↑ Contents  ·  Contents  ·  Ch 2 →

Chapters: Ch 1 · Ch 2 · Ch 3 · Ch 4 · Ch 5

ಅಧ್ಯಾಯ ೧ — ಮುನ್ನೋಟ

↑ ಒಳಪಿಡಿಗೆ ಹಿಂತಿರುಗಿ


೧.೧ ಕನ್ನಡ ಬರಹದಲ್ಲಿ ಬೇಡದಿರುವ ಬರಿಗೆಗಳು

ಇವತ್ತು ಬಳಕೆಯಲ್ಲಿರುವ ಮಹಾಪ್ರಾಣ ಬರಿಗೆ(ಅಕ್ಶರ)ಗಳು, ಷಕಾರ, ಯಕಾರ ಮೊದಲಾದ ಸುಮಾರು ಹತ್ತಿಪ್ಪತ್ತು ಬರಿಗೆಗಳು ನಿಜಕ್ಕೂ ಕನ್ನಡ ಬರಹಕ್ಕೆ ಬೇಕಾಗಿಲ್ಲ. ಇಂತಹ ಬೇಡದಿರುವ ಬರಿಗೆಗಳನ್ನು ಬರಹದಿಂದ ತೆಗೆದು ಹಾಕಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗುವ ಹಾಗೆ ಇವತ್ತು ಮಾಡಲೇಬೇಕಾಗಿದೆ. ಯಾಕೆಂದರೆ, ಕನ್ನಡ ಬರಹವನ್ನು ಎಲ್ಲಾ ವರ್ಗದ ಜನರೂ ಬಳಸುವ ಹಾಗೆ ಮಾಡು ವಲ್ಲಿ ಈ ಬರಿಗೆಗಳು ತೊಡಕುಗಳಾಗಿವೆ.

ಸುಮಾರು ಎರಡು ಸಾವಿರ ವರ್ಷಗಳಶ್ಪು ಹಿಂದೆ, ಕನ್ನಡಕ್ಕೆ ಬರಹವೊಂದನ್ನು ಅಳವಡಿಸುವ ಸಮಯದಲ್ಲಿ ಕನ್ನಡದ ತಿಳಿವಿಗರು ಸಂಸ್ಕ್ರುತದ ಮೇಲಿದ್ದ ಮೇಲರಿಮೆಯಿಂದಾಗಿ ಕನ್ನ ಡ ಬರಹಕ್ಕೆ ಬೇಡದಿದ್ದರೂ ಸಂಸ್ಕೃತ ಇ ಪದಗಳನ್ನು ಅದರಲ್ಲಿದ್ದಂ ತೆ ಕನ್ನಡ ಬರಹಗಳಲ್ಲಿ ಬಳಸಲು ತೊಡಗಿದ್ದರು. ಮುಂದಿನವರೂ ಇದನ್ನೇ ಮುಂದುವರಿಸುತ್ತಾ ಬಂದಿದ್ದು, ಇವತ್ತಿಗೂ ಅದೆ ಬಳಕೆ. ನಡೆಯುತ್ತಿದೆ.

ಸಂಸ್ಕ್ರುತದ ಮೇಲಿರುವ ಈ ಮೇಲರಿಮೆಯನ್ನು ಮತ್ತು ಕನ್ನಡದ ಕಂತಾಗಿಹಫ ಕೀಳರಿಮೆಯನ್ನು ನಾವು “ಇವತ್ತು

[> ತೊರೆಯಬೇಕಾಗಿದೆ. ನಮ್ಮ ಮಟ್ಟಿಗೆ ನಮ್ಮ ನಾಡಿನ ನುಡಿಯಾಗಿರುವ ಕನ್ನಡವೇ ಬೇರೆ ಎಲ್ಲಾ ನುಡಿಗಳಿಗಿಂತಲೂ ಮೇಲಿನ ನುಡಿಯಾಗಿರಬೇಕು, ಮತ್ತು ಹಿಂದಿ, ಇಂಗ್ಲಿಶ್‌, ಮರಾಟಿ ಮೊದಲಾದ ಬೇರೆ ನುಡಿಗಳ ಹಾಗೆ, ಸಂಸ್ಕ್ರುತವೂ ಒಂದು ಹೊರಗಿನ ನುಡಿಯಶ್ಟೇ ಆಗಿರಬೇಕು. ಅದರ ಪದಗಳನ್ನು ಇಂಗ್ಲಿಶ್‌, “ಏಂದಿ ಮೊದಲಾದವುಗಳಿಂದ ಪಡೆದ ಪದಗಳ ಹಾಗೆ ಎರವಲು ಪದಗಳೆಂದಶ್ಟೇ ತಿಳಿಯಬೇಕು.

ಇಂತಹ ಎರವಲು ಪದಗಳನ್ನು ನಾವು ಸಾಮಾನ್ಯವಾಗಿ ಹೇಗೆ ಉಲಿಯು(ಉಚ್ಚರಿಸು)ತ್ತೇವೋ ಹಾಗೆಯೇ ಬರೆಯುತ್ತೇವೆ. ಇಂಗ್ಲಿಶ್‌ನಲ್ಲಿ ವೋಟ್‌ ಎಂಬ ಪದದ ಮೊದಲಿಗೆ ಬರುವ ವಕಾರಕ್ಕೂ ವಾಚ್‌ ಎಂಬ ಇನ್ನೊಂದು ಪದದ ಮೊದಲಿಗೆ

ಬರುವ ವಕಾರಕ್ಕೂ ನಡುವೆ ಇಂಗ್ಲಿಶ್‌ ನುಡಿಗರ ಉಲಿಪಿನಲ್ಲಿ (ಉಚ್ಚಾರಣೆಯಲ್ಲಿ) ಬೇರ್ಕೆ ಇದೆ. ಆದರೆ, ಕನ್ನಡದ ಮಾತುಗಳಲ್ಲಿ

ಬಳಸುವಾಗ ಇವೆರಡನ್ನೂ ಒಂದೇ ಬಗೆಯಲ್ಲಿ ಉಲಿಯುತ್ತೆ ವೆ. ಹಾಗಾಗಿ, ಅವೆರಡನ್ನೂ ಒಂದೇ ಬಗೆಯಲ್ಲಿ ಬರೆಯುತ್ತೇವೆ.

ಇದೇ ರೀತಿಯಲ್ಲಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಕಾಣಿಸುವ ಮಹಾಪ್ರಾಣ ಬರಿಗೆಗಳನ್ನು ಹೆಚ್ಚಿ ನ ಕನ್ನ ಡಿಗರೂ ಅಲ್ಪಪ್ರಾಣಗಳಾಗಿಯೇ. ಉಲಿಯುತ್ತಾರೆ. “ಹಾಗಾಗಿ, ಅವನ್ನೂ ಅಲ್ಪಪ್ರಾಣ ` ಬರಿಗೆಗಳಾಗಿ ಬರೆದರೆ ಸಾಕು, ಮಹಾಪ್ರಾಣ ಬರಿಗೆಗಳಾಗಿ ಬರೆಯಬೇಕಾಗಿಲ್ಲ; ಹಾಗೆ ಬರೆಯದಿರುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ. ಹೀಗೆ ಮಾಡುವುದರಿಂದ, ಕನ್ನಡದ ಬರವಣಿಗೆಯಲ್ಲಿ ಅನವಶ್ಯ ಕವಾಗಿ ಸೇರಿಕೊಂಡಿರುವ

ಖ, ಪ,ಛ,ರು ಮೊದಲಾದ ಹತ್ತು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಲು ಬರುತ್ತದೆ. ಇದೇ ರೀತಿಯಲ್ಲಿ ಚ, ಷ, ವಿಸರ್ಗ ಮೊದಲಾದ ಬೇರೆಯೂ ಕೆಲವು ಬರಿಗೆಗಳು ಕನ್ನಡಕ್ಕೆ ಬೇಕಾಗುವುದಿಲ್ಲ. ಅವನ್ನು ಬಳಸಿರುವ ಪದಗಳನ್ನು ಬೇರೆ ಎರವಲು ಪದಗಳ ಹಾಗೆ ಉಲಿಯುವಂತೆ ಬರೆಯಹೊರಟಲ್ಲಿ ಅವನ್ನೂ ಬಳಸದಿರಲು ಬರುತ್ತದೆ.

↑ ಒಳಪಿಡಿಗೆ ಹಿಂತಿರುಗಿ


೧.೨ ಓದುವ ಮತ್ತು ಬರೆಯುವ ಅಳವು

ಕನ್ನಡದಲ್ಲಿ ಓದುವ ಮತ್ತು ಬರೆಯುವ ಅಳವನ್ನು (ಸಾಮರ್ತ್ಯ ವನ್ನು) ಇವತ್ತು ಎಲ್ಲಾ ಕನ್ನಡಿಗರೂ ಪಡೆಯುವಂತಾಗಬೇಕಾಗಿದೆ. ನಮ್ಮ ನಾಡಿನ ಏಳಿಗೆಗೆ ಇದು ತುಂಬಾ ಅವಶ್ಯವಾಗಿ ನಡೆಯಬೇಕಾಗಿರುವ ಮಾರ್ಬಾಡು. ಬರಹಗಳನ್ನು ಓದಿ ಅವು ಕೊಡುವ ತಿಳಿವನ್ನು ಪಡೆಯಲಾಗದ ಮಂದಿ ಹೆಚ್ಚಿನ ತಿಳಿವಿನಿಂದಲೂ ದೂರ ಉಳಿಯುತ್ತಾರೆ, ಮತ್ತು ಬರೆದು ತಿಳಿಸುವ ಅಳವನ್ನು ಪಡೆಯದಿರುವವರು ತಮ್ಮ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸುವಲ್ಲಿ ಹಿಂದೆ ಬೀಳುತ್ತಾರೆ.

ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹ ಕೆಲವೇ ಕೆಲವು ಮಂದಿ ಮೇಲ್ವರ್ಗದ ಜನರ ಬಳಕೆಯಲ್ಲಿತ್ತು. ನಡುವರ್ಗದವರು ಅದನ್ನು ಬಳಸತೊಡಗಿ ಇನ್ನೂ ಹೆಚ್ಚು ಸಮಯವಾಗಿಲ್ಲ. ಆದರೆ, ಕೆಳವರ್ಗದ ಮಂದಿ ಇವತ್ತಿಗೂ ಬರಹದ ಬಳಕೆಯಿಂದ ದೂರವೇ ಉಳಿದಿದ್ದಾರೆ. ಅವರಲ್ಲಿ ಕೆಲವರು ಶಾಲೆಗೆ ಹೋಗಿ ಓದಲು- ಬರೆಯಲು ಕಲಿಯುತ್ತಾರಾದರೂ, ತಮ್ಮ ಜೀವನದಲ್ಲಿ ಈ ಓದು-ಬರಹವನ್ನು ಬಳಕೆಗೆ ತರುವವರ ಎಣಿಕೆ ಈ ವರ್ಗದವರಲ್ಲಿ ತುಂಭಾ ಕಡಿಮೆ.

ಈ ಪರಿಸ್ತಿತಿಯನ್ನು ಇವತ್ತು, ಅದರಲ್ಲೂ ಈ ಕೂಡುಬಲೆಯ (ಇಂಟರ್‌ನೆಟ್‌ನ) ಯುಗದಲ್ಲಿ, ಮಾರ್ಟ ಡಿಸಲೇಬೇಕಾಗಿದೆ. ಇಲ್ಲ ವಾಣಕೆ] ಕನ್ನಡ ಸಮಾಜ ಮುಂದೆ ಬರಲಾರದು. ಯಾಕೆಂದರೆ, ಸ ರಾಬಾರದಷರು ಆಲೋಚಿಸುವ ಬಗೆಗೂ ಬರಹ ಬರುವವರು ಆಲೋಚಿಸುವ ಬಗೆಗೂ ನಡುವೆ ಕೆಲವು ಮುಕ್ಯವಾದ ಬೇರ್ಮೆಗಳಿವೆ.

ಎತ್ತುಗೆಗೆ, ಬರಹಬಲ್ಲವರು ತಿಳಿವನ್ನು ಒಂದು ವಸ್ತುವಿನಂತೆ ಬೇರ್ಪಡಿಸಿ ಪರಿಶೀಲಿಸಬಲ್ಲರು; ಆದರೆ, ಬರಹಬಾರದವರು ಅದನ್ನು ತಿಳಿಸುವ ಮಾತಿನಿಂದ ಮತ್ತು ಮಾತನ್ನು ಬಳಸುವ ಸನ್ನಿವೇಶದಿಂದ ಬೇರ್ರಡಿಸಲಾರರು. ಈ ಎರಡು ಬಗೆಯ ಜನರೊಳಗೆ ಹೊಂದಾಣಿಕೆಯಾಗಬೇಕಿದ್ದಲ್ಲಿ ಬರಹಬಾರದವ ರೆಲ್ಲ ಬರಹ ಬಳಸುವಂತಾಗಬೇಕು.

ಇದಲ್ಲದೆ, ಇವತ್ತು ಜನರಿಗೆ ಸಮಾಜದಲ್ಲಿ ಮುಂದೆ ಬರಲು ಬೇಕಾಗುವ ಎಲ್ಲಾ ಬಗೆಯ ತಿಳಿವುಗಳೂ ಬರಹಗಳಲ್ಲಿ, ಅದರಲ್ಲೂ ಕೂಡುಬಲೆಯಲ್ಲಿ ದೊರಕುತ್ತವೆ. ಸದ್ಯಕ್ಕೆ ಈ ತಿಳಿವು

ಮುಕ್ಯವಾಗಿ ಇಂಗ್ಲಿಶ್‌ನಲ್ಲಿದೆ; ಆದರೆ, ಕನ್ನಡದಲ್ಲೂ ಸಾಕಶ್ಟು

ತಿಳಿವು ದೊರಕುವ ಹಾಗೆ ಮಾಡಬಲ್ಲೆವು.

ಆದರೆ ಆ ಕೆಲಸವನ್ನು ನಡೆಸುವುದು, ಮತ್ತು ಕನ್ನಡ ಬರಹವನ್ನು ಎಲ್ಲರೂ ಬಳಸುವ ಹಾಗೆ ಮಾಡುವುದು ಎಂಬಿ ವೆರಡೂ ಒಟ್ಟೊಟ್ಟಿಗೆ ಮುಂದೆ ಸಾಗಬೇಕಾಗಿದೆ. ಯಾಕೆಂದರೆ, ಅವು ಒಂದಕ್ಕೊಂದು ಸಂಬಂದಿಸಿವೆ. ಕೂಡುಬಲೆಯಲ್ಲಿ ಹೆಚ್ಚು ಹೆಚ್ಚು ತಿಳಿವುಗಳು ಕನ್ನಡದಲ್ಲಿ ದೊರಕುವ ಹಾಗಾದರೆ, ಅದನ್ನು ಪಡೆಯಲು ಹೋಗುವವರ ಎಣಿಕೆ ಹೆಚ್ಚಾ ಗುತ್ತದೆ, ಮತ್ತು ಇದು

ಹೆಚ್ಚಾದ ಹಾಗೆ ಅದರಲ್ಲಿ ತುಂಬಿಕೊಳ್ಳುವ ತಿಳಿವುಗಳೂ ಹೆಚಾ. ಗುತ್ತ ಹೋಗುತ್ತವೆ. ಇದಲ್ಲದೆ, ಇವತ್ತು ಹಣದ ವಹಿವಾಟನ್ನು ಮತ್ತು ಬೇರೆ ಹಲವಾರು ಬಗೆಯ ಕೆಲಸಗಳನ್ನು ಕೂಡುಬಲೆಯ ಮೂಲಕ ನಡೆಸುವ ಅವಶ್ಯಕತೆ ಮೂಡಿಬಂದಿದೆ. ಬರಹಬಾರದವರು ಇದಕ್ಕಾಗಿ ಬೇರೆಯವರ ಹಂಗಿಗೆ ಬೀಳಬೇಕಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿಯೂ ಇವತ್ತು ಎಲ್ಲರೂ ಬರಹಬಲ್ಲವ ರಾಗಬೇಕಾಗಿದೆ.

ನಮ್ಮ ನಾಡಿನಲ್ಲಿ ಬರಹವನ್ನು ಬಳಸುವವರ ಎಣಿಕೆ ಇವತ್ತಿನ ವೇಗದಲ್ಲಿ ಹೆಚ್ಚಾಗುತ್ತಿದ್ದರೆ, ಎಲ್ಲರೂ ಬರಹಬಲ್ಲವರಾಗ ಬೇಕಿದ್ದಲ್ಲಿ ನಾವು ಅದಕ್ಕಾಗಿ ೨೦೬೦ರ ವರೆಗೆ ಕಾಯಬೇಕಾದೀತು ಎಂದು ಲೆಕ್ಕಹಾಕಲಾಗಿದೆ. ಅದಕ್ಕಿಂತಲೂ ಮೊದಲೇ ಬರಹ ಎಲ್ಲರನ್ನೂ ತಲಪುವಂತಾಗಬೇಕಿದ್ದ ಲ್ಲಿ ಅದಕ್ಕಾಗಿ ನಾವು ಎಲ್ಲವೂ ಈಗಿರುವಂತೆಯೇ ಇರಲಿ ಎಂದು ಸುಮ್ಮನೆ ಕುಳಿತಿರುವ ಬದಲು ಏನಾದರೂ ಮಾಡಲು ಹೊರಡಬೇಕು.

↑ ಒಳಪಿಡಿಗೆ ಹಿಂತಿರುಗಿ


೧.೩ ಬರಹವನ್ನು ಕಲಿಯದಿರಲು ಕಾರಣಗಳು

ಜನರು ಬರಹವನ್ನು ಕಲಿಯದಿರಲು ಹಲವು ಕಾರಣಗಳಿವೆ: ಅದರ ನೆರವಿನಿಂದ ತಾವು ಪಡೆಯಬಲ್ಲ ಪ್ರಯೋಜನಗಳು ಎಂತಹವು ಎಂಬುದನ್ನು ತಿಳಿಯದಿರುವುದು ಒಂದು ಮುಕ್ಯ ಕಾರಣ.

ಬರಹವನ್ನು ಕಲಿತಿರುವ ಮತ್ತು ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ತಂದೆತಾಯಿಯರು (ಅದರಲ್ಲೂ ಮುಕ್ಯವಾಗಿ ತಾಯಂದಿರು) ಮನೆಯಲ್ಲಿ ಇರುವರಾದರೆ, ಅವರ ಮಕ್ಕಳು ಬರಹವನ್ನು ಕಲಿಯದೆ ಇರುವುದೇ ಇಲ್ಲ. ಹಾಗಾಗಿ, ದೊಡ್ಡ ವರಿಗೆ ಬರಹ ಕಲಿಸುವುದರಿಂದ, ಮತ್ತು ಇದು ಸಾದ್ಯ ವಾಗದಿದ್ದ ರೂ, ಅವರಿಗೆ ಬರಹದ ಕಲಿಕೆ ಯಾಕೆ ಮುಕ್ಯ ಎಂಬುದನ್ನು ‘ಿಛಿಸಿಕೊಡುವುದರಿಂದ, ಅವರು ತಮ್ಮ ಮಕ್ಕಳ ಕಲಿಕೆಗೆ ಅಡ್ಡಿ ಪಡಿಸದಂತೆ ಮಾಡಲು ಬರುತ್ತದೆ.

ಬಡತನ, ಹತ್ತಿರ ಶಾಲೆಗಳಿಲ್ಲದಿರುವುದು, ಜಾತಿಯ ಸಮಸ್ಯೆಗಳು ಮೊದಲಾದ ಬೇರೆಯೂ ಹಲವು ಕಾರಣ ಗಳಿಂದಾಗಿಯೂ ಮಕ್ಕಳು ಶಾಲೆಗೆ ಹೋಗದಿರುತ್ತಾರೆ, ಮತ್ತು ಹೋಗತೊಡಗಿದರೂ ನಡುವೆಯೇ ನಿಲ್ಲಿಸಿಬಿಡುತ್ತಾರೆ.

ಇದಲ್ಲ ಹ್ಯೆ ಬರಹಕ್ಕೆ ಸಂಬಂದಿಸಿದಂತಹ ಎರಡು ಮುಕ್ಯವಾದ ತೊಡಕುಗಳಿಂದಾಗಿಯೂ ಮಕ್ಕಳು ಮತ್ತು ದೊಡ್ಡವರು ಬರಹದಿಂದ ದೂರ ಉಳಿಯುವ ಹಾಗೆ ಆಗುತ್ತದೆ:

(೧) ಬರಹಕ್ಕೆ ಬಳಸುವ ಬರವಣಿಗೆ ತುಂಬಾ ತೊಡಕಿನ

ದಾಗಿರುವುದು, ಇಲ್ಲವೇ ಬರವಣಿಗೆ ಸುಲಬವಾಗಿದ್ದರೂ ಅದನ್ನು

ಬರಹಕ್ಕೆ ಅಳವಡಿಸಿರುವ ಬಗೆಯಲ್ಲಿ ತುಂಬಾ ತಪ್ಪುಗಳಾಗಿರು ವ್ರದು ಒಂದು ಕಾರಣ; ಮತ್ತು

(೨) ಬರಹಗಳಲ್ಲಿ ತುಂಬಾ ಎರವಲು ಪದಗಳನ್ನು

ಬಳಸುವುದರಿಂದಾಗಿ, ಇಲ್ಲವೇ ಮಾತು ಬದಲಾದಾಗಲೂ ಬರಹ ಬದಲಾಗದೆ ಉಳಿಯುವುದರಿಂದಾಗಿ, ಅದು ಆಡುನುಡಿ ಯಿಂದ ತೀರ ಬೇರಾಗಿರುವುದು ಇನ್ನೊಂದು ಕಾರಣ.

↑ ಒಳಪಿಡಿಗೆ ಹಿಂತಿರುಗಿ


೧.೪ ಬರವಣಿಗೆಯ ತೊಡಕು

ಬರಹದಲ್ಲಿ ಬಳಕೆಯಾಗುವ ಬರವಣಿಗೆ ಎರಡು ೫ ಬಗೆಗಳಲ್ಲಿ ಕಲಿಯಲು. ಮತ್ತು ಬಳಸಲು ತೊಡಕಿನದಾಗಿರಬಲ್ಲುದು: ಆ ಬರವಣಿಗೆಯೇ ತುಂಬಾ ತೊಡಕಿನದಾಗಿರಬಹುದು, ಇಲ್ಲ ವೇ ಅದನ್ನು ಒಂದು ನುಡಿಯ ಬರಹಕ್ಕೆ ಅಳವಡಿಸಿರುವ ಬಗೆ ತೊಡಕಿನದಾಗಿರಬಹುದು.

ಎತ್ತುಗೆಗೆ, ಚಯ್ನೀಸ್‌ ಬರಹಗಳಲ್ಲಿ ಬಳಕೆಯಾಗುವ ಬರವಣಿಗೆಯೇ ತುಂಬಾ ತೊಡಕಿನದು; ಅದರಲ್ಲಿ ಬರುವ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುವುದಿಲ್ಲ; ಕೆಲವು ಬರಿಗೆಗಳು ಹುರುಳು(ಅರ್ತ)ಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಇನ್ನು ಕೆಲವು ಬರಿಗೆಗಳು ಹುರುಳಿನೊಂದಿಗೆ ಪದಗಳ ಉಲಿಪ(ಉಚ್ಚಾರಣೆಯ)ನ್ನೂ ತಿಳಿಸುವಲ್ಲಿ ಬಳಕೆಯಾಗುತ್ತವೆ. ಹಾಗಾಗಿ, ಚಯ್ನೀಸ್‌ ಬರಹವನ್ನು ಕಲಿಯುವವರು ಬರಿಯ ಒಂದು ದಿನಪತ್ರಿಕೆಯನ್ನು ಓದ ಬೇಕಿದ್ದರೂ ಸಾವಿರಗಟ್ಟಲೆ ಬರಿಗೆಗಳನ್ನು ಕಲಿತು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ.

ಇದಕ್ಕೆ ಬದಲು, ಇಂಗ್ಲಿಶ್‌ನಲ್ಲಿ ಬಳಕೆಯಾಗುವ ರೋಮನ್‌ ಬರವಣಿಗೆಯಲ್ಲಿ ಬರಿಗೆಗಳು ನೇರವಾಗಿ ಉಲಿಗಳನ್ನು ತಿಳಿಸ ಬಲ್ಲುವು; ಹಾಗಾಗಿ, ಕಲಿಯಲು ಮತ್ತು ಬಳಸಲು ಅದು ತುಂಬಾ ಸುಲಬವಾದ ಬರವಣಿಗೆ. ಆದರೆ, ಇಂಗ್ಲಿಶ್‌ನಲ್ಲಿ ಆ ಬರವಣಿಗೆ ಯನ್ನು ಅಳವಡಿಸಿಕೊಂಡಿರುವ ಬಗೆಯಲ್ಲಿ ಹಲವು ತಪ್ಪುಗ ಳಾಗಿವೆ.

ಇದಲ್ಲದೆ, ಇಂಗ್ಲಿಶ್‌ ನುಡಿ ಬದಲಾಗುತ್ತಾ ಬಂದರೂ ಅದಕ್ಕನುಸಾರವಾಗಿ ಇಂಗ್ಲಿಶ್‌ ಬರವಣಿಗೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಎತ್ತು ಗೆಗೆ, ಇಂಗ್ಲಿಶ್‌ ನುಡಿಯ ತೆರೆಯುಲಿ(ಸ್ತರ)ಗಳು ಹಲವು ಬಗೆಯ ಮಾರ್ದಾಡುಗಳಿ ಗೊಳಗಾಗಿವೆ; ಆದಶೆ, ಅದಕ್ಕನುಸಾರವಾಗಿ ಇಂಗ್ಲಿಶ್‌ ಬರಹದಲ್ಲಿ ಮಾರ್ಪಾಡುಗಳನ್ನು ನಡೆಸಿಲ್ಲ. ಇಂತಹ ಹಲವು ಕಾರಣಗಳಿಂದಾಗಿ, ಇವತ್ತು ಇಂಗ್ಲಿಶ್‌ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿದೆ.

ಬರಹ ಈ ರೀತಿ ತೊಡಕಿನದಾಗಿದೆಯಾದಲ್ಲಿ, ಅದನ್ನು ದೊಡ್ಡ ವರಿಗೆ ಕಲಿಸುವುದು ತುಂಬಾ ಕಶ್ಚ; ಯಾಕೆಂದರೆ, ಅವರಿಗೆ ಆ ಕಲಿಕೆಯ ಮೇಲಿರುವ ಆಸಕ್ತಿ ಬಹಳ ಬೇಗನೆ ಹೊರಟು ಹೋಗುತ್ತದೆ; ಬರವಣಿಗೆ ಸುಲಬವಾಗಿದೆಯಾದರೆ, ಕೆಲವೇ ಕೆಲವು ದಿನಗಳಲ್ಲಿ ಅವರು ಕತೆ-ಕಾದಂಬರಿಗಳನ್ನು ಮತ್ತು ದಿನಪತ್ರಿಕೆಗಳನ್ನು ಓದಲು ತೊಡಗಬಲ್ಲರು; ಹಾಗಾಗಿ, ಅಂತಹ ಬರಹಗಳ ಕಲಿಕೆಯಲ್ಲಿಅವರ ಆಸಕ್ತಿ ಅಳಿಯದೆ ಉಳಿದು ಕೊಳ್ಳುತ್ತದೆ.

ಚಿಕ್ಕ ಮಕ್ಕಳ ಕಲಿಕೆಯೂ ಬರಹದ ತೊಡಕನ್ನು ಅವಲಂಬಿಸಿರಬಲ್ಲುದು. ಬರವಣಿಗೆ ತುಂಬಾ ಸುಲಬವಾಗಿದೆ ಯಾದಲ್ಲಿ, ಎರಡು ಮೂರು ವರ್ಷ ಕಲಿತ ಮೇಲೆ ಶಾಲೆಯನ್ನು ಬಿಟ್ಟು ಹೋಗುವವರೂ ಅದರ ಬಳಕೆಯನ್ನು ಮುಂದುವರಿಸ ಬಲ್ಲರು; ಅದು ತೊಡಕಿನದಾಗಿದೆಯಾದಲ್ಲಿ, ಅವರಿಗೆ ಅದರ ಸ್ವಲ್ಪ ಸಮಯದ ಕಲಿಕೆಯಿಂದ ಯಾವ ಪ್ರಯೋಜನವನ್ನೂ ಪಡೆಯಲು ಬರುವುದಿಲ್ಲ; ಯಾಕೆಂದರೆ, ದಿನಪತ್ರಿಕೆ, ವಾರಪತ್ರಿಕೆ ಗಳಂತಹವನ್ನು ಓದಲು ಬರಬೇಕಿದ್ದರೂ ಅವರು ಅಂತಹ

ಬರವಣಿಗೆಯನ್ನು ಬಿಡದೆ ಹಲವು ವರ್ಷಗಳ ವರೆಗೆ ಕಲಿತಿರ ಬೇಕಾಗುತ್ತದೆ.

ಹಾಗಾಗಿ, ಬೇರೆ ತೊಡುಕುಗಳ ಹಾಗೆ, ಇಂತಹ ಬರವಣಿಗೆಯ ತೊಡಕುಗಳನ್ನು ನೀಗುವ ಮೂಲಕವೂ ಒಂದು ಸಮಾಜದಲ್ಲಿ ಇಲ್ಲವೇ ನಾಡಿನಲ್ಲಿ ಬರಹವನ್ನು ಕಲಿಯುವ ಮತ್ತು ಬಳಸುವ ಜನರ ಎಣಿಕೆ ಹೆಚ್ಚಾಗುವಂತೆ ಮಾಡಬಲ್ಲೆವು. ಬರವಣಿಗೆ ತುಂಬಾ ತೊಡಕಿನದಾಗಿರುವಲ್ಲೂ ಒಂದು ಸಮಾಜದ ಇಲ್ಲವೇ ನಾಡಿನ ಎಲ್ಲಾ ಜನರೂ ಬರಹಬಲ್ಲವ ರಾಗಿರಲು ಸಾದ್ಯವಿಲ್ಲವೆಂದೇನಿಲ್ಲ; ಎತ್ತುಗೆಗೆ, ಜಪಾನೀಸ್‌ ಬರವಣಿಗೆ ಒಂದು ತುಂಬಾ ತೊಡಕಿನ ಬರವಣಿಗೆ; ಅದರಲ್ಲಿ ಕಂಜಿ, ಶತಶಸ, ಮತ್ತು ಹಿರಿರಸ ಎಂಬ ಮೂರು ಬಗೆಯ ಬರಿಗೆಗಳನ್ನು ಒಟ್ಟೊಟ್ಟಿಗೆ ಬಳಸಲಾಗುತ್ತದೆ. ಹಾಗಿದ್ದರೂ, ಆ ದೇಶದಲ್ಲಿ ಬರಹವನ್ನು ಬಳಸದಿರುವ ಜನರೇ ಇಲ್ಲ.

ಆದರೆ, ತುಂಬಾ ತೊಡಕಿನ ಬರವಣಿಗೆಯಿರುವ, ಮತ್ತು ಅದರಿಂದಾಗಿ, ಮೇಲ್ವ ರದ ಜನರು ಮಾತ್ರ ಬರಹಬಲ್ಲವ ರಾಗಿರುವಂತಹ ಸಮಾಜಗಳೂ ಹಲವಿವೆ. ಎತ್ತುಗೆಗೆ, ತುಂಬಾ ತೊಡಕು ತೊಡಕಾದ ಅರೇಬಿಕ್‌ ಬರವಣಿಗೆಯನ್ನು ಬಳಸುವ ಹಲವು ನಾಡುಗಳಲ್ಲಿ ಇವತ್ತಿಗೂ ಮೇಲ್ವ ರ್ಗ ದವರ ಬಳಕೆಯಲ್ಲಿ ಮಾತ್ರ ಬರಹ ಉಳಿದುಕೊಂಡಿದೆ.

ಇದಲ್ಲದೆ, ಇಂತಹ ಬರವಣಿಗೆಯಿರುವ ಬೇರೆ ಕೆಲವು ನಾಡುಗಳು ತಮ್ಮ ತೊಡಕು ತೊಡಕಾದ ಬರವಣಿಗೆಯನ್ನು ಬಿಟ್ಟುಕೊಟ್ಟು, ಅದಕ್ಕೆ ಬದಲಾಗಿ ತುಂಬಾ ಸುಲಬವಾಗಿರುವ ಬೇರೊಂದು ಬರವಣಿಗೆಯನ್ನು ತಮ್ಮ ಬರಹಕ್ಕೆ ಒಳ್ಳೇ ರೀತಿಯಲ್ಲಿ ಅಳವಡಿಸಿಕೊಂಡಾಗ, ಆ ನಾಡುಗಳಲ್ಲಿ ಬಹಳ ಬೇಗನೆ ಬರಹಬಲ್ಲವರ ಎಣಿಕೆ ಹೆಚ್ಚಾಗಿರುವುದೂ ಇದೆ.

ಎತ್ತುಗೆಗೆ, ಟರ್ಕಿಯಲ್ಲಿ ತುಂಬಾ ತೊಡಕು ತೊಡಕಾದ ಅರೇಬಿಕ್‌ ಮೂಲದ ಬರವಣಿಗೆಯನ್ನು ಬಿಟ್ಟುಕೊಟ್ಟು, ಕಲಿಯಲು ಮತ್ತು ಬಳಸಲು ತುಂಬಾ ಸುಲಬವಾಗುವ ಹಾಗೆ ರೋಮನ್‌ ಬರವಣಿಗೆಯನ್ನು ಅಲ್ಲಿನ ಟರ್ಕಿಶ್‌ ನುಡಿಗೆ ಅಳವಡಿಸಿಕೊಳ್ಳ ಲಾಯಿತು; ಹಾಗೆ ಮಾಡಿದ ಮೇಲೆ, ಆ ದೇಶದಲ್ಲಿ ಬರಹ ಬಲ್ಲವರ ಎಣಿಕೆ ಬಹಳ ಬೇಗನೆ ಹೆಚ್ಚಾಗಿತ್ತು. ಮಲಯೇಶಿಯಾ ಮತ್ತು ಇಂಡೊನೇಶಿಯಾಗಳಲ್ಲೂ ರೋಮನ್‌ ಬರವಣಿಗೆಯನ್ನು ಅಳವಡಿಸಿದುದರಿಂದಾಗಿ, ಆ ನಾಡುಗಳಲ್ಲೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.

ಹಾಗಾಗಿ, ಕಲಿಯಲು ಕಶ್ಚವಾಗಿರುವ ಬರವಣಿಗೆಯನ್ನು ಬಿಟ್ಟುಕೊಟ್ಟು ಸುಲಬವಾದ ಬರವಣಿಗೆಯನ್ನು ಬಳಸುವ ಜಿಲ ಇಲ್ಲ ವೇ ಬಳಕೆಯಲ್ಲಿರುವ ಬರವಣಿಗೆಯನ್ನು ಸುಲಬವಾಗುವಂತೆ ಮಾರ್ಪಡಿಸುವ ಮೂಲಕ, ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಬವಾಗುವ ಹಾಗೆ ಮಾಡಲು ಬರುತ್ತದೆ, ಮತ್ತು ಹಾಗೆ ಮಾಡುವುದರಿಂದ ಬರಹವನ್ನು ಎಲ್ಲರೂ ಕಲಿಯುವ ಹಾಗೆ ಮಾಡುವ ಕೆಲಸವೂ ಹೆಚ್ಚು ಸುಲಬವಾಗುತ್ತದೆ.

ಕನ್ನಡಕ್ಕೆ ಅವಶ್ಯವಿರುವ ೩೧ ಬರಿಗೆಗಳನ್ನು ಮಾತ್ರ ಬರಹದಲ್ಲಿ ಉಳಿಸಿಕೊಳ್ಳು ವುದು, ಮುತ್ತು ಸಂಸ್ಕ್ರುತ ಎರವಲುಗಳನ್ನೆಲ್ಲ ಹೇಗೆ ‘ಓದುತ್ತೆ ೇವೆಯೋ ಹಾಗೆಯೇ ಬರೆಯುವುದು ಎನ್ನುವ ಎರಡು ಮಾರ್ಬಾ ಡುಗಳ ಮೂಲಕ ಕನ್ನಡ ಬರಹದ ಕಲಿಕೆ ಮತ್ತು ಬಳಕೆ ತುಂಬಾ ಸುಲಬವಾಗುವ ಹಾಗೆ ಮಾಡಬಲ್ಲೆವು, ಮತ್ತು ಹೀಗೆ ಮಾಡುವ ಮೂಲಕ ಕನ್ನಡ ಬರಹವನ್ನು ಎಲ್ಲರಿಗೂ ತಲಪಿಸುವಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿರಿಸಬಲ್ಲೆವು.

ಇದನ್ನು ನಡೆಸುವುದು ಹೇಗೆ ಎಂಬುದನ್ನು ಮುಂದಿನ ಪಸುಗೆ(ಅದ್ಯಾಯ)ಗಳಲ್ಲಿ ತಿಳಿಸಲಾಗಿದೆ. ↑ ಒಳಪಿಡಿಗೆ ಹಿಂತಿರುಗಿ