← Ch 2  ·  Contents  ·  Ch 4 →

Chapters: Ch 1 · Ch 2 · Ch 3 · Ch 4 · Ch 5

ಅಧ್ಯಾಯ ೩ — ಬರವಣಿಗೆಯನ್ನು ಸರಿಪಡಿಸಿಕೊಂಡಿರುವ ನುಡಿಗಳು

↑ ಒಳಪಿಡಿಗೆ ಹಿಂತಿರುಗಿ


೩.೧ ಮುನ್ನೋಟ

ಬೇರೆ ನುಡಿಗಳಿಂದ ಪದಗಳನ್ನು ಎರವಲಾಗಿ ಪಡೆಯುವಾಗ, ಹೆಚ್ಚಿನ ನುಡಿಗಳಲ್ಲೂ ಅವನ್ನು ಆ ನುಡಿಗಳ ಸೊಗಡಿಗೆ ಹೊಂದಿಕೊಳ್ಳುವಂತೆ ಮಾರ್ಬಡಿಸಿಕೊಳ್ಳಲಾಗುತ್ತದೆ. ಆದರೆ, ಕೆಲವು ನುಡಿಗಳಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ, ಇಂತಹ ಪದಗಳನ್ನು ಹೆಚ್ಚು ಕಡಿಮೆ ಎರವಲು ಪಡೆದ ನುಡಿಗಳಲ್ಲಿ ಇರುವ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಆದರೆ, ಹೀಗೆ ಮಾಡುವುದರಿಂದ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುತ್ತದೆ. ಈ ತೊಡಕನ್ನು ಇಲ್ಲವಾಗಿಸುವುದಕ್ಕಾಗಿ ಹಲವು ನುಡಿಗಳಲ್ಲಿ ಅಂತಹ ಪದಗಳ ಬರವಣಿಗೆಯನ್ನು ಮಾರ್ರ ಡಿಸಿಕೊಳ್ಳಲಾಗಿದೆ, ಇಲ್ಲವೇ ಅವುಗಳ ಎಣಿಕೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳಲಾಗಿದೆ.

ಇದಲ್ಲದೆ, ತೊಡಕು ತೊಡಕಾಗಿರುವ ಎರವಲು ಪದಗಳನ್ನು ಉಳಿಸಿಕೊಂಡಿರುವ ಕೆಲವು ನುಡಿಗಳಲ್ಲೂ ಮಕ್ಕಳಿಗೆ ಬರಹವನ್ನು ಕಲಿಸುವಾಗ, ಮೊದಲಿನ ನಾಲ್ಕಯ್ದು ವರ್ಷಗಳಲ್ಲಿ ಅಂತಹ ಎರವಲು ಪದಗಳನ್ನು ಅವರ ಕಲಿಕೆಯಿಂದ ಹೊರಗೆ ಇರಿಸಲಾಗುತ್ತದೆ, ಮತ್ತು ಮಕ್ಕಳು ಬರವಣಿಗೆಯಲ್ಲಿ ಸಾಕಶ್ಟು ಪಳಗಿದ ಮೇಲಶ್ಟೇ ಅವನ್ನು ಅವರ ಕಲಿಕೆಯಲ್ಲಿ ಸೇರಿಸಿಕೊಳ್ಳ ಲಾಗುತ್ತದೆ.

↑ ಒಳಪಿಡಿಗೆ ಹಿಂತಿರುಗಿ


೩.೨ ಕೊರಿಯನ್ ನುಡಿಯ ಬರವಣಿಗೆ

ಕೊರಿಯನ್‌ ನುಡಿಯ ಬರಹದಲ್ಲಿ ಎರಡು ಬಗೆಯ ಬರಿಗೆಗಳನ್ನು ಬಳಸಲಾಗುತ್ತದೆ: ಕೊರಿಯನ್‌ ಪದಗಳನ್ನು ಬರೆಯುವುದಕ್ಕಾಗಿ ಹಂಗುಲ್‌ ಎಂಬ ಕಲಿಯಲು ತುಂಬಾ ಸುಲಬವಾಗಿರುವ ಬರಿಗೆಗಳನ್ನು ಬಳಸಲಾಗುತ್ತದೆ, ಮತ್ತು ಚಯ್ನೀಸ್‌ನಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವುದಕ್ಕಾಗಿ ಚಯ್ನೀಸ್‌ ಬರಿಗೆಗಳನ್ನೇ ಸ್ವಲ್ಪ ಮಟ್ಟಿಗೆ ಮಾರ್ಬಡಿಸಿರುವಂತಹ ಹಂಜ ಎಂಬ ಹೆಸರಿನ, ಕಲಿಯಲು ಸಾಕಶ್ಟು ಕಶ್ಚವಾಗಿರುವ, ಬರಿಗೆಗಳನ್ನು ಬಳಸಲಾಗುತ್ತದೆ.

ಹಂಗುಲ್‌ ಬರವಣಿಗೆಯಲ್ಲಿ ಬರಿಗೆಗಳು ನೇರವಾಗಿ ಉಲಿ ಗಳನ್ನು ಗುರುತಿಸುತ್ತವೆ; ಅದರಲ್ಲಿ ಒಂದು ಉಲಿಗೆ ಒಂದು ಬರಿಗೆ ಮಾತ್ರ ಇದೆ, ಮತ್ತು ಒಂದು ಬರಿಗೆಗೆ ಒಂದು ಉಲಿಪು (ಉಚ್ಚಾರಣೆ) ಮಾತ್ರ ಇದೆ. ಹಾಗಾಗಿ, ಅದನ್ನು ಬಳಸಿರುವ ಬರಹಗಳನ್ನು ಮಕ್ಕಳು ತುಂಬಾ ಬೇಗನೆ ಓದಲು ಕಲಿತು ಬಿಡುತ್ತಾರೆ.

ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡ ಲಾಗಿದೆ, ಮತ್ತು ಈ ಉಲಿಗಳನ್ನು ಬರಹದಲ್ಲಿರುವ ಬರಿಗೆಗಳು ಸೂಚಿಸುತ್ತವೆ ಎಂಬುದನ್ನು ಕಲಿಯುವವರು ಗಮನಿಸುವಂತೆ ಮಾಡಲು ಈ ಬರೆವಣಿಗೆಯಲ್ಲಿ ತುಂಬಾ ಸುಲಬ. ಹಾಗಾಗಿ, ದೊಡ್ಡವರು ಹಂಗುಲ್‌ನಲ್ಲಿ ಬರೆದ ಬರಹಗಳನ್ನು ಒಂದೇ ದಿನದಲ್ಲಿ ಓದಲು ಕಲಿಯಬಲ್ಲರು. ಮಕ್ಕಳಿಗೂ ಇದನ್ನು ಕಲಿಯಲು ಹೆಚ್ಚು ಕಶ ವಾಗುವುದಿಲ್ಲ; ಒಂದು ವರ್ಷದೊಳಗೆ ಅದರಲ್ಲಿ ಬರೆದ. ಯಾವ ಬರಹವನ್ನು ಬೇಕಿದ್ದರೂ ಅವರು ಓದಲು “ಕಲಿತುಬಿಡುತ್ತಾ ರೆ.

ಆದರೆ, ಕೊರಿಯನ್‌ ಬರಹಗಳಲ್ಲಿ ಬರುವ ಹಂಜ ಬರಿಗೆಗಳು ನೇರವಾಗಿ ಉಲಿಗಳಿಗೆ ಸಂಬಂದಿಸಿಲ್ಲ. ಒಂದೊಂದು ಪದಕ್ಕೂ ಇಂತಹ ಒಂದೊಂದು ಬರಿಗೆಯಿರುತ್ತದೆ. ಹಾಗಾಗಿ, ಅವನ್ನೆಲ್ಲ ಒಂದೊಂದಾಗಿ ಕಲಿತು ನೆನಪಿನಲ್ಲಿ ರಿಸಿಕೊಳ್ಳ ಬೇಕಾಗುತ್ತದೆ. ಇಂತಹ ಬರಿಗೆಗಳನ್ನು ಕಲಿಯಲು ಮಕ್ಕಳಿಗೆ ಹಲವು ವರ್ಷಗಳೇ ಬೇಕಾಗುತ್ತವೆ.

ಈ ಎರಡನೇ ಬಗೆಯ ಬರಿಗೆಗಳಿಂದಾಗುವ ತೊಂದರೆಯನ್ನು ಇಲ್ಲವಾಗಿಸಲು, ಬಡಗು ಕೊರಿಯಾದಲ್ಲಿ ಚಯ್ನೀಸ್‌ ಎರವಲುಗಳನ್ನು ಹಂಗುಲ್‌ನಲ್ಲೇ ಬರೆಯಬೇಕೆಂಬ, ಮತ್ತು ಅದಕ್ಕಾಗಿ ಹಂಜ ಬರಿಗೆಗಳನ್ನು ಬಳಸಲೇಬಾರದೆಂಬ ತೀರ್ಮಾ ನ ವನ್ನು ೧೯೪೯ರಲ್ಲಿ ಮಾಡಲಾಗಿತ್ತು. ಈ ತೀರ್ಮಾ poh, ಆ ನಾಡಿನಲ್ಲಿ ಬರಹ ಬಾರದವರೇ ಇಲ್ಲದ ಹಾಗೆ ಮಾಡಲಾಗಿದೆ ಯೆಂದು ಹೇಳಲಾಗುತ್ತದೆ.

ಆದರೆ, ತೆಂಕು ಕೊರಿಯಾದಲ್ಲಿ ಚಯ್ನೀಸ್‌ ಎರವಲುಗಳನ್ನು ಬರೆಯಲು ಇವತ್ತಿಗೂ ಹಂಜ ಬರಿಗೆಗಳನ್ನೇ ಬಳಸಲಾಗುತ್ತಿದೆ; ಹಾಗಿದ್ದರೂ, ಅವುಗಳ ಎಣಿಕೆಯನ್ನು ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಇದಲ್ಲದೆ, ಸಾಮಾನ್ಯವಾಗಿ ಎಲಿಮೆಂಟರಿ ಶಾಲೆಗಳಲ್ಲಿ ಹಂದುಲ್‌ ಬರಿಗೆಗಳನ್ನು ಮಾತ್ರ ಬರೆಯಲು ಮತ್ತು ಒದಲು ಮಕ್ಕಳಿಗೆ ಹೇಳಿಕೊಡಲಾಗುತ್ತದೆ; ಅವನ್ನು ಸಲೀಸಾಗಿ ಓದಲು ಕಲಿತ ಮೇಲೆ, ಮುಂದೆ ಮೇಲಿನ ತರಗತಿಗಳಲ್ಲಿ ಅವರಿಗೆ ಹಂಜ ಬರಿಗೆಗಳನ್ನು ಕಲಿಸಲಾಗುತ್ತದೆ.

ಮಕ್ಕಳ ಪುಸ್ತಕಗಳಲ್ಲಿ, ಹೆಣ್ಣು ಮಕ್ಕಳ ಪತ್ರಿಕೆಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಹಂಗುಲ್‌ ಬರಿಗೆಗಳನ್ನು ಮಾತ್ರ ಬಳಸಲಾಗುತ್ತದೆ; ಹಲವು ದಿನಪತ್ರಿಕೆ, ವಾರಪತ್ರಿಕೆಗಳಲ್ಲೂ ತುಂಬಾ ಕಡಿಮೆ ಹಂಜ ಬರಿಗೆಗಳನ್ನು ಬಳಸಲಾಗುತ್ತದೆ.

↑ ಒಳಪಿಡಿಗೆ ಹಿಂತಿರುಗಿ


೩.೩ ಪಂಜಾಬಿ ನುಡಿಯ ಬರವಣಿಗೆ

ಪಂಜಾಬಿ ನುಡಿಯನ್ನು ಬರೆಯಲು ರುರ್ಮುಕಿ ಎಂಬ ಹೆಸರಿನ ಬರವಣಿಗೆಯನ್ನು ಬಳಸಲಾಗುತ್ತದೆ. ಇದು ಬ್ರಾಹ್ಮೀ ಬರವಣಿಗೆಯಿಂದಲೇ ಬೆಳೆದುಬ ಂದಿದೆಯಾದರೂ ಅದರಲ್ಲಿ ಪಂಜಾಬಿ ಪದಗಳನ್ನು ॥ ಬರೆಯಲು ಬೇಕಾಗುವ ಬರಿಗೆ(ಅಕ್ಕ ರ)

ಗಳನ್ನಶ್ಟೇ ೯ ಛಿಸಿಕೊಳ್ಳ ಲಾಗಿದೆ. ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿ ps ೫.1 ಬರಿಗೆಗಳನ್ನು ಉಳಿಸಿಕೊಂಡಿಲ್ಲ.

ಪಂಜಾಬಿ ಪದಗಳನ್ನು ಬರೆಯಲು ಬೇಕಾಗುವ ಬೇರೆ ಕೆಲವು ಬರಿಗೆಗಳನ್ನೂ ಈ ಬರವಣಿಗೆಯಲ್ಲಿ ಹೊಸದಾಗಿ ರಚಿಸಿ ಸೇರಿಸಿಕೊಳ್ಳಲಾಗಿದೆ.

ಈ ಬರವಣಿಗೆಯನ್ನು ಹದಿನಾರನೇ ಶತಮಾನದ ಸಿಕ್‌ ಗುರು ಅಂಗದ್‌ ಎಂಬವರು ಬ್ರಾಹ್ಮೀ ಬರವಣಿಗೆಯನ್ನು ಪಂಜಾಬಿ ಮುಡಿಗೆ ಅಳವಡಿಸಿಕೊಳ್ಳುವ ಮೂಲಕ ಉಂಟುಮಾಡಿದ್ದ ರೆಂದು ನಂಬಲಾಗಿದೆ. *

ಬರಿಗೆಯಿಲ್ಲ. ಹಾಗಾಗಿ, ಇದರಲ್ಲಿ ಸಕಾರ ಮತ್ತು ಶಕಾರಗಳನ್ನು ಸೂಚಿಸಬಲ್ಲ ಬರಿಗೆಗಳಶ್ಟೇ ಇವೆಯಲ್ಲದೆ, ಷಕಾರವನ್ನು ಸೂಚಿಸಬಲ್ಲ ಸಂಸ್ಕೃತ ಪದಗಳಲ್ಲಿ ಬರುವ ಷಕಾರವನ್ನು ಅದರ ಪಂಜಾಬಿ ಉಚ್ಚಾರಣೆಯನ್ನು ಆ ಪಂಜಾಬಿ ಬರಹದಲ್ಲಿ ಬರೆಯಲಾಗುತ್ತದೆ:

ಸಂಸ್ಕೃತ ಪದಗಳು ಪಂಜಾಬಿ ಬರಹ
ವಿಷ ವಿಶ
ಪ್ರದೂಷಣ ಪ್ರದೂಶಣ
ದ್ರುಷ್ಟಿ ದ್ರಿಶಟೀ
ಪುರುಷ ಪುರುಶ
ವಿಶೇಷ ವಿಶೇಶ

ಯಕಾರವನ್ನು ಸೂಚಿಸಬಲ್ಲ ಬರಿಗೆಯೂ ಪಂಜಾಬಿ ಬರವಣಿಗೆಯಲ್ಲಿಲ್ಲ. ಹಾಗಾಗಿ, ಸಂಸ್ಕೃತ ಪದಗಳಲ್ಲಿ ಬರುವ ಈ ಬರಿಗೆಯನ್ನು ರಿ ಎಂಬುದಾಗಿ ಬರೆಯಲಾಗುತ್ತದೆ:

ಸಂಸ್ಕೃತ ಪದಗಳು ಪಂಜಾಬಿ ಬರಹ
ಕೃಪಾ ಕ್ರಪಾ
ಕೃಷ್ಣ ಕ್ರಿಶಣ
ದೃಷ್ಟಿ ದ್ರಶಟಿ
ಸಂಸ್ಕೃತ ಸಂಸಕಠಿತ
ಶ್ರೀ ಠಿಶೀ

ಇದಲ್ಲದೆ, ಪಂಜಾಬಿ ಬರವಣಿಗೆಯಲ್ಲಿ ಸಂಸ್ಕ್ರುತದಲ್ಲಿ ಬರುವ ಹಲವು ಬಗೆಯ ಒತು ಬರಿಗೆ(ಒತ್ತ ಕೃರ) ಗಳನ್ನು ಸೂಚಿಸಲು ಬರುವುದಿಲ್ಲ. ಅವು ಒತು ಮುಚ್ಚುಲಿ(ವ್ಯ ಂಜನ) ಗಳಾಗಿ ಪಂಜಾಬಿ ಜನರ ಉಲಿಪಿನಲ್ಲಿ ಕಾಣಿಸುವುದೂ ಇಲ್ಲ.

ಇವನ್ನೆಲ್ಲ ಉಲಿಪಿನಲ್ಲಿರುವ ಹಾಗೆ ಬಿಡಿಸಿ ಇಲ್ಲವೇ ಒತ್ತುಬರಿಗೆಗಳಲ್ಲಿರುವ ಮುಚ್ಚುಲಿಗಳಲ್ಲೊಂದನ್ನು ಬಿಟು ಬರೆಯಲಾಗುತ್ತದೆ.

ಎತ್ತುಗೆಗೆ, ಪದಗಳ ನಡುವೆ ಬರುವ ಒತ್ತುಬರಿಗೆಗಳೆಲ್ಲ ಬೇರೆ ಬೇರೆ ಬಗೆಗಳಲ್ಲಿ ಅವುಗಳ ಉಲಿಪಿನ ಹಾಗೆ ಬರವಣಿಗೆ ಯಲ್ಲೂ ಬದಲಾಗುತ್ತವೆ:

ಸಂಸ್ಕ್ರುತ ಪಂಜಾಬಿ ಸಂಸ್ಕ್ರುತ ಪಂಜಾಬಿ
ಶಬ್ದ ಶಬದ ವಿದ್ಯಾ ವಿದಿಅ
ಶಕ್ತಿ ಶಕತಿ ಅಧ್ಯಾಯ ಅಧಿಆಯ
ಭಕ್ತಿ ಭಕತಿ ಅಂತ ಅಂತ

ಸಂಸ್ಕ್ರುತದ ಒತ್ತು ಬರಿಗೆಗಳಲ್ಲಿ ಬರುವ ಯಕಾರ ಪಂಜಾಬಿ ಬರವಣಿಗೆಯಲ್ಲಿ ಇಕಾರವಾಗುತ್ತದೆ:

ಸಂಸ್ಕೃತ ಪಂಜಾಬಿ ಸಂಸ್ಕ್ರುತ ಪಂಜಾಬಿ
ವ್ಯಾಸ ವಿಅಸ ಸಾಯ ನಿಆಯ
ವ್ಯರ್ಥ ವಿಅರಥ ಧಾಸ ದಿಅನ
ತಾದ ತಿಗದ    

ದಾ ರೀತಿಯಲ್ಲಿ ಸಂಸ್ಕ್ರುತ ಎರವಲು ಪದಗಳನ್ನು ಸಂಸ್ಕ್ರುತದ ಲ್ಲಿರುವ ಹಾಗೆ AE ಹೋಗದೆ ಅವನ್ನು ಒದಿನಲ್ಲಿ ಸುವ = ಬರೆಯುವುದರಿಂದ ಪಂಜಾಬಿ ಬರವಣಿಗೆಯನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಬವಾಗಿದೆ.

↑ ಒಳಪಿಡಿಗೆ ಹಿಂತಿರುಗಿ


೩.೪ ಇಂಡೊನೇಶಿಯನ್ ನುಡಿಯ ಬರವಣಿಗೆ

ಇಂಡೊನೇಶಿಯನ್‌ ಬರಹದಲ್ಲಿ ಸಾಕಶ್ಟು ಸಂಸ್ಕ್ರುತದ ಎರವಲು ಪದಗಳು ಬಳಕೆಯಾಗುತ್ತವೆ; ಇದಲ್ಲದೆ, ಹೆಸ ಪದಗಳನ್ನು ಉಂಟುಮಾಡುವಲ್ಲೂ ಸಂಸ್ಕ್ರುತದ ಪದ. ಮತ್ತು ಒಟ್ಟು (ಪ್ರತ್ಯಯ) ಗಳನ್ನು EE, ಇಂತಹ ಸಂಸ್ಕ್ರುತದ ಎರವಲು ಪದಗಳ ಎಣಿಕೆ ಆ ನುಡಿಯಲ್ಲಿ ತುಂಬಾ ಹೆಚ್ಚಿದೆ.

ಆದರೆ, ಆ ನುಡಿಯ ಬರವಣಿಗೆಯಲ್ಲಿ ಈ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲಾಗುತ್ತ ದೆಯಲ್ಲದೆ ಸಂಸ್ಕ್ರುತದಲ್ಲಿ ರುವ ಹಾಗೆ ಬರೆಯುವುದಿಲ್ಲ. ಇದರಿಂದಾಗಿ, ಸಂಸ್ಕೃತ ಪದಗಳಿಗೂ ಈ ಎರವಲು ಪದಗಳಿಗೂ ನಡುವೆ ಹಲವ ಬಗೆಯ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ:

ಎತ್ತುಗೆಗೆ, ಸಂಸ್ಕ್ರುತದ ಮಹಾಪ್ರಾಣ Who ಇಂಡೊ ನೇಶಿಯನ್‌ ಬರವಣಿಗೆಯಲ್ಲಿ ಅಲ್ಪ ಪ್ರಾಣಗಳಾಗಿ ಕಾಣಿಸಿಕೊಳ್ಳು ತ್ತವೆ ಮಃ

ಸಂಸ್ಕೃತ ಇಂಡೊನೇಶಿಯನ್‌ ಸಂಸ್ಕೃತ ಇಂಡೊನೇಶಿಯನ್‌
ಅದಿಕಾರ ಅದಿಕಾರ ಬುದ್ದಿ ಬುದಿ
ಭಕ್ತಿ ಬಕ್ತಿ ಮೇಘ ಮೆರ
ಧೂಪ ದುಪ ಮೂರ್ಟ ಮುರ್ಕ
ಮಧು ಮದು ಭೇದ ಬೆದ
ದುಃಖ ದುಶ ಭೂಮಿ ಬುಮಿ

ಕೆಲವು ಪದಗಳಲ್ಲಿ ಮಹಾಪ್ರಾಣ ಹಕಾರವಾಗಿಯೂ ಕಾಣಿಸಿಕೊಳ್ಳುತ್ತದೆ (ಭಾಷಾ-ಬಹಸ, ಭಯ-ಬಹಯ).

ಸಂಸ್ಕ್ರುತದ ಶಕಾರ ಮತ್ತು ಷಕಾರಗಳು ಇಂಡೊನೇಶಿಯನ್‌ ಎರವಲುಗಳಲ್ಲಿ ಸಕಾರವಾಗಿ ಬದಲಾಗಿವೆ:

ಸಂಸ್ಕ್ರುತ ಇಂಡೊನೇಶಿಯನ್‌ ಸಂಸ್ಕ್ರುತ ಇಂಡೊನೇಶಿಯನ್‌
ಅಕಾಶ ಅಕಸ ಅಕ್ಷರ ಅಕ್ಸರ
ಅಶಾ ಅಸ ವಿಷ ಏಸ
ಶಿಷ ಪಿಸ್ತ ದೋಷ ದೊಸ
ಕುಷ್ಟ ಶುಸ್ತ ಪುಷ್ಪ ಪುಸ್ತ

ಇದಲ್ಲದೆ, ಉದ್ದ ತೆರೆಯುಲಿ(ಸ್ವರ)ಗಳು ಗಿಡ್ಡ ತೆರೆಯುಲಿ ಗಳಾಗಿ ಕಾಣಿಸುವುದು, ಟ/ಡ/ಣಗಳು ತ/ದ/ಸಗಳಾಗಿ ಕಾಣಿಸುವುದು ಎಂಬಂತಹ ಬೇರೆಯೂ ಕೆಲವು ಮಾರ್ಬಾಡುಗಳು ಈ ಎರವಲು ಪದಗಳಲ್ಲಿ ನಡೆದಿವೆ. ಈ ಎಲ್ಲಾ ಮಾರ್ಬಾಡುಗಳೂ ಇಂಡೊನೇಶಿಯನ್‌ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯುವಲ್ಲಿ ನೆರವಾಗಿವೆ.

↑ ಒಳಪಿಡಿಗೆ ಹಿಂತಿರುಗಿ


೩.೫ ಜರ್ಮನ್ ನುಡಿಯ ಬರವಣಿಗೆ

ಜರ್ಮನ್‌ ಬರವಣಿಗೈಯಲ್ಲಿ ಓದುವುದಕ್ಕೂ ಬರೆಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು ದರಿಂದ, ಅದನ್ನು ಕಲಿಯುವ ಕೆಲಸ ಬರಹವನ್ನು ಹೆಚ್ಚು ಬಳಸದಿರುವ ಕುಟುಂಬಗಳಿಂದ ಬರುವ ಮಕ್ಕಳಿಗೆ ಬೇರೆ ಮಕ್ಕಳಿಗಿಂತ ಹೆಚ್ಚು ಕಶ್ಚವಾಗುತ್ತಿತ್ತು, ಮತ್ತು ಇದರಿಂದಾಗಿ, ಸಮಾಜದಲ್ಲಿ ಮುಂದೆ ಬರಲು ಇಂತಹ ಮಕ್ಕಳಿಗೆ ಉಳಿದ ಮಕ್ಕಳಿಗಿಂತ ಹೆಚ್ಚು ಕಶ್ಚವಾಗುತ್ತಿತ್ತು.

ಇದನ್ನು ಮನಗಂಡ ಅರಿವಿಗರು ಜರ್ಮನ್‌ ಬರವಣಿಗೆಯಲ್ಲಿ ಕೆಲವು ಮಾರ್ಬಾಡುಗಳನ್ನು ಮಾಡಿ ಅದನ್ನು ಕಲಿಯುವ ಕೆಲಸ ಎಲ್ಲಾ ಹಿನ್ನೆಲೆಯ ಮಕ್ಕಳಿಗೂ ಒಂದೇ ಬಗೆಯದಾಗುವಂತೆ ಮಾಡಬೇಕೆಂಬುದಾಗಿ ಒಂದು ಬೇಡಿಕೆಯನ್ನು ಆಳ್ವಿಕೆಯ ಮುಂದಿರಿಸಿದರು.

ಇದರಂತೆ, ಸುಮಾರು ೬,೦೦೦ ಪದಗಳಲ್ಲಿ ಓದುವುದಕ್ಕೂ ಬರೆಯುವುದಕ್ಕೂ ನಡುವಿದ್ದ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಇಲ್ಲ ವಾಗಿಸುವಂತೆ ಅವುಗಳ ಬರವಣಿಗೆಯಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಿತ್ತು. ಎರವಲು ಪದಗಳನ್ನೂ ಜರ್ಮನ್‌ ಬರವಣಿಗೆಗೆ ಹೊಂದಿಕೆಯಾಗುವಂತೆ ಮಾರ್ಬಡಿಸಬೇಕಾಗಿತ್ತು.

ಜರ್ಮನ್‌ ನುಡಿಯನ್ನು ಬಳಸುವ ಜರ್ಮನಿ, ಆಸ್ಟಿ/ ಯಾ, ಸ್ವಿಟ್ಟರ್‌ಲೇಂಡ್‌ ಮತ್ತು ಲಿಶ್ಟೆ ನ್‌ಸ್ಟಯ್ನ್‌ ದೇಶಗಳ ಆಳ್ವಿ ನಗಳು ಒಟ್ಟು ಸೇರಿ ಈ ಬೇಡಿಕೆಯನ್ನು. ಪರಿಶೀಲಿಸಿದುವು, “ಮತ್ತು ೧೯೬೬ರಲ್ಲಿ ಜರ್ಮನ್‌ ಬರವಣಿಗೆಯ ತೊಡಕುಗಳನ್ನು ಹೋಗಲಾಡಿಸುವಂತಹ ಈ ಸರಿಪಡಿಕೆಗಳಿಗೆ ಅವು ತಮ್ಮ ಒಪ್ಪಿಗೆಯನ್ನು ನೀಡಿದುವು.

ಆದರೆ, ಊರುಗಳ ಮತ್ತು ಜನರ ಹೆಸರುಗಳನ್ನು ಈ ಮಾರ್ಬಾಡಿನ ಹೊರಗೆ ಇರಿಸುವುದೆಂದು ತೀರ್ಮಾನಿಸಲಾಯಿತು. ಈ ಮಾರ್ದಾಡುಗಳನ್ನು ಬಳಕೆಗೆ ತರುವ ಕೆಲಸ ಮಾತ್ರ ತುಂಬಾ ತೊಡಕಿನದಾಗಿ ಕಂಡುಬಂತು. ಯಾಕೆಂದರೆ, ಸುಮಾರು ನೂರರಲ್ಲಿ ೭೮ರಶ್ಪು ಮಂದಿಗೆ ಈ ಸರಿಪಡಿಕೆ ಬೇಡವಾಗಿತ್ತು! ಹೀಗಿದ್ದರೂ, ಶಾಲೆಗಳಲ್ಲಿ ಮತ್ತು ಆಳ್ವಿಕೆಗೆ ಸಂಬಂದಿಸಿದ ಬರವಣಿಗೆಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಯಿತು.

ಈ ಮಾರ್ಪಾಡಿಗೆ ಕೋರ್ಬು ಒಪ್ಪಿಗೆ ನೀಡಿತಾದರೂ, ಬೇರೆ ಬಗೆಯ ಬರಹಗಳಲ್ಲಿ ಇದನ್ನು ಬಳಸುವುದು ಇಲ್ಲವೇ

ಳಸದಿರುವುದು ಜನರ ಆಯ್ಕೆಗೆ ಬಿಟ್ಟದ್ದೆ ೦ದು ಅದು ಹೇಳಿತು. ಇದರಿಂದಾಗಿ, ಮೊದಲಿಗೆ ಇದನ್ನು ಒಪ್ಪಿಕೊಂಡ ಕೆಲವು ಪ್ರಕಾಶಕರೂ ಆಮೇಲೆ ಹಳೆಯ ಬರವಣಿಗೆಯನ್ನೇ ಬಳಸಲು ತೊಡಗಿದರು.

ಆಮೇಲೆ ೨೦೦೬ರಲ್ಲಿ, ತುಂಬಾ ಎದುರಿಕೆಗೊಳಗಾಗಿದ್ದ ಕೆಲವು ಮಾರ್ಪಾಡುಗಳನ್ನು ಆಳ್ವಿಕೆಗಳು ಬಿಟ್ಟುಕೊಟ್ಟುದರಿಂದಾಗಿ, ಜರ್ಮನ್‌ ನುಡಿಯ ಈ ಸರಿಪಡಿಕೆಗೆ ಹೆಚ್ಚಿನವರ ಒಪ್ಪಿಗೆ ದೊರೆತಿತ್ತು, ಮತ್ತು ಇವತ್ತು ಬೇರೆ ಬಗೆಯ ಬರವಣಿಗೆಗಳಲ್ಲೂ ಅದು ಬಳಕೆಗೆ ಬರತೊಡಗಿದೆ.

↑ ಒಳಪಿಡಿಗೆ ಹಿಂತಿರುಗಿ


೩.೬ ಟರ್ಕಿಶ್ ನುಡಿಯ ಬರವಣಿಗೆ

ಸುಮಾರು ಎಪ್ಪ ತ್ರೆ ಅದು ವಗಳರ್ರ ಗಳಶ್ಟು ಹಿಂದೆ, ಟರ್ಕಿ ದೇಶದಲ್ಲಿ ಅದುವರೆಗೆ ಹೆಚ್ಚಿನವರೂ ಬಳಸುತ್ತಿದ್ದ ಅರೇಬಿಕ್‌ ಬರಿಗೆಗಳನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ರೋಮನ್‌ ಬರಿಗೆಗಳನ್ನು ಬಳಸುವ ತೀರ್ಮಾನವನ್ನು ಮಾಡಲಾಯಿತು. ಇದರಿಂದಾಗಿ, ಮೇಲ್ವ ರದ ಕೆಲವೇ ಕೆಲವು ಜನರ ಸೊತ್ತಾಗಿ ಉಳಿದಿದ್ದ ಟರ್ಕಿಶ್‌ ಬರಹ ಎಲ್ಲರ ಸೊತ್ತಾಗುವಂತಾಯಿತು.

ಟರ್ಕಿಶ್‌ ನುಡಿಯನ್ನಾಡುವ ಜನರು ಮುಸ್ಲಿ ಮರಾಗಿ ಮತಾಂತರ ಗೊಂಡಾಗಲೇನೇ ರಿರೇಬಿಕ್‌ ಬರಿಗೆಗಳನ್ನು ತಮ್ಮ ನುಡಿಯ ಬರವಣಿಗೆಗೆ ಅಳವಡಿಸಿಕೊಂಡಿರಬೇಕು. ಹಾಗಾಗಿ, ಆ ಬರಿಗೆಗಳ ಬಳಕೆಗೆ ಟರ್ಕಿಯಲ್ಲಿ ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಹಿನ್ನಡವಳಿ(ಚರಿತ್ರೆ)ಯಿದೆ. ಆದರೆ, ಆ ಬರಿಗೆಗಳನ್ನು ಬಳಸಿ ಟರ್ಕಿಶ್‌ ಪದಗಳ ಉಲಿಪನ್ನು ಸರಿಯಾಗಿ ತಿಳಿಸಲು ಬರುತ್ತಿರಲಿಲ್ಲ.

ಎತ್ತುಗೆಗೆ, ಟರ್ಕಿಶ್‌ ನುಡಿಯಲ್ಲಿ ಎಂಟು ತೆರೆಯುಲಿ(ಸ್ತ ರ) ಗಳಿವೆ; ಆದರೆ, ಅದು ಬಳಸುತ್ತಿದ್ದ ಅರೇಬಿಕ್‌ ಮೂಲದ ಬರವಣಿಗೆಯಲ್ಲಿ ಮೂರು ತೆರೆಯುಲಿಗಳನ್ನಶ್ಚೇ ತೋರಿಸಲು ಬರುತ್ತಿತ್ತು. ಟರ್ಕಿಶ್‌ ನುಡಿಯಲ್ಲಿ ಇಪ್ಪತ್ತೊಂದು ಮುಚ್ಚುಲಿ (ವ್ಯಂಜನ)ಗಳಶ್ಟೇ ಇವೆ; ಆದರೆ, ಅರೇಬಿಕ್‌ ಮೂಲದ ಬರವಣಿಗೆಯಲ್ಲಿ ಇದಕ್ಕಿಂತಲೂ ತುಂಬಾ ಹೆಚ್ಚು ಮುಚ್ಚುಲಿಗಳನ್ನು ಬಳಸಲಾಗುತ್ತಿತ್ತು.

ಇದಕ್ಕೆ ಕಾರಣವೇನೆಂದರೆ, ಅರೇಬಿಕ್‌ ಮತ್ತು ಪರ್ಮಿಯನ್‌ ನುಡಿಗಳಿಂದ ಎರವಲು ಪಡೆದ ಪದಗಳನ್ನು ಬರೆಯುವಾಗ, ಉಲಿಪಿನಲ್ಲಿ ಇಲ್ಲದಂತಹ ಹಲವು ವ್ಯತ್ಯಾಸಗಳನ್ನು ಬರವಣಿಗೆ ಯಲ್ಲಿ ತೋರಿಸುವ ಹೊಲಬು ಟರ್ಕಿಶ್‌ ಬರವಣಿಗೆಯಲ್ಲಿ ಬಳಕೆಯಲ್ಲಿ ತ್ತು. ಬರಹಗಳಲ್ಲಿ ಇಂತ ಪದಗಳ ಬಳಕೆಯೂ ತುಂಬಾ ಹೆಚ್ಚಿತ್ತು. ಇದರಿಂದಾಗಿ, ಟರ್ಕಿಶ್‌ ಬರಹಕ್ಕೂ ಟರ್ಕಿಶ್‌ ಮಾತಿಗೂ ನಡುವೆ ಹಲವಾರು ವ್ಯತ್ಯಾ ಸಗಳು ಕುಣಿಸುತಿ ದವು.

ಈ ಎಲ್ಲಾ ಉರಗ ಜಾ. ಟರ್ಕಿಶ್‌ ಬರಹ ಕೆಲವರ ಸೊತಾ ಗಿಯಶ್ಪೇ ಉಳಿದಿತ್ತು. ಶೇಕಡಾ ಹತ್ತ ಕ್ಕಿಂತ ಕಡಿಮೆ ಜನ ಅದರಲ್ಲಿ ಓದಲು- ಬರೆಯಲು ತಿಳಿದವರಾಗಿದ್ದರು. ಈ ಪರಿಸ್ತಿತಿ ಹಿಂದಿನ ಕಾಲಕ್ಕೆ ಸರಿಹೋಗಬಹುದಿತಾ ದರೂ, ಇಪ ರತ್ತನೇ ಶತಮಾನಕ್ಕೆ ಕಾಲಿರಿಸುತ್ತಿ ದ್ದಂತೆ, ಯುರೋಪಿನ ಬೇರೆ “ನಾಡು ಗಳಲ್ಲಿ ಕಾಣಿಸುವ ಹಾಗೆ, ಟರ್ಕಿಯಲ್ಲೂ ಬರಹ ಎಲ್ಲರ ಸೊತ್ತಾಗಬೇಕೆಂಬ ಕಳಕಳಿ ಅಲ್ಲಿನ ತಿಳಿವಿಗರಲ್ಲಿ ಮತ್ತು ಆಳ್ವಿಕೆ ಯವರಲ್ಲಿ ಉಂಟಾಯಿತು. ೧೯೨೩ರಲ್ಲಿ ಟರ್ಕಿ ಮಂದಿಯಾಳ್ವಿ ಕೆಗೆ (ಪ್ರಜಾಪ್ರಬುತ್ತಕ್ಕೆ) ಇ ವಕ ಒಳಗಾಯಿತು, ಮತ್ತು ಆ ಸಮಯದಲ್ಲಿ ಈ ಕಳಕಳಿಗೆ ಇನ್ನಶ್ಟು ಹೆಚ್ಚಿ ನ ಮಹತ್ವ ಬಂತು. ಮಂದಿಯಾಳ್ವಿಕೆಯಲ್ಲಿ ಬರಹ ಎಲ್ಲರ ಸೊತ್ತಾಗುವುದು ಅತ್ಯವಶ್ಯ. ಹೆಚ್ಚಿನ ತಿಳಿವಿಗರೂ ಈ ರೀತಿ ಟರ್ಕಿಶ್‌ ಬರಹ ಎಲ್ಲರ ಸೊತ್ತಾಗದಿರುವುದಕ್ಕೆ ಅದು ಬಳಸುವ ಅರೇಬಿಕ್‌ ಮೂಲದ ಬರವಣಿಗೆಯೇ ಕಾರಣ ಎಂಬುದನ್ನು ಕಂಡುಕೊಂಡಿದ್ದರು.

ಹತ್ತೊಂಬತ್ತನೆಯ ಶತಮಾನದ ನಡುಬಾಗದಿಂದಲೂ ಅರೇಬಿಕ್‌ ಬರಿಗೆಗಳನ್ನು ಬಳಸಿ ಟರ್ಕಿಶ್‌ ನುಡಿಯನ್ನು ಬರೆಯುವ ಕುರಿತು ತಿಳಿವಿಗರಲ್ಲಿ ಅಸಮಾದಾನ ಕಾಣಿಸಲು ಸುರುವಾಗಿತ್ತು. ಆ ಸಮಯದಲ್ಲಿ ಹೆಚ್ಚಿನವರೂ ಅರೇಬಿಕ್‌ ಬರಿಗೆಗಳನ್ನು ಬಳಸುತ್ತಿದ್ದರಾದರೂ, ಕ್ರಿಶ್ಚಿಯನ್ನರು ರೋಮನ್‌ ಬರಿಗೆಗಳನ್ನು ಮತ್ತು ಬೇರೆ ಕೆಲವರು ಗ್ರೀಕ್‌ ಬರಿಗೆಗಳನ್ನು ಬಳಸುತ್ತಿದ್ದರು.

ಪಕ್ಕದ ನಾಡಾದ ಅಲ್ಬೇನಿಯಾದಲ್ಲಿ ೧೮೭೯ರಲ್ಲೇನೇ ಅಲ್ಬೇನಿಯನ್‌ ನುಡಿಗೆ ಅರೇಬಿಕ್‌ ಬರಿಗೆಗಳಿಗಿಂತಲೂ ರೋಮನ್‌ ಬರಿಗೆಗಳೇ ಒಳ್ಳೆಯವೆಂಬುದಾಗಿ ತೀರ್ಮಾನಿಸಿ, ಅದುವರೆಗೆ ಬಳಕೆಯಲ್ಲಿದ್ದ ಅರೇಬಿಕ್‌ ಬರಿಗೆಗಳಿಗೆ ಬದಲಾಗಿ ರೋಮನ್‌ ಬರಿಗೆಗಳನ್ನು ಬಳಸಲು ತೊಡಗಿಯಾಗಿತ್ತು. ಸುದಾರಣೆಯ ಹೆಸರಿನಲ್ಲಿ ಹೀಗೆ ಮಾಡುವುದು ದರ್ಮನಿಂದನೆಯೆಂಬುದಾಗಿ ಮತಾದಿಕಾರಿಗಳು ಫತ್ವಾ ಹೊರಡಿಸಿದ್ದರಾದರೂ ಈ ಕೆಲಸ ನಡೆದುಹೋಗಿತ್ತು.

[a ೧೯೨೮ರಲ್ಲಿ ಟರ್ಕಿಯೂ ಅರೇಬಿಕ್‌ ಬರಿಗೆಗಳ ಬದಲು ರೋಮನ್‌ ಬರಿಗೆಗಳನ್ನು ಬಳಸಬೇಕೆಂಬ ತೀರ್ಮಾನಕ್ಕೆ ಬಂತು. ಆಗಿನ ಜನಪ್ರಿಯ ಅದ್ಯಕ್ತರಾಗಿದ್ದ ಮುಸ್ತಾಫಾ ಕಮಲ್‌ ಅವರು ಈ ವಿಶಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದುದರಿಂದಾಗಿ, ಈ ಬದಲಾವಣೆ ಇಡೀ ನಾಡಿನಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದು ಹೋಗಲು ಸಾದ್ಯವಾಯಿತು.

ಈ ರೀತಿ ರೋಮನ್‌ ಬರಿಗೆಗಳನ್ನು ಟರ್ಕಿಶ್‌ಗೆ ಅಳವಡಿಸು ವಾಗ, ಅದರ ಹಳೆ (ಅರೇಬಿಕ್‌ ಮೂಲದ) ಬರವಣಿಗೆಯಲ್ಲಿ ದ್ದ ಹಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು; ಎತ್ತುಗೆಗಾಗಿ, ಆ ಬರವಣಿಗೆಯಲ್ಲಿ ನಾಲ್ಕು ಬಗೆಯ ಸಕಾರಗಳಿದ್ದುವು, ಮತ್ತು ಮೂರು ಬಗೆಯ ಹಕಾರಗಳಿದ್ದುವು; ಅರೇಬಿಕ್‌ ಮೂಲದ ಪದಗಳನ್ನು ಅರೇಬಿಕ್‌ನಲ್ಲಿದ್ದ ಹಾಗೆಯೇ ಬರೆಯಲು ಇವು ಬೇಕಾಗಿದ್ದುವು.

ಆದರೆ, ಟರ್ಕಿಶ್‌ ಪದಗಳನ್ನು ಬರೆಯಲು ಅವು ಬೇಕಾಗಿರಲಿಲ್ಲ. ಹಾಗಾಗಿ, ಹೊಸ ಟರ್ಕಿಶ್‌ ಬರವಣಿಗೆಯಲ್ಲಿ ಎರಡು ಸಕಾರಗಳನ್ನು ಮತ್ತು ಒಂದು ಹಕಾರವನ್ನಶ್ಟೇ ಉಳಿಸಿಕೊಳ್ಳಲಾಯಿತು. ಚಕಾರ, ತಕಾರ, ಕಕಾರ ಮೊದಲಾದ ಬೇರೆ ಕೆಲವು ಬರಿಗೆಗಳಿಗೆ ಸಂಬಂದಿಸಿದಂತಹ ಕೆಲವು ವ್ಯತ್ಯಾಸಗಳನ್ನೂ ಹೊಸ ಬರವಣಿಗೆ ಯಲ್ಲಿ ಬಿಟ್ಟುಕೊಡಲಾಯಿತು.

ಇದರಿಂದಾಗಿ, ಹೊಸ ಬರವಣಿಗೆಯಲ್ಲಿ ಸ್ಪೆಲ್ಲಿಂಗ್‌ ಸಮಸ್ಯೆ ಪೂರ್ತಿ ಇಲ್ಲವಾಯಿತು. ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಸುಲಬವಾಯಿತು. ಟರ್ಕಿಶ್‌ ಬರವಣಿ ಗೆಯಲ್ಲಿ ನಡೆಸಿದ ಈ ಎರಡು ಮಾರ್ದಾಡುಗಳಿಂದಾಗಿ, ಆ ದೇಶದಲ್ಲಿ ಬರಹ ಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು, ಮತ್ತು ಬರಹ ಈ ರೀತಿ ಎಲ್ಲರ ಸೊತ್ತಾದುದರಿಂದಾಗಿ, ಅದರಲ್ಲಿ ಜೀವಂತಿಕೆಯನ್ನೂ ತುಂಬಲು ಸಾದ್ಯವಾಯಿತೆಂದು ಹೇಳಲಾಗುತ್ತಿದೆ.

↑ ಒಳಪಿಡಿಗೆ ಹಿಂತಿರುಗಿ


೩.೭ ಅಸಮೀಸ್ ನುಡಿಯ ಬರವಣಿಗೆ

ಸಾಕಶ್ಟು ಚನ್ನಾಗಿದ್ದ ಒಂದು ನುಡಿಯ ಬರವಣಿಗೆಯನ್ನು ಕೆಲವು ಪಂಡಿತರು ಸೇರಿಕೊಂಡು, ನುಡಿಯ ಕುರಿತಾಗಿ ತಮ್ಮಲ್ಲಿದ್ದ ಅಜ್ನಾನದಿಂದಾಗಿ, ತುಂಬಾ ಸಿಕ್ಕಲು ಸಿಕ್ಕಲಾದ ಬರವಣಿಗೆಯಾಗಿ ಮಾರ್ಬಡಿಸಿರುವುದಕ್ಕೆ ಅಸಮೀಸ್‌ (ಬಸೊಮಿಯ) ನುಡಿಯ ಬರವಣಿಗೆ ಒಂದು ಒಳ್ಳೆಯ ಎತ್ತುಗೆಯಾಗಬಲ್ಲುದು.

ಅಸಮೀಸ್‌ ಬರವಣಿಗೆಯನ್ನು ಕ್ರಿಶ್ಚಿಯನ್‌ ಮಿಶನರಿಗಳು ಆ ನುಡಿಯ ಉಲಿಪಿಗೆ ಹೊಂದಿಕೆಯಾಗುವ ಹಾಗೆ ಬಳಸಿಕೊಂಡು, ಅದರಲ್ಲಿ ಹಲವು ಪುಸ್ತಕಗಳನ್ನು ಅಚ್ಚುಹಾಕಿಸಿದ್ದರು. ಶಾಲೆಗಳಲ್ಲಿ ಅದನ್ನು ಕಲಿಸುವುದಕ್ಕಾಗಿ ಒಳ್ಳೆಯ ಕಲಿಕೆಪುಸ್ತಕಗಳನ್ನೂ ಅವರು ತಯಾರಿಸಿದ್ದರು. ಇದರಲ್ಲಿ ಪದಗಳನ್ನು ಓದುವ ಹಾಗೆಯೇ ಬರೆಯಲಾಗುತ್ತಿತ್ತು.

ಆದರೆ, ಬಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಕೆಲವರು ಅಸಮೀಸ್‌ ಪಂಡಿತರು ಒ ್ರ ಸೇರಿ, ಮಿಶನರಿಗಳು ಬಳಸು ತ್ತಿರುವ ಬರವಣಿಗೆಯಲ್ಲಿ ಅಸಮೀಸ್‌ ಪದಗಳಿಗಿರುವ ಸಂಸ್ಕ್ರುತದ ಮೂಲರೂಪವನ್ನು ಸರಿಯಾಗಿ ಸೂಚಿಸಲಾಗುವುದಿಲ್ಲ ಹ 5’ಆಕ್ಕೇಪಣೆಯನ್ನು ಮುಂದಿಟ್ಟರು. ಆಮೇಲೆ, ಆ ರೀತಿ ಪದಗಳ ಹಿನ್ನಡವಳಿಯನ್ನು ಸೂಚಿಸು ವಂತಹ ಸ್ವರೂಪವನ್ನು ಅವಕ್ಕೆ ಕೊಟ್ಟು, ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುವ ಹಾಗೆ ಮಾಡಿದರು.

ಇದರಿಂದಾಗಿ, ಇವತ್ತಿನ ಅಸಮೀಸ್‌ ಬರವಣಿಗೆಯಲ್ಲಿ ಉಲಿಪಿಗೂ ಬರಹಕ್ಕೂ ನಡುವೆ ದೊಡ್ಡದೊಂದು ಕಂದಕವೇ ಏರ್ಪಟ್ಟಿದೆ. ಎತ್ತುಗೆಗೆ, ಅಸಮೀಸ್‌ ಪದಗಳನ್ನು ಉಲಿಯುವಂತೆ ಬರೆಯಲು ಒಟ್ಟು ೩೧ ಬರಿಗೆಗಳು ಬೇಕಾಗುತ್ತವೆ.

ಆದರೆ, ಇವತ್ತು ಬಳಕೆಯಲ್ಲಿರುವ ಅಸಮೀಸ್‌ ಬರವಣಿಗೆ ಯಲ್ಲಿ ಒಟ್ಟು ೫೧ ಬರಿಗೆಗಳಿವೆ! ಅಸಮೀಸ್‌ ಪದಗಳಲ್ಲಿ ಬರುವ ಬರಿಗೆಗಳು ಪದಗಳ ಹಿನ್ನಡವಳಿಯನ್ನು ತಿಳಿಸುವ ಹಾಗೆ ಮಾಡಿದುದೇ ಅದರಲ್ಲಿ ಇಶ್ಟು ಹೆಚ್ಚು ಬರಿಗೆಗಳು ಸೇರಿ ಕೊಂಡಿರುವುದಕ್ಕೆ ಮುಕ್ಯ ಕಾರಣ.

ಅಸಮೀಸ್‌ ನುಡಿ ಮರಾಟಿ, ಪಂಜಾಬಿ ಮೊದಲಾದವುಗಳ ಹಾಗೆ ಸಂಸ್ಕ್ರುತದಿಂದ (ಇಲ್ಲವೇ ಅದಕ್ಕೆ ಹತ್ತಿರದ ಮೂಲ ನುಡಿಯೊಂದೆರಿಂದ) ಬೆಳೆದು ಬಂದಿದೆ. ಸಂಸ್ಕ್ರುತ ಮೊದಲಿಗೆ ಮಗದಿ ಪ್ರಾಕ್ರುತವಾಗಿ ಮತ್ತು ಆಮೇಲೆ ಕಾಮರೂಪ ಅಪಬ್ರಂಶವಾಗಿ ಬದಲಾಯಿತು; ಕೊನೆಗೆ ಇವತ್ತಿನ ಅಸಮೀಸ್‌ ನುಡಿಯಾಯಿತು. ಈ ನಡುವೆ ಸಂಸ್ಕೃತದ ಪದಗಳೂ ಹಲವು ಬಗೆಯ ಮಾರ್ಟಾಡುಗಳಿಗೊಳಗಾಗಿವೆ.

ಎತ್ತುಗೆಗೆ, ಸಂಸ್ಕೃತದಲ್ಲಿದ್ದ ತಥದಧನ ಮತ್ತು ಟಕಡಢಣ ಎಂಬ ಮುಚ್ಚುಲಿಗಳ ನಡುವಿನ ವ್ಯತ್ಯಾಸ ಅಸಮೀಸ್‌ನಲ್ಲಿ ಇಲ್ಲವಾಗಿದೆ. ಆ ಹತ್ತು ಮುಚ್ಚುಲಿಗಳು ಇವತ್ತು ಅಯ್ದು ಮುಚ್ಚುಲಿಗಳಾಗಿ (ತಥದಧಸಗಳಾಗಿ) ಅಸಮೀಸ್‌ ಜನರ ಮಾತಿನಲ್ಲಿ (ಮತ್ತು ಓದಿನಲ್ಲಿ) ಕಾಣಿಸಿಕೊಳ್ಳುತ್ತವೆ. ಆದರೆ, ಇವತ್ತಿನ. ಅಸಮೀಸ್‌ ಬರಹದಲ್ಲಿ ತಥದದನಗಳನ್ನು ಟರಡಢಣಗಳಿಂದ ಬೇರಾಗಿ ಸೂಚಿಸ ಸಲಾಗುತ್ತಿದೆ.

ಸ್‌ ಬರಹ ಅಸಮೀಸ್‌ ಉಲಿಪು

ತಟ (ದಡ) ತೊತ ಠಂಡಾ (ಚಳಿ) ಥಂದ್‌ ಥಾಲ (ಬಟ್ಟಲು) ಥಾಲ್‌ ಡೇಶಕಾ(ತರುಣ) ದೇಶ ಢೋೊಂಲ(ಡೋಲು) ಧೋಲ್‌ ಧಾನ (ಬತ್ತ) ಧಾಸ್‌ ರಣ (ಯುದ್ದ) ರೊಸ್‌ ಫಸ (ದಪ್ಪ) ಘೊಸ್‌

ಸಂಸ್ಕ್ರುತದಲ್ಲಿದ್ದ ಸ, ಶ ಮತ್ತು ಷಗಳ ನಡುವಿನ ವ್ಯತ್ಯಾಸವೂ

ಸೀಸೆ ನುಡಿಯಲ್ಲಿಲ್ಲ. ಆದರೆ ಅಸಮೀಸ್‌ ಬರಹದಲ್ಲಿ hei ಬರಹದಲ್ಲಿ ಕಾಣಿಸುವ ಈ ಮೂರು ಬರಿಗೆಗಳನ್ನೂ ಜನರು ಒಂದೇ ರೀತಿಯಲ್ಲಿ ಉಲಿಯುತ್ತಾರೆ (ಇದನ್ನು ಕೆಳಗೆ ಹಕಾರವಾಗಿ ಕಾಣಿಸಲಾಗಿದೆ; ಆದರೆ ಇದರ ಉಲಿಪು ಹಕಾರಕ್ಕಿಂತ ಬೇರಾದುದು):

ಅಸಮೀಸ್‌ ಬರಹ ಅಸಮೀಸ್‌ ಉಲಿಪು

ಚಿಷ (ವಿಶ) ಬಿಹ್‌ ಬಿಶೇಷ (ವಿಶೇಶ) ಬಿಹೆಹ್‌ ಶಾಂತಿ ಚ ಹಸ್ತಿ ಸಾರರ ಹರರ್‌ ಸಖೀ (ಗೆಳತಿ) ಹಖಿ

ಇಂತಹ ಇನ್ನೂ ಹಲವಾರು ವ್ಯತ್ಯಾಸಗಳು ಅಸಮೀಸ್‌ ಬರಹಕ್ಕೂ ಉಲಿಪಿಗೂ ನಡುವೆ ಕಾಣಿಸುತ್ತಿವೆ. ಇವುಗಳಿಂದಾಗಿ ಇವತ್ತು ಶಾಲೆಗಳಲ್ಲಿ ಅಸಮೀಸ್‌ ಬರಹವನ್ನು ಕಲಿಯುವು ದೆಂದರೆ ಮಕ್ಕಳಿಗೆ ಹೊಸದೊಂದು ನುಡಿಯನ್ನು ಕಲಿಯುವಶ್ಟೇ ತೊಡಕಿನ ಕೆಲಸವಾಗಿದೆ.

ಅಸಮೀಸ್‌ ನುಡಿಯ ಈ ಬರವಣಿಗೆ ಹೆಚ್ಚಿನೆಡೆಗಳಲ್ಲೂ ಪದಗಳ ಹಿನ್ನಡವಳಿಯನ್ನು ಸೂಚಿಸುವುದರಿಂದ, ತೊಡಕಿನ ದಾದರೂ ಅದನ್ನು ಉಳಿಸಿಕೊಳ್ಳಬೇಕೆಂಬುದಾಗಿ ಅಸಮೀಸ್‌ ಪಂಡಿತರಿಗೆ ಅನಿಸುತ್ತದೆ. ಹಿಂದಿ, ಮರಾಟಿ, ಪಂಜಾಬಿ ಮೊದಲಾದ ಬೇರೆ ಇಂಡೋ- ಆರ್ಯನ್‌ ನುಡಿಗಳ ಹಾಗೆ ಅಸಮೀಸ್‌ ನುಡಿಗೂ ಸಂಸ್ಕ್ರುತವೇ ಮೂ ನಡ ಯಾದದರಿಂದ್ರ ಬರಹದಲ್ಲಿ ತಮ್ಮ ಷು ಪದಗಳಿಗಿರುವ ಸ್ವರೂಪ ಅವುಗಳ ಸಂಸ್ಕೃತ ಮೂಲವನ್ನು ನೆನಪಿಸುವ ಹಾಗಿದ್ದಲ್ಲಿ ಒಳ್ಳೆಯದು ಎಂದ ಅವರಿಗೆ ಅನಿಸುತ್ತ ದೆ.

ಆದರೆ, ನಿಜಕ್ಕೂ ಇದು ಬೇಕಾಗಿಲ್ಲ. ಯಾಕೆಂದರೆ, ಮಾತು ಕಾಗದದ ಮೇಲೆ ಕಾಣಿಸುವ ಹಾಗೆ ಮಾಡುವುದೇ ಬರಹದ ಮುಕ್ಯ ಉದ್ದೆ ೇಶವಲ್ಲದೆ ಮಾತಿನ ಹಿನ್ನಡವಳಿಯನ್ನು ತಿಳಿಸುವುದು ಅದರ ಉದ್ದೇಶವಲ್ಲ. ಮಾತಿನ ಹಿನ್ನಡವಳಿಯನ್ನು ತಿಳಿಯ ಬೇಕೆಂದಿರುವವರು ಅದನ್ನು ಬೇರಾಗಿ ಕಲಿತುಕೊಳ್ಳಬಹುದು. ಅದಕ್ಕಾಗಿ ಒಂದು ನುಡಿಯ ಬರಹವನ್ನೇ ಇಶ್ಟೊಂದು ತೊಡಕಿನದಾಗಿ ಮಾಡಬೇಕಾಗಿಲ್ಲ. ನುಡಿಯ ಸ್ವರೂಪ ಮತ್ತು ಸ್ವಬಾವಗಳನ್ನು ತಿಳಿಯದವರು ನುಡಿಗೆ ಸಂಬಂದಿಸಿದ ವಿಶಯಗಳಿಗೆ ಕಯ್ದಾಕಿದಲ್ಲಿ ಹೇಗೆ ಅನರ್ರಗಳುಂಟಾಗುತ್ತವೆ ಮತ್ತು ಅವುಗಳಿಂದೊದಗುವ ತೊಂದರೆ ಗಳನ್ನು ಹೇಗೆ ಇಡೀ ಸಮಾಜವೇ ಅನುಬವಿಸಬೇಕಾಗುತ್ತದೆ ಎಂಬುದಕ್ಕೆ ಅಸಮೀಸ್‌ ಬರಹದಲ್ಲಿ ಕೆಲವರು ಪಂಡಿತರು ಮಾಡಿರುವ ಈ ಬದಲಾವಣೆಗಳು ಒಳ್ಳೆಯ ಎತ್ತುಗೆಗಳಾಗಿವೆ. ↑ ಒಳಪಿಡಿಗೆ ಹಿಂತಿರುಗಿ