← Ch 3 · Contents · ↑ Contents
Chapters: Ch 1 · Ch 2 · Ch 3 · Ch 4
4. ಪದರೂಪಗಳ ಇಟ್ಟಳ
4.1 ಮುನ್ನೋಟ
ಪದಗಳನ್ನು ಸೊಲ್ಲುಗಳಲ್ಲಿ ಬಳಸುವಾಗ ಅವಕ್ಕೆ ಕೆಲವು ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ; ಈ ಒಟ್ಟುಗಳು ಸೊಲ್ಲು ಗಳಲ್ಲಿ ಬರುವ ಪದಗಳನ್ನು ಒಂದರೊಡನೊಂದು ಸಂಬಂದಿಸುತ್ತವೆ, ಮತ್ತು ಕೆಲವು ಹೆಚ್ಚಿನ ಹುರುಳುಗಳನ್ನೂ ಕೊಡುತ್ತವೆ. ಇದಲ್ಲದೆ, ಸೊಲ್ಲುಗಳನ್ನು ನೆಲೆ ಗೊಳಿಸುವ ಕೆಲಸವನ್ನೂ ಅವು ನಡೆಸುತ್ತವೆ.
ಎತ್ತುಗೆಗಾಗಿ, ಒಂದು ಪದಕಂತೆಯಲ್ಲಿ ಎರಡು ಹೆಸರುಪದಗಳನ್ನು ಬಳಸ ಬೇಕಿದ್ದಲ್ಲಿ, ಅವುಗಳ ನಡುವಿನ ಪತ್ತುಗೆಯೇನು ಎಂಬುದನ್ನು ತಿಳಿಸಬೇಕಾಗು ತ್ತದೆ: ಅಣ್ಣನ ಮನೆ ಎಂಬ ಪದಕಂತೆಯಲ್ಲಿ ಅಣ್ಣ ಮತ್ತು ಮನೆ ಎಂಬ ಎರಡು ಹೆಸರುಪದಗಳು ಬಂದಿದ್ದು, ಇವುಗಳ ನಡುವಿನ ಒಡೆತನದ ಪತ್ತುಗೆ ಯನ್ನು (ನ್)ಅ ಒಟ್ಟು ತಿಳಿಸುತ್ತದೆ.
ಇದೇ ರೀತಿಯಲ್ಲಿ, ಒಂದು ಸೊಲ್ಲಿನಲ್ಲಿ ಎರಡು-ಮೂರು ಹೆಸರುಪದಗಳನ್ನು ಬಳಸಬೇಕಿದ್ದಲ್ಲಿ, ಅವಕ್ಕೂ ಸೊಲ್ಲಿನ ಎಸಕಪದಕ್ಕೂ ನಡುವೆ ಎಂತಹ ಪತ್ತುಗೆ ಯಿದೆ ಎಂಬುದನ್ನು ತಿಳಿಸಬೇಕಾಗುತ್ತದೆ: ಅಣ್ಣ ತಂಗಿಗೆ ಒಂದು ಬೊಂಬೆ ಕೊಟ್ಟ ಎಂಬ ಸೊಲ್ಲಿನಲ್ಲಿ ಬೊಂಬೆಯನ್ನು ಯಾರು ಯಾರಿಗೆ ಕೊಟ್ಟರು ಎಂಬು ದನ್ನು ತಿಳಿಸಲು ತಂಗಿ ಪದದ ಬಳಿಕ ಗೆ ಒಟ್ಟನ್ನು ಬಳಸಬೇಕಾಗಿದೆ.
ಸೊಲ್ಲಿನ ಕೊನೆಯಲ್ಲಿ ಎಸಕಪದವನ್ನು ಬಳಸಬೇಕಿದ್ದಲ್ಲಿ, ಅದಕ್ಕೆ ಮುಕ್ಯವಾಗಿ ಸೊಲ್ಲನ್ನು ನೆಲೆಗೊಳಿಸುವ, ಎಂದರೆ ಅದನ್ನು ಆಡುಗನೊಂದಿಗೆ ಸಂಬಂದಿಸುವ ಎರಡು ಒಟ್ಟುಗಳನ್ನು ಸೇರಿಸಬೇಕಾಗುತ್ತದೆ: ನಾನು ಮನೆಗೆ ಹೋಗುತ್ತೇನೆ ಎಂಬ ಸೊಲ್ಲಿನಲ್ಲಿ ಬಂದಿರುವ ಹೋಗು ಎಸಕಪದಕ್ಕೆ ಉತ್ತ ಮತ್ತು ಏನೆ ಎಂಬ ಎರಡು ಒಟ್ಟುಗಳನ್ನು ಸೇರಿಸಲಾಗಿದೆ; ಇವುಗಳಲ್ಲಿ ಏನೆ ಎಂಬುದು ‘ಹೋಗುವ ಕೆಲಸವನ್ನು ನಡೆಸುವುದು ಯಾರು (ಆಡುಗ)’ ಎಂಬುದನ್ನು ತಿಳಿಸು ತ್ತದೆ, ಮತ್ತು ಉತ್ತ ಎಂಬುದು ‘ಈ ಕೆಲಸವನ್ನು ಆತನು ಯಾವಾಗ ನಡೆಸ ಲಿದ್ದಾನೆ (ಆ ಸೊಲ್ಲನ್ನು ಆಡಿರುವ ಹೊತ್ತಿನ ಬಳಿಕ)’ ಎಂಬುದನ್ನು ತಿಳಿಸುತ್ತದೆ.
ಇದಲ್ಲದೆ, ತಿಳಿಸುವ ಕೆಲಸದ ಬದಲು ಕೆಲವು ಬೇರೆ ಬಗೆಯ ಕೆಲಸಗಳನ್ನು ಸೊಲ್ಲುಗಳ ಮೂಲಕ ನಡೆಸಬೇಕಾದಾಗ, ಅವುಗಳಲ್ಲಿ ಬರುವ ಎಸಕಪದಗಳಿಗೆ
ಕೆಲವು ಬೇರೆಯೇ ಪದರೂಪಗಳನ್ನು ಕೊಡಬೇಕಾಗುತ್ತದೆ. ಎತ್ತುಗೆಗಾಗಿ, ನೀವು ಮನೆಗೆ ಹೋಗಿ ಎಂಬ ಸೊಲ್ಲಿನ ಮೂಲಕ ಕೆಲವು ಜನರಿಗೆ ಹೋಗಲು ಅಪ್ಪಣೆಯನ್ನು ಕೊಡಬೇಕಾಗಿದೆ, ಮತ್ತು ಇದಕ್ಕಾಗಿ ಹೋಗು ಎಸಕಪದಕ್ಕೆ ಇ ಒಟ್ಟನ್ನು ಸೇರಿಸಿ ಹೇಳಬೇಕಾಗಿದೆ. ಈ ಹೋಗಿ ಪದರೂಪ ಮೇಲೆ ಕೊಟ್ಟಿರುವ ಹೋಗುತ್ತೇನೆ ಪದರೂಪಕ್ಕಿಂತ ಬೇರಾಗಿದೆ ಎಂಬುದನ್ನು ಗಮನಿಸಬಹುದು.
ಸೊಲ್ಲುಗಳಲ್ಲಿ ಬಳಸುವುದಕ್ಕಾಗಿ ಎಂತಹ ಪದರೂಪಗಳೆಲ್ಲ ಬೇಕಾಗುತ್ತವೆ, ಅವನ್ನು ಉಂಟುಮಾಡುವುದಕ್ಕಾಗಿ ಎಂತಹ ಒಟ್ಟುಗಳನ್ನು ಬಳಸಬೇಕಾಗುತ್ತದೆ, ಈ ಒಟ್ಟುಗಳನ್ನು ಪದಗಳಿಗೆ ಸೇರಿಸುವಲ್ಲಿ ಎಂತಹ ಸೇರಿಕೆಯ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬಂತಹ ವಿಶಯಗಳನ್ನು ಈ ಪಸುಗೆಯಲ್ಲಿ ವಿವರಿಸ ಲಾಗಿದೆ. ಕನ್ನಡದಲ್ಲಿ ತುಂಬಾ ಹೆಚ್ಚು ಪದರೂಪಗಳಿರುವುದು ಎಸಕಪದಗಳಿಗೆ; ಹಾಗಾಗಿ, ಅವುಗಳನ್ನು ಇಲ್ಲಿ ಮೊದಲಿಗೆ ಎತ್ತಿಕೊಳ್ಳಲಾಗಿದೆ; ಆಮೇಲೆ, ಹೆಸರು ಪದ, ಎಣಿಕೆಪದ, ಆಡುಪದ ಮತ್ತು ತೋರುಪದಗಳಿಗಿರುವ ಪದರೂಪಗಳನ್ನು ವಿವರಿಸಲಾಗುತ್ತದೆ.
4.1.1 ಸೇರಿಕೆಯ ಕಟ್ಟಲೆಗಳು
ಪದರೂಪಗಳನ್ನು ಉಂಟುಮಾಡುವುದಕ್ಕಾಗಿ ಅವುಗಳಿಗೆ ಒಟ್ಟುಗಳನ್ನು ಸೇರಿಸಿ ದಾಗ, ಆ ಪದಗಳಲ್ಲಿ ಮತ್ತು ಒಟ್ಟುಗಳಲ್ಲಿ ಕೆಲವು ಸೇರಿಕೆಯ ಮಾರ್ಪಾಡುಗಳು ನಡೆಯುತ್ತವೆ. ಈ ಮಾರ್ಪಾಡುಗಳು ಎರಡನೇ ಪಸುಗೆಗಳಲ್ಲಿ (2.2ರಲ್ಲಿ) ವಿವರಿಸಿರುವ ಸೇರಿಕೆಯ ಮಾರ್ಪಾಡುಗಳಿಗಿಂತ ಕೆಲವು ವಿಶಯಗಳಲ್ಲಿ ಬೇರಾಗಿವೆ, ಮತ್ತು ಅವುಗಳಿಗೆ ಹೊರಪಡಿಕೆಗಳು ತುಂಬಾ ಕಡಿಮೆ (ಹಿಂಬೊತ್ತಿನ ಒಟ್ಟನ್ನು ಸೇರಿಸುವಲ್ಲಿ ಮಾತ್ರ ಹಲವಾರು ಹೊರಪಡಿಕೆಗಳು ಕಾಣಿಸಿಕೊಳ್ಳುತ್ತವೆ). ಹಾಗಾಗಿ, ಅವನ್ನಿಲ್ಲಿ ಸೇರಿಕೆಯ ಕಟ್ಟಲೆಗಳು ಎಂಬುದಾಗಿ ಕರೆಯಲಾಗಿದೆ.
ಪದರೂಪಗಳಲ್ಲಿ ಮುಕ್ಯವಾಗಿ ಕೆಳಗೆ ಕೊಟ್ಟಿರುವ ಮೂರು ಸೇರಿಕೆಯ ಮಾರ್ಪಾಡುಗಳು ನಡೆಯುತ್ತವೆ; ಇವುಗಳಿಗೆ ಕೆಲವು ಹೊರಪಡಿಕೆಗಳೂ ಇವೆ; ಅವುಗಳಲ್ಲಿ ಮುಕ್ಯವಾದುವನ್ನು ಇಲ್ಲಿ ತಿಳಿಸಲಾಗಿದೆ, ಮತ್ತು ಉಳಿದುವನ್ನು ಮುಂದೆ ಪದರೂಪಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ವಿವರಿಸು ವಲ್ಲಿ ತಿಳಿಸಲಾಗುವುದು.
(1) ಉಕಾರ ಬಿದ್ದುಹೋಗುವುದು ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ತೆರೆಯುಲಿಯಲ್ಲಿ ಮೊದಲಾಗುವ ಒಟ್ಟು ಬಂದಾಗ, ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ. ಈ ಮಾರ್ಪಾಡು ಎಲ್ಲಾ ಬಗೆಯ ಪದಗಳಲ್ಲೂ ನಡೆಯುತ್ತದೆ. ಇದನ್ನು ಉಕಾರದ
ಪದರೂಪಗಳ ಇಟ್ಟಳ / 259 ಬಳಿಕ ಅ, ಇ, ಉ ಮತ್ತು ಓ ತೆರೆಯುಲಿಗಳು ಬಂದಿರುವಲ್ಲಿ ಕಾಣಬಹುದು. ಈ ಮಾರ್ಪಾಡನ್ನು ತೋರಿಸುವ ಒಟ್ಟುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:
(1) ಅ ತೆರೆಯುಲಿ ಸೇರಿದಾಗ: ಅದ್
ಅನ್ನು
ಅಲಿ
ಅಲು
C
ಮಾಡು+ಅದ್+ಅ ಮಾಡದ ಅಡಗು+ಅದ್+ಅ ಅಡಗದ ಹಣ್ಣನ್ನು ಹಣ್ಣು+ಅನ್ನು ಮುಸುಕನ್ನು ಮುಸುಕು+ಅನ್ನು ಹೋಗಲಿ ಹೋಗು+ಅಲಿ ತಿನ್ನಲಿ ತಿನ್ನು+ಅಲಿ ಕೇಳಲು ಕೇಳು+ಅಲು ಚೆಲ್ಲಲು ಚೆಲ್ಲು+ಅಲು ಜನರ ಜನರು+ಅ
ಮನೆಗಳ ಮನೆಗಳು+ಅ
(2) ಇ ತೆರೆಯುಲಿ ಸೇರಿದಾಗ:
E
ಇಗೆ
ಇದ್
ಇನ್
Ej
ಇಸು
ಹೋಗಿ ಕೊಡಿ ಮದ್ದಿಗೆ ನಾಡಿಗೆ ಕಟ್ಟಿದ
ಹೋಗು+ಇ ಕೊಡು+ಇ
ಮದ್ದು+ಇಗೆ ನಾಡು+ಇಗೆ ಕಟ್ಟು+ಇದ್+ಅ ಮಾಡು+ಇದ್+ಅಳು ಮಾಡಿದಳು ಕಾಡು+ಇನ್+ಅ ಹಡಗು+ಇನ್+ಅ ಹಾಡು+ಇರಿ ಹೊರಡು+ಇರಿ ಕಟ್ಟು+ಇಸು ಹೋಗು+ಇಸು
ಕಾಡಿನ ಹಡಗಿನ ಹಾಡಿರಿ ಹೊರಡಿರಿ ಕಟ್ಟಿಸು ಹೋಗಿಸು
(3) ಉ ತೆರೆಯುಲಿ ಸೇರಿದಾಗ: ಉತ್್ತ
ಕೊಡು+ಉತ್್ತ+ಆನೆ ಕೊಡುತ್ತಾನೆ ಕಚ್ಚು+ಉತ್್ತ+ಅದೆ ಕಚ್ಚುತ್ತದೆ
ಉತ್ತಾ ಹೋಗು+ಉತ್ತಾ
ತಿನ್ನು+ಉತ್ತಾ
ಹೋಗುತ್ತಾ ತಿನ್ನುತ್ತಾ
(4) ಓ ತೆರೆಯುಲಿ ಸೇರಿದಾಗ: Nt
ಹೋಗು+ಓಣ ಹೇಳು+ಓಣ ತಿನ್ನು+ಓಣ
ಹೋಗೋಣ ಹೇಳೋಣ ತಿನ್ನೋಣ
ಈ ಮಾರ್ಪಾಡಿಗೆ ಒಂದು ಮುಕ್ಯವಾದ ಹೊರಪಡಿಕೆಯಿದೆ: ಉಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳಲ್ಲಿ ಎರಡು ಉಲಿಕಂತೆಗಳಿದ್ದು, ಉದ್ದ ತೆರೆಯುಲಿ ಇಲ್ಲವೇ ಒತ್ತುಬರಿಗೆ ಇಲ್ಲವಾದರೆ, ಅಂತಹ ಪದಗಳ ಕೊನೆಯ ಉಕಾರ ಬಿದ್ದು ಹೋಗುವ ಬದಲು, ಅವುಗಳ ಬಳಿಕ ವಕಾರವೊಂದು ಸೇರಿಕೊಳ್ಳುತ್ತದೆ. ಹೆಸರು ಪದಗಳೊಂದಿಗೆ ಬಳಕೆಯಾಗುವ ಅನ್ನು ಮತ್ತು ಇಗೆ ಒಟ್ಟುಗಳ ಬಳಕೆಯಲ್ಲಿ ಈ ಹೊರಪಡಿಕೆಯನ್ನು ಕಾಣಬಹುದು:
ಅನ್ನು
ಇಗೆ
ನಗು+ಅನ್ನು ಮಗು+ಅನ್ನು ಮಗು+ಇಗೆ ಕರು+ಇಗೆ
ನಗುವನ್ನು ಮಗುವನ್ನು ಮಗುವಿಗೆ ಕರುವಿಗೆ
ಎಸಕಪದಗಳ ಬಳಕೆಯಲ್ಲಿ ಈ ಹೊರಪಡಿಕೆಯಿಲ್ಲ ಎಂಬುದನ್ನು ಕೆಳಗೆ
ಕೊಟ್ಟಿರುವ ಕೆಲವು ಒಟ್ಟುಗಳ ಬಳಕೆಯಲ್ಲಿ ಕಾಣಬಹುದು:
ಅದ್ ಅಲಿ Ej
ಉತ್್ತ
ಕೊಡು+ಅದ್+ಅ ಇರು+ಅಲಿ
ಬಿಡು+ಇರಿ
ನಗು+ಉತ್್ತ+ಆನೆ ನಗುತ್ತಾನೆ
ಕೊಡದ ಇರಲಿ ಬಿಡಿರಿ
(2) ಯಕಾರ ಬಂದು ಸೇರುವುದು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ತೆರೆಯುಲಿಯಲ್ಲಿ ಮೊದಲಾಗುವ ಒಟ್ಟುಗಳು ಬಂದಾಗ, ಪದಗಳ ಕೊನೆಯಲ್ಲಿ ಯಕಾರವೊಂದು ಸೇರಿಕೊಳ್ಳುತ್ತದೆ. ಈ ಮಾರ್ಪಾಡನ್ನು ಅ, ಇ, ಉ, ಮತ್ತು ಓ ತೆರೆಯುಲಿಗಳಲ್ಲಿ ಮೊದಲಾಗುವ ಒಟ್ಟುಗಳು ಬಂದಿರುವಲ್ಲಿ ಕಾಣಬಹುದು:
(1) ಅ ತೆರೆಯುಲಿ ಸೇರಿದಾಗ:
C
ಅದ್
Gj+C
ಮನೆ+ಅ
ಮುರಿ+ಅದ್+ಅ ಬರೆ+ಅದ್+ಅ
ಉರಿಯ ಮನೆಯ ಮುರಿಯದ ಬರೆಯದ
ಅಂದಿ ಅಜ್ಜಿ+ಅಂದಿ+ಅರು ಅಜ್ಜಿಯಂದಿರು
ಸೊಸೆ+ಅಂದಿ+ಅರು ಸೊಸೆಯಂದಿರು
ಅನ್ನು ಅಜ್ಜಿ+ಅನ್ನು ಮನೆ+ಅನ್ನು ಕುರುಡಿ+ಅರು ಚೆಲುವೆ+ಅರು
ಅರು
ಅಜ್ಜಿಯನ್ನು ಮನೆಯನ್ನು ಕುರುಡಿಯರು ಚೆಲುವೆಯರು
ಪದರೂಪಗಳ ಇಟ್ಟಳ / 261
ಅಲಿ
ಅಲು
ಕುಡಿ+ಅಲಿ
ಬರೆ+ಅಲಿ
ಕಲಿ+ಅಲು
ನಡೆ+ಅಲು
ಕುಡಿಯಲಿ ಬರೆಯಲಿ ಕಲಿಯಲು ನಡೆಯಲು
(2) ಇ ತೆರೆಯುಲಿ ಸೇರಿದಾಗ: ಇಂದ
Ej
ಬೇಲಿ+ಇಂದ ಕೊಂಬೆ+ಇಂದ ದುಡಿ+ಇರಿ
ಬೆಳೆ+ಇರಿ
ಬೇಲಿಯಿಂದ ಕೊಂಬೆಯಿಂದ ದುಡಿಯಿರಿ ಬೆಳೆಯಿರಿ
(3) ಉ ತೆರೆಯುಲಿ ಸೇರಿದಾಗ:
ಉತ್್ತ ತಿಳಿ+ಉತ್್ತ+ಅದೆ ತಿಳಿಯುತ್ತದೆ ಒದೆ+ಉತ್್ತ+ಅದೆ ಒದೆಯುತ್ತದೆ
ಉತ್ತಾ ಜಗಿ+ಉತ್ತಾ
ತೊಳೆ+ಉತ್ತಾ
ಜಗಿಯುತ್ತಾ ತೊಳೆಯುತ್ತಾ
(4) ಓ ತೆರೆಯುಲಿಯ ಬಳಿಕ: Nt
ಕುಡಿ+ಓಣ
ಬರೆ+ಓಣ
ಕುಡಿಯೋಣ ಬರೆಯೋಣ
ಈ ಮಾರ್ಪಾಡಿಗೆ ಮುಕ್ಯವಾಗಿ ಇದ್ ಮತ್ತು ಇಸು ಒಟ್ಟುಗಳು ಹೊರಪಡಿಕೆ ಗಳಾಗಿವೆ: ಇಕಾರ ಇಲ್ಲವೇ ಎಕಾರಗಳಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಈ ಒಟ್ಟುಗಳು ಬಂದಾಗ, ಯಕಾರ ಸೇರಿಕೊಳ್ಳುವ ಬದಲು ಈ ಒಟ್ಟುಗಳ ಇಕಾರ ಬಿದ್ದುಹೋಗುತ್ತದೆ. ಆದರೆ, ಇದ್ ಒಟ್ಟಿನ ಬಳಿಕ ತು ಒಟ್ಟು ಬಂದಿದೆಯಾದರೆ, ಅದರ ಇಕಾರ ಉಳಿದು ದ್ ಅಳಿಯುತ್ತದೆ, ಮತ್ತು ಇಂತಹ ಕಡೆಗಳಲ್ಲಿ ಪದಗಳ ಬಳಿಕ ಯಕಾರ ಸೇರಿಕೊಳ್ಳುತ್ತದೆ. ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:
ಇಸು
(1) ಇಕಾರ ಬಿದ್ದುಹೋಗುವುದು: ಕುಡಿ+ಇಸು ತೊಳೆ+ಇಸು ಕುಡಿ+ಇದ್+ಅ ತೊಳೆ+ಇದ್+ಅ
ಇದ್
ಕುಡಿಸು ತೊಳೆಸು ಕುಡಿದ ತೊಳೆದ
(2) ಇಕಾರ ಉಳಿದು ಯಕಾರ ಸೇರುವುದು:
ಇದ್
ಕುದಿ+ಇದ್+ತು ತಡೆ+ಇದ್+ತು
ಕುದಿಯಿತು ತಡೆಯಿತು
(3) ಅಕಾರ ಬಿದ್ದುಹೋಗುವುದು ಅಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಮತ್ತು ಎಸಕಪದಗಳ ಪರಿಚೆ ರೂಪದ ಬಳಿಕ ತೆರೆಯುಲಿಯಲ್ಲಿ ಮೊದಲಾಗುವ ಒಟ್ಟುಗಳು ಸೇರಿದಾಗ, ಪದ ಗಳ ಕೊನೆಯ ಅಕಾರ ಬಿದ್ದುಹೋಗುತ್ತದೆ. ಈ ಮಾರ್ಪಾಡು ಅರು, ಇಕೆ, ಮತ್ತು ಉದು ಒಟ್ಟುಗಳ ಬಳಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ:
ಅರು
ಇಕೆ
ಉದು
ಹುಡುಗ+ಅರು ಕಳ್ಳ+ಅರು
ಬೀಗ+ಅರು ಮಾಡುವ+ಇಕೆ ಕೊಡುವ+ಇಕೆ ಹೋಗದ+ಇಕೆ ಮಾಡುವ+ಉದು ತಿಂದ+ಉದು ಹೋಗದ+ಉದು
ಹುಡುಗರು ಕಳ್ಳರು ಬೀಗರು ಮಾಡುವಿಕ ಕೊಡುವಿಕೆ ಹೋಗದಿಕೆ ಮಾಡುವುದು ತಿಂದುದು ಹೋಗದುದು
4.2 ಎಸಕಪದಗಳ ಪದರೂಪಗಳು
ಎಸಕಪದಗಳಿಗೆ ಎಂತಹ ಪದರೂಪಗಳೆಲ್ಲ ಇವೆ ಎಂಬುದನ್ನು ತಿಳಿಸುವ ಒಂದು ಪಟ್ಟಿಯನ್ನು ಕೆಳಗೆ ಕೊಡಲಾಗಿದೆ; ಇದಕ್ಕಾಗಿ ಮಾಡು ಎಂಬ ಎಸಕಪದವನ್ನು ಆರಿಸಿಕೊಳ್ಳಲಾಗಿದೆ.
ಎಸಕಪದ: ಮಾಡು
- ಆಗಿಸುವ ರೂಪಗಳು ಮತ್ತು ಸೇರಿಸುವ ರೂಪಗಳು: ಆಗಿಸುವ ರೂಪ ಸೇರಿಸುವ ರೂಪ
ಮಾಡಿಸು ಮಾಡಿಕೊಳ್ಳು
- ಕೊನೆರೂಪಗಳು:
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ತಿಳಿಸುವ ರೂಪಗಳು: ಮುಂಬೊತ್ತು
ಓರೆಣಿಕೆ
ಮಾಡುತ್ತೇನೆ ಮಾಡುತ್ತಿ
ಮಾಡುತ್ತಾನೆ ಮಾಡುತ್ತಾಳೆ ಮಾಡುತ್ತದೆ
ಹಲವೆಣಿಕೆ ಮಾಡುತ್ತೇವೆ ಮಾಡುತ್ತೀರಿ ಮಾಡುತ್ತಾರೆ
ಮಾಡುತ್ತವೆ
ಪದರೂಪಗಳ ಇಟ್ಟಳ / 263
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ತಿಳಿಸುವ ರೂಪಗಳು: ಹಿಂಬೊತ್ತು
ಓರೆಣಿಕೆ
ಮಾಡಿದೆ
ಮಾಡಿದಿ
ಮಾಡಿದ
ಮಾಡಿದಳು ಮಾಡಿತು
ಹಲವೆಣಿಕೆ ಮಾಡಿದೆವು ಮಾಡಿದಿರಿ ಮಾಡಿದರು
ಮಾಡಿದುವು
(ಕೆಲಸ) ಮಾಡಿಸುವ ರೂಪಗಳು
ಓರೆಣಿಕೆ
ಹಲವೆಣಿಕೆ
ಆಡುಗ ಕೇಳುಗ ಹೆರತು
ಮಾಡಲಿ
ಮಾಡು
ಮಾಡೋಣ ಮಾಡಿ/ಮಾಡಿರಿ
ಮಾಡಲಿ
- ನಡುರೂಪಗಳು:
ಮುಂಬೊತ್ತು ಹಿಂಬೊತ್ತು
ಅಲ್ಲಗಳೆತ
ಪರಿಚೆರೂಪಗಳು ಮಾಡುವ ಮಾಡಿದ ಮಾಡದ
ಜೋಡಿಸುವ ರೂಪಗಳು
ಮಾರೆಸಕ
ಒಡನೆಸಕ
ಮೊದಲೆಸಕ ಅಲ್ಲಗಳೆದೆಸಕ
ಮಾಡಲು ಮಾಡುತ್ತ ಮಾಡಿ ಮಾಡದೆ
ಬೇಡಿಕೆಯ ರೂಪ ಮಾಡಿದರೆ
ಹೆಸರುರೂಪಗಳು-1
ಮುಂಬೊತ್ತು ಹಿಂಬೊತ್ತು
ಅಲ್ಲಗಳೆತ
ಮಾಡುವುದು ಮಾಡಿದುದು ಮಾಡದುದು
ನನಸು ಅಲ್ಲಗಳೆತ
ಹೆಸರುರೂಪಗಳು-2 ಮಾಡುವಿಕೆ ಮಾಡದಿಕೆ
4.3 ಆಗಿಸುವ ಮತ್ತು ಸೇರಿಸುವ ರೂಪಗಳು
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಅವುಗಳ ಆಗಿಸುವ ರೂಪವನ್ನು ಪಡೆಯಲಾಗುತ್ತದೆ, ಮತ್ತು ಎಸಕಪದಗಳ ಮೊದಲೆಸಕದ ಜೋಡಿಸುವ ರೂಪ ಗಳಿಗೆ ಕೊಳ್ಳು ಎಂಬುದನ್ನು ಸೇರಿಸಿ ಸೇರಿಸುವ ರೂಪಗಳನ್ನು ಪಡೆಯಲಾಗು ತ್ತದೆ.
ಈ ಎರಡು ಬಗೆಯ ಹೊಲಬುಗಳ ಮೂಲಕವೂ ಬೇರೆ ಎಸಕಪದಗಳ ಜಾಗದಲ್ಲಿ ಬಳಕೆಯಾಗಬಲ್ಲ ಪದಗಳನ್ನೇ ಉಂಟುಮಾಡಲಾಗುತ್ತದೆ; ಹಾಗಾಗಿ, ಒಂದು ರೀತಿಯಲ್ಲಿ ಇವು ಮೂರನೇ ಪಸುಗೆಯಲ್ಲಿ ತಿಳಿಸಬೇಕಾದ ವಿಶಯ ಗಳೆಂದೂ ಹೇಳಬಹುದು. ಆದರೆ, ಈ ಹೊಲಬುಗಳ ಮೂಲಕ ಉಂಟಾಗುವ ಎಸಕಪದಗಳು ಹಲವು ವಿಶಯಗಳಲ್ಲಿ ಪದರೂಪಗಳ ಹಾಗೆ ಕಾಣಿಸುವುವಾದ ಕಾರಣ, ಅವನ್ನು ಈ ಪಸುಗೆಯಲ್ಲಿ ಕೊಡಲಾಗಿದೆ:
ಮೂರನೆಯ ಪಸುಗೆಯಲ್ಲಿ ವಿವರಿಸಿದ ಹಾಗೆ, ಪದಗಳನ್ನು ಉಂಟುಮಾಡು ವಲ್ಲಿ ಬಳಕೆಯಾಗುವ ಒಟ್ಟುಗಳ ಕುರಿತಾಗಿ ಕಟ್ಟುನಿಟ್ಟಾದ ಕಟ್ಟಲೆಗಳನ್ನು ಕೊಡಲು ಬರುವುದಿಲ್ಲ; ಮತ್ತು, ಅವುಗಳ ಎಲ್ಲಾ ಬಳಕೆಗಳಿಗೂ ಹೊಂದಿಕೆ ಯಾಗುವಂತಹ ಹುರುಳುಗಳನ್ನೂ ಕೊಡಲು ಬರುವುದಿಲ್ಲ.
ಇದಲ್ಲದೆ, ಅವು ಕೆಲವೇ ಕೆಲವು ಎಸಕಪದಗಳೊಂದಿಗೆ ಮಾತ್ರ ಬರುತ್ತವೆ, ಮತ್ತು ಅವುಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವ ಸೇರಿಕೆಯ ಮಾರ್ಪಾಡುಗಳು ಬರಿಯ ಒಲವುಗಳಾಗಿರುತ್ತವಲ್ಲದೆ ಕಟ್ಟಲೆಗಳಲ್ಲ; ಅವಕ್ಕೆ ಹಲವಾರು ಹೊರ ಪಡಿಕೆಗಳಿರುತ್ತವೆ; ಈ ಎಲ್ಲಾ ಕಾರಣಗಳಿಗಾಗಿ, ಅಂತಹ ಒಟ್ಟುಗಳಿಂದ ಉಂಟು ಮಾಡಿರುವ ಪದಗಳೆಲ್ಲವನ್ನೂ ಪದನೆರಕೆಗಳಲ್ಲಿ ಕೊಡಬೇಕಾಗುತ್ತದೆ.
ಇಸು ಮತ್ತು ಕೊಳ್ಳು ಎಂಬವುಗಳು ಈ ಎಲ್ಲಾ ವಿಶಯಗಳಲ್ಲೂ ಪದ ಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುವ ಒಟ್ಟುಗಳಿಂದ ಬೇರಾಗಿವೆ: ಅವನ್ನು ಹೆಚ್ಚುಕಡಿಮೆ ಎಲ್ಲಾ ಎಸಕಪದಗಳೊಂದಿಗೂ ಬಳಸಲು ಬರುತ್ತದೆ, ಅವುಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವ ಸೇರಿಕೆಯ ಮಾರ್ಪಾಡುಗಳನ್ನು ಕಟ್ಟಲೆಗಳ ಮೂಲಕ ವಿವರಿಸಬಹುದು; ಯಾಕೆಂದರೆ, ಅವಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ.
ಇದಲ್ಲದೆ, ಈ ಎರಡು ಒಟ್ಟುಗಳಿಗೆ ಅವುಗಳ ಎಲ್ಲಾ ಬಳಕೆಗಳಲ್ಲೂ ಹೆಚ್ಚು ಕಡಿಮೆ ಒಂದೇ ಬಗೆಯ ಹುರುಳನ್ನು ಕೊಡಲು ಬರುತ್ತದೆ. ಹಾಗಾಗಿ, ಅವನ್ನು ಬಳಸಿ ಉಂಟುಮಾಡಬಲ್ಲ ಎಸಕಪದಗಳನ್ನು ಪದನೆರಕೆಗಳಲ್ಲಿ ಕೊಡಬೇಕಾಗುವು ದಿಲ್ಲ. ಈ ಕಾರಣಕ್ಕಾಗಿ, ಅವನ್ನಿಲ್ಲಿ ಎಸಕಪದಗಳ ಪದರೂಪಗಳೆಂದು ಕರೆಯ ಲಾಗಿದೆ.
ಪದರೂಪಗಳ ಇಟ್ಟಳ / 265
4.3.1 ಆಗಿಸುವ ರೂಪಗಳು
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಆಗಿಸುವ ರೂಪಗಳನ್ನು ಪಡೆಯ ಲಾಗುತ್ತದೆ. ಎತ್ತುಗೆಗಾಗಿ, ಮಾಡು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿ ಮಾಡಿಸು ಎಂಬ ಪದರೂಪವನ್ನು ಪಡೆಯಬಹುದು; ಈ ಪದರೂಪಕ್ಕೆ ಒಂದು ಕೆಲಸವನ್ನು ಇನ್ನೊಬ್ಬನಿಂದ ಆಗಿಸುವ ಇಲ್ಲವೇ ಮಾಡಿಸುವ ಹುರುಳಿದೆ. ಇದರ ಬಳಕೆಗೆ ಬೇರೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ನಗಿಸು ನಗು ಇಳಿಸು ಇಳಿ ಮೆರೆಸು
ಮೆರೆ ಅಂಜು ಅಂಜಿಸು
ಕಟ್ಟು ಆಗು ನಡುಗು ನಡುಗಿಸು
ಕಟ್ಟಿಸು ಆಗಿಸು
ಬಿಡಿಸು ಕುಣಿಸು ಒಗೆಸು
ಬಿಡು ಕುಣಿ ಒಗೆ ತುಂಬು ತುಂಬಿಸು ತಿದ್ದು ತಿದ್ದಿಸು ಆಡು ಆಡಿಸು ಮಲಗು ಮಲಗಿಸು
ಹೆಚ್ಚಿನ ಎಸಕಪದಗಳಿಗೂ ಈ ರೀತಿ ಇಸು ಒಟ್ಟನ್ನು ಸೇರಿಸಿ ಆಗಿಸುವ ರೂಪ ಗಳನ್ನು ಪಡೆಯಬಹುದು. ಆಗಿಸಲು ಬಾರದಂತಹ ಕೆಲಸವನ್ನು ತಿಳಿಸುವ ಕೆಲವೇ ಕೆಲವು ಎಸಕಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿ ಕಾಣಿಸಬಹುದು. ಎತ್ತುಗೆಗಾಗಿ, ನಮ್ಮ ಹತೋಟಿಗೆ ಸಿಗದ ಹಾಗೆ ನಡೆಯುವಂತಹ ಕೆಲವು ಎಸಕ ಗಳನ್ನು ತಿಳಿಸುವ ಕೆಮ್ಮು, ಉಳುಕು, ಸೀನು, ತೇಗು ಮೊದಲಾದ ಪದಗಳು, ಮನಸ್ಸಿನ ಸ್ತಿತಿಯನ್ನು ತಿಳಿಸುವ ಹೇಸು, ರೋಸು, ಮರುಗು, ಒಗ್ಗು ಮೊದಲಾದ ಪದಗಳು, ಮತ್ತು ಪ್ರಕ್ರುತಿಯಲ್ಲಿ ನಡೆಯುವ ಕೆಲವು ಎಸಕಗಳನ್ನು ತಿಳಿಸುವ ಮಿಂಚು, ಗುಡುಗು, ಜಿನುಗು, ಕಂದು ಮೊದಲಾದ ಪದಗಳು ಸಾಮಾನ್ಯವಾಗಿ ಈ ಒಟ್ಟಿನೊಂದಿಗೆ ಬಳಕೆಯಾಗುವುದಿಲ್ಲ.
ಆದರೆ, ನಿಜಕ್ಕೂ ಈ ಎಸಕಪದಗಳನ್ನು ಇಸು ಒಟ್ಟಿನ ಬಳಕೆಗೆ ಹೊರಪಡಿಕೆ ಗಳೆಂದು ತಿಳಿಯಬೇಕಾಗಿಲ್ಲ; ಯಾಕೆಂದರೆ, ಇಂತಹ ಪದಗಳೊಂದಿಗೂ ಅದನ್ನು ಬಳಸಬೇಕಾಗುವಂತಹ ಸಂದರ್ಬಗಳನ್ನು ನಾವು ಕಲ್ಪಿಸಿಕೊಳ್ಳಬಲ್ಲೆವು. ಎತ್ತುಗೆ ಗಾಗಿ, ದೇವರು ಗುಡುಗನ್ನು ಗುಡುಗಿಸಬಹುದು, ಮತ್ತು ಮಂತ್ರವಾದಿ ಯೊಬ್ಬ ಹುಡುಗನನ್ನು ಕೆಮ್ಮಿಸಬಹುದು, ಇಲ್ಲವೆ ಸೀನಿಸಬಹುದು. ಹಾಗಾಗಿ, ಇವು ಬಳಕೆಯ ಹೊರಪಡಿಕೆಗಳಲ್ಲದೆ ಸೊಲ್ಲರಿಮೆಯ ಹೊರಪಡಿಕೆಗಳಲ್ಲ.
‘ಇಸು ಒಟ್ಟಿನಲ್ಲಿ ಕೊನೆಗೊಳ್ಳುವ ಎಸಕಪದಗಳಿಗೆ ಇನ್ನೊಮ್ಮೆ ಇಸು ಒಟ್ಟನ್ನು ಸೇರಿಸಲು ಬರುವುದಿಲ್ಲ’ ಎಂಬ ಕಟ್ಟಲೆಯೊಂದಿದ್ದು, ಇದು ಇಸು ಒಟ್ಟಿನ ಬಳಕೆಗೆ ಇನ್ನೊಂದು ಬಗೆಯ ಹೊರಪಡಿಕೆಗಳನ್ನೊದಗಿಸುತ್ತದೆ. ಆದರೆ, ಒಂದು ಬಾರಿ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳಿಗೇನೇ ಅದನ್ನು ಎರಡು
ಬಾರಿ ಸೇರಿಸಿ ಪಡೆಯಬಹುದಾದ ಎಸಕಪದಗಳ ಹುರುಳೂ ದೊರೆಯುತ್ತದೆ. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳಲ್ಲಿ ಬಂದಿರುವ ಓಡು ಮತ್ತು ಓಡಿಸು ಪದ ಗಳ ಬಳಕೆಯನ್ನು ಗಮನಿಸಬಹುದು:
ನಾಯಿ ಓಡಿತು.
(1ಕ) (1ಚ) ಹುಡುಗ ನಾಯಿಯನ್ನು ಓಡಿಸಿದ. (1ಟ) ಆಕೆ ಹುಡುಗನ ಕಯ್ಯಲ್ಲಿ ನಾಯಿಯನ್ನು ಓಡಿಸಿದಳು.
ಓಡು ಎಸಕಪದ (1ಕ)ದಲ್ಲಿ ಒಂದು ಮಾಡುವಿಕೆಯನ್ನು ತಿಳಿಸುತ್ತದೆ; (1ಚ) ದಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಲಾಗಿದ್ದು, ಅದೊಂದು ಮಾಡಿಸುವಿಕೆಯನ್ನು ತಿಳಿಸುತ್ತದೆ; (1ಟ)ದಲ್ಲಿ ಅದಕ್ಕೆ ಬೇರೊಂದು ಇಸು ಒಟ್ಟನ್ನು ಸೇರಿಸದಿದ್ದರೂ, ಹಾಗೆ ಸೇರಿಸಿದಲ್ಲಿ ಸಿಗಬಹುದಾದ ಹುರುಳನ್ನು ಅದು ಕೊಡುತ್ತಿದೆ. (1ಚ) ತಿಳಿಸುವ ಓಡಿಸುವ ಎಸಕಕ್ಕೂ (1ಟ) ತಿಳಿಸುವ ಓಡಿಸುವ ಎಸಕಕ್ಕೂ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು.
ಕೆಲವು ಎಸಕಪದಗಳು ಇಸು ಒಟ್ಟನ್ನು ಸೇರಿಸದಿದ್ದರೂ ಆಗಿಸುವ ಹುರುಳನ್ನು ಕೊಡಬಲ್ಲುವು; ಎಂದರೆ, ಇವಕ್ಕೆ ಆಗುವಿಕೆ ಮತ್ತು ಮಾಡುವಿಕೆ ಎಂಬ ಈ ಎರಡು ಹುರುಳುಗಳಲ್ಲೂ ಬಳಕೆಯಿದೆ. ಎತ್ತುಗೆಗಾಗಿ, ತೆರೆ ಪದ ವನ್ನು ಬಳಸಿರುವ ಕೆಳಗಿನ ಎರಡು ಸೊಲ್ಲುಗಳನ್ನು ಗಮನಿಸಬಹುದು:
(2ಕ) ಬಾಗಿಲು ತೆರೆಯಿತು. (2ಚ) ಆತ ಬಾಗಿಲು ತೆರೆದ.
(2ಕ) ಸೊಲ್ಲಿನಲ್ಲಿ ತೆರೆ ಪದ ಒಂದು ಆಗುವಿಕೆಯನ್ನು ತಿಳಿಸುತ್ತದೆ, ಮತ್ತು (2ಚ) ಸೊಲ್ಲಿನಲ್ಲಿ ಅದೇ ಪದ ಒಂದು ಮಾಡುವಿಕೆಯನ್ನು ತಿಳಿಸುತ್ತದೆ. ಕನ್ನಡ ದಲ್ಲಿ ಈ ರೀತಿ ಯಾವ ಒಟ್ಟನ್ನೂ ಸೇರಿಸದೆ ಆಗುವಿಕೆ ಮತ್ತು ಮಾಡುವಿಕೆ ಗಳೆಂಬ ಎರಡು ಹುರುಳುಗಳನ್ನೂ ಕೊಡಬಲ್ಲ ಹೆಚ್ಚು ಕಡಿಮೆ ನೂರು ಎಸಕ ಪದಗಳಿವೆ; ಅವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ:
Er ಕರೆ ಚಲ್ಲು ತೀಡು ಬಿಗಿ ಬಿಚ್ಚು ಸಿಗಿ
ಒಡೆ ಕಳೆ ಚುಚ್ಚು ಕೇಳು ಕಲಕು ಮುರಿ ಮುಚ್ಚು ಬೀಸು ಹರಿ
ಹಿಡಿ
ಅಂಟು ಒತ್ತು ಒಪ್ಪು ಆಡು ಕುಕ್ಕು ತಳೆ ತಾಗು
ನಡೆ ಕಚ್ಚು ಚಾಚು ಜಾರು
ಕವುಚು ಕಳಚು ನಡೆ
ಕೆದರು ಬಸಿ ಬೆಳೆ ನಿಲ್ಲು ಬಗ್ಗು ಮಗುಚು ಮಡಚು ಸುಡು ಹರಡು ಸುಂದು ಸೀಳು
ಪದರೂಪಗಳ ಇಟ್ಟಳ / 267 ಇಂತಹ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಹೆಚ್ಚಿನೆಡೆಗಳಲ್ಲೂ ಅದು ಅವುಗಳ ಎರಡನೇ (ಮಾಡುವಿಕೆಯ) ಹುರುಳಿನಲ್ಲಿ ಸೇರಿಕೊಳ್ಳುತ್ತದೆ. ಎತ್ತುಗೆಗಾಗಿ, ತೆರೆಸಿದ ಎಂಬುದಕ್ಕೆ ಮಾಡಿಸುವಿಕೆಯ ಹುರುಳಿದೆ.
ಆದರೆ, ಕೆಲವು ಪದಗಳಲ್ಲಿ ಅದು ಮೊದಲನೆಯ (ಆಗುವಿಕೆಯ) ಹುರುಳಿ ನಲ್ಲೂ ಸೇರಬಲ್ಲುದು. ಎತ್ತುಗೆಗಾಗಿ, ಕುಲುಕು ಪದ ಆಗುವಿಕೆ ಮತ್ತು ಮಾಡುವಿಕೆಗಳೆಂಬ ಎರಡು ಹುರುಳುಗಳಲ್ಲೂ ಬಳಕೆಯಾಗುತ್ತದೆ; ಅದಕ್ಕೆ ಇಸು ಒಟ್ಟನ್ನು ಸೇರಿಸಿ ಪಡೆದ ಕುಲುಕಿಸು ಪದಕ್ಕೆ ಆಗಿಸುವ (ಎಂದರೆ ಮಾಡುವಿಕೆಯ) ಹುರುಳಿದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳೂ ಒಂದೇ ಹುರುಳಿನಲ್ಲಿ ಬಳಕೆಯಾಗುತ್ತವೆ:
(3ಕ) ಆತ ಗೆಲ್ಲನ್ನು ಕುಲುಕುತ್ತಿದ್ದಾನೆ. (3ಚ) ಆತ ಗೆಲ್ಲನ್ನು ಕುಲುಕಿಸುತ್ತಿದ್ದಾನೆ.
ಎಸಕಪದಗಳಿಗೆ ಈ ಒಟ್ಟನ್ನು ಸೇರಿಸಿದಾಗ, ಮೇಲೆ 4.1.1(1)ರಲ್ಲಿ ವಿವರಿಸಿದ ಉಕಾರ ಬಿದ್ದುಹೋಗುವ ಸೇರಿಕೆಯ ಮಾರ್ಪಾಡು ನಡೆಯುತ್ತದೆ (ಮಾಡು-ಮಾಡಿಸು, ಇರು-ಇರಿಸು); ಆದರೆ, 4.1.1(2)ರಲ್ಲಿ ವಿವರಿಸಿದ ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಯಕಾರ ಬಂದು ಸೇರುವ ಮಾರ್ಪಾಡು ನಡೆಯುವುದಿಲ್ಲ; ಇದಕ್ಕೆ ಬದಲು, ಇಸು ಒಟ್ಟಿನ ಇಕಾರ ಬಿದ್ದುಹೋಗುತ್ತದೆ (ಕುಡಿ-ಕುಡಿಸು, ನಡೆ-ನಡೆಸು).
4.3.2 ಸೇರಿಸುವ ರೂಪಗಳು
ಎಸಕಪದಗಳ ಮೊದಲೆಸಕದ ಜೋಡಿಸುವ ರೂಪಕ್ಕೆ (4.7.2 ನೋಡಿ) ಕೊಳ್ಳು ಪದವನ್ನು ಸೇರಿಸಿ, ಅವು ತಿಳಿಸುವ ಎಸಕವನ್ನು ಆಗುಗ ತಾನಾಗಿ ನಡೆಸಿದೆ, ಇಲ್ಲವೇ ಮಾಡುಗ ತನಗಾಗಿ ನಡೆಸಿದ್ದಾನೆ ಎಂಬ ಹುರುಳನ್ನು ಪಡೆಯುವ ಹೊಲಬು ಎರಡನೆಯದು (ಒಡೆ-ಒಡೆದುಕೊಳ್ಳು, ಉರುಳು-ಉರುಳಿಕೊಳ್ಳು, ಮಾಡು-ಮಾಡಿಕೊಳ್ಳು, ತಿನ್ನು-ತಿಂದುಕೊಳ್ಳು, ಕಟ್ಟು-ಕಟ್ಟಿಕೊಳ್ಳು).
ಕೊಳ್ಳು ಪದವನ್ನು ಬಳಸಿದಾಗ, ಎಸಕಪದಕ್ಕಿದ್ದ ಎರಡು ಪಾಂಗುಗಳು ಒಬ್ಬನೇ ವ್ಯಕ್ತಿಯಲ್ಲಿ ಇಲ್ಲವೇ ಒಂದೇ ವಸ್ತುವಿನಲ್ಲಿ ಸೇರಿಕೊಳ್ಳುತ್ತವೆ. ಎತ್ತುಗೆ ಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(4ಕ) ಅವರು ಮಕ್ಕಳಿಗೆ ಬಾಳೇಹಣ್ಣುಗಳನ್ನು ಹಂಚಿದರು. (4ಚ) ಅವರು ಬಾಳೇಹಣ್ಣುಗಳನ್ನು ಹಂಚಿಕೊಂಡರು.
(4ಕ) ಸೊಲ್ಲಿನಲ್ಲಿ ‘ಬಾಳೇಹಣ್ಣುಗಳನ್ನು ಹಂಚಿದವರು’ ಮತ್ತು ‘ಅವನ್ನು ಪಡೆದವರು’ ಬೇರೆ ಬೇರೆ ವ್ಯಕ್ತಿಗಳು (ಅವರು, ಮಕ್ಕಳು); ಆದರೆ (4ಚ) ಸೊಲ್ಲಿನಲ್ಲಿ ಬಾಳೇಹಣ್ಣುಗಳನ್ನು ಹಂಚುವ ವ್ಯಕ್ತಿಗಳೇ (ಅವರು) ಅವನ್ನು ಪಡೆ ಯುವ ವ್ಯಕ್ತಿಗಳಾಗಿದ್ದಾರೆ. (4ಚ)ದಲ್ಲಿ ಹಂಚು ಎಸಕಪದದೊಂದಿಗೆ ಕೊಳ್ಳು ಪದವನ್ನೂ ಬಳಸಿರುವುದರಿಂದಾಗಿ ಅದರಲ್ಲಿ ಈ ರೀತಿ ಎರಡು ಪಾಂಗುಗಳು (ಮಾಡುಗ ಮತ್ತು ಈಡು) ಒಟ್ಟುಸೇರಿವೆ.
ಎಸಕಪದಕ್ಕೆ ಕೊಳ್ಳು ಪದವನ್ನು ಸೇರಿಸಿದಾಗ ಅದರ ಎರಡು ಪಾಂಗುಗಳು ಈ ರೀತಿ ಒಟ್ಟು ಸೇರುತ್ತವೆಯಾದ ಕಾರಣ, ಈ ಪದರೂಪಗಳನ್ನು ಸೇರಿಸುವ ರೂಪಗಳು ಎಂಬುದಾಗಿ ಇಲ್ಲಿ ಹೆಸರಿಸಲಾಗಿದೆ.
ಈ ಪದರೂಪಗಳಲ್ಲಿ ಬರುವ ಮೊದಲೆಸಕದ ಒಟ್ಟಿಗೆ ಎಸಕಪದವನ್ನು ಕೊಳ್ಳು ಪದದೊಂದಿಗೆ ಸೇರಿಸುವ ಕೆಲಸ ಮಾತ್ರ ಇದೆಯಲ್ಲದೆ, ಎರಡು ಎಸಕ ಗಳಲ್ಲಿ ಒಂದು ಇನ್ನೊಂದರ ಬಳಿಕ ನಡೆಯುತ್ತದೆ ಎಂಬ ಹೊತ್ತಿನ ಹುರುಳನ್ನು ಕೊಡುವ ಕೆಲಸವಿಲ್ಲ; ಯಾಕೆಂದರೆ, ಇಲ್ಲಿ ಕೊಳ್ಳು ಪದ ಬೇರೊಂದು (ಎರಡನೆಯ) ಎಸಕವನ್ನು ತಿಳಿಸುವುದಕ್ಕಾಗಿ ಬಳಕೆಯಾಗಿಲ್ಲ.
5.2.1ರಲ್ಲಿ ವಿವರಿಸಿದಂತಹ ಇಸು ಒಟ್ಟಿನಲ್ಲಿ ಕೊನೆಗೊಳ್ಳುವ ಪದರೂಪ ಗಳ ಬಳಿಕವೂ ಕೊಳ್ಳು ಎಂಬುದು ಬರಬಲ್ಲುದು (ಉರುಳಿಸು-ಉರುಳಿಸಿ ಕೊಳ್ಳು, ಮಾಡಿಸು-ಮಾಡಿಸಿಕೊಳ್ಳು).
ಆಗುವಿಕೆಯನ್ನು ತಿಳಿಸುವ ಎಸಕಪದಗಳೊಂದಿಗೆ ಕೊಳ್ಳು ಪದವನ್ನು ಬಳಸಿ ದಾಗ, ಅವು ತಿಳಿಸುವ ಎಸಕ ತಾನಾಗಿ (ಬೇರೊಬ್ಬರ ನೆರವಿಲ್ಲದೆ) ನಡೆದಿದೆ ಯೆಂಬ ಹುರುಳು ದೊರಕುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(5ಕ) ಮರದ ಗೆಲ್ಲು ಮುರಿಯಿತು. (5ಚ) ಮರದ ಗೆಲ್ಲು ಮುರಿದುಕೊಂಡಿತು.
(5ಕ) ಸೊಲ್ಲಿಗೆ ‘ಮರದ ಗೆಲ್ಲನ್ನು ಯಾರೋ ಮುರಿದಿದ್ದಾರೆ’ ಎಂಬ ಹುರುಳೂ ಸಿಗಬಲ್ಲುದು; ಆದರೆ, (5ಚ) ಸೊಲ್ಲಿಗೆ ‘ಅದು ತಾನಾಗಿ ಮುರಿ ಯಿತು’ ಎಂಬ ಹುರುಳು ಮಾತ್ರ ಇದೆ. ಇಲ್ಲಿಯೂ ಯಾರೋ ಎಂಬುದು ತಿಳಿಸ ಬಲ್ಲ ಪಾಂಗು, ಕೊಳ್ಳು ಪದವನ್ನು ಎಸಕಪದಕ್ಕೆ ಸೇರಿಸಿದಾಗ, ಮರ ಪಾಂಗಿ ನೊಂದಿಗೆ ಸೇರಿಹೋಗುತ್ತದೆ ಎಂಬುದಾಗಿ ಹೇಳಬಲ್ಲೆವು.
ಪದರೂಪಗಳ ಇಟ್ಟಳ / 269
4.4 ಕೊನೆರೂಪಗಳು
ಎಸಕಪದಗಳಿಗೆ ಕೊನೆರೂಪಗಳು ಮತ್ತು ನಡುರೂಪಗಳು ಎಂಬುದಾಗಿ ಬೇರೆ ಎರಡು ಬಗೆಯ ಪದರೂಪಗಳಿರುತ್ತವೆ; ಮೇಲೆ ವಿವರಿಸಿದಂತಹ ಆಗಿಸುವ ಮತ್ತು ಸೇರಿಸುವ ರೂಪಗಳಿಗೂ ಇಂತಹ ಕೊನೆರೂಪಗಳು ಮತ್ತು ನಡುರೂಪ ಗಳು ಇವೆ. ಕೊನೆರೂಪಗಳು ಸೊಲ್ಲಿನ ಕೊನೆಯಲ್ಲಿ ಬಳಕೆಯಾಗುತ್ತವೆ, ಮತ್ತು ನಡುರೂಪಗಳು ಸೊಲ್ಲಿನ ನಡುವೆ ಬಳಕೆಯಾಗುತ್ತವೆ.
ಎತ್ತುಗೆಗಾಗಿ, ಹುಡುಗ ಮನೆಗೆ ಹೋಗಿ ಊಟ ಮಾಡಿದ ಎಂಬ ಸೊಲ್ಲಿ ನಲ್ಲಿ ಹೋಗಿ ಎಂಬ ನಡುರೂಪ (ಜೋಡಿಸುವ ರೂಪ) ಸೊಲ್ಲಿನ ನಡುವೆ ಬಂದಿದೆ ಮತ್ತು ಮಾಡಿದ ಎಂಬ ಕೊನೆರೂಪ ಸೊಲ್ಲಿನ ಕೊನೆಯಲ್ಲಿ ಬಂದಿದೆ. ಕೊನೆರೂಪಗಳಲ್ಲಿ ತಿಳಿಸುವರೂಪಗಳು ಮತ್ತು (ಕೆಲಸ)ಮಾಡಿಸುವ ರೂಪಗಳು ಎಂಬುದಾಗಿ ಎರಡು ಬಗೆಯ ರೂಪಗಳಿವೆ; ಇವುಗಳಲ್ಲಿ ತಿಳಿಸುವ ರೂಪಗಳನ್ನು ಒಂದು ಇರುಹ ಇಲ್ಲವೇ ಎಸಕವನ್ನು ತಿಳಿಸುವಂತಹ ಸೊಲ್ಲು ಗಳಲ್ಲಿ ಬಳಸಲಾಗುತ್ತದೆ, ಮತ್ತು ಕೆಲಸಮಾಡಿಸುವ ರೂಪಗಳನ್ನು ಒಂದು ಕೆಲಸವನ್ನು ಕೇಳುಗನಿಂದ ಇಲ್ಲವೇ ಬೇರೊಬ್ಬ(ಹೆರತು)ನಿಂದ ಮಾಡಿಸುವಂತಹ ಸೊಲ್ಲುಗಳಲ್ಲಿ ಬಳಸಲಾಗುತ್ತದೆ.
ತಿಳಿಸುವ ಕೊನೆರೂಪಗಳಲ್ಲಿ ಎಸಕಗಳನ್ನು ನೆಲೆಗೊಳಿಸುವುದಕ್ಕಾಗಿ ಎಸಕದ ಹೊತ್ತನ್ನು ತಿಳಿಸುವ ಒಂದು ಹೊತ್ತಿನ ಒಟ್ಟು ಬರುತ್ತದೆ, ಮತ್ತು ಅದರ ಬಳಿಕ ಆಗುಹಗಳ ಆಗುಗವನ್ನು, ಮಾಡುಹಗಳ ಮಾಡುಗವನ್ನು, ಮತ್ತು ಆಗಿಸುಹಗಳ ಆಗಿಸುಗವನ್ನು ಅಡಕವಾಗಿ ತಿಳಿಸುವುದಕ್ಕಾಗಿ ಗುರುತಿನ ಒಟ್ಟು ಬರುತ್ತದೆ.
ಎತ್ತುಗೆಗಾಗಿ, ಹಾಡುತ್ತಾಳೆ ಎಂಬ ಪದರೂಪದಲ್ಲಿ ಹಾಡು ಎಂಬ ಎಸಕ ಪದದ ಬಳಿಕ ಉತ್್ತ ಎಂಬ ಹೊತ್ತಿನ ಒಟ್ಟು ಬಂದಿದ್ದು, ‘ಎಸಕದ ಹೊತ್ತು ಆ ಎಸಕರೂಪವನ್ನು ಆಡಿರುವ ಹೊತ್ತಿನ ಬಳಿಕದ್ದು’ ಎಂಬುದಾಗಿ ಅದು ತಿಳಿಸು ತ್ತದೆ; ಮತ್ತು ಅದರ ಬಳಿಕ ಆಳೆ ಎಂಬ ಗುರುತಿನ ಒಟ್ಟು ಬಂದಿದ್ದು, ‘ಆ ಎಸಕದ ಮಾಡುಗ ಒಬ್ಬ ಹೆಂಗಸು (ಇಲ್ಲವೇ ಹುಡುಗಿ)’ ಎಂಬುದನ್ನು ಅದು ಅಡಕವಾಗಿ ತಿಳಿಸುತ್ತದೆ.
ಇದಕ್ಕೆ ಬದಲು, ಕೆಲಸಮಾಡಿಸುವ ರೂಪಗಳಲ್ಲಿ ಯಾವ ಒಟ್ಟೂ ಬಾರದಿರ ಬಹುದು, ಇಲ್ಲವೇ ಎಣಿಕೆಯನ್ನು ಸೂಚಿಸುವ ಒಟ್ಟಾಗಲಿ, ಗುರುತಿನ ಒಟ್ಟಾಗಲಿ ಬರಬಹುದು. ಎತ್ತುಗೆಗಾಗಿ, ಒಬ್ಬ ಕೇಳುಗನಿಂದ ಕೆಲಸವನ್ನು ಮಾಡಿಸುವಲ್ಲಿ ಬಳಕೆಯಾಗುವ ಹೋಗು ಪದರೂಪದಲ್ಲಿ ಹೋಗು ಎಸಕಪದ ಯಾವ ಒಟ್ಟಿ ನೊಂದಿಗೂ ಸೇರದೆ ಬಂದಿದೆ; ಇಬ್ಬರು ಇಲ್ಲವೇ ಹೆಚ್ಚು ಮಂದಿ ಕೇಳುಗರಿಂದ ಕೆಲಸಮಾಡಿಸುವ ಹೋಗಿ ಪದರೂಪದಲ್ಲಿ ಇ ಎಂಬ ಎಣಿಕೆಯ ಒಟ್ಟು ಬಂದಿದೆ; ಬೇರೊಬ್ಬನಿಂದ ಕೆಲಸಮಾಡಿಸುವ ಹೋಗಲಿ ಪದರೂಪದಲ್ಲಿ ‘ಕೆಲಸ
ಮಾಡಬೇಕಾದವನು ಕೇಳುಗನಲ್ಲ, ಬೇರೊಬ್ಬ’ ಎಂಬುದನ್ನು ತಿಳಿಸುವ ಅಲಿ ಎಂಬ ಗುರುತಿನ ಒಟ್ಟು ಬಂದಿದೆ.
4.5 ಕೊನೆರೂಪಗಳ ಇಟ್ಟಳ: ತಿಳಿಸುವ ರೂಪಗಳು
ಮೇಲೆ ತಿಳಿಸಿದ ಹಾಗೆ, ಎಸಕಪದಗಳ ಕೊನೆರೂಪಗಳಲ್ಲಿ ತಿಳಿಸುವ ರೂಪಗಳು ಮತ್ತು ಕೆಲಸ ಮಾಡಿಸುವ ರೂಪಗಳು ಎಂಬುದಾಗಿ ಎರಡು ಬಗೆ ರೂಪ ಗಳಿದ್ದು, ಅವುಗಳಲ್ಲಿ ತಿಳಿಸುವ ರೂಪಗಳನ್ನು ಪಡೆಯುವ ಬಗೆ ಹೇಗೆ ಎಂಬು ದನ್ನು ಕೆಳಗೆ ವಿವರಿಸಲಾಗಿದೆ.
ಇದಕ್ಕಾಗಿ ಎಸಕಪದಗಳಿಗೆ ಹೊತ್ತಿನ ಒಟ್ಟು ಮತ್ತು ಗುರುತಿನ ಒಟ್ಟು ಎಂಬುದಾಗಿ ಎರಡು ಬಗೆಯ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ. ಇವುಗಳಲ್ಲಿ ಎಸಕದ ಹೊತ್ತನ್ನು ತಿಳಿಸುವ ಮುಂಬೊತ್ತು ಮತ್ತು ಹಿಂಬೊತ್ತು ಎಂಬ ಎರಡು ಬಗೆಯ ಒಟ್ಟುಗಳನ್ನು ಸೇರಿಸುವ ಬಗೆ ಹೇಗೆ ಎಂಬುದನ್ನು ಮೊದಲಿಗೆ ವಿವರಿಸ ಲಾಗಿದೆ, ಮತ್ತು ಎಸಕಗಳ ಆಗುಗ, ಮಾಡುಗ ಇಲ್ಲವೇ ಆಗಿಸುಗವನ್ನು ತಿಳಿಸುವ ಗುರುತಿನ ಒಟ್ಟನ್ನು ಸೇರಿಸುವ ಬಗೆ ಹೇಗೆ ಎಂಬುದನ್ನು ಆಮೇಲೆ ವಿವರಿಸ ಲಾಗಿದೆ.
4.5.1 ಎಸಕದ ಹೊತ್ತು
ಕನ್ನಡದ ಆಗುಹ ಮತ್ತು ಮಾಡುಹಗಳನ್ನು ತಿಳಿಸುವ ಎಸಕ ಪದಗಳೊಂದಿಗೆ ಮುಂಬೊತ್ತು ಮತ್ತು ಹಿಂಬೊತ್ತು ಎಂಬುದಾಗಿ ಎರಡು ಬಗೆಯ ಹೊತ್ತು ಗಳನ್ನು ತಿಳಿಸುವ ಒಟ್ಟುಗಳು ಬರುತ್ತವೆ. ಇವುಗಳಲ್ಲಿ ಮುಂಬೊತ್ತಿನ ಒಟ್ಟು ‘ಎಸಕಗಳ ಹೊತ್ತು ಅವನ್ನು ತಿಳಿಸುವ ಸೊಲ್ಲನ್ನು ಆಡುವ ಹೊತ್ತಿನ ಬಳಿಕದ್ದು’ ಎಂಬುದನ್ನು ತಿಳಿಸುತ್ತದೆ, ಮತ್ತು ಹಿಂಬೊತ್ತಿನ ಒಟ್ಟು ‘ಎಸಕಗಳ ಹೊತ್ತು ಆಡುವ ಹೊತ್ತಿಗಿಂತ ಹಿಂದಿನದು’ ಎಂಬುದನ್ನು ತಿಳಿಸುತ್ತದೆ.
ಎತ್ತುಗೆಗಾಗಿ, ಹಾಡುತ್ತಾಳೆ ಎಂಬ ಎಸಕಪದರೂಪದಲ್ಲಿ ಮುಂಬೊತ್ತಿನ ಉತ್್ತ ಒಟ್ಟು ಬಂದಿದೆ, ಮತ್ತು ಅದು ಹುಡುಗಿ ಯಾವಾಗ ಹಾಡುತ್ತಾಳೆ ಎಂಬು ದನ್ನು ತಿಳಿಸುತ್ತದೆ: ‘ಹುಡುಗಿ ಹಾಡುತ್ತಾಳೆ ಎಂಬ ಸೊಲ್ಲನ್ನು ಆಡಿರುವ ಹೊತ್ತಿನ ಬಳಿಕ ಆಕೆ ಹಾಡುತ್ತಾಳೆ’ ಎಂಬುದಾಗಿ ಅದು ತಿಳಿಸುತ್ತದೆ; ಹಾಡಿದಳು ಎಂಬುದರಲ್ಲಿ ಹಿಂಬೊತ್ತಿನ ಇದ್ ಒಟ್ಟು ಬಂದಿದೆ, ಮತ್ತು ಅದೂ ಕೂಡ ಹುಡುಗಿ ಯಾವಾಗ ಹಾಡುತ್ತಾಳೆ ಎಂಬುದನ್ನೇ ತಿಳಿಸುತ್ತದೆ: ‘ಹುಡುಗಿ ಹಾಡಿದಳು ಎಂಬ ಸೊಲ್ಲನ್ನು ಆಡಿರುವ ಹೊತ್ತಿಗಿಂತ ಮೊದಲೇನೇ ಆಕೆ ಹಾಡಿದ್ದಾಳೆ’ ಎಂಬುದಾಗಿ ಅದು ತಿಳಿಸುತ್ತದೆ. ಹೀಗೆ, ಈ ಎರಡು ಹೊತ್ತಿನ
ಪದರೂಪಗಳ ಇಟ್ಟಳ / 271
ಒಟ್ಟುಗಳೂ ಆಡುಗನು ತಿಳಿಸುವ ಎಸಕದ ಹೊತ್ತನ್ನು ಆತನ ಹೊತ್ತಿಗೆ (ಎಂದರೆ ಆತನು ಆ ಎಸಕಪದವಿರುವ ಸೊಲ್ಲನ್ನು ಆಡಿರುವ ಹೊತ್ತಿಗೆ) ಹೊಂದಿಸುವ ಮೂಲಕ, ಅದನ್ನು ನೆಲೆಗೊಳಿಸುತ್ತವೆ.
ಒಂದು ಸೊಲ್ಲನ್ನು ಆಡುವ ಹೊತ್ತಿನಲ್ಲೇನೇ ಅದು ತಿಳಿಸುವ ಎಸಕವೂ ನಡೆಯುತ್ತಿದೆ ಎಂಬುದಾಗಿ ಹೇಳಬೇಕಿದ್ದಲ್ಲಿ, ಆ ಎಸಕ ತುಸು ಹೊತ್ತು ನಡೆಯುವಂತಹದಾಗಿರಬೇಕಾಗುತ್ತದೆ. ಕನ್ನಡದಲ್ಲಿ ಇದಕ್ಕಾಗಿ ಹಾಡುತ್ತಿದ್ದಾಳೆ ಎಂಬಂತಹ ಎಸಕಪದಕಂತೆಯನ್ನು ಬಳಸಬೇಕಾಗುತ್ತದೆ.
ಎಸಕಪದಗಳ
ಮುಂಬೊತ್ತಿನ ಕೊನೆರೂಪವನ್ನು ಉಂಟುಮಾಡುವಲ್ಲಿ ಒಟ್ಟಿಗೂ ಹಿಂಬೊತ್ತಿನ ಒಟ್ಟಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸ ಇದೆ; ಮುಂಬೊತ್ತಿನ ಒಟ್ಟು ಎಲ್ಲಾ ಬಗೆಯ ಎಸಕಪದಗಳೊಂದಿಗೂ ಹೆಚ್ಚು ಕಡಿಮೆ ಒಂದೇ ರೂಪದಲ್ಲಿ ಬರುತ್ತದೆ; ಅದನ್ನು ಸೇರಿಸಿದಾಗ ಎಸಕಪದಗಳಲ್ಲೂ ಹೆಚ್ಚಿನ ಮಾರ್ಪಾಡುಗಳೇನೂ ನಡೆಯುವುದಿಲ್ಲ. ಹಾಗಾಗಿ, ಈ ಪದರೂಪಗಳ ಇಟ್ಟಳ ವನ್ನು ತುಂಬಾ ಸುಳುವಾಗಿ ವಿವರಿಸಬಲ್ಲೆವು.
ಆದರೆ, ಹಿಂಬೊತ್ತಿನ ಒಟ್ಟನ್ನು ಎಸಕಪದಗಳಿಗೆ ಸೇರಿಸಿದಾಗ ಆ ಒಟ್ಟಿನ ರೂಪದಲ್ಲಿ ಮತ್ತು ಎಸಕಪದಗಳ ರೂಪದಲ್ಲಿ ಹಲವು ಬಗೆಯ ಮಾರ್ಪಾಡುಗಳು ನಡೆಯುತ್ತವೆ. ಅದರ ಬಳಿಕ ಬರುವ ಗುರುತಿನ ಒಟ್ಟುಗಳಲ್ಲೂ ಹಲವು ಬಗೆಯ ಮಾರ್ಪಾಡುಗಳು ನಡೆಯುತ್ತವೆ. ಹಾಗಾಗಿ, ಹಿಂಬೊತ್ತಿನ ಪದರೂಪಗಳ ಇಟ್ಟಳ ವನ್ನು ತಿಳಿದುಕೊಳ್ಳುವುದು ತುಸು ತೊಡಕಿನ ಕೆಲಸ.
4.5.2 ಮುಂಬೊತ್ತಿನ ಒಟ್ಟು
ಮುಂಬೊತ್ತನ್ನು ತಿಳಿಸುವ ಉತ್್ತ ಒಟ್ಟಿಗೆ ಎಲ್ಲಾ ಕಡೆಗಳಲ್ಲೂ ಒಂದೇ ರೂಪ ವಿದೆ. ಆದರೆ, ಈ ಒಟ್ಟು ಸೇರುವಾಗ, ಮೇಲೆ 4.1.1(1)ರಲ್ಲಿ ವಿವರಿಸಿದಂತೆ, ಉಕಾರದಲ್ಲಿ ಕೊನೆಗೊಳ್ಳುವ ಎಸಕ ಪದಗಳ ಉಕಾರ ಬಿದ್ದುಹೋಗುತ್ತದೆ; ಮತ್ತು 4.1.1(2)ರಲ್ಲಿ ವಿವರಿಸಿದಂತೆ, ಎಕಾರ ಇಲ್ಲವೇ ಇಕಾರಗಳಲ್ಲಿ ಕೊನೆ ಗೊಳ್ಳುವ ಎಸಕಪದಗಳ ಮುಂದೆ ಯಕಾರವೊಂದು ಸೇರಿಕೊಳ್ಳುತ್ತದೆ. ಈ ಎರಡು ಸೇರಿಕೆಯ ಮಾರ್ಪಾಡುಗಳಿಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(1) ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಕೊನೆಯ ಉಕಾರ ಬಿದ್ದು ಹೋಗುವುದು:
ನಡುಗು
ತೂಗು ನಂಬು
ನಡುಗುತ್ತಾನೆ (ನಡುಗ್-ಉತ್್ತ-ಆನೆ) ತೂಗುತ್ತಾನೆ (ತೂಗ್-ಉತ್್ತ-ಆನೆ) ನಂಬುತ್ತಾನೆ (ನಂಬ್-ಉತ್್ತ-ಆನೆ)
ಕಟ್ಟು ಬಿಡು
ಕಟ್ಟುತ್ತಾನೆ (ಕಟ್್ಟ-ಉತ್್ತ-ಆನೆ) ಬಿಡುತ್ತಾನೆ (ಬಿಡ್-ಉತ್್ತ-ಆನೆ)
(2) ಎಕಾರ ಮತ್ತು ಇಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳ ಮುಂದೆ
ಯಕಾರ ಸೇರಿಕೊಳ್ಳುವುದು:
ಬರೆ ನಡೆ ಕುಡಿ ಹೊಲಿ
ಬರೆಯುತ್ತಾನೆ (ಬರೆಯ್-ಉತ್್ತ-ಆನೆ) ನಡೆಯುತ್ತಾನೆ (ನಡೆಯ್-ಉತ್್ತ-ಆನೆ) ಕುಡಿಯುತ್ತಾನೆ (ಕುಡಿಯ್-ಉತ್್ತ-ಆನೆ) ಹೊಲಿಯುತ್ತಾನೆ (ಹೊಲಿಯ್-ಉತ್್ತ-ಆನೆ)
ಉತ್್ತ ಒಟ್ಟನ್ನು ಸೇರಿಸಿರುವ ಈ ಪದರೂಪಗಳನ್ನು ಕೆಲವು ಕಡೆಗಳಲ್ಲಿ ಮುಂಬೊತ್ತಿನ ಬದಲು ಬಳಕೆಯ ಹೊತ್ತನ್ನು ತಿಳಿಸುವ ಹುರುಳಿನಲ್ಲೂ ಬಳಸ ಲಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(6ಕ) ಅವರು ಇವತ್ತು ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ. (6ಚ) ಅವರು ದಿನಾಲೂ ಎಂಟು ಗಂಟೆಗೆ ಅಂಗಡಿ ತೆರೆಯುತ್ತಾರೆ.
(6ಕ) ಸೊಲ್ಲು ಅದನ್ನು ಆಡಿರುವ ಹೊತ್ತಿನ ಬಳಿಕ ನಡೆಯುವಂತಹ ಎಸಕ ವೊಂದನ್ನು ತಿಳಿಸುತ್ತದೆ; ಇದಕ್ಕೆ ಬದಲು, (6ಚ) ಸೊಲ್ಲು ಅದನ್ನು ಆಡಿರುವ ಹೊತ್ತಿಗಿಂತ ಮೊದಲು ಮತ್ತು ಆಮೇಲೂ ನಡೆಯುವಂತಹ ಬಳಕೆಯಲ್ಲಿರುವ ಎಸಕವೊಂದನ್ನು ತಿಳಿಸುತ್ತದೆ ಎಂಬುದನ್ನು ಗಮನಿಸಬಹುದು. (6ಚ) ಸೊಲ್ಲಿ ನಲ್ಲಿ ಬಂದಿರುವ ದಿನಾಲೂ ಪದ ಅದಕ್ಕೆ ಈ ಎರಡನೆಯ ಹುರುಳು ಬರುವ ಹಾಗೆ ಮಾಡುತ್ತದೆ. ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲೂ ಇಂತಹ ಬಳಕೆಯ ಹೊತ್ತನ್ನು ತಿಳಿಸುವುದಕ್ಕಾಗಿ ಉತ್್ತ ಒಟ್ಟನ್ನು ಬಳಸಲಾಗಿದೆ.
(7ಕ) ಮೂರಕ್ಕೆ ನಾಲ್ಕು ಸೇರಿಸಿದರೆ ಏಳಾಗುತ್ತದೆ. (7ಚ) ಆತನನ್ನು ಕಂಡಾಗಲೆಲ್ಲ ಈ ನಾಯಿ ಬೊಗಳುತ್ತದೆ. (7ಟ) ಈ ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಾರೆ.
4.5.3 ಹಿಂಬೊತ್ತಿನ ಒಟ್ಟು
ಹಿಂಬೊತ್ತನ್ನು ತಿಳಿಸುವ ಇದ್ ಒಟ್ಟಿನಲ್ಲಿ ಅದರ ಮೊದಲಿರುವ ಎಸಕ ಪದ ವನ್ನವಲಂಬಿಸಿ, ಮತ್ತು ಅದರ ಬಳಿಕ ಬರುವ ಗುರುತಿನ ಒಟ್ಟನ್ನವಲಂಬಿಸಿ, ಹಲವು ಮಾರ್ಪಾಡುಗಳು ನಡೆಯುತ್ತವೆ. ಅದರ ಮೊದಲಿರುವ ಎಸಕಪದ ಗಳಲ್ಲೂ ಹಲವು ಮಾರ್ಪಾಡುಗಳು ನಡೆಯುತ್ತವೆ. ಇವುಗಳಲ್ಲಿ ಕೆಲವನ್ನು ಮುಕ್ಯ
ಪದರೂಪಗಳ ಇಟ್ಟಳ / 273
ಮಾರ್ಪಾಡುಗಳೆಂದು ಕರೆಯಬಹುದು, ಮತ್ತು ಉಳಿದವುಗಳನ್ನು ಅವಕ್ಕಿರುವ ಹೊರಪಡಿಕೆಗಳೆಂದು ಕರೆಯಬಹುದು.
ಉಕಾರದಲ್ಲಿ ಕೊನೆಗೊಳ್ಳುವ ಎಸಕ ಪದಗಳೊಂದಿಗೆ ಮಾತ್ರ ಈ ಒಟ್ಟು ಇದ್ ಎಂಬ ರೂಪದಲ್ಲಿ ಬರುತ್ತದೆ. ಇದು ಸೇರಿದಾಗ, ಮೇಲೆ 4.1.1(1)ರಲ್ಲಿ ವಿವರಿಸಿದಂತೆ, ಈ ಎಸಕಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ನಡುಗು
ಮಾಡು
ಹರಸು ಕಟ್ಟು
ನಡುಗಿದ (ನಡುಗ್-ಇದ್-ಅ < ನಡುಗು-ಇದ್-ಅ) ಮಾಡಿದ (ಮಾಡ್-ಇದ್-ಅ < ಮಾಡು-ಇದ್-ಅ) ಹರಸಿದ (ಹರಸ್-ಇದ್-ಅ < ಹರಸು-ಇದ್-ಅ) ಕಟ್ಟಿದ (ಕಟ್್ಟ-ಇದ್-ಅ < ಕಟ್ಟು-ಇದ್-ಅ)
ಮೇಲೆ ಕೊಟ್ಟಿರುವ ಎಸಕ ಪದರೂಪಗಳಲ್ಲಿ ಇದ್ ಎಂಬ ಹಿಂಬೊತ್ತನ್ನು ತಿಳಿಸುವ ಒಟ್ಟಿನ ಬಳಿಕ ಅ ಎಂಬ ಗುರುತಿನ ಒಟ್ಟು (4.5.7 ನೋಡಿ) ಬಂದಿದೆ ಎಂಬುದನ್ನು ಗಮನಿಸಬಹುದು.
ಬೇರೆ ಗುರುತಿನ ಒಟ್ಟುಗಳು ಬಂದಾಗಲೂ ಇವೇ ಮಾರ್ಪಾಡುಗಳು ನಡೆಯು
ತ್ತವೆ ಎಂಬುದನ್ನು ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಕಾಣಬಹುದು:
ಮಾಡಿದೆ (ಮಾಡ್-ಇದ್-ಎ) ‘ನಾನು ಮಾಡಿದೆ’ ಮಾಡಿದೆವು (ಮಾಡ್-ಇದ್-ಎವು) ‘ನಾವು ಮಾಡಿದೆವು’ ಮಾಡಿದಿ (ಮಾಡ್-ಇದ್-ಇ) ‘ನೀನು ಮಾಡಿದಿ’ ಮಾಡಿದಿರಿ (ಮಾಡ್-ಇದ್-ಇರಿ) ‘ನೀವು ಮಾಡಿದಿರಿ’ ಮಾಡಿದ (ಮಾಡ್-ಇದ್-ಅ) ‘ಅವನು ಮಾಡಿದ’ ಮಾಡಿದಳು (ಮಾಡ್-ಇದ್-ಅಳು) ‘ಅವಳು ಮಾಡಿದಳು’ ಮಾಡಿದರು (ಮಾಡ್-ಇದ್-ಅರು) ‘ಅವರು ಮಾಡಿದರು’ ಮಾಡಿದುವು (ಮಾಡ್-ಇದ್-ಉವು) ‘ಅವು ಮಾಡಿದುವು’
ಆದರೆ, ‘ಅದು ಮಾಡಿತು’ ಎಂಬ ಹುರುಳನ್ನು ಕೊಡುವ ಮಾಡಿತು (ಮಾಡ್-ಇ-ತು) ಎಂಬಂತಹ ಪದರೂಪಗಳಲ್ಲಿ ಮಾತ್ರ ಬೇರೆ ತರದ ಮಾರ್ಪಾಡುಗಳು ನಡೆಯುತ್ತವೆ: ಅಲ್ಲಿ ಹಿಂಬೊತ್ತಿನ ಇದ್ ಒಟ್ಟು ಇ ರೂಪದಲ್ಲಿ ಬರುತ್ತದೆ (ಅದರ ದಕಾರ ಬಿದ್ದುಹೋಗುತ್ತದೆ), ಮತ್ತು ಅದರ ಬಳಿಕ ತು ಎಂಬ ಗುರುತಿನ ಒಟ್ಟು ಬರುತ್ತದೆ. ಇದಕ್ಕೆ ಬೇರೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ನಡುಗು
ತೇಲು
ನಡುಗಿತು (ನಡುಗ್-ಇ-ತು < ನಡುಗು-ಇದ್-ತು) ತೇಲಿತು (ತೇಲ್-ಇ-ತು < ತೇಲು-ಇದ್-ತು)
ತುಂಬು
ಕಟ್ಟು
ತುಂಬಿತು (ತುಂಬ್-ಇ-ತು < ತುಂಬು-ಇದ್-ತು) ಕಟ್ಟಿತು (ಕಟ್್ಟ-ಇ-ತು < ಕಟ್ಟು-ಇದ್-ತು)
ಎಕಾರ ಮತ್ತು ಇಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳೊಂದಿಗೆ ಹಿಂಬೊತ್ತಿನ ಇದ್ ಒಟ್ಟು ದ್ ರೂಪದಲ್ಲಿ ಬರುತ್ತದೆ (ಎಂದರೆ, ಅದರ ಇಕಾರ ಬಿದ್ದುಹೋಗುತ್ತದೆ); ಇದು 4.1.1(2)ರಲ್ಲಿ ಕೊಟ್ಟಿರುವ ಸೇರಿಕೆಯ ಕಟ್ಟಲೆಗೆ ಹೊರಪಡಿಕೆಯಾಗಿದೆ:
ಕರೆ ಬರೆ ಕುಡಿ ಕುಣಿ
ಕರೆದ (ಕರೆ-ದ್-ಅ < ಕರೆ-ಇದ್-ಅ) ಬರೆದ (ಬರೆ-ದ್-ಅ < ಬರೆ-ಇದ್-ಅ) ಕುಡಿದ (ಕುಡಿ-ದ್-ಅ <ಕುಡಿ-ಇದ್-ಅ) ಕುಣಿದ (ಕುಣಿ-ದ್-ಅ < ಕುಣಿ-ಇದ್-ಅ)
ಈ ಪದರೂಪಗಳಲ್ಲಿ ಬೇರೆ ಗುರುತಿನ ಒಟ್ಟುಗಳು ಬಂದಾಗಲೂ ಇವೇ ಮಾರ್ಪಾಡುಗಳು ನಡೆಯುತ್ತವೆಯೆಂಬುದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
ಕುಡಿದೆ (ಕುಡಿ-ದ್-ಎ) ಕುಡಿದೆವು (ಕುಡಿ-ದ್-ಎವು) ಕುಡಿದಿ (ಕುಡಿ-ದ್-ಇ) ಕುಡಿದಿರಿ (ಕುಡಿ-ದ್-ಇರಿ)
ಕುಡಿದ (ಕುಡಿ-ದ್-ಅ) ಕುಡಿದಳು (ಕುಡಿ-ದ್-ಅಳು) ಕುಡಿದರು (ಕುಡಿ-ದ್-ಅರು)
ಕುಡಿದುವು (ಕುಡಿ-ದ್-ಉವು)
ಬರೆದೆ (ಬರೆ-ದ್-ಎ) ಬರೆದೆವು (ಬರೆ-ದ್-ಎವು) ಬರೆದಿ (ಬರೆ-ದ್-ಇ) ಬರೆದಿರಿ (ಬರೆ-ದ್-ಇರಿ) ಬರೆದ (ಬರೆ-ದ್-ಅ) ಬರೆದಳು (ಬರೆ-ದ್-ಅಳು) ಬರೆದರು (ಬರೆ-ದ್-ಅರು) ಬರೆದುವು (ಬರೆ-ದ್-ಉವು)
ಇಲ್ಲೂ ಕೂಡ, ‘ಅದು ಕುಡಿಯಿತು’ ಮತ್ತು ‘ಅದು ಬರೆಯಿತು’ ಎಂಬ ಹುರುಳುಗಳನ್ನು ಕೊಡುವ ಕುಡಿಯಿತು ಮತ್ತು ಬರೆಯಿತು ಎಂಬಂತಹ ರೂಪ ಗಳು ಬೇರೆ ಬಗೆಯ ಮಾರ್ಪಾಡುಗಳನ್ನು ತೋರಿಸುತ್ತವೆ: ಎಸಕಪದದ ಬಳಿಕ ಯ್ ಎಂಬುದು ಸೇರಿಕೊಳ್ಳುತ್ತದೆ (4.1.1(2)ರ ಸೇರಿಕೆಯ ಕಟ್ಟಲೆಯಂತೆ), ಮತ್ತು ಹಿಂಬೊತ್ತನ್ನು ತಿಳಿಸುವ ಇದ್ ಒಟ್ಟಿನ ದ್ ಬಿದ್ದುಹೋಗುತ್ತದೆ.
ಕುದಿ ತಿಳಿ ಕುಡಿ ಒಡೆ ಎಳೆ ಬರೆ
ಕುದಿಯಿತು (ಕುದಿಯ್-ಇ-ತು <ಕುದಿ-ಇದ್-ತು) ತಿಳಿಯಿತು (ತಿಳಿಯ್-ಇ-ತು < ತಿಳಿ-ಇದ್-ತು) ಕುಡಿಯಿತು (ಕುಡಿಯ್-ಇ-ತು < ಕುಡಿ-ಇದ್-ತು) ಒಡೆಯಿತು (ಒಡೆಯ್-ಇ-ತು < ಒಡೆ-ಇದ್-ತು) ಎಳೆಯಿತು (ಎಳೆಯ್-ಇ-ತು < ಎಳೆ-ಇದ್-ತು) ಬರೆಯಿತು (ಬರೆಯ್-ಇ-ತು < ಬರೆ-ಇದ್-ತು)
ಪದರೂಪಗಳ ಇಟ್ಟಳ / 275 ಕುಡಿದ, ಕುಣಿದ ಮೊದಲಾದ ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಹಿಂಬೊತ್ತಿನ ರೂಪಗಳಲ್ಲಿ ಎಂತಹ ಸೇರಿಕೆಯ ಮಾರ್ಪಾಡು ನಡೆದಿದೆ ಎಂಬು ದನ್ನು ವಿವರಿಸುವಲ್ಲಿ ಎರಡು ದಾರಿಗಳಿವೆ: (ಕ) ಎಕಾರದಲ್ಲಿ ಕೊನೆಗೊಳ್ಳುವ ಹಾಗೆ, ಅವುಗಳ ಕೊನೆಯ ತೆರೆಯುಲಿ (ಇಕಾರ) ಉಳಿದು, ಹಿಂಬೊತ್ತಿನ ಇದ್ ಒಟ್ಟು ತನ್ನ ಇಕಾರವನ್ನು ಕಳೆದುಕೊಳ್ಳುತ್ತದೆ ಎನ್ನುವುದು ಒಂದು ದಾರಿ; ಮತ್ತು (ಚ) ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಹಾಗೆ, ಅವುಗಳ ಕೊನೆಯ ತೆರೆ ಯುಲಿ (ಇಕಾರ) ಬಿದ್ದುಹೋಗಿ, ಹಿಂಬೊತ್ತಿನ ಇದ್ ಒಟ್ಟು ಬದಲಾಗದೆ ಉಳಿ ಯುತ್ತದೆ ಎನ್ನುವುದು ಇನ್ನೊಂದು ದಾರಿ.
ಈ ಎರಡು ದಾರಿಗಳಲ್ಲಿ ಮೊದಲನೆಯದನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ; ಯಾಕೆಂದರೆ, ಬೇರೆ ಹಲವು ಕಡೆಗಳಲ್ಲಿ ಇಕಾರ ಮತ್ತು ಎಕಾರದಲ್ಲಿ ಕೊನೆ ಗೊಳ್ಳುವ ಪದಗಳು ಹೆಚ್ಚುಕಡಿಮೆ ಒಂದೇ ಬಗೆಯ ಸೇರಿಕೆಯ ಮಾರ್ಪಾಡುಗಳಿಗೆ ಒಳಗಾಗುತ್ತವೆ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಪದಗಳು ಅವಕ್ಕಿಂತ ಬೇರಾಗಿರುವ ಮಾರ್ಪಾಡುಗಳಿಗೆ ಒಳಗಾಗುತ್ತವೆ.
4.5.4 ಹೊರಪಡಿಕೆಗಳು
ಕನ್ನಡದ ಹೆಚ್ಚಿನ ಎಸಕಪದಗಳಿಗೂ ಅವುಗಳ ಹಿಂಬೊತ್ತಿನ ಪದರೂಪಗಳನ್ನು ಮೇಲೆ ವಿವರಿಸಿದ ಹಾಗೆ ಉಂಟುಮಾಡಲಾಗುತ್ತದೆ; ಆದರೆ, ಹೆಚ್ಚುಕಡಿಮೆ ನೂರು ಎಸಕಪದಗಳು ಇದಕ್ಕೆ ಹೊರಪಡಿಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಅವು ಗಳಲ್ಲಿ, ಮತ್ತು ಅವುಗಳ ಮುಂದೆ ಬರುವ ಹಿಂಬೊತ್ತಿನ ಒಟ್ಟಿನಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳು
ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳನ್ನು ಕೆಳಗೆ ವಿವರಿಸಿದ ಹಾಗೆ ಗುಂಪು ಗೂಡಿಸಿದಲ್ಲಿ, ಅವುಗಳ ಹಿಂಬೊತ್ತಿನ ರೂಪಗಳಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ವಿವರಿಸುವ ಕೆಲಸ ಸುಳುವಾಗುತ್ತದೆ.
(1) ಎರಡು ಬರಿಗೆಕಂತೆಗಳಿದ್ದು, ಇಮ್ಮಡಿ ಮುಚ್ಚುಲಿಯಾಗಲಿ ಉದ್ದ ತೆರೆ ಯುಲಿಯಾಗಲಿ ಇಲ್ಲದಿರುವ ನಗು, ಮಿಗು, ಕೊಡು, ಬರು, ತರು ಮೊದಲಾದ ಪದಗಳು;
(2) ಎರಡು ಬರಿಗೆಕಂತೆಗಳಿದ್ದು, ಮೊದಲನೆಯ ತೆರೆಯುಲಿಯ ಬಳಿಕ ಇಮ್ಮಡಿ ಮುಚ್ಚುಲಿ ಬಂದಿರುವ ಅನ್ನು, ತಿನ್ನು, ನಿಲ್ಲು, ಗೆಲ್ಲು, ಕೊಯ್ಯು, ಬಯ್ಯು ಮೊದಲಾದ ಪದಗಳು, ಮತ್ತು ಕೊಳ್ಳು ಪದವನ್ನು ಸೇರಿಸಿ ಉಂಟು
ಮಾಡಿರುವ ತಿಂದುಕೊಳ್ಳು, ಇಟ್ಟುಕೊಳ್ಳು, ಉಳಿದುಕೊಳ್ಳು ಮೊದಲಾದ ಸೇರಿಸುವ ಪದರೂಪಗಳು (4.3.2 ನೋಡಿ);
(3) ಎರಡು ಬರಿಗೆಕಂತೆಗಳಿದ್ದು, ಮೊದಲನೆಯ ಬರಿಗೆಕಂತೆಯಲ್ಲಿ ಉದ್ದ ತೆರೆಯುಲಿ ಬಂದಿರುವ ಆಗು, ಹೋಗು, ಕಾಣು, ಕಾಯು, ಸಾಯು, ಏಳು, ಬೀಳು ಮೊದಲಾದ ಪದಗಳು; ಮತ್ತು
(4) ಮೂರು ಬರಿಗೆಕಂತೆಗಳಿರುವ ತಿರುಗು, ಹುಡುಕು, ಹೊರಡು, ಬಯಸು, ಕೊರಗು, ಉದುರು ಮೊದಲಾದ ಪದಗಳು, ಮತ್ತು ಆಸರು, ಬೇಸರು, ತೆಪ್ಪರು ಎಂಬ ಪದಗಳು.
ಈ ನಾಲ್ಕು ಗುಂಪುಗಳಲ್ಲಿ ಸೇರುವ ಎಸಕಪದಗಳು ಮಾತ್ರವಲ್ಲದೆ, ಬೇರೆಯೂ ಹಲವು ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳು ಕನ್ನಡದಲ್ಲಿವೆ; ಆದರೆ, ಅವುಗಳಲ್ಲಿ ಯಾವುವೂ ಮೇಲೆ 4.5.3ರಲ್ಲಿ ಕೊಟ್ಟಿರುವ ಮಾರ್ಪಾಡು ಗಳಿಗೆ ಹೊರಪಡಿಕೆಗಳಾಗುವುದಿಲ್ಲ:
(ಕ) ಎರಡು ಬರಿಗೆಕಂತೆಗಳಿದ್ದು, ಎರಡನೇ ಬರಿಗೆಕಂತೆಯಲ್ಲಿ ತಡೆಯುಲಿ ಯಿರುವ, ಮತ್ತು ಅದಕ್ಕಿಂತ ಮೊದಲು ಒಂದು ಸೊನ್ನೆ (ಮೂಗುಲಿ)ಯಿರುವ ಸೊಂಕು, ತಂಗು, ಮಿಂಚು, ಅಂಜು, ಕೊಂತು, ನೊಂದು, ಅಂಟು, ಹಿಂಡು, ತುಂಬು ಮೊದಲಾದ ಉಕಾರದಲ್ಲಿ ಕೊನೆಗೊಳ್ಳುವ 55 ಎಸಕಪದಗಳಿವೆ; ಇವೆಲ್ಲವೂ 4.5.3ರ ಮಾರ್ಪಾಡುಗಳಿಗೆ ಒಳಪಟ್ಟಿರುತ್ತವೆ; ಅವುಗಳಲ್ಲಿ ಹೊರ ಪಡಿಕೆಗಳಿಲ್ಲ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಅಂಜು-ಅಂಜಿದ (ಅಂಜ್-ಇದ್-ಅ) ಅಂಟು-ಅಂಟಿತು (ಅಂಟ್-ಇ-ತು) ಹಂಚು-ಹಂಚಿದ (ಹಂಚ್-ಇದ್-ಅ) ಸುಂಡು-ಸುಂಡಿತು (ಸುಂಡ್-ಇ-ತು) ತಂಗು-ತಂಗಿದ (ತಂಗ್-ಇದ್-ಅ) ಸುಂದು-ಸುಂದಿದ (ಸುಂದ್-ಇದ್-ಅ) ಕೊಂತು-ಕೊಂತಿತು (ಕೊಂತ್-ಇ-ತು) ನಂಬು-ನಂಬಿದ (ನಂಬ್-ಇದ್-ಅ) ತುಂಬು-ತುಂಬಿತು (ತುಂಬ್-ಇ-ತು)
ತೆಂಕು-ತೆಂಕಿತು (ತೆಂಕ್-ಇ-ತು)
(ಚ) ಇಸು ಒಟ್ಟಿನಲ್ಲಿ ಕೊನೆಗೊಳ್ಳುವ ನೂರಾರು ಎಸಕಪದಗಳು ಕನ್ನಡ ದಲ್ಲಿ ಬಳಕೆಯಲ್ಲಿವೆ; ಮೇಲೆ 3.2.1(1)ರಲ್ಲಿ ವಿವರಿಸಿದ ಹಾಗೆ, ಈ ಎಸಕ ಪದಗಳನ್ನು ಹೆಸರುಪದಗಳಿಗೆ, ಪರಿಚೆಪದಗಳಿಗೆ, ಮತ್ತು ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆಯಲಾಗಿದೆ; ಇದಲ್ಲದೆ, ಮೇಲೆ 4.3.1ರಲ್ಲಿ ವಿವರಿಸಿದ ಹಾಗೆ, ಇಸು ಒಟ್ಟನ್ನು ಸೇರಿಸಿ ಕನ್ನಡದಲ್ಲಿ ಹಲವಾರು ಆಗಿಸುವ ಪಡೆಯಪಡೆಯಬಹುದಾಗಿದ್ದು, ಅವುಗಳ ಬಳಿಕವೂ ಎಸಕರೂಪಗಳನ್ನೂ ಹೊತ್ತಿನ ಒಟ್ಟುಗಳನ್ನು ಮತ್ತು ಆಡುಗ ಒಟ್ಟುಗಳನ್ನು ಬಳಸಲಾಗುತ್ತದೆ.
ಪದರೂಪಗಳ ಇಟ್ಟಳ / 277
ಉಕಾರದಲ್ಲಿ ಕೊನೆಗೊಳ್ಳುವ ಈ ಎಲ್ಲಾ ಎಸಕಪದ ಮತ್ತು ಪದರೂಪಗಳೂ ಮೇಲೆ 4.5.3ರಲ್ಲಿ ಕೊಟ್ಟಿರುವ ಮಾರ್ಪಾಡುಗಳಿಗೆ ಒಳಪಡುತ್ತವೆ; ಅವಕ್ಕೆ ಹೊರಪಡಿಕೆಗಳಿಲ್ಲ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಅಬ್ಬರಿಸು-ಅಬ್ಬರಿಸಿದ (ಅಬ್ಬರಿಸ್-ಇದ್-ಅ) ಗೆಂಟಿಸು-ಗೆಂಟಿಸಿತು (ಗೆಂಟಿಸ್-ಇ-ತು) ಎತ್ತರಿಸು-ಎತ್ತರಿಸಿದೆ (ಎತ್ತರಿಸ್-ಇದ್-ಎ) ಇದಿರಿಸು-ಇದಿರಿಸಿತು (ಇದಿರಿಸ್-ಇ-ತು) ತಿನ್ನಿಸು-ತಿನ್ನಿಸಿದ (ತಿನ್ನಿಸ್-ಇದ್-ಅ) ರಚಿಸು-ರಚಿಸಿದರು (ರಚಿಸ್-ಇದ್-ಅರು) ತಳಮಳಿಸು-ತಳಮಳಿಸಿದ (ತಳಮಳಿಸ್-ಇದ್-ಅ) ನೆನವರಿಸು-ನೆನವರಿಸಿದ (ನೆನವರಿಸ್-ಇದ್-ಅ)
ಓಡಿಸು-ಓಡಿಸಿತು (ಓಡಿಸ್-ಇ-ತು) ಚಲಿಸು-ಚಲಿಸಿತು (ಚಲಿಸ್-ಇ-ತು)
4.5.3ರಲ್ಲಿ ಕೊಟ್ಟಿರುವ ಮಾರ್ಪಾಡುಗಳಿಗೆ ಹೊರಪಡಿಕೆಗಳಾಗಿರುವ ಉಕಾರ ದಲ್ಲಿ ಕೊನೆಗೊಳ್ಳುವ ಎಸಕಪದಗಳನ್ನು ಮೇಲೆ ನಾಲ್ಕು ಗುಂಪುಗಳಲ್ಲಿ ಕೊಡ ಲಾಗಿತ್ತು; ಈ ಗುಂಪುಗಳಲ್ಲಿ ಬರುವ ಎಸಕಪದಗಳು ಎಂತಹ ಮಾರ್ಪಾಡುಗಳಿಗೆ ಒಳಗಾಗುತ್ತವೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ಎಂತಹ ರೂಪ ಗಳಿವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) ಎರಡು ಬರಿಗೆಕಂತೆಗಳಿದ್ದು, ಇಮ್ಮಡಿ ಮುಚ್ಚುಲಿಯಾಗಲಿ, ಉದ್ದ
ತೆರೆಯುಲಿಯಾಗಲಿ ಇಲ್ಲದಿರುವ ಎಸಕ ಪದಗಳು:
ಈ ಗುಂಪಿಗೆ ಸೇರುವ 39 ಎಸಕಪದಗಳಿದ್ದು, ಅವುಗಳಲ್ಲಿ ಎಲ್ಲವೂ ಮೇಲಿನ (4.5.3ರ) ಮಾರ್ಪಾಡುಗಳಿಗೆ ಹೊರಪಡಿಕೆಗಳಾಗಿವೆ. ಇವುಗಳ ಎರಡನೇ ಬರಿಗೆಕಂತೆಯಲ್ಲಿ ಗ್, ಡ್, ಸ್, ರ್, ಳ್ ಮತ್ತು ವ್ ಎಂಬ ಮುಚ್ಚುಲಿ ಗಳು ಮಾತ್ರ ಬರಬಲ್ಲುವು; ಹಿಂಬೊತ್ತಿನ ಒಟ್ಟು ಸೇರಿದಾಗ, ಇವುಗಳ ಕೊನೆಯ ಉ ಬಿದ್ದುಹೋಗುತ್ತದೆ, ಮತ್ತು ಅದರ ಹಿಂದಿರುವ ಮುಚ್ಚುಲಿಗಳು ಕೆಳಗೆ ಕೊಟ್ಟಿರುವಂತಹ ಮಾರ್ಪಾಡುಗಳನ್ನು ತೋರಿಸುತ್ತವೆ; ಇದಲ್ಲದೆ, ಹಿಂಬೊತ್ತಿನ ಇದ್ ಒಟ್ಟಿನ ಇಕಾರವೂ ಬಿದ್ದುಹೋಗುತ್ತದೆ, ಮತ್ತು ಅದರ ದಕಾರ ಈ ಮಾರ್ಪಾಡಾದ ಮುಚ್ಚುಲಿಯ ರೂಪವನ್ನೇ ಪಡೆಯುತ್ತದೆ (ನಗು-ಇದ್-ಅ> ನಕ್-ಕ್-ಅ).
ಹಿಂಬೊತ್ತಿನ ಒಟ್ಟಿಗೆ ತು ಗುರುತಿನ ಒಟ್ಟನ್ನು ಸೇರಿಸಿದಾಗ, ಅದರ ಬಳಿಕ
ಇಕಾರ ಸೇರಿಕೊಳ್ಳುತ್ತದೆ (ನಗು-ಇದ್-ತು>ನಕ್-ಕಿ-ತು).
ಎರಡನೇ ಬರಿಗೆಕಂತೆಯಲ್ಲಿ ಬರುವ ಮುಚ್ಚುಲಿಯ ಮಾರ್ಪಾಡುಗಳು: ಗ್>ಕ್
ನಗು-ನಕ್ಕ
ಒಗು-ಒಕ್ಕಿತು ಕೊಡು-ಕೊಟ್ಟ
ನಕ್-ಕ್-ಅ ಒಕ್-ಕಿ-ತು ಕೊಟ್-ಟ್-ಅ
ಡ್>ಟ್
ಸ್>ಚ್ ರ್>ತ್ ಳ್>ತ್
ವ್-ಪ್
ಸುಟ್-ಟಿ-ತು ಸುಡು-ಸುಟ್ಟಿತು ಎಚ್-ಚ್-ಅ ಎಸು-ಎಚ್ಚ ತೆತ್-ತ್-ಅ ತೆರು-ತೆತ್ತ ಅಳು-ಅತ್ತ ಅತ್-ತ್-ಅ ಉಳು-ಉತ್ತಿತು ಉತ್-ತಿ-ತು ತಪ್-ಪಿ-ತು ತವು-ತಪ್ಪಿತು
ಈ ಮಾರ್ಪಾಡುಗಳನ್ನು ತೋರಿಸುವ ಎಸಕಪದಗಳ ಪಟ್ಟಿಯನ್ನು ಕೆಳಗೆ ಕೊಡ ಲಾಗಿದೆ; ಇವುಗಳಲ್ಲಿ ಉಗು-ಒಕ್ಕಿತು ಮತ್ತು ಹುಗು-ಹೊಕ್ಕ ಎಂಬವುಗಳಲ್ಲಿ ಎಸಕಪದದ ಮೊದಲನೇ ಉಕಾರ ಒಕಾರವಾಗಿದೆ (ಈ ಎಸಕಪದಕ್ಕೆ ಹೊಗು ಎಂಬ ರೂಪವೂ ಇದೆ), ಮತ್ತು ಕಿರು ‘ಕೂಡಿಹಾಕು’ -ಕೆತ್ತ, ಗಿರು ‘ನೆನಸು’ - ಗೆತ್ತ, ತಿರು ‘ಬದಲಾಯಿಸು’ - ತೆತ್ತ ಎಂಬವುಗಳಲ್ಲಿ ಎಸಕಪದದ ಇಕಾರ ಎಕಾರವಾಗಿದೆ ಎಂಬುದನ್ನು ಗಮನಿಸಬಹುದು. ಇದಲ್ಲದೆ, ತಗು ಎಸಕಪದಕ್ಕೆ ಹಿಂಬೊತ್ತಿನಲ್ಲಿ ತಕ್ಕ ಎಂಬ ಪತ್ತುಗೆಯ ರೂಪ ಮಾತ್ರ ಬಳಕೆಯಲ್ಲಿದೆ.
(1) ಗಕಾರದ ಪದಗಳು: ಒಗು-ಒಕ್ಕಿತು ಉಗು-ಉಕ್ಕಿತು ಮಿಗು-ಮಿಕ್ಕಿತು ಸಿಗು-ಸಿಕ್ಕಿತು
ತಗು-ತಕ್ಕ
ಹುಗು-ಹೊಕ್ಕ
ನಗು-ನಕ್ಕ ಹೊಗು-ಹೊಕ್ಕ
(2) ಡಕಾರದ ಪದಗಳು: ಅಡು-ಅಟ್ಟ ಕೊಡು-ಕೊಟ್ಟ ತೊಡು-ತೊಟ್ಟ ಬಿಡು-ಬಿಟ್ಟ
ಮಡು-ಮಟ್ಟ
ಇಡು-ಇಟ್ಟ
ಉಡು-ಉಟ್ಟ ಪಡು-ಪಟ್ಟ (ಒಳಪಡು-ಒಳಪಟ್ಟಿತು) ಸುಡು-ಸುಟ್ಟ
ನಡು-ನಟ್ಟ
ಕೆಡು-ಕೆಟ್ಟ
(3) ಸಕಾರದ ಪದಗಳು: ಎಸು-ಎಚ್ಚ
ಪಸು-ಪಚ್ಚ
(4) ರಕಾರದ ಪದಗಳು: ಉರು-ಉತ್ತ ಎರು-ಎತ್ತ ಕೆರು-ಕೆತ್ತ
ಕಿರು-ಕೆತ್ತ ಹೆರು-ಹೆತ್ತಳು ತೆರು-ತೆತ್ತ
(5) ಳಕಾರದ ಪದಗಳು: ಅಳು-ಅತ್ತ ಉಳು-ಉತ್ತ
(6) ವಕಾರದ ಪದ: ತವು-ತಪ್ಪಿತು
ಗಿರು-ಗೆತ್ತ
ಹೊರು-ಹೊತ್ತ
ತರು-ತತ್ತ ತಿರು-ತೆತ್ತ
ಪದರೂಪಗಳ ಇಟ್ಟಳ / 279 ಇರು-ಇದ್ದ, ತರು-ತಂದ, ಮತ್ತು ಬರು-ಬಂದ ಎಂಬವುಗಳು ಮೇಲೆ ಕೊಟ್ಟಿರುವ ಹೊರಪಡಿಕೆಯ ಕಟ್ಟಲೆಗಳಿಗೂ ಹೊರಪಡಿಕೆಗಳಾಗಿವೆ: ಇರು ಎಂಬುದರ ರಕಾರ ದಕಾರವಾಗುತ್ತದೆ, ಮತ್ತು ಅದರ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ಎಂಬ ರೂಪ ಇದೆ; ತರು ಮತ್ತು ಬರು ಎಂಬವುಗಳ ರಕಾರ ನಕಾರ (ಸೊನ್ನೆ)ವಾಗುತ್ತದೆ, ಮತ್ತು ಅವುಗಳ ಬಳಿಕವೂ ಹಿಂಬೊತ್ತಿನ ಒಟ್ಟಿಗೆ ದ್ ಎಂಬ ರೂಪವೇ ಇದೆ.
ಇದಲ್ಲದೆ, ಈ ಹಿಂಬೊತ್ತಿನ ರೂಪಗಳಲ್ಲಿ ಗುರುತಿಸುವ ತು ಒಟ್ಟು ಬಂದಾಗ, ಇರು ಎಂಬುದರ ರಕಾರ ತಕಾರವಾಗುತ್ತದೆ, ಮತ್ತು ಈ ಮೂರರ ಬಳಿಕವೂ ಹಿಂಬೊತ್ತಿನ ಒಟ್ಟು ಸೊನ್ನೆ ರೂಪದಲ್ಲಿ ಬರುತ್ತದೆ: ಇತ್ತು (ಇತ್- ತು), ತಂತು (ತನ್-ತು), ಬಂತು (ಬನ್-ತು).
ಅರು ‘ಕೊನೆಗೊಳ್ಳು’ - ಅರತಿತು ಮತ್ತು ಕರು ‘ಗುರಿಯಿಡು’ - ಕರುತ್ತ ಎಂಬವುಗಳೂ ಮೇಲಿನ ಹೊರಪಡಿಕೆಗೆ ಹೊರಪಡಿಕೆಗಳು; ಅವುಗಳಲ್ಲಿ ಮೊದಲ ನೆಯದರ ಉಕಾರ ಅಕಾರವಾಗುತ್ತದೆ, ಮತ್ತು ಹಿಂಬೊತ್ತಿನ ಒಟ್ಟಿಗೆ ಅದರ ಬಳಿಕ ತಿ ಎಂಬ ರೂಪವಿದೆ (ಅರ-ತಿ-ತು); ಎರಡನೆಯದರ ಉಕಾರ ಉಳಿ ದಿದ್ದು, ಅದರ ಬಳಿಕ ಹಿಂಬೊತ್ತಿನ ಒಟ್ಟಿಗೆ ತ್್ತ ಎಂಬ ರೂಪವಿದೆ: ಕರುತ್ತ (ಕರು-ತ್್ತ-ಅ).
(2) ಎರಡು ಬರಿಗೆಕಂತೆಗಳಿದ್ದು, ಮೊದಲನೆಯ ತೆರೆಯುಲಿಯ ಬಳಿಕ
ಇಮ್ಮಡಿ ಮುಚ್ಚುಲಿ ಬಂದಿರುವ ಎಸಕಪದಗಳು:
ಈ ಬಗೆಯ 155 ಪದಗಳು ಪಟ್ಟಿಯಲ್ಲಿದ್ದು, ಅವುಗಳಲ್ಲಿ ಹೆಚ್ಚಿನವೂ ಮೇಲೆ 4.5.3ರಲ್ಲಿ ಕೊಟ್ಟಿರುವ ಸೇರಿಕೆಯ ಮಾರ್ಪಾಡುಗಳಿಗೆ ಒಳಗಾಗಿರುತ್ತವೆ. (ಕ) ಇಮ್ಮಡಿ ಮುಚ್ಚುಲಿಯಾಗಿ ತಡೆಯುಲಿ ಬಂದಿರುವ 118 ಎಸಕಪದ ಗಳಿದ್ದು, ಅವೆಲ್ಲವೂ ಮೇಲಿನ 4.5.3ರ ಮಾರ್ಪಾಡುಗಳಿಗೆ ಒಳಗಾಗಿರುತ್ತವೆ; ಅಂತಹ ಎಸಕಪದಗಳ ಕೆಲವು ಪದರೂಪಗಳನ್ನು ಕೆಳಗೆ ಎತ್ತುಗೆಯಾಗಿ ಕೊಡ ಲಾಗಿದೆ:
ಇಕ್ಕು-ಇಕ್ಕಿದಳು (ಇಕ್್ಕ-ಇದ್-ಅಳು) ನುಗ್ಗು-ನುಗ್ಗಿದ (ನುಗ್್ಗ-ಇದ್-ಅ) ಕೊಚ್ಚು-ಕೊಚ್ಚಿದೆ (ಕೊಚ್್ಚ-ಇದ್-ಎ) ಜಜ್ಜು-ಜಜ್ಜಿದರು (ಜಜ್್ಜ-ಇದ್-ಅರು) ಉಜ್ಜು-ಉಜ್ಜಿತು (ಉಜ್್ಜ-ಇ-ತು) ಮೆಟ್ಟು-ಮೆಟ್ಟಿತು (ಮೆಟ್್ಟ-ಇ-ತು) ಕಟ್ಟು-ಕಟ್ಟಿದ (ಕಟ್್ಟ-ಇದ್-ಅ) ಒಡ್ಡು-ಒಡ್ಡಿತು (ಒಡ್್ಡ-ಇ-ತು) ಒಡ್ಡು-ಒಡ್ಡಿದ (ಒಡ್್ಡ-ಇದ್-ಅ) ಹತ್ತು-ಹತ್ತಿತು (ಹತ್್ತ-ಇ-ತು) ಬಿತ್ತು-ಬಿತ್ತಿದ (ಬಿತ್್ತ-ಇದ್-ಅ)
ಉಕ್ಕು-ಉಕ್ಕಿತು (ಉಕ್್ಕ-ಇ-ತು) ಬಗ್ಗು-ಬಗ್ಗಿತು (ಬಗ್್ಗ-ಇ-ತು) ಚುಚ್ಚು-ಚುಚ್ಚಿತು (ಚುಚ್್ಚ-ಇ-ತು)
ತಿದ್ದು-ತಿದ್ದಿದ (ತಿದ್್ದ-ಇದ್-ಅ) ಒಪ್ಪು-ಒಪ್ಪಿದೆವು (ಒಪ್್ಪ-ಇದ್-ಎವು) ರುಬ್ಬು-ರುಬ್ಬಿದ (ರುಬ್್ಬ-ಇದ್-ಅ)
ಉದ್ದು-ಉದ್ದಿತು (ಉದ್್ದ-ಇ-ತು) ತಪ್ಪು-ತಪ್ಪಿತು (ತಪ್್ಪ-ಇ-ತು) ಹಬ್ಬು-ಹಬ್ಬಿತು (ಹಬ್್ಬ-ಇ-ತು
(ಚ) ಇಮ್ಮಡಿ ಮುಚ್ಚುಲಿಯಾಗಿ ನ್ ಬಂದಿರುವ ಅನ್ನು, ಎನ್ನು, ಉನ್ನು ಮತ್ತು ತಿನ್ನು ಎಂಬ ಪದಗಳು ಅಂ, ಎಂ, ಉಂ ಮತ್ತು ತಿಂ ಎಂಬ ರೂಪಕ್ಕೆ ಬದಲಾಗುತ್ತವೆ; ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟು ದ್ ರೂಪದಲ್ಲಿ ಬರುತ್ತದೆ (ಅಂದ (ಅಂ-ದ್-ಅ), ಎಂದ, ಉಂದ, ತಿಂದ).
(ಟ) ಇಮ್ಮಡಿ ಮುಚ್ಚುಲಿಯಾಗಿ ಣ್ ಬಂದಿರುವ ಉಣ್ಣು ಪದ ಉಂ ಎಂಬ ರೂಪವನ್ನು ತಳೆಯುತ್ತದೆ; ಅದರ ಬಳಿಕ ಹಿಂಬೊತ್ತಿನ ಒಟ್ಟಿಗೆ ಡ್ ರೂಪ ಇದೆ (ಉಂಡ (ಉಂ-ಡ್-ಅ). ಆದರೆ, ಮೇಲೆ 4.5.3ರಲ್ಲಿ ವಿವರಿಸಿದ ಹಾಗೆ, ಎಣ್ಣು ಮತ್ತು ಪಣ್ಣು ಇಲ್ಲವೇ ಹಣ್ಣು ‘ಅಣಿಗೊಳಿಸು’ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟು ಇದ್ ರೂಪದಲ್ಲೇ ಬರುತ್ತದೆ: ಎಣ್ಣಿದ (ಎಣ್್ಣ-ಇದ್-ಅ), ಪಣ್ಣಿದ, ಹಣ್ಣಿದ.
(ತ) ಇಮ್ಮಡಿ ಮುಚ್ಚುಲಿಯಾಗಿ ಮ್ ಬಂದಿರುವ ಅಮ್ಮು, ಒಮ್ಮು, ಕುಮ್ಮು, ಗುಮ್ಮು, ಚಿಮ್ಮು, ನೆಮ್ಮು ಮತ್ತು ಹೊಮ್ಮು ಎಂಬ ಪದಗಳೂ ಮೇಲಿನ 4.5.3ರ ಮಾರ್ಪಾಡುಗಳಿಗೆ ಹೊರಪಡಿಕೆಗಳಲ್ಲ: ಹೊಮ್ಮಿದರು (ಹೊಮ್್ಮ-ಇದ್-ಅರು), ಚಿಮ್ಮಿತು (ಚಿಮ್್ಮ-ಇ-ತು).
(ಪ) ಇಮ್ಮಡಿ ಮುಚ್ಚುಲಿಯಾಗಿ ಲ್ ಬಂದಿರುವ ಎಸಕಪದಗಳಲ್ಲಿ ಕೊಲ್ಲು, ಸಲ್ಲು, ಗೆಲ್ಲು, ಮೆಲ್ಲು ಮತ್ತು ನಿಲ್ಲು ಎಂಬವುಗಳು ಹೊರಪಡಿಕೆಗಳು; ಇವು ಗಳಲ್ಲಿ ಕೊಲ್ಲು, ನಿಲ್ಲು ಮತ್ತು ಸಲ್ಲು ಎಂಬುವಕ್ಕೆ ಕೊಂ, ನಿಂ ಮತ್ತು ಸಂ ಎಂಬ ರೂಪಗಳಿವೆ; ಗೆಲ್ಲು ಮತ್ತು ಮೆಲ್ಲು ಎಂಬುವಕ್ಕೆ ಗೆದ್ ಮತ್ತು ಮೆದ್ ಎಂಬ ರೂಪಗಳಿವೆ; ಇದಲ್ಲದೆ, ಹಿಂಬೊತ್ತಿನ ಒಟ್ಟಿಗೆ ನಿಲ್ಲು ಎಂಬುದರ ಬಳಿಕ ತ್ ರೂಪ, ಮತ್ತು ಉಳಿದ ಎಸಕಪದಗಳ ಬಳಿಕ ದ್ ರೂಪ ಇದೆ: ಕೊಲ್ಲು- ಕೊಂದ (ಕೊಂ-ದ್-ಅ), ಗೆಲ್ಲು-ಗೆದ್ದ (ಗೆದ್-ದ್-ಅ), ನಿಲ್ಲು-ನಿಂತ (ನಿಂ- ತ್-ಅ).
ಆದರೆ, ಇಂತಹವೇ ಆದ ಅಲ್ಲು ಮತ್ತು ಚಲ್ಲು ಇಲ್ಲವೇ ಚೆಲ್ಲು ಪದಗಳು ಮೇಲಿನ 4.5.3ರ ಮಾರ್ಪಾಡುಗಳಿಗೆ ಹೊರಪಡಿಕೆಗಳಲ್ಲ: ಚೆಲ್ಲಿದ (ಚೆಲ್್ಲ- ಇದ್-ಅ).
(ಗ) ಇಮ್ಮಡಿ ಮುಚ್ಚುಲಿಯಾಗಿ ಳ್ ಬಂದಿರುವ ಎಸಕಪದಗಳಲ್ಲಿ ಕೊಳ್ಳು ಎಂಬುದು ಮಾತ್ರ ಹೊರಪಡಿಕೆಯಾಗಿದೆ: ಅದಕ್ಕೆ ಕೊಂ ಎಂಬ ರೂಪವಿದ್ದು, ಅದರ ಬಳಿಕ ಹಿಂಬೊತ್ತಿನ ಒಟ್ಟು ಡ್ ರೂಪದಲ್ಲಿ ಬರುತ್ತದೆ: ಕೊಂಡು ಕೊಳ್ಳು-ಕೊಂಡುಕೊಂಡ (ಕೊಂ-ಡ್-ಅ). ಇಂತಹ ಅಳ್ಳು, ತಳ್ಳು, ತುಳ್ಳು
ಪದರೂಪಗಳ ಇಟ್ಟಳ / 281 ಮತ್ತು ಸಳ್ಳು ಪದಗಳು ಹೊರಪಡಿಕೆಗಳಲ್ಲ: ತಳ್ಳಿದ (ತಳ್್ಳ-ಇದ್-ಅ), ತುಳ್ಳಿತು (ತುಳ್್ಳ-ಇ-ತು).
(ಜ) ಇಮ್ಮಡಿ ಮುಚ್ಚುಲಿಯಾಗಿ ಯ್ ಬಂದಿರುವ ಒಯ್ಯು, ಕೊಯ್ಯು, ಗೆಯ್ಯು, ತೊಯ್ಯು, ಬಯ್ಯು, ಸುಯ್ಯು ಮತ್ತು ಹೊಯ್ಯು ಎಂಬ ಎಲ್ಲಾ ಏಳು ಎಸಕಪದಗಳಲ್ಲೂ ಕೊನೆಯ ಉಕಾರದೊಂದಿಗೆ ಅದರ ಮೊದಲು ಬಂದಿರುವ ಎರಡು ಯಕಾರಗಳಲ್ಲಿ ಒಂದು ಬಿದ್ದು ಹೋಗುತ್ತದೆ, ಮತ್ತು ಅದರ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ರೂಪ ಇದೆ: ಕೊಯ್ಯು-ಕೊಯ್ದ (ಕೊಯ್- ದ್-ಅ).
(ಡ) ಇಮ್ಮಡಿ ಮುಚ್ಚುಲಿಯಾಗಿ ವ್ ಬಂದಿರುವ ಚಿವ್ವು ಎಸಕಪದವೂ ಮೇಲಿನ 4.5.3ರ ಮಾರ್ಪಾಡುಗಳಿಗೆ ಒಳಗಾಗುತ್ತಿದ್ದು, ಹೊರಪಡಿಕೆಯಲ್ಲ: ಚಿವ್ವಿದ (ಚಿವ್್ವ-ಇದ್-ಅ).
ಮೇಲೆ ಕೊಟ್ಟಿರುವ ಎಲ್ಲಾ ಹಿಂಬೊತ್ತಿನ ಹೊರಪಡಿಕೆಯ ರೂಪಗಳಲ್ಲೂ ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ಒಟ್ಟಿನ ಬಳಿಕ ಇಕಾರವೊಂದು ಸೇರಿಕೊಳ್ಳುತ್ತದೆ: (ತಿನ್ನು-ತಿಂದಿತು (ತಿಂ-ದಿ-ತು), ಉಣ್ಣು-ಉಂಡಿತು (ಉಂ- ಡಿ-ತು), ಗೆಲ್ಲು-ಗೆದ್ದಿತು (ಗೆದ್-ದಿ-ತು), ಕೊಯ್ಯು-ಕೊಯ್ದಿತು (ಕೊಯ್- ದಿ-ತು).
(3) ಎರಡು ಬರಿಗೆಕಂತೆಗಳಿದ್ದು, ಮೊದಲನೆಯ ಬರಿಗೆಕಂತೆಯಲ್ಲಿ
ಉದ್ದ ತೆರೆಯುಲಿ ಬಂದಿರುವ ಎಸಕಪದಗಳು:
ಈ ಬಗೆಯ 200 ಎಸಕಪದಗಳು ಪಟ್ಟಿಯಲ್ಲಿದ್ದು, ಅವುಗಳಲ್ಲಿ ಹೆಚ್ಚಿನವೂ ಮೇಲೆ ಕೊಟ್ಟಿರುವ 4.5.3ರ ಸೇರಿಕೆಯ ಮಾರ್ಪಾಡುಗಳಿಗೆ ಒಳಗಾಗುತ್ತವೆ. ಇದಕ್ಕೆ ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(ಕ) ಎರಡನೆಯ ಬರಿಗೆಕಂತೆಯಲ್ಲಿ ತಡೆಯುಲಿ ಬಂದಿರುವ 80 ಎಸಕಪದ ಗಳಲ್ಲಿ ಆಗು ಮತ್ತು ಹೋಗು ಎಂಬ ಎರಡು ಎಸಕಪದಗಳು ಮಾತ್ರ ಮೇಲಿನ ಕಟ್ಟಲೆಗೆ ಹೊರಪಡಿಕೆಗಳಾಗಿವೆ; ಇವುಗಳ ಬಳಿಕ ಹಿಂಬೊತ್ತಿನ ಒಟ್ಟು ಬಂದಾಗ, ಇವಕ್ಕೆ ಆ ಮತ್ತು ಹೋ ಎಂಬ ರೂಪಗಳಿವೆ, ಮತ್ತು ಇವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ರೂಪ ಇದೆ: ಆಗು-ಆದ (ಆ-ದ್-ಅ); ಹೋಗು- ಹೋದ (ಹೋ-ದ್-ಅ).
ಇದಲ್ಲದೆ, ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ಒಟ್ಟಿಗೆ ಇ ರೂಪ ಇದೆ, ಮತ್ತು ಈ ಒಟ್ಟು ಸೇರಿದಾಗ, ಈ ಎರಡು ಎಸಕಪದಗಳ ಬಳಿಕ ಯಕಾರ ಬರುತ್ತದೆ: ಆಯಿತು (ಆಯ್-ಇ-ತು), ಹೋಯಿತು (ಹೋಯ್-ಇ-ತು).
ಈ ಗುಂಪಿನಲ್ಲಿರುವ ಉಳಿದ ಎಸಕಪದಗಳೆಲ್ಲ ಮೇಲೆ ಕೊಟ್ಟಿರುವ 4.5.3ರ ಸೇರಿಕೆ ಮಾರ್ಪಾಡುಗಳಿಗೆ ಒಳಗಾಗುತ್ತವೆ ಎಂಬುದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:
ಸಾಕು-ಸಾಕಿದರು (ಸಾಕ್-ಇದ್-ಅರು) ಪೀಕು-ಪೀಕಿತು (ಪೀಕ್-ಇ-ತು) ತಾಗು-ತಾಗಿತು (ತಾಗ್-ಇ-ತು) ಬಾಗು-ಬಾಗಿದ (ಬಾಗ್-ಇದ್-ಅ) ತೋಚು-ತೋಚಿತು (ತೋಚ್-ಇ-ಉ) ಚಾಚು-ಚಾಚಿದ (ಚಾಚ್-ಇದ್-ಅ) ಮಾಜು-ಮಾಜಿತು (ಮಾಜ್-ಇ-ತು) ಈಜು-ಈಜಿದ (ಈಜ್-ಇದ್-ಅ) ನಾಟು-ನಾಟಿತು (ನಾಟ್-ಇ-ತು) ದಾಟು-ದಾಟಿದ (ದಾಟ್-ಇದ್-ಅ) ಓಡು-ಓಡಿತು (ಓಡ್-ಇ-ತು) ಹಾಡು-ಹಾಡಿದ (ಹಾಡ್-ಇದ್-ಅ) ಊದು-ಊದಿತು (ಊದ್-ಇ-ತು) ಓದು-ಓದಿದ (ಓದ್-ಇದ್-ಅ)
ಎರಡನೆಯ ಬರಿಗೆಕಂತೆಯಲ್ಲಿ ತ್, ಪ್ ಮತ್ತು ಬ್ ತಡೆಯುಲಿಗಳು
ಕಾಣಿಸುವುದಿಲ್ಲ.
(ಚ) ಎರಡನೆಯ ಬರಿಗೆಕಂತೆಯಲ್ಲಿ ನ್ ಮೂಗುಲಿ ಬಂದಿರುವ ಆನು, ನೋನು, ಪೂನು, ಮತ್ತು ಬಾನು ಎಂಬ ನಾಲ್ಕು ಎಸಕಪದಗಳು ಈ ಗುಂಪಿನಲ್ಲಿವೆ; ಇವುಗಳಲ್ಲಿ ಆನು, ನೋನು ಮತ್ತು ಪೂನು ಎಂಬವುಗಳು ಹಿಂಬೊತ್ತಿನ ಒಟ್ಟು ಸೇರಿದಾಗ ಆ, ನೋ ಮತ್ತು ಪೂ ಎಂದಾಗುತ್ತವೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ತ್ ಎಂಬ ರೂಪ ಇದೆ (ಆತರು (ಆ- ತ್-ಅರು), ನೋತರು (ನೋ-ತ್-ಅರು), ಪೂತರು (ಪೂ-ತ್-ಅರು). ಬಾನು ಎಸಕಪದಕ್ಕೆ ಎಂತಹ ಹಿಂಬೊತ್ತಿನ ರೂಪ ಬರಬಹುದೆಂಬುದಕ್ಕೆ ಎತ್ತುಗೆ ಗಳಿಲ್ಲ.
ಮೇಲಿನ ಎಲ್ಲಾ ಎಸಕರೂಪಗಳಲ್ಲೂ ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ಒಟ್ಟಿನ ಬಳಿಕ ಇಕಾರವೊಂದು ಸೇರಿಕೊಳ್ಳುತ್ತದೆ: ನೋತಿತು (ನೋ-ತಿ-ತು), ಪೂತಿತು (ಪೂ-ತಿ-ತು).
(ಟ) ಎರಡನೆಯ ಬರಿಗೆಕಂತೆಯಲ್ಲಿ ಣ್ ಮೂಗುಲಿ ಬಂದಿರುವ ಕಾಣು ಎಸಕಪದ ಹಿಂಬೊತ್ತಿನ ಒಟ್ಟು ಸೇರಿದಾಗ ಕಂ ಎಂದಾಗುತ್ತದೆ ಮತ್ತು ಅದರ ಬಳಿಕ ಹಿಂಬೊತ್ತಿನ ಒಟ್ಟಿಗೆ ಡ್ ರೂಪ ಇದೆ: ಕಂಡೆ (ಕಂ-ಡ್-ಎ); ಮಾಣು ಎಂಬ ಇನ್ನೊಂದು ಎಸಕಪದಕ್ಕೆ ಮಾದ ಎಂಬ ರೂಪವಿದೆ. ಇಲ್ಲೂ ಕೂಡ, ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ಒಟ್ಟಿನ ಬಳಿಕ ಇಕಾರ ಬರುತ್ತದೆ: ಕಂಡಿತು (ಕಂ-ಡಿ-ತು).
(ತ) ಎರಡನೆಯ ಬರಿಗೆಕಂತೆಯಲ್ಲಿ ಯಕಾರ ಬಂದಿರುವ ಸಾಯು, ನೋಯು, ಕಾಯು ಮೊದಲಾದ 22 ಎಸಕಪದಗಳೆಲ್ಲವೂ 4.5.3ರಲ್ಲಿ ಕೊಟ್ಟಿರುವ ಮಾರ್ಪಾಡುಗಳಿಗೆ ಹೊರಪಡಿಕೆಗಳೇ. ಇವುಗಳಲ್ಲಿ ಆಯು, ಈಯು
ಪದರೂಪಗಳ ಇಟ್ಟಳ / 283 ‘ಕರುಹಾಕು’, ಕಾಯು, ಮಾಯು, ಮೇಯು, ಸೀಯು, ಹಾಯು, ಮತ್ತು ಹೀಯು ಎಂಬ ಎಂಟು ಎಸಕಪದಗಳ ಎರಡನೇ ಬರಿಗೆಕಂತೆ ಹಿಂಬೊತ್ತಿನ ಒಟ್ಟು ಸೇರಿದಾಗ ಬಿದ್ದುಹೋಗುತ್ತದೆ, ಮತ್ತು ಇವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ರೂಪ ಇದೆ: (ಕಾಯು-ಕಾದರು (ಕಾ-ದ್-ಅರು); ಈಯು- ಈದುವು (ಈ-ದ್-ಉವು).
ತೇಯು, ತೋಯು, ಮತ್ತು ನೇಯು ಪದಗಳೂ ಇಂತಹವೇ ಮಾರ್ಪಾಡನ್ನು ತೋರಿಸುತ್ತವೆ: ತೇಯು-ತೇದಳು (ತೇ-ದ್-ಅಳು); ಆದರೆ, ಇವಕ್ಕೆ ಎರಡನೇ ಬರಿಗೆಕಂತೆಯ ಯಕಾರವನ್ನು ಉಳಿಸಿರುವ, ಮತ್ತು ಅದರೊಂದಿಗೆ ಮೊದಲನೇ ಬರಿಗೆಕಂತೆಯ ತೆರೆಯುಲಿಯನ್ನು ಗಿಡ್ಡವಾಗಿಸಿದ ರೂಪವೂ ಇದೆ: ತೆಯ್ದಳು (ತೆಯ್-ದ್-ಅಳು); ಇದಲ್ಲದೆ, ನೇಯು ಪದದ ಬಳಿಕ ಹಿಂಬೊತ್ತಿನ ಒಟ್ಟು ತ್ ರೂಪದಲ್ಲಿ ಬರುವುದೂ ಇದೆ: ನೇತರು (ನೇ- ತ್-ಅರು).
ಕಾಯು ‘ಕಾಯಿ ಬಿಡು’, ಕೀಯು, ಬಾಯು, ಬೀಯು ‘ಮುಗಿ’, ಬೇಯು ‘ಬೇಡು’, ಮತ್ತು ಹೂಯು ‘ಹೂ ಬಿಡು’ ಪದಗಳಿಗೂ ಹಿಂಬೊತ್ತಿನ ಒಟ್ಟು ಸೇರಿದಾಗ ಅವುಗಳ ಎರಡನೆಯ ಬರಿಗೆಕಂತೆ ಬಿದ್ದುಹೋಗುತ್ತದೆ; ಆದರೆ, ಅವುಗಳ ಬಳಿಕ ಹಿಂಬೊತ್ತಿನ ಒಟ್ಟು ತ್ ರೂಪದಲ್ಲಿ ಮಾತ್ರ ಬರುತ್ತದೆ: ಬೇಯು-ಬೇತರು (ಬೇ-ತ್-ಅರು); ಹೂಯು-ಹೂತುವು (ಹೂ-ತ್- ಉವು).
ಸಾಯು ಮತ್ತು ಈಯು ‘ಕೊಡು’ ಪದಗಳ ಎರಡನೇ ಬರಿಗೆಕಂತೆ ಬಿದ್ದು ಹೋಗುವುದು ಮಾತ್ರವಲ್ಲದೆ, ಮೊದಲನೇ ಬರಿಗೆಕಂತೆಯ ತೆರೆಯುಲಿ ಗಿಡ್ಡ ವಾಗುತ್ತದೆ; ಇವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ತ್್ತ ರೂಪ ಇದೆ: ಸಾಯು- ಸತ್ತ (ಸ-ತ್್ತ-ಅ); ಈಯು-ಇತ್ತ (ಇ-ತ್್ತ-ಅ).
ನೋಯು, ಬೇಯು, ಮತ್ತು ಮೀಯು ಪದಗಳಿಗೆ ಹಿಂಬೊತ್ತಿನ ಒಟ್ಟು ಸೇರಿದಾಗ ನೊಂ, ಬೆಂ ಮತ್ತು ಮಿಂ ಎಂಬ ರೂಪವನ್ನು ಪಡೆಯುತ್ತವೆ; ಮತ್ತು ಇವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ರೂಪ ಇದೆ: ನೋಯು-ನೊಂದೆವು (ನೊಂ-ದ್-ಎವು); ಮೀಯು-ಮಿಂದರು (ಮಿಂ-ದ್-ಅರು).
ಮೇಲಿನ ಎಲ್ಲಾ ಎಸಕಪದಗಳಲ್ಲೂ ತು ಗುರುತಿನ ಒಟ್ಟು ಬಂದಾಗ ಹಿಂಬೊತ್ತಿನ ಒಟ್ಟಿಗೆ ಇಕಾರವೊಂದು ಸೇರಿಕೊಳ್ಳುತ್ತದೆ: ಈಯು-ಈದಿತು (ಈ- ದಿ-ತು); ಹೂಯು-ಹೂತಿತು (ಹೂ-ತಿ-ತು); ಸಾಯು-ಸತ್ತಿತು (ಸ-ತ್ತಿ- ತು); ಬೇಯು-ಬೆಂದಿತು (ಬೆಂ-ದಿ-ತು).
(ಪ) ಎರಡನೆಯ ಬರಿಗೆಕಂತೆಯಲ್ಲಿ ರ್ ಬಂದಿರುವ 36 ಎಸಕಪದಗಳಲ್ಲಿ ಹೆಚ್ಚಿನವೂ 4.5.3ರ ಮಾರ್ಪಾಡುಗಳಿಗೆ ಒಳಪಡುತ್ತವೆ. ಇದಕ್ಕೆ ಕೆಲವು ಎತ್ತುಗೆ
ಗಳನ್ನು ಕೆಳಗೆ ಕೊಡಲಾಗಿದೆ:
ಕೋರು-ಕೋರಿದ (ಕೋರ್-ಇದ್-ಅ)
ದೂರು-ದೂರಿದರು (ದೂರ್-ಇದ್-ಅರು) ಮಾರು-ಮಾರಿದಳು (ಮಾರ್-ಇದ್-ಅಳು)
ಹಾರು-ಹಾರಿತು (ಹಾರ್-ಇ-ತು) ಸೇರು-ಸೇರಿತು (ಸೇರ್-ಇ-ತು) ತೇಲು-ತೇಲಿತು (ತೇಲ್-ಇ-ತು)
ಆದರೆ, ಬಾರು ‘ಹೊರ ಚೆಲ್ಲು’ ಮತ್ತು ನಾರು ಎಸಕಪದಗಳು ಇದಕ್ಕೆ ಹೊರಪಡಿಕೆಗಳು: ಹಿಂಬೊತ್ತಿನ ಒಟ್ಟು ಸೇರಿದಾಗ ಅವುಗಳ ಎರಡನೇ ಬರಿಗೆ ಕಂತೆ ಬಿದ್ದುಹೋಗುತ್ತದೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ತ್ ರೂಪ ಇದೆ: ಬಾರು-ಬಾತ (ಬಾ-ತ್-ಅ). ಇದಲ್ಲದೆ, ತು ಗುರುತಿನ ಒಟ್ಟು ಸೇರಿದಾಗ, ಹಿಂಬೊತ್ತಿನ ತ್ ಒಟ್ಟಿನ ಬಳಿಕ ಇಕಾರ ಬರುತ್ತದೆ: ನಾರು- ನಾತಿತು (ನಾ-ತಿ-ತು).
(ಗ) ಎರಡನೇ ಬರಿಗೆಕಂತೆಯಲ್ಲಿ ಲ್ ಬಂದಿರುವ 10 ಪದಗಳಲ್ಲಿ ನೇಲು ಮತ್ತು ಸೋಲು ಎಂಬವು ಮಾತ್ರ ಹೊರಪಡಿಕೆಗಳು: ಅವುಗಳ ಎರಡನೇ ಬರಿಗೆಕಂತೆ ಹಿಂಬೊತ್ತಿನ ಒಟ್ಟು ಸೇರಿದಾಗ ಬಿದ್ದುಹೋಗುತ್ತದೆ, ಮತ್ತು ಆ ಒಟ್ಟಿಗೆ ಅವುಗಳ ಬಳಿಕ ತ್ ರೂಪ ಇದೆ: ಸೋಲು-ಸೋತ (ಸೋ-ತ್-ಅ); ತು ಗುರುತಿನ ಒಟ್ಟು ಸೇರಿದಾಗ ಅದು ತಿ ಎಂದಾಗುತ್ತದೆ: ಸೋತಿತು (ಸೋ- ತಿ-ತು). ಈ ಗುಂಪಿಗೆ ಸೇರುವ ಉಳಿದ ಎಸಕಪದಗಳು 4.5.3ರ ಮಾರ್ಪಾಡು ಗಳಿಗೆ ಒಳಗಾಗುತ್ತವೆ ಎಂಬುದಕ್ಕೆ ಮಾಲು-ಮಾಲಿದ (ಮಾಲ್-ಇದ್-ಅ); ತೇಲು-ತೇಲಿತು (ತೇಲ್-ಇ-ತು) ಎಂಬವುಗಳನ್ನು ಎತ್ತುಗೆಯಾಗಿ ಕೊಡ ಬಹುದು.
(ಜ) ಎರಡನೇ ಬರಿಗೆಕಂತೆಯಲ್ಲಿ ಳ್ ಬಂದಿರುವ 15 ಎಸಕಪದಗಳಲ್ಲಿ ಏಳು, ಕೀಳು, ಬೀಳು ಮತ್ತು ಹೂಳು ಎಂಬವು ಹೊರಪಡಿಕೆಗಳು; ಹಿಂಬೊತ್ತಿನ ಒಟ್ಟು ಸೇರಿದಾಗ, ಇವುಗಳಲ್ಲಿ ಏಳು ಮತ್ತು ಬೀಳು ಎಂಬವು ಎದ್ ಮತ್ತು ಬಿದ್ ಎಂದಾಗುತ್ತವೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ದ್ ರೂಪ ಇದೆ: ಏಳು-ಎದ್ದ (ಎದ್-ದ್-ಅ); ಕೀಳು ಮತ್ತು ಹೂಳು ಎಂಬವು ಕಿತ್ ಮತ್ತು ಹೂ ಎಂದಾಗುತ್ತವೆ, ಮತ್ತು ಅವುಗಳ ಬಳಿಕ ಹಿಂಬೊತ್ತಿನ ಒಟ್ಟಿಗೆ ತ್ ರೂಪ ಇದೆ: ಕೀಳು-ಕಿತ್ತ (ಕಿತ್-ತ್-ಅ); ಹೂಳು- ಹೂತ (ಹೂ-ತ್-ಅ).
ಇದಲ್ಲದೆ, ಇವುಗಳಲ್ಲಿ ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ಒಟ್ಟು ಇಕಾರವೊಂದನ್ನು ಪಡೆಯುತ್ತದೆ: ಏಳು-ಎದ್ದಿತು (ಎದ್-ದಿ-ತು); ಕೀಳು-
ಪದರೂಪಗಳ ಇಟ್ಟಳ / 285 ಕಿತ್ತಿತು (ಕಿತ್-ತಿ-ತು); ಆದರೆ, ಬೀಳು ಪದಕ್ಕೆ ಬಿತ್ತು ಎಂಬ ರೂಪವಿದ್ದು, ಇದರಲ್ಲಿ ಬಿದ್ ಎಂಬುದು ಬಿ ಎಂಬುದಾಗಿ ಬದಲಾಗಿದೆ ಮತ್ತು ಅದರ ಬಳಿಕ ಹಿಂಬೊತ್ತಿನ ಒಟ್ಟು ತ್ ರೂಪದಲ್ಲಿ ಬಂದಿದೆ: ಬಿತ್ತು (ಬಿ-ತ್-ತು).
ಈ ಗುಂಪಿಗೆ ಸೇರಿದ ಉಳಿದ ಎಸಕಪದಗಳು ಮೇಲೆ 4.5.3ರಲ್ಲಿ ಕೊಟ್ಟಿರುವ ಮಾರ್ಪಾಡುಗಳಿಗೆ ಒಳಪಡುತ್ತವೆ ಎಂಬುದಕ್ಕೆ ಕೇಳು-ಕೇಳಿದ (ಸೀಳ್-ಇ-ತು) ಎಂಬವುಗಳನ್ನು (ಕೇಳ್-ಇದ್-ಅ); ಸೀಳು-ಸೀಳಿತು ಎತ್ತುಗೆಯಾಗಿ ಕೊಡಬಹುದು.
(4) ಮೂರು ಬರಿಗೆಕಂತೆಗಳಿರುವ ಪದಗಳು: ಮೂರು ಬರಿಗೆಕಂತೆಗಳಿರುವ ಉರುಳು, ಕನಲು, ಕೆದಕು, ಗುಡುಗು ಮೊದಲಾದ 290 ಎಸಕಪದಗಳು ಪಟ್ಟಿಯಲ್ಲಿವೆ. ಇವುಗಳಲ್ಲಿ ಒತ್ತುಬರಿಗೆ ಗಳಾಗಲಿ, ಉದ್ದ ತೆರೆಯುಲಿಗಳಾಗಲಿ ಬರುವುದಿಲ್ಲ. ಇದಕ್ಕೆ ಹೊರಪಡಿಕೆಯಾಗಿ, ಆಸರು ಮತ್ತು ಬೇಸರು ಎಂಬ ಎರಡು ಎಸಕಪದಗಳಲ್ಲಿ ಉದ್ದ ತೆರೆಯುಲಿ ಬಂದಿದೆ, ಮತ್ತು ತೆಪ್ಪರು ಎಂಬ ಒಂದು ಎಸಕಪದದಲ್ಲಿ ಒತ್ತುಬರಿಗೆ ಬಂದಿದೆ. ಈ ಎಸಕಪದಗಳಲ್ಲಿ ಬೆವರು ಮತ್ತು ಹೊರಡು ಎಂಬ ಎರಡು ಪದಗಳು, ಉದ್ದ ತೆರೆಯುಲಿಯಿರುವ ಆಸರು ಮತ್ತು ಬೇಸರು ಎಂಬ ಪದಗಳು, ಮತ್ತು ಒತ್ತುಬರಿಗೆಯಿರುವ ತೆಪ್ಪರು ಎಂಬ ಪದ ಎಂಬುದಾಗಿ ಒಟ್ಟು ಅಯ್ದು ಪದಗಳು ಮಾತ್ರ ಮೇಲೆ 4.5.3ರಲ್ಲಿ ಕೊಟ್ಟಿರುವ ಮಾರ್ಪಾಡುಗಳಿಗೆ ಹೊರಪಡಿಕೆ ಗಳಾಗಿವೆ. ಉಳಿದ ಪದಗಳು ಹೊರಪಡಿಕೆಗಳಲ್ಲ ಎಂಬುದನ್ನು ತೋರಿಸಿಕೊಡಲು ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಅರಚು-ಅರಚಿದ (ಅರಚ್-ಇದ್-ಅ) ಉಡುಗು-ಉಡುಗಿತು (ಉಡುಗ್-ಇ-ತು) ಕನಲು-ಕನಲಿದ (ಕನಲ್-ಇದ್-ಅ) ಕಳಚು-ಕಳಚಿತು (ಕಳಚ್-ಇ-ತು) ತಿರುಗು-ತಿರುಗಿದ (ತಿರುಗ್-ಇದ್-ಅ) ತಿರುಗು-ತಿರುಗಿತು (ತಿರುಗ್-ಇ-ತು) ಬೆದರು-ಬೆದರಿದ (ಬೆದರ್-ಇದ್-ಅ) ಬಳುಕು-ಬಳುಕಿತು (ಬಳುಕ್-ಇ-ತು) ಸಲಹು-ಸಲಹಿದ (ಸಲಹ್-ಇದ್-ಅ) ಹೊರಳು-ಹೊರಳಿತು (ಹೊರಳ್-ಇ-ತು) ಬೆಗಡು-ಬೆಗಡಿದ (ಬೆಗಡ್-ಇದ್-ಅ) ತಲಪು-ತಲಪಿತು (ತಲಪ್-ಇ-ತು) ಎಡವು-ಎಡವಿದ (ಎಡವ್-ಇದ್-ಅ) ಕರಟು-ಕರಟಿತು (ಕರಟ್-ಇ-ತು)
ಕೊಟ್ಟಿರುವ
4.5.3ರಲ್ಲಿ
ಹೊರಪಡಿಕೆಗಳಾಗಿರುವ ಬೆವರು, ಹೊರಡು, ಆಸರು, ಬೇಸರು ಮತ್ತು ತೆಪ್ಪರು ಎಂಬ ಪದಗಳಿಗೆ ಹಿಂಬೊತ್ತಿನ ಒಟ್ಟು ಸೇರಿದಾಗ, ಅವುಗಳ ಮೂರನೇ ಬರಿಗೆಕಂತೆ ಬಿದ್ದು ಹೋಗುತ್ತದೆ; ಇದಲ್ಲದೆ, ಹಿಂಬೊತ್ತಿನ ಒಟ್ಟಿಗೆ ಅವುಗಳಲ್ಲಿ ಬೆವರು ಎಂಬುದರ
ಮಾರ್ಪಾಡುಗಳಿಗೆ
ಬಳಿಕ ತ್ ರೂಪ, ಹೊರಡು ಎಂಬುದರ ಬಳಿಕ ಟ್ ರೂಪ, ಮತ್ತು ಉಳಿದ ಮೂರು ಎಸಕಪದಗಳ ಬಳಿಕ ತ್್ತ ರೂಪ ಸಿಗುತ್ತದೆ:
ಬೇಸರು-ಬೇಸತ್ತ (ಬೇಸ-ತ್್ತ-ಅ) ಹೊರಡು-ಹೊರಟರು (ಹೊರ-ಟ್-ಅರು) ಆಸರು-ಆಸತ್ತೆ (ಆಸ-ತ್್ತ-ಎ) ತೆಪ್ಪರು-ತೆಪ್ಪತ್ತೆ (ತೆಪ್ಪ-ತ್್ತ-ಎ)
ಬೆವರು-ಬೆವತ (ಬೆವ-ತ್-ಅ)
ಇದಲ್ಲದೆ, ಇವುಗಳಲ್ಲಿ ತು ಗುರುತಿನ ಒಟ್ಟು ಬಂದಾಗ, ಹಿಂಬೊತ್ತಿನ ತ್, ತ್್ತ ಇಲ್ಲವೇ ಟ್ ರೂಪಗಳ ಬಳಿಕ ಇಕಾರವೊಂದು ಸೇರುತ್ತದೆ: ಹೊರಟಿತು (ಹೊರ-ಟಿ-ತು) ಬೇಸತ್ತಿತು (ಬೇಸ-ತ್ತಿ-ತು).
(2) ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳು
ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳಲ್ಲಿ ಎರಡು ಬರಿಗೆ ಕಂತೆಗಳು ಮಾತ್ರ ಬರುತ್ತವೆ; ಇದಲ್ಲದೆ, ಅವುಗಳಲ್ಲಿ ಒತ್ತುಬರಿಗೆಯಾಗಲಿ, ಉದ್ದ ತೆರೆಯುಲಿಯಾಗಲಿ ಬರುವುದಿಲ್ಲ. ಇಕಾರದಲ್ಲಿ ಕೊನೆಗೊಳ್ಳುವ 120 ಎಸಕಪದಗಳು, ಮತ್ತು ಎಕಾರದಲ್ಲಿ ಕೊನೆಗೊಳ್ಳುವ 115 ಎಸಕಪದಗಳು ಪಟ್ಟಿಯಲ್ಲಿವೆ.
ಮೇಲೆ 4.5.3ರಲ್ಲಿ ತಿಳಿಸಿದ ಹಾಗೆ, ಇವುಗಳಲ್ಲಿ ಹೆಚ್ಚಿನ ಪದಗಳಿಗೂ ಹಿಂಬೊತ್ತಿನ ಇದ್ ಒಟ್ಟು ಸೇರಿದಾಗ, ಅವುಗಳ ಕೊನೆಯ ತೆರೆಯುಲಿ ಉಳಿಯು ತ್ತದೆ, ಮತ್ತು ಇದ್ ಒಟ್ಟಿನ ಇಕಾರ ಬಿದ್ದುಹೋಗುತ್ತದೆ (ಕುಡಿ-ಇದ್- ಅ>ಕುಡಿ-ದ್-ಅ; ಬರೆ-ಇದ್-ಅ>ಬರೆ-ದ್-ಅ; ಎಸಕದ ಪಾಂಗನ್ನು ಗುರುತಿಸುವ ತು ಒಟ್ಟು ಬಂದಾಗ ಮಾತ್ರ, ಎಸಕಪದದ ಬಳಿಕ ಯಕಾರ ಸೇರು ತ್ತದೆ, ಮತ್ತು ಇದ್ ಒಟ್ಟಿನ ಇಕಾರ ಉಳಿದು, ದಕಾರ ಬಿದ್ದುಹೋಗುತ್ತದೆ (ಕುಡಿ-ಇದ್-ತು>ಕುಡಿಯ್-ಇ-ತು; ಬರೆ-ಇದ್-ತು>ಬರೆಯ್-ಇ-ತು).
ಇಕಾರದಲ್ಲಿ ಕೊನೆಗೊಳ್ಳುವ ಅರಿ, ಅವಿ, ಕರಿ, ಕಲಿ, ಕಳಿ, ಕುರಿ, ಚಿಗಿ, ಬಲಿ, ಮತ್ತು ಹುಳಿ ಎಂಬ ಒಂಬತ್ತು ಎಸಕಪದಗಳು, ಮತ್ತು ಎಕಾರದಲ್ಲಿ ಕೊನೆ ಗೊಳ್ಳುವ ಒರೆ, ಕಲೆ, ಕೊಳೆ, ಚಳೆ, ದೊರೆ, ನೆರೆ, ಬೆರೆ, ಮರೆ, ಮಲೆ ಮತ್ತು ಮೊಳೆ ಎಂಬ ಹತ್ತು ಎಸಕಪದಗಳು ಇದಕ್ಕೆ ಹೊರಪಡಿಕೆಗಳಾಗಿವೆ: ಅವುಗಳ ಬಳಿಕ ಹಿಂಬೊತ್ತಿನ ಒಟ್ಟು ತ್ ರೂಪವನ್ನು ಪಡೆಯುತ್ತದೆ (ಕಲಿತ> ಕಲಿ-ತ್-ಅ; ಮರೆತ>ಮರೆ-ತ್-ಅ).
ಅದರೆ, ತು ಗುರುತಿನ ಒಟ್ಟು ಬಂದಿರುವಲ್ಲಿ, ಈ ಎಸಕಪದಗಳಿಗೂ ಬೇರೆ ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಹಾಗೆ, ಯಕಾರ ಸೇರುತ್ತದೆ ಮತ್ತು ಅದರ ಬಳಿಕ ಇದ್ ಒಟ್ಟಿನ ಇಕಾರ ಉಳಿದು, ದಕಾರ ಬಿದ್ದು
ಪದರೂಪಗಳ ಇಟ್ಟಳ / 287 ಹೋಗುತ್ತದೆ (ಕಲಿಯಿತು>ಕಲಿಯ್-ಇ-ತು; ಮರೆಯಿತು>ಮರೆಯ್-ಇ- ತು).
ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಈ ಎರಡು ಬಗೆಯ ಎಸಕಪದ ಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಕಾಣಬಹುದು; ಇಕಾರದಲ್ಲಿ ಕೊನೆಗೊಳ್ಳುವ ಕಳಿ, ಕುರಿ ಮತ್ತು ಚಿಗಿ ಪದಗಳಿಗೆ, ಮತ್ತು ಎಕಾರ ದಲ್ಲಿ ಕೊನೆಗೊಳ್ಳುವ ಒರೆ, ನೆರೆ, ಬೆರೆ, ಮತ್ತು ಮಲೆ ಪದಗಳಿಗೆ ಎರಡೆರಡು ಹುರುಳುಗಳಿದ್ದು, ಒಂದು ಹುರುಳಿನಲ್ಲಿ ಮಾತ್ರ ಅವು ಮೇಲಿನ ಮಾರ್ಪಾಡುಗಳಿಗೆ ಹೊರಪಡಿಕೆಗಳಾಗಿವೆ. ಹಿಂಬೊತ್ತಿನ ದಕಾರ ತಕಾರವಾಗುವ ಈ ಮಾರ್ಪಾಡನ್ನು ಮೇಲಿನ ಎಲ್ಲಾ ಎಸಕಪದಗಳನ್ನೂ ಕೊನೆರೂಪಗಳಲ್ಲಿ ಬಳಸಿ ತೋರಿಸಲು ಬರುವುದಿಲ್ಲವಾದ ಕಾರಣ, ಕೆಲವಕ್ಕೆ ಜೋಡಿಸುವ ರೂಪದ ಇಲ್ಲವೇ ಪರಿಚೆ ರೂಪದ ಬಳಕೆಯನ್ನು ಕೊಡಲಾಗಿದೆ:
(1) ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳು:
ಇರಿದ ಸವಿದ ನಲಿದ
Ej ಸವಿ ನಲಿ ಕಳಿದ ಬಣ್ಣ ಕುರಿದು ಬಿದ್ದ ಚಿಗಿದ ಜಿಂಕೆ ಸುಲಿದ ಹಣ್ಣು ಉಳಿದ ಹಣ್ಣು
ಅಲೆ ಕರೆ ಮಲೆದವನು ಕರೆದ ಹಸು ಒರೆದ ಬರಹ ಬೆಳೆದ ಕಾಯಿ ತೊಳೆದ ಬಟ್ಟೆ ನೆರೆದ ಜನ ಬೆರೆದ ಬಣ್ಣಗಳು ಅಳೆದ ಅಕ್ಕಿ
ಅರಿತ ಅವಿತ ಕಲಿತ
Cj ಅವಿ ಕಲಿ ಕಳಿತ ಹಣ್ಣು ಕುರಿತು ಓದಿದ ಚಿಗಿತ ಮರ ಬಲಿತ ಕಾಯಿ ಹುಳಿತ ಹಣ್ಣು
ಕಲೆ ಮರೆ ಮಲೆತವನು ದೊರೆತ ಹಸು ಒರೆತ ನೀರು ಕೊಳೆತ ಹಣ್ಣು ಚಳೆತ ನೀರು ನೆರೆತ ಗಡ್ಡ ಬೆರೆತ ಕಾಲು ಮೊಳೆತ ಕಾಳು
(2) ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳು: ಅಲೆದರು
ಕರೆದರು
ಕಲೆತರು ಮರೆತರು
ಕದಿ ಎಂಬ ಎಸಕಪದವೂ ಮೇಲಿನ ಮಾರ್ಪಾಡುಗಳಿಗೆ ಹೊರಪಡಿಕೆ ಯಾಗಿದೆ; ಹಿಂಬೊತ್ತಿನ ಇದ್ ಒಟ್ಟು ಸೇರಿದಾಗ, ಅದರ ಕೊನೆಯ ಇಕಾರ ಬಿದ್ದುಹೋಗುತ್ತದೆ, ಮತ್ತು ಇದ್ ಒಟ್ಟಿನ ಇಕಾರವೂ ಬಿದ್ದುಹೋಗುತ್ತದೆ:
ಕದಿ-ಕದ್ದ (ಕದ್-ದ್-ಅ). ಈ ರೂಪದಲ್ಲಿ ತು ಗುರುತಿನ ಒಟ್ಟು ಬಂದಾಗ ಹಿಂಬೊತ್ತಿನ ದ್ ಒಟ್ಟು ದಿ ಎಂದಾಗುತ್ತದೆ: ಕದ್ದಿತು (ಕದ್-ದಿ-ತು). ಹಿಂಬೊತ್ತಿನ ಬಳಕೆಯನ್ನು ತುಂಬಾ ಅಡಕವಾಗಿ ಹೇಳುವುದಾದರೆ,
(1) ಅದಕ್ಕೆ ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಇದ್ ರೂಪ ಇದೆ, ಮತ್ತು ಎಕಾರ-ಇಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ದ್ ರೂಪ ಇದೆ; ಅದರ ಬಳಿಕ ತು ಗುರುತಿನ ಒಟ್ಟು ಬಂದಿರುವಲ್ಲಿ ಮಾತ್ರ ಎರಡು ಕಡೆಗಳಲ್ಲೂ ಇ ರೂಪ ಇದೆ;
(2) ಹೊರಪಡಿಕೆಗಳಾಗಿ ಬಂದಿರುವ ಎಸಕಪದಗಳ ಬಳಿಕ, ಕ್, ಟ್, ತ್, ಪ್, ದ್, ಮತ್ತು ತ್್ತ ಎಂಬ ರೂಪಗಳಿದ್ದು, ಇಲ್ಲಿಯೂ ಅದರ ಬಳಿಕ ತು ಗುರುತಿನ ಒಟ್ಟು ಬಂದಿರುವಲ್ಲಿ ಕಿ, ಟಿ, ತಿ, ಪಿ, ದಿ, ಮತ್ತು ತ್ತಿ ರೂಪ ಇದೆ; ಇರು, ತರು ಮತ್ತು ಬರು ಪದಗಳ ಬಳಿಕ ಮಾತ್ರ, ಅದರ ಬಳಿಕ ತು ಒಟ್ಟು ಬಂದಿರುವಲ್ಲಿ ಸೊನ್ನೆ ರೂಪ ಇದೆ.
4.5.5 ಈಪೊತ್ತಿನ ರೂಪಗಳು
ಕನ್ನಡದ ಎಸಕಪದಗಳಿಗೆಲ್ಲ ಮೇಲೆ ವಿವರಿಸಿದ ಹಾಗೆ, ಹಿಂಬೊತ್ತಿನ ರೂಪ ಮತ್ತು ಮುಂಬೊತ್ತಿನ ರೂಪ ಎಂಬುದಾಗಿ ಎರಡು ಬಗೆಯ ಹೊತ್ತಿನ ರೂಪ ಗಳು ಮಾತ್ರ ಇವೆ; ಆದರೆ, ಇರು ಎಂಬ ಒಂದು ಎಸಕಪದಕ್ಕ್ರೆ, ಈ ಎರಡು ಬಗೆಯ ಹೊತ್ತಿನ ರೂಪಗಳು ಮಾತ್ರವಲ್ಲದೆ, ಈಪೊತ್ತಿನ ರೂಪವೆಂಬ ಮೂರನೆಯದೊಂದು ರೂಪವೂ ಇದೆ:
ಇರು ಎಸಕಪದದ ಹೊತ್ತಿನ ರೂಪಗಳು
ಮುಂಬೊತ್ತಿನ ರೂಪ:
ಹಿಂಬೊತ್ತಿನ ರೂಪ:
ಈಪೊತ್ತಿನ ರೂಪ:
ಇರುತ್ತಾನೆ ಇದ್ದ ಇದ್ದಾನೆ
ಈ ಎಸಕಪದದ ಮುಂಬೊತ್ತಿನ ಮತ್ತು ಹಿಂಬೊತ್ತಿನ ರೂಪಗಳನ್ನು ಉಂಟು ಮಾಡುವ ಬಗೆ ಹೇಗೆ ಎಂಬುದನ್ನು ಮೇಲೆಯೇ ನೋಡಿರುವೆವು; ಅದರ ಈಪೊತ್ತಿನ ರೂಪವನ್ನು ಪಡೆಯಲು ಇರು ಎಸಕಪದದ ಇದ್ ರೂಪಕ್ಕೆ ‘ಇರುವಿಕೆಯು ಸೊಲ್ಲನ್ನು ಆಡುತ್ತಿರುವ ಹೊತ್ತಿನಲ್ಲಿ ಇದೆ’ ಎಂಬುದನ್ನು ತಿಳಿಸುವ ಈಪೊತ್ತಿನ ದ್ ಒಟ್ಟನ್ನು ಸೇರಿಸಬೇಕು, ಮತ್ತು ಅದರ ಬಳಿಕ ಗುರುತಿನ ಒಟ್ಟುಗಳಲ್ಲಿ ಒಂದನ್ನು ಸೇರಿಸಬೇಕು: ಇದ್ದಾನೆ (ಇದ್-ದ್-ಆನೆ), ಇದ್ದಾರೆ (ಇದ್-ದ್-ಆರೆ).
ಪದರೂಪಗಳ ಇಟ್ಟಳ / 289 ಎ ಮತ್ತು ವೆ ಗುರುತಿನ ಒಟ್ಟುಗಳು ಬಂದಾಗ, ಈಪೊತ್ತಿನ ಒಟ್ಟಿಗೆ ಸೊನ್ನೆ ರೂಪ ಇದೆ: ಇದೆ (ಇದ್-ಎ); ಇದಲ್ಲದೆ, ವೆ ಒಟ್ಟಿನ ಮೊದಲು ಇರು ಎಸಕ ಪದಕ್ಕೆ ಇ ರೂಪ ಇದೆ: ಇವೆ (ಇ-ವೆ).
4.5.6 ಕೊರೆಪದಗಳು
ಬಲ್್ಲ, ಆರ್ ಮತ್ತು ಒಲ್್ಲ ಎಂಬ ಮೂರು ಎಸಕಬೇರುಗಳು ನೇರವಾಗಿ ಗುರುತಿನ ಒಟ್ಟುಗಳೊಂದಿಗೆ ಸೇರಿ ಕೊನೆರೂಪಗಳಾಗಿ ಬಳಕೆಯಾಗುತ್ತವೆ (4.5.7 ನೋಡಿ); ಇವನ್ನು ಕೊರೆಪದಗಳೆಂದು ಕರೆಯಬಹುದು; ಯಾಕೆಂದರೆ, ಇವು ಬೇರೆ ಎಸಕಪದಗಳ ಹಾಗೆ ಹೊತ್ತಿನ ಒಟ್ಟುಗಳೊಂದಿಗೆ ಬರುವುದಿಲ್ಲ.
ಇವುಗಳಲ್ಲಿ ಆರ್ ಮತ್ತು ಒಲ್್ಲ ಎಂಬ ಎರಡು ಎಸಕಬೇರುಗಳು ಗುರುತಿನ ಒಟ್ಟುಗಳೊಂದಿಗೆ ಸೇರಿ ಅಲ್ಲಗಳೆಯುವ ಹುರುಳನ್ನು ಕೊಡುತ್ತವೆ; ಇದಲ್ಲದೆ, ಅವನ್ನು ಬೇರೆ ಎಸಕಪದಗಳ ಮುಂಬೊತ್ತಿನ ಜೋಡಿಸುವ ರೂಪದ ಬಳಿಕ ಮಾತ್ರವೇ ಬಳಸಲಾಗುತ್ತದೆ (ಮಾಡಲಾರೆ, ಹೋಗಲಾರಳು; ಮಾಡ ಲೊಲ್ಲೆವು, ಹೋಗಲೊಲ್ಲರು). ಬಲ್್ಲ ಬೇರಿನ ರೂಪಗಳು ಮಾತ್ರ ಬೇರೆ ಯಾಗಿಯೂ ಬಳಕೆಯಾಗಬಲ್ಲುವು (ನಾನು ಬಲ್ಲೆ; ಹೋಗಬಲ್ಲೆ, ಮಾಡ ಬಲ್ಲೆವು)
ಅಲ್ಲ, ಇಲ್ಲ, ಮತ್ತು ಸಲ್ಲ ಎಂಬ ಬೇರೆ ಮೂರು ಕೊನೆರೂಪಗಳೂ ಬಳಕೆ ಯಲ್ಲಿದ್ದು, ಅವನ್ನು ಅಲ್, ಇಲ್ ಮತ್ತು ಸಲ್ ಎಂಬ ಎಸಕಬೇರುಗಳಿಗೆ ಅಲ್ಲ ಗಳೆಯುವ ಅ ಒಟ್ಟನ್ನು ಸೇರಿಸಿ ಪಡೆಯಬಹುದು. ಇವನ್ನೂ ಕೊರೆಪದಗಳೆಂದು ಕರೆಯಬಹುದು; ಯಾಕೆಂದರೆ, ಈ ಬೇರುಗಳೊಂದಿಗೆ ಹೊತ್ತಿನ ಒಟ್ಟುಗಳಾಗಲಿ, ಗುರುತಿನ ಒಟ್ಟುಗಳಾಗಲಿ ಬರುವುದಿಲ್ಲ.
4.5.7 ಗುರುತಿನ ಒಟ್ಟುಗಳು
ಎಸಕಪದಗಳ ಕೊನೆರೂಪಗಳಲ್ಲಿ ಹೊತ್ತಿನ ಒಟ್ಟನ್ನು ಬಳಸಿದ ಬಳಿಕ, ಸೊಲ್ಲಿ ನಲ್ಲಿ ಬರುವ ಆಗುಗ, ಮಾಡುಗ ಇಲ್ಲವೇ ಆಗಿಸುಗ ಪಾಂಗನ್ನು ಅಡಕವಾಗಿ ಗುರುತಿಸುವುದಕ್ಕಾಗಿ ಕೆಳಗೆ ಕೊಟ್ಟಿರುವ ಒಂಬತ್ತು ಒಟ್ಟುಗಳಲ್ಲಿ ಯಾವು ದಾದರೂ ಒಂದನ್ನು ಬಳಸಬೇಕಾಗುತ್ತದೆ.
ಆಡುಗ ಕೇಳುಗ ಹೆರತು:
ಗಂಡುಗುರ್ತ
ಓರೆಣಿಕೆ
ಏನೆ E ಆನೆ
ಹಲವೆಣಿಕೆ ಏವೆ Fj ಆರೆ
ಹೆಣ್ಣುಗುರ್ತ
ಉಳಿಕೆಗುರ್ತ
ಆಳೆ ಅದೆ
,, ಅವೆ
ಈ ಒಟ್ಟುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಕೊಡು ಎಸಕಪದದ
ಮುಂಬೊತ್ತಿನ ಪದರೂಪಗಳಲ್ಲಿ ಕಾಣಬಹುದು:
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಓರೆಣಿಕೆ
ಕೊಡುತ್ತೇನೆ ಕೊಡುತ್ತಿ
ಕೊಡುತ್ತಾನೆ ಕೊಡುತ್ತಾಳೆ ಕೊಡುತ್ತದೆ
ಹಲವೆಣಿಕೆ ಕೊಡುತ್ತೇವೆ ಕೊಡುತ್ತೀರಿ ಕೊಡುತ್ತಾರೆ ,, ಕೊಡುತ್ತವೆ
ಈ ಒಟ್ಟುಗಳ ಮೊದಲು ಮುಂಬೊತ್ತನ್ನು ತಿಳಿಸುವ ಒಟ್ಟಿನ ಬದಲು ಹಿಂಬೊತ್ತನ್ನು ತಿಳಿಸುವ ಒಟ್ಟು ಬಂದಿದೆಯಾದರೆ, ಅವಕ್ಕೆ ತುಸು ಬೇರಾಗಿರುವ ರೂಪ ಇದೆ; ಮುಕ್ಯವಾಗಿ ಅವುಗಳಲ್ಲಿರುವ ಉದ್ದ ತೆರೆಯುಲಿ ಗಿಡ್ಡವಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಕೊಡು ಎಸಕಪದದ ಪದರೂಪಗಳಲ್ಲಿ ಕಾಣ ಬಹುದು:
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಓರೆಣಿಕೆ
ಕೊಟ್ಟೆ ಕೊಟ್ಟಿ ಕೊಟ್ಟ ಕೊಟ್ಟಳು
ಕೊಟ್ಟಿತು
ಹಲವೆಣಿಕೆ ಕೊಟ್ಟೆವು ಕೊಟ್ಟಿರಿ ಕೊಟ್ಟರು ,, ಕೊಟ್ಟುವು
ಹಿಂಬೊತ್ತಿನ ಈ ಪದರೂಪಗಳಲ್ಲಿ ಗುರುತಿನ ಒಟ್ಟುಗಳಿಗೆ ಕೆಳಗೆ ಕೊಟ್ಟಿರು
ವಂತಹ ರೂಪಗಳಿವೆ ಎಂಬುದನ್ನು ಗಮನಿಸಬಹುದು:
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಓರೆಣಿಕೆ
J E C ಅಳು ತು
ಹಲವೆಣಿಕೆ ಎವು Ej ಅರು ,, ಉವು
ಪದರೂಪಗಳ ಇಟ್ಟಳ / 291 ಇರು ಎಂಬ ಒಂದು ಎಸಕಪದಕ್ಕೆ ಮಾತ್ರ, ಮುಂಬೊತ್ತಿನ ಮತ್ತು ಹಿಂಬೊತ್ತಿನ ರೂಪಗಳು ಮಾತ್ರವಲ್ಲದೆ ಈಪೊತ್ತಿನ ರೂಪಗಳೂ ಇವೆ ಎಂಬು ದನ್ನು ಮೇಲೆ (4.5.5)ರಲ್ಲಿ ನೋಡಿರುವೆವು; ಅದರ ಈಪೊತ್ತಿನ ರೂಪಗಳಲ್ಲಿ ಗುರುತಿನ ಒಟ್ಟುಗಳಿಗೆ ಹೆಚ್ಚುಕಡಿಮೆ ಮುಂಬೊತ್ತಿನ ರೂಪಗಳಲ್ಲಿ ಕಾಣಿಸುವ ರೂಪಗಳೇ ಇವೆ; ಆದರೆ, ಅದೆ ಮತ್ತು ಅವೆ ಒಟ್ಟುಗಳು ಎ ಮತ್ತು ವೆ ಎಂಬ ರೂಪದಲ್ಲೂ, ಇ ಒಟ್ಟು ಈಯೆ ಎಂಬ ರೂಪದಲ್ಲೂ ಬರುತ್ತವೆ:
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಓರೆಣಿಕೆ
ಇದ್ದೇನೆ
ಇದ್ದೀಯೆ
ಇದ್ದಾನೆ
ಇದ್ದಾಳೆ
ಇದೆ
ಹಲವೆಣಿಕೆ ಇದ್ದೇವೆ ಇದ್ದೀರಿ ಇದ್ದಾರೆ ,, ಇವೆ
ಇದಲ್ಲದೆ, ಹೊತ್ತಿನ ಒಟ್ಟುಗಳನ್ನು ಸೇರಿಸದೆ ನೇರವಾಗಿ ಗುರುತಿನ ಒಟ್ಟು ಗಳನ್ನು ಮಾತ್ರ ಸೇರಿಸಿ ಕೊನೆರೂಪಗಳಾಗಿ ಬಳಸುವ ಬಲ್್ಲ, ಆರ್, ಮತ್ತು ಒಲ್್ಲ ಎಂಬ ಮೂರು ಎಸಕಬೇರುಗಳಿವೆಯೆಂಬುದನ್ನು ಮೇಲೆ 4.5.6ರಲ್ಲಿ ನೋಡಿರುವೆವು; ಈ ಬೇರುಗಳ ಬಳಿಕ ಗುರುತಿನ ಒಟ್ಟುಗಳಿಗೆ ಹಿಂಬೊತ್ತನ್ನು ತಿಳಿಸುವ ಒಟ್ಟಿನ ಬಳಿಕ ಬರುವ ರೂಪಗಳೇ ಇವೆ.
ಆದರೆ, ಇ ಮತ್ತು ತು ಒಟ್ಟುಗಳಿಗೆ ಇವುಗಳ ಬಳಿಕ ಎ ಮತ್ತು ಉದು ಎಂಬ ರೂಪಗಳಿವೆ; ಇದಲ್ಲದೆ, ಒಲ್್ಲ ಮತ್ತು ಆರ್ ಬೇರುಗಳ ಬಳಿಕ ಉದು ಮತ್ತು ಉವು ಒಟ್ಟುಗಳ ಉಕಾರ ಅಕಾರವಾಗುತ್ತದೆ; (ಈ ಅಕಾರವನ್ನು ಅಲ್ಲಗಳೆಯುವ ಒಟ್ಟೆಂದೂ ತಿಳಿಯಲು ಬರುತ್ತದೆ):
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಆಡುಗ ಕೇಳುಗ ಹೆರತು:
ಆಡುಗ ಕೇಳುಗ
ಓರೆಣಿಕೆ
ಬಲ್ಲೆ ಬಲ್ಲೆ ಬಲ್ಲ ಬಲ್ಲಳು
ಬಲ್ಲುದು
ಹಲವೆಣಿಕೆ ಬಲ್ಲೆವು ಬಲ್ಲಿರಿ ಬಲ್ಲರು ,, ಬಲ್ಲುವು
ಓರೆಣಿಕೆ
(ಬರಲ್)ಆರೆ (ಬರಲ್)ಆರೆ
ಹಲವೆಣಿಕೆ (ಬರಲ್)ಆರೆವು (ಬರಲ್)ಆರಿರಿ
ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
(ಬರಲ್)ಆರ (ಬರಲ್)ಆರಳು (ಬರಲ್)ಆರದು
(ಬರಲ್)ಆರರು ,, (ಬರಲ್)ಆರವು
ಆಡುಗ ಕೇಳುಗ ಹೆರತು:
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ
ಓರೆಣಿಕೆ
(ಬರಲ್)ಒಲ್ಲೆ (ಬರಲ್)ಒಲ್ಲೆ (ಬರಲ್)ಒಲ್ಲ (ಬರಲ್)ಒಲ್ಲಳು (ಬರಲ್)ಒಲ್ಲದು
ಹಲವೆಣಿಕೆ (ಬರಲ್)ಒಲ್ಲೆವು (ಬರಲ್)ಒಲ್ಲಿರಿ (ಬರಲ್)ಒಲ್ಲರು ,, (ಬರಲ್)ಒಲ್ಲವು
4.6 ಕೊನೆರೂಪಗಳ ಇಟ್ಟಳ: ಅರಿಕೆರೂಪಗಳು
ಅರಿಕೆರೂಪಗಳನ್ನು ಅರಿಕೆಮಾಡುವುದಕ್ಕೆ ಮಾತ್ರವಲ್ಲದೆ, ಅಪ್ಪಣೆ ಕೊಡುವುದು, ಒಪ್ಪಿಗೆ ತಿಳಿಸುವುದು, ಒಪ್ಪಿಗೆ ಪಡೆಯುವುದು, ಕೊಡುಗೆ ತಿಳಿಸುವುದು ಮೊದ ಲಾದ ಬೇರೆ ಮಾತಿನ ಕೆಲಸಗಳಲ್ಲಿಯೂ ಬಳಸಲಾಗುತ್ತದೆ. ಈ ರೂಪಗಳು ಸೊಲ್ಲಿನ ಮಾಡುಗರಲ್ಲಿ ಆಡುಗ, ಕೇಳುಗ ಮತ್ತು ಹೊರತು ಎಂಬ ವ್ಯತ್ಯಾಸ ವನ್ನು ಬಳಸುತ್ತಿದ್ದು, ಅವುಗಳನ್ನವಲಂಬಿಸಿ ಬೇರೆ ಬೇರೆ ಹುರುಳುಗಳನ್ನು ಕೊಡ ಬಲ್ಲುವು.
4.6.1 ಆಡುಗ, ಕೇಳುಗ ಮತ್ತು ಹೆರತು ರೂಪಗಳು
ಸೊಲ್ಲಿನ ಮಾಡುಗನು ಆಡುಗನಾಗಿದ್ದಲ್ಲಿ, ಓರೆಣಿಕೆಯ ಅಲಿ ಮತ್ತು ಹಲ ವೆಣಿಕೆಯ ಓಣ ಎಂಬ ಎರಡು ಒಟ್ಟುಗಳನ್ನು ಬಳಸಲಾಗುತ್ತದೆ; ಇವನ್ನು ನೇರ ವಾಗಿ ಎಸಕಪದಗಳಿಗೆ ಸೇರಿಸಲಾಗುತ್ತದೆ (ಹೋಗಲಿ, ಹೋಗೋಣ; ಕೊಡಲಿ, ಕೊಡೋಣ). ಇವುಗಳಲ್ಲಿ ಓರೆಣಿಕೆಯ ರೂಪಗಳನ್ನು ಮುಕ್ಯವಾಗಿ ಕೇಳುಗನಿಂದ ಒಪ್ಪಿಗೆ ಪಡೆಯುವುದಕ್ಕಾಗಿ ಬಳಸಲಾಗುತ್ತದೆ, ಮತ್ತು ಇದಕ್ಕಾಗಿ ಅದರ ಬಳಿಕ ಕೇಳ್ವಿಯ ಒಟ್ಟನ್ನು ಸೇರಿಸಲಾಗುತ್ತದೆ (ನಾನು ಬರಲಾ?).
ಸೊಲ್ಲಿನ ಮಾಡುಗನು ಕೇಳುಗನಾಗಿದ್ದಲ್ಲಿ, ಹಲವೆಣಿಕೆಯ ಇ ಇಲ್ಲವೇ ಇರಿ ಎಂಬ ಒಟ್ಟು ಬಳಕೆಯಲ್ಲಿದ್ದು, ಅದನ್ನು ನೇರವಾಗಿ ಎಸಕಪದಕ್ಕೆ ಸೇರಿಸಲಾಗು ತ್ತದೆ (ಹೋಗಿ; ಕೊಡಿ, ನಿಲ್ಲಿರಿ, ನೋಡಿರಿ); ಆದರೆ, ಓರೆಣಿಕೆಯಲ್ಲಿ ಎಸಕಪದವನ್ನು ಅದಕ್ಕೆ ಯಾವ ಒಟ್ಟನ್ನೂ ಸೇರಿಸದೆ ಬಳಸಲಾಗುತ್ತದೆ (ಹೋಗು, ಕೊಡು).
ಸೊಲ್ಲಿನ ಮಾಡುಗನು ಹೆರತಾಗಿದ್ದಲ್ಲಿ, ಅಲಿ ಎಂಬ ಒಟ್ಟನ್ನೇ ಬಳಸ ಲಾಗುತ್ತದೆ (ಅವನು ಬರಲಿ); ಆದರೆ, ಈ ಬಳಕೆಯಲ್ಲಿ ಅದು ಎಣಿಕೆಯ
ಪದರೂಪಗಳ ಇಟ್ಟಳ / 293 ವ್ಯತ್ಯಾಸವನ್ನಾಗಲಿ (ಮೂವರು ಬರಲಿ), ಇಲ್ಲವೇ ಗುರ್ತದ ವ್ಯತ್ಯಾಸವನ್ನಾಗಲಿ ತೋರಿಸುವುದಿಲ್ಲ (ಅವಳು ಬರಲಿ). ಮುಕ್ಯವಾಗಿ ಆಡುಗನ ಒಪ್ಪಿಗೆಯನ್ನು ಇಲ್ಲವೇ ಬಯಕೆಯನ್ನು ತಿಳಿಸುವುದಕ್ಕಾಗಿ ಈ ಎಸಕರೂಪವನ್ನು ಬಳಸಲಾಗು ತ್ತದೆ.
4.6.2 ಸೇರಿಕೆಯ ಮಾರ್ಪಾಡುಗಳು
ಹಲವೆಣಿಕೆಯ ಒಟ್ಟನ್ನು ಸೇರಿಸಿದಾಗ, ಇಲ್ಲವೇ ಓರೆಣಿಕೆಯಲ್ಲಿ ಬಳಸಿದಾಗ, ಕೆಲವು ಎಸಕಪದಗಳಲ್ಲಿ ಮಾರ್ಪಾಡುಗಳು ಕಾಣಿಸಿಕೊಳ್ಳುತ್ತವೆ: ಕೊಳ್ಳು, ತರು ಮತ್ತು ಬರು ಪದಗಳಿಗೆ ಓರೆಣಿಕೆಯಲ್ಲಿ ಕೋ, ತಾ ಮತ್ತು ಬಾ ಎಂಬ ರೂಪಗಳಿವೆ: (ತೆಗೆದುಕೋ, ತಾ, ಬಾ), ಮತ್ತು ಹಲವೆಣಿಕೆಯಲ್ಲಿ ತರು ಮತ್ತು ಬರು ಪದಗಳಿಗೆ ತನ್್ನ ಮತ್ತು ಬನ್್ನ ಎಂಬ ರೂಪಗಳಿವೆ (ತನ್ನಿ (ತನ್್ನ+ಇ), ಬನ್ನಿ, ತನ್ನಿರಿ).
ಇದಲ್ಲದೆ, ಮೇಲೆ 4.1.1ರಲ್ಲಿ ವಿವರಿಸಿದ (1, 2) ಮಾರ್ಪಾಡುಗಳೂ ಇಲ್ಲಿ ನಡೆಯುತ್ತವೆ: (1) ಈ ಮೂರು ಒಟ್ಟುಗಳು ಸೇರಿದಾಗಲೂ ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ, ಮತ್ತು (2) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಯಕಾರವೊಂದು ಸೇರಿಕೊಳ್ಳುತ್ತದೆ:
(1) ಎಸಕಪದದ ಕೊನೆಯ ಉಕಾರ ಬಿದ್ದುಹೋಗುವುದು: ಕಟ್ಟಲಿ ಕಟ್ಟು+ಅಲಿ ಕೊಡು+ಓಣ ಕೊಡೋಣ ಅಡಗು+ಇರಿ ಅಡಗಿರಿ
ಸಾಯು+ಅಲಿ ಸಾಯಲಿ
ತಿನ್ನು+ಅಲಿ ತರು+ಓಣ
ಓಡು+ಇರಿ
ಹೋಗು+ಅಲಿ
ತಿನ್ನಲಿ ತರೋಣ Nrj ಹೋಗಲಿ
(2) ಯಕಾರ ಬಂದು ಸೇರುವುದು: ಕುಡಿ+ಅಲಿ ಹಿಡಿ+ಓಣ ಮುರಿ+ಇರಿ ಸಿಡಿ+ಅಲಿ
ಕುಡಿಯಲಿ
ಹಿಡಿಯೋಣ ಮುರಿಯಿರಿ
ಸಿಡಿಯಲಿ
ಬರೆ+ಅಲಿ
ಕರೆ+ಓಣ
ನೆನೆ+ಇರಿ
ದೊರೆ+ಅಲಿ
ಬರೆಯಲಿ ಕರೆಯೋಣ ನೆನೆಯಿರಿ ದೊರೆಯಲಿ
4.6.3 ಕೊರೆಪದಗಳು
ಬೇಕು, ಬೇಡ, ಸಾಕು, ಕೂಡದು ಮತ್ತು ಬಹುದು ಎಂಬ ಅಯ್ದು ಕೊನೆ ರೂಪಗಳೂ ಅರಿಕೆಪದಗಳಾಗಿ ಬಳಕೆಯಾಗುತ್ತವೆ. ಆದರೆ, ಇವು ಕೊರೆರೂಪ
ಗಳು; ಇವುಗಳಲ್ಲಿ ಬಳಕೆಯಾಗಿರುವ ಒಟ್ಟುಗಳು ಬೇರೆ ಅರಿಕೆರೂಪಗಳಲ್ಲಿ ಬರುವುದಿಲ್ಲ.
ಬೇಕು ಮತ್ತು ಸಾಕು ಪದರೂಪಗಳನ್ನು ಬೇಡು ಮತ್ತು ಸಾಲು ಎಸಕ ಪದಗಳಿಂದ ಪಡೆಯಬಹುದು, ಮತ್ತು ಇವುಗಳಲ್ಲಿ ಕು ಒಟ್ಟು ಬಂದಿದೆ; ಬೇಡ ಮತ್ತು ಕೂಡದು ಎಂಬವುಗಳನ್ನು ಬೇಡು ಮತ್ತು ಕೂಡು ಎಸಕಪದಗಳಿಂದ ಪಡೆಯಬಹುದು, ಮತ್ತು ಇವುಗಳಲ್ಲಿ ಅಲ್ಲಗಳೆಯುವ ಅ ಒಟ್ಟು ಬಂದಿದೆ; ಮತ್ತು, ಕೂಡದು ಹಾಗೂ ಬಹುದು ಎಂಬವುಗಳಲ್ಲಿ ದು ಗುರುತಿನ ಒಟ್ಟು ಬಂದಿದೆ (ಆದರೆ ಇದಕ್ಕೆ ಗುರುತಿನ ಹುರುಳಿಲ್ಲ).
ಇವುಗಳಲ್ಲಿ ಬಹುದು ಎಂಬುದು ಎಸಕಪದಗಳ ಜೋಡಿಸುವ ರೂಪ ದೊಂದಿಗೆ ಮಾತ್ರ ಬರಬಲ್ಲುದು (ಹೋಗಬಹುದು); ಈ ಕೊರೆಪದಗಳಿಗೆ ಅರಿಕೆಯ ಹುರುಳು ಮಾತ್ರವಲ್ಲದೆ ತಿಳಿಸುವ ಹುರುಳೂ ಬರಬಲ್ಲುದೆಂಬುದನ್ನು ಮುಂದೆ ನೋಡಲಿರುವೆವು.
4.7 ನಡುರೂಪಗಳು
ಪರಿಚೆರೂಪಗಳು, ಜೋಡಿಸುವ ರೂಪಗಳು, ಬೇಡಿಕೆರೂಪ, ಮತ್ತು ಹೆಸರು ರೂಪಗಳು-1, 2 ಎಂಬುದಾಗಿ ಅಯ್ದು ಬಗೆಯ ನಡುರೂಪಗಳು ಕನ್ನಡದ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ.
ಇವುಗಳಲ್ಲಿ ಪರಿಚೆರೂಪಗಳ ಮೂಲಕ ಸೊಲ್ಲನ್ನು ಒಂದು ಪದಕಂತೆಯ ಅಂಗವನ್ನಾಗಿ ಮಾಡಲು ಬರುತ್ತದೆ. ಎತ್ತುಗೆಗಾಗಿ, ಮನೆಗೆ ಹೋದ ಜಾನಕಿ ಊಟ ಮಾಡಿದಳು ಎಂಬ ಸೊಲ್ಲಿನಲ್ಲಿ ಜಾನಕಿ ಮನೆಗೆ ಹೋದಳು ಎಂಬ ಸೊಲ್ಲನ್ನು ಮನೆಗೆ ಹೋದ ಜಾನಕಿ ಎಂಬ ಪದಕಂತೆಯ ಅಂಗವನ್ನಾಗಿ ಮಾಡಲು ಹೋಗು ಎಸಕಪದದ ಪರಿಚೆರೂಪವೊಂದನ್ನು (ಹೋದ ಎಂಬು ದನ್ನು) ಬಳಸಲಾಗಿದೆ.
ಜೋಡಿಸುವ ರೂಪಗಳ ಮೂಲಕ ಎರಡು (ಇಲ್ಲವೇ ಹೆಚ್ಚು) ಸೊಲ್ಲುಗಳನ್ನು ಜೋಡಿಸಲು ಬರುತ್ತದೆ. ಎತ್ತುಗೆಗಾಗಿ, ಜಾನಕಿ ಮನೆಗೆ ಹೋಗಿ ಊಟ ಮಾಡಿದಳು ಎಂಬ ಸೊಲ್ಲಿನಲ್ಲಿ ಜಾನಕಿ ಮನೆಗೆ ಹೋದಳು ಮತ್ತು ಜಾನಕಿ ಊಟ ಮಾಡಿದಳು ಎಂಬ ಎರಡು ಸೊಲ್ಲುಗಳನ್ನು ಹೋಗು ಎಸಕಪದದ ಜೋಡಿಸುವ ರೂಪದ (ಹೋಗಿ ಎಂಬುದರ) ಮೂಲಕ ಜೋಡಿಸಲಾಗಿದೆ.
ಬೇಡಿಕೆಯ ರೂಪದ ಮೂಲಕ ಒಂದು ಎಸಕ ನಡೆಯಲು ಬೇಡಿಕೆ ಎಂತಹದು ಎಂಬುದನ್ನು ತಿಳಿಸಲು ಬರುತ್ತದೆ. ಎತ್ತುಗೆಗಾಗಿ, ಜಾನಕಿ ಮನೆಗೆ ಹೋದರೆ ಊಟ ಮಾಡಬಹುದು ಎಂಬ ಸೊಲ್ಲಿನಲ್ಲಿ ಜಾನಕಿ ಊಟಮಾಡಲು
ಪದರೂಪಗಳ ಇಟ್ಟಳ / 295
ಏನು ಮಾಡಬೇಕು (ಅದಕ್ಕೆ ಬೇಡಿಕೆಯೆಂತಹದು) ಎಂಬುದನ್ನು ತಿಳಿಸಲು ಹೋಗು ಎಸಕಪದದ ಬೇಡಿಕೆರೂಪವನ್ನು (ಹೋದರೆ ಎಂಬುದನ್ನು) ಬಳಸ ಲಾಗಿದೆ.
ಹೆಸರುರೂಪಗಳ ಮೂಲಕ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನಲ್ಲಿ ಬರುವ ಹೆಸರುಪದದ ಜಾಗದಲ್ಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಜಾನಕಿ ಮನೆಗೆ ಹೋದುದಕ್ಕೆ ಒಂದು ಕಾರಣ ಇತ್ತು ಎಂಬ ಸೊಲ್ಲಿನಲ್ಲಿ ಜಾನಕಿ ಮನೆಗೆ ಹೋದಳು ಎಂಬ ಸೊಲ್ಲನ್ನು ಒಂದು ಹೆಸರುಪದದ ಜಾಗದಲ್ಲಿರಿಸಲು ಹೋಗು ಎಸಕಪದದ ಹೆಸರುರೂಪವೊಂದನ್ನು (ಹೋಗುವುದು ಎಂಬುದನ್ನು) ಬಳಸಲಾಗಿದೆ. ಹೆಸರುರೂಪ-2 ಎಂಬುದು ಕೆಲವು ವಿಶಯಗಳಲ್ಲಿ ಈ ಹೆಸರು ರೂಪ-1 ಎಂಬುದರಿಂದ ಬೇರಾಗಿದೆ ಎಂಬುದನ್ನು ಮುಂದೆ ನೋಡಲಿರುವೆವು.
ಈ ಅಯ್ದು ಬಗೆಯ ನಡುರೂಪಗಳನ್ನು ಉಂಟುಮಾಡುವ ಬಗೆ ಹೇಗೆ, ಇವು ಗಳಲ್ಲಿ ಬಳಕೆಯಾಗುವ ಒಟ್ಟುಗಳು ಯಾವುವು, ಮತ್ತು ಅವನ್ನು ಎಸಕಪದಗಳಿಗೆ ಸೇರಿಸಿದಾಗ ಎಂತಹ ಸೇರಿಕೆಯ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
4.7.1 ಪರಿಚೆರೂಪಗಳು
ಎಸಕಪದಗಳಿಗೆ ಮುಂಬೊತ್ತಿನ ರೂಪ, ಹಿಂಬೊತ್ತಿನ ರೂಪ, ಮತ್ತು ಅಲ್ಲ ಗಳೆತದ ರೂಪ ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ; ಇವುಗಳ ಮೂಲಕ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನಲ್ಲಿರುವ ಹೆಸರುಪದಕಂತೆಯ ಅಂಗವನ್ನಾಗಿ ಮಾಡಲು ಬರುತ್ತದೆ.
ಈ ಮೂರು ಬಗೆಯ ರೂಪಗಳಲ್ಲೂ ಎಸಕಪದಗಳೊಂದಿಗೆ (ಕ) ಹೊತ್ತು ಇಲ್ಲವೇ ಅಲ್ಲಗಳೆತವನ್ನು ತಿಳಿಸುವ ಒಟ್ಟು, ಮತ್ತು (ಚ) ಹೆಸರುಪದದೊಂದಿಗಿನ ಪತ್ತುಗೆಯನ್ನು ತಿಳಿಸುವ ಒಟ್ಟು ಎಂಬುದಾಗಿ ಎರಡೆರಡು ಒಟ್ಟುಗಳು ಬರುತ್ತವೆ.
ಎತ್ತುಗೆಗಾಗಿ, ಮಾಡುವ ಎಂಬ ಮುಂಬೊತ್ತಿನ ಪರಿಚೆರೂಪದಲ್ಲಿ ಮಾಡು ಎಸಕಪದದೊಂದಿಗೆ ಮುಂಬೊತ್ತನ್ನು ತಿಳಿಸುವ ವ್ ಒಟ್ಟು ಮತ್ತು ಪತ್ತುಗೆಯನ್ನು ತಿಳಿಸುವ ಅ ಒಟ್ಟು ಬಂದಿದೆ; ಮಾಡಿದ ಎಂಬ ಹಿಂಬೊತ್ತಿನ ಪರಿಚೆರೂಪದಲ್ಲಿ ಆ ಎಸಕಪದದೊಂದಿಗೆ ಹಿಂಬೊತ್ತಿನ ಇದ್ ಒಟ್ಟು ಮತ್ತು ಪತ್ತುಗೆಯ ಅ ಒಟ್ಟು ಬಂದಿದೆ; ಮತ್ತು ಮಾಡದ ಎಂಬ ಅಲ್ಲಗಳೆಯುವ ಪರಿಚೆರೂಪದಲ್ಲಿ ಅಲ್ಲಗಳೆಯುವ ಅದ್ ಒಟ್ಟು ಮತ್ತು ಪತ್ತುಗೆಯ ಅ ಒಟ್ಟು ಬಂದಿದೆ.
ಈ ಮೂರು ಬಗೆಯ ಪರಿಚೆರೂಪಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಪದ
ಕಂತೆಗಳಲ್ಲಿ ಕಾಣಬಹುದು:
(1ಕ) ಊಟ ಮಾಡುವ ಹುಡುಗ (1ಚ) ಊಟ ಮಾಡಿದ ಹುಡುಗ (1ಟ) ಊಟ ಮಾಡದ ಹುಡುಗ
(1) ಮುಂಬೊತ್ತಿನ ರೂಪಗಳು ಮುಂಬೊತ್ತಿನ ಪರಿಚೆರೂಪಗಳನ್ನು ಪಡೆಯುವುದಕ್ಕಾಗಿ ಉಕಾರದಲ್ಲಿ ಕೊನೆ ಗೊಳ್ಳುವ ಎಸಕಪದಗಳಿಗೆ ವ್ ಒಟ್ಟನ್ನು ನೇರವಾಗಿ ಸೇರಿಸಲಾಗುತ್ತದೆ ಮತ್ತು ಅದರ ಬಳಿಕ ಪತ್ತುಗೆಯ ಅ ಒಟ್ಟನ್ನು ಸೇರಿಸಲಾಗುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ತಿನ್ನು-ವ್-ಅ ಗೆಲ್ಲು-ವ್-ಅ ಹಾಡು-ವ್-ಅ
ತಿನ್ನುವ ಗೆಲ್ಲುವ ಹಾಡುವ ಕೊಯ್ಯುವ ಕೊಯ್ಯು-ವ್-ಅ ತಪ್ಪುವ ತಪ್ಪು-ವ್-ಅ ಅಂಜುವ ಅಂಜು-ವ್-ಅ ಕಾಯು-ವ್-ಅ ಕಾಯುವ
ನಗು-ವ್-ಅ ನಗುವ
ಬಿಡು-ವ್-ಅ ಬಿಡುವ ಕೊಡುವ ಕೊಡು-ವ್-ಅ ಉದುರುವ ಉದುರು-ವ್-ಅ ಕೊರಗು-ವ್-ಅ ಕೊರಗುವ ಹರಟುವ ಹರಟು-ವ್-ಅ ಹೆಣಗುವ ಹೆಣಗು-ವ್-ಅ
ಎಕಾರ ಇಲ್ಲವೇ ಇಕಾರದಲ್ಲಿ
ಕೊನೆಗೊಳ್ಳುವ ಎಸಕಪದಗಳಿಗೆ ಮುಂಬೊತ್ತಿನ ವ್ ಒಟ್ಟನ್ನು ಸೇರಿಸಿದಾಗ, ಅವುಗಳ ಬಳಿಕ ಯು ಎಂಬುದು ಸೇರಿಕೊಳ್ಳುತ್ತದೆ.
ಎಳೆಯುವ ಒಡೆಯುವ ತೊಳೆಯುವ ಕೊಳೆಯುವ ತಡೆಯುವ
ಎಳೆಯು-ವ್-ಅ ಒಡೆಯು-ವ್-ಅ ತೊಳೆಯು-ವ್-ಅ ಕೊಳೆಯು-ವ್-ಅ ತಡೆಯು-ವ್-ಅ
ಇಳಿಯುವ ಇಳಿಯು-ವ್-ಅ ಕುಡಿಯುವ ಕುಡಿಯು-ವ್-ಅ ತಣಿಯುವ ತಣಿಯು-ವ್-ಅ ತಿಳಿಯುವ ತಿಳಿಯು-ವ್-ಅ ಸುಲಿಯುವ ಸುಲಿಯು-ವ್-ಅ
(2) ಹಿಂಬೊತ್ತಿನ ರೂಪಗಳು ಹಿಂಬೊತ್ತಿನ ಪಡೆಯುವುದಕ್ಕಾಗಿ ಎಸಕಪದಗಳಿಗೆ ಹಿಂಬೊತ್ತಿನ ಇದ್ ಒಟ್ಟನ್ನು ಮತ್ತು ಅದರ ಬಳಿಕ ಪತ್ತುಗೆಯ ಅ ಒಟ್ಟನ್ನು ಸೇರಿಸಲಾಗುತ್ತದೆ.
ಪರಿಚೆರೂಪಗಳನ್ನು
ಎಸಕಪದಗಳಿಗೆ ಹಿಂಬೊತ್ತಿನ ಇದ್ ಒಟ್ಟನ್ನು ಸೇರಿಸಿದಾಗ ಈ ಪರಿಚೆ ರೂಪಗಳಲ್ಲೂ ಮೇಲೆ 4.5.3ರಲ್ಲಿ ವಿವರಿಸಿದ ಎಲ್ಲಾ ಮುಕ್ಯ ಮಾರ್ಪಾಡುಗಳೂ
ಪದರೂಪಗಳ ಇಟ್ಟಳ / 297 ಆ ಎಸಕಪದಗಳಲ್ಲಿ ಮತ್ತು ಅದರ ಬಳಿಕ ಬಂದ ಇದ್ ಒಟ್ಟಿನಲ್ಲಿ ನಡೆಯು ತ್ತವೆ. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
(1) ಎಸಕಪದಗಳ ಕೊನೆಯ ಉಕಾರ ಬಿದ್ದುಹೋಗುವುದು: ನಂಬು ಉಬ್ಬು
ಓಡು
ಹಾರು
ಅಡಗು
ನಂಬಿದ (ನಂಬ್-ಇದ್-ಅ) ಉಬ್ಬಿದ (ಉಬ್್ಬ-ಇದ್-ಅ) ಓಡಿದ (ಓಡ್-ಇದ್-ಅ) ಹಾರಿದ (ಹಾರ್-ಇದ್-ಅ) ಅಡಗಿದ (ಅಡಗ್-ಇದ್-ಅ)
(2) ಎಸಕಪದಗಳ ಕೊನೆಯ ಇಕಾರ ಮತ್ತು ಎಕಾರಗಳು ಉಳಿದು, ಹಿಂಬೊತ್ತಿನ ಇಕಾರ
ಬಿದ್ದುಹೋಗುವುದು:
ಇಳಿ
ಕುಡಿ
ಒಡೆ
ಹೆಣೆ
ಇಳಿದ (ಇಳಿ-ದ್-ಅ) ಕುಡಿದ (ಕುಡಿ-ದ್-ಅ) ಒಡೆದ (ಒಡೆ-ದ್-ಅ) ಹೆಣೆದ (ಹೆಣೆ-ದ್-ಅ)
ಇದಲ್ಲದೆ, ಈ ಪದರೂಪಗಳನ್ನು ಪಡೆಯುವಾಗ, ಎಸಕಪದಗಳಲ್ಲಿ ಮತ್ತು ಇದ್ ಒಟ್ಟಿನಲ್ಲಿ ಮೇಲೆ 4.5.4ರಲ್ಲಿ ವಿವರಿಸಿದ ಎಲ್ಲಾ ಹೊರಪಡಿಕೆಯ ಮಾರ್ಪಾಡುಗಳೂ ನಡೆಯುತ್ತವೆ. ಈ ಮಾರ್ಪಾಡುಗಳನ್ನು ತೋರಿಸುವ ಎಸಕ ಪದಗಳ ಒಂದು ಪಟ್ಟಿಯನ್ನು ಮತ್ತು ಅವುಗಳ ಹಿಂಬೊತ್ತಿನ ಪರಿಚೆರೂಪಗಳನ್ನು ಕೆಳಗೆ ಕೊಡಲಾಗಿದೆ; ಎಸಕಪದಗಳ ಹುರುಳುಗಳನ್ನು ಬೇಕೆನಿಸಿರುವಲ್ಲಿ ಮಾತ್ರ ಕೊಡಲಾಗಿದೆ:
ಎಸಕಪದಗಳು ಪರಿಚೆರೂಪ ಅಡು ‘ಅಡಿಗೆ ಮಾಡು’ ಅನ್ನು ‘ಹೇಳು’ ಅರಿ ‘ತಿಳಿ’ ಅರಿ ‘ತುಂಡಿಸು’ ಅರು ‘ಕೊನೆಗೊಳ್ಳು’ ಅವಿ ‘ಅಡಗು’ ಅಳು
ಆಗು ಆನು ‘ತಾಳು, ಒರಗು’ ಆಯು ‘ಆರಿಸು’
ಅಟ್ಟ ಅಂದ ಅರಿತ ಅರಿದ ಅರತ ಅವಿತ ಅತ್ತ ಆದ ಆತ ಆದ
ಆಸರು ‘ಆಯಾಸಗೊಳ್ಳು’ ಇಡು ‘ಇರಿಸು, ಹೊಡೆ’ ಇರು ಈಯು ‘ಕರು ಹಾಕು’ ಈಯು ‘ಕೊಡು’ ಉಗು ‘ಉಕ್ಕು’ ಉಡು ಉಣ್ಣು ಉನ್ನು ‘ಆಳವಾಗಿ ನೆನೆ’ ಉರು ‘ಹಿಂಜರಿ’ ಉಳು ಎನ್ನು
ಆಸತ್ತ ಇಟ್ಟ ಇದ್ದ ಈದ ಇತ್ತ ಒಕ್ಕ ಉಟ್ಟ ಉಂಡ ಉಂದ ಉತ್ತ ಉತ್ತ ಎಂದ
ಎರು ‘ಮುಗಿಸು’ ಎಸು ‘ಬಿಡು’ ಏಳು ಒಗು ‘ಉಕ್ಕು’ ಒಯ್ಯು ಒರೆ ‘ಊಜು’ ಒರೆ ‘ನುಡಿ’ ಕದಿ
ಕರಿ ‘ಕರಟು, ಸೀಯು’
ಎತ್ತ ಎಚ್ಚ ಎದ್ದ ಒಕ್ಕ ಒಯ್ದ ಒರೆತ ಒರೆದ ಕದ್ದ ಕರಿತ, ಕರಿದ ಕರುತ್ತ ಕರು ‘ಗುರಿಯಿಡು’ ಕಲಿತ ಕಲಿ ಕಲೆತ ಕಲೆ ‘ಬೆರೆ’ ಕಳಿದ ಕಳಿ ‘ಮಾಸು’ ಕಳಿತ ಕಳಿ ‘ಹಣ್ಣಾಗು’ ಕಂಡ ಕಾಣು ಕಾತ ಕಾಯು ‘ಕಾಯಿ ಬಿಡು’ ಕಾದ ಕಾಯು ‘ಬಿಸಿಯಾಗು’ ಕೆತ್ತ ಕಿರು ‘ಕೂಡಿಹಾಕು’ ಕೀತ ಕೀಯು ‘ಕೀವಾಗು’ ಕಿತ್ತ ಕೀಳು ಕುರಿತ ಕುರಿ ‘ಗುರುತು ಮಾಡು’ ಕುರಿದ ಕುರಿ ‘ಬಾಗು’ ಕೆಟ್ಟ ಕೆಡು
ಕೆತ್ತ ಕೆರು ‘ನೋಯು’ ಕೊಟ್ಟ ಕೊಡು ಕೊಯ್ದ ಕೊಯ್ಯು ಕೊಂದ ಕೊಲ್ಲು ಕೊಳೆ ಕೊಳೆತ ಕೊಳ್ಳು (ಕೊಂಡುಕೊಳ್ಳು) ಕೊಂಡ ಗಿರು ‘ನೆನೆ’ ಗೆಯ್ಯು ‘ಕೆಲಸ ಮಾಡು’ ಗೆಲ್ಲು ಚಳೆ ‘ತುಂಬಿರು’
ಗೆತ್ತ ಗೆಯ್ದ ಗೆದ್ದ ಚಳೆತ
ಚಿಗಿ ‘ಚಿಗುರು’ ಚಿಗಿ ‘ನೆಗೆ’ ತಗು ‘ಸರಿಹೊಂದು’ ತರು
ತರು ‘ಜೋಡಿಸು’ ತಿನ್ನು ತಿರು ‘ಬದಲಾಯಿಸು’ ತೆಪ್ಪರು ‘ಎಚ್ಚರಗೊಳ್ಳು’ ತೆರು ‘ಸಲ್ಲಿಸು’ ತೇಯು
ಚಿಗಿತ ಚಿಗಿದ ತಕ್ಕ ತಂದ ತತ್ತ ತಿಂದ ತೆತ್ತ ತೆಪ್ಪತ್ತ ತೆತ್ತ ತೇದ, ತೆಯ್ದ ತೊಡು ‘ಉಡು’ ತೊಟ್ಟ ತೊಯ್ಯು ‘ಒದ್ದೆಯಾಗು’ ತೊಯ್ದ ದೊರೆ ‘ಸಿಗು’ ದೊರೆತ ನಗು
ನಕ್ಕ ನಡು ನಟ್ಟ ನಾರು
ನಾತ ನಿಲ್ಲು ನಿಂದ ನೆರೆತ ನೆರೆ ‘ಕೂದಲು ಬಿಳಿಯಾಗು’ ನೆರೆ ‘ಸೇರು’ ನೆರೆದ ನೇದ, ನೇಯು ನೇತ, ನೆಯ್ದ ನೇಲು ನೋನು ನೋಯು ಪಡು ಪಸು ‘ಬೇರ್ಪಡಿಸು’ ಪೂನು ‘ಪ್ರಯತ್ನಿಸು’ ಬಯ್ಯು ಬರು ಬಲಿ ‘ಬೆಳೆ’ ಬಾಯು ‘ಬಾತುಹೋಗು’ ಬಾರು ‘ಚೆಲ್ಲು’ ಬಿಡು
ನೇತ ನೋತ ನೊಂದ ಪಟ್ಟ ಪಚ್ಚ ಪೂತ ಬಯ್ದ ಬಂದ ಬಲಿತ ಬಾತ ಬಾತ ಬಿಟ್ಟ
ಪದರೂಪಗಳ ಇಟ್ಟಳ / 299
ಬೀತ ಬೀಯು ‘ಬೀಗು’ ಬಿದ್ದ ಬೀಳು ಬೆರೆತ ಬೆರೆ ಬೆವತ ಬೆವರು ಬೆಂದ ಬೇಯು ಬೇತ ಬೇಯು ‘ಬೇಡು’ ಬೇಸತ್ತ ಬೇಸರು ‘ಬೇಸರಿಸು’ ಮಡು ‘ಜೋಡಿಸು’
ಮಟ್ಟ (ಪೊಡಮಡು) ಮರೆತ ಮರೆ ಮಲೆತ ಮಲೆ ‘ಇದಿರಿಸು’ ಮಲೆದ ಮಲೆ ‘ಸೊಕ್ಕಿರು’ ಮಾದ ಮಾಣು ‘ಕೊನೆಗೊಳ್ಳು’ ಮಾಯು ‘ಗುಣವಾಗು’ ಮಾದ ಮಿಕ್ಕ ಮಿಗು ಮಿಂದ ಮೀಯು ಮೆದ್ದ ಮೆಲ್ಲು ಮೇದ ಮೇಯು ಮೊಳೆತ ಮೊಳೆ ‘ಮೊಳಕೆ ಬರು’
ಸಲ್ಲು ‘ಒದಗು, ದಕ್ಕು’ ಸಾಯು ಸಿಗು ಸೀಯು ಸುಡು ಸುಯ್ಯು ‘ಉಸಿರಾಡು’ ಸೋಲು ಹಾಯು ಹೀಯು ‘ಹೀಗಳೆ’ ಹುಗು ‘ಒಳಸೇರು’ ಹುಳಿ ‘ಹುಳ ಹಿಡಿ’ ಹೂಯು ‘ಹೂವಾಗು’ ಹೂಳು ಹೆರು ಹೊಗು ‘ಒಳಸೇರು’ ಹೊಯ್ಯು ‘ಹೊಡೆ, ಎರೆ’ ಹೊರಡು ಹೊರು ಹೋಗು
ಸಂದ ಸತ್ತ ಸಿಕ್ಕ ಸೀದ ಸುಟ್ಟ ಸುಯ್ದ ಸೋತ ಹಾದ ಹೀದ ಹೊಕ್ಕ ಹುಳಿತ ಹೂತ ಹೂತ ಹೆತ್ತ ಹೊಕ್ಕ ಹೊಯ್ದ ಹೊರಟ ಹೊತ್ತ ಹೋದ
(3) ಅಲ್ಲಗಳೆತದ ರೂಪಗಳು ಅಲ್ಲಗಳೆತದ ಪರಿಚೆರೂಪಗಳನ್ನು ಪಡೆಯಲು ಎಸಕಪದಗಳಿಗೆ ಅಲ್ಲಗಳೆಯುವ ಅದ್ ಒಟ್ಟನ್ನು ಮತ್ತು ಅ ಪತ್ತುಗೆ ಒಟ್ಟನ್ನು ಸೇರಿಸಲಾಗುತ್ತದೆ.
ಅದ್ ಒಟ್ಟು ಸೇರಿದಾಗ, ಮೇಲೆ 4.1.1ರಲ್ಲಿ ವಿವರಿಸಿರುವ ಎರಡು ಮಾರ್ಪಾಡುಗಳು (ಎಸಕಪದಗಳ ಕೊನೆಯ ಉಕಾರ ಬಿದ್ದುಹೋಗುವುದು, ಮತ್ತು ಎಕಾರ ಹಾಗೂ ಇಕಾರಗಳ ಬಳಿಕ ಯಕಾರ ಬರುವುದು) ನಡೆಯುತ್ತವೆ.
(1) ಉಕಾರ ಬಿದ್ದುಹೋಗಿರುವುದು: ಸಿಗು ಸಿಗದ (ಸಿಗ್-ಅದ್-ಅ) ಅಂಜು ಅಂಜದ (ಅಂಜ್-ಅದ್-ಅ) ಹೊರಡು ಹೊರಡದ (ಹೊರಡ್-ಅದ್-ಅ) ಕಚ್ಚು ಕಚ್ಚದ (ಕಚ್್ಚ-ಅದ್-ಅ) ಏಳು ಏಳದ (ಏಳ್-ಅದ್-ಅ)
ತಿನ್ನು ತಿನ್ನದ (ತಿನ್್ನ-ಅದ್-ಅ) ಬಯ್ಯು ಬಯ್ಯದ (ಬಯ್್ಯ-ಅದ್-ಅ)
ಬಿಡು ಬಿಡದ (ಬಿಡ್-ಅದ್-ಅ)
(2) ಯಕಾರ ಸೇರಿರುವುದು: ಅಗಿ ಅಗಿಯದ (ಅಗಿಯ್-ಅದ್-ಅ) ಕುಣಿ ಕುಣಿಯದ (ಕುಣಿಯ್-ಅದ್-ಅ) ಉಳಿ ಉಳಿಯದ (ಉಳಿಯ್-ಅದ್-ಅ) ಸುಲಿ ಸುಲಿಯದ (ಸುಲಿಯ್-ಅದ್-ಅ) ಒಡೆ ಒಡೆಯದ (ಒಡೆಯ್-ಅದ್-ಅ) ಕೊಳೆ ಕೊಳೆಯದ (ಕೊಳೆಯ್-ಅದ್-ಅ) ಕರೆ ಕರೆಯದ (ಕರೆಯ್-ಅದ್-ಅ) ಬರೆ ಬರೆಯದ (ಬರೆಯ್-ಅದ್-ಅ)
ಇದಲ್ಲದೆ, ಬರು ಮತ್ತು ತರು ಎಸಕಪದಗಳಿಗೆ ಈ ಒಟ್ಟು ಸೇರಿದಾಗ, ಬರದ ಮತ್ತು ತರದ ಎಂಬ ರೂಪಗಳು ಮಾತ್ರವಲ್ಲದೆ, ಬಾರದ ಮತ್ತು ತಾರದ ಎಂಬ ರೂಪಗಳೂ ಸಿಗುತ್ತವೆ.
ಅಲ್, ಇಲ್, ಮತ್ತು ಸಲ್ ಎಂಬ ಮೂರು ಎಸಕಬೇರುಗಳೊಂದಿಗೂ (4.5.6 ನೋಡಿ) ಅಲ್ಲಗಳೆಯುವ ಅದ್ ಒಟ್ಟು ಮತ್ತು ಪತ್ತುಗೆಯ ಅ ಒಟ್ಟು ಗಳನ್ನು ಸೇರಿಸಿ, ಅಲ್ಲದ, ಇಲ್ಲದ, ಮತ್ತು ಸಲ್ಲದ ಎಂಬ ಮೂರು ಪರಿಚೆ ರೂಪಗಳನ್ನು ಪಡೆಯಲಾಗುತ್ತದೆ. ಆದರೆ, ಈ ಎಸಕಬೇರುಗಳಿಂದ ಅಲ್ಲಗಳೆ ಯುವ ಪರಿಚೆರೂಪಗಳನ್ನು ಮಾತ್ರ ಪಡೆಯಲು ಬರುತ್ತದೆಯಲ್ಲದೆ, ಹಿಂಬೊತ್ತಿನ ಇಲ್ಲವೇ ಮುಂಬೊತ್ತಿನ ಪರಿಚೆರೂಪಗಳನ್ನು ಪಡೆಯಲು ಬರುವುದಿಲ್ಲ.
ಇದಲ್ಲದೆ, ಆರ್ ಮತ್ತು ಒಲ್ ಎಸಕಬೇರುಗಳಿಂದಲೂ ಅಲ್ಲಗಳೆಯುವ ಪರಿಚೆರೂಪಗಳನ್ನು ಪಡೆಯಬಹುದು: (ಹೋಗಲ್)ಆರದ, (ಹೋಗಲ್) ಒಲ್ಲದ. ಬೇಡದ ಮತ್ತು ಸಾಲದ ಎಂಬ ಬೇರೆ ಎರಡು ಅಲ್ಲಗಳೆಯುವ ಪರಿಚೆರೂಪಗಳನ್ನು ಬೇಡು ಮತ್ತು ಸಾಲು ಎಸಕಪದಗಳಿಂದ ಪಡೆಯಬಲ್ಲೆ ವಾದರೂ, ಹುರುಳಿನ ಮಟ್ಟಿಗೆ ಅವು ಬೇಡ ಮತ್ತು ಸಾಕು ಎಂಬ ಎರಡು ಅರಿಕೆಯ ರೂಪಗಳಿಗೆ ಹತ್ತಿರವಾಗಿವೆ.
4.7.2 ಜೋಡಿಸುವ ರೂಪಗಳು
ಎರಡು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಒಟ್ಟು ಸೇರಿಸುವುದಕ್ಕಾಗಿ ಎಸಕಪದಗಳ ಜೋಡಿಸುವ ರೂಪಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ರಾಜು ಮನೆಗೆ ಬಂದು ಊಟ ಮಾಡಿದ ಎಂಬ ಸೊಲ್ಲಿನಲ್ಲಿ ರಾಜು ಮನೆಗೆ ಬಂದ ಮತ್ತು ರಾಜು ಊಟ ಮಾಡಿದ ಎಂಬ ಎರಡು ಸೊಲ್ಲುಗಳನ್ನು ಜೋಡಿಸಿ ಹೇಳ ಲಾಗಿದೆ, ಮತ್ತು ಇದಕ್ಕಾಗಿ ಬರು ಎಸಕಪದದ ಜೋಡಿಸುವ ರೂಪವಾದ ಬಂದು ಎಂಬುದನ್ನು ಬಳಸಲಾಗಿದೆ.
ಸೊಲ್ಲುಗಳನ್ನು ಈ ರೀತಿ ಜೋಡಿಸುವುದಕ್ಕಾಗಿ ನಾಲ್ಕು ಬಗೆಯ ಜೋಡಿಸುವ ರೂಪಗಳನ್ನು ಬಳಸಲಾಗುತ್ತದೆ. ಇವನ್ನು ಮೊದಲೆಸಕ (ಮಾಡಿ), ಮಾರೆಸಕ ಮತ್ತು ಅಲ್ಲಗಳೆದೆಸಕ (ಮಾಡುತ್ತಾ) (ಮಾಡಲು), ಒಡನೆಸಕ
ಪದರೂಪಗಳ ಇಟ್ಟಳ / 301 (ಮಾಡದೆ) ಎಂಬುದಾಗಿ ಹೆಸರಿಸಬಹುದು. ಈ ನಾಲ್ಕು ಬಗೆಯ ಜೋಡಿಸುವ ರೂಪಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(1ಕ) ಅವನು ಊಟ ಮಾಡಿ ನಮ್ಮಲ್ಲಿಗೆ ಬಂದ. (1ಚ) ಅವನು ಊಟ ಮಾಡಲು ನಮ್ಮಲ್ಲಿಗೆ ಬಂದ. (1ಟ) ಅವನು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ. (1ತ) ಅವನು ಊಟ ಮಾಡದೆ ನಮ್ಮಲ್ಲಿಗೆ ಬಂದ.
ಮೇಲೆ 4.7.1ರಲ್ಲಿ ವಿವರಿಸಿರುವ ಪರಿಚೆ ರೂಪಗಳಿಗೂ ಈ ಜೋಡಿಸುವ ರೂಪಗಳಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸ ಇದೆ ಎಂಬುದನ್ನು ಗಮನಿಸಬಹುದು: ಪರಿಚೆರೂಪಗಳಲ್ಲಿ ಮುಂಬೊತ್ತು ಮತ್ತು ಹಿಂಬೊತ್ತುಗಳನ್ನು ತಿಳಿಸುವ ಹೊತ್ತಿನ ಒಟ್ಟುಗಳ ಬಳಕೆಯಾಗಿದೆ; ಅವು ಎಸಕ ಯಾವಾಗ ನಡೆ ಯಿತು ಎಂಬುದನ್ನು ಆಡುಗನ ಹೊತ್ತಿಗೆ ಸಂಬಂದಿಸಿದ ಹಾಗೆ ತಿಳಿಸುತ್ತವೆ.
ಆದರೆ, ಜೋಡಿಸುವ ರೂಪಗಳಲ್ಲಿ ಹೊತ್ತನ್ನು ತಿಳಿಸುವ ಈ ಒಟ್ಟುಗಳ ಬದಲು, ಅವು ತಿಳಿಸುವ ಎಸಕಕ್ಕೂ ಸೊಲ್ಲಿನ ಮುಕ್ಯ ಎಸಕಕ್ಕೂ ನಡುವೆ ಎಂತಹ ಹೊತ್ತಿನ ಸಂಬಂದ ಇದೆ ಎಂಬುದನ್ನು ತಿಳಿಸುವ ಪತ್ತುಗೆ ಒಟ್ಟುಗಳು ಬಂದಿವೆ: ಅವು ತಿಳಿಸುವ ಎಸಕ ಮುಕ್ಯ ಎಸಕದ ಮೊದಲು ನಡೆದಿದೆಯೆಂಬುದನ್ನು ಮೊದ ಲೆಸಕದ ಒಟ್ಟು, ಬಳಿಕ ನಡೆಯುವುದೆಂಬುದನ್ನು ಮಾರೆಸಕದ ಒಟ್ಟು, ಮತ್ತು ಎರಡು ಎಸಕಗಳೂ ಒಟ್ಟೊಟ್ಟಿಗೆ ನಡೆಯುವವುವೆಂಬುದನ್ನು ಒಡನೆಸಕದ ಒಟ್ಟು ತಿಳಿಸುತ್ತವೆ.
ಈ ಪತ್ತುಗೆ ಒಟ್ಟುಗಳಲ್ಲಿ ಮೊದಲೆಸಕದ ಒಟ್ಟು ಹಲವು ವಿಶಯಗಳಲ್ಲಿ ಹಿಂಬೊತ್ತಿನ ಒಟ್ಟನ್ನು ಹೋಲುತ್ತದೆ; ಆದರೆ, ಕೆಲವು ವಿಶಯಗಳಲ್ಲಿ ಅದು ಬೇರಾಗಿಯೂ ಇದೆ; ಇದೇ ರೀತಿಯಲ್ಲಿ, ಒಡನೆಸಕದ ಒಟ್ಟು ಮುಂಬೊತ್ತಿನ ಒಟ್ಟಿನ ಹಾಗೆಯೇ ಇದ್ದು ಕೊನೆಯ ತೆರೆಯುಲಿಯ ಮಟ್ಟಿಗೆ ಬೇರಾಗಿದೆ ಎಂಬುದನ್ನು ಮುಂದೆ ನೋಡಲಿರುವೆವು.
ಎರಡರಲ್ಲಿಯೂ ಅಲ್ಲಗಳೆಯುವ ರೂಪ ಇದೆ ಎಂಬುದು ಇವುಗಳ ನಡು
ವಿರುವ ಇನ್ನೊಂದು ಹೋಲಿಕೆ.
(1) ಮೊದಲೆಸಕದ ರೂಪಗಳು ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳಲ್ಲಿ ಹಲವಕ್ಕೆ ಹಿಂಬೊತ್ತಿನ ಒಟ್ಟು ಸೇರುವಾಗ ಅದು ಇದ್ ರೂಪದಲ್ಲಿ ಬರುತ್ತದೆ (4.5.3 ನೋಡಿ); ಅಂತಹ ಪದಗಳ ಬಳಿಕ ಮೊದಲೆಸಕದ ಒಟ್ಟಿಗೆ ಇ ರೂಪ ಇದೆ. ಇದಕ್ಕೆ ಕೆಲವು ಎತ್ತುಗೆ
ಗಳನ್ನು ಕೆಳಗೆ ಕೊಡಲಾಗಿದೆ; ಹಿಂಬೊತ್ತಿನ ರೂಪವಾಗಿ ಕೆಳಗೆ ಎಸಕಪದಗಳ ಪರಿಚೆರೂಪಗಳನ್ನು ಕೊಡಲಾಗಿದೆ (4.7.1 ನೋಡಿ):
ಎಸಕಪದಗಳು ಅಂಜು ಉಜ್ಜು ತುರುಕು
ಕಿವುಚು
ತೋಡು
ಕರಗು ಕೊಡಿಸು
ತಿನ್ನಿಸು
ಪರಿಚೆರೂಪ ಅಂಜಿದ
ಉಜ್ಜಿದ
ತುರುಕಿದ
ಕಿವುಚಿದ
ತೋಡಿದ
ಕರಗಿದ ಕೊಡಿಸಿದ
ತಿನ್ನಿಸಿದ
ಮೊದಲೆಸಕದ ರೂಪ CAf ಉಜ್ಜಿ ತುರುಕಿ ಕಿವುಚಿ ತೋಡಿ ಕರಗಿ ಕೊಡಿಸಿ ತಿನ್ನಿಸಿ
ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳಲ್ಲಿ ಹಲವು ಮೇಲೆ 4.5.3ರಲ್ಲಿ ಕೊಟ್ಟಿರುವ ಕಟ್ಟಲೆಗಳಿಗೆ ಹೊರಪಡಿಕೆಗಳಾಗಿವೆ; ಅವುಗಳಲ್ಲಿ ಹೆಚ್ಚಿನವುಗಳ ಬಳಿಕವೂ ಮೊದಲೆಸಕದ ಒಟ್ಟಿಗೆ ಹಿಂಬೊತ್ತಿನ ರೂಪವೇ ಇದ್ದು, ಅದರ ಕೊನೆಗೆ ಉಕಾರವೊಂದು ಸೇರಿಕೊಳ್ಳುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಎಸಕಪದಗಳು ಇಡು
ಹೊರು ತಿನ್ನು
ಗೆಲ್ಲು
ಕಾಣು
ಸಾಯು ಏಳು
ಕೊಯ್ಯು ಸೋಲು ಈಯು ಬೇಯು
ಪರಿಚೆರೂಪ ಇಟ್ಟ ಹೊತ್ತ
ತಿಂದ ಗೆದ್ದ ಕಂಡ ಸತ್ತ ಎದ್ದ ಕೊಯ್ದ
ಸೋತ
ಇತ್ತ ಬೆಂದ
ಮೊದಲೆಸಕದ ರೂಪ
ಇಟ್ಟು ಹೊತ್ತು ತಿಂದು ಗೆದ್ದು ಕಂಡು ಸತ್ತು ಎದ್ದು ಕೊಯ್ದು ಸೋತು ಇತ್ತು ಬೆಂದು
ಇದಕ್ಕೆ ಆಗು ಮತ್ತು ಹೋಗು ಎಂಬ ಎರಡು ಹೊರಪಡಿಕೆಗಳಿವೆ; ಇವಕ್ಕೆ ಆದ ಮತ್ತು ಹೋದ ಎಂಬ ಹಿಂಬೊತ್ತಿನ ರೂಪಗಳಿವೆ; ಆದರೆ ಇವುಗಳ ಮೊದಲೆಸಕದ ರೂಪಗಳು ಆಗಿ ಮತ್ತು ಹೋಗಿ ಎಂಬವುಗಳಾಗಿವೆ. ಎಂದರೆ, ಮೊದಲೆಸಕದ ಒಟ್ಟಿಗೆ ಇಲ್ಲಿ ಇ ರೂಪ ಇದೆ.
ಪದರೂಪಗಳ ಇಟ್ಟಳ / 303
ಎಕಾರ ಮತ್ತು ಇಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕವೂ ಮೊದಲೆಸಕದ ಒಟ್ಟಿಗೆ ಹಿಂಬೊತ್ತಿನ ಒಟ್ಟಿಗಿರುವ ರೂಪವೇ ಇದೆ; ಮತ್ತು ಇಲ್ಲೂ ಕೂಡ ಈ ಒಟ್ಟಿನ ಬಳಿಕ ಉಕಾರವೊಂದು ಸೇರಿಕೊಳ್ಳುತ್ತದೆ:
ಎಸಕಪದಗಳು ಹಿಂಬೊತ್ತಿನ ರೂಪ ಮೊದಲೆಸಕದ ರೂಪ ಇಳಿ
fV
ಸುಲಿ
ಕಲಿ
ಕದಿ
ಇಳಿದ ಜಿಗಿದ ಸುಲಿದ
ಕಲಿತ ಕದ್ದ
ಇಳಿದು ಜಿಗಿದು ಸುಲಿದು ಕಲಿತು ಕದ್ದು
ಹೊಡೆ ಸೆಳೆ
ಮೊಳೆ ದೊರೆ
ಹೊಡೆದ
ಸೆಳೆದ ಮೊಳೆತ
ದೊರೆತ
ಹೊಡೆದು ಸೆಳೆದು ಮೊಳೆತು ದೊರೆತು
(2) ಮಾರೆಸಕದ ರೂಪಗಳು ಎಸಕಪದಗಳಿಗೆ ಅಲು ಒಟ್ಟನ್ನು ಸೇರಿಸಿ ಮಾರೆಸಕದ ಜೋಡಿಸುವ ರೂಪಗಳನ್ನು ಉಂಟುಮಾಡಲಾಗುತ್ತದೆ. ಈ ಒಟ್ಟನ್ನು ಸೇರಿಸಿದಾಗ, 4.1.1ರಲ್ಲಿ ವಿವರಿಸಿದ ಹಾಗೆ, ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ; ಮತ್ತು, ಇಕಾರ ಹಾಗೂ ಎಕಾರಗಳಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಯಕಾರವೊಂದು ಸೇರಿಕೊಳ್ಳುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(1) ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಕೊಡಲು
ಕೊಡು ಹಂಚು ಹಂಚಲು
ಅಟ್ಟು ಅಟ್ಟಲು
ತಿನ್ನಲು
ತಿನ್ನು ಕಾದಲು
ಕಾದು ಹೊರಡು ಹೊರಡಲು
ನಗಲು ನಗು ನಂದಲು ನಂದು ಕಚ್ಚಲು ಕಚ್ಚು ಕಾಣು ಕಾಣಲು ಈಜು ಈಜಲು ಒರಸು ಒರಸಲು
(2) ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಇಳಿ ಕಲಿ ಕುದಿ
ಇಳಿಯಲು
ಕಲಿಯಲು
ಕುದಿಯಲು
ನುಡಿಯಲು ದುಡಿಯಲು ಸರಿಯಲು
ನುಡಿ ದುಡಿ ಸರಿ
(3) ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಮರೆ ಸವೆ ಕೊಳೆ
ಹೊಳೆ ಹೊಳೆಯಲು ಹೊಗೆ ಹೊಗೆಯಲು ಬೆರೆ
ಮರೆಯಲು ಸವೆಯಲು ಕೊಳೆಯಲು
ಬೆರೆಯಲು
(3) ಒಡನೆಸಕದ ರೂಪಗಳು ಎಸಕಪದಗಳಿಗೆ ಉತ್ತಾ ಒಟ್ಟನ್ನು ಸೇರಿಸಿ ಒಡನೆಸಕದ ರೂಪಗಳನ್ನು ಪಡೆಯ ಲಾಗುತ್ತದೆ; ಈ ಒಟ್ಟು ಸೇರಿದಾಗಲೂ, 4.1.1ರಲ್ಲಿ ವಿವರಿಸಿದ ಹಾಗೆ, ಉಕಾರ ದಲ್ಲಿ ಕೊನೆಗೊಳ್ಳುವ ಎಸಕಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ, ಮತ್ತು ಇಕಾರ ಹಾಗೂ ಎಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಯಕಾರವೊಂದು ಸೇರುತ್ತದೆ.
(1) ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ನಗುತ್ತಾ ಕೊಡುತ್ತಾ ಕೊಡು ಬಯ್ಯು ಬಯ್ಯುತ್ತಾ ತಿನ್ನುತ್ತಾ ಏಳು ಏಳುತ್ತಾ
ಬೆವರು ಬೆವರುತ್ತಾ ನಿಲ್ಲುತ್ತಾ
ನಿಲ್ಲು
ನಗು ತಿನ್ನು ನೋಯು ನೋಯುತ್ತಾ ಅಡಗು ಅಡಗುತ್ತಾ ಸೋಲು ಸೋಲುತ್ತಾ
(2) ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಕುಡಿ ಕಲಿ ಇಳಿ ಕುಣಿ ಹರಿ fV ಕೊಳೆ ಬರೆ ಸೆಳೆ ಮೆರೆ ನೆನೆ ತಡೆ
ಕುಡಿಯುತ್ತಾ ಇಳಿಯುತ್ತಾ ಹರಿಯುತ್ತಾ ಕೊಳೆಯುತ್ತಾ ಸೆಳೆಯುತ್ತಾ ನೆನೆಯುತ್ತಾ
ಕಲಿಯುತ್ತಾ ಕುಣಿಯುತ್ತಾ ಜಿಗಿಯುತ್ತಾ ಬರೆಯುತ್ತಾ ಮೆರೆಯುತ್ತಾ ತಡೆಯುತ್ತಾ
(4) ಅಲ್ಲಗಳೆದೆಸಕದ ರೂಪಗಳು ಎಸಕಪದಗಳಿಗೆ ಅಲ್ಲಗಳೆಯುವ ಅದ್ ಒಟ್ಟನ್ನು ಸೇರಿಸಿ ಅಲ್ಲಗಳೆದೆಸಕದ ರೂಪ ಗಳನ್ನು ಉಂಟುಮಾಡಲಾಗುತ್ತದೆ; ಈ ಒಟ್ಟಿನ ಬಳಿಕ, ಈ ರೂಪಗಳಲ್ಲಿ ಎಕಾರ ವೊಂದು ಸೇರಿಕೊಳ್ಳುತ್ತದೆ.
ಇದಲ್ಲದೆ, 4.1.1ರಲ್ಲಿ ವಿವರಿಸಿದಂತೆ, ಉಕಾರದಲ್ಲಿ ಕೊನೆಗೊಳ್ಳುವ ಎಸಕ ಪದದ ಕೊನೆಯ ಉಕಾರ ಬಿದ್ದುಹೋಗುತ್ತದೆ, ಮತ್ತು ಎಕಾರ ಹಾಗೂ ಇಕಾರ ಗಳಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಯಕಾರವೊಂದು ಸೇರಿಕೊಳ್ಳುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಪದರೂಪಗಳ ಇಟ್ಟಳ / 305
ಬಿಡದೆ
(1) ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಬಿಡು ಉಣ್ಣು ಉಣ್ಣದೆ
ಬೀಳು ಬೀಳದೆ
ಕಾಣು ಕಾಣದೆ
ಸಾಯು ಸಾಯದೆ
ಕೊಡಿಸು ಕೊಡಿಸದೆ
ಅಳು ಅಳದೆ ನೇಯು ನೇಯದೆ ಹೋಗು ಹೋಗದೆ ಗೆಲ್ಲು ಸೋಲು ಸೋಲದೆ ಬೆರಸು ಬೆರಸದೆ
ಗೆಲ್ಲದೆ
(2) ಇಕಾರ ಮತ್ತು ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ: ಬಸಿ ಕುಸಿ ಸುಲಿ ತಿಳಿ Cj ಕಲಿ
ಬಸಿಯದೆ ಸುಲಿಯದೆ ಅರಿಯದೆ
ಕುಸಿಯದೆ
ತಿಳಿಯದೆ
ಕಲಿಯದೆ
ಮರೆಯದೆ ಮರೆ ಕೊಳೆ ಕೊಳೆಯದೆ ಹೊಳೆ ಹೊಳೆಯದೆ
ಹೊಡೆ ಹೊಡೆಯದೆ ದೊರೆಯದೆ ದೊರೆ ಮಸೆಯದೆ ಮಸೆ
ಬರು ಮತ್ತು ತರು ಎಂಬ ಎರಡು ಎಸಕಪದಗಳು ಈ ಅಲ್ಲಗಳೆಯುವ ಒಟ್ಟು ಸೇರಿದಾಗ ಬಾರ್ ಮತ್ತು ತಾರ್ ಎಂಬ ರೂಪವನ್ನು ಪಡೆಯುತ್ತವೆ: ಬಾರದೆ (ಬಾರ್-ಅದೆ), ತಾರದೆ (ತಾರ್-ಅದೆ).
4.7.3 ಬೇಡಿಕೆಯ ರೂಪ
ಒಂದು ಎಸಕಕ್ಕೆ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ತಿಳಿಸಬೇಕೆಂದಿದ್ದಾಗ, ಅದನ್ನು ತಿಳಿಸುವ ಎಸಕಪದಕ್ಕೆ ಹಿಂಬೊತ್ತಿನ ಒಟ್ಟನ್ನು ಮತ್ತು ಬೇಡಿಕೆಯ ಅರೆ ಒಟ್ಟನ್ನು ಸೇರಿಸಿ ಹೇಳಲಾಗುತ್ತದೆ: ಬರು-ಬಂದರೆ, ತಿನ್ನು-ತಿಂದರೆ, ಹೋಗು- ಹೋದರೆ, ಕೊಡು-ಕೊಟ್ಟರೆ). ಈ ಎಸಕರೂಪದ ಬಳಕೆಯನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು.
(1ಕ) ಮದುವೆಗೆ ಕರೆದರೆ ಹೋಗುತ್ತೇನೆ. (1ಚ) ನೀವು ಬಂದರೆ ಹೋಗುತ್ತೇನೆ. (1ಟ) ಹಣ ಸಿಕ್ಕಿದರೆ ಕೊಡುತ್ತೇನೆ.
ಈ ಒಟ್ಟಿನ ಮೊದಲು ಹಿಂಬೊತ್ತಿನ ಒಟ್ಟಿಗೆ ಪರಿಚೆರೂಪದಲ್ಲಿರುವ ರೂಪವೇ ಇದೆ. ಅಲ್ಲಿ ಕಾಣಿಸುವ ಎಲ್ಲಾ ಹೊರಪಡಿಕೆಗಳೂ ಇಲ್ಲಿಯೂ ಕಾಣಿಸು ತ್ತವೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಎಸಕಪದ
ಇಡು ಹೋಗು
ತಿನ್ನು ಉಣ್ಣು ಕೊಲ್ಲು
ಗೆಲ್ಲು ನೇಯು
ಏಳು ಹೊರಡು
ಪರಿಚೆ ರೂಪ ಇಟ್ಟ ಹೋದ
ತಿಂದ ಉಂಡ ಕೊಂದ
ಗೆದ್ದ ನೆಯ್ದ ಎದ್ದ ಹೊರಟ
ಬೇಡಿಕೆಯ ರೂಪ ಇಟ್ಟರೆ ಹೋದರೆ ತಿಂದರೆ ಉಂಡರೆ ಕೊಂದರೆ ಗೆದ್ದರೆ ನೆಯ್ದರೆ ಎದ್ದರೆ ಹೊರಟರೆ
4.7.4 ಹೆಸರುರೂಪಗಳು
ಎಸಕಪದಗಳ ಪರಿಚೆರೂಪಗಳಿಗೆ (4.7.1 ನೋಡಿ) ಉದು ಮತ್ತು ಇಕೆ ಒಟ್ಟು ಗಳನ್ನು ಸೇರಿಸಿ ಎರಡು ಬಗೆಯ ಹೆಸರುರೂಪಗಳನ್ನು ಪಡೆಯಲಾಗುತ್ತದೆ. ಇವು ಗಳಲ್ಲಿ ಮೊದಲನೇ ಬಗೆಯ ಹೆಸರುರೂಪಗಳನ್ನು ಮುಂಬೊತ್ತು, ಹಿಂಬೊತ್ತು ಮತ್ತು ಅಲ್ಲಗಳೆತಗಳೆಂಬ ಮೂರು ಬಗೆಯ ಪರಿಚೆರೂಪಗಳಿಂದಲೂ ಪಡೆಯಲು ಬರುತ್ತದೆ; ಆದರೆ, ಎರಡನೇ ಬಗೆಯ ಹೆಸರುರೂಪಗಳನ್ನು ಮುಂಬೊತ್ತಿನ ಮತ್ತು ಅಲ್ಲಗಳೆತದ ಪರಿಚೆರೂಪಗಳಿಂದ ಮಾತ್ರ ಪಡೆಯಬಹುದು.
ಹಿಂಬೊತ್ತಿನ ಪರಿಚೆರೂಪ ಮಾಡಿದ
ಕೊಟ್ಟ ತಿಂದ ಕುಡಿದ ಬರೆದ
ಮುಂಬೊತ್ತಿನ ಪರಿಚೆರೂಪ ಮಾಡುವ
ಹೋಗುವ ಹೇಳುವ
ಬರೆಯುವ
ಕುಡಿಯುವ
ಅಲ್ಲಗಳೆಯುವ ಪರಿಚೆರೂಪ ಮಾಡದ
ಹೋಗದ
ತಿನ್ನದ ಕುಡಿಯದ
ಹೆಸರುರೂಪ-1 ಮಾಡಿದುದು ಕೊಟ್ಟುದು ತಿಂದುದು ಕುಡಿದುದು ಬರೆದುದು
ಹೆಸರುರೂಪ-1 ಮಾಡುವುದು ಹೋಗುವುದು ಹೇಳುವುದು ಬರೆಯುವುದು ಕುಡಿಯುವುದು
ಹೆಸರುರೂಪ-1 ಮಾಡದುದು ಹೋಗದುದು ತಿನ್ನದುದು ಕುಡಿಯದುದು
ಹೆಸರುರೂಪ-2 ಮಾಡುವಿಕೆ ಹೋಗುವಿಕೆ ಹೇಳುವಿಕೆ ಬರೆಯುವಿಕೆ ಕುಡಿಯುವಿಕೆ
ಹೆಸರುರೂಪ-2 ಮಾಡದಿಕೆ ಹೋಗದಿಕೆ ತಿನ್ನದಿಕೆ ಕುಡಿಯದಿಕೆ
ಪದರೂಪಗಳ ಇಟ್ಟಳ / 307
ಬರೆಯದ
ಹೇಳದ
ಬರೆಯದುದು ಹೇಳದುದು
ಬರೆಯದಿಕೆ ಹೇಳದಿಕೆ
ಅಲ್ಲಗಳೆತದ ಜೋಡಿಸುವ ರೂಪಗಳಿಗೆ ಇಕೆ ಒಟ್ಟನ್ನು ಸೇರಿಸಿ ಪಡೆದಿರುವ ಹೆಸರುರೂಪಗಳು ಹೆಚ್ಚು ಬಳಕೆಯಲ್ಲಿಲ್ಲ; ಆದರೆ, ಈ ಹೊಲಬನ್ನು ಬಳಸಿ, ಅಡಕವಾದ ಪದರೂಪಗಳನ್ನು ಪಡೆಯಬಲ್ಲೆವಾದ ಕಾರಣ, ಅರಿಮೆಯ ಬರಹ ಗಳಲ್ಲಿ ಅವುಗಳ ಬಳಕೆಯನ್ನು ಹೆಚ್ಚಿಸಬಹುದು.
4.8 ಹೆಸರುಪದಗಳ ಪದರೂಪಗಳು
ಹೆಸರುಪದಗಳೊಂದಿಗೆ ಪತ್ತುಗೆ ಒಟ್ಟು ಮತ್ತು ಎಣಿಕೆ ಒಟ್ಟು ಎಂಬುದಾಗಿ ಎರಡು ಬಗೆಯ ಒಟ್ಟುಗಳು ಅವುಗಳ ಪದರೂಪಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುತ್ತವೆ.
ಇವುಗಳಲ್ಲಿ ಪತ್ತುಗೆ ಒಟ್ಟುಗಳು ಎರಡು ಬಗೆಯವು: ಸೊಲ್ಲುಗಳ ಕೊನೆ ಯಲ್ಲಿ ಬರುವ ಎಸಕಪದಕ್ಕೂ ಅದರ ಮೊದಲು ಬರುವ ಹೆಸರುಪದಗಳಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವ ಅನ್ನು, ಇಂದ, ಗೆ ಮತ್ತು ಲ್ಲಿ ಎಂಬ ನಾಲ್ಕು ಎಸಕಪತ್ತುಗೆಯ ಒಟ್ಟುಗಳು, ಮತ್ತು ಎರಡು ಹೆಸರುಪದಗಳ ನಡು ವಿನ ಪತ್ತುಗೆಯನ್ನು ತಿಳಿಸುವ ಅ ಮತ್ತು ಇಂತ ಎಂಬ ಎರಡು ಹೆಸರು ಪತ್ತುಗೆಯ ಒಟ್ಟುಗಳು.
ಹೆಸರುಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಯನ್ನು ಅಡಕವಾಗಿ ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ತಿಳಿಸುವ ಹಲವೆಣಿಕೆಯ ಒಂದು ಒಟ್ಟು ಮಾತ್ರ ಅವುಗಳೊಂದಿಗೆ ಬರುತ್ತದೆ; ಇದು ಗಳು ಇಲ್ಲವೇ ಅರು ಎಂಬ ರೂಪದಲ್ಲಿರುತ್ತದೆ.
4.8.1 ಎಣಿಕೆಯ ಒಟ್ಟು
ಎಣಿಕೆಯ ಒಟ್ಟಿಗಿರುವ ಅರು ಮತ್ತು ಗಳು ಎಂಬ ಎರಡು ರೂಪಗಳಲ್ಲಿ ಅರು ರೂಪ ಜನರನ್ನು ಗುರುತಿಸುವ ಹೆಸರುಪದಗಳೊಂದಿಗೆ ಬರುತ್ತದೆ, ಮತ್ತು ಗಳು ರೂಪ ಉಳಿದ ಪದಗಳೊಂದಿಗೆ ಬರುತ್ತದೆ.
ಆದರೆ, ಜನರನ್ನು ಗುರುತಿಸುವ ಪದಗಳಲ್ಲಿ ಗಂಡುಗುರ್ತದ ಪದಗಳು ಅಕಾರದಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಮತ್ತು ಹೆಣ್ಣುಗುರ್ತದ ಪದಗಳು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಅವುಗಳೊಂದಿಗೆ ಅರು ರೂಪ ಕಾಣಿಸಿಕೊಳ್ಳುತ್ತದೆ.
ಬಾಕಿ ಉಳಿದ ಪದಗಳು ಗಂಡುಗುರ್ತದ ಇಲ್ಲವೇ ಹೆಣ್ಣುಗುರ್ತದ ಜನರನ್ನು ಗುರುತಿಸುವುದಿದ್ದರೂ ಅವುಗಳೊಂದಿಗೆ ಗಳು ರೂಪವೇ ಕಾಣಿಸಿಕೊಳ್ಳುತ್ತದೆ. ಈ ಕಟ್ಟಲೆಗೆ ಕೆಲವು ಎತ್ತುಗೆಗಳು ಕೆಳಗಿವೆ:
(1) ಗಂಡುಗುರ್ತದ ಪದಗಳು ಅಕಾರದಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಅವುಗಳ ಬಳಿಕ ಅರು ರೂಪ ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ಗಳು ರೂಪ ಬರುತ್ತದೆ (ಅರು ಒಟ್ಟು ಸೇರಿದಾಗ, ಮೇಲೆ 4.1.1(1)ರಲ್ಲಿ ವಿವರಿಸಿದ ಹಾಗೆ, ಈ ಪದಗಳ ಕೊನೆಯ ಅಕಾರ ಬಿದ್ದುಹೋಗುತ್ತದೆ):
ಅಕಾರದಲ್ಲಿ ಕೊನೆಗೊಳ್ಳುವವು ಹುಡುಗ ಅಂಬಿಗ ಬಡವ ಹಾಡುಗಾರ ಹಾಡುಗಾರರು ಕಳ್ಳ
ಹುಡುಗರು ಅಂಬಿಗರು ಬಡವರು
ಕಳ್ಳರು
ಉಳಿದ ಗಂಡುಗುರ್ತದ ಪದಗಳು ತಿಳಿಗೇಡಿಗಳು ತಿಳಿಗೇಡಿ ಎದುರಾಳಿ ಎದುರಾಳಿಗಳು ಹುರಿಯಾಳು ಹುರಿಯಾಳುಗಳು ಮುಂದಾಳು ಮುಂದಾಳುಗಳು ಗುರು
ಗುರುಗಳು
(2) ಹೆಣ್ಣುಗುರ್ತದ ಪದಗಳು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವು ದಿದ್ದಲ್ಲಿ, ಅವುಗಳ ಬಳಿಕ ಅರು ರೂಪ ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ಗಳು ರೂಪ ಬರುತ್ತದೆ; ಇವುಗಳಲ್ಲಿ ಅರು ಒಟ್ಟನ್ನು ಬಳಸಿದಾಗ, ಮೇಲೆ 4.1.1(1)ರಲ್ಲಿ ವಿವರಿಸಿದ ಹಾಗೆ, ಪದಗಳ ಕೊನೆಗೆ ಯಕಾರ ಸೇರುತ್ತದೆ):
ಇ ಇಲ್ಲವೇ ಎದಲ್ಲಿ ಕೊನೆಗೊಳ್ಳುವವು ಉಳಿದ ಹೆಣ್ಣುಗುರ್ತದ ಪದಗಳು ಕುರುಡಿ ಚೆಲುವೆ ನಲ್ಲೆ
ಕುರುಡಿಯರು ಚೆಲುವೆಯರು ನಲ್ಲೆಯರು
ಹೆಣ್ಣಾಳುಗಳು
ಹೆಣ್ಣುಗಳು
ಹೆಣ್ಣಾಳು ಹೆಣ್ಣು
(3) ಹೆಸರುಪದಗಳು ನಂಟರನ್ನು ಗುರುತಿಸುತ್ತಿವೆಯಾದರೆ, ಅವು ಗಂಡು ಗುರ್ತದವಾಗಲಿ, ಹೆಣ್ಣುಗುರ್ತದವಾಗಲಿ, ಅವುಗಳ ಬಳಿಕ ಈ ಒಟ್ಟು ಅರು ರೂಪ ದಲ್ಲೇ ಬರುತ್ತದೆ; ಇದಲ್ಲದೆ ಈ ಒಟ್ಟು ಸೇರುವ ಮೊದಲು, ಅಂದಿ ಎಂಬ ನಂಟಸ್ತಿಕೆಯನ್ನು ತಿಳಿಸುವ ಒಟ್ಟು ಬರುತ್ತದೆ.
ಈ ಪದಗಳು ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ, ಅವುಗಳ ಬಳಿಕ ಯಕಾರವೊಂದು ಸೇರಿಕೊಳ್ಳುತ್ತದೆ (4.1.1(2) ನೋಡಿ. ಆದರೆ ತಾಯಿ ಪದದ ಬಳಿಕ ಯಕಾರ ಬರುವ ಬದಲು, ಅದರ ಇಕಾರವೇ ಬಿದ್ದುಹೋಗುತ್ತದೆ (ತಾಯಂದಿರು). ಇದಲ್ಲದೆ, ಅರು ಒಟ್ಟನ್ನು ಅಂದಿ ಒಟ್ಟಿನ ಬಳಿಕ ಸೇರಿಸಿದಾಗ, ಅದರ ಮೊದಲಿನಲ್ಲಿರುವ ಅಕಾರ ಬಿದ್ದುಹೋಗುತ್ತದೆ:
ಪದರೂಪಗಳ ಇಟ್ಟಳ / 309
ಗಂಡುಗುರ್ತದ ಪದಗಳು ಅಣ್ಣ ಮಾವ ಅಜ್ಜ ತಮ್ಮ
ಅಣ್ಣಂದಿರು ಮಾವಂದಿರು
ಅಜ್ಜಂದಿರು
ತಮ್ಮಂದಿರು
ಹೆಣ್ಣುಗುರ್ತದ ಪದಗಳು ಅಕ್ಕಂದಿರು ಅಕ್ಕ ತಾಯಂದಿರು ತಾಯಿ ಅಜ್ಜಿಯಂದಿರು ಅಜ್ಜಿ ಸೊಸೆಯಂದಿರು ಸೊಸೆ
ನಂಟರನ್ನು ಗುರುತಿಸುವ ಕೆಲವು ಪದಗಳಿಗೆ ಅರು ಒಟ್ಟನ್ನು ನೇರವಾಗಿ
ಸೇರಿಸುವುದೂ ಇದೆ (ಸೊಸೆ-ಸೊಸೆಯರು, ಅತ್ತೆ-ಅತ್ತೆಯರು).
(4) ಜನರನ್ನು ಗುರುತಿಸುವ ಮೇಲಿನ ಪದಗಳನ್ನು ಹೊರತುಪಡಿಸಿ ಉಳಿದ ಹೆಸರುಪದಗಳೊಂದಿಗೆ, ಅವು ಯಾವ ತೆರೆಯುಲಿಯಲ್ಲಿ ಕೊನೆಗೊಳ್ಳುವು ದಿದ್ದರೂ, ಗಳು ರೂಪವೇ ಬರುತ್ತದೆ.
ಮರ ಗುಡ್ಡ ಕೆಲಸ ಕರು ಕಾಡು ಗುಂಪು ನೆನಪು
ಮರಗಳು ಗುಡ್ಡಗಳು ಕೆಲಸಗಳು ಕರುಗಳು ಕಾಡುಗಳು ಗುಂಪುಗಳು
ನೆನಪುಗಳು
ಕರೆಗಳು
ಕರೆ ಎಮ್ಮೆ ಎಮ್ಮೆಗಳು ಪೆಟ್ಟಿಗೆ ಪೆಟ್ಟಿಗೆಗಳು ಕೆರೆ ಕರಡಿ wAr ಅಂಗಡಿ ಅಂಗಡಿಗಳು
ಕೆರೆಗಳು ಕರಡಿಗಳು ತಿಂಡಿಗಳು
(5) ಮೇಲಿನ ಕಟ್ಟಲೆಗಳಿಗೆ ಕೆಲವು ಹೊರಪಡಿಕೆಗಳೂ ಇವೆ: (ಕ) ಹೆಂಗಸು ಮತ್ತು ಗಂಡಸು ಎಂಬೆರಡು ಪದಗಳೊಂದಿಗೆ, ಅವು ಉಕಾರದಲ್ಲಿ ಕೊನೆ ಗೊಳ್ಳುವುದಿದ್ದರೂ, ಅರು ರೂಪ ಬರುತ್ತದೆ (ಹೆಂಗಸರು, ಗಂಡಸರು); (ಚ) ಮಗು ಪದಕ್ಕೆ ಗಳು ಒಟ್ಟು ಸೇರಿದಾಗ, ಆ ಪದದ ಕೊನೆಯ ತೆರೆಯುಲಿ ಬಿದ್ದು ಹೋಗುತ್ತದೆ, ಮತ್ತು ಅದರ ಗಕಾರ ಹಾಗೂ ಗಳು ಒಟ್ಟಿನ ಗಕಾರಗಳು ಕಕಾರ ವಾಗುತ್ತವೆ (ಮಗು-ಮಕ್ಕಳು).
(6) ಜನರನ್ನು ಗುರುತಿಸುವ ಹೆಸರುಪದಗಳನ್ನು ಹೊರತುಪಡಿಸಿ, ಉಳಿದ ಹೆಸರುಪದಗಳೊಂದಿಗೆ ಎಣಿಕೆಯ ಒಟ್ಟನ್ನು ಬಳಸದಿರಲೂ ಬರುತ್ತದೆ; ಈ ಪದ ಗಳ ಎಣಿಕೆಯನ್ನು ಬೇರೆಡೆ ತಿಳಿಸಿರುವಲ್ಲಿ ಈ ರೀತಿ ಒಟ್ಟನ್ನು ಬಳಸದಿರುವುದೇ ಹೆಚ್ಚು. ಇದಕ್ಕೆ ಎರಡು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(1ಕ) ಅವನಿಗೆ ಮೂರು ಪುಸ್ತಕಗಳು ಸಿಕ್ಕಿವೆ. (1ಚ) ಅವನಿಗೆ ಮೂರು ಪುಸ್ತಕ ಸಿಕ್ಕಿದೆ. (2ಕ) ಅವನು ನಾಲ್ಕು ಮನೆಗಳನ್ನು ಕಟ್ಟಿಸಿದ್ದಾನೆ. (2ಚ) ಅವನು ನಾಲ್ಕು ಮನೆ ಕಟ್ಟಿಸಿದ್ದಾನೆ.
4.8.2 ಎಸಕಪತ್ತುಗೆಯ ಒಟ್ಟುಗಳು
ಹೆಸರುಪದ (ಇಲ್ಲವೇ ಹೆಸರುಪದಕಂತೆ)ಗಳಿಗೂ ಎಸಕಪದಕ್ಕೂ ನಡುವಿರುವ ಪತ್ತುಗೆಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳೊಂದಿಗೆ ಅನ್ನು, ಇಂದ, ಗೆ ಮತ್ತು ಲ್ಲಿ ಎಂಬ ನಾಲ್ಕು ಪತ್ತುಗೆಯ ಒಟ್ಟುಗಳನ್ನು ಬಳಸಲಾಗುತ್ತದೆ. ಇವು ಈಡು, ಸುರು, ಗುರಿ ಮತ್ತು ಜಾಗ ಎಂಬ ನಾಲ್ಕು ಪಾಂಗುಗಳಲ್ಲಿರುವ ಹೆಸರು ಪದಗಳನ್ನು ಎಸಕಪದದೊಂದಿಗೆ ಸಂಬಂದಿಸುತ್ತವೆ.
ಇವುಗಳಲ್ಲಿ ಇಂದ ಮತ್ತು ಲ್ಲಿ ಒಟ್ಟುಗಳು ಹೆಸರುಪತ್ತುಗೆಯ ಅ ಒಟ್ಟಿನ ಬಳಿಕ ಬರುತ್ತವೆ (4.8.3 ನೋಡಿ), ಮತ್ತು ಉಳಿದ ಎರಡು ಒಟ್ಟುಗಳು (ಅನ್ನು ಮತ್ತು ಗೆ) ನೇರವಾಗಿ ಹೆಸರುಪದಗಳೊಂದಿಗೆ ಬರುತ್ತವೆ. ಈ ಒಟ್ಟು ಗಳು ಸೇರಿದಾಗ ಹೆಸರುಪದಗಳಲ್ಲಿ ಮತ್ತು ಒಟ್ಟುಗಳಲ್ಲಿ ಕೆಲವು ಸೇರಿಕೆಯ ಮಾರ್ಪಾಡುಗಳು ನಡೆಯುತ್ತವೆ. ಅವನ್ನು ಕೆಳಗೆ ವಿವರಿಸಲಾಗಿದೆ:
(1) ಅನ್ನುಅನ್ನುಅನ್ನುಅನ್ನು ಒಟ್ಟು ಈ ಒಟ್ಟನ್ನು ನೇರವಾಗಿ ಹೆಸರುಪದಗಳಿಗೆ ಸೇರಿಸಲಾಗುತ್ತದೆ; ಇದು ಸೇರಿದಾಗ, ಹೆಸರುಪದಗಳಲ್ಲಿ ಕೆಲವು ಸೇರಿಕೆಯ ಮಾರ್ಪಾಡುಗಳು ಕೆಳಗೆ ವಿವರಿಸಿದಂತೆ ನಡೆ ಯುತ್ತವೆ:
(1) ಉಕಾರದಲ್ಲಿ ಕೊನೆಗೊಳ್ಳುವ ಪದಗಳಿಗೆ ಈ ಒಟ್ಟನ್ನು ಸೇರಿಸಿದಾಗ, 4.1.1(1)ರಲ್ಲಿ ವಿವರಿಸಿದ ಹಾಗೆ, ಅವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ; ಹಲವೆಣಿಕೆಯ ಗಳು ಇಲ್ಲವೇ ಅರು ಒಟ್ಟಿನಲ್ಲಿ ಕೊನೆಗೊಳ್ಳುವ ಹೆಸರುಪದಗಳಿಗೂ ಅನ್ನು ಒಟ್ಟನ್ನು ಸೇರಿಸಿದಾಗ, ಅವುಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ:
(ಕ) ಹೆಸರುಪದಗಳ ಕೊನೆಯ ಉಕಾರ ಬಿದ್ದುಹೋಗುವುದು: ಎತ್ತು ಎತ್ತನ್ನು
ಗಂಟು ಗಂಟನ್ನು
ತವುಡು ತವುಡನ್ನು
ಗಂಡಸು ಗಂಡಸನ್ನು ಎಳ್ಳು ಎಳ್ಳನ್ನು
ಹಣ್ಣು ಹಣ್ಣನ್ನು ಹಾಡು ಹಾಡನ್ನು ಗಂಟಲು ಗಂಟಲನ್ನು ಹಿತ್ತಿಲು ಹಿತ್ತಿಲನ್ನು ಜಿಡ್ಡು ಜಿಡ್ಡನ್ನು
(ಚ) ಹಲವೆಣಿಕೆಯ ಪದರೂಪಗಳ ಕೊನೆಯ ಉಕಾರ ಬಿದ್ದುಹೋಗುವುದು: ಕಳ್ಳರು ಮನೆಗಳು ಮನೆಗಳನ್ನು ಕಳ್ಳರನ್ನು ಜನರು ಜನರನ್ನು ಮರಗಳು ಮರಗಳನ್ನು
ಪದರೂಪಗಳ ಇಟ್ಟಳ / 311
(ಟ) ಆದರೆ, ಎರಡು ಬರಿಗೆಕಂತೆಗಳಿದ್ದು, ಉದ್ದ ತೆರೆಯುಲಿ ಇಲ್ಲವೇ ಒತ್ತುಬರಿಗೆ (ಮುಚ್ಚುಲಿ) ಇಲ್ಲದಿರುವ ಹೆಸರುಪದಗಳಿಗೆ ಇದನ್ನು ಸೇರಿಸಿದಾಗ, ಅವುಗಳ ಕೊನೆಯ ಉಕಾರ ಬಿದ್ದುಹೋಗುವ ಬದಲು, ಅವುಗಳ ಬಳಿಕ ವಕಾರ ವೊಂದು ಸೇರಿಕೊಳ್ಳುತ್ತದೆ:
ಕರು ನಗು
ಕರುವನ್ನು
ನಗುವನ್ನು
ಮಗು ಪುದು
ಮಗುವನ್ನು ಪುದುವನ್ನು
(ತ) ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳಲ್ಲಿ ಕೆಲವು ಉಕಾರದಲ್ಲಿ ಕೊನೆಗೊಳ್ಳುತ್ತವೆ; ಇವು ಎಂತಹವಿದ್ದರೂ ಅನ್ನು ಒಟ್ಟು ಸೇರುವಾಗ ವಕಾರ ವನ್ನು ಪಡೆಯುತ್ತವೆ (ವಸ್ತು-ವಸ್ತುವನ್ನು, ಗುರು-ಗುರುವನ್ನು, ಶತ್ರು- ಶತ್ರುವನ್ನು); ಆದರೆ, ಈ ಉಕಾರ ಕನ್ನಡದಲ್ಲಿ ನಡೆದ ಮಾರ್ಪಾಡಿನಿಂದ ಬಂದು ದಾದರೆ, ಅದರ ಬಳಿಕ ವಕಾರ ಬರುವುದಿಲ್ಲ (ಸೊತ್ತು-ಸೊತ್ತನ್ನು).
(2) ಅಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಬಳಿಕ ಈ ಒಟ್ಟು ಸೇರಿ ದಾಗ, ಅವು ಜನರನ್ನು ಗುರುತಿಸುತ್ತಿವೆಯಾದರೆ ಅವುಗಳ ಬಳಿಕ ನಕಾರ ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ವಕಾರ ಬರುತ್ತದೆ:
(ಕ) ಅಕಾರದಲ್ಲಿ ಕೊನೆಗೊಳ್ಳುವ, ಮತ್ತು ಜನರನ್ನು ಗುರುತಿಸುವ ಪದಗಳು:
ಮಗ ಅಣ್ಣ ಬೇಡ ಅಂಬಿಗ ಅಂಬಿಗನನ್ನು
ಮಗನನ್ನು
ಅಣ್ಣನನ್ನು
ಬೇಡನನ್ನು
ಅಮ್ಮ ಅಮ್ಮನನ್ನು ಕಂದ ಕಂದನನ್ನು ಗೆಳೆಯ ಗೆಳೆಯನನ್ನು ದಾರಿಗನನ್ನು ದಾರಿಗ
(ಚ) ಅಕಾರದಲ್ಲಿ ಕೊನೆಗೊಳ್ಳುವ ಉಳಿದ ಪದಗಳು:
ಕದವನ್ನು
ಕದ ಬಿಂಕವನ್ನು ಬಿಂಕ ಕಡತ ಕಡತವನ್ನು ದಿಬ್ಬಣ ದಿಬ್ಬಣವನ್ನು
ಚಿನ್ನವನ್ನು ಗಾಣವನ್ನು
ಚಿನ್ನ ಗಾಣ ಅಂಗಳ ಅಂಗಳವನ್ನು ಬೇಸರ ಬೇಸರವನ್ನು
(3) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಪದಗಳಿಗೆ ಈ ಒಟ್ಟು ಸೇರಿದಾಗ, 4.1.1(2)ರಲ್ಲಿ ವಿವರಿಸಿದ ಹಾಗೆ, ಅವುಗಳ ಬಳಿಕ ಯಕಾರ ವೊಂದು ಸೇರಿಕೊಳ್ಳುತ್ತದೆ:
(ಕ) ಇಕಾರದಲ್ಲಿ ಕೊನೆಗೊಳ್ಳುವ ಪದಗಳು:
ಗುಡಿ ಬೆಂಕಿ
ಗುಡಿಯನ್ನು ಬೆಂಕಿಯನ್ನು
ಅಜ್ಜಿ ನಾಯಿ
ಅಜ್ಜಿಯನ್ನು ನಾಯಿಯನ್ನು
ಹುಡುಗಿ ಹುಡುಗಿಯನ್ನು ಅಂಗಡಿ ಅಂಗಡಿಯನ್ನು
ಕರಡಿ ಗುದ್ದಲಿ ಗುದ್ದಲಿಯನ್ನು
ಕರಡಿಯನ್ನು
(ಚ) ಎಕಾರದಲ್ಲಿ ಕೊನೆಗೊಳ್ಳುವ ಪದಗಳು:
ಮನೆಯನ್ನು ಕಪ್ಪೆಯನ್ನು
ಮನೆ ಕಪ್ಪೆ ಗೊಂಬೆ ಗೊಂಬೆಯನ್ನು ಅಡಿಕೆ ಅಡಿಕೆಯನ್ನು
ಬೆಲೆ ಬೆಲೆಯನ್ನು ಅತ್ತೆ ಅತ್ತೆಯನ್ನು ಕಾಗೆಯನ್ನು ಕಾಗೆ ಅಂಜಿಕೆ ಅಂಜಿಕೆಯನ್ನು
(2) ಇಂದಇಂದಇಂದಇಂದ ಒಟ್ಟು ಮೇಲೆ ತಿಳಿಸಿದ ಹಾಗೆ, ಇದನ್ನು ಹೆಸರುಪದಗಳಿಗೆ ಹೆಸರುಪತ್ತುಗೆಯ ಅ ಒಟ್ಟಿನ ಬಳಿಕ (8.4.3 ನೋಡಿ) ಸೇರಿಸಲಾಗುತ್ತದೆ; ಈ ಒಟ್ಟು ಸೇರಿದಾಗ, ಹೆಸರು ಪತ್ತುಗೆಯ ಅ ಒಟ್ಟು ಬಿದ್ದುಹೋಗುತ್ತದೆಯಾದರೂ, ಅದರ ಮೊದಲು ಬಂದಿದ್ದ ಇನ್, ವಿನ್, ನ್, ವ್, ರ್, ಮತ್ತು ದ್ ಎಂಬವು ಉಳಿದುಕೊಳ್ಳುತ್ತವೆ. ಹಾಗಾಗಿ, ಇಲ್ಲಿ ಹೆಸರುಪತ್ತುಗೆಯ ಅ ಒಟ್ಟು ಸೊನ್ನೆ ರೂಪದಲ್ಲಿದೆ ಎಂದು ಹೇಳಲು ಬರುತ್ತದೆ. ಕೆಳಗೆ ಕೊಟ್ಟಿರುವ ಹೆಸರುಪದಗಳ ಅ ಒಟ್ಟಿನ ರೂಪ ಮತ್ತು ಇಂದ ಒಟ್ಟಿನ ರೂಪಗಳನ್ನು ಹೋಲಿಸಿ ನೋಡಿದಾಗ ಈ ವಿಶಯ ಗೊತ್ತಾಗುತ್ತದೆ:
ಹೆಸರುಪದ
ಮರ ಅಣ್ಣ ಗವಿ ಕಾಗೆ ತಿನಿಸು ಕರು ಹೊಸದು
ಮರಗಳು
ಕಳ್ಳರು
ಅ ಒಟ್ಟಿನ ರೂಪ ಇಂದ ಒಟ್ಟಿನ ರೂಪ ಮರದ ಅಣ್ಣನ ಗವಿಯ
ಕಾಗೆಯ
ತಿನಿಸಿನ
ಕರುವಿನ
ಹೊಸದರ
ಮರಗಳ
ಕಳ್ಳರ
ಮರದಿಂದ ಅಣ್ಣನಿಂದ ಗವಿಯಿಂದ ಕಾಗೆಯಿಂದ ತಿನಿಸಿನಿಂದ ಕರುವಿನಿಂದ ಹೊಸದರಿಂದ ಮರಗಳಿಂದ ಕಳ್ಳರಿಂದ
(3) ಗೆಗೆಗೆಗೆ ಒಟ್ಟು ಈ ಒಟ್ಟಿಗೆ ಗೆ, ಇಗೆ ಮತ್ತು ಕ್ಕೆ ಎಂಬ ಮೂರು ರೂಪಗಳಿವೆ; ಇವುಗಳ ಬಳಕೆ ಹೆಸರುಪದಗಳ ಕೊನೆಯ ತೆರೆಯುಲಿ ಮತ್ತು ಅವುಗಳ ಹುರುಳುಗಳ ಮೇಲೆ ಅವಲಂಬಿಸಿದೆ:
ಪದರೂಪಗಳ ಇಟ್ಟಳ / 313
(1) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಬಳಿಕ
ಇದು ಗೆ ರೂಪದಲ್ಲಿ ಬರುತ್ತದೆ:
ಅಜ್ಜಿಗೆ ಇಲಿಗೆ
(ಕ) ಇಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು: ಅಜ್ಜಿ ಇಲಿ ಮನವಿ ಮನವಿಗೆ
ಕೋಮಟಿ ಕೋಮಟಿಗೆ ತಬ್ಬಲಿಗೆ
ತಬ್ಬಲಿ
ಹಕ್ಕಿಗೆ ಹಕ್ಕಿ ಗೆಳತಿಗೆ ಗೆಳತಿ ಗೇಣಿಗೆ ಗೇಣಿ ಕನ್ನಡಿ ಕನ್ನಡಿಗೆ ಬಾವಲಿ ಬಾವಲಿಗೆ
(ಚ) ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು: ಕೆರೆಗೆ ಅತ್ತೆ ಅತ್ತೆಗೆ
ರೆಪ್ಪೆಗೆ ರೆಪ್ಪೆ ಸಂತೆಗೆ ಬೇಟೆ ಬೇಟೆಗೆ
ನಂಬಿಕೆ ನಂಬಿಕೆಗೆ
ಬೇಡಿಕೆ ಬೇಡಿಕೆಗೆ
ಕೆರೆ ಸಂತೆ ದುಡಿಮೆ ದುಡಿಮೆಗೆ ಮಜ್ಜಿಗೆ ಮಜ್ಜಿಗೆಗೆ ಮೂಲೆ ಮೂಲೆಗೆ
(2) ಉಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಬಳಿಕ, ಮತ್ತು ಹಲವೆಣಿಕೆಯ ಒಟ್ಟುಗಳಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಇದು ಇಗೆ ರೂಪ ದಲ್ಲಿ ಬರುತ್ತದೆ; ಅದು ಸೇರಿದಾಗ, ಮೇಲೆ 4.1.1ರಲ್ಲಿ ವಿವರಿಸಿದ ಹಾಗೆ, ಈ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ:
ಮದ್ದಿಗೆ
ಮದ್ದು ದೂರು ದೂರಿಗೆ
ಮುಳಿಸು ಮುಳಿಸಿಗೆ
ಮುಪ್ಪು ಮುಪ್ಪಿಗೆ
ಹೆಣ್ಣು ಹಕ್ಕಿಗಳು ಹಕ್ಕಿಗಳಿಗೆ
ಹೆಣ್ಣಿಗೆ
ಹಂಗು ಹಂಗಿಗೆ ತುರುಬು ತುರುಬಿಗೆ ದೇವರು ದೇವರಿಗೆ ಬೆನ್ನು ಬೆನ್ನಿಗೆ ಕಂತಿಗೆ ಕಂತು ದಡ್ಡರು ದಡ್ಡರಿಗೆ
(3) ಆದರೆ, ಉಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳಲ್ಲಿ ಎರಡು ಬರಿಗೆ ಕಂತೆಗಳು ಮಾತ್ರ ಇವೆಯಾದರೆ, ಮತ್ತು ಅವುಗಳಲ್ಲಿ ಉದ್ದ ತೆರೆಯುಲಿ ಇಲ್ಲವೇ ಒತ್ತುಬರಿಗೆ ಇಲ್ಲವಾದರೆ, ಅಂತಹ ಹೆಸರುಪದಗಳ ಕೊನೆಯ ಉಕಾರ ಬಿದ್ದು ಹೋಗುವ ಬದಲು, ಅವುಗಳ ಬಳಿಕ ವಕಾರವೊಂದು ಸೇರಿಕೊಳ್ಳುತ್ತದೆ:
ಕರುವಿಗೆ
ಕರು ನಗು ನಗುವಿಗೆ
ಅಳು ಅಳುವಿಗೆ
ಮಗುವಿಗೆ ಮಗು ಉಡು ಉಡುವಿಗೆ ಮಡುವಿಗೆ ಮಡು
ಉಕಾರದಲ್ಲಿ ಕೊನೆಗೊಳ್ಳುವ ಸಂಸ್ಕ್ರುತ ಎರವಲುಗಳ ಬಳಿಕವೂ ಈ ಒಟ್ಟು
ಸೇರುವ ಮೊದಲು ವಕಾರ ಬರುತ್ತದೆ:
ವಸ್ತು
ವಸ್ತುವಿಗೆ
ಶತ್ರು
ಶತ್ರುವಿಗೆ
(4) ಅಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಜನರನ್ನು ಗುರುತಿಸು ತ್ತಿವೆಯಾದರೆ, ಅವುಗಳ ಬಳಿಕ ಈ ಒಟ್ಟು ಇಗೆ ರೂಪದಲ್ಲೇ ಬರುತ್ತದೆ; ಆದರೆ, ಅದು ಸೇರುವ ಮೊದಲು ಈ ಪದಗಳ ಬಳಿಕ ನಕಾರವೊಂದು ಸೇರಿ ಕೊಳ್ಳುತ್ತದೆ:
ಅಜ್ಜನಿಗೆ
ಅಜ್ಜ ಕಂದನಿಗೆ
ಕಂದ ಕಟುಕ ಕಟುಕನಿಗೆ
ಅಂಬಿಗ ಅಂಬಿಗನಿಗೆ ಗಾಣಿಗನಿಗೆ ಗಾಣಿಗ
ಕಳ್ಳನಿಗೆ ಬೇಡನಿಗೆ
ಕಳ್ಳ ಬೇಡ ಹುಡುಗ ಹುಡುಗನಿಗೆ ಬಿದ್ದಿನ ಬಿದ್ದಿನನಿಗೆ ನಲ್ಲ
ನಲ್ಲನಿಗೆ
(5) ಅಕಾರದಲ್ಲಿ ಕೊನೆಗೊಳ್ಳುವ ಉಳಿದ ಹೆಸರುಪದಗಳ ಬಳಿಕ ಈ ಒಟ್ಟಿಗೆ
ಕ್ಕೆ ರೂಪವಿದೆ:
ಮರ ಮರಕ್ಕೆ ಬಿಂಕ ಬಿಂಕಕ್ಕೆ
ಕಡತಕ್ಕೆ
ಕಡತ ಅಂಕಣ ಅಂಕಣಕ್ಕೆ
ಕಾಳಗಕ್ಕೆ
ಕಾಳಗ
ಅಟ್ಟ ಅಟ್ಟಕ್ಕೆ ಊಟ ಊಟಕ್ಕೆ ಜಳಕ ಜಳಕಕ್ಕೆ ಒತ್ತಡ ಒತ್ತಡಕ್ಕೆ ಬೇಸರ ಬೇಸರಕ್ಕೆ
(4) ಲ್ಲಿಲ್ಲಿಲ್ಲಿಲ್ಲಿ ಒಟ್ಟು ಮೇಲೆ ತಿಳಿಸಿದ ಹಾಗೆ, ಈ ಒಟ್ಟನ್ನೂ ಹೆಸರುಪತ್ತುಗೆಯ ಅ ಒಟ್ಟಿನ ಬಳಿಕ ಸೇರಿಸಲಾಗುತ್ತದೆ. ಇದನ್ನುಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
ಮರದ ಮರದಲ್ಲಿ
ಕೆರೆಯ ಕೆರೆಯಲ್ಲಿ
ಗುಡ್ಡದ ಗುಡ್ಡದಲ್ಲಿ
ಓಣಿಯ ಓಣಿಯಲ್ಲಿ
ಮಗುವಿನ ಮಗುವಿನಲ್ಲಿ ಮರಗಳ ಮರಗಳಲ್ಲಿ
ಅಣ್ಣನ ಅಣ್ಣನಲ್ಲಿ ಕಣ್ಣಿನ ಕಣ್ಣಿನಲ್ಲಿ ಬಟ್ಟೆಯ ಬಟ್ಟೆಯಲ್ಲಿ ಹೊಸದರ ಹೊಸದರಲ್ಲಿ ಮಗಳು ಮಗಳಲ್ಲಿ ಜನರ ಜನರಲ್ಲಿ
ಪದರೂಪಗಳ ಇಟ್ಟಳ / 315
4.8.3 ಹೆಸರುಪತ್ತುಗೆಯ ಒಟ್ಟುಗಳು
ಹೆಸರುಪದಗಳ ನಡುವಿರುವ ಎರಡು ಬಗೆಯ ಪತ್ತುಗೆಗಳನ್ನು ತಿಳಿಸುವುದಕ್ಕಾಗಿ ಒಟ್ಟುಗಳನ್ನು ಬಳಸಲಾಗುತ್ತದೆ: ಹೋಲಿಕೆಯನ್ನು ತಿಳಿಸುವ ಇಂತ ಒಟ್ಟು, ಮತ್ತು ಬೇರೆ ಹಲವು ಬಗೆಯ ಪತ್ತುಗೆಗಳನ್ನು ತಿಳಿಸುವ ಅ ಒಟ್ಟು. ಇವುಗಳಲ್ಲಿ ಇಂತ ಒಟ್ಟು ಎಸಕಪತ್ತುಗೆಯ ಗೆ ಒಟ್ಟಿನ (4.8.2 ನೋಡಿ) ಬಳಿಕ ಬರುತ್ತದೆ, ಮತ್ತು ಅ ಒಟ್ಟು ನೇರವಾಗಿ ಹೆಸರುಪದಗಳ ಬಳಿಕ ಬರುತ್ತದೆ.
(1) ಇಂತಇಂತಇಂತಇಂತ ಒಟ್ಟು ಯಾವುದಾದರೊಂದು ಪರಿಚೆಯ ಕುರಿತಾಗಿ ಇಬ್ಬರು ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳ ನಡುವೆ ಹೋಲಿಕೆಯನ್ನು ತಿಳಿಸುವುದಕ್ಕಾಗಿ ಇಂತ ಒಟ್ಟನ್ನು ಬಳಸ ಲಾಗುತ್ತದೆ. ಇಂತ ಒಟ್ಟನ್ನು ಪಡೆದಿರುವ ಹೆಸರುಪದ ಒಂದು ಪರಿಚೆಯ ಹೋಲಿಕೆಯಲ್ಲಿ ಕೆಳಗಿರುವ ವ್ಯಕ್ತಿ, ವಸ್ತು ಇಲ್ಲವೇ ವಿಶಯವನ್ನು ಗುರುತಿಸು ತ್ತದೆ. ಎತ್ತುಗೆಗಾಗಿ, ಸುನೀಲ್ ಜಾನಕಿಗಿಂತ ದೊಡ್ಡವನು ಎಂಬ ಸೊಲ್ಲಿನಲ್ಲಿ ಜಾನಕಿ ಪದ ಇಂತ ಒಟ್ಟಿನೊಂದಿಗೆ ಬಂದಿದೆ, ಮತ್ತು ಸುನೀಲ್ ಪದ ಒಟ್ಟಿಲ್ಲದೆ ಬಂದಿದೆ; ಹಾಗಾಗಿ, ‘ದೊಡ್ಡತನದಲ್ಲಿ ಜಾನಕಿ ಸುನೀಲ್ಗಿಂತ ಕೆಳ ಗಿದ್ದಾಳೆ’ ಎಂಬ ಹುರುಳನ್ನು ಆ ಸೊಲ್ಲು ಕೊಡುತ್ತದೆ.
ಈ ಒಟ್ಟನ್ನು ಹೆಸರುಪತ್ತುಗೆಯ ಗೆ ಒಟ್ಟಿನ ಬಳಿಕ ಸೇರಿಸಲಾಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಿಂದ ತಿಳಿಯಬಹುದು; ಈ ಒಟ್ಟು ಸೇರಿದಾಗ ಗೆ ಒಟ್ಟಿನ (ಇಲ್ಲವೇ ಅದರ ರೂಪಗಳಾದ ಗೆ, ಇಗೆ ಮತ್ತು ಕ್ಕೆ ಎಂಬವುಗಳ) ಕೊನೆಯ ಎಕಾರ ಬಿದ್ದುಹೋಗುತ್ತದೆ:
ಹೆಸರುಪದ
ಮನೆ ಗುಡಿ ಕಾಡು ಅಜ್ಜ ಹಣ ಮೆಚ್ಚುಗೆ
ಗೆ ಒಟ್ಟಿನ ರೂಪ ಮನೆಗೆ
ಗುಡಿಗೆ ಕಾಡಿಗೆ ಅಜ್ಜನಿಗೆ
ಹಣಕ್ಕೆ ಮೆಚ್ಚುಗೆಗೆ
ಇಂತ ಒಟ್ಟಿನ ರೂಪ ಮನೆಗಿಂತ ಗುಡಿಗಿಂತ ಕಾಡಿಗಿಂತ ಅಜ್ಜನಿಗಿಂತ ಹಣಕ್ಕಿಂತ ಮೆಚ್ಚುಗೆಗಿಂತ
(2) ಅಅಅಅ ಒಟ್ಟು ಈ ಒಟ್ಟನ್ನು ನೇರವಾಗಿ ಹೆಸರುಪದಗಳಿಗೆ ಸೇರಿಸಲಾಗುತ್ತದೆ; ಇದು ಸೇರುವ ಮೊದಲು ಹೆಸರುಪದಗಳು, ಅವುಗಳ ಕೊನೆಯ ಬರಿಗೆ ಮತ್ತು ಹುರುಳುಗಳ ನ್ನವಲಂಬಿಸಿ, ಕೆಲವು ಹೆಚ್ಚಿನ ಬರಿಗೆಗಳನ್ನು ಪಡೆಯುತ್ತವೆ:
(1) ಉಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಬಳಿಕ ಇನ್ ಎಂಬುದು ಬರುತ್ತದೆ; ಆದರೆ, ಇಂತಹ ಪದಗಳಲ್ಲಿ ಎರಡು ಬರಿಗೆಕಂತೆಗಳಿದ್ದು, ಉದ್ದ ತೆರೆಯುಲಿ ಇಲ್ಲವೇ ಒತ್ತುಬರಿಗೆಗಳಿಲ್ಲವಾದರೆ ವಿನ್ ಎಂಬುದು ಸೇರುತ್ತದೆ; ಉಕಾರದಲ್ಲಿ ಕೊನೆಗೊಳ್ಳುವ ಸಂಸ್ಕ್ರುತ ಎರವಲುಗಳ ಬಳಿಕವೂ ವಿನ್ ಎಂಬುದು ಸೇರುತ್ತದೆ:
(ಕ) ಉಕಾರದಲ್ಲಿ ಕೊನೆಗೊಳ್ಳುವ ಪದಗಳು: ಉದ್ದು ಉದ್ದಿನ ಗಂಡು ಗಂಡಿನ
ತಿಳಿವು ತಿಳಿವಿನ
ಎಂಜಲು ಎಂಜಲಿನ
ಬೆಕ್ಕು ಮಾತು ಮಾತಿನ ಹೆಸರು ಹೆಸರಿನ ಬಚ್ಚಲು ಬಚ್ಚಲಿನ
ಬೆಕ್ಕಿನ
(ಚ) ಉದ್ದ ತೆರೆಯುಲಿ, ಒತ್ತೆಬರಿಗೆಯಿಲ್ಲದ ಎರಡು ಬರಿಗೆಕಂತೆಯ ಪದಗಳು: ಮಗು ಮಡು
ಅಳು ಅಳುವಿನ ಗಳುವಿನ ಗಳು
ಮಗುವಿನ
ಮಡುವಿನ
(ಟ) ಉಕಾರದಲ್ಲಿ ಕೊನೆಗೊಳ್ಳುವ ಸಂಸ್ಕ್ರುತ ಎರವಲುಗಳು: ವಸ್ತು ಗುರು
ವಸ್ತುವಿನ
ಗುರುವಿನ
ಶತ್ರುವಿನ
ಶತ್ರು
ಉಕಾರದಲ್ಲಿ ಕೊನೆಗೊಳ್ಳುವ ಮಗಳು ಪದ ಮೇಲಿನ ಕಟ್ಟಲೆಗೆ ಹೊರಪಡಿಕೆ ಯಾಗಿದೆ; ಅದರ ಬಳಿಕ ಅ ಒಟ್ಟು ಸೇರುವಾಗ ಇನ್ ಬರುವ ಬದಲು, ಅದರ ಕೊನೆಯ ಉಕಾರ ಬಿದ್ದುಹೋಗುತ್ತದೆ: ಮಗಳು-ಮಗಳ.
(2) ಅಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಬಳಿಕ, ಅವು ಜನರನ್ನು ಗುರುತಿಸುವುದಿದ್ದಲ್ಲಿ, ನಕಾರ ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ದಕಾರ ಬರು ತ್ತದೆ:
(ಕ) ಅಕಾರದಲ್ಲಿ ಕೊನೆಗೊಳ್ಳುವ ಪದಗಳಲ್ಲಿ ಜನರನ್ನು ಗುರುತಿಸುವವು: ಅಕ್ಕ ದಡ್ಡ ದಡ್ಡನ ನಂಟ ಗಂಡನ
ಗಂಡ ಮುದುಕ ಮುದುಕನ ಪೋರ ಪೋರನ
ನಾಡಿಗ ನಾಡಿಗನ ತೊತ್ತಿಗ ತೊತ್ತಿಗನ
ಅಕ್ಕನ ನಂಟನ
(ಚ) ಅಕಾರದಲ್ಲಿ ಕೊನೆಗೊಳ್ಳುವ ಉಳಿದ ಪದಗಳು: ಬೆಲ್ಲದ ಮರ ಗಾಯದ ಹೆಂಡ
ಮರದ ಹೆಂಡದ
ಬೆಲ್ಲ ಗಾಯ
ಪದರೂಪಗಳ ಇಟ್ಟಳ / 317
ಹೊಡೆತ ಹೊಡೆತದ ಸಂಬಳ ಸಂಬಳದ
ಪಂಗಡ ಪಂಗಡದ ಗೀಜಗ ಗೀಜಗದ
(3) ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳಿಗೆ ಈ ಒಟ್ಟು ಸೇರುವ ಮೊದಲು, 4.1.1(2)ರಲ್ಲಿ ವಿವರಿಸಿದ ಹಾಗೆ, ಯಕಾರ ಸೇರು ತ್ತದೆ:
(ಕ) ಇಕಾರದಲ್ಲಿ ಕೊನೆಗೊಳ್ಳುವ ಪದಗಳು:
ಉರಿ ಉರಿಯ
ಮಂದಿ ಮಂದಿಯ
ಒಡತಿ ಒಡತಿಯ
ಅಂಗಡಿ ಅಂಗಡಿಯ
ಕತ್ತಿ ತಾಯಿ ಸರದಿ ಕನ್ನಡಿ
ಕತ್ತಿಯ ತಾಯಿಯ ಸರದಿಯ ಕನ್ನಡಿಯ
(ಚ) ಎಕಾರದಲ್ಲಿ ಕೊನೆಗೊಳ್ಳುವ ಪದಗಳು: ದೊರೆಯ
ದೊರೆ ಬೆಣ್ಣೆ ಬೆಣ್ಣೆಯ
ಮೀಸೆ ಮೀಸೆಯ
ಅಂಜಿಕೆ ಅಂಜಿಕೆಯ
ಬೆಳೆ ಅಂಚೆ ಅಂಚೆಯ ಅಡುಗೆ ಅಡುಗೆಯ ಮೆಚ್ಚಿಗೆ ಮೆಚ್ಚಿಗೆಯ
ಬೆಳೆಯ
(4) ಹಲವೆಣಿಕೆಯ ಒಟ್ಟುಗಳಲ್ಲಿ ಕೊನೆಗೊಳ್ಳುವ ಹೆಸರುಪದಗಳು ಉಕಾರ ದಲ್ಲಿ ಕೊನೆಗೊಳ್ಳುವುವಾದರೂ, ಅವುಗಳ ಬಳಿಕ ಇನ್ ಎಂಬುದು ಬರುವುದಿಲ್ಲ; ಇದಕ್ಕೆ ಬದಲು, ಅ ಒಟ್ಟು ಸೇರಿದಾಗ, ಇವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ:
ಮರಗಳು ಮರಗಳ
ಹಕ್ಕಿಗಳು ಹಕ್ಕಿಗಳ
ಮನೆಗಳು ಮನೆಗಳ
ಜನರು ಜನರ ಜಾಣರು ಜಾಣರ ಚಿಣ್ಣರು ಚಿಣ್ಣರ
4.9 ಬೇರೆ ಪದಗಳ ಪದರೂಪಗಳು
ಎಸಕ ಮತ್ತು ಹೆಸರುಪದಗಳು ಮಾತ್ರವಲ್ಲದೆ, ಬೇರೆಯೂ ಕೆಲವು ಪದಗಳಿಗೆ ಪದರೂಪಗಳಿವೆ; ಆದರೆ, ಇವುಗಳನ್ನು ಮುಕ್ಯವಾಗಿ ಮೇಲೆ ವಿವರಿಸಿದಂತಹ ಹೆಸರುಪದಗಳೊಂದಿಗೆ ಬರುವ ಒಟ್ಟುಗಳನ್ನು ಬಳಸಿಯೇ ಉಂಟುಮಾಡಲಾಗು ತ್ತದೆ. ಅವುಗಳ ಬಳಕೆಯಲ್ಲಿ ಕೆಲವು ನಿರ್ಬಂದಗಳಿವೆ, ಮತ್ತು ಅವುಗಳಲ್ಲಿ ಕಾಣಿಸಿಕೊಳ್ಳುವ ಸೇರಿಕೆಯ ಮಾರ್ಪಾಡುಗಳೂ ಕೆಲವು ವಿಶಯಗಳಲ್ಲಿ ಬೇರಾಗಿವೆ.
4.9.1 ಪರಿಚೆಪದಗಳ ಪದರೂಪಗಳು
ಕನ್ನಡದ ಪರಿಚೆಪದಗಳಲ್ಲಿ ಹಲವನ್ನು, ಅದರಲ್ಲೂ ಮುಕ್ಯವಾಗಿ ಜನರ ಪರಿಚೆ ಯನ್ನು ತಿಳಿಸುವ ಕಿವುಡು, ಕುರುಡು, ಚೆಲುವು, ಹುಚ್ಚು ಮೊದಲಾದುವನ್ನು ಹೆಸರುಪದಗಳಾಗಿಯೂ ಬಳಸಲು ಬರುತ್ತದೆ. ಇಂತಹ ಬಳಕೆಯಲ್ಲಿ ಅವು, ಉಳಿದ ಹೆಸರುಪದಗಳ ಹಾಗೆ, ಎಲ್ಲಾ ಬಗೆಯ ಒಟ್ಟುಗಳೊಂದಿಗೂ ಬರ ಬಲ್ಲುವು: ಚೆಲುವನ್ನು, ಚೆಲುವಿನಿಂದ, ಚೆಲುವಿಗೆ, ಚೆಲುವಿನಲ್ಲಿ, ಚೆಲುವಿ ಗಿಂತ, ಚೆಲುವಿನ.
ಇವನ್ನು ಹೊರತುಪಡಿಸಿ, ಉಳಿದ ಪರಿಚೆಪದಗಳಲ್ಲಿ ಕೆಲವು ಎಸಕಪರಿಚೆಗಳು ಕೆಲವೇ ಕೆಲವು ಪತ್ತುಗೆ ಒಟ್ಟುಗಳೊಂದಿಗೆ ಸೇರಿ ಪದರೂಪಗಳನ್ನು ಪಡೆಯು ತ್ತವೆ. ಈ ರೂಪಗಳನ್ನು ಕೆಳಗೆ ವಿವರಿಸಲಾಗಿದೆ:
(1) ಅಗೆ ಒಟ್ಟಿನಲ್ಲಿ ಕೊನೆಗೊಳ್ಳುವ ಬೆಳ್ಳಗೆ, ನೆಟ್ಟಗೆ, ದುಂಡಗೆ, ಕೆಂಪಗೆ, ನುಣ್ಣಗೆ ಮೊದಲಾದ ಎಸಕಪರಿಚೆಗಳನ್ನು ಹೆಸರುಪದಗಳೊಂದಿಗೆ ಬಳಸುವುದಕ್ಕಾಗಿ (ಎಂದರೆ ಹೆಸರುಪರಿಚೆಗಳಾಗಿ ಮಾರ್ಪಡಿಸುವುದಕ್ಕಾಗಿ), ಅವಕ್ಕೆ ಹೆಸರುಪತ್ತುಗೆಯ ಅ ಒಟ್ಟನ್ನು ಸೇರಿಸಲಾಗುತ್ತದೆ; ಈ ಒಟ್ಟು ಸೇರಿದಾಗ ಅವು ಗಳ ಕೊನೆಯ ಎಕಾರ ಬಿದ್ದುಹೋಗುತ್ತದೆ, ಮತ್ತು ಇನ್ ಎಂಬುದು ಸೇರಿ ಕೊಳ್ಳುತ್ತದೆ.
ಎಸಕಪರಿಚೆಗಳು ಬೆಳ್ಳಗೆ ಮಾಡಿದ ಕರ್ರಗೆ ಮಾಡಿದ ನುಣ್ಣಗೆ ಬೋಳಿಸಿದ
ನೆಟ್ಟಗೆ ಹೋದ ತಣ್ಣಗೆ ಕುಳಿತ
ಅ ಒಟ್ಟಿನೊಂದಿಗೆ ಬಳಕೆ ಬೆಳ್ಳಗಿನ ಬಟ್ಟೆ ಕರ್ರಗಿನ ಕೂದಲು ನುಣ್ಣಗಿನ ತಲೆ ನೆಟ್ಟಗಿನ ದಾರಿ ತಣ್ಣಗಿನ ನೀರು
(2) ಹೊರಗೆ, ಒಳಗೆ ಮತ್ತು ಕೆಳಗೆ ಎಂಬ ಮೂರು ಎಸಕಪರಿಚೆಗಳಿಗೆ ಕ್ಕೆ, ಇಂದ, ಲ್ಲಿ ಮತ್ತು ಅ ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಪಡೆಯ ಬಹುದು; ಇವುಗಳಲ್ಲಿ ಕ್ಕೆ ಒಟ್ಟನ್ನು ಸೇರಿಸಿದಾಗ, ಅವುಗಳ ಕೊನೆಯ ಗೆ ಬರಿಗೆಕಂತೆ ಬಿದ್ದುಹೋಗುತ್ತದೆ; ಮತ್ತು ಅ ಒಟ್ಟನ್ನು ಸೇರಿಸಿದಾಗ, ಅವುಗಳ ಬಳಿಕ ಇನ್ ಎಂಬುದು ಬರುತ್ತದೆ. ಇದಲ್ಲದೆ, ಇಂದ ಮತ್ತು ಲ್ಲಿ ಎಂಬವುಗಳನ್ನು ಅ ಒಟ್ಟಿನ ಬಳಿಕ ಸೇರಿಸಲಾಗುತ್ತದೆ:
ಹೊರಗೆ ಹೊರಕ್ಕೆ ಹೊರಗಿನ ಹೊರಗಿನಿಂದ ಕೆಳಗೆ
ಒಳಕ್ಕೆ ಒಳಗಿನ ಒಳಗಿನಿಂದ ಕೆಳಗಿನಿಂದ ಕೆಳಕ್ಕೆ
ಕೆಳಗಿನ
ಹೊರಗಿನಲ್ಲಿ ಒಳಗಿನಲ್ಲಿ ಕೆಳಗಿನಲ್ಲಿ
ಪದರೂಪಗಳ ಇಟ್ಟಳ / 319 (3) ಮೇಲೆ, ಹಿಂದೆ ಮತ್ತು ಮುಂದೆ ಪದಗಳು ಗೆ ಬರಿಗೆಕಂತೆಯಲ್ಲಿ ಕೊನೆಗೊಳ್ಳುವುದಿಲ್ಲವಾದರೂ, ಮೇಲಿನ ಪದಗಳ ಹಾಗೆ ಕ್ಕೆ, ಇಂದ, ಲ್ಲಿ ಮತ್ತು ಅ ಒಟ್ಟುಗಳೊಂದಿಗೆ ಬರಬಲ್ಲುವು; ಅವುಗಳ ಕೊನೆಯ ಎಕಾರ ಕ್ಕೆ ಒಟ್ಟಿನ ಮೊದಲು ಅಕಾರವಾಗುತ್ತದೆ, ಮತ್ತು ಅ ಒಟ್ಟಿನ ಮೊದಲು ಬಿದ್ದುಹೋಗುತ್ತದೆ:
ಮೇಲೆ ಹಿಂದೆ ಮುಂದೆ ಮುಂದಕ್ಕೆ ಮುಂದಿನ ಮುಂದಿನಿಂದ
ಮೇಲಕ್ಕೆ ಮೇಲಿನ ಮೇಲಿನಿಂದ ಹಿಂದಕ್ಕೆ ಹಿಂದಿನ ಹಿಂದಿನಿಂದ
ಮೇಲಿನಲ್ಲಿ ಹಿಂದಿನಲ್ಲಿ ಮುಂದಿನಲ್ಲಿ
(4) ಹತ್ತಿರ, ದೂರ, ಎಡ
ಪದಗಳೂ ಇವೇ ಒಟ್ಟುಗಳೊಂದಿಗೆ ಬರಬಲ್ಲುವು; ಆದರೆ, ಇವಕ್ಕೆ ಅ ಒಟ್ಟು ಸೇರಿದಾಗ, ಅವುಗಳ ಬಳಿಕ ಇನ್ ಎಂಬುದರ ಬದಲು ದಕಾರ ಬರುತ್ತದೆ:
ಮತ್ತು ಬಲ
ಹತ್ತಿರ ದೂರ ಎಡ ಬಲ
ಹತ್ತಿರಕ್ಕೆ ಹತ್ತಿರದ ಹತ್ತಿರದಿಂದ ದೂರದಿಂದ ದೂರಕ್ಕೆ ದೂರದ ಎಡದಿಂದ ಎಡಕ್ಕೆ ಎಡದ ಬಲದಿಂದ ಬಲಕ್ಕೆ ಬಲದ
ಹತ್ತಿರದಲ್ಲಿ ದೂರದಲ್ಲಿ ಎಡದಲ್ಲಿ ಬಲದಲ್ಲಿ
(5) ಮೊದಲು, ನಡುವೆ, ಇದಿರು ಮತ್ತು ಒತ್ತು ಪದಗಳೂ ಮೇಲಿನ ಒಟ್ಟುಗಳೊಂದಿಗೆ ಬರಬಲ್ಲುವು; ಆದರೆ, ಇವುಗಳ ಬಳಿಕ ಗೆ ಒಟ್ಟಿಗೆ ಇಗೆ ರೂಪ ಇದೆ; ಮತ್ತು, ಅ ಒಟ್ಟು ಸೇರುವ ಮೊದಲು ಇವುಗಳ ಬಳಿಕ ಇನ್ ಎಂಬುದು ಬರುತ್ತದೆ:
ಮೊದಲು ಮೊದಲಿಗೆ ಮೊದಲಿನ ಮೊದಲಿನಿಂದ ಮೊದಲಿನಲ್ಲಿ ನಡುವಿನಲ್ಲಿ ನಡುವೆ ಇದಿರಿನಲ್ಲಿ ಇದಿರು ಒತ್ತಿನಲ್ಲಿ ಒತ್ತು
ನಡುವಿಗೆ ನಡುವಿನ ನಡುವಿನಿಂದ ಇದಿರಿಗೆ ಇದಿರಿನ ಒತ್ತಿಗೆ ಒತ್ತಿನ
ಇದಿರಿನಿಂದ ಒತ್ತಿನಿಂದ
(6) ನಿನ್ನೆ, ಮೊನ್ನೆ, ಇವತ್ತು ಮತ್ತು ನಾಳೆ ಪದಗಳು ಗೆ, ಅ ಮತ್ತು ಇಂದ ಒಟ್ಟುಗಳೊಂದಿಗೆ ಬರಬಲ್ಲುವು; ಇವುಗಳಲ್ಲಿ ಇವತ್ತು ಪದದ ಬಳಿಕ ಗೆ ಒಟ್ಟಿಗೆ ಇಗೆ ರೂಪ ಇದೆ; ಅ ಒಟ್ಟು ಸೇರಿದಾಗ, ನಿನ್ನೆ, ಮೊನ್ನೆ ಮತ್ತು ಇವತ್ತು ಪದಗಳ ಬಳಿಕ ಇನ್ ಬರುತ್ತದೆ, ಮತ್ತು ನಾಳೆ ಪದದ ಬಳಿಕ ಯಕಾರ ಬರುತ್ತದೆ:
ನಿನ್ನೆ ಮೊನ್ನೆ
ನಿನ್ನೆಗೆ ನಿನ್ನಿನ ಮೊನ್ನೆಗೆ ಮೊನ್ನಿನ ಮೊನ್ನಿನಿಂದ
ನಿನ್ನಿನಿಂದ
ಇವತ್ತು ಇವತ್ತಿಗೆ ಇವತ್ತಿನ ಇವತ್ತಿನಿಂದ ನಾಳೆಗೆ ನಾಳೆಯ ನಾಳೆಯಿಂದ
ನಾಳೆ
4.9.2 ಆಡುಪದಗಳ ಪದರೂಪಗಳು
ಕನ್ನಡದಲ್ಲಿ ನಾನು ಮತ್ತು ನೀನು ಎಂಬ ಎರಡು ಆಡುಪದಗಳಿವೆ; ಇವು ಒಂದು ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ಅದೇ ಸೊಲ್ಲಿನಲ್ಲಿ ಗುರುತಿಸುವು ದಕ್ಕಾಗಿ ಬಳಕೆಯಾಗುತ್ತವೆ. ಇವಕ್ಕೆ ನಾವು ಮತ್ತು ನೀವು ಎಂಬ ಹಲವೆಣಿಕೆಯ ರೂಪಗಳಿವೆ. ಇವನ್ನು ಹಲವೆಣಿಕೆಯ ವು ಒಟ್ಟನ್ನು ಸೇರಿಸಿ ಪಡೆಯಬಹುದು; ಈ ಒಟ್ಟು ಸೇರಿದಾಗ ನಾನು ಮತ್ತು ನೀನು ಪದಗಳ ಎರಡನೆಯ ಬರಿಗೆಕಂತೆ (ನು ಎಂಬುದು) ಬಿದ್ದುಹೋಗುತ್ತದೆ.
ಒಂದು ಸೊಲ್ಲಿನಲ್ಲೇನೇ ಒಮ್ಮೆ ಗುರುತಿಸಿರುವ ವ್ಯಕ್ತಿಯನ್ನು ಇನ್ನೊಮ್ಮೆ ಗುರುತಿಸಬೇಕಾದಾಗ ತಾನು ಎಂಬ ಪದವನ್ನು ಬಳಸಲಾಗುತ್ತದೆ; ಈ ಪದಕ್ಕೂ ಹಲವೆಣಿಕೆಯ ವು ಒಟ್ಟನ್ನು ಸೇರಿಸಲಾಗುತ್ತದೆ, ಮತ್ತು ಅದು ಸೇರಿಸಿದಾಗ, ತಾನು ಪದದ ಎರಡನೇ ಬರಿಗೆಕಂತೆ ಬಿದ್ದುಹೋಗುತ್ತದೆ (ತಾನು-ತಾವು).
ಮೇಲೆ 4.8.2 ಮತ್ತು 4.8.3ರಲ್ಲಿ ವಿವರಿಸಿದ ಎಸಕಪತ್ತುಗೆ ಮತ್ತು ಹೆಸರುಪತ್ತುಗೆಯ ಒಟ್ಟುಗಳನ್ನು ಈ ಮೂರು ಪದಗಳ ಬಳಿಕವೂ ಬಳಸಲು ಬರುತ್ತದೆ. ಎಸಕಪತ್ತುಗೆಯ ಅನ್ನು ಒಟ್ಟು ಮತ್ತು ಹೆಸರುಪತ್ತುಗೆಯ ಅ ಒಟ್ಟುಗಳನ್ನು ಸೇರಿಸಿದಾಗ, ಇವಕ್ಕೆ ನನ್್ನ, ನಿನ್್ನ, ಮತ್ತು ತನ್್ನ ಎಂಬ ರೂಪಗಳಿವೆ; ಇವುಗಳ ಹಲವೆಣಿಕೆಯ ರೂಪಗಳಿಗೆ ನಮ್್ಮ, ನಿಮ್್ಮ, ಮತ್ತು ತಮ್್ಮ ಎಂಬ ರೂಪಗಳಿವೆ:
ಎಸಕಪತ್ತುಗೆಯ ಅನ್ನು ಒಟ್ಟು
ನನ್ನನ್ನು ನಮ್ಮನ್ನು
ನಿನ್ನನ್ನು ನಿಮ್ಮನ್ನು
ತನ್ನನ್ನು ತಮ್ಮನ್ನು
ಹೆಸರುಪತ್ತುಗೆಯ ಅ ಒಟ್ಟು ನಮ್ಮ ನನ್ನ ನಿಮ್ಮ ನಿನ್ನ ತಮ್ಮ ತನ್ನ
ಎಸಕಪತ್ತುಗೆಯ ಇಗೆ ಒಟ್ಟಿಗೆ ಇವುಗಳ ಬಳಿಕ ಗೆ ರೂಪ ಇದೆ; ಮತ್ತು ಅದು ಸೇರಿದಾಗ, ಇವಕ್ಕೆ ನನ, ನಿನ, ತನ, ನಮ, ನಿಮ ಮತ್ತು ತಮ ಎಂಬ ರೂಪಗಳಿವೆ:
ಎಸಕಪತ್ತುಗೆಯ ಇಗೆ ಒಟ್ಟು ನಮಗೆ ನನಗೆ ನಿಮಗೆ ನಿನಗೆ ತಮಗೆ ತನಗೆ
ಪದರೂಪಗಳ ಇಟ್ಟಳ / 321 ಎಸಕಪತ್ತುಗೆಯ ಇಂದ ಮತ್ತು ಲ್ಲಿ ಒಟ್ಟುಗಳನ್ನು ಮೇಲೆ ಕೊಟ್ಟಿರುವ ಹೆಸರುಪತ್ತುಗೆಯ ರೂಪಗಳಿಗೆ ಸೇರಿಸಲಾಗುತ್ತದೆ (ನನ್ನಿಂದ, ನಮ್ಮಿಂದ, ನಿಮ್ಮಿಂದ, ನನ್ನಲ್ಲಿ, ನಮ್ಮಲ್ಲಿ, ತಮ್ಮಲ್ಲಿ), ಮತ್ತು ಇವುಗಳಿಗೆ ಇಂದ ಸೇರಿ ದಾಗ ಹೆಸರುಪತ್ತುಗೆ ರೂಪದ ಕೊನೆಯ ಅಕಾರ ಬಿದ್ದುಹೋಗುತ್ತದೆ.
ಹೆಸರುಪತ್ತುಗೆಯ ಇಂತ ಒಟ್ಟನ್ನೂ ಇವುಗಳಿಗೆ ಎಸಕಪತ್ತುಗೆಯ ಗೆ ಒಟ್ಟನ್ನು ಸೇರಿಸಿದ ಮೇಲೆ ಸೇರಿಸಲಾಗುತ್ತದೆ; ಇಲ್ಲೂ ಗೆ ಒಟ್ಟಿನ ಎಕಾರ ಬಿದ್ದುಹೋಗುತ್ತದೆ (ನನಗಿಂತ, ತನಗಿಂತ, ನಿಮಗಿಂತ).
4.9.3 ತೋರುಪದಗಳ ಪದರೂಪಗಳು
ಕನ್ನಡದಲ್ಲಿ ಬಳಕೆಯಾಗುವ ತೋರುಪದಗಳ ಪಟ್ಟಿಯೊಂದನ್ನು ಹಿಂದಿನ ಪಸುಗೆಯಲ್ಲಿ (3.5.1ರಲ್ಲಿ) ಕೊಡಲಾಗಿದೆ. ಇವುಗಳಲ್ಲಿ ಗಂಡಸು (ಅವನು, ಇವನು ಯಾವನು), ಹೆಂಗಸು (ಅವಳು, ಇವಳು, ಯಾವಳು), ಉಳಿದವು (ಅದು, ಇದು, ಯಾವುದು), ಹಲವರು (ಅವರು, ಇವರು, ಯಾವರು) ಮತ್ತು ಹಲವು (ಅವು, ಇವು, ಯಾವುವು) ಎಂಬವುಗಳಿಗೆ ಎಲ್ಲಾ ಎಸಕ ಪತ್ತುಗೆಯ ಮತ್ತು ಹೆಸರುಪತ್ತುಗೆಯ ರೂಪಗಳೂ ಇವೆ.
(1) ಇವುಗಳಲ್ಲಿ ಅದು, ಇದು ಮತ್ತು ಯಾವುದು ಎಂಬವುಗಳಿಗೆ ಎಸಕಪತ್ತುಗೆಯ ಅನ್ನು ಒಟ್ಟು ಸೇರಿದಾಗ, ಅವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ (ಅದನ್ನು, ಇದನ್ನು, ಯಾವುದನ್ನು); ಇಗೆ ಮತ್ತು ಹೆಸರು ಪತ್ತುಗೆಯ ಅ ಒಟ್ಟು ಸೇರಿದಾಗ ಅವುಗಳ ಕೊನೆಯ ಉಕಾರ ಅಕಾರವಾಗು ತ್ತz;, ಮತ್ತು, ಅವುಗಳ ಬಳಿಕ ಇಗೆ ಒಟ್ಟಿಗೆ ಕ್ಕೆ ರೂಪ ಇದೆ (ಅದಕ್ಕೆ, ಇದಕ್ಕೆ, ಯಾವುದಕ್ಕೆ); ಹೆಸರುಪತ್ತುಗೆಯ ಅ ಒಟ್ಟು ಸೇರಿದಾಗ ಅವುಗಳ ಬಳಿಕ ರಕಾರವೊಂದು ಸೇರಿಕೊಳ್ಳುತ್ತದೆ (ಅದರ, ಇದರ, ಯಾವುದರ).
(2) ಅವು, ಇವು ಮತ್ತು ಯಾವುವು ಎಂಬವುಗಳಿಗೆ ಎಸಕಪತ್ತುಗೆ ಇಲ್ಲವೇ ಹೆಸರುಪತ್ತುಗೆಯ ಒಟ್ಟುಗಳು ಸೇರಿದಾಗ, ಅವುಗಳ ಬಳಿಕ ಹಲ ವೆಣಿಕೆಯ ಗಳು ಒಟ್ಟು ಬರುತ್ತದೆ (ಅವುಗಳನ್ನು, ಇವುಗಳಿಗೆ, ಯಾವವು ಗಳ, ಯಾವವುಗಳಿಗೆ, ಅವುಗಳಲ್ಲಿ, ಇವುಗಳಿಂದ).
(3) ಉಳಿದ ಮೂರು ಬಗೆಯ (ಗಂಡಸು, ಹೆಂಗಸು, ಹಲವರು) ತೋರು ಪದಗಳೊಂದಿಗೆ, ಮತ್ತು ಯಾರು ಪದದೊಂದಿಗೆ ಈ ಪತ್ತುಗೆಯ ಒಟ್ಟುಗಳು ನೇರವಾಗಿ ಸೇರುತ್ತವೆ; ಮತ್ತು ಹಾಗೆ ಸೇರುವಾಗ, ಈ ತೋರುಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ. ಇದಕ್ಕೆ ಎತ್ತುಗೆಯಾಗಿ ಅವನು, ಇವಳು ಮತ್ತು ಯಾರು ಪದಗಳ ಪದರೂಪಗಳನ್ನು ಕೆಳಗೆ ಕೊಡಲಾಗಿದೆ:
ಅವನನ್ನು
ಅವನಿಂದ
ಅವನಿಗೆ
ಅವನಲ್ಲಿ
ಅವನಿಗಿಂತ ಅವನ
ಇವಳನ್ನು
ಇವಳಿಂದ
ಇವಳಿಗೆ
ಇವಳಲ್ಲಿ
ಇವಳಿಗಿಂತ ಇವನ
ಯಾರನ್ನು ಯಾರಿಂದ ಯಾರಿಗೆ ಯಾರಲ್ಲಿ ಯಾರಿಗಿಂತ ಯಾರ
(4) ಉಳಿದ ಎಂಟು ಬಗೆಯ ತೋರುಪದಗಳಲ್ಲಿ ಜಾಗ (ಅಲ್ಲಿ, ಇಲ್ಲಿ, ಎಲ್ಲಿ), ದಿನ (ಅಂದು, ಇಂದು, ಎಂದು) ಮತ್ತು ಅಳವಿ (ಅಶ್ಟು, ಇಶ್ಟು, ಎಶ್ಟು) ಎಂಬವು ಇಂದ, ಗೆ ಮತ್ತು ಅ ಒಟ್ಟುಗಳೊಂದಿಗೆ ಬರಬಲ್ಲುವು.
(ಕ) ಹೆಸರುಪತ್ತುಗೆಯ ಅ ಒಟ್ಟು ಸೇರಿದಾಗ, ಇವುಗಳಲ್ಲಿ ಜಾಗ ಮತ್ತು ದಿನ ಪದಗಳ ಬಳಿಕ ಇನ್ ಎಂಬುದು ಬರುತ್ತದೆ, ಮತ್ತು ಅಳವಿ ಪದಗಳ ಬಳಿಕ ರಕಾರ ಬರುತ್ತದೆ; ಇಂದ ಒಟ್ಟು ಜಾಗ ಪದಗಳಿಗೆ ನೇರವಾಗಿ ಸೇರುತ್ತದೆ, ಮತ್ತು ಉಳಿದ ಎರಡು ಬಗೆಯ ಪದಗಳಲ್ಲಿ ಹೆಸರುಪತ್ತುಗೆಯ ಅ ಒಟ್ಟಿನ ಬಳಿಕ ಬರುತ್ತದೆ; ಆದರೆ, ಇವುಗಳ ಕೊನೆಯ ಅಕಾರ ಬಿದ್ದುಹೋಗುತ್ತದೆ.
ಜಾಗ ಅಲ್ಲಿ ಅಲ್ಲಿನ ಅಲ್ಲಿಂದ ಇಂದಿನಿಂದ ಅಶ್ಟರಿಂದ
ದಿನ ಇಂದು ಇಂದಿನ
ಅಳವಿ ಅಶ್ಟು ಅಶ್ಟರ
(ಚ) ಎಸಕಪತ್ತುಗೆಯ ಗೆ ಒಟ್ಟಿಗೆ ಜಾಗ ಮತ್ತು ದಿನ ಪದಗಳ ಬಳಿಕ ಇಗೆ ರೂಪ ಇದೆ; ಅಳವಿಯ ಪದಗಳ ಕೊನೆಯ ಉಕಾರ ಅಕಾರವಾಗುತ್ತದೆ, ಮತ್ತು ಅವುಗಳ ಬಳಿಕ ಅದಕ್ಕೆ ಕ್ಕೆ ರೂಪ ಇದೆ. ಅಳವಿಯ ಪದಗಳ ಬಳಿಕ ಎಸಕ ಪತ್ತುಗೆಯ ಲ್ಲಿ ಒಟ್ಟೂ ಬರಬಲ್ಲುದು; ಆದರೆ ಅದು ಹೆಸರುಪತ್ತುಗೆಯ ಅ ಒಟ್ಟಿನ ಬಳಿಕ ಬರುತ್ತದೆ. ಈ ಪದರೂಪಗಳಿಗೆ ಎತ್ತುಗೆಯಾಗಿ ಕೆಳಗೆ ಅಲ್ಲಿ, ಇಂದು ಮತ್ತು ಎಶ್ಟು ಪದಗಳ ಪದರೂಪಗಳನ್ನು ಕೊಡಲಾಗಿದೆ.
ಜಾಗ ಅಲ್ಲಿಗೆ —
ದಿನ ಇಂದಿಗೆ —
ಅಳವಿ ಎಶ್ಟಕ್ಕೆ ಎಶ್ಟರಲ್ಲಿ
(ಟ) ಹೊತ್ತಿನ ಪದಗಳ (ಆಗ, ಈಗ, ಯಾವಾಗ) ಬಳಿಕ ಎಸಕಪತ್ತುಗೆಯ ಇಂದ ಒಟ್ಟು, ಮತ್ತು ಹೆಸರುಪತ್ತುಗೆಯ ಅ ಒಟ್ಟು ಬರಬಲ್ಲುವು; ಇವುಗಳಲ್ಲಿ ಇಂದ ಒಟ್ಟು ಅ ಒಟ್ಟಿನ ಬಳಿಕ ಬರುತ್ತದೆ; ಅ ಒಟ್ಟು ಸೇರುವಾಗ, ಈ ಪದಗಳ ಬಳಿಕ ಇನ್ ಎಂಬುದು ಬರುತ್ತದೆ:
ಪದರೂಪಗಳ ಇಟ್ಟಳ / 323
ಆಗಿನ ಅಗಿನಿಂದ
ಈಗಿನ ಈಗಿನಿಂದ
ಯಾವಾಗಿನ ಯಾವಾಗಿನಿಂದ
ಉಳಿದ ತೋರುಪದಗಳಿಗೆ ಹೆಚ್ಚಿನ ಪದರೂಪಗಳಿಲ್ಲ.
4.9.4 ಎಣಿಕೆಪದಗಳ ಪದರೂಪಗಳು
ಹೆಸರುಪದಗಳೊಂದಿಗೆ ಬರುವ ಎರಡು ಬಗೆಯ ಪತ್ತುಗೆಯ ಒಟ್ಟುಗಳೂ (4.8. 2-3 ನೋಡಿ) ಎಣಿಕೆಪದಗಳೊಂದಿಗೆ ಬರುತ್ತವೆ. ಎಸಕಪತ್ತುಗೆಯ ಒಟ್ಟು ಗಳಲ್ಲಿ ಅನ್ನು ಒಟ್ಟು ಸೇರಿದಾಗ ಅವುಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ (4.1.1(1) ನೋಡಿ):
ಒಂದು ಒಂದನ್ನು
ಮೂರು ಮೂರನ್ನು
ಏಳನ್ನು
ಏಳು
ಹತ್ತು ಮೂವತ್ತು ಅಯ್ವತ್ತೊಂದು ಅಯ್ವತ್ತೊಂದನ್ನು
ಹತ್ತನ್ನು ಮೂವತ್ತನ್ನು
ಗೆ ಒಟ್ಟಿಗೆ ಇವುಗಳ ಬಳಿಕ ಕ್ಕೆ ರೂಪ ಇದ್ದು, ಇದು 4.8.2ರಲ್ಲಿ
ಕೊಟ್ಟಿರುವ ಕಟ್ಟಲೆಗೆ ಹೊರಪಡಿಕೆಯಾಗಿದೆ:
ಮೂರು ಮೂರಕ್ಕೆ
ಎಂಟು ಎಂಟಕ್ಕೆ
ಹತ್ತಕ್ಕೆ
ಹತ್ತು
ಇಪ್ಪತ್ತು
ಅಯ್ವತ್ತು
ನೂರಮೂವತ್ತು
ಇಪ್ಪತ್ತಕ್ಕೆ ಅಯ್ವತ್ತಕ್ಕೆ ನೂರಮೂವತ್ತಕ್ಕೆ
ಕ್ಕೆ ಒಟ್ಟಿನ ಬಳಿಕ ಹೆಸರುಪತ್ತುಗೆಯ ಇಂತ ಒಟ್ಟು ಬರಬಲ್ಲುದು:
ಎರಡಕ್ಕೆ ಎರಡಕ್ಕಿಂತ ಮೂರಕ್ಕೆ ಮೂರಕ್ಕಿಂತ
ಅಯ್ವತ್ತಕ್ಕೆ ಮೂವತ್ತಕ್ಕೆ
ಅಯ್ವತ್ತಕ್ಕಿಂತ ಮೂವತ್ತಕ್ಕಿಂತ
ಹೆಸರುಪತ್ತುಗೆಯ ಅ ಒಟ್ಟನ್ನು ಇವುಗಳಿಗೆ ಸೇರಿಸುವ ಮೊದಲು ರಕಾರ
ವನ್ನು ಸೇರಿಸಲಾಗುತ್ತದೆ:
ಮೂರು ಮೂರರ
ಅಯ್ದು ಅಯ್ದರ
ಹತ್ತು
ಹತ್ತರ
ನಲುವತ್ತು ಮೂವತ್ತು ನೂರು
ನಲುವತ್ತರ ಮೂವತ್ತರ ನೂರರ
ಎಸಕಪತ್ತುಗೆಯ ಇಂದ ಮತ್ತು ಲ್ಲಿ ಒಟ್ಟುಗಳು ಈ ಅ ಒಟ್ಟಿನ ರೂಪಗಳ
ಬಳಿಕ ಬರುತ್ತವೆ:
(1) ಇಂದ ಒಟ್ಟಿನ ಬಳಕೆ: ಮೂರರ ಮೂರರಿಂದ ಎಂಟರ ಎಂಟರಿಂದ
(2) ಲ್ಲಿ ಒಟ್ಟಿನ ಬಳಕೆ: ಹತ್ತರ ಹತ್ತರಲ್ಲಿ
ಎರಡರ ಎರಡರಲ್ಲಿ
ನಲುವತ್ತರ ನೂರರ
ನಲುವತ್ತರಿಂದ ನೂರರಿಂದ
ಅಯ್ವತ್ತರ ಇಪ್ಪತ್ತರ
ಅಯ್ವತ್ತರಲ್ಲಿ ಇಪ್ಪತ್ತರಲ್ಲಿ
ಸಾವಿರ, ಲಕ್ಶ, ಮಿಲಿಯ, ಕೋಟಿ ಮೊದಲಾದ ಎರವಲು ಪದಗಳೂ ಮೇಲೆ ವಿವರಿಸಿದ ಪತ್ತುಗೆಯ ಒಟ್ಟುಗಳನ್ನು ಪಡೆಯಬಲ್ಲುವು; ಆದರೆ, ಅವು ಈ ಒಟ್ಟುಗಳನ್ನು ಎಣಿಕೆಯ ಪದಗಳ ಹಾಗೆ ಪಡೆಯುವ ಬದಲು, ಬೇರೆ ಹೆಸರು ಪದಗಳ ಹಾಗೆ ಪಡೆಯುತ್ತವೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಸಾವಿರ ಸಾವಿರವನ್ನು ಮಿಲಿಯ ಮಿಲಿಯಕ್ಕೆ ಲಕ್ಶಕ್ಕೆ ಲಕ್ಶಕ್ಕಿಂತ
ಸಾವಿರ ಸಾವಿರದ
ಲಕ್ಶದ ಲಕ್ಶದಿಂದ
ಸಾವಿರದ ಸಾವಿರದಲ್ಲಿ
ಲಕ್ಶ ಕೋಟಿ ಸಾವಿರಕ್ಕೆ
ಕೋಟಿ ಮಿಲಿಯದ ಕೋಟಿಯ
ಲಕ್ಶವನ್ನು ಕೋಟಿಗೆ ಸಾವಿರಕ್ಕಿಂತ ಕೋಟಿಯ ಮಿಲಿಯದಿಂದ ಕೋಟಿಯಲ್ಲಿ
ಮೇಲಿನ ಒಟ್ಟುಗಳು ಮಾತ್ರವಲ್ಲದೆ, ಒಂದು ಪಟ್ಟಿಯಲ್ಲಿ ಒಬ್ಬ ವ್ಯಕ್ತಿ, ಒಂದು ವಸ್ತು ಇಲ್ಲವೇ ಒಂದು ವಿಶಯಯದ ಜಾಗವನ್ನು ಸೂಚಿಸುವ ಅನೆಯ ಇಲ್ಲವೇ ಅನೇ ಒಟ್ಟನ್ನೂ ಎಣಿಕೆಯ ಪದಗಳಿಗೆ ಸೇರಿಸಿ ಪದರೂಪಗಳನ್ನು ಪಡೆಯಬಹುದು: ನಾಲ್ಕನೆಯ (ನಾಲ್ಕನೇ) ಹುಡುಗ, ಹತ್ತನೆಯ ಮರ, ಅಯ್ದನೇ ಆಟ.
4.10 ತಿರುಳು
ಈ ಪತ್ತುಗೆಯಲ್ಲಿ ಪದಗಳನ್ನು ಸೊಲ್ಲುಗಳಲ್ಲಿ ಬಳಸಬೇಕಾದಾಗ ಅವಕ್ಕೆ ಕೊಡಬೇಕಾಗುವ ಪದರೂಪಗಳು ಎಂತಹವು ಎಂಬುದನ್ನು ವಿವರಿಸಲಾಗಿದೆ. ಬೇರೆಲ್ಲಾ ಪದಗಳಿಗಿಂತಲೂ ಎಸಕಪದಗಳಿಗೆ ಕನ್ನಡದಲ್ಲಿ ತುಂಬಾ ಹೆಚ್ಚು ಪದರೂಪಗಳಿವೆ; ಮತ್ತು, ಇವುಗಳಲ್ಲಿ ಹಿಂಬೊತ್ತಿನ ಪದರೂಪಗಳನ್ನು ಉಂಟು ಮಾಡುವುದು ಬೇರೆಲ್ಲಾ ಪದರೂಪಗಳನ್ನು ಉಂಟುಮಾಡುವುದಕ್ಕಿಂತಲೂ ಹೆಚ್ಚು ತೊಡಕಿನದಾಗಿದೆ.
ಪದರೂಪಗಳ ಇಟ್ಟಳ / 325
ಕನ್ನಡದ ಪದಗಳಲ್ಲಿ ಎಸಕಪದಗಳನ್ನು ಒಂದು ಗುಂಪಿನಲ್ಲಿಯೂ ಉಳಿದೆಲ್ಲಾ ಪದಗಳನ್ನು ಇನ್ನೊಂದು ಗುಂಪಿನಲ್ಲಿಯೂ ಇರಿಸಿ ಹೇಳಬಹುದು; ಯಾಕೆಂದರೆ, ಎಸಕಪದಗಳ ಪದರೂಪಗಳನ್ನು ಉಂಟುಮಾಡುವಲ್ಲಿ ಬೇರೆಯೇ ಒಟ್ಟುಗಳು ಬಳಕೆಯಾಗುತ್ತವೆ, ಮತ್ತು ಉಳಿದೆಲ್ಲಾ ಪದಗಳ ಪದರೂಪಗಳನ್ನು ಉಂಟು ಮಾಡುವಲ್ಲಿ ಹೆಚ್ಚುಕಡಿಮೆ ಒಂದೇ ಬಗೆಯ ಒಟ್ಟುಗಳು ಬಳಕೆಯಾಗುತ್ತವೆ.
ಈ ಎರಡು ಬಗೆಯ ಒಟ್ಟುಗಳ ಬಳಕೆಯನ್ನು, ಮತ್ತು ಅವು ಸೇರಿದಾಗ ಅವುಗಳಲ್ಲಿ ಮತ್ತು ಅವುಗಳೊಂದಿಗೆ ಬರುವ ಪದಗಳಲ್ಲಿ ಕಾಣಿಸಿಕೊಳ್ಳುವ ಸೇರಿಕೆಯ ಮಾರ್ಪಾಡುಗಳನ್ನು ಇಲ್ಲಿ ವಿವರವಾಗಿ ತಿಳಿಸಿಕೊಡಲಾಗಿದೆ.
ಕೆಲವು ಅರಿಮೆಯ ಪದಗಳು
ಪಾರಿಭಾಷಿಕ ಪದ ರಚನೆ ವತ್ರಮಾನಕಾಲ
ಧ್ವನಿ
ಈ ಪುಸ್ತಕದಲ್ಲಿ ಹೊಸದಾಗಿ ಬಳಕೆಯಾಗಿರುವ ಕೆಲವು ಅರಿಮೆಯ ಪದಗಳಿಗೆ ಹೆಚ್ಚುಕಡಿಮೆ ಹೊಂದಿಕೆಯಾಗಬಲ್ಲ ಸಂಸ್ಕ್ರುತ ಮತ್ತು ಇಂಗ್ಲಿಶ್ ಪದಗಳನ್ನು ಕೆಳಗೆ ಕೊಡಲಾಗಿದೆ.
ಅರಿಮೆಯ ಪದ ಇಟ್ಟಳ
ಈಪೊತ್ತು
ಉಲಿ
ಉಲಿಕಂತೆ
ಉಲಿಪು
ಎತ್ತುಗೆ
ಎಸಕಪದ
ಒಟ್ಟು
ಒಯ್ಯುಗೆ
ಓರಣ
ಕಟ್ಟಲೆ
ಕುರಳು
ಕೇಳ್ವಿ
ತಡೆ ಗುರುತು
ತೆರೆಯುಲಿ
ತೋರುಪದ
ನೆಲೆ-ತಿಳಿವು
ಪತ್ತುಗೆ
ಪದನೆರಕೆ
ಪರಿಚೆ
ಪರಿಚೆಪದ
ಪಸುಗೆ
ಪಾಂಗು
technical term structure present tense sound, phone syllable pronunciation example verb affix medium order rule paragraph question
comma vowel demonstrative pronoun topic-comment relation dictionary characteristic adjective, adverb chapter role
ಉಚ್ಚಾರಣೆ
ಉದಾಹರಣೆ ಕ್ರಿಯಾಪದ
ಪ್ರತ್ಯಯ
ಮಾಧ್ಯಮ
ಕ್ರಮ
(ನಿಯಮ)
ವಾಕ್ಯಪರಿಚ್ಛೇದ ಪ್ರಶ್ನೆ
ಸಂಬಂಧ
ಪದಕೋಶ
ಸ್ವರೂಪ
ವಿಶೇಶಣಪದ ಅಧ್ಯಾಯ
ಪಾತ್ರ
ಸ್ವರ
ಕೆಲವು ಅರಿಮೆಯ ಪದಗಳು / 327
ಬರಿಗೆ
ಬರಿಗೆಪಟ್ಟಿ
ಬೆರಗು
ಮುಚ್ಚುಲಿ
ಮುಂಬೊತ್ತು
ಸಿಕ್ಕಲು ಸೊಲ್ಲರಿಮೆ
ಹಿಂಬೊತ್ತು
ಹುರುಳು
ಹೆಸರುಪದ
ಗುರುತಿಸುವುದು ಬಳಕೆ ಪತ್ತುಗೆ ಹುರುಳು ಪತ್ತುಗೆ ನೆಲೆಗೊಳಿಸು ಉಲಿಯ ಏರಿಳಿತ ಜೋಡುಪದ ಹೊರಪಡಿಕೆ ಬೇರು ಅಣಕಪದ
ಕೊನೆರೂಪ ಕೊರೆಪದ
ಅರಿಕೆರೂಪ ಆಡುಗ ಕೇಳುಗ ಹೆರತು ಎಸಕಪತ್ತುಗೆ ಹೆಸರುಪತ್ತುಗೆ ಉಜ್ಜುಲಿ
ಮೂಗುಲಿ
ತಡೆಯುಲಿ
ಬದಿಯುಲಿ
ಮಡಚುಲಿ
ಹೊಡೆಯುಲಿ
ಅಕ್ಷರ
ವರ್ಣಮಾಲೆ ಆಶ್ಚರ್ಯ
ವ್ಯಂಜನ
ಭವಿಷ್ಯತ್ಕಾಲ ಸಂಕೀರ್ಣ
ವ್ಯಾಕರಣ
ಭೂತಕಾಲ
ಅಥ್ರ
ನಾಮಪದ
ಸಮಾಸ
ಅಪವಾದ
ಧಾತು
ಆಜ್ಞಾರ್ಥಕ ಉತ್ತಮ
ಮಧ್ಯಮ
ಪ್ರಥಮ ವಿಭಕ್ತಿ ಷಷ್ಠೀ ವಿಭಕ್ತಿ ಊಷ್ಮ ಅನುನಾಸಿಕ
ಸ್ಪಷ್ರ
ಮೂರ್ಧನ್ಯ ರೇಫ
letter alphabet exclamation consonant future tense complex
grammar past tense meaning noun reference pragmatic relation semantic relation grounding intonation compound exception root onamatopoea finite form irregular word imperative first person second person third person case genitive fricative nasal stop lateral retroflex flap
ತಡೆಯಿಲ್ಲದುಲಿ ನಡುರೂಪ
ಗುನುಗುನಿಸುವ ಊದುಲಿ
ಇಪ್ಪುರುಳು
ಒಳನುಡಿತ
ಎಸಕಪರಿಚೆ ಹೆಸರುಪರಿಚೆ ಗುರುತಿನ ಒಟ್ಟು ಓರೆಣಿಕೆ
ಹಲವೆಣಿಕೆ
ಗಂಡುಗುರ್ತ
ಹೆಣ್ಣುಗುರ್ತ
ಉಳಿಕೆಗುರ್ತ ಅಲ್ಲಗಳೆತ
ಬೇಡಿಕೆ
ಘೋಷ
ಮಹಾಪ್ರಾಣ ಅರ್ಥಸಂದಿಗ್ಧತೆ ವಿಗ್ರಹವಾಕ್ಯ ಕ್ರಿಯಾವಿಶೇಷಣ ನಾಮವಿಶೇಷಣ ಆಖ್ಯಾತ ಪ್ರತ್ಯಯ ಏಕವಚನ
ಬಹುವಚನ ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ ನಿಷೇಧಾರ್ಥಕ
frictionless continuant non-finite form voiced aspirated ambiguity
adverb adjective personal suffix singular plural masculine feminine neuter negation condition