಯನ್ನೂ ಮುಂದಿಡಲಾರರು. ಕನ್ನಡದವೇ ಆದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ಹೊಸಪದಗಳನ್ನು ಉಂಟುಮಾಡುವ ಪ್ರಯತ್ನ ಕನ್ನಡ ಬರಹಗಾರರಲ್ಲಿ ಬಹಳ ಅಪರೂಪವಾಗಿ ಮಾತ್ರವೇ ನಡೆಯುತ್ತದೆ. ಕನ್ನಡ ಬರಹಗಾರರು ಹೊಸ ಪದಗಳನ್ನು ತಯಾರಿಸುವಲ್ಲಿ ಸಂಸ್ಕ್ರುತ ಪ್ರತ್ಯಯವನ್ನು ಸಂಸ್ಕ್ರುತ ಪದಗಳಿಗೆ ಮಾತ್ರವಲ್ಲದೆ ಕನ್ನಡದವೇ ಆದ ಪದಗಳಿಗೂ ಸೇರಿಸುತ್ತಾರೆ. ಎಲ್ಲರಿಗೂ ಅರ್ತವಾಗುವ ಅಳವಡಿಸಿದ ಎಂಬ ಕನ್ನಡ ಪದರೂಪಕ್ಕೆ ಬದಲಾಗಿ

ಕೆಲವರು ಅಳವಡಿತ ಎಂಬ ಸಂಸ್ಕ್ರುತದ ಇತ ಪ್ರತ್ಯಯವನ್ನು ಸೇರಿಸಿರುವ ಹೊಸರಚನೆಯನ್ನು ಬಳಸುತ್ತಾರೆ. ನಮ್ಮದೇ ಆದ ಕನ್ನಡ ಪದವನ್ನು ಕ್ರಿಯಾಪದವಾಗಿ ಬಳಸಬೇಕಾದಾಗ ಅದಕ್ಕೆ ನೇರವಾಗಿ ಇಸು ಪ್ರತ್ಯಯವನ್ನು ಸೇರಿಸಿ ಕನ್ನಡಿಸು ಎಂಬ ಅಂದವಾದ ರೂಪವನ್ನು ತಯಾರಿಸುವ ಬದಲು, ಅದಕ್ಕೆ ಸಂಸ್ಕ್ರುತದ ಕರ್ ಕ್ರಿಯಾರೂಪವನ್ನೂ ಸೇರಿಸಿ ಕನ್ನಡೀಕರಿಸು ಎಂಬಂತಹ ಅದಕ್ಕಿಂತ ಹೆಚ್ಚು ತೊಡಕಾಗಿರುವ ರೂಪವನ್ನು ತಯಾರಿಸಿಕೊಳ್ಳುತ್ತಾರೆ! ಕನ್ನಡ ಮತ್ತು ಸಂಸ್ಕ್ರುತ ಪದಗಳನ್ನು ಒಟ್ಟು ಸೇರಿಸಿ ಹೊಸರಚನೆಗಳನ್ನು ತಯಾರಿಸುವಲ್ಲೂ ಕನ್ನಡದವೇ ಆದ ಸೇರಿಕೆಯ ನಿಯಮಗಳನ್ನು ಬಳಸುವ ಬದಲು ಕೆಲವರು ಸಂಸ್ಕ್ರುತದ ಸೇರಿಕೆಯ ನಿಯಮಗಳನ್ನು ಬಳಸುತ್ತಾರೆ. ಆಟಾಭಿಮಾನಿ ಎಂಬ ಇಂತಹದೊಂದು ರೂಪದಲ್ಲಿ ಸಂಸ್ಕ್ರುತದ ಸವರ್ಣದೀರ್ಗವೆಂಬ ಸೇರಿಕೆಯ ನಿಯಮ ಬಳಕೆಯಾಗಿದೆ. ಕನ್ನಡದ್ದೇ ಆದ ಸೇರಿಕೆಯ ನಿಯಮವನ್ನು ಬಳಸಿದಲ್ಲಿ ಇದು ಆಟಭಿಮಾನಿ ಎಂದಾಗಬೇಕಿತ್ತು. ಆಟೋಪಕರಣ ಎಂಬ ಇನ್ನೊಂದು ಪದದಲ್ಲಿ ಸಂಸ್ಕ್ರುತದ ಗುಣಸಂದಿಯನ್ನು ಬಳಸಲಾಗಿದೆ. ಇಲ್ಲೂ ಕನ್ನಡದ ಸೇರಿಕೆಯ ನಿಯಮವನ್ನು ಬಳಸಿದಲ್ಲಿ ಆಟುಪಕರಣ ಎಂಬ ಪದ ದೊರೆತೀತು. ಊಟೋಪಚಾರ ಎಂಬುದರಲ್ಲೂ ಹೀಗೆಯೇ (ಕೆ. ವಿ. ನಾರಾಯಣ, ಬಿ. ಸುಜ್ನಾನಮೂರ್ತಿ ಮತ್ತು ಅಶೋಕ ಕುಮಾರ ರಂಜೇರ 1997 ನೋಡಿ). ಕನ್ನಡ ಬರಹಗಾರರ ಇಂತಹ ಚಾಳಿಗಳಿಂದಾಗಿ ಕನ್ನಡ ಬರಹ ಇವತ್ತು ತನ್ನ ವ್ಯಾಕರಣದಲ್ಲೂ ಕನ್ನಡಿಗರ ಮಾತಿನಿಂದ ದೂರ ಸರಿದು ಇನ್ನಶ್ಟು ಕ್ರುತಕವಾಗುತ್ತಿದೆ. 6.5 ಜನಪ್ರಿಯ ವಿಜ್ನಾನಬರಹ ವಿಜ್ನಾನವನ್ನು ಜನಪ್ರಿಯಗೊಳಿಸಿ ಆ ಮೂಲಕ ಜನರಲ್ಲಿ ವಿಜ್ನಾನದ ಮನೋಬಾವವನ್ನು ಬೆಳೆಸುವುದಕ್ಕಾಗಿ `ಕರ್ನಾಟಕ ರಾಜ್ಯ ವಿಜ್ನಾನ ಪರಿಶತ್ತು’ ಎಂಬ ಒಂದು ಸಂಸ್ತೆಯನ್ನು ಹುಟ್ಟುಹಾಕಲಾಗಿದೆ. ಈ

ಸಂಸ್ತೆ ವಿಜ್ನಾನವನ್ನು ಜನಪ್ರಿಯಗೊಳಿಸುವುದು ಹೇಗೆ ಎಂಬುದನ್ನು ಬರಹಗಾರರಿಗೆ ತಿಳಿಸಿಕೊಡುವುದಕ್ಕಾಗಿ ಹಲವಾರು ಕಾರ್ಯಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದೆ. ಬಾಲವಿಜ್ನಾನವೆಂಬ ಪತ್ರಿಕೆಯ ಮೂಲಕ ಮತ್ತು ಬೇರೆಯೂ ಹಲವು ರೀತಿಯ ಪ್ರಕಟಣೆಗಳ ಮೂಲಕ ಅದು ಈ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಆದರೆ ಈ ಸಂಸ್ತೆಯ ಪ್ರಕಟಣೆಗಳಲ್ಲಿ ಸಂಸ್ಕ್ರುತ ಪದಗಳ ಬಳಕೆ ತುಂಬಾ ಹೆಚ್ಚಿದ್ದು, ಅವನ್ನು ಓದಿದಾಗ ನಿಜಕ್ಕೂ ಅವು ಮೇಲಿನ ಗುರಿಯನ್ನು ತಲಪುವಲ್ಲಿ ಸಹಾಯಕವಾಗಬಲ್ಲುವೇ ಎಂಬ ವಿಶಯದಲ್ಲಿ ಸಂಶಯವೇಳುತ್ತದೆ. ಉದಾಹರಣೆಗಾಗಿ ಜೆ. ಆರ್. ಲಕ್ಶ್ಮಣರಾವ್ ಅವರು ಸಂಪಾದಿಸಿದ ವಿಜ್ನಾನ ಬರವಣಿಗೆ : ಕೆಲವು ಸಮಸ್ಯೆಗಳು (ಲಕ್ಶ್ಮಣರಾವ್ 1990) ಎಂಬ ಪುಸ್ತಕದಲ್ಲಿ ವಿಜ್ನಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಸೂಚಿಸಿರುವ ಕೆಲವು ವಿದಾನಗಳನ್ನು ಪರಿಶೀಲಿಸಬಹುದು. ಈ ಪುಸ್ತಕದಲ್ಲಿ ಇಂತಹ ಬರಹಗಳ ವಸ್ತು, ಶಯ್ಲಿ ಮತ್ತು ವಿನ್ಯಾಸಗಳು ಹೇಗಿರಬೇಕೆಂಬುದನ್ನು ವಿವರಿಸುವ ಜಿ. ಟಿ. ನಾರಾಯಣರಾವ್ ಅವರ ಒಂದು ಬರಹವಿದೆ. ಈ ಬರಹದಲ್ಲಿ ಇಂಗ್ಲಿಶ್ನ ಕೆಲವು ಆಯ್ದ ಪರಿಚ್ಚೇದಗಳನ್ನು ಅನುವಾದಿಸಿ ತೋರಿಸಲಾಗಿದೆ. ಇವುಗಳಲ್ಲಿ ಬರುವ ಸಂಸ್ಕ್ರುತ (ತತ್ಸಮ) ಪದಗಳನ್ನು ಗಮನಿಸಿದೆವಾದರೆ ಕೆಲವೊಮ್ಮೆ ನಿಜಕ್ಕೂ ಇದು ಕನ್ನಡ ಬರಹವೇ ಇಲ್ಲವೇ ಸಂಸ್ಕ್ರುತ ಬರಹವೇ ಎಂಬ ಸಂಶಯವುಂಟಾಗುತ್ತದೆ. ಈ ಬರಹದಲ್ಲಿ ಬರುವ ಅನುವಾದಗಳಲ್ಲಿ ಒಂದು ವಾಕ್ಯ »ÃVzÉ: ಅಂತರ-ಬ್ರಹ್ಮಾಂಡೀಯ ಆಕಾಶದ ಚಿರಂತನ ರಾತ್ರಿ ದಟ್ಟೈಸಿರುವ ವಿಶಾಲ ಶೀತಲ ಸವ್ರವ್ಯಾಪೀ ಶೂನ್ಯದಲ್ಲಿ’ ವಿಶ್ವದ ಒಂದೇ ಒಂದು ಪ್ರರೂಪೀ ನೆಲೆಯಿದೆ. ನಾರಾಯಣ ರಾವ್ ಅವರ ಇಂತಹದೇ ಇನ್ನೊಂದು ಬರಹ ತುಸು ಕಟಿಣವಾಗಿದೆಯೆಂಬುದಾಗಿ ಕನ್ನಡ ವಾರಪತ್ರಿಕೆಯೊಂದರ ಸಂಪಾದಕರು ಆಕ್ಶೇಪಿಸಿದಾಗ ಅವರು ಈ ಉತ್ತರ ಕೊಟ್ಟಿದ್ದರಂತೆ : ಕಲಗಚ್ಚು ಅತಿ

ಸರಳ. ಕುಂಕುಮ ಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ. ನಿಮಗೆ ಕಲಗಚ್ಚು ಪ್ರಿಯವಾದರೆ ಧಾರಾಳವಾಗಿ ಅದನ್ನು ಕುಡಿಯಿರಿ’. ಆದರೆ ವಿಜ್ನಾನವನ್ನು ಜನಪ್ರಿಯಗೊಳಿಸಬೇಕೆಂಬ ಗುರಿಯನ್ನು ಈ ರೀತಿ ಬೇಕಿದ್ದರೆ ಓದಿ, ಇಲ್ಲದಿದ್ದರೆ ಬಿಟ್ಟುಬಿಡಿ’ ಎಂಬ ಮನೋಬಾವದ ಮೂಲಕ ತಲಪಲು ಸಾದ್ಯವಾಗದೆಂದು ನನಗೆ ಅನಿಸುತ್ತದೆ. ಅದಕ್ಕಾಗಿ ನಾವು ಸಾಕಶ್ಟು ತೊಂದರೆ ತೆಗೆದುಕೊಳ್ಳುವ ಅವಶ್ಯಕತೆಯಿದೆ. ನಮ್ಮ ಬರಹ ಹೆಚ್ಚಿನವರಿಗೂ ಅರ್ತವಾಗುವ ಹಾಗೆ ಅದನ್ನು ಹಲವು ಬಾರಿ ತಿದ್ದಿ ತೀಡಬೇಕಾಗುತ್ತದೆ. ಇದಕ್ಕೆ ನಮ್ಮ ಸ್ವಂತಿಕೆ ಅಡ್ಡಬರುವುದಾದರೆ ಅದನ್ನು ಬಿಟ್ಟುಕೊಡಲೂ ನಾವು ತಯಾರಾಗಿರಬೇಕಾಗುತ್ತದೆ. ಇದಲ್ಲದೆ, ಕನ್ನಡ ಬರಹದಲ್ಲಿ ಅತಿಯಾಗಿ ಸಂಸ್ಕ್ರುತ ಪದಗಳನ್ನು ಬಳಸ ಹೋಗದೆ ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಲು ಪ್ರಯತ್ನಿಸುವುದರಿಂದ ಕನ್ನಡ ಬರಹ ಕಲಗಚ್ಚಾಗುವುದೆಂದೂ ನನಗೆ ತೋರುವುದಿಲ್ಲ. ನಿಜಕ್ಕೂ ಕೋತಿನ (1985:56) ಅವರು ಹೇಳುವ ಹಾಗೆ ಸಕ್ಕದದ (ಸಂಸ್ಕ್ರುತದ) ಅತಿಯಾದ ಸಂಬಂದ ಕನ್ನಡಕ್ಕೆ ಕಕ್ಕಸ(ಕರ್ಕಶ)ವಾಗುವುದೆಂಬ ಕವಿರಾಜಮಾರ್ಗದ ಆಶಯವೇ ಹೆಚ್ಚು ಸರಿಯಾದುದು. ಈ ಸಂದರ್ಬದಲ್ಲಿ ಬಿ. ಎಂ. ಶ್ರೀಕಂಟಯ್ಯನವರ ಒಂದು ಹೇಳಿಕೆಯನ್ನು ನಾವು ನೆನಪಿಸಿಕೊಳ್ಳುದು ಅತ್ಯವಶ್ಯ (ಶ್ರೀಕಂಟಯ್ಯ 1985:358). ಸ್ವತಂತ್ರರಾದ ಗ್ರಂಥಕರ್ತರಿಗೆ ಮೇಲ್ಪಂಕ್ತಿಯನ್ನು ಹಾಕುವ ಧೈಯ್ರ ಯಾರಿಗಿದೆ? ಅದರಲ್ಲೂ ಮಹಾಕವಿಗಳಿಗೆ ಬುದ್ಧಿ ಹೇಳುವವರು ಯಾರು? ಭಾಷೆ ಇದೆ. ನಿಮ್ಮಲ್ಲಿ ಶಕ್ತಿ ಇದೆ. ಬರೆಯಿರಿ. ಓದುವುದು ನಮ್ಮಂತ ಸಾಮಾನ್ಯ ಜನರ ಕಯ್ಯಲ್ಲೇ ಇದೆ. ಖಂಡಿತ ಹೇಳುತ್ತೇವೆ. ಕವಿತ್ವದ ಮೇಲೆ ಕವಿತ್ವ ನಮಗೆ ಅಜೀಣ್ರವಾಗಿದೆ. ಲಂಘನವೇ ಗುಣವೆಂದು ನಂಬಿದ್ದೇವೆ. ಪಾಂಡಿತ್ಯದ ಮೇಲೆ ಪಾಂಡಿತ್ಯವಾಗಿ ರೋಸಿಹೋಗಿದ್ದೇವೆ. ನಾವು ಬಡವರು, ನಿಮ್ಮ ಕಾಡುಕಗ್ಗಕ್ಕೆ ದುಡ್ಡು ಹಾಕುವುದಿಲ್ಲ. ನಾವು ಆಡುವ ಮಾತು, ನಾವು

ಮೆಚ್ಚುವ ವಿಷಯ, ನಾವು ಏಳಿಗೆಯಾಗುವ ದಾರಿ; ಇದಕ್ಕೆ ನೀವು ಬರುವವರೆಗೂ ನಮಗೂ ನಿಮಗೂ ನಂಟಿಲ್ಲ; ಎಚ್ಚರವಿರಲಿ’. ಜನಪ್ರಿಯ ಬರಹ ಎಂಬುದಕ್ಕೆ ಎರಡು ಅರ್ತಗಳಿವೆ. ವಿಜಯ ಕರ್ನಾಟಕದಲ್ಲಿ ಬರುತ್ತಿದ್ದ ಶತಾವದಾನಿ ಆರ್. ಗಣೇಶ್ ಅವರ ಬರಹಗಳನ್ನು ನನಗೆ ಪರಿಚಯವಿದ್ದವರೊಬ್ಬರು ಬಹಳವಾಗಿ ಮೆಚ್ಚಿಕೊಂಡಿದ್ದರು. ಆದರೆ ನಿಜಕ್ಕೂ ಆ ಬರಹಗಳಲ್ಲಿ ಏನು ಹೇಳಲಾಗಿದೆಯೆಂಬುದು ಅವರಿಗೆ ಸ್ವಲ್ಪವೂ ಅರ್ತವಾಗುತ್ತಿರಲಿಲ್ಲ. ಸಂಸ್ಕ್ರುತ ಮಂತ್ರಗಳು ಹೇಗೆ ಸ್ವಲ್ಪವೂ ಅರ್ತವಾಗದಿದ್ದರೂ ಜನರ ಮೆಚ್ಚುಗೆಯನ್ನು ಪಡೆಯುತ್ತವೆಯೋ ಅದೇ ರೀತಿಯಲ್ಲಿ ಈ ಬರಹಗಳೂ ಅವರ ಮೆಚ್ಚುಗೆಯನ್ನು ಪಡೆದಿದ್ದುವು. ಆದರೆ ಈ ವಿಶಿಶ್ಟವಾದ ಅರ್ತದಲ್ಲಿ ವಿಜ್ನಾನ ಬರಹಗಳು ಜನಪ್ರಿಯವಾಗಬೇಕಾಗಿಲ್ಲವಲ್ಲ? ಅವು ತಿಳಿಸುವ ವಿಶಯ ಜನರಿಗೆ ಸುಲಬವಾಗಿ ಗೊತ್ತಾಗುವ ಹಾಗಿರಬೇಕು ಮತ್ತು ಇದರಿಂದಾಗಿ ಅವರಲ್ಲಿ ವಿಜ್ನಾನದ ಮನೋಬಾವ ಬೆಳೆಯಬೇಕು ಎಂಬುದಲ್ಲವೇ ವಿಜ್ನಾನವನ್ನು ಜನಪ್ರಿಯಗೊಳಿಸುವ ಪ್ರಯತ್ನದ ಮೂಲ ಗುರಿ? ಈ ಗುರಿಯನ್ನು ತಲಪಬೇಕಿದ್ದಲ್ಲಿ ಬರಹದ ಒಡ್ಡವ (ಶಯ್ಲಿ) ಗಡುಸಾಗಿರಬಾರದು. ಸುಲಿದ ಬಾಳೆಯ ಹಣ್ಣಿನ ಹಾಗಿರಬೇಕು. ಕನ್ನಡ ರಾಜ್ಯ ವಿಜ್ನಾನ ಪರಿಶತ್ತು ಪ್ರಕಟಿಸಿರುವ ಇಂಗ್ಲಿಶ್-ಕನ್ನಡ ವಿಜ್ನಾನ ಶಬ್ದಕೋಶದಲ್ಲಿ (ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ 1990) ಹೇಗೆ ಅತಿಯಾಗಿ ಸಂಸ್ಕ್ರುತ ಪದಗಳನ್ನು, ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಲಾಗಿದೆ ಮತ್ತು ಇದರಿಂದಾಗಿ ಹೇಗೆ ಕನ್ನಡದ ಮಟ್ಟಿಗೆ ಹಲವಾರು ಸಮಸ್ಯೆಗಳು ಬಂದೊದಗಿವೆ ಎಂಬುದನ್ನು ನಾನು ಮುಂದೆ ಏಳು ಮತ್ತು ಎಂಟನೇ ಅದ್ಯಾಯಗಳಲ್ಲಿ ವಿವರಿಸಲಿದ್ದೇನೆ. ವಿಜ್ನಾನವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುವವರು ಒಂದು ಮುಕ್ಯ ವಿಶಯವನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಇಂಗ್ಲಿಶ್ನ ವಿಜ್ನಾನ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಾಗ ಅವುಗಳ ವಾಕ್ಯಗಳಲ್ಲಿ ಬರುವ ಪದಗಳನ್ನು ಒಂದೊಂದಾಗಿ ಕನ್ನಡಕ್ಕೆ ತರ್ಜುಮೆ

ಮಾಡಲು ಪ್ರಯತ್ನಿಸುವ ಮೂಲಕ ಜನಪ್ರಿಯ ಬರಹವನ್ನು ಸಿದ್ದಗೊಳಿಸಲು ಸಾದ್ಯವಾಗದು. ಆ ಬರಹಗಳಲ್ಲಿ ವಿವರಿಸಿರುವಂತಹ ವಿಶಯಗಳು ಎಂತಹವು ಎಂಬುದನ್ನು ಮೊದಲು ತಿಳಿದುಕೊಂಡು ಅನಂತರ ಆ ವಿಶಯಗಳನ್ನು ಕನ್ನಡದಲ್ಲಿ ಎಲ್ಲರಿಗೂ ಅರ್ತವಾಗುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಕಂಡುಕೊಳ್ಳಲು ಇವರು ಪ್ರಯತ್ನಿಸಬೇಕು. ನಿಜಕ್ಕೂ ಇಂತಹ ಪ್ರಯತ್ನವನ್ನು ಬಹಳ ಚನ್ನಾಗಿ ಮಾಡಿದವರೆಂದರೆ ಶಿವರಾಮ ಕಾರಂತರು. ಅವರ ಬಾಲಪ್ರಪಂಚದಲ್ಲಿ ಪದಗಳಿಗೆ ಮಹತ್ವ ಕೊಡದೆ ವಿಶಯಕ್ಕೆ ಮತ್ತು ವಿಶಯ ನಿರೂಪಣೆಗೆ ಮಹತ್ವ ಕೊಡಲಾಗಿದೆ. ಈ ಕಾರಣಕ್ಕಾಗಿ ಅವರ ಬರಹ ಹೆಚ್ಚು ಸುಲಬವಾಗಿ ಸಾಮಾನ್ಯ ಓದುಗರಿಗೂ ಅರ್ತವಾಗುತ್ತದೆ. ಶಿವರಾಮ ಕಾರಂತರ ಬಾಲಪ್ರಪಂಚದಲ್ಲಿ ಬಳಕೆಯಾಗಿರುವ ಸಂಸ್ಕ್ರುತ (ತತ್ಸಮ) ಪದಗಳ ಎಣಿಕೆ ನೂರಕ್ಕೆ ಹತ್ತರಿಂದ ಹನ್ನೆರಡರಶ್ಟು ಮಾತ್ರ ಇದೆ. ಆದರೆ ನಿರಂಜನ ಅವರು ಸಂಪಾದಿಸಿದ ಜ್ನಾನಗಂಗೋತ್ರಿ : ಕಿರಿಯರ ವಿಶ್ವಕೋಶದ ಕೆಲವು ಬರಹಗಳಲ್ಲಿ ಇದು ನೂರಕ್ಕೆ ನಲುವತ್ತಕ್ಕಿಂತಲೂ ಹೆಚ್ಚು ಇದೆ. ಈ ಎರಡು ಪುಸ್ತಕಗಳಲ್ಲಿ ಬರುವ ಬರಹಗಳನ್ನು ಓದಿ ನೋಡಿದಾಗ ಹೇಗೆ ಸಂಸ್ಕ್ರುತ ಪದಗಳ ಬಳಕೆ ಹೆಚ್ಚಾದ ಹಾಗೆಲ್ಲ ಕನ್ನಡ ಬರಹ ಓದುಗರಿಗೆ ತೊಡಕಿನದಾಗುತ್ತಾ ಹೋಗುತ್ತದೆ ಎಂಬ ವಿಶಯ ಸ್ಪಶ್ಟವಾಗುತ್ತದೆ. 6.6 ವಯಸ್ಕರ ಶಿಕ್ಶಣ ಚಿಕ್ಕಂದಿನಲ್ಲಿ ಬರಹವನ್ನು ಕಲಿಯದಿದ್ದ ವಯಸ್ಕರನ್ನು ಬರಹಕ್ಕೆ ಸೆಳೆಯುವ ಹಾಗೆ ಮಾಡುವುದು ವಯಸ್ಕರ ಶಿಕ್ಶಣದ ಮುಕ್ಯ ಗುರಿಯಾಗಿದೆ. ಇದಕ್ಕಾಗಿ ಅವರಿಗೆ ಪಟ್ಯಪುಸ್ತಕಗಳ ಮೂಲಕ ಅಕ್ಶರಜ್ನಾನ ಬರುವ ಹಾಗೆ ಮಾಡುವುದು ಮಾತ್ರವಲ್ಲದೆ, ಓದಿನಲ್ಲಿ ಅವರಿಗೆ ಆಸಕ್ತಿಯುಂಟಾಗುವ ಹಾಗೆ ಮಾಡಲು ಅವರ ಕುತೂಹಲವನ್ನು ಕೆರಳಿಸುವ ಸಾಹಿತ್ಯವನ್ನು ಒದಗಿಸುವುದೂ ಅವಶ್ಯ. ವಯಸ್ಕರಿಗಾಗಿ ರಚಿಸಿದ ಸಾಹಿತ್ಯ ಹೊಸದಾಗಿ ಬರಹವನ್ನು ಕಲಿತ ವಯಸ್ಕರ ಅಬಿರುಚಿಗೆ ಹೊಂದಿಕೆಯಾಗಿರಬೇಕು ಮಾತ್ರವಲ್ಲ, ಅದು

ಬಳಸುವ ಪದಗಳೂ ಅವರಿಗೆ ಸುಲಬವಾಗಿ ಅರ್ತವಾಗುವ ಹಾಗಿರಬೇಕು. ಯಾಕೆಂದರೆ, ಬರಹದಿಂದ ಎಂತಹ ಪ್ರಯೋಜನಗಳನ್ನೆಲ್ಲ ಪಡೆಯಲು ಸಾದ್ಯ ಎಂಬುದಿನ್ನೂ ಅವರಿಗೆ ಸ್ಪಶ್ಟವಾಗಿ ತಿಳಿದಿಲ್ಲ. ತೊಡಕು ತೊಡಕಾದ ಬರಹಗಳನ್ನು ಅವರೆದುರು ಇರಿಸಿದಲ್ಲಿ ಅವರು ಅವನ್ನು ಸ್ವಲ್ಪವೇ ಓದಿ ಬಿಟ್ಟುಬಿಡಬಹುದಾದ ಕಾರಣ, ಅಂತಹ ಬರಹಗಳಿರುವ ಸಾಹಿತ್ಯ ವಯಸ್ಕರಿಗೆ ಹೇಳಿದ ಸಾಹಿತ್ಯವಲ್ಲ. ವಯಸ್ಕರಿಗಾಗಿ ಸಾಹಿತ್ಯವನ್ನು ಒದಗಿಸುವುದಕ್ಕಾಗಿ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಶಣ ಸಮಿತಿ ಪುಸ್ತಕ ಪ್ರಪಂಚವೆಂಬ ಮಾಸಿಕ ಪತ್ರಿಕೆಯೊಂದನ್ನು ಸುಮಾರು ಅಯ್ವತ್ತು ವರ್ಶಗಳಿಂದಲೂ ನಡೆಸುತ್ತ ಬಂದಿದ್ದು ಈಗ ಅದು ನಿಂತುಹೋಗಿದೆ. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಬರಹಗಳನ್ನು ಗಮನಿಸಿದಾಗ, ಇಲ್ಲೂ ನಮಗೆ ಕಾಣಿಸುವುದು ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳ ಬಳಕೆಯೇ. ಸಂಸ್ಕ್ರುತ ಪದಗಳನ್ನು ಬಳಸಿ ಅಬ್ಯಾಸವಿಲ್ಲದ ವಯಸ್ಕ ಓದುಗರಿಗೆ ತಮ್ಮ ಬರಹಗಳು ಮೆಚ್ಚುಗೆಯಾಗಬೇಕೆಂಬುದಾಗಿ ಇವನ್ನು ರಚಿಸಿರುವ ಹೆಚ್ಚಿನ ಬರಹಗಾರರೂ ಪ್ರಯತ್ನಿಸಿದ ಹಾಗೆ ಕಾಣಿಸುವುದಿಲ್ಲ. ವಯಸ್ಕರಿಗೆ ಓದನ್ನು ಕಲಿಸುವ ಪಟ್ಯಪುಸ್ತಕಗಳು ಆದಶ್ಟು ಮಟ್ಟಿಗೆ ಅವರಿಗೆ ಪರಿಚಿತವಾಗಿರುವ ಪದಗಳನ್ನೇ ಬಳಸಬೇಕು. ಪರಿಚಿತವಲ್ಲದ ಪದಗಳನ್ನು ಬಳಸಿದಾಗಲೆಲ್ಲ ಅವರ ಮೇಲೆ ಓದಿನ ಹೊರೆಯೊಂದಿಗೆ ನುಡಿಯ ಹೊರೆಯೂ ಬೀಳುತ್ತದೆ. ಈ ಕಾರಣಕ್ಕಾಗಿ ಕನ್ನಡ ಬರಹಗಳಲ್ಲಿ ತುಂಬಿರುವ ಅನವಶ್ಯಕವಾದ ಸಂಸ್ಕ್ರುತ ಪದಗಳು ಅವರಿಗೆ ತೊಂದರೆ ಕೊಡುತ್ತವೆ. ಇದಲ್ಲದೆ, ಕನ್ನಡ ಬರಹಕ್ಕೆ ಇವತ್ತು ಅವಶ್ಯವಾಗಿರುವ ಮಹಾಪ್ರಾಣಾಕ್ಶರಗಳು, ಋ, ಷ ಮೊದಲಾದ ಅಕ್ಶರಗಳೂ ಅವರನ್ನು ಬರಹದಿಂದ ದೂರ ಮಾಡುತ್ತವೆ. ಮಯ್ಸೂರು ರಾಜ್ಯ ವಯಸ್ಕರ ಶಿಕ್ಶಣ ಸಮಿತಿ ವಯಸ್ಕರಿಗಾಗಿ ತಯಾರಿಸಿದ ಮೊದಲನೆಯ ಬಾ ಅಣ್ಣ ಓದು ಕಲಿ ಪುಸ್ತಕದಲ್ಲಿ ಇಂತಹ ಅಕ್ಶರಗಳನ್ನು ಬಳಸಲೇ ಇಲ್ಲ. ಅವನ್ನೆಲ್ಲ ಮುಂದೆ ಎರಡನೆಯ ಪುಸ್ತಕದಲ್ಲಿ ಪರಿಚಯ ಮಾಡಲಾಗಿದೆ.

ಇಂತಹ ಹೆಚ್ಚಿನ ಅಕ್ಶರಗಳನ್ನು ಕಲಿಸುವ ಅವಶ್ಯಕತೆಯೇ ಇಲ್ಲವಾದಲ್ಲಿ ವಯಸ್ಕರಿಗೆ ಬರಹವನ್ನು ಕಲಿಸುವ ಕೆಲಸ ಇನ್ನಶ್ಟು ಸುಲಬವಾಗಬಲ್ಲುದೆಂಬುದು ಇದರಿಂದಲೂ ಸ್ಪಶ್ಟವಾಗುತ್ತದೆ. 6.7 ತಿರುಳು ಇತ್ತೀಚೆಗೆ ಜನಸಾಮಾನ್ಯರಿಗಾಗಿ ತಯಾರಾಗುತ್ತಿರುವ ಕನ್ನಡ ಬರಹಗಳಲ್ಲೂ ಸಂಸ್ಕ್ರುತ ಪದಗಳ ಬಳಕೆ ಹೆಚ್ಚಾಗುತ್ತಿದೆ. ಇಂತಹ ಪದಗಳು ಜನಸಾಮಾನ್ಯರ ಮಾತಿನಲ್ಲಿ ಬಳಕೆಯಾಗುವುದಿಲ್ಲವಾದ ಕಾರಣ, ಈ ಚಾಳಿ ಕನ್ನಡ ಬರಹವನ್ನು ಜನಸಾಮಾನ್ಯರಿಂದ ದೂರ ಮಾಡುತ್ತದೆ. ಎಲ್ಲಾ ವರ್ಗದ ಜನರೂ ಓದಬೇಕಾಗಿರುವ ದಿನಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ನಡೆಸುವವರು ಮೇಲ್ವರ್ಗದ ಓದುಗರನ್ನು ಮಾತ್ರವೇ ಓಲಯ್ಸುತ್ತಿರುವ ಹಾಗೆ ಕಾಣಿಸುತ್ತದೆ. ಅವುಗಳಲ್ಲಿ ಬರುವ ಕೆಲವು ಬರಹಗಳನ್ನಂತೂ ಮೇಲ್ವರ್ಗದ ಓದುಗರೂ ಅರ್ತಮಾಡಿಕೊಳ್ಳಲಾರರು. ವಯಸ್ಕರಿಗೆ ಓದನ್ನು ಕಲಿಸಲು ಮತ್ತು ಬಳಸಲು ಸಹಾಯಕವಾಗುವಂತಹ ಪುಸ್ತಕಗಳನ್ನು ತಯಾರಿಸಿಕೊಡುವಲ್ಲೂ ಸಂಸ್ಕ್ರುತ ಪದಗಳ ಬಳಕೆಯನ್ನು ಕಡಿಮೆಮಾಡುವ ಪ್ರಯತ್ನ ನಡೆಯುತ್ತಿಲ್ಲ.

  1. ವಿಜ್ನಾನ ಬರಹಗಳಲ್ಲಿ ಸಂಸ್ಕ್ರುತ ಪದಗಳು 7.1 ಮುನ್ನೋಟ ಮೇಲೆ ಅಯ್ದನೆಯ ಅದ್ಯಾಯದಲ್ಲಿ (5.2.3ರಲ್ಲಿ) ವಿವರಿಸಿದ ಹಾಗೆ, ನಮ್ಮ ದಿನನಿತ್ಯದ ಜೀವನದಲ್ಲಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳುವ ಅವಶ್ಯಕತೆ ತುಂಬಾ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ ವಿಜ್ನಾನ ಬರಹಗಳಲ್ಲಿ ಇಂತಹ ಅವಶ್ಯಕತೆ ಯಾವಾಗಲೂ ಬರುತ್ತಿರುತ್ತದೆ. ಯಾಕೆಂದರೆ ವಿಜ್ನಾನಗಳಲ್ಲಿ ಹೊಸ ಹೊಸ ವಿಶಯಗಳನ್ನು ಮತ್ತು ವಿದಾನಗಳನ್ನು ಸಂಶೋದಕರು ಕಂಡುಹಿಡಿಯುತ್ತಲೇ ಇರುತ್ತಾರೆ; ಹೊಸ ಹೊಸ ವಸ್ತುಗಳನ್ನು ತಯಾರಿಸುತ್ತಲೇ ಇರುತ್ತಾರೆ. ಹಾಗಾಗಿ, ಅವಕ್ಕೆಲ್ಲ ಹೆಸರು ಕೊಡುವುದಕ್ಕಾಗಿ ಹೊಸ ಹೊಸ ಪದಗಳನ್ನೂ ಉಂಟುಮಾಡುತ್ತಲೇ ಇರಬೇಕಾಗುತ್ತದೆ. ವಿಜ್ನಾನಗಳಲ್ಲಿ ತುಂಬಾ ಮುಂದುವರಿದಿರುವ ಇಂಗ್ಲಿಶ್ನಂತಹ ನುಡಿಗಳಲ್ಲಿ ಇಂತಹ ಸಾವಿರಾರು `ಪಾರಿಬಾಶಿಕ ಪದಗಳು’ (ಎಂದರೆ ಬೇರೆ ಬೇರೆ ವಿಜ್ನಾನಗಳಿಗೆ ಸಂಬಂದಿಸಿರುವಂತಹ ವಿಶಿಶ್ಟವಾದ ಪದಗಳು) ಬಳಕೆಯಲ್ಲಿವೆ. ಅವುಗಳಲ್ಲಿರುವ ವಿಜ್ನಾನ ಪುಸ್ತಕಗಳನ್ನು ಮತ್ತು ಇತರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಬೇಕಾದಾಗ ಇಲ್ಲವೇ ಅವುಗಳಲ್ಲಿ ಕೊಟ್ಟಿರುವ ವಿಶಯಗಳನ್ನು ಕನ್ನಡದಲ್ಲಿ ತಿಳಿಸಿಹೇಳಬೇಕಾದಾಗ, ಕನ್ನಡದಲ್ಲೂ ಅಂತಹವೇ ಸಾವಿರಾರು ಪಾರಿಬಾಶಿಕ ಪದಗಳನ್ನು ಬಳಸುವ ಅವಶ್ಯಕತೆಯುಂಟಾಗುತ್ತದೆ.

ಈ ಸಂದರ್ಬದಲ್ಲಿ ಕನ್ನಡ ವಿದ್ವಾಂಸರು ಹೇಗೆ ತಪ್ಪು ದಾರಿಯನ್ನು ಹಿಡಿದಿದ್ದಾರೆ ಮತ್ತು ಅದರಿಂದಾಗಿ ಕನ್ನಡದ ವಿಜ್ನಾನ ಬರಹಗಳು ಹೇಗೆ ತುಂಬಾ ತೊಡಕಿನವಾಗಿವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ. 7.1.1 ಎರಡು ವಿದಾನಗಳು ಇಂಗ್ಲಿಶ್ನ ವಿಜ್ನಾನ ಬರಹಗಳಲ್ಲಿ ಬಳಕೆಯಾಗಿರುವ ಪಾರಿಬಾಶಿಕ ಪದಗಳಿಗೆ ಸಮನಾದ ಪದಗಳನ್ನು ಕನ್ನಡದ ವಿಜ್ನಾನ ಬರಹಗಳಲ್ಲಿ ಬಳಸಬೇಕಾದಾಗ ಮುಕ್ಯವಾಗಿ ಎರಡು ವಿದಾನಗಳನ್ನು ಅನುಸರಿಸಲು ಸಾದ್ಯವಿದೆ. (1) ಈ ವಿಜ್ನಾನ ಬರಹಗಳಲ್ಲಿ ಬಳಕೆಯಲ್ಲಿರುವ ಇಂಗ್ಲಿಶ್ ಪಾರಿಬಾಶಿಕ ಪದಗಳನ್ನು ಹಾಗೆಯೇ ಎರವಲಾಗಿ ಪಡೆದು ಬಳಸುವುದು ಮತ್ತು (2) ಕನ್ನಡದಲ್ಲಿ ಅವಕ್ಕೆ ಸಮನಾಗಿರುವ ಪದಗಳನ್ನು ಹೊಸದಾಗಿ ಉಂಟುಮಾಡಿ ಬಳಸುವುದು. ಸಾಮಾನ್ಯವಾಗಿ ಇಂತಹ ಇಂಗ್ಲಿಶ್ ಬರಹಗಳಲ್ಲಿ ಬರುವ ಪಾರಿಬಾಶಿಕ ಪದಗಳು ಕನ್ನಡದ ಪದಸ್ವರೂಪಕ್ಕೆ ಹೊಂದಿಕೊಳ್ಳುವಂತಿದ್ದರೆ ಅವನ್ನು ಹಾಗೆಯೇ ಎರವಲಾಗಿ ಪಡೆದು ಬಳಸುವುದೇ ಸುಲಬ. ನಮ್ಮ ಉಚ್ಚಾರಣೆಗೆ ಹೊಂದಿಕೊಳ್ಳುವ ಹಾಗೆ ಅವುಗಳ ಬರವಣಿಗೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವಾದರೆ, ಕ್ರಮೇಣ ಅವು ಕನ್ನಡದವೇ ಆದ ಪದಗಳಾಗಿಬಿಡುತ್ತವೆ. ಈ ಪದಗಳು ಕನ್ನಡ ಪದಗಳಿಗಿಂತ ಸ್ವರೂಪದಲ್ಲಿ ತೀರ ಬೇರಾಗಿವೆಯಾದರೆ ಮಾತ್ರ ಅವನ್ನು ಎರವಲಾಗಿ ಪಡೆಯುವ ಬದಲು ಅವಕ್ಕೆ ಸಮನಾಗಿರುವ ಪದವೊಂದನ್ನು ಕನ್ನಡದಲ್ಲಿ ತಯಾರಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗದ ಪದಗಳನ್ನು ಕನ್ನಡ ವಾಕ್ಯಗಳಲ್ಲಿ ಬಳಸಿದೆವಾದರೆ, ಅಂತಹ ವಾಕ್ಯಗಳನ್ನು ಓದಲು ಮತ್ತು ಅವು ತಿಳಿಸುವ ವಿಶಯಗಳನ್ನು

ಸರಿಯಾಗಿ ತಿಳಿದುಕೊಂಡು ನೆನಪಿನಲ್ಲಿರಿಸಿಕೊಳ್ಳಲು ಕನ್ನಡಿಗರಿಗೆ ಕಶ್ಟವಾಗುತ್ತದೆ. ಇದಲ್ಲದೆ, ಕನ್ನಡ ಬರಹಗಳಲ್ಲಿ ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದ ಹಾಗೆಲ್ಲ ಆ ಬರಹ ಕನ್ನಡದ್ದೇ ಆದ ತನ್ನ ಸೊಗಡನ್ನು ಕಳೆದುಕೊಂಡು ಕನ್ನಡಿಗರಿಗೇನೇ ವಿಚಿತ್ರವಾಗಿ ಕಾಣಿಸತೊಡಗುತ್ತದೆ. ಬರಹದಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದೂ ಒಂದು ಅವಶ್ಯವಾದ ಕೆಲಸವಾಗಿದ್ದು ನಾವು ಕನ್ನಡ ಬರಹಗಳಲ್ಲಿ ಬಳಸುವ ಪಾರಿಬಾಶಿಕ ಪದಗಳು ಇದಕ್ಕೆ ಸಹಾಯಕವಾಗುವಂತಿರಬೇಕು. ಬೇರೊಂದು ನುಡಿಯಿಂದ ಪದಗಳನ್ನು ಎರವಲಾಗಿ ಪಡೆಯುವ ಬದಲು ನಮ್ಮವೇ ಆದ ಪದಗಳನ್ನು ಉಂಟುಮಾಡಿಕೊಳ್ಳಬೇಕೆನ್ನುವುದಕ್ಕೆ ಇನ್ನೊಂದು ಉದ್ದೇಶವೂ ಇದೆ. ವಾಕ್ಯದಲ್ಲಿ ಬಳಸುವಾಗ ಅವಕ್ಕೆ ಬೇರೆ ಬೇರೆ ರೂಪಗಳನ್ನು ಕೊಡುವ ಅವಶ್ಯಕತೆಯಿದ್ದು, ನಮ್ಮವೇ ಆದ ಪದಗಳನ್ನು ಬಳಸಿದಲ್ಲಿ ಈ ಕೆಲಸ ಸುಲಬವಾಗುತ್ತದೆ. ಉದಾಹರಣೆಗಾಗಿ, ಈ ಪದಗಳು ಕ್ರಿಯಾಪದಗಳಾಗಿದ್ದಲ್ಲಿ ಅವಕ್ಕೆ ಕ್ರಿಯಾಪದಗಳೊಂದಿಗೆ ಬರುವಂತಹ ಸಮಯ, ಆಡುಗ ಮೊದಲಾದುವನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ನಾಮಪದಗಳಾಗಿದ್ದಲ್ಲಿ ಅವಕ್ಕೆ ಲಿಂಗ, ವಚನ, ವಿಬಕ್ತಿ ಮೊದಲಾದುವನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಇದಲ್ಲದೆ ಈ ಪದಗಳಿಂದ ಅವುಗಳ ನಾಮರೂಪ, ಗುಣರೂಪ, ಕ್ರಿಯಾರೂಪ ಮೊದಲಾದುವನ್ನೂ ಸಂದರ್ಬಕ್ಕೆ ತಕ್ಕಂತೆ ತಯಾರಿಸಿ ಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ಕನ್ನಡದವೇ ಆದ ಪದಗಳ ಮೂಲಕ ಮಾಡುವಶ್ಟು ಸುಲಬವಾಗಿ ಎರವಲು ಪದಗಳ ಮೂಲಕ ಮಾಡಲು ಸಾದ್ಯವಾಗುವುದಿಲ್ಲ. 7.1.2 ಮೂರನೆಯ ವಿದಾನ

ಹೆಚ್ಚಿನ ನುಡಿಗಳಲ್ಲೂ ಈ ರೀತಿ ವಿಜ್ನಾನ ಬರಹಗಳಲ್ಲಿ ಪಾರಿಬಾಶಿಕ ಪದಗಳನ್ನು ಬಳಸಬೇಕಾದಾಗ (1) ಹೊಂದಿಕೆಯಾಗುವಲ್ಲೆಲ್ಲ ಪದಗಳನ್ನು ಎರವಲಾಗಿ ಪಡೆದು ಬಳಸುವುದು ಮತ್ತು (2) ಹೊಂದಿಕೆಯಾಗದಿರುವಲ್ಲಿ ನುಡಿಯಲ್ಲೇನೇ ಪದಗಳನ್ನು ಹೊಸದಾಗಿ ಉಂಟುಮಾಡಿ ಬಳಸುವುದು ಎಂಬುದಾಗಿ ಎರಡು ವಿದಾನಗಳು ಮಾತ್ರ ಬಳಕೆಯಲ್ಲಿವೆ. ಆದರೆ ಮೇಲೆ (5.2.4)ರಲ್ಲಿ ಸೂಚಿಸಿದ ಹಾಗೆ ಕನ್ನಡ ಬರಹಗಳಲ್ಲಿ ಮೂರನೆಯದೊಂದು ವಿದಾನವೂ ಬಳಕೆಗೆ ಬಂದಿದ್ದು, ಇದು ಹೆಚ್ಚಿನ ಸಂದರ್ಬಗಳಲ್ಲೂ ಎರಡನೆಯ ವಿದಾನಕ್ಕೆ ಬದಲಾಗಿ ಬಳಕೆಯಾಗುತ್ತಿದೆ. ಕನ್ನಡದವೇ ಆದ ಹೊಸ ಪದಗಳನ್ನು ಉಂಟುಮಾಡಬೇಕಾಗುವ ಸಂದರ್ಬಗಳಲ್ಲಿ ಕನ್ನಡದ ವಿಜ್ನಾನ ಬರಹಗಾರರು ಕನ್ನಡದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಬದಲು ಸಂಸ್ಕ್ರುತದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ಹೊಸ ಪದಗಳನ್ನು ತಯಾರಿಸಿಕೊಳ್ಳುತ್ತಾರೆ. ಈ ರೀತಿ ಸಂಸ್ಕ್ರುತದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವುದು ಕನ್ನಡದ ಮಟ್ಟಿಗೆ ಅನಿವಾರ್ಯ ಎಂಬುದಾಗಿಯೂ ಈ ಬರಹಗಾರರಲ್ಲಿ ಹೆಚ್ಚಿನವರೂ ಬಾವಿಸುತ್ತಾರೆ. ಅವರ ಈ ಬಾವನೆಗೆ ಹೊಸ ಪಾರಿಬಾಶಿಕ ಪದಗಳನ್ನು ಉಂಟುಮಾಡುವುದಕ್ಕೆ ಬೇಕಾಗುವ ಪದಗಳು ಮತ್ತು ಪ್ರತ್ಯಯಗಳು ಕನ್ನಡದಲ್ಲಿ ಸಿಗಲಾರವು ಎಂಬ ತಪ್ಪು ಕಲ್ಪನೆ ಒಂದು ಕಾರಣ; ಕನ್ನಡದಲ್ಲಿ ಪಾರಿಬಾಶಿಕ ಪದಗಳು ಬೇಕಾದಾಗಲೆಲ್ಲ ಅವನ್ನು ಸಂಸ್ಕ್ರುತದಿಂದ ಎರವಲಾಗಿ ಪಡೆದು ಬಳಸುವ ಚಾಳಿ ನೂರಾರು ವರ್ಶಗಳಿಂದಲೂ ಕನ್ನಡ ಬರಹಗಾರರಲ್ಲಿ ಬೆಳೆದುಬಂದಿರುವುದು ಇನ್ನೊಂದು ಕಾರಣ; ಸಂಸ್ಕ್ರುತ ಪದಗಳನ್ನು ಬಳಸಿದಲ್ಲಿ ತಮ್ಮ ಬರಹದ ಮಟ್ಟ ಮೇಲೇರುತ್ತದೆ ಎಂಬುದಾಗಿ ಇವರಿಗೆ ಅನಿಸುತ್ತಿರುವುದು ಮತ್ತೊಂದು ಕಾರಣ. ಆದರೆ ಮೇಲೆ ಸೂಚಿಸಿದ ಹಾಗೆ, ಇಂಗ್ಲಿಶ್ ಪಾರಿಬಾಶಿಕ ಪದಗಳು ಕನ್ನಡ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳದಿರುವಂತಹ ಸಂದರ್ಬಗಳಲ್ಲಿ ಮಾತ್ರ ನಾವು ಹೊಸ ಪದಗಳನ್ನು ಉಂಟುಮಾಡಿಕೊಳ್ಳಲು ಹೊರಡುತ್ತೇವೆ. ಈ ರೀತಿ ಉಂಟುಮಾಡಿದ

ಹೊಸ ಪದಗಳೂ ಕನ್ನಡ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲವಾದರೆ ಅವನ್ನು ಉಂಟುಮಾಡಿ ಏನನ್ನು ಸಾದಿಸಿದ ಹಾಗಾದೀತು? ಕನ್ನಡದ ಹಲವು ಬರಹಗಾರರಿಗೆ ತಮ್ಮ ಕನ್ನಡ ಬರಹಗಳಲ್ಲಿ ಇಂಗ್ಲಿಶ್ ಪದಗಳಿಗಿಂತ ಸಂಸ್ಕ್ರುತ ಪದಗಳು ಹೆಚ್ಚು ಚನ್ನಾಗಿ ಹೊಂದಿಕೊಳ್ಳುತ್ತವೆಯೆಂದು ಅನಿಸುತ್ತದೆ. ಆದರೆ ಈ ಅನಿಸಿಕೆ ನಿಜಕ್ಕೂ ಸರಿಯಲ್ಲ. ಯಾಕೆಂದರೆ ಮೇಲೆ (5.2.1)ರಲ್ಲಿ ವಿವರಿಸಿದ ಹಾಗೆ, ಕನ್ನಡದ ಪದಸ್ವರೂಪ ಸಂಸ್ಕ್ರುತದ ಪದಸ್ವರೂಪಕ್ಕಿಂತ ತೀರ ಬೇರಾಗಿದೆ. ಕನ್ನಡದ ಪದ ಮತ್ತು ಪ್ರತ್ಯಯಗಳೊಂದಿಗೆ ಬಳಕೆಯಾಗುವ ಸೇರಿಕೆಯ ನಿಯಮಗಳೂ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳೊಂದಿಗೆ ಬಳಕೆಯಾಗುವ ಸೇರಿಕೆಯ ನಿಯಮಗಳಿಗಿಂತ ಬೇರಾಗಿವೆ. ಕನ್ನಡದ ಪದಸ್ವರೂಪದೊಂದಿಗೆ ಸಂಸ್ಕ್ರುತದ ಪದಸ್ವರೂಪವನ್ನೂ ತಮ್ಮದಾಗಿಸಿಕೊಂಡ ಕನ್ನಡ ಪಂಡಿತರಿಗೆ ಮಾತ್ರ ಅಂತಹ ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸಿರುವ ಪದಗಳು ಕನ್ನಡ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತವೆಯೆಂದು ಅನಿಸುತ್ತದೆ. ಬೇರೆಲ್ಲಾ ಕನ್ನಡಿಗರಿಗೂ ಅವು ತೀರಾ ತೊಡಕು ತೊಡಕಾದ ಪದಗಳಾಗಿ ಕಾಣಿಸುತ್ತವೆ. ಇನ್ನೊಂದು ವಿಶಯದಲ್ಲೂ ಈ ರೀತಿ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ರಚಿಸಿದ ಪಾರಿಬಾಶಿಕ ಪದಗಳು ಸೋತುಹೋಗುತ್ತವೆ ಎಂಬುದನ್ನು ನಾವು ಮುಂದೆ ನೋಡಲಿರುವೆವು. ಪಾರಿಬಾಶಿಕ ಪದಗಳಿಗೆ ಅವಶ್ಯವಾಗಿರುವ ಅರ್ತದ ಕಟ್ಟುನಿಟ್ಟು ಈ ಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ. ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯಾಕರಣದಲ್ಲಿರುವ ಹಲವು ಅಡಿಗಟ್ಟಿನ ವ್ಯತ್ಯಾಸಗಳೇ ಇದಕ್ಕೆ ಕಾರಣ. ಹಾಗಾಗಿ, ವಿಜ್ನಾನ ಬರಹಗಳಲ್ಲಿ ಇಂಗ್ಲಿಶ್ ಪಾರಿಬಾಶಿಕ ಪದಗಳ ಬದಲು ನಮ್ಮವೇ ಆದ ಹೊಸ ಪದಗಳನ್ನು ಉಂಟುಮಾಡಬೇಕಾದಾಗ ಸಂಸ್ಕ್ರುತ ಪದ ಮತ್ತು ಪದಕಾಂಡಗಳನ್ನು ಬಳಸಿದೆವಾದರೆ, ಆ ರೀತಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳುವುದರ ಮೂಲಕ ನಾವು

ಸಾದಿಸಬೇಕಾಗಿರುವ ಉದ್ದೇಶಗಳಲ್ಲಿ ಯಾವುದನ್ನೂ ಸಾದಿಸಲು ಸಾದ್ಯವಾಗುವುದಿಲ್ಲ. ಹಿಂದಿನ ಕಾಲದಲ್ಲಿ ಇಂಗ್ಲಿಶ್ ವಿಜ್ನಾನಿಗಳು ಹೊಸ ಹೊಸ ಪಾರಿಬಾಶಿಕ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಲ್ಯಾಟಿನ್ ನುಡಿಯ ಮೊರೆಹೊಗುತ್ತಿದ್ದರು. ಇಂಗ್ಲಿಶ್ನ ಶಾಸ್ತ್ರೀಯ ಬರಹಗಳಿಗೆಲ್ಲ ಲ್ಯಾಟಿನ್ ಬರಹಗಳು ಮಾದರಿಯಾಗಿದ್ದುದೇ ಇದಕ್ಕೆ ಕಾರಣ. ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ಉಂಟುಮಾಡಬೇಕಾದಾಗ ಸಂಸ್ಕ್ರುತದ ಮೊರೆಹೊಗುವುದೂ ಇಂಗ್ಲಿಶ್ನ ಈ ವಿದಾನಕ್ಕೆ ಸಮನಾದುದೆಂದು ಕೆಲವರು ಸಮರ್ತನೆಯನ್ನು ಕೊಡುತ್ತಾರೆ. ಆದರೆ ಎರಡು ಬೇರೆ ಬೇರೆ ಕಾರಣಗಳಿಗಾಗಿ ಇದು ಕನ್ನಡದ ಮಟ್ಟಿಗೆ ಸರಿಯಾದ ದಾರಿಯಲ್ಲ. ಮೊದಲನೆಯದಾಗಿ ಇಂಗ್ಲಿಶ್ ಮತ್ತು ಲ್ಯಾಟಿನ್ ನುಡಿಗಳು ಇಂಡೋ-ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು. ಅವುಗಳ ವ್ಯಾಕರಣಗಳ ನಡುವೆ ಮೂಲಬೂತ ವ್ಯತ್ಯಾಸಗಳಿಲ್ಲ. ಹಾಗಾಗಿ, ಇಂಗ್ಲಿಶ್ಗೆ ಬೇಕಾಗುವಂತಹ ಪದಗಳನ್ನೆಲ್ಲ ಸುಲಬವಾಗಿ ಲ್ಯಾಟಿನ್ನಲ್ಲಿ ಉಂಟುಮಾಡಿಕೊಳ್ಳಲು ಬರುತ್ತದೆ. ಆದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ದ್ರಾವಿಡ ಮತ್ತು ಇಂಡೋ-ಆರ್ಯನ್ ಎಂಬ ಎರಡು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಅವುಗಳ ವ್ಯಾಕರಣಗಳ ನಡುವೆ ಹಲವು ಮೂಲಬೂತ ವ್ಯತ್ಯಾಸಗಳಿವೆ. ಹಾಗಾಗಿ, ಕನ್ನಡಕ್ಕೆ ಬೇಕಾಗುವಂತಹ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಸಾದ್ಯವಾಗುವುದಿಲ್ಲ. ಎರಡನೆಯದಾಗಿ, ಇಂಗ್ಲಿಶ್ನಲ್ಲೂ ಪಾರಿಬಾಶಿಕ ಪದಗಳಾಗಿ ಲ್ಯಾಟಿನ್ ಪದಗಳನ್ನು ಬಳಸುವ ವಿದಾನ ಇವತ್ತು ಅಶ್ಟೊಂದು ಜನಪ್ರಿಯವಾಗಿಲ್ಲ. ಉದಾಹರಣೆಗಾಗಿ ಕಂಪ್ಯೂಟರಿಗೆ ಸಂಬಂದಿಸಿದ ಪಾರಿಬಾಶಿಕ ಪದಗಳಲ್ಲಿ ಹೆಚ್ಚಿನವನ್ನೂ ಇಂಗ್ಲಿಶ್ನವೇ ಆದ ಪದಗಳನ್ನು ಬಳಸಿ ತಯಾರಿಸಲಾಗುತ್ತಿದೆ. ಇದರಿಂದ ತೊಂದರೆಯೇನೂ ಆಗುವ ಹಾಗೆ ಕಾಣಿಸುವುದಿಲ್ಲ.

7.2 ವಿಜ್ನಾನ ಪದಗಳ ರಚನೆಯಲ್ಲಿ ಸಂಸ್ಕ್ರುತದ ಬಳಕೆ ಕನ್ನಡದಲ್ಲಿ ಪಾರಿಬಾಶಿಕ ಪದಗಳನ್ನು ತಯಾರಿಸುವ ಸಮಸ್ಯೆಗೆ ಸಂಬಂದಿಸಿದಂತೆ ಲಕ್ಶ್ಮಣರಾವ್ (1993:19) ಅವರು ಮೂರು ಸಾದ್ಯತೆಗಳನ್ನು ಪರಿಶೀಲಿಸಿದ್ದಾರೆ: (1) ಇಂಗ್ಲಿಶ್ನಲ್ಲಿ ಈಗಾಗಲೇ ಬಳಕೆಯಲ್ಲಿರುವ ಪಾರಿಬಾಶಿಕ ಪದಗಳನ್ನು ಎರವಲಾಗಿ ಪಡೆಯುವುದು; (2) ಕನ್ನಡದಲ್ಲಿ ಬಳಕೆಯಲ್ಲಿರುವ ಸಮಾನ ಪದಗಳನ್ನು ಪಾರಿಬಾಶಿಕ ಪದಗಳಾಗಿ ಬಳಸುವುದು; ಮತ್ತು (3) ಸಂಸ್ಕ್ರುತದಿಂದ ಸಮಾನ ಪದಗಳನ್ನು ಎರವಲಾಗಿ ಪಡೆದುಕೊಳ್ಳುವುದು ಇಲ್ಲವೇ ಸಂಸ್ಕ್ರುತದ ಪದಕಾಂಡಗಳನ್ನು ಬಳಸಿ ಹೊಸತಾಗಿ ಸಮಾನ ಪದಗಳನ್ನು ರಚಿಸಿಕೊಳ್ಳುವುದು. ಲಕ್ಶ್ಮಣರಾವ್ ಅವರ ಅಬಿಪ್ರಾಯದಂತೆ, ಇಂಗ್ಲಿಶ್ ಪದಗಳು ಕನ್ನಡಕ್ಕೆ ಸುಲಬವಾಗಿ ಹೊಂದಿಕೊಳ್ಳಬಲ್ಲುವಾದರೆ ಅವನ್ನು ಹಾಗೆಯೇ ಎರವಲಾಗಿ ಪಡೆದುಕೊಳ್ಳಬಹುದು. ಉದಾಹರಣೆಗಾಗಿ ಅಲರ್ಜಿ, ಅಯಾನ್, ಅಯೊಡಿನ್, ಟರ್ಬಯ್್ನ, ಸೋಡಿಯಮ್ ಮೊದಲಾದ ಪದಗಳು ಕನ್ನಡಕ್ಕೆ ಹೊಂದಿಕೊಳ್ಳಲು ಹೆಚ್ಚು ಕಶ್ಟವಾಗುವುದಿಲ್ಲ. ಹಾಗಾಗಿ ಅವನ್ನು ಹಾಗೆಯೇ ಎರವಲಾಗಿ ಪಡೆದು ಬಳಸಬಹುದು. ಇನ್ನು ಕೆಲವು ಪದಗಳು ಅತ್ಯಂತ ಪಾರಿಬಾಶಿಕವಾಗಿದ್ದು ಕೇವಲ ಶಾಸ್ತ್ರ ಸಾಹಿತ್ಯದಲ್ಲಿ ಮಾತ್ರ ಬಳಕೆಯಾಗುತ್ತವೆ (ಹಯ್ಡ್ರೋಕಾರ್ಟಿಸೋನ್, ಮಯ್ಟೋಕಾಂಡ್ರಿಯಾ). ಇಂತಹ ಪದಗಳನ್ನು ಮತ್ತು ಪದಾರ್ತಗಳ ಹೆಸರುಗಳನ್ನು (ಪೆÇ್ರೀಟಾನ್, ನ್ಯೂಟ್ರಿನೋ) ಅವು ಕನ್ನಡ ಪದಗಳೊಂದಿಗೆ ಸುಲಬವಾಗಿ ಬೆರೆಯದಿದ್ದರೂ ನೇರವಾಗಿ ಇಂಗ್ಲಿಶ್ನಿಂದ ಎರವಲಾಗಿ ಪಡೆದು ಕೊಳ್ಳಬಹುದೆಂದು ಅವರು ಹೇಳುತ್ತಾರೆ. ಆದರೆ ವಿಜ್ನಾನ ಬರಹಗಳಲ್ಲಿ ಬಳಕೆಯಾಗಿರುವ ಬಾವನಾತ್ಮಕ ಪದಗಳು, ಕ್ರಿಯೆಗಳನ್ನು ಸೂಚಿಸುವ ಪದಗಳು ಮತ್ತು ಜನ್ಯಪದಗಳ ಅಗತ್ಯವಿರುವ ಪದಗಳು ಕನ್ನಡಕ್ಕೆ ಸುಲಬವಾಗಿ ಹೊಂದಿಕೊಳ್ಳುವುದಿಲ್ಲವಾದಲ್ಲಿ ಅವಕ್ಕೆ ಸಮನಾದ ಬೇರೆ ಪದಗಳನ್ನು

ಕಂಡುಹಿಡಿಯುವ ಇಲ್ಲವೇ ಉಂಟುಮಾಡಿಕೊಳ್ಳುವ ಅವಶ್ಯಕತೆಯುಂಟಾಗುತ್ತದೆ. ಇಂತಹ ಸಂದರ್ಬಗಳಲ್ಲಿ ಮೇಲೆ ಸೂಚಿಸಿದ ಹಾಗೆ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳನ್ನು ಬಳಸುವುದು ಮತ್ತು ಸಂಸ್ಕ್ರುತದಿಂದ ಪದ ಇಲ್ಲವೇ ಪದಕಾಂಡಗಳನ್ನು ಎರವಲಾಗಿ ಪಡೆದು ಬಳಸುವುದು ಎಂಬ ಎರಡು ವಿದಾನಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಳ್ಳಲು ಸಾದ್ಯವಿದೆ. ಆದರೆ ಇವುಗಳಲ್ಲಿ ಮೊದಲನೆಯ ವಿದಾನವನ್ನು ಬಳಸಿದಲ್ಲಿ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗುತ್ತದೆ ಯೆಂದು ಲಕ್ಶ್ಮಣರಾವ್ ಅವರು ಅಬಿಪ್ರಾಯಪಡುತ್ತಾರೆ. ಈ ಕಾರಣಕ್ಕಾಗಿ ಅವರು ಇಂತಹ ಸಂದರ್ಬಗಳಲ್ಲೆಲ್ಲ ಎರಡನೆಯ ವಿದಾನವನ್ನೇ ಬಳಸಬೇಕಾಗುತ್ತದೆ ಎಂಬುದಾಗಿ ವಾದಿಸುತ್ತಾರೆ. ಪಾರಿಬಾಶಿಕ ಪದಗಳನ್ನು ತಯಾರಿಸುವಲ್ಲಿ ಕನ್ನಡದ ದಿನಬಳಕೆಯ ಪದಗಳನ್ನು ಬಳಸಿದಲ್ಲಿ ಗೊಂದಲಕ್ಕೆಡೆಯಾಗುತ್ತದೆಯೆಂಬ ಈ ಅಬಿಪ್ರಾಯ ನಿಜಕ್ಕೂ ಸರಿಯಲ್ಲವೆಂಬುದನ್ನು ಮೇಲೆ ಅಯ್ದನೆಯ ಅದ್ಯಾಯದಲ್ಲಿ ವಿವರಿಸಲಾಗಿದೆ (5.3.2 ನೋಡಿ). ಈ ಪದಗಳನ್ನು ಬಳಸುವ ಜನರು ಸಂದರ್ಬಕ್ಕನುಸಾರವಾಗಿ ಅವಕ್ಕೆ ಸರಿಯಾದ ಅರ್ತವನ್ನು ಹೊಂದಿಸಿಕೊಳ್ಳಲು ಶಕ್ತರಾಗಿರುವುದೇ ಇದಕ್ಕೆ ಕಾರಣ. ಇದಲ್ಲದೆ, ದಿನಬಳಕೆಯ ಪದಗಳನ್ನು ಬಳಸಿದಲ್ಲಿ ಗೊಂದಲವುಂಟಾಗಬಲ್ಲುದೆಂಬ ವಾದವನ್ನು ಒಪ್ಪಿಕೊಂಡರೂ ಅಂತಹ ಕಡೆಗಳಲ್ಲಿ ಸಂಸ್ಕ್ರುತ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸುವುದೊಂದೇ ನಮಗಿರುವ ದಾರಿ ಎಂಬ ಲಕ್ಶ್ಮಣರಾವ್ ಅವರ ತೀರ್ಮಾನ ಸರಿಯಲ್ಲ. ಯಾಕೆಂದರೆ, ಅಂತಹ ಕಡೆಗಳಲ್ಲಿ ಹೊಸಗನ್ನಡ ಪದಗಳ ಬದಲು ಬಳಕೆಯಿಂದ ತಪ್ಪಿ ಹೋಗಿರುವ ಹಳೆಗನ್ನಡ ಪದಗಳನ್ನಾಗಲಿ ಇಲ್ಲವೇ ಅಂತಹ ಪದಗಳ ಕಾಂಡಗಳನ್ನು ಬಳಸಿ ರಚಿಸಿದ ಹೊಸ ಪದಗಳನ್ನಾಗಲಿ ಬಳಸಲು ಸಾದ್ಯವಿದೆ. ಇಂತಹ ಪದಗಳು ಕನ್ನಡ ವಾಕ್ಯಗಳಲ್ಲಿ ಹೆಚ್ಚು ಚನ್ನಾಗಿ ಹೊಂದಿಕೊಳ್ಳಬಲ್ಲುವು. ಹಾಗಾಗಿ, ಇದು ಸಂಸ್ಕ್ರುತ ಪದಗಳನ್ನು ಬಳಸುವ ವಿದಾನಕ್ಕಿಂತ ಕನ್ನಡದ ಮಟ್ಟಿಗೆ ಹೆಚ್ಚು ಅನುಕೂಲವಾದುದಾಗಿದೆ.

ಈ ಮೂರನೇ ವಿದಾನದ ಸಾದ್ಯತೆಯನ್ನು ಪಾರಿಬಾಶಿಕ ಪದಗಳನ್ನು ಉಂಟುಮಾಡಲು ಹೊರಟಿರುವ ವಿದ್ವಾಂಸರಲ್ಲಿ ಹೆಚ್ಚಿನವರೂ ಗಮನಿಸದಿರುವುದು ನಿಜಕ್ಕೂ ಆಶ್ಚರ್ಯವೇ. ಕನ್ನಡದಲ್ಲಿ ಇದು ಹೇಗೆ ಸಾದ್ಯ ಎಂಬುದನ್ನು ಮುಂದೆ ಒಂಬತ್ತನೇ ಅದ್ಯಾಯದಲ್ಲಿ ವಿವರಿಸಲಾಗುವುದು. 7.3 ತ್ರಿಶಂಕು ಪದಗಳು ಇಂಗ್ಲಿಶ್ ಪಾರಿಬಾಶಿಕ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ಕನ್ನಡ ವಿದ್ವಾಂಸರು ರಚಿಸಿರುವಂತಹ ಪಾರಿಬಾಶಿಕ ಪದಗಳು ನಿಜಕ್ಕೂ ಸಂಸ್ಕ್ರುತ ಪದಗಳೂ ಅಲ್ಲ, ಕನ್ನಡ ಪದಗಳೂ ಅಲ್ಲ. ನಾವು ಪಡೆಯಬೇಕಾಗಿರುವ ಅರ್ತದಲ್ಲಿ ಅವು ಸಂಸ್ಕ್ರುತದಲ್ಲೆಲ್ಲೂ ಬಳಕೆಯಲ್ಲಿಲ್ಲವಾದ ಕಾರಣ, ಅವನ್ನು ಸಂಸ್ಕ್ರುತ ಪದಗಳೆಂದು ಕರೆಯಲು ಸಾದ್ಯವಾಗದು. ಕನ್ನಡದಲ್ಲಿಯೂ ಅವನ್ನು ಹೊಸದಾಗಿ ಬಳಕೆಗೆ ತರಬೇಕಾಗಿದೆ. ಇದಲ್ಲದೆ ಅವು ಕನ್ನಡದ ಪದರಚನೆಯ ನಿಯಮಗಳಿಗೆ ಒಳಗಾಗಿಲ್ಲವಾದ ಕಾರಣ, ಅವನ್ನು ಕನ್ನಡ ಪದಗಳೆಂದು ಕರೆಯುವುದೂ ಸರಿಯಲ್ಲ. ಹಾಗಾಗಿ, ಅವನ್ನು `ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ. ನಿಜಕ್ಕೂ ಅವು ಕನ್ನಡಕ್ಕೆ ಬೇಕಾಗಿಲ್ಲ. ಯಾಕೆಂದರೆ ಅವುಗಳಿಂದ ಕನ್ನಡಕ್ಕೆ ಸಿಗುವ ಪ್ರಯೋಜನಗಳಿಗಿಂತಲೂ ತೊಂದರೆಗಳೇ ಹೆಚ್ಚು. ಮೇಲೆ ಸೂಚಿಸಿದ ಹಾಗೆ, ಅವು ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲವೆಂಬುದು ಒಂದು ತೊಡಕಾದರೆ, ಕನ್ನಡಕ್ಕೆ ಬೇಕಾಗಿರುವ ಹಲವು ರೀತಿಯ ಅರ್ತವ್ಯತ್ಯಾಸಗಳನ್ನು ಅವುಗಳಲ್ಲಿ ಕಾಣಿಸಲು ಸಾದ್ಯವಾಗುವುದಿಲ್ಲವೆಂಬುದು ಇನ್ನೊಂದು ತೊಡಕು. ಈ ಎರಡನೆಯ ತೊಡಕಿನಿಂದಾಗಿ ಅವುಗಳ ಬಳಕೆ ವಿಜ್ನಾನ ಬರಹಗಳಲ್ಲಿ ಹಲವು ರೀತಿಯ ಅರ್ತಸಂದಿಗ್ದತೆ ಮತ್ತು ಗೊಂದಲಗಳನ್ನು ಉಂಟುಮಾಡಬಲ್ಲುದು. ಪಾರಿಬಾಶಿಕ ಪದಗಳ ತಯಾರಿಕೆಯಲ್ಲಿ ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳ ಬಳಕೆಯಿಂದ ಗೊಂದಲ ಹೊರಟುಹೋಗುತ್ತದೆಯೆಂಬ ಲಕ್ಶ್ಮಣ ರಾವ್ ಅವರ

ಬರವಸೆ (7.2 ನೋಡಿ) ಸತ್ಯಕ್ಕೆ ಎಶ್ಟು ದೂರ ಎಂಬುದು ಕೆಳಗೆ ಕೊಟ್ಟಿರುವ ಈ ಪದಗಳ ಪರಿಶೀಲನೆಯಿಂದ ಸ್ಪಶ್ಟವಾಗುತ್ತದೆ. ವಿಜ್ನಾನ ಪದಗಳ ಈ ಪರಿಶೀಲನೆಯಲ್ಲಿ ನಾನು ಮುಕ್ಯವಾಗಿ ಎರಡು ಪದಕೋಶಗಳನ್ನು (ನಾರಾಯಣರಾವ್ 2001 ಹಾಗೂ ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ 1990) ಬಳಸಿದ್ದೇನೆ. ಆದರೆ ಇಲ್ಲಿ ಉದಾಹರಣೆಯಾಗಿ ಕೊಟ್ಟಿರುವ ವಿಜ್ನಾನದ ಪಾರಿಬಾಶಿಕ ಪದಗಳಲ್ಲಿ ಹೆಚ್ಚಿನವೂ (ಸುಮಾರು ನೂರಕ್ಕೆ 75ರಶ್ಟು) ಅವುಗಳಲ್ಲಿ ಎರಡನೆಯ ಪದಕೋಶದಿಂದಲೇ ಬಂದಿವೆ. 7.3.1 ಪದವರ್ಗಗಳಲ್ಲಿ ವ್ಯತ್ಯಾಸ ವಾಕ್ಯರಚನೆಯ ನಿಯಮಗಳು ನುಡಿಯಿಂದ ನುಡಿಗೆ ಬೇರೆ ಬೇರಾಗಿರುತ್ತವೆ. ಒಂದು ನುಡಿಯಲ್ಲಿ ಯಾವ ರೀತಿಯ ಪದಗಳೆಲ್ಲ ಬಳಕೆಯಾಗುತ್ತವೆ ಎಂಬುದು ಆ ನುಡಿಯಲ್ಲಿ ಬಳಕೆಯಲ್ಲಿರುವ ವಾಕ್ಯರಚನೆಯ ನಿಯಮಗಳನ್ನು ಅವಲಂಬಿಸಿದೆಯಾದ ಕಾರಣ, ಎಲ್ಲಾ ನುಡಿಗಳಲ್ಲೂ ಒಂದೇ ಬಗೆಯ ಪದಗಳು ಬಳಕೆಯಾಗುತ್ತಿರುವುದಿಲ್ಲ. ಉದಾಹರಣೆಗಾಗಿ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ರೀತಿಯ ಪದಗಳು ಮಾತ್ರ ಬಳಕೆಯಾಗುತ್ತವೆ; ಇದಕ್ಕೆ ಬದಲು ಕನ್ನಡದಲ್ಲಿ ನಾಮಪದ, ಗುಣಪದ ಮತ್ತು ಕ್ರಿಯಾಪದ ಎಂಬುದಾಗಿ ಮೂರು ರೀತಿಯ ಪದಗಳು ಬಳಕೆಯಾಗುತ್ತವೆ. ಸಂಸ್ಕ್ರುತಕ್ಕೂ ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸಕ್ಕೆ ಅವು ಬಳಸುವ ವಾಕ್ಯರಚನೆಯ ನಿಯಮಗಳು ಬೇರೆ ಬೇರಾಗಿರುವುದೇ ಮುಕ್ಯ ಕಾರಣ. ಕನ್ನಡದಲ್ಲಿ ಒಂದು ನಾಮಪದವನ್ನು ಇಲ್ಲವೇ ಕ್ರಿಯಾಪದವನ್ನು ಇನ್ನೊಂದು ನಾಮಪದದ ವಿಶೇಶಣವನ್ನಾಗಿ ಮಾಡಬೇಕಿದ್ದಲ್ಲಿ ಅದನ್ನು ಗುಣಪದವಾಗಿ ಬದಲಾಯಿಸಬೇಕು (ಹುಳು-ಹುಳುಕಲು, ಇಂಗು- ಇಂಗಲು, ಮಾಸು-ಮಾಸಲು) ಇಲ್ಲವೇ ಅದರ ಗುಣರೂಪಕ್ಕೆ ಬದಲಾಯಿಸಿಕೊಳ್ಳಬೇಕು (ಹಣ್ಣು-ಹಣ್ಣಿನ, ಕಿವಿ-ಕಿವಿಯ; ತಿನ್ನು- ತಿಂದ, ತಿನ್ನುವ, ತಿನ್ನದ; ಬೀಳು-ಬಿದ್ದ, ಬೀಳುವ, ಬೀಳದ).

ಆದರೆ ಸಂಸ್ಕ್ರುತದಲ್ಲಿ ನಾಮಪದವನ್ನು ಹಾಗೆಯೇ ಯಾವ ಬದಲಾವಣೆಯನ್ನೂ ಮಾಡದೆ ವಿಶೇಶಣವಾಗಿ ಬಳಸಲಾಗುತ್ತದೆ ಮತ್ತು ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಿ ಬಳಸಲಾಗುತ್ತದೆ. ಆ ರೀತಿ ವಿಶೇಶಣವಾಗಿ ಬಳಕೆಯಾಗುವ ನಾಮಪದಗಳು ಲಿಂಗ-ವಿಬಕ್ತಿ-ವಚನಗಳಲ್ಲಿ ವಿಶೇಶ್ಯವಾಗಿರುವ ನಾಮಪದದ ಹಾಗೆಯೇ ಇರಬೇಕೆಂಬುದು ಸಂಸ್ಕ್ರುತದ ನಿಯಮ. ಈ ಕಾರಣಕ್ಕಾಗಿ, ಸಂಸ್ಕ್ರುತ ವಾಕ್ಯಗಳಲ್ಲಿ ಬರುವ ಪದಗಳಲ್ಲಿ ಯಾವುದು ವಿಶೇಶಣ, ಯಾವುದು ವಿಶೇಶ್ಯ ಎಂಬುದನ್ನು ನಿರ್ದರಿಸಲು ಸಾದ್ಯವಾಗುವುದಿಲ್ಲ. ಅಂತಹ ವ್ಯತ್ಯಾಸವೇ ಸಂಸ್ಕ್ರುತಕ್ಕೆ ಬೇಕಾಗಿಲ್ಲ (ಬಟ್ 2006 ನೋಡಿ). ಹಾಗಾಗಿ, ಕನ್ನಡಕ್ಕೆ ಬೇಕಾಗಿರುವ ಗುಣಪದಗಳೆಂಬ ವಿಶಿಶ್ಟವಾದ ಪದಗಳನ್ನು ಸಂಸ್ಕ್ರುತದ ಪ್ರತ್ಯಯಗಳ ಮೂಲಕ ತಯಾರಿಸಲು ಸಾದ್ಯವಾಗದು. ಕನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ವ್ಯತ್ಯಾಸದಿಂದಾಗಿ ಕನ್ನಡ ವಿದ್ವಾಂಸರು ಉಂಟುಮಾಡಿರುವ ವಿಜ್ನಾನದ ಪಾರಿಬಾಶಿಕ (ತ್ರಿಶಂಕು) ಪದಗಳಲ್ಲಿ ಹಲವು ರೀತಿಯ ಗೊಂದಲಗಳು ಕಾಣಿಸಿಕೊಳ್ಳುತ್ತವೆ. 7.3.2 ಇಂಗ್ಲಿಶ್ನ ನಾಮಪದ-ಗುಣಪದ ವ್ಯತ್ಯಾಸ ಇಂಗ್ಲಿಶ್ನಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ವ್ಯತ್ಯಾಸವಿದ್ದು ಅದು ಆ ನುಡಿಯ ಪಾರಿಬಾಶಿಕ ಪದಗಳಲ್ಲೂ ಕಾಣಿಸಿಕೊಳ್ಳುತ್ತದೆ. ನಾಮಪದಗಳ ತಯಾರಿಕೆಗಾಗಿ ಇಂಗ್ಲಿಶ್ನಲ್ಲಿ ಮುಕ್ಯವಾಗಿ ಏಶನ್, ಆರ್, ಎಂಟ್ ಮತ್ತು ಟಿ ಎಂಬ ಪ್ರತ್ಯಯಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಬದಲಾಗಿ ಸಂಸ್ಕ್ರುತದ ಪ್ರತ್ಯಯಗಳನ್ನು ಬಳಸಿ ಕನ್ನಡಕ್ಕಾಗಿ ಪಾರಿಬಾಶಿಕ ಪದಗಳನ್ನು ರಚಿಸುವವರು (ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ 1990) ಸಾಮಾನ್ಯವಾಗಿ ನ/ಣ, ಕ, ಇ ಮತ್ತು ತೆ (ಸಂಸ್ಕ್ರುತದ ತಾ) ಪ್ರತ್ಯಯಗಳನ್ನು ಬಳಸಿರುತ್ತಾರೆ. (ಕ) ಇಂಗ್ಲಿಶ್ ನಾಮಪದಗಳು

ನ್ - ನ/ಣ ಸೆಡೇಶನ್ ಶಮನ ಲ್ಯುಬ್ರಿಕೇಶನ್ ಸ್ನೇಹನ ಹಯ್ಬ್ರಿಡಯ್ಸೇಶನ್ ಸಂಕರಣ ಜರ್ಮಿನೇಶನ್ ಅಂಕುರಣ ಅರ್ - ಕ ಕಂಡೆನ್ಸರ್ ಸಾಂದ್ರಕ ಏಂಪ್ಲಿ¥sóÀಯ್ಯರ್ ಪ್ರವಧ್ರಕ ಎಜಿಟೇಟರ್ ಕ್ಷೋಭಕ ಇಂಡಕ್ಟರ್ ಪ್ರೇರಕ ಎಂಟ್ - ಇ ರೆಫಿû್ರಜರೆಂಟ್ ಶೈತ್ಯಕಾರಿ ಪೆÇ್ರಪೆಲೆಂಟ್ ನೋದನಕಾರಿ ಕನ್ವರ್ಜೆಂಟ್ ಅಭಿಸಾರಿ ಟಿ - ತೆ ಡಿವಿಸಿಬಿಲಿಟಿ ಬಾಜ್ಯತೆ ಒಪೇಸಿಟಿ ಅಪಾರಕತೆ ಎಮಿಸಿವಿಟಿ ಉತ್ಸಜ್ರಕತೆ ಪೇಸಿವಿಟಿ ನಿಷ್ಕ್ರಿಯತೆ ಆದರೆ ಸಂಸ್ಕ್ರುತದಲ್ಲಿ ನಾಮಪದ-ಗುಣಪದ ವ್ಯತ್ಯಾಸವಿಲ್ಲವಾದ ಕಾರಣ, ಮೇಲೆ ಕೊಟ್ಟಿರುವ ತ್ರಿಶಂಕು ಪದಗಳನ್ನು ಕನ್ನಡದ ವಿಜ್ನಾನ ಬರಹಗಳಲ್ಲಿ ನಾಮಪದಗಳಾಗಿಯೂ ಬಳಸಬಹುದು (ಶಮನಕ್ಕೆ, ಅಂಕುರಣವನ್ನು), ನಾಮಪದಗಳ ವಿಶೇಶಣಗಳಾಗಿಯೂ (ಎಂದರೆ ಕನ್ನಡದ ಗುಣಪದಗಳ ಜಾಗದಲ್ಲೂ) ಬಳಸಬಹುದು. (ಅಂಕುರಣ ಕ್ರಿಯೆ, ಪ್ರವಧ್ರಕ ಯಂತ್ರ, ಶೈತ್ಯಕಾರಿ ಯಂತ್ರ). ಇಂಗ್ಲಿಶ್ ವಿಜ್ನಾನ ಬರಹಗಳಲ್ಲಿ ಬರುವ ಗುಣಪದ(ಎಜಕ್ಟಿವ್)ಗಳಲ್ಲಿ ಮುಕ್ಯವಾಗಿ ಇಕ್, (ಎ)ಡ್, ಅಲ್ ಮತ್ತು ಇವ್ ಎಂಬ ಪ್ರತ್ಯಯಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ಬದಲಾಗಿ ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ ಅವರ ಪದಕೋಶದಲ್ಲಿ ಅನುಕ್ರಮವಾಗಿ ಸಂಸ್ಕ್ರುತದ ಕ, ಇತ, ಈಯ ಮತ್ತು ಕ

ಪ್ರತ್ಯಯಗಳನ್ನು ಬಳಸಲಾಗಿದೆ. ಇವುಗಳಲ್ಲಿ ಕ ಪ್ರತ್ಯಯವನ್ನು ಮೇಲೆ (ಕ) ವಿಬಾಗದಲ್ಲಿ ಸೂಚಿಸಿದ ಹಾಗೆ, ಇಂಗ್ಲಿಶ್ನ ನಾಮಪದಗಳಲ್ಲಿ ಬರುವ ಅರ್ ಪ್ರತ್ಯಯಕ್ಕೆ ಬದಲಾಗಿಯೂ ಬಳಸಲಾಗಿದೆ. (ಗ) ಇಂಗ್ಲಿಶ್ ಗುಣಪದ(ಎಜಕ್ಟಿವ್)ಗಳು ಇಕ್ - ಕ ಅನಲಿಟಿಕ್ ವಿಶ್ಲೇಷಕ ಎಕ್ಟೋಜನಿಕ್ ಬಹಿರುತ್ಪಾದಕ ಕೆತೇರ್ಟಿಕ್ ವಿರೇಚಕ ಅಲೋಟ್ರೋಪಿಕ್ ಭಿನ್ನವತ್ರಕ (ಎ)ಡ್ - ಇತ ಕೋಯಿಲ್್ಡ ಕುಂಡಲಿತ ಕಂಪ್ರೆಸ್್ಡ ಸಂಪೀಡಿತ ಅಯ್ಸೊಲೇಟೆಡ್ ಪ್ರತ್ಯೇಕಿತ ಕಂಪೆನ್ಸೇಟೆಡ್ ಪ್ರತಿಕರಿತ ಅಲ್ - ಈಯ ಗ್ರಾಫಿûಕಲ್ ಚಿತ್ರೀಯ ಜರ್ಮಿನಲ್ ಅಂಕುರೀಯ ಎಕ್್ಸಪೆÇನೆನ್ಶಲ್ ಘಾತೀಯ ಆರ್ಟೀರಿಯಲ್ ಧಮನೀಯ ಇವ್ - ಕ ಸೆಡೇಟಿವ್ ಶಾಮಕ ರಿಪಲ್ಸಿವ್ ವಿಕಷ್ರಕ ಡಿಸ್ಜಂಕ್ಟಿವ್ ವಿಯೋಜಕ ಪೆÇ್ರಜೆಕ್ಟಿವ್ ಪ್ರಕ್ಷೇಪಕ ನಿಜಕ್ಕೂ ಮೇಲೆ (ಕ) ಮತ್ತು (ಗ)ಗಳಲ್ಲಿ ಕಾಣಿಸಿದ ಈ ಎರಡು ರೀತಿಯ ಪ್ರತ್ಯಯಗಳ ನಡುವೆ ಸಂಸ್ಕ್ರುತದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಅವನ್ನು ಬಳಸಿ ರಚಿಸಿದ ಪದಗಳನ್ನು ನಾಮಪದಗಳಾಗಿಯೂ ಬಳಸಬಹುದು, ನಾಮಪದಗಳ ವಿಶೇಶಣಗಳಾಗಿಯೂ (ಎಂದರೆ ಗುಣಪದಗಳಾಗಿಯೂ) ಬಳಸಬಹುದು. —