← Ch 1  ·  Contents  ·  Ch 3 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10

ಅಧ್ಯಾಯ 2 — ಕನ್ನಡ ನುಡಿ ಸಂಸ್ಕ್ರುತದಿಂದ ಬೆಳೆದು ಬಂದಿಲ್ಲ

↑ ಒಳಪಿಡಿಗೆ ಹಿಂತಿರುಗಿ

ಎಂಬುದನ್ನೆಲ್ಲ ಈ ಪುಸ್ತಕದ ಮೂರನೆಯ ವಿಬಾಗದಲ್ಲಿ (5-9 ಅದ್ಯಾಯಗಳಲ್ಲಿ) ವಿವರಿಸಲಾಗಿದೆ. 1.6 ಅಜ್ನಾನದಿಂದಾಗುವ ಅನಾಹುತಗಳು ನುಡಿಯ ನಿಜವಾದ ಸ್ವರೂಪವೇನು, ಅದು ಯಾವ ರೀತಿಯಲ್ಲಿ ನಮ್ಮ ದಿನನಿತ್ಯದ ಜೀವನದ ಮೇಲೆ ಪ್ರಬಾವವನ್ನು ಬೀರಬಲ್ಲುದು, ನುಡಿಗೂ ಬರಹಕ್ಕೂ ನಡುವೆ ಎಂತಹ ಸಂಬಂದವಿದೆ ಎಂಬಂತಹ ಹಲವು ರೀತಿಯ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡಬೇಕಿದ್ದಲ್ಲಿ ನಾವು ನುಡಿಯ ಕುರಿತಾಗಿ ಆಳವಾದ ಸಂಶೋದನೆಗಳನ್ನು ನಡೆಸುವ ಅವಶ್ಯಕತೆಯಿದೆ. ಕಳೆದ ನೂರು-ನೂರಯ್ವತ್ತು ವರ್ಶಗಳಲ್ಲಿ ನುಡಿಯರಿಗರು ಇಂತಹ ನೂರಾರು ಸಂಶೋದನೆಗಳನ್ನು ನಡೆಸಿ, ನುಡಿಗಳ ಕುರಿತಾಗಿ ಸಾಮಾನ್ಯ ಜನರಿಗೆ ಬೆರಗು ಹುಟ್ಟಿಸಬಲ್ಲಂತಹ ಹಲವಾರು ಹೊಸ ಸಂಗತಿಗಳನ್ನು ಕಂಡುಹಿಡಿದಿದ್ದಾರೆ. ಬರೇ ಒಂದೆರಡು ಪುಸ್ತಕಗಳನ್ನು ಓದುವುದರ ಮೂಲಕ ಈ ವಿಶಯಗಳನ್ನು ಅರಗಿಸಿಕೊಳ್ಳಲು ಸಾದ್ಯವಾಗದು. ನಮ್ಮ ದೇಹಕ್ಕೆ ಸಂಬಂದಿಸಿದ ಕಣ್ಣು, ಕಿವಿ, ಮಿದುಳು ಮೊದಲಾದ ಬೇರೆ ವಿಶಯಗಳ ಹಾಗೆ, ನುಡಿಯೂ ಒಂದು ಸಂಶ್ಲಿಶ್ಟ ವಿಶಯವಾಗಿದೆ. ಆ ಬೇರೆ ವಿಶಯಗಳ ಹಾಗೆ ನುಡಿಗೆ ಸಂಬಂದಿಸಿದ ಸಮಸ್ಯೆಗಳನ್ನು ಪರಿಹರಿಸಬೇಕಿದ್ದಲ್ಲೂ ತಜ್ನರ ಅವಶ್ಯಕತೆಯಿದೆ. ಆದರೆ ನುಡಿಯ ವಿಶಯದಲ್ಲಿ ಜನರಿಗೆ ಅಜ್ನಾನವಿದೆ ಮಾತ್ರವಲ್ಲ, ಹೆಚ್ಚಿನವರಿಗೂ ತಮ್ಮಲ್ಲಿ ಅಂತಹ ಅಜ್ನಾನವಿದೆಯೆಂಬ ಅರಿವೂ ಇರುವುದಿಲ್ಲ. ಸಾಹಿತ್ಯ ರಚನೆಯಲ್ಲಿ ಸಾಕಶ್ಟು ಹೆಸರು ಮಾಡಿರುವ ಹಲವು ಮಂದಿ ವಿದ್ವಾಂಸರು ನುಡಿಯ ವಿಶಯದಲ್ಲೂ ತಾವು ವಿದ್ವಾಂಸರೇ ಎಂಬುದಾಗಿ ಬಾವಿಸಿಕೊಳ್ಳುತ್ತಾರೆ ಮತ್ತು ಉಪದೇಶ ಕೊಡಲು ಮುಂದಾಗುತ್ತಾರೆ. ಇತರರೂ ಅವರಿಗೆ ಉಪದೇಶ ಕೊಡುವ ಯೋಗ್ಯತೆಯಿದೆಯೆಂದು ಬಾವಿಸುತ್ತಾರೆ. ನುಡಿಯ ಕುರಿತಾಗಿ ಗಣ್ಯರಲ್ಲಿರುವ ಇಂತಹ ಅರಿವಿಗೆ ಬಾರದ ಅಜ್ನಾನದಿಂದಾಗಿ ಹಲವಾರು ರೀತಿಯ ಅನಾಹುತಗಳು ಬೇರೆ ಬೇರೆ ನುಡಿಗಳ ಚರಿತ್ರೆಗಳಲ್ಲಿ ನಡೆದಿರುವುದನ್ನು ಕಾಣಬಹುದು.

ಉದಾಹರಣೆಗಾಗಿ, ಇಂಗ್ಲಿಶ್ ನುಡಿಗೆ ಒಂದು ಉತ್ತಮವಾದ ಅರ್ತಕೋಶವನ್ನು ಸಿದ್ದಪಡಿಸಿದ ಸೇಮ್ಯುವೆಲ್ ಜಾನ್ಸನ್ ಎಂಬ ಮಹಾಶಯ ಇಂಗ್ಲಿಶ್ ಪದಗಳ ವ್ಯುತ್ಪತ್ತಿಯನ್ನು ಆ ಪದಗಳ ಸ್ವರೂಪದಲ್ಲೂ (ಸ್ಪೆಲ್ಲಿಂಗ್ನಲ್ಲೂ) ಸೂಚಿಸುವುದು ಅವಶ್ಯ ಎಂಬುದಾಗಿ ಬಾವಿಸಿ, ಸಾವಿರಾರು ಇಂಗ್ಲಿಶ್ ಪದಗಳಿಗೆ ಬರಹದಲ್ಲಿ ಹೊಸ ಸ್ವರೂಪವನ್ನು ಉಂಟುಮಾಡಿದ್ದ. ಆದರೆ ಬರಹದ ನಿಜವಾದ ಉದ್ದೇಶವನ್ನು ಸಾದಿಸುವಲ್ಲಿ ಪದಗಳ ವ್ಯುತ್ಪತ್ತಿಗೆ ಯಾವ ಕೆಲಸವೂ ಇಲ್ಲ ಎಂಬುದನ್ನು ಆತ ಗಮನಿಸಿರಲಿಲ್ಲ. ಯಾಕೆಂದರೆ, ಬೇರೆ ವಿಶಯಗಳಲ್ಲಿ ಕುಶಲನಾಗಿದ್ದರೂ ನುಡಿಯ ವಿಶಯದಲ್ಲಿ ಆತ ಅಜ್ನಾನಿಯಾಗಿದ್ದ. ಆತನ ಈ ಗಮನಕ್ಕೆ ಬಾರದ ಅಜ್ನಾನ ಇಂಗ್ಲಿಶ್ ನುಡಿಯಲ್ಲಿ ಒಂದು ಬಾರೀ ದೊಡ್ಡ ಸ್ಪೆಲ್ಲಿಂಗ್ ಸಮಸ್ಯೆಯನ್ನೇ ಹುಟ್ಟಿಸಿದೆ (3.4.1 ನೋಡಿ). ಇಂತಹದೇ ತಪ್ಪನ್ನು ಅಸಮೀಸ್ (ಅಸಾಮಿಯಾ) ನುಡಿಯ ಬರಹದಲ್ಲಿ ಲಿಪಿಸುದಾರಣೆಯನ್ನು ಮಾಡುತ್ತೇವೆಂದು ಹೊರಟ ಅಸಮೀಸ್ ಪಂಡಿತರೂ ಮಾಡಿದ್ದಾರೆ. ಬರಹದಲ್ಲಿ ಬರುವ ಅಸಮೀಸ್ ಪದಗಳ ಸಂಸ್ಕ್ರುತ ಮೂಲವನ್ನು ಅವುಗಳ ಸ್ವರೂಪದಲ್ಲೂ ಸೂಚಿಸುವುದು ಅವಶ್ಯ ಎಂಬುದಾಗಿ ಈ ಪಂಡಿತರು ಬಾವಿಸಿದ್ದರು. ಇದರಿಂದಾಗಿ ಉಚ್ಚಾರಣೆಗೂ ಬರಹಕ್ಕೂ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದೆ ಮತ್ತು ಅಸಮೀಸ್ ಬರಹಕ್ಕೆ ಬೇಕಾಗುವ ಮೂವತ್ತೊಂದು ಅಕ್ಶರಗಳ ಬದಲು ಆ ಬರಹದಲ್ಲೀಗ ಅಯ್ವತ್ತೊಂದು ಅಕ್ಶರಗಳು ಬಳಕೆಯಾಗುತ್ತಿವೆ! ಮೊದಲು ಚನ್ನಾಗಿದ್ದ ಬರಹವನ್ನು ಈ ಪಂಡಿತರು ನುಡಿಯ ವಿಶಯದಲ್ಲಿದ್ದ ತಮ್ಮ ಅಜ್ನಾನದಿಂದಾಗಿ ದೊಡ್ಡದೊಂದು ಕಗ್ಗಂಟಾಗುವ ಹಾಗೆ ಮಾಡಿದ್ದಾರೆ! (3.4.2 ನೋಡಿ). ಮಣಿಪುರಿ ನುಡಿಯ ಬರಹಕ್ಕೆ ಬಂಗಾಲಿ ಲಿಪಿಯನ್ನು ಅಳವಡಿಸುವಲ್ಲಿ ಮಣಿಪುರಿ ಪಂಡಿತರು ಮತ್ತು ಸಾಹಿತಿಗಳು ಇನ್ನೊಂದು ರೀತಿಯ ತಪ್ಪನ್ನು ಮಾಡಿದ್ದರು (3.4 ನೋಡಿ). ಅದರಿಂದಾಗಿಯೂ ಆ ನುಡಿಯ ಬರಹದಲ್ಲಿ ಇವತ್ತು ದೊಡ್ಡದೊಂದು ಸ್ಪೆಲ್ಲಿಂಗ್ ಸಮಸ್ಯೆ ಉಂಟಾಗಿದೆ. ಈ ವಿದ್ವಾಂಸರು ಮಣಿಪುರಿ ನುಡಿಯಲ್ಲಿ ಮತ್ತು ಸಾಹಿತ್ಯದಲ್ಲಿ ವಿದ್ವಾಂಸರಾಗಿದ್ದರಲ್ಲದೆ, ನುಡಿ

ಯರಿಮೆಯಲ್ಲಿ ವಿದ್ವಾಂಸರಾಗಿರಲಿಲ್ಲ. ಆದರೆ ನುಡಿಗೆ ಲಿಪಿಯನ್ನು ಅಳವಡಿಸಲು ಬೇಕಾದ ತಿಳಿವು ತಮ್ಮಲ್ಲಿಲ್ಲ ಎಂಬುದನ್ನು ಅವರು ತಿಳಿದಿರಲಿಲ್ಲವಾದ ಕಾರಣ ಅವರಿಂದ ಈ ಅನಾಹುತ ಸಂಬವಿಸಿತು. ಇಂಗ್ಲಿಶ್ನಲ್ಲಿ ಆದ ಹಾಗೆ, ಮಣಿಪುರಿಯಲ್ಲೂ ಈ ಪಂಡಿತರು ಉಂಟುಮಾಡಿದ ಸಮಸ್ಯೆ ಇವತ್ತು ಬಗೆಹರಿಸಲಾಗದ ಸಮಸ್ಯೆಯಾಗಿ G½¢zÉ. ಕನ್ನಡಕ್ಕೆ ಬ್ರಾಹ್ಮೀ ಲಿಪಿಯನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತ ಬರಹಗಳಲ್ಲಿರುವ ಹಾಗೆಯೇ ಬರೆಯಬೇಕು ಎಂಬುದಾಗಿ ಕನ್ನಡದ ವಿದ್ವಾಂಸರು ನಿರ್ದರಿಸಿದ್ದುದೂ ಅಂತಹದೇ ಒಂದು ತಪ್ಪು ನಿರ್ದಾರ. ಬರಹದ ನಿಜವಾದ ಸ್ವರೂಪ, ಅದಕ್ಕೂ ನುಡಿಗೂ ನಡುವಿರುವ ಸಂಬಂದ ಮತ್ತು ಬರಹದ ಬಳಕೆಯ ಮುಕ್ಯ ಉದ್ದೇಶ ಮೊದಲಾದುವನ್ನು ಸರಿಯಾಗಿ ತಿಳಿದುಕೊಳ್ಳದೆ ಕನ್ನಡದ ವಿದ್ವಾಂಸರು ಈ ತಪ್ಪು ನಿರ್ದಾರವನ್ನು ಮಾಡಿದ್ದರು. ಅವರು ಮಾಡಿದ ಈ ತಪ್ಪು ನಿರ್ದಾರವನ್ನು ಬದಲಿಸುವ ಅವಶ್ಯಕತೆ ಇದುವರೆಗೆ ಬಂದಿರಲಿಲ್ಲ. ಯಾಕೆಂದರೆ, ಮೊನ್ನೆ ಮೊನ್ನೆಯವರೆಗೂ ಕನ್ನಡ ಬರಹವನ್ನು ಕೆಲವೇ ಕೆಲವು ಮಂದಿ ಮಾತ್ರ ಬಳಸಬೇಕಾಗಿತ್ತು. ಆದರೆ ಇವತ್ತು ಅದನ್ನು ಎಲ್ಲರೂ ಬಳಸಬೇಕಾಗಿದೆ. ಹಾಗಾಗಿ, ಈ ಅನವಶ್ಯಕವಾದ ನಿರ್ಬಂದವನ್ನು ಇವತ್ತು ತೆಗೆದುಹಾಕಬೇಕಾಗಿದೆ. ಆದರೆ ಹಾಗೆ ಮಾಡಿದಲ್ಲಿ ನಮ್ಮ ಸಂಸ್ಕ್ರುತಿ0iÉುೀ ನಶ್ಟವಾಗಿಬಿಡುತ್ತದೆ0iÉುಂಬ ಇವತ್ತಿನ ಹಲವು ವಿದ್ವಾಂಸರ ಅನಿಸಿಕೆ ಇದಕ್ಕೆ ತಡೆಯಾಗಿದೆ. ನಿಜಕ್ಕೂ ಹಾಗೇನೂ ಆಗುವುದಿಲ್ಲವೆಂಬುದನ್ನು ನಾವು ಮೇಲೆ ನೋಡಿರುವೆವು. ಸಂಸ್ಕ್ರುತ ಪದಗಳ ಬಳಕೆಯಲ್ಲಿ ಈ ವಿದ್ವಾಂಸರ ಅರಿವಿಗೆ ಬಾರದಂತಹ ಹಲವಾರು ಬದಲಾವಣೆಗಳು ಈಗಾಗಲೇ ಕನ್ನಡ ಬರಹಗಳಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ (3.5.4 ನೋಡಿ). ಅವನ್ನೆಲ್ಲ ತಡೆಯುವ ಶಕ್ತಿ ಈ ವಿದ್ವಾಂಸರಿಗಿಲ್ಲ. ಬರಹದಲ್ಲಿ ಈ ಪದಗಳಿಗಿರುವ ಸ್ವರೂಪವನ್ನು ಮಾತ್ರ ಇವರು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳಬಲ್ಲರು. ಹಾಗೆ ಇರಿಸಿಕೊಳ್ಳುವ ಮೂಲಕ ತಾವು ತಮ್ಮ

`ಸಂಸ್ಕ್ರುತಿ’ಯನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂಬ ಬ್ರಮೆಯಲ್ಲಿ ಇವರಿದ್ದಾರೆ. ಕನ್ನಡ ವಿದ್ವಾಂಸರ ಈ ಬ್ರಮೆಯ ಹೊರೆಯನ್ನು ಇವತ್ತು ಕನ್ನಡಿಗರೆಲ್ಲರೂ ಹೊರಬೇಕಾಗಿದೆ. ಮೇಲೆ ಸೂಚಿಸಿದ ಹಾಗೆ, ಸಂಸ್ಕ್ರುತ ಪದಗಳನ್ನು ಎರಡು ಸಾವಿರ ವರ್ಶಗಳಶ್ಟು ಹಿಂದೆ ಹೇಗಿದ್ದುವೋ ಹಾಗೆಯೇ ಇವತ್ತೂ ಬರೆಯುವುದು ಯಾರ ಸಂಸ್ಕ್ರುತಿಯೂ ಅಲ್ಲ. ಅದೊಂದು ಕುರುಡು ಅನುಕರಣೆ ಮಾತ್ರ. ಸಂಸ್ಕ್ರುತದಿಂದಲೇ ಬೆಳೆದು ಬಂದಿರುವ ಪಂಜಾಬಿ, ಸಿಂದಿ, ಕಾಶ್ಮೀರಿ ಮೊದಲಾದ ನುಡಿಗಳೇ ಆ ರೀತಿ ಮಾಡುವುದಿಲ್ಲ. ಹಾಗಿರುವಲ್ಲಿ ಸಂಸ್ಕ್ರುತಕ್ಕಿಂತ ತೀರ ಬೇರಾಗಿರುವ ಮತ್ತು ದ್ರಾವಿಡವೆಂಬ ಬೇರೆಯೇ ಒಂದು ಮೂಲನುಡಿಯಿಂದ ಬೆಳೆದು ಬಂದಿರುವ ಕನ್ನಡದಲ್ಲಿ ಹಾಗೆ ಮಾಡಬೇಕೆಂದು ಹೇಳುವುದು ಎಶ್ಟು ಮಾತ್ರಕ್ಕೂ ಸರಿಯಲ್ಲ. ಕನ್ನಡ ವ್ಯಾಕರಣವನ್ನು ಬರೆಯುವುದರಲ್ಲಿ ಮತ್ತು ಕಲಿಸುವುದರಲ್ಲಿ ಹೇಗೆ ನಮ್ಮ ವಿದ್ವಾಂಸರು ಒಂದು ಸಾವಿರ ವರ್ಶಗಳಿಂದಲೂ ಇಂತಹದೇ ಒಂದು ತಪ್ಪನ್ನು ಮಾಡುತ್ತಾ ಬಂದಿದ್ದಾರೆ, ಸಂಸ್ಕ್ರುತ ವ್ಯಾಕರಣವನ್ನೇ ಕನ್ನಡ ವ್ಯಾಕರಣವೆಂಬುದಾಗಿ ಅವರು ಬ್ರಮಿಸಿದುದರಿಂದಾಗಿ ಹೇಗೆ ನಮ್ಮ ಮಕ್ಕಳಿಗೆ ಇವತ್ತು ವ್ಯಾಕರಣವೆಂಬುದು ಒಂದು ಅನವಶ್ಯಕವಾದ ಮತ್ತು ಅರ್ತವಿಲ್ಲದ ಕಗ್ಗಂಟಾಗಿದೆ ಮತ್ತು ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದನ್ನು ನಾನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕದಲ್ಲಿ (ಬಟ್ 2006) ತೋರಿಸಿಕೊಟ್ಟಿದ್ದೇನೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಬರವಣಿಗೆಯ ವಿಶಯದಲ್ಲಿ ನಮ್ಮ ವಿದ್ವಾಂಸರು ಉಳಿಸಿಕೊಂಡು ಬಂದಿರುವ ಮೇಲಿನ ನಿರ್ಬಂದ ಇದಕ್ಕಿಂತಲೂ ಹೆಚ್ಚು, ಎಂದರೆ ಸುಮಾರು ಒಂದೂವರೆ ಸಾವಿರ ವರ್ಶಗಳಶ್ಟು ಹಿಂದಿನಿಂದಲೂ ಕನ್ನಡ ಬರಹವನ್ನು ಕಟ್ಟಿಹಾಕಿದೆ. ಈ ಕಟ್ಟನ್ನು ಬಿಚ್ಚಿ ಹಾಕಿ ಕನ್ನಡ ಬರಹವನ್ನು ಸಂಸ್ಕ್ರುತದ ಅಡಿಮೆಯಿಂದ ಬಿಡಿಸುವ ಸಂದರ್ಬ ಈಗ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ನಮ್ಮೆದುರಿಗಿದೆ.

ಈ ಸಂದರ್ಬವನ್ನು ನಾವು ಎಗ್ಗಿಲ್ಲದೆ ಬಳಸಿಕೊಳ್ಳಬೇಕು. ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲಾ ವರ್ಗದವರ ಸೊತ್ತಾಗುವ ಹಾಗೆ ಮಾಡುವುದಕ್ಕಾಗಿ ಅದನ್ನು ಇಂತಹ ವಿದ್ವಾಂಸರ ಬಿಗಿ ಹಿಡಿತದಿಂದ ಬಿಡಿಸಿ ಜನಸಾಮಾನ್ಯರ ಕಯ್ಗೆ ಕೊಡಬೇಕು.

  1. ಕನ್ನಡ ನುಡಿ ಸಂಸ್ಕ್ರುತದಿಂದ ಬೆಳೆದುಬಂದಿಲ್ಲ 2.1 ಮುನ್ನೋಟ ಕನ್ನಡಕ್ಕೆ ಸಂಸ್ಕ್ರುತ ಮೂಲ’ ಎಂಬ ಮಾತಿನಲ್ಲಿ ನಂಬಿಕೆಯನ್ನಿರಿಸಿಕೊಂಡಿರುವವರು ಇವತ್ತಿಗೂ ಕರ್ನಾಟಕದಲ್ಲಿ ಬಹಳ ಮಂದಿ ಇದ್ದಾರೆ. ಕನ್ನಡಕ್ಕೆ ಮಾತ್ರವಲ್ಲ ಪ್ರಪಂಚದ ಎಲ್ಲಾ ನುಡಿಗಳಿಗೂ ಸಂಸ್ಕ್ರುತವೇ ಮೂಲ ಎಂಬುದಾಗಿ ನಂಬುವವರೂ ಹಲವು ಮಂದಿ ಇದ್ದಾರೆ. ಇದಲ್ಲದೆ, ಈ ನಂಬಿಕೆಗಳನ್ನು ಪೆÇೀಶಿಸಿಕೊಂಡು ಬರುವ ವಿದ್ವಾಂಸರೂ ನಮ್ಮಲ್ಲಿ ಹಲವು ಮಂದಿ EzÁÝgÉ. ಆದರೆ ಈ ನಂಬಿಕೆಗಳಿಗೆ ಆದಾರವೇನು ಎಂಬುದಾಗಿ ಯಾರಾದರೂ ಕೇಳಿದಲ್ಲಿ ಅದಕ್ಕೆ ಉತ್ತರ ಕೊಡಬಲ್ಲವರು ಯಾರೂ ಇಲ್ಲ. ನಿಜಕ್ಕೂ ಅಂತಹ ಆದಾರ ಯಾವುದೂ ಇಲ್ಲ. ಕನ್ನಡಕ್ಕೆ ಸಂಸ್ಕ್ರುತ ಮೂಲ’ ಎಂಬುದು ಒಂದು ಕುರುಡು ನಂಬಿಕೆ ಮಾತ್ರ. ನಮ್ಮ ವಿದ್ವಾಂಸರಿಗೆ ಮತ್ತು ಇತರ ಹಲವು ಜನರಿಗೆ ಸಂಸ್ಕ್ರುತದ ಮೇಲಿರುವ ಆದರ ಮತ್ತು ಅಬಿಮಾನಗಳು ಮಾತ್ರವೇ ಆ ನಂಬಿಕೆಗೆ ಆದಾರವಾಗಿವೆ. ಇವತ್ತು ನಾವು ಕನ್ನಡ ಬರಹದಲ್ಲಿ ನಡೆಸಬೇಕಾಗಿರುವ ಬದಲಾವಣೆಗಳು ಎಂತಹವು ಎಂಬುದನ್ನು ವಿವರಿಸುವ ಮೊದಲು

ಕನ್ನಡಿಗರಲ್ಲಿರುವ ಈ ಕುರುಡು ನಂಬಿಕೆಗೆ ಆದಾರ ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಡುವ ಅವಶ್ಯಕತೆಯಿದೆ. ಹಾಗೆ ತೋರಿಸುವ ಮೂಲಕ, ಕನ್ನಡದ ಮೇಲಿರುವ ಸಂಸ್ಕ್ರುತದ ಹೊರೆ ನಿಜಕ್ಕೂ ನಮಗೆ ಬೇಡದಿರುವ ಹೊರೆ, ಅದನ್ನು ತೆಗೆದು ಹಾಕುವುದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಅವರಿಗೆ ಮನದಟ್ಟಾಗುವ ಹಾಗೆ ವಿವರಿಸಬೇಕಾಗಿದೆ. ಆ ಕೆಲಸವನ್ನು ಈ ಅದ್ಯಾಯದಲ್ಲಿ ಮಾಡಲಾಗಿದೆ. 2.2 ನುಡಿಗಳ ನಡುವಿನ ನಂಟಸ್ತಿಕೆ ಜನರ ನಡುವೆ ಕಾಣಿಸುವ ಹಾಗೆ ಅವರಾಡುವ ನುಡಿಗಳ ನಡುವೆಯೂ `ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು ಮತ್ತು ಬೇರೆ ಕೆಲವು ನುಡಿಗಳ ನಡುವೆ ಅಶ್ಟೊಂದು ಹತ್ತಿರವಲ್ಲದ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಸಾದ್ಯವಾಗುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ. ಉದಾಹರಣೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ. ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ ಜನರ ಹುಟ್ಟಿಗೂ

ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಸಂಯೋಗದಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಸಂಯೋಗದಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ ಇಲ್ಲವೇ ಎರಡು ಇಲ್ಲವೇ ಹೆಚ್ಚು ನುಡಿಗಳಾಗಿ ಒಡೆದುಕೊಳ್ಳುತ್ತದೆ. ಉದಾಹರಣೆಗಾಗಿ, ಸಂಸ್ಕ್ರುತ ನುಡಿ (ಇಲ್ಲವೇ ಅದಕ್ಕೆ ತೀರ ಹತ್ತಿರವಿದ್ದ ಹಿಂದಿನ ಕಾಲದ ಒಂದು ನುಡಿ) ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆ0iÉುಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆ0iÉುಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆ0iÉುಂದು ಹೇಳಲು ಸಾದ್ಯವಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಸಂಸ್ಕ್ರುತ ಕನ್ನಡವಾಗಿ ಬದಲಾಗಿದೆ0iÉುಂದು ಹೇಳಬೇಕಿದ್ದಲ್ಲಿ ಅವೆರಡರ ನಡುವೆ ಕಾಣಿಸುವ ಈ ಎಲ್ಲಾ ವ್ಯತ್ಯಾಸಗಳು ಹೇಗೆ ಉಂಟಾದುವು ಎಂಬುದನ್ನು ವಿವರಿಸಬೇಕಾಗುತ್ತದೆ. ಆದರೆ ಹಾಗೆ ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ. ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳನ್ನಾದರಿಸಿ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ಇಂಡೋ-ಆರ್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆ0iÉುಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.

2.2.1 ನುಡಿಕುಟುಂಬದ ಕಲ್ಪನೆ ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ ಅವರೊಳಗಿನ ಸಂಪರ್ಕ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಇದರಿಂದಾಗಿ ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ. ಈ ರೀತಿ ಬದಲಾವಣೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದುದರಿಂದಾಗಿ, ದೂರದ ಊರುಗಳಿಗೆ ಹೋಗಿ ನೆಲೆಸಿರುವಂತಹ ಜನರು ಬಳಸುವ ನುಡಿ ಒಂದೇ ಇದ್ದದ್ದು ಹಲವು ಒಳನುಡಿಗಳಾಗಿ ಒಡೆದುಕೊಳ್ಳುತ್ತದೆ ಮತ್ತು ಸಮಯ ಕಳೆದಂತೆಲ್ಲ ಈ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ. ಉದಾಹರಣೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ್ನಾಟಕ, ತೆಂಕು ಕರ್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವು ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಬಡಗು ಮತ್ತು ತೆಂಕು ಕರ್ನಾಟಕಗಳ ನಡುವೆ ಸಾಕಶ್ಟು ಅಂತರವಿದೆಯಾದರೂ ನೆಲದ ಮೇಲಿನ ತಡೆಯೇನಿಲ್ಲ. ಆದರೆ, ಈ ಎರಡು ಪ್ರದೇಶಗಳಿಗೂ ಕರಾವಳಿಗೂ ನಡುವೆ ಪಡುವಣಬೆಟ್ಟ ಒಂದು ದೊಡ್ಡ ನೆಲದ ಮೇಲಿನ ತಡೆಯಾಗಿ ¤AwzÉ. ಬಡಗು ಮತ್ತು ತೆಂಕು ಕರ್ನಾಟಕಗಳಲ್ಲಿ ನೆಲೆಸಿದ ಜನರ ನಡುವಿನ ಸಂಪರ್ಕಕ್ಕೆ ಅಂತರ ಮಾತ್ರ ತಡೆಯಾಗಿದ್ದಿರಬೇಕು. ಹಾಗಾಗಿ, ಬಡಗಿನ

ಒಂದು ತುದಿಯಿಂದ ತೆಂಕಿನ ಇನ್ನೊಂದು ತುದಿಯವರೆಗೆ ಸಂಚರಿಸುವವರಿಗೆ ಈ ಜನರ ಮಾತು ಹಂತ ಹಂತವಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಬದಲಾಗುತ್ತಿರುವುದು ಕಾಣಿಸುತ್ತದೆ. ಆದರೆ ಯಾವ ಊರಿನಲ್ಲೂ ಬಡಗು ಒಳನುಡಿ ಮುಗಿದು ತೆಂಕು ಒಳನುಡಿ ಸುರುವಾಗುತ್ತಿದೆಯೆಂದು ಕಚಿತವಾಗಿ ಹೇಳಲು ಸಾದ್ಯವಾಗುವುದಿಲ್ಲ. ಇದಕ್ಕೆ ಬದಲು, ಕರಾವಳಿಯಲ್ಲಿ ನೆಲೆಸಿದ ಜನರಿಗೂ ಇತರ ಪ್ರದೇಶಗಳಲ್ಲಿ ನೆಲೆಸಿದ ಜನರಿಗೂ ನಡುವಿನ ಸಂಪರ್ಕಕ್ಕೆ ಅವರ ನಡುವಿದ್ದ ಅಂತರ ಮಾತ್ರವಲ್ಲದೆ ದುರ್ಗಮವಾದ ಪಡುವಣಬೆಟ್ಟವೂ ತಡೆಯಾಗಿತ್ತು. ಹಾಗಾಗಿ, ಈ ಎರಡು ಪ್ರದೇಶಗಳಲ್ಲಿ ಬೆಳೆದುಬಂದ ಕನ್ನಡದ ಒಳನುಡಿಗಳ ನಡುವೆ ಒಂದು ನಿಶ್ಚಿತವಾದ ಗಡಿಯಿರುವುದನ್ನು ಕಾಣಬಹುದು. ಕರಾವಳಿಯಿಂದ ಬಡಗು ಇಲ್ಲವೇ ತೆಂಕು ಕರ್ನಾಟಕದ ಕಡೆಗಾಗಿ ಸಂಚರಿಸುವಾಗ ಪಡುವಣಬೆಟ್ಟವನ್ನು ದಾಟುತ್ತಿರುವಂತೆ, ಒಮ್ಮೆಗೇನೇ ಕರಾವಳಿಯ ಒಳನುಡಿ ಮುಗಿದು ಬೇರೆ ಒಳನುಡಿ ಸುರುವಾಗುವುದು ಕಾಣಿಸುತ್ತದೆ. ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ ಮತ್ತು ಅನಂತರ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ. ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ

ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ. ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ಸಾದಿಸಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಆ ನುಡಿಯಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ನುಡಿಗಳ ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ಸಾದಿಸಿ ತೋರಿಸಬೇಕು. ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಸಾದ್ಯವಾಗುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಗಳಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿ

ಕೊಡಲು ಸಾದ್ಯವಾಗದಿದ್ದಲ್ಲಿ ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಸಾದ್ಯವಾಗದು. ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಕಾರಣಗಳು ಹಲವಿವೆ. ಉದಾಹರಣೆಗಾಗಿ, ಎರಡು ತೀರ ಬೇರಾಗಿರುವ ನುಡಿಗಳನ್ನಾಡುವ ಜನರು ಒಂದೇ ಪ್ರದೇಶದಲ್ಲಿ ವಾಸಿಸಬೇಕಾದಾಗ, ಇಲ್ಲವೇ ಅವುಗಳಲ್ಲಿ ಒಂದು ನುಡಿಯನ್ನಾಡುವ ಜನರ ಕಯ್ಕೆಳಗೆ ಇನ್ನೊಂದು ನುಡಿಯನ್ನಾಡುವವರು ವಾಸಿಸಬೇಕಾದಾಗ, ಆ ಎರಡು ನುಡಿಗಳ ನಡುವೆ ಹತ್ತಿರದ ಸಂಪರ್ಕವುಂಟಾಗಿ ಹೋಲಿಕೆಗಳು ಮೂಡಿಬರಲು ಸಾದ್ಯವಿದೆ. ಅವುಗಳಲ್ಲಿ ಒಂದು ಇನ್ನೊಂದರಲ್ಲಿರುವ ನೂರಾರು ಪದಗಳನ್ನು ಎರವಲಾಗಿ ಪಡೆಯಬಹುದು. ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಇವತ್ತು ಕಾಣಿಸುವ ಹೋಲಿಕೆಗಳಿಗೆ ಕನ್ನಡ ನುಡಿ ಸಂಸ್ಕ್ರುತದಿಂದ ಈ ರೀತಿ ಹಲವಾರು ಪದಗಳನ್ನು ಎರವಲಾಗಿ ಪಡೆದುಕೊಂಡಿರುವುದೇ ಕಾರಣ. ಇದಲ್ಲದೆ, ಒಂದು ನುಡಿ ತನ್ನ ಸಂಪರ್ಕಕ್ಕೆ ಬಂದಿರುವ ಇನ್ನೊಂದು ನುಡಿಯಿಂದ ಪದರಚನೆ ಇಲ್ಲವೇ ವಾಕ್ಯರಚನೆಯ ವಿದಾನಗಳಲ್ಲಿ ಕೆಲವನ್ನು ತನ್ನದಾಗಿಸಿಕೊಳ್ಳಬಹುದು. ಕನ್ನಡದ ಸಂಪರ್ಕಕ್ಕೆ ಬಂದಿರುವ ಕೊಂಕಣಿ ಮತ್ತು ಉರ್ದು ನುಡಿಗಳು (ಅವುಗಳ ತೆಂಕು ಪ್ರಬೇದಗಳು) ಈ ರೀತಿ ಕನ್ನಡದ ಹಲವು ಪದರಚನೆಯ ಮತ್ತು ವಾಕ್ಯರಚನೆಯ ವಿದಾನಗಳನ್ನು ತಮ್ಮದಾಗಿಸಿಕೊಂಡಿವೆ. ನುಡಿಗಳ ನಡುವೆ ಕಾಣಿಸುವ ಬೇರೆ ಕೆಲವು ಹೋಲಿಕೆಗಳು ಆಕಸ್ಮಿಕವಾಗಿರಲೂ ಸಾದ್ಯವಿದೆ. ಅವನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದು ಇದಕ್ಕೆ ಮುಕ್ಯ PÁgÀt. ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ವಾದಿಸಲು ಸಾದ್ಯವಾಗುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ

ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ. 2.2.2 ಬಾರತದ ನುಡಿಗಳ ಹಂಚಿಕೆ ಬಾರತದಲ್ಲಿ ಬಳಕೆಯಲ್ಲಿರುವ ನುಡಿಗಳನ್ನು ಇಂಡೋ- ಯುರೋಪಿಯನ್, ದ್ರಾವಿಡ (ಡ್ರವೀಡಿಯನ್), ಟಿಬೆಟೋ-ಬರ್ಮನ್ ಮತ್ತು ಆಸ್ಟ್ರೋ-ಏಶಿಯಾಟಿಕ್ ಎಂಬ ನಾಲ್ಕು ಮುಕ್ಯ ನುಡಿಕುಟುಂಬಗಳಲ್ಲಿ ವಿಂಗಡಿಸಿ ಹೇಳಲಾಗುತ್ತದೆ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಮೇಲೆ ವಿವರಿಸಿದ ಹಾಗೆ ನಾಲ್ಕು ಮೂಲ ನುಡಿಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಿರುವುದೇ ಇದಕ್ಕೆ ಆದಾರ. ಹಿಂದಿ, ಮರಾಟಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಉತ್ತರದ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತ ಇಲ್ಲವೇ ಅದಕ್ಕೆ ಹತ್ತಿರದ ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ. ಪ್ರಾಕ್ರುತ, ಪಾಲಿ, ಅಪಬ್ರಂಶ, ಮೊದಲಾದ ಪ್ರಬೇದಗಳಲ್ಲಿ ಈ ಬದಲಾವಣೆಗಳ ಬೇರೆ ಬೇರೆ ಹಂತಗಳನ್ನು ಕಾಣಬಹುದು. ಆದರೆ ಕನ್ನಡಕ್ಕೂ ಹಿಂದಿ, ಮರಾಟಿ, ಗುಜರಾತಿ ಮೊದಲಾದ ಇಂಡೋ-ಆರ್ಯನ್ ನುಡಿಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಆ ರೀತಿ ಸಂಸ್ಕ್ರುತದಲ್ಲಿ ಇಲ್ಲವೇ ಅದಕ್ಕೆ ಹತ್ತಿರದ ಒಂದು ಮೂಲ ನುಡಿಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ತೋರಿಸಿಕೊಡಲು ಸಾದ್ಯವಾಗುವುದಿಲ್ಲ. ಉದಾಹರಣೆಗಾಗಿ, ಮರಾಟಿ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಸಂಸ್ಕ್ರುತದಿಂದ ಅಪಬ್ರಂಶಕ್ಕೆ, ಅಪಬ್ರಂಶದಿಂದ ಹಳೆಯ ಮರಾಟಿಗೆ ಮತ್ತು ಹಳೆಯ ಮರಾಟಿಯಿಂದ ಹೊಸ ಮರಾಟಿಗೆ ಎಂಬುದಾಗಿ ಬೇರೆ ಬೇರೆ ಹಂತಗಳಲ್ಲಿ ನಡೆದ

ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ. ಆದರೆ ಇದೇ ರೀತಿಯಲ್ಲಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಸಂಸ್ಕ್ರುತ ಮತ್ತು ಹಳೆಗನ್ನಡ- ಹೊಸಗನ್ನಡಗಳ ನಡುವೆ ಪಾಲಿ, ಪ್ರಾಕ್ರುತ, ಅಪಬ್ರಂಶ ಮೊದಲಾದ (ಇಲ್ಲವೇ ಅಂತಹವೇ ಬೇರೆ ಯಾವುದಾದರೂ) ಹಂತಗಳನ್ನು ಕಲ್ಪಿಸುವುದರ ಮೂಲಕ ವಿವರಿಸಿ ಹೇಳಲು ಸಾದ್ಯವಾಗಿಲ್ಲ. ಇದಲ್ಲದೆ ಕನ್ನಡ, ತಮಿಳು, ತೆಲುಗು, ತುಳು ಮೊದಲಾದ ಸುಮಾರು ಇಪ್ಪತ್ತಯ್ದು-ಮೂವತ್ತು ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಮೂಲದ್ರಾವಿಡವೆಂಬ ಒಂದು ಕಲ್ಪಿತವಾದ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಿ ಹೇಳಲು ಸಾದ್ಯವಾಗಿದೆ. ಹಾಗಾಗಿ, ಈ ನುಡಿಗಳೆಲ್ಲ ಇಂಡೋ-ಆರ್ಯನ್ ಇಲ್ಲವೇ ಇಂಡೋ-ಯುರೋಪಿಯನ್ ನುಡಿಕುಟುಂಬಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರುತ್ತವೆಯೆಂಬ ವಾದವನ್ನು ಮಂಡಿಸಲು ಸಾದ್ಯವಾಗಿದೆ. ಇದೇ ರೀತಿಯಲ್ಲಿ ಬಾರತದ ಉತ್ತರ ಮತ್ತು ಈಶಾನ್ಯ ಗಡಿಪ್ರದೇಶದಲ್ಲಿ ಬಳಕೆಯಲ್ಲಿರುವ ಮಣಿಪುರಿ, ಲೆಪ್ಚ, ಲುಶಾಯಿ, ಆವೊ ನಾಗ, ಬೋಡೊ ಮೊದಲಾದ ನುಡಿಗಳನ್ನು ಟಿಬೆಟನ್, ಬರ್ಮೀಸ್, ಚಯ್ನೀಸ್ ಮೊದಲಾದ ನುಡಿಗಳೊಂದಿಗೆ ಸಂಬಂದಿಸಲು ಸಾದ್ಯವಾಗಿದೆ (ಎಂದರೆ ಈ ನುಡಿಗಳ ನಡುವಿರುವ ವ್ಯತ್ಯಾಸಗಳನ್ನು ಮೂಲ ನುಡಿಯೊಂದರಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ತೋರಿಸಿ ಕೊಡಲು ಸಾದ್ಯವಾಗಿದೆ). ಆದರೆ, ಸಂಸ್ಕ್ರುತ, ಕನ್ನಡ ಮೊದಲಾದ ನುಡಿಗಳೊಂದಿಗೆ ಅವನ್ನು ಈ ರೀತಿ ಸಂಬಂದಿಸಲು ಸಾದ್ಯವಾಗಿಲ್ಲ. ಹಾಗಾಗಿ ಅವನ್ನೆಲ್ಲ ಟಿಬೆಟೋ-ಬರ್ಮನ್ (ಇಲ್ಲವೇ ಸಿನೋ-ಟಿಬೆಟನ್) ಎಂಬ ಬೇರೆಯೇ ಒಂದು ನುಡಿಕುಟುಂಬದಲ್ಲಿ ಸೇರಿಸಿ ಹೇಳಬೇಕಾಗಿದೆ.

ಇಂತಹದೇ ಕಾರಣಕ್ಕಾಗಿ, ಒರಿಸ್ಸಾ, ಬಿಹಾರ ಮತ್ತು ಮದ್ಯಪ್ರದೇಶದ ಗುಡ್ಡಕಾಡುಗಳಲ್ಲಿ ಬಳಕೆಯಲ್ಲಿರುವ ಮುಂಡಾರಿ, ಸಂತಾಲಿ, ಕಡಿಯಾ ಮೊದಲಾದ ನುಡಿಗಳನ್ನು ಮೇಲಿನ ಮೂರು ನುಡಿಕುಟುಂಬಗಳಿಂದ ಬೇರಾಗಿರುವ ಮುಂಡ (ಆಸ್ಟ್ರೋ- ಏಶಿಯಾಟಿಕ್) ನುಡಿಕುಟುಂಬದಲ್ಲಿ ಸೇರಿಸಿ ಹೇಳುವ ಅವಶ್ಯಕತೆ ಕಂಡುಬಂದಿದೆ. ಇಲ್ಲಿ ನಾವು ಮುಕ್ಯವಾಗಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಎರಡು ನುಡಿಗಳನ್ನು ಒಂದೇ ನುಡಿಕುಟುಂಬದಲ್ಲಿ ಸೇರಿಸಿ ಹೇಳಲು ಸಾದ್ಯವೇ ಅತವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಲು ನಮಗಿರುವ ಆದಾರ ಒಂದೇ. ಅದೇನೆಂದರೆ, ಆ ಎರಡು ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾಗಿವೆಯೆಂಬುದಾಗಿ ವಿವರಿಸಲು ಸಾದ್ಯವಾಗುತ್ತಿದೆಯೇ ಅತವಾ ಇಲ್ಲವೇ ಎಂಬುದು. ಹಾಗೆ ವಿವರಿಸಲು ಸಾದ್ಯವಾಗುತ್ತಿದೆಯಾದರೆ, ಅವೆರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಬಹುದು; ಇಲ್ಲವಾದರೆ ಅವು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ0iÉುಂದೇ ಹೇಳಬೇಕಾಗುತ್ತದೆ. 2.2.3 ಇಂಡೋ-ಆರ್ಯನ್ ನುಡಿಗಳು ಮತ್ತು ದ್ರಾವಿಡ ನುಡಿಗಳು ಸಂಸ್ಕ್ರುತ, ಹಿಂದಿ, ಮರಾಟಿ, ಗುಜರಾತಿ ಮೊದಲಾದ ಬಾರತದ ನುಡಿಗಳನ್ನು ಇಂಡೋ-ಆರ್ಯನ್ ಎಂಬ ನುಡಿಕುಟುಂಬವೊಂದರಲ್ಲಿ ಇರಿಸಿ ಹೇಳಲು ಸಾದ್ಯ ಎಂಬುದನ್ನು ನಾವು ಮೇಲೆ ನೋಡಿರುವೆವು. ಈ ಇಂಡೋ-ಆರ್ಯನ್ ನುಡಿಕುಟುಂಬ ಇಂಡೋ-ಯುರೋಪಿಯನ್ ಎಂಬ ದೊಡ್ಡದೊಂದು ನುಡಿಕುಟುಂಬದ ಕವಲೆಂಬುದಾಗಿ ತೋರಿಸಿಕೊಡಲು ಸಾದ್ಯವಾಗಿದೆ. ಈ ದೊಡ್ಡ ನುಡಿಕುಟುಂಬಕ್ಕೆ ಇಂಡೋ-ಇರೇನಿಯನ್, ಜರ್ಮೇನಿಕ್, ಸ್ಲಾವಿಕ್, ಕೆಲ್ಟಿಕ್, ಇಟಾಲಿಕ್ ಮೊದಲಾದ ಒಟ್ಟು ಹನ್ನೆರಡು ಒಳಕುಟುಂಬಗಳಿದ್ದು, ಇವುಗಳಲ್ಲಿ ಇಂಡೋ-ಇರೇನಿಯನ್

ಎಂಬುದರ ಒಳಕುಟುಂಬವಾಗಿ ಬಾರತದ ಇಂಡೋ-ಆರ್ಯನ್ ನುಡಿಕುಟುಂಬ ಬೆಳೆದು ಬಂದಿದೆ. ಯುರೋಪಿನ ಇಂಗ್ಲಿಶ್, ಜರ್ಮನ್ ಮೊದಲಾದ ನುಡಿಗಳು ಜರ್ಮೇನಿಕ್ ಒಳಕುಟುಂಬದಲ್ಲೂ, ರಶ್ಯನ್ ನುಡಿ ಸ್ಲಾವಿಕ್ ಒಳಕುಟುಂಬದಲ್ಲೂ, ಲ್ಯಾಟಿನ್, ಇಟಾಲಿಯನ್ ಮೊದಲಾದ ನುಡಿಗಳು ಇಟಾಲಿಕ್ ಒಳಕುಟುಂಬದಲ್ಲೂ, ಅಯ್ರಿಶ್, ಸ್ಕೋಟಿಶ್ ಮೊದಲಾದ ನುಡಿಗಳು ಕೆಲ್ಟಿಕ್ ಒಳಕುಟುಂಬದಲ್ಲೂ ಸೇರುತ್ತವೆ. ಆದರೆ ಕನ್ನಡ, ತಮಿಳು, ಮಲಯಾಳ, ತೆಲುಗು, ತುಳು ಮೊದಲಾದ ನುಡಿಗಳನ್ನೊಳಗೊಂಡಿರುವ ದ್ರಾವಿಡ ನುಡಿಕುಟುಂಬವನ್ನು ಈ ರೀತಿ ಇಂಡೋ-ಯುರೋಪಿಯನ್ ನುಡಿಕುಟುಂಬದ ಒಳಕುಟುಂಬವೆಂಬುದಾಗಿ ತೋರಿಸಿಕೊಡಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ. ಹಾಗಾಗಿ ಸಂಸ್ಕ್ರುತ ಮತ್ತು ಇಂಗ್ಲಿಶ್ ನುಡಿಗಳ ನಡುವಿರುವಂತಹ ದೂರದ ನಂಟಸ್ತಿಕೆಯೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ಇದೆಯೆಂದು ಹೇಳಲು ಸಾದ್ಯವಾಗುವುದಿಲ್ಲ. ಮೇಲೆ ವಿವರಿಸಿದ ಹಾಗೆ, ಎರಡು ನುಡಿಗಳ ನಡುವೆ ನಂಟಸ್ತಿಕೆ’ ಮಾತ್ರವಲ್ಲದೆ ಬೇರೆಯೂ ಹಲವು ರೀತಿಯ ಸಂಬಂದಗಳಿರಲು ಸಾದ್ಯ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಉದಾಹರಣೆಗಾಗಿ ಸಂಸ್ಕ್ರುತದಿಂದ ಕನ್ನಡ ಹಲವು ಪದಗಳನ್ನು (ಮತ್ತು ಅವುಗಳೊಂದಿಗೆ ಕೆಲವು ಪ್ರತ್ಯಯಗಳನ್ನೂ) ಎರವಲಾಗಿ ಪಡೆದುಕೊಂಡಿದೆ. ಕನ್ನಡದ ಶಾಸ್ತ್ರೀಯ ಗ್ರಂತಗಳಲ್ಲಿ ಬಳಕೆಯಾಗುವ ಪಾರಿಬಾಶಿಕ ಪದಗಳಲ್ಲಿ ಹೆಚ್ಚಿನವೂ ಈ ರೀತಿ ಸಂಸ್ಕ್ರುತದಿಂದ ಎರವಲಾಗಿ ಪಡೆದುಕೊಂಡವುಗಳು ಇಲ್ಲವೇ ಸಂಸ್ಕ್ರುತದ ಪದಕಾಂಡಗಳನ್ನು ಬಳಸಿ ತಯಾರಿಸಿದವು. ಕನ್ನಡ ಬಳಸುವ ಲಿಪಿ ಮತ್ತು ಸಂಸ್ಕ್ರುತದ ನಾಗರಿ ಲಿಪಿ ಇವೆರಡೂ ಬ್ರಾಹ್ಮೀ ಲಿಪಿ’ ಎಂಬ ಒಂದೇ ಮೂಲ ಲಿಪಿಯಿಂದ ಬೆಳೆದುಬಂದವುಗಳು. ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ಇಂತಹ ಹಲವು ರೀತಿಯ ಸಂಬಂದಗಳಿದ್ದು, ಇವುಗಳಿಂದಾಗಿ ಈ ಎರಡು ನುಡಿಗಳ ನಡುವೆ ಹಲವು ರೀತಿಯ ಹೋಲಿಕೆಗಳು ಬೆಳೆದುಬಂದಿವೆ. ಆದರೆ

ಮೇಲೆ ಸೂಚಿಸಿದ ಹಾಗೆ ಇಂತಹ ಹೋಲಿಕೆಗಳ ಅದಾರದ ಮೇಲೆ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬುದಾಗಿಯಾಗಲಿ ಇಲ್ಲವೇ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ಕುಟುಂಬಕ್ಕೆ ಸೇರಿದವುಗಳೆಂದಾಗಲಿ ವಾದಿಸಲು ಸಾದ್ಯವಾಗದು. ಇದಲ್ಲದೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳೆಲ್ಲ ತುಂಬಾ ಇತ್ತೀಚೆಗಿನವು, ಎಂದರೆ ಕಳೆದ ಸಾವಿರ- ಎರಡು ಸಾವಿರ ವರ್ಶಗಳಲ್ಲಿ ಬೆಳೆದುಬಂದವುಗಳು. ಒಂದು ನುಡಿಯ ಚರಿತ್ರೆ ಮಿಲಿಯಗಟ್ಟಲೆ ವರ್ಶಗಳಶ್ಟು ಹಳೆಯದು. ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಲ್ಲಿ ವಿಂಗಡಿಸುವ ಮತ್ತು ಅವುಗಳ ಚರಿತ್ರೆಯನ್ನು ಬರೆಯುವ ಕೆಲಸ ಇಂತಹ ಹಳೆಯ ಸಂಬಂದದ ಮೇಲೆ ಅವಲಂಬಿಸಿದೆ. ಇನ್ನೊಂದು ವಿಶಯವೇನೆಂದರೆ, ನುಡಿಗಳಲ್ಲಿ ಸಾಮಾನ್ಯವಾಗಿ ದಿನನಿತ್ಯದ ಬಳಕೆಗೆ ಅವಶ್ಯವಿರುವಂತಹ ಅಡಿಗಟ್ಟಿನ ವಿಶಯಗಳನ್ನು ಸೂಚಿಸುವ ಪದಗಳು ಆ ನುಡಿಯವೇ ಆಗಿರುತ್ತವೆ. ಅಂತಹ ಪದಗಳನ್ನು ಬೇರೆ ನುಡಿಗಳಿಂದ ಬಹಳ ಅಪರೂಪವಾಗಿ ಮಾತ್ರ ಎರವಲಾಗಿ ಪಡೆದುಕೊಳ್ಳಲಾಗುತ್ತದೆ. ಕನ್ನಡದಲ್ಲಿ ಕಾಣಿಸುವ ತತ್ಸಮ ಇಲ್ಲವೇ ತದ್ಬವ ಪದಗಳಲ್ಲಿ ಹೆಚ್ಚಿನವೂ ಇಂತಹ ಅಡಿಗಟ್ಟಿನ ವಿಶಯಗಳನ್ನು ಸೂಚಿಸುವವುಗಳಾಗಿರದೆ, ದರ್ಮ, ಸಂಸ್ಕ್ರುತಿ, ವ್ಯಾಕರಣ, ತರ್ಕ, ಅಲಂಕಾರ ಮೊದಲಾದ ಶಾಸ್ತ್ರೀಯ ವಿಶಯಗಳಿಗೆ ಸಂಬಂದಿಸಿ ದವುಗಳಾಗಿವೆ. ಇವು ಎರವಲಾಗಿ ಪಡೆದ ಪದಗಳಲ್ಲದೆ ಮೂಲನುಡಿಯಿಂದ ಪಡೆದ ಪದಗಳಲ್ಲ ಎಂಬುದನ್ನು ಈ ವಿಶಯವೂ ಸೂಚಿಸುತ್ತದೆ. 2.3 ಕನ್ನಡ, ಮರಾಟಿ ಮತ್ತು ಸಂಸ್ಕ್ರುತ ಕನ್ನಡಕ್ಕೆ ಸಂಸ್ಕ್ರುತ ಮೂಲ ಎಂಬ ವಾದವನ್ನು ಸಮರ್ತಿಸಲು ಯಾಕೆ ಸಾದ್ಯವಾಗುವುದಿಲ್ಲ ಎಂಬುದನ್ನು ಇನ್ನಷ್ಟು ಸ್ಪಶ್ಟವಾಗಿ ತೋರಿಸಿಕೊಡುವುದಕ್ಕಾಗಿ ಈ ವಿಬಾಗದಲ್ಲಿ ಕನ್ನಡ ಮತ್ತು ಮರಾಟಿ ನುಡಿಗಳನ್ನು ಸಂಸ್ಕ್ರುತದೊಂದಿಗೆ ಹೋಲಿಸಿ ತೋರಿಸಲಾಗಿದೆ.

ಈ ಹೋಲಿಕೆಯಿಂದ ನಮಗೆ ತಿಳಿದುಬರುವುದೇನೆಂದರೆ, ಮರಾಟಿ ನುಡಿಗೂ ಸಂಸ್ಕ್ರುತಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡ ನುಡಿಗೂ ಸಂಸ್ಕ್ರುತಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳಿಂದ ತೀರ ಬೇರಾಗಿವೆ. ಅವು ಹೀಗೆ ಬೇರಾಗಿರಲು ಕಾರಣವೇನು ಎಂಬುದನ್ನು ಪರಿಶೀಲಿಸಿದಾಗ ಮರಾಟಿ ಸಂಸ್ಕ್ರುತದಿಂದ ಬೆಳೆದು ಬಂದಿದೆ ಮತ್ತು ಕನ್ನಡ ಆ ರೀತಿ ಬೆಳೆದುಬಂದಿಲ್ಲ ಎಂಬ ವಿಶಯ ಸ್ಪಶ್ಟವಾಗುತ್ತದೆ. (1) ದಿನಬಳಕೆಯ ಪದಗಳ ಮಟ್ಟಿಗೆ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವಿರುವ ವ್ಯತ್ಯಾಸ ಸಂಸ್ಕ್ರುತ ಮತ್ತು ಮರಾಟಿ ನುಡಿಗಳ ನಡುವಿರುವ ವ್ಯತ್ಯಾಸಕ್ಕಿಂತ ತೀರ ಬೇರಾದುದು. ಸಂಸ್ಕ್ರುತ ಮತ್ತು ಮರಾಟಿ ನುಡಿಗಳ ನಡುವಿನ ವ್ಯತ್ಯಾಸಗಳನ್ನು ಮರಾಟಿಯ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳು ಎಂಬುದಾಗಿ ವಿವರಿಸಲು ಸಾದ್ಯವಾಗಿದೆ; ಆದರೆ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವಿನ ವ್ಯತ್ಯಾಸಗಳನ್ನು ಆ ರೀತಿ ವಿವರಿಸಲು ಸಾದ್ಯವಾಗಿಲ್ಲ; ಸಾದ್ಯವಾಗುವ ಹಾಗೆಯೂ ಕಾಣಿಸುವುದಿಲ್ಲ (2.3.1- 2 ನೋಡಿ). (2) ಕನ್ನಡ ನುಡಿಯ ಪದಗಳನ್ನು ತಮಿಳು, ಮಲಯಾಳ, ತೆಲುಗು ಮೊದಲಾದ ದ್ರಾವಿಡ ನುಡಿಗಳ ಪದಗಳೊಡನೆ ಹೋಲಿಸಿ ನೋಡಿದಾಗ, ಅವುಗಳ ನಡುವೆ ಹಲವು ವ್ಯತ್ಯಾಸಗಳು ಕಾಣಿಸುತ್ತಿದ್ದು ಇವೆಲ್ಲವನ್ನೂ ಆ ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿದೆ (2.3.3). (3) ಸಂಸ್ಕ್ರುತ, ಲ್ಯಾಟಿನ್, ಗ್ರೀಕ್ ಮೊದಲಾದ ನುಡಿಗಳ ನಡುವೆ ದಿನಬಳಕೆಯ ಪದಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಅವುಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿದೆ; ಆದರೆ, ಈ ನುಡಿಗಳಿಗೂ ಕನ್ನಡಕ್ಕೂ ನಡುವೆ ಇಂತಹ ಪದಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಆ ರೀತಿ ವಿವರಿಸಲು ಸಾದ್ಯವಾಗಿಲ್ಲ (2.3.4). (4) ಈ ರೀತಿ ದಿನಬಳಕೆಯ ಪದಗಳಲ್ಲಿ ಮಾತ್ರವಲ್ಲದೆ ವ್ಯಾಕರಣದಲ್ಲೂ ಸಂಸ್ಕ್ರುತ ಮತ್ತು ಮರಾಟಿ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಮರಾಟಿಯ ಚರಿತ್ರೆಯಲ್ಲಿ ನಡೆದ

ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿದೆ; ಆದರೆ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ಕಾಣಿಸುವ ವ್ಯಾಕರಣದ ವ್ಯತ್ಯಾಸಗಳನ್ನು ಆ ರೀತಿ ಕನ್ನಡದ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿಲ್ಲ (2.3.5). ಈ ಪರಿಶೀಲನೆಯಿಂದ ಸ್ಪಶ್ಟವಾಗುವುದೇನೆಂದರೆ, ಮರಾಟಿ ನುಡಿಗೆ ಸಂಸ್ಕ್ರುತ ಮೂಲ ಎಂಬುದಾಗಿ ವಾದಿಸಲು ಸಾಕಶ್ಟು ಆದಾರಗಳಿವೆ; ಆದರೆ, ಕನ್ನಡ ನುಡಿಗೆ ಸಂಸ್ಕ್ರುತ ಮೂಲ ಎಂಬುದಾಗಿ ವಾದಿಸಲು ಒಂದೇ ಒಂದು ಆದಾರವೂ ಇಲ್ಲ. 2.3.1 ಪದಗಳ ನಡುವಿನ ವ್ಯತ್ಯಾಸಗಳು ಮೇಲೆ ಸೂಚಿಸಿದ ಹಾಗೆ, ದಿನಬಳಕೆಯ ಪದಗಳನ್ನು ಬೇರೊಂದು ನುಡಿಯಿಂದ ಎರವಲಾಗಿ ಪಡೆಯುವುದು ಬಹಳ ಅಪರೂಪ. ಹಾಗಾಗಿ, ಎರಡು ನುಡಿಗಳ ನಡುವೆ ನಂಟಸ್ತನವಿದೆ0iÉುೀ ಅತವಾ ಇಲ್ಲವೇ ಎಂಬುದನ್ನು ನಿರ್ದರಿಸುವಲ್ಲಿ ಇಂತಹ ಪದಗಳನ್ನು ಆರಿಸಿಕೊಳ್ಳುವುದೇ ಒಳ್ಳೆಯದು. ಕನ್ನಡ ಮತ್ತು ಮರಾಟಿ ನುಡಿಗಳ ಕೆಲವು ದಿನಬಳಕೆಯ ಪದಗಳನ್ನು ಕೆಳಗೆ ಕೊಡಲಾಗಿದೆ. ಇವನ್ನು ಸಂಸ್ಕ್ರುತ ಪದಗಳೊಂದಿಗೆ ಹೋಲಿಸಿ ನೋಡಿದಾಗ, ಮರಾಟಿ ಸಂಸ್ಕ್ರುತದಿಂದ (ಇಲ್ಲವೇ ಅದಕ್ಕೆ ಹತ್ತಿರವಿರುವ ಬೇರೊಂದು ಇಂಡೋ-ಆರ್ಯನ್ ಮೂಲನುಡಿಯಿಂದ) ಬೆಳೆದುಬಂದಿದೆ, ಆದರೆ ಕನ್ನಡ ಆ ಮೂಲದಿಂದ ಬೆಳೆದುಬಂದಿಲ್ಲ ಎಂಬ ವಿಶಯ ಸ್ಪಶ್ಟವಾಗುತ್ತದೆ. ಕನ್ನಡ ಸಂಸ್ಕ್ರುತ ಮರಾಟಿ ಎರಡು ದೌ್ವ ದೋನ್ ಬೆಲ್ಲ ಗುಡ ಗೂಳ್ ಏಳು ಸಪ್ತ ಸಾತ್ ಬೆಂಕಿ ಅಗ್ನಿ ಆಗ್ ಹುಲ್ಲು ಗ್ರಾಸ ಘಾಸ್

ಎಳ್ಳು ತಿಲ ತೀಳ್ ನಾಲಿಗೆ ಜಿಹ್ವಾ ಜೀಭ್ ಹತ್ತು ದಶ ದಸ್ ಬಾಗಿಲು ದ್ವಾರ ದಾರ್ ಎಲೆ ಪಣ್ರ ಪಾನ್ ಹುಡುಗ ಬಾಲ ಬಾಳ್ ಕೈ ಹಸ್ತ ಹಾತ್ ದಾರಿ ಮಾಗ್ರ ಮಾಗ್ ಮಗ ಪುತ್ರ ಪೂತ್ ಇವತ್ತು ಅದ್ಯ ಆಜ್ ನಾಚುಗೆ ಲಜ್ಜಾ ಲಾಜ್ ಹಾವು ಸಪ್ರ ಸಾಪ್ ಇಲ್ಲಿ ಕೊಟ್ಟಿರುವ ಮರಾಟಿ ಪದಗಳಿಗೂ ಸಂಸ್ಕ್ರುತ ಪದಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳನ್ನೆಲ್ಲ ಮರಾಟಿ ನುಡಿಯ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿದೆ; ಎಂದರೆ, ಈ ವ್ಯತ್ಯಾಸಗಳು ಸಂಸ್ಕ್ರುತದಿಂದ (ಇಲ್ಲವೇ ಅದಕ್ಕೆ ತೀರ ಹತ್ತಿರವಾಗಿದ್ದ ಒಂದು ನುಡಿಯಿಂದ) ಪ್ರಾಕ್ರುತಕ್ಕೆ, ಪ್ರಾಕ್ರುತದಿಂದ ಹಳೆ ಮರಾಟಿಗೆ ಮತ್ತು ಹಳೆ ಮರಾಟಿಯಿಂದ ಇವತ್ತಿನ ಹೊಸ ಮರಾಟಿಗೆ ಬರುವ ಸಮಯದಲ್ಲಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗಿದೆ. ಉದಾಹರಣೆಗಾಗಿ, ಸಂಸ್ಕ್ರುತ ಪದಗಳಲ್ಲಿ ಎರಡು ಸ್ವರಗಳ ನಡುವೆ ಬರುತ್ತಿದ್ದ ಪ್್ತ, ಸ್್ತ, ಕ್್ಷ, ತ್್ರ, ರ್್ಪ, ಗ್್ನ ಮೊದಲಾದ ಎರಡು ಬೇರೆ ಬೇರೆ ರೀತಿಯ ವ್ಯಂಜನಗಳಿರುವ ಒತ್ತಕ್ಶರಗಳು ಪ್ರಾಕ್ರುತದಲ್ಲಿ ಒಂದೇ ರೀತಿಯ ವ್ಯಂಜನಗಳಿರುವ ಪ್್ಪ, ತ್್ಥ, ಕ್್ಖ, ಟ್್ಠ, ತ್್ತ, ಪ್್ಪ, ಗ್್ಗ ಎಂಬಂತಹ ಒತ್ತಕ್ಶರಗಳಾಗಿ ಬದಲಾಗಿವೆ; ಅನಂತರ ಮರಾಟಿಯಲ್ಲಿ ಇಂತಹ ಪದಗಳ ಕೊನೆಯಲ್ಲಿದ್ದ ಸ್ವರ ಬಿದ್ದುಹೋಗಿದೆ ಮತ್ತು ಒತ್ತಕ್ಶರದಲ್ಲಿದ್ದ ಎರಡು ವ್ಯಂಜನಗಳಲ್ಲಿ ಒಂದು ಬಿದ್ದುಹೋಗಿದೆ; ಅವುಗಳ ಮೊದಲು ಗಿಡ್ಡ ಸ್ವರವಿತ್ತಾದರೆ ಅದು ಉದ್ದ ಸ್ವರವಾಗಿ ಬದಲಾಗಿದೆ.

ಸಂಸ್ಕ್ರುತ ಪ್ರಾಕ್ರುತ ಮರಾಟಿ ಸಪ್ತ ಸತ್ತ ಸಾತ್ ಹಸ್ತ ಹತ್ಥ ಹಾತ್ ಪಕ್ಷ ಪಕ್ಖ ಪಾಖ್ ಅಷೌ್ಟ ಅಟ್ಠ ಆಠ್ ಪೃಷ್ಟ ಪಟ್ಠ ಪಾಠ್ ಪುತ್ರ ಪುತ್ತ ಪೂತ್ ಸಪ್ರ ಸಪ್ಪ ಸಾಪ್ CVß CVÎ DUï ಮಾಗ್ರ ಮಗ್ಗ ಮಾಗ್ ಓಷ್ಟ ಓಟ್ಠ ಓಠ್ ಇಂತಹ ಬೇರೆಯೂ ಹಲವು ಕಟ್ಟುನಿಟ್ಟಾದ ಬದಲಾವಣೆಗಳ ಮೂಲಕ ಸಂಸ್ಕ್ರುತ ಮತ್ತು ಪ್ರಾಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಹಾಗೂ ಪ್ರಾಕ್ರುತ ಮತ್ತು ಮರಾಟಿ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ವಿವರಿಸಲು ಸಾದ್ಯವಾಗಿದೆ. ಹಾಗಾಗಿ, ಮರಾಟಿಗೂ ಸಂಸ್ಕ್ರುತಕ್ಕೂ ನಡುವೆ ಹತ್ತಿರದ ನಂಟಸ್ತಿಕೆಯಿದೆ0iÉುಂಬುದಾಗಿ ಮತ್ತು ಅವೆರಡೂ ಒಂದೇ ನುಡಿ ಕುಟುಂಬಕ್ಕೆ ಸೇರಿವೆ0iÉುಂಬುದಾಗಿ ವಾದಿಸಲು ಸಾದ್ಯವಾಗಿದೆ (ಬ್ಲೋಕ್ 1970 ನೋಡಿ). ಆದರೆ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ಮೇಲೆ ಕೊಟ್ಟಿರುವಂತಹ ದಿನಬಳಕೆಯ ಪದಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಆ ರೀತಿ ಕಟ್ಟುನಿಟ್ಟಾದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ; ಅದು ಸಾದ್ಯವಾಗುವ ಹಾಗೆಯೂ ಕಾಣಿಸುವುದಿಲ್ಲ. ಹಾಗಾಗಿ, ಕನ್ನಡ ಸಂಸ್ಕ್ರುತದಿಂದ ಬೆಳೆದು ಬಂದಿದೆ0iÉುಂದಾಗಲಿ ಇಲ್ಲವೇ ಅವೆರಡೂ ಒಂದೇ ನುಡಿಕುಟುಂಬಕ್ಕೆ ಸೇರಿವೆ0iÉುಂದಾಗಲಿ ವಾದಿಸಲು ಸಾದ್ಯವಾಗುವುದಿಲ್ಲ.

2.3.2 ಕ್ರಿಯಾಪದಗಳಲ್ಲಿ ವ್ಯತ್ಯಾಸ ಕನ್ನಡ ಮತ್ತು ಮರಾಟಿ ನುಡಿಗಳ ನಡುವಿರುವ ಈ ವ್ಯತ್ಯಾಸ ನಾಮಪದಗಳಿಗಿಂತಲೂ ಕ್ರಿಯಾಪದಗಳಲ್ಲಿ ಹೆಚ್ಚು ಸ್ಪಶ್ಟವಾಗಿ ಕಾಣಿಸುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ನಾಮಪದಗಳಲ್ಲಿ ಹಲವು ಸಂಸ್ಕ್ರುತದಿಂದ ಎರವಲಾಗಿ ಬಂದಿದ್ದು, ಇವುಗಳಲ್ಲಿ ನಡೆದಿರುವ ಬದಲಾವಣೆಗಳು ಮೂಲನುಡಿಯಿಂದ ಬೆಳೆದು ಬಂದಿರುವ ಪದಗಳಲ್ಲಿ ಕಾಣಿಸುವ ಬದಲಾವಣೆಗಳ ಹಾಗೆ0iÉುೀ ಇವೆ. ಹಾಗಾಗಿ, ಕನ್ನಡದವೇ ಆದ ನಾಮಪದಗಳನ್ನು ಎರವಲಾಗಿ ಬಂದಿರುವ ನಾಮಪದಗಳಿಂದ ಪ್ರತ್ಯೇಕಿಸುವುದು ಸ್ವಲ್ಪ ಕಶ್ಟ. ಈ ಕಾರಣಕ್ಕಾಗಿ ಮೇಲೆ ಕನ್ನಡವನ್ನು ಮರಾಟಿಯೊಂದಿಗೆ ಹೋಲಿಸುವುದಕ್ಕಾಗಿ ದಿನಬಳಕೆಯ ಪದಗಳನ್ನು ಮಾತ್ರ ಬಳಸಿಕೊಳ್ಳಬೇಕಾಯಿತು. ಆದರೆ ಕ್ರಿಯಾಪದಗಳಲ್ಲಿ ಈ ಸಮಸ್ಯೆಯಿಲ್ಲ. ಕನ್ನಡದಲ್ಲಿ ಮುಕ್ಯವಾಗಿ ಎರಡು ರೀತಿಯ ಕ್ರಿಯಾಪದಗಳಿವೆ. ಇವುಗಳಲ್ಲಿ ಕೆಲವಕ್ಕೆ ಕ್ರಿಯಾಪ್ರತ್ಯಯಗಳನ್ನು ನೇರವಾಗಿ ಸೇರಿಸಬಹುದು; ಆದರೆ ಬೇರೆ ಕೆಲವಕ್ಕೆ ಅವನ್ನು ಸೇರಿಸುವ ಮೊದಲು ಇಸು ಪ್ರತ್ಯಯವನ್ನು ಸೇರಿಸಿ ಅವನ್ನು ಕನ್ನಡದವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಕನ್ನಡದ ಕಟ್ಟು, ಹೇಳು, ಬಿಡು, ತಿನ್ನು ಮೊದಲಾದ ಕ್ರಿಯಾಪದಗಳಿಗೆ ಕ್ರಿಯಾಪ್ರತ್ಯಯಗಳನ್ನು ನೇರವಾಗಿ ಸೇರಿಸಬಹುದು (ಕಟ್ಟುತ್ತಾನೆ, ಕಟ್ಟಿದ, ಕಟ್ಟಲು, ಹೇಳುವ). ಆದರೆ ಬಿನ್ನವಿಸು, ಸಿಂಗರಿಸು, ಮನ್ನಿಸು, ಬಾವಿಸು ಮೊದಲಾದ ಕ್ರಿಯಾಪದಗಳಿಗೆ ಅವುಗಳ ಕೊನೆಯಲ್ಲಿ ಕಾಣಿಸುವ ಇಸು ಪ್ರತ್ಯಯವನ್ನು ಬಳಸದೆ ಕ್ರಿಯಾಪ್ರತ್ಯಯಗಳನ್ನು ಸೇರಿಸಲು ಸಾದ್ಯವಾಗುವುದಿಲ್ಲ (ಮನ್ನಿಸಿದ್ದಾನೆ, ಮನ್ನಿಸುವ, ಸಿಂಗರಿಸುತ್ತಾನೆ, ಸಿಂಗರಿಸಿದ). ಕನ್ನಡದಲ್ಲಿ ಬಳಕೆಯಲ್ಲಿರುವ ಈ ಎರಡು ರೀತಿಯ ಕ್ರಿಯಾಪದಗಳಲ್ಲಿ ನೇರವಾಗಿ ಕ್ರಿಯಾಪ್ರತ್ಯಯಗಳೊಂದಿಗೆ ಬಳಕೆಯಾಗಬಲ್ಲವುಗಳು ಕನ್ನಡದವೇ ಆದ ಕ್ರಿಯಾಪದಗಳೆಂದೂ, ಇಸು ಪ್ರತ್ಯಯವಿಲ್ಲದೆ ಬಳಕೆಯಾಗಲಾರದವುಗಳು ಬೇರೆ ನುಡಿಗಳಿಂದ

(ಮುಕ್ಯವಾಗಿ ಸಂಸ್ಕ್ರುತದಿಂದ) ಎರವಲಾಗಿ ಬಂದವುಗಳೆಂದೂ ವಾದಿಸಲು ಸಾದ್ಯವಿದೆ (ಜಗಜಗಿಸು, ಗಹಗಹಿಸು, ಚಟಚಟಿಸು ಮೊದಲಾದ `ಅಣಕಿಸುವ’ಪದಗಳು ಇದಕ್ಕೆ ಅಪವಾದಗಳು). ಕೆಳಗೆ ಕೊಟ್ಟಿರುವ ಮರಾಟಿ ಮತ್ತು ಕನ್ನಡ ಪದಗಳನ್ನು ಸಂಸ್ಕ್ರುತದ ಪದಗಳೊಂದಿಗೆ ಹೋಲಿಸಿ ನೋಡಿದಲ್ಲಿ ಅದರೊಂದಿಗೆ ಈ ನುಡಿಗಳಿಗಿರುವ ಸಂಬಂದ ಯಾಕೆ ಒಂದೇ ರೀತಿಯದಲ್ಲ ಎಂಬುದು ಗೊತ್ತಾಗುತ್ತದೆ. ಮರಾಟಿ ಸಂಸ್ಕ್ರುತ ಕನ್ನಡ ಕರ್ ಕೃ ಮಾಡು ಖಣ್ ಖನ್ ಅಗೆ ಖಾ ಖಾದ್ ತಿನ್ನು ಖೇಳ್ ಖೇಲ್ ಆಡು ಜಾಣ್ ಜ್ಞಾ ತಿಳಿ ತುಟ್ ತೃಟ್ ಕಡಿ ದೇಖ್ ದೃಷ್ ನೋಡು ಕೋಪ್ ಕುಪ್ ಕೋಪಿಸು/ಕನಲು ಜಳ್ ಜ್ವಲ್ ಜ್ವಲಿಸು/ಉರಿ ನಾಚ್ ನೃತ್ ನರ್ತಿಸು/ಕುಣಿ ಪಢ್ ಪಠ್ ಪಟಿಸು/ಓದು ಠೇವ್ ಸ್ಥಾ(ಪ0iÀiï) ಸ್ತಾಪಿಸು/ಇಡು ಸಾಹ್ ಸಹ್ ಸಹಿಸು/ತಾಳು ವಾಢ್ ವಧ್್ರ ವರ್ದಿಸು/ಬೆಳೆ ಮೇಲೆ ಕೊಟ್ಟಿರುವ ಮರಾಟಿ ಮತ್ತು ಸಂಸ್ಕ್ರುತ ಕ್ರಿಯಾಪದಗಳಿಗೆ ಕನ್ನಡದಲ್ಲಿ ಇಸು ಪ್ರತ್ಯಯದೊಂದಿಗೆ ಬರುವವುಗಳು ಮತ್ತು ಹಾಗೆ0iÉುೀ ಬಳಕೆಯಾಗುವವುಗಳು ಎಂಬುದಾಗಿ ಎರಡು ರೀತಿಯ ಸಮಾನ ಪದಗಳನ್ನು ಕೊಡಲು ಸಾದ್ಯವಾಗಿದೆ. ಇವುಗಳಲ್ಲಿ ಇಸು

ಪ್ರತ್ಯಯದೊಂದಿಗೆ ಬರುವವುಗಳು ಸಂಸ್ಕ್ರುತದಿಂದ ಎರವಲಾಗಿ ಬಂದವುಗಳು ಮತ್ತು ಹಾಗೆ0iÉುೀ ಬಳಕೆಯಾಗುವವುಗಳು ಕನ್ನಡದವೇ ಆದ (ಎಂದರೆ ಕನ್ನಡ ತನ್ನ ಮೂಲನುಡಿಯಿಂದ ಪಡೆದ) ಪದಗಳು. ಆದರೆ ಮರಾಟಿಯಲ್ಲಿ ಕನ್ನಡದ ಹಾಗೆ ಎರಡು ರೀತಿಯ ಕ್ರಿಯಾಪದಗಳು ಕಾಣಿಸುವುದಿಲ್ಲ. ಸಂಸ್ಕ್ರುತದಿಂದ ಇತ್ತೀಚೆಗೆ ಎರವಲಾಗಿ ಪಡೆದ ರಚ್ಣೇ ರಚಿಸು’, ಲಾಭ್ಣೇ ಲಭಿಸು’, ಸ್ತವ್ಣೇ ಸ್ತುತಿಸು’, ನಮ್ಣೇ ನಮಿಸು’ ಮೊದಲಾದ `ತತ್ಸಮ’ ಪದಗಳಿಗೂ ಮರಾಟಿಯವೇ ಆದ ಕರ್, ಖಾ, ಜಾಣ್ ಮೊದಲಾದ ಕ್ರಿಯಾಪದಗಳ ಹಾಗೆ ಕ್ರಿಯಾಪ್ರತ್ಯಯಗಳನ್ನು ನೇರವಾಗಿ ಸೇರಿಸಿ ಬಳಸಲು ಸಾದ್ಯವಿದೆ (ಇದನ್ನು ನಾನು ಕೆ. ಎಸ್. ರಾಜ್ಯಶ್ರೀಯವರಿಂದ w½zÉ). ಇದಲ್ಲದೆ, ಇಸು ಪ್ರತ್ಯಯವನ್ನು ಸೇರಿಸದೆ ಹಾಗೆ0iÉುೀ ಬಳಸಬಲ್ಲ ಕನ್ನಡ ಕ್ರಿಯಾಪದಗಳಿಗೂ ಅವುಗಳಿಗೆ ಸಮನಾಗಿರುವ ಸಂಸ್ಕ್ರುತ ಕ್ರಿಯಾಪದಗಳಿಗೂ ನಡುವಿರುವ ವ್ಯತ್ಯಾಸಗಳನ್ನು ಕನ್ನಡದ ಚರಿತ್ರೆಯಲ್ಲಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗುವುದಿಲ್ಲವೆಂಬುದು ಅವುಗಳ ಮೂಲ ಸಂಸ್ಕ್ರುತವಲ್ಲ ಎಂಬ ವಿಶಯವನ್ನು ಸ್ಪಶ್ಟಪಡಿಸುತ್ತದೆ. 2.3.3 ಕನ್ನಡದ ದ್ರಾವಿಡ ಮೂಲ ಮೇಲೆ ಸೂಚಿಸಿದ ಹಾಗೆ, ಕನ್ನಡ ಪದಗಳಿಗೂ ಸಂಸ್ಕ್ರುತ ಪದಗಳಿಗೂ ನಡುವಿರುವ ವ್ಯತ್ಯಾಸಗಳನ್ನು ಕನ್ನಡದ ಚರಿತ್ರೆಯಲ್ಲಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗುವುದಿಲ್ಲ; ಆದರೆ, ಕನ್ನಡದ ಈ ಪದಗಳಿಗೂ ತಮಿಳು, ತೆಲುಗು, ಗೋಂಡಿ, ಕುಯಿ, ಕುಡುಕ್ ಮೊದಲಾದ ಬೇರೆ ಇಪ್ಪತ್ತು- ಮೂವತ್ತು ನುಡಿಗಳ ಪದಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಮೂಲ ದ್ರಾವಿಡವೆಂಬ ಒಂದು ಕಲ್ಪಿತವಾದ ನುಡಿಯ ಬೇರೆ ಬೇರೆ ಕವಲುಗಳಲ್ಲಿ ನಡೆದ ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗುತ್ತದೆ.

ಬರೋ ಮತ್ತು ಎಮೆನೋ ಸಂಪಾದಿಸಿರುವ ದ್ರಾವಿಡ ಜ್ನಾತಿ ಪದ ಕೋಶದಲ್ಲಿ (ಬರೋ ಮತ್ತು ಎಮೆನೋ 1961) ಇಂತಹ ಸುಮಾರು ಐದೂವರೆ ಸಾವಿರ ದೇಶೀಯ ಪದಕಾಂಡಗಳನ್ನು ಪಟ್ಟಿ ಮಾಡಲಾಗಿದೆ ಮತ್ತು ಅವಕ್ಕೆಲ್ಲ ಬೇರೆ ಬೇರೆ ದ್ರಾವಿಡ ನುಡಿಗಳಲ್ಲಿ ಎಂತೆಂತಹ ರೂಪಗಳಿವೆ ಎಂಬುದನ್ನೂ ತೋರಿಸಿಕೊಡಲಾಗಿದೆ. ಈ ಪದಗಳು ಸಂಸ್ಕ್ರುತ ಪದಗಳಿಂದ ತೀರ ಬೇರಾಗಿವೆ ಎಂಬುದು ಕೆಳಗೆ ಕೊಟ್ಟಿರುವ ಕನ್ನಡ, ತಮಿಳು ಮತ್ತು ತೆಲುಗು ನುಡಿಗಳಲ್ಲಿ ಬಳಕೆಯಲ್ಲಿರುವ ದೇಶೀಯ ಪದಗಳನ್ನು ಸಂಸ್ಕ್ರುತ ಪದಗಳೊಂದಿಗೆ ಹೋಲಿಸಿ ನೋಡಿದಾಗ ಗೊತ್ತಾಗುತ್ತದೆ. ಈ ಪದಗಳಿಗೆ ಮೂಲದ್ರಾವಿಡದಲ್ಲಿ ಎಂತಹ ರೂಪಗಳನ್ನು ಕಲ್ಪಿಸಿಕೊಳ್ಳಲು ಸಾದ್ಯ ಎಂಬುದನ್ನೂ ಕೆಳಗೆ ಸೂಚಿಸಲಾಗಿದೆ. ಕನ್ನಡ ತಮಿಳು ತೆಲುಗು ಮೂಲದ್ರಾವಿಡ ಸಂಸ್ಕ್ರುತ 1 ಕಿವಿ ಚೆವಿ ಚೆವಿ *ಕೆವಿ ಕಣ್ರ 2 ಕಿರು ಚಿ¾ು ಚಿರು *ಕಿ¾ು ಅಲ್ಪ 3 ಕಾಲು ಕಾಲ್ ಕಾಲು *ಕಾಲ್ ಪಾದ 4 ಕಣ್ಣು ಕಣ್ ಕನು *ಕಣ್ ಅಕ್ಷಿ 5 ಕೊಳ ಕುಳಮ್ ಕೊಲನು *ಕುಳಮ್ ತಟಾಕ 6 ಕೊಲ್ಲು ಕೊಲ್ ಕೊಲ್ಲು *ಕೊಲ್ ಹನ್ 7 ಸಿಕ್ಕು ಚಿಕ್ಕು ಚಿಕ್ಕು *ಚಿಕ್ಕು ಲಭ್ 8 ಸೆರೆ ಚಿರೈ ಚೆರ *ಚೆರೈ ಬಂಧನಂ 9 ಸುಡು ಚುಡು ಚುಡು *ಚುಡು ದಹ್ 10 ಸಾಯು ಚಾ ಚಚ್ಚು *ಚಾ ಮೃ 11 ಸಪ್ಪೆ ಚಪ್ಪೈ ಚಪ್ಪ *ಚಪ್ಪ0iÀiï ನೀರಸ 12 ಸೊಕ್ಕು ಚೊಕ್ಕು ಚೊಕ್ಕು *ಚೊಕ್ಕು ಉನ್ಮತ್ತ ಕನ್ನಡ, ತಮಿಳು ಮತ್ತು ತೆಲುಗು ನುಡಿಗಳಲ್ಲಿ ಬಳಕೆಯಲ್ಲಿರುವ ಈ ಪದಗಳ ನಡುವಿರುವ ವ್ಯತ್ಯಾಸಗಳನ್ನು ಆ ನುಡಿಗಳ ಇತಿಹಾಸದಲ್ಲಿ ನಡೆದ ಬೇರೆ ಬೇರೆ ರೀತಿಯ ಕಟ್ಟುನಿಟ್ಟಾದ ಬದಲಾವಣೆಗಳಿಂದ ಉಂಟಾದವುಗಳೆಂಬುದಾಗಿ ವಿವರಿಸಲು ಸಾದ್ಯವಾಗಿದೆ. ಇದಲ್ಲದೆ ಈ ಬದಲಾವಣೆಗಳು ಮೂಲದ್ರಾವಿಡವೆಂಬ ಒಂದು ಕಲ್ಪಿತವಾದ

ಮೂಲನುಡಿಯ ಪದಗಳಲ್ಲಿ ನಡೆದ ಬದಲಾವಣೆಗಳೆಂಬುದಾಗಿ ವಾದಿಸಲು ಸಾದ್ಯವಾಗಿದೆ (ಹೆಚ್ಚಿನ ವಿವರಗಳಿಗೆ ಕ್ರುಶ್ಣಮೂರ್ತಿ 2003, ಬಟ್ 2007 ನೋಡಿ). ಉದಾಹರಣೆಗಾಗಿ, ಈ ಮೂಲನುಡಿಯ ಪದಗಳ ಮೊದಲಿಗೆ ಬರುವ ಕಕಾರ ಕನ್ನಡದಲ್ಲಿ ಹಾಗೆ0iÉುೀ ಉಳಿದಿದೆ; ಆದರೆ, ತಮಿಳು ಮತ್ತು ತೆಲುಗು ನುಡಿಗಳಲ್ಲಿ ಇದು ಇಕಾರ ಇಲ್ಲವೇ ಎಕಾರದ ಎದುರು ಚಕಾರವಾಗಿ ಬದಲಾಗಿದೆ ಮತ್ತು ಉಳಿದೆಡೆಗಳಲ್ಲಿ ಮಾತ್ರ ಹಾಗೆ0iÉುೀ ಉಳಿದಿದೆ. ಈ ರೀತಿ ತಮಿಳು ಮತ್ತು ತೆಲುಗು ನುಡಿಗಳಿಗಾಗಿ ಒಂದು ಬದಲಾವಣೆಯ ನಿಯಮವನ್ನು ಕಲ್ಪಿಸಿಕೊಳ್ಳುವುದರ ಮೂಲಕ (1-7) ಪದಗಳ ಮೊದಲಿಗೆ ಕನ್ನಡಕ್ಕೂ ತಮಿಳು ಮತ್ತು ತೆಲುಗು ನುಡಿಗಳಿಗೂ ನಡುವೆ ಕಾಣಿಸುವ ಒಂದು ವ್ಯತ್ಯಾಸಕ್ಕೆ ವಿವರಣೆಯನ್ನು ಕೊಡಲು ಸಾದ್ಯವಾಗಿದೆ. ಇದೇ ರೀತಿಯಲ್ಲಿ ಮೂಲನುಡಿಯ ಪದಗಳ ಮೊದಲಿಗೆ ಬರುವ ಚಕಾರ ಕನ್ನಡದಲ್ಲಿ ಸಕಾರವಾಗಿ ಬದಲಾಗಿದೆ, ಆದರೆ ತಮಿಳು ಮತ್ತು ತೆಲುಗು ನುಡಿಗಳಲ್ಲಿ ಹಾಗೆ0iÉುೀ ಉಳಿದಿದೆ ಎಂಬುದಾಗಿ ಬೇರೊಂದು ನಿಯಮವನ್ನು ಕಲ್ಪಿಸಿಕೊಳ್ಳುವುದರ ಮೂಲಕ (8-12) ಪದಗಳ ಮೊದಲಿಗೆ ಈ ಮೂರು ನುಡಿಗಳ ನಡುವೆ ಕಾಣಿಸುವ ಬೇರೊಂದು ವ್ಯತ್ಯಾಸಕ್ಕೂ ವಿವರಣೆಯನ್ನು ಕೊಡಲು ಸಾದ್ಯವಾಗಿದೆ. ಆದರೆ ಮೇಲೆ ಕೊಟ್ಟಿರುವ ಕನ್ನಡ ಪದಗಳಿಗೂ ಅವುಗಳ ಮುಂದುಗಡೆ ಕೊನೆಯ ಕಾಲಂನಲ್ಲಿ ಕೊಟ್ಟಿರುವ ಸಂಸ್ಕ್ರುತ ಪದಗಳಿಗೂ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಯಾವುದನ್ನೂ ಆ ರೀತಿ ಕನ್ನಡದ ಇತಿಹಾಸದಲ್ಲಿ ನಡೆದ ಕಟ್ಟುನಿಟ್ಟಾದ ಕೆಲವು ಬದಲಾವಣೆಗಳ ಪರಿಣಾಮವೆಂಬುದಾಗಿ ವಿವರಿಸಲು ಸಾದ್ಯವಾಗುವುದಿಲ್ಲ. ಹಾಗಾಗಿ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂಬುದಾಗಿ ವಾದಿಸಲು ಸಾದ್ಯವಾಗುವುದಿಲ್ಲ. 2.3.4 ಸಂಸ್ಕ್ರುತದ ಇಂಡೋ-ಯುರೋಪಿಯನ್ ಮೂಲ ಕನ್ನಡ, ತಮಿಳು, ತೆಲುಗು ಮೊದಲಾದ ನುಡಿಗಳನ್ನು ಮೂಲದ್ರಾವಿಡವೆಂಬ ಒಂದು ಕಲ್ಪಿತವಾದ ನುಡಿಯಿಂದ ಬೆಳೆದು —

ಬಾಗ ಒಂದು : ಕನ್ನಡಕ್ಕೆ ಬೇಕಾಗಿರುವ ಲಿಪಿಕ್ರಾಂತಿ