Chapters: Ch 1 · Ch 2 · Ch 3 · Ch 4
3. ಪದಗಳ ಇಟ್ಟಳ: ಉಳಿದ ಪದಗಳು
3.1 ಮುನ್ನೋಟ
ಹೆಸರುಪದಗಳನ್ನು ಉಂಟುಮಾಡುವಲ್ಲಿ ಒಟ್ಟುಗಳ ಬಳಕೆ ಮತ್ತು ಜೋಡುಪದ ಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಹಿಂದಿನ ಪಸುಗೆಯಲ್ಲಿ ವಿವರಿಸ ಲಾಗಿತ್ತು. ಉಳಿದ ಪದಗಳನ್ನು, ಅದರಲ್ಲೂ ಮುಕ್ಯವಾಗಿ ಎಸಕಪದಗಳನ್ನು ಮತ್ತು ಪರಿಚೆಪದಗಳನ್ನು ಉಂಟುಮಾಡುವಲ್ಲಿ ಎಂತಹ ಹೊಲಬುಗಳು ಬಳಕೆ ಯಾಗುತ್ತವೆ ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗುವುದು.
3.2 ಎಸಕಪದಗಳ ಇಟ್ಟಳ
ಹೆಸರುಪದಗಳ ಹಾಗೆ, ಎಸಕಪದಗಳನ್ನೂ ಇಟ್ಟಳವಿರುವ ಪದಗಳು, ಮತ್ತು ಇಟ್ಟಳವಿಲ್ಲದ ಪದಗಳು ಎಂಬುದಾಗಿ ಎರಡು ಗುಂಪುಗಳಲ್ಲಿ ಒಡೆಯಲು ಬರು ತ್ತದೆ. ಎತ್ತುಗೆಗಾಗಿ, ಅಳು, ಕೊಡು, ಕಲಿ, ಮರೆ ಮೊದಲಾದ ಹಲವು ಎಸಕ ಪದಗಳಿಗೆ ಒಳಇಟ್ಟಳವಿಲ್ಲ; ಆದರೆ, ಕಳಚು, ಒಣಗು, ದೊರಕು, ಹಂಬಲಿಸು, ಮಾರ್ಪಡು ಮೊದಲಾದ ಬೇರೆ ಹಲವು ಎಸಕಪದಗಳಲ್ಲಿ ಒಳಇಟ್ಟಳವನ್ನು ಕಾಣಲು ಬರುತ್ತದೆ; ಹಾಗಾಗಿ, ಅವನ್ನು ಇಟ್ಟಳವಿರುವ ಪದಗಳೆಂದು ಹೇಳ ಬಹುದು.
ಇಟ್ಟಳವಿರುವ ಎಸಕಪದಗಳಲ್ಲಿಯೂ (1) ಎಸಕಪದ, ಹೆಸರುಪದ, ಇಲ್ಲವೇ ಬೇರೆ ಎಸಕಪದಗಳಿಗೆ ಒಟ್ಟುಗಳನ್ನು ಸೇರಿಸಿ ಉಂಟುಮಾಡಿರುವ ಒಟ್ಟಿಸಿದ ಎಸಕಪದಗಳು, ಮತ್ತು (2) ಹೆಸರುಪದ, ಪರಿಚೆಪದ, ಇಲ್ಲವೇ ಎಸಕಪದಗಳಿಗೆ, ಇಲ್ಲವೇ ಎಸಕಪದಗಳ ಜೋಡಿಸುವ ರೂಪಗಳಿಗೆ ಹೆಚ್ಚಿನ ಹುರುಳೊಂದನ್ನು ಕೊಡಬಲ್ಲ ಕೆಲವು ಎಸಕಪದಗಳನ್ನು ಸೇರಿಸಿ ಉಂಟು ಮಾಡಿರುವ ಕೂಡುಪದಗಳು ಎಂಬುದಾಗಿ ಎರಡು ಬಗೆಯ ಇಟ್ಟಳವಿರುವ ಎಸಕಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ.
ಎತ್ತುಗೆಗಾಗಿ, ಹಂಬಲಿಸು ಎಸಕಪದವನ್ನು ಹಂಬಲ ಹೆಸರುಪದಕ್ಕೆ ಇಸು ಒಟ್ಟನ್ನು ಸೇರಿಸಿ ಉಂಟುಮಾಡಿರುವುದರಿಂದ ಅದೊಂದು ಒಟ್ಟಿಸಿದ ಎಸಕಪದ; ಇದಕ್ಕೆ ಬದಲು, ಮಾರ್ಪಡು ಎಸಕಪದವನ್ನು ಮಾರು ಪರಿಚೆಪದಕ್ಕೆ ಪಡು ಎಸಕ ಪದವನ್ನು ಸೇರಿಸಿ ಉಂಟುಮಾಡಿರುವುದರಿಂದ ಅದೊಂದು ಕೂಡುಪದ. ಈ ಎರಡು ಬಗೆಯ ಎಸಕಪದಗಳಲ್ಲಿ ಎಂತಹ ಇಟ್ಟಳಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ.
3.2.1 ಒಟ್ಟಿಸಿದ ಎಸಕಪದಗಳು
ಎಸಕಪದಗಳ ಇಟ್ಟಳದಲ್ಲಿ ಕಾಣಿಸಿಕೊಳ್ಳುವ ಒಟ್ಟುಗಳು ಹೆಸರುಪದಗಳಲ್ಲಿ ಕಾಣಿಸಿಕೊಳ್ಳುವ ಒಟ್ಟುಗಳಿಗಿಂತ ತುಂಬಾ ಕಡಿಮೆ ಇವೆ. ಹೆಸರುಪದಗಳಲ್ಲಿ ಸುಮಾರು 50 ಒಟ್ಟುಗಳು ಬಳಕೆಯಾಗುತ್ತವೆ ಎಂಬುದನ್ನು ನಾವು ಹಿಂದಿನ ಪಸುಗೆಯಲ್ಲಿ ನೋಡಿರುವೆವು; ಆದರೆ, ಎಸಕಪದಗಳಲ್ಲಿ ಒಟ್ಟು 12 ಒಟ್ಟುಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಒಟ್ಟುಗಳು; ಕು, ಗು, ಚು, ಮತ್ತು ಇಸು ಎಂಬ ನಾಲ್ಕು ಒಟ್ಟುಗಳು ಮಾತ್ರ ತುಸು ಹೆಚ್ಚು ಎಸಕಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಒಟ್ಟುಗಳ ಬಳಕೆಯನ್ನು ಕೆಳಗೆ ವಿವರವಾಗಿ ಕೊಡಲಾಗಿದೆ.
3.2.2 ಸೇರಿಕೆಯ ಮಾರ್ಪಾಡುಗಳು
ಈ ಒಟ್ಟುಗಳನ್ನು ಎಸಕಪದಗಳಿಗೆ ಸೇರಿಸಿದಾಗ, ಅವುಗಳಲ್ಲಿ ಮತ್ತು ಅವು ಸೇರಿರುವ ಎಸಕಪದಗಳಲ್ಲಿ ಹಲವು ಬಗೆಯ ಸೇರಿಕೆಯ ಮಾರ್ಪಾಡುಗಳು ನಡೆ ಯುತ್ತವೆ; ಹಿಂದಿನ ಪಸುಗೆಯಲ್ಲಿ ವಿವರಿಸಿದ ಸೇರಿಕೆಯ ಮಾರ್ಪಾಡುಗಳಲ್ಲಿ ಕೆಳಗೆ ಕೊಟ್ಟಿರುವವು ಮಾತ್ರವಲ್ಲದೆ, ಕೆಲವು ಹೆಚ್ಚಿನ ಮಾರ್ಪಾಡುಗಳೂ ಇವುಗಳಲ್ಲಿ ಕಾಣಿಸಿಕೊಳ್ಳುತ್ತವೆ:
ಮೊದಲಾಗುವ ಒಟ್ಟು
2.2.1ರಲ್ಲಿ ವಿವರಿಸಿರುವ (ಪದಗಳ ಕೊನೆಯ ತೆರೆಯುಲಿ ಅವುಗಳ ಬಳಿಕ ತೆರೆಯುಲಿಯಲ್ಲಿ ಸೇರಿದಾಗ ಬಿದ್ದುಹೋಗುವ) ಮಾರ್ಪಾಡು (1) ಇಸು ಒಟ್ಟು ಸೇರಿರುವ ಗುಂಪು-ಗುಂಪಿಸು, ಅಬ್ಬರ- ಅಬ್ಬರಿಸು, ದಟ್ಟ-ದಟ್ಟಿಸು, ಕತ್ತಲೆ-ಕತ್ತಲಿಸು, ಗೊಂದಳಿ-ಗೊಂದಳಿಸು ಮೊದಲಾದ ಹಲವಾರು ಪದಗಳಲ್ಲಿ ನಡೆಯುತ್ತದೆ;
ಇದಲ್ಲದೆ, (2) ಅರ್ ಒಟ್ಟು ಸೇರಿರುವ ತುಂಡು-ತುಂಡರಿಸು (ತುಂಡು +ಅರ್+ಇಸು), ಮುಗ್ಗು-ಮುಗ್ಗರಿಸು (ಮುಗ್ಗು+ಅರ್+ಇಸು) ಮೊದಲಾದ ಪದಗಳಲ್ಲಿ, (3) ಅಳ್ ಒಟ್ಟು ಸೇರಿರುವ ಬಿಕ್ಕು-ಬಿಕ್ಕಳಿಸು (ಬಿಕ್ಕು+ಅಳ್ +ಇಸು) ಮತ್ತು ಕುಪ್ಪು-ಕುಪ್ಪಳಿಸು ಎಂಬವುಗಳಲ್ಲಿ, (4) ಅಲ್ ಒಟ್ಟು
ಸೇರಿರುವ ಹಿಗ್ಗು-ಹಿಗ್ಗಲಿಸು (ಹಿಗ್ಗು+ಅಲ್+ಇಸು) ಪದದಲ್ಲಿ, ಮತ್ತು (5) ಇ ಒಟ್ಟು ಸೇರಿರುವ ಕಿಸ-ಕಿಸಿ, ಮೀಟು-ಮಿಡಿ ಮತ್ತು ಸೋರು-ಸುರಿ ಎಂಬವು ಗಳಲ್ಲಿ ಕಾಣಿಸಿಕೊಳ್ಳುತ್ತದೆ.
2.2.3ರಲ್ಲಿ ವಿವರಿಸಿರುವ (ಎಸಕಪದಗಳ ಕೊನೆಯ ಎಕಾರ ಮುಚ್ಚುಲಿ ಯಲ್ಲಿ ಮೊದಲಾಗುವ ಒಟ್ಟು ಸೇರಿದಾಗ ಅಕಾರವಾಗುವ) ಮಾರ್ಪಾಡು (1) ಚು ಒಟ್ಟು ಸೇರಿರುವ ಎರೆ-ಎರಚು, ಕಳೆ-ಕಳಚು ಪದಗಳಲ್ಲಿ, (2) ಗು ಒಟ್ಟು ಸೇರಿರುವ ತೊಲೆ-ತೊಲಗು ಪದದಲ್ಲಿ, (3) ಕು ಒಟ್ಟು ಸೇರಿರುವ ದೊರೆ- ದೊರಕು, ಕಲೆ-ಕಲಕು ಮೊದಲಾದ ಅಯ್ದು ಪದಗಳಲ್ಲಿ, (4) ರು ಒಟ್ಟು ಸೇರಿರುವ ಮೆಡೆ-ಮೆಡರು ಪದದಲ್ಲಿ, ಮತ್ತು (5) ಹು ಒಟ್ಟು ಸೇರಿರುವ ನೆರೆ-ನೆರಹು ಪದದಲ್ಲಿ ಕಾಣಿಸಿಕೊಳ್ಳುತ್ತದೆ.
2.2.4ರಲ್ಲಿ ವಿವರಿಸಿರುವ ಉದ್ದ ತೆರೆಯುಲಿ ಗಿಡ್ಡವಾಗುವ ಮಾರ್ಪಾಡು ಓರ್ ಪದದಿಂದ ಪಡೆದ ಒಗ್ಗು, ಒಟ್ಟು ಮತ್ತು ಒಮ್ಮು ಎಸಕಪದಗಳಲ್ಲಿ ಕಾಣ ಬಹುದು.
2.2.5ರಲ್ಲಿ ವಿವರಿಸಿರುವ ಎರಡನೇ ತೆರೆಯುಲಿಯ ಮಾರ್ಪಾಡುಗಳನ್ನು ಹಲವು ಪದಗಳಲ್ಲಿ ಕಾಣಬಹುದು: ಪದದ ಕೊನೆಯ (1) ಇಕಾರ ಅಕಾರ ವಾಗುವುದನ್ನು ತರಿ-ತರಚು, ಮಡಿ-ಮಡಚು ಮೊದಲಾದ ಅಯ್ದು ಪದ ಗಳಲ್ಲಿ, (2) ಉಕಾರ ಅಕಾರವಾಗುವುದನ್ನು ತೊಡು-ತೊಡಗು, ಸೋರು- ಸೊರಗು ಮೊದಲಾದ ನಾಲ್ಕು ಪದಗಳಲ್ಲಿ, (3) ಎಕಾರ ಉಕಾರವಾಗುವುದನ್ನು ಅಲೆ-ಅಲುಗು, ನರೆ-ನರುಗು ಮತ್ತು ತಳೆ-ತಳುವು ಪದಗಳಲ್ಲಿ, (4) ಇಕಾರ ಉಕಾರವಾಗುವುದನ್ನು ಮಿಡಿ-ಮಿಡುಕು, ಅಳಿ-ಅಳುಗು ಮೊದಲಾದ 14 ಪದಗಳಲ್ಲಿ, ಮತ್ತು (5) ಪರಿಚೆಪದದ ಎಕಾರ ಅಕಾರವಾಗುವುದನ್ನು ಹಳೆ- ಹಳಚು ಪದದಲ್ಲಿ ಕಾಣಬಹುದು.
2.2.6ರಲ್ಲಿ ವಿವರಿಸಿರುವ (ಪದಗಳ ಕೊನೆಯ ರಕಾರ ಅದರ ಬಳಿಕ ಬಂದ ಮುಚ್ಚುಳಿಯ ರೂಪವನ್ನೇ ಪಡೆಯುವ) ಮಾರ್ಪಾಡನ್ನು ಬಿರಿ-ಬಿಚ್ಚು, ಹೆರ್- ಹೆಚ್ಚು ಮತ್ತು ಓರ್ ಪದದಿಂದ ಪಡೆದ ಒಗ್ಗು, ಒಪ್ಪು, ಒಮ್ಮು ಪದಗಳಲ್ಲಿ ಕಾಣಬಹುದು.
2.2.7ರಲ್ಲಿ ವಿವರಿಸಿರುವ (ಮುಚ್ಚುಲಿಗಳ ಮೊದಲು ಬರುವ ಮೂಗುಲಿ ಗಳು ಆ ಮುಚ್ಚುಲಿಗಳ ಜಾಗಕ್ಕೆ ಬದಲಾಗುವ) ಮಾರ್ಪಾಡನ್ನು ಮಿನು(ಗು)- ಮಿಂಚು ಪದದಲ್ಲಿ ಕಾಣಬಹುದು.
2.2.10ರಲ್ಲಿ ವಿವರಿಸಿರುವ ಹಕಾರ (ಇಲ್ಲವೇ ಪಕಾರ) ತೆರೆಯುಲಿಗಳ ಬಳಿಕ ವಕಾರವಾಗುವ ಮಾರ್ಪಾಡನ್ನು ಪು/ವು/ಹು ಒಟ್ಟಿನ ಬಳಕೆಯಲ್ಲಿ ಕಾಣ ಬಹುದು.
2.2.11ರಲ್ಲಿ ವಿವರಿಸಿರುವ (ಮುಚ್ಚುಲಿಯ ಮೊದಲು ಬರುವ ಉಕಾರ ಅದರ ಮೊದಲು ಮೂಗುಲಿಯಿರುವಲ್ಲಿ ಬಿದ್ದುಹೋಗುವ) ಮಾರ್ಪಾಡನ್ನು ಮಿನು(ಗು)-ಮಿಂಚು ಪದದಲ್ಲಿ ಕಾಣಬಹುದು, ಮತ್ತು ಅದರ ಮೊದಲು ಯಕಾರ ಬಂದಿರುವ ಹಲವು ಪದಗಳಲ್ಲಿ (ಕಾಯು-ಕಾಯ್ಗಟ್ಟು, ಕೊಯ್ಯು- ಕೊಯ್ತರು, ಬಯ್ಯು-ಬಯ್ತಿಡು, ತುಯ್ಯು-ತುಯ್ದಾಡು) ಕಾಣಬಹುದು.
ಇದಲ್ಲದೆ, ಎಸಕಪದಗಳ ಪರಿಚೆಯನ್ನವಲಂಬಿಸಿರುವ ಬೇರೆ
ಕೆಲವು ಸೇರಿಕೆಯ ಮಾರ್ಪಾಡುಗಳು ಈ ಪದಗಳಲ್ಲಿ ಕಾಣಿಸುತ್ತವೆ: (1) ಕನ್ನಡದಲ್ಲಿ ಎಸಕಪದಗಳು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವುವಾದರೆ, ಅವು ಗಳಲ್ಲಿ ಸಾಮಾನ್ಯವಾಗಿ ಇಮ್ಮಡಿ ಮುಚ್ಚುಲಿ ಇಲ್ಲವೇ ಉದ್ದ ತೆರೆಯುಲಿ ಬರುವುದಿಲ್ಲ; ಈ ಪರಿಚೆಯನ್ನವಲಂಬಿಸಿ, ಮೀಟು ಮತ್ತು ಸೋರು ಎಸಕ ಪದಗಳಿಗೆ ಇ ಒಟ್ಟನ್ನು ಸೇರಿಸಿದಾಗ, ಅವುಗಳ ಉದ್ದ ತೆರೆಯುಲಿ ಗಿಡ್ಡವಾಗಿರು ವುದನ್ನು ಮಿಡಿ ಮತ್ತು ಸುರಿ ಎಸಕಪದಗಳಲ್ಲಿ ಕಾಣಬಹುದು. (ಇದಲ್ಲದೆ, ಮೀಟು ಪದದ ಟಕಾರ ಡಕಾರವಾಗಿದೆ).
(2) ಎಸಕಪದಗಳು ಉಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ, ಮತ್ತು ಅವು ಗಳಲ್ಲಿ ಮೂರು ಬರಿಗೆಕಂತೆಗಳಿವೆಯಾದರೆ, ಅಂತಹ ಎಸಕಪದಗಳಲ್ಲಿ ಇಮ್ಮಡಿ ಮುಚ್ಚುಲಿ ಇಲ್ಲವೇ ಉದ್ದ ತೆರೆಯುಲಿ ಬರುವುದಿಲ್ಲ. (ಇದಕ್ಕೆ ಆಸರು, ಬೇಸರು ಮತ್ತು ಎಚ್ಚರು ಎಂಬ ಮೂರು ಎಸಕಪದಗಳು ಹೊರಪಡಿಕೆಗಳು). ಈ ಪರಿಚೆ ಯನ್ನವಲಂಬಿಸಿ, ಒಟ್ಟುಗಳನ್ನು ಬಳಸಿ ಉಂಟುಮಾಡಿರುವ ಎಸಕಪದಗಳಲ್ಲಿ ಎರಡು ಬಗೆಯ ಸೇರಿಕೆಯ ಮಾರ್ಪಾಡುಗಳು ಕಾಣಿಸಿಕೊಳ್ಳುತ್ತವೆ:
ಎರಡು ಉಲಿಕಂತೆಯಿರುವ ಪದಗಳಿಗೆ ಒಟ್ಟೊಂದನ್ನು ಸೇರಿಸಿದುದರಿಂದಾಗಿ ಅವು ಮೂರು ಉಲಿಕಂತೆಯ ಎಸಕಪದಳಾದಾಗ, (ಕ) ಅವುಗಳಲ್ಲಿದ್ದ ಉದ್ದ ತೆರೆಯುಲಿ ಗಿಡ್ಡವಾಗಬಹುದು, ಇಲ್ಲವೇ (ಚ) ಅವುಗಳಲ್ಲಿದ್ದ ಇಮ್ಮಡಿ ಮುಚ್ಚುಲಿ ಒತ್ತೆ ಮುಚ್ಚುಲಿಯಾಗಬಹುದು. ಈ ಎರಡು ಬಗೆಯ ಮಾರ್ಪಾಡು ಗಳನ್ನು ಕೆಳಗೆ ಕೊಟ್ಟಿರುವ ಪದಗಳಲ್ಲಿ ಕಾಣಬಹುದು (ತಿಕ್ಕು-ತಿಗುರು ಎಂಬುದರಲ್ಲಿ ಕಕಾರ ಗಕಾರವಾಗಿದೆ, ಮತ್ತು ಸೋರು-ಸೊರಗು, ಹೋಳು- ಹೊಳಚು ಎಂಬವುಗಳಲ್ಲಿ ಅವುಗಳ ಕೊನೆಯ ಉಕಾರ ಅಕಾರವಾಗಿದೆ):
ಉದ್ದ ತೆರೆಯುಲಿ ಗಿಡ್ಡವಾಗಿರುವುದು ಇಮ್ಮಡಿ ಮುಚ್ಚುಲಿ ಒತ್ತೆಯಾಗಿರುವುದು ಕೀರು ತಾಳು ತೂರು ಸೋರು ಹೋಳು
ಕಿರುಚು ತಳುಗು ತುರುಕು ಸೊರಗು ಹೊಳಚು
ಎಟಕು ಚಲುಕು ತಿಗುರು ತುಳುಕು
ಎಟ್ಟು ಚಲ್ಲು ತಿಕ್ಕು ತುಳ್ಳು
ಇವು ಒಟ್ಟಿಸಿದ ಎಸಕಪದಗಳಲ್ಲಿ ನಡೆಯುವ ಮುಕ್ಯವಾದ ಸೇರಿಕೆಯ ಮಾರ್ಪಾಡುಗಳು; ಇವಲ್ಲದೆ, ಕೆಲವೇ ಕೆಲವು ಎಸಕಪದಗಳಲ್ಲಿ ಮತ್ತು ಒಟ್ಟು ಗಳಲ್ಲಿ ನಡೆಯುವ ಬೇರೆಯೂ ಕೆಲವು ಮಾರ್ಪಾಡುಗಳಿವೆ; ಇವನ್ನು ಕೆಳಗೆ ಒಟ್ಟು ಗಳ ಬಳಕೆಯನ್ನು ಒಂದೊಂದಾಗಿ ವಿವರಿಸುವ ಸಮಯದಲ್ಲಿ ತಿಳಿಸಲಾಗುತ್ತದೆ.
3.2.3 ಒಟ್ಟುಗಳ ಕೊಗೆತ
ಒಟ್ಟಿಸಿದ ಎಸಕಪದಗಳಲ್ಲಿ ಕೆಳಗೆ ಕೊಟ್ಟಿರುವ 12 ಒಟ್ಟುಗಳು ಬಳಕೆ ಯಾಗಿರುವುದನ್ನು ಕಾಣಬಹುದು; ಇವುಗಳಲ್ಲಿ ಮುಕ್ಯವಾದ ಅಯ್ದು ಒಟ್ಟುಗಳನ್ನು ಬೇರೆ ಬೇರಾಗಿ ವಿವರಿಸಲಾಗಿದೆ; ಮತ್ತು ಉಳಿದ ಏಳು ಒಟ್ಟುಗಳನ್ನು ಪಟ್ಟಿ ಮಾಡಲಾಗಿದೆ.
(1) ಇಸುಇಸುಇಸುಇಸು ಒಟ್ಟು ಈ ಒಟ್ಟನ್ನು ಹೆಸರುಪದಗಳಿಗೆ, ಪರಿಚೆಪದಗಳಿಗೆ, ಮತ್ತು ಎಸಕಪದಗಳಿಗೆ ಸೇರಿಸುವ ಮೂಲಕ ಬೇರೆ ಎಸಕಪದಗಳನ್ನು ಉಂಟುಮಾಡಲಾಗಿದೆ. ಇಂತಹ ಮೂರು ಬಗೆಯ ಎಸಕಪದಗಳನ್ನು ಕೆಳಗೆ ಬೇರೆ ಬೇರಾಗಿ ವಿವರಿಸಲಾಗಿದೆ:
(ಕ) ಹೆಸರುಪದಗಳಿಗೆ ಈ ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು ಆ ಹೆಸರುಪದಗಳು ಹೆಸರಿಸುವಂತಹದನ್ನು ಉಂಟುಮಾಡುವ ಎಸಕವನ್ನು ತಿಳಿಸು ತ್ತವೆ. ಎತ್ತುಗೆಗಾಗಿ, ಕತ್ತಲಿಸು ಎಂಬುದು ಕತ್ತಲೆಯನ್ನು ಉಂಟುಮಾಡುವ ಎಸಕವನ್ನು, ಅಬ್ಬರಿಸು ಎಂಬುದು ಅಬ್ಬರವನ್ನು ಉಂಟುಮಾಡುವ ಎಸಕವನ್ನು, ಮತ್ತು ಎಚ್ಚರಿಸು ಎಂಬುದು ಎಚ್ಚರವನ್ನು ಉಂಟುಮಾಡುವ ಎಸಕವನ್ನು ತಿಳಿಸುತ್ತದೆ. ಇಂತಹ ಕೆಲವು ಎಸಕಪದಗಳನ್ನು ಕೆಳಗೆ ಕೊಡಲಾಗಿದೆ:
ಅಬ್ಬರಿಸು ಎಚ್ಚರಿಸು
ಅಬ್ಬರ ಎಚ್ಚರ ಒತ್ತಾಯ ಒತ್ತಾಯಿಸು ಇಟ್ಟಣ ಕತ್ತಲೆ ಗಮನ ಗುಂಪು ಗುರುತು ಗೊಂದಲ ಜಂಕೆ ತೀರ್ಮಾನ ತೀರ್ಮಾನಿಸು ದಟ್ಟಣೆ
ಇಟ್ಟಣಿಸು ಕತ್ತಲಿಸು ಗಮನಿಸು ಗುಂಪಿಸು ಗುರುತಿಸು ಗೊಂದಲಿಸು ಜಂಕಿಸು
ದಟ್ಟಣಿಸು
ಉಬ್ಬರ ಉಬ್ಬರಿಸು ಬೇಸರ ಬೇಸರಿಸು ಉಕ್ಕೆವ ಉಕ್ಕೆವಿಸು ಉರವಣೆ ಉರವಣಿಸು ಕಮ್ಮು ಕುಚ್ಚಣೆ ಗೊಂದಣಿ ಗೆಂಟು ಚದುಪು ತತ್ತರ ತಿಂತಿಣಿ ಬೆಂಬಲ
ಕಮ್ಮಿಸು ಕುಚ್ಚಣಿಸು ಗೊಂದಣಿಸು ಗೆಂಟಿಸು ಚದುಪಿಸು ತತ್ತರಿಸು ತಿಂತಿಣಿಸು ಬೆಂಬಲಿಸು
ಸಂದಣಿ ಹಂಬಲ ಹೆಸರು ತರಹರ
ಸಂದಣಿಸು ಹಂಬಲಿಸು ಹೆಸರಿಸು ತರಹರಿಸು
ಸಡಗರ ಹುರುಡು ಹೊಪ್ಪಳ ಒತ್ತರ
ಸಡಗರಿಸು ಹುರುಡಿಸು ಹೊಪ್ಪಳಿಸು ಒತ್ತರಿಸು
ಏವ, ಒಪ್ಪ ಮತ್ತು ತಕ್ಕು ಪದಗಳಿಗೆ ಈ ಒಟ್ಟು ಸೇರಿದಾಗ, ಯಕಾರ
ವೊಂದು ಸೇರಿಕೊಳ್ಳುತ್ತದೆ (ಏವಯಿಸು, ಒಪ್ಪಯಿಸು, ತಕ್ಕಯಿಸು); ಅಂದ ಪದಕ್ಕೆ ಸೇರಿದಾಗ ವಕಾರ ಸೇರಿಕೊಳ್ಳುತ್ತದೆ (ಅಂದವಿಸು); ನೆಲೆ-ನೆಲಸು ಮತ್ತು ಬಳೆ-ಬಳಸು ‘ಸುತ್ತಿ ಹೋಗು’ ಎಂಬವುಗಳಲ್ಲಿ ಈ ಒಟ್ಟಿನ ಇಕಾರ ಬಿದ್ದುಹೋಗುತ್ತದೆ; ಮತ್ತು, ಕೆಳಗಿನ ಪದಗಳಲ್ಲಿ ಅರ್ ಎಂಬುದು ಸೇರಿ ಕೊಳ್ಳುತ್ತದೆ (ಕನವರಿಸು ಎಂಬುದರಲ್ಲಿ ಕನ ಪದದ ಬಳಿಕ ವಕಾರ ಬರುತ್ತದೆ, ಮತ್ತು ತಬ್ಬಿಬ್ಬು ಪದ ತಬ್್ಬ ರೂಪದಲ್ಲಿ ಉಳಿಯುತ್ತದೆ):
ಗುಟುಕು ಹೇವ ತಬ್ಬಿಬ್ಬು
ಗುಟುಕರಿಸು ಹೇವರಿಸು ತಬ್ಬರಿಸು
ತುಂಡು ಕನ ಮುಗ್ಗು
ತುಂಡರಿಸು ಕನವರಿಸು ಮುಗ್ಗರಿಸು
(ಚ) ಕೆಲವು ಪರಿಚೆಪದಗಳಿಗೆ ಈ ಒಟ್ಟನ್ನು ಸೇರಿಸಿ, ಅವು ತಿಳಿಸುವ ಪರಿಚೆ ಯನ್ನು ಉಂಟುಮಾಡುವಂತಹ ಎಸಕಗಳನ್ನು ತಿಳಿಸುವ ಪದಗಳನ್ನು ಪಡೆಯ ಲಾಗಿದೆ:
ಎತ್ತರ ಎತ್ತರಿಸು
ಇದಿರು ಇದಿರಿಸು
ಬೋಳು ಬೋಳಿಸು
ಮುಕ್ಕುಳಿ ಮುಕ್ಕುಳಿಸು ಎಂಜಲು ಎಂಜಲಿಸು ಗಾರಿಸು
ಗಾರು
ತಂಪಿಸು ತಂಪು ಎದುರು ಎದುರಿಸು ಅಗಲ ಅಗಲಿಸು ಮೊಕ್ಕಳ ಮೊಕ್ಕಳಿಸು ಬೆತ್ತಲೆ ಬೆತ್ತಲಿಸು ದಟ್ಟ
ದಟ್ಟಿಸು
ಎದುರು ಮತ್ತು ದಟ್ಟ ಪದಗಳಿಂದ ಎದುರಾಯಿಸು ಮತ್ತು ದಟ್ಟಯಿಸು ಎಂಬ ಬೇರೆ ಎರಡು ಎಸಕಪದಗಳನ್ನೂ ಪಡೆಯಲಾಗಿದೆ; ಮತ್ತು ಕೊಕ್ಕೆ(ನುಡಿ) ಎಂಬುದರಿಂದ ಕೊಕ್ಕರಿಸು ಎಂಬ ಎಸಕಪದವನ್ನು ಪಡೆಯಲಾಗಿದೆ.
ಕನ್ನಡದಲ್ಲಿ ಎರಡು ಬಗೆಯ ಅಣಕ ಪದಗಳಿವೆ: ಒಮ್ಮೆಗೇ ನಡೆದುಹೋಗುವ ಸದ್ದು, ಅನಿಸಿಕೆ ಮೊದಲಾದುವನ್ನು ತಿಳಿಸುವ ಚರಕ್ಕನೆ, ಕಚಕ್ಕನೆ, ಡಬ್ಬನೆ, ಗಪ್ಪನೆ, ಕಮ್ಮನೆ ಎಂಬಂತಹವುಗಳದು ಒಂದು ಗುಂಪು; ಮತ್ತು, ತುಸು ಹೊತ್ತು ನಡೆಯುವ ಸದ್ದು, ಅನಿಸಿಕೆ ಮೊದಲಾದುವನ್ನು ತಿಳಿಸುವ ಸರಸರ(ನೆ),
ಲಟಲಟ(ನೆ), ಕೊಣಕೊಣ, ಗಮಗಮ ಎಂಬಂತಹವುಗಳದು ಇನ್ನೊಂದು ಗುಂಪು.
ಇವುಗಳಲ್ಲಿ ಎರಡನೇ ಬಗೆಯವುಗಳಿಗೆ ಇಸು ಒಟ್ಟನ್ನು ಸೇರಿಸಿ, ಅವು ತಿಳಿಸುವ ಸದ್ದು, ಅನಿಸಿಕೆ ಮೊದಲಾದುವನ್ನು ಉಂಟುಮಾಡುವಂತಹ ಎಸಕ ಗಳನ್ನು ತಿಳಿಸುವ ಎಸಕಪದಗಳನ್ನು ಪಡೆಯಲಾಗಿದೆ.
ಕಳಕಳಿಸು ಗಜಬಜಿಸು ಕಟಕಟಿಸು ಗಜಗಲಿಸು ಗಣಗಣಿಸು ಗದಗದಿಸು ಗಮಗಮಿಸು ಗುಜುಗುಜಿಸು ಗುಡುಗುಡಿಸು ಗುರುಗುರಿಸು
ಕಣಕಣಿಸು ಗಡಬಡಿಸು
ಚಿಟಿಚಿಟಿಸು
ತಡಬಡಿಸು ಮಗಮಗಿಸು ತಳಮಳಿಸು
ತಡವರಿಸು ತಲತಳಿಸು
ತಳತಳಿಸು ಮಳಮಳಿಸು
(ಟ) ಕೆಳಗೆ ಕೊಟ್ಟಿರುವ ಎಸಕಪದಗಳಿಗೆ ಈ ಒಟ್ಟನ್ನು ಸೇರಿಸಿ ಬೇರೆ ಎಸಕ ಪದಗಳನ್ನು ಪಡೆಯಲಾಗಿದೆ; ಹೀಗೆ ಸೇರಿಸಿದಾಗ, ಎಸಕಪದಗಳ ಬಳಿಕ ಅರ್ ಎಂಬುದು ಬಂದಿದೆ; ನೆನೆ ಪದದ ಕೊನೆಯ ಎಕಾರ ಅಕಾರವಾಗಿದ್ದು, ಅದರ ಬಳಿಕ ಅರ್ ಒಟ್ಟು ಸೇರುವ ಮೊದಲು ಒಂದು ವಕಾರ ಸೇರಿದೆ; ಮತ್ತು ಅಟ್ಟು ಪದ ಅಂಟು ಎಂದಾಗಿದೆ.
ಇದಲ್ಲದೆ, ಈ ಎಸಕಪದಗಳ ಹುರುಳಿನಲ್ಲೂ ಕೆಲವು ಬಗೆಯ ಮಾರ್ಪಾಡು ಗಳು ನಡೆದಿವೆ; ಎತ್ತುಗೆಗಾಗಿ, ಅಟ್ಟು ಎಂಬುದು ಒಂದು ಮಾಡುವಿಕೆಯನ್ನು (‘ನೀರಿಂಗಿಸಿ ಒಣಗಿಸು’ ಎಂಬುದನ್ನು) ತಿಳಿಸುವುದಾದರೆ, ಅಂಟರಿಸು ಎಂಬುದು ಒಂದು ಆಗುವಿಕೆಯನ್ನು (‘ನೀರಿಂಗಿ ಒಣಗು’ ಎಂಬುದನ್ನು) ತಿಳಿಸುತ್ತದೆ; ಒತ್ತರಿಸು ಎಂಬುದು ‘ಒಟ್ಟು ಸೇರಿಸು’[ಎಂಬ ಹುರುಳನ್ನು ಕೊಡುತ್ತದೆ; ಗುದ್ದರಿಸು ಎಂಬುದು ‘ಕಯ್ಯಿಂದ ಇಲ್ಲವೇ ತಲೆಯಿಂದ ಮೆಲ್ಲನೆ ಹೊಡೆ’[ಎಂಬ ಹುರುಳನ್ನು ಕೊಡುತ್ತದೆ.
ಇಕ್ಕು ಇಕ್ಕರಿಸು
ಅಟ್ಟು ಅಂಟರಿಸು
ಕುಕ್ಕು ಕುಕ್ಕರಿಸು
ಜಬ್ಬು ಜಬ್ಬರಿಸು
ತೆಬ್ಬರಿಸು
ತೆಬ್ಬು ನೆನವರಿಸು ನೆನೆ
ಉಗು ಉಗರಿಸು ಒತ್ತು ಒತ್ತರಿಸು ಗುದ್ದು ಗುದ್ದರಿಸು ಜೂಗು ಜೂಗರಿಸು ಉಬ್ಬು ಉಬ್ಬರಿಸು
ಇದಲ್ಲದೆ, ಕಂಡರಿಸು, ಕೆಕ್ಕರಿಸು, ಕೇಕರಿಸು, ಕೊಕ್ಕರಿಸು, ಗಬ್ಬರಿಸು, ಚಪ್ಪರಿಸು, ತಡವರಿಸು, ತತ್ತರಿಸು, ತೆಪ್ಪರಿಸು, ವಾಕರಿಸು, ಸೀವರಿಸು
ಮೊದಲಾದ ಬೇರೆ ಕೆಲವು ಎಸಕಪದಗಳಲ್ಲಿಯೂ ಇಂತಹದೇ ಇಟ್ಟಳವಿರುವ ಹಾಗೆ ಕಾಣಿಸುತ್ತದೆ.
ಬಿಕ್ಕು ಮತ್ತು ಕುಪ್ಪು ಎಂಬ ಬೇರೆ ಎರಡು ಎಸಕಪದಗಳಿಗೂ ಇಸು ಒಟ್ಟನ್ನು ಸೇರಿಸಿ ಬೇರೆ ಎಸಕಪದಗಳನ್ನು ಪಡೆಯಲಾಗಿದ್ದು, ಅವುಗಳ ಬಳಿಕ, ಈ ಒಟ್ಟು ಸೇರುವ ಮೊದಲು, ಅಳ್ ಎಂಬುದು ಬರುತ್ತದೆ (ಬಿಕ್ಕಳಿಸು, ಕುಪ್ಪ ಳಿಸು); ಹಿಗ್ಗು ಎಂಬುದರ ಬಳಿಕ ಅಲ್ ಎಂಬುದು ಬರುತ್ತದೆ (ಹಿಗ್ಗಲಿಸು).
ತೇರು ‘ತೇರ್ಗಡೆಯಾಗು’ ಎಸಕಪದದ ಅಲ್ಲಗಳೆಯುವ ರೂಪಕ್ಕೆ ಈ ಒಟ್ಟನ್ನು ಸೇರಿಸಿ ತೇರಯಿಸು ‘ತೇರ್ಗಡೆಯಾಗದಿರು’ ಎಂಬ ಬೇರೊಂದು ಎಸಕಪದವನ್ನು ಪಡೆಯಲಾಗಿದೆ.
(1ಕ) ಪದರೂಪದ ಇಸುಇಸುಇಸುಇಸು ಒಟ್ಟು ಎಸಕಪದಗಳೊಂದಿಗೆ ಬರುವ ಮತ್ತು ಇಸು ರೂಪದಲ್ಲಿರುವ ಇನ್ನೊಂದು ಒಟ್ಟನ್ನೂ ಇಲ್ಲಿ ಗಮನಿಸಬಹುದು. ಎತ್ತುಗೆಗಾಗಿ, ಮಾಡು-ಮಾಡಿಸು, ತಿನ್ನು- ತಿನ್ನಿಸು, ಕಲಿ-ಕಲಿಸು ಎಂಬಂತಹ ಪದಗಳಲ್ಲಿ ಈ ಒಟ್ಟಿನ ಬಳಕೆಯಾಗಿದೆ. ಆದರೆ ಇದನ್ನು ಬಳಸಿ, ಎಸಕಪದಗಳಿಂದ ಅವುಗಳ ಪದರೂಪವೊಂದನ್ನು ಪಡೆಯಲಾಗುತ್ತದಲ್ಲದೆ ಬೇರೆ ಎಸಕಪದಗಳನ್ನಲ್ಲ (4.3.1 ನೋಡಿ).
(2) ಚುಚುಚುಚು ಒಟ್ಟು (ಕ) ಕೆಲವು ಎಸಕಪದಗಳಿಗೆ ಈ ಒಟ್ಟನ್ನು ಸೇರಿಸಿ ಬೇರೆ ಎಸಕಪದಗಳನ್ನು ಪಡೆ ಯಲಾಗಿದೆ. ಹೆಚ್ಚಿನೆಡೆಗಳಲ್ಲೂ ಇದರಿಂದಾಗಿ ಅವುಗಳ ಹುರುಳಿನಲ್ಲಿ ಹೆಚ್ಚಿನ ಮಾರ್ಪಾಡಾಗಿರುವಂತೆ ತೋರುವುದಿಲ್ಲ; ಆದರೆ, ಕೆಲವು ಕಡೆಗಳಲ್ಲಿ (ಕವಿಚು, ತೋಚು, ಅವುಚು, ಅಡಚು ಮತ್ತು ತಿರುಚು ಪದಗಳಲ್ಲಿ) ಈ ಒಟ್ಟಿನ (ತಲೆ ಸೇರಿಕೆಯಿಂದಾಗಿ ಆಗುವಿಕೆಗಳು ಮಾಡುವಿಕೆಗಳಾಗಿ ಬದಲಾಗಿವೆ ತಿರುಗಿತು; ತಲೆಯನ್ನು ತಿರುಚಿದ).
ಅವಿಚು
ಕವಿಚು ತರಚು ಮಡಚು
ಬಿಚ್ಚು
ಅವಿ ಕವಿ ತರಿ ಮಡಿ ಬಿರಿ ಮಿನುಗು ಮಿಂಚು
ತಿರುಗು ತಿರುಚು
ಅಡಗು ಅಡಚು
ಅಲುಗು ಅಲಚು
ಎರಚು ಕಳಚು ಕಿರಿಚು
ಎರೆ ಕಳೆ ಕೀರು ಹೋಳು ಹೊಳಚು ತೋರು ತೋಚು ಗೋರು ಗೋಚು ಅವುಗು ಅವುಚು ಮಗುಳು ಮಗುಚು
ಮೇಲೆ ಕೊಟ್ಟಿರುವ ಮಿನುಗು-ಮಿಂಚು, ತಿರುಗು-ತಿರುಚು, ಅಡಗು- ಅಡಚು, ಅಲುಗು-ಅಲಚು, ಮತ್ತು ಅವುಗು-ಅವುಚು ಎಂಬವುಗಳಲ್ಲಿ ಚು ಒಟ್ಟು ಸೇರಿದಾಗ ಎಸಕಪದಗಳ ಕೊನೆಯ ಗು ಬರಿಗೆಕಂತೆ ಬಿದ್ದುಹೋಗಿರುವು ದನ್ನು ಕಾಣಬಹುದು.
ಆದರೆ, ತಿರುಗು-ತಿರುಚು ಮತ್ತು ಮಿನುಗು-ಮಿಂಚು ಎಂಬವುಗಳಲ್ಲಿ ಈ ರೀತಿ ಬಿದ್ದುಹೋಗಿರುವ ಗು ಬರಿಗೆಕಂತೆಯನ್ನು ಒಂದು ಒಟ್ಟೆಂಬುದಾಗಿ ಹೇಳ ಬೇಕಾಗುತ್ತದೆ; ಯಾಕೆಂದರೆ, ತಿರುಗು ಎಂಬುದನ್ನು ತಿರಿ ಎಸಕಪದದಿಂದ, ಮತ್ತು ಮಿಣುಗು ಎಂಬುದನ್ನು ಮಿಣಿಮಿಣಿ ಎಂಬ ಅಣಕು ಪದದಿಂದ ಅವಕ್ಕೆ ಗು ಒಟ್ಟನ್ನು ಸೇರಿಸಿ ಪಡೆಯಲು ಬರುತ್ತದೆ.
ಕೀರು-ಕಿರುಚು ಮತ್ತು ಹೋಳು-ಹೊಳಚು ಪದಗಳಲ್ಲಿ ಉದ್ದ ತೆರೆಯುಲಿ ಗಿಡ್ಡವಾಗಿದೆ; ಆದರೆ ಇದಕ್ಕೆ ಬದಲು, ಗೋರು-ಗೋಚು ಮತ್ತು ತೋರು- ತೋಚು ಪದಗಳಲ್ಲಿ ಅದರ ಬಳಿಕ ಬಂದ ರು ಬರಿಗೆಕಂತೆ ಬಿದ್ದುಹೋಗಿದೆ; ಮಗುಳು-ಮಗುಚು ಎಂಬುದರಲ್ಲೂ ಎಸಕಪದದ ಕೊನೆಯ ಳು ಬರಿಗೆಕಂತೆ ಬಿದ್ದುಹೋಗಿದೆ.
(ಚ) ಈ ಒಟ್ಟನ್ನು ಕೆಲವು ಪರಿಚೆಪದಗಳಿಗೆ ಸೇರಿಸಿಯೂ ಎಸಕಪದಗಳನ್ನು ಕಾಣಬಹುದು; ಇಲ್ಲಿ ಕೆಳಗಿನ ಪದಗಳಲ್ಲಿ ಪಡೆಯಲಾಗಿದೆಯೆಂಬುದನ್ನು ಕೊಟ್ಟಿರುವ ನುಣುಪು-ನುಣುಚು ಎಂಬುದರಲ್ಲಿ ನುಣುಪು ಪದದ ಕೊನೆಯ ಪು ಒಟ್ಟಿನ ಬದಲು ಚು ಒಟ್ಟು ಬಂದಿದೆ:
ಬಿಳಿಚು
ಬಿಳಿ ಮುನ್ ಮುಂಚು
ಹಿನ್
ಹಿಂಚು
ನುಣುಪು ನುಣುಚು ಹಳೆ ಹೆರ್
ಹಳಚು ಹೆಚ್ಚು
(3) ಗುಗುಗುಗು ಒಟ್ಟು (ಕ) ಈ ಒಟ್ಟನ್ನು ಬಳಸಿ ಕೆಳಗೆ ಕೊಟ್ಟಿರುವ ಕೆಲವು ಎಸಕಪದಗಳಿಂದ ಬೇರೆ ಎಸಕಪದಗಳನ್ನು ಪಡೆಯಲಾಗಿದೆ; ತಾಳು-ತಳುಗು ಮತ್ತು ಸೋರು- ಸೊರುಗು ಎಂಬವುಗಳಲ್ಲಿ ಎಸಕಪದದ ಉದ್ದ ತೆರೆಯುಲಿ ಗಿಡ್ಡವಾಗಿದೆ, ಮತ್ತು ನಜ್ಜು-ನಜುಗು ಎಂಬುದರಲ್ಲಿ ಇಮ್ಮಡಿ ಮುಚ್ಚುಲಿ ಒತ್ತೆ ಮುಚ್ಚುಲಿಯಾಗಿದೆ:
wj ಅಳಿ ಹುದಿ ಕುನಿ ಮಣಿ
ತಿರುಗು ಅಳುಗು
ಹುದುಗು
ಕುನುಗು
ಮಣಗು
ತೊಲೆ ಅಲೆ ನರೆ ತಾಳು ನಜ್ಜು
ತೊಲಗು ಅಲುಗು ನರುಗು ತಳುಗು ನಜುಗು
ನುರಿ Vr
ನುರುಗು
ಗಿಡಿಗು
ತೊಡು ತೊಡಗು ಸೋರು ಸೊರಗು
(ಚ) ಒಣ-ಒಣಗು, ಕಡು-ಕಡುಗು, ಕರಿ-ಕರಗು ‘ಕಪ್ಪಾಗು’, ಬಿಳಿ-ಬೆಳಗು ಎಂಬಲ್ಲಿ ಈ ಒಟ್ಟನ್ನು ಪರಿಚೆಪದಗಳಿಗೆ ಸೇರಿಸಿ ಎಸಕಪದಗಳನ್ನು ಉಂಟು ಮಾಡಲಾಗಿದೆ; ಇಲ್ಲಿ ಬಿಳಿ ಪದದ ಮೊದಲನೆಯ ಇಕಾರ ಎಕಾರವಾಗಿರುವು ದನ್ನು ಗಮನಿಸಬಹುದು. ಓರ್-ಒಗ್ಗು ಎಂಬುದರಲ್ಲಿ ಓರ್ ‘ಒಂದು’ ಎಣಿಕೆ ಪದಕ್ಕೆ ಗು ಒಟ್ಟನ್ನು ಸೇರಿಸಿ ಎಸಕಪದವನ್ನು ಪಡೆಯಲಾಗಿದೆ.
ಇದಲ್ಲದೆ, ಗುಡುಗು, ಗೊಣಗು, ಗೊಜಗು, ಮಿನುಗು, ಮಿರುಗು, ನುಜುಗು ಮೊದಲಾದ ಬೇರೆ ಕೆಲವು ಎಸಕಪದಗಳಲ್ಲಿ ಈ ಒಟ್ಟನ್ನು ಅಣಕು ಪದಗಳಿಗೆ ಸೇರಿಸಲಾಗಿದೆಯೆಂದು ತೋರುತ್ತದೆ (ಗುಡುಗುಡು ಗುಡುಗು, ಕೊಣಕೊಣ ಗೊಣಗು, ಗೊಜಗೊಜನೆ ಗೊಜಗು, ಮಿಣಮಿಣನೆ ಮಿನುಗು, ಮಿರಿಮಿರಿ ಮಿರುಗು, ನುಜ್ಜು(ಗುಜ್ಜು)-ನುಜುಗು).
(4) ಕುಕುಕುಕು ಒಟ್ಟು: (ಕ) ಕು ಒಟ್ಟನ್ನು ಬಳಸಿಯೂ ಎಸಕಪದಗಳಿಂದ ಬೇರೆ ಎಸಕಪದಗಳನ್ನು ಪಡೆಯಲು ಬರುತ್ತದೆ ಎಂಬುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು:
ಎಟ್ಟು ಎಟಕು ನಿಲ್ಲು ತೇಲು ಕೊರೆ ಅಡೆ ದೊರೆ ಕಲೆ ಹೊಳೆ ಹೊಳಕು
ನಿಲುಕು
ತೇಕು ಕೊರಕು
ಅಡಕು ದೊರಕು
ಕಲಕು
ಚಲ್ಲು ತುಳ್ಳು ತೂರು Vr ಮಡಿ ಮಿಡಿ ಹನಿ ಹಿಸಿ
ಚಲುಕು ತುಳುಕು ತುರುಕು ಗಿಡುಕು ಮಡುಕು ಮಿಡುಕು ಹನುಕು, ಹನಿಕು ಹಿಸುಕು
ಎಟ್ಟು-ಎಟಕು, ನಿಲ್ಲು-ನಿಲುಕು, ಚಲ್ಲು-ಚಲುಕು ಮತ್ತು ತುಳ್ಳು- ತುಳುಕು ಎಂಬವುಗಳಲ್ಲಿ ಇಮ್ಮಡಿ ಮುಚ್ಚುಲಿ ಒತ್ತೆ ಮುಚ್ಚುಲಿಯಾಗಿದೆ; ತೇಲು -ತೇಕು ಎಂಬುದರಲ್ಲಿ ಲು ಬರಿಗೆಕಂತೆ ಬಿದ್ದುಹೋಗಿದೆ, ಮತ್ತು ತೂರು- ತುರುಕು ಎಂಬುದರಲ್ಲಿ ಉದ್ದ ತೆರೆಯುಲಿ ಗಿಡ್ಡ ತೆರೆಯುಲಿಯಾಗಿದೆ.
ಅಡಗು-ಅಡಕು,
ತುರುಗು-ತುರುಕು ಮತ್ತು ಅವುಗು-ಅವುಕು ಎಂಬಲ್ಲಿ ಗು ಒಟ್ಟಿನ ಬದಲು ಕು ಒಟ್ಟು ಬಂದಿದ್ದು, ಗು
ತೊಡಗು-ತೊಡಕು,
ಒಟ್ಟಿಗೆ ಆಗುವಿಕೆಯನ್ನು ಮತ್ತು ಕು ಒಟ್ಟಿಗೆ ಮಾಡುವಿಕೆಯನ್ನು ತಿಳಿಸುವ ಹುರುಳಿದೆ.
ಇದಲ್ಲದೆ, ಗು ಎಂಬುದರಲ್ಲಿ ಕೊನೆಗೊಳ್ಳುವ ಬೇರೆ ಎಸಕಪದಗಳಲ್ಲಿ ಹೆಚ್ಚಿನವೂ ಆಗುವಿಕೆಯ ಹುರುಳನ್ನು ಕೊಡುತ್ತವೆ, ಮತ್ತು ಕು ಎಂಬುದರಲ್ಲಿ ಕೊನೆಗೊಳ್ಳುವ ಎಸಕಪದಗಳಲ್ಲಿ ಹೆಚ್ಚಿನವೂ ಮಾಡುವಿಕೆಯ ಹುರುಳನ್ನು ಕೊಡು ತ್ತವೆ. ಇವುಗಳ ಕೊನೆಯ ಗು ಇಲ್ಲವೇ ಕು ಎಂಬುದನ್ನು ಒಂದು ಒಟ್ಟೆಂದು ಹೇಳಲು ಬರುವುದಿಲ್ಲವಾದರೂ ಇದು ಗಮನಿಸತಕ್ಕ ವಿಶಯವಾಗಿದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಆಗುವಿಕೆಗಳು:
ಉಡುಗು ಗುಡುಗು ಮಿನುಗು
ಒಣಗು ಜರಗು ಅರಗು
ಮಾಡುವಿಕೆಗಳು: ತುರುಕು ಬೆದಕು ಅಮುಕು
ಹಿದುಕು
ಕೆಣಕು ಅದಕು
ಒದಗು ಜರುಗು
ನಲುಗು
ಹಿಸುಕು
ಕುಸುಕು
ತದಕು
ಕರಗು ಜಿನುಗು ಮಿರುಗು
ಹುಡುಕು ಕುಟುಕು ದುಡುಕು
ಆದರೆ, ಅಲಗು ಮತ್ತು ಅಲಕು ಎಂಬವೆರಡೂ ಆಗುವಿಕೆಗಳನ್ನೇ ತಿಳಿಸು ತ್ತಿರುವ ಹಾಗೆ ಕಾಣಿಸುತ್ತದೆ; ಇಲ್ಲಿ ಮಾಡುವಿಕೆಯನ್ನು ತಿಳಿಸುವ ಅಲಚು ಎಂಬ ಬೇರೆಯೇ ಪದವಿದೆ.
(ಚ) ಕುಟುಕು, ಕುರುಕು, ತಳಕು ಮತ್ತು ಮಿಣುಕು ಎಂಬಂತಹ ಬೇರೆ ಕೆಲವು ಎಸಕಪದಗಳನ್ನು ಅಣಕುಪದಗಳಿಗೆ ಕು ಒಟ್ಟನ್ನು ಸೇರಿಸಿ ಉಂಟು ಮಾಡಿರುವ ಹಾಗೆ ಕಾಣಿಸುತ್ತದೆ (ಕುಟುಕುಟು ಕುಟುಕು, ಕುರುಕುರು ಕುರುಕು, ತಳಪಳ ತಳಕು, ಮಿಣಿಮಿಣಿ ಮಿಣುಕು).
(ಟ) ಕರಿ-ಕರಿಕು ಎಂಬಲ್ಲಿ ಈ ಒಟ್ಟನ್ನು ಬಳಸಿ ಪರಿಚೆಪದದಿಂದ ಎಸಕ
ಪದವನ್ನು ಪಡೆಯಲಾಗಿದೆ.
(5) ಪು/ವು/ಹು ಪು/ವು/ಹು ಒಟ್ಟು ಪು/ವು/ಹು ಪು/ವು/ಹು ಈ ಒಟ್ಟಿಗೆ ಹೆಚ್ಚಿನೆಡೆಗಳಲ್ಲೂ ಆಗುವಿಕೆಯನ್ನು ಮಾಡುವಿಕೆಯಾಗಿ ಮಾರ್ಪಡಿಸುವ ಹುರುಳಿದೆ; ಇದು ಪು ರೂಪದಲ್ಲಿ ಕೆಳಗೆ ಕೊಟ್ಟಿರುವ ಎಸಕಪದಗಳಲ್ಲಿ ಕಾಣಿಸು ತ್ತದೆ:
ತಿಳಿ ಮಡಿ ಮಲೆ
ತಿಳಿಪು
ಮಡಿಪು
ಮಲೆಪು
ನೆರೆ ಮರೆ ಓರ್
ನೆರೆಪು ಮರೆಪು ಒಪ್ಪು
ಕೆಳಗೆ ಕೊಟ್ಟಿರುವ ಎಸಕಪದಗಳಲ್ಲಿ ಇದು ವು ರೂಪದಲ್ಲಿದೆ:
ಸುರುವು
ಸುರಿ ತಿರುಗು ತಿರುವು ತಳುವು ತಳೆ
ತುರಿ ಕೆಡೆ
ತುರುವು ಕೆಡವು
ಕೆಳಗೆ ಕೊಟ್ಟಿರುವ ಎಸಕಪದಗಳಲ್ಲಿ ಇದು ಹು ರೂಪದಲ್ಲಿದೆ:
ತಿಳಿ ಮಡಿ
ತಿಳುಹು
ಮಡುಹು ‘ಕೊಲ್ಲು’[
ನೆರೆ
ನೆರಹು
ಬೇರೆ ಕೆಲವು ಒಟ್ಟುಗಳು ಎಸಕಪದಗಳನ್ನು ಬೇರೆ ಪದಗಳಿಂದ ಉಂಟುಮಾಡುವಲ್ಲಿ ಬಳಕೆಯಾಗಿರುವ ಬೇರೆ ಕೆಲವು ಒಟ್ಟುಗಳನ್ನು ಕೆಳಗೆ ಕೊಡಲಾಗಿದೆ; ಇವುಗಳಲ್ಲಿ ಓರ್-ಒಂಟು ಮತ್ತು ಓರ್-ಒಂದು ಎಂಬುದರಲ್ಲಿ ಓರ್ ಎಣಿಕೆ ಪದಕ್ಕೆ ಒನ್ ರೂಪ ಇದೆ; ನಿಡು-ನೀಡು ಎಂಬುದರಲ್ಲಿ ಪರಿಚೆಪದದ ಇಕಾರ ಉದ್ದವಾಗಿದೆ:
-
E
- ಟು
- ದು
- ಮು
-
ರು
- ಸೊನ್ನೆ
ಕಿಸಿ
ಕಿಸ ಮೀಟು ಮಿಡಿ ಓರ್ ಓರ್ ಓರ್ ಬೆಳ್ ಮೆಡೆ ನಿಡು
ಒಂಟು ‘ಒಪ್ಪು’ ಒಂದು ‘ಕೂಡು’ ಒಮ್ಮು ‘ಒಪ್ಪು’ ಬೆಳರು ಮೆಡರು ನೀಡು
ತಣಿ
ತಣ್ ಸೋರು ಸುರಿ
ಓರ್
ಒಟ್ಟು ‘ಒಂದು ಮಾಡು’
ತಿಕ್ಕು
ತಿಗುರು
3.3 ಕೂಡುಪದಗಳು
ಹೆಸರುಪದಕ್ಕೆ, ಪರಿಚೆಪದಕ್ಕೆ, ಪರಿಚೆಬೇರಿಗೆ, ಇಲ್ಲವೇ ಎಸಕಪದದ ಜೋಡಿಸುವ ರೂಪಕ್ಕೆ ಬೇರೊಂದು ಎಸಕಪದವನ್ನು ಸೇರಿಸಿ ಹೊಸ ಎಸಕಪದಗಳನ್ನು ಉಂಟು ಮಾಡುವ ಇನ್ನೊಂದು ಹೊಲಬು ಕನ್ನಡದಲ್ಲಿ ತುಂಬಾ ಬಳಕೆಯಲ್ಲಿದೆ. ಈ
ಹೊಲಬನ್ನು ಬಳಸಿ ಪಡೆದಿರುವ ಎಸಕಪದಗಳನ್ನು ಇಲ್ಲಿ ಕೂಡುಪದಗಳೆಂದು ಕರೆಯಲಾಗಿದೆ.
ಎತ್ತುಗೆಗಾಗಿ, ಉಸಿರು ಹೆಸರುಪದಕ್ಕೆ ಆಡು ಎಸಕಪದವನ್ನು ಸೇರಿಸಿ ಉಸಿರಾಡು ಎಂಬ ಕೂಡುಪದವನ್ನು ಪಡೆಯಲಾಗಿದೆ; ಮುನ್ ಪರಿಚೆಬೇರಿಗೆ ದೂಡು ಎಸಕಪದವನ್ನು ಸೇರಿಸಿ ಮುಂದೂಡು ಕೂಡುಪದವನ್ನು ಪಡೆಯ ಲಾಗಿದೆ; ಮತ್ತು ನಲಿ ಎಸಕಪದದ ಜೋಡಿಸುವ ರೂಪವಾದ ನಲಿದು ಎಂಬುದಕ್ಕೆ ಆಡು ಎಸಕಪದವನ್ನು ಸೇರಿಸಿ ನಲಿದಾಡು ಕೂಡುಪದವನ್ನು ಪಡೆಯಲಾಗಿದೆ.
ಸಾಮಾನ್ಯವಾಗಿ ಇಂತಹ ಕೂಡುಪದಗಳ ಹುರುಳನ್ನು ಅವುಗಳಲ್ಲಿ ಸೇರಿ ಕೊಂಡಿರುವ ಪದಗಳ ಹುರುಳಿನಿಂದಲೇ ಪಡೆಯಲು ಬರುತ್ತದೆ. ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಕೂಡು ಪದಗಳ ಹುರುಳನ್ನು ನೇರವಾಗಿ ಅವುಗಳಲ್ಲಿ ಸೇರಿರುವ ಪದಗಳ ಹುರುಳಿನಿಂದ ಪಡೆಯಲು ಬರುವುದಿಲ್ಲ:
ತಪ್ಪುಕೊಡು ‘ತಪ್ಪು ಮಾಡಿದ್ದಕ್ಕೆ ಹಣ ಕೊಡು’ ಬೀಳ್ಕೊಡು ‘ಕಳಿಸಿಕೊಡು’[ ಕಯ್ಕೊಡು ‘ಮೋಸಮಾಡು’ ತಲೆಯೆತ್ತು ‘ಏಳಿಗೆಯಾಗು’ ಕಾಲುಮಾಡು ‘ಸುರುಮಾಡು’ ಕಯ್ಗಯ್ಯು ‘ಪ್ರಬಾವ ಬೀರು’ ಪಾಲ್ಗೊಳ್ಳು ‘ಸೇರಿಕೊಳ್ಳು’ ಬೆಂಗೊಡು ‘ಹಿಂದಿರುಗು’ ಬೆನ್ನಟ್ಟು ‘ಹಿಂಬಾಲಿಸು’
ತಲೆದೋರು ‘ಕಾಣಿಸು’ ಬಗೆಹರಿಸು ‘ಬಿಡಿಸು’ ತಲೆಹಾಕು ‘ತೂರಿಕೊಳ್ಳು’[
ಕೂಡುಪದಗಳನ್ನು ಮುಕ್ಯವಾಗಿ ಎರಡು ಬಗೆಗಳಲ್ಲಿ ಗುಂಪಿಸಲು ಬರುತ್ತದೆ, ಮತ್ತು ಹೀಗೆ ಗುಂಪಿಸುವ ಮೂಲಕ ಅವುಗಳ ಪರಿಚೆಯನ್ನು ಹೆಚ್ಚು ಚನ್ನಾಗಿ ತಿಳಿದುಕೊಳ್ಳಲು ಬರುತ್ತದೆ:
(1) ಅವುಗಳ ಮೊದಲನೆಯ ಪದವಾಗಿ ಎಂತಹ ಪದ ಬಂದಿದೆ, ಮತ್ತು ಅದಕ್ಕೂ ಎರಡನೆಯದಾಗಿ ಬಂದಿರುವ ಎಸಕಪದಕ್ಕೂ ನಡುವೆ ಎಂತಹ ಪತ್ತುಗೆ ಯಿದೆ ಎಂಬುದರ ಮೇಲೆ ಗುಂಪಿಸುವುದು ಒಂದು ಬಗೆ, ಮತ್ತು
(2) ಅವುಗಳ ಎರಡನೆಯ ಪದವಾಗಿ ಎಂತಹ ಎಸಕಪದ ಬಂದಿದೆ, ಮತ್ತು ಅವುಗಳ ಹುರುಳಿಗೆ ಅದರ ಕೊಡುಗೆಯೆಂತಹದು ಎಂಬುದರ ಮೇಲೆ ಗುಂಪಿಸು ವುದು ಇನ್ನೊಂದು ಬಗೆ.
ಈ ಎರಡು ಬಗೆಯ ಗುಂಪಿಸುವಿಕೆಗಳನ್ನು ಕೆಳಗೆ ಬೇರೆ ಬೇರಾಗಿ ಪರಿಶೀಲಿಸ
ಲಾಗಿದೆ:
3.3.1 ಮೊದಲನೆಯ ಪದದ ಮೇಲೆ ಗುಂಪಿಸುವುದು
ಕನ್ನಡದ ಕೂಡುಪದಗಳಲ್ಲಿ ಮೊದಲನೆಯ ಪದವಾಗಿ ಹೆಸರುಪದ, ಎಸಕಪದ, ಮತ್ತು ಪರಿಚೆಪದ (ಇಲ್ಲವೇ ಪರಿಚೆಬೇರು) ಎಂಬವುಗಳು ಬರಬಲ್ಲುವು; ಇವು ಗಳಲ್ಲಿ ಎಸಕಪದಗಳು ಹೆಚ್ಚಿನೆಡೆಗಳಲ್ಲೂ ಅವುಗಳ ಜೋಡಿಸುವ ರೂಪದಲ್ಲಿ ಬಳಕೆಯಾಗುತ್ತವೆ; ಆದರೆ, ಕೆಲವೆಡೆಗಳಲ್ಲಿ ಅಂತೆ ಒಟ್ಟಿನೊಂದಿಗೆ, ಇಲ್ಲವೇ ಕೊನೆರೂಪದಲ್ಲಿ ಬಳಕೆಯಾಗಿರುವುದೂ ಇದೆ. ಹಾಗಾಗಿ, ಕೆಳಗೆ ವಿವರಿಸಿದ ಹಾಗೆ, ಅವನ್ನು ನಾಲ್ಕು ಗುಂಪುಗಳಲ್ಲಿ ಒಡೆದು ತೋರಿಸಬಹುದು:
(1) ಮೊದಲ ಪದ ಹೆಸರುಪದ ಹೆಚ್ಚಿನ ಕೂಡುಪದಗಳಲ್ಲೂ ಮೊದಲನೆಯ ಪದ ಒಂದು ಹೆಸರುಪದವಾಗಿರು ತ್ತದೆ, ಮತ್ತು ಈ ಪದ ಅದರ ಬಳಿಕ ಬರುವ ಎಸಕಪದದ ಈಡು ಇಲ್ಲವೇ ಆಗುಗವಾಗಿರುತ್ತದೆ. ಸಾಮಾನ್ಯವಾಗಿ, ಹೆಸರುಪದಕ್ಕೂ ಎಸಕಪದಕ್ಕೂ ನಡು ವಿರುವ ಪತ್ತುಗೆಯನ್ನು ತಿಳಿಸುವ ಒಟ್ಟು ಬಿದ್ದುಹೋಗಿರುತ್ತದೆ; ಆದರೆ, ಮಾತ ನಾಡು ಕೂಡುಪದದಲ್ಲಿ ಮಾತು ಮತ್ತು ಆಡು ಪದಗಳ ನಡುವಿರುವ ಪತ್ತುಗೆ ಯನ್ನು ತಿಳಿಸುವ ಅನ್ನು ಒಟ್ಟು ಅನ್ ರೂಪದಲ್ಲಿ ಉಳಿದುಕೊಂಡಿದೆ.
ಈಡು ಮತ್ತು ಆಗುಗ ಪತ್ತುಗೆಗಳಿರುವ ಕೆಲವು ಕೂಡುಪದಗಳನ್ನು ಕೆಳಗೆ
ಕೊಡಲಾಗಿದೆ:
(1) ಮೊದಲನೆಯ ಪದ ಎಸಕದ ಈಡು:
ಬೆಲೆಯನ್ನು ಕೊಡು
ಮಾತನ್ನು ಕೊಡು
ಕತೆಯನ್ನು ಕಟ್ಟು ಕಾಲನ್ನು ಊರು ಕಿಚ್ಚನ್ನು ಇಕ್ಕು
ಬೆಲೆಕೊಡು ಮಾತುಕೊಡು ಕತೆಕಟ್ಟು ಕಾಲೂರು ಕಿಚ್ಚಿಕ್ಕು
(2) ಮೊದಲನೆಯ ಪದ ಎಸಕದ ಆಗುಗ: ಕಾಳುಕಟ್ಟು ತುತ್ತಾಗು
ಬೆಲೆಬರು
ಹೆಪ್ಪುಕಟ್ಟು ಗೊತ್ತಾಗು ಹೂಬಿಡು
ಒಪ್ಪಗೆಡು ಹೆಸರುಹೋಗು ಹಳ್ಳಬೀಳು
ಹಲವು ಕೂಡುಪದಗಳಲ್ಲಿ ಇಂತಹ ಆಗುಗಪದ ಎಸಕಪದದೊಂದಿಗೆ ಸೇರಿ ಹೋಗಿರುತ್ತದೆ; ಹಾಗಾಗಿ, ಅವುಗಳೊಂದಿಗೆ ಬೇರೆಯೇ ಒಂದು ಆಗುಗವನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಅಳವುಗುಂದು ಪದದಲ್ಲಿ ಕುಂದು ಎಸಕ ಪದಕ್ಕೆ ಅಳವು ಆಗುಗವಾಗಿರುತ್ತದೆ; ಆದರೆ, ಅಳವುಗುಂದು ಕೂಡುಪದಕ್ಕೆ
ಅಳವುಗುಂದಿರುವ ವ್ಯಕ್ತಿ ಆಗುಗವಾಗಬಲ್ಲುದು (ಆತ ಅಳವುಗುಂದಿದ್ದಾನೆ); ಸಿಟ್ಟಾಗು ಪದದಲ್ಲಿ ಆಗು ಎಸಕಪದಕ್ಕೆ ಸಿಟ್ಟು ಆಗುಗವಾಗಿರುತ್ತದೆ; ಆದರೆ, ಸಿಟ್ಟಾಗು ಕೂಡುಪದಕ್ಕೆ ಸಿಟ್ಟಾದ ವ್ಯಕ್ತಿ ಆಗುಗವಾಗಬಲ್ಲುದು (ಆತ ಸಿಟ್ಟಾ ಗಿದ್ದಾನೆ).
ಇಂತಹ ಬೇರೆಯೇ ಆಗುಗ ಬರಬಲ್ಲ ಬೇರೆ ಕೆಲವು ಕೂಡುಪದಗಳನ್ನು
ಕೆಳಗೆ ಕೊಡಲಾಗಿದೆ:
ಈಡೇರು
ಮರಕಟ್ಟು
ಎಚ್ಚರದಪ್ಪು
ಹದಗೆಡು
ತುತ್ತಾಗು
ನೆರವೇರು
ಸಿಪ್ಪೆಗಟ್ಟು ನೀರಡಿಸು ಪಾರಾಗು
ಬೇರೆ ಕಡೆಗಳಲ್ಲಿ ಇಂತಹ ಕೂಡುಪದದೊಂದಿಗೆ ಗುರಿ ಬಂದಿರುವುದನ್ನು
ಕಾಣಬಹುದು (ಅವನಿಗೆ ಗೊತ್ತಾಗಿದೆ; ಅಡಿಕೆಗೆ ಬೆಲೆಬಂದಿದೆ).
ಕೆಲವು ಕೂಡುಪದಗಳಲ್ಲಿ ಬಂದಿರುವ ಈಡುಪದವೂ ಈ ರೀತಿ ಎಸಕ ಪದದೊಂದಿಗೆ ಸೇರಿಹೋಗಿರುತ್ತದೆ, ಮತ್ತು ಅಂತಹ ಕೂಡುಪದದೊಂದಿಗೆ ಬೇರೊಂದು ಈಡುಪದವನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಬೆನ್ನಟ್ಟು ಪದದಲ್ಲಿ ಬೆನ್ನು ಪದ ಅಟ್ಟು ಎಸಕಪದದ ಈಡಾಗಿ ಬಂದಿದೆ; ಆದರೆ, ನಾನು ಆತನನ್ನು ಬೆನ್ನಟ್ಟಿದೆ ಎಂಬಲ್ಲಿ ಆತ ಪದ ಬೆನ್ನಟ್ಟು ಕೂಡುಪದದ ಈಡಾಗಿ ಬಂದಿದೆ. ಇಂತಹ ಕೆಲವು ಕೂಡುಪದಗಳನ್ನು ಕೆಳಗೆ ಕೊಡಲಾಗಿದೆ:
ಬಗೆಹರಿಸು ಅಲೆಯಾಡು ತೊಟ್ಟಿಕ್ಕು
ಬೆಂಬತ್ತು
ಪಾಲುಮಾಡು ಗೊತ್ತುಹಚ್ಚು
ಒಕ್ಕಲೆಬ್ಬಿಸು ಬೆಂಬಿಡಿ ಹುರಿದುಂಬಿಸು
ಆಗುಗ ಇಲ್ಲವೇ ಈಡು ಮಾತ್ರವಲ್ಲದೆ ಬೇರೆ ಪತ್ತುಗೆಗಳೂ ಕೂಡುಪದ ಗಳಲ್ಲಿ ಬರುವ ಹೆಸರುಪದ ಮತ್ತು ಎಸಕಪದಗಳ ನಡುವೆ ಕಾಣಿಸಿಕೊಳ್ಳ ಬಲ್ಲುವು. ಆದರೆ, ಇಂತಹ ಕೆಲವೇ ಕೆಲವು ಕೂಡುಪದಗಳು ಮಾತ್ರ ಬಳಕೆ ಯಲ್ಲಿವೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಗುರಿಪತ್ತುಗೆ: ಉಬ್ಬೆಗೆ ಹಾಕು: ಉಬ್ಬೆಹಾಕು
ತಪ್ಪಿಗೆ (ಹಣ) ಕಟ್ಟು: ತಪ್ಪುಕಟ್ಟು ತಪ್ಪಿಗೆ (ಹಣ) ತೆರು: ತಪ್ಪುತೆರು ಸೆರೆಗೆ ಸಿಕ್ಕು: ಸೆರೆಸಿಕ್ಕು
ಆಣೆಗೆ ತಪ್ಪು: ಆಣೆತಪ್ಪು ಒತ್ತೆಗೆ ಇಡು: ಒತ್ತೆಯಿಡು ಅಡವಿಗೆ ಇಡು: ಅಡವಿಡು ಮಾತಿಗೆ ತಪ್ಪು: ಮಾತುತಪ್ಪು
ಜಾಗಪತ್ತುಗೆ: ಬಲೆಯಲ್ಲಿ ಹಿಡಿ: ಬಲೆಹಿಡಿ
ನೆನಪಿನಲ್ಲಿ ಇಡು: ನೆನಪಿಡು
ಸೆರೆಯಲ್ಲಿ ಹಿಡಿ: ಸೆರೆಹಿಡಿ ಕಯ್ಯಲ್ಲಿ ಕೂಡು: ಕಯ್ಗೂಡು
ಕೆಲವು ಹೆಸರುಪದಗಳು ಹಲವು ಕೂಡುಪದಗಳ ಮೊದಲನೆಯ ಪದವಾಗಿ ಬಳಕೆಯಾಗಿರುವುದನ್ನು ಕಾಣಬಹುದು; ಇವುಗಳಲ್ಲಿ ಕಯ್, ತಲೆ, ಕಾಲು, ಮಯ್, ಎದೆ, ಕಣ್ಣು, ಬಾಯಿ, ಬೆನ್ನು ಎಂಬಂತಹ ಅಂಗಗಳನ್ನು ಹೆಸರಿಸುವ ಪದಗಳು, ಮತ್ತು ಹೆಸರು ಹಾಗೂ ಬೆಲೆ ಪದಗಳು ಮುಕ್ಯವಾದವುಗಳು.
ಇವುಗಳನ್ನು ಬಳಸಿ ಉಂಟುಮಾಡಿರುವ ಕೆಲವು ಕೂಡುಪದಗಳನ್ನು ಕೆಳಗೆ
ಕೊಡಲಾಗಿದೆ:
ಕಯ್: ಕಯ್ಕುಲುಕು ಕಯ್ಕೂಡು ಕಯ್ಬಿಡು ಕಯ್ಮಿಂಚು ಕಯ್ಸಾಗು
ತಲೆ: ತಲೆಕೊಡು ತಲೆತಿರುಗು ತಲೆವಾಗು ತಲೆಸುತ್ತು
ಕಾಲು: ಕಾಲುಕಟ್ಟು ಕಾಲುಹಿಡಿ ಕಾಲ್ತೆಗೆ
ಕಯ್ಯೊಡ್ಡು ಕಯ್ತಟ್ಟು
ಕಯ್ಬೀಸು
ಕಯ್ಮೀರು
ಕಯ್ಸೆಳೆ
ಕಯ್ಕೊಳು
ಕಯ್ನೀಡು
ಕಯ್ಮರೆ
ಕಯ್ಯೂರು
ಕಯ್ಹಚ್ಚು
ಕಯ್ಗಯ್ಯು ಕಯ್ನೋಡು ಕಯ್ಮಾಡು ಕಯ್ವೊಯ್ಯು ಕಯ್ಹಾಕು
ತಲೆಕೆಡು
ತಲೆದೋರು ತಲೆಮರೆಸು ತಲೆಹಾಕು
ತಲೆಗೇರು
ತಲೆತಿನ್ನು
ತಲೆಯೆತ್ತು ತಲೆಬೋಳಿಸು
ತಲೆಗೊಡಹು ತಲೆದೂಗು ತಲೆಸಿಡಿ ತಲೆಹಿಡಿ
ಕಾಲುಕೀಳು ಕಾಲೆಳೆ
ಕಾಲುನೆಕ್ಕು ಕಾಲ್ಗುತ್ತು
ಕಾಲುಮಾಡು ಕಾಲ್ಕೆಡಿಸು
ಎದೆ: ಎದೆಗಾಣು ಎದೆಕರಗು
ಎದೆಗೆಡು
ಎದೆಗುಂದು ಎದೆಸೋಲು ಎದೆಹಾರು
ಎದೆಕೊಡು ಎದೆಬಡಿ
ಎದೆಗಳೆ ಎದೆಬಿರಿ
ಕಣ್ಣು: ಕಣ್ಣರಸು ಕಣ್ಣುಕುಕ್ಕು ಕಣ್ಣುಕಟ್ಟು ಕಂಗೆಡು
ಕಣ್ಣಾಡಿಸು
ಕಣ್ಣುತಪ್ಪಿಸು ಕಣ್ಮುಚ್ಚು
ಕಂಗೊಳಿಸು
ಕಣ್ಣಿಡು
ಕಣ್ಣುತಾಗು ಕಣ್ಣೆತ್ತು
ಕಂಗಾಣು
ಕಣ್ಣುಕಿಸಿ ಕಣ್ಣುಬ್ಬಿಸು ಕಣ್ಣುಹಾಕು ಕಣ್ತುಂಬು
ಮಯ್: ಮಯ್ಕೆಡು ಮಯ್ಗೂಡು ಮಯ್ಗೊಳ್ಳು ಮಯ್ದೆಗೆ ಮಯ್ಬರು ಮಯ್ಯಿಳಿ
ಮಯ್ಕೊಡು ಮಯ್ಗೆಡು
ಮಯ್ತುಂಬು ಮಯ್ದೋರು ಮಯ್ಮುರಿ
ಮಯ್ಯೊಡ್ಡು
ಮಯ್ಗರೆ
ಮಯ್ಗೆದರು ಮಯ್ದಡವು ಮಯ್ನೆರೆ
ಮಯ್ಮರೆ
ಮಯ್ಸವೆ
ಮಯ್ಗುಂದು ಮಯ್ದಡವು
ಮಯ್ದಾಳು ಮಯ್ಬಗ್ಗಿಸು
ಮಯ್ಯಿಕ್ಕು
ಮಯ್ಹತ್ತು
ಹೆಸರು: ಹೆಸರಾಗು ಹೆಸರುಕಟ್ಟು ಹೆಸರುಪಡೆ ಹೆಸರುಹೊಂದು ಹೆಸರುಹೋಗು
ಹೆಸರಾನು
ಹೆಸರುಕೆಡು ಹೆಸರುಬೀಳು
ಬೆಲೆ: ಬೆಲೆಯೇರು ಬೆಲೆತಗ್ಗು ಬೆಲೆಮಾಡು
ಬೆಲೆಕಟ್ಟು
ಬೆಲೆತೆರು
ಬೆಲೆಸಿಗು
ಹೆಸರಿಡು
ಹೆಸರುಕೊಡು ಹೆಸರುಮಾಡು
ಹೆಸರೆತ್ತು ಹೆಸರುಗೊಳ್ಳು ಹೆಸರುಹಚ್ಚು
ಬೆಲೆಕೊಡು ಬೆಲೆಬರು
ಬೆಲೆಹೆಚ್ಚು
ಬೆಲೆಗಾಣು ಬೆಲೆಬಾಳು
ಬೇರೆ ನುಡಿಗಳಿಂದ ಎರವಲಾಗಿ ಪಡೆದ ಹೆಸರುಪದಗಳೂ ಇಂತಹ ಕೂಡು ಪದಗಳಲ್ಲಿ ಸುಳುವಾಗಿ ಬಳಕೆಯಾಗಬಲ್ಲುವು; ಇದು ಈ ಕೂಡುಪದಗಳಿಗೂ ಜೋಡುಪದಗಳಿಗೂ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸ. ಎತ್ತುಗೆಗಾಗಿ, ಬಂದಾಗು, ಸ್ಟಾರ್್ಟಮಾಡು, ದುಕ್ಕವಾಗು, ಪಾಸಾಗು ಎಂಬಂತಹ ಕೂಡು ಪದಗಳಲ್ಲಿ ಎರವಲು ಹೆಸರುಪದಗಳ ಬಳಕೆಯಾಗಿರುವುದನ್ನು ಕಾಣಬಹುದು.
(2) ಮೊದಲ ಪದ ಪರಿಚೆಪದ ಮೊದಲನೆಯ ಪದ ಪರಿಚೆಪದವಾಗಿದ್ದರೆ ಹೆಚ್ಚಿನೆಡೆಗಳಲ್ಲೂ ಅದು ಒಂದು ಎಸಕದ ಪರಿಚೆಯನ್ನು ತಿಳಿಸುವ ಎಸಕಪರಿಚೆಯಾಗಿರುತ್ತದೆ. ಎತ್ತುಗೆಗಾಗಿ, ಅಡ್ಡ ಬೀಳು ಕೂಡುಪದದಲ್ಲಿ ಮೊದಲನೆಯ ಪದವಾಗಿ ಅಡ್ಡ ಪರಿಚೆಪದ ಬಂದಿದ್ದು, ಅದು ‘ಬಿದ್ದುದು ಹೇಗೆ’ ಎಂಬುದನ್ನು, ಎಂದರೆ ಬೀಳು ಎಸಕದ ಪರಿಚೆಯನ್ನು ತಿಳಿಸುವ ಎಸಕಪರಿಚೆಯಾಗಿದೆ.
ಇಂತಹ ಕೂಡುಪದಗಳಲ್ಲಿ ಕಾಣಿಸಿಕೊಳ್ಳುವ ಎಸಕಪರಿಚೆಗಳು ಮುಕ್ಯವಾಗಿ ಒಳ(ಗೆ)-ಹೊರ(ಗೆ), ಮುನ್(ದು)-ಹಿನ್(ದು), ಮಾರ್ ಮತ್ತು ಕೆಳ-ಮೇಲೆ ಎಂಬವುಗಳು. ಈ ಪದಗಳನ್ನು ಬಳಸಿರುವ ಕೆಲವು ಕೂಡುಪದಗಳನ್ನು ಕೆಳಗೆ ಕೊಡಲಾಗಿದೆ:
ಒಳಗಾಗು ಒಳತುಂಬು ಒಳಬಿಡು ಒಳಹರಿ
ಒಳಗಿಕ್ಕು
ಒಳನುಗ್ಗು
ಒಳಮಾಡು ಒಳಹೀರು
ಒಳಗೊಳ್ಳು ಒಳಪಡು
ಒಳಸಿಡಿಸು ಒಳಹೊಗು
ಒಳಚಾಚು ಒಳಬಾಗು ಒಳಸೇರು ಒಳಹೋಗು
ಹೊರ: ಹೊರಗಟ್ಟು ಹೊರಗಿಡು ಹೊರಚಿಮ್ಮು ಹೊರಚೆಲ್ಲು ಹೊರದಬ್ಬು ಹೊರತೆಗೆ ಹೊರಬರು
ಹೊರಪಡು ಹೊರಸೆಳೆ
ಹೊರಸೂಸು ಹೊರಹೊರಡು ಹೊರಹೋಗು
ಮುನ್(ದು): ಮುಂಗಾಣು ಮುಂದಾಗು ಮುಂದೂಡು ಮುನ್ನುಗ್ಗು ಮುನ್ನೊರೆ ಮುಂಪುಗು
ಮುಂಗೆಡು ಮುಂದಿಡು ಮುಂದೋರು ಮುನ್ನೆಚ್ಚರಿಸು ಮುನ್ನೋರು ಮುಂಬರಿ
ಹಿನ್(ದು): ಹಿಂಜರಿ
ಹಿಂಗರೆ ಹಿಂದಿಡು
ಹಿಂದಾಗು ಹಿಂದೂಡು ಹಿಂದೆಗೆ
ಹಿಂಬಾಲಿಸು ಹಿನ್ನಡೆಸು
ಮಾರ್(ಮರು): ಮರುಕಣಿಸು ಮರುಕಳಿಸು ಮರುತೊಡಗು ಮರುನೆಡು ಮರುಮಲೆ ಮರುಬಳಸು ಮಾರಾನು
ಮರುಹೊಳೆ ಮಾರುಹೋಗು ಮಾರುಲಿ ಮಾರೊರೆ ಮಾರೋರು ಮಾರ್ಪಡು
ಮೇಲ್(ಮೇಲೆ): ಮೇಲರಿ ಮೇಲೆತ್ತು
ಮೇಲಾಗು ಮೇಲೆನಿಸು
ಹೊರಗೆಡಹು ಹೊರತರು
ಹೊರದೂಡು ಹೊರಬಿಡು ಹೊರಹಾಕು
ಹೊರಗೆಸೆ ಹೊರತಳ್ಳು ಹೊರನೂಕು ಹೊರಬೀಳು ಹೊರಹೊಮ್ಮು
ಮುಂಗೆಯ್ಯು ಮುಂದಿರು
ಮುಂಬರು
ಮುನ್ನೆಣಿಸು ಮುನ್ಪಡೆ
ಮುಮ್ಮೆಟ್ಟು
ಹಿಂತೆಗೆ
ಹಿಂದಿರುಗು ಹಿಂಪುಟಿಸು ಹಿನ್ನೆಗೆ
ಮರುತಳೆ
ಮರುಪಡೆ
ಮರುಸುತ್ತು ಮಾರುಗುಡು ಮಾರೆಣಿಸು ಮಾರ್ನಡೆ
ಮುಂಚಾಚು ಮುಂದುವರಿ ಮುನ್ತೆರು
ಮುನ್ನೆನಸು ಮುನ್ಸೊಲ್ಲು
ಹಿಂದಟ್ಟು ಹಿಂದುಳಿ ಹಿಂಬರೆ ಹಿಮ್ಮೆಟ್ಟು
ಮರುತೆರು ಮರುಬರು ಮರುಹಂಚು ಮಾರುಗೊಳ್ಳು ಮಾರೆಸಗು ಮಾರ್ನುಡಿ
ಮೇಲಿಕ್ಕು
ಮೇಲೇರು
ಮೇಲುಕ್ಕು ಮೇಲೊಗು
ಮೇಲೊತ್ತು ಮೇಲ್ವರಿ
ಮೇಲೊದಗು ಮೇಲೇಳು
ಮೇಲ್ಪಡು
ಮೇಲ್ವಾಯು
ಮೇಲ್ಮಾಡು ಮೇಲೆಬೀಳು
ಕೀಳ್(ಕೆಳ): ಕೆಳತಳ್ಳು
ಕಿಳ್ಪಡು
ಕಿಳ್ಮಾಡು
ಕೀಳುಗಳೆ
ಮೇಲೆ ಕೊಟ್ಟಿರುವ ಪರಿಚೆಪದಗಳಲ್ಲಿ ಮುನ್-ಮುಂದು, ಹಿನ್- ಹಿಂದು, ಮಾರ್-ಮರು, ಮೇಲ್-ಮೇಲೆ, ಕೀಳ್-ಕೆಳ ಎಂಬವು ಕೆಲವು ಕೂಡುಪದಗಳಲ್ಲಿ ಬೇರಿನ ರೂಪದಲ್ಲಿ ಬಂದಿವೆ (ಮುಂಗಾಣು, ಹಿಂಜರಿ, ಮಾರ್ಪಡು, ಕಿಳ್ಮಾಡು), ಮತ್ತು ಇನ್ನು ಕೆಲವು ಕೂಡುಪದಗಳಲ್ಲಿ ಒಟ್ಟಿಸಿದ ರೂಪದಲ್ಲಿ ಬಂದಿವೆ (ಮುಂದಿರು, ಹಿಂದಿಡು, ಮರುಪಡೆ, ಮೆಲೆಬೀಳು, ಕೆಳತಳ್ಳು).
ಈ ಪರಿಚೆಪದಗಳು ಮಾತ್ರವಲ್ಲದೆ, ಅಡ್ಡ (ಅಡ್ಡಬೀಳು, ಅಡ್ಡಬರು, ಅಡ್ಡಾಗು, ಅಡ್ಡಾಡು), ಬಳಿ (ಬಳಿಗೊಳ್ಳು, ಬಳಿವಿಡಿ, ಬಳಿಸಾರು), ಹೆರ (ಹೆರಸಾರು, ಹೆರಮೆಟ್ಟು, ಹೆರಹಿಂಗು, ಹೆರಹೋಗು), ಕೊನೆ (ಕೊನೆ ಗಾಣು, ಕೊನೆಗೊಳ್ಳು, ಕೊನೆಮುಟ್ಟು), ಒಡ(ನೆ) (ಒಡಗೂಡು, ಒಡ ನಾಡು, ಒಡನುಲಿ, ಒಡಮೂಡು, ಒಡಹುಟ್ಟು, ಒಡಂಬಡು) ಮೊದ ಲಾದ ಬೇರೆಯೂ ಕೆಲವು ಎಸಕಪರಿಚೆಗಳು ಇಂತಹ ಕೂಡುಪದಗಳಲ್ಲಿ ಬಳಕೆಯಾಗುತ್ತವೆ.
ಕೆಲವು ಹೆಸರುಪರಿಚೆಗಳೂ ಇಂತಹ ಕೂಡುಪದಗಳ ಮೊದಲನೆಯ ಪದ ವಾಗಿ ಬಳಕೆಯಾಗಿರುವುದನ್ನು ಕಾಣಬಹುದು; ಆದರೆ, ಇವುಗಳಲ್ಲಿ ಬರುವ ಪರಿಚೆಪದ ಎಸಕಪದದ ಪರಿಚೆಯನ್ನು ತಿಳಿಸುವ ಬದಲು, ಅದರ ಒಂದು ಪಾಂಗಿನ ಪರಿಚೆಯನ್ನು ತಿಳಿಸುತ್ತದೆ.
ಎತ್ತುಗೆಗಾಗಿ, ಬಡ್ಡುಗಟ್ಟು ಕೂಡುಪದದಲ್ಲಿ ಬಂದಿರುವ ಬಡ್ಡು ಹೆಸರು ಪರಿಚೆ ನೇರವಾಗಿ ಕಟ್ಟು ಎಸಕದ ಪರಿಚೆಯನ್ನು ತಿಳಿಸುವ ಬದಲು, ಅದರ ಆಗುಗದ (ಕತ್ತಿ ಬಡ್ಡುಗಟ್ಟಿದೆ ಎಂಬುದರಲ್ಲಿ ಕತ್ತಿಯ) ಪರಿಚೆಯನ್ನು ತಿಳಿಸುತ್ತದೆ.
ಇಂತಹ ಹೆಸರುಪರಿಚೆಗಳಿರುವ ಕೆಲವು ಕೂಡುಪದಗಳನ್ನು ಕೆಳಗೆ ಕೊಡ
ಲಾಗಿದೆ:
ಕೆಂಪೇರು ಮೊಂಡುಬೀಳು ಪಟ್ಟುಕಟ್ಟು ಸೂರೆಹೋಗು
ದಡ್ಡುಗಟ್ಟು ಹಾಳುಗೆಡವು ನೆರವೇರು ಹದಮಾಡು
ಒಪ್ಪಗುಂದು ಹದಗೆಡು ಗಾರುಗೆಡು ಮೊಂಡುಹಿಡಿ
ನಲವೆರು ಮಟ್ಟಹಾಕು ಡಿಕ್ಕಿಹೊಡೆ ಮಡಿಮಾಡು
ಕೆಳಗೆ ಕೊಟ್ಟಿರುವ ಕೂಡುಪದಗಳಲ್ಲಿ ಮೊದಲನೆಯ ಪದವಾಗಿ ಒಂದು ಅಣಕಪದ ಬಳಕೆಯಾಗಿರುವುದನ್ನು ಕಾಣಬಹುದು; ಆದರೆ ಈ ಪದಗಳು ಬೇರೆಡೆಯಲ್ಲಿ ಪರಿಚೆಪದಗಳಾಗಿ ಬಳಕೆಯಾಗುವುದಿಲ್ಲ:
ಏಗೊಳ್ಳು ಗೋಗರೆ
ಓಕೊಳ್ಳು
ಬೋರ್ಗರೆ
ಓಗೊಡು ಹೀಗಳೆ
(3) ಮೊದಲ ಪದ ಎಸಕಪದದ ಜೋಡಿಸುವ ರೂಪ ಕನ್ನಡದ ಎಸಕಪದಗಳಿಗೆ ನಾಲ್ಕು ಬಗೆಯ ಜೋಡಿಸುವ ರೂಪಗಳಿವೆ; ಎತ್ತುಗೆ ಗಾಗಿ, ಮಾಡು ಎಸಕಪದಕ್ಕೆ ಮಾಡಲು, ಮಾಡುತ್ತ, ಮಾಡಿ ಮತ್ತು ಮಾಡದೆ ಎಂಬ ನಾಲ್ಕು ಜೋಡಿಸುವ ರೂಪಗಳಿವೆ; ಈ ನಾಲ್ಕು ಜೋಡಿಸುವ ರೂಪಗಳನ್ನು ಮೊದಲೆಸಕದ ರೂಪ (ಮಾಡುತ್ತ), ಮಾರೆಸಕದ ರೂಪ (ಮಾಡಲು), ಮತ್ತು ಅಲ್ಲಗಳೆತದ ರೂಪ (ಮಾಡದೆ) ಎಂಬುದಾಗಿ ಹೆಸರಿಸಲಾಗಿದೆ.
(ಮಾಡಿ), ಒಡನೆಸಕದ
ರೂಪ
ಈ ನಾಲ್ಕು ರೂಪಗಳನ್ನು ಬಳಸಿ, ಎರಡು ಸೊಲ್ಲುಗಳನ್ನು ಜೋಡಿಸಲು ಬರುತ್ತದೆ. ಸಾಮಾನ್ಯವಾಗಿ ಇವುಗಳನ್ನು ಬಳಸಿದಾಗ, ಎರಡು ಎಸಕಗಳನ್ನು ಜೋಡಿಸಿರುವ ಹುರುಳು ದೊರೆಯುತ್ತದೆ. ಎತ್ತುಗೆಗಾಗಿ, ಊಟ ಮಾಡಿ ಪೇಟೆಗೆ ಹೋದ ಎಂಬ ಸೊಲ್ಲಿನಲ್ಲಿ ಮಾಡಿ ಎಂಬ ಮೊದಲೆಸಕದ ಜೋಡಿಸುವ ರೂಪವನ್ನು ಬಳಸಲಾಗಿದೆ, ಮತ್ತು ಆ ಸೊಲ್ಲಿಗೆ ಊಟ ಮಾಡಿದ ಮತ್ತು ಪೇಟೆಗೆ ಹೋದ ಎಂಬ ಎರಡು ಸೊಲ್ಲುಗಳನ್ನು ಜೋಡಿಸಿರುವ ಹುರುಳಿದೆ (4.7.2 ನೋಡಿ).
ಆದರೆ, ಕೆಲವು ಕಡೆಗಳಲ್ಲಿ ಎಸಕಪದಗಳ ಜೋಡಿಸುವ ರೂಪದೊಂದಿಗೆ ಇನ್ನೊಂದು ಎಸಕಪದವನ್ನು ಬಳಸಿದಾಗ, ಎರಡನೆಯ ಎಸಕಪದ ಬೇರೊಂದು ಎಸಕವನ್ನು ತಿಳಿಸುವ ಬದಲು, ಮೊದಲನೇ ಪದ ತಿಳಿಸುವ ಎಸಕಕ್ಕೆ ಪರಿಚೆ ಯೊಂದನ್ನು ಸೇರಿಸಿ ಹೇಳುತ್ತದೆ. ಎತ್ತುಗೆಗಾಗಿ, ಹೊಡೆದಾಡು ಎಂಬಲ್ಲಿ ಹೊಡೆ ಎಸಕಪದದ ಜೋಡಿಸುವ ರೂಪ (ಹೊಡೆದು) ಮೊದಲನೆಯ ಪದ ವಾಗಿ ಬಂದಿದೆ, ಮತ್ತು ಅದರೊಂದಿಗೆ ಆಡು ಎಸಕಪದ ಬಂದಿದೆ; ಆದರೆ, ಇದಕ್ಕೆ ‘ಹೊಡೆದು ಆಡು’ ಎಂಬ ಹುರುಳಿಲ್ಲ; ಇದಕ್ಕೆ ಬದಲು, ‘ಒಬ್ಬರಿಗೊಬ್ಬರು ಹೊಡೆದುಕೊಳ್ಳು’, ಇಲ್ಲವೇ ‘ಜಗಳಾಡು’ ಎಂಬ ಹುರುಳಿದೆ. ಇಲ್ಲಿ ಎರಡನೆಯ ಎಸಕಪದವಾದ ಆಡು ಎಂಬುದು ಮೊದಲನೆಯ ಹೊಡೆ ಎಸಕಪದಕ್ಕೆ ಪರಿಚೆ ಯೊಂದನ್ನು ಸೇರಿಸುತ್ತದೆ.
ಈ ರೀತಿ ಎಸಕಪದದ ಜೋಡಿಸುವ ರೂಪವನ್ನು ಇನ್ನೊಂದು ಎಸಕಪದ ದೊಂದಿಗೆ ಸೇರಿಸಿರುವ ಇಟ್ಟಳವನ್ನೂ ಇಲ್ಲಿ ಕೂಡುಪದ ಎಂಬುದಾಗಿ ಹೆಸರಿಸ
ಲಾಗಿದೆ. ಇಂತಹ ಕೂಡುಪದಗಳ ಬಳಕೆಗೆ ಬೇರೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಚುಚ್ಚಿಕೊಡು ಬಿಟ್ಟುಕೊಡು ಕೆಟ್ಟುಹೋಗು ಹಣಿಕಿಕ್ಕು ಕಂಡುಹಿಡಿ
ಬೆಚ್ಚಿಬೀಳು
ಬೀಳ್ಕೊಡು ಆರಿಹೋಗು ಮರೆತುಬಿಡು
ಅಟ್ಟಿಕ್ಕು ಜೋತುಬೀಳು ಸೀದುಬಿಡು
ಆದರೆ, ಇಂತಹ ಎಲ್ಲಾ ಕೂಡುಪದಗಳಲ್ಲೂ ಎರಡು ಎಸಕಗಳು ಒಂದೇ ಮಟ್ಟಕ್ಕೆ ಒಂದಾಗಿ ಸೇರಿಕೊಂಡಿರುವುದಿಲ್ಲ; ಕೆಲವು ಕೂಡುಪದಗಳಲ್ಲಿ ಎರಡನೇ ಎಸಕ ಪೂರ್ತಿ ಅಳಿದುಹೋಗಿರುತ್ತದೆ; ಮತ್ತು ಬೇರೆ ಕೆಲವು ಕೂಡುಪದಗಳಲ್ಲಿ ಅದು ಹೆಚ್ಚೋ ಕಡಿಮೆಯೋ ಉಳಿದುಕೊಂಡಿರುತ್ತದೆ. ಎತ್ತುಗೆಗಾಗಿ, ಕಾಯ್ದಿಡು ಕೂಡುಪದದ ಹುರುಳಿನಲ್ಲಿ ಕಾಯುವ ಎಸಕದೊಂದಿಗೆ ಇಡುವ ಎಸಕವೂ ಉಳಿದುಕೊಂಡಿದೆ. ಹೀಗಿದ್ದರೂ ಅವೆರಡೂ ಒಟ್ಟುಸೇರಿ ಒಂದು ಎಸಕವನ್ನು ತಿಳಿಸುವ ಹಾಗೆ ಕಾಣಿಸುವುದರಿಂದ, ಅದನ್ನೂ ಒಂದು ಕೂಡುಪದವೆಂದು ತಿಳಿಯ ಬಹುದು.
(1) ಇಂತಹ ಕೂಡುಪದಗಳಲ್ಲಿ ಹೆಚ್ಚಿನವನ್ನೂ ಎಸಕಪದದ ಮೊದಲೆಸಕದ ಜೋಡಿಸುವ ರೂಪಕ್ಕೆ ಇನ್ನೊಂದು ಎಸಕಪದವನ್ನು ಸೇರಿಸಿ ಪಡೆಯಲಾಗಿದೆ. ಆದರೆ, ಇವುಗಳಲ್ಲಿ ಕೆಲವನ್ನು (ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ತೆರೆಯುಲಿಯಲ್ಲಿ ಮೊದಲಾಗುವ ಎಸಕಪದ ಬಂದಿರುವವುಗಳನ್ನು) ನೋಡಿದಾಗ, ಅವನ್ನು ಒಂದು ಎಸಕಪದಕ್ಕೆ ನೇರವಾಗಿ ಇನ್ನೊಂದು ಎಸಕ ಪದವನ್ನು ಸೇರಿಸಿ ಪಡೆದಿರುವ ಹಾಗೆ ಕಾಣಿಸುತ್ತದೆ. ಎತ್ತುಗೆಗಾಗಿ, ತಿರುಗಾಡು ಎಂಬುದರಲ್ಲಿ ತಿರುಗು ಪದಕ್ಕೆ ನೇರವಾಗಿ ಆಡು ಪದವನ್ನು ಸೇರಿಸಿರುವ ಹಾಗೆ ಕಾಣಿಸುತ್ತದೆ; ತೇಲಾಡು, ನೀಡಿರು, ಕೂಡಿಕ್ಕು, ಹಣಿಕಿಕ್ಕು ವೂದಲಾದ ಪದಗಳಲ್ಲೂ ಹೀಗೆಯೇ.
ಆದರೆ, ಇವುಗಳ ಇಟ್ಟಳದಲ್ಲೂ ಮೊದಲನೆಯ ಪದವಾಗಿ ಎಸಕಪದಗಳ ಮೊದಲೆಸಕದ ಜೋಡಿಸುವ ರೂಪವೇ ಬಂದಿದೆ ಎಂಬುದಾಗಿ ತಿಳಿಯಲು ಬರುತ್ತದೆ; ಯಾಕೆಂದರೆ, ಅವುಗಳ ಬಳಿಕ ತೆರೆಯುಲಿಯಲ್ಲಿ ಮೊದಲಾಗುವ ಆಡು, ಇರು, ಇಕ್ಕು ಮೊದಲಾದ ಎಸಕಪದಗಳನ್ನು ಸೇರಿಸಿದಾಗ, ಅವುಗಳ ಕೊನೆಯ ಇಕಾರ (ಎಂದರೆ ಮೊದಲೆಸಕವನ್ನು ತಿಳಿಸುವ ಒಟ್ಟು), 2.2.1ರಲ್ಲಿ ವಿವರಿಸಿರುವಂತೆ, ಬಿದ್ದುಹೋಗಿದೆಯೆಂದು ಹೇಳಬಹುದು: ತಿರುಗಿ+ಆಡು> ತಿರುಗಾಡು, ತೇಲಿ+ಆಡು > ತೇಲಾಡು, ಕೂಡಿ+ಇಕ್ಕು>ಕೂಡಿಕ್ಕು.
ಎಕಾರ, ಇಕಾರ, ಇಲ್ಲವೇ ಯ್ಯು ಎಂಬುದರಲ್ಲಿ ಕೊನೆಗೊಳ್ಳುವ ಎಸಕ ಪದಗಳ ಜೋಡಿಸುವ ರೂಪಕ್ಕೆ ಇಂತಹ ಎಸಕಪದಗಳನ್ನು ಸೇರಿಸಿದಾಗ,
ಅವುಗಳ ಕೊನೆಯಲ್ಲಿರುವ ಮೊದಲೆಸಕದ ಒಟ್ಟು ದ್ ರೂಪದಲ್ಲಿ ಉಳಿದು ಕೊಳ್ಳುತ್ತದೆ (ಕುಣಿದು+ಆಡು > ಕುಣಿದಾಡು, ಹೊಡೆದು+ಆಡು > ಹೊಡೆ ದಾಡು, ಹೊಯ್ದು+ಆಡು > ಹೊಯ್ದಾಡು).
ಇದಲ್ಲದೆ, ಇ ರೂಪವೊಂದನ್ನು ಬಿಟ್ಟು, ಬೇರೆ ರೂಪಗಳಲ್ಲಿರುವ ಮೊದಲೆಸಕದ ಒಟ್ಟುಗಳೆಲ್ಲ ಇಂತಹ ಕೂಡುಪದಗಳಲ್ಲಿ ಉಳಿದುಕೊಳ್ಳುತ್ತದೆ: ಕಿತ್ತಾಡು, ಜೋತಾಡು, ತಂದಿಕ್ಕು). ಹಾಗಾಗಿ, ಎಲ್ಲೆಡೆಗಳಲ್ಲೂ ಎಸಕಪದಗಳ ಜೋಡಿಸುವ ರೂಪವನ್ನೇ ಬಳಸಲಾಗುತ್ತದೆ ಎಂದು ತಿಳಿಯುವುದು ಒಳ್ಳೆಯದು. ಆದರೆ, ಕೆಳಗಿನ ಕೆಲವು ಕೂಡುಪದಗಳಲ್ಲಿ ಮೊದಲನೇ ಎಸಕಪದದ ಬಳಿಕ ಬಂದಿರುವ ಮೊದಲೆಸಕದ ಒಟ್ಟು ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕವೂ ಬಿದ್ದುಹೋಗಿರುವ ಹಾಗೆ ಕಾಣಿಸುತ್ತದೆ (ತಡಕೊಳ್ಳು ಮತ್ತು ತಡಗಟ್ಟು ಎಂಬವುಗಳಲ್ಲಿ ಎಸಕಪದದ ಕೊನೆಯ ಎಕಾರ ಅಕಾರವಾಗಿದೆ); ಹೀಗಿದ್ದರೂ, ಇವುಗಳಲ್ಲಿ ಮೊದಲೆಸಕದ ಜೋಡಿಸುವ ರೂಪ ಬಳಕೆಯಾಗಿದೆ ಯೆಂದು ಹೇಳಬಲ್ಲೆವು:
ತಡೆದು ಹಿಡಿ ತಡೆಹಿಡಿ
ಒಗೆದು ತರು ಒಗೆತರು
ತಡೆದು ಕೊಳ್ಳು ತಡಕೊಳ್ಳು ಬಿಲಿದು ತರು ಬಿಲಿತರು
ತಡಗಟ್ಟು ತಡೆದು ಕಟ್ಟು
ಮುರಿಬೀಳು ಮುರಿದು ಬೀಳು ಒರೆದು ಹಚ್ಚು ಒರೆಹಚ್ಚು ಉಳಿದು ಕೊಳ್ಳು ಉಳಕೊಳ್ಳು ಬಿಗಿದು ಹಿಡಿ
ಬಿಗಿಹಿಡಿ
(2) ಕೆಳಗೆ ಕೊಟ್ಟಿರುವ ಕೂಡುಪದಗಳಲ್ಲಿ ಎಸಕಪದದ ಮಾರೆಸಕದ ಜೋಡಿಸುವ ರೂಪ ಬಳಕೆಯಾಗಿದೆ; ಈ ಜೋಡಿಸುವ ರೂಪದ ಬಳಿಕ ಮುಚ್ಚುಲಿಯಲ್ಲಿ ಮೊದಲಾಗುವ ಎಸಕಪದ ಬಂದಾಗ, ಅವುಗಳ ಕೊನೆಯ ಲು ಬರಿಗೆಕಂತೆ ಬಿದ್ದುಹೋಗುತ್ತದೆ (ಬರಲು+ಮಾಡು - ಬರಮಾಡು), ಮತ್ತು ತೆರೆಯುಲಿಯಲ್ಲಿ ಮೊದಲಾಗುವ ಎಸಕಪದ ಬಂದಾಗ ಅದು ಉಳಿದುಕೊಳ್ಳುತ್ತದೆ (ತಾಗಲು+ಇಕ್ಕು - ತಾಗಲಿಕ್ಕು).
(1) ಮುಚ್ಚುಲಿಯಲ್ಲಿ ಮೊದಲಾಗುವ ಎಸಕಪದಗಳು ಬಂದಾಗ: ಇಸಕೊಳ್ಳು ಉಣಬಡಿಸು ತರಹೋಗು ತರಹೇಳು ಬರಮಾಡು ತೂಗಹಾಕು ಬೀಳಹೊಡೆ ಸಾಗಹಾಕು ಸಾಯಬಡಿ
ಕೆಡವಗೊಡು ತಾರಹೊಯ್ಯು ಬರಹೇಳು
ಸಾಗಬೀಳು
ಕೊಡಮಾಡು ತಿಳಿಯಪಡಿಸು ಬರಸೆಳೆ
ಸಾಗಬಡಿ
(2) ತೆರೆಯುಲಿಯಲ್ಲಿ ಮೊದಲಾಗುವ ಎಸಕಪದ ಬಂದಾಗ: ಹೋಗಲಾಡಿಸು ತಾಗಲಿಕ್ಕು
ತಾಗಲಾಡು
(4) ಮೊದಲ ಪದ ಎಸಕಪದದ ಬೇರೆ ರೂಪ ಎಸಕಪದಗಳ ಜೋಡಿಸುವ ರೂಪ ಮಾತ್ರವಲ್ಲದೆ, ಅಂತೆ ಒಟ್ಟಿನೊಂದಿಗೆ ಬಂದಿರುವ ರೂಪ ಮತ್ತು ಕೆಲವು ಕೊನೆರೂಪಗಳೂ ಕೂಡುಪದಗಳಲ್ಲಿ ಬಳಕೆ ಯಾಗಿವೆ. ಇವನ್ನು ಕೆಳಗೆ ವಿವರಿಸಲಾಗಿದೆ:
(1) ಕೆಲವು ಕೂಡುಪದಗಳಲ್ಲಿ ಮೊದಲಿಗೆ ಬಂದಿರುವ ಎಸಕಪದ ಅಂತೆ ಎಂಬ ಒಟ್ಟಿನೊಂದಿಗೆ ಬಂದಿರುವ ಹಾಗೆ ಕಾಣಿಸುತ್ತದೆ. ಎತ್ತುಗೆಗಾಗಿ, ಬೀಳಿಕ್ಕು ಎಂಬ ಕೂಡುಪದಕ್ಕೆ ಬೀಳುವಂತೆ ಇಕ್ಕು ಎಂಬ ಒಳಸೊಲ್ಲನ್ನು ಕೊಡಲು ಬರು ತ್ತದೆ. ಇದೇ ರೀತಿಯಲ್ಲಿ ತೂಗುಹಾಕು (ತೂಗುವಂತೆ ಹಾಕು), ತಿಳಿಹೇಳು (ತಿಳಿಯುವಂತೆ ಹೇಳು) ಮೊದಲಾದ ಕೂಡುಪದಗಳಲ್ಲೂ ಅಂತೆ ಒಟ್ಟಿರುವ ಎಸಕಪದ ಮೊದಲ ಪದವಾಗಿ ಬಂದಿದೆಯೆಂದು ಹೇಳಬಹುದು. ಆದರೆ, ಇವನ್ನು ಕೂಡುಪದದಲ್ಲಿ ಬಳಸಿದಾಗ, ಅಂತೆ ಒಟ್ಟು ಬಿದ್ದುಹೋಗುತ್ತದೆ. ಇಂತಹ ಕೂಡುಪದಗಳ ಪಟ್ಟಿಯೊಂದನ್ನು ಕೆಳಗೆ ಕೊಡಲಾಗಿದೆ:
ತಿಳಿಹೇಳು
ಇಳಿಬಿಡು ಬಗ್ಗುಬಡಿ
ಬೀಳ್ಕೊಳ್ಳು
ಮರೆಮಾಚು ಮರೆಮಾಡು
ತೂಗುಹಾಕು
ಬೀಳ್ಕೊಡು
ನೆನೆಹಾಕು
ಬೀಳುಗೆಡವು
ಬೀಳ್ಕೊಳ್ಳು ಮತ್ತು ಬೀಳ್ಕೊಡು ಎಂಬವುಗಳಲ್ಲಿ ಬಂದಿರುವ ಬೀಳು ಎಸಕ
ಪದಕ್ಕೆ ‘ಬಿಡು’ ಎಂಬ ಹುರುಳಿದೆ.
ಕೆಳಗೆ ಕೊಟ್ಟಿರುವ ಕೆಲವು ಕೂಡುಪದಗಳಲ್ಲಿ ಎಸಕಪದಗಳ ಕೊನೆರೂಪಗಳು
ಮೊದಲನೆಯ ಪದವಾಗಿ ಬಳಕೆಯಾಗಿವೆ:
ಅಲ್ಲಗಳೆ ಬೇಕಾಗು ಸಾಕಾಗು
ಅಲ್ಲಗಣಿಸು ಬೇಕೆನ್ನು
ಸಾಕುಮಾಡು
ಉಂಟಾಗು
ಬೇಡವಾಗು
ಉಂಟುಮಾಡು ಬೇಡೆನ್ನು
3.3.2 ಎರಡನೆಯ ಪದದ ಮೇಲೆ ಗುಂಪಿಸುವುದು
ಕೂಡುಪದಗಳ ಎರಡನೆಯ ಪದವಾಗಿ ಬರುವ ಎಸಕಪದಗಳಲ್ಲಿ ಕೆಲವು ಎಲ್ಲಾ ಬಗೆಯ ಪದಗಳೊಂದಿಗೂ (ಹೆಸರುಪದ, ಪರಿಚೆಪದ, ಇಲ್ಲವೇ ಎಸಕಪದದ ಜೋಡಿಸುವ ರೂಪಗಳೊಂದಿಗೂ) ಬರಬಲ್ಲುವು; ಆದರೆ, ಬೇರೆ ಕೆಲವು ಎಸಕ ಪದಗಳು ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ಮಾತ್ರವೇ ಬರಬಲ್ಲುವು.
ಎತ್ತುಗೆಗಾಗಿ, ಕೊಳ್ಳು ಎಸಕಪದವನ್ನು ಈ ಮೂರು ಬಗೆಯ ಪದಗ ಳೊಂದಿಗೂ ಬಳಸಲು ಬರುತ್ತದೆ (ಉಬ್ಬಸಗೊಳ್ಳು, ಒಳಗೊಳ್ಳು, ಅಂಟಿ ಕೊಳ್ಳು); ಆದರೆ, ಮಾಡು ಎಸಕಪದವನ್ನು ಹೆಸರುಪದ (ಪಾಲುಮಾಡು)
ಇಲ್ಲವೇ ಪರಿಚೆಪದದೊಂದಿಗೆ (ಕಿಳ್ಮಾಡು, ಗಟ್ಟಿಮಾಡು) ಮಾತ್ರವೇ ಬಳಸ ಲಾಗುತ್ತದಲ್ಲದೆ, ಎಸಕಪದಗಳ ಜೋಡಿಸುವ ರೂಪದೊಂದಿಗೆ ಬಳಸಲು ಬರುವ ಹಾಗೆ ಕಾಣಿಸುವುದಿಲ್ಲ. ಬರಮಾಡು ಮತ್ತು ಕೊಡಮಾಡು ಎಂಬವು ಗಳಲ್ಲಿ ಮಾತ್ರ ಅದು ಮಾರೆಸಕದ ಜೋಡಿಸುವ ರೂಪದೊಂದಿಗೆ ಬಂದಿದೆ (ಬರಲು+ಮಾಡು, ಕೊಡಲು+ಮಾಡು), ಮತ್ತು ಉಂಟುಮಾಡು, ಮತ್ತು ಸಾಕುಮಾಡು ಎಂಬವುಗಳಲ್ಲಿ ಅದು ಎಸಕಪದಗಳ ಕೊನೆರೂಪದೊಂದಿಗೆ ಬಂದಿದೆ.
ಹೆಸರುಪದ, ಪರಿಚೆಪದ, ಮತ್ತು ಎಸಕಪದದ ಜೋಡಿಸುವ ರೂಪ ಎಂಬ ಮೂರು ಬಗೆಯ ಪದಗಳೊಂದಿಗೂ ಬರಬಲ್ಲವು, ಮತ್ತು ಹೆಸರುಪದ ಮತ್ತು ಪರಿಚೆಪದಗಳೊಂದಿಗೆ ಮಾತ್ರವೇ ಬರಬಲ್ಲುವು ಎಂಬ ಈ ಎರಡು ಬಗೆಯ
ಎಸಕಪದಗಳಿಗೆ ಬೇರೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಎರಡರೊಂದಿಗೆ ಬರುವವು ಕಾಣು (ಕೊನೆಗಾಣು) ಕುಂದು (ಎದೆಗುಂದು) ಅಟ್ಟು (ಬೆನ್ನಟ್ಟು) ಒಡ್ಡು (ಕಯ್ಯೊಡ್ಡು) ಊರು (ಬೇರೂರು) ಏರು (ನೆರವೇರು)
ಮೂರರೊಂದಿಗೆ ಬರುವವು ಕೊಳ್ಳು (ಕೊನೆಗೊಳ್ಳು-ಅಂಟಿಕೊಳ್ಳು) ಕೊಡು (ಎದೆಕೊಡು-ಬಿಟ್ಟುಕೊಡು) ಕಟ್ಟು (ಗಂಟುಕಟ್ಟು-ಎತ್ತಿಕಟ್ಟು)
ಇಕ್ಕು (ಕಿಚ್ಚಿಕ್ಕು-ಕೊಂದಿಕ್ಕು) ಇಡು (ಅಡವಿಡು-ಕಾದಿಡು) ಆಡು (ಅಡ್ಡಾಡು-ಅಲೆದಾಡು)
ಹೋಗು (ಗುಳೆಹೋಗು-ಆರಿಹೋಗು) ಎತ್ತು (ಹೆಸರೆತ್ತು) ಆಗು (ಗುರಿಯಾಗು) ಹೇಳು (ಕತೆಹೇಳು-ಎತ್ತಿಹೇಳು) ಅಡಗು (ಸದ್ದಡಗು) ಬೀಳು (ಮೇಲೆಬೀಳು-ಬೆಚ್ಚಿಬೀಳು) ತೋರು (ತಲೆದೋರು) ಹಿಡಿ (ಸೆರೆಹಿಡಿ-ಎತ್ತಿಹಿಡಿ) ಹಚ್ಚು (ಗೊತ್ತುಹಚ್ಚು) ಹಾಕು (ಗಂಟುಹಾಕು-ತಳ್ಳಿಹಾಕು) ತುಂಬು (ತೆನೆತುಂಬು) ಬಿಡು (ಕಣ್ಣುಬಿಡು-ತೇಲಿಬಿಡು)
ಮೇಲೆ ಮೊದಲನೇ ಕಾಲಂನಲ್ಲಿ ಕೊಟ್ಟಿರುವ ಕೊಳ್ಳು, ಕೊಡು, ಕಟ್ಟು ಮೊದಲಾದ ಎಸಕಪದಗಳು ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ಮಾತ್ರ ವಲ್ಲದೆ ಎಸಕಪದಗಳ ಜೋಡಿಸುವ ರೂಪದೊಂದಿಗೂ ಬರಬಲ್ಲುವು, ಆದರೆ ಎರಡನೇ ಕಾಲಂನಲ್ಲಿ ಕೊಟ್ಟಿರುವ ಕಾಣು, ಕುಂದು, ಅಟ್ಟು, ಒಡ್ಡು ಮೊದಲಾ ದವು ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ಮಾತ್ರವೇ ಬರಬಲ್ಲುವು ಎಂಬು ದನ್ನು ಇಲ್ಲಿ ಗಮನಿಸಬಹುದು.
ಕೂಡುಪದಗಳಲ್ಲಿ ಎರಡನೆಯ ಪದವಾಗಿ ಬಳಕೆಯಾಗುವ ಕೆಲವು ಮುಕ್ಯ
ವಾದ ಎಸಕಪದಗಳನ್ನು ಕೆಳಗೆ ಒಂದೊಂದಾಗಿ ಪರಿಶೀಲಿಸಲಾಗಿದೆ:
(1) ಕೊಳ್ಳು (ಗೊಳ್ಳು) ಕೊಳ್ಳು (ಗೊಳ್ಳು) ಕೊಳ್ಳು (ಗೊಳ್ಳು) ಕೊಳ್ಳು (ಗೊಳ್ಳು) ಇದು ಇವತ್ತು ಕೂಡುಪದಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಒಂದು ಎಸಕಪದ ವಾಗಿದೆ; ಇದಕ್ಕೆ ಕೊಳ್ಳು ಮತ್ತು ಗೊಳ್ಳು ಎಂಬ ಎರಡು ರೂಪಗಳಿದ್ದು, ಅವುಗಳಲ್ಲಿ ಕೊಳ್ಳು ಎಂಬುದು ಎಸಕಪದಗಳ ಜೋಡಿಸುವ ರೂಪದೊಂದಿಗೆ ಬರುತ್ತದೆ (ಒಪ್ಪಿಕೊಳ್ಳು, ಅಂಟಿಕೊಳ್ಳು, ಬರೆದುಕೊಳ್ಳು, ಇಸಕೊಳ್ಳು), ಮತ್ತು ಗೊಳ್ಳು ಎಂಬುದು ಹೆಸರುಪದ (ಎಚ್ಚರಗೊಳ್ಳು, ಕೊನೆಗೊಳ್ಳು) ಮತ್ತು ಪರಿಚೆಪದಗಳೊಂದಿಗೆ ಬರುತ್ತದೆ (ಎದುರುಗೊಳ್ಳು).
ಇವುಗಳಲ್ಲಿ ಕೊಳ್ಳು ಎಂಬುದು ಎಲ್ಲಾ ಬಗೆಯ ಎಸಕಪದಗಳ ಮೊದ ಲೆಸಕದ ಜೋಡಿಸುವ ರೂಪಗಳೊಂದಿಗೂ ಬರಬಲ್ಲುದಾದ ಕಾರಣ, ಅದರ ಅಂತಹ ಬಳಕೆಯನ್ನು ಒಂದು ಪದರೂಪವೆಂದು (ಸೇರಿಸುವ ರೂಪವೆಂದು) ತಿಳಿಯಬೇಕಾಗುತ್ತದೆ (4.3.2 ನೋಡಿ); ಈ ಬಳಕೆಯಲ್ಲಿ ಅದಕ್ಕೆ ‘ಒಂದು ಎಸಕ ತಾನಾಗಿ ನಡೆದಿದೆ’[ಎಂಬ ಹುರುಳಾಗಲಿ (ಬಾಗಿಲು ತೆರೆದುಕೊಂಡಿತು), ಇಲ್ಲವೇ ‘ಒಬ್ಬ ಮಾಡುಗ ಅದನ್ನು ತನಗಾಗಿ ನಡೆಸಿದ್ದಾನೆ’[ಎಂಬ ಹುರುಳಾಗಲಿ (ಬರೆದುಕೊಂಡ, ತೆಗೆದುಕೊಂಡ) ಬರುತ್ತದೆ.
ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ಬಂದಾಗ, ಈ ಎಸಕಪದಕ್ಕೆ ಹೆಚ್ಚಿ ನೆಡೆಗಳಲ್ಲೂ ‘ತಾನಾಗಿಯೇ ಆಗು’[ಎಂಬ ಹುರುಳಿದೆ. ಎತ್ತುಗೆಗಾಗಿ, ಎಚ್ಚರ ಗೊಂಡ ಕೂಡುಪದಕ್ಕೆ ‘ತಾನಾಗಿಯೇ ಎಚ್ಚರವಾದ’[ಎಂಬ ಹುರುಳಿದೆ; ಆ ಎಸಕವನ್ನು ಬೇರೊಬ್ಬರು ಮಾಡಿದ್ದರೂ (ಕೊನೆಗೊಂಡಿತು), ಅವುಗಳನ್ನು ಬಳಸುವಾಗ ಆ ವಿಶಯವನ್ನು ಮರೆಮಾಚಲಾಗುತ್ತದೆ. ಇಂತಹ ಬೇರೆ ಕೆಲವು ಕೂಡುಪದಗಳನ್ನು ಕೆಳಗೆ ಕೊಡಲಾಗಿದೆ:
ಅಣಿಗೊಳ್ಳು ಅಡಕಗೊಳ್ಳು ಅಂದಗೊಳ್ಳು ಆಯ್ಕುಳಿಗೊಳ್ಳು ಇಕ್ಕೆಗೊಳ್ಳು ಅಳಿಗೊಳ್ಳು ಎಡೆಗೊಳ್ಳು ಎಚ್ಚರಗೊಳ್ಳು ಎಣೆಗೊಳ್ಳು ಕೊನೆಗೊಳ್ಳು ಕೆಳೆಗೊಳ್ಳು ಒಳಗೊಳ್ಳು ಚುರುಕುಗೊಳ್ಳು ಗೆಡೆಗೊಳ್ಳು ಗುಡಿಗೊಳ್ಳು ಬಳಿಗೊಳ್ಳು ಪಾಲ್ಗೊಳ್ಳು ಪುದುಗೊಳ್ಳು ಮುನಿಸುಗೊಳ್ಳು ಮಟ್ಟುಗೊಳ್ಳು ಮುಡಿಗೊಳ್ಳು ಸಿಡಿಮಿಡಿಗೊಳ್ಳು ಸೇಡುಗೊಳ್ಳು ಮೊಟಕುಗೊಳ್ಳು
ಅನುಗೊಳ್ಳು ಎಡ್ಡಗೊಳ್ಳು ಎದುರುಗೊಳ್ಳು ಗಾಸಿಕೊಳ್ಳು ತಿಂತಿಣಿಗೊಳ್ಳು ಬೆದೆಗೊಳ್ಳು ಸೂರೆಗೊಳ್ಳು
ಆದರೆ, ಬಗೆಗೊಳ್ಳು, ಬೇಗುದಿಗೊಳ್ಳು, ಉಬ್ಬಸಗೊಳ್ಳು, ಮತ್ತು ಬೇಳುವೆಗೊಳ್ಳು ಎಂಬವುಗಳಲ್ಲಿ ಈ ಎಸಕಪದಕ್ಕೆ ‘ಪಡು’[ಎಂಬ ಹುರುಳಿದೆ; ಹೆಪ್ಪುಗೊಳ್ಳು ಎಂಬಲ್ಲಿ ‘ಕಟ್ಟು’[ಎಂಬ ಹುರುಳಿದೆ; ಗೊನೆಗೊಳ್ಳು ಎಂಬಲ್ಲಿ ‘ಹಾಕು’ ಎಂಬ ಹುರುಳಿದೆ; ಮತ್ತು ಏಗೊಳ್ಳು ಹಾಗೂ ಓಕೊಳ್ಳು ಎಂಬಲ್ಲಿ
‘ಎನ್ನು’[ಎಂಬ ಹುರುಳಿದೆ; ಇದಲ್ಲದೆ, ಓಕೊಳ್ಳು ಎಂಬುದರಲ್ಲಿ ಇದು ಕೊಳ್ಳು ರೂಪದಲ್ಲಿ ಬಂದಿದೆ.
(2) ಆಡುಆಡುಆಡುಆಡು ಆಡು ಎಸಕಪದಕ್ಕೆ ಮುಕ್ಯವಾಗಿ ಎರಡು ಹುರುಳುಗಳಿವೆ: (ಕ) ‘ಆಟವಾಡು, ಕುಣಿ, ಅಲ್ಲಾಡು’ ಇಲ್ಲವೇ ‘ತೊನೆದಾಡು’[ಎಂಬುದೊಂದು, ಮತ್ತು (ಚ) ‘ಹೇಳು’[ಎಂಬುದಿನ್ನೊಂದು; ಈ ಎರಡು ಹುರುಳುಗಳಲ್ಲೂ ಇದನ್ನು ಕೂಡು ಪದಗಳ ಎರಡನೆಯ ಪದವಾಗಿ ಬಳಸಲಾಗುತ್ತದೆ (ಹೊರಳಾಡು, ಕೂಗಾಡು). ಇದಲ್ಲದೆ, ಈ ಕೂಡುಪದಗಳಿಗೆ ಹೆಚ್ಚಿನೆಡೆಗಳಲ್ಲೂ ‘ಒಂದು ಎಸಕ ಹಲವು ಬಾರಿ ನಡೆಯುತ್ತದೆ’[(ಇಲ್ಲವೇ ‘ಅದನ್ನು ಹಲವು ಬಾರಿ ನಡೆಸಲಾಗುತ್ತದೆ’) ಎಂಬ ಹುರುಳು ಬರುತ್ತದೆ. ಸುತ್ತು-ಸುತ್ತಾಡು, ಹಾರು-ಹಾರಾಡು, ಕೂಗು- ಕೂಗಾಡು ಮೊದಲಾದ ಬಳಕೆಗಳಲ್ಲಿ ಈ ಹುರುಳನ್ನು ಕಾಣಬಹುದು.
ಎಸಕಪದಗಳೊಂದಿಗೆ ಇದರ ಬಳಕೆಯನ್ನು ತೋರಿಸುವ ಕೆಲವು ಎತ್ತುಗೆ
ಗಳನ್ನು ಕೆಳಗೆ ಕೊಡಲಾಗಿದೆ:
(ಕ) ಮೊದಲನೆಯ ‘ಆಟವಾಡು, ಅಲ್ಲಾಡು’ ಹುರುಳಿನಲ್ಲಿ ಬಳಕೆ: ತಡಕಾಡು
ಎಗರಾಡು ತೂರಾಡು
ತಿರುಗಾಡು ಜಗ್ಗಾಡು
ಗುದ್ದಾಡು ಹಾರಾಡು
ಸುತ್ತಾಡು ಹೋಗಾಡು ಹೋರಾಡು ಮುಂಡಾಡು ಈಜಾಡು
ತೆಂಕಾಡು ಉರುಳಾಡು ಕಡಿದಾಡು ಸುಳಿದಾಡು ಅಲೆದಾಡು ಮೆರೆದಾಡು ಒಸೆದಾಡು
ತಾಟಾಡು
ಕಚ್ಚಾಡು
ತೇಲಾಡು
ಹೆಣಗಾಡು ನಗಾಡು
ತೂಗಾಡು
ಓಲಾಡು
ಕಿತ್ತಾಡು
ಕುಣಿದಾಡು ಸರಿದಾಡು
ಒಲೆದಾಡು ಮಲೆದಾಡು ಹೊಯ್ದಾಡು
ಹುಡುಕಾಡು ಓಡಾಡು
ಜಿಗಿದಾಡು
ಹರಿದಾಡು
ಎಳೆದಾಡು ಹೊಡೆದಾಡು ತೊನೆದಾಡು
ತಿಣುಕಾಡು ಕಾದಾಡು ಏಲಾಡು ಹೊರಳಾಡು ಮಿಸುಕಾಡು ನೂಕಾಡು ಅಲುಗಾಡು ಜೋತಾಡು ಬಡಿದಾಡು ನಲಿದಾಡು ಕುಣಿದಾಡು ತುಯ್ದಾಡು
(ಚ) ಎರಡನೆಯ ‘ಹೇಳು’ ಹುರುಳಿನಲ್ಲಿ ಬಳಕೆ: ಕೊರಚಾಡು ಕೊಂಚಾಡು ಜರೆದಾಡು
ಒದರಾಡು
ಗೊಣಗಾಡು ಕೊಂಡಾಡು
ಕೂಗಾಡು
ಹೆಸರು ಮತ್ತು ಪರಿಚೆಪದಗಳಿಗೂ ಈ ಎಸಕಪದವನ್ನು ಸೇರಿಸಿ ಕೆಲವು ಕೂಡುಪದಗಳನ್ನು ಉಂಟುಮಾಡಲಾಗಿದೆ. ಇಲ್ಲೂ ಕೂಡ, ಮೇಲಿನ ಎರಡು ಹುರುಳುಗಳಲ್ಲೂ ಈ ಎಸಕಪದದ ಬಳಕೆಯಾಗಿದೆ:
(ಕ) ಮೊದಲನೆಯ ‘ಆಟವಾಡು, ಅಲ್ಲಾಡು’ ಹುರುಳಿನಲ್ಲಿ ಬಳಕೆ: ಕೊಸರಾಡು ಉಸಿರಾಡು ಕಾಪಾಡು ಕೂತಾಡು
ಬೇಟೆಯಾಡು ಮುದ್ದಾಡು
ಚಲ್ಲಾಡು
ಎಡೆಯಾಡು ಅಲ್ಲಾಡು
ಜೂಜಾಡು ಗಾಣವಾಡು ಅಡ್ಡಾಡು
(ಚ) ಎರಡನೆಯ ‘ಹೇಳು’ ಹುರುಳಿನಲ್ಲಿ ಬಳಕೆ: ಸುಳ್ಳಾಡು
ಗೋಳಾಡು ಪದರಾಡು
ಮಾತನಾಡು
ಹಾಡಾಡು
ಇದಿರಾಡು
ನುಡಿಯಾಡು ಒರಟಾಡು
ಮಾಡು (3) ಆಗುಆಗುಆಗುಆಗು ಮತ್ತು ಮಾಡು ಮಾಡು ಮಾಡು ಈ ಎರಡು ಎಸಕಪದಗಳನ್ನು ಕೂಡುಪದಗಳಲ್ಲಿ ಹೆಸರು ಇಲ್ಲವೇ ಪರಿಚೆಪದ ಗಳೊಂದಿಗೆ ಮೊದಲೆಸಕದ ಮಾತ್ರ ಬಳಸಲಾಗುತ್ತದೆ; ಎಸಕಪದಗಳ ಜೋಡಿಸುವ ರೂಪದೊಂದಿಗೆ ಇವನ್ನು ಬಳಸುವುದಿಲ್ಲ. ಇದಕ್ಕೆ ಕಾರಣ ಕನ್ನಡದ ಎಸಕಪದಗಳು ಆಗುವಿಕೆಗಳಾಗಿರುತ್ತವೆ, ಇಲ್ಲವೇ ವೇನೆಂದರೆ, ಮಾಡುವಿಕೆಗಳಾಗಿರುತ್ತವೆ; ಹಾಗಾಗಿ, ಆಗುವಿಕೆಯನ್ನು ತಿಳಿಸಬಲ್ಲ ಆಗು, ಮತ್ತು ಮಾಡುವಿಕೆಯನ್ನು ತಿಳಿಸಬಲ್ಲ ಮಾಡು ಎಂಬ ಈ ಎಸಕಪದಗಳ ಹುರುಳು ಆ ಎಸಕಪದಗಳಲ್ಲೇ ಅಡಕವಾಗಿರುತ್ತದೆ.
ಆದರೆ, ಕೊನೆರೂಪದಲ್ಲಿರುವ ಬೇಕು, ಸಾಕು, ಮತ್ತು ಉಂಟು ಎಂಬ ಎಸಕಪದಗಳೊಂದಿಗೆ ಅವನ್ನು ನೇರವಾಗಿ ಬಳಸಿ ಕೂಡುಪದಗಳನ್ನು ಪಡೆಯಲು (ಬೇಕಾಗು, ಬೇಕುಮಾಡು; ಸಾಕಾಗು, ಸಾಕುಮಾಡು; ಬರುತ್ತದೆ ಉಂಟಾಗು, ಉಂಟುಮಾಡು); ಅಲ್ಲಗಳೆಯುವ ಹುರುಳನ್ನು ಕೊಡುವ ಬೇಡ, ಸಾಲದು ಮತ್ತು ಇಲ್ಲ ಎಂಬವುಗಳೊಂದಿಗೆ ಆಗು ಎಂಬುದನ್ನು ಬಳಸಿಯೂ ಕೂಡುಪದಗಳನ್ನು ಪಡೆಯಲು ಬರುತ್ತದೆ: ಬೇಡವಾಗು, ಸಾಲದಾಗು, ಇಲ್ಲ ವಾಗು.
ಇದಲ್ಲದೆ, ಮೇಲೆ ಸೂಚಿಸಿದ ಹಾಗೆ, ಕೊಡಮಾಡು ಮತ್ತು ಬರಮಾಡು ಎಂಬ ಎರಡು ಕೂಡುಪದಗಳಲ್ಲಿ ಕೊಡು ಮತ್ತು ಬರು ಎಸಕಪದಗಳ ಮಾರೆಸಕದ ಜೋಡಿಸುವ ರೂಪಗಳೊಂದಿಗೆ (ಕೊಡಲು ಮತ್ತು ಬರಲು ಎಂಬವುಗಳೊಂದಿಗೆ) ಮಾಡು ಪದ ಬಂದಿದೆ; ಈ ರೂಪಗಳ ಕೊನೆಯ ಲು ಇಲ್ಲಿ ಬಿದ್ದುಹೋಗಿರುವುದನ್ನು ಗಮನಿಸಬಹುದು.
ಇವುಗಳಲ್ಲಿ ಆಗು ಎಸಕಪದವನ್ನು ಮಾರೆಸಕದ ಜೋಡಿಸುವ ರೂಪ ದೊಂದಿಗೆ ಬಳಸಿ ಬೇರೊಂದು ಬಗೆಯ ಎಸಕರೂಪವನ್ನೂ ಪಡೆಯಲು ಬರು ತ್ತದೆ: ಮಾಡಲಾಯಿತು, ಕೊಡಲಾಯಿತು, ಕರೆಸಲಾಯಿತು ಮೊದಲಾದ ಇಂತಹ ಪದರೂಪಗಳ ಮೂಲಕ ಎಸಕಪದದ ಮಾಡುಗನನ್ನು ಇಲ್ಲವೇ ಮಾಡಿಸುಗನನ್ನು ತಿಳಿಸದೆ ಇರಲು ಬರುತ್ತದೆ; ಆದರೆ, ಇವು ಪದರೂಪಗಳಲ್ಲದೆ ಪದಗಳಲ್ಲ; ಇವುಗಳ ಕುರಿತು ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು. ಕೆಲವು ಹೆಸರು ಇಲ್ಲವೇ ಪರಿಚೆಪದದೊಂದಿಗೆ ಆಗು ಮತ್ತು ಮಾಡು ಎಂಬ ಈ ಎರಡು ಎಸಕಪದಗಳನ್ನೂ ಬಳಸಲು ಬರುತ್ತದೆ, ಮತ್ತು ಇಂತಹ ಬಳಕೆ ಗಳಲ್ಲಿ ಅವುಗಳ ನಡುವಿನ ವ್ಯತ್ಯಾಸ ಸರಿಯಾಗಿ ಕಾಣಿಸುತ್ತದೆ:
ಅಚ್ಚುಮಾಡು
ಗೊತ್ತುಮಾಡು
ಅಚ್ಚಾಗು ಅಣಿಯಾಗು ಅಣಿಮಾಡು ಗೊತ್ತಾಗು ಚಿಂದಿಯಾಗು ಚಿಂದಿಮಾಡು ಮರುಳಾಗು ತಡವಾಗು ಪಾಲಾಗು ವೆಚ್ಚವಾಗು ಹಣ್ಣಾಗು ಗಟ್ಟಿಯಾಗು ಸರಿಯಾಗು
ಮರುಳುಮಾಡು ತಡಮಾಡು ಪಾಲುಮಾಡು ವೆಚ್ಚಮಾಡು ಹಣ್ಣುಮಾಡು ಗಟ್ಟಿಮಾಡು ಸರಿಮಾಡು
ಅಡ್ದಿಯಾಗು ಅಡ್ಡಿಮಾಡು ಅನುವಾಗು ಅನುಮಾಡು ಚಟ್ಟಾಗು ಚಟ್ಟುಮಾಡು ತೆರವುಮಾಡು ತೆರವಾಗು ಮೋಸವಾಗು ಮೋಸಮಾಡು ಪಾರುಮಾಡು ಪಾರಾಗು ಒಟ್ಟಾಗು ಒಟ್ಟುಮಾಡು ಸೂರೆಯಾಗು ಸೂರೆಮಾಡು ಹೆಸರುಮಾಡು ಹೆಸರಾಗು ಕಿರಿದುಮಾಡು ಕಿರಿದಾಗು
ಆದರೆ, ಬೇರೆ ಕೆಲವು ಪದಗಳೊಂದಿಗೆ ಆಗು ಮತ್ತು ಮಾಡು ಎಂಬ ಎರಡು ಎಸಕಪದ್ಗಳಲ್ಲಿ ಒಂದು ಮಾತ್ರವೇ ಬರಬಲ್ಲುದು. ಇದಕ್ಕೆ ಕೆಲವು ಎತ್ತುಗೆ ಗಳನ್ನು ಕೆಳಗೆ ಕೊಡಲಾಗಿದೆ:
(ಕ) ಆಗು ಪದದೊಂದಿಗೆ ಬರುವವು: ಒಕ್ಕಲಾಗು ಜಳ್ಳಾಗು
ಕಂಗಾಗು
ತುತ್ತಾಗು
ಕಾಯಾಗು ಬೆರಗಾಗು
ಚುರುಕಾಗು ಮುಟ್ಟಾಗು
(ಚ) ಮಾಡು ಪದದೊಂದಿಗೆ ಬರುವವು: ಅರಿಕೆಮಾಡು ಆರಯ್ಕೆಮಾಡು ಕಟ್ಟುಮಾಡು ಕಾಲುಮಾಡು ಬೇಹುಮಾಡು
ಕಯ್ಮಾಡು
ಮದ್ದುಮಾಡು ಸಂಚುಮಾಡು ಮತ್ತೆಮಾಡು
ಆಳಿಮಾಡು ಸನ್ನೆಮಾಡು ಬರಮಾಡು
(4) ಇಡುಇಡುಇಡುಇಡು ಈ ಎಸಕಪದವನ್ನು ಹೆಸರುಪದಗಳೊಂದಿಗೆ, ಪರಿಚೆಪದಗಳೊಂದಿಗೆ, ಮತ್ತು ಎಸಕಪದಗಳ ಮೊದಲೆಸಕದ ಜೋಡಿಸುವ ರೂಪಗಳೊಂದಿಗೆ ಬಳಸಲಾಗುತ್ತದೆ; ಹೆಚ್ಚಿನೆಡೆಗಳಲ್ಲೂ ಇದನ್ನೊಳಗೊಂಡ ಕೂಡುಪದಗಳು ಅವಕ್ಕೆ ಸಂಬಂದಿಸಿದ ಮಾಡುವಿಕೆಯನ್ನು ತಿಳಿಸುತ್ತವೆ; ಆದರೆ, ಕತ್ತಲಿಡು ಎಂಬುದು ಒಂದು ಆಗುವಿಕೆ ಯನ್ನು ತಿಳಿಸುತ್ತದೆ.
ಇಂತಹ ಕೆಲವು ಕೂಡುಪದಗಳನ್ನು ಕೆಳಗೆ ಕೊಡಲಾಗಿದೆ:
(ಕ) ಹೆಸರುಪದದೊಂದಿಗಿನ ಬಳಕೆ: ಅಡವಿಡು ಒತ್ತೆಯಿಡು ಕಂಡವಿಡು ಕುರುಪಿಡು ಗುಮ್ಮಿಡು ತುತ್ತಿಡು ನೆನಪಿಡು
ಮೊರೆಯಿಡು ಹೆಪ್ಪಿಡು
ಅಡಕಲಿಡು ಒಪ್ಪವಿಡು
ಕಣ್ಣಿಡು
ಕೋಡಿಡು
ಗುರಿಯಿಡು
ತೂತಿಡು
ಬೊಬ್ಬಿಡು
ಸುಯಿಲಿಡು ಹೆಸರಿಡು
ಇಂಬಿಡು
ಕಟ್ಟಲೆಯಿಡು ಕುಂದಿಡು
ಗೀಳಿಡು
ಗೋಳಿಡು
ತೋಹಿಡು
ಮೀಸಲಿಡು ಹುಯ್ಯಲಿಡು
ಉಸುರಿಡು ಕಿಚ್ಚಿಡು ಕುಕಿಲಿಡು ಗುಟುಕಿಡು ತಕ್ಕಮೆಯಿಡು ದಾಳಿಯಿಡು ಮುದ್ದಿಡು ಹೆಜ್ಜೆಯಿಡು
(ಚ) ಪರಿಚೆಪದಗಳೊಂದಿಗಿನ ಬಳಕೆ: ಗೊಡ್ಡಿಡು
ದೂರವಿಡು
ಮುಂದಿಡು
ಹಿಂದಿಡು
(ಟ) ಎಸಕಪದಗಳೊಂದಿಗಿನ ಬಳಕೆ: ಎಳಲಿಡು ಕಾದಿಡು
ದೂರಿಡು ಬರೆದಿಡು
ಅದುಮಿಡು ಕೂಡಿಡು
ಪಣ್ಣಿಡು
ಸೆಕ್ಕಿಡು
ಊಂಕಿಡು
ಜೋರಿಡು
ಬಚ್ಚಿಡು
ಹಿಡಿದಿಡು
ಊಳಿಡು ತೆಗೆದಿಡು
ಬಯ್ತಿಡು ಹೂತಿಡು
ಕೊಡು (ಗೊಡು) (5) ಕೊಡು (ಗೊಡು) ಕೊಡು (ಗೊಡು) ಕೊಡು (ಗೊಡು) ಎಸಕಪದಗಳ ಮೊದಲೆಸಕದ ಜೋಡಿಸುವ ರೂಪದೊಂದಿಗೆ ಬಳಸಿದಾಗ, ಈ ಎಸಕಪದಕ್ಕೆ ‘ಒಂದು ಎಸಕವನ್ನು ಇನ್ನೊಬ್ಬನ ನೆರವಿಗಾಗಿ ಮಾಡಲಾಗಿದೆ’ಯೆಂಬ ಹುರುಳಿದೆ. ಎತ್ತುಗೆಗಾಗಿ, ಹೇಳಿಕೊಡು ಎಂಬುದಕ್ಕೆ ‘ಇನ್ನೊಬ್ಬನಿಗೆ ನೆರವಾಗು ವಂತೆ ಹೇಳು’[ಎಂದರೆ ‘ಕಲಿಸು’[ಎಂಬ ಹುರುಳಿದೆ; ಅದರಲ್ಲಿ ಬಂದಿರುವ ಕೊಡು ಎಸಕಪದಕ್ಕೆ ಅದರ (ಎಂದರೆ ಕೊಡು ಪದದ) ನೇರವಾದ ಹುರುಳಿಲ್ಲ.
ಜೋಡಿಸುವ ರೂಪದೊಂದಿಗಿನ ಬೇರೆ ಕೆಲವು ಬಳಕೆಗಳನ್ನು ಕೆಳಗೆ ಕೊಡ ಲಾಗಿದೆ; ಮೇಲಿನ ಹುರುಳನ್ನು ಕೊಡಬಲ್ಲ ಬೇರೆಯೂ ಹಲವು ಎಸಕಪದ ಗಳೊಂದಿಗೆ ಇದನ್ನು ಬಳಸಲು ಬರುತ್ತದೆ. ಆದರೆ, ಬೀಳ್ಕೊಡು ಎಂಬುದರಲ್ಲಿ ಎರಡು ಪದಗಳೂ ತಮ್ಮ ಹುರುಳನ್ನು ಮಾರ್ಪಡಿಸಿವೆ.
ಎತ್ತಿಕೊಡು ತುಂಬಿಕೊಡು ಬರೆದುಕೊಡು
ಚುಚ್ಚಿಕೊಡು
ತಂದುಕೊಡು
ಬಿಟ್ಟುಕೊಡು
ತಿದ್ದಿಕೊಡು ಹುಡುಕಿಕೊಡು
ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ಕೊಡು ಪದವನ್ನು ಬಳಸಿರುವಲ್ಲಿ ಅದಕ್ಕೆ ಹೆಚ್ಚು ನೇರವಾದ ಹುರುಳಿದೆ. ಈ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ. ಕೆಲವೆಡೆಗಳಲ್ಲಿ ಇದಕ್ಕೆ ಗೊಡು ಎಂಬ ರೂಪವಿರುವುದನ್ನು ಗಮನಿಸಬಹುದು (ಎದೆ ಮತ್ತು ಎಡೆ ಪದಗಳ ಬಳಿಕ ಈ ಎರಡು ರೂಪಗಳೂ ಬರುತ್ತವೆ):
ಎಡೆಗೊಡು
ಎಡೆಕೊಡು ಒತ್ತುಕೊಡು ಓಗೊಡು
ಕಾವುಕೊಡು ಕಿವಿಗೊಡು
ತೆರಪುಗೊಡು ಪರಟೆಕೊಡು ಮಾತುಕೊಡು ಮುಳಿಕೊಡು ಹಕ್ಕುಕೊಡು
ಹೊಳಪುಕೊಡು
ಎದೆಕೊಡು ಕಡಕೊಡು
ತಪ್ಪುಕೊಡು ಬೆಂಗೊಡು ಲಂಚಕೊಡು
ಎದೆಗೊಡು
ಕಯ್ಕೊಡು
ತೀರ್ಪುಕೊಡು ಬೆಲೆಕೊಡು ಸಲುವುಕೊಡು
ಕಟ್ಟು (ಗಟ್ಟು) (6) ಕಟ್ಟು (ಗಟ್ಟು) ಕಟ್ಟು (ಗಟ್ಟು) ಕಟ್ಟು (ಗಟ್ಟು) ಸಾಮಾನ್ಯವಾಗಿ ಈ ಎಸಕಪದವನ್ನು ಹೆಸರು ಮತ್ತು ಪರಿಚೆಪದಗಳೊಂದಿಗೆ ಮಾತ್ರವೇ ಬಳಸಲಾಗುತ್ತದೆ; ಆದರೆ, ಎತ್ತಿಕಟ್ಟು ಎಂಬಲ್ಲಿ ಇದನ್ನು ಎಸಕಪದದ ಜೋಡಿಸುವ ರೂಪದೊಂದಿಗೂ ಬಳಸಲಾಗಿದೆ.
ಇದನ್ನು ಬಳಸಿರುವ ಕೂಡುಪದಗಳು ಆಗುವಿಕೆಗಳನ್ನಾಗಲಿ ಇಲ್ಲವೇ ಮಾಡು ವಿಕೆಗಳನ್ನಾಗಲಿ ತಿಳಿಸಬಲ್ಲುವು. ಎತ್ತುಗೆಗಾಗಿ, ಕೊಕ್ಕೆಕಟ್ಟು, ಗಡ್ಡೆಕಟ್ಟು, ಗರಣೆ ಕಟ್ಟು ಎಂಬವು ಆಗುವಿಕೆಗಳನ್ನು ತಿಳಿಸುತ್ತವೆ; ಮತ್ತು ಕತೆಕಟ್ಟು, ಗಂಟುಕಟ್ಟು, ತಂಡಕಟ್ಟು ಎಂಬವು ಮಾಡುವಿಕೆಗಳನ್ನು ತಿಳಿಸುತ್ತವೆ.
ಇದಕ್ಕೆ ಕಟ್ಟು ಮತ್ತು ಗಟ್ಟು ಎಂಬ ಎರಡು ರೂಪಗಳಿವೆ; ಆದರೆ ಅವು ಗಳಲ್ಲಿ ಯಾವುದು ಎಲ್ಲಿ ಬರುತ್ತದೆ ಎಂಬುದರ ಕುರಿತು ಒಲವೇನೂ ಇರುವ ಹಾಗೆ ಕಾಣಿಸುವುದಿಲ್ಲ; ಹೆಚ್ಚುಕಡಿಮೆ ಅರೆವಾಶಿ ಕೂಡುಪದಗಳಲ್ಲಿ ಕಟ್ಟು ರೂಪ ಕಾಣಿಸುತ್ತದೆ, ಮತ್ತು ಬಾಕಿ ಉಳಿದಿರುವವುಗಳಲ್ಲಿ ಗಟ್ಟು ರೂಪ ಕಾಣಿಸುತ್ತದೆ. ಒಂದೇ ಪದದ ಬಳಿಕವೂ ಆ ಎರಡು ರೂಪಗಳನ್ನು ಕಾಣಲು ಬರುತ್ತದೆ:
ಉಸಿರುಕಟ್ಟು-ಉಸಿರುಗಟ್ಟು; ಮರಕಟ್ಟು-ಮರಗಟ್ಟು. ಇದರ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(ಕ) ಕಟ್ಟು ರೂಪದಲ್ಲಿ: ಕತೆಕಟ್ಟು ಕೊಕ್ಕೆಕಟ್ಟು ಗುಂಪುಕಟ್ಟು
ತಪ್ಪುಕಟ್ಟು ಪಟ್ಟುಕಟ್ಟು ಬೆಲೆಕಟ್ಟು ಹೆಡಕಟ್ಟು
ಕತ್ತಿಕಟ್ಟು
ಗಂಟುಕಟ್ಟು ಗುಳೆಕಟ್ಟು
ತಳಕಟ್ಟು
ಪರೆಕಟ್ಟು
ಮರಕಟ್ಟು
ಹೆಡೆಮುರಿಗೆಕಟ್ಟು ಹೆಪ್ಪುಕಟ್ಟು
ಕಾಲುಕಟ್ಟು ಗಡ್ಡೆಕಟ್ಟು
ಟೊಂಕಕಟ್ಟು ತೆನೆಕಟ್ಟು
ಪಾಚಿಕಟ್ಟು ಮೂಟೆಕಟ್ಟು
(ಚ) ಗಟ್ಟು ರೂಪದಲ್ಲಿ: ಉಸಿರುಗಟ್ಟು ಒಡಿಗಟ್ಟು
ಕೀವುಗಟ್ಟು ಕಾಳುಗಟ್ಟು
ಗರಿಗಟ್ಟು
ಕೋಡುಗಟ್ಟು ತಕ್ಕೆಗಟ್ಟು
ಜೋರುಗಟ್ಟು ನೊರೆಗಟ್ಟು
ನಿರಿಗಟ್ಟು
ಬೆಪ್ಪುಗಟ್ಟು
ಬೂಜುಗಟ್ಟು ಸಾಲುಗಟ್ಟು ಸರಿಗಟ್ಟು ಹದಿಗಟ್ಟು
ಹಕ್ಕುಗಟ್ಟು
ಒರೆಗಟ್ಟು
ಕೆಂಪುಗಟ್ಟು ಗುಬರುಗಟ್ಟು ತೆಕ್ಕೆಗಟ್ಟು
ಬಡ್ಡುಗಟ್ಟು ಮಡುಗಟ್ಟು ಸಿಪ್ಪಿಗಟ್ಟು
ಕೆನೆಕಟ್ಟು
ಗರಣೆಕಟ್ಟು ತಂಡಕಟ್ಟು ಪಂತಕಟ್ಟು ಬಾಯಿಕಟ್ಟು ಹದಿಕಟ್ಟು ಹೊಟ್ಟೆಕಟ್ಟು
ಕಾಯ್ಗಟ್ಟು ಕೆಚ್ಚುಗಟ್ಟು ಜಿಡ್ಡುಗಟ್ಟು ದಾರಿಗಟ್ಟು ಬಿರುಸುಗಟ್ಟು ಮರಗಟ್ಟು ಸುಕ್ಕುಗಟ್ಟು
ಹೋಗು (7) ಹೋಗು ಹೋಗು ಹೋಗು ಇದು ಹೆಚ್ಚಿನೆಡೆಗಳಲ್ಲೂ ಎಸಕಪದದ ಮೊದಲೆಸಕದ ಜೋಡಿಸುವ ರೂಪ ದೊಂದಿಗೆ ಬಳಕೆಯಾಗಿದೆ. ಕೆಲವೆಡೆಗಳಲ್ಲಿ ಹೆಸರುಪದ ಇಲ್ಲವೇ ಪರಿಚೆಪದ ಗಳೊಂದಿಗೂ ಇದರ ಬಳಕೆಯನ್ನು ಕಾಣಬಹುದು.
ಎಸಕಪದದ ಜೋಡಿಸುವ ರೂಪದೊಂದಿಗೆ ಬಂದಾಗ, ‘ಎಸಕ ನಡೆದು ಹೋಗಿದೆ’ ಎಂಬ ಹುರುಳನ್ನು, ಮತ್ತು ‘ಹಾಗೆ ನಡೆದುದು ಬೇಸರದ ಸಂಗತಿ’[ಎಂಬ ಹುರುಳನ್ನು ಕೊಡುತ್ತದೆ:
ಆರಿಹೋಗು ಓಡಿಹೋಗು ತಪ್ಪಿಹೋಗು ತೀರಿಹೋಗು ಸೋತುಹೋಗು
ಕುಗ್ಗಿಹೋಗು ತೇಲಿಹೋಗು ಸೋರಿಹೋಗು
ಕೆಟ್ಟುಹೋಗು ಸತ್ತುಹೋಗು ಹಾದುಹೋಗು
ಹೆಸರು ಮತ್ತು ಪರಿಚೆಪದಗಳೊಂದಿಗಿನ ಇದರ ಬಳಕೆಯನ್ನು ಕೆಳಗಿನ ಕೂಡು
ಪದಗಳಲ್ಲಿ ಕಾಣಬಹುದು:
ಒಡಹೋಗು ಕಟ್ಟೆಹೋಗು
ದೋರೆಹೋಗು ಮರೆಹೋಗು
ಹೊರಹೋಗು
ಗುಳೆಹೋಗು ಹಿಂದೆಹೋಗು
ಗೋಟುಹೋಗು ಹೆಸರುಹೋಗು
(8) ಬೀಳುಬೀಳುಬೀಳುಬೀಳು ಈ ಎಸಕಪದವನ್ನೂ ಮೇಲಿನ ಮೂರು ಬಗೆಯ ಪದಗಳೊಂದಿಗೂ ಬಳಸಲು ಬರುತ್ತದೆ. ಹೆಚ್ಚಿನ ಕೂಡುಪದಗಳಲ್ಲೂ ಇದು ‘ಏನೋ ಕೆಟ್ಟದಾಗಿರುವ ಎಸಕ ನಡೆದಿದೆ’ಯೆಂಬ ಹುರುಳನ್ನು ಕೊಡುತ್ತದೆ.
(ಕ) ಎಸಕಪದದ ಜೋಡಿಸುವ ರೂಪದೊಂದಿಗೆ ಬಳಕೆ: ಕುಸಿದುಬೀಳು ಎಡವಿಬೀಳು ಬೆಚ್ಚಿಬೀಳು ತೂಗಿಬೀಳು
ಜೋತುಬೀಳು ಮುರಿಬೀಳು
ತಿರುಗಿಬೀಳು
(ಚ) ಹೆಸರುಪದಗಳೊಂದಿಗೆ ಬಳಕೆ: ಒಟ್ಟೆಬೀಳು
ತೆರೆಬೀಳು ಬಲಿಬೀಳು
ಸಾಗುಬೀಳು
ಕಟ್ಟುಬೀಳು
ದಿಗಿಲುಬೀಳು ಬೆಲೆಬೀಳು ಸಾಲಬೀಳು
(ಟ) ಪರಿಚೆಪದಗಳೊಂದಿಗೆ ಬಳಕೆ: ಅಡ್ಡಬೀಳು ಎದುರುಬೀಳು ಮೊಂಡುಬೀಳು ಹಿಂದೆಬೀಳು
ಜೊಂಗುಳಿಬೀಳು ತೆಕ್ಕೆಬೀಳು ಬಟ್ಟಿಬೀಳು ಪೋಟೆಬೀಳು ಸರಿಬೀಳು
ಬೇನೆಬೀಳು
ಹೆಣಬೀಳು ಹಳ್ಳಬೀಳು
ಪೋಟುಬೀಳು
ಮೇಲೆಬೀಳು
(9) ಹಾಕು ಹಾಕು ಹಾಕು ಹಾಕು ಎಸಕಪದಗಳ ಮೊದಲೆಸಕದ ಜೋಡಿಸುವ ರೂಪದೊಂದಿಗೆ ಬಂದಾಗ ಇದಕ್ಕೆ ‘ಎಸಕವನ್ನು ಮಾಡಿ ಮುಗಿಸು’[ಎಂಬ ಹುರುಳು ಮಾತ್ರವಲ್ಲದೆ, ‘ಹಾಗೆ ಮಾಡಿ ದುದು ಬೇಸರದ ಸಂಗತಿ’ ಎಂಬ ಹುರುಳೂ ಇದೆ. ಮಾರೆಸಕದ ಜೋಡಿಸುವ ರೂಪದೊಂದಿಗೆ ಬಂದಾಗ, ಇದಕ್ಕೆ ‘ಒಂದು ಎಸಕ ನಡೆಯುವುದಕ್ಕಾಗಿ ಬೇರೆ ಒಂದು ಎಸಕವನ್ನು ಮಾಡಲಾಗಿದೆ’ ಎಂಬ ಹುರುಳು ಬರುತ್ತದೆ; ಕೆಲವೆಡೆಯಲ್ಲಿ ಇಲ್ಲಿಯೂ ಬೇಸರದ ಹುರುಳು ಸಿಗುತ್ತದೆ.
(ಕ) ಎಸಕಪದಗಳ ಮೊದಲೆಸಕದ ಜೋಡಿಸುವ ರೂಪದೊಂದಿಗೆ ಬಳಕೆ: ಅಳಿಸಿಹಾಕು ಎತ್ತಿಹಾಕು ಕೂಡಿಹಾಕು ತೆಗೆದುಹಾಕು
ಕಟ್ಟಿಹಾಕು
ತಳ್ಳಿಹಾಕು
ಸುಟ್ಟುಹಾಕು
ಜೋತುಹಾಕು ತೊಡೆದುಹಾಕು
ಕಿತ್ತುಹಾಕು ತುಳಿದುಹಾಕು ಹೊತ್ತುಹಾಕು
(ಚ) ಎಸಕಪದಗಳ ಮಾರೆಸಕದ ಜೋಡಿಸುವ ರೂಪದೊಂದಿಗೆ ಬಳಕೆ: ಕೊಳೆಹಾಕು
ನೆನೆಹಾಕು
ತೂಗಹಾಕು
ಸಾಗಹಾಕು
ಹೆಸರುಪದ ಇಲ್ಲವೇ ಪರಿಚೆಪದಗಳೊಂದಿಗೆ ಬಂದಾಗ, ಇದಕ್ಕೆ ಮೇಲಿನ ಬೇಸರದ ಹುರುಳಿಲ್ಲ; ಹೆಚ್ಚುಕಡಿಮೆ ಹಾಕು ಎಂಬುದರ ಹುರುಳೇ ಕಾಣಿಸು ತ್ತದೆ.
(ಟ) ಹೆಸರುಪದಗಳೊಂದಿಗೆ ಬಳಕೆ: ಇಪ್ಪೆಹಾಕು ಉಬ್ಬೆಹಾಕು
ಕಂದುಹಾಕು ಒತ್ತುಹಾಕು ಕಯ್ಹಾಕು
ಕನ್ನಹಾಕು ಗಂಟುಹಾಕು ಗುಟುರುಹಾಕು
ಗೋಣುಹಾಕು ಜಂಟಿಹಾಕು ತೆಕ್ಕೆಹಾಕು
ತಲೆಹಾಕು
ಬಾಯಿಹಾಕು ಬರೆಹಾಕು
ಮದ್ದುಹಾಕು ಮರಿಹಾಕು ಮೊಳಹಾಕು ಮೂಗುಹಾಕು ಸೋಗುಹಾಕು ಹುಟ್ಟುಹಾಕು
ಉರುಹಾಕು ಕಟ್ಟುಹಾಕು ಕುಪ್ಪಿಹಾಕು ಗುಮ್ಮುಹಾಕು ತಡೆಹಾಕು
ನಾಟಿಹಾಕು ಬೊಬ್ಬೆಹಾಕು ಮುತ್ತಿಗೆಹಾಕು ಮೋಡಿಹಾಕು ಹೊಗೆಹಾಕು
ಎಲೆಹಾಕು ಕಣ್ಣುಹಾಕು ಕೂಗುಹಾಕು ಗುರುತುಹಾಕು ತತ್ತುಹಾಕು ನೇಣುಹಾಕು ಮಣೆಹಾಕು ಮೆಲುಕುಹಾಕು ಲೆಕ್ಕಹಾಕು ಹೊಂಚುಹಾಕು
(ತ) ಪರಿಚೆಪದಗಳೊಂದಿಗೆ ಬಳಕೆ: ಮುಂದೆಹಾಕು ಸುತ್ತುಹಾಕು
ಹಿಂದೆಹಾಕು
ಹೊರಹಾಕು
(10) ಕೆಡು (ಗೆಡು) ಕೆಡು (ಗೆಡು) ಕೆಡು (ಗೆಡು) ಕೆಡು (ಗೆಡು) ಕೆಡು ಎಸಕಪದ ಕೂಡುಪದಗಳಲ್ಲಿ ಗೆಡು ರೂಪದಲ್ಲಿ ಬಳಕೆಯಾಗುತ್ತದೆ; ಹೆಸರುಪದ ಮತ್ತು ಪರಿಚೆಪದಗಳೊಂದಿಗೆ ಮಾತ್ರವೇ ಅದು ಬರುತ್ತದೆ.
ಹೆಸರುಪದಗಳೊಂದಿಗೆ ಬಳಸಿದಾಗ ಇದಕ್ಕೆ ಎರಡು ಬಗೆಯ ಹುರುಳುಗಳು ಸಿಗುತ್ತವೆ: ಹೆಚ್ಚಿನೆಡೆಗಳಲ್ಲೂ ‘ಹೆಸರುಪದ ತಿಳಿಸುವ ಸಂಗತಿ ಇಲ್ಲವಾಗಿದೆ’ ಎಂಬ ಹುರುಳು ಸಿಗುತ್ತದೆ (ಅಂದಗೆಡು ‘ಅಂದವಿಲ್ಲದಾಗು’); ಆದರೆ, ಕೆಲವು ಕಡೆಗಳಲ್ಲಿ, ‘ಅದು ತಿಳಿಸುವ ಸಂಗತಿಯಿಂದಾಗಿ ಕೆಡುಕುಂಟಾಗಿದೆ’ ಎಂಬ ಹುರುಳು ಸಿಗುತ್ತದೆ (ಬರಗೆಡು ‘ಬರದಿಂದಾಗಿ ಕೆಟ್ಟುಹೋಗು’).
(ಕ) ಮೊದಲನೆಯ ಹುರುಳು: ಅರಿವುಗೆಡು ಅಂದಗೆಡು ಕಟ್ಟಲೆಗೆಡು
ಕಂಗೆಡು ದೊರೆಗೆಡು
ಚಂದಗೆಡು
ಎದೆಗೆಡು
ಕಳೆಗೆಡು
ನುಡಿಗೆಡು
ಒಪ್ಪಗೆಡು ಕೆಳೆಗೆಡು ಪೆಂಪುಗೆಡು
ಬಗೆಗೆಡು ಬಿಂಕಗೆಡು
ಸೊಂಪುಗೆಡು ಹದಗೆಡು
ಮುಂಗೆಡು ಹಸಗೆಡು
ಸುರ್ವುಗೆಡು
(ಚ) ಎರಡನೆಯ ಹುರುಳು: ಗಾರುಗೆಡು ಬರಗೆಡು
ಸೇದೆಗೆಡು
ಹೊಲೆಗೆಡು
(11) ಬಿಡುಬಿಡುಬಿಡುಬಿಡು ಎಸಕಪದಗಳ ಮೊದಲೆಸಕದ ಜೋಡಿಸುವ ರೂಪದೊಂದಿಗೆ ಬಂದಾಗ, ಇದಕ್ಕೆ ‘ಎಸಕವನ್ನು ಮುಗಿಸಿಬಿಡಲಾಗಿದೆ’[ಇಲ್ಲವೇ ‘ಎಸಕ ಮುಗಿದುಹೋಗಿದೆ’[ಎಂಬ ಹುರುಳಿದೆ; ಇದನ್ನು ಕೆಳಗಿನ ಕೂಡುಪದಗಳಲ್ಲಿ ಕಾಣಬಹುದು:
ಕೊಟ್ಟುಬಿಡು
ಮರೆತುಬಿಡು
ತೇಲಿಬಿಡು ಮುಗಿಸಿಬಿಡು
ಬಂದುಬಿಡು ಸೀದುಬಿಡು
ಬಿಟ್ಟುಬಿಡು
ಹೋಗಿಬಿಡು
ಇದಲ್ಲದೆ, ಹೆಸರುಪದಗಳೊಂದಿಗೆ ಬಂದಾಗಲೂ ಇದಕ್ಕೆ ಬೇರೆಯೇ ಹುರುಳುಗಳು ಬರುತ್ತವೆ: ಬೇರುಬಿಡು, ತೆನೆಬಿಡು, ಅಗೆಬಿಡು, ಹೂಬಿಡು, ಮತ್ತು ಕಾಯಿಬಿಡು ಎಂಬವುಗಳಲ್ಲಿ ಇದು ‘ಆಗು’[ಎಂಬ ಹುರುಳಿನಲ್ಲಿ ಬಳಕೆ ಯಾಗಿದೆ; ಬಾಯಿಬಿಡು ಮತ್ತು ಕಣ್ಣುಬಿಡು ಎಂಬವುಗಳಲ್ಲಿ ‘ಒಡೆ’[ಇಲ್ಲವೇ ‘ತೆರೆ’[ಎಂಬ ಹುರುಳಿನಲ್ಲಿ, ಮತ್ತು ಕಯ್ಬಿಡು ಎಂಬಲ್ಲಿ ‘ತೊರೆ’[ಎಂಬ ಹುರುಳಿನಲ್ಲಿ ಬಳಕೆಯಾಗಿದೆ; ಸೊರೆಬಿಡು ಎಂಬಲ್ಲಿ ಇದು ‘ಕೆಚ್ಚಲಿನಿಂದ ಹಾಲು ಸುರಿಸು’[ಎಂಬ ಹುರುಳಿನಲ್ಲಿ ಬಂದಿದೆ.
(12) ಇಕ್ಕುಇಕ್ಕುಇಕ್ಕುಇಕ್ಕು ಇದನ್ನು ಹೆಸರುಪದ, ಪರಿಚೆಪದ, ಮತ್ತು ಎಸಕಪದಗಳ ಮೊದಲೆಸಕದ ಜೋಡಿಸುವ ರೂಪಗಳೊಂದಿಗೆ ಬಳಸಲಾಗುತ್ತದೆ; ‘ಇರಿಸು’[ಎಂಬ ಹುರುಳಿಗೆ ಸಂಬಂದಿಸಿದಂತಹ ಹಲವು ಬಗೆಯ ಹುರುಳುಗಳನ್ನು ಅದು ಈ ಬಳಕೆಗಳಲ್ಲಿ ಕೊಡುವುದನ್ನು ಕೆಳಗಿನ ಕೂಡುಪದಗಳಲ್ಲಿ ಕಾಣಬಹುದು:
(ಕ) ಹೆಸರುಪದಗಳೊಂದಿಗೆ ಬಳಕೆ: ಉಸಿರಿಕ್ಕು ಕೂಳಿಕ್ಕು
ತುತ್ತಿಕ್ಕು ಬೆನ್ನಿಕ್ಕು
ಎವೆಯಿಕ್ಕು ಗಂಟಿಕ್ಕು
ತೆಗಹಿಕ್ಕು
ಮಯ್ಯಿಕ್ಕು
ಒಪ್ಪವಿಕ್ಕು
ಚಪ್ಪಳಿಕ್ಕು
ತೊಟ್ಟಿಕ್ಕು
ಮುದ್ದಿಕ್ಕು
ಕಿಚ್ಚಿಕ್ಕು ತಳೆಯಿಕ್ಕು ನಂಜಿಕ್ಕು
ಸೆಲವಿಕ್ಕು
(ಚ) ಎಸಕಪದಗಳ ಹಿಂಬೊತ್ತಿನ ಜೋಡಿಸುವ ರೂಪದೊಂದಿಗೆ ಬಳಕೆ: ಅಟ್ಟಿಕ್ಕು ಕೊಂದಿಕ್ಕು ಸರಿಯಿಕ್ಕು
ಎಳಲಿಕ್ಕು
ತಂದಿಕ್ಕು
ಹಣಿಕಿಕ್ಕು
ಕುಂಬಿಕ್ಕು
ಪಚ್ಚಿಕ್ಕು
ಕೂಡಿಕ್ಕು ಬೀಳಿಕ್ಕು
ಇದನ್ನು ಅಡ್ಡ ಪರಿಚೆಪದದೊಂದಿಗೆ ಬಳಸಿ, ಅಡ್ಡಿಕ್ಕು ಎಂಬ ಕೂಡು ಪದವನ್ನು ಪಡೆಯಲಾಗಿದ್ದು, ಅದಕ್ಕೆ ‘ಲಂಚಕೊಡು’ ಎಂಬ ಹುರುಳಿದೆ; ಸರಿಯಿಕ್ಕು ಎಂಬ ಇನ್ನೊಂದು ಕೂಡುಪದಕ್ಕೆ ‘ಹೋಲಿಸು’[ಎಂಬ ಹುರುಳಿದೆ.
ಮೇಲೆ ಕೊಟ್ಟಿರುವ ಎಸಕಪದಗಳು ಮಾತ್ರವಲ್ಲದೆ ಬೇರೆಯೂ ಹಲವಾರು ಎಸಕಪದಗಳು ಕೂಡುಪದಗಳ ಎರಡನೆಯ ಪದವಾಗಿ ಬಳಕೆಯಾಗುತ್ತವೆ. ಅಂತಹ ಕೆಲವು ಕೂಡುಪದಗಳನ್ನು ಕೆಳಗೆ ಕೊಡಲಾಗಿದೆ:
ಒಟ್ಟುಗೂಡು ಎದೆಗುಂದು ಕಯ್ಯೊಡ್ಡು ಈಡೇರು ಮೇಲೆತ್ತು ಒತ್ತಿಹೇಳು ಕಂಡುಹಿಡಿ ಚಾಪೆಹಿಡಿ ಡಿಕ್ಕಿಹೊಡೆ
ಕಯ್ಗೂಡು
ಬೆನ್ನಟ್ಟು
ಸೆರಗೊಡ್ಡು ನೆರವೇರು
ಮರೆಹೊಗು ಬರಹೇಳು
ತಡೆಹಿಡಿ
ಪಟ್ಟುಹಿಡಿ
ಬೇರೊಡೆ
ಕೊನೆಗಾಣು ಕಯ್ತಟ್ಟು
ಬೇರೂರು
ತಲೆಯೆತ್ತು ತಲೆದೋರು ತಿಳಿಹೇಳು
ಸೆರೆಹಿಡಿ
ಕೊಳ್ಳೆಹೊಡೆ ಕವಲೊಡೆ
ಮನಗಾಣು ತಡೆಯೊಡ್ಡು ನೆಲೆಯೂರು ಕಯ್ಯೆತ್ತು ಸರಿತೋರು ಬಿಗಿಹಿಡಿ ಚಳಿಹಿಡಿ ಹರಟೆಹೊಡೆ ಅಲ್ಲಗಳೆ
ಅಣಕಿಸುವ ಪದಗಳಿಗೆ ಕುಟ್ಟು ಎಸಕಪದವನ್ನು ಸೇರಿಸಿ ಕೆಲವು ಕೂಡು ಪದಗಳನ್ನು ಉಂಟುಮಾಡಲಾಗಿದೆ; ಇವುಗಳಲ್ಲಿ ಕುಟ್ಟು ಪದ ಗುಟ್ಟು ರೂಪ ದಲ್ಲಿ ಬರುತ್ತದೆ, ಮತ್ತು ಅದಕ್ಕೆ ಹೆಚ್ಚಿನೆಡೆಗಳಲ್ಲೂ ‘ಅನ್ನು’[ಇಲ್ಲವೇ ‘ಸದ್ದು ಮಾಡು’[ಎಂಬ ಹುರುಳಿದೆ.
ಕಿಚಗುಟ್ಟು ಕಿರುಗುಟ್ಟು ದುರುಗುಟ್ಟು ಕಿಲಕಿಲಗುಟ್ಟು ಚುರುಚುರುಗುಟ್ಟು ಪಿಟಿಪಿಟಿಗುಟ್ಟು
ಲೊಚಗುಟ್ಟು ಕೊರಗುಟ್ಟು ಗುಜಿಗುಟ್ಟು
ಕಿಣಿಗುಟ್ಟು
ಕುಸುಗುಟ್ಟು ಗಡಗುಟ್ಟು
ಗುಣುಗುಟ್ಟು ಗುರುಗುಟ್ಟು ತಳಗುಟ್ಟು
3.3.3 ಸೇರಿಕೆಯ ಮಾರ್ಪಾಡುಗಳು
ಹಿಂದಿನ ಪಸುಗೆಯಲ್ಲಿ ವಿವರಿಸಿದ ಸೇರಿಕೆಯ ಮಾರ್ಪಾಡುಗಳಲ್ಲಿ ಹಲವು ಕೂಡು ಪದಗಳಲ್ಲೂ ಕಾಣಿಸಿಕೊಳ್ಳುತ್ತವೆ; ಇವನ್ನು ಕೆಳಗೆ ಪಟ್ಟಿಮಾಡಲಾಗಿದೆ:
2.2.1ರಲ್ಲಿ ವಿವರಿಸಿರುವ (ತೆರೆಯುಲಿಗಳ ಮೊದಲು ಬಂದ ತೆರೆಯುಲಿ ಬಿದ್ದುಹೋಗುವ) ಮಾರ್ಪಾಡು ಉಕಾರವನ್ನು ಮತ್ತು ಎಸಕಪದಗಳ ಜೋಡಿಸುವ ರೂಪದ ಇಕಾರವನ್ನು ಮಾತ್ರ ತಾಗುತ್ತದೆ. ಇದನ್ನು ಅಚ್ಚಾಗು (ಅಚ್ಚು+ಆಗು), ಹೆಸರಿಡು (ಹೆಸರು+ಇಡು), ಕೂಡಿಡು (ಕೂಡಿ+ಇಡು), ತೆಗೆದಿಡು (ತೆಗೆದು+ ಇಡು) ಮೊದಲಾದ ಕೂಡುಪದಗಳಲ್ಲಿ ಕಾಣಬಹುದು. 2.2.1ರಲ್ಲೇ ವಿವರಿಸಿದ ಹಾಗೆ, ಇಕಾರ ಮತ್ತು ಎಕಾರದ ಬಳಿಕ ತೆರೆಯುಲಿ ಬಂದಾಗ ಯಕಾರ ಸೇರಿ ಕೊಳ್ಳುತ್ತದೆ (ದಾಳಿಯಿಡು, ಎವೆಯಿಕ್ಕು), ಮತ್ತು ಅಕಾರದ ಬಳಿಕ ವಕಾರ ಸೇರಿಕೊಳ್ಳುತ್ತದೆ (ಒಪ್ಪವಿಡು, ಪಂತವೊಡ್ಡು).
ಈ ಮಾರ್ಪಾಡಿಗೆ ಕೆಲವು ಹೊರಪಡಿಕೆಗಳೂ ಇವೆ: ಮುಂದೆ, ಹಿಂದೆ, ಮೇಲೆ, ಬೇರೆ, ಒಡನೆ, ಮತ್ತು ಗೆ ಒಟ್ಟಿನಲ್ಲಿ ಕೊನೆಗೊಳ್ಳುವ ಪರಿಚೆಪದಗಳು ಇದಕ್ಕೆ ಹೊರಪಡಿಕೆಗಳಾಗುತ್ತವೆಯೆಂಬುದನ್ನು 2.2.1ರಲ್ಲೇ ನೋಡಿರುವೆವು; ಇದಲ್ಲದೆ, ಬೊಬ್ಬಿಡು (ಬೊಬ್ಬೆ+ಇಡು), ಮತ್ತು ಬೊಬ್ಬಿರಿ ಪದಗಳಲ್ಲೂ ಮೊದಲನೇ ಪದದ ಕೊನೆಯ ಎಕಾರ ಬಿದ್ದುಹೋಗಿದೆ; ಚಪ್ಪಳಿಕ್ಕು (ಚಪ್ಪಳಿ+ ಇಕ್ಕು) ಮತ್ತು ಕಾಯಾಗು ಪದಗಳಲ್ಲಿ ಇಕಾರ ಬಿದ್ದುಹೋಗಿದೆ; ಮತ್ತು ಅಡ್ಡಿಕ್ಕು, ಅಡ್ಡಾಡು ಹಾಗೂ ಚಲ್ಲಾಡು (ಚಲ್ಲ+ಆಡು) ಪದಗಳಲ್ಲಿ ಅಕಾರ ಬಿದ್ದುಹೋಗಿದೆ.
2.2.2ರಲ್ಲಿ ವಿವರಿಸಿರುವ (ಯಕಾರ ಮತ್ತು ನಕಾರದ ಬಳಿಕ ತೆರೆಯುಲಿ ಬಂದಾಗ, ಮತ್ತು ಅದರ ಮೊದಲು ಗಿಡ್ಡ ತೆರೆಯುಲಿಯಿರುವಾಗ, ಅವು ಇಮ್ಮಡಿಯಾಗುವ) ಮಾರ್ಪಾಡನ್ನು ಕಯ್ಯೂರು, ಕಯ್ಯಿಕ್ಕು, ಮಯ್ಯೊಡ್ಡು, ಮುನ್ನೋರು ಮೊದಲಾದ ಕೂಡುಪದಗಳಲ್ಲಿ ಕಾಣಬಹುದು.
2.2.4ರಲ್ಲಿ ವಿವರಿಸಿರುವ ಉದ್ದ ತೆರೆಯುಲಿ ಗಿಡ್ಡವಾಗುವ ಮಾರ್ಪಾಡನ್ನು ಇಲ್ಲಿ ಮಾರ್ (ಮರುನುಡಿ, ಮರುನೆಡು, ಮರುಪಡೆ), ಓರ್ (ಒಗ್ಗೂಡು), ಕೇಸ್ (ಕಿಸುಗುಟ್ಟು) ಮತ್ತು ಕೀಳ್ (ಕಿಳ್ಮಾಡು, ಕಿಳ್ಪಡಿಸು) ಪದಗಳ ಬಳಕೆ ಯಲ್ಲಿ ಕಾಣಬಹುದು. ಇವುಗಳಲ್ಲಿ ಮಾರ್ ಪದದ ಬಳಕೆಯಲ್ಲಿ ಮಾರ್ನಡೆ, ಮಾರ್ನುಡಿ, ಮತ್ತು ಮಾರ್ಪಡು ಎಂಬವು, ಮತ್ತು ಕೀಳ್ ಪದದ ಬಳಕೆಯಲ್ಲಿ ಕೀಳುಗಳೆ ಮತ್ತು ಕೀಳುಮಾಡು ಎಂಬವು ಹೊರಪಡಿಕೆಗಳು.
2.2.6ರಲ್ಲಿ ವಿವರಿಸಿರುವ (ರಕಾರ ಅದರ ಬಳಿಕ ಬಂದಿರುವ ಮುಚ್ಚುಲಿಯ ರೂಪ ಪಡೆಯುವ) ಮಾರ್ಪಾಡನ್ನು ಒಗ್ಗೂಡು (ಓರ್+ಕೂಡು) ಪದದಲ್ಲಿ ಕಾಣ ಬಹುದು; ಉಸುರ್ಗರೆ, ಎದುರ್ಗೊಳ್ಳು ಎಂಬವುಗಳು ಇದಕ್ಕೆ ಹೊರಪಡಿಕೆ ಗಳಾಗಿವೆ.
2.2.7ರಲ್ಲಿ ವಿವರಿಸಿರುವ (ಮೂಗುಲಿಗಳು ಅವುಗಳ ಬಳಿಕ ಬರುವ ಮುಚ್ಚುಲಿಗಳಿಗೆ ಹೊಂದಿಕೊಳ್ಳುವ) ಮಾರ್ಪಾಡನ್ನು ಮುನ್, ಹಿನ್, ಕಣ್ಣು
(>ಕಣ್) ಮತ್ತು ಬೆನ್ನು (>ಬೆನ್) ಪದಗಳ ಬಳಕೆಯಲ್ಲಿ ಕಾಣಬಹುದು (ಮುಂಕೊಳ್ಳು, ಮುಂಗಾಣು, ಮುಂಚಾಚು, ಮುಂದೂಡು, ಮುಂಬರು, ಮುಮ್ಮೆಟ್ಟು; ಹಿಂಗರೆ, ಹಿಂಜರಿ, ಹಿಂತೆಗೆ, ಹಿಂದಿರುಗು, ಹಿಂಬರೆ, ಹಿಮ್ಮೆಟ್ಟು; ಕಂಗೆಡು; ಬೆಂಗೊಡು, ಬೆಂಬತ್ತು). ಆದರೆ, ಇದಕ್ಕೆ ಮುನ್ಪಡೆ, ಮುನ್ಸೊಲ್ಲು; ಕಣ್ಣುಕುಕ್ಕು, ಕಣ್ಣುಕಟ್ಟು, ಕಣ್ಣುತಾಗು; ಬೆನ್ನುಹತ್ತು, ಬೆನ್ನು ತಟ್ಟು ಎಂಬಂತಹ ಹೊರಪಡಿಕೆಗಳೂ ಇವೆ.
2.2.9ರಲ್ಲಿ ವಿವರಿಸಿರುವ ಕಕಾರ-ತಕಾರಗಳು ಗಕಾರ-ದಕಾರಗಳಾಗುವ ಮಾರ್ಪಾಡನ್ನು ಎದೆಗಳೆ, ತಲೆದೋರು, ಕಯ್ಗೂಡು, ಕಾಲ್ದೆಗೆ, ಸೂಳ್ಗರೆ, ಹಿಂದಿರುಗು ಮೊದಲಾದ ಪದಗಳಲ್ಲಿ ಕಾಣಬಹುದು; ಇದಕ್ಕೆ ಹಲವು ಹೊರ ಪಡಿಕೆಗಳೂ ಇವೆ; ಆದರೆ, ಅವನ್ನಿಲ್ಲಿ ಪಟ್ಟಿಮಾಡಿಲ್ಲ.
2.2.10ರಲ್ಲಿ ವಿವರಿಸಿರುವ ಹ(ಪ)ಕಾರ, ಬಕಾರ ಮತ್ತು ಮಕಾರಗಳು ವಕಾರವಾಗುವ ಮಾರ್ಪಾಡನ್ನು ಮುಂದುವರಿ, ಇಂಪುವಡೆ, ತಲೆವಾಗು ಮೊದಲಾದ ಪದಗಳಲ್ಲಿ ಕಾಣಬಹುದು; ಇದಕ್ಕೂ ಬೀಡುಬಿಡು, ಅಡ್ಡಿಪಡಿಸು ಮೊದಲಾದ ಹಲವು ಹೊರಪಡಿಕೆಗಳಿವೆ.
2.2.11ರಲ್ಲಿ ವಿವರಿಸಿರುವ (ಮುಚ್ಚುಲಿಗಳ ಮೊದಲು ಉಕಾರ ಬಿದ್ದು ಹೋಗುವ) ಮಾರ್ಪಾಡನ್ನು ಆಸರ್ಗಳೆ, ಕಾಲ್ದೆಗೆ, ಬೀಳ್ಕೊಡು, ಬೆಂಬತ್ತು, ಸುಯ್ಗರೆ ಮೊದಲಾದ ಪದಗಳಲ್ಲಿ ಕಾಣಬಹುದು; ಇದಕ್ಕೂ ಕಾಳುಗಟ್ಟು, ಉಸಿರುಕಟ್ಟು ಮೊದಲಾದ ಹಲವು ಹೊರಪಡಿಕೆಗಳಿವೆ.
3.4 ಪರಿಚೆಪದಗಳ ಇಟ್ಟಳ
ಕನ್ನಡದಲ್ಲಿ ಮುಕ್ಯವಾಗಿ ಎರಡು ಬಗೆಯ ಪರಿಚೆಪದಗಳು ಬಳಕೆಯಲ್ಲಿವೆ. ಇವುಗಳಲ್ಲಿ ಒಂದು ಬಗೆಯವನ್ನು ಹೆಸರುಪದಗಳೊಂದಿಗೆ, ಮತ್ತು ಇನ್ನೊಂದು ಬಗೆಯವನ್ನು ಎಸಕಪದಗಳೊಂದಿಗೆ ಬಳಸಲಾಗುತ್ತದೆ. ಹೆಸರುಪರಿಚೆ ಮತ್ತು ಎಸಕಪರಿಚೆ ಎಂಬುದಾಗಿ ಈ ಎರಡು ಬಗೆಯ ಪದಗಳನ್ನು ಹೆಸರಿಸಬಹುದು.
ಎತ್ತುಗೆಗಾಗಿ, ಉದ್ದ, ಬಿಳಿ, ದೊಡ್ಡ ಮೊದಲಾದುವು ಹೆಸರುಪದಗಳೊಂದಿಗೆ ಅವು ಗುರುತಿಸುವ ವ್ಯಕ್ತಿ, ವಸ್ತು, ವಿಶಯ ಮೊದಲಾದವುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ (ಉದ್ದ ಕೋಲು, ಬಿಳಿ ಗೋಡೆ, ದೊಡ್ಡ ಹುಡುಗ); ಹಾಗಾಗಿ, ಅವು ಹೆಸರುಪರಿಚೆಗಳು. ಇದಕ್ಕೆ ಬದಲು, ಮೇಲೆ, ಹಿಂದೆ, ಮೆಲ್ಲಗೆ ಮೊದಲಾದುವು ಎಸಕಪದಗಳೊಂದಿಗೆ ಅವು ತಿಳಿಸುವ ಎಸಕದ ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ (ಮೇಲೆ ಇಡು, ಹಿಂದೆ ಇದೆ, ಮೆಲ್ಲಗೆ ಮಾತನಾಡು); ಹಾಗಾಗಿ, ಅವು ಎಸಕಪರಿಚೆಗಳು.
ಈ ಎರಡು ಬಗೆಯ ಪರಿಚೆಪದಗಳು ಮಾತ್ರವಲ್ಲದೆ, ಬಾರೀ, ತುಸು, ತೀರ, ಬರೀ ಮೊದಲಾದ ಬೇರೆ ಕೆಲವು ಪದಗಳು ಪರಿಚೆಯ ಪರಿಚೆಯನ್ನು ತಿಳಿಸುವು ದಕ್ಕಾಗಿ ಪರಿಚೆಪದಗಳೊಂದಿಗೆ ಬಳಕೆಯಾಗುತ್ತವೆ (ಬಾರೀ ದೊಡ್ಡ ಮನೆ, ತುಸು ಹಿಂದೆ ಹೋಗಿ, ತೀರ ಚಿಕ್ಕ ಹಣ್ಣು, ಬರೀ ಚಿಕ್ಕ ಹುಡುಗ); ಅವನ್ನು ಮೂರನೆಯದೊಂದು ಗುಂಪಿನಲ್ಲಿ ಇರಿಸಬಹುದು. ಆದರೆ, ಇಂತಹ ಕೆಲವೇ ಕೆಲವು ಪದಗಳು ಮಾತ್ರ ಕನ್ನಡದಲ್ಲಿ ಬಳಕೆಯಲ್ಲಿದ್ದು, ಅವುಗಳ ಇಟ್ಟಳದ ಕುರಿತು ಹೇಳುವಂತಹ ಸಂಗತಿಯೇನೂ ಇಲ್ಲ; ಹಾಗಾಗಿ, ಮೊದಲ ಎರಡು ಗುಂಪುಗಳಿಗೆ ಸೇರುವ ಪರಿಚೆಪದಗಳ ಇಟ್ಟಳವನ್ನು ಮಾತ್ರ ಇಲ್ಲಿ ವಿವರಿಸ ಲಾಗಿದೆ.
3.4.1 ಪರಿಚೆಬೇರುಗಳು
ಕನ್ನಡದಲ್ಲಿ ಕೆನ್, ನುಣ್, ಹೇರ್, ಮುನ್, ಮೇಲ್ ಮೊದಲಾದ ಹಲವು ಪರಿಚೆಬೇರುಗಳಿವೆ. ಇವನ್ನು ಮುಕ್ಯವಾಗಿ ಜೋಡುಪದಗಳಲ್ಲಿ ಮತ್ತು ಕೂಡು ಪದಗಳಲ್ಲಿ ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಂದಾಳಿ ಜೋಡುಪದದಲ್ಲಿ ಕೆನ್ ಪರಿಚೆಬೇರನ್ನು ತಾಳಿ ಹೆಸರುಪದದ ಪರಿಚೆಯನ್ನು ತಿಳಿಸುವುದಕ್ಕಾಗಿ, ಮತ್ತು ಹಿಂದೂಡು ಕೂಡುಪದದಲ್ಲಿ ಹಿನ್ ಪರಿಚೆಬೇರನ್ನು ದೂಡು ಎಸಕಪದದ ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಸಲಾಗಿದೆ.
ಇವನ್ನೇ ಹೆಸರುಪರಿಚೆ ಇಲ್ಲವೇ ಎಸಕಪರಿಚೆಗಳಾಗಿ ಪದಕಂತೆಗಳಲ್ಲಿ ಬಳಸ ಬೇಕಿದ್ದರೆ, ಅವಕ್ಕೆ ಕೆಲವು ಬಗೆಯ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ. ಎತ್ತುಗೆಗಾಗಿ, ಕೆನ್ ಪರಿಚೆಬೇರಿಗೆ ಪು ಒಟ್ಟನ್ನು ಸೇರಿಸಿ ಕೆಂಪು ಹೆಸರು ಪರಿಚೆಯನ್ನು (ಕೆಂಪು ಚೆಂಡು), ಮತ್ತು ಅದರೊಂದಿಗೆ ಅಗೆ ಒಟ್ಟನ್ನು ಸೇರಿಸಿ ಕೆಂಪಗೆ ಎಸಕಪರಿಚೆಯನ್ನು (ಕೆಂಪಗೆ ಕಾಯಿಸಿದ) ಉಂಟುಮಾಡಲಾಗಿದೆ; ಮತ್ತು ಒಳ್ ಪರಿಚೆಬೇರಿಗೆ ಅಗೆ ಒಟ್ಟನ್ನು ಸೇರಿಸಿ ಒಳಗೆ ಎಂಬ ಎಸಕಪರಿಚೆ ಯನ್ನು (ಒಳಗೆ ಹೋಗಿ), ಮತ್ತು ಅದರೊಂದಿಗೆ ಅ ಒಟ್ಟನ್ನು ಸೇರಿಸಿ ಒಳ ಎಂಬ ಹೆಸರುಪರಿಚೆಯನ್ನು (ಒಳ ತಿರುಳು) ಉಂಟುಮಾಡಲಾಗಿದೆ.
ಪರಿಚೆಪದಗಳ ಹಾಗೆ ಪರಿಚೆಬೇರುಗಳನ್ನೂ ಹೆಸರುಗಳ ಪರಿಚೆಯನ್ನು ತಿಳಿಸು ವವು ಮತ್ತು ಎಸಕಗಳ ಪರಿಚೆಯನ್ನು ತಿಳಿಸುವವು ಎಂಬುದಾಗಿ ಎರಡು ಗುಂಪು ಗಳಲ್ಲಿ ಒಡೆದು ಹೇಳಬಹುದು.
ಕೆಲವು ಮುಕ್ಯವಾದ ಪರಿಚೆಬೇರುಗಳ ಒಂದು ಪಟ್ಟಿಯನ್ನು ಕೆಳಗೆ ಕೊಡ ಲಾಗಿದೆ; ಮತ್ತು ಅವುಗಳ ಬಳಕೆಯನ್ನು ತಿಳಿಸುವ ಕೆಲವು ಜೋಡುಪದ ಇಲ್ಲವೇ ಕೂಡುಪದಗಳನ್ನು ಮತ್ತು ಪರಿಚೆಪದಗಳನ್ನು ಅವುಗಳೆದುರು ಎತ್ತುಗೆಯಾಗಿ ಕೊಡಲಾಗಿದೆ:
(1) ಹೆಸರುಗಳ ಪರಿಚೆಯನ್ನು ತಿಳಿಸುವ ಪರಿಚೆಬೇರುಗಳು:
ಪರಿಚೆಬೇರು ಇನ್ ಎಳ್ ಒಳ್ ಕಟ್ ಕಮ್ ಕಯ್ ಕಾರ್ ಕಿರ್ ‘ಚಿಕ್ಕ’[ ಕೆನ್ ಕೇಸ್ ಚನ್ ತಣ್ ತೆಳ್ ನಲ್ ನುಣ್ ನೆಟ್ ಬಿಣ್ ಬೆಳ್ ಬೆನ್ ಮಾರ್ ಸಯ್ ಹೇರ್
ಪರಿಚೆಪದಗಳು
ಜೋಡುಪದಗಳು ಇನ್ನುಡಿ, ಇಮ್ಮಾವು, ಇನ್ನುಣಿಸು ಇನಿ
ಎಳ್ಗರು, ಎಳ್ನೀರು ಒಳ್ಗನ್ನಡ, ಒಳ್ನುಡಿ
ಕಟ್ಟಡವಿ, ಕಗ್ಗೊಲೆ ಕಮ್ಮಲರು, ಕಮ್ಮೆಲರು ಕಯ್ಸೊಪ್ಪು, ಕಯ್ಹೀರೆ
ಕಾರಿರುಳು, ಕಮ್ಮರ, ಕಬ್ಬಕ್ಕಿ ಕಿಗ್ಗಣ್ಣು, ಕಿತ್ತೂರು ಕೆಂಬಟ್ಟೆ, ಕೆನ್ನೀರು ಕೇಸುಗುರು, ಕೇಸುಳ್ಳಿ
ಚಂದಳಿರು, ಚಂದುಟಿ
ತಂಗದಿರು, ತಂಗಾಳಿ, ತಣ್ಣೀರು ತೆಳ್ನಡು, ತೆಳ್ಗಲ್ಲ ನಲ್ನುಡಿ, ನಲ್ಬರಹ ನುಣ್ಗೊರಲು, ನುಣ್ಗುರುಳು
ನೆಟ್ಟೆಲುವು ಬಿಣ್ಗೆಚ್ಚಲು, ಬಿಣ್ಗೊನೆ
ಬೆಳ್ದಿಂಗಳು, ಬೆಳ್ಳುಳ್ಳಿ
ಬೆಂಗಲ್ಲು, ಬೆನ್ನೀರು
ಮಾರಡಿ, ಮಾರ್ಪಾಡು
ಸಯ್ಯಡಿ ಹೆದ್ದಾರಿ, ಹೆಗ್ಗಳ್ಳ, ಹೇರಾನೆ
ಎಳೆ, ಎಳತು ಒಳ್ಳೆ, ಒಳಿತು ಕಡು, ಕಡಿ, ಕಡಿದು ಕಂಪು, ಕಮ್ಮನೆ ಕಹಿ, ಕಯ್ಪೆ ಕರಿ, ಕಪ್ಪು, ಕರ್ರಗೆ ಕಿರಿ, ಕಿರು ಕೆಂಪು, ಕೆಂಚು ಕಿಸು, ಕೆಚ್ಚನೆ ಚನ್ನು, ಚಂದ ತಂಪು, ತಣ್ಣಗೆ ತೆಳು, ತೆಳುಪು, ತೆಳ್ಳಗೆ ನಲ್ಲ ನುಣುಪು, ನುಣ್ಣಗೆ ನಿಡು, ನೆಟ್ಟಗೆ ಬಿಣ್ಪು ಬಿಳಿ, ಬೆಳ್ಳಗೆ ಬೆಂಕಿ ಮರು ಸಯ್ದ ಹಿರಿ, ಹೇರಳ
(2) ಎಸಕಗಳ ಪರಿಚೆಯನ್ನು ತಿಳಿಸುವ ಪರಿಚೆಬೇರುಗಳು:
ಒಳ್ ಒಡ ಕೀಳ್ ನಟ್ ಮುನ್ ಮೇಲ್ ಹಿನ್
ಒಳ್ದಿರುಳು, ಒಳ್ದೊಡೆ
ಒಡಗೂಟ, ಒಡನಾಡಿ
ಕೀಳ್ದುಟಿ, ಕೀಳ್ನೋಟ
ನಟ್ಟಡವಿ, ನಟ್ಟೆಲುವು
ಮುಂಗಡ, ಮುನ್ನುಡಿ
ಮೇಲ್ಕಟ್ಟು, ಮೇಲ್ಕಾಪು
ಹಿನ್ನಡೆ, ಹಿನ್ನೋಟ, ಹಿಂಗಟ್ಟು
ಒಳಗೆ, ಒಳ ಒಡನೆ ಕೆಳ, ಕೆಳಗೆ ನಡು, ನಡುವೆ ಮುಂದೆ, ಮೊದಲು ಮೇಲೆ ಹಿಂದೆ
3.4.2 ಹೆಸರುಪರಿಚೆಗಳು
ಮೇಲೆ ತಿಳಿಸಿದ ಹಾಗೆ, ಹೆಸರುಪರಿಚೆಗಳನ್ನು ಪರಿಚೆಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಉಂಟುಮಾಡಲಾಗುತ್ತದೆ; ಇದಲ್ಲದೆ, ಎಸಕಪದ, ಹೆಸರುಪದ ಮತ್ತು ಪರಿಚೆಪದಗಳಿಗೆ ಒಟ್ಟುಗಳನ್ನು ಸೇರಿಸಿಯೂ ಅವನ್ನು ಉಂಟುಮಾಡಬಹುದು. ಈ
ನಾಲ್ಕು ಬಗೆಯ ಇಟ್ಟಳಗಳಲ್ಲಿ ಬಳಕೆಯಾಗುವ ಒಟ್ಟುಗಳ ವಿವರಣೆಯನ್ನು ಕೆಳಗೆ ಕೊಡಲಾಗಿದೆ.
(1) ಅಲುಅಲುಅಲುಅಲು ಒಟ್ಟು (ಕ) ಒಂದು ಎಸಕವನ್ನು ನಡೆಸಿದುದರಿಂದಾಗಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಉಂಟಾಗುವ ಪರಿಚೆಯನ್ನು ತಿಳಿಸುವುದಕ್ಕಾಗಿ, ಅಂತಹ ಎಸಕಪದಗಳಿಗೆ ಅಲು ಒಟ್ಟನ್ನು ಸೇರಿಸಲಾಗುತ್ತದೆ. ಎತ್ತುಗೆಗಾಗಿ, ಹಳಸುವ ಎಸಕದಿಂದ ಒಂದು ವಸ್ತು ವಿನಲ್ಲಿ ಉಂಟಾಗುವ ಪರಿಚೆಯನ್ನು ಹಳಸಲು ಪದ ತಿಳಿಸುತ್ತದೆ. (ಅನ್ನ ಹಳ ಸಿತು; ಹಳಸಲು ಅನ್ನ). ಇಂತಹ ಬೇರೆ ಕೆಲವು ಹೆಸರುಪರಿಚೆಗಳನ್ನು ಕೆಳಗೆ ಕೊಡಲಾಗಿದೆ:
ತಿಕ್ಕಲು
ಇಂಗು ಇಂಗಲು
ತಿಕ್ಕು ಪೋಳು ಪೋಳಲು
ಸಿಕ್ಕಲು ಸಿಕ್ಕು ಕುಚ್ಚಲು
ಕುಚ್ಚು ಜಗ್ಗಲು
ಜಗ್ಗು ಪಡುವ ಪಡುವಲು
ಇಕ್ಕಲು
ಇಕ್ಕು ತೊಳಸು ತೊಳಸಲು ಮಾಸು ಮಾಸಲು ಹಳಸು ಹಳಸಲು ಗೋಜು ಗೋಜಲು ಮೂಡು ಮೂಡಲು
ಒಣಗಿಲು ಮತ್ತು ಮಿಗಿಲು ಎಂಬ ಎರಡು ಪರಿಚೆಪದಗಳಲ್ಲಿ ಈ ಒಟ್ಟಿಗೆ ಇಲು ಎಂಬ ರೂಪ ಇದೆ; 2.2.1ರಲ್ಲಿ ವಿವರಿಸಿದ ತೆರೆಯುಲಿಗಳ ಮೊದಲು ಬಂದ ತೆರೆಯುಲಿ ಬಿದ್ದುಹೋಗುವ ಮಾರ್ಪಾಡು ಮೇಲಿನ ಪದಗಳಲ್ಲಿ (ಇಂಗು- ಇಂಗಲು, ಇಕ್ಕು-ಇಕ್ಕಲು) ಮಾತ್ರವಲ್ಲದೆ, ಕೆಳಗೆ ಕೊಟ್ಟಿರುವ ಪದಗಳಲ್ಲೂ ಕಾಣಿಸುತ್ತದೆ (ಕೊರಕ-ಅಲು>ಕೊರಕಲು).
ಇದಲ್ಲದೆ, ಕೆಳಗೆ ಕೊಟ್ಟಿರುವ ಪದಗಳಲ್ಲಿ ಅಲು ಒಟ್ಟಿನ ಮೊದಲು ಕ ಒಟ್ಟು ಬಂದಿದೆ; ಈ ಒಟ್ಟು ಸೇರಿದಾಗ, ಕೊರೆ, ಒಡೆ ಮತ್ತು ಸವೆ ಪದಗಳ ಎಕಾರ 2.2.3ರಲ್ಲಿ ವಿವರಿಸಿದ ಎಕಾರ ಅಕಾರವಾಗುವ ಮಾರ್ಪಾಡಿಗೆ ಒಳ ಗಾಗಿದೆ; ಹುಳಿ, ಇಳಿ ಮತ್ತು ಕುದಿ ಪದಗಳ ಕೊನೆಯ ಇಕಾರ ಉಕಾರವಾಗಿದೆ, ಮತ್ತು ತರಿ ಪದದ ಇಕಾರ ಅಕಾರವಾಗಿದೆ (2.2.5 ನೋಡಿ).
ಕೊರೆ ಒಡೆ ಸವೆ ಹುಳಿ
ಕೊರಕಲು
ಒಡಕಲು
ಸವಕಲು
ಹುಳುಕಲು
ಇಳಿ ಕುದಿ ತರಿ
ಇಳುಕಲು ಕುದುಕಲು ತರಕಲು
ಕುದಿ-ಕುದುಪಲು ಎಂಬುದರಲ್ಲಿ ಅಲು ಒಟ್ಟಿನ ಮೊದಲು ಪ ಒಟ್ಟು
ಬಂದಿದೆ, ಮತ್ತು ಇಲ್ಲಿಯೂ ಕುದಿ ಪದದ ಕೊನೆಯ ಇಕಾರ ಉಕಾರವಾಗಿದೆ.
(ಚ) ಕೆಲವು ಪರಿಚೆಪದಗಳೊಂದಿಗೂ ಈ ಒಟ್ಟನ್ನು ಸೇರಿಸಲಾಗಿದ್ದು, ಅದು ಹೆಚ್ಚಿನ ಹುರುಳನ್ನೇನೂ ಕೊಡುವ ಹಾಗೆ ಕಾಣಿಸುವುದಿಲ್ಲ; ಇಲ್ಲಿ ಅಳ್ಳೆ ಪದದ ಇಮ್ಮಡಿ ಬರಿಗೆ ಒತ್ತೆ ಬರಿಗೆಯಾಗುತ್ತದೆ, ಮತ್ತು ಅದರ ಬಳಿಕ ಅಲು ಒಟ್ಟು ಇಲು ರೂಪದಲ್ಲಿ ಬರುತ್ತದೆ; ಇದಲ್ಲದೆ, ಕೆಂಕ ಪದದ ಕಕಾರ ಗಕಾರವಾಗು ತ್ತದೆ.
ಕುರುಚು ಕುರುಚಲು
ತರಕು ತರಕಲು
ಅಡ್ಡ ಅಡ್ಡಲು
ಮುಡುಕು ಮುಡುಕಲು ಅಳ್ಳೆ ತೆಳು ಕಡು
ಅಳಿಲು ತೆಳುಲು
ಕಡಲು
ಜಬ್ಬು ಜಬ್ಬಲು ಪುಕ್ಕಲು ಪುಕ್ಕು ಬರಲು ಬರ ಕೆಂಕ ಕೆಂಗಲು ಗೋಜು ಗೋಜಲು ಮಳ ಗೂರು
ಮಳಲು ಗೂರಲು
ಕೆಳಗಿನ ಪದಗಳಲ್ಲಿ ಈ ಒಟ್ಟು ಕ ಇಲ್ಲವೇ ಚ ಒಟ್ಟಿನೊಂದಿಗೆ ಬಂದಿದೆ. ಎಡಚಿಲು ಎಂಬುದರಲ್ಲಿ ಅದು ಇಲು ರೂಪದಲ್ಲಿದೆ, ಮತ್ತು ಬೇರೆ ಎರಡು ಕಡೆಗಳಲ್ಲಿ (ಚೊಚ್ಚಲು ಮತ್ತು ಮಲಚಲು ಎಂಬವುಗಳಲ್ಲಿ) ಇದನ್ನು ಪರಿಚೆ ಬೇರಿಗೆ ಸೇರಿಸಲಾಗಿದೆ. ಇದು ಸೇರಿದಾಗ, ಸಣ್ಣ ಪದದ ಇಮ್ಮಡಿ ಣಕಾರ ಒತ್ತೆ ಣಕಾರವಾಗುತ್ತದೆ. ಹುಳು-ಹುಳುಕಲು, ಮುಡುಕು-ಮುಡುಕಲು ಮತ್ತು ಕವೆ -ಕವಲು ಎಂಬಲ್ಲಿ ಇದನ್ನು ಒಂದು ಹೆಸರುಪದದೊಂದಿಗೆ ಸೇರಿಸಲಾಗಿದೆ.
ಬಡ ಸಣ್ಣ ಮರು ಹುಳು
ಬಡಕಲು
ಸಣಕಲು
ಮರುಚಲು ಹುಳುಕಲು
ಎಡ ಎಡಚಿಲು ಚೊಚ್ ಚೊಚ್ಚಲು ಮಲಚಲು ಮಲ
(2) ಕುಕುಕುಕು ಒಟ್ಟು ಎಸಕಪದಗಳಿಗೆ ಕು ಒಟ್ಟನ್ನು ಸೇರಿಸಿ ಕೆಲವು ಹೆಸರುಪರಿಚೆಗಳನ್ನು ಉಂಟುಮಾಡ ಲಾಗಿದೆ:
ಒಡೆ ಕೊಳೆ
ಒಡಕು ಕೊಳಕು
ಕೆರೆ ತರಿ
ಕೆರಕು ತರಕು, ದರಕು
ಮೊಟ್ಟು ಮೊಟಕು
ಹರಿ
ಹರುಕು
ಮುರಿ ಕಟಿ
ಮುರುಕು ಕಟಕು
ಒಣ-ಒಣಕು ಮತ್ತು ಹಸಿ-ಹಸುಕು ಎಂಬವುಗಳಲ್ಲಿ ಈ ಒಟ್ಟನ್ನು ಪರಿಚೆ ಪದಗಳಿಗೆ ಸೇರಿಸಲಾಗಿದೆ, ಮತ್ತು ಕರೆ-ಕರಕು ಮತ್ತು ಚಿಟಿಕೆ-ಚಿಟುಕು ಎಂಬಲ್ಲಿ ಇದನ್ನೇ ಹೆಸರುಪದಗಳಿಗೆ ಸೇರಿಸಲಾಗಿದೆ.
ಈ ಒಟ್ಟು ಸೇರಿದಾಗ, 2.2.3ರಲ್ಲಿ ವಿವರಿಸಿದ (ಎಸಕಪದದ ಕೊನೆಯ ಎಕಾರ ಅಕಾರವಾಗುವ) ಮಾರ್ಪಾಡು (ಒಡೆ-ಒಡಕು), 2.2.5ರಲ್ಲಿ ವಿವರಿಸಿದ ಎರಡನೇ ತೆರೆಯುಲಿಯ ಮಾರ್ಪಾಡು (ಹರಿ-ಹರುಕು, ಕಟಿ-ಕಟಕು), ಮತ್ತು ಇಮ್ಮಡಿ ಟಕಾರ ಒತ್ತೆ ಟಕಾರವಾಗುವ (ಮೊಟ್ಟು-ಮೊಟಕು) ಮತ್ತು ತಕಾರ ದಕಾರವಾಗುವ (ತರಿ-ದರಕು) ಮಾರ್ಪಾಡುಗಳು ನಡೆಯುತ್ತವೆ.
(3) ಅಅಅಅ ಒಟ್ಟು ಎಸಕಪದಗಳಿಗೆ ಈ ಒಟ್ಟನ್ನು ಸೇರಿಸಿ ಕೆಳಗೆ ಕೊಟ್ಟಿರುವ ಕೆಲವು ಹೆಸರುಪರಿಚೆ ಗಳನ್ನು ಉಂಟುಮಾಡಲಾಗಿದೆ:
ಕಲ
ಕಲೆ ತಟ್ಟು ತಟ್ಟ
ಅಡಗು ಅಡಕ
ಸೊಡ ಸುಡು ಕೋಡು ಕೋಟ
ಪರಿಚೆಬೇರುಗಳಿಗೆ ಇದನ್ನು ಸೇರಿಸಿಯೂ ಹೆಸರುಪರಿಚೆಗಳನ್ನು ಉಂಟುಮಾಡ
ಲಾಗಿದೆಯೆಂಬುದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು:
ನಲ್ ಕೀಳ್
ನಲ್ಲ ಕೆಳ
ಚನ್ ಚನ್ನ ಉಳ್ ಒಳ
ಈ ಒಟ್ಟು ಸೇರಿದಾಗ, 2.2.1ರಲ್ಲಿ ವಿವರಿಸಿರುವ (ತೆರೆಯುಲಿಯ ಬಳಿಕ ತೆರೆಯುಲಿ ಬಿದ್ದುಹೋಗುವ) ಮಾರ್ಪಾಡು (ಕಲೆ-ಕಲ), ಮತ್ತು 2.2.2ರಲ್ಲಿ ವಿವರಿಸಿರುವ (ತೆರೆಯುಲಿಗಳ ಮೊದಲು ಲಕಾರ-ನಕಾರಗಳು ಇಮ್ಮಡಿಯಾಗುವ) ಮಾರ್ಪಾಡುಗಳು (ನಲ್-ನಲ್ಲ, ಚನ್-ಚನ್ನ) ನಡೆದಿವೆ; ಇದಲ್ಲದೆ, ಅಡಗು- ಅಡಕ ಮತ್ತು ಕೋಡು-ಕೋಟ ಎಂಬವುಗಳಲ್ಲಿ ಗಕಾರ-ಡಕಾರಗಳು ಕಕಾರ- ಟಕಾರಗಳಾಗಿವೆ, ಮತ್ತು ಸುಡು-ಸೊಡ ಎಂಬುದರಲ್ಲಿ ಎಸಕಪದದ ಮೊದಲ ನೆಯ ಉಕಾರ ಒಕಾರವಾಗಿದೆ.
(4) ಇಇಇಇ ಒಟ್ಟು ಕೆಲವು ಪರಿಚೆಬೇರುಗಳಿಗೆ ಮತ್ತು ಪದಗಳಿಗೆ ಈ ಒಟ್ಟನ್ನು ಸೇರಿಸಿ ಹೆಸರುಪರಿಚೆ ಗಳನ್ನು ಪಡೆಯಲಾಗಿದೆ:
ಕಹಿ ಬಿಳಿ
ಕಯ್ ಬೆಳ್ ಮುತ್ ಮುದಿ ಕಾರ್ ನಿಡು
ಕರಿ ನಿಡಿ
ಹೇರ್ ಹಿರಿ ಬಿಸಿ ಬಿಸು ಇನಿ ಇನ್ Qj ಕಿರ್
ಇಲ್ಲಿಯೂ 2.2.1ರ ಮಾರ್ಪಾಡು ನಡೆದಿದೆ (ಬಿಸು-ಬಿಸಿ); ಇದಲ್ಲದೆ, ಹೇರ್ ಮತ್ತು ಕಾರ್ ಬೇರುಗಳ ಉದ್ದ ತೆರೆಯುಲಿ ಗಿಡ್ಡವಾಗಿದೆ (2.2.4 ನೋಡಿ), ಬೆಳ್ ಬೇರಿನ ಎಕಾರ ಇಕಾರವಾಗಿದೆ, ಕಯ್ ಬೇರಿನ ಯಕಾರ ಹಕಾರವಾಗಿದೆ, ಮತ್ತು ಮುತ್ ಬೇರಿನ ತಕಾರ ದಕಾರವಾಗಿದೆ. ಬಿಡು-ಬಿಡಿ ಎಂಬಲ್ಲಿ ಈ ಒಟ್ಟನ್ನು ಒಂದು ಎಸಕಪದಕ್ಕೆ ಸೇರಿಸಿರುವ ಹಾಗೆ ಕಾಣಿಸುತ್ತದೆ.
(5) ಉಉಉಉ ಒಟ್ಟು ಕೆಲವು ಪರಿಚೆಬೇರುಗಳಿಗೆ ಮತ್ತು ಪದಗಳಿಗೆ ಈ ಒಟ್ಟನ್ನು ಸೇರಿಸಿ ಹೆಸರುಪರಿಚೆ ಗಳನ್ನು ಪಡೆಯಲಾಗಿದೆ:
ಮಾರ್ ಮರು ತೆಳು ತೆಳ್ ಕಿಸು ಕೇಸ್ ನಸು ನಸಿ
ಬಿಸಿ ಕಿರ್ ಚನ್ ಕೀಳ್
ಬಿಸು ಕಿರು ಚನ್ನು ಕಿಳು
ಇಲ್ಲಿಯೂ 2.2.1ರ ತೆರೆಯುಲಿ ಬಿದ್ದುಹೋಗುವ ಮಾರ್ಪಾಡು (ನಸಿ- ನಸು, ಬಿಸಿ-ಬಿಸು), ಮತ್ತು 2.2.2ರ ಮುಚ್ಚುಲಿ ಇಮ್ಮಡಿಯಾಗುವ ಮಾರ್ಪಾಡು (ಚನ್-ಚನ್ನು) ನಡೆದಿದೆ; ಇದಲ್ಲದೆ, ಮಾರ್, ಕೇಸ್ ಮತ್ತು ಕೀಳ್ ಪದಗಳಲ್ಲಿ 2.2.4ರ ಉದ್ದ ತೆರೆಯುಲಿ ಗಿಡ್ಡವಾಗುವ ಮಾರ್ಪಾಡು ನಡೆದಿದೆ.
(6) ಎ ಎ ಎ ಎ ಒಟ್ಟು ಈ ಒಟ್ಟನ್ನೂ ಕೆಲವು ಪರಿಚೆಬೇರುಗಳಿಗೆ ಮತ್ತು ಪದಗಳಿಗೆ ಸೇರಿಸಲಾಗಿದೆ:
ಎಳ ಎಳೆ ಕಡ ಕಡೆ ಬೆಟ್ಟೆ ಬೆಟ್ಟು ಹಳ(ತು) ಹಳೆ
ಒಳ್ ಕೊರ್ ನಡು
ಒಳ್ಳೆ ಕೊರೆ ನಟ್ಟೆ
ಈ ಒಟ್ಟು ಸೇರಿರುವಲ್ಲೂ 2.2.1ರ ತೆರೆಯುಲಿ ಬಿದ್ದುಹೋಗುವ ಮಾರ್ಪಾಡು (ಎಳ-ಎಳೆ), 2.2.2ರ ಮುಚ್ಚುಲಿ ಇಮ್ಮಡಿಯಾಗುವ ಮಾರ್ಪಾಡು (ಒಳ್-ಒಳ್ಳೆ), ಮತ್ತು 2.2.8ರ ಡಕಾರ ಟ್್ಟ ಎಂದಾಗುವ ಮಾರ್ಪಾಡುಗಳು ನಡೆದಿವೆ.
(7) ಕಕಕಕ ಒಟ್ಟು ಈ ಒಟ್ಟು ಮುಕ್ಯವಾಗಿ ಎಸಕಪದಗಳಿಗೆ ಅಲು ಒಟ್ಟು ಸೇರಿದಾಗ ಅವುಗಳ ಮೊದಲು ಬರುತ್ತದೆ. ಇದರ ಬಳಕೆಯನ್ನು ತಿಳಿಸುವ ಪದಗಳನ್ನು ಮೇಲೆಯೇ ಕೊಡಲಾಗಿದೆ: ಕುದುಕಲು (ಕುದಿ+ಕ+ಅಲು), ಕೊರಕಲು (ಕೊರೆ+ಕ+ಅಲು), ಹುಳುಕಲು (ಹುಳು+ಕ+ಅಲು). ಅಲು ಒಟ್ಟು ಸೇರಿದಾಗ, ಇದರ ಕೊನೆಯ ಅಕಾರ ಬಿದ್ದುಹೋಗುತ್ತದೆ (2.2.1 ನೋಡಿ). ಇದಲ್ಲದೆ, ಅಳ್ಳೆ-ಅಳ್ಳಕ, ಸಳ್ಳೆ-ಸಳ್ಳಕ ಎಂಬಲ್ಲೂ ಈ ಒಟ್ಟಿನ ಬಳಕೆಯಾಗಿದೆ (ಈ ಎರಡು ಪದಗಳ ಕೊನೆಯ ಎಕಾರ ಅಕಾರವಾಗುತ್ತದೆ).
ಬೇರೆ ಕೆಲವು ಒಟ್ಟುಗಳು ಕೆಲವೇ ಕೆಲವು ಪದ ಇಲ್ಲವೇ ಬೇರುಗಳೊಂದಿಗೆ ಮಾತ್ರ ಕಾಣಿಸಿಕೊಳ್ಳುವ ಬೇರೆ ಕೆಲವು ಒಟ್ಟುಗಳನ್ನು ಕೆಳಗೆ ಕೊಡಲಾಗಿದೆ; ಇವನ್ನು ಬಳಸಿದಾಗ, ಕೆಳಗೆ ವಿವರಿಸಿ ದಂತಹ ಹಲವಾರು ಸೇರಿಕೆಯ ಮಾರ್ಪಾಡುಗಳು ನಡೆಯುತ್ತವೆ:
ಚು ಒಟ್ಟು ಸೇರಿದಾಗ ಮೊನೆ ಪದದ ಕೊನೆಯ ಎಕಾರ ಅಕಾರವಾಗು ತ್ತದೆ; ಟು ಒಟ್ಟು ಸೇರಿದಾಗ ಜಿಗಿ ಪದದ ಕೊನೆಯ ಇಕಾರ ಅಕಾರವಾಗುತ್ತದೆ; ಪು ಒಟ್ಟು ಸೇರಿದಾಗ, 2.2.11ರ ಉಕಾರ ಬಿದ್ದುಹೋಗುವ ಮಾರ್ಪಾಡು (ಜೋಮು-ಜೊಂಪು), 2.2.7ರ ಮೂಗುಲಿಯ ಜಾಗ ಬದಲಾಗುವ ಮಾರ್ಪಾಡು (ಕೆನ್-ಕೆಂಪು), 2.2.4ರ ಉದ್ದ ತೆರೆಯುಲಿ ಗಿಡ್ಡವಾಗುವ ಮಾರ್ಪಾಡು (ಕಾರ್-ಕಪ್ಪು), ಮತ್ತು 2.2.6ರ ರಕಾರ ಅದರ ಬಳಿಕ ಬಂದ ಮುಚ್ಚುಲಿಯ ರೂಪವನ್ನು ಪಡೆಯುವ ಮಾರ್ಪಾಡುಗಳು (ಕಾರ್-ಕಪ್ಪು) ನಡೆಯುತ್ತವೆ.
ಪೆ ಒಟ್ಟು ಸೇರಿದಾಗ, ಕಳೆ ಪದದ ಎಕಾರ ಅಕಾರವಾಗುತ್ತದೆ; ಮತ್ತು ಸು ಒಟ್ಟು ಸೇರಿದಾಗ, ಗಟ್ಟಿ ಪದದ ಇಮ್ಮಡಿ ಟಕಾರ ಒತ್ತೆ ಡಕಾರವಾಗುತ್ತದೆ, ಮತ್ತು ಅದರ ಕೊನೆಯ ಇಕಾರ ಉಕಾರವಾಗುತ್ತದೆ.
ಚಪ್ಪಟೆ
- ಅಟೆ ಚಪ್ಪೆ ಹೇರಳ
- ಅಳ ಹೇರ್
- ಚು ಮೊನೆ ಮೊನಚು
- ಟ ಚೊಕ್ಕ ಚೊಕ್ಕಟ
- ಟಿ ಒನ್
- ಟು ಜಿಗಿ
-
ಪು ಜೋಮು ಜೊಂಪು
ಬಿಳುಪು
ಕಯ್ಪೆ ಗಡುಸು - ಪೆ ಕಯ್
- ಸು ಗಟ್ಟಿ
MAn ಜಿಗಟು
ಬಿಳಿ
ಸಪ್ಪೆ
ಸಪ್ಪಟೆ
ಬಕ್ಕ
ಬಕ್ಕಟ
ಕೆನ್ ಕಾರ್ ಕಳೆ ಬಿರು
ಕೆಂಪು ಕಪ್ಪು ಕಳಪೆ ಬಿರುಸು
ಕೆಲವು ಬಗೆಯ ಅಣಕ ಪದಗಳನ್ನೂ ಹೆಸರುಪರಿಚೆಗಳಾಗಿ ಬಳಸಲಾಗುತ್ತದೆ. ಎತ್ತುಗೆಗಾಗಿ, ಮಟಮಟ ಅಣಕಪದವನ್ನು ಮದ್ಯಾನ್ನ ಪದದೊಂದಿಗೆ ಬಳಸ ಲಾಗುತ್ತದೆ (ಆತ ಮನೆಗೆ ಬಂದಾಗ ಮಟಮಟ ಮದ್ಯಾನ್ನವಾಗಿತ್ತು).
3.4.3 ಎಸಕಪರಿಚೆಗಳು
ಕನ್ನಡದಲ್ಲಿ ಮುಕ್ಯವಾಗಿ ಎರಡು ಬಗೆಯ ಎಸಕಪರಿಚೆಗಳು ಬಳಕೆಯಲ್ಲಿವೆ:
(1) ಪರಿಚೆಬೇರುಗಳಿಗೆ ಇಲ್ಲವೇ ಬೇರೆ ಬಗೆಯ ಪದಗಳಿಗೆ ಒಟ್ಟುಗಳನ್ನು
ಸೇರಿಸಿ ಉಂಟುಮಾಡಿರುವ ಪರಿಚೆಪದಗಳು, ಮತ್ತು
(2) ಎಸಕಗಳ ಸದ್ದನ್ನು ಇಲ್ಲವೇ ಅವು ಮನಸ್ಸಿನಲ್ಲಿ ಮೂಡಿಸುವ ಅನಿಸಿಕೆ ಯನ್ನು ಅಣಕಪದಗಳ ಮೂಲಕ ತಿಳಿಸುವ ಪದಗಳನ್ನು ನೇರವಾಗಿ ಇಲ್ಲವೇ ಅನೆ ಒಟ್ಟಿನೊಂದಿಗೆ ಬಳಸಿರುವ ಅಣಕಪದಗಳು.
3.4.4 ಪರಿಚೆಪದಗಳು
ಪರಿಚೆಬೇರುಗಳಿಗೆ ನೇರವಾಗಿ ಒಟ್ಟುಗಳನ್ನು ಸೇರಿಸಿ, ಇಲ್ಲವೇ ಅವುಗಳಿಂದ ಪಡೆ ದಿರುವ ಹೆಸರುಪರಿಚೆಗಳಿಗೆ ಒಟ್ಟುಗಳನ್ನು ಸೇರಿಸಿ ಕೆಲವು ಎಸಕಪರಿಚೆಗಳನ್ನು ಪಡೆಯಲಾಗಿದೆ. ಇದಲ್ಲದೆ, ಹೆಸರು ಮತ್ತು ಎಸಕಪದಗಳಿಗೆ ಒಟ್ಟುಗಳನ್ನು ಸೇರಿಸಿಯೂ ಕೆಲವು ಎಸಕಪರಿಚೆಗಳನ್ನು ಪಡೆಯಲಾಗಿದೆ.
ಇವುಗಳಲ್ಲಿ ಕಾಣಿಸಿಕೊಳ್ಳುವ ಒಟ್ಟುಗಳನ್ನು ಕೆಳಗೆ ವಿವರಿಸಲಾಗಿದೆ:
(1) ಅಗೆ ಅಗೆ ಅಗೆ ಅಗೆ ಒಟ್ಟು ಅಗೆ ಒಟ್ಟನ್ನು ಬಳಸಿ ಕೆಲವು ಹೆಸರುಪರಿಚೆಗಳನ್ನು (ಬೇರುಗಳನ್ನು ಇಲ್ಲವೇ ಪದ ಗಳನ್ನು) ಎಸಕಪರಿಚೆಗಳಾಗಿ ಮಾರ್ಪಡಿಸಲಾಗಿದೆ; ಈ ಒಟ್ಟು ಸೇರಿದಾಗ 2.2.1 ರಲ್ಲಿ ವಿವರಿಸಿರುವ ತೆರೆಯುಲಿ ಬಿದ್ದುಹೋಗುವ ಮಾರ್ಪಾಡು (ಕೆಂಪು-ಕೆಂಪಗೆ), 2.2.2ರಲ್ಲಿ ವಿವರಿಸಿರುವ ಮುಚ್ಚುಲಿ ಇಮ್ಮಡಿಯಾಗುವ ಮಾರ್ಪಾಡು (ನುಣ್- ನುಣ್ಣಗೆ), 2.2.4ರಲ್ಲಿ ವಿವರಿಸಿರುವ ಉದ್ದ ತೆರೆಯುಲಿ ಗಿಡ್ಡವಾಗುವ ಮಾರ್ಪಾಡು (ಕಾರ್-ಕರ್ರಗೆ), ಮತ್ತು 2.2.8ರಲ್ಲಿ ವಿವರಿಸಿರುವ ಡಕಾರ ಟ್್ಟ ಎಂದಾಗುವ ಮಾರ್ಪಾಡುಗಳು (ನಿಡು-ನೆಟ್ಟಗೆ) ನಡೆಯುತ್ತವೆ; ಇದಲ್ಲದೆ, ಮುಚ್ಚುಲಿ ಇಮ್ಮಡಿಯಾಗುವ ಮಾರ್ಪಾಡನ್ನು ರಕಾರ (ಕರ್ರಗೆ), ದ(>ತ)ಕಾರಗಳೂ (ಮಿದು-ಮೆತ್ತಗೆ) ತೋರಿಸುತ್ತವೆ; ಬಿಸಿ, ಮಿದು ಮತ್ತು ನಿಡು ಪದಗಳ ಮೊದಲ ಇಕಾರ ಎಕಾರವಾಗುತ್ತದೆ; ಮತ್ತು ಬಿಸಿ ಪದದ ಕೊನೆಯ ಇಕಾರ ಬಿದ್ದುಹೋಗುತ್ತದೆ.
ಕರ್ರಗೆ ಕೆಂಪಗೆ
ತಣ್ಣಗೆ
ಕಾರ್ ಕೆಂಪು ತಣ್ ದುಂಡು ದುಂಡಗೆ
ನುಣ್ಣಗೆ
ನುಣ್ ಬೆಚ್ಚಗೆ
ಬಿಸಿ ಮೆತ್ತಗೆ
ಮಿದು ಸಪ್ಪಗೆ ಸಪ್ಪೆ
ಕಮ್ ಕಮ್ಮಗೆ ಗುಂಡು ಗುಂಡಗೆ ತೆಳು ನಿಡು ಪಚ್ಚೆ ಬೆಳ್ ಮೆಲ್ ಸೊಮ್ಮು ಸೊಮ್ಮಗೆ
ತೆಳ್ಳಗೆ ನೆಟ್ಟಗೆ ಪಚ್ಚಗೆ ಬೆಳ್ಳಗೆ ಮೆಲ್ಲಗೆ
ಒಳ-ಒಳಗೆ, ಕಡೆ-ಕಡೆಗೆ, ಕೆಳ-ಕೆಳಗೆ, ಒಮ್ಮೆ-ಒಮ್ಮೆಗೆ ಮತ್ತು ಹೊರ-ಹೊರಗೆ ಎಂಬವುಗಳಲ್ಲಿ ಅಗೆ ಒಟ್ಟಿಗೆ ಗೆ ರೂಪ ಇದೆ, ಮತ್ತು ಒಟ್ಟು- ಒಟ್ಟಿಗೆ ಎಂಬಲ್ಲಿ ಇಗೆ ರೂಪ ಇದೆ.
ಕೆಲವು ಅಣಕಪದಗಳೊಂದಿಗೂ ಈ ಒಟ್ಟು ಬರಬಲ್ಲುದು ಎಂಬುದನ್ನು
ಮುಂದೆ (3.3.4)ರಲ್ಲಿ ನೋಡಲಿರುವೆವು.
(2) ಆರೆಆರೆಆರೆಆರೆ ಒಟ್ಟು ಕಣ್ಣು, ಕಿವಿ ಮೊದಲಾದ ಕೆಲವು ಅಂಗಗಳಿಂದ ಎಸಕವೊಂದನ್ನು ನೇರವಾಗಿ ನಡೆಸಲಾಗಿದೆಯೆಂಬುದನ್ನು ತಿಳಿಸುವುದಕ್ಕಾಗಿ ಅವುಗಳ ಹೆಸರಿನೊಂದಿಗೆ ಆರೆ ಒಟ್ಟನ್ನು ಸೇರಿಸಲಾಗುತ್ತದೆ (ಕಣ್ಣಾರೆ ನೋಡು, ಕಿವಿಯಾರೆ ಕೇಳು); ಇಲ್ಲಿ 2.2.1ರ ತೆರೆಯುಲಿ ಬಿದ್ದು ಹೋಗುವ ಮಾರ್ಪಾಡು ನಡೆದಿದೆ (ಕಣ್ಣು+ ಆರೆ>ಕಣ್ಣಾರೆ), ಮತ್ತು 2.2.2ರ ಮುಚ್ಚುಲಿ ಇಮ್ಮಡಿಯಾಗುವ ಮಾರ್ಪಾಡೂ
(ಕಯ್+ಆರೆ>ಕಯ್ಯಾರೆ) ನಡೆದಿದೆ; ಆದರೆ, ಕಿವಿ ಪದದ ಬಳಿಕ ಯಕಾರ ಸೇರಿಕೊಂಡಿದೆ, ಮತ್ತು ಮನಸ್ಸು ಪದದ ಇಮ್ಮಡಿ ಸಕಾರ ಒತ್ತೆಯಾಗಿದೆ:
ಕಣ್ಣಾರೆ
ಕಣ್ಣು ಬಾಯಿ ಬಾಯಾರೆ
ಮನಸ್ಸು ಮನಸಾರೆ
ಕಿವಿ ಕಯ್
ಕಿವಿಯಾರೆ ಕಯ್ಯಾರೆ
(3) ಎ ಎ ಎ ಎ ಒಟ್ಟು ಎಸಕಪದಗಳಿಗೆ ಈ ಒಟ್ಟನ್ನು ಸೇರಿಸಿ ಕೆಲವು ಎಸಕಪರಿಚೆಗಳನ್ನು ಉಂಟುಮಾಡ ಲಾಗಿದೆ (ಇಲ್ಲಿಯೂ 2.2.1ರ ಮಾರ್ಪಾಡು ನಡೆದಿದೆ):
ನಡು ಮುಂಚು ಮುಂಚೆ
ನಡೆ
ಮಿಗು ಮಿಗೆ ಸಾರೆ ಸಾರು
ಮೇಲ್ ಮತ್ತು ಹೆರ್ ಪರಿಚೆಬೇರುಗಳಿಗೆ ಈ ಒಟ್ಟನ್ನು ಸೇರಿಸಿ ಮೇಲೆ ಮತ್ತು ಹೆರೆ ‘ಹಿಂದಕ್ಕೆ’ ಎಂಬೆರಡು ಎಸಕಪರಿಚೆಗಳನ್ನು ಉಂಟುಮಾಡಲಾಗಿದೆ; ಇದಲ್ಲದೆ, ಮತ್ತು ಎಂಬುದಕ್ಕೂ ಇದನ್ನು ಸೇರಿಸಿ ಮತ್ತೆ ಎಸಕಪರಿಚೆಯನ್ನು ಉಂಟುಮಾಡಲಾಗಿದೆ.
ಬೇರೆ ಒಟ್ಟುಗಳು ಕೆಲವೇ ಕೆಲವು ಎಸಕಪರಿಚೆಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಬೇರೆ ಕೆಲವು ಒಟ್ಟುಗಳನ್ನು ಕೆಳಗೆ ಕೊಡಲಾಗಿದೆ (ಅ ಒಟ್ಟು ಸೇರುವಾಗ 2.2.1ರ ತೆರೆಯುಲಿ ಬಿದ್ದುಹೋಗುವ ಮಾರ್ಪಾಡು ನಡೆಯುತ್ತದೆ):
- C
ತುಂಬು ತುಂಬ ಕೂಡ ಕೂಡು ಬಳಿಕ
- ಕ ಬಳಿ ಒಮ್ಮೆ
- ಮೆ ಒನ್ ನಡುವೆ ನಡು
- ವೆ
ಸುತ್ತು ಸುತ್ತ
3.4.5 ಅಣಕಪರಿಚೆಗಳು
ಹಲವಾರು ಅಣಕಪದಗಳನ್ನು ನೇರವಾಗಿ ಇಲ್ಲವೇ ಅನೆ ಒಟ್ಟಿನೊಂದಿಗೆ ಎಸಕ ಪರಿಚೆಗಳಾಗಿ ಬಳಸಲಾಗುತ್ತಿದೆ. ಇವು ಮುಕ್ಯವಾಗಿ ಎರಡು ಬಗೆಯವು:
(1) ಕೆಲವು ಅಣಕಪರಿಚೆಗಳು ತುಸು ಹೊತ್ತು ನಡೆಯುವಂತಹ ಎಸಕದ
ಪರಿಚೆಯನ್ನು ತಿಳಿಸುತ್ತವೆ, ಮತ್ತು
(2) ಇನ್ನು ಕೆಲವು ಅಣಕಪರಿಚೆಗಳು ಒಮ್ಮೆಗೇ ನಡೆದುಹೋಗುವಂತಹ
ಎಸಕದ ಪರಿಚೆಯನ್ನು ತಿಳಿಸುತ್ತವೆ.
ಎತ್ತುಗೆಗಾಗಿ, ಗಣಗಣನೆ ಗಂಟೆ ಬಾರಿಸಿತು ಎಂಬ ಸೊಲ್ಲಿನಲ್ಲಿ ಬಂದಿರುವ ಗಣಗಣನೆ ಎಂಬ ಎಸಕಪರಿಚೆ ತುಸು ಹೊತ್ತು ನಡೆಯುವ ಎಸಕವೊಂದರ (ಗಂಟೆ ಬಾರಿಸಿತು ಎಂಬುದರ) ಪರಿಚೆಯನ್ನು ಗಣಗಣ ಎಂಬ ಅಣಕಪದದ ಮೂಲಕ ತಿಳಿಸುತ್ತದೆ.
ಇದಕ್ಕೆ ಬದಲು, ಗಾಳಿ ಹಾಕುತ್ತಿರುವಾಗ ಚೆಂಡು ಡಬ್ಬನೆ ಒಡೆಯಿತು ಎಂಬ ಸೊಲ್ಲಿನಲ್ಲಿ ಬಂದಿರುವ ಡಬ್ಬನೆ ಎಂಬ ಎಸಕಪರಿಚೆ ಒಮ್ಮೆಗೇನೇ ನಡೆದುಹೋಗುವ ಎಸಕವೊಂದರ (ಚೆಂಡು ಒಡೆಯಿತು ಎಂಬುದರ) ಪರಿಚೆ ಯನ್ನು ಡಬ್ ಎಂಬ ಅಣಕಪದದ ಮೂಲಕ ತಿಳಿಸುತ್ತದೆ.
(1) ತುಸು ಹೊತ್ತು ನಡೆಯುವ ಅಣಕಪರಿಚೆಗಳು ಇಂತಹ ಅಣಕಪರಿಚೆಗಳನ್ನು ನೇರವಾಗಿ ಇಲ್ಲವೇ ಅನೆ ಒಟ್ಟಿನೊಂದಿಗೆ ಸೇರಿಸಿ ಎಸಕಪದಗಳೊಂದಿಗೆ ಬಳಸಲು ಬರುತ್ತದೆ (ಕತಕತ ಕುದಿ; ಕತಕತನೆ ಕುದಿ); ಇದಲ್ಲದೆ, ಇಸು ಒಟ್ಟನ್ನು ಸೇರಿಸಿ ಇವನ್ನು ಎಸಕಪದಗಳಾಗಿ ಮಾಡಿಯೂ ಬಳಸಲು ಬರುತ್ತದೆ (ಗಮಗಮಿಸುತ್ತಿದೆ, ಕಳಕಳಿಸುತ್ತಿದೆ). ಇವುಗಳ ಬಳಿಕ ಹಲವೆಡೆಗಳಲ್ಲಿ ಎನ್ನು ಎಸಕಪದವನ್ನೂ ಬಳಸಲಾಗುತ್ತಿದೆ (ಹಕ್ಕಿಗಳು ಕಿಚಕಿಚ ಎನ್ನುತ್ತಿದ್ದುವು).
ಇಂತಹ ಅಣಕಪರಿಚೆಗಳಲ್ಲಿ ಮೊದಲಿಗೆ ತೆರೆಯುಲಿ ಕಾಣಿಸಿಕೊಳ್ಳುವುದಿಲ್ಲ; ಎರಡು ಪದಗಳ ಸೇರಿಕೆಯಿಂದ ಇವನ್ನು ಪಡೆಯಲಾಗುತ್ತದೆ, ಮತ್ತು ಹೆಚ್ಚಿನವು ಗಳಲ್ಲೂ ಈ ಎರಡು ಪದಗಳು ಒಂದೇ ರೂಪದಲ್ಲಿರುತ್ತವೆ (ಗಸಗಸ, ಗುರು ಗುರು, ಚಿಟಿಚಿಟಿ, ಡವಡವ); ಎರಡನೇ ಪದದ ಮೊದಲನೆಯ ಮುಚ್ಚುಲಿ ಬೇರೆಯಾಗಿರುವುದೂ ಇದೆ (ಕಿಟಿಪಿಟಿ, ಸಿಡಿಮಿಡಿ, ದಡಬಡನೆ, ಗಡಬಡಿಸು); ಇವುಗಳಲ್ಲಿ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿ ಕಾಣಿಸುವುದಿಲ್ಲ.
ಇವುಗಳಲ್ಲಿರುವ ಎರಡು ಪದಗಳ ತೆರೆಯುಲಿಗಳೂ ಒಂದೇ ಆಗಿರುವು ವಾದರೂ, 2.2.1ರಲ್ಲಿ ವಿವರಿಸಿರುವ ತೆರೆಯುಲಿ ಬಿದ್ದುಹೋಗುವ ಸೇರಿಕೆಯ ಕಟ್ಟಲೆಯಿಂದಾಗಿ, ಅನೆ ಇಲ್ಲವೇ ಇಸು ಒಟ್ಟು ಸೇರಿದಾಗ ಎರಡನೆಯ ಪದದ ಎರಡನೆಯ ತೆರೆಯುಲಿ ಬೇರೆಯಾಗಿರುವಂತೆ ಕಾಣಿಸುತ್ತದೆ (ದುರುದುರು+ ಅನೆ-ದುರುದುರನೆ; ಮಳಮಳ+ಇಸು-ಮಳಮಳಿಸು). ಇವುಗಳಲ್ಲಿ ಹೆಚ್ಚಾಗಿ ಅಕಾರ ಕಾಣಿಸಿಕೊಳ್ಳುತ್ತದೆ; ಹಾಗಿದ್ದರೂ ಮೊದಲನೆಯ ತೆರೆಯುಲಿ ಇಕಾರ
ಇಲ್ಲವೇ ಒಕಾರವಾಗಿಯೂ ಇರಬಹುದು (ಕಿಚಕಿಚ ಎನ್ನು, ಕೊಣಕೊಣ ಎನ್ನು), ಮತ್ತು ಎರಡೂ ಇಕಾರ ಇಲ್ಲವೇ ಉಕಾರವಾಗಿಯೂ ಇರಬಹುದು (ಚಿಟಿಚಿಟಿ ಹೊಡೆ, ಗುಡುಗುಡು ಗುಡುಗು).
ಮೇಲಿನ ಒಲವುಗಳಿಗೆ ಹೊರಪಡಿಕೆಗಳಾಗಬಲ್ಲ ಕೆಲವು ಅಣಕಪರಿಚೆಗಳೂ ಇವೆ: ಬಿಕೋ ಅನ್ನು, ಗೋಳೋ ಎಂದು ಅಳು; ಜೋಜೋ ಅನ್ನು; ಕವಕ್ಕವ ಅನ್ನು; ಕೀಚುಕೀಚೆನ್ನುವ ಕೀಚಕ್ಕಿ; ಚಿಟಿಲ್ ಚಿಟಿಲ್ ಎಂದು ಉರಿ; ಜುಮ್ ಜುಮ್ ಎನ್ನು, ಟಿಕ್ ಟಿಕ್ ಎನ್ನು.
ಇದಲ್ಲದೆ, ಕೂಡುಪದಗಳಲ್ಲಿ ಮಾತ್ರವೇ ಬಳಕೆಯಾಗುವಂತಹ ಕೆಲವು ಅಣಕಬೇರುಗಳೂ ಇವೆ: ಓಗೊಡು (ಓ+ಕೊಡು), ಓಕೊಳ್ಳು, ಏಗೊಳ್ಳು, ಗೋಗರೆ, ಬೋರ್ಗರೆ, ಹೀಗಳೆ; ಇವನ್ನೂ ತುಸು ಹೊತ್ತು ನಡೆಯುವ ಎಸಕದ ಪರಿಚೆಯನ್ನು ತಿಳಿಸುವವೆಂದು ಹೇಳಬಹುದು; ಇವುಗಳಲ್ಲಿ ಒಂದು ಬರಿಗೆಕಂತೆ ಮಾತ್ರ ಬಂದಿದ್ದು, ಉದ್ದ ತೆರೆಯುಲಿ ಬಳಕೆಯಾಗಿದೆ.
ಇಂತಹ ಹೆಚ್ಚಿನ ಅಣಕ ಪದಗಳಿಗೂ ಅವು ಎಂತಹ ಎಸಕಪದಗಳೊಂದಿಗೆ ಬರಬಲ್ಲುವು ಎಂಬ ವಿಶಯದಲ್ಲಿ ಬಳಕೆಯ ಕಟ್ಟುಪಾಡುಗಳಿವೆ. ಕೆಳಗೆ ಕೊಟ್ಟಿರುವ ಎತ್ತುಗೆಗಳು ಇದನ್ನು ತೋರಿಸಿಕೊಡುತ್ತವೆ:
ಕಟಕಟನೆ ಕಡಿ ಕತಕತನೆ ಕುದಿ ಕಿಲಕಿಲನೆ ನಗು ಕರಕರನೆ ತುಂಡಿಸು
ಗಿರಗಿರನೆ ತಿರುಗು ಗದಗದನೆ ನಡುಗು
ತಟತಟನೆ ತಟ್ಟು ತಕತಕನೆ ಕುಣಿ ಸರಸರನೆ ಹರಿ ಮಿಣಮಿಣನೆ ಉರಿ ದರದರನೆ ಎಳೆ ಮಿಡುಮಿಡನೆ ಮಿಡುಕು ಚಳಚಳನೆ ಬಿಸಿಲು ಬೀಳು ಪಟಪಟನೆ ರೆಕ್ಕೆ ಬಡಿ
ಮಿಡುಮಿಡನೆ ಮಿಡುಕು ಕಟಕಟ ಕಡಿ ಕಿಚಕಿಚ ಅನ್ನು ಗಸಗಸ ತಿಕ್ಕು ಗಮಗಮ ಎನ್ನು anan Gj
ಕಪಕಪನೆ ತಿನ್ನು ಕಳಕಳನೆ ಅಳು ಗಡಗಡನೆ ನಡುಗು
ಗರಗರನೆ ತಿರುಗು ಚಟಚಟನೆ ಉರಿ ಜರಜರನೆ ಎಳೆ ತಳತಳನೆ ಹೊಳೆ ದಡದಡನೆ ಬರು ಲಟಲಟನೆ ಮುರಿ ಬಗಬಗನೆ ಉರಿ ದಡಬಡನೆ ಬರು
ಗಣಗಣನೆ ಗಂಟೆ ಬಾರಿಸು ದುರುದುರನೆ ನೋಡು ಪರಪರನೆ ಬಟ್ಟೆ ಹರಿ ಚರಚರನೆ ಕತ್ತರಿಸು ಕುಚುಕುಚು ನುಡಿ ಕೊಸಕೊಸ ನುಡಿ ಕೊರಕೊರ ಎನ್ನು ಗಿಮಿಗಿಮಿ ತಿರುಗು ಚಳಚಳ ಮಿಂಚು
ಚುರುಚುರೆನ್ನು ಪಚಪಚ ತುಳಿ ಕವಕವ ಎನ್ನು ಸಿಮಿಸಿಮಿ ಉರಿ ಮಿಡುಮಿಡು ಮಿಡುಕು
ಪಕಪಕ ನಗು ಪಿಟಿಪಿಟಿ ಎನ್ನು ಕಳಕಳ ಕುದಿ ಮಿರುಮಿರು ಮಿರುಗು
ಲಬಲಬ ಎಂದು ಬಡಕೊಳ್ಳು
(2) ಒಮ್ಮೆಗೇ ನಡೆದುಹೋಗುವ ಅಣಕಪರಿಚೆಗಳು ಇವುಗಳಲ್ಲಿ ಹೆಚ್ಚಿನವೂ ಅನೆ ಒಟ್ಟಿನೊಂದಿಗೆ ಬಳಕೆಯಾಗುತ್ತವೆ. ಇವು ಮುಕ್ಯ ವಾಗಿ ಎರಡು ಬಗೆಯವು:
(ಕ) ಮೂರು ಬರಿಗೆಕಂತೆಗಳಿದ್ದು, ಎರಡನೆಯದು ಒತ್ತುಬರಿಗೆಯಾಗಿರುವವು:
ಬಗ್ಗನೆ, ಗೊಳ್ಳನೆ, ಬರ್ರನೆ, ಚಕ್ಕನೆ; ಮತ್ತು
(ಚ) ನಾಲ್ಕು ಬರಿಗೆಕಂತೆಗಳಿದ್ದು, ಮೂರನೆಯದು ಒತ್ತುಬರಿಗೆಯಾಗಿರುವವು:
ಕಚಕ್ಕನೆ, ಕಿಸಕ್ಕನೆ, ಪಟಕ್ಕನೆ, ಗುಳುಕ್ಕನೆ.
ನಾಲ್ಕು ಬರಿಗೆಕಂತೆಗಳಿದ್ದು, ಎರಡನೆಯ ಬರಿಗೆಯಲ್ಲಿ ಉದ್ದ ತೆರೆಯುಲಿ ಯಿರುವ ಅಣಕಪರಿಚೆಗಳೂ ಕೆಲವಿವೆ: ತಟಾರನೆ ಎದ್ದು ಬರು; ದಡಾರನೆ ಬೀಳು; ಪಟಾರನೆ ಹೊಡೆ; ಪಟೀರನೆ ಹೊಡೆ. ಇದಲ್ಲದೆ, ಇಂತಹ ಅಣಕ ಪರಿಚೆಗಳಲ್ಲಿ ಮೊದಲಾಗುವವುಗಳೂ ಇವೆ (ಅಬಕ್ಕನೆ, ಉಸಕ್ಕನೆ, ಅಳ್ಕನೆ, ಇಮ್ಮನೆ, ಒಯ್ಯನೆ).
ತೆರೆಯುಲಿಗಳಲ್ಲಿ
ಕೆಲವು
(ಕ) ಮೂರು ಬರಿಗೆಕಂತೆಗಳಿರುವ ಅಣಕಪರಿಚೆಗಳು ಮೂರು ಬರಿಗೆಕಂತೆಗಳಿರುವ ಅಣಕಪರಿಚೆಗಳಲ್ಲಿ ಹಲವು ಬಗೆಯ ಒತ್ತು ಬರಿಗೆಗಳು ಕಾಣಿಸಿಕೊಳ್ಳುತ್ತವೆ; ಇದನ್ನು ಕೆಳಗಿನ ಪದಗಳಲ್ಲಿ ಕಾಣಬಹುದು:
ಗಕ್ಕನೆ ಬಿನ್ನನೆ ಬರ್ರನೆ
ಕಗ್ಗನೆ ಗಪ್ಪನೆ ಒಲ್ಲನೆ
ಕಚ್ಚನೆ ಡಬ್ಬನೆ ಹವ್ವನೆ
ಚಟ್ಟನೆ ಜಮ್ಮನೆ ಟುಸ್ಸನೆ
ಮಿಣ್ಣನೆ ಒಯ್ಯನೆ ಗೊಳ್ಳನೆ
ಇವುಗಳ ಬಳಕೆಯೂ ಅವುಗಳ ಬಳಿಕ ಬರುವ ಎಸಕಪದವನ್ನು ಅವಲಂಬಿ
ಸಿರುತ್ತದೆ; ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಗೊಳ್ಳನೆ ನಗು ಕಟ್ಟನೆ ಕಡಿ ಬಿಮ್ಮಗೆ ಬಿಗಿ ರಪ್ಪನೆ ಹೊಡೆ ಡರ್ರನೆ ತೇಗು ಟುಸ್ಸನೆ ಒಡೆ ಜುರ್ರನೆ ಸುರಿ ಬಗ್ಗನೆ ಉರಿ
ತೆಪ್ಪಗೆ ಇರು ಚಿಟ್ಟನೆ ಚೀರು ಡಬ್ಬನೆ ಬೀಳು ಬರ್ರನೆ ಹಾರು
ಹವ್ವನೆ ಹಾರು ಜರ್ರನೆ ಜಾರು ತಿರ್ರನೆ ತಿರುಗು ದೊಪ್ಪನೆ ಬೀಳು
‘ಒಮ್ಮೆಗೇ’ (ಅಳ್ಕನೆ, ಕಳ್ಕನೆ, ತೊಟ್ಟನೆ, ದಿಗ್ಗನೆ, ಚಟ್ಟನೆ), ‘ಬೇಗನೆ’ (ಚಕ್ಕನೆ, ಗಳ್ಕನೆ, ಗುಮ್ಮನೆ, ಒಲ್ಲನೆ), ‘ಮೆಲ್ಲನೆ’ (ಒಯ್ಯನೆ, ತೆಪ್ಪನೆ), ‘ಚನ್ನಾಗಿ’ (ನೊಚ್ಚನೆ, ಕಚ್ಚನೆ, ಇಮ್ಮನೆ), ‘ತಿರುತಿರುಗಿ’ (ಬಿಟ್ಟನೆ, ಬಿರ್ರನೆ), ‘ಕಾರಣವಿಲ್ಲದೆ’ (ಕೆಮ್ಮನೆ) ಎಂಬಂತಹ ಹುರುಳುಗಳೂ ಇವಕ್ಕಿವೆ.
ಇವುಗಳಲ್ಲಿ ಕೆಲವು ಅನೆ ಒಟ್ಟಿನ ಬದಲು ಅಗೆ ಒಟ್ಟಿನೊಂದಿಗೂ ಬಳಕೆ
ಯಲ್ಲಿವೆ:
ತೆಪ್ಪಗೆ ಬಿನ್ನಗೆ
ತೊಟ್ಟಗೆ
ಬಿಮ್ಮಗೆ
ನೊಚ್ಚಗೆ
ಒಯ್ಯಗೆ
ಮಿಣ್ಣಗೆ ಕೆಮ್ಮಗೆ
ಆದರೆ, ಸಾಮಾನ್ಯವಾಗಿ ಅನೆ ಒಟ್ಟು ಅಣಕಪರಿಚೆಗಗಳಲ್ಲಿ ಬರುತ್ತದೆ ಮತ್ತು
ಅಗೆ ಒಟ್ಟು ಹೆಸರುಪರಿಚೆಗಳಲ್ಲಿ ಬರುತ್ತದೆ.
(ಚ) ನಾಲ್ಕು ಬರಿಗೆಕಂತೆಗಳಿರುವ ಅಣಕಪರಿಚೆಗಳು ಇವುಗಳಲ್ಲೆಲ್ಲ ಕ್ಕ ಎಂಬುದೇ ಒತ್ತುಬರಿಗೆಯಾಗಿರುತ್ತದೆ. ಚಟಿಲ್ಲನೆ ಮತ್ತು ಕಟಮ್ಮನೆ ಎಂಬವು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಕಟಮ್ಮನೆ ಎಂಬುದರ ಬದಲು ಕಟಮ್ಮೆಂದು ಎಂಬ ರೂಪವೂ ಬಳಕೆಯಲ್ಲಿದೆ. ಇವು ಕೂಡಲೇ, ಬೇಗನೆ, ಒಡನೆಯೇ ಎಂಬಂತಹ ಹುರುಳುಗಳನ್ನು ಕೊಡುತ್ತವೆ; ಇವುಗಳ ಬಳಕೆಯೂ ಅವುಗಳ ಬಳಿಕ ಬರುವ ಎಸಕಪದಗಳನ್ನವಲಂಬಿಸಿದೆ.
ಕಿಸಕ್ಕನೆ ನಗು ಗುಳುಕ್ಕನೆ ನುಂಗು
ಪಚಕ್ಕನೆ ಬೀಳು ಅಬಕ್ಕನೆ ತಿನ್ನು ಪುಚಕ್ಕನೆ ಉಗುಳು
ಚುಟುಕ್ಕನೆ ಕಡಿ ದೊಸಕ್ಕನೆ ಬೀಳು ಪಟಕ್ಕನೆ ಬೀಳು ಸರಕ್ಕನೆ ಎಳೆ ಪುಸಕ್ಕನೆ ಒಳಹೋಗು
3.5 ತೋರುಪದಗಳ ಇಟ್ಟಳ
ಆಡುಗನ ಜಾಗ, ಹೊತ್ತು ಮೊದಲಾದುವಕ್ಕೆ ಸಂಬಂದಿಸಿದ ಹಾಗೆ, ವ್ಯಕ್ತಿ, ವಸ್ತು ಇಲ್ಲವೇ ವಿಶಯದ ಜಾಗ, ಹೊತ್ತು ಮೊದಲಾದುವನ್ನು ತಿಳಿಸುವ (ಇಲ್ಲವೇ ತಿಳಿದಿಲ್ಲವೆಂದು ಹೇಳುವ) ಪದಗಳನ್ನು ತೋರುಪದಗಳು ಎಂಬುದಾಗಿ ಇಲ್ಲಿ ಕರೆಯಲಾಗಿದೆ. ಕನ್ನಡದಲ್ಲಿ ಅವನು-ಇವನು-ಯಾವನು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ಇಂತಹ ಹಲವು ತೋರುಪದಗಳು ಬಳಕೆಯಲ್ಲಿವೆ. ಇವುಗಳ ಇಟ್ಟಳವೆಂತಹದು ಎಂಬುದನ್ನು ಕೆಳಗೆ ವಿವರಿಸಲಾಗಿದೆ.
ಕನ್ನಡದಲ್ಲಿ ಬಳಕೆಯಲ್ಲಿರುವ ತೋರುಪದಗಳನ್ನು ಕೆಳಗೆ ತೋರಿಸಿದ ಹಾಗೆ
ಒಂದು ಪಟ್ಟಿಯಲ್ಲಿ ಇರಿಸಿ ಹೇಳಬಹುದು:
ಗಂಡಸು
ಹೆಂಗಸು
ಉಳಿದವು
ಹಲವರು
ಹಲವು ಜಾಗ ದಿಕ್ಕು ಹೊತ್ತು
ದಿನ ಅಳವಿ ಹೊಲಬು
ಬಗೆ ಪರಿಚೆ
ತಿಳಿದವು
ದೂರದವು
ಅವನು
ಅವಳು
ಅದು ಅವರು ಅವು ಅಲ್ಲಿ ಅತ್ತ ಆಗ ಅಂದು ಅಶ್ಟು ಹಾಗೆ ಅಂತಹ
D
ಹತ್ತಿರದವು ಇವನು ಇವಳು ಇದು ಇವರು ಇವು ಇಲ್ಲಿ ಇತ್ತ ಈಗ ಇಂದು ಇಶ್ಟು ಹೀಗೆ ಇಂತಹ
F
ತಿಳಿಯದವು
ಯಾವನು
ಯಾವಳು ಯಾವುದು ಯಾವರು ಯಾವುವು ಎಲ್ಲಿ ಎತ್ತ ಯಾವಾಗ ಎಂದು ಎಶ್ಟು ಹೇಗೆ ಎಂತಹ ಯಾವ
3.5.1 ಎರಡು ಅಂಗಗಳು
ಮೇಲೆ ಕೊಟ್ಟಿರುವ ಎಲ್ಲಾ ತೋರುಪದಗಳಲ್ಲೂ ಎರಡೆರಡು ಅಂಗಗಳಿರುವು ದನ್ನು ಗಮನಿಸಬಹುದ: ಈ ಅಂಗಗಳಲ್ಲಿ ಮೊದಲನೆಯದು ಅವು ನಡೆಸ ಬೇಕಾಗಿರುವ ಕೆಲಸವನ್ನು ತಿಳಿಸುತ್ತವೆ, ಮತ್ತು ಎರಡನೆಯದು ಅವುಗಳ ಹರವನ್ನು ತಿಳಿಸುತ್ತದೆ.
ಎತ್ತುಗೆಗಾಗಿ, ಅಲ್ಲಿ ಪದದಲ್ಲಿ ಅ ಮತ್ತು ಲ್ಲಿ ಎಂಬ ಎರಡು ಅಂಗಗಳಿವೆ; ‘ಆಡುಗನಿಗಿಂತ ದೂರ ಇರುವ’ಂತಹದೊಂದನ್ನು ಗುರುತಿಸುವ ಕೆಲಸ ಈ ಪದ ಕ್ಕಿದೆ ಎಂಬುದನ್ನು ಮೊದಲನೆಯ ಅಂಗ ತಿಳಿಸುತ್ತದೆ; ಅಲ್ಲಿ ಎಂಬುದನ್ನು ಇಲ್ಲಿ ಮತ್ತು ಎಲ್ಲಿ ಎಂಬ ಉಳಿದ ಎರಡು ತೋರುಪದಗಳೊಂದಿಗೆ ಹೋಲಿಸಿದಾಗ ಇದು ಗೊತ್ತಾಗುತ್ತದೆ; ಇಲ್ಲಿ ಎಂಬುದರಲ್ಲಿರುವ ಇ ಎಂಬುದು ‘ಆಡುಗನ ಹತ್ತಿರ ಇರುವ’ಂತಹದೆಂದು ತಿಳಿಸುತ್ತದೆ, ಮತ್ತು ಎಲ್ಲಿ ಎಂಬುದರಲ್ಲಿರುವ ಎ ಎಂಬುದು ‘ಆಡುಗನಿಗೆ ತಿಳಿದಿಲ್ಲ’ದಂತಹದೆಂದು ತಿಳಿಸುತ್ತದೆ.
‘ಅಲ್ಲಿ ಪದ ತಿಳಿಸುವುದು ಒಂದು ಜಾಗವನ್ನು’ ಎಂಬುದಾಗಿ ಅದರ ಹರ ವನ್ನು ಲ್ಲಿ ಎಂಬ ಅದರ ಎರಡನೆಯ ಅಂಗ ತಿಳಿಸುತ್ತದೆ; ಅದನ್ನು ಅಂದು, ಅತ್ತ, ಆಗ ಮೊದಲಾದವುಗಳೊಡನೆ ಹೋಲಿಸಿದಾಗ ಈ ವಿಶಯ ಗೊತ್ತಾಗು
ತ್ತದೆ; ಅಂದು ಪದದ ಎರಡನೆಯ ಅಂಗವಾಗಿ ಬಂದಿರುವ ನ್ದು ಎಂಬುದು ‘ಆ ಪದ ತಿಳಿಸುವುದು ಒಂದು ಹೊತ್ತನ್ನು’ ಎಂಬುದಾಗಿ ತಿಳಿಸುತ್ತದೆ.
ಪಟ್ಟಿಯ ಕೊನೆಯಲ್ಲಿ ಬಂದಿರುವ ಆ, ಈ ಮತ್ತು ಯಾವ ಎಂಬುವನ್ನು ಮಾತ್ರ ಈ ರೀತಿ ಎರಡು ಅಂಗಗಳಾಗಿ ಒಡೆಯಲು ಬರುವುದಿಲ್ಲ; ಆದರೆ, ಅವು ಹೆಸರುಪದಗಳೊಂದಿಗೆ ಸೇರಿ ಪದಕಂತೆಗಳಲ್ಲಿ ಬರುವ ಕಾರಣ (ಆ ಹುಡುಗ, ಈ ಮನೆ, ಯಾವ ಕೆಲಸ), ಅವುಗಳ ಹರವು ಎಂತಹದು ಎಂಬುದನ್ನು ಈ ಹೆಸರುಪದಗಳೇ ತಿಳಿಸುತ್ತವೆ ಎಂದು ಹೇಳಬಹುದು.
ಮೇಲಿನ ಪಟ್ಟಿಯಲ್ಲಿ ಬಾರದಿರುವ, ಎಂದರೆ ಮೂರು-ಮೂರು ರೂಪ ಗಳನ್ನು ಕೊಡದಿರುವ ಕೆಲವು ತೋರುಪದಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ: ಯಾರು, ಏನು ಮತ್ತು ಯಾಕೆ ಎಂಬ ಮೂರು ‘ತಿಳಿಯದ’ ತೋರುಪದಗಳಿವೆ; ಆದರೆ, ಇವಕ್ಕೆ ಸಮನಾಗಿರುವ ‘ತಿಳಿದ’ ತೋರುಪದಗಳು ಬಳಕೆಯಲ್ಲಿಲ್ಲ.
ಇವುಗಳಲ್ಲಿ ಯಾರು ಎಂಬುದು ಯಾವನು, ಯಾವಳು ಮತ್ತು ಯಾವರು ಎಂಬುವಕ್ಕೆ ಬದಲಾಗಿ ಬಳಕೆಯಾಗುತ್ತದೆ; ಏನು ಎಂಬುದು ಯಾವುದು ಮತ್ತು ಯಾವುವು ಎಂಬುವಕ್ಕೆ ಬದಲಾಗಿ ಬಳಕೆಯಾಗುತ್ತದೆ. ಯಾಕೆ ಎಂಬುದಕ್ಕೆ ‘ಕಾರಣ ತಿಳಿಯದು’ ಎಂಬ ಹುರುಳಿದೆ; ಆದರೆ, ಕಾರಣ ತಿಳಿದಿರುವಲ್ಲಿ ಬಳಕೆ ಯಾಗಬಲ್ಲ ತೋರುಪದಗಳಿಲ್ಲ; ಅಂತಹ ಕಡೆಗಳಲ್ಲಿ ಹಾಗಾಗಿ ಮತ್ತು ಹೀಗಾಗಿ ಎಂಬುವನ್ನು ಬಳಸಬೇಕಾಗುತ್ತದೆ.
ಇದಲ್ಲದೆ, ಯಾವನು, ಯಾವಳು ಮತ್ತು ಯಾವರು ಎಂಬುವಕ್ಕೆ ಸ್ವಲ್ಪ ಮಟ್ಟಿಗೆ ಕೀಳರಿಮೆಯನ್ನು ಕೊಡುವ ಹುರುಳೂ ಇದೆ; ಹಾಗಾಗಿ, ಅದಕ್ಕೆ ಬದಲಾಗಿ ಯಾರು ಎಂಬುದೇ ಇವತ್ತು ಹೆಚ್ಚು ಬಳಕೆಯಾಗುತ್ತಿದೆ.
ಮೇಲಿನ ಪಟ್ಟಿಯಲ್ಲಿ ಕೊಟ್ಟಿರುವ ಅತ್ತ, ಇತ್ತ ಮತ್ತು ಎತ್ತ ಎಂಬವು ಗಳೂ ಬಳಕೆಯಿಂದ ಬಿದ್ದುಹೋಗುತ್ತಿವೆ; ಅವುಗಳಲ್ಲಿ ಮೊದಲ ಎರಡು ಪದಗಳ ಬದಲು ಆಚೆ ಮತ್ತು ಈಚೆ ಎಂಬವೂ ಕಾಣಿಸಿಕೊಳ್ಳುತ್ತಿವೆ.
ಅವನು, ಅವಳು ಮತ್ತು ಇವನು, ಇವಳು ಎಂಬವುಗಳ ಬದಲು ಆತ,
ಆಕೆ ಮತ್ತು ಈತ, ಈಕೆ ಎಂಬವುಗಳೂ ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
ಈ ಪಟ್ಟಿಯ ಮೊದಲ ಅಯ್ದು ಸಾಲುಗಳಲ್ಲಿರುವ ಪದಗಳು ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ, ಮತ್ತು ಉಳಿದ ಸಾಲುಗಳಲ್ಲಿರುವ ಪದಗಳು ಪರಿಚೆ ಪದಗಳ ಹಾಗೆ ಬಳಕೆಯಾಗುತ್ತವೆ ಎಂಬುದನ್ನು ಇಲ್ಲಿ ಗಮನಿಸಬಹುದು.
3.6 ಎಣಿಕೆಪದಗಳ ಇಟ್ಟಳ
ಎಣಿಕೆಪದಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಮತ್ತು ಅಯ್ದು ಪದಗಳನ್ನು ಓರ್, ಈರ್, ಮೂರ್, ನಾಲ್, ಮತ್ತು ಅಯ್ ಎಣಿಕೆಬೇರುಗಳಿಂದ ಪಡೆಯಬಹುದು; ಇವುಗಳಲ್ಲಿ ಓರ್ ಬೇರಿಗೆ ದು ಒಟ್ಟನ್ನು ಸೇರಿಸಿ ಒಂದು ಎಂಬುದನ್ನು ಪಡೆಯುವಲ್ಲಿ ಅದಕ್ಕೆ ಒನ್ ರೂಪ ಇದೆ; ಈರ್ ಬೇರಿಗೆ ಡು ಒಟ್ಟನ್ನು ಸೇರಿಸಿ ಎರಡು ಎಂಬುದನ್ನು ಪಡೆಯುವಲ್ಲಿ ಅದಕ್ಕೆ ಎರ ರೂಪ ಇದೆ; ಉಳಿದ ಮೂರ್, ನಾಲ್, ಮತ್ತು ಅಯ್ ಬೇರುಗಳಿಗೆ ಉ, ಕು, ಮತ್ತು ದು ಒಟ್ಟುಗಳನ್ನು ಸೇರಿಸಿ ಮೂರು, ನಾಲ್ಕು ಮತ್ತು ಅಯ್ದು ಪದಗಳನ್ನು ಪಡೆಯ ಬಹುದು.
ಉಳಿದ ಪದಗಳಲ್ಲಿ ಆರು, ಏಳು, ಎಂಟು ಮತ್ತು ಹತ್ತು ಪದಗಳಲ್ಲಿ ಇಟ್ಟಳವನ್ನು ಕಾಣಲು ಬರುವುದಿಲ್ಲ. ಒಂಬತ್ತು ಪದವನ್ನು ಓರ್ ಬೇರಿನ ಒನ್ ರೂಪಕ್ಕೆ ಹತ್ತು ಪದವನ್ನು ಸೇರಿಸಿ ಪಡೆಯಬಹುದು; ಇದಕ್ಕೆ ‘ಹತ್ತಕ್ಕಿಂತ ಒಂದು ಕಡಿಮೆ’ ಎಂಬ ಹುರುಳಿದೆ. ಇಲ್ಲಿ ಹತ್ತು ಎಂಬುದು ಬತ್ತು ಎಂಬ ರೂಪದಲ್ಲಿ ಬರುತ್ತದೆ.
ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳನ್ನು ಹತ್ತು ಪದದ ಹತ್ತಿನ ಪದರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಿ ಪಡೆಯಬಹುದು. ಆದರೆ, ಹತ್ತು ಪದಕ್ಕೆ ಹೆಸರುಪತ್ತುಗೆಯ ಅ ಒಟ್ಟನ್ನು ಸೇರಿಸಿ ದಾಗ ಹತ್ತರ ಎಂಬ ಪದರೂಪ ಸಿಗುವುದಾದ ಕಾರಣ (4.9.4 ನೋಡಿ), ಹತ್ತಿನ ಪದರೂಪ ಹೇಗೆ ಬಂತು ಎಂಬುದನ್ನು ವಿವರಿಸುವುದು ಕಶ್ಟ.
ಹತ್ತಿನ ಪದರೂಪಕ್ಕೆ ಒಂದು ಮತ್ತು ಎರಡು ಪದಗಳ ಮೊದಲು ಹನ್ ಎಂಬ ರೂಪ ಇದೆ (ಹನ್ನೊಂದು, ಹನ್ನೆರಡು), ಮೂರು ಮತ್ತು ನಾಲ್ಕು ಪದಗಳ ಮೊದಲು ಹದಿ ರೂಪ ಇದೆ (ಹದಿಮೂರು, ಹದಿನಾಲ್ಕು), ಅಯ್ದು, ಆರು, ಏಳು, ಮತ್ತು ಎಂಟು ಪದಗಳ ಮೊದಲು ಹದಿನ್ ರೂಪ ಇದೆ (ಹದಿನಯ್ದು, ಹದಿನಾರು, ಹದಿನೇಳು, ಹದಿನೆಂಟು), ಮತ್ತು ಒಂಬತ್ತು ಪದದ ಮುಂದೆ ಹತ್್ತ ರೂಪ ಇದೆ (ಹತ್ತೊಂಬತ್ತು).
ಈರ್, ಮೂರ್, ನಾಲ್ ಮತ್ತು ಅಯ್ ಬೇರುಗಳಿಗೆ ಹತ್ತು ಪದವನ್ನು ಸೇರಿಸಿ ಇಪ್ಪತ್ತು, ಮೂವತ್ತು, ನಲುವತ್ತು ಮತ್ತು ಅಯ್ವತ್ತು ಪದಗಳನ್ನು ಉಂಟುಮಾಡಲಾಗಿದೆ; ಈರ್ ಬೇರು ಇಲ್ಲಿ ಇಪ್ ರೂಪದಲ್ಲಿ (2.2.4 ಮತ್ತು
2.2.6 ನೋಡಿ) ಬಂದಿದೆ, ಮತ್ತು ಅದರ ಬಳಿಕ ಹತ್ತು ಪದ ಪತ್ತು
ರೂಪದಲ್ಲಿ ಬಂದಿದೆ; ಮೂರ್ ಮತ್ತು ನಾಲ್ ಬೇರುಗಳು ಮೂ ಮತ್ತು ನಲು ರೂಪದಲ್ಲಿ ಬಂದಿವೆ, ಮತ್ತು ಅವುಗಳ ಬಳಿಕ, ಮತ್ತು ಅಯ್ ಬೇರಿನ ಬಳಿಕ ಹತ್ತು ಪದ ವತ್ತು ರೂಪದಲ್ಲಿ ಬಂದಿದೆ.
ಅರುವತ್ತು, ಎಪ್ಪತ್ತು ಮತ್ತು ಎಂಬತ್ತು ಪದಗಳನ್ನು ಆರು, ಏಳು ಮತ್ತು ಎಂಟು ಪದಗಳಿಗೆ ಹತ್ತು ಪದವನ್ನು ಸೇರಿಸಿ ಪಡೆಯಬಹುದು; ಈ ಮೂರು ಪದಗಳಿಗೆ ಇಲ್ಲಿ ಅರು, ಎಪ್ ಮತ್ತು ಎಂ ಎಂಬ ರೂಪಗಳಿವೆ, ಮತ್ತು ಅವು ಗಳ ಬಳಿಕ ಹತ್ತು ಪದಕ್ಕೆ ವತ್ತು, ಪತ್ತು ಮತ್ತು ಬತ್ತು ಎಂಬ ರೂಪಗಳಿವೆ. ತೊಂಬತ್ತು ಪದದಲ್ಲೂ ತೊಂ ಮತ್ತು ಪತ್ತು (ಹತ್ತು) ಎಂಬವುಗಳನ್ನು ಜೋಡಿಸಿ ಪಡೆಯಬಹುದು; ಆದರೆ, ತೊಂ ಎಂಬುದನ್ನು ಒಂಬತ್ತು ಎಂಬುದ ರೊಂದಿಗೆ ಸಂಬಂದಿಸುವುದು ಹೇಗೆ ಎಂಬ ತೊಡಕು ಉಳಿದಿರುತ್ತದೆ.
3.7 ಎರವಲು ಪದಗಳ ಇಟ್ಟಳ
ಸಂಸ್ಕ್ರುತ, ಇಂಗ್ಲಿಶ್, ಹಿಂದಿ, ಪರ್ಶಿಯನ್ ಮೊದಲಾದ ನುಡಿಗಳಿಂದ ಎರವಲಾಗಿ ಬಂದ ಹಲವು ಪದಗಳು ಕನ್ನಡ ಬರಹಗಳಲ್ಲಿ ಬಳಕೆಯಲ್ಲಿವೆ. ಇವುಗಳ ಇಟ್ಟಳ ಕೆಲವು ವಿಶಯಗಳಲ್ಲಿ ಕನ್ನಡದವೇ ಆದ ಪದಗಳ ಇಟ್ಟಳಕ್ಕಿಂತ ಬೇರಾಗಿರುತ್ತದೆ. ಹಾಗಾಗಿ, ಅವನ್ನಿಲ್ಲಿ ಬೇರಾಗಿ ಪರಿಶೀಲಿಸಲಾಗಿದೆ.
ಆದರೆ, ಕನ್ನಡದವೇ ಆದ ಪದಗಳು, ಮತ್ತು ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಕನ್ನಡ ಬರಹದಲ್ಲಿ ಬಳಕೆಯಲ್ಲಿರುವ ಪದಗಳನ್ನು ಬೇರ್ಪಡಿಸುವುದು ಸುಳುವಾದ ಕೆಲಸವೇನಲ್ಲ. ಯಾಕೆಂದರೆ, ಎರವಲು ಪದಗಳು ನಮ್ಮ ನುಡಿಯಲ್ಲಿ ಸಾವಿರಾರು ವರ್ಶಗಳಿಂದಲೂ ಬಂದು ಸೇರುತ್ತಿದ್ದು, ಅವು ಗಳಲ್ಲಿ ಇತ್ತೀಚೆಗೆ ಬಂದವುಗಳು ಮಾತ್ರ ಕನ್ನಡದವೇ ಆದ ಪದಗಳಿಂದ ಬೇರಾಗಿ ಕಾಣಿಸುತ್ತವೆ; ಉಳಿದುವೆಲ್ಲ ಹಲವಾರು ಬಗೆಗಳಲ್ಲಿ ಮಾರ್ಪಟ್ಟು, ಕನ್ನಡದವೇ ಆದ ಪದಗಳೊಂದಿಗೆ ಸೇರಿಹೋಗಿವೆ.
ಹಾಗಾಗಿ, ಬೇರೆ ನುಡಿಗಳಿಂದ ಇತ್ತೀಚೆಗೆ ಎರವಲಾಗಿ ಬಂದ ಪದಗಳನ್ನು ಮಾತ್ರ ಇಲ್ಲಿ ಪರಿಶೀಲನೆಗೆ ಎತ್ತಿಕೊಳ್ಳಲಾಗಿದೆ. ನಿಜಕ್ಕೂ ಇಂತಹ ಇತ್ತೀಚೆಗೆ ಎರವಲಾಗಿ ಬಂದ ಪದಗಳನ್ನು ಮಾತ್ರವೇ ಇಲ್ಲಿ ಪರಿಶೀಲಿಸಬೇಕಾಗಿದೆ; ಯಾಕೆಂದರೆ, ಅವು ಮಾತ್ರ ಕನ್ನಡದವೇ ಆದ ಪದಗಳಿಂದ ಇಟ್ಟಳದಲ್ಲಿ ಬೇರಾ ಗಿರುತ್ತವೆ. ಕನ್ನಡ ಬರಹಗಳಲ್ಲಿ ಕಾಣಿಸಿಕೊಳ್ಳುವ ಇಂತಹ ಪದಗಳಲ್ಲಿ ಸಂಸ್ಕ್ರುತ ಮತ್ತು ಇಂಗ್ಲಿಶ್ ನುಡಿಗಳಿಂದ ಎರವಲಾಗಿ ಪಡೆದವು ಮುಕ್ಯವಾದವುಗಳು.
3.7.1 ಸಂಸ್ಕ್ರುತದ ಎರವಲು ಪದಗಳು
ಕನ್ನಡದ ಹಲವು ಮಂದಿ ಬರಹಗಾರರಿಗೆ ಸಂಸ್ಕ್ರುತ ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಎಗ್ಗಿಲ್ಲದೆ ಕನ್ನಡ ಬರಹಗಳಲ್ಲಿ ಬಳಸಬಹುದು ಎಂಬ ಅನಿಸಿಕೆ ಯಿದೆ; ಅವನ್ನು ಕನ್ನಡದಲ್ಲಿ ಬರೆದೊಡನೆ ಅವು ಕನ್ನಡದವಾಗಿ ಬಿಡುತ್ತವೆ
ಎಂದು ಅವರು ತಿಳಿದಿರುವ ಹಾಗೆ ಕಾಣಿಸುತ್ತದೆ! ಇದಲ್ಲದೆ, ಹೆಚ್ಚಿನವರಿಗೂ ಆ ರೀತಿ ಎರವಲು ಪಡೆದ ಪದ ಯಾವುದು, ಮತ್ತು ಕನ್ನಡದ್ದೇ ಆದ ಪದ ಯಾವುದು ಎಂಬುದರ ತಿಳುವಳಿಕೊ ಇರುವುದಿಲ್ಲ. ಕನ್ನಡದ ಹೆಚ್ಚಿನ ಪದನೆರಕೆಗಳಲ್ಲೂ ಶೇಕಡಾ ಅಯ್ವತ್ತಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕೊಟ್ಟಿರುವುದು, ಮತ್ತು ಈ ಪದಗಳಿಗೂ ಕನ್ನಡದ್ದೇ ಆದ ಪದಗಳಿಗೂ ನಡುವೆ ಯಾವ ವ್ಯತ್ಯಾಸವನ್ನೂ ಮಾಡದಿರುವುದು ಈ ತಿಳುವಳಿಕೆಯನ್ನು ಗಟ್ಟಿಮಾಡು ತ್ತದೆ.
ಆದರೆ, ನಿಜಕ್ಕೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಗಿಂತ ಹಲವು ವಿಶಯ ಗಳಲ್ಲಿ ಬೇರಾಗಿವೆ: ಅವುಗಳಲ್ಲಿ ಮಹಾಪ್ರಾಣ, ಋ, ಷ ಮೊದಲಾದ ಹಲವು ಹೆಚ್ಚಿನ ಬರಿಗೆಗಳು ಬಳಕೆಯಾಗುತ್ತವೆ; ಕನ್ನಡದವೇ ಆದ ಬರಿಗೆಗಳು ಬಂದಿರು ವಲ್ಲೂ ಸ್್ಕ, ತ್್ಕ, ಕ್್ಷ್ಮ, ಪ್್ತ ಮೊದಲಾದ ಹಲವು ಹೆಚ್ಚಿನ ಒತ್ತುಬರಿಗೆಗಳು ಬಳಕೆಯಾಗುತ್ತವೆ; ಅವುಗಳಲ್ಲಿ ಪದಗಳಿಗೆ ಒಟ್ಟುಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸುವ ಬಗೆ ಬೇರಾಗಿರುತ್ತದೆ; ಮತ್ತು ಹಾಗೆ ಸೇರಿಸುವಾಗ ನಡೆಯುವ ಸೇರಿಕೆಯ ಮಾರ್ಪಾಡುಗಳೂ ಕನ್ನಡದವೇ ಆದ ಪದಗಳಲ್ಲಿ ನಡೆಯುವ ಮಾರ್ಪಾಡುಗಳಿಗಿಂತ ಬೇರಾಗಿರುತ್ತವೆ.
ಹಾಗಾಗಿ, ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಎರವಲು ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ಆ ಬರಹಗಳು ಕನ್ನಡದ ಸೊಗಡನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ; ಮತ್ತು ಇದರಿಂದಾಗಿ, ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗುತ್ತಾ ಹೋಗುತ್ತದೆ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಕಾಣಿಸಿಕೊಳ್ಳು ತ್ತವೆ; ಮತ್ತು ಹಾಗೆ ಕಾಣಿಸಿಕೊಳ್ಳುವವೂ, ಕನ್ನಡದ ಸೊಗಡನ್ನು ಹೆಚ್ಚು ಕೆಡಿಸ ದಂತೆ ಮಾರ್ಪಟ್ಟಿರುತ್ತವೆ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳು ಕನ್ನಡದಲ್ಲಿ ಚನ್ನಾಗಿ ಹೊಂದಿ ಕೊಳ್ಳುವುದಿಲ್ಲವೆಂಬುದನ್ನು ಗಮನಿಸಿದ ಹಿಂದಿನ ಕಾಲದ ಕನ್ನಡ ಬರಹಗಾರರು ಅವುಗಳಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನು ಮಾಡಿಕೊಂಡಿದ್ದರು: ಶಕಾರ- ಷಕಾರಗಳಿಗೆ ಬದಲಾಗಿ ಸಕಾರವನ್ನು ಬಳಸುವುದು (ಪಶು-ಪಸು, ಶರ್ಕರ- ಸಕ್ಕರೆ, ಆಕಾಶ-ಆಗಸ, ಶೇಷ-ಸೇಸ), ಮಹಾಪ್ರಾಣಗಳ ಬದಲು ಅಲ್ಪಪ್ರಾಣ ಗಳನ್ನು ಬಳಸುವುದು (ಶೃಂಖಲೆ-ಸಂಕಲೆ, ಸಂಘ-ಸಂಗ, ಶುಂಠಿ-ಸುಂಟಿ, ಕಥೆ-ಕತೆ, ಭಕ್ತಿ-ಬಕ್ತಿ), ಋಕಾರದ ಬದಲು ರಿ ಇಲ್ಲವೇ ಇ ಎಂಬುದನ್ನು ಬಳಸುವುದು (ಋಷಿ-ರಿಸಿ, ತೃಣ-ತಿಣ), ಒತ್ತುಬರಿಗೆಗಳನ್ನೆಲ್ಲ ಇಮ್ಮಡಿ ಬರಿಗೆ ಗಳಾಗಿ ಇಲ್ಲವೇ ಒತ್ತೆ ಬರಿಗೆಗಳಾಗಿ ಮಾರ್ಪಡಿಸುವುದು (ಸಂಸ್ಕ್ರುತ-ಸಕ್ಕದ, ಉತ್ಕಟ-ಉಗ್ಗಟ, ಧ್ವನಿ-ದನಿ, ಆಜ್ಞೆ-ಆಣೆ) ಮೊದಲಾದ ಇಂತಹ ಹಲವು
ಮಾರ್ಪಾಡುಗಳ ಮೂಲಕ ಸಂಸ್ಕ್ರುತದ ಎರವಲು ಪದಗಳು ಕನ್ನಡದ ಸೊಗಡನ್ನು ಹೆಚ್ಚು ಕೆಡಿಸದಂತೆ ನೋಡಿಕೊಳ್ಳಲಾಗುತ್ತಿತ್ತು.
ಕನ್ನಡಕ್ಕೆ ಬೇಕಾಗಿರುವ ಇಂತಹ ಮಾರ್ಪಾಡುಗಳಲ್ಲಿ ಹಲವು ಪ್ರಾಕ್ರುತ ಮತ್ತು ಪಾಲಿ ನುಡಿಗಳಲ್ಲಿ ನಡೆದಿದ್ದುವಾದ ಕಾರಣ, ತಮಗೆ ಬೇಕಾಗುವ ಪದಗಳನ್ನು ನೇರವಾಗಿ ಸಂಸ್ಕ್ರುತದಿಂದ ಎರವಲಾಗಿ ಪಡೆಯುವ ಬದಲು, ಪ್ರಾಕ್ರುತ ಇಲ್ಲವೇ ಪಾಲಿಯಿಂದ ಪಡೆಯುವ ಮೂಲಕವೂ ಅವರು ಈ ಕೆಲಸವನ್ನು ನಡೆಸುತ್ತಿದ್ದರು. ಆದರೆ, ಇವತ್ತಿನ ಕನ್ನಡ ಬರಹಗಳಲ್ಲಿ ಆ ರೀತಿ ಮಾರ್ಪಡಿಸಿರುವ ಸಂಸ್ಕ್ರುತ ಎರವಲುಗಳಲ್ಲಿ ಸಕ್ಕರೆ, ಹಿಟ್ಟು, ಹಕ್ಕಿ, ಬೀದಿ ಮೊದಲಾದ ಕೆಲವೇ ಕೆಲವು ಪದಗಳು ಮಾತ್ರ ಬಳಕೆಯಲ್ಲಿ ಉಳಿದಿವೆ; ಬಾಕಿ ಉಳಿದುವೆಲ್ಲ ಬಳಕೆಯಿಂದ ಬಿದ್ದು ಹೋಗಿ, ಅವುಗಳ ಬದಲು ಜ್ವರ, ಸ್ಥಾನ, ಋಷಿ, ಋತು, ದೋಷ, ಅಗ್ನಿ ಮೊದಲಾದ ಮಾರ್ಪಡಿಸದಿರುವ ಸಂಸ್ಕ್ರುತ ಎರವಲುಗಳು ಬಳಕೆಗೆ ಬಂದಿವೆ. ಕನ್ನಡದ ಹೆಚ್ಚಿನ ಬರಹಗಾರರಿಗೂ ಸಂಸ್ಕ್ರುತದ ಮೇಲಿದ್ದ ಮೇಲರಿಮೆ, ಮತ್ತು ಕನ್ನಡದ ಮೇಲಿದ್ದ ಕೀಳರಿಮೆ ಇದಕ್ಕೆ ಕಾರಣವಿರಬೇಕು.
ಇದಲ್ಲದೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದ ಸೊಗಡನ್ನು ಉಳಿಸಿಕೊಳ್ಳುವಂತೆ ಮಾರ್ಪಡಿಸುವ ಹಕ್ಕನ್ನೂ ಇವತ್ತು ಕನ್ನಡದ ಬರಹಗಾರರು ಬಿಟ್ಟುಕೊಟ್ಟಿದ್ದಾರೆ: ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದ ಗಳನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆಯನ್ನು ಅವರು ತಮ್ಮ ಮೇಲೆ ಹೊರಿಸಿಕೊಂಡಿದ್ದಾರೆ. ಇದರಿಂದಾಗಿ, ಇವತ್ತು ಸಂಸ್ಕ್ರುತದ ಎರವಲು ಪದಗಳಲ್ಲಿ ಯಾವ ರೀತಿಯ ಮಾರ್ಪಾಡನ್ನು ಮಾಡಿಕೊಂಡರೂ ಅದು ಕನ್ನಡ ಬರಹಗಾರರಿಗೆ ತಪ್ಪಾಗಿ ಕಾಣಿಸುತ್ತದೆ.
ಎತ್ತುಗೆಗಾಗಿ, ಸಂಸ್ಕ್ರುತದ ಎರವಲು ಪದಗಳನ್ನು ಬರೆಯುವಾಗ, ಅವನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುವಂತಹ ‘ಹೊಸಬರಹ’ ಎಂಬ ಕನ್ನಡ ಬರಹವೊಂದನ್ನು ಹುಟ್ಟುಹಾಕಲಾಗಿದೆ, ಮತ್ತು ಅದನ್ನೇ ಈ ಪುಸ್ತಕ ದಲ್ಲೂ ಬಳಸಲಾಗಿದೆ. ಇದು ಹಿಂದಿನ ಕಾಲದ ಕನ್ನಡ ಬರಹಗಾರರು ಹಲವಾರು ಸಂಸ್ಕ್ರುತ ಪದಗಳ ಮಟ್ಟಿಗೆ ಅನುಸರಿಸಿದ ದಾರಿಯನ್ನು, ಎಂದರೆ ಕನ್ನಡದ ಸೊಗಡನ್ನು ಉಳಿಸಿಕೊಳ್ಳುವುದಕ್ಕಾಗಿ ಅವರು ಬಳಸಿದ ಹೊಲಬನ್ನು ಹೋಲು ತ್ತದೆ; ಹಾಗಿದ್ದರೂ, ಇವತ್ತಿನ ಹಲವು ಬರಹಗಾರರಿಗೆ ಈ ಮಾರ್ಪಾಡು ಕನ್ನಡ ಬರಹವನ್ನು ಕೆಡಿಸುವ ಹಾಗೆ ಕಾಣಿಸುತ್ತದೆ!
3.7.2 ಮಾರ್ಪಡಿಸಿದ ಪದಗಳು
ಮೇಲೆ ಸೂಚಿಸಿದ ಹಾಗೆ, ಮಾರ್ಪಡಿಸಿದ ಸಂಸ್ಕ್ರುತ ಎರವಲುಗಳಲ್ಲಿ ಹೆಚ್ಚಿನವೂ ಇವತ್ತಿನ ಕನ್ನಡ ಬರಹಗಳಲ್ಲಿ ಬಳಕೆಯಲ್ಲಿಲ್ಲ; ಅವುಗಳ ಬದಲು ಮಾರ್ಪಡಿಸದ
ಸಂಸ್ಕ್ರುತ ಪದಗಳನ್ನೇ ಬಳಸಲಾಗುತ್ತಿದೆ. ಇವುಗಳಲ್ಲಿ ಪದಗಳ ಕೊನೆಯ ಕೆಲವು ಬರಿಗೆಗಳನ್ನು ಮಾತ್ರ ಕನ್ನಡಕ್ಕೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ.
ಕನ್ನಡ ಬರಹಗಳಲ್ಲಿ ಬಳಕೆಯಲ್ಲಿರುವ ಸಕ್ಕರೆ, ಹಕ್ಕಿ, ಆಣೆ ಮೊದಲಾದ ಮಾರ್ಪಡಿಸಿದ ಸಂಸ್ಕ್ರುತ ಎರವಲುಗಳಲ್ಲಿ ಹೆಚ್ಚಿನವನ್ನೂ ಇಟ್ಟಳವಿಲ್ಲದ ಪದ ಗಳೆಂದೇ ತಿಳಿಯಬೇಕಾಗುತ್ತದೆ. ಯಾಕೆಂದರೆ, ಸಂಸ್ಕ್ರುತದ ಬೇರೆ ಎರವಲು ಗಳಿಗೂ ಅವಕ್ಕೂ ನಡುವಿದ್ದ ಪತ್ತುಗೆಗಳು ಅವುಗಳಲ್ಲಿ ನಡೆದ ಹಲವು ಬಗೆಯ ಮಾರ್ಪಾಡುಗಳಿಂದಾಗಿ ಹೆಚ್ಚಿನೆಡೆಗಳಲ್ಲೂ ಕಾಣಿಸದಂತಾಗಿವೆ. ಎತ್ತುಗೆಗಾಗಿ, ಕವಿ ಮತ್ತು ಕಾವ್ಯಗಳ ನಡುವಿನ ಪತ್ತುಗೆ ಕಾವ್ಯ ಪದ ಕಬ್ಬ ಎಂದು ಮಾರ್ಪಟ್ಟಿರು ವುದರಿಂದ, ಪಾದ ಮತ್ತು ಪಾದುಕೆಗಳ ನಡುವಿನ ಪತ್ತುಗೆ ಪಾದುಕೆ ಪದ ಹಾವುಗೆ ಎಂಬುದಾಗಿ ಮಾರ್ಪಟ್ಟಿರುವುದರಿಂದ, ಪತಿ, ವ್ರತ, ಮತ್ತು ಪತಿವ್ರತೆ ಪದಗಳ ನಡುವಿನ ಪತ್ತುಗೆ ಪತಿವ್ರತೆ ಪದ ಹದಿಬದೆಯಾಗಿ ಮಾರ್ಪಟ್ಟಿರು ವುದರಿಂದ ಕಾಣಿಸದಂತಾಗಿದೆ.
ಇಂತಹ ಪದಗಳ ಚರಿತ್ರೆಯನ್ನು ಪರಿಶೀಲಿಸಿದಾಗ ಮಾತ್ರ, ಅವುಗಳಿಗಿರುವ ಇಟ್ಟಳದ ಅರಿವು ನಮಗಾಗುತ್ತದೆ; ಆದರೆ ಅವುಗಳ ಇವತ್ತಿನ ಬಳಕೆಯನ್ನು ಮಾತ್ರವೇ ಪರಿಶೀಲಿಸಿದಲ್ಲಿ, ಅವು ಇಟ್ಟಳವಿಲ್ಲದ ಬೇರೆ ಪದಗಳಿಂದ ಯಾವ ಕನ್ನಡದ ರೀತಿಯಲ್ಲೂ ಸೊಲ್ಲರಿಮೆಯ ಮಟ್ಟಿಗೆ ಅವು ಇಟ್ಟಳವಿಲ್ಲದ ಪದಗಳೇ.
ಕಾಣಿಸುವುದಿಲ್ಲ.
ಬೇರೆಯವಾಗಿ
ಹಾಗಾಗಿ,
ಕನ್ನಡ ಬರಹಗಳಲ್ಲಿ ಬಳಕೆಯಲ್ಲಿರುವ ಇಂತಹ ಕೆಲವು ಮಾರ್ಪಡಿಸಿದ ಸಂಸ್ಕ್ರುತ ಎರವಲುಗಳನ್ನು, ಮತ್ತು ಅವುಗಳ ಸಂಸ್ಕ್ರುತ ಮೂಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
ಅಗ್ಗ
ಅರ್ಘ ಆಶ್ಚರ್ಯ ಅಚ್ಚರಿ ಆಜ್ಞೆ ಆಣೆ ಕಾಂಸ್ಯ ಕಂಚು ಶಷ್ಕುಲಿ ಚಕ್ಕುಲಿ
ದ್ಯೂತ ಜೂಜು ನಿದ್ರಾ ನಿದ್ದೆ ಹಿಟ್ಟು ಪಿಷ್ಟ ವಂಧ್ಯಾ ಬಂಜೆ ವರ್ತಿ ಬತ್ತಿ ದ್ವಿತೀಯೆ ಬಿದಿಗೆ ಶ್ಮಶಾನ ಮಸಣ ಶೃಂಖಲಾ ಸಂಕಲೆ
ಶೂನ್ಯ
ಸೊನ್ನೆ
ಆರ್ಯ ಅಜ್ಜ ಆಕಾಶ ಆಗಸ ಇಷ್ಟಕ ಇಟ್ಟಿಗೆ ಕರ್ತರಿ ಕತ್ತರಿ ಯೌವನ ಜವ್ವನ ತಾಣ ಸ್ಥಾನ ಪಕ್ಷಿ ಹಕ್ಕಿ ಪುಸ್ತಕ ಹೊತ್ತಗೆ ವರ್ಣ ಬಣ್ಣ ವಸತಿ ಬಸದಿ ವೇತ್ರ ಬೆತ್ತ ಸಂಧ್ಯಾ ಸಂಜೆ ಸುಣ್ಣ ಚೂರ್ಣ ಹಲಗೆ ಫಲಕ
3.7.3 ಮಾರ್ಪಡಿಸದ ಪದಗಳು
ಮಾರ್ಪಡಿಸದ ಸಂಸ್ಕ್ರುತ ಎರವಲುಗಳೆಂದು ಇಲ್ಲಿ ಕರೆದಿರುವ ಪದಗಳು ನಿಜಕ್ಕೂ ತುಸುವೂ ಮಾರ್ಪಡದ ಪದಗಳಲ್ಲ; ಕನ್ನಡದ ಬರಹಕ್ಕೆ ಮತ್ತು ಸೊಲ್ಲರಿಮೆಯ ಕಟ್ಟಲೆಗಳಿಗೆ ಹೊಂದಿಕೊಳ್ಳುವಂತೆ ಅವುಗಳಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ; ಎತ್ತುಗೆಗಾಗಿ, ಪದಗಳ ಕೊನೆಯ ಉದ್ದ ತೆರೆಯುಲಿಗಳನ್ನು ಗಿಡ್ಡ ತೆರೆಯುಲಿಗಳಾಗಿ (ಮತ್ತು ಆ ಎಂಬುದನ್ನು ಎ ಎಂಬುದಾಗಿ) ಮಾರ್ಪಡಿಸ ಲಾಗಿದೆ (ಶಾಲಾ>ಶಾಲೆ, ಜನನೀ>ಜನನಿ), ಮತ್ತು ಅವುಗಳ ಕೊನೆಯ ಮುಚ್ಚುಲಿಗಳ ಬಳಿಕ ತೆರೆಯುಲಿಯೊಂದನ್ನು ಸೇರಿಸಿಕೊಳ್ಳಲಾಗಿದೆ (ಮನಸ್> ಮನಸ್ಸು). ಇಂತಹ ಎರವಲುಗಳಲ್ಲಿ ಯಾವುದೇ ಒಂದು ಪದಕ್ಕೆ ಇಟ್ಟಳವಿದೆಯೇ, ಇಲ್ಲವೇ ಎಂಬುದನ್ನು ತೀರ್ಮಾನಿಸುವಲ್ಲಿ ಅದಕ್ಕೂ ಕನ್ನಡ ಬರಹದಲ್ಲಿ ಇವತ್ತು ಬಳಕೆಯಲ್ಲಿರುವ ಬೇರೆ ಸಂಸ್ಕ್ರುತ ಎರವಲುಗಳಿಗೂ ನಡುವಿರುವ ಪತ್ತುಗೆ ಮಾತ್ರ ಆದಾರವಾಗಬಲ್ಲುದು. ಸಂಸ್ಕ್ರುತದ ಸೊಲ್ಲರಿಮೆ(ವ್ಯಾಕರಣ)ಯಲ್ಲಿ ಅದಕ್ಕೆ ಕೊಟ್ಟಿರುವ ಇಟ್ಟಳವನ್ನು, ಮತ್ತು ಅದರ ಹಿಂದಿರುವ ಕಟ್ಟಲೆಗಳನ್ನು ಈ ಸಂದರ್ಬ ದಲ್ಲಿ ನೆರವಿಗೆ ಬಳಸಬಹುದೇನೋ ನಿಜ; ಆದರೆ, ಆ ಕಟ್ಟಲೆಗಳನ್ನು ಹಾಗೆಯೇ ಕನ್ನಡದ ಸೊಲ್ಲರಿಮೆಯಲ್ಲಿ ತಂದಿರಿಸುವುದು ಸರಿಯಲ್ಲ.
ಎತ್ತುಗೆಗಾಗಿ, ಸಂಸ್ಕ್ರುತದ ಸೊಲ್ಲರಿಮೆಯಲ್ಲಿ ಹೆಚ್ಚುಕಡಿಮೆ ಎಲ್ಲಾ ಹೆಸರು ಪದಗಳನ್ನೂ ಇಟ್ಟಳವಿರುವ ಪದಗಳೆಂದು ತಿಳಿಯಲಾಗುತ್ತದೆ; ಯಾಕೆಂದರೆ, ಅವನ್ನೆಲ್ಲ ಎಸಕಬೇರುಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆಯಲು ಬರುತ್ತದೆ. ಆದರೆ, ಕನ್ನಡದ ಸೊಲ್ಲರಿಮೆಯ ಮಟ್ಟಿಗೆ ಇವುಗಳಲ್ಲಿ ಹೆಚ್ಚಿನವೂ ಇಟ್ಟಳ ವಿಲ್ಲದ ಪದಗಳು; ಎರವಲಾಗಿ ಬಂದಿರುವ ಬೇರೆ ಹೆಸರುಪದಗಳೊಂದಿಗೆ ಪತ್ತುಗೆಯನ್ನು ತೋರಿಸುವ ನಗರ-ಉಪನಗರ, ವಿವೇಕಿ, ಅವಿವೇಕಿ, ರಸ- ರಸಿಕ, ಕವಿ-ಕಾವ್ಯ ಮೊದಲಾದ ಕೆಲವೇ ಕೆಲವನ್ನು ಮಾತ್ರ ಇಟ್ಟಳವಿರುವ ಪದಗಳೆಂದು ಹೇಳಬಲ್ಲೆವು.
ಹಾಗಾಗಿ, ಒಂದು ಬಗೆಯ ಬರಹದಲ್ಲಿ ಇಂತಹ ಎಶ್ಟು ಪದಗಳು ಎರವಲಾಗಿ ಬಂದಿವೆ ಎಂಬುದರ ಮೇಲೂ ಅವುಗಳಲ್ಲಿ ಎಶ್ಟು ಪದಗಳನ್ನು ಇಟ್ಟಳವಿರುವ ಪದಗಳೆಂದು ತಿಳಿಯಬಹುದು ಎಂಬುದು ಅವಲಂಬಿಸಿದೆ. ತುಂಬಾ ಕಡಿಮೆ ಪದಗಳನ್ನು ಎರವಲು ಪಡೆದು ಬಳಸುವ ಎಲ್ಲರ ಕನ್ನಡದಂತಹ ಬರಹದಲ್ಲಿ ಕೆಲವೇ ಕೆಲವು ಪದಗಳನ್ನು ಮಾತ್ರ ಇಟ್ಟಳವಿರುವ ಪದಗಳೆಂದು ತಿಳಿದರೆ ಸಾಕು. ಇದಲ್ಲದೆ, ಕನ್ನಡ ಬರಹಗಳಲ್ಲಿ ಬಳಕೆಯಾಗುವ ಎರವಲು ಪದಗಳ ಇಟ್ಟಳವನ್ನು ಕನ್ನಡ ಸೊಲ್ಲರಿಮೆಯ ಕೋನದಿಂದ ನೋಡಬೇಕಲ್ಲದೆ, ಸಂಸ್ಕ್ರುತ ಸೊಲ್ಲರಿಮೆಯ ಕೋನದಿಂದ ನೋಡುವುದು ಸರಿಯಲ್ಲ. ಎತ್ತುಗೆಗಾಗಿ, ಕನ್ನಡ
ದಲ್ಲಿ ಮುಕ್ಯವಾಗಿ ಹೆಸರುಪದ, ಎಸಕಪದ, ಮತ್ತು ಪರಿಚೆಪದ ಎಂಬ ಮೂರು ಬಗೆಯ ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತದಲ್ಲಿ ಹೆಸರುಪದ ಮತ್ತು ಎಸಕಪದ ಎಂಬ ಎರಡು ಬಗೆಯ ಪದಗಳು ಮಾತ್ರ ಬಳಕೆಯಲ್ಲಿವೆ. ಪರಿಚೆ ಪದಗಳೆಂಬ ಮೂರನೇ ಬಗೆಯ ಪದಗಳು ಸಂಸ್ಕ್ರುತದಲ್ಲಿಲ್ಲ; ಅಂತಹ ಪದಗಳು ಅದರಲ್ಲಿ ಹೆಸರುಪದಗಳೊಂದಿಗೆ ಸೇರಿಕೊಳ್ಳುತ್ತವೆ.
ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲು ಪದಗಳ ಇಟ್ಟಳ ವನ್ನು ವಿವರಿಸುವಾಗ, ಕನ್ನಡಕ್ಕೆ ಅವಶ್ಯವಿರುವ ಈ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳೆಂಬ ಮೂರು ಬಗೆಯ ಪದಗಳ ನಡುವಿನ ವ್ಯತ್ಯಾಸವನ್ನು ಕಡೆಗಣಿಸಲು ಬರುವುದಿಲ್ಲ. ಆದರೆ, ಸಂಸ್ಕ್ರುತದಲ್ಲಿ ಈ ವ್ಯತ್ಯಾಸ ಇಲ್ಲದಿರು ವುದು ಇಲ್ಲಿ ಕೆಲವು ತೊಡರುಗಳನ್ನೂ ತಂದೊಡ್ಡುತ್ತದೆ.
ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕ್ರುತ ಎರವಲುಗಳಲ್ಲಿ ಒಟ್ಟಿಸಿದ ಪದಗಳು ಮತ್ತು ಜೋಡುಪದಗಳು ಎಂಬುದಾಗಿ ಎರಡು ಬಗೆಯ ಇಟ್ಟಳಗಳನ್ನು ಕಾಣಬಹುದು. ಎತ್ತುಗೆಗಾಗಿ, ಕಾವ್ಯ ಪದವನ್ನು ಕವಿ ಪದಕ್ಕೆ ಯ ಒಟ್ಟನ್ನು ಸೇರಿಸಿ ಪಡೆಯಬಹುದಾದ ಕಾರಣ, ಅದನ್ನೊಂದು ಒಟ್ಟಿಸಿದ ಪದವೆಂದು ತಿಳಿಯಬಹುದು, ಮತ್ತು ಲಗ್ನಪತ್ರಿಕೆ ಪದವನ್ನು ಲಗ್ನ ಮತ್ತು ಪತ್ರಿಕೆ ಎಂಬ ಎರಡು ಪದಗಳನ್ನು ಜೋಡಿಸಿ ಪಡೆಯಬಹುದಾದ ಕಾರಣ, ಅದನ್ನೊಂದು ಜೋಡುಪದವೆಂದು ತಿಳಿಯಬಹುದು.
ಒಟ್ಟಿಸಿದ ಪದಗಳಲ್ಲಿ (1) ಹೆಸರುಪದಗಳಿಂದ ಪರಿಚೆಪದಗಳನ್ನು ಪಡೆಯು ವುದು (ಸಮಾಜ-ಸಾಮಾಜಿಕ, ಯಂತ್ರ-ಯಾಂತ್ರಿಕ), (2) ಪರಿಚೆಪದ ಗಳಿಂದ ಹೆಸರುಪದಗಳನ್ನು ಪಡೆಯುವುದು (ಯೋಗ್ಯ-ಯೋಗ್ಯತೆ, ಅಶಕ್ತ- ಅಸಕ್ತತೆ; ಸ್ವತಂತ್ರ-ಸ್ವಾತಂತ್ರ್ಯ, ಉನ್ನತ-ಅವ್ನತ್ಯ), (3) ಹೆಸರುಪದಗ ಳಿಂದ ಬೇರೆ ಹೆಸರುಪದಗಳನ್ನು ಪಡೆಯುವುದು (ರಾಜ-ರಾಜ್ಯ, ಜೀವ-ಜೀವಿ, ರೋಗ-ರೋಗಿ; ನಟ-ನಟಿ, ಸೇವಕ-ಸೇವಕಿ) ಮತ್ತು (4) ಹೆಸರು ಇಲ್ಲವೇ ಪರಿಚೆಪದಗಳಿಗೆ ಕನ್ನಡದ ಇಸು ಒಟ್ಟನ್ನು ಸೇರಿಸಿ ಎಸಕಪದಗಳನ್ನು ಪಡೆಯು ವುದು (ಪೂಜೆ-ಪೂಜಿಸು, ವಂಚನೆ-ವಂಚಿಸು, ರುಚಿ-ರುಚಿಸು) ಎಂಬುದಾಗಿ ನಾಲ್ಕು ಬಗೆಯ ಇಟ್ಟಳಗಳನ್ನು ಕಾಣಬಹುದು.
ಆದರೆ ಮೇಲೆ ತಿಳಿಸಿದ ಹಾಗೆ, ಸಂಸ್ಕ್ರುತದಲ್ಲಿ ಹೆಸರುಪದ-ಪರಿಚೆಪದ ವ್ಯತ್ಯಾಸ ಇಲ್ಲವಾದ ಕಾರಣ, ಹೆಸರುಪದಗಳಿಂದ ಪರಿಚೆಪದಗಳನ್ನು ಪಡೆಯು ವಲ್ಲಿ ಬಳಕೆಯಾಗಿರುವ ಎಲ್ಲಾ ಒಟ್ಟುಗಳೂ ಹೆಸರುಪದಗಳಿಂದ ಬೇರೆ ಹೆಸರು ಕಾಣಬಹುದು. ಪಡೆಯುವಲ್ಲಿಯೂ ಬಳಕೆಯಾಗಿರುವುದನ್ನು ಪದಗಳನ್ನು ಇದರಿಂದಾಗಿ, ಸಂಸ್ಕ್ರುತ ಎರವಲು ಪದಗಳನ್ನು ಕನ್ನಡದಲ್ಲಿ ಬಳಸುವಾಗ, ಅದಕ್ಕೆ ಬೇಕಾಗುವ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ಕಟ್ಟುನಿಟ್ಟಾಗಿ ಉಳಿಸಿ ಕೊಳ್ಳಲು ಬರುವುದಿಲ್ಲ; ಸಂಸ್ಕ್ರುತ ಎರವಲುಗಳನ್ನು ಅರಿಮೆಯ ಬರಹಗಳಲ್ಲಿ
ಬಳಸುವಾಗ ಇದು ಹೇಗೆ ಗೊಂದಲವನ್ನುಂಟುಮಾಡುತ್ತದೆ ಎಂಬುದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ ಹೊತ್ತಗೆಯಲ್ಲಿ ತೋರಿಸಿಕೊಟ್ಟಿದ್ದೇನೆ.
ಜೋಡುಪದಗಳಲ್ಲಿ ಹೆಸರುಪದಕ್ಕೆ ಬೇರೊಂದು ಹೆಸರುಪದವನ್ನು ಸೇರಿಸಿ ಉಂಟುಮಾಡಿದವು (ಮಾನದ ಹಾನಿ - ಮಾನಹಾನಿ, ಯುಗದ ಆದಿ - ಯುಗಾದಿ), ಮತ್ತು ಹೆಸರುಪದಕ್ಕೆ ಪರಿಚೆಪದವನ್ನು ಸೇರಿಸಿ ಉಂಟುಮಾಡಿದವು (ಪರಲೋಕ, ಮೂಲನಿವಾಸಿ, ಮಹಾನಗರ) ಎಂಬುದಾಗಿ ಎರಡು ಬಗೆಯ ಇಟ್ಟಳಗಳನ್ನು ಕಾಣಬಹುದು.
ಇದಲ್ಲದೆ,
ಸಂಸ್ಕ್ರುತದ ಎರವಲುಗಳನ್ನು ಪದಗಳೊಂದಿಗೆ ಬಳಸಿ ಕೂಡುಪದಗಳನ್ನೂ ಪಡೆಯಲಾಗುತ್ತದೆ.
ಕನ್ನಡದ
ಕೆಲವು ಎಸಕ
3.7.8 ಇಂಗ್ಲಿಶ್ನ ಎರವಲುಪದಗಳು
ಇಂಗ್ಲಿಶ್ನಿಂದ ಪದಗಳು ಕನ್ನಡಕ್ಕೆ ಎರಡು ಅಲೆಗಳಲ್ಲಿ ಎರವಲಾಗಿ ಬಂದಿವೆ. ಇವುಗಳಲ್ಲಿ ಮೊದಲನೇ ಅಲೆಯ ಪದಗಳು ಇಂಗ್ಲಿಶ್ ಜನರ ಮಾತಿನಿಂದ ನೇರವಾಗಿ ಬಂದವುಗಳಿರಬೇಕು; ಅವರ ಮಾತನ್ನು ಕೇಳುತ್ತಿರುವಾಗ, ಅವುಗಳಲ್ಲಿ ಬಳಕೆಯಾಗುತ್ತಿದ್ದ ಈ ಕೆಲವು ಪದಗಳು ಕನ್ನಡಿಗರ ಮಾತಿನಲ್ಲಿ ಎರವಲಾಗಿ ಬಂದು ಸೇರಿಕೊಂಡಿರಬೇಕು; ಎರಡನೇ ಅಲೆಯ ಪದಗಳು ಆ ರೀತಿ ಇಂಗ್ಲಿಶ್ ಜನರ ಮಾತಿನಿಂದ ನೇರವಾಗಿ ಬರದೆ, ಅವರ ನುಡಿಯನ್ನು ಕಲಿತ ಕನ್ನಡಿಗರ ಮಾತಿನಿಂದ ಬಂದಿರಬೇಕು.
ಈ ಎರಡು ಅಲೆಗಳಿಗೆ ಸೇರಿದ ಎರವಲು ಪದಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೆಂದರೆ, ಮೊದಲನೇ ಅಲೆಯಲ್ಲಿ ಬಂದ ಪದಗಳಲ್ಲಿ ಇಂಗ್ಲಿಶ್ನ ಣ ಮತ್ತು ಜ ಮುಚ್ಚುಲಿಗಳು ತಕಾರ ಮತ್ತು ದಕಾರಗಳಾಗಿ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು, ಎರಡನೇ ಅಲೆಯಲ್ಲಿ ಬಂದ ಪದಗಳಲ್ಲಿ ಅವು ಟಕಾರ ಮತ್ತು ಡಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕೆಲವು ಎತ್ತುಗೆ ಗಳನ್ನು ಕೆಳಗೆ ಕೊಡಲಾಗಿದೆ:
ಮೊದಲನೇ ಅಲೆಯ ಪದಗಳು receipt tar treasury captain saint dress
ರಶೀತಿ(ದಿ) ತಾರು ತಿಜೋರಿ ಕಪ್ತಾನ ಸಂತ ದಿರಸು
ಎರಡನೇ ಅಲೆಯ ಪದಗಳು poultice gazette jacket seat loot load
ಪೋಲ್ಟೀಸು ಗಜೆಟ್ಟು ಜಾಕೀಟು ಸೀಟು ಲೂಟಿ ಲೋಡು
godown ryot
ಗೋದಾಮು ರಯ್ತ
godown decree
ಗಡಂಗು ಡಿಕ್ರಿ
ಈ ಎರಡೂ ಅಲೆಗಳಲ್ಲೂ ಇಂಗ್ಲಿಶ್ ಎರವಲುಗಳು ಬಹಳ ಮಟ್ಟಿಗೆ ಕನ್ನಡ ಪದಗಳನ್ನು ಹೋಲುವಂತೆ ಬದಲಾಗಿವೆ. ಎತ್ತುಗೆಗಾಗಿ, ಮುಚ್ಚುಲಿಯಲ್ಲಿ ಕೊನೆ ಗೊಳ್ಳುವ ಪದಗಳೆಲ್ಲ ತೆರೆಯುಲಿಯಲ್ಲಿ ಕೊನೆಗೊಳ್ಳುವಂತಾಗಿವೆ: ಒಂದೇ ಉಲಿಕಂತೆಯಿರುವ ಪದಗಳಲ್ಲಿ ಉದ್ದ ತೆರೆಯುಲಿಯಿತ್ತಾದರೆ ಅವುಗಳ ಕೊನೆ ಯಲ್ಲಿ ಉಕಾರ ಸೇರಿಕೊಂಡಿದೆ (ಚೀಟು, ಸೀಟು, ಕೇಪು, ಗೋಲು, ಬೀರು) ಮತ್ತು ಗಿಡ್ಡ ತೆರೆಯುಲಿಯಿತ್ತಾದರೆ ಉಕಾರ ಸೇರುವುದರೊಂದಿಗೆ ಅವುಗಳ ಕೊನೆಯ ಮುಚ್ಚುಲಿ ಇಮ್ಮಡಿಯಾಗಿದೆ (ಕಪ್ಪು, ಗಲ್ಲು, ವಿಲ್ಲು).
ಆದರೆ, ಇತ್ತೀಚೆಗೆ ಎರವಲಾಗಿ ಬಂದ ಪದಗಳಲ್ಲಿ ಪದಗಳ ಕೊನೆಯ ಮುಚ್ಚುಲಿ ಹಾಗೆಯೇ ಉಳಿದಿರುವುದನ್ನು ಕಾಣಬಹುದು (ಕಂಪ್ಯೂಟರ್, ಸಿಸ್ಟಮ್, ಕಪ್, ಪೊ್ರೀಗ್ರೇಮ್).
ಇಂತಹ ಎರವಲುಗಳು ಹೆಚ್ಚು ಹೆಚ್ಚು ಕನ್ನಡ ಬರಹದಲ್ಲಿ ಸೇರಿದುವಾದರೆ, ಸಂಸ್ಕ್ರುತ ಎರವಲುಗಳ ಹಾಗೆ ಅವುಗಳಲ್ಲೂ ಇಟ್ಟಳಗಳನ್ನು ಕಾಣಬಲ್ಲೆವು. ಇದಕ್ಕಾಗಿ ಅವನ್ನು ಒಟ್ಟುಸೇರಿಸಿ ಕನ್ನಡದ ಕೋನದಿಂದ ಪರಿಶೀಲಿಸಬೇಕಾಗು ತ್ತದೆ.
ಕನ್ನಡದ ಕೂಡುಪದಗಳಲ್ಲಿ, ಮತ್ತು ಜೋಡುಪದಗಳಲ್ಲಿ ಇಂಗ್ಲಿಶ್ ಎರವಲು ಗಳು ಹೆಚ್ಚು ಸುಳುವಾಗಿ ಹೊಂದಿಕೊಳ್ಳಬಲ್ಲುವು: ಆನ್ ಮಾಡು, ಆನ್ ಆಗು; ಕ್ಲಿಕ್ ಮಾಡು, ಪ್ರೆಸ್ ಮಾಡು ಮೊದಲಾದವುಗಳಲ್ಲಿ ಆಗು ಮತ್ತು ಮಾಡು ಎಸಕಪದಗಳೊಂದಿಗೆ ಇಂಗ್ಲಿಶ್ ಎರವಲುಗಳನ್ನು ಬಳಸಿ ಹಲವು ಬಗೆಯ ಕೂಡುಪದಗಳನ್ನು ಉಂಟುಮಾಡಲಾಗಿದೆ, ಮತ್ತು ಸೆಟ್ದೋಸೆ, ಬಿಡ್ಹಣ ಮೊದಲಾದ ಜೋಡುಪದಗಳನ್ನೂ ಉಂಟುಮಾಡಲಾಗಿದೆ.
3.8 ತಿರುಳು
ಈ ಪಸುಗೆಯಲ್ಲಿ ಹೆಸರುಪದಗಳನ್ನು ಬಿಟ್ಟು ಉಳಿದ ಪದಗಳ, ಎಂದರೆ ಎಸಕ ಪದಗಳ, ಪರಿಚೆಪದಗಳ, ತೋರುಪದಗಳ ಮತ್ತು ಎರವಲು ಪದಗಳ ಇಟ್ಟಳ ಎಂತಹದು ಎಂಬುದನ್ನು ವಿವರಿಸಲಾಗಿದೆ.
(1) ಎಸಕಪದಗಳಲ್ಲಿ ಒಟ್ಟಿಸಿದ ಪದಗಳು ಮತ್ತು ಕೂಡುಪದಗಳು ಎಂಬು ದಾಗಿ ಎರಡು ಬಗೆಯ ಇಟ್ಟಳಗಳನ್ನು ಕಾಣಬಹುದು; ಒಟ್ಟಿಸಿದ ಪದಗಳಲ್ಲಿ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳಿಗೆ ಒಟ್ಟುಗಳನ್ನು ಸೇರಿಸಿ ಉಂಟು ಕೂಡುಪದಗಳಲ್ಲಿ ಹೆಸರುಪದ, ಮತ್ತು ಮಾಡಿರುವ ಎಸಕಪದಗಳಿವೆ,
ಪರಿಚೆಪದ, ಮತ್ತು ಮುಕ್ಯವಾಗಿ ಎಸಕಪದಗಳ ಜೋಡಿಸುವ ರೂಪಗಳಿಗೆ ಕೆಲವು ಹೆಚ್ಚಿನ ಹುರುಳುಗಳನ್ನು ಕೊಡಬಲ್ಲ ಎಸಕಪದಗಳನ್ನು ಸೇರಿಸಿ ಪಡೆದಿರುವ ಎಸಕಪದಗಳಿವೆ.
(2) ಕೆಲವು ಪರಿಚೆಬೇರುಗಳಿಂದ ಪರಿಚೆಪದಗಳನ್ನು ಪಡೆಯಲಾಗುತ್ತದೆ; ಅವಕ್ಕೂ, ಹೆಸರುಪದ ಮತ್ತು ಎಸಕಪದಗಳಿಗೂ ಕೆಲವು ಒಟ್ಟುಗಳನ್ನು ಸೇರಿಸಿ, ಹೆಸರುಪರಿಚೆ ಮತ್ತು ಎಸಕಪರಿಚೆಗಳೆಂಬ ಬೇರೆ ಎರಡು ಬಗೆಯ ಪರಿಚೆ ಪದಗಳನ್ನೂ ಉಂಟುಮಾಡಲಾಗುತ್ತದೆ. ಇದಲ್ಲದೆ, ತುಸು ಹೊತ್ತು ನಡೆಯುವ ಎಸಕಗಳ ಪರಿಚೆಗಳು, ಮತ್ತು ಒಮ್ಮೆಗೇ ನಡೆದುಹೋಗುವ ಎಸಕಗಳ ಪರಿಚೆ ಗಳು ಎಂಬುದಾಗಿ ಎರಡು ಬಗೆಯ ಅಣಕಪದಗಳಿಂದಲೂ ಪರಿಚೆಪದಗಳನ್ನು ಉಂಟುಮಾಡಲಾಗುತ್ತದೆ.
(3) ತೋರುಪದಗಳಲ್ಲಿ ಮುಕ್ಯವಾಗಿ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಅವು ನಡೆಸಬೇಕಾಗಿರುವ ಕೆಲಸವನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವುಗಳ ಹರವನ್ನು ತಿಳಿಸುತ್ತದೆ.
(4) ಮುಕ್ಯವಾಗಿ ಸಂಸ್ಕ್ರುತ ಮತ್ತು ಇಂಗ್ಲಿಶ್ ಎಂಬ ಎರಡು ನುಡಿಗಳಿಂದ ಎರವಲಾಗಿ ಬಂದಿರುವ ಪದಗಳಿದ್ದು, ಅವುಗಳ ಇಟ್ಟಳದ ಕುರಿತು ಇಲ್ಲಿ ಅಡಕವಾಗಿ ತಿಳಿಸಲಾಗಿದೆ.