↑ Contents  ·  Contents  ·  Ch 2 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 1 — ಮುನ್ನೋಟ

↑ ಒಳಪಿಡಿಗೆ ಹಿಂತಿರುಗಿ

ಪ್ರಯೋಜನಗಳನ್ನೆಲ್ಲ ಪಡೆಯಲು ಸಾದ್ಯ ಎಂಬುದನ್ನು ಎಲ್ಲಾ ಕನ್ನಡಿಗರೂ ತಿಳಿದುಕೊಳ್ಳಬೇಕು ಮತ್ತು ಅಂತಹ ಪ್ರಯೋಜನಗಳನ್ನು ಅವರು ದಿನನಿತ್ಯವೂ ಪಡೆಯುವಂತಾಗಬೇಕು ಎಂಬುದು ಎರಡನೆಯದು. ಈ ಗುರಿಯನ್ನು ತಲಪಬೇಕಿದ್ದಲ್ಲಿ ಅದಕ್ಕೆ ಹಲವು ತೊಡಕುಗಳಿವೆ. ಕೆಳವರ್ಗದ ಜನರ ಬಡತನ ಮತ್ತು ಅಜ್ನಾನಗಳು ಅವರ ಮಕ್ಕಳನ್ನು ಶಾಲೆಗಳಿಂದ ದೂರ ಇರಿಸುತ್ತವೆಯೆಂಬುದು ಒಂದು ದೊಡ್ಡ ತೊಡಕು. ಅವರು ಈಗಿರುವಂತೆ ಕೆಳವರ್ಗದವರಾಗಿ ಇರುವುದೇ ತಮಗೆ ಅನುಕೂಲವೆಂಬುದಾಗಿ ಹಲವು ಮಂದಿ ಮೇಲ್ವರ್ಗದ ಜನರು ಎಣಿಸುತ್ತಿರುವುದು ಇನ್ನೊಂದು ದೊಡ್ಡ ತೊಡಕು. ಇಂತಹ ಸಾಮಾಜಿಕ ತೊಡಕುಗಳು ಮಾತ್ರವಲ್ಲದೆ, ಇವತ್ತು ನಾವು ಬಳಸುತ್ತಿರುವ ಕನ್ನಡ ಬರಹದ ಸ್ವರೂಪವೂ ಕೆಳವರ್ಗದ ಜನರನ್ನು ಬರಹದ ಕಲಿಕೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಯಾಕೆಂದರೆ ದಿನದಿಂದ ದಿನಕ್ಕೆ ಈ ಬರಹ ಸಾಮಾನ್ಯ ಜನರ ಮಾತಿನಿಂದ ಹೆಚ್ಚು ಹೆಚ್ಚು ಬೇರಾಗುತ್ತಿದೆ; ಅವರು ಮಾತಿನಲ್ಲಿ ಬಳಸುವ ಪದಗಳಿಗೂ ಕನ್ನಡದ ಬರಹಗಳಲ್ಲಿ ಬಳಕೆಯಾಗುತ್ತಿರುವ ಪದಗಳಿಗೂ ನಡುವಿರುವ ಅಂತರ ಹೆಚ್ಚುತ್ತಾ ಹೋಗುತ್ತಿದೆ. ಇದರಿಂದಾಗಿ ಕನ್ನಡ ಬರಹವನ್ನು ಕಲಿಯುವ ಕೆಲಸ ಸಾಮಾನ್ಯ ಕನ್ನಡಿಗರಿಗೆ, ಅದರಲ್ಲೂ ಕೆಳವರ್ಗದ ಕನ್ನಡಿಗರಿಗೆ, ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜಟಿಲವಾಗುತ್ತಾ ಹೋಗುತ್ತಿದೆ. ಈ ರೀತಿ ಕನ್ನಡ ಬರಹಕ್ಕೂ ಸಾಮಾನ್ಯ ಕನ್ನಡಿಗರ ಮಾತಿಗೂ ನಡುವಿರುವ ಅಂತರ ಹೆಚ್ಚುತ್ತಿರುವುದಕ್ಕೆ ಎರಡು ಮುಕ್ಯ ಕಾರಣಗಳಿವೆ. ಮೊದಲನೆಯದಾಗಿ, ಕನ್ನಡದವೇ ಆದ ಪದಗಳನ್ನು ಬರೆಯಲು ಒಟ್ಟು ಮೂವತ್ತೊಂದು ಅಕ್ಶರಗಳಿದ್ದರೆ ಸಾಕು. ಆದರೆ ನಾವು ಇವತ್ತು ಬಳಸುವ ಕನ್ನಡ ಬರಹದಲ್ಲಿ ಅಯ್ವತ್ತು ಅಕ್ಶರಗಳಿವೆ! ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ನಾವು ಉಚ್ಚರಿಸುವ ಹಾಗೆ ಬರೆಯುವ ಬದಲು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಅನವಶ್ಯಕವಾದ ನಿರ್ಬಂದದಿಂದಾಗಿ ಈ ರೀತಿ ಬೇಕಾದುದಕ್ಕಿಂತ ಹೆಚ್ಚು ಅಕ್ಶರಗಳನ್ನು ಕನ್ನಡ ಬರಹಗಳಲ್ಲಿ

ಬಳಸಬೇಕಾಗಿದೆ ಮತ್ತು ಇದರಿಂದಾಗಿ ಕನ್ನಡ ಬರಹವನ್ನು ಕಲಿಯುವ ಕೆಲಸ ಬಹಳ ತೊಡಕಿನ ದಾಗಿದೆ. ಎರಡನೆಯದಾಗಿ, ಬೇಕಿದ್ದರೂ ಬೇಡದಿದ್ದರೂ ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವಂತಹ ಕೆಟ್ಟ ಚಾಳಿ ನಮ್ಮ ಬರಹಗಾರರಲ್ಲಿ ಕಾಣಿಸುತ್ತಿದೆ. ಇದಲ್ಲದೆ ಈ ಪದಗಳನ್ನು ಆದಶ್ಟು ಮಟ್ಟಿಗೆ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಸಾಮಾನ್ಯ ಕನ್ನಡಿಗರ ಮಾತಿನಲ್ಲಿ, ಅದರಲ್ಲೂ ಕೆಳವರ್ಗದ ಜನರ ಮಾತಿನಲ್ಲಿ ಬಹಳ ಕಡಿಮೆ ಸಂಸ್ಕ್ರುತ ಪದಗಳು ಬಳಕೆಯಾಗುತ್ತವೆ ಮತ್ತು ಆ ರೀತಿ ಬಳಕೆಯಾಗುವ ಪದಗಳೂ ಹಲವು ರೀತಿಯಲ್ಲಿ ಬದಲಾಗಿರುತ್ತವೆ. ಸಾಮಾನ್ಯ ಕನ್ನಡಿಗರಿಗೆ ಕನ್ನಡ ಬರಹ ತೊಡಕಿನದಾಗಿ ಕಾಣಿಸಲು ಇದು ಇನ್ನೊಂದು ಮುಕ್ಯ ಕಾರಣ. ಕನ್ನಡ ಬರಹ ಎಲ್ಲಾ ಕನ್ನಡಿಗರ ಸೊತ್ತಾಗಬೇಕಿದ್ದಲ್ಲಿ ಈ ಎರಡು ತೊಂದರೆಗಳನ್ನೂ ನಿವಾರಿಸಿಕೊಳ್ಳಬೇಕು. ಇದು ಅಂತಹ ಕಶ್ಟದ ಕೆಲಸವೇನಲ್ಲ. ಆದರೆ ಇದಕ್ಕಾಗಿ ಕನ್ನಡ ಬರಹದಲ್ಲಿ ಎರಡು ರೀತಿಯ ಕ್ರಾಂತಿ’ಗಳು ನಡೆಯ ಬೇಕಾಗಿದೆ. ಮೊದಲನೆಯದಾಗಿ ಕನ್ನಡಕ್ಕೆ ಬೇಕಾಗಿರುವ ಅಕ್ಶರಗಳನ್ನು ಮಾತ್ರವೇ ಬಳಸುವಂತಹ ಒಂದು ಹೊಸ ಬರಹ’ವನ್ನು ಕನ್ನಡಕ್ಕೆ ಅಳವಡಿಸಿಕೊಳ್ಳಬೇಕು ಮತ್ತು ಎರಡನೆಯದಾಗಿ ಕನ್ನಡ ಬರಹದಲ್ಲಿ ಸಾದ್ಯವಿರುವಲ್ಲೆಲ್ಲ ಕನ್ನಡದವೇ ಆದ ಪದಗಳನ್ನು ಬಳಸಲು ತೊಡಗಬೇಕು. ಇವುಗಳಲ್ಲಿ ಎರಡನೆಯ ಬದಲಾವಣೆಯನ್ನು ನಡೆಸಲು ಸಾದ್ಯವಾಗದಂತಹ ಕಡೆಗಳು ಕೆಲವಿರಬಹುದು. ಅಂತಹ ಕಡೆಗಳಲ್ಲಿ ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗದ ತತ್ಸಮ’ ಪದಗಳ ಬದಲು ಅವುಗಳ ತದ್ಬವ’ ರೂಪ ಗಳನ್ನು ಬಳಸುವ ಪ್ರಯತ್ನ ನಡೆಸಬೇಕು. ನಾವು ಇವತ್ತು ಕನ್ನಡ ಬರಹದಲ್ಲಿ ನಡೆಸಬೇಕಾಗಿರುವ ಈ ಎರಡು ರೀತಿಯ ಬದಲಾವಣೆಗಳನ್ನು `ಲಿಪಿಕ್ರಾಂತಿ’ (ಇಲ್ಲವೇ

ಅಕ್ಶರಕ್ರಾಂತಿ’) ಮತ್ತು ಪದಕ್ರಾಂತಿ’ ಎಂಬುದಾಗಿ ಕರೆಯಬಹುದು. ಇವನ್ನು ಕಯ್ಗೊಂಡಲ್ಲಿ ಕನ್ನಡ ಬರಹವನ್ನು ಕಲಿಯುವ ಕೆಲಸ ಸುಲಬವಾಗಬಲ್ಲುದು ಮತ್ತು ಅದು ಎಲ್ಲಾ ವರ್ಗದ ಕನ್ನಡಿಗರನ್ನೂ ತಲಪುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು. 1.2 ಬರಹವನ್ನು ಎಲ್ಲರೂ ಯಾಕೆ ಕಲಿಯಬೇಕು? ಬರಹವನ್ನು ಕಲಿತಿರುವವರು ಇವತ್ತು ಅದರಿಂದ ಎಂತಹ ಪ್ರಯೋಜನಗಳನ್ನೆಲ್ಲ ಪಡೆಯುತ್ತಿದ್ದಾರೆ ಎಂಬುದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಿದೆವಾದಲ್ಲಿ ಅದನ್ನು ಎಲ್ಲರೂ ಕಲಿಯುವ ಅವಶ್ಯಕತೆ ಯಾಕೆ ಇದೆ ಎಂಬುದು ಸ್ಪಶ್ಟವಾಗದಿರದು. ಇವತ್ತಿನ ಕಾಲದಲ್ಲಿ ಬರಹವೆಂಬುದು ಒಂದು ಅತ್ಯಮೂಲ್ಯವಾದ ಆಸ್ತಿಯಾಗಿ ಬೆಳೆದು ಬಂದಿದೆ. ಅದನ್ನು ಪಡೆಯದಿರುವವರು ಜೀವನದಲ್ಲಿ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಶ್ಟರ ಮಟ್ಟಿಗೆ ಅದು ಮಹತ್ವವನ್ನು ಪಡೆದಿದೆ. ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತಿದ್ದರೆ ಸಾಕಾಗುತ್ತಿತ್ತು. ಉಳಿದವರಿಗೆಲ್ಲ ಅದನ್ನು ಕಲಿಯುವ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ, ಆವತ್ತಿನ ಸಮಾಜದಲ್ಲಿ ಹೆಚ್ಚಿನ ಮಂದಿಗೂ ತಮ್ಮ ಜೀವನದಲ್ಲಿ ಬರಹವನ್ನು ಬಹಳ ಅಪರೂಪವಾಗಿ ಮಾತ್ರವೇ ಬಳಸಬೇಕಾಗುತ್ತಿತ್ತು. ಇದಕ್ಕಾಗಿ ಅವರು ಕಲಿತವರ ಸಹಾಯವನ್ನು ಪಡೆಯಲು ಸಾದ್ಯವಿತ್ತಾದ ಕಾರಣ, ಬರಹವನ್ನು ಕಲಿಯುವಂತಹ ತೊಡಕಾದ ಕೆಲಸಕ್ಕೆ ಅವರು ತಮ್ಮನ್ನು ತೊಡಗಿಸಬೇಕಾಗಿರಲಿಲ್ಲ. ಆದರೆ ಇವತ್ತು ಜೀವನದ ಪ್ರತಿಯೊಂದು ಸನ್ನಿವೇಶವನ್ನೂ ಬರಹ ಆಕ್ರಮಿಸಿಕೊಂಡಿದೆ. ಹಾಗಾಗಿ, ಓದಲು ಬರೆಯಲು ಬಾರದಿರುವವರು ಇವತ್ತು ಅಡಿಗಡಿಗೂ ಬರಹ ಗೊತ್ತಿರುವವರ ಸಹಾಯವನ್ನು ಬೇಡಬೇಕಾಗುತ್ತಿದೆ. ಇದರಿಂದ ಅವರಲ್ಲಿ ಕೀಳರಿಮೆ ಬೆಳೆಯುತ್ತದೆ ಮಾತ್ರವಲ್ಲ, ಅಡಿಗಡಿಗೂ ಅವರು ಬರಹ ತಿಳಿದಿರುವವರಿಂದ ಮೋಸಹೋಗುವಂತಹ ಸಂದರ್ಬಗಳೂ ಉಂಟಾಗುತ್ತಿರುತ್ತವೆ.

ಕೆಳವರ್ಗದ ಜನರನ್ನು ಮೇಲೆತ್ತಲು ಮತ್ತು ಅವರಲ್ಲಿರುವ ಬಡತನವನ್ನು ಹೋಗಲಾಡಿಸಲು ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಇವಾವುವೂ ಅವರನ್ನು ತಲಪುವ ಹಾಗೆ ಕಾಣಿಸುವುದಿಲ್ಲ. ಅಂತಹ ಯೋಜನೆಗಳ ಇರುವಿಕೆಯನ್ನು ಮತ್ತು ಅವುಗಳ ಮೂಲಕ ತಾವು ಪಡೆಯ ಬಹುದಾದ ಪ್ರಯೋಜನಗಳನ್ನು ತಿಳಿದುಕೊಳ್ಳಲು ಅವಶ್ಯವಿರುವ ಬರಹದ ಅರಿವು ಕೆಳವರ್ಗದ ಜನರಲ್ಲಿ ಇಲ್ಲದಿರುವುದೇ ಇದಕ್ಕೆ ಮುಕ್ಯ PÁgÀt. 1.2.1 ಬರಹ ಇಶ್ಟೊಂದು ಮುಕ್ಯವಾದುದು ಹೇಗೆ? ನಮ್ಮ ಜೀವನದಲ್ಲಿ ಬರಹಕ್ಕೆ ಇಶ್ಟೊಂದು ಮಹತ್ವ ಬರಲು ಹಲವು ಕಾರಣಗಳಿವೆ. ಮಾತೆಂಬುದು ಕ್ಶಣಿಕವಾದುದು; ಆಡಿದ ಕ್ಶಣದಲ್ಲೇ ಅದು ಮಾಯವಾಗಿ ಬಿಡುತ್ತದೆ. ಆದರೆ ಬರಹಕ್ಕೆ ಅಳಿವಿಲ್ಲ. ಬರೆದವನು ಸತ್ತುಹೋದ ಮೇಲೂ ಅದು ಉಳಿದಿರುತ್ತದೆ. ಹೇಳಿದ ಮಾತನ್ನು ಅಲ್ಲಗಳೆಯುವ ಹಾಗೆ ಬರಹವನ್ನು ಅಲ್ಲಗಳೆಯಲು ಸಾದ್ಯವಾಗುವುದಿಲ್ಲ. ಮಾತಿಗೆ ಈ ರೀತಿ ಕಾಲದ ಕಟ್ಟು ಮಾತ್ರವಲ್ಲದೆ ದೇಶದ ಕಟ್ಟೂ ಇದೆ. ಮಾತು ತಲಪಲು ಸಾದ್ಯವಾಗದ ದೂರದ ಜಾಗವನ್ನೂ ಬರಹ ತಲಪಬಲ್ಲುದು. ರೇಡಿಯೋ, ಟೇಪ್ರೆಕಾರ್ಡರ್ ಮೊದಲಾದವುಗಳ ಮೂಲಕ ಮಾತಿಗಿರುವ ಈ ಕಟ್ಟನ್ನು ಸ್ವಲ್ಪಮಟ್ಟಿಗೆ ಸಡಿಲಿಸಬಲ್ಲೆವಾದರೂ ಅವನ್ನು ಬರಹದಶ್ಟು ಸುಲಬವಾಗಿ ಮತ್ತು ಅಗ್ಗವಾಗಿ ಬಳಸಿಕೊಳ್ಳಲಾರೆವು. ಒಬ್ಬ ವ್ಯಕ್ತಿ ಎಶ್ಟೇ ಬಡವನಾದರೂ ಬರಹದ ಮೂಲಕ ಸಾವಿರಾರು ಕಿಲೋಮೀಟರುಗಳಶ್ಟು ದೂರವಿರುವ ಇನ್ನೊಬ್ಬ ವ್ಯಕ್ತಿಯನ್ನು ಬಹಳ ಸುಲಬವಾಗಿ ತಲಪಬಲ್ಲನು. ಇದಕ್ಕಾಗಿ ಆತ ತಾನು ತಿಳಿಸಬೇಕಾದುದನ್ನು ಅತೀ ಕಡಿಮೆ ಬೆಲೆಯ ಒಂದು ಕಾರ್ಡಿನಲ್ಲಿ ಬರೆದು ಅದನ್ನು ಅಂಚೆಪೆಟ್ಟಿಗೆಯಲ್ಲಿ ಹಾಕಿದರೆ ಸಾಕು. ಬರಹಗಳನ್ನು ಅಚ್ಚುಹಾಕಲು ಸಾದ್ಯವಾಗಿರುವುದಂತೂ ಅದರ ಮಹತ್ವವನ್ನು ಇನ್ನಶ್ಟು ಹೆಚ್ಚಿಸಿದೆ. ತಮ್ಮ ಮಾತು ಒಂದೇ ಬಾರಿಗೆ

ಸಾವಿರಾರು ಜನರನ್ನು ತಲಪುವ ಹಾಗೆ ಮಾಡಲು ಇದರಿಂದ ಸಾದ್ಯವಾಗಿದೆ ಮತ್ತು ಆ ಮಾತು ಬಹಳ ಅಗ್ಗವಾಗಿ ನೂರಾರು ವರ್ಶಗಳಶ್ಟು ಸಮಯ ನಾಶವಾಗದೆ ಉಳಿಯುವ ಹಾಗೆಯೂ ಮಾಡಲು ಸಾದ್ಯವಾಗಿದೆ. ಜೆರಾಕ್್ಸ ಯಂತ್ರಗಳ ಮೂಲಕ ಕಯ್ಬರಹದಲ್ಲಿರುವುದನ್ನೂ ಹಲವು ಮಂದಿಗೆ ಸುಲಬವಾಗಿ ಮತ್ತು ಅಗ್ಗವಾಗಿ ತಲಪಿಸಬಲ್ಲೆವಾದ ಕಾರಣ, ಈ ಕೆಲಸ ಇವತ್ತು ಇನ್ನಶ್ಟು ಸುಲಬವಾಗಿದೆ. ಇಂತಹ ಹಲವು ಕಾರಣಗಳಿಂದಾಗಿ ಇವತ್ತು ನಮ್ಮ ಜೀವನದಲ್ಲಿ ಬರಹಕ್ಕೆ ಬಹಳ ಮಹತ್ವ ಬಂದಿದೆ. ಇತ್ತೀಚೆಗೆ ನಡೆದ `ಇಂಟರ್ನೆಟ್’ ಎಂಬುದರ ಪ್ರವೇಶವಂತೂ ಬರಹದ ಅರಿವಿಲ್ಲದವರ ಜೀವನ ಜೀವನವೇ ಅಲ್ಲ ಎಂಬಂತಹ ಸ್ತಿತಿಗೆ ನಮ್ಮನ್ನು ತಳ್ಳಿದೆ. 1.2.2 ಬರಹ ತಿಳಿಯದವರು ಸಮಾಜದ ಕಳಂಕ ಬರಹಕ್ಕೆ ಬಂದಿರುವ ಈ ಮಹತ್ವದಿಂದಾಗಿ ಇವತ್ತು ಹಿಂದಿನ ಹಾಗೆ ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತಿದ್ದರೆ ಸಾಕಾಗುವುದಿಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ಕಲಿತಿರಬೇಕಾಗಿದೆ. ಹಲವು ಮಂದಿ ಬರಹ ತಿಳಿಯದವರಿರುವ ಸಮಾಜ ಮುಂದೆ ಬರಲು ಸಾದ್ಯವೇ ಇಲ್ಲ ಎಂಬ ಸ್ತಿತಿಗೆ ನಾವೀಗ ಬಂದಿದ್ದೇವೆ. ಬರಹ ಬಲ್ಲವರೂ ಬಡವರಾಗಿರಲು ಸಾದ್ಯವಿದೆಯೇನೋ ನಿಜ; ಆದರೆ ಇವತ್ತು ಅತ್ಯಂತ ಬಡವರಾಗಿರುವವರಲ್ಲಿ ಹೆಚ್ಚಿನವರೂ ಬರಹ ಬಾರದವರೇ. ಹಾಗಾಗಿ, ಒಂದು ಸಮಾಜದಿಂದ ಬಡತನವನ್ನು ಹೋಗಲಾಡಿಸಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ವ್ಯಕ್ತಿಗಳನ್ನೂ ಬರಹ ಬಲ್ಲವರನ್ನಾಗಿ ಮಾಡುವ ಕೆಲಸವನ್ನು ಮೊದಲು ಎತ್ತಿಕೊಳ್ಳಬೇಕಾಗುತ್ತದೆ. ಪ್ರಜಾಪ್ರಬುತ್ವದಲ್ಲಿ ಆಳ್ವಿಕೆಯ ಒಂದು ಅಂಶ ಪ್ರತಿಯೊಬ್ಬ ಪ್ರಜೆಯಲ್ಲೂ ಇರುತ್ತದೆ. ಹಾಗಾಗಿ, ಒಂದು ಪ್ರಜಾಪ್ರಬುತ್ವ ಸರಿಯಾಗಿ ನಡೆಯಬೇಕಾದರೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ

ಹೊಣೆಗಾರಿಕೆಯನ್ನು ಮತ್ತು ಹಕ್ಕುಬಾದ್ಯತೆಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ. ಇವತ್ತಿನ ದಿನಗಳಲ್ಲಿ ಇದು ಪ್ರತಿಯೊಬ್ಬನೂ ಬರಹವನ್ನು ತಿಳಿದಿದ್ದರೆ ಮಾತ್ರ ಸಾದ್ಯ ವಾಗಬಲ್ಲುದು. ಈ ಎಲ್ಲಾ ಕಾರಣಗಳಿಗಾಗಿ, ಬರಹ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸೊತ್ತಾಗುವ ಹಾಗೆ ಮಾಡುವುದು ವಯ್ಯಕ್ತಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಅತ್ಯಂತ ಅವಶ್ಯವಾದ ಕೆಲಸವಾಗಿದೆ. ಮೇಲೆ ಸೂಚಿಸಿದ ಹಾಗೆ, ಈ ಕೆಲಸವನ್ನು ನಡೆಸಬೇಕಿದ್ದಲ್ಲಿ ನಾವು ಹಲವು ತೊಡರುಗಳನ್ನು ಎದುರಿಸ ಬೇಕಾಗುತ್ತದೆ. ಅವುಗಳಲ್ಲಿ ನಮ್ಮ ಇವತ್ತಿನ ಬರಹ ಅನವಶ್ಯಕವಾಗಿ ಅದನ್ನು ಕಲಿಯುವವರಿಗೆ ತೊಡಕಿನದಾಗಿರುವುದೂ ಒಂದು. ಕನ್ನಡ ಬರಹದಲ್ಲಿರುವ ಈ ತೊಡಕನ್ನು ಕಡಿಮೆಮಾಡುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. 1.3 ಕನ್ನಡಕ್ಕೆ ಸಂಸ್ಕ್ರುತ ಮೂಲವಲ್ಲ ಕನ್ನಡದ ಬರಹಗಾರರಿಗೆ ತಮ್ಮ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವುದು ಮತ್ತು ಅಂತಹ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಪ್ರಯತ್ನಿಸುವುದು ಎಂಬ ಎರಡು ಚಾಳಿಗಳಿವೆ; ಇವೆರಡಕ್ಕೂ ಕನ್ನಡ ಬರವಣಿಗೆಯ ಇತಿಹಾಸದಲ್ಲಿ ಸಂಸ್ಕ್ರುತಕ್ಕಿದ್ದ ಮಹತ್ವದ ಸ್ತಾನವೇ ಮುಕ್ಯ ಕಾರಣ. ಕನ್ನಡ ಬರಹ ಮೊದಲಿನಿಂದಲೂ ಸಂಸ್ಕ್ರುತದ ಪ್ರಬಾವದಲ್ಲಿಯೇ ಬೆಳೆದುಬಂದಿದೆ. ಕನ್ನಡವನ್ನು ಬರಹಕ್ಕಿಳಿಸುವುದಕ್ಕಾಗಿ ಬಳಕೆಯಾಗಿರುವ ಲಿಪಿಗೆ ಸಂಸ್ಕ್ರುತ ಬರಹಗಳಿಗಾಗಿ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿ ಮೂಲವಾಗಿದೆ. ಈ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಸಮಯದಲ್ಲಿ, ಕನ್ನಡ ಪದಗಳನ್ನು ಬರೆಯಲು ಬೇಕಾಗುವ ಅಕ್ಶರಗಳನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಅಕ್ಶರಗಳನ್ನೂ ಅದರಲ್ಲಿ ಉಳಿಸಿಕೊಳ್ಳಲಾಯಿತು.

ಇದರಿಂದಾಗಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಿಗೆ ಕನ್ನಡ ಬರಹದಲ್ಲಿ ಒಂದು ವಿಶಿಶ್ಟವಾದ ಸ್ತಾನ ದೊರೆಯಿತು. ಇಂಗ್ಲಿಶ್, ಪರ್ಶಿಯನ್, ತಮಿಳು ಮೊದಲಾದ ಇತರ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ ನುಡಿಗಳಲ್ಲಿ ಇರುವ ಹಾಗೆ ಬರೆಯುವುದಿಲ್ಲ. ಉದಾಹರಣೆಗಾಗಿ ಇಂಗ್ಲಿಶ್ನ ಞಟಿoತಿಟeಜge ಪದವನ್ನು ನಾವು ಕನ್ನಡದಲ್ಲಿ ನೋಲೇಜ್ ಎಂಬುದಾಗಿ ಅದನ್ನು ಓದುವ ಹಾಗೆ ಬರೆಯುತ್ತೇವಲ್ಲದೆ ಅದರ ಮೊದಲಿಗೆ ಕಾಣಿಸುವ ಕಕಾರವನ್ನು ಇಲ್ಲವೇ ಅದರ ನಡುವೆ ಕಾಣಿಸುವ ಡಕಾರವನ್ನು ಬರಹದಲ್ಲಿ ಕಾಣಿಸಲು ಹೋಗುವುದಿಲ್ಲ. ಇದೇ ರೀತಿಯಲ್ಲಿ ಇಂಗ್ಲಿಶ್ನ viಟಿe ಮತ್ತು ತಿiಟಿe ಪದಗಳ ನಡುವೆ ಮೊದಲನೆಯ ಅಕ್ಶರದಲ್ಲಿ ವ್ಯತ್ಯಾಸವಿದೆಯಾದರೂ ಅದು ನಮ್ಮ ಉಚ್ಚಾರಣೆಯಲ್ಲಿ ಇಲ್ಲವಾದ ಕಾರಣ ಕನ್ನಡ ಬರಹದಲ್ಲಿ ಅದನ್ನು ಕಾಣಿಸಹೋಗುವುದಿಲ್ಲ. ಸಂಸ್ಕ್ರುತ ಪದಗಳನ್ನು ಮಾತ್ರ ನಾವು ನಮ್ಮ ಉಚ್ಚಾರಣೆ ಹೇಗಿದೆಯೋ ಹಾಗೆ ಬರೆಯುವ ಬದಲು ಹೆಚ್ಚುಕಡಿಮೆ ಸಂಸ್ಕ್ರುತ ಬರಹಗಳಲ್ಲಿರುವ ಹಾಗೆ ಬರೆಯುತ್ತೇವೆ; ವಿಶೇಷ ಎಂಬುದಾಗಿ ಬರೆಯುತ್ತೇವೆ, ಆದರೆ ವಿಶೇಶ ಎಂಬುದಾಗಿ ಓದುತ್ತೇವೆ; ಕೃತಿ ಎಂಬುದಾಗಿ ಬರೆಯುತ್ತೇವೆ, ಕ್ರುತಿ ಎಂಬುದಾಗಿ ಓದುತ್ತೇವೆ; ಭ್ರಮೆ ಎಂಬುದಾಗಿ ಬರೆಯುತ್ತೇವೆ, ಬ್ರಮೆ ಎಂಬು ದಾಗಿ ಓದುತ್ತೇವೆ. ಸುಮಾರು ಎರಡು ಸಾವಿರ ವರ್ಶಗಳಶ್ಟು ಹಿಂದೆ ಕನ್ನಡ ನುಡಿಗೆ ಬ್ರಾಹ್ಮೀ ಲಿಪಿಯನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಕನ್ನಡ ಬರಹಗಾರರು ಸಂಸ್ಕ್ರುತ ಪದಗಳನ್ನು ಈ ರೀತಿ ಉಚ್ಚಾರಣೆಯಲ್ಲಿರುವ ಹಾಗೆ ಬರೆಯುವ ಬದಲು ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ತೊಡಗಿದರು. ಈ ಕ್ರಮವನ್ನು ನಾವು ಇವತ್ತಿಗೂ ಮುಂದುವರಿಸಿಕೊಂಡು ಬಂದಿದ್ದೇವೆ. ಆಗಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಒಂದು ವಿಕ್ರುತ ರೂಪ ಎಂಬ ಅನಿಸಿಕೆ ಕನ್ನಡದ ವಿದ್ವಾಂಸರಲ್ಲಿತ್ತು. ಹಾಗಾಗಿ ಸಂಸ್ಕ್ರುತದವೇ ಆದ ಪದಗಳನ್ನು ಕನ್ನಡ ಬರಹದಲ್ಲಿ ಬಳಸುವಾಗ ಅವನ್ನು

ವಿಕ್ರುತ’ಗೊಳಿಸದೆ ಶುದ್ದ’ರೂಪದಲ್ಲಿ ಉಳಿಸಬೇಕೆಂಬ ಆಶಯ ಅವರದಾಗಿತ್ತು. ಅದಕ್ಕಾಗಿ ಈ ಹೆಚ್ಚಿನ ಅಕ್ಶರಗಳ ಅವಶ್ಯಕತೆ ಅವರಿಗಿತ್ತು. ಇವತ್ತಿಗೂ ಆ ರೀತಿ ಸಂಸ್ಕ್ರುತ ಒಂದು ಪವಿತ್ರನುಡಿಯೆಂಬುದಾಗಿ ಮತ್ತು ಕನ್ನಡ ಅದರಿಂದ ಬೆಳೆದುಬಂದಿದೆಯೆಂಬುದಾಗಿ ಬಾವಿಸುವ ಕನ್ನಡ (ಮತ್ತು ಸಂಸ್ಕ್ರುತ) ವಿದ್ವಾಂಸರು ಹಲವರಿದ್ದಾರೆ. ಅವರ ಮಾತನ್ನು ನಂಬುವ ಇತರ ಮಂದಿಯೂ ಹಲವರಿದ್ದಾರೆ. ಕನ್ನಡದಲ್ಲಿ ಬರುವ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವ ಬದಲು ನಮ್ಮ ಉಚ್ಚಾರಣೆ ಹೇಗಿದೆಯೋ ಹಾಗೆ ಬರೆಯುವುದಕ್ಕೆ ಈ ವಿದ್ವಾಂಸರ ಮತ್ತು ಅವರನ್ನು ನಂಬುವ ಇತರ ಮಂದಿಯ ವಿರೋದವಿದೆ. ಹಾಗಾಗಿ, ಅವರ ಈ ವಿರೋದಕ್ಕೆ ಮುಕ್ಯ ಆದಾರವಾಗಬಲ್ಲ ಕನ್ನಡ ಸಂಸ್ಕ್ರುತಜನ್ಯ’, ಬಾರತದ ಎಲ್ಲಾ ನುಡಿಗಳಿಗೂ ಸಂಸ್ಕ್ರುತವೇ ಮೂಲ’ ಎಂಬ ಈ ನಂಬಿಕೆಗಳು ಯಾಕೆ ತಪ್ಪು ಎಂಬುದನ್ನು ತೋರಿಸಿಕೊಡುವ ಅವಶ್ಯಕತೆಯಿದೆ. ಸಂಸ್ಕ್ರುತ ನುಡಿ ಇಂಡೋಯುರೋಪಿಯನ್ ಎಂಬ ನುಡಿಕುಟುಂಬಕ್ಕೆ ಸೇರಿರುವ ನುಡಿ ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿ ಎಂಬ ನಿರ್ಣಯಕ್ಕೆ ಹತ್ತೊಂಬತ್ತನೇ ಶತಮಾನದಿಂದೀಚೆಗೆ ನಡೆದಿರುವ ಹಲವಾರು ಸಂಶೋದನೆಗಳನ್ನು ಮತ್ತು ಅವುಗಳ ಆದಾರದ ಮೇಲೆ ಬರೆದಿರುವ ನೂರಾರು ಬರಹಗಳನ್ನು ಮತ್ತು ಪುಸ್ತಕಗಳನ್ನು ಆದಾರವಾಗಿ ಕೊಡಬಹುದು. ಆದರೆ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬ ವಾದಕ್ಕೆ ಆದಾರವಾಗಬಲ್ಲ ಒಂದೇ ಒಂದು ಸಂಶೋದನೆಯೂ ಇದುವರೆಗೆ ನಡೆದಿಲ್ಲ. ಅದು ಸಂಸ್ಕ್ರುತದ ಮೇಲೆ ಹೆಚ್ಚಿನ ಅಬಿಮಾನವಿರುವ ಕೆಲವು ವಿದ್ವಾಂಸರ ಕುರುಡು ನಂಬಿಕೆಯನ್ನು ಮಾತ್ರವೇ ಅವಲಂಬಿಸಿದೆ. ಈ ಕುರುಡು ನಂಬಿಕೆಯನ್ನು ಬಿಟ್ಟುಕೊಟ್ಟು ನಿಜಕ್ಕೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಎರಡು ತೀರ ಸ್ವತಂತ್ರವಾದ

ನುಡಿಗಳೆಂಬುದನ್ನು ಮತ್ತು ನುಡಿಗೆ ಇಲ್ಲವೇ ನುಡಿಯ ವ್ಯಾಕರಣಕ್ಕೆ ಸಂಬಂದಿಸಿದಂತಹ ಯಾವ ವಿಶಯದಲ್ಲೂ ಕನ್ನಡ ಸಂಸ್ಕ್ರುತವನ್ನು ಅವಲಂಬಿಸಬೇಕಾಗಿಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ. ಕೆಲವು ವಿಶಿಶ್ಟವಾದ ಚಾರಿತ್ರಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಇದುವರೆಗೆ ಕನ್ನಡ ಬರಹ ಸಂಸ್ಕ್ರುತವನ್ನು ಅವಲಂಬಿಸಿತ್ತು. ಆದರೆ ಯಾವಾಗಲೂ ಅದು ಆ ರೀತಿ ಸಂಸ್ಕ್ರುತವನ್ನು ಅವಲಂಬಿಸಿಯೇ ಉಳಿಯಬೇಕೆಂದೇನೂ ಇಲ್ಲ. ಸ್ವತಂತ್ರವಾಗಿ ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಅದಕ್ಕಿದೆ. ಈ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಇವತ್ತು ಅದು ಸಂಸ್ಕ್ರುತದ ಅಡಿಮೆಯಿಂದ ಬಿಡುಗಡೆ ಹೊಂದುವ ಹಾಗೆ ಮಾಡಬೇಕಾಗಿದೆ ಮತ್ತು ಆ ಮೂಲಕ ಅದು ಎಲ್ಲಾ ವರ್ಗದ ಜನರನ್ನೂ ತಲಪುವ ಹಾಗೆ ಮಾಡಬೇಕಾಗಿದೆ. ಈ ಪುಸ್ತಕದ ಎರಡನೆಯ ಅದ್ಯಾಯದಲ್ಲಿ ನುಡಿಗಳ ನಡುವೆ ಕಾಣಿಸುವ ನಂಟಸ್ತನದ ಸ್ವರೂಪವೇನು, ಒಂದು ನುಡಿ ಇನ್ನೊಂದು ನುಡಿಯ ತಾಯಿ ಎಂದು ವಾದಿಸುವುದಕ್ಕೆ ಯಾವ ರೀತಿಯ ಆದಾರಗಳನ್ನು ಕೊಡಲು ಸಾದ್ಯ ಮತ್ತು ಈ ವಿಶಯದಲ್ಲಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ಪರಿಸ್ತಿತಿ ಎಂತಹದು ಎಂಬುದನ್ನು ವಿವರವಾಗಿ ಪರಿಶೀಲಿಸಲಾಗಿದೆ. 1.4 ಲಿಪಿಕ್ರಾಂತಿ : ಅಕ್ಶರಗಳ ಎಣಿಕೆಯನ್ನು ಕಡಿಮೆ ಮಾಡುವುದು ಮೇಲೆ ಸೂಚಿಸಿದ ಹಾಗೆ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವಾದುದೆಂದು ತೋರುವುದಕ್ಕೆ ಅದರಲ್ಲಿ ಕನ್ನಡದ ಮಟ್ಟಿಗೆ ಅವಶ್ಯವಿಲ್ಲದಂತಹ ಹಲವಾರು ಹೆಚ್ಚಿನ ಅಕ್ಶರಗಳನ್ನು ಬಳಸುತ್ತಿರುವುದು ಒಂದು ಮುಕ್ಯ ಕಾರಣ. ನಿಜಕ್ಕೂ ಕನ್ನಡದವೇ ಆದ ಪದಗಳನ್ನು ಬರೆಯುವುದಕ್ಕೆ ಒಟ್ಟು 31 ಅಕ್ಶರಗಳಿದ್ದರೆ ಸಾಕು. ಆದರೆ ಕನ್ನಡ ಬರಹಗಳಲ್ಲಿ ನಾವು ಇವತ್ತು 50ಕ್ಕಿಂತಲೂ ಹೆಚ್ಚು ಅಕ್ಶರಗಳನ್ನು ಬಳಸುತ್ತಿದ್ದೇವೆ. ಈ ಹೆಚ್ಚಿನ ಅಕ್ಶರಗಳನ್ನು ಮುಕ್ಯವಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತ ಬರಹಗಳಲ್ಲಿರುವ ಹಾಗೆಯೇ

ಬರೆಯುವುದಕ್ಕಾಗಿ ನಾವು ಬಳಸುತ್ತಿದ್ದೇವೆ. ಇವುಗಳಲ್ಲಿ ಕೆಲವನ್ನು ಇಂಗ್ಲಿಶ್ ಇಲ್ಲವೇ ಇತರ ನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲೂ ಬಳಸುತ್ತೇವಾದರೂ (ಕಾಫಿ, ರೆಫ್ರಿಜಿ ರೇಟರ್, ಥಿಂಕ್), ಅಕ್ಶರಗಳ ಕೆಳಗಿನ ಎರಡು ಚುಕ್ಕೆಗಳ ಹಾಗೆ (ವಿಜûನ್, ಜûರೂರು), ಅಂತಹ ಪದಗಳಲ್ಲಿ ಇವನ್ನು ಬಳಸಲೇಬೇಕೆಂಬ ಒತ್ತಾಯವಿಲ್ಲ. ಆದರೆ ಸಂಸ್ಕ್ರುತ ಪದಗಳಲ್ಲಿ ಮಾತ್ರ ಅವನ್ನು ಬಳಸಲೇಬೇಕೆಂಬ ಒತ್ತಾಯವಿದೆ. ಮಹಾಪ್ರಾಣಾಕ್ಶರಗಳಿರುವ ಪದಗಳನ್ನು ಉಚ್ಚರಿಸುವಾಗ ಹೆಚ್ಚಿನವರೂ ಆ ಅಕ್ಶರಗಳನ್ನು ಅಲ್ಪಪ್ರಾಣಾಕ್ಶರಗಳಾಗಿಯೇ (ಕಚಟತಪ ಮತ್ತು ಗಜಡದಬಗಳೆಂಬುದಾಗಿಯೇ) ಉಚ್ಚರಿಸುತ್ತಾರೆ. ಗ್ರಂಥಾಲಯ ಎಂಬ ಪದ ಹೆಚ್ಚಿನವರ ಉಚ್ಚಾರಣೆಯಲ್ಲೂ ಗ್ರಂತಾಲಯ ಎಂದಾಗುತ್ತದೆ, ವಿಧಾನ ಸಭೆ ಎಂಬುದು ವಿದಾನ ಸಬೆ ಎಂದಾಗುತ್ತದೆ. ಕನ್ನಡ ಬರಹಗಳಲ್ಲಿ ಬಳಕೆಯಾಗುವ ಋಕಾರ, ಷಕಾರ, ವಿಸರ್ಗ ಮೊದಲಾದವುಗಳೂ ಈ ಮಹಾಪ್ರಾಣಾಕ್ಶರಗಳ ಹಾಗೆ ಉಚ್ಚಾರಣೆಯಲ್ಲಿ ಕಾಣಿಸುವುದಿಲ್ಲ. ಋಕಾರ ಉಚ್ಚಾರಣೆಯಲ್ಲಿ ರು ಎಂದಾಗುತ್ತದೆ (ಕೃತಿ>ಕ್ರುತಿ, ಋಷಿ>ರುಶಿ), ಷಕಾರ ಶಕಾರವಾಗುತ್ತದೆ (ವಿಷ>ವಿಶ, ವಿಷಯ>ವಿಶಯ) ಮತ್ತು ವಿಸರ್ಗ ಹಕಾರವಾಗುತ್ತದೆ (ಬಹುಶಃ>ಬಹುಶಹ) ಇಲ್ಲವೇ ಅದರ ಮುಂದಿನ ವ್ಯಂಜನದೊಂದಿಗೆ ಸೇರಿ ಒತ್ತಕ್ಶರವಾಗುತ್ತದೆ (ದುಃಖ>ದುಕ್ಕ). ಈ ರೀತಿ ಉಚ್ಚಾರಣೆಯಲ್ಲಿಲ್ಲದ ಹಲವು ವ್ಯತ್ಯಾಸಗಳನ್ನು ಬರಹದಲ್ಲಿ ತೋರಿಸುವ ಕಾರಣ, ಅದನ್ನು ಕಲಿಯುವ ಕೆಲಸ ಮಕ್ಕಳಿಗೂ ಕಶ್ಟ ಮತ್ತು ದೊಡ್ಡವರಿಗೂ ಕಶ್ಟ. ನಿಜಕ್ಕೂ ಉಚ್ಚಾರಣೆಯಲ್ಲಿಲ್ಲದ ಇಂತಹ ವ್ಯತ್ಯಾಸಗಳನ್ನೆಲ್ಲ ಬರಹದಲ್ಲಿ ಕಾಣಿಸುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ, ಓದಿನ ಇಲ್ಲವೇ ಮಾತಿನ ಮೂಲಕ ನಾವು ಯಾವುದನ್ನು ತಿಳಿಸಬೇಕೆಂದಿರುವೆವೋ ಅದನ್ನೇ ಬರಹದ ಮೂಲಕವೂ ತಿಳಿಸಬೇಕಾಗಿದೆ. ಹಾಗಾಗಿ ಉಚ್ಚಾರಣೆಯಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳನ್ನಶ್ಟೇ ಬರಹದಲ್ಲೂ ಕಾಣಿಸಿದರೆ ಸಾಕು.

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಪದಗಳನ್ನೆಲ್ಲ ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯಲು ತೊಡಗಿದಲ್ಲಿ ಕನ್ನಡ ಬರಹಗಳಲ್ಲಿ ಕಡ್ಡಾಯವಾಗಿ ಬಳಸಬೇಕಾಗುವ ಅಕ್ಶರಗಳ ಎಣಿಕೆ ಬಹಳಶ್ಟು ಕಡಿಮೆಯಾಗಬಲ್ಲುದು. ಹೀಗೆ ಮಾಡುವ ಮೂಲಕ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಬಹಳಶ್ಟು ಸುಲಬವಾಗುವ ಹಾಗೆ ಮಾಡಬಹುದು. ನಮ್ಮ ಶಾಲೆಗಳಲ್ಲಿ ಉಚ್ಚಾರಣೆಯಲ್ಲಿಲ್ಲದ ಈ ಹೆಚ್ಚಿನ ಅಕ್ಶರಗಳನ್ನು ಕಲಿಯುವುದಕ್ಕಾಗಿ ಮಕ್ಕಳು, ಅದರಲ್ಲೂ ಕೆಳವರ್ಗದ ಮಕ್ಕಳು ಎಶ್ಟು ಕಶ್ಟ ಪಡಬೇಕಾಗಿದೆ, ಮೇಶ್ಟರರ ಕಯ್ಯಲ್ಲಿ ಎಶ್ಟು ಬಾರಿ ಪೆಟ್ಟು ತಿನ್ನಬೇಕಾಗಿದೆ ಎಂಬುದನ್ನು ನಾವೆಲ್ಲರೂ ಬಲ್ಲೆವು. ಈ ಅವಶ್ಯವಿಲ್ಲದ ಅಕ್ಶರಗಳಿಂದಾಗಿ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಕನ್ನಡ ಬರಹವನ್ನು ಕಲಿಯುವುದು ಒಂದು ದೊಡ್ಡ ಶಿಕ್ಶೆ ಎಂಬುದಾಗಿ ಅನಿಸುತ್ತದೆ. ಕನ್ನಡ ಬರಹ ಎಲ್ಲರ ಸೊತ್ತಾಗಬೇಕಿದ್ದಲ್ಲಿ ಅದನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಕಲಿಯುವಂತೆ ಮಾಡಬೇಕು ಮತ್ತು ದೊಡ್ಡವರಿಗೂ ಅದರ ರುಚಿ ಹತ್ತುವ ಹಾಗೆ ಮಾಡಬೇಕು. ಯಾಕೆಂದರೆ, ಮಕ್ಕಳು ಬರಹವನ್ನು ಕಲಿಯದಿರುವುದಕ್ಕೆ ಅವರ ತಾಯಿತಂದೆಯರಿಗೆ ಬರಹ ತಿಳಿದಿಲ್ಲದಿರುವುದು ಮತ್ತು ಬರಹದ ಮಹತ್ವ ಗೊತ್ತಿಲ್ಲದಿರುವುದೂ ಒಂದು ಕಾರಣ. ಅನವಶ್ಯಕವಾದ ಅಕ್ಶರಗಳನ್ನೆಲ್ಲ ಕನ್ನಡದ ಅಕ್ಶರಮಾಲೆಯಿಂದ ತೆಗೆದುಹಾಕಿದಲ್ಲಿ ಅದನ್ನು ಕಲಿಯುವ ಕೆಲಸ ದೊಡ್ಡವರಿಗೂ ಹೆಚ್ಚು ಸುಲಬವಾಗಬಲ್ಲುದು. 1.4.1 ಬರಹ ಮತ್ತು ಸಂಸ್ಕ್ರುತಿ ಇತ್ತೀಚೆಗೆ ಮೊದಲನೇ ತರಗತಿಯ ಪಟ್ಯಪುಸ್ತಕಗಳಲ್ಲಿ ಋಕಾರವನ್ನು ಬಳಸುವುದಕ್ಕೆ ಬದಲಾಗಿ ರು ಎಂಬುದನ್ನು ಬಳಸುವ ಮತ್ತು ಅದರ ಮೂಲಕ ಕನ್ನಡಕ್ಕೆ ಅವಶ್ಯವಿಲ್ಲದಿರುವ ಒಂದು ಹೆಚ್ಚಿನ ಅಕ್ಶರವನ್ನು ಕಡಿಮೆ ಮಾಡುವ ಪ್ರಸ್ತಾಪವನ್ನು ಮಾಡಲಾಯಿತು. ಆದರೆ ಹೀಗೆ ಮಾಡಿದಲ್ಲಿ ನಮ್ಮ ಸಂಸ್ಕ್ರುತಿಯೇ ಅಳಿದುಹೋಗಬಲ್ಲುದೆಂಬುದಾಗಿ ಈ

ಬದಲಾವಣೆಗೆ ಹಲವು ಮಂದಿ ಹಿರಿಯ ಸಾಹಿತಿಗಳು ಮತ್ತು ವಿದ್ವಾಂಸರು ಅಡ್ಡಿಯಾದರು. ಹಾಗಾಗಿ, ಈ ಪ್ರಸ್ತಾಪವನ್ನು ಅಲ್ಲಿಗೇ ಬಿಟ್ಟುಕೊಡಲಾಯಿತು. ನಿಜಕ್ಕೂ ಮೇಲಿನ ಪ್ರಸ್ತಾಪಕ್ಕೆ ಬಂದ ಈ ಅಡ್ಡಿ ನುಡಿಯ ಮೇಲಿನ ಅಜ್ನಾನದಿಂದ ಮಾತ್ರವೇ ಹುಟ್ಟಿಕೊಂಡಿದೆ. ಯಾಕೆಂದರೆ, ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವುದು ಎಂದಿಗೂ ನಮ್ಮ ಸಂಸ್ಕ್ರುತಿ’ಯಾಗಲಾರದು. ಅದು ಬರಿಯ ಕುರುಡು ಅನುಕರಣೆ ಮಾತ್ರ ಆಗಬಲ್ಲುದು. ಉಚ್ಚಾರಣೆಯಲ್ಲಿ ಈ ಪದಗಳೆಲ್ಲ ನಮ್ಮ ನುಡಿಯ ಪದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಬದಲಾಗಿವೆ. ಇದನ್ನು ಗಮನಿಸಿ ಅವನ್ನು ಆ ರೀತಿ ಬರೆಯುವುದೇ ನಿಜಕ್ಕೂ ನಮ್ಮ ಸಂಸ್ಕ್ರುತಿಯಾಗಬಲ್ಲುದು. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಬೇರೆಯೂ ಹಲವು ರೀತಿಗಳಲ್ಲಿ ನಾವು ನಮ್ಮ ನುಡಿಯ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಬದಲಿಸಿಕೊಂಡಿದ್ದೇವೆ. ಉದಾಹರಣೆಗಾಗಿ, ಅವುಗಳ ಲಿಂಗಬೇದವನ್ನು ನಮ್ಮ ನುಡಿಯ ಲಿಂಗಬೇದಕ್ಕೆ ಹೊಂದಿಕೆಯಾಗುವ ಹಾಗೆ ಬದಲಾಯಿಸಿಕೊಂಡಿದ್ದೇವೆ; ಅವುಗಳಲ್ಲಿ ಕಾಣಿಸದಿರುವಂತಹ ನಾಮಪದ-ಗುಣಪದ ಬೇದವನ್ನು ಆ ಪದಗಳ ಮೇಲೆ ಹೊರಿಸಿದ್ದೇವೆ; ಅವುಗಳಲ್ಲಿ ಕಾಣಿಸುವ ಜೋಡುಪದಗಳಿಗೆ ನಮ್ಮವೇ ಆದ ಜೋಡುಪದಗಳ ಒಳರಚನೆಯನ್ನು ಕೊಟ್ಟಿದ್ದೇವೆ; ಕ್ರಿಯಾಪದಗಳನ್ನು ಬಳಸಬೇಕಾದಾಗ ಅವಕ್ಕೆಲ್ಲ ನಮ್ಮವೇ ಆದ ಇಸು ಪ್ರತ್ಯಯವನ್ನು ಸೇರಿಸಿಕೊಂಡಿದ್ದೇವೆ. ಅವುಗಳ ಅರ್ತದಲ್ಲಿಯೂ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಸಂಸ್ಕ್ರುತ ಪದಗಳ ಬಳಕೆಯಲ್ಲಿ ನಾವು ಮಾಡಿಕೊಂಡಿರುವ ಇಂತಹ ಹಲವಾರು ರೀತಿಯ ಬದಲಾವಣೆಗಳು ನಮ್ಮದೇ ಆದ ಕನ್ನಡ ಸಂಸ್ಕ್ರುತಿಯನ್ನು ಸೂಚಿಸುತ್ತವೆಯಲ್ಲದೆ, ಸಂಸ್ಕ್ರುತಿ ನಾಶ’ವಾಗಿರುವುದನ್ನು ಸೂಚಿಸುವುದಿಲ್ಲ. ಈ ಎಲ್ಲಾ ಅಂಶಗಳಲ್ಲೂ ಕನ್ನಡ ಬರಹ ಸಂಸ್ಕ್ರುತದ ದಾಸ್ಯದಲ್ಲಿ ಸಿಕ್ಕಿಬೀಳದೆ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ.

ಎರವಲಾಗಿ ಪಡೆದ ಪದಗಳ ಸ್ವರೂಪವನ್ನು ಕನ್ನಡ ಪದಗಳ ಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಿಸುವುದೂ ನಮ್ಮದೇ ಆದ ಕನ್ನಡ ಸಂಸ್ಕ್ರುತಿ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಹಾಪ್ರಾಣಾಕ್ಶರಗಳನ್ನು ಅಲ್ಪ ಪ್ರಾಣಾಕ್ಶರಗಳನ್ನಾಗಿ, ಋಕಾರವನ್ನು ರು ಎಂಬುದಾಗಿ ಮತ್ತು ಷಕಾರವನ್ನು ಶ ಎಂಬುದಾಗಿ ಬದಲಾಯಿಸಿಕೊಳ್ಳುವುದು ಕನ್ನಡ ನುಡಿಯ ಒಂದು ಗುಣದರ್ಮ ªÁVzÉ. ನಿಜಕ್ಕೂ ಈ ಗುಣದರ್ಮದ ಮೂಲಕ ಉಚ್ಚಾರಣೆಯಲ್ಲಿ ನಾವು ನಮ್ಮದೇ ಆದ ಕನ್ನಡ ಸಂಸ್ಕ್ರುತಿಯನ್ನು ಉಳಿಸಿಕೊಂಡಿದ್ದೇವಲ್ಲದೆ ನಾಶಮಾಡಿಲ್ಲ. ಯಾರಾದರೂ ಈ ಪದಗಳನ್ನು ಕನ್ನಡದಲ್ಲಿ ಉಚ್ಚರಿಸುವಾಗ ಮಹಾಪ್ರಾಣಾಕ್ಶರಗಳನ್ನು ಮಹಾಪ್ರಾಣಾಕ್ಶರಗಳಾಗಿ ಇಲ್ಲವೇ ಷಕಾರವನ್ನು ಷಕಾರವಾಗಿ ಉಚ್ಚರಿಸಿದಲ್ಲಿ ಉಳಿದವರಿಗೆ ಅವನೊಬ್ಬ ಅತಿಪಂಡಿತನೆಂದು ಅನಿಸದಿರದು. ಉಚ್ಚಾರಣೆಯಲ್ಲಿ ಕಾಣಿಸುವ ಈ ನಮ್ಮದೇ ಆದ ಕನ್ನಡ ಸಂಸ್ಕ್ರುತಿಯನ್ನು ನಾವು ಬರಹದಲ್ಲಿ ಕಾಣಿಸುವುದಿಲ್ಲ; ಅದನ್ನು ಬರಹದಲ್ಲೂ ಕಾಣಿಸೋಣ ಎಂಬುದಾಗಿ ಹೇಳಲು ನಾವು ಯಾಕೆ ನಾಚಿಕೆಪಡಬೇಕು? ಸಂಸ್ಕ್ರುತದ ಋಷಿ ಎಂಬ ಪದವನ್ನು ರುಶಿ ಎಂಬುದಾಗಿ, ಸಂಸ್ಕೃತಿ ಎಂಬ ಪದವನ್ನು ಸಂಸ್ಕ್ರುತಿ ಎಂಬುದಾಗಿ, ವಿಶೇಷ ಎಂಬ ಪದವನ್ನು ವಿಶೇಶ ಎಂಬುದಾಗಿ ಮತ್ತು ಮುಖ್ಯಮಂತ್ರಿ ಎಂಬ ಪದವನ್ನು ಮುಕ್ಯಮಂತ್ರಿ ಎಂಬುದಾಗಿ ಈ ಪದಗಳನ್ನೆಲ್ಲ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ0iÉುೀ ಬರೆಯುವುದೂ ನಮ್ಮ ಸಂಸ್ಕ್ರುತಿಯೇ ಎಂಬುದಾಗಿ ಎದೆತಟ್ಟಿ ಹೇಳೋಣ. ನಮ್ಮ ನುಡಿಗೆ ಹೊಂದಿಕೊಳ್ಳುವ ಹಾಗೆ ಎರವಲಾಗಿ ಪಡೆದ ಸಂಸ್ಕ್ರುತ ಪದಗಳಲ್ಲಿ ಈ ರೀತಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಮ್ಮ ಹಕ್ಕು. ಈ ಹಕ್ಕನ್ನು ಉಚ್ಚಾರಣೆಯಲ್ಲಿ ಹೇಗೆ ಉಳಿಸಿಕೊಂಡಿದ್ದೇವೆಯೋ ಹಾಗೆಯೇ ಬರಹದಲ್ಲೂ ಉಳಿಸಿಕೊಳ್ಳಬೇಕಾಗಿದೆ. ಸಂಸ್ಕ್ರುತದ ಮೇಲಿನ ವ್ಯಾಮೋಹದಿಂದಾಗಿ ನಮಗಿರುವ ಈ ನಮ್ಮದೇ ಆದ ಸಂಸ್ಕ್ರುತಿಯನ್ನು ಉಳಿಸಿಕೊಳ್ಳು

ವಂತಹ ಹಕ್ಕನ್ನು ಯಾರಾದರೂ ಮೊಟಕುಗೊಳಿಸಲು ಪ್ರಯತ್ನಿಸುವುದಿದ್ದಲ್ಲಿ ಅವರಿಗೆ ನಾವು ಮನ್ನಣೆ ಕೊಡಬೇಕಾಗಿಲ್ಲ. 1.4.2 ಬರಹದ ಉದ್ದೇಶ ನಾವು ತಿಳಿಸಬೇಕೆಂದಿರುವ ವಿಶಯವೊಂದನ್ನು ಮಾತಿನ ಮೂಲಕ ತಿಳಿಸಲು ಸಾದ್ಯವಿಲ್ಲದಂತಹ ಕಡೆಗಳಲ್ಲಿ ಒಂದು ಸಾದನವಾಗಿ ಬಳಕೆಯಾಗುವುದೇ ಬರಹದ ಮುಕ್ಯ ಉದ್ದೇಶವಾಗಿದೆ. ಈ ಉದ್ದೇಶವನ್ನು ಅದು ತ್ರುಪ್ತಿಕರವಾಗಿ ನಡೆಸಿಕೊಂಡು ಹೋಗಬೇಕಿದ್ದಲ್ಲಿ ಮಾತಿಗೂ ಬರಹಕ್ಕೂ ನಡುವೆ ವ್ಯತ್ಯಾಸಗಳು ಕಡಿಮೆಯಿದ್ದಶ್ಟೂ ಒಳ್ಳೆಯದು. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವ ಮೂಲಕ ನಾವು ಬರಹಕ್ಕಿರುವ ಈ ಮುಕ್ಯವಾದ ಉದ್ದೇಶಕ್ಕೆ ತಡೆಯೊಡ್ಡುತ್ತಿದ್ದೇವೆ. ಹೀಗೆ ಮಾಡಲು ಕನ್ನಡದ ಬರಹಗಾರರಿಗೆ ಸಂಸ್ಕ್ರುತದ ಮೇಲಿರುವ ಕುರುಡು ಅಬಿಮಾನವೊಂದೇ ಕಾರಣ. ಕನ್ನಡದವೇ ಆದ ಪದಗಳನ್ನು ಹೇಗೆ ಬೇಕಿದ್ದರೂ ಬದಲಾಯಿಸಬಹುದು; ಸಂಸ್ಕ್ರುತ ಪದಗಳನ್ನು ಮಾತ್ರ ಅವು ಎರಡು ಸಾವಿರ ವರ್ಶಗಳಶ್ಟು ಹಿಂದೆ ಹೇಗಿದ್ದುವೋ ಹಾಗೆಯೇ ಇವತ್ತೂ ಬರೆಯಬೇಕೆಂಬ ಅವರ ಈ ವಾದ ಕುರುಡು ಅಬಿಮಾನವಲ್ಲದೆ ಬೇರೇನೂ ಅಲ್ಲ. ಕಳೆದ ಸಾವಿರ ವರ್ಶಗಳಲ್ಲಿ ಕನ್ನಡದವೇ ಆದ ಪದಗಳು ಉಚ್ಚಾರಣೆಯಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಕಂಡಿವೆ ಮತ್ತು ಅದಕ್ಕನುಗುಣವಾಗಿ ಬರವಣಿಗೆಯಲ್ಲೂ ಬದಲಾಗಿವೆ (ವಿವರಗಳಿಗೆ ಬಟ್ 2007 ನೋಡಿ). ¾ಕಾರ-¿ಕಾರಗಳು ಮಾಯವಾಗಿವೆ (ಕೆ¾õÉ>ಕೆರೆ, ಎ¾õÉ>ಎರೆ, ಅ¿ು> ಅಳು, ಏ¿ು>ಏಳು) ಪಕಾರ ಹಕಾರವಾಗಿದೆ (ಪಾಲ್>ಹಾಲು, ಪಲ್> ಹಲ್ಲು), ಉದ್ದ ಸ್ವರದ ಅನಂತರ ಬರುತ್ತಿದ್ದ ಸೊನ್ನೆ ಬಿದ್ದುಹೋಗಿದೆ (ದಾಂಟು >ದಾಟು, ನಾಂಟು>ನಾಟು), ಪದದ ಕೊನೆಯಲ್ಲಿ ಬರುತ್ತಿದ್ದ ವ್ಯಂಜನ ಬಿದ್ದುಹೋಗಿದೆ (ಹೋದನು>ಹೋದ)

ಇಲ್ಲವೇ ಅದರ ಮುಂದೆ ಒಂದು ಸ್ವರ ಸೇರಿ ಅದು ಒತ್ತಕ್ಶರವಾಗಿದೆ (ಬೆನ್>ಬೆನ್ನು, ಪೆÇನ್>ಹೊನ್ನು, ಪೆಣ್>ಹೆಣ್ಣು). ಕನ್ನಡದವೇ ಆದ ಪದಗಳ ಬರವಣಿಗೆಯಲ್ಲಿ ಕಾಣಿಸುವ ಇಂತಹ ಬದಲಾವಣೆಗಳೆಲ್ಲವೂ ಕನ್ನಡದ ಬರಹಕ್ಕೂ ಮಾತಿಗೂ ನಡುವಿರುವ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ ಬೇರೆ ಬೇರೆ ಸಂದರ್ಬಗಳಲ್ಲಿ ನಡೆದುಕೊಂಡು ಬಂದಿವೆ. ಕನ್ನಡ ಬರಹದಲ್ಲಿ ಇಂತಹ ಹಲವು ಬದಲಾವಣೆಗಳು ನಡೆದಿರುವುದು ಅದರ ಶ್ರೇಶ್ಟತೆಯನ್ನು ಸೂಚಿಸುತ್ತದೆ. ಇವುಗಳಿಂದಾಗಿ ಕನ್ನಡ ಬರಹದ ಮೂಲ ಉದ್ದೇಶ ಇವತ್ತಿಗೂ ಬಹಳ ಚೆನ್ನಾಗಿ ಸಾದಿತವಾಗುತ್ತಿದೆ. ಕನ್ನಡದವೇ ಆದ ಈ ಪದಗಳ ಸ್ವರೂಪವನ್ನು ಬದಲಾಯಿಸಿ ಮೊದಲಿಗೆ ಅವು ಹಳೆಗನ್ನಡದಲ್ಲಿ ಹೇಗಿದ್ದುವೋ ಹಾಗೆಯೇ ಇವತ್ತೂ ಬರೆಯಬೇಕೆಂದೇನೂ ಕನ್ನಡದ ವಿದ್ವಾಂಸರು ವಾದಿಸುವುದಿಲ್ಲ. ಇವುಗಳ ಸ್ವರೂಪದಲ್ಲಿ ನಡೆದ ಬದಲಾವಣೆಗಳಿಂದಾಗಿ ನಮ್ಮ ಸಂಸ್ಕ್ರುತಿ’ ನಾಶವಾಗಿದೆಯೆಂದು ಅವರಿಗೆ ಅನಿಸುವುದೂ ಇಲ್ಲ. ಆ ರೀತಿ ವಾದಿಸಿ, ತಮ್ಮ ನುಡಿಯ ಬರಹ ತುಂಬಾ ಕ್ಲಿಶ್ಟವಾಗುವ ಹಾಗೆ ಮಾಡಿದ ವಿದ್ವಾಂಸರೂ ಇದ್ದಾರೆ ಎಂಬುದು ಇಂಗ್ಲಿಶ್, ಅಸಮೀಸ್ ಮೊದಲಾದ ಬೇರೆ ಕೆಲವು ನುಡಿಗಳ ಬರಹಗಳನ್ನು ಪರಿಶೀಲಿಸಿದಾಗ ಗೊತ್ತಾಗುತ್ತದೆ (3.4.1-2 ನೋಡಿ). ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಮಾತ್ರ ಎರಡು ಸಾವಿರ ವರ್ಶಗಳಶ್ಟು ಹಿಂದೆ ಅವು ಹೇಗಿದ್ದುವೋ ಹಾಗೆಯೇ ಉಳಿಸಬೇಕೆಂಬುದಾಗಿ ಕನ್ನಡದ ವಿದ್ವಾಂಸರು ವಾದಿಸುತ್ತಾರೆ. ಇವುಗಳಲ್ಲಿ ಹಲವು ಪದಗಳು ಕನ್ನಡಿಗರ ಮಾತಿನಲ್ಲಿ ಮಾತ್ರವಲ್ಲದೆ ಬರಹದಲ್ಲೂ ಬದಲಾವಣೆಗಳನ್ನು ಕಂಡಿದ್ದುವು. ಆದರೆ ಅವುಗಳಲ್ಲಿ ಹೆಚ್ಚಿನವನ್ನೂ ಇವರು ಶುದ್ದ’ ರೂಪದಲ್ಲಿ ಸಂಸ್ಕ್ರುತದಿಂದ ತಿರುಗಿ ಎರವಲು ಪಡೆದುಕೊಂಡಿದ್ದಾರೆ (3.2.2 ನೋಡಿ). ಕನ್ನಡ ಬರಹಗಾರರ ಈ ಕುರುಡು ಅಬಿಮಾನದ ಹೊರೆಯನ್ನು ಇವತ್ತು ಎಲ್ಲಾ ಕನ್ನಡಿಗರೂ ಹೊರಬೇಕಾಗಿದೆ. ಎಲ್ಲಾ ವರ್ಗದ ಜನರೂ ಬಳಸಬೇಕಾಗಿರುವ ಬರಹಗಳಿಂದಲಾದರೂ ಇಂತಹ ಅವಶ್ಯವಿಲ್ಲದ ಅಕ್ಶರಗಳನ್ನು

ತೆಗೆದುಹಾಕಿದಲ್ಲಿ ಜನರಿಗೆ ಅವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು. ಸಂಸ್ಕ್ರುತದ ಕುರುಡು ಅಬಿಮಾನಿಗಳು ಬೇಕಿದ್ದರೆ ತಮ್ಮ ಬರಹಗಳಲ್ಲಿ ಈ ಎಲ್ಲಾ ಹೆಚ್ಚಿನ ಅಕ್ಶರಗಳನ್ನೂ ಬಳಸಿಕೊಳ್ಳಲಿ; ಆದರೆ ಕನ್ನಡದ ಎಲ್ಲಾ ರೀತಿಯ ಬರಹಗಳಲ್ಲೂ ಅವನ್ನು ಉಳಿಸಬೇಕೆಂಬ ಆಗ್ರಹ ಬೇಡ. ಕೆಳವರ್ಗದ ಜನರು ದೇವಾಲಯಗಳನ್ನು ಮತ್ತು ತಮ್ಮ ಮನೆಗಳನ್ನು ಪ್ರವೇಶಿಸಿದಲ್ಲಿ ತಮ್ಮ ದರ್ಮ’ವೇ ನಾಶವಾದೀತೆಂದು ಮೇಲ್ವರ್ಗದ ಜನರು ವಾದಿಸುತ್ತಿದ್ದರು. ನಿಜಕ್ಕೂ ಕೆಳವರ್ಗದ ಜನರು ಕೆಳವರ್ಗದಲ್ಲಿಯೇ ಅಸ್ಪ್ರುಶ್ಯರಾಗಿ ಉಳಿಯುವಂತೆ ಮಾಡುವುದೇ ಈ ವಾದದ ಮೂಲ ಉದ್ದೇಶವಾಗಿತ್ತು. ಇವತ್ತಿಗೂ ಹಳ್ಳಿಗಳಲ್ಲಿ ಇದೇ ದರ್ಮದ ಹೆಸರಿನಲ್ಲಿ ಕೆಳವರ್ಗದ ಜನರನ್ನು ದೂರ ಇರಿಸಲಾಗುತ್ತದೆ. ಆದರೆ ಇದು ತಪ್ಪು, ಇದನ್ನು ಸರಿಪಡಿಸಬೇಕು ಎಂಬುದನ್ನು ಇವತ್ತು ಹೆಚ್ಚಿನವರೂ ಒಪ್ಪಿಕೊಳ್ಳುತ್ತಾರೆ. ಕನ್ನಡ ಬರಹದಲ್ಲಿ ಬರುವ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು, ಇಲ್ಲವಾದರೆ ನಮ್ಮ ಸಂಸ್ಕ್ರುತಿ’ಯೇ ನಶ್ಟವಾಗುತ್ತದೆ ಎಂಬ ವಾದವೂ ಅಂತಹದೇ. ಅದು ಮುಕ್ಯವಾಗಿ ಕೆಳವರ್ಗದ ಮಕ್ಕಳನ್ನೇ ಬರಹದಿಂದ ದೂರ ಉಳಿಯುವಂತೆ ಮಾಡುತ್ತದೆ. ಯಾಕೆಂದರೆ, ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವ ಕೆಲಸ ಮೇಲ್ವರ್ಗದ ಮಕ್ಕಳಿಗಿಂತಲೂ ಕೆಳವರ್ಗದ ಮಕ್ಕಳಿಗೆ ಹೆಚ್ಚು ಕಶ್ಟವಾಗುತ್ತದೆ. ಹಾಗಾಗಿ ಈ ನಿರ್ಬಂದದಿಂದಾಗಿ ಬರಹದಿಂದ ದೂರ ಉಳಿಯುವುದು ಹೆಚ್ಚಾಗಿ ಕೆಳವರ್ಗದ ಮಕ್ಕಳೇ. ಕನ್ನಡ ಬರಹದಲ್ಲಿ ಕಾಣಿಸುವ ಅವಶ್ಯವಿಲ್ಲದ ಈ ನಿರ್ಬಂದವನ್ನು ತೆಗೆದು ಹಾಕಿರುವಂತಹ ಒಂದು `ಹೊಸ ಬರಹ’ವನ್ನು ಕನ್ನಡದಲ್ಲಿ ಬಳಸುವ ಬಗೆ ಹೇಗೆ? ಹಾಗೆ ಮಾಡುವುದರಿಂದ ನಾವು ಪಡೆಯಬಹುದಾದ ಪ್ರಯೋಜನಗಳು ಎಂತಹವು? ಅದಕ್ಕಾಗಿ ಈಗಿರುವ ಬರಹವನ್ನು ಕಲಿತಿರುವ ಜನರು ಎದುರಿಸಬೇಕಾಗುವ ತೊಂದರೆಗಳು ಎಂತಹವು? ಮತ್ತು ಹೊಸ ಬರಹವನ್ನು ಕಲಿತವರಿಗೆ

ಹಳೆ ಬರಹದಲ್ಲಿ ಈಗಾಗಲೇ ಪ್ರಕಟವಾಗಿರುವ ಬರಹಗಳನ್ನು ಓದಲು ಎಶ್ಟು ಕಶ್ಟವಾಗಬಲ್ಲುದು? ಇಂತಹ ಹಲವು ವಿಶಯಗಳನ್ನು ಇನ್ನಶ್ಟು ವಿವರವಾಗಿ ಈ ಪುಸ್ತಕದ ಎರಡನೇ ವಿಬಾಗದಲ್ಲಿ (ಅದ್ಯಾಯ 3-4) ಪರಿಶೀಲಿಸಲಾಗಿದೆ. 1.5 ಪದಕ್ರಾಂತಿ : ಸಂಸ್ಕ್ರುತ ಪದಗಳನ್ನು ಕಡಿಮೆ ಮಾಡುವುದು ಕೆಳವರ್ಗದ ಜನರಿಗೆ ಕನ್ನಡ ಬರಹಗಳನ್ನು ಓದಿ ಅರ್ತಮಾಡಿಕೊಳ್ಳುವ ಕೆಲಸ ಹೆಚ್ಚು ಸುಲಬವಾಗುವಂತೆ ಮಾಡಲು ನಾವು ಮಾಡಬೇಕಾಗಿರುವ ಇನ್ನೊಂದು ಮುಕ್ಯವಾದ ಕೆಲಸವೇನೆಂದರೆ, ಕನ್ನಡ ಬರಹಗಳಲ್ಲಿ ಸಾದ್ಯವಿರುವಲ್ಲೆಲ್ಲ ಕನ್ನಡದವೇ ಆದ ಪದಗಳನ್ನು ಬಳಸಲು ಪ್ರಯತ್ನಿಸುವುದು ಮತ್ತು ಅವಶ್ಯವಿಲ್ಲದಿರುವಲ್ಲೂ ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿಗೆ ಕಡಿವಾಣ ಹಾಕುವುದು. ಸಾಮಾನ್ಯ ಜನರ ಮಾತಿನಲ್ಲಿ ಸಂಸ್ಕ್ರುತ ಪದಗಳು ಬಹಳ ಅಪರೂಪವಾಗಿ ಮಾತ್ರವೇ ಬಳಕೆಯಾಗುತ್ತವೆ. ಹೀಗೆ ಬಳಕೆಯಾಗುವಾಗಲೂ ಅವುಗಳ ಸ್ವರೂಪದಲ್ಲಿ ಬಹಳಶ್ಟು ಬದಲಾವಣೆಗಳಾಗಿರುತ್ತವೆ. ಆದರೆ ಕನ್ನಡ ಬರಹಗಳಲ್ಲಿ ಈ ಪದಗಳು ಹೆಚ್ಚಾಗಿ ಅವುಗಳ ತತ್ಸಮ ರೂಪದಲ್ಲೇನೇ ಬಳಕೆಯಾಗುತ್ತವೆ. ಹಾಗಾಗಿ ಸಾಮಾನ್ಯ ಜನರಿಗೆ ಅವನ್ನು ಗುರುತಿಸುವುದೂ ಕಶ್ಟ, ಅರ್ತಮಾಡಿಕೊಳ್ಳುವುದೂ ಕಶ್ಟ. ಈ ವಿಶಯದಲ್ಲಿ ಮೇಲ್ವರ್ಗದ ಜನರಿಗಿಂತಲೂ ಕೆಳವರ್ಗದ ಜನರು ಹೆಚ್ಚು ತೊಂದರೆ ಪಡಬೇಕಾಗುತ್ತದೆ. ಯಾಕೆಂದರೆ, ಮೇಲ್ವರ್ಗದವರ ಮಾತಿನಲ್ಲಿ ಕೆಳವರ್ಗದವರಿಗಿಂತ ಹೆಚ್ಚು ಸಂಸ್ಕ್ರುತ ಪದಗಳು ಬಳಕೆಯಾಗುತ್ತವೆ ಮತ್ತು ಅವುಗಳ ಸ್ವರೂಪವೂ ತತ್ಸಮ ರೂಪಕ್ಕೆ ಹೆಚ್ಚು ಹತ್ತಿರದ್ದಾಗಿರುತ್ತದೆ. ಕನ್ನಡ ಬರಹಗಳಲ್ಲಿ ಸಂಸ್ಕ್ರುತ ಪದಗಳನ್ನು ಆದಶ್ಟು ಕಡಿಮೆ ಬಳಸುವ ಮೂಲಕ ಮೇಲ್ವರ್ಗದವರಿಗೂ ಕೆಳವರ್ಗದವರಿಗೂ ನಡುವಿರುವ ಈ ಅಸಮಾನತೆಯನ್ನು ಕಡಿಮೆ ಮಾಡಬಹುದು. ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿ ಒಂದು ಸಾವಿರ ವರ್ಶಗಳಿಗಿಂತಲೂ ಹಳೆಯದು.

ಕನ್ನಡದ ಬರಹ ಮೊದಲಾದ ಕಾಲದಿಂದಲೂ ಅದರ ಬರಹಗಾರರು ಸಂಸ್ಕ್ರುತದ ಪ್ರಬಾವದಲ್ಲೇ ಬೆಳೆದು ಬಂದಿರುವುದು ಮತ್ತು ಅವರು ರಚಿಸಿದ ಶಾಸ್ತ್ರ ಗ್ರಂತಗಳಿಗೆ ಮಾತ್ರವಲ್ಲದೆ ಸಾಹಿತ್ಯ ಗ್ರಂತಗಳಿಗೂ ಸಂಸ್ಕ್ರುತದ ಗ್ರಂತಗಳೇ ಆದಾರವಾಗಿದ್ದುದು ಈ ಚಾಳಿಗೆ ಮುಕ್ಯ PÁgÀt. ಈ ಚಾಳಿಯಿಂದಾಗಿ, ಕನ್ನಡದ ಹೆಚ್ಚಿನ ಬರಹಗಾರರಿಗೂ ಇವತ್ತು ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಇಂಗ್ಲಿಶ್ ನುಡಿಯಲ್ಲಿ ಬರುವ ಪದಗಳಿಗೆ ಸಮಾನ ಪದಗಳನ್ನು ತಯಾರಿಸಬೇಕಾದಾಗಲೆಲ್ಲ ಇವರು ಹೆಚ್ಚಾಗಿ ಸಂಸ್ಕ್ರುತ ಪದಗಳನ್ನು ಇಲ್ಲವೇ ಪದಕಾಂಡಗಳನ್ನು ಬಳಸುತ್ತಾರೆ. ಈ ಪದಗಳು ಕನ್ನಡದವಲ್ಲ, ಸಂಸ್ಕ್ರುತವೆಂಬ ಕನ್ನಡಕ್ಕಿಂತ ತೀರ ಬಿನ್ನವಾಗಿರುವ ಬೇರೊಂದು ನುಡಿಯದು ಎಂಬ ವಿಶಯ ಅವರ ಗಮನಕ್ಕೇ ಬರುವುದಿಲ್ಲ. ದೂರದರ್ಶನ, ದಿನಪತ್ರಿಕೆ, ದೂರವಾಣಿ, ಚಲನಚಿತ್ರ, ಗ್ರಂತಾಲಯ, ವಸ್ತುಪ್ರದರ್ಶನ, ಪಟ್ಯಪುಸ್ತಕ, ಉಚ್ಚಶಿಕ್ಶಣ, ದ್ವನಿವರ್ದಕ, ನಿರುದ್ಯೋಗ ಸಮಸ್ಯೆ, ಲೋಕಾಯುಕ್ತ, ಜನಗಣನೆ ಮೊದಲಾದ ಹಲವಾರು ದಿನಬಳಕೆಯ ಪದಗಳಲ್ಲಿ ಕಾಣಿಸುವ ಹಾಗೆ, ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಸಂಸ್ಕ್ರುತಕ್ಕೇನೇ ಮೊರೆಹೊಗುತ್ತಿದ್ದಾರೆ. ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಸಾದ್ಯವಿದ್ದರೂ ಅವು ಅವರ ಗಮನಕ್ಕೇ ಬರುವುದಿಲ್ಲ. ಇದಲ್ಲದೆ, ಸುಲಬವಾಗಿ ಅರ್ತವಾಗುವ ಕನ್ನಡದವೇ ಆದ ಪದಗಳು ಈಗಾಗಲೇ ಬಳಕೆಯಲ್ಲಿದ್ದರೂ ಅವನ್ನು ಬಳಸದೆ ಅವಕ್ಕಿಂತ ಕ್ಲಿಶ್ಟವಾಗಿರುವ ಸಂಸ್ಕ್ರುತ ಪದಗಳನ್ನು ಬಳಸುವ ಚಾಳಿ ನಮ್ಮ ಹೆಚ್ಚಿನ ಬರಹಗಾರರಲ್ಲೂ ಕಾಣಿಸುತ್ತಿದೆ. ಉದಾಹರಣೆಗಾಗಿ, ಕನ್ನಡದ ದಿನಪತ್ರಿಕೆಗಳಲ್ಲಿ ಲಭ್ಯ, ಶೀಘ್ರ, ಆಬಾಧಿತ, ಪ್ರಥಮ, ಬೃಹತ್, ಸೂಕ್ತ, ಭುವಿ, ಧರೆ, ನಭ ಮೊದಲಾದ ಹಲವು ಸಂಸ್ಕ್ರುತ ಪದಗಳು ಆಗಾಗ ತಲೆಬರಹಗಳಲ್ಲೇನೇ ಕಾಣಿಸಿಕೊಳ್ಳುತ್ತವೆ. ಯಾವುದಾದರೊಂದು ಸಂಸ್ಕ್ರುತ ಪದ ಬಳಕೆಗೆ ಬಂದು ಜನರಿಗೆ

ಪರಿಚಿತವಾದೊಡನೆ ಅದಕ್ಕಿಂತ ಕ್ಲಿಶ್ಟವಾಗಿರುವ ಇನ್ನೊಂದು ಪದವನ್ನು ಸಂಸ್ಕ್ರುತದಿಂದ ತಂದು ತುರುಕುವುದನ್ನು ಕೆಲವರು ಬರಹಗಾರರು ಮಾಡುತ್ತಿದ್ದಾರೆ. ಈ ರೀತಿ ಸಂಸ್ಕ್ರುತ ಪದಗಳನ್ನು ಬಳಸುವುದು ಒಂದು ರೀತಿಯ ಹೆಚ್ಚುಗಾರಿಕೆ ಎಂಬುದಾಗಿ ಅವರು ತಿಳಿದಿರುವ ಹಾಗಿದೆ. ಸಾಮಾನ್ಯ ಜನರ ಜೀವನವನ್ನು ಮತ್ತು ಮಾತನ್ನು ಚಿತ್ರಿಸುವ ಬರಹಗಳಲ್ಲಿ (ಕತೆ, ಕಾದಂಬರಿ, ನಾಟಕ ಮೊದಲಾದವುಗಳಲ್ಲಿ) ನೂರಕ್ಕೆ ಅಯ್ದು ಇಲ್ಲವೇ ಆರಕ್ಕಿಂತ ಹೆಚ್ಚು ಸಂಸ್ಕ್ರುತ (ತತ್ಸಮ) ಪದಗಳು ಕಾಣಿಸುವುದಿಲ್ಲ. ಇದು ಹೆಚ್ಚೆಂದರೆ ನೂರಕ್ಕೆ ಹತ್ತರಶ್ಟಿರಬಹುದು. ಕೆಳವರ್ಗದ ಜನರ ಜೀವನವನ್ನು ಚಿತ್ರಿಸುವ ಬರಹಗಳಲ್ಲಂತೂ ಇಂತಹ ಪದಗಳು (ಅದೂ ತತ್ಸಮ ರೂಪದಲ್ಲಿ) ಕಾಣಿಸುವುದೇ ಅಪರೂಪ. ಆದರೆ ಕನ್ನಡದ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಹೆಚ್ಚಿನೆಡೆಗಳಲ್ಲೂ ನೂರಕ್ಕೆ ಮೂವತ್ತಕ್ಕಿಂತಲೂ ಹೆಚ್ಚು ಸಂಸ್ಕ್ರುತ (ತತ್ಸಮ) ಪದಗಳು ಬಳಕೆಯಾಗುವುದನ್ನು ಕಾಣಬಹುದು. ಅವುಗಳಲ್ಲಿ ಬರುವ ಕೆಲವು ಬರಹಗಳಲ್ಲಂತೂ ಇವು ನೂರಕ್ಕೆ ಅಯ್ವತ್ತಕ್ಕಿಂತಲೂ ಹೆಚ್ಚು ಇರುತ್ತವೆ! ಕನ್ನಡದವೇ ಆದ, ಎಲ್ಲರಿಗೂ ಅರ್ತವಾಗಬಲ್ಲ, ಪದಗಳಿರುವಲ್ಲೂ ಸಂಸ್ಕ್ರುತ ಪದಗಳನ್ನು ಬಳಸುವ ಪತ್ರಕರ್ತರ’ ಮತ್ತು ಇತರ ಬರಹಗಾರರ ಚಾಳಿಯೇ ಇದಕ್ಕೆ ಮುಕ್ಯ ಕಾರಣ. ಎಲ್ಲಾ ವರ್ಗದ ಜನರನ್ನೂ ತಲಪಬೇಕಾಗಿರುವ ಈ ಬರಹಗಳು ಈ ರೀತಿ ಓದಲು ಹೆಚ್ಚು ಹೆಚ್ಚು ತೊಡಕಿನವಾಗುವ ಹಾಗೆ ಬದಲಾಗುತ್ತಿರುವುದು ನಿಜಕ್ಕೂ ಆಶ್ಚರ್ಯವೇ. ಈ ಸಂದರ್ಬದಲ್ಲಿ ಬಿ.ಎಂ.ಶ್ರೀಯವರು ಹೇಳಿದ ಒಂದು ಮಾತನ್ನು ನೆನಪಿಸುವ ಅವಶ್ಯಕತೆಯಿದೆ. ಹಿಂದಿನ ಕಾಲದಲ್ಲಿ ಮಹನೀಯರಾದವರು ದೇಶಭಾಷೆಯ ಮೂಲಕ ಜನರನ್ನು ಬದುಕಿಸಬೇಕೆಂದು ಯೋಚನೆ ಮಾಡಿ ಕನ್ನಡವನ್ನು ಪುಷ್ಟಿಗೊಳಿಸುವುದಕ್ಕೆ, ಕನ್ನಡದ ಜ್ಞಾನಭಂಡಾರವನ್ನು ಹೆಚ್ಚಿಸುವುದಕ್ಕೆ ಸಂಸ್ಕೃತವನ್ನು ಮರೆಹೊಕ್ಕರು. ಅದರ ಮೂಲಕ ಕನ್ನಡ ನಾನಾಮುಖವಾಗಿ ಪುಷ್ಟಿಹೊಂದಿತು. ಅವರಿಗೆ ಸಂಸ್ಕೃತದ ಮೇಲಿದ್ದ ಮಮತೆಯಲ್ಲಿ ಕನ್ನಡದ ಶಕ್ತಿಗೆ ಮೀರಿ ಅದು ಹೊರಲಾರದಷ್ಟು ಹೊರೆ

ಅಲ್ಲಿಂದ ಬಂದಿದ್ದರೂ ಬಂದಿರಬಹುದು - ಬಂದಿದೆ! ಆ ಹೆಚ್ಚು ಹೊರೆಯನ್ನು ಇಳಿಸಿ, ಕನ್ನಡವನ್ನು ತಿಳಿಮಾಡಬೇಕೆಂದು ನನ್ನ ಮತ’ (ಶೀಕಂಟಯ್ಯ 1985:345). 1.5.1 ಹೊಸ ಪದಗಳನ್ನು ಉಂಟುಮಾಡುವುದು ಕನ್ನಡ ಬರಹದ ಮೇಲೆ ಸಂಸ್ಕ್ರುತ ಪದಗಳ ಹೊರೆ ಜಾಸ್ತಿಯಾಗದ ಹಾಗೆ ಮಾಡಲು ನಾವು ಹೊಸ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಸಂಸ್ಕ್ರುತದ ಪದ ಮತ್ತು ಪ್ರತ್ಯಯಗಳನ್ನು ಬಳಸುವ ಈ ಚಾಳಿಯನ್ನು ಸಾದ್ಯವಿದ್ದಶ್ಟು ಕಡಿಮೆ ಮಾಡಬೇಕು. ಯಾಕೆಂದರೆ ಈ ಚಾಳಿಯಿಂದಾಗಿ ಇವತ್ತು ಕನ್ನಡ ಬರಹದ ಸ್ವರೂಪವೇ ಬದಲಾಗುತ್ತಿದೆ. ಅದು ತನ್ನ ಸಹಜತೆಯನ್ನು ಕಳೆದುಕೊಂಡು ಕ್ರುತಕವಾಗುತ್ತಿದೆ ಮತ್ತು ಆಡುಮಾತಿನಿಂದ ದೂರಹೋಗುತ್ತಿದೆ. ಈ ಚಾಳಿ ಮುಕ್ಯವಾಗಿ ನಮ್ಮ ಬರಹಗಾರರಿಗೆ ಕನ್ನಡದ ಮೇಲಿರುವ ಕೀಳರಿಮೆಯಿಂದಾಗಿ ಬೆಳೆದುಬಂದಿದೆ. ಕನ್ನಡ ಪದಗಳ ಬದಲು ಸಂಸ್ಕ್ರುತ ಪದಗಳನ್ನು ಬಳಸಿ ಈ ರೀತಿ ಹೊಸಪದಗಳನ್ನು ಉಂಟುಮಾಡಿದಲ್ಲಿ ಅವನ್ನು ಬಳಸಿರುವ ತಮ್ಮ ಬರಹಗಳ ಮಟ್ಟ ಮೇಲೇರುತ್ತದೆ ಮತ್ತು ಅವನ್ನು ಓದುವವರು ತಮ್ಮ ಪಾಂಡಿತ್ಯವನ್ನು ಮೆಚ್ಚಿಕೊಳ್ಳುತ್ತಾರೆ ಎಂಬುದಾಗಿ ಹೆಚ್ಚಿನ ಬರಹಗಾರರೂ ಬಾವಿಸುತ್ತಾರೆ. ಇದಲ್ಲದೆ ಆ ರೀತಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಸಂಸ್ಕ್ರುತದ ಮೊರೆಹೊಗುವುದು ಅನಿವಾರ್ಯವೆಂಬುದಾಗಿಯೂ ಕನ್ನಡದ ಬರಹಗಾರರಲ್ಲಿ ಹಲವು ಮಂದಿ ಬಾವಿಸುತ್ತಾರೆ. ಸಂಸ್ಕ್ರುತದಲ್ಲಿರುವಶ್ಟು ಪ್ರತ್ಯಯಗಳು ಮತ್ತು ಪದಗಳು ಕನ್ನಡದಲ್ಲಿಲ್ಲ ಎಂಬ ಅವರ ಅನಿಸಿಕೆ ಇದಕ್ಕೆ ಒಂದು ಕಾರಣವಾದರೆ, ಹೊಸ ಪದಗಳನ್ನು ಉಂಟುಮಾಡುವಲ್ಲಿ ಸಂಸ್ಕ್ರುತಕ್ಕಿರುವ ಕಸುವು ಕನ್ನಡಕ್ಕಿಲ್ಲ ಎಂಬ ಅವರ ಅನಿಸಿಕೆ ಇನ್ನೊಂದು ಕಾರಣ.

ಆದರೆ ಇವೆರಡೂ ತಪ್ಪು ಅನಿಸಿಕೆಗಳು. ಯಾಕೆಂದರೆ, ಯಾವ ರೀತಿಯ ಆಶಯವನ್ನು ಬೇಕಿದ್ದರೂ ಸ್ಪಶ್ಟವಾಗಿ ತಿಳಿಸಬಲ್ಲ ಪದಸಂಪತ್ತು ಮತ್ತು ಪದರಚನೆಯ ವಿದಾನಗಳು ಕನ್ನಡದಲ್ಲಿವೆ. ಮೇಲ್ನೋಟಕ್ಕೆ ಸಂಸ್ಕ್ರುತ ಈ ವಿಶಯದಲ್ಲಿ ಹೆಚ್ಚು ಶ್ರೀಮಂತವಾದ ನುಡಿಯೆಂಬುದಾಗಿ ಅನಿಸಬಹುದು. ಆದರೆ ಆಳವಾಗಿ ಪರಿಶೀಲಿಸಿದಾಗ ಸಂಸ್ಕ್ರುತದ ಈ ಶ್ರೀಮಂತಿಕೆ ಇಲ್ಲವೇ ಹೆಚ್ಚುಗಾರಿಕೆ ನಿಜಕ್ಕೂ ಪದರಚನೆಯಲ್ಲಿ ಕನ್ನಡದ ಮಟ್ಟಿಗೆ ಅನವಶ್ಯಕವಾದ ಗೊಂದಲವನ್ನು ತಂದುಹಾಕುತ್ತದಲ್ಲದೆ, ಅವಶ್ಯವಿರುವ ಸಂಪತ್ತನ್ನೇನೂ ಒದಗಿಸುವುದಿಲ್ಲ ಎಂಬ ವಿಶಯ ಸ್ಪಶ್ಟವಾಗುತ್ತದೆ. ಉದಾಹರಣೆಗಾಗಿ ಕನ್ನಡಕ್ಕೆ ಅವಶ್ಯವಿರುವ ನಾಮಪದ-ಗುಣಪದ ವ್ಯತ್ಯಾಸ ಸಂಸ್ಕ್ರುತದಲ್ಲಿಲ್ಲ. ಕೆಲವು ಸಂದರ್ಬಗಳಲ್ಲಿ ಸಂಸ್ಕ್ರುತದಲ್ಲಿಲ್ಲದ ಈ ವ್ಯತ್ಯಾಸವನ್ನು ನಾವು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಮೇಲೆ ಹೊರಿಸಿಕೊಂಡಿದ್ದೇವೆ. ಉದಾಹರಣೆಗಾಗಿ ನೈಸಗ್ರಿಕ, ಲೈಂಗಿಕ, ನೈತಿಕ, ದೈಹಿಕ, ದೈವಿಕ ಮೊದಲಾದ ಇಕ ಪ್ರತ್ಯಯವಿರುವ ಸಂಸ್ಕ್ರುತದ ನಾಮಪದಗಳನ್ನು ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಗುಣಪದಗಳಾಗಿ ಬಳಸುತ್ತೇವೆ. ಆದರೆ ರಸಿಕ, ವೈದಿಕ, ತಾರ್ಕಿಕ, ಮಾಂತ್ರಿಕ ಮೊದಲಾದ ಇಂತಹವೇ ಬೇರೆ ಹಲವು ಸಂಸ್ಕ್ರುತದ ನಾಮಪದಗಳನ್ನು ನಾಮಪದಗಳಾಗಿಯೂ ಬಳಸುತ್ತೇವಾದ ಕಾರಣ, ಇದು ಗೊಂದಲವನ್ನೇ ಉಂಟುಮಾಡಿದೆ (ಹೆಚ್ಚಿನ ವಿವರಗಳಿಗೆ 7.3.1-3 ನೋಡಿ). ಕ್ರಿಯಾಪದಗಳಿಂದ ನಾಮಪದಗಳನ್ನು ಉಂಟುಮಾಡುವುದಕ್ಕಾಗಿ ಎಂತಹ ವಿದಾನಗಳೆಲ್ಲ ಅವಶ್ಯವೋ ಅವೆಲ್ಲವೂ ಕನ್ನಡದಲ್ಲೇ ಇವೆ. ಇದಕ್ಕಾಗಿ ಸಂಸ್ಕ್ರುತದ ಮೊರೆಹೊಗುವ ಅವಶ್ಯಕತೆಯೇ ಇಲ್ಲ. ಅದಕ್ಕಾಗಿ ಬಳಕೆಯಾಗಬಲ್ಲ ಪ್ರತ್ಯಯಗಳು ಕನ್ನಡಕ್ಕಿಂತ ಸಂಸ್ಕ್ರುತದಲ್ಲಿ ಹೆಚ್ಚಿರಬಹುದು. ಆದರೆ ಹೆಚ್ಚಿನ ಸಂದರ್ಬಗಳಲ್ಲೂ ಇದೊಂದು ತೊಡರಾಗುತ್ತದಲ್ಲದೆ ಸಹಾಯಕವಾಗುವುದಿಲ್ಲ. ಎರಡು ಇಲ್ಲವೇ ಹೆಚ್ಚು ನಾಮಪದಗಳನ್ನು ಒಟ್ಟು ಸೇರಿಸಿ ಹೊಸ ಪದಗಳನ್ನು ಉಂಟುಮಾಡುವುದರಲ್ಲೂ ಕನ್ನಡದಲ್ಲಿ ಅದರದೇ ಆದ ವಿದಾನಗಳು ಬಳಕೆಯಲ್ಲಿವೆ. ಇವು ಸಂಸ್ಕ್ರುತದಲ್ಲಿರುವ

ವಿದಾನಗಳಿಗಿಂತ ಬೇರಾದವುಗಳು. ಇಂತಹ ಪದಗಳ ಅವಶ್ಯಕತೆಯಿರುವಲ್ಲಿ ಸಂಸ್ಕ್ರುತದ ವಿದಾನಗಳಿಗೆ ಮೊರೆಹೊಗುವುದಕ್ಕಿಂತಲೂ ಕನ್ನಡದವೇ ಆದ ವಿದಾನಗಳನ್ನು ಬಳಸುವುದೇ ಕನ್ನಡದ ಮಟ್ಟಿಗೆ ಹಿತವಾದ ದಾರಿ. ಆ ರೀತಿ ಉಂಟುಮಾಡಿದ ಹೊಸ ಪದಗಳು ಕನ್ನಡ ವಾಕ್ಯಗಳಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತವೆ ಮಾತ್ರವಲ್ಲ ಅವುಗಳಿಂದಾಗಿ ಕನ್ನಡದ ಸಹಜತೆ ಮತ್ತು ಸ್ವಂತಿಕೆಗಳೂ ಉಳಿಯುತ್ತವೆ. 1.5.2 ಪಾರಿಬಾಶಿಕ ಪದಗಳನ್ನು ಉಂಟುಮಾಡುವುದು ಹೊಸ ಪದಗಳನ್ನು ಉಂಟುಮಾಡಬೇಕಾಗಿರುವಲ್ಲೆಲ್ಲ ಸಂಸ್ಕ್ರುತದ ಮೊರೆಹೊಗುವ ಕೆಟ್ಟ ಚಾಳಿ ವಿಜ್ನಾನ ಬರಹಗಳಿಗಾಗಿ ಮತ್ತು ಇತರ ಶಾಸ್ತ್ರೀಯ ಬರಹಗಳಿಗಾಗಿ ಪಾರಿಬಾಶಿಕ ಪದಗಳನ್ನು ಉಂಟುಮಾಡುವಲ್ಲಿ ಇನ್ನಶ್ಟು ಹೆಚ್ಚು ಕಾಣಿಸುತ್ತದೆ. ಈ ಚಾಳಿಯಿಂದಾಗಿ ಕನ್ನಡದಲ್ಲಿ ಇದುವರೆಗೆ ಈ ವಿದ್ವಾಂಸರು ಉಂಟುಮಾಡಿರುವ ಪಾರಿಬಾಶಿಕ ಪದಗಳಲ್ಲಿ ಹೆಚ್ಚಿನವೂ ಕನ್ನಡದ ಮಟ್ಟಿಗೆ ತುಂಬಾ ತೊಡಕಿನವಾಗಿವೆ. ಸಾಮಾನ್ಯವಾಗಿ ಇಂತಹ ಪದಗಳ ಅವಶ್ಯಕತೆ ಇಂಗ್ಲಿಶ್ ನುಡಿಯಲ್ಲಿ ಪ್ರಕಟವಾಗಿರುವ ವಿಜ್ನಾನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಬೇಕಾದಾಗ ಇಲ್ಲವೇ ಅವುಗಳಲ್ಲಿರುವ ವಿಶಯಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಬೇಕಾದಾಗ ನಮಗೆ ಉಂಟಾಗುತ್ತದೆ. ಇಂಗ್ಲಿಶ್ ಪಾರಿಬಾಶಿಕ ಪದಗಳನ್ನು ಸಾದ್ಯವಿರುವಲ್ಲೆಲ್ಲ ನಾವು ಹಾಗೆಯೇ ಕನ್ನಡಕ್ಕೆ ಎರವಲಾಗಿ ಪಡೆದು ಬಳಸಬಲ್ಲೆವು. ಈ ಪದಗಳು ಕನ್ನಡದ ಮಟ್ಟಿಗೆ ಬಹಳ ತೊಡಕಿನವಾಗಿ ಕಾಣಿಸುವುದಿದ್ದಲ್ಲಿ ಮತ್ತು ಕನ್ನಡದ ವಾಕ್ಯಗಳಲ್ಲಿ ಅವು ಸರಿಯಾಗಿ ಹೊಂದಿಕೊಳ್ಳುವುದಿಲ್ಲವಾದಲ್ಲಿ ಮಾತ್ರ ಅವಕ್ಕೆ ಬದಲು ಕನ್ನಡದವೇ ಆದ ಪದಗಳನ್ನು ಹೊಸದಾಗಿ ಉಂಟುಮಾಡಿಕೊಂಡು ಬಳಸಬೇಕಾಗುತ್ತದೆ. ಇಂತಹ ಕಡೆಗಳಲ್ಲಿ ಇಂಗ್ಲಿಶ್ ಪಾರಿಬಾಶಿಕ ಪದಗಳಿಗೆ ಬದಲಾಗಿ ಕನ್ನಡದ ವಿದ್ವಾಂಸರು ಸಂಸ್ಕ್ರುತದಲ್ಲಿರುವ ಪದಗಳನ್ನು ಎರವಲಾಗಿ ಪಡೆಯುತ್ತಾರೆ. ಅಂತಹ ಪದಗಳು ಸಂಸ್ಕ್ರುತದಲ್ಲೂ ಇಲ್ಲವಾದಾಗ,

ಇವರು ಸಂಸ್ಕ್ರುತದ ಪದಕಾಂಡಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿ ತಮಗೆ ಬೇಕಾಗಿರುವ ಪದಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮೇಲೆ ವಿವರಿಸಿದ ಉದ್ದೇಶ ಸ್ವಲ್ಪವೂ ಸಾದಿತವಾಗುವುದಿಲ್ಲ. ಯಾಕೆಂದರೆ, ಕನ್ನಡದ ಮಟ್ಟಿಗೆ ಈ ಸಂಸ್ಕ್ರುತ ಪದಗಳೂ ತೊಡಕಾದ ಪದಗಳೇ. ಕೆಲವು ಕಡೆಗಳಲ್ಲಂತೂ ಇವರು ಉಂಟುಮಾಡಿರುವ ಪಾರಿಬಾಶಿಕ ಪದಗಳು ಮೂಲ ಇಂಗ್ಲಿಶ್ ಇಲ್ಲವೇ ಲ್ಯಾಟಿನ್ ಪದಗಳಿಗಿಂತಲೂ ಹೆಚ್ಚು ತೊಡಕಿನವಾಗಿರುವುದನ್ನು ಕಾಣಬಹುದು! ಕನ್ನಡದಲ್ಲಿ ರಚಿತವಾಗಿರುವ ವಿಜ್ನಾನ ಪದಕೋಶಗಳನ್ನು ಪರಿಶೀಲಿಸಿದಲ್ಲಿ ಈ ವಿಶಯ ಸ್ಪಶ್ಟವಾಗುತ್ತದೆ. ಅವುಗಳಲ್ಲಿ ಹೊಸದಾಗಿ ಉಂಟುಮಾಡಿರುವ ಪದಗಳಲ್ಲಿ ನೂರಕ್ಕೆ ಎಂಬತ್ತರಶ್ಟು ಸಂಸ್ಕ್ರುತ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಉಂಟುಮಾಡಿದವುಗಳು! ಕನ್ನಡ ಪದ ಮತ್ತು ಪ್ರತ್ಯಯಗಳು ಇವುಗಳಲ್ಲಿ ಬಹಳ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ನಿಜಕ್ಕೂ ಇದು ಈ ವಿದ್ವಾಂಸರಿಗೆ ಕನ್ನಡದ ಮೇಲಿರುವ ಕೀಳರಿಮೆಯನ್ನು ಸೂಚಿಸುತ್ತದಲ್ಲದೆ ಕನ್ನಡದ ಬಡತನವನ್ನಲ್ಲ. ಕನ್ನಡಕ್ಕೆ ತೀರ ಹತ್ತಿರದ ನಂಟಸ್ತಿಕೆಯಿರುವ ತಮಿಳು ನುಡಿಯಲ್ಲಿ ಪಾರಿಬಾಶಿಕ ಪದಗಳ ತಯಾರಿಕೆ ಹೇಗೆ ನಡೆಯುತ್ತಿದೆಯೆಂಬುದನ್ನು ಪರಿಶೀಲಿಸಿದೆವಾದರೆ ಈ ವಿಶಯ ಸ್ಪಶ್ಟವಾಗುತ್ತದೆ. ಹೊಸ ಪಾರಿಬಾಶಿಕ ಪದಗಳನ್ನು ತಯಾರಿಸುವಲ್ಲಿ ಸಂಸ್ಕ್ರುತ ಪದಗಳ ಬಳಕೆ ತಮಿಳಿನಲ್ಲಿ ನೂರಕ್ಕೆ ಒಂದೆರಡರಶ್ಟಿರಬಹುದು, ಅಶ್ಟೆ! ತಮಿಳಿನಲ್ಲಿ ಸಾದ್ಯವಾಗಿರುವುದು ಕನ್ನಡದಲ್ಲಿ ಯಾಕೆ ಸಾದ್ಯವಾಗುವುದಿಲ್ಲ? ಅವಶ್ಯವಿರುವ ಪದ ತಮ್ಮ ನುಡಿಯಲ್ಲಿ ಕಾಣಿಸದಿದ್ದಾಗ ತಮಿಳು ವಿದ್ವಾಂಸರು ಹಳೆ ತಮಿಳಿಗೆ ಮೊರೆಹೊಗುತ್ತಾರೆ. ಈ ಪದಗಳು ತಮಿಳು ವಾಕ್ಯಗಳಲ್ಲಿ ಸುಲಬವಾಗಿ ಹೊಂದಿಕೊಳ್ಳುತ್ತವೆ ಮತ್ತು ಸಂಸ್ಕ್ರುತ ಪದಗಳ ಹಾಗೆ ತೊಡಕಿನವಾಗಿರುವುದಿಲ್ಲ. ಇದಲ್ಲದೆ ಅವರು ಸಂಸ್ಕ್ರುತ ಪದಗಳನ್ನು ಬಳಸಬೇಕಿದ್ದಲ್ಲೂ ಅವನ್ನು ತಮಿಳಿನ ಪದಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಬದಲಿಸಿಯೇ ಬಳಸುತ್ತಾರೆ.

ತಮಿಳು ಪಾರಿಬಾಶಿಕ ಪದಗಳನ್ನು ಉಂಟುಮಾಡುವಲ್ಲಿ ಮಾಡಿದ ಹಾಗೆ, ಕನ್ನಡದಲ್ಲಿ ಅವಶ್ಯವಾದ ಪದ ಇಲ್ಲದಿರುವಲ್ಲಿ ಹಳೆಗನ್ನಡದಿಂದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಅರಿಸಿಕೊಳ್ಳಲು ಸಾದ್ಯವಿದೆ. ಆದರೆ ಈ ಸಾದ್ಯತೆ ಕನ್ನಡ ವಿದ್ವಾಂಸರ ಗಮನಕ್ಕೇ ಬರುವುದಿಲ್ಲ. ಸಂಸ್ಕ್ರುತ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವುದೇ ಅವರಿಗೆ ಹೆಚ್ಚು `ಸುಲಬ’ವೆಂದು ಅನಿಸುತ್ತದೆ. ಈ ಪದಗಳು ತೊಡಕಿನವಾಗಿ ಕಾಣಿಸಿದಶ್ಟೂ ತಮ್ಮ ಬರಹದ ಮಟ್ಟ ಮೇಲೇರುತ್ತದೆಯೆಂದು ಇವರು ಬಾವಿಸುವ ಹಾಗಿದೆ! ಕನ್ನಡದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವ ಬದಲು ಸಂಸ್ಕ್ರುತದ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸಿದಲ್ಲಿ ವಿಜ್ನಾನ ಬರಹಗಳಿಗೆ ಅವಶ್ಯವಿರುವಂತಹ ಅರ್ತದ ಕಟ್ಟುನಿಟ್ಟು ತಾವು ಉಂಟುಮಾಡಿದ ಪಾರಿಬಾಶಿಕ ಪದಗಳಿಗೆ ಬರಬಲ್ಲುದು ಎಂಬುದಾಗಿಯೂ ಈ ವಿದ್ವಾಂಸರು ಬಾವಿಸುತ್ತಾರೆ. ಆದರೆ ನಿಜಕ್ಕೂ ಮೇಲೆ ಸೂಚಿಸಿದ ಹಾಗೆ, ಈ ಪ್ರತ್ಯಯಗಳು ವಿಜ್ನಾನ ಬರಹಗಳಲ್ಲಿ ಗೊಂದಲ ಮತ್ತು ಅರ್ತಸಂದಿಗ್ದತೆಗಳನ್ನು ತಂದು ಹಾಕಿ, ಕಟ್ಟುನಿಟ್ಟೇ ಇಲ್ಲದ ಹಾಗೆ ಮಾಡುತ್ತವೆ! ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವಾಕ್ಯ ರಚನೆಯ ಮೂಲ ತತ್ವಗಳಲ್ಲೇನೇ ಹಲವು ಮುಕ್ಯವಾದ ವ್ಯತ್ಯಾಸಗಳಿರುವುದೇ ಇದಕ್ಕೆ ಕಾರಣ. ಸಂಸ್ಕ್ರುತದಲ್ಲಿ ಅದರ ವಾಕ್ಯರಚನೆಗೆ ಬೇಕಾಗುವ ಪದಗಳನ್ನು ಉಂಟುಮಾಡಲು ಸಾದ್ಯವಾಗುತ್ತದಲ್ಲದೆ ಕನ್ನಡದ ವಾಕ್ಯರಚನೆಗೆ ಬೇಕಾಗುವ ಪದಗಳನ್ನು ಉಂಟುಮಾಡಲು ಸಾದ್ಯವಾಗುವುದಿಲ್ಲ. ಹೊಸ ಪದಗಳ ತಯಾರಿಕೆಯಲ್ಲಿ ಮತ್ತು ಈಗಾಗಲೇ ಬಳಕೆಗೆ ಬಂದಿರುವ ಪದಗಳ ಬಳಕೆಯಲ್ಲಿ ಅತಿಯಾಗಿ ಸಂಸ್ಕ್ರುತವನ್ನು ಅವಲಂಬಿಸುವುದರಿಂದಾಗಿ ಹೇಗೆ ಕನ್ನಡ ಬರಹ ಮಾತಿನಿಂದ ದೂರ ಹೋಗುತ್ತಿದೆ, ಇದರಿಂದಾಗುವ ತೊಂದರೆಗಳೇನು, ನಿಜಕ್ಕೂ ಇದು ಅವಶ್ಯವೇ, ಕನ್ನಡ ಬರಹ ಸಂಸ್ಕ್ರುತದ ಈ ಅಡಿಮೆಯಿಂದ ಹೊರಬರಲು ನಾವು ಏನು ಮಾಡಬೇಕಾಗಿದೆ ಮತ್ತು ಹಾಗೆ ಮಾಡುವುದರಿಂದ ನಾವು ಪಡೆಯಬಲ್ಲ ಪ್ರಯೋಜನಗಳೆಂತಹವು —