↑ Contents · Contents · Ch 2 →
Chapters: Ch 1 · Ch 2 · Ch 3 · Ch 4
1. ಮುನ್ನೋಟ
ವ್ಯಾಕರಣ
ಎಂಬ ಪದದ ಬದಲು, ಕನ್ನಡದ್ದೇ ಆದ
1.1 ವ್ಯಾಕರಣ ಮತ್ತು ಸೊಲ್ಲರಿಮೆ
ಸೊಲ್ಲರಿಮೆ ಸಂಸ್ಕ್ರುತದ ಎಂಬ ಪದವನ್ನು ನಾನಿಲ್ಲಿ ಬಳಸಿದ್ದೇನೆ. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ‘ವ್ಯಾಕರಣ ಎಂಬುದು ಯಾವ ಕೆಲಸಕ್ಕೂ ಬಾರದ ತೊಡಕು ತೊಡಕಾದ ಒಂದು ಕಗ್ಗಂಟು’ ಎಂಬ ಅನಿಸಿಕೆ ಇವತ್ತು ಅದನ್ನು ಕಲಿಯುವವರ ಮನಸ್ಸಿನಲ್ಲಿದೆ. ಅದರ ಕೆಲವೊಮ್ಮೆ ಹಳೆಗನ್ನಡದಿಂದ, ಮತ್ತು ಬೇರೆ ಕೆಲವೊಮ್ಮೆ ಹೊಸಗನ್ನಡದಿಂದ ಎತ್ತುಗೆಗಳನ್ನು ಕೊಡಬೇಕಾಗಿ ಬರುವುದು ಈ ಅನಿಸಿಕೆಯನ್ನು ಗಟ್ಟಿಮಾಡುತ್ತದೆ.
ಸಂಸ್ಕ್ರುತದಿಂದ,
ನಿಯಮಗಳಿಗೆ
ಕೆಲವೊಮ್ಮೆ
ಕನ್ನಡ ವ್ಯಾಕರಣ ಇಂತಹದೊಂದು ಕಗ್ಗಂಟಾಗಲು ಅದನ್ನು ಮೊದಲಿಗೆ
ಬರೆಯಹೊರಟ ವಿದ್ವಾಂಸರು ಆಗಿನ ಕಾಲದಲ್ಲಿ ಸಂಸ್ಕ್ರುತಕ್ಕಿದ್ದ ತುಂಬಾ ಕ್ಲಿಶ್ಟವಾದ ಪಾಣಿನಿಯ ವ್ಯಾಕರಣವನ್ನು ಮಾದರಿಯಾಗಿ ಇರಿಸಿಕೊಂಡುದೇ ಮುಕ್ಯ ಕಾರಣ. ಅದು ತುಂಬಾ ಕ್ಲಿಶ್ಟವಾಗಿದ್ದ ಕಾರಣ, ಅದರಲ್ಲಿದ್ದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸುವ ಕೆಲಸವನ್ನಶ್ಟೇ ಮಾಡಲು ಅವರಿಗೆ ಸಾದ್ಯವಾಗಿತ್ತು. ಕನ್ನಡದ ನಿಜವಾದ ವ್ಯಾಕರಣ ಎಂತಹದು ಎಂಬುದನ್ನು ಕಂಡುಕೊಳ್ಳಲು ಈ ಕ್ಲಿಶ್ಟವಾದ ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಅವರಿಗೆ ಅಡ್ಡಿಯಾಗಿದ್ದುವು.
ಕನ್ನಡದ
ಗಮನಿಸಿ,
ಅವರ ಬಳಿಕ ಬಂದವರಿಗೂ ಈ ತೊಡಕಿನಿಂದ ಹೊರಬರಲು ಆಗಲೇ ಇಲ್ಲ. ಇದಲ್ಲದೆ, ಹಳೆಗನ್ನಡದ ಸಮಯದಿಂದ ಹೊಸಗನ್ನಡದ ಸಮಯಕ್ಕೆ ಬರುವಾಗ ಕನ್ನಡ ನುಡಿಯಲ್ಲೂ ಹಲವು ಮಾರ್ಪಾಡುಗಳು ನಡೆದಿದ್ದುವು; ಇವನ್ನೆಲ್ಲ ವ್ಯಾಕರಣವನ್ನು ಬದಲಾಯಿಸಿಕೊಳ್ಳುವ ಕೆಲಸವನ್ನೂ ಸರಿಯಾಗಿ ನಡೆಸಲು ಅವರಿಗೆ ಸಾದ್ಯವಾಗಲಿಲ್ಲ. ಈ ಕಾರಣಕ್ಕಾಗಿ, ಇವತ್ತಿನ ಶಾಲಾವ್ಯಾಕರಣಗಳಲ್ಲಿ ಬರುವ ಕಟ್ಟಲೆಗಳನ್ನು ಹೊಸಗನ್ನಡದ ಪದಗಳನ್ನು, ಪದರೂಪಗಳನ್ನು ಮತ್ತು ಸೊಲ್ಲುಗಳನ್ನು ಮಾತ್ರವೇ ಕೊಟ್ಟು ವಿವರಿಸಲು ಬರುವುದಿಲ್ಲ. ನಿಜಕ್ಕೂ ಈ ವ್ಯಾಕರಣಗಳು ಹೊಸಗನ್ನಡದ ವ್ಯಾಕರಣಗಳೇ ಅಲ್ಲ ಎಂಬುದನ್ನು ನಾನು ನನ್ನ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ.
ವ್ಯಾಕರಣವೆಂಬುದು ಅಂತಹ ವಿಚಿತ್ರವಾದ ವಿಶಯವೇನಲ್ಲ. ನಾವು ಮಾತನಾಡುವಾಗ ಇಲ್ಲವೇ ಬರೆಯುವಾಗ ಸಲೀಸಾಗಿ ಬಳಸುತ್ತಿರುವ ಸೊಲ್ಲುಗಳ ಇಟ್ಟಳ ಎಂತಹದು ಎಂಬುದನ್ನು ವಿವರಿಸಿ ಹೇಳುವುದಶ್ಟೇ ಅದರ
ಗುರಿಯಾಗಿರುತ್ತದೆ. ಈ ವಿಶಯದ ಮೇಲೆ ಒತ್ತುಕೊಡುವುದಕ್ಕಾಗಿ, ಮತ್ತು ವ್ಯಾಕರಣ ಅನಿಸಿಕೆಯನ್ನು ಹೋಗಲಾಡಿಸುವುದಕ್ಕಾಗಿ, ಈ ಪುಸ್ತಕದಲ್ಲಿ ಆ ಪದದ ಬದಲು ‘ಸೊಲ್ಲುಗಳ ಆಳವಾದ ತಿಳುವಳಿಕೆ’ಔಎಂಬ ಹುರುಳನ್ನು ಕೊಡಬಲ್ಲ ಸೊಲ್ಲರಿಮೆ ಎಂಬ ಬೇರೆಯೇ ಒಂದು ಪದವನ್ನು ಬಳಸಿದ್ದೇನೆ.
ಕೊಡುವ
ಎಂಬ
ಪದ
ಕಹಿ
1.1.1 ಸೊಲ್ಲರಿಮೆಯ ಕಟ್ಟಲೆಗಳು
ನಾವು ಮಾತನಾಡುವಾಗ ಇಲ್ಲವೇ ಬರೆಯುವಾಗ ಹಲವಾರು ಸೊಲ್ಲುಗಳನ್ನು ಎಂಬುದರಲ್ಲಿ ಒಂದು ಸೊಲ್ಲಿದೆ; ಉಂಟುಮಾಡುತ್ತಿರುತ್ತೇವೆ. ಎಲ್ಲಿಗೂ ಹೋಗಬೇಡ. ಇಲ್ಲೇ ಇರು. ಬೇಗ ಬಂದುಬಿಡುತ್ತೇನೆ ಎಂಬುದರಲ್ಲಿ ಮೂರು ಸೊಲ್ಲುಗಳಿವೆ.
ಮನೆಗೆ ಹೋಗು
ಈ ರೀತಿ ಸೊಲ್ಲುಗಳನ್ನು ಉಂಟುಮಾಡುವುದಕ್ಕಾಗಿ ನಾವು ಹಲವಾರು ಮನೆಗೆ ಹೋಗು ಕಟ್ಟಲೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಎಂಬ ಸೊಲ್ಲನ್ನು ಉಂಟುಮಾಡಬೇಕಿದ್ದಲ್ಲಿ ಮನೆ ಪದಕ್ಕೆ ಗೆ ಒಟ್ಟನ್ನು ಸೇರಿಸಬೇಕು. ಇದಕ್ಕೆ ಬದಲು, ಎಂಬ ಸೊಲ್ಲನ್ನು ಮನೆ ಎಂಬ ಬೇರೊಂದು ಒಟ್ಟನ್ನು ಉಂಟುಮಾಡಬೇಕಿದ್ದಲ್ಲಿ, ಸೇರಿಸಬೇಕು, ಮತ್ತು ಹಾಗೆ ಸೇರಿಸುವಾಗ ಮನೆ ಪದದ ಬಳಿಕ ಒಂದು ಯಕಾರವನ್ನೂ ಬಳಸಬೇಕು.
ಮನೆಯಿಂದ ಬೇಗ ಬಾ ಇಂದ
ಪದಕ್ಕೆ
ನಾವು ಇಂತಹ
ಸೊಲ್ಲುಗಳನ್ನು ಮತ್ತು ಅವುಗಳಲ್ಲಿ ಬರುವ ಪದಗಳ ರೂಪಗಳನ್ನು ಕಟ್ಟಲೆಗಳನ್ನು ಉಂಟುಮಾಡುವುದಕ್ಕಾಗಿ ಬಳಸಬೇಕಾಗುತ್ತದೆ. ಇವನ್ನು ಎಂದು ಕರೆಯಬಹುದು. ಮಾತನಾಡುವಾಗ ಇಲ್ಲವೇ ಬರೆಯುವಾಗ ಇವೆಲ್ಲವನ್ನೂ ನಾವು ಸುಳುವಾಗಿ ಬಳಸುತ್ತಿರುತ್ತೇವೆ. ಅವನ್ನು ಬಳಸದೆ ನಾವು ಒಂದು ಸೊಲ್ಲನ್ನೂ ಆಡಲಾರೆವು ಮತ್ತು ಬರೆಯಲಾರೆವು.
ಕಟ್ಟಲೆಗಳು
ಸೊಲ್ಲರಿಮೆಯ
ನೂರಾರು
ಚಿಕ್ಕಂದಿನಲ್ಲಿ ಮಾತನಾಡಲು ಮತ್ತು ಬರೆಯಲು ಕಲಿಯುತ್ತಿರುವಾಗಲೇನೇ ಇಂತಹ ನೂರಾರು ಕಟ್ಟಲೆಗಳನ್ನು ನಾವು ಕಲಿತುಕೊಂಡಿರುತ್ತೇವೆ. ಆದರೆ, ಅವನ್ನು ಬಳಸುವುದು ಹೇಗೆ ಎಂಬುದನ್ನು ನಾವು ಕಲಿತಿರುತ್ತೇವಲ್ಲದೆ, ಅವು ಎಂತಹವು ಎಂಬುದನ್ನು ತಿಳಿದಿರುವುದಿಲ್ಲ. ಅವು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲೇ ರೂಪದಲ್ಲಿ ಬಳಕೆಯಾಗುತ್ತಿರುತ್ತವೆ.
ನೆಲೆನಿಂತಿರುತ್ತವೆ,
ಮತ್ತು ಆ
ಎತ್ತುಗೆಗಾಗಿ, ಮನೆಗೆ ಮನೆ ಮತ್ತು ಕ್ಕೆ
ಸೂಚಿಸಿದ ಹಾಗೆ, ಒಟ್ಟಿಗೆ ಗೆ, ಇಗೆ
ಎಂಬ ಪದವನ್ನು ಬಳಸಬೇಕಾದಾಗ, ಮೇಲೆ ಗೆ ಒಟ್ಟನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಈ ಹಳ್ಳಿಗೆ ಎಂಬುದರಲ್ಲಿ
ಪದಕ್ಕೆ ಎಂಬ ಮೂರು ರೂಪಗಳಿವೆ:
ರೂಪ ಇದೆ (ಹಳ್ಳಿ+ಗೆ), ಕಾಡಿಗೆ ಎಂಬುದರಲ್ಲಿ ಇಗೆ ರೂಪ ಇದೆ ಬೆಟ್ಟಕ್ಕೆ ಎಂಬುದರಲ್ಲಿ ಕ್ಕೆ ರೂಪ ಇದೆ (ಬೆಟ್ಟ+ಕ್ಕೆ). ಸರಿಯಾಗಿ ಕನ್ನಡವನ್ನು ಬಲ್ಲವರೆಲ್ಲರೂ
ರೂಪಗಳನ್ನು
ಗೆ (ಕಾಡು+ಇಗೆ), ಮತ್ತು ಮೂರು F ಬಳಸಬಲ್ಲರು.
ಇದಲ್ಲದೆ, ಗೆ ಒಟ್ಟಿನ ಈ ರೂಪಗಳನ್ನು ಪದಗಳಿಗೆ ಸೇರಿಸುವಾಗ, ಪದಗಳಲ್ಲೂ D ಕೆಲವೊಮ್ಮೆ ಮಾರ್ಪಾಡುಗಳನ್ನು ಕೆಲವು ಇಗೆ ಎಂಬುದನ್ನು ಸೇರಿಸುವಾಗ ಮಾಡಿಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಕಾಡು ಪದದ ಕೊನೆಯ ಉಕಾರವನ್ನು ತೆಗೆದುಹಾಕಬೇಕಾಗುತ್ತದೆ. ಗೆ ಒಟ್ಟಿಗಿರುವ ಮೂರು ರೂಪಗಳಲ್ಲಿ ತಮ್ಮೆದುರಿಗಿರುವ ಪದಕ್ಕೆ ತಕ್ಕುದಾದ ರೂಪವನ್ನು ಬಳಸುವ, ಮತ್ತು ಹಾಗೆ ಬಳಸುವಾಗ ಆ ಪದದಲ್ಲಿ ತಕ್ಕುದಾದ ಮಾರ್ಪಾಡುಗಳನ್ನು ನಡೆಸುವ ಬಗೆ ಹೇಗೆ ಎಂಬುದು ಕನ್ನಡ ಬಲ್ಲವರಿಗೆಲ್ಲರಿಗೂ ಗೊತ್ತಿದೆ; ಆದರೆ, ಅವರಲ್ಲಿ ಹೆಚ್ಚಿನವರೂ ಅದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳಲಾರರು. ಯಾಕೆಂದರೆ, ಈ ಮಾತಿನ ಇಲ್ಲವೇ ಬರಹದ ಹಿಂದಿರುವ ಕಟ್ಟಲೆಗಳು ಅವರ ಮಿದುಳಿನಲ್ಲಿ ತಿಳಿವಿಗೆ ಎಟಕುವ ರೂಪದಲ್ಲಿಲ್ಲ.
ನಾವು ಸುಲಬವಾಗಿ ಬಳಸಬಲ್ಲ ಈ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿಯಬೇಕೆಂದಿದ್ದಲ್ಲಿ (ಎಂದರೆ ಅವು ನಮ್ಮ ತಿಳಿವಿಗೆ ಎಟಕುವ ಹಾಗೆ ಮಾಡಬೇಕಿದ್ದಲ್ಲಿ) ನಮ್ಮ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬಳಕೆಯಾಗುವ ಪದಗಳಿಗಿರುವ ಗೆ ರೂಪಗಳನ್ನು ಒಟ್ಟು ಸೇರಿಸಬೇಕು, ಮತ್ತು ಅವುಗಳ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯಬೇಕು. ಇದನ್ನು ನಾವು ನೇರವಾಗಿ ಯಾರನ್ನೂ ಕೇಳಿ ತಿಳಿದುಕೊಳ್ಳಲು ಬರುವುದಿಲ್ಲ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಅವು ಎಲ್ಲರ ಮಿದುಳಿನಲ್ಲೂ ಅರಿವಿಗೆ ಎಟಕದ ರೂಪದಲ್ಲಿ ಮಾತ್ರವೇ ಇರುತ್ತವೆ, ಮತ್ತು ಅರಿವಿಗೆ ಎಟಕದ ರೂಪದಲ್ಲೇ ಬಳಕೆಯಾಗುತ್ತಿರುತ್ತವೆ.
1.1.2 ಗೆಗೆಗೆಗೆ ರೂಪದ ಹಿಂದಿರುವ ಕಟ್ಟಲೆಗಳು
ನಮ್ಮ ಬರಹದಲ್ಲಿ ಬಳಕೆಯಾಗುವ ಪದಗಳ ಗೆ ರೂಪಗಳನ್ನು ಗಮನಿಸಿದಲ್ಲಿ, ಅವುಗಳ ಬಳಕೆಯ ಹಿಂದೆ ಕೆಳಗೆ ಕೊಟ್ಟಿರುವ ಕಟ್ಟಲೆಗಳು ಅಡಗಿರುವುದು ಕಾಣಿಸುತ್ತದೆ.
(1) ಇ ಬರಿಗೆಯಲ್ಲಿ ಇಲ್ಲವೇ ಎ ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಅದು ಗೆ ರೂಪದಲ್ಲಿ ಬರುತ್ತದೆ (ಅಜ್ಜಿ-ಅಜ್ಜಿಗೆ; ಕುರಿ-ಕುರಿಗೆ; ಹಕ್ಕಿ- ಹಕ್ಕಿಗೆ; ಅತ್ತೆ-ಅತ್ತೆಗೆ; ಮನೆ-ಮನೆಗೆ; ಕೆರೆ-ಕೆರೆಗೆ);
(ಮಗಳು-ಮಗಳಿಗೆ;
(2) ಉ ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಇಗೆ ರೂಪದಲ್ಲಿ ಕಾಡು-ಕಾಡಿಗೆ; ಹಣ್ಣು-ಹಣ್ಣಿಗೆ; ಬರುತ್ತದೆ ಹಲ್ಲು-ಹಲ್ಲಿಗೆ), ಮತ್ತು ಅದನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ; ಇದಲ್ಲದೆ, ಇಂತಹ ಪದಗಳಲ್ಲಿ ಎರಡು ಬರಿಗೆಕಂತೆಗಳು ಮಾತ್ರ ಇದ್ದು, ಅವುಗಳಲ್ಲಿ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿ ಇಲ್ಲವಾದಲ್ಲಿ, ಆ ರೀತಿ ಉಕಾರ ಬಿದ್ದುಹೋಗುವ ಬದಲು, ಅವುಗಳಿಗೂ ಇಗೆ ಒಟ್ಟಿಗೂ ನಡುವೆ ಒಂದು ವ್ ಬರಿಗೆ ಸೇರಿಕೊಳ್ಳುತ್ತದೆ (ಮಗು-ಮಗುವಿಗೆ, ಕರು-ಕರುವಿಗೆ, ಗಡು-ಗಡುವಿಗೆ);
ಬರಿಗೆಯಲ್ಲಿ ಕೊನೆಗೊಳ್ಳುವ ಪದ ಮಾನವನನ್ನು ಗುರುತಿಸುವುದಾದರೆ, ಅದರ ಬಳಿಕವೂ ಈ ಒಟ್ಟು ಇಗೆ ರೂಪದಲ್ಲಿ ಬರುತ್ತದೆ, ಮತ್ತು ಅದರ ಮೊದಲು ಒಂದು ನ್ ಬರಿಗೆ ಸೇರಿಕೊಳ್ಳುತ್ತದೆ (ಅಣ್ಣ-ಅಣ್ಣನಿಗೆ; ಹೆಡ್ಡ- ಹೆಡ್ಡನಿಗೆ; ಅಕ್ಕ-ಅಕ್ಕನಿಗೆ);
(3) C
(4) ಮಾನವರನ್ನು ಹೊರತುಪಡಿಸಿ ಇತರ ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವಂತಹ ಅ ಬರಿಗೆಯಲ್ಲಿ ಕೊನೆಗೊಳ್ಳುವ ಪದದ ಬಳಿಕ ಈ ಒಟ್ಟು ಕ್ಕೆ ರೂಪದಲ್ಲಿ ಬರುತ್ತದೆ (ಮರ-ಮರಕ್ಕೆ; ಅಟ್ಟ-ಅಟ್ಟಕ್ಕೆ, ಹುಳ- ಹುಳಕ್ಕೆ, ಹೆಗ್ಗಣ-ಹೆಗ್ಗಣಕ್ಕೆ).
ಇದು ಗೆ-ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳ ಅಡಕರೂಪ ಮಾತ್ರ. ಇದಕ್ಕೆ ಕೆಲವು ಹೊರಪಡಿಕೆಗಳಿವೆ, ಮತ್ತು ಬೇರೆಯೂ ಕೆಲವು ತೊಡರುಗಳಿವೆ. ಎತ್ತುಗೆಗಾಗಿ, ಅಕಾರದಲ್ಲಿ ಕೊನೆಗೊಳ್ಳುವ ಕೆಳ ಪದಕ್ಕೆ ಕೆಳಕ್ಕೆ ಎಂಬ ರೂಪ ಮಾತ್ರವಲ್ಲದೆ ಕೆಳಗೆ ಎಂಬ ಬೇರೊಂದು ರೂಪವೂ ಇದೆ; ಇದಲ್ಲದೆ, ಅವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವೂ ಇರುವ ಹಾಗಿದೆ.
ಒಂದು, ಎರಡು, ಮೂರು, ಹತ್ತು, ನೂರು ಮೊದಲಾದ ಎಣಿಕೆಯ ಪದಗಳು ಉಕಾರದಲ್ಲಿ ಕೊನೆಗೊಳ್ಳುತ್ತವೆಯಾದರೂ, ಅವುಗಳ ಬಳಿಕ ಇದಕ್ಕೆ ಕ್ಕೆ ರೂಪ ಇದೆ (ಹತ್ತಕ್ಕೆ, ನೂರಕ್ಕೆ); ಇಂತಹ ವಿಶಯಗಳನ್ನೆಲ್ಲ ವಿವರಿಸಿದಾಗ ಮಾತ್ರ, ಗೆ ಎಂಬ ಒಂದು ಒಟ್ಟನ್ನು ಬಳಸಲು ಬೇಕಾಗುವ ಕಟ್ಟಲೆಗಳ ಇಡೀ ರೂಪ ಸಿಗಬಲ್ಲುದು (4.8.2 ನೋಡಿ).
1.1.3 ಬೇರೆ ಬಗೆಯ ಕಟ್ಟಲೆಗಳು
ಪದಗಳಿಗೆ ಒಟ್ಟುಗಳನ್ನು ಸೇರಿಸುವಲ್ಲಿ ಮಾತ್ರವಲ್ಲ, ಪದಗಳನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸುವಲ್ಲಿ, ಮತ್ತು ಸೊಲ್ಲುಗಳನ್ನು ಕುರಳುಗಳಾಗಿ ಹಲವು ಕಟ್ಟಲೆಗಳು ಜೋಡಿಸುವಲ್ಲಿಯೂ ಮತ್ತು ಬರಹಗಳಾಗಿ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಚಿಕ್ಕ ಹುಡುಗಿ ಎನ್ನುತ್ತೇವೆ; ಆದರೆ,
ಎನ್ನುವುದಿಲ್ಲ;
ಹುಡುಗಿ ಚಿಕ್ಕವಳು *ಹುಡುಗಿ ಚಿಕ್ಕ ಎನ್ನುತ್ತೇವೆ. ಬಂದ ಮೇಲೆ ಎನ್ನುತ್ತೇವೆ; ಆದರೆ, *ಬರುವ ಮೇಲೆ ಎನ್ನುವುದಿಲ್ಲ; ಬರುವ ಮೊದಲು ಎನ್ನುತ್ತೇವೆ; ನನ್ನ ಕಪ್ಪು ಕೂದಲು ಎನ್ನುತ್ತೇವೆ; ಆದರೆ, *ಕಪ್ಪು ನನ್ನ ಕೂದಲು ಇಲ್ಲವೇ *ಕೂದಲು ನನ್ನ ಕಪ್ಪು ಎನ್ನುವುದಿಲ್ಲ.
ಎರಡು ಸೊಲ್ಲುಗಳನ್ನು ಸೇರಿಸಿ ಒಂದು ಸೊಲ್ಲಾಗಿ ಮಾಡಿ ಬಳಸಲು ಹಲವು ಹೊಲಬುಗಳಿವೆ; ಎತ್ತುಗೆಗಾಗಿ, ಮತ್ತು, ಇಲ್ಲವೇ, ಆದರೆ ಮೊದಲಾದ ಕೆಲವು ಪದಗಳನ್ನು ಬಳಸಿ ಸೊಲ್ಲುಗಳನ್ನು ಜೋಡಿಸಬಹುದು: (ರಾಜು ಮನೆಗೆ ಬಂದ ಮತ್ತು ಊಟ ಮಾಡಿದ); ಇಲ್ಲವೇ, ಮೊದಲನೇ ಸೊಲ್ಲಿನ ಎಸಕಪದದ ಕೊನೆರೂಪವನ್ನು ಜೋಡಿಸುವ ರೂಪಕ್ಕೆ ಮಾರ್ಪಡಿಸಿಯೂ ಅದನ್ನು ಎರಡನೆಯ ಸೊಲ್ಲಿನೊಂದಿಗೆ ಜೋಡಿಸಬಹುದು: (ರಾಜು ಮನೆಗೆ ಬಂದು ಊಟ ಮಾಡಿದ). ಆದರೆ ಎಲ್ಲಾ ಬಗೆಯ ಸೊಲ್ಲುಗಳನ್ನೂ ಈ ಎರಡನೆಯ ಹೊಲಬನ್ನು ಬಳಸಿ ಜೋಡಿಸಲು ಬರುವುದಿಲ್ಲ; ಅದರ ಬಳಕೆಯ ಹಿಂದೆ ಒಂದು ಕಟ್ಟಲೆಯಿದ್ದು, ಎಲ್ಲರಿಗೂ ಅದು ತಿಳಿದಿದೆ. ಆದರೆ, ಆ ಕಟ್ಟಲೆಯೆಂತಹದು ಎಂಬುದನ್ನು ಹೆಚ್ಚಿನವರೂ ವಿವರಿಸಿ ಹೇಳಲಾರರು.
‘ಜೋಡಿಸಬೇಕಾಗಿರುವ ಎರಡು ಸೊಲ್ಲುಗಳೂ ಮಾಡುಹಗಳಾಗಿದ್ದಲ್ಲಿ ಅವುಗಳ ಮಾಡುಗರು ಒಬ್ಬನೇ ವ್ಯಕ್ತಿಯಾಗಿರಬೇಕು’ ಎಂಬುದೇ ಈ ಕಟ್ಟಲೆ. ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ರಾಜು ಮನೆಗೆ ಬಂದು ಊಟ ಮಾಡಿದ ಸೊಲ್ಲಿನಲ್ಲಿ ‘ಮನೆಗ ಬಂದ’ ವ್ಯಕ್ತಿಯೂ ‘ಊಟ ಮಾಡಿದ’ ವ್ಯಕ್ತಿಯೂ ಒಬ್ಬನೇ. ಜೋಡಿಸಬೇಕಾಗಿರುವ ವ್ಯಕ್ತಿಗಳು ಮಾಡುಗರಾಗಿದ್ದಲ್ಲಿ, ಅವನ್ನು ಈ ರೀತಿ ಎಸಕಪದಗಳ ಜೋಡಿಸುವ ರೂಪದ ಮೂಲಕ ಜೋಡಿಸಲು ಬರುವುದಿಲ್ಲ.
ಸೊಲ್ಲುಗಳಲ್ಲಿ
ಬೇರೆ
ಬೇರೆ
ಎತ್ತುಗೆಗಾಗಿ, *ರಾಜು ಮನೆಗೆ ಬಂದು ಜಾನಕಿ ಊಟ ಮಾಡಿದಳು ಎಂಬ ಸೊಲ್ಲು ಸರಿಯೆಂದು ನಮಗೆ ಅನಿಸುವುದಿಲ್ಲ. ಅದರ ಎರಡು ಸೊಲ್ಲುಗಳಲ್ಲಿ ಬಂದಿರುವ ಮಾಡುಗರು ಬೇರೆ ಬೇರಾಗಿರುವುದೇ ಇದಕ್ಕೆ ಕಾರಣ: ‘ಮನೆಗೆ ಬಂದವನು’ ರಾಜು ಮತ್ತು ‘ಊಟ ಮಾಡಿದವಳು’ ಜಾನಕಿ. ಇದಕ್ಕೆ ಮೊದಲು ಕೊಟ್ಟಿರುವ ಸೊಲ್ಲಿನಲ್ಲಿ ‘ಮನೆಗೆ ಬಂದವನು’ ಮತ್ತು ‘ಊಟ ಮಾಡಿದವನು’ ಒಬ್ಬನೇ ವ್ಯಕ್ತಿಯಾದ ಕಾರಣ, ಆ ಸೊಲ್ಲು ನಮಗೆ ಸರಿಯೆಂದು ಅನಿಸುತ್ತದೆ.
ಇದಲ್ಲದೆ, ಮಾಡುಹದೊಂದಿಗೆ ಆಗುಹವನ್ನು ಸೇರಿಸಿರುವಲ್ಲಿ ಅವುಗಳಲ್ಲಿ ಬೇರೆ ಬೇರೆ ವ್ಯಕ್ತಿಗಳು ತೊಡಗಿದ್ದರೂ ತೊಂದರೆಯಾಗುವುದಿಲ್ಲ. ಎತ್ತುಗೆಗಾಗಿ, ರಾಜು ಮನೆಗೆ ಬಂದು ಜಾನಕಿಗೆ ತೊಂದರೆಯಾಯಿತು ಎಂಬ ಸೊಲ್ಲು ಸರಿಯಾಗಿದೆಯೆಂದು ಸೊಲ್ಲಿನಲ್ಲಿ ಒಂದು ನಮಗೆ ಅನಿಸುತ್ತದೆ; ಈ ಮಾಡುಹವನ್ನು ಇನ್ನೊಂದು ಮಾಡುಹದೊಂದಿಗೆ ಜೋಡಿಸುವ ಬದಲು, ಒಂದು ಆಗುಹದೊಂದಿಗೆ ಜೋಡಿಸಲಾಗಿದೆ.
ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬಳಕೆಯಾಗುವ ಇಂತಹ ನೂರಾರು ಕಟ್ಟಲೆಗಳನ್ನು ಒಟ್ಟು ಸೇರಿಸುವ ಮೂಲಕ ಒಂದು ನುಡಿಯ ಸೊಲ್ಲರಿಮೆಯನ್ನು ಬರೆಯಲಾಗುತ್ತದೆ; ಎಂದರೆ, ಮಾತನಾಡುವಾಗ ಇಲ್ಲವೇ ಬರೆಯುವಾಗ ನಿಜಕ್ಕೂ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಸೊಲ್ಲರಿಮೆ ತಿಳಿಸುತ್ತದೆ; ನಮಗೆ ಗೊತ್ತಿದ್ದರೂ ನಮ್ಮ ತಿಳಿವಿಗೆ ಎಟಕದಂತಿರುವ ಈ ಸೊಲ್ಲಿನ ಕಟ್ಟಲೆಗಳನ್ನು ಅದು ನಮ್ಮ ತಿಳಿವಿಗೆ ಎಟಕುವಂತೆ ಮಾಡುತ್ತದೆ. ಹಾಗಾಗಿ, ಸೊಲ್ಲರಿಮೆಯೊಂದರಲ್ಲಿ ಬರುವ ಯಾವುದೇ ಒಂದು ಕಟ್ಟಲೆ ಸರಿಯೋ ಇಲ್ಲವೇ ತಪೊ್ಪೀ ಎಂಬುದನ್ನು ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬರುವ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗಿದೆ ಎಂಬುದನ್ನು ಗಮನಿಸುವ ಮೂಲಕ ತೀರ್ಮಾನಿಸಲು ಬರುತ್ತದೆ.
1.2 ಕನ್ನಡದ ಹಲವು ಬಗೆಗಳು
ಮತ್ತು ಹಲವು ಬಗೆಯ ಆಡುನುಡಿಗಳು, ಒಳನುಡಿಗಳು ಕನ್ನಡಕ್ಕೆ ಹೊತ್ತುನುಡಿಗಳಿವೆ. ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಅದರಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳು ಆಡುನುಡಿಯ ವ್ಯತ್ಯಾಸಗಳು; ಬಳಕೆಯಿಂದ ಬಳಕೆಗೆ ಕಾಣಿಸಿಕೊಳ್ಳುವ ವ್ಯತ್ಯಾಸಗಳು ಒಳನುಡಿಯ ವ್ಯತ್ಯಾಸಗಳು; ಮತ್ತು, ತಲೆಮಾರಿನಿಂದ ತಲೆಮಾರಿಗೆ ಕಾಣಿಸಿಕೊಳ್ಳುವ ವ್ಯತ್ಯಾಸಗಳು ಹೊತ್ತುನುಡಿಯ ವ್ಯತ್ಯಾಸಗಳು.
ಇವುಗಳಲ್ಲಿ ಊರುಗಳ ನಡುವಿನ ವ್ಯತ್ಯಾಸಗಳು ಮುಕ್ಯವಾಗಿ ಹವ್ಯಕ, ಹಾಲಕ್ಕಿ, ಕೋಟ ಮೊದಲಾದ ಕರಾವಳಿಯ ಆಡುನುಡಿಗಳಿಗೂ ಮಯ್ಸೂರು, ದಾರವಾಡ, ಗುಲ್ಬರ್ಗ ಮೊದಲಾದ ಒಳನಾಡಿನ ಆಡುನುಡಿಗಳಿಗೂ ನಡುವೆ ಕಾಣಿಸುತ್ತವೆ; ಇದಲ್ಲದೆ, ಒಳನಾಡಿನ ಆಡುನುಡಿಗಳಲ್ಲೂ ತೆಂಕು ಮತ್ತು ಬಡಗು ಆಡುನುಡಿಗಳ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ. ಇದಕ್ಕೆ ಬದಲು, ಜಾತಿಗಳ ನಡುವಿನ ವ್ಯತ್ಯಾಸಗಳು ಮುಕ್ಯವಾಗಿ ಊರೊಳಗಿನವರ ಆಡುನುಡಿ, ಊರ ಹೊರಗಿನವರ ಆಡುನುಡಿ, ಮತ್ತು ಬ್ರಾಹ್ಮಣರ ಆಡುನುಡಿ ಎಂಬುದಾಗಿ ಮೂರು ಬಗೆಯ ಆಡುನುಡಿಗಳ ನಡುವೆ ಕಾಣಿಸುತ್ತವೆ.
ಇದಲ್ಲದೆ, ಸೊಲಿಗರ ಕನ್ನಡ, ಬಡಗರ ಕನ್ನಡ, ಕುರುಂಬರ ಕನ್ನಡ ಎಂಬಂತಹ ಮೇಲಿನ ಆಡುನುಡಿಗಳಿಂದ ತೀರ ಬೇರಾಗಿರುವ ಬೇರೆ ಕೆಲವು ಆಡುನುಡಿಗಳೂ ಕನ್ನಡಕ್ಕಿವೆ. ಇವುಗಳಲ್ಲಿ ಬಡಗರ ಕನ್ನಡವನ್ನಂತೂ ಕೆಲವರು ಬೇರೆಯೇ ಒಂದು ನುಡಿಯೆಂದು ತಿಳಿಯುತ್ತಾರೆ.
ಕನ್ನಡಕ್ಕೆ ಕೆಲವು ಒಳನುಡಿಗಳೂ ಇವೆ; ಇವು ಅದರ ಹಲವು ಬಗೆಯ ಬಳಕೆಗಳನ್ನವಲಂಬಿಸಿ ಮಾತಿನಲ್ಲಿ ಬಳಕೆಯಾಗುವ ಕನ್ನಡಕ್ಕೂ ಬರಹದಲ್ಲಿ ಬಳಕೆಯಾಗುವ ಕನ್ನಡಕ್ಕೂ ನಡುವೆ
ಬೆಳೆದುಬಂದಿವೆ.
ಎತ್ತುಗೆಗಾಗಿ,
ವ್ಯತ್ಯಾಸಗಳಿವೆ;
ಹಾಗಾಗಿ, ಬರಹದ
ಹಲವು ಕನ್ನಡವನ್ನು ಒಂದು ಒಳನುಡಿಯೆಂದು ಕರೆಯಬಲ್ಲೆವು. ಬರಹದ ಕನ್ನಡದಲ್ಲೂ ಸುದ್ದಿಹಾಳೆಗಳಲ್ಲಿ ಕತೆ-ಕಾದಂಬರಿಗಳಲ್ಲಿ ಬಳಕೆಯಾಗುವ ಕನ್ನಡಕ್ಕೂ ಅರಿಮೆಯ ಇಲ್ಲವೇ ಬರಹಗಳಲ್ಲಿ ಬಳಕೆಯಾಗುವ ಕನ್ನಡಕ್ಕೂ ನಡುವೆ ಕೆಲವು ವ್ಯತ್ಯಾಸಗಳಿವೆ, ಮತ್ತು ಇವಕ್ಕೂ ಕೋರ್ಟಿನ ಬರಹಗಳಲ್ಲಿ ಬಳಕೆಯಾಗುವ ಕನ್ನಡಕ್ಕೂ ನಡುವೆ ಕೆಲವು ವ್ಯತ್ಯಾಸಗಳಿವೆ. ಜಾಹೀರಾತುಗಳ ಕನ್ನಡ, ತಲೆಬರಹಗಳ ಕನ್ನಡ ಎಂಬಂತಹ ಬೇರೆಯೂ ಕೆಲವು ಒಳನುಡಿಗಳನ್ನು ಕನ್ನಡದ ಬಳಕೆಯಲ್ಲಿ ಕಾಣಬಹುದು.
ಹೀಗೆ, ಹಲವು ಬಗೆಯ ಕೆಲಸಗಳಲ್ಲಿ ಕನ್ನಡದ ಬಳಕೆಯಾಗುತ್ತಿರುವಂತೆ, ಮತ್ತು ಈ ಹಲವು ಬಗೆಯ ಒಳನುಡಿಗಳೂ
ಮೂಡಿಬರುತ್ತವೆ,
ಅದರಲ್ಲಿ ಹಲವು ಮಾರ್ಪಾಡುಗಳಿಂದಾಗಿ, ಅದರಲ್ಲಿ ಮೂಡಿಬರುತ್ತವೆ.
ಮಾರ್ಪಾಡುಗಳು
ವ್ಯತ್ಯಾಸಗಳನ್ನು
ಕನ್ನಡದಲ್ಲಿ ಹಲವು
ಊರು, ಜಾತಿ ಮತ್ತು ಬಳಕೆಗಳನ್ನವಲಂಬಿಸಿ ಮಾತ್ರವಲ್ಲದೆ, ಹೊತ್ತನ್ನು ಕಾಣಬಲ್ಲೆವು. ಅವಲಂಬಿಸಿಯೂ ಎತ್ತುಗೆಗಾಗಿ, ಒಂದು ಸಾವಿರ ವರ್ಶಗಳಶ್ಟು ಹಿಂದೆ ಬಳಕೆಯಲ್ಲಿದ್ದ ಕನ್ನಡಕ್ಕೂ ಇವತ್ತಿನ ಕನ್ನಡಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ತಲೆಮಾರಿನಿಂದ ತಲೆಮಾರಿಗೆ ನಡೆಯುತ್ತಾ ಬರುತ್ತಿರುವುದೇ ಇದಕ್ಕೆ ಕಾರಣ. ಒಂದೇ ತಲೆಮಾರಿನ ಜನರಲ್ಲೂ, ಅವರು ಚಿಕ್ಕವರಿದ್ದಾಗ ಆಡುತ್ತಿದ್ದ ನುಡಿಗೂ, ದೊಡ್ಡವರಾದ ಮೇಲೆ ಆಡುವ ನುಡಿಗೂ ನಡುವೆ ಹಲವು ವ್ಯಾತ್ಯಾಸಗಳಿರುವುದನ್ನು ಗಮನಿಸಬಹುದು. ಇಂತಹ ಹೊತ್ತಿನ ಮಾರ್ಪಾಡುಗಳಿಂದಾಗಿ, ಹಳೆಗನ್ನಡವಾಗಿದ್ದ ನುಡಿ ನಡುಗನ್ನಡವಾಗಿ, ಇವತ್ತು ಹೊಸಗನ್ನಡವಾಗಿದೆ.
ಮಾರ್ಪಾಡುಗಳು
ಕನ್ನಡದಲ್ಲಿ
ಹಲವಾರು
ಕನ್ನಡದ ಸೊಲ್ಲರಿಮೆಯನ್ನು ಬರೆಯಬೇಕೆಂದಿರುವವರು ಅದಕ್ಕಿರುವ ಇಂತಹ ಹಲವು ಆಡುನುಡಿ, ಒಳನುಡಿ, ಮತ್ತು ಹೊತ್ತುನುಡಿಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಈ ಪುಸ್ತಕದಲ್ಲಿ ಇದಕ್ಕಾಗಿ ಹೊಸಗನ್ನಡದ ಒಂದು ಒಳನುಡಿಯನ್ನು ಆರಿಸಿಕೊಳ್ಳಲಾಗಿದೆ, ಮತ್ತು ಅದಕ್ಕೆ ಎಲ್ಲರ ಕನ್ನಡ ಎಂಬ ಹೆಸರನ್ನು ಕೊಡಲಾಗಿದೆ.
1.2.1 ಯಾವುದು ಎಲ್ಲರ ಕನ್ನಡ?
ಕರ್ನಾಟಕದಲ್ಲಿ ಎಲ್ಲರೂ ತಮ್ಮ ಬರಹಗಳಲ್ಲಿ ಬಳಸುವಂತಹ ಒಂದು ಒಳನುಡಿಯಿದೆ. ಎತ್ತುಗೆಗಾಗಿ, ಹುಬ್ಬಳ್ಳಿಯಿಂದ ಹೊರಬರುವ ಸಂಯುಕ್ತ ಕರ್ನಾಟಕದಲ್ಲಿ, ಬೆಂಗಳೂರಿನಿಂದ ಹೊರಬರುವ ಪ್ರಜಾವಾಣಿ ಇಲ್ಲವೇ ವಿಜಯ ಹೊರಬರುವ ಉದಯವಾಣಿಯಲ್ಲಿ ಕನ್ನಡ ಬಳಕೆಯಾಗುತ್ತದೆ. ಈ ಊರುಗಳಲ್ಲಿ ಜನರು ಬೇರೆ ಬೇರೆ ಬಗೆಯ
ಕಡಿಮೆ ಒಂದೇ ಬಗೆಯ
ಮತ್ತು ಉಡುಪಿಯಿಂದ
ಕರ್ನಾಟಕದಲ್ಲಿ,
ಹೆಚ್ಚು
ಆಡುನುಡಿಗಳನ್ನು ಬಳಸುವುದಿದ್ದರೂ, ಸುದ್ದಿಹಾಳೆಗಳಲ್ಲಿ ಬರೆಯುವವರು ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡವನ್ನು ಬಳಸುತ್ತಾರೆ.
ಎತ್ತುಗೆಗಾಗಿ, ಹುಬ್ಬಳ್ಳಿಯ ಆಡುನುಡಿಯಲ್ಲಿ ಪದಗಳ ಕೊನೆಯ ಎಕಾರ ಅಕಾರವಾಗಿ ಕಾಣಿಸಿಕೊಳ್ಳುತ್ತದೆ (ಮನೆ>ಮನಿ, ಎಲೆ>ಯಲಿ, ಕಾಗೆ>ಕಾಗಿ, ಬರೆ>ಬರಿ, ಕೊಳೆ>ಕ್ವಳಿ). ಆದರೆ, ಸಂಯುಕ್ತ ಕರ್ನಾಟಕದಲ್ಲಿ ಬರೆಯುವವರು ಸಾಮಾನ್ಯವಾಗಿ ಪದಗಳ ಕೊನೆಯ ಎಕಾರವನ್ನು ಇಕಾರವಾಗಿ ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಬೆಂಗಳೂರಿನ ಹಲವರ ಆಡುನುಡಿಯಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗುತ್ತದೆ (ಹಣೆ>ಅಣೆ, ಹಾಲು>ಆಲು, ಹುಲಿ>ಉಲಿ). ಆದರೆ, ಪ್ರಜಾವಾಣಿ ಇಲ್ಲವೇ ವಿಜಯ ಕರ್ನಾಟಕದಲ್ಲಿ ಬರೆಯುವವರು ಈ ಹಕಾರವನ್ನು ಹೆಚ್ಚಿನೆಡೆಗಳಲ್ಲೂ ಉಳಿಸಿಕೊಳ್ಳುತ್ತಾರೆ. ಕರಾವಳಿಯ ಕನ್ನಡದ ಆಡುನುಡಿಗಳೂ ಹಲವು ವಿಶಯಗಳಲ್ಲಿ ಒಳನಾಡಿನ ಆಡುನುಡಿಗಳಿಂದ ಬೇರಾಗಿವೆ; ಆದರೆ, ಉದಯವಾಣಿಯಲ್ಲಿ ಬರೆಯುವವರು ಹೆಚ್ಚಿನ ಮಟ್ಟಿಗೆ ಬೇರೆ ಸುದ್ದಿಹಾಳೆಗಳಲ್ಲಿ ಬಳಕೆಯಾಗುವಂತಹ ಒಳನುಡಿಯನ್ನೇ ಬಳಸಹೋಗುತ್ತಾರೆ.
ಸುದ್ದಿಹಾಳೆಗಳಲ್ಲಿ ಮಾತ್ರವಲ್ಲದೆ, ಬೇರೆ ಹಲವು ಬಗೆಯ ಬರಹಗಳಲ್ಲೂ ಇದೇ ಒಳನುಡಿ ಬಳಕೆಯಾಗುತ್ತದೆ: ಕತೆ-ಕಾದಂಬರಿಗಳಲ್ಲೂ ಈ ಒಳನುಡಿಯೇ ಬಳಕೆಯಾಗುತ್ತದೆ; ಸೂಳುನುಡಿಗಳು (ಸಂಬಾಶಣೆಗಳು) ಬರುವಲ್ಲಿ ಮಾತ್ರ, ಕೆಲವರು ಅವು ಆಡುನುಡಿಯಲ್ಲಿವೆ ಎಂಬ ಅನಿಸಿಕೆ ಬರುವ ಹಾಗೆ, ಅವುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾರೆ. ಬೇರೆ ಹಲವು ಬಗೆಯ ಬರಹಗಳಲ್ಲೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಇದಲ್ಲದೆ, ಶಾಲೆಗಳಲ್ಲಿ ಮಕ್ಕಳಿಗೆ ಓದಲು ಮತ್ತು ಬರೆಯಲು ಇದೇ ಒಳನುಡಿಯನ್ನು ಕಲಿಸುತ್ತಾರೆ, ಮತ್ತು ಅವರ ಕಲಿಕೆಯ ಪುಸ್ತಕಗಳಲ್ಲಿ ಇದನ್ನೇ ಬಳಸುತ್ತಾರೆ.
ಎಂಬುದಾಗಿ
ಹೆಸರಿಸಲಾಗಿದೆ. ಬರಹಗಳಲ್ಲಿ
ಈ ರೀತಿ, ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸಲು ಕಲಿಯುವ ಈ ಒಳನುಡಿಯನ್ನು ಇಲ್ಲಿ ಎಲ್ಲರ ಕನ್ನಡ ಮಾತ್ರವಲ್ಲದೆ ಮಾತಿನಲ್ಲಿಯೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಎತ್ತುಗೆಗಾಗಿ, ಹವ್ಯಕ, ಹಾಲಕ್ಕಿ, ಗವ್ಡ ಮೊದಲಾದ ಆಡುನುಡಿಗಳನ್ನು ಮತ್ತು ತುಳು, ಕೊಂಕಣಿ, ಮರಾಟಿ ಮೊದಲಾದ ಬೇರೆ ಕೆಲವು ನುಡಿಗಳನ್ನು ಬಳಸುವ ಕರಾವಳಿಯ ಜನರು, ತಮ್ಮದಲ್ಲದ ಬೇರೆ ಆಡುನುಡಿ ಇಲ್ಲವೇ ನುಡಿಗಳನ್ನು ಆಡುವವರೊಂದಿಗೆ ಮಾತನಾಡುವಾಗ, ಹಲವೆಡೆಗಳಲ್ಲಿ ಈ ಎಲ್ಲರ ಕನ್ನಡವನ್ನೇ ಬಳಸುತ್ತಾರೆ. ಬೇರೆ ಕಡೆಗಳಲ್ಲೂ ಹಲವು ಸಂದರ್ಬಗಳಲ್ಲಿ (ತರಗತಿಗಳಲ್ಲಿ ಮತ್ತು ಸಬೆ-ಸಮಾರಂಬಗಳಲ್ಲಿ) ಆಡುಮಾತಿನ ಬದಲು ಎಲ್ಲರ ಕನ್ನಡವನ್ನೇ ಬಳಸಬೇಕಾಗುತ್ತದೆ.
ಮತ್ತು
ಆದರೆ, ಇದು ಮುಕ್ಯವಾಗಿ ಬರಹದ ಕನ್ನಡವಾಗಿದೆ; ಇದರಲ್ಲಿ ಎಂತಹ ಪದಗಳನ್ನು ಪದರೂಪಗಳನ್ನು ಬಳಸಬಹುದು, ಎಂತಹವನ್ನು ಬಳಸಬಾರದು, ಇದರ ಸೊಲ್ಲುಗಳು ಎಂತಹವಾಗಿರಬೇಕು ಎಂಬುದನ್ನೆಲ್ಲ ಬರಹಗಳೇ ನಿರ್ದರಿಸುತ್ತವೆ; ಮಾತಿನಲ್ಲಿ ಬಳಕೆಯಾದಾಗ, ಇವುಗಳಲ್ಲಿ ಕೆಲವು ಮಾರ್ಪಾಡುಗಳು ನಡೆಯಬಹುದು; ಎತ್ತುಗೆಗಾಗಿ, ಪದರೂಪಗಳಲ್ಲಿ ಕೆಲವು ತೆರೆಯುಲಿಗಳು ಬಿದ್ದುಹೋಗಬಹುದು: ಮಾಡುತ್ತಾನೆ ಎಂಬುದು ಮಾಡ್ತಾನೆ ಎಂದಾಗಬಹುದು; ಆದರೆ ಇಂತಹ ಹೆಚ್ಚಿನ ಮಾರ್ಪಾಡುಗಳೂ ಮಾತಿನಲ್ಲೇ ಉಳಿಯುತ್ತವಲ್ಲದೆ ಬರಹಕ್ಕೆ ಇಳಿಯುವುದಿಲ್ಲ.
1.2.2 ಎಲ್ಲರ ಕನ್ನಡ ಇವತ್ತು ಎಲ್ಲರದಾಗಿಲ್ಲ
ಕನ್ನಡದಲ್ಲಿ ಓದುಬರಹವನ್ನು ಕಲಿಯುವವರೆಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯ ಬರಹದ ಒಳನುಡಿಯನ್ನು ಕಲಿಯುತ್ತಿದ್ದಾರೆ ಮತ್ತು ಬಳಸುತ್ತಿದ್ದಾರೆ ಎಂಬುದರ ಮೇಲೆ, ಅದನ್ನು ಇಲ್ಲಿ ಎಲ್ಲರ ಕನ್ನಡ ಎಂಬುದಾಗಿ ಕರೆಯಲಾಗಿದೆ. ಆದರೆ, ನಿಜಕ್ಕೂ ಇದು ಇವತ್ತು ಎಲ್ಲರ ಕನ್ನಡವಾಗಿಲ್ಲ; ಯಾಕೆಂದರೆ, ನೂರರಲ್ಲಿ ಅಯ್ವತ್ತಕ್ಕಿಂತಲೂ ಕಡಿಮೆ ಮಂದಿ ಕನ್ನಡಿಗರು ಮಾತ್ರ ಇವತ್ತು ಬರಹಗಳನ್ನು ಓದಬಲ್ಲರು, ಮತ್ತು ಅವುಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳಬಲ್ಲರು. ಉಳಿದವರೆಲ್ಲ ಬರಹದಿಂದ ದೂರವೇ ಉಳಿಯುತ್ತಿದ್ದಾರೆ.
ಮೊನ್ನೆ ಮೊನ್ನೆಯ ವರೆಗೆ ಇದರಿಂದ ಹೆಚ್ಚಿನ
ತೊಂದರೆಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಮುಕ್ಯವಾಗಿ ಕತೆ, ಕವಿತೆ, ನಾಟಕ, ಪುರಾಣ ಮೊದಲಾದ ನಲ್ಬರಹಗಳಿಗಾಗಿ ಮಾತ್ರವೇ ಬರಹವನ್ನು ಬಳಸಲಾಗುತ್ತಿತ್ತು. ಆದರೆ, ಇವತ್ತು ಅಂತಹವುಗಳಿಗಿಂತಲೂ ಜನರಿಗೆ ತಿಳುವಳಿಕೆಯನ್ನು ಕೊಡುವಂತಹ ಕೆಲಸಗಳಲ್ಲೇನೇ ಬರಹಗಳನ್ನು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಇವು ಎಲ್ಲರಿಗೂ ಬೇಕಾಗುವಂತಹ ಬರಹಗಳು.
ಎತ್ತುಗೆಗಾಗಿ, ಟಿ.ವಿ., ರೇಡಿಯೋ, ಮಿಕ್ಸಿ, ಮೊಬಯ್ಲು ಮೊದಲಾದ ಹಲವಾರು ಬಗೆಯ ಉಪಕರಣಗಳನ್ನು ಇವತ್ತು ಎಲ್ಲರೂ ಬಳಸುತ್ತಿದ್ದಾರೆ; ಬೇಕಾಗುವ ಅವನ್ನು ತಿಳುವಳಿಕೆಯನ್ನು ಅವರು ಪಡೆದಿರಬೇಕಾಗುತ್ತದೆ. ಆದರೆ, ಈ ತಿಳುವಳಿಕೆ ಕಯ್ಪಿಡಿಗಳಲ್ಲಿರುತ್ತದೆ, ಮತ್ತು ಅವುಗಳಿಂದ ಅದನ್ನು ಬರಹ ಬಲ್ಲವರು ಮಾತ್ರವೇ ಪಡೆಯಬಲ್ಲರು.
ಸರಿಯಾಗಿ ಬಳಸಬೇಕಿದ್ದಲ್ಲಿ, ಅದಕ್ಕೆ
ಕೆಡಿಸದೆ
ಬೆಳೆಗಳನ್ನು
ಬೆಳೆಯುವಲ್ಲಿ,
ಬೀಜಗಳನ್ನು ಆರಿಸಿಕೊಳ್ಳುವಲ್ಲಿ, ಅವಕ್ಕೆ ಗೊಬ್ಬರ, ಪೂಚಿಯಳಿಕ ಮೊದಲಾದುವನ್ನು ತಪ್ಪದೆ ಹಾಕುವಲ್ಲಿ, ಮತ್ತು ಬೆಳೆದ ಬೆಳೆಯನ್ನು ಲಾಬ ಹುಟ್ಟುವಂತೆ ಮಾರಾಟ
ಅದಕ್ಕಾಗಿ
ಒಳ್ಳೇ
ಮಾಡುವಲ್ಲಿ ನೆರವಾಗುತ್ತವೆ.
ಸರಿಯಾದ
ತಿಳುವಳಿಕೆಯನ್ನು
ಪಡೆಯಲು ಬರಹಗಳು
ನಮ್ಮ ನಾಡಿನ ಆಡಳಿತ ಇವತ್ತು ಜನರ ಕಯ್ಗೆ ಬಂದಿದೆ; ಇದನ್ನವರು ಸರಿಯಾಗಿ ನಡೆಸಬೇಕಿದ್ದಲ್ಲಿ, ತಾವು ಆಯ್ದು ಕಳಿಸಿದ ಜನರು ನಿಜಕ್ಕೂ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದಿರಬೇಕು. ಈ ತಿಳುವಳಿಕೆಯೂ ಮುಕ್ಯವಾಗಿ ಸುದ್ದಿಹಾಳೆಗಳಂತಹ ಬರಹಗಳಲ್ಲಿರುತ್ತದೆ. ಓದಲು-ಬರೆಯಲು ಬಾರದವರು ಈ ತಿಳುವಳಿಕೆಯಿಂದ ದೂರ ಉಳಿಯುತ್ತಾರೆ, ಮತ್ತು ಇದರಿಂದಾಗಿ ನಾಡಿನ ಆಡಳಿತ ಅವರ ಹತೋಟಿಯಲ್ಲಿ ಉಳಿಯುವುದಿಲ್ಲ.
ಜನರಿಗೆ ಇವತ್ತು ಜೀವನದಲ್ಲಿ ಇಂತಹ ನೂರಾರು ಬಗೆಯ ತಿಳುವಳಿಕೆಗಳು ಬೇಕಾಗುತ್ತವೆ, ಮತ್ತು ಅವುಗಳಲ್ಲಿ ಹೆಚ್ಚಿನವನ್ನೂ ಅವರು ಬರಹಗಳ ಮೂಲಕ ಮಾತ್ರವೇ ಪಡೆಯಬಲ್ಲರು. ಹಾಗಾಗಿ, ಬರಹ ತಿಳಿಯದವರು ಇವತ್ತು ನೆಮ್ಮದಿಯ ಬಾಳ್ವೆಯನ್ನು ನಡೆಸಲಾರರು. ಅವರು ಕಣ್ಣಿದ್ದರೂ ಕುರುಡರ ಹಾಗಿರಬೇಕಾಗಿದೆ.
1.2.3 ಎಲ್ಲರದಾಗಲು ಏನು ಮಾಡಬೇಕು?
ಎಲ್ಲಾ ಕನ್ನಡಿಗರೂ ಕನ್ನಡ ಬರಹಗಳನ್ನು ಓದಲು ಮತ್ತು ಬರೆಯಲು ತಿಳಿದಿರುವಂತೆ ಮಾಡಲು ಇವತ್ತು ನಾವು ಕನ್ನಡ ಬರಹದ ಮಟ್ಟಿಗೆ ಏನು ಮಾಡಬಹುದು, ಮತ್ತು ಏನು ಮಾಡಬೇಕಾಗಿದೆ ಎಂಬುದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ವಿವರಿಸಿದ್ದೇನೆ. ಜನರಿಗೆ ತಿಳುವಳಿಕೆಯನ್ನು ಕೊಡುವಂತಹ ಬರಹಗಳಲ್ಲಿ ಬಳಕೆಯಾಗುವ ಎಲ್ಲರ ಕನ್ನಡ ಆದಶ್ಟು ಮಟ್ಟಿಗೆ ಅವರ ಆಡುನುಡಿಗೆ ಹತ್ತಿರವಿರಬೇಕೆಂಬುದೇ ಇಲ್ಲಿ ಮುಕ್ಯವಾದ ವಿಶಯ. ಆದರೆ, ಬೇರೆ ಬೇರೆ ಊರಿನ ಮತ್ತು ಜಾತಿಯ ಜನರು ಬೇರೆ ಬೇರೆ ಆಡುನುಡಿಗಳನ್ನು ಬಳಸುತ್ತಿರುವ ಕಾರಣ, ಅವರೆಲ್ಲರಿಗೂ ಸಮಾನವಾಗಿರಬೇಕಾಗಿರುವ ಎಲ್ಲರ ಕನ್ನಡ ಅವರು ಬಳಸುವ ಆಡುನುಡಿಗಳಿಂದ ತುಸುವಾದರೂ ಬೇರಾಗಿರಲೇಬೇಕಾಗುತ್ತದೆ.
ಹೀಗಿದ್ದರೂ, ಜನರ ಆಡುನುಡಿಗಳಿಗೂ ಎಲ್ಲರ ಕನ್ನಡಕ್ಕೂ ನಡುವೆ ಇವತ್ತು ಕಂಡುಬರುವ ವ್ಯತ್ಯಾಸಗಳಲ್ಲಿ ಹಲವನ್ನು ನಾವು ಇಲ್ಲವಾಗಿಸಬಲ್ಲೆವು, ಮತ್ತು ಹಾಗೆ ಮಾಡಿದಲ್ಲಿ, ಓದಲು ಮತ್ತು ಬರೆಯಲು ಕಲಿಯುವ ಕೆಲಸ ಎಲ್ಲರಿಗೂ ಹೆಚ್ಚು ಸುಳುವಾಗಬಲ್ಲುದು.
ಇವತ್ತಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಎಲ್ಲರ ಕನ್ನಡ ಎರಡು ವಿಶಯಗಳಲ್ಲಿ ಓದಲು ಮತ್ತು ಬರೆಯಲು ಕಲಿಯುವವರಿಗೆ ತೊಡಕನ್ನು ಒಡ್ಡುತ್ತಿದೆ: ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು, ಅವುಗಳ ಓದು ಸಂಸ್ಕ್ರುತದಲ್ಲಿರುವ ಹಾಗೆಯೇ ಇಲ್ಲವೇ ಉಲಿಪು ಹೇಗೆಯೇ ಇರಲಿ,
ಬರೆಯಬೇಕು ಎಂಬ ಕನ್ನಡಕ್ಕೆ ತೀರ ಅನವಶ್ಯಕವಾದ ಕಟ್ಟಲೆಯೊಂದನ್ನು ಮಾಡಿಕೊಂಡಿರುವುದು ಮೊದಲನೆಯ ತೊಡಕು, ಮತ್ತು ಬೇಕಿರುವಲ್ಲೂ ಬೇಡದಿರುವಲ್ಲೂ ಸಂಸ್ಕ್ರುತದಿಂದ ಹೆಚ್ಚು ಹೆಚ್ಚು ಪದಗಳನ್ನು ಎರವಲು ಪಡೆದು ಬಳಸುತ್ತಿರುವುದು ಎರಡನೆಯ ತೊಡಕು.
(1) ಮೊದಲನೇ ತೊಡಕಿಗೆ ಪರಿಹಾರ ಇವುಗಳಲ್ಲಿ ಮೊದಲನೆಯ ತೊಡಕಿನಿಂದಾಗಿ, ಕನ್ನಡಕ್ಕೆ ಬೇಕಾಗುವ 31 ಬರಿಗೆಗಳ ಬದಲು, ಇವತ್ತು 48 ಬರಿಗೆಗಳನ್ನು (ಎಂದರೆ 17 ಹೆಚ್ಚಿನ ಬರಿಗೆಗಳನ್ನು) ಕನ್ನಡ ಬರಹದಲ್ಲಿ ಬಳಸಬೇಕಾಗಿದೆ. ಆದರೆ, ಈ ಬರಿಗೆಗಳು ಹೆಚ್ಚಿನ ಕನ್ನಡಿಗರ ಓದು ಇಲ್ಲವೇ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎತ್ತುಗೆಗಾಗಿ, ಅಧಿಕಾರಿ, ವಿಶೇಷ, ತೃಪ್ತಿ, ಬುದ್ಧಿ, ದುಃಖ, ಭಕ್ತಿ ಮೊದಲಾದ ಪದಗಳು ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಅದಿಕಾರಿ, ವಿಶೇಶ, ತ್ರುಪ್ತಿ, ಬುದ್ದಿ, ದುಕ್ಕ, ಬಕ್ತಿ ಎಂಬುದಾಗಿ ಕಾಣಿಸಿಕೊಳ್ಳುತ್ತವೆ. ಓದಿನಲ್ಲಿಲ್ಲದಿರುವ ವ್ಯತ್ಯಾಸವನ್ನು ಬರಹದಲ್ಲಿ ತೋರಿಸುವುದು ತುಂಬಾ ತೊಡಕಿನ ಕೆಲಸ. ಇದರಿಂದಾಗಿ, ಇವತ್ತು ಕನ್ನಡ ಬರಹದ ಕಲಿಕೆ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗಿ ಕಾಣಿಸುತ್ತದೆ.
ನಿಜಕ್ಕೂ ಕನ್ನಡಕ್ಕೆ ಬೇಕಾಗಿಲ್ಲದ ಈ ಕಟ್ಟಲೆಯನ್ನು ಎಲ್ಲರ ಕನ್ನಡದ ಬರಹ ದಿಂದ ತೆಗೆದುಹಾಕಿದಲ್ಲಿ, ಅದಕ್ಕೆ ಈ 17 ಹೆಚ್ಚಿನ ಬರಿಗೆಗಳು ಬೇಕಾಗುವುದಿಲ್ಲ; ಎಂದರೆ, ಬರೇ 31 ಬರಿಗೆಗಳು ಮಾತ್ರ ಸಾಕಾಗುತ್ತದೆ. ಇಂತಹ ಬರಹವನ್ನು ನಾನು ಹೊಸ ಬರಹ ಎಂದು ಕರೆದಿದ್ದೇನೆ. ಈ ರೀತಿ ಕನ್ನಡದ ಪದಗಳ ಹಾಗೆ, ಮತ್ತು ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳ ಹಾಗೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೂ ಓದುವ ಹಾಗೆಯೇ ಬರೆಯತೊಡಗುವುದರಿಂದ ಏನು ಪ್ರಯೋಜನ ಎಂಬುದಕ್ಕೆ ನಾನು ನನ್ನ ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ ಒಟ್ಟು ಎಂಟು ಮುಕ್ಯ ಕಾರಣಗಳನ್ನು ಕೊಟ್ಟಿದ್ದೇನೆ. ಅವನ್ನು ಇಲ್ಲಿ ಅಡಕವಾಗಿ ಕೊಡಲಾಗಿದೆ:
(1) ಚಿಕ್ಕ ಮಕ್ಕಳಿಗೆ (ಅದರಲ್ಲೂ ಕೆಳವರ್ಗದ ಮಕ್ಕಳಿಗೆ) ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಸುಲಬವಾಗುತ್ತದೆ. ಅವರಿಗೆ 50 ಅಕ್ಶರಗಳ ಬದಲು ಬರೇ 31 ಅಕ್ಶರಗಳನ್ನು ಕಲಿಸಿದರೆ ಸಾಕು.
(2) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತದೆ. ಅಂತಹ ಸ್ಪೆಲ್ಲಿಂಗ್ ಸಮಸ್ಯೆಯಿಲ್ಲದ ಬರಹವನ್ನು ಮಕ್ಕಳು ಒಂದು ವರ್ಶದಲ್ಲಿ ಎಶ್ಟು ಕಲಿಯ ಬಲ್ಲರೋ ಅಶ್ಟನ್ನು ಕಲಿಯಲು ಸ್ಪೆಲ್ಲಿಂಗ್ ಸಮಸ್ಯೆಯಿರುವ ಇಂಗ್ಲಿಶ್ನಂತಹ ಬರಹವನ್ನು ಕಲಿಯಲು ಎರಡೂವರೆ ವರ್ಶ ಬೇಕಾಗುತ್ತದೆಯೆಂದು ಸಂಶೋದನೆ ಗಳು ತೋರಿಸಿಕೊಟ್ಟಿವೆ.
(3) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆ-ಕಾದಂಬರಿಗಳಲ್ಲಿ ತುಂಬಾ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣಾಕ್ಶರ, ಷಕಾರ, ಮತ್ತು ಋಕಾರಗಳ ಬಳಕೆಯಲ್ಲಿ. ಇವು ಸಾಮಾನ್ಯವಾಗಿ ಹೊಸ ಬರಹದಲ್ಲಿ ಬರುವುದಿಲ್ಲವಾದ ಕಾರಣ, ಅದನ್ನು ಬಳಸಿದಲ್ಲಿ ಈ ತಪ್ಪುಗಳೆಲ್ಲವೂ ಇಲ್ಲ ವಾಗುತ್ತವೆ. (ಹಲವು ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು).
(4) ಬರಹಗಾರರಿಗೆ ಎಲ್ಲಿ ಯಾವ ಅಕ್ಶರಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಅಕ್ಶರಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ಹೊಸ ಬರಹದಲ್ಲಿ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ.
(5) ಕೆಳವರ್ಗದ ಮಕ್ಕಳಿಗೆ ಉಚ್ಚಾರಣೆಯಲ್ಲಿಲ್ಲದ ಈ ಹೆಚ್ಚಿನ ಅಕ್ಶರಗಳನ್ನು ಕಲಿಯಲು ತುಂಬಾ ಕಶ್ಟವೆಂದೆನಿಸುವ ಕಾರಣ ಅವರಲ್ಲಿ ಕೀಳರಿಮೆಯುಂಟಾಗು ತ್ತದೆ, ಮತ್ತು ಇದರಿಂದಾಗಿ ಅವರು ತಮ್ಮ ಕಲಿಕೆಯನ್ನು ನಡುವಿನಲ್ಲೇ ಬಿಟ್ಟು ಬಿಡುತ್ತಾರೆ. ಹೊಸ ಬರಹದ ಬಳಕೆಯಾದಲ್ಲಿ ಈ ತೊಂದರೆಯಿಲ್ಲ.
(6) ಹೊಸ ಬರಹದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ ಬರೆಯುವುದು ಸುಲಬ; ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತ ಬೇಕಾಗುತ್ತದೆ.
(7) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ
ಆಡುಮಾತಿಗೂ ನಡುವಿರುವ ಅಂತರ ಕಡಿಮೆಯಾಗುತ್ತದೆ.
(8) ಬರಹದ ಕ್ಲಿಶ್ಟತೆ ಮತ್ತು ಕ್ರುತಕತೆಗಳು ಕಡಿಮೆಯಾಗುತ್ತವೆ, ಮತ್ತು
ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು ಪುಸ್ತಕದಲ್ಲಿ
ಇನ್ನೊಂದು ಮುಕ್ಯವಾದ ಪ್ರಯೋಜನವನ್ನೂ ಕೊಟ್ಟಿದ್ದೇನೆ:
(9) ಬರಹವನ್ನು ಓದಲು ಕಲಿಯುವ ಮಕ್ಕಳು ಅದರಲ್ಲಿ ಬರಿಗೆಗಳನ್ನು ಜೋಡಿಸಿ ಪದಗಳನ್ನು ಬರೆಯಲಾಗುತ್ತದೆ (ಮ್, ಅ, ರ್, ಅ ಎಂಬ ಬರಿಗೆ ಗಳನ್ನು ಜೋಡಿಸಿ ಮರ ಪದವನ್ನು ಬರೆಯಲಾಗುತ್ತದೆ) ಎಂಬುದನ್ನು, ಮತ್ತು ಈ ಬರಿಗೆಗಳಿಗೂ ಉಲಿಗಳಿಗೂ ನಡುವೆ ಸಂಬಂದ ಇದೆ ಎಂಬುದನ್ನು ಕಂಡು ಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಓದಲು ಬರುತ್ತದೆ.
ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದ ಇದೆಯಾದರೆ ಇದನ್ನು ಕಂಡುಕೊಳ್ಳುವುದು ಸುಲಬ; ‘ಸ್ಪೆಲ್ಲಿಂಗ್’ ಸಮಸ್ಯೆಗಳು ಈ ಸಂಬಂದ ವನ್ನು ಕೆಡಿಸುತ್ತವೆ; ಇಂತಹ ಸಮಸ್ಯೆಗಳು ತುಂಬಾ ಹೆಚ್ಚಿರುವ ಇಂಗ್ಲಿಶ್ನಂತಹ ಬರಹಗಳನ್ನು ಓದಲು ಕಲಿಸುವಾಗ, ಮಕ್ಕಳಲ್ಲಿ ಮೇಲಿನ ತಿಳುವಳಿಕೆ ಹುಟ್ಟುವ
ಹಾಗೆ ಮಾಡುವುದು, ಮತ್ತು ಅವರು ಬರಹವನ್ನು ಸರಿಯಾದ ಕ್ರಮದಲ್ಲಿ ಓದುವ ಹಾಗೆ ಮಾಡುವುದು ತುಂಬಾ ಕಶ್ಟ. ಇವತ್ತು ಇಂಗ್ಲಿಶ್ ಬರಹವನ್ನು ಓದಲು ಕಲಿಯುವ ಮಕ್ಕಳಲ್ಲಿ ಹೆಚ್ಚಿನವರೂ, ಅಮೆರಿಕದಂತಹ ಮುಂದುವರಿದ ದೇಶಗಳಲ್ಲೂ, ಸರಿಯಾಗಿ ಓದುವ ಕ್ರಮವನ್ನು ಕಲಿಯುವುದೇ ಇಲ್ಲ ಎಂಬುದಾಗಿ ಸಂಶೋದನೆಗಳು ತೋರಿಸಿಕೊಟ್ಟಿವೆ.
ಕನ್ನಡದಲ್ಲೂ ಬರಿಗೆ ಮತ್ತು ಉಲಿಗಳ ನಡುವಿನ ನೇರ ಸಂಬಂದವನ್ನು ಕೆಡಿಸುವ ಮಹಾಪ್ರಾಣ, ಷ, ಋ, ಐ, ಃ ಮೊದಲಾದವು ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಓದಲು ಕಲಿಸುವಲ್ಲಿ ತೊಡಕಾಗುತ್ತವೆ; ಹಾಗಾಗಿ, ಅವನ್ನು ಹೊರ ಗಿಟ್ಟಲ್ಲಿ ಅವರು ಸುಲಬವಾಗಿ ಸರಿಯಾದ ಕ್ರಮದ ಓದನ್ನು ಕಲಿಯಬಲ್ಲರು.
ಕನ್ನಡದ ಈ ಹೊಸ ಬರಹವನ್ನು ವಿರೋದಿಸುವ ವಿದ್ವಾಂಸರು, ನನಗೆ ತಿಳಿದ ಹಾಗೆ, ಅವರ ವಾದವನ್ನು ಬೆಂಬಲಿಸಬಲ್ಲ ಮತ್ತು ವಯ್ಜ್ನಾನಿಕವೆನಿಸ ಬಲ್ಲ ಒಂದೇ ಒಂದು ಪ್ರಯೋಜನವನ್ನೂ ತೋರಿಸಿಕೊಟ್ಟಿಲ್ಲ. ಹೆಚ್ಚಿನವರೂ ನುಡಿ ಮತ್ತು ಬರಹಗಳ ನಡುವಿನ ವ್ಯತ್ಯಾಸವೇನೆಂಬುದನ್ನು ತಿಳಿದುಕೊಳ್ಳದೆ, ಗೊಂದಲದಲ್ಲಿ ಸಿಲುಕಿದ್ದಾರೆ. ನಾನು ಕನ್ನಡ ಬರಹದಲ್ಲಿ ಬಳಕೆಯಾಗುವ ಬರಿಗೆ ಗಳನ್ನು ಕಡಿಮೆ ಮಾಡಬೇಕೆಂದು ಹೇಳುತ್ತಿದ್ದೇನಲ್ಲದೆ, ಕನ್ನಡ ನುಡಿಯಲ್ಲಿ ಬಳಕೆಯಾಗುವ ಉಲಿಗಳನ್ನು ಕಡಿಮೆ ಮಾಡಬೇಕೆಂದು ಹೇಳುತ್ತಾ ಇಲ್ಲ. ನುಡಿ ಯನ್ನು ಯಾರೂ ವಯ್ಯಕ್ತಿಕವಾಗಿ ಬದಲಾಯಿಸಲಾರರು; ಯಾಕೆಂದರೆ, ಅದು ಯಾರೊಬ್ಬರ ಹತೋಟಿಯಲ್ಲೂ ಇಲ್ಲ.
ಆದರೆ, ಬರಹವನ್ನು ಯಾರಾದರೂ ಬರಹಗಾರರು ಬದಲಾಯಿಸಿದಲ್ಲಿ ಮಾತ್ರ ಅದು ಬದಲಾಗಬಲ್ಲುದು; ಇಲ್ಲವಾದರೆ ನೂರಾರು ವರ್ಶಗಳು ಕಳೆದರೂ ಅದು ಸಂಸ್ಕ್ರುತ ಬರಹದ ಹಾಗೆ ಬದಲಾಗದೆ ಉಳಿದೀತು. ಕನ್ನಡ ಬರಹದಲ್ಲಿ ಇಂತಹ ಹಲವಾರು ಬದಲಾವಣೆಗಳು ಕಾಲದಿಂದ ಕಾಲಕ್ಕೆ ನಡೆಯುತ್ತಾ ಬಂದಿವೆ: ಹಳೆಗನ್ನಡದ ಕಾಲದಲ್ಲಿ ಪಕಾರ ಹಕಾರವಾದಾಗ, ಮೊದಲಿಗೆ ಪಕಾರ ವಿದ್ದ ಪಾಲ್, ಪಣ್, ಪೆಸರ್ ಮೊದಲಾದ ಪದಗಳ ಬರಹವನ್ನು ಬದಲಾಯಿಸಿ ದರು; ರ-ಱಗಳ ಮತ್ತು ಳ-ೞಗಳ ನಡುವಿನ ವ್ಯತ್ಯಾಸ ಓದಿನಲ್ಲಿ (ಮತ್ತು ಮಾತಿನಲ್ಲಿ) ಇಲ್ಲವಾದಾಗ, ಅವುಗಳಲ್ಲಿ ಒಂದನ್ನು (ಱ ಮತ್ತು ೞಗಳನ್ನು) ಬರಹದಿಂದ ತೆಗೆದುಹಾಕಿದರು.
ಇವತ್ತು ಕನ್ನಡ ಬರಹದಲ್ಲಿ ಹೊಸ ಬರಹವನ್ನು ಬಳಸುವ ಮೂಲಕ ನಾನು ಮಾಡಬೇಕೆಂದಿರುವ ಬದಲಾವಣೆಯೂ ಇಂತಹದೇ: ಎರಡು ಸಾವಿರ ವರ್ಶ ಗಳಶ್ಟು ಹಿಂದೆ ಸಂಸ್ಕ್ರುತದಲ್ಲಿದ್ದ, ಮತ್ತು ಇವತ್ತು ಓದಿನಲ್ಲಿ ಇಲ್ಲದಿರುವ ವ್ಯತ್ಯಾಸಗಳನ್ನು ಬರಹದಲ್ಲಿ ತೋರಿಸಬೇಕಾಗಿಲ್ಲ; ಮೇಲೆ ಕನ್ನಡದವೇ ಆದ ಪದಗಳಲ್ಲಿ ಬದಲಾವಣೆಗಳನ್ನು ಮಾಡಿದ ಹಾಗೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲೂ ಬದಲಾವಣೆಗಳನ್ನು ಮಾಡಿ, ಕನ್ನಡ ಬರಹ ಹೆಚ್ಚು ವಯ್ಜ್ನಾನಿಕವಾಗುವ ಹಾಗೆ, ಮತ್ತು ಅದನ್ನು ಓದಲು ಕಲಿಯುವ ಕೆಲಸ ಮತ್ತು
ಬಳಸುವ ಕೆಲಸ ಹೆಚ್ಚು ಸುಲಬವಾಗುವ ಮಾಡಬೇಕು ಎಂಬುದೇ ಈ ಬದಲಾವಣೆ. ಇಂಗ್ಲಿಶ್ನಿಂದ ಎರವಲಾಗಿ ಪಡೆದ ಪದಗಳಲ್ಲೂ ಇಂತಹವೇ ಕೆಲವು ಬದಲಾವಣೆಗಳನ್ನು ಇವತ್ತು ಮಾಡಬೇಕಾಗಿದೆ (1.6.4 ನೋಡಿ).
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು
ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ನಿಯಮವನ್ನು ಈಗಿರುವ ಹಾಗೆಯೇ ಉಳಿಸಿ ಕೊಂಡಲ್ಲಿ ಕನ್ನಡ ಬರಹದ ಮಟ್ಟಿಗೆ ಪ್ರಯೋಜನಗಳೇನಾದರೂ ಸಿಗಬಲ್ಲುವೇ ಎಂಬುದನ್ನು ಈಗ ಪರಿಶೀಲಿಸಬೇಕಾಗಿದೆ.
ನನಗೆ ಅನಿಸುವುದೇನೆಂದರೆ, ಈ ಪದಗಳನ್ನು ಬದಲಾಯಿಸಹೋಗದೆ, ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತಿರುವುದರಿಂದ ಸಿಗಬಲ್ಲ ಪ್ರಯೋಜನ ಗಳೆಲ್ಲ ತಾತ್ಕಾಲಿಕವಾದವುಗಳು. ಉದಾಹರಣೆಗಾಗಿ, ಅವನ್ನು ಹಳೇ ರೂಪದಲ್ಲಿ ನೋಡಿ ಬಳಕೆಯಾಗಿರುವವರಿಗೆ ಹೊಸ ರೂಪವನ್ನು ಕಂಡಾಗ ಅದು ತಪ್ಪೆಂದು ಅನಿಸುತ್ತದೆ; ಇಂತಹ ಅನಿಸಿಕೆ ಉಂಟಾಗದಂತೆ, ಇವರಿಗಾಗಿ ಈ ಬದಲಾವಣೆ ಯನ್ನು ಮಾಡದಿರಬೇಕು. ಆದರೆ, ಹೊಸ ರೂಪವನ್ನು ಕಂಡು ಬಳಕೆಯಾದವರಿಗೆ ಅದು ತಪ್ಪೆಂದು ಅನಿಸುವುದೇ ಇಲ್ಲವಲ್ಲ!
ಹೊಸ ಬರಹವನ್ನು ಕಲಿತವರಿಗೆ ಹಳೇ ಬರಹದಲ್ಲಿರುವ ಪುಸ್ತಕಗಳನ್ನು ಓದಲು ತುಸು ತೊಂದರೆಯಾಗಬಹುದು; ಇದೂ ಕೂಡ ತಾತ್ಕಾಲಿಕವಾದ ತೊಂದರೆ. ಸಮಯ ಕಳೆದಂತೆ ಇಂತಹ ಸಂದಬ್ರಗಳು ಕಡಿಮೆಯಾಗುತ್ತಾ ಹೋಗುತ್ತವೆ.
ಬರಹದಲ್ಲಿ ಎಂತಹ ಬದಲಾವಣೆಯನ್ನು ಮಾಡುವುದಿದ್ದರೂ ಇಂತಹ ತಾತ್ಕಾಲಿಕವಾದ ತೊಂದರೆಗಳು ಬಂದೇ ಬರುತ್ತವೆ; ಅವಕ್ಕೆ ಹೆದರಿ ಬದಲಾವಣೆ ಯನ್ನು ಮಾಡಿಕೊಳ್ಳದಿದ್ದರೆ, ಸ್ಪೆಲ್ಲಿಂಗ್ ಸಮಸ್ಯೆಯನ್ನು ಯಾವಾಗಲೂ ಅನುಬವಿ ಸುತ್ತಲೇ ಇರಬೇಕಾಗುತ್ತದೆ. ಇಂಗ್ಲಿಶ್ನ ಸ್ಪೆಲ್ಲಿಂಗ್ ಸಮಸ್ಯೆಯೂ ಇಂತಹದೇ. ಅದನ್ನು ಸರಿಪಡಿಸಹೋದರೆ ಹಲವಾರು ತಾತ್ಕಾಲಿಕ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಆದರೆ, ಇಂಗ್ಲಿಶ್ನಲ್ಲಿ ಇಂತಹ ತಾತ್ಕಾಲಿಕ ತೊಂದರೆಗಳು ತುಂಬಾ ಜಾಸ್ತಿ; ಹಾಗಾಗಿ, ಹೆಚ್ಚಿನವರಿಗೂ ಅದನ್ನು ಸರಿಪಡಿಸಬೇಕೆಂದು ಅನಿಸುವುದಿಲ್ಲ. ಕನ್ನಡದಲ್ಲಿ ತೊಂದರೆಗಳು ಹೆಚ್ಚಿಲ್ಲವಾದ ಕಾರಣ (ಕನ್ನಡದವೇ ಆದ ಪದಗಳ ಮಟ್ಟಿಗೆ ಏನೂ ಇಲ್ಲ), ಅದನ್ನು ಸುಲಬವಾಗಿ ಸರಿಪಡಿಸಬಹುದು. ಇದನ್ನು ನಾನು ನನ್ನ ಇತ್ತೀಚೆಗಿನ ಪುಸ್ತಕಗಳಲ್ಲಿ, ಮತ್ತು ಈ ಪುಸ್ತಕದಲ್ಲೂ ತೋರಿಸಿಕೊಟ್ಟಿದ್ದೇನೆ.
(2) ಸಂಸ್ಕ್ರುತ ಎರವಲುಗಳನ್ನು ಕಡಿಮೆ ಮಾಡುವುದು ಎಲ್ಲರ ಕನ್ನಡದ ಬರಹವನ್ನು ಕಲಿಯುವ ಕೆಲಸ ಸುಳುವಾಗುವಂತೆ ಮಾಡಲು, ಮತ್ತು ಆ ಮೂಲಕ ಎಲ್ಲಾ ಕನ್ನಡಿಗರೂ ಅದನ್ನು ಕಲಿಯುವಂತೆ ಮಾಡಲು,
ನಾವು ಇವತ್ತು ಮಾಡಬೇಕಾಗಿರುವ ಇನ್ನೊಂದು ಮಾರ್ಪಾಡೆಂದರೆ, ಅದರಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸತೊಡಗಬೇಕು. ಮೇಲೆ ಹೇಳಿದ ಹಾಗೆ, ಇವತ್ತು ಕನ್ನಡದ ಬರಹಗಾರರು ಬೇಕಾದಲ್ಲೂ ಬೇಡದಿರು ವಲ್ಲೂ ಸಂಸ್ಕ್ರುತ ಪದಗಳನ್ನು ಬಳಸುವ ಒಂದು ಕೆಟ್ಟ ಚಾಳಿಯನ್ನು ಬೆಳೆಸಿ ಕೊಂಡಿದ್ದಾರೆ. ಪದಕೋಶದಲ್ಲಿರುವ ಪದಗಳೆಲ್ಲವೂ ಕನ್ನಡದ ಪದಗಳೇ ಎಂಬ ಅನಿಸಿಕೆಯಿರುತ್ತದೆ; ಅವನ್ನು ಕನ್ನಡ ಬರಹಗಳಲ್ಲಿ ಬಳಸಿದರೆ ಸಾಕು, ಅವು ಕನ್ನಡದವಾಗಿ ಬಿಡುತ್ತವೆ ಎಂದು ಅವರು ತಿಳಿಯು ತ್ತಾರೆ. ಇದು ಕೆಟ್ಟ ಚಾಳಿ ಯಾಕೆಂದರೆ, ಅದರಿಂದಾಗಿ ಕನ್ನಡದ ಬರಹಗಳು ಇವತ್ತು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿವೆ.
ಕೆಲವರಲ್ಲಂತೂ
ಸಂಸ್ಕ್ರುತದ
ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೂ ಕನ್ನಡದ ಬರಹಗಾರರು ಸಂಸ್ಕ್ರುತದ ಮೊರೆಹೊಗುತ್ತಾರೆ. ಕನ್ನಡದಲ್ಲೇನೇ ಅಂತಹ ಪದಗಳನ್ನು ಉಂಟು ಮಾಡಬಲ್ಲೆವು ಎಂಬುದು ಅವರ ಗಮನಕ್ಕೇ ಬರುವುದಿಲ್ಲ. ತಮಗೆ ಬೇಕಾಗಿರು ವಂತಹ ಪದಗಳು ಸಂಸ್ಕ್ರುತದಲ್ಲಿ ಇಲ್ಲದಿದ್ದರೂ, ಇವರು ಅಂತಹವನ್ನು ಅದರಲ್ಲಿ ಉಂಟುಮಾಡಿ ಕನ್ನಡದಲ್ಲಿ ಬಳಸುತ್ತಾರೆ! ಎಂದರೆ, ಇವು ನಿಜಕ್ಕೂ ಸಂಸ್ಕ್ರುತ ಪದಗಳೇ ಅಲ್ಲ. ಈ ಕೆಟ್ಟ ಚಾಳಿಯಿಂದಾಗಿ, ಕನ್ನಡ ಬರಹದಲ್ಲಿ ಸಂಸ್ಕ್ರುತ ಎರವಲುಗಳ ಎಣಿಕೆ ಇನ್ನಶ್ಟು ಹೆಚ್ಚುತ್ತಾ ಹೋಗುತ್ತಿದೆ. ಬರಹದಲ್ಲಿ ಈ ರೀತಿ ತುಂಬಾ ಸಂಸ್ಕ್ರುತ ಪದಗಳು ಕಾಣಿಸಿಕೊಳ್ಳುತ್ತಿವೆಯಾದರೂ, ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ತುಂಬಾ ಕಡಿಮೆ ಸಂಸ್ಕ್ರುತ ಪದಗಳು ಕಾಣಿಸಿಕೊಳ್ಳು ತ್ತವೆ; ಮತ್ತು ಹಾಗೆ ಕಾಣಿಸುವವುಗಳೆಲ್ಲ ಕನ್ನಡದ ಪರಿಚೆಗೆ ಹೊಂದಿಕೊಳ್ಳುವಂತೆ ಬಹಳ ಮಟ್ಟಿಗೆ ಬದಲಾಗಿರುತ್ತವೆ. ಹಾಗಾಗಿ, ದಿನದಿಂದ ದಿನಕ್ಕೆ ಬರಹ ಕನ್ನಡ ವನ್ನು ಕಲಿಯುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ಹೆಚ್ಚು ಹೆಚ್ಚು ತೊಡಕಿನ ದಾಗುತ್ತಾ ಹೋಗುತ್ತಿದೆ.
ಇವತ್ತಿನ ಬರಹಗಾರರಲ್ಲಿ ಎಲ್ಲರಿಗಿಂತಲೂ ಹೆಚ್ಚು ಸಂಸ್ಕ್ರುತ ಎರವಲು ಗಳನ್ನು ಬಳಸುವವರೆಂದರೆ ಕಲಿಕೆಯ ಕುರಿತಾಗಿ ಬರೆಯುವವರು. ಕಲಿಕೆಯ ಪುಸ್ತಕಗಳನ್ನೂ ಇವರೇ ಬರೆಯುವರಾದ ಕಾರಣ, ಅವರ ಈ ಚಾಳಿ ಕಲಿಕೆಯ ಪುಸ್ತಕಗಳಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ತುಂಬಿರುವ ಈ ಪುಸ್ತಕಗಳನ್ನು ಓದುವ ಮೂಲಕ, ಮಕ್ಕಳು ಮತ್ತು ದೊಡ್ಡವರು ಓದಲು-ಬರೆಯಲು ಕಲಿಯಬೇಕಾಗಿದೆ.
ಎತ್ತುಗೆಗಾಗಿ, ಇವತ್ತು ಕನ್ನಡ ಮಕ್ಕಳಿಗೆ ಕನ್ನಡದಲ್ಲಿ ಓದಲು ಮತ್ತು ಬರೆಯಲು ಕಲಿಸುವ ಮೊದಲನೇ ತರಗತಿಯ ಪುಸ್ತಕದಲ್ಲಿ ಖಗ ‘ಹಕ್ಕಿ’, ಛಗ ‘ಹೋತ’, ಛದ ‘ಮುಚ್ಚಳ’, ಖರ ‘ಹೇಸರಗತ್ತೆ’, ಐಲ ‘ಕುಬೇರ’, ಲಗಡ ‘ಹದ್ದು’, ಮೊದಲಾದ ಹಲವಾರು ಸಂಸ್ಕ್ರುತ ಎರವಲುಗಳನ್ನು ಬಳಸಲಾಗಿದೆ; ಇವುಗಳಲ್ಲಿ ಕೆಲವನ್ನು ಸಂಸ್ಕ್ರುತದಲ್ಲಿ ಎಂ.ಎ. ಮಾಡಿದವರೂ ಅದುವರೆಗೆ ಕಂಡಿರಲಾರರು! ಇವನ್ನು ನೇರವಾಗಿ ಸಂಸ್ಕ್ರುತ ಪದಕೋಶದಿಂದ ಎತ್ತಿ ಈ
ಪುಸ್ತಕದಲ್ಲಿ ಬಳಸಿರುವ ಹಾಗೆ ಕಾಣಿಸುತ್ತದೆ. ನಿಜಕ್ಕೂ ಇವು ಯಾವ ಹುರುಳಿ ನಲ್ಲೂ ಕನ್ನಡದ ಪದಗಳಾಗಲಾರವು.
ಕನ್ನಡದಲ್ಲಿ ಇವತ್ತು ಹೆಚ್ಚು ಹೆಚ್ಚು ಹೊಸ ಪದಗಳನ್ನು ಉಂಟುಮಾಡ ಬೇಕಾಗಿ ಬರುವುದು ಅರಿಮೆಯ (ವಿಜ್ನಾನದ) ಬರಹಗಳಲ್ಲಿ. ಈ ಬರಹಗಳನ್ನು ಬರೆಯುವವರೆಲ್ಲ ಹೊಸ ಪದಗಳನ್ನು ಉಂಟುಮಾಡಲು ಸಂಸ್ಕ್ರುತವನ್ನೇ ಮರೆ ಹೊಗುತ್ತಾರೆ. ಕನ್ನಡ ಪದಗಳನ್ನು ಮತ್ತು ಒಟ್ಟುಗಳನ್ನು ಬಳಸಿಯೂ ಅರಿಮೆಯ ಪದಗಳನ್ನು ಉಂಟುಮಾಡಲು ಬರುತ್ತದೆ ಎಂಬುದು ಇವರ ಗಮನಕ್ಕೇ ಬರುವು ದಿಲ್ಲ. ಕನ್ನಡ ಬರಹಗಳಲ್ಲಿ ಕಾಣಿಸಿಕೊಳ್ಳುವ ಸಂಸ್ಕ್ರುತ ಎರವಲುಗಳ ಎಣಿಕೆ ತುಂಬಾ ಹೆಚ್ಚಾಗಲು ಇವರೂ ಕಾರಣರಾಗಿರುತ್ತಾರೆ.
ಎಲ್ಲರ ಕನ್ನಡ (ಬರಹ ಕನ್ನಡ) ಎಲ್ಲರನ್ನೂ ತಲಪುವ ಮೂಲಕ ನಿಜಕ್ಕೂ ಎಲ್ಲರದಾಗಬೇಕಿದ್ದಲ್ಲಿ, ಅದರಲ್ಲಿ ಕಾಣಿಸಿಕೊಳ್ಳುವ ಎರವಲು ಪದಗಳ ಎಣಿಕೆ ನೂರಕ್ಕೆ 10 ಇಲ್ಲವೇ 15ರಿಂದ ಹೆಚ್ಚಾಗಬಾರದು. ಸುದ್ದಿಹಾಳೆಗಳಲ್ಲಿ ಬರುವ ಕೆಲವು ಬರಹಗಳಲ್ಲಿ ಇವತ್ತು ನೂರಕ್ಕೆ 50 ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಎರವಲುಗಳಿರುವುದನ್ನು ಕಾಣಬಹುದು. ಅಂತಹ ಬರಹಗಳು ಹೆಚ್ಚಿನ ಕನ್ನಡಿಗರನ್ನೂ ತಲಪಲಾರವು.
1.3 ನುಡಿ ಮತ್ತು ಬರಹ
ನುಡಿ ಮತ್ತು ಬರಹಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಿನ ಜನರೂ ಸರಿಯಾಗಿ ತಿಳಿದುಕೊಂಡಿಲ್ಲ. ಕನ್ನಡ ನುಡಿಯ ಕುರಿತು ಮಾತನಾಡುವಾಗ, ಹಲವು ಮಂದಿ ವಿದ್ವಾಂಸರೆನ್ನಿಸಿಕೊಂಡವರೂ ಈ ಅರಿಯಮೆಯಿಂದಾಗಿ ತಪ್ಪುಮಾಡುವುದನ್ನು ಕಾಣಬಹುದು. ಎತ್ತುಗೆಗಾಗಿ, ‘ಕನ್ನಡ ನುಡಿ ಎರಡು ಸಾವಿರ ವರ್ಶಗಳಶ್ಟು ಹಳೆ ಯದು’ ಎಂದು ಹೇಳುವಾಗ, ಅವರು ಇಂತಹದೊಂದು ತಪ್ಪನ್ನು ಮಾಡುತ್ತಾರೆ. ಯಾಕೆಂದರೆ, ನಿಜಕ್ಕೂ ಎರಡು ಸಾವಿರ ವರ್ಶಗಳಶ್ಟು ಹಳೆಯದೆಂದು ನಾವು ಹೇಳುವುದು ಕನ್ನಡ ಬರಹವನ್ನಲ್ಲದೆ ಕನ್ನಡ ನುಡಿಯನ್ನಲ್ಲ; ‘ಕನ್ನಡ ನುಡಿಯನ್ನು ಅಶ್ಟು ಹಿಂದೆಯೇ ಬರಹಕ್ಕೆ ಇಳಿಸಿರಬೇಕು’ ಎಂದು ಹೇಳಲು ನಮಗೆ ಎತ್ತುಗೆ ದೊರೆತಿದೆ, ಅಶ್ಟೆ; ಕನ್ನಡ ನುಡಿ ಅದಕ್ಕಿಂತಲೂ ತುಂಬಾ ಹಿಂದಿನದಾಗಿರಬಲ್ಲುದು.
ನುಡಿಯೆಂಬುದು ಮುಕ್ಯವಾಗಿ ಮಾತಿನ ರೂಪದಲ್ಲಿರುತ್ತದೆ; ಆಡುತ್ತಿದ್ದಂತೆ ಅದರ ಪದಗಳು ಮತ್ತು ಸೊಲ್ಲುಗಳು ಅಳಿದುಹೋಗುತ್ತಿರುತ್ತವೆ; ಈ ಪದ ಗಳಿಗೆ ಮತ್ತು ಸೊಲ್ಲುಗಳಿಗೆ ಒಂದು ಬಗೆಯ ಬಾಳಿಕೆಯನ್ನು ಕೊಡಲು ನಾವು ಬರಹವನ್ನು ಬಳಸುತ್ತೇವೆ. ಆದರೆ ಹಾಗೆ ಮಾಡುವಾಗ, ಅದರಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನೂ ಮಾಡಿಕೊಳ್ಳುತ್ತೇವೆ. ಮಾತು ಮತ್ತು ಬರಹಗಳನ್ನು ಹೋಲಿಸಿ ನೋಡಿದಾಗ, ಈ ಮಾರ್ಪಾಡುಗಳು ನಿಜಕ್ಕೂ ಎಂತಹವು ಎಂಬುದು ಗೊತ್ತಾಗುತ್ತದೆ.
1.3.1 ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸಗಳು
ಮಾತು ಮತ್ತು ಬರಹಗಳ ನಡುವೆ ಹಲವು ವ್ಯತ್ಯಾಸಗಳಿವೆ; ಇವುಗಳಲ್ಲಿ ಮುಕ್ಯ ವಾದ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ:
(1) ಮಾತಿನಲ್ಲಿ ಪದಗಳನ್ನೆಲ್ಲ ಒಟ್ಟೊಟ್ಟಿಗೆ ಬಳಸುತ್ತೇವೆ. ಆದರೆ ಬರೆಯು ವಾಗ ಅವನ್ನು ನಡುವೆ ಜಾಗ ಬಿಟ್ಟು ಬೇರೆ ಬೇರಾಗಿ ಬರೆಯಬೇಕಾಗುತ್ತದೆ. ಇಲ್ಲವಾದರೆ ಬರೆದುದನ್ನು ಓದಲು ತುಂಬಾ ಕಶ್ಟವಾಗಬಲ್ಲುದು. ಮಾತಿನಲ್ಲಿ ಕೆಲವೊಮ್ಮೆ ಸೊಲ್ಲುಗಳೂ ಒಟ್ಟೊಟ್ಟಿಗೆ ಬರುತ್ತವೆ. ಆದರೆ ಬರೆಯುವಾಗ ಅವನ್ನು ಬೇರ್ಪಡಿಸಿ, ಅವುಗಳ ಕೊನೆ ಎಲ್ಲಿದೆ ಎಂಬುದನ್ನು ಕೊನೆ(.), ಕೇಳ್ವಿ (?) ಇಲ್ಲವೇ ಬೆರಗು (!) ಸನ್ನೆಗಳ ಮೂಲಕ ಸೂಚಿಸುತ್ತಿರಬೇಕಾಗುತ್ತದೆ. ಇದಲ್ಲದೆ, ಬರಹದಲ್ಲಿ ಬರುವ ಸೊಲ್ಲುಗಳು ಉದ್ದವಾಗಿದ್ದರೆ, ಇಲ್ಲವೇ ಸಿಕ್ಕಲು ಸಿಕ್ಕಲಾ ಗಿದ್ದರೆ, ಅವುಗಳ ನಡುವೆ ಅರೆಕೊನೆ (;), ತಡೆ (,) ಮೊದಲಾದ ಸನ್ನೆಗಳನ್ನು ಬಳಸಿ, ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಸುಳುವಾಗುವಂತೆ ಮಾಡಬೇಕಾಗು ತ್ತದೆ.
(2) ಮಾತನಾಡುವಾಗ ಬಳಕೆಯಾಗುವ ಸೊಲ್ಲುಗಳು ತುಂಡು ತುಂಡಾಗಿರು ವುದೇ ಹೆಚ್ಚು. ಆದರೆ ಬರೆಯುವಾಗ ಅವೆಲ್ಲ ಇಡಿ ಇಡಿಯಾಗಿರುವಂತೆ ನೋಡಿ ಕೊಳ್ಳಬೇಕಾಗುತ್ತದೆ. ಮಾತಿನಲ್ಲಿ ಚಿಕ್ಕ ಚಿಕ್ಕ ಸೊಲ್ಲುಗಳಿರುವುದೇ ಹೆಚ್ಚು. ಉದ್ದದ ಸೊಲ್ಲುಗಳಿದ್ದರೂ ಅವು ಮತ್ತು, ಆದರೆ ಮೊದಲಾದ ಕೆಲವೇ ಕೆಲವು ಪದಗಳಿಂದ ಇಲ್ಲವೇ ಒಟ್ಟುಗಳಿಂದ ಜೋಡಿಸಿದವುಗಳಾಗಿರುತ್ತವೆ.
ಇದಕ್ಕೆ ಬದಲು, ಬರಹದಲ್ಲಿ ಹೆಚ್ಚು ಉದ್ದದ ಮತ್ತು ಹೆಚ್ಚು ತೊಡಕಿನ ಸೊಲ್ಲುಗಳು ಕಾಣಿಸಿಕೊಳ್ಳುತ್ತವೆ. ಜೋಡಿಸಿದ ಸೊಲ್ಲುಗಳಿಗಿಂತಲೂ ಸೊಲ್ಲು ಗಳನ್ನು ಒಳಸೊಲ್ಲುಗಳಾಗಿ ಬಳಸಿರುವಂತಹ ಸಿಕ್ಕಲು ಸೊಲ್ಲುಗಳು ಬರಹದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಬರೆದುದನ್ನು ಓದುಗರು ತಿರುತಿರುಗಿ ಓದಬಲ್ಲರಾದ ಕಾರಣ, ಅಂತಹ ಸಿಕ್ಕಲು ಸೊಲ್ಲುಗಳಿದ್ದರೂ ಅವರಿಗೆ ತೊಂದರೆಯಾಗುವುದಿಲ್ಲ. (3) ಮಾತನಾಡುವಾಗ ಆಲೋಚಿಸುವುದನ್ನೂ ಆಡುವುದನ್ನೂ ಒಟ್ಟೊಟ್ಟಿಗೆ ಮಾಡುತ್ತಿರುತ್ತೇವೆ. ಹಾಗಾಗಿ, ಮಾತಿನಲ್ಲಿ ಹಲವು ತಪ್ಪುಗಳು ಕಾಣಿಸಿ ಕೊಳ್ಳುತ್ತವೆ; ನಾವು ಬಳಸಿದ ಪದಗಳು ಇಲ್ಲವೇ ಪದರೂಪಗಳು ತಪ್ಪಾಗಿರ ಬಹುದು, ಸೊಲ್ಲುಗಳೂ ತಪ್ಪಾಗಿರಬಹುದು; ಇವುಗಳಲ್ಲಿ ಕೆಲವು ತಪ್ಪುಗಳನ್ನು ನಾವು ಮಾತನಾಡುತ್ತಿರುವಂತೆ ತಿದ್ದಿಕೊಳ್ಳುತ್ತೇವೆ; ಆದರೆ, ಕೆಲವು ಹಾಗೆಯೇ ಉಳಿದಿರುತ್ತವೆ. ಆದರೆ, ಬರೆದುದರಲ್ಲಿ ಇಂತಹ ತಪ್ಪುಗಳು ಉಳಿಯದಂತೆ ನಾವು ಅದನ್ನು ತಿದ್ದಿ ಸರಿಪಡಿಸುತ್ತೇವೆ.
ಮಾತಿನಲ್ಲಿ ವಿಶಯಗಳು ಒಂದು ಕ್ರಮದಲ್ಲಿ ಬರುವುದಿಲ್ಲ. ಒಂದನ್ನು ತಿಳಿಸು ತ್ತಿರುವಾಗ ನಡುನಡುವೆ ಬೇರೆ ವಿಶಯಗಳೂ ಸೇರಿಕೊಳ್ಳುತ್ತವೆ. ಈ ಕಾರಣ
ಕ್ಕಾಗಿ, ಕೆಲವೊಮ್ಮೆ ಹೇಳಿದುದನ್ನೇ ಮತ್ತೆ ಮತ್ತೆ ಹೇಳುತ್ತಿರಬೇಕಾಗುತ್ತದೆ. ಆದರೆ, ಬರೆಯುವಾಗ ಎಲ್ಲಾ ವಿಶಯಗಳನ್ನೂ ಮೊದಲಿಗೆ ಆಲೋಚಿಸಿ ಮತ್ತು ವಿಮರ್ಶಿಸಿ, ಅನಂತರ ಬರೆಯುತ್ತೇವೆ. ತಿಳಿಸಬೇಕಾಗಿರುವ ವಿಶಯಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಇರಿಸುತ್ತೇವೆ, ಮತ್ತು ಆದಶ್ಟು ಮಟ್ಟಿಗೆ ಒಮ್ಮೆ ಬರೆದ ವಿಶಯ ಮತ್ತೊಮ್ಮೆ ಅನವಶ್ಯಕವಾಗಿ ಬಾರದ ಹಾಗೆ ನೋಡಿಕೊಳ್ಳುತ್ತೇವೆ.
(4) ಮಾತನಾಡುವಾಗ ಪದಗಳನ್ನು ಮಾತ್ರವಲ್ಲದೆ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ, ಮಯ್ಯ ನಿಲುವು ಮೊದಲಾದುವನ್ನೂ ಬಳಸುತ್ತೇವೆ. ಹಲವು ಕಡೆಗಳಲ್ಲಿ ತಿಳಿಸಬೇಕಾಗಿರುವ ವಿಶಯಗಳಲ್ಲಿ ಹೆಚ್ಚಿನವನ್ನೂ ಈ ಕಯ್ಸನ್ನೆ-ಕಣ್ಣು ಸನ್ನೆಗಳ ಮೂಲಕವೇನೇ ತಿಳಿಸುತ್ತಿರುತ್ತೇವೆ.
ಇದಕ್ಕೆ ಬದಲು, ಬರಹದಲ್ಲಿ ಸೊಲ್ಲುಗಳ ಇಟ್ಟಳ, ಬರಹದ ಗುರುತುಗಳು, ಕುರಳು(ಪಾರಾ)ಗಳು, ಕೋಶ್ಟಕಗಳು, ಗೆರೆತಿಟ್ಟಗಳು ಮೊದಲಾದವುಗಳನ್ನು ಬಳಸುತ್ತೇವೆ. ಸೊಲ್ಲುಗಳ ಮೂಲಕ ತಿಳಿಸಲಾಗದ ಹಲವು ಹುರುಳುಗಳನ್ನು ಇಂತಹ ಇಟ್ಟಳ ಮತ್ತು ಗುರುತುಗಳ ಮೂಲಕ ತಿಳಿಸುತ್ತೇವೆ.
1.3.2 ವ್ಯತ್ಯಾಸಗಳಿಗೆ ಕಾರಣಗಳು
ಮಾತು ಮತ್ತು ಬರಹಗಳ ನಡುವೆ ಕಾಣಿಸಿಕೊಳ್ಳುವ ಈ ವ್ಯತ್ಯಾಸಗಳಿಗೆ ನಾಲ್ಕು ಮುಕ್ಯ ಕಾರಣಗಳಿವೆ:
(1) ಅವೆರಡಕ್ಕೆ ತೀರಾ ಬೇರಾಗಿರುವ ಗುರಿಗಳಿರುತ್ತವೆ; (2) ಅವೆರಡು ಬಳಸುವ ಒಯ್ಯುಗೆಗಳು ಬೇರಾಗಿರುತ್ತವೆ;
(3) ಮಾತನಾಡುವವರ ಎದುರಿಗೇನೇ ಕೇಳುಗರು ಇರುವ ಹಾಗೆ ಬರಹಗಾರರ ಎದುರಿಗೆ ಓದುಗರು ಇರುವುದಿಲ್ಲ; (4) ಮಾತು ಕಲಿಯಲು ಹುಟ್ಟಿನಿಂದಲೇ ಸಿಗುವ ಅಳವು ಇರುವ ಹಾಗೆ ಓದು-ಬರಹಗಳನ್ನು ಕಲಿಯಲು ಇರುವುದಿಲ್ಲ.
(1) ಗುರಿ ಬೇರೆ: ನುಡಿಯ ಮೂಲಕ ತಲಪಬೇಕಾಗಿರುವ ವ್ಯಕ್ತಿ ನಮ್ಮ ಎದುರಿಗೇನೇ ಇರುವಾಗ ನಾವು ಮಾತನ್ನು ಬಳಸುತ್ತೇವಲ್ಲದೆ ಬರಹವನ್ನು ಬಳಸಲು ಹೋಗುವುದಿಲ್ಲ. ಆತ ಎದುರಿನಲ್ಲಿ ಇಲ್ಲದಿರುವಾಗ ಮಾತ್ರ ಬರಹ ವನ್ನು ಬಳಸುತ್ತೇವೆ.
ಹರಟೆ ಹೊಡೆಯುವುದು, ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ತಿಳಿಸುವುದು ಮೊದಲಾದುವಕ್ಕೆ ಮಾತನ್ನು ಬಳಸುತ್ತೇವೆ. ಇದಕ್ಕೆ ಬದಲು, ವಿಶಯಗಳನ್ನು ತಿಳಿಸುವುದು, ನಡವಳಿಕೆಗಳನ್ನು ಬರೆದಿಡುವುದು, ಮರೆತುಹೋಗದಂತೆ ಸಂಗತಿ
ಗಳನ್ನು ಗುರುತಿಸಿಡುವುದು ಇಲ್ಲವೇ ಪಟ್ಟಿಮಾಡುವುದು, ಮೊದಲಾದುವಕ್ಕೆ ಬರಹವನ್ನು ಬಳಸುತ್ತೇವೆ.
ಇತ್ತೀಚೆಗೆ ದೂರವಾಣಿ, ಉಲಿಯಚ್ಚು, ಮಿಂಚಂಚೆ ಮೊದಲಾದವುಗಳ ಬಳಕೆ ಯಿಂದಾಗಿ, ಮಾತು ಮತ್ತು ಬರಹಗಳು ಹತ್ತಿರ ಬರುತ್ತಿವೆ: ಇವು ಮಾತಿನ ಕೆಲಸವನ್ನು ಬರಹದ ಮೂಲಕ ಮತ್ತು ಬರಹದ ಕೆಲಸವನ್ನು ಮಾತಿನ ಮೂಲಕ ನಡೆಸಲು ಬರುವಂತೆ ಮಾಡಿವೆ, ಮತ್ತು ಇದರಿಂದಾಗಿ ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗತೊಡಗಿದೆ. ಹೀಗಿದ್ದರೂ, ಮಾತು ಮತ್ತು ಬರಹಗಳ ಮುಕ್ಯ ಗುರಿಗಳು ಬೇರಾಗಿಯೇ ಇದ್ದು, ಅವು ಗಳಿಂದಾಗಿ ಮೂಡಿಬರುವ ವ್ಯತ್ಯಾಸಗಳು ಹಾಗೆಯೇ ಉಳಿದುಕೊಂಡಿವೆ.
(2) ಒಯ್ಯುಗೆ ಬೇರೆ: ಮಾತಿನಲ್ಲಿ ನಾವು ಉಲಿಗಳನ್ನು ಬಳಸುತ್ತೇವೆ;
ಆದರೆ ಬರಹದಲ್ಲಿ ಬರಿಗೆಗಳನ್ನು ಬಳಸುತ್ತೇವೆ.
ಉಲಿಗಳು ಅವನ್ನು ಆಡಿದ ಕೂಡಲೇ ಮಾಯವಾಗಿಬಿಡುತ್ತವೆ. ಹಾಗಾಗಿ, ಮಾತನ್ನೊಮ್ಮೆ ಆಡಿದೆವೆಂದರೆ ಅದನ್ನು ಮತ್ತೆ ಹಿಂದಕ್ಕೆ ಪಡೆದುಕೊಳ್ಳಲಾರೆವು. ಹೇಳುವುದು ಸರಿಯಾಗುತ್ತಿಲ್ಲವೆಂದು ನಮ್ಮ ಮನಸ್ಸಿಗೆ ಅನಿಸಿದರೆ, ಅದನ್ನು ನಡುವೆಯೇ ನಿಲ್ಲಿಸಿಬಿಡುತ್ತೇವೆ, ಮತ್ತು ಇನ್ನೊಮ್ಮೆ ಹೇಳಲು ಸುರುಮಾಡು ತ್ತೇವೆ. ಈ ಕಾರಣಕ್ಕಾಗಿ, ಮಾತಿನಲ್ಲಿ ಬರುವ ಸೊಲ್ಲುಗಳು ಸಾಮಾನ್ಯವಾಗಿ ತುಂಡು ತುಂಡಾಗಿರುತ್ತವೆ.
ಆದರೆ, ಕಾಗದದ ಮೇಲೆ ಮೂಡಿಸಿದ ಬರಿಗೆಗಳು ಮತ್ತು ಬೇರೆ ಗುರುತು ಗಳು ಉಲಿಗಳ ಹಾಗೆ ಕೂಡಲೇ ಅಳಿಸಿಹೋಗುವುದಿಲ್ಲ. ಹಾಗಾಗಿ, ಬರೆದುದನ್ನು ಸರಿಪಡಿಸಿಕೊಳ್ಳಲು ನಮಗೆ ಸಾಕಶ್ಟು ಸಮಯವಿರುತ್ತದೆ. ಅದನ್ನು ಓದುಗರೆದುರು ಇರಿಸುವ ಮೊದಲು ಹಲವು ಬಾರಿ ಓದಿನೋಡಿ, ಅದರಲ್ಲಿ ನಮಗೆ ಬೇಕಾಗಿರುವ ಎಲ್ಲಾ ರೀತಿಯ ಬದಲಾವಣೆಗಳನ್ನೂ ಮಾಡಿಕೊಳ್ಳಬಲ್ಲೆವು. ಉತ್ತಮ ಬರಹ ವೊಂದನ್ನು ರಚಿಸುವುದಕ್ಕಾಗಿ ವರ್ಶಗಟ್ಟಲೆ ಬೇಕಿದ್ದರೂ ದುಡಿಯಬಲ್ಲೆವು.
ಮಾತಿನಲ್ಲಿ ಬರುವ ಉಲಿಗಳು ಒಂದರ ಹಿಂದೊಂದು ಮಾತ್ರ ಬರಬಲ್ಲು ವಲ್ಲದೆ ಒಮ್ಮೆಗೇ ಬರಲಾರವು. ಆದರೆ, ಬರಹದ ಬರಿಗೆಗಳನ್ನು ಒಂದರ ಮುಂದೆ ಒಂದರಂತೆ ಮಾತ್ರವಲ್ಲದೆ, ಮೇಲೆ-ಕೆಳಗೂ ಜೋಡಿಸಬಲ್ಲೆವು. ಅವನ್ನು ಓದುವವರೂ ಹಲವು ಗುರುತುಗಳನ್ನು ಒಮ್ಮೆಗೇನೇ ಗಮನಿಸಬಲ್ಲರು. ಹಾಗಾಗಿ, ಬರಹದಲ್ಲಿ ವಿಶಯಗಳನ್ನು ಹಲವು ಬಗೆಯ ಪಟ್ಟಿಗಳಲ್ಲಿ ಅಳವಡಿಸಿ ಕೊಡಲು ಬರುತ್ತದೆ.
(3) ಓದುಗರು ಬರೆಯುವವರ ಎದುರಿಗಿರುವುದಿಲ್ಲ: ಸಾಮಾನ್ಯವಾಗಿ, ಮಾತನಾಡುವವರ ಎದುರಿಗೇನೇ ಅವರ ಕೇಳುಗರಿರುತ್ತಾರೆ; ಆದರೆ, ಬರೆಯು ವವರ ಎದುರಿಗೆ ಅವರ ಓದುಗರಿರುವುದು ತುಂಬಾ ಅಪರೂಪ.
ಕೇಳುಗರು ಎದುರಿಗೇನೇ ಇರುವ ಕಾರಣ, ತಮ್ಮ ಮಾತನ್ನು ಅವರು ಮೆಚ್ಚುತ್ತಿದ್ದಾರೋ, ಇಲ್ಲವೇ ಅದು ಅವರಿಗೆ ಬೇಸರ ತರುತ್ತಿದೆಯೋ ಎಂಬುದು ಆಡುಗರಿಗೆ ಮಾತನಾಡುತ್ತಿರುವ ಹಾಗೆಯೇ ಗೊತ್ತಾಗುತ್ತಿರುತ್ತದೆ. ಕೇಳುಗರೂ ತಮ್ಮ ಅನಿಸಿಕೆಗಳನ್ನು ನಡುನಡುವೆ ತಿಳಿಸುತ್ತಿರುತ್ತಾರೆ. ಹಾಗಾಗಿ, ಸನ್ನಿವೇಶಕ್ಕೆ ತಕ್ಕ ಹಾಗೆ ಆಡುಗರು ತಮ್ಮ ಮಾತನ್ನು ಬದಲಾಯಿಸುತ್ತಾ ಹೋಗಬಲ್ಲರು. ತಾವು ಹೇಳಿದ್ದು ತಮ್ಮ ಕೇಳುಗರಿಗೆ ಸರಿಯಾಗಿ ಗೊತ್ತಾಗುತ್ತಿಲ್ಲವೆಂದು ಅನಿಸಿ ದರೆ, ಅದನ್ನು ಬೇರೆ ಬಗೆಯಲ್ಲಿ ಹೇಳುವ ಮೂಲಕ ಗೊತ್ತಾಗುವ ಹಾಗೆಯೂ ಅವರು ಮಾಡಬಲ್ಲರು.
ಆದರೆ, ಬರೆಯುವವರಿಗೆ ಓದುಗರ ಅನಿಸಿಕೆ ಏನಿರಬಹುದೆಂಬುದು ಕೂಡಲೇ ಗೊತ್ತಾಗುವುದಿಲ್ಲ. ಅದನ್ನವರು ಊಹಿಸಿಕೊಂಡು, ತಮ್ಮ ಬರಹವನ್ನು ಮುಂದು ವರಿಸಬೇಕಾಗುತ್ತದೆ. ಯಾವ ರೀತಿಯಲ್ಲಿ ಬರೆದರೆ ಓದುಗರ ಕುತೂಹಲ ಉಳಿದೀತು ಎಂಬುದನ್ನೂ ಅವರು ತಾವೇ ಕಲ್ಪಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ, ಬರಹದಲ್ಲಿ ಬರುವ ಸೊಲ್ಲುಗಳು ಮಾತಿನಲ್ಲಿ ಬರುವ ಸೊಲ್ಲು ಗಳಿಗಿಂತ ಹಲವು ಬಗೆಯಲ್ಲಿ ಬೇರಾಗಿರಬೇಕಾಗುತ್ತದೆ.
ಕೇಳುಗರು ಎದುರಿಗೇನೇ ಇರುವ ಕಾರಣ, ಮಾತಿನೊಂದಿಗೆ ಕಣ್ಣುಸನ್ನೆ, ಕಯ್ಸನ್ನೆ ಮೊದಲಾದುವನ್ನೂ ಬಳಸಬಹುದು. ಎದುರಿಗೇನೇ ಇರುವ ವ್ಯಕ್ತಿ, ವಸ್ತು ಮೊದಲಾದುವನ್ನೂ ಮಾತಿನಲ್ಲಿ ಬಳಸಿಕೊಳ್ಳಬಹುದು. ಆದರೆ, ಬರಹಕ್ಕೆ ಇಂತಹದು ಯಾವುದೂ ನೆರವಿಗೆ ಬರುವುದಿಲ್ಲ. ತಿಳಿಸಬೇಕಾದುದನ್ನೆಲ್ಲ ಕಾಗದದ ಮೇಲೆ ಮೂಡುವ ಸೊಲ್ಲುಗಳ ಮೂಲಕವೇನೇ ತಿಳಿಸಬೇಕಾಗುತ್ತದೆ.
(4) ಹುಟ್ಟಿನಿಂದಲೇ ಸಿಗುವ ಅಳವಿಲ್ಲ: ಮಾತು ಕಲಿಯಲು ಬೇಕಾಗುವ ಅಳವನ್ನು ನಾವು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುತ್ತೇವೆ. ಆದರೆ, ಬರಹ ಕಲಿಯಲು ಬೇಕಾಗುವ ಅಳವನ್ನು ನಾವು ಆ ರೀತಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವುದಿಲ್ಲ.
ಎಲ್ಲಾ ಮಕ್ಕಳೂ ಮಾತನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆದು ಕೊಳ್ಳುತ್ತಾರೆ. ಆರೋಗ್ಯ ಸರಿಯಿರುವ ಯಾವ ಮಗುವೂ ಮಾತು ಕಲಿಯ ದಿರುವುದಿಲ್ಲ. ಆದರೆ, ಓದುವ ಮತ್ತು ಬರೆಯುವ ಕೆಲಸವನ್ನು ಮಕ್ಕಳಿಗೆ ಯಾರಾದರೂ ಕಲಿಸಿಕೊಡಬೇಕಾಗುತ್ತದೆ. ಈಜುವುದು, ಸಯ್ಕಲ್ ತುಳಿಯು ವುದು, ಕಾರು ಬಿಡುವುದು ಮೊದಲಾದ ಬೇರೆ ಹಲವಾರು ಚಳಕಗಳ ಹಾಗೆ,
ಓದುವುದು ಮತ್ತು ಬರೆಯುವುದೂ ಒಂದು ಚಳಕವಾಗಿದ್ದು, ಪ್ರಯತ್ನಪಟ್ಟು ಕಲಿತಲ್ಲಿ ಮಾತ್ರ ಅದು ದಕ್ಕುತ್ತದೆ.
1.3.3 ನುಡಿಯ ಸೊಲ್ಲರಿಮೆ ಮತ್ತು ಬರಹದ ಸೊಲ್ಲರಿಮೆ
ಮಾತಿಗೂ ಬರಹಕ್ಕೂ ನಡುವಿರುವ ಈ ವ್ಯತ್ಯಾಸಗಳೇ ನುಡಿಗೂ ಬರಹಕ್ಕೂ ನಡುವಿರುವ ವ್ಯತ್ಯಾಸಗಳೆಂದು ತಿಳಿಯಬಹುದು; ಯಾಕೆಂದರೆ, ಒಂದು ನುಡಿ ಮುಕ್ಯವಾಗಿ ಮಾತಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ: ಕನ್ನಡ ನುಡಿಯೆಂದರೆ ಮುಕ್ಯವಾಗಿ ಕನ್ನಡಿಗರು ಆಡುವ ನುಡಿ, ಎಂದರೆ ಅವರ ಮಾತು. ಮೇಲೆ 1.2 ರಲ್ಲಿ ವಿವರಿಸಿದ ಹಾಗೆ, ಅದು ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ: ಬೇರೆ ಬೇರೆ ಊರುಗಳ ಮತ್ತು ಕೂಟಗಳ (ಜಾತಿಗಳ) ಆಡುನುಡಿಗಳು, ಮತ್ತು ಬೇರೆ ಬೇರೆ ತಲೆಮಾರುಗಳ ಹೊತ್ತುನುಡಿಗಳು ಎಂಬುದಾಗಿ ಅದಕ್ಕೆ ಹಲವು ರೂಪ ಗಳಿವೆ. ಕನ್ನಡದ ಈ ಹಲವು ರೂಪಗಳನ್ನು ತಮ್ಮ ಮಾತಿನಲ್ಲಿ ಬಳಸುವ ಕನ್ನಡಿಗರಿಗೆಲ್ಲ ಸಮಾನವಾಗಬಹುದಾದಂತಹ ಎಲ್ಲರ ಕನ್ನಡ ಎಂಬ ಬರಹದ ರೂಪವೊಂದನ್ನು ಕನ್ನಡದ ಬರಹಗಾರರು ಉಂಟುಮಾಡಿಕೊಂಡಿದ್ದಾರೆ.
ಆದರೆ, ಒಂದು ನುಡಿಯ ಮಾತಿನ ರೂಪದ ಹಾಗೆ ಅದರ ಬರಹದ ರೂಪ ಸಹಜವಾದ ರೂಪವಲ್ಲ; ಮೇಲೆ ವಿವರಿಸಿದ ಹಾಗೆ, ಅದನ್ನು ಯಾರೂ ಹುಟ್ಟಿ ನಿಂದ ಪಡೆಯುವುದಿಲ್ಲ, ಕಲಿತು ಪಡೆಯಬೇಕಾಗುತ್ತದೆ; ಇದಲ್ಲದೆ, ಆ ರೀತಿ ಕಲಿತು ಪಡೆಯುವವರಲ್ಲಿ ಎಲ್ಲರೂ ಅದರಲ್ಲಿ ಒಂದೇ ಮಟ್ಟಕ್ಕೆ ತಿಳಿವಿಗರಾಗುವು ದಿಲ್ಲ; ಕೆಲವರಿಗೆ ಅದರಲ್ಲಿ ಹೆಚ್ಚು ಅಳವು ಇಲ್ಲವೇ ಜಾಣ್ಮೆ ಬಂದಿರುತ್ತದೆ, ಮತ್ತು ಕೆಲವರಿಗೆ ಕಡಿಮೆ ಬಂದಿರುತ್ತದೆ. ಎಂದರೆ, ಹುಟ್ಟಿನಿಂದಲೇ ಪಡೆಯುವ ಮಾತಿನ ಸೊಲ್ಲರಿಮೆಯ ಹಾಗೆ ಕಲಿತು ಪಡೆಯುವ ಬರಹದ ಸೊಲ್ಲರಿಮೆಯನ್ನು ಎಲ್ಲರೂ ಒಂದೇ ಮಟ್ಟಕ್ಕೆ ತಮ್ಮದಾಗಿಸಿಕೊಂಡಿರುವುದಿಲ್ಲ; ಹಾಗೆ ಮಾಡಲು ಅವರಿಗೆ ಸಾದ್ಯವಾಗುವುದೂ ಇಲ್ಲ.
ಒಂದು ಮಾತಿನ ಇಲ್ಲವೇ ನುಡಿಯ ಸೊಲ್ಲರಿಮೆಯನ್ನು ಬರೆಯುವವರು ಅದರ ಒಂದು ವರ್ಣನೆಯನ್ನು ಕೊಟ್ಟರೆ ಸಾಕು. ಇದಕ್ಕಾಗಿ ಅವರು ಆ ನುಡಿಯನ್ನು ಆಡುವ ಜನರ ಮಾತನ್ನು ಆಳವಾಗಿ ಪರಿಶೀಲಿಸಿ, ಅದನ್ನು ಉಂಟುಮಾಡುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತಿರಬಹುದು ಎಂಬುದನ್ನು ಊಹಿಸಿಕೊಂಡು, ಅದರಂತೆ ತಮ್ಮ ಸೊಲ್ಲರಿಮೆಯನ್ನು ಬರೆಯಬೇಕಾಗುತ್ತದೆ. ಆ ಕಟ್ಟಲೆಗಳಲ್ಲಿ ಯಾವುದು ತಪ್ಪು, ಯಾವುದು ಸರಿ ಎಂಬ ಕೇಳ್ವಿಯೇ ಇಲ್ಲಿ ಏಳುವುದಿಲ್ಲ. ಯಾಕೆಂದರೆ, ಆ ನುಡಿಯನ್ನು ಆಡುವವರೆಲ್ಲರೂ ಅದರಲ್ಲಿ ಒಂದೇ ಮಟ್ಟದ (ಪೂರ್ಣಮಟ್ಟದ) ಪರಿಣತಿಯನ್ನು ಪಡೆದಿರುತ್ತಾರೆ. ಅವರ ನಡುವೆ ನುಡಿಯ ಬಳಕೆಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದಲ್ಲದೆ, ಅವರಲ್ಲಿ ಒಬ್ಬರ ಬಳಕೆ ಸರಿ, ಮತ್ತು ಇನ್ನೊಬ್ಬರದು ತಪ್ಪು ಎಂದು ಹೇಳಲು ಯಾವ ಆದಾರವೂ ದೊರಕುವುದಿಲ್ಲ.
ಆದರೆ, ಬರಹದ ಸೊಲ್ಲರಿಮೆಯನ್ನು ಬರೆಯುವವರು ಸರಿ-ತಪ್ಪುಗಳ ತೀರ್ಮಾನವನ್ನೂ ಆಗಾಗ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಎಲ್ಲಾ ಬರಹ ಗಾರರೂ ತಮ್ಮ ಬರವಣಿಗೆಯ ಮೇಲೆ ಒಂದೇ ಮಟ್ಟದ ಪರಿಣತಿಯನ್ನು ಪಡೆದಿರುವುದಿಲ್ಲ. ಕೆಲವರು ಒಳ್ಳೇ ಪರಿಣತಿಯನ್ನು ಪಡೆದಿದ್ದು, ಅವರ ಬರಹ ತುಂಬಾ ಚನ್ನಾಗಿರುತ್ತದೆ; ಬೇರೆ ಕೆಲವರು ಕಡಿಮೆ ಪರಿಣತಿಯನ್ನು ಪಡೆದಿದ್ದು, ಅವರ ಬರಹ ಅಶ್ಟು ಚನ್ನಾಗಿರುವುದಿಲ್ಲ; ಕೆಲವರ ಬರಹಗಳು ಹಲವಾರು ತಪ್ಪು ಗಳಿಂದಲೂ ಕೂಡಿರಬಲ್ಲುದು. ಹಾಗಾಗಿ, ಬರಹದ ಸೊಲ್ಲರಿಮೆಯನ್ನು ಬರೆಯು ವವರು ಎಂತಹ ಬರಹವನ್ನು ತಮ್ಮೆದುರು ಮಾದರಿಯಾಗಿ ಇರಿಸಿಕೊಳ್ಳಬೇಕು ಎಂಬುದನ್ನು, ಮತ್ತು ತಮ್ಮ ಮುಂದಿರುವ ಬರಹಗಳಲ್ಲಿ ಬಳಕೆಯಾಗಿರುವ ಸೊಲ್ಲುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಾವೇ ತೀರ್ಮಾನಿಸಿಕೊಳ್ಳಬೇಕಾಗುತ್ತದೆ.
ಇನ್ನೊಂದು ವಿಶಯದಲ್ಲೂ ಮಾತು ಮತ್ತು ಬರಹಗಳ ನಡುವೆ ವ್ಯತ್ಯಾಸ ವಿದೆ: ನುಡಿಯಲ್ಲಿ ಕಾಲದಿಂದ ಕಾಲಕ್ಕೆ ಮಾರ್ಪಾಡುಗಳು ಅದರ ಆಡುಗರಿಗೆ ಗೊತ್ತಾಗದ ಹಾಗೆ ನಡೆಯುತ್ತಲೇ ಇರುತ್ತವೆ; ಈ ಮಾರ್ಪಾಡುಗಳು ಇಡೀ ಸಮಾಜದ ಹತೋಟಿಯಲ್ಲಿರುತ್ತವೆಯಲ್ಲದೆ ಒಬ್ಬಿಬ್ಬರ ಹತೋಟಿಯಲ್ಲಿರುವು ದಿಲ್ಲ. ಹಾಗಾಗಿ, ನಾವು ಬಯಸುವ ಯಾವುದೇ ರೀತಿಯ ಮಾರ್ಪಾಡನ್ನೂ ನುಡಿಯ ಮೇಲೆ ಹೇರಲು ಬರುವುದಿಲ್ಲ.
ಆದರೆ, ಬರಹದಲ್ಲಿ ನಡೆಯುವ ಹೆಚ್ಚಿನ ಮಾರ್ಪಾಡುಗಳೂ ಕೆಲವೇ ಕೆಲವು ಮಂದಿ ಬರಹಗಾರರ ಹತೋಟಿಯಲ್ಲಿರುತ್ತವೆ; ಇದಕ್ಕೆ ಕಾರಣವೇನೆಂದರೆ, ಬರಹಗಾರರು ತಮ್ಮ ಬರಹಗಳನ್ನು ಹಲವು ಬಾರಿ ತಿದ್ದಿ ಸರಿಪಡಿಸಬೇಕಾಗು ತ್ತದೆ, ಮತ್ತು ಈ ಕೆಲಸದಲ್ಲಿ ಅವರಿಗೆ ಪದಗಳ ಕುರಿತು, ಪದರೂಪಗಳ ಕುರಿತು, ಮತ್ತು ಸೊಲ್ಲುಗಳ ಕುರಿತು ತಮಗಿರುವ ತಿಳುವಳಿಕೆಯನ್ನು ಬಳಸಿ ಕೊಳ್ಳಲು ಬರುತ್ತದೆ. ಸಾಮಾನ್ಯವಾಗಿ ಈ ರೀತಿ ತಮ್ಮ ಬರಹಗಳನ್ನು ಸರಿಪಡಿಸುವಾಗ, ಅವರು ಒಳ್ಳೇ ಬರಹಗಾರರ ಬರಹಗಳನ್ನು, ಮತ್ತು ಅವು ಗಳಲ್ಲಿ ಬಳಕೆಯಾಗಿರುವ ಸೊಲ್ಲರಿಮೆಯ ಕಟ್ಟಲೆಗಳನ್ನು ಮಾದರಿಯಾಗಿರಿಸಿ ಕೊಳ್ಳುತ್ತಾರೆ.
ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸ ಮಾತಿನ ಸೊಲ್ಲರಿಮೆ ಮತ್ತು ಬರಹದ ಸೊಲ್ಲರಿಮೆಗಳ ನಡುವೆಯೂ ಕಾಣಿಸಿಕೊಳ್ಳುತ್ತದೆ: ಮಾತಿನ ಸೊಲ್ಲರಿಮೆಗಳು ಮಾತಿನ ಮೇಲೆ, ಇಲ್ಲವೇ ನುಡಿಯ ಮೇಲೆ ಯಾವ ಪ್ರಬಾವ ವನ್ನೂ ಬೀರಲಾರವು; ಯಾಕೆಂದರೆ, ಮಾತನ್ನು ಬಳಸುವವರು ಯಾರೂ ಸರಿ- ತಪ್ಪುಗಳ ಗೋಜಿಗೆ ಹೋಗುವುದಿಲ್ಲ. ಮಾತನಾಡುವಾಗ ಎಂತಹ ಸೊಲ್ಲ ರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದು ಅವರ ಗಮನಕ್ಕೂ ಬರುವು ದಿಲ್ಲ.
ಆದರೆ ಮೇಲೆ ಸೂಚಿಸಿದ ಹಾಗೆ, ಬರೆಯುವವರು ತಾವು ಬರೆದುದನ್ನು ತಿದ್ದಿ ಸರಿಪಡಿಸಬೇಕಾಗುತ್ತದೆ, ಮತ್ತು ಇದನ್ನು ನಡೆಸುವಲ್ಲಿ ಅವರಿಗೆ ಪದಗಳ, ಪದ ರೂಪಗಳ, ಮತ್ತು ಸೊಲ್ಲಿನ ಇಟ್ಟಳಗಳ ತಿಳುವಳಿಕೆ ನೆರವಿಗೆ ಬರುತ್ತದೆ. ಅವರಿಗೆ ಬೇಕಾಗುವ ಈ ತಿಳುವಳಿಕೆಯನ್ನು ಕೊಡಬಲ್ಲ ಬರಹದ ಸೊಲ್ಲರಿಮೆ ಗಳು ಅವರ ಬರಹದ ಮೇಲೆ ಪ್ರಬಾವವನ್ನೂ ಬೀರಬಲ್ಲುವು. ಹಾಗಾಗಿ, ಬರಹದಲ್ಲಿ ನಡೆಯುವ ಮಾರ್ಪಾಡುಗಳು ಸಮಾಜಕ್ಕೆ ಅನುಕೂಲವಾಗುವಂತಹ ದಿಕ್ಕಿನಲ್ಲಿ ನಡೆಯುವ ಹಾಗೆ ಮಾಡಲು ಬರಹದ ಸೊಲ್ಲರಿಮೆಗಳು ಹಮ್ಮುಗೆ ಗಳನ್ನು ತಮ್ಮ ಮುಂದಿರಿಸಿಕೊಳ್ಳಬಲ್ಲುವು.
ಎತ್ತುಗೆಗಾಗಿ, ಹೊಸ ಹೊಸ ವಿಶಯಗಳ ಕುರಿತು ಬರೆಯುವವರು, ಮತ್ತು ಬೇರೆ ನುಡಿಗಳಲ್ಲಿರುವ ವಿಶಯಗಳನ್ನು ತಮ್ಮ ನುಡಿಗೆ ಮಾರೆಡೆಗೊಳಿಸುವವರು ಹಲವಾರು ಹೊಸ ಪದಗಳನ್ನು ತಮ್ಮ ನುಡಿಯಲ್ಲಿ ಹುಟ್ಟುಹಾಕಿಕೊಳ್ಳಬೇಕಾಗು ತ್ತದೆ. ಆದರೆ, ಹೀಗೆ ಹೊಸ ಪದಗಳನ್ನು ಹುಟ್ಟುಹಾಕುವಾಗ, ಅವು ತಮ್ಮ ನುಡಿಯ ಸೊಗಡನ್ನು ಕೆಡಿಸದಂತೆಯೂ ಅವರು ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವರ ಬರಹ ಓದುವವರಿಗೆ ತುಂಬಾ ತೊಡಕಿನದೆಂದು ಅನಿಸಬಲ್ಲುದು.
ಹೊಸಪದಗಳನ್ನು ಉಂಟುಮಾಡುವಲ್ಲಿ ಒಂದು ನುಡಿಯ ಒಲವು ಎಂತಹದು ಎಂಬುದನ್ನು ಕಂಡುಹಿಡಿದು, ಆ ಒಲವನ್ನು ಮೀರದ ಹಾಗೆ ಹೊಸ ಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಸೊಲ್ಲರಿಗರು ತಮ್ಮ ಬರಹದ ಸೊಲ್ಲರಿಮೆಯಲ್ಲಿ ತಿಳಿಸಬಲ್ಲರು. ಇದು ಒಂದು ನುಡಿಯ ಬರಹದಲ್ಲಿ ತುಂಬಿ ಕೊಳ್ಳುವ ಹೊಸ ಪದಗಳು ಅದರಲ್ಲಿ ಆ ನುಡಿಯ ಸೊಗಡನ್ನು ಉಳಿಸುವಂತೆ ನೋಡಿಕೊಳ್ಳುವಲ್ಲಿ ನೆರವಾಗಬಲ್ಲುದು.
1.3.4 ಮಾರ್ಪಾಡುಗಳು ಬರಹದಲ್ಲಿ ಸಹಜವಾಗಿ ನಡೆಯುವುದಿಲ್ಲ
ಮೇಲೆ ತಿಳಿಸಿದ ಹಾಗೆ, ಮಾತಿನಲ್ಲಿ ಕಾಲದಿಂದ ಕಾಲಕ್ಕೆ ಮತ್ತು ತಲೆಮಾರಿನಿಂದ ತಲೆಮಾರಿಗೆ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ. ಇವುಗಳ ಮೇಲೆ ಆಡುಗರಿಗೆ ಎಂತಹ ಹತೋಟಿಯೂ ಇರುವುದಿಲ್ಲ. ಈ ಮಾರ್ಪಾಡುಗಳಿಂದಾಗಿ, ಮಾತು (ಇಲ್ಲವೇ ನುಡಿ) ಯಾವಾಗಲೂ ತನ್ನ ಸಹಜತೆಯನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ. ಆದರೆ, ಬರಹದಲ್ಲಿ ಈ ರೀತಿ ಮಾರ್ಪಾಡುಗಳು ತಾವಾಗಿ ನಡೆಯುವುದಿಲ್ಲ. ಹಾಗಾಗಿ, ಸಮಯ ಕಳೆದಂತೆಲ್ಲ ಬರಹ ಮಾತಿನಿಂದ ಬೇರಾಗುತ್ತಾ ಹೋಗುತ್ತದೆ, ಮತ್ತು ಹೆಚ್ಚು ಹೆಚ್ಚು ಕ್ರುತಕ ವಾಗುತ್ತಾ ಹೋಗುತ್ತದೆ.
ಮಾತಿಗೂ ಬರಹಕ್ಕೂ ನಡುವಿನ ಅಂತರ ಈ ರೀತಿ ಹೆಚ್ಚಾದಾಗ, ಸಾಮಾನ್ಯ ವಾಗಿ ಬರಹಗಾರರು ತಮ್ಮ ಬರಹಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳು ತ್ತಾರೆ, ಮತ್ತು ಅವಕ್ಕೂ ಮಾತಿಗೂ ನಡುವೆ ಬೆಳೆದುಬಂದಿರುವ ಅಂತರ
ಕಡಿಮೆಯಾಗುವ ಹಾಗೆ ನೋಡಿಕೊಳ್ಳುತ್ತಾರೆ. ಆದರೆ, ಇದನ್ನು ಅವರು ತಿಳಿದು ಮಾಡಬೇಕಾಗಿದೆ. ಕೆಲವು ಬರಹಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಇಂತಹ ಮಾರ್ಪಾಡುಗಳನ್ನು ಯಾರೂ ನಡೆಸದಿರುವುದೂ ಇದೆ.
ಎತ್ತುಗೆಗಾಗಿ, ಸಂಸ್ಕ್ರುತ, ಲ್ಯಾಟಿನ್ ಮೊದಲಾದ ಕೆಲವು ‘ಕ್ಲಾಸಿಕಲ್’ ಬರಹ ಗಳಲ್ಲಿ ಈ ರೀತಿ ನುಡಿಯಲ್ಲಿ ನಡೆದ ಮಾರ್ಪಾಡುಗಳನ್ನು ಯಾರೂ ಬರಹಕ್ಕೆ ಇಳಿಸಲು ಹೋಗಿರಲಿಲ್ಲ. ಹಾಗಾಗಿ, ಅವು ನೂರಾರು ವರ್ಶಗಳಿಂದಲೂ ಮಾರ್ಪಡದೆ ಉಳಿದಿವೆ, ಮತ್ತು ಇದರಿಂದಾಗಿ ಅವುಗಳಲ್ಲಿ ಹಲವು ಬಗೆಯ ಕ್ರುತಕತೆಗಳೂ ತುಂಬಿಕೊಂಡಿವೆ. ಆದರೆ, ಕನ್ನಡದ ಬರಹದಲ್ಲಿ ಮಾತಿಗೂ ಬರಹಕ್ಕೂ ನಡುವಿನ ಅಂತರ ಹೆಚ್ಚಿದ ಹಾಗೆಲ್ಲ, ಅದು ಮಾತಿಗೆ ಹತ್ತಿರ ಉಳಿಯುವ ಹಾಗೆ, ಕನ್ನಡ ಬರಹಗಾರರು ಅದರಲ್ಲಿ ಮಾರ್ಪಾಡುಗಳನ್ನು ಮಾಡುತ್ತಾ ಬಂದಿದ್ದರು; ಹಾಗಾಗಿ, ಕನ್ನಡ ಬರಹ ಹಳೆಗನ್ನಡವಿದ್ದದ್ದು ನಡು ಗನ್ನಡವಾಗಿ, ಇವತ್ತು ಹೊಸಗನ್ನಡವಾಗಿದೆ.
ನಿಜಕ್ಕೂ ಸಂಸ್ಕ್ರುತ ಇವತ್ತು ಒಂದು ಬರಹವಾಗಿ ಉಳಿದಿದೆಯಲ್ಲದೆ, ನುಡಿ ಯಾಗಿ ಇಲ್ಲವೆ ಬಾಶೆಯಾಗಿ ಉಳಿದಿಲ್ಲ; ಎರಡು ಸಾವಿರ ವರ್ಶಗಳಶ್ಟು ಹಿಂದೆಯೇ ಅದರ ನುಡಿಯ ರೂಪ ಅಳಿದುಹೋಗಿತ್ತು. ಇವತ್ತಿಗೂ ಕೆಲವರು ಅದನ್ನು ತಮ್ಮ ಮಾತಿನಲ್ಲಿ ಬಳಸಿಕೊಳ್ಳುತ್ತಿರಬಹುದು; ಆದರೆ ಕಾಲದಿಂದ ಕಾಲಕ್ಕೆ ಮತ್ತು ತಲೆಮಾರಿನಿಂದ ತಲೆಮಾರಿಗೆ ಮಾರ್ಪಡುತ್ತಾ ಹೋಗುವ ಮೂಲಕ, ತನ್ನಲ್ಲಿ ತುಂಬಿಕೊಳ್ಳುವ ಕ್ರುತಕತೆಯನ್ನು ಅಳಿಸಿಕೊಳ್ಳುವ ಮತ್ತು ಜೀವಂತಿಕೆಯನ್ನು ತುಂಬಿಕೊಳ್ಳುವ ಅಳವು ಅದಕ್ಕಿಲ್ಲ. ಯಾಕೆಂದರೆ, ಅದನ್ನು ಮಾತಿನಲ್ಲಿ ಬಳಸುವವರು ಯಾವ ಮಾತು ಸರಿ, ಮತ್ತು ಯಾವ ಮಾತು ತಪ್ಪು ಎಂಬುದನ್ನು ಹಿಂದಿನವರ (ಮಹಾಕವಿಗಳ) ಬರಹಗಳನ್ನು ನೋಡಿ, ಇಲ್ಲವೇ ಪಾಣಿನಿಯ ವ್ಯಾಕರಣವನ್ನು ಓದಿ ತೀರ್ಮಾನಿಸುತ್ತಿರಬೇಕಾಗಿದೆ. ಹಾಗಾಗಿ, ಸಂಸ್ಕುತವನ್ನು ಒಂದು ಬರಹವೆಂದು ಕರೆಯಬೇಕಲ್ಲದೆ ನುಡಿ ಇಲ್ಲವೇ ಬಾಶೆಯೆಂದು ಕರೆಯುವುದೇ ತಪ್ಪು.
ಒಂದು ಬರಹ ಸಮಾಜದ ಕೆಲವೇ ಕೆಲವು ಜನರಲ್ಲಿ ಮಾತ್ರವೇ ಉಳಿಯದೆ ಎಲ್ಲರನ್ನೂ ತಲಪುವ ಹಾಗೆ ಆಗಬೇಕಿದ್ದಲ್ಲಿ, ಅದಕ್ಕೂ ಮಾತಿಗೂ ನಡುವಿನ ಅಂತರ ಆದಶ್ಟು ಕಡಿಮೆಯಿರಬೇಕು. ಕನ್ನಡ ಬರಹದಲ್ಲಿ ಇವತ್ತು ಈ ಅಂತರ ಹೆಚ್ಚಾಗುತ್ತಾ ಇದೆ. ಹಾಗಾಗಿ, ಅದನ್ನು ಕಡಿಮೆಮಾಡುವ ಕೆಲಸ ಇವತ್ತು ನಡೆಯ ಬೇಕಾಗಿದೆ.
1.3.5 ಈ ಹೊತ್ತಗೆಯ ಹಮ್ಮುಗೆಗಳು
ಈ ಹೊತ್ತಗೆ ಮುಕ್ಯವಾಗಿ ಎಲ್ಲರ ಕನ್ನಡ ಎಂಬ ಬರಹ ಕನ್ನಡದಲ್ಲಿ ಬಳಕೆ ಯಾಗುವ (ಮತ್ತು ಬಳಕೆಯಾಗಬೇಕಾಗಿರುವ) ಸೊಲ್ಲರಿಮೆಯ ಕಟ್ಟಲೆಗಳು ಎಂತಹವು ಎಂಬುದನ್ನು ವಿವರವಾಗಿ ತಿಳಿಸಲು ಹೊರಟಿದೆ. ಇದೊಂದು ಬರಹದ
ಸೊಲ್ಲರಿಮೆಯಾದ ಕಾರಣ, ಇವತ್ತು ಹೊಸಗನ್ನಡ ಬರಹಗಳಲ್ಲಿ ಬಳಕೆಯಲ್ಲಿಲ್ಲ ದಿದ್ದರೂ ಬಳಕೆಗೆ ತರಬಹುದಾದ ಕೆಲವು ಹಳೆಗನ್ನಡ ಪದ, ಪದರೂಪ, ಮತ್ತು ಒಟ್ಟುಗಳನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಇವುಗಳ ಮೂಲಕ ಎಲ್ಲರ ಕನ್ನಡದ ಕಸುವನ್ನು ಇನ್ನಶ್ಟು ಹೆಚ್ಚಿಸಲು ಬರುತ್ತದೆ ಎಂದು ನನಗೆ ಅನಿಸುತ್ತದೆ.
ಇದಲ್ಲದೆ, ಎಲ್ಲರ ಕನ್ನಡ ಎಂಬ ಬರಹದ ಕನ್ನಡ ನಿಜಕ್ಕೂ ಎಲ್ಲರದಾಗ ಬೇಕಿದ್ದಲ್ಲಿ ಬರಹದ ಮಟ್ಟಿಗೆ ಏನು ಮಾಡಬಹುದು ಎಂಬುದರ ಕುರಿತು ಎರಡು ಸೂಚನೆಗಳನ್ನು ಮೇಲೆ ಕೊಡಲಾಗಿತ್ತು; ಅವೆರಡನ್ನೂ ಈ ಹೊತ್ತಗೆಯಲ್ಲಿ ಅಳವಡಿಸಿಕೊಳ್ಳಲಾಗಿದೆ:
ಬೇಕಾಗಿರುವಲ್ಲೂ ಬೇಡದಿರುವಲ್ಲೂ ಸಂಸ್ಕ್ರುತದಿಂದ ಪದಗಳನ್ನು ಎರವಲು ಪಡೆದು (ಇಲ್ಲವೇ ಸಂಸ್ಕ್ರುತದಲ್ಲೇನೇ ಹೊಸದಾಗಿ ಉಂಟುಮಾಡಿ) ಬಳಸುವ ಚಾಳಿಯ ಮೇಲೆ ಬರಹಗಾರರು ಹತೋಟಿಯನ್ನಿರಿಸಿಕೊಳ್ಳಬೇಕು (ಅಂತಹ ಎರವಲುಗಳನ್ನು ಆದಶ್ಟು ಕಡಿಮೆ ಮಾಡಬೇಕು) ಎಂಬುದು ಒಂದು ಸೂಚನೆ; ಮತ್ತು, ಆ ರೀತಿ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾಗಿರುವ ಕಟ್ಟಲೆಯನ್ನು ಬಿಟ್ಟುಕೊಟ್ಟು, ಅವನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆಯೇ ಬರೆಯಬೇಕು ಎಂಬುದು ಎರಡನೆಯ ಸೂಚನೆ. ಈ ಎರಡು ಸೂಚನೆಗಳನ್ನು ಒಪ್ಪಿಕೊಂಡಲ್ಲಿ, ಕನ್ನಡ ಬರಹಗಳು ಕನ್ನಡ ನುಡಿಯ ಸೊಗಡನ್ನು ಹೆಚ್ಚು ಚನ್ನಾಗಿ ಉಳಿಸಿಕೊಳ್ಳಬಲ್ಲುವು, ಮತ್ತು ಆ ಮೂಲಕ ಅವನ್ನು ಕಲಿಯುವ ಮತ್ತು ಬಳಸುವ ಕೆಲಸ ಎಲ್ಲಾ ಕನ್ನಡಿಗರಿಗೂ ಹೆಚ್ಚು ಸುಳುವಾಗಬಲ್ಲುದು.
ಈ ಹೊತ್ತಗೆಯಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಆದಶ್ಟು ಕಡಿಮೆ ಬಳಸಲಾಗಿದೆ, ಮತ್ತು ಅವನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯುವ ಬದಲು, ಹೇಗೆ ಓದುತ್ತೇವೆಯೋ ಹಾಗೆ ಬರೆಯಲಾಗಿದೆ. ಇದಲ್ಲದೆ, ಕನ್ನಡದ ಸೊಲ್ಲರಿಮೆಯನ್ನು ವಿವರಿಸಿ ಹೇಳಲು ಬೇಕಾಗುವ ಹಲವಾರು ಅರಿಮೆಯ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಿ ಬಳಸಲಾಗಿದೆ. ಹಾಗಾಗಿ, ಈಗಾಗಲೇ ಸಂಸ್ಕ್ರುತದ ಸೊಲ್ಲರಿಮೆಯ (ವ್ಯಾಕರಣದ) ಪದಗಳನ್ನು ತಮ್ಮ ಓದಿನಲ್ಲಿ ಕಂಡು ಬಳಕೆಯಾಗಿರುವವರಿಗೆ ಈ ಹೊತ್ತಗೆಯ ಓದು ಕೆಲವೆಡೆಗಳಲ್ಲಿ ತುಸು ತೊಡಕಿನದೆಂದು ಅನಿಸಬಹುದು. ಆದರೆ, ಹೊಸದಾಗಿ ಕನ್ನಡದ ಸೊಲ್ಲರಿಮೆಯನ್ನು ಕಲಿಯ ಹೊರಡುವವರಿಗೆ ಇದು ಸಂಸ್ಕ್ರುತದ ಎರವಲು ಪದಗಳು ತುಂಬಿ ತುಳುಕುವ ವ್ಯಾಕರಣಗಳಿಗಿಂತ ಹೆಚ್ಚು ಸುಳುವಾದುದೆಂದು ಅನಿಸದಿರದು.
ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ, ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.
ಅರಿಮೆಯ ಪದಗಳು ಆದಶ್ಟು ಅಡಕವಾಗಿರಬೇಕು; ಆದರೆ, ಆ ರೀತಿ ಅಡಕ ವಾಗಿರುವ ಪದಗಳನ್ನು ಸಂಸ್ಕ್ರುತದ ಹಾಗೆ ಕನ್ನಡದಲ್ಲಿ ಉಂಟುಮಾಡಲು ಬರುವು ದಿಲ್ಲ ಎಂಬ ಅನಿಸಿಕೆ ಹಲವು ಬರಹಗಾರರಲ್ಲಿದೆ; ಹೊಸ ಪದಗಳನ್ನು ಉಂಟು ಮಾಡಬೇಕಾದಾಗಲೆಲ್ಲ ಕನ್ನಡದ ಬರಹಗಾರರು ಹೆಚ್ಚಾಗಿ ಸಂಸ್ಕ್ರುತದ ಮೊರೆ ಹೊಗುತ್ತಿರುವುದಕ್ಕೆ ಅವರ ಈ ಅನಿಸಿಕೆಯೂ ಒಂದು ಕಾರಣ. ಆದರೆ, ಕೆಲವೇ ಕೆಲವು ಶತಮಾನಗಳಶ್ಟು ಹಿಂದೆ ಬಳಕೆಯಲ್ಲಿದ್ದ ಹಳೆಗನ್ನಡದ ಪದಗಳನ್ನು ಮತ್ತು ಬೇರುಗಳನ್ನು ಬಳಸಿದಲ್ಲಿ, ಕನ್ನಡದಲ್ಲೂ ಸಾಕಶ್ಟು ಅಡಕವಾದ ಪದ ಗಳನ್ನು ಉಂಟುಮಾಡಲು ಬರುತ್ತದೆ. ಇದನ್ನು ಪದಗಳ ಇಟ್ಟಳ ಎಂಬ ಈ ಹೊತ್ತಗೆಯ ಎರಡು ಮತ್ತು ಮೂರನೇ ಪಸುಗೆಗಳಲ್ಲಿ ತೋರಿಸಿಕೊಡಲಾಗಿದೆ.
ಎರಡು ಸಾವಿರ ವರ್ಶಗಳಶ್ಟು ಹಿಂದೆ ಬಳಕೆಯಲ್ಲಿದ್ದ ಸಂಸ್ಕ್ರುತದ ಪದ ಮತ್ತು ಒಟ್ಟುಗಳಲ್ಲಿ ಯಾವುದನ್ನು ಬೇಕಿದ್ದರೂ ಎಗ್ಗಿಲ್ಲದೆ ಬಳಸಿಕೊಳ್ಳಬಲ್ಲ ಕನ್ನಡ ಬರಹಗಾರರಿಗೆ ಕೆಲವೇ ಕೆಲವು ಶತಮಾನಗಳಶ್ಟು ಹಿಂದೆ ಬಳಕೆಯಲ್ಲಿದ್ದ ನಮ್ಮವೇ ಆದ ಹಳೆಗನ್ನಡದ ಪದ ಮತ್ತು ಒಟ್ಟುಗಳು ಬಳಕೆಗೆ ತಕ್ಕವುಗಳೆಂದು ಅನಿಸದಿರುವುದು ನಿಜಕ್ಕೂ ಅಚ್ಚರಿಯನ್ನುಂಟುಮಾಡುತ್ತದೆ! ಇದು ಅವರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು, ಮತ್ತು ಸಂಸ್ಕ್ರುತದ ಮೇಲಿರುವ ಮೇಲರಿಮೆಯನ್ನು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತದೆ.
1.4 ಬರಹದ ಏರ್ಪಾಡು
ಎಲ್ಲರ ಕನ್ನಡದ ಸೊಲ್ಲರಿಮೆಯೆಂತಹದು ಎಂಬುದನ್ನು ವಿವರಿಸಲು ತೊಡಗುವ ಮೊದಲು, ಅದರ ಬರಹಗಳಲ್ಲಿ ಎಂತಹ ಇಟ್ಟಳಗಳೆಲ್ಲ ಬಳಕೆಯಾಗುತ್ತವೆ ಎಂಬುದನ್ನು ಅಡಕವಾಗಿ ತಿಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ:
ಬರಹಗಳಲ್ಲಿ ತಮ್ಮದೇ ಆದ ಯಾವ ಹುರುಳೂ ಇಲ್ಲದ ಕೆಲವೇ ಕೆಲವು ಬರಿಗೆಗಳನ್ನು ಬಳಸಿ ಸಾವಿರಾರು ಪದಗಳನ್ನು ಉಂಟುಮಾಡಲಾಗುತ್ತದೆ. ಎತ್ತುಗೆ ಗಾಗಿ, ಎಲ್ಲರ ಕನ್ನಡದ ಬರಹದಲ್ಲಿ ಒಟ್ಟು 31 ಬರಿಗೆಗಳು ಮಾತ್ರ ಬಳಕೆ ಯಾಗುತ್ತವೆ; ಆದರೆ ಈ 31 ಬರಿಗೆಗಳನ್ನು ಬಳಸಿ ಸಾವಿರಾರು ಪದಗಳನ್ನು ಉಂಟುಮಾಡಲಾಗಿದೆ.
ಇದಲ್ಲದೆ, ಈ ಪದಗಳನ್ನು ಹಾಗೆಯೇ ಬರಹಗಳಲ್ಲಿ ಬಳಸುವುದಿಲ್ಲ; ಅವುಗಳನ್ನು ಪದಕಂತೆಗಳಾಗಿ ಜೋಡಿಸಲಾಗುತ್ತದೆ, ಮತ್ತು ಈ ಪದಕಂತೆ ಗಳನ್ನು ಬಳಸಿ ಸೊಲ್ಲುಗಳನ್ನು ಉಂಟುಮಾಡಲಾಗುತ್ತದೆ. ಹಾಗಾಗಿ, (1) ಬರಿಗೆಗಳನ್ನು ಬಳಸಿ ಪದಗಳನ್ನು ಕಟ್ಟುವುದು, (2) ಪದಗಳನ್ನು ಬಳಸಿ ಪದಕಂತೆ ಗಳನ್ನು ಕಟ್ಟುವುದು, ಮತ್ತು (3) ಪದಕಂತೆಗಳನ್ನು ಬಳಸಿ ಸೊಲ್ಲುಗಳನ್ನು ಕಟ್ಟು ವುದು ಎಂಬುದಾಗಿ ಸೊಲ್ಲುಗಳ ಇಟ್ಟಳದಲ್ಲಿ ಮೂರು ಮುಕ್ಯ ಹಂತಗಳನ್ನು ಕಾಣಬಲ್ಲೆವು.
ಬರಿಗೆಗಳಿಂದ ಪದಗಳನ್ನು ಪಡೆಯುವಲ್ಲೂ ಹುರುಳಿರುವ ಪದಗಳಿಗೆ ಒಟ್ಟು ಗಳನ್ನು ಸೇರಿಸಿ ಬೇರೆ ಹಲವು ಹೆಚ್ಚಿನ ಪದಗಳನ್ನು ಪಡೆಯುವುದು, ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ ಬೇರೆ ಹಲವು ಹೆಚ್ಚಿನ ಪದಗಳನ್ನು ಪಡೆಯು ವುದು ಎಂಬ ಎರಡು ಒಳಹಂತಗಳಿವೆ. ಎತ್ತುಗೆಗಾಗಿ, ಅರಿಕೆ, ಅರಿತ, ಅರಿಮೆ, ಅರಿವು, ಅರಿಗ, ಅರಿದು, ಅರಿಯಮೆ, ಅರಿಯಮಿಕೆ, ಅರಿವಿಗ ಮೊದಲಾದ ಹಲವು ಪದಗಳನ್ನು ಅರಿ ಪದಕ್ಕೆ ಒಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ, ಮತ್ತು ಅರಿವಳಿಕೆ, ಅರಿವಿಲಿ, ಮುನ್ನರಿವು ಮೊದಲಾದ ಬೇರೆ ಹಲವು ಪದಗಳನ್ನು ಅದೇ ಅರಿ ಪದಕ್ಕೆ ಬೇರೆ ಕೆಲವು ಪದಗಳನ್ನು ಸೇರಿಸಿ ಪಡೆಯಲಾಗಿದೆ.
ಪದಗಳನ್ನು ಪದಕಂತೆಗಳಲ್ಲಿ ಇಲ್ಲವೇ ಸೊಲ್ಲುಗಳಲ್ಲಿ ಬಳಸುವಾಗಲೂ ಅವಕ್ಕೆ ಕೆಲವು ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳ ಬೇಕಾಗುತ್ತದೆ. ಎತ್ತುಗೆಗಾಗಿ, ಮರ ಪದಕ್ಕೆ ಮರಗಳು, ಮರವನ್ನು, ಮರ ದಿಂದ, ಮರಕ್ಕೆ, ಮರದಲ್ಲಿ, ಮರದ ಮೊದಲಾದ ಪದರೂಪಗಳಿವೆ. ಇಂತಹ ಪದರೂಪಗಳ ಮೂಲಕ, ಸೊಲ್ಲುಗಳಲ್ಲಿ ಬಳಕೆಯಾಗುವ ಪದಗಳು ಒಂದರೊಡ ನೊಂದು ಸಂಬಂದಿಸಿರುವಂತೆ ಮಾಡಲಾಗುತ್ತದೆ, ಮತ್ತು ಆ ಸೊಲ್ಲುಗಳು ಆಡುಗನ ಜಾಗ ಮತ್ತು ಹೊತ್ತುಗಳಲ್ಲಿ ನೆಲೆಗೊಳ್ಳುವಂತೆ ಮಾಡಲಾಗುತ್ತದೆ (1.5.4 ನೋಡಿ).
ಬರಹಗಳಲ್ಲಿ ಸೊಲ್ಲುಗಳನ್ನು ಬಳಸುವಲ್ಲೂ ಒಂದು ಏರ್ಪಾಡಿದೆ. ಅವುಗಳನ್ನು ಕುರಳು(ಪಾರಾ)ಗಳಲ್ಲಿ ಅಣಿಗೊಳಿಸಲಾಗುತ್ತದೆ, ಮತ್ತು ಈ ಕುರಳುಗಳನ್ನು ಪಸುಗೆಗಳಲ್ಲಿ ಅಣಿಗೊಳಿಸಲಾಗುತ್ತದೆ. ಬರಹ ಸಲೀಸಾಗಿ ಓದಿಸಿಕೊಂಡು ಹೋಗಬೇಕಿದ್ದಲ್ಲಿ, ಅದರಲ್ಲಿ ಬರುವ ಸೊಲ್ಲುಗಳನ್ನು ಸರಿಯಾದ ಬಗೆಯಲ್ಲಿ ಅಣಿಗೊಳಿಸಿರಬೇಕಾಗುತ್ತದೆ.
1.4.1 ಪದಗಳು ಮತ್ತು ಬರಿಗೆಗಳು
ನಾವು ಬರಹದಲ್ಲಿ ಬಳಸುವ ಸೊಲ್ಲುಗಳಲ್ಲಿ ಮನೆ, ಹೋಗು, ಬರು, ನೀನು, ಬೇಗ, ಇಲ್ಲಿ, ಎಲ್ಲಿ ಮೊದಲಾದ ಹಲವಾರು ಪದಗಳು ಬಳಕೆಯಾಗುತ್ತಿರುತ್ತವೆ, ಮತ್ತು ಈ ಪದಗಳಿಗೆ ಬೇರೆ ಬೇರೆ ರೂಪಗಳನ್ನು ಕೊಡುವುದಕ್ಕಾಗಿ ಗೆ, ಇಂದ, ಉತ್ತ, ಏನೆ ಮೊದಲಾದ ಹಲವಾರು ಒಟ್ಟುಗಳೂ ಬಳಕೆಯಾಗುತ್ತಿರುತ್ತವೆ.
ಪದ ಮತ್ತು ಒಟ್ಟುಗಳೆರಡನ್ನೂ ನಾವು ಬರಿಗೆಗಳನ್ನು ಒಟ್ಟು ಸೇರಿಸಿ ಉಂಟುಮಾಡುತ್ತೇವೆ. ಎತ್ತುಗೆಗಾಗಿ ಮನೆ ಪದದಲ್ಲಿ ಮ್, ಅ, ನ್, ಎ ಎಂಬ ನಾಲ್ಕು ಬರಿಗೆಗಳು ಬಂದಿವೆ; ಹೋಗು ಪದದಲ್ಲಿ ಹ್, ಓ, ಗ್, ಉ ಎಂಬ ಬೇರೆ ನಾಲ್ಕು ಬರಿಗೆಗಳು ಬಂದಿವೆ; ಗೆ ಒಟ್ಟಿನಲ್ಲಿ ಗ್ ಮತ್ತು ಎ ಎಂಬ ಎರಡು ಬರಿಗೆಗಳು ಬಂದಿವೆ. ಬರಹದಲ್ಲಿ ಬಳಕೆಯಾಗುವ ಈ ಬರಿಗೆಗಳು ಓದಿನಲ್ಲಿ (ಇಲ್ಲವೇ ಮಾತಿನಲ್ಲಿ) ಉಲಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಮೇಲೆ ತಿಳಿಸಿದ ಹಾಗೆ, ಎಲ್ಲರ ಕನ್ನಡದಲ್ಲಿ ಪದ ಮತ್ತು ಒಟ್ಟುಗಳನ್ನು ಬರೆಯುವುದಕ್ಕಾಗಿ ಒಟ್ಟು ಮೂವತ್ತೊಂದು ಬರಿಗೆಗಳನ್ನು ಬಳಸಿಕೊಳ್ಳುತ್ತೇವೆ. ಇವುಗಳಲ್ಲಿ ಇ, ಈ, ಎ, ಏ, ಉ, ಊ, ಒ, ಓ, ಅ, ಆ ಎಂಬ ಹತ್ತು ಬರಿಗೆಗಳನ್ನು ತೆರೆಯುಲಿಗಳು ಎಂಬುದಾಗಿ ಕರೆಯಬಹುದು, ಮತ್ತು ಉಳಿದ ಪ್, ತ್, ಟ್, ಚ್, ಕ್, ಬ್, ದ್, ಡ್, ಜ್, ಗ್, ಮ್, ನ್, ಣ್, ಯ್, ವ್, ರ್, ಲ್, ಳ್, ಶ್, ಸ್, ಹ್ ಎಂಬ ಇಪ್ಪತ್ತೊಂದು ಬರಿಗೆಗಳನ್ನು ಮುಚ್ಚುಲಿಗಳು ಎಂಬುದಾಗಿ ಕರೆಯಬಹುದು.
ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಈ ಬರಿಗೆಗಳ ಉಲಿಪು ಹೇಗೆ ನಡೆಯುತ್ತದೆ ಎಂಬುದನ್ನು, ಮತ್ತು ಪದಗಳಲ್ಲಿ ಮತ್ತು ಒಟ್ಟುಗಳಲ್ಲಿ ಬಳಕೆ ಯಾಗುವಾಗ ಅವು ಎಂತಹ ಕಟ್ಟಲೆಗಳಿಗೆ ಒಳಗಾಗುತ್ತವೆ ಎಂಬುದನ್ನು ಮುಂದೆ 1.6ರಲ್ಲಿ ನೋಡಲಿರುವೆವು.
ಪದಗಳು ಮತ್ತು ಒಟ್ಟುಗಳು ಒಂದರೊಡನೊಂದು ಸೇರುವಾಗ, ಅವು ಗಳಲ್ಲಿ ಬರುವ ಬರಿಗೆಗಳಲ್ಲಿ ಕೆಲವು ಮಾರ್ಪಾಡುಗಳೂ ನಡೆಯುತ್ತವೆ. ಎತ್ತುಗೆ ಗಾಗಿ, ಮನೆ ಪದಕ್ಕೆ ಅ ಒಟ್ಟು ಸೇರುವಾಗ ಅವುಗಳ ನಡುವೆ ಯ್ ಬರಿಗೆ ಕಾಡು ಪದಕ್ಕೆ ಇಗೆ ಒಟ್ಟು ಸೇರುವಾಗ ಬರುತ್ತದೆ (ಮನೆ+ಅ - ಮನೆಯ); ಅದರ ಕೊನೆಯಲ್ಲಿರುವ ಉ ಬರಿಗೆ ಬಿದ್ದು ಹೋಗುತ್ತದೆ (ಕಾಡು+ಇಗೆ - ಕಾಡಿಗೆ). ಕನ್ನಡದ ಪದಗಳನ್ನು ಸೊಲ್ಲುಗಳಲ್ಲಿ ಬಳಸುವಾಗ ಇಂತಹ ಹಲವು ಸೇರಿಕೆಯ ಮಾರ್ಪಾಡುಗಳು ನಡೆಯುತ್ತಿದ್ದು, ಅವು ಎಂತಹವು ಎಂಬುದನ್ನು ಮುಂದಿನ ಕೆಲವು ಪಸುಗೆಗಳಲ್ಲಿ ನೋಡಲಿರುವೆವು.
ಪದ ಮತ್ತು ಒಟ್ಟುಗಳಲ್ಲಿ ಬಳಕೆಯಾಗುವ ಬರಿಗೆಗಳಿಗೆ ನೇರವಾಗಿ ಯಾವ ಹುರುಳೂ ಇಲ್ಲ. ಅವು ಪದ ಮತ್ತು ಒಟ್ಟುಗಳಿಗೆ ಒಂದು ರೂಪವನ್ನು ಕೊಡುವು ದಕ್ಕಾಗಿ ಮಾತ್ರ ಬಳಕೆಯಾಗುತ್ತವೆ. ಕನ್ನಡದಲ್ಲಿ ಮನೆ ಎಂಬುದಕ್ಕೆ ಒಂದು ಹುರುಳಿದೆ; ಆದರೆ, ಅದಕ್ಕೊಂದು ರೂಪವನ್ನು ಕೊಡುವುದಕ್ಕಾಗಿ ಬಂದಿರುವ ಮ್, ಅ, ನ್ ಮತ್ತು ಎ ಎಂಬ ನಾಲ್ಕು ಬರಿಗೆಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ.
1.4.2 ಪದಗಳ ಇಟ್ಟಳ
ಕನ್ನಡದ ಸೊಲ್ಲುಗಳಲ್ಲಿ ಮುಕ್ಯವಾಗಿ ಇಟ್ಟಳವಿರುವ ಪದಗಳು ಮತ್ತು ಇಟ್ಟಳ ವಿಲ್ಲದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಬಳಕೆಯಾಗುತ್ತವೆ. ಎತ್ತುಗೆಗಾಗಿ, ಚಿಕ್ಕಮ್ಮ ಎಂಬ ಪದಕ್ಕೆ ಒಂದು ಇಟ್ಟಳವಿದೆ; ಅದನ್ನು ಚಿಕ್ಕ ಮತ್ತು ಅಮ್ಮ ಎಂಬ ಎರಡು ಸೇರಿಸಿ ಉಂಟುಮಾಡಲಾಗಿದೆ. ಹೀಗೆಯೇ, ಕುಣಿತ ಎಂಬ ಪದಕ್ಕೂ ಒಂದು ಇಟ್ಟಳವಿದೆ; ಅದನ್ನು ಕುಣಿ ಪದಕ್ಕೆ ತ ಒಟ್ಟನ್ನು ಸೇರಿಸಿ ಉಂಟುಮಾಡಲಾಗಿದೆ.
ಪದಗಳನ್ನು ಒಟ್ಟು
ಇದಕ್ಕೆ ಬದಲು, ತಲೆ ಪದಕ್ಕೆ ಇಟ್ಟಳವಿಲ್ಲ. ಅದು ತ್, ಅ, ಲ್ ಮತ್ತು ಎ ಎಂಬ ನಾಲ್ಕು ಬರಿಗೆಗಳ ಸೇರಿಕೆಯಿಂದ ತಯಾರಾಗಿದೆಯೇನೋ ನಿಜ; ಆದರೆ, ಈ ಬರಿಗೆಗಳನ್ನು ಚಿಕ್ಕಮ್ಮ ಪದದಲ್ಲಿ ಕಾಣಿಸುವ ಹಾಗೆ ಎರಡು ಪದಗಳಾಗಿ, ಇಲ್ಲವೇ ಕುಣಿತ ಪದದದಲ್ಲಿ ಕಾಣಿಸುವ ಹಾಗೆ ಒಂದು ಪದ ಮತ್ತು ಒಂದು ಒಟ್ಟು ಎಂಬುದಾಗಿ ಒಡೆದು ತೋರಿಸಲು ಬರುವುದಿಲ್ಲ.
ಪದಗಳಲ್ಲಿ ಎಂತಹ ಇಟ್ಟಳಗಳು ಬರಬಲ್ಲುವು ಎಂಬುದು ಸೊಲ್ಲುಗಳಲ್ಲಿ ಆ ಪದಗಳು ಎಂತಹ ಕೆಲಸಕ್ಕಾಗಿ ಬಳಕೆಯಾಗುತ್ತವೆ ಎಂಬುದನ್ನು ಅವಲಂಬಿ ಸಿದೆ. ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳನ್ನು ಗುರುತಿಸುವ ಹೆಸರುಪದಗಳಿಗೂ ಎಸಕಗಳನ್ನು ತಿಳಿಸುವ ಎಸಕಪದಗಳಿಗೂ ನಡುವೆ ಇಟ್ಟಳದಲ್ಲಿ ಹಲವು ಗಳಿವೆ. ಎತ್ತುಗೆಗಾಗಿ, ಎರಡು ಪದಗಳನ್ನು ಒಟ್ಟು ಸೇರಿಸಿ ವ್ಯತ್ಯಾಸ ಜೋಡುಪದಗಳನ್ನು ಉಂಟುಮಾಡುವಂತಹ ಹೆಸರುಪದಗಳ ಹೊಲಬು ಇಟ್ಟಳದಲ್ಲಿ ಬಳಕೆಯಾಗು ತ್ತದಲ್ಲದೆ ಎಸಕಪದಗಳ ಇಟ್ಟಳದಲ್ಲಿ ಬಳಕೆಯಾಗುವುದಿಲ್ಲ.
ಇದಕ್ಕೆ ಕಾರಣವೇನೆಂದರೆ, ಹೆಸರುಪದಗಳು ನಡೆಸುವಂತಹ ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ಗುರುತಿಸುವ ಕೆಲಸಕ್ಕೆ ಜೋಡುಪದದಂತಹ ಇಟ್ಟಳ ಬೇಕಾಗುತ್ತದೆ, ಆದರೆ ಎಸಕಪದಗಳು ನಡೆಸುವಂತಹ ಎಸಕಗಳನ್ನು ತಿಳಿಸುವ ಕೆಲಸಕ್ಕೆ ಅಂತಹ ಇಟ್ಟಳ ಬೇಕಾಗುವುದಿಲ್ಲ. ಅದಕ್ಕೆ ಬದಲು, ಕೂಡುಪದ ಎಂಬ ಬೇರೆಯೇ ಒಂದು ಬಗೆಯ ಇಟ್ಟಳ ಅದಕ್ಕೆ ಬೇಕಾಗುತ್ತದೆ.
ಹಾಗಾಗಿ, ಒಂದು ಪದದ ಇಟ್ಟಳವೆಂತಹದು ಎಂಬುದನ್ನು ಕಂಡುಹಿಡಿ ಯುವುದಕ್ಕೆ ಮೊದಲು, ಅದು ಸೊಲ್ಲುಗಳಲ್ಲಿ ಎಂತಹ ಕೆಲಸವನ್ನು ನಡೆಸುವು ದಕ್ಕಾಗಿ ಬಳಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಕನ್ನಡದ ಸೊಲ್ಲುಗಳಲ್ಲಿ ಬರುವ ಪದಗಳು ಮುಕ್ಯವಾಗಿ ಮೂರು ಬಗೆಯ ಕೆಲಸಗಳನ್ನು ನಡೆಸಬೇಕಾಗುತ್ತದೆ.
(1) ಒಂದು ಎಸಕ ಇಲ್ಲವೇ ಇರುಹವನ್ನು ತಿಳಿಸುವುದು;
(2) ಒಂದು ಎಸಕ ಇಲ್ಲವೇ ಇರುಹದಲ್ಲಿ ತೊಡಗಿಕೊಂಡಿರುವ ವ್ಯಕ್ತಿ,
ವಸ್ತು, ಇಲ್ಲವೇ ವಿಶಯವನ್ನು ಗುರುತಿಸುವುದು; ಮತ್ತು
(3) ವ್ಯಕ್ತಿ, ವಸ್ತು, ವಿಶಯ, ಇಲ್ಲವೇ ಎಸಕದ ಪರಿಚೆಯನ್ನು ತಿಳಿಸುವುದು.
ಇವುಗಳಲ್ಲಿ ಮೊದಲನೆಯ ಕೆಲಸವನ್ನು ಎಸಕ(ಮತ್ತು ಇರುಹ)ಪದಗಳು ಮತ್ತು ಎರಡನೆಯದನ್ನು ಹೆಸರುಪದಗಳು ನಡೆಸುತ್ತವೆ, ನಡೆಸುತ್ತವೆ. ಮೂರನೆಯ ಕೆಲಸವನ್ನು ನಡೆಸುವುದಕ್ಕಾಗಿ ಪರಿಚೆಪದಗಳು ಬಳಕೆಯಾಗುತ್ತವೆ.
1.4.3 ಗುರುತಿಸುವ ಕೆಲಸ
ಸೊಲ್ಲಿನ ಮೂಲಕ ಒಂದು ಎಸಕವನ್ನು ತಿಳಿಸಬೇಕಾದಾಗ, ಅದರಲ್ಲಿ ತೊಡಗಿ ಕೊಂಡಿರುವ ಕೆಲವು ವ್ಯಕ್ತಿ, ವಸ್ತು ಇಲ್ಲವೇ ವಿಶಯಗಳನ್ನು ಗುರುತಿಸಬೇಕಾಗು ತ್ತದೆ. ಎತ್ತುಗೆಗಾಗಿ, ಅಗಸ ಕತ್ತೆಗೆ ಹೊಡೆದ ಎಂಬ ಸೊಲ್ಲಿನಲ್ಲಿ ಹೊಡೆ ಎಂಬ ಒಂದು ಎಸಕಪದ ಮತ್ತು ಅದರೊಂದಿಗೆ ಅಗಸ ಮತ್ತು ಕತ್ತೆ ಎಂಬ ಎರಡು ಹೆಸರುಪದಗಳು ಬಂದಿವೆ; ಇವುಗಳಲ್ಲಿ ಹೊಡೆ ಎಂಬ ಎಸಕಪದ ಒಂದು ಎಸಕ ವನ್ನು ತಿಳಿಸುತ್ತದೆ; ಅಗಸ ಮತ್ತು ಕತ್ತೆ ಎಂಬ ಹೆಸರುಪದಗಳು ಆ ಎಸಕದಲ್ಲಿ ತೊಡಗಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಪ್ರಾಣಿ ಯನ್ನು ಗುರುತಿಸುತ್ತವೆ.
ಗುರುತಿಸುವುದಕ್ಕಾಗಿ ಬಳಕೆಯಾಗುವ ಹೆಸರುಪದಗಳು ಇರುವಹೆಸರುಗಳಿರ ಕೊಟ್ಟಹೆಸರುಗಳಿರಬಹುದು. ಬಹುದು ಇಲ್ಲವೇ ಕೊಟ್ಟಿರುವ ಸೊಲ್ಲಿನಲ್ಲಿ ಜಾನಕಿ ಎಂಬ ಕೊಟ್ಟಹೆಸರು ಬಂದಿದೆ. ಇದಕ್ಕೆ ಬದಲು, ಅದಕ್ಕಿಂತ ಮೊದಲು ಕೊಟ್ಟಿದ್ದ ಅಗಸ ಕತ್ತೆಗೆ ಹೊಡೆದ ಎಂಬ ಸೊಲ್ಲಿನಲ್ಲಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಪ್ರಾಣಿಯನ್ನು ಗುರುತಿಸುವುದಕ್ಕಾಗಿ ಎರಡು ಇರುವಹೆಸರುಗಳು (ಅಗಸ ಮತ್ತು ಕತ್ತೆ ಎಂಬವು) ಬಂದಿವೆ.
ಮೇಲೆ
ಕೊಟ್ಟಹೆಸರುಗಳಿಗೂ ಇರುವಹೆಸರುಗಳಿಗೂ ನಡುವಿನ ಮುಕ್ಯ ವ್ಯತ್ಯಾಸ ಕೊಟ್ಟಹೆಸರುಗಳನ್ನು ಒಂದೊಂದು ವ್ಯಕ್ತಿ, ವಸ್ತು, ಜಾಗ ವೇನೆಂದರೆ, ಮೊದಲಾದುವಕ್ಕೂ ಬೇರೆ ಬೇರಾಗಿ ಕೊಟ್ಟಿರುತ್ತೇವೆ; ಮಯ್ಸೂರು ಎಂಬುದು ಒಂದು ಪಟ್ಟಣಕ್ಕೆ ಕೊಟ್ಟ ಹೆಸರು; ಕಾವೇರಿ ಎಂಬುದು ಒಂದು ನದಿಗೆ ಕೊಟ್ಟ ಹೆಸರು. ಜಾನಕಿ ಎಂಬುದು ಒಬ್ಬ ವ್ಯಕ್ತಿಗೆ (ಹುಡುಗಿಗೆ) ಕೊಟ್ಟ ಹೆಸರು.
ಒಂದು ಕೊಟ್ಟಹೆಸರು ಒಬ್ಬನೇ ವ್ಯಕ್ತಿಯನ್ನು ಇಲ್ಲವೇ ಒಂದೇ ವಸ್ತುವನ್ನು ಗುರುತಿಸುತ್ತಿರಬೇಕೆಂದೇನೂ ಇಲ್ಲ. ಎತ್ತುಗೆಗಾಗಿ, ಜಾನಕಿ ಎಂಬುದು ಹಲವು ಮಂದಿ ಹುಡುಗಿಯರನ್ನು (ಬೇರೆ ಬೇರೆ ಸಂದರ್ಬಗಳಲ್ಲಿ) ಗುರುತಿಸುತ್ತಿರಲು ಸಾದ್ಯವಿದ್ದು, ಅದು ಹಲವು ಹುಡುಗಿಯರ ಕೊಟ್ಟಹೆಸರಾಗಿರಬಲ್ಲುದು; ಕಾವೇರಿ ಎಂಬುದು ಒಂದು ನದಿಯ ಹೆಸರಾಗಿ ಮಾತ್ರವಲ್ಲದೆ, ಒಬ್ಬ ಹುಡುಗಿಯ ಹೆಸರಾಗಿಯೂ ಬಳಕೆಯಲ್ಲಿರಬಲ್ಲುದು. ಆದರೆ, ಒಬ್ಬೊಬ್ಬ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ಅವನ್ನು ಬೇರೆ ಬೇರಾಗಿ ಕೊಟ್ಟಿರುತ್ತದೆಯೆಂಬುದೇ ಅವಕ್ಕೂ ಇರುವಹೆಸರಿಗೂ ನಡುವಿರುವ ವ್ಯತ್ಯಾಸ.
ಇರುವಹೆಸರನ್ನು ವ್ಯಕ್ತಿ, ವಸ್ತು, ವಿಶಯ ಮೊದಲಾದುವಕ್ಕೆ ಬೇರೆ ಬೇರಾಗಿ ಕೊಟ್ಟಿರುವುದಿಲ್ಲ. ಒಂದು ಬಗೆಯ ವ್ಯಕ್ತಿ (ಮುದುಕ, ಕುರುಡ, ಮೇಶ್ಟ್ರು, ಹುಡುಗ), ಒಂದು ಬಗೆಯ ವಸ್ತು (ಮರ, ಪುಸ್ತಕ, ಹಣ್ಣು), ಒಂದು ಬಗೆಯ ವಿಶಯ (ಸಿಟ್ಟು, ನೆನಪು, ಆಗುಹ, ಓಟ) ಮೊದಲಾದುವಕ್ಕೆ ಅವನ್ನು ಒಮ್ಮೆ ಮಾತ್ರವೇ ಕೊಡಲಾಗಿದ್ದು, ಅಂತಹವನ್ನು ಗುರುತಿಸಬೇಕಾದಾಗಲೆಲ್ಲ ಅವನ್ನೇ
ತಿರುತಿರುಗಿ ಬಳಸುತ್ತಿರುತ್ತೇವೆ. ಯಾವುದೇ ಒಂದು ಮರವನ್ನು ಗುರುತಿಸಬೇಕಾ ದಾಗಲೂ ನಾವು
ಮರ ಎಂಬ ಹೆಸರನ್ನೇ ಬಳಸುತ್ತೇವೆ.
ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ಗುರುತಿಸುವುದಕ್ಕಾಗಿ ಅದರದೇ ಆದ (ಇರುವ ಇಲ್ಲವೇ ಕೊಟ್ಟ) ಹೆಸರನ್ನು ಬಳಸುವ ಬದಲು, ಅದರ ಕೊಗೆತವನ್ನು (ವರ್ಣನೆಯನ್ನು) ಬಳಸುವ ಹೊಲಬೂ ಕನ್ನಡದಲ್ಲಿದೆ. ಎತ್ತುಗೆಗಾಗಿ, ಜಾನಕಿ ಅವಳ ಗೆಳತಿಯನ್ನು ಕರೆತಂದಿದ್ದಾಳೆ ಎಂಬ ಸೊಲ್ಲಿನಲ್ಲಿ ಎರಡು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೊದಲನೆಯ ವ್ಯಕ್ತಿಯನ್ನು ಜಾನಕಿ ಎಂಬ ಹೆಸರಿನ ಮೂಲಕ ಗುರುತಿಸಲಾಗಿದೆ; ಆದರೆ ಎರಡನೆಯ ವ್ಯಕ್ತಿಯನ್ನು ಆ ರೀತಿ ಹೆಸರಿನ ಮೂಲಕ ಗುರುತಿಸುವ ಬದಲು, ಅವಳ ಗೆಳತಿ ಎಂಬ ಕೊಗೆತದ ಮೂಲಕ ಗುರುತಿಸಲಾಗಿದೆ.
ಹೆಸರುಪದಗಳಿಗೂ ಕೊಗೆತಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ: ಕೊಗೆತಗಳಲ್ಲೆಲ್ಲ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಪದಗಳಿರುತ್ತವೆ; ಎಂದರೆ, ಅವೆಲ್ಲವೂ ಪದಕಂತೆಗಳಾಗಿರುತ್ತವೆ. ಮೇಲೆ ಕೊಟ್ಟಿರುವ ಅವಳ ಗೆಳತಿ ಎಂಬ ಕೊಗೆತದಲ್ಲಿ ಗೆಳತಿ ಎಂಬ ಒಂದು ಹೆಸರುಪದ ಬಂದಿದೆ ಮತ್ತು ಅದರೊಂದಿಗೆ ಅವಳ ಎಂಬ ಒಂದು ತೋರುಪದವೂ ಬಂದಿದೆ. ಹಸುರು ಸೀರೆ ಎಂಬ ಕೊಗೆತದಲ್ಲಿ ಸೀರೆ ಎಂಬ ಹೆಸರುಪದದೊಂದಿಗೆ ಹಸುರು ಎಂಬ ಒಂದು ಪರಿಚೆ ಪದ ಬಂದಿದೆ.
ಮೇಲೆ ತಿಳಿಸಿದ ಹಾಗೆ, ಹೆಸರುಪದಗಳಿಗೆ ಇಟ್ಟಳವಿರಬಹುದು ಇಲ್ಲವೇ ಇಲ್ಲದಿರಬಹುದು. ಎತ್ತುಗೆಗಾಗಿ, ಹೊದಿಕೆ ಇಲ್ಲವೇ ನಿಲುಗಡೆ ಎಂಬ ಹೆಸರು ಪದಕ್ಕೆ ಇಟ್ಟಳವಿದೆ; ಆದರೆ ಜಾನಕಿ ಇಲ್ಲವೇ ಮನೆ ಎಂಬ ಹೆಸರುಪದಕ್ಕೆ ಇಟ್ಟಳವಿಲ್ಲ. ಆದರೆ, ಎಲ್ಲಾ ರೀತಿಯ ಕೊಗೆತಗಳಿಗೂ ಯಾವುದಾದರೊಂದು ಬಗೆಯ ಇಟ್ಟಳವಿದ್ದೇ ಇರುತ್ತದೆ.
ಕೊಗೆತಗಳ ಹುರುಳೇನು ಎಂಬುದನ್ನು ನೇರವಾಗಿ ಅವುಗಳ ಇಟ್ಟಳದಿಂದ ತಿಳಿದುಕೊಳ್ಳಬಲ್ಲೆವು. ಎತ್ತುಗೆಗಾಗಿ, ಹಸುರು ಸೀರೆ ಎಂಬ ಕೊಗೆತದಲ್ಲಿ ಹಸುರು ಎಂಬ ಒಂದು ಪರಿಚೆಪದ ಮತ್ತು ಸೀರೆ ಎಂಬ ಒಂದು ಹೆಸರುಪದ ಬಂದಿವೆ. ಈ ಎರಡು ಪದಗಳು ಒಟ್ಟಿಗೆ ಕೊಡುವಂತಹ ‘ಹಸುರಾಗಿರುವ ಸೀರೆ’ ಎಂಬುದೇ ಆ ಕೊಗೆತದ ಹುರುಳಾಗಿದೆ.
ಆದರೆ, ಇಟ್ಟಳವಿರುವ ಹೆಸರುಪದಗಳ ಹುರುಳನ್ನು ಆ ರೀತಿ ನೇರವಾಗಿ ಅವುಗಳ ಇಟ್ಟಳದಿಂದ ತಿಳಿದುಕೊಳ್ಳಲು ಬರುವುದಿಲ್ಲ. ಎತ್ತುಗೆಗಾಗಿ, ಹೊದಿಕೆ ಪದವನ್ನು ಹೊದೆ ಎಂಬ ಎಸಕಪದಕ್ಕೆ ಇಕೆ ಒಟ್ಟನ್ನು ಸೇರಿಸುವ ಮೂಲಕ ಪಡೆಯಲಾಗಿದೆ. ಅದು ಹೊದೆಯುವುದಕ್ಕಾಗಿ ಬಳಕೆಯಾಗುವ ಒಂದು ವಸ್ತು ವನ್ನು ಗುರುತಿಸುತ್ತದೆ. ಈ ಹುರುಳನ್ನು ಸ್ವಲ್ಪ ಮಟ್ಟಿಗೆ ಹೊದೆ ಪದ ತಿಳಿಸಬಲ್ಲುದಾದರೂ ಇಕೆ ಒಟ್ಟು ಅದರ ಎಲ್ಲಾ ಬಳಕೆಗಳಲ್ಲೂ ಆ ರೀತಿ ಒಂದು ಎಸಕದಲ್ಲಿ ಬಳಕೆಯಾಗುವ ವಸ್ತುಗಳನ್ನು ಗುರುತಿಸುವುದಿಲ್ಲ.
ಎತ್ತುಗೆಗಾಗಿ, ಮೊಳಕೆ ಪದದಲ್ಲಿ ಅದು ಒಂದು ಎಸಕದಿಂದ ಉಂಟಾಗಿರುವ ವಸ್ತುವನ್ನು ಗುರುತಿಸುತ್ತದೆ ಮತ್ತು ಬೀಳಿಕೆ, ಸಲ್ಲಿಕೆ ಮೊದಲಾದ ಬೇರೆ ಕೆಲವು ಪದಗಳಲ್ಲಿ ಅದು ಒಂದು ಎಸಕವನ್ನು ಗುರುತಿಸುತ್ತದೆ (2.4.1(2-3) ನೋಡಿ).
ಎರಡು ಪದಗಳನ್ನು ಒಟ್ಟುಸೇರಿಸಿ ಕಟ್ಟಿರುವಂತಹ ಹೆಸರುಪದಗಳೂ (ಜೋಡುಪದಗಳೂ) ಈ ವಿಶಯದಲ್ಲಿ ಕೊಗೆತಗಳಿಂದ ಬೇರಾಗಿವೆ. ಕೊಗೆತಗಳ ಹಾಗೆ ಅವುಗಳ ಹುರುಳನ್ನು ನೇರವಾಗಿ ಅವುಗಳ ಇಟ್ಟಳದಿಂದ ಪಡೆಯಲು ಬರುವುದಿಲ್ಲ. ಎತ್ತುಗೆಗಾಗಿ, ಚಿಕ್ಕಪ್ಪ ಎಂಬ ಹೆಸರುಪದದಲ್ಲಿ ಚಿಕ್ಕ ಮತ್ತು ಅಪ್ಪ ಎಂಬ ಎರಡು ಪದಗಳು ಒಟ್ಟುಸೇರಿವೆ. ಆದರೆ ಚಿಕ್ಕ ಹುಡುಗ ಎಂಬ ಕೊಗೆತದ ಹಾಗೆ ಈ ಜೋಡುಪದದ ಹುರುಳನ್ನು ನೇರವಾಗಿ ಅದರ ಇಟ್ಟಳದಿಂದ ಪಡೆಯಲು ಬರುವುದಿಲ್ಲ. ಚಿಕ್ಕಪ್ಪ ಎಂಬುದು ‘ತಂದೆಯ ತಮ್ಮ’ನನ್ನು ಗುರುತಿಸು ತ್ತದಲ್ಲದೆ ‘ಚಿಕ್ಕ ಅಪ್ಪ’ನನ್ನು (ಎಂದರೆ ‘ಚಿಕ್ಕವನಾಗಿರುವ ತಂದೆ’ಯನ್ನು) ಗುರುತಿಸುವುದಿಲ್ಲ.
ಇಂತಹ ಪದಕಂತೆಗಳು ಮಾತ್ರವಲ್ಲದೆ, ಕೆಲವು ಎಸಕರೂಪ ಇಲ್ಲವೇ ಪರಿಚೆರೂಪಗಳೂ ಕನ್ನಡದ ಸೊಲ್ಲುಗಳಲ್ಲಿ ಕೊಗೆತಗಳಾಗಿ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಹೋಗುವುದು, ಹೋಗುವಿಕೆ ಮೊದಲಾದ ಎಸಕರೂಪಗಳು, ಮತ್ತು ದೊಡ್ಡತನ, ಒಳ್ಳೆತನ ಮೊದಲಾದ ಪರಿಚೆರೂಪಗಳು ಸೊಲ್ಲುಗಳಲ್ಲಿ ಕೊಗೆತಗಳಾಗಿ ಬಳಕೆಯಾಗಬಲ್ಲುವು (4.7.3 ನೋಡಿ).
1.4.4 ಎಸಕವನ್ನು ತಿಳಿಸುವ ಕೆಲಸ
ಹೆಸರುಪದಗಳಲ್ಲಿ ಕಾಣಿಸಿದ ಹಾಗೆ, ಎಸಕಪದಗಳಲ್ಲೂ ಇಟ್ಟಳವಿರುವ ಪದಗಳು ಮತ್ತು ಇಟ್ಟಳವಿಲ್ಲದ ಪದಗಳು ಎಂಬುದಾಗಿ ಎರಡು ಬಗೆಯವುಗಳಿರುವುದನ್ನು ಕಾಣಬಹುದು. ಎತ್ತುಗೆಗಾಗಿ, ಸಿಟ್ಟಾಗು ಎಸಕಪದದಲ್ಲಿ ಸಿಟ್ಟು ಹೆಸರುಪದ ದೊಂದಿಗೆ ಆಗು ಎಸಕಪದ ಸೇರಿದೆ; ಕಳಚು ಎಸಕಪದದಲ್ಲಿ ಕಳೆ ಎಸಕಪದ ದೊಂದಿಗೆ ಚು ಒಟ್ಟು ಸೇರಿದೆ. ತುಂಬಿಸು ಎಸಕಪದದಲ್ಲಿ ತುಂಬು ಎಸಕಪದ ದೊಂದಿಗೆ ಇಸು ಒಟ್ಟು ಬಂದಿದೆ.
ಆದರೆ, ಇಟ್ಟಳವಿರುವ ಹೆಚ್ಚಿನ ಎಸಕಪದಗಳಲ್ಲೂ ಅವುಗಳ ಹುರುಳನ್ನು ನೇರವಾಗಿ ಅವುಗಳ ಇಟ್ಟಳದಿಂದಲೇನೇ ತಿಳಿದುಕೊಳ್ಳಲು ಬರುತ್ತದೆ. ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳಿದ್ದು ಅವನ್ನು ನುಡಿಗಟ್ಟುಗಳೆಂದು ತಿಳಿಯ ಬಹುದು. ಇದು ಹೆಸರುಪದಗಳಿಗೂ ಎಸಕಪದಗಳಿಗೂ ನಡುವಿರುವ ಒಂದು ಮುಕ್ಯ ವ್ಯತ್ಯಾಸ.
ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಹೆಸರುಪದಗಳು ಸೊಲ್ಲುಗಳಲ್ಲಿ ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕಾಗು
ತ್ತದೆ; ಆದರೆ, ಎಸಕಪದಗಳು ಇದಕ್ಕಿಂತ ತೀರ ಬೇರಾಗಿರುವ ಯಾವುದಾದ ರೊಂದು ಎಸಕವನ್ನು ತಿಳಿಸುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಎತ್ತುಗೆ ಗಾಗಿ, ಜಾನಕಿ ಬಾಗಿಲು ತೆರೆದಳು ಎಂಬ ಸೊಲ್ಲಿನಲ್ಲಿ ಜಾನಕಿ ಮತ್ತು ಬಾಗಿಲು ಎಂಬ ಹೆಸರುಪದಗಳು ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ; ಆದರೆ ತೆರೆ ಎಂಬ ಎಸಕಪದ ‘ಜಾನಕಿ ಏನು ಮಾಡಿದಳು’ ಎಂಬುದನ್ನು, ಎಂದರೆ ‘ಬಾಗಿಲನ್ನು ತೆರೆಯುವ ಎಸಕವನ್ನು ನಡೆಸಿದಳು’ ಎಂಬುದನ್ನು ತಿಳಿಸುತ್ತದೆ.
ಎಸಕ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುವುದು ಮಾತ್ರವಲ್ಲದೆ, ಅದನ್ನು ಅಲ್ಲಗಳೆಯುವುದು, ನಡೆದಿದೆಯೇ ಎಂದು ಕೇಳುವುದು, ನಡೆಸಲು ಒಪ್ಪಿಗೆ ಪಡೆಯುವುದು ಇಲ್ಲವೇ ಒಪ್ಪಿಗೆ ಕೊಡುವುದು ಮೊದಲಾದ ಬೇರೆಯೂ ಹಲವು ಬಗೆಯ ಮಾತಿನ ಕೆಲಸಗಳನ್ನು ಎಸಕಪದಗಳು ನಡೆಸ ಬಲ್ಲುವು. ಈ ಎಲ್ಲಾ ಕೆಲಸಗಳೂ ಹೆಸರುಪದಗಳು ನಡೆಸುವ ಕೆಲಸಕ್ಕಿಂತ ತೀರಾ ಬೇರಾಗಿವೆ.
ಹೆಸರುಪದಗಳಲ್ಲಿ ಕೊಟ್ಟಹೆಸರು ಮತ್ತು ಇರುವಹೆಸರು ಎಂಬುದಾಗಿ ಎರಡು ಬಗೆಯ ಪದಗಳಿವೆಯೆಂಬುದನ್ನು ನಾವು ಮೇಲೆ ನೋಡಿರುವೆವು; ಆದರೆ, ಎಸಕಪದಗಳಲ್ಲಿ ಇಂತಹ ವ್ಯತ್ಯಾಸವಿಲ್ಲ. ಅವು ನಡೆಸಬೇಕಾಗಿರುವ ಕೆಲಸ ಹೆಸರುಪದಗಳು ನಡೆಸಬೇಕಾಗಿರುವ ಕೆಲಸಕ್ಕಿಂತ ತೀರ ಬೇರಾಗಿರುವುದೇ ಈ ವ್ಯತ್ಯಾಸಕ್ಕೂ ಕಾರಣ.
1.4.5 ಪರಿಚೆಯನ್ನು ತಿಳಿಸುವ ಕೆಲಸ
ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸುವುದಕ್ಕಾಗಿ ಅದರ ಇರುವ ಇಲ್ಲವೇ ಕೊಟ್ಟ ಹೆಸರನ್ನು ಬಳಸುವ ಬದಲು ಕೊಗೆತವನ್ನು ಬಳಸಬೇಕಿದ್ದಲ್ಲಿ, ಅದಕ್ಕಾಗಿ ಆ ವ್ಯಕ್ತಿ ಇಲ್ಲವೇ ವಸ್ತುವಿನ ಪರಿಚೆಯೊಂದನ್ನು ತಿಳಿಸಬೇಕಾಗುತ್ತದೆ. ಈ ಕೆಲಸವನ್ನು ಸಾಮಾನ್ಯವಾಗಿ ಪರಿಚೆಪದಗಳು ನಡೆಸುತ್ತವೆ.
ಎತ್ತುಗೆಗಾಗಿ, ಸುನೀಲ್ ಜಾನಕಿಗೊಂದು ಕೆಂಪು ಹೂ ಕೊಟ್ಟಿದ್ದಾನೆ ಎಂಬ ಸೊಲ್ಲಿನಲ್ಲಿ ಸುನೀಲ್ ಕೊಟ್ಟಿರುವ ವಸ್ತುವನ್ನು ಕೆಂಪು ಹೂ ಎಂಬ ಕೊಗೆತದ ಮೂಲಕ ಗುರುತಿಸಲಾಗಿದೆ. ಈ ಕೊಗೆತದಲ್ಲಿ ಗುರುತಿಸಬೇಕಾಗಿರುವ ವಸ್ತುವಿನ ಪರಿಚೆಯನ್ನು ತಿಳಿಸುವುದಕ್ಕಾಗಿ ಕೆಂಪು ಎಂಬ ಪರಿಚೆಪದ ಬಂದಿದೆ.
ಒಂದು ಸೊಲ್ಲಿನ ಇಟ್ಟಳದಲ್ಲಿ ವ್ಯಕ್ತಿ, ವಸ್ತು ಇಲ್ಲವೇ ವಿಶಯವನ್ನು ಗುರುತಿಸುವುದು ಮತ್ತು ಎಸಕಗಳನ್ನು ತಿಳಿಸುವುದು ಎಂಬ ಎರಡು ಕೆಲಸಗಳು ಒಂದು ಹಂತದಲ್ಲಿ ಬರುತ್ತವೆಯಾದರೆ, ಪರಿಚೆಗಳನ್ನು ತಿಳಿಸುವುದು ಎಂಬ ಈ ಮೂರನೆಯ ಕೆಲಸ ಬೇರೆಯೇ ಒಂದು (ಕೆಳಗಿನ) ಹಂತದಲ್ಲಿ ಬರುತ್ತದೆ. ಯಾಕೆಂದರೆ, ಪರಿಚೆಗಳನ್ನು ತಿಳಿಸುವ ಕೆಲಸದ ಮೂಲಕ ಕೊಗೆತಗಳನ್ನು ಉಂಟು
ಮಾಡಲಾಗುತ್ತದೆ, ಮತ್ತು ಈ ಕೊಗೆತಗಳನ್ನು ಆಮೇಲೆ ಹೆಸರುಪದಗಳ ಹಾಗೆ ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ಗುರುತಿಸುವ ಕೆಲಸದಲ್ಲಿ ಬಳಸಲಾಗುತ್ತದೆ. ಪರಿಚೆಗಳನ್ನು ತಿಳಿಸುವ ಈ ಕೆಲಸವನ್ನು ಪರಿಚೆಪದಗಳು ಕೊಗೆತಗಳಲ್ಲಿ ಮಾತ್ರವಲ್ಲದೆ ಇರುಹಗಳನ್ನು ತಿಳಿಸುವ ಸೊಲ್ಲುಗಳಲ್ಲೂ ನಡೆಸಬೇಕಾಗುತ್ತದೆ. ಇಂತಹ ಸೊಲ್ಲುಗಳಲ್ಲಿ ಅವು ಇರುಹಪದದೊಂದಿಗೆ ಸೇರಿರುತ್ತವೆ. ಎತ್ತುಗೆಗಾಗಿ, ರಾಜುವಿನ ಕಣ್ಣು ಕೆಂಪಿದೆ ಎಂಬ ಸೊಲ್ಲಿನಲ್ಲಿ ಕೆಂಪು ಎಂಬ ಪರಿಚೆಪದ ಇದೆ ಎಂಬ ಇರುಹಪದದೊಂದಿಗೆ ಬಂದಿದ್ದು, ಒಂದು ವಸ್ತುವಿನ (ರಾಜುವಿನ ಕಣ್ಣಿನ) ಪರಿಚೆಯನ್ನು ತಿಳಿಸುತ್ತಿದೆ.
ಪರಿಚೆಪದಗಳನ್ನು ಎಸಕಗಳ ಪರಿಚೆಯನ್ನು ತಿಳಿಸುವುದಕ್ಕಾಗಿಯೂ ಸೊಲ್ಲು ಗಳಲ್ಲಿ ಬಳಸಲಾಗುತ್ತದೆ. ಆದರೆ ಇಂತಹ ಪರಿಚೆಪದಗಳು ಕೆಲವು ವಿಶಯಗಳಲ್ಲಿ ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳ ಪರಿಚೆಗಳನ್ನು ತಿಳಿಸುವ ಪದಗಳಿಗಿಂತ ಬೇರಾಗಿರುತ್ತವೆ. ಎತ್ತುಗೆಗಾಗಿ, ಕತ್ತಿಯನ್ನು ಮೆಲ್ಲಗೆ ಕಾಯಿಸಿದರು, ಕಿಚ್ಚು ಬಗ್ಗನೆ ಉರಿಯಿತು ಮತ್ತು ಹಣ್ಣನ್ನು ತೆಳ್ಳಗೆ ತುಂಡಿಸಿದಳು ಎಂಬ ಸೊಲ್ಲುಗಳಲ್ಲಿ ಕಾಯು, ಉರಿ ಮತ್ತು ತುಂಡಿಸು ಎಂಬ ಎಸಕಪದಗಳೊಂದಿಗೆ ಅವು ತಿಳಿಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದಕ್ಕಾಗಿ ಮೆಲ್ಲಗೆ, ಬಗ್ಗನೆ ಮತ್ತು ತೆಳ್ಳಗೆ ಎಂಬ ಪರಿಚೆಪದಗಳನ್ನು ಬಳಸಲಾಗಿದೆ.
1.4.6 ಬೇರೆ ಕೆಲಸಗಳು
ಸೊಲ್ಲುಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳೂ ಎಸಕಪದ, ಹೆಸರುಪದ ಮತ್ತು ಪರಿಚೆಪದಗಳೆಂಬ ಮೇಲಿನ ಮೂರು ಗುಂಪುಗಳೊಳಗೆ ಯಾವುದಾದರೂ ಒಂದರಲ್ಲಿ ಸೇರುತ್ತವೆ. ಆದರೆ, ಈ ಮೂರು ಗುಂಪುಗಳಲ್ಲೂ ಸೇರದಿರುವಂತಹ ಬೇರೆ ಕೆಲವು ಪದಗಳೂ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ. ಅವಕ್ಕೆ ತಮ್ಮವೇ ಆದ ಬೇರೆ ಕೆಲಸಗಳಿರುವುದೇ ಇದಕ್ಕೆ ಕಾರಣ.
(1) ಒಂದು ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ಅದೇ ಸೊಲ್ಲಿನಲ್ಲಿ ಗುರುತಿಸಬೇಕಾದಾಗ ಅವರ ಹೆಸರುಗಳನ್ನು ಇಲ್ಲವೇ ಕೊಗೆತಗಳನ್ನು ಬಳಸುವ ಬದಲು, ನಾನು ಮತ್ತು ನೀನು ಎಂಬ ಪದಗಳನ್ನು ಬಳಸಲಾಗುತ್ತದೆ. ಎತ್ತುಗೆ ಗಾಗಿ, ನಾನು ಮನೆಗೆ ಹೋಗುತ್ತೇನೆ ಎಂಬ ಸೊಲ್ಲಿನಲ್ಲಿ ಆ ಸೊಲ್ಲಿನ ಆಡುಗನನ್ನು ಗುರುತಿಸುವುದಕ್ಕಾಗಿ ನಾನು ಪದ ಬಂದಿದೆ. ನೀನು ಎಲ್ಲಿಗೂ ಹೋಗಬೇಡ ಎಂಬ ಸೊಲ್ಲಿನಲ್ಲಿ ಆ ಸೊಲ್ಲಿನ ಕೇಳುಗನನ್ನು ಗುರುತಿಸುವು ದಕ್ಕಾಗಿ ನೀನು ಪದ ಬಂದಿದೆ. ಇವೆರಡನ್ನು ಆಡುಪದಗಳೆಂದು ಕರೆಯ ಬಹುದು.
(2) ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳನ್ನು ಅವುಗಳ ಜಾಗ, ಹೊತ್ತು, ಅಳವು, ಬಗೆ ಮೊದಲಾದುವುಗಳ ಮೂಲಕ ಗುರುತಿಸುವುದಕ್ಕಾಗಿ ತೋರುಪದ
ಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಒಬ್ಬ ವ್ಯಕ್ತಿ ಆಡುಗನ ಹತ್ತಿರ ಇದ್ದಾನೋ, ಇಲ್ಲವೇ ದೂರ ಇದ್ದಾನೋ ಎಂಬುದನ್ನು ತಿಳಿಸುವ ಮೂಲಕ ಆತನನ್ನು ಗುರುತಿಸಬಲ್ಲೆವು. ಇದಕ್ಕಾಗಿ ಇವನು ಮತ್ತು ಅವನು ಎಂಬ ಎರಡು ತೋರುಪದಗಳು ಬಳಕೆಯಾಗುತ್ತವೆ. ಇದೇ ರೀತಿಯಲ್ಲಿ, ಒಂದು ಎಸಕದ ಹೊತ್ತು ಸೊಲ್ಲನ್ನಾಡುವ ಹೊತ್ತಿನ ಹತ್ತಿರದ್ದೇ, ಇಲ್ಲವೇ ದೂರದ್ದೇ ಎಂಬುದನ್ನು ತಿಳಿಸುವುದಕ್ಕಾಗಿ, ಈಗ ಮತ್ತು ಆಗ ಎಂಬ ಬೇರೆ ಎರಡು ತೋರುಪದಗಳು ಬಳಕೆಯಾಗುತ್ತವೆ.
ಸೊಲ್ಲುಗಳಲ್ಲಿ ಬಳಕೆಯಾಗುವ ತೋರುಪದಗಳಲ್ಲಿ ಕೆಲವು ಹೆಸರುಪದಗಳ ಕೆಲಸದಲ್ಲಿ ಬರುತ್ತವೆ (ಅದು, ಇದು, ಅವನು, ಯಾರು), ಮತ್ತು ಬೇರೆ ಕೆಲವು ಪರಿಚೆಪದಗಳ ಕೆಲಸದಲ್ಲಿ ಬರುತ್ತವೆ (ಅಶ್ಟು, ಇಶ್ಟು, ಅಲ್ಲಿ, ಇಲ್ಲಿ). ಆದರೆ, ಈ ಎಲ್ಲಾ ಪದಗಳ ನಡುವೆಯೂ ಹಲವು ಹೋಲಿಕೆಗಳಿರುವ ಕಾರಣ, ಅವನ್ನು ತೋರುಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಸೇರಿಸಿ ಹೇಳ ಲಾಗಿದೆ.
ನೆರೆಮನೆಯ
ಇದಲ್ಲದೆ, ಒಂದು ಸೊಲ್ಲಿನಲ್ಲೇ ಬೇರೆಡೆ ಗುರುತಿಸಿರುವ ವ್ಯಕ್ತಿಯನ್ನು ತಿಳಿಸುವುದಕ್ಕಾಗಿ ತಾನು ಎಂಬ ಬೇರೊಂದು ಪದವೂ ಬಳಕೆಯಲ್ಲಿದೆ. ಎತ್ತುಗೆ ತನಗೆ ಗಾಗಿ, ಹಸಿವಿಲ್ಲವೆಂದು ಮಲಗಿದ ಎಂಬ ಸೊಲ್ಲಿನಲ್ಲಿ ತನಗೆ ಪದ ಅದೇ ಸೊಲ್ಲಿನಲ್ಲಿ ಬೇರೆಡೆ ಬಂದಿರುವ ನೆರೆಮನೆ ಮುದುಕ ಎಂಬ ಪದಕಂತೆಗೆ ಬದಲಾಗಿ ಬಂದಿದೆ. ಇದನ್ನೂ ತೋರುಪದವೆಂದು ಕರೆಯಬಹುದು. ಆದರೆ, ಕೆಲವು ವಿಶಯಗಳಲ್ಲಿ ಅದು ಆಡುಪದಗಳನ್ನು ಹೋಲುತ್ತದೆ.
ಮನೆಗೆ ಬಂದವನು,
ಮುದುಕ,
(3) ಎಣಿಕೆಯನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಒಂದು, ಎರಡು, ಮೂರು ಮೊದಲಾದ ಪದಗಳು ಬೇರೆಯೇ ಒಂದು ಗುಂಪಿನಲ್ಲಿ ಸೇರುತ್ತವೆ. ಕೆಲವು ವಿಶಯಗಳಲ್ಲಿ ಅವು ಪರಿಚೆಪದಗಳನ್ನು ಹೋಲುತ್ತವೆ; ಆದರೆ ಬೇರೆ ಕೆಲವು ವಿಶಯಗಳಲ್ಲಿ ಹೆಸರುಪದಗಳನ್ನೂ ಹೋಲುತ್ತವೆ.
(4) ಸದ್ದು, ನೋಟ, ಅನಿಸಿಕೆ ಮೊದಲಾದುವನ್ನು ಅಣಕಿಸುವಂತಹ ಹಲವಾರು ಅಣಕಪದಗಳು ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ. ಇವು ಹಲವು ವಿಶಯಗಳಲ್ಲಿ ಮೇಲೆ ವಿವರಿಸಿರುವಂತಹ ಪದಗಳಿಂದ ಬೇರಾಗಿವೆ. ಹಾಗಾಗಿ, ಇವನ್ನು ಬೇರೆಯೇ ಒಂದು ಗುಂಪಿನಲ್ಲಿ ಇರಿಸಬೇಕಾಗುತ್ತದೆ. ಹೆಚ್ಚಾಗಿ ಇವು ಪರಿಚೆಪದಗಳಾಗಿ ಬಳಕೆಯಾಗುತ್ತವೆ (ದಗದಗನೆ ಉರಿಯಿತು; ಡಬ್ಬನೆ ಬಿತ್ತು; ಮಿಣಿಮಿಣಿ ಸೊಡರು). ಆದರೆ, ಇವುಗಳಲ್ಲಿ ಕೆಲವು ಇಸು ಒಟ್ಟಿನೊಂದಿಗೆ ಇಲ್ಲವೇ ಗುಟ್ಟು ಪದದೊಂದಿಗೆ ಸೇರಿ ಎಸಕಪದಗಳಾಗಿಯೂ ಬಳಕೆಯಾಗ ಬಲ್ಲುವು (ತಳಮಳಿಸು, ಗಮಗಮಿಸು, ಗುಣುಗುಟ್ಟು).
1.4.7 ಪದರೂಪಗಳ ಇಟ್ಟಳ
ಪದಗಳನ್ನು ಸೊಲ್ಲುಗಳಲ್ಲಿ ಬಳಸುವಾಗ, ಎಲ್ಲಾ ಕಡೆಗಳಲ್ಲೂ ಅವನ್ನು ಒಂದೇ ರೂಪದಲ್ಲಿ ಬಳಸಲು ಬರುವುದಿಲ್ಲ; ಅವುಗಳಲ್ಲಿ ಹೆಚ್ಚಿನವಕ್ಕೂ ಒಟ್ಟುಗಳನ್ನು ಸೇರಿಸಿ ಬೇರೆ ಬೇರೆ ಪದರೂಪಗಳನ್ನು ಉಂಟುಮಾಡಿ ಬಳಸಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(1ಕ) ಬಿರುಗಾಳಿಗೆ ಮರ ಉರುಳಿತು. (1ಚ) ಮರವನ್ನು ಕಡಿದುಹಾಕಿದರು. (1ಟ) ಆತ ಮರದಿಂದ ಕೆಳಗೆ ಇಳಿಯುತ್ತಿದ್ದಾನೆ.
(1ತ) ಈ ಮರಕ್ಕೆ ಹತ್ತಲು ಏಣಿ ಬೇಕು. (1ಪ) ಆ ಮರದಲ್ಲಿ ಹೂ ಬಿಟ್ಟಿಲ್ಲ.
ಮರ ಪದವನ್ನು ಮೇಲಿನ ಸೊಲ್ಲುಗಳಲ್ಲಿ ಬಳಸಲು ಅದಕ್ಕೆ ಮರ, ಮರವನ್ನು, ಮರದಿಂದ, ಮರಕ್ಕೆ, ಮತ್ತು ಮರದಲ್ಲಿ ಎಂಬ ಅಯ್ದು ಬಗೆಯ ಪದರೂಪಗಳು ಬೇಕಾಗಿವೆ. ಇವು ಮರಕ್ಕೂ ಸೊಲ್ಲಿನ ಎಸಕಪದಕ್ಕೂ ನಡುವೆ ಎಂತಹ ಪತ್ತುಗೆಯಿದೆ ಎಂಬುದನ್ನು ತಿಳಿಸುತ್ತವೆ. ಇದಲ್ಲದೆ, ಮರ ಪದಕ್ಕೂ ಬೇರೆ ಹೆಸರುಪದಗಳಿಗೂ ನಡುವೆ ಎಂತಹ ಪತ್ತುಗೆಯಿದೆ ಎಂಬುದನ್ನು ತಿಳಿಸು ವವು (ಮರದ, ಮರಕ್ಕಿಂತ), ಮತ್ತು ಅದು ಗುರುತಿಸುವ ವಸ್ತುವಿನ ಎಣಿಕೆ ಯನ್ನು ತಿಳಿಸುವವು (ಮರಗಳು) ಎಂಬುದಾಗಿ ಬೇರೆಯೂ ಕೆಲವು ಪದರೂಪ ಗಳು ಅದಕ್ಕೆ ಬೇಕಾಗುತ್ತವೆ.
ಇವು ಹೆಸರುಪದಗಳಿಗೆ ಬೇಕಾಗುವಂತಹ ಪದರೂಪಗಳು; ಎಸಕಪದಗಳಿಗೆ ಇವಕ್ಕಿಂತ ತೀರ ಬೇರಾಗಿರುವ ಹಲವು ಬಗೆಯ ಪದರೂಪಗಳು ಬೇಕಾಗುತ್ತವೆ; ಎತ್ತುಗೆಗಾಗಿ, ಹತ್ತು ಎಸಕಪದವನ್ನು ಬಳಸಿರುವ ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು:
(2ಕ) ಹುಡುಗ ಮರಕ್ಕೆ ಹತ್ತಿದ. (2ಚ) ಬೆಕ್ಕು ಮರಕ್ಕೆ ಹತ್ತಿತು. (2ಟ) ಬೆಕ್ಕು ಮರಕ್ಕೆ ಹತ್ತುತ್ತದೆ. (2ತ) ಹುಡುಗ ಮರಕ್ಕೆ ಹತ್ತಲಿ. (2ಪ) ಹುಡುಗನನ್ನು ಮರಕ್ಕೆ ಹತ್ತಿಸಿದರು.
ಹತ್ತು ಎಸಕಪದವನ್ನು ಮೇಲಿನ ಸೊಲ್ಲುಗಳಲ್ಲಿ ಬಳಸಲು ಹತ್ತಿದ, ಹತ್ತಿತು, ಹತ್ತುತ್ತದೆ, ಹತ್ತಲಿ ಮತ್ತು ಹತ್ತಿಸಿದರು ಎಂಬ ಅಯ್ದು ಪದ
ರೂಪಗಳು ಬೇಕಾಗಿವೆ. ಬೇರೆ ಬಗೆಯ ಸೊಲ್ಲುಗಳಲ್ಲಿ ಬಳಸಲು ಅದಕ್ಕೆ ಇಂತಹ ಇನ್ನೂ ಹಲವಾರು ಪದರೂಪಗಳು ಬೇಕಾಗುತ್ತವೆ.
ಎಸಕಪದಗಳಿಗಿರುವ ಈ ಪದರೂಪಗಳು ಓದುಗರಿಗೆ ಹಲವು ಬಗೆ ತಿಳುವಳಿಕೆಗಳನ್ನು ಕೊಡುತ್ತವೆ: ಅವುಗಳ ಕೊನೆಯಲ್ಲಿ ಬರುವ ಅ, ತು, ಅದೆ, ಅಲಿ, ಅರು ಎಂಬಂತಹ ಗುರುತಿನ ಒಟ್ಟುಗಳು ಅವು ತಿಳಿಸುವ ಎಸಕದಲ್ಲಿ ತೊಡಗಿರುವವರು (ಆಗುಗ ಇಲ್ಲವೇ ಮಾಡುಗ) ಯಾರು ಎಂಬುದನ್ನು ಅಡಕ ವಾಗಿ ತಿಳಿಸುತ್ತವೆ; ಇವುಗಳ ಮೊದಲು ಬರುವ ಇದ್, ಇ, ಉತ್್ತ ಎಂಬಂತಹ ಹೊತ್ತಿನ ಒಟ್ಟುಗಳು ಸೊಲ್ಲನ್ನು ಆಡಿದ ಹೊತ್ತಿಗೂ ಎಸಕ ನಡೆಯುವ ಹೊತ್ತಿಗೂ ನಡುವಿರುವ ಸಂಬಂದವನ್ನು ತಿಳಿಸುತ್ತವೆ; ಹತ್ತಿಸಿದರು ಪದರೂಪ ದಲ್ಲಿ ಬಂದಿರುವ ಇಸು ಒಟ್ಟು ಎಸಕವನ್ನು ಅದರ ಮಾಡುಗನಿಂದ ಬೇರೆ ಯಾರೋ ಮಾಡಿಸಿದರು ಎಂಬುದನ್ನು ತಿಳಿಸುತ್ತದೆ. ಹತ್ತಲಿ ಪದರೂಪದಲ್ಲಿ ಬಂದಿರುವ ಅಲಿ ಒಟ್ಟು ಎಸಕಕ್ಕೆ ಆಡುಗನ ಒಪ್ಪಿಗೆಯಿದೆಯೆಂಬುದನ್ನು ತಿಳಿಸು ತ್ತದೆ.
ಎಸಕದ ಕುರಿತಾಗಿ ಇಂತಹ ಹಲವು ಬಗೆಯ ವಿಶಯಗಳನ್ನು ತಿಳಿಸುವುದಕ್ಕಾಗಿ ಎಸಕಪದಗಳಿಗೆ ಹಲವು ಬಗೆಯ ಪದರೂಪಗಳು ಬೇಕಾಗುತ್ತವೆ. ಇದೇ ರೀತಿ ಯಲ್ಲಿ ಸೊಲ್ಲುಗಳಲ್ಲಿ ಬರುವ ಪರಿಚೆಪದಗಳು, ಆಡುಪದಗಳು, ತೋರುಪದ ಗಳು, ಎಣಿಕೆ ಪದಗಳು ಮೊದಲಾದುವಕ್ಕೂ ಕೆಲವು ಹೆಚ್ಚಿನ ಪದರೂಪಗಳು ಬೇಕಾಗುತ್ತವೆ.
1.4.8 ಪದಕಂತೆಗಳ ಇಟ್ಟಳ
ಒಂದು ಸೊಲ್ಲಿನ ಹುರುಳೇನೆಂಬುದನ್ನು ಸರಿಯಾಗಿ ವಿವರಿಸಬೇಕಾದಲ್ಲಿ, ಅದನ್ನು ಪದಗಳಾಗಿ ಮಾತ್ರವಲ್ಲದೆ ಪದಕಂತೆಗಳಾಗಿಯೂ ಒಡೆಯಬೇಕಾಗುತ್ತದೆ. ಎತ್ತುಗೆ ಗಾಗಿ, ಚಿಕ್ಕ ಹುಡುಗ ಹತ್ತು ರೊಟ್ಟಿ ತಿಂದ ಎಂಬ ಸೊಲ್ಲನ್ನು ಗಮನಿಸ ಬಹುದು. ಇದನ್ನು ಚಿಕ್ಕ, ಹುಡುಗ, ಹತ್ತು, ರೊಟ್ಟಿ ಮತ್ತು ತಿಂದ ಎಂಬ ಅಯ್ದು ಪದಗಳಾಗಿ ಒಡೆಯಬಲ್ಲೆವು. ಆದರೆ ಹೀಗೆ ಮಾಡುವುದರ ಮೂಲಕ ಆ ಸೊಲ್ಲಿನ ಹುರುಳು ಎಂತಹದು ಎಂಬುದನ್ನು ಸರಿಯಾಗಿ ವಿವರಿಸಲು ಬರುವು ದಿಲ್ಲ.
ಇದಕ್ಕಾಗಿ ನಾವು ಆ ಸೊಲ್ಲನ್ನು ಬೇರೆ ರೀತಿಯಾಗಿ ಒಡೆಯಬೇಕಾಗುತ್ತದೆ: ಅದರಲ್ಲಿ ಬಂದಿರುವ ಅಯ್ದು ಪದಗಳಲ್ಲಿ ಮೊದಲನೆಯ ಎರಡು ಪದಗಳನ್ನು ಒಟ್ಟಿಗೆ ಚಿಕ್ಕ ಹುಡುಗ ಎಂಬ ಒಂದು ಪದಕಂತೆಯಾಗಿ, ಮತ್ತು ಆಮೇಲಿನ ಎರಡು ಪದಗಳನ್ನು ಒಟ್ಟಿಗೆ ಹತ್ತು ರೊಟ್ಟಿ ಎಂಬ ಇನ್ನೊಂದು ಪದಕಂತೆಯಾಗಿ ಒಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ, ಆ ಸೊಲ್ಲು ತಿಂದ ಎಂಬುದಾಗಿ ಒಂದು ಎಸಕವನ್ನು ತಿಳಿಸುತ್ತಿದ್ದು, ಅದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ ಮತ್ತು ವಸ್ತುಗಳಲ್ಲಿ ‘ತಿಂದುದು ಯಾರು’ ಎಂಬುದನ್ನು ಚಿಕ್ಕ ಹುಡುಗ ಎಂಬ ಪದ
ಕಂತೆಯ ಮೂಲಕ, ಮತ್ತು ‘ತಿಂದುದು ಏನನ್ನು’ ಎಂಬುದನ್ನು ಹತ್ತು ರೊಟ್ಟಿ ಎಂಬ ಪದಕಂತೆಯ ಮೂಲಕ ತಿಳಿಸುತ್ತದೆ.
ಕನ್ನಡದಲ್ಲಿ ಎಂತಹ ಪದಕಂತೆಗಳೆಲ್ಲ ಬಳಕೆಯಾಗುತ್ತವೆ, ಅವುಗಳ ಇಟ್ಟಳ ಎಂತಹದು, ಅವುಗಳಲ್ಲಿ ಬರುವ ಪದಗಳನ್ನು ಹೇಗೆ ಅಣಿಗೊಳಿಸಲಾಗುತ್ತದೆ ಎಂಬುದನ್ನು ಬೇರೆಯೇ ಒಂದು ಪಸುಗೆಯಲ್ಲಿ ವಿವರಿಸಲಾಗುತ್ತದೆ.
1.5 ಸೊಲ್ಲುಗಳ ಇಟ್ಟಳ
ಕನ್ನಡ ನುಡಿ ತಿಳಿದಿರುವವರಿಗೆಲ್ಲ ಅದರ ಒಂದು ಸೊಲ್ಲನ್ನು ಓದಿದಾಗ ಇಲ್ಲವೇ ಕೇಳಿದಾಗ ಅದು ಏನನ್ನು ಹೇಳುತ್ತಿದೆ ಎಂಬುದು ಗೊತ್ತಾಗುತ್ತದೆ. ಆದರೆ ಅವರಿಗೆ ಇದು ಹೇಗೆ ಗೊತ್ತಾಗುತ್ತದೆ? ಆ ಸೊಲ್ಲಿನಲ್ಲಿ ಬಂದಿರುವ ಪದಗಳ ಹುರುಳು ಅವರಿಗೆ ಗೊತ್ತಿರುವುದರಿಂದ ಸೊಲ್ಲಿನ ಹುರುಳೂ ಗೊತ್ತಾಗುತ್ತದೆ ಎಂದಿಶ್ಟೇ ಹೇಳಿದರೆ, ಅದು ಸರಿಯಾಗುವುದಿಲ್ಲ.
ಯಾಕೆಂದರೆ, ಒಂದು ಸೊಲ್ಲು ಏನು ಹೇಳುತ್ತಿದೆ ಎಂಬುದು ಅದರಲ್ಲಿ ಬಂದಿರುವ ಪದಗಳ ಹುರುಳನ್ನು ಮಾತ್ರವಲ್ಲದೆ, ಆ ಪದಗಳನ್ನು ಅದರಲ್ಲಿ ಹೇಗೆ ಅಣಿಗೊಳಿಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಹಾಗಾಗಿ, ಪದಗಳನ್ನು ಕೆಲವು ಗುಂಪುಗಳಲ್ಲಿ ಹೊಂದಿಸಿಕೊಂಡು, ಅವುಗಳಿಂದ ಸೊಲ್ಲಿನ ಹುರುಳನ್ನು ಪಡೆಯುವ ಅಳವೂ ಓದುಗನಲ್ಲಿರಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(3) ಹುಲಿಯ ಬಾಯಿಗೆ ಬಿದ್ದ ದನದ ಕರು ಕೂಗಾಡುತ್ತಿದೆ.
ಈ ಸೊಲ್ಲನ್ನು ಓದಿದವರಲ್ಲಿ ಕೆಲವರಿಗೆ ಅದು ಒಂದು ದನದ ಕರು ಹುಲಿಯ ಬಾಯಿಗೆ ಬಿದ್ದು ಕೂಗಾಡುತ್ತಿದೆ ಎಂಬುದನ್ನು ತಿಳಿಸುತ್ತಿದೆ ಎಂದು ಅನಿಸಬಹುದು; ಆದರೆ, ಬೇರೆ ಕೆಲವರಿಗೆ ಅದು ಒಂದು ದನ ಹುಲಿಯ ಬಾಯಿಗೆ ಬಿದ್ದಿದೆ, (ಮತ್ತು ಹಾಗಾಗಿ) ಅದರ ಕರು ಕೂಗಾಡುತ್ತಿದೆ ಎಂಬು ದನ್ನು ತಿಳಿಸುತ್ತಿದೆ ಎಂದೂ ಅನಿಸಬಹುದು. ಈ ಸೊಲ್ಲಿನ ಪದಗಳನ್ನು ಎರಡು ಬಗೆಗಳಲ್ಲಿ ಗುಂಪುಗೂಡಿಸಲು ಬರುತ್ತದೆ ಎಂಬುದೇ ಅದು ಹೀಗೆ ಅದರ ಓದುಗರಲ್ಲಿ ಎರಡು ಬಗೆಯ ಅನಿಸಿಕೆಗಳನ್ನು ಮೂಡಿಸಲು ಕಾರಣ.
ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಮೇಲಿನ ಸೊಲ್ಲಿಗೆ ಎರಡು ಬಗೆಯ ಇಟ್ಟಳಗಳಿವೆ: (1) ಅದರಲ್ಲಿ ಹುಲಿಯ ಬಾಯಿಗೆ ಬಿದ್ದ ಎಂಬುದು ನೇರವಾಗಿ ದನದ ಕರುವಿನ ಪರಿಚೆಯೊಂದನ್ನು ತಿಳಿಸುತ್ತಿರಬಹುದು, ಇಲ್ಲವೇ (2) ಹುಲಿಯ ಬಾಯಿಗೆ ಬಿದ್ದ ಎಂಬುದು ದನದ ಪರಿಚೆಯನ್ನು, ಮತ್ತು ಅವೆರಡೂ ಒಟ್ಟು ಸೇರಿರುವ ಹುಲಿಯ ಬಾಯಿಗೆ ಬಿದ್ದ ದನದ
ಎಂಬುದು ಕರುವಿನ ಪರಿಚೆಯನ್ನು ತಿಳಿಸುತ್ತಿರಬಹುದು. ಇದನ್ನೇ ಕಂಸಗಳನ್ನು ಬಳಸಿ ಕೆಳಗೆ ಕೊಟ್ಟಿರುವ ಹಾಗೆ ತೋರಿಸಬಹುದು.
- (ಹುಲಿಯ ಬಾಯಿಗೆ ಬಿದ್ದ) ದನದ ಕರು ಕೂಗಾಡುತ್ತಿದೆ.
- ((ಹುಲಿಯ ಬಾಯಿಗೆ ಬಿದ್ದ) ದನದ) ಕರು ಕೂಗಾಡುತ್ತಿದೆ.
ಕೆಳಗೆ ಕೊಟ್ಟಿರುವ ಹಾಗೆ, ಎರಡು ಬಗೆಯಲ್ಲಿ ಕವಲೊಡೆಯುವಂತಹ ಚಿತ್ರಗಳ ಮೂಲಕವೂ ಈ ಎರಡು ಇಟ್ಟಳಗಳ ನಡುವಿರುವ ವ್ಯತ್ಯಾಸವನ್ನು ತೋರಿಸಲು ಬರುತ್ತದೆ:
ಹುಲಿಯ ಬಾಯಿಗೆ ಬಿದ್ದ ದನದ ಕರು
ಹುಲಿಯ ಬಾಯಿಗೆ ಬಿದ್ದ
ದನದ
ದನ
ಕರು
ಸೊಲ್ಲುಗಳಲ್ಲಿ ಬರುವ ಇಂತಹ ಪದಗಳ ಗುಂಪುಗಳಲ್ಲಿ ಕೆಲವನ್ನು ಪದಕಂತೆಗಳು ಎಂಬುದಾಗಿ, ಮತ್ತು ಬೇರೆ ಕೆಲವನ್ನು ಒಳಸೊಲ್ಲುಗಳು ಎಂಬುದಾಗಿ ಹೆಸರಿಸಬೇಕಾಗುತ್ತದೆ. ಮೇಲೆ ಮೊದಲನೇ ಇಟ್ಟಳದಲ್ಲಿ (1ರಲ್ಲಿ) ಬಂದಿರುವ ದನದ ಕರು ಎಂಬುದು ಒಂದು ಪದಕಂತೆ, ಮತ್ತು ಹುಲಿಯ ಬಾಯಿಗೆ ಬಿದ್ದ ಎಂಬುದು ಒಂದು ಒಳಸೊಲ್ಲು.
ದನದ ಕರು ಎಂಬುದರಲ್ಲಿ ಕರುವಿನ ಪರಿಚೆಯೊಂದನ್ನು ತಿಳಿಸುವುದಕ್ಕಾಗಿ ಕರು ಪದದೊಂದಿಗೆ ದನದ ಎಂಬ ಪದರೂಪವನ್ನು ಬಳಸಲಾಗಿದೆ; ಇದಕ್ಕೆ ಬದಲು, ಹುಲಿಯ ಬಾಯಿಗೆ ಬಿದ್ದ ಎಂಬುದರಲ್ಲಿ ಕರುವಿನ ಬೇರೊಂದು ಪರಿಚೆಯನ್ನು ತಿಳಿಸುವುದಕ್ಕಾಗಿ ಕರು ಹುಲಿಯ ಬಾಯಿಗೆ ಬಿತ್ತು ಎಂಬ ಸೊಲ್ಲನ್ನು ಒಂದು ಒಳಸೊಲ್ಲಾಗಿ ಮಾರ್ಪಡಿಸಿ ಬಳಸಲಾಗಿದೆ.
ಒಂದು ಸೊಲ್ಲು ಏನು ಹೇಳುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿದೆ ಯಾದರೆ, ಅದರಲ್ಲಿ ಬಂದಿರುವ ಪದಗಳನ್ನು ಪದಕಂತೆಗಳಾಗಿ ಮತ್ತು ಒಳ ಸೊಲ್ಲುಗಳಾಗಿ ಜೋಡಿಸಿಕೊಳ್ಳುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಯೆಂದೇ ಹೇಳಬಹುದು. ಇಂತಹ ತಿಳಿವು ನಮ್ಮಲ್ಲಿದೆ ಎಂಬುದಕ್ಕೆ ಕನ್ನಡದ ಲ್ಲಿಲ್ಲದ ಪದಗಳನ್ನು ಬಳಸಿ ಉಂಟುಮಾಡಿರುವ ಕೆಳಗಿನ ಸೊಲ್ಲು ಒಂದು ಒಳ್ಳೆಯ ಎತ್ತುಗೆ:
(4)
ಪಲುಕನ್ನು ಬಿಂಗಿ, ಕಮ್ಮತನ ಪಂಗು ನೋಯುತ್ತಿದೆ.
ಈ ಸೊಲ್ಲಿನಲ್ಲಿ ನೋಯು ಎಂಬ ಪದ ಮಾತ್ರ ಕನ್ನಡದ್ದು. ಉಳಿದವು ಕನ್ನಡದ ಪದಗಳ ಹಾಗೆ ಕಾಣಿಸುತ್ತವೆ; ಆದರೆ ನಿಜಕ್ಕೂ ಅಂತಹ ಪದಗಳು ಕನ್ನಡದಲ್ಲಿಲ್ಲ. ಹಾಗಿದ್ದರೂ, ‘ಕಮ್ಮತ ಎಂಬಾತ ಏನೋ ಮಾಡಿದುದರಿಂದಾಗಿ (ಪಲುಕನ್ನು ಬಿಂಗಿದುದರಿಂದಾಗಿ), ಆತನ ಒಂದು ಅಂಗ (ಪಂಗು) ನೋಯುತ್ತಿದೆ’ ಎಂಬಂತಹ ಹುರುಳನ್ನು ನಾವು ಮೇಲಿನ ಸೊಲ್ಲಿನಿಂದ ಪಡೆಯ ಬಲ್ಲೆವು.
ಇದು ಹೇಗೆ ಸಾದ್ಯವಾಗುತ್ತದೆ? ಪದಗಳ ಹುರುಳು ತಿಳಿಯದಿದ್ದರೂ, ಸೊಲ್ಲಿ ನಲ್ಲಿ ಬಳಕೆಯಾಗಿರುವ ಇಟ್ಟಳ ಎಂತಹದು ಎಂಬುದನ್ನು ನಾವು ಕಂಡುಕೊಳ್ಳ ಬಲ್ಲೆವು; ಇದಲ್ಲದೆ, ಆ ಇಟ್ಟಳದಲ್ಲಿ ಯಾವ ಪದ ಎಲ್ಲಿ ಬಳಕೆಯಾಗಿದೆ ಕೆಲಸವನ್ನು ಗಮನಿಸಿ, ಅದರಲ್ಲಿ ಅವು ಎಂತಹ ಎಂಬುದನ್ನು ನಡೆಸುತ್ತಿರಬಹುದು ಎಂಬುದನ್ನೂ ಊಹಿಸಬಲ್ಲೆವು.
ಆದರೆ, ಈ ತಿಳುವಳಿಕೆ ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪ ದಲ್ಲಿರುತ್ತದೆ, ಮತ್ತು ಅದೇ ರೂಪದಲ್ಲಿ ಬಳಕೆಯಾಗುತ್ತಿರುತ್ತದೆ. ಕನ್ನಡದ ಸೊಲ್ಲರಿಮೆ ಅದನ್ನು ಅರಿವಿಗೆ ಎಟಕುವಂತೆ ಮಾಡುತ್ತದೆ.
1.5.1 ಕನ್ನಡದ ಮುಕ್ಯ ಸೊಲ್ಲಿಟ್ಟಳಗಳು
ಕನ್ನಡದಲ್ಲಿ ಬಳಕೆಯಾಗುವ ಸೊಲ್ಲುಗಳನ್ನು ಸುಳುಸೊಲ್ಲುಗಳು, ಜೋಡು ಸೊಲ್ಲುಗಳು ಮತ್ತು ಸಿಕ್ಕಲುಸೊಲ್ಲುಗಳು ಎಂಬುದಾಗಿ ಮೂರು ಗುಂಪುಗಳಲ್ಲಿ ಸೇರಿಸಿ ಹೇಳಬಹುದು.
ಇವುಗಳಲ್ಲಿ ಜೋಡುಸೊಲ್ಲುಗಳನ್ನು ಎರಡು ಇಲ್ಲವೇ ಹೆಚ್ಚು ಸುಳು ಸೊಲ್ಲುಗಳನ್ನು ಒಟ್ಟಿಗೆ ಸೇರಿಸಿ ಉಂಟುಮಾಡಲಾಗುತ್ತದೆ, ಮತ್ತು ಸಿಕ್ಕಲು ಸೊಲ್ಲುಗಳನ್ನು ಒಂದು ಸುಳುಸೊಲ್ಲಿನೊಳಗೆ ಒಂದು ಇಲ್ಲವೇ ಹೆಚ್ಚು ಸುಳು ಸೊಲ್ಲುಗಳನ್ನು ಒಳಸೊಲ್ಲುಗಳಾಗಿ ಬಳಸಿ, ಉಂಟುಮಾಡಲಾಗುತ್ತದೆ. ಎತ್ತುಗೆ ಗಾಗಿ, ಕೆಳಗೆ ಕೊಟ್ಟಿರುವ ಮೂರು ಸೊಲ್ಲುಗಳನ್ನು ಗಮನಿಸಬಹುದು: (5ಕ) ರಾಜು ಮನೆಗೆ ಬಂದ. (5ಚ) (5ಟ) ಮನೆಗೆ ಬಂದ ರಾಜು ಊಟಮಾಡಿದ.
ರಾಜು ಮನೆಗೆ ಬಂದ ಮತ್ತು ಊಟ ಮಾಡಿದ.
(5ಕ)ದಲ್ಲಿ ಒಂದು ಸುಳುಸೊಲ್ಲು ಬಂದಿದೆ; (5ಚ)ದಲ್ಲಿ ಅದೇ ಸುಳು ಸೊಲ್ಲನ್ನು ಇನ್ನೊಂದು ಸುಳುಸೊಲ್ಲಿನೊಂದಿಗೆ ಸೇರಿಸಿರುವ ಒಂದು ಜೋಡು
ಸೊಲ್ಲು ಬಂದಿದೆ; ಮತ್ತು (5ಟ)ದಲ್ಲಿ ಆ ಸುಳುಸೊಲ್ಲನ್ನು ಮನೆಗೆ ಬಂದ ಎಂಬ ಒಳಸೊಲ್ಲನ್ನಾಗಿ ಮಾರ್ಪಡಿಸಿ, ಅದನ್ನು ಎರಡನೇ ಸುಳುಸೊಲ್ಲಿನ ಒಂದು ಪದಕಂತೆಯೊಳಗೆ ಇರಿಸಿರುವ ಸಿಕ್ಕಲುಸೊಲ್ಲು ಬಂದಿದೆ.
ಜೋಡು ಮತ್ತು ಸಿಕ್ಕಲು ಸೊಲ್ಲುಗಳನ್ನು ಹೀಗೆ ಸುಳುಸೊಲ್ಲುಗಳನ್ನು ಒಟ್ಟು ಸೇರಿಸುವ ಇಲ್ಲವೇ ಅವುಗಳಲ್ಲಿ ಮಾರ್ಪಾಟುಗಳನ್ನು ಮಾಡುವ ಮೂಲಕ ಪಡೆಯ ಬಹುದು; ಹಾಗಾಗಿ, ಈ ಹೊತ್ತಗೆಯಲ್ಲಿ ಮೊದಲಿಗೆ ಕನ್ನಡದಲ್ಲಿ ಬಳಕೆಯಾಗುವ ಸುಳುಸೊಲ್ಲುಗಳ ಇಟ್ಟಳಗಳು ಎಂತಹವು ಎಂಬುದನ್ನು ವಿವರಿಸಲಾಗಿದೆ; ಅವನ್ನು ಬಳಸಿ ಜೋಡು ಮತ್ತು ಸಿಕ್ಕಲುಸೊಲ್ಲುಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಆಮೇಲೆ ವಿವರಿಸಲಾಗುತ್ತದೆ.
ಕನ್ನಡದ ಸುಳುಸೊಲ್ಲುಗಳನ್ನೆಲ್ಲ ಎಸಕವನ್ನು ತಿಳಿಸುವವುಗಳು ಮತ್ತು ಇರುಹ ವನ್ನು ತಿಳಿಸುವವುಗಳು ಎಂಬುದಾಗಿ ಎರಡು ಗುಂಪುಗಳಲ್ಲಿ ಅಣಿಗೊಳಿಸ ಬಹುದು. ಸುನೀಲ್ ಮನೆಗೆ ಹೋದ ಎಂಬ ಸೊಲ್ಲು ಒಂದು ಎಸಕವನ್ನು (ಹೋಗುವಿಕೆಯನ್ನು) ತಿಳಿಸುತ್ತದೆ, ಮತ್ತು ಸುನೀಲ್ ಮಯ್ಗಳ್ಳ ಎಂಬುದು ಒಂದು ಇರುಹವನ್ನು ತಿಳಿಸುತ್ತದೆ.
ಈ ರೀತಿ ಎಸಕ ಇಲ್ಲವೇ ಇರುಹವನ್ನು ತಿಳಿಸುವುದು ಮಾತ್ರವಲ್ಲದೆ ತಿಳಿಯ ದಿರುವುದನ್ನು ತಿಳಿಯಲು ಯಾರನ್ನಾದರೂ ಕೇಳುವುದು, ಮಾಡಲಾಗದ ಕೆಲಸ ವನ್ನು ಇನ್ನೊಬ್ಬರ ಹತ್ತಿರ ಮಾಡಲು ಹೇಳುವುದು, ಮಾಡಬೇಕೆಂದಿರುವ ಕೆಲಸಕ್ಕೆ ಇನ್ನೊಬ್ಬರ ಒಪ್ಪಿಗೆ ಪಡೆಯುವುದು, ಮಾಡಬಾರದ ಕೆಲಸವನ್ನು ಇನ್ನೊಬ್ಬನು ಮಾಡದಂತೆ ತಡೆಯುವುದು ಮೊದಲಾದ ಬೇರೆಯೂ ಹಲವು ಬಗೆಯ ಮಾತಿನ ಕೆಲಸಗಳನ್ನು ಸೊಲ್ಲುಗಳ ಮೂಲಕ ನಡೆಸಬಲ್ಲೆವು. ಇದಕ್ಕಾಗಿ ಒಂದೇ ಸೊಲ್ಲನ್ನು ಬೇರೆ ಬೇರೆ ರೂಪಗಳಲ್ಲಿ ಬಳಸಬೇಕಾಗುತ್ತದೆ.
ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ಎಸಕ ಮತ್ತು ಇರುಹಗಳನ್ನು ತಿಳಿಸುವ ಎರಡು ಸೊಲ್ಲುಗಳಿಗಿರುವ ಇಂತಹ ಹಲವು ರೂಪಗಳನ್ನು ಕೆಳಗೆ ಕೊಡಲಾಗಿದೆ.
ಸುನೀಲ್ ಮನೆಗೆ ಹೋಗಿದ್ದಾನೆ.
(6ಕ) (6ಚ) ಸುನೀಲ್ ಮನೆಗೆ ಹೋಗಿದ್ದಾನೋ? (6ಟ) ಸುನೀಲ್ ಮನೆಗೆ ಹೋಗಲಿ. (6ತ) ಸುನೀಲ್ ಮನೆಗೆ ಹೋಗಲೋ? (6ಪ) ಸುನೀಲ್ ಮನೆಗೆ ಹೋಗದಿರಲಿ.
(7ಕ) ಸುನೀಲ್ ಮಯ್ಗಳ್ಳ. (7ಚ) ಸುನೀಲ್ ಮಯ್ಗಳ್ಳನೋ? (7ಟ) ಸುನೀಲ್ ಮಯ್ಗಳ್ಳನಲ್ಲ.
(7ತ) ಸುನೀಲ್ ಮಯ್ಗಳ್ಳನಿರಬಹುದು. (7ಪ) ಸುನೀಲ್ ಮಯ್ಗಳ್ಳನಿರಲಾರ.
ಸೊಲ್ಲುಗಳ ಮೂಲಕ ಎಸಕ ಇಲ್ಲವೇ ಇರುಹಗಳನ್ನು ಇನ್ನೊಬ್ಬರಿಗೆ ತಿಳಿಸುವ ಕೆಲಸವೇ ಮೇಲೆ ಕೊಟ್ಟಿರುವ ಕೆಲಸಗಳಲ್ಲೆಲ್ಲ ಅತ್ಯಂತ ಮುಕ್ಯವಾದುದು. ಹಾಗಾಗಿ, ಸೊಲ್ಲುಗಳ ಇಟ್ಟಳವೆಂತಹದು ಎಂಬುದನ್ನು ತಿಳಿದುಕೊಳ್ಳಬೇಕೆಂದಿರು ವವರು ಮೊದಲಿಗೆ ಈ ತಿಳಿಸುವ ಕೆಲಸದಲ್ಲಿ ಬಳಕೆಯಾಗುವ ಸೊಲ್ಲುಗಳು ಎಂತಹವು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಬೇರೆ ಕೆಲಸಗಳಲ್ಲಿ ಬಳಕೆಯಾಗುವ ಸೊಲ್ಲುಗಳನ್ನೆಲ್ಲ ಆಮೇಲೆ, ಅಂತಹ ತಿಳಿಸುವ ಸೊಲ್ಲು ಗಳಲ್ಲೇನೇ ಹಲವು ಬಗೆಯ ಮಾರ್ಪಾಡುಗಳನ್ನು ಮಾಡುವ ಮೂಲಕ, ಪಡೆಯಲು ಬರುತ್ತದೆ.
ಎತ್ತುಗೆಗಾಗಿ, ಸುನೀಲ್ ಮನೆಗೆ ಹೋಗಿದ್ದಾನೆ ಎಂಬ (ಕ) ತಿಳಿಸುವ ಸೊಲ್ಲಿಗೆ ಓ ಒಟ್ಟನ್ನು ಸೇರಿಸಿ, ಕೇಳುವ ಕೆಲಸಕ್ಕಾಗಿ ಬಳಕೆಯಾಗುವ (6ಚ) ಸೊಲ್ಲನ್ನು ಪಡೆಯಬಹುದು; (6ಕ) ಸೊಲ್ಲಿನಲ್ಲಿ ಬಳಕೆಯಾಗಿರುವ ಹೋಗು ಎಸಕಪದಕ್ಕೆ ನೇರವಾಗಿ ಅಲಿ ಒಟ್ಟನ್ನು ಸೇರಿಸಿ, ಒಪ್ಪಿಗೆ ಕೊಡುವ (6ಟ) ಸೊಲ್ಲನ್ನು ಪಡೆಯಬಹುದು; ಅದಕ್ಕೇನೇ ಅಲು ಮತ್ತು ಓ ಒಟ್ಟುಗಳನ್ನು ಸೇರಿಸಿ ಒಪ್ಪಿಗೆ ಕೇಳುವ (6ತ) ಸೊಲ್ಲನ್ನು ಪಡೆಯಬಹುದು.
ಎಸಕಗಳನ್ನು ಸೂಚಿಸುವ ಕನ್ನಡದ ಸೊಲ್ಲುಗಳಲ್ಲೆಲ್ಲ ಒಂದು ಎಸಕಪದ ಆ ಸೊಲ್ಲುಗಳ ತಿರುಳುಪದವಾಗಿ ಬಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಸೊಲ್ಲಿನ ಕೊನೆಯಲ್ಲಿ ಇರಿಸಲಾಗುತ್ತದೆ. ಎತ್ತುಗೆಗಾಗಿ, ಸುನೀಲ್ ಮನೆಗೆ ಹೋದ ಎಂಬ ಸೊಲ್ಲಿನಲ್ಲಿ ಆ ಸೊಲ್ಲಿನ ತಿರುಳನ್ನು ತಿಳಿಸುವುದಕ್ಕಾಗಿ ಹೋದ ಎಂಬ ಎಸಕಪದ ಬಂದಿದೆ.
ಈ ಎಸಕಪದದೊಂದಿಗೆ ಸುನೀಲ್ ಮತ್ತು ಮನೆಗೆ ಎಂಬ ಬೇರೆಯೂ ಎರಡು ಪದಗಳು ಬಂದಿದ್ದು, ಅವು ಆ ಪದ ತಿಳಿಸುವ ಎಸಕದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುತ್ತವೆ, ಇಲ್ಲವೇ ಅದು ಕೊಡುವ ಮಾಹಿತಿಯನ್ನೇ ಹೆಚ್ಚು ವಿವರವಾಗಿ ತಿಳಿಸುತ್ತವೆ:
ಹೋದ ಎಂಬ ಎಸಕಪದವು ತಿಳಿಸುವ ಕೆಲಸಕ್ಕೆ ಒಂದು ಗುರಿ (ಹೋಗುವ ಜಾಗ) ಇರುತ್ತದೆ; ಆದರೆ ಅದು ಯಾವುದು ಎಂಬುದನ್ನು ಆ ಪದ ತಿಳಿಸುವು ದಿಲ್ಲ; ಹಾಗಾಗಿ, ಈ ಹೆಚ್ಚಿನ ಸಂಗತಿಯನ್ನು ತಿಳಿಸುವುದಕ್ಕಾಗಿ ಅದರ ಮೊದಲು ಮನೆಗೆ ಎಂಬ ಪದದ ಬಳಕೆಯಾಗಿದೆ. ಇದಕ್ಕೆ ಬದಲು, ಹೋದ ಎಂಬ ಎಸಕ ಪದವೇ ಹೋದವನು ಒಬ್ಬ ವ್ಯಕ್ತಿ (ಗಂಡುಸು) ಎಂಬುದನ್ನು ಅದರ ಕೊನೆಯಲ್ಲಿ ಬಂದಿರುವ ಅ ಒಟ್ಟಿನ ಮೂಲಕ ತಿಳಿಸುತ್ತದೆ; ಹಾಗಾಗಿ, ಆ ಸೊಲ್ಲಿನಲ್ಲಿ
ಮೊದಲಿಗೆ ಬಂದಿರುವ ಸುನೀಲ್ ಎಂಬ ಪದಕ್ಕೆ ಅದೇ ಸಂಗತಿಯನ್ನು ಹೆಚ್ಚು ವಿವರವಾಗಿ ಸೂಚಿಸುವ ಕೆಲಸವಿದೆಯೆಂದು ಹೇಳಬಹುದು.
ಎಸಕವನ್ನು ತಿಳಿಸುವ ಸೊಲ್ಲುಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಎಸಕ ಪದಗಳು ಬಳಕೆಯಾಗುತ್ತವೆ. ಇವನ್ನು ಆಗುಹಗಳು ಮತ್ತು ಮಾಡುಹಗಳು ಎಂಬುದಾಗಿ ಕರೆಯಬಹುದು. ಸೋರು ಎಂಬುದು ಒಂದು ಆಗುಹ ಪದ; ಮಾಡಿನಿಂದ ನೀರು ಸೋರುತ್ತಿದೆ ಎಂಬ ಸೊಲ್ಲಿನಲ್ಲಿ ‘ಏನು ನಡೆಯುತ್ತಿದೆ’ ಎಂಬುದನ್ನು (ಎಂದರೆ ಒಂದು ಆಗುಹವನ್ನು) ಅದರಲ್ಲಿ ಬಂದಿರುವ ಈ ಸೋರು ಪದ ತಿಳಿಸುತ್ತದೆ.
ಇದಕ್ಕೆ ಬದಲು, ಓದು ಎಂಬುದು ಒಂದು ಮಾಡುಹ ಪದ; ಹುಡುಗ ಕತೆ ಓದುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ‘ಹುಡುಗ ಏನು ಮಾಡುತ್ತಿದ್ದಾನೆ’ ಎಂಬು ದನ್ನು (ಎಂದರೆ ಒಂದು ಮಾಡುಹವನ್ನು) ಈ ಓದು ಪದ ತಿಳಿಸುತ್ತದೆ.
ಒಂದು ಸೊಲ್ಲಿನಲ್ಲಿ ಬರುವ ಎಸಕಪದದೊಂದಿಗೆ ಬೇರೆ ಎಂತಹ ಪದ ಗಳೆಲ್ಲ ಬರಬಲ್ಲುವು ಎಂಬುದು ಆ ಎಸಕಪದ ಎಂತಹ ಎಸಕವನ್ನು ತಿಳಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ಸೋರು ಎಂಬ ಎಸಕಪದದೊಂದಿಗೆ ಮೇಲೆ ನೀರು ಕೊಟ್ಟಿರುವ ಸೊಲ್ಲಿನಲ್ಲಿ ‘ಸೋರುವುದು ಏನು’ ಎಂಬುದನ್ನು ತಿಳಿಸುವ ಎಂಬ ಒಂದು ಆಗುಗ ಪದ ಬಂದಿದೆ ಮತ್ತು ‘ಸೋರುವುದು ಎಲ್ಲಿಂದ’ ಎಂಬು ದನ್ನು ತಿಳಿಸುವ ಮಾಡಿನಿಂದ ಎಂಬ ಒಂದು ಸುರು ಪದ ಬಂದಿದೆ.
ಇದಕ್ಕೆ ಬದಲು, ಓದು ಎಂಬ ಎಸಕಪದದೊಂದಿಗೆ ಮೇಲೆ ಕೊಟ್ಟಿರುವ ಸೊಲ್ಲಿನಲ್ಲಿ ಅದು ತಿಳಿಸುವ ಮಾಡುಹವನ್ನು ‘ಯಾರು ಮಾಡುತ್ತಿದ್ದಾರೆ’ ಎಂಬು ದನ್ನು ತಿಳಿಸುವ ಹುಡುಗ ಎಂಬ ಒಂದು ಮಾಡುಗ ಪದ ಬಂದಿದೆ ಮತ್ತು ಆತ ‘ಏನು ಓದುತ್ತಿದ್ದಾನೆ’ ಎಂಬುದನ್ನು ತಿಳಿಸುವ ಕತೆ ಎಂಬ ಈಡು ಪದ ಬಂದಿದೆ. ಓದು ಎಂಬ ಎಸಕಪದದ ಬದಲು ಬೀಳು ಎಂಬ ಬೇರೊಂದು ಎಸಕ ಪದವನ್ನು ಬಳಸಿದೆವಾದರೆ, ಅದರೊಂದಿಗೆ ಈಡನ್ನು ತಿಳಿಸುವ ಪದ ಬರ ಲಾರದು. ಆದರೆ ಅದಕ್ಕೆ ಬದಲು, ಆ ಎಸಕಪದ ತಿಳಿಸುವ ಆಗುಹ ‘ಎಲ್ಲಿ ನಡೆಯಿತು’ ಎಂಬುದನ್ನು (ಎಂದರೆ, ಅದರ ಜಾಗವನ್ನು) ತಿಳಿಸುವ ಪದ ಬಳಕೆ ಯಾಗಬಲ್ಲುದು (ಹುಡುಗ ಅಂಗಳದಲ್ಲಿ ಬಿದ್ದ), ಇಲ್ಲವೇ ಅದು ‘ಎಲ್ಲಿಂದ ಮೊದಲಾಗಿದೆ’ ಮತ್ತು ‘ಎಲ್ಲಿಗೆ ಸಾಗಿದೆ’ ಎಂಬುದನ್ನು ತಿಳಿಸುವುದಕ್ಕಾಗಿ, ಹುಡುಗ ಮರದಿಂದ ಗುಂಡಿಗೆ ಬಿದ್ದ ಎಂಬ ಸೊಲ್ಲಿನಲ್ಲಿ ಕಾಣಿಸುವ ಹಾಗೆ, ಅದರ ಸುರುವನ್ನು (ಮರದಿಂದ) ಮತ್ತು ಗುರಿಯನ್ನು (ಗುಂಡಿಗೆ) ತಿಳಿಸುವ ಪದಗಳು ಬಳಕೆಯಾಗಬಲ್ಲುವು.
ಎಸಕಗಳನ್ನು ತಿಳಿಸುವ ಸೊಲ್ಲುಗಳಲ್ಲಿ ಎಸಕಪದಗಳು ಬರುವ ಹಾಗೆ, ಇರುಹಗಳನ್ನು ತಿಳಿಸುವ ಸೊಲ್ಲುಗಳಲ್ಲಿ ಇರು ಪದ ಬರುತ್ತದೆ. ಇದನ್ನು ಇರುಹ ಪದದವೆಂಬುದಾಗಿ ಕರೆಯಬಹುದು. ಎತ್ತುಗೆಗಾಗಿ, ಹುಡುಗನ ಕಯ್ಯಲ್ಲಿ
ಒಂದು ಹಣ್ಣಿದೆ ಎಂಬ ಸೊಲ್ಲು ಒಂದು ಇರುಹವನ್ನು ತಿಳಿಸುತ್ತದೆ ಮತ್ತು ಅದರ ಕೊನೆಯಲ್ಲಿ ಇರುಹಪದ ಇದೆ ಎಂಬ ರೂಪದಲ್ಲಿ ಬಂದಿದೆ.
ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಇರುಹಪದ ಬಾರದಿರುವುದೂ ಇದೆ. ಎತ್ತುಗೆಗಾಗಿ, ಈ ಗಿಡದ ಎಲೆ ಕೆಂಪು ಎಂಬ ಸೊಲ್ಲಿನಲ್ಲಿ ಇರುಹಪದ ಬಂದಿಲ್ಲ. ಮೇಲೆ (7ಕ-ಪ)ದಲ್ಲಿ ಕೊಟ್ಟಿರುವ ಸುನೀಲ್ ಮಯ್ಗಳ್ಳ ಎಂಬ ಸೊಲ್ಲಿನಲ್ಲೂ ಅದು ಬಂದಿಲ್ಲ.
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಕೆಲವು ಹೆಚ್ಚಿನ ಸುಳುಸೊಲ್ಲು ಗಳನ್ನೂ ಉಂಟುಮಾಡಲು ಬರುತ್ತದೆ. ಇವುಗಳಲ್ಲಿ ಕೆಲವನ್ನು ಮಾಡುಹಗಳಲ್ಲಿ ಬಳಕೆಯಾಗುವಂತಹ ಇಟ್ಟಳಗಳಿಂದಲೇ ಉಂಟುಮಾಡಲಾಗುತ್ತದೆ; ಆದರೆ, ಬೇರೆ ಕೆಲವನ್ನು ಉಂಟುಮಾಡಲು ಕೆಲವು ಹೆಚ್ಚಿನ ಇಟ್ಟಳಗಳನ್ನು ಬಳಸ ಬೇಕಾಗುತ್ತದೆ. ಹೀಗಿದ್ದರೂ, ಅವನ್ನೆಲ್ಲ ಮೇಲೆ ಕೊಟ್ಟಿರುವ ಸುಳುಸೊಲ್ಲುಗಳ ಇಟ್ಟಳಗಳಲ್ಲಿ ಮಾರ್ಪಾಡುಗಳನ್ನು ಮಾಡುವ ಮೂಲಕ ಪಡೆಯಲು ಬರುತ್ತದೆ. ಹಾಗಾಗಿ, ಅವನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಆಮೇಲೆ ತಿಳಿದು ಕೊಳ್ಳಬಹುದು.
ಇದಲ್ಲದೆ, ಎಸಕಪದಗಳಿಗೆ ಬೇರೆ ಬಗೆಯ ಪದಗಳನ್ನು ಸೇರಿಸಿ ಕೂಡುಪದ ಗಳನ್ನು ಉಂಟುಮಾಡುವಂತಹ ಒಂದು ಹೊಲಬೂ ಕನ್ನಡದಲ್ಲಿದೆ. ಎತ್ತುಗೆಗಾಗಿ, ನಾಯಿಗಳು ಕಚ್ಚಾಡುತ್ತಿವೆ ಎಂಬ ಸೊಲ್ಲಿನಲ್ಲಿ ಕಚ್ಚಾಡು ಎಂಬ ಕೂಡುಪದ ವನ್ನು ಬಳಸಲಾಗಿದೆ. ಇಂತಹ ಕೂಡುಪದಗಳನ್ನು ಬಳಸಿರುವ ಸೊಲ್ಲುಗಳ ಇಟ್ಟಳ ಕೆಲವು ವಿಶಯಗಳಲ್ಲಿ ಸುಳುಸೊಲ್ಲುಗಳ ಇಟ್ಟಳದಿಂದ ಬೇರಾಗಿದೆ. ಆದರೆ ಇವನ್ನೂ ಸುಳುಸೊಲ್ಲುಗಳಿಂದ ಪಡೆಯಬಲ್ಲೆವು.
1.5.2 ಎಸಕಗಳು ಮತ್ತು ಅವುಗಳ ಪಾಂಗುಗಳು
ಮೇಲೆ ತಿಳಿಸಿದ ಹಾಗೆ, ಒಂದು ಸೊಲ್ಲಿನಲ್ಲಿ ಎಸಕಪದದೊಂದಿಗೆ ಅದು ತಿಳಿಸುವ ಎಸಕದ ಆಗುಗ, ಮಾಡುಗ, ಈಡು, ಗುರಿ ಮತ್ತು ಜಾಗಗಳನ್ನು ತಿಳಿಸುವ ಹೆಸರುಪದಗಳಲ್ಲಿ ಕೆಲವು ಬರಬಲ್ಲುವು. ಅವುಗಳಲ್ಲಿ ಎಂತಹವು ಬರಬಲ್ಲುವು ಮತ್ತು ಎಶ್ಟು ಬರಬಹುದು ಇಲ್ಲವೇ ಬರಬೇಕು ಎಂಬುದನ್ನು ಒಂದು ಸೊಲ್ಲಿನ ಎಸಕಪದವೇ ತೀರ್ಮಾನಿಸುತ್ತದೆ.
ಎತ್ತುಗೆಗಾಗಿ, ಮಾರು ಎಂಬಎಸಕಪದದೊಂದಿಗೆ ಮಾಡುಗ, ಗುರಿ, ಮತ್ತು ಈಡು ಎಂಬ ಮೂರು ಬಗೆಯ ಹೆಸರು ಪದಗಳು ಬರಬೇಕಾಗುತ್ತದೆ; ಅದಕ್ಕೆ ಬದಲು, ತಿನ್ನು ಎಂಬ ಎಸಕಪದವನ್ನು ಬಳಸಿದೆವಾದರೆ, ಅದರೊಂದಿಗೆ ತಿನ್ನುವ ವ್ಯಕ್ತಿ (ಮಾಡುಗ) ಮತ್ತು ತಿನ್ನುವ ವಸ್ತು (ಈಡು) ಎಂಬ ಎರಡು ಹೆಸರುಪದ ಗಳು ಬಂದರೆ ಸಾಕು; ಅಳು ಎಂಬ ಬೇರೊಂದು ಎಸಕಪದವನ್ನು ಬಳಸಿದೆ ವಾದರೆ, ಅದರೊಂದಿಗೆ ಅಳುವ ವ್ಯಕ್ತಿ (ಆಗುಗ) ಎಂಬ ಒಂದು ಹೆಸರುಪದ ಬಂದರೆ ಸಾಕು.
ಸೀತೆ ಮನೆಯನ್ನು ಜಾನಕಿಗೆ ಮಾರಿದಳು.
ಹುಡುಗ ಸೀಬೆಹಣ್ಣು ತಿಂದ.
(8) (9) (10) ಮಗು ಅಳುತ್ತದೆ.
ಎಸಕಪದಗಳೊಂದಿಗೆ ಬರುವ ಈ ಆಗುಗ, ಮಾಡುಗ, ಈಡು, ಸುರು, ಗುರಿ, ಮತ್ತು ಜಾಗಗಳನ್ನು ಅದರ ಪಾಂಗುಗಳೆಂದು ಕರೆಯಬಹುದು. ಇವುಗಳಲ್ಲಿ ಆಗುಗ ಪಾಂಗು ಎಲ್ಲಾ ಬಗೆಯ ಆಗುಹ ಸೊಲ್ಲುಗಳಲ್ಲೂ ಬರುತ್ತದೆ, ಮತ್ತು ಮಾಡುಗ ಪಾಂಗು ಎಲ್ಲಾ ಬಗೆಯ ಮಾಡುಹ ಸೊಲ್ಲುಗಳಲ್ಲೂ ಬರುತ್ತದೆ; ಆದರೆ, ಇವೆರಡೂ ಒಟ್ಟಿಗೆ ಒಂದೇ ಸೊಲ್ಲಿನಲ್ಲಿ ಬರುವುದಿಲ್ಲ; ಹಾಗಾಗಿ, ಇವನ್ನು ಗುರುತಿಸುವುದಕ್ಕಾಗಿ ಯಾವ ಒಟ್ಟನ್ನೂ ಬಳಸಬೇಕಾಗುವುದಿಲ್ಲ.
ಬಾಕಿ ಉಳಿದ ಪಾಂಗುಗಳಲ್ಲಿ ಈಡನ್ನು ಅನ್ನು ಒಟ್ಟಿನಿಂದ, ಸುರುವನ್ನು ಇಂದ ಒಟ್ಟಿನಿಂದ, ಗುರಿಯನ್ನು ಗೆ ಒಟ್ಟಿನಿಂದ ಮತ್ತು ಜಾಗವನ್ನು ಲ್ಲಿ ಒಟ್ಟಿ ನಿಂದ ಗುರುತಿಸಲಾಗುತ್ತದೆ. ಹಲವು ಕಡೆಗಳಲ್ಲಿ ಈಡನ್ನು ಗುರುತಿಸುವ ಅನ್ನು ಒಟ್ಟು ಬಿದ್ದುಹೋಗುವುದೂ ಇದೆ ಎಂಬುದನ್ನು ರಾಜು ಮರ ಕಡಿದ ಎಂಬ ಸೊಲ್ಲಿನಲ್ಲಿ ಕಾಣಬಹುದು. ಈ ನಾಲ್ಕು (ಈಡು, ಸುರು, ಕೊನೆ, ಮತ್ತು ಜಾಗ) ಪಾಂಗುಗಳ ಬಳಕೆಗೆ ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(11) ಹುಡುಗ ನಾಯಿಯನ್ನು ಓಡಿಸಿದ. (12) ಹುಡುಗ ಶಾಲೆಯಿಂದ ಬರುತ್ತಿದ್ದಾನೆ, (13) ಹುಡುಗನಿಗೆ ಒಂದು ಪುಸ್ತಕ ಸಿಕ್ಕಿದೆ. (14) ಮನೆಯಲ್ಲಿ ಯಾರೂ ಇಲ್ಲ.
ಆಗುಹ ಮತ್ತು ಮಾಡುಹ ಸೊಲ್ಲುಗಳಲ್ಲಿ ಬರಬಲ್ಲ ಪಾಂಗುಗಳನ್ನವಲಂಬಿಸಿ, ಅವನ್ನು ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ಗುಂಪುಗಳಲ್ಲಿ ಸೇರಿಸಿ ಹೇಳ ಬಹುದು:
ಆಗುಹ ಸೊಲ್ಲುಗಳು:
- ಆಗುಗ ಮಾತ್ರ: ಬೆಕ್ಕು ಸತ್ತಿತು.
- ಆಗುಗ ಮತ್ತು ಈಡು: ಮರ ಹೂ ಬಿಟ್ಟಿದೆ.
- ಆಗುಗ ಮತ್ತು ಸುರು:
- ಆಗುಗ ಮತ್ತು ಗುರಿ: ಹುಡುಗಿಗೆ ಹಾಡು ನೆನಪಿದೆ.
- ಆಗುಗ ಮತ್ತು ಜಾಗ: ಅಂಗಳದಲ್ಲಿ ಹುಲ್ಲು ಬೆಳೆದಿದೆ.
ಮರದಿಂದ ಹಣ್ಣು ಬಿತ್ತು.
ಮಾಡುಹ ಸೊಲ್ಲುಗಳು:
- ಮಾಡುಗ ಮಾತ್ರ: ಹುಡುಗ ಓಡಿದ.
- ಮಾಡುಗ ಮತ್ತು ಈಡು: ಮಗು ಹಾಲು ಕುಡಿಯಿತು.
- ಮಾಡುಗ ಮತ್ತು ಸುರು: ಹುಡುಗ ಮರದಿಂದ ಇಳಿದ.
- ಮಾಡುಗ ಮತ್ತು ಗುರಿ: ಹುಡುಗ ಮರಕ್ಕೆ ಹತ್ತಿದ.
- ಮಾಡುಗ ಮತ್ತು ಜಾಗ: ಕೋತಿ ಮರದಲ್ಲಿ ಕುಳಿತಿತು.
- ಮಾಡುಗ, ಸುರು, ಮತ್ತು ಈಡು: ಹುಡುಗ ಮರದಿಂದ ಹಣ್ಣು ಕಿತ್ತ.
- ಮಾಡುಗ, ಗುರಿ, ಮತ್ತು ಈಡು: ಅಜ್ಜಿ ಮಕ್ಕಳಿಗೆ ಕತೆ ಹೇಳಿದಳು.
ಇರುಹ ಸೊಲ್ಲುಗಳ ಪಾಂಗುಗಳು ಇರುಹ ಸೊಲ್ಲುಗಳಲ್ಲಿ ಬೇರೆ ಬಗೆಯ ಕೆಲವು ಪಾಂಗುಗಳು ಬಳಕೆಯಾಗುತ್ತವೆ. ಇಂತಹ ಎಲ್ಲಾ ಸೊಲ್ಲುಗಳಲ್ಲೂ ಒಂದು ಇರುಗ ಬರುತ್ತದೆ; ಇದಲ್ಲದೆ, ಇವು ಬರಿಯ ಇರುವಿಕೆಯನ್ನು ತಿಳಿಸುವುವಾದರೆ, ಅವುಗಳಲ್ಲಿ ಜಾಗ ಮತ್ತು ಹೊತ್ತು ಗಳನ್ನು ಸೂಚಿಸುವ ಬೇರೆ ಎರಡು ಪಾಂಗುಗಳು (ಇಲ್ಲವೇ ಅವುಗಳಲ್ಲೊಂದು) ಬರುತ್ತವೆ.
ಇದಕ್ಕೆ ಬದಲು ಅವು ಪರಿಚೆಯನ್ನು ಇಲ್ಲವೇ ಪತ್ತುಗೆಯನ್ನು ತಿಳಿಸುವು ದಿದ್ದಲ್ಲಿ, ಅವನ್ನು ತಿಳಿಸುವ ಬೇರೊಂದು ಪಾಂಗುವೂ ಇರುಗದೊಂದಿಗೆ ಬರುತ್ತದೆ. ಇದಲ್ಲದೆ, ಜಾಗ, ಹೊತ್ತು ಮತ್ತು ಹರವನ್ನು ತಿಳಿಸುವ ಪಾಂಗು ಗಳೂ ಇಂತಹ ಸೊಲ್ಲುಗಳಲ್ಲಿ ಬರಬಲ್ಲುವು. ಇವುಗಳಲ್ಲಿ ಕೆಲವು ಪಾಂಗುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
- ಜಾಗ, ಹೊತ್ತು, ಮತ್ತು ಇರುಗ: ನಿನ್ನೆ ನಾನು ಮಯ್ಸೂರಲ್ಲಿದ್ದೆ.
- ಪರಿಚೆ ಮತ್ತು ಇರುಗ: ಹುಡುಗ ಸಪ್ಪಗಿದ್ದಾನೆ.
- ಪರಿಚೆ, ಜಾಗ, ಮತ್ತು ಇರುಗ: ಅವನು ಮನೆಯಲ್ಲಿ ತೆಪ್ಪಗಿರುತ್ತಾನೆ.
- ಪತ್ತುಗೆ ಮತ್ತು ಇರುಗ: ಅವನಿಗೆ ಕೆಲಸ ಇದೆ. ಹುಡುಗರಿಗೆ ನಾಳೆ ಶಾಲೆಗೆ
- ಪತ್ತುಗೆ, ಹೊತ್ತು, ಹರವು, ಮತ್ತು ಇರುಗ:
ರಜೆ ಇದೆ.
1.5.3 ಹುರುಳುಪತ್ತುಗೆ ಮತ್ತು ಬಳಕೆಪತ್ತುಗೆ
ಮೇಲೆ ವಿವರಿಸಿದಂತಹ ಪಾಂಗುಗಳು ಹೆಸರುಪದಗಳಿಗೂ ಎಸಕಪದಕ್ಕೂ ನಡುವೆ ಸೊಲ್ಲಿನ ಹುರುಳಿಗೆ ಸಂಬಂದಿಸಿದಂತಹ ಪತ್ತುಗೆಗಳನ್ನು ತಿಳಿಸಲು ಬಳಕೆಯಾಗು ತ್ತವೆ. ಇವಕ್ಕಿಂತ ತೀರ ಬೇರಾಗಿರುವ ಬಳಕೆಗೆ ಸಂಬಂದಿಸಿದಂತಹ ಸೊಲ್ಲಿನಲ್ಲಿ ಬರುವ ಹೆಸರುಪದಗಳಿಗೂ ಎಸಕಪದಕ್ಕೂ ಪತ್ತುಗೆಗಳೂ
ನಡುವಿದ್ದು, ಅವನ್ನು ತಿಳಿಸಲು ಬೇರೆಯೇ ಒಂದು ಹೊಲಬು ಸೊಲ್ಲುಗಳಲ್ಲಿ ಬಳಕೆಯಾಗುತ್ತದೆ.
ಸೊಲ್ಲುಗಳನ್ನು ನೆಲೆ ಮತ್ತು ತಿಳಿವು ಎಂಬ ಎರಡು ತುಂಡುಗಳಾಗಿ ಒಡೆ ಯಲು ಬರುತ್ತದೆ. ಯಾರ ಇಲ್ಲವೇ ಯಾವುದರ ಕುರಿತಾಗಿ ಸೊಲ್ಲು ಒಂದು ಸಂಗತಿಯನ್ನು ತಿಳಿಸುತ್ತದೆ ಎಂಬುದನ್ನು ಅದರ ನೆಲೆ ಹೇಳುತ್ತದೆ, ಮತ್ತು ಈ ನೆಲೆಯ ಕುರಿತಾಗಿ ಏನು ತಿಳಿಸಬೇಕಾಗಿದೆ ಎಂಬುದನ್ನು ತಿಳಿವು ಹೇಳುತ್ತದೆ. ಸಾಮಾನ್ಯವಾಗಿ ಸೊಲ್ಲಿನ ಮೊದಲನೆಯ ಪದ ಇಲ್ಲವೇ ಪದಕಂತೆ ಅದರ ನೆಲೆಯಾಗಿರುತ್ತದೆ, ಮತ್ತು ಉಳಿದ ಅಂಶ ತಿಳಿವಾಗಿರುತ್ತದೆ.
ಎತ್ತುಗೆಗಾಗಿ, ಅಜ್ಜಿ ಮಕ್ಕಳಿಗೆ ಕತೆ ಹೇಳಿದಳು ಎಂಬ ಸೊಲ್ಲಿನಲ್ಲಿ ಅಜ್ಜಿ ಎಂಬುದು ನೆಲೆ ಮತ್ತು ಮಕ್ಕಳಿಗೆ ಕತೆ ಹೇಳಿದಳು ಎಂಬುದು ತಿಳಿವು. ಸೊಲ್ಲಿನಲ್ಲಿ ಬಂದಿರುವ ಪದಗಳ ಓರಣವನ್ನು ಬದಲಾಯಿಸಿ, ಬೇರೆ ಬೇರೆ ನೆಲೆಗಳನ್ನು ಆರಿಸಿಕೊಳ್ಳಲು ಬರುತ್ತದೆ:
(15ಕ) ಅಜ್ಜಿ ಮಕ್ಕಳಿಗೆ ಕತೆ ಹೇಳಿದಳು. (15ಚ) ಮಕ್ಕಳಿಗೆ ಅಜ್ಜಿ ಕತೆ ಹೇಳಿದಳು. (15ಟ) ಕತೆಯನ್ನು ಅಜ್ಜಿ ಮಕ್ಕಳಿಗೆ ಹೇಳಿದಳು.
ಒಂದು ಸೊಲ್ಲಿನಲ್ಲಿ ಬರುವ ಆಗುಗ, ಮಾಡುಗ, ಈಡು, ಸುರು, ಗುರಿ, ಜಾಗ ಮೊದಲಾದವುಗಳಲ್ಲಿ ಯಾವುದನ್ನು ಬೇಕಿದ್ದರೂ ಈ ರೀತಿ ಅದರ ನೆಲೆಯನ್ನಾಗಿ ಮಾಡಿ ಬಳಸಬಲ್ಲೆವು.
ಇದಲ್ಲದೆ, ಸೊಲ್ಲುಗಳಲ್ಲಿ ಯಾವುದಾದರೂ ಒಂದು ಪದ ಇಲ್ಲವೇ ಪದ ಕಂತೆಯ ಮೇಲೆ ಒತ್ತು ಬೀಳುತ್ತಿರುತ್ತದೆ. ಸಾಮಾನ್ಯವಾಗಿ ಸೊಲ್ಲಿನಲ್ಲಿ ಎಸಕಪದಕ್ಕಿಂತ ಮೊದಲು, ಮತ್ತು ಅದರ ಪಕ್ಕವೇ ಇರುವ ಪದ ಇಲ್ಲವೇ ಪದಕಂತೆಯ ಮೇಲೆ ಒತ್ತು ಬಿದ್ದಿರುತ್ತದೆ. ಎತ್ತುಗೆಗಾಗಿ, ಮೇಲೆ (15ಕ-ಚ) ಸೊಲ್ಲುಗಳಲ್ಲಿ ಕತೆ ಪದದ ಮೇಲೆ ಒತ್ತು ಬಿದ್ದಿದೆ; ಆದರೆ, (15ಟ)ದಲ್ಲಿ ಅದು ಮಕ್ಕಳಿಗೆ ಪದದ ಮೇಲೆ ಬಿದ್ದಿದೆ, ಮತ್ತು ಮಕ್ಕಳಿಗೆ ಕತೆಯನ್ನು ಅಜ್ಜಿ ಹೇಳಿದಳು ಎಂಬ ಸೊಲ್ಲಿನಲ್ಲಿ ಅಜ್ಜಿ ಪದದ ಮೇಲೆ ಬಿದ್ದಿದೆ.
ಸೊಲ್ಲಿನಲ್ಲಿ ಬರುವ ಯಾವುದಾದರೊಂದು ಪದ ಇಲ್ಲವೇ ಪದಕಂತೆಯ ಮೇಲೆ ಒತ್ತು ಬೀಳುವಂತೆ ಮಾಡಲು ಕನ್ನಡದಲ್ಲಿ ಬೇರೆಯೂ ಕೆಲವು ಹೊಲಬು ಗಳು ಬಳಕೆಯಲ್ಲಿವೆ. ಎತ್ತುಗೆಗಾಗಿ, ಅದನ್ನು ಸೊಲ್ಲಿನ ಕೊನೆಗೆ ಸಾಗಿಸಬಹುದು; ಆದರೆ, ಇದಕ್ಕಾಗಿ ಸೊಲ್ಲಿನ ಎಸಕಪದವನ್ನು ಹೆಸರುಪದವಾಗಿ ಬದಲಾಯಿಸ ಬೇಕಾಗುತ್ತದೆ:
(15ತ) ಮಕ್ಕಳಿಗೆ ಕತೆ ಹೇಳಿದ್ದು ಅಜ್ಜಿ. (15ಪ) ಅಜ್ಜಿ ಮಕ್ಕಳಿಗೆ ಹೇಳಿದ್ದು ಕತೆ. (15ಗ) ಅಜ್ಜಿ ಕತೆ ಹೇಳಿದ್ದು ಮಕ್ಕಳಿಗೆ.
ಸೊಲ್ಲುಗಳ ನೆಲೆ ಮತ್ತು ಒತ್ತುಗಳನ್ನು ಈ ರೀತಿ ಬದಲಾಯಿಸಿದಾಗ (ಎಂದರೆ, ಅದರ ಬಳಕೆಪತ್ತುಗೆಗಳಲ್ಲಿ ಬದಲಾವಣೆಗಳನ್ನು ಮಾಡಿದಾಗ), ಅದರ ಹುರುಳುಪತ್ತುಗೆಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂಬುದನ್ನು ಗಮನಿಸಬಹುದು. (15ಕ-ಗ)ಗಳಲ್ಲಿ ಬಂದಿರುವ ಎಲ್ಲಾ ಸೊಲ್ಲುಗಳಲ್ಲೂ ಒಂದೇ ವ್ಯಕ್ತಿ ಇಲ್ಲವೇ ವಿಶಯಗಳು ಮಾಡುಗ (ಅಜ್ಜಿ), ಗುರಿ (ಮಕ್ಕಳು) ಮತ್ತು ಈಡು(ಕತೆ)ಗಳಾಗಿ ಉಳಿದುಕೊಂಡಿವೆ.
1.5.4 ನೆಲೆಗೊಳಿಸುವುದು
ನಮ್ಮ ಎಣಿಸಿಕೆಯಲ್ಲಿರುವ ಎಸಕ ಎಂತಹದು, ಅದರಲ್ಲಿ ಯಾವ ವ್ಯಕ್ತಿ, ವಸ್ತು, ವಿಶಯ ಮೊದಲಾದವುಗಳು ತೊಡಗಿಕೊಂಡಿವೆ, ಅವಕ್ಕೂ ಎಸಕಕ್ಕೂ ನಡುವೆ ಎಂತಹ ಹುರುಳಿನ ಮತ್ತು ಬಳಕೆಯ ಪತ್ತುಗೆಗಳಿವೆ ಎಂಬುದನ್ನು ತಿಳಿಸಿದಾಗ, ಕೇಳುಗನಿಗೆ ನಾವು ತಿಳಿಸಬೇಕೆಂದಿರುವ ಎಣಿಸಿಕೆಯ ತಿರುಳು ಗೊತ್ತಾಗುತ್ತದೆ. ಆದರೆ, ಅಶ್ಟು ಮಾತ್ರ ಮಾಡಿದರೆ ಸಾಕಾಗುವುದಿಲ್ಲ. ನಾವು ತಿಳಿಸುವ ಎಸಕದ ಹೊತ್ತು ಮತ್ತು ಜಾಗಗಳು ಯಾವುವು, ಅವಕ್ಕೂ ಆಡುಗನ ಇಲ್ಲವೇ ಕೇಳುಗನ ಹೊತ್ತು ಮತ್ತು ಜಾಗಗಳಿಗೂ ನಡುವೆ ಎಂತಹ ಪತ್ತುಗೆಯಿದೆ, ಬೇರೆ ಎಸಕ ಗಳಿಗೂ ಅದಕ್ಕೂ ನಡುವೆ ಎಂತಹ ಪತ್ತುಗೆಯಿದೆ ಎಂಬಂತಹ ಬೇರೆ ಹಲವು ಬಗೆಯ ಸಂಗತಿಗಳನ್ನೂ ತಿಳಿಸಬೇಕಾಗುತ್ತದೆ. ಇದನ್ನು ನೆಲೆಗೊಳಿಸುವುದು ಎಂಬುದಾಗಿ ಕರೆಯಬಹುದು.
(1) ಆಡುಗನ ಹೊತ್ತು ಎಸಕದ ಹೊತ್ತನ್ನು ಆಡುಗನ ಹೊತ್ತಿಗೆ ಸಂಬಂದಿಸುವಂತೆ ತಿಳಿಸಲು ಎಸಕಪದ ದೊಂದಿಗೆ ಹೊತ್ತಿನ ಒಟ್ಟನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಹುಡುಗ ಹಾಲು ಕುಡಿದ ಎಂಬ ಸೊಲ್ಲನ್ನು ಗಮನಿಸಬಹುದು. ಇದರಲ್ಲಿ ಹುಡುಗ ಎಂಬ ಹೆಸರು ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ಹಾಲು ಎಂಬ ಇನ್ನೊಂದು ಹೆಸರುಪದ ಒಂದು ವಸ್ತುವನ್ನು ಗುರುತಿಸುತ್ತದೆ; ಆ ವ್ಯಕ್ತಿ ಹಾಲನ್ನು ಏನು ಮಾಡಿದ ಎಂಬುದನ್ನು ಕುಡಿ ಎಂಬ ಎಸಕಪದ ತಿಳಿಸುತ್ತದೆ. ಈ ಮೂರು ಪದ ಗಳು ಒಟ್ಟು ಸೇರಿ ನಮ್ಮ ಎಣಿಸಿಕೆಯ ತಿರುಳನ್ನು ಕೊಡುತ್ತವೆ.
ಮೇಲಿನ ಸೊಲ್ಲಿನಲ್ಲಿ ಕುಡಿ ಎಂಬ ಎಸಕಪದದೊಂದಿಗೆ ದ್ ಮತ್ತು ಅ ಎಂಬ ಎರಡು ಒಟ್ಟುಗಳು ಬಂದಿರುವುದನ್ನು ಗಮನಿಸಬಹುದು. ಇವುಗಳಲ್ಲಿ ದ್ ಒಟ್ಟು ಕುಡಿಯುವ ಕೆಲಸ ಮೇಲಿನ ಸೊಲ್ಲನ್ನು ಆಡಿರುವ ಹೊತ್ತಿಗಿಂತ (ಎಂದರೆ ಆಡುಗನ ಹೊತ್ತಿಗಿಂತ) ಮೊದಲೇ ನಡೆದಿದೆ ಎಂಬುದನ್ನು ತಿಳಿಸುತ್ತದೆ, ಮತ್ತು ಅದರ ಬಳಿಕ ಬಂದಿರುವ ಅ ಒಟ್ಟು ಈ ಕೆಲಸವನ್ನು ನಡೆಸಿದವನು ಒಬ್ಬ ಹುಡುಗ, ಎಂದರೆ ಗಂಡುಗುರ್ತಿನ ಒಬ್ಬ ವ್ಯಕ್ತಿ, ಎಂಬುದನ್ನು ತಿಳಿಸುತ್ತದೆ.
ಎಸಕದ ಹೊತ್ತನ್ನು ಆಡುಗನ ಹೊತ್ತಿನೊಂದಿಗೆ ಸಂಬಂದಿಸುವುದಕ್ಕಾಗಿ ಕನ್ನಡ ದಲ್ಲಿ ಉತ್ತ ಮತ್ತು ದ್ ಎಂಬ ಎರಡು ಒಟ್ಟುಗಳನ್ನು ಎಸಕಪದದೊಂದಿಗೆ ಬಳಸಲಾಗುತ್ತದೆ. ಇವುಗಳಲ್ಲಿ ಉತ್ತ ಎಂಬುದು ಆಡುಗನ ಹೊತ್ತಿನ ಬಳಿಕ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ದ್ ಎಂಬುದು ಅದಕ್ಕೆ ಮೊದಲು ನಡೆದ ಎಸಕವನ್ನು ತಿಳಿಸುತ್ತದೆ.
(16ಕ) ಆಕೆ ಎಂಟೂವರೆಗೆ ಬರುತ್ತಾಳೆ. (16ಚ) ಆಕೆ ಎಂಟೂವರೆಗೆ ಬಂದಳು.
ಇದನ್ನೇ ಹೆಚ್ಚು ವಿವರವಾಗಿ ತಿಳಿಸಲು ನಾಳೆ, ನಾಡಿದು, ನಿನ್ನೆ, ಮೊನ್ನೆ, ಎಂಟೂವರೆಗೆ ಮೊದಲಾದ ಪರಿಚೆಪದಗಳನ್ನೂ ಬಳಸಲಾಗುತ್ತದೆ. ಇದಲ್ಲದೆ, ತಿಳಿಸುತ್ತಿರುವ ಎಸಕಕ್ಕೂ ಬೇರೊಂದು ಎಸಕಕ್ಕೂ ನಡುವೆ ಎಂತಹ ಹೊತ್ತಿನ ಪತ್ತುಗೆಯಿದೆ ಎಂಬುದನ್ನೂ ತಿಳಿಸಬೇಕಾಗುತ್ತದೆ. ಇದಕ್ಕಾಗಿ ಕನ್ನಡದಲ್ಲಿ ಎಸಕ ಪದದ ಜೋಡಿಸುವ ರೂಪದೊಂದಿಗೆ ಇರು ಪದದ ಪದರೂಪಗಳನ್ನು ಬಳಸಲಾಗುತ್ತದೆ.
(17ಕ) ನಾವು ಹೋಗುವಶ್ಟರಲ್ಲಿ ಆತ ಬಂದಿರುತ್ತಾನೆ. (17ಚ) ನಾವು ಹೋಗುವಶ್ಟರಲ್ಲಿ ಆತ ಬಂದಿದ್ದ. (17ಟ) ನಾವು ಹೋಗುವಾಗ ಆತ ಬರುತ್ತಿದ್ದ.
(17ತ) ನಾವು ಹೋಗುವಶ್ಟರಲ್ಲಿ ಆತ ಬರಲಿದ್ದಾನೆ.
(2) ಆಡುಗನ ನಿಲುವು ಸೊಲ್ಲು ತಿಳಿಸುವ ತಿರುಳಿನ ಕುರಿತಾಗಿ ಆಡುಗನ ನಿಲುವೇನು ಎಂಬುದನ್ನೂ ಕೇಳುಗನಿಗೆ ತಿಳಿಸಬೇಕಾಗುತ್ತದೆ. ಕನ್ನಡದಲ್ಲಿ ಇದಕ್ಕಾಗಿ ಬಹುದು, ಬೇಕು, ಇಲ್ಲ ಮೊದಲಾದ ಕೆಲವು ಪದಗಳನ್ನು ಎಸಕಪದದೊಂದಿಗೆ ಬಳಸಲಾಗುತ್ತದೆ.
(18ಕ) ಆತ ನಾಳೆ ಬೆಳಿಗ್ಗೆ ಬರುತ್ತಾನೆ. (18ಚ) ಆತ ನಾಳೆ ಬೆಳಿಗ್ಗೆ ಬರಬಹುದು.
(18ಟ) ಆತ ನಾಳೆ ಬೆಳಿಗ್ಗೆ ಬರಬೇಕು. (18ತ) ಆತ ನಾಳೆ ಬೆಳಿಗ್ಗೆ ಬರುವುದಿಲ್ಲ.
(18ಕ)ದಲ್ಲಿ ಮರುದಿನ ನಡೆಯಲಿರುವ ಒಂದು ಎಸಕವನ್ನು ತಿಳಿಸಲಾಗಿದೆ; (18ಚ)ದಲ್ಲಿ ಈ ಎಸಕವನ್ನು ತಿಳಿಸುವುದರೊಂದಿಗೆ ಅದು ನಡೆಯುವ ಕುರಿತು ಆಡುಗನು ತನ್ನ ಸಂಶಯವನ್ನೂ ತಿಳಿಸಿದ್ದಾನೆ; ಈ ಸಂಶಯ (18ಚ)ದಲ್ಲಿರುವುದ ಕ್ಕಿಂತ (18ಟ)ದಲ್ಲಿ ತುಸು ಕಡಿಮೆಯಿದೆ; ಆದರೆ (18ತ)ದಲ್ಲಿ ಆ ಎಸಕ ನಡೆಯುವುದೇ ಇಲ್ಲವೆಂಬುದಾಗಿ ತಿಳಿಸಲಾಗಿದೆ.
ನಾನು
ಈ ನೆಲೆಗೊಳಿಸುವ ಕೆಲಸಗಳು ಎಶ್ಟು ಮುಕ್ಯವಾದುವೆಂದರೆ, ಅವುಗಳಲ್ಲಿ ಕೆಲವನ್ನು ನಾವು ಬಳಸುವ ಎಲ್ಲಾ ಸೊಲ್ಲುಗಳಲ್ಲೂ ಕಡ್ಡಾಯವಾಗಿ ನಡೆಸಲೇ ಬೇಕಾಗುತ್ತದೆ. ಎತ್ತುಗೆಗಾಗಿ, ನಾನು ನಾಳೆ ಊರಿಗೆ ಹೋಗುತ್ತೇನೆ ಎಂಬ ಸೊಲ್ಲಿನಲ್ಲಿ ಯಾರು ಎಂಬುದನ್ನು ತಿಳಿಸುವುದಾದರೂ ಅದನ್ನು ಇನ್ನೊಮ್ಮೆ ಕಡ್ಡಾಯವಾಗಿ ಎಸಕಪದದ ಏನೆ ಒಟ್ಟಿನ ಮೂಲಕ ತಿಳಿಸಬೇಕಾಗಿದೆ; ಹೋಗುವ ಕೆಲಸ ಈ ಮಾತನ್ನು ಹೇಳುವ ಸಮಯದಲ್ಲಿ ನಡೆದಿಲ್ಲವೆಂಬುದನ್ನು ನಾಳೆ ಪದ ತಿಳಿಸುವುದಾದರೂ, ಅದನ್ನೇ ಕಡ್ಡಾಯವಾಗಿ ಎಸಕಪದದ ಉತ್್ತ ಒಟ್ಟಿನ ಇನ್ನೊಮ್ಮೆ ಮೂಲಕ ತಿಳಿಸಬೇಕಾಗಿದೆ.
ಹೋದವರು
ಪದ
1.6 ಬರಿಗೆಗಳು ಮತ್ತು ಅವುಗಳ ಉಲಿಪು
ಮೇಲೆ (1.4.1ರಲ್ಲಿ) ತಿಳಿಸಿದ ಹಾಗೆ, ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಸೊಲ್ಲುಗಳನ್ನೆಲ್ಲ ಮೂರು ಮುಕ್ಯ ಹಂತಗಳಲ್ಲಿ ಕಟ್ಟಲಾಗುತ್ತದೆ:
ಬರಿಗೆಗಳನ್ನು ಸೇರಿಸಿ ಪದಗಳನ್ನು ಕಟ್ಟುವುದು ಮೊದಲನೆಯ ಹಂತ,
ಪದಗಳನ್ನು ಸೇರಿಸಿ ಪದಕಂತೆಗಳನ್ನು ಕಟ್ಟುವುದು ಎರಡನೆಯ ಹಂತ, ಮತ್ತು
ಪದಕಂತೆಗಳನ್ನು (ಮತ್ತು ಪದಗಳನ್ನು) ಸೇರಿಸಿ ಸೊಲ್ಲುಗಳನ್ನು ಕಟ್ಟುವುದು
ಮೂರನೆಯ ಹಂತ.
ಎತ್ತುಗೆಗಾಗಿ, ಆ ಹುಡುಗ ಯಾರು? ಎಂಬ ಸೊಲ್ಲನ್ನು ಗಮನಿಸಬಹುದು. ಇದನ್ನು ಆ ಹುಡುಗ ಪದಕಂತೆಯನ್ನು ಯಾರು ಪದದೊಂದಿಗೆ ಸೇರಿಸಿ ಕಟ್ಟ ಲಾಗಿದೆ; ಆ ಹುಡುಗ ಪದಕಂತೆಯಲ್ಲಿ ಆ ಮತ್ತು ಹುಡುಗ ಎಂಬ ಎರಡು ಪದಗಳು ಒಟ್ಟುಸೇರಿವೆ. ಈ ಪದಗಳಲ್ಲಿ ಹುಡುಗ ಎಂಬುದನ್ನು ಹ್, ಉ, ಡ್, ಉ, ಗ್ ಮತ್ತು ಅ ಎಂಬ ಆರು ಬರಿಗೆಗಳ ಸೇರಿಕೆಯಿಂದ, ಮತ್ತು ಯಾರು ಎಂಬುದನ್ನು ಯ್, ಆ, ರ್, ಉ ಎಂಬ ನಾಲ್ಕು ಬರಿಗೆಗಳ ಸೇರಿಕೆಯಿಂದ
ಉಂಟುಮಾಡಲಾಗಿದೆ. (ಇದಲ್ಲದೆ, ಈ ಬರಿಗೆಗಳು ಹುಡುಗ ಪದದಲ್ಲಿ ಹು, ಡು, ಗ ಎಂಬ ಮೂರು ಬರಿಗೆಕಂತೆಗಳಾಗಿ, ಮತ್ತು ಯಾರು ಪದದಲ್ಲಿ ಯಾ ಮತ್ತು ರು ಎಂಬ ಎರಡು ಬರಿಗೆಕಂತೆಗಳಾಗಿ ಕಾಣಿಸಿಕೊಳ್ಳುತ್ತವೆ. ಆ ಪದದಲ್ಲಿ ಒಂದು ಬರಿಗೆ ಮಾತ್ರ ಇದೆ.)
ಸೊಲ್ಲುಗಳನ್ನು ಹೀಗೆ ಮೂರು ಹಂತಗಳಲ್ಲಿ ಕಟ್ಟುವ ಕಾರಣ, ಕನ್ನಡದಲ್ಲಿ ಬರೇ ಮೂವತ್ತೊಂದು ಬರಿಗೆಗಳನ್ನು ಬಳಸಿ ಸಾವಿರಾರು ಪದಗಳನ್ನು ಉಂಟು ಮಾಡಲು ಬರುತ್ತದೆ, ಮತ್ತು ಈ ಸಾವಿರಾರು ಪದಗಳನ್ನು ಬಳಸಿ ಲೆಕ್ಕವಿಲ್ಲದಶ್ಟು ಸೊಲ್ಲುಗಳನ್ನು ಉಂಟುಮಾಡಲು ಬರುತ್ತದೆ.
ಎಲ್ಲರ ಕನ್ನಡಕ್ಕೆ ಬೇಕಾಗುವ ಈ ಮೂವತ್ತೊಂದು ಬರಿಗೆಗಳನ್ನು ಅವುಗಳ ಉಲಿಪನ್ನು ಅವಲಂಬಿಸಿ ತೆರೆಯುಲಿಗಳು ಮತ್ತು ಮುಚ್ಚುಲಿಗಳು ಎಂಬ ಎರಡು ಗುಂಪುಗಳಲ್ಲಿ ಸೇರಿಸಿ ಹೇಳಬಹುದು. ತೆರೆಯುಲಿಗಳ ಗುಂಪಿನಲ್ಲಿ ಅ, ಇ, ಉ, ಎ, ಒ ಮತ್ತು ಆ, ಈ, ಊ, ಏ, ಓ ಎಂಬ ಹತ್ತು ಬರಿಗೆಗಳಿವೆ, ಮತ್ತು ಮುಚ್ಚುಲಿಗಳ ಗುಂಪಿನಲ್ಲಿ ಕ್, ಚ್, ಟ್, ತ್, ಪ್; ಗ್, ಜ್, ಡ್, ದ್, ಬ್; ಣ್, ನ್, ಮ್; ಯ್, ವ್; ರ್; ಲ್, ಳ್; ಶ್, ಸ್, ಹ್ ಎಂಬ ಇಪ್ಪತ್ತೊಂದು ಬರಿಗೆಗಳಿವೆ.
ಈ ಎರಡು ಬಗೆಯ ಬರಿಗೆಗಳ ನಡುವಿನ ವ್ಯತ್ಯಾಸವೇನೆಂದರೆ, ತೆರೆಯುಲಿ ಗಳ ಉಲಿಪಿನಲ್ಲಿ ಬಾಯಿ ಹೆಚ್ಚುಕಡಿಮೆ ತೆರೆದಿರುತ್ತದೆ, ಮತ್ತು ಮುಚ್ಚುಲಿಗಳ ಉಲಿಪಿನಲ್ಲಿ ಅದು ಹೆಚ್ಚುಕಡಿಮೆ ಮುಚ್ಚಿರುತ್ತದೆ. ತೆರೆದಿರುವ ಬಾಯಿಯೊಳ ಗಿರುವ ಟೊಳ್ಳಿನ ಆಕಾರವನ್ನು ಬಗೆಬಗೆಯಾಗಿ ಬದಲಾಯಿಸುವ ಮೂಲಕ ಹಲವು ಬಗೆಯ ತೆರೆಯುಲಿಗಳನ್ನು ಹೊರಡಿಸುತ್ತೇವೆ, ಮತ್ತು ಹೆಚ್ಚುಕಡಿಮೆ ಮುಚ್ಚಿರುವ ಬಾಯಿಯಿಂದ ಹೊರ ಬರುವ ಉಸಿರಿಗೆ ಬಗೆಬಗೆಯ ತಡೆಗಳ ನ್ನೊಡ್ಡುವ ಮೂಲಕ ಹಲವು ಬಗೆಯ ಮುಚ್ಚುಲಿಗಳನ್ನು ಹೊರಡಿಸುತ್ತೇವೆ.
ಕನ್ನಡದಲ್ಲಿ ಈ ಎರಡು ಬಗೆಯ ಬರಿಗೆಗಳ ಉಲಿಪು ಹೇಗೆ ನಡೆಯುತ್ತದೆ
ಎಂಬುದರ ಮೇಲೆ, ಅವನ್ನು ಕೆಳಗೆ ಕೊಟ್ಟಿರುವ ಹಾಗೆ ಪಟ್ಟಿಮಾಡಬಹುದು.
(1) ತೆರೆಯುಲಿಗಳು ಗಿಡ್ಡ ಉಲಿಗಳು
ಉದ್ದ ಉಲಿಗಳು
ಬಾಯಿಯ ಜಾಗ
ನಾಲಿಗೆಯ ಬಾಗ
ಮೇಲೆ
ನಡುವೆ
ಕೆಳಗೆ
ಮುಂದೆ ಹಿಂದೆ E J
G M C
ಮುಂದೆ ಹಿಂದೆ F H N K D
ಮಾಡುವ ಬಗೆ
ತಡೆಯುಲಿ
,, (ಗು) ಮೂಗುಲಿ ಉಜ್ಜುಲಿ
ಬದಿಯುಲಿ ಹೊಡೆಯುಲಿ ತಡೆಯಿಲ್ಲದುಲಿ
ತುಟಿ ಪ್ ಬ್ ಮ್
ವ್
(2) ಮುಚ್ಚುಲಿಗಳು
ಮಾಡುವ ಜಾಗ
ಕ್ ಗ್
ಟ್ ಡ್ ಣ್
ಚ್
ಜ್
ಹಲ್ಲು ಮಡಚು ಅಂಗುಳು ಮೆತ್ತಂಗುಳು ತ್ ದ್ ನ್ ಸ್ ಲ್ ರ್
ಶ್
ಳ್
ಹ್
ಯ್
ಪ್, ಬ್ಗಳ ಮೊದಲು ಬಂದಿರುವ ಮಕಾರವನ್ನು, ತ್, ದ್ಗಳ ಮೊದಲು ಬಂದಿರುವ ನಕಾರವನ್ನು, ಮತ್ತು ಟ್, ಡ್ಗಳ ಮೊದಲು ಬಂದಿರುವ ಣಕಾರ ವನ್ನು ಸೊನ್ನೆ(ಂ)ಯ ಮೂಲಕ ಗುರುತಿಸುವ ಪರಿ ಕನ್ನಡದ ಬರಹದಲ್ಲಿದೆ. ಆದರೆ ಉಲಿಪಿನಲ್ಲಿ ಇವು ಮೂಗುಲಿಗಳೇ. ಕೆಂಪು, ನಂಬು, ಕಂತು, ಅಂದು, ಅಂಟು, ತುಂಡು ಮೊದಲಾದ ಪದಗಳಲ್ಲಿ ಬರುವ ಮೂಗುಲಿಗಳನ್ನು ಹಾಗೆ ಸೊನ್ನೆಯ ರೂಪದಲ್ಲಿ ಬರೆಯುವ ಬದಲು, ಮೂಗುಲಿಗಳ ರೂಪದಲ್ಲೇನೇ ಕೆಮ್ಪು, ನಮ್ಬು, ಕನ್ತು, ಅನ್ದು, ಅಣ್ಟು, ತುಣ್ಡು ಎಂಬುದಾಗಿ ಬರೆದಲ್ಲಿ ಇದು ಗೊತ್ತಾಗುತ್ತದೆ.
ಉಲಿಪಿನಲ್ಲಿ ಚ್, ಜ್ಗಳ ಮೊದಲು [ಞ] ಎಂಬ ಒಂದು ಮೂಗುಲಿ ಕಾಣಿಸಿಕೊಳ್ಳುತ್ತದೆ, ಮತ್ತು ಕ್, ಗ್ಗಳ ಮೊದಲು [ಙ] ಎಂಬ ಇನ್ನೊಂದು ಮೂಗುಲಿ ಕಾಣಿಸಿಕೊಳ್ಳುತ್ತದೆ. ಈ ಎರಡು ಕಡೆಗಳಲ್ಲೂ ನಕಾರ ಬರುವುದಿಲ್ಲ; ಹಾಗಾಗಿ, ಅವನ್ನು ನಕಾರದ ರೂಪಗಳೆಂದು ತಿಳಿದುಕೊಳ್ಳಬಹುದು, ಮತ್ತು ಈ ಕಾರಣಕ್ಕಾಗಿ ಇಂತಹ ಎರಡು ಬರಿಗೆಗಳು ಕನ್ನಡಕ್ಕೆ ಬೇಕಾಗುವುದಿಲ್ಲ. ಇದಲ್ಲದೆ, ಬರಹದಲ್ಲಿ ಅವನ್ನು ಇತರ ಮೂಗುಲಿಗಳ ಹಾಗೆ ಸೊನ್ನೆಯ ಮೂಲಕವೇನೇ ಸೂಚಿಸಲಾಗುತ್ತದೆ (ಅಂಚು [ಅಞ್ಚು], ಅಂಜು [ಅಞ್ಜು], ಅಂಕೆ [ಅಙ್ಕ], ಮಂಗ [ಮಙ್ಗ]).
1.6.1 ಬರಿಗೆಗಳ ಉಲಿಪು
ಬರಿಗೆಗಳನ್ನು ಇಲ್ಲಿ ಅವುಗಳ ಉಲಿಪಿನ ಮೇಲೆ ಗುಂಪುಗೂಡಿಸಲಾಗಿದೆ; ಹಾಗಾಗಿ, ಅವಕ್ಕೆ ತೆರೆಯುಲಿ, ಮುಚ್ಚುಲಿ, ಮೂಗುಲಿ, ತಡೆಯುಲಿ ಮೊದಲಾದ ಉಲಿಗಳ ಹೆಸರುಗಳನ್ನೇ ಕೊಡಲಾಗಿದೆ ಎಂಬುದನ್ನು ಗಮನಿಸಬೇಕು. ಆದರೆ, ಎಲ್ಲರ ಕನ್ನಡ ಮುಕ್ಯವಾಗಿ ಬರಹದ ಕನ್ನಡ; ಹಾಗಾಗಿ, ಅದರ ಈ ಸೊಲ್ಲರಿಮೆ ಯಲ್ಲಿ ಬರಹದಲ್ಲಿ ಕಾಣಿಸಿಕೊಳ್ಳುವ ಬರಿಗೆಗಳಿಂದ ಅವುಗಳ ಉಲಿಪಿಗೆ ಹೋಗಲಾಗಿದೆಯಲ್ಲದೆ, ಮಾತಿನಲ್ಲಿ ಕಾಣಿಸಿಕೊಳ್ಳುವ ಉಲಿಗಳಿಂದ ಬರಿಗೆಗಳಿಗೆ ಬಂದಿಲ್ಲ.
(1) ತೆರೆಯುಲಿಗಳ ಉಲಿಪು ಕನ್ನಡದಲ್ಲಿ ಹತ್ತು ತೆರೆಯುಲಿಗಳಿದ್ದು, ಅವುಗಳ ಉಲಿಪಿನಲ್ಲಿ ಕಾಣಿಸುವ ಮುಕ್ಯ ವ್ಯತ್ಯಾಸಗಳನ್ನು ಕೆಳಗೆ ಕೊಡಲಾಗಿದೆ.
(1) ಇ, ಎ, ಉ, ಒ, ಅ ಎಂಬವು ಗಿಡ್ಡ ತೆರೆಯುಲಿಗಳು, ಮತ್ತು ಈ, ಏ, ಊ, ಓ, ಆ ಎಂಬವು ಉದ್ದ ತೆರೆಯುಲಿಗಳು. ಗಿಡ್ಡ ತೆರೆಯುಲಿಗಳನ್ನು ಹೊರಡಿಸುವುದಕ್ಕಿಂತ ಉದ್ದ ತೆರೆಯುಲಿಗಳನ್ನು ಹೊರಡಿಸಲು ತುಸು ಹೆಚ್ಚು ಹೊತ್ತು ಬೇಕಾಗುತ್ತದೆ ಎಂಬುದೇ ಇವುಗಳ ನಡುವಿರುವ ಮುಕ್ಯ ವ್ಯತ್ಯಾಸ.
(2) ಇ, ಈ, ಎ, ಏ ಎಂಬವು ಮುಂದಿನ ತೆರೆಯುಲಿಗಳು, ಮತ್ತು ಮತ್ತು ಉ, ಊ, ಒ, ಓ, ಅ, ಆ ಎಂಬವು ಹಿಂದಿನ ತೆರೆಯುಲಿಗಳು. ಮುಂದಿನ ತೆರೆಯುಲಿಗಳನ್ನು ಹೊರಡಿಸುವುದಕ್ಕಾಗಿ ನಾಲಿಗೆಯ ಮುಂದಿನ ಬಾಗ ವನ್ನು ಬಳಸಲಾಗುತ್ತದೆ ಮತ್ತು ಹಿಂದಿನ ತೆರೆಯುಲಿಗಳನ್ನು ಹೊರಡಿಸುವುದಕ್ಕಾಗಿ ನಾಲಿಗೆಯ ಹಿಂದಿನ ಬಾಗವನ್ನು ಬಳಸಲಾಗುತ್ತದೆ.
(3) ಇ, ಈ, ಉ, ಊ ಎಂಬವು ಮೇಲಿನ ತೆರೆಯುಲಿಗಳು, ಎ, ಏ, ಒ, ಓ ಎಂಬವು ನಡುವಿನ ತೆರೆಯುಲಿಗಳು, ಮತ್ತು ಅ, ಆ ಎಂಬವು ಕೆಳಗಿನ ತೆರೆಯುಲಿಗಳು. ಇವುಗಳಲ್ಲಿ ಮೇಲಿನ ತೆರೆಯುಲಿಗಳಾದ ಇ, ಈ ಎಂಬವು ಗಳನ್ನು ಹೊರಡಿಸುವಾಗ ನಾಲಿಗೆಯ ಮುಂದಿನ ಬಾಗ, ಮತ್ತು ಉ, ಊ ಎಂಬವುಗಳನ್ನು ಹೊರಡಿಸುವಾಗ ನಾಲಿಗೆಯ ಹಿಂದಿನ ಬಾಗ ಬಾಯಿಯ ಮೇಲಿನ ಜಾಗದಲ್ಲಿರುತ್ತವೆ.
ಹೀಗೆಯೇ, ನಡುವಿನ ತೆರೆಯುಲಿಗಳಾದ ಎ, ಏ ಎಂಬವುಗಳನ್ನು ಹೊರಡಿಸುವಾಗ ನಾಲಿಗೆಯ ಮುಂದಿನ ಬಾಗ, ಮತ್ತು ಒ, ಓ ಎಂಬವುಗಳನ್ನು ಹೊರಡಿಸುವಾಗ ನಾಲಿಗೆಯ ಹಿಂದಿನ ಬಾಗ ಬಾಯಿಯ ನಡುಜಾಗದಲ್ಲಿರು ತ್ತವೆ; ಕೆಳಗಿನ ತೆರೆಯುಲಿಗಳಾದ ಅ, ಆ ಎಂಬವುಗಳನ್ನು ಹೊರಡಿಸುವಾಗ ನಾಲಿಗೆಯ ಹಿಂದಿನ ಬಾಗ ಬಾಯಿಯ ಕೆಳಜಾಗದಲ್ಲಿರುತ್ತದೆ.
(4) ಈ ತೆರೆಯುಲಿಗಳ ಹೊರಡಿಸುವಿಕೆಯಲ್ಲಿ ಇನ್ನೂ ಒಂದು ವ್ಯತ್ಯಾಸ ವಿದೆ: ಉ, ಊ, ಒ, ಓ ಎಂಬವುಗಳ ಹೊರಡಿಸುವಿಕೆಯಲ್ಲಿ ತುಟಿ ದುಂಡಗಿರು ತ್ತದೆ, ಮತ್ತು ಉಳಿದವುಗಳ (ಇ, ಈ, ಎ, ಏ, ಅ, ಆ ಎಂಬವುಗಳ) ಹೊರಡಿಸುವಿಕೆಯಲ್ಲಿ ಆ ರೀತಿ ತುಟಿ ದುಂಡಗಿರುವುದಿಲ್ಲ. ಕನ್ನಡದಲ್ಲಿ ಈ ವ್ಯತ್ಯಾಸಕ್ಕೆ ಹುರುಳನ್ನು ಕೊಡುವ ಕೆಲಸವಿಲ್ಲವಾದ ಕಾರಣ, ತೆರೆಯುಲಿಗಳನ್ನು ಹೆಸರಿಸುವಾಗ ಈ ವ್ಯತ್ಯಾಸವನ್ನು ತಿಳಿಸಬೇಕಾಗುವುದಿಲ್ಲ.
ತೆರೆಯುಲಿಗಳ ನಡುವಿರುವ ಈ ವ್ಯತ್ಯಾಸಗಳಲ್ಲಿ ನಮಗೆ ಬೇಕಾದವುಗಳನ್ನು
ಮಾತ್ರವೇ ಬಳಸಿಕೊಂಡು ಕೆಳಗೆ ಕೊಟ್ಟಿರುವ ಹಾಗೆ ಅವನ್ನು ಹೆಸರಿಸಬಹುದು:
E
F
J
K
G
H
M
N
C
D
ಮುನ್ಮೇಲಿನ ಗಿಡ್ಡ ತೆರೆಯುಲಿ ಮುನ್ಮೇಲಿನ ಉದ್ದ ತೆರೆಯುಲಿ ಮುನ್ನಡುವಿನ ಗಿಡ್ಡ ತೆರೆಯುಲಿ ಮುನ್ನಡುವಿನ ಉದ್ದ ತೆರೆಯುಲಿ ಹಿನ್ಮೇಲಿನ ಗಿಡ್ಡ ತೆರೆಯುಲಿ ಹಿನ್ಮೇಲಿನ ಉದ್ದ ತೆರೆಯುಲಿ ಹಿನ್ನಡುವಿನ ಗಿಡ್ಡ ತೆರೆಯುಲಿ ಹಿನ್ನಡುವಿನ ಉದ್ದ ತೆರೆಯುಲಿ ಹಿಂಗೆಳಗಿನ ಗಿಡ್ಡ ತೆರೆಯುಲಿ ಹಿಂಗೆಳಗಿನ ಉದ್ದ ತೆರೆಯುಲಿ
ಮೇಲೆ ತಿಳಿಸಿದ ಹಾಗೆ, ಈ ಎಲ್ಲಾ ತೆರೆಯುಲಿಗಳನ್ನು ಹೊರಡಿಸುವಾಗಲೂ ಬಾಯಿ ತೆರೆದಿರುತ್ತದೆ. ಅದರೊಳಗಿನ ಟೊಳ್ಳು ಯಾವ ಆಕಾರದಲ್ಲಿದೆ ಎಂಬು ದರ ಮೇಲೆ ಈ ತೆರೆಯುಲಿಗಳ ನಡುವಿನ ವ್ಯತ್ಯಾಸ ಅವಲಂಬಿಸಿದೆ. ನಾಲಿಗೆಯ ಹಿಂಬಾಗವನ್ನು ಇಲ್ಲವೇ ಮುಂಬಾಗವನ್ನು ಬೇರೆ ಬೇರೆ ಕಡೆಗಳಲ್ಲಿ ನಿಲ್ಲಿಸುವ ಮೂಲಕ ಈ ಟೊಳ್ಳಿನ ಆಕಾರವನ್ನು ಬದಲಿಸಲಾಗುತ್ತದೆ.
ಈ ಎಲ್ಲಾ ತೆರೆಯುಲಿಗಳನ್ನು ಹೊರಡಿಸುವಾಗಲೂ ಉಲಿಪೆಟ್ಟಿಗೆ ಗುನು ಗುನಿಸುತ್ತಿರುತ್ತದೆ ಮತ್ತು ಆ ರೀತಿ ಗುನುಗುನಿಸುತ್ತಿರುವಾಗ ಉಂಟಾಗುವ ಉಲಿಗೆ ಬಾಯಿಯಲ್ಲಿರುವ ಬೇರೆ ಬೇರೆ ಆಕಾರದ ಟೊಳ್ಳುಗಳು ಬೇರೆ ಬೇರೆ ರೀತಿಯಲ್ಲಿ ಮಾರುಲಿಯುತ್ತಿರುತ್ತವೆ. ಇದರಿಂದಾಗಿ ಬೇರೆ ಬೇರೆ ರೀತಿಯ ತೆರೆಯುಲಿಗಳು ಉಂಟಾಗುತ್ತವೆ.
(2) ಮುಚ್ಚುಲಿಗಳ ಉಲಿಪು ಕನ್ನಡದಲ್ಲಿ ಬಳಕೆಯಾಗುವ ಮುಚ್ಚುಲಿಗಳನ್ನು ಹೊರಡಿಸುವ ಬಗೆ ತೆರೆಯುಲಿ ಗಳನ್ನು ಹೊರಡಿಸುವ ಬಗೆಗಿಂತ ತೀರ ಬೇರಾದುದು. ಅದು ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಬೇಕಿದ್ದಲ್ಲಿ ಅದಕ್ಕಾಗಿ ಬಳಕೆಯಾಗುವ ಅಂಗಗಳು ಯಾವುವು, ಅವು ಬಾಯಿಯಲ್ಲಿ ಯಾವ ಜಾಗಕ್ಕೆ ಹೋಗುತ್ತವೆ ಮತ್ತು ಅಲ್ಲಿ ಎಂತಹ ಕೆಲಸವನ್ನು ನಡೆಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಇದಲ್ಲದೆ, ಹೀಗೆ ಉಲಿಗಳನ್ನು ಹೊರಡಿಸುವ ಸಮಯದಲ್ಲಿ ಗಂಟಲಿನ ಲ್ಲಿರುವ ಉಲಿಪೆಟ್ಟಿಗೆ ಗುನುಗುನಿಸುತ್ತಿದೆಯೋ ಇಲ್ಲವೋ ಎಂಬುದನ್ನೂ ಗಮನಿಸ ಬೇಕಾಗುತ್ತದೆ.
ಕನ್ನಡದ ಮುಚ್ಚುಲಿಗಳನ್ನು ಹೊರಡಿಸುವ ಸಮಯದಲ್ಲಿ ಕೆಳಗಿನ ತುಟಿ, ನಾಲಿಗೆಯ ತುದಿ, ನಾಲಿಗೆಯ ಅಡಿ, ನಾಲಿಗೆಯ ಅಲಗು ಮತ್ತು ನಾಲಿಗೆಯ ಹಿಂಬಾಗ ಎಂಬ ಅಯ್ದು ಅಂಗಗಳಲ್ಲಿ ಯಾವುದಾದರೂ ಒಂದು ಬಳಕೆಯಾಗು ತ್ತಿರುತ್ತದೆ.
ಈ ಅಂಗಗಳು ಮೇಲಿನ ತುಟಿ, ಹಲ್ಲಿನ ಹಿಂಬಾಗ, ಅಂಗುಳು ಮತ್ತು ಮೆತ್ತಂಗುಳು ಎಂಬ ನಾಲ್ಕು ಜಾಗಗಳಲ್ಲಿ ಒಂದರ ಕಡೆಗಾಗಿ ಹೋಗುತ್ತವೆ ಮತ್ತು ಅಲ್ಲಿ ಕೆಳಗೆ ವಿವರಿಸಿದ ಹಾಗೆ ಆರು ರೀತಿಯ ಕೆಲಸಗಳನ್ನು ನಡೆಸುತ್ತವೆ.
(1) ಉಸಿರನ್ನು ತಡೆಯುವುದು (ತಡೆಯುಲಿ),
(2) ಉಸಿರನ್ನು ಬಾಯಲ್ಲಿ ತಡೆದರೂ ಮೂಗಿನ ಮೂಲಕ ಬಿಡುವುದು
(ಮೂಗುಲಿ),
(3) ಚಲಿಸುವ ಅಂಗಕ್ಕೂ ಬಾಯಿಯ ಜಾಗಕ್ಕೂ ನಡುವೆ ಉಸಿರು ಉಜ್ಜಿ
ಕೊಂಡು ಹೋಗುವ ಹಾಗೆ ಮಾಡುವುದು (ಉಜ್ಜುಲಿ),
(4) ಉಸಿರು ನಾಲಿಗೆಯ ಬದಿಯಲ್ಲಿ ಹೋಗುವ ಹಾಗೆ ಮಾಡುವುದು
(ಬದಿಯುಲಿ),
(5) ಬಾಯಿಯ ಜಾಗಕ್ಕೆ ಹೊಡೆದು ಕೆಳಗೆ ಬರುವುದು (ಹೊಡೆಯುಲಿ),
ಮತ್ತು
(6) ಉಸಿರಿಗೆ ಯಾವ ಬಗೆಯ ತಡೆಯನ್ನೂ ಒಡ್ಡದೆ ಒಂದೆಡೆ ನಿಲ್ಲುವುದು
(ತಡೆಯಿಲ್ಲದುಲಿ).
ಬಾಯಿಯ ಅಂಗುಳಿನಲ್ಲಿ ನಾವು ಎರಡು ರೀತಿಯ ಮುಚ್ಚುಲಿಗಳನ್ನು ಉಂಟುಮಾಡುತ್ತೇವೆ. ಚ್, ಜ್, ಶ್, ಯ್ ಎಂಬವುಗಳನ್ನು ನಾಲಿಗೆಯ ಅಲಗಿ
ನಿಂದ ಉಂಟುಮಾಡುತ್ತೇವೆ, ಮತ್ತು ಟ್, ಡ್, ಣ್ ಎಂಬವುಗಳನ್ನು ನಾಲಿಗೆಯ ಅಡಿಬಾಗದಿಂದ ಉಂಟುಮಾಡುತ್ತೇವೆ.
ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಕ್ಕಾಗಿ ಮೇಲೆ ಕೊಟ್ಟಿರುವ ಮುಚ್ಚುಲಿಗಳ ಪಟ್ಟಿಯಲ್ಲಿ ಮಡಚುಔಎಂಬ ಬಾಯಿಯ ಜಾಗವೊಂದನ್ನು ಬಳಸ ಲಾಗಿದೆ. ನಿಜಕ್ಕೂ ಇದು ಬಾಯಿಯ ಜಾಗವನ್ನು ತಿಳಿಸುವುದಿಲ್ಲ; ಅದಕ್ಕೆ ಬದಲು, ನಾಲಿಗೆಯ ಅಡಿಬಾಗವನ್ನು ಅಂಗುಳಿನ ಕಡೆಗೆ ಕೊಂಡೊಯ್ಯುವುದಕ್ಕಾಗಿ ನಾಲಿಗೆ ಯನ್ನು ಮಡಚಬೇಕಾಗುತ್ತದೆ ಎಂಬ ಅಂಶವನ್ನು ತಿಳಿಸುತ್ತದೆ.
ಕನ್ನಡದಲ್ಲಿ ಎರಡು ರೀತಿಯ ತಡೆಯುಲಿಗಳು ಬಳಕೆಯಲ್ಲಿವೆ. ಬ್, ದ್, ಡ್, ಜ್, ಗ್ ಎಂಬವುಗಳನ್ನು ಹೊರಡಿಸುವಾಗ ಗಂಟಲಿನಲ್ಲಿರುವ ಉಲಿಪೆಟ್ಟಿಗೆ ಗುನುಗುನಿಸುತ್ತಿರುತ್ತದೆ ಮತ್ತು ಪ್, ತ್, ಟ್, ಚ್, ಕ್ ಎಂಬವುಗಳನ್ನು ಹೊರಡಿಸುವಾಗ ಅದು ಆ ರೀತಿ ಗುನುಗುನಿಸುತ್ತಿರುವುದಿಲ್ಲ. ಈ ವ್ಯತ್ಯಾಸವನ್ನು ತಿಳಿಸುವುದಕ್ಕಾಗಿ ಬ್, ದ್, ಡ್, ಜ್, ಗ್ ಎಂಬವುಗಳನ್ನು ಗುನುಗುನಿಸಿದ ತಡೆಯುಲಿಗಳೆಂದು, ಮತ್ತು ಪ್, ತ್, ಟ್, ಚ್, ಕ್ ಎಂಬವುಗಳನ್ನು ಗುನು ಗುನಿಸದ ತಡೆಯುಲಿಗಳೆಂದು ಕರೆಯಬಹುದು.
ಇತರ ಮುಚ್ಚುಲಿಗಳಲ್ಲೂ ಈ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಸ್, ಶ್, ಹ್ ಎಂಬವುಗಳನ್ನು ಬಿಟ್ಟು ಉಳಿದವುಗಳ (ಮ್, ನ್, ಣ್; ಲ್, ಳ್; ರ್; ಯ್, ವ್ ಎಂಬವುಗಳ) ಹೊರಡಿಸುವಿಕೆಯಲ್ಲೂ ಉಲಿಪೆಟ್ಟಿಗೆ ಗುನುಗುನಿಸು ತ್ತಿರುತ್ತದೆ. ಹಾಗಾಗಿ ಅವೆಲ್ಲವೂ ಗುನುಗುನಿಸಿದ ಉಲಿಗಳೇ. ಸ್, ಶ್, ಹ್ ಎಂಬವುಗಳ ಹೊರಡಿಸುವಿಕೆಯಲ್ಲಿ ಮಾತ್ರ ಅದು ಗುನುಗುನಿಸದಿರುತ್ತದೆ. ಹಾಗಾಗಿ, ಅವು ಪ್, ತ್, ಟ್, ಚ್, ಕ್ಗಳ ಹಾಗೆ ಗುನುಗುನಿಸದ ಉಲಿಗಳು.
ಸ್್ಸ… ಎಂಬುದಾಗಿ ಸಕಾರವನ್ನು ಎಳೆದು ಹೊರಡಿಸುವಾಗ, ಮತ್ತು ಮ್… ಎಂಬುದಾಗಿ ಮಕಾರವನ್ನು ಎಳೆದು ಹೊರಡಿಸುವಾಗ, ಬೆರಳನ್ನು ಉಲಿಪೆಟ್ಟಿಗೆಯ ಮೇಲೆ ಇರಿಸಿ ಗಮಸಿದೆವಾದರೆ, ಈ ಎರಡು ರೀತಿಯ (ಗುನುಗುನಿಸದ ಮತ್ತು ಗುನುಗುನಿಸುವ) ಮುಚ್ಚುಲಿಗಳ ನಡುವಿರುವ ವ್ಯತ್ಯಾಸ ಗೊತ್ತಾದೀತು.
(ಕ) ತಡೆಯುಲಿಗಳು ಕನ್ನಡದಲ್ಲಿ ಒಟ್ಟು ಹತ್ತು ತಡೆಯುಲಿಗಳು ಬಳಕೆಯಾಗುತ್ತವೆ. ಮೇಲೆ ತಿಳಿಸಿದ ಹಾಗೆ, ಇವುಗಳಲ್ಲಿ ಪ್, ತ್, ಟ್, ಚ್, ಕ್ಗಳೆಂಬ ಅಯ್ದು ತಡೆಯುಲಿಗಳು ಗುನುಗುನಿಸದ ಉಲಿಗಳು ಮತ್ತು ಬ್, ದ್, ಡ್, ಜ್, ಗ್ಗಳೆಂಬ ಉಳಿದ ಅಯ್ದು ತಡೆಯುಲಿಗಳು ಗುನುಗುನಿಸುವ ಉಲಿಗಳು.
ಇವುಗಳನ್ನು ಹೊರಡಿಸುತ್ತಿರುವಾಗ, ಬಾಯಿಯಿಂದ ಹೊರಹೋಗುವ ಉಸಿರನ್ನೊಮ್ಮೆ ತುಟಿ, ಹಲ್ಲಿನ ಹಿಂಬಾಗ, ಅಂಗುಳು, ಮತ್ತು ಮೆತ್ತಂಗುಳು (ಅಂಗುಳಿನ ಮೆತ್ತಗಿರುವ ಹಿಂಬಾಗ) ಎಂಬ ಮೂರು ಜಾಗಗಳಲ್ಲಿ ನಿಲ್ಲಿಸಿ
(ತಡೆದು) ಆಮೇಲೆ ಬಿಡಲಾಗುತ್ತದೆ. ಇದಕ್ಕಾಗಿ ಇವನ್ನು ತಡೆಯುಲಿಗಳೆಂದು ಕರೆಯಲಾಗಿದೆ.
ಎರಡು ತುಟಿಗಳನ್ನು ಒಟ್ಟುಸೇರಿಸಿ ಉಸಿರನ್ನೊಮ್ಮೆ ತಡೆಹಿಡಿದು ಬಿಟ್ಟಾಗ [ಪ್] ಎಂಬ ಉಲಿ ಹೊರಡುತ್ತದೆ. ಪಡೆ, ಪಾತಿ, ಪೆಟ್ಟು, ಕಪ್ಪು, ಸಪ್ಪೆ ಮೊದ ಲಾದ ಪದಗಳಲ್ಲಿ ಈ ಉಲಿ ಕಾಣಿಸುತ್ತದೆ.
ಇದಕ್ಕೆ ಬದಲು, ನಾಲಿಗೆಯ ತುದಿಯನ್ನು ಹಲ್ಲಿನ ಹಿಂಬದಿಯಲ್ಲಿ ಇರಿಸಿ, [ತ್] ಎಂಬ ಉಲಿ ಅಲ್ಲೇ ಉಸಿರನ್ನೊಮ್ಮೆ ತಡೆಹಿಡಿದು ಬಿಟ್ಟಾಗ, ಹೊರಡುತ್ತದೆ. ತಗ್ಗು, ತುಳಿ, ತೋಡು, ಕತ್ತೆ, ಎತ್ತು ಮೊದಲಾದ ಪದಗಳಲ್ಲಿ ಈ ಉಲಿ ಕಾಣಿಸುತ್ತದೆ.
ನಾಲಿಗೆಯನ್ನು ಒಳಕ್ಕೆ ಮಡಚಿ ಅದರ ಅಡಿಬಾಗವನ್ನು ಅಂಗುಳಿನ ಮೇಲೆ ಇರಿಸಿ, ಆ ಜಾಗದಲ್ಲಿ ಉಸಿರನ್ನೊಮ್ಮೆ ತಡೆಹಿಡಿದು ಬಿಟ್ಟಾಗ, [ಟ್] ಎಂಬ ಉಲಿ ಹೊರಡುತ್ತದೆ. ಟೊಂಕ, ಟೊಳ್ಳು, ಕಟ್ಟು, ಹಿಟ್ಟು ಮೊದಲಾದ ಪದಗಳಲ್ಲಿ ಈ ಉಲಿ ಕಾಣಿಸುತ್ತದೆ.
ನಾಲಿಗೆಯ ಅಡಿಬಾಗದ ಬದಲು, ಅದರ ಅಲಗಿನ ಮೇಲ್ಬಾಗವನ್ನು (ತುದಿ ಯಿಂದ ತುಸು ಹಿಂದಿರುವ ಬಾಗವನ್ನು) ಅದೇ ಜಾಗದಲ್ಲಿರಿಸಿ ಉಸಿರನ್ನೊಮ್ಮೆ ಹಿಡಿದು ಬಿಟ್ಟಾಗ, [ಚ್] ಎಂಬ ಉಲಿ ಹೊರಡುತ್ತದೆ. ಚಳಿ, ಚಿಗುರು, ಕಚ್ಚು, ಚೆಲುವು, ಮೆಚ್ಚು ಮೊದಲಾದ ಪದಗಳಲ್ಲಿ ಈ ಉಲಿ ಕಾಣಿಸುತ್ತದೆ.
ನಾಲಿಗೆಯ ಹಿಂಬಾಗವನ್ನು ಅದರ ಮೇಲಿರುವ ಮೆತ್ತಂಗುಳಿನ ಮೇಲಿರಿಸಿ ಉಸಿರನ್ನೊಮ್ಮೆ ತಡೆಹಿಡಿದು ಬಿಟ್ಟಾಗ, [ಕ್] ಎಂಬ ಉಲಿ ಹೊರಡುತ್ತದೆ. ಕಟ್ಟು, ಕಿಲುಬು, ಕೂಗು, ಸಿಕ್ಕು, ಅಕ್ಕ ಮೊದಲಾದ ಪದಗಳಲ್ಲಿ ಈ ಉಲಿ ಕಾಣಿಸು ತ್ತದೆ.
ಬ್, ದ್, ಡ್, ಜ್, ಗ್ಗಳೆಂಬ ಉಳಿದ ಅಯ್ದು ತಡೆಯುಲಿಗಳೂ ಮೇಲಿನ ಉಲಿಗಳ ಹಾಗೆಯೇ ತುಟಿ, ಹಲ್ಲಿನ ಹಿಂಬಾಗ, ಅಂಗುಳು ಮತ್ತು ಮೆತ್ತಂಗುಳು ಗಳಲ್ಲಿ ಉಸಿರನ್ನು ತಡೆಹಿಡಿದು ಬಿಟ್ಟಾಗ ಹೊರಡುತ್ತವೆ. ಡಕಾರವನ್ನು ಹೊರಡಿಸುವಾಗಲೂ ಟಕಾರದ ಹಾಗೆ ನಾಲಿಗೆಯನ್ನು ಮಡಚಿ ಅದರ ಅಡಿಬಾಗ ವನ್ನು ಬಳಸಲಾಗುತ್ತದೆ. ಹೀಗೆ ಮಾಡುವಾಗ ಉಲಿಪೆಟ್ಟಿಗೆ ಗುನುಗುನಿಸು ತ್ತಿರುತ್ತದೆಯೆಂಬುದೊಂದೇ ಇವುಗಳಿಗೂ ಪ್, ತ್, ಟ್, ಚ್, ಕ್ಗಳಿಗೂ ನಡುವಿರುವ ವ್ಯತ್ಯಾಸ.
ಚ್ ಮತ್ತು ಜ್ ಎಂಬವುಗಳಿಗೂ ಉಳಿದ ತಡೆಯುಲಿಗಳಿಗೂ ನಡುವೆ ಬೇರೊಂದು ವ್ಯತ್ಯಾಸ ಇದೆ. ಇವುಗಳನ್ನು ಹೊರಡಿಸುವಾಗ ನಾಲಿಗೆಯ ಅಲಗು ಉಸಿರನ್ನು ತಡೆಹಿಡಿದ ಮೇಲೆ ಒಮ್ಮೆಗೇ ಕೆಳಗೆ ಸರಿಯುವುದಿಲ್ಲ; ತುಸು ಮೆಲ್ಲಗೆ ಕೆಳಗೆ ಬರುತ್ತದೆ. ಹಾಗಾಗಿ, ಅವೆರಡರ ಕೊನೆಯಲ್ಲಿ [ಶ್] ಎಂಬ ಉಜ್ಜುಲಿ ಕೇಳಿಸುತ್ತದೆ. ಜಕಾರದಲ್ಲಿ ಈ ಉಜ್ಜುಲಿ ಗುನುಗುನಿಸುವ ರೂಪದಲ್ಲಿರುತ್ತದೆ.
ಬಾಳೆ, ಬೀಳು, ಕೊಂಬೆ, ಅಣಬೆ ಮೊದಲಾದ ಪದಗಳಲ್ಲಿ ಬಕಾರದ ಬಳಕೆಯನ್ನು, ದಾಟು, ದೂರು, ಆದರೆ, ಒಂದು ಮೊದಲಾದ ಪದಗಳಲ್ಲಿ ದಕಾರದ ಬಳಕೆಯನ್ನು, ಜಾರು, ಜೋಗು, ಅಂಜು, ಮಾಜು ಮೊದಲಾದ ಪದಗಳಲ್ಲಿ ಜಕಾರದ ಬಳಕೆಯನ್ನು, ಡೊಂಕು, ಅಡಿಗೆ, ಮಡಕೆ, ಗಂಡು ಮೊದಲಾದ ಪದಗಳಲ್ಲಿ ಡಕಾರದ ಬಳಕೆಯನ್ನು, ಮತ್ತು ಗಾಲಿ, ಗೋಟು, ಹಗೆ, ತೊಂಗು ಮೊದಲಾದ ಪದಗಳಲ್ಲಿ ಗಕಾರದ ಬಳಕೆಯನ್ನು ಕಾಣಬಹುದು. ಈ ಎಲ್ಲಾ ಹತ್ತು ತಡೆಯುಲಿಗಳೂ ಒತ್ತೆ ರೂಪದಲ್ಲಿ ಮಾತ್ರವಲ್ಲದೆ ಇಮ್ಮಡಿ ರೂಪದಲ್ಲೂ ಬರಬಲ್ಲುವು. ಎತ್ತುಗೆಗಾಗಿ ಅಪ್ಪ, ಅತ್ತೆ, ಅಟ್ಟ, ಕಚ್ಚು, ಅಕ್ಕ ಮತ್ತು ಬೊಬ್ಬೆ, ಹದ್ದು, ಬಡ್ಡಿ, ಅಜ್ಜಿ, ಸುಗ್ಗಿ ಎಂಬ ಪದಗಳಲ್ಲಿ ಅವು ಆ ರೀತಿ ಇಮ್ಮಡಿ ರೂಪದಲ್ಲಿ ಬಂದಿರುವುದನ್ನು ಕಾಣಬಹುದು.
ಆದರೆ, ನಿಜಕ್ಕೂ ನಾವಿಲ್ಲಿ ಈ ಉಲಿಗಳನ್ನು ಎರಡೆರಡು ಬಾರಿ ಹೊರಡಿಸು ವುದಿಲ್ಲ. ಎತ್ತುಗೆಗಾಗಿ, ಬಡಿ ಮತ್ತು ಬಡ್ಡಿ ಪದಗಳ ನಡುವಿನ ವ್ಯತ್ಯಾಸವನ್ನು ಗಮನಿಸಬಹುದು. ಬಡ್ಡಿ ಪದದಲ್ಲಿ ಡಕಾರವನ್ನು ಎರಡು ಬಾರಿ ಹೊರಡಿಸುವು ದಿಲ್ಲ; ಒಂದು ಬಾರಿ ಮಾತ್ರ ಹೊರಡಿಸುತ್ತೇವೆ. ಆದರೆ ಹಾಗೆ ಹೊರಡಿಸುವಾಗ ಉಸಿರನ್ನು ತುಸು ಹೆಚ್ಚು ಹೊತ್ತು ನಿಲ್ಲಿಸಿ ಬಿಡುತ್ತೇವೆ, ಅಶ್ಟೆ. ಹಾಗಾಗಿ, ನಿಜಕ್ಕೂ ಬಡಿ ಪದದಲ್ಲಿ ಗಿಡ್ಡ ಡಕಾರವಿದೆ ಮತ್ತು ಬಡ್ಡಿ ಪದದಲ್ಲಿ ಉದ್ದ ಡಕಾರವಿದೆ ಎಂದೇ ಹೇಳಬಹುದು.
ಆದರೆ, ಕನ್ನಡ ಬರಹದಲ್ಲಿ ಉದ್ದ ತಡೆಯುಲಿಗಳನ್ನು ಪ್ಪ, ತ್ತ, ಕ್ಕ ಮೊದ ಲಾದವುಗಳಲ್ಲಿ ಕಾಣಿಸುವ ಹಾಗೆ ಇಮ್ಮಡಿ ರೂಪದಲ್ಲಿ ಬರೆಯುತ್ತೇವೆ; ಹಾಗಾಗಿ, ಅವನ್ನು ಇಮ್ಮಡಿ ತಡೆಯುಲಿಗಳೆಂದು ತಿಳಿದುಕೊಳ್ಳುವುದರಲ್ಲಿ ತೊಂದರೆಯೇನಿಲ್ಲ. ಇತರ ಮುಚ್ಚುಲಿಗಳಿಗೂ ಇಂತಹವೇ ಗಿಡ್ಡ ಮತ್ತು ಉದ್ದ ರೂಪಗಳಿದ್ದು (ಮ್ಮ, ನ್ನ, ಣ್ಣ, ಲ್ಲ, ರ್ರ, ವ್ವ, ಯ್ಯ, ಸ್ಸ, ಶ್ಶ, ಳ್ಳ) ಅವನ್ನೂ ಒತ್ತೆ ಮತ್ತು ಇಮ್ಮಡಿ ರೂಪಗಳೆಂದು ತಿಳಿದುಕೊಳ್ಳಬಹುದು.
ಪದಗಳನ್ನು ಉಲಿಕಂತೆಗಳಾಗಿ ಒಡೆಯುವಾಗ ಉದ್ದ ತಡೆಯುಲಿಗಳು ಇಮ್ಮಡಿ ತಡೆಯುಲಿಗಳ ಹಾಗೆ ನಡೆದುಕೊಳ್ಳುತ್ತವೆ ಎಂಬುದು ಅವನ್ನು ಉದ್ದ ತಡೆಯುಲಿಗಳೆಂದು ಕರೆಯಲು ಇನ್ನೊಂದು ಕಾರಣ. ಎತ್ತುಗೆಗಾಗಿ, ಕಪ್ಪು ಪದವನ್ನು [ಕಪ್] ಮತ್ತು [ಪು] ಎಂಬ ಎರಡು ಉಲಿಕಂತೆಗಳಾಗಿ ಒಡೆಯಬೇಕಾಗುತ್ತದೆ, ಮತ್ತು ಹೀಗೆ ಮಾಡುವಾಗ, ಪ್್ಪ ಎಂಬುದರ ಒಂದು ಮೊದಲನೆಯ ಉಲಿಕಂತೆಯಲ್ಲಿ ತುಂಡು ಉಳಿಯುತ್ತದೆ, ಮತ್ತು ಇನ್ನೊಂದು ತುಂಡು ಎರಡನೆಯದಕ್ಕೆ ಹೋಗುತ್ತದೆ.
ಕರೆಯದೆ ಇಮ್ಮಡಿ
ತಡೆಯುಲಿಗಳೆಂದು
(ಚ) ಮೂಗುಲಿಗಳು ಕನ್ನಡದಲ್ಲಿ ಮ್, ನ್ ಮತ್ತು ಣ್ಗಳೆಂಬ ಮೂರು ಮೂಗುಲಿಗಳಿವೆ. ಇವುಗಳ ಹೊರಡಿಸುವಿಕೆ ಬ್, ದ್ ಮತ್ತು ಡ್ಗಳ ಹೊರಡಿಸುವಿಕೆಯ ಹಾಗೆಯೇ ಇದೆ. ಆದರೆ, ಬಾಯಿಯಿಂದ ಹೊರಹೋಗದ ಹಾಗೆ ಉಸಿರನ್ನು ತಡೆಹಿಡಿದಿದ್ದರೂ ಅದನ್ನು ಮೂಗಿನಿಂದ ಹೊರಹೋಗಲು ಬಿಡಲಾಗುತ್ತಿದೆಯೆಂಬುದೇ ಇವಕ್ಕೂ ಬ್, ದ್, ಡ್ಗಳಿಗೂ ನಡುವಿರುವ ವ್ಯತ್ಯಾಸ. ಬ್, ದ್, ಡ್ಗಳನ್ನು ಹೊರಡಿಸು ವಾಗ ಉಸಿರು ಮೂಗಿನಿಂದ ಹೊರಗೆ ಹೋಗುವುದಿಲ್ಲ.
ಈ ಮೂರು ಮೂಗುಲಿಗಳನ್ನು ಹೊರಡಿಸುವಾಗಲೂ ಉಲಿಪೆಟ್ಟಿಗೆ ಗುನು
ಗುನಿಸುತ್ತಿರುತ್ತದೆ.
ಮಕಾರವನ್ನು ಹೊರಡಿಸುವಾಗ ಬಕಾರದ ಹಾಗೆ ಎರಡು ತುಟಿಗಳನ್ನು ಒಟ್ಟು ಸೇರಿಸುತ್ತೇವೆ. ಆದರೆ, ಬಕಾರದಲ್ಲಿ ಉಸಿರನ್ನೊಮ್ಮೆ ಎಲ್ಲೂ ಹೊರ ಹೋಗದ ಹಾಗೆ ತಡೆದು ಆಮೇಲೆ ಬಿಡುತ್ತೇವೆ. ಇದಕ್ಕೆ ಬದಲು, ಮಕಾರದಲ್ಲಿ ಉಸಿರು ಬಾಯಿಯಿಂದ ಹೋಗದ ಹಾಗೆ ತಡೆದಿದ್ದರೂ ಮೂಗಿನಿಂದ ಹೊರ ಹೋಗುತ್ತಿರುತ್ತದೆ; ಆಮೇಲೆ, ತುಟಿಗಳ ನಡುವಿನ ತಡೆಯನ್ನು ತೆಗೆದಾಗ ಅದು ಬಾಯಿಯಿಂದಲೂ ಹೊರಹೋಗತೊಡಗುತ್ತದೆ. ಮನೆ, ಅಮ್ಮ, ತಂಪು [ತಮ್ಪು], ತಂಬಿಗೆ [ತಮ್ಬಿಗೆ], ಸುಮ್ಮನೆ, ಅಮುಕು ಮೊದಲಾದ ಪದಗಳಲ್ಲಿ ಈ ಮೂಗುಲಿ ಬಂದಿರುವುದನ್ನು ಕಾಣಬಹುದು.
ಹೀಗೆಯೇ, ನಕಾರವನ್ನು ಹೊರಡಿಸುವಾಗ ದಕಾರದ ಹಾಗೆ ನಾಲಿಗೆಯ ತುದಿಯನ್ನು ಹಲ್ಲಿನ ಹಿಂಬದಿಯಲ್ಲಿ ನಿಲ್ಲಿಸುತ್ತೇವೆ, ಮತ್ತು ಣಕಾರವನ್ನು ಹೊರಡಿಸುವಾಗ ಡಕಾರದ ಹಾಗೆ ನಾಲಿಗೆಯನ್ನು ಮಡಚಿ ಅದರ ಅಡಿಬಾಗವನ್ನು ಅಂಗುಳಿನ ಮೇಲಿರಿಸುತ್ತೇವೆ. ಈ ಎರಡು ಮೂಗುಲಿಗಳನ್ನು ಹೊರಡಿಸು ವಾಗಲೂ ಮೊದಲಿಗೆ ಉಸಿರು ಮೂಗಿನಿಂದ ಹೊರಹೋಗುತ್ತಿರುತ್ತದೆ, ಮತ್ತು ಆಮೇಲೆ ತಡೆಯನ್ನು ತೆಗೆದಾಗ ಅದು ಬಾಯಿಯಿಂದಲೂ ಹೋಗತೊಡಗುತ್ತದೆ.
ಈ ಎರಡು ಮೂಗುಲಿಗಳಲ್ಲಿ ನಕಾರದ ಬಳಕೆಯನ್ನು ನಾಲಿಗೆ, ನನ್ನ, ಕೊನೆ, ಕಂತು [ಕನ್ತು], ಅಂದ [ಅನ್ದ] ಮೊದಲಾದ ಪದಗಳಲ್ಲಿ ಕಾಣಬಹುದು, ಮತ್ತು ಣಕಾರದ ಬಳಕೆಯನ್ನು ಕಣ್ಣು, ಆಣೆ, ಕಿಂಡಿ [ಕಿಣ್ಡಿ], ತಂಟೆ [ತಣ್ಟೆ] ಮೊದಲಾದ ಪದಗಳಲ್ಲಿ ಕಾಣಬಹುದು.
ಒಂದು ಬಗೆಯಲ್ಲಿ ಇವು ಮೂರೂ ತಡೆಯುಲಿಗಳೇ; ಆದರೆ, ಇವನ್ನು ಹೊರಡಿಸುವಾಗ ಉಸಿರು ಪೂರ್ತಿ ನಿಂತುಹೋಗದೆ, ಮೂಗಿನಿಂದ ಹೊರಹೋಗು ತ್ತಿರುತ್ತದೆ; ಹಾಗಾಗಿ, ಇವಕ್ಕೆ ಮೂಗುಲಿಗಳೆಂಬ ಬೇರೆಯೇ ಒಂದು ಹೆಸರನ್ನು ಕೊಡಲಾಗಿದೆ.
ಕನ್ನಡದಲ್ಲಿ [ಞ] ಮತ್ತು [ಙ]ಗಳೆಂಬ ಬೇರೆಯೂ ಎರಡು ಮೂಗುಲಿ ಗಳಿವೆ. ಎತ್ತುಗೆಗಾಗಿ, ಅಂಜು ಪದವನ್ನು ಆಡುವಾಗ ಜಕಾರದ ಮೊದಲು
[ಞ] ಮೂಗುಲಿ ಕಾಣಿಸುತ್ತದೆ, ಮತ್ತು ತಂಗು ಪದವನ್ನು ಆಡುವಾಗ ಗಕಾರದ ಮೊದಲು [ಙ] ಮೂಗುಲಿ ಕಾಣಿಸುತ್ತದೆ. ಈ ಎರಡು ಉಲಿಗಳನ್ನು ಆಡುವಾಗಲೂ ಉಸಿರು ಮೂಗಿನಿಂದ ಹೊರಹೋಗುತ್ತಿರುತ್ತದೆ.
ಇವುಗಳಲ್ಲಿ [ಞ] ಎಂಬುದನ್ನು, ಚಕಾರ ಮತ್ತು ಜಕಾರಗಳ ಹಾಗೆ, ನಾಲಿಗೆಯ ಅಲಗನ್ನು ಅಂಗುಳಿನ ಮೇಲಿರಿಸಿ ಹೊರಡಿಸುತ್ತೇವೆ (ಅಂಚು [ಅಞ್ಚು], ಅಂಜು [ಅಞ್ಜು]), ಮತ್ತು [ಙ] ಎಂಬುದನ್ನು, ಕಕಾರ ಮತ್ತು ಗಕಾರಗಳ ಹಾಗೆ, ನಾಲಿಗೆಯ ಹಿಂಬಾಗವನ್ನು ಮೆತ್ತಂಗುಳಿನ ಮೇಲಿರಿಸಿ ಹೊರಡಿಸುತ್ತೇವೆ (ಅಂಕೆ [ಅಙ್ಕ], ಅಂಗಳ [ಅಙ್ಗಳ]).
ಆದರೆ, ಇವು ಬರುವ ಜಾಗದಲ್ಲಿ ನಕಾರ ಬರುವುದಿಲ್ಲವಾದ ಕಾರಣ, ಇವನ್ನು ನಕಾರದ ಎರಡು ರೂಪಗಳೆಂದು ತಿಳಿದುಕೊಳ್ಳಲು ಬರುತ್ತದೆ. ಬರಹ ದಲ್ಲಿ ಇವೆರಡೂ ಂ ರೂಪದಲ್ಲಿರುತ್ತವೆ. ಇದಲ್ಲದೆ, ಮ್, ನ್, ಣ್ಗಳೆಂಬ ಉಳಿದ ಮೂರು ಮೂಗುಲಿಗಳೂ ಅವುಗಳದೇ ಆದ ಜಾಗದಲ್ಲಿ ಹೊರಡುವ ತಡೆಯುಲಿಗಳ ಮೊದಲು ಬರಹದಲ್ಲಿ ಂ ರೂಪದಲ್ಲಿರುತ್ತವೆ (ಕಂಪು [ಕಮ್ಪು], ಕಂಬಿ [ಕಮ್ಬಿ], ಕಂತು [ಕನ್ತು], ಕಂದು [ಕನ್ದು], ಅಂಟು [ಅಣ್ಟು], ಬಂಡು [ಬಣ್ಡು].
(ಟ) ಉಜ್ಜುಲಿಗಳು ಕನ್ನಡದಲ್ಲಿ ಸ್, ಶ್ ಮತ್ತು ಹ್ಗಳೆಂಬ ಮೂರು ಉಜ್ಜುಲಿಗಳು ಬಳಕೆಯಲ್ಲಿವೆ. ಇವುಗಳನ್ನು ಹೊರಡಿಸುವಾಗ ಉಸಿರು ಒಂದು ಸಪುರವಾದ ಸೀಳು ಇಲ್ಲವೇ ಕಂಡಿಯ ಮೂಲಕ ಉಜ್ಜಿಕೊಂಡು ಹೋಗುವ ಹಾಗೆ ಮಾಡಲಾಗುತ್ತದೆ. ಆ ರೀತಿ ಉಜ್ಜಿಕೊಂಡು ಹೋಗುವಾಗ ಇಂತಹ ಉಲಿ ಹೊರಡುತ್ತದೆ. ಈ ಮೂರು ಉಲಿಗಳನ್ನು ಹೊರಡಿಸುವಾಗಲೂ ಉಲಿಪೆಟ್ಟಿಗೆ ಗುನುಗುನಿಸದಿರುತ್ತದೆ.
ಸಕಾರವನ್ನು ಹೊರಡಿಸುವಾಗ, ತಕಾರದ ಹಾಗೆ, ನಾಲಿಗೆಯ ತುದಿಯನ್ನು ಹಲ್ಲಿನ ಹಿಂಬದಿಯಲ್ಲಿ ನಿಲ್ಲಿಸಲಾಗುತ್ತದೆ. ನಾಲಿಗೆಯ ತುದಿಗೂ ಹಲ್ಲಿನ ಹಿಂಬದಿಗೂ ನಡುವೆ ಸಪುರವಾದ ಜಾಗ ಬಿಟ್ಟು ಅದರ ಮೂಲಕ ಉಸಿರು ಹೊರಹಾಯುವ ಹಾಗೆ ಮಾಡಿದಾಗ ಸ್ ಉಜ್ಜುಲಿ ಹೊರಡುತ್ತದೆ. ಇದರ ಬಳಕೆ ಯನ್ನು ಸವಿ, ತುಸು, ಸಾಟಿ, ಹೆಸರು ಮೊದಲಾದ ಪದಗಳಲ್ಲಿ ಕಾಣಬಹುದು. ಇದೇ ರೀತಿಯಲ್ಲಿ ಶಕಾರವನ್ನು ಹೊರಡಿಸುವಾಗ, ಚಕಾರ ಮತ್ತು ಜಕಾರ ಗಳ ಹಾಗೆ, ನಾಲಿಗೆಯ ಅಲಗನ್ನು ಅಂಗುಳಿನ ಹತ್ತಿನ ನಿಲ್ಲಿಸಲಾಗುತ್ತದೆ. ಚಕಾರ ಮತ್ತು ಜಕಾರಗಳನ್ನು ಹೊರಡಿಸುವಾಗ ಉಸಿರನ್ನು ಪೂರ್ತಿ ತಡೆಯಲಾಗುತ್ತದೆ; ಆದರೆ ಇಲ್ಲಿ ಹಾಗೆ ಮಾಡದೆ, ನಾಲಿಗೆಯ ಅಲಗಿಗೂ ಅಂಗುಳಿಗೂ ನಡುವೆ ತುಸು ಜಾಗ ಬಿಟ್ಟು, ಅದರ ಮೂಲಕ ಉಸಿರು ಉಜ್ಜಿಕೊಂಡು ಹೋಗುವ ಹಾಗೆ
ಮಾಡಲಾಗುತ್ತದೆ. ಇದರ ಬಳಕೆಯನ್ನು ಶಾಲೆ, ಶಾಯಿ, ವೇಶ, ವಿಶಯ ಮೊದಲಾದ ಪದಗಳಲ್ಲಿ ಕಾಣಬಹುದು.
ಹಕಾರವನ್ನು ಹೊರಡಿಸುವಾಗ ಉಸಿರು ಉಲಿಪೆಟ್ಟಿಗೆಯಲ್ಲಿರುವ ಎರಡು ನರಕಟ್ಟುಗಳ ನಡುವೆ ಉಜ್ಜಿಕೊಂಡು ಹೊರಬರುತ್ತದೆ. ಹಾಗಾಗಿ ಅದನ್ನು ಉಲಿ ಪೆಟ್ಟಿಗೆಯ ಉಜ್ಜುಲಿಯೆಂದೂ ಕರೆಯಬಹುದು. ಹಸಿವು, ಹಾವು, ಬರಹ, ಹೊರಗೆ ಮೊದಲಾದ ಪದಗಳಲ್ಲಿ ಈ ಉಜ್ಜುಲಿಯ ಬಳಕೆಯನ್ನು ಕಾಣಬಹುದು. ಕನ್ನಡದಲ್ಲಿ [ಷ್] ಎಂಬ ಇನ್ನೊಂದು ಉಜ್ಜುಲಿಯೂ ಉಲಿಪಿನಲ್ಲಿ ಇದೆ. ಇದನ್ನು [ಅಷ್ಟು], [ಇಷ್ಟು], [ಕಷ್ಟ] ಮೊದಲಾದ ಕೆಲವು ಪದಗಳಲ್ಲಿ ಕಾಣ ಬಹುದು. ಇದನ್ನು ಹೊರಡಿಸುವಾಗ, ಟಕಾರದ ಹಾಗೆ, ನಾಲಿಗೆಯ ತುದಿ ಒಳಕ್ಕೆ ಮಡಚಿರುತ್ತದೆ, ಮತ್ತು ಅದರ ಅಡಿಬಾಗ ಅಂಗುಳಿನ ಹತ್ತಿರ ನಿಂತು, ಅದಕ್ಕೂ ಅಂಗುಳಿಗೂ ನಡುವಿರುವ ಜಾಗದಲ್ಲಿ ಉಸಿರು ಉಜ್ಜಿಕೊಂಡು ಹೋಗುವ ಹಾಗೆ ಮಾಡಲಾಗುತ್ತದೆ.
ಆದರೆ, ಈ ಉಜ್ಜುಲಿ ಟಕಾರದ ಮೊದಲು ಮಾತ್ರ ಬರುತ್ತಿದೆಯಾದ ಕಾರಣ, ಮತ್ತು ಆ ಜಾಗದಲ್ಲಿ ಶಕಾರ ಬರುವುದಿಲ್ಲವಾದ ಕಾರಣ, ಅದನ್ನು ಶಕಾರದ ಒಂದು ರೂಪವೆಂದು ತಿಳಿದುಕೊಳ್ಳಬಹುದು, ಮತ್ತು ಮೇಲಿನ ಪದಗಳನ್ನು ಅಶ್ಟು, ಇಶ್ಟು ಮತ್ತು ಕಶ್ಟ ಎಂಬುದಾಗಿ ಬರೆಯಬಹುದು.
(ತ) ಬದಿಯುಲಿಗಳು ಕನ್ನಡದಲ್ಲಿ ಲ್ ಮತ್ತು ಳ್ಗಳೆಂಬ ಎರಡು ಬದಿಯುಲಿಗಳಿವೆ. ಇವನ್ನು ಹೊರಡಿಸುವಾಗ ಉಸಿರನ್ನು ನಾಲಿಗೆಯ ಮೇಲ್ಬಾಗದಲ್ಲಿ ತಡೆಯಲಾಗುತ್ತದೆ; ಆದರೆ, ನಾಲಿಗೆಯ ಒಂದು ಬದಿಯಲ್ಲಿ (ಇಲ್ಲವೇ ಎರಡೂ ಬದಿಗಳಲ್ಲಿ) ಉಸಿರು ಹೊರಹೋಗಲು ಜಾಗ ಬಿಡಲಾಗುತ್ತದೆ. ಹಾಗಾಗಿ ಇವನ್ನು ಕರೆಯಲಾಗಿದೆ. ಉಸಿರು ಯಾವುದಾದರೂ ಒಂದು ಬದಿಯುಲಿಗಳೆಂದು ಬದಿಯಿಂದ ಮಾತ್ರವೇ ಹೊರಹೋಗುತ್ತಿರಬಹುದು, ಇಲ್ಲವೇ ಎರಡು ಬದಿಗಳಿಂದಲೂ ಹೊರಹೋಗು ತ್ತಿರಬಹುದು.
ಇವೆರಡನ್ನು ಹೊರಡಿಸುವಾಗಲೂ ಉಲಿಪೆಟ್ಟಿಗೆ ಗುನುಗುನಿಸುತ್ತಿರುತ್ತದೆ. ಲಕಾರವನ್ನು ಹೊರಡಿಸಬೇಕಾದಾಗ, ದಕಾರದ ಹಾಗೆ, ನಾಲಿಗೆಯ ತುದಿ ಯನ್ನು ಹಲ್ಲುಗಳ ಹಿಂಬಾಗದಲ್ಲಿರಿಸಲಾಗುತ್ತದೆ, ಮತ್ತು ಉಸಿರು ನಾಲಿಗೆಯ ಬದಿಯಿಂದ ಹೊರಹೋಗುವ ಹಾಗೆ ದಕಾರವನ್ನು ಹೊರಡಿಸುವಾಗ ಉಸಿರು ಆ ರೀತಿ ಹೊರಹೋಗುವುದಿಲ್ಲ, ಮತ್ತು ಲಕಾರವನ್ನು ಹೊರಡಿಸುವಾಗ ಹೊರಹೋಗುತ್ತಿರುತ್ತದೆ ಎಂಬುದೇ ದಕಾರ ಮತ್ತು ಲಕಾರಗಳ ನಡುವಿರುವ ವ್ಯತ್ಯಾಸ. ಲೇಸು, ಜೋಲು, ಮೆಲ್ಲಗೆ, ಹಲಿಗೆ ಮೊದಲಾದ ಪದಗಳಲ್ಲಿ ಲಕಾರದ ಬಳಕೆಯನ್ನು ಕಾಣಬಹುದು.
ಮಾಡಲಾಗುತ್ತದೆ.
ಳಕಾರವನ್ನು ಹೊರಡಿಸಬೇಕಾದಾಗ, ಡಕಾರದ ಹಾಗೆ, ನಾಲಿಗೆಯ ತುದಿ ಯನ್ನು ಒಳಕ್ಕೆ ಮಡಚಿಕೊಂಡು ಅಂಗುಳಿನ ಮೇಲಿರಿಸಲಾಗುತ್ತದೆ. ಆದರೆ, ಡಕಾರದ ಹಾಗೆ ಉಸಿರನ್ನೊಮ್ಮೆ ಪೂರ್ತಿ ತಡೆಹಿಡಿಯುವ ಬದಲು, ಅದು ಮೊದಲಿನಿಂದಲೂ ನಾಲಿಗೆಯ ಬದಿಯಲ್ಲಿ ಹೊರಹೋಗುತ್ತಿರುವ ಹಾಗೆ ಮಾಡ ಲಾಗುತ್ತದೆ. ಹುಳಿ, ಹಾಳು, ಕೇಳು, ಹಳ್ಳಿ ಮೊದಲಾದ ಪದಗಳಲ್ಲಿ ಈ ಬದಿಯುಲಿಯ ಬಳಕೆಯನ್ನು ಕಾಣಬಹುದು.
(ಪ) ಹೊಡೆಯುಲಿ ಕನ್ನಡದಲ್ಲಿ ರ್ ಎಂಬ ಒಂದು ಹೊಡೆಯುಲಿ ಮಾತ್ರ ಇದೆ. ಇದನ್ನು ಹೊರಡಿಸು ವಾಗ ನಾಲಿಗೆಯ ತುದಿಯನ್ನು ಅಂಗುಳಿನ ಮೇಲೆ ಒಂದು ಬಾರಿ ಹೊಡೆಯು ತ್ತೇವೆ. ಹಾಗೆ ಹೊಡೆಯುವ ಸಮಯದಲ್ಲಿ ಉಲಿಪೆಟ್ಟಿಗೆ ಗುನುಗುನಿಸುತ್ತಿರುತ್ತದೆ. ಕನ್ನಡದ ರೇಗು, ರುಬ್ಬು, ಮರ, ಕೆರೆ, ಹೊರಗೆ ಮೊದಲಾದ ಪದಗಳಲ್ಲಿ ಈ ಉಲಿಯ ಬಳಕೆಯನ್ನು ಕಾಣಬಹುದು.
ಕರ್ರಗೆ, ಚುರ್ರನೆ ಎಂಬಂತಹ ಪದಗಳಲ್ಲಿ ಇದು ಇಮ್ಮಡಿ ರೂಪದಲ್ಲಿ ಬರು ತ್ತದೆ. ಇಲ್ಲಿ ನಾಲಿಗೆಯ ತುದಿ ಅಂಗುಳಿಗೆ ಒಂದು ಬಾರಿ ಹೊಡೆಯುವ ಬದಲು ಹಲವು ಬಾರಿ ಹೊಡೆಯುತ್ತದೆ.
(ಗ) ತಡೆಯಿಲ್ಲದುಲಿಗಳು ಕನ್ನಡದಲ್ಲಿ ವ್ ಮತ್ತು ಯ್ ಎಂಬ ಎರಡು ತಡೆಯಿಲ್ಲದುಲಿಗಳಿವೆ. ಇವನ್ನು ಹೊರಡಿಸುವಾಗ ಉಸಿರಿಗೆ ಬಾಯಲ್ಲೆಲ್ಲೂ ತಡೆಯನ್ನುಂಟುಮಾಡುವುದಿಲ್ಲ. ವಕಾರವನ್ನು, ಉಕಾರದ ಹಾಗೆ (ಎಂದರೆ ನಾಲಿಗೆಯ ಹಿಂಬಾಗವನ್ನು ಬಾಯಿಯ ಮೇಲಿನ ಜಾಗದಲ್ಲಿ ನಿಲ್ಲಿಸಿ ಮತ್ತು ತುಟಿಯನ್ನು ದುಂಡಗಾಗಿಸಿ), ಹೊರಡಿಸು ತ್ತೇವೆ, ಮತ್ತು ಯಕಾರವನ್ನು, ಇಕಾರದ ಹಾಗೆ (ಎಂದರೆ ನಾಲಿಗೆಯ ಮುಂಬಾಗ ವನ್ನು ಬಾಯಿಯ ಮೇಲಿನ ಜಾಗದಲ್ಲಿ ನಿಲ್ಲಿಸಿ), ಹೊರಡಿಸುತ್ತೇವೆ.
ಹೊರಡಿಸುವಿಕೆಯಲ್ಲಿ ಇವು ತೆರೆಯುಲಿಗಳ ಹಾಗೆ ಇದ್ದರೂ ಬಳಕೆಯಲ್ಲಿ ಮುಚ್ಚುಲಿಗಳ ಹಾಗೆ ಇರುತ್ತವೆ. ಈ ಕಾರಣಕ್ಕಾಗಿ, ಇವನ್ನು ಅರೆತೆರೆಯುಲಿ ಗಳೆಂದೂ ಕರೆಯಲಾಗುತ್ತದೆ.
1.6.2 ಬರಿಗೆಗಳ ರೂಪಗಳು
ಕನ್ನಡದ ಬರಿಗೆಗಳಿಗೆ ಎಲ್ಲಾ ಕಡೆಗಳಲ್ಲೂ ಒಂದೇ ರೂಪ ಇಲ್ಲ; ಪದಗಳಲ್ಲಿ ಅವುಗಳ ಮೊದಲು ಇಲ್ಲವೇ ಬಳಿಕ ಎಂತಹ ಬರಿಗೆಗಳು ಬಂದಿವೆ ಎಂಬುದರ ಮೇಲೆ, ಅವುಗಳ ರೂಪದಲ್ಲಿ ಕೆಲವು ಮಾರ್ಪಾಡುಗಳಾಗುತ್ತವೆ.
(1) ತೆರೆಯುಲಿಗಳ ರೂಪಗಳು ತೆರೆಯುಲಿಗಳ ಮೊದಲು ಮುಚ್ಚುಲಿಯಿದ್ದರೆ ಅವಕ್ಕೆ ಚಿಕ್ಕ ರೂಪ ಇದೆ, ಮತ್ತು ಮುಚ್ಚುಲಿ ಇಲ್ಲವಾದಲ್ಲಿ ದೊಡ್ಡ ರೂಪ ಇದೆ. ಎತ್ತುಗೆಗಾಗಿ, [ಇಲ್ಇ] ಎಂಬು ದನ್ನು ಇಲಿ ಎಂಬುದಾಗಿ ಬರೆಯಲಾಗುತ್ತದೆ; ಈ ಪದದಲ್ಲಿ ಬಂದಿರುವ ಎರಡು ತೆರೆಯುಲಿಗಳಲ್ಲಿ ಮೊದಲನೆಯದರ ಮೊದಲು ಮುಚ್ಚುಲಿಯಿಲ್ಲ; ಹಾಗಾಗಿ, ಅದಕ್ಕೆ ಇ ಎಂಬ ದೊಡ್ಡ ರೂಪ ಇದೆ; ಆದರೆ, ಎರಡನೆಯದರ ಮೊದಲು ಲ್ ಮುಚ್ಚುಲಿಯಿದೆ; ಹಾಗಾಗಿ, ಅದಕ್ಕೆ ಿ ಎಂಬ ಚಿಕ್ಕ ರೂಪ ಇದೆ. ತೆರೆಯುಲಿಗಳಿ ಗಿರುವ ಇಂತಹ ದೊಡ್ಡರೂಪ ಮತ್ತು ಚಿಕ್ಕರೂಪಗಳನ್ನು ಕೆಳಗೆ ಕೊಡಲಾಗಿದೆ:
ದೊಡ್ಡರೂಪ ಚಿಕ್ಕರೂಪ C E G J M
ಿ ು ೆ ೊ
ದೊಡ್ಡರೂಪ D F H K N
ಚಿಕ್ಕರೂಪ ಾ ೀ ೂ ೇ ೋ
ಉ ಮತ್ತು ಊ ತೆರೆಯುಲಿಗಳ ಚಿಕ್ಕರೂಪದಲ್ಲಿ ಅ ತೆರೆಯುಲಿಯ ಚಿಕ್ಕ ರೂಪ ಸೇರಿಕೊಂಡಿರುವುದನ್ನು ಕ, ಕು, ಕೂ; ತ, ತು, ತೂ ಮೊದಲಾದ ಬರಿಗೆಕಂತೆಗಳಲ್ಲಿ, ಮತ್ತು ಒ ಹಾಗೂ ಓ ತೆರೆಯುಲಿಗಳ ಚಿಕ್ಕರೂಪದಲ್ಲಿ ಎ ತೆರೆಯುಲಿಯ ಚಿಕ್ಕರೂಪ ಸೇರಿಕೊಂಡಿರುವುದನ್ನು ಕೆ, ಕೊ, ಕೋ; ಬೆ, ಬೊ, ಬೋ ಮೊದಲಾದ ಬರಿಗೆಕಂತೆಗಳಲ್ಲಿ ಕಾಣಬಹುದು; ಉದ್ದ ತೆರೆಯುಲಿಗಳ ಚಿಕ್ಕ ತೆರೆಯುಲಿಗಳ ಚಿಕ್ಕರೂಪ ಸೇರಿಕೊಂಡಿರುವುದನ್ನು ಕ, ಕಾ; ಕಿ, ಕೀ; ಕು, ಕೂ; ಕೆ, ಕೇ; ಕೊ, ಕೋ ಮೊದಲಾದ ಬರಿಗೆಕಂತೆಗಳಲ್ಲಿ ಕಾಣಬಹುದು.
ರೂಪದಲ್ಲೂ ಅವುಗಳ
ಗಿಡ್ಡ
ಇದಲ್ಲದೆ, ತೆರೆಯುಲಿಗಳ ಚಿಕ್ಕರೂಪದಲ್ಲಿ, ಅವುಗಳ ಮೊದಲು ಬಂದಿರುವ ಮುಚ್ಚುಲಿಯನ್ನವಲಂಬಿಸಿ, ಕೆಳಗೆ ಕೊಟ್ಟಿರುವ ಕೆಲವು ಮಾರ್ಪಾಡುಗಳೂ ಕಾಣಿಸಿ ಕೊಳ್ಳುತ್ತವೆ:
-
ಬ್, ಜ್, ಟ್, ಣ್ ಮತ್ತು ಲ್ ಎಂಬ ಅಯ್ದು ಮುಚ್ಚುಲಿಗಳ ಬಳಿಕ ಬರುವಾಗ, ಅ ತೆರೆಯುಲಿಗೆ ಸೊನ್ನೆ ರೂಪ ಇದೆ (ಬ, ಜ, ಟ, ಣ, ಲ);
-
ಯ್ ಮತ್ತು ಮ್ ಮುಚ್ಚುಲಿಗಳ ಬಳಿಕ, ಆ ತೆರೆಯುಲಿಯ ಚಿಕ್ಕರೂಪ ಅ ತೆರೆಯುಲಿಯ ಚಿಕ್ಕರೂಪದೊಂದಿಗೆ ಸೇರಿಕೊಳ್ಳದೆ ಬೇರಾಗಿ ಬರುತ್ತದೆ (ಯಾ, ಮಾ);
-
ಇ ತೆರೆಯುಲಿಯ ಚಿಕ್ಕ ರೂಪ ಬೇರೆ ಬೇರೆ ಬಗೆಗಳಲ್ಲಿ ಅದರ ಮೊದಲಿನ
ಮುಚ್ಚುಲಿಯೊಂದಿಗೆ ಸೇರಿ ಬರುತ್ತದೆ (ಪಿ, ಸಿ, ಣಿ, ಲಿ, ಶಿ, ಯಿ);
- ಉ ಮತ್ತು ಒ ತೆರೆಯುಲಿಗಳ ಚಿಕ್ಕರೂಪ ಪ್ ಮತ್ತು ವ್ ಮುಚ್ಚುಲಿಗಳ
ಬುಡದಿಂದ ಸುರುವಾಗುತ್ತವೆ (ಪು, ಪೊ; ವು, ವೊ); ಮತ್ತು
- ಯ್ ಮತ್ತು ಮ್ ಮುಚ್ಚುಲಿಗಳ ಬಳಿಕ, ಒ ತೆರೆಯುಲಿಯ ಚಿಕ್ಕರೂಪ ಅವುಗಳ ಒಂದು ಅಂಗವಾಗಿರುವ ಕೊಂಬಿಗೆ (ು ಎಂಬುದಕ್ಕೆ) ಬದಲಾಗಿ ಬರುತ್ತದೆ (ಯ್, ಯೊ; ಮ್, ಮೊ).
(2) ಮುಚ್ಚುಲಿಗಳ ರೂಪಗಳು ಮುಚ್ಚುಲಿಗಳ ಬಳಿಕ ಬರುವ ಮುಚ್ಚುಲಿಗಳು ಅವುಗಳ ಕೆಳಗೆ ಚಿಕ್ಕರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಎತ್ತುಗೆಗಾಗಿ, [ಅಜ್ಜ್ಅ] ಎಂಬುದನ್ನು ಅಜ್ಜ ಎಂಬುದಾಗಿ ಬರೆಯಲಾಗುತ್ತದೆ. ಇಂತಹ ಎರಡು ಮುಚ್ಚುಲಿಗಳ ಬಳಿಕ ಬರುವ ತೆರೆ ಯುಲಿಯ ಚಿಕ್ಕರೂಪವನ್ನು ಎರಡನೇ ಮುಚ್ಚುಲಿಗೆ ಸೇರಿಸುವ ಬದಲು ಮೊದಲನೇ ಮುಚ್ಚುಲಿಗೆ ಸೇರಿಸಲಾಗುತ್ತದೆ. ಎರಡನೆಯ ಮುಚ್ಚುಲಿ ಚಿಕ್ಕರೂಪ ದಲ್ಲಿರುವುದೇ ಇದಕ್ಕೆ ಕಾರಣವಿರಬೇಕು. ಎತ್ತುಗೆಗಾಗಿ, [ಮ್ಅಯ್ದ್ಓರ್ಉ] ಎಂಬುದನ್ನು ಮಯ್ದೋರು ಎಂಬುದಾಗಿ ಬರೆಯಲಾಗುತ್ತದೆ; ಇಲ್ಲಿ ಓ ತೆರೆಯುಲಿಯ ಚಿಕ್ಕರೂಪವನ್ನು ಯ್ ಮುಚ್ಚುಲಿಗೆ ಸೇರಿಸಲಾಗಿದೆಯಲ್ಲದೆ ದ್ ಮುಚ್ಚುಲಿಗಲ್ಲ.
ಮುಚ್ಚುಲಿಗಳಲ್ಲಿ ಕೆಲವಕ್ಕೆ (ತ್, ನ್, ಮ್, ಯ್, ರ್ ಮತ್ತು ಲ್ಗಳಿಗೆ) ಬೇರೆಯೇ ಚಿಕ್ಕರೂಪವೂ ಇರುತ್ತದೆ (ತ್ತ, ನ್ನ, ಮ್ಮ, ಯ್ಯ, ರ್ರ, ಲ್ಲ). ಪ್ ಮತ್ತು ತುಸು ಬದಲಾವಣೆಯಿದೆ.
ಮುಚ್ಚುಲಿಗಳ ಚಿಕ್ಕರೂಪದಲ್ಲೂ
(ಪ್ಪ,
ಸ್ಸ)
ಸ್
ಮೇಲೆ ತಿಳಿಸಿದ ಹಾಗೆ, ತಡೆಯುಲಿಗಳ ಮೊದಲು ಬರುವ ಎಲ್ಲಾ ಮೂಗುಲಿ ಗಳನ್ನೂ ಂ ಎಂಬ ಒಂದೇ ರೂಪದಿಂದ ತೋರಿಸಲಾಗುತ್ತದೆ (ಅಂಟು, ಕಂಡು, ಕೊಂಬು, ಇಂದು, ಕಂತೆ, ಅಂಚು, ಇಂಗು). ಪದಗಳಲ್ಲಿ ಮುಚ್ಚುಲಿಯ ಬಳಿಕ ಬೇರೆ ಯಾವ ಬರಿಗೆಯೂ ಬರುವುದಿಲ್ಲವಾದಲ್ಲಿ, ಅದರೊಂದಿಗೆ ್ ಎಂಬ ಗುರುತೊಂದನ್ನು ಸೇರಿಸಲಾಗುತ್ತದೆ (ಅಲ್, ತನ್, ಅಕ್).
ಎರಡು ಮುಚ್ಚುಲಿಗಳು ಒಟ್ಟಿಗೆ ಬಂದಿರುವಲ್ಲಿ ಬರಿಗೆಕಂತೆಗಳಿಗೂ ಉಲಿಕಂತೆ ಗಳಿಗೂ ನಡುವಿರುವ ಹೊಂದಾಣಿಕೆ ತಪ್ಪಿಹೋಗುತ್ತದೆ. ಎತ್ತುಗೆಗಾಗಿ, ಹಕ್ಕಿ ಪದದಲ್ಲಿ ಹ ಮತ್ತು ಕ್ಕಿ ಎಂಬ ಎರಡು ಬರಿಗೆಕಂತೆಗಳಿವೆ; ಆದರೆ, ಈ ಪದದ
ಉಲಿಕಂತೆಗಳು ಅವಕ್ಕಿಂತ ಬೇರಾಗಿದ್ದು, [ಹ್ಅಕ್] ಮತ್ತು [ಕ್ಇ] ಎಂಬವು ಗಳಾಗಿವೆ.
1.6.3 ಹೆಚ್ಚಿನ ಬರಿಗೆಗಳ ಬಳಕೆ
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಉಲಿಪು ಇಲ್ಲವೇ ಓದು ಹೇಗೆಯೇ ಇರಲಿ, ಅವನ್ನು ಕನ್ನಡದಲ್ಲಿ ಬರೆಯುವಾಗ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ನಿಜಕ್ಕೂ ಕನ್ನಡದ ಮಟ್ಟಿಗೆ ಬೇಕಿಲ್ಲದ ಒಂದು ಕಟ್ಟಲೆ ಕನ್ನಡ ಬರಹದಲ್ಲಿ ಸುರುವಿನಿಂದಲೂ ಬಳಕೆಯಲ್ಲಿದೆ. ಈ ಕಟ್ಟಲೆಯಿಂದಾಗಿ, ಇವತ್ತು ಕನ್ನಡ ಬರಹದಲ್ಲಿ 17 ಹೆಚ್ಚಿನ ಬರಿಗೆಗಳು ಬಳಕೆಯಾಗುತ್ತಿವೆ.
ಫ್, ಥ್, ಠ್, ಛ್, ಖ್; ಭ್, ಧ್, ಢ್, ಝ್, ಘ್; ಞ, ಙ; ಋ, ಐ, ಔ; ಷ್, ಃ ಎಂಬ ಈ 17 ಹೆಚ್ಚಿನ ಬರಿಗೆಗಳು ನಮ್ಮ ಉಲಿಪಿನಲ್ಲಿ ಇಲ್ಲವೇ ಓದಿನಲ್ಲಿ ಮೇಲೆ ಕೊಟ್ಟಿರುವ ಬರಿಗೆಗಳಿಂದ ಬೇರಾಗಿಲ್ಲ: ಮೊದಲಿನ ಅಯ್ದು ಬರಿಗೆಗಳು ಪ್, ತ್, ಟ್, ಚ್, ಕ್ಗಳ ಹಾಗೆ ಉಲಿಪುಗೊಳ್ಳುತ್ತವೆ, ಮತ್ತು ಮುಂದಿನ ಅಯ್ದು ಬರಿಗೆಗಳು ಬ್, ದ್, ಡ್, ಜ್, ಗ್ಗಳ ಹಾಗೆ ಉಲಿಪು ಗೊಳ್ಳುತ್ತವೆ.
ಎತ್ತುಗೆಗಾಗಿ, ಅರ್ಥ, ಪಠ್ಯ, ಛಂದಸ್ಸು, ಮುಖ್ಯ, ಭಕ್ತಿ, ಸಾಧ್ಯ,
ಮೊದಲಾದ ಪದಗಳನ್ನು ನಾವು ಅರ್ತ, ಪಟ್ಯ, ಚಂದಸ್ಸು, ಮುಕ್ಯ, ಬಕ್ತಿ, ಸಾದ್ಯ ಎಂಬುದಾಗಿ ಓದುತ್ತೇವೆ.
ಇದೇ ರೀತಿಯಲ್ಲಿ, ಋಕಾರವನ್ನು ರು ಇಲ್ಲವೇ ರಿ ಎಂಬುದಾಗಿ, (ಕೃತಿ ಎಂಬುದನ್ನು ಕ್ರುತಿ ಎಂಬುದಾಗಿ), ಐಕಾರ, ಔಕಾರಗಳನ್ನು ಅಯ್ ಮತ್ತು ಅವ್ ಎಂಬುದಾಗಿ (ಐಹಿಕ ಮತ್ತು ಔತಣ ಎಂಬವುಗಳನ್ನು ಅಯ್ಹಿಕ ಮತ್ತು ಅವ್ತಣ ಎಂಬುದಾಗಿ), ಷಕಾರವನ್ನು ಶಕಾರವಾಗಿ (ವಿಶೇಷ ಎಂಬುದನ್ನು ವಿಶೇಶ ಎಂಬುದಾಗಿ), ಮತ್ತು ವಿಸರ್ಗ(ಃ)ವನ್ನು ತೆರೆಯುಲಿಯೆದುರು ಹಕಾರವಾಗಿ (ಬಹುಶಃ ಎಂಬುದನ್ನು ಬಹುಶಹ ಎಂಬುದಾಗಿ), ಮತ್ತು ಮುಚ್ಚುಲಿಯೆದುರು ಅಂತಹದೇ ಇನ್ನೊಂದು ಮುಚ್ಚುಲಿಯಾಗಿ (ದುಃಖ ಎಂಬುದನ್ನು ದುಕ್ಕ ಎಂಬು ದಾಗಿ) ನಮ್ಮ ಉಲಿಪಿನಲ್ಲಿ ಮತ್ತು ಓದಿನಲ್ಲಿ ಕಾಣಿಸುತ್ತೇವೆ.
ಞ ಮತ್ತು ಙಗಳು ಇವಕ್ಕಿಂತ ತುಸು ಬೇರಾಗಿವೆ: ಅವು ಕನ್ನಡದಲ್ಲೂ ಉಲಿಪು ಮತ್ತು ಓದುಗಳಲ್ಲಿ ಕಾಣಿಸಿಕೊಳ್ಳುತ್ತವೆ; ಆದರೆ ಕನ್ನಡದಲ್ಲಿ, ಮೇಲೆ ತಿಳಿಸಿದ ಹಾಗೆ, ಅವುಗಳಲ್ಲಿ ಮೊದನೆಯದು ಬರುವುದು ಚಕಾರ-ಜಕಾರಗಳ ಮೊದಲು ಮಾತ್ರ, ಮತ್ತು ಎರಡನೆಯದು ಬರುವುದು ಕಕಾರ-ಗಕಾರಗಳ ಮೊದಲು ಮಾತ್ರ; ಆ ಜಾಗದಲ್ಲಿ ನಕಾರ ಬರುವುದಿಲ್ಲವಾದ ಕಾರಣ, ಅವೆರಡನ್ನೂ ನಕಾರದ ರೂಪಗಳೆಂಬುದಾಗಿ ತಿಳಿಯಲಾಗಿತ್ತು. ಸಂಸ್ಕ್ರುತದಿಂದ
ಎರವಲಾಗಿ ಪಡೆದ ಪದಗಳಲ್ಲಿ ಮಾತ್ರ, ಇವು ಬೇರೆಯೂ ಕೆಲವು ಕಡೆಗಳಲ್ಲಿ ಬರುತ್ತವೆ (ಅಜ್ಞಾನ, ವಾಙ್ಮಯ).
ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಇವೆರಡು ಬರಿಗೆಗಳನ್ನು ಬಳಸದೇ ಇರಲು ಹೆಚ್ಚಿನ ತೊಡಕೇನಿಲ್ಲ: ಅಜ್ಞಾನ ಎಂಬುದನ್ನು ಅಜ್ನಾನ ಎಂಬುದಾಗಿ, ಮತ್ತು ವಾಙ್ಮಯ ಎಂಬುದನ್ನು ವಾಗ್ಮಯ ಎಂಬುದಾಗಿ ಬರೆಯಬಹುದು.
ರಕಾರದ ಬರವಣಿಗೆಯಲ್ಲೂ ಒಂದು ತೊಡಕಿದೆ: ತೆರೆಯುಲಿಗಳ ಮೊದಲು ಬಂದಾಗ ಅದನ್ನು ದೊಡ್ಡರೂಪದಲ್ಲೇ ಬರೆಯಲಾಗುತ್ತದೆ (ರೇಗು, ಬರು, ಕರೆ). ಪದದ ಮೊದಲಿಗೆ ಬಂದಿರುವ ಮುಚ್ಚುಲಿಗಳ ಬಳಿಕ ಬಂದಾಗಲೂ ಅದಕ್ಕೆ ಬೇರೆ ಮುಚ್ಚುಲಿಗಳ ಹಾಗೆ ಚಿಕ್ಕರೂಪ ಇದೆ (ಪ್ರತಿ, ಪ್ರವೇಶ). ಆದರೆ, ಪದದ ಒಳಗೆ, ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಬಂದಾಗ, ಅದಕ್ಕೆ ್ರ ಎಂಬ ಬೇರೆಯೇ ಒಂದು ರೂಪವನ್ನು ಕೊಡಲಾಗುತ್ತದೆ, ಮತ್ತು ಅದರ ಬಳಿಕ ಬರುವ ಮುಚ್ಚುಲಿಯನ್ನು ದೊಡ್ಡರೂಪದಲ್ಲಿ ಬರೆಯಲಾಗುತ್ತದೆ (ಮಾಪ್ರಾಡು). ಇದಲ್ಲದೆ, ಅದರ ಬಳಿಕ ಬರುವ ಮುಚ್ಚುಲಿಯೂ ರ್ ಆಗಿದೆಯಾದರೆ, ಅದನ್ನು ಉಳಿದ ಮುಚ್ಚುಲಿಗಳ ಹಾಗೆ ಚಿಕ್ಕರೂಪದಲ್ಲೇ ಬರೆಯಲಾಗುತ್ತದೆ (ಕರ್ರಗೆ).
ನಿಜಕ್ಕೂ ಈ ಗೊಂದಲ ಕನ್ನಡಕ್ಕೆ ಬೇಕಾಗಿಲ್ಲ. ಬೇರೆ ಮುಚ್ಚುಲಿಗಳ ಹಾಗೆ, ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಬಂದಿರುವಲ್ಲೆಲ್ಲ ಅದನ್ನು ದೊಡ್ಡ ರೂಪದಲ್ಲಿ, ಮತ್ತು ಅದರ ಬಳಿಕ ಬರುವ ಮುಚ್ಚುಲಿಯನ್ನು ಚಿಕ್ಕರೂಪದಲ್ಲಿ ಬರೆಯುವುದೇ ಸರಿಯಾದ ದಾರಿ (ಮಾರ್ಪಾಡು).
ಯಾವುದೇ ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆಯೇ ಬರೆದಾಗ, ಅವನ್ನು ಓದುವ ಮತ್ತು ಬರೆಯುವ ಕೆಲಸ ಸುಳುವಾಗುತ್ತದೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಕಟ್ಟಲೆಯಿಂದಾಗಿ, ಕನ್ನಡದಲ್ಲಿ ಹಲವು ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ರೀತಿಯಲ್ಲಿ ಬರೆಯಬೇಕಾಗಿದೆ, ಮತ್ತು ಇದರಿಂದಾಗಿ ಇವತ್ತು ಕನ್ನಡ ಬರಹ ಅನವಶ್ಯಕವಾಗಿ ತೊಡಕಿನದಾಗಿದೆ.
ಹಿಂದಿನ ಕಾಲದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಯುತ್ತಿದ್ದರು, ಮತ್ತು ಹಾಗೆ ಕಲಿಯುವವರಲ್ಲಿ ಹೆಚ್ಚಿ ನವರೂ ಅದರೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು. ಹಾಗಾಗಿ, ಮೇಲಿನ ಕಟ್ಟಲೆ ಅವರಿಗೆ ಹೆಚ್ಚು ತೊಂದರೆ ಕೊಡುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ತಮ್ಮ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯಬೇಕಾಗಿದೆ, ಮತ್ತು ಅವರಿಗೆ ಮೇಲಿನ ಕಟ್ಟಲೆ ಒಂದು ಅನವಶ್ಯಕವಾದ ತೊಡಕಾಗಿದೆ.
ಈ ತೊಡಕನ್ನು ಇಲ್ಲವಾಗಿಸುವುದು ಹೇಗೆ, ಮತ್ತು ಹಾಗೆ ಇಲ್ಲವಾಗಿಸಿರುವ ಹೊಸ ಬರಹವೊಂದನ್ನು ಕನ್ನಡಕ್ಕೆ ಅಳವಡಿಸುವುದು ಹೇಗೆ ಎಂಬುದನ್ನು ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಹೊತ್ತಗೆಯಲ್ಲಿ ವಿವರಿಸಲಾಗಿದೆ. ಅದೇ
ಹೊಸ ಬರಹವನ್ನು ಈ ಹೊತ್ತಗೆಯಲ್ಲೂ ಬಳಸಲಾಗಿದೆ. ಎಲ್ಲರ ಕನ್ನಡದಲ್ಲೂ ಈ ಹೊಸಬರಹನ್ನೇ ಬಳಸುವುದು ಒಳ್ಳೆಯದು.
1.6.4 ಇಂಗ್ಲಿಶ್ ಎರವಲುಗಳಲ್ಲಿ ಹೆಚ್ಚಿನ ಬರಿಗೆಗಳು
ಇಂಗ್ಲಿಶ್ ನುಡಿಯಿಂದ ಹಲವು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿವೆ; ಎಲ್ಲಕ್ಕಿಂತ ಹೆಚ್ಚಾಗಿ, ಅರಿಮೆಯ ಬರಹಗಳಲ್ಲಿ ಇಂತಹ ನೂರಾರು ಪದಗಳನ್ನು ನೇರವಾಗಿ ಎರವಲು ಪಡೆಯಲಾಗಿದೆ. ಇಂತಹ ಪದಗಳನ್ನು ಕನ್ನಡದಲ್ಲಿ ಬರೆಯು ವಾಗ ಯಾವ ಬರಿಗೆಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ಯಾರೂ ಆಳ ವಾಗಿ ಆಲೋಚಿಸಿದ ಹಾಗೆ ಕಾಣಿಸುವುದಿಲ್ಲ.
ಅರಿಮೆಯ ಬರಹಗಳಲ್ಲಿ ಇಂತಹ ಪದಗಳನ್ನು ಬರೆಯುವಾಗ ಕನ್ನಡದ 31 ಬರಿಗೆಗಳನ್ನು ಮಾತ್ರವಲ್ಲದೆ, ಸಂಸ್ಕ್ರುತ ಎರವಲುಗಳಲ್ಲಿ ಬಳಕೆಯಾಗುವ ಷ್, ಫ್, ಮತ್ತು ಥ್ ಎಂಬ ಮೂರು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತದೆ; ಕೆಲವೆಡೆಗಳಲ್ಲಿ ಝ್ ಬರಿಗೆಯನ್ನೂ ಬಳಸಲಾಗುತ್ತದೆ. ಆಳವಾಗಿ ವಿಚಾರಿಸಿದಾಗ, ಈ ಬರಿಗೆಗಳ ಬಳಕೆ ಸರಿಯಲ್ಲವೆಂಬುದು ಗೊತ್ತಾಗುತ್ತದೆ. ಎತ್ತುಗೆಗಾಗಿ, ಜಿ. ಆರ್. ಲಕ್ಶ್ಮಣರಾವ್ ಮತ್ತು ಎ. ಕ್ರುಶ್ಣಬಟ್ ಅವರ ಇಂಗ್ಲಿಶ್-ಕನ್ನಡ ವಿಜ್ನಾನ ಶಬ್ದಕೋಶದಲ್ಲಿ (ಎರಡನೆಯ ಆವ್ರುತ್ತಿ, 2007) ಕಂಡುಬರುವ ಕೆಲವು ಬಳಕೆಗಳನ್ನು ಕೆಳಗೆ ಕೊಡಲಾಗಿದೆ.
(1) ಷ್ ಬರಿಗೆಯ ಬಳಕೆ ಈ ಬರಿಗೆಯನ್ನು ಇಂಗ್ಲಿಶ್ನ ಹಲವು ಬರಿಗೆಕಂತೆಗಳನ್ನು ಕನ್ನಡದಲ್ಲಿ ಬರೆಯುವು ದಕ್ಕಾಗಿ ಬಳಸಲಾಗಿದೆ. ಇಂಗ್ಲಿಶ್ನಲ್ಲಿ ಇವೆಲ್ಲವನ್ನೂ [ಶ್] ಎಂಬುದಾಗಿ ಉಲಿಯಲಾಗುತ್ತದೆ; ಕನ್ನಡದಲ್ಲೂ ಇದನ್ನು [ಶ್] ಎಂದೇ ಉಲಿಯಲಾಗುತ್ತದೆ. ಹಾಗಿದ್ದರೂ, ಇವನ್ನು ಷ್ ಎಂಬುದಾಗಿ ಬರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ನ್ನುಂಟುಮಾಡುತ್ತದೆ. ಈ ತಪ್ಪನ್ನು ಕನ್ನಡ ಬರಹದಲ್ಲಿ ಯಾರು ಮಾಡ ಹೊರಟಿದ್ದರೋ ತಿಳಿಯದು; ಆದರೆ ಉಳಿದವರೆಲ್ಲರೂ ಅದನ್ನು ಕಣ್ಣುಮುಚ್ಚಿ ಹಿಂಬಾಲಿಸುತ್ತಿರುವ ಹಾಗೆ ಕಾಣಿಸುತ್ತದೆ!
ಇಂಗ್ಲಿಶ್ ಬರಿಗೆಕಂತೆ
sh
sch
ಇಂಗ್ಲಿಶ್ನಲ್ಲಿ shale English
flash
schizo
schist
ಕನ್ನಡದಲ್ಲಿ ಷೇಲ್ ಇಂಗ್ಲಿಷ್ ಫ್ಲಾಷ್
ಷಿಜೋ
ಷಿಸ್ಟ್
-ci
-sci -si
-ti
-ce
synoecious technician
fascia television
concretion modulation
cretaceous
ಸಿನೀಷಸ್ ಟೆಕ್ನೀಷಿಯನ್
ಫ್ಯಾಷಿಯಾ ಟೆಲಿವಿಷನ್
ಕಾಂಕ್ರೀಷನ್ ಮಾಡ್ಯುಲೇಷನ್
ಕ್ರಿಟೇಷಸ್
ಛಿಡಿusಣಚಿಛಿeoಟogಥಿ (ಕ್ರಿಸ್ಟೇಶಿಯಾಲಜಿ) ಎಂಬ ಪದದಲ್ಲಿ ಮಾತ್ರ, ಮೇಲಿನ ಪದನೆರಕೆಯಲ್ಲಿ ಶ್ ಬರಿಗೆಯನ್ನೇ ಬಳಸಲಾಗಿದೆ. ನಿಜಕ್ಕೂ ಇಂತಹ ಎಲ್ಲಾ ಪದಗಳಲ್ಲೂ ಶ್ ಎಂಬುದನ್ನು ಬಳಸುವುದೇ ಕನ್ನಡಕ್ಕೆ ಸರಿಯಾದ ದಾರಿ. (ಇಂತಹ ಪದಗಳಲ್ಲಿ ಶ್ ಎಂಬುದನ್ನು ಬಳಸುವ ಬರಹಗಾರರೂ ಕೆಲವ ರಿದ್ದಾರೆ.)
(2) ಫ್ಫ್ಫ್ಫ್ ಬರಿಗೆಯ ಬಳಕೆ ಈ ಬರಿಗೆಯನ್ನು ಇಂಗ್ಲಿಶ್ನ ಜಿ ಬರಿಗೆಯನ್ನು, ಮತ್ತು ಠಿh ಬರಿಗೆಕಂತೆಯನ್ನು ಕನ್ನಡದಲ್ಲಿ ಬರೆಯಲು ಬಳಸಲಾಗುತ್ತದೆ; ಇಂಗ್ಲಿಶ್ನಲ್ಲಿ ಇವೆರಡನ್ನೂ ಒಂದು ಉಜ್ಜುಲಿಯಾಗಿ ಉಲಿಯಲಾಗುತ್ತದೆ; ಕನ್ನಡಿಗರಲ್ಲಿ ಕೆಲವರು ಇದನ್ನು ಹಾಗೆಯೇ ಒಂದು ಉಜ್ಜುಲಿಯಾಗಿ ಉಲಿಯುತ್ತಾರೆ, ಮತ್ತು ಇನ್ನು ಕೆಲವರು [ಪ್] ಎಂಬುದಾಗಿ ಉಲಿಯುತ್ತಾರೆ. ಈ ಉಜ್ಜುಲಿಯನ್ನು ಬರೆಯಲು ಫ್ ಎಂಬ ಬರಿಗೆ ಕನ್ನಡದಲ್ಲಿ ಬೇರೆಡೆಯಲ್ಲಿ ಬಳಕೆಯಲ್ಲಿದೆ.
ಆದರೆ, ಮೇಲಿನ ಪದನೆರಕೆಯಲ್ಲಿ (ಮತ್ತು ಕನ್ನಡದ ಬೇರೆ ಬರಹಗಳಲ್ಲೂ) ಫ್ ಎಂಬುದನ್ನು ಬಳಸುವ ಬದಲು, ಫ್ ಎಂಬುದನ್ನು ಇಂಗ್ಲಿಶ್ ಎರವಲುಗಳಲ್ಲಿ ಬಳಸಲಾಗುತ್ತದೆ.
ಇಂಗ್ಲಿಶ್ ಬರಿಗೆಕಂತೆ
f
ph
ಇಂಗ್ಲಿಶ್ನಲ್ಲಿ fuse flash bluff solfatara
phage epiphora clorophyll
ಕನ್ನಡದಲ್ಲಿ ಫ್ಯೂಸು ಫ್ಲಾಷ್ ಬ್ಲಫ್ ಸೋಲ್ಫಟಾರ
ಫೇಜ್ ಎಪಿಫೋರ ಕ್ಲೋರೋಫಿಲ್
ಸಂಸ್ಕ್ರುತದ ಎರವಲುಗಳಲ್ಲಿ ಬಂದಾಗ, ಫ್ ಬರಿಗೆಯನ್ನು ಕೆಲವರು ಒಂದು ಮಹಾಪ್ರಾಣ ತಡೆಯುಲಿಯಾಗಿ (ಎಂದರೆ, ಊದುಲಿಯಾಗಿ) ಉಲಿಯುತ್ತಾ ರಾದರೂ, ಹೆಚ್ಚಿನವರೂ [ಪ್] ಎಂಬುದಾಗಿಯೇ ಉಲಿಯುತ್ತಾರೆ; ಯಾರೂ ಅದನ್ನು ಒಂದು ಉಜ್ಜುಲಿಯಾಗಿ ಉಲಿಯುವುದಿಲ್ಲ. ಈ ಬರಿಗೆ ಮತ್ತು ಬರಿಗೆಕಂತೆಗಳಿಗೆ ಇಂಗ್ಲಿಶ್ನಲ್ಲಾಗಲಿ ಕನ್ನಡದಲ್ಲಾಗಲಿ ಇಲ್ಲದಿರುವ ಇಂತಹ ಊದುಲಿಯ ಉಲಿಪನ್ನು ತೋರಿಸುವ ಫ್ ಬರಿಗೆಯನ್ನು ಬಳಸುವ ಬದಲು, ಫ್ ಇಲ್ಲವೇ ಪ್ ಎಂಬವುಗಳಲ್ಲಿ ಒಂದನ್ನು ಬಳಸುವುದೇ ಸರಿಯಾದ ದಾರಿ.
(3) ಥ್ಥ್ಥ್ಥ್ ಬರಿಗೆಯ ಬಳಕೆ ಈ ಬರಿಗೆಯನ್ನು ಇಂಗ್ಲಿಶ್ನ ಣh ಬರಿಗೆಕಂತೆಯನ್ನು ಕನ್ನಡದಲ್ಲಿ ಬರೆಯುವು ದಕ್ಕಾಗಿ ಬಳಸಲಾಗುತ್ತದೆ. ಇಂಗ್ಲಿಶ್ನಲ್ಲಿ ಈ ಬರಿಗೆಯನ್ನೂ ಒಂದು ಉಜ್ಜುಲಿ ಯಾಗಿ ಉಲಿಯಲಾಗುತ್ತದೆ; ಆದರೆ, ಕನ್ನಡಿಗರಲ್ಲಿ ಕೆಲವರು ಇದನ್ನು [ಥ್] ಎಂಬುದಾಗಿ, ಎಂದರೆ ಒಂದು ಊದುಲಿಯಾಗಿ ಉಲಿಯುತ್ತಾರೆ; ಆದರೆ, ಹೆಚ್ಚಿನವರೂ ಇದನ್ನು [ತ್] ಎಂಬುದಾಗಿಯೇ ಉಲಿಯುತ್ತಾರೆ. ಹಾಗಾಗಿ, ಹೆಚ್ಚಿನವರ ಉಲಿಪನ್ನನುಸರಿಸಿ ಇದನ್ನು ತ್ ಎಂಬುದಾಗಿಯೇ ಬರೆಯಬಹುದು.
ಇಂಗ್ಲಿಶ್ನ ಣ ಬರಿಗೆಯನ್ನು ಕನ್ನಡದಲ್ಲಿ, ಕನ್ನಡಿಗರ ಉಲಿಪನ್ನನುಸರಿಸಿ, ಟ್ ಎಂಬುದಾಗಿ ಬರೆಯುವ ಕಾರಣ, ಮೇಲಿನ ಬರಿಗೆಕಂತೆಯನ್ನು ತ್ ಎಂಬುದಾಗಿ ಬರೆಯುವುದರಿಂದ ತೊಂದರೆಯೇನೂ ಇಲ್ಲ. ಇದಲ್ಲದೆ, ಇಂಗ್ಲಿಶ್ನ ಪದಗಳಲ್ಲಿ ಕಾಣಿಸುವ ಬೇರೆ ಹಲವು ಉಲಿಪಿನ ವ್ಯತ್ಯಾಸಗಳನ್ನು ಕನ್ನಡದಲ್ಲಿ ಕಾಣಿಸುವು ದಿಲ್ಲ.
ಎತ್ತುಗೆಗಾಗಿ, ಇಂಗ್ಲಿಶ್ನ geಟಿe ಮತ್ತು zeಟಿeಡಿ ಪದಗಳ ಮೊದಲನೆಯ ಮುಚ್ಚುಲಿಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಇದೆ; ಆದರೆ ಇವೆರಡರಲ್ಲೂ ಜ್ ಬರಿಗೆಯನ್ನೇ ಬಳಸಲಾಗುತ್ತದೆ (ಜೀನ್, ಜೆನರ್); ಹಾಗೆಯೇ, ಇಂಗ್ಲಿಶ್ನ vಚಿಟeಟಿಛಿಥಿ ಮತ್ತು ತಿಚಿಜಿeಡಿ ಪದಗಳ ನಡುವೆಯೂ ಮೊದಲನೆಯ ಮುಚ್ಚುಲಿಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಇದೆ; ಆದರೆ, ಇವೆರಡರಲ್ಲೂ ವ್ ಬರಿಗೆಯನ್ನೇ ಬಳಸಲಾಗುತ್ತದೆ (ವೇಲೆನ್ಸಿ, ವೇಫರ್).
ಎರವಲು ಪದಗಳನ್ನು ಕನ್ನಡದಲ್ಲಿ ಬರೆಯುವಾಗ, ಕನ್ನಡಿಗರ ಉಲಿಪಿನಲ್ಲಿ ವ್ಯತ್ಯಾಸವಿಲ್ಲವಾದರೆ, ಅದನ್ನು ಬರಹದಲ್ಲಿ ತೋರಿಸಬೇಕಾಗಿಲ್ಲ; ಹಾಗಾಗಿ, ಇದು ಕನ್ನಡಕ್ಕೆ ಸರಿಯಾದ ದಾರಿ. ಮೇಲಿನ ಮೂರು ಕಡೆಗಳಲ್ಲೂ ಇದೇ ದಾರಿಯ ನ್ನನುಸರಿಸಿ, ಷ್, ಫ್ ಮತ್ತು ಥ್ ಬರಿಗೆಗಳನ್ನು ಬಳಸದಿರಬಹುದು.
1.7 ಬರಹದ ಗುರುತುಗಳು
ಮೇಲೆ 1.3.1ರಲ್ಲಿ ವಿವರಿಸಿದ ಹಾಗೆ, ಮಾತಿನಲ್ಲಿ ಬಳಸುವ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ ಮೊದಲಾದುವನ್ನು ಬರಹದಲ್ಲಿ ನೇರವಾಗಿ ತೋರಿಸಲು ಬರುವುದಿಲ್ಲವಾದ ಕಾರಣ, ಅವುಗಳಿಗೆ ಬದಲಾಗಿ ಕೊನೆ (.), ಅರೆಕೊನೆ (;), ಕೇಳ್ವಿ (?), ಬೆರಗು (!), ತಡೆ (,) ಮೊದಲಾದ ಹಲವು ಬಗೆಯ ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ. ಬರಹಗಳಲ್ಲಿ ಇವು ನಡೆಸುವ ಕೆಲವು ಮುಕ್ಯ ಕೆಲಸಗಳನ್ನು ಕೆಳಗೆ ವಿವರಿಸಲಾಗಿದೆ:
1.7.1 ಉಲಿಯ ಏರಿಳಿತವನ್ನು ತಿಳಿಸುವುದು
ಮಾತನಾಡುವಾಗ, ಮೇಲೆ ತಿಳಿಸಿದಂತಹ 31 ಉಲಿಗಳನ್ನು ಮಾತ್ರವಲ್ಲದೆ ಉಲಿಯ ಏರಿಳಿತವನ್ನೂ ನಾವು ಬಳಸುತ್ತಿರುತ್ತೇವೆ. ಎತ್ತುಗೆಗಾಗಿ, ಒಂದು ಸೊಲ್ಲು ಮುಗಿಯಿತೆಂಬುದನ್ನು ಮಾತಿನಲ್ಲಿ ಉಲಿಯ ಇಳಿತದ ಮೂಲಕ ತಿಳಿಸುತ್ತೇವೆ, ಮತ್ತು ಒಂದು ಸೊಲ್ಲು ಕೇಳ್ವಿ ಎಂಬುದನ್ನು ಅದರ ಕೊನೆಯಲ್ಲಿ ಉಲಿ ತುಸು ಮೇಲೇರುವಂತೆ, ಇಲ್ಲವೇ ಕೆಳಗಿಳಿಯದಂತೆ ಮಾಡುವ ಮೂಲಕ ತಿಳಿಸುತ್ತೇವೆ. ಈ ವಿಶಯಗಳನ್ನು ಬರಹದಲ್ಲಿ ತಿಳಿಸುವುದಕ್ಕಾಗಿ, ಕೊನೆ (.) ಮತ್ತು ಕೇಳ್ವಿ(?)ಗಳೆಂಬ ಬರಹದ ಗುರುತನ್ನು ಬಳಸುತ್ತೇವೆ.
ಒಂದು ಸೊಲ್ಲು ಬೆರಗು ಎಂಬುದನ್ನೂ ಮಾತಿನಲ್ಲಿ ಉಲಿಯ ಏರಿಳಿತ ತಿಳಿಸುತ್ತದೆ; ಬರಹದಲ್ಲಿ ಇದು ಗೊತ್ತಾಗಬೇಕಿದ್ದಲ್ಲಿ ಸೊಲ್ಲಿನ ಕೊನೆಯಲ್ಲಿ ಬೆರಗಿನ (!) ಗುರುತನ್ನು ಬಳಸಬೇಕಾಗುತ್ತದೆ. ಬೇರೊಬ್ಬರ ಮಾತನ್ನು ಎತ್ತಿ ಹೇಳಲಾಗಿದೆ ಎಂಬುದೂ ಉಲಿಯ ಏರಿಳಿತದಲ್ಲಿ ಗೊತ್ತಾಗುತ್ತದೆ; ಬರಹದಲ್ಲಿ ಇದನ್ನು ತಿಳಿಸಲು, ಸೊಲ್ಲಿನ ಮೊದಲಿಗೆ ಮತ್ತು ಕೊನೆಗೆ ಎತ್ತುಗೆಯ (‘’ ಇಲ್ಲವೇ ‘’) ಗುರುತುಗಳನ್ನು ಬಳಸಬೇಕಾಗುತ್ತದೆ.
(…) ಮೊದಲಾದ ಬೇರೆ ಹಲವು ಬರಹದ
ಇದಲ್ಲದೆ, ಸೊಲ್ಲಿನ ಒಳಗೂ ತಡೆ (,), ಅರೆಕೊನೆ (;), ಅಡ್ಡಗೆರೆ (-), ಕಳೆತ ಗುರುತುಗಳನ್ನು ಬಳಸಬೇಕಾಗುತ್ತದೆ. ಇವೆಲ್ಲವೂ ಮುಕ್ಯವಾಗಿ ಬರಹವನ್ನು ಯಾವ ರೀತಿ ಓದಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಗುರುತುಗಳನ್ನು ಸರಿಯಾಗಿ ಬಳಸದಿದ್ದಲ್ಲಿ, ಓದುಗರಿಗೆ ಬರಹವನ್ನು ಹೇಗೆ ಓದಬೇಕು ಎಂಬುದು ಮತ್ತು ಬರಹಗಾರರು ಗೊತ್ತಾಗುವುದಿಲ್ಲ, ತಿಳಿಸಿರುವುದೊಂದು ತಿಳಿದುಕೊಳ್ಳುವುದಿನ್ನೊಂದು ಎಂದಾಗುತ್ತದೆ.
ಓದುಗರು
ಮತ್ತು
ಎತ್ತುಗೆಗಾಗಿ, ಅಲ್ಲಿಗೆ ಹೋಗಿ ಬಂದವರನ್ನು ಮಾತನಾಡಿಸಿದ ಎಂಬ ಸೊಲ್ಲಿಗೆ ಎರಡು ಹುರುಳುಗಳಿರಬಲ್ಲುದು. ‘ಅಲ್ಲಿಗೆ ಹೋಗಿ ಬಂದ ಜನರನ್ನು ಆತ ಮಾತನಾಡಿಸಿದ’ ಎಂಬುದು ಒಂದು ಹುರುಳು, ಮತ್ತು ‘ಆತ ಅಲ್ಲಿಗೆ
ಹೋಗಿ, (ಬೇರೆಲ್ಲಿಂದಲೋ) ಬಂದ ಜನರನ್ನು ಮಾತನಾಡಿಸಿದ’ ಎಂಬುದು ಇನ್ನೊಂದು ಹುರುಳು. ಈ ವ್ಯತ್ಯಾಸ ಮಾತಿನಲ್ಲಿ ಸುಳುವಾಗಿ ಗೊತ್ತಾಗುತ್ತದೆ. ಬರಹದಲ್ಲೂ ಇದನ್ನು ಗೊತ್ತುಮಾಡಬೇಕಿದ್ದರೆ, ಎರಡನೇ ಹುರುಳಿರುವಲ್ಲಿ ಹೋಗಿ ಪದದ ಬಳಿಕ ಒಂದು ತಡೆ (,) ಗುರುತನ್ನು ಬಳಸಬೇಕಾಗುತ್ತದೆ (ಅಲ್ಲಿಗೆ ಹೋಗಿ, ಬಂದವರನ್ನು ಮಾತನಾಡಿಸಿದ). ಸೊಲ್ಲನ್ನು ಎಲ್ಲಿ ಒಡೆಯಬೇಕು ಎಂಬುದನ್ನು ಈ ಗುರುತು ತಿಳಿಸುತ್ತದೆ.
ಕೆಲವು ಕಡೆಗಳಲ್ಲಿ ಸೊಲ್ಲುಗಳ ನಡುವೆ ಹುರುಳಿನಲ್ಲಿರುವ ವ್ಯತ್ಯಾಸವನ್ನು ಉಲಿಯ ಏರಿಳಿತದಿಂದ ಮಾತ್ರವೇ ತಿಳಿಸುವುದೂ ಇದೆ; ಅಂತಹ ಕಡೆಗಳಲ್ಲಿ ಸರಿಯಾದ ಬರಹದ ಗುರುತುಗಳನ್ನು ಬಳಸದಿದ್ದರೆ, ಓದುಗನಿಗೆ ಆ ಸೊಲ್ಲುಗಳ ಹುರುಳೇನೆಂಬುದು ಗೊತ್ತಾಗಲಾರದು. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(19ಕ) ಅವರು ಊಟಮಾಡಿ ಆಯಿತು. (19ಚ) ಅವರು ಊಟಮಾಡಿ ಆಯಿತು? (20ಕ) ಮದುವೆಗೆ ಎಶ್ಟು ಜನ ಬಂದಿದ್ದಾರೆ? (20ಚ) ಮದುವೆಗೆ ಎಶ್ಟು ಜನ ಬಂದಿದ್ದಾರೆ!
(19ಕ)ದಲ್ಲಿ ಒಂದು ತಿಳಿವು ಕೊಡುವ ಸೊಲ್ಲನ್ನು ಕೊಡಲಾಗಿದೆ; ಮತ್ತು ಅದನ್ನೇ (19ಚ)ದಲ್ಲಿ ಒಂದು ಕೇಳ್ವಿಯನ್ನಾಗಿ ಕೊಡಲಾಗಿದೆ. ಈ ಎರಡು ಸೊಲ್ಲುಗಳ ನಡುವೆ ಉಲಿಯ ಏರಿಳಿತದಲ್ಲಿ ಮಾತ್ರ ವ್ಯತ್ಯಾಸವಿದೆಯಲ್ಲದೆ, ಬರಿಗೆಗಳಲ್ಲಿ ವ್ಯತ್ಯಾಸವಿಲ್ಲ. ಹಾಗಾಗಿ, ಈ ವ್ಯತ್ಯಾಸವನ್ನು ಓದುಗರಿಗೆ ತಿಳಿಸಬೇಕಿದ್ದಲ್ಲಿ ಮೊದಲನೇ ಸೊಲ್ಲಿನಲ್ಲಿ ಕೊನೆ ಗುರುತನ್ನು ಮತ್ತು ಎರಡನೇ ಸೊಲ್ಲಿನಲ್ಲಿ ಕೇಳ್ವಿ ಗುರುತನ್ನು ಬಳಸಬೇಕಾಗಿದೆ.
ಇದೆ ರೀತಿಯಲ್ಲಿ, ಒಂದೇ ಸೊಲ್ಲನ್ನು (20ಕ)ದಲ್ಲಿ ಕೇಳ್ವಿಯಾಗಿ, ಮತ್ತು (20ಚ)ದಲ್ಲಿ ಬೆರಗಾಗಿ ಬಳಸಲಾಗಿದೆ; ಇವುಗಳ ನಡುವೆಯೂ ಉಲಿಯ ಏರಿಳಿತದಲ್ಲಿ ಮಾತ್ರ ವ್ಯತ್ಯಾಸವಿದೆ, ಮತ್ತು ಈ ವ್ಯತ್ಯಾಸವನ್ನು ಬರಹದಲ್ಲಿ ತಿಳಿಸುವುದಕ್ಕಾಗಿ ಕೇಳ್ವಿಯ ಮತ್ತು ಬೆರಗಿನ ಗುರುತುಗಳನ್ನು ಬಳಸಬೇಕಾಗಿದೆ.
ಆದರೆ, ಉಲಿಯ ಏರಿಳಿತಗಳ ಮೂಲಕ ನಾವು ತಿಳಿಸಬಲ್ಲ ಎಲ್ಲಾ ಬಗೆಯ ಹುರುಳುಗಳನ್ನೂ ಈ ರೀತಿ ಬರಹದ ಗುರುತುಗಳ ಮೂಲಕ ತಿಳಿಸಲು ಬರುವುದಿಲ್ಲ. ಮಾತಿನಲ್ಲಿ ನಿಜಕ್ಕೂ ನೂರಾರು ಬಗೆಯ ಹುರುಳುಗಳನ್ನು ಉಲಿಯ ಏರಿಳಿತಗಳ ಮೂಲಕ ತಿಳಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(21ಕ) ಮರ ಹತ್ತಿದರೆ ಹತ್ತು ರೂಪಾಯಿ ಕೊಡುತ್ತೇನೆ. (21ಚ) ಮರ ಹತ್ತಿದರೆ ಪೆಟ್ಟು ಬಿದ್ದೀತು.
(21ಕ) ಸೊಲ್ಲು ಆಡುಗನ ಬಯಕೆಯನ್ನು ತಿಳಿಸುತ್ತದೆ, ಮತ್ತು (21ಚ) ಸೊಲ್ಲು ಎಚ್ಚರಿಕೆಯನ್ನು ತಿಳಿಸುತ್ತದೆ. ಈ ವ್ಯತ್ಯಾಸವನ್ನು ‘ಮರ ಹತ್ತಿದರೆ ಆಡುಗ ಏನು ಮಾಡಲಿದ್ದಾನೆ’ ಎಂಬುದರಿಂದ ತಿಳಿಯಬಹುದೇನೋ ನಿಜ; ಆದರೆ, ಈ ಎರಡು ಸೊಲ್ಲುಗಳನ್ನು ಆಡಿರುವ ಬಗೆಯಿಂದಲೂ (ಎಂದರೆ ಉಲಿಯ ಏರಿಳಿತಗಳಿಂದಲೂ) ಇದನ್ನು ತಿಳಿಯಬಹುದು. ಬರಹದಲ್ಲಿ ಈ ವ್ಯತ್ಯಾಸವನ್ನು ತಿಳಿಸಲು ಗುರುತುಗಳಿಲ್ಲ.
1.7.2 ಎಲ್ಲೆಗಳನ್ನು ತಿಳಿಸುವುದು
ಬರಹದಲ್ಲಿ ಬರುವ ಸೊಲ್ಲು, ಎತ್ತುಗೆ, ಒಳಸೊಲ್ಲು, ಪದಕಂತೆ, ಪದ ಮೊದಲಾದವುಗಳ ಎಲ್ಲೆಗಳನ್ನು ತಿಳಿಸುವುದು ಬರಹದ ಗುರುತುಗಳ ಇನ್ನೊಂದು ಮುಕ್ಯ ಕೆಲಸ. ಎತ್ತುಗೆಗಾಗಿ, ಕೊನೆ (.), ಕೇಳ್ವಿ (?), ಮತ್ತು ಬೆರಗು (!) ಗುರುತುಗಳು ಒಂದು ಸೊಲ್ಲು ಎಲ್ಲಿ ಕೊನೆಗೊಳ್ಳುತ್ತದೆ, ಮತ್ತು ಇನ್ನೊಂದು ಸೊಲ್ಲು ಸುರುವಾಗುತ್ತದೆ ಎಂಬುದನ್ನು ತಿಳಿಸುತ್ತವೆ; ಪದಗಳ ನಡುವೆ ಬರುವ ಎಡೆಗಳು ಒಂದು ಪದ ಎಲ್ಲಿ ಸುರುವಾಗಿ ಎಲ್ಲಿ ಮುಗಿಯುತ್ತದೆ ಎಂಬುದನ್ನು ತಿಳಿಸುತ್ತವೆ. ಕೊಗೆತದ (:) ಗುರುತೂ ಕೆಲವೆಡೆಗಳಲ್ಲಿ ಸೊಲ್ಲಿನ ಕೊನೆಯನ್ನು ತಿಳಿಸಬಲ್ಲುದು. ಇವನ್ನು
ತುಂಬಾ ತೊಡಕಿನದಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಪದ ಮತ್ತು ಪದರೂಪಗಳ ನಡುವೆ ಎಡೆಯನ್ನು ಬಿಡದೆ ಬರೆಯಲಾಗಿದೆ. ಇದನ್ನು ಓದಲು ಹೇಗೆ ತೊಡಕಾಗುವುದೆಂಬುದನ್ನು ಗಮನಿಸಬಹುದು:
ಸರಿಯಾಗಿ ಬಳಸದಿದ್ದಲ್ಲಿ ಓದಿನ
ಕೆಲಸ
(22) ರಾಜುಬೆಲ್ಲತಿಂದುನೀರುಕುಡಿದುಹೊಟ್ಟೆತುಂಬಿಸಿಕೊಂಡ.
ನೇರವಾದ ಎತ್ತುಗೆಗೂ ನೇರವಲ್ಲದ ಎತ್ತುಗೆಗೂ ನಡುವಿರುವ ವ್ಯತ್ಯಾಸವನ್ನು ಎತ್ತುಗೆಯ ಗುರುತುಗಳ (‘’) ಮೂಲಕ ತೋರಿಸಿಕೊಡದಿದ್ದಲ್ಲಿ, ಇಪ್ಪುರುಳು ಪುಣೆಗೆ ಕಾಣಿಸಿಕೊಳ್ಳುತ್ತದೆ. ಹೋಗಬೇಕೆಂದು ರಾಜು ಹೇಳಿದ್ದಾನೆ ಎಂಬ ಸೊಲ್ಲಿಗೆ ಅದರ ‘ಆಡುಗನು ಪುಣೆಗೆ ಹೋಗಬೇಕು’ ಎಂಬ ಹುರುಳಿರಬಲ್ಲುದು, ಇಲ್ಲವೇ ಅದರ ‘ಕೇಳುಗನು ಪುಣೆಗೆ ಹೋಗಬೇಕು’ ಎಂಬ ಹುರುಳೂ ಇರಬಲ್ಲುದು:
ಎತ್ತುಗೆಗಾಗಿ,
ಇವತ್ತೇ
ನೀನು
ಅದರಲ್ಲಿ ಬಂದಿರುವ ನೀನು ಇವತ್ತೇ ಪುಣೆಗೆ ಹೋಗಬೇಕು ಎಂಬ ಸೊಲ್ಲು ನೇರ ಎತ್ತುಗೆಯಾದರೆ ಮೊದಲನೆಯ ಹುರುಳು ಸಿಗುತ್ತದೆ, ಮತ್ತು
ನೇರವಲ್ಲದ ಎತ್ತುಗೆಯಾದರೆ ಎರಡನೆಯ ಹುರುಳು ಸಿಗುತ್ತದೆ. ಈ ಇಪ್ಪುರುಳನ್ನು ಹೋಗಲಾಡಿಸಬೇಕಿದ್ದಲ್ಲಿ, ನೇರ ಎತ್ತುಗೆಯಿರುವ ಮೊದಲನೆಯ ಹುರುಳು ಬಂದಿರುವಲ್ಲಿ ‘ನೀನು ಇವತ್ತೇ ಪುಣೆಗೆ ಹೋಗಬೇಕೆ’ಂದು ರಾಜು ಹೇಳಿದ್ದಾನೆ ಎಂಬುದಾಗಿ ಎತ್ತುಗೆಯ ಗುರುತುಗಳನ್ನು ಬಳಸಿ ನೇರ ಎತ್ತುಗೆಯ ಎಲ್ಲೆಗಳನ್ನು ತೋರಿಸಿಕೊಡಬೇಕಾಗುತ್ತದೆ.
ಹೆಸರುಪದಗಳೊಂದಿಗೆ ಎರಡು ಇಲ್ಲವೇ ಹೆಚ್ಚು ಪರಿಚೆಪದರೂಪಗಳು ಬಂದಿವೆಯಾದರೆ, ಅವು ನೇರವಾಗಿ ಆ ಹೆಸರುಪದದ ಎರಡು ಪರಿಚೆಗಳನ್ನು ತಿಳಿಸುತ್ತಿರಬಹುದು, ಇಲ್ಲವೇ ಒಂದು ಪರಿಚೆಪದರೂಪ ಇನ್ನೊಂದು ಪರಿಚೆಪದರೂಪದ ಪರಿಚೆಯನ್ನು ತಿಳಿಸುತ್ತಿದ್ದು, ಅವೆರಡೂ ಒಟ್ಟಾಗಿ ಹೆಸರುಪದದ ಪರಿಚೆಯನ್ನು ತಿಳಿಸುತ್ತಿರಬಹುದು. ಈ ವ್ಯತ್ಯಾಸವೂ ಇಪ್ಪುರುಳಿಗೆ ಎಡೆಕೊಡಬಲ್ಲುದು. ಇಂತಹ ಗುರುತನ್ನು ಬಳಸಿ, ಕಡೆಗಳಲ್ಲಿ ಪರಿಚೆಪದರೂಪಗಳ ಎಲ್ಲೆಗಳು ಎಲ್ಲಿವೆ ಎಂಬುದನ್ನು ತಿಳಿಸಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
ತಡೆ
(23ಕ) ಪುಣೆಯಿಂದ ಬಂದ ಮಗನನ್ನು ಬೆಂಗಳೂರಿಗೆ ಕಳುಹಿಸಿದ
ರಾಮರಾಯರು ತುಂಬಾ ಚಿಂತೆಯಲ್ಲಿದ್ದಾರೆ.
(23ಚ) ಪುಣೆಯಿಂದ ಬಂದ, ಮಗನನ್ನು ಬೆಂಗಳೂರಿಗೆ ಕಳುಹಿಸಿದ
ರಾಮರಾಯರು ತುಂಬಾ ಚಿಂತೆಯಲ್ಲಿದ್ದಾರೆ.
(23ಕ)ದಲ್ಲಿ ಪುಣೆಯಿಂದ ಬಂದ ಒಳಸೊಲ್ಲು (ಬಂದ ಪರಿಚೆರೂಪ) ಅದರ ಬಳಿಕ ಬಂದಿರುವ ಮಗನನ್ನು ಬೆಂಗಳೂರಿಗೆ ಕಳುಹಿಸಿದ ಒಳಸೊಲ್ಲಿನಲ್ಲಿರುವ ಮಗನನ್ನು ಪದದ ಪರಿಚೆಯನ್ನು ತಿಳಿಸುತ್ತದೆ; ಇದಕ್ಕೆ (23ಚ)ದಲ್ಲಿ ಅದು ರಾಮರಾಯರು ಪದದ ಪರಿಚೆಯನ್ನು ಬದಲು, ತಿಳಿಸುತ್ತದೆ. ಈ ವ್ಯತ್ಯಾಸವನ್ನು (23ಚ)ದಲ್ಲಿ ಬಳಸಿರುವ, ಮತ್ತು (23ಕ)ದಲ್ಲಿ ಬಳಸದಿರುವ ತಡೆ (,) ಗುರುತಿನ ಮೂಲಕ ಕಾಣಿಸಲಾಗಿದೆ.
ಬರಹದ ಗುರುತುಗಳನ್ನು ಸರಿಯಾಗಿ ಬಳಸಬೇಕಿದ್ದಲ್ಲಿ ಸೊಲ್ಲರಿಮೆಯ ತಿಳಿವೂ ಬೇಕಾಗುತ್ತದೆ ಎಂಬುದು ಅವು ನಡೆಸಬೇಕಾಗಿರುವ ಈ ಕೆಲಸಗಳನ್ನು ಪರಿಶೀಲಿಸಿದಾಗ ಗೊತ್ತಾಗುತ್ತದೆ. ಅವುಗಳ ಬಳಕೆಯ ಕುರಿತು ಹೆಚ್ಚಿನ ವಿವರಗಳನ್ನು ಮುಂದೆ ಕೊಡಲಾಗುವುದು.
1.8 ತಿರುಳು
ಈ ಪಸುಗೆಯಲ್ಲಿ ಸೊಲ್ಲರಿಮೆ ಹೇಗಿರುತ್ತದೆ, ಎಂತಹ ಸೊಲ್ಲರಿಮೆಯನ್ನು ಈ ಹೊತ್ತಗೆಯಲ್ಲಿ ವಿವರಿಸಲಾಗುತ್ತದೆ, ಮಾತಿನ ಸೊಲ್ಲರಿಮೆಗೂ ಬರಹದ
ಸೊಲ್ಲರಿಮೆಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇರಬಲ್ಲುವು, ಬರಹದ ಸೊಲ್ಲರಿಮೆಯನ್ನು ವಿವರಿಸುವಲ್ಲಿ ಅದು ಎಂತಹ ವಿಶಯಗಳನ್ನೆಲ್ಲ ಒಳಗೊಳ್ಳಬೇಕಾಗುತ್ತದೆ, ಕನ್ನಡ ಬರಹದಲ್ಲಿ ಬಳಕೆಯಾಗುವ ಬರಿಗೆಗಳು ಎಂತಹವು, ಅವುಗಳಲ್ಲಿ ಎಂತಹ ಮಾರ್ಪಾಡುಗಳನ್ನು ಮಾಡಬೇಕಾಗಿದೆ, ಮತ್ತು ಬರಹದಲ್ಲಿ ಬಳಕೆಯಾಗುವ ಬರಹದ ಗುರುತುಗಳ ಮುಕ್ಯ ಕೆಲಸಗಳೇನು ಎಂಬಂತಹ ಈ ಕನ್ನಡ ಬರಹದ ಸೊಲ್ಲರಿಮೆಗೆ ಮುನ್ನೋಟವನ್ನೊದಗಿಸುವ ಕೆಲವು ವಿಶಯಗಳನ್ನು ವಿವರಿಸಲಾಗಿದೆ.