Chapters: Ch 1 · Ch 2 · Ch 3 · Ch 4 · Ch 5
ಭಾಗ ಮೂರು — ಮಾತು ಮತ್ತು ಬರಹ
ಮಾತು ಮತ್ತು ಬರಹ
ಬರಹವುಳ್ಳ ಭಾಷೆಗಳಿಗೂ ಬರಹವಿಲ್ಲದ ಭಾಷೆಗಳಿಗೂ ನಡುವೆ, ಅವುಗಳ ವ್ಯಾಕರಣದ ಮಟ್ಟಿಗೆ, ಯಾವ ವ್ಯತ್ಯಾಸವೂ ಇಲ್ಲ; ಈ ಎರಡು ಬಗೆಯ ಭಾಷೆ ಗಳಲ್ಲೂ ಪರಿಪೂರ್ಣವಾದ ವ್ಯಾಕರಣಗಳೇ ಬಳಕೆಯಾಗುತ್ತಿರುತ್ತವೆ. ಇದಲ್ಲದೆ, ‘ಪ್ರಬುದ್ಧತೆಯ’ ಮಟ್ಟಿಗೂ ಅವುಗಳ ವ್ಯಾಕರಣಗಳ ನಡುವೆ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗದು.
ಒಂದು ಭಾಷೆಯು ಬಳಸುತ್ತಿರುವ ಲಿಪಿಯ ಚರಿತ್ರೆ ಆ ಭಾಷೆಯ ಚರಿತ್ರೆ ಗಿಂತ ತೀರ ಭಿನ್ನವಾಗಿರಲು ಸಾಧ್ಯವಿದೆ. ಭಾರತದ ಭಾಷೆಗಳು ನಾಲ್ಕು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿವೆ; ಆದರೆ, ಅವುಗಳಲ್ಲಿ ಹೆಚ್ಚಿನವೂ ಒಂದೇ ಮೂಲದಿಂದ ಬೆಳೆದು ಬಂದ ಲಿಪಿಗಳನ್ನು ಬಳಸುತ್ತಿವೆ. ಈ ಲಿಪಿಗಳ ಮತ್ತು ಅವುಗಳನ್ನು ಬಳಸುವ ಬರಹಗಳ ಮೂಲ ಇತ್ತೀಚೆಗಿನದು; ಆದರೆ, ಭಾಷೆಗಳ ಮೂಲ ಮಿಲಿಯಗಟ್ಟಲೆ ವರ್ಷಗಳಷ್ಟು ಹಿಂದೆ, ಎಂದರೆ ನಮ್ಮ ಅರಿವಿಗೆ ಎಟುಕದ ಕಾಲವೊಂದರಲ್ಲಿ ಅಡಗಿದೆ.
ಮಾತು ಮತ್ತು ಬರಹಗಳ ನಡುವೆ ಬೇರೆಯೂ ಹಲವು ಮುಖ್ಯವಾದ ವ್ಯತ್ಯಾಸಗಳಿದ್ದು, ಕೆಲವೊಮ್ಮೆ ಬರಹ ಮಾತಿನಿಂದ ಬೇರಾಗಿ ತನ್ನದೇ ಆದ ಒಂದು ಅಸ್ತಿತ್ವವನ್ನು ಉಂಟುಮಾಡಿಕೊಳ್ಳಬಹುದು. ಹಾಗಾದಾಗ, ಅದಕ್ಕೂ ಮಾತಿಗೂ ನಡುವಿನ ಕೊಂಡಿ ತಪ್ಪಿ ಹೋಗಿ, ಅದರಲ್ಲಿ ಹಲವು ಬಗೆಯ ಕೃತಕತೆ ಗಳು ತುಂಬಿಕೊಳ್ಳುತ್ತವೆ; ಇದರಿಂದಾಗಿ ಅದು ಒಂದು ‘ಭಾಷೆ’ಯೆಂದು ಕರೆಯಲು ಸಾಧ್ಯವಿಲ್ಲದಂತಹ ರೂಪವನ್ನು ಪಡೆಯಬಲ್ಲುದು.
ಭಾಷೆ ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸಗಳು ಎಂತಹವು, ಮತ್ತು ಅವನ್ನು ತಿಳಿದುಕೊಳ್ಳುವುದು ಯಾಕೆ ಅವಶ್ಯ ಎಂಬುದನ್ನು ಈ ವಿಭಾಗದ ಆರು ಲೇಖನಗಳು ಸ್ಪಷ್ಟಪಡಿಸುತ್ತವೆ.
೩.೧ ಮಾತಿಗೂ ಒಂದು ಫೋಟೋ
ಕ್ಯಾಮರಾದ ಎದುರು ನಿಂತು ನಾವೆಲ್ಲ ನಮ್ಮ ಫೋಟೋ ತೆಗೆಸಿಕೊಳ್ಳುತ್ತೇವಲ್ಲ? ಹಾಗೆಯೇ ನಮ್ಮ ಮಾತನ್ನೂ ಕ್ಯಾಮರಾದೆದುರು ‘ನಿಲ್ಲಿಸಿ’ ಅದರ ಫೋಟೋ ತೆಗೆಯಲು ಸಾಧ್ಯವೇ? ಇದನ್ನು ಸಾಧ್ಯವಾಗಿಸಿದ್ದಾರೆ ಇಂದಿನ ವಿಜ್ಞಾನಿಗಳು.
ಆದರೆ, ಇಲ್ಲಿ ಫೋಟೋ ತೆಗೆಯುವುದು ಸಾಧಾರಣ ಕೆಮರಾ ಅಲ್ಲ, ಸ್ಪೆಕ್ಟೋ ಗ್ರಾಮ್ ಎನ್ನುವ ಒಂದು ವಿಶಿಷ್ಟವಾದ ಉಪಕರಣ. ಮಾತು ನಿಮ್ಮ ಬಾಯಿ ಯಿಂದ ಹೊರಟು ಅಲೆ ಅಲೆಯಾಗಿ ಗಾಳಿಯಲ್ಲಿ ಸಂಚರಿಸುವಾಗ, ಈ ಉಪಕರಣ ಅದನ್ನು ಹಿಡಿದಿಟ್ಟು, ವಿಚ್ಛೇದಿಸಿ, ಅದರ ಭೌತಿಕ ಚಿತ್ರವೊಂದನ್ನು ತಯಾರಿಸಿ ಕೊಡುತ್ತದೆ. ನೀವೊಂದು ಭಾಷಣ ಕೊಡುತ್ತಿದ್ದೀರಾದರೆ, ಅದನ್ನು ಈ ಉಪಕರಣ ಚಲನಚಿತ್ರವಾಗಿಯೂ ಪರಿವರ್ತಿಸಬಲ್ಲುದು. ಟೆಲಿವಿಷನ್‌ನ ಮೇಲೆ ಮಾತಿನ ಈ ಚಲನಚಿತ್ರವನ್ನು ನೋಡಿ, ಕಿವುಡರೂ ನಿಮ್ಮ ಭಾಷಣವನ್ನು ಅರ್ಥ ಮಾಡಿಕೊಳ್ಳಬಲ್ಲರು.
ಓದುವ ಫೋಟೋ
ಆದರೆ, ಈ ಬಗೆಯ ಉಪಕರಣದ ಸಂಶೋಧನೆ ಇತ್ತೀಚೆಗಿನದು. ಮಾತನ್ನು ಕಣ್ಣಿನೆದುರು ಹಿಡಿದು ನಿಲ್ಲಿಸುವ ಪ್ರಯತ್ನ ಇದಕ್ಕಿಂತಲೂ ಎಷ್ಟೋ ವರ್ಷ ಹಿಂದೆಯೇ ಪ್ರಾರಂಭವಾಗಿತ್ತು. ಅಂದಿನ ಕಾಲದ ಮಾನವನ ಚಾಣಾಕ್ಷತೆಯ ಫಲವಾಗಿ, ನೀವಿಂದು ನಾನಾಡಬಹುದಾದ ಮಾತಿನ ‘ಫೋಟೋ’ವನ್ನು ಈ ಪುಟದ ಮೇಲೆ ನೋಡಿ, ‘ಓದಿ’, ಅದರ ಅರ್ಥವನ್ನು ಗ್ರಹಿಸಿಕೊಳ್ಳುತ್ತಿದ್ದೀರಿ.
ಈ ದಿಕ್ಕಿನಲ್ಲಿ ಕಡಿಮೆಯೆಂದರೆ ಮೂರು ಸ್ವತಂತ್ರವಾದ ಸಂಶೋಧನೆ ಗಳಾದರೂ ನಡೆದಿರಬೇಕೆಂಬುದು ಲಿಪಿಶಾಸ್ತ್ರಜ್ಞರ ಊಹೆ. ಪುರಾತನ ಈಜಿಪ್ಟಿನ ಲ್ಲೊಂದು, ಪುರಾತನ ಚೀನಾದಲ್ಲೊಂದು, ಮತ್ತು ಯುಕಾಟನ್‌ದ ಮಾಯಾದವ ರಲ್ಲಿ ಮತ್ತೊಂದು. ಇವಲ್ಲದೆ, ಮೆಸಪೊಟೇಮಿಯಾದಲ್ಲೂ ಸ್ವತಂತ್ರವಾಗಿ ಬರಹದ ಸಂಶೋಧನೆ ನಡೆದಿರಬಹುದೆಂಬ ಊಹೆಯಿದೆ. ಇವತ್ತು ಜಗತ್ತಿನಲ್ಲಿ ಬಳಕೆಯಲ್ಲಿರುವ ಲಿಪಿಗಳಲ್ಲಿ ಹೆಚ್ಚಿನವಕ್ಕೂ ಈಜಿಪ್ಟ್ ಮತ್ತು ಮೆಸಪೊಟೇ ಮಿಯಾಗಳಲ್ಲಿ ಅಂದು ಸಿದ್ಧವಾಗಿದ್ದ ಲಿಪಿಗಳೇ ಮೂಲವಾಗಿರಬೇಕು.
ಪದಸಂಕೇತ ಮತ್ತು ವರ್ಣಸಂಕೇತ
ಪದಸಂಕೇತ ಮತ್ತು ವರ್ಣಸಂಕೇತ ಎಂಬುದಾಗಿ ಲಿಪಿಗಳಲ್ಲಿ ಎರಡು ಮುಖ್ಯ ವಾದ ಪ್ರಭೇದಗಳನ್ನು ಗುರುತಿಸಬಹುದು. ಪದಸಂಕೇತವೆಂದರೆ, ಲಿಪಿಯಲ್ಲಿ ಒಂದೊಂದು ಪದಕ್ಕೂ ಒಂದೊಂದು ವಿಶಿಷ್ಟವಾದ ಸಂಕೇತವನ್ನು ಕೊಡುವುದು. ಇಂತಹ ಲಿಪಿಗಳನ್ನು ಬಳಸುವವರು ತಮ್ಮ ಭಾಷೆಯಲ್ಲಿ ಎಷ್ಟು ಪದಗಳಿವೆಯೋ ಅಷ್ಟೇ ಸಂಖ್ಯೆಯ ಸಂಕೇತಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಎಂದರೆ, ಇಂತಹ ಲಿಪಿಯಲ್ಲಿ ಕಡಿಮೆಯೆಂದರೆ ಹತ್ತಿಪ್ಪತ್ತು ಸಾವಿರ ಸಂಕೇತಗಳಾದರೂ ಇರ ಬೇಕಾಗುತ್ತದೆ.
ವರ್ಣಸಂಕೇತವೆಂದರೆ, ಭಾಷೆಯಲ್ಲಿರುವ ಒಂದೊಂದು ವರ್ಣ (ಸ್ವರ ಇಲ್ಲವೇ ವ್ಯಂಜನ)ಕ್ಕೂ ಒಂದೊಂದು ಸಂಕೇತವನ್ನು ಕೊಡುವುದು. ಯಾವ ಭಾಷೆಯಲ್ಲೂ ೫೦-೬೦ಕ್ಕಿಂತ ಜಾಸ್ತಿ ವರ್ಣಗಳಿರುವುದಿಲ್ಲವಾದ್ದರಿಂದ, ಇಂತಹ
ಲಿಪಿಯನ್ನು ಬಳಸುವವರು ನೂರಕ್ಕಿಂತ ಜಾಸ್ತಿ ಸಂಕೇತಗಳನ್ನು ಕಲಿತುಕೊಳ್ಳ ಬೇಕಾಗುವುದಿಲ್ಲ.
ವಿಶ್ವದ ಬರವಣಿಗೆಗಳನ್ನೆಲ್ಲ ಈ ಎರಡು ಗುಂಪುಗಳೊಳಗೆ ಸೇರಿಸಿಕೊಳ್ಳಲು ಸಾಧ್ಯವಿದೆಯಾದರೂ, ಶುದ್ಧವಾಗಿ ಯಾವ ಲಿಪಿಯನ್ನೂ ಪದಸಂಕೇತ ಇಲ್ಲವೇ ವರ್ಣಸಂಕೇತ ಎಂಬುದಾಗಿ ವರ್ಣಿಸಲುಬರುವುದಿಲ್ಲ. ಇಂಗ್ಲಿಷ್ ಬರವಣಿಗೆ ಯಲ್ಲಿ ಪದ ಮತ್ತು ವರ್ಣಸಂಕೇತಗಳೆರಡೂ ಸೇರಿಹೋಗಿವೆ. ಉದಾಹರಣೆ ಗಾಗಿ, no ಮತ್ತು know ಎಂಬ ಎರಡು ಪದಗಳ ನಡುವೆ ಉಚ್ಚಾರದಲ್ಲಿ ವ್ಯತ್ಯಾಸವೇನೂ ಇಲ್ಲವಾದುದರಿಂದ ಅವು ಎರಡು ಬೇರೆ ಬೇರೆ ಪದಗಳನ್ನು ಸೂಚಿಸುವ ಪದಸಂಕೇತಗಳೆಂದು ಹೇಳಬೇಕಾಗುತ್ತದೆ.
ಜಪಾನೀಯರ ಬರವಣಿಗೆಯಲ್ಲಿ ಪದಸಂಕೇತಗಳೊಂದಿಗೆ ವರ್ಣಗುಚ್ಛ ಗಳನ್ನು ಸೂಚಿಸುವ ಸಂಕೇತಗಳೂ ಸೇರಿಕೊಂಡಿವೆ. ಪದಸಂಕೇತಕ್ಕೆ ಅತೀ ಉತ್ತಮ ಉದಾಹರಣೆಯೆಂದರೆ ಚೀನೀ ಬರವಣಿಗೆ. ಆದರೆ, ಈ ಬರವಣಿಗೆ ಯಲ್ಲೂ ವರ್ಣಸಂಕೇತಗಳ ಪ್ರಯೋಗ ಕೆಲವೆಡೆ ಸೇರಿಕೊಂಡಿದೆ. ಇವೆರಡ ಕ್ಕಿಂತಲೂ ಭಿನ್ನವಾಗಿರುವ ಅರೇಬಿಕ್ ಬರವಣಿಗೆಯಲ್ಲಿ ಸಾಮಾನ್ಯವಾಗಿ ಸ್ವರ ವರ್ಣಗಳನ್ನು ಬಿಟ್ಟು, ವ್ಯಂಜನವರ್ಣಗಳನ್ನು ಮಾತ್ರವೇ ಬರೆಯುವ ರೂಢಿಯಿದೆ.
ಪದಸಂಕೇತದ ವೈಶಿಷ್ಟ್ಯ
ಒಂದೊಂದು ಪದಕ್ಕೂ ಒಂದೊಂದು ಸಂಕೇತವಿರುವ ಈ ಪದಸಂಕೇತದ ಲಿಪಿ ಯಲ್ಲಿ ಸಾವಿರಾರು ಭಿನ್ನ ಭಿನ್ನವಾದ ಸಂಕೇತಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಚೈನೀಸ್ ಲಿಪಿಯಲ್ಲಿ ಸಾಮಾನ್ಯವಾಗಿ ಪದಕ್ಕೊಂದು ಸಂಕೇತ ವಿರುತ್ತದೆ. ಅದರ ಹಲವಾರು ಪದಗಳ ನಡುವೆ ಉಚ್ಚಾರಣೆಯಲ್ಲಿ ವ್ಯತ್ಯಾಸ ವಿಲ್ಲದಿದ್ದರೂ ಅರ್ಥದಲ್ಲಿ ವ್ಯತ್ಯಾಸವಿರುವ ಕಾರಣ, ಬರಹದಲ್ಲಿ ಬೇರೆ ಬೇರೆ ಸಂಕೇತಗಳನ್ನು ಬಳಸಬೇಕಾಗುತ್ತದೆ.
ಉದಾಹರಣೆಗಾಗಿ, ಹೆಂಡತಿ, ಏಳು, ಮೋಸಮಾಡು, ಕಾಲ, ದು:ಖ ಮೊದ ಲಾದ ಹಲವು ಅರ್ಥಗಳನ್ನು ಸೂಚಿಸಲು ಚೈನೀಸ್ ಭಾಷೆಯಲ್ಲಿ ಛೀ ಎಂಬ ಒಂದೇ ಉಚ್ಚಾರಣೆಯಿರುವ ಪದವನ್ನು ಬಳಸಲಾಗುತ್ತದೆ, ಆದರೆ ಇವಕ್ಕೆಲ್ಲ ಚೈನೀಸ್ ಲಿಪಿಯಲ್ಲಿ ಬೇರೆ ಬೇರೆ ಸಂಕೇತಗಳಿವೆ. ಇದೇ ರೀತಿಯಲ್ಲಿ, ನುಡಿ, ಅರೆ, ಬಣ್ಣ, ಉಪ್ಪು, ಅಲ್ಲಿ ಮೊದಲಾದ ಅರ್ಥಗಳನ್ನು ಸೂಚಿಸುವ ಪದಗಳಿಗೆ ಲಿಪಿಯಲ್ಲಿ ಬೇರೆ ಬೇರೆ ಸಂಕೇತಗಳಿವೆ; ಆದರೆ, ಇವೆಲ್ಲಕ್ಕೂ ಉಚ್ಚಾರಣೆ ಜೆನ್ ಎಂಬುದೊಂದೇ.
ಚೀನೀ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ಓದಲು ಕಡಿಮೆಯೆಂದರೆ ಏಳೆಂಟು ಸಾವಿರ ಸಂಕೇತಗಳನ್ನಾದರೂ ಕಲಿತುಕೊಳ್ಳಬೇಕಾಗುತ್ತದೆ. ಅದರ ಸಂಪೂರ್ಣ ಪದಕೋಶವೊಂದರಲ್ಲಿ ಒಟ್ಟು ಸುಮಾರು ಐವತ್ತು ಸಾವಿರ ಸಂಕೇತ ಗಳಿವೆ! ಇದು ವಿದ್ಯಾರ್ಥಿಗಳಿಗೊಂದು ದೊಡ್ಡ ತಲೆನೋವನ್ನೇ ತಂದೊಡ್ಡ
ಬಲ್ಲುದೇನೋ ನಿಜ; ಆದರೆ, ತಮ್ಮ ತಮ್ಮ ಭಾಷೆಗಳನ್ನು ಕಲಿಯುವುದರೊಂದಿಗೆ ಇಷ್ಟೆಲ್ಲಾ ಸಂಕೇತಗಳನ್ನೂ ಅವರು ಕಡ್ಡಾಯವಾಗಿಯೇ ಕಲಿತುಕೊಳ್ಳ ಬೇಕಾಗುವು ದಾದ್ದರಿಂದ, ಎಪ್ಪತ್ತೈದು ಕೋಟಿ ಜನರಿರುವ ಚೀನಾದೇಶದಲ್ಲಿ ಭಾಷಾ ಸಮಸ್ಯೆಯೇ ಏಳುತ್ತಿಲ್ಲ.
ಇದು ಹೇಗೆಂದರೆ, ದೂರ ದೂರದ ಊರುಗಳಲ್ಲಿರುವ ಚೈನೀಸ್ ಜನರಲ್ಲಿ ಒಬ್ಬರ ಮಾತನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳಲಾರರಾದರೂ, ಒಬ್ಬರು ಬರೆದುದನ್ನು ಇನ್ನೊಬ್ಬರು ಓದಿ ಅರ್ಥಮಾಡಿಕೊಳ್ಳಬಲ್ಲರು. ಉದಾಹರಣೆಗಾಗಿ, ಮಂದಾರಿನ್ ಎಂಬ ಒಂದು ಮಾದರಿಯ ಚೈನೀಸ್ ಭಾಷೆಯನ್ನಾಡುವವನೊಬ್ಬ ತನ್ನ ಭಾಷೆಯಲ್ಲಿ ಚೈನೀಸ್ ಲಿಪಿಯನ್ನು ಬಳಸಿ ಬರೆದ ಪತ್ರವನ್ನು ಕೆಂಟೊನೀಸ್ ಎನ್ನುವ ಇನ್ನೊಂದು ಮಾದರಿಯ ಚೈನೀಸ್ ಭಾಷೆಯನ್ನಾಡುವವನು ತನ್ನದೇ ಭಾಷೆಯಲ್ಲಿ ಓದಿ ಅರ್ಥಮಾಡಿಕೊಳ್ಳಬಲ್ಲನು. ಆದರೆ, ಮಂದಾರಿನ್‌ನವನು ತನ್ನ ಭಾಷೆಯಲ್ಲಿ ಮಾತನಾಡಹೊರಟರೆ ಅವನಾಡಿದ ಒಂದೇ ಒಂದು ಮಾತೂ ಕೆಂಟೊನೀಸ್‌ನವನಿಗೆ ಅರ್ಥವಾಗದು
ನಮ್ಮ ದೇಶದಲ್ಲೂ ಇಂತಹ ಒಂದು ಲಿಪಿ ಪ್ರಚಾರದಲ್ಲಿದ್ದಿದ್ದರೆ, ಶೇಕಡಾ ಎಪ್ಪತ್ತೈದು ಮಂದಿಯಾದರೂ ಒಬ್ಬರು ಬರೆದುದನ್ನು ಇನ್ನೊಬ್ಬರು ಯಾವ ಹೊಸ ಭಾಷೆಯನ್ನು ಕಲಿತುಕೊಳ್ಳದೆಯೂ ಸುಲಭದಲ್ಲಿ ಅರ್ಥಮಾಡಿಕೊಳ್ಳುವಂತೆ ಆಗಬಹುದಿತ್ತು.
ಕನ್ನಡದ ಲಿಪಿ
ನಾವು ಭಾರತದಲ್ಲಿ ಬಳಸುವ ಲಿಪಿಗಳಲ್ಲೆಲ್ಲ ಹೆಚ್ಚು ಕಡಿಮೆ ವರ್ಣಕ್ಕೊಂದು ಸಂಕೇತವಿದೆ. ರೋಮನ್ ಲಿಪಿಗೂ, ಕನ್ನಡ ಲಿಪಿಗೂ ನಡುವೆ ಇರುವ ಮುಖ್ಯ ವ್ಯತ್ಯಾಸವೇನೆಂದರೆ, ರೋಮನ್ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳೆರಡಕ್ಕೂ ಸ್ವತಂತ್ರವಾದ ಅಸ್ತಿತ್ವವುಳ್ಳ ಸಂಕೇತಗಳಿವೆ, ಆದರೆ ಕನ್ನಡ ಲಿಪಿಯಲ್ಲಿ ಸಾಮಾನ್ಯ ವಾಗಿ ಒಂದು ವ್ಯಂಜನದ ಅನಂತರ ಬರುವ ಸ್ವರ ಇಲ್ಲವೇ ವ್ಯಂಜನಗಳ ಸಂಕೇತಗಳಿಗೆ ಪದದ ಆದಿಯಲ್ಲಿ ಇಲ್ಲವೇ ಸ್ವರದ ಅನಂತರ ಬರುವ ಸಂಕೇತ ಗಳಷ್ಟು ಪೂರ್ಣತೆಯಿಲ್ಲ. ಇದನ್ನು ಸರಿಯಾಗಿ ಗಮನಿಸದ ಕೆಲವರು ಕನ್ನಡ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳೆರಡಕ್ಕೂ ಒಟ್ಟಾಗಿ ಸಂಕೇತಗಳಿವೆಯೆಂದು ತಪ್ಪಾಗಿ ತಿಳಿದುಕೊಂಡಂತಿದೆ.
ಲಿಪಿ ಸಮಸ್ಯೆ
ಭಾಷಾಸಮಸ್ಯೆಯೊಂದಿಗೆ ಲಿಪಿ ಸಮಸ್ಯೆಯೂ ನಮ್ಮ ದೇಶದಲ್ಲಿ ಹಲಕೆಲವು ಹೋರಾಟಗಳಿಗೆ ಕಾರಣವಾಗಿದೆ. ಉದಾಹರಣೆಗಾಗಿ, ಹಿಂದಿ-ಉರ್ದು ವಿವಾದ ಹೆಚ್ಚು ಕಡಿಮೆ ಲಿಪಿ ವಿವಾದವೆಂದೇ ಹೇಳಿದರೂ ತಪ್ಪಾಗದು. ಭಾಷೆಯ
ವ್ಯಾಕರಣದ ಮಟ್ಟಿಗೆ ಹಿಂದಿ ಮತ್ತು ಉರ್ದುಗಳೊಳಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.
ಸಂಸ್ಕೃತ, ಹಿಂದೀ ಮತ್ತು ಮರಾಠಿ ಭಾಷೆಗಳು ಬಳಸುವ ದೇವನಾಗರಿ ಲಿಪಿಯಷ್ಟು ‘ವೈಜ್ಞಾನಿಕ’ವಾದ ಲಿಪಿ ಬೇರಿಲ್ಲವೆಂದು ಕೆಲವರು ರಾಜಕಾರಣಿಗಳು ಮಾತ್ರವಲ್ಲ, ವಿದ್ವಾಂಸರೆಂದೆನ್ನಿಸಿಕೊಳ್ಳುವವರೂ ಹೇಳುತ್ತಿರುತ್ತಾರೆ. ಆದರೆ ಈ ಮಾತಿಗೆ ಆಧಾರವೇನೂ ಇಲ್ಲ.
ದೇವನಾಗರಿ ಲಿಪಿ ವೈಜ್ಞಾನಿಕವೆಂದು ಹೇಳಲು ಅದರಲ್ಲಿ ಬರುವ ಸಂಕೇತ ಗಳನ್ನು ವೈಜ್ಞಾನಿಕವಾಗಿ, ಎಂದರೆ ಅವುಗಳ ಉಚ್ಚಾರಣೆಗನುಸಾರವಾಗಿ, ಬೇರೆ ಬೇರೆ ವರ್ಗಗಳಲ್ಲಿ ವಿಂಗಡಿಸಲಾಗಿದೆ ಎಂಬುದೇ ಮುಖ್ಯ ಆಧಾರ. ಆದರೆ ಇದು ಸಂಕೇತಗಳ ವಿಂಗಡಣೆಯ ವೈಜ್ಞಾನಿಕತೆಯಲ್ಲದೆ, ಸಂಕೇತಗಳ ಇಲ್ಲವೇ ಅವನ್ನು ಬಳಸುವ ಲಿಪಿಯ ವೈಜ್ಞಾನಿಕತೆಯಲ್ಲ. ಯಾವ ಲಿಪಿಯಲ್ಲಿ ಬರುವ ಸಂಕೇತ ಗಳನ್ನು ಬೇಕಿದ್ದರೂ ಈ ರೀತಿ ಉಚ್ಚಾರಣೆಗನುಸಾರವಾಗಿ ವಿಂಗಡಿಸುವುದು ಕಷ್ಟ ವೇನಲ್ಲ.
ನಿಜಕ್ಕೂ ಭಾರತದ ಲಿಪಿಗಳಲ್ಲೆಲ್ಲ ಉರ್ದು ಲಿಪಿಯನ್ನು ಬಿಟ್ಟರೆ ದೇವ ನಾಗರಿ ಲಿಪಿಯೇ ಅತ್ಯಂತ ಕ್ಲಿಷ್ಟವಾದ ಮತ್ತು ತೊಡಕುತೊಡಕಾದ ಲಿಪಿ. ಕನ್ನಡ ಲಿಪಿ ಮತ್ತು ದೇವನಾಗರಿ ಲಿಪಿ ಇವೆರಡೂ ಒಂದೇ ಮೂಲದಿಂದ ಬಂದಿವೆ ಯಾದರೂ ಕನ್ನಡ ಲಿಪಿ ದೇವನಾಗರಿಗಿಂತ ಹಲವಾರು ವಿಷಯಗಳಲ್ಲಿ ಸರಳ ವಾಗಿದೆ ಮತ್ತು ಲಲಿತವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲಾರದ ಕನ್ನಡಿಗರು ಕೆಲವರು ನಮ್ಮಲ್ಲಿ ಈಗಾಗಲೇ ಬಳಕೆಯಲ್ಲಿರುವ ಉತ್ತಮವಾದ ಲಿಪಿಯನ್ನು ಹೊರಗೆಸೆದು, ದೇವನಾಗರಿಯನ್ನು ಬಳಸಿಕೊಳ್ಳುವ ಆತುರದಲ್ಲಿರುವಂತಿದೆ.
ಮಾತು ಮತ್ತು ಬರವಣಿಗೆ
ಮಾತಿಗೆ ಹೋಲಿಸಿದೆವಾದರೆ ಬರವಣಿಗೆಯೆಂಬುದು ಬಹಳ ಇತ್ತೀಚೆಗಿನದು. ಸಾವಿರಾರು ವರ್ಷಗಳ ಹಿಂದೆಯೇ ಈಜಿಪ್ಟ್ ಮತ್ತು ಮೆಸಪೊಟೇಮಿಯಾಗಳಲ್ಲಿ ಮನುಷ್ಯನಿಗೆ ಬರವಣಿಗೆ ತಿಳಿದಿತ್ತೆಂಬುದು ನಿಜ. ಆದರೆ, ಸಾಮಾನ್ಯ ಜನರ ಕೈಗೆ ಅದು ಬಂದು ಇನ್ನೂ ಇನ್ನೂರು ವರ್ಷ ಕಳೆದಿಲ್ಲ. ಇವತ್ತಿಗೂ ಬರವಣಿಗೆಯನ್ನು ಬಳಸಿಕೊಳ್ಳುವಂತಹ ಭಾಷೆಗಳು ಕೆಲವು ಮಾತ್ರ. ಜಗತ್ತು ಇಷ್ಟೊಂದು ಮುಂದು ವರಿದಿದೆಯಾದರೂ ಓದಲು ಮತ್ತು ಬರೆಯಲು ಬಲ್ಲ ಜನರ ಸಂಖ್ಯೆ ಶೇಕಡಾ ಐವತ್ತಕ್ಕಿಂತಲೂ ಕಡಿಮೆ.
ಲಿಪಿಯಿಲ್ಲದ ಭಾಷೆಗೂ ಲಿಪಿಯಿರುವ ಭಾಷೆಗೂ ನಡುವೆ ಎಂತಹ ವ್ಯತ್ಯಾಸ ವಿದೆ? ಈ ಪ್ರಶ್ನೆಗೆ ‘ಏನೂ ಇಲ್ಲ’ ಎಂಬುದಾಗಿ ಭಾಷಾವಿಜ್ಞಾನಿಗಳು ಕೊಡುವ ಉತ್ತರವನ್ನು ಬಹುಶಃ ಹೆಚ್ಚಿನವರೂ ನಂಬಲಾರರು. ಆದರೆ, ಜಗತ್ತಿನಲ್ಲಿ ಬಳಕೆ ಯಲ್ಲಿರುವ ಹಲವಾರು ಭಾಷೆಗಳ ಮೇಲೆ ಅವರು ನಡೆಸಿರುವ ಸಂಶೋಧನೆಗಳ ಫಲವಾಗಿ ತಿಳಿದು ಬಂದ ಆಶ್ಚರ್ಯಕರ ವಿಷಯಗಳಲ್ಲಿ ಇದೂ ಒಂದು.
ಭಾಷೆಗಳಲ್ಲಿ ನಡೆಯಬಹುದಾದ ಬದಲಾವಣೆಗಳಲ್ಲಿ ಲಿಪಿಯಿಂದಾಗುವ ಕಾರ್ಯ ಸೊನ್ನೆಯೆಂದೇ ಹೇಳಬಹುದು. ಭಾಷೆಯೊಂದರ ಯೋಗ್ಯತೆಯೂ ಲಿಪಿ ಯಿರುವುದರಿಂದ ಇಲ್ಲವೇ ಇಲ್ಲದಿರುವುದರಿಂದ ಹೆಚ್ಚುಕಡಿಮೆಯಾಗುವುದಿಲ್ಲ. ಲಿಪಿಯಿರುವ ಭಾಷೆಯಷ್ಟೇ ಲಿಪಿಯಿಲ್ಲದ ಭಾಷೆಯೂ ಸಮೃದ್ಧ ಮತ್ತು ಸಂಪನ್ನ ವಾಗಿರಬಲ್ಲುದು.
ಸಂಸ್ಕೃತ ಭಾಷೆಗೆ ತನ್ನದೇ ಆದ ಲಿಪಿ ದೊರಕುವುದಕ್ಕಿಂತ ಎಷ್ಟೋ ವರ್ಷ ಗಳ ಹಿಂದೆಯೇ ಅದರಲ್ಲಿ ಜಗತ್ತಿನ ಮಹೋನ್ನತ ಕೃತಿಗಳಲ್ಲಿ ಒಂದಾಗಿರುವ ವೇದಗಳ ರಚನೆಯಾಗಿತ್ತೆಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆ. ಲಿಪಿಯು ಭಾಷೆಯ ಮೇಲೆ ಮಾಡಬಹುದಾದ ಪರಿಣಾಮವೇನಾದರೂ ಇದ್ದರೆ, ಅದು ಆ ಭಾಷೆಯ (ಬರಹದ) ವ್ಯಾಕರಣ ನಿಯಮಗಳಿಗಿರುವ ಅಪವಾದಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡುವುದು ಮಾತ್ರ
೩.೨ ಭಾರತಕ್ಕೆಲ್ಲ ಒಂದು ಲಿಪಿ ಬೇಕೇ?
ಭಾರತದ ಭಾಷೆಗಳೆಲ್ಲ ಒಂದೇ ಲಿಪಿಯನ್ನು ಬಳಸತೊಡಗಿದಲ್ಲಿ ನಮ್ಮ ದೇಶದ ಭಾಷಾಸಮಸ್ಯೆಗಳೆಲ್ಲವೂ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುವುವೆಂದು ವಾದಿಸುವ ಆಶಾವಾದಿಗಳು ನಮ್ಮಲ್ಲಿ ಬಹಳ ಮಂದಿ ಇದ್ದಾರೆ. ತಮಿಳು, ಕನ್ನಡ, ಬಂಗಾಲಿ, ಒಡಿಯಾ ಮೊದಲಾದ ಈ ಬೇರೆ ಬೇರೆ ಭಾಷೆಗಳನ್ನಾಡುವ ಜನರು ತಮ್ಮವೇ ಆದ ಲಿಪಿಗಳನ್ನು ಸಂಪೂರ್ಣವಾಗಿ ಬಿಟ್ಟು ಕೊಡಲು ಸಿದ್ಧರಿಲ್ಲದಿರಬಹುದು. ಆದರೂ ‘ರಾಷ್ಟ್ರದ ಐಕ್ಯತೆ’ಗಾಗಿ ಈ ಭಾಷೆಗಳನ್ನಾಡುವ ಮಂದಿ ತಮ್ಮ ತಮ್ಮ ಲಿಪಿಗಳೊಡನೆ ಇಂತಹ ರಾಷ್ಟ್ರೀಯ ಲಿಪಿಯೊಂದನ್ನೂ ಕಲಿತು ಬಳಸತೊಡಗಿ ದಲ್ಲಿ, ನಮ್ಮ ದೇಶ ಬಹಳಷ್ಟು ಉದ್ಧಾರವಾದೀತೆಂದು ಇವರೆಲ್ಲರೂ ನಂಬಿರು ವಂತಿದೆ.
ಇಂತಹ ವಾದವನ್ನು ಮುಂದೆ ತರುವವರು ಬರಿಯ ರಾಜಕಾರಣಿಗಳು ಮಾತ್ರವಲ್ಲ; ಈ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಪರಿಣತ ರಾಗಿರುವೆವೆಂದು ಹೇಳಿಕೊಳ್ಳುವ ವಿದ್ವಾಂಸರೂ ಇವೇ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ಸಂಗತಿಯಾಗಿದೆ.
ಉದಾಹರಣೆಗಾಗಿ, ೧೯೫೬ರಲ್ಲಿ ಪ್ರಕಟವಾದ ಅಧಿಕೃತ ಭಾಷಾ ಸಮಿತಿಯ ವರದಿಯು ಇಂತಹ ರಾಷ್ಟ್ರೀಯ ಲಿಪಿಯೊಂದರ ಬಳಕೆಯು ಅವಶ್ಯವೆಂದೇ ಸಮರ್ಥಿಸಿತ್ತು. ಜಸ್ಟಿಸ್ ಶಾರದಾಚರಣ ಮಿತ್ರರು ‘ಏಕಲಿಪಿ ವಿಸ್ತಾರ ಪರಿಷತ್’ ಎಂಬುದಾಗಿ ಒಂದು ಸಂಸ್ಥೆಯನ್ನೇ ಸ್ಥಾಪಿಸಿದ್ದರು.
ಇಂತಹ ಏಕಲಿಪಿ ವಾದವನ್ನು ಮಂಡಿಸುವವರಲ್ಲಿ ಹೆಚ್ಚಿನವರೂ ಭಾರತದ ಈ ರಾಷ್ಟ್ರೀಯ ಲಿಪಿ ಇವತ್ತು ಹಿಂದೀ ಭಾಷೆಯನ್ನು ಬರೆಯಲು ಬಳಸುತ್ತಿರುವ
ದೇವನಾಗರಿ ಲಿಪಿಯೇ ಆಗಬೇಕೆಂದು ವಾದಿಸುತ್ತಿರುವುದು ಇನ್ನೊಂದು ಗಮ ನಾರ್ಹವಾದ ಸಂಗತಿಯಾಗಿದೆ.
ಏಕಲಿಪಿ ಅವಶ್ಯವೇ?
ಇಲ್ಲಿ ಎರಡು ಮುಖ್ಯವಾದ ಪ್ರಶ್ನೆಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಭಾರತದ ಭಾಷೆಗಳೆಲ್ಲ ಒಂದೇ ಲಿಪಿಯನ್ನು ಇಲ್ಲವೇ ಸಮಾನ ಲಿಪಿಯೊಂದನ್ನು ಬಳಸುವುದು ಅವಶ್ಯವೇ, ಮತ್ತು ಹಾಗೆ ಮಾಡುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂಬುದೊಂದು; ಮತ್ತು ಅದು ಅವಶ್ಯವಾಗಿದೆ ಯಾದರೂ, ಅಂತಹ ಸಮಾನ ಲಿಪಿಯಾಗಲು ದೇವನಾಗರಿಯೇ ಅರ್ಹವಾದು ದೆಂಬ ವಾದದಲ್ಲಿ ಹುರುಳಿದೆಯೇ ಎಂಬುದಿನ್ನೊಂದು.
ಇವುಗಳಲ್ಲಿ ಮೊದಲನೆಯ ಪ್ರಶ್ನೆಯನ್ನು ಯಾರೂ ಇದುವರೆಗೆ ಸರಿಯಾಗಿ ವಿವೇಚಿಸಿದ ಹಾಗೆ ಕಂಡುಬರುವುದಿಲ್ಲ. ಏಕಲಿಪಿಯ ಕುರಿತು ವಾದ ನಡೆಸು ವವರೆಲ್ಲ ಅದರ ಅವಶ್ಯಕತೆ ಸ್ವತಃಸಿದ್ಧವಾದುದೆಂಬ ಅಭಿಪ್ರಾಯದಿಂದಲೇ ತಮ್ಮ ವಾದವನ್ನು ಪ್ರಾರಂಭಿಸುತ್ತಾರೆ.
ಈ ವಿಷಯದಲ್ಲಿ ಅಧಿಕೃತ ಭಾಷಾ ಸಮಿತಿಯು ಎರಡು ಮುಖ್ಯವಾದ ಕಾರಣಗಳನ್ನು ಕೊಟ್ಟಿದೆ. ದೇಶದ ಐಕ್ಯತೆಗೆ ಅದು ಸಹಾಯಕವಾಗಬಹುದೆಂಬು ದೊಂದು; ಬೇರೆ ಬೇರೆ ಭಾಷೆಗಳನ್ನು ಕಲಿಯುವ ಕೆಲಸ ಅದರಿಂದ ಸುಗಮ ವಾಗಬಹುದೆಂಬುದಿನ್ನೊಂದು. ಇವೆರಡೂ ಹೆಚ್ಚಿನ ಮಟ್ಟಿಗೆ ಕಲ್ಪಿತವಾದ ಕಾರಣ ಗಳು. ದೇಶದ ಐಕ್ಯತೆಯೆಂಬುದು ತರ್ಕದೆದುರು ನಿಲ್ಲದ ವಿಷಯ. ಭಾರತಕ್ಕೆಲ್ಲ ಒಂದು ಲಿಪಿಯನ್ನು ತಂದು ಹಾಕುವ ಅವಸರದಲ್ಲಿ ಈಗ ಇರುವ ಐಕ್ಯತೆಯೂ ಒಡೆದುಹೋಗುವ ಸಂಭವವೇ ಜಾಸ್ತಿ.
ಲಿಪಿ ಮತ್ತು ಭಾಷಾಭ್ಯಾಸ
ಲಿಪಿ ಭೇದವಿಲ್ಲದಿದ್ದರೆ ನೆರೆ ಪ್ರಾಂತದವರ ಭಾಷೆಗಳನ್ನು ಕಲಿಯುವ ಕೆಲಸ ಸುಗಮವಾಗಬಹುದು, ಮತ್ತು ಅದರಿಂದಾಗಿ ಹಾಗೆ ಕಲಿಯುವ ಜನರ ಸಂಖ್ಯೆಯೂ ಹೆಚ್ಚಬಹುದು ಎಂಬ ವಾದ ಸತ್ಯದಿಂದ ಬಹಳ ದೂರ ಇದೆ. ತೆಲುಗು ಮತ್ತು ಕನ್ನಡ ಭಾಷೆಗಳಿಗೆ ಹೆಚ್ಚು ಕಡಿಮೆ ಒಂದೇ ಲಿಪಿಯಿದೆ ಯೆಂದರೂ ಸಲ್ಲುತ್ತದೆ. ತೆಲುಗು ಭಾಷೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ಕನ್ನಡಿಗರು ಅರ್ಧ ಗಂಟೆಯೊಳಗೆ ಅದರ ಲಿಪಿಯನ್ನು ಕೈವಶ ಮಾಡಿಕೊಳ್ಳ ಬಲ್ಲರು. ಆದರೆ, ಇಂದು ಎಷ್ಟು ಮಂದಿ ಕನ್ನಡಿಗರು ಇಲ್ಲವೇ ತೆಲುಗರು ಈ ಸೌಕರ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ?
ಮರಾಠಿ ಮತ್ತು ಹಿಂದೀ ಭಾಷೆಗಳೆರಡೂ ಒಂದೇ ಲಿಪಿಯನ್ನು ಬಳಸಿಕೊಳ್ಳು ತ್ತಿವೆ. ಹಾಗೆಂದು ಮರಾಠಿಯನ್ನು ಕಲಿಯುವ ಹಿಂದೀ ಜನರ ಸಂಖ್ಯೆ ಅದೇ
ಭಾಷೆಯನ್ನು ಕಲಿಯುವ ಕನ್ನಡಿಗರ ಇಲ್ಲವೇ ಗುಜರಾತಿಗಳ ಸಂಖ್ಯೆಗಿಂತ ಜಾಸ್ತಿ ಯಿರುವ ಹಾಗೇನೂ ಕಾಣಿಸುತ್ತಿಲ್ಲ. ನಿಜಕ್ಕೂ ಒಂದು ಭಾಷೆಯನ್ನು ಕಲಿಯುವ ಅವಶ್ಯಕತೆ ಬಂದರೆ ಚೀನೀ ಭಾಷೆಗಿರುವಂತಹ ಅತೀ ಕ್ಲಿಷ್ಟವಾದ ಲಿಪಿಯನ್ನೂ ಜನ ಅರಗಿಸಿಕೊಂಡಾರು. ಬೇಡವಾಗಿರುವ ಭಾಷೆಯ ಲಿಪಿ ಸಮಾನವಾಗಿದ್ದರೂ ಒಂದೇ, ಭಿನ್ನವಾಗಿದ್ದರೂ ಒಂದೇ.
ಲಿಪಿ ಭೇದವನ್ನು ತೆಗೆದುಹಾಕಿದಲ್ಲಿ ಭಾಷೆಗಳನ್ನು ಕಲಿಯುವ ಕೆಲಸ ಸುಗಮ ವಾದೀತೆಂದು ವಾದಿಸುವವರೆಲ್ಲ ಲಿಪಿ ಮತ್ತು ಭಾಷೆಗಳ ನಡುವಿನ ಸಂಬಂಧ ವನ್ನೇ ಸರಿಯಾಗಿ ಅರ್ಥಮಾಡಿಕೊಂಡಂತಿಲ್ಲ. ಇಂಗ್ಲಿಷ್‌ನಂತಹ ಕೆಲವು ಬರಹ ಗಳಲ್ಲಿ ಕ್ಲಿಷ್ಟವಾದ ‘ಸ್ಪೆಲ್ಲಿಂಗ್’ ಸಮಸ್ಯೆಗಳಿರುವ ಕಾರಣ, ಭಾಷೆಗಳನ್ನು ಕಲಿತಾದ ಮೇಲೂ ಅವುಗಳ ಬರಹವನ್ನು ಓದಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುತ್ತದೆ. ಆದರೆ, ಭಾರತೀಯ ಭಾಷೆಗಳಲ್ಲಿ ಹೆಚ್ಚಿನವೂ ಒಂದೇ ಮಾದರಿಯ ಲಿಪಿಗಳನ್ನು ಬಳಸುತ್ತಿವೆಯಾದ ಕಾರಣ, ಅವುಗಳಲ್ಲಿ ಒಂದು ಲಿಪಿಯನ್ನು ಕಲಿತವರು ಹೊಸದೊಂದು ಲಿಪಿಯನ್ನು ಒಂದೆರಡು ದಿನಗಳಲ್ಲೇ ಕೈವಶಮಾಡಿಕೊಳ್ಳಬಲ್ಲರು. ಲಿಪಿಗಿಂತಲೂ ಭಾಷೆಯನ್ನು ಕಲಿತುಕೊಳ್ಳುವುದೇ ಇಲ್ಲಿ ಹೆಚ್ಚಿನ ಸಮಸ್ಯೆಯಾಗಿರುತ್ತದೆ.
ಹಾಗಾಗಿ, ಈ ಭಾಷೆಗಳೆಲ್ಲ ಸಮಾನ ಲಿಪಿಯೊಂದನ್ನು ಬಳಸುವುದರಿಂದಾಗಿ ಹೊಸ ಭಾಷೆಯನ್ನು ಕಲಿಯುವಲ್ಲಿ ಆಗುವ ಉಳಿತಾಯ ಬರೇ ಒಂದೆರಡು ದಿನ ಗಳಷ್ಟು ಮಾತ್ರ. ಈ ಅಲ್ಪ ಉಳಿತಾಯಕ್ಕಾಗಿ ನಾವು ಮಾಡಬೇಕಾಗಿರುವ ತ್ಯಾಗ ವೆಂತಹದೆಂಬುದನ್ನು ಗಮನಿಸಿದಲ್ಲಿ, ಯಾರೂ ಈ ಕೆಲಸಕ್ಕೆ ಕೈಹಾಕಲಾರರು. ಏಕಲಿಪಿವಾದ ಮಾತ್ರವಲ್ಲ, ಸಮಾನಲಿಪಿವಾದವೂ ಭಾರತದ ಮಟ್ಟಿಗೆ ನಿರಾಧಾರವಾದುದೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ದೇವನಾಗರಿಯ ಅರ್ಹತೆ
ಇನ್ನು ಏಕಲಿಪಿವಾದಿಗಳು ಈ ಸ್ಥಾನಕ್ಕೆ ದೇವನಾಗರಿ ಲಿಪಿಯೇ ಅರ್ಹವೆಂದು ವಾದಿಸುತ್ತಿದ್ದಾರಲ್ಲ, ಈ ವಾದದಲ್ಲಿ ಎಷ್ಟು ಹುರುಳಿದೆ ಎಂಬುದನ್ನು ವಿವೇಚಿಸು ವುದು ಅವಶ್ಯ. ಇತರ ಭಾರತೀಯ ಲಿಪಿಗಳಿಗಿಂತೆಲ್ಲ ದೇವನಾಗರಿ ಲಿಪಿಯನ್ನು ಬಳಸುವ ಭಾರತೀಯರ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿರುವುದೆಂಬ ಒಂದು ಕಾರಣ ಮಾತ್ರ ಯುಕ್ತಿಯುಕ್ತವಾಗಿದೆ. ಮರಾಠಿ, ಹಿಂದಿ ಮತ್ತು ಸಂಸ್ಕೃತ - ಈ ಮೂರು ಭಾಷೆಗಳೂ ದೇವನಾಗರಿ ಲಿಪಿಯನ್ನೇ ಬಳಸುತ್ತಿವೆ. ಕೆಲವೆಡೆಗಳಲ್ಲಿ ಕೊಂಕಣಿಗೂ ಇದೇ ಲಿಪಿ ಬಳಕೆಯಲ್ಲಿದೆ. ಹಾಗಾಗಿ, ಈ ಲಿಪಿಗೆ ಜನ ಸಂಖ್ಯೆಯ ಬೆಂಬಲ ಬೇಕಾದಷ್ಟಿದೆ.
ಆದರೆ, ಹಿಂದಿಯನ್ನು ಭಾರತದ ರಾಜಕೀಯ ಭಾಷೆಯನ್ನಾಗಿ ಆರಿಸಿಕೊಳ್ಳು ವಲ್ಲಿ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಂತೆ ದೇವನಾಗರಿ ಲಿಪಿಯನ್ನು ಸಮಾನ ಲಿಪಿಯಾಗಿ ಆರಿಸಿಕೊಳ್ಳುವಲ್ಲೂ ಅದೇ ಅಂಶಕ್ಕೆ ಮಹತ್ವ ಕೊಡ
ಬೇಕೆಂದೇನಿಲ್ಲ. ಸಾಹಜವಾಗಿ ಬೆಳೆದು ಬಂದಿರುವ ಭಾಷೆಗಳೊಳಗೆ ಮೇಲು ಕೀಳಿಲ್ಲವೆಂಬುದೇನೋ ನಿಜ. ಆದರೆ ಲಿಪಿಗಳು ಮಾನವ ನಿರ್ಮಿತವಾಗಿರುವು ವಾದ್ದರಿಂದ, ಅವುಗಳಲ್ಲಿ ಕೆಲವು ಅತ್ಯುತ್ತಮವಾದವುಗಳು ಮತ್ತು ಸರಳವಾದವು ಗಳು, ಮತ್ತು ಕೆಲವು ಅತೀ ಕ್ಲಿಷ್ಟವಾದವುಗಳು ಎಂಬುದಾಗಿ ಮೌಲ್ಯಮಾಪನ ಮಾಡಲು ಬರುತ್ತದೆ. ದೇವನಾಗರಿ ಲಿಪಿಗೆ ಜನಸಂಖ್ಯೆಯ (ಬಳಸುವವರ ಸಂಖ್ಯೆಯ) ಬೆಂಬಲವೊಂದನ್ನು ಬಿಟ್ಟರೆ ಬೇರಾವ ಯೋಗ್ಯತೆಯೂ ಇಲ್ಲ ಎಂಬುದು ಈ ಕೆಳಗಿನ ವಿಚಾರಗಳಿಂದ ಸ್ಪಷ್ಟವಾಗುತ್ತದೆ.
ಲಿಪಿಯ ವೈಜ್ಞಾನಿಕತೆ
ಪ್ರಪಂಚದಲ್ಲಿ ದೇವನಾಗರಿಯಷ್ಟು ವೈಜ್ಞಾನಿಕವಾದ ಲಿಪಿ ಬೇರೊಂದಿಲ್ಲವೆಂದು ಹಲವಾರು ಹಿಂದೀ ಭಕ್ತರು ಮತ್ತು ರಾಜಕಾರಣಿಗಳು ಸಾರುತ್ತಿದ್ದಾರೆ. ಲಿಪಿ ಯಲ್ಲಿ ವೈಜ್ಞಾನಿಕತೆಯೆಂದರೆ ಏನೆಂಬುದನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳದೆ ಹೇಳುವ ಮಾತಿದೆಂಬುದರಲ್ಲಿ ಸಂಶಯವಿಲ್ಲ. ನಿಜಕ್ಕೂ ದೇವನಾಗರಿ ಬಹಳ ಕ್ಲಿಷ್ಟವಾದ ಮತ್ತು ತೊಡಕು ತೊಡಕಾದ ಲಿಪಿ. ಇಂಗ್ಲಿಷ್, ಫ್ರೆಂಚ್, ಮೊದಲಾದ ಭಾಷೆಗಳು ಬಳಸುವ ರೋಮನ್ ಲಿಪಿ ಅದಕ್ಕಿಂತ ಬಹಳಷ್ಟು ಸರಳವಾದುದು. ಕನ್ನಡ ಲಿಪಿಯೂ ದೇವನಾಗರಿ ಲಿಪಿಗಿಂತ ಹೆಚ್ಚು ಶ್ರೇಷ್ಠವಾದುದು.
ಲಿಪಿಗಳ ಯೋಗ್ಯತೆಯನ್ನು ತುಲನಾತ್ಮಕವಾಗಿ ಅಭ್ಯಸಿಸುವಲ್ಲಿ ಎರಡು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯ. ಆ ಲಿಪಿಯಲ್ಲಿ ಬರುವ ಸಂಜ್ಞೆಗಳ ಇಲ್ಲವೇ ಸಂಕೇತಗಳ ಒಳರಚನೆ ಹೇಗಿದೆ ಎಂಬುದೊಂದು; ಮತ್ತು, ಅದನ್ನು ಬಳಸುತ್ತಿರುವ ಭಾಷೆಯಲ್ಲಿ ಬರುವ ಧ್ವನಿಗಳನ್ನು ಈ ಸಂಕೇತ ಗಳು ಹೇಗೆ ಪ್ರತಿನಿಧೀಕರಿಸುತ್ತಿವೆ ಎಂಬುದಿನ್ನೊಂದು. ಲಿಪಿಗಳ ಕುರಿತು ವಾದ ನಡೆಸುವವರೆಲ್ಲ ಈ ಎರಡು ಅಂಶಗಳನ್ನು ಸರಿಯಾಗಿ ಬೇರ್ಪಡಿಸಿಕೊಳ್ಳಲಾರದೆ ಎಲ್ಲೆಲ್ಲೋ ದಿಕ್ಕುತಪ್ಪಿ ಅಲೆಯುತ್ತಿರುತ್ತಾರೆ.
ಸ್ಟೆಲ್ಲಿಂಗ್ ಸಮಸ್ಯೆ
ರೋಮನ್ ಲಿಪಿಯನ್ನು ಬಳಸುವ ಇಂಗ್ಲಿಷ್ ಬರಹದಲ್ಲಿ ಅತಿ ಕ್ಲಿಷ್ಟವಾದ ‘ಸ್ಪೆಲ್ಲಿಂಗ್’ ಸಮಸ್ಯೆಯಿದೆ. ಇದರಲ್ಲಿ ಒಂದೇ ಸಂಜ್ಞೆಗೆ ಹಲವಾರು ಉಚ್ಚಾರಗ ಳಿರುತ್ತವೆ, ಮತ್ತು ಒಂದೇ ಧ್ವನಿಗೆ ಹಲವಾರು ಸಂಜ್ಞೆಗಳೂ ಇರುತ್ತವೆ; ಸಂಜ್ಞೆಗಳಿಗೂ ಅವುಗಳ ಉಚ್ಚಾರಕ್ಕೂ ನಡುವೆ ನೇರವಾದ ಸಂಬಂಧವಿಲ್ಲ. ಈ ಕಾರಣಕ್ಕಾಗಿ, ಇಂಗ್ಲಿಷ್ ಬರಹವನ್ನು ತುಂಬಾ ಕ್ಲಿಷ್ಟವಾದ ಬರಹವೆಂದು ಹೇಳಲಾಗುತ್ತದೆ.
ಆದರೆ ಇವೆಲ್ಲ ಇಂಗ್ಲಿಷ್ ಜನರು ರೋಮನ್ ಲಿಪಿಯನ್ನು ತಮ್ಮ ಭಾಷೆಗೆ ತಪ್ಪು ತಪ್ಪಾಗಿ ಅಳವಡಿಸಿಕೊಂಡಿರುವುದರಿಂದಾಗಿ ಹುಟ್ಟಿಕೊಂಡಿರುವ ದೋಷ ಗಳು. ಈ ದೋಷಗಳನ್ನು ರೋಮನ್ ಲಿಪಿಯ ಆಂತರಿಕ ದೋಷಗಳೆಂದು
ಕರೆಯಲು ಎಂದಿಗೂ ಸಾಧ್ಯವಾಗದು. ಇದೇ ಲಿಪಿಯನ್ನು ಹೊಸದೊಂದು ಭಾಷೆ ಯನ್ನು ಬರೆಯುವಲ್ಲಿ ಬಳಸಬೇಕಾದಾಗ, ಈ ಸಮಸ್ಯೆಗಳಲ್ಲಿ ಒಂದೂ ಬಾರದಂತೆ ನೋಡಿಕೊಳ್ಳಬಹುದು.
ಇಂತಹ ಸ್ಪೆಲ್ಲಿಂಗ್ ಸಮಸ್ಯೆ ಲಿಪಿಯ ದೋಷವಲ್ಲ, ಅದರ ಬಳಕೆಯ ದೋಷ ಎಂಬುದಕ್ಕೆ ದೇವನಾಗರಿ ಲಿಪಿಯೇ ಒಂದು ಉತ್ತಮ ಉದಾಹರಣೆ. ಸಂಸ್ಕೃತ ಭಾಷೆಯನ್ನು ಬರೆಯುವಲ್ಲಿ ಈ ಲಿಪಿಯನ್ನು ಬಹಳ ಮಟ್ಟಿಗೆ ಸಮರ್ಪಕವಾಗಿಯೇ ಬಳಸಲಾಗುತ್ತಿದೆ. ಆದರೆ, ಅದನ್ನು ಬಳಸುವ ಮರಾಠಿ ಮತ್ತು ಹಿಂದೀ ಭಾಷೆಗಳ ಬರಹಗಳಲ್ಲಿ ಹಲಕೆಲವು ಸ್ಪೆಲ್ಲಿಂಗ್ ದೋಷಗಳು ಸೇರಿಕೊಂಡಿವೆ.
ಇಂದಿನ ಹಿಂದೀ ಪಂಡಿತರು ಕುಡುಖ್, ಬೋಡೋ, ಕೋಲಾಮಿ ಮೊದ ಲಾದ ಕೆಲವು ಲಿಪಿಯಿಲ್ಲದ ಭಾಷೆಗಳಿಗೆ ಇದೇ ದೇವನಾಗರಿ ಲಿಪಿಯನ್ನು ಬಳಸಿ ಕೊಂಡಿರುವ ಕ್ರಮವನ್ನು ನೋಡಿದರೆ ಮಾತ್ರ, ಯಾರಿಗೂ ಆಶ್ಚರ್ಯವಾದೀತು. ಇಂಗ್ಲಿಷ್‌ನ ಬರಹಗಳಲ್ಲಿರುವುದಕ್ಕಿಂತ ಹತ್ತರಷ್ಟು ಸ್ಪೆಲ್ಲಿಂಗ್ ಭೂತಗಳು ಈ ಭಾಷೆಗಳ ‘ದೇವನಾಗರಿ’ ಬರಹಗಳಲ್ಲಿ ಸೇರಿಕೊಂಡಿವೆ
ಆಂತರಿಕ ಗುಣಗಳು
ಲಿಪಿಗಳಿಗೆ ಇರಬಹುದಾದ ಆಂತರಿಕ ಗುಣಗಳೆಂದರೆ, ಅವುಗಳಲ್ಲಿರುವ ಸಂಜ್ಞೆ ಗಳ ಸ್ವರೂಪ, ಒಂದೇ ಸಂಜ್ಞೆಗಿರುವ ಉಪಸಂಜ್ಞೆಗಳ ಸಂಖ್ಯೆ (ಕನ್ನಡ ಲಿಪಿ ಯಲ್ಲಿ ರಕಾರಕ್ಕೆ ರ, ೯, ಮತ್ತು ಎಂಬುದಾಗಿ ಮೂರು ಉಪಸಂಜ್ಞೆ ಗಳಿರುವಂತೆ), ಎಷ್ಟು ಶೀಘ್ರವಾಗಿ ಅವನ್ನು ಬರೆಯಬಹುದು, ಟೈಪ್ ಮಾಡ ಬಹುದು, ಮತ್ತು ಎಷ್ಟು ಹತ್ತಿರ ಹತ್ತಿರವಾಗಿ ಅವನ್ನು ಮುದ್ರಿಸಬಹುದು, ಇತ್ಯಾದಿ. ಈ ಎಲ್ಲಾ ವಿಷಯಗಳಲ್ಲೂ ದೇವನಾಗರಿ ಲಿಪಿಗೆ ದೊರಕುವ ಅಂಕ ಗಳು ಬಹಳ ಕಡಿಮೆ.
ದೇವನಾಗರಿ ಲಿಪಿಯ ಸಂಜ್ಞೆಗಳು ಬಹಳ ತೊಡಕು ತೊಡಕಾಗಿವೆ; ಹಾಗಾಗಿ ಅವನ್ನು ಬರೆಯುವಾಗ ಕೈ ಹೆಚ್ಚು ಶೀಘ್ರವಾಗಿ ಓಡಲಾರದು; ಸಂಜ್ಞೆಗಳ ಮೇಲೆ ಬರುವ ತಲೆಕೊಟ್ಟು ಬರೆಯುವ ವೇಗವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ; ಸಂಜ್ಞೆಗಳು ಒಂದಕ್ಕೊಂದು ಸೇರಿಕೊಳ್ಳದೆ ದೂರ ದೂರ ನಿಲ್ಲುವುವಾದ್ದರಿಂದ ಬರೆಯುವಾಗ ಲೇಖನಿಯನ್ನು ಆಗಾಗ ಎತ್ತಿ ಇಡಬೇಕಾಗುತ್ತದೆ; ಅದರಲ್ಲಿ ಬರುವ ಒತ್ತಕ್ಷರಗಳು ಮತ್ತು ಸ್ವರ ಸಂಜ್ಞೆಗಳು ಈ ಲಿಪಿಯನ್ನು ಟೈಪ್ ರೈಟರ್‌ಗೆ ಅಳವಡಿಸುವಲ್ಲಿ ಬಹಳಷ್ಟು ತೊಂದರೆ ಕೊಟ್ಟಿವೆ; ಮುದ್ರಣದಲ್ಲೂ ಈ ಲಿಪಿಯ ಸಾಲುಗಳನ್ನು ರೋಮನ್ ಲಿಪಿಯ ಸಾಲುಗಳಷ್ಟು ಹತ್ತಿರ ಹತ್ತಿರ ವಾಗಿ ಮುದ್ರಿಸಲು ಸಾಧ್ಯವಾಗದು.
ಹಾಗಿದ್ದರೆ, ದೇವನಾಗರಿ ಲಿಪಿ ಅತ್ಯಂತ ವೈಜ್ಞಾನಿಕ ಲಿಪಿಯೆಂದು ಬಹಳ ಮಂದಿ ಸಾರಿ ಹೇಳುತ್ತಿರುವುದಕ್ಕೆ ಕಾರಣವೇನು? ಅದರ ಸಂಜ್ಞೆಗಳ (ಸಂಕೇತ
ಗಳ) ಪಟ್ಟಿ (ಅಕ್ಷರಮಾಲೆ)ಯನ್ನು ಸಂಜ್ಞೆಗಳು ಸೂಚಿಸುವ ಧ್ವನಿಗಳ ಉಚ್ಚಾ ರಣೆಗೆ ಅನುಸಾರವಾಗಿ ಸಿದ್ಧಪಡಿಸಲಾಗಿದೆಯೆಂಬುದೇ ಇದಕ್ಕೆ ಮುಖ್ಯ ಆಧಾರ. ಆದರೆ, ಅಕ್ಷರಮಾಲೆಯ ರಚನೆಗೂ ಲಿಪಿಯ ಯೋಗ್ಯತೆಗೂ ಯಾವ ಸಂಬಂಧವೂ ಇಲ್ಲವೆಂಬುದನ್ನು ಈ ಮಹನೀಯರು ಗಮನಿಸಿದಂತಿಲ್ಲ. ಒಂದು ಲಿಪಿಯಲ್ಲಿ ಬರುವ ಸಂಜ್ಞೆಗಳನ್ನು ಹೇಗೆ ಬೇಕಿದ್ದರೂ ಪಟ್ಟಿಮಾಡಬಹುದು. ಇದರಿಂದಾಗಿ ಆ ಲಿಪಿಯ ಯೋಗ್ಯತೆಯೇನೂ ಹೆಚ್ಚು ಕಡಿಮೆಯಾಗುವುದಿಲ್ಲ.
ಹಿಂದಿಯನ್ನು ಇಲ್ಲವೇ ಸಂಸ್ಕೃತವನ್ನು ದೇವನಾಗರಿಯಲ್ಲದೆ ಬೇರಾವ ಲಿಪಿಯಲ್ಲಿ ಬರೆದರೂ ಅದರ ಯೋಗ್ಯತೆ ಅಳಿಯುತ್ತದೆ ಎಂದು ವಾದಿಸುವ ಈ ಹಿಂದೀ ಪ್ರೇಮಿಗಳಿಗೆ, ಕನ್ನಡವೇ ಮೊದಲಾದ ಇತರ ಲಿಪಿಗಳನ್ನು ಬಳಸು ವವರಿಗೂ ತಮ್ಮ ತಮ್ಮ ಲಿಪಿಗಳಲ್ಲಿ ಆದರವಿರುತ್ತದೆ ಎಂಬ ವಿಷಯ ಅರ್ಥ ವಾಗುವುದಿಲ್ಲ. ದೇವನಾಗರಿ ಲಿಪಿಗಿಂತ ವೈಜ್ಞಾನಿಕವಾಗಿ ಹೆಚ್ಚು ಯೋಗ್ಯತೆಯುಳ್ಳ ಕನ್ನಡ ಲಿಪಿಯನ್ನು ನೂರಾರು ವರ್ಷಗಳಿಂದಲೂ ನಮ್ಮ ಹಿರಿಯರು ಬೆಳೆಸಿ ಕೊಂಡು ಬಂದಿರುವ ಕಾರಣ, ಅದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ವಾಗಿದೆ. ಅದನ್ನು ಖಡ್ಡಾಯವಾಗಿ ತೊರೆಯಬೇಕಿದ್ದರೂ ಆ ಸ್ಥಾನಕ್ಕೆ ದೇವನಾಗರಿ ಲಿಪಿ ಯಾವ ವಿಧದಲ್ಲೂ ಅರ್ಹವಲ್ಲವೆಂಬುದನ್ನು ಕನ್ನಡಿಗರು ಮರೆಯಬಾರದು.
ಕನ್ನಡಕ್ಕೆ ರೋಮನ್ ಲಿಪಿ
ಇವತ್ತಿನ ಕನ್ನಡಲಿಪಿಯೊಂದಿಗೆ ಆಯ್ಕೆಯ ಲಿಪಿಯಾಗಿ ಬಳಸಲು, ರೋಮನ್ ಲಿಪಿಯನ್ನು ಬಳಸಿ ಮಾಡಿದ ‘ಹಲ’ ಎಂಬ ಹೆಸರಿನ ಹೊಸಲಿಪಿಯೊಂದನ್ನು ಬಾ. ರಾ. ಕಿರಣ್ ಅವರು ಕನ್ನಡ ಬರಹಗಾರರ ಮುಂದಿರಿಸುತ್ತಿದ್ದಾರೆ. ರೋಮನ್ ಲಿಪಿಯ ಅಕ್ಷರಗಳಲ್ಲಿ ನಮಗೆ ಬೇಕಾದುವನ್ನು ಆರಿಸಿ, ಅವುಗಳಲ್ಲಿ ಕೆಲವಕ್ಕೆ ಮೇಲೆ ಗೆರೆ ಎಳೆದ ಮತ್ತು ಇನ್ನು ಕೆಲವಕ್ಕೆ ಕೆಳಗೆ ಚುಕ್ಕೆ ಇರಿಸಿದ ಕೆಲವು ಹೆಚ್ಚಿನ ಅಕ್ಷರಗಳನ್ನು ಸೇರಿಸಿ, ಅವರು ಈ ಹಲಲಿಪಿಯನ್ನು ಉಂಟುಮಾಡಿದ್ದಾರೆ. ಈಗಾಗಲೇ ಮೊಬೈಲ್‌ಗಳ ಮೂಲಕ ಎಸ್ಸೆಮೈನ್ಸ್ ಕಳುಹಿಸುವುದಕ್ಕಾಗಿ ಕನ್ನಡವನ್ನು ಬಳಸುವವರೆಲ್ಲರೂ ಅದಕ್ಕಾಗಿ ಕನ್ನಡ ಲಿಪಿಯ ಬದಲು ರೋಮನ್ ಲಿಪಿಯನ್ನೇ ಬಳಸುತ್ತಿದ್ದಾರೆ. ಆದರೆ, ಹೀಗೆ ಬಳಸುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆ ಲಿಪಿಯ ಅಕ್ಷರಗಳನ್ನು ಅಳವಡಿಸಿಕೊಳ್ಳುವ ಕಾರಣ, ತುಂಬಾ ಗೊಂದಲಗಳಿವೆ. ಇದಕ್ಕೆ ಬದಲು, ಎಲ್ಲರೂ ಒಂದೇ ರೀತಿಯಲ್ಲಿ ಅವನ್ನು ಬಳಸುವ ಹಾಗಾದರೆ, ಈ ಗೊಂದಲ ಇಲ್ಲವಾಗಬಹುದು. ಕಿರಣ್ ಅವರ ಹಲಲಿಪಿ ಇಲ್ಲಿ ನೆರವಾಗಬಲ್ಲುದು.
ಬೇರೆ ಕಡೆಗಳಲ್ಲೂ ಕನ್ನಡವನ್ನು ಬರೆಯಲು ಈ ಹೊಸಲಿಪಿಯನ್ನು ಒಂದು ಆಯ್ಕೆಯ ಲಿಪಿಯಾಗಿ ಬಳಸಬಹುದು; ಅದರಲ್ಲಿ ಪುಸ್ತಕಗಳನ್ನೂ ಅಚ್ಚು ಹಾಕಿಸಬಹುದು. ಯಾಕೆಂದರೆ, ಅದರ ಬಳಕೆಯಿಂದ ನಾವು ಹಲವು ಹೆಚ್ಚಿನ ಪ್ರಯೋಜನಗಳನ್ನೂ ಪಡೆಯಬಲ್ಲೆವು: ಅದರಲ್ಲಿ ಕನ್ನಡವನ್ನು ಓದಲು-
ಬರೆಯಲು ಕಲಿತವರಿಗೆ ಇಂಗ್ಲಿಷ್ ಕಲಿಯಲು ಹೆಚ್ಚು ಸುಲಭವಾಗಬಲ್ಲುದು ಎಂಬುದೊಂದು; ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಈಗಿನ ಲಿಪಿಯಲ್ಲಿರುವ ಸ್ಪೆಲ್ಲಿಂಗ್ ತೊಡಕುಗಳು ಹೊಸಲಿಪಿಯಲ್ಲಿ ಇಲ್ಲವಾಗುತ್ತವೆ ಎಂಬುದಿನ್ನೊಂದು; ಮತ್ತು ಕನ್ನಡ ಮಾತನಾಡಲು ಬರುತ್ತಿದ್ದರೂ ಅದರ ಲಿಪಿಯನ್ನು ಕಲಿಯದವರು ಮತ್ತು ಇಂಗ್ಲಿಷ್ ತಿಳಿದಿರುವವರು ಸುಲಭವಾಗಿ ಈ ಲಿಪಿಯಲ್ಲಿ ಕನ್ನಡ ಬರಹಗಳನ್ನು ಓದಬಲ್ಲರು ಎಂಬುದಿನ್ನೊಂದು.
ಅಕ್ಷರಗಳ ರಚನೆಯ ಮಟ್ಟಿಗೆ, ಹಲಲಿಪಿಯನ್ನು ಬಳಸುವುದು ಈಗಿರುವ ಕನ್ನಡ ಲಿಪಿಗಿಂತ ಹಲವು ವಿಷಯಗಳಲ್ಲಿ ಹೆಚ್ಚು ಅನುಕೂಲವಾಗಿದೆ. ಉದಾ ಹರಣೆಗಾಗಿ, ಅದರಲ್ಲಿ ಒತ್ತಕ್ಷರಗಳಿರುವುದಿಲ್ಲ; ಹಾಗಾಗಿ, ಅದರ ಸಾಲುಗಳನ್ನು ಹೆಚ್ಚು ಹತ್ತಿರ ಇರಿಸಬಹುದು. ತುಂಬಾ ಚಿಕ್ಕದಾಗಿ ಅಚ್ಚುಹಾಕಿಸಿದರೂ ಅದನ್ನು ಓದಲು ಕಷ್ಟವಾಗುವುದಿಲ್ಲ. ಕನ್ನಡ ಲಿಪಿಯನ್ನು ಅಷ್ಟು ಚಿಕ್ಕದಾಗಿ ಅಚ್ಚು ಹಾಕಿಸಿದರೆ ಓದಲು ತುಂಬಾ ಕಷ್ಟವಾಗುತ್ತದೆ. ಕನ್ನಡ ಲಿಪಿಯಲ್ಲಿ ವ್ಯಂಜನಗಳ ಬಳಿಕ ಬರುವ ಸ್ವರಗಳನ್ನು ಮತ್ತು ವ್ಯಂಜನಗಳನ್ನು ಅದರೊಂದಿಗೆ ಸೇರಿಸಿ ಬರೆಯುವುದು ಇದಕ್ಕೆ ಕಾರಣವಿರಬಹುದು.
ಇದಲ್ಲದೆ, ಕಂಪ್ಯೂಟರ್ ಮೊದಲಾದ ಉಪಕರಣಗಳಲ್ಲಿ ಕನ್ನಡವನ್ನು ಈ ಹಲಲಿಪಿಯಲ್ಲಿ ಬಳಸುವುದು ಹೆಚ್ಚು ಸುಲಭವಾಗುತ್ತದೆ; ಇಂಗ್ಲಿಷ್‌ನಂತಹ ಯುರೋಪಿನ ನುಡಿಗಳಿಂದ ಪದಗಳನ್ನು ಎರವಲು ಪಡೆದು ಬಳಸುವುದೂ ಸುಲಭ; ಮತ್ತು, ಈ ಲಿಪಿಯಿಂದಾಗಿ ಕನ್ನಡಕ್ಕೆ ಜಾಗತಿಕ ಮಟ್ಟದ ಬಳಕೆ ಸುಲಭವಾಗುತ್ತದೆ. ಇಂತಹ ಹಲವು ಪ್ರಯೋಜನಗಳಿರುವ ಕಾರಣ, ಇದನ್ನು ಒಂದು ಆಯ್ಕೆಯ ಲಿಪಿಯಾಗಿ ಬಳಕೆಗೆ ತರುವುದರಿಂದ ಯಾವ ತೊಂದರೆಯೂ ಇಲ್ಲ.
೩.೩ ಋಕಾರದ ಅಳಿವು-ಉಳಿವು
ಕನ್ನಡದ ಪಠ್ಯಪುಸ್ತಕಗಳಲ್ಲಿ ಋ ಎಂಬ ಅಕ್ಷರವನ್ನು ಬಳಸುವ ಬದಲು ರು ಎಂಬುದನ್ನೇ ಬಳಸುವ ಮೂಲಕ (ಋಷಿ, ಕೃಷ್ಣ, ಮೃಗ ಮೊದಲಾದ ಪದ ಗಳನ್ನು ರುಷಿ, ಕ್ರುಷ್ಣ, ಮುರುಗ ಇತ್ಯಾದಿಯಾಗಿ ಬರೆಯುವುದರ ಮೂಲಕ), ಕನ್ನಡ ಲಿಪಿಯನ್ನು ಕಲಿಯಬೇಕಾಗಿರುವ ಮಕ್ಕಳ ಹೊರೆಯನ್ನು ಕಡಿಮೆಮಾಡ ಬಹುದೆಂದು ಪಠ್ಯಪುಸ್ತಕ ಸಮಿತಿಯವರು ಒಂದು ನಿರ್ಧಾರಕ್ಕೆ ಬಂದಿದ್ದರು. ಆದರೆ ಈ ನಿರ್ಧಾರವನ್ನು ಹಲವು ಮಂದಿ ಗಣ್ಯರ ವಿರೋಧದಿಂದಾಗಿ ಕೈಬಿಡ ಬೇಕಾಯಿತೆಂದು ದಿನಪತ್ರಿಕೆಗಳಲ್ಲಿ ಬರೆದಿದೆ. ಇಲ್ಲಿ ಯಾವ ನಿರ್ಧಾರ ಸರಿ ಮತ್ತು ಯಾವುದು ತಪ್ಪು?
ವರ್ಣಮಾಲೆ ಮತ್ತು ಅಕ್ಷರಮಾಲೆ
ಭಾಷೆಯಲ್ಲಿರುವ ವರ್ಣಮಾಲೆಗೂ ಅದು ಬಳಸುವ ಲಿಪಿಯಲ್ಲಿ ಇರುವ ಅಕ್ಷರ ಮಾಲೆಗೂ ನಡುವೆ ವ್ಯತ್ಯಾಸಗಳಿರಬಲ್ಲುವು. ಹೆಚ್ಚಿನ ಭಾಷೆಗಳೂ ಬೇರೆ ಯಾವುದೋ ಒಂದು ಭಾಷೆಗಾಗಿ ಸಿದ್ಧವಾದ ಲಿಪಿಯನ್ನು ತಮ್ಮದಾಗಿ ಮಾಡಿ ಕೊಂಡಿರುವುದು ಇದಕ್ಕೆ ಒಂದು ಕಾರಣ. ಭಾರತದ ಭಾಷೆಗಳು ಬಳಸುವ ಲಿಪಿ ಗಳಲ್ಲಿ ಹೆಚ್ಚಿನವಕ್ಕೂ ಅಶೋಕನ ಕಾಲದಲ್ಲಿ ಪಾಲಿ ಭಾಷೆಯನ್ನು ಬರೆಯಲು ಬಳಸುತ್ತಿದ್ದ ಬ್ರಾಹ್ಮೀ ಲಿಪಿಯೇ ಮೂಲ. ಇದಲ್ಲದೆ, ಭಾರತದ ಹೊರಗೆ ಬಳಕೆ ಯಲ್ಲಿರುವ ಟಿಬೆಟನ್, ಬರ್ಮೀಸ್, ಥಾಯಿ, ಲವೋತಿಯನ್, ಕಂಬೋಡಿಯನ್ ಮೊದಲಾದ ಇತರ ಹಲವು ಭಾಷೆಗಳು ಬಳಸುವ ಲಿಪಿಗಳಿಗೂ ಇದೇ ಬ್ರಾಹ್ಮೀ ಲಿಪಿ ಮೂಲವಾಗಿದೆ.
ಒಂದು ಲಿಪಿಯನ್ನು ತಮ್ಮದಾಗಿ ಮಾಡಿಕೊಳ್ಳುವಾಗ, ಬೇರೆ ಬೇರೆ ಭಾಷೆ ಗಳು ಅದರಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಎಲ್ಲಾ ಭಾಷೆಗಳಲ್ಲೂ ವರ್ಣಮಾಲೆ ಒಂದೇ ಆಗಿಲ್ಲದಿರುವುದೇ ಇದಕ್ಕೆ ಕಾರಣ. ಉದಾಹರಣೆಗಾಗಿ, ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿ ಕೊಂಡಾಗ ಅದರಲ್ಲಿ ದೀರ್ಘ ಎಕಾರ ಮತ್ತು ದೀರ್ಘ ಒಕಾರ (ಏ ಮತ್ತು ಓ) ಎಂಬ ಎರಡು ಹೆಚ್ಚಿನ ಸ್ವರಾಕ್ಷರಗಳನ್ನೂ, ಅ ಮತ್ತು ಿ ಎಂಬ ಎರಡು ಹೆಚ್ಚಿನ ವ್ಯಂಜನಾಕ್ಷರಗಳನ್ನೂ ಸೇರಿಸಿಕೊಳ್ಳಬೇಕಾಗಿತ್ತು.
ಎರವಲಾಗಿ ಪಡೆದ ಲಿಪಿಯಲ್ಲಿರುವ ಅನವಶ್ಯಕವಾದ ಅಕ್ಷರಗಳನ್ನು ಬಿಟ್ಟು ಕೊಡುವುದೂ ಅಪರೂಪವೇನಲ್ಲ. ಉದಾಹರಣೆಗಾಗಿ, ಇದೇ ಬ್ರಾಹ್ಮೀ ಲಿಪಿ ಯನ್ನು ತಮಿಳಿಗೆ ಅಳವಡಿಸಿಕೊಳ್ಳುವಾಗ, ವರ್ಗಾಕ್ಷರಗಳಲ್ಲಿ ಮೊದಲನೆಯ ಮತ್ತು ಐದನೆಯ ಅಕ್ಷರಗಳನ್ನು ಮಾತ್ರ (ಉದಾ: ಕವರ್ಗದಲ್ಲಿ ಕ ಮತ್ತು ಜಿ ಎಂಬವುಗಳನ್ನು ಮಾತ್ರ) ಉಳಿಸಿಕೊಳ್ಳುವ ಅವಶ್ಯಕತೆ ಕಂಡುಬಂದಿತ್ತು. ಹಾಗಾಗಿ, ಉಳಿದ ಮೂರು ಅಕ್ಷರಗಳನ್ನು (ಖ, ಗ, ಘಗಳನ್ನು) ತಮಿಳು ಲಿಪಿಗೆ ಅಳವಡಿಸಿ ಕೊಂಡಿರಲಿಲ್ಲ. ಇತರ ವರ್ಗಗಳಲ್ಲೂ ಇದೇ ವಿಧಾನವನ್ನು ಅನುಸರಿಸಲಾಯಿತು.
ಇದಲ್ಲದೆ, ಕಾಲದಿಂದ ಕಾಲಕ್ಕೆ ಭಾಷೆಗಳಲ್ಲಿ ನಡೆಯುವ ಬದಲಾವಣೆ ಗಳಿಂದಾಗಿ ಅವುಗಳಲ್ಲಿರುವ ವರ್ಣಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗಲು ಸಾಧ್ಯವಿದೆ, ಮತ್ತು ಈ ರೀತಿ ನಡೆಯುವ ಬದಲಾವಣೆಗಳಿಂದಲೂ ಅವುಗಳ ಲ್ಲಿರುವ ವರ್ಣ ಮತ್ತು ಅಕ್ಷರಗಳ ನಡುವೆ ವ್ಯತ್ಯಾಸಗಳುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ, ಹಳೆಗನ್ನಡದಲ್ಲಿ ರ-ಅ ಮತ್ತು ಳಿ-ಳಗಳನ್ನು ಭಿನ್ನ ಭಿನ್ನವಾಗಿ ಉಚ್ಚರಿಸುತ್ತಿದ್ದಿರಬೇಕು. ಈ ಉಚ್ಚಾರಣಾಭೇದ ಹೊಸಗನ್ನಡದ ಕಾಲದಲ್ಲಿ ಅಳಿದು ಹೋಗಿದೆ. ಅದು ಈ ರೀತಿ ಅಳಿದುಹೋಗುತ್ತಿರುವ ಕಾಲದಲ್ಲಿ ಬರಹಕ್ಕೂ ಉಚ್ಚಾರಣೆಗೂ ನಡುವೆ ಅಂತರವೇರ್ಪಟ್ಟಿರಬೇಕು. ಆದರೆ, ಹೊಸ ಗನ್ನಡದ ಬರಹದಲ್ಲಿ ಅ ಮತ್ತು ಳಿ ಎಂಬ ಎರಡು ವ್ಯಂಜನಾಕ್ಷರಗಳನ್ನು ತೆಗೆದು ಹಾಕುವ ಮೂಲಕ, ಈ ಅಂತರವನ್ನು ಇಲ್ಲವಾಗಿಸಲಾಗಿದೆ.
ಸ್ಟೆಲ್ಲಿಂಗ್ ಸಮಸ್ಯೆ
ಭಾಷೆಯೊಂದರ ವರ್ಣಮಾಲೆಗೂ ಅದು ಬಳಸುವ ಲಿಪಿಯ ಅಕ್ಷರ ಮಾಲೆಗೂ ನಡುವೆ ಹೊಂದಾಣಿಕೆಯಿಲ್ಲವಾದಾಗಲೆಲ್ಲ ಆ ಭಾಷೆಯ ಬರವಣಿಗೆಯಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ತಲೆದೋರುತ್ತದೆ. ಕನ್ನಡದ ಲಿಪಿಯಲ್ಲಿ ಬರುವ ಶ ಮತ್ತು ಷ ಎಂಬ ಎರಡು ಅಕ್ಷರಗಳಿಗೂ ಉಚ್ಚಾರ ಒಂದೇ. ಎಂದರೆ, ಅವು ಒಂದೇ ವರ್ಣವನ್ನು ಸೂಚಿಸುತ್ತಿದ್ದು, ಅವುಗಳ ಬಳಕೆಯಲ್ಲಿ ಅಕ್ಷರಕ್ಕೂ ವರ್ಣಕ್ಕೂ ನಡುವೆ ಹೊಂದಾಣಿಕೆಯಿಲ್ಲ. ಇದೇ ರೀತಿಯಲ್ಲಿ, ಐ ಮತ್ತು ಅಯ್ ಎಂಬವು ಗಳ ನಡುವೆ, ಔ ಮತ್ತು ಅವ್ ಎಂಬವುಗಳ ನಡುವೆ, ಮತ್ತು ಅಲ್ಪಪ್ರಾಣಾಕ್ಷರ -ಮಹಾಪ್ರಾಣಾಕ್ಷರಗಳ ನಡುವೆ ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಉಚ್ಚಾರಣೆ ಯಲ್ಲಿ ವ್ಯತ್ಯಾಸವಿಲ್ಲ.
ಕನ್ನಡದ ಲಿಪಿಯಲ್ಲಿ ಋಕಾರದ ಸ್ಥಾನವೂ ಇಂತಹದೇ. ಹೆಚ್ಚಿನವರೂ ಅದನ್ನು ರು ಇಲ್ಲವೇ ರಿ ಎಂದು ಉಚ್ಚರಿಸುತ್ತಾರೆ. (ಅಥವಾ ರಕಾರವನ್ನೇ ಉಕಾರ ಮತ್ತು ಇಕಾರಗಳಿಂದ ಭಿನ್ನವಾದ ಬೇರೊಂದು ಸ್ವರದೊಂದಿಗೆ ಉಚ್ಚರಿಸುತ್ತಾರೆ.) ಯಾರೂ ಅದನ್ನು ಒಂದು ಸ್ವತಂತ್ರ ಸ್ವರವಾಗಿ ಉಚ್ಚರಿಸುವು ದಿಲ್ಲ. ಉಚ್ಚಾರಣೆಯಲ್ಲಿಲ್ಲದ ಈ ವ್ಯತ್ಯಾಸವನ್ನು ಲಿಪಿಯಲ್ಲಿ ಕಾಣಿಸಬೇಕಾಗಿರು ವುದರಿಂದ, ಅದೊಂದು ಸ್ಟೆಲ್ಲಿಂಗ್ ಸಮಸ್ಯೆಯಾಗಿದೆ.
ಬರಹದಲ್ಲಿರುವ ಅಕ್ಷರಗಳಿಗೂ ಅವುಗಳ ಉಚ್ಚಾರಣೆಗೂ ನಡುವೆ ಈ ರೀತಿ ವ್ಯತ್ಯಾಸಗಳು ಕಾಣಿಸಿಕೊಳ್ಳಲು ಲಿಪಿಯನ್ನು ಭಾಷೆಗೆ ಅಳವಡಿಸಿಕೊಳ್ಳುವಾಗ ಲಿಪಿ ಪಂಡಿತರು ಮಾಡುವ ತಪ್ಪುಗಳು ಇನ್ನೊಂದು ಕಾರಣ. ಹಿಂದಿನ ಕಾಲದಲ್ಲಿ ಬರಹವನ್ನು ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರು. ಶ-ಷಭೇದ, ಅಲ್ಪಪ್ರಾಣ-ಮಹಾಪ್ರಾಣಭೇದ ಮತ್ತು ಋ-ರು ಭೇದವನ್ನು ಇವರು ಉಚ್ಚಾರಣೆ ಯಲ್ಲಿ ಸ್ಪಷ್ಟವಾಗಿ ಮೂಡಿಸುತ್ತಿದ್ದಿರಬಹುದು. ಆದರೆ, ಇವತ್ತು ಬರಹವನ್ನು ಬಳಸುವವರ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿರುವ ಕಾರಣ, ಹೆಚ್ಚಿನವರ ಉಚ್ಚಾರಣೆಯಲ್ಲೂ ಈ ವ್ಯತ್ಯಾಸಗಳು ಕಾಣಿಸದೆ ತೊಂದರೆಯುಂಟಾಗಿದೆ.
ಐ-ಅಯ್ ಭೇದ, ಔ-ಅವ್ ಭೇದ, ಮತ್ತು ಸೊನ್ನೆ-ಅನುನಾಸಿಕ ಭೇದ ಕನ್ನಡದ ಮಟ್ಟಿಗೆ ಅವಶ್ಯವಿಲ್ಲದ ವ್ಯತ್ಯಾಸಗಳು. ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸುವಾಗ ನಮ್ಮ ಹಿಂದಿನವರು ಇವನ್ನು ಬಿಟ್ಟುಕೊಡಬಹುದಿತ್ತು. ಹಾಗೆ ಮಾಡದಿದ್ದುದೇ ಇವತ್ತಿನ ತೊಂದರೆಗೆ ಕಾರಣ.
ಅ-ರ ಮತ್ತು ಬಿ-ಳಗಳ ನಡುವಿನ ವ್ಯತ್ಯಾಸ ಉಚ್ಚಾರಣೆಯಲ್ಲಿ ಇಲ್ಲವಾದು ದನ್ನು ಗಮನಿಸಿ, ನಮ್ಮ ಹಿರಿಯರು ಅ ಮತ್ತು ಿ ಎಂಬ ಎರಡು ಅಕ್ಷರಗಳು ಹೊಸಗನ್ನಡಕ್ಕೆ ಅನವಶ್ಯಕ ಎಂಬುದಾಗಿ ನಿರ್ಧರಿಸಿದ್ದರು, ಮತ್ತು ಅವನ್ನು ನಮ್ಮ ಬರಹದಿಂದ ತೆಗೆದುಹಾಕಿದ್ದರು. ಅವರು ಹೀಗೆ ಮಾಡಿರದಿದ್ದರೆ ಇವತ್ತಿಗೂ ನಾವು ಈ ಎರಡು ಹೆಚ್ಚಿನ ಅಕ್ಷರಗಳನ್ನು ಕಟ್ಟಿಕೊಂಡು ಕಷ್ಟಪಡಬೇಕಾಗುತ್ತಿತ್ತು.
ಉಚ್ಚಾರಣೆಯಲ್ಲಿ ವ್ಯತ್ಯಾಸವಿಲ್ಲದ ಇತರ ಅಕ್ಷರಯುಗ್ಮಗಳ ಸ್ಥಿತಿಯೂ ಇಂತಹದೇ. ಎಷ್ಟೋ ಬಾರಿ ಎಲ್ಲಿ ಷ ಬರೆಯಬೇಕು ಮತ್ತು ಎಲ್ಲಿ ಶ ಬರೆಯ ಬೇಕು ಎಂಬುದನ್ನು ನಿರ್ಧರಿಸಲು ನಾವು ಅರ್ಥಕೋಶದ ಮರೆಹೊಗಬೇಕಾಗು ತ್ತದೆ. ಇವುಗಳ ಉಚ್ಚಾರಣೆಯಲ್ಲಿ ವ್ಯತ್ಯಾಸವಿಲ್ಲದಿರುವುದೇ ಇದಕ್ಕೆ ಕಾರಣ. ಈ ಎರಡು ವ್ಯಂಜನಗಳನ್ನು ಬರೆಯುವಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡುವುದಕ್ಕೂ ಇದೇ ಕಾರಣ. ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವಿನ ವ್ಯತ್ಯಾಸವೂ ಇಂತಹದೇ. ಹೆಚ್ಚಿನ ಕನ್ನಡಿಗರ ಉಚ್ಚಾರಣೆಯಲ್ಲೂ ಇವುಗಳೊಳಗೆ ಯಾವ ವ್ಯತ್ಯಾಸವೂ ಇಲ್ಲ. ಬರಹದಲ್ಲಿ ಮಾತ್ರ ಈ ವ್ಯತ್ಯಾಸವನ್ನು ಕಾಣಿಸಬೇಕಾಗುತ್ತದೆ. ಹಾಗಾಗಿ, ಎಲ್ಲಿ ಮಹಾಪ್ರಾಣ ಬರಬೇಕು, ಮತ್ತು ಎಲ್ಲಿ ಅಲ್ಪಪ್ರಾಣ ಬರಬೇಕು ಎಂಬುದನ್ನು ನಿರ್ಧರಿಸಲು ನಾವು ಆಗಾಗ ಅರ್ಥಕೋಶದ ಮರೆಹೊಗಬೇಕಾಗು ತ್ತದೆ.
ಸಮಸ್ಯೆಗೆ ಪರಿಹಾರ
ಈ ರೀತಿ ಬರಹಕ್ಕೂ ಮಾತಿಗೂ (ಉಚ್ಚಾರಣೆಗೂ) ನಡುವೆ ಹೊಂದಾಣಿಕೆ ತಪ್ಪಿಹೋದಾಗಲೆಲ್ಲ ಬರಹದಲ್ಲಿ ಬದಲಾವಣೆಯನ್ನು ಮಾಡಿ ಅದು ಉಚ್ಚಾ ರಣೆಗೆ ಹೊಂದಿಕೊಳ್ಳುವಂತೆ ಮಾಡುವುದೇ ಸ್ಪೆಲ್ಲಿಂಗ್ ಸಮಸ್ಯೆಗೆ ಉತ್ತಮ ಪರಿಹಾರ. ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಬಹಳ ಜಟಿಲ ವಾಗಿದೆ. ಹಾಗಾಗಿ, ಅದನ್ನು ಪರಿಹರಿಸುವುದೂ ಬಹಳ ಕಷ್ಟ. ಆದರೆ, ಕನ್ನಡದ ಬರಹದಲ್ಲಿ ಹೆಚ್ಚಿನಡೆಗಳಲ್ಲೂ ಮಾತಿನೊಡನೆ ನೇರವಾದ ಹೊಂದಾಣಿಕೆ ಯಿರುವುದಾದ ಕಾರಣ, ಕೆಲವೇ ಕೆಲವು ಬದಲಾವಣೆಗಳ ಮೂಲಕ ಅದರಲ್ಲಿ ಕಾಣಿಸುವ ಸ್ಪೆಲ್ಲಿಂಗ್ ಸಮಸ್ಯೆಯನ್ನು ನಿವಾರಿಸಬಹುದು.
ಇಲ್ಲಿ ಕೆಲವು ಮುಖ್ಯವಾದ ವಿಷಯಗಳನ್ನು ಗಮನಿಸುವುದು ಅವಶ್ಯ. ಕಾಲ ದಿಂದ ಕಾಲಕ್ಕೆ ಭಾಷೆ ಬದಲಾಗುತ್ತಿರುವುದು ಒಂದು ಸಹಜವಾದ ಕ್ರಿಯೆ. ಅದು ನಮ್ಮ ಅರಿವಿಗೆ ಎಟಕದ ವ್ಯಾಕರಣ ಜ್ಞಾನದಲ್ಲಿ ನಡೆಯುವ ಬದಲಾವಣೆಯ ಫಲವಾದ ಕಾರಣ, ಅದನ್ನು ಯಾರೂ ತಡೆಯಲಾರರು. ಆದರೆ ಈ ಬದಲಾವಣೆ ಗಳನ್ನನುಸರಿಸಿ ನಮ್ಮ ಬರಹ ಇಲ್ಲವೇ ಲಿಪಿಯಲ್ಲಿ ಬದಲಾವಣೆಗಳನ್ನು ಪ್ರಯತ್ನ ಪೂರ್ವಕವಾಗಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಭಾಷೆ ಮತ್ತು ಬರಹಗಳ ನಡುವೆ ಹೊಂದಾಣಿಕೆ ತಪ್ಪಿಹೋಗಿ, ಬರಹವನ್ನು ಸ್ಪೆಲ್ಲಿಂಗ್ ಸಮಸ್ಯೆ ಕಾಡುತ್ತದೆ.
ಇಂತಹ ಬದಲಾವಣೆಗಳನ್ನು ಸಮಾಜದ ಗಣ್ಯರು ನಿಷೇಧಿಸುವುದೂ ಸಹಜವೇ. ಅವರು ಸಾಮಾನ್ಯವಾಗಿ ಈ ರೀತಿ ಲಿಪಿಯಲ್ಲಿ ಮಾಡಬಹುದಾದ ಬದಲಾವಣೆಗಳನ್ನು ಮಾತ್ರವಲ್ಲ, ಭಾಷೆಯಲ್ಲಿ ಸಾಹಜವಾಗಿ ನಡೆಯುವಂತಹ ಬದಲಾವಣೆಗಳನ್ನೂ ಸಹಿಸುವುದಿಲ್ಲ. ಆದರೆ, ಭಾಷೆಯಲ್ಲಿ ನಡೆಯುವ ಬದಲಾ ವಣೆಗಳ ಮೇಲೆ ಯಾರಿಗೂ ನೇರವಾದ ನಿಯಂತ್ರಣವಿರುವುದಿಲ್ಲ. ಅಂತಹ
ಬದಲಾವಣೆಗಳು ಬರಹವನ್ನು ಸ್ಪರ್ಶಿಸದಂತೆ ಅವರು ಸ್ವಲ್ಪಮಟ್ಟಿಗೆ ಅದನ್ನು ನಿಯಂತ್ರಿಸಬಲ್ಲರು. ಆದರೆ ಇದರಿಂದಾಗಿ ಬರಹಕ್ಕೂ ಮಾತಿಗೂ ನಡುವೆ ಕಂದಕ ವೇರ್ಪಡುತ್ತದೆ.
ಸ್ಟೆಲ್ಲಿಂಗ್ ಸಮಸ್ಯೆ ಸ್ವಲ್ಪ ಸ್ವಲ್ಪವಾಗಿ ಬರಹದಲ್ಲಿ ಸೇರಿಕೊಳ್ಳುತ್ತಿರುತ್ತದೆ. ಇದು ಬಹಳ ಜಾಸ್ತಿಯಾದಾಗ ಮಾತ್ರ, ಜನರಿಗೆ ಅದೊಂದು ಸಮಸ್ಯೆಯೆಂಬ ಅರಿವಾಗುತ್ತದೆ. ಇಂತಹ ಸಮಯದಲ್ಲಿ ಕ್ರಾಂತಿಕಾರೀ ಯುವಕರು ಗಣ್ಯರ ವಿರೋಧವನ್ನೂ ಲೆಕ್ಕಿಸದೆ, ಬರಹವನ್ನು ಬದಲಾಯಿಸಿಕೊಳ್ಳಬಲ್ಲರು. ಕನ್ನಡದಲ್ಲಿ ಮುಖ್ಯವಾಗಿ ರು-ಋ, ಶ-ಷ, ಅಯ್-ಐ, ಅವ್-ಔ, ಮತ್ತು ಅಲ್ಪಪ್ರಾಣ- ಮಹಾಪ್ರಾಣಗಳೆಂಬ ಈ ಅಕ್ಷರಯುಗ್ಮಗಳ ಬಳಕೆಯಲ್ಲಿ, ಮತ್ತು ಸೊನ್ನೆ ಹಾಗೂ ವಿಸರ್ಗಗಳ ಬಳಕೆಯಲ್ಲಿ ಸ್ಟೆಲ್ಲಿಂಗ್ ಸಮಸ್ಯೆಯಿರುವುದಂತೂ ನಿಜ.
ಈ ಅಕ್ಷರಯುಗಗಳಲ್ಲಿ ಪ್ರತಿಯೊಂದರಲ್ಲೂ ಎರಡನೆಯ ಅಕ್ಷರವನ್ನು ಬರಹದಿಂದ ತೆಗೆದುಹಾಕಿ ಕನ್ನಡ ಬರಹದ ಸ್ಪೆಲ್ಲಿಂಗ್ ಸಮಸ್ಯೆಯನ್ನು ನಿವಾರಿಸ ಬಹುದು. ಹೀಗೆ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಬರಹವನ್ನು ಕಲಿಯಲು ಮತ್ತು ಇತರರಿಗೆ ಅದನ್ನು ಬಳಸಲು ಸುಲಭವಾದೀತು ಎಂಬುದೂ ನಿಜವೇ. ಆದರೆ, ಇಂತಹ ಬದಲಾವಣೆಗಳನ್ನು ಮಾಡಬೇಕೇ ಅಥವಾ ಬೇಡವೇ, ಮತ್ತು ಮಾಡುವುದಾದರೆ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ಸಮಾಜವೇ ನಿರ್ಧರಿಸಬೇಕು.
ಹಳೇ ಮತ್ತು ಹೊಸ ಬರಹಗಳು
ಈ ಅನವಶ್ಯಕವಾದ ಅಕ್ಷರಗಳನ್ನು ಬಿಟ್ಟುಕೊಟ್ಟಲ್ಲಿ, ಅವುಗಳನ್ನು ಬಳಸುವ ಹಳೆಯ ಬರಹಗಳನ್ನು ಓದಲು ಕಷ್ಟವಾಗಬಹುದೇ, ಮತ್ತು ಹಾಗೆ ಓದುವಾಗ ಗೊಂದಲವುಂಟಾಗಬಹುದೇ ಎಂಬುದನ್ನೂ ಚಿಂತಿಸುವುದು ಅವಶ್ಯ. ನಿಜಕ್ಕೂ ಒಂದು ಹೊಸ ಅಕ್ಷರವನ್ನು ಗುರುತಿಸಿಕೊಳ್ಳಲು ನಮಗೆ ಕೆಲವೇ ಕೆಲವು ಮಿನಿಟು ಗಳಷ್ಟು ಸಮಯ ಸಾಕು.
ಉದಾಹರಣೆಗಾಗಿ, ಹಳೆಗನ್ನಡದ ಬರಹಗಳನ್ನು ಮೊದಲ ಬಾರಿಗೆ ಓದುವಾಗ ಅವುಗಳಲ್ಲಿ ಹೊಸದಾಗಿ ಕಾಣಿಸುವ ಅ ಮತ್ತು ಿಗಳನ್ನು ಗುರುತಿಸಿಕೊಳ್ಳುವಲ್ಲಿ ನಮಗೆ ಸಮಸ್ಯೆಯೇನೂ ಉದ್ಭವಿಸುವುದಿಲ್ಲ. ಇವತ್ತಿನ ಉಚ್ಚಾರಣೆಯಲ್ಲಿ ಅ-ರ ಮತ್ತು ಿ-ಳಗಳೊಳಗೆ ವ್ಯತ್ಯಾಸವಿಲ್ಲ, ಹಳೆಗನ್ನಡದ ಕಾಲದಲ್ಲಿದ್ದ ವ್ಯತ್ಯಾಸವನ್ನು ಅವು ಪ್ರತಿನಿಧೀಕರಿಸುತ್ತವೆ ಎಂದಿಷ್ಟನ್ನು ಮಾತ್ರ ನಮಗೆ ಯಾರಾದರೂ ತಿಳಿಸಿ ಹೇಳಿದರೆ ಸಾಕು.
ನಿಜಕ್ಕೂ ಉಚ್ಚಾರಣೆಯಲ್ಲಿ ಕಾಣಿಸದ ವ್ಯತ್ಯಾಸವನ್ನು ಬರಹದಲ್ಲಿ ಕಾಣಿಸ ಬೇಕಾಗಿ ಬಂದಾಗ ಮಾತ್ರ ಸಮಸ್ಯೆ ಎದುರಾಗುತ್ತದೆ. ಎಲ್ಲಿ ಋ ಬರೆಯಬೇಕು ಎಲ್ಲಿ ರು ಬರೆಯಬೇಕು, ಇಲ್ಲವೇ ಎಲ್ಲಿ ಶ ಬರೆಯಬೇಕು ಎಲ್ಲಿ ಷ ಬರೆಯ ಬೇಕು, ಎಲ್ಲಿ ಮಹಾಪ್ರಾಣ ಬಳಸಬೇಕು ಎಲ್ಲಿ ಅಲ್ಪಪ್ರಾಣ ಬಳಸಬೇಕು
ಎಂಬುದೇ ನಮ್ಮ ಸಮಸ್ಯೆ. ಇತರರು ಅಂತಹ ವ್ಯತ್ಯಾಸವನ್ನು ಕಾಣಿಸಿರುವರಾದರೆ ಅದನ್ನು ಓದುವಲ್ಲಿ ನಮಗೆ ಯಾವ ಸಮಸ್ಯೆಯೂ ಉದ್ಭವಿಸಲಾರದು. ಹಾಗಾಗಿ, ಋ, ಐ, ಔ, ಷ, ಸೊನ್ನೆ, ವಿಸರ್ಗ ಮೊದಲಾದ ಅನವಶ್ಯಕವಾದ ಅಕ್ಷರಗಳನ್ನು ನಮ್ಮ ಬರಹದಿಂದ ತೆಗೆದು ಹಾಕಿದೆವಾದರೆ, ಕನ್ನಡ ಬರಹದಲ್ಲಿ ಕಾಣಿಸುವ ಸ್ಪೆಲ್ಲಿಂಗ್ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗಬಲ್ಲುದಲ್ಲದೆ, ಅವನ್ನು ಬಳಸುವ ಹಳೆಯ ಬರಹಗಳನ್ನು ಓದುವಲ್ಲಿ ಎಂತಹ ಗೊಂದಲವೂ ಉಂಟಾಗ ಲಾರದು.
ಯಾವುದು ಸಂಸ್ಕೃತಿ?
ಈ ಮೇಲಿನ ಅಕ್ಷರಯುಗ್ಮಗಳು ಕನ್ನಡ ಭಾಷೆಯ ಮಟ್ಟಿಗೆ ಅನವಶ್ಯಕ ಎಂಬುದರಲ್ಲಿ ಸಂಶಯವಿಲ್ಲ. ಸಂಸ್ಕೃತ ಭಾಷೆಯನ್ನು ಬರೆಯುವಲ್ಲಿ ಅವು ಅವಶ್ಯವಿರಬಹುದು. ಅವುಗಳಲ್ಲಿ ಕೆಲವು ವೇದಕಾಲದಲ್ಲಿ ಸಂಸ್ಕೃತ ಭಾಷೆಯನ್ನು ನುಡಿಯುತ್ತಿದ್ದಾಗ ಮಾಡುತ್ತಿರಬಹುದಾದ ಉಚ್ಚಾರಣಾಭೇದವನ್ನು ಪ್ರತಿಬಿಂಬಿಸು ತಿವೆ. ಇನ್ನು ಕೆಲವು ಸಂಧಿಕಾರ್ಯದಲ್ಲಿ ಕಾಣಿಸುವ ವ್ಯತ್ಯಾಸವನ್ನು ಸೂಚಿಸುವು ದಕ್ಕಾಗಿ ಬಳಕೆಗೆ ಬಂದಿವೆ. ಆದರೆ ಈ ಕಾರಣಕ್ಕಾಗಿ ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಈ ಲಿಪಿಭೇದವನ್ನು ನಾವು ಹಾಗೆಯೇ ಉಳಿಸಿ ಕೊಳ್ಳಬೇಕು, ಇಲ್ಲವಾದರೆ ನಮ್ಮ ‘ಸಂಸ್ಕೃತಿ’ಯೇ ನಷ್ಟವಾಗುತ್ತದೆ ಎಂದು ಕೆಲವರು ಗಣ್ಯರು ವಾದಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ಸಂಗತಿ.
ಈ ರೀತಿ ಸಂಸ್ಕೃತ ಲಿಪಿಯ ವೈಶಿಷ್ಟ್ಯವನ್ನು ಹಾಗೆಯೇ ಉಳಿಸಿಕೊಳ್ಳ ದಿದ್ದರೆ ನಮ್ಮ ಸಂಸ್ಕೃತಿಯೇ ನಾಶವಾಗುವುದೆಂದು ಹೇಳುವ ಈ ಗಣ್ಯರು ಯಾರೂ ಹಳೆಗನ್ನಡದ ಅ ಮತ್ತು ಳಿಗಳನ್ನು ಕೈಬಿಟ್ಟಿರುವುದರಿಂದಾಗಿ ನಮ್ಮ ಸಂಸ್ಕೃತಿ ನಷ್ಟವಾಗಿದೆಯೆಂದಾಗಲಿ, ಇಲ್ಲವೇ ಅವನ್ನು ಪುನಃ ಬಳಕೆಗೆ ತರ ಬೇಕೆಂದಾಗಲಿ ಹೇಳುವ ಹಾಗೆ ಕಾಣಿಸುವುದಿಲ್ಲ. ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನು ಕನ್ನಡದಲ್ಲಿ ನಾವು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯುವುದರಲ್ಲಿ ತಪ್ಪೇನಿಲ್ಲ. ಹಾಗೆ ಮಾಡುವುದೇ ನಮ್ಮ ಸಂಸ್ಕೃತಿಯೆಂದು ತಿಳಿದುಕೊಂಡರೆ ಸಾಕು.
ತಮಿಳು ಬರಹದಲ್ಲಿ ಋಕಾರ, ವಿಸರ್ಗ, ಸೊನ್ನೆ, ಮಹಾಪ್ರಾಣ ಮೊದಲಾ ದವುಗಳನ್ನು ಬಳಸುವ ಕ್ರಮವಿಲ್ಲ. ಹೀಗೆ ಬಳಸದಿರುವುದೇ ತಮ್ಮ ಸಂಸ್ಕೃತಿ ಯೆಂದು ಅವರು ತಿಳಿದಿದ್ದಾರೆ. ಏ-ಓ, ಅ-ಅಗಳು ಮಾತ್ರವಲ್ಲದೆ ಕನ್ನಡದ ಲ್ಲಿಲ್ಲದ ವಿಶಿಷ್ಟವಾದೊಂದು ನಕಾರವನ್ನೂ ಅವರು ತಮ್ಮ ಲಿಪಿಗೆ ಅವಶ್ಯವೆಂದು ಸೇರಿಸಿಕೊಂಡಿದ್ದಾರೆ. ನಮ್ಮ ಭಾಷೆಯಲ್ಲಿರುವ ವರ್ಣಗಳನ್ನೆಲ್ಲ ತಪ್ಪಿಲ್ಲದೆ ಸರಿಯಾಗಿ ಸೂಚಿಸುವಂತಹ ಲಿಪಿಯನ್ನು ನಮ್ಮ ಭಾಷೆಗೆ ಅಳವಡಿಸಿಕೊಳ್ಳುವುದೇ ಸಂಸ್ಕೃತಿಯಲ್ಲದೆ ಅನವಶ್ಯಕವಾದ ಸಂಜ್ಞೆಗಳನ್ನು ಕಷ್ಟದಿಂದ ಉಳಿಸಿಕೊಳ್ಳುವುದು ಭ್ರಮೆಯಲ್ಲದೆ ಸಂಸ್ಕೃತಿಯಲ್ಲ.
ಟರ್ಕಿ ದೇಶದ ಲಿಪಿಕ್ರಾಂತಿ
ನನ್ನ ಚಿಕ್ಕಂದಿನಲ್ಲಿ ಜುಟ್ಟನ್ನು ಇರಿಸಿಕೊಳ್ಳುವುದು ಸಂಸ್ಕೃತಿಯೆಂದು ಹಿರಿಯರು ವಿಧಿಸಿದ್ದರು. ಆದರೆ ಶಾಲೆಯಲ್ಲಿ ಹೆಚ್ಚಿನವರೂ ಅದನ್ನು ತೆಗೆದುಹಾಕಿ ಅಂದವಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದರಾದ ಕಾರಣ, ನನಗೆ ಜುಟ್ಟನ್ನು ಇರಿಸಿ ಕೊಳ್ಳುವುದು ಮುಜುಗರವೆಂದೆನಿಸುತ್ತಿತ್ತು. ಹಾಗಾಗಿ, ಯಾವಾಗಲೂ ನಾನು ಒಂದು ಗಾಂಧೀ ಟೊಪ್ಪಿಯನ್ನು ಧರಿಸುತ್ತಿದ್ದು, ಜುಟ್ಟನ್ನು ಅದರ ಒಳಗೆ ಅಡಗಿಸಿ ಕೊಳ್ಳುತ್ತಿದ್ದೆ. ಅನಂತರ ಉಚ್ಚವಿದ್ಯಾಭ್ಯಾಸಕ್ಕಾಗಿ ದೂರದ ಊರಿನಲ್ಲಿರಬೇಕಾಗಿ ಬಂದಾಗ, ಧೈರ್ಯ ತಂದುಕೊಂಡು ಅದನ್ನು ತೆಗೆಸಿ ಹಾಕಿ ಆ ‘ಸಂಸ್ಕೃತಿ’ಯ ಹೊರೆಯಿಂದ ಮುಕ್ತನಾದೆ.
ಋಕಾರ, ಷಕಾರ, ಐಕಾರ ಮೊದಲಾದವುಗಳ ಹೊರೆಯೂ ಇಂತಹದೇ ಎಂದು ನನ್ನ ಅಭಿಪ್ರಾಯ. ಆ ಹೊರೆಯಿಂದ ಮುಕ್ತರಾಗಲು ಧೈರ್ಯ ಬೇಕು. ಗಣ್ಯರೆಂದೆನ್ನಿಸಿಕೊಂಡವರ ವಿರೋಧವನ್ನೂ ಲೆಕ್ಕಿಸದೆ ಅನವಶ್ಯಕವಾದ ಈ ಹೊರೆಯನ್ನು ತೆಗೆದುಹಾಕಿದಲ್ಲಿ, ಮುಂದಿನ ಪೀಳಿಗೆಯವರೆಲ್ಲರ ಕೃತಜ್ಞತೆಗೂ ನಾವು ಭಾಗಿಗಳಾಗಬಲ್ಲೆವು.
೩.೪ ಟರ್ಕಿ ದೇಶದ ಲಿಪಿಕ್ರಾಂತಿ
ಸುಮಾರು ಎಪ್ಪತ್ತೈದು ವರ್ಷಗಳಷ್ಟು ಹಿಂದೆ, ಟರ್ಕಿ ದೇಶದಲ್ಲಿ ಒಂದು ದೊಡ್ಡ ಲಿಪಿಕ್ರಾಂತಿ ನಡೆಯಿತು. ಅದುವರೆಗೆ ಹೆಚ್ಚಿನವರೂ ತಮ್ಮ ಬರಹಗಳಲ್ಲಿ ಬಳಸು ತಿದ್ದ ಅರೇಬಿಕ್ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ಲ್ಯಾಟಿನ್ ಲಿಪಿ ಯನ್ನು ಬಳಸುವ ನಿರ್ಧಾರ ಮಾಡಲಾಯಿತು. ಇದರಿಂದಾಗಿ, ಮೇಲ್ವರ್ಗದ ಕೆಲವೇ ಕೆಲವು ಜನರ ಸೊತ್ತಾಗಿ ಉಳಿದಿದ್ದ ಟರ್ಕಿಷ್ ಬರಹ ಎಲ್ಲರ ಸೊತ್ತಾಗಲು ಸಾಧ್ಯವಾಯಿತು.
ಬರಹ ಎಲ್ಲರ ಸೊತ್ತಾಗಬೇಕು, ಎಲ್ಲರೂ ‘ಸಾಕ್ಷರರಾಗಬೇಕು’ ಎಂಬ ಪ್ರಯತ್ನ ನಮ್ಮಲ್ಲೂ ಹಲವು ವರ್ಷಗಳಿಂದ ನಡೆಯುತ್ತಿದೆ, ಮತ್ತು ಇದಕ್ಕಾಗಿ ನಮ್ಮ ಸರಕಾರ ಕೋಟಿಗಟ್ಟಲೆ ಹಣವನ್ನೂ ಖರ್ಚು ಮಾಡುತ್ತಿದೆ. ಆದರೆ, ಇದರ ಪ್ರತಿಫಲ ಮಾತ್ರ ತುಂಬಾ ಕಡಿಮೆ. ಕಷ್ಟಪಟ್ಟು ಬರಹ ಕಲಿತರೂ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳಬಲ್ಲವರು ಇವತ್ತಿಗೂ ನಮ್ಮಲ್ಲಿ ಹೆಚ್ಚು ಮಂದಿಯಿಲ್ಲ.
ಕೆಳವರ್ಗದ ಜನರು ಕನ್ನಡ ಬರಹವನ್ನು ಕಲಿಯದಿರುವುದಕ್ಕೆ, ಮತ್ತು ಕಲಿತರೂ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಲು ಸಾಧ್ಯವಾಗ ದಿರುವುದಕ್ಕೆ ನಾವು ಕನ್ನಡದಲ್ಲಿ ಬಳಸುವ ಲಿಪಿಯ ದೋಷವೇನಾದರೂ ಕಾರಣ ವಿರಬಹುದೇ? ಮತ್ತು ಇದು ನಿಜವಾದರೆ, ಟರ್ಕಿಷ್ ದೇಶದ ಈ ಲಿಪಿಕ್ರಾಂತಿ
ಯಿಂದ ನಾವೇನಾದರೂ ಕಲಿತುಕೊಳ್ಳಲು ಸಾಧ್ಯವೇ ಎಂಬುದನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆಯಿದೆ.
ಅರೇಬಿಕ್ ಲಿಪಿಯ ದೋಷಗಳು
ಟರ್ಕಿಷ್ ಭಾಷೆಯನ್ನಾಡುವ ಜನರು ಮುಸ್ಲಿಮರಾಗಿ ಮತಾಂತರಗೊಂಡಾಗ ಲೇನೇ ಅರೇಬಿಕ್ ಲಿಪಿಯನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡಿರಬೇಕು. ಹಾಗಾಗಿ, ಆ ಲಿಪಿಯ ಬಳಕೆಗೆ ಟರ್ಕಿಷ್ ಭಾಷೆಯಲ್ಲಿ ಸಾವಿರ ವರ್ಷಗಳಿ ಗಿಂತಲೂ ಹೆಚ್ಚು ದೀರ್ಘವಾದ ಚರಿತ್ರೆಯಿದೆ. ಆದರೆ, ಆ ಲಿಪಿ ಹಲವು ರೀತಿಯಲ್ಲಿ ಟರ್ಕಿಷ್ ಪದಗಳ ಉಚ್ಚಾರಣೆಯನ್ನು ಸರಿಯಾಗಿ ಸೂಚಿಸಲು ಶಕ್ತವಾಗಿರಲಿಲ್ಲ.
ಉದಾಹರಣೆಗಾಗಿ, ಟರ್ಕಿಷ್ ಭಾಷೆಯಲ್ಲಿ ಎಂಟು ಸ್ವರವರ್ಣಗಳಿದ್ದು ವಾದರೂ ಅದು ಬಳಸುವ ಅರೇಬಿಕ್ ಲಿಪಿಯಲ್ಲಿ ಮೂರು ಸ್ವರಗಳನ್ನು ಮಾತ್ರ ಸೂಚಿಸಲು ಸಾಧ್ಯವಿತ್ತು. ಇದಲ್ಲದೆ, ಅರೇಬಿಕ್ ಮತ್ತು ಪರ್ಶಿಯನ್ ಭಾಷೆ ಗಳಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಾಗ, ಉಚ್ಚಾರಣೆಯಲ್ಲಿ ಇಲ್ಲದಂತಹ ಹಲವು ವ್ಯತ್ಯಾಸಗಳನ್ನು ಲಿಪಿಯಲ್ಲಿ ತೋರಿಸುವ ಪದ್ಧತಿ ಬಳಕೆ ಯಲ್ಲಿತ್ತು. ಬರಹದಲ್ಲಿ ಇಂತಹ ಪದಗಳ ಬಳಕೆಯೂ ಬಹಳ ಜಾಸ್ತಿಯಿತ್ತು. ಇದರಿಂದಾಗಿ, ಬರಹದ ಭಾಷೆ ಮಾತಿನ ಭಾಷೆಗಿಂತ ಬಹಳ ಭಿನ್ನವಾಗಿ ಬೆಳೆದು ಬಂದಿತ್ತು.
ಈ ಎಲ್ಲಾ ಕಾರಣಗಳಿಂದಾಗಿ, ಟರ್ಕಿಷ್ ಬರಹ ಆ ದೇಶದಲ್ಲಿ ಕೆಲವರ ಸೊತ್ತಾಗಿ ಮಾತ್ರ ಉಳಿದಿತ್ತು. ಶೇಕಡಾ ಹತ್ತಕ್ಕಿಂತ ಕಡಿಮೆ ಜನ ಮಾತ್ರ ಆ ದೇಶದಲ್ಲಿ ಬರಹವನ್ನು ಬಲ್ಲವರಾಗಿದ್ದರು. ಈ ಪರಿಸ್ಥಿತಿ ಹಿಂದಿನ ಕಾಲಕ್ಕೆ ಸರಿಹೋಗಬಹುದಿತ್ತಾದರೂ, ಇಪ್ಪತ್ತನೇ ಶತಮಾನಕ್ಕೆ ಕಾಲಿರಿಸುತ್ತಿದ್ದಂತೆ, ಯುರೋಪಿನ ಇತರ ದೇಶಗಳಲ್ಲಿ ಕಾಣಿಸುವ ಹಾಗೆ, ಟರ್ಕಿ ದೇಶದಲ್ಲೂ ಬರಹ ಎಲ್ಲರ ಸೊತ್ತಾಗಬೇಕೆಂಬ ಕಳಕಳಿ ಅಲ್ಲಿನ ವಿದ್ವಾಂಸರಲ್ಲಿ ಮತ್ತು ರಾಜಕಾರಣಿ ಗಳಲ್ಲಿ ಉಂಟಾಯಿತು.
ಲಿಪಿಯ ಬದಲಾವಣೆ
೧೯೨೩ರಲ್ಲಿ ಟರ್ಕಿ ಒಂದು ಪ್ರಜಾಪ್ರಭುತ್ವವುಳ್ಳ ಗಣರಾಜ್ಯವಾಯಿತು. ಆಗ ಈ ಕಳಕಳಿಗೆ ಇನ್ನಷ್ಟು ಹೆಚ್ಚಿನ ಮಹತ್ವ ಬಂತು. ಪ್ರಜಾಪ್ರಭುತ್ವದಲ್ಲಿ ಬರಹ ಎಲ್ಲರ ಸೊತ್ತಾಗುವುದು ರಾಜಕೀಯವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯವಶ್ಯ. ಹೆಚ್ಚಿನ ವಿದ್ವಾಂಸರೂ ಈ ರೀತಿ ಟರ್ಕಿಷ್ ಬರಹ ಎಲ್ಲರ ಸೊತ್ತಾಗದಿರುವುದಕ್ಕೆ ಅದು ಬಳಸುವ ಅರೇಬಿಕ್ ಲಿಪಿಯೇ ಕಾರಣ ಎಂಬ ನಿರ್ಧಾರಕ್ಕೆ ಬಂದಿದ್ದರು.
ಟರ್ಕಿ ದೇಶದ ಲಿಪಿಕ್ರಾಂತಿ
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಿಂದಲೂ ಅರೇಬಿಕ್ ಲಿಪಿ ಯಲ್ಲಿ ಟರ್ಕಿಷ್ ಭಾಷೆಯನ್ನು ಬರೆಯುವ ಕುರಿತು ವಿದ್ವಾಂಸರಲ್ಲಿ ಅಸಮಧಾನ ಕಾಣಿಸಲು ಸುರುವಾಗಿತ್ತು. ಆ ಸಮಯದಲ್ಲಿ ಹೆಚ್ಚಿನವರೂ ಟರ್ಕಿಷ್ ಭಾಷೆ ಯನ್ನು ಬರೆಯಲು ಅರೇಬಿಕ್ ಲಿಪಿಯನ್ನು ಬಳಸುತ್ತಿದ್ದರಾದರೂ, ಅಲ್ಪಮತ ದವರಾದ ಕ್ರಿಶ್ಚಿಯನ್ನರು ರೋಮನ್ ಲಿಪಿಯನ್ನು ಬಳಸುತ್ತಿದ್ದರು. ಇದಲ್ಲದೆ, ಬೇರೆ ಕೆಲವರು ಗ್ರೀಕ್ ಲಿಪಿಯನ್ನೂ ಈ ಭಾಷೆಗೆ ಅಳವಡಿಸಿಕೊಂಡಿದ್ದರು.
ಪಕ್ಕದ ದೇಶವಾದ ಅಲ್ಬೇನಿಯಾದಲ್ಲಿ ೧೮೭೯ರಲ್ಲೇನೇ ಅಲ್ಬೇನಿಯನ್ ಭಾಷೆಗೆ ಅರೇಬಿಕ್ ಲಿಪಿಗಿಂತಲೂ ರೋಮನ್ ಲಿಪಿಯೇ ಉತ್ತಮವೆಂಬುದಾಗಿ ನಿರ್ಧರಿಸಿ, ಅದುವರೆಗೆ ಬಳಕೆಯಲ್ಲಿದ್ದ ಅರೇಬಿಕ್ ಲಿಪಿಗೆ ಬದಲಾಗಿ ರೋಮನ್ ಲಿಪಿಯನ್ನು ಬಳಸಲು ತೊಡಗಿಯಾಗಿತ್ತು. ಸುಧಾರಣೆಯ ಹೆಸರಿನಲ್ಲಿ ಹೀಗೆ ಮಾಡುವುದು ಧರ್ಮನಿಂದನೆಯೆಂಬುದಾಗಿ ಮತಾಧಿಕಾರಿಗಳು ಫತ್ವಾ ಹೊರಡಿ ಸಿದ್ದರಾದರೂ ಈ ಕೆಲಸ ನಡೆದುಹೋಗಿತ್ತು.
೧೯೨೮ರಲ್ಲಿ ಟರ್ಕಿ ದೇಶವೂ ಟರ್ಕಿಷ್ ಭಾಷೆಗೆ ಅರೇಬಿಕ್ ಲಿಪಿಯನ್ನು ಬಳಸುವ ಬದಲು ರೋಮನ್ ಲಿಪಿಯನ್ನು ಬಳಸಬೇಕೆಂಬ ನಿರ್ಧಾರಕ್ಕೆ ಬಂತು. ಆಗಿನ ಜನಪ್ರಿಯ ಅಧ್ಯಕ್ಷರಾಗಿದ್ದ ಮುಸ್ತಾಫಾ ಕಮಲ್ ಅವರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದುದರಿಂದಾಗಿ, ಈ ಬದಲಾವಣೆ ಇಡೀ ದೇಶದಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದು ಹೋಗಲು ಸಾಧ್ಯವಾಯಿತು. ಇದರಿಂದಾಗಿ, ಆ ದೇಶದಲ್ಲಿ ಹೆಚ್ಚು ಹೆಚ್ಚು ಜನ ಟರ್ಕಿಷ್ ಬರಹವನ್ನು ತಮ್ಮದನ್ನಾಗಿ ಮಾಡಿ ಕೊಳ್ಳಲು ಶಕ್ತರಾದರು.
ಕನ್ನಡದ ಪರಿಸ್ಥಿತಿ
ಕನ್ನಡದ ಪರಿಸ್ಥಿತಿ ಬಹಳಮಟ್ಟಿಗೆ ಈ ಟರ್ಕಿಷ್ ಪರಿಸ್ಥಿತಿಯನ್ನು ಹೋಲುತ್ತದೆ: ಟರ್ಕಿಷ್ ಭಾಷೆಗೆ ಅರೇಬಿಕ್ ಮೂಲದ ಲಿಪಿಯನ್ನು ಅಳವಡಿಸಿಕೊಂಡಿದ್ದ ಕಾರಣ, ಅರೇಬಿಕ್ ಮತ್ತು ಪರ್ಶಿಯನ್ ಮೂಲದ ಪದಗಳನ್ನು ಆ ಭಾಷೆಗಳಲ್ಲಿ ಹೇಗೆ ಬರೆಯುತ್ತಾರೋ ಹಾಗೆಯೇ ಟರ್ಕಿಷ್‌ನಲ್ಲೂ ಬರೆಯಬೇಕು ಎಂಬ ನಿಯಮವನ್ನು ತಮ್ಮ ಮೇಲೆ ಹೊರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿತ್ತು.
ಕನ್ನಡದಲ್ಲೂ ಹೀಗೆಯೇ. ಈ ಭಾಷೆಗೆ ಬ್ರಾಹ್ಮೀ ಲಿಪಿಯನ್ನು ಅಳವಡಿಸಿ ಕೊಂಡಿದ್ದ ಕಾರಣ, ಸಂಸ್ಕೃತ ಪದಗಳನ್ನು ಆ ಭಾಷೆಯಲ್ಲಿ ಹೇಗೆ ಬರೆಯು ತಾರೋ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದ ನಿಯಮವನ್ನು ನಮಗೂ ಮಾಡಿಕೊಳ್ಳಲು ಸಾಧ್ಯವಾಗಿತ್ತು.
ಟರ್ಕಿ ದೇಶದ ಜನರು ಈ ಅನವಶ್ಯಕವಾದ ಹೊರೆಯನ್ನು ತೆಗೆದು ಹಾಕಲು ತಮ್ಮ ಲಿಪಿಯನ್ನೇ ಬದಲಾಯಿಸಿಕೊಂಡರು. ಕನ್ನಡದಲ್ಲೂ ಈಗಿರುವ ಲಿಪಿಯನ್ನು ಬಿಟ್ಟುಕೊಟ್ಟು ರೋಮನ್‌ನಂತಹ ಬೇರೊಂದು ಲಿಪಿಯನ್ನು ಅಳವಡಿಸಿಕೊಂಡಲ್ಲಿ, ಸುಲಭವಾಗಿ ಮೇಲಿನ ಹೊರೆ ನಮ್ಮನ್ನು ಬಿಟ್ಟುಹೋದೀತು.
ಆದರೆ, ಅರೇಬಿಕ್ ಮೂಲದ ಲಿಪಿ ಬೇರೆಯೂ ಕೆಲವು ವಿಷಯಗಳಲ್ಲಿ ಟರ್ಕಿಷ್ ಭಾಷೆಗೆ ಅನುಕೂಲವಾಗಿರಲಿಲ್ಲ; ಉದಾಹರಣೆಗಾಗಿ, ಮೇಲೆ ತಿಳಿಸಿದ ಹಾಗೆ, ಟರ್ಕಿಷ್ ಭಾಷೆಯ ಎಲ್ಲಾ ಸ್ವರಗಳನ್ನೂ ಆ ಲಿಪಿಯಲ್ಲಿ ಸರಿಯಾಗಿ ಸೂಚಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಆ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗುವುದು ಈ ಹೆಚ್ಚಿನ ಕಾರಣಗಳಿಗಾಗಿಯೂ ಅವರಿಗೆ ಅವಶ್ಯವಾಗಿತ್ತು.
ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಬರೆಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. ಹಾಗಾಗಿ, ಕನ್ನಡದ ಈಗಿನ ಲಿಪಿಯಲ್ಲೇನೇ ಅವಶ್ಯವಿಲ್ಲದ ಅಕ್ಷರಗಳನ್ನು ತೆಗೆದುಹಾಕುವ ಮೂಲಕ, ಮೇಲಿನ ಹೊರೆಯಿಂದ ಮುಕ್ತರಾಗ ಬಲ್ಲೆವು.
೩.೫ ಕನ್ನಡಕ್ಕೊಂದು ‘ಹೊಸ ಬರಹ’
ಮೇಲೆ ೩.೩ನೇ ಲೇಖನದಲ್ಲಿ ವಿವರಿಸಿದ ಹಾಗೆ, ಕನ್ನಡ ಬರಹದಲ್ಲಿ ಕನ್ನಡಕ್ಕೆ ಬೇಕಾಗುವ ಅಕ್ಷರಗಳನ್ನು ಮಾತ್ರವೇ ಉಳಿಸಿಕೊಂಡಿರುವ ‘ಹೊಸ ಬರಹ’ ಎಂಬ ಹೆಸರಿನ ಕನ್ನಡ ಬರಹವೊಂದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ (೨೦೦೬, ೨೦೦೯) ಎಂಬ ಪುಸ್ತಕದಲ್ಲಿ ಓದುಗರ ಮುಂದಿರಿಸಿದ್ದೆ; ಇದಲ್ಲದೆ, ಆಮೇಲೆ ಬರೆದ ನಾಲ್ಕು ಪುಸ್ತಕಗಳಲ್ಲಿ ಅದನ್ನೇ ಬಳಸಿದ್ದೆ. (ಆದರೆ, ಈ ಪುಸ್ತಕದ ಲೇಖನಗಳನ್ನು ನಾನು ಅದಕ್ಕೆ ಮೊದಲೇ ಬರೆದಿದ್ದೆನಾದ ಕಾರಣ, ಅವುಗಳಲ್ಲಿ ಬಳಕೆಯಾಗಿದ್ದ ಹಳೆ ಬರಹವನ್ನು ಬದಲಿಸಹೋಗಿಲ್ಲ; ಇದರಲ್ಲಿ ಹೊಸದಾಗಿ ಸೇರಿಸಿರುವ ಲೇಖನಗಳಲ್ಲೂ ಅದನ್ನು ಬಳಸಿಲ್ಲ.)
ಕನ್ನಡದವೇ ಆದ ಪದಗಳನ್ನು ಬರೆಯಲು ಅ, ಆ, ಇ, ಈ, ಉ, ಊ, ಎ, ಏ, ಒ, ಓ ಎಂಬ ಹತ್ತು ಸ್ವರಗಳು ಮತ್ತು ಕ್, ಚ್, ಟ್, ತ್, ಪ್; ಗ್, ಜ್, ಡ್, ದ್, ಬ್; ಣ್, ನ್, ಮ್; ಸ್, ಶ್, ರ್; ಲ್, ಳ್; ಯ್, ವ್ ಎಂಬ ೨೧ ವ್ಯಂಜನಗಳು ಎಂಬುದಾಗಿ ಒಟ್ಟು ೩೧ ಅಕ್ಷರಗಳು ಮಾತ್ರ ಸಾಕಾಗುತ್ತದೆ; ಆದರೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವುದಕ್ಕಾಗಿ ಋ, ಐ, ಔ ಎಂಬ ಮೂರು ಹೆಚ್ಚಿನ ಸ್ವರಗಳು, ಮತ್ತು ಖ್, ಛ್, ಠ್, ಥ್, ಫ್; ಫ್, ಝ್, ಢ್, ಧ್, ಭ್; ಞ್, ಞ್; ಃ ಎಂಬ ೧೪ ಹೆಚ್ಚಿನ ವ್ಯಂಜನಗಳು ಎಂಬುದಾಗಿ ಒಟ್ಟು ೧೭ ಹೆಚ್ಚಿನ ಅಕ್ಷರಗಳನ್ನು ಇವತ್ತು ಕನ್ನಡ ಬರಹಗಳಲ್ಲಿ ಬಳಸುತ್ತಿದ್ದೇವೆ.
ಹಳೆಗನ್ನಡದಲ್ಲಿ ಳ್ ಮತ್ತು ಳ್ ಎಂಬ ಇನ್ನೂ ಎರಡು ಹೆಚ್ಚಿನ ಅಕ್ಷರ ಗಳು ಬಳಕೆಯಲ್ಲಿದ್ದುವು; ಆದರೆ ಹೊಸಗನ್ನಡದ ಕಾಲದಲ್ಲಿ, ಇವು ಹೆಚ್ಚಿನ ಕನ್ನಡಿಗರ ಉಚ್ಚಾರಣೆಯಲ್ಲೂ ರ್ ಮತ್ತು ಳ್ ಎಂಬವುಗಳಿಂದ ಭಿನ್ನವಾಗಿಲ್ಲ
ಕನ್ನಡಕ್ಕೊಂದು ‘ಹೊಸ ಬರಹ’
ಎಂಬುದನ್ನು ಗಮನಿಸಿದ ನಮ್ಮ ಹಿಂದಿನ ಬರಹಗಾರರು ಆ ಎರಡು ಅಕ್ಷರ ಗಳನ್ನು ಬರಹದಿಂದ ತೆಗೆದುಹಾಕಿದ್ದರು.
ಅದೇ ರೀತಿಯಲ್ಲಿ, ಸಂಸ್ಕೃತ ಪದಗಳನ್ನು ಬರೆಯುವಲ್ಲಿ ಬಳಕೆಯಾಗು ತಿರುವ ಮೇಲಿನ ೧೭ ಅಕ್ಷರಗಳೂ ಇವತ್ತು ಹೆಚ್ಚಿನ ಕನ್ನಡಿಗರ ಉಚ್ಚಾರಣೆ ಯಲ್ಲೂ ಭಿನ್ನವಾಗಿ ಕಾಣಿಸಿಕೊಳ್ಳುವುದಿಲ್ಲವೆಂಬುದನ್ನು ಗಮನಿಸಿ, ನಾವು ಇವತ್ತು ಅವನ್ನೂ ನಮ್ಮ ಬರಹದಿಂದ ತೆಗೆದುಹಾಕಬೇಕಾಗಿದೆ. ಈ ಕೆಲಸವನ್ನು ‘ಹೊಸ ಬರಹ’ದಲ್ಲಿ ಮಾಡಲಾಗಿದೆ.
ಇಂಗ್ಲಿಷ್‌ನಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಲ್ಲೂ ಮುಖ್ಯ ವಾಗಿ ಷ್, ಫ್ ಮತ್ತು ಥ್ ಎಂಬ ಮೂರು ಹೆಚ್ಚಿನ ಅಕ್ಷರಗಳನ್ನು ಕನ್ನಡ ಬರಹಗಳಲ್ಲಿ ಬಳಸಲಾಗುತ್ತದೆ; ಆದರೆ, ಇವುಗಳಲ್ಲಿ ಮೊದಲಿನದನ್ನು ಹೆಚ್ಚಿನ ಕನ್ನಡಿಗರೂ ತ್ ಎಂಬುದಾಗಿಯೇ ಉಚ್ಚರಿಸುತ್ತಾರೆ, ಮತ್ತು ಇಂಗ್ಲಿಷ್‌ನಲ್ಲಿಯೂ ಅದರ ಉಚ್ಚಾರ ತ್ ಎಂಬುದಾಗಿಯೇ ಇದೆ; ಹಾಗಿರುವಾಗ, ಅದನ್ನು ತ್ ಎಂಬುದಾಗಿ ಬರೆಯದೆ ಷ್ ಎಂಬುದಾಗಿ ಬರೆಯುವುದು ನಿಜಕ್ಕೂ ವಿಚಿತ್ರವೇ! (ಇಂಗ್ಲಿಶ್ ಎರವಲು ಪದಗಳನ್ನು ಬರೆಯುವಾಗ ತ್ ಎಂಬುದನ್ನು ನಾವು ಬಳಸುವುದೇ ಇಲ್ಲ!) ‘ಹೊಸ ಬರಹ’ದಲ್ಲಿ ಅದನ್ನು ತ್ ಎಂಬುದಾಗಿಯೇ ಬರೆಯಲಾಗುತ್ತದೆ. ಉಳಿದ ಎರಡು ಅಕ್ಷರಗಳ ಬದಲಾಗಿಯೂ ಪ್ ಮತ್ತು ತ್ ಎಂಬವುಗಳನ್ನೇ, ಹೆಚ್ಚಿನ ಕನ್ನಡಿಗರ ಉಚ್ಚಾರಣೆಯನ್ನನುಸರಿಸಿ, ಬಳಸಬಹುದು.
ವಿಮರ್ಶೆಗಳು
೨೦೦೬ರಲ್ಲಿ ನಾನು ಓದುಗರ ಮುಂದಿರಿಸಿದ್ದ ಈ ‘ಹೊಸ ಬರಹ’ದ ಕುರಿತಾಗಿ ಹಲವು ವಿಮರ್ಶೆಗಳು ಬಂದಿವೆ; ಹಲವರು ಅದರಿಂದಾಗಬಹುದಾದ ತೊಂದರೆ ಗಳ ಕುರಿತೂ ಬರೆದಿದ್ದಾರೆ. ಆದರೆ, ಅವರು ಕಲ್ಪಿಸಿಕೊಂಡಿರುವ ಈ ತೊಂದರೆ ಗಳು ನಿಜಕ್ಕೂ ತೊಂದರೆಗಳೇ ಅಲ್ಲ; ಭಾಷೆ ಮತ್ತು ಬರಹಗಳ ನಡುವಿನ ಸಂಬಂಧ ಎಂತಹದು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರು ಈ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಈ ವ್ಯತ್ಯಾಸ ಎಂತಹದು ಎಂಬುದನ್ನು ನಾನು ವಿವರವಾಗಿ ಮುಂದಿನ (೩.೬) ಲೇಖನದಲ್ಲಿ ಬರೆಯಲಿದ್ದೇನೆ.
ಒಂದು ಬರಹದಲ್ಲಿ ಬರೆದುದನ್ನು ಯಾವ ರೀತಿಯಲ್ಲಿ ಓದಲಾಗುತ್ತದೆ ಎಂಬುದನ್ನು ಓದುಗನಿಗೆ ತಿಳಿಸುವುದೇ ಅದರಲ್ಲಿ ಬಳಕೆಯಾಗುವ ಲಿಪಿಯ ಮುಖ್ಯ ಕೆಲಸ; ಪದಗಳ ಚರಿತ್ರೆಯನ್ನು ತಿಳಿಸುವುದಾಗಲಿ, ಬೇರೊಂದು ಭಾಷೆ ಯಲ್ಲಿ ಅವನ್ನು ಹೇಗೆ ಬರೆಯಲಾಗುತ್ತದೆ ಎಂಬುದನ್ನು ತಿಳಿಸುವುದಾಗಲಿ ಅದರ ಕೆಲಸವಲ್ಲ. ಇಂತಹ ಬೇಡದ ಕೆಲಸಗಳ ಹೊರೆಯನ್ನು ಅದರ ಮೇಲೆ ಹೊರಿಸಿ ದಾಗ, ಬರಹ ಕ್ಲಿಷ್ಟವಾಗುತ್ತಾ ಹೋಗುತ್ತದೆ.
ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ, ಅವನ್ನು ಸಂಸ್ಕೃತದಲ್ಲಿ ಹೇಗೆ ಬರೆಯಲಾಗುತ್ತದೆಯೋ ಹಾಗೆಯೇ ಬರೆಯಬೇಕು
ಎಂಬ ನಿಯಮ ಕನ್ನಡದ ಮಟ್ಟಿಗೆ ಇಂತಹ ತೀರಾ ಅನವಶ್ಯಕವಾದ ಒಂದು ಹೊರೆ. ಹಿಂದಿನ ಕಾಲದಲ್ಲಿ ಕನ್ನಡ ಬರಹಗಾರರಿಗೆ ಸಂಸ್ಕೃತದ ಮೇಲೆ ಅತಿಯಾದ ಪೂಜ್ಯಭಾವವಿತ್ತು; ಮತ್ತು ಈ ಕಾರಣಕ್ಕಾಗಿ, ಅದರ ಪದಗಳನ್ನು ‘ಕೆಡಿಸ’ಹೋಗದೆ ಅದರಲ್ಲಿರುವ ಹಾಗೆಯೇ ಅವನ್ನು ಕನ್ನಡದಲ್ಲೂ ಬರೆಯಬೇಕು ಎಂಬ ಈ ನಿಯಮವನ್ನು ಅವರು ತಮ್ಮ ಮೇಲೆ ಹೊರಿಸಿಕೊಂಡಿದ್ದರು.
ಹಿಂದಿನ ಕಾಲದಲ್ಲಿ ಸಮಾಜದ ಕೆಲವೇ ಕೆಲವು ಮಂದಿ ಪಂಡಿತರು ಮಾತ್ರ ಬರಹವನ್ನು ಬಳಸುತ್ತಿದ್ದರು; ಹಾಗಾಗಿ, ಮೇಲಿನ ಕಟ್ಟಲೆಯಿಂದ ಹೆಚ್ಚು ತೊಂದರೆಯಾಗುತ್ತಿರಲಿಲ್ಲ; ತೊಂದರೆಯಾದರೂ, ಸಂಸ್ಕೃತದ ಮೇಲಿನ ಪೂಜ್ಯ ಭಾವದಿಂದಾಗಿ ಅವರು ಅದನ್ನು ಸಹಿಸಿಕೊಂಡಿದ್ದರು. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಹಾಗಾಗಿ, ಈ ಸಂದರ್ಭ ದಲ್ಲಿ, ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾಗಿರುವ ಈ ನಿಯಮವನ್ನು ತೆಗೆದು ಹಾಕುವುದೇ ಬುದ್ಧಿವಂತಿಕೆ.
ಯಾಕೆಂದರೆ, ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಭವಾಗುವಂತೆ ಮಾಡಬಹುದು. ಸಂಸ್ಕೃತದ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ತಿಳಿಸು ವಲ್ಲಿ ಈ ೧೭ ಹೆಚ್ಚಿನ ಅಕ್ಷರಗಳು ಸ್ವಲ್ಪವೂ ಸಹಾಯಮಾಡುವುದಿಲ್ಲವಾದ ಕಾರಣ, ನಿಜಕ್ಕೂ ಅವು ಕನ್ನಡ ಬರಹಕ್ಕೆ ಬೇಕಾಗಿಯೇ ಇಲ್ಲ.
ನನ್ನ ಈ ವಾದ ತಪ್ಪು ಎಂದು ಹೇಳುವವರು ಯಾರೂ ಸಂಸ್ಕೃತ ಎರವಲು ಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯುವುದರಿಂದ ಕನ್ನಡದ ಓದುಗರಿಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಎಂಬುದನ್ನು ಎಲ್ಲೂ ತೋರಿಸಿ ಕೊಟ್ಟಿಲ್ಲ. ಬೇರೆ ಏನೇನೋ ವಿಷಯಕ್ಕೆ ಸಂಬಂಧಿಸದ ವಾದಗಳನ್ನು ಮುಂದಿಟ್ಟು ಕೊಂಡು ಅವರು ಈ ಬದಲಾವಣೆಯನ್ನು ವಿರೋಧಿಸುತ್ತಿದ್ದಾರೆ.
ಉದಾಹರಣೆಗಾಗಿ, ದ-ಧ ವ್ಯತ್ಯಾಸವನ್ನು ಬರಹದಲ್ಲಿ ತೋರಿಸದಿದ್ದರೆ ದನ -ಧನ, ಮದ್ಯ-ಮಧ್ಯ ಮೊದಲಾದ ಪದಗಳನ್ನು ಬರೆದಿರುವಲ್ಲಿ ಗೊಂದಲ ವುಂಟಾಗಬಲ್ಲುದು ಎಂಬ ವಾದವನ್ನು ಗಮನಿಸಬಹುದು. ಹಳೆಗನ್ನಡದ ರ-ಅ ಮತ್ತು ಳ-ಇ ವ್ಯತ್ಯಾಸವನ್ನು ಬಿಟ್ಟುಕೊಟ್ಟಾಗಲೂ ಇಂತಹದೇ ಸಮಸ್ಯೆ ಎದ್ದಿರ ಬಹುದಲ್ಲವೇ? ಯಾಕೆಂದರೆ, ಕರೆ ‘ಬರಹೇಳು’, ಕಳ್ ‘ಹಾಲು ಕರೆ’; ಸಾರು ‘ಹತ್ತಿರ ಹೋಗು’, ಸಾಳು ‘ಕೂಗಿ ಹೇಳು’; ಎಳೆ ‘ಎಳತು’, ಎಲ್ ‘ಎಳೆದಾಡು’ ಎಂಬಂತಹ ಹಲವಾರು ಪದಗಳನ್ನು ಬರೆಯುವಲ್ಲಿ, ಅ ಮತ್ತು ಇಗಳನ್ನು ತೆಗೆದುಹಾಕಿದಾಗ, ಮೊದಲಿಗಿದ್ದ ವ್ಯತ್ಯಾಸ ಇಲ್ಲವಾಗಿತ್ತು; ಹಾಗಿದ್ದರೂ ನಮ್ಮ ಹಿಂದಿನವರು ಧೈರ್ಯದಿಂದ ಈ ಮಾಪ್ಪಾಡನ್ನು ಮಾಡಿಕೊಂಡಿದ್ದರು. ಇವತ್ತು ಯಾರಿಗೂ ಇದೊಂದು ಸಮಸ್ಯೆಯೆಂದು ತೋರುವುದೇ ಇಲ್ಲವಲ್ಲ! ನಿಜಕ್ಕೂ ಅವರು ಈ ಬದಲಾವಣೆಯನ್ನು ಮಾಡಿರದಿದ್ದರೆ ಅದು ನಮಗೆ ಒಂದು ದೊಡ್ಡ ಸಮಸ್ಯೆಯಾಗುತ್ತಿತ್ತು
ಕನ್ನಡಕ್ಕೊಂದು ‘ಹೊಸ ಬರಹ’
ಇದಲ್ಲದೆ, ಮಾತಿನಲ್ಲಿ ಈ ವ್ಯತ್ಯಾಸ ಇಲ್ಲವಾದರೂ ತೊಂದರೆಯಾಗುವು ದಿಲ್ಲವೆಂದ ಮೇಲೆ, ಬರಹದಲ್ಲಿ ಯಾಕೆ ತೊಂದರೆಯಾಗಬೇಕು? ಇನ್ನೊಂದು ವಿಷಯವೇನೆಂದರೆ, ಭಾಷೆಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳಿಗೂ ಒಂದ ಕ್ಕಿಂತ ಹೆಚ್ಚು ಅರ್ಥಗಳಿರುತ್ತವೆ; ಸಂಸ್ಕೃತದ ಪದಗಳಿಗಂತೂ ಇನ್ನಷ್ಟು ಹೆಚ್ಚು ಅರ್ಥಗಳಿರುತ್ತವೆ; ಕೆಲವು ಪದಗಳಿಗೆ ಇಪ್ಪತ್ತು-ಮೂವತ್ತು ಅರ್ಥಗಳಿರುತ್ತವೆ. ಸಂಸ್ಕೃತದ ಒಂದು ಪದಕೋಶವನ್ನು ಬಿಡಿಸಿ ನೋಡಿದರೆ ಇದು ಸ್ಪಷ್ಟವಾದೀತು. ಹಾಗಿದ್ದರೂ, ಓದುಗರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಹೆಚ್ಚಿನೆಡೆ ಗಳಲ್ಲೂ ಬಳಸಿದ ಸಂದರ್ಭದಿಂದಲೇ ಅವುಗಳಲ್ಲಿ ಸರಿಯಾದ ಅರ್ಥವನ್ನು ಆರಿಸಿಕೊಳ್ಳಲು ನಮಗೆ ಗೊತ್ತಾಗುತ್ತದೆ. ಹಾಗಾಗಿ, ಕನ್ನಡ ಬರಹದಲ್ಲೂ ಓದಿನ ಲ್ಲಿಲ್ಲದ ಮೇಲಿನ ವ್ಯತ್ಯಾಸಗಳನ್ನು ತೆಗೆದುಹಾಕುವುದರಿಂದ ಓದುಗರಿಗೆ ಯಾವ ಹೆಚ್ಚಿನ ತೊಂದರೆಯೂ ಆಗಲಾರದು.
ಬರಹವನ್ನು ಸರಿಪಡಿಸುವುದು
‘ಭಾಷಾವಿಜ್ಞಾನಿಗಳು ಭಾಷೆಗಳನ್ನು ವರ್ಣಿಸಹೋಗಬೇಕಲ್ಲದೆ ಅವನ್ನು ಬದಲಾ ಯಿಸುವ ಪ್ರಯತ್ನ ಮಾಡಬಾರದು; ಹಾಗಿರುವಾಗ, ನಾನು ಯಾಕೆ ಈ ರೀತಿ ಕನ್ನಡವನ್ನು ಬದಲಾಯಿಸಲು ಹೊರಟಿದ್ದೇನೆ?’ ಎಂಬುದು ಅವರು ಎತ್ತಿರುವ ಇನ್ನೊಂದು ಆಕ್ಷೇಪ. ಆದರೆ, ನಾನಿಲ್ಲಿ ಬದಲಾಯಿಸಹೊರಟಿರುವುದು ಕನ್ನಡ ಭಾಷೆಯನ್ನಲ್ಲ, ಕನ್ನಡ ಬರಹವನ್ನು. ಭಾಷೆಗೂ ಬರಹಕ್ಕೂ ನಡುವಿರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಅವರು ಈ ಆಕ್ಷೇಪವನ್ನೆತ್ತಿದ್ದಾರೆ.
ಭಾಷೆ ತಾನಾಗಿಯೇ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ, ಮತ್ತು ಆ ಮೂಲಕ ಅದು ತನ್ನನ್ನು ಸರಿಪಡಿಸಿಕೊಳ್ಳುತ್ತಾ ಇರುತ್ತದೆ. ಹಾಗಾಗಿ, ಅದಕ್ಕೆ ಭಾಷಾವಿಜ್ಞಾನಿಯ ನೆರವು ಬೇಕಾಗಿಲ್ಲ. ಆತ ತನ್ನ ನೆರವನ್ನು ಕೊಡಲು ಹೋದರೂ ಅದು ಅದನ್ನು ಸ್ವೀಕರಿಸುವುದಿಲ್ಲ.
ಆದರೆ, ಬರಹ ಆ ರೀತಿಯದಲ್ಲ. ಹೊಸ ಹೊಸ ಸಂದರ್ಭಗಳಿಗೆ ಹೊಂದಿ ಕೊಳ್ಳುವ ಹಾಗೆ, ಅದನ್ನು ಬರಹಗಾರರೇ ಪ್ರಯತ್ನಪಟ್ಟು ಬದಲಾಯಿಸಿಕೊಳ್ಳು ತಿರಬೇಕಾಗುತ್ತದೆ. ಭಾಷೆಯ ಹಾಗೆ ತಾನಾಗಿ ಬದಲಾಗುವ ಶಕ್ತಿ ಅದಕ್ಕಿಲ್ಲ. ಕೆಲವೊಮ್ಮೆ ಬರಹದ ಒಳಗುಟ್ಟನ್ನರಿಯದವರು ಇಂತಹ ಮಾರಾಡುಗಳನ್ನು ನಡೆಸಲು ಹೊರಡುತ್ತಾರೆ, ಮತ್ತು ಆ ಮೂಲಕ ತಮ್ಮ ನುಡಿಯ ಬರಹ ಇನ್ನಷ್ಟು ಕ್ಲಿಷ್ಟವಾಗುವ ಹಾಗೆ ಮಾಡುತ್ತಾರೆ.
ಉದಾಹರಣೆಗಾಗಿ, ಇಂಗ್ಲಿಷ್‌ನಲ್ಲಿ ಇವತ್ತು ಕಾಣಿಸುವ ಹೆಚ್ಚಿನ ಸ್ಪೆಲ್ಲಿಂಗ್ ಸಮಸ್ಯೆಗಳಿಗೂ ಸಾಮ್ಯುವೆಲ್ ಜಾನ್ಸನ್ ಎಂಬ ಪದಕೋಶಕಾರ ಅದರ ಬರಹ ದಲ್ಲಿ ನಡೆಸಿದ್ದ ಹಲವು ತಪ್ಪು ಮಾರಾಡುಗಳೇ ಕಾರಣ. ಉದಾಹರಣೆಗಾಗಿ, ಪದಗಳ ರೂಪ ಅವುಗಳ ಚರಿತ್ರೆಯನ್ನೂ ಸೂಚಿಸಬೇಕು (know ಮತ್ತು no ಪದಗಳ ಉಚ್ಚಾರಣೆ ಒಂದೇ ಇದ್ದರೂ, ಅವುಗಳ ಚರಿತ್ರೆ ಬೇರೆ ಎಂಬುದನ್ನು
ರೂಪಭೇದ ಸೂಚಿಸುವ ಹಾಗೆ) ಎಂಬ ಅನವಶ್ಯಕವಾದ ಹೊರೆಯನ್ನು ಆತ ಇಂಗ್ಲಿಷ್ ಬರಹದ ಮೇಲೆ ಹೊರಿಸಿದ್ದ. ಬೇರೆ ಯಾರಾದರೂ ಬರಹಗಾರರು ಇಲ್ಲವೇ ವಿದ್ವಾಂಸರು ಮುಂದೆ ಬಂದು, ಆತ ಹೊರಿಸಿದ ಇಂತಹ ಹೊರೆಗಳನ್ನು ತೆಗೆದುಹಾಕುವಲ್ಲಿ ವರೆಗೂ, ಇಂಗ್ಲಿಷ್ ಬರಹದ ಈ ಸ್ಪೆಲ್ಲಿಂಗ್ ಸಮಸ್ಯೆಗಳು ಹಾಗೆಯೇ ಉಳಿದಿರುತ್ತವೆ ಮಾತ್ರವಲ್ಲ, ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಾ ಹೋಗುತ್ತವೆ. ಇವನ್ನು ತಾನಾಗಿ ಸರಿಪಡಿಸಿಕೊಳ್ಳುವ ಶಕ್ತಿ ಬರಹಕ್ಕಿಲ್ಲ.
ತಮ್ಮ ಬರಹವನ್ನು ತಪ್ಪು ಮಾಡದೆ ಸರಿಪಡಿಸಿದವರೂ ಹಲವರಿದ್ದಾರೆ. ಉದಾಹರಣೆಗಾಗಿ, ಕೊರಿಯನ್ ಬರಹದಲ್ಲಿ ಬಳಕೆಯಾಗುತ್ತಿದ್ದ ಚೈನೀಸ್ ಮೂಲದ ಹಾಜಾ ಲಿಪಿ ತುಂಬಾ ತೊಡಕು ತೊಡಕಾಗಿತ್ತು; ಅದನ್ನು ಕಲಿಯಲು ಹಲವು ವರ್ಷಗಳೇ ಬೇಕಾಗುತ್ತಿದ್ದುವು; ಕಲಿತ ಮೇಲೆ ಅದನ್ನು ಬಳಸುವುದೂ ತುಂಬಾ ತೊಡಕಿನ ಕೆಲಸವಾಗಿತ್ತು. ಎಲ್ಲಾ ಜನರೂ ಬರಹವನ್ನು ಕಲಿಯಲು ಸುಲಭವಾಗುವಂತೆ, ೧೯೪೫ರಲ್ಲಿ ಅದಕ್ಕಿಂತ ತುಂಬಾ ಚನ್ನಾಗಿರುವ ಹಂಗುಲ್ ಎಂಬ ಒಂದು ಹೊಸ ಲಿಪಿಯೊಂದನ್ನು ಸೃಷ್ಟಿಸಿ, ಕೊರಿಯನ್ ಭಾಷೆಗೆ ಅಳವಡಿಸಲಾಯಿತು.
ಈ ಲಿಪಿಯಲ್ಲಿ ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಭವಾಗಿದೆ. ಈ ಹೊಸ ಲಿಪಿಯನ್ನು ಬಳಸತೊಡಗಿದುದರಿಂದಾಗಿ, ಕೊರಿಯಾದಲ್ಲಿ ಓದು-ಬರಹ ಬಲ್ಲ ವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.
ಟರ್ಕಿಷ್ ಭಾಷೆಯಲ್ಲೂ ಇಂತಹದೇ ಒಂದು ಮಾರ್ಪಾಡನ್ನು ಮಾಡಲಾಗಿತ್ತು; ತೊಡಕು ತೊಡಕಾಗಿದ್ದ ಅದರ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟುಕೊಟ್ಟು ರೋಮನ್ ಲಿಪಿಯನ್ನು ಬಳಸತೊಡಗುವ ಮೂಲಕ, ಅದರ ಬರಹದಲ್ಲಿದ್ದ ಹಲವು ಬಗೆಯ ಹೊರೆಗಳನ್ನು ತೆಗೆದುಹಾಕಲಾಗಿತ್ತು, ಮತ್ತು ಇದರಿಂದಾಗಿ ಇವತ್ತು ಟರ್ಕಿಯಲ್ಲೂ ಓದು-ಬರಹ ಕಲಿತವರ ಎಣಿಕೆ ತುಂಬಾ ಹೆಚ್ಚಾಗಿದೆ. ಈ ಮಾರ್ಪಾಡಿನ ಸ್ವರೂಪವನ್ನು ಹಿಂದಿನ ಲೇಖನದಲ್ಲಿ (೩.೫) ವಿವರಿಸ ಲಾಗಿದೆ.
ಈ ರೀತಿ ಹಳೇ ಲಿಪಿಯನ್ನು ಬಿಟ್ಟುಕೊಟ್ಟು ಹೊಸಲಿಪಿಯನ್ನು ಬಳಸಲು ಹೊರಡುವ ಬದಲು, ಬಳಕೆಯಲ್ಲಿರುವ ಲಿಪಿಯನ್ನೇ ಸರಿಪಡಿಸಿರುವ ಉದಾ ಹರಣೆಗಳೂ ಹಲವಿವೆ: ಫಿನ್ನಿಷ್ ಭಾಷೆಯನ್ನು ಬರೆಯುವುದಕ್ಕಾಗಿ ಬಳಕೆಯಾಗು ತಿದ್ದ ಹಳೇ ಲಿಪಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಅದನ್ನು ಸರಿಪಡಿಸ ಲಾಗಿದೆ. ಹಿಂದಿನ ಲಿಪಿಯಲ್ಲಿ ಪದಗಳ ಓದಿಗೂ ಬರವಣಿಗೆಗೂ ನಡುವೆ ಹಲವು ವ್ಯತ್ಯಾಸಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಇದ್ದುವು; ಅವನ್ನೆಲ್ಲ ತೆಗೆದುಹಾಕುವ ಮೂಲಕ, ಫಿನ್ನಿಷ್ ಬರಹವನ್ನು ಸರಿಪಡಿಸಲಾಯಿತು. ಇದರಿಂದಾಗಿ, ಇವತ್ತು ಇಡೀ ಯುರೋಪಿನಲ್ಲೇ ಕಲಿಯಲು ಮತ್ತು ಬಳಸಲು ಅತ್ಯಂತ ಸುಲಭ ವಾಗಿರುವ ಬರಹ ಫಿನ್ನಿಷ್ ಬರಹವೆಂಬುದಾಗಿ ಹೇಳಲಾಗುತ್ತದೆ.
ಕನ್ನಡಕ್ಕೊಂದು ‘ಹೊಸ ಬರಹ’
ಬರಹವನ್ನು ಕಲಿಯಬೇಕೆಂದಿರುವವರು ಚೈನೀಸ್‌ನಂತಹ ತುಂಬಾ ಕ್ಲಿಷ್ಟ ವಾದ ಬರಹವನ್ನೂ ಕಲಿತಾರು ಎಂಬುದಾಗಿ ನಾನು ಮೇಲೆ ಬರೆದಿದ್ದೆ. ಹಾಗೆಂದು, ನಮ್ಮ ಬರಹದಲ್ಲಿರುವ ಅನವಶ್ಯಕವಾದ ತೊಡಕುಗಳನ್ನು ತೆಗೆದು ಹಾಕಬಾರದೆಂದೇನೂ ಇಲ್ಲವಲ್ಲ? ನಾಲ್ಕೈದು ಮೈಲು ದೂರ ನಡೆದು ಹೋಗಿಯೂ ಕುಡಿಯುವ ನೀರನ್ನು ತರುವವರಿದ್ದಾರೆ, ನಿಜ; ಆದರೆ, ನೀರಿನ ಬಾವಿ ಅಂಗಳದ ತುದಿಯಲ್ಲೇ ಇದ್ದರೂ ಮೇಲೆ ಟೇಂಕ್ ಕಟ್ಟಿಸಿ, ಅದರಲ್ಲಿ ನೀರನ್ನು ಪಂಪಿನಿಂದ ತುಂಬಿಸಿ, ಮನೆಯ ನಲ್ಲಿಗಳಲ್ಲಿ ಬರುವ ಹಾಗೆ ಮಾಡು ವವರೂ ಇದ್ದಾರಲ್ಲ? ಹೆಚ್ಚಿನವರೂ ತಮ್ಮ ಕೆಲಸಗಳು ಸುಲಭವಾಗಿ ನಡೆಯ ಬೇಕೆಂದು ಪ್ರಯತ್ನಿಸುತ್ತಿರುತ್ತಾರೆ. ಸೋಮಾರಿಗಳು ಮಾತ್ರ ಬದಲಾವಣೆಗಳನ್ನು ವಿರೋಧಿಸುತ್ತ ನಿಂತ ನೀರಿನ ಹಾಗೆ ಕೊಳೆಯುತ್ತಿರುತ್ತಾರೆ.
ಹೆಚ್ಚಿನ ಧ್ವನಿಗಳನ್ನೇಕೆ ಕಲಿಸಬಾರದು?
ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದ ಈ ಹೆಚ್ಚಿನ ಅಕ್ಷರಗಳು ಹೆಚ್ಚಿನ ಕನ್ನಡಿಗರ ಓದು ಇಲ್ಲವೇ ಉಚ್ಚಾರಣೆಯಲ್ಲೂ ಇಲ್ಲ; ಹಾಗಾಗಿ, ಓದು ಕಲಿಯುವಲ್ಲಿ ಮತ್ತು ಬರಹ ಬಳಸುವಲ್ಲಿ ತೊಂದರೆ ಕೊಡುವ ಈ ಅಕ್ಷರಗಳನ್ನು ತೆಗೆದುಹಾಕುವುದೇ ಒಳ್ಳೆಯದು ಎಂಬುದಾಗಿ ನಾನು ವಾದಿಸಿದ್ದೆ; ಹೀಗೆ ಹೇಳು ವಾಗ, ನಾನು ಕನ್ನಡ ಬರಹವನ್ನು ಸರಿಪಡಿಸಹೊರಟಿದ್ದೆ.
ಇದನ್ನು ವಿರೋಧಿಸುವವರೊಬ್ಬರು ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದುವನ್ನು ಸರಿಯಾಗಿ ಓದುವುದು ಇಲ್ಲವೇ ಉಚ್ಚರಿಸುವುದು ಕಷ್ಟದ ಕೆಲಸವೇನಲ್ಲ; ಮಕ್ಕಳಿಗೆ ಅವನ್ನು ಸುಲಭವಾಗಿ ಕಲಿಸಬಹುದು ಎಂಬುದಾಗಿ ವಾದಿಸಿದ್ದಾರೆ. ನಿಜಕ್ಕೂ ಇದು ಮೇಲಿನ ವಿಷಯಕ್ಕೆ ನೇರವಾಗಿ ಸಂಬಂಧಿಸ ದಂತಹ ಇನ್ನೊಂದು ವಾದವಾಗಿದೆ. ಯಾಕೆಂದರೆ, ಇದು ಓದನ್ನು ಎಂದರೆ ಮಾತನ್ನು ಸರಿಪಡಿಸುವ ಕೆಲಸ; ಬರಹವನ್ನು ಸರಿಪಡಿಸುವ ಕೆಲಸವೇ ಅಲ್ಲ. ಅವರೇ ಇನ್ನೊಂದು ಕಡೆ ಹೇಳಿದ ಹಾಗೆ, ಮಾತನ್ನು ಇಲ್ಲವೇ ಭಾಷೆಯನ್ನು ಸರಿಪಡಿಸುವುದು ಭಾಷಾವಿಜ್ಞಾನಿಯ ಕೆಲಸವಲ್ಲ; ಆತ ಹಾಗೆಲ್ಲಾದರೂ ಅದನ್ನು ಸರಿಪಡಿಸಹೊರಟರೂ ಭಾಷೆ ಅದನ್ನು ಒಪ್ಪಿಕೊಳ್ಳದೆ ಪಕ್ಕಕ್ಕೆಸೆದುಬಿಡಬಹುದು. ಯಾಕೆಂದರೆ, ಯಾರಿಗೂ ಭಾಷೆಯ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯ ವಾಗದು.
ಇದಲ್ಲದೆ, ಸಾವಿರಗಟ್ಟಲೆ ಅಧ್ಯಾಪಕರಿಗೆ ಮತ್ತು ಮಿಲಿಯಗಟ್ಟಲೆ ವಿದ್ಯಾರ್ಥಿ ಗಳಿಗೆ ಈ ಹೆಚ್ಚಿನ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಲು ಕಲಿಸುವುದು ಅವರು ಊಹಿಸಿದಷ್ಟು ಸುಲಭದ ಕೆಲಸವೇನಲ್ಲ; ಒಂದು ಚಿಕ್ಕ ಇಪ್ಪತ್ತೈದು-ಮೂವತ್ತು ವಯಸ್ಕರ ತರಗತಿಯಲ್ಲಿ ಎಲ್ಲರಿಗೂ ಈ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಲು ಕಲಿಸಹೊರಟವರಿಗೆ ಮಾತ್ರವೇ ಈ ಕೆಲಸ ಎಷ್ಟು ತೊಡಕಿನದು ಎಂಬುದರ ಅರಿವಾಗಬಲ್ಲುದು. ಅದು ಹೇಗೇ ಇರಲಿ, ಆ ರೀತಿ ಹೆಚ್ಚಿನ ಧ್ವನಿಗಳನ್ನು
ಉಚ್ಚರಿಸಲು ಕಲಿತು ಕನ್ನಡಿಗರಿಗೆ ಆಗಬೇಕಾದ್ದೇನು? ಇವತ್ತಿನ ಸಮಾಜದಲ್ಲಿ ಸಂಸ್ಕೃತದ ಈ ಹೆಚ್ಚಿನ ಅಕ್ಷರಗಳನ್ನು ಕಲಿಯುವುದಕ್ಕಿಂತಲೂ ಇಂಗ್ಲಿಷ್‌ನ ಹೆಚ್ಚಿನ ಅಕ್ಷರಗಳನ್ನು ಕಲಿಯುವುದಕ್ಕೇನೆ ಜನರು ಆಸಕ್ತಿ ತೋರಿಸಬಹುದು.
ಕನ್ನಡ ಬರಹದಲ್ಲಿ ಈ ೧೭ ಹೆಚ್ಚಿನ ಅಕ್ಷರಗಳಿರುವುದು ಅದರ ಶ್ರೀಮಂತಿಕೆ ಎಂಬುದಾಗಿ ಕೆಲವರು ಭಾವಿಸಿದ್ದಾರೆ; ಹಾಗಾಗಿ, ಅದನ್ನು ತೆಗೆದುಹಾಕುವುದೆಂದರೆ ಬಡವರನ್ನು ಮೇಲೆತ್ತುವ ಬದಲು ಶ್ರೀಮಂತರನ್ನು ಬಡವರ ಮಟ್ಟಕ್ಕೆ ಇಳಿಸುವ ಹಾಗೆ ಎಂಬುದಾಗಿ ಅವರು ವಾದಿಸುತ್ತಾರೆ. ನಿಜಕ್ಕೂ ಓದಿನಲ್ಲಿ ಕಾಣಿಸದಿರುವ ಅಕ್ಷರಗಳು ಬರಹದಲ್ಲಿರುವುದು ಶ್ರೀಮಂತಿಕೆಯಲ್ಲ, ಯಾವ ಪ್ರಯೋಜನಕ್ಕೂ ಬಾರದ ಒಂದು ಹೊರೆ! ಹಳೆಗನ್ನಡದಲ್ಲಿದ್ದ ಅ-ಅಗಳನ್ನು ಬಿಟ್ಟುಕೊಟ್ಟುದ ರಿಂದಾಗಿ ಹೊಸಗನ್ನಡ ಬರಹ ಹೇಗೆ ಬಡವಾಗಲಿಲ್ಲವೋ ಹಾಗೆಯೇ ಈ ೧೭ ಅಕ್ಷರಗಳನ್ನು ಬಿಟ್ಟುಕೊಟ್ಟಾಗಲೂ ಅದು ಬಡವಾಗುವುದಿಲ್ಲ, ಇನ್ನೊಂದು ಹೊರೆ ಯನ್ನು ಕಳಚಿಕೊಳ್ಳುತ್ತದೆ, ಅಷ್ಟೆ
‘ಹೊಸ ಬರಹ’ದ ಪ್ರಯೋಜನಗಳು
ಇಲ್ಲಿ ನಮ್ಮ ಮುಂದಿರುವ ಪ್ರಶ್ನೆ ನಿಜಕ್ಕೂ ತುಂಬಾ ಸರಳವಾದುದು: ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ, ಅವು ಸಂಸ್ಕೃತದಲ್ಲಿ ಹೇಗಿವೆಯೋ ಹಾಗೆಯೇ ಬರೆಯಬೇಕೋ, ಇಲ್ಲವೇ ಅವನ್ನು ಹೆಚ್ಚಿನ ಕನ್ನಡಿಗರೂ ಕನ್ನಡದಲ್ಲಿ ಹೇಗೆ ಓದುತ್ತಾರೋ (ಉಚ್ಚರಿಸು ತಾರೋ) ಹಾಗೆ ಬರೆಯಬೇಕೋ ಎಂಬುದು.
ಅವನ್ನು ನಾವು ಹೇಗೆ ಓದುತ್ತೇವೋ ಹಾಗೆ ಬರೆದರೆ ಸಾಕು, ಸಂಸ್ಕೃತ ದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕಾಗಿಲ್ಲ ಎಂಬುದು ‘ಹೊಸ ಬರಹ’ದ ನಿಲುವು; ಇವತ್ತು ಹೀಗೆ ಮಾಡುವುದರಿಂದ ನಾವು ಹಲವು ಪ್ರಯೋಜನಗಳನ್ನು ಪಡೆಯಬಲ್ಲೆವು. ಇವುಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ:
(೧) ಚಿಕ್ಕ ಮಕ್ಕಳಿಗೆ ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹ ವನ್ನು ಕಲಿಸುವ ಕೆಲಸ ಸುಲಭವಾಗುತ್ತದೆ. ಯಾಕೆಂದರೆ, ಅವರಿಗೆ ೪೮ ಅಕ್ಷರಗಳ ಬದಲು ಬರೇ ೩೧ ಅಕ್ಷರಗಳನ್ನು ಕಲಿಸಿದರೆ ಸಾಕು. ಇವನ್ನೆಲ್ಲ ಓದುವ ಹಾಗೆಯೇ ಬರೆಯುವ ಕಾರಣ, ಕಲಿಯುವುದೂ ಸುಲಭ.
(೨) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತದೆ.
(೩) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆ-ಕಾದಂಬರಿಗಳಲ್ಲಿ ತುಂಬಾ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣಾಕ್ಷರ, ಷಕಾರ, ಮತ್ತು ಋಕಾರಗಳ ಬಳಕೆಯಲ್ಲಿ. ಇವು ಸಾಮಾನ್ಯವಾಗಿ ‘ಹೊಸ ಬರಹ’ದಲ್ಲಿ ಬರುವುದಿಲ್ಲವಾದ ಕಾರಣ, ಈ ತಪ್ಪುಗಳೆಲ್ಲವೂ ಇಲ್ಲವಾಗುತ್ತವೆ. (ಹಲವು
ಕನ್ನಡಕ್ಕೊಂದು ‘ಹೊಸ ಬರಹ’
ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಷಯದಲ್ಲಿ ನಾವೇನೂ ಮಾಡಲಾರೆವು).
- (೪) ಬರಹಗಾರರಿಗೆ ಎಲ್ಲಿ ಯಾವ ಅಕ್ಷರಗಳನ್ನು ಬಳಸಬೇಕು ಎಂಬ
- ವಿಷಯದಲ್ಲಿ ಸಂಶಯವೇಳುವುದು, ಮತ್ತು ಆಗಾಗ ಪದಕೋಶಗಳನ್ನು ಬಿಡಿಸಿ
- ನೋಡಬೇಕಾಗುವುದು ಮೇಲಿನ ಅಕ್ಷರಗಳ ಬಳಕೆಯಲ್ಲಿ ಮಾತ್ರ. ಅವನ್ನು
- ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ‘ಹೊಸ ಬರಹ’ದಲ್ಲಿ ಈ
- ಸಂಶಯಗಳೆಲ್ಲ ಇಲ್ಲವಾಗುತ್ತವೆ.
- (೫) ಕೆಳವರದ ಮಕ್ಕಳಿಗೆ ಉಚ್ಚಾರಣೆಯಲ್ಲಿಲ್ಲದ ಈ ಹೆಚ್ಚಿನ ಅಕ್ಷರಗಳನ್ನು
- ಕಲಿಯಲು ತುಂಬಾ ಕಷ್ಟವೆಂದೆನಿಸುವ ಕಾರಣ, ಅವರಲ್ಲಿ ಕೀಳರಿಮೆಯುಂಟಾಗು
- ಇದೆ; ಮತ್ತು, ಅವರು ತಮ್ಮ ಕಲಿಕೆಯನ್ನು ನಡುವಿನಲ್ಲೇ ಬಿಟ್ಟುಬಿಡುತ್ತಾರೆ.
- ‘ಹೊಸ ಬರಹ’ದ ಬಳಕೆಯಾದಲ್ಲಿ ಈ ತೊಂದರೆಯಿಲ್ಲ.
- (೬) ‘ಹೊಸ ಬರಹ’ದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ
- ಬರೆಯುವುದು ಸುಲಭ; ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗು
- ಇದೆ.
- (೭) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ ಆಡು
- ಮಾತಿಗೂ ನಡುವಿರುವ ಅಂತರ ಕಡಿಮೆಯಾಗುತ್ತದೆ.
- (೮) ಬರಹದ ಕ್ಲಿಷ್ಟತೆ ಮತ್ತು ಕೃತಕತೆಗಳು ಕಡಿಮೆಯಾಗುತ್ತವೆ, ಮತ್ತು
- ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
- ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು ಎಂಬ ಪುಸ್ತಕದಲ್ಲಿ
- ಇನ್ನೊಂದು ಮುಖ್ಯವಾದ ಪ್ರಯೋಜನವನ್ನೂ ಕೊಟ್ಟಿದ್ದೇನೆ:
- (೯) ಕನ್ನಡ ಬರಹವನ್ನು ಓದಲು ಕಲಿಯುವ ಮಕ್ಕಳು ಅದರಲ್ಲಿ ಅಕ್ಷರ
- ಗಳನ್ನು ಜೋಡಿಸಿ (ಮರ ಪದವನ್ನು ಮ ಮತ್ತು ರ ಎಂಬ ಅಕ್ಷರಕಂತೆಗಳನ್ನು
- ಜೋಡಿಸಿ, ಮತ್ತು ಮ ಎಂಬ ಅಕ್ಷರಕಂತೆಯನ್ನು ಮ್ ಮತ್ತು ಅ ಎಂಬ ಅಕ್ಷರ
- ಗಳನ್ನು ಜೋಡಿಸಿ) ಪದಗಳನ್ನು ಬರೆಯಲಾಗುತ್ತದೆ ಎಂಬುದನ್ನು, ಮತ್ತು ಬರಹ
- ದಲ್ಲಿ ಕಾಣಿಸುವ ಅಕ್ಷರಗಳಿಗೂ ಬಾಯಿಯಿಂದ ಹೊರಡಿಸುವ [ಮ್], [ಅ],
- [ರ್], [ಅ] ಮೊದಲಾದ ಧ್ವನಿಗಳಿಗೂ ನಡುವೆ ಸಂಬಂಧ ಇದೆ ಎಂಬುದನ್ನು
- ಕಂಡುಕೊಂಡಲ್ಲಿ ಮಾತ್ರ, ಅವರಿಗೆ ಅದನ್ನು ಸಲೀಸಾಗಿ ಓದಲು ಬರುತ್ತದೆ.
ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ನೇರವಾದ ಸಂಬಂಧ ಇದೆಯಾದರೆ, ಇದನ್ನು ಕಂಡುಕೊಳ್ಳುವುದು ತುಂಬಾ ಸುಲಭ; ಬರಹದಲ್ಲಿರುವ ‘ಸ್ಟೆಲ್ಲಿಂಗ್’ ಸಮಸ್ಯೆಗಳು ಈ ಸಂಬಂಧವನ್ನು ಕೆಡಿಸುತ್ತವೆ; ಹಾಗಾಗಿ, ಇಂತಹ ಸಮಸ್ಯೆಗಳು ತುಂಬಾ ಹೆಚ್ಚಿರುವ ಇಂಗ್ಲಿಷ್‌ನಂತಹ ಬರಹಗಳನ್ನು ಮಕ್ಕಳಿಗೆ ಸರಿಯಾದ ಕ್ರಮ ದಲ್ಲಿ ಓದಲು ಕಲಿಸುವುದು ತುಂಬಾ ಕಷ್ಟ. ಇವತ್ತು ಇಂಗ್ಲಿಷ್ ಬರಹವನ್ನು ಓದಲು ಕಲಿಯುವ ಮಕ್ಕಳಲ್ಲಿ ಹೆಚ್ಚಿನವರಿಗೂ ಸರಿಯಾದ ಕ್ರಮದಲ್ಲಿ ಓದು
ವುದು ಹೇಗೆ ಎಂಬುದು ಗೊತ್ತಾಗುವುದೇ ಇಲ್ಲ ಎಂಬುದಾಗಿ ಸಂಶೋಧನೆಗಳು ತೋರಿಸಿಕೊಟ್ಟಿವೆ.
ಕನ್ನಡ ಬರಹದಲ್ಲೂ, ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದ ಹೆಚ್ಚಿನ ಅಕ್ಷರಗಳು ಸ್ಪೆಲ್ಲಿಂಗ್ ಸಮಸ್ಯೆಯನ್ನು ತಂದೊಡ್ಡುತ್ತವೆ; ಯಾಕೆಂದರೆ, ಅವು ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ನೇರವಾದ ಸಂಬಂಧವಿಲ್ಲದ ಹಾಗೆ ಮಾಡುತ್ತವೆ. ಹಾಗಾಗಿ, ಅವನ್ನು ಬರಹದಿಂದ ಹೊರಗಿರಿಸಿದಲ್ಲಿ ಮಕ್ಕಳು ಬಹಳ ಬೇಗನೆ ಸರಿಯಾದ ಕ್ರಮದಲ್ಲಿ ಓದುವುದು ಹೇಗೆ ಎಂಬುದನ್ನು ಕಲಿಯಬಲ್ಲರು.
ಹಳೇ ಬರಹವನ್ನು ಉಳಿಸಿಕೊಳ್ಳುವುದರಿಂದ ಪ್ರಯೋಜನವಿದೆಯೇ?
ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ನಿಯಮವನ್ನು ಈಗಿರುವ ಹಾಗೆಯೇ ಉಳಿಸಿಕೊಂಡಲ್ಲಿ ಕನ್ನಡಿಗರಿಗೆ ಪ್ರಯೋಜನಗಳೇನಾದರೂ ಸಿಗಬಲ್ಲುವೇ ಎಂಬುದನ್ನೂ ಪರಿಶೀಲಿಸ ಬಹುದು.
ನನಗೆ ಅನಿಸುವುದೇನೆಂದರೆ, ಈ ಪದಗಳನ್ನು ಬದಲಾಯಿಸಹೋಗದೆ, ಸಂಸ್ಕೃತದಲ್ಲಿರುವ ಹಾಗೆಯೇ ಬರೆಯುತ್ತಿರುವುದರಿಂದ ಸಿಗಬಲ್ಲ ಪ್ರಯೋಜನ ಗಳೆಲ್ಲ ತಾತ್ಕಾಲಿಕವಾದವುಗಳು. ಉದಾಹರಣೆಗಾಗಿ, ಅವನ್ನು ಹಳೇ ರೂಪದಲ್ಲಿ ನೋಡಿ ಬಳಕೆಯಾಗಿರುವವರಿಗೆ ಹೊಸ ರೂಪವನ್ನು ಕಂಡಾಗ ಅದು ತಪ್ಪೆಂದು ಅನಿಸುತ್ತದೆ; ಇಂತಹ ಅನಿಸಿಕೆ ಉಂಟಾಗದಂತೆ, ಇವರಿಗಾಗಿ ಈ ಬದಲಾವಣೆ ಯನ್ನು ಮಾಡದಿರಬೇಕು. ಆದರೆ, ಹೊಸ ರೂಪವನ್ನು ಕಂಡು ಬಳಕೆಯಾದವರಿಗೆ ಅದು ತಪ್ಪೆಂದು ಅನಿಸುವುದೇ ಇಲ್ಲವಲ್ಲ
ಹೊಸ ಬರಹವನ್ನು ಕಲಿತವರಿಗೆ ಹಳೇ ಬರಹದಲ್ಲಿರುವ ಪುಸ್ತಕಗಳನ್ನು ಓದಲು ತುಸು ತೊಂದರೆಯಾಗಬಹುದು; ಇದೂ ಕೂಡ ತಾತ್ಕಾಲಿಕವಾದ ತೊಂದರೆ. ಸಮಯ ಕಳೆದಂತೆ ಇಂತಹ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತವೆ.
ಬರಹದಲ್ಲಿ ಎಂತಹ ಬದಲಾವಣೆಯನ್ನು ಮಾಡುವುದಿದ್ದರೂ ಇಂತಹ ತಾತ್ಕಾಲಿಕವಾದ ತೊಂದರೆಗಳು ಬಂದೇ ಬರುತ್ತವೆ; ಅವಕ್ಕೆ ಹೆದರಿ ಬದಲಾವಣೆ ಯನ್ನು ಮಾಡಿಕೊಳ್ಳದಿದ್ದರೆ, ಸ್ಪೆಲ್ಲಿಂಗ್ ಸಮಸ್ಯೆಯನ್ನು ಯಾವಾಗಲೂ ಅನುಭವಿ ಸುತ್ತಲೇ ಇರಬೇಕಾಗುತ್ತದೆ. ಯಾಕೆಂದರೆ, ಕನ್ನಡ ಬರಹವನ್ನು ಮೇಲೆ ಸೂಚಿಸಿದ ಹಾಗೆ ಬದಲಾಯಿಸುವುದರಿಂದ ನಮಗೆ ದೊರಕುವ ಪ್ರಯೋಜನ ಗಳಲ್ಲಿ ಪ್ರತಿಯೊಂದೂ ನಮಗೆ ಯಾವಾಗಲೂ ದೊರಕುವಂತಹವು.
ಇಂಗ್ಲಿಷ್‌ನ ಸ್ಪೆಲ್ಲಿಂಗ್ ಸಮಸ್ಯೆಯೂ ಇಂತಹದೇ. ಅದನ್ನು ಸರಿಪಡಿಸ ಹೋದರೆ ಹಲವಾರು ತಾತ್ಕಾಲಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇಂಗ್ಲಿಷ್‌ನಲ್ಲಿ ಇಂತಹ ತಾತ್ಕಾಲಿಕ ತೊಂದರೆಗಳು ತುಂಬಾ ಜಾಸ್ತಿ; ಹಾಗಾಗಿ, ಹೆಚ್ಚಿನವರಿಗೂ ಅದನ್ನು ಸರಿಪಡಿಸಬೇಕೆಂದು ಅನಿಸುವುದಿಲ್ಲ.
ಕನ್ನಡದಲ್ಲಿ ತೊಂದರೆಗಳು ಹೆಚ್ಚಿಲ್ಲವಾದ ಕಾರಣ (ಕನ್ನಡದವೇ ಆದ ಪದಗಳ ಮಟ್ಟಿಗೆ ಏನೂ ಇಲ್ಲ), ಅದನ್ನು ಸುಲಭವಾಗಿ ಸರಿಪಡಿಸಬಹುದು. ಇದನ್ನು ನಾನು ನನ್ನ ಇತ್ತೀಚೆಗಿನ ಪುಸ್ತಕಗಳಲ್ಲಿ ತೋರಿಸಿಕೊಟ್ಟಿದ್ದೇನೆ.
೩. ಭಾಷೆ ಮತ್ತು ಬರಹ
ಮಾತು ಮತ್ತು ಬರಹಗಳ ನಡುವೆ ಹಲವು ವ್ಯತ್ಯಾಸಗಳಿವೆ; ಈ ವ್ಯತ್ಯಾಸಗಳು ಮಾತಿಗಿಲ್ಲದ ಹಲವು ಅನುಕೂಲತೆಗಳನ್ನು ಬರಹಕ್ಕೆ ತಂದುಕೊಟ್ಟಿವೆ; ಆದರೆ, ಇವೇ ವ್ಯತ್ಯಾಸಗಳು ಕೆಲವು ಸಂದರ್ಭಗಳಲ್ಲಿ ಬರಹಕ್ಕೆ ಹಾನಿಕಾರಕಗಳಾಗಿಯೂ ಪರಿಣಮಿಸಿವೆ.
ಈ ವ್ಯತ್ಯಾಸಗಳಿಂದಾಗಿ, ಕೆಲವು ಬರಹಗಳಿಗೆ ಭಾಷೆಯ ಕಟ್ಟನ್ನು ಮುರಿದು ಹೊರಬರಲು, ಮತ್ತು ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ, ಹಾಗೆ ಸ್ವತಂತ್ರವಾಗಿ ನಿಂತಿರುವ ಬರಹಗಳನ್ನು ‘ಭಾಷೆ’ಗಳೆಂದು ಕರೆಯುವುದು ಮಾತ್ರ ಸರಿಯಲ್ಲವೆಂದು ನನಗೆ ತೋರುತ್ತದೆ. ಯಾಕೆಂದರೆ, ಭಾಷೆಗಳಲ್ಲಿರುವ ಜೀವಂತಿಕೆ ಈ ಬರಹಗಳಲ್ಲಿ ಉಳಿದಿರುವುದಿಲ್ಲ. ಮಾತನ್ನನುಸರಿಸಿ ಬದಲಾಗುತ್ತಾ ಹೋಗುವ ಬರಹಗಳು ಮಾತ್ರ ತಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುವು.
ಈ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಲು ಮೊದಲಿಗೆ ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸಗಳೆಂತಹವು, ಮತ್ತು ಈ ವ್ಯತ್ಯಾಸಗಳು ಮಾತು ಮತ್ತು ಬರಹಗಳ ಮೇಲೆ ಎಂತಹ ಪರಿಣಾಮವನ್ನು ಬೀರಬಲ್ಲುವು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಮಾತು ಕ್ಷಣಿಕ, ಬರಹ ಶಾಶ್ವತ
ಮಾತಿನ ಮಾಧ್ಯಮ ಧ್ವನಿಯಾದ ಕಾರಣ, ಆಡುತ್ತಿದ್ದ ಹಾಗೆಯೇ ಅದು ಅಳಿದುಹೋಗುತ್ತಾ ಇರುತ್ತದೆ. ಆದರೆ, ಕಾಗದದ ಮೇಲೆ ಮೂಡಿಸುವ ಬರಹ ಹೆಚ್ಚು ಶಾಶ್ವತವಾದುದು. ಮಾತು ಮತ್ತು ಬರಹಗಳ ನಡುವಿನ ಈ ವ್ಯತ್ಯಾಸ ದಿಂದಾಗಿ, ಅವುಗಳ ನಡುವೆ ಹಲವು ತುಂಬಾ ಮುಖ್ಯವಾದ ವ್ಯತ್ಯಾಸಗಳು ಮೂಡಿಬಂದಿವೆ.
ಒಮ್ಮೆ ನುಡಿದ ಮಾತನ್ನು ನಾವು ಹಿಂದಕ್ಕೆ ಪಡೆಯಲಾರೆವು; ಹಾಗಾಗಿ, ಅದರಲ್ಲಿ ಬದಲಾವಣೆಗಳನ್ನೂ ಮಾಡಲಾರೆವು; ಅದು ತಪ್ಪಾಗಿದ್ದರೆ, ಅದನ್ನು ಸರಿಪಡಿಸುವ ಬೇರೊಂದು ಮಾತನ್ನು ಹೇಳಬಲ್ಲೆವಲ್ಲದೆ, ಅದನ್ನೇ ಹಿಂದಕ್ಕೆ ಪಡೆದು ಸರಿಪಡಿಸುವ ಹಾಗಿಲ್ಲ. ಆದರೆ, ಬರೆದುದನ್ನು ಓದಿ ನೋಡಿ, ಅದರಲ್ಲಿ
ತಪ್ಪುಗಳಿದ್ದರೆ ಅವನ್ನು ತಿದ್ದಿ ಸರಿಪಡಿಸಿ, ಬೇಕಿದ್ದರೆ ಅದನ್ನೇ ಇನ್ನೊಮ್ಮೆ ಬರೆದು, ಆಮೇಲೆ ಅದನ್ನು ಓದುಗರೆದುರು ಇರಿಸಬಲ್ಲೆವು.
ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸ ಅವುಗಳ ನಡುವೆ ಇನ್ನೂ ಹಲವಾರು ವ್ಯತ್ಯಾಸಗಳನ್ನು ತಂದು ಹಾಕಿದೆ. ಮಾತಿನಲ್ಲಿ ಬರುವ ವಾಕ್ಯಗಳು ಸಾಮಾನ್ಯವಾಗಿ ತುಂಡು ತುಂಡಾಗಿರುತ್ತವೆ; ಅವುಗಳಲ್ಲಿ ಹಲವು ತಪ್ಪಾಗಿಯೂ ಇರಬಲ್ಲುವು. ಇದಲ್ಲದೆ, ಮಾತಿನಲ್ಲಿ ಹಲವು ಬಾರಿ ಹೇಳಿದ್ದನ್ನೇ ಹೇಳುತ್ತಿರುತ್ತೇವೆ; ಒಂದು ವಿಷಯದ ನಡುವೆ ಇನ್ನೊಂದು ವಿಷಯ ತಲೆಹಾಕು ತಿರುತ್ತದೆ; ಒಬ್ಬನು ಮಾತನಾಡುತ್ತಿರುವಾಗ ನಡುವೆ ಇನ್ನೊಬ್ಬನ ಮಾತೂ ಬಂದಿರುತ್ತದೆ.
ಆದರೆ, ಬರಹದಲ್ಲಿ ವಾಕ್ಯಗಳು ಇಡಿಯಿಡಿಯಾಗಿರುತ್ತವೆ, ಮತ್ತು ಅವು ಸರಿ ಯಾಗಿರುವಂತೆಯೂ ನೋಡಿಕೊಳ್ಳಲಾಗುತ್ತದೆ. ತಿಳಿಸಬೇಕೆಂದಿರುವ ವಿಷಯ ಗಳನ್ನು ಒಂದು ಕ್ರಮದಲ್ಲಿ ಜೋಡಿಸಲಾಗುತ್ತದೆ, ಮತ್ತು ಅವುಗಳಲ್ಲಿ ಪುನರುಕ್ತಿ ದೋಷ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ.
ಮಾತಿನಲ್ಲಿ ಬಳಕೆಯಾಗುವ ವಾಕ್ಯಗಳು ಚಿಕ್ಕ ಚಿಕ್ಕವು; ಉದ್ದುದ್ದ ವಾಕ್ಯ ಗಳಿದ್ದರೂ ಅವನ್ನು ಚಿಕ್ಕ ಚಿಕ್ಕ ವಾಕ್ಯಗಳ ಜೋಡಣೆಯಿಂದ ಉಂಟುಮಾಡಲಾಗು ತ್ತದೆ. ಆದರೆ, ಬರಹದಲ್ಲಿ ಹೆಚ್ಚಾಗಿ ಉದ್ದುದ್ದ ವಾಕ್ಯಗಳೇ ಬಳಕೆಯಾಗುತ್ತಿರು ತ್ತವೆ. ಇದಲ್ಲದೆ, ಒಂದು ವಾಕ್ಯದೊಳಗೆ ಇನ್ನೊಂದು ವಾಕ್ಯವನ್ನು ಇರಿಸಿರು ವಂತಹ ಸಿಕ್ಕಲು ವಾಕ್ಯಗಳು ಬರಹದಲ್ಲಿ ಕಾಣಿಸಿಕೊಳ್ಳುವ ಹಾಗೆ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಮಾತಿಗೂ ಬರಹಕ್ಕೂ ನಡುವೆ ಇಂತಹ ಹಲವು ವ್ಯತ್ಯಾಸಗಳಿರುವುದ ರಿಂದಾಗಿ, ಬರಹ ಮಾತಿಗಿಂತ ಶ್ರೇಷ್ಠ ಎಂಬ ಅನಿಸಿಕೆ ನಮ್ಮಲ್ಲಿ ಬೆಳೆದುಬಂದಿದೆ. ಆದರೆ, ನಿಜಕ್ಕೂ ಮಿಲಿಯಗಟ್ಟಲೆ ವರ್ಷಗಳಿಂದ ಭಾಷೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವುದು ಮಾತಲ್ಲದೆ ಬರಹವಲ್ಲ. ಮಾತಿಗೆ ಸ್ವಲ್ಪಮಟ್ಟಿಗಿನ ಶಾಶ್ವತತೆಯನ್ನು ತಂದುಕೊಡುವುದಕ್ಕಾಗಿ ಕೆಲವೇ ಕೆಲವು ಭಾಷೆಗಳಲ್ಲಿ ಮಾತ್ರ ಬರಹ ಬಳಕೆಗೆ ಬಂದಿದೆ. ಇವತ್ತಿಗೂ ಬರಹವನ್ನು ಬಳಸುವ ಭಾಷೆಗಳಿಗಿಂತಲೂ ಬಳಸದ ಭಾಷೆಗಳೇ ಹೆಚ್ಚಿವೆ.
ಬರಹವನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುವುದಿಲ್ಲ
ಮಾತಿಗೂ ಬರಹಕ್ಕೂ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವೆಂದರೆ, ಮಾತನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುತ್ತಾರೆ; ಅದನ್ನು ಅವರಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ; ಮನೆಯಲ್ಲಿ ದೊಡ್ಡವರು ಮಾತನಾಡುವುದನ್ನು ಕೇಳಿ, ಅವರು ತಾವಾಗಿಯೇ ಅದನ್ನು ಕಲಿತುಕೊಳ್ಳುತ್ತಾರೆ; ಆರೋಗ್ಯದಲ್ಲಿರುವ ಯಾವ ಮಗುವೂ ತನ್ನ ತಾಯ್ನುಡಿಯನ್ನು ಕಲಿತುಕೊಳ್ಳದಿರುವುದಿಲ್ಲ. ಇದಲ್ಲದೆ, ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಒಂದೇ ಬಗೆಯ ಪರಿಣತಿಯನ್ನು ಪಡೆಯು
ತ್ತಾರೆ: ಇದನ್ನು ಪಡೆಯಲು ಕೆಲವರಿಗೆ ತುಸು ಹೆಚ್ಚು ಸಮಯ ತಗಲಬಲ್ಲುದು, ಮತ್ತು ಕೆಲವರಿಗೆ ತುಸು ಕಡಿಮೆ ಸಮಯ ತಗಲಬಲ್ಲುದು; ಆದರೆ, ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಸಂಪೂರ್ಣವಾದ ಪರಿಣತಿಯನ್ನು ಪಡೆಯ ದಿರುವುದಿಲ್ಲ.
ಆದರೆ, ಬರಹವನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುವುದಿಲ್ಲ. ಅದನ್ನು ಅವರಿಗೆ ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಯಾರಾದರೂ ಕಲಿಸಬೇಕಾಗುತ್ತದೆ. ಹಾಗೆ ಕಲಿಸದಿದ್ದರೆ, ಅವರು ಅದನ್ನು ಕಲಿಯುವುದೇ ಇಲ್ಲ. ಇದಲ್ಲದೆ, ಎಲ್ಲಾ ಮಕ್ಕಳೂ ಬರಹದಲ್ಲಿ ಒಂದೇ ಬಗೆಯ ಪರಿಣತಿಯನ್ನು ಪಡೆಯುವುದಿಲ್ಲ; ಕೆಲವರಿಗೆ ಅದನ್ನು ತುಂಬಾ ಚನ್ನಾಗಿ ಬಳಸಲು ಬರುತ್ತದೆ, ಮತ್ತು ಬೇರೆ ಕೆಲವರಿಗೆ ಅದನ್ನು ಎಷ್ಟು ಕಲಿತರೂ ಸರಿಯಾಗಿ ಬಳಸಲು ಬರುವುದಿಲ್ಲ. ಈ ಎಲ್ಲಾ ವಿಷಯಗಳಲ್ಲೂ, ಈಜುವುದು, ಸೈಕಲ್ ತುಳಿಯುವುದು, ವಾಹನಗಳನ್ನು ಓಡಿಸುವುದು ಮೊದಲಾದವುಗಳ ಹಾಗೆ, ಬರಹವೆಂಬುದು ನಮ್ಮ ಮಟ್ಟಿಗೆ ಹುಟ್ಟಿನಿಂದಲೇ ಪಡೆಯದ, ಮತ್ತು ಕಲಿತು ಪಡೆಯಬೇಕಾಗಿರುವ ಕೌಶಲ್ಯವಾಗಿದೆ.
ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸ ಅವುಗಳ ನಡುವೆ ಬೇರೊಂದು ತುಂಬಾ ಮುಖ್ಯವಾದ ವ್ಯತ್ಯಾಸವನ್ನು ತಂದಿರಿಸಿದೆ: ಹೇಗೆ ಬರೆಯ ಬೇಕು, ಮತ್ತು ಏನು ಬರೆಯಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬಹುದು; ದೊಡ್ಡವರು ಹೇಗೆ ಕಲಿಸಿಕೊಡುತ್ತಾರೋ, ಹಾಗೆಯೇ ಮಕ್ಕಳೂ ಬರೆಯಲು ಕಲಿಯುತ್ತಾರೆ.
ಆದರೆ, ಹೇಗೆ ಮಾತನಾಡಬೇಕು, ಮತ್ತು ಏನು ಮಾತಾಡಬೇಕು ಎಂಬು ದನ್ನು ಮಕ್ಕಳಿಗೆ ಕಲಿಸಿಕೊಡಲು ಬರುವುದಿಲ್ಲ; ಅವರು ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ಕಲಿಯುತ್ತಿರುವಾಗ ಅವರನ್ನು ತಂದೆತಾಯಿಯರು ತಿದ್ದಲು ಹೋದರೂ, ಅದು ಅವರ ಮಾತಿನ ಮೇಲೆ ಯಾವ ಪರಿಣಾಮವನ್ನೂ ಬೀರುವು ದಿಲ್ಲ. ಇದಲ್ಲದೆ, ತಾಯ್ನುಡಿಯನ್ನು ಕಲಿಯುವಲ್ಲಿ ಕೆಲವು ನಿಶ್ಚಿತವಾದ ಹಂತ ಗಳಿದ್ದು, ಇವುಗಳಲ್ಲಿ ಒಂದೊಂದನ್ನೂ ನಿಶ್ಚಿತವಾದ ಕ್ರಮದಲ್ಲಿ ಮಕ್ಕಳೆಲ್ಲರೂ ದಾಟುತ್ತಿರುತ್ತಾರೆ. ಈ ವಿಷಯದಲ್ಲೂ ಅವರ ಮೇಲೆ ದೊಡ್ಡವರ ಕಲಿಸುವಿಕೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.
ಮಕ್ಕಳು ಮಾತು ಮತ್ತು ಬರಹಗಳನ್ನು ಕಲಿಯುವ ಕ್ರಮದಲ್ಲಿರುವ ಈ ವ್ಯತ್ಯಾಸದಿಂದಾಗಿ, ಅವುಗಳ ನಡುವೆ ಇನ್ನೊಂದು ಮುಕ್ಯವಾದ ವ್ಯತ್ಯಾಸ ಮೂಡಿ ಬಂದಿದೆ. ಮಾತು ಕಾಲದಿಂದ ಕಾಲಕ್ಕೆ, ಮತ್ತು ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುತ್ತದೆ, ಮತ್ತು ಸಹಜವಾಗಿ ನಡೆಯುವ ಈ ಬದಲಾ ವಣೆಯ ಮೂಲಕ, ಮಾತು ಯಾವಾಗಲೂ ತನ್ನ ಹೊಸತನವನ್ನು ಉಳಿಸಿ ಕೊಂಡಿರುತ್ತದೆ. ಈ ಬದಲಾವಣೆ ಮುಖ್ಯವಾಗಿ ಮಕ್ಕಳು ತಮ್ಮ ತಾಯ್ನುಡಿಯನ್ನು ಕಲಿತುಕೊಳ್ಳುವ ಸಮಯದಲ್ಲಿ ನಡೆಯುತ್ತದೆ. ದೊಡ್ಡವರ ಮಾತಿನಲ್ಲಿ ಕೃತಕತೆ ಗಳೇನಾದರೂ ಸೇರಿಕೊಂಡಿವೆಯಾದರೆ, ಅವೆಲ್ಲವೂ ಇಂತಹ ಬದಲಾವಣೆಗಳ
ಮೂಲಕ ಮಕ್ಕಳ ಮಾತಿನಲ್ಲಿ ಪೂರ್ತಿ ಇಲ್ಲವಾಗುತ್ತವೆ. ಮಾತಿನಲ್ಲಿ ನಡೆಯುವ ಈ ಬದಲಾವಣೆಯ ಮೇಲೆ ಯಾರ ಹತೋಟಿಯೂ ಇರುವುದಿಲ್ಲ.
ಆದರೆ, ಬರಹದಲ್ಲಿ ಇಂತಹ ಯಾವ ಬದಲಾವಣೆಯೂ ನಡೆಯುವುದಿಲ್ಲ. ಅದನ್ನು ಮಕ್ಕಳಿಗೆ ಕಲಿಸಿಕೊಡಬೇಕಾಗುತ್ತದೆಯಾದ ಕಾರಣ, ಹಾಗೆ ಕಲಿಸಿಕೊಡು ವಾಗ ಅದನ್ನು ಮಕ್ಕಳು ‘ಸರಿಯಾಗಿ’ ಕಲಿಯುವಂತೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ, ಸಮಯ ಕಳೆದಂತೆಲ್ಲ ಬರಹದಲ್ಲಿ ಕೃತಕತೆ ತುಂಬಿಕೊಳ್ಳುತ್ತದೆ, ಮತ್ತು ಅದು ಮಾತಿನಿಂದ ದೂರವಾಗುತ್ತಾ ಹೋಗುತ್ತದೆ. ಈ ಕೃತಕತೆಯನ್ನು ಹೋಗಲಾಡಿಸಬೇಕಾದಲ್ಲಿ, ಮತ್ತು ಮಾತಿಗೂ ಬರಹಕ್ಕೂ ನಡುವೆ ಬೆಳೆದು ಬರುವ ಅಂತರವನ್ನು ಕಡಿಮೆ ಮಾಡಬೇಕಾದಲ್ಲಿ, ಯಾರಾದರೂ ಬರಹಗಾರರು ತಮ್ಮ ಬರಹಗಳಲ್ಲಿ ಅದಕ್ಕೆ ಬೇಕಾದ ಬದಲಾವಣೆಗಳನ್ನು ಮೂಡಿಸಲು ಪ್ರಯತ್ನ ಪಡಬೇಕಾಗುತ್ತದೆ.
ಯಾವುದು ಭಾಷೆ?
ಮಾತಿಗೂ ಬರಹಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸಿದಾಗ, ಇನ್ನೊಂದು ಮುಖ್ಯವಾದ ವಿಷಯ ನಮ್ಮ ಗಮನಕ್ಕೆ ಬರುತ್ತದೆ: ನಾವು ‘ಭಾಷೆ’ ಎಂಬ ಪದದ ಮೂಲಕ ಜನರ ಮಾತನ್ನು ಹೆಸರಿಸಬೇಕಲ್ಲದೆ ಅವರ ಬರಹ ವನ್ನಲ್ಲ. ಮಿಲಿಯಗಟ್ಟಲೆ ವರ್ಷಗಳಿಂದ ಭಾಷೆಯ ಮಾಧ್ಯಮವಾಗಿದ್ದುದು ಮಾತಲ್ಲದೆ ಬರಹವಲ್ಲ. ಮಾತಿನಲ್ಲಿ ಹೇಳಿದ ಸಂಗತಿ ತುಸು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರಹವನ್ನು ಬಳಸಲಾಗುತ್ತದೆ, ಅಷ್ಟೆ. ಭಾಷೆಯಿಂದ ಮಾತು, ಮತ್ತು ಮಾತಿನಿಂದ ಬರಹ ಎಂಬುದಾಗಿ ಬರಹಕ್ಕೂ ಭಾಷೆಗೂ ನಡುವೆ ಮಾತು ಒಂದು ಕೊಂಡಿಯಾಗಿ ನಿಂತಿರುತ್ತದೆ. ಇದಲ್ಲದೆ, ಮೊನ್ನೆ ಮೊನ್ನೆಯ ವರೆಗೂ ಬರಹವನ್ನು ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬಳಸು ತ್ತಿದ್ದರು.
ಆದರೆ ಮೇಲೆ ಸೂಚಿಸಿದ ಹಾಗೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಈ ವ್ಯತ್ಯಾಸಗಳಿಂದಾಗಿ ಬರಹಕ್ಕೆ ಮಾತಿನಿಂದ ಬೇರಾಗಿರುವ ತನ್ನದೇ ಆದ ಅಸ್ತಿತ್ವವೊಂದನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ, ಮತ್ತು ಇದರಿಂದಾಗಿ, ಜನರ ಮನಸ್ಸಿನಲ್ಲಿ ಇವತ್ತು ಮಾತಿಗಿಂತಲೂ ಬರಹಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇದಲ್ಲದೆ, ಬರಹವಿಲ್ಲದ ಮಾತು ಭಾಷೆಯೇ ಅಲ್ಲ ಎಂಬ ಅನಿಸಿಕೆ ಇವತ್ತು ಹಲವರಲ್ಲಿದೆ. ಆದರೆ ಇದು ನಾಯಿ ತನ್ನ ಬಾಲವನ್ನು ಬೀಸುವ ಬದಲು, ಬಾಲವೇ ನಾಯಿಯನ್ನು ಬೀಸುವ ಹಾಗೆ
ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವ ಮಾತನ್ನನುಸರಿಸಿ ಬರಹ ಬದಲಾಗದಿದ್ದರೆ ಏನಾಗುತ್ತದೆ? ಇದಕ್ಕೆ ಸಂಸ್ಕೃತ ಬರಹ ಒಂದು ಒಳ್ಳೆಯ ಉದಾಹರಣೆ. ಹಲವಾರು ಒಳ್ಳೆಯ ಬರಹಗಾರರು ಸಂಸ್ಕೃತದಲ್ಲಿ ಬರಹಗಳನ್ನು ಬರೆದರು; ಇವನ್ನಾಧರಿಸಿ, ಪಾಣಿನಿಯಂತಹ ವೈಯಾಕರಣಿಗಳು ಸಂಸ್ಕೃತಕ್ಕೆ
ಒಂದು ಕಟ್ಟುನಿಟ್ಟಾದ ವ್ಯಾಕರಣವನ್ನೂ ಬರೆದುಕೊಟ್ಟರು. ಇವುಗಳಿಂದಾಗಿ, ಸಂಸ್ಕೃತ ಬರಹ ಮಾತನ್ನನುಸರಿಸಿ ಬದಲಾಗಲು ಹೋಗದೆ ನಿಶ್ಚಲವಾಗಿ ಉಳಿಯುವಂತಾಯಿತು. ಕಳೆದ ಎರಡು ಸಾವಿರ ವರ್ಷಗಳಲ್ಲಿ ಈ ರೀತಿ ಸಂಸ್ಕೃತ ಬರಹ ಮಾತನ್ನನುಸರಿಸಿ ಬದಲಾಗದೆ ಉಳಿದಿದೆ.
ನಿಜಕ್ಕೂ ಇವತ್ತು ಸಂಸ್ಕೃತವನ್ನು ಒಂದು ಭಾಷೆಯೆಂದು ಕರೆಯುವುದು ಸರಿಯಲ್ಲ. ಯಾಕೆಂದರೆ, ಎರಡು ಸಾವಿರ ವರ್ಷಗಳಷ್ಟು ಹಿಂದೆ ಮಾತಿನಿಂದ ಬೇರ್ಪಟ್ಟಾಗಲೇ ಅದು ‘ಭಾಷೆ’ ಎಂಬ ಹೆಸರನ್ನೂ ಕಳೆದುಕೊಂಡಿತ್ತು. ಇವತ್ತು ಕೆಲವರು ತಾವು ಸಂಸ್ಕೃತವನ್ನು ಆಡುತ್ತಿದ್ದೇವೆಂದು ಹೇಳಬಹುದು; ಆದರೆ, ಕಾಲದಿಂದ ಕಾಲಕ್ಕೆ ಮತ್ತು ತಲೆಮಾರಿನಿಂದ ತಲೆಮಾರಿಗೆ ಬದಲಾಗುವಂತಹ, ಮತ್ತು ಆ ಮೂಲಕ ತನ್ನ ಹೊಸತನವನ್ನು ಉಳಿಸಿಕೊಳ್ಳುವಂತಹ ಭಾಷೆಯ ಮುಖ್ಯ ಸ್ವಭಾವ ಅದಕ್ಕಿಲ್ಲ. ಯಾಕೆಂದರೆ, ಆ ರೀತಿ ಬದಲಾದರೆ ಅದು ಸಂಸ್ಕೃತ ವಾಗಿ ಉಳಿಯದೆ ಬೇರೊಂದು ಭಾಷೆಯಾಗಿಬಿಡುತ್ತದೆ
ಹಾಗಾಗಿ, ಸಂಸ್ಕೃತವನ್ನು ಮಾತಿನಲ್ಲಿ ಬಳಸುವವರೆಲ್ಲರೂ ಇವತ್ತು ಪಾಣಿನಿಯ ವ್ಯಾಕರಣಕ್ಕೆ ಮತ್ತು ಮಹಾಕವಿಗಳ ಬಳಕೆಗೆ ಹೊಂದಿಕೊಳ್ಳುವಂತೆ ತಮ್ಮ ಮಾತನ್ನು ಸರಿದೂಗಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಅದರಲ್ಲಿ ಬದಲಾ ವಣೆಗಳೇನಾದರೂ ನಡೆದರೂ ಅವು ಸ್ವಾಭಾವಿಕವಾಗಿ ನಡೆಯುವ ಬದಲು, ಬರಹಗಾರರು (ಕವಿಗಳು) ವೈಯಕ್ತಿಕವಾಗಿ ನಡೆಸಿದುದರಿಂದಾಗಿ ಉಂಟಾಗುತ್ತವೆ. ಈ ರೀತಿ ಮಾತಿನ ಆಧಾರವನ್ನು ಬಿಟ್ಟುಕೊಟ್ಟುದರಿಂದಾಗಿ ಸಂಸ್ಕೃತ ಬರಹಗಳು ಕೃತಕವಾಗುತ್ತಾ ಹೋಗುತ್ತಿವೆ.
ಇದನ್ನು ತಿಳಿಯಲು, ಸಂಸ್ಕೃತದಲ್ಲಿ ಬಳಕೆಯಾಗುವ ಸಮಸ್ತಪದಗಳನ್ನು ಪರಿಶೀಲಿಸಬಹುದು: ಸಾಮಾನ್ಯವಾಗಿ, ಭಾಷೆಗಳಲ್ಲಿ ಸಮಸ್ತಪದಗಳಿಗೂ ಪದ ಕಂತೆಗಳಿಗೂ ನಡುವೆ ವ್ಯತ್ಯಾಸವಿರುತ್ತದೆ; ಉದಾಹರಣೆಗಾಗಿ, ಕನ್ನಡದಲ್ಲಿ ಕರಿಹಲಗೆ ಎಂಬುದು ಒಂದು ಸಮಸ್ತಪದ, ಬಿಳಿಹಲಗೆ ಎಂಬುದು ಒಂದು ಪದಕಂತೆ.
ಇಂತಹ ಪದಕಂತೆಯನ್ನು ಒಂದು ವಿಶಿಷ್ಟವಾದ ಅರ್ಥದಲ್ಲಿ ತಯಾರಿಸಿ ಬಳಸಿದಾಗ, ಮತ್ತು ಆ ಅರ್ಥದಲ್ಲಿ ಅದು ಮಾತಿನಲ್ಲಿ ಬಳಕೆಗೆ ಬಂದಾಗ ಮಾತ್ರ ಸಮಸ್ತಪದವೆಂದೆನ್ನಿಸುತ್ತದೆ. ಬೆಣ್ಕಲ್ಲು, ಹುಟ್ಟುಹಬ್ಬ, ಹುರಿಗಡಲೆ ಮೊದಲಾ ದವುಗಳು ಈ ರೀತಿ ವಿಶಿಷ್ಟವಾದ ಅರ್ಥದಲ್ಲಿ ಬಳಕೆಗೆ ಬಂದು ಕನ್ನಡದಲ್ಲಿ ಸಮಸ್ತಪದಗಳೆನಿಸಿವೆ.
ಸಮಸ್ತಪದ ಮತ್ತು ಪದಕಂತೆಗಳ ನಡುವೆ ಭಾಷೆಗಳಲ್ಲಿ ಕಾಣಿಸಿಕೊಳ್ಳುವ ಈ ವ್ಯತ್ಯಾಸ ಸಂಸ್ಕೃತ ಬರಹದಲ್ಲಿ ಇಲ್ಲವಾಗಿದೆ. ಅದರಲ್ಲಿ ಕೆಲವು ಸಮಸ್ತ ಪದಗಳಿಗೆ ವಿಶಿಷ್ಟವಾದ ಅರ್ಥವಿದೆಯಾದರೂ, ಅವನ್ನು ಅಂತಹ ಅರ್ಥದಲ್ಲಿ ಮಾತ್ರವಲ್ಲದೆ ಬರಿಯ ಪದಕಂತೆಯ ಅರ್ಥದಲ್ಲೂ ಕವಿಗಳು ಬಳಸಬಲ್ಲರು. ಹಾಗಾಗಿ, ‘ಸಮಾಸ’ವೆಂಬ ವ್ಯಾಕರಣ ವಿಧಾನ ಸಂಸ್ಕೃತದಲ್ಲಿ ಎರಡು ಇಲ್ಲವೇ
ಹೆಚ್ಚು ನಾಮಪದಗಳನ್ನು ಒಟ್ಟುಸೇರಿಸಿ ಸಂಕ್ಷಿಪ್ತ ರೂಪದಲ್ಲಿ ಬಳಸುವ ಒಂದು ಸಾಧನ ಮಾತ್ರವಾಗಿ ಉಳಿದುಕೊಂಡಿದೆ.
ಸಂಸ್ಕೃತದ ಪದಕಂತೆಗಳಲ್ಲಿ ಎರಡು ನಾಮಪದಗಳನ್ನು ಒಟ್ಟಿಗೆ ಬಳಸ ಬೇಕಾದಲ್ಲಿ, ಅವೆರಡಕ್ಕೂ ಲಿಂಗ, ವಚನ, ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಕೃಷ್ಣಂ ಸರ್ಪ೦, ಕೃಷ್ಣನ ಸರ್ಪೇಣ ಎಂಬಂತಹ ಪದಕಂತೆಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಸಮಸ್ತಪದಗಳಲ್ಲಿ ಈ ಪ್ರತ್ಯಯ ಕೊನೆಯ ಪದದಲ್ಲಿ ಮಾತ್ರ ಇರುತ್ತದೆ ಎಂಬು ದನ್ನು ಕೃಷ್ಣಸರ್ಪ೦, ಕೃಷ್ಣಸರ್ಪೇಣ ಎಂಬಂತಹ ಪದರೂಪಗಳಲ್ಲಿ ಕಾಣ ಬಹುದು.
ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಕವಿಗಳ ಕೈಯಲ್ಲಿ ಈ ವಿಧಾನ ಪದ ಗಳನ್ನು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಬಳಸುವ ಒಂದು ವಿಧಾನವಾಗಿ ಬದಲಾಗಿದೆ. ಯಾವ ಎರಡು (ಇಲ್ಲವೇ ಹೆಚ್ಚು) ನಾಮಪದಗಳನ್ನು ಬೇಕಿದ್ದರೂ ಒಟ್ಟು ಸೇರಿಸಿ ಮತ್ತು ಸಂಕ್ಷಿಪ್ತಗೊಳಿಸಿ, ಅದನ್ನು ಅವರು ತಮ್ಮ ಕಾವ್ಯಗಳಲ್ಲಿ ಬಳಸಬಲ್ಲರು.
ಉದಾಹರಣೆಗಾಗಿ, ಬಾಣಭಟ್ಟನ ಕಾದಂಬರಿಯಲ್ಲಿ ಇಪ್ಪತ್ತು-ಮೂವತ್ತು ನಾಮಪದಗಳನ್ನು ಒಟ್ಟುಸೇರಿಸಿ ತಯಾರಿಸಿರುವ ಉದ್ದುದ್ದವಾದ ಸಮಸ್ತಪದ ಗಳನ್ನೂ ಕಾಣಬಹುದು. ಇಂತಹ ಸಮಸ್ತಪದಗಳಿಗೆ ತಯಾರಿಕೆ ಎಂಬ ಒಂದೇ ಒಂದು ಹಂತವಿರಬಲ್ಲುದಲ್ಲದೆ, ಅದಕ್ಕಿಂತ ಭಿನ್ನವಾದ ಬಳಕೆ ಎಂಬ ಇನ್ನೊಂದು ಹಂತವಿರಲಾರದು. ಯಾಕೆಂದರೆ, ಅಂತಹ ಉದ್ದುದ್ದವಾದ ಪದಗಳನ್ನು ತಿರು ತಿರುಗಿ ಬಳಸುವ ಮೂಲಕ ಅವು ಒಂದು ಭಾಷೆಯಲ್ಲಿ ರೂಢಿಗೆ ಬರಲು ಸಾಧ್ಯವೇ ಇಲ್ಲ
ಕವಿಗಳು ವೈಯಕ್ತಿಕವಾಗಿ ನಡೆಸಿರುವ ಇಂತಹ ಹಲವು ಮಾರ್ಪಾಡು ಗಳಿಂದಾಗಿ, ಸಂಸ್ಕೃತ ಬರಹದಲ್ಲಿ ಕೃತಕೆಗಳು ತುಂಬಿಕೊಂಡಿವೆ. ಕಾಲದಿಂದ ಕಾಲಕ್ಕೆ ಸಹಜವಾಗಿ ಮುಂದುವರಿಯುವ ಭಾಷೆಗಳಲ್ಲಿ ಇಂತಹ ಕೃತಕೆಗಳು ತಾವಾಗಿಯೇ ಬಿದ್ದುಹೋಗುತ್ತವೆ; ಆದರೆ, ಸಂಸ್ಕೃತ ಬರಹಕ್ಕೆ ಎರಡು ಸಾವಿರ ವರ್ಷಗಳಿಂದಲೂ ಮಾತಿನ ಆಧಾರ ತಪ್ಪಿಹೋಗಿದೆಯಾದ ಕಾರಣ, ಅದರಲ್ಲಿ ಸೇರಿಕೊಂಡಿರುವ ಕೃತಕೆಗಳು ಹಾಗೆಯೇ ಉಳಿದಿವೆ. ನಿಂತ ನೀರಿನ ಹಾಗೆ ಅದು ಜಡವಾಗಿದೆ, ಮತ್ತು ತನ್ನ ಜೀವಂತಿಕೆಯನ್ನು ಕಳೆದುಕೊಂಡಿದೆ.
‘ಕ್ಲಾಸಿಕಲ್’ ಭಾಷೆಯೋ, ಬರಹವೋ?
ಸಂಸ್ಕೃತ, ಲ್ಯಾಟಿನ್ ಮೊದಲಾದ ಕೆಲವು ಬರಹಗಳನ್ನು ಕ್ಲಾಸಿಕಲ್ ಭಾಷೆ ಗಳೆಂದು ಕರೆಯಲಾಗುತ್ತದೆ; ನೂರಾರು ವರ್ಷಗಳಿಂದ ಬದಲಾಗದೆ ಉಳಿದಿರು ವುದು, ಮತ್ತು ಹಲವು ಬಗೆಯ ಉತ್ತಮವಾದ ಗ್ರಂಥಗಳನ್ನು ಅವುಗಳಲ್ಲಿ ಬರೆದಿರುವುದು ಅವಕ್ಕೆ ಈ ‘ಕ್ಲಾಸಿಕಲ್’ ಎಂಬ ಹೆಸರು ಬರಲು ಮುಖ್ಯ ಕಾರಣ. ಆದರೆ, ಮೇಲೆ ಸೂಚಿಸಿದ ಹಾಗೆ, ನೂರಾರು ವರ್ಷ ಬದಲಾಗದೆ ಉಳಿದಿರ
ಬೇಕಾದರೆ, ಅವು ಮಾತಿನ ಆಧಾರ ತಪ್ಪಿಹೋಗಿರುವ ಬರಹಗಳಾಗಿರಬೇಕಲ್ಲದೆ ಭಾಷೆಗಳಾಗಿರಲು ಸಾಧ್ಯವಿಲ್ಲ.
ಇವತ್ತು ಕನ್ನಡಕ್ಕೂ ಭಾರತ ಸರಕಾರ ‘ಕ್ಲಾಸಿಕಲ್’ ಪದವಿಯನ್ನು ಕೊಟ್ಟಿದೆ. ಆದರೆ, ಕನ್ನಡ ಬರಹ ಸಂಸ್ಕೃತ ಮತ್ತು ಲ್ಯಾಟಿನ್ ಬರಹಗಳ ಹಾಗೆ ಬದಲಾಗದೆ ಉಳಿದಿಲ್ಲ; ಅದು ಮೊದಲಿಗೆ ಹಳೆಗನ್ನಡವಿದ್ದುದು ಆಮೇಲೆ ನಡು ಗನ್ನಡವಾಗಿ, ಇವತ್ತು ಹೊಸಗನ್ನಡವಾಗಿದೆ. ಕನ್ನಡ ಭಾಷೆ ಮಾತಿನಲ್ಲಿ ಬದಲಾಗುತ್ತಿರುವಂತೆ, ಅದನ್ನನುಸರಿಸಿ ಕನ್ನಡ ಬರಹವೂ ಬದಲಾಗುತ್ತಾ ಹೋಗಿದೆ. ಹಾಗಾಗಿ, ಇವತ್ತಿಗೂ ಕನ್ನಡ ಬರಹ ಜೀವಂತವಾಗಿದೆ.
ಹಾಗಾದರೆ, ಕನ್ನಡದಲ್ಲಿ ಯಾವುದನ್ನು ‘ಕ್ಲಾಸಿಕಲ್’ ಎಂಬುದಾಗಿ ಕರೆಯ ಬಹುದು? ನನಗೆ ಅನಿಸುವುದೇನೆಂದರೆ, ಹಳೆಗನ್ನಡ ಬರಹಕ್ಕೆ ಬೇಕಿದ್ದರೆ ಈ ಪದವಿಯನ್ನು ಕೊಡಬಹುದು. ಯಾಕೆಂದರೆ, ವಡ್ಡಾರಾಧನೆಯಿಂದ ತೊಡಗಿ ಮುದ್ದಣ್ಣನವರೆಗೂ ನೂರಾರು ವರ್ಷಗಳ ಬಳಕೆ ಅದಕ್ಕಿದೆಯೆಂದು ಹೇಳ ಬಹುದು.
ಭಾಷೆಯ ಬಗೆಗೆ ನೀವೇನು ಬಲ್ಲಿರಿ?