← Ch 1  ·  Contents  ·  Ch 3 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9

Eke →

೨.೧ ಮುನ್ನೋಟ

ನುಡಿಯೊಂದರಲ್ಲಿ ಬರುವ ಪದಗಳನ್ನು ಅವುಗಳ ಹುರುಳು ಮತ್ತು ಸೊಲ್ಲುಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ ಈ ಎರಡು ವಿಷಯಗಳ ಮೇಲೆ ಕೆಲವು ಮುಕ್ಯವಾದ ಗುಂಪುಗಳಲ್ಲಿ ಸೇರಿಸಿ ಹೇಳಬಹುದು. ಕನ್ನಡ ಸೊಲ್ಲುಗಳಲ್ಲಿ ಬರುವ ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದು, ಎಸಕಗಳನ್ನು ತಿಳಿಸುವುದು ಮತ್ತು ವ್ಯಕ್ತಿ, ವಸ್ತು ಮೊದಲಾದವುಗಳ ಇಲ್ಲವೇ ಅವು ನಡೆಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಕ್ಯವಾದ ಕೆಲಸಗಳನ್ನು ನಡೆಸಬೇಕಾಗಿದೆ. ಹಾಗಾಗಿ, ಈ ಕೆಲಸಗಳ ಮೇಲೆ ಅವನ್ನು ಹೆಸರುಪದ, ಎಸಕಪದ, ಮತ್ತು ಪರಿಚೆಪದಗಳೆಂಬ ಮೂರು ಮುಕ್ಯ ಪದಗುಂಪುಗಳಾಗಿ ವಿಂಗಡಿಸಬಲ್ಲೆವು.

ಎತ್ತುಗೆಗಾಗಿ, ರಾಜು, ಹುಡುಗಿ, ಆನೆ, ಮನೆ, ಆಸೆ ಮೊದಲಾದ ಪದಗಳು ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಸೊಲ್ಲುಗಳಲ್ಲಿ ಬರುವುವಾದ ಕಾರಣ, ಅವು ಹೆಸರುಪದಗಳು; ಹೇಳು, ಬೀಳು, ಒಡೆ, ತಿನ್ನು, ಒಣಗು, ತಿರುಗು ಮೊದಲಾದ ಪದಗಳು ಎಸಕಗಳನ್ನು ತಿಳಿಸುವುದಕ್ಕಾಗಿ ಬರುವುವಾದ ಕಾರಣ ಎಸಕಪದಗಳು; ಬಿಳಿ, ಒಳ್ಳೆ, ದೊಡ್ಡ, ತುಸು ಮೊದಲಾದ ಪದಗಳು ವ್ಯಕ್ತಿ, ವಸ್ತು ಮೊದಲಾದವುಗಳ ಇಲ್ಲವೇ ಅವು ನಡೆಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದಕ್ಕಾಗಿ ಬರುವುವಾದ ಕಾರಣ ಪರಿಚೆಪದಗಳು. ಇವು ಈ ಮೂರು ಬಗೆಯ ಕೆಲಸಗಳನ್ನು ನಡೆಸುವವೆಂಬುದನ್ನು ಕೆಳಗಿನ ಎತ್ತುಗೆಗಳಿಂದ ತಿಳಿಯಬಹುದು.

(೧) ರಾಜು ದೊಡ್ಡ ಹುಡುಗನಿಗೆ ತುಸು ಹೊಡೆದ.

(೨) ಗಿರಿ ಕಪ್ಪು ಚಿತ್ರಗಳನ್ನು ಕಾಗದದಲ್ಲಿ ಬಿಡಿಸುತ್ತಾನೆ.

(೩) ವತ್ಸಲ ಒಂದು ಕಪ್ಪು ಬೆಕ್ಕನ್ನು ಸಾಕುತ್ತಿದ್ದಾಳೆ.

(೪) ಸಪ್ತವರ ಮಾರ್ಗಗಳಲ್ಲಿ ವಾಹನಗಳು ಒಂದೇ ದಿಕ್ಕಿನಲ್ಲಿ ಚಲಿಸಲಿ.

ಮೇಲೆ ಕೊಟ್ಟಿರುವ (೧)ನೇ ಸೊಲ್ಲಿನಲ್ಲಿ ಹೊಡೆ ಎಂಬ ಪದ ಒಂದು ಎಸಕವನ್ನು ತಿಳಿಸುತ್ತಿದೆಯಾದ ಕಾರಣ ಎಸಕಪದ; ಹುಡುಗ ಮತ್ತು ರಾಜು ಎಂಬ ಪದಗಳು ಆ ಎಸಕದಲ್ಲಿ ನಿರತರಾಗಿರುವ ಇಬ್ಬರು ವ್ಯಕ್ತಿಗಳನ್ನು ಗುರುತಿಸುತ್ತಿವೆಯಾದ ಕಾರಣ ಹೆಸರುಪದಗಳು; ದೊಡ್ಡ ಎಂಬ ಪದ ಹುಡುಗ ಎಂಬ ಪದವು ಗುರುತಿಸುವ ವ್ಯಕ್ತಿಯ ಪರಿಚೆಯೊಂದನ್ನು ಸೂಚಿಸುತ್ತಿಯಾದ ಕಾರಣ ಪರಿಚೆಪದ; ಮತ್ತು ತುಸು ಎಂಬ ಪದ ಹೊಡೆ ಎಂಬ ಎಸಕಪದವು ತಿಳಿಸುವ ಎಸಕದ ಪರಿಚೆಯೊಂದನ್ನು ಸೂಚಿಸುತ್ತಿದೆಯಾದ ಕಾರಣ ಅದೂ ಒಂದು ಪರಿಚೆಪದವೇ. ಇವುಗಳಲ್ಲಿ ದೊಡ್ಡ ಎಂಬುದನ್ನು ಹೆಸರುಪರಿಚೆಯೆಂದು ಮತ್ತು ತುಸು ಎಂಬುದನ್ನು ಎಸಕಪರಿಚೆಯೆಂದು ಕರೆಯಬಹುದು.

ಇತರ ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಈ ಮೂರು ಕೆಲಸಗಳನ್ನು ನಡೆಸುವುದಕ್ಕಾಗಿ ಬೇರೆ ಬೇರೆ ಪದಗಳು ಬಂದಿದ್ದು, ಅವನ್ನು ಈ ಕೆಲಸಗಳ ಮೇಲೆ ಮೂರು ಪದವರ್ಗಗಳಲ್ಲಿ ವಿಂಗಡಿಸಿ ಹೇಳಬಹುದು. ಎತ್ತುಗೆಗಾಗಿ, (೨)ನೇ ಸೊಲ್ಲಿನಲ್ಲಿ ಗಿರಿ, ಕಾಗದ ಮತ್ತು ಚಿತ್ರ ಎಂಬ ಹೆಸರುಪದಗಳು, ಬಿಡಿಸು ಎಂಬ ಎಸಕಪದ, ಮತ್ತು ಕಪ್ಪು ಎಂಬ ಹೆಸರುಪರಿಚೆಗಳು ಬಂದಿವೆ.

ಪದಗಳ ಒಳರಚನೆಯೆಂಬುದು ಸ್ವಲ್ಪಮಟ್ಟಿಗೆ ಅವು ಯಾವ ಗುಂಪಿನಲ್ಲಿ ಸೇರುತ್ತವೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಯಾಕೆಂದರೆ, ಅವು ಸೊಲ್ಲಿನಲ್ಲಿ ಎಂತಹ ಕೆಲಸವನ್ನು ನಡೆಸಬೇಕಾಗುತ್ತದೆಯೋ ಅದಕ್ಕೆ ತಕ್ಕುದಾದ ಒಳರಚನೆಯೂ ಅವಕ್ಕಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಮತ್ತು ಅವುಗಳ ಪರಿಚಿಗಳನ್ನು ಸೂಚಿಸುವುದಕ್ಕಾಗಿ ಪರಿಚೆಪದಗಳನ್ನು ಬಳಸಲಾಗುತ್ತದೆ; ಈ ಎರಡು ಬಗೆಯ ಪದಗಳ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ:

ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ‘ಹೆಸರಿಸುವ ಹಮ್ಮುಗೆ’ ಮತ್ತು ‘ವರಿಸುವ ಹಮ್ಮುಗೆ’ ಎಂಬುದಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ ಎಂಬುದನ್ನು ನಾವು ಮುಂದೆ ೩.೧ರಲ್ಲಿ ನೋಡಲಿರುವೆವು. ಆದರೆ, ಈ ಎರಡು ಹಮ್ಮುಗೆಗಳಲ್ಲಿ ಒಂದನ್ನು ಮಾತ್ರ (ಎಂದರೆ ವರಿಸುವ ಹಮ್ಮುಗೆಯನ್ನು ಮಾತ್ರ) ಪರಿಚೆಯೊಂದನ್ನು ಸೂಚಿಸುವ ಕೆಲಸದಲ್ಲಿ ಬಳಸಲು ಬರುತ್ತದೆ. ಈ ವ್ಯತ್ಯಾಸದ ಪರಿಣಾಮವನ್ನು ನಾವು ಹೆಸರುಪದ ಮತ್ತು ಪರಿಚೆಪದಗಳ ಒಳರಚನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು:

ಎತ್ತುಗೆಗಾಗಿ, ಹೆಸರುಪದಗಳ ಒಳರಚನೆಯಲ್ಲಿ ಜೋಡುಪದ (ಸಮಾಸ) ಎಂಬ ಪದರಚನೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಎರಡು (ಇಲ್ಲವೇ ಹೆಚ್ಚು)

ಪದಗಳ ಜೋಡಣೆಯಿಂದ ಹೊಸ ಪದವೊಂದನ್ನು ತಯಾರಿಸಲಾಗುತ್ತದೆ. ಆದರೆ, ಪರಿಚೆಪದಗಳ ಒಳರಚನೆಯಲ್ಲಿ ಜೋಡುಪದಗಳು ಕಾಣಿಸುವುದಿಲ್ಲ. ಇಂತಹ ರಚನೆ ‘ಹೆಸರಿಸುವ’ ಹಮ್ಮುಗೆಗೆ ಸೀಮಿತವಾಗಿರುವುದೇ ಇದಕ್ಕೆ ಕಾರಣ.

ಹಾಗಾಗಿ, ಕನ್ನಡದ ಪದಗಳನ್ನು ಎಂತಹ ಗುಂಪುಗಳಲ್ಲೆಲ್ಲ ಸೇರಿಸಿ ಹೇಳಬಹುದು ಎಂಬ ವಿಶಯ ಕನ್ನಡ ಪದರಚನೆಯ ಪರಿಶೀಲನೆಯಲ್ಲಿ ಮುಕ್ಯವಾಗುತ್ತದೆ. ಸಂಸ್ಕೃತದಲ್ಲಿ ಹೆಸರುಪದ ಎಂಬುದಕ್ಕಿಂತ ಬೇರಾಗಿರುವ ಪರಿಚೆಪದ ಎಂಬ ಪದಗುಂಪಿಲ್ಲ. ಕನ್ನಡದಲ್ಲಿರುವ ಈ ಎರಡು ಬಗೆಯ ಪದಗಳಿಗೆ ಬದಲಾಗಿ ಅದರಲ್ಲಿ ಹೆಸರುಪದವೆಂಬ ಒಂದು ಪದಗುಂಪಿನಲ್ಲಿ ಸೇರುವ ಪದಗಳು ಮಾತ್ರ ಕಾಣಿಸುತ್ತವೆ. ಇದಕ್ಕೆ ಆ ನುಡಿಯ ಸೊಲ್ಲುಗಳಲ್ಲಿ ಈ ಪದಗಳು ನಡೆಸಿಕೊಡಬೇಕಾಗಿರುವ ಕೆಲಸಗಳು ಕನ್ನಡದ ಸೊಲ್ಲುಗಳಲ್ಲಿ ಅವು ನಡೆಸಿಕೊಡಬೇಕಾಗಿರುವ ಕೆಲಸಗಳಿಗಿಂತ ಬೇರಾಗಿರುವುದೇ ಕಾರಣವೆಂಬುದನ್ನು ಮುಂದೆ (೨.೨ರಲ್ಲಿ) ನೋಡಲಿರುವೆವು. ಈ ವ್ಯತ್ಯಾಸವನ್ನು ಅರಿತುಕೊಳ್ಳದೆ, ಸಂಸ್ಕೃತದ ಹಾಗೆ ಕನ್ನಡದಲ್ಲೂ ಪರಿಚೆಪದಗಳು ಹೆಸರುಪದಗಳಿಗಿಂತ ಬೇರಲ್ಲ ಎಂದು ತಪ್ಪಾಗಿ ತಿಳಿದುಕೊಂಡೆವಾದರೆ, ಕನ್ನಡದಲ್ಲಿ ಬರುವ ಹೆಸರುಪದ ಮತ್ತು ಪರಿಚೆಪದಗಳ ಒಳರಚನೆಯಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ನಾವು ತಪ್ಪಿಬೀಳುತ್ತೇವೆ.

Eke →

೨.೨ ಪದಗುಂಪುಗಳಲ್ಲಿ ವ್ಯತ್ಯಾಸಗಳು

ಮೇಲೆ ಹೇಳಿರುವಂತೆ, ಎಲ್ಲಾ ನುಡಿಗಳೂ ತಾವು ಬಳಸುವ ಪದಗಳನ್ನು ಒಂದೇ ರೀತಿಯಾಗಿ ಗುಂಪುಗೂಡಿಸುವುದಿಲ್ಲ. ಇದಕ್ಕೆ ಮುಕ್ಯ ಕಾರಣವೇನೆಂದರೆ, ಸೊಲ್ಲುಗಳ ರಚನೆ ನುಡಿಯಿಂದ ನುಡಿಗೆ ಬೇರೆ ಬೇರಾಗಿದ್ದು, ಅವುಗಳಲ್ಲಿ ಪದಗಳು ನಡೆಸಬೇಕಾಗಿರುವ ಕೆಲಸಗಳೂ ಬೇರೆ ಬೇರಾಗಿರುತ್ತವೆ. ನುಡಿಯೊಂದರಲ್ಲಿ ಪದಗಳು ಎಂತಹ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅದರಲ್ಲಿ ಬರುವ ಪದಗಳನ್ನು ಎಂತಹ ಗುಂಪುಗಳಲ್ಲಿ ಸೇರಿಸಿ ಹೇಳಬಹುದು ಎಂಬುದು ಅವಲಂಬಿಸಿದೆ.

ಭಾರತದಲ್ಲಿ ದ್ರಾವಿಡ, ಆರ್ಯ (ಇಂಡೋ-ಆರ್ಯನ್), ಟಿಬೆಟೋ-ಬರ್ಮನ್ ಮತ್ತು ಆಸ್ಟೋ-ಏಶಿಯಾಟಿಕ್ ಎಂಬುದಾಗಿ ನಾಲ್ಕು ಮುಕ್ಯ ನುಡಿಕುಟುಂಬಗಳಿಗೆ ಸೇರಿದ ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸೊಲ್ಲುಗಳನ್ನು ಕಟ್ಟುವ ಹಮ್ಮುಗೆಗಳು ಬೇರೆ ಬೇರಾಗಿದ್ದು, ಅವುಗಳಲ್ಲಿ ಪದಗಳು ನಡೆಸಬೇಕಾಗಿರುವ ಕೆಲಸಗಳೂ ಬೇರೆ ಬೇರಾಗಿವೆ. ಈ ಕಾರಣಕ್ಕಾಗಿ, ಈ ನಾಲ್ಕು ಬಗೆಯ ನುಡಿಗಳಲ್ಲಿರುವ ಪದಗುಂಪುಗಳ ಎಣಿಕೆ ಮತ್ತು ಪರಿಚೆಗಳೆರಡೂ ಬೇರೆ ಬೇರಾಗಿವೆ.

ಕನ್ನಡ ನುಡಿಯು ತಮಿಳು, ತೆಲುಗು, ತುಳು, ಮಲಯಾಳ, ಗೋಂಡಿ, ಕುಡುಕ್ ಮೊದಲಾದ ಬೇರೆ ಕೆಲವು ನುಡಿಗಳೊಂದಿಗೆ ‘ದ್ರಾವಿಡ’ ಎಂಬ ಹೆಸರಿನ ನುಡಿಕುಟುಂಬಕ್ಕೆ ಸೇರಿರುವ ನುಡಿ. ಈ ಎಲ್ಲಾ ನುಡಿಗಳಲ್ಲೂ ಕನ್ನಡದ ಹಾಗೆ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಕ್ಯ ಪದಗುಂಪುಗಳಿವೆ, ಮತ್ತು ಅವು ಸೊಲ್ಲುಗಳಲ್ಲಿ ವ್ಯಕ್ತಿ, ವಸ್ತು ಮೊದಲಾ ದುವನ್ನು ಗುರುತಿಸುವುದು, ಎಸಕಗಳನ್ನು ತಿಳಿಸುವುದು ಮತ್ತು ಪರಿಚೆಗಳನ್ನು ಸೂಚಿಸುವುದು ಎಂಬುದಾಗಿ ಮೂರು ಕೆಲಸಗಳನ್ನು ನಡೆಸಿಕೊಡುತ್ತವೆ.

ಸಂಸ್ಕೃತ ನುಡಿಯು ಹಿಂದಿ, ಮರಾಟಿ, ಗುಜರಾತಿ, ಬಂಗಾಲಿ, ಕಾಶ್ಮೀರಿ ಮೊದಲಾದ ಬೇರೆ ಕೆಲವು ನುಡಿಗಳೊಂದಿಗೆ ಆರ್ಯ (ಇಲ್ಲವೇ ಇಂಡೋ- ಆರ್ಯನ್) ಎಂಬ ನುಡಿಕುಟುಂಬಕ್ಕೆ ಸೇರಿರುವ ನುಡಿ. ಈ ನುಡಿಗಳಲ್ಲಿ ಬರುವ ಪದಗಳು ಮುಕ್ಯವಾಗಿ ಹೆಸರುಪದ ಮತ್ತು ಎಸಕಪದಗಳೆಂಬ ಎರಡು ಪದಗುಂಪುಗಳಲ್ಲಿ ಸೇರುತ್ತವೆ. ಇವುಗಳಲ್ಲಿ ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕೆಲಸವನ್ನು, ಮತ್ತು ಎಸಕಪದಗಳು ಎಸಕಗಳನ್ನು ತಿಳಿಸುವ ಕೆಲಸವನ್ನು ನಡೆಸುತ್ತವೆ. ಪರಿಚೆಪದಗಳೆಂಬ ಮೂರನೇ ಪದಗುಂಪು ಈ ನುಡಿಗಳಲ್ಲಿಲ್ಲ. ‘ಬಿಳೀ’, ‘ದೊಡ್ಡ’, ‘ಒಳ್ಳೇ’ ಮೊದಲಾದ ಪರಿಚಿಗಳನ್ನು ಸೂಚಿಸಬೇಕಾಗಿರುವ ಪದಗಳು ಈ ನುಡಿಗಳಲ್ಲಿ ಹೆಸರುಪದಗಳಾಗಿ ಬರುತ್ತವೆ, ಮತ್ತು ಅವು ಆ ಪರಿಚಿಗಳನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ.

ಎತ್ತುಗೆಗಾಗಿ, ಕನ್ನಡದ ಕಪ್ಪು ಹಾವು ಎಂಬ ಪದಕಂತೆಯಲ್ಲಿ ಬರುವ ಹಾವು ಎಂಬ ಹೆಸರುಪದ ಒಂದು ಪ್ರಾಣಿಯನ್ನು ಗುರುತಿಸುತ್ತದೆ, ಮತ್ತು ಕಪ್ಪು ಎಂಬ ಪರಿಚೆಪದ ಒಂದು ಪರಿಚೆಯನ್ನು ಸೂಚಿಸುತ್ತದೆ. ಇವೆರಡು ಪದಗಳನ್ನು ಒಟ್ಟಿಗೆ ಒಂದು ಪದಕಂತೆಯಲ್ಲಿ ಕಪ್ಪು ಹಾವು ಎಂಬುದಾಗಿ ಬಳಸಿದಾಗ, ಕಪ್ಪು ಎಂಬ ಪದ ಒಂದು ಪರಿಚೆವನ್ನು ಸೂಚಿಸುವುದರ ಮೂಲಕ ಹಾವು ಎಂಬ ಹೆಸರುಪದಕ್ಕೆ ಒಂದು ವಿಶಿಷ್ಟವಾದ (ಕಪ್ಪು ಬಣ್ಣವಿರುವ) ಹಾವನ್ನು ಗುರುತಿಸಲು ಸಹಾಯ ಮಾಡುತ್ತದೆ.

ಸಂಸ್ಕೃತದಲ್ಲಿ ಬರುವ ಕೃಷ್ಣಃ ಸರ್ವಃ ಎಂಬ ಇದೇ ಹುರುಳಿನ ಪದಕಂತೆ ಇದಕ್ಕಿಂತ ತೀರ ಬೇರಾದುದು. ಆ ಪದಕಂತೆಯ ಅಂಗಗಳಾಗಿರುವ ಕೃಷ್ಣಃ ಮತ್ತು ಸರ್ವಃ ಎಂಬ ಈ ಎರಡು ಪದಗಳೂ ಸ್ವತಂತ್ರವಾದ ಹೆಸರುಪದಗಳು. ಕೃಷ್ಣಃ ಎಂಬ ಹೆಸರುಪದ ಕಪ್ಪಾಗಿರುವ ಒಂದು ಪ್ರಾಣಿ (ಇಲ್ಲವೇ ವಸ್ತುವನ್ನು) ಗುರುತಿಸುತ್ತದೆ, ಮತ್ತು ಸರ್ವಃ ಎಂಬ ಹೆಸರುಪದ ‘ಹಾವಾ’ಗಿರುವ ಒಂದು ಪ್ರಾಣಿಯನ್ನು ಗುರುತಿಸುತ್ತದೆ. ಈ ಎರಡು ಪದಗಳನ್ನು ಒಟ್ಟಿಗೆ ಒಂದು ಪದಕಂತೆಯ ಅಂಗಗಳಾಗಿ (ಕೃಷ್ಣಃ ಸರ್ವಃ ಎಂಬುದಾಗಿ) ಬಳಸಿದಾಗ, ಅವೆರಡು ಹೆಸರುಪದಗಳು ಗುರುತಿಸುವ ವಸ್ತು ಇಲ್ಲವೇ ಪ್ರಾಣಿಗಳು ಒಂದೇ ಎಂಬ

ಹುರುಳು ದೊರಕುತ್ತದೆ, ಮತ್ತು ಇದರಿಂದಾಗಿ ಆ ಪದಕಂತೆ ವಿಶಿಷ್ಟವಾದೊಂದು ಪ್ರಾಣಿಯನ್ನು (ಎಂದರೆ ಕಪ್ಪು ಬಣ್ಣದ ಹಾವನ್ನು) ಗುರುತಿಸುವಂತಾಗುತ್ತದೆ.

ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಈ ವ್ಯತ್ಯಾಸ ಅವು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಎಂತಹ ಹಮ್ಮುಗೆಯನ್ನು ಬಳಸುತ್ತವೆ ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ಗಮನಿಸಬೇಕು. ಕನ್ನಡದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಹೆಸರುಪದಗಳ ನೆರವಿನಿಂದ ಗುರುತಿಸಿ, ಅವುಗಳಲ್ಲಿ ಕೆಲವನ್ನು ಮಾತ್ರ ಪ್ರತ್ಯೇಕಿಸಿ ಹೇಳಲು ಪರಿಚೆಪದಗಳನ್ನು ಬಳಸುವ ಕ್ರಮ ಬಳಕೆಯಲ್ಲಿದೆ. ಎತ್ತುಗೆಗಾಗಿ, ಹಾವು ಎಂಬ ಹೆಸರುಪದ ಹಲವಾರು ರೀತಿಯ ಪ್ರಾಣಿ(ಹಾವು)ಗಳನ್ನು ಗುರುತಿಸಬಲ್ಲುದಾಗಿದ್ದು, ಅವುಗಳಲ್ಲಿ ಕೆಲವನ್ನು ಕಪ್ಪು ಹಾವು ಎಂಬ ಪದಕಂತೆಯಿಂದಲೂ, ಬೇರೆ ಕೆಲವನ್ನು ಹಸುರು ಹಾವು ಎಂಬ ಪದಕಂತೆಯಿಂದಲೂ, ಮತ್ತು ಇನ್ನು ಕೆಲವನ್ನು ದೊಡ್ಡ ಹಾವು ಎಂಬ ಪದಕಂತೆಯಿಂದಲೂ ಪ್ರತ್ಯೇಕಿಸಿ ಹೇಳಲು ಬರುತ್ತದೆ. ಇಲ್ಲಿ ಕಪ್ಪು, ಹಸುರು, ದೊಡ್ಡ ಮೊದಲಾದ ಪರಿಚೆಪದಗಳು ಬೇರೆ ಬೇರೆ ಪರಿಚೆಗಳನ್ನು ಸೂಚಿಸುತ್ತಿದ್ದು, ಆ ಪರಿಚೆಗಳು ಹಾವು ಎಂಬ ಪದವು ತಿಳಿಸುವ ಹುರುಳಿಗೆ ಸೇರುವುದರ ಮೂಲಕ ಮೇಲಿನ ಕೆಲಸ ಸಾದ್ಯವಾಗುತ್ತದೆ.

ಸಂಸ್ಕೃತದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸಲು, ಮೇಲೆ ವಿವರಿಸಿದಂತೆ, ಇದಕ್ಕಿಂತ ಬೇರೆಯೇ ಆಗಿರುವ ಒಂದು ಹಮ್ಮುಗೆಯನ್ನು ಬಳಸಲಾಗುತ್ತದೆ. ಕೃಷ್ಣಃ ಎಂಬ ಹೆಸರುಪದ ಕಪ್ಪು ಬಣ್ಣವಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತದೆ (ಇದರಲ್ಲಿ ಹಾವುಗಳೂ ಸೇರುತ್ತವೆ); ಸರ್ವಃ ಎಂಬ ಹೆಸರುಪದ ಬೇರೆ ಬೇರೆ ಬಣ್ಣದ ಮತ್ತು ಆಕಾರದ ಹಾವುಗಳನ್ನು ಗುರುತಿಸುತ್ತದೆ (ಇದರಲ್ಲಿ ಕಪ್ಪು ಬಣ್ಣದ ಹಾವುಗಳೂ ಸೇರುತ್ತವೆ); ಈ ಎರಡು ಹೆಸರುಪದಗಳನ್ನು ಒಟ್ಟು ಸೇರಿಸಿ ಒಂದು ಪದಕಂತೆಯಾಗಿ ಮಾಡಿ ಬಳಸಿದಾಗ ಆ ಎರಡು ಪದಗಳು ಗುರುತಿಸುವವುಗಳಲ್ಲಿ ಸಮಾನವಾಗಿರುವಂತಹ ಕಪ್ಪು ಬಣ್ಣದ ಹಾವು ಗುರುತಿಸಲ್ಪಡುತ್ತದೆ.

ಸಂಸ್ಕೃತದಲ್ಲಿ ಈ ರೀತಿ ‘ಪರಿಚೆ’ಗಳ ಹುರುಳನ್ನು ಕೊಡುವ ಹೆಸರು ಪದಗಳನ್ನಲ್ಲದೆ ಬೇರೆ ಹೆಸರುಪದಗಳನ್ನೂ ಇನ್ನೊಂದು ಹೆಸರುಪದದೊಂದಿಗೆ ಸೇರಿಸಿ ಪದಕಂತೆಗಳನ್ನಾಗಿ ಮಾಡಿ ಹೇಳಲು ಬರುತ್ತದೆ. ಎತ್ತುಗೆಗಾಗಿ, ಮೃತ್ತಿಕಂ ಘಟಂ ಎಂಬ ಪದಕಂತೆಯಲ್ಲಿ ಮೃತ್ತಿಕ ‘ಮಣ್ಣು’ ಮತ್ತು ಘಟ ‘ಕೊಡ’ ಎಂಬ ಎರಡು ಹೆಸರುಪದಗಳನ್ನು ಒಟ್ಟಿಗೆ ಬಳಸಲಾಗಿದೆ. ಇವುಗಳಲ್ಲಿ ಮೊದಲನೆಯದು ‘ಮಣ್ಣಾ’ ಗಿರುವ ಒಂದು ವಸ್ತುವನ್ನೂ ಮತ್ತು ಎರಡನೆಯದು ‘ಕೊಡ’ವಾಗಿರುವ ಒಂದು ವಸ್ತುವನ್ನೂ ಬೇರೆ ಬೇರಾಗಿ ಗುರುತಿಸುತ್ತಿದ್ದು, ಅವು ಎರಡೂ ಒಂದೇ ಪದಕಂತೆಯ ಅಂಗವಾಗಿ ಬಂದಿರುವ ಕಾರಣ ‘ಮಣ್ಣಿನ ಕೊಡ’ ವನ್ನು ಗುರುತಿಸಬಲ್ಲುವು. ಕನ್ನಡದಲ್ಲಿ ಈ ರೀತಿ ಎರಡು ಹೆಸರುಪದಗಳನ್ನು

ಒಟ್ಟಿಗೆ ಒಂದು ಪದಕಂತೆಯ ಅಂಗಗಳಾಗಿ ಬಳಸಬೇಕಿದ್ದಲ್ಲಿ, ಅವುಗಳ ನಡು ವಿರುವ ಪತ್ತುಗೆಯನ್ನು ತಿಳಿಸಲು ಮೊದಲನೆಯದಕ್ಕೆ ಅ ಒಟ್ಟನ್ನು ಸೇರಿಸಿ ಮಣ್ಣಿನ ಕೊಡ ಎಂಬುದಾಗಿ ಹೇಳಬೇಕಾಗುತ್ತದೆ.

ಪದಗುಂಪುಗಳ ಮಟ್ಟಿಗೆ ಕನ್ನಡ ಮತ್ತು ಸಂಸ್ಕೃತ ನುಡಿಗಳ ನಡುವಿರುವ ಈ ಮುಕ್ಯವಾದ ವ್ಯತ್ಯಾಸದಿಂದಾಗಿ ಅವೆರಡು ನುಡಿಗಳೊಳಗೆ ಪದರಚನೆಯ ಹಮ್ಮುಗೆಯಲ್ಲೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನಾವು ಮುಂದೆ ನೋಡಲಿರುವೆವು. ಎತ್ತುಗೆಗಾಗಿ, ಕರ್ಮದಾರಯ ಸಮಾಸವನ್ನು ತತ್ಪುರುಶದ ಒಂದು ಬಗೆಯೆಂದು ಸಂಸ್ಕೃತದ ಸೊಲ್ಲರಿಗರು ತಿಳಿಯಲು ಆ ನುಡಿಯಲ್ಲಿ ವಿಶೇಷಣ ಮತ್ತು ವಿಶೇಷ್ಯಗಳ ನಡುವಿನ ಪತ್ತುಗೆಯನ್ನು ….. ಸಾಧ್ಯವಾಗ ದಿರುವುದೇ ಕಾರಣ. ಕರ್ಮಧಾರಯದಲ್ಲಿ ಅಂತಹ ಸಂಬಂಧದ ಬದಲು ಸಮಾ ನಾಧಿಕರಣ (ಎಂದರೆ ಅಂಗಗಳಾಗಿರುವ ಎರಡು ಪದಗಳೂ ಒಂದೇ ವಿಭಕ್ತಿ ಯಲ್ಲಿ ಬರುತ್ತವೆ) ಎಂಬ ವಿಷಯವನ್ನು ಆಧಾರವಾಗಿರಿಸಿಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ಈ ಸಮಸ್ಯೆಯಿಲ್ಲದಿದ್ದರೂ ಹಲವಾರು ವೈಯಾಕರಣಿಗಳು ಅದರಲ್ಲೂ ಸಂಸ್ಕೃತದ ಹಾಗೆ ಸಮಾನಾಧಿಕರಣವೇ ಕರ್ಮಧಾರಯ ಸಮಾಸಕ್ಕೆ ಆಧಾರವೆಂದು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ (೫.೬.೫ ನೋಡಿ).

ಭಾರತದ ವಾಯವ್ಯ ಗಡಿ ಪ್ರದೇಶದಲ್ಲಿ ‘ಟಿಬೆಟೋ-ಬರ್ಮನ್’ ಎಂಬ ಭಾಷಾ ಕುಟುಂಬಕ್ಕೆ ಸೇರಿದ ಮಣಿಪುರಿ, ಬೋಡೋ, ಲುಶಾಯಿ, ಸೆಮ, ತಾಂಖುರ್ ನಾಗ ಮೊದಲಾದ ನೂರಕ್ಕೂ ಜಾಸ್ತಿ ನುಡಿಗಳು ಪ್ರಚಾರದಲ್ಲಿವೆ. ಇವು ಸೊಲ್ಲುಗಳ ರಚನೆಗಾಗಿ ಬೇರೆಯೇ ಒಂದು ವಿಧಾನವನ್ನು ಬಳಸುತ್ತವೆ. ಈ ನುಡಿಗಳಲ್ಲೂ ಹೆಸರುಪದ ಮತ್ತು ‘ಸಕಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರ ಕಾಣಿಸುತ್ತವೆ. ಆದರೆ, ಪರಿಚೆಧರ್ಮಗಳನ್ನು ಸೂಚಿಸುವ ಪದಗಳು ಈ ನುಡಿಗಳಲ್ಲಿ ಸಂಸ್ಕೃತದಲ್ಲಿರುವ ಹಾಗೆ ಹೆಸರುಪದಗಳಾಗಿ ಬಾರದೆ ‘ಸಕಪದಗಳಾಗಿ ಬರುತ್ತವೆ.

ಎತ್ತುಗೆಗಾಗಿ, ಈ ನುಡಿಗಳಲ್ಲಿ ‘ಸಕಪದಗಳು ‘ಓಡು’, ‘ಬೀಳು’, ‘ಒಡೆ’, ‘ತೊಳೆ’ ಮೊದಲಾದ ಎಸಕಗಳನ್ನು ನಿರ್ದೇಶಿಸುವುದು ಮಾತ್ರವಲ್ಲದೆ ಬೇರೆ ಬೇರೆ ರೀತಿಯ ‘ಸ್ಥಿತಿ’ಗಳನ್ನೂ ನಿರ್ದೇಶಿಸುತ್ತಿದ್ದು, ‘ಕಪ್ಪು’, ‘ದೊಡ್ಡ’, ‘ಒಳ್ಳೇ’ ಮೊದಲಾದ ಪರಿಚೆಧರ್ಮಗಳನ್ನು ಸೂಚಿಸುವ ಪದಗಳು ಈ ನುಡಿಗಳಲ್ಲಿ ಇಂತಹ ಸ್ಥಿತಿಗಳನ್ನು ನಿರ್ದೇಶಿಸುವ ಸಕಪದಗಳಾಗಿ ಬರುತ್ತವೆ. ಹೆಸರುಪದಗಳೊಂದಿಗೆ ಈ ಎರಡು ರೀತಿಯ ‘ಸಕಪದಗಳನ್ನೂ ಅವುಗಳ ಕೃದಂತ ರೂಪದಲ್ಲಿ ಮಾತ್ರವೇ ಬಳಸಲು ಸಾಧ್ಯ.

ಮಣಿಪುರಿ ನುಡಿಯಲ್ಲಿ ಎಸಕಗಳನ್ನು ನಿರ್ದೇಶಿಸುವ ಚಾ (ತಿನ್ನು), ಚತ್ (ಹೋಗು), ಮೊದಲಾದವುಗಳ ಹಾಗೆಯೇ ಪರಿಚೆಧರ್ಮ (ಸ್ಥಿತಿ)ಗಳನ್ನು ನಿರ್ದೇ

ಶಿಸುವ ಸಾಜ್ (ಉದ್ದ), ಮೂ (ಕಪ್ಪು) ಮೊದಲಾದವುಗಳನ್ನೂ ಹೆಸರುಪದ ಗಳೊಂದಿಗೆ ಬಳಸಬೇಕಿದ್ದಲ್ಲಿ ಅವುಗಳನ್ನು ಕೃದಂತರೂಪಕ್ಕೆ ಬದಲಾಯಿಸಿ ಕೊಳ್ಳಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ. ಉದಾ:

ಅಬಾಬ ಮೀ ‘ತಿನ್ನುವ ಮನುಷ್ಯ’
ಅಚತ್‌ಪ ಮೀ ‘ಹೋಗುವ ಮನುಷ್ಯ’
ಅಸಾಬ್‌ಮೀ ‘ಉದ್ದ ಮನುಷ್ಯ’
ಅಮೂಬ ಮೀ ‘ಕಪ್ಪು ಮನುಷ್ಯ’

ಕನ್ನಡದ ಹಾಗೆ ಪರಿಚೆಧರ್ಮಗಳನ್ನು ಸೂಚಿಸುವ ಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಬಳಸಲು ಈ ನುಡಿಯಲ್ಲಿ ಸಾಧ್ಯವಾಗದು. ಇದಲ್ಲದೆ ಬೇರೆ ಹಲವಾರು ರೀತಿಗಳಲ್ಲೂ ಈ ಎರಡು ರೀತಿಯ ಪದಗಳು ಮಣಿಪುರಿ ಯಲ್ಲಿ ಒಂದೇ ರೀತಿಯವಾಗಿವೆ. ಎತ್ತುಗೆಗಾಗಿ, ಕನ್ನಡದಲ್ಲಿ ‘ಸಕಪದಗಳು ಕಾಲವಾಚಕ ಪ್ರತ್ಯಯಗಳೊಂದಿಗೆ ಬರಬಲ್ಲುವಲ್ಲದೆ (ಉದಾ: ಬರುತ್ತಾನೆ, ಬಂದ, ಬಂದಿದ್ದ ಇತ್ಯಾದಿ) ಪರಿಚೆಪದಗಳು ಬರಲಾರವು. ಆದರೆ ಮಣಿಪುರಿ ನುಡಿಯಲ್ಲಿ ‘ಸಕಪದ ಮತ್ತು ಪರಿಚೆಪದಗಳೆರಡೂ ಬೇರೆ ಬೇರೆ ಕಾಲವಾಚಕ ಪ್ರತ್ಯಯಗಳೊಂದಿಗೆ ಬರಬಲ್ಲುವು. ಉದಾ:

ಬಾಗನಿ ‘ತಿಂದಾನು’
ಚತ್‌ಕನಿ ‘ಹೋದಾನು’
ಸಾಜ್‌ಗನಿ ‘ಉದ್ದವಿದ್ದಾನು’
ಮೂರನಿ ‘ಕಪ್ಪಿದ್ದಾನು’

ಕನ್ನಡದಲ್ಲಿ ಉದ್ದ ಮತ್ತು ಕಪ್ಪು ಎಂಬ ಪರಿಚೆಪದಗಳಿಗೆ ಕಾಲವಾಚಕ ಪ್ರತ್ಯಯಗಳನ್ನು ನೇರವಾಗಿ ಸೇರಿಸಲು ಸಾಧ್ಯವಾಗದು. ಇದಕ್ಕಾಗಿ ಅವುಗಳ ಮುಂದೆ ಇರು ಎಂಬ ‘ಸಕಪದವನ್ನಿರಿಸಿ ಆ ‘ಸಕಪದಕ್ಕೆ ಕಾಲವಾಚಕ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ; ಆದರೆ, ಮಣಿಪುರಿಯಲ್ಲಿ ಈ ಎರಡು ಕನ್ನಡ ಪದಗಳಿಗೆ ಸಮಾನವಾಗಿರುವ ಪದಗಳಿಗೂ (ಸಾಜ್ ಮತ್ತು ಮೂ ಎಂಬಂತಹವುಗಳಿಗೂ) ನೇರವಾಗಿ ಕಾಲವಾಚಕ ಪ್ರತ್ಯಯಗಳನ್ನು ಸೇರಿಸಲು ಸಾಧ್ಯ ಎಂಬುದನ್ನು ಮೇಲಿನ ಎತ್ತುಗೆಗಳು ಸ್ಪಷ್ಟಪಡಿಸುತ್ತವೆ.

ಭಾರತದಲ್ಲಿ ಆಸ್ಟೋ-ಏಶಿಯಾಟಿಕ್ ಎಂಬ ಇನ್ನೊಂದು ಭಾಷಾಕುಟುಂಬಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯಾ ಸೋರಾ ಮೊದಲಾದ ಬೇರೆ ಕೆಲವು ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಮುಂಡ ಎಂಬ ಉಪಕುಟುಂಬಕ್ಕೆ ಸೇರಿದ ಮುಂಡಾರಿ, ಸಂತಾಲಿ ಮೊದಲಾದ ಕೆಲವು ನುಡಿಗಳಲ್ಲಿ ಬರುವ ಪದಗಳೆಲ್ಲ ಒಂದೇ ಪದವರ್ಗದಲ್ಲಿ ಸೇರುತ್ತವೆ. ಈ ಪದವರ್ಗವನ್ನು ‘ಸಕಪದ ಇಲ್ಲವೇ ‘ಆಖ್ಯಾತಪದ’ ಎಂಬುದಾಗಿ ಹೆಸರಿಸಬಹುದು.

ಈ ನುಡಿಗಳಲ್ಲಿ ಬರುವ ಸೊಲ್ಲುಗಳು ಈ ‘ಸಕಪದದ ಮೂಲಕ ಒಂದು ಎಸಕ ಇಲ್ಲವೇ ಸ್ಥಿತಿಯನ್ನು ನಿರ್ದೇಶಿಸುತ್ತಿದ್ದು, ಆ ಎಸಕೆಯಲ್ಲಿ ಇಲ್ಲವೇ ಸ್ಥಿತಿಯಲ್ಲಿ ತೊಡಗಿರುವ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಸೂಕ್ಷ್ಮವಾಗಿ ಪ್ರತ್ಯಯಗಳ ಸಹಾಯದಿಂದ ‘ಸಕರೂಪದಲ್ಲೇನೇ ಗುರುತಿಸುತ್ತವೆ. ಇದಲ್ಲದೆ ಇಂತಹ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳ ವಿಷಯವಾಗಿ, ಮತ್ತು ಸೊಲ್ಲುಗಳು ನಿರ್ದೇಶಿಸುವ ಎಸಕ ಇಲ್ಲವೇ ಸ್ಥಿತಿಗಳ ವಿಷಯವಾಗಿ ಹೆಚ್ಚಿನ ಸಂಗತಿಗಳನ್ನು ತಿಳಿಸುವುದಕ್ಕಾಗೆ ಈ ನುಡಿಗಳು ಬೇರೆ ಬೇರೆ ರೀತಿಯ ‘ಸಕರೂಪಗಳನ್ನೇ ಬಳಸುತ್ತವೆ. ಹೀಗೆ ಈ ನುಡಿಗಳು ಬೇರೆಯೇ ಒಂದು ಸೊಲ್ಲುಗಳ ರಚನೆಯ ವಿಧಾನವನ್ನನುಸರಿಸುವ ಕಾರಣ ಅವಕ್ಕೆ ‘ಸಕಪದವೆಂಬ ಒಂದೇ ಒಂದು ಪದವರ್ಗವಿದ್ದರೆ ಸಾಕಾಗುತ್ತದೆ; ಹೆಸರುಪದ ಮತ್ತು ಪರಿಚೆಪದ ಗಳೆಂಬ ಬೇರೆ ಎರಡು ಪದವರ್ಗಗಳ ಅವಶ್ಯಕತೆ ಬರುವುದಿಲ್ಲ.

ಭಾರತದ ನುಡಿಗಳು ಹೀಗೆ ತಮ್ಮಲ್ಲಿರುವ ಪದಗಳನ್ನು ಬೇರೆ ಬೇರೆ ರೀತಿ ಯಲ್ಲಿ ಪದವರ್ಗಗಳಾಗಿ ವಿಂಗಡಿಸುವ ಕಾರಣ ಅವೆಲ್ಲವನ್ನೂ ಒಂದೇ ರೀತಿ ಯಲ್ಲಿ (ಸಂಸ್ಕೃತದಲ್ಲಿರುವ ಹಾಗೆ) ವರ್ಣಿಸಲು ಪ್ರಯತ್ನಿಸಿದಲ್ಲಿ ಆ ನುಡಿಗಳ ನಿಜವಾದ ಸ್ವರೂಪವೆಂತಹದು ಎಂಬುದನ್ನು ತಿಳಿಯಲು ನಮಗೆ ಸಾಧ್ಯವಾಗದು.

Eke →

೨.೩ ಪರಿಚೆಧರ್ಮಗಳಲ್ಲಿ ವ್ಯತ್ಯಾಸ

ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಖ್ಯ ಪದವರ್ಗಗಳಿಗೆ ಸೇರುವ ಪದಗಳಿವೆಯೆಂದು ಹೇಳಲು ಮೇಲೆ ಸೂಚಿಸಿದಂತೆ ಅವು ಸೊಲ್ಲುಗಳಲ್ಲಿ ಮೂರು ಬೇರೆ ಬೇರೆ ಕೆಲಸಗಳನ್ನು ನಡೆಸಿಕೊಡಬೇಕಾಗುತ್ತದೆ ಎಂಬ ವಿಷಯ ಆಧಾರವಾಗಬಲ್ಲುದು ಮಾತ್ರವಲ್ಲ, ಈ ಮೂರು ಪದವರ್ಗ ಗಳಲ್ಲಿ ಸೇರುವ ಪದಗಳು ಕನ್ನಡದಲ್ಲಿ ಬೇರೆ ಬೇರೆ ರೀತಿಯ ಪರಿಚೆಧರ್ಮಗಳನ್ನು ತೋರಿಸುತ್ತವೆ ಎಂಬ ವಿಷಯವೂ ಆಧಾರವಾಗಬಲ್ಲುದು. ಇವೆರಡಕ್ಕೂ ನಡು ವಿರುವ ಸಂಬಂಧವೇನೆಂದರೆ, ಈ ಮೂರು ರೀತಿಯ ಪದಗಳು ತೋರಿಸುವ ಪರಿಚೆಧರ್ಮಗಳು ಅವು ಸೊಲ್ಲಿನಲ್ಲಿ ನಡೆಸಬೇಕಾಗಿರುವ ಬೇರೆ ಬೇರೆ ಕೆಲಸಗಳಿಗೆ ಸಹಾಯಕವಾಗುವಂತಹವುಗಳು.

ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳನ್ನು ಮೂರು ಬೇರೆ ಬೇರೆ ಪದವರ್ಗಗಳಲ್ಲಿ ವಿಂಗಡಿಸಬೇಕೆಂಬುದಕ್ಕೆ ಆಧಾರವಾಗಬಲ್ಲ ಈ ಪರಿಚೆಧರ್ಮಗಳನ್ನು ಕೆಳಗೆ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.

೨.೩.೧ ನೇರವಾದ ಬಳಕೆ

ಸಾಮಾನ್ಯವಾಗಿ ಪದಗಳು ತಮ್ಮವೇ ಆದ ಕೆಲಸಗಳನ್ನು ನಡೆಸಬೇಕಾದಾಗಲೆಲ್ಲ ಯಾವ ಪ್ರತ್ಯಯವೂ ಸೇರಿರದ ‘ಪ್ರತ್ಯಯರಹಿತ’ ರೂಪದಲ್ಲಿ ಬರುತ್ತವೆ. ಆದರೆ ಬೇರೆ ಪದವರ್ಗಗಳಿಗೆ ಸೇರಿದ ಪದಗಳ ಕೆಲಸಗಳನ್ನು ನಡೆಸಬೇಕಾಗಿ ಬಂದಾಗ ಅವು ಬೇರೆ ಬೇರೆ ರೀತಿಯ ಪ್ರತ್ಯಯಗಳೊಂದಿಗೆ ಸೇರುವುದರ ಮೂಲಕ ಸಿದ್ಧವಾದ ‘ಪ್ರತ್ಯಯಯುಕ್ತ’ ರೂಪಗಳಲ್ಲಿ ಬರುತ್ತವೆ. ಕನ್ನಡದಲ್ಲಿ ಈ ರೀತಿ ಪ್ರತ್ಯಯರಹಿತ ರೂಪದಲ್ಲಿ ಬರಲು ಪದಗಳಿಗೆ ಮೂರು ಬೇರೆ ಬೇರೆ ಸಂದರ್ಭಗಳಿವೆ. ಈ ವಿಷಯವನ್ನು ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಬೇರೆ ಬೇರೆ ಪದವರ್ಗಗಳಿವೆಯೆಂಬುದಕ್ಕೆ ಆಧಾರ ವಾಗಿ ಕೊಡಬಹುದು.

ಎತ್ತುಗೆಗಾಗಿ, ಹೆಸರುಪದಗಳನ್ನು ವಿಭಕ್ತಿಪ್ರತ್ಯಯಗಳೊಂದಿಗೆ, ‘ಸಕ ಪದಗಳನ್ನು ಕಾಲವಾಚಕ ಪ್ರತ್ಯಯಗಳೊಂದಿಗೆ, ಮತ್ತು ಪರಿಚೆಪದಗಳನ್ನು ಹೆಸರು ಪದಗಳೊಂದಿಗೆ (ಇಲ್ಲವೇ ‘ಸಕಪದಗಳೊಂದಿಗೆ) ನೇರವಾಗಿ ಬಳಸಲು ಸಾಧ್ಯ ವಿದೆ. ಇದಕ್ಕೆ ವ್ಯತಿರಿಕ್ತವಾಗಿ, ‘ಸಕಪದಗಳನ್ನು ಇಲ್ಲವೇ ಪರಿಚೆಪದಗಳನ್ನು ವಿಭಕ್ತಿಪ್ರತ್ಯಯಗಳೊಂದಿಗೆ ಬಳಸಬೇಕಾದಲ್ಲಿ, ಹೆಸರುಪದಗಳನ್ನು ಇಲ್ಲವೇ ಪರಿಚೆ ಪದಗಳನ್ನು ಕಾಲವಾಚಕ ಪ್ರತ್ಯಯಗಳೊಂದಿಗೆ ಬಳಸಬೇಕಾದಲ್ಲಿ, ಮತ್ತು ಹೆಸರು ಪದಗಳನ್ನು ಇಲ್ಲವೇ ‘ಸಕಪದಗಳನ್ನು ಬೇರೆ ಹೆಸರುಪದಗಳೊಂದಿಗೆ ಇಲ್ಲವೇ ‘ಸಕಪದಗಳೊಂದಿಗೆ ಬಳಸಬೇಕಾದಲ್ಲಿ, ಅವಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು (ಅಥವಾ ಪದಗಳನ್ನು) ಸೇರಿಸುವ ಅವಶ್ಯಕತೆಯಿದೆ.

ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳ ನಡುವೆ ಅವುಗಳ ನೇರವಾದ ಬಳಕೆಯಲ್ಲಿ ಕಾಣಿಸುವ ಈ ಪ್ರಾಮುಖ್ಯವಾದ ವ್ಯತ್ಯಾಸವನ್ನು ಕೆಳಗಿನ ಎತ್ತುಗೆಗಳು ಸ್ಪಷ್ಟಪಡಿಸುತ್ತವೆ.

(೧) ವಿಭಕ್ತಿ ಪ್ರತ್ಯಯದೊಂದಿಗೆ ಬಳಕೆ

ಹೆಸರುಪದ ‘ಸಕಪದ ಪರಿಚೆಪದ ಕಾಡ-ನ್ನು ಹಾಡು-ವು-ದ-ನ್ನು ತೆಳು-ವಿನದ-ನ್ನು ಮನೆ-ಯನ್ನು ಬರೆ-ದು-ದ-ನ್ನು ಹಳೆ-ಯದ-ನ್ನು

ಮರ-ವನ್ನು ಕೊಡು-ವು-ದ-ನ್ನು ದೊಡ್ಡ-ದ-ನ್ನು ಕಿವಿ-ಯನ್ನು ಕಲಿ-ತು-ದ-ನ್ನು ಬಿಳಿ-ಯದ-ನ್ನು ಕೊರಳಿ-ಗೆ ಹೊರಡು-ವು-ದ-ಕ್ಕೆ ಮುಂದಿ-ನದ-ಕ್ಕೆ

ಮೇಲೆ ಮೊದಲನೆಯ ಕಾಲಂನಲ್ಲಿ ಹೆಸರುಪದಗಳು ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಪಡೆದಿರುವುದನ್ನು ಕಾಣಬಹುದು. ಈ ಪ್ರತ್ಯಯಗಳ (ಅನ್ನು ಮತ್ತು ಇಗೆ ಎಂಬವುಗಳ) ಮೊದಲಿಗೆ ಸ್ವರ ಇದೆಯಾದ ಕಾರಣ ಹೆಸರುಪದಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗಿದೆ ಮತ್ತು ಇತರ ಸ್ವರಗಳ ಅನಂತರ ಯಕಾರ ಇಲ್ಲವೇ ವಕಾರಗಳು ಹೆಚ್ಚುವರಿಯಾಗಿ ಬಂದಿವೆ. ಆದರೆ ಇವೆಲ್ಲ ಕನ್ನಡದಲ್ಲಿ ನಡೆಯುವ ಸಂಧಿ ನಿಯಮಗಳಿಗನುಸಾರವಾಗಿ ನಡೆಯುವ ಬದಲಾ ವಣೆಗಳು.

‘ಸಕಪದಗಳು ಈ ಪ್ರತ್ಯಯಗಳೊಂದಿಗೆ ಬರಲು ಅವುಗಳೊಂದಿಗೆ ಸಮಯವನ್ನು ಸೂಚಿಸುವ ವ್ ಇಲ್ಲವೇ ದ್(ತ್) ಎಂಬ ಪ್ರತ್ಯಯವೂ ಮತ್ತು ಪುರುಷ, ವಚನ ಮತ್ತು ಲಿಂಗಗಳನ್ನು ಸೂಚಿಸುವ ಉದ್ ಎಂಬ ಪ್ರತ್ಯಯವೂ ಬರುವುದು ಅವಶ್ಯ ಎಂಬುದನ್ನು ಎರಡನೆಯ ಕಾಲಂನ ಎತ್ತುಗೆಗಳಿಂದ ತಿಳಿಯಬಹುದು. ಇದೇ ರೀತಿಯಲ್ಲಿ ಪರಿಚೆಪದಗಳು ಈ ವಿಭಕ್ತಿಪ್ರತ್ಯಯ ಗಳೊಂದಿಗೆ ಬರಬೇಕಿದ್ದಲ್ಲಿ ಅವಕ್ಕೆ ಅದ್ (ಇಲ್ಲವೇ ಇನ್ + ಅದ್) ಎಂಬ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸುವುದು ಅವಶ್ಯ ಎಂಬು ದನ್ನು ಮೂರನೆಯ ಕಾಲಂನ ಎತ್ತುಗೆಗಳಿಂದ ತಿಳಿಯಬಹುದು.

ಕನ್ನಡದಲ್ಲಿ ಕೆಲವು ಪರಿಚೆಪದಗಳು ನೇರವಾಗಿ ವಿಭಕ್ತಿಪ್ರತ್ಯಯಗಳೊಂದಿಗೆ ಬರಬಲ್ಲುವೆಂಬುದನ್ನು ಕೆಂಪ-ನ್ನು, ಹಸುರಿ-ಗೆ ಮೊದಲಾದ ಪ್ರಯೋಗಗಳಲ್ಲಿ ಕಾಣಬಹುದು. ಆದರೆ ಇಂತಹ ಪ್ರಯೋಗಗಳಲ್ಲಿ ಈ ಪದಗಳು ಹೆಸರು ಪದಗಳಾಗಿಯೇ ಬಂದಿವೆ. ಇಲ್ಲಿ ಅವಕ್ಕೆ ‘ಸೊನ್ನೆ’ ಪ್ರತ್ಯಯವೊಂದನ್ನು ಸೇರಿಸಿ ಹೆಸರುಪದಗಳನ್ನಾಗಿ ಬದಲಿಸಲಾಗಿದೆಯೆಂದೂ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಇಂತಹ ಪ್ರಯೋಗಗಳಲ್ಲಿ ಈ ಪದಗಳು ಪರಿಚೆಪದಗಳ ಹಾಗೆ ಪರಿಚೆಧರ್ಮ ವೊಂದನ್ನು ಸೂಚಿಸುವ ಬದಲು ಹೆಸರುಪದಗಳ ಹಾಗೆ ಅದನ್ನು ಹೆಸರಿಸುತ್ತವೆ ಎಂಬುದನ್ನೂ ಗಮನಿಸಬಹುದು.

  1. (೫) ಇದರಿಂದ ಸ್ವಲ್ಪ ಕೆಂಪನ್ನು ಕಡಿಮೆ ಮಾಡಲು ಸಾಧ್ಯವಾದೀತೇ?
  2. (೫)ನೇ ಸೊಲ್ಲಿನಲ್ಲಿ ಕೆಂಪನ್ನು ಎಂಬ ಪದಕ್ಕೆ ‘ಕೆಂಪು ಬಣ್ಣವನ್ನು’ ಎಂಬ
  3. ಹೆಸರುಪದಕಂಗಿದ ಅರ್ಥವಿದೆಯೆಂಬುದನ್ನು ಗಮನಿಸಬಹುದು.

  4. (೨) ಸಮಯವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಕೆ
  5. ಕನ್ನಡದಲ್ಲಿ ‘ಸಕಪದಗಳು ಮಾತ್ರವೇ ಸಮಯವನ್ನು ಸೂಚಿಸುವ ಪ್ರತ್ಯಯ
  6. ಗಳೊಂದಿಗೆ ಬರಬಲ್ಲುವು. ಹೆಸರುಪದ ಮತ್ತು ಪರಿಚೆಪದಗಳು ಅವುಗಳೊಂದಿಗೆ
  7. ಬರಲಾರವು. ಕೆಲವು ಹೆಸರುಪದ ಮತ್ತು ಪರಿಚೆಪದಗಳನ್ನು ಈ ರೀತಿ ಸಮಯ
  8. ವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆಯಾದರೂ
  9. ಇದಕ್ಕಾಗಿ ಅವಕ್ಕೆ ಇಸು ಎಂಬ ಪ್ರತ್ಯಯವನ್ನಾಗಲೀ (ಉದಾ: ಹಂಬಲ-
  10. ಹಂಬಲಿಸು, ಹೆಸರು-ಹಸರಿಸು, ಎತ್ತರ-ಎತ್ತರಿಸು) ಇಲ್ಲವೇ ಬೇರೆ ಕೆಲವು
  11. ಅನಿಯಮಿತವಾದ ಪ್ರತ್ಯಯಗಳನ್ನಾಗಲೀ (ಉದಾ: ಅಗಲಿ-ಅಗಲು, ಒಣ-
  12. ಒಣಗು) ಸೇರಿಸುವುದರ ಮೂಲಕ ಅವನ್ನು ‘ಸಕಪದಗಳನ್ನಾಗಿ ಬದಲಾಯಿಸಿ
  13. ಕೊಳ್ಳುವ ಅವಶ್ಯಕತೆಯಿದೆ.
  14. (೩) ಹೆಸರುಪದಗಳೊಂದಿಗೆ ಬಳಕೆ
  15. ಹೆಸರುಪದ ‘ಸಕಪದ ಪರಿಚೆಪದ
  16. ಕಲ್ಲಿನ ಮನೆ ಕಟ್ಟುವ ಮನೆ ದೊಡ್ಡ ಮನೆ
  17. ಬಣ್ಣದ ಕಾಗದ ಬರೆಯುವ ಕಾಗದ ಬಿಳಿ ಕಾಗದ
  18. ಕಾಗದದ ಹೂವು ಬಾಡಿದ ಹೂವು ಹಳೆ ಹೂವು
  19. ಮಾವಿನ ಹಣ್ಣು ಕೊಳೆತ ಹಣ್ಣು ಹುಳಿ ಹಣ್ಣು
  20. ರಾಜುವಿನ ಬಟ್ಟೆ ಹರಿದ ಬಟ್ಟೆ ಒದ್ದೆ ಬಟ್ಟೆ
  21. ಮೇಲೆ ಮೂರನೇ ಕಾಲಂನಲ್ಲಿರುವ ಪದಕಂಗೆ’ಗಳಲ್ಲಿ ದೊಡ್ಡ, ಬಿಳೀ, ಹಳೆ
  22. ಮೊದಲಾದ ಪರಿಚೆಪದಗಳು ಹೆಸರುಪದಗಳೊಂದಿಗೆ ನೇರವಾಗಿ ಪ್ರತ್ಯಯಗಳ
  23. ಸಹಾಯವಿಲ್ಲದೆ ಸೇರಿವೆ. ಆದರೆ ಎರಡನೆಯ ಕಾಲಂನಲ್ಲಿರುವ ಪದಕಂಗೆ’ಗಳಲ್ಲಿ
  24. ಕಟ್ಟು, ಬರೆ, ಬಾಡು ಮೊದಲಾದ ‘ಸಕಪದಗಳು ಇಂತಹ ಬಳಕೆಗಾಗಿ
  25. ಸಮಯವನ್ನು ಸೂಚಿಸುವ ವ್ ಇಲ್ಲವೇ ದ್(ತ್) ಎಂಬ ಪ್ರತ್ಯಯದೊಂದಿಗೆ
  26. ಮತ್ತು ಅವು ವಿಶೇಷಣಗಳೆಂಬುದನ್ನು ಸೂಚಿಸುವ ಅ ಎಂಬ ಪ್ರತ್ಯಯದೊಂದಿಗೆ
  27. ಬರಬೇಕಾಗಿದೆ. ಇದೇ ರೀತಿಯಲ್ಲಿ, ಮೊದಲನೆಯ ಕಾಲಂನಲ್ಲಿರುವ ಪದಕಂಗೆ’
  28. ಗಳಲ್ಲಿ ಕಲ್ಲು, ಬಣ್ಣ, ಕಾಗದ ಮೊದಲಾದ ಹೆಸರುಪದಗಳು ಇಂತಹ
  29. ಬಳಕೆಗಾಗಿ ಸಂಬಂಧವನ್ನು ಸೂಚಿಸುವ ಅ ಎಂಬ ಪ್ರತ್ಯಯದೊಂದಿಗೆ
  30. ಬರಬೇಕಾಗಿದೆ.

ಕೆಲವು ಹೆಸರುಪದಗಳು ನೇರವಾಗಿ ಬೇರೆ ಹೆಸರುಪದಗಳೊಂದಿಗೆ ಬರ ಬಲ್ಲುವು. ಎತ್ತುಗೆಗಾಗಿ, ತಲೆಗೂದಲು, ಹೊಗೆಸೊಪ್ಪು, ಆನೆಕಾಲು ಮೊದಲಾದ ಬಳಕೆಗಳನ್ನು ಗಮನಿಸಬಹುದು. ಆದರೆ ಇಂತಹ ಬಳಕೆಗಳಲ್ಲಿ ಹೆಸರುಪದಗಳೆರಡು ಒಟ್ಟು ಸೇರಿ ಒಂದೇ ಹೆಸರುಪದವಾಗಿವೆ. ಹಾಗಾಗಿ, ಇವನ್ನು ಪದಕಂಗೆ’ಗಳೆಂದು ಕರೆಯುವ ಬದಲು ‘ಜೋಡುಪದ’ಗಳೆಂದು ಕರೆಯುವ ಅವಶ್ಯಕತೆಯಿದೆ.

ಇದೇ ರೀತಿಯಲ್ಲಿ ಕೆಲವು ‘ಸಕಪದಗಳೂ ನೇರವಾಗಿ ಹೆಸರುಪದ ಗಳೊಂದಿಗೆ ಬರಬಲ್ಲುವು. ಹುಟ್ಟುಪರಿಚೆ, ಬೀಸುಗಲ್ಲು, ಸುಳಿಗಾಳಿ ಮೊದ ಲಾದ ಬಳಕೆಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಆದರೆ ಇಂತಹ ಬಳಕೆಗಳಲ್ಲೂ ಎರಡು ಪದಗಳು ಒಟ್ಟು ಸೇರಿ ಜೋಡುಪದಗಳಾಗಿವೆಯಲ್ಲದೆ, ಅವು ಪದಕಂಗೆ’ಗಳಾಗಿ ಉಳಿದಿಲ್ಲ. ‘ಸಕಪದಗಳು ಹೆಸರುಪದಗಳೊಂದಿಗೆ ಒಂದು ಪದಕಂಗಿದ ಅಂಗವಾಗಿ ಬರಬೇಕಿದ್ದಲ್ಲಿ ಮೇಲೆ ಸೂಚಿಸಿದಂತೆ ಅವಕ್ಕೆ ಸಮಯವನ್ನು (ಇಲ್ಲವೇ ನಿಷೇಧಾರ್ಥವನ್ನು) ಸೂಚಿಸುವ ಪ್ರತ್ಯಯವನ್ನೂ ಮತ್ತು ಅವು ವಿಶೇಷಣಗಳೆಂಬುದನ್ನು ಸೂಚಿಸುವ ಪ್ರತ್ಯಯವನ್ನೂ ಸೇರಿಸುವ ಅವಶ್ಯಕತೆ ಯಿದೆ.

ಕನ್ನಡದಲ್ಲಿ ಕೆಲವು ಪರಿಚೆಪದಗಳೂ ಹೆಸರುಪದಗಳೊಂದಿಗೆ ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬರಬಲ್ಲುವು. ಎತ್ತುಗೆಗಾಗಿ, ಎತ್ತರ ಗೋಡೆ ಎನ್ನುವ ಬದಲು ಎತ್ತರದ ಗೋಡೆ ಎಂಬುದಾಗಿಯೂ ಮತ್ತು ಕೆಂಪು ಬಟ್ಟೆ ಎನ್ನುವ ಬದಲು ಕೆಂಪಿನ ಬಟ್ಟೆ ಎಂಬುದಾಗಿಯೂ ಹೇಳಲು ಸಾಧ್ಯವಿದೆ. ಆದರೆ ಈ ಎರಡು ರೀತಿಯ ಬಳಕೆಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ. ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಇವು ಹೆಸರುಪದಗಳ ಹಾಗೆ ಅರ್ಥ ಕೊಡುತ್ತವೆಯಲ್ಲದೆ ಪರಿಚೆಪದಗಳ ಹಾಗೆ ಅರ್ಥ ಕೊಡುವುದಿಲ್ಲ. ಎತ್ತುಗೆಗಾಗಿ ಈ ಕೆಳಗಿನ (೬-೭) ಸೊಲ್ಲುಗಳನ್ನು ಗಮನಿಸಬಹುದು.

(೬) ಆ ಕಲ್ಲಿನ ಗೋಡೆಗಿಂತ ಈ ಕಲ್ಲಿನ ಗೋಡೆ ನೋಡಲು ಚನ್ನಾಗಿದೆ.

(೭) ಆ ಎತ್ತರದ ಗೋಡೆಗಿಂತ ಈ ಎತ್ತರದ ಗೋಡೆ ನೋಡಲು ಚನ್ನಾಗಿದೆ.

(೬)ನೇ ಸೊಲ್ಲಿನಲ್ಲಿ ಎರಡು ಬೇರೆ ಬೇರೆ ರೀತಿಯ ಕಲ್ಲುಗಳಿಂದ (ಉದಾ ಕಗ್ಗಲ್ಲಿನಿಂದ ಮತ್ತು ಮುರಕಲ್ಲಿನಿಂದ) ಕಟ್ಟಿದ ಗೋಡೆಗಳನ್ನು ಹೋಲಿಸಲಾಗಿದೆ; (೭)ನೇ ಸೊಲ್ಲಿನಲ್ಲೂ ಇದೇ ರೀತಿ ಎರಡು ಬೇರೆ ಬೇರೆ ಎತ್ತರಗಳಿರುವ (ಉದಾ: ಆರು ಅಡಿ ಮತ್ತು ಆರೂವರೆ ಅಡಿ) ಗೋಡೆಗಳನ್ನು ಹೋಲಿಸ

ಲಾಗಿದೆಯೆಂದು ಹೇಳಲು ಸಾಧ್ಯವಿದೆ. ಎಂದರೆ, ಎತ್ತರ ಎಂಬ ಪದ ಇಲ್ಲಿ ಹೆಸರುಪದವಾಗಿ ಬಂದಿದೆ.

ಪರಿಚೆಪದಗಳಿಗೆ ಈ ರೀತಿ ಹೆಸರುಪದಗಳಿಗಿರುವಂತಹ ಅರ್ಥ ಅವನ್ನು ಹೆಸರುಪದಗಳೊಂದಿಗೆ ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಳಸಿ ದಾಗ ಮಾತ್ರ ಬರಬಲ್ಲುದು. ಅವನ್ನು ನೇರವಾಗಿ ಎತ್ತರ ಗೋಡೆ ಎಂಬುದರ ಲ್ಲಿರುವಂತೆ ಬಳಸಿದಾಗ ಅವಕ್ಕೆ ಈ ಅರ್ಥ ಬರಲಾರದೆಂಬುದನ್ನು (೮)ನೇ ಸೊಲ್ಲಿನಿಂದ ತಿಳಿಯಬಹುದು.

(೮) ಆ ಎತ್ತರ ಗೋಡೆ ಈ ಎತ್ತರ ಗೋಡೆಗಿಂತ ನೋಡಲು ಚನ್ನಾಗಿದೆ.

ಈ (೮)ನೇ ಸೊಲ್ಲಿಗೆ ಮೇಲೆ (೭)ನೇ ಸೊಲ್ಲಿಗೆ ಬಂದಿರುವಂತೆ ‘ಎರಡು ಬೇರೆ ಬೇರೆ ಎತ್ತರಗಳಿರುವ ಗೋಡೆಗಳು’ ಎಂಬ ಅರ್ಥ ಬರಲಾರದೆಂಬುದನ್ನು ಇಲ್ಲಿ ಗಮನಿಸಬಹುದು.

೨.೩.೨ ಅರ್ಥದಲ್ಲಿ ವ್ಯತ್ಯಾಸ

ಹೆಸರುಪದ, ‘ಸಕಪದ, ಮತ್ತು ಪರಿಚೆಪದಗಳ ನಡುವೆ ಅವು ಕೊಡುವ ಅರ್ಥ ದಲ್ಲೂ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಸೊಲ್ಲುಗಳಲ್ಲಿ ಈ ಮೂರು ರೀತಿಯ ಪದಗಳು ನಡೆಸಿಕೊಡಬೇಕಾಗಿರುವ ಕೆಲಸಗಳು ಬೇರೆ ಬೇರಾಗಿರುವುದೇ ಅವಕ್ಕೆ ಈ ರೀತಿ ಬೇರೆ ಬೇರೆ ರೀತಿಯ ಅರ್ಥಗಳು ಬರಲು ಮುಖ್ಯ ಕಾರಣ. ಪರಿಚೆ ಪದಗಳು ಹೆಸರುಪದಗಳೊಂದಿಗೆ ಸೇರಿ ಅವುಗಳ ಅರ್ಥವನ್ನು ಸಂಕುಚಿತ ಗೊಳಿಸಬೇಕಾಗಿದೆ. ಹಾಗಾಗಿ, ಅವಕ್ಕೆ ಯಾವುದಾದರೂ ಒಂದು ನಿಶ್ಚಿತವಾದ ಪರಿಚೆಧರ್ಮವನ್ನು ಮಾತ್ರವೇ ಸೂಚಿಸುವಂತಹ ಅರ್ಥವಿರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಹೆಸರುಪದಗಳು ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಬೇಕಾಗಿದೆ. ಹಾಗಾಗಿ, ಅವಕ್ಕೆ ಸಾಮಾನ್ಯ ವಾಗಿ ಅಂತಹ ವ್ಯಕ್ತಿ, ವಸ್ತು, ವಿಷಯ ಮೊದಲಾದುವಕ್ಕೆ ಸಂಬಂಧಿಸಿದಂತಹ ಹಲವಾರು ಪರಿಚೆಧರ್ಮಗಳ ಒಂದು ಸಮೂಹವನ್ನೇ ಸೂಚಿಸುವ ಅರ್ಥವಿರು ತ್ತದೆ.

ಎತ್ತುಗೆಗಾಗಿ ಕುರುಡು ಎಂಬ ಪರಿಚೆಪದವನ್ನು ಕುರುಡ ಎಂಬ ಹೆಸರು ಪದದೊಂದಿಗೆ ಹೋಲಿಸಿ ನೋಡಬಹುದು. ಕುರುಡು ಎಂಬ ಪರಿಚೆಪದ ‘ಕಣ್ಣಿಲ್ಲ ದಿರುವಿಕೆ’ ಎಂಬ ಒಂದೇ ಒಂದು ಪರಿಚೆಧರ್ಮವನ್ನು ಮಾತ್ರ ಸೂಚಿಸಬಲ್ಲುದು. ಆದರೆ, ಕುರುಡ ಎಂಬ ಹೆಸರುಪದ ಈ ಒಂದು

ಪರಿಚೆಧರ್ಮವನ್ನು ಮಾತ್ರ ವಲ್ಲದೆ, ಬೇರೆಯೂ ಹಲವು ಪರಿಚೆಧರ್ಮಗಳನ್ನು (ಉದಾ: ‘ಗಂಡಸು’, ‘ಬೆತ್ತ ಹಿಡಿದು ನಡೆಯುವವನು’, ‘ಕಿವಿ ಬಹಳ ಸೂಕ್ಷ್ಮವಾಗಿರುವವನು’, ಇತ್ಯಾದಿ) ಸೂಚಿಸಬಲ್ಲುದು.

ಹೆಸರುಪದಗಳಿಗೆ ಈ ರೀತಿ ಬೇರೆ ಬೇರೆ ಪರಿಚೆಧರ್ಮಗಳ ಒಂದು ಸಮೂಹ ವನ್ನೇ ಸೂಚಿಸುವಂತಹ ಅರ್ಥವಿದೆ ಮಾತ್ರವಲ್ಲ, ಅಂತಹ ಪರಿಚೆಧರ್ಮಗಳನ್ನು ಪಡೆದಿರುವ ಒಬ್ಬ ವ್ಯಕ್ತಿ, ವಸ್ತು ಇಲ್ಲವೇ ವಿಷಯವನ್ನು ಗುರುತಿಸುವಂತಹ ಹೆಚ್ಚಿನ ಅರ್ಥವೂ ಇದೆ. ನಿಜಕ್ಕೂ ಈ ಎರಡನೇ ರೀತಿಯ ಅರ್ಥವನ್ನು ಕೊಡುವುದೇ ಹೆಸರುಪದಗಳ ಮುಖ್ಯ ಕೆಲಸ. ಎತ್ತುಗೆಗಾಗಿ, ಕುರುಡ ಎಂಬ ಪದ ಪ್ರಾಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಮೇಲೆ ಸೂಚಿಸಿದ ಪರಿಚೆಧರ್ಮಗಳಲ್ಲಿ ಕೆಲವು ಆತನಲ್ಲಿಲ್ಲದಿದ್ದರೂ (ಉದಾ: ಆತ ಒಂದು ಕೋಲನ್ನು ಹಿಡಿದಿಲ್ಲವಾದರೂ) ಅದು ಒಬ್ಬ ವ್ಯಕ್ತಿಯನ್ನು ಗುರುತಿಸಬಲ್ಲುದು. ಪರಿಚೆಪದಗಳಿಗೆ ಈ ಎರಡನೇ ರೀತಿಯ ಅರ್ಥವಿಲ್ಲ. ಇದು ಹೆಸರುಪದಗಳಿಗೂ ಮತ್ತು ಪರಿಚೆಪದಗಳಿಗೂ ನಡುವಿರುವ ಅತ್ಯಂತ ಪ್ರಾಮುಖ್ಯವಾದ ವ್ಯತ್ಯಾಸ.

ಹೆಸರುಪದ ಮತ್ತು ‘ಸಕಪದಗಳ ನಡುವೆಯೂ ಅರ್ಥದ ಮಟ್ಟಿಗೆ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾ ದುವನ್ನು ಗುರುತಿಸುತ್ತಿದ್ದು, ಅವಕ್ಕೆ ಸ್ವತಂತ್ರವಾದ ಅಸ್ತಿತ್ವವಿದೆ. ಆದರೆ ‘ಸಕ ಪದಗಳು ಒಂದು ಎಸಕೆಯನ್ನು (ಇಲ್ಲವೇ ಸ್ಥಿತಿಯನ್ನು) ನಿರ್ದೇಶಿಸುತ್ತಿದ್ದು, ಸಾಮಾನ್ಯವಾಗಿ ಅವನ್ನು ಬಳಸಬೇಕಿದ್ದಲ್ಲಿ ಆ ಎಸಕೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ಸ್ಥಾನ, ಕಾಲ ಮೊದಲಾದುವನ್ನೂ ಸೇರಿಸಿ ಹೇಳುವ ಅವಶ್ಯಕತೆಯಿದೆ. ಎತ್ತುಗೆಗಾಗಿ, ತಿನ್ನು ಎಂಬ ‘ಸಕಪದವನ್ನು ಮಾತಿನಲ್ಲಿ ಬಳಸಿದೊಡನೆ ಯಾರು ತಿಂದರು, ಯಾವುದನ್ನು ತಿಂದರು, ಯಾವಾಗ ತಿಂದರು, ಎಲ್ಲಿ ತಿಂದರು ಮೊದಲಾದ ಪ್ರಶ್ನೆಗಳು ಏಳದಿರುವುದಿಲ್ಲ. ಹೆಸರುಪದಗಳು (ಉದಾ: ಆನೆ, ಕಾಡು, ಇತ್ಯಾದಿ) ಈ ರೀತಿ ‘ಸಕಪದಗಳ ಹಾಗೆ ಅಸ್ವತಂತ್ರವಾಗಿಲ್ಲವಾದ ಕಾರಣ ಅವನ್ನು ಬಳಸಿದಾಗ ಇಂತಹ ಪ್ರಶ್ನೆಗಳು ಏಳದಿರಲು ಸಾಧ್ಯವಿದೆ.

೨.೩.೩ ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಬಳಕೆ

ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಪರಿಚೆಪದಗಳನ್ನು ಮಾತ್ರವೇ ಬಳಸಲು ಸಾಧ್ಯ ಎಂಬ ನಿಯಮ ಕನ್ನಡದಲ್ಲಿದೆ. ಹೆಸರುಪದಗಳನ್ನಾಗಲೀ ಇಲ್ಲವೇ ‘ಸಕಪದಗಳನ್ನಾಗಲೀ ಅಂತಹ ರಚನೆಗಳಲ್ಲಿ ಬಳಸಲು ಸಾಧ್ಯವಾಗದು. ಎತ್ತುಗೆಗಾಗಿ ಈ ಕೆಳಗಿನ (೯-೧೨) ಸೊಲ್ಲುಗಳನ್ನು ಗಮನಿಸಬಹುದು.

  1. (೯) ಇದು ಆ ಮನೆಗಿಂತ ದೊಡ್ಡ ಮನೆ.
  2. (೧೦) ಅವನಷ್ಟು ಬೇಗ ಓಡುವವನನ್ನು ನಾನು ಕಾಣಲಿಲ್ಲ.
  3. (೧೧) ಈ ಗೋಡೆ ಆ ಗೋಡೆಗಿಂತ ಎತ್ತರ.
  4. (೧೨) ಎಲ್ಲರಿಗಿಂತಲೂ ಹೆಚ್ಚು ಹಣವನ್ನು ತಂದವರಿಗೆ ಬಹುಮಾನವಿದೆ.

ಮೇಲೆ ಕೊಟ್ಟಿರುವ ನಾಲ್ಕು ಸೊಲ್ಲುಗಳಲ್ಲೂ ಹೋಲಿಕೆಯನ್ನು ಸೂಚಿಸುವ ರಚನೆಗಳಿದ್ದು, ಇವುಗಳಲ್ಲೆಲ್ಲ ಪರಿಚೆಪದವೊಂದು (ದೊಡ್ಡ, ಬೇಗ, ಎತ್ತರ ಇಲ್ಲವೇ ಹೆಚ್ಚು ಎಂಬುದು) ಖಡ್ಡಾಯವಾಗಿ ಬಂದಿದೆಯೆಂಬುದನ್ನು ಗಮನಿಸ ಬಹುದು. ಇಂತಹ ರಚನೆಗಳಲ್ಲಿ ಯಾವುದಾದರೂ ಒಂದು ವಿಶಿಷ್ಟವಾದ ಪರಿಚೆ ಧರ್ಮವನ್ನು ಹೋಲಿಕೆಗಾಗಿ ಸೂಚಿಸುವುದು ಅವಶ್ಯ. ಎತ್ತುಗೆಗಾಗಿ (೯)ನೇ ಸೊಲ್ಲಿನಲ್ಲಿ ಎರಡು ಮನೆಗಳನ್ನು ಅವುಗಳ ಗಾತ್ರಕ್ಕೆ ಸಂಬಂಧಿಸಿದಂತೆ ಹೋಲಿಸ ಲಾಗಿದೆ. ಈ ರೀತಿ ವಿಶಿಷ್ಟವಾದ ಒಂದು ಪರಿಚೆಧರ್ಮವನ್ನು ಸೂಚಿಸುವ ಕೆಲಸವನ್ನು ಪರಿಚೆಪದಗಳು ಮಾತ್ರ ನಡೆಸಬಲ್ಲುವು.

ಹೆಸರುಪದಗಳು ಒಂದಕ್ಕಿಂತ ಜಾಸ್ತಿ ಪರಿಚೆಧರ್ಮಗಳನ್ನು ಸೂಚಿಸುವು ವಾದ್ದರಿಂದ ಅವನ್ನು ಇಂತಹ ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಬಳಸಲು ಸಾಧ್ಯವಾಗದು. ಇದೇ ರೀತಿಯಲ್ಲಿ ‘ಸಕಪದಗಳು ಪರಿಚೆಧರ್ಮವನ್ನು ಸೂಚಿಸುವ ಬದಲು ಎಸಕೆಯನ್ನು ಸೂಚಿಸುವುವಾದ ಕಾರಣ ಅವನ್ನೂ ಇಂತಹ ರಚನೆಗಳಲ್ಲಿ ಬಳಸಲು ಸಾಧ್ಯವಾಗದು.

೨.೩.೪ ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳಲ್ಲಿ ಬಳಕೆ

ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳಿಗೆ ಆಧಾರವಾಗಿ ಪರಿಚೆಪದವೊಂದರ ಅವಶ್ಯಕತೆಯಿದೆಯೆಂಬುದು ಹೆಸರುಪದ ಮತ್ತು ‘ಸಕಪದಗಳನ್ನು ಪರಿಚೆಪದ ಗಳಿಂದ ಬೇರ್ಪಡಿಸುವ ಇನ್ನೊಂದು ಸೊಲ್ಲುಗಳ ರಚನೆಯ ನಿಯಮ. ಕನ್ನಡದಲ್ಲಿ ಎಷ್ಟು ಎಂಬ ಪದದ ಸಹಾಯದಿಂದ ಆಶ್ಚರ್ಯಸೂಚಕ ಸೊಲ್ಲುಗಳನ್ನು ರಚಿಸ ಬೇಕಾದಾಗಲೆಲ್ಲ ಅದರೊಂದಿಗೆ ಪರಿಚೆಪದವೊಂದನ್ನು ಬಳಸುವ ಅವಶ್ಯಕತೆಯಿದೆ. ಎತ್ತುಗೆಗಾಗಿ (೧೩-೧೫) ಸೊಲ್ಲುಗಳನ್ನು ಗಮನಿಸಬಹುದು.

  1. (೧೩) ಈ ಆನೆಯ ಕಿವಿ ಎಷ್ಟು ದೊಡ್ಡದು!
  2. (೧೪) ಅವಳು ಎಷ್ಟು ಜೋರಾಗಿ ಹಾಡುತ್ತಿದ್ದಾಳೆ!
  3. (೧೫) ಈ ಹುಡುಗಿಯದು ಎಷ್ಟು ಒಳ್ಳೇ ಪರಿಚೆ!

ಇದಲ್ಲದೆ, ಏನು, ಹೇಗೆ ಮತ್ತು ಎಂತಹ ಎಂಬ ಪದಗಳನ್ನು ಬಳಸಿಯೂ ಕನ್ನಡದಲ್ಲಿ ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳನ್ನು ರಚಿಸಲು ಸಾಧ್ಯವಿದೆ. ಇವುಗಳೊಂದಿಗೆ ಪರಿಚೆಪದವೊಂದನ್ನು ಬಳಸದಿರಲು ಸಾಧ್ಯವಿದೆಯಾದರೂ ಅಂತಹ ಒಂದು ಪದದ ಅರ್ಥ ಇವುಗಳಲ್ಲಿ ಧ್ವನಿತವಾಗದಿರುವುದಿಲ್ಲವೆಂಬು ದನ್ನು (೧೬-೧೮) ಸೊಲ್ಲುಗಳಲ್ಲಿ ಕಾಣಬಹುದು.

  1. (೧೬) ಅವನು ಹೇಗೆ ಓಡಿದ! (ಜೋರಾಗಿ ಓಡಿದ)
  2. (೧೭) ಅವರು ಎಂತಹ ಮನೆ ಕಟ್ಟಿಸಿದ್ದಾರೆ! (ದೊಡ್ಡ ಮನೆ)
  3. (೧೮) ಏನು ಸಾಮರ್ಥ್ಯ ಅವನದು! (ಹೆಚ್ಚಿನ ಸಾಮರ್ಥ್ಯ)

ಆಶ್ಚರ್ಯಕ್ಕೆ ಯಾವುದಾದರೂ ಒಂದು ಪರಿಚೆಧರ್ಮ ಮೂಲವಾಗಿರಬೇಕು ಮತ್ತು ಅಂತಹ ಪರಿಚೆಧರ್ಮವೊಂದನ್ನು ಪರಿಚೆಪದಗಳು ಮಾತ್ರವೇ ಪ್ರತ್ಯೇಕಿಸಿ ಸೂಚಿಸ ಬಲ್ಲುವು ಎಂಬುದೇ ಈ ನಿರ್ಬಂಧಕ್ಕೆ ಕಾರಣವಿರಬೇಕು.

೨.೩.೫ ಮಾರ್ದನಿಸುವ ಪದಗಳ ಬಳಕೆ

ಪದಗಳೊಂದಿಗೆ ಅವುಗಳ ಮಾರ್ದನಿಯಂತೆ ಕಾಣಿಸುವ ಇನ್ನೊಂದು ಪದವನ್ನು ಬಳಸುವ ಕ್ರಮ ಕನ್ನಡದಲ್ಲಿದೆ. ಎತ್ತುಗೆಗಾಗಿ, ಮನೆ-ಗಿನೆ, ಮಾರಾಟ-ಗೀರಾಟ, ಕಾಡು-ಗೀಡು, ಕುರಿ-ಗಿರಿ, ಎಮ್ಮೆ-ಗಿಮ್ಮೆ, ಕೋಲು-ಗೀಲು ಮೊದಲಾದ ಬಳಕೆಗಳಲ್ಲಿ ಇಂತಹ ಮಾರ್ದನಿಸುವ ಪದಗಳನ್ನು ಕಾಣಬಹುದು. ಪದದ ಮೊದಲನೆಯ ಅಕ್ಷರಕ್ಕೆ ಬದಲಾಗಿ ಅದು ಗಿಡ್ಡಸ್ವರದೊಂದಿಗಿದ್ದರೆ ಗಿ ಎಂಬ ಅಕ್ಷರವನ್ನೂ ಮತ್ತು ಉದ್ದಸ್ವರದೊಂದಿಗಿದ್ದರೆ ಗೀ ಎಂಬ ಅಕ್ಷರವನ್ನೂ ಬಳಸಿ ಈ ಮಾರ್ದನಿಸುವ ಪದಗಳನ್ನು ರಚಿಸಬಹುದು.

ಒಂದು ಪದದೊಂದಿಗೆ ಇಂತಹ ಮಾರ್ದನಿಸುವ ಪದವನ್ನು ಬಳಸಿದಾಗ, ಆ ಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ವಿಷಯದಲ್ಲಿ ಅನಿಶ್ಚಿತತೆ ಇಲ್ಲವೇ ಅಸ್ಪಷ್ಟತೆ ಸೂಚಿತವಾಗುತ್ತದೆ. ಎತ್ತುಗೆಗಾಗಿ ಈ (೧೯-೨೧) ಸೊಲ್ಲುಗಳಲ್ಲಿ ಬಂದಿರುವ ಇಂತಹ ಮಾರ್ದನಿಸುವ ಪದಗಳ ಅರ್ಥವನ್ನು ಪರಿ ಶೀಲಿಸಬಹುದು.

(೧೯) ಪೇಟೆಗೆ ಹೋಗಲು ಕಾರುಗೀರು ಇದ್ದರೆ ಚೆನ್ನಾಗಿರುತ್ತದೆ.

(೨೦) ಆ ಹಾದಿಯಲ್ಲಿ ಹಾವುಗೀವು ಇರಬಹುದು.

  1. (೨೧) ಅವರು ಮನೆಗಿನ್ ಎಲ್ಲಾ ಕಳೆದುಕೊಂಡು ಕಷ್ಟದಲ್ಲಿದ್ದಾರೆ.
  2. (೧೯)ನೇ ಸೊಲ್ಲಿನಲ್ಲಿ ಕಾರು ಎಂಬುದನ್ನು ಬಳಸುವ ಬದಲು ಕಾರು ಗೀರು
  3. ಎಂಬುದನ್ನು ಬಳಸಿದ್ದರಿಂದಾಗಿ, ಅದು ಗುರುತಿಸುವ ವಸ್ತುವಿನ ರೂಪ ಅಸ್ಪಷ್ಟ
  4. ವಾಗಿದೆಯೆಂದು ಸೂಚಿತವಾಗುತ್ತದೆ. ಕಾರು, ಬೈಕ್, ಸ್ಕೂಟರ್, ಸೈಕಲ್,
  5. ಇತ್ಯಾದಿಗಳಲ್ಲಿ ಯಾವುದು ಇದ್ದರೂ ನಡೆದು ಹೋಗುವುದಕ್ಕಿಂತ ಇಲ್ಲವೇ
  6. ಬಸ್ಸಿಗೆ ಕಾಯುವುದಕ್ಕಿಂತ ಲೇಸು ಎಂಬರ್ಥ ಈ ಸೊಲ್ಲಿಗೆ ಬರುತ್ತದೆ.
  7. ಕನ್ನಡದಲ್ಲಿ ಇಂತಹ ಮಾರ್ದನಿಸುವ ಪದಗಳನ್ನು ಹೆಸರುಪದ ಮತ್ತು ‘ಸಕ
  8. ಪದಗಳೊಂದಿಗೆ (ಉದಾ: ನೋಡಿ-ಗೀಡಿ, ತಿಂದರೆ-ನಿಂದರೆ, ಹೊಡೆಯಲು
  9. ಗಿಡಯಲು, ಇತ್ಯಾದಿ) ಬಳಸಲು ಸಾಧ್ಯವಿದೆಯಲ್ಲದೆ ಪರಿಚೆಪದಗಳೊಂದಿಗೆ
  10. ಬಳಸಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಪರಿಚೆಪದಗಳು ಒಂದು
  11. ವಿಶಿಷ್ಟವಾದ ಪರಿಚೆಧರ್ಮವನ್ನು ಸೂಚಿಸುವುದರ ಮೂಲಕ ಅವುಗಳ ಅನಂತರ
  12. ಬರುವ ಹೆಸರುಪದದ ಅರ್ಥವನ್ನು ಸಂಕುಚಿತಗೊಳಿಸಬೇಕಾಗುತ್ತದೆ ಇಲ್ಲವೇ
  13. ಬೇರೆ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ. ಅವುಗಳ ಈ ಕೆಲಸಕ್ಕೆ ಅವು
  14. ಸೂಚಿಸುವ ವಿಷಿಷ್ಠವಾದ ಪರಿಚೆಧರ್ಮ ಅತ್ಯಂತ ಪ್ರಾಮುಖ್ಯವಾದುದಾದ
  15. ಕಾರಣ, ಅದನ್ನು ಅಸ್ಪಷ್ಟವಾಗಿ ಮಾಡಬಲ್ಲ ಮಾರ್ದನಿಸುವ ಪದ ಅದರೊಂದಿಗೆ
  16. ಬರ ಲಾರದು.
  17. ೩.೬ ಬಳಕೆಯಲ್ಲಿ ಸ್ವಾತಂತ್ರ್ಯ
  18. ಹೆಸರುಪದಗಳಿಗೂ ಪರಿಚೆಪದಗಳಿಗೂ ನಡುವೆ ಕಾಣಿಸುವ ಇನ್ನೊಂದು
  19. ಮುಕ್ಯವಾದ ವ್ಯತ್ಯಾಸವೇನೆಂದರೆ, ಹೆಸರುಪದಗಳಿಗೆ ಸೊಲ್ಲಿನಲ್ಲಿ ಹೆಚ್ಚಿನ
  20. ಸ್ವಾತಂತ್ರ್ಯವಿದೆ, ಆದರೆ ಪರಿಚೆಪದಗಳಿಗೆ ಇಂತಹ ಸ್ವಾತಂತ್ರ್ಯವಿಲ್ಲ. ಅವು
  21. ಯಾವಾಗಲೂ ಒಂದು ಹೆಸರುಪದದೊಂದಿಗೆ ಹೆಸರುಪದಕಂ’ದ ಅಂಗವಾಗಿ
  22. ಬರಬೇಕಾಗುತ್ತದೆ. ಈ ರೀತಿ ಈ ಎರಡು ಪದವರ್ಗಗಳ ನಡುವೆ ಕನ್ನಡದಲ್ಲಿ
  23. ಅವುಗಳ ಸ್ವಾತಂತ್ರ್ಯದ ಮಟ್ಟಿಗಿರುವ ವ್ಯತ್ಯಾಸವನ್ನು ಕೆಳಗಿನ ವ್ಯಾಕರಣ
  24. ನಿಯಮಗಳು ಸ್ಪಷ್ಟಪಡಿಸುತ್ತವೆ.
  25. (೧) ಕೆಲವು ಪ್ರತ್ಯಯಗಳ ಬಳಕೆ
  26. ಒಂದು ಪದವನ್ನು ಒತ್ತಿ ಹೇಳಲು ಬಳಸುವ ಏ ಎಂಬ ಪ್ರತ್ಯಯ, ‘ಮತ್ತು’
  27. ಎಂಬ ಅರ್ಥವನ್ನು ಕೊಡುವ ಊ ಎಂಬ ಪ್ರತ್ಯಯ, ಮತ್ತು ‘ಆದರೆ’ ಎಂಬ
  28. ಅರ್ಥವನ್ನು ಕೊಡುವ ಓ ಎಂಬ ಪ್ರತ್ಯಯ ಈ ಮೂರನ್ನೂ ಕನ್ನಡ
  29. ಸೊಲ್ಲುಗಳಲ್ಲಿ ಬರುವ ಹೆಸರುಪದಗಳೊಂದಿಗೆ (ಇಲ್ಲವೇ

ಹೆಸರುಪದಕಂಗಿಗಳೊಂದಿಗೆ) ಸೇರಿಸಿ ಹೇಳಲು ಸಾಧ್ಯವಿದೆ, ಆದರೆ ಹೆಸರುಪದಕಂಗಿಗಳಲ್ಲಿ ಬರುವ ಪರಿಚೆಪದ ಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿಲ್ಲ.

  1. (೨೨) ರಾಜು ಹರಿಯನ್ನು ಮನೆಗೆ ಕರೆಯಲಿಲ್ಲ.
  2. (೨೩) ರಾಜು ಹರಿಯನ್ನೇ ಮನೆಗೆ ಕರೆಯಲಿಲ್ಲ.
  3. (೨೪) ರಾಜು ಹರಿಯನ್ನೂ ಮನೆಗೆ ಕರೆಯಲಿಲ್ಲ.
  4. (೨೫) ರಾಜು ಹರಿಯನ್ನೋ ರವಿಯನ್ನೋ ಮನೆಗೆ ಕರೆದಾನು.
  5. (೨೬) ರಾಜು ದೊಡ್ಡ ಕೋಲನ್ನೂ ಮುರಿದು ಹಾಕಿದ.

(೨೬)ನೇ ಸೊಲ್ಲಿನಲ್ಲಿ ದೊಡ್ಡ ಕೋಲನ್ನು ಎಂಬ ಪದಕಂಗೊಂದಿಗೆ ಊ ಎಂಬ ಪ್ರತ್ಯಯವನ್ನು ಸೇರಿಸಿ ಹೇಳಲಾಗಿದೆ. ಆದರೆ ಈ ಪ್ರತ್ಯಯವನ್ನು ದೊಡ್ಡ ಎಂಬ ಪರಿಚೆಪದದೊಂದಿಗೆ ಸೇರಿಸಿ ಹೇಳಲು ಸಾಧ್ಯವಾಗದು. ಇತರ ಎರಡು ಪ್ರತ್ಯಯಗಳೂ ಹೀಗೆಯೇ.

ಕನ್ನಡ ಸೊಲ್ಲುಗಳಲ್ಲಿ ಕಾಣಿಸುವ ಈ ನಿಯಮಕ್ಕೆ ಕಾರಣವೇನೆಂದರೆ, ಪರಿಚೆಪದಗಳು ಹೆಸರುಪದಗಳೊಂದಿಗೆ ಅವಕ್ಕೆ ಸಹಾಯಕಗಳಾಗಿ ಬರುತ್ತವೆ ಮತ್ತು ಈ ಕಾರಣಕ್ಕಾಗಿ ಅವಕ್ಕೆ ಸೊಲ್ಲಿನಲ್ಲಿ ಸ್ವತಂತ್ರವಾದ ಅಸ್ತಿತ್ವವಿಲ್ಲ. ಮೇಲೆ ಕೊಟ್ಟ ಮೂರು ಪ್ರತ್ಯಯಗಳು ಅವನ್ನು ಹೆಸರುಪದಗಳಿಂದ ಬೇರ್ಪಡಿಸಿ ಸ್ವತಂತ್ರ ಪದಗಳನ್ನಾಗಿ ಮಾಡಬಲ್ಲುವಾದ ಕಾರಣ, ಮತ್ತು ಹೀಗೆ ಮಾಡುವುದರಿಂದ ಅವುಗಳ (ಎಂದರೆ ಪರಿಚೆಪದಗಳ) ಮುಖ್ಯ ಕೆಲಸಕ್ಕೆ ಅಡ್ಡಿಯುಂಟಾಗುವುದಾದ ಕಾರಣ ಅವುಗಳೊಂದಿಗೆ ಈ ಪ್ರತ್ಯಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

(೨) ಸೊಲ್ಲಿ ನದ ಮೊದಲ ಸ್ಥಾನಕ್ಕೆ ತರುವುದು

ಸೊಲ್ಲಿನ ಬೇರೆ ಬೇರೆ ಭಾಗಗಳಲ್ಲಿ ಬರುವ ಹೆಸರುಪದಗಳನ್ನು (ಇಲ್ಲವೇ ಹೆಸರುಪದಕಂಗೆಗಳನ್ನು) ಸೊಲ್ಲಿನ ಮೊದಲ ಸ್ಥಾನಕ್ಕೆ ತಂದಿರಿಸಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಆ ಹೆಸರುಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದುವಕ್ಕೆ ಸೊಲ್ಲಿನ ಮುಖ್ಯ ವ್ಯಕ್ತಿ ಇಲ್ಲವೇ ವಸ್ತು ಎಂಬ ಅರ್ಥ ಲಭಿಸುತ್ತದೆ. ಎತ್ತುಗೆಗಾಗಿ (೨೭-೨೯) ಸೊಲ್ಲುಗಳನ್ನು ಗಮನಿಸಬಹುದು.

(೨೭) ರಾಜು ಮದುಮಗನಿಗೆ ಕೆಂಪು ಹೂ ಕೊಟ್ಟ.

(೨೮) ಮದುಮಗನಿಗೆ ರಾಜು ಕೆಂಪು ಹೂ ಕೊಟ್ಟ.

  1. (೨೯) ಕೆಂಪು ಹೂವನ್ನು ರಾಜು ಮದುಮಗನಿಗೆ ಕೊಟ್ಟ.
  2. (೨೭)ನೇ ಸೊಲ್ಲಿನಲ್ಲಿ ರಾಜು ಎಂಬ ಹೆಸರುಪದವೂ, (೨೮)ನೇ ಸೊಲ್ಲಿನಲ್ಲಿ
  3. ಮದುಮಗ ಎಂಬ ಹೆಸರುಪದವೂ ಮತ್ತು (೨೯)ನೇ ಸೊಲ್ಲಿನಲ್ಲಿ ಕೆಂಪು ಹೂ
  4. ಎಂಬ ಹೆಸರುಪದಕಂಗೆ’ವೂ ಮೊದಲನೆಯ ಸ್ಥಾನದಲ್ಲಿ ಬಂದಿವೆ.
  5. ಆದರೆ ಈ ರೀತಿ ಸೊಲ್ಲಿನಲ್ಲಿರುವ ಪರಿಚೆಪದಗಳನ್ನು ಮೊದಲನೆಯ
  6. ಸ್ಥಾನಕ್ಕೆ ತಂದಿರಿಸಲು ಸಾಧ್ಯವಾಗದು. ಅವು ಯಾವಾಗಲೂ ಅವಕ್ಕೆ ಸಂಬಂಧಿಸಿದ
  7. ಹೆಸರು ಪದದೊಂದಿಗೆ ಮಾತ್ರವೇ ಬರಬಲ್ಲುವು. ಎತ್ತುಗೆಗಾಗಿ (೨೯)ನೇ
  8. ಸೊಲ್ಲಿನಲ್ಲಿ ಕೆಂಪು ಎಂಬ ಪರಿಚೆಪದ ಹೂ ಎಂಬ ಹೆಸರುಪದದೊಂದಿಗೆ
  9. ಮೊದಲನೆಯ ಸ್ಥಾನಕ್ಕೆ ಬಂದಿದೆ. ಕೆಂಪು ಎಂಬುದನ್ನು ಮಾತ್ರವೇ ಈ ರೀತಿ
  10. ಮೊದಲನೆಯ ಸ್ಥಾನಕ್ಕೆ ತರಲು ಸಾಧ್ಯವಾಗದು ಎಂಬುದನ್ನು ಕನ್ನಡದ ವ್ಯಾಕರಣ
  11. ನಿಯಮಕ್ಕೆ ಒಳಪಡದ (೩೦)ನೇ ಸೊಲ್ಲಿನಿಂದ ತಿಳಿಯಬಹುದು.
  12. (೩೦) *ಕೆಂಪು ರಾಜು ಮದುಮಗನಿಗೆ ಹೂ ಕೊಟ್ಟ.
  13. (೩) ಸೊಲ್ಲು ಮುಗಿದ ಮೇಲೆ ಸೂಚಿಸುವುದು
  14. ಹೆಸರುಪದವೊಂದನ್ನು (ಇಲ್ಲವೇ ಹೆಸರುಪದಕಂಗಿ’ವೊಂದನ್ನು) ಸೊಲ್ಲಿನಲ್ಲಿ
  15. ಸೂಚಿಸದೆ ಸೊಲ್ಲಿನ ಅನಂತರ ಸೂಚಿಸಲೂ ಸಾಧ್ಯವಿದೆ. ಆದರೆ
  16. ಪರಿಚೆಪದವನ್ನು ಈ ರೀತಿ ಸೊಲ್ಲಿನ ಹೊರಗೆ ನಿಲ್ಲಿಸಿ ಹೇಳಲು ಸಾಧ್ಯವಾಗದು
  17. ಎಂಬುದನ್ನು (೩೪)ನೇ ಸೊಲ್ಲು ವ್ಯಾಕರಣ ಸಮ್ಮತವಲ್ಲ ಎಂಬುದರಿಂದ
  18. ತಿಳಿಯಬಹುದು.
  19. (೩೧) ಮದುಮಗನಿಗೆ ಕೆಂಪು ಹೂ ಕೊಟ್ಟಿದ್ದ, ರಾಜು.
  20. (೩೨) ರಾಜು ಕೆಂಪು ಹೂ ಕೊಟ್ಟಿದ್ದ, ಮದುಮಗನಿಗೆ.
  21. (೩೩) ರಾಜು ಮದುಮಗನಿಗೆ ಕೊಟ್ಟಿದ್ದ, ಕೆಂಪು ಹೂ.
  22. (೩೪) *ರಾಜು ಮದುಮಗನಿಗೆ ಹೂ ಕೊಟ್ಟಿದ್ದ, ಕೆಂಪು.
  23. (೪) ಸೊಲ್ಲಿನ ಎದುರು ನಿಲ್ಲಿಸುವುದು
  24. ಹೆಸರುಪದವೊಂದನ್ನು ಸೊಲ್ಲಿನಿಂದ ಬೇರ್ಪಡಿಸಿ ಅದಕ್ಕೆದುರಾಗಿ ನಿಲ್ಲಿಸಲು
  25. ಕನ್ನಡದಲ್ಲೊಂದು ವಿಶಿಷ್ಟವಾದ ಸೊಲ್ಲುರೂಪದ ಬಳಕೆಯಿದೆ. ಇದಕ್ಕಾಗಿ
  26. ಸೊಲ್ಲಿನಲ್ಲಿ ಬರುವ ‘ಸಕಪದವನ್ನು ಅದರ ವಿಶೇಷಣ ರೂಪಕ್ಕೆ ಬದಲಾಯಿಸ

ಬೇಕಾಗುತ್ತದೆ. ಆದರೆ, ಪರಿಚೆಪದಗಳನ್ನು ಈ ರೀತಿ ಅವು ಬರುವ ಸೊಲ್ಲಿನ ಎದುರು ನಿಲ್ಲಿಸಲು ಸಾಧ್ಯವಾಗದು.

  1. (೩೫) ಮದುಮಗನಿಗೆ ಕೆಂಪು ಹೂ ಕೊಟ್ಟದ್ದು ರಾಜು.
  2. (೩೬) ರಾಜು ಕೆಂಪು ಹೂ ಕೊಟ್ಟದ್ದು ಮದುಮಗನಿಗೆ.
  3. (೩೭) ರಾಜು ಮದುಮಗನಿಗೆ ಕೊಟ್ಟದ್ದು ಕೆಂಪು ಹೂ.
  4. (೩೮) *ರಾಜು ಮದು ಮಗನಿಗೆ ಹೂ ಕೊಟ್ಟದ್ದು ಕೆಂಪು.

ಹೆಸರುಪದ ಮತ್ತು ಪರಿಚೆಪದಗಳ ನಡುವೆ ಕಾಣಿಸುವ ಈ ಎಲ್ಲಾ ವ್ಯತ್ಯಾಸಗಳೂ ಸೊಲ್ಲಿನಲ್ಲಿ ಹೆಸರುಪದಗಳಿಗೆ ಸ್ವತಂತ್ರವಾದ ಸ್ಥಾನವಿದೆ, ಆದರೆ ಪರಿಚೆಪದಗಳಿಗೆ ಅಂತಹ ಸ್ವತಂತ್ರವಾದ ಸ್ಥಾನವಿಲ್ಲ, ಅವು ಹೆಸರುಪದಗಳಿಗೆ ಸಹಾಯಕಗಳಾಗಿ ಅವುಗಳ ಅಧೀನದಲ್ಲಿ ಬರುವವುಗಳು ಎಂಬುದರಿಂದ ಮೂಡಿಬಂದಿವೆ ಎಂಬುದ ನ್ನಿಲ್ಲಿ ಗಮನಿಸಬಹುದು.

೨.೩.೭ ಸ್ಥಾಯಿ ಮತ್ತು ಅಸ್ಥಾಯಿ

ಹೆಸರುಪದ ಮತ್ತು ‘ಸಕಪದಗಳ ನಡುವೆ ಕನ್ನಡದಲ್ಲಿ ‘ಸ್ಥಾಯಿ’ ಮತ್ತು ‘ಅಸ್ಥಾಯಿ’ ಎಂಬ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವನ್ನು ಕಾಣಲು ಸಾಧ್ಯವಿದೆ. ಹೆಸರುಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಬದಲಾಗದೆ ಉಳಿಯಬಲ್ಲುವು ಮತ್ತು ಬದಲಾದರೂ ಅವುಗಳ ಮೂಲರೂಪ ಹಾಗೆಯೇ ಉಳಿಯಬಲ್ಲುದು. ಹಾಗಾಗಿ ಅವನ್ನು ಸ್ಥಾಯಿಗಳೆಂದು ಹೇಳಲು ಸಾಧ್ಯವಿದೆ. ಆದರೆ, ‘ಸಕಪದಗಳು ನಿರ್ದೇಶಿಸುವ ಎಸಕಗಳು ಸಾಮಾನ್ಯವಾಗಿ ನಡೆದು ಹೋಗುವಂತಹವುಗಳಾದ ಕಾರಣ ಅಸ್ಥಾಯಿಗಳಾಗಿರುತ್ತವೆ.

ಈ ವ್ಯತ್ಯಾಸಕ್ಕೆ ಅನುಸಾರವಾಗಿ, ಹೆಸರುಪದಗಳೊಂದಿಗೆ ಬರುವ ಪರಿಚೆಪದ ಗಳು ಸಾಮಾನ್ಯವಾಗಿ ಸ್ಥಾಯಿ ಪರಿಚೆಧರ್ಮಗಳನ್ನು ಸೂಚಿಸುತ್ತಿರುತ್ತವೆ ಮತ್ತು ‘ಸಕಪದಗಳೊಂದಿಗೆ ಬರುವವುಗಳು ಸಾಮಾನ್ಯವಾಗಿ ಅಸ್ಥಾಯಿ ಪರಿಚೆಧರ್ಮ ಗಳನ್ನು ಸೂಚಿಸುತ್ತಿರುತ್ತವೆ.

‘ಸಕಪದಗಳು ನಿರ್ದೇಶಿಸುವ ಎಸಕಗಳೆಲ್ಲ ನಡೆದು ಹೋಗುವಂತಹವು ಗಳು. ಅವುಗಳಲ್ಲಿ ಒಡೆ, ಬಿಡು, ಬಿರಿ, ಮುರಿ ಮೊದಲಾದ ಕೆಲವು ‘ಸಕಪದಗಳು ನಿರ್ದೇಶಿಸುವ ಎಸಕಗಳು ಕ್ಷಣಿಕ ಎಸಕಗಳಾದರೆ, ಓದು, ಓಡು, ಬರೆ, ಇಳಿ ಮೊದಲಾದ ಬೇರೆ ಕೆಲವು ‘ಸಕಪದಗಳು ನಿರ್ದೇಶಿಸುವ ಎಸಕಗಳು ಸ್ವಲ್ಪ ಕಾಲ ನಡೆಯಬಲ್ಲಂತಹವುಗಳು. ಆದರೆ ಈ ಎಲ್ಲಾ ಎಸಕ ಗಳೂ

ನಡೆದುಹೋಗುವಂತಹವುಗಳೇ ಎಂಬುದನ್ನು ಸೊಲ್ಲಿನಲ್ಲಿ ಅವನ್ನು ಬಳಸ ಬೇಕಾದಾಗಲೆಲ್ಲ ಸಾಮಾನ್ಯವಾಗಿ ಅವುಗಳೊಂದಿಗೆ ಕಾಲವಾಚಕ ಪ್ರತ್ಯಯಗಳನ್ನು ಬಳಸಬೇಕಾಗುತ್ತದೆ ಎಂಬುದರಿಂದ ತಿಳಿಯಬಹುದು. ಕನ್ನಡದಲ್ಲಿ ಸ್ಥಾಯಿ ಎನ್ನಿಸ ಬಹುದಾದ ‘ಸಕಪದಗಳು ಬಹಳ ಅಪರೂಪ. ಇರು ಎಂಬುದೊಂದು ಇಂತಹ ಸ್ಥಾಯಿ ‘ಸಕಪದವೆಂದು ಹೇಳಬಹುದು.

ಇದಲ್ಲದೆ, ಕನ್ನಡದಲ್ಲಿ ‘ಸಕಪದವೊಂದನ್ನು ಎರಡು ಮೂರು ಬೇರೆ ಬೇರೆ ಸೊಲ್ಲುಗಳಲ್ಲಿ ಪ್ರಯೋಗಿಸಿದೆಯಾದರೆ, ಆ ‘ಸಕಪದವು ನಿರ್ದೇಶಿಸುವ ಎಸಕ ಎರಡು ಮೂರು ಬಾರಿ ನಡೆದಿದೆಯೆಂಬ ಅರ್ಥ ಬರುವುದಲ್ಲದೆ ಒಂದು ಬಾರಿ ನಡೆದ ಎಸಕೆಯನ್ನು ಅದು ಮೂರು ಬಾರಿ ನಿರ್ದೇಶಿಸುವಂತಹ ಅರ್ಥ ಬರುವುದಿಲ್ಲ. ಎತ್ತುಗೆಗಾಗಿ, (೩೯)ರಲ್ಲಿ ಬಂದಿರುವ ಸೊಲ್ಲುಗಳನ್ನು ಗಮನಿಸ ಬಹುದು.

  1. (೩೯) ರಾಜು ಮನೆಗೆ ಓಡಿದ. ಅಲ್ಲಿಂದ ಅರ್ಧ ಗಂಟೆ ಬಿಟ್ಟು ಶಾಲೆಗೆ
  2. ಓಡಿದ.
  3. (೩೯)ರಲ್ಲಿ ಬಂದ ಓಡು ಎಂಬ ‘ಸಕಪದದ ಎರಡು ಪ್ರಯೋಗಗಳು ಎರಡು
  4. ಬೇರೆ ಬೇರೆ ಎಸಕಗಳನ್ನು ನಿರ್ದೇಶಿಸುತ್ತಿವೆಯೆಂಬುದನ್ನು ಗಮನಿಸಬಹುದು.
  5. ಇದಕ್ಕೆ ವ್ಯತಿರಿಕ್ತವಾಗಿ, ಹೆಸರುಪದಗಳು ಗುರುತಿಸುವ ವ್ಯಕ್ತಿ, ವಸ್ತು
  6. ಮೊದಲಾದವುಗಳು ಸ್ಥಾಯಿಗಳಾಗಿದ್ದು, ಅವುಗಳಲ್ಲಿ ಒಂದನ್ನೇ ಹಲವಾರು ಬಾರಿ
  7. ಬೇರೆ ಬೇರೆ ಸೊಲ್ಲುಗಳಲ್ಲಿ ಪುನ: ಪುನ: ಗುರುತಿಸಿ ಹೇಳಲು ಸಾಧ್ಯವಿದೆ.
  8. (೪೦) ರಾಜು ಕಳೆದ ವಾರ ಒಂದು ಮದುವೆಗೆ ಹೋಗಿದ್ದ. ಅಲ್ಲಿ
  9. ರಾಜುವಿನ ತಂಗಿಯ ಕಚೇರಿ ಇತ್ತು.
  10. (೪೦)ರಲ್ಲಿ ಬಂದ ರಾಜು ಎಂಬ ಪದದ ಎರಡೂ ಪ್ರಯೋಗಗಳೂ ಒಬ್ಬನೇ
  11. ವ್ಯಕ್ತಿಯನ್ನು ಗುರುತಿಸುತ್ತವೆ ಎಂಬುದನ್ನು ಗಮನಿಸಬಹುದು.
  12. ಹೆಸರುಪದವೊಂದು ಈ ರೀತಿ ಹಲವಾರು ಬಾರಿ ಸೊಲ್ಲುಗಳಲ್ಲಿ ಬಂದಾಗ
  13. ಅದು ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆಯೇ ಅಥವಾ ಬೇರೆ
  14. ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದೆಯೇ ಎಂಬುದನ್ನು ಸೂಚಿಸು
  15. ವುದಕ್ಕಾಗಿ ಆ, ಈ ಮೊದಲಾದ ನಿರ್ದೇಶಕ ಪದಗಳ ಇಲ್ಲವೇ ಸರ್ವಹೆಸರುಗಳ
  16. ಬಳಕೆಯಾಗುತ್ತದೆ.

‘ಸಕಪದಗಳೊಂದಿಗೆ ನೇರವಾಗಿ ಬರಬಲ್ಲ ಸಮಯವನ್ನು ಸೂಚಿಸುವ ಪ್ರತ್ಯಯಗಳು ಹೆಸರುಪದಗಳೊಂದಿಗೆ ಬರಲಾರವು ಎಂಬ ನಿಯಮಕ್ಕೂ (೨.೩.೧ ನೋಡಿ) ಹೆಸರುಪದ ಮತ್ತು ‘ಸಕಪದಗಳ ನಡುವಿರುವ ಈ ವ್ಯತ್ಯಾಸವೇ ಕಾರಣವಿರಬೇಕು.

Eke →

೨.೪ ಪದವರ್ಗಗಳ ಸದಸ್ಯತ್ವ

ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಖ್ಯ ಪದವರ್ಗ ಗಳು ಕನ್ನಡದಲ್ಲಿವೆಯೆಂಬುದನ್ನು ಈ ಮೂರು ರೀತಿಯ ಪದಗಳ ನಡುವೆ ಕನ್ನಡ ಸೊಲ್ಲುಗಳಲ್ಲಿ ಕಾಣಿಸುವ ಮೇಲೆ ವಿವರಿಸಿದಂತಹ ವ್ಯತ್ಯಾಸಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ. ಹೆಸರುಪದ ಮತ್ತು ಪರಿಚೆಪದಗಳ ನಡುವೆ ಇಂತಹ ವ್ಯತ್ಯಾಸಗಳಾವುವೂ ಸಂಸ್ಕೃತದಲ್ಲಿ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಆ ಭಾಷೆಯಲ್ಲಿ ಈ ರೀತಿ ಎರಡು ಬೇರೆ ಬೇರೆ ಪದವರ್ಗಗಳಿರುವ ಬದಲು ಹೆಸರುಪದವೆಂಬ ಒಂದೇ ಪದವರ್ಗವಿದೆಯೆಂದು ಹೇಳುವ ಅವಶ್ಯಕತೆಯಿದೆ. ಕನ್ನಡ ಮತ್ತು ಸಂಸ್ಕೃತ ನುಡಿಗಳ ನಡುವಿರುವ ಈ ಒಂದು ಪ್ರಾಮುಖ್ಯವಾದ ವ್ಯತ್ಯಾಸವೇ ಅವುಗಳ ಪದರಚನೆಯಲ್ಲಿ ಕಾಣಿಸುವ ಹಲವಾರು ವ್ಯತ್ಯಾಸಗಳಿಗೆ ಮೂಲ ಕಾರಣವೆಂಬುದನ್ನು ಮುಂದೆ ನೋಡಲಿರುವೆವು.

ಕನ್ನಡ ಪದಗಳನ್ನೆಲ್ಲ ಈ ರೀತಿ ಮೂರು ಮುಖ್ಯ ಪದವರ್ಗಗಳಲ್ಲಿ ವಿಂಗಡಿಸ ಹೊರಟಾಗ ಯಾವ ಯಾವ ಪದಗಳನ್ನು ಯಾವ ಯಾವ ವರ್ಗಗಳಲ್ಲಿ ಸೇರಿಸಬೇಕು ಎಂಬ ವಿಷಯದಲ್ಲಿ ಸಂದೇಹವುಂಟಾಗಲು ಸಾಧ್ಯವಿದೆ, ಇದಕ್ಕೆ ಒಂದು ಕಾರಣವೇನೆಂದರೆ, ಕೆಲವು ಪದಗಳ ಬಳಕೆ ಒಂದು ಪದವರ್ಗಕ್ಕೆ ಮಾತ್ರವೇ ಸೀಮಿತವಾಗಿರದೆ ಎರಡು ಇಲ್ಲವೇ ಮೂರು ಪದವರ್ಗಗಳಿಗೂ ವಿಸ್ತರಿಸಿರಲು ಸಾಧ್ಯವಿದೆ.

ಎತ್ತುಗೆಗಾಗಿ, ಉದ್ದ ಎಂಬ ಪದ ಒಂದು ಸೊಲ್ಲಿನಲ್ಲಿ ಪರಿಚೆಪದ ವಾಗಿಯೂ ಬರಬಲ್ಲುದು (ಉದಾ: ಉದ್ದ ಗೋಡೆ), ಮತ್ತು ಹೆಸರುಪದ ವಾಗಿಯೂ ಬರಬಲ್ಲುದು (ಉದಾ: ಗೋಡೆಯ ಉದ್ದ); ಹಾಡು ಎಂಬ ಪದ ಹೆಸರುಪದವಾಗಿಯೂ ಬರಬಲ್ಲುದು (ಉದಾ: ಅವನೊಂದು ಹಾಡನ್ನು ಬರೆದ), ‘ಸಕಪದವಾಗಿಯೂ ಬರಬಲ್ಲುದು (ಉದಾ: ಅವನೊಂದು ಕವಿತೆ ಯನ್ನು ಹಾಡಿದ).

ಇನ್ನೊಂದು ಕಾರಣವೇನೆಂದರೆ, ಕೆಲವು ಪದಗಳು ಕೆಲವು ವಿಷಯಗಳಲ್ಲಿ ಒಂದು ಪದವರ್ಗಕ್ಕೆ ಸೇರುವಂತಿದ್ದರೆ ಬೇರೆ ಕೆಲವು ವಿಷಯಗಳಲ್ಲಿ ಇನ್ನೊಂದು ಪದವರ್ಗಕ್ಕೆ ಸೇರುವಂತಿರುತ್ತವೆ. ಎತ್ತುಗೆಗಾಗಿ, ನಾಲ್ಕು ಎಂಬ ಸಂಖ್ಯೆ ಯನ್ನು ಸೂಚಿಸುವ ಪದ ಕೆಲವು ವಿಷಯಗಳಲ್ಲಿ ಪರಿಚೆಪದಗಳ ಹಾಗಿದೆ (ಉದಾ:

ನಾಲ್ಕು ಪುಸ್ತಕ ಎಂಬಲ್ಲಿ ಅದು ನೇರವಾಗಿ (ಎಂದರೆ, ಸಂಬಂಧವನ್ನು ಸೂಚಿಸುವ ಅ ಎಂಬ ಪ್ರತ್ಯಯದ ಸಹಾಯವಿಲ್ಲದೆ) ಹೆಸರುಪದದ ಮುಂದೆ ಬಂದಿದೆ). ಆದರೆ ಬೇರೆ ಕೆಲವು ವಿಷಯಗಳಲ್ಲಿ ಅದು ಹೆಸರುಪದಗಳ ಹಾಗಿದೆ. (ಉದಾ: ನಾಲ್ಕಕ್ಕೆ, ನಾಲ್ಕರಿಂದ, ನಾಲ್ಕನ್ನು ಇತ್ಯಾದಿ ವಿಭಕ್ತಿ ರೂಪಗಳು ಅದಕ್ಕಿವೆ). ಹಾಗಾಗಿ, ಇಂತಹ ಪದಗಳನ್ನು ಯಾವ ಪದವರ್ಗದಲ್ಲಿ ಸೇರಿಸಿ ಕೊಳ್ಳಬೇಕು ಎಂಬ ವಿಷಯದಲ್ಲಿ ಸಂದೇಹವುಂಟಾಗಲು ಸಾಧ್ಯವಿದೆ.

ಆದರೆ ಇಂತಹ ಪರಿಸ್ಥಿತಿಯಿರುವುದು ನುಡಿಗಳಲ್ಲಿ ಬರುವ ಪದಗಳ ಸ್ವಾಭಾವಿಕವಾದ ಪರಿಚೆಧರ್ಮವೇ ಆಗಿದೆ. ಪದವರ್ಗವೊಂದರಲ್ಲಿ ಸೇರಿಕೊಳ್ಳುವ ಪದಗಳಲ್ಲಿ ಎಲ್ಲವೂ ಒಂದೇ ರೀತಿಯಾಗಿ ಆ ಪದವರ್ಗದ ಪರಿಚೆಧರ್ಮಗಳನ್ನು ತೋರಿಸುವುದಿಲ್ಲ. ಕೆಲವು ಪದಗಳು ಎಲ್ಲಾ ಪರಿಚೆಧರ್ಮಗಳನ್ನೂ ಸ್ಪಷ್ಟವಾಗಿ ತೋರಿಸುತ್ತಿದ್ದು, ಆ ಪದವರ್ಗದ ‘ಮಾದರಿ’ ಪದಗಳೆಂದೆನಿಸಿಕೊಳ್ಳುತ್ತವೆ. ಆದರೆ, ಬೇರೆ ಕೆಲವು ಪದಗಳು ಅಂತಹ ಪರಿಚೆಧರ್ಮಗಳಲ್ಲಿ ಕೆಲವನ್ನು ಮಾತ್ರವೇ ತೋರಿಸಿಕೊಡುತ್ತಿದ್ದು ಅವು ಆ ಪದವರ್ಗದ ಅಂಚಿನಲ್ಲಿ ನಿಲ್ಲು ವಂತಹವುಗಳಾಗಿರುತ್ತವೆ.

ಹಾಗಾಗಿ, ಪದವರ್ಗವೊಂದರ ಪರಿಚೆಧರ್ಮಗಳು ಅದರ ಮಾದರಿ ಪದಗಳ ಪರಿಚೆಧರ್ಮಗಳು ಮಾತ್ರ, ಆ ಪದವರ್ಗದಲ್ಲಿ ಸೇರುವ ಎಲ್ಲಾ ಪದಗಳೂ ತೋರಿಸುವ (ಇಲ್ಲವೇ ತೋರಿಸಬೇಕಾಗಿರುವ) ಪರಿಚೆಧರ್ಮಗಳಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.

Eke →

೨.೫ ಸಾರಾಂಶ

ಕನ್ನಡದಲ್ಲಿ ಮುಖ್ಯವಾಗಿ ಮೂರು ವರ್ಗಗಳಿಗೆ ಸೇರುವ ಪದಗಳಿವೆ. ಇವನ್ನು ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂದು ಕರೆಯಬಹುದು. ಇವುಗಳಲ್ಲಿ ಹೆಸರುಪದಗಳು ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವು ದಕ್ಕಾಗಿಯೂ ಮತ್ತು ‘ಸಕಪದಗಳು ಎಸಕಗಳನ್ನು ನಿರ್ದೇಶಿಸುವುದಕ್ಕಾಗಿಯೂ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ. ಹೆಸರುಪದ ಇಲ್ಲವೇ ‘ಸಕಪದಗಳ ಅರ್ಥ ವನ್ನು ಹೆಚ್ಚಿಸಿ, ಅವುಗಳ ವ್ಯಾಪ್ತಿ ಕಡಿಮೆಯಾಗುವಂತೆ ಮಾಡಲು ಪರಿಚೆಪದಗಳು ಬಳಕೆಯಾಗುತ್ತವೆ.

ಪದವರ್ಗಗಳ ಸಂಖ್ಯೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರಾಗಿರುತ್ತದೆ. ಸಂಸ್ಕೃತದಲ್ಲಿ ಹೆಸರುಪದ ಮತ್ತು ‘ಸಕಪದಗಳೆಂಬ ಎರಡೇ ಪದವರ್ಗ ಗಳಿದ್ದು, ಕನ್ನಡದ ಪರಿಚೆಪದಗಳಿಗೆ ಸಮನಾದ ಪದಗಳು ಸಂಸ್ಕೃತದಲ್ಲಿ ಹೆಸರು ಪದವರ್ಗಕ್ಕೆ ಸೇರುತ್ತವೆ. ಇದಕ್ಕೆ ಬದಲು ಈ ಪದಗಳು ‘ಸಕಪದವರ್ಗಕ್ಕೆ ಸೇರುವ ಮಣಿಪುರಿಯಂತಹ ನುಡಿಗಳೂ ಮತ್ತು ಈ ಮೂರು ರೀತಿಯ ಪದಗಳೂ ಒಂದೇ ಪದವರ್ಗದಲ್ಲಿ ಬರುವ ಮುಂಡಾರಿಯಂತಹ ನುಡಿಗಳೂ

ಭಾರತದಲ್ಲಿವೆ. ಈ ಬೇರೆ ಬೇರೆ ನುಡಿಗಳಲ್ಲಿ ಸೊಲ್ಲು ರಚನೆಯ ನಿಯಮಗಳು ಬೇರೆ ಬೇರಾಗಿದ್ದು, ಸೊಲ್ಲುಗಳಲ್ಲಿ ಈ ಪದಗಳು ನಡೆಸಬೇಕಾಗುವ ಕೆಲಸಗಳೂ ಬೇರೆ ಬೇರಾಗಿರುವುದೇ ಈ ರೀತಿ ಅವುಗಳಲ್ಲಿ ಬರುವ ಪದವರ್ಗಗಳ ಸಂಖ್ಯೆ ಯಲ್ಲಿ ವ್ಯತ್ಯಾಸ ಕಾಣಿಸಲು ಮುಖ್ಯ ಕಾರಣ.

ಈ ಮೂರು ಪದವರ್ಗಗಳಿಗೆ ಸೇರುವ ಪದಗಳ ನಡುವೆ ಕನ್ನಡದಲ್ಲಿ ಹಲವು ರೀತಿಯ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಈ ವ್ಯತ್ಯಾಸಗಳು ಸೊಲ್ಲುಗಳಲ್ಲಿ ಈ ಪದಗಳು ನಡೆಸಬೇಕಾಗಿರುವ ಪ್ರಾಮುಖ್ಯವಾದ ಕೆಲಸಗಳು ಯಾವುವು ಎಂಬುದರ ಮೇಲೆ ಅವಲಂಬಿಸಿವೆ. ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಹಾಗೆಯೇ ನೇರವಾಗಿ ಬಳಸಲು ಸಾಧ್ಯ ವಿದೆ, ಆದರೆ ‘ಸಕಪದ ಇಲ್ಲವೇ ಪರಿಚೆಪದಗಳನ್ನು ಅವುಗಳದಲ್ಲದ ಈ ಕೆಲಸ ದಲ್ಲಿ ಬಳಸಲು ಅವಕ್ಕೆ ಕೆಲವು ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ‘ಸಕಪದಗಳ ಕೆಲಸದಲ್ಲಿ ಹೆಸರುಪದ ಇಲ್ಲವೇ ಪರಿಚೆಪದಗಳನ್ನು ಮತ್ತು ಪರಿಚೆಪದಗಳ ಕೆಲಸದಲ್ಲಿ ಹೆಸರುಪದ ಇಲ್ಲವೇ ‘ಸಕಪದಗಳನ್ನು ನೇರ ವಾಗಿ ಬಳಸಲು ಸಾಧ್ಯವಾಗದು.

ಈ ಮೂರು ರೀತಿಯ ಪದಗಳ ನಡುವೆ ಅವುಗಳ ಅರ್ಥದಲ್ಲೂ ವ್ಯತ್ಯಾಸ ವಿದೆ. ಪರಿಚೆಪದಗಳು ಒಂದೇ ಒಂದು ವಿಶಿಷ್ಟವಾದ ಪರಿಚೆಧರ್ಮವನ್ನಷ್ಟೇ ಸೂಚಿಸುವುವಾದರೆ, ಹೆಸರುಪದಗಳು ಹಲವು ಪರಿಚೆಧರ್ಮಗಳನ್ನು ಒಟ್ಟಾಗಿ ಸೂಚಿಸುತ್ತವೆ ಮತ್ತು ಇವುಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳ ಲ್ಲೊಂದನ್ನು ಗುರುತಿಸುತ್ತವೆ. ಪರಿಚೆಧರ್ಮಗಳನ್ನು ಸೂಚಿಸುವುದಕ್ಕಿಂತಲೂ ಅಂತಹ ಪರಿಚೆಧರ್ಮವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಲ್ಲೊಂದನ್ನು ಗುರುತಿಸುವುದೇ ಇವುಗಳ ಮುಖ್ಯ ಕೆಲಸ. ಹಾಗಾಗಿ, ಹೆಸರುಪದಗಳ ಬಳಕೆಯಲ್ಲಿ ಅವುಗಳ ಒಳರಚನೆಗೆ ಇಲ್ಲವೇ ಅಂತಹ ರಚನೆಯಿಂದ ದೊರಕುವ ಅರ್ಥಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿಲ್ಲ.

ಕನ್ನಡದಲ್ಲಿ ಬರುವ ಪದಗಳ ಒಳರಚನೆಯಂತಹದು ಎಂಬುದನ್ನು ಸರಿ ಯಾಗಿ ತಿಳಿದೊಕೊಳ್ಳಲು ಅವು ಬರುವ ಈ ಮೂರು ಪದವರ್ಗಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಂಡಿರುವುದು ಅತ್ಯವಶ್ಯ.

ಅಧ್ಯಾಯ ಮೂರು ನಾಮಪದಗಳ ಒಳರಚನೆ