← Ch 5 · Contents · ↑ Contents
6. ಹೆಸರುಕಂತೆಗಳ ಇಟ್ಟಳ
6.1 ಮುನ್ನೋಟ
ಒಂದು ಸೊಲ್ಲಿನಲ್ಲಿ ಬಳಕೆಯಾಗುವ ಹೆಸರುಪದಗಳು ಇಲ್ಲವೇ ಹೆಸರುಕಂತೆಗಳು ಆ ಸೊಲ್ಲು ತಿಳಿಸುವ ಎಸಕದಲ್ಲಿ ಯಾವ ಪಾಂಗುಗಳೆಲ್ಲ ತೊಡಗಿಕೊಂಡಿವೆ ಎಂಬುದನ್ನು ಗುರುತಿಸಿ ತಿಳಿಸುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(1)
ರಾಜೀವ ಮಗುವಿಗೆ ಒಂದು ಗೊಂಬೆ ಕೊಟ್ಟ.
ಈ (1)ನೇ ಸೊಲ್ಲಿನ ಕೊನೆಯಲ್ಲಿ ಬಂದಿರುವ ಕೊಟ್ಟ ಎಂಬುದು ಒಂದು ಎಸಕಪದ; ಅದು ಒಂದು ಎಸಕವನ್ನು (ಎಂದರೆ ‘ಏನಾಯಿತು’ ಎಂಬುದನ್ನು) ತಿಳಿಸುತ್ತದೆ; ಈ ಎಸಕದಲ್ಲಿ ಮೂರು ಪಾಂಗುಗಳು ತೊಡಗಿಕೊಂಡಿವೆ; ಅವು ಗಳಲ್ಲಿ ಎರಡನ್ನು ರಾಜೀವ ಮತ್ತು ಮಗುವಿಗೆ ಎಂಬ ಎರಡು ಹೆಸರುಪದಗಳು ಗುರುತಿಸುತ್ತವೆ, ಮತ್ತು ಮೂರನೆಯದನ್ನು ಒಂದು ಗೊಂಬೆ ಎಂಬ ಹೆಸರು ಕಂತೆ ಗುರುತಿಸುತ್ತದೆ.
ಹೆಸರುಪದಗಳು ತಿಳಿಸುವ ಈ ಪಾಂಗುಗಳಿಗೂ ಎಸಕಪದಕ್ಕೂ ನಡುವೆ ಎಂತಹ ಪತ್ತುಗೆಯಿದೆ ಎಂಬುದನ್ನು ಹೆಸರುಪದಗಳ ಕೊನೆಯಲ್ಲಿ ಬರುವ ಎಸಕ ಪತ್ತುಗೆಯ ಒಟ್ಟುಗಳು ತಿಳಿಸುತ್ತವೆ. ಕನ್ನಡದಲ್ಲಿ ಇದಕ್ಕಾಗಿ ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ನಾಲ್ಕು ಒಟ್ಟುಗಳು ಬಳಕೆಯಾಗುತ್ತವೆ ಎಂಬುದನ್ನು ನಾವು ನಾಲ್ಕನೇ ಪಸುಗೆಯಲ್ಲಿ (4.8.2ರಲ್ಲಿ) ನೋಡಿರುವೆವು.
ಎತ್ತುಗೆಗಾಗಿ, ಮೇಲೆ ಕೊಟ್ಟಿರುವ (1)ನೇ ಸೊಲ್ಲಿನಲ್ಲಿ ‘ಕೊಡುವ ಎಸಕ’ದ ಗುರಿ ಯಾವುದು (‘ಕೊಟ್ಟುದು ಯಾರಿಗೆ’) ಎಂಬುದನ್ನು ತಿಳಿಸುವುದಕ್ಕಾಗಿ ಮಗು ಪದದೊಂದಿಗೆ ಗೆ ಒಟ್ಟು ಬಂದಿದೆ; ಆದರೆ, ಎಸಕದ ಈಡನ್ನು (‘ಕೊಟ್ಟುದು ಏನನ್ನು’ ಎಂಬುದನ್ನು) ತಿಳಿಸುವುದಕ್ಕಾಗಿ ಗೊಂಬೆ ಪದದೊಂದಿಗೆ ಯಾವ ಒಟ್ಟೂ ಬಂದಿಲ್ಲ; ನಿಜಕ್ಕೂ ಅದರೊಂದಿಗೆ ಈ ಕೆಲಸಕ್ಕಾಗಿ ಅನ್ನು ಎಂಬ ಒಟ್ಟನ್ನು ಬಳಸಬಹುದು; ಅದರೆ, ಸಾಮಾನ್ಯವಾಗಿ ಅದನ್ನು ಬಳಸದಿರುವುದೇ ಹೆಚ್ಚು; ಇದೇ ಸೊಲ್ಲನ್ನು, ಕೆಳಗೆ (1ಕ)ದಲ್ಲಿ ಕಾಣಿಸಿದ ಹಾಗೆ, ಬೇರೊಂದು
ರೀತಿಯಲ್ಲಿ ಬರೆದರೆ, ಗೊಂಬೆ ಪದದೊಂದಿಗೆ ಅನ್ನು ಒಟ್ಟನ್ನು ಬಳಸಬೇಕಾಗು ತ್ತದೆ.
(1ಕ)
ರಾಜೀವ ಒಂದು ಗೊಂಬೆಯನ್ನು ಮಗುವಿಗೆ ಕೊಟ್ಟ.
ಎಸಕದ ಮಾಡುಗನನ್ನು (‘ಕೊಟ್ಟುದು ಯಾರು’ ಎಂಬುದನ್ನು) ಗುರುತಿಸಲು ಕನ್ನಡದಲ್ಲಿ ಯಾವ ಒಟ್ಟನ್ನೂ ಬಳಸುವುದಿಲ್ಲ; ಆ ರೀತಿ ಹೆಸರುಪದದೊಂದಿಗೆ ಯಾವ ಒಟ್ಟನ್ನೂ ಬಳಸಿಲ್ಲವೆಂಬುದೇ ಅದು ಎಸಕದ ಮಾಡುಗ ಎಂಬುದನ್ನು ತಿಳಿಸುತ್ತದೆ. ಇದಲ್ಲದೆ, ಸಾಮಾನ್ಯವಾಗಿ ಸೊಲ್ಲಿನ ಈಡುಗಳು ಮಾಡುಗರ ಹಾಗೆ ಉಸಿರುಳ್ಳವುಗಳಾಗಿರುವುದಿಲ್ಲವಾದ ಕಾರಣ, ಹೆಚ್ಚಿನೆಡೆಗಳಲ್ಲೂ ಮಾಡುಗ ಮತ್ತು ಈಡುಗಳೆರಡಕ್ಕೂ ಪಾಂಗಿನ ಒಟ್ಟನ್ನು ಸೇರಿಸದಿರಲು ಬರುತ್ತದೆ. ಆದರೆ, ಮಾಡುಗದೊಂದಿಗೆ ಉಸಿರುಳ್ಳ ಈಡು ಬಂದಿದೆಯಾದರೆ, ಅದರೊಂದಿಗೆ ಅನ್ನು ಒಟ್ಟನ್ನು ಬಳಸದಿರುವುದಿಲ್ಲ:
ರಾಜು ಹರಿಯನ್ನು ದೂಡಿದ.
(2ಕ) (2ಚ) *ರಾಜು ಹರಿ ದೂಡಿದ.
ಎಸಕಗಳಲ್ಲಿ ತೊಡಗಿಕೊಂಡಿರುವ ಪಾಂಗುಗಳನ್ನು ಗುರುತಿಸಲು ಬರಿಯ ಒಂದು ಹೆಸರುಪದವನ್ನು ಮಾತ್ರವೇ ಬಳಸಬಲ್ಲೆವು, ಇಲ್ಲವೇ ಒಂದು ಹೆಸರು ಕಂತೆಯನ್ನೂ ಬಳಸಬಲ್ಲೆವು. ಮೇಲೆ ಕೊಟ್ಟಿರುವ ರಾಜೀವ ಮಗುವಿಗೆ ಒಂದು ಗೊಂಬೆ ಕೊಟ್ಟ ಎಂಬ ಸೊಲ್ಲಿನಲ್ಲಿ ‘ಕೊಡುವ’ ಎಸಕದ ಮಾಡುಗ ಮತ್ತು ಗುರಿಗಳನ್ನು ಗುರುತಿಸಲು ರಾಜೀವ ಮತ್ತು ಮಗು ಎಂಬ ಎರಡು ಹೆಸರು ಪದಗಳನ್ನು ಮಾತ್ರವೇ ಬಳಸಲಾಗಿದೆ; ಆದರೆ, ಅದರ ಈಡನ್ನು ಗುರುತಿಸಲು ಒಂದು ಗೊಂಬೆ ಎಂಬ ಹೆಸರುಕಂತೆಯನ್ನು ಬಳಸಲಾಗಿದೆ.
6.1.1 ಹೆಸರುಪದಗಳು ಮತ್ತು ಹೆಸರುಕಂತೆಗಳು
ಬರಿಯ ಒಂದು ಹೆಸರುಪದವನ್ನು ಮಾತ್ರವೇ ಬಳಸಿದಲ್ಲಿ ನಾವು ಗುರುತಿಸ ಬೇಕಾಗಿರುವ ಪಾಂಗನ್ನು ಕೇಳುಗನು ಇಲ್ಲವೇ ಓದುಗನು ಸರಿಯಾಗಿ ಗುರುತಿಸ ಲಾರನು ಎಂದು ಅನಿಸುವಲ್ಲಿ ನಾವು ಅದರೊಂದಿಗೆ ಒಂದೋ ಎರಡೋ ಬೇರೆ ಪದಗಳನ್ನು ಸೇರಿಸಿ ಹೇಳುತ್ತೇವೆ; ಈ ಪದಗಳು ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ ಹೆಸರುಪದಗಳಿಗೆ ನೆರವು ನೀಡುತ್ತವೆ; ಇಂತಹ ನೆರವು ನೀಡುವ ಪದಗಳೊಂದಿಗೆ ಬರುವ ಹೆಸರುಪದಗಳನ್ನು ಹೆಸರುಕಂತೆಗಳೆಂದು ಕರೆಯ ಬಹುದು.
ಎತ್ತುಗೆಗಾಗಿ, ಮನೆ ಎಂದಿಶ್ಟೇ ಹೇಳಿದರೆ, ಕೆಲವೊಮ್ಮೆ ‘ಯಾವ ಮನೆ’ ಸಂದರ್ಬಗಳಲ್ಲಿ
ಗೊತ್ತಾಗದಿರಬಹುದು; ಅಂತಹ
ಕೇಳುಗನಿಗೆ
ಎಂಬುದು
ರಾಜುವಿನ ಮನೆ, ಹೊಸ ಮನೆ, ದೊಡ್ಡ ಮನೆ, ಶಾಲೆಯ ಎದುರಿಗಿರುವ ಮನೆ ಎಂಬಂತಹ ಹೆಸರುಕಂತೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಮನೆ ಎಂಬ ತಿರುಳುಪದದೊಂದಿಗೆ ರಾಜುವಿನ, ಹೊಸ, ದೊಡ್ಡ, ಶಾಲೆಯ ಎದುರಿಗಿರುವ ಎಂಬಂತಹ ಕೆಲವು ನೆರವು ನುಡಿತಗಳನ್ನು ಬಳಸಲಾಗಿದೆ.
ಹೆಸರುಪದಗಳೊಂದಿಗೆ ಇಂತಹ ನೆರವು ನುಡಿತಗಳನ್ನು ಬಳಸಲು ಇನ್ನೂ ಒಂದು ಕಾರಣವಿದೆ: ನಾವು ಎಶ್ಟು ಹೆಸರುಗಳನ್ನು ನೆನಪಿನಲ್ಲಿರಿಸಿ ಬಳಸಬಲ್ಲೆವು ಎಂಬುದಕ್ಕೆ ಒಂದು ಮಿತಿಯಿದೆ; ರಾಜು, ಜಾನಕಿ, ಹೆಗ್ಗೋಡು ಮೊದಲಾದ ಕೆಲವೇ ಕೆಲವು ಕೊಟ್ಟಹೆಸರುಗಳನ್ನು ಮತ್ತು ಮನೆ, ಮರ, ಕಬ್ಬಿಣ, ತಿಂಡಿ ಮೊದಲಾದ ಕೆಲವು ಸಾವಿರ ಇರುವಹೆಸರುಗಳನ್ನು ನಾವು ಆ ರೀತಿ ನೆನಪಿನಲ್ಲಿರಿಸಿ ಬಳಸಬಲ್ಲೆವು. ಆದರೆ, ನಮ್ಮ ಗಮನಕ್ಕೆ ಬರುವ, ಮತ್ತು ಹೆಸರುಗಳ ಮೂಲಕ ಸೊಲ್ಲುಗಳಲ್ಲಿ ಗುರುತಿಸಬೇಕಾಗುವ ವ್ಯಕ್ತಿ, ವಸ್ತು, ವಿಶಯ ಮೊದಲಾದ ಪಾಂಗುಗಳಿಗೆ ಮಿತಿಯೇ ಇಲ್ಲ.
ಇದಲ್ಲದೆ, ಕೆಲವು ಸಂದರ್ಬಗಳಲ್ಲಿ ಒಂದು ವಸ್ತುವಿನ ಹೆಸರು ನಮಗೆ ತಿಳಿದಿದ್ದರೂ, ನಮ್ಮ ಕೇಳುಗರಿಗೆ ಇಲ್ಲವೇ ಓದುಗರಿಗೆ ಅದು ತಿಳಿದಿಲ್ಲದಿರ ಬಹುದು, ಮತ್ತು ಬೇರೆ ಕೆಲವು ಸಂದರ್ಬಗಳಲ್ಲಿ ಅದು ನಮಗೇನೇ ಮರೆತು ಹೋಗಿರಬಹುದು. ಇಂತಹ ಸಂದರ್ಬಗಳಲ್ಲೂ ಪಾಂಗುಗಳನ್ನು ಗುರುತಿಸುವು ದಕ್ಕಾಗಿ ಅವುಗಳ ಹೆಸರುಗಳನ್ನು ಮಾತ್ರವೇ ಬಳಸುವ ಬದಲು, ಆ ಹೆಸರುಗಳಿಗೆ ಕೆಲವು ನೆರವು ನುಡಿತಗಳನ್ನೂ ಸೇರಿಸಿರುವ ಹೆಸರುಕಂತೆಗಳನ್ನು ಬಳಸ ಬೇಕಾಗುತ್ತದೆ.
ಹೆಸರುಪದಗಳ ಬಳಕೆ ಮತ್ತು ಹೆಸರುಕಂತೆಗಳ ಬಳಕೆಗಳ ನಡುವಿರುವ ಈ
ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
ರಾಜು ಇವತ್ತು ಶಾಲೆಗೆ ಹೋಗಲಿಲ್ಲ.
(3ಕ) (3ಚ) ಪಕ್ಕದ ಮನೆಯ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. (4ಕ) (4ಚ) ನೀವು ಕೊಟ್ಟ ಈ ಹಣ್ಣು ತುಂಬಾ ರುಚಿಯಾಗಿದೆ.
ಸಪೋಟ ತುಂಬಾ ರುಚಿಯಾಗಿದೆ.
(3ಕ)ದಲ್ಲಿ ರಾಜು ಎಂಬ ಕೊಟ್ಟಹೆಸರನ್ನು ಬಳಸಲಾಗಿದೆ; ಮತ್ತು ಇದಕ್ಕೆ ಬದಲು (3ಚ)ದಲ್ಲಿ ಪಕ್ಕದ ಮನೆಯ ಹುಡುಗ ಎಂಬ ಹೆಸರುಕಂತೆಯನ್ನು ಬಳಸಲಾಗಿದೆ; ಕೇಳುಗನಿಗೆ ರಾಜು ಪದ ಯಾರನ್ನು ಗುರುತಿಸುತ್ತದೆ ಎಂಬುದು ಗೊತ್ತಿಲ್ಲದಿದ್ದಲ್ಲಿ ಈ ರೀತಿ ಮಾಡಬೇಕಾದೀತು; (4ಚ)ದಲ್ಲಿ ಸಪೋಟ ಎಂಬ ಹೆಸರುಪದದ ಬದಲು ನೀವು ಕೊಟ್ಟ ಈ ಹಣ್ಣು ಎಂಬ ಹೆಸರುಕಂತೆಯನ್ನು ಬಳಸಲು ಆಡುಗನಿಗೆ ಆ ಹಣ್ಣಿನ ಹೆಸರು ಮರೆತಿರುವುದು ಇಲ್ಲವೇ ತಿಳಿದಿಲ್ಲ ದಿರುವುದು ಕಾರಣವಿರಬಹುದು.
ಬರೇ ಒಂದು ಹೆಸರುಪದದ ಬದಲು ಹೆಸರುಕಂತೆಯನ್ನು ಬಳಸಲು ಇವಕ್ಕಿಂತಲೂ ಮುಕ್ಯವಾದ ಕೆಲವು ಕಾರಣಗಳಿವೆ. ಎತ್ತುಗೆಗಾಗಿ, ಹೆಸರುಪದಗಳ ಎಣಿಕೆಯನ್ನು ಸರಿಯಾಗಿ ತಿಳಿಸಲು ಅವುಗಳೊಂದಿಗೆ ಎಣಿಕೆಪದಗಳನ್ನು ಬಳಸ ಬೇಕಾಗುತ್ತದೆ (ಹತ್ತು ಹುಡುಗರು, ಇಪ್ಪತ್ತಯ್ದು ರುಪಾಯಿ); ಅವುಗಳ ಅಳತೆಯನ್ನು ತಿಳಿಸಲು ಅಳತೆಯ ಹೆಸರುಕಂತೆಗಳನ್ನು ಬಳಸಬೇಕಾಗುತ್ತದೆ (ಎರಡು ಕಿಲೋ ಸಕ್ಕರೆ, ಹತ್ತು ಲೀಟರ್ ತೆಂಗಿನೆಣ್ಣೆ); ಅವುಗಳ ಜಾಗವನ್ನು ತಿಳಿಸಲು ತೋರುಪದಗಳನ್ನು ಬಳಸಬೇಕಾಗುತ್ತದೆ (ಆ ಹುಡುಗ, ಈ ಹುಡುಗ). ಇವೆಲ್ಲವೂ ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ ನೆರವಾಗುವ ನುಡಿತಗಳು; ಇವನ್ನು ಬಳಸದೆ ಅವು ಕೊಡುವ ಹುರುಳುಗಳನ್ನು ಕೇಳುಗರಿಗೆ ತಿಳಿಸಲು ಬರುವುದಿಲ್ಲ.
ಮಾತಿನಲ್ಲಿ ಬರುವ ಸೊಲ್ಲುಗಳಿಗಿಂತಲೂ ಬರಹದಲ್ಲಿ ಬರುವ ಸೊಲ್ಲು ಗಳಲ್ಲಿ ಹೆಚ್ಚು ಹೆಚ್ಚು ಹೆಸರುಕಂತೆಗಳನ್ನು ಮತ್ತು ಹೆಚ್ಚು ಸಿಕ್ಕಲಾಗಿರುವ ಹೆಸರು ಕಂತೆಗಳನ್ನು ಬಳಸಲಾಗುತ್ತದೆ. ಮಾತಿನ ಸೊಲ್ಲುಗಳಲ್ಲಿ ಒಂದೆರಡು ಹೆಸರು ಕಂತೆಗಳು ಮಾತ್ರ ಬಳಕೆಯಾಗುವುವಾದರೆ, ಬರಹದ ಸೊಲ್ಲುಗಳಲ್ಲಿ ಹಲವಾರು ಹೆಸರುಕಂತೆಗಳು ಬಳಕೆಯಾಗಿರುತ್ತವೆ; ಬರಹದ ಒಂದು ಸೊಲ್ಲು ಮಾತಿನಲ್ಲಿ ಹಲವು ಸೊಲ್ಲುಗಳಾಗಿ ಕಾಣಿಸಿಕೊಳ್ಳುತ್ತದೆ.
ಇದಲ್ಲದೆ, ಬರಹದಲ್ಲಿ ಬರುವ ಹೆಸರುಕಂತೆಗಳು ಸಿಕ್ಕಲು ಸಿಕ್ಕಲಾಗಿರುತ್ತವೆ; ಆದರೆ, ಮಾತಿನಲ್ಲಿ ಅವು ಸುಳುರೂಪದಲ್ಲಿ ಬರುತ್ತವೆ. ಬರಹದ ಸೊಲ್ಲುಗಳು ಈ ರೀತಿ ಮಾತಿನ ಸೊಲ್ಲುಗಳಿಗಿಂತ ಹೆಚ್ಚು ಉದ್ದವಾಗಿರುವುದಕ್ಕೆ, ಮತ್ತು ಹೆಚ್ಚು ಸಿಕ್ಕಲಾಗಿರುವುದಕ್ಕೆ ಮುಕ್ಯ ಕಾರಣವೇನೆಂದರೆ, ಬರಹದ ಸೊಲ್ಲುಗಳನ್ನು ಆಲೋಚಿಸಿ ಬರೆಯಲಾಗುತ್ತದೆ, ಮತ್ತು ಹಲವು ಬಾರಿ ತಿದ್ದಿ ಸರಿಪಡಿಸ ಲಾಗುತ್ತದೆ; ಓದುವವರಿಗೂ ಅವನ್ನು ಹಲವು ಬಾರಿ ಓದಿ ತಿಳಿದುಕೊಳ್ಳಲು ಸಮಯವಿರುತ್ತದೆ. ಹಾಗಾಗಿ, ಅವು ಹೆಚ್ಚು ಉದ್ದ ಮತ್ತು ಸಿಕ್ಕಲಾಗಿದ್ದರೂ ಹೆಚ್ಚು ತೊಂದರೆಯಾಗುವುದಿಲ್ಲ.
6.1.2 ಗುರುತಿಸುವಿಕೆಯ ಎರಡು ಹಂತಗಳು
ಸೊಲ್ಲುಗಳನ್ನು ಉಂಟುಮಾಡುವಾಗ, ಹೆಸರುಪದಗಳು ಮತ್ತು ಹೆಸರುಕಂತೆಗಳು ಎರಡು ಬೇರೆ ಬೇರೆ ಹಂತಗಳಲ್ಲಿ ಬಳಕೆಯಾಗುತ್ತವೆಯೆಂದು ಹೇಳಬಹುದು. ಅವಕ್ಕೂ ಅವು ಗುರುತಿಸುವ ಪಾಂಗುಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದರ ಮೇಲೆ ಈ ವ್ಯತ್ಯಾಸವನ್ನು ಕಾಣಲು ಬರುತ್ತದೆ.
(1) ಹೆಸರುಪದಗಳು ಪಾಂಗುಗಳನ್ನು ನೇರವಾಗಿ ಗುರುತಿಸುತ್ತವೆ; ಆದರೆ, ಹೆಸರುಕಂತೆಗಳು ಒಂದು ಕೊಗೆತವನ್ನು (ವರ್ಣನೆಯನ್ನು) ಕೊಡುತ್ತಿದ್ದು, ಈ ಕೊಗೆತದ ಮೂಲಕ ಅವು ಪಾಂಗುಗಳನ್ನು ಗುರುತಿಸುವಂತಹ ಕೆಲಸವನ್ನು ನಡೆಸು ತ್ತವೆ. ಇದಲ್ಲದೆ, ಇಂತಹ ಕೊಗೆತಗಳನ್ನು ಕೊಡುವುದಕ್ಕಾಗಿ ಅವು ಎರಡು
ಇಲ್ಲವೇ ಹೆಚ್ಚು ಹೆಸರುಗಳನ್ನು (ಮತ್ತು ಬೇರೆ ಬಗೆಯ ಪದಗಳನ್ನು) ಬಳಸು ತ್ತವೆ. ಹಾಗಾಗಿ, ಹೆಸರುಗಳ ಬಳಕೆ ಮೊದಲನೆಯ ಹಂತದಲ್ಲಿ ನಡೆಯುತ್ತದೆ, ಮತ್ತು ಹೆಸರುಕಂತೆಗಳ ಬಳಕೆ ಅದರ ಮೇಲಿರುವ ಎರಡನೆಯ ಹಂತದಲ್ಲಿ ನಡೆಯುತ್ತದೆ ಎಂಬುದಾಗಿ ಹೇಳಲು ಬರುತ್ತದೆ.
ಎತ್ತುಗೆಗಾಗಿ, ನವಿಲು ಎಂಬುದು ಕನ್ನಡದಲ್ಲಿ ಒಂದು ಬಗೆಯ ಹಕ್ಕಿಯನ್ನು ಗುರುತಿಸುತ್ತದೆ; ಈ ಪದವನ್ನು ನ್, ಅ, ವ್, ಇ, ಲ್, ಉ ಎಂಬ ಆರು ಉಲಿಗಳನ್ನು (ಇಲ್ಲವೇ ಬರಿಗೆಗಳನ್ನು) ಬಳಸಿ ಪಡೆಯಲಾಗಿದೆ; ಆದರೆ, ಅದಕ್ಕಿರುವ ಹುರುಳನ್ನು ಈ ಉಲಿಗಳಿಂದ ಪಡೆಯಲು ಬರುವುದಿಲ್ಲ; ಆ ಪದ ಕ್ಕೊಂದು ರೂಪವನ್ನು ಕೊಡುವುದು, ಮತ್ತು ಉಳಿದ ಪದಗಳಿಂದ ಅದು ಬೇರಾಗಿ ನಿಲ್ಲುವಂತೆ ಮಾಡುವುದು ಎಂಬ ಎರಡು ಕೆಲಸಗಳನ್ನು ಮಾತ್ರ ಈ ಉಲಿಗಳು ನಡೆಸಬಲ್ಲುವು. ಹಾಗಾಗಿ, ನವಿಲು ಪದದ ಹುರುಳೇನು ಎಂಬುದನ್ನು ಅದು ಯಾವ ಬಗೆಯ ಪಾಂಗನ್ನು ಗುರುತಿಸುವುದಕ್ಕಾಗಿ ಬಳಕೆಗೆ ಬಂದಿದೆ ಎಂಬುದರ ಮೇಲೆ ತೀರ್ಮಾನಿಸಬೇಕಾಗುತ್ತದೆ.
ಇದಕ್ಕೆ ಬದಲು, ಹೆಸರುಕಂತೆಯ ಹುರುಳನ್ನು ನೇರವಾಗಿ ಅದರ ಒಳ ಇಟ್ಟಳದಿಂದ ಪಡೆಯಲು ಬರುತ್ತದೆ; ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ನವಿಲು ಪದಕ್ಕೆ ಗಂಡು ಎಂಬ ಇನ್ನೊಂದು ಪದವನ್ನು ಸೇರಿಸಿ, ಗಂಡು ನವಿಲು ಎಂಬ ಹೆಸರುಕಂತೆಯನ್ನು ಪಡೆಯಬಹುದು; ಈ ಎರಡು ಪದಗಳ ಹುರುಳೇನು ಎಂಬುದರಿಂದ, ಮತ್ತು ಅವನ್ನು ಯಾವ ಬಗೆಯ ಇಟ್ಟಳದಲ್ಲಿ ಬಳಸಲಾಗಿದೆ ಎಂಬುದರಿಂದ, ಗಂಡು ನವಿಲು ಎಂಬುದರ ಹುರುಳೇನು ಎಂಬುದನ್ನು ತೀರ್ಮಾನಿಸಬಲ್ಲೆವು.
ನೇರವಾದ
ಹಾಗಾಗಿ, ನವಿಲು ಪದಕ್ಕೂ ಅದು ಗುರುತಿಸುವ ಪಾಂಗಿಗೂ ನಡುವೆ ಆ ಪದದ ಬಳಕೆಯನ್ನವಲಂಬಿಸಿರುವ ಸಂಬಂದವಿದೆ ಎಂದು ಹೇಳಬಹುದು; ಅದು ಎಂತಹ ಪಾಂಗನ್ನು ಹೆಸರಿಸುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು; ಆಮೇಲೆ, ಆ ಪಾಂಗಿನ ಸಾಮಾನ್ಯ ಪರಿಚೆಗಳು (ಅದೊಂದು ಹಕ್ಕಿ, ಆ ಹಕ್ಕಿಗಳಲ್ಲಿ ಗಂಡಿಗೆ ಸುಂದರವಾದ ರೆಕ್ಕೆಯಿದೆ, ಅದು ಹೆಣ್ಣು ಹಕ್ಕಿಯನ್ನು ಕುಶಿಪಡಿಸಲು ತನ್ನ ರೆಕ್ಕೆಯನ್ನು ಅಗಲವಾಗಿ ಹರಡಿ ಕುಣಿಯುತ್ತದೆ ಎಂಬಂತಹವು) ಯಾವುವು ಎಂಬುದನ್ನು ತಿಳಿಯಬೇಕು. ಈ ಪರಿಚೆಗಳ ಕಲೆತವೇ ನವಿಲು ಪದದ ಹುರುಳಾಗಿರುತ್ತದೆ.
ಇದಕ್ಕೆ ಬದಲು, ಕೆಂಪು ಸೀರೆ ಎಂಬ ಹೆಸರುಕಂತೆಗೂ ಅದು ಗುರುತಿಸುವ ಪಾಂಗಿಗೂ ನಡುವೆ ಅಂತಹ ನೇರವಾದ ಸಂಬಂದವಿಲ್ಲ. ಮೊದಲಿಗೆ ಅದರ ಹುರುಳನ್ನು ಅದರ ಒಳ ಇಟ್ಟಳದಿಂದ ಪಡೆಯಬೇಕಾಗುತ್ತದೆ; ಅದರಲ್ಲಿ ಸೀರೆ ಪದಕ್ಕೆ ಕೆಂಪು ಪದವನ್ನು ಸೇರಿಸಲಾಗಿದ್ದು, ಅದು ‘ಕೆಂಪು ಬಣ್ಣವಿರುವ ಸೀರೆ’ ಯನ್ನು ಗುರುತಿಸುತ್ತದೆ. ಈ ಹುರುಳನ್ನು, ಎಂದರೆ ಅದು ತಿಳಿಸುವ ಸೀರೆಯ ಕೊಗೆತವನ್ನು ಬಳಸಿ, ಅದು ಗುರುತಿಸುವ ಪಾಂಗು ಯಾವುದೆಂದು ತಿಳಿಯ ಬೇಕಾಗುತ್ತದೆ.
(2) ಹೆಸರುಕಂತೆಗಳಲ್ಲಿ ಕೆಲವು ಹೆಸರುಪದಗಳೂ ಬರುತ್ತಿದ್ದು, ಅವುಗಳ ಹುರುಳನ್ನು, ಮೇಲೆ ವಿವರಿಸಿದ ಹಾಗೆ, ಅವು ಎಂತಹ ಪಾಂಗನ್ನು ಗುರುತಿಸುತ್ತವೆ ಎಂಬುದನ್ನು ತಿಳಿಯುವ ಮೂಲಕ ಕಂಡುಕೊಳ್ಳಬೇಕಾಗುತ್ತದೆ; ಆದರೆ, ಇಡೀ ಹೆಸರುಕಂತೆಯ ಹುರುಳನ್ನು ಕಂಡುಹಿಡಿಯಲು ಆ ರೀತಿ ನೇರವಲ್ಲದ ದಾರಿ ಯನ್ನು ಹಿಡಿಯಬೇಕಾಗಿಲ್ಲ. ಅದನ್ನು ನೇರವಾಗಿ ಅವುಗಳ ಇಟ್ಟಳದಿಂದ ಪಡೆಯಲು ಬರುತ್ತದೆ.
(3) ಹಲವು ಬಗೆಯ ಹೆಸರುಪದಗಳಿಗೂ ಒಳ ಇಟ್ಟಳ ಎಂಬುದಿರುತ್ತದೆ; ಎತ್ತುಗೆಗಾಗಿ, ಕಲ್ಲೆದೆ ಎಂಬ ಪದವನ್ನು ಕಲ್ಲು ಮತ್ತು ಎದೆ ಎಂಬ ಎರಡು ಪದಗಳನ್ನು ಒಟ್ಟುಸೇರಿಸಿ ಉಂಟುಮಾಡಲಾಗಿದೆ; ಇದೇ ರೀತಿಯಲ್ಲಿ, ಎರಕ ಎಂಬ ಪದವನ್ನು ಎರೆ ಪದಕ್ಕೆ ಕ ಎಂಬ ಒಟ್ಟನ್ನು ಸೇರಿಸಿ ಉಂಟುಮಾಡಲಾಗಿದೆ; ಹಾಗಾಗಿ, ಈ ಎರಡು ಬಗೆಯ ಪದಗಳಿಗೂ ಇಟ್ಟಳ ಎಂಬುದಿದೆಯೆಂದು ಹೇಳ ಬಹುದು.
ಆದರೆ, ಹೆಸರುಕಂತೆಗಳ ಹಾಗೆ ಇಂತಹ ಹೆಸರುಪದಗಳ ಹುರುಳನ್ನು ಅವುಗಳ ಇಟ್ಟಳದಿಂದ ನೇರವಾಗಿ ಪಡೆಯಲು ಬರುವುದಿಲ್ಲ. ಎತ್ತುಗೆಗಾಗಿ, ಕಲ್ಲೆದೆ ಎಂಬುದು ಕಲ್ಲಚ್ಚು ಎಂಬುದರ ಹಾಗೆ ‘ಕಲ್ಲಿನಿಂದ ಮಾಡಿದ ಎದೆ’ ಯನ್ನು ಹೆಸರಿಸುವುದಿಲ್ಲ, ‘ಕಲ್ಲಿನ ಹಾಗಿರುವ ಎದೆ’ಯನ್ನು, ಎಂದರೆ ‘ಯಾವ ಕರುಣೆಯನ್ನೂ ತೋರದವನ ಎದೆ’ಯನ್ನು ಹೆಸರಿಸುತ್ತದೆ; ಮತ್ತು ಎರಕ ಎಂಬುದು ವ್ಯಕ್ತಿ’ಯನ್ನು ಹೆಸರಿಸುವುದಿಲ್ಲ, ‘ಎರೆಯುವುದರಿಂದ ಪಡೆದ ವಸ್ತು’ವನ್ನು ಹೆಸರಿಸುತ್ತದೆ. ಕುಡುಕ ಎಂಬುದೂ ‘ಕುಡಿಯುವ ಎಲ್ಲಾ ವ್ಯಕ್ತಿ’ಗಳನ್ನೂ ಹೆಸರಿಸುವ ಬದಲು, ‘ಕಳ್ಳು ಕುಡಿಯುವ ಚಟದಲ್ಲಿ ಬಿದ್ದವ’ನನ್ನು ಹೆಸರಿಸುತ್ತದೆ.
ಕುಡುಕ ಎಂಬುದರ
ಎರೆಯುವ
ಹಾಗೆ
ಹಾಗಾಗಿ, ಒಳ ಇಟ್ಟಳವಿರಲಿ, ಇಲ್ಲದಿರಲಿ, ಹೆಸರುಪದಗಳ ಹುರುಳನ್ನು ತಿಳಿಯಬೇಕಿದ್ದಲ್ಲಿ, ಮೊದಲಿಗೆ ಅವನ್ನು ಎಂತಹ ಸೊಲ್ಲುಗಳಲ್ಲಿ ಬಳಸಲಾಗು ತ್ತದೆ, ಮತ್ತು ಅವು ಆ ಸೊಲ್ಲುಗಳಲ್ಲಿ ಎಂತಹ ಪಾಂಗುಗಳನ್ನು ಗುರುತಿಸುತ್ತವೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ; ಅವುಗಳ ಒಳ ಇಟ್ಟಳ ಈ ಕೆಲಸದಲ್ಲಿ ನೆರವನ್ನೊದಗಿಸಬಲ್ಲುದಶ್ಟೇ ಅಲ್ಲದೆ, ಹೆಸರುಕಂತೆಗಳ ಹಾಗೆ ಅವುಗಳ ಹುರುಳನ್ನು ನೇರವಾಗಿ ಒದಗಿಸಲಾರದು.
(4) ಹೆಸರುಪದಗಳಿಗೂ ಹೆಸರುಕಂತೆಗಳಿಗೂ ನಡುವೆ ಇನ್ನೂ ಒಂದು ಮುಕ್ಯವಾದ ವ್ಯತ್ಯಾಸವಿದೆ: ಒಂದು ವಸ್ತುವಿಗೆ, ಇಲ್ಲವೇ ಒಂದು ಬಗೆಯ ವಸ್ತುವಿಗೆ ಒಂದು ಹೆಸರನ್ನು ಕೊಡಬೇಕಿದ್ದಾಗ, ಅದರ ಪರಿಚೆಗಳಲ್ಲಿ ಕಣ್ಣಿಗೆ ಹೊಡೆದು ಕಾಣಿಸುವಂತಹ ಪರಿಚೆಯೊಂದನ್ನು ಆರಿಸಿಕೊಳ್ಳಲಾಗುತ್ತದೆ; ಆದರೆ ಒಂದು ವಸ್ತುವನ್ನು ವರ್ಣಿಸುವ ಹೆಸರುಕಂತೆಯೊಂದನ್ನು ಉಂಟುಮಾಡಬೇಕಾ ದಾಗ, ಈ ರೀತಿ ಪರಿಚೆಯ ಆಯ್ಕೆಯನ್ನು ನಡೆಸಬೇಕಾಗುವುದಿಲ್ಲ. ಯಾಕೆಂದರೆ, ಯಾವ ಪರಿಚೆಯನ್ನು ಬೇಕಿದ್ದರೂ ಬಳಸಿಕೊಂಡು ಆ ವಸ್ತುವನ್ನು ಗುರುತಿಸಬಲ್ಲ ಹೆಸರುಕಂತೆಯನ್ನು ಉಂಟುಮಾಡಲು ಬರುತ್ತದೆ.
ಎತ್ತುಗೆಗಾಗಿ, ಉಗಿಬಂಡಿ ಎಂಬ ಹೆಸರುಪದವನ್ನು ಉಂಟುಮಾಡುವಾಗ, ‘ಅದು ಗುರುತಿಸುವ (ಹೆಸರಿಸುವ) ವಸ್ತು ಯಾವುದರಿಂದ ನಡೆಯುತ್ತದೆ’ ಎಂಬ ವಿಶಯವನ್ನು ಅದಕ್ಕಾಗಿ ಆಯ್ಕೆ ಮಾಡಲಾಗಿತ್ತು; ಇದಕ್ಕೆ ಬದಲು, ಹೀರುಕಾಗದ ಎಂಬ ಬೇರೊಂದು ಹೆಸರುಪದವನ್ನು ಉಂಟುಮಾಡುವಾಗ, ‘ಅದು ಗುರುತಿಸುವ ವಸ್ತು ಯಾವ ಕೆಲಸಕ್ಕಾಗಿ ಬಳಕೆಯಾಗುತ್ತದೆ’ ಎಂಬ ವಿಶಯವನ್ನು ಆಯ್ಕೆ ಮಾಡಲಾಗಿತ್ತು.
ಈ ರೀತಿ ಆಯ್ಕೆ ಮಾಡಿರುವ ಪರಿಚೆ ಮುಂದೆ ಬದಲಾದರೂ ಬಳಕೆಗೆ ಬಂದಿರುವ ಹೆಸರುಪದ ಹಾಗೆಯೇ ಉಳಿಯುತ್ತದೆ; ಒಂದು ಕರಿಹಲಗೆಯನ್ನು ನೀಲಿ ಬಣ್ಣವನ್ನು ಬಳಸಿ ಉಂಟುಮಾಡಲಾಗಿದೆಯಾದರೂ ಅದನ್ನು ಗುರುತಿಸುವ ಹೆಸರುಪದ ಕರಿಹಲಗೆ ಎಂದೇ ಇರುತ್ತದೆ, ಮತ್ತು ಹೊಸಮನೆ ಎಂಬುದಾಗಿ ಹೆಸರಿಸಿರುವ ಮನೆ ಹಳೆಯದಾದಾಗಲೂ ಅದರ ಕೊಟ್ಟಹೆಸರು ಹೊಸಮನೆ ಎಂಬುದಾಗಿಯೇ ಉಳಿದಿರುತ್ತದೆ.
ಇದಲ್ಲದೆ, ಈ ರೀತಿ ಹೆಸರಿಸುವುದಕ್ಕಾಗಿ ಪರಿಚೆಯೊಂದನ್ನು ಆಯ್ಕೆ ಮಾಡುವ ಕೆಲಸ ಒಮ್ಮೆ ಮಾತ್ರ, ಎಂದರೆ ಅದನ್ನು ಉಂಟುಮಾಡುವ ಸಮಯ ದಲ್ಲಿ ಮಾತ್ರ, ನಡೆಯುತ್ತದೆ. ಒಮ್ಮೆ ಆಯ್ಕೆಯಾಗಿ ನುಡಿಯಲ್ಲಿ ಬಳಕೆಗೆ ಬಂದ ಮೇಲೆ, ಅದನ್ನು ಬಳಸುವ ಹೊತ್ತಿನಲ್ಲಿ ಪರಿಚೆಯ ಆಯ್ಕೆಯೆಂಬುದು ಇರುವು ದಿಲ್ಲ. ಇದು ಇಟ್ಟಳವಿರುವ ಕೊಟ್ಟಹೆಸರು ಮತ್ತು ಇರುವಹೆಸರುಗಳೆರಡರಲ್ಲೂ ಕಾಣಿಸಿಕೊಳ್ಳುವ ಪರಿಚೆಯಾಗಿದೆ. ಹೆಸರುಕಂತೆಗಳ ಬಳಕೆ ಇದಕ್ಕಿಂತ ತೀರ ಬೇರಾದುದು. ಅದನ್ನು ಬಳಸುವವರು ಒಂದೊಂದು ಬಾರಿಯೂ ಪರಿಚೆ ಯೊಂದನ್ನು ಎತ್ತಿಕೊಂಡು, ಅದರ ಕೊಗೆತವನ್ನು ಕೊಡಬಲ್ಲ ಪದಕಂತೆಯನ್ನು ಉಂಟುಮಾಡಬೇಕಾಗುತ್ತದೆ.
(5) ಹೆಸರುಪದಗಳನ್ನು ಉಂಟುಮಾಡುವುದು ಒಂದು ನುಡಿಯ ಚರಿತ್ರೆಗೆ ಸಂಬಂದಿಸಿದ ಕೆಲಸ, ಮತ್ತು ಹೆಸರುಕಂತೆಗಳನ್ನು ಉಂಟುಮಾಡುವುದು ಒಂದು ನುಡಿಯ ಬಳಕೆಗೆ ಸಂಬಂದಿಸಿದ ಕೆಲಸ. ಹೊಸ ಹೊಸ ಹೆಸರುಗಳನ್ನು ಉಂಟು ಮಾಡಿ ಬಳಕೆಗೆ ತಂದಾಗಲೆಲ್ಲ, ನುಡಿಯಲ್ಲಿ ಮಾರ್ಪಾಡುಗಳು ನಡೆದಿವೆಯೆಂದು ಹೇಳಬಹುದು; ಯಾಕೆಂದರೆ, ಹಾಗೆ ಮಾಡಿದಾಗಲೆಲ್ಲ ಅದರ ಪದನೆರಕೆಗೆ ಹೊಸದೊಂದು ಪದದ ಸೇರಿಕೆಯಾಗಿರುತ್ತದೆ.
ಆದರೆ, ಹೊಸ ಹೊಸ ಹೆಸರುಕಂತೆಗಳನ್ನು ಉಂಟುಮಾಡಿದಾಗ, ನುಡಿಯಲ್ಲಿ ಯಾವ ಮಾರ್ಪಾಡೂ ನಡೆಯುವುದಿಲ್ಲ. ಯಾಕೆಂದರೆ, ಅವನ್ನು ನೇರವಾಗಿ ಉಂಟುಮಾಡಿ ಬಳಸಬಹುದು; ಹೊಸ ಹೊಸ ಹೆಸರುಗಳ ಹಾಗೆ, ಅವು ಬಳಕೆಗೆ ಬರುವುದು ಇಲ್ಲವೇ ಬಾರದಿರುವುದು ಎಂಬುದಿಲ್ಲ. ಈ ವಿಶಯದಲ್ಲಿ ಅವು ನುಡಿಯಲ್ಲಿ ಬಳಕೆಯಾಗುವ ಸೊಲ್ಲುಗಳನ್ನು ಹೋಲುತ್ತವೆ: ಹೊಸ ಹೊಸ ಸೊಲ್ಲುಗಳನ್ನು ಉಂಟುಮಾಡುವ ಹಾಗೆ, ಹೊಸ ಹೊಸ ಹೆಸರುಕಂತೆಗಳನ್ನು ಉಂಟುಮಾಡುವುದೂ ನುಡಿಯ ಬಳಕೆಗೆ ಸಂಬಂದಿಸಿದ ಕೆಲಸವಾಗಿದೆ.
(6) ಒಂದು ನುಡಿಯಲ್ಲಿ ಬಳಕೆಯಲ್ಲಿರುವ ಹೆಸರುಗಳನ್ನು (ಮತ್ತು ಬೇರೆ ಬಗೆ ಪದಗಳನ್ನು) ಪಟ್ಟಿಮಾಡಬಹುದು; ಈ ಕೆಲಸವನ್ನು ನುಡಿಯ ಪದನೆರಕೆ ಗಳು ನಡೆಸುತ್ತವೆ. ನುಡಿಯ ಆಡುಗರಿಗಿಂತಲೂ ಬರಹಗಾರರಿಗೆ ಮತ್ತು ಬರಹಗಳ ಓದುಗರಿಗೆ ಇಂತಹ ಪದನೆರಕೆಗಳು ಆಗಾಗ ನೆರವಿಗೆ ಬರುತ್ತವೆ. ಆದರೆ, ಒಂದು ನುಡಿಯಲ್ಲಿ ಬಳಕೆಯಾಗುವ (ಇಲ್ಲವೇ ಬಳಕೆಯಾಗಬಲ್ಲ) ಹೆಸರುಕಂತೆಗಳನ್ನು ಆ ರೀತಿ ಪಟ್ಟಿಮಾಡಲು ಬರುವುದಿಲ್ಲ; ಅವುಗಳ ಎಣಿಕೆ ಪಟ್ಟಿಮಾಡಲಾಗದಶ್ಟು ದೊಡ್ಡದಿರುತ್ತದೆ. ಇದಲ್ಲದೆ, ಅವುಗಳ ಪಟ್ಟಿ ನುಡಿಯ ಬರಹಗಾರರಿಗಾಗಲೀ ಬರಹಗಳ ಓದುಗರಿಗಾಗಲೀ ಬೇಕಾಗುವುದೂ ಇಲ್ಲ.
ಕನ್ನಡದಲ್ಲಿ ಬಳಕೆಯಲ್ಲಿರುವ ಹೆಸರುಪದಗಳ ಇಟ್ಟಳವೆಂತಹದು ಎಂಬು ದನ್ನು ಕನ್ನಡ ಬರಹದ ಸೊಲ್ಲರಿಮೆ-1ರ ಎರಡನೇ ಪಸುಗೆಯಲ್ಲಿ ವಿವರಿಸ ಲಾಗಿದೆ; ಕನ್ನಡದಲ್ಲಿ ಎಂತಹ ಹೆಸರುಕಂತೆಗಳನ್ನು ಬಳಸಲಾಗುತ್ತದೆ, ಮತ್ತು ಅವುಗಳ ಇಟ್ಟಳವೆಂತಹದು ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗಿದೆ.
61.3 ಹೆಸರುಕಂತೆಗಳ ಇಟ್ಟಳ
ಹೆಸರುಕಂತೆಗಳಲ್ಲಿ ಒಂದು ತಿರುಳುಪದ ಬಂದಿರುತ್ತದೆ, ಮತ್ತು ಅದರೊಂದಿಗೆ ಕೆಳಗೆ ಕೊಟ್ಟಿರುವಂತಹ ಹಲವು ಬಗೆಯ ನೆರವು ನುಡಿತಗಳಲ್ಲಿ (ಪದ, ಪದಕಂತೆ ಇಲ್ಲವೇ ಒಳಸೊಲ್ಲುಗಳಲ್ಲಿ) ಒಂದು ಇಲ್ಲವೇ ಹೆಚ್ಚು ಬಂದಿರುತ್ತವೆ:
(1) ಚಿಕ್ಕ, ದೊಡ್ಡ, ಕೆಂಪು ಎಂಬಂತಹ ಪರಿಚೆಪದಗಳು (ಚಿಕ್ಕ ಮನೆ,
ದೊಡ್ಡ ಮರ, ಕೆಂಪು ಹೂವು),
(2) ಎರಡು, ಎಲ್ಲಾ, ಕೆಲವು ಎಂಬಂತಹ ಎಣಿಕೆಪದಗಳು (ಎರಡು ಪುಸ್ತಕಗಳು, ಎಲ್ಲಾ ಜನರು, ಕೆಲವು ಹಣ್ಣುಗಳು), ಮತ್ತು ಎರಡು ಅಡಿ, ಮೂರು ಕಿಲೋ, ಹತ್ತು ಲೀಟರ್ ಎಂಬಂತಹ ಅಳತೆಯ ನುಡಿತಗಳು (ಎಂಟು ಅಡಿ ಹಗ್ಗ, ಹತ್ತು ಲೀಟರ್ ಎಣ್ಣೆ),
(3) ಆ, ಈ, ಯಾವ ಎಂಬಂತಹ ತೋರುಪದಗಳು (ಆ ಮನೆ, ಈ
ಹುಡುಗಿ, ಯಾವ ಮನೆ),
(4) ನಿಮ್ಮ, ಅಣ್ಣನ, ಹುಡುಗನ, ಮರದ ಎಂಬಂತಹ ಪತ್ತುಗೆರೂಪಗಳು (ನಿಮ್ಮ ಮನೆ, ಅಣ್ಣನ ಹೆಂಡತಿ, ಹುಡುಗನ ಹೆಸರು, ಮರದ ಗೆಲ್ಲು), ಮತ್ತು
(5) ನೀವು ಕಟ್ಟಿಸಿದ, ಯಾರೂ ಮಾಡದ ಎಂಬಂತಹ ಒಳಸೊಲ್ಲುಗಳು
(ನೀವು ಕಟ್ಟಿಸಿದ ಮನೆ, ಯಾರೂ ಮಾಡದ ಕೆಲಸ).
ತಿರುಳು ಪದದೊಂದಿಗೆ ಬರುವ ಈ ನೆರವು ನುಡಿತಗಳು ತಿರುಳು ಪದ ಗುರುತಿಸುವ ಪಾಂಗುಗಳ ಕುರಿತಾಗಿ ಅವುಗಳ (1) ಪರಿಚೆ, (2) ಅಳವಿ, ಮತ್ತು (3) ಜಾಗ ಎಂಬುದಾಗಿ ಮೂರು ಮುಕ್ಯ ವಿಶಯಗಳನ್ನು ತಿಳಿಸುತ್ತವೆ. ಈ
ಮೂರು ಮುಕ್ಯ ವಿಶಯಗಳೂ ಗುರುತಿಸುವ ಕೆಲಸದಲ್ಲಿ ತಿರುಳು ಪದಕ್ಕೆ ನೆರವ ನ್ನೊದಗಿಸುತ್ತವೆ.
(1) ಪರಿಚೆಪದಗಳು ಇಲ್ಲವೇ ಪದಕಂತೆಗಳು ‘ಅದು ಎಂತಹ ಪಾಂಗು?’ ಎಂಬುದನ್ನು ತಿಳಿಸುತ್ತವೆ; ಅವುಗಳ ಉದ್ದಗಲ (ದೊಡ್ಡ ಮನೆ), ಬೆಲೆ (ಒಳ್ಳೆ ಮನೆ), ಪ್ರಾಯ (ಹೊಸ ಮನೆ), ಬಣ್ಣ (ಕೆಂಪು ಸೀರೆ) ಮೊದಲಾದುವನ್ನು ತಿಳಿಸುವ ಮೂಲಕ, ಅವು ಈ ಕೆಲಸವನ್ನು ನಡೆಸುತ್ತವೆ. ತಿರುಳುಪದದೊಡನೆ ಇಂತಹ ಒಂದಕ್ಕಿಂತ ಹೆಚ್ಚು ಪರಿಚೆಪದಗಳೂ ಬರಬಲ್ಲುವು (ದೊಡ್ಡ ಕೆಂಪು ಕಾರು); ಹೀಗೆ ಬರುವಾಗ, ಅವುಗಳಲ್ಲಿ ಯಾವುದು ತಿರುಳುಪದದ ಹತ್ತಿರ ನಿಲ್ಲುತ್ತದೆ, ಮತ್ತು ಯಾವುದು ದೂರ ಇರುತ್ತದೆ ಎಂಬುದರ ಕುರಿತಾಗಿ ಕೆಲವು ಕಟ್ಟಲೆಗಳಿವೆ.
(2) ಪಾಂಗುಗಳ ಅಳವಿಯನ್ನು ತಿಳಿಸುವುದಕ್ಕಾಗಿ ಎರಡು ಹೊಲಬುಗಳನ್ನು ಬಳಸಲಾಗುತ್ತದೆ: (ಕ) ಅವುಗಳ ಎಣಿಕೆಯನ್ನು ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳ ಮೂಲಕ ತಿಳಿಸುವುದು (ಒಂದು ಮನೆ, ಎರಡು ಹಣ್ಣುಗಳು, ಮೂರು ಕೋತಿಗಳು) ಒಂದು ಹೊಲಬು, ಮತ್ತು (ಚ) ಅವುಗಳ ಅಳತೆಯನ್ನು (ತೂಕ, ಉದ್ದಳತೆ ಮೊದಲಾದುವನ್ನು) ಅಳತೆಯ ಪದಕಂತೆಗಳ ಮೂಲಕ ತಿಳಿಸುವುದು (ಮೂರು ಕೆ.ಜಿ. ತುಪ್ಪ, ನಾಲ್ಕಡಿ ಹಲಿಗೆ) ಇನ್ನೊಂದು ಹೊಲಬು.
(3) ಪಾಂಗುಗಳ ಜಾಗವನ್ನು ತಿಳಿಸಲು ಆ, ಈ ಮೊದಲಾದ ತೋರುಪದ
ಗಳನ್ನು ಬಳಸಲಾಗುತ್ತದೆ (ಆ ಪುಸ್ತಕ, ಈ ಮನೆ).
ಇವುಗಳಲ್ಲಿ ಪಾಂಗುಗಳ ಪರಿಚೆ ಮತ್ತು ಜಾಗಗಳನ್ನು ತಿಳಿಸುವುದಕ್ಕಾಗಿ ಹೆಸರುಪದಗಳ ಪತ್ತುಗೆ ರೂಪಗಳನ್ನು, ಇಲ್ಲವೇ ಒಳಸೊಲ್ಲುಗಳನ್ನೂ ಬಳಸಲು ಬರುತ್ತದೆ. ಎತ್ತುಗೆಗಾಗಿ, ಮಣ್ಣಿನ ಮನೆ, ಬಣ್ಣದ ಚಿಟ್ಟೆ, ಮರದ ಮನೆ ಎಂಬಂತಹ ಪದಕಂತೆಗಳಲ್ಲಿ ಪಾಂಗುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ, ಮತ್ತು
ಕೊಡದ ಹಾಲು, ಬುಟ್ಟಿಯ ಹಣ್ಣು ಎಂಬಂತಹ ಪದಕಂತೆಗಳಲ್ಲಿ ಜಾಗವನ್ನು ತಿಳಿಸುವುದಕ್ಕಾಗಿ ಇಂತಹ ಹೆಸರುಪದಗಳ ಪತ್ತುಗೆರೂಪಗಳನ್ನು ಬಳಸಲಾಗಿದೆ.
ಇದೇ ರೀತಿಯಲ್ಲಿ, ಕಲ್ಲಿನಲ್ಲಿ ಕಟ್ಟಿದ ಮನೆ, ಬಣ್ಣ ಹಚ್ಚಿದ ಗೊಂಬೆ ಎಂಬಂತಹವುಗಳಲ್ಲಿ ಪಾಂಗುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ, ಮತ್ತು ಮೇಜಿನ ಮೇಲಿರುವ ಪೆನ್ನು, ಚೀಲದಲ್ಲಿರುವ ಹಣ ಎಂಬವುಗಳಲ್ಲಿ ಜಾಗ ವನ್ನು ತಿಳಿಸುವುದಕ್ಕಾಗಿ ಒಳಸೊಲ್ಲುಗಳನ್ನು ಬಳಸಲಾಗಿದೆ.
ಪರಿಚೆ, ಅಳವಿ, ಮತ್ತು ಜಾಗಗಳೆಂಬ ಈ ಮೂರು ಬಗೆಯ ನೆರವುಪದ ಗಳಲ್ಲಿ ಪರಿಚೆಯನ್ನು ತಿಳಿಸುವವುಗಳು ತಿರುಳುಪದಗಳ ಪಕ್ಕವೇ ಬರುತ್ತವೆ; ಅವುಗಳ ಮೊದಲು ಅಳವಿಯನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳು ಬರುತ್ತವೆ, ಮತ್ತು ಜಾಗವನ್ನು ತಿಳಿಸುವವುಗಳು ಅವಕ್ಕೂ ಮೊದಲು ಬರುತ್ತವೆ. ಇದನ್ನು ಕೆಳಗಿನ ಎತ್ತುಗೆಯಲ್ಲಿ ಕಾಣಬಹುದು:
(5)
ಮೇಜಿನ ಮೇಲಿರುವ ಎರಡು ಹೊಸ ಪುಸ್ತಕಗಳು
ಮೇಲಿನ ಹೆಸರುಕಂತೆಯಲ್ಲಿ ಪುಸ್ತಕಗಳು ಎಂಬ ತಿರುಳುಪದದ ಪಕ್ಕವೇ ಪರಿಚೆಯನ್ನು ತಿಳಿಸುವ ಹೊಸ ಎಂಬ ಪರಿಚೆಪದ ಬಂದಿದೆ; ಅಳವಿಯನ್ನು ತಿಳಿಸುವ ಎರಡು ಎಂಬ ಎಣಿಕೆಪದ ಅದಕ್ಕೆ ಮೊದಲು ಬಂದಿದೆ, ಮತ್ತು ಜಾಗವನ್ನು ತಿಳಿಸುವ ಮೇಜಿನ ಮೇಲಿರುವ ಎಂಬ ಒಳಸೊಲ್ಲು ಅದಕ್ಕೂ ಮೊದಲು ಬಂದಿದೆ.
ನೆರವು ಪದಗಳ ಈ ಓರಣ ಅವುಗಳಲ್ಲಿ ಯಾವುದು ಪದಕಂತೆಯ ಯಾವ ಅಂಗದ ಹುರುಳನ್ನು ತಾಗುತ್ತದೆ ಎಂಬುದನ್ನು ಅವಲಂಬಿಸಿದೆ: ಅವುಗಳಲ್ಲಿ ಪರಿಚೆ ಅದರ ಬಲಬದಿಗಿರುವ ತಿರುಳುಪದದ ಹುರುಳನ್ನು ಮಾತ್ರ ತಾಗುತ್ತದೆ; ಎಣಿಕೆ ಅದರ ಬಲಬದಿಗಿರುವ ಪರಿಚೆಪದ ಮತ್ತು ತಿರುಳುಪದಗಳೆರಡರ ಹುರುಳನ್ನೂ ತಾಗುತ್ತದೆ; ಮತ್ತು ಜಾಗ ಅದರ ಬಲಬದಿಗಿರುವ ಎಣಿಕೆ, ಪರಿಚೆ ಮತ್ತು ತಿರುಳುಗಳೆಂಬ ಮೂರು ಅಂಗಗಳ ಹುರುಳನ್ನೂ ತಾಗುತ್ತದೆ.
ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ಪದಕಂತೆಯಲ್ಲಿ ಹೊಸ ಎಂಬುದು ಪುಸ್ತಕಗಳು ಎಂಬ ತಿರುಳುಪದದ ಹುರುಳನ್ನು ಮಾತ್ರ ತಾಗುತ್ತದೆ; ಮೇಜು ಹೊಸದೆಂದು, ಇಲ್ಲವೇ ಎರಡು ಎಣಿಕೆ ಹೊಸದೆಂದು ಆ ಪದಕಂತೆ ಹೇಳುವು ದಿಲ್ಲ; ಎರಡು ಎಂಬುದು ಹೊಸ ಮತ್ತು ಪುಸ್ತಕ ಎಂಬ ಎರಡು ಪದಗಳ ಹುರುಳನ್ನೂ ತಾಗುತ್ತದೆ; ಯಾಕೆಂದರೆ, ಅದು ‘ಹೊಸ ಪುಸ್ತಕಗಳು ಎಶ್ಟು’ ಎಂಬುದನ್ನು ತಿಳಿಸುತ್ತದಲ್ಲದೆ ಬರೀ ‘ಪುಸ್ತಕಗಳು ಎಶ್ಟು’ ಎಂಬುದನ್ನು ತಿಳಿಸುವು ದಿಲ್ಲ. ಮೇಜಿನ ಮೇಲಿರುವ ಎಂಬುದು ಈ ಮೂರು ಅಂಗಗಳ ಹುರುಳನ್ನೂ ಒಟ್ಟಾಗಿ ತಾಗುತ್ತದೆ; ಯಾಕೆಂದರೆ, ಅದು ‘ಎರಡು ಹೊಸ ಪುಸ್ತಕಗಳ’ ಜಾಗ ವನ್ನು ತಿಳಿಸುತ್ತದೆ.
ಪಾಂಗುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ ಬರಿಯ ಪದಗಳನ್ನು ಬಳಸುವ ಬದಲು, ಅವುಗಳ ಪತ್ತುಗೆ ರೂಪಗಳನ್ನು ಇಲ್ಲವೇ ಒಳಸೊಲ್ಲುಗಳನ್ನು ಬಳಸಿ ದಾಗ, ಅವು ಈ ಓರಣದಲ್ಲಿ ಉಳಿಯುವುದಿಲ್ಲ ಎಂಬುದನ್ನು ಮುಂದೆ ನೋಡ ಲಿರುವೆವು. ಎತ್ತುಗೆಗಾಗಿ, ಮೂರು ಬಣ್ಣಗಳಿರುವ ಮೇಜಿನ ಮೇಲಿನ ಗೊಂಬೆ ಎಂಬ ಪದಕಂತೆಯಲ್ಲಿ ಪಾಂಗಿನ ಪರಿಚೆಯನ್ನು ತಿಳಿಸುವ ಒಳಸೊಲ್ಲು (ಮೂರು ಬಣ್ಣಗಳಿರುವ ಎಂಬುದು) ಜಾಗವನ್ನು ತಿಳಿಸುವ ಮೇಜಿನ ಮೇಲಿನ ಎಂಬ ಪತ್ತುಗೆರೂಪಕ್ಕಿಂತ ಮೊದಲು ಬಂದಿರುವುದನ್ನು ಕಾಣಬಹುದು.
ಹೆಸರುಕಂತೆಯಲ್ಲಿ ತಿರುಳುಪದಕ್ಕೆ ನೆರವನ್ನು ನೀಡುವುದಕ್ಕಾಗಿ ಬಳಕೆ ಯಾಗುವ ಈ ಮೂರು ಬಗೆಯ ನುಡಿತಗಳಲ್ಲಿ ಜಾಗ ಎಂಬುದು ಎಸಕದ ಪಾಂಗುಗಳನ್ನು ನೆಲೆಗೊಳಿಸುತ್ತದೆ ಎಂಬುದಾಗಿಯೂ ಹೇಳಬಹುದು. ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವ ವ್ಯಕ್ತಿ, ವಸ್ತು, ವಿಶಯ ಮೊದಲಾದವುಗಳನ್ನು ಜಾಗ (ಮತ್ತು ಹೊತ್ತು) ನುಡಿತಗಳ ಮೂಲಕ ಬರಹಗಾರನ, ಓದುಗನ, ಇಲ್ಲವೇ ಬರೆಯು
ತ್ತಿರುವ ಕತೆಯ ಜಾಗ ಮತ್ತು ಹೊತ್ತುಗಳೊಂದಿಗೆ ಹೊಂದಿಸಿಕೊಡುವ ಕೆಲಸ ವನ್ನು ಅವು ಮಾಡುತ್ತವೆ.
ಹೆಸರುಪದಗಳೊಂದಿಗೆ ಬರುವ ನೆರವು ನುಡಿತಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ಅವುಗಳ ಮೊದಲು ಬರುತ್ತವೆ; ಆದರೆ, ಕೆಲವನ್ನು ಅವುಗಳ ಬಳಿಕವೂ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(6ಕ) ಇಬ್ಬರು ಹುಡುಗರು ಮನೆಗೆ ಹೋಗಿದ್ದಾರೆ. (6ಚ) ಹುಡುಗರಿಬ್ಬರು ಮನೆಗೆ ಹೋಗಿದ್ದಾರೆ. (7ಕ) ಎಲ್ಲಾ ಮರಗಳೂ ಕೆಳಗುರುಳಿವೆ. (7ಚ) ಮರಗಳೆಲ್ಲ ಕೆಳಗುರುಳಿವೆ. ಕೆಲವು ಮನೆಗಳಿಗೆ ಬಣ್ಣ ಹಚ್ಚಿದ್ದಾರೆ. (8ಕ) (8ಚ) ಮನೆಗಳು ಕೆಲವಕ್ಕೆ ಬಣ್ಣ ಹಚ್ಚಿದ್ದಾರೆ.
ಇಬ್ಬರು ಎಣಿಕೆಪದವನ್ನು, ಮತ್ತು ಎಲ್ಲಾ, ಕೆಲವು ಅಳವಿಪದಗಳನ್ನು ಹೆಸರುಪದಗಳ ಮೊದಲು ಮಾತ್ರವಲ್ಲದೆ, ಬಳಿಕವೂ ಬಳಸಲು ಬರುತ್ತದೆ ಎಂಬುದನ್ನು ಮೇಲಿನ ಸೊಲ್ಲುಗಳಲ್ಲಿ ಕಾಣಬಹುದು.
ಆದರೆ, ಬೇರೆ ಕೆಲವು ಪದ ಮತ್ತು ಒಟ್ಟುಗಳನ್ನು ಹೆಸರುಪದಗಳ ಬಳಿಕ
ಬಳಸಬಹುದಲ್ಲದೆ, ಅವುಗಳ ಮೊದಲು ಬಳಸಲು ಬರುವುದಿಲ್ಲ:
ರಾಜುವಂತೂ ನಿನ್ನೆಯೇ ಬಂದಿದ್ದ.
(9ಕ) (9ಚ) ಅಂತೂ ರಾಜು ನಿನ್ನೆಯೇ ಬಂದಿದ್ದ. (10ಕ) ಇದನ್ನು ರಾಜು ಮಾತ್ರ ಮಾಡಬಲ್ಲ. (10ಚ) ಇದನ್ನು ಮಾತ್ರ ರಾಜು ಮಾಡಬಲ್ಲ.
(9ಕ)ದಲ್ಲಿ ಅಂತೂ ಪದವನ್ನು ರಾಜು ಹೆಸರುಪದದ ಬಳಿಕ ಬಳಸ ಲಾಗಿದ್ದು, ಅದು ಆ ಪದದ ನೆರವು ಪದವಾಗಿ ಅದರೊಂದಿಗೆ ಒಂದೇ ಪದಕಂತೆಯಲ್ಲಿ ಬಂದಿದೆ; ಆದರೆ, (9ಚ)ದಲ್ಲಿ ಅದು ರಾಜು ಪದದ ಮೊದಲು ಬಂದಿದ್ದು, ಆ ಪದದ ನೆರವು ಪದವಾಗಿಲ್ಲ, ಮತ್ತು ಅವೆರಡು ಒಟ್ಟಿಗೆ ಒಂದು ಪದಕಂತೆಯಾಗಿಯೂ ಬಂದಿಲ್ಲ.
ಇದೇ ರೀತಿಯಲ್ಲಿ, ಮಾತ್ರ ಪದ (10ಕ)ದಲ್ಲಿ ರಾಜು ಪದದ ಬಳಿಕ ಬಂದಿದೆ, ಮತ್ತು ಅದರೊಂದಿಗೆ ಒಂದು ಪದಕಂತೆಯಾಗಿಯೂ ಬಳಕೆಯಾಗಿದೆ; ಆದರೆ, (10ಚ)ದಲ್ಲಿ ಅದು ಆ ಪದದ ಮೊದಲು ಬಳಕೆಯಾಗಿದೆ, ಮತ್ತು ಅದು
ಆ ಪದದೊಂದಿಗೆ ಸೇರಿ ಒಂದು ಪದಕಂತೆಯಾಗುವ ಬದಲು, ಅದರ ಮೊದಲು ಬಂದಿರುವ ಇದನ್ನು ಪದದೊಂದಿಗೆ ಸೇರಿ ಬೇರೊಂದು ಪದಕಂತೆಯಾಗಿದೆ.
ಒಳಗೊಳ್ಳುವ ಊ ಒಟ್ಟು ಮತ್ತು ಒತ್ತಿ ಹೇಳುವ ಏ ಒಟ್ಟು ಎಂಬವುಗ
ಳೆರಡೂ ಹೆಸರುಪದದ ಬಳಿಕ ಮಾತ್ರ ಬರಬಲ್ಲುವು:
(11ಕ) ನಿನ್ನೆ ಅವನೂ ಬಂದಿದ್ದ. (11ಚ) ನಿನ್ನೆ ಅವನೇ ಬಂದಿದ್ದ.
ಸೊಲ್ಲುಗಳಲ್ಲಿ ಸುಮಾರು ನೂರಕ್ಕೆ ಎಂಬತ್ತರಶ್ಟು ಬಾಗವನ್ನೂ ಹೆಸರು ಕಂತೆಗಳೇ ತುಂಬಿಕೊಳ್ಳುತ್ತವೆ; ಹಾಗಾಗಿ, ಒಂದು ಸೊಲ್ಲಿನ ಇಟ್ಟಳವೆಂತಹದು ಮತ್ತು ಅದರ ಹುರುಳೇನು ಎಂಬುದನ್ನು ತಿಳಿಯಬೇಕೆಂದಿರುವವರು ಮೊದಲಿಗೆ ಅದರಲ್ಲಿ ಬಂದಿರುವ ಹೆಸರುಕಂತೆಗಳು ಯಾವುವು, ಮತ್ತು ಅವುಗಳ ಇಟ್ಟಳ ಮತ್ತು ಹುರುಳು ಎಂತಹದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಸೊಲ್ಲುಗಳಲ್ಲಿ ಬರುವ ಪಾಂಗುಗಳನ್ನು ಗುರುತಿಸುವುದಕ್ಕಾಗಿ ಹೆಸರುಪದ ಇಲ್ಲವೇ ಪದಕಂತೆಗಳನ್ನು ಮಾತ್ರವಲ್ಲದೆ, ಆಡುಪದಗಳು (ನಾನು, ನೀನು), ತೋರುಪದಗಳು (ಅವನು, ಅವಳು, ಅದು, ಅವರು, ತಾನು), ಎಣಿಕೆಪದ ಗಳು (ಒಂದು, ಎರಡು, ಒಬ್ಬರು), ಎಸಕಪದಗಳ ಹೆಸರುರೂಪಗಳು (ಮಾಡು ವುದು, ಮಾಡಿದುದು, ಮಾಡುವಿಕೆ), ಮೊದಲಾದ ಬೇರೆಯೂ ಕೆಲವು ಬಗೆಯ ನುಡಿತಗಳನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(12ಕ) ನೀವು ನಾಳೆ ಬರಬೇಕಾಗಿಲ್ಲ. (12ಚ) ಅವರು ಹೊರಟುಹೋದುದನ್ನು ಯಾರೂ ಗಮನಿಸಿರಲಿಲ್ಲ. (12ಟ) ಒಂದನ್ನು ನೀವು ಮನೆಯಲ್ಲೇ ಇರಿಸಿಕೊಳ್ಳಿ. (12ತ) ಆಕೆ ಹಾಡಿದುದನ್ನು ಎಲ್ಲರೂ ಹೊಗಳುತ್ತಿದ್ದಾರೆ.
ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬಳಕೆಯಾಗುವ ಹೆಸರುಕಂತೆಗಳ, ಮತ್ತು ಬೇರೆ ಬಗೆಯ ನುಡಿತಗಳ ಇಟ್ಟಳವೆಂತಹದು ಎಂಬುದರ ಕುರಿತಾಗಿ ಹೆಚ್ಚಿನ ವಿವರಗಳನ್ನು ತಿಳಿಸುವುದೇ ಈ ಪಸುಗೆಯ ಗುರಿಯಾಗಿದೆ.
6.2 ತಿರುಳುಪದದ ಬಗೆಗಳು
ಹೆಸರುಕಂತೆಗಳ ತಿರುಳುಪದಗಳಾಗಿ ಬರಬಲ್ಲ ಹೆಸರುಪದಗಳಲ್ಲಿ ಹಲವು ಬಗೆ ಗಳಿವೆ; ಅವನ್ನು ಹಲವು ಗುಂಪುಗಳಲ್ಲಿ ವಿಂಗಡಿಸಿ ಹೇಳಲು ಬರುತ್ತದೆ.
ಎತ್ತುಗೆಗಾಗಿ, ಕೊಟ್ಟಹೆಸರು ಮತ್ತು ಇರುವಹೆಸರು ಎಂಬುದಾಗಿ ಹೆಸರುಪದ ಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು: ಜಾನಕಿ ಎಂಬುದು ಒಬ್ಬ ಹುಡುಗಿಗೆ ಕೊಟ್ಟಿರುವ ಹೆಸರು; ಆ ಹುಡುಗಿಯನ್ನು ಒಂದು ಸೊಲ್ಲಿನ ಪಾಂಗಾಗಿ ಗುರುತಿಸಬೇಕಾದಾಗಲೆಲ್ಲ ಅವಳ ಈ ಕೊಟ್ಟಹೆಸರನ್ನು ಬಳಸಬಲ್ಲೆವು.
ಇದಕ್ಕೆ ಬದಲು, ಹುಡುಗಿ ಎಂಬುದು ಈಗಾಗಲೇ ನುಡಿಯಲ್ಲಿ ಬಳಕೆಯಲ್ಲಿ ಇರುವಂತಹ ಒಂದು ಹೆಸರು; ಇಂತಹ ಇರುವಹೆಸರುಗಳು ಒಂದು ಬಗೆಯ ವ್ಯಕ್ತಿ, ಒಂದು ಬಗೆಯ ವಸ್ತು, ಇಲ್ಲವೇ ಒಂದು ಬಗೆಯ ವಿಶಯವನ್ನು ಹೆಸರಿಸುತ್ತಿದ್ದು, ಅಂತಹವನ್ನು ಒಂದು ಸೊಲ್ಲಿನ ಪಾಂಗಾಗಿ ಗುರುತಿಸಬೇಕಾದಾಗ ಲೆಲ್ಲ ನಾವು ಆ ಹೆಸರುಗಳನ್ನು ಬಳಸಬಲ್ಲೆವು.
ಹೆಸರುಪದಗಳನ್ನು ಬೇರೆಯೂ ಕೆಲವು ಬಗೆಗಳಲ್ಲಿ ಗುಂಪಿಸಲು ಬರುತ್ತದೆ; ಎತ್ತುಗೆಗಾಗಿ, ಹೆಸರುಪದದೊಂದಿಗೆ ಎಣಿಕೆಪದಗಳನ್ನು ಬಳಸುವಲ್ಲಿ ಕಾಣಿಸಿ ಕೊಳ್ಳುವ ಕೆಲವು ವ್ಯತ್ಯಾಸಗಳನ್ನವಲಂಬಿಸಿ, ಅವನ್ನು ಒತ್ತೆಹೆಸರು, ಮತ್ತು ಒಟ್ಟಲುಹೆಸರು ಎಂಬುದಾಗಿ ಎರಡು ಗುಂಪುಗಳಲ್ಲಿ ಇರಿಸಬಹುದು; ಹೆಸರುಪದ ಗಳಿಗೂ ಸೊಲ್ಲಿನ ಎಸಕಪದಗಳಿಗೂ ನಡುವೆ ಕಾಣಿಸುವ ಸಂಬಂದವನ್ನವ ಲಂಬಿಸಿ, ಅವನ್ನು ಮಂದಿಗುರ್ತ ಮತ್ತು ಉಳಿಕೆಗುರ್ತ ಎಂಬ ಎರಡು ಗುಂಪು ಗಳಲ್ಲಿ, ಮತ್ತು ಮಂದಿಗುರ್ತದ ಪದಗಳನ್ನು ಗಂಡುಗುರ್ತ ಮತ್ತು ಹೆಣ್ಣುಗುರ್ತ ಎಂಬ ಬೇರೆ ಎರಡು ಗುಂಪುಗಳಲ್ಲಿಯೂ ಇರಿಸಬಹುದು.
ಹೆಸರುಪದಗಳು ಎಂತಹ ಪಾಂಗುಗಳನ್ನು
ಗುರುತಿಸುತ್ತವೆ ಎಂಬುದ ನ್ನವಲಂಬಿಸಿ ಅವನ್ನು ಮೂರು-ನಾಲ್ಕು ಹಂತಗಳಲ್ಲಿ ಗುಂಪಿಸಲು ಬರುತ್ತದೆ; ಜಾಗದ ಎಲ್ಲೆಗಳಿರುವ ಪಾಂಗುಗಳನ್ನು ಗುರುತಿಸುವ ಮನೆ, ಹೂವು, ಹುಡುಗ, ಮರ ಮೊದಲಾದ ಪದಗಳು ಮೊದಲನೆಯ ಹಂತದಲ್ಲಿ ಬರುತ್ತವೆ; ಇದಕ್ಕೆ ಬದಲು, ಹೊತ್ತಿನ ಎಲ್ಲೆಗಳಿರುವ ಪಾಂಗುಗಳನ್ನು ಗುರುತಿಸುವ ಮದುವೆ, ಕೆಲಸ, ಆಟ, ಹಬ್ಬ ಮೊದಲಾದವು ಎರಡನೆಯ ಹಂತದಲ್ಲಿ ಬರುತ್ತವೆ; ಜಾಗ ಮತ್ತು ಹೊತ್ತುಗಳೆಂಬ ಎರಡು ಬಗೆಯ ಎಲ್ಲೆಗಳೂ ಇಲ್ಲದಿರುವ ಪಾಂಗು ಗಳನ್ನು ಗುರುತಿಸುವ ನಂಬಿಕೆ, ಅನಿಸಿಕೆ, ಮರುಕ, ಸಿಟ್ಟು ಮೊದಲಾದ ಪದಗಳು ಮೂರನೇ ಹಂತದಲ್ಲಿ ಬರುತ್ತವೆ.
ಹೆಸರುಪದಗಳನ್ನು ಪರಿಜಿರುವ ಮತ್ತು ಪರಿಜಿಲ್ಲದ ಪದಗಳೆಂಬುದಾಗಿ ಬೇರೆಯೂ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ಸಾಮಾನ್ಯವಾಗಿ ಮೇಲೆ ವಿವರಿಸಿದ ಒಂದನೇ ಹಂತದಲ್ಲಿ ಬರುವ ಮರ, ಕಲ್ಲು, ನೀರು, ಎಣ್ಣೆ ಮೊದಲಾದ ಪದಗಳು ಪರಿಜಿರುವ ಪದಗಳಾಗಿರುತ್ತವೆ, ಮತ್ತು ಉಳಿದ ಹಂತಗಳಲ್ಲಿ ಬರುವ ಹಸಿವು, ಸಿಟ್ಟು, ಮದುವೆ, ಬಯಕೆ, ತಿಳಿವು ಮೊದಲಾದ ಪದಗಳು ಪರಿಜಿಲ್ಲದ ಪದಗಳಾಗಿರುತ್ತವೆ.
ಇದಲ್ಲದೆ, ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳೆಂಬುದಾಗಿಯೂ
ಹೆಸರುಪದಗಳನ್ನು ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ.
ಆದರೆ, ಈ ಗುಂಪುಗಳು ಒಂದನ್ನೊಂದು ಕತ್ತರಿಸುವ ಕಾರಣ, ಅವನ್ನು ಬೇರೆ ಬೇರಾಗಿ ಪರಿಶೀಲಿಸಬೇಕಾಗುತ್ತದೆ. ಮುಕ್ಯವಾಗಿ, ಈ ಪದಗಳೊಂದಿಗೆ ಪದ ಕಂತೆಗಳಲ್ಲಿ ಎಂತಹ ನೆರವು ನುಡಿತಗಳು ಬರಬಲ್ಲುವು ಎಂಬುದರ ಮೇಲೆ ಅವನ್ನು ಈ ರೀತಿ ಹಲವು ಬಗೆಗಳಲ್ಲಿ ಗುಂಪಿಸಲಾಗುತ್ತದೆ. ಇವುಗಳಲ್ಲಿ ಮುಕ್ಯ ವಾದ ಕೆಲವು ಗುಂಪಿಸುವಿಕೆಗಳನ್ನು ಕೆಳಗೆ ವಿವರಿಸಲಾಗಿದೆ:
6.2.1 ಕೊಟ್ಟಹೆಸರು ಮತ್ತು ಇರುವಹೆಸರು
ಮೇಲೆ ತಿಳಿಸಿದ ಹಾಗೆ, ಕೊಟ್ಟಹೆಸರು ಎಂಬುದು ಯಾರಾದರೊಬ್ಬ ವ್ಯಕ್ತಿ, ವಸ್ತು ಇಲ್ಲವೇ ಜಾಗಕ್ಕೆ ನಾವು ಕೊಟ್ಟಿರುವಂತಹ ಹೆಸರು; ಇದಕ್ಕೆ ಬದಲು, ಇರುವಹೆಸರು ಎಂಬುದು ನುಡಿಯಲ್ಲೇನೇ ಬಳಕೆಯಲ್ಲಿದ್ದು, ಬೇಕಾದಾಗ ಅದಕ್ಕಿರುವ ಈ ಬಳಕೆಯನ್ನವಲಂಬಿಸಿ, ವ್ಯಕ್ತಿ, ವಸ್ತು, ವಿಶಯ ಮೊದಲಾದು ವನ್ನು ಗುರುತಿಸುವುದಕ್ಕಾಗಿ ಬಳಸಿಕೊಳ್ಳುವಂತಹದು.
ಎತ್ತುಗೆಗಾಗಿ, ಜಾನಕಿ ಎಂಬುದು ಒಬ್ಬ ಹುಡುಗಿಯ ಕೊಟ್ಟಹೆಸರು, ಗೋದಾವರಿ ಎಂಬುದು ಒಂದು ನದಿಯ ಕೊಟ್ಟಹೆಸರು, ಮತ್ತು ಪುತ್ತೂರು ಎಂಬುದು ಒಂದು ತಾಲೂಕಿನ ಕೊಟ್ಟಹೆಸರು; ಇದಕ್ಕೆ ಬದಲು, ಗೊಂಬೆ ಎಂಬುದು ಒಂದು ಬಗೆಯ ವಸ್ತುವಿನ ಇರುವಹೆಸರು, ಮತ್ತು ಗೆಳೆಯ ಎಂಬುದು ಒಂದು ಬಗೆಯ ವ್ಯಕ್ತಿಯ ಇರುವಹೆಸರು.
(1) ಕೊಟ್ಟಹೆಸರಿನ ಹಾಗೆ ಇರುವಹೆಸರನ್ನೂ ನಾವು ಹೊಸದಾಗಿ ಉಂಟು ಮಾಡಬಲ್ಲೆವು; ಆದರೆ, ಆ ರೀತಿ ಉಂಟುಮಾಡುವಾಗಲೂ, ಅವು ಒಂದು ಬಗೆಯ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವ ಹಾಗೆ ಉಂಟು ಮಾಡುತ್ತೇವಲ್ಲದೆ, ಒಂದನ್ನು ಮಾತ್ರವೇ ಗುರುತಿಸುವ ಹಾಗೆ ಉಂಟುಮಾಡುವು ದಿಲ್ಲ. ಎತ್ತುಗೆಗಾಗಿ, ಸೊಲ್ಲರಿಮೆ ಎಂಬ ಪದವನ್ನು ಹೊಸದಾಗಿ ಉಂಟುಮಾಡ ಲಾಗಿದೆ; ಆದರೆ, ಹಾಗೆ ಮಾಡುವಾಗಲೇನೇ ಅದು ಎಲ್ಲಾ ಬಗೆಯ ವ್ಯಾಕರಣ ಗಳನ್ನೂ (ಈಗ ಬಳಕೆಯಲ್ಲಿರುವ, ಹಿಂದೆ ಬಳಕೆಯಲ್ಲಿದ್ದ, ಮತ್ತು ಮುಂದೆ ಬಳಕೆಗೆ ಬರಲಿರುವ ವ್ಯಾಕರಣಗಳನ್ನೂ) ಗುರುತಿಸುವ ಹಾಗೆ ಉಂಟುಮಾಡ ಲಾಗಿದೆ.
(2) ಕೊಟ್ಟಹೆಸರು ಒಬ್ಬನೇ ವ್ಯಕ್ತಿಯನ್ನು ಇಲ್ಲವೇ ಒಂದೇ ವಸ್ತುವನ್ನು ಗುರುತಿಸುತ್ತಿರಬೇಕೆಂದೇನೂ ಇಲ್ಲ; ಎತ್ತುಗೆಗಾಗಿ, ಜಾನಕಿ ಎಂಬ ಹೆಸರು ಹಲವು ಮಂದಿ ಹುಡುಗಿಯರನ್ನು (ಬೇರೆ ಬೇರೆ ಸಂದರ್ಬಗಳಲ್ಲಿ) ಗುರುತಿಸುತ್ತಿರ ಬಲ್ಲುದು; ಆದರೆ, ಅದನ್ನು ಈ ಹಲವು ಹುಡುಗಿಯರಿಗೆ ಬೇರೆ ಬೇರಾಗಿ ಕೊಡಲಾಗಿದೆಯೆಂಬುದು ಅದನ್ನು ಇರುವಹೆಸರಿಗಿಂತ ಬೇರಾಗಿರುವ ಹಾಗೆ ಮಾಡುತ್ತದೆ. ಹಾಗಾಗಿ, ಅದು ಹಲವು ಹುಡುಗಿಯರ ಕೊಟ್ಟಹೆಸರಾಗಿಯೇ ಬಳಕೆಯಾಗುತ್ತದಲ್ಲದೆ ಇರುವಹೆಸರಾಗಿ ಬಳಕೆಯಾಗುವುದಿಲ್ಲ.
(3) ಒಂದೇ ಕೊಟ್ಟಹೆಸರು ಹಲವು ಬಗೆಯ ವ್ಯಕ್ತಿ, ವಸ್ತು ಮೊದಲಾದು ವನ್ನೂ ಗುರುತಿಸುತ್ತಿರಬಲ್ಲುದು; ಎತ್ತುಗೆಗಾಗಿ, ಕಾವೇರಿ ಎಂಬುದು ಒಂದು ನದಿಯ ಕೊಟ್ಟಹೆಸರಾಗಿದೆಯಲ್ಲದೆ, ಹಲವು ಮಂದಿ ಹುಡುಗಿಯರ (ಮತ್ತು ಹೆಂಗುಸರ) ಕೊಟ್ಟಹೆಸರಾಗಿಯೂ ಇದೆ.
(4) ಇರುವಹೆಸರನ್ನು ಒಂದು ಬಗೆಯ ವ್ಯಕ್ತಿ (ಮುದುಕ, ಕುರುಡ, ಅಣ್ಣ, ಗೆಳೆಯ), ಒಂದು ಬಗೆಯ ವಸ್ತು (ಗೊಂಬೆ, ಕಣ್ಣು, ಮಂಚ, ಗೋಡೆ), ಒಂದು ಬಗೆಯ ವಿಶಯ (ಸಿಟ್ಟು, ನೆನಪು, ಆಸೆ, ಓಟ) ಮೊದಲಾದುವಕ್ಕೆ ಒಮ್ಮೆ ಮಾತ್ರವೇ ಕೊಡಲಾಗಿದ್ದು, ಅಂತಹವನ್ನು ಗುರುತಿಸಬೇಕಾದಾಗಲೆಲ್ಲ ಅದನ್ನೇ ತಿರುತಿರುಗಿ ಬಳಸುತ್ತಿರುತ್ತೇವೆ. ಎತ್ತುಗೆಗಾಗಿ, ಯಾವನೇ ಒಬ್ಬ ಮುದುಕನನ್ನು ಗುರುತಿಸಬೇಕಾದಾಗಲೂ ನಾವು ಮುದುಕ ಎಂಬ ಪದವನ್ನೇ ಬಳಸುತ್ತೇವೆ.
ಹಾಗಾಗಿ, ಇರುವಹೆಸರಿಗೆ ಒಂದು ಹುರುಳಿದೆ ಎಂದು ಹೇಳಲು ಬರುತ್ತದೆ; ಅದು ಗುರುತಿಸಬಲ್ಲ ವ್ಯಕ್ತಿ ಇಲ್ಲವೇ ವಸ್ತುವಿನ ಪರಿಚೆಗಳ ಕಂತೆಯೇ ಅದರ ಹುರುಳು ಎಂಬುದಾಗಿ ಹೇಳಬಹುದು. ಇದಲ್ಲದೆ, ಒಂದು ಇರುವಹೆಸರು ಯಾವ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆ ಎಂಬುದನ್ನು ನಾವು ಅದರ ಈ ಹುರುಳಿನ ನೆರವಿನಿಂದ ತಿಳಿದುಕೊಳ್ಳಬಲ್ಲೆವು. ಎತ್ತುಗೆಗಾಗಿ, ಮುದುಕ ಎಂಬ ಪದವನ್ನು ಬಳಸಿದಾಗ, ಅದು ಯಾವ ವ್ಯಕ್ತಿಯನ್ನು ಗುರುತಿಸುತ್ತಿರಬಹುದು ಎಂಬುದನ್ನು ತಿಳಿಯುವಲ್ಲಿ ನಮಗೆ ತಿಳಿದಿರುವ ಅದರ ಹುರುಳು ನೆರವಿಗೆ ಬರುತ್ತದೆ.
(5) ಈ ಕಾರಣಕ್ಕಾಗಿ, ಒಬ್ಬನೇ ವ್ಯಕ್ತಿಯನ್ನು, ಇಲ್ಲವೇ ಒಂದೇ ವಸ್ತುವನ್ನು ಗುರುತಿಸಲು ಹಲವು ಇರುವಹೆಸರುಗಳನ್ನು ಬಳಸಲು ಬರುತ್ತದೆ; ಒಬ್ಬನೇ ವ್ಯಕ್ತಿ ಒಬ್ಬನಿಗೆ ಅಣ್ಣನಾಗಿರಬಹುದು, ಇನ್ನೊಬ್ಬನಿಗೆ ತಂದೆಯಾಗಿರಬಹುದು, ಮತ್ತೊಬ್ಬನಿಗೆ ಗೆಳೆಯನಾಗಿರಬಹುದು, ಇನ್ನೊಬ್ಬಳಿಗೆ ಗಂಡನಾಗಿರಬಹುದು, ಮತ್ತೊಬ್ಬಳಿಗೆ ಮಗನಾರಬಹುದು; ಹಾಗಾಗಿ, ಈ ಇರುವಹೆಸರುಗಳು, ಮತ್ತು ಮುದುಕ, ಕುರುಡ, ಮೇಶ್ಟ್ರು, ಮೊದಲಾದ ಬೇರೆಯೂ ಹಲವು ಇರುವ ಹೆಸರುಗಳು ಬೇರೆ ಬೇರೆ ಸಂದರ್ಬಗಳಲ್ಲಿ ಆ ಒಬ್ಬ ವ್ಯಕ್ತಿಯನ್ನೇ ಗುರುತಿಸ ಬಲ್ಲುವು. ಆತನನ್ನು ಗುರುತಿಸಲು ಯಾವ ಸಂದರ್ಬದಲ್ಲಿ ಯಾವ ಇರುವಹೆಸರು ಬಳಕೆಯಾಗುತ್ತದೆ ಎಂಬುದು ಅವುಗಳ ಹುರುಳನ್ನವಲಂಬಿಸಿದೆ.
ಆದರೆ, ಕೊಟ್ಟಹೆಸರಿಗೆ ಆ ರೀತಿ ಒಂದು ಹುರುಳಿದೆಯೆಂದು ಹೇಳಲು ಬರುವುದಿಲ್ಲ. ಅದಕ್ಕೂ ಅದು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡು ವಿರುವ ಸಂಬಂದ ನೇರವಾದುದು. ಒಂದು ಸಂದರ್ಬದಲ್ಲಿ ಅದನ್ನು ಆ ವ್ಯಕ್ತಿ ಇಲ್ಲವೇ ವಸ್ತುವಿಗೆ ಕೊಡಲಾಗಿದೆ ಎಂಬುದರಿಂದ ಈ ಸಂಬಂದ ಉಂಟಾಗಿದೆ. ಹಾಗಾಗಿ, ಒಂದು ಕೊಟ್ಟಹೆಸರು ಯಾರದು ಇಲ್ಲವೇ ಯಾವುದರದ್ದು ಎಂಬು ದನ್ನು ತಿಳಿದವರಿಗೆ ಮಾತ್ರ ಅದನ್ನು ಬಳಸಲು ಬರುತ್ತದೆ.
(6) ಕೆಲವೊಮ್ಮೆ, ತಾವು ಬಳಸುವ ಕೊಟ್ಟಹೆಸರು ಯಾರನ್ನು ಇಲ್ಲವೇ ಯಾವುದನ್ನು ಗುರುತಿಸುತ್ತದೆ ಎಂಬುದು ಕೇಳುಗರಿಗೆ ಗೊತ್ತಿರಲಾರದೆಂಬ ಸಂಶಯವಿರುವಲ್ಲಿ, ಆಡುಗರು ಅದರೊಂದಿಗೆ ಬೇರೊಂದು ಹೆಸರುಕಂತೆಯನ್ನು ಬಳಸುವುದಿದೆ. ಇದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು:
(1ಕ)
ರಾಜೀವ, ನನ್ನ ಅಣ್ಣನ ಮಗ, ನಿನ್ನೆ ಬಂದಿದ್ದ.
ಆಡುಗನಿಗೇನೇ ತಾನು ಬಳಸುವ ಕೊಟ್ಟಹೆಸರು ಯಾರದೆಂದು ತಿಳಿಯ ದಿರುವಲ್ಲಿ ಇನ್ನೊಂದು ಬಗೆಯ ಇಟ್ಟಳವನ್ನು ಬಳಸಲಾಗುತ್ತದೆ; ಇಲ್ಲೂ ಈ ವಿಶಯವನ್ನು ತಿಳಿಸುವ ಪದ ಬೇರಾಗಿಯೇ ಬಂದಿರುತ್ತದೆ:
(1ಚ) ಯಾರೋ ಜಗದೀಶ ಎಂಬವರು ನಿಮ್ಮನ್ನು ಕಾಣಲು ಬಂದಿದ್ದಾರೆ.
ಆದರೆ, ಸಾಮಾನ್ಯವಾಗಿ ಇಂತಹ ಹೆಚ್ಚಿನ ವಿವರಗಳನ್ನು ತಿಳಿಸುವುದಕ್ಕಾಗಿ, ಪರಿಚೆಪದ, ತೋರುಪದ, ಪತ್ತುಗೆರೂಪ ಮೊದಲಾದ ನೆರವುಪದಗಳನ್ನು ನೇರವಾಗಿ ಕೊಟ್ಟಹೆಸರುಗಳೊಂದಿಗೆ ಒಂದೇ ಪದಕಂತೆಯಲ್ಲಿ ಬಳಸಲು ಬರುವು ದಿಲ್ಲ.
ಈ ಕಟ್ಟಲೆಗೆ ಕೆಲವು ಹೊರಪಡಿಕೆಗಳೂ ಇವೆ ಎಂಬುದನ್ನು ಕೆಳಗೆ
ಕೊಟ್ಟಿರುವ ಕೆಲವು ಸೊಲ್ಲುಗಳಲ್ಲಿ ಕಾಣಬಹುದು:
(2ಕ) ಈ ಜಿಲ್ಲೆಯಲ್ಲೂ ಒಂದು ಪುತ್ತೂರಿದೆ. (2ಚ) ನಮ್ಮ ತರಗತಿಯಲ್ಲಿ ಮೂವರು ಜಾನಕಿಯರಿದ್ದಾರೆ. (2ಟ) ನನಗೆ ಬೇಕಾಗಿರುವ ರಾಜೀವ ನೀನಲ್ಲ. (2ತ) ನನಗೆ ಈ ರೀತಿ ಕೋಪಿಸುವ ರಾಜೀವನಿಗಿಂತ ನಗುನಗುತ್ತಿರುವ
ರಾಜೀವನೇ ಇಶ್ಟ.
(2ಪ) ಇವತ್ತು ಇನ್ನೊಬ್ಬ ಗಾಂದಿ ಹುಟ್ಟಿಬರಬೇಕಾಗಿದೆ.
ಒಂದೇ ಹೆಸರನ್ನು ಹಲವು ವ್ಯಕ್ತಿ ಇಲ್ಲವೇ ಜಾಗಗಳಿಗೆ (ಬೇರೆ ಬೇರೆ ಸಂದರ್ಬ ಗಳಲ್ಲಿ) ಕೊಟ್ಟಿರಬಹುದು ಎಂಬ ವಿಶಯವನ್ನು ಬಳಸಿ, (2ಕ-ಟ) ಸೊಲ್ಲು ಗಳಲ್ಲಿ ಅವುಗಳೊಂದಿಗೆ ಒಂದು, ಮೂವರು ಮತ್ತು ನನಗೆ ಬೇಕಾಗಿರುವ ಎಂಬ ನೆರವುನುಡಿತಗಳನ್ನು ಬಳಸಲಾಗಿದೆ; ಇದಲ್ಲದೆ, (2ಚ) ಸೊಲ್ಲಿನಲ್ಲಿ ಜಾನಕಿ ಎಂಬ ಕೊಟ್ಟಹೆಸರಿನೊಂದಿಗೆ ಹಲವಚನದ ಅರು ಒಟ್ಟನ್ನೂ ಬಳಸ ಲಾಗಿದೆ; (2ತ)ದಲ್ಲಿ ಒಬ್ಬನೇ ವ್ಯಕ್ತಿಯ ಎರಡು ತೋರ್ಕೆಗಳನ್ನು ಬೇರ್ಪಡಿಸುವು ದಕ್ಕಾಗಿ ರಾಜೀವ ಪದದೊಂದಿಗೆ ಎರಡು ಒಳಸೊಲ್ಲುಗಳನ್ನು ಬಳಸಲಾಗಿದೆ;
ಮತ್ತು (2ಪ)ದಲ್ಲಿ ಗಾಂದಿ ಎಂಬ ಇಟ್ಟಹೆಸರನ್ನು ಮಾರ್ಪುರುಳಿನಲ್ಲಿ (‘ಗಾಂದಿ ಯಂತಹವನು’ ಎಂಬ ಹುರುಳಿನಲ್ಲಿ) ಬಳಸಲಾಗಿದೆ.
(7) ಕೊಟ್ಟಹೆಸರುಗಳು, ಮೇಲಿನ ಎತ್ತುಗೆಗಳಲ್ಲಿ ಕಾಣಿಸುವ ಹಾಗೆ, ಒಂದು ಪದವಾಗಿ ಮಾತ್ರ ಬರಬಹುದು, ಇಲ್ಲವೇ ಒಂದು ಪದಕಂತೆಯಾಗಿಯೂ ಬರ ಬಹುದು. ಎತ್ತುಗೆಗಾಗಿ, ಕನ್ನಡ ವಿಶ್ವವಿದ್ಯಾಲಯ ಎಂಬ ಕೊಟ್ಟಹೆಸರಿನಲ್ಲಿ ಎರಡು ಪದಗಳಿವೆ. ಇಂತಹ ಕೊಟ್ಟಹೆಸರುಗಳಿಗೆ ಅವುಗಳದೇ ಆದ ಹುರುಳೂ ಇರುತ್ತದೆ. ಮೇಲಿನ ಹೆಸರಿನಲ್ಲಿ ಬಂದಿರುವ ಕನ್ನಡ ಮತ್ತು ವಿಶ್ವವಿದ್ಯಾಲಯ ಎಂಬ ಪದಗಳಿಂದ ಅದು ಎಂತಹ ಸಂಸ್ತೆಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಲು ಬರುತ್ತದೆ. ಹೀಗಿದ್ದರೂ, ಇಂತಹ ಪದಕಂತೆಗಳನ್ನು ಅವು ಗುರುತಿಸುವ ವಸ್ತು, ಜಾಗ ಮೊದಲಾದವುಗಳೊಂದಿಗೆ ನೇರವಾಗಿ ಸಂಬಂದಿಸ ಲಾಗಿದೆಯಾದ ಕಾರಣ, ಅವು ಇರುವಹೆಸರುಗಳಿಗಿಂತ ಬೇರಾಗಿವೆ.
6.2.2 ಒತ್ತೆಹೆಸರು ಮತ್ತು ಒಟ್ಟಲುಹೆಸರು
ಹೆಸರುಪದಗಳನ್ನು ಒತ್ತೆಹೆಸರು ಮತ್ತು ಒಟ್ಟಲುಹೆಸರು ಎಂಬುದಾಗಿಯೂ ಗುಂಪಿಸಲು ಬರುತ್ತದೆ. ಹುಡುಗ, ಹಕ್ಕಿ, ಮರ, ಕಣ್ಣು, ಕಲ್ಲು ಮೊದಲಾದವು ಒತ್ತೆಹೆಸರುಗಳು, ಮತ್ತು ಹಾಲು, ತುಪ್ಪ, ನೀರು, ಅಕ್ಕಿ, ಮಣ್ಣು, ಬೂದಿ ಮೊದಲಾದುವು ಒಟ್ಟಲುಹೆಸರುಗಳು.
(1) ಈ ಎರಡು ಬಗೆಯ ಹೆಸರುಪದಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಒತ್ತೆಹೆಸರುಗಳು ಗುರುತಿಸುವ ಪಾಂಗುಗಳಿಗೆ ಅವುಗಳದೇ ಆದ ಎಲ್ಲೆಗಳಿರುತ್ತವೆ, ಆದರೆ ಒಟ್ಟಲುಹೆಸರುಗಳು ಗುರುತಿಸುವ ಪಾಂಗುಗಳಿಗೆ ಅಂತಹ ಅವುಗಳದೇ ಆದ ಎಲ್ಲೆಗಳಿರುವುದಿಲ್ಲ. ಈ ಕಾರಣಕ್ಕಾಗಿ, ಒತ್ತೆಹೆಸರು ಗಳೊಂದಿಗೆ ಹಲವೆಣಿಕೆಯ ಒಟ್ಟನ್ನು ಬಳಸಲು ಬರುತ್ತದೆ (ಹುಡುಗರು, ಹಕ್ಕಿ ಗಳು, ಮರಗಳು, ಕಣ್ಣುಗಳು); ಆದರೆ, ಒಟ್ಟಲುಹೆಸರುಗಳೊಂದಿಗೆ ಅದನ್ನು ಬಳಸಲು ಬರುವುದಿಲ್ಲ (*ತುಪ್ಪಗಳು, *ಮಣ್ಣುಗಳು).
ಇದಲ್ಲದೆ, ಒತ್ತೆಹೆಸರುಗಳೊಂದಿಗೆ ಎಣಿಕೆಯ ಪದಗಳನ್ನು ನೇರವಾಗಿ ಬಳಸಲು ಬರುತ್ತದೆ (ಹತ್ತು ಹುಡುಗರು, ನಾಲ್ಕು ಹಕ್ಕಿಗಳು); ಆದರೆ, ಒಟ್ಟಲುಹೆಸರುಗಳೊಂದಿಗೆ ಆ ರೀತಿ ಎಣಿಕೆಯ ಪದಗಳನ್ನು ನೇರವಾಗಿ ಬಳಸಲು ಬರುವುದಿಲ್ಲ (*ಅಯ್ದು ತುಪ್ಪ, *ಹತ್ತು ಹಾಲು); ಅವು ಗುರುತಿಸುವ ಪಾಂಗು ಗಳಿಗೆ ಎಲ್ಲೆಗಳನ್ನು ಕೊಡಬಲ್ಲ ಅಳತೆಯ ಪದಗಳನ್ನು ಸೇರಿಸಿದಲ್ಲಿ ಮಾತ್ರ, ಅವುಗಳೊಂದಿಗೆ ಎಣಿಕೆಯ ಪದಗಳನ್ನು ಬಳಸಲು ಬರುತ್ತದೆ (ಎರಡು ಲೀಟರ್ ಹಾಲು, ಮೂರು ಕಿಲೋ ತುಪ್ಪ, ಒಂದು ಲೋಟ ನೀರು).
ಈ ಕಟ್ಟಲೆಗಿರುವ ಒಂದು ಹೊರಪಡಿಕೆಯೆಂದರೆ, ಅಳತೆಯನ್ನು ತಿಳಿಸುವ ಪದವನ್ನು ಕೆಲವೊಮ್ಮೆ ಬಳಸದಿರಲೂ ಬರುತ್ತದೆ, ಮತ್ತು ಅಂತಹ ಕಡೆಗಳಲ್ಲಿ ಒಟ್ಟಲು ಪದಗಳು ಎಣಿಕೆಯ ಪದದೊಂದಿಗೆ ನೇರವಾಗಿ ಬಳಕೆಯಾಗಿರುವ ಹಾಗೆ
ತೋರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(3ಕ) ಎರಡು ಲೋಟ ಹಾಲು ಕೊಡಿ. (3ಚ) ಎರಡು ಹಾಲು ಕೊಡಿ. (4ಕ) (4ಚ) ನಾನು ಒಂದು ಟೀ ಕುಡಿದೆ.
ನಾನು ಒಂದು ಕಪ್ ಟೀ ಕುಡಿದೆ.
ಇಂತಹ ಕಡೆಗಳಲ್ಲಿ ಒಟ್ಟಲುಹೆಸರುಗಳನ್ನು ಒತ್ತೆಹೆಸರುಗಳಾಗಿ ಬಳಸಲಾಗಿದೆ
ಎಂದೂ ಹೇಳಬಹುದು.
(2) ಈ ಎರಡು ಬಗೆಯ ಹೆಸರುಪದಗಳ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಒಟ್ಟಲುಹೆಸರುಗಳು ಒರ್ಬಗೆಯ ವಸ್ತುಗಳನ್ನು ಹೆಸರಿಸುತ್ತವೆ; ಎತ್ತುಗೆಗಾಗಿ, ಈ ಲೋಟದಲ್ಲಿ ಹಾಲಿದೆ ಎಂಬ ಸೊಲ್ಲನ್ನು ಗಮನಿಸಬಹುದು; ಅದು ಗುರುತಿಸುವ ಲೋಟದಿಂದ ಸ್ವಲ್ಪ ಹಾಲನ್ನು ತೆಗೆದ ಬಳಿಕವೂ (ಇಲ್ಲವೇ ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಿದ ಬಳಿಕವೂ) ಈ ಲೋಟದಲ್ಲಿ ಹಾಲಿದೆ ಎಂಬ ಸೊಲ್ಲು ನಿಜವಾಗಿಯೇ ಉಳಿಯುತ್ತದೆ. ಹಾಲು ಪದ ಒರ್ಬಗೆಯ ವಸ್ತುವನ್ನು ಗುರುತಿಸುತ್ತಿರುವುದೇ ಇದಕ್ಕೆ ಕಾರಣ.
ಇದಕ್ಕೆ ಬದಲು, ಇಲ್ಲೊಂದು ಮಡಿಕೆಯಿದೆ ಎಂಬ ಇನ್ನೊಂದು ಸೊಲ್ಲನ್ನು ಗಮನಿಸಬಹುದು; ಅದು ಗುರುತಿಸುವ ಮಡಿಕೆಯನ್ನು ಒಡೆದು, ಕೆಲವು ತುಂಡುಗಳನ್ನು ದೂರ ಎಸೆದ ಬಳಿಕ, ಅಲ್ಲಿ ಉಳಿಯುವುದು ಮಡಿಕೆಯ ಕೆಲವು ತುಂಡುಗಳಲ್ಲದೆ ಮಡಿಕೆಯಲ್ಲ. ಹಾಗಾಗಿ, ಇಲ್ಲೊಂದು ಮಡಿಕೆಯಿದೆ ಎಂಬ ಸೊಲ್ಲು ಆಮೇಲೆ ನಿಜವಾಗಿ ಉಳಿಯುವುದಿಲ್ಲ; ಇಲ್ಲಿ ಕೆಲವು ಮಡಿಕೆಯ ಚೂರುಗಳಿವೆ ಎಂದಿಶ್ಟೇ ಆಮೇಲೆ ಹೇಳಲು ಬರುತ್ತದೆ.
(3) ಒಟ್ಟಲುಹೆಸರುಗಳು ಗುರುತಿಸುವ ವಸ್ತುಗಳಿಗೆ ಪಾಲುಗಳಿವೆ, ಮತ್ತು ಅವನ್ನು ಪಾಲು ಮಾಡಬಹುದು; ಆದರೆ, ಒತ್ತೆಹೆಸರುಗಳು ಗುರುತಿಸುವ ವಸ್ತುಗಳಿಗೆ ಅಂಗಗಳಿವೆ; ಹಾಗಾಗಿ, ಅವನ್ನು ಪಾಲುಮಾಡಲು ಬರುವುದಿಲ್ಲ.
ಈ ಕಾರಣಕ್ಕಾಗಿ, ಒಟ್ಟಲು ಹೆಸರುಗಳು ಗುರುತಿಸುವ ಪಾಂಗುಗಳ ಪರಿಚೆ ಗಳನ್ನು ಅವುಗಳ ಯಾವುದೇ ಒಂದು ತುಂಡಿನಲ್ಲೂ ಕಾಣಬಹುದು; ಸಕ್ಕರೆಯ ಒಂದು ಕಣವಾಗಲಿ, ಒಂದು ಹಿಡಿಯಾಗಲಿ, ಇಲ್ಲವೇ ಒಂದು ಕುಪ್ಪೆಯಾಗಲಿ, ಅವೆಲ್ಲವುಗಳಲ್ಲೂ ಬಿಳಿಬಣ್ಣ, ಸಿಹಿ ರುಚಿ ಮೊದಲಾದ ಅದರ ಪರಿಚೆಗಳನ್ನು ಕಾಣಲು ಬರುತ್ತದೆ.
ಆದರೆ, ಒತ್ತೆ ಹೆಸರುಗಳು ಗುರುತಿಸುವ ಪಾಂಗುಗಳ ಪರಿಚೆಗಳನ್ನು ಆ ರೀತಿ ಎಲ್ಲಾ ಬಗೆಯ ಅಳವಿಗಳಲ್ಲೂ ಕಾಣಲು ಬರುವುದಿಲ್ಲ; ಎತ್ತುಗೆಗಾಗಿ, ಒಂದು
ಕೋತಿಗೆ ಬಾಲ ಇದೆಯೆಂದು ಹೇಳಬಹುದು, ಆದರೆ ಕೋತಿಗಳ ಒಂದು ಗುಂಪಿಗೆ ಬಾಲ ಇದೆಯೆಂದು ಹೇಳಲು ಬರುವುದಿಲ್ಲ.
(3) ಗೊಂಚಲು, ಕಂತೆ ಮೊದಲಾದ ಒತ್ತೆಹೆಸರುಗಳು ಕೆಲವು ವಿಶಯ ಗಳಲ್ಲಿ ಒಟ್ಟಲು ಪದಗಳ ಹಾಗೆ ಕಾಣಿಸುತ್ತವೆ: ಅವಕ್ಕೆ ಪಾಲುಗಳಿವೆಯಲ್ಲದೆ ಅಂಗಗಳಿಲ್ಲ; ಒಂದು ಗೊಂಚಲಿನಿಂದ ಕೆಲವು ಹೂಗಳನ್ನು ತೆಗೆದರೂ ಅದು ಗೊಂಚಲಾಗಿಯೇ ಉಳಿಯುತ್ತದೆ; ಆದರೆ, ಆ ರೀತಿ ಎಶ್ಟನ್ನು ತೆಗೆಯಬಹುದು ಎಂಬ ವಿಶಯದಲ್ಲಿ ಮಾತ್ರ ಒಂದು ಮಿತಿಯಿದೆ. ಒಟ್ಟಲು ಪದಗಳಿಗೆ ಇಂತಹ ಮಿತಿಯಿಲ್ಲ.
ಗೊಂಚಲು, ಕಂತೆ ಮೊದಲಾದವು ಈ ರೀತಿ ಒಟ್ಟಲುಹೆಸರುಗಳ ಹಾಗೆ ಒರ್ಬಗೆಯವಾಗಿ ಕಾಣಿಸುತ್ತವೆಯಾದರೂ, ಅವಕ್ಕೆ ಹಲವೆಣಿಕೆಯ ಒಟ್ಟನ್ನು ಸೇರಿಸಲು ಬರುತ್ತದೆ (ಗೊಂಚಲುಗಳು, ಕಂತೆಗಳು) ಮತ್ತು ಅವುಗಳೊಂದಿಗೆ ಎಣಿಕೆಯ ಪದಗಳನ್ನು ನೇರವಾಗಿ ಬಳಸಲು ಬರುತ್ತದೆ (ಹತ್ತು ಗೊಂಚಲು ಗಳು); ಈ ಎರಡು ವಿಶಯಗಳಲ್ಲಿ ಅವು ಒಟ್ಟಲುಹೆಸರುಗಳಿಂದ ಬೇರಾಗಿದ್ದು, ಒತ್ತೆಹೆಸರುಗಳ ಹಾಗಿವೆ. ಹಾಗಾಗಿ, ಅವನ್ನು ಒತ್ತೆ ಹೆಸರುಗಳೆಂದೇ ತಿಳಿಯ ಬಹುದು.
ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತು ಮೊದಲಾದವುಗಳನ್ನು ಒಂದು ಪಾಂಗಾಗಿ ಗುರುತಿಸಬೇಕಾದಾಗ, ಹೆಸರುಪದಗಳನ್ನು ಹಲವೆಣಿಕೆಯ ರೂಪದಲ್ಲಿ ಬಳಸಲಾಗುತ್ತದೆ (ಹಣ್ಣುಗಳು, ಮರಗಳು, ಹುಡುಗರು). ಆದರೆ, ಗೊಂಚಲು, ಗುಂಪು, ಕಂತೆ ಮೊದಲಾದವುಗಳು ಈ ಕಟ್ಟಲೆಗೆ ಹೊರಪಡಿಕೆ ಗಳಾಗಿವೆ. ಯಾಕೆಂದರೆ, ಅವು ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತು ಮೊದಲಾದು ವನ್ನು ಒಳಗೊಂಡಿರುತ್ತವೆ. ಆದರೆ, ಇವನ್ನೆಲ್ಲ ಒಟ್ಟಿಗೆ ಒಂದೇ ವಸ್ತುವೆಂಬುದಾಗಿ ಅವು ಗುರುತಿಸುತ್ತವೆ; ಹಾಗಾಗಿ, ಅವು ಒತ್ತೆಹೆಸರುಗಳ ಹಾಗೆ ಹಲವೆಣಿಕೆಯ ಒಟ್ಟಿನೊಂದಿಗೆ ಬರಬಲ್ಲುವು.
(4) ಗುರುತಿಸಬೇಕಾಗಿರುವ ವಸ್ತುಗಳು ತೀರ ಚಿಕ್ಕವಾಗಿದ್ದಲ್ಲಿ, ಅಂತಹ ಹೆಸರುಪದಗಳು ಒತ್ತೆಹೆಸರುಗಳಾಗಿ ಬಳಕೆಯಾಗದೆ ಒಟ್ಟಲುಹೆಸರುಗಳಾಗಿ ಬಳಕೆ ಯಾಗುತ್ತವೆ. ಎತ್ತುಗೆಗಾಗಿ, ಅಕ್ಕಿ, ಗೋದಿ, ರಾಗಿ ಮೊದಲಾದ ಪದಗಳು ತೀರ ಚಿಕ್ಕವಾಗಿರುವ ಕಾಳುಗಳನ್ನು ಒಟ್ಟಿಗೆ ಗುರುತಿಸುತ್ತವೆ. ಹಾಗಾಗಿ, ಅವು ಒಟ್ಟಲು ಹೆಸರುಗಳಾಗಿ ಬಳಕೆಯಾಗುತ್ತವೆ (ಒಂದು ಮೂಟೆ ಅಕ್ಕಿ, ಎರಡು ಕಿಲೋ ಗೋದಿ).
(5) ನಿಜಕ್ಕೂ ಒತ್ತೆಹೆಸರು ಮತ್ತು ಒಟ್ಟಲುಹೆಸರುಗಳ ನಡುವಿನ ವ್ಯತ್ಯಾಸ ಸೊಲ್ಲರಿಮೆಯ ಕಟ್ಟಲೆಗಳು, ಅವು ಗುರುತಿಸುವ ಪಾಂಗುಗಳ ಪರಿಚೆ, ಪಾಂಗು ಗಳನ್ನು ಬಳಸುವ ಬಗೆ ಮೊದಲಾದ ಹಲವು ವಿಶಯಗಳ ಮೇಲೆ ಅವಲಂಬಿಸಿದೆ. ಎತ್ತುಗೆಗಾಗಿ, ಮರದ ಎಲೆಗಳನ್ನು ಸುಳುವಾಗಿ ವಿಂಗಡಿಸಿ ಒಂದೊಂದಾಗಿ ಗುರುತಿಸಿ ಹೆಸರಿಸಬಹುದು; ಹಾಗಾಗಿ, ಎಲೆ ಎಂಬ ಪದ ಒತ್ತೆಹೆಸರಾಗಿ ಬಳಕೆ
ಯಾಗುತ್ತದೆ; ಆದರೆ, ಹುಲ್ಲಿನ ‘ಎಲೆ’ಗಳನ್ನು ಅಶ್ಟು ಸುಳುವಾಗಿ ವಿಂಗಡಿಸಿ ಗುರುತಿಸಲು ಬರುವುದಿಲ್ಲ; ಹಾಗಾಗಿ, ಹುಲ್ಲು ಎಂಬ ಪದ ಒಟ್ಟಲುಹೆಸರಾಗಿ ಬಳಕೆಯಾಗುತ್ತದೆ.
ಇದಕ್ಕೆ ಬದಲು, ತೊಪ್ಪಲು ಇಲ್ಲವೇ ಸೊಪ್ಪು ಪದ ಒಟ್ಟಲುಹೆಸರಾಗಿ ಬಳಕೆಯಾಗುವುದಕ್ಕೆ ಬೇರೆಯೇ ಕಾರಣವಿರಬೇಕು. ಇಲ್ಲಿ ಹಲವು ಎಲೆಗಳನ್ನು ಮತ್ತು ಅವುಗಳೊಂದಿಗೆ ತೆಳು ಗೆಲ್ಲುಗಳನ್ನೂ ಒಟ್ಟಾಗಿ ಗಮನಿಸಲಾಗುತ್ತದೆ, ಮತ್ತು ಬಳಸಲಾಗುತ್ತದೆ ಎಂಬುದರಿಂದ ತೊಪ್ಪಲು ಎಂಬ ಪದ ಒಟ್ಟಲು ಹೆಸರಾಗಿ ಬಳಕೆಗೆ ಬಂದಿರಬೇಕು.
ಹರಳುಗಳಿಂದ ಜಲ್ಲಿ ಕಲ್ಲುಗಳು ದೊಡ್ಡವಿದ್ದರೂ, ಹರಳು ಪದ ಒತ್ತೆ ಹೆಸರಾಗಿ ಬಳಕೆಯಾಗುತ್ತದೆ, ಮತ್ತು ಜಲ್ಲಿ ಪದ ಒಟ್ಟಲುಹೆಸರಾಗಿ ಬಳಕೆ ಯಾಗುತ್ತದೆ. ಹರಳುಗಳನ್ನು ಒಂದೊಂದಾಗಿ ಮಾಲೆಗಳಲ್ಲಿ ಪೋಣಿಸಿ ಬಳಸ ಲಾಗುತ್ತದೆ, ಮತ್ತು ಜಲ್ಲಿಕಲ್ಲುಗಳನ್ನು ಒಟ್ಟಿಗೆ ಬುಟ್ಟಿಗಳಲ್ಲಿ ಅಳೆದು ಬಳಸ ಲಾಗುತ್ತದೆ ಎಂಬುದು ಈ ವ್ಯತ್ಯಾಸಕ್ಕೆ ಕಾರಣವಿರಬಹುದು.
6.2.3 ಮಂದಿಗುರ್ತ ಮತ್ತು ಉಳಿಕೆಗುರ್ತ
ಹೆಸರುಪದಗಳನ್ನು ಮಂದಿಗುರ್ತದವು ಮತ್ತು ಉಳಿಕೆಗುರ್ತದವು ಎಂಬುದಾಗಿ ಗುಂಪಿಸಲು ಬರುತ್ತದೆ; ಜನರನ್ನು ಬೇರೆಯೂ ಎರಡು ಗುರುತಿಸುವ ಮುದುಕ, ಹುಡುಗಿ, ಕಳ್ಳ, ಅಣ್ಣ ಮೊದಲಾದ ಪದಗಳು ಮಂದಿ ಗುರ್ತದ ಪದಗಳು, ಮತ್ತು ಹಕ್ಕಿ, ಹಾವು, ಕಲ್ಲು, ಮನೆ, ತಿಳಿವು ಮೊದಲಾದ ಉಳಿದ ಪದಗಳು ಉಸಿರಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುತ್ತಿದ್ದು, ಉಳಿಕೆಗುರ್ತದ ಪದಗಳು.
ಗುಂಪುಗಳಲ್ಲಿ
ಮಂದಿಗುರ್ತದ ಪದಗಳನ್ನು ಗಂಡುಗುರ್ತ ಮತ್ತು ಹೆಣ್ಣುಗುರ್ತ ಎಂಬ ಬೇರೆ ಎರಡು ಗುಂಪುಗಳಲ್ಲೂ ಗುಂಪಿಸಲು ಬರುತ್ತದೆ; ಗಂಡಸರನ್ನು ಗುರುತಿಸುವ ಮುದುಕ, ಅಣ್ಣ, ಕಳ್ಳ ಮೊದಲಾದುವು ಗಂಡುಗುರ್ತದ ಪದಗಳು, ಮತ್ತು ಹೆಂಗಸರನ್ನು ಗುರುತಿಸುವ ಮುದುಕಿ, ಅಕ್ಕ, ಮಗಳು, ಗೆಳತಿ ಮೊದಲಾದುವು ಹೆಣ್ಣುಗುರ್ತದ ಪದಗಳು.
ಮಂದಿಗುರ್ತದ ಗುಂಪಿನಲ್ಲಿ ಜನರನ್ನು ಗುರುತಿಸುವ ಹೆಸರುಪದಗಳೊಂದಿಗೆ ದೇವರು, ದೇವಿ, ಸೂರ್ಯ ಮೊದಲಾದ ಬೇರೆಯೂ ಕೆಲವು ಬಗೆಯ ಪದಗಳನ್ನು ಸೇರಿಸಿಕೊಳ್ಳಲಾಗುತ್ತದೆ.
ಹೆಸರುಪದಗಳ ಈ ಗುರ್ತದ ವ್ಯತ್ಯಾಸವನ್ನು ಅವುಗಳೊಂದಿಗೆ ಬರುವ ಕೆಲವು ಎಣಿಕೆಪದಗಳ ಪದರೂಪಗಳು (ಒಬ್ಬ ಹುಡುಗ, ಒಂದು ಮನೆ), ಎಸಕ ಪದಗಳ ಪದರೂಪಗಳು (ಹುಡುಗ ಬಿದ್ದ, ಹುಡುಗಿ ಬಿದ್ದಳು, ಹಣ್ಣು ಬಿತ್ತು; ಹುಡುಗರು ಬಿದ್ದರು, ಹಣ್ಣುಗಳು ಬಿದ್ದುವು), ತೋರುಪದಗಳ ಪದರೂಪಗಳು (ಅವನು, ಅವಳು, ಅದು, ದೊಡ್ಡವನು, ದೊಡ್ಡವಳು, ದೊಡ್ಡದು),
ಎಸಕಪದಗಳ ಹೆಸರುರೂಪಗಳು (ಬಂದವನು, ಬಂದವಳು, ಬಂದುದು) ಮೊದಲಾದವುಗಳಲ್ಲಿ ಕಾಣಲು ಬರುತ್ತದೆ.
ಗಂಡುಗುರ್ತ ಮತ್ತು ಹೆಣ್ಣುಗುರ್ತಗಳ ನಡುವಿನ ವ್ಯತ್ಯಾಸ ಓರೆಣಿಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಹಲವೆಣಿಕೆಯಲ್ಲಿ ಅವೆರಡೂ ಒಂದೇ ಗುಂಪಿನಲ್ಲಿ ಸೇರಿಕೊಳ್ಳುತ್ತವೆ. ಎತ್ತುಗೆಗಾಗಿ, ಎಸಕಪದಗಳ ಪದರೂಪದಲ್ಲಿ ಕಾಣಿಸುವ ಗಂಡುಗುರ್ತ ಮತ್ತು ಹೆಣ್ಣುಗುರ್ತಗಳ ನಡುವಿನ ವ್ಯತ್ಯಾಸ (ಹುಡುಗ ಓಡಿದ, (ಹುಡುಗರು ಹುಡುಗಿ ಓಡಿದಳು) ಹಲವೆಣಿಕೆಯಲ್ಲಿ ಓಡಿದರು, ಹುಡುಗಿಯರು ಓಡಿದರು). ತೋರುಪದಗಳ ಬಳಕೆಯಲ್ಲೂ ಗಂಡುಗುರ್ತ ಮತ್ತು ಹೆಣ್ಣುಗುರ್ತಗಳ ನಡುವಿನ ವ್ಯತ್ಯಾಸ ಹಲವೆಣಿಕೆಯಲ್ಲಿ ಕಾಣಿಸುವುದಿಲ್ಲ (ಅವನು, ಅವಳು - ಅವರು).
ಕಾಣಿಸುವುದಿಲ್ಲ
6.2.4 ಹೆಸರುಪದಗಳ ಹಂತಗಳು
ನಾವು ಇದುವರೆಗೆ ಪರಿಶೀಲಿಸಿದ ಹುಡುಗ, ಜಾನಕಿ, ಮರ, ಅಕ್ಕಿ, ಅಣ್ಣ, ಹಣ್ಣು ಮೊದಲಾದ ಹೆಸರುಪದಗಳಿಗೆಲ್ಲ ಜಾಗದ ಎಲ್ಲೆಗಳಿದ್ದು, ಅವನ್ನೆಲ್ಲ ಮೊದಲನೇ ಹಂತದ ಪದಗಳೆಂದು ಕರೆಯಬಹುದು. ಇಂತಹ ಜಾಗದ ಎಲ್ಲೆಗಳು ಮಾತ್ರವಲ್ಲದೆ ಹೊತ್ತಿನ ಎಲ್ಲೆಗಳೂ ಇರುವ ಆಟ, ಮದುವೆ, ಹಬ್ಬ, ಸಿಟ್ಟು ಮೊದಲಾದ ಬೇರೆಯೂ ಹಲವು ಹೆಸರುಪದಗಳಿದ್ದು, ಅವನ್ನು ಎರಡನೇ ಹಂತದ ಪದಗಳೆಂದು ಕರೆಯಬಹುದು.
ಈ ಎರಡು ಬಗೆಯ ಹೆಸರುಪದಗಳ ನಡುವೆ ಹಲವು ವ್ಯತ್ಯಾಸಗಳಿವೆ; ಅವು
ಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ:
(1) ಮೊದಲನೇ ಹಂತದ ಹೆಸರುಪದಗಳೊಂದಿಗೆ ಅವು ಗುರುತಿಸುವ ಪಾಂಗುಗಳ ಬಣ್ಣ, ಉದ್ದಳತೆ, ಆಕಾರ, ಬೆಲೆ ಮೊದಲಾದ ಜಾಗಕ್ಕೆ ಸಂಬಂದಿಸಿದ ಪರಿಚೆಗಳನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳನ್ನು ಬಳಸಲು ಬರುತ್ತದೆ (ಕೆಂಪು ಹಕ್ಕಿ, ದೊಡ್ಡ ಮರ, ಚಿಕ್ಕ ಹುಡುಗ).
ಇದಕ್ಕೆ ಬದಲು, ಎರಡನೇ ಹಂತದ ಹೆಸರುಪದಗಳೊಡನೆ ಅವು ಗುರುತಿಸುವ ಪಾಂಗುಗಳ ಗಡುವು (ಮೂರು ದಿನದ ಮದುವೆ), ವೇಗ (ಮೆಲ್ಲಗಿನ ಆಟ) ಮೊದಲಾದ ಹೊತ್ತಿಗೆ ಸಂಬಂದಿಸಿದ ಪರಿಚೆಗಳನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳನ್ನು ಬಳಸಲು ಬರುತ್ತದೆ.
ಆದರೆ, ಇದೊಂದು ಬಳಕೆಯ ಒಲವು ಮಾತ್ರ; ಕೆಲವೊಮ್ಮೆ ಮೊದಲನೇ ಹಂತದ ಹೆಸರುಪದಗಳೊಂದಿಗೆ ಹೊತ್ತಿನ ಪರಿಚೆಪದಗಳನ್ನು ಮತ್ತು ಎರಡನೇ ಹಂತದ ಹೆಸರುಪದಗಳೊಂದಿಗೆ ಜಾಗದ ಪರಿಚೆಪದಗಳನ್ನು ಒತ್ತಾಯದಿಂದ ಸೇರಿಸಿ ಹೇಳಲೂ ಬರುತ್ತದೆ. ಎತ್ತುಗೆಗಾಗಿ, ಈಚೆಗಿನ ಪುಸ್ತಕ ಎಂಬ ಹೆಸರು ಕಂತೆಯಲ್ಲಿ ಮೊದಲನೇ ಹಂತದ ಪುಸ್ತಕ ಪದದೊಂದಿಗೆ ಹೊತ್ತಿನ ಪರಿಚೆ
ಯನ್ನು ತಿಳಿಸುವ ಈಚೆಗಿನ ಪದ ಬಂದಿದೆ; ಆದರೆ, ನಿಜಕ್ಕೂ ಇದು ‘ಈಚೆಗೆ ಬರೆದಿರುವ’ ಇಲ್ಲವೇ ‘ಈಚೆಗೆ ಅಚ್ಚಾಗಿರುವ’ ಪುಸ್ತಕವನ್ನು ಗುರುತಿಸುತ್ತದೆ.
ಇದೇ ರೀತಿಯಲ್ಲಿ ದೊಡ್ಡ ಹಬ್ಬ, ಚಿಕ್ಕ ಆಟ ಎಂಬ ಪದಕಂತೆಗಳಲ್ಲಿ ಎರಡನೇ ಹಂತದ ಹಬ್ಬ ಮತ್ತು ಆಟ ಪದಗಳೊಂದಿಗೆ ಜಾಗದ ಪರಿಚೆಯನ್ನು ತಿಳಿಸುವ ದೊಡ್ಡ ಮತ್ತು ಚಿಕ್ಕ ಪದಗಳು ಬಳಕೆಯಾಗಿವೆ. ಇಂತಹ ಒತ್ತಾಯದ ಬಳಕೆಗಳಲ್ಲಿ ಹೆಸರುಪದದ ಹುರುಳು ಬದಲಾಗುತ್ತದೆ, ಇಲ್ಲವೇ ಅದರೊಂದಿಗೆ ಬಂದ ಪರಿಚೆಪದದ ಹುರುಳು ಬದಲಾಗುತ್ತದೆ.
(2) ಮೇಲೆ 6.2.2ರಲ್ಲಿ ವಿವರಿಸಿದಂತಹ ಒತ್ತೆಹೆಸರು ಮತ್ತು ಒಟ್ಟಲು ಹೆಸರುಗಳ ನಡುವಿನ ವ್ಯತ್ಯಾಸ ಮುಕ್ಯವಾಗಿ ಮೊದಲನೇ ಹಂತದ ಹೆಸರು ಪದಗಳಿಗೆ ಸಂಬಂದಿಸಿರುವಂತಹದು. ಆದರೆ, ಇದನ್ನು ಎರಡನೇ ಹಂತದ ಹೆಸರುಪದಗಳಲ್ಲೂ ಕಾಣಲುಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(5ಕ) ಎರಡು ಆಟ ಆಡಿದೆ. (5ಚ) ಅವನಿಗೆ ತುಂಬಾ ಸಿಟ್ಟು ಬಂದಿದೆ.
(5ಕ) ಸೊಲ್ಲಿನಲ್ಲಿ ಆಟ ಎಂಬ ಎರಡನೇ ಹಂತದ ಪದ ಒತ್ತೆಹೆಸರಾಗಿ ಬಳಕೆಯಾಗಿದೆ, ಮತ್ತು (5ಚ) ಸೊಲ್ಲಿನಲ್ಲಿ ಸಿಟ್ಟು ಎಂಬ ಎರಡನೇ ಹಂತದ ಪದ ಒಟ್ಟಲುಹೆಸರಾಗಿ ಬಳಕೆಯಾಗಿದೆ.
(3) ಈ ಎರಡು ಬಗೆಯ ಹೆಸರುಪದಗಳನ್ನೂ ಇರುವಿಕೆಯನ್ನು ತಿಳಿಸುವ ಇಲ್ಲವೇ ಅಲ್ಲಗಳೆಯುವ ಇದೆ ಮತು ಇಲ್ಲ ಪದಗಳೊಂದಿಗೆ ಬಳಸಲು ಬರುತ್ತದೆ; ಆದರೆ, ಎರಡನೇ ಹಂತದ ಹೆಸರುಪದಗಳನ್ನು ಹೊತ್ತಿಗೆ ಸಂಬಂದಿಸಿದ ಎಸಕಗಳನ್ನು ತಿಳಿಸುವ ಪದಗಳೊಂದಿಗೂ ಬಳಸಲು ಬರುತ್ತದೆ ಎಂಬುದು ಅವಕ್ಕೂ ಮೊದಲನೇ ಹಂತದ ಹೆಸರುಪದಗಳಿಗೂ ನಡುವಿರುವ ವ್ಯತ್ಯಾಸ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(6ಕ) ಅವರಲ್ಲಿ ಒಂದು ನಾಯಿಯಿದೆ. (6ಚ) *ಅವರಲ್ಲಿ ಒಂದು ನಾಯಿ ಜರಗಿತು. (7ಕ) ಅವರಲ್ಲಿ ಒಂದು ಮದುವೆಯಿದೆ. (7ಚ) ಅವರಲ್ಲಿ ಒಂದು ಮದುವೆ ಜರಗಿತು.
(4) ಮೊದಲನೇ ಹಂತದ ಹೆಸರುಪದಗಳಿಗೂ ಎರಡನೇ ಹಂತದ ಹೆಸರು ಪದಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲು ಗಳಲ್ಲಿ ಕಾಣಬಹುದು:
(8ಕ)
ರಾಜು ಒಂದು ನಾಯಿಯನ್ನು ನೋಡಿದ; ಅದೇ ನಾಯಿಯನ್ನು ಹರಿಯೂ ನೋಡಿದ್ದ.
(8ಚ) ಅಂತಹದೇ ನಾಯಿಯನ್ನು ಹರಿಯೂ ನೋಡಿದ್ದ. (9ಕ) (9ಚ) ಅಂತಹದೇ ಆಟವನ್ನು ಹರಿಯೂ ಆಡಿದ.
ರಾಜು ಒಂದು ಆಟ ಆಡಿದ; ಅದೇ ಆಟವನ್ನು ಹರಿಯೂ ಆಡಿದ್ದ.
(8ಕ)ದಲ್ಲಿ ರಾಜು ಮತ್ತು ಹರಿ ಒಂದೇ ನಾಯಿಯನ್ನು ನೋಡಿದ್ದರು, ಮತ್ತು (8ಚ)ದಲ್ಲಿ ಅವರಿಬ್ಬರು ಬೇರೆ ಬೇರೆ ನಾಯಿಗಳನ್ನು ನೋಡಿದ್ದರು. ಈ ವ್ಯತ್ಯಾಸ (9ಕ) ಮತ್ತು (9ಚ) ಸೊಲ್ಲುಗಳ ನಡುವೆ ಉಳಿದಿಲ್ಲ. ಯಾಕೆಂದರೆ, ಅಂತಹದೇ ಆಟ ಎಂಬುದರ ಹಾಗೆ ಅದೇ ಆಟ ಎಂಬುದೂ ಬೇರೊಂದು ಆಟವನ್ನೇ ಗುರುತಿಸುತ್ತದೆ. ಅದೇ ನಾಯಿ ಮತ್ತು ಅಂತಹದೇ ನಾಯಿ ಎಂಬವುಗಳ ನಡುವಿರುವಂತಹ ವ್ಯತ್ಯಾಸ ಅದೇ ಆಟ ಮತ್ತು ಅಂತಹದೇ ಆಟ ಎಂಬವುಗಳ ನಡುವೆ ಕಾಣಿಸದಿರುವುದೇ ಇದಕ್ಕೆ ಕಾರಣ.
(5) ಹೆಸರುಪದಗಳಲ್ಲಿ ಹೇಳಿಕೆ, ಅನಿಸಿಕೆ, ನಂಬಿಕೆ, ಸೊಲ್ಲು ಮೊದಲಾದ ಕೆಲವನ್ನು ಮೂರನೆಯದೊಂದು ಹಂತದಲ್ಲೂ ಗುಂಪಿಸಲು ಬರುತ್ತದೆ; ಇವಕ್ಕೆ ಮೊದಲ ಎರಡು ಹಂತದ ಪದಗಳ ಹಾಗೆ ಜಾಗದ ಎಲ್ಲೆ ಯಿಲ್ಲ, ಮತ್ತು ಎರಡನೇ ಹಂತದ ಪದಗಳ ಹಾಗೆ ಹೊತ್ತಿನ ಎಲ್ಲೆಯೂ ಇಲ್ಲ.
ಸರಿ ಇಲ್ಲವೇ ತಪ್ಪು ಎಂಬುದಾಗಿ ಈ ಮೂರನೇ ಹಂತದ ಹೆಸರುಪದಗಳು ಗುರುತಿಸುವ ಪಾಂಗುಗಳಿಗೆ ಬೆಲೆಕಟ್ಟಬಹುದು, ಮತ್ತು ಅವನ್ನು ಒಪ್ಪಬಹುದು, ಇಲ್ಲವೇ ಅಲ್ಲಗಳೆಯಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(10ಕ) ಆತನ ಹೇಳಿಕೆ ಸರಿಯಾದುದು. (10ಚ) ನಿಮ್ಮ ಅನಿಸಿಕೆ ತಪ್ಪು. (10ಟ) ಈ ಸೊಲ್ಲು ಸರಿಯಿಲ್ಲ.
ಆದರೆ, ಮೊದಲನೇ ಇಲ್ಲವೇ ಎರಡನೇ ಹಂತದ ಹೆಸರುಪದಗಳನ್ನು
ನೇರವಾಗಿ ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ.
(11ಕ) *ಈ ಮರ ತಪ್ಪು. (11ಚ) *ಈ ಮದುವೆ ತಪ್ಪು.
ಮದುವೆಯನ್ನು ನಡೆಸಿದುದು ಸರಿಯಾಗಿಲ್ಲ ಎನ್ನಬಹುದಲ್ಲದೆ, ನೇರ ವಾಗಿ ಮದುವೆಯೇ ಸರಿಯಲ್ಲ ಎಂದು ಹೇಳಲು ಬರುವುದಿಲ್ಲ. ಹಾಗಿದ್ದರೂ
ಒತ್ತಾಯದಿಂದ ಮೊದಲನೇ ಹುರುಳು ಸಿಗುವ ಹಾಗೆ (11ಚ)ವನ್ನೂ ಬಳಸಲು ಬರುತ್ತದೆ.
(6) ಮೇಲಿನ ಹಂತದ ಹೆಸರುಪದಗಳನ್ನು ಕೆಳಗಿನ ಹಂತಕ್ಕೆ (ಮೂರನೇ ಹಂತದಿಂದ ಎರಡನೇ ಹಂತಕ್ಕೆ, ಮತ್ತು ಎರಡನೇ ಹಂತದಿಂದ ಮೊದಲನೇ ಹಂತಕ್ಕೆ) ಮಾರೆಡೆಗೊಳಿಸಲು ಬರುತ್ತದೆ; ಆದರೆ ಸಾಮಾನ್ಯವಾಗಿ, ಕೆಳಗಿನ ಹಂತದ ಪದಗಳನ್ನು ಮೇಲಿನ ಹಂತಕ್ಕೆ ಮಾರೆಡೆಗೊಳಿಸಲು ಬರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(12ಕ) ನನ್ನ ಹೇಳಿಕೆಯನ್ನು ಆತ ಅಲ್ಲಗಳೆದಿದ್ದಾನೆ. (12ಚ) ನನ್ನ ಹೇಳಿಕೆಯನ್ನು ಆತ ಕೇಳಿದ್ದಾನೆ. (12ಟ) ನನ್ನ ಹೇಳಿಕೆ ಮೇಜಿನ ಮೇಲಿದೆ. (13ಕ) *ನನ್ನ ಹಣ್ಣನ್ನು ಆತ ಅಲ್ಲಗಳೆದಿದ್ದಾನೆ. (13ಚ) *ನನ್ನ ಹಣ್ಣನ್ನು ಆತ ಕೇಳಿದ್ದಾನೆ. (13ಟ) ನನ್ನ ಹಣ್ಣು ಮೇಜಿನ ಮೇಲಿದೆ.
ಮೂರನೇ ಹಂತದ ಹೇಳಿಕೆ ಹೆಸರುಪದವನ್ನು (12ಕ)ದಲ್ಲಿ ಮೂರನೇ ಹಂತದ ಪದವಾಗಿಯೇ ಬಳಸಲಾಗಿದೆ; ಆದರೆ, (12ಚ)ದಲ್ಲಿ ಅದನ್ನು ಎರಡನೇ ಹಂತದ ಪದವಾಗಿ, ಮತ್ತು (12ಟ)ದಲ್ಲಿ ಮೊದಲನೇ ಹಂತದ ಪದವಾಗಿ ಬಳಸಲಾಗಿದೆ; ಆದರೆ, ಮೊದಲನೇ ಹಂತದ ಹಣ್ಣು ಪದವನ್ನು, (13ಟ)ದಲ್ಲಿ ಕಾಣಿಸಿದ ಹಾಗೆ, ಮೊದಲನೇ ಹಂತದ ಪದವಾಗಿ ಮಾತ್ರ ಬಳಸಲಾಗುತ್ತದಲ್ಲದೆ, (13ಕ) ಮತ್ತು (13ಚ) ಸೊಲ್ಲುಗಳಲ್ಲಿ ಕಾಣಿಸಿದ ಹಾಗೆ, ಎರಡು ಇಲ್ಲವೇ ಮೂರನೇ ಹಂತದ ಪದವಾಗಿ ಬಳಸಲು ಬರುವುದಿಲ್ಲ.
(7) ಹೆಚ್ಚಿನ ಹೆಸರುಪದಗಳೂ ಮೊದಲನೇ ಹಂತದಲ್ಲಿ ಬರುತ್ತವೆ; ಎರಡು ಮತ್ತು ಮೂರನೇ ಹಂತಗಳಲ್ಲಿ ಬರುವ ಪದಗಳಲ್ಲಿ ಹೆಚ್ಚಿನವೂ ಬೇರೆ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆದಂತಹವು, ಇಲ್ಲವೇ ಸೊಲ್ಲುಗಳ ಹೆಸರು ರೂಪಗಳು.
(14ಕ) ಆತನ ಬರವನ್ನು ನಾನು ಎದುರುನೋಡುತ್ತಿದ್ದೇನೆ. (14ಚ) ಅವನು ಬರುವುದನ್ನು ನಾನು ನೋಡಲಿಲ್ಲ.
ಎರಡು ಮತ್ತು ಮೂರನೇ ಹಂತದಲ್ಲಿ ಬರುವ ಹೆಸರುರೂಪಗಳನ್ನು ಮುಕ್ಯ ವಾಗಿ ಮೊದಲನೇ ಹಂತದ ಪಾಂಗುಗಳಿರುವ ಸೊಲ್ಲುಗಳಿಂದ ಪಡೆಯಲಾಗು ತ್ತದೆ; ಎತ್ತುಗೆಗಾಗಿ, ರಾಜು ಹರಿಗೆ ಒಂದು ಪುಸ್ತಕ ಕೊಟ್ಟ ಎಂಬ ಸೊಲ್ಲಿನಲ್ಲಿ ರಾಜು, ಹರಿ ಮತ್ತು ಪುಸ್ತಕ ಎಂಬ ಮೂರು ಮೊದಲನೇ ಹಂತದ
ಪಾಂಗುಗಳು ತೊಡಗಿಕೊಂಡಿವೆ; ಈ ಸೊಲ್ಲಿನಿಂದ ರಾಜು ಹರಿಗೆ ಪುಸ್ತಕ ಕೊಟ್ಟುದು ಎಂಬ ಎರಡನೇ ಹಂತದ ಹೆಸರುರೂಪವನ್ನು ಪಡೆಯಬಹುದು.
(8) ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವುದಕ್ಕಾಗಿ ಬಳಕೆ ಯಾಗುವ ಒಟ್ಟುಗಳಲ್ಲಿ ಕೆಲವು ಮುಕ್ಯವಾಗಿ ಮೊದಲನೇ ಹಂತದ ಹೆಸರುಪದ ಗಳನ್ನು ಕೊಡುತ್ತವೆ, ಮತ್ತು ಬೇರೆ ಕೆಲವು ಎರಡನೇ ಹಂತದ ಹೆಸರು ಪದಗಳನ್ನು ಕೊಡುತ್ತವೆ ಎಂಬುದಾಗಿ ಈ ಒಟ್ಟುಗಳನ್ನು ಗುಂಪಿಸಲು ಬರುತ್ತದೆ.
ಎತ್ತುಗೆಗಾಗಿ, ಹೆಸರುಪದಗಳನ್ನು ಉಂಟುಮಾಡುವುದಕ್ಕಾಗಿ ಎಸಕಪದಗಳಿಗೆ ಸೇರಿಸುವ ಗ (ಹಾಡುಗ, ಕೇಳುಗ), ಗೆ (ಹಾಸುಗೆ, ಮುಚ್ಚಿಗೆ, ಬಡಿಗೆ), ಕ (ಕುಡುಕ, ತಿರುಕ), ಅಲು (ಒಕ್ಕಲು, ಮೆಟ್ಟಲು) ಮೊದಲಾದ ಕೆಲವು ಒಟ್ಟುಗಳು ಮುಕ್ಯವಾಗಿ ಮೊದಲನೇ ಹಂತದ ಹೆಸರುಪದಗಳನ್ನು ಕೊಡುತ್ತವೆ, ಮತ್ತು ಇಕೆ (ಬಯಕೆ, ಏರಿಕೆ, ಅಗಲಿಕೆ), ತ (ಅಗೆತ, ಕುಡಿತ, ದುಡಿತ, ಕುಣಿತ) ಮೊದಲಾದುವು ಮುಕ್ಯವಾಗಿ ಎರಡನೇ ಹಂತದ ಹೆಸರುಪದಗಳನ್ನು ಕೊಡುತ್ತವೆ.
(9) ಸೊಲ್ಲುಗಳನ್ನೇ ಎತ್ತಿ ಹೇಳುವಂತಹ ಕೆಲವು ಸಂದರ್ಬಗಳಲ್ಲಿ ಮೂರನೆಯ ಹಂತಕ್ಕೂ ಮೇಲಿರುವ ನಾಲ್ಕನೆಯದೊಂದು ಹಂತದ ಪಾಂಗುಗಳು ಕಾಣಿಸಿಕೊಳ್ಳುತ್ತವೆಯೆಂಬುದಾಗಿಯೂ ಹೇಳಲು ಬರುತ್ತದೆ. ಈ ನಾಲ್ಕನೇ ಹಂತದ ಪಾಂಗುಗಳನ್ನು ಸೊಲ್ಲುಗಳ ಮೂಲಕ, ಇಲ್ಲವೇ ಅವುಗಳ ಹೆಸರು ರೂಪದ ಮೂಲಕವೂ ಗುರುತಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(15ಕ) ಆಕೆ ಪುಸ್ತಕ ತಂದಿದ್ದಾಳೆಂಬುದನ್ನು ನನಗೆ ಯಾರೂ ತಿಳಿಸಲಿಲ್ಲ. (15ಚ) ಆಕೆ ತಂದುದನ್ನು ನನಗೆ ಯಾರೂ ತಿಳಿಸಲಿಲ್ಲ. (15ಟ) ಆಕೆ ತಂದುದನ್ನು ನಾನು ನೋಡಲಿಲ್ಲ. (15ತ) ಆಕೆ ತಂದುದನ್ನು ಮೇಜಿನ ಮೇಲಿರಿಸಿದ್ದೇನೆ.
(15ಕ)ದಲ್ಲಿ ಆಕೆ ಪುಸ್ತಕ ತಂದಿದ್ದಾಳೆಂಬುದು ಎಂಬ ಹೆಸರುಕಂತೆ ನಾಲ್ಕನೇ ಹಂತದ ಪಾಂಗನ್ನು ಗುರುತಿಸುತ್ತದೆ; ಇದಕ್ಕೆ ಬದಲು, ಆಕೆ ತಂದುದು ಎಂಬ ಹೆಸರುಕಂತೆ (15ಚ)ದಲ್ಲಿ ಮೂರನೇ ಹಂತದ ಪಾಂಗನ್ನು, (15ಟ)ದಲ್ಲಿ ಎರಡನೇ ಹಂತದ ಪಾಂಗನ್ನು, ಮತ್ತು (15ತ)ದಲ್ಲಿ ಮೊದಲನೇ ಹಂತದ ಪಾಂಗನ್ನು ಗುರುತಿಸುತ್ತದೆ.
6.2.5 ಪರಿಜಿರುವ ಮತ್ತು ಪರಿಜಿಲ್ಲದ ಪಾಂಗುಗಳು
ಒಂದನೇ ಹಂತದ ಮರ, ಕಲ್ಲು, ನೀರು, ಹಾಲು ಮೊದಲಾದ ಹೆಸರುಪದಗಳು ಗುರುತಿಸುವ ಪಾಂಗುಗಳಿಗೆ ಅವುಗಳದೇ ಆದ ಪರಿಜು (ರೂಪ) ಇರುತ್ತದೆ;
ಅವನ್ನು ಕಣ್ಣಿನಿಂದ ನೋಡಬಹುದು, ಇಲ್ಲವೇ ಕಯ್ಯಿಂದ ಮುಟ್ಟಬಹುದು. ಆದರೆ, ಅವುಗಳಿಂದ ಮೇಲಿನ ಹಂತಗಳಲ್ಲಿ (ಎರಡರಿಂದ ನಾಲ್ಕರ ವರೆಗಿನ ಹಂತಗಳಲ್ಲಿ) ಬರುವ ಬಯಕೆ, ತಿಳುವಳಿಕೆ, ಹಸಿವು, ಸಿಟ್ಟು ಮೊದಲಾದ ಹೆಸರುಪದಗಳು ಗುರುತಿಸುವ ಪಾಂಗುಗಳಿಗೆ ಪರಿಜಿಲ್ಲ. ಅವನ್ನು ನೋಡಲು, ಇಲ್ಲವೇ ಮುಟ್ಟಲು ಬರುವುದಿಲ್ಲ.
ಈ ಪರಿಜಿರುವ ಪಾಂಗುಗಳನ್ನು ಎಲ್ಲೆಗಳಿರುವ ಪಾಂಗುಗಳು ಮತ್ತು ಎಲ್ಲೆಗ ಳಿಲ್ಲದ ಪಾಂಗುಗಳು ಎಂಬುದಾಗಿ ಗುಂಪಿಸಲು ಬರುತ್ತದೆ; ಇವುಗಳಲ್ಲಿ ಎಲ್ಲೆಗಳಿಲ್ಲದ ಪಾಂಗುಗಳು ಒರ್ಬಗೆಯವುಗಳಾಗಿರುತ್ತವೆ; ಮತ್ತು ಅವಕ್ಕೆ ಪಾಲುಗಳಿರುತ್ತವಲ್ಲದೆ, ಎಲ್ಲೆಗಳಿರುವ ಪಾಂಗುಗಳ ಹಾಗೆ ಅಂಗಗಳಿರುವುದಿಲ್ಲ. ಈ ಕಾರಣಕ್ಕಾಗಿ, ಪರಿಜಿರುವ ಪಾಂಗುಗಳನ್ನು ಗುರುತಿಸುವ ಪದಗಳನ್ನು ಒತ್ತೆಹೆಸರು ಮತ್ತು ಒಟ್ಟಲು ಹೆಸರು ಎಂಬುದಾಗಿ ಗುಂಪಿಸಲು ಬರುತ್ತದೆ.
ಆದರೆ, ಪರಿಜಿಲ್ಲದ ಪಾಂಗುಗಳಿಗೆ ಎಲ್ಲೆಗಳಿವೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಕಶ್ಟ; ಅವುಗಳು ಒರ್ಬಗೆಯವೋ ಅಲ್ಲವೋ ಎಂಬುದನ್ನೂ ತಿಳಿಯುವುದು ಕಶ್ಟ; ಇದಲ್ಲದೆ, ಅವುಗಳಿಗೆ ಪಾಲುಗಳಿವೆಯೋ ಅಂಗಗಳಿವೆಯೋ ಎಂದು ಹೇಳುವುದೂ ಕಶ್ಟ.
ಹೀಗಿದ್ದರೂ, ಮೇಲೆ 6.2.2ರಲ್ಲಿ ವಿವರಿಸಿದಂತಹ ಒತ್ತೆ ಮತ್ತು ಒಟ್ಟಲು ಎಂಬ ವ್ಯತ್ಯಾಸವನ್ನು ಪರಿಜಿಲ್ಲದ ಪದಗಳಲ್ಲೂ ಕಾಣಲು ಬರುತ್ತದೆ. ಎತ್ತುಗೆ ಗಾಗಿ, ಬಯಕೆ, ಆಯ್ಕೆ, ನಂಬಿಕೆ, ಎನಿಸಿಕೆ ಮೊದಲಾದ ಪರಿಜಿಲ್ಲದ ಪದಗಳು ಒತ್ತೆಪದಗಳಾಗಿ ಬಳಕೆಯಾಗುತ್ತವೆ, ಮತ್ತು ದಣಿವು, ದಿಗಿಲು, ಮರುಕ, ತಾಳ್ಮೆ ಮೊದಲಾದ ಪರಿಜಿಲ್ಲದ ಪದಗಳು ಒಟ್ಟಲು ಪದಗಳಾಗಿ ಬಳಕೆಯಾಗುತ್ತವೆ.
ಇದಲ್ಲದೆ, ಇವುಗಳನ್ನು ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳೆಂಬು ದಾಗಿಯೂ ಗುಂಪಿಸಲು ಬರುತ್ತದೆ; ಎತ್ತುಗೆಗಾಗಿ, ಮೂರು ನಂಬಿಕೆಗಳು ಎನ್ನಲು ಬರುತ್ತದೆ; ಆದರೆ, *ಮೂರು ದಣಿವುಗಳು ಎನ್ನಲು ಬರುವುದಿಲ್ಲ.
ಇದಕ್ಕೆ ಕಾರಣವೇನೆಂದರೆ, ಪಾಂಗುಗಳನ್ನು ನಾವು ನಮ್ಮ ಮನಸ್ಸಿನಲ್ಲಿ ಹೇಗೆ ಕಲ್ಪಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳ (ಇಲ್ಲವೇ ಒತ್ತೆಹೆಸರು ಮತ್ತು ಒಟ್ಟಲುಹೆಸರುಗಳ) ನಡುವಿನ ವ್ಯತ್ಯಾಸ ಅವಲಂಬಿಸಿದೆಯಲ್ಲದೆ, ನಿಜಕ್ಕೂ ಅವುಗಳ ರೂಪ ಎಂತಹದು ಎಂಬುದರ ಮೇಲೆ ಅವಲಂಬಿಸಿಲ್ಲ. ಪಾಂಗುಗಳಿಗೆ ಪರಿಜಿರಲಿ, ಇಲ್ಲದಿರಲಿ, ಅವು ನಮ್ಮ ಮನಸ್ಸಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದೇ ಇಲ್ಲಿ ಮುಕ್ಯವಾದ ವಿಶಯ. ಇದಲ್ಲದೆ, ಈ ಪಾಂಗುಗಳನ್ನು ನಾವು ನಮ್ಮ ಮನಸ್ಸಿನಲ್ಲಿ ಹೇಗೆ ಕಾಣುತ್ತೇವೆ ಎಂಬುದು ನಮ್ಮ ನುಡಿ ಅವನ್ನು ಹೇಗೆ ಕಾಣುವಂತೆ ಮಾಡುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.
ಪರಿಜಿರುವ ಮತ್ತು ಪರಿಜಿಲ್ಲದ ಪದಗಳ ನಡುವಿನ ಕೆಲವು ವ್ಯತ್ಯಾಸಗಳನ್ನು
ಕೆಳಗೆ ವಿವರಿಸಲಾಗಿದೆ:
(1) ಮೇಲೆ ತಿಳಿಸಿದ ಹಾಗೆ, ಪರಿಜಿರುವ ಒತ್ತೆ ಪದಗಳ ಹಾಗೆ ಪರಿಜಿಲ್ಲದ ಒತ್ತೆ ಪದಗಳೂ ಹಲವೆಣಿಕೆಯ ಒಟ್ಟಿನೊಂದಿಗೆ ಬರಬಲ್ಲುವು (ಬಯಕೆಗಳು, ಅನಿಸಿಕೆಗಳು), ಮತ್ತು ನೇರವಾಗಿ ಎಣಿಕೆಯ ಪದಗಳೊಂದಿಗೂ ಬರಬಲ್ಲುವು (ಎರಡು ಆಯ್ಕೆಗಳು, ಮೂರು ನಂಬಿಕೆಗಳು). ಆದರೆ, ಪರಿಜಿಲ್ಲದ ಒಟ್ಟಲು ಪದಗಳು ಸಾಮಾನ್ಯವಾಗಿ ಅಳತೆಯ ಪದಗಳೊಂದಿಗೆ ಬರಲಾರವಾದ ಕಾರಣ, ಪರಿಜಿರುವ ಒಟ್ಟಲು ಪದಗಳ ಹಾಗೆ ಅವುಗಳೊಂದಿಗೆ ಎಣಿಕೆಯ ಪದಗಳನ್ನು ಬಳಸಲು ಬರುವುದಿಲ್ಲ (*ಎರಡು ಕಿಲೋ ದಣಿವು).
ಆದರೆ, ಎರಡನೇ ಹಂತದ ಪದಗಳು ಜಾಗ ಮತ್ತು ಹೊತ್ತಿನ ಎಲ್ಲೆಯನ್ನು ಪಡೆಯಬಲ್ಲುವು; ಹಾಗಾಗಿ, ಅವುಗಳೊಂದಿಗೆ ಜಾಗದ ಇಲ್ಲವೇ ಹೊತ್ತಿನ ಅಳತೆ ಪದವನ್ನು ಮತ್ತು ಅದರೊಂದಿಗೆ ಎಣಿಕೆಪದವನ್ನೂ ಸೇರಿಸಿ ಹೇಳಲು ಬರುತ್ತದೆ. ಎತ್ತುಗೆಗಾಗಿ, ನೂರು ಮೀಟರ್ ಓಟ ಎಂಬುದರಲ್ಲಿ ಎರಡನೇ ಹಂತದ ಓಟ ಪದವನ್ನು ನೂರು ಎಂಬ ಎಣಿಕೆಪದದೊಂದಿಗೆ, ಮತ್ತು ಮೀಟರ್ ಎಂಬ ಜಾಗದ ಅಳತೆಪದದೊಂದಿಗೆ ಬಳಸಲಾಗಿದೆ; ಮೂರು ಗಂಟೆ ಕೆಲಸ ಎಂಬು ದರಲ್ಲಿ ಎರಡನೇ ಹಂತದ ಕೆಲಸ ಪದವನ್ನು ಮೂರು ಎಂಬ ಎಣಿಕೆ ಪದ ದೊಂದಿಗೆ ಮತ್ತು ಗಂಟೆ ಎಂಬ ಹೊತ್ತಿನ ಅಳತೆಪದಗಳೊಂದಿಗೆ ಬಳಸಲಾಗಿದೆ.
(2) ಪರಿಜಿಲ್ಲದ ಪದಗಳಲ್ಲಿ ಹೆಚ್ಚಿನವೂ ಒಟ್ಟಲು ಪದಗಳಾಗಿರುತ್ತವೆ; ಆದರೆ, ಅವುಗಳೊಂದಿಗೆ ಅಳತೆಯನ್ನು ಸೇರಿಸಿ ಒತ್ತೆ ಪದಕಂತೆಯನ್ನಾಗಿ ಮಾರ್ಪಡಿಸಬಹುದು (ಅಯ್ದು ಮಿನಿಟಿನ ಕೆಲಸಗಳು); ಇಲ್ಲವೇ ಅವು ತಿಳಿಸುವ ಎಸಕಗಳ ಕೆಲವು ಎತ್ತುಗೆಗಳನ್ನು ಆಯ್ದುಕೊಳ್ಳುವ ಮೂಲಕವೂ ಅವನ್ನು ಒತ್ತೆ ಪದಕಂತೆಗಳನ್ನಾಗಿ ಮಾರ್ಪಡಿಸಬಹುದು (ಅವನು ಪಟ್ಟ ಪಾಡುಗಳು).
ಮೂರನೇ ಹಂತದ ಹೆಸರುಪದಗಳಿಗೆ ಜಾಗದ ಇಲ್ಲವೇ ಹೊತ್ತಿನ ಎಲ್ಲೆಗ ಳಿಲ್ಲವಾದ ಕಾರಣ, ಅವನ್ನು ಒತ್ತೆಪದಗಳಾಗಿ ಮಾರ್ಪಡಿಸಬೇಕಿದ್ದಲ್ಲಿ ಕೆಳಗಿನ (ಎರಡನೇ ಇಲ್ಲವೇ ಮೊದಲನೇ) ಹಂತಕ್ಕೆ ಇಳಿಸಬೇಕಾಗುತ್ತದೆ:
(16ಕ) ಅವನಿಗೆ ತುಂಬಾ ಕೆಲಸ ಇದೆ. (16ಚ) ಅವನಿಗೆ ಆಪೀಸಿನ ಎರಡು ಕೆಲಸಗಳಿವೆ.
(16ಕ)ದಲ್ಲಿ ಕೆಲಸ ಎಂಬುದು ಮೂರನೇ ಹಂತದ ಒಟ್ಟಲುಹೆಸರಾಗಿ ಬಳಕೆಯಾಗಿದೆ; (16ಚ)ದಲ್ಲಿ ಅದನ್ನೇ ಎರಡನೇ ಹಂತದ ಒತ್ತೆಹೆಸರಾಗಿ ಬಳಸಲಾಗಿದ್ದು, ಅದಕ್ಕೆ ಹೊತ್ತಿನ ಎಲ್ಲೆಯನ್ನು ಹಾಕಲಾಗಿದೆ.
6.2.6 ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳು
ಮೇಲೆ ವಿವರಿಸಿದ ಗುಂಪುಗಳನ್ನು ಅಡ್ಡಕ್ಕೆ ಕತ್ತರಿಸುವಂತೆ ಹೆಸರುಪದಗಳನ್ನು ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳೆಂಬುದಾಗಿಯೂ ಬೇರ್ಪಡಿಸಲು
ಬರುತ್ತದೆ. ಮರುಕ, ಬೇಸರ, ಗೋಳು, ಮದಿಪು ಮೊದಲಾದ ಹಲವಾರು ಪರಿಜಿಲ್ಲದ (ರೂಪವಿಲ್ಲದ) ಪದಗಳು, ಕಾವೇರಿ, ಪುಣೆ, ನಿತಿನ್ ಮೊದಲಾದ ಕೊಟ್ಟಹೆಸರುಗಳು, ಮೇಲೆ ವಿವರಿಸಿದಂತಹ ನೇರವಾಗಿ ಎಣಿಕೆಪದಗಳನ್ನು ಸೇರಿಸಲು ಬಾರದ ಒಟ್ಟಲು ಪದಗಳು ಮೊದಲಾದುವನ್ನು ಎಣಿಸಲಾಗದ ಪದ ಗಳೆಂದು ತಿಳಿಯಬಹುದು.
ಈ ಹಲವು ಬಗೆಯ ಎಣಿಸಲಾಗದ ಪದಗಳಲ್ಲಿ ಒಂದೊಂದು ಬಗೆಯದೂ ಅದರದೇ ಆದ ಪರಿಚೆಗಳನ್ನು ಹೊಂದಿದ್ದು, ಅವಕ್ಕೂ ಎಣಿಕೆಗೂ ನಡುವಿನ ಸಂಬಂದವನ್ನು ತಿಳಿಯುವಲ್ಲಿ ಹಲವು ಬಗೆಯ ತೊಂದರೆಗಳನ್ನು ತಂದೊಡ್ಡು ತ್ತವೆ. ಹಾಗಾಗಿ, ಅವು ಎಣಿಸಲಾಗದಿರುವುದಕ್ಕೆ, ಮತ್ತು ಎಣಿಸಲಾಗುವಂತೆ ಮಾರ್ಪಡುವುದಕ್ಕೆ ಬೇರೆ ಬೇರೆ ಬಗೆಯ ಕಾರಣಗಳಿರುತ್ತವೆ.
ಎತ್ತುಗೆಗಾಗಿ, ಪರಿಜಿರುವ ಒಟ್ಟಲು ಪದಗಳಿಗೆ ಅಳತೆಯ ಪದಗಳನ್ನು ಸೇರಿಸಿದಲ್ಲಿ ಎಣಿಸಲಾಗುವ ಪದಗಳಾಗಿಬಿಡುತ್ತವೆ (ಮೂರು ಲೀಟರ್ ಎಣ್ಣೆ, ಎರಡು ಕಿಲೋ ಬೆಣ್ಣೆ); ಆದರೆ, ಕೊಟ್ಟ ಹೆಸರುಗಳನ್ನಾಗಲಿ (ಮೂರು ಕಿಲೋ ಕಾವೇರಿ), ಇಲ್ಲವೇ ಪರಿಜಿಲ್ಲದ ಪದಗಳನ್ನಾಗಲಿ (ಮೂರು ಲೀಟರ್ ಮರುಕ) ಆ ರೀತಿ ಮಾರ್ಪಡಿಸಲು ಬರುವುದಿಲ್ಲ. ಆದರೆ, ಎಣಿಸಲಾಗದ ಕೆಲವು ಪದಗಳನ್ನು ಒತ್ತಾಯದಿಂದ ಅಂತಹ ಬಳಕೆಗಳಲ್ಲಿ ತೊಡಗಿಸಲೂ ಬರುತ್ತದೆ.
ಎತ್ತುಗೆಗಾಗಿ, ‘ಒಂದೇ ಹೆಸರಿನ ಮೂರು ಮಂದಿ ಹುಡುಗಿಯರು’ ಎಂಬ ಹುರುಳಿನಲ್ಲಿ ಮೂವರು ಕಾವೇರಿಯರು ಎಂಬುದಾಗಿ ಕೊಟ್ಟಹೆಸರಿನೊಂದಿಗೆ ಎಣಿಕೆಯ ಪದವನ್ನು ಮತ್ತು ಹಲವೆಣಿಕೆಯ ಒಟ್ಟನ್ನು ಬಳಸಲು ಬರುತ್ತದೆ; ಮತ್ತು ‘ಮೂರು ಸಂದರ್ಬಗಳಲ್ಲಿ ಉಂಟಾಗಿರುವ ದಣಿವುಗಳು’ ಎಂಬ ಹುರುಳಿ ನಲ್ಲಿ ಮೂರು ದಣಿವುಗಳು ಎಂಬುದಾಗಿ ಪರಿಜಿಲ್ಲದ ಮತ್ತು ಎಣಿಸಲಾಗದ ಪದದೊಂದಿಗೂ ಅವನ್ನು ಬಳಸಲು ಬರುತ್ತದೆ.
ಎಣಿಸಲಾಗದ ಪದಗಳಲ್ಲಿ ಪರಿಜಿಲ್ಲದ ಪದಗಳೇ ಮುಕ್ಯವಾದವುಗಳು. ಮೇಲೆ ತಿಳಿಸಿದ ಹಾಗೆ, ಅವುಗಳಲ್ಲಿ ಹೆಚ್ಚಿನವನ್ನೂ ಎಸಕಪದ ಇಲ್ಲವೇ ಪರಿಚೆ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ.
6.3 ಪಾಂಗುಗಳ ಪರಿಚೆಯನ್ನು ತಿಳಿಸುವುದು
ಪಾಂಗುಗಳ ನಡುವೆ ಅವುಗಳ ಪರಿಚೆಯಲ್ಲಿರುವ ಹಲವು ಬಗೆಯ ವ್ಯತ್ಯಾಸ ಗಳನ್ನು ಅವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುವ ಹೆಸರುಪದಗಳ ಹುರುಳು ಗಳೇ ತಿಳಿಸುತ್ತವೆ:
ಎತ್ತುಗೆಗಾಗಿ, ಮರ ಮತ್ತು ಗಿಡ ಪದಗಳ ಹುರುಳುಗಳು ಅವು ಗುರುತಿಸುವ ಪಾಂಗುಗಳ ನಡುವೆ ಹರಯದ ವ್ಯತ್ಯಾಸವಿದೆ (‘ಮರಕ್ಕೆ ಗಿಡಕ್ಕಿಂತ ಹೆಚ್ಚು ಹರಯವಾಗಿದೆ’) ಎಂಬುದನ್ನು ತಿಳಿಸುತ್ತವೆ; ಇದ್ದಲು ಮತ್ತು ಹಾಲು ಪದಗಳ ಹುರುಳುಗಳು ಅವು ಗುರುತಿಸುವ ಪಾಂಗುಗಳ ನಡುವೆ ಬಣ್ಣದ ವ್ಯತ್ಯಾಸವಿದೆ (‘ಇದ್ದಲು ಕಪ್ಪು ಮತ್ತು ಹಾಲು ಬಿಳಿ’) ಎಂಬುದನ್ನು ತಿಳಿಸುತ್ತವೆ; ಆನೆ ಮತ್ತು ಇಲಿ ಪದಗಳ ಹುರುಳುಗಳು ಅವು ಗುರುತಿಸುವ ಪಾಂಗುಗಳ ನಡುವೆ ಉದ್ದಗಲ ದಲ್ಲಿ ವ್ಯತ್ಯಾಸವಿದೆ (‘ಆನೆ ದೊಡ್ಡದು, ಇಲಿ ಚಿಕ್ಕದು’) ಎಂಬುದನ್ನು ತಿಳಿಸುತ್ತವೆ. ಪರಿಚೆಗಳನ್ನು ತಿಳಿಸಬಲ್ಲುದು. ಎತ್ತುಗೆಗಾಗಿ, ಪದಗಳ ಕೊನೆಯಲ್ಲಿ ಬರುವ ಇತ್ತಿ (ಗಾಣಿಗ- ಗಾಣಿಗಿತ್ತಿ), ತಿ (ಆಟಗಾರ-ಆಟಗಾರ್ತಿ), ಇ (ಕಿವುಡ-ಕಿವುಡಿ), ಎ (ಜಾಣ- ಜಾಣೆ) ಮೊದಲಾದ ಒಟ್ಟುಗಳು ಅವು ಗುರುತಿಸುವ ಪಾಂಗುಗಳು ಹೆಣ್ಣುಗುರ್ತ ದವು (ಹೆಂಗಸು ಇಲ್ಲವೇ ಹುಡುಗಿ) ಎಂಬುದನ್ನು ತಿಳಿಸುತ್ತವೆ; ಮತ್ತು ಜೋಡು ಪದಗಳಲ್ಲಿ ಬರುವ ಹಲವು ಬಗೆಯ ಪರಿಚೆಬೇರುಗಳು ಇಲ್ಲವೇ ಪರಿಚೆಪದಗಳು ಅವು ಗುರುತಿಸುವ ಪಾಂಗುಗಳ ಬಣ್ಣ (ಕೆಂಗಣ್ಣು, ಬೆಳ್ಕೊಡೆ), ಉದ್ದಗಲ (ಹೆಜ್ಜೇನು, ಕಿರುಗತ್ತಿ), ಬೆಲೆ (ನಲ್ಲುಣಿಸು) ಮೊದಲಾದುವನ್ನು ತಿಳಿಸುತ್ತವೆ.
ಹೆಸರುಪದಗಳ ಒಳಇಟ್ಟಳವೂ
ಇದಲ್ಲದೆ,
ಕೆಲವು
ಆದರೆ, ಮೇಲೆ (6.1.1)ರಲ್ಲಿ ವಿವರಿಸಿದ ಹಾಗೆ, ಹೆಸರುಪದಗಳ ಹುರುಳು ಗಳು ಅವು ಎಂತಹ ಪಾಂಗುಗಳನ್ನು ಹೆಸರಿಸುವುದಕ್ಕಾಗಿ ಬಳಕೆಯಲ್ಲಿವೆ ಎಂಬುದರ ಮೇಲೆ ಅವಲಂಬಿಸಿದ್ದು, ಅವನ್ನು ನೇರವಾಗಿ ಹೆಸರುಪದಗಳಿಂದ ಪಡೆಯಲು ಬರುವುದಿಲ್ಲ.
ಇದೇ ರೀತಿಯಲ್ಲಿ, ಹೆಸರುಪದಗಳ ಒಳ ಇಟ್ಟಳಗಳಿಂದಲೂ ಅವು ಗುರುತಿಸುವ ಪಾಂಗುಗಳ ಪರಿಚೆಯನ್ನು ನೇರವಾಗಿ ಪಡೆಯಲು ಬರುವುದಿಲ್ಲ. ಯಾಕೆಂದರೆ, ಆ ಹೆಸರುಪದಗಳನ್ನು ಉಂಟುಮಾಡುವ ಸಮಯದಲ್ಲಿ ಕಣ್ಣಿಗೆ ಹೊಡೆದು ಪರಿಚೆಯೊಂದನ್ನು ಆರಿಸಿಕೊಳ್ಳಲಾಗಿತ್ತಾದರೂ, ಅವುಗಳ ಬಳಕೆಯ ಸಮಯದಲ್ಲಿ ಅದು ಉಳಿದುಕೊಂಡಿರಬಲ್ಲುದು, ಇಲ್ಲವೇ ಕಳೆದುಹೋಗಿರಲೂ ಬಲ್ಲುದು.
ಕಾಣುವಂತಹ
ಎತ್ತುಗೆಗಾಗಿ, ಕರಿಹಲಗೆ ಪದವನ್ನು ಉಂಟುಮಾಡುವಾಗ, ಕಣ್ಣಿಗೆ ಹೊಡೆದು ಕಾಣುವಂತಹ ‘ಅದನ್ನು ಹಲಗೆಯಿಂದ ಮಾಡಲಾಗಿದ್ದು, ಅದರ ಬಣ್ಣ ಕಪ್ಪಾಗಿದೆ’ ಎಂಬ ಪರಿಚೆಯನ್ನು ಬಳಸಲಾಗಿತ್ತು; ಆದರೆ, ಆಮೇಲೆ ಬೇರೆ ಬಣ್ಣಗಳನ್ನು ಬಳಸಿಯೂ ಅದನ್ನು ತಯಾರಿಸುವ ಹೊಲಬು ಬಳಕೆಗೆ ಬಂತು; ಹೀಗಿದ್ದರೂ, (ಒಂದು ತರಗತಿಯಲ್ಲಿ ಅದು ನೀಲಿ ಬಣ್ಣದ್ದಾಗಿದೆಯಾದರೂ) ಅದನ್ನು ಗುರುತಿಸಲು ಕರಿಹಲಗೆ ಎಂಬ ಹೆಸರುಪದವನ್ನೇ ಬಳಸುತ್ತಿರಲು ತೊಂದರೆ ಯಾಗುವುದಿಲ್ಲ.
ಇದೇ ರೀತಿಯಲ್ಲಿ, ಒಂದು ಮನೆ ಅದನ್ನು ಕಟ್ಟಿದ ಸಮಯದಲ್ಲಿ ಹತ್ತಿರದ ಮನೆಗಳಿಂದೆಲ್ಲ ಹೊಸದಾಗಿದ್ದ ಕಾರಣ, ಅದಕ್ಕೆ ಹೊಸಮನೆ ಎಂಬ ಹೆಸರನ್ನು
ಕೊಟ್ಟಿರಬಹುದು; ಆದರೆ ಆಮೇಲೆ, ಹತ್ತಿಪ್ಪತ್ತು ವರ್ಶ ಕಳೆದ ಬಳಿಕ, ಸುತ್ತ ಮುತ್ತ ಬೇರೆ ಹಲವು ‘ಹೊಸ’ ಮನೆಗಳನ್ನು ಜನರು ಕಟ್ಟಿರಬಹುದು; ಹಾಗಿದ್ದರೂ ಹೊಸಮನೆ ಎಂಬ ಆ ಮನೆಯ ಹಳೆಯ ಹೆಸರು ಬದಲಾಗದೆ ಉಳಿದಿರಬಲ್ಲುದು.
ಹಾಗಾಗಿ, ಹೆಸರುಪದಗಳ ಒಳಇಟ್ಟಳಗಳು ಅವು ಗುರುತಿಸುವ ಪಾಂಗುಗಳ ಪರಿಚೆಯನ್ನು ತಿಳಿಯುವಲ್ಲಿ ನೆರವನ್ನು ನೀಡುತ್ತವೆ ಎಂದಿಶ್ಟೇ ಹೇಳಬಲ್ಲೆವಲ್ಲದೆ, ಅವು ನೇರವಾಗಿ ಅವುಗಳ ಪರಿಚೆಯನ್ನು ತಿಳಿಸುತ್ತವೆಯೆಂದು ಹೇಳಲಾರೆವು. ಇದಕ್ಕೆ ಬದಲು, ಹೆಸರುಕಂತೆಗಳಲ್ಲಿ ಬರುವ ಪರಿಚೆಪದಗಳು ನೇರವಾಗಿ ಅವುಗಳ ಪರಿಚೆಯೇನೆಂಬುದನ್ನು ತಿಳಿಸುತ್ತವೆ, ಮತ್ತು ಈ ಪರಿಚೆಯನ್ನು ಬಳಸುವ ಮೂಲಕವೇನೇ ಅವು ಯಾವ ಪಾಂಗನ್ನು ಗುರುತಿಸುತ್ತವೆ ಎಂಬುದನ್ನು ನಾವು ಕಂಡುಕೊಳ್ಳಬಲ್ಲೆವು.
ಹಾಗಾಗಿ,
ಹೆಸರುಪದಗಳಲ್ಲಿ ಬರುವ
ಪರಿಚೆಪದಗಳು ಇಲ್ಲವೇ ಪರಿಚೆಬೇರುಗಳು ಅವುಗಳ ತಯಾರಿಕೆಯಲ್ಲಿ ಬಳಕೆಯಾದವುಗಳು, ಮತ್ತು ಹೆಸರುಕಂತೆಗಳಲ್ಲಿ ಬರುವ ಪರಿಚೆ ಪದಗಳು ಅವುಗಳ ತಿರುಳುಪದದೊಂದಿಗೆ ನೆರವುಪದಗಳಾಗಿ ಬಳಕೆಯಾದವುಗಳು ಎಂಬುದಾಗಿ ಈ ಎರಡು ಬಳಕೆಗಳ ನಡುವೆ ವ್ಯತ್ಯಾಸವನ್ನು ಕಾಣಲಾಗುತ್ತದೆ.
ಎತ್ತುಗೆಗಾಗಿ, ದೊಡ್ಡ ಮನೆ ಎಂಬ ಹೆಸರುಕಂತೆಯಲ್ಲಿ ಬಂದಿರುವ ದೊಡ್ಡ ಪರಿಚೆಪದ ‘ಮನೆಯ ಉದ್ದಗಲ ಎಂತಹದು’ ಎಂಬುದನ್ನು ತಿಳಿಸುತ್ತದೆ; ಕೆಂಪು ಮನೆ ಎಂಬ ಹೆಸರುಕಂತೆಯಲ್ಲಿ ಬಂದಿರುವ ಕೆಂಪು ಪರಿಚೆಪದ ಮನೆಯ ಬಣ್ಣವನ್ನು ತಿಳಿಸುತ್ತದೆ; ಮತ್ತು ಹೊಸ ಕೊಡೆ ಎಂಬ ಹೆಸರುಕಂತೆಯಲ್ಲಿ ಬಂದಿರುವ ಹೊಸ ಪರಿಚೆಪದ ಕೊಡೆಯ ಹರಯವನ್ನು ತಿಳಿಸುತ್ತದೆ. ಹೆಸರುಪದಗಳೊಂದಿಗೆ ಬೇರೆ ಹೆಸರುಪದಗಳ ಪತ್ತುಗೆ
ರೂಪವನ್ನು (ಮಣ್ಣಿನ ಗೋಡೆ, ಕಬ್ಬಿಣದ ಗುಂಡು) ಇಲ್ಲವೇ ಪರಿಚೆಪದಗಳ ಪತ್ತುಗೆ ರೂಪವನ್ನು (ಬೆಳ್ಳಗಿನ ಕೊಡೆ, ಮೆತ್ತಗಿನ ಹಾಸಿಗೆ) ಬಳಸಿಯೂ ಅವು ಗುರುತಿಸುವ ಪಾಂಗುಗಳ ಪರಿಚೆಯನ್ನು ತಿಳಿಸಲು ಬರುತ್ತದೆ. ಇದಲ್ಲದೆ, ಸೊಲ್ಲು ಗಳ ಪತ್ತುಗೆರೂಪವನ್ನೂ ಇದಕ್ಕಾಗಿ ಬಳಸಲು ಬರುತ್ತದೆ (ಅವರು ಕೊಟ್ಟ ಹಣ್ಣು, ಎತ್ತರಕ್ಕೆ ಕಟ್ಟಿದ ಕಟ್ಟಡ).
ಇಂತಹ ನೆರವುಪದ, ಪದಕಂತೆ, ಮತ್ತು ಒಳಸೊಲ್ಲುಗಳ ಮೂಲಕ ಹೆಸರುಪದಗಳ ಪರಿಚೆಯನ್ನು ತಿಳಿಸುವ ಬಗೆ ಹೇಗೆ ಎಂಬುದನ್ನು ಕೆಳಗೆ ವಿವರಿಸ ಲಾಗಿದೆ.
6.3.1 ಪರಿಚೆಪದಗಳ ಬಗೆಗಳು
ಪರಿಚೆಪದಗಳು ಎಸಕಪದ ಮತ್ತು ಹೆಸರುಪದಗಳಿಗಿಂತ ತೀರ ಬೇರಾಗಿರುವ ಕೆಲಸವನ್ನು ನಡೆಸಬೇಕಾಗುತ್ತದೆ: ಎಸಕಪದಗಳು ಎಸಕಗಳನ್ನು ತಿಳಿಸುತ್ತವೆ,
ಮತ್ತು ಹೆಸರುಪದಗಳು ಅಂತಹ ಎಸಕಗಳಲ್ಲಿ ತೊಡಗಿಕೊಂಡಿರುವ ಪಾಂಗು ಗಳನ್ನು ಗುರುತಿಸುತ್ತವೆ; ಆದರೆ, ಪರಿಚೆಪದಗಳು ಈ ಎರಡನೆಯ ಕೆಲಸದಲ್ಲಿ ಹೆಸರುಪದಗಳಿಗೆ ನೆರವನ್ನು ನೀಡುತ್ತವೆ. ಅವು ಸೊಲ್ಲುಗಳಲ್ಲಿ ಬೇರೆ ಕೆಲಸ ಗಳನ್ನೂ ನಡೆಸಬಲ್ಲುವಾದರೂ, ಗುರುತಿಸುವ ಕೆಲಸದಲ್ಲಿ ಹೆಸರುಪದಗಳಿಗೆ ನೆರವನ್ನು ನೀಡುವುದೇ ಅವುಗಳ ಮುಕ್ಯ ಕೆಲಸವಾಗಿದೆ. ಈ ರೀತಿ ಅವುಗಳದೇ ಆದ ಒಂದು ಮುಕ್ಯ ಕೆಲಸವಿದೆಯಾದ ಕಾರಣ, ಹಲವು ವಿಶಯಗಳಲ್ಲಿ ಅವು ಎಸಕಪದ ಮತ್ತು ಹೆಸರುಪದಗಳಿಂದ ಬೇರಾಗಿವೆ.
ಎತ್ತುಗೆಗಾಗಿ, ಪರಿಚೆಪದಗಳನ್ನು ಹೆಸರುಕಂತೆಗಳಲ್ಲಿ ಹಾಗೆಯೇ ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನೆರವು ಪದಗಳಾಗಿ ಬಳಸಲು ಬರುತ್ತದೆ (ಕೆಂಪು ಹೂವು, ಬಿಳಿ ಬಟ್ಟೆ, ದೊಡ್ಡ ಮರ); ಆದರೆ, ಹೆಸರುಪದಗಳನ್ನು ಆ ರೀತಿ ಬೇರೊಂದು ಹೆಸರುಪದದ ನೆರವು ಪದವಾಗಿ ಬಳಸಬೇಕಿದ್ದಲ್ಲಿ, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗುತ್ತದೆ (ಮರದ ಗೆಲ್ಲು, ಹಣ್ಣಿನ ಬಣ್ಣ). ಇದೇ ರೀತಿಯಲ್ಲಿ, ಎಸಕಪದಗಳನ್ನು ಹೆಸರುಪದಗಳ ನೆರವುಪದಗಳಾಗಿ ಬಳಸ ಬೇಕಿದ್ದಲ್ಲಿ, ಅವಕ್ಕೆ ಹೊತ್ತಿನ ಒಟ್ಟು ಮತ್ತು ಪತ್ತುಗೆಯ ಅ ಒಟ್ಟು ಎಂಬವುಗಳೆರಡನ್ನೂ ಸೇರಿಸಬೇಕಾಗುತ್ತದೆ (ಮಾಡಿದ ಕೆಲಸ, ಕುಡಿಯುವ ನೀರು).
ಪರಿಚೆಪದಗಳನ್ನು ಹೆಸರುಪದಗಳಾಗಿಯೂ (ಎಂದರೆ, ಹೆಸರುಪದಗಳ ಹಾಗೆ ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ) ಬಳಸಲು ಬರುತ್ತದೆ; ಅದರೆ, ಇದಕ್ಕಾಗಿ ಅವಕ್ಕೆ ಕೆಲವು ಒಟ್ಟುಗಳನ್ನು ಸೇರಿಸಬೇಕಾಗುತ್ತದೆ. ಎತ್ತುಗೆಗಾಗಿ, ತನ ಒಟ್ಟನ್ನು ಸೇರಿಸಿ ಹಲವು ಪರಿಚೆಪದಗಳನ್ನು ಹೆಸರುಪದಗಳಾಗಿ ಬಳಸಲು ಬರುತ್ತದೆ: ದೊಡ್ಡ-ದೊಡ್ಡತನ, ಹೊಸ-ಹೊಸತನ, ಬಡ-ಬಡತನ, ಹಿರಿ- ಹಿರಿತನ.
ಪರಿಚೆಪದಗಳಲ್ಲಿಯೂ ಮುಕ್ಯವಾಗಿ ಎರಡು ಬಗೆಯವನ್ನು ಗುರುತಿಸ ಬಹುದು: ಹೆಸರುಪದಗಳೊಂದಿಗೆ ಬರುವ ಹೆಸರುಪರಿಚೆಗಳು (ಕಪ್ಪು, ಬಿಳಿ, ಉದ್ದ, ಹೊಸ), ಮತ್ತು ಎಸಕಪದಗಳೊಂದಿಗೆ ಬರುವ ಎಸಕಪರಿಚೆಗಳು (ಬೇಗ, ಮೆಲ್ಲಗೆ, ನುಣ್ಣಗೆ); ಇವುಗಳಲ್ಲಿ ಎಸಕಪದಗಳೊಂದಿಗೆ ಬರುವ ಎಸಕ ಪರಿಚೆಗಳನ್ನು ಹೆಸರುಪದಗಳೊಂದಿಗೆ ಬಳಸಬೇಕಿದ್ದಲ್ಲಿ ಅವಕ್ಕೂ ಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗುತ್ತದೆ (ಬೆಳ್ಳಗಿನ ಬಟ್ಟೆ, ಮೆತ್ತಗಿನ ಹೊದಿಕೆ).
ಈ ಎರಡು ಬಗೆಯ ಪರಿಚೆಪದಗಳು ಮಾತ್ರವಲ್ಲದೆ, ಬಾರೀ, ತುಸು, ತೀರ ಮೊದಲಾದ ಬೇರೆ ಪರಿಚೆಪದಗಳೊಂದಿಗೆ ಬರುವ ಮತ್ತು ಅವುಗಳ ಹಂತವನ್ನು ತಿಳಿಸುವ ಕೆಲವು ಪದಗಳೂ ಇವೆ (ಬಾರೀ ದೊಡ್ಡ ಮರ, ತುಸು ಚಿಕ್ಕ ಮನೆ, ತೀರ ಚಿಕ್ಕ ಮನೆ).
ಹೆಸರುಪದಗಳೊಂದಿಗೆ ಬರುವ ಪರಿಚೆಪದಗಳನ್ನು, ಅವುಗಳ ಹುರುಳನ್ನು ಅವಲಂಬಿಸಿ, ಇಲ್ಲವೇ ಅವು ಯಾವ ರೀತಿಯಲ್ಲಿ ಹೆಸರುಪದಗಳಿಗೆ ಅವುಗಳ
ಗುರುತಿಸುವ ಕೆಲಸದಲ್ಲಿ ನೆರವನ್ನು ನೀಡುತ್ತವೆ ಎಂಬುದನ್ನವಲಂಬಿಸಿ, ಹಲವು ಬಗೆಗಳಲ್ಲಿ ಗುಂಪಿಸಲು ಬರುತ್ತದೆ. ಇವುಗಳಲ್ಲಿ ಮುಕ್ಯವಾದ ಕೆಲವು ಗುಂಪು ಗಳನ್ನು ಕೆಳಗೆ ವಿವರಿಸಲಾಗಿದೆ:
(1) ಹುರುಳನ್ನು ಬಳಸಿ ಗುಂಪಿಸುವುದು ಪರಿಚೆಪದಗಳ ಹುರುಳನ್ನವಲಂಬಿಸಿ, ಅವನ್ನು ಮುಕ್ಯವಾಗಿ ಅಯ್ದು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ:
(ಕ) ಅಳತೆಯ ಪರಿಚೆಗಳು: ಈ ಗುಂಪಿನಲ್ಲಿ ಬರುವ ಪರಿಚೆಪದಗಳಲ್ಲಿ
ಹೆಚ್ಚಿನವೂ ಎದುರು ಹುರುಳಿನ ಜೋಡಿಗಳಾಗಿ ಕಾಣಿಸಿಕೊಳ್ಳುತ್ತವೆ:
ಎತ್ತರ-ತಗ್ಗು
- ಉದ್ದ-ಗಿಡ್ಡ
ಅಗಲ-ಸಪುರ ದಪ್ಪ-ತೆಳು ದೊಡ್ಡ-ಚಿಕ್ಕ
ಆದರೆ, ಇಂತಹ ಜೋಡಿಗಳಲ್ಲಿ ಸೇರದಿರುವ ಆಳ, ಸಳ್ಳೆ, ಎಕ್ಕಲ, ನೀಳ, ನಸು ಮೊದಲಾದ ಕೆಲವು ಪದಗಳೂ ಈ ಗುಂಪಿನಲ್ಲಿ ಬರುತ್ತವೆ. ಇದಲ್ಲದೆ, ಹೇರ್-ಕಿರ್ ಎಂಬ ಪರಿಚೆಬೇರುಗಳ ಜೋಡಿಯೂ ಈ ಗುಂಪಿನಲ್ಲಿ ಬರುತ್ತದೆ.
ಈ ಜೋಡಿಗಳು ತಿಳಿಸುವ ಅಳತೆಯನ್ನು ಹೆಸರಿಸಬೇಕಾದಾಗ, ಅವುಗಳಲ್ಲಿ ಬರುವ ಎರಡು ಪರಿಚೆಪದಗಳಲ್ಲಿ ಮೊದಲಿನದನ್ನು ಮಾತ್ರ ಬಳಸಲು ಬರುತ್ತದೆ; ಅವು ತಿಳಿಸುವ (ಹೆಚ್ಚಿನ) ಅಳತೆಯನ್ನು ಮಾತ್ರವಲ್ಲದೆ ಜೋಡಿಯ ಇನ್ನೊಂದು ಪದ ತಿಳಿಸುವ (ಕಡಿಮೆಯ) ಅಳತೆಯನ್ನು ತಿಳಿಸಬೇಕಾಗಿರುವಲ್ಲೂ ಮೊದಲಿನ ದನ್ನೇ ಬಳಸಲಾಗುತ್ತದೆ.
ಎತ್ತುಗೆಗಾಗಿ, ಒಂದು ಗೋಡೆ ಎತ್ತರವಾಗಿರಲಿ, ತಗ್ಗಾಗಿರಲಿ, ಅದರ ಈ ಅಳತೆಯನ್ನು ತಿಳಿಸಲು ಗೋಡೆಯ ಎತ್ತರ ಎನ್ನುತ್ತೇವಲ್ಲದೆ, *ಗೋಡೆಯ ತಗ್ಗು ಎನ್ನುವುದಿಲ್ಲ; ಇದೇ ರೀತಿಯಲ್ಲಿ ಕಣಿವೆಯ ಅಗಲ, ತಂತಿಯ ಉದ್ದ, ಹಲಿಗೆಯ ದಪ್ಪ ಎಂಬಂತಹ ಬಳಕೆಗಳಿವೆಯಲ್ಲದೆ, *ಕಣಿವೆಯ ಸಪುರ, *ತಂತಿಯ ಗಿಡ್ಡ, *ಹಲಿಗೆಯ ತೆಳು ಎಂಬಂತಹ ಬಳಕೆಗಳಿಲ್ಲ.
(1ಕ) ಈ ಗೋಡೆಯ ಎತ್ತರ ಆರು ಅಡಿ.
(1ಚ) *ಈ ಗೋಡೆಯ ತಗ್ಗು ಮೂರಡಿ. (2ಕ) ಈ ತಂತಿಯ ಉದ್ದ ತುಸು ಕಡಿಮೆ ಇದೆ. (2ಚ) *ಈ ತಂತಿಯ ಗಿಡ್ಡ ತುಸು ಕಡಿಮೆ ಇದೆ.
(ಚ) ಮನುಶ್ಯರ ಪರಿಚೆಗಳು: ಮಯ್ಗೆ ಸಂಬಂದಿಸಿದವು ಮತ್ತು ಮನಸ್ಸಿಗೆ ಸಂಬಂದಿಸಿದವು ಎಂಬುದಾಗಿ ಈ ಪದಗಳನ್ನು ಎರಡು ಒಳಗುಂಪು ಗಳಲ್ಲಿ ಇರಿಸಲು ಬರುತ್ತದೆ: ಕುರುಡು, ಕಿವುಡು, ಕುಂಟು ಮೊದಲಾದ ಪರಿಚೆ ಪದಗಳು ಮೊದಲನೆಯ ಒಳಗುಂಪಿಗೂ, ಚುರುಕು, ಬೆಪ್ಪು, ಹೆಡ್ಡು, ಪೋಲಿ ಮೊದಲಾದವು ಎರಡನೆಯ ಒಳಗುಂಪಿಗೂ ಸೇರುತ್ತವೆ.
(ಟ) ವಸ್ತುಗಳ ಪರಿಚೆಗಳು: ಮನುಶ್ಯರಿಗೆ ಮಾತ್ರವೇ ಸಂಬಂದಿಸಿರದೆ, ಬೇರೆ ವಸ್ತುಗಳಿಗೂ ಸಂಬಂದಿಸಿರುವಂತಹ ಪರಿಚೆಗಳು ಹಲವಿವೆ; ಇವುಗಳಲ್ಲಿ ಹಲವು ಅಳತೆಯ ಪರಿಚೆಗಳ ಹಾಗೆ, ಎದುರು ಹುರುಳಿನ ಜೋಡಿಗಳಾಗಿ ಕಾಣಿಸಿ ಕೊಳ್ಳುತ್ತವೆ:
ದೊಡ್ಡ-ಚಿಕ್ಕ ಒದ್ದೆ-ಒಣ ಹರಿತ-ಮೊಂಡು ಬಿಗಿ-ಸಡಿಲು ತಿಳಿ-ಕಲಕು ನುಣುಪು-ದೊರಗು ನೇರ-ಓರೆ ದುಂಡು-ಚಪ್ಪಟೆ
ಆದರೆ, ಅಳತೆಯ ಪರಿಚೆಪದಗಳ ಹಾಗೆ, ಈ ಜೋಡಿಗಳಲ್ಲಿ ಒಂದನ್ನು ಜೋಡಿಯ ಒಟ್ಟು ಪರಿಚೆಯನ್ನು ಗುರುತಿಸುವ ಹೆಸರುಪದವಾಗಿ ಬಳಸಲು ಬರುವುದಿಲ್ಲ.
ಈ ರೀತಿ ಎದುರು ಹುರುಳಿನ ಜೋಡಿಗಳಾಗಿ ಕಾಣಿಸಿಕೊಳ್ಳದ ಬೇರೆ ಹಲವು ಪರಿಚೆಪದಗಳೂ ಈ ಗುಂಪಿನಲ್ಲಿ ಬರುತ್ತವೆ. ಇವುಗಳಲ್ಲಿ ಕೆಲವನ್ನು ಅವುಗಳದೇ ಆದ ಚಿಕ್ಕ ಚಿಕ್ಕ ಒಳಗುಂಪುಗಳಲ್ಲಿ ಸೇರಿಸಿ ಹೇಳಲೂ ಬರುತ್ತದೆ. ಎತ್ತುಗೆಗಾಗಿ, ಮೇಲಿನ ಗುಂಪಿನಲ್ಲೇ ಬರುವ ಸಿಹಿ, ಕಹಿ, ಹುಳಿ, ಸಪ್ಪೆ, ಉಪ್ಪು, ಕನರು ಮೊದಲಾದವುಗಳನ್ನು ರುಚಿಯನ್ನು ತಿಳಿಸುವವೆಂಬ ಒಂದು ಒಳಗುಂಪಿನಲ್ಲಿ ಸೇರಿಸಿ ಹೇಳಲು ಬರುತ್ತದೆ; ಆದರೆ, ಅವುಗಳಲ್ಲಿ ಯಾವ ಎರಡು ಪದಗಳೂ ಎದುರು ಹುರುಳಿನ ಜೋಡಿಗಳಾಗಿ ಕಾಣಿಸಿಕೊಳ್ಳುವುದಿಲ್ಲ.
ಬಣ್ಣಗಳನ್ನು ತಿಳಿಸುವ ಬಿಳಿ, ಕಪ್ಪು, ಕೆಂಪು, ನೀಲಿ, ನೇರಳೆ, ಬೂದು, ಹಸುರು, ಕಂದು, ಕಾವಿ ಮೊದಲಾದವನ್ನು ಇನ್ನೊಂದು ಒಳಗುಂಪಿನಲ್ಲಿ ಸೇರಿಸಿ ಹೇಳಬಹುದು; ಇವುಗಳಲ್ಲೂ ಕೂಡ, ಯಾವ ಎರಡು ಪದಗಳೂ ಎದುರು ಹುರುಳಿನ ಜೋಡಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಕಪ್ಪು-ಬಿಳಿ ಎಂಬುವಕ್ಕೆ ಮಾತ್ರ ಸ್ವಲ್ಪ ಮಟ್ಟಿಗೆ ಇಂತಹ ಬಳಕೆಯಿದೆ.
(ತ) ಬೆಲೆಯ ಪರಿಚೆಗಳು: ವಸ್ತುಗಳ ಬೆಲೆಯನ್ನು ತಿಳಿಸುವ ಅಗ್ಗ, ಅಣ್ಣೆ, ನಲ್ಲ, ನನ್ನಿ, ಹುಸಿ, ಹೊಲ್ಲ, ಚೊಕ್ಕ, ಚೆನ್ನ, ಒಳ್ಳೆ ಮೊದಲಾದ ಪರಿಚೆಪದಗಳನ್ನು ಈ ಗುಂಪಿನಲ್ಲಿ ಸೇರಿಸಿ ಹೇಳಬಹುದು.
(ಪ) ಹರಯದ ಪರಿಚೆಗಳು: ಹೊಸ, ಹಳೆ, ಮುದಿ, ಹುಡುಗು, ಕೊಡ, ಹಿರಿ, ಕಿರಿ ಮೊದಲಾದ ಕೆಲವು ಪದಗಳನ್ನು ಈ ಗುಂಪಿನಲ್ಲಿ ಸೇರಿಸಬಹುದು. ಇವುಗಳಲ್ಲಿ ಹೊಸ-ಹಳೆ ಮತ್ತು ಹಿರಿ-ಕಿರಿ ಎಂಬವುಗಳು ಜೋಡಿಗಳಾಗಿ ಕಾಣಿಸಿಕೊಳ್ಳುತ್ತವೆ.
ಪರಿಚೆಪದಗಳನ್ನು ಈ ರೀತಿ ಹುರುಳನ್ನವಲಂಬಿಸಿ ಗುಂಪಿಸುವಲ್ಲಿ ಒಂದು ತೊಂದರೆಯೇನೆಂದರೆ, ಅವನ್ನು ಎಶ್ಟು ಗುಂಪುಗಳಲ್ಲಿ ವಿಂಗಡಿಸಬೇಕು ಎಂಬು ದನ್ನು ತೀರ್ಮಾನಿಸುವುದು ಕಶ್ಟ. ಎತ್ತುಗೆಗಾಗಿ, ಬಣ್ಣವನ್ನು ಇಲ್ಲವೇ ರುಚಿಯನ್ನು ತಿಳಿಸುವ ಪದಗಳನ್ನು ವಸ್ತುಗಳ ಪರಿಚೆಗಳು ಎಂಬ ಗುಂಪಿನೊಳಗಿರಿಸುವ ಬದಲು, ಬೇರೆಯೇ ಒಂದು ಗುಂಪಿನಲ್ಲಿಯೂ ಇರಿಸಬಹುದು; ಮನುಶ್ಯರ ಪರಿಚೆಗಳು ಮತ್ತು ವಸ್ತುಗಳ ಪರಿಚೆಗಳು ಎಂಬುವನ್ನು ಎರಡು ಬೇರೆ ಬೇರೆ ಗುಂಪುಗಳಲ್ಲಿರಿಸುವ ಬದಲು, ಒಂದೇ ಗುಂಪಿನಲ್ಲಿಯೂ ಇರಿಸಬಹುದು.
ಇದಲ್ಲದೆ, ಕೆಲವು ಪರಿಚೆಪದಗಳನ್ನು ಯಾವ ಗುಂಪಿನಲ್ಲಿರಿಸಬೇಕು ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಎತ್ತುಗೆಗಾಗಿ, ದೊಡ್ಡ ಮತ್ತು ಚಿಕ್ಕ ಎಂಬವುಗಳನ್ನು ವಸ್ತುಗಳ ಉದ್ದಳತೆಯನ್ನು ತಿಳಿಸುವುದಕ್ಕಾಗಿ ಮಾತ್ರವಲ್ಲದೆ, ಮನುಶ್ಯರ ಹರಯವನ್ನು ತಿಳಿಸುವುದಕ್ಕಾಗಿಯೂ ಬಳಸಲಾಗುತ್ತದೆ (ದೊಡ್ಡ ಹುಡುಗ, ದೊಡ್ಡಪ್ಪ); ಹಿರಿ ಪದವನ್ನು ಹರಯವನ್ನು ತಿಳಿಸುವುದಕ್ಕಾಗಿ ಮಾತ್ರ ವಲ್ಲದೆ, ಉದ್ದಳತೆಯನ್ನು ತಿಳಿಸುವುದಕ್ಕಾಗಿಯೂ ಬಳಸಲಾಗುತ್ತದೆ.
ಹೀಗಿದ್ದರೂ, ಕನ್ನಡದಲ್ಲಿ ಪರಿಚೆಪದಗಳು ಎಂತಹ ಹುರುಳುಗಳನ್ನೆಲ್ಲ ತಿಳಿಸು ತ್ತವೆ ಎಂಬುದನ್ನು ಅಡಕವಾಗಿ ಹೇಳಲು ಇಂತಹ ಗುಂಪುಗಳು ನೆರವನ್ನೀಯು ತ್ತವೆ. ಅವುಗಳ ಬಳಕೆಯ ಮೇಲಿರುವ ಕೆಲವು ಕಟ್ಟುಪಾಡುಗಳನ್ನೂ ಇಂತಹ ಗುಂಪುಗಳನ್ನು ಬಳಸಿ ವಿವರಿಸಲು ಬರುತ್ತದೆ.
(2) ಹರವು ಕುಗ್ಗಿಸುವ ಮತ್ತು ಪಾಂಗು ಬದಲಿಸುವ ಪರಿಚೆಪದಗಳು ಹೆಸರುಪದಗಳೊಂದಿಗೆ ಬಳಸಿದಾಗ, ಹೆಚ್ಚಿನ ಪರಿಚೆಪದಗಳೂ ಅವುಗಳ ಹರವನ್ನು ಕಡಿಮೆ ಮಾಡುತ್ತವೆ. ಎತ್ತುಗೆಗಾಗಿ, ಹುಡುಗ ಹೆಸರುಪದಕ್ಕೆ ಚಿಕ್ಕ ಪರಿಚೆಪದವನ್ನು ಸೇರಿಸಿ ನೋಡಬಹುದು: ಹುಡುಗ ಪದ ಗುರುತಿಸಬಲ್ಲ ವ್ಯಕ್ತಿಗಳಿಗಿಂತ ಚಿಕ್ಕ ಹುಡುಗ ಪದಕಂತೆ ಗುರುತಿಸಬಲ್ಲ ವ್ಯಕ್ತಿಗಳ ಎಣಿಕೆ ಕಡಿಮೆಯಾಗಿರುತ್ತದೆ. ಯಾಕೆಂದರೆ, ಹುಡುಗ ಪದ ಯಾವ ವ್ಯಕ್ತಿಗಳನ್ನೆಲ್ಲ ಗುರುತಿಸಬಲ್ಲುದೋ ಅವರಲ್ಲಿ ಚಿಕ್ಕ ಎಂಬ ಪರಿಚೆಯಿರುವ ವ್ಯಕ್ತಿಗಳನ್ನು ಮಾತ್ರ ಚಿಕ್ಕ ಹುಡುಗ ಎಂಬ ಪದಕಂತೆ ಗುರುತಿಸಬಲ್ಲುದು. ಹಾಗಾಗಿ, ಚಿಕ್ಕ ಪರಿಚೆಪದ
ಇಲ್ಲಿ ಹುಡುಗ ಹೆಸರುಪದದ ಹರವನ್ನು ಕಡಿಮೆ ಮಾಡುತ್ತದೆ ಇಲ್ಲವೇ ಕುಗ್ಗಿಸುತ್ತದೆಯೆಂದು ಹೇಳಬಹುದು.
ಇಂತಹದೇ ವ್ಯತ್ಯಾಸವನ್ನು ಹೂವು ಮತ್ತು ಕೆಂಪು ಹೂವು ಎಂಬವುಗಳ ನಡುವೆ, ಮರ ಮತ್ತು ದೊಡ್ಡ ಮರ ಎಂಬವುಗಳ ನಡುವೆ, ಮನೆ ಮತ್ತು ಹೊಸ ಮನೆ ಎಂಬವುಗಳ ನಡುವೆ, ಮತ್ತು ಕಾಯಿ ಮತ್ತು ದೋರೆ ಕಾಯಿ ಎಂಬವುಗಳ ನಡುವೆಯೂ ಕಾಣಬಹುದು.
ಆದರೆ, ಕೆಲವು ಪರಿಚೆಪದಗಳು ಈ ರೀತಿ ಹೆಸರುಪದಗಳ ಹರವನ್ನು ಕುಗ್ಗಿಸುವ ಬದಲು, ಅವುಗಳ ಹುರುಳನ್ನೇ ಮಾರ್ಪಡಿಸಿ, ಅವು ಬೇರೆಯೇ ಪಾಂಗು ಗಳನ್ನು ಗುರುತಿಸುವ ಹಾಗೆ ಮಾಡುತ್ತವೆ. ಎತ್ತುಗೆಗಾಗಿ, ಸುಳ್ಳುಸುದ್ದಿ ಎಂಬ ಹೆಸರುಕಂತೆ ಒಂದು ಬಗೆಯ ಸುದ್ದಿಯನ್ನು ತಿಳಿಸುವ ಬದಲು, ಸುದ್ದಿಯ ಹಾಗೆ ಕಾಣಿಸುವ, ಆದರೂ ಸುದ್ದಿಯಲ್ಲದ ವಿಶಯವೊಂದನ್ನು ತಿಳಿಸುತ್ತದೆ. ಇದೇ ರೀತಿಯಲ್ಲಿ, ಕಳ್ಳಬಸಿರು ಎಂಬುದು ಬಸಿರಲ್ಲದ, ಆದರೂ ಬಸಿರಿನ ಹಲವು ಪರಿಚೆಗಳನ್ನು ತೋರಿಸುವ ಬೇರೊಂದು ಪಾಂಗನ್ನು ತಿಳಿಸುತ್ತದೆ.
ಒಣಹೆಮ್ಮೆ, ಹುಸಿನಗು, ಕಳ್ಳಹಣ ಎಂಬಂತಹವುಗಳಲ್ಲೂ ಇಂತಹ ಪಾಂಗನ್ನು ಬದಲಾಯಿಸುವ ಪರಿಚೆಪದಗಳ ಬಳಕೆಯಾಗಿದೆ. ಕನ್ನಡದಲ್ಲಿ ಈ ರೀತಿ ಪಾಂಗನ್ನು ಬದಲಾಯಿಸುವ ಪರಿಚೆಪದಗಳು ಕೆಲವು ಮಾತ್ರ ಇವೆ. (ಅವುಗಳ ಬಳಕೆಯೂ ಕೆಲವೇ ಕೆಲವು ಹೆಸರುಪದಗಳೊಂದಿಗೆ ಮಾತ್ರ ಕಾಣಿಸಿ ಕೊಳ್ಳುತ್ತವೆ; ಹಾಗಾಗಿ, ಈ ಪದಗಳೊಂದಿಗೆ ಬರುವ ಹೆಸರುಪದಗಳನ್ನು ಹೆಸರು ಕಂತೆಗಳೆನ್ನುವ ಬದಲು ಜೋಡುಪದಗಳೆಂದೂ ಹೇಳಲು ಬರುತ್ತದೆ). ಇಂತಹ ಕೆಲವೇ ಕೆಲವು ಪರಿಚೆಪದಗಳನ್ನು ಹೊರತುಪಡಿಸಿ, ಉಳಿದ ಪರಿಚೆಪದಗಳೆಲ್ಲವೂ ಹೆಸರುಪದಗಳ ಹರವನ್ನು ಕುಗ್ಗಿಸುವುದಕ್ಕಾಗಿಯೇ ಬಳಕೆಯಾಗುತ್ತವೆ.
ಈ ಎರಡು ಬಗೆಯ ಪರಿಚೆಪದಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಪಾಂಗನ್ನು ಬದಲಾಯಿಸುವ ಪದಗಳೊಂದಿಗೆ ಹಂತಗಳನ್ನು ತಿಳಿಸುವ ಪರಿಚೆಪದಗಳನ್ನು ಬಳಸಲು ಬರುವುದಿಲ್ಲ, ಮತ್ತು ಹೋಲಿಕೆಯ ಇಟ್ಟಳಗಳಲ್ಲೂ ಅವನ್ನು ಬಳಸಲು ಬರುವುದಿಲ್ಲ.
ಎತ್ತುಗೆಗಾಗಿ, ಉದ್ದ ಪರಿಚೆಪದದೊಂದಿಗೆ ಹಂತವನ್ನು ತಿಳಿಸುವ ತುಂಬಾ ಇಲ್ಲವೇ ತುಸು ಪದಗಳನ್ನು ಬಳಸಲು ಬರುತ್ತದೆ (ತುಂಬಾ ಉದ್ದ ಕೋಲು, ತುಸು ಉದ್ದ ಕೋಲು); ಅದರೆ, ಸುಳ್ಳು ಇಲ್ಲವೇ ಹುಸಿ ಪದದೊಂದಿಗೆ ಅವನ್ನು ಬಳಸಲು ಬರುವುದಿಲ್ಲ (*ತುಂಬಾ ಸುಳ್ಳುಸುದ್ದಿ). ಇದೇ ರೀತಿಯಲ್ಲಿ, ಉದ್ದ ಪರಿಚೆಪದವನ್ನು ಹೋಲಿಕೆಯನ್ನು ತಿಳಿಸುವ ಇಟ್ಟಳದಲ್ಲಿ ಬಳಸಲು ಬರುತ್ತದೆ; ಆದರೆ, ಪಾಂಗನ್ನು ಬದಲಾಯಿಸುವ ಸುಳ್ಳು ಇಲ್ಲವೇ ಹುಸಿ ಪದವನ್ನು ಅಂತಹ ಇಟ್ಟಳದಲ್ಲಿ ಬಳಸಲು ಬರುವುದಿಲ್ಲ.
ತುಂಬಾ ಉದ್ದ ಕೋಲು ನಮ್ಮಲ್ಲಿಲ್ಲ. (3ಕ) (3ಚ) ಆತ ನನಗೆ ತುಂಬಾ ಸುಳ್ಳುಹಣ ಕೊಟ್ಟಿದ್ದಾನೆ. (4ಕ) ಅವನಿಗೆ ಇದಕ್ಕಿಂತಲೂ ಉದ್ದ ದೋಟಿ ಬೇಕಾಗಿದೆ. (4ಚ) *ಅವನಲ್ಲಿ ಇದಕ್ಕಿಂತಲೂ ಸುಳ್ಳುಹಣ ಇದೆ.
(3ಕ) ಸೊಲ್ಲಿನಲ್ಲಿ ತುಂಬಾ ಪದ ಉದ್ದ ಎಂಬುದರ ಮೇಲಿನ ಹಂತವನ್ನು ತಿಳಿಸುತ್ತದೆ; ಆದರೆ, (3ಚ)ದಲ್ಲಿ ಅದು ಆ ರೀತಿ ಸುಳ್ಳು ಪರಿಚೆಪದದ ಮೇಲಿನ ಹಂತವನ್ನು ತಿಳಿಸಲಾರದು; ಯಾಕೆಂದರೆ, ಸುಳ್ಳು ಪದಕ್ಕೆ ಹಂತಗಳಿಲ್ಲ. ಇದಕ್ಕೆ ಬದಲು, ಅದು (3ಚ)ದಲ್ಲಿ ಹಣ ಹೆಸರುಪದದ ಪರಿಚೆಯನ್ನು (‘ತುಂಬಾ ಹಣ’ ಎಂಬುದನ್ನು) ತಿಳಿಸುತ್ತದೆ.
ಇದೇ ರೀತಿಯಲ್ಲಿ ಹೋಲಿಕೆಯನ್ನು ತಿಳಿಸುವ ನುಡಿತವನ್ನು (4ಕ)ದಲ್ಲಿ ಉದ್ದ ಪದದೊಂದಿಗೆ ಬಳಸಲಾಗಿದ್ದು, ಆ ಸೊಲ್ಲು ಸರಿಯಾಗಿದೆ; ಆದರೆ, (4ಚ)ದಲ್ಲಿ ಅದನ್ನೇ ಸುಳ್ಳು ಪದದೊಂದಿಗೆ ಬಳಸಲಾಗಿದ್ದು, ಅದು ಸರಿಯಾಗಿಲ್ಲ.
ಆದರೆ, ಹೆಸರುಪದಗಳ ಹರವನ್ನು ಕುಗ್ಗಿಸುವ ಎಲ್ಲಾ ಪರಿಚೆಪದಗಳನ್ನೂ ಈ ರೀತಿ ಹಂತವನ್ನು ತಿಳಿಸುವ ಪದಗಳೊಂದಿಗೆ ಇಲ್ಲವೇ ಹೋಲಿಕೆಯನ್ನು ತಿಳಿಸುವ ಇಟ್ಟಳಗಳಲ್ಲಿ ಬಳಸಲು ಬರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಎತ್ತುಗೆಗಾಗಿ, ತಪ್ಪು, ಸರಿ ಎಂಬಂತಹ ಪರಿಚೆಪದಗಳು ಹೆಸರುಪದಗಳ ಹರವನ್ನು ಕುಗ್ಗಿಸುತ್ತವೆಯಾದರೂ, ಅವನ್ನು ಹಂತವನ್ನು ತಿಳಿಸುವ ಪದ ಗಳೊಂದಿಗೆ, ಇಲ್ಲವೇ ಹೋಲಿಕೆಯನ್ನು ತಿಳಿಸುವ ಇಟ್ಟಳಗಳಲ್ಲಿ ಬಳಸಲು ಬರುವುದಿಲ್ಲ (6.3.4 ನೋಡಿ).
(5ಕ) ಅವನು ತುಂಬಾ ತಪ್ಪು ಕೆಲಸ ಮಾಡಿದ್ದಾನೆ. (5ಚ) ಅವನು ತುಂಬಾ ತಪ್ಪು ಮಾಡಿದ್ದಾನೆ. (5ಟ) *ಅವನು ನನಗಿಂತ ತಪ್ಪು ಕೆಲಸ ಮಾಡಿದ್ದಾನೆ.
ಪದದ
ಕೆಲಸ
(5ಕ)ದಲ್ಲಿ
ತುಂಬಾ ಎಂಬುದು
ಪರಿಚೆಯನ್ನು ತಿಳಿಸುತ್ತದಲ್ಲದೆ ತಪ್ಪು ಎಂಬುದರ ಪರಿಚೆಯನ್ನು ತಿಳಿಸುವುದಿಲ್ಲ ಎಂಬುದನ್ನು ಗಮನಿಸಬಹುದು. (5ಚ)ದಲ್ಲಿ ಅದೇ ಪರಿಚೆಪದ ತಪ್ಪು ಎಂಬುದರ ಪರಿಚೆಯನ್ನೇನೋ ತಿಳಿಸುತ್ತದೆ; ಆದರೆ, ಇಲ್ಲಿ ತಪ್ಪು ಪದ ಒಂದು ಹೆಸರು ಪದವಾಗಿ ಬಳಕೆಯಾಗಿದೆ. ಈ ಎರಡು ಕಡೆಗಳಲ್ಲೂ ತುಂಬಾ ಎಂಬುದು ‘ಹಲವು’ ಎಂಬ ಹುರುಳಿನಲ್ಲಿ ಬಂದಿದೆಯಲ್ಲದೆ, ಮೇಲಿನ ಹಂತವನ್ನು ತಿಳಿಸುವ ಹುರುಳಿನಲ್ಲಿ ಬಂದಿಲ್ಲ.
ಹರವನ್ನು ಕುಗ್ಗಿಸುವ ಪರಿಚೆಪದಗಳಿಗೂ ಪಾಂಗನ್ನು ಬದಲಿಸುವ ಪರಿಚೆಪದ ಗಳಿಗೂ ನಡುವೆ ಅವನ್ನು ಬಳಸಿದ ಸೊಲ್ಲುಗಳಿಗಿರುವ ಒಳಹುರುಳುಗಳ
ಮಟ್ಟಿಗೂ ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ನನ್ನ ಕಯ್ಯಲ್ಲಿರುವುದು ಬಿಳಿ ಚೆಂಡು.
(6ಕ) (6ಚ) ನನ್ನ ಕಯ್ಯಲ್ಲಿರುವುದು ಚೆಂಡು. (6ಟ) ನನ್ನ ಕಯ್ಯಲ್ಲಿರುವುದು ಬಿಳಿಯದು (7ಕ) (7ಚ) ನನ್ನ ಕಯ್ಯಲ್ಲಿರುವುದು ಹಣ.
ನನ್ನ ಕಯ್ಯಲ್ಲಿರುವುದು ಕಳ್ಳಹಣ.
(6ಕ) ಸೊಲ್ಲಿನಿಂದ (6ಚ) ಮತ್ತು (6ಟ) ಸೊಲ್ಲುಗಳನ್ನು ಒಳಹುರುಳು ಗಳಾಗಿ ಪಡೆಯಲು ಬರುತ್ತದೆ; ಆದರೆ, (7ಕ) ಸೊಲ್ಲಿನಿಂದ (7ಚ) ಸೊಲ್ಲನ್ನು ಆ ರೀತಿ ಒಳಹುರುಳಾಗಿ ಪಡೆಯಲು ಬರುವುದಿಲ್ಲ. ಬಿಳಿಚೆಂಡಿರುವವನ ಹತ್ತಿರ ಚೆಂಡು ಇದೆ ಎನ್ನಬಹುದು, ಆದರೆ, ಕಳ್ಳಹಣ ಇರುವವನ ಹತ್ತಿರ ಹಣ ಇದೆ ಎನ್ನಲು ಬರುವುದಿಲ್ಲ. ಯಾಕೆಂದರೆ, ಅದು ಹಣವೇ ಅಲ್ಲ. (ಕಳ್ಳ ಎಂಬುದು ಇಲ್ಲಿ ಹಣ ಪದ ಗುರುತಿಸುವ ಪಾಂಗನ್ನೇ ಬದಲಾಯಿಸುತ್ತದೆ ಎಂಬುದೇ ಇದಕ್ಕೆ ಕಾರಣ.)
(3) ಹರವು ಕುಗ್ಗಿಸುವ ಪರಿಚೆಪದಗಳ ಬಗೆಗಳು ಹೆಚ್ಚಿನ ಪರಿಚೆಪದಗಳನ್ನೂ ಹೆಸರುಪದಗಳ ಹರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಆದರೆ, ಈ ಕೆಲಸವನ್ನು ಅವೆಲ್ಲವೂ ಒಂದೇ ಬಗೆಯಲ್ಲಿ ನಡೆಸುವುದಿಲ್ಲ; ಯಾವ ರೀತಿಯಲ್ಲಿ ಅವು ಈ ಕೆಲಸವನ್ನು ನಡೆಸುತ್ತವೆ ಎಂಬುದನ್ನವಲಂಬಿಸಿ, ಇಂತಹ ಪದಗಳನ್ನು ಜೋಡಿಪರಿಚೆ, ಪಟ್ಟಿಪರಿಚೆ, ಮತ್ತು ಹಂತಪರಿಚೆಗಳೆಂಬುದಾಗಿ ಮೂರು ಗುಂಪಿಸಲು ಬರುತ್ತದೆ.
ಗುಂಪುಗಳಲ್ಲಿ
(ಕ) ಕೆಲವು ಪರಿಚೆಪದಗಳು ಜೋಡಿಗಳಾಗಿ ಬಳಕೆಯಾಗುತ್ತಿದ್ದು, ಆ ಜೋಡಿಗಳು ತಿಳಿಸುವ ಪರಿಚೆಗಳಲ್ಲಿ ಒಂದು ‘ಇಲ್ಲ’ವೆಂದಾದಾಗ ಇನ್ನೊಂದು ‘ಇದೆ’ಯೆಂಬ ಹುರುಳು ದೊರಕುತ್ತದೆ. ಇಂತಹ ಪರಿಚೆಪದಗಳನ್ನು ಜೋಡಿ ಪರಿಚೆಗಳೆಂದು ಕರೆಯಬಹುದು.
ಎತ್ತುಗೆಗಾಗಿ, ತಪ್ಪು ಮತ್ತು ಸರಿ ಎಂಬ ಎರಡು ಪರಿಚೆಪದಗಳನ್ನು ಗಮನಿಸಬಹುದು: ಇವು ಒಂದು ಜೋಡಿಯಾಗಿ ಬಳಕೆಯಾಗುತ್ತವೆ; ಒಂದು ವಿಶಯ ತಪ್ಪಲ್ಲವಾದರೆ, ಅದನ್ನು ಸರಿಯೆಂದು ಹೇಳಲು ಬರುತ್ತದೆ, ಮತ್ತು ಅದು ಸರಿಯಲ್ಲವಾದರೆ ತಪ್ಪು ಎಂದು ಹೇಳಲು ಬರುತ್ತದೆ.
(8ಕ) ಇದು ಸರಿ ಲೆಕ್ಕವಲ್ಲ, ತಪ್ಪು ಲೆಕ್ಕ. (8ಚ) ಅವನದು ತಪ್ಪು ಮಾತಲ್ಲ, ಸರಿ ಮಾತು.
(ಚ) ಇನ್ನೊಂದು ಬಗೆಯ ಪರಿಚೆಪದಗಳನ್ನು ಪಟ್ಟಿಮಾಡಿ ಹೇಳಲು ಬರುತ್ತದೆ; ಆದರೆ, ಒಂದೊಂದು ಪಟ್ಟಿಯಲ್ಲೂ ಎರಡಕ್ಕಿಂತ ಹೆಚ್ಚು ಪದಗಳು ಬರುತ್ತವೆ; ಹಾಗಾಗಿ, ಅವುಗಳಲ್ಲಿ ಒಂದು ಇಲ್ಲವೆಂದು ತಿಳಿದಿರುವಾಗ, ಉಳಿದ ಪರಿಚೆಗಳಲ್ಲಿ ಯಾವುದು ಇರಬಹುದು ಎಂಬುದನ್ನು ತೀರ್ಮಾನಿಸಲು ಬರುವುದಿಲ್ಲ.
ಎತ್ತುಗೆಗಾಗಿ, ಪಾಂಗುಗಳ ಬಣ್ಣವನ್ನು ತಿಳಿಸುವ ಕೆಂಪು, ಕಪ್ಪು, ನೀಲಿ, ಕಂದು, ನೇರಳೆ, ಬೂದು, ಹಸುರು, ಹಳದಿ, ಮೊದಲಾದ ಪರಿಚೆಪದಗಳ ಬಳಕೆಯನ್ನು ಗಮನಿಸಬಹುದು; ಇವನ್ನೆಲ್ಲ ಒಟ್ಟಿಗೆ ಒಂದು ‘ಬಣ್ಣದ ಪಟ್ಟಿ’ಯಲ್ಲಿ ಇರಿಸಲು ಬರುತ್ತದೆ; ಆದರೆ, ಈ ಒಂದು ಪಟ್ಟಿಯಲ್ಲಿ ಹಲವು ಪರಿಚೆಪದಗಳು ಸೇರಿಕೊಳ್ಳುವ ಕಾರಣ, ಒಂದು ವಸ್ತು ಈ ಬಣ್ಣಗಳಲ್ಲಿ ಒಂದನ್ನು ಪಡೆದಿಲ್ಲ ವಾದರೆ (ಎತ್ತುಗೆಗಾಗಿ, ಒಂದು ಹೂ ಕೆಂಪು ಗುಲಾಬಿಯಲ್ಲವಾದರೆ), ಉಳಿದ ಬಣ್ಣಗಳಲ್ಲಿ ಅದರ ಬಣ್ಣ ಯಾವುದಿರಬಹುದು ಎಂಬುದನ್ನು ನೋಡದೆ ಹೇಳಲು ಬರುವುದಿಲ್ಲ; ಅದು ಬೇರೆ ಯಾವ ಬಣ್ಣದಲ್ಲೂ ಇರಬಲ್ಲುದು (ಬಿಳಿ ಗುಲಾಬಿ ಯಿರಬಹುದು, ಇಲ್ಲವೇ ಹಳದಿ ಗುಲಾಬಿಯಿರಬಹುದು).
ಸಿಹಿ, ಕಹಿ, ಹುಳಿ, ಕಾರ, ಉಪ್ಪು, ಚೊಗರು ಮೊದಲಾದ ರುಚಿಗಳನ್ನು ತಿಳಿಸುವ ಪರಿಚೆಪದಗಳೂ ಇಂತಹವೇ; ಅವನ್ನೆಲ್ಲ ಒಟ್ಟಿಗೆ ‘ರುಚಿಯ ಪಟ್ಟಿ’ ಯೆಂಬ ಇನ್ನೊಂದು ಪಟ್ಟಿಯಲ್ಲಿ ಇರಿಸಲು ಬರುತ್ತದೆ; ಆದರೆ, ಒಂದು ವಸ್ತುವಿಗೆ ಈ ರುಚಿಗಳಲ್ಲಿ ಒಂದು ಇಲ್ಲವೆಂದು ತಿಳಿದಿರುವಲ್ಲಿ, ಉಳಿದವುಗಳಲ್ಲಿ ಯಾವ ರುಚಿ ಅದಕ್ಕೆ ಇರಬಹುದು ಎಂಬುದನ್ನು ಅದರ ರುಚಿ ನೋಡದೆ ಹೇಳಲು ಬರುವುದಿಲ್ಲ; ಹುಳಿಯಿಲ್ಲದುದು ಕಾರ ಇರಬಹುದು, ಸಿಹಿಯಿರಬಹುದು, ಇಲ್ಲವೇ ಕಹಿಯಿರಬಹುದು.
ಇಂತಹ ಪಟ್ಟಿಗಳಲ್ಲಿ ಬರುವ ಪರಿಚೆಪದಗಳನ್ನು ಪಟ್ಟಿಪರಿಚೆಗಳೆಂದು ಕರೆಯ
ಬಹುದು.
(ಟ) ಇನ್ನು ಕೆಲವು ಪರಿಚೆಪದಗಳನ್ನು ಒಂದು ಅಳತೆಪಟ್ಟಿಯಲ್ಲಿ ಜೋಡಿ ಸಿಡಲು ಬರುತ್ತದೆ; ಅವುಗಳಲ್ಲಿ ಒಂದು ಪರಿಚೆಪದ ಈ ಪಟ್ಟಿಯ ಒಂದು ತುದಿಯಲ್ಲಿ ಬರುತ್ತದೆ, ಮತ್ತು ಇನ್ನೊಂದು ಪರಿಚೆಪದ ಅದರ ಇನ್ನೊಂದು ತುದಿಯಲ್ಲಿ ಬರುತ್ತದೆ; ಉಳಿದ ಪರಿಚೆಪದಗಳು ಈ ಎರಡು ಪದಗಳ ನಡುವೆ ಬರುತ್ತವೆ.
ಇದಲ್ಲದೆ, ಇಂತಹ ಪಟ್ಟಿಗಳಲ್ಲಿ ಅವುಗಳ ಎರಡು ಕೊನೆಗಳಲ್ಲಿ ಬರುವ ಪರಿಚೆಪದಗಳು ಮಾತ್ರವಲ್ಲದೆ, ನಡುವೆ ಬರುವಂತಹ ಇನ್ನೊಂದು ಪರಿಚೆ ಪದವೂ ಇರಬಲ್ಲುದು. ಎತ್ತುಗೆಗಾಗಿ, ತೆಳು, ದಪ್ಪ ಮತ್ತು ಅಳಕ ಎಂಬ ಮೂರು ಪರಿಚೆಪದಗಳನ್ನು ಒಂದು ಪಟ್ಟಿಯಲ್ಲಿ ಇರಿಸಲು ಬರುತ್ತದೆ;
ಇವುಗಳಲ್ಲಿ ತೆಳು ಎಂಬುದು ಪಟ್ಟಿಯ ಒಂದು ಕೊನೆಯಲ್ಲೂ, ದಪ್ಪ ಎಂಬುದು ಇನ್ನೊಂದು ಕೊನೆಯಲ್ಲೂ ಬರುತ್ತವೆ; ‘ತೆಳುವೂ ಅಲ್ಲ ದಪ್ಪವೂ ಅಲ್ಲ’ ಎಂಬ ಹುರುಳಿರುವ ಅಳಕ ಎಂಬುದು ಈ ಪಟ್ಟಿಯ ನಡುವೆ ಬರುತ್ತದೆ (ತೆಳು ಮೊಸರು, ದಪ್ಪ ಮೊಸರು, ಅಳಕ ಮೊಸರು).
ಇಂತಹ ಒಂದು ಪಟ್ಟಿಯಲ್ಲಿ ಅದರ ನಡುವಿನ ಪರಿಚೆಯನ್ನು ತಿಳಿಸುವ ಪರಿಚೆಪದ ಇಲ್ಲದಿದ್ದರೂ, ನಡುವಿನ ಜಾಗವೆಂಬುದೊಂದಿದ್ದು, ಆ ಪಟ್ಟಿಯಲ್ಲಿ ಬರುವ ಪರಿಚೆಪದಗಳನ್ನು ಈ ಜಾಗದ ಮೇಲೆ ಮತ್ತು ಕೆಳಗೆ ಒಂದು ಓರಣ ದಲ್ಲಿ ಇರಿಸಲು ಬರುತ್ತದೆ.
ಎತ್ತುಗೆಗಾಗಿ, ದೊಡ್ಡ ಮತ್ತು ಚಿಕ್ಕ ಎಂಬವು ಬರುವ ಪಟ್ಟಿಯಲ್ಲಿ ಅವುಗಳ ನಡುವೆ ಬರಬಲ್ಲ ಮೂರನೇ ಪರಿಚೆಪದ ಇಲ್ಲ; ದೊಡ್ಡ ಎಂಬುದು ಈ ಪಟ್ಟಿಯ ಒಂದು ಬದಿಯಲ್ಲಿ ಬರುತ್ತದೆ, ಮತ್ತು ಚಿಕ್ಕ ಎಂಬುದು ಇನ್ನೊಂದು ಬದಿಯಲ್ಲಿ ಬರುತ್ತದೆ. ಹಾಗಿದ್ದರೂ, ಒಂದು ವಸ್ತು ದೊಡ್ಡದಲ್ಲವಾದರೆ, ಅದು ಚಿಕ್ಕದೆಂದು ಹೇಳಲು ಬರುವುದಿಲ್ಲ; ಯಾಕೆಂದರೆ, ಅದು ‘ದೊಡ್ಡದೂ ಅಲ್ಲದೆ ಮತ್ತು ಚಿಕ್ಕದೂ ಅಲ್ಲದೆ’ ಇರಬಲ್ಲುದು. ಹಾಗಾಗಿ, ಈ ಅಳತೆಪಟ್ಟಿಯಲ್ಲಿ ನಡುವಿನ ಜಾಗವನ್ನು ತಿಳಿಸುವ ಪರಿಚೆಪದ ಇಲ್ಲದಿದ್ದರೂ, ಜಾಗವಂತೂ ಇದ್ದೇ ಇದೆ.
ಇಂತಹ ಪರಿಚೆಪದಗಳನ್ನೆಲ್ಲ ಅವು ಬರುವ ಪಟ್ಟಿಯ ಹಂತಗಳೆಂಬುದಾಗಿ ತಿಳಿಯಬಲ್ಲೆವಾದ ಕಾರಣ, ಈ ಪದಗಳನ್ನು ಹಂತಪರಿಚೆಗಳೆಂಬುದಾಗಿ ಹೆಸರಿಸ ಬಹುದು.
ನಿಜಕ್ಕೂ ದೊಡ್ಡ-ಚಿಕ್ಕ ಅಳತೆಪಟ್ಟಿಯಲ್ಲಿ ಬರಬಲ್ಲ ಪರಿಚೆಪದಗಳು ಕನ್ನಡ ದಲ್ಲಿ ಹಲವಿವೆ. ಈ ಪದಗಳಲ್ಲಿ ಕೆಲವನ್ನು ಅಳತೆಪಟ್ಟಿಯ ನಡುವಿರುವ ಜಾಗಕ್ಕಿಂತ ಮೇಲೆ ಬರುವವು, ಮತ್ತು ಉಳಿದುವನ್ನು ಅದರ ಕೆಳಗೆ ಬರುವವು ಎಂಬುದಾಗಿ ಅವನ್ನು ಅಣಿಗೊಳಿಸಲು ಬರುತ್ತದೆ. ಇಂತಹ ಪದಗಳನ್ನು ಕೆಳಗೆ ಪಟ್ಟಿಮಾಡಲಾಗಿದ್ದು, ಅವುಗಳಿಗಿರುವ ಬಳಕೆಗಳಲ್ಲಿ ಒಂದೊಂದನ್ನು ಅವುಗಳ ಮುಂದೆ ತೋರಿಸಿಕೊಡಲಾಗಿದೆ:
ದೊಡ್ಡ-ಚಿಕ್ಕ ಅಳತೆಪಟ್ಟಿ:
ಕೆಳಗಿನ ಪರಿಚೆಪದಗಳು
ಮೇಲಿನ ಪರಿಚೆಪದಗಳು ದೊಡ್ಡ (ದೊಡ್ಡ ಮನೆ) ಚಿಕ್ಕ (ಚಿಕ್ಕ ಮನೆ) ಎಕ್ಕಲ (ಎಕ್ಕಲ ಕಟ್ಟಡ) ಚಿಕಣಿ (ಚಿಕಣಿ ತಿಟ್ಟ) ಕಂಡೆಯ (ಕಂಡೆಯ ಸಿರಿ) ನಸು (ನಸು ನಗೆ) ಮಲ್ಲ (ಮಲ್ಲ ಕೆಲಸ) ಹೇರ್ (ಹೇರಾನೆ)
ಹಿರಿ (ಹಿರಿ ಬೆಲೆ)
ಏನಿಕೆ (ಏನಿಕೆ ಕೆಲಸ) ಮರಿ (ಮರಿ ಮುಗಿಲು) ಕಿರಿ (ಕಿರಿ ಗೆಜ್ಜೆ) ಕೂಚು (ಕೂಚು ಗಡ್ಡ)
ಕಡು (ಕಡು ಮಿಂಚು)
ಕಿರು (ಕಿರುಗಾಣಿಕೆ) ಪೇರ್ (ಪೇರರಸು) ಕುರು (ಕುರುಗಡ್ಡ) ತನಿ (ತನಿ ತುಂಡು) ಪುಟ್ಟ (ಪುಟ್ಟ ಹುಡುಗ) ಆನೆ (ಆನೆ ಸೊಳ್ಳೆ) ಉರುವ (ಉರುವ ಕತೆ) ಚೀಕು (ಚೀಕು ಕಾಳು)
ಬಿಣ್ (ಬಿಣ್ಗೊನೆ)
ಹೆಗ್ (ಹೆಗ್ಗಳ್ಳ)
ಎಕ್ಕಟ (ಎಕ್ಕಟ ಮರ)
ಚಿನ್ನ (ಚಿನ್ನಾಟ) ಸೀರು (ಸೀರ್ಮೀನು) ಗುನ್ನ (ಗುನ್ನಾನೆ)
ಈ ಅಳತೆಪಟ್ಟಿಯ ನಡುಜಾಗದಿಂದ ಕೆಳಗೆ ಬರಬಲ್ಲ ಕೀಟು (ಕೀಟು ಕೆಲಸ), ಬಡ (ಬಡ ಕೆಲಸ), ಚಿಟ್ಟು (ಚಿಟ್ಟು ಗುಬ್ಬಿ), ಚಿಣ್ಣ, ಗುಚ್ಚು, ಪಿಳ್ಳ ಮೊದಲಾದ ಬೇರೆಯೂ ಕೆಲವು ಪರಿಚೆಪದಗಳಿವೆ.
ದೊಡ್ಡ-ಚಿಕ್ಕ ಅಳತೆಪಟ್ಟಿಯಲ್ಲಿ ಬರುವ ಈ ಪದಗಳಲ್ಲಿ ಎಕ್ಕಲ, ಕಂಡೆಯ ಎಂಬಂತಹ ಕೆಲವು ಪದಗಳು ದೊಡ್ಡ ಪದಕ್ಕಿಂತಲೂ ಮೇಲೆ ಬರುತ್ತವೆ, ಮತ್ತು ಸೀರು, ಚೀಕು ಎಂಬಂತಹ ಬೇರೆ ಕೆಲವು ಪದಗಳು ಚಿಕ್ಕ ಪದಕ್ಕಿಂತಲೂ ಕೆಳಗೆ ಬರುತ್ತವೆ. ಉಳಿದ ಪದಗಳನ್ನು ಯಾವ ಓರಣದಲ್ಲಿರಿಸಬೇಕು ಎಂಬ ವಿಶಯ ದಲ್ಲಿ ಏನನ್ನೂ ಕಂಡಿತವಾಗಿ ಹೇಳಲು ಬರುವುದಿಲ್ಲ. ಹಾಗಿದ್ದರೂ, ಅವುಗಳಲ್ಲಿ ಯಾವುವು ನಡುಜಾಗದಿಂದ ಮೇಲೆ ನಿಲ್ಲುತ್ತವೆ ಮತ್ತು ಯಾವುವು ಅದರ ಕೆಳಗೆ ನಿಲ್ಲುತ್ತವೆ ಎಂಬ ವಿಶಯದಲ್ಲಿ ಯಾವ ಸಂಶಯವೂ ಇಲ್ಲ.
ಪಟ್ಟಿಯ ಮೇಲೆ ಇಲ್ಲವೇ ಕೆಳಗೆ ಬರುವ ಪದಗಳ ನಡುವಿನ ಮುಕ್ಯ ವ್ಯತ್ಯಾಸ ಅವು ಎಂತಹ ಹೆಸರುಪದಗಳೊಂದಿಗೆ ಬರುತ್ತವೆ ಎಂಬುದರಲ್ಲಿದೆ. ಎಲ್ಲಾ ಪರಿಚೆಪದಗಳನ್ನೂ ಎಲ್ಲಾ ಬಗೆಯ ಹೆಸರುಪದಗಳೊಂದಿಗೂ ಬಳಸಲು ಬರುವು ದಿಲ್ಲ. ಹಾಗಾಗಿ, ಮೇಲೆ ಪರಿಚೆಪದಗಳನ್ನು ಪಟ್ಟಿಮಾಡುವಾಗ, ಅವುಗಳೊಂದಿಗೆ ಸುಳುವಾಗಿ ಬರಬಲ್ಲ ಹೆಸರುಪದವೊಂದನ್ನು ಎತ್ತುಗೆಯಾಗಿ ಕೊಡಲಾಗಿದೆ.
ಉದ್ದ-ಗಿಡ್ಡ ಎಂಬ ಇನ್ನೊಂದು ಅಳತೆಪಟ್ಟಿಯಲ್ಲಿ ಬರಬಲ್ಲ ಪರಿಚೆಪದ ಗಳನ್ನೂ ಪಟ್ಟಿಯ ನಡುವಿನ ಜಾಗಕ್ಕಿಂತ ಮೇಲೆ ಮತ್ತು ಕೆಳಗೆ ಬರುವವುಗ ಳೆಂಬುದಾಗಿ ಗುಂಪಿಸಲು ಬರುತ್ತದೆ:
ಉದ್ದ-ಗಿಡ್ಡ ಅಳತೆಪಟ್ಟಿ:
ಮೇಲಿನ ಪರಿಚೆಪದಗಳು
ಉದ್ದ (ಉದ್ದ ಹಗ್ಗ)
ಕೆಳಗಿನ ಪರಿಚೆಪದಗಳು ಗಿಡ್ಡ (ಗಿಡ್ಡ ಮೂತಿ)
ಜಂಬು (ಜಂಬು ಹುಲ್ಲು) ಕಿತ್ತು (ಕಿತ್ತಂಬು) ನೀಳ (ನೀಳ ನಾಲಿಗೆ) ಕೂಲು (ಕೂಲು ಬಲೆ) ಚಲ್ಲೆ (ಚಲ್ಲೆಗಣ್ಣು) ದಾಟು (ದಾಟು ಹೊಲಿಗೆ) ಗುಜುರು (ಗುಜುರು ಕೊಂಬು)
ಪೀಚು (ಪೀಚು ಗಡ್ಡ) ಗುಜ್ಜು (ಗುಜ್ಜು ಕಾಲು) ಗುಡ್ಡ (ಗುಡ್ಡ ಕೊಂಬು)
ನೀಟ (ನೀಟ ಬಿದಿರು) ನಿಡು (ನಿಡುಗೊರಲು) ನಿಟ್ಟು (ನಿಟ್ಟೆಲುಬು) ಕೋಲು (ಕೋಲು ಬಲೆ) ಕುರು (ಕುರುಗಡ್ಡ)
ಮೊಟ್ಟ (ಮೊಟ್ಟ ಕಿರುಬ) ಮಟ್ಟು (ಮಟ್ಟು ಮೂಗು) ಮೊಟಕು (ಮೊಟಕು ಕತ್ತಿ)
ಮೇಲಿನ ಅಳತೆಪಟ್ಟಿಯಲ್ಲಿ ನಡುಜಾಗದ ಕೆಳಗೆ ಬರಬಲ್ಲ ಕುಂಟು ಮತ್ತು
ಕುಳ್ಳು ಎಂಬ ಬೇರೆ ಎರಡು ಪರಿಚೆಪದಗಳೂ ಇವೆ.
ದಪ್ಪ-ತೆಳು ಎಂಬ ಇನ್ನೊಂದು ಅಳತೆಪಟ್ಟಿಯಲ್ಲಿ ಬರಬಲ್ಲ ಕೆಲವು
ಪರಿಚೆಪದಗಳನ್ನು ಕೆಳಗೆ ಕೊಡಲಾಗಿದೆ:
ದಪ್ಪ-ತೆಳು ಅಳತೆಪಟ್ಟಿ:
ಮೇಲಿನ ಪರಿಚೆಪದಗಳು ದಪ್ಪ (ದಪ್ಪ ಹಲಿಗೆ) ದಟ್ಟ (ದಟ್ಟ ಕೂದಲು) ಎಟ್ಟೆ (ಎಟ್ಟೆ ಹಾಲು) ತಿಣ್ಣ (ತಿಣ್ಣ ಕೊಂಬು) ದೊಣ್ಣೆ (ದೊಣ್ಣೆ ಮೂಗು) ತೋರ (ತೋರ ತೊಡೆ)
ಕೆಳಗಿನ ಪರಿಚೆಪದಗಳು ತೆಳು (ತೆಳು ಹಲಿಗೆ) ಸೆಳೆ (ಸೆಳೆ ಕೊಂಬು) ಬಡ (ಬಡ ನಡು) ಸಳ್ಳೆ (ಸಳ್ಳೆ ಕೋಲು)
ಮೇಲೆ ತಿಳಿಸಿದ ಹಾಗೆ, ಈ ಪರಿಚೆಪಟ್ಟಿಯ ನಡುಜಾಗದಲ್ಲಿ ಬರಬಲ್ಲ ಅಳಕ
ಎಂಬ ಪದವೂ ಇದೆ.
ಜೋಡಿಪರಿಚೆಗಳಿಗೂ ಉಳಿದ ಎರಡು ಬಗೆಯ (ಪಟ್ಟಿ ಮತ್ತು ಹಂತ) ಪರಿಚೆಗಳಿಗೂ ನಡುವಿರುವ ಮುಕ್ಯ ವ್ಯತ್ಯಾಸವೇನೆಂದರೆ, ಜೋಡಿಪದಗಳನ್ನು ಹಂತವನ್ನು ತಿಳಿಸುವ ಪದಗಳೊಂದಿಗೆ, ಇಲ್ಲವೇ ಹೋಲಿಸುವ ನುಡಿತ ಗಳೊಂದಿಗೆ ಬಳಸಲು ಬರುವುದಿಲ್ಲ; ಆದರೆ, ಪಟ್ಟಿಪರಿಚೆ ಮತ್ತು ಹಂತಪರಿಚೆ ಪದಗಳನ್ನು ಅಂತಹ ಕಡೆಗಳಲ್ಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ತುಂಬಾ ದೊಡ್ಡ ಹಣ್ಣುಗಳು ಇಲ್ಲೇ ಇರಲಿ.
(9ಕ) (9ಚ) ಇದಕ್ಕಿಂತ ದೊಡ್ಡ ಮರ ಈ ಊರಲ್ಲಿಲ್ಲ. (10ಕ) ಈ ಹಣ್ಣು ತುಂಬಾ ಸಿಹಿ. (10ಚ) ಈ ಮರದ ಹಣ್ಣಿಗಿಂತ ಆ ಮರದ ಹಣ್ಣು ಹೆಚ್ಚು ಸಿಹಿ.
ಸರಿ, ತಪ್ಪು ಮೊದಲಾದ ಜೋಡಿಪರಿಚೆಗಳನ್ನು ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ ಎಂಬುದನ್ನು ಮೇಲೆಯೇ 6.3.1(2)ರಲ್ಲಿ ವಿವರಿಸ
ಲಾಗಿದೆ. ಒಂದು ಬರಹದಲ್ಲಿ ಹೆಚ್ಚು ಇಲ್ಲವೇ ಕಡಿಮೆ ತಪ್ಪುಗಳಿವೆಯೆಂದು ಹೇಳಬಲ್ಲೆವಲ್ಲದೆ, ಅವು ತಿಳಿಸುವ ಸರಿ-ತಪ್ಪು ಪರಿಚೆಯಲ್ಲಿ ಹಂತಗಳನ್ನು ಕಾಣಲು ಬರುವುದಿಲ್ಲ.
ಈ ವಿಶಯದಲ್ಲಿ ಪಟ್ಟಿಪರಿಚೆ ಮತ್ತು ಹಂತಪರಿಚೆಗಳ ನಡುವೆಯೂ ಒಂದು ಮುಕ್ಯವಾದ ವ್ಯತ್ಯಾಸವಿದೆ. ಮೇಲೆ ವಿವರಿಸಿದ ಹಾಗೆ, ಪಟ್ಟಿಪರಿಚೆಗಳನ್ನು ಅವು ಬರುವ ಪಟ್ಟಿಯ ಹಂತಗಳೆಂದು ಹೇಳಲು ಬರುವುದಿಲ್ಲ. ಎತ್ತುಗೆಗಾಗಿ, ಸಿಹಿ, ಹುಳಿ, ಕಹಿ, ಚೊಗರು ಮೊದಲಾದ ಪರಿಚೆಪದಗಳು ರುಚಿಪಟ್ಟಿಯಲ್ಲಿ ಒಂದು ಓರಣದಲ್ಲಿ ಬರುವುದಿಲ್ಲ; ಅವನ್ನು ಹೇಗೆ ಬೇಕಿದ್ದರೂ ಇರಿಸಬಹುದು. ಇದಲ್ಲದೆ, ಈ ಪಟ್ಟಿಗೆ ಹಂತಪರಿಚೆಗಳ ಪಟ್ಟಿಯಲ್ಲಿರುವ ಹಾಗೆ ಎರಡು ಬದಿಗಳು ಮತ್ತು ನಡುವಿನ ಜಾಗ ಎಂಬವುಗಳಿಲ್ಲ.
ಹಾಗಾಗಿ, ಹಂತವನ್ನು ತಿಳಿಸುವ ಪದಗಳೊಂದಿಗೆ, ಇಲ್ಲವೇ ಹೋಲಿಕೆಯನ್ನು ತಿಳಿಸುವ ನುಡಿತಗಳೊಂದಿಗೆ ಬಳಸಿದಾಗ, ಪಟ್ಟಿಪರಿಚೆಗಳು ಅವು ಬರುವ ಪಟ್ಟಿಯ ಹಂತಗಳನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಪಟ್ಟಿಯಲ್ಲಿ ಬರುವ ಒಂದೊಂದು ಪರಿಚೆಗೂ ಒಂದು ಮಾದರಿ ಬೆಲೆಯಿದ್ದು, ಈ ಬೆಲೆಗಿಂತ ಹೆಚ್ಚು ಇಲ್ಲವೇ ಕಡಿಮೆ ಬೆಲೆ ಒಂದು ವಸ್ತುವಿಗಿದೆ ಎಂಬುದನ್ನು ಅವು ತಿಳಿಸುತ್ತವೆ.
ಎತ್ತುಗೆಗಾಗಿ, ತುಂಬಾ ದಪ್ಪ (ಮೊಸರು) ಎಂಬುದು ತೆಳು-ದಪ್ಪ ಅಳತೆಪಟ್ಟಿಯಲ್ಲಿ ದಪ್ಪ ಎಂಬುದು ತಿಳಿಸುವ ಹಂತಕ್ಕಿಂತಲೂ ಮೇಲಿರುವ ಒಂದು ಹಂತವನ್ನು ತಿಳಿಸುತ್ತದೆ; ಆದರೆ, ತುಂಬಾ ಕೆಂಪು (ಹೂ) ಎಂಬುದು ಹೂಗಳ ಮಟ್ಟಿಗಿರುವ ಮಾದರಿ ಕೆಂಪಿಗಿಂತ ಹೆಚ್ಚು ಕೆಂಪಾಗಿರುವ ಹೂ ಎಂಬುದಾಗಿ ಬೇರೆಯೇ ಒಂದು ಬಗೆಯ ಹುರುಳನ್ನು ಕೊಡುತ್ತದೆ. ಅದು ಬಣ್ಣಗಳನ್ನು ತಿಳಿಸುವ ಅಳತೆಪಟ್ಟಿಯಲ್ಲಿ ಕೆಂಪು ಪದ ತಿಳಿಸುವ ಹಂತಕ್ಕಿಂತ ಮೇಲಿನ ಹಂತವನ್ನು ತಿಳಿಸುವುದಿಲ್ಲ; ಯಾಕೆಂದರೆ, ಬಣ್ಣದ ಅಳತೆಪಟ್ಟಿಯಲ್ಲಿ ಅಂತಹ ಹಂತಗಳೇ ಇಲ್ಲ.
(4) ಹಂತಗಳ ಇಟ್ಟಳ ಹೆಸರುಕಂತೆಗಳಲ್ಲಿ ಹಂತಪರಿಚೆಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸಬೇಕಿದ್ದಲ್ಲಿ, ಎರಡು ಮುಕ್ಯವಾದ ವಿಶಯಗಳನ್ನು ಗಮನಿಸಬೇಕಾಗುತ್ತದೆ: ಅಳತೆಪಟ್ಟಿಯಲ್ಲಿ ಬರುವ ಹಂತಗಳ ಇಟ್ಟಳ ಎಂತಹದು ಎಂಬುದು ಒಂದು ವಿಶಯ, ಮತ್ತು ಈ ಹಂತಗಳ ಬೆಲೆಯನ್ನು ತಿಳಿಯುವಲ್ಲಿ ಬಳಕೆಯಾಗುವ ಮಾದರಿ ಎಂತಹದು ಎಂಬುದು ಇನ್ನೊಂದು ವಿಶಯ.
ಅಳತೆಪಟ್ಟಿಗಳಲ್ಲಿ ಸಾಮಾನ್ಯವಾಗಿ ಎರಡು ಹಂತಗಳಿದ್ದು, ಇವನ್ನು ತಿಳಿಸುವ ಪದಗಳು ಎದುರುಹುರುಳನ್ನು ಕೊಡುತ್ತಿರುತ್ತವೆ. ಎತ್ತುಗೆಗಾಗಿ, ಒದ್ದೆ-ಒಣ ಅಳತೆಪಟ್ಟಿಯಲ್ಲಿ ಅದರ ಎರಡು ಹಂತಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುವ ಒದ್ದೆ ಮತ್ತು ಒಣ ಎಂಬ ಪರಿಚೆಪದಗಳು ಎದುರುಹುರುಳುಗಳನ್ನು ಕೊಡುತ್ತವೆ.
ಇದೇ ರೀತಿಯಲ್ಲಿ, ವಸ್ತುವಿನ ಹರೆಯವನ್ನು ತಿಳಿಸುವ ಪರಿಚೆಪಟ್ಟಿಯಲ್ಲಿ ಅದರ ಎರಡು ಹಂತಗಳನ್ನು ತಿಳಿಸಲು ಬಳಕೆಯಾಗುವ ಹೊಸ ಮತ್ತು ಹಳೆ ಎಂಬ ಪರಿಚೆಪದಗಳೂ ಎದುರುಹುರುಳುಗಳನ್ನು ಕೊಡುತ್ತವೆ.
ಆದರೆ, ಹೆಚ್ಚಿನ ಅಳತೆಪಟ್ಟಿಗಳಲ್ಲೂ ಅವುಗಳ ಒಂದು ಹಂತವನ್ನು ತಿಳಿಸುವ ಪರಿಚೆಪದಗಳು ಮಾತ್ರ ಇರುತ್ತವೆ; ಅವುಗಳ ಇನ್ನೊಂದು ಹಂತವನ್ನು (ಎದುರು ಹುರುಳನ್ನು) ತಿಳಿಸಲು ಪರಿಚೆಪದಗಳಿರುವುದಿಲ್ಲ. ಎತ್ತುಗೆಗಾಗಿ, ಒಳ್ಳೆ, ಬೆತ್ತಲೆ, ಬೋಳು, ಜಿಗುಟು, ಗೊಡ್ಡು ಮೊದಲಾದ ಹಲವು ಪರಿಚೆಪದಗಳಿಗೆ ಅವುಗಳ ಅಳತೆಪಟ್ಟಿಯಲ್ಲಿ ಬರುವ ಎದುರುಹಂತವನ್ನು ತಿಳಿಸುವ ಪರಿಚೆಪದವಿಲ್ಲ.
ಇಂತಹ ಕಡೆಗಳಲ್ಲಿ ಕೆಲವೊಮ್ಮೆ ಎದುರುಹುರುಳುಗಳನ್ನು ತಿಳಿಸುವುದಕ್ಕಾಗಿ ಎಸಕಪದಗಳ ಪತ್ತುಗೆರೂಪವನ್ನು ಬಳಸಲು ಬರುತ್ತದೆ: ಎತ್ತುಗೆಗಾಗಿ, ಒಳ್ಳೆ- ಕೆಟ್ಟ ಎಂಬವುಗಳಲ್ಲಿ ಒಳ್ಳೆ ಎಂಬುದು ಪರಿಚೆಪದ; ಆದರೆ, ಕೆಟ್ಟ ಎಂಬುದು ಕೆಡು ಎಸಕಪದದ ಪತ್ತುಗೆರೂಪ; ಇನ್ನು ಕೆಲವು ಕಡೆಗಳಲ್ಲಿ ಅಲ್ಲಗಳೆವ ರೂಪಗಳನ್ನೂ ಬಳಸಲು ಬರುತ್ತದೆ: ಎತ್ತುಗೆಗಾಗಿ, ಜಿಗಟು ಎಂಬುದು ಒಂದು ಪರಿಚೆಪದ; ಆದರೆ ಅದರ ಎದುರುಹುರುಳನ್ನು ಕೊಡಬೇಕಿದ್ದಲ್ಲಿ ಜಿಗಟಲ್ಲದ ಎಂಬ ಅದರ ಅಲ್ಲಗಳೆಯುವ ರೂಪವನ್ನು ಬಳಸಲು ಬರುತ್ತದೆ.
ಎದುರುಹುರುಳಿನ ಪದಗಳು ಒಂದೇ ಅಳತೆಪಟ್ಟಿಯಲ್ಲಿ ಬರುವ ಕಾರಣ ತುಂಬಾ ಹತ್ತಿರದವಾಗಿಯೂ ಕಾಣಿಸುತ್ತವೆ, ಮತ್ತು ಒಂದಕ್ಕೊಂದು ಎದುರು ನಿಲ್ಲುವ ಹುರುಳುಗಳನ್ನು ಕೊಡುವ ಕಾರಣ ತುಂಬಾ ದೂರದವಾಗಿಯೂ ಕಾಣಿಸುತ್ತವೆ. ಹೋಲಿಕೆಯೂ ಇರಬೇಕು, ವ್ಯತ್ಯಾಸವೂ ಇರಬೇಕು ಎಂಬುದು ಇವುಗಳ ಒಂದು ಮುಕ್ಯ ಪರಿಚೆ.
ಹಂತಪರಿಚೆಗಳ ಬಳಕೆಯಲ್ಲಿ ಕಂಡುಬರುವ ಕೆಲವು ಮುಕ್ಯವಾದ ವಿಶಯ
ಗಳನ್ನು ಕೆಳಗೆ ವಿವರಿಸಲಾಗಿದೆ:
(ಕ) ಎದುರುಹುರುಳಿನ ಪದಗಳಲ್ಲಿ ಒಂದು ಪದ ಅಳತೆಪಟ್ಟಿಯ ಮೇಲಿನ ಹುರುಳನ್ನು ಕೊಡುತ್ತದೆ, ಮತ್ತು ಇನ್ನೊಂದು ಪದ ಕೆಳಗಿನ ಹುರುಳನ್ನು ಕೊಡುತ್ತದೆ. ಇದಲ್ಲದೆ, ಅವುಗಳಲ್ಲಿ ಒಂದು ಕೂಡುಹುರುಳನ್ನು ಕೊಡುತ್ತದೆ ಮತ್ತು ಇನ್ನೊಂದು ಅದನ್ನು ಅಲ್ಲಗಳೆವ ಕಳೆಹುರುಳನ್ನು ಕೊಡುತ್ತದೆ. ಹಾಗಾಗಿ, ಈ ಎರಡು ಪದಗಳಿಗೂ ಅವುಗಳ ಎದುರುಪದದ ಅಲ್ಲಗಳೆತ ಒಳಹುರುಳಾಗಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(11ಕ) ರಾಮು ಹರಿಗಿಂತ ಉದ್ದ. (11ಚ) ರಾಮು ಹರಿಗಿಂತ ಗಿಡ್ಡವಲ್ಲ.
(12ಕ) ಹರಿ ರಾಮುವಿಗಿಂತ ಗಿಡ್ಡ. (12ಚ) ರಾಮು ಹರಿಗಿಂತ ಉದ್ದವಲ್ಲ.
(11ಕ) ಸೊಲ್ಲಿಗೆ (11ಚ) ಸೊಲ್ಲು ಒಳಹುರುಳಾಗಿ ಬರುತ್ತದೆ, ಮತ್ತು
(12ಕ) ಸೊಲ್ಲಿಗೆ (12ಚ) ಸೊಲ್ಲು ಒಳಹುರುಳಾಗಿ ಬರುತ್ತದೆ.
ಆದರೆ, ಮೇಲೆ 6.3.1(3)ರಲ್ಲಿ ತಿಳಿಸಿದ ಹಾಗೆ, (11ಕ) ಮತ್ತು (11ಚ) ಸೊಲ್ಲುಗಳಿಗೆ (ಇಲ್ಲವೇ (12ಕ) ಮತ್ತು (12ಚ) ಸೊಲ್ಲುಗಳಿಗೆ) ಒಂದೇ ಹುರುಳಿಲ್ಲ; ಅವುಗಳ ಹುರುಳು ಬೇರೆ ಬೇರಾಗಿರುತ್ತದೆ. ಎತ್ತುಗೆಗಾಗಿ, ರಾಮು ಮತ್ತು ಹರಿ ಒಂದೇ ಉದ್ದದವರಾಗಿರುವಲ್ಲಿ, ಎಂದರೆ ರಾಮು ಹರಿಗಿಂತ ಉದ್ದವೂ ಅಲ್ಲ, ಗಿಡ್ಡವೂ ಅಲ್ಲ ಎಂದಿರುವಲ್ಲಿ, (11ಚ)ವನ್ನು ಬಳಸಲು ಬರುತ್ತದೆ; ಆದರೆ, (11ಕ)ವನ್ನು ಬಳಸಲು ಬರುವುದಿಲ್ಲ.
(ಚ) ಕಳೆಹುರುಳಿನ ಪದಕ್ಕೂ ಕೂಡುಹುರುಳಿನ ಪದಕ್ಕೂ ನಡುವಿರುವ
ಇನ್ನೊಂದು ಮುಕ್ಯವಾದ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(13ಕ) ಅವಳು ಇವಳಶ್ಟೇ ಗಿಡ್ಡ. (13ಚ) ಅವಳು ಇವಳಶ್ಟೇ ಉದ್ದ.
(13ಕ) ಸೊಲ್ಲನ್ನು ಬಳಸಬೇಕಿದ್ದಲ್ಲಿ, ಇಬ್ಬರ ಎತ್ತರವೂ ಒಂದೇ ಇರಬೇಕು, ಮತ್ತು ಇಬ್ಬರೂ ಗಿಡ್ಡವಾಗಿರಬೇಕು; ಆದರೆ, (13ಚ) ಸೊಲ್ಲನ್ನು ಬಳಸ ಬೇಕಿದ್ದಲ್ಲಿ, ಇಬ್ಬರ ಎತ್ತರವೂ ಒಂದೇ ಇದ್ದರೆ ಸಾಕು; ಯಾಕೆಂದರೆ, ಇಬ್ಬರೂ ಗಿಡ್ಡವಾಗಿರುವಲ್ಲೂ ಈ ಸೊಲ್ಲನ್ನು ಬಳಸಲು ಬರುತ್ತದೆ.
(ಟ) ಕೂಡುಹುರುಳು ಮತ್ತು ಕಳೆಹುರುಳಿನ ಪದಗಳು ಒಂದೇ ಅಳತೆಪಟ್ಟಿ ಯಲ್ಲಿ ಬರುತ್ತವೆಯಾದರೂ ಅವು ಎದುರು ದಿಕ್ಕಿಗೆ ಮೋರೆಮಾಡಿರುತ್ತವೆ. ತುಂಬಾ ಉದ್ದ ಎಂಬುದು ಅಳತೆಪಟ್ಟಿಯಲ್ಲಿ ಉದ್ದ ಎತ್ತುಗೆಗಾಗಿ, ಎಂಬುದಕ್ಕಿಂತ ಮೇಲಿರುವ ಜಾಗವನ್ನು ತಿಳಿಸುತ್ತದೆ; ಆದರೆ, ತುಂಬಾ ಗಿಡ್ಡ ಎಂಬುದು ಅಳತೆಪಟ್ಟಿಯಲ್ಲಿ ಗಿಡ್ಡ ಎಂಬುದಕ್ಕಿಂತ ಮೇಲಿರುವ ಜಾಗವನ್ನು ತಿಳಿಸುವ ಬದಲು, ಕೆಳಗಿರುವ ಜಾಗವನ್ನು ತಿಳಿಸುತ್ತದೆ.
ಇದೇ ರೀತಿಯಲ್ಲಿ, ತುಸು ಉದ್ದ ಎಂಬುದು ಅಳತೆಪಟ್ಟಿಯಲ್ಲಿ ಉದ್ದ ಎಂಬುದಕ್ಕಿಂತ ಕೆಳಗಿನ ಜಾಗವನ್ನು ತಿಳಿಸುತ್ತದೆ, ಮತ್ತು ತುಸು ಗಿಡ್ಡ ಎಂಬುದು ಅಳತೆಪಟ್ಟಿಯಲ್ಲಿ ಗಿಡ್ಡ ಎಂಬುದಕ್ಕಿಂತ ಮೇಲಿನ ಜಾಗವನ್ನು ತಿಳಿಸುತ್ತದೆ. ಉದ್ದ-ಗಿಡ್ಡ ಅಳತೆಪಟ್ಟಿಯಲ್ಲಿ ಈ ನುಡಿತಗಳ ಜಾಗ ಯಾವುದು ಎಂಬುದನ್ನು ಕೆಳಗೆ ತೋರಿಸಿಕೊಡಲಾಗಿದೆ:
ತುಂಬಾ ಉದ್ದ ಹಗ್ಗ ಉದ್ದ ಹಗ್ಗ ತುಸು ಉದ್ದ ಹಗ್ಗ ——- (ನಡುಜಾಗ) ತುಸು ಗಿಡ್ಡ ಹಗ್ಗ
ಗಿಡ್ಡ ಹಗ್ಗ ತುಂಬಾ ಗಿಡ್ಡ ಹಗ್ಗ
(ತ) ಮೇಲೆ ವಿವರಿಸಿದ ಹಾಗೆ, ಇಂತಹ ಕೆಲವು ಎದುರುಹುರುಳಿರುವ ಪರಿಚೆ ಪದಗಳು ಬರುವ ಅಳತೆಪಟ್ಟಿಯನ್ನು ಹೆಸರಿಸಬೇಕಿದ್ದಾಗ, ನಾವು ಸಾಮಾನ್ಯವಾಗಿ ಕೂಡುಹುರುಳಿನ ಪದವನ್ನು ಬಳಸುತ್ತೇವಲ್ಲದೆ, ಕಳೆಹುರುಳಿನ ಪದವನ್ನು ಬಳಸು ವುದಿಲ್ಲ. ಎತ್ತುಗೆಗಾಗಿ, ಗೋಡೆಯ ಅಳತೆಯನ್ನು ತಿಳಿಸುವಲ್ಲಿ ಗೋಡೆಯ ಉದ್ದ ಎನ್ನುತ್ತೇವಲ್ಲದೆ, *ಗೋಡೆಯ ಗಿಡ್ಡ ಎನ್ನುವುದಿಲ್ಲ. ಹುಡುಗನ ಎತ್ತರ ಎನ್ನುತ್ತೇವಲ್ಲದೆ, *ಹುಡುಗನ ತಗ್ಗು ಎನ್ನುವುದಿಲ್ಲ. ಗಮನಿಸಬೇಕಾಗದಿರುವ ನಡುವಿನ ವ್ಯತ್ಯಾಸವನ್ನು ಬೇರೆಯೂ ಕೆಲವು ಬಳಕೆಗಳಲ್ಲಿ ಕೂಡುಹುರುಳಿನ ಪದವೇ ಬಳಕೆಯಾಗು ತ್ತದಲ್ಲದೆ ಕಳೆಹುರುಳಿನ ಪದ ಬಳಕೆಯಾಗುವುದಿಲ್ಲ; ಎತ್ತುಗೆಗಾಗಿ ಉದ್ದಳತೆ ಎಂಬ ಪದವಿದೆ, *ಗಿಡ್ಡಳತೆ ಎಂಬ ಪದವಿಲ್ಲ; ಉದ್ದಗಲ ಎಂಬ ಪದವಿದೆ, *ಗಿಡ್ಡಸಪುರ ಎಂಬ ಪದವಿಲ್ಲ. ಉದ್ದಳತೆ ಮತ್ತು ಉದ್ದಗಲ ಎಂಬ ಪದ ಗಳನ್ನು ಬಳಸಿರುವಲ್ಲಿ ಉದ್ದ ಮತ್ತು ಗಿಡ್ಡ ಎಂಬವುಗಳ ನಡುವಿನ ವ್ಯತ್ಯಾಸವನ್ನು ಗಮನಿಸದೆ ಇಡೀ ಅಳತೆಪಟ್ಟಿಯನ್ನು ಗಮನಿಸಬೇಕಾಗಿದೆ.
ಎರಡು ಪದಗಳ
ಗೇಣಗಲ, ಗೇಣುದ್ದ, ಚೋಟುದ್ದ ಪದಗಳಿಗೆ ಉದ್ದಗಲವನ್ನು ತಿಳಿಸುವ ಹುರುಳು ಮಾತ್ರ ಇದೆ; ಅದು ಬೇಕಾದುದಕ್ಕಿಂತ ಹೆಚ್ಚೂ ಇರಬಲ್ಲುದು, ಕಡಿಮೆಯೂ ಇರಬಲ್ಲುದು. ಆದರೆ, ಚೋಟು ಗಿಡ್ಡ ಇಲ್ಲವೇ ಅರ್ದಂಗುಲ ಸಪುರ ಎಂಬವುಗಳಿಗೆ ‘ಕಡಿಮೆ ಉದ್ದ’ ಇಲ್ಲವೇ ‘ಬೇಕಾದುದಕ್ಕಿಂತ ಕಡಿಮೆ ಅಗಲ’ ಎಂಬ ಹುರುಳಿದೆ; ಎಂದರೆ, ಕಳೆಹುರುಳಿನ ಪದಗಳನ್ನು ಬಳಸಿರುವಲ್ಲಿ ಎದುರುಹುರುಳಿನ ಪದಗಳ ನಡುವಿರುವ ವ್ಯತ್ಯಾಸ ವನ್ನು ಗಮನಿಸದಿರಲು ಬರುವುದಿಲ್ಲ.
ಬೇಕಾದುದಕ್ಕಿಂತ
(ಪ) ಎರಡು ಬೇರೆ ಬೇರೆ ಅಳತೆಪಟ್ಟಿಗಳಲ್ಲಿ ಬರುವ ಪರಿಚೆಪದಗಳು ಒಂದೇ ಬಗೆಯ ಅಳತೆಯನ್ನು ತಿಳಿಸುತ್ತಿವೆಯಾದರೆ, ಅವನ್ನು ಹೋಲಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(14ಕ) ಅವನು ಎತ್ತರ ಇರುವಶ್ಟೇ ದಪ್ಪವೂ ಇದ್ದಾನೆ. (14ಚ) *ಅವನು ಕಪ್ಪಿರುವಶ್ಟೇ ಗಿಡ್ಡವೂ ಇದ್ದಾನೆ
ಎತ್ತರ ಮತ್ತು ದಪ್ಪ ಎಂಬವು ಎತ್ತರ-ಗಿಡ್ಡ ಮತ್ತು ದಪ್ಪ-ತೆಳು ಎಂಬ ಎರಡು ಬೇರೆ ಬೇರೆ ಅಳತೆಪಟ್ಟಿಗಳಲ್ಲಿ ಬರುತ್ತವೆ; ಹಾಗಿದ್ದರೂ, ಅವು ಒಂದೇ ಬಗೆಯ ಅಳತೆಯನ್ನು (ಉದ್ದಗಲವನ್ನು) ತಿಳಿಸುವ ಕಾರಣ, ಅವನ್ನು (14ಕ) ಸೊಲ್ಲಿನಲ್ಲಿ ಕಾಣಿಸಿದ ಹಾಗೆ, ಹೋಲಿಸಲು ಬರುತ್ತದೆ. ಆದರೆ, ಕಪ್ಪು ಮತ್ತು ಗಿಡ್ಡ ಪದಗಳ ನಡುವೆ ಹುರುಳಿನ ಸಂಬಂದವಿಲ್ಲ; ಹಾಗಾಗಿ, ಅವನ್ನು ಆ ರೀತಿ
ಹೋಲಿಸಲು ಬರುವುದಿಲ್ಲ ಎಂಬುದನ್ನು (14ಚ) ಸೊಲ್ಲು ಸರಿಯಿಲ್ಲ ಎಂಬು ದರಿಂದ ತಿಳಿಯಬಹುದು.
(5) ಹಂತಗಳ ಇಟ್ಟಳವನ್ನು ಬಳಸಿ ಗುಂಪಿಸುವುದು
ಹಂತಪರಿಚೆಗಳನ್ನು ಅವು ತಿಳಿಸುವ ಬದಿ ತೆರೆದಿರುತ್ತದೆಯೋ ಇಲ್ಲವೇ ಮುಚ್ಚಿರು ತ್ತದೆಯೋ ಎಂಬುದನ್ನವಲಂಬಿಸಿ ಮುಕ್ಯವಾಗಿ ತೆರೆದ ಪದಗಳು ಮತ್ತು ಮುಚ್ಚಿದ ಪದಗಳು ಎಂಬುದಾಗಿ ಎರಡು ಗುಂಪುಗಳಲ್ಲಿ ಇರಿಸಲು ಬರುತ್ತದೆ. ಎತ್ತುಗೆಗಾಗಿ, ಉದ್ದ-ಗಿಡ್ಡ ಅಳತೆಪಟ್ಟಿಯಲ್ಲಿ ಬರುವ ಪರಿಚೆಪದಗಳು ಅದರ ಎರಡು ಬದಿಗಳನ್ನೂ ತೆರೆದಿರಿಸುತ್ತವೆ. ಈ ಎರಡು ಬದಿಗಳಿಗೂ ಕೊನೆಯೆಂಬು ದಿಲ್ಲ. ಇದಕ್ಕೆ ಬದಲು, ಒಣ-ಒದ್ದೆ ಎಂಬ ಅಳತೆಪಟ್ಟಿಯಲ್ಲಿ ಬರುವ ಒಣ ಪದ ಅದು ಬರುವ ಬದಿಯನ್ನು ಮುಚ್ಚುತ್ತದೆ; ಆ ಬದಿಗೆ ಕೊನೆಯೆಂಬುದಿದೆ; ಆದರೆ, ಒದ್ದೆ ಎಂಬ ಅದರ ಎದುರುಹುರುಳಿನ ಪದ ಅದು ಬರುವ ಬದಿಯನ್ನು ತೆರೆದಿರಿಸುತ್ತದೆ.
ಉದ್ದ-ಗಿಡ್ಡ, ದೊಡ್ಡ-ಚಿಕ್ಕ, ದಪ್ಪ-ತೆಳು, ಎತ್ತರ-ತಗ್ಗು ಮೊದಲಾದುವು ಅಳತೆಪಟ್ಟಿಯ ಎರಡು ಬದಿಗಳನ್ನೂ ತೆರೆದಿರಿಸುವ ಪರಿಚೆಪದಗಳು, ಮತ್ತು ಒಣ-ಒದ್ದೆ, ನೇರ-ಓರೆ, ತಿಳಿ-ಕಲಕು, ಉರುಟು-ಚಪ್ಪಟೆ, ದೋರೆ-ಎಳೆ ಮೊದಲಾದುವು ಅಳತೆಪಟ್ಟಿಯ ಒಂದು ಬದಿಯನ್ನು ಮುಚ್ಚಿರಿಸುವ ಮತ್ತು ಇನ್ನೊಂದನ್ನು ತೆರೆದಿರಿಸುವ ಪರಿಚೆಪದಗಳು.
ಮುಚ್ಚಿದ ಮತ್ತು ತೆರೆದ ಪದಗಳಿರುವ ಎದುರುಹುರುಳಿನ ಪದಗಳಲ್ಲಿ ಒಂದು ಪದಕ್ಕೆ ಕಂಡಿತವಾದ ಮಾದರಿ ಹಂತವಿರುತ್ತದೆ, ಆದರೆ ಇನ್ನೊಂದಕ್ಕೆ ಅಂತಹ ಕಂಡಿತವಾದ ಮಾದರಿ ಹಂತವಿರುವುದಿಲ್ಲ. ಎತ್ತುಗೆಗಾಗಿ, ಒಣ ಮತ್ತು ಒದ್ದೆ ಪದಗಳನ್ನು ಗಮನಿಸಬಹುದು: ಒಣ ಎಂಬುದಕ್ಕೆ ಒಂದು ಕಂಡಿತವಾದ ಮಾದರಿ ಹಂತವಿದೆ; ಅದನ್ನು ತಲಪಿದಾಗ ಒಂದು ವಸ್ತುವಿನಲ್ಲಿ ಈ ಪರಿಚೆ ಇದೆ ಎನ್ನಲು ಬರುತ್ತದೆ; ಆದರೆ, ಒದ್ದೆ ಎಂಬುದಕ್ಕೆ ಅಂತಹ ಕಂಡಿತವಾದ ಮಾದರಿ ಹಂತ ವೆಂಬುದಿಲ್ಲ; ಅಳತೆಪಟ್ಟಿಯ ಒಂದು ಬದಿಯಲ್ಲಿ ಅದು ಯಾವ ಹಂತದ ಲ್ಲಿದ್ದರೂ ಒಂದು ವಸ್ತುವಿನಲ್ಲಿ ಈ ಪರಿಚೆಯಿದೆಯೆಂದು ಹೇಳಲು ಬರುತ್ತದೆ.
ಎತ್ತುಗೆಗಾಗಿ, ಒಂದು ಬಟ್ಟೆ ಚೂರು ಒದ್ದೆಯಾಗಿದೆಯಾದರೂ ಅದನ್ನು ಒದ್ದೆ ಬಟ್ಟೆ ಎನ್ನಬಹುದು; ಆದರೆ, ಒಂದು ಬಟ್ಟೆ ಚೂರು ಒಣಗಿದೆಯಾದರೆ ಅದನ್ನು ಒಣ ಬಟ್ಟೆ ಎನ್ನಲು ಬರುವುದಿಲ್ಲ; ಚೂರು ಒಣಗಿದ ಬಟ್ಟೆಯೂ ಒದ್ದೆ ಬಟ್ಟೆಯೇ.
ಇದೇ ರೀತಿಯಲ್ಲಿ, ಚೂರು ಕಲಕಿರುವ ನೀರನ್ನು ಕಲಕು ನೀರು ಎನ್ನ ಬಹುದು, ಆದರೆ ಚೂರು ತಿಳಿಯಾಗಿರುವ ನೀರನ್ನು ತಿಳಿ ನೀರು ಎನ್ನಲು ಬರುವುದಿಲ್ಲ. ನೀರು ತಿಳಿಯಾಗಿದೆ ಎನ್ನಲು ಒಂದು ಕಂಡಿತವಾದ ಮಾದರಿ
ಹಂತವಿದ್ದು, ನಮ್ಮೆದುರಿರುವ ನೀರು ಆ ಹಂತವನ್ನು ತಲಪಿದಾಗ ಮಾತ್ರ ಅದನ್ನು ತಿಳಿ ನೀರು ಎನ್ನಲು ಬರುತ್ತದೆ.
ಈ ಮಾದರಿ ಹಂತ ಸಂದರ್ಬದಿಂದ ಸಂದರ್ಬಕ್ಕೆ ಬೇರೆ ಬೇರಾಗಿರಬಲ್ಲುದು: ಎತ್ತುಗೆಗಾಗಿ, ಮೀಯಲು ಬಳಸಬಹುದಾದ ತಿಳಿ ನೀರು ಕುಡಿಯಲು ತಿಳಿಯಲ್ಲದಿರಬಹುದು. ಕುಡಿಯಲು ತಿಳಿಯಾಗಿರುವ ನೀರೂ ಕೆಲವು ಬಗೆಯ ಪ್ರಯೋಗಗಳನ್ನು ನಡೆಸುವ ಕೆಲಸಕ್ಕೆ ತಿಳಿಯಲ್ಲದಿರಬಹುದು.
ಹೆಚ್ಚುಕಡಿಮೆ ಎಂಬುದನ್ನು ಮುಚ್ಚಿದ ಪದಗಳೊಂದಿಗೆ ಬಳಸಲು ಬರುತ್ತ
ದಲ್ಲದೆ ತೆರೆದ ಪದಗಳೊಂದಿಗೆ ಬಳಸಲು ಬರುವುದಿಲ್ಲ.
(15ಕ) ಇದು ಹೆಚ್ಚುಕಡಿಮೆ ನೇರ ಗೆರೆ. (15ಚ) *ಇದು ಹೆಚ್ಚುಕಡಿಮೆ ಓರೆ ಗೆರೆ. (16ಕ) ಇದು ಹೆಚ್ಚುಕಡಿಮೆ ತಿಳಿ ನೀರು. (16ಚ) *ಇದು ಹೆಚ್ಚುಕಡಿಮೆ ಕಲಕು ನೀರು.
(6) ಮಾದರಿಯನ್ನು ಬಳಸಿ ಗುಂಪಿಸುವುದು ಪರಿಚೆಪದಗಳಿಗೆ ಎಂತಹ ಮಾದರಿಯಿರುತ್ತದೆ ಎಂಬ ವಿಶಯವನ್ನು ಬಳಸಿಯೂ ಅವನ್ನು ಗುಂಪಿಸಲು ಬರುತ್ತದೆ. ಕೆಲವಕ್ಕೆ ಹಲವು ಮಾದರಿಗಳಿತ್ತವೆ; ಆದರೆ, ಇನ್ನು ಕೆಲವಕ್ಕೆ ಎಲ್ಲಾ ಬಳಕೆಗಳಿಗೂ ಸಮಾನವಾಗಿರುವಂತಹ ಒಂದೇ ಮಾದರಿ ಇರುತ್ತದೆ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(17ಕ) ಇದೊಂದು ಕಪ್ಪು ಗೋಡೆ. (17ಚ) ಇದೊಂದು ಚಿಕ್ಕ ಆನೆ.
ಕಪ್ಪು ಗೋಡೆ ಎಂಬುದು ಗೋಡೆಗಳಲ್ಲಿ ಕೆಲವನ್ನು ಮಾತ್ರ (ಕಪ್ಪು ಬಣ್ಣ ದವನ್ನು ಮಾತ್ರ) ಗುರುತಿಸಬಲ್ಲುದು; ಹಾಗಾಗಿ, ಅದು ಗೋಡೆ ಪದದ ಹರವನ್ನು ಕುಗ್ಗಿಸುತ್ತದೆ; ಇದೇ ರೀತಿಯಲ್ಲಿ, ಚಿಕ್ಕ ಆನೆ ಎಂಬುದು ಆನೆಗಳಲ್ಲಿ ಕೆಲವನ್ನು ಮಾತ್ರ (ಚಿಕ್ಕವನ್ನು ಮಾತ್ರ) ಗುರುತಿಸಬಲ್ಲುದು; ಹಾಗಾಗಿ, ಚಿಕ್ಕ ಎಂಬ ಪದವೂ ಆನೆ ಪದದ ಹರವನ್ನು ಕುಗ್ಗಿಸುತ್ತದೆ.
ಆದರೆ, ಈ ಕೆಲಸವನ್ನು ಇವು ಹೇಗೆ ನಡೆಸುತ್ತವೆ ಎಂಬುದರಲ್ಲಿ ವ್ಯತ್ಯಾಸ ವಿದೆ. ಕಪ್ಪು ಎಂಬುದು ಬಣ್ಣವಿರುವ ಎಲ್ಲಾ ಬಗೆಯ ಪಾಂಗುಗಳ ಹರವನ್ನೂ ಒಂದೇ ರೀತಿಯಲ್ಲಿ ಕುಗ್ಗಿಸುತ್ತದೆ; ಅವೆಲ್ಲವನ್ನೂ ಅದು ‘ಕಪ್ಪು ಬಣ್ಣವಿರುವವು’ ಮತ್ತು ‘ಬೇರೆ ಬಣ್ಣಗಳಿರುವವು’ ಎಂಬ ಎರಡು ಗುಂಪುಗಳಲ್ಲಿ ಇರಿಸುವ
ಮೂಲಕ ಅವುಗಳ ಹರವನ್ನು ಕುಗ್ಗಿಸುತ್ತದೆ. ‘ಮಾದರಿ ಕಪ್ಪು ಬಣ್ಣ’ ಎಂಬುದು ಎಲ್ಲಾ ಬಳಕೆಗಳಲ್ಲೂ ಒಂದೇ ಆಗಿರುತ್ತದೆ.
ಇದಕ್ಕೆ ಬದಲು, ಚಿಕ್ಕ ಎಂಬುದು ಉದ್ದಳತೆಯಿರುವ ಪಾಂಗುಗಳಲ್ಲಿ ಒಂದೊಂದು ಬಗೆಯವುಗಳ ಹರವನ್ನೂ ಒಂದೊಂದು ಬಗೆಯಲ್ಲಿ ಕುಗ್ಗಿಸುತ್ತದೆ. ಬೇರೆ ಬೇರೆ ಬಗೆಯ ಪಾಂಗುಗಳಿಗೆ ಅದು ಬೇರೆ ಬೇರೆ ಮಾದರಿಗಳನ್ನು ಬಳಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ, ಆನೆಗಳ ಮಟ್ಟಿಗೆ ಚಿಕ್ಕ ದಾಗಿರುವ ಪ್ರಾಣಿಯನ್ನು ಆಡುಗಳ ಮಟ್ಟಿಗೆ ದೊಡ್ಡದಾಗಿರುವ ಪ್ರಾಣಿಯೊಂದಿಗೆ ಹೋಲಿಸಿ ನೋಡಿದಾಗ, ಚಿಕ್ಕದಾಗಿರುವ ಆನೆಯೇ ದೊಡ್ಡದಾಗಿ ಕಾಣಿಸುತ್ತದೆ.
ಎಂದರೆ, ಚಿಕ್ಕ ಮತ್ತು ದೊಡ್ಡ ಎಂಬ ಪರಿಚೆಪದಗಳು, ಅವು ಎಂತಹ ಹೆಸರುಪದಗಳೊಂದಿಗೆ ಬಳಕೆಯಾಗುತ್ತವೆ ಎಂಬುದನ್ನವಲಂಬಿಸಿ, ಬೇರೆ ಬೇರೆ ಉದ್ದಳತೆಗಳನ್ನು ತಿಳಿಸುತ್ತವೆ; ಅವುಗಳ ಪಟ್ಟಿಗೆ ಬೇರೆ ಬೇರೆ ಬಗೆಯ ಕೊನೆಗಳು ಮತ್ತು ನಡುವಿನ ಜಾಗಗಳೂ ಇರುತ್ತವೆ.
ಇಂತಹ ಹಲವು ಮಾದರಿಗಳಿರುವ ಪರಿಚೆಪದಗಳನ್ನು ಕೆಳಗೆ ಕೊಟ್ಟಿರು ವಂತಹ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ; ಆದರೆ, ಒಂದೇ ಮಾದರಿಯಿರುವ ಪರಿಚೆಪದಗಳನ್ನು ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ:
(18ಕ) ಆನೆಗಳ ಮಟ್ಟಿಗೆ ಈ ಪ್ರಾಣಿ ಚಿಕ್ಕದು. (18ಚ) ಈ ಪ್ರಾಣಿ ನೋಡಲು ದೊಡ್ಡದಾಗಿದೆಯಾದರೂ, ಒಂದು ಚಿಕ್ಕ
ಆನೆಯಾಗಿದೆ.
(18ಟ) ಇದು ನೋಡಲು ಚಿಕ್ಕದಾಗಿದೆಯಾದರೂ, ಒಂದು ದೊಡ್ಡ
ಇರುವೆ.
(18ತ) ಈ ಚಿಕ್ಕ ಆನೆ ನಿಜಕ್ಕೂ ಚಿಕ್ಕದೇನಲ್ಲ. (18ಪ) ಈ ದೊಡ್ಡ ಆಡು ಒಂದು ಚಿಕ್ಕ ಆನೆಗಿಂತಲೂ ಚಿಕ್ಕದು. (19ಕ) ?ಗೋಡೆಗಳ ಮಟ್ಟಿಗೆ ಈ ಗೋಡೆ ಕಪ್ಪು. (19ಚ) *ಈ ಗೋಡೆ ನೋಡಲು ಕಪ್ಪಾಗಿದೆಯಾದರೂ ಒಂದು ಬಿಳಿ
ಗೋಡೆಯಾಗಿದೆ.
(19ಟ) *ಈ ಕಪ್ಪು ಗೋಡೆ ನಿಜಕ್ಕೂ ಕಪ್ಪಿನದೇನಲ್ಲ.
(19ಚ) ಸೊಲ್ಲನ್ನು ‘ಮೊದಲಿಗೆ ಬಿಳಿಯಾಗಿದ್ದು ಈಗ ಮಸಿ ಹಿಡಿದು ಕಪ್ಪಾಗಿರುವ ಗೋಡೆ’ಯನ್ನು ವರ್ಣಿಸಬಲ್ಲುದೇನೋ ನಿಜ; ಆದರೆ, (18ಚ- ಟ)ಗಳಲ್ಲಿ ಕಾಣಿಸುವಂತಹ ಹುರುಳು ಅದಕ್ಕಿಲ್ಲ ಎಂಬುದನ್ನು ಗಮನಿಸಬಹುದು. ಒಂದೇ ಮಾದರಿಯ ಮತ್ತು ಹಲವು ಮಾದರಿಗಳ ಪದಗಳೆಂದು ಈ
ಎರಡು ಬಗೆಯ ಪರಿಚೆಪದಗಳನ್ನು ಹೆಸರಿಸಬಹುದು.
(7) ಒರ್ಪರಿಚೆ ಮತ್ತು ಹಲಪರಿಚೆಪದಗಳು ಉದ್ದ, ಗಿಡ್ಡ, ಕೆಂಪು, ಬಿಳಿ, ಬೋಳು, ಬಿಸಿ, ಹೊಸ ಮೊದಲಾದ ಪರಿಚೆಪದಗಳನ್ನು ಒರ್ಪರಿಚೆಪದಗಳೆಂದು ಕರೆಯಬಹುದು. ಅವು ಒಂದೊಂದು ಪರಿಚೆಯನ್ನು ಮಾತ್ರ ತಿಳಿಸುತ್ತವೆ; ಈ ಪರಿಚೆಪದಗಳನ್ನು ಹೆಸರುಪದಗಳೊಂದಿಗೆ ಬಳಸಿದಾಗ, ಅವು ಈ ಪರಿಚೆಯನ್ನು ಬಳಸಿ ನೇರವಾಗಿ ತಮ್ಮ ಮುಂದಿರುವ ಹೆಸರುಪದಗಳ ಹರವನ್ನು ಕುಗ್ಗಿಸುತ್ತವೆ.
ಎತ್ತುಗೆಗಾಗಿ, ಕೆಂಪು ಪದ ವಸ್ತುವಿನ ಒಂದು ಪರಿಚೆಯನ್ನು (ಅದರ ಬಣ್ಣ ವನ್ನು) ಮಾತ್ರ ತಿಳಿಸುತ್ತದೆ, ಮತ್ತು ಅದನ್ನು ಹೂವು ಎಂಬ ಹೆಸರುಪದ ದೊಂದಿಗೆ ಬಳಸಿದಾಗ, ಅದು ಆ ಪರಿಚೆಯ ಮೂಲಕ ಹೂವು ಪದದ ಹರವನ್ನು ಕುಗ್ಗಿಸುತ್ತದೆ.
ಇದಕ್ಕೆ ಬದಲು, ಒಳ್ಳೆ, ಜಾಣ, ಚಂದ ಮೊದಲಾದ ಬೇರೆ ಕೆಲವು ಪರಿಚೆಪದಗಳನ್ನು ಹಲಪರಿಚೆಪದಗಳೆಂದು ಕರೆಯಬಹುದು. ಅವು ಒಂದಕ್ಕಿಂತ ಹೆಚ್ಚು ಪರಿಚೆಗಳನ್ನು ತಿಳಿಸುತ್ತವೆ, ಮತ್ತು ಈ ಪರಿಚೆಗಳೆಲ್ಲವೂ ಹೆಸರುಪದದ ಹರವನ್ನು ಕುಗ್ಗಿಸುವ ಕೆಲಸವನ್ನು ನಡೆಸಬಲ್ಲುವು.
ಎತ್ತುಗೆಗಾಗಿ, ಒಳ್ಳೆ ಪದ ಹಲವು ಬಗೆಯ ಪರಿಚೆಗಳನ್ನು ತಿಳಿಸಬಲ್ಲುದು; ಒಳ್ಳೆ ಹಣ್ಣು ಎಂಬ ಬಳಕೆಯಲ್ಲಿ ಅದು ‘ತಿನ್ನಲು ರುಚಿಯಾಗಿರುವ’ ಎಂಬ ಪರಿಚೆಯನ್ನಾಗಲಿ, ‘ಕೊಳೆತು ಹೋಗಿಲ್ಲದ’ ಎಂಬ ಪರಿಚೆಯನ್ನಾಗಲಿ, ಇಲ್ಲವೇ ‘ರಾಸಾಯನಿಕಗಳನ್ನು ಬಳಸದೆ ಬೆಳೆಸಿರುವ’ ಎಂಬ ಪರಿಚೆಯನ್ನಾಗಲಿ ತಿಳಿಸ ಬಲ್ಲುದು. ಸಂದರ್ಬಕ್ಕೆ ತಕ್ಕ ಹಾಗೆ, ಆಡುಗನು ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡಿರಬಹುದು, ಇಲ್ಲವೇ ಈ ಮೂರನ್ನೂ ಒಟ್ಟಾಗಿ ತಿಳಿಸುವ ಹಾಗೆಯೂ ಅದನ್ನು ಬಳಸಿರಬಹುದು.
ಒರ್ಪರಿಚೆಪದಗಳಲ್ಲೂ ಕೆಲವಕ್ಕೆ ಒಂದಕ್ಕಿಂತ ಹೆಚ್ಚು ಪರಿಚೆಗಳನ್ನು ತಿಳಿಸುವ ಹುರುಳಿರಬಲ್ಲುದು; ಎತ್ತುಗೆಗಾಗಿ, ದೊಡ್ಡ ಎಂಬುದು ‘ಹೆಚ್ಚು ಉದ್ದಗಲ ಗಳಿರುವ’ ಎಂಬ ಪರಿಚೆಯನ್ನು, ಇಲ್ಲವೇ ‘ದೊಡ್ಡಸ್ತಿಕೆಯಿರುವ’ ಎಂಬ ಪರಿಚೆ ಯನ್ನು ತಿಳಿಸಬಲ್ಲುದು; ಆದರೆ, ಅದರ ಒಂದು ಬಳಕೆಯಲ್ಲಿ ಈ ಎರಡು ಪರಿಚೆಗಳಲ್ಲಿ ಒಂದು ಮಾತ್ರ ಬೇಕಾದುದಾಗಿರುತ್ತದೆ.
(8) ತುಸುಹೊತ್ತಿನ ಮತ್ತು ಬಾಳಿಕೆಯ ಪರಿಚೆಗಳು ಪರಿಚೆಪದಗಳು ತಿಳಿಸುವ ಪರಿಚೆ ತುಸು ಹೊತ್ತು ಮಾತ್ರ ಉಳಿಯುವಂತಹದೋ ಇಲ್ಲವೇ ಬಾಳಿಕೆಯದೋ ಎಂಬ ವಿಶಯವನ್ನವಲಂಬಿಸಿಯೂ ಅವನ್ನು ಬೇರೆ ಬೇರೆ ಗುಂಪುಗಳಲ್ಲಿರಿಸಲು ಬರುತ್ತದೆ. ಬಾಳಿಕೆಯ ಪರಿಚೆ ಒಂದು ಪಾಂಗಿನದೇ ಪರಿಚೆಯಾಗಿರುತ್ತದೆ, ಮತ್ತು ತುಸುಹೊತ್ತಿನ ಪರಿಚೆ ಅದರ ಒಂದು ಹಂತಕ್ಕೆ ಮಾತ್ರ ಸಂಬಂದಿಸಿದುದಾಗಿರುತ್ತದೆ.
ಎತ್ತುಗೆಗಾಗಿ, ದೊಡ್ಡ-ಚಿಕ್ಕ, ಉದ್ದ-ಗಿಡ್ಡ, ಕಪ್ಪು-ಬಿಳಿ ಮೊದಲಾದವು ಬಾಳಿಕೆಯ ಪರಿಚೆಗಳು; ಅವನ್ನು ಪಾಂಗುಗಳದೇ ಪರಿಚೆಗಳೆಂದು ತಿಳಿಯ ಬಹುದು, ಮತ್ತು ಚೊಕ್ಕ-ಕೊಳಕು, ತಿಳಿ-ಕಲಕು, ಒಣ-ಒದ್ದೆ, ಬಿಸಿ-ತಂಪು ಮೊದಲಾದುವು ಪಾಂಗುಗಳ ಒಂದು ಹಂತಕ್ಕೆ ಮಾತ್ರ ಸಂಬಂದಿಸಿದವು ಗಳಾಗಿದ್ದು, ಅವನ್ನು ತುಸುಹೊತ್ತಿನ ಪರಿಚೆಗಳೆಂದು ಕರೆಯಬಹುದು.
ಆದರೆ, ಹೆಚ್ಚಿನ ಪರಿಚೆಪದಗಳನ್ನೂ ಈ ಎರಡು ಬಗೆಯ ಹುರುಳುಗಳಲ್ಲೂ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಂಪು ತುಟಿ ಎಂಬ ಹೆಸರುಕಂತೆಯಲ್ಲಿ ಬಂದಿರುವ ಕೆಂಪು ಪದ ಬಾಳಿಕೆಯ ಪರಿಚೆಯನ್ನೂ ತಿಳಿಸಬಲ್ಲುದು, ಮತ್ತು ತುಸುಹೊತ್ತಿನ ಪರಿಚೆಯನ್ನೂ ತಿಳಿಸಬಲ್ಲುದು. ತುಟಿಯ ಬಣ್ಣವೇ ಕೆಂಪಿದ್ದಲ್ಲಿ, ಅದಕ್ಕೆ ಬಾಳಿಕೆಯ ಹುರುಳು ಸಿಗುತ್ತದೆ; ಆದರೆ, ಕವಳ ಹಾಕಿದುದರಿಂದಾಗಿ, ಇಲ್ಲವೇ ಲಿಪ್ಸ್ಟಿಕ್ ಹಚ್ಚಿದುದರಿಂದಾಗಿ ಕೆಂಪಾಗಿದೆಯಾದಲ್ಲಿ, ಅದಕ್ಕೆ ತುಸು ಹೊತ್ತಿನ ಹುರುಳು ಸಿಗುತ್ತದೆ.
ಎಲ್ಲಾ ಪರಿಚೆಪದಗಳೂ ಈ ರೀತಿ ಎರಡು ಹುರುಳುಗಳಲ್ಲಿ ಬರುವುದಿಲ್ಲ. ಎತ್ತುಗೆಗಾಗಿ, ಬಿಸಿ ನೀರು ಎಂಬುದು ಮೊದಲಿಗೆ ತಣ್ಣಗಿದ್ದು ಈಗ ಬಿಸಿ ಯಾಗಿರುವ ನೀರನ್ನು ಮಾತ್ರ ಗುರುತಿಸಬಲ್ಲುದು; ಒದ್ದೆ ಬಟ್ಟೆ ಎಂಬುದು ಮೊದಲಿಗೆ ಒಣಗಿದ್ದು ಈಗ ಒದ್ದೆಯಾಗಿರುವ ಬಟ್ಟೆಯನ್ನು ಮಾತ್ರ ಗುರುತಿಸ ಬಲ್ಲುದು; ಮತ್ತು ತಿಳಿ ನೀರು ಎಂಬುದು ಮೊದಲು ಕಲಕಿದ್ದು ಈಗ ತಿಳಿ ಯಾಗಿರುವ ನೀರನ್ನು ಮಾತ್ರ ಗುರುತಿಸಬಲ್ಲುದು.
ಇದಕ್ಕೆ ಬದಲು, ಅಗಲ ಹಲಿಗೆ, ಚಿಕ್ಕ ಆನೆ ಮೊದಲಾದ ಪದಕಂತೆಗಳಲ್ಲಿ ಕಾಣಿಸುವ ಪರಿಚೆಪದಗಳು ಬಾಳಿಕೆಯ ಹುರುಳಿನಲ್ಲಿ ಮಾತ್ರ ಬಳಕೆಯಾಗಿರ ಬಲ್ಲುವು.
ಈ ಎರಡು ಬಗೆಯ ಹುರುಳುಗಳಲ್ಲೂ ಬರಬಲ್ಲ ಪರಿಚೆಪದಗಳಿಗೆ ಅವು ಗಳಲ್ಲಿ ಒಂದು ಹುರುಳು (ಬಾಳಿಕೆಯದು ಇಲ್ಲವೇ ತುಸುಹೊತ್ತಿನದು) ಸಹಜ ವಾಗಿ ದೊರೆಯುವುದಾಗಿದ್ದು, ಅವನ್ನು ಬಳಸಿದ ಸಂದರ್ಬದಿಂದಾಗಿ ಅವಕ್ಕೆ ಸಹಜವಲ್ಲದ ಇನ್ನೊಂದು ಹುರುಳೂ ದೊರಕುತ್ತದೆ ಎಂಬುದಾಗಿ ಇಲ್ಲಿ ಹೇಳಲು ಬರುತ್ತದೆ.
ಈ ಪರಿಚೆಪದಗಳನ್ನು ಆಗು ಎಸಕಪದದ ಪತ್ತುಗೆರೂಪದೊಂದಿಗೆ (ಆದ ಎಂಬುದರೊಂದಿಗೆ) ಬಳಸಿದಾಗ, ಬಾಳಿಕೆಯ ಹುರುಳಿರುವಲ್ಲಿ ಆದ ಎಂಬುದು ತನ್ನ ಹುರುಳನ್ನು ಕಳೆದುಕೊಳ್ಳುತ್ತದೆ. ಎತ್ತುಗೆಗಾಗಿ, ಅಗಲವಾದ ಹಲಿಗೆ ಎಂಬುದರಲ್ಲಿ ಬಂದಿರುವ ಆದ ಪದಕ್ಕೆ ಹೆಚ್ಚಿನ ಹುರುಳೇನೂ ಇಲ್ಲ; ಅಗಲ ಪರಿಚೆಪದವನ್ನು ಹಲಿಗೆ ಹೆಸರುಪದದೊಂದಿಗೆ ಸಂಬಂದಿಸುವ ಕೆಲಸವನ್ನಶ್ಟೇ ಅದು ನಡೆಸುತ್ತದೆ. ಆದರೆ, ಒದ್ದೆಯಾದ ಬಟ್ಟೆ ಎಂಬುದರಲ್ಲಿ ಬಂದಿರುವ ಅದೇ ಪದಕ್ಕೆ ‘ಒಣ ಬಟ್ಟೆ ಒದ್ದೆಯಾಗಿರುವಂತಹ’ ಒಂದು ಎಸಕವನ್ನು ತಿಳಿಸುವ ಹುರುಳೂ ಇದೆ.
ಎರಡು ಹುರುಳುಗಳನ್ನೂ ಕೊಡಬಲ್ಲ ಪರಿಚೆಪದಗಳೊಂದಿಗೆ ಆಗು ಪದ ವನ್ನು ಬಳಸಿದಾಗ ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಕೆಂಪಾದ ತುಟಿ ಎಂಬುದು ‘ಹೆಚ್ಚು ಕೆಂಪಿಲ್ಲದ ಮತ್ತು ಈಗ ಕೆಂಪಾಗಿರುವ’ ತುಟಿಯನ್ನೂ ಗುರುತಿಸಬಹುದು, ಇಲ್ಲವೇ ‘ಯಾವಾಗಲೂ ಕೆಂಪಾಗಿಯೇ ಇರುವ’ ತುಟಿ ಯನ್ನೂ ಗುರುತಿಸಬಲ್ಲುದು.
(9) ಆಗಿರು ಎಂಬುದರೊಂದಿಗೆ ಬಳಕೆ ಪರಿಚೆಪದಗಳ ನಡುವೆ ಇನ್ನೊಂದು ಬಗೆಯ ವ್ಯತ್ಯಾಸವೂ ಇದೆ; ಹೆಚ್ಚಿನ ಪರಿಚೆಪದಗಳನ್ನೂ ನೇರವಾಗಿ ಆಗಿರು (ಆಗಿ+ಇರು) ಎಂಬುದರೊಂದಿಗೆ ಬಳಸಲು ಬರುತ್ತದೆ; ಆದರೆ, ಹೊಸ-ಹಳೆ, ಹಿರಿ-ಕಿರಿ, ದೊಡ್ಡ-ಚಿಕ್ಕ, ಒಳ್ಳೆ ಮೊದಲಾದ ಕೆಲವು ಪರಿಚೆಪದಗಳನ್ನು ಆಗಿರು ಎಂಬುದರೊಂದಿಗೆ ಬಳಸ ಬೇಕಿದ್ದಲ್ಲಿ, ಅವಕ್ಕೆ ದು (ಹಲವೆಣಿಕೆಯಲ್ಲಿ ವು) ಎಂಬುದನ್ನು ಸೇರಿಸಬೇಕಾಗು ತ್ತದೆ:
ಒದ್ದೆಯಾಗಿರುವ ಬಟ್ಟೆ ಗಟ್ಟಿಯಾಗಿರುವ ಹಲಿಗೆ
(1) ನೇರವಾಗಿ ಬಳಕೆಯಾಗುವವು: ಒದ್ದೆ ಬಟ್ಟೆ ಗಟ್ಟಿ ಹಲಿಗೆ ಉದ್ದ ಹಗ್ಗಗಳು ಉದ್ದವಾಗಿರುವ ಹಗ್ಗಗಳು ಕಪ್ಪು ಗೋಡೆ ಅಗ್ಗ ಬೆಲ್ಲ
ಕಪ್ಪಾಗಿರುವ ಗೋಡೆ ಅಗ್ಗವಾಗಿರುವ ಬೆಲ್ಲ
(2) ದು ಇಲ್ಲವೇ ವು ಎಂಬುದರೊಂದಿಗೆ ಬಳಕೆಯಾಗುವವು: ದೊಡ್ಡದಾಗಿರುವ ಮನೆ ದೊಡ್ದ ಮನೆ ಹೊಸ ಮನೆ ಹೊಸದಾಗಿರುವ ಮನೆ ಚಿಕ್ಕ ಗಿಡಗಳು ಚಿಕ್ಕವಾಗಿರುವ ಗಿಡಗಳು ಒಳ್ಳೆಯದಾಗಿರುವ ತುಪ್ಪ ಒಳ್ಳೆ ತುಪ್ಪ ಚೊಕ್ಕದಾಗಿರುವ ಮನೆ ಚೊಕ್ಕ ಮನೆ
ಮೇಲೆ (1)ನೇ ಪಟ್ಟಿಯಲ್ಲಿ ಉದ್ದ ಮತ್ತು ಅಗ್ಗ ಪದಗಳ ಬಳಿಕ ಆಗಿರುವ ಎಂಬುದನ್ನು ಬಳಸಿದಾಗ ವಕಾರ ಸೇರಿಕೊಂಡಿದೆ; ಆದರೆ, ಇದು ಸೇರಿಕೆಯ ವಕಾರವಲ್ಲದೆ, ವು ಎಂಬ ಒಟ್ಟಲ್ಲ. ಇದಕ್ಕೆ ಬದಲು (2)ನೇ ಪಟ್ಟಿಯಲ್ಲಿ ಚಿಕ್ಕ ಪದದ ಬಳಿಕ ಬಂದ ವಕಾರ ಸೇರಿಕೆಯ ವಕಾರವಲ್ಲ, ವು ಎಂಬ ಒಟ್ಟು. ಈ ವಿಶಯ ಈ ಬೆಲ್ಲ ಅಗ್ಗ ಮತ್ತು ಈ ಗಿಡಗಳು ಚಿಕ್ಕವು ಎಂಬ ಸೊಲ್ಲುಗಳ ನಡುವಿನ ವ್ಯತ್ಯಾಸವನ್ನು ಗಮನಿಸಿದಾಗ ಗೊತ್ತಾಗುತ್ತದೆ.
6.3.2 ಪರಿಚೆಪದಗಳ ಓರಣ
ಒಂದು ಹೆಸರುಪದದೊಂದಿಗೆ ಒಂದಕ್ಕಿಂತ ಹೆಚ್ಚು ಪರಿಚೆಪದಗಳನ್ನು ಬಳಸ ಬೇಕಿದ್ದಲ್ಲಿ, ಸಾಮಾನ್ಯವಾಗಿ ಹೆಚ್ಚು ಹೆಸರುಪದಗಳೊಂದಿಗೆ ಬರಬಲ್ಲ ಪರಿಚೆಪದ ಗಳು ಮೊದಲು ಬರುತ್ತವೆ, ಮತ್ತು ಕಡಿಮೆ ಹೆಸರುಪದಗಳೊಂದಿಗೆ ಬರಬಲ್ಲವು ಆಮೇಲೆ (ಎಂದರೆ, ಹೆಸರುಪದಕ್ಕೆ ಹೆಚ್ಚು ಹತ್ತಿರವಾಗಿ) ಬರುತ್ತವೆ.
ಎತ್ತುಗೆಗಾಗಿ, ಪೋಲಿ ಪದದೊಂದಿಗೆ ಬರಬಲ್ಲ ಹೆಸರುಪದಗಳು ದೊಡ್ಡ ಪದದೊಂದಿಗೆ ಬರಬಲ್ಲ ಹೆಸರುಪದಗಳಿಗಿಂತ ತುಂಬಾ ಕಡಿಮೆ; ಹಾಗಾಗಿ, ಅವೆರಡನ್ನೂ ಒಟ್ಟಿಗೆ ಬಳಸಬೇಕಾದಾಗ, ದೊಡ್ಡ ಎಂಬುದು ಮೊದಲು ಬರುತ್ತದೆ, ಮತ್ತು ಪೋಲಿ ಎಂಬುದು ಆಮೇಲೆ ಬರುತ್ತದೆ (ಅವನೊಬ್ಬ ದೊಡ್ಡ ಪೋಲಿ ಹುಡುಗ, *ಅವನೊಬ್ಬ ಪೋಲಿ ದೊಡ್ಡ ಹುಡುಗ).
ಉದ್ದಗಲ ಮತ್ತು ಬಣ್ಣಗಳನ್ನು ತಿಳಿಸುವ ಪರಿಚೆಪದಗಳಲ್ಲಿ ಬಣ್ಣವನ್ನು ತಿಳಿಸುವವು ಹೆಸರುಪದದ ಹತ್ತಿರ ನಿಲ್ಲುತ್ತವೆ: ಚಿಕ್ಕ ಬಿಳಿ ಗೊಂಬೆ ಎಂಬುದು ಸರಿಯಾಗಿದೆ, ಆದರೆ *ಬಿಳಿ ಚಿಕ್ಕ ಗೊಂಬೆ ಎಂಬುದು ಸರಿಯಾಗಿಲ್ಲ ಎಂದು ಅನಿಸುವುದಕ್ಕೆ ಇದೇ ಕಾರಣ. ಇಂತಹ ಬೇರೆಯೂ ಕೆಲವು ಓರಣಗಳನ್ನು ಕೆಳಗೆ ಕೊಡಲಾಗಿದೆ; ಇವುಗಳಲ್ಲಿ ಮೊದಲನೇ ಕಾಲಂನಲ್ಲಿ ಕೊಟ್ಟಿರುವವು ಸರಿಯೆಂದು ತೋರುತ್ತದೆ; ಆದರೆ, ಎರಡನೇ ಕಾಲಂನಲ್ಲಿ ಕೊಟ್ಟಿರುವವು ಅಶ್ಟೊಂದು ಸರಿಯೆಂದು ತೋರುವುದಿಲ್ಲ.
ಹೊಸ ಕೆಂಪು ಕಾರು
ಚಿಕ್ಕ ಹೊಸ ಕಾರು ಒಳ್ಳೆ ಹೊಸ ಕಾರು ಒಳ್ಳೆ ಕೆಂಪು ಕಾರು ಒಳ್ಳೆ ಹೊಸ ಕೆಂಪು ಕಾರು *ಹೊಸ ಕೆಂಪು ಒಳ್ಳೆ ಕಾರು
*ಕೆಂಪು ಹೊಸ ಕಾರು *ಹೊಸ ಚಿಕ್ಕ ಕಾರು *ಹೊಸ ಒಳ್ಳೆ ಕಾರು *ಕೆಂಪು ಒಳ್ಳೆ ಕಾರು
ಇಂತಹ ಕೆಲವು ಓರಣದ ಒಲವುಗಳನ್ನು ಹೊರತುಪಡಿಸಿದರೆ, ಕನ್ನಡದ ಹೆಸರುಕಂತೆಗಳಲ್ಲಿ ಒಂದಕ್ಕಿಂತ ಹೆಚ್ಚು ಪರಿಚೆಪದಗಳನ್ನು ಹಾಗೆಯೇ ಬಳಸುವ ಹೊಲಬು ಇಲ್ಲವೆಂದೇ ಹೇಳಬಹುದು. ಆದರೆ, ಈ ಪರಿಚೆಪದಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದಲ್ಲಿ, ಅವು ಆ ರೀತಿ ಒಂದೇ ಹೆಸರುಕಂತೆಯಲ್ಲಿ ಒಟ್ಟಿಗೆ ಬರಬಲ್ಲುವು:
(1) ತಪ್ಪಾಗಿ ಕಾಣಿಸುವ ಓರಣದಲ್ಲಿ ಮೊದಲು ಬಂದಿರುವ ಪರಿಚೆಪದವನ್ನು ಒತ್ತಿಹೇಳುವುದು ಒಂದು ಮಾರ್ಪಾಡು; ಹಾಗೆ ಮಾಡಿದಾಗ, ಆ ಓರಣ ಸರಿ ಎಂದು ತೋರುತ್ತದೆ; ಒತ್ತಿ ಹೇಳಿದ ಪರಿಚೆಪದ ಬೇರಾಗಿ ನಿಲ್ಲುವುದೇ ಇದಕ್ಕೆ ಕಾರಣವಿರಬೇಕು (ಹೊಸಾ ಚಿಕ್ಕ ಕಾರು).
(2) ಹೆಸರುಕಂತೆಯಲ್ಲಿ ಬರುವ ಎರಡು ಪರಿಚೆಪದಗಳಲ್ಲಿ ಮೊದಲಿನದನ್ನು ಇರು ಇಲ್ಲವೇ ಆಗು ಎಸಕಪದದ ಪರಿಚೆರೂಪದೊಂದಿಗೆ ಕೊಡುವುದು ಇನ್ನೊಂದು ಮಾರ್ಪಾಡು; ಆದರೆ, ದೊಡ್ಡ, ಚಿಕ್ಕ, ಹೊಸ, ಹಳೆ ಮೊದಲಾದ ಕೆಲವು ಪರಿಚೆಪದಗಳನ್ನು ಇಂತಹ ಕಡೆಗಳಲ್ಲಿ ಬಳಸುವಾಗ, ಅವಕ್ಕೆ ದು (ಇಲ್ಲವೇ ವು) ಒಟ್ಟನ್ನು ಬಳಸಬೇಕಾಗುತ್ತದೆ (6.3.1(9) ನೋಡಿ):
(ಕ) ಇರು ಪದದೊಂದಿಗೆ ಬಳಕೆ: ದಪ್ಪ ಇರುವ ಒರಟು ಬಟ್ಟೆ
ತುಂಬಾ ಆಳ ಇರುವ ಉರುಟು ಬಾವಿ ಹುಳಿಯಿರುವ ಚಿಕ್ಕ ಕೆಂಪು ಹಣ್ಣು
(ಚ) ಆಗು ಪದದೊಂದಿಗೆ ಬಳಕೆ: ದೊಡ್ಡದಾದ ಕಪ್ಪು ಹಲಿಗೆ ಕಪ್ಪಾದ ದೊಡ್ಡ ಹಲಿಗೆ ಹೊಸದಾದ ಚಿಕ್ಕ ಮನೆ ಚಿಕ್ಕವಾದ ಹೊಸ ಮನೆಗಳು ಹೊಸದಾದ ಕೆಂಪು ಜಾರ್ಜೆಟ್ ಸೀರೆಗಳು
(3) ಕೆಲವು ಪರಿಚೆಪದಗಳು ಹೆಸರುಪದಗಳಾಗಿಯೂ ಬಳಕೆಯಾಗುತ್ತಿದ್ದು,
ಇಂತಹ ಪದಗಳ ಪತ್ತುಗೆ ರೂಪವನ್ನು ಬಳಸುವುದು ಇನ್ನೊಂದು ಮಾರ್ಪಾಡು:
ಉದ್ದದ ಗಟ್ಟಿ ಹಗ್ಗ
ಎತ್ತರದ ಒಂಟಿ ಮರ ದಪ್ಪದ ಹಳೇ ಹಚ್ಚಡ ಅಗ್ಗದ ದಪ್ಪ ಹಚ್ಚಡ ದಪ್ಪದ ಅಗ್ಗ ಹಚ್ಚಡ
ಮೇಲಿನ ಎರಡು ಹೊಲಬುಗಳನ್ನು ಒಟ್ಟಿಗೆ ಬಳಸಲೂ ಬರುತ್ತದೆ: ಕುಂಬಾದ ಎತ್ತರದ ಒಂಟಿ ಮರ, ಚಿಕ್ಕವಾದ ಅಗ್ಗದ ಹೊಸ ಮನೆಗಳು. ಇಂತಹ ಬಳಕೆಗಳಲ್ಲಿ ಇರು ಇಲ್ಲವೇ ಆಗು ಪದಗಳ ಪತ್ತುಗೆ ರೂಪದೊಂದಿಗೆ ಬರುವ ಪರಿಚೆಪದ ಸಾಮಾನ್ಯವಾಗಿ ಮೊದಲು ಬರುತ್ತದೆ.
(4) ಬೇರೆ ಕೆಲವು ಪರಿಚೆಪದಗಳನ್ನು ಮೊದಲಿಗೆ ಎಸಕಪರಿಚೆಯಾಗಿ ಬದಲಾಯಿಸಿ, ಆಮೇಲೆ ಅವಕ್ಕೆ ಹೆಸರುಪತ್ತುಗೆಯ ಅ ಒಟ್ಟನ್ನು ಸೇರಿಸಿ ಬಳಸ ಬಹುದು:
ಮಾರ್ಪಡಿಸಿದ ಬಳಕೆ
ಬೆಳ್ಳಗಿನ ದೊಡ್ಡ ಹರಳು
ಕೆಂಪಗಿನ ಚಿಕ್ಕ ಹಕ್ಕಿ ಕಪ್ಪಗಿನ ಗುಂಗುರು ಕೂದಲು
ಮಾರ್ಪಡಿಸದ ಬಳಕೆ ದೊಡ್ಡ ಬಿಳಿ ಹರಳು ಚಿಕ್ಕ ಕೆಂಪು ಹಕ್ಕಿ ಕಪ್ಪು ಗುಂಗುರು ಕೂದಲು
ಇಂತಹ ಎಲ್ಲಾ ಬಳಕೆಗಳಲ್ಲೂ ಮಾರ್ಪಡಿಸಿದ ಪರಿಚೆಪದ ಹೆಸರುಕಂತೆಯಲ್ಲಿ ಮೊದಲು ಬರುತ್ತದೆ, ಮತ್ತು ಮಾರ್ಪಡಿಸದ ಪರಿಚೆಪದ ಆಮೇಲೆ (ಎಂದರೆ ಹೆಸರುಪದಕ್ಕೆ ಹತ್ತಿರವಾಗಿ) ಬರುತ್ತದೆ ಎಂಬುದನ್ನು ಗಮನಿಸಬಹುದು.
(5) ಹೆಸರುಕಂತೆಯಲ್ಲಿ ಬರುವ ಎರಡು ಪರಿಚೆಪದಗಳನ್ನು ಮತ್ತು ಪದ ದಿಂದ ಬೇರ್ಪಡಿಸಿ ಹೇಳುವ ಇನ್ನೊಂದು ಹೊಲಬೂ ಕನ್ನಡದಲ್ಲಿ ಬಳಕೆಯಲ್ಲಿದೆ:
ಕೆಂಪು ಮತ್ತು ಕಪ್ಪು ಹರಳು(ಗಳು) ಕಪ್ಪು ಮತ್ತು ಬಿಳಿ ಬೆಕ್ಕು(ಗಳು) ಉದ್ದ ಮತ್ತು ಅಗಲ ಹಲಿಗೆ(ಗಳು)
ಆದರೆ, ಈ ಹೊಲಬನ್ನು ಬಳಸಬೇಕಿದ್ದಲ್ಲಿ, ಮತ್ತು ಪದದಿಂದ ಬೇರ್ಪಡುವ (ಇಲ್ಲವೇ ಒಟ್ಟುಸೇರುವ) ಪರಿಚೆಪದಗಳು ಒಂದೇ ಬಗೆಯ ಪರಿಚೆಗಳನ್ನು ತಿಳಿಸುತ್ತಿರಬೇಕು:
*ದೊಡ್ಡ ಮತ್ತು ಕೆಂಪು ಹರಳು(ಗಳು) *ಅಗ್ಗ ಮತ್ತು ಉದ್ದ ಹಗ್ಗ(ಗಳು)
ದೊಡ್ಡ ಮತ್ತು ಕೆಂಪು ಪರಿಚೆಪದಗಳು ಒಂದೇ ಬಗೆಯವಾಗಿಲ್ಲವಾದ ಕಾರಣ, *ದೊಡ್ಡ ಮತ್ತು ಕೆಂಪು ಹರಳುಗಳು ಎಂಬುದರಲ್ಲಿ ಮತ್ತು ಪದವನ್ನು ಬಳಸಿರುವುದು ಸರಿಯಾಗಿಲ್ಲ. ಅಗ್ಗ ಮತ್ತು ಉದ್ದ ಪದಗಳ ಬಳಕೆಯೂ ಹೀಗೆಯೇ.
ಮತ್ತು ಪದದಿಂದ ಬೇರ್ಪಡಿಸಿದ ಪರಿಚೆಪದಗಳು (ಕ) ‘ಒಂದೇ ಪಾಂಗಿನ ಎರಡು ಪರಿಚೆಗಳನ್ನು ತಿಳಿಸುವುದು’, ಮತ್ತು (ಚ) ‘ಎರಡು ಬೇರೆ ಬೇರೆ ಪಾಂಗುಗಳ ಪರಿಚೆಗಳನ್ನು ತಿಳಿಸುವುದು’ ಎಂಬ ಎರಡು ಹುರುಳುಗಳನ್ನೂ ಕೊಡಬಲ್ಲುವಾಗಿದ್ದು, ಇಪ್ಪುರುಳಿಗೆ ಎಡೆಕೊಡುತ್ತವೆ. ಈ ಎರಡನೇ ಹುರುಳನ್ನು ಹಲವೆಣಿಕೆಯ ಗಳು ಒಟ್ಟನ್ನು ಬಳಸಿರುವಲ್ಲಿ ಹೆಚ್ಚು ಚನ್ನಾಗಿ ಕಾಣಬಹುದು.
ಎತ್ತುಗೆಗಾಗಿ, ಕೆಂಪು ಮತ್ತು ಕಪ್ಪು ಹರಳುಗಳು ಎಂಬುದು ‘ಕೆಂಪು ಹರಳುಗಳು ಮತ್ತು ಕಪ್ಪು ಹರಳುಗಳು’ ಎಂಬ ಹುರುಳನ್ನು ಕೊಡಬಲ್ಲುದು,
ಇಲ್ಲವೇ ‘ಒಂದೊಂದರಲ್ಲೂ ಕೆಂಪು ಮತ್ತು ಕಪ್ಪು ಬಣ್ಣಗಳಿರುವ ಹರಳುಗಳು’ ಎಂಬ ಹುರುಳನ್ನೂ ಕೊಡಬಲ್ಲುದು.
ಆದರೆ, ದೊಡ್ಡ ಮತ್ತು ಚಿಕ್ಕ ಹುಡುಗರು ಎಂಬಂತಹ ಎದುರುಹುರುಳಿನ
ಪರಿಚೆಪದಗಳನ್ನು ಬಳಸಿರುವಲ್ಲಿ ಎರಡನೆಯ ಹುರುಳು ಮಾತ್ರ ಇರುತ್ತದೆ.
6.3.3 ಇಮ್ಮಡಿ ಪರಿಚೆಪದಗಳು
ಇಮ್ಮಡಿ ರೂಪದಲ್ಲಿರುವ ಪರಿಚೆಪದಗಳು ಎರಡು ಹುರುಳುಗಳಲ್ಲಿ ಬಳಕೆ ಯಾಗಬಲ್ಲುವು: ಪರಿಚೆಪದ ತಿಳಿಸುವ ಪರಿಚೆ ಇನ್ನಶ್ಟು ಮೇಲಿನ (ಇಲ್ಲವೇ ಕೆಳಗಿನ) ಹಂತದ್ದು ಎಂಬುದಾಗಿ ಅದನ್ನು ಒತ್ತಿ ಹೇಳುವುದು ಇವುಗಳಲ್ಲಿ ಒಂದು ಹುರುಳು; ಎತ್ತುಗೆಗಾಗಿ, ಹುಳಿ ಹುಳಿ ಹಣ್ಣು ಎಂಬ ಹೆಸರುಕಂತೆಯಲ್ಲಿ ಹುಳಿ ಪರಿಚೆಪದವನ್ನು ಇಮ್ಮಡಿರೂಪದಲ್ಲಿ ಬಳಸಲಾಗಿದ್ದು, ಅದು ‘ತುಂಬಾ ಹುಳಿ ಯಾದ ಹಣ್ಣು’ ಎಂಬ ಹುರುಳನ್ನು ಕೊಡುತ್ತದೆ. ಇಂತಹ ಬಳಕೆಯನ್ನು ಕೆಳಗೆ ಕೊಟ್ಟಿರುವ ಪದಕಂತೆಗಳಲ್ಲೂ ಕಾಣಬಹುದು:
ಹಳೆ ಹಳೆ ಪುಸ್ತಕ ಕಪ್ಪುಕಪ್ಪು ಗೋಡೆ
ಕೆಂಪು ಕೆಂಪು ಮೋರೆ ಬಿಸಿ ಬಿಸಿ ಕಾಪಿ
ಮುದಿ ಮುದಿ ಮುದುಕ ಚಳಿ ಚಳಿ ಗಾಳಿ ದುಂಡು ದುಂಡು ಮೋರೆ ಉಪ್ಪುಪ್ಪು ಉಪ್ಪಿಟ್ಟು ಹೆಚ್ಚು ಹೆಚ್ಚು ನೀರು ಗಟ್ಟಿ ಗಟ್ಟಿ ತಿಂಡಿ
ಅಂಟಂಟು ಬೆಲ್ಲ ಜಬ್ಬು ಜಬ್ಬು ಮುದುಕಿ
ಪರಿಚೆ ಹಲವು ಪಾಂಗುಗಳಲ್ಲಿದೆ ಎಂಬುದನ್ನು ತಿಳಿಸುವುದು ಇನ್ನೊಂದು ಹುರುಳು. ಈ ಬಳಕೆಯಲ್ಲಿ ಪರಿಚೆಪದದ ಬಳಿಕ ಬರುವ ಹೆಸರುಪದ ಸಾಮಾನ್ಯ ವಾಗಿ ಹಲವೆಣಿಕೆಯ ರೂಪದಲ್ಲಿರುತ್ತದೆ. ಎತ್ತುಗೆಗಾಗಿ, ದೊಡ್ಡ ದೊಡ್ಡ ಮರಗಳು ಎಂಬುದು ದೊಡ್ಡದಾಗಿರುವ ಹಲವು ಮರಗಳನ್ನು ಗುರುತಿಸುತ್ತದೆ ಮಾತ್ರವಲ್ಲ, ಅವೆಲ್ಲವೂ ದೊಡ್ಡದಾಗಿವೆ ಎಂಬ ವಿಶಯಕ್ಕೆ ಒತ್ತು ಕೊಡುತ್ತದೆ.
ಇಂತಹ ಬಳಕೆಗಳಲ್ಲೂ ಮೇಲಿನ ಬಳಕೆಯಲ್ಲಿ ಕಾಣಿಸಿಕೊಳ್ಳುವ (ಪರಿಚೆ ಮೇಲಿನ ಇಲ್ಲವೇ ಕೆಳಗಿನ ಹಂತದ್ದು ಎಂಬುದನ್ನು ತಿಳಿಸುವ) ಹುರುಳು ಸಾಮಾನ್ಯವಾಗಿ ಬಂದಿರುತ್ತದೆ. ದೊಡ್ಡ ಮರಗಳು ಎಂಬ ಹೆಸರುಕಂತೆಯನ್ನು ದೊಡ್ಡ ದೊಡ್ಡ ಮರಗಳು ಎಂಬುದರೊಂದಿಗೆ ಹೋಲಿಸಿ ನೋಡಿದಾಗ ಈ ವಿಶಯ ಸ್ಪಶ್ಟವಾಗುತ್ತದೆ. ಈ ಎರಡನೆಯ ಬಳಕೆಗೆ ಬೇರೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
ಚಿಕ್ಕ ಚಿಕ್ಕ ಮಕ್ಕಳು ಉರುಟುರುಟು ಹಣ್ಣುಗಳು ಹಣ್ಣು ಹಣ್ಣು ಮುದುಕಿಯರು
ಹೊಸ ಹೊಸ ಮನೆಗಳು
ದಪ್ಪ ದಪ್ಪ ಎಲೆಗಳು ಉದ್ದುದ್ದ ಪದಗಳು ಒಳ್ಳೊಳ್ಳೆ ಹಣ್ಣುಗಳು ಚಂದ ಚಂದ ಮಕ್ಕಳು ಪುಟ್ಟ ಪುಟ್ಟ ಕಯ್ಗಳು ಬಿಳಿ ಬಿಳಿ ಹಲ್ಲುಗಳು
ಕಪ್ಪು ಕಪ್ಪು ಹುಳಗಳು ಚೊಕ್ಕ ಚೊಕ್ಕ ಮನೆಗಳು ಚೂಪು ಚೂಪು ಮೊಳೆಗಳು ಬೋಳು ಬೋಳು ತಲೆಗಳು
ಈ ಎರಡು ಬಗೆಯ ಬಳಕೆಗಳಿಗೆ ಎತ್ತುಗೆಯಾಗಿ ಕೆಲವು ಸೊಲ್ಲುಗಳನ್ನು
ಕೆಳಗೆ ಕೊಡಲಾಗಿದೆ:
(20ಕ) ಈ ಹಣ್ಣು ಹಣ್ಣು ಮುದುಕಿಗೂ ಹಣದ ಆಸೆ ಬಿಟ್ಟಿಲ್ಲ. (20ಚ) ಅವರು ಹೆಚ್ಚು ಹೆಚ್ಚು ಹಣ ಕೇಳುತ್ತಿದ್ದಾರೆ. (20ಟ) ಬಿಸಿ ಬಿಸಿ ಗಾಳಿ ಬೀಸುತ್ತಿತ್ತು. (20ತ) ಆ ಮರದಲ್ಲಿ ಕೆಂಪು ಕೆಂಪು ಹಣ್ಣುಗಳು ತೂಗಾಡುತ್ತಿವೆ. (21ಕ) ನಾವು ಹೊಸ ಹೊಸ ಊರುಗಳನ್ನು ನೋಡುತ್ತಿರುತ್ತೇವೆ. (21ಚ) ದೊಡ್ಡ ದೊಡ್ಡ ಮರಗಳಲ್ಲಿ ಒಂದನ್ನೂ ಅವರು ಉಳಿಸಿಲ್ಲ. (21ಟ) ಅವನ ಪೆದ್ದು ಪೆದ್ದು ಮಾತುಗಳನ್ನು ಕೇಳುವವರು ಯಾರು? (21ತ) ಇದು ಚೊಕ್ಕ ಚೊಕ್ಕ ಮನೆಗಳಿರುವ ಊರು.
ಎಲ್ಲಾ ಬಗೆಯ ಪರಿಚೆಪದಗಳನ್ನೂ ಈ ರೀತಿ ಇಮ್ಮಡಿ ರೂಪದಲ್ಲಿ ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಅಗ್ಗ, ಕಳಪೆ, ಕಿವುಡು, ದುಂದು, ಬಕ್ಕ, ಎಡ- ಬಲ ಮೊದಲಾದ ಹಲವು ಪರಿಚೆಪದಗಳನ್ನು ಇಮ್ಮಡಿ ರೂಪದಲ್ಲಿ ಬಳಸಲು ಬರುವ ಹಾಗೆ ಕಾಣಿಸುವುದಿಲ್ಲ. ಸಾಮಾನ್ಯವಾಗಿ, ಹಂತಗಳಲ್ಲಿ ಬರಬಲ್ಲ ಪದಗಳೇ ಇಂತಹ ಇಟ್ಟಳದಲ್ಲಿ, ಅದರಲ್ಲೂ ಮೊದಲನೆಯ ಹುರುಳನ್ನು ಕೊಡುವ ಇಟ್ಟಳದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಎರಡನೆಯ ಹುರುಳಿನಲ್ಲಿ ಬೇರೆ ಬಗೆಯ ಪರಿಚೆಪದಗಳೂ ಬರಬಲ್ಲುವು.
ಕೆಲವು ಪರಿಚೆಪದಗಳು ಈ ರೀತಿ ಇಮ್ಮಡಿ ರೂಪದಲ್ಲಿ ಬರುವಾಗ ಸೇರಿಕೆ ಮಾರ್ಪಾಡುಗಳಿಗೆ ಒಳಗಾಗುತ್ತವೆ. ಉರುರುಟುರುಟು, ಅಂಟಂಟು, ಉಪ್ಪುಪ್ಪು ಎಂಬಂತಹವುಗಳಲ್ಲಿ ಮೊದಲನೇ ಪದದ ಕೊನೆಯ ಉಕಾರ ಬಿದ್ದುಹೋಗಿದೆ; ಇದಕ್ಕೆ ಬದಲು, ಒಳ್ಳೊಳ್ಳೆ ಎಂಬುದರಲ್ಲಿ ಮೊದಲನೇ ಪದದ ಕೊನೆಯ ಎಕಾರ ಬಿದ್ದುಹೋಗಿದೆ, ಮತ್ತು ಉದ್ದುದ್ದ ಎಂಬುದರಲ್ಲಿ ಮೊದಲನೇ ಪದದ ಕೊನೆಯ ಅಕಾರ ಬಿದ್ದುಹೋಗಿದೆ. ಈ ಎಲ್ಲಾ ಪದಗಳೂ ತೆರೆಯುಲಿಯಲ್ಲಿ ಮೊದಲಾಗು ತ್ತವೆ ಎಂಬುದನ್ನು ಗಮನಿಸಬಹುದು.
ಮುಚ್ಚುಲಿಯಲ್ಲಿ ಮೊದಲಾಗುವ ಕೆಲವು ಪದಗಳೂ ಇಂತಹ ಸೇರಿಕೆಯ ಮಾರ್ಪಾಡುಗಳನ್ನು ತೋರಿಸುತ್ತವೆ. ಎತ್ತುಗೆಗಾಗಿ, ಹೊಚ್ಚಹೊಸ ಎಂಬುದರಲ್ಲಿ
ಹೊಸ ಎಂಬುದು ಹೊಚ್ಚ ರೂಪಕ್ಕೆ ಬದಲಾಗಿದೆ. ಈ ಬಗೆಯ ಮಾರ್ಪಾಡುಗಳು ಹೆಸರುಪರಿಚೆಗಳಿಗಿಂತಲೂ ಎಸಕಪರಿಚೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ (ಕಟ್ಟ ಕಡೆಗೆ, ನಟ್ಟನಡುವೆ, ತುತ್ತತುದಿಯಲ್ಲಿ ಇಲ್ಲವೇ ತುಟ್ಟತುದಿಯಲ್ಲಿ, ಮೊತ್ತಮೊದಲು ಇಲ್ಲವೇ ಮೊಟ್ಟಮೊದಲು).
6.3.4 ಹಂತಪದಗಳು ಮತ್ತು ಹೋಲಿಕೆಯ ನುಡಿತಗಳು
ಮೇಲೆ 6.3.1(4)ರಲ್ಲಿ ವಿವರಿಸಿದ ಹಾಗೆ, ಹಂತಪರಿಚೆಗಳೆಲ್ಲ ಒಂದು ಅಳತೆ ಪಟ್ಟಿಗೆ ಸಂಬಂದಿಸಿರುತ್ತವೆ. ಒಂದೊಂದು ಅಳತೆಪಟ್ಟಿಯಲ್ಲೂ ಹಲವು ಹಂತಗ ಳಿದ್ದು, ಒಂದು ಪಾಂಗು ಯಾವ ಹಂತದಲ್ಲಿ ಒಂದು ಪರಿಚೆಯನ್ನು ಪಡೆದಿದೆ ಎಂಬುದನ್ನು ಹೇಳಲು ಬರುತ್ತದೆ, ಮತ್ತು ಎರಡು ಪಾಂಗುಗಳು ಹೇಗೆ ಒಂದು ಅಳತೆಪಟ್ಟಿಯ ಬೇರೆ ಬೇರೆ ಹಂತಗಳಲ್ಲಿ (ಇಲ್ಲವೇ ಒಂದೇ ಹಂತದಲ್ಲಿ) ಆ ಪರಿಚೆಯನ್ನು ಪಡೆದಿವೆ ಎಂಬುದನ್ನೂ ತಿಳಿಸಲು ಬರುತ್ತದೆ.
ಎತ್ತುಗೆಗಾಗಿ, ಮೂರಡಿ ಎತ್ತರ ಗೋಡೆ ಎಂಬುದು ಎತ್ತರ-ತಗ್ಗು ಅಳತೆ ಪಟ್ಟಿಯಲ್ಲಿ ‘ಕೆಳಗಿನಿಂದ ಮೂರಡಿ ಎತ್ತರದಲ್ಲಿರುವ ಹಂತದಲ್ಲಿ ಗೋಡೆಯ ಎತ್ತರ ಇದೆ’ ಎಂಬುದನ್ನು ತಿಳಿಸುತ್ತದೆ; ಮತ್ತು ಇದಕ್ಕಿಂತ ದಪ್ಪ ಹಲಿಗೆ ಎಂಬುದು ದಪ್ಪ-ಹಗುರ ಅಳತೆಪಟ್ಟಿಯಲ್ಲಿ ಎರಡು ಹಲಿಗೆಗಳು ಬೇರೆ ಬೇರೆ ಹಂತಗಳಲ್ಲಿವೆ (ಒಂದು ಮೇಲೆ ಮತ್ತು ಇನ್ನೊಂದು ಕೆಳಗೆ) ಎಂಬುದನ್ನು ತಿಳಿಸುತ್ತದೆ.
(1) ಹೋಲಿಕೆಯ ನುಡಿತವನ್ನು ಬಳಸುವ ಹೆಸರುಕಂತೆಗಳಲ್ಲಿ ಮುಕ್ಯವಾಗಿ ಮೂರು ಅಂಗಗಳಿರುತ್ತವೆ: (ಕ) ಹೋಲಿಕೆ ಪಾಂಗು, (ಚ) ಮಾದರಿ ಪಾಂಗು, ಮತ್ತು (ಟ) ಅಳತೆಪಟ್ಟಿ. ಎತ್ತುಗೆಗಾಗಿ, ಅವನಿಗಿಂತ ದೊಡ್ಡ ಹುಡುಗ ಎಂಬ ಹೆಸರುಕಂತೆಯಲ್ಲಿ ಅವನು ಎಂಬುದು ಮಾದರಿ ಪಾಂಗನ್ನು ಗುರುತಿಸುತ್ತದೆ; ಹುಡುಗ ಎಂಬುದು ಹೋಲಿಕೆಯ ಪಾಂಗನ್ನು ಗುರುತಿಸುತ್ತದೆ; ಮತ್ತು ದೊಡ್ಡ ಎಂಬುದು ಅಳತೆಪಟ್ಟಿ ಎಂತಹದು ಎಂಬುದನ್ನು ತಿಳಿಸುತ್ತದೆ.
(2) ಹೋಲಿಕೆಯಲ್ಲೂ ಎರಡು ಬಗೆಗಳಿವೆ: (ಕ) ಮಾದರಿ ಮತ್ತು ಹೋಲಿಕೆ ಪಾಂಗುಗಳು ಒಂದೇ ಹಂತದಲ್ಲಿವೆ ಎಂಬುದಾಗಿ ತಿಳಿಸುವುದು ಒಂದು ಬಗೆ, ಮತ್ತು (ಚ) ಅವೆರಡು ಬೇರೆ ಬೇರೆ ಹಂತಗಳಲ್ಲಿವೆ ಎಂಬುದಾಗಿ ತಿಳಿಸುವುದು ಇನ್ನೊಂದು ಬಗೆ.
(22ಕ) ಇದರಶ್ಟು ದೊಡ್ಡ ಇನ್ನೊಂದು ಗಡಿಗೆ ಅಟ್ಟದ ಮೇಲಿದೆ. (22ಚ) ಶಾನುಬಾಗರ ಮನೆಯಲ್ಲಿ ಇದಕ್ಕಿಂತ ದೊಡ್ಡ ಗಡಿಗೆ ಇದೆ.
(22ಕ)ದಲ್ಲಿ ‘ಎರಡು ಗಡಿಗೆಗಳು ದೊಡ್ಡ-ಚಿಕ್ಕ ಅಳತೆಪಟ್ಟಿಯ ಒಂದೇ ಹಂತದಲ್ಲಿವೆ’ ಎಂಬುದಾಗಿ ತಿಳಿಸಲಾಗಿದೆ, ಮತ್ತು (22ಚ)ದಲ್ಲಿ ‘ಎರಡು
ಗಡಿಗೆಗಳು ಬೇರೆ ಬೇರೆ ಹಂತಗಳಲ್ಲಿವೆ, ಮತ್ತು ಹೋಲಿಕೆ ಪಾಂಗು ಮಾದರಿ ಪಾಂಗಿಗಿಂತ ಮೇಲಿನ ಹಂತದಲ್ಲಿದೆ’ ಎಂಬುದಾಗಿ ತಿಳಿಸಲಾಗಿದೆ.
ಇಂತಹ ಪದಕಂತೆಗಳಲ್ಲಿ ಮಾದರಿ ಪಾಂಗನ್ನು
ಗುರುತಿಸುವ ಪದ ಯಾವಾಗಲೂ ಒಂದೇ ರೂಪದಲ್ಲಿರುತ್ತದೆ: ಎರಡು ಪಾಂಗುಗಳೂ ಒಂದೇ ಹಂತದಲ್ಲಿವೆ ಎಂಬುದನ್ನು ತಿಳಿಸುವಲ್ಲೆಲ್ಲ ಅದರೊಂದಿಗೆ ಅಶ್ಟು ಪದ ಬರುತ್ತದೆ, ಮತ್ತು ಅವು ಬೇರೆ ಬೇರೆ ಹಂತಗಳಲ್ಲಿವೆ ಎಂಬುದನ್ನು ತಿಳಿಸುವಲ್ಲೆಲ್ಲ ಅದರೊಂದಿಗೆ ಇಗೆ ಮತ್ತು ಇಂತ ಎಂಬ ಎರಡು ಒಟ್ಟುಗಳು ಒಟ್ಟಾಗಿ ಬರುತ್ತವೆ. ಇದಲ್ಲದೆ, ಮಾದರಿ ಪಾಂಗನ್ನು ಗುರುತಿಸುವ ಹೆಸರುಪದ ಮತ್ತು ಅಳತೆಪಟ್ಟಿಯನ್ನು ತಿಳಿಸುವ ಪದ - ಇವೆರಡೂ ಒಟ್ಟಾಗಿ ಹೆಸರುಕಂತೆಯ ನೆರವು ನುಡಿತವಾಗಿ ಬರುತ್ತವೆ.
ಇದಕ್ಕೆ ಬದಲು, ಹೋಲಿಕೆ ಪಾಂಗನ್ನು ಗುರುತಿಸುವ ಪದ ಹೆಸರುಕಂತೆಯ ತಿರುಳು ಪದವಾಗಿ ಬರುತ್ತಿದ್ದು, ಅದರೊಂದಿಗೆ ಬೇರೆ ಬೇರೆ ಪತ್ತುಗೆ ಒಟ್ಟುಗಳು ಬರಬಲ್ಲುವು. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(23ಕ) ಇದಕ್ಕಿಂತ ದೊಡ್ಡ ಹಣ್ಣುಗಳನ್ನು ಬೇರೆ ಬುಟ್ಟಿಯಲ್ಲಿ ತುಂಬಿಸಿ. (23ಚ) ಅವನಿಗಿಂತ ದೊಡ್ಡ ಹುಡುಗನಿಗೆ ಇಲ್ಲಿ ಜಾಗವಿಲ್ಲ. (24ಕ) ಇದರಶ್ಟು ಚಿಕ್ಕ ಬುಟ್ಟಿಗಳಲ್ಲಿ ಹಣ್ಣು ತುಂಬಿಸಬೇಡಿ.
(24ಚ) ಇವನಶ್ಟು ಚಿಕ್ಕ ಹುಡುಗನಿಂದ ಕೆಲಸ ಮಾಡಿಸಬಾರದು.
(23)ರ ಎರಡು ಸೊಲ್ಲುಗಳಲ್ಲೂ ಮಾದರಿ ಪಾಂಗು ಇಂತ ಒಟ್ಟಿನೊಂದಿಗೆ ಬಂದಿದೆ; ಆದರೆ, ಹೋಲಿಕೆ ಪಾಂಗು (23ಕ)ದಲ್ಲಿ ಅನ್ನು ಒಟ್ಟಿನೊಂದಿಗೆ ಬಂದಿದೆ, ಮತ್ತು (23ಚ)ದಲ್ಲಿ ಇಗೆ ಒಟ್ಟಿನೊಂದಿಗೆ ಬಂದಿದೆ; ಇದೇ ರೀತಿ ಯಲ್ಲಿ, (24)ರ ಎರಡು ಸೊಲ್ಲುಗಳಲ್ಲೂ ಮಾದರಿ ಪಾಂಗು ಅಶ್ಟು ಪದ ದೊಂದಿಗೆ ಬಂದಿದೆ; ಆದರೆ, ಹೋಲಿಕೆ ಪಾಂಗು (24ಕ)ದಲ್ಲಿ ಅಲ್ಲಿ ಒಟ್ಟಿ ನೊಂದಿಗೆ ಬಂದಿದೆ, ಮತ್ತು (24ಚ)ದಲ್ಲಿ ಇಂದ ಒಟ್ಟಿನೊಂದಿಗೆ ಬಂದಿದೆ.
(3) ಮಾದರಿ ಪಾಂಗಿನೊಂದಿಗೆ ಅಶ್ಟು ಪದದ ಬದಲು ಅಂತಹ ಪದವನ್ನೂ ಬಳಸಲು ಬರುತ್ತದೆ; ಆದರೆ, ಇದು ಅಳತೆಪಟ್ಟಿಯನ್ನು ಬಳಸಹೋಗದೆ ನೇರವಾಗಿ ಯಾವುದೋ ಒಂದು ಪರಿಚೆಯ ಮಟ್ಟಿಗೆ ಎರಡು ಪಾಂಗುಗಳು ಒಂದೇ ಹಂತದಲ್ಲಿವೆ ಎಂಬುದಾಗಿ ತಿಳಿಸುತ್ತದೆ.
(25ಕ) ಇವನಂತಹ ಹುಡುಗನನ್ನು ನಾನೆಲ್ಲೂ ನೋಡಿಲ್ಲ. (25ಚ) ಆಕೆಯದು ತೊಂಡೆಹಣ್ಣಿನಂತಹ ತುಟಿ.
ಈ ಇಟ್ಟಳದಲ್ಲಿ ಅಳತೆಪಟ್ಟಿಯನ್ನು ತಿಳಿಸುವ ಪರಿಚೆಪದವನ್ನು ಹೋಲಿಕೆ ಪಾಂಗನ್ನು ಗುರುತಿಸುವ ಹೆಸರುಪದದ ಪರಿಚೆಪದವಾಗಿ ಬಳಸಲು ಬರುತ್ತದೆ; ಆದರೆ, ಅದು ಹೋಲಿಕೆ ನುಡಿತದ ಅಂಗವಾಗಿರುವ ಹಾಗೆ ಕಾಣಿಸುವುದಿಲ್ಲ.
(26ಕ) ಇವನಂತಹ ದಡ್ಡ ಹುಡುಗನನ್ನು ನಾನೆಲ್ಲೂ ನೋಡಿಲ್ಲ. (26ಚ) ಆಕೆಯದು ತೊಂಡೆಹಣ್ಣಿನಂತಹ ಕೆಂಪು ತುಟಿ.
(26ಕ) ಸೊಲ್ಲಿನಲ್ಲಿ ದಡ್ಡ ಎಂಬ ಪದ ನೇರವಾಗಿ ಹುಡುಗ ಪದಕ್ಕೆ ಸಂಬಂದಿಸಿದೆಯಲ್ಲದೆ, ಇವನಂತಹ ಎಂಬುದರೊಂದಿಗೆ ನೇರವಾಗಿ ಸಂಬಂದಿ ಸಿಲ್ಲ ಎಂಬುದನ್ನು ಗಮನಿಸಬಹುದು.
(4) ಹೋಲಿಕೆಯ ಹೆಸರುಕಂತೆಗಳಲ್ಲಿ ಮಾದರಿ ಪಾಂಗನ್ನು ಗುರುತಿಸದಿರಲೂ ಬರುತ್ತದೆ. ಎತ್ತುಗೆಗಾಗಿ, ಇದೊಂದು ದೊಡ್ಡ ಆನೆ ಎಂಬ ಸೊಲ್ಲನ್ನು ಗಮನಿಸಬಹುದು; ಇದರಲ್ಲಿ ಬಂದಿರುವ ದೊಡ್ಡ ಆನೆ ಎಂಬುದು ನಿಜಕ್ಕೂ ಒಂದು ಹೋಲಿಕೆಯನ್ನು ತಿಳಿಸುವ ಪದಕಂತೆಯಾಗಿದೆ. ಯಾಕೆಂದರೆ, ಅದು ಸಾಮಾನ್ಯ ಆನೆಗಳಿಗಿಂತ ದೊಡ್ಡದಾಗಿರುವ ಒಂದು ಆನೆಯನ್ನು ಗುರುತಿಸುತ್ತದೆ. ಆದರೆ, ಈ ‘ಸಾಮಾನ್ಯ ಆನೆಗಳು’ ಯಾವುವು ಎಂಬುದನ್ನು, ಎಂದರೆ ಈ ಹೋಲಿಕೆಯ ಮಾದರಿ ಪಾಂಗು ಯಾವುದು ಎಂಬುದನ್ನು, ಅದು ಗುರುತಿಸಿ ತೋರಿಸುವುದಿಲ್ಲ ಅಶ್ಟೆ.
ಈ ರೀತಿ ಹೋಲಿಕೆಯ ಮಾದರಿ ಪಾಂಗನ್ನು ಗುರುತಿಸದಿರುವ ಹೆಸರು
ಕಂತೆಗಳೇ ಹೆಚ್ಚು ಬಳಕೆಯಾಗುತ್ತಿರುತ್ತವೆ.
(5) ಹೋಲಿಕೆಯ ಪದಕಂತೆಗಳಲ್ಲಿ ಅಳತೆಪಟ್ಟಿಯನ್ನು ತಿಳಿಸುವುದಕ್ಕಾಗಿ ಹೆಸರುಪರಿಚೆಗಳ ಬದಲು ಎಸಕಪರಿಚೆಗಳನ್ನು ಬಳಸಲು ಬರುತ್ತದೆ; ಆದರೆ, ಇದಕ್ಕಾಗಿ ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗುತ್ತದೆ:
(27ಕ) ಈ ನೀರಿಗಿಂತ ತಣ್ಣಗಿನ ನೀರು ಆ ಕೆರೆಯಲ್ಲಿದೆ. (27ಚ) ಇದಕ್ಕಿಂತ ಬೆಳ್ಳಗಿನ ಕಾಗದ ನಮ್ಮಲ್ಲಿ ಸಿಗಲಾರದು. (27ಟ) ಇದಕ್ಕಿಂತ ಕರ್ರಗಿನ ಬೆಕ್ಕನ್ನು ನಾನೆಲ್ಲೂ ನೋಡಿಲ್ಲ.
ಮೇಲಿನ ಸೊಲ್ಲುಗಳಲ್ಲಿ ತಣ್ಣಗೆ, ಬೆಳ್ಳಗೆ ಮತ್ತು ಕರ್ರಗೆ ಎಂಬ ಎಸಕ ಪರಿಚೆಗಳನ್ನು, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ತಣ್ಣಗಿನ, ಬೆಳ್ಳಗಿನ ಮತ್ತು ಕರ್ರಗಿನ ಎಂಬುದಾಗಿ ಬದಲಾಯಿಸಿ, ಹೋಲಿಕೆಯ ಪರಿಚೆಪಟ್ಟಿಯನ್ನು ತಿಳಿಸಲು ಬಳಸಲಾಗಿದೆ.
(6) ಹೋಲಿಸುವ ಹೆಸರುಕಂತೆಗಳಲ್ಲಿ ಮಾದರಿ ಪಾಂಗನ್ನು ಗುರುತಿಸಲು ಸೊಲ್ಲುಗಳ ಹೆಸರುರೂಪಗಳನ್ನೂ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(28ಕ) ನೀವು ತಂದುದಕ್ಕಿಂತ ದೊಡ್ಡ ಹಣ್ಣನ್ನು ಅವನು ತಂದಿದ್ದಾನೆ. (28ಚ) ನೀವು ತಂದುದರಶ್ಟು ದೊಡ್ಡ ಹಣ್ಣನ್ನು ಅವನೂ ತಂದಿದ್ದಾನೆ. (28ಟ) ನೀವು ತರುವುದಕ್ಕಿಂತ ದೊಡ್ಡ ಹಣ್ಣನ್ನು ನಾನು ತರಲಿದ್ದೇನೆ.
ಆದರೆ ಇಲ್ಲಿ ಒಂದು ಕಟ್ಟುಪಾಡಿದೆ: ಮಾದರಿ ಪಾಂಗುಗಳನ್ನು ಗುರುತಿಸುವ
ಹೆಸರುರೂಪಗಳಲ್ಲಿ ಅಲ್ಲಗಳೆಯುವ ಒಟ್ಟು ಬರಲಾರದು:
(29ಕ) *ಯಾರೂ ನೋಡದುದಕ್ಕಿಂತ ಎತ್ತರದ ಕಟ್ಟಡವನ್ನು ಅವನು
ನೋಡಿದ್ದಾನೆ.
(29ಚ) *ಯಾರೂ ತರದುದರಶ್ಟು ದೊಡ್ಡ ಹಣ್ಣನ್ನು ಅವನು ತಂದಿದ್ದಾನೆ.
6.3.5 ಹೆಸರುಪದಗಳ ಪತ್ತುಗೆ ರೂಪದ ಬಳಕೆ
ಹೆಸರುಪದಗಳ ಹರವನ್ನು ಕುಗ್ಗಿಸುವುದಕ್ಕಾಗಿ ಪರಿಚೆಪದಗಳನ್ನು ಬಳಸುವ ಬದಲು, ಬೇರೊಂದು ಹೆಸರುಪದದ ಪತ್ತುಗೆ ರೂಪವನ್ನು ಬಳಸುವ ಹೊಲಬೂ ಕನ್ನಡದಲ್ಲಿದೆ. ಎತ್ತುಗೆಗಾಗಿ, ಕಲ್ಲಿನ ಮನೆ ಎಂಬುದರಲ್ಲಿ ಕಲ್ಲು ಪದದ ಪತ್ತುಗೆ ರೂಪವಾದ ಕಲ್ಲಿನ ಎಂಬುದನ್ನು ಮನೆ ಪದದ ನೆರವು ನುಡಿತವಾಗಿ ಬಳಸಲಾಗಿದೆ, ಮತ್ತು ಅದು ಮನೆ ಪದದ ಹರವನ್ನು ಕುಗ್ಗಿಸುತ್ತದೆ: ಮನೆ ಪದ ಗುರುತಿಸಬಲ್ಲ ಪಾಂಗುಗಳಲ್ಲಿ ಕೆಲವನ್ನು ಮಾತ್ರ ಕಲ್ಲಿನ ಮನೆ ಪದಕಂತೆ ಗುರುತಿಸಬಲ್ಲುದು.
ಹೆಸರುಪದದ ಹರವನ್ನು ಕುಗ್ಗಿಸುವ ಕೆಲಸದಲ್ಲಿ ಬೇರೊಂದು ಹೆಸರುಪದದ ಪತ್ತುಗೆ ರೂಪವನ್ನು ಬಳಸುವ ಈ ಹೊಲಬು ಪರಿಚೆ ಪದದ ಬಳಕೆಯನ್ನು ಹೋಲುತ್ತದೆ ಎಂಬುದನ್ನು ಗಮನಿಸಬಹುದು: ದೊಡ್ಡ ಮನೆ ಎಂಬುದರಲ್ಲಿ ಬಂದಿರುವ ದೊಡ್ಡ ಪರಿಚೆಪದ ಹೇಗೆ ಮನೆ ಪದದ ಹರವನ್ನು ಕುಗ್ಗಿಸು ತ್ತದೆಯೋ ಹಾಗೆಯೇ ಕಲ್ಲಿನ ಮನೆ ಎಂಬುದರಲ್ಲಿ ಬಂದಿರುವ ಕಲ್ಲಿನ ಪತ್ತುಗೆ ರೂಪವೂ ಮನೆ ಪದದ ಹರವನ್ನು ಕುಗ್ಗಿಸುತ್ತದೆ.
ಆದರೆ ಈ ಎರಡು ಹೊಲಬುಗಳ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸ
ಗಳಿವೆ:
(1) ಸಾಮಾನ್ಯವಾಗಿ ಪರಿಚೆಪದಗಳು ಒಂದು ಪರಿಚೆಯನ್ನು ತಿಳಿಸುತ್ತಿದ್ದು, ಆ ಪರಿಚೆಯನ್ನು ಹೆಸರುಪದಕ್ಕೆ ಸೇರಿಸುವ ಮೂಲಕ ಅದರ ಹರವನ್ನು ಕುಗ್ಗಿಸುತ್ತವೆ; ಎತ್ತುಗೆಗಾಗಿ, ಕೆಂಪು ಪರಿಚೆಪದ ಒಂದು ಪಾಂಗಿನ ಬಣ್ಣವನ್ನು ತಿಳಿಸುತ್ತದೆ; ಆ ಪರಿಚೆಪದವನ್ನು ಹೂವು ಹೆಸರುಪದದೊಂದಿಗೆ ಬಳಸಿದಾಗ, ಅದು ಆ ಹೆಸರು ಪದಕ್ಕಿರುವ ಹುರುಳಿಗೆ ‘ಕೆಂಪು ಬಣ್ಣದ್ದು’ ಎಂಬ ಹುರುಳನ್ನು ಸೇರಿಸುತ್ತದೆ, ಮತ್ತು ಆ ಮೂಲಕ ಅದರ ಹುರುಳನ್ನು ಕುಗ್ಗಿಸುತ್ತದೆ.
ಆದರೆ, ಹೆಸರುಪದಗಳು ಒಂದೇ ಪರಿಚೆಯನ್ನು ತಿಳಿಸುವ ಬದಲು, ಹಲವು ಪರಿಚೆಗಳ ಒಂದು ಗುಂಪನ್ನು ತಿಳಿಸುತ್ತವೆ; ಹಾಗಾಗಿ, ಅವುಗಳ ಪತ್ತುಗೆ ರೂಪವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಿದಾಗ, ಆ ಗುಂಪಿನ ಎಲ್ಲಾ ಪರಿಚೆಗಳೂ ತಿರುಳು ಪದವಾಗಿ ಬಂದಿರುವ ಹೆಸರುಪದದ ಹುರುಳಿನೊಂದಿಗೆ ಬೆರೆಯಬಲ್ಲುವು. ಆದರೆ ಸಾಮಾನ್ಯವಾಗಿ, ಸಂದರ್ಬಕ್ಕೆ ತಕ್ಕ ಹಾಗೆ, ಅವುಗಳಲ್ಲಿ ಯಾವುದಾದರೂ ಒಂದು ಪರಿಚೆ ಮಾತ್ರ ಹರವನ್ನು ಕುಗ್ಗಿಸುವ ಪರಿಚೆಯಾಗಿ ಆಯ್ಕೆಯಾಗಿರುತ್ತದೆ. ಎತ್ತುಗೆಗಾಗಿ, ಮರ ಎಂಬ ಪದದ ಪತ್ತುಗೆರೂಪವನ್ನು ಬಳಸಿರುವ ಕೆಲವು ಪದಕಂತೆಗಳನ್ನು ಗಮನಿಸಬಹುದು:
(30ಕ) ಈ ಮರದ ಗೊಂಬೆ - ಈ ಮರದಿಂದ ಮಾಡಿದ ಗೊಂಬೆ (30ಚ) ಈ ಮರದ ಹಣ್ಣು - ಈ ಮರದಲ್ಲಿ ಬೆಳೆದ ಹಣ್ಣು (30ಟ) ಈ ಮರದ ನೆರಳು - ಈ ಮರದ ಕೆಳಗೆ ಬಿದ್ದ ನೆರಳು
ಮರ ಪದದ ಪತ್ತುಗೆ ರೂಪ (30ಕ)ದಲ್ಲಿ ‘ಗೊಂಬೆಯನ್ನು ಯಾವುದರಿಂದ ಮಾಡಲಾಗಿದೆ’ ಎಂಬುದನ್ನು, (30ಚ)ದಲ್ಲಿ ‘ಹಣ್ಣು ಯಾವುದರಲ್ಲಿ ಬೆಳೆದದ್ದು’ ಎಂಬುದನ್ನು, ಮತ್ತು (30ಟ)ದಲ್ಲಿ ‘ನೆರಳು ಯಾವುದರದ್ದು’ ಎಂಬುದನ್ನು ತಿಳಿಸುತ್ತದೆ. ಇವು ಮರ ಪದ ತಿಳಿಸಬಲ್ಲ ಬೇರೆ ಬೇರೆ ಪರಿಚೆಗಳಾಗಿದ್ದು, ಅವುಗಳಲ್ಲಿ ಬೇರೆ ಬೇರೆ ಪರಿಚೆಗಳು ಮೇಲಿನ ಬೇರೆ ಬೇರೆ ಪದಕಂತೆಗಳಲ್ಲಿ ಕಾಣಿಸಿಕೊಂಡಿವೆ.
(2) ಪರಿಚೆಪದಗಳೊಂದಿಗೆ ಮೇಲಿನ ಇಲ್ಲವೇ ಕೆಳಗಿನ ಹಂತವನ್ನು ತಿಳಿಸುವ ಪರಿಚೆಪದ ಬರಬಲ್ಲುದು (ತುಂಬಾ ದೊಡ್ಡ ಮನೆ), ಮತ್ತು ಹೋಲಿಕೆಯ ನುಡಿತಗಳೂ ಬರಬಲ್ಲುವು (ಇದಕ್ಕಿಂತ ದೊಡ್ಡ ಮನೆ) ಎಂಬುದನ್ನು ಮೇಲೆ ನೋಡಿರುವೆವು (6.3.4 ನೋಡಿ); ಆದರೆ, ಹೆಸರುಪದದ ಪತ್ತುಗೆ ರೂಪ ದೊಂದಿಗೆ ಇವೆರಡೂ ಬರಲಾರವು (*ತುಂಬಾ ಮರದ ಮನೆ; *ಇದಕ್ಕಿಂತ ಮರದ ಮನೆ).
ಹಂತಪರಿಚೆ ಇಲ್ಲವೇ ಹೋಲಿಕೆನುಡಿತಗಳನ್ನು ಬಳಸಬೇಕಿದ್ದಲ್ಲಿ, ಅವುಗಳ ಮುಂದೆ ಬರುವ ಪದ ಒಂದೇ ಪರಿಚೆಯನ್ನು ತಿಳಿಸುತ್ತಿರಬೇಕೆಂಬ ಕಟ್ಟಲೆಯಿದೆ; ಯಾಕೆಂದರೆ, ಒಂದೇ ಪರಿಚೆಯನ್ನು ತಿಳಿಸುವ ಬದಲು ಹಲವು ಪರಿಚೆಗಳ ಒಂದು ಗುಂಪನ್ನು ತಿಳಿಸುವ ಪದಗಳೊಂದಿಗೆ ಅವನ್ನು ಬಳಸಿದಲ್ಲಿ, ಯಾವ ಪರಿಚೆಯ ಕುರಿತಾಗಿ ಅವನ್ನು ಬಳಸಲಾಗಿದೆ ಎಂಬುದನ್ನು ತಿಳಿಯಲು ಬರುವು ದಿಲ್ಲ.
ಹೆಸರುಪದಗಳ ಪತ್ತುಗೆರೂಪಗಳು ಸಾಮಾನ್ಯವಾಗಿ ಹಲವು ಪರಿಚೆಗಳ ಒಂದು ಗುಂಪನ್ನು ತಿಳಿಸುತ್ತವೆ ಎಂಬುದನ್ನು ಮೇಲೆ ನೋಡಿರುವೆವು. ಹಾಗಾಗಿ, ಅವುಗಳೊಂದಿಗೆ ಈ ಎರಡು ಬಗೆಯ ನುಡಿತಗಳನ್ನೂ ಬಳಸಲು ಬರುವುದಿಲ್ಲ. ಆದರೆ, ಕೆಲವು ಹೆಸರುಪದಗಳು ಒಂದೇ ಪರಿಚೆಯನ್ನು ತಿಳಿಸುತ್ತಿರುತ್ತವೆ;
ಅಂತಹ ಪದಗಳ ಪತ್ತುಗೆ ರೂಪದೊಂದಿಗೆ ಮೇಲಿನ ಎರಡು ಬಗೆಯ ನುಡಿತಗಳನ್ನೂ ಬಳಸಲು ಬರುತ್ತದೆ.
ಎತ್ತುಗೆಗಾಗಿ, ಬೇಸರ, ಹೇಸಿಕೆ, ಬೇಗುದಿ, ನಾಚುಗೆ, ನೆಮ್ಮದಿ, ಮೆಚ್ಚಿಗೆ, ಅಕ್ಕರೆ, ಎಚ್ಚರ, ನಂಬಿಕೆ, ಅಂಜಿಕೆ, ಸೆಡವು, ಬೆರಗು, ಗೊಂದಲ ಮೊದಲಾದ ಮನಸ್ಸಿಗೆ ಸಂಬಂದಿಸಿದ ಕೆಲವು ಹೆಸರುಪದಗಳು ಪಾಂಗನ್ನು ಗುರುತಿಸುವುದಕ್ಕಾಗಿ ಹೆಚ್ಚುಕಡಿಮೆ ಒಂದೇ ಪರಿಚೆಯನ್ನು ತಿಳಿಸುವಂತಿದ್ದು, ಅವನ್ನು ಈ ಎರಡು ಬಗೆಯ ನುಡಿತಗಳೊಂದಿಗೂ ಬಳಸಲು ಬರುತ್ತದೆ:
(31ಕ) ಇದು ತುಂಬಾ ಬೇಸರದ ಕೆಲಸ. (31ಚ) ಆಕೆ ತುಸು ಬೆಡಗಿನ ಹುಡುಗಿ. (31ಟ) ನಿಮ್ಮದು ತುಂಬಾ ನೆಮ್ಮದಿಯ ಬಾಳು. (31ತ) ತುಂಬಾ ಹೇಸಿಕೆಯ ಕೆಲಸವನ್ನು ಅವರು ಮಾಡುತ್ತಿದ್ದಾರೆ. (31ಪ) ಆ ಕೆಲಸಕ್ಕೆ ತುಂಬಾ ನಂಬಿಕೆಯ ಆಳನ್ನು ಮಾತ್ರ ಕಳಿಸಿ. (32ಕ) ಇದಕ್ಕಿಂತ ನಾಚುಗೆಯ ಕೆಲಸ ಬೇರಿಲ್ಲ. (32ಚ) ಅವನಶ್ಟು ನಂಬಿಕೆಯ ಆಳು ಬೇರೆ ಸಿಗಲಿಕ್ಕಿಲ್ಲ. (32ಟ) ಇಶ್ಟೊಂದು ಬೇಸರದ
ಕೆಲಸವನ್ನು
ನಾನು ಇದುವರೆಗೆ
ಮಾಡಿಲ್ಲ.
(32ತ) ಇವರಿಗಿಂತ ಹೆಚ್ಚು ತೆವಲಿನ ಮಂದಿ ಬೇರಿರಲಾರರು.
ಬೇರೆಯೂ ಕೆಲವು ಹೆಸರುಪದಗಳು ಇಂತಹ ಇಟ್ಟಳಗಳಲ್ಲಿ ಬರಬಲ್ಲುವು; ಎತ್ತುಗೆಗಾಗಿ, ತೂಕ, ಗದ್ದಲ, ಗುಟ್ಟು, ಕೊರತೆ, ಮಡಿ, ಬೆಳಕು, ಕತ್ತಲೆ ಮೊದಲಾದ ಹೆಸರುಪದಗಳನ್ನು ಹಂತಪರಿಚೆ ಮತ್ತು ಹೋಲಿಕೆ ನುಡಿತ ಗಳೊಂದಿಗೆ ಬಳಸಲು ಬರುತ್ತದೆ:
(33ಕ) ಇದು ತುಂಬಾ ತೂಕದ ಗಂಟು. (33ಚ) ಈ ಗದ್ದಲದ ಊರಿನಲ್ಲಿ ನಾನಿರಲಾರೆ. (34ಕ) ಅವಳಶ್ಟು ಮಡಿಯ ಮುದುಕಿಯನ್ನು ನಾನೆಲ್ಲೂ ಕಂಡಿಲ್ಲ. (34ಚ) ಅದಕ್ಕಿಂತ ಹೆಚ್ಚು ಗುಟ್ಟಿನ ಸಂಗತಿಯನ್ನು ನಾನು ಹೇಳುತ್ತೇನೆ.
(3) ಕೆಲವು ಪರಿಚೆಪದಗಳನ್ನು ಪತ್ತುಗೆ ರೂಪದಲ್ಲಿ ಬಳಸಲು ಬರುತ್ತದೆ, ಮತ್ತು ಅಂತಹ ಬಳಕೆಗಳಲ್ಲಿ ಅವು ಹೆಸರುಪದಗಳನ್ನು ಹೋಲುತ್ತವೆ ಎಂಬು ದನ್ನು ಮುಂದೆ 6.6.5ರಲ್ಲಿ ನೋಡಲಿರುವೆವು; ಆದರೆ, ಈ ಪರಿಚೆಪದಗಳ ಪತ್ತುಗೆರೂಪದೊಂದಿಗೆ ಹಂತ ಮತ್ತು ಹೋಲಿಕೆಗಳನ್ನು ತಿಳಿಸುವ ನುಡಿತಗಳನ್ನು ಬಳಸಲು ಬರುತ್ತದೆ; ಈ ವಿಶಯದಲ್ಲಿ ಅವು ಹೆಸರುಪದಗಳಿಂದ ಬೇರಾಗಿವೆ:
(35ಕ) ಅವರ ಮನೆಯದು ತುಂಬಾ ಎತ್ತರದ ಗೋಡೆ.
(35ಚ) ಇಶ್ಟೊಂದು ಉದ್ದದ ಹಗ್ಗವನ್ನು ನಾನೆಲ್ಲೂ ನೋಡಲಿಲ್ಲ.
(35ಟ) ಇದಕ್ಕಿಂತ ಕೆಂಪಿನ ಸೀರೆ ನಿಮಗೆ ಎಲ್ಲೂ ಸಿಗಲಿಕ್ಕಿಲ್ಲ.
ಈ ಪರಿಚೆಪದಗಳು ಬೇರೆ ವಿಶಯಗಳಲ್ಲಿ ಹೆಸರುಪದಗಳನ್ನು ಹೋಲುವು ದಿದ್ದರೂ, ಪರಿಚೆಗಳನ್ನು ಗುರುತಿಸುವ ವಿಶಯದಲ್ಲಿ ಬೇರಾಗಿರುವುದೇ (ಒಂದೇ ಪರಿಚೆಯನ್ನು ಗುರುತಿಸುತ್ತಿರುವುದೇ) ಇದಕ್ಕೆ ಕಾರಣವಿರಬೇಕು.
(36ಕ) ಆ ಗೋಡೆಗಿಂತ ಎತ್ತರದ ಗೋಡೆ ಇಲ್ಲಿದೆ. (36ಚ) ಆ ಗೋಡೆಯಶ್ಟು ಎತ್ತರದ ಗೋಡೆ ಇಲ್ಲಿದೆ. (36ಟ) ನಾಲ್ಕಡಿಗಿಂತ ಉದ್ದದ ಕೋಲು ಇಲ್ಲಿದೆ. (36ತ) ಅವನಿಗಿಂತ ಒಂದಡಿ ಉದ್ದದ ಹುಡುಗ ಇಲ್ಲಿದ್ದಾನೆ.
ಆದರೆ, ಇಂತಹ ಬಳಕೆಯಲ್ಲಿ ಉದ್ದ, ಎತ್ತರ ಮೊದಲಾದ ಕೂಡುಹುರುಳಿನ ಪರಿಚೆಪದಗಳು ಬರುತ್ತವಲ್ಲದೆ, ಗಿಡ್ಡ, ತಗ್ಗು ಮೊದಲಾದ ಕಳೆಹುರುಳಿನ ಪರಿಚೆಪದಗಳು ಬರುವುದಿಲ್ಲ. ಹಾಗಾಗಿ, ಕಳೆಹುರುಳಿನ ಪರಿಚೆಯನ್ನು ತಿಳಿಸಲು ಕೂಡುಹುರುಳಿನ ಪರಿಚೆಪದಗಳೊಂದಿಗೆ ಕಡಿಮೆ ಪದವನ್ನು ಬಳಸಲಾಗುತ್ತದೆ:
(37ಕ) ಅದಕ್ಕಿಂತ ಉದ್ದದ ಕೋಲು ಇಲ್ಲಿದೆ. (37ಚ) *ಅದಕ್ಕಿಂತ ಗಿಡ್ಡದ ಕೋಲು ಇಲ್ಲಿದೆ. (37ಟ) ಅದಕ್ಕಿಂತ ಕಡಿಮೆ ಉದ್ದದ ಕೋಲು ಇಲ್ಲಿದೆ.
(37ಚ) ಸೊಲ್ಲಿನ ಮೂಲಕ ತಿಳಿಸಬೇಕಾಗಿರುವ ಹುರುಳನ್ನು (37ಟ)
ಸೊಲ್ಲಿನ ಮೂಲಕ ತಿಳಿಸಬೇಕಾಗುತ್ತದೆ ಎಂಬುದನ್ನು ಗಮನಿಸಬಹುದು.
ಕಡಿಮೆ ಪದದ ಹಾಗೆ, ಕೂಡುಹುರುಳಿನ ಪರಿಚೆಯನ್ನು ತಿಳಿಸಲು ಹೆಚ್ಚು ಪದವನ್ನು ಬಳಸಲು ಬರುತ್ತದೆ; ಆದರೆ, ಇಂತಹ ಇಟ್ಟಳಗಳಲ್ಲಿ ಕೂಡು ಹುರುಳಿನ ಪದಕ್ಕೇನೇ ಆ ಹುರುಳಿರುವ ಕಾರಣ, ಹೆಚ್ಚು ಎಂಬುದಕ್ಕೆ ಹೆಚ್ಚಿನ ಹುರುಳಿಲ್ಲ:
(37ತ) ಅದಕ್ಕಿಂತ ಹೆಚ್ಚು ಉದ್ದದ ಕೋಲು ಇಲ್ಲಿದೆ.
(37ತ) ಸೊಲ್ಲಿಗೆ (37ಕ) ಸೊಲ್ಲಿನ ಹುರುಳೇ ಇದೆ; ಎಂದರೆ, ಹೆಚ್ಚು ಪದ ಕೂಡುಹುರುಳಿನ ಪರಿಚೆಪದಕ್ಕೆ ಹೆಚ್ಚಿನ ಹುರುಳನ್ನೇನೂ ಸೇರಿಸುವ ಹಾಗೆ ಕಾಣಿಸುವುದಿಲ್ಲ; ಅದು ಆ ಹುರುಳನ್ನು ಒತ್ತಿ ಹೇಳುತ್ತದೆ ಎಂದಶ್ಟೇ ಹೇಳ ಬಹುದು.
(4) ಮೇಲೆ 6.3.1(9)ರಲ್ಲಿ ವಿವರಿಸಿದ ಹಾಗೆ, ಹಲವು ಪರಿಚೆಪದಗಳನ್ನು ನೇರವಾಗಿ ಆಗಿರು ಎಂಬುದರೊಂದಿಗೆ ಬಳಸಲು ಬರುತ್ತದೆ, ಮತ್ತು ಇಂತಹ ಬಳಕೆಗಳಲ್ಲಿ ಆಗಿರು ಎಂಬುದನ್ನು ಬಳಸದಿರಲೂ ಬರುತ್ತದೆ; ಆದರೆ, ಹೆಸರು ಪದಗಳ ಪತ್ತುಗೆ ರೂಪವನ್ನು ಈ ರೀತಿಯ ಇಟ್ಟಳದಲ್ಲಿ ಬಳಸಲು ಬರುವುದಿಲ್ಲ. ಆಗಿರು ಎಂಬುದರೊಂದಿಗೆ ಬಳಸಬೇಕಿದ್ದಲ್ಲಿ ಅವಕ್ಕೆ ದು (ಹಲವೆಣಿಕೆಯಲ್ಲಿ ವು) ಒಟ್ಟನ್ನು ಸೇರಿಸಬೇಕಾಗುತ್ತದೆ.
(38ಕ) ಮೂರು ಹಣ್ಣುಗಳು ಕೆಂಪಾಗಿವೆ. (38ಚ) ಮೂರು ಹಣ್ಣುಗಳು ಕೆಂಪು. (39ಕ) *ಮೂರು ಮನೆಗಳು ಮಣ್ಣಿನಾಗಿವೆ. (39ಚ) *ಮೂರು ಮನೆಗಳು ಮಣ್ಣಿನ. (40ಕ) ಮೂರು ಮನೆಗಳು ಮಣ್ಣಿನವಾಗಿವೆ/ಮಣ್ಣಿನವು. (40ಚ) ಒಂದು ಮನೆ ಮಣ್ಣಿನದಾಗಿದೆ/ಮಣ್ಣಿನದು.
(5) ಪತ್ತುಗೆ ರೂಪದಲ್ಲಿ ಬರುವ ಹೆಸರುಪದಗಳು ಅವುಗಳ ತಿರುಳು ಪದದೊಂದಿಗೆ ಹಲವು ಬಗೆಯ ಪತ್ತುಗೆಗಳನ್ನು ತಿಳಿಸಬಲ್ಲುವು. ಎತ್ತುಗೆಗಾಗಿ, ಹುಡುಗನ ಕಾಲು ಎಂಬುದರಲ್ಲಿ ಹುಡುಗ ಎಂಬ ಪಾಂಗಿಗೂ ಕಾಲು ಎಂಬ ಅದರ ಅಂಗಕ್ಕೂ ನಡುವಿನ ಪತ್ತುಗೆಯನ್ನು ತಿಳಿಸಲಾಗಿದೆ; ಹುಡುಗನ ತಾಯಿ ಎಂಬುದರಲ್ಲಿ ಹುಡುಗ ಪಾಂಗಿಗೂ ಅದರ ನಂಟಾಗಿರುವ ತಾಯಿಗೂ ನಡುವಿನ ಪತ್ತುಗೆಯನ್ನು ತಿಳಿಸಲಾಗಿದೆ; ಮುದುಕನ ಮನೆ ಎಂಬುದರಲ್ಲಿ ಆ ಪಾಂಗಿಗೂ ಅದರ ಒಡೆತನದಲ್ಲಿರುವ ಮನೆಗೂ ನಡುವಿನ ಪತ್ತುಗೆಯನ್ನು ತಿಳಿಸಲಾಗಿದೆ.
ಇವುಗಳಲ್ಲಿ ಕೆಲವು ಪತ್ತುಗೆಗಳು ಹಲವು ಪದರಗಳಲ್ಲಿ ಬರಬಲ್ಲುವು. ಎತ್ತುಗೆಗಾಗಿ, ನಂಟಸ್ತನದ ಕೆಲವು ಪದರಗಳನ್ನು ಕೆಳಗಿನ ಹೆಸರುಕಂತೆಗಳಲ್ಲಿ ಕಾಣಬಹುದು:
ಅವಳ ಅಣ್ಣ ಅವಳ ಅಣ್ಣನ ಮಗ ಅವಳ ಅಣ್ಣನ ಮಗನ ಹೆಂಡತಿ ಅವಳ ಅಣ್ಣನ ಮಗನ ಹೆಂಡತಿಯ ತಾಯಿ ಅವಳ ಅಣ್ಣನ ಮಗನ ಹೆಂಡತಿಯ ತಾಯಿಯ ತಮ್ಮ
(6) ಕೆಲವು ಪದಗಳು ಪತ್ತುಗೆರೂಪದಲ್ಲಿ ಮಾತ್ರ ಬಳಕೆಯಾಗುತ್ತಿದ್ದು, ಅವುಗಳೊಂದಿಗೆ ಬರುವ ಪದಗಳ ಹುರುಳನ್ನು ಕುಗ್ಗಿಸುವ ಕೆಲಸವನ್ನು ಅವು ನಡೆಸುತ್ತವೆ. ಎತ್ತುಗೆಗಾಗಿ, ಕೆಲವು ಬಗೆಯ ಮರಗಳನ್ನು ಹೆಸರಿಸುವ ಪದಗಳನ್ನು ಗಮನಿಸಬಹುದು:
ತೆಂಗು:
ತೆಂಗಿನ ಮರ ತೆಂಗಿನಕಾಯಿ ತೆಂಗಿನ ಗರಿ ತೆಂಗಿನ ಚಿಪ್ಪು
ಬಾಳೆ: ಬಾಳೆಗಿಡ ಬಾಳೆಹಣ್ಣು ಬಾಳೆಕಾಯಿ ಬಾಳೆಲೆ
ಬಾಳೆ ದಿಂಡು
ಹಲಸು: ಹಲಸಿನ ಮರ ಹಲಸಿನ ಕಾಯಿ/ಹಣ್ಣು ಹಲಸಿನ ಎಲೆ ಹಲಸಿನ ಹಲಿಗೆ
ಮಾವು: ಮಾವಿನ ಮರ ಮಾವಿನ ಕಾಯಿ ಮಾವಿನ ಹಣ್ಣು ಮಾವಿನ ಎಲೆ ಮಾವಿನ ಗೊರಟೆ
ಪತ್ತುಗೆರೂಪದಲ್ಲಿ ಬರುವ ಹೆಸರುಪದಗಳಿಗೂ ಅವುಗಳ ತಿರುಳುಪದವಾಗಿ ಬರುವ ಹೆಸರುಪದಕ್ಕೂ ನಡುವೆ ಎರಡು ಮುಕ್ಯವಾದ ಸಂಬಂದವಿರಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(41ಕ) ಇದು ರಾಜುವಿನ ಪುಸ್ತಕ. (41ಚ) ಈ ಪುಸ್ತಕ ರಾಜುವಿನದು. (42ಕ) ಇವನು ರಾಜುವಿನ ಅಣ್ಣ. (42ಚ) *ಈ ಅಣ್ಣ ರಾಜುವಿನವನು.
(41ಕ) ಸೊಲ್ಲಿನಲ್ಲಿ ಪತ್ತುಗೆರೂಪದಲ್ಲಿ ಬಂದಿರುವ ರಾಜು ಪದವನ್ನು (41ಚ) ಸೊಲ್ಲಿನ ಕೊನೆಯಲ್ಲಿ ಅದು ತೋರುಪದದೊಂದಿಗೆ ಬಳಸಲು ಸಾದ್ಯ ವಾಗಿದೆ; ಆದರೆ, (42ಕ) ಸೊಲ್ಲಿನಲ್ಲಿ ಪತ್ತುಗೆರೂಪದಲ್ಲಿ ಬಂದಿರುವ ಅದೇ ಪದವನ್ನು (42ಚ) ಸೊಲ್ಲಿನ ಕೊನೆಯಲ್ಲಿ ಆ ರೀತಿ ಅವನು ತೋರುಪದ ದೊಂದಿಗೆ ಬಳಸಲು ಸಾದ್ಯವಾಗಿಲ್ಲ.
ಹಾಗಾಗಿ, ರಾಜು ಮತ್ತು ಪುಸ್ತಕ ಎಂಬವುಗಳ ನಡುವಿನ ಸಂಬಂದಕ್ಕೂ ರಾಜು ಮತ್ತು ಅಣ್ಣ ಪದಗಳ ನಡುವಿನ ಸಂಬಂದಕ್ಕೂ ನಡುವೆ, ಅವೆರಡನ್ನೂ ಒಂದೇ ಬಗೆಯ ಪತ್ತುಗೆರೂಪದ ಮೂಲಕ ತಿಳಿಸಲಾಗಿದೆಯಾದರೂ, ವ್ಯತ್ಯಾಸ ವಿದೆಯೆಂದು ಹೇಳಬೇಕಾಗುತ್ತದೆ.
ರಾಜುವಿನ ಪುಸ್ತಕ ಎಂಬುದರಲ್ಲಿ ರಾಜು ಮತ್ತು ಪುಸ್ತಕಗಳ ನಡುವೆ ರಾಜು ಬರೆದ ಪುಸ್ತಕ, ರಾಜು ಕೊಂಡುಕೊಂಡ ಪುಸ್ತಕ, ರಾಜು ಓದು ತ್ತಿರುವ ಪುಸ್ತಕ, ರಾಜು ಎರವಲು ಪಡೆದ ಪುಸ್ತಕ ಮೊದಲಾದ ಹಲವು ಬಗೆಯ ಸಂಬಂದಗಳಿರಬಲ್ಲುವು; ಆದರೆ, ರಾಜುವಿನ ಅಣ್ಣ ಎಂಬುದರಲ್ಲಿ
ರಾಜು ಮತ್ತು ಅಣ್ಣ ಎಂಬವುಗಳ ನಡುವೆ ನಂಟಸ್ತಿಕೆಯ ಒಂದು ಸಂಬಂದ ವಶ್ಟೇ ಇರಬಲ್ಲುದು.
ಇವುಗಳಲ್ಲಿ ಮೊದಲನೇ ಬಗೆಯ ಸಂಬಂದವನ್ನು ಮುಕ್ಯವಾಗಿ ಎಸಕಪದಗಳ ಇಕೆ-ಹೆಸರುರೂಪಗಳ ಬಳಕೆಯಲ್ಲಿ ಕಾಣಬಹುದು. ಎತ್ತುಗೆಗಾಗಿ, ರಾಜುವಿನ ಬರುವಿಕೆ ಎಂಬುದನ್ನು ರಾಜು ಬಂದ ಎಂಬುದರಿಂದಲೂ, ರಾಜುವಿನ ಬರೆಯುವಿಕೆ ಎಂಬುದನ್ನು ರಾಜು ಬರೆದ ಎಂಬುದರಿಂದಲೂ ಪಡೆಯಲು ಬರುತ್ತದೆ; ಇಲ್ಲಿ ಹೆಸರುಪತ್ತುಗೆಯ ರೂಪದಲ್ಲಿರುವ ರಾಜುವಿನ ಎಂಬುದನ್ನು ಬರು ಮತ್ತು ಬರೆ ಎಂಬ ಎಸಕಗಳ ಪತ್ತುಗೆಗಳಿಂದ ಪಡೆಯಲಾಗಿದೆ.
ಆದರೆ, ರಾಜನ ಅಣ್ಣ ಎಂಬುದರಲ್ಲಿ ಹೆಸರುಪತ್ತುಗೆರೂಪದಲ್ಲಿ ಬಂದಿರುವ ಅದೇ ಪದವನ್ನು ಆ ರೀತಿ ಬೇರೊಂದು ಎಸಕದ ಪತ್ತುಗೆಯಿಂದ ಪಡೆಯಲು ಬರುವುದಿಲ್ಲ. ಇದಕ್ಕೆ ಬದಲು, ಅದನ್ನು ರಾಜುವಿಗೆ (ಒಬ್ಬ) ಅಣ್ಣನಿದ್ದಾನೆ ಎಂಬ ಇರುಹದ ಸೊಲ್ಲಿನಿಂದ ಪಡೆಯಬೇಕಾಗುತ್ತದೆ.
6.3.6 ಎಸಕಪದಗಳ ಪರಿಚೆರೂಪಗಳ ಬಳಕೆ
ಹೆಸರುಪದಗಳ ಪರಿಚೆರೂಪಗಳ ಹಾಗೆ, ಎಸಕಪದಗಳ ಪರಿಚೆರೂಪಗಳನ್ನೂ ಹೆಸರುಕಂತೆಗಳಲ್ಲಿ ನೆರವುಪದಗಳಾಗಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಮುರಿದ ಮರ ಎಂಬ ಹೆಸರುಕಂತೆಯಲ್ಲಿ ಮುರಿ ಎಸಕಪದದ ಪರಿಚೆರೂಪವಾದ ಮುರಿದ ಎಂಬುದು ನೆರವುಪದವಾಗಿ ಬಳಕೆಯಾಗಿದೆ.
ಎಸಕಪದಗಳಿಗೆ ಮುಂಬೊತ್ತು (ಮುರಿಯುವ), ಹಿಂಬೊತ್ತು (ಮುರಿದ) ಮತ್ತು ಅಲ್ಲಗಳೆತ (ಮುರಿಯದ) ಎಂಬ ಮೂರು ಬಗೆಯ ಪರಿಚೆರೂಪಗಳಿದ್ದು (4.7.1 ನೋಡಿ), ಈ ಮೂರನ್ನೂ ಹೆಸರುಕಂತೆಗಳಲ್ಲಿ ನೆರವುಪದಗಳಾಗಿ ಬಳಸಲು ಬರುತ್ತದೆ:
(ಕ) ಮುಂಬೊತ್ತಿನ ರೂಪ: ಮುರಿಯುವ ಕೋಲು (ಚ) ಹಿಂಬೊತ್ತಿನ ರೂಪ: ಮುರಿದ ಕೋಲು (ಟ) ಅಲ್ಲಗಳೆತದ ರೂಪ: ಮುರಿಯದ ಕೋಲು
ಎಸಕಪದಗಳು ಒಂದು ಇಡೀ ಸೊಲ್ಲಿನ ತಿರುಳುಪದವಾಗಿ ಬಳಕೆಯಾಗುತ್ತವೆ; ಹಾಗಾಗಿ, ಅವುಗಳ ಪರಿಚೆರೂಪಗಳೂ ಅಂತಹ ಇಡೀ ಸೊಲ್ಲುಗಳ ತಿರುಳುಪದ ಗಳಾಗಿ ಬಳಕೆಯಾಗಬಲ್ಲುವು. ಹಾಗಾಗಿ, ಹೆಸರುಕಂತೆಗಳಲ್ಲಿ ನೆರವುಪದಗಳಾಗಿ ಬಳಕೆಯಾಗುವ ಎಸಕಪದಗಳ ಈ ಪರಿಚೆರೂಪಗಳು ಇಡೀ ಸೊಲ್ಲನ್ನೇ ತಮ್ಮೊಂದಿಗೆ ತರಬಲ್ಲುವು.
ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಹೆಸರುಕಂತೆಗಳನ್ನು ಗಮನಿಸಬಹುದು:
(43ಕ) ಜಾನಕಿ ಮಯ್ಸೂರಿನಿಂದ ತಂದ ಸೀರೆ (43ಚ) ದಿನಾಲೂ ತಣ್ಣೀರಿನಲ್ಲಿ ಮೀಯುವ ಹರಿ (43ಟ) ಬೊಂಬಾಯಿಯಿಂದ ನೇರವಾಗಿ ಬೆಂಗಳೂರಿಗೆ ಹೋದ ಹುಡುಗ (43ತ) ಬೊಂಬಾಯಿಗೆ ಹೋದರೂ ಬೆಂಗಳೂರಿಗೆ ಹೋಗದ ಹುಡುಗ
(43ಕ)ದಲ್ಲಿ ಬಂದಿರುವ ತಂದ ಪರಿಚೆರೂಪ ಜಾನಕಿ ಮಯ್ಸೂರಿನಿಂದ ಸೀರೆ ತಂದಳು ಎಂಬ ಇಡೀ ಸೊಲ್ಲನ್ನೇ ತನ್ನೊಂದಿಗೆ ಹೆಸರುಕಂತೆಯೊಳಕ್ಕೆ ತಂದಿದೆ. ಇದೇ ರೀತಿಯಲ್ಲಿ, (43ತ)ದಲ್ಲಿ ಬಂದಿರುವ ಅಲ್ಲಗಳೆತದ ಹೋಗದ ಹೋದರೂ ಪರಿಚೆರೂಪ ಬೆಂಗಳೂರಿಗೆ ಹೋಗಲಿಲ್ಲ ಎಂಬ ಇಡೀ ಸೊಲ್ಲನ್ನು ಆ ಹೆಸರುಕಂತೆಯೊಳಕ್ಕೆ ತಂದಿದೆ.
ಬೊಂಬಾಯಿಗೆ
ತನ್ನೊಂದಿಗೆ
ಹುಡುಗ
ಇಂತಹ ಒಳಸೊಲ್ಲುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದಿನ ಒಂದು ಪಸುಗೆಯಲ್ಲಿ ಕೊಡಲಾಗುವುದು. ಹೆಸರುಕಂತೆಗಳಲ್ಲಿ ಬಳಕೆಯಾಗುವ ಎಸಕಪದ ಗಳ ಪರಿಚೆರೂಪಗಳ ವಿಶಯವನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.
(1) ಎಸಕಪದಗಳ ಅಲ್ಲಗಳೆತದ ಪರಿಚೆರೂಪಗಳಲ್ಲಿ ಹೊತ್ತಿನ ವ್ಯತ್ಯಾಸ ವನ್ನು ತಿಳಿಸಲಾಗುವುದಿಲ್ಲ; ಹಾಗಾಗಿ, ಅಂತಹ ರೂಪಗಳು ಇಪ್ಪುರುಳಿಗೆ ಎಡೆ ಕೊಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(44) ಶಾಲೆಗೆ ಹೋಗದ ಹುಡುಗನಿಗೆ ಚಾಕಲೇಟ್ ಇಲ್ಲ. (44ಕ) ಯಾವ ಹುಡುಗ ಶಾಲೆಗೆ ಹೋಗುವುದಿಲ್ಲವೋ ಅವನಿಗೆ
ಚಾಕಲೇಟ್ ಇಲ್ಲ. (44ಚ) ಯಾವ ಹುಡುಗ ಚಾಕಲೇಟ್ ಇಲ್ಲ.
ಶಾಲೆಗೆ ಹೋಗಲಿಲ್ಲವೋ ಅವನಿಗೆ
(44)ನೇ ಸೊಲ್ಲಿಗೆ (44ಕ)ದಲ್ಲಿ ಕೊಟ್ಟಿರುವ ಸೊಲ್ಲಿನ ಹುರುಳು, ಮತ್ತು (44ಚ)ದಲ್ಲಿ ಕೊಟ್ಟಿರುವ ಸೊಲ್ಲಿನ ಹುರುಳು ಎಂಬುದಾಗಿ ಎರಡು ಹುರುಳು ಗಳು ಸಿಗಬಲ್ಲುವು.
(2) ಎಸಕಪದಗಳ ಪರಿಚೆರೂಪಗಳು ಹೆಸರುಪದಗಳ ಹರವನ್ನು ಕುಗ್ಗಿಸುವು ದಕ್ಕಾಗಿಯೂ ಬಳಕೆಯಾಗಬಲ್ಲುವು, ಮತ್ತು ಅವುಗಳ ಕುರಿತಾಗಿ ಪರಿಚೆ ಯೊಂದನ್ನು ತಿಳಿಸುವ ಕೆಲಸವನ್ನಶ್ಟೇ ಮಾಡುವುದಕ್ಕಾಗಿಯೂ ಬಳಕೆಯಾಗ ಬಲ್ಲುವು. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(45ಕ) ಮನೆಗೆ ಹೋದ ಹುಡುಗ ಇನ್ನೂ ಮರಳಿ ಬರಲಿಲ್ಲ. (45ಚ) ಮನೆಗೆ ಹೋದ ಈ ಹುಡುಗ ಇನ್ನೂ ಮರಳಿ ಬರಲಿಲ್ಲ.
(45ಕ)ದಲ್ಲಿ ಮನೆಗೆ ಹೋದ ಎಂಬುದು ಹುಡುಗ ಪದದ ಹರವನ್ನು ಕಡಿಮೆ ಮಾಡುವ ಮೂಲಕ, ಅದು ಗುರುತಿಸಬೇಕಾಗಿರುವ ಪಾಂಗನ್ನು ಗುರುತಿಸುವಲ್ಲಿ ನೆರವು ನೀಡುತ್ತದೆ; ಆದರೆ, (45ಚ)ದಲ್ಲಿ ಈ ಹುಡುಗ ಎಂಬುದು ಬೇರೆ ಯಾವ ಪದದ ನೆರವೂ ಇಲ್ಲದೆ (ಎಂದರೆ, ಈ ಎಂಬ ತೋರುಪದದ ನೆರವಿನಿಂದ) ಅದರ ಪಾಂಗನ್ನು ಗುರುತಿಸಬಲ್ಲುದು; ಹಾಗಾಗಿ, ಅದರೊಂದಿಗೆ ಬಂದಿರುವ ಮನೆಗೆ ಹೋದ ಎಂಬುದು ಈ ಹುಡುಗ ಎಂಬುದರ ಹರವನ್ನು ಕಡಿಮೆ ಮಾಡಲು ಹೋಗದೆ, ಅದರ ಪರಿಚೆ ಯೊಂದನ್ನಶ್ಟೇ ತಿಳಿಸುತ್ತದೆ.
(3) ಅವನು, ಅವಳು, ಮತ್ತು ಅವರು ಪದಗಳೊಂದಿಗೆ ಎಸಕಪದಗಳ ಪರಿಚೆರೂಪಗಳನ್ನು ಬಳಸಿದಾಗ, ಹರವನ್ನು ಕುಗ್ಗಿಸುವ ಹುರುಳು ಬಂದಿರುವಲ್ಲಿ ಅವೆರಡೂ ಒಟ್ಟಿಗೆ ಸೇರಿ ಬರುತ್ತವೆ, ಮತ್ತು ಪರಿಚೆಯನ್ನಶ್ಟೇ ತಿಳಿಸುವ ಹುರುಳು ಬಂದಿರುವಲ್ಲಿ ಅವು ಬೇರೆ ಬೇರಾಗಿರುತ್ತವೆ:
(46ಕ) ತಡವಾಗಿ ಬಂದವನು ನೇರವಾಗಿ ಮಹಡಿಗೆ ಹೋದ.
(46ಚ) ತಡವಾಗಿ ಬಂದ ಅವನು ನೇರವಾಗಿ ಮಹಡಿಗೆ ಹೋದ. (47ಕ) ಕಳ್ಳತನ ಮಾಡಿದವರು ಪೋಲೀಸರಿಗೆ ಸಿಕ್ಕಿದ್ದಾರೆ. (47ಚ) ಕಳ್ಳತನ ಮಾಡಿದ ಅವರು ಪೋಲೀಸರಿಗೆ ಸಿಕ್ಕಿದ್ದಾರೆ.
(46ಕ)ದಲ್ಲಿ ತಡವಾಗಿ ಬಂದ ಎಂಬುದು ಅವನು ಪದದ ಹರವನ್ನು ಕುಗ್ಗಿಸಿದೆ; ಆದರೆ, (46ಚ)ದಲ್ಲಿ ಬಂದಿರುವ ಅದೇ ಪರಿಚೆರೂಪ ಅವನು ಪದದ ಪರಿಚೆಯೊಂದನ್ನಶ್ಟೇ ತಿಳಿಸಿದೆಯಲ್ಲದೆ ಅದರ ಹರವನ್ನು ಕುಗ್ಗಿಸಲು ಹೋಗಿಲ್ಲ.
(46ಕ)ದಲ್ಲಿ ಅವನು ಪದ ಆಡುಗನ ಹತ್ತಿರ-ದೂರ ಎಂಬ ಜಾಗದ ವ್ಯತ್ಯಾಸವನ್ನು ಗಮನಿಸುವುದಿಲ್ಲ; ಆದರೆ, (46ಚ)ದಲ್ಲಿ ಅದು ಈ ವ್ಯತ್ಯಾಸ ವನ್ನು ಗಮನಿಸುತ್ತಿದ್ದು, ಆಡುಗನಿಗೆ ಹತ್ತಿರವಿಲ್ಲದ ಪಾಂಗೊಂದನ್ನು ಗುರುತಿಸು ತ್ತದೆ. ಹಾಗಾಗಿ, ಇಲ್ಲಿ ಹರವನ್ನು ಕುಗ್ಗಿಸುವ ಕೆಲಸವನ್ನು ಅದರ ಮೊದಲು ಬಂದ ಪರಿಚೆರೂಪ ನಡೆಸಲಾರದು.
ಇವನು, ಇವಳು, ಇವರು ಎಂಬವು ‘ಆಡುಗನ ಹತ್ತಿರ-ದೂರ’ ಎಂಬ ವ್ಯತ್ಯಾಸವನ್ನು ಅವುಗಳ ಎಲ್ಲಾ ಬಳಕೆಗಳಲ್ಲೂ ಗಮನಿಸುತ್ತಿರುತ್ತವೆ; ಎಲ್ಲಾ ಬಳಕೆಗಳಲ್ಲೂ ಅವು ಆಡುಗನ ಹತ್ತಿರದ ಪಾಂಗನ್ನೇ ಗುರುತಿಸುತ್ತಿರುತ್ತವೆ. ಹಾಗಾಗಿ, ಅವುಗಳೊಂದಿಗೆ ಪಾಂಗಿನ ಹರವನ್ನು ಕಡಿಮೆ ಮಾಡುವ ಹುರುಳಿನಲ್ಲಿ ಪರಿಚೆರೂಪಗಳನ್ನು ಬಳಸಲು ಬರುವುದಿಲ್ಲ.
(48ಕ) *ತಡವಾಗಿ ಬಂದಿವನು ನೇರವಾಗಿ ಮಹಡಿಗೆ ಹೋದ. (48ಚ) ತಡವಾಗಿ ಬಂದ ಇವನು ನೇರವಾಗಿ ಮಹಡಿಗೆ ಹೋದ.
(4) ಪಾಂಗುಗಳ ಹರವನ್ನು ಕಡಿಮೆ ಮಾಡಲು ಬಾರದಿರುವ ಬೇರೆ ಕೆಲವು ತಿರುಳು ಪದಗಳೊಂದಿಗೂ ಎಸಕಪದಗಳ ಪರಿಚೆರೂಪಗಳನ್ನು ಪರಿಚೆಯನ್ನಶ್ಟೇ ತಿಳಿಸುವ ಹುರುಳಿನಲ್ಲಿ ಮಾತ್ರ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೊಟ್ಟಹೆಸರು ಗಳೊಂದಿಗೆ ಅವನ್ನು ಬಳಸಿರುವಲ್ಲಿ ಪರಿಚೆಯನ್ನಶ್ಟೇ ತಿಳಿಸುವ ಹುರುಳು ಅವಕ್ಕಿದೆ:
(49ಕ) ಶಾಲೆಗೆ ತಡವಾಗಿ ಬಂದ ಜಾನಕಿ ಹೊರಗೆ ನಿಲ್ಲಬೇಕಾಯಿತು. (49ಚ) ಮಡಿಕೆ ಒಡೆದ ಜಾನಕಿಗೆ ಅವಳ ಅತ್ತೆ ಹೊಡೆದಳು.
(49ಕ)ದಲ್ಲಿ ಶಾಲೆಗೆ ತಡವಾಗಿ ಬಂದ ಎಂಬುದು ಜಾನಕಿ ಪದದ ಪರಿಚೆ ಯೊಂದನ್ನು ತಿಳಿಸುತ್ತದಲ್ಲದೆ, ಅದರ ಹರವನ್ನು ಕುಗ್ಗಿಸಲು ಹೋಗುವುದಿಲ್ಲ. ಯಾಕೆಂದರೆ, ಜಾನಕಿ ಪದಕ್ಕೆ ಒಂದು ಪಾಂಗನ್ನಶ್ಟೇ ಗುರುತಿಸುವ ಹುರುಳಿದ್ದು, ಅದನ್ನು ಕುಗ್ಗಿಸಲು ಬರುವುದಿಲ್ಲ.
ಆಡುಪದಗಳೊಂದಿಗೆ ಎಸಕಪದಗಳ ಪರಿಚೆರೂಪವನ್ನು ಬಳಸಿರುವಲ್ಲೂ ಅವಕ್ಕೆ ಪರಿಚೆಯನ್ನು ತಿಳಿಸುವ ಹುರುಳಿರಬಲ್ಲುದಲ್ಲದೆ, ಹರವನ್ನು ಕುಗ್ಗಿಸುವ ಹುರುಳು ಸಿಗಲಾರದು:
(50ಕ) ತಡವಾಗಿ ಹೋಗಿದ್ದ ನನ್ನನ್ನು ಅವರು ಒಳಗೆ ಬಿಡಲಿಲ್ಲ. (50ಚ) ಊರಿಗೆ ಹೋಗುವ ನಿಮಗೆ ಈ ಪುಸ್ತಕ ಕೊಡುತ್ತೇನೆ.
(50ಕ)ದಲ್ಲಿ ನನ್ನನ್ನು ಎಂಬುದು ಆ ಸೊಲ್ಲಿನ ಆಡುಗನನ್ನೇ ಪಾಂಗಾಗಿ ಬಳಸುತ್ತಿದೆಯಾದ ಕಾರಣ, ಅದನ್ನು ಗುರುತಿಸಬೇಕಾಗುವುದಿಲ್ಲ; ಹಾಗಾಗಿ, ಅದರ ಮೊದಲು ಬಂದಿರುವ ತಡವಾಗಿ ಹೋಗಿದ್ದ ಎಂಬ ಪರಿಚೆರೂಪ ಆ ಪಾಂಗಿನ ಪರಿಚೆಯೊಂದನ್ನಶ್ಟೇ ತಿಳಿಸಲು ಬಳಕೆಯಾಗಿದೆ.
(5) ಕೆಡು ಎಸಕಪದದ ಹಿಂಬೊತ್ತಿನ ಪರಿಚೆರೂಪವಾದ ಕೆಟ್ಟ ಎಂಬುದನ್ನು ನೇರವಾಗಿ ಮೇಲಿನ ಹಂತವನ್ನು ತಿಳಿಸುವ ತುಂಬಾ ಪದದೊಂದಿಗೆ, ಇಲ್ಲವೇ ಹೋಲಿಕೆಯನ್ನು ತಿಳಿಸುವ ನುಡಿತಗಳೊಂದಿಗೆ ಬಳಸಲು ಬರುತ್ತದೆ: ಅವನು ತುಂಬಾ ಕೆಟ್ಟ ಹುಡುಗ; ಇದಕ್ಕಿಂತ ಕೆಟ್ಟ ಕೆಲಸ ಬೇರಿಲ್ಲ;
ಇದೇ ಪದದ ಅಲ್ಲಗಳೆಯುವ ರೂಪವನ್ನೂ ಮೇಲಿನ ಇಟ್ಟಳಗಳಲ್ಲಿ ಬಳಸಲು ಬರುತ್ತದೆ (ತುಂಬಾ ಕೆಡದ ಹುಡುಗ); ಆದರೆ, ಅದರ ಮುಂಬೊತ್ತಿನ ಪರಿಚೆರೂಪವನ್ನು ಆ ರೀತಿ ಬಳಸಲು ಬರುವ ಹಾಗೆ ತೋರುವು ದಿಲ್ಲ (?ತುಂಬಾ ಕೆಡುವ ಹುಡುಗ). ಇದಲ್ಲದೆ, ಈ ರೀತಿ ಬಳಕೆಯಾಗಬಲ್ಲ ಎಸಕಪದಗಳು ಹೆಚ್ಚಿಲ್ಲ.
ಇದಕ್ಕೆ ಬದಲು, ಹಲವು ಎಸಕಪದಗಳ ಪರಿಚೆರೂಪಗಳನ್ನು ಹೆಚ್ಚು ಇಲ್ಲವೇ ಕಡಿಮೆ ಎಂಬ ಪದದೊಂದಿಗೆ ಸೇರಿಸಿ, ತುಂಬಾ ಪದದೊಂದಿಗೆ
(ತುಂಬಾ ಹೆಚ್ಚು ಕೊಳೆತ ಹಣ್ಣು, ತುಂಬಾ ಕಡಿಮೆ ಹೊಳೆವ ಒಡವೆ) ಇಲ್ಲವೇ ಹೋಲಿಕೆಯನ್ನು ತಿಳಿಸುವ ನುಡಿತಗಳೊಂದಿಗೆ ಬಳಸಲು ಬರುತ್ತದೆ:
(51ಕ) ಇವಳಿಗಿಂತ ಹೆಚ್ಚು ಹರಟುವ ಮುದುಕಿ ನಮ್ಮಲ್ಲಿದ್ದಾಳೆ. (51ಚ) ಇದಕ್ಕಿಂತ ಹೆಚ್ಚು ಬೆಳೆದ ಗೊನೆ ಆ ತೋಟದಲ್ಲಿದೆ. (52ಕ) ನಮಗೆ ಇವರಿಗಿಂತ ಕಡಿಮೆ ಓದಿದ ಮೇಶ್ಟ್ರು ಸಾಕು. (52ಚ) ಇದಕ್ಕಿಂತ ಕಡಿಮೆ ಹಿಡಿಯುವ ಗಡಿಗೆಯಿದ್ದರೆ ಕೊಡಿ.
(6) ಎರಡು ಪಾಂಗುಗಳೂ ಒಂದೇ ಹಂತದಲ್ಲಿವೆಯೆಂದು ತಿಳಿಸುವ ಅಶ್ಟು ಪದವನ್ನು ಬಳಸಿರುವಲ್ಲಿ, ಇಂತಹ ಎಸಕಪದಗಳ ಪರಿಚೆರೂಪವನ್ನು ನೇರವಾಗಿ, ಎಂದರೆ ಹೆಚ್ಚು ಇಲ್ಲವೇ ಕಡಿಮೆ ಪದಗಳ ನೆರವಿಲ್ಲದೆಯೇ, ಬಳಸಲು ಬರುತ್ತದೆ; ನಿಜಕ್ಕೂ ಇಂತಹ ಹೆಸರುಕಂತೆಗಳಲ್ಲಿ ಹೆಚ್ಚು ಇಲ್ಲವೇ ಕಡಿಮೆ ಪದಗಳನ್ನು ಬಳಸಲು ಬರುವುದಿಲ್ಲ:
(53ಕ) ಇದರಶ್ಟು ಬೆಳೆದ ಗೊನೆಯಿದ್ದರೆ ನಮಗೂ ಒಂದು ಕೊಡಿ. (53ಚ) ಇವಳಶ್ಟು ಹರಟುವ ಮುದುಕಿಯನ್ನು ನಾನೆಲ್ಲೂ ನೋಡಿಲ್ಲ.
(7) ಹೋಲಿಕೆಯ ಪರಿಚೆಪಟ್ಟಿಯನ್ನು ತಿಳಿಸುವುದಕ್ಕಾಗಿ ಎಸಕಪದಗಳ ಪರಿಚೆರೂಪಗಳನ್ನು ಬಳಸಿರುವಲ್ಲಿ ಎರಡು ಪಾಂಗುಗಳೂ ಒಂದೇ ಹಂತದಲ್ಲಿವೆ ಎಂಬುದನ್ನು ತಿಳಿಸುವ ಅಶ್ಟು ಪದದ ಬದಲು ಹಾಗೆ ಪದವನ್ನೂ ಬಳಸಲು ಬರುತ್ತದೆ; ಆದರೆ, ಅಶ್ಟು ಎಂಬುದರ ಹಾಗೆ ಹೋಲಿಕೆಗಾಗಿ ಪರಿಚೆಯ ಅಳವಿಯನ್ನು ಬಳಸುವ ಬದಲು, ಹಾಗೆ ಎಂಬುದು ಪರಿಚೆಯ ಇರುಹವನ್ನು ಬಳಸುತ್ತದೆ:
(54ಕ) ನಿನ್ನ ಹಾಗೆ ಓದುವ ಹುಡುಗ ಪಾಸಾಗದಿರುತ್ತಾನೆಯೇ? (54ಚ) ಅವನಿಗೆ ಅವಳ ಹಾಗೆ ದುಡಿಯುವ ಹೆಂಡತಿ ಬೇಕಾಗಿದೆ. (54ಟ) ಜಿಂಕೆಯ ಹಾಗೆ ಓಡುವ ಈ ಹುಡುಗಿ ಓದಿನಲ್ಲೂ ಮುಂದೆ. (55ಕ) *ಅವಳ ಹಾಗೆ ಕಪ್ಪು ಹುಡುಗಿ ನಮ್ಮ ತರಗತಿಯಲ್ಲಿಲ್ಲ. (55ಚ) *ಇದರ ಹಾಗೆ ಚಿಕ್ಕ ಹಣ್ಣು ಬೇರೆ ಯಾವ ಮರದಲ್ಲೂ ಇಲ್ಲ.
ಅಶ್ಟು ಪದದ ಬದಲು ಹಾಗೆ ಎಂಬುದನ್ನು ಎಸಕಪದಗಳ ಪರಿಚೆರೂಪ ದೊಂದಿಗೆ ಬಳಸಿರುವ (54ಕ-ಟ) ಸೊಲ್ಲುಗಳು ಸರಿಯಾಗಿವೆ; ಆದರೆ, ಅದನ್ನೇ ಕಪ್ಪು ಮತ್ತು ಚಿಕ್ಕ ಎಂಬ ಪರಿಚೆಪದಗಳೊಂದಿಗೆ ಬಳಸಿರುವ (55ಕ-ಚ) ಸೊಲ್ಲುಗಳು ತಪ್ಪಾಗಿವೆ. (ಅವನ್ನು ಸರಿಮಾಡಲು, ಆಗಿರುವ ಎಂಬುದಾಗಿ ಪರಿಚೆಯ ಇರುಹವನ್ನು ತಿಳಿಸಬೇಕಾಗುತ್ತದೆ:
(55ಟ) ಅವಳ ಹಾಗೆ ಕಪ್ಪಾಗಿರುವ ಹುಡುಗಿ ನಮ್ಮ ತರಗತಿಯಲ್ಲಿಲ್ಲ. (55ತ) ಇದರ ಹಾಗೆ ಚಿಕ್ಕದಾಗಿರುವ ಹಣ್ಣು ಬೇರೆ ಯಾವ ಮರದಲ್ಲೂ
ಇಲ್ಲ.
(8) ಎರಡು ಪಾಂಗುಗಳೂ ಒಂದೇ ಹಂತದಲ್ಲಿವೆಯೆಂದು ತಿಳಿಸುವ ಇಟ್ಟಳ
ದಲ್ಲಿ ಅಲ್ಲಗಳೆಯುವ ಪದರೂಪಗಳನ್ನು ಬಳಸಲು ಬರುತ್ತದೆ:
(56ಕ) ಅವನಶ್ಟು ಓದದ ಹುಡುಗನೂ ಪಾಸಾಗಿದ್ದಾನೆ. (56ಚ) ನಿನ್ನ ಹಾಗೆ ಗಲಾಟೆ ಮಾಡದ ಹುಡುಗರಿಗೂ ತಿಂಡಿ ಸಿಕ್ಕಿದೆ. (56ಟ) ಇವನಶ್ಟು ತಾಳ್ಮೆಯಿಲ್ಲದ ಹುಡುಗ ಆ ಮನೆಯಲ್ಲಿರಲಾರ.
ಆದರೆ, ಎರಡು ಪಾಂಗುಗಳು ಬೇರೆ ಬೇರೆ ಹಂತಗಳಲ್ಲಿವೆಯೆಂದು ತಿಳಿಸುವ ಪದಕಂತೆಗಳಲ್ಲಿ ಇಂತಹ ಅಲ್ಲಗಳೆಯುವ ಎಸಕಪದರೂಪ ಬರುವುದಿಲ್ಲ: ಎತ್ತುಗೆಗಾಗಿ, *ಅವನಿಗಿಂತ ಓದದ ಇಲ್ಲವೇ *ಇವನಿಗಿಂತ ತಾಳ್ಮೆಯಿಲ್ಲದ ಎಂಬಂತಹ ಬಳಕೆಗಳು ಸರಿಯಿಲ್ಲ.
(9) ಎಸಕಪದದ ಪರಿಚೆರೂಪದೊಂದಿಗೆ ಮೇಲೆ ವಿವರಿಸಿದಂತಹ ಇಟ್ಟಳ ಗಳಲ್ಲಿ ಬೇರೆಯೂ ಹಲವು ಪದಗಳನ್ನು ಬಳಸಲು ಬರುತ್ತದೆ; ಹಾಗಾಗಿ, ಅದು ತುಂಬಾ ಸಿಕ್ಕಲು ನುಡಿತವಾಗಿಯೂ ಇರಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಕೆಲವು ಪದಕಂತೆಗಳನ್ನು ಗಮನಿಸಬಹುದು:
(57ಕ) ಅವಳಿಗಿಂತ ಹೆಚ್ಚು ದೊಡ್ಡದಾಗಿ ಹಾಡುವ ಹುಡುಗಿ (57ಚ) ನಮಗಿಂತ ಕಡಿಮೆ ಹಣ ಕೊಟ್ಟ ಜನರು (57ಟ) ಅವಳಿಗಿಂತ ಚನ್ನಾಗಿ ದೇವರನಾಮ ಹಾಡುವ ಹುಡುಗಿ (57ತ) ನಿಮ್ಮ ಹಾಗೆ ಓದದಿದ್ದರೂ ಪಾಸಾಗುವ ಹುಡುಗರು
(10) ಹೆಸರುಪದಗಳೊಂದಿಗೆ ಒಂದಕ್ಕಿಂತ ಹೆಚ್ಚು ಎಸಕಪದಗಳ ಪರಿಚೆ ರೂಪಗಳನ್ನು ಬಳಸಬೇಕಿದ್ದಲ್ಲಿ, ಅವನ್ನು ಎರಡು ಬಗೆಯ ಇಟ್ಟಳಗಳಲ್ಲಿ ಇರಿಸಲು ಬರುತ್ತದೆ; ಅವನ್ನು ಒಂದರ ಬಳಿಕ ಇನ್ನೊಂದರಂತೆ ಇರಿಸಿ ಹೇಳ ಬಹುದು, ಇಲ್ಲವೇ ಮತ್ತು, ಇಲ್ಲವೇ ಎಂಬಂತಹ ಜೋಡಿಸುವ ಪದ ಗಳೊಂದಿಗೂ ಬಳಸಬಹುದು:
(58ಕ) ರೊಟ್ಟಿಯನ್ನು ತಿಂದ ನಾಯಿಗೆ ಹೊಡೆದ ಹುಡುಗ (58ಚ) ರೊಟ್ಟಿಯನ್ನು ತಿಂದ ಮತ್ತು ನಾಯಿಗೆ ಹೊಡೆದ ಹುಡುಗ (58ಟ) ಬೊಂಬಾಯಿಗೆ ಹೋಗುವ ಇಲ್ಲವೇ ಬೊಂಬಾಯಿಯಿಂದ
ಬರುವ ಗಾಡಿಗಳು
(58ಕ)ದಲ್ಲಿ ಎರಡು ಪರಿಚೆರೂಪಗಳನ್ನು ಒಂದರ ಬಳಿಕ ಒಂದರಂತೆ ಬಳಸಲಾಗಿದೆ; ಇದಕ್ಕೆ ಬದಲು, (58ಚ)ದಲ್ಲಿ ಅವೆರಡನ್ನು ಮತ್ತು ಪದದಿಂದ ಮತ್ತು (58ಟ)ದಲ್ಲಿ ಇಲ್ಲವೇ ಪದದಿಂದ ಬೇರ್ಪಡಿಸಿ ಬಳಸಲಾಗಿದೆ.
ಈ ಎರಡು ಇಟ್ಟಳಗಳ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ ಎಂಬು ದನ್ನು ಗಮನಿಸಬಹುದು: (58ಕ)ದಲ್ಲಿ ಮೊದಲನೆಯ ರೊಟ್ಟಿಯನ್ನು ತಿಂದ ಎಂಬುದು ನೇರವಾಗಿ ಅದರ ಬಳಿಕ ಬಂದ ನಾಯಿ ಹೆಸರುಪದದ ಪರಿಚೆಯನ್ನು ತಿಳಿಸುತ್ತದೆ, ಮತ್ತು ಎರಡನೆಯ ನಾಯಿಗೆ ಹೊಡೆದ ಎಂಬುದು ಅದರ ಬಳಿಕ ಬಂದ ಹುಡುಗ ಪದದ ಪರಿಚೆಯನ್ನು ತಿಳಿಸುತ್ತದೆ.
ಇದಕ್ಕೆ ಬದಲು, (58ಚ) ಸೊಲ್ಲಿನಲ್ಲಿ ಈ ಎರಡು ಪರಿಚೆರೂಪಗಳೂ ಹುಡುಗ ಪದದ ಪರಿಚೆಯನ್ನೇ ತಿಳಿಸುತ್ತವೆ, ಮತ್ತು (58ಟ) ಸೊಲ್ಲಿನಲ್ಲಿಯೂ
ಬೊಂಬಾಯಿಯಿಂದ ಬರುವ ಮತ್ತು ಬೊಂಬಾಯಿಗೆ ಹೋಗುವ ಎಂಬ ಎರಡು ಪರಿಚೆರೂಪಗಳೂ ಗಾಡಿಗಳು ಎಂಬ ಒಂದೇ ಪದದ ಪರಿಚೆಯನ್ನು ತಿಳಿಸುತ್ತವೆ. (58ಕ) ಸೊಲ್ಲಿಗೂ ಈ ಎರಡನೆಯ ಹುರುಳು ಸಿಗಬಲ್ಲುದು; ಆದರೆ, (58ಚ) ಮತ್ತು (58ಟ) ಸೊಲ್ಲುಗಳಿಗೆ ಮೊದಲನೆಯ ಹುರುಳು ಸಿಗಲಾರದು.
ಎರಡಕ್ಕಿಂತ ಹೆಚ್ಚು ಪರಿಚೆರೂಪಗಳನ್ನೂ ಒಂದೇ ಹೆಸರುಕಂತೆಯಲ್ಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಹೆಸರುಕಂತೆಗಳನ್ನು ಗಮನಿಸಬಹುದು:
(59ಕ) ಬೆಕ್ಕನ್ನು ತಿಂದ ನಾಯಿಯನ್ನು ಕೊಂದ ಹುಡುಗನನ್ನು ಗದರಿಸಿದ
ತಾಯಿಗೆ ಹೊಡೆದ ತಂದೆ
(59ಚ) ಬೆಕ್ಕನ್ನು ತಿಂದ,
ನಾಯಿಯನ್ನು
ಕೊಂದ, ಹುಡುಗನನ್ನು
ಗದರಿಸಿದ, ಮತ್ತು ತಾಯಿಗೆ ಹೊಡೆದ ತಂದೆ
ಒಂದೇ ಹೆಸರುಕಂತೆಯಲ್ಲಿ ಬೇರೆ ಬೇರೆ ಬಗೆಯ ಪರಿಚೆರೂಪಗಳನ್ನು
ಒಟ್ಟಾಗಿ ಬಳಸಲೂ ಬರುತ್ತದೆ:
(60ಕ) ಒಡೆದ ಮತ್ತು ಒಡೆಯದ ಕಪ್ಪುಗಳನ್ನು ಒಂದೇ ಬುಟ್ಟಿಯಲ್ಲಿ
ಹಾಕಿದ್ದಾರೆ.
(60ಚ) ಬೆಕ್ಕು ತಿನ್ನುವ ನಾಯಿಯನ್ನು ಕೊಂದ ಹುಡುಗ ಇಲ್ಲಿದ್ದಾನೆ. (60ಟ) ಬಿದ್ದರೂ ಒಡೆಯದ ನಾಲ್ಕು ಬಾಟಲಿಗಳನ್ನಿರಿಸಿದ ಪೆಟ್ಟಿಗೆಯನ್ನು ಹೆಗಲಮೇರಿಸಿಕೊಂಡಿರುವ ಹುಡುಗನನ್ನು ಕರೆದುಕೊಂಡು ಬಂದ ಅವನ ಅಣ್ಣ ಹೊರಗೆ ಕಾದಿದ್ದಾನೆ.
6.3.7 ಎಸಕಪರಿಚೆಗಳ ಪತ್ತುಗೆ ರೂಪದ ಬಳಕೆ
ಹೆಸರುಪದಗಳೊಂದಿಗೆ ಕೆಲವು ಎಸಕಪರಿಚೆಗಳನ್ನು ಅವುಗಳ ಪತ್ತುಗೆ ರೂಪದಲ್ಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಒಳಗಿನ ಬಾಗಿಲು ಎಂಬ ಹೆಸರು ಕಂತೆಯಲ್ಲಿ ಬಾಗಿಲು ಹೆಸರುಪದದೊಂದಿಗೆ ಒಳಗೆ ಎಸಕಪರಿಚೆಯ ಪತ್ತುಗೆ ರೂಪವಾದ ಒಳಗಿನ ಎಂಬುದರ ಬಳಕೆಯಾಗಿದೆ. ಈ ಬಾಗಿಲು ಮನೆಯ ಒಳಗಿದೆ ಎಂಬ ಸೊಲ್ಲಿನಲ್ಲಿ ಒಳಗೆ ಎಂಬುದು ಎಸಕಪರಿಚೆಯಾಗಿಯೇ ಬಳಕೆ ಯಾಗಿದೆ. ಒಳಗಿನ ಬಾಗಿಲು ಎಂಬುದು ಈ ಸೊಲ್ಲಿನ ಪರಿಚೆರೂಪ ಎಂದೂ ಹೇಳಬಹುದು.
ಇಂತಹ ಬೇರೆಯೂ ಕೆಲವು ಎಸಕಪರಿಚೆಗಳ ಬಳಕೆಗಳನ್ನು ಕೆಳಗೆ ಕೊಡ
ಲಾಗಿದೆ:
ಎಸಕಪರಿಚೆಯ ರೂಪದಲ್ಲಿ ಅವರು ಒಟ್ಟಿಗೆ ಓಡಿದರು. ಪುಸ್ತಕ ಮೇಜಿನ ಮೇಲಿದೆ. ಈ ಕೆಲಸವನ್ನು ಮೊದಲು ಮಾಡು. ಈ ಮೇಜು ಹೊರಗಿದೆ.
ಈ ಊರು ಹತ್ತಿರ ಇದೆ. ಹೋಟೆಲಿನಲ್ಲಿ ಊಟ ಮಾಡಿದ.
ಹತ್ತಿರ ಕೆಲಸ ಮಾಡುತ್ತಾನೆ.
ಪತ್ತುಗೆ ರೂಪದಲ್ಲಿ ಅವರ ಒಟ್ಟಿಗಿನ ಓಟ ಮೇಜಿನ ಮೇಲಿನ ಪುಸ್ತಕ ಮೊದಲಿನ ಕೆಲಸ ಹೊರಗಿನ ಮೇಜು ಹತ್ತಿರದ ಊರು ಹೋಟೆಲಿನ ಊಟ ಹತ್ತಿರದ ಕೆಲಸ
ಎಸಕಪದಗಳಿಗೆ ಇಕೆ ಒಟ್ಟನ್ನು ಸೇರಿಸಿ ಅವುಗಳಿಂದ ಹೆಸರುರೂಪಗಳನ್ನು ಪಡೆದಿರುವಲ್ಲಿ ಅವುಗಳೊಂದಿಗೆ ಬಂದಿರುವ ಎಸಕಪರಿಚೆಗಳೆಲ್ಲ ಪತ್ತುಗೆರೂಪಕ್ಕೆ ಬದಲಾಗುತ್ತವೆ ಎಂಬುದನ್ನು ಮುಂದೆ 6.6.4ರಲ್ಲಿ ನೊಡಲಿರುವೆವು.
(61ಕ) ಅವರಿಬ್ಬರು ಒಟ್ಟಿಗೆ ಹಾಡುತ್ತಾರೆ. (61ಚ) ಅವರಿಬ್ಬರ ಒಟ್ಟಿಗಿನ ಹಾಡುವಿಕೆ ಕೇಳಲು ಚನ್ನಾಗಿದೆ. (62ಕ) ಆಕೆ ಬೆಳಿಗ್ಗೆ ಹಾಡುತ್ತಾಳೆ.
(62ಚ) ಆಕೆಯ ಬೆಳಿಗ್ಗಿನ ಹಾಡುವಿಕೆ ನಮಗೆ ತೊಂದರೆ ಕೊಡುತ್ತಿದೆ.
6.3.8 ತೋರುಪದಗಳ ಬಳಕೆ
ಹೆಸರುಪದಗಳ ಮೊದಲು ಅಂತಹ, ಇಂತಹ, ಮತ್ತು ಎಂತಹ ಎಂಬ ಮೂರು ತೋರುಪದಗಳನ್ನು ಬಳಸಲು ಬರುತ್ತದೆ. ಇವುಗಳಲ್ಲಿ ಮೊದಲಿನ ಎರಡು ಪದಗಳು ಹೆಸರುಪದಗಳು ಗುರುತಿಸುವ ಪಾಂಗಿನ ಪರಿಚೆ ಎಂತಹದು ಎಂಬು ದನ್ನು ತಿಳಿಸುತ್ತವೆ, ಮತ್ತು ಮೂರನೆಯ ಪದ ಆಡುಗನಿಗೆ ಆ ಪಾಂಗಿನ ಪರಿಚೆ ತಿಳಿಯದೆಂದು ಹೇಳುತ್ತದೆ.
(63ಕ) ಅವರ ಮನೆಯೆದುರಿರುವ ಮರ ತುಂಬಾ ದೊಡ್ಡದಾಗಿದೆ;
ಅಂತಹ ಮರ ನಮ್ಮ ಮನೆಯೆದುರೂ ಇದೆ. (63ಚ) ಇಂತಹ ಹಕ್ಕಿಯನ್ನು ನಾನು ಬೇರೆಲ್ಲೂ ನೋಡಲಿಲ್ಲ. (63ಟ) ಅವರಿಗೆ ಎಂತಹ ಪುಸ್ತಕ ಬೇಕಾಗಿದೆ?
ಮೇಲಿನ ತೋರುಪದಗಳಲ್ಲಿ ಅಂತಹ ಎಂಬುದನ್ನು ಎಸಕಪದ, ಹೆಸರುಪದ, ಇಲ್ಲವೇ ತೋರುಪದದ ಪತ್ತುಗೆರೂಪದೊಂದಿಗೆ ಬಳಸಿ, ಅವುಗಳ ಮೂಲಕ ಅದು ತಿಳಿಸಬೇಕಾಗಿರುವ ಪರಿಚೆ ಎಂತಹದು ಎಂಬುದನ್ನು ಅಲ್ಲೇನೇ ತಿಳಿಸಲು ಬರುತ್ತದೆ:
(64ಕ) ಅವನು ಇವತ್ತು ಮಾಡಿದಂತಹ ಕೆಲಸವನ್ನು ಇದುವರೆಗೆ
ಮಾಡಿರಲಿಲ್ಲ.
(64ಚ) ಈ ಹಕ್ಕಿಯಂತಹ ಕೆಂಪು ಹಕ್ಕಿಯನ್ನು ನಾನು ಬೇರೆಲ್ಲೋ
ನೋಡಿದ್ದೆ.
(64ಟ) ಅವನಂತಹ ಹುಡುಗ ತರಗತಿಯಲ್ಲಿ ಒಬ್ಬನಿದ್ದರೆ ಸಾಕು.
6.4 ಪಾಂಗುಗಳ ಅಳವಿಯನ್ನು ತಿಳಿಸುವುದು
ಪಾಂಗುಗಳ ಅಳವಿಯನ್ನು ತಿಳಿಸಲು ಮುಕ್ಯವಾಗಿ (1) ಹೆಸರುಪದಗಳಿಗೆ ಹಲ ವೆಣಿಕೆಯ ಒಟ್ಟನ್ನು ಸೇರಿಸುವುದು, (2) ಹೆಸರುಪದಗಳ ಮೊದಲು ಎಣಿಕೆಯ ಪದಗಳನ್ನು ಬಳಸುವುದು, (3) ಎಣಿಕೆಯ ಪದ ಮತ್ತು ಅಳತೆಯ ಪದಗಳ ಜೋಡಿಯನ್ನು ಬಳಸುವುದು, ಮತ್ತು (4) ಹೆಸರುಪದಗಳೊಂದಿಗೆ ಅಳವಿಯ ಪದಗಳನ್ನು ಬಳಸುವುದು ಎಂಬ ನಾಲ್ಕು ಹೊಲಬುಗಳು ಬಳಕೆಯಲ್ಲಿವೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(1ಕ) ಹುಡುಗರು ಮನೆಗೆ ಹೋಗಿದ್ದಾರೆ. (1ಚ) ಅವನಿಗೆ ಹತ್ತು ರುಪಾಯಿ ಸಿಕ್ಕಿದೆ. (1ಟ) ಆತ ಎರಡು ಕಿಲೋ ಬೆಣ್ಣೆ ತಂದಿದ್ದಾನೆ. (1ತ) ತೂಬಿನಲ್ಲಿ ತುಂಬಾ ನೀರು ಹರಿದು ಹೋಗಿದೆ.
(1ಕ)ದಲ್ಲಿ ಹುಡುಗ ಪದದೊಂದಿಗೆ, ಅದು ಗುರುತಿಸುವ ಪಾಂಗಿನ ಎಣಿಕೆ ಯನ್ನು ತಿಳಿಸುವುದಕ್ಕಾಗಿ, ರು ಹಲವೆಣಿಕೆಯ ಒಟ್ಟನ್ನು ಬಳಸಲಾಗಿದೆ; (1ಚ) ದಲ್ಲಿ ರುಪಾಯಿ ಪದದೊಂದಿಗೆ ಇದಕ್ಕಾಗಿ ಹತ್ತು ಎಣಿಕೆಯ ಪದವನ್ನು ಬಳಸಲಾಗಿದೆ; (1ಟ)ದಲ್ಲಿ ಇದಕ್ಕಾಗಿ ಬೆಣ್ಣೆ ಪದದೊಂದಿಗೆ ಎರಡು ಕಿಲೋ
ಎಂಬ ಎಣಿಕೆಪದ ಮತ್ತು ಅಳತೆಪದಗಳ ಜೋಡಿಯನ್ನು ಬಳಸಲಾಗಿದೆ; ಮತ್ತು (1ತ)ದಲ್ಲಿ ನೀರು ಪದದೊಂದಿಗೆ ತುಂಬಾ ಅಳವಿಪದವನ್ನು ಬಳಸಲಾಗಿದೆ.
ಇವುಗಳಲ್ಲಿ (4)ನೇ ಹೊಲಬನ್ನು ಅಳವಿ ಎಶ್ಟೆಂಬುದು ಕಂಡಿತವಿಲ್ಲದಿರು ವಲ್ಲಿ ಬಳಸಲಾಗುತ್ತದೆ; (1)ನೇ ಹೊಲಬಿಗೂ ಕಂಡಿತವಲ್ಲದ ಅಳವಿಯನ್ನು ತಿಳಿಸಬಲ್ಲ ಹುರುಳಿದೆ.
6.4.1 ಹಲವೆಣಿಕೆಯ ಒಟ್ಟು
ಹೆಸರುಪದಗಳು ಪಾಂಗುಗಳು ಒಂದಕ್ಕಿಂತ ಹೆಚ್ಚಿರುವಲ್ಲಿ ಗುರುತಿಸುವ ಅವುಗಳೊಂದಿಗೆ ಹಲವೆಣಿಕೆಯ ಒಟ್ಟನ್ನು ಬಳಸಲಾಗುತ್ತದೆ. ಈ ಒಟ್ಟಿಗೆ ಅರು ಮತ್ತು ಗಳು ಎಂಬ ಎರಡು ರೂಪಗಳಿವೆ ಎಂಬುದನ್ನು (4.8.1)ರಲ್ಲಿ ನೋಡಿರುವೆವು.
ಅರು ರೂಪದ ಬಳಕೆ ಹುಡುಗರು ಹುಡುಗಿಯರು ಬಡವರು
ಚೆಲುವೆಯರು
ಗಳು ರೂಪದ ಬಳಕೆ ಮರಗಳು ಹಣ್ಣುಗಳು ಕಾಗೆಗಳು ಎಮ್ಮೆಗಳು
ಇವುಗಳಲ್ಲಿ ಅರು ರೂಪವನ್ನು ಜನರನ್ನು ಗುರುತಿಸುವ ಪದಗಳೊಂದಿಗೆ ಮಾತ್ರವೇ ಬಳಸಲಾಗುತ್ತದೆ; ಆದರೆ, ಗಳು ರೂಪವನ್ನು ಉಳಿದ ಪ್ರಾಣಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವ ಪದಗಳೊಂದಿಗೆ ಮಾತ್ರವಲ್ಲದೆ, ಜನರನ್ನು ಗುರುತಿಸುವ ಕೆಲವು ಪದಗಳೊಂದಿಗೂ ಬಳಸಲಾಗುತ್ತದೆ:
(1) ಈ ಎರಡು ರೂಪಗಳ ಬಳಕೆಯ ಹಿಂದಿರುವ ಕಟ್ಟುಪಾಡು ಏನೆಂದರೆ, ಮುಕ್ಯವಾಗಿ, ಅಕಾರದಲ್ಲಿ ಕೊನೆಗೊಳ್ಳುವ ಗಂಡುಗುರ್ತದ ಪದಗಳೊಂದಿಗೆ (ಹುಡುಗ-ಹುಡುಗರು, ಬಡವ-ಬಡವರು), ಮತ್ತು ಇಕಾರ (ಕುರುಡಿ- ಕುರುಡಿಯರು) ಇಲ್ಲವೇ ಎಕಾರದಲ್ಲಿ (ಚೆಲುವೆ-ಚೆಲುವೆಯರು) ಕೊನೆ ಗೊಳ್ಳುವ ಹೆಣ್ಣುಗುರ್ತದ ಪದಗಳೊಂದಿಗೆ ಅರು ಒಟ್ಟನ್ನು ಬಳಸಲಾಗುತ್ತದೆ; ಉಳಿದ ಎಲ್ಲಾ ಬಗೆಯ ಜನರನ್ನು ಗುರುತಿಸುವ ಪದಗಳೊಂದಿಗೂ ಗಳು (ತಿಳಿಗೇಡಿ-ತಿಳಿಗೇಡಿಗಳು, ಮುಂದಾಳು- ಒಟ್ಟನ್ನೇ ಬಳಸಲಾಗುತ್ತದೆ ಮುಂದಾಳುಗಳು, ದೊರೆ-ದೊರೆಗಳು, ಹೆಣ್ಣಾಳು-ಹೆಣ್ಣಾಳುಗಳು).
ಇದಲ್ಲದೆ, ಪ್ರಾಣಿ, ವಸ್ತು, ವಿಶಯ ಮೊದಲಾದ ಬೇರೆಲ್ಲಾ ಬಗೆಯವನ್ನು ಗುರುತಿಸುವ ಪದಗಳೊಂದಿಗೂ ಗಳು ಒಟ್ಟನ್ನೇ ಬಳಸಲಾಗುತ್ತದೆ (ಕತ್ತೆ- ಕತ್ತೆಗಳು, ಬಯಕೆ-ಬಯಕೆಗಳು, ಹಕ್ಕಿ-ಹಕ್ಕಿಗಳು, ತಿಂಡಿ-ತಿಂಡಿಗಳು, ಹಣ್ಣು-ಹಣ್ಣುಗಳು, ಕರು-ಕರುಗಳು, ಗುಡ್ಡ-ಗುಡ್ಡಗಳು, ಮರ-ಮರಗಳು).
(2) ಜನರನ್ನು ಹೊರತುಪಡಿಸಿ ಬೇರೆ ಬಗೆಯವನ್ನು ಗುರುತಿಸುವ ಪದ ಗಳೊಂದಿಗೆ ಹಲವೆಣಿಕೆಯ ಒಟ್ಟನ್ನು ಬಳಸಲೇಬೇಕೆಂದೇನೂ ಇಲ್ಲ; ಅವುಗಳ ಎಣಿಕೆಯನ್ನು ಬೇರೆಡೆ ತಿಳಿಸಿರುವಲ್ಲಿ ಅದನ್ನು ಬಳಸದೆಯೂ ಇರಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(2ಕ) ಅವನು ಮೂರು ಮನೆಗಳನ್ನು ಕಟ್ಟಿಸಿದ್ದಾನೆ. (2ಚ) ಅವನು ಮೂರು ಮನೆ ಕಟ್ಟಿಸಿದ್ದಾನೆ. (3ಕ) (3ಚ) ನಾಲ್ಕು ಮನೆ ಮುಳುಗಿದೆ.
ನಾಲ್ಕು ಮನೆಗಳು ಮುಳುಗಿವೆ.
(2ಕ) ಸೊಲ್ಲಿನಲ್ಲಿ ಮನೆ ಪದ ಗುರುತಿಸುವ ಪಾಂಗಿನ ಎಣಿಕೆಯನ್ನು ಮೂರು ಮನೆಗಳು ಹೆಸರುಕಂತೆಯಲ್ಲಿ ಎರಡು ಬಾರಿ ಗುರುತಿಸಲಾಗಿದೆ; ಮನೆ ಪದದ ಬಳಿಕ ಬಂದ ಗಳು ಒಟ್ಟು ಎಣಿಕೆ ಒಂದಕ್ಕಿಂತ ಹೆಚ್ಚು ಎಂಬುದನ್ನು ತಿಳಿಸುತ್ತದೆ, ಮತ್ತು ಅದರ ಮೊದಲು ಬಂದ ಮೂರು ಎಣಿಕೆಪದ ಅದನ್ನೇ ಹೆಚ್ಚು ಕಂಡಿತವಾಗಿ ತಿಳಿಸುತ್ತದೆ; ಹಾಗಾಗಿ, (2ಚ)ದಲ್ಲಿ ಮನೆ ಪದದ ಬಳಿಕ ಗಳು ಒಟ್ಟನ್ನು ಬಳಸಿಲ್ಲ. (3ಕ-ಚ) ಸೊಲ್ಲುಗಳಲ್ಲೂ ಹೀಗೆಯೇ.
ಜನರನ್ನು ಗುರುತಿಸುವ ಪದಗಳ ಬಳಿಕ ಎಣಿಕೆಯನ್ನು ಬೇರೆಡೆ ತಿಳಿಸಿದ್ದರೂ ಹಲವೆಣಿಕೆಯ ಒಟ್ಟನ್ನು ಬಳಸದಿರಲು ಬರುವುದಿಲ್ಲ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(4ಕ) ಹತ್ತು ಹುಡುಗರನ್ನು ಕರೆಸಿದ್ದೇವೆ. (4ಚ) *ಹತ್ತು ಹುಡುಗ ಕರೆಸಿದ್ದೇವೆ. (5ಕ) ಮೂವರು ಹುಡುಗರು ಬಂದಿದ್ದಾರೆ. (5ಚ) *ಮೂವರು ಹುಡುಗ ಬಂದಿದ್ದಾರೆ.
(3) ಹೆಸರುಪದಗಳಿಗೆ (ಕ) ನೇರವಾಗಿ ಪಾಂಗುಗಳನ್ನು ಗುರುತಿಸುವುದು, ಮತ್ತು (ಚ) ಪಾಂಗುಗಳ ಬಗೆಯನ್ನು ಮಾತ್ರವೇ ಗುರುತಿಸುವುದು ಎಂಬ ಎರಡು
ಬಗೆಯ ಬಳಕೆಗಳಿವೆ ಎಂಬುದನ್ನು ಮುಂದೆ (6.5.5)ರಲ್ಲಿ ನೋಡಲಿರುವೆವು; ಪಾಂಗುಗಳ ಬಗೆಯನ್ನು ಮಾತ್ರವೇ ಗುರುತಿಸುವಲ್ಲಿ ಪಾಂಗುಗಳ ಎಣಿಕೆ ಮುಕ್ಯವಲ್ಲ; ಹಾಗಾಗಿ, ಅಂತಹ ಪದಗಳೊಂದಿಗೆ ಹಲವೆಣಿಕೆಯ ಗಳು ಒಟ್ಟನ್ನು ಬಳಸಲೂಬಹುದು, ಬಳಸದಿರಲೂಬಹುದು.
(6ಕ) ಅವರು ಮದುವೆಗೆ ಸೀರೆಗಳನ್ನು ತರಲು ಹೋಗಿದ್ದಾರೆ. (6ಚ) ಅವರು ಮದುವೆಗೆ ಸೀರೆ ತರಲು ಹೋಗಿದ್ದಾರೆ.
(7ಕ) ದನಗಳು ಹುಲ್ಲು ತಿನ್ನುತ್ತವೆ. (7ಚ) ದನ ಹುಲ್ಲು ತಿನ್ನುತ್ತದೆ.
(6ಕ) ಮತ್ತು (6ಚ) ಸೊಲ್ಲುಗಳು ಒಂದೇ ಹುರುಳಿನಲ್ಲಿ ಬಳಕೆಯಾಗಿರ ಬಲ್ಲುವಾಗಿದ್ದು, ಈ ಹುರುಳಿನಲ್ಲಿ ಸೀರೆ ಪದದ ಬಳಿಕ ಬಂದಿರುವ ಗಳು ಒಟ್ಟಿಗೆ ಹೆಚ್ಚಿನ ಹುರುಳೇನೂ ಇಲ್ಲ ಎಂಬುದನ್ನು ಗಮನಿಸಬಹುದು. (7ಕ-ಚ) ಸೊಲ್ಲುಗಳಲ್ಲೂ ಹೀಗೆಯೇ.
ಆದರೆ, ಮಂದಿಗುರ್ತದ ಪದಗಳನ್ನು ಪಾಂಗುಗಳ ಬಗೆಯನ್ನು ಗುರುತಿಸುವ ಕೆಲಸದಲ್ಲಿ ತೊಡಗಿಸಬೇಕಾಗಿರುವಲ್ಲೂ ಎಣಿಕೆಯ ಒಟ್ಟನ್ನು ಬಳಸದಿರಲು ಬರುವುದಿಲ್ಲ:
ಕೆಲಸಕ್ಕೆ ಆಳುಗಳನ್ನು ಕರೆತರಲು ಹೋಗಿದ್ದಾನೆ.
(8ಕ) (8ಚ) *ಕೆಲಸಕ್ಕೆ ಆಳು ಕರೆತರಲು ಹೋಗಿದ್ದಾನೆ. (9ಕ) ಹುಡುಗರು ಹುಡುಗಿಯರಿಗಿಂತ ಹೆಚ್ಚು ತಂಟೆ ಮಾಡುತ್ತಾರೆ. (9ಚ) ಹುಡುಗ ಹುಡುಗಿಗಿಂತ ಹೆಚ್ಚು ತಂಟೆ ಮಾಡುತ್ತಾನೆ.
(8ಚ) ಸೊಲ್ಲಿನಲ್ಲಿ ಆಳು ಪದಕ್ಕೆ ಹಲವೆಣಿಕೆಯ ಹುರುಳು ಬರಲಾರದು, ಮತ್ತು ಅದನ್ನು ಪಾಂಗಿನ ಬಗೆಯನ್ನು ಗುರುತಿಸುವುದಕ್ಕಾಗಿ ಬಳಸಲೂ ಬಾರದು; ಈ ಎರಡು ಕಾರಣಗಳಿಗಾಗಿ ಆ ಸೊಲ್ಲು ತಪ್ಪಾಗುತ್ತದೆ; ಇದಕ್ಕೆ ಬದಲು, (9ಚ) ಸೊಲ್ಲಿನಲ್ಲಿ ಹುಡುಗ ಮತ್ತು ಹುಡುಗಿ ಪದಗಳಿಗೆ ಪಾಂಗಿನ ಬಗೆಯನ್ನು ತಿಳಿಸುವ ಹುರುಳು ಬರಲಾರದು, ಮತ್ತು ಈ ಕಾರಣಕ್ಕಾಗಿ, ಅದಕ್ಕೆ (9ಕ) ಸೊಲ್ಲಿಗಿರುವಂತಹ ಪಾಂಗಿನ ಬಗೆಯನ್ನು ಗುರುತಿಸುವ ಹುರುಳು ಬರಲಾರದು.
ಹೆಸರುಪದಗಳಿಗೆ ಪಾಂಗುಗಳ ಬಗೆಯನ್ನು ಗುರುತಿಸುವ ಕೆಲಸವಿಲ್ಲದಲ್ಲಿ ಉಳಿಕೆ ಗುರ್ತದ ಪದಗಳೊಂದಿಗೂ ಗಳು ಒಟ್ಟನ್ನು ಬಳಸದೆ ಇರಲು ಬರುವು ದಿಲ್ಲ. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು:
(10ಕ) ಅವಳು ಎರಡು ಪೆನ್ನು ತಂದಿದ್ದಾಳೆ; ಆ ಪೆನ್ನುಗಳು ಮೇಜಿನ
ಮೇಲಿವೆ.
(10ಚ) ಅವಳು ಎರಡು ಪೆನ್ನು ತಂದಿದ್ದಾಳೆ; *ಆ ಪೆನ್ನು ಮೇಜಿನ
ಮೇಲಿದೆ.
(10ಕ)ದಲ್ಲಿ ಬಳಸಿರುವ ಆ ಪೆನ್ನುಗಳು ಎಂಬುದರ ಬದಲು, (10ಚ)ದಲ್ಲಿ ಆ ಪೆನ್ನು ಎಂದಿಶ್ಟೇ ಬಳಸಲಾಗಿದೆ; ಆದರೆ, ಈ ಪದಕಂತೆಗೆ ನೇರವಾಗಿ
ಪಾಂಗನ್ನು ಗುರುತಿಸುವ ಹುರುಳಿದೆ; ಹಾಗಾಗಿ, ಗಳು ಒಟ್ಟನ್ನು ತೆಗೆದುಹಾಕಿರುವ (10ಚ)ದ ಎರಡನೇ ಸೊಲ್ಲು ತಪ್ಪಾಗಿದೆ.
ಕೆಳಗಿನ ಸೊಲ್ಲುಗಳಲ್ಲಿ ಉಳಿಕೆಗುರ್ತದ ಪದಗಳೊಂದಿಗೆ ಗಳು ಒಟ್ಟನ್ನು ಬಳಸಿರುವುದಕ್ಕೂ ಬಳಸದಿರುವುದಕ್ಕೂ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು:
(11ಕ) ಪುಸ್ತಕವನ್ನು ಇಲ್ಲಿರಿಸಿದ್ದೇನೆ. (11ಚ) ಪುಸ್ತಕಗಳನ್ನು ಇಲ್ಲಿರಿಸಿದ್ದೇನೆ. (12ಕ) ಆತ ಮನೆಗೆ ಬೀಗ ಹಾಕಿದ. (12ಚ) ಆತ ಮನೆಗಳಿಗೆ ಬೀಗ ಹಾಕಿದ.
ಪಾಂಗಿನ ಬಗೆಯನ್ನು ಗುರುತಿಸುವಲ್ಲೂ ಮೂರು ಬಗೆಗಳಿದ್ದು, ಅವುಗಳಲ್ಲಿ ಯಾವುವು ಎಣಿಕೆಗೆ ಬೆಲೆ ಕೊಡುವುದಿಲ್ಲ ಎಂಬ ವಿಶಯದಲ್ಲಿ ವ್ಯತ್ಯಾಸವಿದೆ; ಎಣಿಕೆಗೆ ಬೆಲೆ ಕೊಡದ ಬಗೆಗಳಲ್ಲಿ ಮಾತ್ರ ಹಲವೆಣಿಕೆಯ ಒಟ್ಟನ್ನು ಬಳಸ ದಿರಲು ಬರುತ್ತದೆ ಎಂಬುದನ್ನು ಮುಂದೆ (6.5.5)ರಲ್ಲಿ ನೋಡಲಿರುವೆವು.
(3) ಹೆಸರುಪದಗಳಲ್ಲಿ ಕೊಟ್ಟಹೆಸರು ಮತ್ತು ಇರುವ ಹೆಸರು ಎಂಬ ಎರಡು ಬಗೆಗಳಿದ್ದು (6.2.1 ನೋಡಿ), ಇವುಗಳಲ್ಲಿ ಇರುವ ಹೆಸರುಗಳೊಂದಿಗೆ ಮಾತ್ರ ಹಲವೆಣಿಕೆಯ ಒಟ್ಟು ಬಳಕೆಯಾಗುತ್ತದೆ; ಕೊಟ್ಟಹೆಸರುಗಳನ್ನು ಅವು ಹೆಸರಿಸುವ ಪಾಂಗುಗಳಿಗೆ ಒಂದೊಂದಾಗಿ ಕೊಟ್ಟಿರುವ ಕಾರಣ, ಮತ್ತು ಅವು ಒಂದೊಂದು ಬಳಕೆಯಲ್ಲೂ ಒಂದೊಂದು ಪಾಂಗನ್ನು ಮಾತ್ರ ಗುರುತಿಸ ಬಲ್ಲುವಾದ ಕಾರಣ, ಅವುಗಳೊಂದಿಗೆ ಹಲವೆಣಿಕೆಯ ಒಟ್ಟನ್ನು ಬಳಸ ಬೇಕಾಗುವುದಿಲ್ಲ.
ಆದರೆ, ಒಂದೇ ಕೊಟ್ಟಹೆಸರಿರುವ ಹಲವು ಪಾಂಗುಗಳ ಕುರಿತಾಗಿ ಒಟ್ಟಿಗೆ ಏನಾದರೂ ಹೇಳಬೇಕೆಂದೆನಿಸಿದಾಗ, ಅಂತಹ ಪದಗಳೊಂದಿಗೆ ಹಲವೆಣಿಕೆಯ ಒಟ್ಟನ್ನು (ಮತ್ತು ಎಣಿಕೆಯ ಪದಗಳನ್ನು) ಬಳಸಲು ಬರುತ್ತದೆ; ಆದರೆ, ಇಲ್ಲಿ ಕೊಟ್ಟಹೆಸರುಗಳು ಇರುವ ಹೆಸರುಗಳಾಗಿ ಬಳಕೆಯಾಗಿವೆಯೆಂದೂ ಹೇಳ ಬಹುದು. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(13ಕ) ಈ ತರಗತಿಯಲ್ಲಿ ನಾಲ್ವರು ಜಾನಕಿಯರಿದ್ದಾರೆ. (13ಚ) ಇಬ್ಬರು ನಾರಾಯಣರಲ್ಲಿ ಒಬ್ಬ ತೀರಿಹೋಗಿದ್ದಾನೆ.
(4) ಹೆಸರುಪದಗಳಲ್ಲಿ ಒತ್ತೆಹೆಸರು ಮತ್ತು ಒಟ್ಟಲು ಹೆಸರು ಎಂಬ ಬೇರೆ ಎರಡು ಬಗೆಗಳಿದ್ದು (6.2.2 ನೋಡಿ), ಇವುಗಳಲ್ಲಿ ಒತ್ತೆಹೆಸರುಗಳೊಂದಿಗೆ ಮಾತ್ರ ಹಲವೆಣಿಕೆಯ ಒಟ್ಟು ಬಳಕೆಯಾಗುತ್ತದೆ; ಒಟ್ಟಲು ಹೆಸರುಗಳೊಂದಿಗೆ ಅದು ಬಳಕೆಯಾಗುವುದಿಲ್ಲ (*ಮೂರು ರಾಗಿಗಳು, *ಹತ್ತು ಮಣ್ಣುಗಳು).
ಇದಕ್ಕೆ ಹೊರಪಡಿಕೆಯಾಗಿ, ಒಟ್ಟಲುಹೆಸರುಗಳನ್ನು ಒತ್ತೆ ಹೆಸರುಗಳಾಗಿ ಬಳಕೆ ಮಾಡಿದಲ್ಲಿ, ಅವುಗಳೊಂದಿಗೆ ಗಳು ಒಟ್ಟನ್ನು ಬಳಸಲು ಬರುತ್ತದೆ (ಹತ್ತು ಬಗೆಯ ಮಣ್ಣುಗಳು - ಹತ್ತು ಮಣ್ಣುಗಳು).
(5) ಮಂದಿ ಪದ ಒಬ್ಬರಿಗಿಂತ ಹೆಚ್ಚು ಜನರನ್ನು ಗುರುತಿಸುವುದಾದರೂ ಅದರೊಂದಿಗೆ ಹಲವೆಣಿಕೆಯ ಒಟ್ಟು ಬಳಕೆಯಾಗುವುದಿಲ್ಲ: ಅಲ್ಲಿ ನೂರಾರು ಮಂದಿ ಸೇರಿದ್ದರು, ನೂರಾರು *ಮಂದಿಗಳು ಸೇರಿದ್ದರು).
6.4.2 ಎಣಿಕೆಪದಗಳ ಬಳಕೆ
ಪಾಂಗುಗಳ ಎಣಿಕೆ ಒಂದಕ್ಕಿಂತ ಹೆಚ್ಚು ಎಂದಿಶ್ಟೇ ಮೇಲೆ ವಿವರಿಸಿದ ಹಲ ವೆಣಿಕೆಯ ಒಟ್ಟು ತಿಳಿಸುತ್ತದೆ; ಈ ಎಣಿಕೆಯನ್ನು ಹೆಚ್ಚು ವಿವರವಾಗಿ ತಿಳಿಸಲು ಅದರೊಂದಿಗೆ (ಮತ್ತು ಕೆಲವೆಡೆಗಳಲ್ಲಿ ಅದಕ್ಕೆ ಬದಲು) ಎಣಿಕೆಯ ಪದಗಳನ್ನು ಬಳಸಲಾಗುತ್ತದೆ. ಇವು ಹೆಸರುಪದದ ಮೊದಲು ಬರುತ್ತವೆ (ಹತ್ತು ಹುಡುಗರು, ಎರಡು ಮನೆಗಳು, ನೂರಯ್ವತ್ತು ಮಾವಿನ ಹಣ್ಣು).
ಇಂತಹ ಎಣಿಕೆಯ ಪದಗಳನ್ನು ಇರುವ ಹೆಸರುಗಳೊಂದಿಗೆ ಮಾತ್ರ ಬಳಸ ಲಾಗುತ್ತದೆ; ಸಾಮಾನ್ಯವಾಗಿ, ಕೊಟ್ಟಹೆಸರುಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ; ಆದರೆ, ಮೇಲೆ 6.4.1ರಲ್ಲಿ ವಿವರಿಸಿದ ಹಾಗೆ, ಒಂದೇ ಹೆಸರಿರುವ ಹಲವು ಪಾಂಗುಗಳ ಕುರಿತಾಗಿ ಏನಾದರೂ ಹೇಳಬೇಕೆಂದಿರುವಲ್ಲಿ ಅವುಗಳೊಂದಿಗೂ ಎಣಿಕೆಯ ಪದಗಳನ್ನೂ ಬಳಸಲು ಬರುತ್ತದೆ: ಈ ಜಿಲ್ಲೆ ಯಲ್ಲಿ ಮೂರು ಹೆಗ್ಗೋಡುಗಳಿವೆ).
ಹೆಸರುಪದಗಳಲ್ಲಿ ಒತ್ತೆಹೆಸರು ಮತ್ತು ಒಟ್ಟಲುಹೆಸರು ಎಂಬ ಬೇರೆ ಎರಡು ಗುಂಪುಗಳಿದ್ದು (6.2.2 ನೋಡಿ), ಇವುಗಳಲ್ಲಿ ಒತ್ತೆಹೆಸರುಗಳು ಗುರುತಿಸುವ ಪಾಂಗುಗಳ ಎಣಿಕೆಯನ್ನು ತಿಳಿಸಲು ಅವುಗಳೊಂದಿಗೆ ಎಣಿಕೆಪದಗಳನ್ನು ನೇರ ವಾಗಿ ಬಳಸಲಾಗುತ್ತದೆ; ಆದರೆ, ಒಟ್ಟಲುಹೆಸರುಗಳು ಗುರುತಿಸುವ ಪಾಂಗುಗಳ ಎಣಿಕೆಯನ್ನು ತಿಳಿಸಬೇಕಿದ್ದಲ್ಲಿ, ಅವುಗಳೊಂದಿಗೆ ಎಣಿಕೆಪದಗಳನ್ನು ಮಾತ್ರ ವಲ್ಲದೆ ಅಳತೆಪದಗಳನ್ನೂ ಬಳಸಬೇಕಾಗುತ್ತದೆ.
ಈ ವ್ಯತ್ಯಾಸವನ್ನು ಹತ್ತು ರುಪಾಯಿ ಮತ್ತು ಒಂದು ಕಿಲೋ ಬೆಣ್ಣೆ ಎಂಬ ಹೆಸರುಕಂತೆಗಳಲ್ಲಿ ಕಾಣಬಹುದು. ರುಪಾಯಿ ಎಂಬುದು ಒತ್ತೆಹೆಸರಾಗಿದ್ದು, ಅದರೊಂದಿಗೆ ಹತ್ತು ಎಣಿಕೆಪದವನ್ನು ನೇರವಾಗಿ ಬಳಸಲಾಗಿದೆ; ಆದರೆ, ಬೆಣ್ಣೆ ಎಂಬುದು ಒಟ್ಟಲುಹೆಸರಾಗಿದ್ದು, ಅದರೊಂದಿಗೆ ಒಂದು ಎಂಬ ಎಣಿಕೆಪದ ದೊಂದಿಗೆ ಕಿಲೋ ಎಂಬ ಅಳತೆಪದವನ್ನೂ ಬಳಸಬೇಕಾಗಿದೆ. ಯಾಕೆಂದರೆ, ಒಟ್ಟಲುಪದಗಳೊಂದಿಗೆ ಎಣಿಕೆಪದಗಳನ್ನು ನೇರವಾಗಿ ಬಳಸಲು ಬರುವುದಿಲ್ಲ (*ಎರಡು ಬೆಣ್ಣೆ).
ಹೆಸರುಪದಗಳೊಂದಿಗೆ ಎಣಿಕೆಪದಗಳನ್ನು ಬಳಸುವಲ್ಲಿ ಇನ್ನೂ ಒಂದು ಕಟ್ಟುಪಾಡಿದೆ: ಎಣಿಸಬಲ್ಲ ಮತ್ತು ಎಣಿಸಲಾಗದ ಪದಗಳೆಂಬುದಾಗಿ ಹೆಸರುಪದ
ಗಳನ್ನು ಬೇರೆ ಎರಡು ಗುಂಪುಗಳಲ್ಲಿ ಬೇರ್ಪಡಿಸಲು ಬರುತ್ತದೆ (6.2.6 ನೋಡಿ). ಮರ, ಹಣ್ಣು, ನೀರು, ಹಾಲು ಮೊದಲಾದವು ಎಣಿಸಬಲ್ಲ ಪದ ಗಳು, ಮತ್ತು ದಣಿವು, ಮರುಕ, ಬೇಸರ, ನಡತೆ ಮೊದಲಾದವು ಎಣಿಸ ಲಾಗದ ಪದಗಳು.
ಇವುಗಳಲ್ಲಿ ಎಣಿಸಬಲ್ಲ ಪದಗಳೊಂದಿಗೆ ಮಾತ್ರ, ಮೇಲೆ ವಿವರಿಸಿದ ಹಾಗೆ, ನೇರವಾಗಿ ಇಲ್ಲವೇ ಅಳತೆ ಪದಗಳೊಂದಿಗೆ ಸೇರಿಸಿ, ಎಣಿಕೆಪದಗಳನ್ನು ಬಳಸಲು ಬರುತ್ತದೆ. ಎಣಿಸಲಾಗದ ಪದಗಳೊಂದಿಗೆ ಅಳತೆಪದಗಳನ್ನೂ ಸೇರಿಸಲು ಬರುವುದಿಲ್ಲ, ಮತ್ತು ಎಣಿಕೆಪದಗಳನ್ನಾಗಲಿ ಇಲ್ಲವೇ ಹಲವೆಣಿಕೆಯ ಒಟ್ಟನ್ನಾಗಲಿ ಬಳಸಲೂ ಬರುವುದಿಲ್ಲ (*ಎರಡು ಕಿಲೋ ಮರುಕ, *ಮೂರು ಲೀಟರ್ ಬೇಸರ, *ಬೇಸರಗಳು).
ಹೆಸರುಪದಗಳ ಎಣಿಕೆಯನ್ನು ತಿಳಿಸುವಲ್ಲಿ ಬೇರೆಯೂ ಕೆಲವು ಕಟ್ಟುಪಾಡು
ಗಳಿದ್ದು, ಅವನ್ನು ಕೆಳಗೆ ವಿವರಿಸಲಾಗಿದೆ:
(1) ಒತ್ತೆಹೆಸರುಗಳಲ್ಲಿ ಗುರ್ತದ ವ್ಯತ್ಯಾಸ: ಒತ್ತೆಹೆಸರುಗಳೊಂದಿಗೆ ಎಣಿಕೆಪದಗಳನ್ನು ಬಳಸುವಲ್ಲಿ ಅವು ಮಂದಿಗುರ್ತದ ಪದಗಳೋ, ಇಲ್ಲವೇ ಉಳಿಕೆಗುರ್ತದ ಪದಗಳೋ ಎಂಬ ವಿಶಯವನ್ನು ಗಮನಿಸ ಬೇಕಾಗುತ್ತದೆ:
ಮಂದಿಗುರ್ತದ ಪದಗಳೊಂದಿಗೆ ಎಣಿಕೆಪದಗಳನ್ನು ಬಳಸುವುದಿದ್ದಲ್ಲಿ, ಕಡ್ಡಾಯವಾಗಿ ಅವುಗಳೊಂದಿಗೆ ಹಲವೆಣಿಕೆಯ ಒಟ್ಟನ್ನೂ ಬಳಸಬೇಕೆಂಬ ಕಟ್ಟಲೆ ಯಿದೆ (ಇಪ್ಪತ್ತು ಹುಡುಗರು, *ಇಪ್ಪತ್ತು ಹುಡುಗ); ಆದರೆ, ಉಳಿಕೆಗುರ್ತದ ಪದಗಳೊಂದಿಗೆ ಎಣಿಕೆಪದಗಳನ್ನು ಮಾತ್ರವೇ ಬಳಸಬಹುದು (ಎರಡು ಕತೆ), ಹಲವೆಣಿಕೆಯ ಒಟ್ಟನ್ನು ಮಾತ್ರವೇ ಬಳಸಬಹುದು (ಕತೆಗಳು), ಇಲ್ಲವೇ ಅವೆರಡನ್ನೂ ಒಟ್ಟಿಗೆ ಬಳಸಬಹುದು (ಎರಡು ಕತೆಗಳು). ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(14ಕ) *ಆರು ಹುಡುಗ ಊರಿಗೆ ಹೋಗಿದ್ದಾನೆ. (14ಚ) ಹುಡುಗರು ಊರಿಗೆ ಹೋಗಿದ್ದಾರೆ. (14ಟ) ಆರು ಹುಡುಗರು ಊರಿಗೆ ಹೋಗಿದ್ದಾರೆ.
(15ಕ) ನನ್ನ ಎರಡು ಕತೆ ಅಚ್ಚಾಗಿದೆ. (15ಚ) ನನ್ನ ಕತೆಗಳು ಈ ಪುಸ್ತಕದಲ್ಲಿವೆ. (15ಟ) ನನ್ನ ಎರಡು ಕತೆಗಳು ಅಚ್ಚಾಗಿವೆ.
(14ಕ)ದಲ್ಲಿ ಮಂದಿಗುರ್ತದ ಪದವಾದ ಹುಡುಗ ಪದದೊಂದಿಗೆ ಆರು ಎಣಿಕೆಪದವನ್ನು ಮಾತ್ರವೇ ಬಳಸಲಾಗಿದೆ, (14ಚ)ದಲ್ಲಿ ಗಳು ಹಲವೆಣಿಕೆಯ
ಒಟ್ಟನ್ನು ಮಾತ್ರವೇ ಬಳಸಲಾಗಿದೆ, ಮತ್ತು (14ಟ)ದಲ್ಲಿ ಇವೆರಡನ್ನೂ ಒಟ್ಟಿಗೆ ಬಳಸಲಾಗಿದೆ (ಆರು ಹುಡುಗರು). ಇವುಗಳಲ್ಲಿ ಎಣಿಕೆಯ ಪದವನ್ನು ಮಾತ್ರವೇ ಬಳಸಿರುವ, ಎಂದರೆ ಅದರೊಂದಿಗೆ ಹಲವೆಣಿಕೆಯ ಒಟ್ಟನ್ನು ಬಳಸ ದಿರುವ (14ಕ) ಸೊಲ್ಲು ಸರಿಯಲ್ಲ ಎಂಬುದನ್ನು ಗಮನಿಸಬಹುದು.
ಇದಕ್ಕೆ ಬದಲು, ಉಳಿಕೆಗುರ್ತದ ಕತೆ ಪದದೊಂದಿಗೆ ಎಣಿಕೆಪದವನ್ನು ಮಾತ್ರ ಬಳಸಿರುವ (15ಕ) ಸೊಲ್ಲು, ಹಲವೆಣಿಕೆಯ ಗಳು ಒಟ್ಟನ್ನು ಮಾತ್ರ ಬಳಸಿರುವ (15ಚ) ಸೊಲ್ಲು, ಮತ್ತು ಅವೆರಡನ್ನೂ ಬಳಸಿರುವ (15ಟ) ಸೊಲ್ಲು - ಈ ಮೂರು ಬಗೆಯ ಸೊಲ್ಲುಗಳೂ ಸರಿಯಾಗಿವೆ. ಆದರೆ, ಗಳು ಒಟ್ಟನ್ನು ಮಾತ್ರ ಬಳಸಿರುವಲ್ಲಿ ‘ಕತೆಗಳು ಹಲವು’ ಎಂಬ ಹುರುಳು ದೊರಕುತ್ತದಲ್ಲದೆ ಅವು ಎಶ್ಟು ಎಂಬುದು ತಿಳಿಯುವುದಿಲ್ಲ ಎಂಬುದನ್ನು ಗಮನಿಸಬಹುದು.
ಮೇಲೆ ತಿಳಿಸಿದ ಹಾಗೆ, ಹಲವೆಣಿಕೆಯ ಗಳು ಒಟ್ಟನ್ನು ಮಾತ್ರವೇ ಬಳಸಿರು ವಲ್ಲಿ ಪಾಂಗುಗಳ ಅಳವಿ ಒಂದಕ್ಕಿಂತ ಹೆಚ್ಚು ಎಂದಿಶ್ಟೇ ತಿಳಿಸಲಾಗುತ್ತದೆ; ಅದು ಎಶ್ಟು ಎಂಬುದನ್ನು ಸರಿಯಾಗಿ ತಿಳಿಸಲು ಅದರೊಂದಿಗೆ ಎಣಿಕೆಪದವನ್ನೂ ಬಳಸ ಬೇಕಾಗುತ್ತದೆ.
ಮಂದಿಗುರ್ತದ ಪದಗಳೊಂದಿಗೆ ಬರುವ ಎಣಿಕೆಪದಗಳಲ್ಲಿ ಒಂದರಿಂದ ಅಯ್ದರವರೆಗಿನ ಪದಗಳನ್ನು ಆ ಪದಗಳ ಗುರ್ತ ಮತ್ತು ಎಣಿಕೆಗಳಲ್ಲಿರುವ ಪದರೂಪಗಳಲ್ಲೂ ಬಳಸಲು ಬರುತ್ತದೆ; ಇದಕ್ಕಾಗಿ ಒಂದು ಪದಕ್ಕೆ (ಕ) ಓರೆಣಿಕೆ ಮತ್ತು ಗಂಡುಗುರ್ತಗಳಲ್ಲಿರುವ ಒಬ್ಬನು, (ಚ) ಓರೆಣಿಕೆ ಮತ್ತು ಹೆಣ್ಣುಗುರ್ತಗಳಲ್ಲಿರುವ ಒಬ್ಬಳು, (ಟ) ಹಲವೆಣಿಕೆಯಲ್ಲಿರುವ ಮತ್ತು ಗಂಡು- ಹೆಣ್ಣು ಗುರ್ತವ್ಯತ್ಯಾಸವನ್ನು ತೋರಿಸದಿರುವ ಒಬ್ಬರು, ಮತ್ತು (ತ) ಉಳಿಕೆ ಗುರ್ತದಲ್ಲಿರುವ ಒಂದು ಎಂಬುದಾಗಿ ನಾಲ್ಕು ರೂಪಗಳಿವೆ; ಆದರೆ, ಉಳಿದುವಕ್ಕೆ ಹಲವೆಣಿಕೆಯ ಇಬ್ಬರು, ಮೂವರು, ನಾಲ್ವರು, ಮತ್ತು ಅಯ್ವರು ಎಂಬ ಮಂದಿಗುರ್ತದ ರೂಪಗಳು, ಮತ್ತು ಎರಡು, ಮೂರು, ನಾಲ್ಕು ಮತ್ತು ಅಯ್ದು ಎಂಬ ಉಳಿಕೆಗುರ್ತದ ರೂಪಗಳು ಎಂಬುದಾಗಿ ಎರಡೆರಡು ರೂಪಗಳು ಮಾತ್ರ ಇವೆ.
ಒಬ್ಬನು ಮತ್ತು ಒಬ್ಬಳು ಎಂಬವೆರಡೂ ಅವುಗಳ ಬಳಿಕ ತೆರೆಯುಲಿ ಬಂದಿರುವಲ್ಲಿ ಮಾತ್ರ ಆ ರೂಪದಲ್ಲಿ ಬರುತ್ತವೆ (ಅವನೊಬ್ಬನನ್ನು, ಅವಳೊಬ್ಬಳನ್ನು); ಮುಚ್ಚುಲಿ ಬಂದಿರುವಲ್ಲಿ ಅವೆರಡೂ ಒಬ್ಬ ಎಂಬ ಒಂದೇ ರೂಪದಲ್ಲಿ ಬರುತ್ತವೆ (ಒಬ್ಬ ಹುಡುಗ, ಒಬ್ಬ ಹುಡುಗಿ); ಆದರೆ, ಒಬ್ಬರು ಎಂಬುದು ಈ ಎರಡು ಕಡೆಗಳಲ್ಲೂ ಬದಲಾಗದೆ ಉಳಿಯುತ್ತದೆ (ಒಬ್ಬರು ಮಂತ್ರಿಗಳು, ಮಂತ್ರಿಗಳೊಬ್ಬರನ್ನು, *ಒಬ್ಬ ಮಂತ್ರಿಗಳು).
ಇದಲ್ಲದೆ, ಹಲವೆಣಿಕೆಯ ಮಂದಿಗುರ್ತದ ಒಬ್ಬರು ರೂಪವನ್ನು ಸಾಮಾನ್ಯ ವಾಗಿ ತಕ್ಕುಮೆ ಹುರುಳಿನಲ್ಲಿ ಮಾತ್ರ ಬಳಸಲಾಗುತ್ತದೆ (ಒಬ್ಬರು ಹಿರಿಯರು); ಆದರೆ, ಒಬ್ಬೊಬ್ಬರು ಎಂಬ ಇಮ್ಮಡಿ ರೂಪದ ಬಳಕೆಯಲ್ಲಿ ಅದಕ್ಕೆ ಹಲ
ವೆಣಿಕೆಯ ಹುರುಳೂ ಇರುವ ಹಾಗೆ ಕಾಣಿಸುತ್ತದೆ. ಯಾಕೆಂದರೆ, ಒಬ್ಬೊಬ್ಬರು ಒಂದೊಂದು ಹಣ್ಣು ತಂದಿದ್ದಾರೆ ಎಂಬಂತಹ ಸೊಲ್ಲುಗಳಲ್ಲಿ ತಕ್ಕುಮೆಯ ಹುರುಳು ಇಲ್ಲದಿದ್ದರೂ ಒಬ್ಬರು ರೂಪ ಬಂದಿದೆ.
ಇಂತಹದೇ ಇನ್ನೊಂದು ಬಳಕೆಯನ್ನು ನಿಮ್ಮಿಬ್ಬರಲ್ಲಿ ಒಬ್ಬರು ಎಂಬ ಹೆಸರುಕಂತೆಯಲ್ಲಿ ಕಾಣಬಹುದು; ಇಲ್ಲಿ ಒಬ್ಬರು ಪದ ಒಬ್ಬ ವ್ಯಕ್ತಿಯನ್ನು ಮಾತ್ರ ಗುರುತಿಸುತ್ತದೆ; ಆದರೆ, ಅದು ಯಾರೆಂಬುದನ್ನು ಆಡುಗನು ತೀರ್ಮಾನಿಸುವುದಿಲ್ಲ, ಕೇಳುಗರಿಗೆ ಬಿಡುತ್ತಾನೆ; ಇದಕ್ಕಾಗಿ ಇಲ್ಲಿ ಹಲವಚನದ ಒಬ್ಬರು ಬಂದಿರುವ ಹಾಗೆ ಕಾಣಿಸುತ್ತದೆ. ಇಂತಹದೇ ಬಳಕೆಯನ್ನು ಕೆಳಗಿನ ಸೊಲ್ಲುಗಳಲ್ಲೂ ಕಾಣಬಹುದು:
(16ಕ) ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಬನ್ನಿ. (16ಚ) ಅವರು ನಾಲ್ವರಲ್ಲಿ ಒಬ್ಬರು ಬರಲಿ. (16ಟ) ನಾವು ಮೂವರಲ್ಲಿ ಯಾರಾದರೂ ಒಬ್ಬರು ಬರುತ್ತೇವೆ. (16ತ) ನೀವೆಲ್ಲರೂ ಒಬ್ಬೊಬ್ಬರಾಗಿ ಒಳಗೆ ಬನ್ನಿ.
ಎಣಿಕೆಪದಗಳಿಗಿರುವ ಈ ಪದರೂಪಗಳ ಕೆಲವು ಬಳಕೆಗಳನ್ನು ಕೆಳಗಿನ
ಸೊಲ್ಲುಗಳಲ್ಲಿ ಕಾಣಬಹುದು:
(17ಕ) ಒಬ್ಬ ಹುಡುಗ ಎಲ್ಲಿಗೂ ಹೋಗಲಿಲ್ಲ. (17ಚ) ಅವರ ಇಬ್ಬರು ಹುಡುಗಿಯರಿಗೆ ಮದುವೆಯಾಗಿದೆ. (17ಟ) ಮೂವರು ಹರದರು ಹೊರಗೆ ಕಾದಿದ್ದಾರೆ. (17ತ) ನಿಮ್ಮನ್ನು ಕಾಣಲು ಒಬ್ಬರು ಮಂತ್ರಿಗಳು ಬರಲಿದ್ದಾರೆ.
ಅಯ್ದಕ್ಕಿಂತ ಮೇಲಿನ ಎಣಿಕೆಪದಗಳಿಗೆ ಗುರ್ತ ಮತ್ತು ಎಣಿಕೆಗಳನ್ನು ತಿಳಿಸುವ ಪದರೂಪಗಳಿಲ್ಲ. ಹಾಗಾಗಿ, ಅವನ್ನು ಎಲ್ಲಾ ಬಗೆಯ ಹೆಸರುಪದಗಳೊಂದಿಗೂ ಒಂದೇ ರೂಪದಲ್ಲಿ ಬಳಸಲಾಗುತ್ತದೆ (ಹತ್ತು ಹುಡುಗರು, ಇಪ್ಪತ್ತು ಹುಡುಗಿ ಯರು, ಎಂಟು ಹಣ್ಣುಗಳು).
ಎರಡರಿಂದ ಅಯ್ದರವರೆಗಿನ ಪದಗಳ ಉಳಿಕೆಗುರ್ತದ ರೂಪಗಳನ್ನೂ ಈ ರೀತಿ ನೇರವಾಗಿ ಮಂದಿಗುರ್ತದ ಪದಗಳೊಂದಿಗೆ ಬಳಸಲು ಬರುತ್ತದೆ (ಎರಡು ಹುಡುಗರು, ಅಯ್ದು ಹುಡುಗಿಯರು). ಆದರೆ, ಒಂದು ಎಂಬ ಪದರೂಪ ವನ್ನು ಆ ರೀತಿ ಬಳಸುವ ಹಾಗೆ ಕಾಣಿಸುವುದಿಲ್ಲ (*ಒಂದು ಹುಡುಗ).
ಇದಲ್ಲದೆ, ಈ ರೀತಿ ಉಳಿಕೆಗುರ್ತದ ಎಣಿಕೆಪದಗಳನ್ನು ನೇರವಾಗಿ ಮಂದಿ ಗುರ್ತದ ಪದಗಳೊಂದಿಗೆ ಬಳಸುವುದು ಅಶ್ಟೊಂದು ಚನ್ನಾಗಿಯೂ ಕಾಣಿಸುವು ದಿಲ್ಲ. ಅದಕ್ಕೆ ಬದಲು, ಅವುಗಳೊಂದಿಗೆ ಮಂದಿ ಇಲ್ಲವೇ ಜನ ಎಂಬ ಪದವನ್ನೂ ಬಳಸಿದಲ್ಲಿ, ಅದು ಹೆಚ್ಚು ಚನ್ನಾಗಿ ಕಾಣಿಸುತ್ತದೆ (ಹತ್ತು ಮಂದಿ
ಹುಡುಗರು, ಹತ್ತು ಜನ ಹುಡುಗರು, ಮೂರು ಮಂದಿ ಹುಡುಗಿಯರು). ಆದರೆ, ಒಂದು ಎಂಬ ಪದವನ್ನು ಆ ರೀತಿ ಮಂದಿ ಇಲ್ಲವೇ ಜನ ಪದ ದೊಂದಿಗೂ ಬಳಸಲು ಬರುವುದಿಲ್ಲ (*ಒಂದು ಮಂದಿ ಹುಡುಗ, *ಒಂದು ಜನ ಮುದುಕ). ಎರಡು ಎಂಬ ಪದವನ್ನೂ ಮಂದಿ ಪದದೊಂದಿಗೆ ಬಳಸುವ ಹಾಗೆ ಕಾಣಿಸುವುದಿಲ್ಲ (?ಎರಡು ಮಂದಿ ಹುಡುಗರು).
(2) ಒಟ್ಟಲು ಹೆಸರುಗಳೊಂದಿಗೆ ಅಳತೆ ಪದಗಳ ಬಳಕೆ:
ಒಟ್ಟಲು ಹೆಸರುಗಳು ಗುರುತಿಸುವ ಪಾಂಗುಗಳಿಗೆ ಎಲ್ಲೆಗಳಿಲ್ಲವಾದ ಕಾರಣ, ಅವುಗಳೊಂದಿಗೆ ಎಣಿಕೆಪದಗಳನ್ನು ಬಳಸಬೇಕಿದ್ದಲ್ಲಿ ಅವಕ್ಕೆ ಎಲ್ಲೆಗಳನ್ನು ಒದಗಿಸಬಲ್ಲ ಲೀಟರ್, ಕಿಲೋ, ಅಡಿ, ಅಂಗುಲ, ಕುತ್ತಿ ಮೊದಲಾದ ಅಳತೆಯ ಪದಗಳನ್ನು ಬಳಸಬೇಕಾಗುತ್ತದೆ ಎಂಬುದನ್ನು ಮೇಲೆ (6.2.2)ರಲ್ಲಿ ನೋಡಿರುವೆವು.
(18ಕ) ಎರಡು ಲೀಟರ್ ಎಣ್ಣೆ ಕೊಡಿ. (18ಚ) *ಎರಡು ಎಣ್ಣೆ ಕೊಡಿ. (19ಕ) ಹತ್ತು ಕಿಲೋ ಸಕ್ಕರೆ ಕೊಡಿ. (19ಚ) *ಹತ್ತು ಸಕ್ಕರೆ ಕೊಡಿ.
ಇಂತಹ ನೇರವಾಗಿ ಅಳತೆಯನ್ನು ತಿಳಿಸುವ ಪದಗಳನ್ನು ಮಾತ್ರವಲ್ಲದೆ, ಕಪ್, ಚೀಲ, ಬುಟ್ಟಿ, ಬೊಗಸೆ, ಲೋಟ ಮೊದಲಾದ ಬೇರೆಯೂ ಕೆಲವು ಪದಗಳನ್ನು ಎಣಿಕೆಪದಗಳೊಂದಿಗೆ ಸೇರಿಸಿ, ಅವನ್ನು ಒಟ್ಟಲುಹೆಸರುಗಳೊಂದಿಗೆ ಬಳಸಲು ಬರುತ್ತದೆ. ಅಳತೆಯ ಪದಗಳ ಹಾಗೆ, ಇವು ಒಂದು ಎಂಬ ಪದ ದೊಂದಿಗೂ ಬರಬಲ್ಲುವು:
ಹತ್ತು ಕಪ್ ಹಾಲು ಎರಡು ಚೀಲ ಅಡಿಕೆ
ಒಂದು ಬೊಗಸೆ ನೀರು
ಎರಡು ಹೊರೆ ಹುಲ್ಲು
ಮೂರಚ್ಚು ಬೆಲ್ಲ
ಒಂದು ಕಪ್ ಹಾಲು ಹತ್ತು ಚೀಲ ಅಕ್ಕಿ ಒಂದು ಬುಟ್ಟಿ ಅಕ್ಕಿ ಎರಡು ಕಟ್ಟು ಬೀಡಿ ಮೂರು ಉಂಡೆ ಬೆಲ್ಲ
ಇಂತಹ ಪದಕಂತೆಗಳಲ್ಲಿ ಎಣಿಕೆಯ ಪದ ಮತ್ತು ಅಳತೆಯ ಪದಗಳು ಒಟ್ಟಿಗೆ ಸೇರಿ ಒಂದು ಜೋಡಿಯಾಗಿ ಬರಬೇಕಾಗುತ್ತದೆ; ಹಾಗಾಗಿ, ಅವುಗಳ ನಡುವೆ ಬೇರೆ ಪದಗಳನ್ನು ಬಳಸಲು ಬರುವುದಿಲ್ಲ.
ಎತ್ತುಗೆಗಾಗಿ, ಎರಡು ಲೋಟ ಹಾಲು ಎಂಬ ಪದಕಂತೆಯಲ್ಲಿ ಬಂದಿರುವ ಎರಡು ಮತ್ತು ಲೋಟ ಪದಗಳ ನಡುವೆ ಲೋಟದ ಪರಿಚೆಯನ್ನು ತಿಳಿಸುವ
ದೊಡ್ಡ ಪದವನ್ನು ಬಳಸಲು ಬರುವುದಿಲ್ಲ (ಎರಡು ದೊಡ್ಡ ಲೋಟ ಹಾಲು); ಇದೇ ರೀತಿಯಲ್ಲಿ, ಮೂರು ಲೀಟರ್ ಹಾಲು ಎಂಬ ಪದಕಂತೆಯಲ್ಲಿ ಲೀಟರ್ ಅಳತೆಯಲ್ಲಿ ಕೊರೆಯಿದೆ ಎಂಬುದನ್ನು ತಿಳಿಸುವುದಕ್ಕಾಗಿ ಆ ಪದದ ಮುಂದೆ ಕೊರೆ ಪದವನ್ನು ಬಳಸಲು ಬರುವುದಿಲ್ಲ (ಮೂರು ಕೊರೆ ಲೀಟರ್ ಹಾಲು).
ಆದರೆ, ಎಣಿಕೆಪದ ಮತ್ತು ಅಳತೆಪದಗಳ ಜೋಡಿಯ ಬಳಿಕ, ಹೆಸರುಪದದ ಮೊದಲು, ಬೇರೆ ಪದಗಳನ್ನು ಇರಿಸಲು ಬರುತ್ತದೆ: ಎರಡು ಚೀಲ ಅಕ್ಕಿ - ಎರಡು ಚೀಲ ಬಾಸ್ಮತಿ ಅಕ್ಕಿ; ಎರಡು ಲೋಟ ಟೀ - ಎರಡು ಲೋಟ ಬಿಸಿ ಬಿಸಿ ಟೀ.
(3) ಒಟ್ಟಲುಹೆಸರುಗಳು ಒತ್ತೆಹೆಸರುಗಳಾಗಿ: ಕೆಲವೊಮ್ಮೆ ಒತ್ತಾಯದಿಂದ ಒಟ್ಟಲುಹೆಸರುಗಳನ್ನು ಒತ್ತೆಹೆಸರುಗಳಾಗಿ ಬಳಸಲು ಬರುತ್ತದೆ. ಅಂತಹ ಬಳಕೆಗಳಲ್ಲಿ ಒಟ್ಟಲು ಪದಗಳೂ ನೇರವಾಗಿ (ಅಳತೆಪದಗಳ ನೆರವಿಲ್ಲದೆ) ಎಣಿಕೆಪದಗಳೊಂದಿಗೆ ಬರಬಲ್ಲುವು. ಎತ್ತುಗೆಗಾಗಿ, ಎರಡು ಟೀ ಕೊಡಿ ಎಂಬುದಕ್ಕೆ ‘ಎರಡು ಕಪ್ ಟೀ ಕೊಡಿ’ ಎಂಬ ಹುರುಳಿದೆ. ನಾಲ್ಕು ನೀರಾದ ಬಳಿಕ ಒಳಗೆ ಬರಬಹುದು ಎಂಬುದರಲ್ಲಿ ನೀರು ಎಂಬುದು ‘ಜಳಕ’ ಎಂಬ ಹುರುಳಿನಲ್ಲಿ ಬಳಕೆಯಾಗಿದೆ. ಇವೆರಡು ಬಳಕೆಗಳಲ್ಲೂ ಒಟ್ಟಲುಹೆಸರುಗಳನ್ನು ಒತ್ತಾಯದಿಂದ ಒತ್ತೆಹೆಸರುಗಳಾಗಿ ಬಳಸಲಾಗಿದೆ, ಮತ್ತು ಅವುಗಳೊಂದಿಗೆ ಎಣಿಕೆಪದಗಳನ್ನೂ ನೇರವಾಗಿ ಬಳಸಲಾಗಿದೆ.
(4) ಒತ್ತೆಹೆಸರುಗಳು ಒಟ್ಟಲುಹೆಸರುಗಳಾಗಿ: ಹೆಸರುಪದಗಳು ಗುರುತಿಸುವ ವಸ್ತುಗಳು ತೀರ ಚಿಕ್ಕವಾಗಿದ್ದಲ್ಲಿ, ಅವನ್ನು ಒತ್ತೆಹೆಸರುಗಳಾಗಿ ಬಳಸುವ ಬದಲು ಒಟ್ಟಲುಹೆಸರುಗಳಾಗಿ ಬಳಸಲಾಗುತ್ತದೆ. ಅಕ್ಕಿ, ರಾಗಿ, ಅನ್ನ ಮೊದಲಾದ ಪದಗಳು ಈ ರೀತಿ ತುಂಬಾ ಚಿಕ್ಕ ವಸ್ತುಗಳನ್ನು ಗುರುತಿಸುವುವಾದ ಕಾರಣ, ಅವನ್ನು ಒಟ್ಟಲುಹೆಸರುಗಳಾಗಿ ಬಳಸಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ, ಅವುಗಳೊಂದಿಗೆ ಎಣಿಕೆಪದಗಳನ್ನು ನೇರವಾಗಿ ಬಳಸದೆ (ಎರಡು ಅಕ್ಕಿ, *ಮೂರು ರಾಗಿ), ಅಳತೆಯ ಪದಗಳೊಂದಿಗೆ ಬಳಸಲಾಗುತ್ತದೆ: ಎರಡು ಸೇರು ಅಕ್ಕಿ, ಮೂರು ಕಿಲೋ ರಾಗಿ, ಒಂದು ಹಿಡಿ ಬತ್ತ. ಇವುಗಳೊಂದಿಗೆ ಹಲವೆಣಿಕೆಯ ಒಟ್ಟನ್ನೂ ಬಳಸಲು ಬರುವುದಿಲ್ಲ (ಅಕ್ಕಿಗಳು, *ರಾಗಿಗಳು).
ಬೇರೆ ಕಡೆಗಳಲ್ಲಿ ಒತ್ತೆಹೆಸರುಗಳಾಗಿ ಬರುವ ಪದಗಳನ್ನೂ ಕೆಲವೆಡೆಗಳಲ್ಲಿ ಒಟ್ಟಲುಹೆಸರುಗಳಾಗಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಹಣ್ಣು ಪದ ಸಾಮಾನ್ಯವಾಗಿ ಒಂದು ಒತ್ತೆಹೆಸರಾಗಿ ಬಳಕೆಯಾಗುತ್ತದೆ (ಎರಡು ಹಣ್ಣು
ಗಳು); ಆದರೆ, ಈ ತಿಂಡಿಯಲ್ಲಿ ಹಣ್ಣು ಜಾಸ್ತಿಯಿದೆ ಎಂಬ ಸೊಲ್ಲಿನಲ್ಲಿ ಅದು ಒಟ್ಟಲುಹೆಸರಾಗಿ ಬಳಕೆಯಾಗಿದೆ.
ಹಲವು ಪದಗಳಿಗೆ ಸಂದರ್ಬವನ್ನನುಸರಿಸಿ ಒತ್ತೆಹೆಸರು ಮತ್ತು ಒಟ್ಟಲು ಹೆಸರುಗಳೆಂಬ ಎರಡು ಬಗೆಯ ಬಳಕೆಗಳೂ ಇರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ಒತ್ತೆಹೆಸರುಗಳಾಗಿ ಬಳಕೆ ಒಂದು ನಿದ್ದೆ ಮಾಡಿದ. ಒಂದು ಕೂದಲು ಕಿತ್ತ. ಒಂದು ಕೆಲಸ ಆಗಿಲ್ಲ. ಒಂದು ನಂಬಿಕೆ ಅಳಿದಿಲ್ಲ.
ಒಟ್ಟಲುಹೆಸರುಗಳಾಗಿ ಬಳಕೆ ತುಂಬಾ ನಿದ್ದೆ ಮಾಡಿದ. ಆಕೆಗೆ ತುಂಬಾ ಕೂದಲಿದೆ. ತುಂಬಾ ಕೆಲಸ ಉಳಿದಿದೆ. ತುಂಬಾ ನಂಬಿಕೆಯಿದೆ.
(5) ಎಣಿಕೆಯನ್ನು ತಿಳಿಸುವ ಬೇರೆ ಪದಗಳು: ಪಾಂಗುಗಳ ಎಣಿಕೆಯನ್ನು ತಿಳಿಸಲು ಒಂದು, ಎರಡು, ಮೂರು ಮೊದಲಾದ ಎಣಿಕೆಪದಗಳನ್ನು ಬಳಸುವ ಬದಲು, ಜತೆ, ಒಡ್ಡಿ, ಡಜನ್ ಮೊದಲಾದ ಬೇರೆ ಕೆಲವು ಪದಗಳನ್ನು ಬಳಸಲು ಬರುತ್ತದೆ. ಇವನ್ನು ಎಣಿಕೆಯ ಪದಗಳೊಂದಿಗೂ ಬಳಸಬಲ್ಲುದಾಗಿದ್ದು, ಅವೆರಡೂ ಸೇರಿ ಒಟ್ಟು ಸಿಗುವ ಎಣಿಕೆಯನ್ನು ಅಂತಹ ಪದಕಂತೆ ಕೊಡುತ್ತದೆ. ಎತ್ತುಗೆಗಾಗಿ, ಹತ್ತು ಜತೆ ಎತ್ತುಗಳು ಎಂಬುದಕ್ಕೆ ‘ಇಪ್ಪತ್ತು ಎತ್ತುಗಳು’ ಎಂಬ ಹುರುಳಿದೆ.
ಜತೆ, ಡಜನ್ ಮೊದಲಾದ ಪದಗಳ ಈ ಬಳಕೆ ಸ್ವಲ್ಪಮಟ್ಟಿಗೆ ಹತ್ತು, ನೂರು, ಸಾವಿರ ಮೊದಲಾದ ಎಣಿಕೆ ಪದಗಳ ಬಳಕೆಯನ್ನು ಹೋಲುತ್ತದೆ. ಯಾಕೆಂದರೆ, ಇಪ್ಪತ್ತು (ಎರಡು ಹತ್ತು), ಇನ್ನೂರು (ಎರಡು ನೂರು), ಎರಡು ಸಾವಿರ ಎಂಬವುಗಳ ಇಟ್ಟಳವನ್ನೇ ಎರಡು ಜತೆ ಮತ್ತು ಎರಡು ಡಜನ್ ಎಂಬವುಗಳಲ್ಲೂ ಕಾಣಬಹುದು.
ಆದರೆ, ಇವಕ್ಕೆ ಎಣಿಕೆಯನ್ನು ತಿಳಿಸುವ ಹುರುಳು ಮಾತ್ರವಲ್ಲದೆ ಬೇರೆಯೂ ಕೆಲವು ವಿಶಯಗಳನ್ನು ತಿಳಿಸುವ ಹುರುಳಿರುತ್ತದೆ. ಎತ್ತುಗೆಗಾಗಿ, ಎರಡು ಜತೆ ಚಪ್ಪಲಿ ತಂದಿದ್ದಾರೆ ಎಂಬುದಕ್ಕೆ ‘ಬಲಗಾಲಿನ ಎರಡು ಮತ್ತು ಎಡಗಾಲಿನ ಎರಡು ಚಪ್ಪಲಿಗಳನ್ನು ತಂದಿದ್ದಾರೆ’ ಎಂಬ ಹುರುಳು ಸಿಗುತ್ತದೆಯಲ್ಲದೆ, ‘ಒಂದೇ ಕಾಲಿನ ನಾಲ್ಕು ಚಪ್ಪಲಿಗಳನ್ನು ತಂದಿದ್ದಾರೆ’ ಎಂಬ ಹುರುಳು ಸಿಗುವು ದಿಲ್ಲ.
ಹಾಗಾಗಿ, ಇವನ್ನು ಅಂತಹ ಪರಿಚೆಗಳಿರುವ ಹೆಸರುಪದಗಳೊಂದಿಗೆ ಮಾತ್ರವೇ ಬಳಸಲು ಬರುತ್ತದೆ. ಒಡ್ಡಿ ಪದ ನಾಲ್ಕು ಹರಳು, ಗೇರುಬೀಜ ಮೊದಲಾದವುಗಳ ಗುಂಪನ್ನು, ಮತ್ತು ಆ ಮೂಲಕ ನಾಲ್ಕು ಎಂಬ ಎಣಿಕೆ ಯನ್ನು ತಿಳಿಸುತ್ತದೆ; ಮೂರೊಡ್ಡಿ ಗೇರುಬೀಜ ಎಂದರೆ ಒಟ್ಟು ‘ಹನ್ನೆರಡು
ಗೇರುಬೀಜ’ ಎಂಬ ಹುರುಳು ಸಿಗುತ್ತದೆ. ಆರು ಎಂಬ ಇನ್ನೊಂದು ಪದ ಎತ್ತುಗಳ ಜೋಡಿಯನ್ನು ತಿಳಿಸಬಲ್ಲುದಾದರೂ, ಅದನ್ನು ಎಣಿಕೆಯ ಪದ ಗಳೊಂದಿಗೆ ಬಳಸುವ ಹಾಗೆ ತೋರುವುದಿಲ್ಲ.
6.4.3 ಅಳತೆಪದಗಳ ಬಳಕೆ
ಎಣಿಕೆಯ ಪದಗಳನ್ನು ಒಟ್ಟಲುಹೆಸರುಗಳೊಂದಿಗೆ ಬಳಸಬೇಕಿದ್ದಲ್ಲಿ, ಅವುಗ ಳೊಂದಿಗೆ ಲೀಟರ್, ಕಿಲೋ ಮೊದಲಾದ ಅಳತೆಪದಗಳನ್ನು ಬಳಸ ಬೇಕಾಗುತ್ತದೆ (ಎರಡು ಕಿಲೋ ಬೆಣ್ಣೆ), ಅವನ್ನು ನೇರವಾಗಿ ಒಟ್ಟಲುಹೆಸರು ಗಳೊಂದಿಗೆ ಬಳಸಲು ಬರುವುದಿಲ್ಲ (*ಎರಡು ಬೆಣ್ಣೆ) ಎಂಬುದನ್ನು ಮೇಲೆ ನೋಡಿರುವೆವು; ಈ ಅಳತೆ ಪದಗಳು ಒಟ್ಟಲುಹೆಸರುಗಳಿಗೆ ಎಲ್ಲೆಗಳನ್ನು ಒದಗಿಸುತ್ತವೆ.
(1) ಅಳತೆಯನ್ನು ತಿಳಿಸುವ ಇಂತಹ ಪದಗಳನ್ನು ಒಟ್ಟಲು ಪದಗಳೊಂದಿಗೆ ಮಾತ್ರವಲ್ಲದೆ, ಒತ್ತೆಪದಗಳೊಂದಿಗೂ ಬಳಸಲು ಬರುತ್ತದೆ (ಎರಡು ಕಿಲೋ ಕಿತ್ತಳೆ ಹಣ್ಣು, ಮೂರಡಿ ಕೋಲು). ಇವುಗಳಲ್ಲಿ ಯಾವ ಅಳತೆಪದ ಎಂತಹ ಹೆಸರುಪದದೊಂದಿಗೆ ಬರಬಲ್ಲುದು ಎಂಬ ವಿಶಯದಲ್ಲಿ ಕೆಲವು ಕಟ್ಟುಪಾಡು ಗಳಿವೆ: (ಎರಡು ಲೀಟರ್ ಹಾಲು, ಎರಡು ಕಿಲೋ ಸಕ್ಕರೆ, ನಾಲ್ಕಡಿ ಹಲಿಗೆ, *ಎರಡು ಲೀಟರ್ ಹಲಿಗೆ, *ನಾಲ್ಕಡಿ ಹಾಲು).
(2) ಅಳತೆಯನ್ನು ತಿಳಿಸುವಲ್ಲಿ ಬಳಕೆಯಾಗುವ ಇಂತಹ ಪದಗಳನ್ನು ಮುಕ್ಯ ವಾಗಿ ಎರಡು ಗುಂಪುಗಳಲ್ಲಿ ಇರಿಸಿ ಹೇಳಲು ಬರುತ್ತದೆ: ಯಾವುದಾದರೊಂದು ಅಳತೆಪಟ್ಟಿಯ ಹಂತಗಳನ್ನು ತಿಳಿಸುವ ಲೀಟರ್, ಅಡಿ, ಕಿಲೋ ಮೊದಲಾ ದವುಗಳದು ಒಂದು ಗುಂಪು; ಮತ್ತು, ಅಂತಹ ಯಾವುದೇ ಒಂದು ಅಳತೆ ಪಟ್ಟಿಗೂ ಸಂಬಂದಿಸದ ಬುಟ್ಟಿ, ಬೊಗಸೆ, ಲೋಟ, ಹೊರೆ ಮೊದಲಾದವು ಗಳದು ಇನ್ನೊಂದು ಗುಂಪು.
ಅಳತೆಪಟ್ಟಿಯ ಪದಗಳು ಅವುಗಳ ಪಟ್ಟಿಯಲ್ಲಿರುವ ಹಲವು ಹಂತಗಳಲ್ಲಿ ಒಂದನ್ನು ಗುರುತಿಸುತ್ತವೆ (ಮಿಲಿಗ್ರಾಮ್, ಗ್ರಾಮ್, ಕಿಲೊಗ್ರಾಮ್). ಹಾಗಾಗಿ, ಎಲ್ಲಾ ಬಳಕೆಗಳಲ್ಲೂ ಅವಕ್ಕೆ ಒಂದೇ ಅಳವಿಯನ್ನು ತಿಳಿಸುವ ಹುರುಳಿರುತ್ತದೆ. ಆದರೆ, ಬುಟ್ಟಿ, ಚೀಲ, ಕಟ್ಟು, ಹೊರೆ ಮೊದಲಾದವುಗಳು ಆ ರೀತಿ ಒಂದು ಅಳತೆಪಟ್ಟಿಯಲ್ಲಿ ಬಾರದ ಕಾರಣ, ಅವು ಒಂದೊಂದು ಬಳಕೆಯಲ್ಲಿ ಒಂದೊಂದು ಅಳವಿಯನ್ನು ತಿಳಿಸಬಲ್ಲುವು. ಹೀಗಿದ್ದರೂ, ಚಮಚ, ಕಪ್ ಎಂಬಂತಹ ಕೆಲವಕ್ಕೆ ಹೆಚ್ಚುಕಡಿಮೆ ಒಂದೇ ಬಗೆಯ ಅಳವಿಯನ್ನು ತಿಳಿಸುವ ಹುರುಳು ಬಂದಿದೆ.
(3) ಅಳತೆಪದಗಳನ್ನು ಇನ್ನೊಂದು ಬಗೆಯಲ್ಲೂ ಗುಂಪಿಸಲು ಬರುತ್ತದೆ: ಕಪ್, ಲೋಟ, ಬುಟ್ಟಿ, ಚೀಲ, ಬಕೆಟ್ ಮೊದಲಾದುವು ಪಾಂಗುಗಳನ್ನು ಅಳೆಯಲು ಬಳಸುವ ಒಂದು ವಸ್ತುವನ್ನು ಹೆಸರಿಸುತ್ತವೆ; ಇದಕ್ಕೆ ಬದಲು,
ಲೀಟರ್, ಕಿಲೋ, ಹೊರೆ, ಕಟ್ಟು, ಅಡಿ, ಡಿಗ್ರಿ ಮೊದಲಾದುವು ಅಂತಹ ಯಾವ ವಸ್ತುವನ್ನೂ ಹೆಸರಿಸುವುದಿಲ್ಲ. ಒಂದು ಅಳತೆಯನ್ನು ಹೆಸರಿಸುವ ಕೆಲಸ ಮಾತ್ರವೇ ಅವಕ್ಕಿದೆ.
ಬುಟ್ಟಿ, ಬೊಗಸೆ, ಹನಿ ಮೊದಲಾದ ಪದಗಳನ್ನು ಪಾಂಗುಗಳ ಅಳತೆಯನ್ನು ತಿಳಿಸುವುದಕ್ಕಾಗಿ ಬಳಸಿದಾಗ, ಅವು ಆ ಅಳತೆಯನ್ನು ಮಾತ್ರ ತಿಳಿಸುತ್ತವಲ್ಲದೆ, ಪಾಂಗುಗಳನ್ನು ಗುರುತಿಸಲು ಹೋಗುವುದಿಲ್ಲ. ಹಾಗಾಗಿ, ಅವನ್ನು ಕೆಳಗೆ ಕೊಟ್ಟಿರುವಂತಹ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ:
(20ಕ) ಈ ರಾಶಿಯಲ್ಲಿ ಮೂರು ಬುಟ್ಟಿ ಹಣ್ಣುಗಳಿವೆ. (20ಚ) ಈ ಉಗ್ಗದಲ್ಲಿ ಮೂರು ಲೋಟ ಹಾಲಿದೆ. (20ಟ) ಆಕೆಯ ಸೀರೆಯ ಮೇಲೆ ನಾಲ್ಕು ಹನಿ ನೆತ್ತರು ಬಿದ್ದಿದೆ.
(20ಕ) ಸೊಲ್ಲು ಎದುರಿಗಿರುವ ರಾಶಿಯಲ್ಲಿ ಎಶ್ಟು ಹಣ್ಣುಗಳಿವೆ ಎಂಬುದನ್ನು ಬುಟ್ಟಿಯ ಅಳತೆಯ ಮೂಲಕ ತಿಳಿಸುತ್ತದಲ್ಲದೆ, ಅಲ್ಲಿ ಬುಟ್ಟಿಗಳೂ ಇವೆ ಎಂದು ತಿಳಿಸುವುದಿಲ್ಲ. ಇದಲ್ಲದೆ, ರಾಶಿಯ ಹತ್ತಿರ ಅಳತೆ ಮಾಡಲು ಬಳಸಿದ ಒಂದು ಬುಟ್ಟಿ ಮಾತ್ರ ಇರಬಲ್ಲುದು, ಮತ್ತು ಅದು ಬರಿದಾಗಿಯೂ ಇರಬಲ್ಲುದು. ಇದೇ ರೀತಿಯಲ್ಲಿ, (20ಟ) ಸೊಲ್ಲಿನಂತೆ ಸೀರೆಯ ಮೇಲೆ ನಾಲ್ಕು ಹನಿ ನೆತ್ತರು ಒಂದೇ ಕಡೆ ಬಿದ್ದಿದ್ದು, ನಾಲ್ಕು ಹನಿ ಎಂಬುದು ನೆತ್ತರಿನ ಅಳವಿಯನ್ನು ತಿಳಿಸುತ್ತದಲ್ಲದೆ, ‘ಅದು ಅಲ್ಲಿ ನಾಲ್ಕು ಹನಿಗಳಾಗಿ ಕಾಣಿಸುತ್ತದೆ’ ಎಂದೇನೂ ಹೇಳುವುದಿಲ್ಲ.
(4) ಬುಟ್ಟಿ, ಚೀಲ, ಕಪ್ ಮೊದಲಾದ ‘ವಸ್ತುಗಳನ್ನು ಹೆಸರಿಸುವ’ ಅಳತೆ ಪದಗಳ ಬಳಕೆಯಲ್ಲಿ ‘ವಸ್ತುಗಳನ್ನು ಹೆಸರಿಸದಿರುವ’ ಲೀಟರ್, ಕಿಲೋ, ಹೊರೆ, ಕಟ್ಟು ಮೊದಲಾದ ಅಳತೆ ಪದಗಳ ಬಳಕೆಯಲ್ಲಿ ಕಾಣಿಸದಂತಹ ಒಂದು ಬಗೆಯ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: ಅವಕ್ಕೆ ಪಾಂಗುಗಳ ಅಳತೆಯನ್ನು ತಿಳಿಸುವ ಹುರುಳಿನೊಂದಿಗೆ ವಸ್ತುಗಳನ್ನು ಗುರುತಿಸುವ ಹುರುಳೂ ಇರಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(21ಕ) ಎರಡು ಕಪ್ ನೀರು ತನ್ನಿ. (21ಚ) ಈ ಪಾತ್ರೆಯಲ್ಲಿರುವ ಹಾಲಿಗೆ ಎರಡು ಕಪ್ ನೀರು ಸೇರಿಸಿ.
(21ಕ) ಸೊಲ್ಲಿಗೆ ‘ನೀರಿರುವ ಎರಡು ಕಪ್ ತನ್ನಿ’ ಎಂಬ ಹುರುಳಿದೆ; ಅದರಲ್ಲಿ ಕಪ್ ಪದವನ್ನು ನೀರಿನ ಅಳತೆಯನ್ನು ತಿಳಿಸುವುದಕ್ಕಾಗಿ ಮಾತ್ರವಲ್ಲದೆ, ವಸ್ತುವೊಂದನ್ನು ಗುರುತಿಸುವುದಕ್ಕಾಗಿಯೂ ಬಳಸಲಾಗಿದೆ; ಇದಕ್ಕೆ ಬದಲು, (21ಚ) ಸೊಲ್ಲಿಗೆ ‘ಎರಡು ಕಪ್ ಅಳತೆಯ ನೀರನ್ನು ಹಾಲಿಗೆ ಸೇರಿಸಿ’ ಎಂಬ
ಹುರುಳಿದೆ; ಇದರಲ್ಲಿ ಕಪ್ ಪದವನ್ನು ಅಳತೆಯನ್ನು ತಿಳಿಸುವುದಕ್ಕಾಗಿ ಮಾತ್ರವೇ ಬಳಸಲಾಗಿದೆ. ಇದಲ್ಲದೆ, (21ಕ) ಸೊಲ್ಲಿಗೂ ‘ಎರಡು ಕಪ್ ಅಳತೆಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ತನ್ನಿ’ ಎಂಬ ಹುರುಳೂ ಸಿಗಬಲ್ಲುದು.
ಈ ಎರಡು ಬಗೆಯ ಬಳಕೆಗಳ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ: ಮೊದಲನೆಯದರಲ್ಲಿ ಕಪ್ ಪದ ಒತ್ತೆಹೆಸರಾಗಿ ಬಂದಿದೆ ಮಾತ್ರವಲ್ಲ, ಅದು ತನ್ನೊಂದಿಗೆ ಬಂದಿರುವ ನೀರು ಪದಕ್ಕೂ ಒತ್ತೆಹೆಸರಿನ ಹುರುಳನ್ನು ಕೊಟ್ಟಿದೆ; ಆದರೆ, ಎರಡನೆಯ ಬಳಕೆಯಲ್ಲಿ ನೀರು ಪದ ಒಟ್ಟಲುಹೆಸರಾಗಿಯೇ ಉಳಿಯುತ್ತದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣ ಬಹುದು:
(22ಕ) ಆಕೆ ತಂದ ಎರಡು ಕಪ್ ನೀರಿನಲ್ಲಿ ಒಂದನ್ನು ಮಾತ್ರ ಕುಡಿದಿ
ದ್ದಾರೆ.
(22ಚ) ಹಾಲಿಗೆ ಸೇರಿಸಿದ ಎರಡು ಕಪ್ ನೀರಿನಲ್ಲಿ ಅರೆವಾಶಿ ಇಂಗಿ
ಹೋಗಿದೆ.
(23ಕ) ಆಕೆ ತಂದ ಎರಡು ಕಪ್ ನೀರು ಮೇಜಿನ ಮೇಲಿದೆ. (23ಚ) ಆಕೆ ತಂದ ಎರಡು ಕಪ್ ನೀರು ಈ ಪಾತ್ರೆಯಲ್ಲಿದೆ.
(22ಕ)ದಲ್ಲಿ ನೀರು ಎಂಬುದು ಒತ್ತೆಹೆಸರಾಗಿ ಬಳಕೆಯಾಗಿದೆ; ಹಾಗಾಗಿ, ಆಮೇಲೆ ಅದನ್ನೇ ಗುರುತಿಸಲು ಒಂದನ್ನು ಎಂಬ ಪದರೂಪವನ್ನು ಬಳಸಲು ಸಾದ್ಯವಾಗಿದೆ; ಆದರೆ, (22ಚ)ದಲ್ಲಿ ಅದು ಒಟ್ಟಲುಹೆಸರಾಗಿ ಬಳಕೆಯಾಗಿದ್ದು, ಅರೆವಾಸಿ ಎಂಬುದನ್ನು ಬಳಸಬೇಕಾಗಿದೆ. (23ಕ) ಮತ್ತು (23ಚ)ಗಳ ನಡುವೆಯೂ ಇಂತಹದೇ ವ್ಯತ್ಯಾಸ ಇರುವುದನ್ನು ಗಮನಿಸಬಹುದು.
ಕೆಳಗೆ ಕೊಟ್ಟಿರುವ ಬೇರೆ ಎರಡು ಬಗೆಯ ಇಟ್ಟಳಗಳಲ್ಲೂ ಈ ಎರಡು
ಬಗೆಯ ಅಳತೆಪದಗಳ ನಡುವಿನ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ:
(24ಕ) ಎರಡು ಸಾಲು ಕುರ್ಚಿಗಳಲ್ಲಿ ಜನ ಕುಳಿತಿದ್ದಾರೆ. (24ಚ) ಕುರ್ಚಿಗಳ ಎರಡು ಸಾಲುಗಳಲ್ಲಿ ಜನ ಕುಳಿತಿದ್ದಾರೆ. (25ಕ) ಲೋಟದಲ್ಲಿ ಎರಡು ಚಮಚ ಸಕ್ಕರೆಯಿದೆ. (25ಚ) ಮೇಜಿನ ಮೇಲೆ ಸಕ್ಕರೆಯ ಎರಡು ಚಮಚಗಳಿವೆ.
(24ಕ) ಮತ್ತು (24ಚ) ಸೊಲ್ಲುಗಳಿಗೆ ಒಂದೇ ಹುರುಳಿದೆ; ಎರಡೂ ‘ಯಾವ ಕುರ್ಚಿಗಳಲ್ಲಿ ಜನ ಕುಳಿತಿದ್ದಾರೆ’ ಎಂಬುದನ್ನು ತಿಳಿಸುತ್ತವೆ. ಆದರೆ, (25ಕ) ಮತ್ತು (25ಚ) ಸೊಲ್ಲುಗಳಿಗೆ ಬೇರೆ ಬೇರೆ ಹುರುಳುಗಳಿವೆ; (25ಕ) ಸೊಲ್ಲು ‘ಲೋಟದಲ್ಲಿ ಎಶ್ಟು ಸಕ್ಕರೆಯಿದೆ’ ಎಂಬುದನ್ನು ತಿಳಿಸುತ್ತದೆ; ಇಲ್ಲಿ ಚಮಚ ಪದ ಅಳತೆಪದವಾಗಿ ಬಳಕೆಯಾಗಿದೆ; ಆದರೆ (25ಚ) ಸೊಲ್ಲು
‘ಮೇಜಿನ ಮೇಲೆ ಎಶ್ಟು ಚಮಚಗಳಿವೆ’ ಎಂಬುದನ್ನು ತಿಳಿಸುತ್ತದಲ್ಲದೆ, ‘ಅಲ್ಲಿ ಸಕ್ಕರೆಯಿದೆ’ ಎಂಬುದನ್ನು, ಇಲ್ಲವೇ ‘ಎಶ್ಟು ಸಕ್ಕರೆಯಿದೆ’ ಎಂಬುದನ್ನು ತಿಳಿಸುವು ದಿಲ್ಲ; ಇಲ್ಲಿ ಚಮಚ ಪದವನ್ನು ಒಂದು ವಸ್ತುವನ್ನು ಗುರುತಿಸುವ ಪದವಾಗಿ ಬಳಸಲಾಗಿದೆ.
(5) ಆದರೆ, ವಸ್ತುಗಳನ್ನು ಹೆಸರಿಸುವ ಎಲ್ಲಾ ಬಗೆಯ ಪದಗಳನ್ನೂ ಈ ರೀತಿ ಅಳತೆಯನ್ನು ತಿಳಿಸುವುದಕ್ಕಾಗಿ ಬಳಸಲು ಬರುವುದಿಲ್ಲ. ಹಾಗೆ ಬಳಸ ಬೇಕಿದ್ದಲ್ಲಿ ಅವು ನೀರು, ಹಾಲು, ಹಣ್ಣು ಮೊದಲಾದುವನ್ನು ಹಾಕುವಂತಹ ವಾಗಿರಬೇಕು, ಮತ್ತು ಅಳೆಯುವ ಕೆಲಸದಲ್ಲಿ ಬಳಸಬಲ್ಲುವಾಗಿರಬೇಕು. ಎತ್ತುಗೆ ಗಾಗಿ, ಒಂದು ಚಿಪ್ಪಿನಲ್ಲಿ ನೀರನ್ನು ಹಾಕಲು ಬರುವುದಾದರೂ, ಒಂದು ಚಿಪ್ಪು ನೀರು ಎಂಬುದು ಅಳತೆಯನ್ನು ತಿಳಿಸುವ ಪದಕಂತೆಯಾಗಿ ಬಳಕೆಯಾಗುವುದಿಲ್ಲ; ಅದನ್ನು ಸಾಮಾನ್ಯವಾಗಿ ಅಳೆಯುವ ಕೆಲಸಕ್ಕೆ ಬಳಸುವುದಿಲ್ಲವೆಂಬುದೇ ಇದಕ್ಕೆ ಕಾರಣ.
ಇದಲ್ಲದೆ, ಇಂತಹ ಇಟ್ಟಳದಲ್ಲಿ ಚಮಚ, ಲೋಟ, ಬುಟ್ಟಿ ಮೊದಲಾದ ಪದಗಳನ್ನು ಅಳತೆಯನ್ನು ತಿಳಿಸುವುದರೊಂದಿಗೆ ವಸ್ತುಗಳನ್ನು ಗುರುತಿಸುವುದ ಕ್ಕಾಗಿಯೂ ಬಳಸಲಾಗಿದೆಯಾದರೂ ಅವುಗಳೊಂದಿಗೆ ಹಲವೆಣಿಕೆಯ ಗಳು ಒಟ್ಟನ್ನು ಬಳಸಲು ಬರುವುದಿಲ್ಲ. ಈ ವಿಶಯದಲ್ಲಿ ಈ ಪದಗಳ ಮೇಲಿನ ಬಳಕೆ ವಸ್ತುಗಳನ್ನು ಗುರುತಿಸುವ ಬೇರೆ ಬಳಕೆಗಳಿಂದ ಬೇರಾಗಿದೆ.
(26ಕ) ನನಗೆ ಮೂರು ಲೋಟ ಹಾಲು ಬೇಕಾಗಿತ್ತು. (26ಚ) *ನನಗೆ ಮೂರು ಲೋಟಗಳು ಹಾಲು ಬೇಕಾಗಿತ್ತು. (27ಕ) ಒಂದು ಬುಟ್ಟಿ ಹಣ್ಣು ತನ್ನಿ. (27ಚ) *ಮೂರು ಬುಟ್ಟಿಗಳು ಹಣ್ಣು ತನ್ನಿ.
(6) ಎಣಿಕೆಪದ ಮತ್ತು ಅಳತೆಪದಗಳ ಜೋಡಿಯನ್ನು ಕೆಲವು ಪರಿಚೆಪದ
ಗಳೊಂದಿಗೂ ಬಳಸಲು ಬರುತ್ತದೆ:
(28ಕ) ನನಗೊಂದು ಮೂರಡಿ ಉದ್ದ ಹಗ್ಗ ಬೇಕಾಗಿತ್ತು. (28ಚ) ಮನೆಯ ಸುತ್ತ ಆರಡಿ ಎತ್ತರ ಗೋಡೆಯಿದೆ.
(28ಕ)ದಲ್ಲಿ ಮೂರಡಿ ಎಂಬ ಎಣಿಕೆಪದ ಮತ್ತು ಅಳತೆಪದಗಳ ಜೋಡಿ ಉದ್ದ ಪರಿಚೆಪದದೊಂದಿಗೆ ಬಂದಿದೆ, ಮತ್ತು (28ಚ)ದಲ್ಲಿ ಅಂತಹದೇ ಆರಡಿ ಪದಜೋಡಿ ಎತ್ತರ ಪರಿಚೆಪದದೊಂದಿಗೆ ಬಂದಿದೆ.
ಆದರೆ, ಸಾಮಾನ್ಯವಾಗಿ ಇಂತಹ ಬಳಕೆಗಳಲ್ಲಿ ಪರಿಚೆಪದವನ್ನು ಹೆಸರು ಪದದ ಹಾಗೆ ಪತ್ತುಗೆ ರೂಪದಲ್ಲಿ ಬಳಸುವುದೇ ಹೆಚ್ಚು (ಮೂರಡಿ ಉದ್ದದ ಹಗ್ಗ, ಆರಡಿ ಎತ್ತರದ ಗೋಡೆ).
ಇದಲ್ಲದೆ, ಇಂತಹ ಬಳಕೆಯಲ್ಲಿ ಎಲ್ಲಾ ಪರಿಚೆಪದಗಳನ್ನೂ ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಉದ್ದ-ಗಿಡ್ಡ, ಎತ್ತರ-ತಗ್ಗು, ದಪ್ಪ-ತೆಳು, ಬಾರ- ಹಗುರ ಮೊದಲಾದ ಎದುರುಹುರುಳಿನ ಪರಿಚೆಪದಗಳಲ್ಲಿ ಕೂಡುಹುರುಳಿರುವ ಮೊದಲಿನದನ್ನು ಮಾತ್ರ ಬಳಸಲು ಬರುತ್ತದಲ್ಲದೆ, ಕಳೆಹುರುಳಿರುವ ಎರಡನೆ ಯದನ್ನು ಬಳಸಲು ಬರುವುದಿಲ್ಲ (*ಮೂರಡಿ ಗಿಡ್ಡ ಹಗ್ಗ, *ಆರಡಿ ತಗ್ಗಿನ ಗೋಡೆ).
ಆದರೆ, ಹೋಲಿಕೆಯ ನುಡಿತವನ್ನು ಸೇರಿಸಿ ಬಳಸಿದೆವಾದರೆ, ಈ ಎರಡು ಬಗೆಯ ಪರಿಚೆಪದಗಳನ್ನೂ ಎಣಿಕೆಪದ ಮತ್ತು ಅಳತೆಪದಗಳ ಜೋಡಿ ಯೊಂದಿಗೆ ಬಳಸಲು ಬರುತ್ತದೆ:
(29ಕ) ಅವನು ಇವನಿಗಿಂತ ಎರಡಿಂಚು ಗಿಡ್ಡ. (29ಚ) ಈ ಗೋಡೆ ಆ ಗೋಡೆಗಿಂತ ಎರಡಡಿ ತಗ್ಗು.
ಇಲ್ಲಿ ನಿಜಕ್ಕೂ ಎದುರುಹುರುಳಿನ ಪರಿಚೆಪದಗಳಲ್ಲಿ ಕೂಡುಹುರುಳಿರುವ ಪದವನ್ನು ಎಣಿಕೆಪದ ಮತ್ತು ಅಳತೆಪದಗಳ ಜೋಡಿಯೊಂದಿಗೆ ಬಳಸಿದಾಗ, ಅದಕ್ಕೆ ಅಳತೆಪಟ್ಟಿಯ ಎರಡು ಹಂತಗಳನ್ನೂ ತಿಳಿಸುವ ಹುರುಳು ಬರುತ್ತದೆ ಯೆಂದು ಹೇಳಬಹುದು. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣ ಬಹುದು:
(30ಕ) ಮೂರಡಿ ಉದ್ದ ಹಗ್ಗ ನಮಗೆ ಗಿಡ್ಡವಾಗುತ್ತದೆ. (30ಚ) ಈ ಒಂದೂವರೆ ಅಡಿ ದಪ್ಪ ಹಗ್ಗ ಅವನಿಗೆ ತೆಳು.
ಕೆಲವೆಡೆಗಳಲ್ಲಿ ಮೂರಡಿ ಗಿಡ್ಡ ಹಲಿಗೆ, ಎರಡು ಕಿಲೋ ಹಗುರ ಕಲ್ಲು ಎಂಬಂತಹ ನುಡಿತಗಳನ್ನು ಬಳಸಲು ಬರುತ್ತದೆಯಾದರೂ, ಅವಕ್ಕೆ ‘ಬೇಕಾದು ದಕ್ಕಿಂತ ಗಿಡ್ಡ, ಇಲ್ಲವೇ ಹಗುರ’ ಎಂಬ ಹೋಲಿಕೆಯ ಹುರುಳು ಬರುತ್ತದೆ ಎಂಬುದನ್ನು ಗಮನಿಸಬಹುದು.
(7) ಅಳತೆ ಪದ ಎಂತಹ ಪಾಂಗಿನ ಅಳವಿಯನ್ನು ತಿಳಿಸುತ್ತದೆ ಎಂಬುದು ಸೊಲ್ಲಿನ ಸಂದರ್ಬದಿಂದ ತಿಳಿಯುವುದಾದರೆ, ಆ ಪಾಂಗನ್ನು ಗುರುತಿಸುವ ಹೆಸರುಪದವನ್ನು ಬಳಸದೆಯೂ ಇರಲು ಬರುತ್ತದೆ:
(31ಕ) ನಿಮಗೆ ಎಶ್ಟು ಹಾಲು ಬೇಕು? ಒಂದು ಲೀಟರ್ ಕೊಡಿ. (31ಚ) ಇದರಲ್ಲಿ ಒಂದು ಲೀಟರನ್ನು ಈ ಪಾತ್ರೆಗೆ ಹಾಕಿ. (31ಟ) ನಿಮಗೆ ಎಶ್ಟು ಬಟ್ಟೆ ಬೇಕು? ಎರಡು ಮೀಟರ್ ಕೊಡಿ. (31ತ) ರೇಡಿಯೋ ರಿಪೇರಿಗೆ ನೂರಯ್ವತ್ತು ಕೊಡಬೇಕಾಯಿತು.
(31ಕ)ದಲ್ಲಿ ಮೊದಲನೆಯ ಸೊಲ್ಲಿನಿಂದಲೇ ಬೇಕಾಗಿರುವುದು ಹಾಲು ಎಂಬುದು ತಿಳಿಯುವುದಾದ ಕಾರಣ, ಅದರ ಎರಡನೆಯ ಸೊಲ್ಲಿನಲ್ಲಿ ಒಂದು ಲೀಟರ್ ಎಂದಿಶ್ಟೇ ಹೇಳಲು ಬರುತ್ತದೆ; (31ಟ)ದಲ್ಲೂ ಹೀಗೆಯೇ. ಆದರೆ, (31ಚ)ದಲ್ಲಿ ಒಂದು ಲೀಟರ್ ಎಂಬುದು ಯಾವುದರ ಒಂದು ಲೀಟರನ್ನು ತಿಳಿಸುತ್ತದೆ ಎಂಬುದು ಆ ಸೊಲ್ಲನ್ನು ಬಳಸಿದ ಸಂದರ್ಬದಿಂದ ಮಾತ್ರವೇ ಗೊತ್ತಾಗಬಲ್ಲುದು; (31ತ)ದಲ್ಲಿ ನೂರಯ್ವತ್ತು ಎಂಬುದು ರುಪಾಯಿಯ ಅಳವಿಯನ್ನು ತಿಳಿಸುತ್ತದೆ ಎಂಬುದು ಅದರಲ್ಲೇನೇ ಬಂದಿರುವ ರೇಡಿಯೋ ರಿಪೇರಿ ಎಂಬುದರಿಂದ ಊಹಿಸಲು ಬರುತ್ತದೆ.
6.4.4 ಅಳವಿ ಪದಗಳ ಬಳಕೆ
ಮೇಲೆ ವಿವರಿಸಿದ ಹಾಗೆ, ಪಾಂಗುಗಳ ಅಳವಿ ಎಶ್ಟು ಎಂಬುದು ಕಂಡಿತವಾಗಿ ತಿಳಿದಿರುವಲ್ಲಿ ಅವನ್ನು ಗುರುತಿಸುವ ಹೆಸರುಪದಗಳೊಂದಿಗೆ ಎಣಿಕೆಪದಗಳನ್ನು ಬಳಸಲಾಗುತ್ತದೆ; ಆದರೆ, ಅದು ಕಂಡಿತವಾಗಿ ತಿಳಿಯದಿರುವಲ್ಲಿ ಎಣಿಕೆಪದಗಳ ಬದಲು ಕೆಲವು, ಹಲವು, ತುಸು, ತುಂಬಾ, ಎಲ್ಲ ಮೊದಲಾದ ಕೆಲವು ಅಳವಿಯ ಪದಗಳನ್ನು ಬಳಸಲಾಗುತ್ತದೆ. ಇದಲ್ಲದೆ, ಎಣಿಕೆಪದಗಳೊಂದಿಗೂ ಸುಮಾರು, ಹೆಚ್ಚುಕಡಿಮೆ, ಹತ್ತಿರ ಹತ್ತಿರ ಎಂಬಂತಹ ಪದಗಳನ್ನು, ಇಲ್ಲವೇ ಆರು ಎಂಬ ಒಟ್ಟನ್ನು ಇಂತಹದೇ ಹುರುಳನ್ನು ಕೊಡಲು ಬಳಸಲಾಗುತ್ತದೆ.
(1) ಇವುಗಳಲ್ಲಿ ಕೆಲವು ಮತ್ತು ಹಲವು ಎಂಬವು ಎಣಿಕೆಪದಗಳನ್ನು ಹೋಲುತ್ತವೆ. ಆ ಪದಗಳ ಹಾಗೆ, ಇವನ್ನು ನೇರವಾಗಿ ಒತ್ತೆಹೆಸರುಗಳೊಂದಿಗೆ ಬಳಸಬಲ್ಲೆವು (ಹಲವು ಮರಗಳು, ಹಲವು ಹುಡುಗರು), ಮತ್ತು ಒಟ್ಟಲು ಹೆಸರುಗಳೊಂದಿಗೆ ಅವನ್ನು ಬಳಸಲಾರೆವು (*ಹಲವು ನೀರು).
ಕೊಡುವ ಲೀಟರ್,
ಒಟ್ಟಲುಹೆಸರುಗಳಿಗೆ ಎಲ್ಲೆಗಳನ್ನು
ಕಿಲೋ, ಮೊದಲಾದ ಪದಗಳನ್ನು ಸೇರಿಸಿದಲ್ಲಿ, ಅವುಗಳೊಂದಿಗೆ ಎಣಿಕೆಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ಮೇಲೆ ನೋಡಿರುವೆವು (ಎರಡು ಲೀಟರ್ ಹಾಲು); ಆದರೆ, ಇಂತಹ ಕಡೆಗಳಲ್ಲೂ ಹಲವು ಮತ್ತು ಕೆಲವು ಪದಗಳನ್ನು ಬಳಸಲು ಬರುವುದಿಲ್ಲ (*ಹಲವು ಲೀಟರ್ ಹಾಲು, *ಕೆಲವು ಕಿಲೋ ಸಕ್ಕರೆ).
ವಸ್ತುವಿನ ಅಳವಿಯನ್ನು ಕಂಡಿತವಾಗಿ ತಿಳಿಸಲು ಅಳತೆಯ ಪದಗಳನ್ನು ಬಳಸಲಾಗುತ್ತದೆಯೆಂಬುದೇ ಈ ರೀತಿ ಅವುಗಳೊಂದಿಗೆ ಅಳವಿಯನ್ನು ಕಂಡಿತ ವಲ್ಲದಂತೆ ತಿಳಿಸುವ ಹಲವು ಮತ್ತು ಕೆಲವು ಪದಗಳನ್ನು ಬಳಸಲು ಬಾರ ದಿರುವುದಕ್ಕೆ ಕಾರಣವಿರಬಹುದು.
ಮಂದಿಗುರ್ತದ ಪದಗಳೊಂದಿಗೆ ಬಳಕೆಯಾದಾಗ, ಈ ಎರಡು ಪದಗಳೂ ಗುರ್ತದ ರೂಪದಲ್ಲಿ ಬರಬಲ್ಲುವು (ಹಲವರು ಹುಡುಗರು, ಕೆಲವರು ಹುಡುಗಿ
ಯರು). ಇದಲ್ಲದೆ, ಈ ಎರಡು ರೂಪಗಳನ್ನು ಮಂದಿಗುರ್ತದ ಬಳಿಕವೂ ಬಳಸಲು ಬರುತ್ತದೆ (ಹುಡುಗರು ಹಲವರು, ಹುಡುಗಿಯರು ಕೆಲವರು).
ಪಾಂಗುಗಳ ಎಣಿಕೆ ತುಂಬಾ ಚಿಕ್ಕದಾಗಿರುವಲ್ಲಿ (ಎರಡು ಇಲ್ಲವೇ ಮೂರು ಮಾತ್ರವೇ ಇರುವಲ್ಲಿ) ಕೆಲವು ಪದವನ್ನು ಬಳಸಲು ಬರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಅಂತಹ ಕಡೆಗಳಲ್ಲಿ ಎಣಿಕೆಯನ್ನೇ ಕಂಡಿತವಾಗಿ ತಿಳಿಸುವ ಎಣಿಕೆಪದಗಳನ್ನು ಬಳಸುವುದೇ ಸರಿಯಾದ ದಾರಿ.
(2) ಅಳವಿಯನ್ನು ತಿಳಿಸುವ ತುಸು ಮತ್ತು ಕೊಂಚ ಎಂಬ ಪದಗಳು ಒಟ್ಟಲುಹೆಸರುಗಳೊಂದಿಗೆ ಮಾತ್ರ ಬಳಕೆಯಾಗುತ್ತವೆ (ತುಸು ಉಪ್ಪು, ಕೊಂಚ ನೀರು); ಒತ್ತೆಹೆಸರುಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ (*ತುಸು ಮರಗಳು, *ಕೊಂಚ ಹುಡುಗರು). ಆದರೆ, ತುಂಬಾ ಎಂಬ ಇನ್ನೊಂದು ಪದ ಈ ಎರಡು ಬಗೆಯ ಹೆಸರುಪದಗಳೊಂದಿಗೂ ಬಳಕೆಯಾಗ ಬಲ್ಲುದು (ತುಂಬಾ ಹುಡುಗರು, ತುಂಬಾ ನೀರು).
ತುಂಬಾ ಪದಕ್ಕೆ ಈ ಎರಡು ಬಳಕೆಗಳಲ್ಲಿ ಬೇರೆ ಬೇರೆ ಹುರುಳುಗಳಿವೆ ಎಂಬುದನ್ನು ಗಮನಿಸಬಹುದು: ತುಂಬಾ ಹುಡುಗರು ಎಂಬಲ್ಲಿ ಅದು ಹುಡುಗರ ಎಣಿಕೆಯನ್ನು ತಿಳಿಸುತ್ತದೆ, ಮತ್ತು ತುಂಬಾ ನೀರು ಎಂಬಲ್ಲಿ ಅದು ನೀರಿನ ಅಳವಿಯನ್ನು ತಿಳಿಸುತ್ತದೆ.
(3) ಈ ಎರಡು ಬಗೆಯ ಪದಗಳೊಂದಿಗೂ ಬಳಕೆಯಾಗಬಲ್ಲ ಇನ್ನೊಂದು ಅಳವಿಯ ಪದವೆಂದರೆ, ಎಲ್ಲ ಎಂಬುದು; ಸಾಮಾನ್ಯವಾಗಿ, ಈ ಪದವನ್ನು ಬಳಸಿರುವಲ್ಲಿ ಅದರೊಂದಿಗೆ ಒಳಗೊಳ್ಳುವ ಊ ಒಟ್ಟು ಬಂದಿರುತ್ತದೆ. ಎಲ್ಲ ಪದವನ್ನು ಒತ್ತೆ ಮತ್ತು ಒಟ್ಟಲು ಹೆಸರುಗಳೊಂದಿಗೆ ಬಳಸಲು ಬರುತ್ತಿದ್ದು, ಒತ್ತೆಹೆಸರುಗಳೊಂದಿಗೆ ಬಂದಾಗ ಇದು ಪಾಂಗಿನ ಎಣಿಕೆಯನ್ನು ತಿಳಿಸುತ್ತದೆ, ಮತ್ತು ಒಟ್ಟಲುಹೆಸರುಗಳೊಂದಿಗೆ ಬಂದಾಗ ಪಾಂಗಿನ ಅಳವಿಯನ್ನು ತಿಳಿಸುತ್ತದೆ:
(32ಕ) ಎಲ್ಲ ಹುಡುಗರೂ ಮರದ ಮೇಲಿದ್ದಾರೆ. (32ಚ) ಕೆರೆಯಿಂದ ಎಲ್ಲ ನೀರೂ ಹರಿದುಹೋಗಿದೆ.
ಇದಲ್ಲದೆ, ಇದರೊಂದಿಗೆ ಆ ಒಟ್ಟನ್ನೂ ಬಳಸಲು ಬರುತ್ತದೆ; ಈ ಒಟ್ಟಿಗೆ
ಒತ್ತಿಹೇಳುವ ಹುರುಳಿದೆ (ಎಲ್ಲಾ ಹುಡುಗರೂ, ಎಲ್ಲಾ ನೀರೂ).
ಒಂದರಿಂದ ಅಯ್ದರವರೆಗಿನ ಎಣಿಕೆಪದಗಳ ಹಾಗೆ, ಇದನ್ನೂ ಹೆಸರುಪದದ ಬಳಿಕ ಬಳಸಲು ಬರುತ್ತದೆ; ಈ ಬಳಕೆಯಲ್ಲಿ ಅದಕ್ಕೆ ಮಂದಿಗುರ್ತದ ಪದ ಗಳೊಂದಿಗೆ ಎಲ್ಲರು ಎಂಬ ರೂಪ, ಮತ್ತು ಉಳಿಕೆಗುರ್ತದ ಪದಗಳೊಂದಿಗೆ ಎಲ್ಲವು ಎಂಬ ರೂಪ ಇದೆ:
(33ಕ) ಹುಡುಗರೆಲ್ಲರೂ ಮರದ ಮೇಲಿದ್ದಾರೆ. (33ಚ) ಮರಗಳೆಲ್ಲವೂ ಕೆಳಗೆ ಉರುಳಿವೆ.
ಆದರೆ, ಈ ಪದದ ಬಳಿಕ ಒಳಗೊಳ್ಳುವ ಊ ಒಟ್ಟನ್ನು ಬಳಸದಿದ್ದಲ್ಲಿ, ಅದು
ಹೆಸರುಪದಗಳ ಬಳಿಕವೂ ಎಲ್ಲ ರೂಪದಲ್ಲೇ ಬರುತ್ತದೆ:
(34ಕ) ಹುಡುಗರೆಲ್ಲ ಮರದ ಮೇಲಿದ್ದಾರೆ. (34ಚ) ನೀರೆಲ್ಲ ಹರಿದು ಹೋಗಿದೆ.
ಎಲ್ಲ ಪದವನ್ನು ಎಣಿಕೆ ಪದಗಳೊಂದಿಗೂ ಬಳಸಲು ಬರುತ್ತದೆ; ಇಂತಹ ಬಳಕೆಯಲ್ಲಿ ಅದಕ್ಕೆ ಒಳಗೊಳ್ಳುವ ಹುರುಳು ಸಿಗುತ್ತದೆ. ಆದರೆ, ಚಿಕ್ಕ ಎಣಿಕೆ ಯನ್ನು ತಿಳಿಸುವ ಒಂದು, ಎರಡು, ಇಲ್ಲವೇ ಮೂರು ಪದಗಳೊಂದಿಗೆ ಅದನ್ನು ಬಳಸಲು ಬರುವುದಿಲ್ಲ:
(35ಕ) ಎಲ್ಲಾ ಹತ್ತು ಮಂದಿಯೂ ತಪ್ಪು ಮಾಡಿದ್ದರು. (35ಚ) *ಎಲ್ಲಾ ಎರಡು ಮನೆಗಳೂ ಮುರಿದುಬಿದ್ದಿವೆ.
(4) ಅಶ್ಟು, ಇಶ್ಟು ಮತ್ತು ಎಶ್ಟು ಎಂಬ ತೋರುಪದಗಳೂ ಕಂಡಿತವಲ್ಲದ ಎಣಿಕೆ ಇಲ್ಲವೇ ಅಳವಿಯನ್ನು ತಿಳಿಸುತ್ತವೆ. ಎತ್ತುಗೆಗಾಗಿ, ಇಶ್ಟು ಹಣ್ಣು ಸಿಕ್ಕಿತು ಎಂಬಲ್ಲಿ ಸಿಕ್ಕಿರುವ ಹಣ್ಣುಗಳ ಎಣಿಕೆಯನ್ನು ಕಂಡಿತವಲ್ಲದಂತೆ ತಿಳಿಸಲಾಗಿದೆ. ಈ ಮೂರು ಪದಗಳನ್ನು ಒಟ್ಟಲುಹೆಸರುಗಳೊಂದಿಗೂ ಬಳಸಲು ಬರುತ್ತದೆ (ಅಶ್ಟು ನೀರು ಕುಡಿದರೆ ಏನಾದೀತು?, ಎಶ್ಟು ಜನ ಬಂದಿದ್ದರು?). ಅಶ್ಟು ಮತ್ತು ಇಶ್ಟು ಎಂಬವನ್ನು ಒಟ್ಟಿಗೆ ಬಳಸಲೂ ಬರುತ್ತದೆ (ಅಶ್ಟಿಶ್ಟು ಹಣ ಸಿಕ್ಕಿತು).
(ಕ) ಅಶ್ಟು ಮತ್ತು ಇಶ್ಟು ಪದಗಳೊಂದಿಗೆ ಒಂದು ಎಂಬ ಪದವನ್ನೂ ಬಳಸಲು ಬರುತ್ತದೆ; ಮತ್ತು ಇವು ಒಟ್ಟಾಗಿ ಕಂಡಿತವಲ್ಲದ ಅಳವಿ ಇಲ್ಲವೇ ಎಣಿಕೆಯನ್ನು ತಿಳಿಸುತ್ತವೆ; ಇವಕ್ಕೆ ‘ಸ್ವಲ್ಪ’ ಎಂಬ ಹುರುಳೂ ಇದೆ:
(37ಕ) ಒಂದಶ್ಟು ಹುಲ್ಲು ಈ ಕಡೆ ಹಾಕಿ. (37ಚ) ಒಂದಿಶ್ಟು ಹಣ ಅವನಿಗೂ ಕೊಟ್ಟಿದ್ದೆ. (37ಟ) ಅವರ ನಾಟಕಕ್ಕೆ ಒಂದಶ್ಟು ಜನ ಬಂದಿದ್ದರು.
ಒಂದು ಎಂಬ ಪದಕ್ಕೆ ಈ ಕಂಡಿತವಲ್ಲದ ಹುರುಳು ಅದನ್ನು ಎಣಿಕೆ ಪದಗಳೊಂದಿಗೆ ಬಳಸಿದಾಗಲೂ ಬರುತ್ತದೆ; ಎಣಿಕೆಪದಗಳ ಕಂಡಿತವಾದ ಹುರುಳನ್ನು ಅದು ಈ ರೀತಿ ಮಾರ್ಪಡಿಸುತ್ತದೆ.
(38ಕ) ಮದುವೆಗೆ ನೂರಯ್ವತ್ತು ಜನ ಬಂದಿದ್ದರು. (38ಚ) ಮದುವೆಗೆ ಒಂದು ನೂರಯ್ವತ್ತು ಜನ ಬಂದಿದ್ದರು. (38ಟ) ಅಯ್ವತ್ತು ರುಪಾಯಿ ಕೊಡಿ. (38ತ) ಒಂದಯ್ವತ್ತು ರುಪಾಯಿ ಕೊಡಿ.
(38ಕ) ಸೊಲ್ಲಿನಲ್ಲಿ ಬಂದಿರುವ ನೂರಯ್ವತ್ತು ಎಂಬುದು ಕಂಡಿತ ಎಣಿಕೆ ಯನ್ನು ಕೊಡುತ್ತದೆ; ಆದರೆ, (38ಚ)ದಲ್ಲಿ ಬಂದಿರುವ ಒಂದು ನೂರಯ್ವತ್ತು ಎಂಬುದು ಕಂಡಿತವಲ್ಲದ ಎಣಿಕೆಯನ್ನು ಕೊಡುತ್ತದೆ. (38ಟ-ತ)ಗಳಲ್ಲೂ ಹೀಗೆಯೇ.
(ಚ) ಎಶ್ಟು ಪದದೊಂದಿಗೆ ಒಳಗೊಳ್ಳುವ ಊ ಒಟ್ಟನ್ನು, ಒತ್ತಿಹೇಳುವ ಏ ಒಟ್ಟನ್ನು, ಮತ್ತು ‘ಇಲ್ಲವೇ’ ಎಂಬ ಹುರುಳಿರುವ ಓ ಒಟ್ಟನ್ನು ಸೇರಿಸಿ ಮೂರು ಬಗೆಯ ಪದರೂಪಗಳನ್ನು ಪಡೆಯಲು ಬರುತ್ತದೆ; ಇವನ್ನು ಹೆಸರುಪದ ಗಳೊಂದಿಗೆ ಬಳಸಿ ಅವು ತಿಳಿಸುವ ಪಾಂಗುಗಳ ಅಳವಿಯನ್ನು ಮೂರು ಬಗೆ ಗಳಲ್ಲಿ ತಿಳಿಸಲು ಬರುತ್ತದೆ:
(39ಕ) ಕೇಳಿದರೆ ಅವನು ಎಶ್ಟೂ ಕೊಡಬಹುದು. (39ಚ) ಎಶ್ಟೋ ಜನ ಅವರಲ್ಲಿ ಊಟಮಾಡಿ ಹೋಗಿದ್ದಾರೆ. (39ಟ) ಎಶ್ಟೇ ಸಿಗಲಿ, ಅವನ ಬಯಕೆ ತಣಿಯುವುದಿಲ್ಲ.
(5) ಕಂಡಿತವಲ್ಲದ ಎಣಿಕೆಯನ್ನು ತಿಳಿಸಲು ಮೇಲೆ ವಿವರಿಸಿದ ಅಳವಿಪದ ಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಬಳಸಲಾಗುತ್ತದೆ; ಆದರೆ, ಹೆಚ್ಚು ಕಡಿಮೆ, ಸುಮಾರು, ಹತ್ತಿರ ಹತ್ತಿರ ಎಂಬಂತಹ ಬೇರೆ ಕೆಲವು ಪದಗಳನ್ನು ಆ ರೀತಿ ನೇರವಾಗಿ ಹೆಸರುಪದಗಳೊಂದಿಗೆ ಬಳಸುವ ಬದಲು, ಅವುಗಳ ಮೊದಲು ಬಂದಿರುವ ಎಣಿಕೆಪದಗಳಿಗೆ ಸೇರಿಸಿ, ಅವು ಕೊಡುವ ಎಣಿಕೆ ಕಂಡಿತ ವಲ್ಲ ಎಂಬುದನ್ನು ತಿಳಿಸುವಲ್ಲಿ ನೆರವಾಗುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(40ಕ) ಹೆಚ್ಚುಕಡಿಮೆ ಅಯ್ವತ್ತು ಜನ ಬಂದಿದ್ದರು. (40ಚ) ಸುಮಾರು ನೂರು ಜನ ಬಂದಿದ್ದರು. (40ಟ) ಹತ್ತಿರ ಹತ್ತಿರ ನೂರಯ್ವತ್ತು ಜನ ಬಂದಿದ್ದರು.
ಇವುಗಳಲ್ಲಿ ಹತ್ತಿರ ಹತ್ತಿರ ಎಂಬುದಕ್ಕೆ ಎಣಿಕೆಯ ಪದ ತಿಳಿಸುವ ಎಣಿಕೆಗಿಂತ ಕಡಿಮೆ ಎಂಬ ಹುರುಳೂ ಇದೆ. ಆದರೆ, ಹೆಚ್ಚುಕಡಿಮೆ ಮತ್ತು ಸುಮಾರು ಎಂಬವುಗಳಿಗೆ ಅದಕ್ಕಿಂತ ಹೆಚ್ಚು ಇಲ್ಲವೇ ಕಡಿಮೆ ಎಂಬ ಎರಡು ಹುರುಳೂ ಬರಬಲ್ಲುದು.
(6) ಎಣಿಕೆಯ ಪದಗಳಿಗೆ ಆರು ಒಟ್ಟನ್ನು ಸೇರಿಸಿ ಹೇಳುವುದು ಅಳವಿ ಕಂಡಿತವಲ್ಲ ಎಂಬುದನ್ನು ತಿಳಿಸುವ ಇನ್ನೊಂದು ಹೊಲಬು; ಆದರೆ ಇದನ್ನು ಹತ್ತು, ನೂರು ಮತ್ತು ಸಾವಿರ ಎಂಬ ಮೂರು ಎಣಿಕೆಪದಗಳಿಗೆ ಮಾತ್ರ ಸೇರಿಸಿ ಹೇಳುವ ಹಾಗೆ ಕಾಣಿಸುತ್ತದೆ; ಇದಲ್ಲದೆ, ಇದನ್ನು ಈ ಎಣಿಕೆಯ ಪದಗಳಿಗೆ ಸೇರಿಸಿದಾಗ, ಅವು ತಿಳಿಸುವ ಎಣಿಕೆಗಿಂತ ಎಶ್ಟೋ ಹೆಚ್ಚು ಎಂಬ ಹುರುಳು ಸಿಗುತ್ತದೆ; ಎತ್ತುಗೆಗಾಗಿ, ನೂರಾರು ಎಂಬುದಕ್ಕೆ ನೂರಕ್ಕಿಂತ ಎಶ್ಟೋ ಹೆಚ್ಚು ಎಂಬ ಹುರುಳಿದೆ:
(41ಕ) ಅವರ ಮನೆಯ ಅಂಗಳದಲ್ಲಿ ನೂರಾರು ಜನ ಸೇರಿದ್ದರು. (41ಚ) ಮೆರವಣಿಗೆಗೆ ಸಾವಿರಾರು ಜನ ಬಂದಿದ್ದರು.
ಹಲವು ಎಂಬ ಪದದೊಂದಿಗೂ ಈ ಒಟ್ಟನ್ನು ಸೇರಿಸಿ ಹೇಳಲು ಬರುತ್ತದೆ; ಇಲ್ಲಿಯೂ ಅದಕ್ಕೆ ‘ಹಲವು ಎಂಬುದು ತಿಳಿಸಬಹುದಾದ ಎಣಿಕೆಗಿಂತ ಎಶ್ಟೋ ಹೆಚ್ಚು’ ಎಂಬ ಹುರುಳಿದೆ; ಅದಕ್ಕೆ ಈ ರೀತಿ ‘ಎಶ್ಟೋ ಹೆಚ್ಚು’ ಎಂಬ ಹುರುಳಿರುವ ಕಾರಣ, ಅದನ್ನು ಕೆಲವು ಪದದೊಂದಿಗೆ ಬಳಸಲು ಬರುವುದಿಲ್ಲ (*ಕೆಲವಾರು).
(42ಕ) ಆವತ್ತು ಹಲವಾರು ಜನ ಬಂದು ಹೋಗಿದ್ದರು. (42ಚ) ಹಲವಾರು ಪುಸ್ತಕಗಳು ಒದ್ದೆಯಾಗಿವೆ.
(7) ಹೋಲಿಕೆಯ ಇಂತ ಒಟ್ಟನ್ನು ಬಳಸಿರುವಲ್ಲಿ ಅದರ ಬಳಿಕ ಬರುವ ಹೆಚ್ಚು ಮತ್ತು ಕಡಿಮೆ ಪದಗಳೂ ಕಂಡಿತವಲ್ಲದ ಅಳವಿಯನ್ನು ತಿಳಿಸುತ್ತವೆ ಎಂದು ಹೇಳಬಹುದು. ಇವನ್ನೂ ಒತ್ತೆಹೆಸರು ಮತ್ತು ಒಟ್ಟಲುಹೆಸರುಗಳೆಂಬ ಎರಡು ಬಗೆಯ ಹೆಸರುಗಳೊಂದಿಗೂ ಬಳಸಲು ಬರುತ್ತದೆ:
(43ಕ) ಇಲ್ಲಿಗಿಂತ ಹೆಚ್ಚು ಹಣ್ಣುಗಳು ಅಲ್ಲಿವೆ. (43ಚ) ಇಲ್ಲಿಗಿಂತ ಹೆಚ್ಚು ನೀರು ಅಲ್ಲಿದೆ. (44ಕ) ಈ ಮರಕ್ಕಿಂತ ಕಡಿಮೆ ಹಣ್ಣುಗಳು ಆ ಮರದಲ್ಲಿವೆ. (44ಚ) ಈ ಕೆರೆಗಿಂತ ಕಡಿಮೆ ನೀರು ಆ ಕೆರೆಯಲ್ಲಿದೆ.
(8) ಒಂದೆರಡು, ಎರಡುಮೂರು, ಮೂರುನಾಲ್ಕು, ಅಯ್ದಾರು, ಏಳೆಂಟು, ಹತ್ತೆಂಟು, ಹತ್ತಿಪ್ಪತ್ತು, ಹತ್ತಯ್ವತ್ತು, ಇಪ್ಪತ್ತು ಇಪ್ಪತ್ತಯ್ದು, ಅಯ್ವತ್ತರುವತ್ತು, ನೂರೊಂದು ಮೊದಲಾದ ಕೆಲವು ಎಣಿಕೆಪದಗಳ ಜೋಡಿ ಗಳೂ ಕಂಡಿತವಲ್ಲದ ಎಣಿಕೆಯನ್ನು ತಿಳಿಸಲು ಬಳಕೆಯಾಗುತ್ತವೆ. ಇವು ಈ ಎಣಿಕೆಪದಗಳ ಹತ್ತಿರದ ಎಣಿಕೆಯೊಂದನ್ನು ತಿಳಿಸಬಲ್ಲುವು; ಆದರೆ, ಆ ಎಣಿಕೆ
ಅವುಗಳಲ್ಲಿ ಬಳಕೆಯಾಗಿರುವ ಎರಡು ಎಣಿಕೆಪದಗಳಲ್ಲಿ ಯಾವುದಾದರೂ ಒಂದು ಆಗಿರಲೇಬೇಕೆಂದೇನಿಲ್ಲ. ಎತ್ತುಗೆಗಾಗಿ, ನಾಲ್ಕಯ್ದು ಹಣ್ಣು ಕೊಳೆತಿದೆ ಎಂಬುದನ್ನು ಆರು ಹಣ್ಣುಗಳು ಕೊಳೆತಿರುವಲ್ಲೂ ಬಳಸಲು ಬರುತ್ತದೆ.
ಇದಲ್ಲದೆ, ಅವುಗಳಲ್ಲಿ ಸೇರಿರುವ ಎಣಿಕೆಪದಗಳಲ್ಲಿ ಚಿಕ್ಕದಕ್ಕಿಂತ ಕಡಿಮೆ ಎಣಿಕೆಯನ್ನು ಅವು ತಿಳಿಸುವುದಿಲ್ಲವೆಂದು ತೋರುತ್ತದೆ: ಎಣಿಕೆ ಎರಡೇ ಇರುವಲ್ಲಿ ಮೂರುನಾಲ್ಕು ಎಂಬುದನ್ನು, ಇಲ್ಲವೇ ಎಣಿಕೆ ನಾಲ್ಕೇ ಇರುವಲ್ಲಿ ಅಯ್ದಾರು ಎಂಬುದನ್ನು ಬಳಸಬಹುದೆಂದು ತೋರುವುದಿಲ್ಲ.
6.4.5 ಎಣಿಕೆಪದಗಳ ಇಟ್ಟಳ
ಎಣಿಕೆಪದಗಳಲ್ಲಿ ಆರು, ಏಳು, ಎಂಟು ಮತ್ತು ಹತ್ತು ಎಂಬ ನಾಲ್ಕು ಪದಗಳಲ್ಲಿ ಮಾತ್ರ ಇಟ್ಟಳವನ್ನು ಕಾಣಲು ಬರುವುದಿಲ್ಲ; ಆದರೆ, ಉಳಿದ ಎಣಿಕೆಪದಗಳಲ್ಲೆಲ್ಲ ಇಟ್ಟಳವನ್ನು ಕಾಣಲು ಬರುತ್ತದೆ. ಎಣಿಕೆಬೇರುಗಳಿಗೆ ಒಟ್ಟುಗಳನ್ನು ಇಲ್ಲವೇ ಬೇರೆ ಎಣಿಕೆಪದಗಳನ್ನು ಸೇರಿಸಿ (ಓರ್-ದು>ಒಂದು, ಈರ್-ಡು>ಎರಡು, ಈರ್-ಹತ್ತು>ಇಪ್ಪತ್ತು) ಅವನ್ನು ಪಡೆಯಬಹುದು, ಇಲ್ಲವೇ ಎಣಿಕೆಪದಗಳಿಗೆ ಬೇರೆ ಎಣಿಕೆಪದಗಳನ್ನು ಸೇರಿಸಿ (ಇಪ್ಪತ್ತ- ಆರು>ಇಪ್ಪತ್ತಾರು, ನೂರ ಎರಡು) ಪಡೆಯಬಹುದು. ಇವುಗಳ ವರ್ಣನೆಯನ್ನು ಮೂರನೆಯ ಪಸುಗೆಯಲ್ಲಿ (3.6ರಲ್ಲಿ) ಕೊಡಲಾಗಿದೆ.
(1) ಎಣಿಕೆಪದಗಳ ಮೊದಲು ಇನ್ನು, ಮತ್ತೆ, ಮಗದ್-, ಮತ್ತು ಬೇರೆ ಎಂಬ ಪದಗಳನ್ನು ಬಳಸಲು ಬರುತ್ತದೆ. ಇವುಗಳಲ್ಲಿ ಮಗದ್- ಎಂಬುದು ಒಂದು ಎಂಬ ಪದದ ಮೊದಲು ಮಾತ್ರ ಬರಬಲ್ಲುದು (ಮಗದೊಂದು, *ಮಗದೆರಡು). ಉಳಿದ ಪದಗಳು ಎಲ್ಲಾ ಬಗೆಯ ಎಣಿಕೆಪದಗಳೊಂದಿಗೂ ಬರಬಲ್ಲುವು.
ಮತ್ತೊಂದು ಮತ್ತೊಬ್ಬ ಮತ್ತೊಬ್ಬಳು ಮತ್ತೊಬ್ಬರು ಮತ್ತೆ ನೂರು
ಇನ್ನೊಂದು ಇನ್ನೊಬ್ಬ ಇನ್ನೊಬ್ಬಳು ಇನ್ನೊಬ್ಬರು ಇನ್ನು ನೂರು ಇನ್ನು ಹತ್ತು ಮಂದಿ ಮತ್ತೆ ಹತ್ತು ಮಂದಿ ಮತ್ತೆ ಅಯ್ವತ್ತು ಮಂದಿ ಬೇರೆ ಅಯ್ವತ್ತು ಮಂದಿ
ಬೇರೊಂದು ಬೇರೊಬ್ಬ ಬೇರೊಬ್ಬಳು ಬೇರೊಬ್ಬರು ಬೇರೆ ನೂರು ಬೇರೆ ಹತ್ತು ಮಂದಿ ಇನ್ನಯ್ವತ್ತು ಮಂದಿ
(2) ಪಾಂಗಿನ ಜಾಗವನ್ನು ತಿಳಿಸುವುದಕ್ಕಾಗಿ ಎಣಿಕೆಪದಗಳೊಂದಿಗೆ ಅನೆಯ ಇಲ್ಲವೆ ಅನೇ ಒಟ್ಟನ್ನು ಬಳಸಲಾಗುತ್ತದೆ. ಈ ಒಟ್ಟಿನೊಂದಿಗೆ ಒಂದು ಪದದ ಬದಲು ಮೊದಲು ಪದವನ್ನೂ ಬಳಸಲು ಬರುತ್ತದೆ.
(45ಕ) ಹುಡುಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. (45ಚ) ಹುಡುಗ ಮೊದಲನೇ ತರಗತಿಯಲ್ಲಿ ಓದುತ್ತಿದ್ದಾನೆ. (45ಟ) ಆತ ಎರಡನೇ ಸಾಲಿನಲ್ಲಿ ಕುಳಿತಿದ್ದಾನೆ. (45ತ) ಇವತ್ತು ನಾಲ್ಕನೇ ದಿನದ ಹಬ್ಬ.
ಇಂತಹ ಜಾಗವನ್ನು ತಿಳಿಸುವ ಎಣಿಕೆಪದಗಳೊಂದಿಗೆ ಬೇರೆ ಎಣಿಕೆಪದ ಗಳನ್ನೂ ಬಳಸಲು ಬರುತ್ತದೆ, ಮತ್ತು ಅವು ಮೊದಲನೆಯ ಪದ ತಿಳಿಸುವ ಜಾಗದಲ್ಲಿರುವ ಕೊಡುತ್ತವೆ. ಎತ್ತುಗೆಗಾಗಿ, ಮೊದಲನೇ ಹತ್ತು ಹುಡುಗರು ಎಂಬ ಹೆಸರುಕಂತೆಯಲ್ಲಿ ಮೊದಲನೇ ಎಂಬುದು ಹುಡುಗರ ಜಾಗವನ್ನು ತಿಳಿಸುತ್ತದೆ; ಮತ್ತು ಅದರ ಬಳಿಕ ಬಂದಿರುವ ಹತ್ತು ಪದ ಹುಡುಗರ ಎಣಿಕೆಯನ್ನು ತಿಳಿಸುತ್ತದೆ.
ಪಾಂಗುಗಳ ಎಣಿಕೆಯನ್ನು
(3) ಎಣಿಕೆಯ ಹಸುಗೆ(ಅಂಶ)ಗಳನ್ನು ತಿಳಿಸಲು ಅರೆ ಮತ್ತು ಕಾಲು ಪದಗಳನ್ನು ಬಳಸಲಾಗುತ್ತದೆ. ಇವನ್ನು ಎಣಿಕೆಪದಗಳೊಂದಿಗೆ ಸೇರಿಸಿಯೂ ಹೇಳಲು ಬರುತ್ತದೆ:
(46ಕ) ಇದಕ್ಕೆ ಮೂರೂವರೆ ರುಪಾಯಿ ಕೊಟ್ಟಿದ್ದೇನೆ. (46ಚ) ಅವರು ಆರೂಕಾಲು ಗಂಟೆಗೆ ಬರುತ್ತೇನೆಂದಿದ್ದಾರೆ, (46ಟ) ಮುಕ್ಕಾಲು ಪಾಲು ಕೆಲಸ ಮುಗಿದಿದೆ. (46ತ) ಏಳೂಮುಕ್ಕಾಲು ರುಪಾಯಿಗೆ ಎರಡು ಹಣ್ಣು ಸಿಕ್ಕಿತು. (46ಪ) ಅರೆಕಾಲು ಕಿಲೋ ಜೀರಿಗೆ ಕೊಡಿ.
ಇಲ್ಲಿ ಎರಡು ಬಗೆಯ ಇಟ್ಟಳಗಳು ಬಳಕೆಯಾಗಿರುವುದನ್ನು ಕಾಣಬಹುದು: ಎಣಿಕೆಪದಗಳನ್ನು ನೇರವಾಗಿ ಅರೆ ಇಲ್ಲವೇ ಕಾಲು ಪದಗಳೊಂದಿಗೆ ಸೇರಿಸಿ ಹೇಳಿದರೆ, ಅವು ಎಶ್ಟು ಅರೆ ಇಲ್ಲವೇ ಕಾಲು ಪಸುಗೆಗಳು ಸೇರಿಕೊಂಡಿವೆ ಎಂಬುದನ್ನು ತಿಳಿಸುತ್ತವೆ; ಎತ್ತುಗೆಗಾಗಿ, ಮುಕ್ಕಾಲು ಎಂಬುದು ಮೂರು ಕಾಲುಗಳ ಸೇರಿಕೆಯನ್ನು (3/4) ತಿಳಿಸುತ್ತದೆ, ಮತ್ತು ಅರೆಕಾಲು ಎಂಬುದು ಕಾಲು ಪಸುಗೆಯ ಅರೆ ಎಂದರೆ 1/8 ಅಂಶವನ್ನು ತಿಳಿಸುತ್ತದೆ.
ಇದಕ್ಕೆ ಬದಲು, ಎಣಿಕೆಪದಕ್ಕೆ ಒಳಗೊಳ್ಳುವ ಊ ಒಟ್ಟನ್ನು ಸೇರಿಸಿ ಅದರ ಬಳಿಕ ಪಸುಗೆಯ ಪದಗಳನ್ನು ಬಳಸಿದಲ್ಲಿ, ಅವು ಎಣಿಕೆಯ ಪದ ಮತ್ತು ಪಸುಗೆ ಪದ ತಿಳಿಸುವ ಅಂಶ ಇವೆರಡನ್ನು ಒಟ್ಟು ಸೇರಿಸಿದಾಗ ಸಿಗುವ ಅಳವಿಯನ್ನು ತಿಳಿಸುತ್ತವೆ; ಎತ್ತುಗೆಗಾಗಿ ಮೂರೂಕಾಲು ಎಂಬುದಕ್ಕೆ ‘ಮೂರು ಮತ್ತು ಕಾಲು’ (3+1/4) ಎಂಬ ಹುರುಳಿದೆ; ಮೂರೂವರೆ ಎಂಬುದಕ್ಕೆ ‘ಮೂರು ಮತ್ತು ಅರೆ’ (3+1/2) ಎಂಬ ಹುರುಳಿದೆ; ಹತ್ತೂಕಾಲು ಎಂಬುದಕ್ಕೆ ‘ಹತ್ತು ಮತ್ತು ಕಾಲು’ (10+1/4) ಎಂಬ ಹುರುಳಿದೆ.
(4) ಅಳತೆಯಲ್ಲಿ ಒಂದು ಅಂಶವನ್ನಶ್ಟೇ ತಿಳಿಸಬೇಕಿದ್ದಲ್ಲಿ, ಅಳತೆಯನ್ನು ತಿಳಿಸುವ ನುಡಿತವನ್ನು ಅಲ್ಲಿ (ಜಾಗ ಒಟ್ಟು) ಇಲ್ಲವೇ ಒಳಗೆ ಎಂಬುದರಲ್ಲಿ ಕೊನೆಗೊಳಿಸಲಾಗುತ್ತದೆ:
(47ಕ) ಹತ್ತು ಹಣ್ಣುಗಳಲ್ಲಿ ನಾಲ್ಕನ್ನು ಅವನಿಗೆ ಕೊಟ್ಟೆ. (47ಚ) ಈ ತುಪ್ಪದಲ್ಲಿ ಮೂರು ಕಿಲೋ ನಿಮಗೆ ಕೊಡುತ್ತೇನೆ. (47ಟ) ಎಂಟು ಜನರೊಳಗೆ ಇಬ್ಬರು ಹಿಂದಿರುಗಿಲ್ಲ.
(5) ಮೇಲಿನ ಹುರುಳನ್ನೇ ಅಳತೆಯ ನುಡಿತಕ್ಕೆ ಗುರಿ ಒಟ್ಟನ್ನು (ಕ್ಕೆ ಎಂಬುದನ್ನು) ಸೇರಿಸಿಯೂ ತಿಳಿಸಲು ಬರುತ್ತದೆ; ಆದರೆ, ಈ ಇಟ್ಟಳದಲ್ಲಿ ನೂರು, ಸಾವಿರ, ಲಕ್ಶ ಎಂಬಂತಹ ಎಣಿಕೆಪದಗಳು ಮಾತ್ರ ಬಳಕೆಯಾಗುವ ಹಾಗೆ ಕಾಣಿಸುತ್ತದೆ:
(48ಕ) ನೂರಕ್ಕೆ ಅಯ್ವತ್ತರಶ್ಟು ಜನ ಬಂದಿದ್ದರು. (48ಚ) ನೂರಕ್ಕೆ ಎಂಟರ ಬಡ್ಡಿ ಕೊಡಬೇಕು. (48ಟ) ಸಾವಿರಕ್ಕೊಬ್ಬನೂ ಸಾಲವನ್ನು ಹಿಂದಿರುಗಿಸಲಿಲ್ಲ.
(6) ‘ಎರಡು ಪಟ್ಟು’ ಎಂಬ ಹುರುಳನ್ನು ಕೊಡುವ ಇಮ್ಮಡಿ ಪದದಲ್ಲಿ ಮಡಿ ಎಂಬ ಪದ ಬಂದಿದೆ; ‘ಮೂರು ಪಟ್ಟು’ ಎಂಬ ಹುರುಳನ್ನು ಕೊಡುವ ಮುಮ್ಮಡಿ ಪದ, ಮತ್ತು ಅಂತಹವೇ ಬೇರೆ ಪದಗಳು ಹಿಂದೆ ಇದ್ದುವಾದರೂ, ಈಗ ಬಳಕೆಯಿಂದ ಬಿದ್ದುಹೋಗಿವೆ. ಬೇರೆ ಎಣಿಕೆಪದಗಳೊಂದಿಗೆ ಪಟ್ಟು ಪದವೇ ಈ ಹುರುಳಿನಲ್ಲಿ ಬಳಕೆಯಾಗುತ್ತದೆ (ಹತ್ತು ಪಟ್ಟು, ಇಪ್ಪತ್ತು ಪಟ್ಟು):
(49ಕ) ಅವನು ನೀವು ಕೊಟ್ಟುದರ ಎರಡು ಪಟ್ಟು ಕೊಡಬಲ್ಲ. (49ಚ) ಅವನು ನೀವು ಕೊಟ್ಟುದರ ಇಮ್ಮಡಿ ಕೊಡಬಲ್ಲ. (49ಟ) ನಿಮ್ಮ ಸಂಬಳದ ಹತ್ತು ಪಟ್ಟು ಸಂಬಳ ಅವನಿಗೆ ಬರುತ್ತದೆ.
ಪಟ್ಟು ಪದದ ಬದಲು ಅದೇ ಹುರುಳಿನಲ್ಲಿ ಪಾಲು ಪದವನ್ನೂ ಬಳಸಲು
ಬರುತ್ತದೆ:
(50ಕ) ಅವನು ನೀವು ಕೊಟ್ಟುದರ ಎರಡು ಪಾಲು ಕೊಡಬಲ್ಲ. (50ಚ) ನಿಮ್ಮ ಸಂಬಳದ ಮೂರು ಪಾಲು ಸಂಬಳ ಅವನಿಗೆ ಬರುತ್ತದೆ.
6.4.6 ಎಣಿಕೆಪದಗಳ ಜಾಗ
ಸಾಮಾನ್ಯವಾಗಿ, ಎಣಿಕೆಪದಗಳನ್ನು ಹೆಸರುಪದಗಳ ಮೊದಲು ಬಳಸಲಾಗುತ್ತದೆ; ಆದರೆ ಈ ಕಟ್ಟಲೆಗೆ ಕೆಲವು ಹೊರಪಡಿಕೆಗಳೂ ಇವೆ:
(1) ಗುರ್ತ ಮತ್ತು ಎಣಿಕೆಗಳನ್ನು ತಿಳಿಸುವ ಪದರೂಪಗಳಿರುವ ಒಂದರಿಂದ ಅಯ್ದರವರೆಗಿನ ಎಣಿಕೆಪದಗಳನ್ನು ತಿರುಳುಪದದ ಮೊದಲಿಗೂ ಬಳಸಬಹುದು, ಬಳಿಕವೂ ಬಳಸಬಹುದು.
ಇವುಗಳಲ್ಲಿ ತಿರುಳುಪದದ ಬಳಿಕ ಬರುವ ಎಣಿಕೆಪದ ತಿರುಳುಪದ ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಒಂದು ಅಂಶವನ್ನಶ್ಟೇ ಗುರುತಿಸು ತ್ತದೆ; ಆದರೆ, ತಿರುಳುಪದದ ಮೊದಲು ಬರುವ ಎಣಿಕೆಪದ ಅದರ ಅಳವಿ ಯನ್ನು ತಿಳಿಸುತ್ತದೆ. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(51ಕ) ಎರಡು ಹಣ್ಣುಗಳು ಕೊಳೆತುಹೋಗಿವೆ. (51ಚ) ಹಣ್ಣುಗಳೆರಡು ಕೊಳೆತುಹೋಗಿವೆ. (52ಕ) ಒಬ್ಬ ಹುಡುಗ ಪುಣೆಯಲ್ಲಿ ಓದುತ್ತಿದ್ದಾನೆ. (52ಚ) ಹುಡುಗನೊಬ್ಬ ಪುಣೆಯಲ್ಲಿ ಓದುತ್ತಿದ್ದಾನೆ.
(51ಕ) ಮತ್ತು (51ಚ) ಸೊಲ್ಲುಗಳೆರಡೂ ‘ಕೊಳೆತು ಹೋಗಿರುವ ಹಣ್ಣು ಗಳ ಎಣಿಕೆ ಎರಡು’ ಎಂಬುದಾಗಿ ತಿಳಿಸುತ್ತವೆ; ಆದರೆ, ಇವುಗಳಲ್ಲಿ (51ಕ) ಸೊಲ್ಲಿಗೆ ‘ಎರಡು ಹಣ್ಣುಗಳು ಕೊಳೆತುಹೋಗಿವೆ’ ಎಂದಿಶ್ಟೇ ಹುರುಳಿದೆ; ಆದರೆ, (51ಚ) ಸೊಲ್ಲಿಗೆ ‘ಹಣ್ಣುಗಳಲ್ಲಿ ಎರಡು ಕೊಳೆತುಹೋಗಿವೆ, ಉಳಿದವು ಕೊಳೆತಿಲ್ಲ’ ಎಂಬ ಹೆಚ್ಚಿನ ಹುರುಳಿರುವ ಹಾಗೆ ಕಾಣಿಸುತ್ತದೆ. ಎಣಿಕೆಪದದ ಬಳಿಕ ಒಳಗೊಳ್ಳುವ ಹುರುಳಿನ ಊ ಒಟ್ಟನ್ನು ಸೇರಿಸಿ, ‘ಹಣ್ಣುಗಳಲ್ಲಿ ಎರಡು’ ಎಂಬ ಈ ಹುರುಳು ಬಾರದಂತೆ ಮಾಡಲು ಬರುತ್ತದೆ:
(51ಟ) ಹಣ್ಣುಗಳೆರಡೂ ಕೊಳೆತುಹೋಗಿವೆ.
(2) ಈ ರೀತಿ ಹೆಸರುಪದಗಳ ಬಳಿಕ ಬರುವ ಎಣಿಕೆಪದಗಳು ಅವುಗ ಳೊಂದಿಗೆ ಸೇರಿ ಒಂದೇ ಪದಕಂತೆಯಾಗಿರಬಹುದು, ಇಲ್ಲವೇ ಅವೆರಡೂ ಬೇರೆ ಬೇರೆ ಪದಕಂತೆಗಳಾಗಿರಬಹುದು; ಅವಕ್ಕೆ ಪತ್ತುಗೆ ಒಟ್ಟನ್ನು ಸೇರಿಸಿರುವಲ್ಲಿ ಈ ವ್ಯತ್ಯಾಸವನ್ನು ಕಾಣಬಹುದು:
(52ಕ) ರಾಜುವಿನ ಹುಡುಗರಿಬ್ಬರನ್ನು ಎಲ್ಲರೂ ಹೊಗಳುತ್ತಾರೆ. (52ಚ) ರಾಜುವಿನ ಹುಡುಗರನ್ನು ಇಬ್ಬರನ್ನು ಎಲ್ಲರೂ ಹೊಗಳುತ್ತಾರೆ.
ಆದರೆ, ಹೆಸರುಪದಗಳ ಮೊದಲು ಬರುವ ಎಣಿಕೆಪದಗಳನ್ನು ಈ ರೀತಿ
ಎರಡು ಪದಕಂತೆಗಳಾಗಿ ಒಡೆಯಲು ಬರುವುದಿಲ್ಲ.
(53ಕ) ರಾಜುವಿನ ಇಬ್ಬರು ಹುಡುಗರನ್ನು ಎಲ್ಲರೂ ಹೊಗಳುತ್ತಾರೆ. (53ಚ) *ರಾಜುವಿನ ಇಬ್ಬರನ್ನು ಹುಡುಗರನ್ನು ಎಲ್ಲರೂ ಹೊಗಳುತ್ತಾರೆ.
(3) ಗುರ್ತ ಮತ್ತು ಎಣಿಕೆಗಳನ್ನು ತಿಳಿಸದಿರುವ ಆರರಿಂದ ಹೆಚ್ಚಿನ ಎಣಿಕೆ ಪದಗಳನ್ನು ಹೆಸರುಪದಗಳ ಮೊದಲು ಬಳಸಲು ಬರುತ್ತದಲ್ಲದೆ (ಹತ್ತು ಮರಗಳು, ಅಯ್ವತ್ತು ಹುಡುಗರು) ಬಳಿಕ ಬಳಸಲು ಬರುವುದಿಲ್ಲ.
(54ಕ) ಅರುವತ್ತು ಮರಗಳನ್ನು ಕಡಿದಿದ್ದಾರೆ. (54ಚ) *ಮರಗಳು ಅರುವತ್ತನ್ನು ಕಡಿದಿದ್ದಾರೆ.
(4) ಎಣಿಕೆಪದಗಳ ಗುರ್ತರೂಪದ ಹಾಗೆ, ಹಲವು ಮತ್ತು ಕೆಲವು ಪದಗಳ ಗುರ್ತರೂಪಗಳನ್ನೂ ಹೆಸರುಪದಗಳ ಮೊದಲು ಮಾತ್ರವಲ್ಲದೆ ಬಳಿಕವೂ ಬಳಸಲು ಬರುತ್ತದೆ:
(55ಕ) ಹಲವರು ಹುಡುಗರು ಹಿಂದೆ ಬಿದ್ದಿದ್ದಾರೆ. (55ಚ) ಹುಡುಗರು ಹಲವರು ಇನ್ನೂ ಹಿಂದಿರುಗಿಲ್ಲ. (56ಕ ಕೆಲವು ಪೆನ್ನುಗಳು ಕಳೆದುಹೋಗಿವೆ. (56ಚ) ಪೆನ್ನುಗಳು ಕೆಲವು ಕಳೆದುಹೋಗಿವೆ.
(5) ಗುರ್ತರೂಪಗಳಿರುವ ಎಲ್ಲ ಪದವನ್ನೂ ಇದೇ ರೀತಿಯಲ್ಲಿ ಹೆಸರು ಪದಗಳ ಬಳಿಕ ಇಲ್ಲವೇ ಅವಕ್ಕಿಂತ ಮೊದಲು ಬಳಸಲು ಬರುತ್ತದೆ (ಹುಡುಗ ರೆಲ್ಲರೂ, ನೀರೆಲ್ಲವೂ, ಹಣ್ಣುಗಳೆಲ್ಲವೂ); ಆದರೆ, ಈ ಪದದ ಬಳಿಕ ಬೇರೆ ಒಟ್ಟು ಬಾರದಿರುವಲ್ಲಿ ಗುರ್ತದ ಒಟ್ಟು ಬಿದ್ದುಹೋಗುತ್ತದೆ (ಹುಡುಗರೆಲ್ಲ, ನೀರೆಲ್ಲ, ಹುಡುಗರೆಲ್ಲರನ್ನು, ನೀರೆಲ್ಲವನ್ನು). ಹುಡುಗರೆಲ್ಲ ಮತ್ತು ನೀರೆಲ್ಲ ಎಂಬವುಗಳಲ್ಲಿ ಎಲ್ಲರು ಮತ್ತು ಎಲ್ಲವು ಎಂಬವುಗಳಲ್ಲಿ ಕಾಣಿಸುವ ಗುರ್ತದ ಒಟ್ಟುಗಳು ಬಿದ್ದುಹೋಗಿವೆ.
(6) ತಿರುಳುಪದಗಳಾಗಿ ತೋರುಪದಗಳನ್ನು ಬಳಸಿದೆಯಾದಲ್ಲಿ ಎಣಿಕೆಪದ ಗಳನ್ನು, ಮತ್ತು ಮೇಲೆ ಕೊಟ್ಟಿರುವ ಹಲವು, ಕೆಲವು, ಮತ್ತು ಎಲ್ಲ ಎಂಬ ಪದಗಳನ್ನು ಅವುಗಳ ಬಳಿಕ ಬಳಸಲು ಬರುತ್ತದಲ್ಲದೆ, ಅವುಗಳ ಮೊದಲು ಬಳಸಲು ಬರುವುದಿಲ್ಲ.
(57ಕ) ಅವರಿಬ್ಬರು ಇಲ್ಲಿದ್ದಾರೆ. (57ಚ) ಅವೆರಡನ್ನು ಮೇಜಿನ ಮೇಲಿರಿಸಿ. (57ಟ) *ಇಬ್ಬರು ಅವರು ಇಲ್ಲಿದ್ದಾರೆ (57ತ) *ಎರಡು ಅವನ್ನು ಮೇಜಿನ ಮೇಲಿರಿಸಿ. (58ಕ) ಅವರು ಕೆಲವರು ಮನೆಗೆ ಹೋಗಿದ್ದಾರೆ. (58ಚ) *ಕೆಲವರು ಅವರು ಮನೆಗೆ ಹೋಗಿದ್ದಾರೆ. (59ಕ) ಅವರೆಲ್ಲರೂ ಮನೆಗೆ ಹೋಗಿದ್ದಾರೆ. (59ಚ) *ಎಲ್ಲರವರೂ ಮನೆಗೆ ಹೋಗಿದ್ದಾರೆ.
(7) ಇದಲ್ಲದೆ, ತೋರುಪದಗಳ ಬಳಿಕ ಬರುವ ಎಣಿಕೆಪದಗಳಿಗೆ ಹೆಸರು ಪದಗಳ ಬಳಿಕ ಬರುವವುಗಳ ಹಾಗೆ, ಒಂದು ಅಂಶವನ್ನು ಗುರುತಿಸುವ ಹುರುಳಿಲ್ಲ; ಅವರಿಬ್ಬರು ಎಂಬುದಕ್ಕೆ ‘ಅವರಲ್ಲಿ ಇಬ್ಬರು’ ಎಂಬ ಹುರುಳಿಲ್ಲ ಎಂಬುದನ್ನು ಗಮನಿಸಬಹುದು.
ಹಾಗಾಗಿ, ಅವರಿಬ್ಬರು ಎಂಬುದಕ್ಕೆ ಒಳಗೊಳ್ಳುವ ಹುರುಳಿನ ಊ ಒಟ್ಟನ್ನು ಸೇರಿಸಿದಾಗ, ಅದರ ಹುರುಳು ಬದಲಾಗುವುದಿಲ್ಲ; ಅವರಿಬ್ಬರೂ ಇಲ್ಲಿದ್ದಾರೆ ಎಂಬ ಸೊಲ್ಲಿಗೆ ಅವರಿಬ್ಬರು ಇಲ್ಲಿದ್ದಾರೆ ಎಂಬ (57ಕ) ಸೊಲ್ಲಿನ ಹುರುಳೇ ಇದೆ. ಊ ಒಟ್ಟನ್ನು ಸೇರಿಸಿರುವಲ್ಲಿ ಒಳಗೊಳ್ಳುವ ಹುರುಳನ್ನು ಒತ್ತಿ ಹೇಳಲಾಗುತ್ತದೆ, ಅಶ್ಟೆ.
6.4.7 ಎಣಿಕೆ ಪದಗಳ ಇಮ್ಮಡಿರೂಪದ ಬಳಕೆ
ಒಂದು ವಸ್ತು ಹಲವು ಮಂದಿಯಲ್ಲಿ ಸಮಸಮವಾಗಿ ಹಂಚಿಕೆಯಾಗಿರುವುದನ್ನು ತಿಳಿಸಲು ಆ ವಸ್ತುವಿನ ಎಣಿಕೆಯನ್ನು ತಿಳಿಸುವ ಪದವನ್ನು ಇಮ್ಮಡಿರೂಪದಲ್ಲಿ ಬಳಸಲಾಗುತ್ತದೆ:
(60ಕ) ಹುಡುಗರಿಗೆ ಹತ್ತು ರುಪಾಯಿ ಸಿಕ್ಕಿದೆ. (60ಚ) ಹುಡುಗರಿಗೆ ಹತ್ತು ಹತ್ತು ರುಪಾಯಿ ಸಿಕ್ಕಿದೆ.
‘ಹುಡುಗರಿಗೆ ಒಟ್ಟು ಎಶ್ಟು ರುಪಾಯಿ ಸಿಕ್ಕಿದೆ’ ಎಂಬುದನ್ನು (60ಕ) ಸೊಲ್ಲು ತಿಳಿಸುತ್ತದೆ; ಆದರೆ, (60ಚ) ಸೊಲ್ಲು ಇದನ್ನು ತಿಳಿಸುವ ಬದಲು, ಅವರಲ್ಲಿ ‘ಒಬ್ಬೊಬ್ಬ ಹುಡುಗನಿಗೂ ಎಶ್ಟು ರುಪಾಯಿ ಸಿಕ್ಕಿದೆ’ ಎಂಬುದನ್ನು ತಿಳಿಸುತ್ತದೆ; ಅವರಿಗೆ ಒಟ್ಟು ಎಶ್ಟು ರುಪಾಯಿ ಸಿಕ್ಕಿದೆ ಎಂಬುದನ್ನು ಅದು ತಿಳಿಸುವುದಿಲ್ಲ; (60ಚ) ಸೊಲ್ಲಿನಿಂದ ಈ ವಿಶಯವನ್ನು ತಿಳಿಯಬೇಕಿದ್ದಲ್ಲಿ ಒಟ್ಟು ಎಶ್ಟು ಹುಡುಗರಿದ್ದರು ಎಂಬುದನ್ನೂ ತಿಳಿಯಬೇಕಾಗುತ್ತದೆ.
ಇದೇ ಹುರುಳನ್ನು ಇನ್ನಶ್ಟು ಸರಿಯಾಗಿ ತಿಳಿಸಬೇಕಿದ್ದಲ್ಲಿ, ಹುಡುಗರಿಗೆ ಎಂಬ ಪದದ ಬದಲು, ಹುಡುಗರಲ್ಲಿ ಒಬ್ಬೊಬ್ಬನಿಗೆ ಎಂಬುದಾಗಿ ಇಮ್ಮಡಿ ಎಣಿಕೆ ರೂಪವಿರುವ ಪದಕಂತೆಯನ್ನು ಬಳಸಬಹುದು:
(60ಟ) ಹುಡುಗರಲ್ಲಿ ಒಬ್ಬೊಬ್ಬನಿಗೆ ಹತ್ತು ಹತ್ತು ರುಪಾಯಿ ಸಿಕ್ಕಿದೆ.
ಇದಲ್ಲದೆ, ಯಾರಿಗೆ ಎಂಬುದನ್ನು ತಿಳಿಸುವ ಎಣಿಕೆಪದಗಳ ಇಮ್ಮಡಿ ರೂಪದ ಬದಲು ಅವುಗಳೊಂದಿಗೆ ಸಂಸ್ಕ್ರುತದಿಂದ ಎರವಲಾಗಿ ಪಡೆದಿರುವ ಪ್ರತಿ ಎಂಬುದನ್ನೂ ಬಳಸಲು ಬರುತ್ತಿದ್ದು, ಅಂತಹ ಕಡೆಗಳಲ್ಲಿ ಸಿಕ್ಕಿರುವ ವಸ್ತುವಿನ ಎಣಿಕೆಯನ್ನು ತಿಳಿಸುವ ಪದವನ್ನು ಇಮ್ಮಡಿರೂಪದಲ್ಲಿ ಬಳಸದಿರಲೂ ಬರುತ್ತದೆ:
(61ಕ) ಹುಡುಗರಲ್ಲಿ ಪ್ರತಿಯೊಬ್ಬನಿಗೂ ಎರಡೆರಡು ಪುಸ್ತಕ ಸಿಕ್ಕಿದೆ. (61ಚ) ಹುಡುಗರಲ್ಲಿ ಪ್ರತಿಯೊಬ್ಬನಿಗೂ ಎರಡು ಪುಸ್ತಕ ಸಿಕ್ಕಿದೆ. (61ಟ) ಪ್ರತಿಯೊಂದಕ್ಕೂ (ಹತ್ತು) ಹತ್ತು ರುಪಾಯಿ ಬೆಲೆ.
ಮೇಲಿನ ಸೊಲ್ಲುಗಳು ತಿಳಿಸುವ ಹಂಚಿಕೆಗಳಲ್ಲೆಲ್ಲ ಹಂಚಿಕೆಯಾಗಿರುವ ವಸ್ತು ಮತ್ತು ಅದನ್ನು ಪಡೆದಿರುವ ವ್ಯಕ್ತಿ ಎಂಬುದಾಗಿ ಎರಡೆರಡು ಪಾಂಗುಗಳು ತೊಡಗಿಕೊಂಡಿವೆ; ಎತ್ತುಗೆಗಾಗಿ, ಮೇಲೆ (61ಕ)ದಲ್ಲಿ ಹಂಚಿಕೆಯಾಗಿರುವ ವಸ್ತುಗಳು ಪುಸ್ತಕಗಳು, ಮತ್ತು ಅವನ್ನು ಪಡೆದಿರುವ ವ್ಯಕ್ತಿಗಳು ಹುಡುಗರು. ಇವುಗಳಲ್ಲಿ ಮೊದಲನೆಯದನ್ನು, ಇಲ್ಲವೇ ಎರಡನ್ನೂ ಇಮ್ಮಡಿ ಎಣಿಕೆಪದಗಳ ಮೂಲಕ ತಿಳಿಸಲು ಬರುತ್ತದೆ; ಆದರೆ, ಪ್ರತಿ ಪದವನ್ನು ಎರಡನೆಯದರೊಂದಿಗೆ ಮಾತ್ರ ಬಳಸಲು ಬರುತ್ತದೆ.
ಈ ಕಾರಣಕ್ಕಾಗಿ, ಎಣಿಕೆಪದದ ಇಮ್ಮಡಿರೂಪವನ್ನು ಬಳಸಬಲ್ಲ ಎಲ್ಲಾ ಬಗೆಯ ಇಟ್ಟಳಗಳಲ್ಲೂ ಪ್ರತಿ ಪದವನ್ನು ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಹಂಚಿಕೆಯಾಗಿರುವ ವಸ್ತುಗಳು ಹಲವಿದ್ದರೂ, ಅವನ್ನು ಪಡೆಯುವ ವ್ಯಕ್ತಿ ಒಬ್ಬನೇ ಇರಬಹುದು; ಇಂತಹ ಸೊಲ್ಲುಗಳಲ್ಲಿ ಹಂಚಿಕೆಯ ಎರಡನೆಯ ಪಾಂಗಾಗಿ ಎಸಕದ ಹೊತ್ತನ್ನು ಇಲ್ಲವೇ ಅದರ ಜಾಗವನ್ನು ಆರಿಸಿಕೊಳ್ಳ ಬೇಕಾಗುತ್ತದೆ; ಇದನ್ನು ಕೆಳಗೆ ಕೊಟ್ಟಿರುವ (62)ನೇ ಸೊಲ್ಲಿನಲ್ಲಿ ಕಾಣ ಬಹುದು:
(62) ಹುಡುಗ ಎರಡೆರಡು ಹಣ್ಣು ತಿನ್ನುತ್ತಿದ್ದ. (62ಕ) ಹುಡುಗ ದಿನಾಲೂ ಎರಡೆರಡು ಹಣ್ಣು ತಿನ್ನುತ್ತಿದ್ದ. (62ಚ) ಹುಡುಗ ಎಲ್ಲಾ ಕಡೆಗಳಲ್ಲೂ ಎರಡೆರಡು ಹಣ್ಣು ತಿನ್ನುತ್ತಿದ್ದ.
(62)ನೇ ಸೊಲ್ಲಿನಲ್ಲಿ ಬಂದಿರುವ ಎರಡೆರಡು ಹಣ್ಣು ಎಂಬುದರಲ್ಲಿರುವ ಇಮ್ಮಡಿ ಎಣಿಕೆಪದ ಒಂದು ಹಂಚಿಕೆಯನ್ನು ತಿಳಿಸುತ್ತದೆ; ಆದರೆ, ಅದರಲ್ಲಿ ಹಂಚಿಕೆಯನ್ನು ಪಡೆಯುವ ವ್ಯಕ್ತಿ (ಹುಡುಗ) ಒಬ್ಬನೇ ಆಗಿರುವ ಕಾರಣ, ಆತನನ್ನು ಹಂಚಿಕೆಯ ಎರಡನೆಯ ಪಾಂಗಾಗಿ ಮಾಡಲು ಬರುವುದಿಲ್ಲ; ಇದಕ್ಕೆ ಬದಲು ಎಸಕದ ಹೊತ್ತನ್ನು ಇಲ್ಲವೇ ಜಾಗವನ್ನು ಅದರ ಎರಡನೆಯ ಪಾಂಗಾಗಿ ಅರಿಸಿಕೊಳ್ಳಬೇಕಾಗುತ್ತದೆ; ಇದನ್ನು (62ಕ) ಮತ್ತು (62ಚ) ಸೊಲ್ಲುಗಳಲ್ಲಿ ಸರಿಯಾಗಿ ತೋರಿಸಿಕೊಡಲಾಗಿದೆ:
(62ಕ)ದಲ್ಲಿ ಬಂದಿರುವ ದಿನಾಲೂ ಪದ ಮತ್ತು (62ಚ)ದಲ್ಲಿ ಬಂದಿರುವ ಎಲ್ಲಾ ಕಡೆಗಳಲ್ಲೂ ಎಂಬ ನುಡಿತ ಈ ಎರಡು ಹುರುಳುಗಳನ್ನು ತೋರಿಸಿ ಕೊಡುತ್ತವೆ. ಪ್ರತಿ ಪದವನ್ನು ಬಳಸಿಯೂ ಈ ಎರಡು ಹುರುಳುಗಳನ್ನು, ಕೆಳಗೆ (62ಟ) ಮತ್ತು (62ತ)ಗಳಲ್ಲಿ ಕಾಣಿಸಿದ ಹಾಗೆ, ತಿಳಿಸಲು ಬರುತ್ತದೆ; ಆದರೆ, ಅವನ್ನು ತಿಳಿಸದಿರುವಂತಹ (62)ನೇ ಸೊಲ್ಲಿನಲ್ಲಿ ಪ್ರತಿ ಪದವನ್ನು ಬಳಸಲು ಬರುವುದಿಲ್ಲ.
(62ಟ) ಹುಡುಗ ಪ್ರತಿದಿನವೂ ಎರಡು ಹಣ್ಣು ತಿನ್ನುತ್ತಿದ್ದ. (62ತ) ಹುಡುಗ ಪ್ರತಿಯೊಂದು ಜಾಗದಲ್ಲೂ ಎರಡು ಹಣ್ಣು ತಿನ್ನುತ್ತಿದ್ದ.
ಇಂತಹ ಹೊತ್ತು ಮತ್ತು ಜಾಗಗಳನ್ನು ಸರಿಯಾಗಿ ತಿಳಿಸದಿರುವ ಬೇರೆಯೂ ಕೆಲವು ಇಮ್ಮಡಿ ಎಣಿಕೆಪದಗಳ ಬಳಕೆಗಳನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣ ಬಹುದು; ಇಲ್ಲೂ ಪ್ರತಿ ಪದವನ್ನು ಬಳಸಲು ಬರುವುದಿಲ್ಲ:
(64ಕ) ಒಬ್ಬೊಬ್ಬರೇ ಒಳಗೆ ಬನ್ನಿ. (64ಚ) ಅವನು ಎರಡೆರಡು ಬುಟ್ಟಿ ಹೆಣೆಯುತ್ತಿದ್ದ. (64ಟ) ಈ ಮರದಿಂದ ಎರಡೆರಡು ಹಣ್ಣು ಬೀಳುತ್ತಿರುತ್ತದೆ. (64ತ) ಈ ಕೋಳಿ ಒಂದೊಂದೇ ಮೊಟ್ಟೆ ಇಡುತ್ತಿರುತ್ತದೆ.
ಎಣಿಕೆಪದಗಳನ್ನು ಬಳಸುವ ಹೆಚ್ಚಿನ ಕಡೆಗಳಲ್ಲೂ ಈ ರೀತಿ ಅವುಗಳ ಇಮ್ಮಡಿರೂಪವನ್ನೂ ಬಳಸಲು ಬರುತ್ತದೆಯೆಂದು ತೋರುತ್ತದೆ; ಆದರೆ, ಎಣಿಕೆಪದಗಳಲ್ಲಿ ಕೆಲವನ್ನು ಅವುಗಳ ಒತ್ತೆರೂಪದಲ್ಲಿ ಹೆಸರುಪದಗಳ ಬಳಿಕವೂ ಬಳಸಲು ಬರುವ ಹಾಗೆ (ಅವರಿಬ್ಬರು, ಹಣ್ಣುಗಳೆರಡು) ಇಮ್ಮಡಿರೂಪದಲ್ಲಿ ಬಳಸಲು ಬರುವುದಿಲ್ಲ.
ಪ್ರತಿಯೊಂದು ಎಂಬುದು ತಿಳಿಸುವ ಇನ್ನೊಂದು ಬಗೆಯ ಹುರುಳಿನಲ್ಲಿ ಎಣಿಕೆಪದದ ಬದಲು ಹೆಸರುಪದವನ್ನೇ ಇಮ್ಮಡಿರೂಪದಲ್ಲಿ ಬಳಸುವ ಹೊಲಬು ಕನ್ನಡದಲ್ಲಿದೆ:
(65ಕ) ಪ್ರತಿಯೊಂದು ಮನೆಗೂ ಹೋಗಿ ಹೇಳಿಕೆ ಕೊಟ್ಟು ಬಂದ. (65ಚ) ಮನೆ ಮನೆಗೂ ಹೋಗಿ ಹೇಳಿಕೆ ಕೊಟ್ಟು ಬಂದ. (66ಕ) ಪ್ರತಿಯೊಂದು ಮೂಲೆಗೂ ಹೋಗಿ ನೋಡಿದ. (66ಚ) ಮೂಲೆ ಮೂಲೆಗೂ ಹೋಗಿ ನೋಡಿದ. (67ಕ) ಪ್ರತಿಯೊಂದು ಮರದಲ್ಲೂ ಹಕ್ಕಿಗಳು ಕುಳಿತು ಹಾಡುತ್ತಿದ್ದುವು. (67ಚ) ಮರಮರಗಳಲ್ಲೂ ಹಕ್ಕಿಗಳು ಕುಳಿತು ಹಾಡುತ್ತಿದ್ದುವು.
6.4.8 ಪಾಂಗುಗಳ ಅಳವಿ ಮತ್ತು ಪರಿಚೆ
ಎಣಿಕೆಪದಗಳನ್ನು ಪಾಂಗುಗಳ ಅಳವಿಯನ್ನು ತಿಳಿಸುವುದು ಮತ್ತು ಪರಿಚೆಯನ್ನು ತಿಳಿಸುವುದು ಎಂಬ ಎರಡು ಬಗೆಯ ಹುರುಳುಗಳಲ್ಲಿ ಬಳಸಲು ಬರುತ್ತದೆ; ಇವುಗಳಲ್ಲಿ ಅಳವಿಯನ್ನು ತಿಳಿಸುವ ಮೊದಲನೆಯ ಕೆಲಸಕ್ಕಾಗಿ ಎಣಿಕೆಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಬಳಸಲಾಗುತ್ತದೆ; ಆದರೆ, ಪರಿಚೆಯನ್ನು ತಿಳಿಸುವ ಮೊದಲನೆಯ ಕೆಲಸಕ್ಕಾಗಿ ಅವನ್ನು ಪತ್ತುಗೆಯ ಅ ಒಟ್ಟಿನೊಂದಿಗೆ ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(68ಕ) ಆತ ನನಗೆ ಹತ್ತು ಅಯ್ದರ ನೋಟುಗಳನ್ನು ಕೊಟ್ಟ. (68ಚ) ಆತ ನನಗೆ ಹತ್ತರ ಅಯ್ದು ನೋಟುಗಳನ್ನು ಕೊಟ್ಟ. (69ಕ) ಸಿನಿಮಾಕ್ಕೆ ಅಯ್ದರ ನಾಲ್ಕು ಟಿಕೇಟುಗಳನ್ನು ತಂದಿದ್ದೇನೆ. (69ಚ) ಸಿನಿಮಾಕ್ಕೆ ಅಯ್ದು ನಾಲ್ಕರ ಟಿಕೇಟುಗಳನ್ನು ತಂದಿದ್ದೇನೆ.
(68ಕ)ದಲ್ಲಿ ಬಂದಿರುವ ಹತ್ತು ಎಂಬುದು ನೋಟುಗಳ ಅಳವಿಯನ್ನು, ಎಂದರೆ ಆತ ಎಶ್ಟು ನೋಟುಗಳನ್ನು ಕೊಟ್ಟಿದ್ದಾನೆ ಎಂಬುದನ್ನು ತಿಳಿಸುತ್ತದೆ; ಇದಕ್ಕೆ ಬದಲು, ಅಯ್ದರ ಎಂಬುದು ಅಯ್ದು ಪದದ ಪತ್ತುಗೆ ರೂಪದಲ್ಲಿದ್ದು, ನೋಟುಗಳ ಪರಿಚೆಯನ್ನು, ಎಂದರೆ ಅವುಗಳಲ್ಲಿ ಒಂದೊಂದೂ ಎಶ್ಟು ರುಪಾಯಿಯ ನೋಟುಗಳು ಎಂಬುದನ್ನು ತಿಳಿಸುತ್ತದೆ.
(1) ಈ ವ್ಯತ್ಯಾಸವನ್ನು ತಿಳಿಸುವಲ್ಲಿ ಎಣಿಕೆಪದಗಳ ಓರಣ ಮುಕ್ಯವಲ್ಲ ಎಂಬುದನ್ನು (68ಚ) ಸೊಲ್ಲು ತಿಳಿಸುತ್ತದೆ; (68ಕ)ದಲ್ಲಿ ಅಳವಿಯನ್ನು ತಿಳಿಸುವ ಎಣಿಕೆಪದ ಮೊದಲು ಬಂದಿದೆ; ಆದರೆ, (68ಚ)ದಲ್ಲಿ ಅದು ಆಮೇಲೆ (ಎರಡನೆಯ ಪದವಾಗಿ) ಬಂದಿದೆ. ಹಾಗಾಗಿ, ನೇರವಾಗಿ ಬಂದಿದೆಯೋ, ಪತ್ತುಗೆ ರೂಪದಲ್ಲಿ ಬಂದಿದೆಯೋ ಎಂಬುದೇ ಈ ವ್ಯತ್ಯಾಸವನ್ನು ಇಲ್ಲಿ ತಿಳಿಸುತ್ತದೆ. ಇವನ್ನು ಒಂದೊಂದಾಗಿ ಬಳಸಿರುವಲ್ಲೂ ಈ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ:
(69ಟ) ನನಗೆ ಸ್ವಲ್ಪ ಅಯ್ದರ ನಾಣ್ಯಗಳು ಬೇಕಾಗಿದ್ದುವು. (69ತ) ನನಗೆ ಅಯ್ದು ನಾಣ್ಯಗಳು ಬೇಕಾಗಿದ್ದುವು.
(2) ಈ ರೀತಿ ಪತ್ತುಗೆ ರೂಪದಲ್ಲಿ ಬಳಕೆಯಾಗುವ ಎಣಿಕೆಪದಗಳು ಎಂತಹ ಪರಿಚೆಯನ್ನು ತಿಳಿಸುತ್ತವೆ ಎಂಬುದು ಅವುಗಳ ಬಳಿಕ ಬರುವ ಹೆಸರು ಪದಗಳನ್ನು ಅವಲಂಬಿಸಿದೆ. ಎತ್ತುಗೆಗಾಗಿ, ನೋಟು ಇಲ್ಲವೇ ನಾಣ್ಯ ಪದ ದೊಂದಿಗೆ ಬಳಕೆಯಾದಾಗ, ಎಣಿಕೆಪದಗಳು ಅವುಗಳ ಬೆಲೆಯನ್ನು ತಿಳಿಸುತ್ತವೆ.
ಇದಕ್ಕೆ ಬದಲು, ಮಂದಿಗುರ್ತದ ಪದಗಳೊಂದಿಗೆ ಬಂದಾಗ, ಅವು ಆ ಪದ
ಗಳು ಗುರುತಿಸುವ ವ್ಯಕ್ತಿಗಳ ಹರಯವನ್ನು ತಿಳಿಸುತ್ತವೆ:
(70ಕ) ಹದಿನಾಲ್ಕು ಹುಡುಗರನ್ನು ಕರೆಸಿದ್ದೇವೆ. (70ಚ) ಹದಿನಾಲ್ಕರ ಹುಡುಗರನ್ನು ಕರೆಸಿದ್ದೇವೆ.
(70ಕ) ಸೊಲ್ಲಿನಲ್ಲಿ ಬಂದಿರುವ ಹದಿನಾಲ್ಕು ಎಂಬ ಎಣಿಕೆಪದ ಹುಡುಗರ ಎಣಿಕೆಯನ್ನು (‘ಎಶ್ಟು ಹುಡುಗರನ್ನು ಕರೆಸಿದ್ದೇವೆ’ ಎಂಬುದನ್ನು) ತಿಳಿಸುತ್ತದೆ; ಆದರೆ, (70ಚ)ದಲ್ಲಿ ಪತ್ತುಗೆ ರೂಪದಲ್ಲಿ ಬಂದಿರುವ ಅದೇ ಪದ ಹುಡುಗರ ಹರಯವನ್ನು (‘ಎಶ್ಟು ವರ್ಶದ ಹುಡುಗರನ್ನು ಕರೆಸಿದ್ದೇವೆ’ ಎಂಬುದನ್ನು) ತಿಳಿಸು ತ್ತದೆ.
ಇಂತಹ ಬೇರೆಯೂ ಕೆಲವು ಪರಿಚೆಗಳನ್ನು ಎಣಿಕೆಪದಗಳು ತಿಳಿಸಬಲ್ಲುವು. ಇದಲ್ಲದೆ, ಅವು ಕೊಡುವ ಹುರುಳು ಅವುಗಳ ಬಳಿಕ ಬರುವ ಹೆಸರುಪದಗಳನ್ನು ಮಾತ್ರವಲ್ಲದೆ, ಬಳಕೆಯ ಸಂದರ್ಬವನ್ನೂ ಅವಲಂಬಿಸಿರಬಲ್ಲುದು. ಎತ್ತುಗೆಗಾಗಿ, ಮೂರರ ಮಕ್ಕಳು ಎಂಬುದು ‘ಮೂರು ವರ್ಶದ ಮಕ್ಕಳು’ ಎಂಬ ಹುರುಳಿನ ಬದಲು, ಅದನ್ನು ಬಳಸಿದ ಸಂದರ್ಬದ ಮೇಲೆ, ‘ಮೂರನೇ ತರಗತಿಯ ಮಕ್ಕಳು’ ಎಂಬ ಹುರುಳನ್ನೂ ಕೊಡಬಲ್ಲುದು.
(3) ಎಣಿಕೆಪದಗಳ ಹಾಗೆ, ಎಣಿಕೆಪದ-ಅಳತೆಪದ ಜೋಡಿಗಳನ್ನೂ ಹೆಸರು ಪದದ ಅಳವಿಯನ್ನು ತಿಳಿಸುವುದು ಮತ್ತು ಅದರ ಪರಿಚೆಯನ್ನು ತಿಳಿಸುವುದು ಎಂಬ ಎರಡು ಬಗೆಯ ಹುರುಳುಗಳಲ್ಲಿ ಬಳಸಲು ಬರುತ್ತದೆ, ಮತ್ತು ಇಲ್ಲೂ ಅಳವಿಯನ್ನು ತಿಳಿಸುವುದಕ್ಕಾಗಿ ಈ ಎರಡು ಪದಗಳ ಜೋಡಿಗಳನ್ನು ಹೆಸರುಪದ ದೊಂದಿಗೆ ನೇರವಾಗಿ ಬಳಸಲಾಗುತ್ತದೆ, ಮತ್ತು ಪರಿಚೆಯನ್ನು ತಿಳಿಸುವುದಕ್ಕಾಗಿ ಅವನ್ನು ಪತ್ತುಗೆಯ ಅ ಒಟ್ಟಿನೊಂದಿಗೆ ಬಳಸಲಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(71ಕ) ಎರಡು ಕಿಲೋ ಮೂರಿಂಚಿನ ಮೊಳೆಗಳನ್ನು ತನ್ನಿ. (71ಚ) ಎರಡು ಗಂಟೆಯ ಕೆಲಸವನ್ನು ಮಾಡಲು ಅವನಿಗೆ ಹತ್ತು ಗಂಟೆ
ಬೇಕಾಯಿತು.
(71ಕ)ದಲ್ಲಿ ಎರಡು ಕಿಲೋ ಎಂಬುದನ್ನು ಮೊಳೆ ಪದದ ಅಳವಿಯನ್ನು ತಿಳಿಸಲು ಬಳಸಲಾಗಿದೆ, ಮತ್ತು ಇದಕ್ಕಾಗಿ ಅದನ್ನು ಅ ಒಟ್ಟನ್ನು ಸೇರಿಸದೆ
ನೇರವಾಗಿ ಹೆಸರುಪದದೊಂದಿಗೆ ಬಳಸಲಾಗಿದೆ; ಇದಕ್ಕೆ ಬದಲು, ಮೂರಿಂಚು ಎಂಬುದನ್ನು ಮೊಳೆ ಪದದ ಪರಿಚೆಯನ್ನು ತಿಳಿಸಲು ಬಳಸಲಾಗಿದೆ, ಮತ್ತು ಇದಕ್ಕಾಗಿ ಅದರೊಂದಿಗೆ ಪತ್ತುಗೆಯ ಅ ಒಟ್ಟನ್ನೂ ಬಳಸಲಾಗಿದೆ.
ಇದೇ ರೀತಿಯಲ್ಲಿ, (71ಚ)ದಲ್ಲಿ ಬಂದಿರುವ ಎರಡು ಗಂಟೆಯ ಎಂಬುದು ಕೆಲಸದ ಪರಿಚೆಯನ್ನು ತಿಳಿಸುತ್ತದೆ (‘ಅದು ಎಂತಹ ಕೆಲಸ’ ಎಂಬುದನ್ನು ಅದು ತಿಳಿಸುತ್ತದೆ), ಮತ್ತು ಹತ್ತು ಗಂಟೆ ಎಂಬುದು ‘ಕೆಲಸ ನಡೆಸಲು ಎಶ್ಟು ಹೊತ್ತು ಬೇಕಾಯಿತು’ ಎಂಬುದಾಗಿ ಕೆಲಸದ ಅಳವಿಯನ್ನು ತಿಳಿಸುತ್ತವೆ.
(4) ಪರಿಚೆಯನ್ನು ತಿಳಿಸುವ ಹುರುಳಿನಲ್ಲಿ ಮಾತ್ರವೇ ಬರಬಲ್ಲ ಕೆಲವು ಎಣಿಕೆ-ಅಳವಿ ಪದಜೋಡಿಗಳು ಪತ್ತುಗೆ ರೂಪದಲ್ಲಿ ಮಾತ್ರ ಬರಬಲ್ಲುವಲ್ಲದೆ, ನೇರವಾಗಿ ಹೆಸರುಪದದೊಂದಿಗೆ ಬರಲಾರವು:
(72ಕ) ಅವನ ಮೋರೆಯಲ್ಲಿ ಎರಡು ದಿನದ ಗಡ್ಡ ಬೆಳೆದಿತ್ತು. (72ಚ) ?ಅವನ ಮೋರೆಯಲ್ಲಿ ಎರಡು ದಿನ ಗಡ್ಡ ಬೆಳೆದಿತ್ತು.
(72ಚ)ದಲ್ಲಿ ಎರಡು ದಿನ ಗಡ್ಡ ಎಂಬುದನ್ನು ಒಟ್ಟಿಗೆ ಒಂದು ಹೆಸರು ಕಂತೆಯೆಂದು ತಿಳಿಯಲು ಬರುವುದಿಲ್ಲ; ಯಾಕೆಂದರೆ, ಎರಡು ದಿನ ಎಂಬುದು ಗಡ್ಡ ಪದದ ಅಳವಿಯನ್ನು ತಿಳಿಸಲಾರದು. ಹಾಗಾಗಿ, ಆ ಹುರುಳಿನಲ್ಲಿ (72ಚ) ಸೊಲ್ಲು ಸರಿಯಲ್ಲ. ಆದರೆ, ‘ಆತನ ಗಡ್ಡ ಎರಡು ದಿನ ಬೆಳೆದಿತ್ತು’ ಎಂಬ ಬೇರೊಂದು ಹುರುಳಿನಲ್ಲಿ ಆ ಸೊಲ್ಲು ತಪ್ಪಲ್ಲ.
(5) ಇಂತಹದೇ ವ್ಯತ್ಯಾಸ ಎತ್ತರ, ಉದ್ದ, ಗಿಡ್ಡ ಮೊದಲಾದ ಉದ್ದಳತೆ ಯನ್ನು ತಿಳಿಸುವ ಪರಿಚೆಪದಗಳ ಬಳಕೆಯಲ್ಲೂ ಕಾಣಿಸಿಕೊಳ್ಳುತ್ತದೆ. ಎತ್ತುಗೆ ಗಾಗಿ, ಎತ್ತರ ಗೋಡೆ ಮತ್ತು ಎತ್ತರದ ಗೋಡೆ ಎಂಬ ಎರಡು ಹೆಸರು ಪದಗಳ ಬಳಕೆಯನ್ನು ಗಮನಿಸಬಹುದು:
(73ಕ) ಈ ಎತ್ತರ ಗೋಡೆಗಿಂತ ಆ ಎತ್ತರ ಗೋಡೆ ಚನ್ನಾಗಿದೆ. (73ಚ) ಈ ಎತ್ತರದ ಗೋಡೆಗಿಂತ ಆ ಎತ್ತರದ ಗೋಡೆ ಚನ್ನಾಗಿದೆ.
(73ಕ)ದಲ್ಲಿ ಎರಡು ಎತ್ತರ ಗೋಡೆಗಳನ್ನು ಹೋಲಿಸಲಾಗಿದೆ; ಇಲ್ಲಿ ಎತ್ತರ ಪದವನ್ನು ಆ ಎರಡು ಗೋಡೆಗಳಿಗೂ ಸಮಾನವಾಗಿರುವ ಪರಿಚೆ ಯೊಂದನ್ನು ತಿಳಿಸಲು ಬಳಸಲಾಗಿದ್ದು, ಅವನ್ನು ಗುರುತಿಸುವಲ್ಲಿ ಮಾತ್ರ ಅದು ಮುಕ್ಯವಲ್ಲದೆ ಹೋಲಿಕೆಯ ಮಟ್ಟಿಗೆ ಅದು ಮುಕ್ಯವಲ್ಲ; ಆ ಎರಡು ಗೋಡೆ ಗಳನ್ನು ಬೇರೆ ಗೋಡೆಗಳಿಂದ ಬೇರ್ಪಡಿಸುವುದಕ್ಕಾಗಿ ಮಾತ್ರ ಅದನ್ನು ಬಳಸ ಲಾಗಿದೆ.
ಆದರೆ, (73ಚ)ದಲ್ಲಿ ಎರಡು ಬೇರೆ ಬೇರೆ ಎತ್ತರಗಳಲ್ಲಿರುವ ಗೋಡೆ ಗಳನ್ನು ಹೋಲಿಸಲಾಗಿದೆ, ಮತ್ತು ಈ ಹೋಲಿಕೆಯಲ್ಲಿ ಅವುಗಳ ಎತ್ತರ ಎಶ್ಟು
ಎಂಬುದು ಮುಕ್ಯವಾಗಿದೆ. ಎತ್ತರ ಗೋಡೆ ಎಂಬುದು ಗೋಡೆಯ ಪರಿಚೆಯನ್ನು ಕೇಳುಗನ ಗಮನಕ್ಕೆ ತರುತ್ತದೆ, ಮತ್ತು ಎತ್ತರದ ಗೋಡೆ ಎಂಬುದು ಅದರ ಅಳವಿಯನ್ನು (‘ಎಶ್ಟು ಎತ್ತರದ್ದು’ ಎಂಬುದನ್ನು) ಗಮನಕ್ಕೆ ತರುತ್ತದೆ.
(6) ಎಣಿಕೆಪದಗಳಿಗೆ ಅನೆ ಒಟ್ಟನ್ನು ಮತ್ತು ಅದರೊಂದಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿಯೂ ಅವನ್ನು ಹೆಸರುಪದಗಳು ಗುರುತಿಸುವ ಪಾಂಗಿನ ಪರಿಚೆ ಯನ್ನು ತಿಳಿಸಲು ಬಳಸಲಾಗುತ್ತದೆ (ಮೂರನೆಯ ತರಗತಿ, ನಾಲ್ಕನೆಯ ಪುಸ್ತಕ, ಎಂಟನೆಯ ಹುಡುಗ). ಇವು ಪಾಂಗುಗಳ ಓರಣದೆಣಿಕೆಯನ್ನು ತಿಳಿಸುತ್ತವೆ ಎಂದೂ ಹೇಳಬಹುದು.
ಈ ಎರಡು ಒಟ್ಟುಗಳು ಒಟ್ಟಿಗೆ ಅನೇ ಎಂಬ ರೂಪದಲ್ಲೂ ಬಳಕೆಯಾಗು
ತ್ತವೆ: ಮೂರನೇ ಬಾಗಿಲು, ಒಂದನೇ ತರಗತಿ).
ಎಣಿಕೆಪದಗಳನ್ನು ಮಾತ್ರವಲ್ಲದೆ, ಮೊದಲನೆಯ, ಮಾರನೆಯ, ಅಶ್ಟ ನೆಯ, ಇಶ್ಟನೆಯ, ಎಶ್ಟನೆಯ ಎಂಬ ಅನೆಯ ಒಟ್ಟಿರುವ ಬೇರೆ ಪದಗಳನ್ನು, ಮತ್ತು ಕೊನೆಯ, ಮುಂದಿನ, ಹಿಂದಿನ, ಆಮೇಲಿನ ಮೊದಲಾದ ಬೇರೆ ಕೆಲವು ಪತ್ತುಗೆರೂಪಗಳನ್ನೂ ಈ ರೀತಿ ಪಾಂಗುಗಳ ಓರಣದೆಣಿಕೆಯನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ.
ಎಸಕಗಳ ದಿನ ಇಲ್ಲವೇ ವರ್ಶವನ್ನು ತಿಳಿಸುವುದಕ್ಕಾಗಿಯೂ ಇವೇ ಪದರೂಪ ಗಳನ್ನು ಬಳಸಲಾಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(74ಕ) ಆತ ಸಾವಿರದೊಂಬಯ್ನೂರ ನಲುವತ್ತೆಂಟನೇ ಇಸವಿಯಲ್ಲಿ
ಹುಟ್ಟಿದ.
(74ಚ) ಜೂನ್ ಮೂವತ್ತನೆಯ
ತಾರೀಕಿನಂದು
ನಾವು ಊಟಿಗೆ
ಹೋಗಿದ್ದೆವು.
6.4.9 ಹೋಲಿಕೆಯಲ್ಲಿ ಎಣಿಕೆಪದಗಳ ಬಳಕೆ
ಎರಡು ಪಾಂಗುಗಳನ್ನು ಹೋಲಿಸುವಲ್ಲಿ ಅಳತೆಯನ್ನು ತಿಳಿಸುವ ನುಡಿತಗಳನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(75ಕ) ಇದಕ್ಕಿಂತ ನಾಲ್ಕಡಿ ಉದ್ದ ಕೋಲು ಅಲ್ಲಿದೆ. (75ಚ) ಇದಕ್ಕಿಂತ ನಾಲ್ಕಡಿ ಗಿಡ್ಡ ಕೋಲು ಅಲ್ಲಿದೆ. (76ಕ) ನಮಗೆ ಇದಕ್ಕಿಂತ ಅರ್ದಂಗುಲ ದಪ್ಪ ಹಲಿಗೆ ಬೇಕಾಗಿದೆ. (76ಚ) ನಮಗೆ ಇದಕ್ಕಿಂತ ಅರ್ದಂಗುಲ ತೆಳು ಹಲಿಗೆ ಬೇಕಾಗಿದೆ.
ಈ ಸೊಲ್ಲುಗಳಲ್ಲಿ ಎರಡು ಪಾಂಗುಗಳನ್ನು ಗುರುತಿಸಲಾಗಿದ್ದು, ಅವುಗಳ ನಡುವೆ ವ್ಯತ್ಯಾಸ ಎಶ್ಟಿದೆ (ಇಲ್ಲವೇ ಇರಬೇಕು) ಎಂಬುದನ್ನು ತಿಳಿಸಲು ಅಳತೆಯ ನುಡಿತಗಳನ್ನು (ನಾಲ್ಕಡಿ ಉದ್ದ, ನಾಲ್ಕಡಿ ಗಿಡ್ಡ, ಅರ್ದಂಗುಲ ದಪ್ಪ, ಅರ್ದಂಗುಲ ತೆಳು ಎಂಬುವನ್ನು) ಬಳಸಲಾಗಿದೆ. ಇಂತಹ ಸೊಲ್ಲುಗಳಲ್ಲಿ ಹೋಲಿಕೆಗೆ ಮಾದರಿಯಾಗಿ ಒಂದು ಪಾಂಗನ್ನು ಬಳಸುವ ಬದಲು ಅಳತೆಯ ನುಡಿತವನ್ನೇ ಬಳಸಲೂ ಬರುತ್ತದೆ:
(77ಕ) ನಾಲ್ಕಡಿಗಿಂತ ಉದ್ದ ಕೋಲು ಇಲ್ಲಿದೆ. (77ಚ) ನಮಗೆ ಎರಡಂಗುಲಕ್ಕಿಂತಲೂ ತೆಳು ಹಲಿಗೆ ಬೇಕಾಗಿದೆ.
(77ಕ)ದಲ್ಲಿ ಒಂದು ಪಾಂಗಿನ ಹಂತವನ್ನು ನೇರವಾಗಿ ಇನ್ನೊಂದು ಹಂತ ದೊಂದಿಗೆ ಹೋಲಿಸಲಾಗಿದೆ: ಕೋಲು ಪದ ಗುರುತಿಸುವ ಪಾಂಗು ನಾಲ್ಕಡಿ ಎಂಬ ಅಳತೆನುಡಿತ ತಿಳಿಸುವ ಹಂತಕ್ಕಿಂತ ಮೇಲಿನ ಹಂತದಲ್ಲಿದೆ ಎಂಬುದನ್ನು ಆ ಅಳತೆನುಡಿತದೊಂದಿಗೆ ಬಂದಿರುವ ಇಂತ ಒಟ್ಟು ತಿಳಿಸುತ್ತದೆ.
ಈ ರೀತಿ ಮಾದರಿಯಾಗಿ ಒಂದು ಹಂತವನ್ನು ಬಳಸಿರುವ ಹೆಸರುಕಂತೆಗಳಲ್ಲಿ ಹೋಲಿಕೆಪಾಂಗಿನ ಹಂತ ಮತ್ತು ಮಾದರಿಹಂತಗಳು ಒಂದೇ ಎಂಬುದಾಗಿಯೂ ತಿಳಿಸಲು ಬರುತ್ತದೆ; ಆದರೆ, ಎರಡು ಪಾಂಗುಗಳು ಒಂದೇ ಹಂತದಲ್ಲಿವೆ ಎಂದು ತಿಳಿಸಿರುವಲ್ಲಿ ಅಳತೆಯ ನುಡಿತವನ್ನು ಬಳಸಲು ಬರುವುದಿಲ್ಲ.
(78ಕ) ನಾಲ್ಕಡಿಯಶ್ಟು ಉದ್ದ ಕೋಲು ಇಲ್ಲಿದೆ. (78ಚ) *ಇದರಶ್ಟು ನಾಲ್ಕಡಿ ಉದ್ದ ಕೋಲು ಇಲ್ಲಿದೆ.
ಎರಡು ಪಾಂಗುಗಳೂ ಒಂದೇ ಹಂತದಲ್ಲಿವೆಯೆಂದು ತಿಳಿಸಿರುವಲ್ಲಿ ಅವುಗಳ ಅಳತೆಯನ್ನು ತಿಳಿಸಬೇಕಾಗುವುದಿಲ್ಲ ಎಂಬುದೇ (78ಚ) ಸೊಲ್ಲು ಸರಿಯಲ್ಲ ದಿರುವುದಕ್ಕೆ ಕಾರಣವಿರಬಹುದು.
ಮಾದರಿ ಪಾಂಗಿನ ಪತ್ತುಗೆ ರೂಪದೊಂದಿಗೆ ಎಣಿಕೆಪದ ಮತ್ತು ಅಶ್ಟು ಎಂಬುವನ್ನು ಸೇರಿಸಿ ಬಳಸಿದಲ್ಲಿ, ಅದು ಮಾದರಿ ಪಾಂಗಿನ ಅಳವಿಗಿಂತ ಹೋಲಿಕೆ ಪಾಂಗಿನ ಅಳವಿ ಎಣಿಕೆಪದ ತಿಳಿಸುವ ಎಣಿಕೆಯಶ್ಟು ಹೆಚ್ಚಿಕೆಯದು ಎಂಬುದನ್ನು ತಿಳಿಸುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(79ಕ) ಇದರ ಎರಡರಶ್ಟು ದಪ್ಪ ಹಲಿಗೆ ನಮ್ಮಲ್ಲಿದೆ. (79ಚ) ಇದರ ಅರ್ದದಶ್ಟು ತೆಳು ಹಲಿಗೆ ನಮ್ಮಲ್ಲಿದೆ.
ಹೋಲಿಕೆಯನ್ನು ಪಟ್ಟು, ಪಾಲು, ಇಲ್ಲವೇ ಮಡಿ ಪದಗಳ ಬಳಕೆಯ ಮೂಲಕವೂ ತಿಳಿಸಲು ಬರುತ್ತದೆ; ಇಲ್ಲಿ ಮಾದರಿ ಪದ ಅದರ ಪತ್ತುಗೆರೂಪ ದಲ್ಲಿ ಬರುತ್ತದೆ:
(80ಕ) ಅದರ ಇಮ್ಮಡಿ ತೂಕದ ಕಲ್ಲು ಇಲ್ಲಿದೆ. (80ಚ) ಅದರ ಮೂರು ಪಟ್ಟು ಎತ್ತರದ ಗುಡ್ಡ ನಮ್ಮ ಊರಲ್ಲಿದೆ. (80ಟ) ನಮಗೆ ಇದರ ಎರಡು ಪಾಲು ಎತ್ತರದ ಕಂಬ ಬೇಕಾಗಿತ್ತು.
6.4.10 ಎಣಿಕೆ ಪದಗಳು ಮತ್ತು ಪರಿಚೆಪದಗಳು
ಎಣಿಕೆಪದಗಳು ಪರಿಚೆಪದಗಳ ಹಾಗೆ ಹೆಸರುಪದಗಳೊಂದಿಗೆ ಅವುಗಳ ನೆರವು ಪದಗಳಾಗಿ ಹೆಸರುಕಂತೆಗಳಲ್ಲಿ ಬಳಕೆಯಾಗುತ್ತವೆಯಾದರೂ, ಅವು ಹಲವು ವಿಶಯಗಳಲ್ಲಿ ಪರಿಚೆಪದಗಳಿಂದ ಬೇರಾಗಿವೆ.
(1) ಪರಿಚೆಪದಗಳಿಗೆ ತನ, ಪು, ಮೆ ಮೊದಲಾದ ಕೆಲವು ಒಟ್ಟುಗಳನ್ನು ಸೇರಿಸಿ, ಅವು ತಿಳಿಸುವ ಪರಿಚೆಯನ್ನು ಹೆಸರಿಸಲು ಬರುತ್ತದೆ, ಮತ್ತು ಅವಕ್ಕೆ ಅ, ಇ ಮೊದಲಾದ ಬೇರೆ ಕೆಲವು ಒಟ್ಟುಗಳನ್ನು ಸೇರಿಸಿ ಅವನ್ನು ಪಡೆದಿರುವ ಪಾಂಗುಗಳನ್ನು ಹೆಸರಿಸಲಾಗುತ್ತದೆ (2.4.3 ನೋಡಿ).
(81ಕ) ಅವನ ಒಳ್ಳೆತನಕ್ಕೆ ಎಲ್ಲರೂ ಮಾರುಹೋಗಿದ್ದಾರೆ. (81ಚ) ಈ ಹಲಿಗೆಯ ತೆಳುಪು ಹೆಚ್ಚಾಯಿತು. (81ಟ) ಆ ಹುಚ್ಚಿಯನ್ನು ನೋಡಿ ಎಲ್ಲರೂ ನಗಾಡುತ್ತಿದ್ದಾರೆ.
ಆದರೆ, ಎಣಿಕೆಪದಗಳನ್ನು ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಹಾಗೆಯೇ ಅವು ತಿಳಿಸುವ ಎಣಿಕೆಯನ್ನು, ಇಲ್ಲವೇ ಆ ಎಣಿಕೆಯನ್ನು ಪಡೆದಿರುವ ಪಾಂಗುಗಳನ್ನು ಹೆಸರಿಸಲು ಬರುತ್ತದೆ.
(82ಕ) ಏಳಕ್ಕೆ ಅಯ್ದನ್ನು ಸೇರಿಸಿರಿ. (82ಚ) ಏಳರಲ್ಲಿ ಅಯ್ದು (ಹಣ್ಣುಗಳು) ಉಳಿದಿವೆ.
(2) ಹೆಸರುಪರಿಚೆಗಳಿಗೆ ಅಗೆ ಒಟ್ಟನ್ನು ಸೇರಿಸಿ ಅವನ್ನು ಎಸಕಪರಿಚೆಗಳಾಗಿ
ಮಾರ್ಪಡಿಸಲು ಬರುತ್ತದೆ:
ಕೆಂಪು ಹಣ್ಣು
ಬಿಳಿ ಸೀರೆ ಕರಿ ನೀರು
ನೀವು ಕೊಟ್ಟ ಹಣ್ಣು ಕೆಂಪಗಿದೆ. ಆಕೆಯ ಸೀರೆ ಬೆಳ್ಳಗಿದೆ. ಈ ನೀರು ಕಪ್ಪಗಿದೆ.
ಆದರೆ, ಹೆಸರುಪದಗಳ ಪರಿಚೆಯನ್ನು ತಿಳಿಸಲು ಪರಿಚೆಪದಗಳನ್ನು ಬಳಸುವ ಹಾಗೆ ಎಸಕಪದಗಳ ಅಳವಿಯನ್ನು ತಿಳಿಸಲು ಎಣಿಕೆಪದಗಳನ್ನು ನೇರವಾಗಿ ಬಳಸಲು ಬರುವುದಿಲ್ಲ. ಇದಕ್ಕಾಗಿ ಅವಕ್ಕೆ ಬಾರಿ, ಸಲ ಮೊದಲಾದ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಬಾರಿ ಹಾಡಿದ).
(3) ಹಂತಗಳನ್ನು ತಿಳಿಸುವ ಪದಗಳನ್ನು ಹಲವು ಬಗೆಯ ಪರಿಚೆಪದ ಗಳೊಂದಿಗೆ ಬಳಸಲು ಬರುತ್ತದೆ (ತುಂಬಾ ದೊಡ್ಡ ಮರ); ಆದರೆ, ಎಣಿಕೆ ಪದಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ (*ತುಂಬಾ ಹತ್ತು ಜನ).
(4) ಎಣಿಕೆಯನ್ನು ಕಂಡಿತವಲ್ಲದಂತೆ ತಿಳಿಸುವ ಹಲವು, ಕೆಲವು ಎಂಬವು ಗಳಿಂದಲೂ ಅವನ್ನು ಕಂಡಿತವಾಗಿ ತಿಳಿಸುವ ಎಣಿಕೆಪದಗಳು ಬೇರಾಗಿವೆ: ಹತ್ತಕ್ಕಿಂತ ಕಡಿಮೆ ಇಲ್ಲವೇ ಎಂಟಕ್ಕಿಂತ ಹೆಚ್ಚು ಎನ್ನಬಹುದು; ಆದರೆ, *ಕೆಲವಕ್ಕಿಂತ ಹೆಚ್ಚು ಇಲ್ಲವೇ *ಹಲವಕ್ಕಿಂತ ಕಡಿಮೆ ಎನ್ನಲು ಬರುವುದಿಲ್ಲ; ಹೆಚ್ಚುಕಡಿಮೆ ನೂರು ಜನರು ಎನ್ನಬಹುದು; ಆದರೆ, *ಹೆಚ್ಚುಕಡಿಮೆ ಹಲವು ಜನರು ಎನ್ನಲು ಬರುವುದಿಲ್ಲ. ಹಲವು ಎಂಬುದಕ್ಕೇನೇ ‘ಹೆಚ್ಚುಕಡಿಮೆ’ ಎಂಬ ಹುರುಳಿರುವುದೇ ಇದಕ್ಕೆ ಕಾರಣವಿರಬಹುದು.
6.5 ಪಾಂಗುಗಳನ್ನು ನೆಲೆಗೊಳಿಸುವುದು
ಒಂದು ಕತೆಯನ್ನು ಹೇಳಬೇಕಿದ್ದರೆ, ಇಲ್ಲವೇ ಒಂದು ವಿಶಯವನ್ನು ತಿಳಿಸ ಬೇಕಿದ್ದರೆ, ಅದರಲ್ಲಿ ತೊಡಗಿಕೊಂಡಿರುವ ಹಲವು ಬಗೆಯ ವ್ಯಕ್ತಿ, ವಸ್ತು, ವಿಶಯ ಮೊದಲಾದ ಪಾಂಗುಗಳನ್ನು ಗುರುತಿಸಬೇಕಾಗುತ್ತದೆ; ಮೇಲೆ ವಿವರಿಸಿದ ಹಾಗೆ, ಅವುಗಳ ಪರಿಚೆ ಮತ್ತು ಅಳವಿಗಳನ್ನು ತಿಳಿಸುವುದರಿಂದ ಈ ಗುರುತಿಸು ವಿಕೆಗೆ ಸ್ವಲ್ಪಮಟ್ಟಿನ ನೆರವು ದೊರಕುತ್ತದೆ.
ಎತ್ತುಗೆಗಾಗಿ, ಮೇಜಿನ ಮೇಲೆ ಒಂದು ಕಪ್ಪು ಮತ್ತು ಒಂದು ಕೆಂಪು ಚೆಂಡುಗಳಿವೆಯಾದರೆ, ಚೆಂಡು ತೆಗೆದುಕೋ ಎಂದಿಶ್ಟೇ ಹೇಳಿದಲ್ಲಿ, ಯಾವುದನ್ನು (ಮತ್ತು ಎಶ್ಟನ್ನು) ತೆಗೆದುಕೊಳ್ಳಬೇಕು ಎಂದು ಗೊತ್ತಾಗದಿರ ಬಹುದು; ಇದಕ್ಕೆ ಬದಲು, ಕೆಂಪು ಚೆಂಡು ತೆಗೆದುಕೋ ಎಂದಲ್ಲಿ, ಅವುಗಳಲ್ಲಿ ಇಂತಹದನ್ನೇ ತೆಗೆದುಕೊಳ್ಳಬೇಕು ಎಂಬುದು, ಮತ್ತು ಎರಡನ್ನೂ ತೆಗೆದುಕೊಳ್ಳಬಾರದು ಎಂಬುದು ಗೊತ್ತಾಗುತ್ತದೆ.
ಇದೇ ರೀತಿಯಲ್ಲಿ, ಒಂದು ಚೆಂಡು ತೆಗೆದುಕೋ ಎಂದಾಗಲೂ ಅದರಂತೆ ಮಾಡಲು ಕೇಳುಗನಿಗೆ ತೊಂದರೆಯಾಗುವುದಿಲ್ಲ. ಕೆಂಪು ಚೆಂಡು ಎಂಬುದರಲ್ಲಿ ವಸ್ತುವಿನ ಪರಿಚೆಯೊಂದನ್ನು ತಿಳಿಸುವ ಮೂಲಕ ಗುರುತಿಸುವ ಕೆಲಸಕ್ಕೆ ನೆರವು ನೀಡಲಾಗಿದೆ, ಮತ್ತು ಒಂದು ಚೆಂಡು ಎಂಬುದರಲ್ಲಿ ವಸ್ತುವಿನ ಎಣಿಕೆಯನ್ನು ಒಂದು ಎಂಬುದಾಗಿ ತಿಳಿಸುವ ಮೂಲಕ ಈ ಕೆಲಸವನ್ನು ನಡೆಸಲಾಗಿದೆ. ಈ
ಎರಡನೆಯ ಸಂದರ್ಬದಲ್ಲಿ ಚೆಂಡಿನ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡ ಲಾಗಿದೆ.
ಈ ಎರಡು ಬಗೆಯ ಹೊಲಬುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಈಗಾಗಲೇ 6.3 ಮತ್ತು 6.4ರಲ್ಲಿ ಕೊಡಲಾಗಿದೆ; ಇವು ಮಾತ್ರವಲ್ಲದೆ, ಹೆಸರು ಕಂತೆಗಳು ಗುರುತಿಸುವ ಪಾಂಗುಗಳಿಗೆ ಎಂತಹ ನೆಲೆಯಿದೆ ಎಂಬುದನ್ನು ತಿಳಿಸುವ ಹಲವು ಬಗೆಯ ನುಡಿತಗಳೂ ಗುರುತಿಸುವ ಕೆಲಸದಲ್ಲಿ ನೆರವನ್ನು ನೀಡುತ್ತವೆ. ಅವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(1) ಪಾಂಗುಗಳಲ್ಲಿರುವ ಕೆಲವು ನೆಲೆಗೊಳಿಸುವ ಪರಿಚೆಗಳನ್ನು ತಿಳಿಸುವುದು ಒಂದು ಹೊಲಬು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(1ಕ) ಈ ಹುಡುಗ ಎಲ್ಲಿಗೆ ಹೋಗುತ್ತಿದ್ದಾನೆ? (1ಚ) ಮೇಜಿನ ಮೇಲಿನ ಪುಸ್ತಕವನ್ನು ನೀವು ತೆಗೆದುಕೊಳ್ಳಿ. (1ಟ) ರಾಜೀವನ ಮನೆ ಮೂರನೇ ಅಡ್ಡರಸ್ತೆಯಲ್ಲಿದೆ. (1ತ) ಜಾನಕಿ ಕೊಟ್ಟ ಪುಸ್ತಕವನ್ನು ಮಗು ಹರಿದುಹಾಕಿದೆ.
(1ಕ) ಸೊಲ್ಲಿನಲ್ಲಿ ಈ ಹುಡುಗ ಎಂಬ ಹೆಸರುಕಂತೆ ಬಂದಿದ್ದು, ಅದರಲ್ಲಿ ಈ ಎಂಬ ತೋರುಪದ ಪಾಂಗನ್ನು ನೆಲೆಗೊಳಿಸಲು ಬಳಕೆಯಾಗಿದೆ; ಅದು ಹುಡುಗನು ‘ದೂರದವನಲ್ಲ, ಹತ್ತಿರದವನು’ ಎಂಬುದನ್ನು ತಿಳಿಸುವ ಮೂಲಕ ಈ ಕೆಲಸವನ್ನು ನಡೆಸುತ್ತದೆ; (1ಚ) ಸೊಲ್ಲಿನಲ್ಲಿ ಮೇಜಿನ ಮೇಲಿನ ಪುಸ್ತಕ ಎಂಬ ಹೆಸರುಕಂತೆ ಬಂದಿದ್ದು, ಅದರಲ್ಲಿ ಮೇಜಿನ ಮೇಲಿನ ಎಂಬುದು ಪಾಂಗಿನ (ಪುಸ್ತಕದ) ಜಾಗವನ್ನು ತಿಳಿಸುವ ಮೂಲಕ ಅದನ್ನು ನೆಲೆಗೊಳಿಸುತ್ತದೆ. (1ಚ) ಸೊಲ್ಲಿನಲ್ಲಿ ರಾಜೀವನ ಮನೆ ಎಂಬ ಹೆಸರುಕಂತೆ ಬಂದಿದ್ದು, ಅದರಲ್ಲಿ ರಾಜೀವನ ಎಂಬ ಪತ್ತುಗೆರೂಪ ‘ಪುಸ್ತಕ ಯಾರದು’ ಎಂಬುದನ್ನು ತಿಳಿಸುವ ಮೂಲಕ ಅದನ್ನು ನೆಲೆಗೊಳಿಸುತ್ತದೆ; ಮತ್ತು (1ತ) ಸೊಲ್ಲಿನಲ್ಲಿ ಜಾನಕಿ ಕೊಟ್ಟ ಪುಸ್ತಕ ಎಂಬ ಹೆಸರುಕಂತೆ ಬಂದಿದ್ದು, ಅದರಲ್ಲಿ ಜಾನಕಿ ಕೊಟ್ಟ ಎಂಬ ಎಸಕಪದದ ಪತ್ತುಗೆರೂಪ ಪುಸ್ತಕ ಕೊಟ್ಟವರನ್ನು ಹೆಸರಿಸುವ ಮೂಲಕ ಅದನ್ನು ನೆಲೆಗೊಳಿಸುತ್ತದೆ.
(2) ಈ ರೀತಿ ಪಾಂಗುಗಳ ಪರಿಚೆಯನ್ನು ತಿಳಿಸುವುದರ ಮೂಲಕ ಮಾತ್ರ ವಲ್ಲದೆ, ಅವುಗಳ ನಡುವಿರುವ ಕೆಲವು ಮುಕ್ಯವಾದ ವ್ಯತ್ಯಾಸಗಳನ್ನು ಬಳಸಿಯೂ ಅವನ್ನು ನೆಲೆಗೊಳಿಸಲು ಬರುತ್ತದೆ: ಗುರುತಿಸುತ್ತಿರುವ ಪಾಂಗು ಹೊಸದೋ, ಹಳೆಯದೋ ಎಂಬುದು ಇಂತಹ ವ್ಯತ್ಯಾಸಗಳಲ್ಲಿ ಒಂದು; ಎತ್ತುಗೆಗಾಗಿ, ಒಂದು ಪಾಂಗನ್ನು ಮೊದಲೇ ಗುರುತಿಸಿದ್ದು, ಈಗ ಗುರುತಿಸುತ್ತಿರುವ ಪಾಂಗು ಅದೇ (ಎಂದರೆ, ಹಿಂದೆ ಗುರುತಿಸಿದಂತಹದು, ಹಳೆಯದು) ಎಂಬುದನ್ನು ಅವನು,
ಇವನು, ಅದು ಮೊದಲಾದ ಕೆಲವು ತೋರುಪದಗಳ ಮೂಲಕ ತಿಳಿಸ ಲಾಗುತ್ತದೆ.
(2ಕ) ಒಬ್ಬ ಹುಡುಗ ತರಕಾರಿ ತಂದ, ಮತ್ತು ಅವನ ತಂಗಿ ಅಡಿಗೆ
ಮಾಡಿದಳು.
(2ಚ) ಒಬ್ಬ ಹುಡುಗ ತರಕಾರಿ ತಂದ, ಮತ್ತು ಒಬ್ಬ ಹುಡುಗಿ ಅಡಿಗೆ
ಮಾಡಿದಳು.
(2ಕ) ಸೊಲ್ಲಿನಲ್ಲಿ ಬಳಕೆಯಾಗಿರುವ ಅವನ ಎಂಬ ತೋರುಪದ ಅದಕ್ಕೆ ಮೊದಲೇ ಒಬ್ಬ ಹುಡುಗ ಎಂಬ ಹೆಸರುಕಂತೆಯ ಮೂಲಕ ಗುರುತಿಸಲಾಗಿರುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುತ್ತದೆ; ಇದಕ್ಕೆ ಬದಲು, (2ಚ)ದಲ್ಲಿ ಬಳಕೆ ಯಾಗಿರುವ ಒಬ್ಬ ಹುಡುಗಿ ಎಂಬ ಹೆಸರುಕಂತೆ ಬೇರೆಯೇ ಒಂದು ಹೊಸ ಪಾಂಗನ್ನು ಗುರುತಿಸುತ್ತದೆ.
ಗುರುತಿಸುತ್ತಿರುವ ಪಾಂಗು ನಿಜಕ್ಕೂ ಯಾವುದು ಎಂಬುದು ಗುರುತಿಸು ವವನಿಗೇನೇ ತಿಳಿದಿದೆಯೋ, ಇಲ್ಲವೋ ಎಂಬುದು ಇನ್ನೊಂದು ವ್ಯತ್ಯಾಸ; ಎತ್ತುಗೆಗಾಗಿ, ಯಾವ ಹುಡುಗ, ಯಾವುದೋ ಒಂದು ಹಕ್ಕಿ, ಯಾವು ದಾದರೂ ಒಂದು ಹಣ್ಣು ಎಂಬಂತಹ ಹೆಸರುಕಂತೆಗಳಲ್ಲಿ ಹುಡುಗ, ಹಕ್ಕಿ ಇಲ್ಲವೇ ಹಣ್ಣುಗಳು ಯಾವುವು ಎಂಬುದು ಗುರುತಿಸುವವನಿಗೆ ತಿಳಿದಿಲ್ಲ ವೆಂಬುದಾಗಿ, ಇಲ್ಲವೇ ಅದರ ಆಯ್ಕೆಯನ್ನು ಕೇಳುಗನಿಗೆ ಬಿಡಲಾಗಿದೆ ಯೆಂದಾಗಲಿ ಯಾವ, ಯಾವುದೋ ಒಂದು, ಯಾವುದಾದರೂ ಒಂದು ಎಂಬ ನುಡಿತಗಳ ಮೂಲಕ ತಿಳಿಸಲಾಗುತ್ತದೆ.
(3ಕ) ನೀನು ರಾಜುವಿಗೆ ಯಾವ ಪುಸ್ತಕ ಕೊಟ್ಟೆ? (3ಚ) ಯಾವುದೋ ಒಂದು ಹಕ್ಕಿ ಹಾಡುತ್ತಾ ಇದೆ. (3ಟ) ಯಾವುದಾದರೂ ಒಂದು ಹಣ್ಣನ್ನು ತೆಗೆದುಕೊಳ್ಳಿ.
(3ಕ) ಸೊಲ್ಲಿನಲ್ಲಿ ಬಂದಿರುವ ಯಾವ ಪುಸ್ತಕ ಎಂಬುದು ಆಡುಗನಿಗೆ ತಿಳಿದಿಲ್ಲದ ಒಂದು ಪುಸ್ತಕವನ್ನು ಗುರುತಿಸುತ್ತದೆ, ಮತ್ತು ಅದರ ಕುರಿತಾಗಿ ಕೇಳುಗನಿಂದ ತಿಳಿವನ್ನು ಪಡೆಯಲು ಅದನ್ನು ಆ ಸೊಲ್ಲಿನಲ್ಲಿ ಬಳಸಲಾಗಿದೆ. (3ಚ) ಸೊಲ್ಲಿನ ಯಾವುದೋ ಒಂದು ಹಕ್ಕಿ, ಮತ್ತು (3ಟ) ಸೊಲ್ಲಿನ ಯಾವುದಾದರೂ ಒಂದು ಹಣ್ಣು ಎಂಬವುಗಳೂ ಆಡುಗನಿಗೆ ತಿಳಿದಿಲ್ಲದ ಪಾಂಗುಗಳನ್ನು ಗುರುತಿಸುತ್ತಿದ್ದು, (3ಟ)ದಲ್ಲಿ ಅದರ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಲಾಗಿದೆ.
ಹೆಸರುಕಂತೆಗಳ ಬಳಕೆಯಲ್ಲಿ ಇನ್ನೊಂದು ಬಗೆಯ ವ್ಯತ್ಯಾಸವೂ ಕಾಣಿಸಿ ಕೊಳ್ಳುತ್ತದೆ. ಎತ್ತುಗೆಗಾಗಿ, ಅವನಿಗೆ ಒಂದು ಮನೆ ಬೇಕಾಗಿದೆ ಎಂಬ
ಸೊಲ್ಲಿನಲ್ಲಿ ಮನೆ ಎಂಬುದು ಯಾವುದಾದರೂ ಒಂದು ಮನೆಯನ್ನು ಗುರುತಿಸು ತ್ತಿರಬಹುದು (ಅಲ್ಲೊಂದು ಮನೆಯಿದೆ, ಮತ್ತು ಅದು ಆತನಿಗೆ ಬೇಕಾಗಿದೆ), ಇಲ್ಲವೇ ‘ಮನೆ ಬೇಕೆ’ಂಬುದು ಆಡುಗನ ಬಯಕೆಯಶ್ಟೇ ಆಗಿದ್ದು, ಯಾವುದೇ ಒಂದು ಮನೆಯನ್ನೂ ಆತ ಗುರುತಿಸದಿರಬಹುದು. ಈ ವ್ಯತ್ಯಾಸವನ್ನು ಕೆಳಗಿನ ಎರಡು ಸೊಲ್ಲುಗಳ ನಡುವೆಯೂ ಕಾಣಬಹುದು:
(4ಕ) ಯಾರೋ ಒಬ್ಬ ಹಾಡುಗಾರನನ್ನು ಕರೆಸಬೇಕಾಗಿತ್ತು. (4ಚ) ಯಾರಾದರೂ ಒಬ್ಬ ಹಾಡುಗಾರನನ್ನು ಕರೆಸಬೇಕಾಗಿತ್ತು.
(4ಕ)ದಲ್ಲಿ ಆಡುಗನಿಗೆ ಒಬ್ಬ ಹಾಡುಗಾರನನ್ನು ಕರೆಸಬೇಕೆಂದಿದೆ; ಆದರೆ, ಅದು ಯಾರೆಂಬುದನ್ನು ಆ ಸೊಲ್ಲಿನಲ್ಲಿ ತಿಳಿಸಿಲ್ಲ. ಇದಕ್ಕೆ ಬದಲು, (4ಚ)ದಲ್ಲಿ ಆಡುಗನಿಗೆ ತಾನು ಕರೆಸಬೇಕಾಗಿರುವ ಹಾಡುಗಾರ ಇಂತಹವನೇ ಆಗಿರಬೇಕೆಂ ದೇನೂ ಇಲ್ಲ; ಆತ ಹಾಡುಗಾರನಾಗಿದ್ದರೆ ಸಾಕು.
ಈ ವ್ಯತ್ಯಾಸ ಯಾರೋ ಒಬ್ಬ ಮತ್ತು ಯಾರಾದರೂ ಒಬ್ಬ ಎಂಬವುಗಳ ಬಳಕೆಯಿಂದ ಸಿಗುತ್ತದೆ; ಯಾರೋ ಒಬ್ಬ ಎಂಬುದು ಪಾಂಗೊಂದನ್ನು ಗುರುತಿಸುತ್ತಿದೆಯಾದರೂ, ಅದು ಯಾರೆಂಬುದನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಯಾರಾದರೂ ಒಬ್ಬ ಎಂಬುದು ಪಾಂಗೊಂದನ್ನು ತಿಳಿಸುವುದಿಲ್ಲ ಮಾತ್ರವಲ್ಲ, ಅದನ್ನು ಗುರುತಿಸಲೂ ಹೋಗುವುದಿಲ್ಲ; ಪಾಂಗಿನ ಬಗೆಯನ್ನು ಮಾತ್ರ ಅದು ಗುರುತಿಸುತ್ತದೆ.
ಇಂತಹ ಗುರುತಿಸದಿರುವಿಕೆಯನ್ನು ಇಲ್ಲವೇ ಬಗೆಯ ಗುರುತಿಸುವಿಕೆಯನ್ನು
ಸಾಮಾನ್ಯ ಸಂಗತಿಗಳನ್ನು ತಿಳಿಸುವ ಸೊಲ್ಲುಗಳಲ್ಲೂ ಕಾಣಬಹುದು:
ತಡವಾಗಿ ಬರುವ ಹುಡುಗರಿಗೆ ತಿಂಡಿಯಿಲ್ಲ.
(5ಕ) (5ಚ) ಹೊಸ ಅಕ್ಕಿಯನ್ನು ಬೇಯಿಸುವಾಗ ನೀರು ಸ್ವಲ್ಪ ಕಡಿಮೆ ಹಾಕ
ಬೇಕು.
(5ಟ) ಹುಲಿ ಹತ್ತಿರ ಬರುವಾಗ ಕೋತಿ ಎಚ್ಚರಿಕೆ ಕೊಡುತ್ತದೆ.
ಮೇಲೆ (5ಕ) ಸೊಲ್ಲಿನಲ್ಲಿ ಬಳಕೆಯಾಗಿರುವ ತಡವಾಗಿ ಬರುವ ಹುಡುಗರು ಎಂಬ ಹೆಸರುಕಂತೆ ಮತ್ತು ತಿಂಡಿ ಎಂಬ ಹೆಸರುಪದ - ಇವೆರಡೂ ‘ಎಂತಹ ಹುಡುಗರು’ ಮತ್ತು ‘ಎಂತಹ ವಸ್ತು’ ಎಂಬುದನ್ನು ತಿಳಿಸುತ್ತವಲ್ಲದೆ, ನಿಜಕ್ಕೂ ಅವು ‘ಕೆಲವು ಹುಡುಗರನ್ನು’ ಇಲ್ಲವೇ ‘ಒಂದು ತಿಂಡಿಯನ್ನು’ ಗುರುತಿಸುವುದಿಲ್ಲ.
(5ಚ)ದಲ್ಲಿ ಬಂದಿರುವ ಹೊಸ ಅಕ್ಕಿ, ನೀರು ಎಂಬವು, ಮತ್ತು (5ಟ)ದಲ್ಲಿ ಬಂದಿರುವ ಹುಲಿ, ಕೋತಿ ಎಂಬವುಗಳೂ ಹೀಗೆಯೇ. ಅವು ನೇರವಾಗಿ ಪಾಂಗುಗಳನ್ನು ಗುರುತಿಸಲು ಹೋಗುವುದಿಲ್ಲ; ಆದರೆ, ಅವು
ಪಾಂಗುಗಳನ್ನು ಗುರುತಿಸುವುದಿಲ್ಲ ಎಂಬುದಾಗಿ ಹೇಳುವ ಬದಲು, ಪಾಂಗುಗಳ ಬಗೆಯನ್ನು ಗುರುತಿಸುತ್ತವೆ ಎಂಬುದಾಗಿಯೂ ಹೇಳಬಹುದು.
ಈ ಎಲ್ಲಾ ಹೊಲಬುಗಳೂ ಸೊಲ್ಲುಗಳಲ್ಲಿ ಪಾಂಗುಗಳನ್ನು ಯಾವ ರೀತಿ ಯಲ್ಲಿ ನೆಲೆಗೊಳಿಸಲಾಗಿದೆ ಎಂಬುದನ್ನು ತಿಳಿಸುತ್ತವೆ. ಇವುಗಳ ಬಳಕೆಯ ಕುರಿತು ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ.
6.5.1 ನೆಲೆಗೊಳಿಸುವ ಪರಿಚೆಗಳು
ಪಾಂಗುಗಳಲ್ಲಿ ಅವನ್ನು ನೆಲೆಗೊಳಿಸಬಲ್ಲ ಕೆಲವು ಪರಿಚೆಗಳನ್ನು ಕಾಣಬಹುದು, ಮತ್ತು ಅವನ್ನು ತಿಳಿಸುವ ಮೂಲಕ ಆ ಪಾಂಗುಗಳನ್ನು ನೆಲೆಗೊಳಿಸಬಹುದು. ಇಂತಹ ಪರಿಚೆಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ:
(1) ತೋರುಪದಗಳ ಬಳಕೆ ಹೆಸರುಪದಗಳೊಂದಿಗೆ, ಆ, ಈ, ಮತ್ತು ಯಾವ ಎಂಬ ಮೂರು ತೋರುಪದ ಗಳಲ್ಲೊಂದನ್ನು ಬಳಸುವ ಮೂಲಕ, ಅವು ಗುರುತಿಸುವ ಪಾಂಗನ್ನು ನೆಲೆಗೊಳಿಸ ಲಾಗುತ್ತದೆ; ಇವುಗಳಲ್ಲಿ ಮೊದಲಿನ ಎರಡು ಪದಗಳು ‘ಪಾಂಗು ಯಾವುದು’ ಎಂಬುದನ್ನು ತಿಳಿಸಲು ಬಳಕೆಯಾಗುತ್ತವೆ, ಮತ್ತು ಮೂರನೆಯದು ‘ಪಾಂಗು ಯಾವುದೆಂದು ತನಗೆ ತಿಳಿದಿಲ್ಲ’ ಎಂಬುದನ್ನು ತಿಳಿಸಲು ಬಳಕೆಯಾಗುತ್ತದೆ:
(6ಕ) ಆ ಪುಸ್ತಕವನ್ನು ನಿಮಗೆಂದು ಬೇರೆ ಇರಿಸಿದ್ದೇನೆ. (6ಚ) ಈ ಮನೆಯನ್ನು ಹತ್ತು ಲಕ್ಶಕ್ಕೆ ಕೊಡುಕೊಂಡೆ. (6ಟ) ಜಾನಕಿ ಯಾವ ಮನೆಯನ್ನು ಮಾರಿದ್ದು?
(6ಕ)ದಲ್ಲಿ ಆ ಎಂಬುದು ಎದುರಿಗಿರುವ ಪುಸ್ತಕಗಳಲ್ಲಿ ತಾನು ಗುರುತಿಸು ತ್ತಿರುವುದು ಯಾವುದನ್ನು’ ಎಂಬುದನ್ನು, ಅದರ ಜಾಗನ್ನು ತೋರಿಸುವ ಮೂಲಕ, ತಿಳಿಸುತ್ತದೆ; (6ಚ)ದಲ್ಲಿ ಈ ಎಂಬುದೂ ಇದೇ ಕೆಲಸವನ್ನು ನಡೆಸು ತ್ತದೆ; ಆದರೆ, ಅದು ಆಡುಗನಿಗೆ ಹತ್ತಿರವಿರುವ ಮನೆಯನ್ನು ತೋರಿಸುವ ಮೂಲಕ ಇದನ್ನು ನಡೆಸುತ್ತದೆ; ಮಾತನಾಡುವಾಗ ಇದಕ್ಕಾಗಿ ತೋರುಬೆರಳನ್ನೂ ಬಳಸುತ್ತಿರಬಹುದು.
ಆದರೆ, (6ಟ)ದಲ್ಲಿ ಯಾವ ಎಂಬುದು ‘ಜಾನಕಿ ಮಾರಿದ ಮನೆ ಯಾವು ದೆಂಬುದು ತಿಳಿದಿಲ್ಲ’ ಎಂಬುದನ್ನು ತಿಳಿಸುವ ಮೂಲಕ, ‘ಕೇಳುಗನು ಗುರುತಿಸ ಬೇಕಾಗಿರುವ, ಮತ್ತು ಅದರ ಕುರಿತಾಗಿ ಹೆಚ್ಚಿನ ಸಂಗತಿಗಳನ್ನು ತಿಳಿಸಬೇಕಾ ಗಿರುವ ಮನೆ ಎಂತಹದು’ ಎಂಬುದನ್ನಶ್ಟೇ ತಿಳಿಸುತ್ತದೆ.
(ಕ) ಈ ಮೂರು ತೋರುಪದಗಳೂ ಹೆಸರುಪದಗಳೊಂದಿಗೆ ಮಾತ್ರವೇ ಬರಬಲ್ಲುವಾಗಿದ್ದು, ಯಾವ ಬಗೆಯ ಮಾರ್ಪಾಡುಗಳಿಗೂ ಒಳಗಾಗುವುದಿಲ್ಲ. ಆದರೆ, ಅವಕ್ಕೆ ವನು, ವಳು, ವರು, ದು, ವು ಮೊದಲಾದ ಕೆಲವು ಒಟ್ಟು ಗಳನ್ನು ಸೇರಿಸಿ, ಹೆಸರುಕಂತೆಗಳ ತಿರುಳು ಪದಗಳಾಗಿ ಬರಬಲ್ಲ ಅವನು, ಇವನು, ಯಾವನು ಮೊದಲಾದ ಬೇರೆ ಹಲವು ತೋರುಪದಗಳನ್ನು ಪಡೆಯಲು ಬರುತ್ತದೆ (6.6.2 ನೋಡಿ).
ಇದಲ್ಲದೆ, ಅಂತಹ-ಇಂತಹ-ಎಂತಹ ಮತ್ತು ಅಶ್ಟು-ಇಶ್ಟು-ಎಶ್ಟು ಎಂಬ ಪರಿಚೆರೂಪಗಳನ್ನು ಹೆಸರುಪದಗಳೊಂದಿಗೆ ನೆರವುಪದಗಳಾಗಿ ಬಳಸಿ, ಅವುಗಳ ಪರಿಚೆಯನ್ನು (6.3.8) ಇಲ್ಲವೇ ಅಳವಿಯನ್ನು (6.4.4) ತಿಳಿಸಲು, ಇಲ್ಲವೇ ಅದು ತನಗೆ ಗೊತ್ತಿಲ್ಲವೆಂದು ತಿಳಿಸಲು ಬಳಸಲಾಗುತ್ತದೆ. ಇವು ಗಳಲ್ಲಿಯೂ ಈ ತೋರುಪದಗಳು ಬೇರಿನ ರೂಪದಲ್ಲಿ ಬಳಕೆಯಾಗಿವೆ.
(ಚ) ಕೊಟ್ಟಹೆಸರುಗಳು ಅವನ್ನು ಕೊಟ್ಟಿರುವ ಒಂದು ಪಾಂಗನ್ನು ಮಾತ್ರವೇ ಗುರುತಿಸಬಲ್ಲುವಾದ ಕಾರಣ, ಅವುಗಳೊಂದಿಗೆ ಆ, ಈ ಇಲ್ಲವೇ ಯಾವ ಪದಗಳನ್ನು ಬಳಸಬೇಕಾಗುವುದಿಲ್ಲ; ಆದರೆ, ಒಂದೇ ಹೆಸರನ್ನು ಹಲವು ಪಾಂಗು ಗಳಿಗೆ (ಬೇರೆ ಬೇರೆಯಾಗಿ) ಕೊಟ್ಟಿರಬಹುದಾಗಿದ್ದು, ಅಂತಹ ಪಾಂಗುಗಳನ್ನು ಒಟ್ಟಾಗಿ, ಇಲ್ಲವೇ ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸಿ ಗುರುತಿಸ ಬೇಕಾಗಿರುವಲ್ಲಿ ಅವುಗಳೊಂದಿಗೆ ಈ ಪದಗಳನ್ನು ಬಳಸಲು ಬರುತ್ತದೆ:
(7ಕ) ಈ ರಾಮಚಂದ್ರನಿಗೆ ಆ ರಾಮಚಂದ್ರನಶ್ಟು ಹೆದರಿಕೆಯಿಲ್ಲ. (7ಚ) ಆ ಸುಬ್ಬಣ್ಣನಿಗೆ ತುಸುವೂ ಹೆದರಿಕೆಯಿಲ್ಲ. (7ಟ) ಯಾವ ರಾಮಚಂದ್ರನನ್ನು ನೀವು ಕಾಣಬೇಕಾಗಿದೆ?
(ಟ) ಆ ಮತ್ತು ಈ ಪದಗಳಿಗೆ ಎರಡು ಬಗೆಯ ಬಳಕೆಗಳಿವೆ: ಒಂದು ಪಾಂಗನ್ನು ಕೇಳುಗನ ಗಮನಕ್ಕೆ ತರುವುದು ಒಂದು ಬಳಕೆ; ಮತ್ತು ಒಂದೇ ಬಗೆಯ ಎರಡು ಪಾಂಗುಗಳಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸುವುದು ಇನ್ನೊಂದು ಬಳಕೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(8ಕ) ಆ ಪುಸ್ತಕವನ್ನು ಇಲ್ಲಿ ತನ್ನಿ. (8ಚ) ಆ ನಾಯಿ ಮಲಗಿದೆ; ಆದರೆ, ಈ ನಾಯಿ ಓಡಾಡುತ್ತಿದೆ.
(8ಕ)ದಲ್ಲಿ ಆಡುಗನಿಂದ ತುಸು ದೂರದಲ್ಲಿರುವ ಪುಸ್ತಕದ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಪುಸ್ತಕ ಪದದೊಂದಿಗೆ ಆ ತೋರುಪದವನ್ನು ಬಳಸಲಾಗಿದೆ; ಇದಕ್ಕೆ ಬದಲು, (8ಚ)ದಲ್ಲಿ ಎರಡು ನಾಯಿಗಳಲ್ಲಿ ಒಂದನ್ನು
ಇನ್ನೊಂದರಿಂದ ಬೇರ್ಪಡಿಸುವುದಕ್ಕಾಗಿ ನಾಯಿ ಪದದೊಂದಿಗೆ ಆ ಮತ್ತು ಈ ತೋರುಪದಗಳನ್ನು ಬಳಸಲಾಗಿದೆ.
(ತ) ಆ ಮತ್ತು ಈ ಎಂಬ ಈ ಎರಡು ತೋರುಪದಗಳ ಬಳಕೆಯ ಕುರಿತಾಗಿ, ಮತ್ತು ಅವುಗಳನ್ನು ಮೊದಲನೆಯ ಅಂಗವಾಗಿ ಪಡೆದಿರುವ ಬೇರೆ ಹಲವು ಬಗೆಯ ತೋರುಪದಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ (6.6.2)ರಲ್ಲಿ ಕೊಡಲಾಗಿದೆ.
(2) ಹೆಸರುಪದಗಳ ಪತ್ತುಗೆರೂಪದ ಬಳಕೆ ಹೆಸರುಪದಗಳನ್ನು ನೆಲೆಗೊಳಿಸುವುದಕ್ಕಾಗಿ ಅವುಗಳೊಂದಿಗೆ ಬೇರೆ ಹೆಸರು ಪದಗಳ ಪತ್ತುಗೆರೂಪವನ್ನೂ ಬಳಸಲು ಬರುತ್ತದೆ; ಎತ್ತುಗೆಗಾಗಿ, ರಾಜನ ಮಗ ಎಂಬ ಹೆಸರುಕಂತೆಯಲ್ಲಿ ರಾಜ ಪದದ ಪತ್ತುಗೆರೂಪವನ್ನು (ರಾಜನ ಎಂಬುದನ್ನು) ಬಳಸಲಾಗಿದ್ದು, ಅದು ಮಗ ಪದವನ್ನು ನೆಲೆಗೊಳಿಸುವಲ್ಲಿ ನೆರವು ನೀಡುತ್ತದೆ.
(1) ಇಂತಹ ಹೆಸರುಪದಗಳ ಪತ್ತುಗೆರೂಪವನ್ನು ಒಂದು ಇಡೀ ಸೊಲ್ಲಿನ ಅಡಕರೂಪವೆಂದೂ ತಿಳಿಯಬಹುದು. ಎತ್ತುಗೆಗಾಗಿ, (9ಕ)ದಲ್ಲಿ ಕೊಟ್ಟಿರುವ ಹೆಸರುಕಂತೆಯನ್ನು (9ಚ)ದಲ್ಲಿ ಕೊಟ್ಟಿರುವ ಸೊಲ್ಲಿನೊಂದಿಗೆ ಹೋಲಿಸಿ ನೋಡಬಹುದು:
ಕೆಳಗೆ
ರಮೇಶನ ಗಣಪತಿ (ತುಂಬಾ ಚನ್ನಾಗಿದೆ).
(9ಕ) (9ಚ) ರಮೇಶ ಒಂದು ಗಣಪತಿಯನ್ನು ಮಾಡಿದ್ದಾನೆ.
(9ಕ)ದಲ್ಲಿ ಬಂದಿರುವ ರಮೇಶನ ಎಂಬ ಪತ್ತುಗೆರೂಪಕ್ಕೆ (9ಚ) ಸೊಲ್ಲಿನ ಹುರುಳಿರಬಲ್ಲುದು; ಎಂದರೆ, ಅದನ್ನು ರಮೇಶ ಮಾಡಿದ ಗಣಪತಿ ಎಂಬು ದಾಗಿ ಬಿಡಿಸಿಹೇಳಲು ಬರುತ್ತದೆ.
ಹೆಸರುಪದಕ್ಕೂ ಅದರೊಂದಿಗೆ ಬಂದಿರುವ ಬೇರೊಂದು ಹೆಸರುಪದದ ಪತ್ತುಗೆರೂಪಕ್ಕೂ ನಡುವೆ ಹಲವು ಬಗೆಯ ಸಂಬಂದಗಳಿರಬಲ್ಲುದು; ಎತ್ತುಗೆ ಗಾಗಿ, ರಾಮುವಿನ ಕುದುರೆ ಎಂಬ ಹೆಸರುಕಂತೆಯಲ್ಲಿ ರಾಮು ಮತ್ತು ಕುದುರೆಗಳ ನಡುವೆ ಕೆಳಗೆ ಸೊಲ್ಲುಗಳ ಪರಿಚೆರೂಪದ ಮೂಲಕ ಕಾಣಿಸಿರು ವಂತಹ ಹಲವು ಸಂಬಂದಗಳಿರಬಲ್ಲುವು:
ರಾಮು ಕೊಂಡುಕೊಂಡ ಕುದುರೆ ರಾಮು ಸವಾರಿ ಮಾಡುತ್ತಿರುವ ಕುದುರೆ ರಾಮು ಪಂತದಲ್ಲಿ ಹಣ ಗೆದ್ದಿರುವ ಕುದುರೆ ರಾಮು ಚಿತ್ರ ಬಿಡಿಸಿರುವ ಕುದುರೆ
ರಾಮು ಮಣ್ಣಿನಲ್ಲಿ ಮಾಡಿದ ಕುದುರೆ ರಾಮು ಮರದಲ್ಲಿ ಕೆತ್ತಿದ ಕುದುರೆ ರಾಮು ಮೀಯಿಸುತ್ತಿರುವ ಕುದುರೆ ರಾಮು ಕನಸಿನಲ್ಲಿ ಕಂಡ ಕುದುರೆ
(2) ಆದರೆ, ಎಲ್ಲಾ ಪತ್ತುಗೆರೂಪಗಳ ಹುರುಳನ್ನೂ ಈ ರೀತಿ ಸೊಲ್ಲುಗಳ ಮೂಲಕ ವಿವರಿಸಲು ಬರುವುದಿಲ್ಲ; ಯಾಕೆಂದರೆ, ಪತ್ತುಗೆರೂಪಗಳಿಗೂ ಹೆಸರು ಪದಗಳಿಗೂ ನಡುವಿರುವ ಸಂಬಂದಗಳು (ಕ) ಒಂದು ಎಸಕದ ಪಾಂಗನ್ನು ತಿಳಿಸುವ ಸಂಬಂದ, ಮತ್ತು (ಚ) ಒಂದು ಪಾಂಗಿನ ಪರಿಚೆಯನ್ನು ತಿಳಿಸುವ ಸಂಬಂದ ಎಂಬುದಾಗಿ ಎರಡು ಮುಕ್ಯ ಬಗೆಯವಾಗಿರುತ್ತವೆ; ಎತ್ತುಗೆಗಾಗಿ, ಮೇಲೆ ಪರಿಶೀಲಿಸಿದ ಹೆಸರುಕಂತೆಯಲ್ಲಿ ರಾಮು ಮತ್ತು ಕುದುರೆ ಎಂಬವುಗಳು ಹಲವು ಬಗೆಯ ಎಸಕಗಳ ಪಾಂಗುಗಳಾಗಿ ಬರಬಲ್ಲುವಾಗಿದ್ದು, ಅವುಗಳ ನಡುವೆ ಎಸಕಗಳ ಪಾಂಗಿನ ಸಂಬಂದವಿದೆಯೆಂದು ಹೇಳಬಹುದು.
ಇದಕ್ಕೆ ಬದಲು, ರಾಮುವಿನ ಅಣ್ಣ ಎಂಬ ಇನ್ನೊಂದು ಹೆಸರುಕಂತೆಯಲ್ಲಿ ಬಂದಿರುವ ರಾಮು ಮತ್ತು ಅಣ್ಣ ಎಂಬ ಪದಗಳ ನಡುವೆ ಪಾಂಗಿನ ಪರಿಚೆ ಯನ್ನು ತಿಳಿಸುವ ಸಂಬಂದವಿದೆ; ಈ ಸಂಬಂದವನ್ನು ಹೆಸರುಕಂತೆಯ ತಿರುಳು ಪದವಾದ ಅಣ್ಣ ಎಂಬುದೇ ತಿಳಿಸುತ್ತದೆ. ಈ ಎರಡು ಬಗೆಯ ಸಂಬಂದಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳಲ್ಲಿ ಕಾಣ ಬಹುದು:
(10ಕ) ಈ ಕುದುರೆ ರಾಜುವಿನದು. (10ಚ) *ಈ ಅಣ್ಣ ರಾಜುವಿನವನು.
ಎಸಕದ ಪಾಂಗನ್ನು ತಿಳಿಸುವ ಹೆಸರುಕಂತೆಯನ್ನು (10ಕ)ದಲ್ಲಿ ಕಾಣಿಸಿ ದಂತಹ ಸೊಲ್ಲಾಗಿ ಮಾರ್ಪಡಿಸಲು ಬರುತ್ತದೆ; ಆದರೆ, ಪಾಂಗಿನ ಪರಿಚೆಯನ್ನು ತಿಳಿಸುವ ಹೆಸರುಕಂತೆಯನ್ನು ಆ ರೀತಿ ಸೊಲ್ಲಾಗಿ ಮಾರ್ಪಡಿಸಲು ಬರುವುದಿಲ್ಲ.
(3) ಈ ಎರಡು ಬಗೆಯ ಪತ್ತುಗೆರೂಪಗಳ ನಡುವಿರುವ ಇನ್ನೊಂದು ಮುಕ್ಯ ವಾದ ವ್ಯತ್ಯಾಸವಿದೆ: ಸಾಮಾನ್ಯವಾಗಿ, ಒಂದು ಹೆಸರುಕಂತೆಯಲ್ಲಿ ಒಂದಕ್ಕಿಂತ ಹೆಚ್ಚು ಎಸಕದ ಪಾಂಗನ್ನು ತಿಳಿಸುವ ಪತ್ತುಗೆರೂಪಗಳು ಬರುವುದು ಅಪರೂಪ. ಹೆಚ್ಚೆಂದರೆ, ಅಂತಹ ಎರಡು ಪತ್ತುಗೆರೂಪಗಳು ಬರಬಲ್ಲುವು; ಅದಕ್ಕಿಂತ ಹೆಚ್ಚು ಪತ್ತುಗೆರೂಪಗಳನ್ನು ಬಳಸಿದಲ್ಲಿ, ಹೆಸರುಕಂತೆ ತುಂಬಾ ಸಿಕ್ಕಲಾಗಿ ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲು ಮತ್ತು ಹೆಸರು ಕಂತೆಗಳ ಜೋಡಿಗಳನ್ನು ಗಮನಿಸಬಹುದು:
(11ಕ) ಜಾನಕಿ ಮಣ್ಣಿನಲ್ಲಿ ಒಂದು ಗೊಂಬೆ ಮಾಡಿದಳು. (11ಚ) ಜಾನಕಿಯ ಮಣ್ಣಿನ ಗೊಂಬೆ (12ಕ) ಜಾನಕಿ ಮಯ್ಸೂರಿನಲ್ಲಿ ಒಂದು ಲೆಕ್ಚರ್ ಕೊಟ್ಟಳು. (12ಚ) ಜಾನಕಿಯ ಮಯ್ಸೂರಿನ ಲೆಕ್ಚರ್ (13ಕ) ಜಾನಕಿ ನಿನ್ನೆ ಮಯ್ಸೂರಿನಲ್ಲಿ ಒಂದು ಲೆಕ್ಚರ್ ಕೊಟ್ಟಳು. (13ಚ) ?ಜಾನಕಿಯ ನಿನ್ನಿನ ಮಯ್ಸೂರಿನ ಒಂದು ಲೆಕ್ಚರ್
ಮೇಲಿನ ಹೆಸರುಕಂತೆಗಳಲ್ಲಿ ಬಂದಿರುವ ಪತ್ತುಗೆರೂಪಗಳೆಲ್ಲ ನೇರವಾಗಿ ತಿರುಳುಪದದೊಂದಿಗೆ ಸಂಬಂದಿಸಿರುತ್ತವೆ; ಅವು ಒಂದೇ ಎಸಕದ ಪಾಂಗು ಗಳನ್ನು ತಿಳಿಸುತ್ತಿರುವುದೇ ಇದಕ್ಕೆ ಕಾರಣ. ಎತ್ತುಗೆಗಾಗಿ, (11ಚ)ದಲ್ಲಿ ಬಂದಿರುವ ಜಾನಕಿಯ ಮಣ್ಣಿನ ಗೊಂಬೆ ಎಂಬ ಪದಕಂತೆಯಲ್ಲಿ ಜಾನಕಿ ಮತ್ತು ಮಣ್ಣು ಎಂಬವೆರಡನ್ನೂ ನೇರವಾಗಿ ಗೊಂಬೆ ಪದದೊಂದಿಗೆ ಸಂಬಂದಿಸಲು ಬರುತ್ತದೆ; ಇದಲ್ಲದೆ, ಅದನ್ನು ಜಾನಕಿಯ ಗೊಂಬೆ ಮತ್ತು ಮಣ್ಣಿನ ಗೊಂಬೆ ಎಂಬುದಾಗಿ ಬೇರ್ಪಡಿಸಿ ಹೇಳಲು ಬರುತ್ತದೆ. ಅವು ಮೂರೂ ಮಾಡು ಎಂಬ ಒಂದೇ ಎಸಕದ ಪಾಂಗುಗಳಾಗಿರುವುದೇ ಇದಕ್ಕೆ ಕಾರಣ.
ಇದಕ್ಕೆ ಬದಲು, ಪಾಂಗಿನ ಪರಿಚೆಯನ್ನು ತಿಳಿಸುವ ಹಲವು ಪತ್ತುಗೆರೂಪಗಳು ಒಂದೇ ಹೆಸರುಕಂತೆಯಲ್ಲಿ ಬರಬಲ್ಲುವಾಗಿದ್ದು, ಅವೆಲ್ಲ ಸಂಕಲೆಯ ಕೊಂಡಿಗಳ ಹಾಗೆ ಒಂದಕ್ಕೊಂದು ಸಂಬಂದಿಸಿರುತ್ತವೆ. ಎತ್ತುಗೆಗಾಗಿ, ರಾಮುವಿನ ಅಣ್ಣನ ಮಗನ ಹೆಂಡತಿಯ ತಮ್ಮನ ಮನೆ ಎಂಬ ಹೆಸರುಕಂತೆಯನ್ನು ಗಮನಿಸ ಬಹುದು:
ಇದರಲ್ಲಿ ರಾಮು ಪದದೊಂದಿಗೆ ಅಣ್ಣ ಪದವನ್ನು, ಅಣ್ಣ ಪದದೊಂದಿಗೆ ಮಗ ಪದವನ್ನು, ಮಗ ಪದದೊಂದಿಗೆ ಹೆಂಡತಿ ಪದವನ್ನು, ಹೆಂಡತಿ ಪದದೊಂದಿಗೆ ತಮ್ಮ ಪದವನ್ನು, ಮತ್ತು ತಮ್ಮ ಪದದೊಂದಿಗೆ ಮನೆ ಪದವನ್ನು ಸಂಬಂದಿಸಲಾಗಿದೆ; ಅವುಗಳಲ್ಲಿ ತಮ್ಮ ಎಂಬ ಒಂದು ಪದವನ್ನು ಹೊರತುಪಡಿಸಿ, ಉಳಿದ ಯಾವುವನ್ನೂ ನೇರವಾಗಿ ಮನೆ ಪದ ದೊಂದಿಗೆ ಸಂಬಂದಿಸಲು ಬರುವುದಿಲ್ಲ.
(5) ಒಂದು ಸೊಲ್ಲಿನಿಂದ ಪಾಂಗನ್ನು ತಿಳಿಸುವ ಹೆಸರುಕಂತೆಗಳನ್ನು ಉಂಟು ಮಾಡುವಲ್ಲಿ ಇನ್ನೊಂದು ಬಗೆಯ ಕಟ್ಟುಪಾಡೂ ಇದೆ; ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
ಹೆಸರುಕಂತೆಗಳು
ಗಿಡದ ಹೂವು ಹುಳದ ಬಾಲ ಕೊಡದ ಹಾಲು
ಹೆಸರುಗಳು ಹೂವಿನ ಗಿಡ ಬಾಲದ ಹುಳ ಹಾಲಿನ ಕೊಡ
ಹುಡುಗನ ಕೆಚ್ಚು
ಗೋಡೆಯ ಎತ್ತರ ಮುದುಕನ ಹಣ
ಕೆಚ್ಚಿನ ಹುಡುಗ ಎತ್ತರದ ಗೋಡೆ ಹಣದ ಮುದುಕ
ಮೇಲೆ ಎರಡು ಕುಂದ(ಕಾಲಂ)ಗಳಲ್ಲಿ ಕೊಟ್ಟಿರುವ ನುಡಿತಗಳ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ; ಮೊದಲನೇ ಕುಂದದಲ್ಲಿ ಕೊಟ್ಟಿರುವ ನುಡಿತಗಳೆಲ್ಲ ಹೆಸರುಕಂತೆಗಳು; ಅಂತಹ ಎಶ್ಟು ನುಡಿತಗಳನ್ನು ಬೇಕಿದ್ದರೂ ಹೊಸದಾಗಿ ಉಂಟುಮಾಡಿ ಬಳಸಬಹುದು; ಆದರೆ, ಎರಡನೇ ಕುಂದದಲ್ಲಿ ಕೊಟ್ಟಿರುವ ನುಡಿತಗಳು ಹೆಸರುಗಳ ಹಾಗೆ ಬಳಕೆಯಾಗುವ ಬದಲು, ಹೆಸರುಗಳ ಹಾಗೆ ಬಳಕೆಯಾಗುತ್ತವೆ.
ಎತ್ತುಗೆಗಾಗಿ, ಹೂವಿನ ಗಿಡ ಎಂಬುದು ಒಂದು ಬಗೆಯ ಗಿಡವನ್ನು ಹೆಸರಿಸು ತ್ತದೆ; ಹಾಲಿನ ಕೊಡ ಎಂಬುದು ಒಂದು ಬಗೆಯ ಕೊಡವನ್ನು ಹೆಸರಿಸುತ್ತದೆ; ಹೂವಿನ ಗಿಡದಲ್ಲಿ ಈಗ ಹೂವಿಲ್ಲ ಎನ್ನಬಹುದು, ಮತ್ತು ಹಾಲಿನ ಕೊಡ ದಲ್ಲಿ ಈಗ ಹಾಲಿಲ್ಲ ಎನ್ನಬಹುದು. ಹಾಗಾಗಿ, ಅವನ್ನು ಕೊಗೆತ (ವರ್ಣನೆ) ಗಳೆಂದು ಕರೆಯಲು ಬರುವುದಿಲ್ಲ.
ಆದರೆ, ಗಿಡದ ಹೂವು ಹೂವಿನದಲ್ಲ ಎಂದಾಗಲಿ, ಇಲ್ಲವೇ ಕೊಡದ ಹಾಲು ಕೊಡದ್ದಲ್ಲ ಎಂದಾಗಲಿ ಹೇಳಲು ಬರುವುದಿಲ್ಲ. ಯಾಕೆಂದರೆ, ಅವೆರಡೂ ಕೊಗೆತಗಳೇ. ಒಂದು ಹೆಸರುಕಂತೆಯಲ್ಲಿ ಬರುವ ಕೊಗೆತ ಆ ಹೆಸರು ಕಂತೆ ಬರುವ ಸೊಲ್ಲಿನ ಮಟ್ಟಿಗೆ ಮುನ್ನೆಣಿಕೆಯಾಗಿದ್ದು, ಅದನ್ನು ಅಲ್ಲಗಳೆಯಲು ಬರುವುದಿಲ್ಲ.
ಕನ್ನಡದಲ್ಲಿ ಯಾವ ಬಗೆಯ ಸಂಬಂದಗಳನ್ನು ಬಳಸಿ ಹೆಸರುಕಂತೆಗಳನ್ನು ಉಂಟುಮಾಡಬಹುದು, ಮತ್ತು ಯಾವ ಬಗೆಯ ಸಂಬಂದಗಳನ್ನು ಬಳಸಿ ಹೆಸರುಗಳನ್ನು ಉಂಟುಮಾಡಬಹುದು ಎಂಬ ವಿಶಯದಲ್ಲಿ ಕೆಳಗೆ ಕೊಟ್ಟಂತಹ ಕಟ್ಟಲೆಯಿರುವ ಹಾಗೆ ಕಾಣಿಸುತ್ತದೆ:
ಹೆಸರುಕಂತೆಗಳು
ಹೆಸರುಗಳು
ಪತ್ತುಗೆರೂಪ ತಿರುಳುಪದ ಜಾಗ
ಅಂಗ
ಪರಿಚೆ ಒಡವೆ ಎನಿಸುಗ
ತಿರುಳುಪದ ಜಾಗ ವಸ್ತು ಉಸಿರಿ
ಅಂಗ ಪರಿಚೆಯುಳ್ಳುದು ಪರಿಚೆಯುಳ್ಳುದು ಪರಿಚೆ ಒಡವೆ ಒಡೆಯ
ಎನಿಸುಗ ಎನಿಸಿಕೆ
ಪತ್ತುಗೆರೂಪ ವಸ್ತು ಉಸಿರಿ
ಒಡೆಯ
ಎನಿಸಿಕೆ
ಪತ್ತುಗೆರೂಪಗಳನ್ನು ಬಳಸುವಲ್ಲಿ ಕಾಣಿಸುವ ಈ ಕಟ್ಟುಪಾಡು ಎಸಕಪದಗಳ ಕೆಳಗೆ
ಕಾಣಿಸುವುದಿಲ್ಲ. ಎತ್ತುಗೆಗಾಗಿ,
ಪರಿಚೆರೂಪಗಳನ್ನು ಬಳಸುವಲ್ಲಿ ಕೊಟ್ಟಿರುವ ಪದಕಂತೆಗಳನ್ನು ಗಮನಿಸಬಹುದು:
ಹೂ ಬಿಡುವ ಗಿಡ ಬಾಲವಿರುವ ಹುಳ
ಗಿಡದಲ್ಲಿರುವ ಹೂ ಹುಳಕ್ಕಿರುವ ಬಾಲ ಕೊಡದಲ್ಲಿರುವ ಹಾಲು ಹಾಲು ಹಾಕುವ ಕೊಡ ಹುಡುಗನಿಗಿರುವ ಕೆಚ್ಚು ಗೋಡೆಗಿರುವ ಎತ್ತರ ಮುದುಕನಿಗಿರುವ ಹಣ
ಕೆಚ್ಚು ತೋರುವ ಹುಡುಗ ಎತ್ತರವಿರುವ ಗೋಡೆ ಹಣವಿರುವ ಮುದುಕ
ಮೇಲೆ ಎರಡು ಕುಂದಗಳಲ್ಲಿ ಕೊಟ್ಟಿರುವ ನುಡಿತಗಳೂ ಹೆಸರುಕಂತೆಗಳಾಗಿ ಬಳಕೆಯಾಗಬಲ್ಲುವು; ಇದಕ್ಕೆ ಮೊದಲು, ಹೆಸರುಪದಗಳ ಪತ್ತುಗೆರೂಪಗಳನ್ನು ಕೊಟ್ಟಿರುವಲ್ಲಿ ಕಾಣಿಸಿದಂತಹ ವ್ಯತ್ಯಾಸ ಇಲ್ಲಿ ಕಾಣಿಸುವುದಿಲ್ಲ. ಹಾಗಾಗಿ, ಇವನ್ನು ಈ ರೀತಿ ಎರಡು ಕುಂದಗಳಲ್ಲಿ ಗುಂಪಿಸುವುದಕ್ಕೆ ಯಾವ ವಿಶಯವನ್ನೂ ಬೆಂಬಲವಾಗಿ ಕೊಡಲು ಬರುವುದಿಲ್ಲ.
(3) ಎಸಕಪದಗಳ ಪರಿಚೆರೂಪದ ಬಳಕೆ ಎಸಕಪದಗಳಿಗೆ ಮುಂಬೊತ್ತಿನ ರೂಪ (ಮಾಡುವ), ಹಿಂಬೊತ್ತಿನ ರೂಪ (ಮಾಡಿದ), ಮತ್ತು ಅಲ್ಲಗಳೆತದ ರೂಪ (ಮಾಡದ) ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ (4.7.1 ನೋಡಿ); ಹೆಸರುಪದಗಳನ್ನು ನೆಲೆಗೊಳಿಸು ವುದಕ್ಕಾಗಿ, ಅವುಗಳೊಂದಿಗೆ ಈ ಪರಿಚೆರೂಪಗಳನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(14ಕ) ಓದುವ ಹುಡುಗರಿಗೆ ತೊಂದರೆ ಕೊಡಬೇಡಿ. (14ಚ) ಓದಿದ ಹುಡುಗ ಪಾಸಾಗಿದ್ದಾನೆ. (14ಟ) ಓದದ ಹುಡುಗ ಪಾಸಾಗಲಿಲ್ಲ.
(1) ಮುಂಬೊತ್ತು (ಓದುವ), ಹೊಂಬೊತ್ತು (ಓದಿದ), ಮತ್ತು ಅಲ್ಲ ಗಳೆತ (ಓದದ) ಎಂಬ ಈ ಮೂರು ಬಗೆಯ ಪದರೂಪಗಳನ್ನು ಎಸಕಪದಗಳ ಪರಿಚೆರೂಪಗಳೆಂದು ಹೆಸರಿಸಿದೆಯಾದರೂ, ನಿಜಕ್ಕೂ ಅವು ಇಡೀ ಸೊಲ್ಲುಗಳ ಪರಿಚೆರೂಪಗಳಾಗಿವೆ; ಯಾಕೆಂದರೆ, ಎಸಕಪದಗಳು ಸೊಲ್ಲುಗಳ ತಿರುಳುಪದ ಗಳಾಗಿ ಬಳಕೆಯಾಗುವ ಹಾಗೆ, ಅವುಗಳ ಪರಿಚೆರೂಪಗಳೂ ಸೊಲ್ಲುಗಳ ಅಡಕ ರೂಪದ ತಿರುಳುಪದಗಳಾಗಿ ಬಳಕೆಯಾಗುತ್ತವೆ.
ಎಸಕಪದಗಳ ಪರಿಚೆರೂಪಗಳಿಗೂ ಸೊಲ್ಲುಗಳಿಗೂ ನಡುವಿರುವ ಈ
ಸಂಬಂದವನ್ನು ಕೆಳಗಿನ ಎತ್ತುಗೆಗಳು ಚನ್ನಾಗಿ ತೋರಿಸಿಕೊಡುತ್ತವೆ:
(15ಕ) ಮುದುಕ ದಿನಾಲೂ ತಣ್ಣೀರಿನಲ್ಲಿ ಮೀಯುತ್ತಾನೆ.
(15ಚ) ದಿನಾಲೂ ತಣ್ಣೀರಿನಲ್ಲಿ ಮೀಯುವ ಮುದುಕ (16ಕ) ಮುದುಕ ಗೀತಾಪಾರಾಯಣ ಮಾಡುವುದನ್ನು ಮುಂದುವರಿಸಿದ. (16ಚ) ಗೀತಾಪಾರಾಯಣ ಮಾಡುವುದನ್ನು ಮುಂದುವರಿಸಿದ ಮುದುಕ (17ಕ) ಮುದುಕ ಇನ್ನೂ ಜಯ್ಲಿನಿಂದ ಹೊರಗೆ ಬರಲಿಲ್ಲ. (17ಚ) ಜಯ್ಲಿನಿಂದ ಇನ್ನೂ ಹೊರಗೆ ಬರದ ಮುದುಕ
ಮೇಲೆ ಕೊಟ್ಟಿರುವ (ಕ) ಸೊಲ್ಲುಗಳಲ್ಲಿ ಬಳಕೆಯಾಗಿರುವ ನುಡಿತಗಳೆಲ್ಲವೂ (ಚ) ಪದಕಂತೆಗಳಲ್ಲಿ ಹಾಗೆಯೇ ಉಳಿದುಕೊಂಡಿರುವುದನ್ನು ಕಾಣಬಹುದು; ಹೆಸರುಕಂತೆಗಳ ತಿರುಳುಪದವಾಗಿ ಬಂದಿರುವ ಪದಗಳನ್ನು (ಮುದುಕ ಎಂಬು ದನ್ನು) ಮಾತ್ರ ಈ (ಚ) ಪದಕಂತೆಗಳಲ್ಲಿರುವ ಪರಿಚೆರೂಪಗಳಿಂದ ತೆಗೆದು ಹಾಕಲಾಗಿದೆ.
(2) ಎಸಕಪದಗಳ ಅಲ್ಲಗಳೆಯುವ ಪರಿಚೆರೂಪಕ್ಕೆ ಮುಂಬೊತ್ತಿನ ಹುರುಳೂ ಬರಬಲ್ಲುದು, ಹಿಂಬೊತ್ತಿನ ಹುರುಳೂ ಬರಬಲ್ಲುದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪರಿಚೆರೂಪವನ್ನು ಗಮನಿಸಬಹುದು:
(18) ಶಾಲೆಗೆ ಹೋಗದ (ಹುಡುಗ) (18ಕ) ಈ ಹುಡುಗ ಶಾಲೆಗೆ ಹೋಗುವುದಿಲ್ಲ. (18ಚ) ಈ ಹುಡುಗ (ಇವತ್ತು) ಶಾಲೆಗೆ ಹೋಗಲಿಲ್ಲ.
(18)ದಲ್ಲಿ ಕೊಟ್ಟಿರುವ ಶಾಲೆಗೆ ಹೊಗದ ಎಂಬ ಅಲ್ಲಗಳೆಯುವ ಪರಿಚೆ ರೂಪಕ್ಕೆ (18ಕ) ತಿಳಿಸುವ ಮುಂಬೊತ್ತಿನ ಹುರುಳೂ ಬರಬಲ್ಲುದು, (18ಚ) ತಿಳಿಸುವ ಹಿಂಬೊತ್ತಿನ ಹುರುಳೂ ಬರಬಲ್ಲುದು.
(3) ಎಸಕಪದಗಳ ಪರಿಚೆರೂಪವನ್ನು ಹೆಸರುಪದಗಳ ಪತ್ತುಗೆರೂಪದ ಮೊದಲೂ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಗಳಲ್ಲಿ ಅದು ನೇರವಾU ತಿರುಳುಪದದ ಪರಿಚೆಯನ್ನು ತಿಳಿಸುತ್ತಿರಬಹುದು, ಇಲ್ಲವೇ ಅದರ ಬಳಿಕ ಬಂದ ಹೆಸರುಪದದ ಪರಿಚೆಯನ್ನೂ ತಿಳಿಸುತ್ತಿರಬಹುದು. ಈ ಇಪ್ಪುರುಳನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು:
(19) ಹುಲಿಯ ಬಾಯಿಗೆ ಬಿದ್ದ ದನದ ಕರು
ಈ ಹೆಸರುಕಂತೆಯಲ್ಲಿ ಬಂದಿರುವ ಹುಲಿಯ ಬಾಯಿಗೆ ಬಿದ್ದ ಎಂಬ ಪರಿಚೆರೂಪ ಆ ಹೆಸರುಕಂತೆಯ ತಿರುಳುಪದವಾದ ಕರು ಎಂಬುದರ ಪರಿಚೆ ಯನ್ನು ತಿಳಿಸುತ್ತಿರಬಹುದು, ಇಲ್ಲವೇ ಅದರ ನೆರವಿಗೆ ಬಳಕೆಯಾಗಿರುವ ದನದ ಎಂಬ ಪತ್ತುಗೆರೂಪದಲ್ಲಿರುವ ದನ ಪದದ ಪರಿಚೆಯಾಗಿರಬಹುದು. ಹಾಗಾಗಿ, (19)ನೇ ಹೆಸರುಕಂತೆ ‘ಕರು ಹುಲಿಯ ಬಾಯಿಗೆ ಬಿದ್ದಿದೆ’ ಎಂಬ ಸಂಗತಿಯನ್ನು ಬಳಸಿಕೊಳ್ಳಬಲ್ಲುದು, ಇಲ್ಲವೇ ‘ದನ ಹುಲಿಯ ಬಾಯಿಗೆ ಬಿದ್ದಿದೆ’ ಎಂಬ ಬೇರೊಂದು ಸಂಗತಿಯನ್ನೂ ಬಳಸಿಕೊಳ್ಳಬಲ್ಲುದು.
ಎಸಕಪದಗಳ ಎರಡು (ಇಲ್ಲವೇ ಹೆಚ್ಚು) ಪರಿಚೆರೂಪಗಳನ್ನೂ ಹೆಸರುಕಂತೆ ಗಳಲ್ಲಿ ಬಳಸಲು ಬರುತ್ತದೆ, ಮತ್ತು ಇಲ್ಲಿಯೂ ಮೊದಲನೆಯ ಪರಿಚೆರೂಪ ನೇರವಾಗಿ ಆ ಹೆಸರುಕಂತೆಯ (ತಿರುಳುಪದದ) ಪರಿಚೆಯನ್ನು ತಿಳಿಸುತ್ತದೆಯೋ ಇಲ್ಲವೇ ಆ ಪರಿಚೆರೂಪದ ಮುಂದಿರುವ ಎರಡನೇ ಪರಿಚೆರೂಪದಲ್ಲಿರುವ ಹೆಸರುಪದದ ಪರಿಚೆಯನ್ನು ತಿಳಿಸುತ್ತದೆಯೋ ಎಂಬ ವಿಶಯದಲ್ಲಿ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು:
(20) ಚೀನದಿಂದ ತಂದ ಕಪ್ಪು ಬಣ್ಣದ ಕಾಗದದಿಂದ ಮಾಡಿದ ನಾಲ್ಕು
ಪೆಟ್ಟಿಗೆಗಳು
ಮೇಲಿನ ಹೆಸರುಕಂತೆ ‘ನಾಲ್ಕು ಪೆಟ್ಟಿಗೆಗಳನ್ನು ಚೀನದಿಂದ ತರಲಾಗಿದೆ’ ಎಂಬುದಾಗಿ ತಿಳಿಸುತ್ತಿರಬಹುದು, ಇಲ್ಲವೇ ‘ಕಪ್ಪು ಬಣ್ಣದ ಕಾಗದವನ್ನು ಚೀನ ದಿಂದ ತರಲಾಗಿದೆ’ ಎಂಬುದಾಗಿಯೂ ತಿಳಿಸುತ್ತಿರಬಹುದು.
ಒಂದೇ ಹೆಸರುಕಂತೆಯಲ್ಲಿ ಒಟ್ಟಾಗಿ ಬಂದಿರುವ ಎರಡು ಪರಿಚೆರೂಪಗಳನ್ನು ಮತ್ತು ಇಲ್ಲವೇ ಹಾಗೂ ಪದಗಳಿಂದ ಬೇರ್ಪಡಿಸಿದಲ್ಲಿ, ಮೊದಲನೆಯ ಹುರುಳು ಮಾತ್ರ ಉಳಿದುಕೊಳ್ಳುತ್ತದೆ, ಮತ್ತು ಇಪ್ಪುರುಳು ಇಲ್ಲವಾಗುತ್ತದೆ:
(21ಕ) ಚೀನದಿಂದ ತಂದ ಮತ್ತು ಕಪ್ಪು ಬಣ್ಣದ ಕಾಗದದಿಂದ ಮಾಡಿದ
ನಾಲ್ಕು ಪೆಟ್ಟಿಗೆಗಳು
(21ಚ) ಚೀನದಿಂದ ತಂದ ಹಾಗೂ ಕಪ್ಪು ಬಣ್ಣದ ಕಾಗದದಿಂದ ಮಾಡಿದ
ನಾಲ್ಕು ಪೆಟ್ಟಿಗೆಗಳು
ಇಲ್ಲವೇ ಮತ್ತು ಆದರೆ ಎಂಬ ಪದಗಳನ್ನೂ ಇಂತಹ ಪರಿಚೆರೂಪಗಳನ್ನು
ಬೇರ್ಪಡಿಸಲು ಬಳಸಬಹುದು:
(22ಕ) ಮೂರು ವರ್ಶ ಶಾಲೆಗೆ ಹೋದ, ಆದರೆ ಒಂದಕ್ಶರವನ್ನೂ
ಬರೆಯಲು ಕಲಿಯದ ಹುಡುಗ
(22ಚ) ಕಡಿಮೆಗೆ ಸಿಕ್ಕಿದ ಇಲ್ಲವೇ ಬೇಡಿ ತಂದ ಆಟಿಕೆಗಳು
ಎಸಕಪದಗಳ ಪರಿಚೆರೂಪಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ
ಒಳಸೊಲ್ಲುಗಳ ಇಟ್ಟಳವನ್ನು ವಿವರಿಸುವಲ್ಲಿ ತಿಳಿಸಲಾಗುವುದು.
6.5.2 ತಿಳಿಯಬಲ್ಲ ಮತ್ತು ತಿಳಿಯಲಾಗದ ಗುರುತಿಸುವಿಕೆಗಳು
ಕೇಳುಗನಿಗೆ ಈಗಾಗಲೇ ತಿಳಿದಿರುವಂತಹ (ಇಲ್ಲವೇ ತಾನು ಬಳಸುವ ನುಡಿತ ದಿಂದ ಆತನಿಗೆ ತಿಳಿಯಬಹುದೆಂದು ಆಡುಗನು ಊಹಿಸಬಲ್ಲ) ಗುರುತಿಸುವಿಕೆ ಗಳು ಮತ್ತು ಆತನಿಗೆ ತಿಳಿದಿಲ್ಲದ (ಇಲ್ಲವೇ ತಾನು ಬಳಸುವ ನುಡಿತದಿಂದ ಆತನಿಗೆ ತಿಳಿಯಬಹುದೆಂದು ಆಡುಗನು ಊಹಿಸಲಾಗದ) ಗುರುತಿಸುವಿಕೆಗಳು ಎಂಬುದಾಗಿ ಬೇರೆ ಎರಡು ಬಗೆಯ ಗುರುತಿಸುವಿಕೆಗಳನ್ನೂ ಹೆಸರುಕಂತೆಗಳ ಮೂಲಕ ನಡೆಸಲಾಗುತ್ತದೆ.
ಇವನ್ನು (ಕೇಳುಗನಿಗೆ) ತಿಳಿಯಬಲ್ಲ ಮತ್ತು ತಿಳಿಯಲಾಗದ ಗುರುತಿಸು ವಿಕೆಗಳೆಂಬುದಾಗಿ ಇಲ್ಲಿ ಹೆಸರಿಸಲಾಗಿದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಮೂರು ಸೊಲ್ಲುಗಳನ್ನು ಗಮನಿಸಬಹುದು:
(23ಕ) ಹುಡುಗರು ಈಜಾಡಲು ಕೆರೆಗೆ ಹೋಗಿದ್ದಾರೆ. (23ಚ) ಹುಡುಗರು ಈಜಾಡಲು ಒಂದು ಕೆರೆಗೆ ಹೋಗಿದ್ದಾರೆ. (23ತ) ಹುಡುಗರು ಈಜಾಡಲು ಹೊಸ ಕೆರೆಗೆ ಹೋಗಿದ್ದಾರೆ.
ಮಾತನಾಡುವ ಸಂದರ್ಬದಲ್ಲಿ ಆಡುಗನ ಮತ್ತು ಕೇಳುಗನ ಮನಸ್ಸಿನಲ್ಲಿ ಒಂದೇ ಕೆರೆ ಇದೆಯಾದರೆ (ಅವರ ಊರಲ್ಲಿ ಇರುವುದು ಒಂದೇ ಕೆರೆಯಾದರೆ), ಅದನ್ನು ಗುರುತಿಸಲು, (23ಕ)ದಲ್ಲಿ ಕಾಣಿಸಿದ ಹಾಗೆ, ಕೆರೆ ಎಂದಿಶ್ಟೇ ಹೇಳಿದರೆ ಸಾಕಾಗುತ್ತದೆ.
ಇದಕ್ಕೆ ಬದಲು, ಒಂದಕ್ಕಿಂತ ಹೆಚ್ಚು (ಇಲ್ಲವೇ ಬೇರೆ ಬೇರೆ) ಕೆರೆಗಳು ಅವನ ಮನಸ್ಸಿನಲ್ಲಿ ಇರಬಹುದಾದರೆ, (23ಚ)ದಲ್ಲಿ ಕಾಣಿಸಿದ ಹಾಗೆ, ಅದರೊಂದಿಗೆ ಎಣಿಕೆಯನ್ನು ತಿಳಿಸುವ ಒಂದು ಎಂಬ ಪದವನ್ನು ಬಳಸಬೇಕಾಗು ತ್ತದೆ; ಇಲ್ಲವೇ ಆಡುಗನ ಮನಸ್ಸಿನಲ್ಲಿರುವ ಕೆರೆ ಯಾವುದೆಂಬುದನ್ನು, (23ಟ) ದಲ್ಲಿ ಕಾಣಿಸಿದ ಹಾಗೆ, ಹೊಸ ಕೆರೆಗೆ ಎಂಬುದಾಗಿ ನೆಲೆಗೊಳಿಸಿ ತಿಳಿಸ ಬೇಕಾಗುತ್ತದೆ.
ಇವುಗಳಲ್ಲಿ ಕೆರೆಗೆ ಎಂಬ ಹೆಸರುಪದ, ಮತ್ತು ಹೊಸ ಕೆರೆಗೆ ಎಂಬ ಹೆಸರುಕಂತೆಗಳು ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಯನ್ನೂ, ಒಂದು ಕೆರೆ ಎಂಬುದು ಕೇಳುಗನಿಗೆ ತಿಳಿಯಲಾಗದ ಗುರುತಿಸುವಿಕೆಯನ್ನೂ ನಡೆಸು ತ್ತವೆ ಎಂಬುದಾಗಿ ಹೇಳಬಹುದು.
ಈ ರೀತಿ ತಾನು ಗುರುತಿಸುವ ಪಾಂಗನ್ನು ಕೇಳುಗನು ತಿಳಿಯಬಲ್ಲನು ಎಂಬುದಾಗಿ ಆಡುಗನು ತೀರ್ಮಾನಿಸಬೇಕಿದ್ದಲ್ಲಿ ಅದು ಎಂತಹ ಪಾಂಗಾಗಿರಬೇಕು ಎಂಬುದನ್ನು ಇಲ್ಲಿ ಪರಿಶೀಲಿಸಬಹುದು:
(1) ಯಾರು? ಇಲ್ಲವೇ ಯಾವುದು? ಎಂಬ ಕೇಳ್ವಿ ಏಳದಿರುವಂತಹ ಕಡೆಗಳಲ್ಲೆಲ್ಲ ಕೇಳುಗನು ತಿಳಿಯಬಲ್ಲ ಗುರುತಿಸುವಿಕೆಯಿದೆ ಎಂಬುದಾಗಿ ಹೇಳ ಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸ ಬಹುದು:
(24ಕ) ಮೇಜಿನ ಮೇಲಿರುವ ಪುಸ್ತಕ ನಿನಗೆ. (24ಚ) ಮೇಜಿನ ಮೇಲಿರುವ ಪುಸ್ತಕಗಳಲ್ಲಿ ಒಂದು ನಿನಗೆ.
ಮೇಜಿನ ಮೇಲೆ ಒಂದೇ ಪುಸ್ತಕವಿದೆಯಾದರೆ, ಮೇಜಿನ ಮೇಲಿರುವ ಪುಸ್ತಕ ಎಂದಿಶ್ಟೇ ಹೇಳಿದರೆ ಸಾಕಾಗುತ್ತದೆ; ಯಾಕೆಂದರೆ, ಆತ ಹೇಳಿರುವುದು ಯಾವ ಪುಸ್ತಕವನ್ನು ಎಂಬುದು ಕೇಳುಗನಿಗೆ ಕೂಡಲೇ ಗೊತ್ತಾಗುತ್ತದೆ; ಆದರೆ, ಅಲ್ಲಿ ಒಂದಕ್ಕಿಂತ ಹೆಚ್ಚು ಪುಸ್ತಕಗಳಿವೆಯಾದರೆ, ಮತ್ತು ಅಂತಹ ಸಂದರ್ಬದಲ್ಲಿ (24ಕ) ಸೊಲ್ಲನ್ನು ಬಳಸಿದರೆ, ಆಡುಗ ತನಗೆಂದು ಹೇಳುತ್ತಿರುವುದು ಮೇಜಿನ ಮೇಲಿರುವ ಪುಸ್ತಕಗಳಲ್ಲಿ ಯಾವುದನ್ನು ಎಂಬ ವಿಶಯದಲ್ಲಿ ಕೇಳುಗನಿಗೆ ಗೊಂದಲವಾಗಬಲ್ಲುದು.
ಹಾಗಾಗಿ, (24ಚ)ದಲ್ಲಿ ಕಾಣಿಸಿದ ಹಾಗೆ, ಅಂತಹ ಸಂದರ್ಬದಲ್ಲಿ ಮೇಜಿನ ಮೇಲಿರುವ ಪುಸ್ತಕಗಳಲ್ಲಿ ಒಂದು ಎಂಬುದಾಗಿ ತಿಳಿಯಲಾಗದ ಗುರುತಿಸು ವಿಕೆಯನ್ನು ಬಳಸಬೇಕಾಗುತ್ತದೆ.
(2) ಆದರೆ, ನಿಜಕ್ಕೂ ಒಂದು ಪಾಂಗನ್ನು ಕೇಳುಗನು ಗುರುತಿಸಬಲ್ಲನೆಂದು ತಿಳಿಯಲು ಈ ರೀತಿ ಆತನಿಗೆ ಅದನ್ನು ಹೆಕ್ಕಿ ತೆಗೆಯಲು ಸಾದ್ಯವಾಗ ಬೇಕೆಂದೇನೂ ಇಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸ ಬಹುದು:
(25ಕ) ನನ್ನ ಒಬ್ಬ ಗೆಳೆಯನ ಮಗ ಇವತ್ತು ಆಪೀಸಿಗೆ ಬಂದಿದ್ದ. (25ಚ) ಇವತ್ತು ಅವರು ತೋರಿಸಿದ ಮನೆಗಳಲ್ಲಿ ಒಂದಕ್ಕೆ ಕಿಟಿಕಿಗಳೇ
ಇರಲಿಲ್ಲ.
(25ಕ)ದಲ್ಲಿ ನನ್ನ ಒಬ್ಬ ಗೆಳೆಯನ ಮಗ ಎಂಬ ಹೆಸರುಕಂತೆ ಬಂದಿದ್ದು, ಅದರಲ್ಲಿ ನೆರವು ನುಡಿತವಾಗಿ ಬಂದಿರುವ ಒಬ್ಬ ಗೆಳೆಯ ಎಂಬುದು ತಿಳಿಯ ಲಾಗದ ಪಾಂಗನ್ನು ಗುರುತಿಸುತ್ತಿದೆಯಾದರೂ, ಇಡೀ ಹೆಸರುಕಂತೆ ತಿಳಿಯಬಲ್ಲ ಪಾಂಗನ್ನೇ ಗುರುತಿಸುತ್ತದೆ; ಅದರ ತಿರುಳುಪದವಾಗಿರುವ ಮಗ ಎಂಬುದು
ಒಬ್ಬ ಎಂಬುದರೊಂದಿಗೆ ಬಾರದಿರುವುದನ್ನು (ನನ್ನ ಒಬ್ಬ ಗೆಳೆಯನ ಒಬ್ಬ ಮಗ ಎಂಬುದಾಗಿ ಹೇಳದಿರುವುದನ್ನು) ಗಮನಿಸಬಹುದು.
ಇದೇ ರೀತಿಯಲ್ಲಿ (25ಚ)ದಲ್ಲಿ ಬಂದಿರುವ ಅವನು ತೋರಿಸಿದ ಮನೆ ಗಳಲ್ಲಿ ಒಂದು ಎಂಬುದು ಕೇಳುಗನಿಗೆ ತಿಳಿಯಲಾಗದ ಪಾಂಗಾದರೂ ಕಿಟಿಕಿ ಗಳು ಎಂಬುದು ತಿಳಿಯಬಲ್ಲ ಪಾಂಗಾಗಿದೆ.
(3) ಇದಲ್ಲದೆ, ಕೆಲವೊಮ್ಮೆ ಹೆಸರುಕಂತೆಯ ತಿರುಳುಪದ ಒಂದೇ ಪಾಂಗನ್ನು ತಿಳಿಸದಿರುವಲ್ಲೂ ಅದನ್ನು ತಿಳಿಯಬಲ್ಲ ಗುರುತಿಸುವಿಕೆಯಾಗಿ ಬಳಸಿರುವುದನ್ನು ಕಾಣಬಹುದು:
(26ಕ) ಅವನ ಕಾಲು ಮುರಿದುಹೋಗಿದೆ. (26ಚ) ರಾಜುವಿನ ಮನೆಯ ಹಂಚುಗಳು ಒಡೆದುಹೋಗಿವೆ. (26ಟ) ರಾಜುವಿನ ಮನೆಯ ಕೆಲವು ಹಂಚುಗಳು ಒಡೆದುಹೋಗಿವೆ.
ಮೇಲೆ (26ಕ)ದಲ್ಲಿ ಅವನ ಕಾಲುಗಳಲ್ಲಿ ಯಾವುದು ಮುರಿದುಹೋಗಿದೆ (ಎಡದ್ದೋ, ಬಲದ್ದೋ) ಎಂಬುದನ್ನು ತಿಳಿಸಿಲ್ಲವಾದರೂ, ಅವನ ಕಾಲು ಎಂಬುದನ್ನು ತಿಳಿಯಬಲ್ಲ ಗುರುತಿಸುವಿಕೆಯಾಗಿ ಬಳಸಲಾಗಿದೆ; ಇದೇ ರೀತಿ ಯಲ್ಲಿ ‘ರಾಜುವಿನ ಮನೆಯ ಕೆಲವು ಹಂಚುಗಳು’ ಮಾತ್ರ ಒಡೆದಿವೆಯಾದರೂ ಹಂಚುಗಳು ಎಂಬ ತಿರುಳುಪದವನ್ನು (26ಚ) ಸೊಲ್ಲಿನಲ್ಲಿ ತಿಳಿಯಬಲ್ಲ ಗುರುತಿಸುವಿಕೆಯಾಗಿ ಬಳಸಲಾಗಿದೆ.
ಇಲ್ಲಿ ಕೇಳುಗನ ಗುರುತಿಸುವಿಕೆಗೆ ಈ ವಿವರಗಳು ಮುಕ್ಯವಲ್ಲ ಎಂಬುದಾಗಿ ಆಡುಗನು ತಿಳಿದುಕೊಂಡಿರುವುದೇ ಇಂತಹ ಬಳಕೆಗಳಿಗೆ ಕಾರಣವಿರಬೇಕು. ಅದು ಮುಕ್ಯವೆಂದು ಅನಿಸಿರುವಲ್ಲಿ ಆಡುಗನು. (26ಟ)ದಲ್ಲಿ ಕಾಣಿಸಿದ ಹಾಗೆ, ಕೆಲವು ಹಂಚುಗಳು ಎಂಬುದಾಗಿ ತಿಳಿಯಲಾಗದ ಗುರುತಿಸುವಿಕೆಯನ್ನು ಬಳಸಬಹುದು. (4) ಎಲ್ಲಾ ಬಗೆಯ ತಿಳಿಯಲಾಗದ ಗುರುತಿಸುವಿಕೆಗಳೂ ಅವನ್ನು ನಡೆಸುವ ಹೆಸರುಕಂತೆಗಳನ್ನು ಒಮ್ಮೆ ಸೊಲ್ಲಿನಲ್ಲಿ ಬಳಸಿದೊಡನೆಯೇ ತಿಳಿಯಬಲ್ಲ ಗುರುತಿಸುವಿಕೆಗಳಾಗಿ ಬಿಡುತ್ತವೆ. ಅವು ನಿಜಕ್ಕೂ ಎಂತಹ ವ್ಯಕ್ತಿ, ಪ್ರಾಣಿ, ಇಲ್ಲವೇ ವಸ್ತುವನ್ನು ಗುರುತಿಸುತ್ತವೆ ಎಂಬುದು ಕೇಳುಗನಿಗೆ ಗೊತ್ತಾಗದಿದ್ದರೂ ಅವನ್ನು ತಾನು ತಿಳಿಯಬಲ್ಲೆನೆಂದು ಆತನು ಒಪ್ಪಿಕೊಳ್ಳಬೇಕಾಗುತ್ತದೆ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(27) ಇವತ್ತು ಕಾಡಿನಲ್ಲಿ ಬರುವಾಗ ನಾನು ಒಂದು ಹುಲಿಯನ್ನು ನೋಡಿದೆ; ಅದು ಒಂದು ಬಂಡೆಕಲ್ಲಿನ ಮೇಲೆ ಕುಳಿತು ಏನನ್ನೋ ತಿನ್ನುತ್ತಿತ್ತು.
ಇಲ್ಲಿ ಒಂದು ಹುಲಿ ಎಂಬುದು ಆಡುಗನು ನೋಡಿದ್ದ ಒಂದು ನಿಜವಾದ ಹುಲಿಯಿರಬಹುದು; ಇಲ್ಲವೇ ಅದೊಂದು ಕಲ್ಪಿತ ಹುಲಿಯಾಗಿರಬಹುದು, ಎಂದರೆ ಆತ ಸುಳ್ಳು ಹೇಳುತ್ತಿರಬಹುದು; ನಿಜಕ್ಕೂ ಆತ ಆವತ್ತು ಕಾಡಿಗೆ ಹೋಗಿರದೇ ಇದ್ದರೂ ಮೇಲಿನ ಸೊಲ್ಲನ್ನು ಹೇಳಬಲ್ಲ.
ಆದರೆ, ಕೇಳುಗನು ಇದನ್ನೆಲ್ಲ ವಿಚಾರಿಸುತ್ತ ಹೋದಲ್ಲಿ, ಆಡುಗನ ಮಾತು ಮುಂದಕ್ಕೆ ಹೋಗಲಾರದು. ಹಾಗಾಗಿ, ಆಡುಗನು ಒಂದು ಹುಲಿ ಎಂಬ ಹೆಸರುಕಂತೆಯ ಮೂಲಕ ಒಂದು ಪಾಂಗನ್ನು ಹೊಸದಾಗಿ ಗುರುತಿಸುತ್ತಿರುವ ಹಾಗೆಯೇ ಕೇಳುಗನು ಅದನ್ನು ಒಪ್ಪಿಕೊಂಡು, ಆತನು ತನ್ನ ಮಾತನ್ನು ಮುಂದು ವರಿಸಲು ಬಿಡಬೇಕಾಗುತ್ತದೆ.
ಆಡುಗರು ತಮ್ಮ ಸೊಲ್ಲುಗಳಲ್ಲಿ ಇಂತಹ ಹಲವಾರು ತಿಳಿಯಲಾಗದ ಪಾಂಗುಗಳನ್ನು ಹೊಸದಾಗಿ ಗುರುತಿಸುತ್ತಲೇ ಇರುತ್ತಾರೆ; ಮತ್ತು ಅವನ್ನೆಲ್ಲ ಕೇಳುಗರು ಒಪ್ಪಿಕೊಳ್ಳುತ್ತಲೂ ಇರುತ್ತಾರೆ. ಆದರೆ, ಅವು ಎಂತಹವಿರಬಹುದು
- ನಿಜವೋ, ಸುಳ್ಳೋ, ಕಲ್ಪಿತವೋ ಎಂಬುದನ್ನೆಲ್ಲ ಮಾತು ಮುಂದುವರಿಯು ತ್ತಿರುವ ಹಾಗೆ ಕೇಳುಗರು ತಾವೇ ತೀರ್ಮಾನಿಸಿಕೊಳ್ಳುತ್ತಲೂ ಇರುತ್ತಾರೆ.
ಈ ವಿಶಯದಲ್ಲಿ ಒಬ್ಬೊಬ್ಬ ಕೇಳುಗನು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿರಬಹುದು. ಎತ್ತುಗೆಗಾಗಿ, ಬೂತ-ಪಿಶಾಚಿಗಳ ಮಾತು ಬಂದಾಗ, ಅವು ನಿಜಕ್ಕೂ ಇರುವಂತಹವು ಎಂಬ ತೀರ್ಮಾನಕ್ಕೆ ಕೆಲವರು ಕೇಳುಗರು ಬರಬಹುದು; ಆದರೆ, ಬೇರೆ ಕೆಲವರು ಕೇಳುಗರು ಅವು ಬರೀ ಹುಸಿ ನಂಬಿಕೆಗಳು, ಇಲ್ಲವೇ ಕಲ್ಪಿತವಾದವುಗಳು ಎಂಬುದಾಗಿ ತೀರ್ಮಾನಿಸಬಹುದು.
ಹೀಗಿದ್ದರೂ, ಒಂದು ಬೂತ ಎಂಬ ಹೆಸರುಕಂತೆಯ ಮೂಲಕ ಹೊಸದಾಗಿ ಗುರುತಿಸಿದುದನ್ನು ಆಮೇಲೆ ಅದು, ಅದನ್ನು ಎಂಬಂತಹ ತಿಳಿಯಬಲ್ಲ ಗುರುತಿಸುವಿಕೆಗಳ ಮೂಲಕ ಮುಂದುವರಿಸುವುದನ್ನು ಇಬ್ಬರೂ ತಮ್ಮ ಮಾತು ಗಳಲ್ಲಿ ನಡೆಸಲೇಬೇಕಾಗುತ್ತದೆ.
ಈ ರೀತಿ, ಹೆಸರುಪದ ಮತ್ತು ಹೆಸರುಕಂತೆಗಳ ಮೂಲಕ ಆಡುಗರು ಗುರುತಿಸುವ ಪಾಂಗುಗಳು ಹಲವು ಪದರಗಳಲ್ಲಿ ಕಾಣಿಸಿಕೊಳ್ಳುತ್ತವೆ: ಪುರಾಣ ಗಳಲ್ಲಿ ಬರುವ ಪಾಂಗುಗಳು ಕೆಲವರ ಮಟ್ಟಿಗೆ ಕಲ್ಪಿತವಾದವುಗಳು, ಮತ್ತು ಬೇರೆ ಕೆಲವರ ಮಟ್ಟಿಗೆ ನಿಜವಾದವುಗಳು; ಕತೆ-ಕಾದಂಬರಿಗಳಲ್ಲಿ ಬರುವವು ಎಲ್ಲರ ಮಟ್ಟಿಗೂ ಕಲ್ಪಿತವಾದವುಗಳೇ; ಚರಿತ್ರೆಗಳಲ್ಲಿ ಮತ್ತು ಆತ್ಮಕತೆಗಳಲ್ಲಿ ಬರುವವು ನಿಜವಾದವುಗಳಾದರೂ ಅವುಗಳಲ್ಲಿ ಸ್ವಲ್ಪಮಟ್ಟಿಗೆ ಕಲ್ಪನೆಯೂ ಸೇರಿಕೊಂಡಿರುತ್ತದೆ. ಈ ಎಲ್ಲಾ ಬಗೆಯ ಪಾಂಗುಗಳೂ, ಅವನ್ನೊಮ್ಮೆ ಹೊಸ ದಾಗಿ ಗುರುತಿಸಿದೊಡನೆ, ಅವು ಕೇಳುಗನಿಗೆ ಇಲ್ಲವೇ ಓದುಗನಿಗೆ ತಿಳಿಯಬಲ್ಲ ಗುರುತಿಸುವಿಕೆಗಳಾಗಿಬಿಡುತ್ತವೆ.
(5) ಒಂದು ಎಂಬ ಪದವನ್ನು ಬಳಸಿ ಮಾತ್ರವಲ್ಲದೆ, ಬೇರೆ ಎಣಿಕೆಪದ ಗಳನ್ನು ಬಳಸಿಯೂ ತಿಳಿಯಲಾಗದ ಪಾಂಗುಗಳನ್ನು ಈ ರೀತಿ ಹೊಸದಾಗಿ
ಗುರುತಿಸಲು ಬರುತ್ತದೆ, ಮತ್ತು ಹಲವು, ಕೆಲವು, ತುಂಬಾ, ತುಸು, ಹೆಚ್ಚಿನ ಮೊದಲಾದ ಬೇರೆಯೂ ಕೆಲವು ಅಳವಿಯ ಪದಗಳನ್ನು ಬಳಸಿಯೂ ಪಾಂಗು ಗಳನ್ನು ಹೊಸದಾಗಿ ಗುರುತಿಸಲು ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(28ಕ) ಅವರ ಮನೆಯಲ್ಲಿ ಎರಡು ಎಮ್ಮೆಗಳು ಮಾರಾಟಕ್ಕಿವೆ. (28ಚ) ಮರದ ಮೇಲೆ ಕೆಲವು ಹಕ್ಕಿಗಳು ಕುಳಿತಿವೆ. (28ಟ) ಅವನಿಗೆ ತುಂಬಾ ಹಣ ಸಿಕ್ಕಿದೆ. (28ತ) ಈ ಶಾಲೆಯ ಹೆಚ್ಚಿನ ಹುಡುಗರೂ ಹಳ್ಳಿಯಿಂದ ಬರುತ್ತಾರೆ.
(6) ಎಣಿಕೆ ಮತ್ತು ಅಳವಿ ಪದಗಳು ಹೆಸರುಪದದ ಮೊದಲೂ ಬರ ಬಲ್ಲುವು, ಅದರ ಬಳಿಕವೂ ಬರಬಲ್ಲುವು (ಒಬ್ಬ ಹುಡುಗ, ಹುಡುಗನೊಬ್ಬ; ಒಂದು ಮನೆ, ಮನೆಯೊಂದು); ಆದರೆ, ಇವುಗಳಲ್ಲಿ ಹೆಸರುಪದದ ಮೊದಲು ಬರುವ ಎಣಿಕೆ ಮತ್ತು ಅಳವಿಪದಗಳು ಮಾತ್ರ ತಿಳಿಯಲಾಗದ ಪಾಂಗನ್ನು ಗುರುತಿಸುವಲ್ಲಿ ನೆರವಾಗುತ್ತವೆ; ಹೆಸರುಪದಗಳ ಬಳಿಕ ಬರುವ ಪದಗಳು ಅಳವಿಯನ್ನು ತಿಳಿಸುವ ಕೆಲಸವನ್ನು ಮಾತ್ರ ಮಾಡುತ್ತವೆ.
ಈ ಕಾರಣಕ್ಕಾಗಿ, ತಿಳಿಯಬಲ್ಲ ಗುರುತಿಸುವಿಕೆಯನ್ನು ನಡೆಸುವ ಆಡುಗಪದ, ಕೊಟ್ಟಹೆಸರು, ಮತ್ತು ತೋರುಪದಗಳೊಂದಿಗೆ ಎಣಿಕೆ ಮತ್ತು ಅಳವಿಪದಗಳನ್ನು ಬಳಸಬೇಕಾಗಿರುವಲ್ಲಿ ಅವನ್ನು ಆ ಪದಗಳ ಬಳಿಕ ಬಳಸಲು ಬರುತ್ತದಲ್ಲದೆ ಮೊದಲು ಬಳಸಲು ಬರುವುದಿಲ್ಲ:
(29ಕ) ನಾನೊಬ್ಬ (ಒಬ್ಬ ನಾನು) ಮನೆಯಲ್ಲೇ ಇರುತ್ತೇನೆ. (29ಚ) ರಾಜುವೊಬ್ಬ (ಒಬ್ಬ ರಾಜು) ಮಾತೇ ಆಡುವುದಿಲ್ಲ. (29ಟ) ಅವರು ಕೆಲವರು (ಕೆಲವರು ಅವರು) ಇಲ್ಲಿದ್ದಾರೆ. (29ತ) ಇದೊಂದನ್ನು (ಒಂದಿದನ್ನು) ಒಳಗಿರಿಸಿ.
(7) ಒಂದಕ್ಕಿಂತ ಹೆಚ್ಚು ಪಾಂಗುಗಳಿರಬಹುದಾದ ಕಡೆಗಳಲ್ಲಿ ಮಾತ್ರ ತಿಳಿಯ ಲಾಗದ ಗುರುತಿಸುವಿಕೆಯನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಸುಳ್ಳು ಎಂಬುದು ಒಂದಕ್ಕಿಂತ ಹೆಚ್ಚು ಇರಬಲ್ಲುದು; ಹಾಗಾಗಿ, ಅವನು ಒಂದು ಸುಳ್ಳು ಹೇಳಿದ ಎನ್ನಲು ಬರುತ್ತದೆ; ಆದರೆ, ನನ್ನಿ (ಇಲ್ಲವೇ ಸತ್ಯ) ಎಂಬುದು ಒಂದೇ ಇರಬಲ್ಲುದು; ಹಾಗಾಗಿ, *ಅವನು ಒಂದು ನನ್ನಿ ಹೇಳಿದ ಎನ್ನಲು ಬರುವುದಿಲ್ಲ.
ಕೊಟ್ಟ ಹೆಸರುಗಳನ್ನು ಬಳಸುವಲ್ಲೂ ಇಂತಹದೇ ಕಟ್ಟುಪಾಡು ಕಾಣಿಸಿಕೊಳ್ಳು ತ್ತದೆ; ಮಯ್ಸೂರು ಎಂಬ ಹೆಸರಿನ ನಗರ ಒಂದೇ ಇದೆ; ಹಾಗಾU, *ಅವನು ಒಂದು ಮಯ್ಸೂರಿಗೆ ಹೋದ ಎನ್ನಲು ಬರುವುದಿಲ್ಲ. ಆದರೆ, ಒಂದೇ
ಹೆಸರಿನ ಇಬ್ಬರು ಇಲ್ಲವೇ ಹೆಚ್ಚು ಮಂದಿ ಇರುವಲ್ಲಿ ಇಂತಹ ಬಳಕೆಗಳನ್ನೂ ಕಾಣಬಹುದು: ಒಬ್ಬ ಗಣಪತಿ ಮಯ್ಸೂರಿಗೆ ಹೋಗಿದ್ದಾನೆ.
6.5.3 ತಿಳಿಯಬಲ್ಲ ಗುರುತಿಸುವಿಕೆಯ ಬಗೆಗಳು
ತಾನು ಗುರುತಿಸುವ ಪಾಂಗು ತಿಳಿಯಲಾಗದ್ದು, ಇಲ್ಲವೇ ಹೊಸದು ಎಂಬುದಾಗಿ ಆಡುಗನು ತಿಳಿಸದಿರುವಲ್ಲೆಲ್ಲ ಕೇಳುಗನ ಮಟ್ಟಿಗೆ ತಿಳಿಯಬಲ್ಲ ಗುರುತಿಸು ವಿಕೆಯೇ ಬಂದಿರುತ್ತದೆ ಎಂದು ಹೇಳಬಹುದು. ಆದರೆ, ಇಂತಹ ತಿಳಿಯಬಲ್ಲ ಗುರುತಿಸುವಿಕೆಯಲ್ಲೂ ಹಲವು ಬಗೆಗಳಿವೆ.
(1) ಕೊಟ್ಟ ಹೆಸರನ್ನು ಬಳಸಿರುವಲ್ಲೆಲ್ಲ ಕೇಳುಗನಿಗೆ ತಿಳಿಯಬಲ್ಲ ಗುರುತಿಸು ವಿಕೆಯೇ ಇರುತ್ತದೆ. ಯಾಕೆಂದರೆ, ಅದು ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ಜಾಗವನ್ನು ಹೆಸರಿಸುತ್ತದೆ, ಮತ್ತು ಆ ವ್ಯಕ್ತಿ ಇಲ್ಲವೇ ಜಾಗ ಯಾವುದು ಎಂಬುದನ್ನು ಕೇಳುಗನು ತಿಳಿದಿರುತ್ತಾನೆಂದು ಅನಿಸುವಲ್ಲಿ ಮಾತ್ರ ಆಡುಗನು ಅದನ್ನು ಬಳಸುತ್ತಾನೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(30ಕ) ಎಶ್ಟು ಹೊತ್ತಿಗೆ ರಾಜು ನಿಮ್ಮ ಮನೆಗೆ ಬಂದ? (30ಚ) ಅವನು ಜರ್ಮನ್ನಲ್ಲಿ ತುಂಬ ಚನ್ನಾಗಿ ಮಾತನಾಡುತ್ತಾನೆ. (30ಟ) ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿದೆ. (30ತ) ಆತ ಮುಂಬಯಿಗೆ ಹೋಗಿ ಮೂರು ವರ್ಶ ಕಳೆಯಿತು.
ರಾಜು ಎಂಬ ಕೊಟ್ಟಹೆಸರು ಯಾರನ್ನು ಹೆಸರಿಸುತ್ತದೆ ಎಂಬುದನ್ನು ಕೇಳುಗನು ತಿಳಿದಿರುವಲ್ಲಿ ಮಾತ್ರ (30ಕ) ಸೊಲ್ಲನ್ನು ಬಳಸಲು ಬರುತ್ತದೆ; ಇದೇ ರೀತಿಯಲ್ಲಿ, ಜರ್ಮನ್, ಕನ್ನಡ ವಿಶ್ವವಿದ್ಯಾಲಯ, ಮತ್ತು ಮುಂಬಯಿ ಎಂಬ ಕೊಟ್ಟಹೆಸರುಗಳ ಬಳಕೆಯೂ ಕೇಳುಗನ ತಿಳಿವನ್ನು ಅವಲಂಬಿಸಿದೆ.
ಆದರೆ, ಕೆಲವೊಮ್ಮೆ ಈ ವಿಶಯದಲ್ಲಿ ಆಡುಗನಿಗೆ ಸಂಶಯವಿದೆಯಾದರೆ, ಕೊಟ್ಟ ಹೆಸರಿನೊಂದಿಗೆ ಅದು ಯಾರನ್ನು ಇಲ್ಲವೇ ಯಾವುದನ್ನು ಹೆಸರಿಸುತ್ತದೆ ಎಂಬುದನ್ನು ತಿಳಿಸುವ ಹೆಸರುಪದವನ್ನು ಇಲ್ಲವೇ ಬೇರೊಂದು ಹೆಸರುಕಂತೆ ಯನ್ನು ಬಳಸುವ ಹೊಲಬೂ ಬಳಕೆಯಲ್ಲಿದೆ:
(31ಕ) ನಾವು ನಿನ್ನೆ ಕಾವೇರಿ ನದಿಯನ್ನು ನೋಡಲು ಹೋಗಿದ್ದೆವು. (31ಚ) ನಿಮ್ಮ ಹುಡುಗ, ಜನಾರ್ದನ, ಹುಣಸೂರಿನಿಂದ ಯಾವಾಗ ಬಂದ? (31ಟ) ಈ ಕೆಲಸವನ್ನು ರಾಜು, ನೆರೆಮನೆಯ ಹುಡುಗ, ಮಾಡಬಲ್ಲ.
ಕಾವೇರಿ ಎಂದಿಶ್ಟೇ ಹೇಳಿದರೆ ಅದು ಯಾರನ್ನು (ಒಬ್ಬ ಹುಡುಗಿಯನ್ನು) ಇಲ್ಲವೇ ಏನನ್ನು (ಒಂದು ನದಿಯನ್ನು) ಗುರುತಿಸುತ್ತದೆ ಎಂಬ ವಿಶಯದಲ್ಲಿ
ಗೊಂದಲವುಂಟಾಗಬಲ್ಲುದು; ಹಾಗಾಗಿ, (31ಕ)ದಲ್ಲಿ ಅದರೊಂದಿಗೆ ನದಿ ಪದವನ್ನು ಸೇರಿಸಿ ಹೇಳಲಾಗಿದೆ.
ಇದೇ ರೀತಿಯಲ್ಲಿ ನಿಮ್ಮ ಹುಡುಗ ಎಂದಿಶ್ಟೇ ಹೇಳಿದರೆ, ಇಲ್ಲವೇ ಜನಾರ್ದನ ಎಂದಿಶ್ಟೇ ಹೇಳಿದರೆ ಗೊಂದಲವುಂಟಾಗಬಹುದೆಂದು, (31ಚ)ದಲ್ಲಿ ಅವೆರಡನ್ನೂ ಒಟ್ಟಿಗೆ ಬಳಸಲಾಗಿದೆ; (31ಟ)ದಲ್ಲಿ ‘ಯಾವ ರಾಜು’ ಎಂಬ ವಿಶಯದಲ್ಲಿ ಸಂಶಯ ಬರಬಲ್ಲುದೆಂದು ಆಡುಗನಿಗೆ ಅನಿಸಿರುವ ಕಾರಣ, ಅದರ ಬಳಿಕ ನೆರೆಮನೆಯ ಹುಡುಗ ಎಂಬುದನ್ನು ಬಳಸಲಾಗಿದೆ.
(2) ತೋರುಪದಗಳನ್ನು ಬಳಸಿರುವಲ್ಲೆಲ್ಲ ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಯೇ ಇರುತ್ತದೆ. ಆದರೆ, ಅದು ಬೇರೆ ಬೇರೆ ಕಾರಣಗಳಿಗಾಗಿ ತಿಳಿಯಬಲ್ಲುದಾಗಿರಬಲ್ಲುದು. ಎತ್ತುಗೆಗಾಗಿ, ಈ-ಆ, ಇವನು-ಅವನು, ಇವಳು-ಅವಳು, ಇವರು-ಅವರು, ಇದು-ಅದು, ಇವು-ಅವು, ಇಲ್ಲಿ-ಅಲ್ಲಿ, ಈಗ-ಆಗ ಮೊದಲಾದ ತೋರುಪದಗಳ ಬಳಕೆಯ ಮೂಲಕ ಒಂದು ಪಾಂಗು ತನ್ನ ಹತ್ತಿರ ಇರುವಂತಹದು ಇಲ್ಲವೇ ತನಗಿಂತ ದೂರ ಇರುವಂತಹದು ಎಂಬುದಾಗಿ ಒಬ್ಬ ಆಡುಗನು ತಿಳಿಸಬಲ್ಲನು, ಮತ್ತು ಇದರಿಂದಾಗಿ ಅದು ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಯಾಗುತ್ತದೆ. ಇಂತಹ ಬಳಕೆಯನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(32ಕ) ಈ ಮನೆಯನ್ನು ನಾವು ಹತ್ತು ವರ್ಶಗಳ ಹಿಂದೆ ಕಟ್ಟಿಸಿದೆವು. (32ಚ) ಈ ಎಮ್ಮೆಗಿಂತ ಆ ಎಮ್ಮೆ ಹೆಚ್ಚು ಹಾಲು ಕೊಡುತ್ತದೆ. (32ಟ) ಇವರು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. (32ತ) ಈ ಮೇಜಿನ ಮೇಲೆ ಆ ಸ್ಟೂಲನ್ನು ಇರಿಸಿ.
(32ಕ)ದಲ್ಲಿ ಬಂದಿರುವ ಈ ಮನೆಯನ್ನು ಎಂಬುದು ಆಡುಗನ ಹತ್ತಿರ ಇರುವ ಮನೆಯನ್ನು ಗುರುತಿಸುತ್ತದೆ; ಅದು ಎದುರಿಗೇನೇ ಇರುವುದು, ಮತ್ತು ಆಡುಗನು ಅದನ್ನು ಕಯ್ಸನ್ನೆಯಿಂದ ತೋರಿಸುತ್ತಿರುವುದು ಈ ರೀತಿ ಅದು ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಯೆನಿಸುತ್ತದೆ. ಉಳಿದ ಸೊಲ್ಲುಗಳಲ್ಲೂ ಹೀಗೆಯೇ.
ಒಂದು ಸೊಲ್ಲಿನಲ್ಲಿ, ಇಲ್ಲವೇ ಹಿಂದಿನ ಒಂದು ಸೊಲ್ಲಿನಲ್ಲಿ ಗುರುತಿಸಿರುವ ಪಾಂಗನ್ನೇ ತೋರುಪದಗಳ ಮೂಲಕ ಇನ್ನೊಮ್ಮೆ ಗುರುತಿಸಲು ಬರುತ್ತದೆ; ಇಂತಹ ಪಾಂಗುಗಳೂ ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಗಳಾಗಿರುತ್ತವೆ:
(33ಕ) ನಾವು ಒಬ್ಬ ಹುಡುಗನ ವಿಶಯ ಮಾತನಾಡುತ್ತಿದ್ದಾಗ, ಅವನೇ
ನಮ್ಮೆದುರು ಬಂದು ನಿಂತ.
(33ಚ) ಸಂತೆಯಿಂದ ನಿನ್ನೆ ಒಂದು ಬಾಳೆಕೊನೆ ತಂದಿದ್ದೆ; ಅದು ಇನ್ನೂ
ಹಣ್ಣಾಗಿಲ್ಲ.
(33ಟ) ಆತ ಹೊರಗೆ ಹೋಗುವುದು ಬೇಡ ಎಂದು ಹೇಳಿದ್ದ; ಆದರೆ,
ಅವಳಿಗೆ ಆ ಮಾತು ಸರಿಯಾಗಿ ಕೇಳಿಸಿರಲಿಲ್ಲ.
(33ತ) ಅವಳು ನನಗೊಂದು ಕತೆ ಹೇಳಿದಳು; ಆದರೆ, ಆ ಕತೆಯನ್ನು
ನಾನು ಇದಕ್ಕೆ ಮೊದಲೇ ಹಲವು ಬಾರಿ ಕೇಳಿದ್ದೆ.
(33ಕ)ದಲ್ಲಿ ಒಬ್ಬ ಹುಡುಗ ಎಂಬುದು ತಿಳಿಯಲಾಗದ ಹೊಸ ಗುರುತಿಸು ವಿಕೆಯನ್ನು ನಡೆಸುತ್ತದೆ; ಆದರೆ, ಆವನೇ ಎಂಬುದು ಅದೇ ಹುಡುಗನನ್ನು ಗುರುತಿಸುತ್ತಿದೆ, ಮತ್ತು ಹಾಗಾಗಿ ಅದು ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆ ಯಾಗುತ್ತದೆ.
ಇದೇ ರೀತಿಯಲ್ಲಿ, (33ಚ)ದಲ್ಲಿ ಬಂದಿರುವ ಅದು ಎಂಬುದು ಅದಕ್ಕೆ ಮೊದಲು ಬಂದಿರುವ ಒಂದು ಬಾಳೆಗೊನೆ ಎಂಬುದು ಗುರುತಿಸುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುವುದರಿಂದ, (33ಟ)ದಲ್ಲಿ ಬಂದಿರುವ ಆ ಮಾತು ಎಂಬುದು ಅದಕ್ಕೆ ಮೊದಲು ತಿಳಿಸಿರುವ ‘ಆತ ಹೇಳಿದ ಮಾತ’ನ್ನೇ ಗುರುತಿಸು ವುದರಿಂದ, ಮತ್ತು (33ತ)ದಲ್ಲಿ ಆ ಕತೆ ಎಂಬುದು ಅದಕ್ಕೆ ಮೊದಲು ತಿಳಿಸಿದ ‘ಅವಳು ಹೇಳಿದ ಕತೆ’ಯನ್ನು ಗುರುತಿಸುವುದರಿಂದ ಅವೆಲ್ಲವೂ ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಗಳಾಗುತ್ತವೆ.
(3) ತಾನು ಎಂಬ ಪದವೂ ಸೊಲ್ಲಿನಲ್ಲೇನೇ ಬೇರೆಡೆಯಲ್ಲಿ ಗುರುತಿಸಿರುವ ಪಾಂಗನ್ನು ಇನ್ನೊಮ್ಮೆ ಗುರುತಿಸುತ್ತದೆ; ಹಾಗಾಗಿ, ಅದರ ಬಳಕೆಯಲ್ಲೂ ತಿಳಿಯ ಬಲ್ಲ ಗುರುತಿಸುವಿಕೆ ಕಾಣಿಸುತ್ತದೆ:
(34ಕ) ಇಲ್ಲಿನ ಒಬ್ಬ ಹುಡುಗ ನಮ್ಮನ್ನೆಲ್ಲ ತನ್ನ ಮನೆಗೆ ಕರೆದಿದ್ದಾನೆ. (34ಚ) ಆತ ನನ್ನ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದ.
(34ಕ)ದಲ್ಲಿ ಬಂದಿರುವ ತನ್ನ ಎಂಬುದು ಆ ಸೊಲ್ಲಿನಲ್ಲೇನೇ ಬೇರೆಡೆ ಇಲ್ಲಿನ ಒಬ್ಬ ಹುಡುಗ ಎಂಬ ಹೆಸರುಕಂತೆಯ ಮೂಲಕ ಗುರುತಿಸಿರುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುತ್ತಿದೆ, ಮತ್ತು ಹಾಗಾಗಿ ಅದು ತಿಳಿಯಬಲ್ಲ ಗುರುತಿಸುವಿಕೆಯನ್ನು ನಡೆಸುತ್ತದೆ.
(4) ಎಣಿಕೆಯನ್ನು ತಿಳಿಸುವ ಒಂದು, ಎರಡು, ಮೂರು ಮೊದಲಾದ ಪದಗಳೊಂದಿಗೆ, ಮತ್ತು ಅಳವಿಯನ್ನು ತಿಳಿಸುವ ಎಲ್ಲಾ ಪದದೊಂದಿಗೆ ಒಳಗೊಳ್ಳುವ ಹುರುಳನ್ನು ಕೊಡುವ ಊ ಒಟ್ಟನ್ನು ಬಳಸಿರುವಲ್ಲಿಯೂ ತಿಳಿಯ ಬಲ್ಲ ಗುರುತಿಸುವಿಕೆಯಿದೆಯೆಂದು ಹೇಳಬಹುದು. ಈ ಎರಡು ಬಗೆಯ ಪದ ಗಳೂ ಹೆಸರುಪದಗಳ ಮೊದಲು ಮಾತ್ರವಲ್ಲದೆ ಬಳಿಕವೂ ಬರಬಲ್ಲುವು:
(35ಕ) ಎಲ್ಲಾ ತಾಯಂದಿರನ್ನೂ ಶಾಲೆಗೆ ಕರೆಸಿದ್ದಾರೆ. (35ಚ) ಹತ್ತು ಹಣ್ಣುಗಳೂ ಕೊಳೆತುಹೋಗಿವೆ.
(35ಟ) ಮೂವರು ಹುಡುಗಿಯರನ್ನೂ ಮನೆಗೆ ಕಳಿಸಲಾಗಿದೆ. (35ತ) ತಾಯಂದಿರೆಲ್ಲರನ್ನೂ ಶಾಲೆಗೆ ಕರೆಸಿದ್ದಾರೆ. (35ಪ) ಹುಡುಗಿಯರು ಮೂವರನ್ನೂ ಮನೆಗೆ ಕಳಿಸಲಾಗಿದೆ.
ಎಲ್ಲಾ ಎಂಬ ಪದವನ್ನು ಒತ್ತೆಹೆಸರುಗಳೊಂದಿಗೆ ಮಾತ್ರವಲ್ಲದೆ ಒಟ್ಟಲು ಹೆಸರುಗಳೊಂದಿಗೂ ಬಳಸಲು ಬರುತ್ತದೆ, ಮತ್ತು ಇಲ್ಲೂ ಕೂಡ ಅದು ತಿಳಿಯಬಲ್ಲ ಗುರುತಿಸುವಿಕೆಯನ್ನು ನಡೆಸುತ್ತದೆ. ಆದರೆ, ಇಂತಹ ಬಳಕೆಗಳಲ್ಲಿ ಎಲ್ಲಾ ಎಂಬ ಪದ ಹೆಸರುಪದದ ಬಳಿಕ ಬರುವುದೇ ಹೆಚ್ಚು.
(36ಕ) ಎಲ್ಲಾ ನೀರೂ ಮನೆಯೊಳಗೆ ನುಗ್ಗಿತು. (36ಚ) ಎಲ್ಲಾ ಹತ್ತಿಯನ್ನೂ ಗೋಣಿಯೊಳಗೆ ತುಂಬಿಸಿದ. (36ಟ) ಹತ್ತಿಯೆಲ್ಲವನ್ನೂ ಗೋಣಿಯೊಳಗೆ ತುಂಬಿಸಿದ.
(5) ಒಂದು ಹೆಸರುಕಂತೆಯಲ್ಲಿ ಪಾಂಗನ್ನು ಗುರುತಿಸಲು ಬೇಕಾಗುವಶ್ಟು ವಿಶಯವನ್ನು ಒಳಸೊಲ್ಲಿನ ಮೂಲಕ, ಇಲ್ಲವೇ ಹೆಸರುಪದದ ಪತ್ತುಗೆರೂಪದ ಮೂಲಕ ಒದಗಿಸಿಕೊಡಲಾಗಿದೆಯಾದರೆ, ಅಂತಹ ಹೆಸರುಕಂತೆಯೂ ಕೇಳುಗನಿಗೆ ತಿಳಿಯಬಲ್ಲ ಗುರುತಿಸುವಿಕೆಯನ್ನು ನಡೆಸುತ್ತದೆಯೆಂದು ಹೇಳಬಹುದು.
(37ಕ) ಮನೆಗೆ ಹೋದ ಹುಡುಗ ಇನ್ನೂ ಹಿಂದಿರುಗಿಲ್ಲ. (37ಚ) ಮನೆಗೆ ಹೋದ ಹುಡುಗರಲ್ಲಿ ಒಬ್ಬ ಇನ್ನೂ ಹಿಂದಿರುಗಿಲ್ಲ.
(37ಕ)ದಲ್ಲಿ ಮನೆಗೆ ಹೋದ ಎಂಬ ಒಳಸೊಲ್ಲು ‘ಹುಡುಗ ಯಾರು’ ಎಂಬುದನ್ನು ಗುರುತಿಸಲು ಬೇಕಾಗುವಶ್ಟು ತಿಳಿವನ್ನು ಕೊಡುತ್ತದೆ; ಯಾಕೆಂದರೆ, ಅದನ್ನು ಬಳಸಿರುವ ಸಂದರ್ಬದಲ್ಲಿ ಮನೆಗೆ ಹೋದವನು ಒಬ್ಬನೇ ಇರುತ್ತಾನೆ; ಇದಕ್ಕೆ ಬದಲು, (37ಚ)ದಲ್ಲಿ ಹುಡುಗರಲ್ಲಿ ಒಬ್ಬ ಎಂಬುದರ ಮೂಲಕ ‘ಇದು ತಿಳಿಯಲಾಗದ ಗುರುತಿಸುವಿಕೆ’ ಎಂಬುದನ್ನು ತಿಳಿಸಲಾಗಿದೆ; ಇದನ್ನು ಬಳಸಿರುವ ಸಂದರ್ಬದಲ್ಲಿ ಮನೆಗೆ ಹೋದವರು ಹಲವು ಮಂದಿ ಇದ್ದಿರಬೇಕು.
6.5.4 ತಿಳಿದ ಮತ್ತು ತಿಳಿಯದ ಗುರುತಿಸುವಿಕೆಗಳು
ಆಡುಗನಿಗೆ ತಿಳಿದ ಮತ್ತು ತಿಳಿಯದ ಗುರುತಿಸುವಿಕೆಗಳು ಎಂಬುದಾಗಿ ಬೇರೆ ಎರಡು ಬಗೆಯ ಗುರುತಿಸುವಿಕೆಗಳನ್ನೂ ಹೆಸರುಕಂತೆಗಳ ಬಳಕೆಯಲ್ಲಿ ಕಾಣ ಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸ ಬಹುದು:
(38ಕ) ನಿನ್ನೆ ರಾತ್ರಿ ನಮ್ಮಲ್ಲಿಗೆ ಒಬ್ಬ ಮುದುಕ ಬಂದಿದ್ದ. (38ಚ) ನಿನ್ನೆ ರಾತ್ರಿ ನಮ್ಮಲ್ಲಿಗೆ ಯಾವನೋ ಒಬ್ಬ ಮುದುಕ ಬಂದಿದ್ದ.
ಮೇಲಿನ ಸೊಲ್ಲುಗಳಲ್ಲಿ ಬಂದಿರುವ ಒಬ್ಬ ಮುದುಕ ಮತ್ತು ಯಾವನೋ ಒಬ್ಬ ಮುದುಕ ಎಂಬ ಎರಡು ಹೆಸರುಕಂತೆಗಳೂ ಕೇಳುಗನ ಮಟ್ಟಿಗೆ ಹೊಸದಾ ಗಿರುವಂತಹ ತಿಳಿಯಲಾಗದ ಪಾಂಗುಗಳನ್ನು ಗುರುತಿಸುತ್ತವೆ; ಆದರೆ, ಇವು ಗಳಲ್ಲಿ ಯಾವನೋ ಒಬ್ಬ ಮುದುಕ ಎಂಬ ಎರಡನೆಯ ಹೆಸರುಕಂತೆ ಅದು ಯಾರೆಂಬುದು ಆಡುಗನಿಗೂ ಸರಿಯಾಗಿ ತಿಳಿದಿಲ್ಲ ಎಂಬುದಾಗಿ ತಿಳಿಸುತ್ತದೆ.
ಈ ಎರಡು ಸೊಲ್ಲುಗಳ ನಡುವೆ ಕಾಣಿಸುವ ತಿಳಿದ ಮತ್ತು ತಿಳಿಯದ ಎಂಬ ಈ ಎರಡು ಬಗೆಯ ಗುರುತಿಸುವಿಕೆಗಳಿಗೂ, ಮೇಲೆ ವಿವರಿಸಿದ ತಿಳಿಯ ಬಲ್ಲ ಮತ್ತು ತಿಳಿಯಲಾಗದ ಎಂಬ ಬೇರೆ ಎರಡು ಬಗೆಯ ಗುರುತಿಸು ವಿಕೆಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ:
(1) ಪಾಂಗು ತಿಳಿದಿರುವುದು ಇಲ್ಲವೇ ತಿಳಿಯದಿರುವುದು ಆಡುಗನಿಗೆ, ಮತ್ತು ಪಾಂಗು ತಿಳಿಯಬಲ್ಲುದು ಇಲ್ಲವೇ ತಿಳಿಯಲಾಗದುದು ಕೇಳುಗನಿಗೆ ಎಂಬುದು ಒಂದು ಮುಕ್ಯವಾದ ವ್ಯತ್ಯಾಸ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(39ಕ) ನಾನು ಒಂದು ಮನೆಯನ್ನು ಕೊಂಡುಕೊಂಡೆ. (39ಚ) ಈ ಬೀಗವನ್ನು ಯಾರೋ ಮುರಿದುಹಾಕಿದ್ದಾರೆ.
(39ಕ)ದಲ್ಲಿ ಒಂದು ಮನೆ ಎಂಬ ಹೆಸರುಕಂತೆಯ ಮೂಲಕ ಆಡುಗನು ಗುರುತಿಸುತ್ತಿರುವ ಪಾಂಗು ಆತನ ಮಟ್ಟಿಗೆ ತಿಳಿಯದುದೇನಲ್ಲ; ಅದನ್ನು ಆತ ಕೊಂಡುಕೊಂಡಿರುವ ಕಾರಣ, ಅದು ಯಾವುದು ಎಂಬುದು ಆತನಿಗೆ ಚನ್ನಾಗಿಯೇ ತಿಳಿದಿರುತ್ತದೆ. ಆದರೆ, ಅದನ್ನು ಆತ ತನ್ನ ಮಾತಿನಲ್ಲಿ ಹೊಸದಾಗಿ ಬಳಸುತ್ತಿದ್ದಾನೆ, ಮತ್ತು ಅದಕ್ಕೆ ಮೊದಲು ಆ ಮನೆಯ ಕುರಿತಾಗಿ ಆತ ಕೇಳುಗನಿಗೆ ಏನೂ ಹೇಳಿಲ್ಲ; ಹಾಗಾಗಿ, ಕೇಳುಗನ ಮಟ್ಟಿಗೆ ಅದು ತಿಳಿಯಲಾಗದ ಹೊಸ ಗುರುತಿಸುವಿಕೆಯಾಗಿದೆ.
ಇದಕ್ಕೆ ಬದಲು, (39ಚ)ದಲ್ಲಿ ಬಂದಿರುವ ಯಾರೋ ಎಂಬುದು ಆಡುಗನಿ ಗೇನೇ ತಿಳಿಯದಿರುವ ಪಾಂಗೊಂದನ್ನು ಗುರುತಿಸುತ್ತದೆ. ಯಾಕೆಂದರೆ, ಆಡುಗ ಬೀಗವನ್ನು ಮುರಿದುಹಾಕಿರುವ ಸಂಗತಿಯನ್ನು ಮಾತ್ರ ತಿಳಿದಿರುವನಲ್ಲದೆ, ಅದನ್ನು ಮಾಡಿದವರು ಯಾರು ಎಂಬುದನ್ನು ತಿಳಿದಿಲ್ಲ ಎಂಬುದಾಗಿ (39ಚ) ಸೊಲ್ಲು ತಿಳಿಸುತ್ತದೆ.
(2) ಯಾವುದೇ ಒಂದು ಪಾಂಗನ್ನು ಸೊಲ್ಲಿನಲ್ಲಿ ಹೊಸದಾಗಿ ಗುರುತಿಸಿ ದೊಡನೆ ಅದು ಕೇಳುಗನಿಗೆ ತಿಳಿಯಬಲ್ಲುದಾಗಿ ಬಿಡುತ್ತದೆ. ಮೇಲೆ 6.5.1(4) ರಲ್ಲಿ ವಿವರಿಸಿದ ಹಾಗೆ, ಆ ಪಾಂಗು ನಿಜವಾದುದಿರಬಹುದು, ಸುಳ್ಳಾಗಿರ
ಬಹುದು, ಇಲ್ಲವೇ ಕಲ್ಪಿತವಾದುದಿರಬಹುದು; ಅದು ಎಂತಹದೆಂಬುದನ್ನು ಕೇಳುಗ ಆಮೇಲೆ ತೀರ್ಮಾನಿಸಿಕೊಳ್ಳಬಹುದು; ಆದರೆ, ಮಾತು ಸಲೀಸಾಗಿ ಮುಂದುವರಿಯಬೇಕಿದ್ದಲ್ಲಿ, ಆಡುಗನು ಹೊಸದಾಗಿ ಗುರುತಿಸುವ ಪಾಂಗು ಗಳನ್ನೆಲ್ಲ, ಅವನ್ನು ಆತ ಬಳಸುತ್ತಿರುವಂತೆ, ಕೇಳುಗನು ಒಪ್ಪಿಕೊಳ್ಳುತ್ತಲೇ ಇರಬೇಕಾಗುತ್ತದೆ.
ಇದಕ್ಕೆ ಬದಲು, ಒಂದು ಸೊಲ್ಲಿನಲ್ಲಿ ಆಡುಗನಿಗೆ ತಿಳಿಯದಿರುವುದೆಂದು ಗುರುತಿಸಿರುವ ಪಾಂಗು ಆ ರೀತಿ ಬಳಸಿದೊಡನೆಯೇ ತಿಳಿದ ಪಾಂಗಾಗುವುದಿಲ್ಲ. ಆಡುಗನಿಗೆ ಸರಿಯಾದ ತಿಳುವಳಿಕೆ ಸಿಗುವಲ್ಲಿವರೆಗೂ ಅದು ತಿಳಿಯದ ಪಾಂಗಾಗಿಯೇ ಉಳಿಯಬಲ್ಲುದು. ಇದಲ್ಲದೆ, ಯಾವ ಹಂತದಲ್ಲಿ ಬೇಕಿದ್ದರೂ ಒಂದು ಪಾಂಗು ಯಾವುದೆಂದು ತನಗೆ ತಿಳಿದಿದೆಯೆಂದು ಆಡುಗನು ಒಪ್ಪಿಕೊಳ್ಳ ಬಹುದು, ಇಲ್ಲವೇ ಅದರ ಕುರಿತಾಗಿ ಇನ್ನಶ್ಟು ತಿಳುವಳಿಕೆಯನ್ನು ಪಡೆಯಲು ಪ್ರಯತ್ನಿಸಬಹುದು.
ಹಾಗಾಗಿ, ಕೇಳುಗನಿಗೆ ತಿಳಿಯಲಾಗದ ಗುರುತಿಸುವಿಕೆಯನ್ನು ನಡೆಸುವ ಹೆಸರುಕಂತೆಯೊಂದನ್ನು ಎರಡು ಬಾರಿ ಬಳಸಿದಾಗ, ಅದು ಎರಡು ಬೇರೆ ಬೇರೆ ಪಾಂಗುಗಳನ್ನು ಗುರುತಿಸಬಲ್ಲುದಲ್ಲದೆ ಒಂದೇ ಪಾಂಗನ್ನು ಗುರುತಿಸಲಾರದು. ಯಾಕೆಂದರೆ, ಹೊಸದಾಗಿ ಪಾಂಗೊಂದನ್ನು ಮಾತಿನಲ್ಲಿ ಬಳಸಿದೊಡನೆ ಅದು ಹಳೆಯದಾಗುತ್ತದೆ, ಮತ್ತು ಕೇಳುಗನಿಗೆ ತಿಳಿಯಬಲ್ಲುದಾಗುತ್ತದೆ; ಹಾಗಾಗಿ, ಎರಡನೆಯ ಬಾರಿ ಅದನ್ನೇ ತಿಳಿಯಲಾಗದ ಗುರುತಿಸುವಿಕೆಯೆಂದು ಬಳಸಲು ಬರುವುದಿಲ್ಲ.
ಆದರೆ, ಆಡುಗನಿಗೆ ತಿಳಿಯದಿರುವಂತಹ ಗುರುತಿಸುವಿಕೆಯನ್ನು ನಡೆಸುವ ಹೆಸರುಕಂತೆಯೊಂದನ್ನು ಎರಡು ಇಲ್ಲವೇ ಹೆಚ್ಚು ಬಾರಿ ಬಳಸಿದಾಗಲೂ ಅದು ಒಂದೇ ಪಾಂಗನ್ನು ಗುರುತಿಸುತ್ತಿರಬಲ್ಲುದು. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲು ಗಳಲ್ಲಿ ಕಾಣಬಹುದು:
(40ಕ) ಈ ಬೀಗವನ್ನು ಒಬ್ಬ ಹುಡುಗ ಮುರಿದಿದ್ದಾನೆ, ಮತ್ತು ಈ
ಗಿಡವನ್ನೂ ಒಬ್ಬ ಹುಡುಗ ಕಿತ್ತುಹಾಕಿದ್ದಾನೆ.
(40ಚ) ಈ ಬೀಗವನ್ನು ಯಾರೋ ಮುರಿದಿದ್ದಾರೆ, ಮತ್ತು ಈ ಗಿಡವನ್ನೂ
ಯಾರೋ ಕಿತ್ತುಹಾಕಿದ್ದಾರೆ.
ಕೇಳುಗನಿಗೆ ತಿಳಿಯಲಾಗದ ಹೊಸ ಗುರುತಿಸುವಿಕೆಯನ್ನು ನಡೆಸುವ ಒಬ್ಬ ಹುಡುಗ ಎಂಬ ಪದಕಂತೆ (40ಕ)ದಲ್ಲಿ ಎರಡು ಬಾರಿ ಬಳಕೆಯಾಗಿದೆ; ಇವು ಗಳಲ್ಲಿ ಎರಡನೆಯ ಬಾರಿ ಬಂದಿರುವ ಈ ಪದಕಂತೆ ಅದಕ್ಕೆ ಮೊದಲು ಬಂದಿರುವ ಅದೇ ಪದಕಂತೆ ಗುರುತಿಸುವ ಪಾಂಗಿಗಿಂತ ಬೇರಾಗಿರುವ ಪಾಂಗೊಂದನ್ನು ಮಾತ್ರವೇ ಗುರುತಿಸಬಲ್ಲುದು; ಎಂದರೆ, ಅವೆರಡೂ ಒಬ್ಬನೇ ಹುಡುಗನನ್ನು ಗುರುತಿಸುತ್ತಿರಲಾರವು.
ಇದಕ್ಕೆ ಬದಲು, ಆಡುಗನಿಗೆ ತಿಳಿಯದ ಪಾಂಗನ್ನು ಗುರುತಿಸುವ ಯಾರೋ ಎಂಬುದು (40ಚ)ದಲ್ಲಿ ಎರಡು ಬಾರಿ ಬಳಕೆಯಾಗಿದ್ದು, ಅದು ಒಬ್ಬನೇ ವ್ಯಕ್ತಿ ಯನ್ನೂ ಗುರುತಿಸುತ್ತಿರಬಲ್ಲುದು.
ಈ ಎರಡು ವಿಶಯಗಳಲ್ಲಿ ಮೊದಲನೆಯದನ್ನು ಬೆಂಬಲಿಸುವ ಇನ್ನೊಂದು
ಸೊಲ್ಲನ್ನು ಕೆಳಗೆ ಕೊಡಲಾಗಿದೆ:
(41ಕ) ಒಬ್ಬ ಹೆಂಗಸು ಮತ್ತು ಒಬ್ಬ ಹುಡುಗ ಬಸ್ ಸ್ಟೇಂಡಿನಲ್ಲಿ
ನಿಂತಿದ್ದರು; ಆ ಹುಡುಗ ಹೆಂಗಸಿನ ಹತ್ತಿರ ಏನೋ ಹೇಳಿದ.
(41ಚ) ಒಬ್ಬ ಹೆಂಗಸು ಮತ್ತು ಒಬ್ಬ ಹುಡುಗ ಬಸ್ ಸ್ಟೇಂಡಿನಲ್ಲಿ ನಿಂತಿದ್ದರು; ಒಬ್ಬ ಹುಡುಗ ಆ ಹೆಂಗಸಿನ ಹತ್ತಿರ ಏನೋ ಹೇಳಿದ.
(41ಕ) ಸೊಲ್ಲಿಗೆ ‘ಹೆಂಗಸಿನ ಹತ್ತಿರ ಏನೋ ಹೇಳಿದ ಹುಡುಗನೂ ಅವಳೊಂದಿಗೆ ನಿಂತಿದ್ದ ಹುಡುಗನೂ ಒಬ್ಬರೇ’ ಎಂಬ ಹುರುಳಿದೆ; ಆದರೆ, (41ಚ) ಸೊಲ್ಲಿಗೆ ‘ಅವರಿಬ್ಬರೂ ಬೇರೆ ಬೇರೆ ಹುಡುಗರು’ ಎಂಬ ಹುರುಳಿದೆ; ಅದಕ್ಕೆ ಈ ಹುರುಳು ಬರಲು ಒಬ್ಬ ಹುಡುಗ ಎಂಬ ಕೇಳುಗನಿಗೆ ತಿಳಿಯಲಾಗದ ಹೆಸರುಕಂತೆಯನ್ನು ಅದರಲ್ಲಿ ಎರಡು ಬಾರಿ ಬಳಸಿರುವುದೇ ಕಾರಣ.
(3) ಒಂದು ಪಾಂಗಿನ ಕುರಿತು ಎಶ್ಟೇ ತಿಳುವಳಿಕೆಯನ್ನು ಪಡೆದಿದ್ದರೂ, ಅದನ್ನು ಪೂರ್ತಿ ತಿಳಿದುಕೊಂಡಿರುವೆನೆಂದು ಯಾರೂ ಹೇಳಲಾರರು. ಹಾಗಾಗಿ, ಸಾಕಶ್ಟು ತಿಳುವಳಿಕೆಯನ್ನು ಪಡೆದಿರುವ ಪಾಂಗಿನ ಕುರಿತಾಗಿಯೂ ಮತ್ತೆ ಮತ್ತೆ ಕೇಳ್ವಿಗಳ ಮೂಲಕ ಹೆಚ್ಚಿನ ಸಂಗತಿಗಳನ್ನು ಪಡೆಯಲು ಆಡುಗನು ಪ್ರಯತ್ನಿಸ ಬಲ್ಲನು.
(42) ನಿಮ್ಮ ಪಕ್ಕದ ಮನೆಗೆ ರಂಗರಾಯ ಎಂಬವರು ಬಾಡಿಗೆಗೆ
ಬಂದಿದ್ದಾರಲ್ಲ, ನಿಜಕ್ಕೂ ಅವರು ಯಾರು?
(42)ನೇ ಸೊಲ್ಲಿನಲ್ಲಿ ಒಬ್ಬ ವ್ಯಕ್ತಿಯ ಕುರಿತಾಗಿ ಆತನ ಹೆಸರು, ಇರುವ ಜಾಗ, ಇರುವ ಬಗೆ ಮೊದಲಾದುವನ್ನು ಆಡುಗನು ತಿಳಿದಿದ್ದರೂ, ಆತನ ಕುರಿತಾಗಿ ಇನ್ನಶ್ಟು ಹೆಚ್ಚಿನ ಸಂಗತಿಗಳನ್ನು ತಿಳಿಯಲು ಯಾರು ಪದವನ್ನು ಬಳಸಲಾಗಿದೆ.
ಆದರೆ, ಮೇಲೆ ವಿವರಿಸಿದ ಹಾಗೆ, ಕೇಳುಗನಿಗೆ ತಿಳಿಯಲಾಗದ ಪಾಂಗು ಅದನ್ನು ಗುರುತಿಸುವ ಹೆಸರುಕಂತೆಯನ್ನು ಬಳಸಿದೊಡನೆಯೇ ತಿಳಿಯಬಲ್ಲ ಪಾಂಗಾಗಿಬಿಡುತ್ತದೆ; ಹಾಗಾಗಿ, ಅದರ ಕುರಿತಾಗಿ ಇನ್ನಶ್ಟು ಹೆಚ್ಚಿನ ಸಂಗತಿಗಳನ್ನು ಕೇಳುಗನಿಗೆ ತಿಳಿಸಲೇಬೇಕೆಂದೇನೂ ಇಲ್ಲ.
(4) ಕೇಳುಗನಿಗೆ ತಿಳಿಯಬಲ್ಲುದು ಮತ್ತು ತಿಳಿಯಲಾಗದುದು ಎಂಬವುಗಳ ನಡುವಿನ ವ್ಯತ್ಯಾಸ ಹೆಸರುಪದಗಳ ಮೂಲಕ ಆಡುಗರು ನಡೆಸುವ ಪಾಂಗುಗಳ ಗುರುತಿಸುವಿಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಆದರೆ, ಆಡುಗನಿಗೆ ತಿಳಿದುದು ಮತ್ತು ತಿಳಿಯದುದು ಎಂಬವುಗಳ ನಡುವಿನ ವ್ಯತ್ಯಾಸ ಬೇರೆ ಬಗೆಯ ಪದಗಳ ಬಳಕೆಯಲ್ಲೂ ಕಾಣಿಸಿಕೊಳ್ಳುತ್ತದೆ. ಇದು ಈ ಎರಡರ ನಡುವಿರುವ ಇನ್ನೊಂದು ಮುಕ್ಯವಾದ ವ್ಯತ್ಯಾಸವಾಗಿದೆ.
ಎತ್ತುಗೆಗಾಗಿ, ಆಡುಗನಿಗೆ ತಿಳಿದುದನ್ನು ಹೇಳುವ ತೋರುಪದಗಳು ಮತ್ತು ತಿಳಿಯದುದನ್ನು ಹೇಳುವ ತೋರುಪದಗಳು ಎಂಬುದಾಗಿ ಎರಡು ಬಗೆಯ ತೋರುಪದಗಳಿದ್ದು, ಅವು ಪಾಂಗುಗಳನ್ನು ಗುರುತಿಸುವಲ್ಲಿ ಮಾತ್ರವಲ್ಲದೆ ಅವುಗಳ ಪರಿಚೆ, ಅಳವಿ, ಎಣಿಕೆ ಮೊದಲಾದುವನ್ನು ತಿಳಿಸುವಲ್ಲೂ ಕಾಣಿಸಿ ಕೊಳ್ಳುತ್ತವೆ:
ತಿಳಿದಿರುವವು
ಅವರು
ಅದು
ಅಂತಹ
ಅಶ್ಟು ಅಲ್ಲಿ ಆಗ
ಹಾಗೆ
ತಿಳಿಯದಿರುವವು ಯಾರು ಯಾವುದು ಎಂತಹ ಎಶ್ಟು ಎಲ್ಲಿ ಯಾವಾಗ ಹೇಗೆ
ಮೇಲೆ ಕೊಟ್ಟಿರುವ ತೋರುಪದಗಳಲ್ಲಿ ಅವರು-ಯಾರು ಮತ್ತು ಅದು- ಯಾವುದು ಎಂಬವು ಪಾಂಗುಗಳನ್ನು (ತಿಳಿದಿರುವವು ಮತ್ತು ತಿಳಿಯದಿರುವವು ಎಂಬುದಾಗಿ) ಗುರುತಿಸಲು ಬಳಕೆಯಾಗುತ್ತವೆ; ಆದರೆ, ಉಳಿದವುಗಳಲ್ಲಿ ಅಂತಹ-ಎಂತಹ ಎಂಬವು ಪರಿಚೆಯನ್ನು, ಅಶ್ಟು-ಎಶ್ಟು ಎಂಬವು ಅಳವಿ ಯನ್ನು, ಅಲ್ಲಿ-ಎಲ್ಲಿ ಎಂಬವು ಜಾಗವನ್ನು, ಆಗ-ಯಾವಾಗ ಎಂಬವು ಹೊತ್ತನ್ನು, ಮತ್ತು ಹಾಗೆ-ಹೇಗೆ ಎಂಬವು (ಎಸಕಗಳ) ಬಗೆಯನ್ನು ತಿಳಿದಿರು ವುದು ಮತ್ತು ತಿಳಿಯದಿರುವುದು ಎಂಬುದಾಗಿ ವಿಂಗಡಿಸಿ ಹೇಳುತ್ತವೆ.
ಆದರೆ, ಕೇಳುಗನಿಗೆ ತಿಳಿಯಲಾಗದುದನ್ನು ಗುರುತಿಸುವ ಒಂದು, ಒಬ್ಬ, ತುಂಬಾ, ಹಲವು ಮೊದಲಾದ ಪದಗಳು ಪಾಂಗುಗಳ ಗುರುತಿಸುವಿಕೆಯನ್ನಶ್ಟೇ ನಡೆಸಬಲ್ಲುವು.
6.5.5 ಪಾಂಗಿನ ಬಗೆಯನ್ನು ಗುರುತಿಸುವುದು
ಸೊಲ್ಲುಗಳಲ್ಲಿ ಬಳಕೆಯಾಗುವ ಹೆಸರುಕಂತೆಗಳು ನೇರವಾಗಿ ಒಂದು ಪಾಂಗನ್ನು ಗುರುತಿಸುತ್ತಿರಬಹುದು ಇಲ್ಲವೆ ಒಂದು ಬಗೆಯ ಪಾಂಗನ್ನು ಗುರುತಿಸುತ್ತಿರ ಬಹುದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(43) ಆ ಮುದುಕನನ್ನು ಕೊಂದವನಿಗೆ ತಲೆ ಸರಿಯಿಲ್ಲ.
(43)ನೇ ಸೊಲ್ಲನ್ನು ಆಡುಗನೊಬ್ಬನು ಎರಡು ಹುರುಳುಗಳಲ್ಲಿ ಬಳಸಿರ
ಬಹುದು:
ಮೊದಲನೆಯದಾಗಿ, ಆ ಮುದುಕನನ್ನು ಕೊಂದವನು ಎಂಬುದು ಒಬ್ಬ ವ್ಯಕ್ತಿಯನ್ನು ಗುರುತಿಸುತ್ತಿದ್ದು, ಆತನು ಎಂತಹವನು ಎಂಬುದನ್ನು ತಲೆ ಸರಿ ಯಿಲ್ಲ ಎಂಬುದು ತಿಳಿಸುತ್ತಿರಬಹುದು;
ಎರಡನೆಯದಾಗಿ, ಆ ಮುದುಕನನ್ನು ಕೊಂದವನು ಎಂಬುದು ನೇರವಾಗಿ ಯಾವುದೇ ಒಬ್ಬ ವ್ಯಕ್ತಿಯನ್ನೂ ಗುರುತಿಸದಿರಬಹುದು; ‘ಆ ಮುದುಕನನ್ನು ಕೊಲ್ಲುವಂತಹ ಕೆಲಸವನ್ನು ನಡೆಸಿದವನು’ ಎಂಬುದಾಗಿ ಒಂದು ಬಗೆಯ ವ್ಯಕ್ತಿ ಯನ್ನಶ್ಟೇ ಅದು (43)ನೇ ಸೊಲ್ಲಿನ ಪಾಂಗಾಗಿ ಬಳಸಿದ್ದು, ‘ಅಂತಹ ವ್ಯಕ್ತಿಗೆ ತಲೆಸರಿಯಿಲ್ಲ’ ಎಂಬುದಾಗಿ ತಿಳಿಸುತ್ತಿರಬಹುದು. ಈ ಎರಡನೆಯ ಹುರುಳಿನಲ್ಲಿ ಮುದುಕನನ್ನು ಕೊಂದವನು ಎಂಬ ಹೆಸರುಕಂತೆಯನ್ನು ಬಳಸುವಾಗ, ಆಡುಗನ ಮನಸ್ಸಿನಲ್ಲಿ ಯಾವೊಬ್ಬ ವ್ಯಕ್ತಿಯೂ ಇರುವುದಿಲ್ಲ.
ನಿಜಕ್ಕೂ ಈ ಎರಡನೇ ಬಳಕೆಯಲ್ಲಿ ಆ ಮುದುಕನನ್ನು ಕೊಂದವನು ಎಂಬ ಹೆಸರುಕಂತೆ ಯಾವ ಒಬ್ಬ ವ್ಯಕ್ತಿಯನ್ನೂ ಗುರುತಿಸುವುದಿಲ್ಲವಾದ ಕಾರಣ, ಅದನ್ನು ‘ಗುರುತಿಸದ ಹೆಸರುಕಂತೆ’ ಎಂಬುದಾಗಿಯೂ ಕರೆಯಬಹುದು.
‘ಪಾಂಗನ್ನು ಗುರುತಿಸುವ’ ಮತ್ತು ‘ಪಾಂಗನ್ನು ಗುರುತಿಸದ’ ಇಲ್ಲವೇ ‘ಪಾಂಗಿನ ಬಗೆಯನ್ನು ಗುರುತಿಸುವ’ ಈ ಎರಡು ಬಗೆಯ ಹುರುಳುಗಳಲ್ಲಿ ಯಾವುದನ್ನು ಒಂದು ಸೊಲ್ಲಿನಲ್ಲಿ ಬಂದಿರುವ ಹೆಸರುಕಂತೆ ತಿಳಿಸುತ್ತದೆ ಎಂಬುದು ಆಡುಗನಿಗೆ ಏನು ಹೇಳಬೇಕಾಗಿದೆ, ಮತ್ತು ಹಾಗೆ ಹೇಳುವಲ್ಲಿ ಆತನ ಉದ್ದೇಶವೇನು ಎಂಬುದರ ಮೇಲೆ ಅವಲಂಬಿಸಿರುತ್ತದೆ. ಆತನಿಗೆ ಇಲ್ಲವೇ ಆತನ ಕೇಳುಗನಿಗೆ ಎಶ್ಟು ತಿಳಿದಿದೆ, ತಿಳಿದಿರುವ ಸಂಗತಿ ನಿಜವೋ ಸುಳ್ಳೋ ಎಂಬಂತಹ ಬೇರೆ ಯಾವ ವಿಶಯವೂ ಇಲ್ಲಿ ಮುಕ್ಯವಲ್ಲ.
ಎತ್ತುಗೆಗಾಗಿ, ಒಬ್ಬ ಆಡುಗನಿಗೆ ಒಂದು ವಿಶಯದ ಕುರಿತಾಗಿ ಎಲ್ಲರಿಗೂ ಅನ್ವಯಿಸುವಂತಹ ಹೇಳಿಕೆಯೊಂದನ್ನು ಕೊಡಬೇಕೆಂದಿರಬಹುದು. ಹಾಗಿದ್ದಲ್ಲಿ, ಆತನು ಯಾವನೊಬ್ಬ ವ್ಯಕ್ತಿಯನ್ನೂ ಮನಸ್ಸಿನಲ್ಲಿರಿಸಿಕೊಳ್ಳದೆ (ಮತ್ತು ಹೆಸರು ಕಂತೆಯ ಮೂಲಕ ಅಂತಹ ವ್ಯಕ್ತಿಯನ್ನು ಗುರುತಿಸಹೋಗದೆ), ತನ್ನ ಹೇಳಿಕೆ ಯನ್ನು ಕೊಡಬಹುದು. ಇದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು:
(44) ಆನೆಗಳು ಕಾಡಿನಲ್ಲಿ ಒಟ್ಟಿಗೆ ತಿರುಗಾಡುತ್ತಿರುತ್ತವೆ.
(44)ನೇ ಸೊಲ್ಲಿನಲ್ಲಿ ಆನೆಗಳು ಎಂಬುದು ಯಾವ ಒಂದು ಆನೆಗಳ ಗುಂಪನ್ನೂ ನೇರವಾಗಿ ಗುರುತಿಸುವುದಿಲ್ಲ. ಕಾಡು ಎಂಬ ಪದವೂ ಹೀಗೆಯೇ; ಅದು ನೇರವಾಗಿ ಯಾವ ಕಾಡನ್ನೂ ಗುರುತಿಸುವುದಿಲ್ಲ. ‘ಸಾಮಾನ್ಯವಾಗಿ ಆನೆ ಗಳು ಏನು ಮಾಡುತ್ತಿರುತ್ತವೆ’ ಎಂಬುದನ್ನು ತಿಳಿಸುವುದು (44)ರಂತಹ ಸೊಲ್ಲು ಗಳನ್ನು ಆಡುವವರ ಉದ್ದೇಶವಾಗಿರುತ್ತದೆ; ಹಾಗಾಗಿ, ಅವನ್ನು ಬಳಸುವಾಗ ‘ಕೆಲವು ಆನೆ’ಗಳನ್ನು ಇಲ್ಲವೇ ‘ಒಂದು ಕಾಡ’ನ್ನು ಅವರು ಗುರುತಿಸಲು ಹೋಗುವುದಿಲ್ಲ.
(1) ಇಂತಹ ‘ಪಾಂಗುಗಳ ಬಗೆ’ಯನ್ನು ಗುರುತಿಸುವ ಹೆಸರುಕಂತೆಗಳು ಮುಕ್ಯವಾಗಿ ನಾಲ್ಕು ಬಗೆಯ ಸೊಲ್ಲುಗಳಲ್ಲಿ ಕಾಣಿಸಿಕೊಳ್ಳುತ್ತವೆ: ಮೊದಲನೆಯ ದಾಗಿ, ಸೊಲ್ಲಿನ ಎಸಕಪದ ಎಂತಹದು ಎಂಬುದರ ಮೇಲೆ ಇವುಗಳ ಬಳಕೆ ಯನ್ನು ಎರಡು ಗುಂಪುಗಳಲ್ಲಿ ಬೇರ್ಪಡಿಸಬಹುದು.
(ಕ) ಸೊಲ್ಲಿನಲ್ಲಿ ಬಳಕೆಯಾಗಿರುವ ಎಸಕಪದ ಪಾಂಗುಗಳ ಬಗೆಯನ್ನು
ಗುರುತಿಸುವ ಹೆಸರುಕಂತೆಯೊಂದಿಗೆ ಮಾತ್ರ ಬರುವಂತಹದಾಗಿರಬಹುದು;
(ಚ) ಅದು ಬೇರೆ ಬಗೆಯ ಎಸಕಪದವಾಗಿದೆಯಾದರೂ, ಅದರೊಂದಿಗೆ
ಬಂದ ಹೆಸರುಕಂತೆಗೆ ಈ ಹುರುಳು ಬಂದಿರಬಲ್ಲುದು.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(45ಕ) ಕೆಂಪು ಹೂವಿನ ಗಿಡ ಅಳಿದು ಹೋಗಿದೆ. (45ಚ) ದನಗಳು ಹುಲ್ಲು ತಿನ್ನುತ್ತವೆ.
(45ಕ) ಸೊಲ್ಲಿನಲ್ಲಿ ಅಳಿದು ಹೋಗು ಎಂಬುದು ಎಸಕವನ್ನು ತಿಳಿಸಲು ಬಳಕೆಯಾಗಿದ್ದು, ಅದರೊಂದಿಗೆ ಪಾಂಗುಗಳ ಬಗೆಯನ್ನು ಗುರುತಿಸುವ ಹೆಸರು ಕಂತೆಗಳನ್ನು ಮಾತ್ರ ಬಳಸಬಹುದಲ್ಲದೆ, ಪಾಂಗುಗಳನ್ನು ಗುರುತಿಸುವ ಹೆಸರು ಕಂತೆಗಳನ್ನು ಬಳಸಲು ಬರುವುದಿಲ್ಲ. ಹಾಗಾಗಿ, ಇದರಲ್ಲಿ ಬಂದಿರುವ ಕೆಂಪು ಹೂವಿನ ಗಿಡ ಎಂಬುದು ನೇರವಾಗಿ ಒಂದು ಪಾಂಗನ್ನು ಗುರುತಿಸುವ ಬದಲು, ಒಂದು ಬಗೆಯ ಪಾಂಗನ್ನು ಮಾತ್ರವೇ ಗುರುತಿಸಬಲ್ಲುದು.
ಹಾಗಾಗಿ, (45ಕ) ಸೊಲ್ಲಿಗೆ ‘ಕೆಂಪುಹೂವಿನ ಒಂದು ಗಿಡವೂ ತೋಟದ ಲ್ಲಿಲ್ಲ’ ಎಂಬ ಹುರುಳಿದೆಯಲ್ಲದೆ, ‘ಒಂದು ಕೆಂಪುಹೂವಿನ ಗಿಡ ಇಲ್ಲವಾಗಿದೆ (ಸತ್ತುಹೋಗಿದೆ)’ ಎಂಬ ಹುರುಳಿಲ್ಲ.
(45ಚ) ಸೊಲ್ಲಿನಲ್ಲಿ ತಿನ್ನು ಎಸಕಪದ ಬಂದಿದ್ದು, ಅದರೊಂದಿಗೆ ಪಾಂಗು ಗಳನ್ನು ಗುರುತಿಸುವ ಹೆಸರುಕಂತೆಯೂ ಬರಬಲ್ಲುದು, ಇಲ್ಲವೇ ಪಾಂಗುಗಳ ಬಗೆಯನ್ನು ಗುರುತಿಸುವ ಹೆಸರುಕಂತೆಯೂ ಬರಬಲ್ಲುದು. ಎಂದರೆ, ಈ
ಸೊಲ್ಲಿಗೆ ಎರಡು ಹುರುಳುಗಳಿರಬಲ್ಲುವು: ‘(ಹಟ್ಟಿಯಲ್ಲಿರುವ) ದನಗಳು ಏನು ತಿನ್ನುತ್ತಿವೆ’ ಎಂಬುದನ್ನು ಅದು ತಿಳಿಸಬಲ್ಲುದು, ಇಲ್ಲವೇ ‘ಸಾಮಾನ್ಯವಾಗಿ ದನಗಳು ಏನು ತಿನ್ನುತ್ತವೆ’ ಎಂಬುದನ್ನೂ ಅದು ತಿಳಿಸಬಲ್ಲುದು. ಇವುಗಳಲ್ಲಿ ಮೊದಲನೆಯದು ಪಾಂಗನ್ನು ಗುರುತಿಸುವ ಬಳಕೆ, ಮತ್ತು ಎರಡನೆಯದು ಪಾಂಗಿನ ಬಗೆಯನ್ನು ಗುರುತಿಸುವ ಬಳಕೆ.
(2) ಪಾಂಗುಗಳ ಬಗೆಯನ್ನು ಗುರುತಿಸುವ ಈ ಎರಡು ಬಗೆಯ ಬಳಕೆ ಗಳಲ್ಲೂ ಹೆಸರುಕಂತೆಯಲ್ಲಿ ಕಾಣಿಸುವ ಎಣಿಕೆಯ ವ್ಯತ್ಯಾಸಕ್ಕೆ ಬೆಲೆಯಿಲ್ಲ; ಅದನ್ನು ಓರೆಣಿಕೆಯಲ್ಲೂ ಬಳಸಬಹುದು, ಇಲ್ಲವೇ ಹಲವೆಣಿಕೆಯಲ್ಲೂ ಬಳಸ ಬಹುದು. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(46ಕ) ಕೆಂಪು ಹೂವಿನ ಗಿಡ ಅಳಿದುಹೋಗಿದೆ. (46ಚ) ಕೆಂಪು ಹೂವಿನ ಗಿಡಗಳು ಅಳಿದುಹೋಗಿವೆ. (47ಕ) ದನ ಹುಲ್ಲು ತಿನ್ನುತ್ತದೆ. (47ಚ) ದನಗಳು ಹುಲ್ಲು ತಿನ್ನುತ್ತವೆ.
ಪಾಂಗಿನ ಬಗೆಯನ್ನು ಗುರುತಿಸುವ ಹುರುಳಿನಲ್ಲಿ (46ಕ) ಮತ್ತು (46ಚ) ಸೊಲ್ಲುಗಳು ಒಂದೇ ವಿಶಯವನ್ನು ತಿಳಿಸುತ್ತವೆ; ಹೀಗೆಯೇ, (47ಕ) ಮತ್ತು (47ಚ) ಸೊಲ್ಲುಗಳೂ ಒಂದೇ ವಿಶಯವನ್ನು ತಿಳಿಸುತ್ತವೆ.
ಆದರೆ, ಇಂತಹ ಸೊಲ್ಲುಗಳಲ್ಲಿ ಮಂದಿಗುರ್ತದ ಪದಗಳನ್ನು ಬಳಸಿದೆ ಯಾದರೆ, ಅವು ಹಲವೆಣಿಕೆಯ ಪದಗಳಾಗಿದ್ದಲ್ಲಿ ಮಾತ್ರ ಪಾಂಗಿನ ಬಗೆಯನ್ನು ಗುರುತಿಸುವ ಹುರುಳನ್ನು ಪಡೆಯಬಲ್ಲುವು:
(48ಕ) ಹುಡುಗ ತುಂಬಾ ತಂಟೆ ಮಾಡುತ್ತಾನೆ. (48ಚ) ಹುಡುಗರು ತುಂಬಾ ತಂಟೆ ಮಾಡುತ್ತಾರೆ.
(48ಚ) ಸೊಲ್ಲಿನಲ್ಲಿ ಬಂದಿರುವ ಮಂದಿಗುರ್ತದ ಮತ್ತು ಹಲವೆಣಿಕೆಯ
ಹುಡುಗರು ಎಂಬ ಪದ ನೇರವಾಗಿ ಪಾಂಗನ್ನೂ ಗುರುತಿಸಬಲ್ಲುದು, ಪಾಂಗಿನ ಬಗೆಯನ್ನೂ ಗುರುತಿಸಬಲ್ಲುದು; ಆದರೆ, (48ಕ) ಸೊಲ್ಲಿನಲ್ಲಿ ಬಂದಿರುವ ಮಂದಿಗುರ್ತದ ಮತ್ತು ಓರೆಣಿಕೆಯ ಹುಡುಗ ಪದ ನೇರವಾಗಿ ಪಾಂಗನ್ನು ಗುರುತಿಸಬಲ್ಲುದಲ್ಲದೆ, ಪಾಂಗಿನ ಬಗೆಯನ್ನು ಗುರುತಿಸಲಾರದು.
(3) ಈ ಎರಡು ಬಗೆಯ ಸೊಲ್ಲುಗಳಲ್ಲಿ ಎರಡನೆಯ ಬಗೆಯದರ ಎಸಕ ಪದ ಮುಂಬೊತ್ತಿನ ರೂಪದಲ್ಲಿ ಮಾತ್ರ ಬರಬಲ್ಲುದು; ಹಿಂಬೊತ್ತಿನ ರೂಪ ದಲ್ಲಿ ಬಂದಿದೆಯಾದರೆ, ಅದರೊಂದಿಗೆ ಬಂದಿರುವ ಹೆಸರುಕಂತೆಗೆ ಪಾಂಗಿನ ಬಗೆಯನ್ನು ಗುರುತಿಸುವ ಹುರುಳು ಸಿಗಲಾರದು:
(49ಕ) ದನಗಳು ಹಾಲು ಕೊಡುತ್ತವೆ. (49ಚ) ದನಗಳು ಹಾಲು ಕೊಟ್ಟುವು.
(49ಕ) ಸೊಲ್ಲಿನಲ್ಲಿ ಬಂದಿರುವ ದನಗಳು ಪದ ಪಾಂಗನ್ನು ಗುರುತಿಸುವ ಹುರುಳಿನಲ್ಲೂ ಬಂದಿರಬಲ್ಲುದು, ಇಲ್ಲವೇ ಪಾಂಗಿನ ಬಗೆಯನ್ನು ಗುರುತಿಸುವ ಹುರುಳಿನಲ್ಲೂ ಬಂದಿರಬಲ್ಲುದು; ಆದರೆ, (49ಚ) ಸೊಲ್ಲಿನಲ್ಲಿ ಬಂದಿರುವ ಅದೇ ಪದ ಪಾಂಗನ್ನು ಗುರುತಿಸುವ ಹುರುಳಿನಲ್ಲಿ ಮಾತ್ರ ಬಂದಿರಬಲ್ಲುದು.
ಹಿಂದೆ ನಡೆದಿದ್ದ ಒಂದು ಸಂಗತಿಯನ್ನು ತಿಳಿಸುವ ಸೊಲ್ಲಿನಲ್ಲೂ ಉತ್ತ ಒಟ್ಟು ಬಂದಿರುವಲ್ಲಿ ಮಾತ್ರ ಇಂತಹ ಪಾಂಗಿನ ಬಗೆಯನ್ನು ಗುರುತಿಸುವ ಹುರುಳು ಸಿಗಬಲ್ಲುದು:
(49ಟ) ದನಗಳು ಒಳ್ಳೆ ಹಾಲು ಕೊಡುತ್ತಿದ್ದುವು.
(49ಟ) ಸೊಲ್ಲಿನಲ್ಲೂ ದನಗಳು ಪದ ಪಾಂಗಿನ ಬಗೆಯನ್ನು ಗುರುತಿಸುವ
ಹುರುಳಿನಲ್ಲಿ ಬಂದಿರಬಲ್ಲುದು.
(4) ಮೇಲೆ ಕೊಟ್ಟಿರುವ ಎರಡು (49ಕ) ಮತ್ತು (49ಟ) ಸೊಲ್ಲುಗಳೂ ಒಂದು ಬಗೆಯ ಪಾಂಗಿಗೆ ಸಂಬಂದಿಸಿದಂತಹ ವಿಶಯವನ್ನು ತಿಳಿಸಲು ಬಳಕೆ ಯಾಗಿವೆ. ಇದಕ್ಕೆ ಬದಲು, ಒಬ್ಬ ವ್ಯಕ್ತಿಗೆ ಇಲ್ಲವೇ ಒಂದು ವಸ್ತುವಿಗೆ ಸಂಬಂದಿಸಿದಂತಹ ವಿಶಯವನ್ನು ತಿಳಿಸುವ ಸೊಲ್ಲುಗಳಲ್ಲೂ ಒಂದು ಬಗೆಯ ಪಾಂಗನ್ನು ಗುರುತಿಸುವ ಹೆಸರುಕಂತೆ ಬಳಕೆಯಾಗಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(50ಕ) ರಾಜುವಿಗೆ ಒಬ್ಬ ನರ್ಸನ್ನು ಮದುವೆಯಾಗಬೇಕೆಂದಿದೆ. (50ಚ) ರಾಜು ಒಬ್ಬ ಹಾಡುಗಾರ.
(50ಕ) ಸೊಲ್ಲಿನಲ್ಲಿ ಬಂದಿರುವ ಒಬ್ಬ ನರ್್ಸ ಎಂಬ ಹೆಸರುಕಂತೆಗೆ ಪಾಂಗನ್ನು ಗುರುತಿಸುವ ಹುರುಳೂ ಇರಬಲ್ಲುದು, ಮತ್ತು ಪಾಂಗಿನ ಬಗೆಯನ್ನು ಗುರುತಿಸುವ ಹುರುಳೂ ಇರಬಲ್ಲುದು; ಒಬ್ಬ ಹುಡುಗಿಯನ್ನು ಮನಸ್ಸಿನಲ್ಲಿರಿಸಿ ಆತ ಈ ಸೊಲ್ಲನ್ನು ಬಳಸಿರುವನಾದರೆ, ಅದಕ್ಕೆ ಪಾಂಗನ್ನು ಗುರುತಿಸುವ ಹುರುಳಿರುತ್ತದೆ; ಮತ್ತು ಯಾರನ್ನೂ ಮನಸ್ಸಿನಲ್ಲಿರಿಸದೆ ಬಳಸಿರುವನಾದರೆ, ಅದಕ್ಕೆ ಪಾಂಗಿನ ಬಗೆಯನ್ನು ಗುರುತಿಸುವ ಹುರುಳಿರುತ್ತದೆ.
(50ಚ) ಸೊಲ್ಲಿನಲ್ಲಿ ಬಂದಿರುವ ಒಬ್ಬ ಹಾಡುಗಾರ ಎಂಬ ಹೆಸರುಕಂತೆ ಬೇರೆಯೇ ಒಂದು ಕಾರಣಕ್ಕಾಗಿ ಪಾಂಗಿನ ಬಗೆಯನ್ನು ಗುರುತಿಸುವ ಹುರುಳನ್ನು ಪಡೆಯುತ್ತದೆ: ‘ರಾಜು ಎಂತಹವನು’ ಎಂಬುದಾಗಿ ಆತನ ಪರಿಚೆಯನ್ನು ತಿಳಿಸುವುದಕ್ಕಾಗಿ ಈ ಸೊಲ್ಲು ಬಳಕೆಯಾಗಿದೆ; ಹಾಗಾಗಿ, ಅದರಲ್ಲಿ ಬಂದಿರುವ
ಒಬ್ಬ ಹಾಡುಗಾರ ಎಂಬ ಪದಕಂತೆಗೆ ಪಾಂಗಿನ ಬಗೆಯನ್ನು ಗುರುತಿಸುವ ಹುರುಳು ಮಾತ್ರವೇ ಸಿಗಬಲ್ಲುದು.
(5) ಈ ಎರಡು ಬಗೆಯ ಸೊಲ್ಲುಗಳು ಇದಕ್ಕೆ ಮೊದಲು ಕೊಟ್ಟಿರುವ ಎರಡು ಬಗೆಯ ಸೊಲ್ಲುಗಳಿಂದ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿವೆ; ಇದಕ್ಕೆ ಮೊದಲು ಕೊಟ್ಟಿರುವ ಸೊಲ್ಲುಗಳಲ್ಲಿ ಪಾಂಗಿನ ಬಗೆಯನ್ನು ಗುರುತಿಸುವ ಹೆಸರುಕಂತೆ ಓರೆಣಿಕೆಯಲ್ಲೂ ಇರಬಲ್ಲುದು, ಇಲ್ಲವೇ ಹಲವೆಣಿಕೆಯಲ್ಲೂ ಇರಬಲ್ಲುದು; ಈ ಎಣಿಕೆಯ ವ್ಯತ್ಯಾಸಕ್ಕೆ ಸಮನಾದ ಹುರುಳಿನ ವ್ಯತ್ಯಾಸ ಆ ಸೊಲ್ಲುಗಳಲ್ಲಿ ಕಾಣಿಸುವುದಿಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು.
ಆದರೆ, ಮೇಲೆ ಕೊಟ್ಟಿರುವ (50ಕ) ಮತ್ತು (50ಚ) ಸೊಲ್ಲುಗಳಲ್ಲಿ ಹೆಸರುಕಂತೆ ಓರೆಣಿಕೆಯಲ್ಲಿರುವ ಬದಲು ಹಲವೆಣಿಕೆಯಲ್ಲಿದೆಯಾದರೆ, ಪಾಂಗಿನ ಬಗೆಯನ್ನು ಗುರುತಿಸುವ ಹುರುಳಿನಲ್ಲೂ ಅದು ಬೇರೆ ವಿಶಯವನ್ನು ತಿಳಿಸುತ್ತದೆ:
(51ಕ) ರಾಜುವಿಗೆ ಒಂದು ಮನೆ ಕೊಂಡುಕೊಳ್ಳಬೇಕೆಂದಿದೆ. (51ಚ) ರಾಜುವಿಗೆ ಮನೆಗಳನ್ನು ಕೊಂಡುಕೊಳ್ಳಬೇಕೆಂದಿದೆ. (52ಕ) ಅವನೊಬ್ಬ ಹಾಡುಗಾರ. (52ಚ) ಅವರು ಹಾಡುಗಾರರು.
(51ಕ)ದಲ್ಲಿ ಒಂದು ಮನೆ ಎಂಬ ಓರೆಣಿಕೆಯ ಹೆಸರುಕಂತೆಯನ್ನು ಬಳಸ ಲಾಗಿದೆ, ಮತ್ತು (51ಚ)ದಲ್ಲಿ, ಇದಕ್ಕೆ ಬದಲು, ಮನೆಗಳು ಎಂಬ ಹಲ ವೆಣಿಕೆಯ ಪದವನ್ನು ಬಳಸಲಾಗಿದೆ; ಇವೆರಡನ್ನೂ ಪಾಂಗುಗಳ ಬಗೆಯನ್ನು ಗುರುತಿಸುವ ಹುರುಳಿನಲ್ಲಿ ಬಳಸಲಾಗಿದೆಯಾದರೂ, ಈ ಸೊಲ್ಲುಗಳು ತಿಳಿಸುವ ವಿಶಯ ಬೇರೆ ಬೇರೆ ಎಂಬುದನ್ನು ಗಮನಿಸಬಹುದು. (52ಕ) ಮತ್ತು (52ಚ) ಸೊಲ್ಲುಗಳಲ್ಲೂ ಹೀಗೆಯೇ.
(6) ಕೇಳುಗನಿಂದ ಒಂದು ಕೆಲಸವನ್ನು ಮಾಡಿಸಬೇಕೆಂದಿರುವ ಸಂದರ್ಬ ಗಳಲ್ಲಿ ಆಡುಗನು ತಿಳಿಯಬಲ್ಲ ಪಾಂಗನ್ನು ಗುರುತಿಸಬೇಕಾಗುತ್ತದೆ, ಇಲ್ಲವೇ ಪಾಂಗಿನ ಬಗೆಯನ್ನು ಮಾತ್ರವೇ ಗುರುತಿಸಬೇಕಾಗುತ್ತದೆ. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(53ಕ) ಆ ಮಣೆಯನ್ನು ಇಲ್ಲಿ ತನ್ನಿ. (53ಚ) ಒಂದು ಮಣೆಯನ್ನು ಇಲ್ಲಿ ತನ್ನಿ.
(53ಕ)ದಲ್ಲಿ ಬಂದಿರುವ ಆ ಮಣೆ ಎಂಬುದು ಕೇಳುಗನಿಗೆ ತಿಳಿಯಬಲ್ಲ ಒಂದು ಮಣೆಯನ್ನು ಗುರುತಿಸುತ್ತದೆ; ಹಾಗಾಗಿ, ಆಡುಗನು ಬಯಸುವ ಕೆಲಸ ವನ್ನು ಕೇಳುಗನು ಮಾಡಬಲ್ಲನು.
ಇದಕ್ಕೆ ಬದಲು, (53ಚ)ದಲ್ಲಿ ಬಂದಿರುವ ಒಂದು ಮಣೆ ಎಂಬುದು ನೇರ ವಾಗಿ ಒಂದು ಪಾಂಗನ್ನು ಗುರುತಿಸಲು ಹೋಗುವುದಿಲ್ಲ; ಇದಕ್ಕೆ ಬದಲು, ಅದು ಒಂದು ಬಗೆಯ ಪಾಂಗನ್ನು ಮಾತ್ರವೇ ಗುರುತಿಸುತ್ತದೆ; ಇದಲ್ಲದೆ, ಅಂತಹ ದೊಂದು ಪಾಂಗನ್ನು ಆರಿಸಿಕೊಳ್ಳುವ ಕೆಲಸವನ್ನು ಕೇಳುಗನಿಗೇನೇ ಬಿಟ್ಟುಕೊಡ ಲಾಗಿದೆ; ಯಾಕೆಂದರೆ, ಹಾಗೆ ಮಾಡದಿದ್ದಲ್ಲಿ, (ಎಂದರೆ, ಆಡುಗನ ಮನಸ್ಸಿನಲ್ಲಿ ಒಂದು ಮಣೆಯಿದ್ದು, ಅದನ್ನು ಗುರುತಿಸಲು ಆತ ಒಂದು ಮಣೆ ಎಂಬುದನ್ನು ಬಳಸಿರುವನಾದರೆ) ಆತನು ಬಯಸುವ ಕೆಲಸವನ್ನು ನಡೆಸಲು ಕೇಳುಗನಿಗೆ ಸಾದ್ಯವಾಗದು.
ಇಂತಹ ಸೊಲ್ಲುಗಳಲ್ಲಿ ಬಳಕೆಯಾಗುವ ಗುರುತಿಸುವಿಕೆ ಬೇರೆ ಬಗೆಯದು ಎಂಬುದನ್ನು ಇಲ್ಲಿ ಗಮನಿಸಬಹುದು: ಕೇಳುಗನಿಗೆ ಸರಿಯಾದ ತಿಳುವಳಿಕೆ ಸಿಗುವಲ್ಲಿವರೆಗೂ ಅದು ತಿಳಿಯಲಾಗದ ಗುರುತಿಸುವಿಕೆಯಾಗಿಯೇ ಉಳಿಯು ತ್ತದೆ.
(7) ನಾನು ಮತ್ತು ನೀನು ಎಂಬ ಎರಡು ಆಡುಪದಗಳು ಅವುಗಳ ಎಲ್ಲಾ ಬಳಕೆಗಳಲ್ಲೂ ಪಾಂಗಿನ ಬಗೆಯನ್ನು ಮಾತ್ರವೇ ಗುರುತಿಸುವ ಪದಗಳಾಗಿರು ತ್ತವೆ; ಯಾಕೆಂದರೆ, ಅವನ್ನು ಸೊಲ್ಲಿನಲ್ಲಿ ಬಳಸುವಾಗ, ಅವು ಗುರುತಿಸುವ ಪಾಂಗುಗಳು ಸೊಲ್ಲಿನ ಆಡುಗ ಮತ್ತು ಕೇಳುಗರು ಎಂದಿಶ್ಟನ್ನು ಮಾತ್ರ ತಿಳಿಸ ಬೇಕಾಗಿದೆ; ಈ ಆಡುಗ ಮತ್ತು ಕೇಳುಗರು ಯಾರು ಎಂಬುದನ್ನು ತಿಳಿಸ ಬೇಕಾಗಿಲ್ಲ. ಯಾಕೆಂದರೆ, ಅದು ಇಬ್ಬರಿಗೂ ತಿಳಿದಿದೆ.
ಇದಲ್ಲದೆ, ಮಾತು ಮುಂದುವರಿಯುತ್ತಿದ್ದಂತೆ, ಸೊಲ್ಲಿನ ಆಡುಗ ಮತ್ತು ಕೇಳುಗರು ಬದಲಾಗುತ್ತಾ ಇರುತ್ತಾರೆ; ಆಡುಗನಿದ್ದವನು ಕೇಳುಗನಾಗುತ್ತಾನೆ, ಮತ್ತು ಕೇಳುಗನಿದ್ದವನು (ಇಲ್ಲವೇ ಬೇರೊಬ್ಬ ವ್ಯಕ್ತಿ) ಆಡುಗನಾಗುತ್ತಾನೆ. ಈ ಮಾರ್ಪಾಡುಗಳನ್ನು ಆಡುಗರು ಮತ್ತು ಅವರ ಕೇಳುಗರು ಗಮನಿಸುತ್ತಿರುವರಾದ ಕಾರಣ, ಅವನ್ನು ಸೊಲ್ಲಿನಲ್ಲಿ ತಿಳಿಸಬೇಕಾಗುವುದಿಲ್ಲ. ಹಾಗಾಗಿ, ನಾನು ಮತ್ತು ನೀನು ಎಂಬ ಈ ಎರಡು ಪದಗಳನ್ನು ಯಾವುದೇ ಒಂದು ಸಂದರ್ಬದಲ್ಲೂ ಯಾವ ಪಾಂಗು ಆಡುಗ ಮತ್ತು ಯಾವುದು ಕೇಳುಗ ಎಂಬುದಿಶ್ಟನ್ನು ಮಾತ್ರ ತಿಳಿಸಲು ಬಳಸಲಾಗುತ್ತದೆ.
(8) ಸೊಲ್ಲುಗಳಿಗೆ ಎಂತಹ ಒಳಹುರುಳಿದೆ ಎಂಬುದು ಅವುಗಳಲ್ಲಿ ಹೆಸರು ಕಂತೆಯೊಂದನ್ನು ನೇರವಾಗಿ ಪಾಂಗನ್ನು ಗುರುತಿಸಲು ಬಳಸಲಾಗಿದೆಯೇ ಇಲ್ಲವೇ ಪಾಂಗಿನ ಬಗೆಯನ್ನು ಗುರುತಿಸಲು ಬಳಸಲಾಗಿದೆಯೇ ಎಂಬುದರ ಮೇಲೆ ಅವಲಂಬಿಸಿದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
(54ಕ) ಅವಳು ನನಗೊಂದು ಕೆಂಪು ಗುಲಾಬಿ ಕೊಟ್ಟಳು. (54ಚ) ಅವಳು ನನಗೊಂದು ಗುಲಾಬಿ ಕೊಟ್ಟಳು. (54ಟ) ಅವಳು ನನಗೊಂದು ಹೂ ಕೊಟ್ಟಳು.
(54ಕ) ಸೊಲ್ಲಿಗೆ (54ಚ) ಮತ್ತು (54ಟ) ಸೊಲ್ಲುಗಳು ಒಳಹುರುಳು ಗಳಾಗಬಲ್ಲುವು; ಅವಳು ನನಗೆ ಕೆಂಪು ಗುಲಾಬಿ ಕೊಟ್ಟಿದ್ದಾಳೆ ಎಂದರೆ, ‘ಗುಲಾಬಿ ಕೊಟ್ಟಿದ್ದಾಳೆ’ಂದೂ ಆಗುತ್ತದೆ, ಮತ್ತು ‘ಹೂ ಕೊಟ್ಟಿದ್ದಾಳೆ’ಂದೂ ಆಗುತ್ತದೆ. ಇಲ್ಲಿ ಕೆಂಪು ಗುಲಾಬಿ ಎಂಬುದನ್ನು ನೇರವಾಗಿ ಒಂದು ಪಾಂಗನ್ನು ಗುರುತಿಸಲು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು.
ಇದಕ್ಕೆ ಬದಲು, ಕೆಂಪು ಗುಲಾಬಿ ಎಂಬುದನ್ನು ಪಾಂಗಿನ ಬಗೆಯನ್ನು ಗುರುತಿಸಲು ಬಳಸಿದೆಯಾದರೆ, ಇಂತಹ ಒಳಹುರುಳುಗಳು ದೊರಕಲಾರವು. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು:
(55ಕ) ಒಂದು ಕೆಂಪು ಗುಲಾಬಿ ನಾಲ್ಕು ದಿನ ಉಳಿಯುತ್ತದೆ.
(55ಚ) ಒಂದು ಗುಲಾಬಿ ನಾಲ್ಕು ದಿನ ಉಳಿಯುತ್ತದೆ. (55ಟ) ಒಂದು ಹೂ ನಾಲ್ಕು ದಿನ ಉಳಿಯುತ್ತದೆ.
(55ಕ) ಸೊಲ್ಲಿಗೆ (55ಚ) ಇಲ್ಲವೇ (55ಟ) ಸೊಲ್ಲುಗಳು ಒಳಹುರುಳು ಗಳಾಗಲಾರವು; ಯಾಕೆಂದರೆ, ಕೆಂಪು ಗುಲಾಬಿ ನಾಲ್ಕು ದಿನ ಉಳಿಯುವು ದಾದರೂ, ಎಲ್ಲಾ ಬಗೆಯ ಗುಲಾಬಿಗಳು, ಇಲ್ಲವೇ ಎಲ್ಲಾ ಬಗೆಯ ಹೂಗಳು ನಾಲ್ಕು ದಿನ ಉಳಿಯಬೇಕೆಂದೇನಿಲ್ಲ.
ಪಾಂಗಿನ ಬಗೆಯನ್ನು ಗುರುತಿಸುವ ಹೆಸರುಕಂತೆಯನ್ನು ಬಳಸಿರುವಲ್ಲಿ ಬೇರೆಯೇ ಬಗೆಯ ಒಳಹುರುಳು ದೊರೆಯುತ್ತದೆ: ಇದನ್ನು ಕೆಳಗಿನ ಸೊಲ್ಲು ಗಳಲ್ಲಿ ಕಾಣಬಹುದು:
(56ಕ) ಅವನಿಗೊಂದು ಹಣ್ಣನ್ನು ತಿನ್ನಬೇಕೆಂದಿದೆ. (56ಚ) ಅವನಿಗೊಂದು ಹುಳಿ ಹಣ್ಣನ್ನು ತಿನ್ನಬೇಕೆಂದಿದೆ.
(56ಕ) ಸೊಲ್ಲಿನಲ್ಲಿ ಒಂದು ಹಣ್ಣು ಎಂಬುದನ್ನು ನೇರವಾಗಿ ಒಂದು ಪಾಂಗನ್ನು ಗುರುತಿಸುವುದಕ್ಕಾಗಿ ಬಳಸಿರಬಹುದು, ಇಲ್ಲವೇ ಪಾಂಗಿನ ಬಗೆಯನ್ನು ಗುರುತಿಸುವುದಕ್ಕಾಗಿಯೂ ಬಳಸಿರಬಹುದು. ಅದನ್ನೊಂದು ಪಾಂಗನ್ನು ಗುರುತಿಸು ವುದಕ್ಕಾಗಿ ಬಳಸಲಾಗಿದೆಯಾದರೆ, (ಎಂದರೆ, ಅದನ್ನು ಬಳಸಿರುವ ಆಡುಗನ ಮನಸ್ಸಿನಲ್ಲಿ ಯಾವುದಾದರೂ ಒಂದು ಹಣ್ಣು ಇದೆಯಾದರೆ), (56ಕ) ಸೊಲ್ಲಿಗೆ (56ಚ) ಸೊಲ್ಲು ಒಳಹುರುಳಾಗಲಾರದು; ಯಾಕೆಂದರೆ, ಆಡುಗನ ಮನಸ್ಸಿನ ಲ್ಲಿದ್ದ ಹಣ್ಣು ಹುಳಿ ಹಣ್ಣಾಗಿರಬೇಕೆಂದೇನೂ ಇಲ್ಲ.
ಇದಕ್ಕೆ ಬದಲು, (56ಕ)ದಲ್ಲಿ ಒಂದು ಹಣ್ಣು ಎಂಬುದನ್ನು ಪಾಂಗಿನ ಬಗೆ ಯನ್ನು ಗುರುತಿಸುವುದಕ್ಕಾಗಿ ಬಳಸಲಾಗಿದೆಯಾದರೆ, ಆ ಸೊಲ್ಲಿಗೆ (56ಚ) ಸೊಲ್ಲು ಒಳಹುರುಳಾಗಬಲ್ಲುದು. ಯಾಕೆಂದರೆ, ಹುಳಿ ಹಣ್ಣೂ ಒಂದು ಹಣ್ಣೇ.
6.5.6 ತೋರುಪದಗಳಿಂದ ತಿಳಿಯದ ಗುರುತಿಸುವಿಕೆ
ಯಾರು, ಏನು, ಯಾವನು, ಯಾವಳು, ಯಾವುದು, ಮತ್ತು ಎಶ್ಟು ಎಂಬ ತೋರುಪದಗಳನ್ನು, ಮತ್ತು ಎಶ್ಟು, ಎಂತಹ ಮತ್ತು ಯಾವ ಎಂಬ ತೋರುಪದಗಳಿರುವ ಹೆಸರುಕಂತೆಗಳನ್ನು ಬಳಸಿ, ತಿಳಿಯದ ಗುರುತಿಸುವಿಕೆಯನ್ನು ನಡೆಸಲು ಬರುತ್ತದೆ. ಇಲ್ಲಿ ಪಾಂಗು ತಿಳಿಯದಿರುವುದು ಆಡುಗನಿಗಲ್ಲದೆ ಕೇಳುಗನಿಗಲ್ಲ. ಎತ್ತುಗೆಗಾಗಿ ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು:
(57ಕ) ನಿನ್ನೆ ನಿಮ್ಮಲ್ಲಿಗೆ ಯಾರು ಬಂದಿದ್ದರು? (57ಚ) ನಿಮಗೆ ಅವರಲ್ಲಿ ಎಶ್ಟು ಹಣ ಸಿಕ್ಕಿತು? (57ಟ) ಅವರಲ್ಲಿ ಕೆಲಸಕ್ಕಿರುವವನು ಎಂತಹ ಹುಡುಗ? (57ತ) ಇದನ್ನು ಯಾವ ಹುಡುಗನಿಗೆ ಕೊಡಬೇಕು?
ಮೇಲೆ ಕೊಟ್ಟಿರುವ ಸೊಲ್ಲುಗಳಲ್ಲಿ ಯಾರು, ಎಶ್ಟು ಹಣ, ಎಂತಹ ಹುಡುಗ, ಮತ್ತು ಯಾವ ಹುಡುಗ ಎಂಬವನ್ನು ಪಾಂಗುಗಳನ್ನು ಗುರುತಿಸು ವುದಕ್ಕಾಗಿ ಬಳಸಲಾಗಿದೆ; ಆದರೆ, ಅವು ಯಾವ ಪಾಂಗುಗಳನ್ನು, ಎಶ್ಟು ಪಾಂಗು ಗಳನ್ನು ಇಲ್ಲವೇ ಎಂತಹ ಪಾಂಗುಗಳನ್ನು ಗುರುತಿಸುತ್ತವೆ ಎಂಬುದು ಆಡುಗನಿಗೆ ತಿಳಿದಿಲ್ಲ. ಕೇಳುಗ ಅವನ್ನು ತಿಳಿದಿರಬಹುದೆಂಬುದು ಆತನ ಅನಿಸಿಕೆ; ಹಾಗಾಗಿ, ಕೇಳುಗನ ಮುಂದೆ ಆತ ಮೇಲಿನ ಕೇಳ್ವಿಗಳನ್ನಿರಿಸಿರುತ್ತಾನೆ.
ಇಂತಹ ಕೇಳ್ವಿಗಳಲ್ಲಿ ಮಾತ್ರವಲ್ಲದೆ ಬೇರೆಯೂ ಕೆಲವು ಬಗೆಯ ಸೊಲ್ಲು ಗಳಲ್ಲಿ ಆಡುಗನಿಗೆ ತಿಳಿಯದಂತಹ ಪಾಂಗನ್ನು ಗುರುತಿಸುವ ಈ ತೋರುಪದ ಗಳು ಬರಬಲ್ಲುವು. ಇದಲ್ಲದೆ, ‘ಇಲ್ಲವೇ’ ಎಂಬ ಹುರುಳಿನ ಓ ಒಟ್ಟು, ಮತ್ತು ಒಳಗೊಳ್ಳುವ ಊ ಒಟ್ಟುಗಳನ್ನು ಸೇರಿಸಿಯೂ ಅವನ್ನು ಕೆಲವು ಬಗೆಯ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(58ಕ) ರಾಮುವಿಗೆ ಒಂದು ಪುಸ್ತಕ ಬೇಕಾಗಿದೆ. (58ಚ) ರಾಮುವಿಗೆ ಯಾವುದೋ ಒಂದು ಪುಸ್ತಕ ಬೇಕಾಗಿದೆ.
(58ಕ) ಸೊಲ್ಲಿನಲ್ಲಿ ಬಂದಿರುವ ಒಂದು ಪುಸ್ತಕ ಎಂಬ ಹೆಸರುಕಂತೆ ಯನ್ನು ನೇರವಾಗಿ ಒಂದು ಪಾಂಗನ್ನು ಗುರುತಿಸಲು ಬಳಸಿರಬಹುದು, ಇಲ್ಲವೇ ಒಂದು ಬಗೆಯ ಪಾಂಗನ್ನು ಗುರುತಿಸಲು ಬಳಸಿರಬಹುದು (6.5.5 ನೋಡಿ).
(58ಕ) ಸೊಲ್ಲಿಗಿರುವ ಈ ಇಪ್ಪುರುಳು (58ಚ) ಸೊಲ್ಲಿನಲ್ಲಿ ಇಲ್ಲವಾಗಿದೆ; ಅದರಲ್ಲಿ ಬಂದಿರುವ ಯಾವುದೋ ಒಂದು ಪುಸ್ತಕ ಎಂಬ ಹೆಸರುಕಂತೆ ನೇರವಾಗಿ ಒಂದು ಪಾಂಗನ್ನು ಗುರುತಿಸಬಲ್ಲುದಲ್ಲದೆ, ಒಂದು ಬಗೆಯ ಪಾಂಗನ್ನು ಗುರುತಿಸುವ ಹುರುಳು ಅದಕ್ಕೆ ಬರಲಾರದು. ಇದಲ್ಲದೆ, ಈ
ಹೆಸರುಕಂತೆಯಲ್ಲಿ ಬಂದಿರುವ ಯಾವುದೋ (ಯಾವುದು+ಓ) ಎಂಬುದು ಅದು ಗುರುತಿಸುವ ಪಾಂಗು ಯಾವುದೆಂಬುದನ್ನು ಆಡುಗ ತಿಳಿದಿಲ್ಲ ಎಂಬು ದನ್ನೂ ತಿಳಿಸುತ್ತದೆ.
ಮೇಲಿನ ತೋರುಪದಗಳೊಂದಿಗೆ ಓ ಒಟ್ಟಿನ ಬಳಕೆಯನ್ನು ಕೆಳಗಿನ ಸೊಲ್ಲು
ಗಳಲ್ಲೂ ಕಾಣಬಹುದು:
(59ಕ) ಅಲ್ಲಿ ಯಾರೋ ಕುಳಿತಿದ್ದಾರೆ. (59ಚ) ದೂರದಲ್ಲಿ ಏನೋ ಕಾಣಿಸುತ್ತಿದೆ. (59ಟ) ಅವನು ಯಾವನೋ ಒಬ್ಬ ಹುಡುಗನನ್ನು ಹುಡುಕುತ್ತಿದ್ದಾನೆ. (59ತ) ಅವರಿಗೆ ಎಶ್ಟೋ ಹಣ ಸಿಕ್ಕಿದೆ, ಎಶ್ಟು ಗೊತ್ತಿಲ್ಲ. (59ಪ) ಅವನಿಗೆ ಎಂತಹವನೋ ಜತೆಗೆ ಸಿಕ್ಕಿದ್ದಾನೆ.
ಮೇಲಿನ ತೋರುಪದಗಳೊಂದಿಗೆ ಒಳಗೊಳ್ಳುವ ಊ ಒಟ್ಟನ್ನು ಬಳಸಿದಲ್ಲಿ ಅದು ಒಂದು ಬಗೆಯ ಪಾಂಗನ್ನು ಗುರುತಿಸಬಲ್ಲುದಲ್ಲದೆ, ನೇರವಾಗಿ ಒಂದು ಪಾಂಗನ್ನು ಗುರುತಿಸಲಾರದು; ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(60ಕ) ಅವನು ನಿನ್ನೆ ಒಬ್ಬ ಹುಡುಗನನ್ನು ಕಂಡಿರಲಿಲ್ಲ. (60ಚ) ಅವನು ನಿನ್ನೆ ಯಾವನೋ ಒಬ್ಬ ಹುಡುಗನನ್ನು ಕಂಡಿರಲಿಲ್ಲ. (60ಟ) ಅವನು ನಿನ್ನೆ ಯಾವ ಹುಡುಗನನ್ನೂ ಕಂಡಿರಲಿಲ್ಲ.
(60ಕ) ಸೊಲ್ಲಿನಲ್ಲಿ ಬಂದಿರುವ ಒಬ್ಬ ಹುಡುಗ(ನನ್ನು) ಹೆಸರುಕಂತೆಗೆ ನೇರವಾಗಿ ಒಂದು ಪಾಂಗನ್ನು ಗುರುತಿಸುವ ಹುರುಳು, ಮತ್ತು ಒಂದು ಬಗೆಯ ಪಾಂಗನ್ನು ಗುರುತಿಸುವ ಹುರುಳು ಎಂಬುದಾಗಿ ಎರಡು ಹುರುಳುಗಳಿರಬಲ್ಲುವು; ಈ ಎರಡು ಹುರುಳುಗಳಲ್ಲಿ ಮೊದಲನೆಯದು ಮಾತ್ರ, ಮೇಲೆ ವಿವರಿಸಿದ ಹಾಗೆ, (60ಚ) ಸೊಲ್ಲಿನಲ್ಲಿ ಬಂದಿರುವ ಯಾವನೋ ಒಬ್ಬ ಹುಡುಗ(ನನ್ನು) ಎಂಬ ಹೆಸರುಕಂತೆಗೆ ಬರಬಲ್ಲುದು.
ಇದಕ್ಕೆ ಬದಲು, (60ಟ) ಸೊಲ್ಲಿನಲ್ಲಿ ಬಂದಿರುವ ಯಾವ ಹುಡುಗನನ್ನೂ ಎಂಬ ಹೆಸರುಕಂತೆಗೆ ಎರಡನೆಯ ಹುರುಳು ಮಾತ್ರ, ಎಂದರೆ, ಒಂದು ಬಗೆಯ ಪಾಂಗನ್ನು ಗುರುತಿಸುವ ಹುರುಳು ಮಾತ್ರ, ಬರಬಲ್ಲುದು. ಅದು ನೇರವಾಗಿ ಯಾವನೇ ಒಬ್ಬ ಹುಡುಗನನ್ನೂ ಗುರುತಿಸುವುದಿಲ್ಲ ಎಂಬುದನ್ನು ಗಮನಿಸ ಬಹುದು. ಹಾಗಾಗಿ, ಇಂತಹ ಹೆಸರುಕಂತೆಯಲ್ಲಿ ಆಡುಗನಿಗೆ ತಿಳಿದ ಮತ್ತು ತಿಳಿಯದ ಪಾಂಗು ಎಂಬ ವ್ಯತ್ಯಾಸಕ್ಕೆ ಎಡೆಯಿಲ್ಲ.
ಮೇಲಿನ ಹೆಸರುಕಂತೆಗಳೊಂದಿಗೆ ಊ ಒಟ್ಟನ್ನು ಬಳಸುವ ಮೊದಲು ಅವಕ್ಕೆ ಆದರೆ ಎಂಬ ಆಗು ಎಸಕಪದದ ಬೇಡಿಕೆಯ ರೂಪವನ್ನು ಸೇರಿಸಿದೆವಾದರೆ, ಅವಕ್ಕೆ ನೇರವಾಗಿ ಒಂದು ಪಾಂಗನ್ನು ಗುರುತಿಸುವ ಹುರುಳು ಬರುತ್ತದೆ, ಮತ್ತು
ಇಂತಹ ಪಾಂಗು ಆಡುಗನಿಗೆ ತಿಳಿಯದುದು ಎಂಬ ಹುರುಳೂ ಸಿಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(61ಕ) ಅವನು ಯಾವ ಹುಡುಗನನ್ನೂ ಕರೆಯಲಿಲ್ಲ. (61ಚ) ಅವನು ಯಾವ ಹುಡುಗನನ್ನಾದರೂ ಕರೆಯಬಹುದು.
(61ಕ)ದಲ್ಲಿ ಬಂದಿರುವ ಯಾವ ಹುಡುಗನನ್ನೂ ಹೆಸರುಕಂತೆಗೆ ಒಂದು ಬಗೆಯ ಪಾಂಗನ್ನು ಗುರುತಿಸುವ ಹುರುಳು ಮಾತ್ರ ಇದೆ; ಇದಕ್ಕೆ ಬದಲು, ಆದರೆ ಪದವನ್ನು ಸೇರಿಸಿರುವ ಯಾವ ಹುಡುಗನನ್ನಾದರೂ ಎಂಬ (61ಚ) ದಲ್ಲಿ ಬಂದಿರುವ ಹೆಸರುಕಂತೆಗೆ ನೇರವಾಗಿ ಒಂದು ಪಾಂಗನ್ನು ಗುರುತಿಸುವ ಹುರುಳಿದೆ, ಮತ್ತು ಅದರೊಂದಿಗೆ ಅದು ಯಾರು ಎಂಬುದನ್ನು ಆಡುಗ ತಿಳಿದಿಲ್ಲ ಎಂಬ ಹುರುಳೂ ಇದೆ.
ಇಂತಹ ಆದರೆ ಪದದ ಬಳಕೆಯನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲೂ
ಕಾಣಬಹುದು:
(62ಕ) ಮದುವೆಗೆ ಅವರಲ್ಲಿಂದ ಯಾರಾದರೂ ಬರಬಹುದು. (62ಚ) ಆತ ಏನಾದರೂ ಮಾಡಿರಬಹುದು. (62ಟ) ನಿಮ್ಮಲ್ಲಿ ಯಾರಾದರೂ ಮೂರು ಮಂದಿ ಮುಂದೆ ಬನ್ನಿ. (62ತ) ಆಕೆಗೆ ಏನಾದರೂ ಬೇಕಿದ್ದರೆ ನನ್ನನ್ನು ಕರೆಯುತ್ತಾಳೆ.
6.6 ಪಾಂಗುಗಳನ್ನು ಗುರುತಿಸುವ ಬೇರೆ ಬಗೆಗಳು
ಹೆಸರುಪದಗಳನ್ನು ಮಾತ್ರವಲ್ಲದೆ, ಬೇರೆಯೂ ಕೆಲವು ಬಗೆಯ ಪದಗಳನ್ನು ಬಳಸಿ ಎಸಕಗಳ ಪಾಂಗುಗಳನ್ನು ಗುರುತಿಸಲು ಬರುತ್ತದೆ. ಆಡುಪದಗಳು, ತೋರುಪದಗಳು, ಎಣಿಕೆಪದಗಳು, ಎಸಕಪದಗಳ ಹೆಸರುರೂಪಗಳು, ಮತ್ತು ಕೆಲವು ಪರಿಚೆಪದಗಳು ಹಾಗೂ ಎಸಕಪದಗಳು ಇವುಗಳಲ್ಲಿ ಮುಕ್ಯವಾದವುಗಳು.
ಇವುಗಳಲ್ಲಿ ಕೆಲವಕ್ಕೆ ಹೆಸರುಪದಗಳಿಂದ ಬೇರಾಗಿರುವ ಅವುಗಳದೇ ಆದ ಕೆಲಸಗಳಿದ್ದು, ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ ಬಳಕೆಯಾದಾಗ ಅವು ಹಲವು ಬಗೆಗಳಲ್ಲಿ ಹೆಸರುಪದಗಳಿಂದ ಬೇರಾಗಿ ಕಾಣಿಸಿಕೊಳ್ಳುತ್ತವೆ.
6.6.1 ಆಡುಪದಗಳ ಬಳಕೆ
ಒಂದು ಸೊಲ್ಲನ್ನು ಆಡುತ್ತಿರುವ (ಇಲ್ಲವೇ ಕೇಳುತ್ತಿರುವ) ವ್ಯಕ್ತಿಯೇ ಅದರ ಪಾಂಗುಗಳಲ್ಲಿ ಒಂದಾಗಿದೆಯಾದಲ್ಲಿ ಅದನ್ನು ತಿಳಿಸಲು ನಾನು ಮತ್ತು ನೀನು
ಎಂಬ ಎರಡು ಆಡುಪದಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ. ಇವುಗಳಲ್ಲಿ ನಾನು ಎಂಬುದು ಸೊಲ್ಲಿನ ಪಾಂಗುಗಳಲ್ಲಿ ಒಂದು ಅದರ ಆಡುಗ ಎಂಬುದನ್ನು ತಿಳಿಸುತ್ತದೆ, ಮತ್ತು ನೀನು ಎಂಬುದು ಅದು ಆತನ ಕೇಳುಗ ಎಂಬುದನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ರಾಜು ನನಗೊಂದು ಹಣ್ಣು ಕೊಟ್ಟ.
(1ಕ) (1ಚ) ನಾನು ನಿನಗೊಂದು ಪುಸ್ತಕ ಕೊಡುತ್ತೇನೆ. (1ಟ) ನೀನು ಎಲ್ಲಿಗೂ ಹೋಗಬೇಡವೆಂದು ರಾಜು ಹೇಳಿದ.
(1ಕ)ದಲ್ಲಿ ಕೊಡುವ ಎಸಕಕ್ಕೆ ಗುರಿಯಾಗಿರುವುದು ಆ ಸೊಲ್ಲನ್ನು ಆಡಿರುವ ವ್ಯಕ್ತಿ (ಅದರ ಆಡುಗ) ಎಂಬುದನ್ನು ತಿಳಿಸಲು ಅದರಲ್ಲಿ ನನಗೆ ಪದವನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ, ಕೊಡುವ ಎಸಕಕ್ಕೆ ಆ ಸೊಲ್ಲಿನ ಆಡುಗನೇ ಮಾಡುಗ, ಮತ್ತು ಅದರ ಕೇಳುಗನೇ ಗುರಿ ಎಂಬುದನ್ನು ತಿಳಿಸಲು (1ಚ) ಸೊಲ್ಲಿನಲ್ಲಿ ನಾನು ಮತ್ತು ನಿನಗೆ ಎಂಬ ಆಡುಪದಗಳನ್ನು ಬಳಸಲಾಗಿದೆ.
ಆಡುಪದಗಳು ನಡೆಸುವ ಈ ಕೆಲಸವನ್ನು ನುಡಿಯ ಬೇರೆ ಯಾವ ಪದವೂ ನಡೆಸಲಾರದು. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು:
ನಾನು ಜಾನಕಿಯನ್ನು ಊಟಕ್ಕೆ ಕರೆದಿದ್ದೇನೆ. (2ಕ) (2ಚ) ರಾಜು ಜಾನಕಿಯನ್ನು ಊಟಕ್ಕೆ ಕರೆದಿದ್ದಾನೆ. (3ಕ) ನಿನಗೆ ಈ ಪುಸ್ತಕ ಕೊಟ್ಟಿದ್ದಾರೆ. (3ಚ) ಹರಿಗೆ ಈ ಪುಸ್ತಕ ಕೊಟ್ಟಿದ್ದಾರೆ.
(2ಕ) ಸೊಲ್ಲಿನಲ್ಲಿ ಬಂದಿರುವ ನಾನು ಪದ ಆ ಸೊಲ್ಲು ತಿಳಿಸುವಂತಹ ‘ಊಟಕ್ಕೆ ಕರೆಯುವ’ ಎಸಕವನ್ನು ನಡೆಸಿದ ವ್ಯಕ್ತಿ ಅದರ ಆಡುಗ ಎಂಬುದನ್ನು ತಿಳಿಸುತ್ತದೆ; ಇದಕ್ಕೆ ಬದಲು (2ಚ) ಸೊಲ್ಲಿನಲ್ಲಿ ಬಂದಿರುವ ರಾಜು ಪದ ಆ ಎಸಕವನ್ನು ನಡೆಸಿದ ವ್ಯಕ್ತಿ ಯಾರು (ರಾಜು) ಎಂಬುದನ್ನು ತಿಳಿಸುತ್ತದಲ್ಲದೆ, ಸೊಲ್ಲನ್ನು ಆಡಿರುವ ವ್ಯಕ್ತಿ ರಾಜು ಎಂಬುದನ್ನು ತಿಳಿಸುವುದಿಲ್ಲ.
ಇದೇ ರೀತಿಯಲ್ಲಿ, (3ಕ)ದಲ್ಲಿ ಬಂದಿರುವ ನಿನಗೆ ಪದ ‘ಪುಸ್ತಕವನ್ನು ಕೊಟ್ಟಿರುವುದು’ ಸೊಲ್ಲಿನ ಕೇಳುಗನಿಗೆ ಎಂಬುದನ್ನು ತಿಳಿಸುತ್ತದೆ; ಆದರೆ, (3ಚ) ಸೊಲ್ಲಿನಲ್ಲಿ ಬಂದಿರುವ ಹರಿಗೆ ಪದ ‘ಪುಸ್ತಕ ಕೊಟ್ಟಿರುವುದು ಯಾರಿಗೆ’ (ಹರಿಗೆ) ಎಂಬುದನ್ನು ತಿಳಿಸುತ್ತದಲ್ಲದೆ, ‘ಆ ಸೊಲ್ಲನ್ನು ಹರಿಗೆ ಹೇಳಲಾಗಿದೆ, ಆತ (ಹರಿ) ಅದರ ಕೇಳುಗ’ ಎಂಬ ವಿಶಯವನ್ನು ತಿಳಿಸುವುದಿಲ್ಲ.
ಈ ರೀತಿ, ನಾನು ಮತ್ತು ನೀನು ಎಂಬ ಈ ಎರಡು ಆಡುಪದಗಳಿಗೆ ಸೊಲ್ಲಿನ ಒಂದು ಪಾಂಗು ಅದರ ಆಡುಗ ಇಲ್ಲವೇ ಕೇಳುಗ ಎಂಬುದನ್ನು
ತಿಳಿಸುವಂತಹ ಅವುಗಳದೇ ಆದ ಕೆಲಸವಿದೆ; ಹಾಗಾಗಿ, ಅವುಗಳ ಬಳಕೆ ಹೆಸರುಪದಗಳ ಬಳಕೆಗಿಂತ ಹಲವು ವಿಶಯಗಳಲ್ಲಿ ಬೇರಾಗಿದೆ. ಇವುಗಳಲ್ಲಿ ಮುಕ್ಯವಾದ ಕೆಲವು ವ್ಯತ್ಯಾಸಗಳನ್ನು ಕೆಳಗೆ ಕೊಡಲಾಗಿದೆ.
(1) ಆಡುಪದಗಳು ಪಾಂಗನ್ನು ‘ಗುರುತಿಸಲು’ ಹೋಗುವುದಿಲ್ಲ; ಅದು ಆಡುಗ ಇಲ್ಲವೇ ಕೇಳುಗ ಎಂದಿಶ್ಟನ್ನು ಮಾತ್ರ ಅವು ತಿಳಿಸುತ್ತವೆ. ಒಂದು ಸೊಲ್ಲಿನ ಆಡುಗ ಇಲ್ಲವೇ ಕೇಳುಗ ಯಾರು ಎಂಬುದು ಸಾಮಾನ್ಯವಾಗಿ ಅದರ ಆಡುಗ ಮತ್ತು ಕೇಳುಗರಿಗಿಬ್ಬರಿಗೂ ತಿಳಿದಿರುತ್ತದೆಯೆಂಬುದು ಅವರನ್ನು ಆ ಸೊಲ್ಲಿನಲ್ಲಿ ಗುರುತಿಸಬೇಕಾಗುವುದಿಲ್ಲ ಎಂಬುದಕ್ಕೆ ಒಂದು ಕಾರಣ.
ಇನ್ನೊಂದು ಕಾರಣವೇನೆಂದರೆ, ಒಂದು ಪಾಂಗನ್ನು ನಡೆಸುತ್ತಿರುವುದು ಯಾರು ಎಂಬುದನ್ನು ತಿಳಿಸಹೋದರೆ, ಆಡುಪದಗಳ ಮುಕ್ಯ ಕೆಲಸಕ್ಕೆ, ಎಂದರೆ ಪಾಂಗು ಸೊಲ್ಲಿನ ಆಡುಗ ಇಲ್ಲವೇ ಕೇಳುಗ ಎಂಬುದನ್ನು ತಿಳಿಸುವುದಕ್ಕೆ, ಅಡ್ಡಿ ಬರುತ್ತದೆ.
ಎತ್ತುಗೆಗಾಗಿ, ಇಬ್ಬರು ಇಲ್ಲವೇ ಅದಕ್ಕಿಂತ ಹೆಚ್ಚು ಮಂದಿ ತಮ್ಮೊಳಗೆ ಮಾತನಾಡುತ್ತಿರುವಂತಹ ಸಂದರ್ಬವನ್ನು ಗಮನಿಸಬಹುದು: ಇಂತಹ ಸಂದರ್ಬ ಗಳಲ್ಲಿ ಮಾತಿನ ಆಡುಗ ಮತ್ತು ಕೇಳುಗರು ಬದಲಾಗುತ್ತಾ ಇರುತ್ತಾರೆ; ಆಡುಗ ಏನಾದರೂ ಹೇಳಬಹುದು, ಮತ್ತು ಆ ಹೇಳಿಕೆಗೆ ಕೇಳುಗ ತನ್ನ ಮಾರ್ನುಡಿಯನ್ನು ಸೊಲ್ಲಿನ ಆಡುಗ ಕೊಡಬಹುದು; ಬೇರೇನಾದರೂ ಹೇಳಬಹುದು; ಈ ರೀತಿ, ಮಾತು ಮುಂದುವರಿಯುತ್ತಿರುವಾಗ ಆ ಸೊಲ್ಲುಗಳ ಆಡುಗ ಮತ್ತು ಕೇಳುಗರು ಅದಲುಬದಲಾಗುತ್ತಾ ಇರುತ್ತಾರೆ:
ಮತ್ತು ಆಮೇಲೆ,
ಮೊದಲನೇ
ರಾಜು: ನಾನು ಇವತ್ತು ಸ್ವಲ್ಪ ಬೇಗ ಮನೆಗೆ ಹೋಗಬೇಕು.
(4ಕ) (4ಚ) ಹರಿ: ನಾನೂ ನಿನ್ನೊಂದಿಗೆ ಹೊರಡುತ್ತೇನೆ. (4ಟ) ರಾಜು: ಆದರೆ, ಮನೆಗೆ ಹೋಗುವ ಮೊದಲು ನನಗೆ ಸ್ವಲ್ಪ
ಬೇರೆ ಕೆಲಸವಿದೆ.
(4ಕ) ಸೊಲ್ಲಿಗೆ ರಾಜು ಆಡುಗನಾಗಿದ್ದು, ಅದರಲ್ಲಿ ಬಂದಿರುವ ನಾನು ಪದ ಆತನನ್ನು ಗುರುತಿಸಬೇಕಾಗಿದೆ; ಆದರೆ ಇದಕ್ಕೆ ಬದಲು, (4ಚ) ಸೊಲ್ಲಿಗೆ ಹರಿ ಆಡುಗನಾಗಿದ್ದು, ಅದರಲ್ಲಿ ಬಂದಿರುವ ನಾನು ಪದ ರಾಜುವಿನ ಬದಲು ಹರಿಯನ್ನು ಗುರುತಿಸಬೇಕಾಗಿದೆ; (4ಟ) ಸೊಲ್ಲಿನಲ್ಲಿ ಆಡುಗನಾಗಿರುವ ವ್ಯಕ್ತಿ ಇನ್ನೊಮ್ಮೆ ಬದಲಾಗಿದ್ದು, ನಾನು ಪದ ಇಲ್ಲಿ ರಾಜುವನ್ನು ಗುರುತಿಸಬೇಕಾಗಿದೆ. ಈ ರೀತಿ, ಸೊಲ್ಲುಗಳ ಆಡುವಿಕೆಗೆ ಸಂಬಂದಿಸಿದಂತೆ ಅವುಗಳ ಆಡುಗ ಮತ್ತು ಕೇಳುಗರು ಬದಲಾಗುತ್ತಾ ಇರಬಲ್ಲರಾದ ಕಾರಣ, ‘ಒಂದು ಪಾಂಗು ಸೊಲ್ಲಿನ ಆಡುಗ ಇಲ್ಲವೇ ಕೇಳುಗ ಎಂಬುದನ್ನು ತಿಳಿಸುವುದು’ ಮತ್ತು ‘ಆ ಪಾಂಗನ್ನು ಹೊತ್ತಿರುವುದು ಯಾರು ಎಂಬುದನ್ನು ತಿಳಿಸುವುದು’ ಎಂಬ ಈ ಎರಡು ಕೆಲಸಗಳನ್ನು ಒಂದೇ ಪದ ಇಲ್ಲವೇ ಪದಕಂತೆ ನಡೆಸಲಾರದು.
ಆಡುಪದಗಳು ಇವುಗಳಲ್ಲಿ ಮೊದಲನೆಯ ಕೆಲಸವನ್ನು ನಡೆಸಲು ಬಳಕೆಯಾಗು ತ್ತವೆ, ಮತ್ತು ಹೆಸರುಪದಗಳು ಹಾಗೂ ಪದಕಂತೆಗಳು ಎರಡನೆಯ ಕೆಲಸವನ್ನು ನಡೆಸಲು ಬಳಕೆಯಾಗುತ್ತವೆ.
ವ್ಯಕ್ತಿ ಬದಲಾದರೂ ಆಡುಪದ ಬದಲಾಗದಿರುತ್ತದೆ: (4ಕ) ಮತ್ತು (4ಚ) ಸೊಲ್ಲುಗಳಲ್ಲಿ ಆಡುಗರು ಬೇರೆ ಬೇರೆ ವ್ಯಕ್ತಿಗಳಾಗಿವೆಯಾದರೂ ನಾನು ಪದ ಬದಲಾಗದೆ ಉಳಿದಿದೆ; ಮತ್ತು, ವ್ಯಕ್ತಿ ಬದಲಾಗದಿದ್ದರೂ ಆಡುಪದ ಬದಲಾಗು ತ್ತದೆ: (4ಕ) ಸೊಲ್ಲಿನಲ್ಲಿ ನಾನು ಪದ ಬಂದಿದೆ, ಮತ್ತು (4ಚ) ಸೊಲ್ಲಿನಲ್ಲಿ ನೀನು ಪದ ಬಂದಿದೆ; ಆದರೆ, ಇವೆರಡು ತಿಳಿಸುವ ವ್ಯಕ್ತಿ ಒಬ್ಬನೇ (ರಾಜು); ಆತ (4ಕ) ಸೊಲ್ಲಿನ ಆಡುಗನಾಗಿ ಮತ್ತು (4ಚ) ಸೊಲ್ಲಿನ ಕೇಳುಗನಾಗಿ ಕಾಣಿಸಿಕೊಳ್ಳುತ್ತಿರುವುದೇ ಅವು ಈ ರೀತಿ ಬೇರೆ ಬೇರಾಗಿರಲು ಕಾರಣ.
ಒಂದು ಪಾಂಗು ಸೊಲ್ಲಿನ ಆಡುಗ ಇಲ್ಲವೇ ಕೇಳುಗ ಎಂಬುದನ್ನು ಮಾತ್ರ ಆಡುಪದಗಳು ತಿಳಿಸಬೇಕಾಗಿದೆ, ಮತ್ತು ಇದನ್ನು ತಿಳಿಸುವುದಕ್ಕಾಗಿ ಆ ಪಾಂಗನ್ನು ಹೊರುವ ವ್ಯಕ್ತಿ, ವಸ್ತು ಮೊದಲಾದುವನ್ನು ಅವು ಗುರುತಿಸಲು ಹೋಗಬಾರದು; ಹಾಗಾಗಿ, ಈ ಎರಡನೇ ಕೆಲಸದಲ್ಲಿ ನೆರವಾಗುವುದಕ್ಕಾಗಿ ಹೆಸರುಪದಗಳೊಂದಿಗೆ ಬರುವ ಯಾವ ನುಡಿತವೂ ಆಡುಪದಗಳೊಂದಿಗೆ ಬರುವುದಿಲ್ಲ.
ಪಾಂಗುಗಳನ್ನು ಹೊರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವು ದಕ್ಕಾಗಿ, ಅವುಗಳ ಪರಿಚೆಯನ್ನು ತಿಳಿಸುವುದು, ಅಳವಿಯನ್ನು ತಿಳಿಸುವುದು, ಮತ್ತು ಆ ವ್ಯಕ್ತಿ, ವಸ್ತು ಮೊದಲಾದುವನ್ನು ನೆಲೆಗೊಳಿಸುವುದು ಎಂಬ ಮೂರು ಬಗೆಯ ಕೆಲಸಗಳನ್ನು ನಡೆಸಬಲ್ಲ ನೆರವು ನುಡಿತಗಳು ಹೆಸರುಪದಗಳೊಂದಿಗೆ ಬರುತ್ತವೆಯೆಂಬುದನ್ನು ನಾವು ಮೇಲೆ ನೋಡಿರುವೆವು. ಇವುಗಳಲ್ಲಿ ಯಾವುವೂ ಆಡುಪದಗಳೊಂದಿಗೆ ಬರುವುದಿಲ್ಲ.
ಕೆಲವೊಮ್ಮೆ ಒಂದು ಸೊಲ್ಲಿನ ಆಡುಗ ಇಲ್ಲವೇ ಕೇಳುಗ ಯಾರು ಎಂಬು ದನ್ನು ಗುರುತಿಸಿಕೊಡಬೇಕಾಗುತ್ತದೆ. ಇಂತಹ ಸಂದರ್ಬಗಳಲ್ಲಿ, ಗುರುತಿಸುವಲ್ಲಿ ನೆರವಾಗಬಲ್ಲ ನುಡಿತಗಳನ್ನು ಆಡುಪದಕ್ಕೆ ಸೇರಿಸಿ ಹೇಳುವ ಬದಲು, ಬೇರೆ ಯಾಗಿ ಇರಿಸಲಾಗುತ್ತದೆ:
ನಾವು, ಕಲಿತವರು, ಇಂತಹ ಕೆಲಸ ಮಾಡಬಾರದು. (5ಕ) (5ಚ) ನೀನು, ಆ ಮೂಲೆಯಲ್ಲಿ ಕುಳಿತವನು, ಹೊರಗೆ ಹೋಗು. (5ಟ) ನೀವು,
ಹುಡುಗರು,
ತರಗತಿಯ
ಮೂರನೇ
ಮನೆಗೆ
ಹೋಗಬಹುದು.
(5ತ) ನಿನಗೆ, ಶ್ರೀನಿವಾಸನಿಗೆ, ಒಂದು ಬಹುಮಾನ ಇದೆ. (5ಪ) ಮೇಶ್ಟ್ರೇ, ನಿಮ್ಮ ಶಾಲು ಕೆಳಗೆ ಬಿದ್ದಿದೆ.
ಮೇಲಿನ ಸೊಲ್ಲುಗಳಲ್ಲಿ ಆಡುಗ ಇಲ್ಲವೇ ಕೇಳುಗರು ಯಾರೆಂಬುದನ್ನು ಗುರುತಿಸುವಲ್ಲಿ ನೆರವಾಗುವ ಕಲಿತವರು, ಆ ಮೂಲೆಯಲ್ಲಿ ಕುಳಿತವನು,
ಮತ್ತು ಮೂರನೇ ತರಗತಿಯ ಹುಡುಗರು, ಶ್ರೀನಿವಾಸನಿಗೆ, ಮೇಶ್ಟ್ರೇ ಎಂಬ ನುಡಿತಗಳನ್ನು ಬೇರೆಯೇ ಪದ ಇಲ್ಲವೆ ಪದಕಂತೆಗಳಾಗಿ ಇರಿಸಲಾಗಿದೆ; ಅವನ್ನು ಆಡುಪದಗಳ ನೆರವು ನುಡಿತಗಳಾಗಿ ಒಂದೇ ಪದಕಂತೆಯಲ್ಲಿ ಇರಿಸಿಲ್ಲ. ಅವು ಪಾಂಗುಗಳನ್ನು ಗುರುತಿಸಹೋದಲ್ಲಿ, ಸೊಲ್ಲಿನ ಯಾವ ಪಾಂಗು ಅದರ ಆಡುಗ ಇಲ್ಲವೇ ಕೇಳುಗನಾಗಿದೆ ಎಂಬುದನ್ನು ಸರಿಯಾಗಿ ತಿಳಿಸಲಾರವೆಂಬುದೇ ಇದಕ್ಕೆ ಕಾರಣ.
ಮಾತನಾಡುತ್ತಿರುವವರಿಗೆ ಸೊಲ್ಲುಗಳ ಆಡುಗರು ಮತ್ತು ಕೇಳುಗರು ಯಾರು ಎಂಬ ವಿಶಯದಲ್ಲಿ ಸಂಶಯವುಂಟಾಗುವುದು ತೀರಾ ಕಡಿಮೆ. ಮಾತ ನಾಡುವ ವ್ಯಕ್ತಿ ಎದುರಿಗೇನೇ ಇಲ್ಲದಿದ್ದರೂ, ಆತನ ಉಲಿಯನ್ನು ಕೇಳಿಯೇ ಹೆಚ್ಚಿನೆಡೆಗಳಲ್ಲೂ ಆತ ಯಾರೆಂದು ಕೇಳುಗರು ತಿಳಿದುಕೊಳ್ಳಬಲ್ಲರು. ಆದರೆ, ಬರಹಗಳ ಓದುಗರಿಗೆ ಈ ನೆರವು ಸಿಗುವುದಿಲ್ಲವಾದ ಕಾರಣ, ಹಲವೆಡೆಗಳಲ್ಲಿ ಸೊಲ್ಲಿನ ಆಡುಗ ಮತ್ತು ಕೇಳುಗರ ಗುರುತನ್ನು ತಿಳಿಸಿಕೊಡಬೇಕಾಗುತ್ತದೆ. ಹಾಗಾಗಿ, ಮಾತಿನಲ್ಲಿ ಬಳಕೆಯಾಗದಂತಹ ಕೆಲವು ಹೆಚ್ಚಿನ ಹೊಲಬುಗಳು ಬರಹದಲ್ಲಿ ಬಳಕೆಯಾಗುತ್ತವೆ.
ಮೇಲೆ (5ಕ-ಟ) ಸೊಲ್ಲುಗಳಲ್ಲಿ ಕಾಣಿಸಿದ ಹಾಗೆ, ಮಾತಿನ ಆಡುಗ ಯಾರೆಂಬುದನ್ನು ಸೊಲ್ಲಿನ ಮೊದಲು ಕೊಡುವ ಹೆಸರಿನ ಮೂಲಕ ತಿಳಿಸುವುದು ಒಂದು ಹೊಲಬು. ಇದನ್ನು ಬರಹದಲ್ಲಿರುವ ನಾಟಕಗಳಲ್ಲಿ ಬಳಸಲಾಗುತ್ತದೆ. ಯಾವ ಸೊಲ್ಲನ್ನು ಯಾರು ಹೇಳಬೇಕು ಎಂಬುದನ್ನು ತಿಳಿಸುವುದು ಮಾತ್ರ ವಲ್ಲದೆ, ಆಡುಗನು ನಡೆಸಬೇಕಾಗಿರುವ ಬೇರೆ ಕೆಲಸಗಳನ್ನೂ ಇವುಗಳ ಮೂಲಕ ತಿಳಿಸಲಾಗುತ್ತದೆ.
ಇದಕ್ಕೆ ಬದಲು, ಸೊಲ್ಲುಗಳ ಆಡುಗ ಮತ್ತು ಕೇಳುಗರಿಬ್ಬರನ್ನೂ ಗುರುತಿಸು ವುದಕ್ಕಾಗಿ ಕತೆ-ಕಾದಂಬರಿಗಳಲ್ಲಿ ಹೊರಸೊಲ್ಲುಗಳನ್ನು ಬಳಸಲಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
(6ಕ)
ರಾಜು ಮನೆಗೆ ಬಂದೊಡನೆ ಜಾನಕಿ ಅವನ ಹತ್ತಿರ ‘ನೀವು ಇವತ್ತು ನನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಿರಲ್ಲವೇ?’ ಎಂದು ಕೇಳಿದಳು. ಅದಕ್ಕೆ ರಾಜು, ‘ಮೊದಲಿಗೆ ಸ್ವಲ್ಪ ಕಾಪಿ ಮಾಡಿಕೊಡು; ಆಮೇಲೆ ನೋಡೋಣ’ ಎಂದು ಹೇಳಿದ.
(6ಚ) ‘ನೀವೊಮ್ಮೆ ಹೊರಗೆ ಹೋಗಿ’ ಎಂದು ರಾಜು ಹರಿಗೆ ಹೇಳಿದ. (6ಟ) ಹರಿಯನ್ನು ಕಂಡು ರಾಜು ಕೇಳಿದ: ‘ನೀನು ಬೆಂಗಳೂರಿನಿಂದ
ಬಂದದ್ದು ಯಾವಾಗ?’
(6ಕ)ದಲ್ಲಿ ಬಂದಿರುವ ಎರಡು ಸೊಲ್ಲುಗಳನ್ನು ಯಾರು ಯಾರಿಗೆ ಹೇಳಿದ್ದು (ಅವುಗಳ ಆಡುಗ ಮತ್ತು ಕೇಳುಗರು ಯಾರು ಎಂಬುದನ್ನು ತಿಳಿಸಲು)
ಹೊರಸೊಲ್ಲುಗಳನ್ನು ಬಳಸಲಾಗಿದೆ. ಇವುಗಳಲ್ಲಿ ಮೊದಲನೇ ಸೊಲ್ಲಿನ ಆಡುಗ ಮತ್ತು ಕೇಳುಗರು ಯಾರು ಎಂಬುದನ್ನು ರಾಜು ಮನೆಗೆ ಬಂದೊಡನೆ ಜಾನಕಿ ಅವನ ಹತ್ತಿರ ‘……’ ಎಂದು ಹೇಳಿದಳು ಎಂಬ ಹೊರಸೊಲ್ಲು ತಿಳಿಸುತ್ತದೆ, ಮತ್ತು ಎರಡನೇ ಸೊಲ್ಲಿನ ಆಡುಗ ಮತ್ತು ಕೇಳುಗರು ಯಾರು ಎಂಬುದನ್ನು ಅದಕ್ಕೆ ರಾಜು ‘……’ ಎಂದು ಹೇಳಿದ ಎಂಬ ಇನ್ನೊಂದು ಹೊರಸೊಲ್ಲು ತಿಳಿಸುತ್ತದೆ.
(2) ಮನುಶ್ಯರನ್ನು ಹೆಸರಿಸುವ ಪದಗಳಲ್ಲಿ ಹುಡುಗ-ಹುಡುಗಿ, ಅಜ್ಜ- ಅಜ್ಜಿ, ಕುರುಡ-ಕುರುಡಿ ಮೊದಲಾದ ಕೆಲವು ಪದಗಳು ಗಂಡುಗುರ್ತ ಮತ್ತು ಹೆಣ್ಣುಗುರ್ತಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತವೆ; ಆದರೆ, ಆಡುಪದಗಳು ಇಂತಹ ವ್ಯತ್ಯಾಸವನ್ನು ತೋರಿಸುವುದಿಲ್ಲ; ಅವು ವ್ಯಕ್ತಿಗಳನ್ನು ಗುರುತಿಸ ಹೋಗದೆ, ಸೊಲ್ಲಿನ ಪಾಂಗು ಆಡುಗ ಇಲ್ಲವೇ ಕೇಳುಗ ಎಂದಿಶ್ಟೇ ತಿಳಿಸಲು ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ.
ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜು ಹೇಳಿದ.
(7ಕ) (7ಚ) ನಾನು ಎಲ್ಲಿಗೂ ಹೋಗುವುದಿಲ್ಲವೆಂದು ಜಾನಕಿ ಹೇಳಿದಳು.
(7ಕ)ದಲ್ಲಿ ಬಂದಿರುವ ಒಳಸೊಲ್ಲಿನ (ನಾನು ಎಲ್ಲಿಗೂ ಹೋಗುವುದಿಲ್ಲ ಎಂಬುದರ) ಆಡುಗ ಗಂಡುಗುರ್ತದ ರಾಜು, ಮತ್ತು (7ಚ)ದಲ್ಲಿ ಬಂದಿರುವ ಅದೇ ಒಳಸೊಲ್ಲಿನ ಆಡುಗ ಹೆಣ್ಣುಗುರ್ತದ ಜಾನಕಿ; ಹೀಗಿದ್ದರೂ, ಈ ಎರಡು ಕಡೆಗಳಲ್ಲೂ ನಾನು ಎಂಬ ಆಡುಪದವೇ ಬಳಕೆಯಾಗಿದೆ.
ಸೊಲ್ಲುಗಳ ಎಸಕರೂಪದಲ್ಲಿ ಬರುವ ಗುರ್ತದ ಒಟ್ಟುಗಳು ಬೇರೆ ಹೆಸರು ಪದಗಳ ಹಾಗೆ, ಆಡುಪದಗಳು ತಿಳಿಸುವ ಆಗುಗ, ಮಾಡುಗ, ಮತ್ತು ಆಗಿಸುಗ ಗಳನ್ನೂ ಅಡಕವಾಗಿ ಗುರುತಿಸುತ್ತವೆ; ಆಡುಪದಗಳು ತಿಳಿಸಲಾರದಂತಹ ಈ ಗಂಡುಗುರ್ತ-ಹೆಣ್ಣುಗುರ್ತ ವ್ಯತ್ಯಾಸವನ್ನು ಈ ಒಟ್ಟುಗಳು ತಿಳಿಸುತ್ತವೆ (ಹೇಳಿದ- ಹೇಳಿದಳು) ಎಂಬುದನ್ನು ಮೇಲಿನ ಸೊಲ್ಲುಗಳಲ್ಲಿ ಕಾಣಬಹುದು.
(3) ಹೆಸರುಪದಗಳ ಹಾಗೆ ಆಡುಪದಗಳೂ ಓರೆಣಿಕೆ ಮತ್ತು ಹಲವೆಣಿಕೆ ಗಳೆಂಬ ಎರಡು ರೂಪಗಳಲ್ಲಿ ಬರುತ್ತವೆ; ಆದರೆ, ಇವುಗಳಲ್ಲಿ ಹಲವೆಣಿಕೆಯ ರೂಪಗಳನ್ನು ಪಡೆಯುವುದಕ್ಕಾಗಿ ಅವಕ್ಕೆ ಅರು ಇಲ್ಲವೇ ಗಳು ಒಟ್ಟನ್ನು ಸೇರಿಸುವ ಬದಲು, ಅವುಗಳ ಎರಡನೆಯ ಬರಿಗೆಕಂತೆಯಾದ ನು ಎಂಬುದಕ್ಕೆ ಬದಲಾಗಿ ವು ಎಂಬುದನ್ನು ಬಳಸಲಾಗುತ್ತದೆ (ನಾನು-ನಾವು, ನೀನು- ನೀವು).
ಇದಲ್ಲದೆ, ಹಲವೆಣಿಕೆಯ ರೂಪಗಳು ಇಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ತಿಳಿಸುವುದಕ್ಕಿಂತಲೂ ಮುಕ್ಯವಾಗಿ ಸೊಲ್ಲಿನ ಆಡುಗ, ಕೇಳುಗ ಮತ್ತು ಬೇರೊಬ್ಬ ಎಂಬವುಗಳ ಬೇರೆ ಬೇರೆ ಕೂಡಿಕೆಗಳನ್ನು ತಿಳಿಸುತ್ತವೆ. ಆಡುಪದಗಳು ಪಾಂಗು ಗಳನ್ನು ಗುರುತಿಸಲು ಬಳಕೆಯಾಗುವ ಬದಲು ಸೊಲ್ಲುಗಳಲ್ಲಿ ಯಾವ ಪಾಂಗು
ಅವುಗಳ ಆಡುಗ ಇಲ್ಲವೇ ಕೇಳುಗವಾಗಿರುತ್ತದೆ ಎಂಬುದನ್ನು ತಿಳಿಸಲು ಬಳಕೆ ಯಾಗುತ್ತಿರುವುದೇ ಇದಕ್ಕೆ ಕಾರಣವಿರಬೇಕು.
ಎತ್ತುಗೆಗಾಗಿ, ನಾವು ಎಂಬುದು ಒಂದು ಸೊಲ್ಲಿನ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ತಿಳಿಸುತ್ತಿರಬಹುದು, ಇಲ್ಲವೇ ಆಡುಗನೊಂದಿಗೆ ಕೇಳುಗನನ್ನು ಹೊರತುಪಡಿಸಿ ಬೇರೊಬ್ಬನನ್ನು ಸೇರಿಸಿ ಹೇಳುತ್ತಿರಬಹುದು. ಅದನ್ನು ‘ಹಲವು ಮಂದಿ ಆಡುಗರು’ ಎಂಬ ಹುರುಳಿನಲ್ಲಿ ಬಳಸುವುದು ತುಂಬಾ ಅಪರೂಪ.
ಇದೇ ರೀತಿಯಲ್ಲಿ ನೀವು ಎಂಬುದಕ್ಕೆ ಕೇಳುಗನೊಂದಿಗೆ ಆಡುಗನನ್ನು ಹೊರತುಪಡಿಸಿ ಬೇರೊಬ್ಬನನ್ನು ಸೇರಿಸಿ ಹೇಳುವ ಹುರುಳಿರಬಲ್ಲುದು; ಕೆಲವು ಸಂದರ್ಬಗಳಲ್ಲಿ ಮಾತ್ರ, ಅದು ಹಲವು ಮಂದಿ ಕೇಳುಗರನ್ನೂ ತಿಳಿಸಬಲ್ಲುದು.
ಹೆಸರುಪದಗಳೊಂದಿಗೆ ಅವು ಗುರುತಿಸುವ ಪಾಂಗುಗಳ ಎಣಿಕೆಯನ್ನು ಹೆಚ್ಚು ವಿವರವಾಗಿ ತಿಳಿಸಲು ಎಣಿಕೆಪದಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ, ಈ ಎಣಿಕೆಪದಗಳು ಹೆಸರುಪದಗಳ ಮೊದಲು ಬರುತ್ತವೆ; ಒಂದರಿಂದ ಅಯ್ದರ ವರೆಗಿನ ಪದಗಳು ಮಾತ್ರ ಹೆಸರುಪದಗಳ ಬಳಿಕವೂ ಬರುತ್ತವೆ (6.4 ನೋಡಿ). ಆದರೆ, ಆಡುಪದಗಳೊಂದಿಗೆ ಬರುವ ಎಣಿಕೆಪದಗಳು ಅವುಗಳ ಬಳಿಕ ಮಾತ್ರ ಬರಬಲ್ಲುವಲ್ಲದೆ, ಅವುಗಳ ಮೊದಲು ಬರಲಾರವು; ಇದಲ್ಲದೆ, ಅವು ಆಡುಪದಗಳೊಂದಿಗೆ ಒಂದೇ ಪದಕಂತೆಯಲ್ಲಿ ಬರುವುದಿಲ್ಲ, ಬೇರೆ ಬೇರೆ ಪದಕಂತೆಗಳಲ್ಲಿ ಬರುತ್ತವೆ. ಪತ್ತುಗೆ ಒಟ್ಟುಗಳನ್ನು ಅವೆರಡಕ್ಕೂ ಬೇರೆ ಬೇರಾಗಿ ಸೇರಿಸಬೇಕಾಗುತ್ತದೆ ಎಂಬುದರಿಂದ ಇದನ್ನು ತಿಳಿಯಬಹುದು:
ನಮ್ಮನ್ನು ಇಬ್ಬರನ್ನು ಯಾರೂ ಕರೆಯುವುದಿಲ್ಲ.
(8ಕ) (8ಚ) ನಿಮಗೆ ಮೂವರಿಗೆ ಮೊದಲು ಬಡಿಸುತ್ತಾರೆ. (8ಟ) ನಿಮ್ಮಿಂದ ಮೂವರಿಂದ ಯಾವ ಕೆಲಸವೂ ಆಗದು.
ಇಂತಹ ಬಳಕೆಗಳಲ್ಲಿ ಪತ್ತುಗೆ ಒಟ್ಟುಗಳನ್ನು ಆಡುಪದದಿಂದ ತೆಗೆದುಹಾಕಲು ಬರುತ್ತದೆ; ಆದರೆ, ಹಾಗೆ ಮಾಡಿದಾಗಲೂ ಅವು ನನ್್ನ ಮತ್ತು ನಿನ್್ನ ಎಂಬ ರೂಪದಲ್ಲೇ ಉಳಿಯುತ್ತವಲ್ಲದೆ, ನಾವು ಮತ್ತು ನೀವು ಎಂಬ ರೂಪದಲ್ಲಿ ಬರುವುದಿಲ್ಲ. ಇದಲ್ಲದೆ, ಇಬ್ಬರು ಎಣಿಕೆಪದ ಮಾತ್ರ ಈ ಇಟ್ಟಳದಲ್ಲಿ ಬರ ಬಲ್ಲುದು:
ನಮ್ಮಿಬ್ಬರನ್ನು ಯಾರೂ ಕರೆಯುವುದಿಲ್ಲ.
(9ಕ) (9ಚ) ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬ ಹೊರಗೆ ಹೋಗಲಿ. (9ಟ) ನಿಮ್ಮಿಬ್ಬರಿಂದ ಯಾವ ಕೆಲಸವೂ ಆಗದು. (9ಪ) ನಮ್ಮಿಬ್ಬರಲ್ಲಿ ಒಬ್ಬ ಒಳಗೆ ಹೋಗಲಿ.
6.6.2 ತೋರುಪದಗಳ ಬಳಕೆ
ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬರುವ ಹೆಸರುಪದಗಳ ಜಾಗದಲ್ಲಿ ಅವನು, ಅವಳು, ಇವನು, ಅದು ಮೊದಲಾದ ತೋರುಪದಗಳನ್ನೂ ಬಳಸಲು ಬರುತ್ತದೆ. ಆದರೆ, ಇವು ಹಲವು ವಿಶಯಗಳಲ್ಲಿ ಹೆಸರುಪದಗಳಿಂದ ಬೇರಾಗಿವೆ, ಮತ್ತು ಆಡುಪದಗಳಿಂದಲೂ ಬೇರಾಗಿವೆ.
ಕನ್ನಡದ ತೋರುಪದಗಳಲ್ಲೆಲ್ಲ ಎರಡೆರಡು ಅಂಗಗಳಿರುತ್ತವೆ; ಇವುಗಳಲ್ಲಿ ಮೊದಲನೆಯದು ಅವು ಸೊಲ್ಲುಗಳಲ್ಲಿ ನಡೆಸಬೇಕಾಗಿರುವ ಕೆಲಸ ಎಂತಹದು ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅದರ ಹರವು ಎಂತಹದು ಎಂಬುದನ್ನು ತಿಳಿಸುತ್ತದೆ.
ಎತ್ತುಗೆಗಾಗಿ, ಇವನು ಪದದಲ್ಲಿ ಇ ಎಂಬುದು ಮೊದಲನೆಯ ಅಂಗ; ಅದು ‘ಆಡುಗನ ಹತ್ತಿರ ಇರುವಂತಹದು’ ಎಂಬ ಹುರುಳನ್ನು ಕೊಡುತ್ತದೆ; ಅವನು ಎಂಬ ಇನ್ನೊಂದು ತೋರುಪದದಲ್ಲಿ ಈ ಅಂಗಕ್ಕೆ ಬದಲಾಗಿ ಅ ಎಂಬ ಬೇರೊಂದು ಅಂಗ ಬಂದಿದ್ದು, ಅದು ‘ಆಡುಗನಿಂದ ದೂರ ಇರುವಂತಹದು’ ಎಂಬ ಹುರುಳನ್ನು ಕೊಡುತ್ತದೆ.
ಇವನು ಪದದಲ್ಲಿ ಎರಡನೆಯ ಅಂಗವಾಗಿ ಅನು ಎಂಬುದು ಬಂದಿದ್ದು, ಅದಕ್ಕೆ ‘ಗಂಡುಗುರ್ತದ ವ್ಯಕ್ತಿ’ ಎಂಬ ಹುರುಳಿದೆ. ಇವಳು ಎಂಬ ಇನ್ನೊಂದು ತೋರುಪದದಲ್ಲಿ ಈ ಅಂಗಕ್ಕೆ ಬದಲಾಗಿ ಅಳು ಎಂಬ ಬೇರೊಂದು ಅಂಗ ಬಂದಿದ್ದು, ಅದಕ್ಕೆ ‘ಹೆಣ್ಣುಗುರ್ತದ ವ್ಯಕ್ತಿ’ ಎಂಬ ಹುರುಳಿದೆ.
ಈ ಎರಡು ಅಂಗಗಳನ್ನು ಅವಲಂಬಿಸಿ, ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬಳಕೆಯಾಗಬಲ್ಲ ತೋರುಪದಗಳನ್ನು ಕೆಳಗೆ ಕೊಟ್ಟಿರುವ ಹಾಗೆ ಪಟ್ಟಿಮಾಡ ಬಹುದು:
ಹರವು
- ಗಂಡಸು ,,
- ಹೆಂಗಸು ,,
- ಉಳಿಕೆ ,,
- ಹಲವರು ,,
-
ಹಲವು
ತಿಳಿದವು
ತಿಳಿಯದವು
ದೂರದವು ಅವನು ಆತ ಅವಳು ಆಕೆ ಅದು — ಅವರು — ಅವು
ಹತ್ತಿರದವು ಇವನು
ಈತ ಇವಳು
ಈಕೆ ಇದು — ಇವರು
— ಇವು
ಯಾವನು
ಯಾವಳು —- ಯಾವುದು ಏನು ಯಾವರು ಯಾರು ಯಾವುವು
ಈ ಪಟ್ಟಿಯ ಒಂದೊಂದು ಸಾಲಿನಲ್ಲೂ ಮೂರು ಮೂರು ಪದಗಳಿವೆ; ಇವುಗಳಲ್ಲಿ ಮೊದಲ ಎರಡು ಪದಗಳು ಆಡುಗನಿಗೆ ತಿಳಿದಿರುವ ಪಾಂಗನ್ನು ಗುರುತಿಸುತ್ತವೆ; ಅವುಗಳಲ್ಲಿ ಮೊದಲನೆಯದು ಆಡುಗನಿಗಿಂತ ದೂರ ಇರುವ ಪಾಂಗನ್ನು ಗುರುತಿಸುತ್ತದೆ, ಮತ್ತು ಎರಡನೆಯದು ಆತನ ಹತ್ತಿರ ಇರುವ ಪಾಂಗನ್ನು ಗುರುತಿಸುತ್ತದೆ; ಒಂದೊಂದು ಸಾಲಿನಲ್ಲೂ ಬಂದಿರುವ ಮೂರನೆಯ ಪದ ಆಡುಗನಿಗೆ ತಿಳಿಯದಿರುವ ಪಾಂಗನ್ನು ಗುರುತಿಸುತ್ತದೆ.
ನಾಲ್ಕು ಮತ್ತು ಅಯ್ದನೇ ಸಾಲಿನ ಪದಗಳು ಎರಡು ಮತ್ತು ಮೂರನೇ ಸಾಲಿನಲ್ಲಿರುವ ಪದಗಳ ಹಲವೆಣಿಕೆ ರೂಪಗಳು. 1, 2, 3, ಮತ್ತು 4ನೇ ಸಾಲುಗಳಲ್ಲಿ ಎರಡೆರಡು ಒಳಸಾಲುಗಳಿವೆ; ಇವುಗಳ ಎರಡನೇ ಒಳಸಾಲುಗಳು ಕೊರೆಸಾಲುಗಳಾಗಿದ್ದು, ಅವುಗಳಲ್ಲಿ ಎರಡು ಇಲ್ಲವೇ ಒಂದು ಪದ ಮಾತ್ರ ಕಾಣಿಸುತ್ತದೆ.
ಯಾವನು ಮತ್ತು ಯಾವಳು ಪದಗಳಿಗೆ ಸ್ವಲ್ಪ ಮಟ್ಟಿಗೆ ಕೀಳ್ಮೆಯ ಹುರುಳಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳ ನಡುವಿರುವ ವ್ಯತ್ಯಾಸ ದಿಂದ ತಿಳಿಯಬಹುದು:
(10ಕ) ಯಾರು ಇದನ್ನು ಆಚೆ ಇರಿಸಿದ್ದು? (10ಚ) ಯಾವನು ಇದನ್ನು ಆಚೆ ಇರಿಸಿದ್ದು?
ಹಾಗಾಗಿ, ಅಂತಹ ಕೀಳ್ಮೆಯ ಹುರುಳು ಇಲ್ಲದಿರುವ, ಮತ್ತು ಓರೆಣಿಕೆಯ
ಪದ ಬೇಕಾಗಿರುವ ಕಡೆಗಳಲ್ಲೂ ಯಾರು ಪದವನ್ನೇ ಬಳಸಲಾಗುತ್ತದೆ:
(11ಕ) ಅಲ್ಲಿ ಕುಳಿತಿರುವ ಹುಡುಗ ಯಾರು? (11ಚ) ಅಲ್ಲಿ ಹಾಡುತ್ತಿರುವ ಹುಡುಗಿ ಯಾರು? (11ಟ) ಯಾರೋ ಒಬ್ಬ ಹುಡುಗ ನಿಮ್ಮನ್ನು ನೋಡಲು ಬಂದಿದ್ದ.
ತಿಳಿದಿರುವ ಪಾಂಗನ್ನು ಗುರುತಿಸುವ ಇವನು, ಈತ, ಇವಳು, ಈಕೆ, ಇದು, ಇವರು, ಇವು ಎಂಬ ಪದಗಳಿಗೆ ‘ಆಡುಗನ ಹತ್ತಿರ ಇರುವ ಪಾಂಗು’ ಎಂಬ ಹುರುಳು ಮಾತ್ರವಲ್ಲದೆ, ‘ಆಡುಗನಿಂದ ದೂರ ಇಲ್ಲದ ಪಾಂಗು’ ಎಂಬ ಅಲ್ಲಗಳೆಯುವ ಹುರುಳೂ ಇದೆ. ಆದರೆ, ಅವನು, ಆತ, ಅವಳು, ಆಕೆ, ಅದು, ಅವರು, ಅವು ಎಂಬ ಪದಗಳಿಗೆ ಅಂತಹ ಅಲ್ಲಗಳೆಯುವ ಹುರುಳಿಲ್ಲ. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(12ಕ) ಇವಳು ಊರಿಗೆ ಬಂದು ಮೂರು ವಾರ ಕಳೆಯಿತು. (12ಚ) ಅವನಿಗೆ ಒಂದು ಪುಸ್ತಕ ಬೇಕಾಗಿದೆ.
ಆಡುಗನ ಹತ್ತಿರದ ಪಾಂಗುಗಳನ್ನು ಗುರುತಿಸುವ ಪದಗಳ ಎದುರು ನಿಲ್ಲಿಸಿ ದಾಗ ಮಾತ್ರ ದೂರದ ಪದಗಳಿಗೆ ಅಂತಹ ‘ದೂರದ ಪಾಂಗು’ ಎಂಬ ಹುರುಳು ಬರುತ್ತದೆ:
(12ಟ) ಇವರು ಮಂಚದ ಮೇಲೆ ಮಲಗಲಿ, ಮತ್ತು ಅವರು ಸೋಪಾ
ದಲ್ಲಿ ಮಲಗಲಿ.
(12ತ) ಇವಳು ಅವಳಿಗೆ ಹೊಡೆದದ್ದು ಯಾಕೆ?
ಆಡುಗನ ಹತ್ತಿರದ ಪಾಂಗನ್ನು ಗುರುತಿಸುವ ಇವನು, ಇವಳು, ಇದು ಮೊದಲಾದವುಗಳಿಗೂ, ದೂರದ ಪಾಂಗನ್ನು ಗುರುತಿಸುವ ಅವನು, ಅವಳು, ಅದು ಮೊದಲಾದವುಗಳಿಗೂ ನಡುವಿರುವ ಈ ವ್ಯತ್ಯಾಸ ಇನ್ನೊಂದು ರೀತಿ ಯಲ್ಲೂ ಕಾಣಿಸಿಕೊಳ್ಳುತ್ತದೆ: ದೂರದ ಪಾಂಗನ್ನು ಗುರುತಿಸುವ ಪದಗಳನ್ನು ಹತ್ತಿರ-ದೂರ ಎಂಬ ವ್ಯತ್ಯಾಸವನ್ನು ತಿಳಿಸಬೇಕಾಗಿಲ್ಲದಂತಹ ಕಡೆಗಳಲ್ಲೂ ಬಳಸಲು ಬರುತ್ತದೆ; ಆದರೆ ಹತ್ತಿರದ ಪಾಂಗನ್ನು ಗುರುತಿಸುವ ಪದಗಳನ್ನು ಅಂತಹ ಕಡೆಗಳಲ್ಲಿ ಬಳಸಲು ಬರುವುದಿಲ್ಲ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಇಟ್ಟಳಗಳಲ್ಲಿ ದೂರದ ಪಾಂಗನ್ನು ಗುರುತಿಸುವ ಪದಗಳು ಬರುತ್ತವೆ, ಆದರೆ ಹತ್ತಿರದ ಪಾಂಗನ್ನು ಗುರುತಿಸುವ ಪದಗಳು ಬರುವುದಿಲ್ಲ ಎಂಬುದನ್ನು ಗಮನಿಸಬಹುದು:
ದೂರದ ತೋರುಪದ ಬರುತ್ತದೆ ಹತ್ತಿರದ ತೋರುಪದ ಬರುವುದಿಲ್ಲ
ದೂರದವನು ಬಂದವನು ಕೊಡುವವರು ಹಾಡದವನು ದೊಡ್ಡದು ಕಾಡಿನವಳು ಹಳ್ಳಿಯಾಕೆ ನಾಲ್ಕನೆಯವರು
*ದೂರದಿವನು *ಬಂದಿವನು *ಕೊಡುವಿವರು *ಹಾಡದಿವನು *ದೊಡ್ಡಿದು *ಕಾಡಿನಿವಳು *ಹಳ್ಳಿಯೀಕೆ *ನಾಲ್ಕನೆಯಿವರು
ದೂರದ, ಬಂದ, ಕೊಡುವ, ಹಾಡದ, ದೊಡ್ಡ, ಕಾಡಿನ, ಹಳ್ಳಿಯ, ನಾಲ್ಕನೆಯ ಮೊದಲಾದ ಪದರೂಪಗಳೊಂದಿಗೆ ಹತ್ತಿರದ ಪದರೂಪಗಳನ್ನು (ಇವನು, ಇವರು, ಇದು, ಇವಳು, ಈಕೆ, ಇವರು ಮೊದಲಾದುವನ್ನು) ಬಳಸಲು ಬರುವುದಿಲ್ಲ ಎಂಬುದನ್ನು ಮೇಲೆ ಎರಡನೇ ಕಾಲಂನಲ್ಲಿರುವ ನುಡಿತ ಗಳು ಸರಿಯಲ್ಲ ಎಂಬುದರಿಂದ ತಿಳಿಯಬಹುದು.
ಈ ಎರಡು ಬಗೆಯ ತೋರುಪದಗಳ ನಡುವೆ ಇನ್ನೊಂದು ವ್ಯತ್ಯಾಸವೂ ಇದೆ: ಇವನು, ಇವಳು, ಇದು ಮೊದಲಾದವು ಕೇಳುಗನಿಗೆ ತಿಳಿಯಬಲ್ಲು ದಾಗಿದ್ದರೂ ನೇರವಾಗಿ ಆತನ ಗಮನದಲ್ಲಿಲ್ಲದ ಪಾಂಗನ್ನು ಗಮನಕ್ಕೆ ಬರುವ ಹಾಗೆ ಮಾಡಲು ಬಳಕೆಯಾಗುತ್ತವೆ, ಮತ್ತು ಅವನು, ಅವಳು, ಅದು ಮೊದಲಾದವು ಕೇಳುಗನ ಗಮನದಲ್ಲಿರುವ ಪಾಂಗನ್ನೇ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಬಳಕೆಯಾಗುತ್ತವೆ.
(13ಕ) ಅವನಿಗೆ ಬಾಗಿಲು ತೆರೆಯಲು ಬರಲಿಲ್ಲ; ಅದನ್ನು ತುಂಬಾ
ಗಟ್ಟಿಯಾಗಿ ಹಾಕಿದ್ದರು.
(13ಚ) ಅವನಿಗೆ ಬಾಗಿಲು ತೆರೆಯಲು ಬರುವುದಿಲ್ಲ; ಇದನ್ನು ನಾನೂ
ಗಮನಿಸಿದ್ದೆ.
(13ಕ)ದ ಎರಡನೇ ಸೊಲ್ಲಿನಲ್ಲಿ ಅದನ್ನು ಪದ ಬಂದಿದೆ; ಈ ಪದ ಅದಕ್ಕಿಂತ ಹಿಂದಿನ ಸೊಲ್ಲಿನಲ್ಲಿದ್ದ ಬಾಗಿಲು ಎಂಬ ಪಾಂಗನ್ನೇ ಮುಂದು ವರಿಸುವುದಕ್ಕಾಗಿ ಬಳಕೆಯಾಗಿದೆ; ಈ ಪಾಂಗು ಕೇಳುಗನ ಗಮನದಲ್ಲಿರುವಂತಹ ಪಾಂಗೇ ಎಂಬುದನ್ನು ಗಮನಿಸಬಹುದು.
ಇದಕ್ಕೆ ಬದಲು, (13ಚ)ದ ಎರಡನೇ ಸೊಲ್ಲಿನಲ್ಲಿ ಇದನ್ನು ಪದ ಬಂದಿದೆ; ಈ ಪದ ಅದಕ್ಕಿಂತ ಹಿಂದಿನ ಸೊಲ್ಲಿನಲ್ಲಿದ್ದ ಯಾವ ಪಾಂಗನ್ನೂ ಮುಂದು ವರಿಸಲು ಹೋಗದೆ, ಬೇರೆಯೇ ಒಂದು ಪಾಂಗನ್ನು (ಅವನಿಗೆ ಬಾಗಿಲು ತೆರೆಯಲು ಬರುವುದಿಲ್ಲ ಎಂಬ ಸಂಗತಿಯನ್ನು) ಕೇಳುಗನ ಗಮನಕ್ಕೆ ತರಲು ಬಳಕೆಯಾಗಿದೆ ಎಂಬುದನ್ನು ಗಮನಿಸಬಹುದು.
ಮೇಲೆ ಕೊಟ್ಟಿರುವ ತೋರುಪದಗಳ ಪಟ್ಟಿಯ ಮೂರನೇ ಸಾಲಿನಲ್ಲಿ ಬಂದಿರುವ ಯಾವುದು ಮತ್ತು ಏನು ಎಂಬ ಪದಗಳ ನಡುವೆ ಬೇರೊಂದು ಬಗೆಯ ವ್ಯತ್ಯಾಸವಿದೆ; ‘ಯಾವುದಾದರೂ ಒಂದು ಪಾಂಗು ತಿಳಿಯದುದು’ ಎಂಬುದನ್ನು ತಿಳಿಸಬೇಕಾದಾಗ ಏನು ಪದವನ್ನು ಬಳಸಲಾಗುತ್ತದೆ; ಆದರೆ, ‘ಹಲವು ಪಾಂಗುಗಳಲ್ಲಿ ಒಂದು ಮಾತ್ರ ತಿಳಿಯದುದು’ ಎಂಬುದನ್ನು ತಿಳಿಸ ಬೇಕಾದಾಗ, ಯಾವುದು ಪದವನ್ನು ಬಳಸಲಾಗುತ್ತದೆ, ಮತ್ತು ‘ಕೆಲವು ಮಾತ್ರ ತಿಳಿಯದವು’ ಎಂಬುದನ್ನು ತಿಳಿಸಬೇಕಾದಾಗ ಯಾವುವು ಎಂಬುದನ್ನು ಬಳಸ ಲಾಗುತ್ತದೆ. ಏನು ಮತ್ತು ಯಾವುದು/ಯಾವುವು ಎಂಬವುಗಳ ನಡುವಿನ ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(14ಕ) ನಿಮ್ಮ ಬಳಿ ಏನಿದೆ? (14ಚ) ನಿಮ್ಮ ಬಳಿ ಯಾವುದಿದೆ? (15ಕ) ನಾನು ಪೇಟೆಯಿಂದ ಏನು ತರಬೇಕು? (15ಚ) ನಾನು ಪೇಟೆಯಿಂದ ಯಾವುವನ್ನು ತರಬೇಕು?
ಯಾವನು, ಯಾವರು ಮೊದಲಾದ ಮನುಶ್ಯರನ್ನು ಗುರುತಿಸುವ ಪದ
ಗಳಿಗೂ ಯಾರು ಪದಕ್ಕೂ ನಡುವೆ ಇಂತಹದೇ ವ್ಯತ್ಯಾಸವಿದೆ:
(16ಕ) ಈ ಮೂವರಲ್ಲಿ ಜಾನಕಿಗೆ ಹೊಡೆದವಳು ಯಾವಳು? (16ಚ) ಜಾನಕಿಗೆ ಹೊಡೆದದ್ದು ಯಾರು?
ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬಳಕೆಯಾಗಬಲ್ಲ ತೋರುಪದಗಳು ಹಲವು ವಿಶಯಗಳಲ್ಲಿ ಹೆಸರುಪದಗಳಿಂದ, ಮತ್ತು ಮೇಲೆ 6.6.1ರಲ್ಲಿ ವಿವರಿಸಿದ ಆಡುಪದಗಳಿಂದ ಬೇರಾಗಿವೆ. ತೋರುಪದಗಳಿಗೆಲ್ಲ ಎರಡೆರಡು ಅಂಗಗಳಿವೆ, ಮತ್ತು ಈ ಅಂಗಗಳನ್ನವಲಂಬಿಸಿ ಅವನ್ನು ಮೇಲೆ ಕಾಣಿಸಿದ ಹಾಗೆ ಪಟ್ಟಿಮಾಡಬಹುದು ಎಂಬುದು ಇಂತಹ ವ್ಯತ್ಯಾಸಗಳಲ್ಲಿ ಮುಕ್ಯವಾದುದು. ಇದಲ್ಲದೆ ಬೇರೆಯೂ ಕೆಲವು ವ್ಯತ್ಯಾಸಗಳಿದ್ದು, ಅವನ್ನು ಕೆಳಗೆ ಕೊಡಲಾಗಿದೆ:
(1) ಸೊಲ್ಲಿನ ಯಾವ ಪಾಂಗು ಅದರ ಆಡುಗ ಇಲ್ಲವೇ ಕೇಳುಗ ಎಂಬು ದನ್ನು ಆಡುಪದಗಳು ತಿಳಿಸಬೇಕಾಗಿದೆಯಾದ ಕಾರಣ, ಅವು ನೇರವಾಗಿ ಯಾವ ಬಗೆಯ ನೆರವು ನುಡಿತಗಳೊಂದಿಗೂ ಒಂದೇ ಪದಕಂತೆಯಲ್ಲಿ ಬರುವುದಿಲ್ಲ ಎಂಬುದನ್ನು ನಾವು ಮೇಲೆ (6.6.1ರಲ್ಲಿ) ನೋಡಿರುವೆವು; ಆದರೆ, ತೋರು ಪದಗಳು ಸೊಲ್ಲಿನಲ್ಲಿ ನಡೆಸಬೇಕಾಗಿರುವ ಕೆಲಸ ಇದಕ್ಕಿಂತ ತೀರ ಬೇರಾಗಿದೆ ಯಾದ ಕಾರಣ, ಅವುಗಳ ಬಳಕೆಯ ಮೇಲೆ ಇಂತಹ ನಿರ್ಬಂದವಿಲ್ಲ. ಅವು ಹಲವು ಬಗೆಯ ನೆರವು ನುಡಿತಗಳೊಂದಿಗೆ ಬರಬಲ್ಲುವು.
(2) ಹೆಸರುಪದಗಳಲ್ಲಿ ಕೆಲವು ಮಾತ್ರ (ಅಜ್ಜ-ಅಜ್ಜಿ, ಒಕ್ಕಲಿಗ-ಒಕ್ಕಲಿ ಗಿತ್ತಿ, ಆಟಗಾರ, ಆಟಗಾರ್ತಿ, ಜಾಣ-ಜಾಣೆ ಮೊದಲಾದವು) ಗಂಡು-ಹೆಣ್ಣು ಎಂಬ ಗುರ್ತದ ವ್ಯತ್ಯಾಸವನ್ನು ತೋರಿಸುತ್ತವೆ; ಆದರೆ, ತೋರುಪದಗಳಲ್ಲಿ ಈ ರೀತಿ ಗುರ್ತದ ವ್ಯತ್ಯಾಸವನ್ನು ತಿಳಿಸುವುದು ಅವುಗಳ ಒಂದು ಮುಕ್ಯ ಪರಿಚೆ ಯಾಗಿದೆ. ಈ ವ್ಯತ್ಯಾಸದ ಮೇಲೆ ಅವನ್ನೊಂದು ಪಾಂಗುಪಟ್ಟಿಯಲ್ಲಿ ಇರಿಸಿ ಹೇಳಲು ಬರುತ್ತದೆ. ಎತ್ತುಗೆಗಾಗಿ, ದೂರದ ಮತ್ತು ಹತ್ತಿರದ ತೋರುಪದಗಳ ಪಾಂಗುಪಟ್ಟಿಯನ್ನು ಕೆಳಗೆ ಕೊಡಲಾಗಿದೆ:
ದೂರದವು
ಓರೆಣಿಕೆ ಹಲವೆಣಿಕೆ ಗಂಡುಗುರ್ತ ಅವನು ಅವರು
ಹೆಣ್ಣುಗುರ್ತ ಅವಳು ಉಳಿಕೆಗುರ್ತ ಅದು
,, ಅವು
ಹತ್ತಿರದವು ಓರೆಣಿಕೆ ಹಲವೆಣಿಕೆ ಇವನು ಇವರು ಇವಳು ,, ಇದು ಇವು
(3) ಹೆಸರುಪದಗಳ ಹಾಗೆ, ತೋರುಪದಗಳನ್ನೂ ಪರಿಚೆಪದಗಳೊಂದಿಗೆ
ಬಳಸಲು ಬರುತ್ತದೆ; ಆದರೆ, ಈ ವಿಶಯದಲ್ಲಿ ಕೆಲವು ಕಟ್ಟುಪಾಡುಗಳಿವೆ:
(ಕ) ಪರಿಚೆಪದಗಳು ದೂರದ ಪಾಂಗುಗಳನ್ನು ಗುರುತಿಸುವ ತೋರುಪದ ಗಳೊಂದಿಗೆ ಮಾತ್ರ ಬರುತ್ತವಲ್ಲದೆ, ಹತ್ತಿರದ ಮತ್ತು ತಿಳಿಯದ ಪಾಂಗುಗಳನ್ನು ಗುರುತಿಸುವ ತೋರುಪದಗಳೊಂದಿಗೆ ಬರುವುದಿಲ್ಲ (ಚಿಕ್ಕವನು, *ಚಿಕ್ಕಿವನು, *ಚಿಕ್ಕಯಾವನು).
ಪಾಂಗುಗಳನ್ನು
ಆದರೆ, ತಿಳಿಯದ
ಪರಿಚೆಪದ ಗಳೊಂದಿಗೆ ಅವನು ಎಂಬುದನ್ನು ಬಳಸಿ, ಪರಿಚೆಪದದ ಮೊದಲು ಯಾವ ಎಂಬ ಪರಿಚೆರೂಪದಲ್ಲಿರುವ ತೋರುಪದವನ್ನು ಬಳಸುವ ಬೇರೊಂದು ಬಗೆಯ ಹೊಲಬು ಬಳಕೆಯಲ್ಲಿದೆ; ಈ ಎಂಬುದನ್ನೂ ಇಂತಹ ಕಡೆಗಳಲ್ಲಿ ಬಳಸಲು ಬರುತ್ತದೆ:
ಗುರುತಿಸುವುದಕ್ಕಾಗಿ
(17ಕ) ಯಾವ ಚಿಕ್ಕವನನ್ನು ನೀವು ಊಟಕ್ಕೆ ಕರೆದಿರಿ? (17ಚ) ಈ ಚಿಕ್ಕವನು ಊರಿಗೆ ಹೋದುದು ಯಾವಾಗ?
(ಚ) ಪರಿಚೆಪದಗಳು ಹೆಸರುಪದಗಳೊಂದಿಗೆ ನೇರವಾಗಿ ಬಳಕೆಯಾಗ ಬಲ್ಲುವು; ಆದರೆ, ತೋರುಪದಗಳೊಂದಿಗೆ ಬರುವಾಗ ಅವುಗಳಲ್ಲಿ ಹೆಚ್ಚಿನವೂ ಪತ್ತುಗೆಯ ಅ ಒಟ್ಟಿನೊಂದಿಗೆ ಬರುತ್ತವೆ:
ಹೆಸರುಪದಗಳೊಂದಿಗೆ ಸಪುರ ಹುಡುಗ
ಬಿಳಿ ಬಟ್ಟೆ ಕಪ್ಪು ಹುಡುಗಿ
ಕಳಪೆ ಕೆಲಸ ಹೆಚ್ಚು ಜನ ಚುರುಕು ಹುಡುಗ
ಕೆಂಪು ಗೋಡೆ
ತೋರುಪದಗಳೊಂದಿಗೆ
ಸಪುರದವನು ಬಿಳಿಯದು ಕಪ್ಪಿನವಳು ಕಳಪೆಯದು ಹೆಚ್ಚಿನವರು ಚುರುಕಿನವನು ಕೆಂಪಿನದು
ದೊಡ್ಡ, ಚಿಕ್ಕ, ಬಡ ಎಂಬಂತಹ ಕೆಲವೇ ಕೆಲವು ಪರಿಚೆಪದಗಳು ಮಾತ್ರ ನೇರವಾಗಿ ತೋರುಪದಗಳೊಂದಿಗೆ ಸೇರಿ ಬರುತ್ತವೆ (ದೊಡ್ಡವಳು, ಚಿಕ್ಕವನು, ಬಡವರು).
ಆಡುಪದಗಳು ಪರಿಚೆಪದಗಳೊಂದಿಗೆ ನೇರವಾಗಿ ಇಲ್ಲವೇ ಪತ್ತುಗೆಯ ಅ ಒಟ್ಟಿನೊಂದಿಗೆ ಬರುವುದಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು (*ಕಪ್ಪು ನಾನು, *ಚುರುಕಿನ ನೀನು).
(4) ತೋರುಪದಗಳೊಂದಿಗೆ ಅಳವಿಯನ್ನು ತಿಳಿಸುವ ನೆರವುಪದಗಳನ್ನು
ಬಳಸುವಲ್ಲೂ ಕೆಲವು ಕಟ್ಟುಪಾಡುಗಳಿವೆ:
(ಕ) ಎಣಿಕೆಯ ಪದಗಳು ತೋರುಪದಗಳ ಬಳಿಕ ಬರುತ್ತವಲ್ಲದೆ
ಹೆಸರುಪದಗಳ ಹಾಗೆ ಅವುಗಳ ಮೊದಲು ಬರುವುದಿಲ್ಲ:
ಅವನೊಬ್ಬ
ಅದೊಂದು ಇವರು ಹತ್ತು ಮಂದಿ ಅವು ಹತ್ತು
*ಒಬ್ಬ ಅವನು
*ಇಬ್ಬರು ಇವರು *ಹತ್ತು ಮಂದಿ ಇವರು *ನಾಲ್ಕವು
(ಚ) ದೂರದ ತೋರುಪದಗಳ ಬಳಿಕ ಮಾತ್ರವಲ್ಲದೆ, ಹತ್ತಿರದ ತೋರು
ಪದಗಳ ಬಳಿಕವೂ ಎಣಿಕೆಯ ಪದಗಳು ಬರಬಲ್ಲುವು:
ಇವನೊಬ್ಬ ಇದೊಂದು
ಇವರು ಮೂವರು ಇವು ಅಯ್ವತ್ತು
(ಟ) ತಿಳಿಯದ ತೋರುಪದಗಳು ಒಬ್ಬ ಇಲ್ಲವೇ ಒಂದು ಪದದೊಂದಿಗೆ ಮಾತ್ರ ಬರಬಲ್ಲುವಾಗಿದ್ದು, ಅವುಗಳೊಂದಿಗೆ ಒಳಗೊಳ್ಳುವ ಊ ಒಟ್ಟನ್ನು (ಯಾರೊಬ್ಬರೂ, ಯಾವನೊಬ್ಬನೂ, ಯಾವನಾದರೊಬ್ಬ), ಆಯ್ಕೆ ನಡೆಸದ ಓ ಒಟ್ಟನ್ನು (ಯಾವುದೋ ಒಂದು, ಯಾವನೋ ಒಬ್ಬ), ಇಲ್ಲವೇ ಒತ್ತಿ ಹೇಳುವ ಏ ಒಟ್ಟನ್ನು (ಯಾವುದೇ ಒಂದು) ಬಳಸಬೇಕಾಗುತ್ತದೆ. ಆದರೆ, ಯಾರು ಪದದೊಂದಿಗೆ ಬೇರೆ ಎಣಿಕೆಪದಗಳನ್ನು ಬಳಸಲು ಬರುವುದಿಲ್ಲವೆಂದು ತೋರುತ್ತದೆ (*ಯಾರಿಬ್ಬರೂ, *ಯಾವುವು ಹತ್ತೂ).
ಅದರೊಂದಿಗೆ ಆದರೆ ಪದವನ್ನು ಬಳಸಿದಲ್ಲಿ ಮಾತ್ರ, ಬೇರೆ ಎಣಿಕೆಪದ ಗಳನ್ನೂ ಬಳಸಲು ಬರುತ್ತದೆ (ಯಾರಾದರೂ ನಾಲ್ವರು, ಯಾರಾದರೂ ಎಂಟು ಮಂದಿ).
(ತ) ತೋರುಪದಗಳಿಗೆಲ್ಲ ಹಲವೆಣಿಕೆಯ ರೂಪಗಳಿದ್ದು, ಅವನ್ನು ಒತ್ತೆ ಹೆಸರುಗಳ ಹಾಗೆಂದು ತಿಳಿಯಬಹುದು. ಹಾಗಾಗಿ, ಅವು ಎಣಿಕೆಪದಗಳೊಂದಿಗೆ ಬರುತ್ತವಲ್ಲದೆ ಅಳತೆಪದಗಳೊಂದಿಗೆ ಬರುವುದಿಲ್ಲ. ಮಂದಿಗುರ್ತದ ಅವರು ಇಲ್ಲವೇ ಇವರು ಪದದೊಂದಿಗೆ ಅಯ್ದಕ್ಕಿಂತ ಮೇಲಿನ ಎಣಿಕೆ ಪದವನ್ನು ಬಳಸಬೇಕಿದ್ದಲ್ಲಿ, ಅದರೊಂದಿಗೆ ಮಂದಿ ಇಲ್ಲವೇ ಜನ ಪದವನ್ನೂ ಬಳಸ ಬೇಕಾಗುತ್ತದೆ (ಅವರು ಹತ್ತು ಮಂದಿ, ಇವರು ಅಯ್ವತ್ತು ಜನ).
(5) ಪಾಂಗುಗಳನ್ನು ನೆಲೆಗೊಳಿಸುವ ಕೆಲಸವನ್ನು ಈ ತೋರುಪದಗಳೇ ನಡೆಸುತ್ತವೆ; ಹಾಗಾಗಿ, ಅವುಗಳೊಂದಿಗೆ ನೆಲೆಗೊಳಿಸುವ ನುಡಿತಗಳನ್ನು ಬಳಸ ಬೇಕಾಗುವುದಿಲ್ಲ; ಆದರೆ, ದೂರದ ತೋರುಪದಗಳನ್ನು ಬೇರೆ ಕೆಲಸಗಳಲ್ಲೂ ಬಳಸಬಹುದಾಗಿದ್ದು, ಅಂತಹ ಬಳಕೆಗಳಿರುವಲ್ಲಿ ಅವುಗಳೊಂದಿಗೆ ಬೇರೆ ನೆಲೆಗೊಳಿಸುವ ಪದಗಳನ್ನು ಬಳಸಲು ಬರುತ್ತದೆ.
(ಕ) ಕೆಲವು ಪರಿಚೆಪದಗಳೊಂದಿಗೆ, ಮತ್ತು ಪತ್ತುಗೆ ಒಟ್ಟಿನೊಂದಿಗೆ ಬಂದಿರುವ ಎಸಕ, ಹೆಸರು ಇಲ್ಲವೇ ಪರಿಚೆಪದಗಳೊಂದಿಗೆ ದೂರದ ತೋರು ಪದಗಳನ್ನು ಬಳಸಬಲ್ಲೆವಾಗಿದ್ದು, ಅವುಗಳ ಮೊದಲು ನೆಲೆಗೊಳಿಸುವ ಆ, ಈ ಇಲ್ಲವೇ ಯಾವ ಪದಗಳನ್ನು ಬಳಸಲು ಬರುತ್ತದೆ (ಈ ದೊಡ್ಡವನು, ಆ ಓದುವವಳು, ಯಾವ ಹಣ್ಣಿನವನು, ಈ ಚಿಕ್ಕದು).
(ಚ) ಪತ್ತುಗೆ ಒಟ್ಟಿನೊಂದಿಗೆ ಬಂದಿರುವ ಎಸಕ, ಹೆಸರು ಇಲ್ಲವೇ ಪರಿಚೆ ಪದಗಳನ್ನೂ ಇಂತಹ ಪದಗಳೊಂದಿಗೆ ಬಳಸಲು ಬರುತ್ತದೆ (ಓದದ ದೊಡ್ಡ ವನು, ಅಳುವ ಚಿಕ್ಕವನು, ಹಾಡಿದ ಊರಿನವರು).
ಆದರೆ, ಅವುಗಳ ಮೊದಲು ಇಂತಹ ಒಂದಕ್ಕಿಂತ ಹೆಚ್ಚು ಪದಗಳನ್ನು ಮತ್ತು, ಇಲ್ಲವೇ ಮೊದಲಾದ ಪದಗಳಿಂದ ಬೇರ್ಪಡಿಸಿ ಬಳಸಲು ಬರುವುದಿಲ್ಲ:
(18ಕ) *ಕಳ್ಳತನ ಮಾಡಿದ ಮತ್ತು ಪೋಲೀಸರ ಕಯ್ಗೆ ಸಿಕ್ಕಿಬಿದ್ದವನು (18ಚ) *ಈ ಊರಿನ ಮತ್ತು ಈ ಶಾಲೆಯವರು
(6) ಗುರುತಿಸುವ ಸೊಲ್ಲುಗಳಲ್ಲೂ ಅದು ಮತ್ತು ಇದು ಎಂಬ ಎರಡು ತೋರುಪದಗಳನ್ನು ಬಳಸಲು ಬರುತ್ತದೆ, ಮತ್ತು ಇಂತಹ ಬಳಕೆಗಳಲ್ಲಿ ಸೊಲ್ಲು ಗುರುತಿಸಬೇಕಾಗಿರುವ ಪಾಂಗು ಯಾವುದು ಎಂಬುದನ್ನು ಈ ಪದಗಳು ತಿಳಿಸು ತ್ತವೆ. ಇದಲ್ಲದೆ, ಈ ಬಳಕೆಯಲ್ಲಿ ಅವು ಗುರ್ತದ ವ್ಯತ್ಯಾಸವನ್ನು ತೋರಿಸುವು ದಿಲ್ಲ:
(19ಕ) ಇದು ನಮ್ಮ ಮನೆ. (19ಚ) ಅದು ಯಾರು ನಿನ್ನೆ ಬಂದದ್ದು? ಅದು ನಮ್ಮ ಅಣ್ಣ. (19ಟ) ಇದು ಯಾರು? (19ತ) ಇದು ನನ್ನ ತಂಗಿ.
(19ಚ-ತ)ಗಳಲ್ಲಿ ಗುರುತಿಸಬೇಕಾಗಿರುವ ಪಾಂಗನ್ನು ಮಂದಿಗುರ್ತದ ಅಣ್ಣ, ಯಾರು ಮತ್ತು ತಂಗಿ ಎಂಬವುಗಳು ತಿಳಿಸುತ್ತಿವೆಯಾದರೂ, ಅದನ್ನು ಗುರುತಿಸಲು ಅದು ಮತ್ತು ಇದು ಎಂಬ ಉಳಿಕೆಗುರ್ತದ ಪದಗಳನ್ನೇ ಬಳಸ ಲಾಗಿದೆ ಎಂಬುದನ್ನು ಗಮನಿಸಬಹುದು.
ಒಂದು ಚಿತ್ರದಲ್ಲಿರುವ ವ್ಯಕ್ತಿಗಳ ಗುರುತನ್ನು ಕೇಳಬೇಕಾಗಿರುವಲ್ಲಿ ಇಲ್ಲವೇ ತಿಳಿಸಬೇಕಾಗಿರುವಲ್ಲಿ ಅದು ಮತ್ತು ಇದು ಪದಗಳ ಈ ಬಳಕೆಯನ್ನು ಹೆಚ್ಚು ಚನ್ನಾಗಿ ಕಾಣಬಹುದು.
ಎಣಿಕೆಯ ವ್ಯತ್ಯಾಸವನ್ನು ತೋರಿಸಬೇಕಾಗಿರುವಲ್ಲಿ ಈ ಎರಡು ತೋರುಪದ ಗಳನ್ನು ಮೇಲಿನ ಕೆಲಸದಲ್ಲಿ ಬಳಸಲು ಬರುವುದಿಲ್ಲ (*ಇದು ನಮ್ಮ ಮನೆ ಗಳು, *ಅದು ನನ್ನ ಗೆಳೆಯರು). ಆದರೆ, ಹಲವೆಣಿಕೆಯ ಪದಗಳನ್ನು
ತಕ್ಕುಮೆಯ ಹುರುಳಿನಲ್ಲಿ ಬಳಸಲಾಗಿದೆಯಾದರೆ, ಅಂತಹ ಕಡೆಗಳಲ್ಲಿ ಅವನ್ನು ಬಳಸಲು ಬರುತ್ತದೆ (ಇದು ನನ್ನ ತಂದೆಯವರು, ಇದು ನಮ್ಮ ಗುರುಗಳು). ಇಲ್ಲಿ ಅರು ಇಲ್ಲವೇ ಗಳು ಒಟ್ಟು ಎಣಿಕೆಯ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂಬುದನ್ನು ಗಮನಿಸಬಹುದು.
6.6.3 ಎಣಿಕೆಪದಗಳ ಬಳಕೆ
ಪಾಂಗುಗಳನ್ನು ಗುರುತಿಸುವುದಕ್ಕಾಗಿ ಎಣಿಕೆಪದಗಳನ್ನೂ ಬಳಸಲು ಬರುತ್ತದೆ; ಇಂತಹ ಬಳಕೆಗಳಲ್ಲಿ ನೇರವಾಗಿ ಅವು ತಿಳಿಸುವ ಎಣಿಕೆಯನ್ನೇ ಪಾಂಗಾಗಿ ಗುರುತಿಸಬಹುದು, ಇಲ್ಲವೇ ಆ ಎಣಿಕೆಯಿರುವ ವಸ್ತುವನ್ನೂ ಪಾಂಗಾಗಿ ಗುರುತಿಸಬಹುದು.
ಎತ್ತುಗೆಗಾಗಿ, ಮೂರಕ್ಕೆ ನಾಲ್ಕನ್ನು ಸೇರಿಸಿದರೆ ಏಳಾಗುತ್ತದೆ ಎಂಬ ಸೊಲ್ಲಿನಲ್ಲಿ ಮೂರು, ನಾಲ್ಕು ಮತ್ತು ಏಳು ಪದಗಳನ್ನು ನೇರವಾಗಿ ಅವು ತಿಳಿಸುವ ಎಣಿಕೆಯನ್ನು ಗುರುತಿಸಲು ಬಳಸಲಾಗಿದೆ. ಆದರೆ, ನಾಲ್ಕನ್ನು ಇಲ್ಲಿರಿಸಿ, ಮತ್ತು ಒಂದನ್ನು ಒಳಗಿರಿಸಿ ಎಂಬ ಸೊಲ್ಲಿನಲ್ಲಿ ನಾಲ್ಕು ಮತ್ತು ಒಂದು ಪದಗಳನ್ನು ಆ ಎಣಿಕೆಯಿರುವ ವಸ್ತುಗಳನ್ನು ಗುರುತಿಸಲು ಬಳಸ ಲಾಗಿದೆ.
ಎಣಿಕೆಯಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವಲ್ಲಿ ಒಂದರಿಂದ ಅಯ್ದರವರೆಗಿನ ಎಣಿಕೆಪದಗಳು ಅವುಗಳ ಗುರ್ತ ಮತ್ತು ಎಣಿಕೆಯನ್ನು ತಿಳಿಸುವ ಪದರೂಪಗಳಲ್ಲಿ ಬಳಕೆಯಾಗುತ್ತವೆ; ಒಂದು ಎಂಬ ಪದ ಓರೆಣಿಕೆಯಲ್ಲಿ ಮಾತ್ರ ಬರಬಲ್ಲುದಾಗಿದ್ದು, ಆ ಎಣಿಕೆಯ ಮನುಶ್ಯರನ್ನು ಗುರುತಿಸಬೇಕಾದಾಗ ಅದು ಗಂಡುಗುರ್ತದ ಒಬ್ಬ(ನು), ಹೆಣ್ಣುಗುರ್ತದ ಒಬ್ಬಳು ಮತ್ತು ತಕ್ಕುಮೆಯ ಒಬ್ಬರು ಎಂಬ ಮೂರು ರೂಪಗಳಲ್ಲಿ ಬರುತ್ತದೆ. ಮನುಶ್ಯರಲ್ಲದ ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸಬೇಕಾದಾಗ ಅದು ಒಂದು ಎಂಬ ರೂಪ ದಲ್ಲೇ ಬರುತ್ತದೆ.
(20ಕ) ಒಬ್ಬನು ಊರಿಗೆ ಹೋಗಿದ್ದಾನೆ. (20ಚ) ಮನೆಯಲ್ಲಿ ಒಬ್ಬಳೇ ಇದ್ದಾಳೆ. (20ಟ) ಅವುಗಳಲ್ಲಿ ಒಂದನ್ನು ಮೇಜಿನ ಮೇಲಿರಿಸಿ.
ಉಳಿದ ಎಣಿಕೆಪದಗಳಲ್ಲಿ ಎರಡರಿಂದ ಅಯ್ದರವರೆಗಿನ ಪದಗಳಿಗೆ ಮಾತ್ರ ಮನುಶ್ಯರನ್ನು ಗುರುತಿಸುವ ಇಬ್ಬರು, ಮೂವರು, ನಾಲ್ವರು ಮತ್ತು ಅಯ್ವರು ಎಂಬ ಹಲವೆಣಿಕೆಯ ಹೆಚ್ಚಿನ ರೂಪಗಳಿವೆ:
(21ಕ) ಇಬ್ಬರನ್ನು ಬರಹೇಳು. (21ಚ) ನಾಲ್ವರನ್ನು ಒಳಗೆ ಬಿಡಲಿಲ್ಲ. (21ಟ) ಅಯ್ದನ್ನು ಇದರೊಳಗಿರಿಸಿದ್ದೇನೆ.
ಅಯ್ದಕ್ಕಿಂತ ಮೇಲಿನ ಎಣಿಕೆಪದಗಳನ್ನು ಮಂದಿ ಇಲ್ಲವೇ ಜನ ಎಂಬುದ ರೊಂದಿಗೆ ಸೇರಿಸದೆ, ಎಂದರೆ ಹಾಗೆಯೇ ಬಳಸಿ ಮನುಶ್ಯರನ್ನು ಗುರುತಿಸಲು ಬರುವುದಿಲ್ಲ. ಮನುಶ್ಯರಲ್ಲದವನ್ನು ಮಾತ್ರ ಆ ರೀತಿ ಗುರುತಿಸಲು ಬರುತ್ತದೆ:
(22ಕ) ಮೂವತ್ತನ್ನು ಈ ಚೀಲದಲ್ಲಿ ಹಾಕಿದ್ದೇವೆ. (22ಚ) ಮೂವತ್ತು ಮಂದಿಯನ್ನು ಬಸ್ಸಿನಲ್ಲಿ ಕಳಿಸಿದ್ದೇವೆ.
ಪಾಂಗನ್ನು ಗುರುತಿಸುವುದಕ್ಕಾಗಿ ಬಳಕೆಯಾಗುವ ಎಣಿಕೆಪದಗಳೊಂದಿಗೆ ಪರಿಚೆಪದಗಳನ್ನು ಬಳಸಲು ಬರುವುದಿಲ್ಲ (*ದೊಡ್ಡ ಇಬ್ಬರು); ಆದರೆ, ಪತ್ತುಗೆ ಒಟ್ಟಿನೊಂದಿಗೆ ಬಂದಿರುವ ಹೆಸರುಪದ ಇಲ್ಲವೇ ಎಸಕಪದಗಳನ್ನು ಬಳಸಲು ಬರುತ್ತದೆ:
(23ಕ) ಆ ಊರಿನ ಇಬ್ಬರು ಈಜಲು ಹೋಗಿದ್ದಾರೆ. (23ಚ) ನಿಮ್ಮಲ್ಲಿಂದ ತಂದ ಹತ್ತು ಈ ಚೀಲದಲ್ಲಿವೆ. (23ಟ) ಊಟ ಮಾಡದ ಮೂವರು ಊಟಕ್ಕೆ ಕುಳಿತಿದ್ದಾರೆ.
(23ಕ)ದಲ್ಲಿ ಊರು ಹೆಸರುಪದದ ಪತ್ತುಗೆರೂಪವನ್ನು ಇಬ್ಬರು ಪದ ದೊಂದಿಗೆ ಬಳಸಲಾಗಿದೆ, ಮತ್ತು (23ಚ)ದಲ್ಲಿ ತರು ಎಸಕಪದದ ಹಿಂಬೊತ್ತಿನ ಪರಿಚೆರೂಪವಾದ ತಂದ ಎಂಬುದನ್ನು ಹತ್ತು ಪದದೊಂದಿಗೆ ಬಳಸಲಾಗಿದೆ.
ಆ, ಈ ಮತ್ತು ಯಾವ ಎಂಬ ನೆಲೆಗೊಳಿಸುವ ಪದಗಳನ್ನೂ ಅವು
ಗಳೊಂದಿಗೆ ಬಳಸಲು ಬರುತ್ತದೆ:
(24ಕ) ಈ ಮೂವರು ಒಳಗೆ ಹೋಗಲಿ. (24ಚ) ಆ ಹತ್ತು ನಿಮ್ಮಲ್ಲಿರಲಿ.
ಮೇಲಿನ ಬಳಕೆಗಳಲ್ಲೆಲ್ಲ ಎಣಿಕೆಪದಗಳನ್ನು ಎಣಿಕೆಯಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಸಲಾಗಿದೆ ಎಂಬುದನ್ನು ಗಮನಿಸ ಬಹುದು. ಎಣಿಕೆಯನ್ನೇ ನೇರವಾಗಿ ಗುರುತಿಸುವಲ್ಲಿ ಬಳಕೆಯಾಗುವ ಎಣಿಕೆಪದ ಗಳೊಂದಿಗೆ ಆ, ಈ, ಮತ್ತು ಯಾವ ಎಂಬವುಗಳನ್ನು ಹೊರತುಪಡಿಸಿ, ಮೇಲಿನ ಯಾವ ನೆರವು ನುಡಿತಗಳೂ ಬರುವುದಿಲ್ಲ.
(25ಕ) ಈ ಹತ್ತನ್ನು ಆ ಇಪ್ಪತ್ತಕ್ಕೆ ಕೂಡಿಸಿ. (25ಚ) ಯಾವ ಇಪ್ಪತ್ತಯ್ದನ್ನು ನೀವು ಇದರಿಂದ ಕಳೆದದ್ದು?
ಮಂದಿಗುರ್ತದ ಒಬ್ಬರು, ಇಬ್ಬರು, ಮೂವರು, ನಾಲ್ವರು ಮತ್ತು ಅಯ್ವರು ಎಂಬ ಪದಗಳನ್ನು ಹೊರತುಪಡಿಸಿ ಉಳಿದ ಎಣಿಕೆಪದಗಳು ಹಲವೆಣಿಕೆಯ ಗಳು ಒಟ್ಟಿನೊಂದಿಗೆ ಬರುವುದಿಲ್ಲ (ಒಬ್ಬ ಹುಡುಗ, ಇಬ್ಬರು ಹುಡುಗರು, ಎರಡು ಹಣ್ಣು(ಗಳು), *ಎರಡುಗಳು ಹಣ್ಣುಗಳು).
6.6.4 ಎಸಕಪದಗಳ ಹೆಸರುರೂಪಗಳ ಬಳಕೆ
ಎಸಕಪದಗಳಿಗೆ ಉದು ಮತ್ತು ಇಕೆ ಎಂಬ ಎರಡು ಒಟ್ಟುಗಳನ್ನು ಸೇರಿಸಿ ಎರಡು ಬಗೆಯ ಹೆಸರುರೂಪಗಳನ್ನು ಉಂಟುಮಾಡಲು ಬರುತ್ತದೆ; ಇವನ್ನು (4.7.4)ರಲ್ಲಿ ಹೆಸರುರೂಪ-1 ಮತ್ತು ಹೆಸರುರೂಪ-2 ಎಂಬುದಾಗಿ ಹೆಸರಿಸಲಾಗಿತ್ತು; ಇಲ್ಲಿ ಅವಕ್ಕೆ ಉದು-ರೂಪ ಮತ್ತು ಇಕೆ-ರೂಪ ಎಂಬ ಹೆಚ್ಚು ಅಡಕವಾದ ಹೆಸರುಗಳನ್ನು ಕೊಡಲಾಗಿದೆ.
ಉದು ಒಟ್ಟನ್ನು ಎಸಕಪದಗಳ ಮುಂಬೊತ್ತು, ಹಿಂಬೊತ್ತು ಮತ್ತು ಅಲ್ಲ ಗಳೆತಗಳೆಂಬ ಮೂರು ಬಗೆಯ ಪರಿಚೆರೂಪಗಳಿಗೂ ಸೇರಿಸಲು ಬರುತ್ತದೆ; ಹಾಗಾಗಿ, ಒಂದೊಂದು ಎಸಕಪದದಿಂದಲೂ ಇಂತಹ ಮೂರು ಮೂರು ಹೆಸರು ರೂಪಗಳನ್ನು ಪಡೆಯಲು ಬರುತ್ತದೆ (ಮಾಡು - ಮಾಡುವುದು, ಮಾಡಿ ದುದು, ಮಾಡದುದು).
ಆದರೆ, ಇಕೆ ಒಟ್ಟನ್ನು ಮುಂಬೊತ್ತಿನ ಮತ್ತು ಅಲ್ಲಗಳೆತದ ಪರಿಚೆ ರೂಪಗಳಿಗೆ ಮಾತ್ರ ಸೇರಿಸಲು ಬರುತ್ತದೆ; ಹಾಗಾಗಿ, ಅದನ್ನು ಬಳಸಿ ಒಂದೊಂದು ಎಸಕಪದದಿಂದ ಎರಡೆರಡು ಹೆಸರುರೂಪಗಳನ್ನು ಮಾತ್ರ ಪಡೆಯಲು ಬರುತ್ತದೆ (ಮಾಡು - ಮಾಡುವಿಕೆ, ಮಾಡದಿಕೆ).
ಈ ಅಯ್ದು ಬಗೆಯ ಹೆಸರುರೂಪಗಳನ್ನೂ ಸೊಲ್ಲುಗಳ ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ ಬಳಸಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
(26ಕ) ಅವಳು ಹಾಡುವುದನ್ನು ನಾನು ಕೇಳಿದ್ದೇನೆ, (26ಚ) ಅವಳು ಹಾಡುವುದಕ್ಕೆ ಒಪ್ಪಿಗೆ ಸಿಕ್ಕಿದೆ. (26ಟ) ಅವಳು ಹಾಡುವುದರಲ್ಲಿ ತುಂಬಾ ಮುಂದೆ ಬಂದಿದ್ದಾಳೆ. (26ತ) ಅವಳು ಹಾಡದುದರಿಂದ ಯಾರೂ ಬೇಸರಪಟ್ಟಿಲ್ಲ. (27ಕ) ಅವಳ ಹಾಡುವಿಕೆಯನ್ನು ನಾನು ಹಲವು ಬಾರಿ ಕೇಳಿದ್ದೇನೆ.
(27ಚ) ಅವಳ ಹಾಡುವಿಕೆಗೆ ತುಂಬಾ ಚಪ್ಪಾಳೆ ಬಿದ್ದಿದೆ. (27ಟ) ಅವಳ ಹಾಡದಿಕೆಯಿಂದ ಯಾರೂ ಬೇಸರಪಟ್ಟಿಲ್ಲ.
(27ಟ)ದಲ್ಲಿ ಕಾಣಿಸಿದಂತಹ ಅಲ್ಲಗಳೆಯುವ ಇಕೆ-ರೂಪ ಹೆಚ್ಚು ಬಳಕೆ ಯಲ್ಲಿಲ್ಲ; ಆದರೆ, ಅರಿಮೆಯ ಬರಹಗಳಿಗೆ ಅಂತಹ ಅಡಕವಾದ ರೂಪಗಳು ಬೇಕಾಗುತ್ತವೆಯಾದ ಕಾರಣ, ಅದನ್ನು ಬಳಕೆಗೆ ತರುವುದರಲ್ಲಿ ತೊಂದರೆ ಯೇನಿಲ್ಲ.
ಈ ಹೆಸರುರೂಪಗಳು ಎಂತಹ ಸೊಲ್ಲುಗಳ ಪಾಂಗುಗಳನ್ನು ಗುರುತಿಸ ಬಲ್ಲುವು, ಮತ್ತು ಇವುಗಳೊಂದಿಗೆ ಎಂತಹ ನೆರವು ನುಡಿತಗಳು ಬರಬಲ್ಲುವು ಎಂಬ ವಿಶಯದಲ್ಲಿ ಉದು-ರೂಪ ಮತ್ತು ಇಕೆ-ರೂಪಗಳ ನಡುವೆ ಹಲವು ವ್ಯತ್ಯಾಸಗಳಿವೆ.
(1) ಉದು-ರೂಪಗಳು ಒಳಸೊಲ್ಲುಗಳಾಗಿ ಬಳಕೆಯಾಗುತ್ತವೆ, ಮತ್ತು ಇಕೆ-ರೂಪಗಳು ಹೆಸರುಕಂತೆಗಳಾಗಿ ಬಳಕೆಯಾಗುತ್ತವೆ ಎಂಬುದು ಇವುಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸ. ಈ ವ್ಯತ್ಯಾಸವನ್ನು ಇವುಗಳೊಂದಿಗೆ ಎಂತಹ ನೆರವು ನುಡಿತಗಳು ಬರುತ್ತವೆ ಎಂಬುದರಲ್ಲಿ ಕಾಣಬಹುದು:
ಎಸಕಪದಗಳ ಉದು-ರೂಪದೊಂದಿಗೆ ಸೊಲ್ಲುಗಳಲ್ಲಿ ಬರಬಲ್ಲ ಎಲ್ಲಾ ಬಗೆಯ ಹೆಸರುಪದಗಳು ಮತ್ತು ಎಸಕಪರಿಚೆಗಳೂ ಬರಬಲ್ಲುವು. ಇವುಗಳಲ್ಲಿ ಹೆಸರುಪದಗಳು ಉದು-ರೂಪದ ಪಾಂಗುಗಳಾಗಿ ಕಾಣಿಸಿಕೊಳ್ಳುತ್ತವೆ. ಈ ರೀತಿ ಸೊಲ್ಲುಗಳ ಎಲ್ಲಾ ಪರಿಚೆಗಳನ್ನೂ ಉಳಿಸಿಕೊಳ್ಳುವ ಉದು-ರೂಪಗಳನ್ನು ಒಳಸೊಲ್ಲುಗಳೆಂದೂ ಕರೆಯಬಹುದು.
ಆದರೆ, ಹೆಸರುಕಂತೆಗಳಲ್ಲಿ ಬರಬಲ್ಲ ಪರಿಚೆಪದಗಳು, ಎಸಕಪದಗಳ ಪರಿಚೆ ರೂಪಗಳು, ಮತ್ತು ಹೆಸರುಪದಗಳ ಪತ್ತುಗೆ ರೂಪಗಳು ಇಕೆ-ರೂಪದೊಂದಿಗೆ ಕಾರಣಕ್ಕಾಗಿ, ಒಂದು ಎಸಕಪದವನ್ನು ಇಕೆ-ರೂಪಕ್ಕೆ ಬರುತ್ತವೆ; ಈ ಮಾರ್ಪಡಿಸುವಾಗ, ಅದರೊಂದಿಗೆ ಬರುವ ಹೆಸರುಪದಗಳನ್ನು ಪತ್ತುಗೆರೂಪಕ್ಕೆ, ಮತ್ತು ಎಸಕಪರಿಚೆಗಳನ್ನು ಹೆಸರುಪರಿಚೆರೂಪಕ್ಕೆ ಮಾರ್ಪಡಿಸಬೇಕಾಗುತ್ತದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
ಇಕೆ-ರೂಪದ ಬಳಕೆ
ಉದು-ರೂಪದ ಬಳಕೆ
ಎಮ್ಮೆಯನ್ನು ಕರೆಯುವುದು ಎಮ್ಮೆಯ ಕರೆಯುವಿಕೆ ಅವಳು ಹಾಡುವುದು
ಮದುವೆಗೆ ಹೊರಡುವುದು ನಿನ್ನೆ ಬಂದುದು ಗಟ್ಟಿಯಾಗಿ ಹಾಡುವುದು
ಅವಳ ಹಾಡುವಿಕೆ ಮದುವೆಯ ಹೊರಡುವಿಕೆ ನಿನ್ನಿನ ಬರುವಿಕೆ ಗಟ್ಟಿಯಾದ ಹಾಡುವಿಕೆ
ಎಮ್ಮೆಯನ್ನು ಕರೆಯುವುದು ಎಂಬ ಪದಕಂತೆಯಲ್ಲಿ ಕರೆ ಎಸಕಪದದ ಮುಂಬೊತ್ತಿನ ಉದು-ರೂಪ ಬಂದಿದ್ದು, ಅದರೊಂದಿಗೆ ಎಮ್ಮೆ ಹೆಸರುಪದ ಆಗುಗ ಪಾಂಗಾಗಿ ಅನ್ನು ಒಟ್ಟಿನೊಂದಿಗೆ ಬಂದಿದೆ; ಇದಕ್ಕೆ ಬದಲು, ಎಮ್ಮೆಯ
ಕರೆಯುವಿಕೆ ಎಂಬ ಪದಕಂತೆಯಲ್ಲಿ ಅದೇ ಎಸಕಪದದ ಇಕೆ-ರೂಪ ಬಂದಿದ್ದು, ಅದರೊಂದಿಗೆ ಎಮ್ಮೆ ಪದ ಪತ್ತುಗೆರೂಪದಲ್ಲಿ ಅ ಒಟ್ಟಿನೊಂದಿಗೆ ಬಂದಿದೆ.
ನಿನ್ನೆ ಬಂದುದು ಎಂಬುದರಲ್ಲಿ ಉದು-ರೂಪದೊಂದಿಗೆ ನಿನ್ನೆ ಎಂಬ ಎಸಕಪತ್ತುಗೆ ಬಂದಿದೆ; ಆದರೆ, ನಿನ್ನಿನ ಬರುವಿಕೆ ಎಂಬುದರಲ್ಲಿ ಇಕೆ-ರೂಪ ದೊಂದಿಗೆ ಅದನ್ನು ನಿನ್ನಿನ ಎಂಬ ಹೆಸರುಪತ್ತುಗೆಯಾಗಿ ಮಾರ್ಪಡಿಸಿ ಬಳಸ ಲಾಗಿದೆ; ಗಟ್ಟಿಯಾಗಿ ಹಾಡುವುದು ಎಂಬುದರಲ್ಲಿ ಉದು-ರೂಪದೊಂದಿಗೆ ಗಟ್ಟಿಯಾಗಿ ಎಂಬ ಜೋಡಿಸುವ ರೂಪ ಬಂದಿದೆ; ಆದರೆ, ಗಟ್ಟಿಯಾದ ಹಾಡುವಿಕೆ ಎಂಬುದರಲ್ಲಿ ಇಕೆ-ರೂಪದೊಂದಿಗೆ ಗಟ್ಟಿಯಾದ ಎಂಬ ಪತ್ತುಗೆ ರೂಪ ಬಂದಿದೆ.
ಇದಲ್ಲದೆ, ಉದು-ರೂಪದೊಂದಿಗೆ ಸೊಲ್ಲಿನ ಎಲ್ಲಾ ಅಂಗಗಳೂ ಒಟ್ಟಾಗಿ ಬದಲಾಗದೆ ಬರಬಲ್ಲುವು; ಆದರೆ, ಇಕೆ-ರೂಪದೊಂದಿಗೆ ಅವುಗಳಲ್ಲಿ ಒಂದೆರಡು ಪಾಂಗುಗಳು ಮಾತ್ರ ಬರಬಲ್ಲುವು, ಮತ್ತು ಹಾಗೆ ಬರುವಾಗ ಅವು ಪತ್ತುಗೆರೂಪಕ್ಕೆ ಬದಲಾಗುತ್ತವೆ. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
(28ಕ) ಆಕೆ ನಿನ್ನೆ ಸಂಜೆ ಮಯ್ಸೂರಿನಲ್ಲಿ ಒಂದು ದೇವರನಾಮವನ್ನು
ಹಾಡಿದ್ದಾಳೆ.
(28ಚ) ಆಕೆ ನಿನ್ನೆ ಸಂಜೆ ಮಯ್ಸೂರಿನಲ್ಲಿ ಒಂದು ದೇವರನಾಮವನ್ನು
ಹಾಡಿದುದು ಚನ್ನಾಗಿತ್ತು.
(28ಟ) ಆಕೆಯ ನಿನ್ನಿನ (ನಿನ್ನೆ ಸಂಜೆಯ) ಹಾಡುವಿಕೆ ಚನ್ನಾಗಿತ್ತು. (28ತ) ಆಕೆಯ ಮಯ್ಸೂರಿನ ಹಾಡುವಿಕೆ ಚನ್ನಾಗಿತ್ತು. (28ಪ) ಆಕೆಯ ದೇವರನಾಮದ ಹಾಡುವಿಕೆ ಚನ್ನಾಗಿತ್ತು.
(28ಕ) ಸೊಲ್ಲಿನಲ್ಲಿ ಬಂದಿದ್ದ ಆಕೆ, ನಿನ್ನೆ ಇಲ್ಲವೇ ನಿನ್ನೆ ಸಂಜೆ, ಮಯ್ಸೂರಿನಲ್ಲಿ, ಒಂದು ದೇವರನಾಮವನ್ನು ಎಂಬ ಅಂಗಗಳೆಲ್ಲವೂ (28ಚ)ದಲ್ಲಿ ಬಂದಿರುವ ಉದು-ರೂಪದೊಂದಿಗೆ ಬದಲಾಗದೆ ಉಳಿದಿವೆ; ಆದರೆ, (28ಟ-ಪ)ಗಳಲ್ಲಿ ಬಂದಿರುವ ಇಕೆ-ರೂಪಗಳೊಂದಿಗೆ ಇವುಗಳಲ್ಲಿ ಎರಡೆರಡು ಪತ್ತುಗೆರೂಪಕ್ಕೆ ಬದಲಾಗಿವೆ.
ಮಾತ್ರ ಉಳಿದುಕೊಂಡಿದ್ದು, ಅವೆಲ್ಲವೂ
(2) ಉದು-ರೂಪಗಳು ಎಸಕವನ್ನೂ ಗುರುತಿಸಬಲ್ಲುವು, ಎಸಕ ನಡೆದಿರುವ (ನಡೆಯಲಿರುವ, ಇಲ್ಲವೇ ನಡೆಯದಿರುವ) ಸಂಗತಿಯನ್ನೂ ಗುರುತಿಸಬಲ್ಲುವು; ಈ ಕಾರಣಕ್ಕಾಗಿ ಅವುಗಳ ಬಳಕೆಯಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ; ಆದರೆ, ಇಕೆ-ರೂಪಗಳು ಇವುಗಳಲ್ಲಿ ಮೊದಲನೆಯ (ಎಸಕವನ್ನು ಗುರುತಿಸುವ)
ಕೆಲಸವನ್ನು ಮಾತ್ರ ಮಾಡುತ್ತವೆಯಾದ ಕಾರಣ, ಅವುಗಳ ಬಳಕೆಯಲ್ಲಿ ಅಂತಹ ಇಪ್ಪುರುಳು ಕಾಣಿಸುವುದಿಲ್ಲ.
(29ಕ) ಅವಳು ಹಾಡಿದುದನ್ನು ನಾನು ಕೇಳಿದ್ದೇನೆ. (29ಚ) ಅವಳ ಹಾಡುವಿಕೆಯನ್ನು ನಾನು ಕೇಳಿದ್ದೇನೆ.
(29ಕ) ಸೊಲ್ಲಿಗೆ ಎರಡು ಹುರುಳುಗಳಿರಬಲ್ಲುವು: ಅದರ ಆಡುಗನು ಕೇಳಿರುವುದು ‘ಅವಳು ಹಾಡಿದ್ದಾಳೆ’ ಎಂಬ ಸಂಗತಿಯನ್ನಿರಬಹುದು, ಇಲ್ಲವೇ ನಿಜಕ್ಕೂ ಅವಳು ಹಾಡುವುದನ್ನು ಅವನು ಕೇಳಿರಬಹುದು. ಆದರೆ, (29ಚ) ಸೊಲ್ಲು ಇವುಗಳಲ್ಲಿ ಎರಡನೇ ಹುರುಳನ್ನು ಮಾತ್ರ ಕೊಡುತ್ತದೆ.
ಉದು-ರೂಪವನ್ನು ಇನ್ನೊಂದು ಹುರುಳಿನಲ್ಲೂ ಬಳಸಲು ಬರುತ್ತದೆ;
ಇದನ್ನು ಕೆಳಗೆ ಕೊಟ್ಟಿರುವ ಮೂರು ಸೊಲ್ಲುಗಳಲ್ಲಿ ಕಾಣಬಹುದು:
(30ಕ) ಅವನು ತಂದುದನ್ನು ನಾನು ನೋಡಲಿಲ್ಲ. (30ಚ) ಅವನು ತಂದುದನ್ನು ಯಾರೂ ನನಗೆ ತಿಳಿಸಲಿಲ್ಲ. (30ಟ) ಅವನು ತಂದುದನ್ನು ಮೇಜಿನ ಮೇಲಿರಿಸಿದ್ದೇನೆ.
(30ಕ) ಸೊಲ್ಲಿಗೆ ‘ಅವನು ತರುವ ಎಸಕವನ್ನು ನಾನು ನೋಡಲಿಲ್ಲ’ ಎಂಬ ಹುರುಳಿದೆ; (30ಚ) ಸೊಲ್ಲಿಗೆ ‘ಅವನು ತಂದಿದ್ದಾನೆಂಬ ಸಂಗತಿಯನ್ನು ನನಗೆ ಯಾರೂ ತಿಳಿಸಲಿಲ್ಲ’ ಎಂಬ ಹುರುಳಿದೆ; ಮತ್ತು, (30ಟ) ಸೊಲ್ಲಿಗೆ ‘ಅವನು ತಂದಿರುವ ವಸ್ತುವನ್ನು ಮೇಜಿನ ಮೇಲಿರಿಸಿದ್ದೇನೆ’ ಎಂಬ ಹುರುಳಿದೆ. (30ಕ) ಸೊಲ್ಲಿಗೂ ‘ಅವನು ತಂದ ವಸ್ತುವನ್ನು ನಾನು ನೋಡಲಿಲ್ಲ’ ಎಂಬುದಾಗಿ ಈ ಮೂರನೇ ಬಗೆಯ ಹುರುಳೂ ಬರಬಲ್ಲುದು.
ಆದರೆ, ಈ ಮೂರನೆಯ ಹುರುಳಿನಲ್ಲಿ ಎಸಕಪದದ ಉದು-ರೂಪ ಬಳಕೆ ಯಾಗಿದೆಯೆಂದು ಹೇಳುವುದಕ್ಕಿಂತಲೂ ಎಸಕಪದದ ಪತ್ತುಗೆರೂಪದೊಂದಿಗೆ ಉದು ರೂಪದಲ್ಲಿರುವ ಉಳಿಕೆಗುರ್ತದ (ಮತ್ತು ಓರೆಣಿಕೆಯ) ತೋರುಪದ (ಅದು ಎಂಬುದು) ಬಂದಿದೆ ಎಂದು ಹೇಳುವುದೇ ಸರಿಯಾಗಬಲ್ಲುದು. ಯಾಕೆಂದರೆ, ಈ ಹುರುಳಿನಲ್ಲಿ ಅದು ಎಂಬ ತೋರುಪದ ತಿರುಳುಪದವಾಗಿ ಬಂದಿರುವ ಹಾಗೆ ಕಾಣಿಸುತ್ತದೆ.
6.6.5 ಪರಿಚೆಪದಗಳ ಬಳಕೆ
ಸಾಮಾನ್ಯವಾಗಿ, ಪಾಂಗುಗಳ ಪರಿಚೆಯನ್ನು ತಿಳಿಸುವ ಮೂಲಕ ಪರಿಚೆಪದಗಳು ಪಾಂಗುಗಳನ್ನು ಗುರುತಿಸುವಲ್ಲಿ ಹೆಸರುಪದಗಳಿಗೆ ನೆರವನ್ನು ನೀಡುತ್ತವೆ; ಎತ್ತುಗೆಗಾಗಿ, ಚಿಕ್ಕ ಹುಡುಗ ಎಂಬ ಹೆಸರುಕಂತೆಯಲ್ಲಿ ಬಂದಿರುವ ಚಿಕ್ಕ ಎಂಬ
ಪರಿಚೆಪದ ಹುಡುಗ ಎಂಬ ಪಾಂಗಿನ ಪರಿಚೆಯೊಂದನ್ನು ತಿಳಿಸುವ ಮೂಲಕ, ಅದನ್ನು ಗುರುತಿಸುವಲ್ಲಿ ಹುಡುಗ ಹೆಸರುಪದಕ್ಕೆ ನೆರವನ್ನು ನೀಡುತ್ತದೆ. ಈ ರೀತಿ ಹೆಸರುಪದಗಳಿಗೆ ಅವುಗಳ ಕೆಲಸದಲ್ಲಿ ನೆರವನ್ನು ನೀಡುವುದೇ ಪರಿಚೆ ಪದಗಳ ಮುಕ್ಯ ಕೆಲಸವಾಗಿದೆ. ಈ ಕೆಲಸವನ್ನು ಅವು ಹೇಗೆ ನಡೆಸುತ್ತವೆ ಎಂಬು ದನ್ನು ಮೇಲೆ 6.3ರಲ್ಲಿ ವಿವರವಾಗಿ ಪರಿಶೀಲಿಸಲಾಗಿದೆ.
ಕೆಲವು ಪರಿಚೆಪದಗಳನ್ನು ಈ ರೀತಿ ನೆರವುಪದಗಳಾಗಿ ಬಳಸುವುದು ಮಾತ್ರವಲ್ಲದೆ, ನೇರವಾಗಿ ಪಾಂಗುಗಳನ್ನು ಗುರುತಿಸುವ ಕೆಲಸದಲ್ಲೂ ತೊಡಗಿಸ ಲಾಗುತ್ತದೆ; ಆದರೆ, ಇದು ಸೊಲ್ಲುಗಳಲ್ಲಿ ಅವು ನಡೆಸುವ ಒಂದು ಹೆಚ್ಚಿನ ಕೆಲಸವಾಗಿದ್ದು, ಅವುಗಳದೇ ಆದ ಕೆಲಸವಲ್ಲವಾದ ಕಾರಣ, ಅದರಲ್ಲಿ ಬಳಕೆ ಯಾದಾಗ ಅವು ಹಲವು ವಿಶಯಗಳಲ್ಲಿ ಉಳಿದ ಪರಿಚೆಪದಗಳಿಂದ ಬೇರಾಗಿ ಕಾಣಿಸಿಕೊಳ್ಳುತ್ತವೆ; ಇದಲ್ಲದೆ, ಪಾಂಗುಗಳನ್ನು ಗುರುತಿಸುವಂತಹ ಹೆಸರುಪದ ಗಳ ಕೆಲಸವನ್ನು ಅವು ನಡೆಸುತ್ತಿರುವ ಕಾರಣ, ಕೆಲವು ವಿಶಯಗಳಲ್ಲಿ ಹೆಸರು ಪದಗಳ ಹಾಗೆಯೂ ಕಾಣಿಸುತ್ತವೆ.
ಪರಿಚೆಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆಯೇ ಹೆಸರುಪದಗಳ ಕೆಲಸದಲ್ಲಿ (ಪಾಂಗುಗಳನ್ನು ಗುರುತಿಸುವ ಕೆಲಸ ದಲ್ಲಿ) ಬಳಸಿದಾಗ, ಅವು ನೇರವಾಗಿ ಪರಿಚೆಗಳನ್ನೇ ಗುರುತಿಸುತ್ತವೆ. ಎತ್ತುಗೆ ಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(31ಕ) ಈ ದಪ್ಪ ಹಲಿಗೆ ಚನ್ನಾಗಿದೆ. (31ಚ) ಈ ಹಲಿಗೆಯ ದಪ್ಪ ಎಶ್ಟಿದೆ? (32ಕ) ಈ ಉದ್ದ ಕೋಲನ್ನು ಯಾರು ತಂದದ್ದು? (32ಚ) ಈ ಕೋಲಿನ ಉದ್ದ ನಾಲ್ಕು ಅಡಿ.
(31ಕ) ಸೊಲ್ಲಿನಲ್ಲಿ ದಪ್ಪ ಪದವನ್ನು ಅದರದೇ ಕೆಲಸದಲ್ಲಿ, ಎಂದರೆ ಹಲಿಗೆ ಎಂಬ ಹೆಸರುಪದಕ್ಕೆ ಪಾಂಗೊಂದನ್ನು ಗುರುತಿಸುವಲ್ಲಿ ನೆರವಾಗುವಂತಹ ಕೆಲಸದಲ್ಲಿ ಬಳಸಲಾಗಿದೆ; ಇದಕ್ಕೆ ಬದಲು, (31ಚ) ಸೊಲ್ಲಿನಲ್ಲಿ ಅದನ್ನು ನೇರವಾಗಿ ಪಾಂಗೊಂದನ್ನು ಗುರುತಿಸುವುದಕ್ಕಾಗಿ ಬಳಸಲಾಗಿದೆ, ಮತ್ತು ಈ ಬಳಕೆಯಲ್ಲಿ ಅದು ‘ದಪ್ಪ’ ಎಂಬ ಪರಿಚೆಯನ್ನೇ ಗುರುತಿಸುತ್ತದೆ ಎಂಬುದನ್ನು ಗಮನಿಸಬಹುದು. ಅದರೊಂದಿಗೆ ಬಂದಿರುವ ಹಲಿಗೆ ಪದದ ಪತ್ತುಗೆ ರೂಪ (ಹಲಿಗೆಯ ಎಂಬುದು) ಈ ಕೆಲಸದಲ್ಲಿ ಅದಕ್ಕೆ ನೆರವನ್ನು ನೀಡುತ್ತದೆ.
ಇದೇ ರೀತಿಯಲ್ಲಿ, ಕೋಲು ಪದಕ್ಕೆ ನೆರವನ್ನು ನೀಡುವುದಕ್ಕಾಗಿ (32ಕ) ಸೊಲ್ಲಿನಲ್ಲೂ, ನೇರವಾಗಿ ‘ಉದ್ದ’ ಪರಿಚೆಯನ್ನು ಗುರುತಿಸುವುದಕ್ಕಾಗಿ (32ಚ) ಸೊಲ್ಲಿನಲ್ಲೂ ಉದ್ದ ಎಂಬ ಪರಿಚೆಪದವನ್ನು ಬಳಸಲಾಗಿದೆ.
ಪರಿಚೆಪದಗಳನ್ನು ಈ ರೀತಿ ನೇರವಾಗಿ ಒಂದು ಪಾಂಗನ್ನು ಗುರುತಿಸುವು ದಕ್ಕಾಗಿ ಬಳಸಿದಾಗ, ಅವು ಒಂದು ಪರಿಚೆಯನ್ನು ಗುರುತಿಸುತ್ತವಲ್ಲದೆ ಆ ಪರಿಚೆಯನ್ನು ಪಡೆದಿರುವ ವ್ಯಕ್ತಿ ಇಲ್ಲವೇ ವಸ್ತುವನ್ನಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಎತ್ತುಗೆಗಾಗಿ, ಮೇಲೆ (31ಚ)ದಲ್ಲಿ ಬಂದಿರುವ ದಪ್ಪ ಪದ ಅದು ತಿಳಿಸುವ ಪರಿಚೆಯನ್ನು ಗುರುತಿಸುತ್ತದಲ್ಲದೆ, ಆ ಪರಿಚೆಯನ್ನು ಪಡೆದಿರುವ ವಸ್ತುವನ್ನು (ಹಲಿಗೆಯನ್ನು) ಗುರುತಿಸುವುದಿಲ್ಲ. ಪರಿಚೆಪದಗಳು ಅವನ್ನು ಪಡೆದಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬೇಕಿದ್ದಲ್ಲಿ ಅವನು, ಅವಳು, ಅವರು, ಅದು, ಅವು ಎಂಬ ತೋರುಪದಗಳಲ್ಲೊಂದನ್ನು ಅವುಗಳ ಪತ್ತುಗೆ ರೂಪದೊಂದಿಗೆ ಬಳಸಬೇಕಾಗುತ್ತದೆ:
(33ಕ) ಉದ್ದದವನು ಮನೆಗೆ ಹೋಗಿದ್ದಾನೆ. (33ಚ) ಎತ್ತರದವರು ಹಿಂದೆ ನಿಲ್ಲಲಿ.
ಉದ್ದಳತೆಯನ್ನು ತಿಳಿಸುವ ಉದ್ದ-ಗಿಡ್ಡ, ದಪ್ಪ-ತೆಳು, ಅಗಲ-ಸಪುರ, ಎತ್ತರ-ತಗ್ಗು, ಎಂಬ ಈ ಪರಿಚೆಪದಜೋಡಿಗಳಲ್ಲಿ ಮೊದಲನೆಯದನ್ನು ಮಾತ್ರ ಪರಿಚೆಯನ್ನು ಗುರುತಿಸುವುದಕ್ಕಾಗಿ ಹೆಸರುಪದದ ಜಾಗದಲ್ಲಿ ಬಳಸಲು ಬರು ತ್ತದೆ. ಹೀಗೆ ಬಳಸಿದಾಗ ಅದು ಜೋಡಿಯ ಎರಡು ಪದಗಳೂ ಒಟ್ಟಾಗಿ ತಿಳಿಸುವ ಪರಿಚೆಯನ್ನು ಗುರುತಿಸುತ್ತದೆ. ಎತ್ತುಗೆಗಾಗಿ, ಒಂದು ಗೋಡೆ ಎತ್ತರ ವಿರಲಿ, ತಗ್ಗಿರಲಿ, ಅದರ ಪರಿಚೆಯನ್ನು ಗುರುತಿಸಬೇಕಾದಾಗ ಎತ್ತರ ಎಂಬ ಪದವನ್ನೇ ಬಳಸಲಾಗುತ್ತದೆ (ಗೋಡೆಯ ಎತ್ತರ ಆರು ಅಡಿ); ತಗ್ಗು ಎಂಬುದನ್ನು ಆ ರೀತಿ ಪರಿಚೆಯನ್ನು ಗುರುತಿಸುವ ಕೆಲಸದಲ್ಲಿ ಬಳಸಲು ಬರುವು ದಿಲ್ಲ (*ಗೋಡೆಯ ತಗ್ಗು ಮೂರು ಅಡಿ ಎನ್ನಲು ಬರುವುದಿಲ್ಲ).
ಈ ಪದಗಳ ಪತ್ತುಗೆರೂಪವನ್ನು ಬೇರೆ ಹೆಸರುಪದಗಳೊಂದಿಗೂ ಬಳಸಲು ಬರುತ್ತದೆ (ದಪ್ಪದ ಹಲಿಗೆ, ಉದ್ದದ ಹಗ್ಗ, ಎತ್ತರದ ಕಟ್ಟಡ); ಇಂತಹ ಬಳಕೆಯಲ್ಲೂ ಅವು ಪರಿಚೆಯನ್ನು ಗುರುತಿಸುತ್ತಿದ್ದು, ಪತ್ತುಗೆ ಒಟ್ಟಿನ ಮೂಲಕ ಅದನ್ನು ಹೆಸರುಪದ ಗುರುತಿಸುವ ಪಾಂಗಿನೊಂದಿಗೆ ಸಂಬಂದಿಸುತ್ತವೆ ಎಂದು ಹೇಳಬಹುದು. ಗಿಡ್ಡ, ಸಪುರ, ತೆಳು ಮೊದಲಾದ ಈ ಜೋಡಿಗಳ ಎರಡನೆಯ ಪದಗಳು ಇಂತಹ ಇಟ್ಟಳದಲ್ಲೂ ಬಳಕೆಯಾಗುವುದಿಲ್ಲ.
ಉದ್ದಳತೆಯನ್ನು ತಿಳಿಸುವ ಉದ್ದ, ದಪ್ಪ ಅಗಲ, ಎತ್ತರ ಮೊದಲಾದ ಪರಿಚೆಪದಗಳು ಮಾತ್ರವಲ್ಲದೆ, ಮನುಶ್ಯರ ಪರಿಚೆಯನ್ನು ತಿಳಿಸುವ ಕುರುಡು, ಕಿವುಡು, ಬೆಡಗು, ಮರುಳು, ಹುಚ್ಚು ಮೊದಲಾದ ಪದಗಳೂ ಈ ರೀತಿ ಅವು ತಿಳಿಸುವ ಪರಿಚೆಯನ್ನು ಒಂದು ಪಾಂಗಾಗಿ ಗುರುತಿಸುವಲ್ಲಿ ಬಳಕೆಯಾಗಬಲ್ಲುವು:
(34ಕ) ಅವನ ಕುರುಡಿಗೆ ಮದ್ದಿಲ್ಲ. (34ಚ) ಆಕೆಯ ಹುಚ್ಚನ್ನು ಬಿಡಿಸುತ್ತೇನೆನ್ನುವವರು ಬಂದಿದ್ದಾರೆ.
ಆದರೆ, ಇವು ತಿಳಿಸುವ ಪರಿಚೆಯನ್ನು ಪಡೆದಿರುವ ವ್ಯಕ್ತಿಯನ್ನು ಗುರುತಿಸುವು ದಕ್ಕಾಗಿ, 2.4.3ರಲ್ಲಿ ವಿವರಿಸಿದ ಹಾಗೆ, ಅ ‘ಗಂಡುಸು’ ಇಲ್ಲವೇ ಇ ‘ಹೆಂಗಸು’ ಒಟ್ಟನ್ನು ಸೇರಿಸಲಾಗುತ್ತದೆ:
(35ಕ) ಈ ಬೆಡಗಿಯನ್ನು ಯಾರು ಮದುವೆಯಾಗುತ್ತಾರೆ? (35ಚ) ಕುರುಡರಿಗೆ ಇಲ್ಲೊಂದು ಶಾಲೆಯಿದೆ.
ಬಣ್ಣಗಳನ್ನು ತಿಳಿಸುವ ಕೆಂಪು, ಬಿಳಿ, ಕಪ್ಪು ಮೊದಲಾದ ಪದಗಳನ್ನೂ ಮೇಲಿನ ಪದಗಳ ಹಾಗೆ ಅವು ತಿಳಿಸುವ ಪರಿಚೆಯನ್ನು ಗುರುತಿಸಲು ಬಳಸ ಬಹುದು:
(36ಕ) ಈ ಸೀರೆಯ ಕೆಂಪು ತುಂಬಾ ಕಡು. (36ಚ) ಇಂತಹ ಹಸುರನ್ನು ನಾನು ಬೇರೆಲ್ಲೂ ನೋಡಲಿಲ್ಲ.
ಪರಿಚೆಯನ್ನು ಒಂದು ಪಾಂಗಾಗಿ ಗುರುತಿಸುವಲ್ಲಿ ಬಳಕೆಯಾಗದಂತಹ ದೊಡ್ಡ, ಚಿಕ್ಕ, ಹೊಸ, ಹಳೆ, ನಲ್ಲ, ಒಳ್ಳೆ, ಗಟ್ಟಿ ಮೊದಲಾದ ಬೇರೆ ಕೆಲವು ಪರಿಚೆಪದಗಳಿವೆ; ಇವು ನೇರವಾಗಿ ಅವನು, ಅವಳು ಮೊದಲಾದ ತೋರು ಪದಗಳೊಂದಿಗೆ ಸೇರಿ ಅವು ತಿಳಿಸುವ ಪರಿಚೆಯನ್ನು ಪಡೆದಿರುವ ಪಾಂಗುಗಳನ್ನು ಗುರುತಿಸುತ್ತವೆ:
(37ಕ) ದೊಡ್ಡವನು ಮನೆಗೆ ಬರಲಿಲ್ಲ. (37ಚ) ಹೊಸದನ್ನು ಕೆಳಗೆ ಇರಿಸಿ. (37ಟ) *ಇದರ ದೊಡ್ಡ ಎಶ್ಟು?
ಇಂತಹ ಪದಗಳು ಅವು ತಿಳಿಸುವ ಪರಿಚೆಯನ್ನೇ ಪಾಂಗಾಗಿ ಗುರುತಿಸ
ಬೇಕಿದ್ದಲ್ಲಿ ಅವಕ್ಕೆ ತನ ಒಟ್ಟನ್ನು ಸೇರಿಸಲಾಗುತ್ತದೆ:
ದೊಡ್ಡ ದೊಡ್ಡತನ
ಬಡ ಬಡತನ
ಮುದಿ ಮುದಿತನ ಎಳೆ ಎಳೆತನ
ಒಳ್ಳೆ ಒಳ್ಳೆತನ ಹೊಸ ಹೊಸತನ ಹಿರಿ ಹಿರಿತನ ಮಂಕು ಮಂಕುತನ
ಮೇಲೆ ಸೂಚಿಸಿದ ಹಾಗೆ, ಪರಿಚೆಯನ್ನು ಒಂದು ಪಾಂಗಾಗಿ ಗುರುತಿಸಲು ಬಳಕೆಯಾಗಿರುವ ಪರಿಚೆಪದಗಳು ಕೆಲವು ವಿಶಯಗಳಲ್ಲಿ ಹೆಸರುಪದಗಳಿಗೆ ನೆರವನ್ನು ನೀಡಲು ಬಳಕೆಯಾಗಿರುವ ಪರಿಚೆಪದಗಳಿಗಿಂತ ಬೇರಾಗಿವೆ:
(1) ನೆರವು ನೀಡುವ ಪರಿಚೆಪದಗಳಲ್ಲಿ ಹಲವು ಹೋಲಿಕೆಯನ್ನು ತಿಳಿಸುವ ನುಡಿತಗಳೊಂದಿಗೆ ಬರಬಲ್ಲುವು; ಆದರೆ, ಪರಿಚೆಯನ್ನು ಗುರುತಿಸುವುದಕ್ಕಾಗಿ ಬಳಕೆಯಾಗಿರುವ ಇವೇ ಪದಗಳು ಅಂತಹ ನುಡಿತಗಳೊಂದಿಗೆ ಬರುವುದಿಲ್ಲ.
(38ಕ) ಇದಕ್ಕಿಂತ ಉದ್ದ ಹಗ್ಗ ನಮ್ಮಲ್ಲಿಲ್ಲ. (38ಚ) *ಇದ(ರದ)ಕ್ಕಿಂತ ಉದ್ದವನ್ನು ನಾನು ನೋಡಿಲ್ಲ.
(2) ನೆರವು ನೀಡುವ ಪರಿಚೆಪದಗಳೊಂದಿಗೆ ಮೇಲಿನ ಇಲ್ಲವೇ ಕೆಳಗಿನ ಹಂತವನ್ನು ತಿಳಿಸುವ ಎಸಕಪರಿಚೆಗಳು ಬರಬಲ್ಲುವು; ಆದರೆ, ಪರಿಚೆಗಳನ್ನು ಗುರುತಿಸುವ ಪದಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ:
(39ಕ) ಅದು ತುಂಬಾ ದಪ್ಪ ಹಲಿಗೆ.
(39ಚ) *ಈ ಹಲಿಗೆಯ ತುಂಬಾ ದಪ್ಪ ಎಶ್ಟು?
ಹೆಸರುಪದಗಳ ಕೆಲಸದಲ್ಲಿ (ಪಾಂಗುಗಳನ್ನು ಗುರುತಿಸುವ ಕೆಲಸದಲ್ಲಿ) ಬಳಕೆಯಾದಾಗ ಪರಿಚೆಪದಗಳು ಮೇಲೆ ವಿವರಿಸಿದ ಹಾಗೆ ಅವುಗಳದೇ ಆದ ಕೆಲವು ಪರಿಚೆಗಳನ್ನು ಕಳೆದುಕೊಳ್ಳುತ್ತವೆ ಮಾತ್ರವಲ್ಲ, ಹೆಸರುಪದಗಳ ಕೆಲವು ಪರಿಚೆಗಳನ್ನೂ ಪಡೆಯುತ್ತವೆ:
(1) ಹೆಸರುಪದಗಳು ಅವುಗಳ ಮಾರುಲಿ ರೂಪದೊಂದಿಗೆ ಬಳಕೆಯಾಗ ಬಲ್ಲುವು; ಆದರೆ, ನೆರವು ನೀಡುವ ಪರಿಚೆಪದಗಳು ಆ ರೀತಿ ಅವುಗಳ ಮಾರುಲಿ ರೂಪದೊಂದಿಗೆ ಬಳಕೆಯಾಗುವುದಿಲ್ಲ.
ಈ ವಿಶಯದಲ್ಲಿ ಪರಿಚೆಗಳನ್ನು ಗುರುತಿಸುವ ಪದಗಳು ಹೆಸರುಪದಗಳ
ಹಾಗಿವೆ: ಅವನ್ನು ಅವುಗಳ ಮಾರುಲಿ ರೂಪದೊಂದಿಗೂ ಬಳಸಲು ಬರುತ್ತದೆ:
(40ಕ) ಹಗ್ಗ ಗಿಗ್ಗ ಎಲ್ಲ ಅಳೆದಾಯಿತು. (40ಚ) *ಉದ್ದ ಗಿದ್ದ ಹಗ್ಗ ಎಲ್ಲ ಸಾಕಶ್ಟಿದೆ. (40ಟ) ಹಗ್ಗದ ಉದ್ದ ಗಿದ್ದ ಎಲ್ಲ ಸಾಕಶ್ಟಿದೆ. (40ತ) ಉದ್ದ ಹಗ್ಗ ಗಿದ್ದ ಹಗ್ಗ ಎಲ್ಲ ಸಾಕಶ್ಟಿದೆ.
(40ಕ)ದಲ್ಲಿ ಹಗ್ಗ ಹೆಸರುಪದವನ್ನು ಅದರ ಮಾರುಲಿ ರೂಪದೊಂದಿಗೆ ಬಳಸಲಾಗಿದೆ, ಮತ್ತು (40ಚ)ದಲ್ಲಿ ಹಗ್ಗ ಪದಕ್ಕೆ ನೆರವು ಪದವಾಗಿ ಬಂದಿರುವ ಉದ್ದ ಪದವನ್ನು ಅದರ ಮಾರುಲಿ ರೂಪದೊಂದಿಗೆ ಬಳಸಿರುವುದರಿಂದ, ಆ ಸೊಲ್ಲು ತಪ್ಪಾಗಿದೆ; ಆದರೆ, (40ಟ)ದಲ್ಲಿ ಗುರುತಿಸುವ ಪದವಾಗಿ ಬಂದಿರುವ ಅದೇ ಉದ್ದ ಪರಿಚೆಪದವನ್ನು ಅದರ ಮಾರುಲಿ ರೂಪದೊಂದಿಗೆ ಬಳಸಿರುವುದು ಸರಿಯೆಂದು ಅನಿಸುತ್ತದೆ.
ಇದಲ್ಲದೆ, (40ತ)ದಲ್ಲಿ ಕಾಣಿಸಿದ ಹಾಗೆ, ನೆರವು ಪದವಾಗಿ ಬಂದಿರುವ ಉದ್ದ ಪರಿಚೆಪದವನ್ನು ಅದರ ಮಾರುಲಿ ರೂಪದೊಂದಿಗೆ ಬಳಸುವಾಗ, ಹೆಸರು ಪದವನ್ನೂ ಒಟ್ಟಿಗೆ ಇರಿಸಿದಲ್ಲಿ, ಆ ಸೊಲ್ಲು ಸರಿಯೆಂದು ಅನಿಸುತ್ತದೆ. ಇದಕ್ಕೆ ಕಾರಣವೇನೆಂದರೆ, ಇಲ್ಲಿ ಇಡೀ ಹೆಸರುಕಂತೆಯನ್ನೇ ಅದರ ಮಾರುಲಿ ರೂಪ ದಲ್ಲಿ ಬಳಸಲಾಗಿದೆ.
(2) ನೆರವು ಪದವಾಗಿ ಬರುವ ಪರಿಚೆಪದವನ್ನು ನೇರವಾಗಿ ಹೆಸರುಪದ ದೊಂದಿಗೆ ಬಳಸಲಾಗುತ್ತದೆ (ಎತ್ತರ ಗೋಡೆ, ಉದ್ದ ಹಗ್ಗ); ಆದರೆ, ಗುರುತಿಸುವ ಪದವಾಗಿ ಬಂದಿರುವ ಪರಿಚೆಪದವನ್ನು ಹೆಸರುಪದದೊಂದಿಗೆ ಬಳಸಬೇಕಿದ್ದಲ್ಲಿ ಅದಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗುತ್ತದೆ (ಎತ್ತರದ ಗೋಡೆ, ಉದ್ದದ ಹಗ್ಗ). ಈ ಎರಡು ಬಗೆ ಬಳಕೆಗಳ ನಡುವೆ ವ್ಯತ್ಯಾಸವಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:
(41ಕ) ಈ ಎತ್ತರ ಗೋಡೆಗಿಂತ ಆ ಎತ್ತರ ಗೋಡೆ ಚನ್ನಾಗಿದೆ. (41ಚ) ಈ ಎತ್ತರದ ಗೋಡೆಗಿಂತ ಆ ಎತ್ತರದ ಗೋಡೆ ಚನ್ನಾಗಿದೆ. (41ತ) ಈ ಗೋಡೆಗಿಂತ ಆ ಗೋಡೆ ಚನ್ನಾಗಿದೆ. (41ಪ) ಈ ಗೋಡೆಯ ಎತ್ತರಕ್ಕಿಂತ ಆ ಗೋಡೆಯ ಎತ್ತರ ಚನ್ನಾಗಿ
ಕಾಣಿಸುತ್ತದೆ.
(41ಕ)ದಲ್ಲಿ ಎತ್ತರ ಪರಿಚೆಪದ ಗೋಡೆ ಪದಕ್ಕೆ ನೆರವು ನೀಡುವುದಕ್ಕಾಗಿ ಬಂದಿದ್ದು, ಅದನ್ನು ಹಾಗೆಯೇ ಯಾವ ಬದಲಾವಣೆಯೂ ಮಾಡದೆ ಬಳಸ ಲಾಗಿದೆ; ಇದಕ್ಕೆ ಬದಲು, (41ಚ)ದಲ್ಲಿ ಅದೇ ಪದ ‘ಎತ್ತರ’ ಪರಿಚೆಯನ್ನು ಗುರುತಿಸುವುದಕ್ಕಾಗಿ ಬಂದಿದ್ದು, ಅದನ್ನು ಗೋಡೆ ಪದದೊಂದಿಗೆ ಬಳಸಲು ಅದಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗಿದೆ.
ಈ ಎರಡು ಸೊಲ್ಲುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು: (41ಕ)ದಲ್ಲಿ ಎರಡು ಗೋಡೆಗಳನ್ನು ಹೋಲಿಸಲಾಗಿದೆ; ಅದರ ಹುರುಳು (41ತ) ಸೊಲ್ಲಿನ ಹುರುಳಿನ ಹಾಗೆಯೇ ಇದೆ. ಆದರೆ, (41ಚ)ದಲ್ಲಿ ಎರಡು ಎತ್ತರಗಳನ್ನು ಹೋಲಿಸಲಾಗಿದೆ; ಹಾಗಾಗಿ, ಅದರ ಹುರುಳು (41ಪ) ಸೊಲ್ಲಿನ ಹುರುಳಿನ ಹಾಗಿದೆ. (41ಚ)ದಲ್ಲಿ ಎತ್ತರ ಪದ ಪರಿಚೆಯೊಂದನ್ನು ಗುರುತಿಸುತ್ತಿರುವುದೇ ಈ ವ್ಯತ್ಯಾಸಕ್ಕೆ ಕಾರಣ.
ಹೀಗಿದ್ದರೂ, (41ಚ) ಸೊಲ್ಲಿನಲ್ಲಿ ಬಂದಿರುವ ಈ ಎತ್ತರದ ಗೋಡೆ ಮತ್ತು ಆ ಎತ್ತರದ ಗೋಡೆ ಎಂಬ ಪದಕಂತೆಗಳಲ್ಲಿ ಗೋಡೆ ಪದವೇ ಗೋಡೆಗಳನ್ನು ತಿರುಳು ಪದವಾಗಿದೆಯಾದ ಹೋಲಿಸುವ ಹುರುಳೂ ಬರಬಲ್ಲುದು.
ಕಾರಣ, ಅದಕ್ಕೆ ಎರಡು
6.6.6 ಎಸಕಪದಗಳ ಬಳಕೆ
ಹಲವು ಎಸಕಪದಗಳನ್ನು ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಹೆಸರು ಪದಗಳಾಗಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ರಾಜು ಕೆಮ್ಮಿದ ಎಂಬ ಸೊಲ್ಲಿನಲ್ಲಿ ಕೆಮ್ಮು ಪದ ಒಂದು ಎಸಕಪದವಾಗಿ ಬಳಕೆಯಾಗಿದೆ; ಆದರೆ, ರಾಜುವಿನ ಕೆಮ್ಮು ಇಲ್ಲಿವರೆಗೆ ಕೇಳಿಸುತ್ತದೆ ಎಂಬ ಸೊಲ್ಲಿನಲ್ಲಿ ಅದೇ ಪದ ಒಂದು ಹೆಸರುಪದವಾಗಿ ಬಳಕೆಯಾಗಿದೆ.
ಕನ್ನಡದಲ್ಲಿ ಹೆಚ್ಚುಕಡಿಮೆ 160 ಎಸಕಪದಗಳನ್ನು ಈ ರೀತಿ ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಹೆಸರುಪದಗಳಾಗಿ ಬಳಸಲು ಬರುತ್ತದೆ (2.4.1(16) ನೋಡಿ); ಆದರೆ, ಇವೆಲ್ಲವೂ ಮೂಲದಲ್ಲಿ ಎಸಕಪದಗಳೇ; ಹೆಸರುಪದಗಳಾಗಿ ಬರುವುದು ಅವುಗಳ ಒಂದು ಹೆಚ್ಚಿನ ಬಳಕೆ ಎಂದು ಹೇಳಬಹುದು. ಯಾಕೆಂದರೆ, ಹಲವು ವಿಶಯಗಳಲ್ಲಿ ಅವು ಹೆಸರುಪದಗಳಿಗಿಂತ ಬೇರಾಗಿವೆ.
ಆದರೆ, ಈ ರೀತಿ ಹೆಸರುಪದಗಳಾಗಿ ಬಳಕೆಯಾಗುವ ಎಸಕಪದಗಳಲ್ಲಿ ಕೆಲವು ಮೊದಲನೇ ಹಂತದ (6.2.4 ನೋಡಿ) ಪಾಗುಗಳನ್ನು ಗುರುತಿಸುತ್ತಿದ್ದು, ಅವು ಯಾವ ವಿಶಯದಲ್ಲೂ ಬೇರೆ ಮೊದಲನೇ ಹಂತದ ಹೆಸರುಪದಗಳಿಂದ ಬೇರಾಗಿಲ್ಲ. ಚಿಗುರು, ಅಂಟು, ಮರೆ, ಹಣ್ಣು, ಮೆಟ್ಟು, ಉಗುಳು ಮೊದಲಾದ ಪದಗಳು ಇಂತಹವು.
ಅಲೆ, ಉಲಿ, ಅಳು, ನಗು, ಗುಡುಗು, ಹಾಡು, ನುಡಿ, ಸುಳಿ ಮೊದಲಾದ ಬೇರೆ ಕೆಲವು ಪದಗಳು ಮೊದಲನೇ ಹಂತದ ಹೆಸರುಪದಗಳ ಹಾಗೆ ಬಳಕೆಯಾಗುವುದಿದ್ದರೂ, ಕೆಲವು ವಿಶಯಗಳಲ್ಲಿ ಎಸಕಪದಗಳ ಪರಿಚೆಯನ್ನೂ ಉಳಿಸಿಕೊಂಡಿವೆ.
ಎರಡನೇ ಹಂತಕ್ಕೆ ಸೇರುವ ಅಳಲು, ಕುದಿ, ಓದು, ಕೊರಗು, ತಪ್ಪು, ಕುಂದು, ಹುಟ್ಟು ಮೊದಲಾದವು ಎಸಕಪದಗಳ ಪರಿಚೆಗಳನ್ನು ಮೇಲಿನವು ಗಳಿಗಿಂತ ಹೆಚ್ಚು ಉಳಿಸಿಕೊಂಡಿವೆ.
ಹಾಗಾಗಿ, ಈ ರೀತಿ ಹೆಸರುಪದಗಳಾಗಿ ಬಳಕೆಯಾಗಬಲ್ಲ ಎಸಕಪದಗಳನ್ನು ಬೇರೆ ಬೇರಾಗಿ ಪರಿಶೀಲಿಸಿ, ಅವುಗಳ ಬಳಕೆಯ ಮೇಲಿರುವ ಕಟ್ಟುಪಾಡುಗಳನ್ನು ಪಟ್ಟಿಮಾಡಬೇಕಾಗಿದೆ. ಇವುಗಳ ಕುರಿತು ಕೆಲವು ಸಂಗತಿಗಳನ್ನು ಮುಂದೆ ಏಳನೇ ಪಸುಗೆಯಲ್ಲಿ ಕೊಡಲಾಗುವುದು.
6.7 ತಿರುಳು
ಈ ಪಸುಗೆಯಲ್ಲಿ ಹೆಸರುಕಂತೆಗಳ ಇಟ್ಟಳ ಎಂತಹದು ಎಂಬುದನ್ನು ವಿವರಿಸ ಲಾಗಿದೆ. ಸಾಮಾನ್ಯವಾಗಿ, ಹೆಸರುಕಂತೆಗಳಲ್ಲಿ ಒಂದು ಹೆಸರುಪದ ತಿರುಳುಪದ
ವಾಗಿ ಬರುತ್ತದೆ, ಮತ್ತು ಅದರೊಂದಿಗೆ ಹಲವು ಬಗೆಯ ಪದಗಳು, ಪದರೂಪ ಗಳು, ಮತ್ತು ಒಳಸೊಲ್ಲುಗಳು ನೆರವು ನುಡಿತಗಳಾಗಿ ಬರುತ್ತವೆ.
ಹೆಸರುಪದಗಳು ಗುರುತಿಸಬೇಕಾಗಿರುವ ಪಾಂಗಿನ ಪರಿಚೆಯನ್ನು ತಿಳಿಸು ವುದು, ಅಳವಿಯನ್ನು ತಿಳಿಸುವುದು, ಮತ್ತು ಅವನ್ನು ನೆಲೆಗೊಳಿಸುವುದು ಎಂಬ ಮೂರು ಮುಕ್ಯ ಕೆಲಸಗಳನ್ನು ನಡೆಸುವ ಮೂಲಕ ಈ ನೆರವು ನುಡಿತಗಳು ತಿರುಳುಪದವಾಗಿ ಬಂದಿರುವ ಹೆಸರುಪದಗಳಿಗೆ ಗುರುತಿಸುವ ಕೆಲಸದಲ್ಲಿ ನೆರವ ನ್ನೊದಗಿಸುತ್ತವೆ.
ಹೆಸರುಪದಗಳು ಮಾತ್ರವಲ್ಲದೆ, ಬೇರೆಯೂ ಕೆಲವು ಬಗೆಯ ಪದಗಳು ಮತ್ತು ಪದರೂಪಗಳು ಹೆಸರುಕಂತೆಗಳ ತಿರುಳುಪದಗಳಾಗಿ ಬಳಕೆಯಾಗ ಬಲ್ಲುವು; ಆಡುಪದಗಳು, ತೋರುಪದಗಳು, ಎಣಿಕೆಪದಗಳು, ಎಸಕಪದಗಳ ಹೆಸರುರೂಪಗಳು, ಕೆಲವು ಪರಿಚೆಪದಗಳು ಮತ್ತು ಎಸಕಪದಗಳೂ ಈ ಕೆಲಸ ದಲ್ಲಿ ಬಳಕೆಯಾಗಬಲ್ಲುವು. ಆದರೆ, ಇವು ಹೆಸರುಪದಗಳಿಂದ ಹಲವು ವಿಶಯ ಗಳಲ್ಲಿ ಬೇರಾಗಿವೆ; ಅವುಗಳ ಈ ಬಳಕೆಯಲ್ಲಿ ಹಲವು ಹೆಚ್ಚಿನ ಕಟ್ಟುಪಾಡು ಗಳಿವೆ.
ಇದು ಬರಹದ ಸೊಲ್ಲರಿಮೆಯಾದರೂ, ಇದರಲ್ಲಿ ಆಗಾಗ ಆಡುಗರು ಯಾವ ರೀತಿಯಲ್ಲಿ ಹೆಸರುಪದಗಳನ್ನು ಮತ್ತು ಹೆಸರುಕಂತೆಗಳನ್ನು ಬಳಸುತ್ತಾರೆ, ಮತ್ತು ಅವನ್ನು ಕೇಳುಗರು ಹೇಗೆ ತಿಳಿದುಕೊಳ್ಳುತ್ತಾರೆ ಎಂಬುದನ್ನು ವಿವರಿಸ ಲಾಗಿದೆ; ಹೆಸರುಕಂತೆಗಳನ್ನು ನೆಲೆಗೊಳಿಸುವ ಸಂದರ್ಬದಲ್ಲಿ ಇಂತಹ ವಿಶಯ ಗಳನ್ನು ಇನ್ನಶ್ಟು ಆಳವಾಗಿ ಪರಿಶೀಲಿಸಲಾಗಿದೆ.
ಬರಹಕ್ಕೂ ಮಾತೇ ಮೂಲ ಎಂಬುದು ಹೀಗೆ ಮಾಡಬೇಕಾಗಿರುವುದಕ್ಕೆ ಒಂದು ಕಾರಣ; ಬರಹದಲ್ಲೂ ಆಡುಗ ಮತ್ತು ಕೇಳುಗರು ಆಗಾಗ ಕಾಣಿಸಿ ಕೊಳ್ಳುತ್ತಾರೆ ಎಂಬುದು ಇನ್ನೊಂದು ಕಾರಣ. ಕತೆ, ಕಾದಂಬರಿ, ನಾಟಕ ಮೊದಲಾದವುಗಳಲ್ಲಿ ಈ ರೀತಿ ಆಡುಗ ಮತ್ತು ಕೇಳುಗರು ಕಾಣಿಸಿಕೊಳ್ಳುವುದು ಇನ್ನಶ್ಟು ಹೆಚ್ಚು.
ಕೆಲವು ಅರಿಮೆಯ ಪದಗಳು
ಅರಿಕೆರೂಪ
ಅರಿಮೆಯ ಪದ ಅರಿವಿನ ಅಲ್ಲಗಳೆತ
ಅಳತೆಪಟ್ಟಿ
ಅಳವಿ ಅಳವು ಆಗಿಸುಗ ಆಗುಗ ಆಡುಗ ಆಡುಪದ ಆರಯ್ಗ ಇಟ್ಟಳ
ಇಪ್ಪುರುಳು
ಇಪ್ಪುರುಳು
ಇಮ್ಮಡಿರೂಪ ಇರುವಹೆಸರು ಇರುಹ ಇರುಹದ ಹೊತ್ತು ಈಡು ಈಪೊತ್ತು
ಉರುಬೆ ಉಳಿಕೆಗುರ್ತ
ಎತ್ತುಗೆ
ಎದುರುಹುರುಳು ಎಸಕ ಎಸಕದ ಇಟ್ಟಳ ಎಸಕಪದ ಎಸಕಪರಿಚೆ
ಎಸಕಹೊತ್ತು
ವಿಧ್ಯರ್ಥಕ
ಪಾರಿಭಾಷಿಕ ಪದ
ನಿಷೇಧಾರ್ಥಕ
ಉತ್ತಮಪುರುಷ
ತಾಕ್ರಿಕ ರಚನೆ ಅರ್ಥಸಂದಿಗ್ಧತೆ ಅರ್ಥಸಂದಿಗ್ಧತೆ ದ್ವಿರುಕ್ತಿ
ಕರ್ಮ ವತ್ರಮಾನಕಾಲ
ನಪುಂಸಕಲಿಂಗ ಉದಾಹರಣೆ ವಿರುದ್ಧಾರ್ಥಕ ಕ್ರಿಯೆ
ಕ್ರಿಯಾಪದ
ಕ್ರಿಯಾವಿಶೇಷಣ
imperative technical term epestemic negation scale quantity ability causer doer first person personal pronoun logician structure ambiguity ambiguity reduplicated form common name possibility, state state time object present tense intensity neuter example antonym event actionsart verb adverb event time
ಒಟ್ಟಲುಹೆಸರು ಒಟ್ಟು
ಒಡನೆಸಕ ಒತ್ತಾಸೆಯ
ಒತ್ತಿಹೇಳುವ ಒತ್ತೆಹೆಸರು
ಒಪ್ಪಿಗೆ ಒರ್ಬಗೆತನ
ಒಳಗೊಳ್ಳುವ ಒಳಸೊಲ್ಲು
ಒಳಹುರುಳು ಓರಣ ಓರೆಣಿಕೆ ಕಟ್ಟಲೆ
ಕಡ್ಡಾಯ ಕಳೆಹುರುಳು
ಕೀಳ್ಮೆ ಕೂಡುಪದ
ಕೂಡುಹುರುಳು ಕೇಳುಗ ಕೇಳ್ವಿ
ಕೊಟ್ಟಹೆಸರು ಕೊನೆಗೊಳ್ಳುವಿಕೆ ಕೊನೆಯೆಸಕ
ಕೊನೆರೂಪ
ಕೊರೆಪದ
ಗಂಡುಗುರ್ತ
ಗುರ್ತ ಗುರಿ ಗುರುತಿಸುವುದು ಚಣದೆಸಕ
ಜಾಗ ಜೋಡುಪದ ತಕ್ಕುಮೆ
ಪ್ರತ್ಯಯ
ಕ್ರಮ ಏಕವಚನ
(ನಿಯಮ)
ಮಧ್ಯಮಪುರುಷ ಪ್ರಶ್ನೆ
ಪುಲ್ಲಿಂಗ ಲಿಂಗ ಅಪಾದಾನ
ಸಮಾಸ ಗೌರವ
mass noun affix simultaneous event deontic emphatic count noun permission homogeneity inclusive embedded sentence entailment order singular rule obligation negagtive meaning inferiority compound verb positive meaning second person question
proper name completion telic event finite form irregular word masculine gender goal reference momentary event location compound respect
ತಿಕ್ಕಾಟ ತಿರುಳುಪದ
ತಿಳಿಯಬಲ್ಲ
ತಿಳಿಯಲಾಗದ ತಿಳಿವಿನ ಹೊತ್ತು ತಿಳಿವುರೂಪ
ತೆರೆಯುಲಿ
ತೊಡಗಿಕೆ ತೋರುಪದ
ದೊರೆತ ನಡುರೂಪ
ನಿಲುವು ನುಡಿತ ನೆರೆವೆಸಕಪದ ನೆಲೆಗೊಳಿಸು
ಪತ್ತುಗೆ
ಪರಿಚೆ ಪರಿಚೆ
ಪರಿಚೆಪದ
ಪರಿಜು ಪಸುಗೆ
ಪಾಂಗು
ಪುರಾವೆ ಬಳಕೆಯ ಹುರುಳು ಬೇಡಿಕೆ ಬೇರು ಬೇಹ ಮಾದರಿ ಮಾರುಲಿ ರೂಪ ಮಾರೆಸಕ ಮುಂದುವರಿಕೆ ಮುಂಬೊತ್ತು
ಮುಚ್ಚುಲಿ ಮುನ್ನೆಣಿಕೆ
ಸ್ವರ
ಸಂಬಂಧ
ಸ್ವರೂಪ ಸ್ವರೂಪ ವಿಶೇಶಣಪದ ರೂಪ ಅಧ್ಯಾಯ
ಪಾತ್ರ ಸಾಕ್ಷಿ
ಧಾತು
ಭವಿಷ್ಯತ್ಕಾಲ
ವ್ಯಂಜನ
conflict head word definite indefinite topic time indicative form vowel initiation demonstrative pronoun result non-finite form modality expression auxiliary grounding relation characteristic characteristic adjective, adverb characteristic chapter role evidence habitual meaning condition root necessity standard echo-form later event continuation future tense consonant presupposition
ಮೊದಲೆಸಕ
ಸರಿಕತನ ಸಾಗುವೆಸಕ
ಸಿಕ್ಕಲು ಸುಳುರೂಪ
ಸೇರಿಸುವ ಪದ ಸೊಲ್ಲರಿಮೆ
ಸೊಲ್ಲು ಸೊಲ್ಲುಹೊತ್ತು ಹಂತ ಹಂತಪರಿಚೆ
ಹರವು ಹಲವೆಣಿಕೆ
ಹಿಂಬೊತ್ತು
ಹುರುಳು ಹೆಣ್ಣುಗುರ್ತ
ಹೆರತು ಹೆಸರುಪದ
ಹೆಸರುಪರಿಚೆ ಹೊತ್ತಿನ ಇಟ್ಟಳ ಹೊತ್ತಿನ ಪತ್ತುಗೆ ಹೊರಪಡಿಕೆ
ಹೊರಸೊಲ್ಲು ಹೊರಿಗೆ ಹೊಲಬು ಹೋಲಿಕೆಯ
ಸಂಕೀರ್ಣ
ಆತ್ಮಾರ್ಥಕ
ವ್ಯಾಕರಣ
ವಾಕ್ಯ
ಬಹುವಚನ
ಭೂತಕಾಲ
ಅಥ್ರ ಸ್ತ್ರೀಲಿಂಗ ಪ್ರಥಮಪುರುಷ ನಾಮಪದ
ನಾಮವಿಶೇಷಣ
ಕಾಲ ಅಪವಾದ
ತುಲನಾತ್ಮಕ
earlier event equality durative event complex
simple form reflexive form grammar sentence utterance time degree, stage degree adjective scope plural past tense meaning feminine third person noun adjective aspect tense exception matrix sentence layer method comparative
ಬಾಶಾಪ್ರಕಾಶನದ ಬೇರೆ ಪುಸ್ತಕಗಳು
ಡಿ. ಎನ್. ಶಂಕರ ಭಟ್ ಬರೆದ ಬೇರೆ ಪುಸ್ತಕಗಳು:
- ಕನ್ನಡ ವ್ಯಾಕರಣ ಯಾಕೆ ಬೇಕು? 2009, ಪು. 260, ರೂ. 150.
-
ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, 2008, 2011, ಪು. 336, ರೂ.
- ಮಾತಿನ ಒಳಗುಟ್ಟು, 2008, ಪು. 208, ರೂ 120.
- ಕನ್ನಡ ನುಡಿ ನಡೆದು ಬಂದ ದಾರಿ, 2007, 2009, ಪು. 348, ರೂ 190.
- ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, 2000, 2001, 2006, 2009; ಪು.
248, ರೂ. 140.
- ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? 2005, ಪು. 265, ರೂ. 65.
- ಕನ್ನಡದ ಸರ್ವನಾಮಗಳು, 2003, ಪು 192, ರೂ. 46.
- ಕನ್ನಡ ಪದಗಳ ಒಳರಚನೆ, 1999, 2002, 2010, ಪು. 240, ರೂ. 160.
- ಕನ್ನಡ ವಾಕ್ಯಗಳ ಒಳರಚನೆ, 2004, 2006, 2011, ಪು. 280, ರೂ. 180.
- ಕನ್ನಡ ಬರಹವನ್ನು ಸರಿಪಡಿಸೋಣ, 2006, 2009, ಪು. 304, ರೂ. 160.
- ಭಾಷೆಯ ಬಗೆಗೆ ನೀವೇನು ಬಲ್ಲಿರಿ? 1970, 1998, 2002, 2010 ಪು.
206, ರೂ. 140.
- ಕನ್ನಡ ಬರಹದ ಸೊಲ್ಲರಿಮೆ-1, 2010, ಪು. 328, ರೂ. 220.
ಭಾರತಿ ಭಟ್ ಬರೆದ ಪುಸ್ತಕಗಳು:
- ನನ್ನ ಬೆಲ್ಜಿಯಂ ಪ್ರವಾಸ, 2000, ಪುಟ 160, ರೂ. 50.
- ತಾಯಂದಿರಿಗೆ ಕಿವಿಮಾತು, 2007, ಪುಟ 224, ರೂ. 120.
ದಭ್ರೆ ನಾರಾಯಣ ಶಾಸ್ತ್ರಿ ಬರೆದ ಪುಸ್ತಕ:
- ಸನಾತನತ್ವದ ಇಣುಕುನೋಟಗಳು, 2007, ಪುಟ 264, ರೂ. 140
ಪ್ರತಿಗಳಿಗೆ ಬರೆಯಿರಿ: ಅತ್ರಿ ಬುಕ್ ಸೆಂಟರ್,4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001
ದೂರವಾಣಿ: 0824-2425161, -2492397