ಇಂಗ್ಲಿಶ್-ಕನ್ನಡ ಪದನೆರಕೆ

ಲೇಖಕರು: ಡಿ. ಎನ್. ಶಂಕರ ಬಟ್, ಯೋ. ಭರತ್ ಕುಮಾರ್, ವಿವೇಕ್ ಶಂಕರ್ Inglish-Kannada Padanerake (English-Kannada Word Correspondence Dictionary) ಪ್ರಕಟಣೆ / Year: 2015 (1st edition) ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು ಪುಟಗಳು / Pages: x + 730 (ಮಾದರಿ: 53 ಪುಟಗಳು) ಮೂಲ: PDF (Google Drive) — hybrid extraction: English headwords from pdfminer ASCII, Kannada WX-decoded

ಸೊಲ್ಲರಿಮೆ ಅಂಶಗಳು: ಹೆ = ಹೆಸರುಪದ (noun) · ಎ = ಎಸಕಪದ (verb) · ಪ = ಪರಿಚೆಪದ (adjective/qualifier)


ಇಂಗ್ಲಿಶ್-ಕನ್ನಡ ಪದನೆರಕೆ (ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದ್ದೇ ಪದಗಳನ್ನು ಇಲ್ಲಿ ಕೊಡಲಾಗಿದೆ) ಡಿ. ಎನ್. ಶಂಕರ ಬಟ್ ಯೋ. ಬರತ್ ಕುಮಾರ್ ವಿವೇಕ್ ಶಂಕರ್ ಹೊರಪಡಿಕೆ ಡಿ. ಎನ್. ಶಂಕರ ಬಟ್ ಬೀಮನಕೋಣೆ ಹೊನ್ನೆಸರ, ಸಾಗರ 577 417


Inglish-Kannada Padanerake (English-Kannada Dictionary) by D. N. Shankara Bhat, Y . Bharath Kumar and Vivek Shankar Contact address: Mungaravalli, P.O Bhimana Kone, Honnesara, Sagara, 577417. Phone: 9449774956. ಮೊದಲನೆಯ ಅಚ್ಚು : 2015 ಬಿ ಬರಹಗಾರರು ಹೊರಪಡಿಕೆ ಡಿ. ಎನ್. ಶಂಕರ ಬಟ್ ಬೀಮನಕೋಣೆ ಹೊನ್ನೆಸರ, ಸಾಗರ 577 417 ಪುಟಗಳು: x + 730 ಬೆಲೆ: ರೂ. 400 ºÀAaPÉ ನವಕರ್ನಾಟಕ ಪ್ರಕಾಶನ 11, ಕ್ರೆಸೆಂಟ್ ರಸ್ತೆ, ಕೆ.ಪಿ. ಈಸ್್ಟ ಬೆಂಗಳೂರು 560 001 ಹೊದಿಕೆಪುಟ: ವಲ್ಲೀಶ್ ಕುಮಾರ್ ಎಸ್. CZÀÄÑ ಲಕ್ಶ್ಮೀ ಮುದ್ರಣಾಲಯ ಚಾಮರಾಜಪೇಟೆ ಬೆಂಗಳೂರು 560 018 ii


ಮುನ್ನುಡಿ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬ 2008ರಲ್ಲಿ ಹೊರಬಂದ ಕಡತವನ್ನು ನೆಲೆಯಾಗಿರಿಸಿಕೊಂಡು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದರ ಗುರಿಯೂ ಆ ಕಡತದ ಗುರಿಯೇ ಆಗಿದೆ: ಇಂಗ್ಲಿಶ್ ನುಡಿಯನ್ನು ಸಾಕಶ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮಾನವಾಗಿರುವ ಕನ್ನಡದವೇ ಆದ ಪದಗಳು ಯಾವುವಿವೆ ಎಂಬುದನ್ನು ಮತ್ತು ಅಂತಹ ಪದಗಳನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವನ್ನು ನೀಡುವುದೇ ಈ ಪದನೆರಕೆಯ ಗುರಿಯೂ ಆಗಿದೆ. ಕನ್ನಡಕ್ಕೆ ಹೊಸ ಪದಗಳು ಬೇಕಾದಾಗಲೆಲ್ಲ ಅವನ್ನು ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಉಂಟುಮಾಡಿಕೊಳ್ಳುವ ವಾಡಿಕೆಯು ಕನ್ನಡದ ಬರಹಗಾರರಲ್ಲಿ ಮತ್ತು ಪಂಡಿತರಲ್ಲಿ ಹಲವಾರು ವರ್ಶಗಳಿಂದ ಬೆಳೆದುಬಂದಿದೆ. ನಿಜಕ್ಕೂ ಅವರು ಉಂಟುಮಾಡಿರುವ ಪದಗಳು ಕನ್ನಡದವೂ ಅಲ್ಲ, ಸಂಸ್ಕ್ರುತದವೂ ಅಲ್ಲ. ಅವನ್ನು ತ್ರಿಶಂಕು' ಪದಗಳೆಂದು ಕರೆಯಬಹುದು. ಇವತ್ತು ಕನ್ನಡ ಬರಹಗಳಲ್ಲಿ ಅಂತಹ ತ್ರಿಶಂಕು ಪದಗಳು ತುಂಬಿತುಳುಕುತ್ತಿವೆ. ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಅರಿಮೆಯ (ಪಾರಿಬಾಶಿಕ) ಪದನೆರಕೆಯೊಂದನ್ನು ಬಿಡಿಸಿ ನೋಡಿದೆವಾದರೆ ಇದು ಚನ್ನಾಗಿ ಗೊತ್ತಾಗುತ್ತದೆ. ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ಅರಿಮೆಯ (ವಿಜ್ನಾನದ) ಬರಹಗಳನ್ನು ಅರ್ತಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ. ಹೊಸ ಪದಗಳನ್ನು ಉಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ. ಇವೆರಡೂ ತಪ್ಪು ಅನಿಸಿಕೆಗಳು. ಇವುಗಳಿಂದಾಗಿ, ಇವತ್ತು ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ಓದುಗರಿಗೆ ತಿಳಿವು ನೀಡಬೇಕೆನ್ನುವ ತಮ್ಮ ಮೂಲಗುರಿಯನ್ನು ತಲಪುವುದೇ E®è. ಹೊಸ ಪದಗಳು ಬೇಕಾದಾಗಲೆಲ್ಲ ಸಂಸ್ಕ್ರುತದ ಮೊರೆಹೊಕ್ಕರೆ ಕನ್ನಡದ ಪದಗಳು ಬೆಳವಣಿಗೆ ಕಾಣದೆ ಉಳಿಯುತ್ತವೆ; ಬೇರೆ ಬೇರೆ ಬಗೆಯ ಅರಿಮೆಯ ಬರಹಗಳಲ್ಲಿರುವ ವಿಶಯಗಳನ್ನು ಕನ್ನಡಕ್ಕೆ iii


ತರುವಾಗ ಕನ್ನಡದವೇ ಆದ ಪದಗಳನ್ನು ಬಳಸಿದೆವಾದರೆ, ಆ ಪದಗಳ ಹುರುಳುಗಳು ಹೆಚ್ಚುತ್ತಾ ಹೋಗುತ್ತವೆ; ಇದಕ್ಕೆ ಬದಲು, ಈಗ ಮಾಡುತ್ತಿರುವ ಹಾಗೆ, ಅಂತಹ ಕಡೆಗಳಲ್ಲೆಲ್ಲ ಸಂಸ್ಕ್ರುತ ಪದಗಳನ್ನು ಬಳಸುತ್ತಾಹೋದರೆ, ಈಗ ಬಳಕೆಯಲ್ಲಿರುವ ಕನ್ನಡ ಪದಗಳ ಹುರುಳುಗಳು ಹೆಚ್ಚುವುದಿಲ್ಲವಶ್ಟೇ ಅಲ್ಲ, ಅವುಗಳಲ್ಲಿ ಹಲವು ಬಳಕೆಯಿಂದಲೂ ಬಿದ್ದುಹೋಗುತ್ತವೆ. ಕನ್ನಡಕ್ಕೆ ಈಗ ಇಂತಹದೊಂದು ಕೆಟ್ಟ ಪರಿಸ್ತಿತಿ ಒದಗಿಬಂದಿದೆ. ಬೆಳವಣಿಗೆಯನ್ನು ಪಡೆದ ಇಂಗ್ಲಿಶ್ನಂತಹ ನುಡಿಗಳ ಪದನೆರಕೆಗಳಲ್ಲಿ ಹಲವಾರು ಪದಗಳಿಗೆ ಏಳೆಂಟು ಹುರುಳುಗಳಿರುವುದನ್ನು ಕಾಣಬಹುದು. ಆದರೆ, ಕನ್ನಡದ ಪದನೆರಕೆಯಲ್ಲಿ ಅಂತಹವೇ ಪದಗಳಿಗೆ ಒಂದೆರಡು ಹುರುಳುಗಳಶ್ಟೇ ಇರುತ್ತವೆ. ಎತ್ತುಗೆಗಾಗಿ, ಇಂಗ್ಲಿಶ್ನ ಠಿಚಿಡಿಣ ಎಂಬ ಪದಕ್ಕೆ ತುಂಡು ಇಲ್ಲವೇ ಪಾಲು ಎಂಬ ಹುರುಳಶ್ಟೇ ಅಲ್ಲದೆ ಹೊತ್ತಗೆಯ ಒಂದು ಬಾಗ, ನಾಟಕದ ಒಂದು ಪಾತ್ರ ಎಂಬಂತಹ ಬೇರೆಯೂ ಹಲವು ಹುರುಳುಗಳಿವೆ; ಆದರೆ, ಕನ್ನಡದ ತುಂಡು ಇಲ್ಲವೆ ಪಾಲು ಪದಗಳಿಗೆ ಇಂತಹ ಹೆಚ್ಚಿನ ಹುರುಳುಗಳು ದೊರೆತಿಲ್ಲ; ಇದಕ್ಕೆ ಕಾರಣವೇನೆಂದರೆ, ಈ ಹೆಚ್ಚಿನ ಹುರುಳುಗಳು ಬೇಕಾಗಿರುವಲ್ಲಿ ಕನ್ನಡದ ಬರಹಗಾರರು ಇಂಗ್ಲಿಶ್ ಬರಹಗಾರರು ಠಿಚಿಡಿಣ ಎಂಬುದನ್ನು ಬಳಸಿದ ಹಾಗೆ, ಕನ್ನಡದ ತುಂಡು ಇಲ್ಲವೇ ಪಾಲು ಎಂಬ ಪದವನ್ನೇ ಬಳಸುವ ಬದಲು ಬಾಗ ಇಲ್ಲವೇ ಪಾತ್ರ ಎಂಬ ಪದಗಳನ್ನು ಎರವಲು ಪಡೆದು ಬಳಸಿದ್ದಾರೆ. ಬೇರೆ ನುಡಿಗಳಿಂದ ಪದಗಳನ್ನು ಎರವಲು ಪಡೆಯಬಾರದೆಂದೇನೂ ನಾವು ಹೇಳುತ್ತಿಲ್ಲ. ಇವತ್ತು ಸಾಕಶ್ಟು ಬಳಕೆಗೆ ಬಂದಿರುವ ಪೆನ್ನು, ಪುಸ್ತಕ, ಕೋರ್ಟು, ಕಚೇರಿ, ಮೇಜು, ಕುರ್ಚಿ, ಡಾಕ್ಟರ್, ಸರ್ಜನ್ ಮೊದಲಾದ ಪದಗಳನ್ನು ಬಿಟ್ಟುಕೊಟ್ಟು ಕನ್ನಡದವೇ ಆದ ಪದಗಳನ್ನು ಬಳಸಬೇಕೆಂದೂ ನಾವು ಹೇಳುತ್ತಿಲ್ಲ. ಆದರೆ, ಒಂದು ಕನ್ನಡ ಬರಹದಲ್ಲಿ ಇಲ್ಲವೇ ಪದನೆರಕೆಯಲ್ಲಿ ಬರುವ ಇಂತಹ ಎರವಲು ಪದಗಳ ಎಣಿಕೆ ನೂರರಲ್ಲಿ ಅಯ್ವತ್ತಕ್ಕಿಂತಲೂ ಹೆಚ್ಚಾದರೆ, ಅದನ್ನು `ಕನ್ನಡ’ ಬರಹವೆಂದು ಇಲ್ಲವೇ ಕನ್ನಡ ಪದನೆರಕೆಯೆಂದು ಹೇಗೆ ಹೇಳಬಲ್ಲೆವು ಎಂಬುದೇ ನಮ್ಮ ಕೇಳ್ವಿ. ನಿಜಕ್ಕೂ ಇಂಗ್ಲಿಶ್ನ ಯಾವ ಪದಕ್ಕೂ ಸಾಟಿಯಾಗುವಂತಹ ಪದವನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ; ಇದನ್ನು ತೋರಿಸಿಕೊಡುವುದಕ್ಕಾಗಿ ಈ ಪದನೆರಕೆಯಲ್ಲಿ ಮೇಲೆ ತಿಳಿಸಿದಂತಹ, ಕನ್ನಡದಲ್ಲಿ ಸಾಕಶ್ಟು ಬಳಕೆಗೆ ಬಂದಿರುವ ಇಂಗ್ಲಿಶ್ ಪದಗಳಿಗೂ ಸಾಟಿಯಾಗುವಂತೆ ಕನ್ನಡದವೇ ಆದ ಪದಗಳನ್ನು ಕಟ್ಟಿಕೊಡಲಾಗಿದೆ. ಇಂತಹ ಪದಕಟ್ಟಣೆಯ ಕೆಲಸ ಕನ್ನಡದಲ್ಲಿ ಬರೇ ಬೆರಳೆಣಿಕೆಯಶ್ಟು ಮಂದಿಯ ಮಟ್ಟಕ್ಕೆ ಮೊಟಕುಗೊಳ್ಳದೆ ಹೆಚ್ಚು ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಪದ ಪದ ಕನ್ನಡ ಪದಾನೇ! ಎಂಬ ಪೇಸ್ಬುಕ್ ಗುಂಪಿನ ಮೂಲಕ ಬೇರೆ ಬೇರೆ ವಲಯಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಪದಗಳನ್ನು ಕಟ್ಟುವ ಕೆಲಸದಲ್ಲಿ ತೊಡಗುವಂತೆ ಹುರಿದುಂಬಿಸಲಾಗಿದೆ. ಇವರು ಇಂತಹ ಕನ್ನಡದವೇ ಆದ ಪದಗಳನ್ನು ಕಟ್ಟುವುದಲ್ಲದೆ ಅವನ್ನು ಹೊನಲು.ನೆಟ್ (hoಟಿಚಿಟu.ಟಿeಣ) ಎಂಬ ಮಿಂಬಾಗಿಲಿನಲ್ಲಿ ಬಳಸಿಕೊಂಡು ಹಲವಾರು ಬಗೆಯ ಬರಹಗಳನ್ನು ಉಂಟುಮಾಡುತ್ತಿದ್ದಾರೆ. ಅವರು ಕಟ್ಟಿದ ಪದಗಳನ್ನೂ ಈ ಪದನೆರಕೆಯಲ್ಲೂ ಸೇರಿಸಿಕೊಳ್ಳಲಾಗಿದೆ. ಈ ರೀತಿ ಸೇರಿಸುವ ಮುನ್ನ ಕನ್ನಡದ ಒಲವುಗಳನ್ನು ಬಗೆಯಲ್ಲಿರಿಸಿ, ಬೇಕಾದ ಕಡೆ ಅವುಗಳಲ್ಲಿ ಮಾರ್ಪಾಟುಗಳನ್ನೂ iv


ಮಾಡಲಾಗಿದೆ. ಇದರಿಂದಾಗಿ, ಈ ಹೊತ್ತಗೆ ಒಂದು ಪದನೆರಕೆಗೆ ಇರಬೇಕಾದ ಹರವು ಮತ್ತು ಆಳಗಳನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಅರಿಮೆಯ ವಿಶಯಗಳ ಬಗೆಗೆ ಪದಗಳ ಕೊರತೆ ಎದ್ದುಕಾಣುತ್ತಿರುವುದನ್ನು ಮನಗಂಡು, ಇಂಗ್ಲಿಶ್ನ ಹಲವು ಅರಿಮೆಯ ಪದಗಳಿಗೆ ಕನ್ನಡದ್ದೇ ಆದ ಪದಕಟ್ಟಣೆಯ ಮಾದರಿಯನ್ನು ಈ ಹೊತ್ತಗೆಯ ಮೂಲಕ ಬಳಕೆಗೆ ತರಲಾಗುತ್ತಿದೆ. ಇದರಿಂದ ಹುರುಪು ಪಡೆದು ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಪದಗಳನ್ನು ಕಟ್ಟಲು ತೊಡಗಿದರೆ ಕನ್ನಡಕ್ಕಿರುವ ಪದಗಳ ಕೊರತೆಯನ್ನು ನೀಗಬಹುದೆಂಬ ಎಣಿಕೆ ನಮ್ಮದು. ಆ ಕಡೆಗೆ ಅಡಿಯಿಡುವವರಿಗೆ ಈ ಪದನೆರಕೆ ದಾರಿದೀವಿಗೆಯಾಗ- ಬಲ್ಲುದೆಂಬ ನಂಬಿಕೆ ನಮಗಿದೆ. ಇಂಗ್ಲಿಶ್ ಪದಗಳನ್ನು ಮತ್ತು ಅವುಗಳ ಹುರುಳುಗಳನ್ನು ಪಡೆಯಲು ಇಂಗ್ಲಿಶ್ನ ಹಲವು ಪದನೆರಕೆಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ:

  1. ಪಾಕೆಟ್ ಅಕ್್ಸಪರ್್ಡ ಇಂಗ್ಲಿಶ್ ಡಿಕ್್ಶನರಿ, 2011
  2. ವೆಬ್ಸ್ಟರ್್ಸ ನ್ಯೂ ವರ್್ಲಡ್ ಡಿಕ್್ಶನರಿ, 1974
  3. ವರ್್ಡವೆಬ್ 6.75
  4. ವಿಕ್್ಶನರಿ.ಆರ್್ಗ ಈಗಾಗಲೇ ಬಳಕೆಯಲ್ಲಿರುವ ಕನ್ನಡದ್ದೇ ಆದ ಪದಗಳನ್ನು ಪಡೆಯುವಲ್ಲಿ ಕೆಳಗಿನ ಪದನೆರಕೆಗಳನ್ನು ಬಳಸಿಕೊಳ್ಳಲಾಗಿದೆ:
  5. ಕಿಟ್ಟೆಲ್್ಸ ಕನ್ನಡ-ಇಂಗ್ಲಿಶ್ ಡಿಕ್್ಶನರಿ, ತಿದ್ದಿ ದೊಡ್ಡದು ಮಾಡಿದ ಅಚ್ಚು, ಎಂ. ಮರಿಯಪ್ಪ ಬಟ್, ಮದ್ರಾಸ್ ಯುನಿವರ್ಸಿಟಿ, ಚೆನ್ನಯ್, 1968
  6. ಪ್ರಿಸಮ್ ಇಂಗ್ಲಿಶ್-ಕನ್ನಡ ನಿಗಂಟು, ಜಿ. ವೆಂಕಟಸುಬ್ಬಯ್ಯ ಮತ್ತು ರಾಜ್ಯಶ್ರೀ ಸತೀಶ್, 2001
  7. ಕನ್ನಡ ನಿಗಂಟು, ಕನ್ನಡ ಸಾಹಿತ್ಯ ಪರಿಶತ್ತು
  8. ಅಚ್ಚಗನ್ನಡ ನುಡಿಕೋಶ, ಕೊಳಂಬೆ ಪುಟ್ಟಣ್ಣಗವ್ಡ, 2002
  9. ವಯ್ದ್ಯಕೀಯ ನಿಗಂಟು, ಡಿ.ಎಸ್. ಶಿವಪ್ಪ, 1986
  10. ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್್ಶನರಿ, ಟಿ. ಬರೊ ಮತ್ತು ಎಮ್. ಬಿ. ಎಮನೊ, 1961 ಈ ಪದನೆರಕೆಯ ಹೆಗ್ಗಳಿಕೆಯೇನೆಂದರೆ, ಕೆಲವು ಸುಳುವಾಗಿರುವ ಮತ್ತು ಈಗಾಗಲೇ ಹೆಚ್ಚು ಬಳಕೆಯಲ್ಲಿರುವ ಪದಗಳನ್ನು ಬಿಟ್ಟು ಮಿಕ್ಕ ಎಲ್ಲಾ ಪದಗಳಿಗೂ ಬಳಕೆಯ ಪದಕಂತೆಯನ್ನು ಇಲ್ಲವೇ ಸೊಲ್ಲನ್ನು ಕೊಡಲು ಪ್ರಯತ್ನಿಸಲಾಗಿದೆ. ಹೀಗೆ ಕೊಟ್ಟಿರುವ ಪದಕಂತೆ ಇಲ್ಲವೇ ಸೊಲ್ಲುಗಳು ಈ ಪದನೆರಕೆಯ ಬಳಸಬಲ್ಲಮೆಯನ್ನು ಹೆಚ್ಚಿಸುತ್ತವೆಯೆಂದು ನಾವು ನಂಬಿದ್ದೇವೆ. ಯಾವುದೇ ಪದವು v

ಕನ್ನಡದ ಬೇರಿನ ಪದವೇ ಅಲ್ಲವೇ ಎಂಬುದನ್ನು ತೀರ್ಮಾನಿಸಲು ಮೇಲೆ ತಿಳಿಸಿದ ಕಿಟ್ಟೆಲ್ ಡಿಕ್್ಶನರಿಯ ಮತ್ತು ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್್ಶನರಿಯ ಮೊರೆ ಹೋಗಲಾಗಿದೆ. ಇಲ್ಲಿ ನಾವು ಕನ್ನಡದ್ದೇ ಪದಗಳು' ಎಂದು ಕರೆದಿರುವ ಪದಗಳಲ್ಲಿ ಕೆಲವು ಬೇರೆ ನುಡಿಗಳಿಂದ ಎರವಲಾಗಿ ಬಂದವುಗಳೂ ಇವೆ. ಅಂತಹ ಎರವಲು ಪದಗಳು ನೂರಕ್ಕೆ ಒಂದೆರಡರಿಂದ ಹೆಚ್ಚಿಲ್ಲವೆಂದು ನಮ್ಮ ನಂಬಿಕೆ. ಸಾಮಾನ್ಯ ಜನರಿಗೆ ತಿಳಿದಿಲ್ಲದ ಮತ್ತು ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗದ ಪದಗಳನ್ನು ಆದಶ್ಟು ಮಟ್ಟಿಗೆ ಕನ್ನಡ ಬರಹಗಳಿಂದ ಹೊರಗಿರಿಸಬೇಕೆಂಬುದಿಶ್ಟೇ ನಾವು ಮಾಡಬೇಕಾಗಿರುವ ಕೆಲಸವಲ್ಲದೆ ಅಚ್ಚಗನ್ನಡ’ ಪದಗಳನ್ನು ಮಾತ್ರ ಬಳಸಬೇಕೆಂಬುದಲ್ಲ. ಸಾಮಾನ್ಯ ಜನರಿಗೆ ತಿಳಿದಿಲ್ಲದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ನಮ್ಮ ಬರಹ ಅವರಿಂದ ದೂರ ಹೋಗುತ್ತದೆ ಮತ್ತು ಕನ್ನಡÀ ಪದಗಳ ಸೊಗಡಿಗೆ ಹೊಂದಿಕೆಯಾಗದ ತತ್ಸಮ ಪದಗಳನ್ನು ಇಲ್ಲವೇ `ತ್ರಿಶಂಕು’ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ಅಂತಹ ಬರಹ ಕನ್ನಡಿಗರಿಗೆ ತೊಡಕಿನದಾಗುತ್ತಾ ಹೋಗುತ್ತದೆ. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಹೊಸ ಪದಗಳನ್ನು ಕಟ್ಟುವಾಗ, ಕನ್ನಡದ ಪಡೆನುಡಿಗಳನ್ನು ಬಳಸದೆ, ಇಂಗ್ಲಿಶ್ ಪದಗಳ ಹುರುಳಿನ ಮೇಲೆ ಕನ್ನಡದ ಪದಗಳನ್ನು ಕಟ್ಟಲಾಗಿದೆ. ಯಾಕಂದರೆ, ಪಡೆನುಡಿಗಳು ಬೇರೆ ಬೇರೆ ಒಳನುಡಿಗಳಲ್ಲಿ ಬೇರೆ ಬೇರೆ ಹುರುಳುಗಳನ್ನು ಹೊಂದಿರಬಲ್ಲುವು. ಆದರೆ, ಹಲವು ಪಡೆನುಡಿಗಳು ಕನ್ನಡ ಕೂಡಣದಲ್ಲೆಲ್ಲ ಹರಡಿರುವುದರಿಂದ ಅಂತಹವುಗಳನ್ನು ಇಲ್ಲಿ ಕೊಡಲಾಗಿದೆ. ಈ ಹೊತ್ತಗೆಯಲ್ಲಿ ಕೆಲವು ಇರುಸರಿಕೆಗಳನ್ನು (ಛಿoಟಿveಟಿಣioಟಿs) ಬಳಸಲಾಗಿದೆ. ಅವುಗಳಾವುವೆಂದರೆ:

  1. ಇದು ಕನ್ನಡದ ಪದನೆರಕೆಯಾಗಿರುವುದರಿಂದ ಇಲ್ಲಿ ಕೊಟ್ಟಿರುವ ಸೊಲ್ಲರಿಮೆಯ ಅಂಶಗಳು (ಹೆಸರುಪದ (ಹೆ), ಎಸಕಪದ (ಎ), ಮತ್ತು ಪರಿಚೆಪದ (ಪ) ಎಂಬವು) ಅವುಗಳ ಮುಂದೆ ಕೊಟ್ಟಿರುವ ಕನ್ನಡ ಪದಗಳಿಗೆ ಸಂಬಂದಿಸಿವೆಯಲ್ಲದೆ ಇಂಗ್ಲಿಶ್ ಪದಗಳಿಗೆ ಸಂಬಂದಿಸಿಲ್ಲ. ಇದಲ್ಲದೆ, ಪದಗಳ ಬಳಕೆಯನ್ನು ಸೂಚಿಸುವುದಕ್ಕಾಗಿ ತೂರಿಗೆಯಲಿ ್ಲ (bಡಿಚಿಛಿಞeಣ) ಕೊಟ್ಟಿರುವ ಬಳಕೆಪದಗಳು, ಜೋಡುಪದಗಳು, ಪದಕಂತೆಗಳು ಮತ್ತು ಸೊಲ್ಲುಗಳು - ಇವೆಲ್ಲವೂ ಅವುಗಳ ಮೊದಲು ಬಂದಿರುವ ಕನ್ನಡ ಪದಗಳನ್ನು ಹೊಸಗನ್ನಡದಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತವೆಯಲ್ಲದೆ ಇಂಗ್ಲಿಶ್ ಪದಗಳ ಬಳಕೆಯನ್ನು ತಿಳಿಸುವುದಿಲ್ಲ.
  2. ಈ ಪದನೆರಕೆಗಾಗಿ ಇಂಗ್ಲಿಶ್ ಪದಗಳನ್ನು ಆರಿಸಿಕೊಳ್ಳುವಲ್ಲೂ ಇದೇ ಗುರಿಯನ್ನು ಮುಂದಿರಿಸಿಕೊಳ್ಳಲಾಗಿದೆ. ಎಂತಹ ಇಂಗ್ಲಿಶ್ ಪದಗಳಿಗೆ ಸಾಟಿಯಾದ ಕನ್ನಡ ಪದಗಳು ಬರಹಗಾರರಿಗೆ ಬೇಕಾಗಬಹುದೋ ಅಂತಹ ಪದಗಳನ್ನಶ್ಟೇ ಇಲ್ಲಿ ಆರಿಸಿಕೊಳ್ಳಲಾಗಿದೆ. ನೇರವಾಗಿ ಸೊಲ್ಲರಿಮೆಗೆ ಸಂಬಂದಿಸಿದಂತಹ ಚಿಟಿಜ, buಣ, ತಿheಟಿ ಮೊದಲಾದುವನ್ನು ಇಲ್ಲಿ ಕೊಟ್ಟಿಲ್ಲ.
  3. ಒಂದು ಇಂಗ್ಲಿಶ್ ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿದ್ದರೆ ಅವುಗಳನ್ನು 1, 2, 3… ಎಂಬುದಾಗಿ ಗುರುತಿಸಲಾಗಿದೆ. ಒಂದೇ ಹುರುಳಿಗೆ ಹಲವು ಪದಗಳಿದ್ದರೆ ಅವುಗಳನ್ನು ಅರೆತಡೆ(,)ಯನ್ನು ಬಳಸಿ ಬೇರ್ಪಡಿಸಲಾಗಿದೆ.
  4. ಯಾವುದೇ ಪದಕ್ಕೆ ಕೊಟ್ಟಿರುವ ಬಳಕೆಯ ಪದಕಂತೆ, ಜೋಡುಪದ ಇಲ್ಲವೆ ಸೊಲ್ಲುಗಳನ್ನು ಅರೆಕೊನೆ(;)ಗಳನ್ನು ಬಳಸಿ ಬೇರ್ಪಡಿಸಲಾಗಿದೆ. vi

ಎತ್ತುಗೆಗೆ: abuse ಎ ಬಯ್ಯು (ಬಯ್ದಾಟ), ಜರೆ (ಇತರರನ್ನೆಲ್ಲ ಜರೆದು ತನ್ನನ್ನು ಹೊಗಳಿಕೊಳ್ಳುತ್ತಿದ್ದಾನೆ), ಜಬ್ಬರಿಸು, ತೆಗಳು (ಆತನದು ತೆಗಳುವ ನುಡಿ; ತೆಗಳಿಕೆ) ಹೆ 1 ಕೊಂಡೆ (ಆತನ ಕೊಂಡೆಯನ್ನು ಕೇಳಲಾಗದು; ಕೊಂಡಿಸು), ತಿಟ್ಟು, ಉಟ್ಟಿ (ಉಟ್ಟಿ ಮಾತು), ಚುನ್ನ (ಚುನ್ನವಾಡು; ಊಳಿಗದವರ ಕೈಯಲ್ಲಿ ನನ್ನನ್ನು ಚುನ್ನವಾಡಿಸಿದಳು; ಚುನ್ನಮಾಡು), ಪರೆ, ಬಯ್ಗಳು (ಕೆಟ್ಟ ಬಯ್ಗಳು) 2 ಕೀಳ್ಬಳಕೆ (ಅವರು ಮದ್ದನ್ನು ಕೀಳ್ಬಳಕೆ ಮಾಡುತ್ತಿದ್ದಾರೆ), ತಪ್ಪುಬಳಕೆ

  1. ಕೆಲವು ಇಂಗ್ಲಿಶ್ ಪದಗಳಿಗೆ ಕನ್ನಡದ ಬೇರುಗಳನ್ನು ಕೊಡಲಾಗಿದೆ. ಬೇರುಗಳನ್ನು ಗುರುತಿಸುವಾಗ ಪದದ ಮುಂದೆ ಅಡ್ಡಗೆರೆ(-)ಯನ್ನು ಬಳಸಲಾಗಿದೆ. ಎತ್ತುಗೆಗೆ, ಟಚಿಡಿge ಎಂಬ ಪದಕ್ಕೆ ಸಾಟಿಯಾಗಿ ಹೇರ್-, ಹೆರ್- ಎಂಬುದಾಗಿ ಬೇರುಗಳನ್ನು ಕೊಡಲಾಗಿದೆ. ಪದಕಟ್ಟಣೆಯ ಹಿಂದೆ ಅಡಗಿರುವ ಕನ್ನಡದ ಒಲವುಗಳು ಮತ್ತು ಕಂಡುಕೊಂಡ ಚಳಕಗಳ ಬಗ್ಗೆ ಈಗಾಗಲೆ ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ಹೊತ್ತಗೆಯಲ್ಲಿ ತಿಳಿಸಿಕೊಡಲಾಗಿದೆ. ಈ ಒಲವುಗಳನ್ನು ಮತ್ತು ಚಳಕಗಳನ್ನು ಬಳಸಿಕೊಂಡು ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಬಗೆ ಹೇಗೆ ಎಂಬುದನ್ನು ಅರಿತುಕೊಳ್ಳಲು ಆ ಹೊತ್ತಗೆಯ ಮೊರೆ ಹೋಗಬಹುದು. vii ಈ ಪದನೆರಕೆಯಲ್ಲಿರುವ ಪದಗಳ ಬಗೆಗಿನ ಅಂಕಿ-ಅಂಶ ಗಮನ ಸೆಳೆಯುತ್ತದೆ:
  2. ಅ ಇಂದ ಸುರುವಾಗುವ ಪದಗಳು ಉಳಿದ ಎಲ್ಲ ತೆರೆಯುಲಿಗಳಿಗಿಂತ ಹೆಚ್ಚು ಕಂಡುಬರುತ್ತವೆ.
  3. ಸಂಸ್ಕ್ರುತದಲ್ಲಿ ಇಲ್ಲದ ಎ ಮತ್ತು ಒ ತೆರೆಯುಲಿಗಳಿಂದ ಸುರುವಾಗುವ ಪದಗಳು ಕನ್ನಡದಲ್ಲಿ ಹೆಚ್ಚೆಣಿಕೆಯಲ್ಲಿವೆ. ಕನ್ನಡದ ಸೊಗಡು ಮತ್ತು ಒಲವುಗಳು ಸಂಸ್ಕ್ರುತಕ್ಕಿಂತ ಬೇರೆಯಾಗಿರುವುದನ್ನು ಇದು ತೋರಿಸುತ್ತದೆ.

ಇನ್ನು ಪದ ಸೊಲ್ಲರಿಮೆಯ ಅಂಶಗಳ ಬಗ್ಗೆ ನೋಡಿದರೆ, ಕಟ್ಟಿದ ಪದಗಳಲ್ಲಿ ಹೆಚ್ಚಾಗಿ ಹೆಸರುಪದಗಳು ಕಂಡು ಬರುತ್ತವೆ. ಅರಿಮೆಯ ಬರಹಗಳಲ್ಲಿ ಹೆಚ್ಚಾಗಿ ಹೆಸರುಪದಗಳು ಬೇಕಾಗುತ್ತವೆ. ಇವತ್ತಿನ ಮಟ್ಟಿಗೆ ಕನ್ನಡದಲ್ಲಿ ಅರಿಮೆಪದಗಳ ಕೊರತೆ ಅರಿಮೆ ಬರಹಗಳನ್ನು ಮಾಡುವವರಿಗೆ ಸವಾಲಾಗಿ ಎದುರಾಗಿದೆ. ಹಾಗಾಗಿ, ಅರಿಮೆ ಪದಗಳ ಕೊರತೆಯನ್ನು ಕನ್ನಡದಲ್ಲೇ ಎರವುಪದಗಳ ನೆರವಿಲ್ಲದೆ ನೀಗಲು ಬರುತ್ತದೆ ಎಂಬುದನ್ನು ಈ ಅಂಕಿ-ಅಂಶ ತೋರಿಸಿಕೊಡುತ್ತದೆ. ಅರಿಮೆಯಲ್ಲಿ ಬಳಸುವ ಪದಗಳಲ್ಲದೆ ಅರಿಮೆಯ ಕವಲುಗಳನ್ನು (Disciplines of Sciences/ Sಣuಜಥಿ) ಹೆಸರಿಸಲು ಕನ್ನಡದ್ದೇ ಆದ ಪದಗಳಿಲ್ಲದಿರುವುದನ್ನು ಮನಗಂಡು ಬೇರೆ ಬೇರೆ ಅರಿಮೆಯ ಕವಲುಗಳಿಗೆ ಸುಮಾರು 240 ಪದಗಳನ್ನು ಈ ಪದನೆರಕೆಯಲ್ಲಿ ಕೊಡಲಾಗಿದೆ. ಎತ್ತುಗೆಗೆ: ಛಿhemisಣಡಿಥಿ – ಇರ್ಪರಿಮೆ, ಠಿಟಿeumಚಿಣiಛಿs – ಗಾಳಿಯೊತ್ತರಿಮೆ, sಣಚಿಣisಣiಛಿs – ತಿಳಿಹದರಿಮೆ ಈ ಹೊತ್ತಗೆಯಲ್ಲಿ ಕೊಟ್ಟಿರುವ ಬಳಕೆಯ ಸೊಲ್ಲುಗಳಲ್ಲೂ ಹಲವು ಕನ್ನಡದವೇ ಆದ ಪದಗಳನ್ನು ಬಳಸಲಾಗಿದೆ; ಇಂತಹ ಪದಗಳಿಗೆ ಒಗ್ಗಿಹೋಗಿಲ್ಲದವರಿಗಾಗಿ ಕೊನೆಯಲ್ಲಿ ಕನ್ನಡ-ಇಂಗ್ಲಿಶ್ ಪದಸುಟ್ಟುಗೆಯನ್ನು (ಉಟossಚಿಡಿಥಿ) ಕೊಡಲಾಗಿದೆ. ಇಂಗ್ಲಿಶ್ ಪದಗಳಿಗೆ ಸಮನಾದ ಕನ್ನಡ ಪದಗಳು ಯಾವುವಿವೆ ಎಂಬುದನ್ನು ಹುಡುಕುವವರಿಗೆ ಮತ್ತು ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದ್ದೇ ಆದ ಪದಗಳನ್ನು ಹೊಸದಾಗಿ ಉಂಟುಮಾಡಬೇಕೆಂದು ಬಯಸುವವರಿಗೆ ಈ ಪದನೆರಕೆ ಒತ್ತಾಸೆಯಾಗಲಿ ಎಂಬುದು ನಮ್ಮ ಹಾರಯ್ಕೆ. viii


ix ಈ ಪದನೆರಕೆಯನ್ನು ತಯಾರಿಸುವಲ್ಲಿ ನಮಗೆ ಹಲವು ರೀತಿಯ ಸಲಹೆಗಳನ್ನಿತ್ತಿರುವ ಶ್ರೀ ಹೆಗ್ಗೆರೆ ರಾಜ್, ಬಾ.ರಾ.ಕಿರಣ್, ಶ್ರೀಮತಿ ಬಾರತಿ ಬಟ್, ಮತ್ತು ಹೊನಲು.ನೆಟ್(hoಟಿಚಿಟu.ಟಿeಣ)ನ ತಂಡದವರನ್ನು, ಇದನ್ನು ಮಿನ್ನಣಿಗೊಳಿಸಿದ (ಆಖಿP ಕೆಲಸ ಮಾಡಿದ) ಶ್ರೀ ಶ್ರೀದರ್ ಅವರನ್ನು, ಇದನ್ನು ಅಂದವಾಗಿ ಅಚ್ಚುಮಾಡಿದ ಲಕ್ಶ್ಮೀ ಮುದ್ರಣಾಲಯದ ಶ್ರೀ ಕೆ. ಎಸ್. ಮಂಜು ಅವರನ್ನು, ಅಚ್ಚುಮಾಡಿಸುವಲ್ಲಿ ಹಣದ ಬೆಂಬಲವಿತ್ತ ಹೊನಲು ತಂಡದವರನ್ನು, ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ನವಕರ್ನಾಟಕ ಪ್ರಕಾಶನದ ಶ್ರೀ ರಾಜಾರಾಮ್ ಅವರನ್ನು ಇಲ್ಲಿ ನೆನಪಿಸಬಯಸುತ್ತೇವೆ. ಮುಂಗರವಳ್ಳಿ, ಸಾಗರ ಡಿ. ಎನ್. ಶಂಕರ ಬಟ್ ಆಗಸ್್ಟ 1, 2015 ಯೋ. ಬರತ್ ಕುಮಾರ್ ವಿವೇಕ್ ಶಂಕರ್


x


1 a little ಪ ನಸು (ನಸು ಮಾಸಿದ ರೆಕ್ಕೆ, ನಸುಗತ್ತಲೆ, ನಸುನಗೆ), ಇಳಿ (ಇಳಿಯಶ್ಟಾದರೂ ಕೊಡಿ), ಏನಿಕೆ, ಕೊಂಚ (ಕೊಂಚ ಹೊತ್ತಾಯಿತು), ಕೀಟು, ತುಸು (ಅವನು ತುಸು ಹೊತ್ತು ಮಾತನಾಡದೆ ಕುಳಿತಿದ್ದ; ತುಸುನಗು) abacinate ಎ ಮಿಂಚುಗುರುಡಿಸು (ಸೆರೆಯಾಳುಗಳನ್ನು ಮಿಂಚುಗುರುಡಿಸಲಾಯಿತು), ಹೊಳಪುಗುರುಡಿಸು abacination ಹೆ ಮಿಂಚುಗುರುಡು (ಸೆರೆಪಾರುಗ ಸೆರೆಯಾಳುಗಳಿಗೆ ಮಿಂಚುಗುರುಡಿನ ಮುಯ್ಪು ಕೊಟ್ಟ), ಹೊಳಪುಗುರುಡು abacus ಹೆ ಎಣ್ಣುಪಟ್ಟಿ (ಆವತ್ತಿನ ಪಡಪನ್ನು ಲೆಕ್ಕಹಾಕಲು ಅವನು ಎಣ್ಣುಪಟ್ಟಿ ಬಳಸುತ್ತಾನೆ) abandon ಎ 1 ತೊಲಗು (ಅವನು ಯಾವಾಗ ತೊಲಗಿ ಹೋಗುತ್ತಾನೆ?) 2 ನೀಗು (ಕೊಟ್ಟ ಮಾತನ್ನು ನೀಗಿದ; ನೀಗಾಡು), ಬಿಟ್ಟುಕೊಡು, ಕಯ್ಬಿಡು, ಕಳೆ, ತೊರೆ (ಇವರು ಎಲ್ಲವನ್ನೂ ತೊರೆದು ಮಂಜುಬೆಟ್ಟಕ್ಕೆ ಹೋದವರು) ಹೆ ತೊರೆತ, ನೀಗಿಕೆ abandoned ಪ ಅಂಕೆತಪ್ಪಿದ (ಮಂದಿಯ ಅಂಕೆತಪ್ಪಿದ ಹಲವು ನಾಯಿಗಳು ಕಾಡಿನಲ್ಲಿ ತಿರುಗಾಡುತ್ತಿವೆ), ಹಿಡಿತವಿಲ್ಲದ, ಕಾಡು abandoning ಹೆ ತೊರವಿ, ತೊರೆತ abarticulation ಹೆ ಜಾರುಕೀಲು (ಕೀಲೆಣ್ಣೆ ಹಾಕಿದರೆ ಜಾರುಕೀಲು ಮಾಯುತ್ತದೆ; ಆತನಿಗೆ ಆಟವಾಡುವಾಗ ಬಿದ್ದು ಜಾರುಕೀಲು ಆಗಿದೆ) abashed ಪ ಮದಿಪುಕೆಟ್ಟ, ಗಲಿಬಿಲಿಗೊಂಡ, ನಾಚಿದ abate ಎ ಕುಗ್ಗು (ನೆರೆ ಕುಗ್ಗಲು ಸುರುವಾಗಿದೆ), ಕುಂದು, ತಗ್ಗು abattoir ಹೆ ಕೊಲ್ಲುಮನೆ (ಮುದಿ ಹಸುಗಳನ್ನು ಆತ ಕೊಲ್ಲುಮನೆಗೆ ಕೊಂಡುಹೋಗುತ್ತಿದ್ದಾನೆ) abbey ಹೆ ಬಿಡುಗಮನೆ (ಎದುರಿಗೆ ಕಾಣಿಸುವುದು ಈ ಊರಿನ ಬಿಡುಗಮನೆ) abbot ಹೆ ಮೇಲ್ಬಿಡುಗ (ಕಿರಿಯ ಬಿಡುಗರಿಗೆ ತಿಳುವಳಿಕೆ ನೀಡಿ ಬೆಳೆಸಲು ಮೇಲ್ಬಿಡುಗನೊಬ್ಬ ಇರುತ್ತಾನೆ) abbreviate ಎ ಕಿರಿದುಮಾಡು, ಅಡಕಮಾಡು (ನಿಮ್ಮ ಬರಹವನ್ನು ಅಡಕಮಾಡಿ ಕೊಡಿ) abbreviation ಹೆ ಅಡಕಮೆ (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಹೆಸರಿನ ಅಡಕಮೆ ಕುವೆಂಪು; ಈ ಬರಹದಲ್ಲಿ ಬಳಸಿರುವ ಅಡಕಮೆಗಳ ಬಿಡಿಸುವಿಕೆಯನ್ನು ಹೊತ್ತಗೆಯ ಕೊನೆಯಲ್ಲಿ ಕೊಡಲಾಗಿದೆ) abdicate ಎ ತೊರೆ (ಅರಸು ಗದ್ದುಗೆಯನ್ನು ತೊರೆದು ಕಾಡಿಗೆ ನಡೆದ) abdomen ಹೆ ಹೊಟ್ಟೆ (ಹೊಟ್ಟೆನೋವು; ಹೊಟ್ಟೆಬರು) abduct ಎ ಹಾರಿಸು (ಅವರ ಮಕ್ಕಳನ್ನು ಯಾರೋ ಹಾರಿಸಿಕೊಂಡು ಹೋಗಿದ್ದಾರೆ), ಎತ್ತಿಹಾಕು, ಎಗರಿಸು abductor ಹೆ ಹಾರಿಸುಗ (ಹಾರಿಸುಗರು ತುಂಬ ಬಿಡುಬೆಲೆಯನ್ನು ಕೇಳುತ್ತಿದ್ದಾರೆ) aberrate ಎ ಪಾಟಿಗೆಡು (ನಾವು ತಿಳಿಸಿದ ಹೊಲಬಿನಿಂದ ಅವರು ಪಾಟಿಗೆಟ್ಟಿದ್ದಾರೆ) aberration ಹೆ ತಪ್ಪುಬಳಕೆ, ಹಳಿತಪ್ಪಿಕೆ, ಪಾಟಿಗೇಡು abet ಎ ಒತ್ತಾಸೆ ಕೊಡು (ಕಳವಿನಲ್ಲಿ ಅವನಿಗೆ ಒತ್ತಾಸೆ ಕೊಟ್ಟವರು ಯಾರು?) abettor ಹೆ ಒಡಸೆರಗ (ಆತನ ಕೊಲೆಯಲ್ಲಿ ಇವನೂ ಒಬ್ಬ ಒಡಸೆರಗನಾಗಿದ್ದ) abeyance ಹೆ ತಡೆಹಿಡಿಕೆ (ಕಟ್ಟಳೆಯ ತಡೆಹಿಡಿಕೆಗಾಗಿ ಇವರು ಒತ್ತಾಯಿಸುತ್ತಿದ್ದಾರೆ), ಹಿಂದಿಡುಗೆ abhor ಎ ಹೇಸು (ಆತ ಯಾವುದಕ್ಕೂ ಹೇಸದವನು), ಕಿಸುರಿಸು abhorrent ಪ ಹೇಸಿಕೆಯ (ಹೇಸಿಕೆಯ ಕೆಲಸ), ಚಿಟ್ಟು- ಹಿಡಿವ, ರೋಸಿಹೋಗುವ abide ಎ 1 ಒಪ್ಪು (ಒಪ್ಪಿನಡೆ) 2 ಅಳಿಯದಿರು, ಅಳಿಯದುಳಿ (ಅದೊಂದು ನೆನಪು ಆತನಲ್ಲಿ ಅಳಿಯ- ದುಳಿದಿದೆ) abiding ಪ ಬಾಳುವ (ಬಾಳುವ ನಂಬಿಕೆ), ಅಳಿಯ- ದುಳಿಯುವ ability ಹೆ ಬಲ್ಮೆ (ಆಟದ ಬಲ್ಮೆ), ಆರ್ಮೆ, ಅಳವಿಕೆ ability ಹೆ 1 ಅಳವು (ಈ ಕೆಲಸವನ್ನು ಮಾಡುವ ಅಳವು ಆತನಲ್ಲಿದೆ), ಬಲ್ಲತನ 2 ಜಾಣ್ಮೆ, ಅರಿವು, ಬದ್ದು A A


2 abiogenesis ಹೆ ಉಸಿರಿಲಹುಟ್ಟು (ಹಲವು ಬಿಲಿಯನ್ ಏಡುಗಳ ಹಿಂದೆಯೇ ಉಸಿರಿಲಹುಟ್ಟು ನಡೆದಿರಬೇಕು) abject ಪ ಕಕ್ಕೆಟ್ಟ, ಕಡುಕೆಟ್ಟ (ಈ ಮಕ್ಕಳು ಕಡುಕೆಟ್ಟ ಬಡತನದಲ್ಲಿ ಬಾಳನ್ನು ನಡೆಸುತ್ತಿದ್ದಾರೆ) abjuct ಪ ಮದಿಪುಕೆಡಿಸುವ (ಮದಿಪುಕೆಡಿಸುವ ಬಡತನ), ಕೆಚ್ಚಿಲ್ಲದ (ಕೆಚ್ಚಿಲ್ಲದ ನಡವಳಿಕೆ) abjure ಎ ಆಣೆಯಿಡು, ಸೂರುಳಿಸು (ಯಾವತ್ತೂ ಈ ಮಾತಿಗೆ ತಪ್ಪುವುದಿಲ್ಲವೆಂದು ಸೂರುಳಿಸಿದ) ablaze ಪ ದಗದಗನೆ ಉರಿಯುವ (ದಗದಗನೆ ಉರಿಯುವ ಕಟ್ಟಡದ ಹತ್ತಿರ ಯಾರೂ ಹೋಗಲಾರರು) able ಎ ತೀರು (ಅದು ನಿನ್ನಿಂದ ತೀರದ ಕೆಲಸ), ಬಲ್ (ಮಾಡಬಲ್ಲೆ), ಆರು (ಕೊಡಲಾರೆ; ಹೋಗಲಾರೆ; ಆರದವನು), ಅರಿ (ಮಾಡಲರಿಯದ ಹುಡುಗ), ಅಮ್ಮು (ಮಾಡಲಮ್ಮೆ) ಪ ಬಲ್ಲ (ಮಾಡಬಲ್ಲ, ತಿನ್ನಬಲ್ಲ) able ಹೆ ಗಟ್ಟಿಗ, ಗಟ್ಟಿಗಿತ್ತಿ, ಬಲ್ಲ, ಬಲ್ಲಿದ, ಜಾಣ abnegation ಹೆ ತೊರೆತ, ನೀಗಿಕೆ abnormal ಪ ಓಜೆತಪ್ಪಿದ, ಎಂದಿನದಲ್ಲದ (ಈ ಮಗುವಿ- ನಲ್ಲಿ ಎಂದಿನದಲ್ಲದ ಬೆಳವಣಿಗೆ ಕಾಣಿಸುತ್ತಿದೆ), ಹದುಳತಪ್ಪುವ, ಕಟ್ಟಲೆತಪ್ಪುವ abnormality ಹೆ ಓಜೆತಪ್ಪಿಕೆ (ಆತನಲ್ಲಿ ಹುಟ್ಟಿನಿಂದಲೇ ಒಂದು ಓಜೆತಪ್ಪಿಕೆ ಮೂಡಿಬಂದಿತ್ತು) abode ಹೆ ನಿಲುವು (ಈ ಮಕ್ಕಳ ನಿಲುವೆಲ್ಲಿದೆಯೋ ತಿಳಿಯದು), ಮನೆ, ನೆಲೆ (ನೆಲೆಯಿಲ್ಲದವರು), ಬೀಡು (ಬೀಡುಬಿಡು; ನೆಲೆವೀಡು), ಪಟ್ಟಿಗೆ (ಮಸಣವಟ್ಟಿಗೆ; ಅರವಟ್ಟಿಗೆ), ಹಟ್ಟಿ (ಹಟ್ಟಿಗೆ), ಇಕ್ಕೆ (ಆತನ ಇಕ್ಕೆ ಕಾಡಿನಲ್ಲಿ), ಗರುಡಿ (ನಾವೆಲ್ಲ ಒಂದೇ ಗರುಡಿಯಲ್ಲಿ ಓದಿದವರು), ಗೀಬು abolish ಎ ನೀಗು, ನೀಗಾಡು (ಆತನ ಆಳ್ವಿಕೆಯನ್ನು ನೀಗಾಡಬೇಕಿದೆ), ಅಳಿಸು, ಕೊನೆಗಾಣಿಸು abolition ಹೆ ನೀಗಾಣಿಕೆ, ಕೊನೆಗಾಣಿಕೆ (ಎಳೆಮದುವೆಗಳ ಕೊನೆಗಾಣಿಕೆ ಇನ್ನೂ ನಡೆದಿಲ್ಲ) abominable ಪ ಹೇಸಿಗೆಯ (ಆ ಸೆರೆಮನೆಯಲ್ಲಿ ಸೆರೆಯಾಳುಗಳನ್ನು ನಡೆಸಿಕೊಳ್ಳುವ ಬಗೆ ಹೇಸಿಗೆಯ- zÁVzÉ) abominate ಎ ಹಗೆಮಾಡು, ಕಿಸುರಿಸು, ಕಂಡರಾಗದಿರು (ಆಕೆಗೆ ಬೆಕ್ಕುಗಳನ್ನು ಕಂಡರಾಗುವುದಿಲ್ಲ) aboriginal ಪ ಬುಡಕಟ್ಟಿನ (ಆಕೆ ಒಂದು ಬುಡಕಟ್ಟಿನ ಜನರ ನುಡಿಯನ್ನು ಕಲಿಯಬೇಕೆಂದಿದ್ದಾಳೆ) ಹೆ ಬುಡಕಟ್ಟಿನ ಮಂದಿ abort ಎ ಮಯ್ಯಿಳಿಸು, ಬಸುರಿಳಿಸು (ಮಗು ಕೊರೆಯುಳ್ಳು- ದೆಂದು ಗೊತ್ತಾದುದರಿಂದ ಆಕೆಗೆ ಬಸುರಿಳಿಸಬೇಕಾ- ಯಿತು) abortion ಹೆ ಮಯ್ಯಿಳಿತ (ಆಕೆಗೆ ಅಯ್ದನೇ ತಿಂಗಳಲ್ಲಿ ಮಯ್ಯಿಳಿತವುಂಟಾಯಿತು), ಬಸಿರಿಳಿತ abortionist ಹೆ ಬಸಿರಿಳಿಸುಗ (ಆಕೆ ಯಾರಿಗೂ ತಿಳಿಯದ ಹಾಗೆ ಬಸಿರಿಳಿಸುಗನಲ್ಲಿಗೆ ಹೋಗಿದ್ದಳು) abortive ಪ ಗೆಲ್ಲದ, ತೇರದ, ತೇರ್ಗಡೆಯಾಗದ, ಪಡಪು ದೊರಕದ abound ಎ ಆರು, ತೀವು (ತೀವಿದೊಡ್ಡೋಲಗ), ಚಳೆ, ತುಂಬು (ತುಂಬಿರು; ತುಂಬಿತುಳುಕು) above ಪ ಮೇಗೆ (ಮೇಗುಸಿರು), ಮೇಲು (ಮೇಲುಗಡೆ; ಮೇಲುಕಾಲುವೆ; ಮೇಲುಗೆಲಸ; ಮೇಲುಹೊದಿಕೆ), ಮೇಲೆ (ಮೇಲೆತ್ತು; ಮೇಲೆಬರು; ಮೇಲೇಳು) abrade ಎ ಕೆರೆ (ನೆಲಕ್ಕೆ ಹಿಡಿದ ಕೆಸರನ್ನು ಕೆರೆದು ತೆಗೆದ), ಕಿರುಕು, ಉಜ್ಜು abrasion ಹೆ 1 ಕೆರೆತ, ಉಜ್ಜಿಕೆ 2 ಉಜ್ಜುಗಾಯ (ಬಂಡಿಯಿಂದ ಕೆಳಗೆ ಬಿದ್ದವನಿಗೆ ಉಜ್ಜುಗಾಯ- ವಾಗಿತ್ತು) abrasive ಪ 1 ಒರಟು (ಒರಟು ಬಟ್ಟೆ) 2 ಕನಿಕರವಿಲ್ಲದ, ಬಿರುಸು (ಬಿರುಸು ನುಡಿ) abreast ಪ 1 ಒಟ್ಟೊಟ್ಟಿಗೆ (ಇಬ್ಬರೂ ಒಟ್ಟೊಟ್ಟಿಗೆ ಬಂದರು) 2 ಇಂದಿನರಿವು abridge ಎ ಅಡಕಮಾಡು, ಅಡಕಗೊಳಿಸು (ನಿಮ್ಮ ಕತೆಯನ್ನು ತುಸು ಅಡಕಗೊಳಿಸಬೇಕು), ಕುಗ್ಗಿಸು, ದಾಟುಮಾಡು abroad ಪ ಹೊರನಾಡಿನಲ್ಲಿ (ಅವರು ಇದುವರೆಗೆ ಹೊರನಾಡಿನಲ್ಲಿದ್ದರು) abiogenesis abroad A


3 abrogate ಎ ನೀಗು, ತೆಗೆದುಹಾಕು (ಈ ಕಟ್ಟಲೆಯನ್ನು ತೆಗೆದುಹಾಕುವುದೊಳ್ಳೆಯದು) abruptly ಪ ಇದ್ದಕ್ಕಿದ್ದಂತೆ (ಆತ ಇದ್ದಕ್ಕಿದ್ದಂತೆ ಹೊರಟು ಹೋದ), ಒಮ್ಮೆಗೇ, ಒಮ್ಮೆಲೇ abscess ಹೆ ಕುರು (ಬೆನ್ನಲ್ಲೆದ್ದ ಕುರು), ಹುಣ್ಣು abscond ಎ ತಲೆಮರೆಸಿಕೊಳ್ಳು, ತಪ್ಪಿಸಿಕೊಳ್ಳು absence ಹೆ ಇಲ್ಲದಿರುವಿಕೆ, ಇಲ್ಲಮೆ (ಅವನ ಇಲ್ಲಮೆ- ಯನ್ನು ಯಾರೂ ಗಮನಿಸಲಿಲ್ಲ), ಕೊರತೆ, ಗೊಟ್ಟು (ನೀರಿಗೆ ಗೊಟ್ಟಾಯಿತು), ತಗುಸಿ absent ಎ ತಪ್ಪಿಸು, ಇಲ್ಲದಿರು, ಬಾರದಿರು, ಹೋಗದಿರು, ಪ ಇಲ್ಲದ absentee ಹೆ ಉಳಿಯಾಳು (ಉಳಿಯಾಳುಗಳು ತಪ್ಪು ಕೊಡಬೇಕಾಗುತ್ತದೆ) absent-minded ಹೆ ಮರೆಗುಳಿ (ಅವನು ಮರೆಗುಳಿ ಯಾಗಿರುವುದೇ ನಿನ್ನೆ ಬಾರದಿರಲು ದೂಸರಿರಬೇಕು) absolute ಹೆ 1 ಇಡುಕು (ಹೊತ್ತು ಮತ್ತು ಎಡೆಗಳು ಇಡುಕಲ್ಲವೆಂದು ಅರಿಗರು ತೋರಿಸಿಕೊಟ್ಟಿದ್ದಾರೆ) 2 ಕಡೆನುಡಿ, ಕಡೆಯುಲಿ, ಕಡುನಿಲುವು, ಇಡಿನಿಲುವು, ಕಡೆಕಟ್ಟಲೆ ಪ ಗೊತ್ತುಪಾಡಿಲ್ಲದ, ಇಡಿ, ನೆರೆ (ಮೊರೆಮನೆ ಇವರಿಗೆ ನೆರೆ ಹಕ್ಕುಗಳನ್ನು ನೀಡಿದೆ) absolution ಹೆ 1 ಬಿಡುಗಡೆ (ಇವರಿಗೆ ಸೆರೆಮನೆಯಿಂದ ಬಿಡುಗಡೆಯಾಗಿದೆ) 2 ದೂರು ಹಿಂತೆಗೆತ, ತಪ್ಪುಕಳೆತ absolve ಎ ದೂರು ಹಿಂತೆಗೆ, ತಪ್ಪುಕಳೆ absorb ಎ 1 ಹೀರು (ಮಳೆಯಿಂದ ಸೋರಿದ ನೀರನ್ನೆಲ್ಲ ನೆಲ ಹೀರಿದೆ) 2 ತಿಳಿ (ಅವನು ಹೇಳಿದ್ದನ್ನೆಲ್ಲ ತಿಳಿದು- ಕೊಂಡಿದ್ದಾನೆ) 3 ಮಯ್ಮರೆ (ಆಕೆ ತನ್ನ ಕೆಲಸದಲ್ಲಿ ಮಯ್ಮರೆತಿದ್ದಳು) absorbent ಹೆ ಹೀರುಕ (ಕಡತದ ಮೇಲೆ ಬಿದ್ದ ಮಸಿ- ಯನ್ನು ಹೀರುಕದಿಂದ ಒತ್ತಿ ತೆಗೆದಳು) absorption ಹೆ ಹೀರಿಕೆ (ಕೆಂಪು ನೆಲದಲ್ಲಿ ಮಳೆನೀರಿನ ಹೀರಿಕೆ ಬೇಗ ನಡೆಯುತ್ತದೆ), ಸೀಪಿಕೆ (ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹಾಕಿಡಲು ಸೀಪಿಕೆ ಮಾಡುವ ಕಾಗದವನ್ನು ಬಳಸಲಾಗುತ್ತದೆ) abstain ಎ ದೂರವಿಡು (ಅವನು ಹೊಗೆ ಬತ್ತಿಯನ್ನು ದೂರವಿಟ್ಟಿದ್ದಾನೆ), ದೂರವಿರು (ಅವನು ಕುಡಿತದಿಂದ ದೂರವಿದ್ದಾನೆ), ಸೇರದಿರು abstinence ಹೆ ತಪ್ಪಿಕೆ (ಆತನ ಕುಡಿತದ ತಪ್ಪಿಕೆ ಒಂದು ಸಾಲಿನಿಂದ ನಡೆಯುತ್ತಿದೆ) abstract ಹೆ 1 ತಿರುಳು (ಬರಹದ ಮೊದಲಿಗೆ ಅದರ ತಿರುಳನ್ನು ಕೊಡಲಾಗಿದೆ) 2 ನೆನಸು (ಕನಸಿನಲ್ಲಿ ಕಾಣಿಸುವ ಹುಲಿ ಒಂದು ನೆನಸಿನ ಪುರುಳು) ಪ 1 ಬಳಕೆಯೆಣಿಸದ (ಬಳಕೆಯೆಣಿಸದ ಅರಿಮೆ; ಬಳಕೆ- ಯೆಣಿಸದ ಕುರಿಪು) 2 ತಿಳಿಯದ, ಅರಿಯದ (ಯಾರಿಗೂ ಅರಿಯದ ವಿಶಯ) abstracted ಪ ಗಮನಿಸದ (ಯಾವುದನ್ನೂ ಗಮನಿಸದ ನೋಟ) abstruse ಪ ಹುದುಗಿದ (ಆತನ ಮಾತುಗಳಲ್ಲಿ ಹುದುಗಿದ ಹುರುಳಿದೆ), ಮುಚ್ಚುಮರೆಯ absurd ಪ ನಗೆಗೀಡಾದ, ನಗೆಪಾಟಲಾದ (ಆತನ ತಲೆಯಲ್ಲಿ ಏನೇನೋ ನಗೆಪಾಟಲಾದ ಅನಿಸಿಕೆಗಳು ಮೂಡುತ್ತಿರು- ತ್ತವೆ) abundance ಹೆ ಮಿಗಿತೆ (ನಮ್ಮೂರಲ್ಲೀಗ ಹಾಲಿನ ಮಿಗಿತೆಯಿದೆ), ವೆಗ್ಗಳಿಕೆ, ವೆಗ್ಗಳ (ಹುಟ್ಟಳವಿನ ವೆಗ್ಗಳ), ಹೆಗ್ಗಳ (ಹೆಗ್ಗಳವಾಗು) abundant ಪ ಉಕ್ಕಂದ (ಕೆರೆಯಲ್ಲಿ ಉಕ್ಕಂದ ನೀರಿದೆ), ಕರ (ಕರ ಚನ್ನಾಗಿದೆ), ಬಿಜ್ಜೆ (ಬಿಜ್ಜೆ ಮೇಲೇರು), ಹೇರಳ (ಅವನ ಹತ್ತಿರ ಹೇರಳ ಹಣ ಇದೆ), ಆರು (ನೂರಾರು ಮಂದಿ) abuse ಎ ಬಯ್ಯು (ಬಯ್ದಾಟ), ಜರೆ (ಇತರರನ್ನೆಲ್ಲ ಜರೆದು ತನ್ನನ್ನು ಹೊಗಳಿಕೊಳ್ಳುತ್ತಿದ್ದಾನೆ), ಜಬ್ಬರಿಸು, ತೆಗಳು (ಆತನದು ತೆಗಳುವ ನುಡಿ; ತೆಗಳಿಕೆ) ಹೆ 1 ಕೊಂಡೆ (ಆತನ ಕೊಂಡೆಯನ್ನು ಕೇಳಲಾಗದು; ಕೊಂಡಿಸು), ತಿಟ್ಟು, ಉಟ್ಟಿ (ಉಟ್ಟಿ ಮಾತು), ಚುನ್ನ (ಚುನ್ನವಾಡು; ಊಳಿಗದವರ ಕೈಯಲ್ಲಿ ನನ್ನನ್ನು ಚುನ್ನವಾಡಿಸಿದಳು; ಚುನ್ನಮಾಡು), ಪರೆ, ಬಯ್ಗಳು (ಕೆಟ್ಟ ಬಯ್ಗಳು) 2 ಕೀಳ್ಬಳಕೆ (ಅವರು ಮದ್ದನ್ನು ಕೀಳ್ಬಳಕೆ ಮಾಡುತ್ತಿದ್ದಾರೆ), ತಪ್ಪುಬಳಕೆ abut ಎ ನೆರೆಯಲ್ಲಿರು (ದೊಡ್ಡದೊಂದು ಕಾಡು ನಮ್ಮೂರ ನೆರೆಯಲ್ಲಿದೆ) abrogate abut A


4 abyss ಹೆ ಅಡಿಯಿಲ್ಲದ ಗುಂಡಿ (ಮನೆಯ ಹತ್ತಿರ ಅಡಿಯಿಲ್ಲದ ಗುಂಡಿಯೊಂದು ಬಾಯಿ ತೆರೆದು ಕುಳಿತಿದೆ), ಹೆಗ್ಗುಂಡಿ (ಈ ಹೆಗ್ಗುಂಡಿಗೆ ಹಾರಿ ಹಲವರು ತಂಗೊಲೆ ಮಾಡಿಕೊಂಡಿದ್ದಾರೆ) academic ಪ 1 ಕಲಿಕೆಯ (ನೀವು ನಮ್ಮ ಕಲಿಕೆಯ ಸುದ್ದಿಗೆ ಬರಬೇಡಿ), ಬರಿಕಲಿಕೆಯ (ಅವರು ಬರಿ- ಕಲಿಕೆಯ ಕೆಲಸದಲ್ಲಿ ಮುಂದಿದ್ದಾರೆ) 2 ಕಲಿಕೆವೀಡಿನ (ಅವನು ಕಲಿಕೆವೀಡಿನ ಕಲಿಕೆಯನ್ನು ಬಳಕೆಗೆ ತರುವಲ್ಲಿ ಸೋತಿದ್ದಾನೆ) academy ಹೆ 1 ಪೆರ್ಕಲಿಮನೆ (ಅವನೊಂದು ಪೆರ್ಕಲಿ- ಮನೆಯಲ್ಲಿ ಅರಕೆ ನಡೆಸುತ್ತಿದ್ದಾನೆ) 2 ಕಲಿಗಕೂಟ acarpous ಪ ಹಣ್ಣುಬಿಡದ accede ಎ ಒಪ್ಪು (ಆತ ನಿಮ್ಮ ಕಟ್ಟುಪಾಡುಗಳಿಗೆಲ್ಲ ಒಪ್ಪಿದ್ದಾನೆ) accelerate ಎ ಚುರುಕಾಗು (ಆತನ ನಡೆ ಚುರುಕಾಯಿತು) acceleration ಹೆ ಉರುಬೇರಿಕೆ, ಒತ್ತರದೇರಿಕೆ, ಬಿರುಹೆಚ್ಚಿಕೆ (ಬಂಡಿಯ ಬಿರುಹೆಚ್ಚಿಕೆಯನ್ನು ಹಿಡಿತದಲ್ಲಿರಿಸಿಕೊಳ್ಳ- ಬೇಕು), ಬಿರುಸೇರಿಕೆ accelerator ಹೆ ಉರುಬುಹೆಚ್ಚುಕ, ಬಿರುಹೆಚ್ಚುಕ (ಬಂಡಿ ಓಡಿಸುವಾಗ ಅವನ ಮುಂಗಾಲು ಯಾವಾಗಲೂ ಬಿರುಹೆಚ್ಚುಕದ ಮೇಲೆಯೇ ಇರುತ್ತದೆ), ಬಿರುವಂಕೆ accent ಹೆ 1 ಒತ್ತು (ಈ ಸೊಲ್ಲಿನಲ್ಲಿ ಕೊನೆಯ ಪದದ ಮೇಲೆ ಒತ್ತು ಬಿದ್ದಿದೆ) 2 ಮೇಲ್ಬರಿಗೆ (ತೆರೆಯುಲಿಯ ಬರಿಗೆಯೊಂದಿಗೆ ಮೇಲ್ಬರಿಗೆಯನ್ನು ಬಳಸಿ ಅದನ್ನು ಉಲಿಯುವುದು ಹೇಗೆ ಎಂಬುದನ್ನು ತಿಳಿಸಲಾಗುತ್ತದೆ) ಎ ಒತ್ತು ಕೊಡು, ಒತ್ತಿಹೇಳು (ಕೊನೆಯ ಮಾತನ್ನು ಒತ್ತಿಹೇಳಿದ್ದಾನೆ) accept ಎ ಒಪ್ಪಿಕೊಳ್ಳು, ಇಂಬುಗೆಯ್ಯು, ಒಡಂಬಡು, ಕಯ್ಕೊಳ್ಳು acceptable ಪ ಒಪ್ಪಿಗೆಯಾಗುವ (ಎಲ್ಲರಿಗೂ ಒಪ್ಪಿಗೆ- ಯಾಗುವ ಹೇಳಿಕೆ) acceptance ಹೆ ಒಪ್ಪಿಗೆ, ಕೊಳ್ಗೆ acceptor ಹೆ ಒಪ್ಪಿದವ, ಒಪ್ಪುಗ (ಒಪ್ಪುಗರನ್ನು ಅವರು ಮೊದಲು ಕರೆಸಿದ್ದಾರೆ) access ಹೆ 1 ದಾರಿ (ಈ ಕಟ್ಟಡಕ್ಕೆ ದಾರಿ ಹಿಂದಿನಿಂದ ಇದೆ), ಬಾಗಿಲು 2 ಬಳಸುಹಕ್ಕು, ಪುಗಿಲು (ನಮಗೆ ಈ ಬಾಗಿಲಿನಿಂದ ಒಳಗೆ ಹೋಗಲು ಪುಗಿಲಿಲ್ಲ) ಎ ಹುಗು, ಹೊಗು, ಒಳಸೇರು accessible ಪ ಪಡೆಯಬಲ್ಲ (ಸುಳುವಾಗಿ ಪಡೆಯಬಲ್ಲ ಗುರಿ), ಮುಟ್ಟಬಲ್ಲ, ತಲುಪಬಲ್ಲ (ಉಗಿಬಂಡಿಯಿಂದ ತಲುಪಬಲ್ಲ ಊರು) accessory ಹೆ 1 ನೆರಬಿಡಿ (ಈ ಆಟದ ಸರಕಿನ ನೆರಬಿಡಿ ಕೆಟ್ಟುಹೋಗಿದೆ) 2 ಮರೆಯೊತ್ತಾಸೆಗಾರ, ಮರೆಗೆಯ್ಯುಗ, ಮರೆನೆರವಿಗ, ತಪ್ಪುನೆರವಿಗ, ಸೆರಗುನೆರವಿಗ (ಈ ಕೊಲೆ- ಯಲ್ಲಿ ಇವನೇ ಸೆರಗುನೆರವಿಗನೆಂದು ಈಗ ತಿಳಿಯಿತು), ಒತ್ತಾಸೆಗಾರ (ಆತನ ಕೆಟ್ಟ ಕೆಲಸಗಳಿಗೆ ಈತ ಒತ್ತಾಸೆ- ಗಾರನಾಗಿದ್ದಾನೆ) accident ಹೆ 1 ಕೆಟ್ಟಾಗುಹ (ಇವತ್ತು ಏನಾದರೂ ಕೆಟ್ಟಾಗುಹ ನಡೆಯಲಿದೆ), ಕೇಡುಹ 2 ತೆರಹು (ಗೆಲ್ಲುವ ತೆರಹು), ಅಮಗ accidental ಪ ತೆರಹಿನ (ಅವನು ಗೆದ್ದುದು ಒಂದು ತೆರಹಿನ ಆಗುಹವಿರಬೇಕು) acclaim ಎ ಹೊಗಳು, ಕೊಂಡಾಡು acclamation ಹೆ ಹೊಗಳಿಕೆ, ಕೊಂಡಾಡಿಕೆ (ಅವರ ಕೊಂಡಾಡಿಕೆ ಹೆಚ್ಚಾಗಿ ಅವನು ನಾಚಿದ) acclimatization ಹೆ ನೆರೆಯೊಗ್ಗಿಕೆ (ಹೊರನಾಡಿನ ನೆರೆಯೊಗ್ಗಿಕೆ), ಒಗ್ಗಿಕೆ (ಅವನಿಗೆ ಆ ಊರು ಒಗ್ಗಿಕೆ- ಯಾಗಲು ಎರಡು ತಿಂಗಳು ಬೇಕಾಯಿತು) acclimatize ಎ ಒಗ್ಗು, ಒಗ್ಗಿಕೊಳ್ಳು, ಹೊಂದಿಕೊಳ್ಳು, ನೆರೆಯೊಗ್ಗು (ಆಟಗಾರರು ಸರಿಯಾಗಿ ನೆರೆಯೊಗ್ಗದಿದ್ದರೆ ಅವರಿಗೆ ಹೊರನಾಡಿನಲ್ಲಿ ಗೆಲ್ಲಲು ಬರುವುದಿಲ್ಲ) acclivity ಹೆ ಏರುವೋರೆ (ಈ ಬೆಟ್ಟದಲ್ಲಿ ಹಲವು ಏರು- ವೋರೆಗಳಿರುವುದರಿಂದ ಅವರು ಅದನ್ನು ಹತ್ತುವುದಕ್ಕೆ ಒಪ್ಪಲಿಲ್ಲ) accolade ಹೆ ಮೆಚ್ಚು (ಅವನಿಗೆ ಆಟದಲ್ಲಿ ಮೊದಲು ಬಂದುದಕ್ಕೆ ಮೆಚ್ಚು ದೊರೆತಿದೆ) accommodate ಎ 1 ತೆರಪುಗೊಡು, ಎಡೆಗೊಡು (ನಾನು ಈ ಕೋಣೆಯಲ್ಲಿ ಮೂರು ಮಂದಿಗೆ ಎಡೆ- ಗೊಡಬಲ್ಲೆ) 2 ಅಳವಡಿಸಿಕೊಳ್ಳು (ಮಕ್ಕಳಲ್ಲಿ ಮೂಡುವ ಹಲವು ಬಗೆಯ ಬಯಕೆಗಳನ್ನು ಅಳವಡಿಸಿಕೊಳ್ಳ- ಬೇಕಾಗಿದೆ) abyss accommodate A


5 accommodating ಪ ಅಳವಡಿಸಿಕೊಳ್ಳಬಲ್ಲ (ಇನ್ನೊಬ್ಬರ ಬಯಕೆಗಳನ್ನು ಅಳವಡಿಸಿಕೊಳ್ಳಬಲ್ಲ ಅಳವು ಆತನಲ್ಲಿದೆ) accommodation ಹೆ 1 ಹೊಂದಾಣಿಕೆ (ಅವರು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು) 2 ತಂಗು, ತಂಗುಮನೆ (ಇರುಳು ಉಳಿಯಲು ಇಲ್ಲಿ ಹತ್ತಿರವೇ ಒಂದು ತಂಗುಮನೆಯಿದೆ) accompaniment ಹೆ ಹಿಮ್ಮೇಳ (ಆತ ಹಿಮ್ಮೇಳದ ನೆರವಿಲ್ಲದೆ ಹಾಡುವುದಿಲ್ಲ) accompanist ಹೆ ಹಿಮ್ಮೇಳಗಾರ (ಹಿಮ್ಮೇಳಗಾರರು ಸಂಬಳದ ಕುರಿತಾಗಿ ಮಾತೆತ್ತಿದ್ದಾರೆ) accompany ಎ 1 ಒಡಹೋಗು (ಅವನು ತನ್ನಣ್ಣನ ಒಡಹೋಗಿದ್ದಾನೆ), ಒಡನಾಗು 2 ಒಡಬಾರಿಸು (ಒಡಬಾರಿಸುವ ಹಾಡು ತಂಡಗಳು) accomplice ಹೆ ಒತ್ತಾಸೆಗಾರ, ಮರೆನೆರವಿಗ, ಸೆರಗು- ನೆರವಿಗ (ಹಣಮನೆಯ ದೋಚಿಕೆಯಲ್ಲಿ ಸೆರಗು- ನೆರವಿಗನಾಗಿದ್ದನೆಂದು ಆತನನ್ನೂ ಸೆರೆಮನೆಗೆ ತಳ್ಳಿದ್ದಾರೆ) accomplish ಎ 1 ಕಯ್ಗೂಡು (ಅವನ ಬಯಕೆ ಕಯ್ಗೂಡಿತು), ಕಡೆಸಲ್ಲು, ನೆರವೇರು, ಈಡೇರು 2 ಈಡೇರಿಸು (ಆಕೆಯ ಕೊನೆಯ ಬಯಕೆಯನ್ನು ಈಡೇರಿಸಬೇಕು) accomplished ಪ 1 ಚೆಚ್ಚರಿಕೆಯ (ಆತ ತುಂಬಾ ಚೆಚ್ಚರಿಕೆಯ ಹಾಡುಗಾರನೆಂದು ಎಲ್ಲರೂ ಹೊಗಳುತ್ತಾರೆ), ಕೆಯ್ತದ 2 ನಿಂದರಿಕೆಯ (ಹೊಗೆಬತ್ತಿ ಸೇದುವುದರಿಂದ ಏಡಿಹುಣ್ಣು ಉಂಟಾಗುತ್ತದೆಯೆಂಬುದು ನಿಂದರಿಕೆಯ ¢l) accomplishment ಹೆ ನೆರವಣಿಗೆ (ನುಡಿಯರಿಮೆಯಲ್ಲಿ ಆತನ ನೆರವಣಿಗೆ ಚಿಕ್ಕದೇನಲ್ಲ) accord ಹೆ 1 ಒಪ್ಪಂದ (ನೀರಿನ ಬಳಕೆಯ ಕುರಿತಾಗಿ ಅವರೊಂದು ಒಪ್ಪಂದಕ್ಕೆ ಬಂದಿದ್ದಾರೆ) 2 ಮನ್ನಣೆ (ಈ ಏಡಿನಲ್ಲಿ ನಮಗೂ ಮನ್ನಣೆ ಸಿಗಬಹುದು) ಎ ಒಪ್ಪಂದ ನಡೆಸು accordant ಪ ಹೊಂದಿಕೊಳ್ಳುವ, ಒಪ್ಪುವ (ಕಾಡಿನಲ್ಲಿರುವ ಈ ತಂಗು ಎಲ್ಲರಿಗೂ ಒಪ್ಪುವ ತಾಣವಾಗಿದೆ) accordantly ಪ ಹೊಂದುಕೊಳ್ಳುವಂತೆ, ಒಪ್ಪುವಂತೆ (ಈ ತಂಗನ್ನು ಎಲ್ಲರಿಗೂ ಒಪ್ಪುವಂತೆ ಕಟ್ಟಿಸಿದ್ದಾರೆ) accost ಎ ಬಳಿಸಾರು (ನಾನೇ ಆತನ ಬಳಿಸಾರಿ ಮಾತ- ನಾಡಿಸಿದೆ) account ಹೆ 1 ಹೇಳಿಕೆ, ಕೊಗೆತ (ಆವತ್ತಿನ ಹೋರಾಟದ ಕೊಗೆತವೊಂದನ್ನು ಕೊಡಬೇಕಾಗಿದೆ) 2 ಲೆಕ್ಕ (ಇವತ್ತಿನ ಮುಟ್ಟುವಳಿಯ ಲೆಕ್ಕ ಕೊಡಿ; ಈ ಹಣಮನೆಯಲ್ಲಿ ಅವನದೂ ಒಂದು ಲೆಕ್ಕ ಇದೆ), ಎಣಿಕೆಹೊತ್ತಿಗೆ, ಎಣ್ಪೊತ್ತಿಗೆ (ಈ ಹಣಮನೆಯಲ್ಲಿ ನಾನೊಂದು ಎಣ್ಪೊತ್ತಿಗೆ ತೆರೆದಿದ್ದೇನೆ) ಎ 1 ಲೆಕ್ಕಕೊಡು 2 ಹೊಣೆಯಾಗು accountable ಹೆ 1 ಹೊಣೆಗಾರ (ಇದಕ್ಕೆ ನಾನು ಹೊಣೆಗಾರನಲ್ಲ) 2 ಹೊಣೆಗಾರಿಕೆ (ಈ ಕಟ್ಟಡದ ಹೊಣೆಗಾರಿಕೆ ಯಾರಲ್ಲಿದೆ?) accountant ಹೆ ಎಣಿಕೆಗಾರ (ಅವನಿಗೆ ಒಂದು ಹಣ- ಮನೆಯಲ್ಲಿ ಎಣಿಕೆಗಾರನ ಕೆಲಸ ಸಿಕ್ಕಿದೆ), ಲೆಕ್ಕಿಗ accredit ಎ 1 ಮೆಚ್ಚುಕೊಡು (ಅಶ್ಟೆಲ್ಲಾ ಮಾಡಿದ್ದರೂ ಆತನ ಕೆಲಸಕ್ಕೆ ಮೆಚ್ಚುಕೊಟ್ಟವರಿಲ್ಲ) 2 ಒಪ್ಪಿಗೆಕೊಡು (ಅವರ ಕಲಿಮನೆಗೆ ಒಪ್ಪಿಗೆ ಕೊಡಲಾಗಿದೆ) accretion ಹೆ ಬೆಳವಣಿಗೆ, ಹೆಚ್ಚುಗೆ (ಬಾಗಿಲ ಹಲಿಗೆಯ ಮೇಲೆ ಸೇರಿಕೊಂಡು ಬಂದಿದ್ದ ಬಣ್ಣದ ಹೆಚ್ಚುಗೆಯನ್ನು ಕೆರೆದು ತೆಗೆಯಬೇಕಾಯಿತು), ಸೇರಿಕೆ accrue ಎ ಸಲ್ಲು (ಆತನಿಗೆ ಸಂದ ಹಣ ಎಶ್ಟು?; ಸಂದಾಯವಾಗು), ಕೂಡಿಬರು, ಒದಗು, ದಕ್ಕು (ದಕ್ಕಿ ಹೋಗು; ದಕ್ಕುಹಿಡಿ; ದಕ್ಕಬೇಕಾದ ಹಣ) accumulate ಎ 1 ಒಟ್ಟುಗೂಡಿಸು, ಕೂಡಿಹಾಕು (ಆತ ಹಣವನ್ನು ಕೂಡಿಹಾಕುತ್ತಾ ಇದ್ದಾನೆ) 2 ಹೆಚ್ಚು (ಆತನ ಸಾಲಗಳು ಹೆಚ್ಚುತ್ತಾ ಇವೆ) accumulation ಹೆ ನೆರಕೆ (ಆತನಲ್ಲಿ ತಿಳಿವಿನ ನೆರಕೆ ತುಂಬ ಇದೆ), ಒಟ್ಟುಗೂಡಿಕೆ accumulator ಹೆ ನೆರಕ, ಮಿಂಚುನೆರಕ, ಮಿನ್ನೆರಕ (ಎಣ್ಣುಕಗಳಲ್ಲಿ ಮಿನ್ನೆರಕಗಳು ಆಗಾಗ ಬಳಕೆಯಾಗು- ತ್ತಿರುತ್ತವೆ) accupuncture ಹೆ ಸೂಜಿಮಾಂಜುಗೆ (ಅವರು ಸೂಜಿ- ಮಾಂಜುಗೆ ಪಡೆಯಲು ದಿನಾಲೂ ಹೊಳಲಿಗೆ ಹೋಗುತ್ತಾರೆ), ದಬ್ಬಳಮಾಂಜುಗೆ accommodating accupuncture A


6 accuracy ಹೆ ಸರಿಮೆ (ಆತನ ಹೇಳಿಕೆಯ ಸರಿಮೆಯ ಕುರಿತು ನನಗೆ ಅಯ್ಬಿದೆ), ನನ್ನಿಯಳತೆ, ಸಯ್ಯಳತೆ, ಸರಿಯಳತೆ (ಈ ಅಂಗಡಿಯಲ್ಲಿ ದೊರೆಯುವ ಸರಕುಗಳ ತೂಕ ಸರಿಯಳತೆಯದಾಗಿರುತ್ತದೆ) accurate ಪ ಸರಿಯಾದ (ಸರಿಯಾದ ಹೇಳಿಕೆ), ತಪ್ಪಿಲ್ಲದ accursed ಪ ಉಸುರಿಟ್ಟ (ಈ ಉಸುರಿಟ್ಟ ಕಟ್ಟಡಕ್ಕೆ ಯಾರೂ ಬಾಡಿಗೆಗೆ ಬರುವುದಿಲ್ಲ) accusation ಹೆ ತಪ್ಪುಹೊರಿಕೆ (ತನ್ನ ಮೇಲಿನ ತಪ್ಪು- ಹೊರಿಕೆಯಿಂದ ಆತನಿಗೆ ಹೊರಬರಲಾಗಲಿಲ್ಲ) accusative ಹೆ ಈಡು ಪತ್ತುಗೆ (ಕನ್ನಡದಲ್ಲಿ ಅನ್ನು (ಮನೆಯನ್ನು) ಎಂಬುದು ಈಡು ಪತ್ತುಗೆಯ ಒಟ್ಟು) accuse ಎ ತಪ್ಪುಹೊರಿಸು (ಅವನು ಎಲ್ಲರ ಮೇಲೂ ತಪ್ಪುಹೊರಿಸುತ್ತಿದ್ದಾನೆ), ತೆಗಳು accustom ಎ ಬಳಕೆಗೆ ಬರು (ಅವನಿಗೆ ಕಲಿಗಮನೆಯ ಊಟ ಬಳಕೆಗೆ ಬರುತ್ತಿದೆ) ace ಹೆ ಎಕ್ಕ (ಅವನು ಈ ಎಲೆಯಾಟದಲ್ಲಿ ಎಕ್ಕ, ಅರಸು ಮತ್ತು ಅರಸಿ ಎಲೆಗಳನ್ನು ಪಡೆದಿದ್ದಾನೆ) acentric ಪ ನಡುವಿಲ್ಲದ (ಇದೊಂದು ನಡುವಿಲ್ಲದ ತುಂಡು), ನಡುವಲ್ಲದ, ಬದಿನಡುವು acerbic ಪ ಬಿರು (ಬಿರುಬಿಸಿಲು), ಬಿರುಸು (ಬಿರುಸುನುಡಿ) ache ಎ ನೋಯು, ಕುಟ್ಟು, ಚಿಟಗುಟ್ಟು (ತಲೆ ಚಿಟಗುಟ್ಟು- ತ್ತಿದೆ), ಕೊಡೆ (ಈ ಕುರು ತುಂಬಾ ಕೊಡೆಯುತ್ತಿದೆ) ಹೆ ಕೊಡೆತ (ಸಂದುಗಳ ಕೊಡೆತ), ನೋವು (ತಲೆ- ನೋವು), ಸಿಡಿತ (ತಲೆ ಸಿಡಿತ) achieve ಎ ಗುರಿಮುಟ್ಟು (ಅಶ್ಟೆಲ್ಲ ತೊಡಕುಗಳು ಎದುರಾಗಿದ್ದರೂ ಕೊನೆಗೂ ಆಕೆ ಗುರಿ ಮುಟ್ಟಿದ್ದಾಳೆ) achievement ಹೆ ಗೆಲವು (ಗೆಲವು ಪಡೆ), ಪಡೆಪು achlorohydria ಹೆ ಹುಳಿಕೊರತೆ (ಅವರಿಗೆ ಹುಳಿಕೊರತೆ ಇರುವುದರಿಂದ ಹೊಟ್ಟೆನೋವು ಕಾಣಿಸಿಕೊಂಡಿತು) achromatic ಪ ಹೊಗರಿಲ್ಲದ (ಹೊಗರಿಲ್ಲದ ಕನ್ನಡಕಕ್ಕೆ ಬೆಲೆ ಕಡಿಮೆ), ಹೊಗರಳಿಸುವ achromatic ಹೆ ಹೊಗರಳಿಕ (ಕೆಂಬಣ್ಣದ ಬೆಳಕು ಹೊಗರಳಿಕವನ್ನು ಹಾದು ಬಂದಾಗ ಅದರ ಬಣ್ಣ ಇಲ್ಲವಾಗುತ್ತದೆ) acid ಹೆ ಹುಳಿ (ಹುಳಿ ಹೆಚ್ಚಾದರೆ ಹೊಟ್ಟೆಯಲ್ಲಿ ಗಾಳಿ ಸೇರಿದಂತೆ ಅನಿಸುತ್ತದೆ) acid ಹೆ ಉರಿಮಳೆ (ಉರಿಮಳೆಯಿಂದ ಬೆಳೆಗಳೆಲ್ಲ ಹಾಳಾದುವು), ಹುಳಿಮಳೆ acid ಹೆ ಹುಳಿಮಣ್ಣು (ಈ ಹುಳಿಮಣ್ಣಿನಲ್ಲಿ ಏನೂ ಬೆಳೆಯುವುದಿಲ್ಲ) acidic ಪ ಹುಳಿಯ, ಹುಳಿ (ಹುಳಿ ನೀರು) acidify ಎ ಹುಳಿಯಾಗಿಸು, ಹುಳಿಸು (ಈ ನೀರನ್ನು ಅವರು ಹುಳಿಸಿದ್ದಾರೆ) acidimeter ಹೆ ಹುಳಿಯಳಕ (ಹುಳಿತ ಎಶ್ಟಿದೆಯೆಂಬು- ದನ್ನು ಹುಳಿಯಳಕ ತಿಳಿಸುತ್ತದೆ) acidity ಹೆ ಹುಳಿತ (ಆತನಿಗೆ ಹುಳಿತದ ತೊಂದರೆಯಿದೆ) acidosis ಹೆ ನೆತ್ತರಹುಳಿ (ಅವರು ನೆತ್ತರಹುಳಿಯಿಂದ ಒದ್ದಾಡುತ್ತಿದ್ದಾರೆ) acknowledge ಎ 1 ಒಪ್ಪಿಕೊಳ್ಳು (ತನ್ನದೂ ತಪ್ಪಿರ- ಬಹುದೆಂದು ಅತ ಒಪ್ಪಿಕೊಂಡ) 2 ತಲುಪರಿತ ತಿಳಿಸು 3 ಗುರುತಿಸು (ನಿಮ್ಮ ಅಳವನ್ನು ಅವರು ಗುರುತಿಸಿದ್ದಾರೆ) acknowledgement ಹೆ ತಲುಪರಿತ (ಓಲೆ ಕಳುಹಿಸಿ- ದುದಕ್ಕೆ ತಲುಪರಿತ ಬಂದಿದೆ), ತಲುಪೊಪ್ಪಿಗೆ aclinic ಹೆ ನೆಟ್ಟಸೆಳೆಗಲ್ಲಿನ ಗೆರೆ (ಅವರು ಈ ನಾಡುತಿಟ್ಟದ ಮೇಲೆ ನೆಟ್ಟಸೆಳೆಗಲ್ಲಿನ ಗೆರೆಯನ್ನು ಬರೆದರು) acne ಹೆ ಮೊಡವೆ (ಆಕೆಯ ಮೋರೆಯ ತುಂಬಾ ಮೊಡವೆಗಳೆದ್ದಿವೆ), ಬೊಕ್ಕೆ acolyte ಹೆ ಹಿಂಬಾಲಕ, ನೆರವಿಗ aconite ಹೆ ತೋಳನಂಜೀ ಗಿಡ, ನಂಜುಬಟ್ಟಲು (ನಂಜು- ಬಟ್ಟಲು ಗಿಡ) acotyledon ಹೆ ತನೆಯೆಲೆಯಿಲಿ (ತನೆಯೆಲೆಯಿಲಿ ಗಿಡ- ವನ್ನು ಇಲ್ಲಿ ಬೆಳೆಸಲಾಗುತ್ತಿದೆ) acoustic ಪ ಆಲಿಕೆಯ (ಆಲಿಕೆಯ ತೊಂದರೆ), ಕೇಳು- ವಿಕೆಯ acoustics ಹೆ ಸೂಳರಿಮೆ, ಸದ್ದರಿಮೆ (ಇವರು ಸದ್ದರಿಮೆ- ಯಲ್ಲಿ ಮೇಲ್ಮಟ್ಟದ ಓದನ್ನು ನಡೆಸುತ್ತಿದ್ದಾರೆ) acquaint ಎ 1 ತಿಳಿಸು 2 ಗುರುತುಮಾಡು (ನಾನು ಆತನನ್ನು ಮೊನ್ನೆಯೇ ಗುರುತುಮಾಡಿಕೊಂಡಿದ್ದೆ) accuracy acquaint A


7 acquaintance ಹೆ ಗುರುತು (ಗುರುತಿನವರು; ನನಗವನ ಗುರುತಿಲ್ಲ) acquiesce ಎ ಒಪ್ಪು, ಒಪ್ಪಿಗೆ ನೀಡು acquire ಎ ಪಡೆ, ಗಳಿಸು (ತುಂಬಾ ಹಣ ಗಳಿಸಿದ್ದಾನೆ), ಹೊಂದು acquisition ಹೆ ಪಡಪು, ಗಳಿಕೆ (ಅವರ ಇತ್ತೀಚೆಗಿನ ಗಳಿಕೆಗಳು) acquisition ಹೆ ನುಡಿಯಳವಡಿಕೆ (ಈ ಆಳ್ವಿಕೆಯವರು ಹೊರಗಿನ ನುಡಿಯಳವಡಿಕೆಯಲ್ಲಿ ತೊಡಗಿದ್ದಾರೆ) acquit ಎ 1 ನಡೆದುಕೊಳ್ಳು (ಕೂಟದಲ್ಲಿ ನೀವು ನಡೆದು- ಕೊಂಡುದು ಸರಿಯಾಗಿಲ್ಲ) 2 ಬಿಡುಗಡೆಯಾಗು, ಬಿಡುಗಡೆಮಾಡು acquitt ಹೆ ಬಿಡುಗಡೆ (ಅವನ ಬಿಡುಗಡೆ ಯಾವಾಗ?) acrid ಪ ಕನರು (ಈ ಹಣ್ಣಿಗೆ ಕನರು ಸವಿಯಿದೆ), ಕಸು (ಕಸುಗಾಯಿ) acrimony ಹೆ ಮುನಿಸು, ಕನಲ್ಕೆ acroarthritis ಹೆ ಕಯ್ಕಾಲುಕೀಲುರಿತ acrobat ಹೆ ದೊಂಬ (ಅಲ್ಲಿ ಒಬ್ಬ ದೊಂಬನ ಆಟ ನಡೆಯುತ್ತಿತ್ತು) acrodant ಹೆ ಮೇಲ್ವಲ್ಲ (ಕೆಲವು ಜಾತಿಯ ಹಲ್ಲಿಗಳಲ್ಲಿ ಮೇಲ್ವಲ್ಲ ಉಸುರಿಗಳಿರುತ್ತವೆ) acrodermatitis ಹೆ ಕಯ್ಯಡಿಯ ಉರಿತ (ಕಯ್ಯಡಿಯ ಉರಿತದಿಂದ ತುಂಬಾ ನವೆ ಉಂಟಾಗುತ್ತದೆ) acrogen ಹೆ ತಾಳುಗಿಡ acronycal ಪ ಬಯ್ಗುಟ್ಟುವ (ಬಯ್ಗುಟ್ಟುವ ಅರಿಲು), ಇರುಳಿನ, ಇಳಿಹೊತ್ತಿನ acronym ಹೆ ಅಡಕನುಡಿ, ಅಡಕಪದ (ಖಂಒ ಎಂಬುದು ಅಡಕಪದಕ್ಕೆ ಒಂದು ಎತ್ತುಗೆ) acropathology ಹೆ ಕಯ್ಕಾಲುಬೇನೆಯರಿಮೆ (ಮಾಂಜು- ಗೆಯಲ್ಲಿ ಕಯ್ಕಾಲುಬೇನೆಯರಿಮೆ ಒಂದು ಅರಿದಾದ ಅರಿಮೆಯಾಗಿದೆ) acropetal ಪ ಅಡಿಯೋರಣದ (ಈ ಗಿಡವೂ ಅಡಿ- ಯೋರಣದ ಗುಣಗಳನ್ನು ತೋರುತ್ತಿದೆ), ಮುಡಿಗೆ ಬೆಳೆವ acrophobia ಹೆ ಎತ್ತರದಂಜಿಕೆ (ಅವರಿಗೆ ಎತ್ತರದಂಜಿಕೆ ಇರುವುದರಿಂದ ಬೆಟ್ಟವನ್ನು ಹತ್ತಲು ಹಿಂಜರಿದರು), ಎತ್ತರದಳುಕು acropolis ಹೆ ತುದಿವೊಳಲು (ಈ ತುದಿವೊಳಲನ್ನು ಕಾಯಲು ಹಲವು ಕಾವಲುಗಾರರಿದ್ದಾರೆ), ಮೇರು- ವೊಳಲು across ಪ ಅಡ್ಡ (ಅಡ್ಡಬರು, ಅಡ್ಡಬೀಳು) act ಎ ಉರವಣಿಸು (ಉರವಣಿಸಿ ಮಾತನಾಡು) act ಎ ದುಡುಕು (ಅವನದೆಲ್ಲ ದುಡುಕಿ ಮಾಡುವ ಕೆಲಸ; ದುಡುಕುತನ) act ಎ 1 ಮಾಡು 2 ನಡೆದುಕೊಳ್ಳು (ಮೊದಲು ದೊಡ್ಡವನ ಹಾಗೆ ನಡೆದುಕೊಳ್ಳಲು ಕಲಿ) 3 ಪಾಂಗು ನಡೆಸು (ನೀವು ಹೇಳಿದ ಪಾಂಗನ್ನು ನಡೆಸಲು ಅವನಿನ್ನೂ ದೊಡ್ಡವನಾಗಬೇಕು) ಹೆ 1 ಮಾಡುಗೆ, ಗೆಯ್ತ 2ಆಟ actinology ಹೆ ಬೆಳಕಿರ್ಪರಿಮೆ (ಅವರು ಬೆಳಕಿರ್ಪರಿಮೆಯಲ್ಲಿ ಹಲವು ಏಡಿನಿಂದ ಕೆಲಸ ಮಾಡಿದ್ದಾರೆ) action ಹೆ 1 ನೆಗಳ್ತೆ, ಎಸಕ (ಆತನ ಎಸಕ ನಮಗೆ ಒಪ್ಪಿಗೆಯಾಗಿಲ್ಲ) 2 ಕಟ್ಟಲೆ (ಅವನ ಮೇಲೆ ಒಂದು ಕಳ್ಳತನದ ಕಟ್ಟಲೆಯನ್ನು ಹಾಕಿದ್ದಾರೆ) actionable ಪ ಕಟ್ಟಲೆಹಾಕಬಲ್ಲ (ನೀವು ಕಟ್ಟಲೆಹಾಕಬಲ್ಲ ತಪ್ಪನ್ನು ಮಾಡಿದ್ದೀರಿ) activate ಎ ಚುರುಕುಗೊಳಿಸು (ಒಂದು ಹಳೆಯ ಕಡತ- ವನ್ನು ಅವರು ಚುರುಕುಗೊಳಿಸಿದ್ದಾರೆ), ಚೂಟಿಗೊಳಿಸು active ಪ ಚುರುಕು (ಈ ಚುರುಕಾದ ಮಗು ಯಾವಾಗಲೂ ಕೀಟಲೆ ಮಾಡುತ್ತಿರುತ್ತದೆ), ಚೂಟಿ active ಹೆ ಚೂಟಿನಟ್ಟುಗಳು (ಹುಬ್ಬಿನ ಚೂಟಿನಟ್ಟುಗಳನ್ನು ಒಂದು ಹೊಲಬಿನಲ್ಲಿ ಒತ್ತಿದಾಗ ನೋವು ಕಡಿಮೆಯಾಗುತ್ತದೆ) activist ಹೆ ಮಾರೊಲವಿಗ (ಸೇರುವೆಯಲ್ಲಿ ಮಾರ್ಪಾಡು ನಡೆಯಲೇಬೇಕೆಂದು ಒತ್ತಾಯಿಸುವ ಮಾರೊಲವಿಗರು ಇಲ್ಲಿ ಹಲವು ಮಂದಿ ಇದ್ದಾರೆ) acquaintance activist A


8 activity ಹೆ ಚೂಟಿತನ (ಚಿಕ್ಕ ಮಕ್ಕಳ ಚೂಟಿತನಕ್ಕೆ ಕೊನೆಯೇ ಇಲ್ಲ) actor ಹೆ ಪಾಂಗುಗಾರ, ಪಾಂಗೆತ್ತುಗ, ಆಡಿಗ (ಅವರು ತುಂಬಾ ಹೆಸರಾಂತ ಆಡಿಗರಾಗಿದ್ದರು) actress ಹೆ ಆಡಿಗಿತ್ತಿ (ಹೆಸರಾಂತ ಆಡಿಗಿತ್ತಿ), ಪಾಂಗುಗಾರ್ತಿ actual ಪ ನನಸಿನ (ನೆನೆಸಿದಂತೆಲ್ಲ ನನಸಿನ ಬಾಳಿನಲ್ಲಿ ನಡೆಯುವುದಿಲ್ಲ), ನನ್ನಿಯ, ಇರುವ (ಇರುವ ಮಂದಿಯನ್ನು ಬರಹೇಳಿ) actuality ಹೆ ನನಸು (ನನಸಿನಲ್ಲಿ ಕಂಡುದೇ ಕನಸಿನಲ್ಲಿ ಇನ್ನೊಂದು ಬಗೆಯಲ್ಲಿ ಕಾಣಿಸುತ್ತದೆ) actualize ಎ ನನಸಾಗಿಸು (ತನ್ನ ಕನಸನ್ನು ನನಸಾಗಿಸು- ವುದೇ ಆತನ ಗುರಿಯಾಗಿದೆ) actuate ಎ ಹೊರಡಿಸು (ಬಂಡಿಯನ್ನು ಹೊರಡಿಸು), Nr¸ÀÄ acuity ಹೆ ಚುರುಕುತನ (ಅವನು ತುಂಬಾ ಚುರುಕುತನ- ದಿಂದ ತನ್ನ ನೆಲೆಯನ್ನು ತಿಳಿಸಿಕೊಟ್ಟನು) acumen ಹೆ ಚುರುಕು ತಿಬ್ಬಳಿ (ಆತನ ಚುರುಕು ತಿಬ್ಬಳಿ ಒಮ್ಮೆಯೂ ಆತನಿಗೆ ಕಯ್ಕೊಡಲಿಲ್ಲ) acute ಪ 1 ಮೊನಚು (ಅವನ ಗಮನ ತುಂಬಾ ಮೊನಚಾಗಿರುತ್ತದೆ) 2 ಅರಿದು (ಅರಿದು ಕುತ್ತದಿಂದ ಅವರು ನರಳುತ್ತಿದ್ದಾರೆ) ಹೆ ಮುಳ್ಳು acute ಹೆ ಹರಿತಕೋನ (ಮುಕ್ಕೋನದಲ್ಲಿ ಎರಡು ಕೋನಗಳು ಹರಿತಕೋನವಾಗಿರುತ್ತವೆ), ಚೂಪುಕೋನ, ಚಿಕ್ಕಕೋನ, ಹರಿತ ಬಾಗು, ಹರಿತೋರೆ acuteness ಹೆ ಮೋಪು (ಗಾಯದ ಮೋಪು) acyclic ಪ ಸುತ್ತಿಲ್ಲದ (ಒಗ್ಗೊಂಟಿನ ಸುತ್ತಿಲ್ಲದ ಇಟ್ಟಳಗಳನ್ನು ಎಣ್ಣುಕದರಿಮೆಯಲ್ಲಿ ಕಲಿಯುತ್ತಾರೆ) ad ಪ ಕೊನೆಯಿಲ್ಲದ (ಕೊನೆಯಿಲ್ಲದ ಎಣಿಕೆ) adage ಹೆ ಗಾದೆಮಾತು, ನಾಣ್ಣುಡಿ adamant ಪ ಪಟ್ಟುಹಿಡಿವ, ಮೊಂಡು (ಮೊಂಡು ಹುಡುಗ; ಮೊಂಡುಹಿಡಿ) ಂಜಚಿm’s ಚಿಠಿಠಿಟe ಹೆ ಗಂಟಲಗಡ್ಡೆ (ಗಂಡಸರಲ್ಲಿ ಗಂಟಲಗಡ್ಡೆ ಚೆನ್ನಾಗಿ ಕಾಣಿಸುತ್ತದೆ), ಗಂಟಲಸೇಬು, ಮೆಟ್ರೆಸೇಬು adapt ಎ 1 ಅಳವಡಿಸಿಕೊಳ್ಳು (ಇದನ್ನು ನಮ್ಮ ಕೆಲಸಕ್ಕೆ ಬರುವಂತೆ ಅಳವಡಿಸಿಕೊಳ್ಳಬೇಕು) 2 ಹೊಂದಿಕೊಳ್ಳು (ಅವನು ಎಂತಹ ಊರಿಗೆ ಹೋದರೂ ಹೊಂದಿ- ಕೊಳ್ಳುತ್ತಾನೆ), ಒಗ್ಗಿಕೊಳ್ಳು, ಸರಿಹೊಂದು adaptable ಪ ಅಳವಡಿಸಬಲ್ಲ, ಹೊಂದಿಕೊಳ್ಳಬಲ್ಲ adaptation ಹೆ 1 ಅಳವಡಿಕೆ (ಈ ಆಡುಗಬ್ಬ ಒಂದು ಕಿರುಕತೆಯ ಅಳವಡಿಕೆಯಾಗಿದೆ) 2 ಹೊಂದಿಕೆ, ಹೊಂದಾಣಿಕೆ adaption ಹೆ ಹೊಂದಿಕೆ, ಹೊಂದಾಣಿಕೆ adaptor ಹೆ ತೆತ್ತುಕ (ಇವೆರಡನ್ನು ಒಟ್ಟು ಸೇರಿಸಲು ಒಂದು ತೆತ್ತುಕ ಬೇಕಾಗುತ್ತದೆ) add ಎ 1 ಕೂಡಿಸು (ನಾಲ್ಕಕ್ಕೆ ಮೂರನ್ನು ಕೂಡಿಸು) 2 ಸೇರಿಸು (ಈ ಎರಡು ತುಂಡುಗಳನ್ನು ಒಟ್ಟು ಸೇರಿಸಿ) addend ಹೆ ಕೂಡುಕ (2+2 = 4 ಇದರಲ್ಲಿ 2 ಎಂಬುದು ಒಂದು ಕೂಡುಕ) addendum ಹೆ ಜೋಡಿಕೆ, ಸೇರಿಕೆ (ಹೊತ್ತಗೆಯ ಕೊನೆಯಲ್ಲಿ ಎರಡು ಸೇರಿಕೆಗಳಿವೆ) addict ಎ ಅಳುಪು (ಅವರು ಹೊಗೆಸೊಪ್ಪಿಗೆ ಅಳುಪಿದ್ದಾರೆ) ಹೆ ಅಳುಪುಗ (ಹೆಂಡದ ಅಳುಪುಗರಿಗೆ ಇಲ್ಲಿ ಆರಯ್ಕೆ ನಡೆಸಲಾಗುತ್ತದೆ), ಗೀಳಿಗ, ಗೀಳಾಳು (ಅವನು ಮದ್ದು- ಗಳ ಗೀಳಾಳಾಗಿದ್ದಾನೆ) addicted ಪ ಅಳುಪಿದ (ಮದ್ದಿಗೆ ಅಳುಪಿದ ಮಂದಿ ಏನು ಮಾಡಲೂ ನಾಚುವುದಿಲ್ಲ), ತೆವಲು ಹಿಡಿದ addiction ಹೆ ಗೀಳು (ಇವರಿಗೆ ಕುಡಿತದ ಗೀಳಿದೆ), ಅಳುಪಿಕೆ, ತೆವಲು (ಏನು ಮಾಡಿದರೂ ಹೆಂಡದ ತೆವಲು ಅವನನ್ನು ಬಿಡುವುದಿಲ್ಲ; ತೆವಲುಗಾರ), ಕೆಟ್ಟೊಲವು addition ಹೆ ಸೇರ್ಪಡೆ (ಅವರ ಬಳಗಕ್ಕೆ ಇನ್ನೂ ಮೂವರ ಸೇರ್ಪಡೆಯಾಗಿದೆ) additional ಪ ಹೆಚ್ಚುವರಿ (ಇವತ್ತು ನಾಲ್ಕು ಹೆಚ್ಚುವರಿ ಕೂಲಿಗಳನ್ನು ಕರೆಸಬೇಕಾಗಿದೆ) additive ಹೆ ಸೇರಿಕೆ (ಈ ಹಣ್ಣಿನ ಮುರಬ್ಬದಲ್ಲಿ ಸೇರಿಕೆಗಳು ಯಾವುವೂ ಇಲ್ಲ) addle ಎ 1 ಕೊಳೆ (ಮೊಟ್ಟೆ ಕೊಳೆತಿದೆ), ಕೆಡು 2 ತತ್ತರಗೊಳಿಸು activity addle A


9 address ಎ 1 ಮಾತನಾಡು 2 ಒಕ್ಕಣೆ ಬರೆ (ನೀವು ಒಕ್ಕಣೆ ಬರೆದುದು ಸರಿಯಾಗಿಲ್ಲ) 3 ನೋಡಿಕೊಳ್ಳು (ನಾವು ಈ ತೊಡಕನ್ನು ಮೊದಲಿಗೆ ನೋಡಿಕೊಳ್ಳಬೇಕು) ಹೆ 1 ಒಕ್ಕಣೆ, ಎಡೆಗುರ್ತು, ಮನೆಗುರ್ತು, ತಾಣಗುರ್ತು (ಈ ಓಲೆಯ ಮೇಲಿರುವ ತಾಣಗುರ್ತು ಸರಿಯಾಗಿಲ್ಲ- ದುದರಿಂದ ಅದನ್ನು ಅಂಚೆಯಾಳು ತಪ್ಪಾಗಿ ಬೇರೆ ಮನೆಗೆ ತಲುಪಿಸಿದ್ದಾನೆ) 2 ಪೆರ್ಮಾತು (ಇಂದು ಅವರ ಹೆದ್ದಿರುಳಿನ ಪೆರ್ಮಾತಿದೆ) adduce ಹೆ 1 ಎತ್ತುಗೆ ಕೊಡು (ತನ್ನ ಹೇಳಿಕೆಗೆ ನೆರವಾಗುವಂತೆ ಅವನು ಹಲವು ಎತ್ತುಗೆಗಳನ್ನೂ ಕೊಟ್ಟಿದ್ದಾನೆ) 2 ಸಲುವು ಕೊಡು adept ಹೆ ಅರಿಗ, ಚೆಚ್ಚರಿಗ ಪ ಚೆಚ್ಚರಿಕೆಯ (ಚೆಚ್ಚರಿಕೆಯ ಬೇಟೆಗಾರ), ಕೆಯ್ತದ adequate ಪ 1 ಸಾಕಶ್ಟು (ಸಾಕಶ್ಟು ಹಣ ತಂದಿದ್ದೇನೆ) 2 ತಕ್ಕ (ಆಕೆ ಅವನಿಗೆ ತಕ್ಕ ಮಡದಿ) adhere ಎ 1 ಹತ್ತು, ಅಂಟು, ಒಟ್ಟು 2 ಒಮ್ಮು (ಕಟ್ಟಲೆಗಳಿಗೆ ಒಮ್ಮಿ ನಡೆಯುವವರು) adherent ಹೆ ಬೆಂಬಲಿಗ ಪ ಅಂಟಿದ adhesion ಹೆ 1 ಅಂಟಿಕೆ, ಜಿಗಿಲಿಕೆ (ಇವೆರಡರ ಜಿಗಿಲಿಕೆ ಸರಿಯಾಗಬೇಕಿದ್ದರೆ ಬಿಸಿ ಮಾಡಬೇಕು) 2 ಬೆಂಬಲ adhesion ಹೆ 1 ಹೊಂದಾಣಿಕೆ (ಈ ಮನೆತನದಲ್ಲಿ ತುಂಬಾ ಹೊಂದಾಣಿಕೆ ಕಾಣಿಸುತ್ತದೆ) 2 ಅಂಟಿಕೆ (ಈ ವಸ್ತುವಿನಲ್ಲಿ ಅಂಟಿಕೆ ತುಂಬಾ ಇದೆ) adhesion ಹೆ ಅಂಟುಪಟ್ಟಿ (ಗಾಯದ ಮೇಲೆ ಅಂಟುಪಟ್ಟಿ ಹಚ್ಚಿದ್ದಾನೆ) adhesive ಹೆ ಅಂಟು (ಇದಕ್ಕೆ ಅಂಟು ಹಚ್ಚಿದ್ದು ಸಾಕಾಗಲಿಲ್ಲ) adiabatic ಪ ಸರಿಗಾವಿನ (ಕೆಲವು ಡೀಸಲ್ ಬಿಣಿಗೆಗಳಲ್ಲಿ ಸರಿಗಾವಿನ ಹಿಗ್ಗುವಿಕೆ ನಡೆಯುತ್ತದೆ), ಒರ್ಬಿಸುಪಿನ, ಕಾವ್ಗಾಪಿನ adieu ಹೆ ಬೀಳ್ಕೊಡುಗೆ (ಆತನ ಬೀಳ್ಕೊಡುಗೆಗೆ ನಾನೂ ಹೋಗಿದ್ದೆ) adjacent ಪ ಮಗ್ಗುಲಿನ (ಮಗ್ಗುಲಿನ ಗುಡಿಸಲು), ಒತ್ತಿನ (ಒತ್ತಿನ ಮನೆಯಲ್ಲಿ ಒಬ್ಬ ಮುದುಕಿ ಮತ್ತು ಅವಳ ಮೊಮ್ಮಗ ಇದ್ದಾರೆ) adjacent ಹೆ ಬದಿಕೋನ (ಈ ಎರಡು ಬದಿಕೋನಗಳ ಮೊತ್ತ 90 ಡಿಗ್ರಿ), ಮಗ್ಗಲುಕೋನ, ಪಕ್ಕಕೋನ, ನೆರೆಕೋನ adjective ಹೆ ಪರಿಚೆಪದ, ಹೆಸರುಪರಿಚೆ (ದೊಡ್ಡ ಎಂಬುದೊಂದು ಹೆಸರುಪರಿಚೆ) adjoin ಎ 1 ನೆರೆಯಾಗು (ನಮ್ಮ ಮನೆ ಅವರ ಮನೆಗೆ ನೆರೆಯಾಗಿದೆ) 2 ತಗಲಿಸು adjoining ಪ ನೆರೆ (ನೆರೆಮನೆ; ನೆರೆಯೂರು) adjoint ಹೆ ತಾಳೆಮಣೆ (ಅವರು ತಾಳೆಮಣೆಯ ಬಗ್ಗೆ ಈಗ ಓದುತ್ತಿದ್ದಾರೆ), ಹೋಲ್ಮಣೆ, ಹೊಂದಿಕೆಮಣೆ adjourn ಎ ಮುಂದೂಡು (ಇವತ್ತಿನ ಕೂಟವನ್ನು ನಾಳೆಗೆ ಮುಂದೂಡಲಾಗಿದೆ), ಮುಂದೆ ಹಾಕು adjournment ಹೆ ನಿಲುವಳಿ (ನಿಲುವಳಿ ಬೇಕೆಂದು ಎಲ್ಲರೂ ಬೊಬ್ಬಿರಿದರು), ಮುಂದೂಡಿಕೆ adjudge ಎ ತೀರ್ಪುಕೊಡು (ಆತ ತಪ್ಪುಗಾರನೆಂದು ತೀರ್ಪುಕೊಡಲಾಗಿದೆ) adjudicate ಎ 1 ತೀರ್ಪುಕೊಡು 2 ತೀರ್ಮಾನಿಸು adjunct ಹೆ 1 ಸೇರಿಕೆ (ಹೊತ್ತಗೆಯ ಕೊನೆಯಲ್ಲಿ ಎರಡು ಸೇರಿಕೆಗಳಿವೆ) 2 ಹಿನ್ನುಡಿತ (ಸೊಲ್ಲಿನ ಕೊನೆಯಲ್ಲಿ ಒಂದು ಹಿನ್ನುಡಿತವಿದೆ) adjure ಎ ಒತ್ತಾಯಿಸು (ಕೂಟಕ್ಕೆ ಬರಲೇ ಬೇಕೆಂದು ಒತ್ತಾಯಿಸಿದರು) adjust ಎ 1 ಸರಿಮಾಡು, ಸರಿಪಡಿಸು (ನಿಮ್ಮ ಬರಹವನ್ನು ತುಸು ಸರಿಪಡಿಸಿದ್ದೇನೆ), ಸರಿದೂಗಿಸು, ಹೊಂದಿಸು 2 ಹೊಂದಿಕೊಳ್ಳು (ಅವನಿನ್ನೂ ಈ ಊರಿಗೆ ಹೊಂದಿ- ಕೊಂಡಿಲ್ಲ) adjustment ಹೆ 1 ಸರಿಪಡಿಕೆ (ಇದರಲ್ಲಿ ಇನ್ನಶ್ಟು ಸರಿಪಡಿಕೆಗಳನ್ನು ನಡೆಸಬೇಕಿದೆ) 2 ಹೊಂದಾಣಿಕೆ, ಹೊಂದಿಕೆ administer ಎ 1 ಅಣಿಗೊಳಿಸು, ಸಾವಗಿಸು, ಏರ್ಪಡಿಸು 2 ಮದ್ದುಕೊಡು (ಅವನಿಗೆ ಹೊತ್ತಿಗೆ ಸರಿಯಾಗಿ ಮದ್ದುಕೊಡಲು ಒಬ್ಬ ಆರಯ್ಕೆಗಿತ್ತಿ ಇದ್ದಾಳೆ) administrate ಎ ಆಡಳಿತ ನಡೆಸು administration ಹೆ ಆಡಳಿತ (ಅವರ ಆಡಳಿತದಲ್ಲಿ ಬಡವರು ಇನ್ನಶ್ಟು ಬಡವರಾದರು) address administration A


10 administrator ಹೆ ಆಡಳಿತಗಾರ (ಇಲ್ಲಿಗೆ ಒಬ್ಬ ಹೊಸ ಆಡಳಿತಗಾರರು ಬರಲಿದ್ದಾರೆ) admirable ಪ ಮೆಚ್ಚತಕ್ಕ (ನೀವು ಮಾಡಿರುವುದು ಎಲ್ಲರೂ ಮೆಚ್ಚತಕ್ಕ ಕೆಲಸ) admire ಎ ಮೆಚ್ಚು (ಅವರು ನಿಮ್ಮ ಕೆಲಸವನ್ನು ಮೆಚ್ಚಿದ್ದಾರೆ; ಮೆಚ್ಚುಗೆ) admission ಹೆ 1 ಪೂಣ್ಕೆ (ಪೂಣ್ಕೆಗೆ ಮೊದಲು ನೀವು ಒಪ್ಪಿಗೆ ಪಡೆಯಬೇಕು) 2 ಸೇರಿಕೆ (ಆತನ ಮಗನಿಗೆ ಇನ್ನೂ ಕಲಿಮನೆಯಲ್ಲಿ ಸೇರಿಕೆಯಾಗಿಲ್ಲ) 3 ತಪ್ಪೊಪ್ಪಿಗೆ (ಬೆಳಗ್ಗಿನಿಂದಲೂ ಆತನ ತಪ್ಪೊಪ್ಪಿಗೆ ನಡೆಯುತ್ತಿದೆ) admit ಎ 1 ಪೂಣು, ಒಳಬಿಡು (ಅವರು ಒಬ್ಬೊಬ್ಬರನ್ನೇ ಒಳಬಿಡುತ್ತಿದ್ದಾರೆ) 2 ಸೇರಿಸು (ಕಲಿಮನೆಗೆ ಮಕ್ಕಳನ್ನು ನಾಳೆಯಿಂದ ಸೇರಿಸುತ್ತಾರೆ) 3 ಒಪ್ಪಿಕೊಳ್ಳು (ಅವನು ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ) admittance ಹೆ ಒಳಸೇರಿಕೆ, ಪೂಣ್ಕೆ admix ಎ ಕಲೆಸು (ಮಗು ಮಣ್ಣಿಗೆ ನೀರು ಹಾಕಿ ಕಲೆಸುತ್ತಿದೆ) admixture ಹೆ ಬೆರಕೆ, ಕಲೆತ (ಎರಡು ಬಣ್ಣದ ನೀರುಗಳ ಕಲೆತ ಇಲ್ಲಿ ನಡೆಯುತ್ತಿದೆ) admonish ಎ 1 ಜರೆ (ಯಾರ ಹತ್ತಿರವೂ ಹೇಳದೆ ಹೋದುದಕ್ಕೆ ಚನ್ನಾಗಿ ಜರೆದರು) 2 ಎಚ್ಚರಿಸು, ನೆನಪಿಸು ado ಹೆ ಗೊಂದಲ, ತೊಂದರೆ, ಗಡಿಬಿಡಿ (ಮಗಳು ಬಂದರೆ ಆಕೆ ಸುಮ್ಮಗೇ ಗಡಿಬಿಡಿ ಮಾಡುತ್ತಿರುತ್ತಾಳೆ) adolescence ಹೆ ಹದಿಹರೆಯ (ಹದಿಹರೆಯದ ಹುಡುಗರು ಸುಳುವಾಗಿ ಕೆಟ್ಟ ದಾರಿ ಹಿಡಿದುಬಿಡುತ್ತಾರೆ) adopt ಎ 1 ಸಾಕಪಡೆ (ತಮಗೆ ಮಕ್ಕಳಾಗುವುದಿಲ್ಲವೆಂದು ತಿಳಿದಿದುದರಿಂದ ಅವರೊಂದು ಮಗುವನ್ನು ಸಾಕ- ಪಡೆಯಬೇಕೆಂದಿದ್ದಾರೆ), ತೆಕ್ಕಿಸು (ಅವನು ತನ್ನ ತಮ್ಮನ ಮಗುವನ್ನು ತೆಕ್ಕಿಸುತ್ತಿದ್ದಾರೆ), ಮಗುವೊಪ್ಪು 2 ಆಯ್ಕೆ ಮಾಡು (ಆತ ನಡುದಾರಿಯನ್ನು ಆಯ್ಕೆ ಮಾಡಿದ), adopted ಹೆ ಕೊಳ್ಮಗ (ಆತ ನನ್ನ ಕೊಳ್ಮಗ; ಕೊಳ್ಮಗಳು), ಸಾಕುಮಗ adoption ಹೆ ತೆಕ್ಕಿಕೆ (ಈ ತಬ್ಬಲಿಯ ತೆಕ್ಕಿಕೆಯನ್ನು ಇವತ್ತು ಮಾಡಲಾಗುತ್ತದೆ), ಮಗುವೊಪ್ಪಿಗೆ adoration ಹೆ ಮೆಚ್ಚುಗೆ (ಅವನು ಎಲ್ಲರ ಮೆಚ್ಚುಗೆಯನ್ನೂ ಪಡೆದಿದ್ದ) adore ಎ ಅಳುಗು (ಅವನು ಆಕೆಯನ್ನು ಅಳುಗುತ್ತಾನೆ), ಮದಿಪುಕೊಡು adorn ಎ ಅಂದಗೊಳಿಸು (ಆಕೆ ಬರಲಿದ್ದಾಳೆಂದು ತನ್ನ ಕೋಣೆಯನ್ನು ಅಂದಗೊಳಿಸುತ್ತಿದ್ದಾನೆ) adrenaline ಹೆ ಕೆರಳುಸುರಿಗೆ (ಆಟಗಾರರು ಕೆರಳು- ಸುರಿಗೆಯ ಏರಿಕೆಯಿಂದ ಕೂಗಾಡುತ್ತಿದ್ದಾರೆ) adrift ಪ ನೆಲೆಯಿಲ್ಲದ (ನೆಲೆಯಿಲ್ಲದ ದೋಣಿ ಯಾವುದೋ ಒಂದು ನಡುಗುಡ್ಡೆಗೆ ತಲಪಿತು), ಅಲೆದಾಡುವ adroit ಪ ಕಯ್ಗಾರ (ಆತನ ಕಯ್ಗಾರ ಮಾರ್ನುಡಿಗಳು ಅವರ ಮೆಚ್ಚುಗೆಯನ್ನು ಕೊಡಿಸಿದುವು) ಹೆ ಹೊಲಬಿಗ adulation ಹೆ ಹೊಗಳಿಕೆ (ಆತನ ಹೊಗಳಿಕೆ ಹೆಚ್ಚಾಯಿತು) adult ಹೆ ದೊಡ್ಡವರ ನರಹುಟ್ಟು (ಸುಮಾರು ಹದಿನೆಂಟನೆಯ ಹರೆಯದಿಂದ ಮೇಲ್ಪಟ್ಟ- ವರಿಗೆ ದೊಡ್ಡವರ ನರಹುಟ್ಟು ಬರುತ್ತದೆ), ಹರೆಯದ ನರಹುಟ್ಟು adult ಹೆ ದೊಡ್ಡವನು (ದೊಡ್ಡವರೆಲ್ಲ ಈ ಕಡೆ ಬಂದು ನಿಲ್ಲಿ), ಹರೆಯ adulteration ಹೆ ಕಲಬೆರಕೆ (ಇತ್ತೀಚೆಗೆ ಹಾಲಿನ ಕಲಬೆರಕೆ ಹೆಚ್ಚಾಗಿದೆ) adulteress ಹೆ ಹಡಬೆ (ಹಡಬೆ ಬೀಳು), ದುಂಡೆ adultery ಹೆ ಹಾದರ (ಅವರ ಮದುವೆ ಒಡೆತಕ್ಕೆ ಹಾದರವೇ ದೂಸರವಾಗಿತ್ತು) adulthood ಹೆ ಹರೆಯತನ (ಅವರು ಓದನ್ನು ಮುಗಿಸಿ ಹರೆಯತನಕ್ಕೆ ಕಾಲಿಟ್ಟು ಕುಟುಂಬದ ಹೊಣೆ ತೆಗೆದು- ಕೊಂಡರು) adumbral ಪ ನೆಳಲು ಕವಿದ, ನೆಳಲಿನಲ್ಲಿರುವ adumbrate ಎ 1 ಮುನ್ನೆಚ್ಚರಿಸು (ಮುನ್ನೆಚ್ಚರಿಸಿದ್ದರೂ ಅವನು ಸಿಕ್ಕಿಬಿದ್ದಿದ್ದ) 2 ಅಡಕವಾಗಿ ತಿಳಿಸು advance ಎ 1 ಮುಂದುವರಿ, ಮುಂಕೊಳ್ಳು 2 ಮುಂದಿರಿಸು (ಅವನೊಂದು ಹೊಸ ಅಡಿಕಟ್ಟಲೆಯನ್ನು ಅವರ ಮುಂದಿರಿಸಿದ್ದಾನೆ) 3 ಮುಂಗಡ ಕೊಡು ಹೆ 1 ಮುಂಗಡ (ಮುಂಗಡ ಹಣ ಕೊಟ್ಟಿದ್ದರೂ ಅವನು ಕೆಲಸವನ್ನು ಮಾಡಿಲ್ಲ) 2 ಮುನ್ನಡೆ (ಅವರ ಮುನ್ನಡೆಗೆ ತಡೆ ಬಂದಿರುವ ಹಾಗೆ ಕಾಣಿಸುತ್ತದೆ) administrator advance A


11 advanced ಪ 1 ಮುಂದುವರಿದ (ಮುಂದುವರಿದ ನಾಡುಗಳು ತಾಯ್ನುಡಿಯಲ್ಲಿ ಕಲಿಕೆಯೇರ್ಪಾಡು ಕಟ್ಟಿಕೊಂಡಿವೆ) 2 ತೊಡಕಿನ (ತುಂಬಾ ತೊಡಕಿನ ಚಳಕರಿಮೆಗಳು), ಸಿಕ್ಕಲು advancement ಹೆ ಮುಂದುವರಿಕೆ, ಮುನ್ನಡೆ (ಅರಿಮೆಯ ಮುನ್ನಡೆ) advantage ಹೆ ಸಲೆ, ಅಕ್ಕು (ಆತನಿಗೆ ನಿಮಗಿಂತ ಹೆಚ್ಚು CQÌzÉ) adverb ಹೆ ಪರಿಚೆಪದ, ಎಸಕಪರಿಚೆ (ತಣ್ಣಗೆ ಎಂಬು- ದೊಂದು ಎಸಕಪರಿಚೆ ಪದ) advect ಎ ಅಡ್ಡವೊಯ್ಯು (ಮಂಜು ಇವತ್ತು ಅಡ್ಡವೊಯ್ಯಿತು) advection ಹೆ ಅಡ್ಡವೊಯ್ಯಿಕೆ (ಮಂಜಿನ ಅಡ್ಡವೂಯ್ಯಿಕೆ- ಯಿಂದ ಈ ಊರಿನಲ್ಲಿ ತುಂಬಾ ತೊಂದರೆಗಳಾಗಿವೆ) advent ಹೆ ಬರವು (ಎಣ್ಣುಕದ ಬರವು ಎಲ್ಲವನ್ನೂ ಮಾರ್ಪಡಿಸಿದೆ), ಬರುವಿಕೆ adventitious ಹೆ ಮುನ್ನೋರದ (ಮುನ್ನೋರದ ಎಸಕವೊಂದು ನಡೆದುಬಿಟ್ಟಿದೆ) adventure ಹೆ ಕುತ್ತದ ಕೆಲಸ, ಕುತ್ತಗೆಯ್ತ (ಅವರೆಲ್ಲರೂ ಅಂದಿನ ಕುತ್ತಗೆಯ್ತಕ್ಕೆ ಅಣಿಯಾಗಿ ಕಾಯುತ್ತಿದ್ದರು), ಕಡಗುಗೆಯ್ತ adventure ಹೆ ಅದಟಿನ ಆಟಗಳು (ಅದಟಿನ ಆಟಗಳಲ್ಲಿ ಆ ನಾಡು ಬಲು ಮುಂದಿದೆ) adventurous ಪ ಪಸಿಯಿಸುವ, ಮನಸೆಳೆವ, ಕುತ್ತದ (ಅವರೊಂದು ಕುತ್ತದ ಕೆಲಸಕ್ಕೆ ಕಯ್ಹಾಕಿದ್ದಾರೆ) adversary ಹೆ ಎದುರಾಳಿ (ಆತ ತನ್ನ ಎಲ್ಲಾ ಎದುರಾಳಿ- ಗಳನ್ನೂ ಸೋಲಿಸಿದ್ದಾನೆ) adversative ಪ ಅಡ್ಡಹೇಳಿಕೆಯ, ತಿರುಮಾತಿನ (ಇವರ ತಿರುಮಾತಿನ ಹೇಳಿಕೆಯನ್ನು ಅವರು ಒಪ್ಪಲಿಲ್ಲ) adverse ಪ 1 ಇದಿರಾಗುವ, ಇದಿರಿಸುವ 2 ಕೇಡಿನ, ತೊಡಕಿನ (ಅವನು ತನ್ನ ಹೇಳಿಕೆ ಯಿಂದ ತೊಡಕಿನ ಹೆಸರು ಪಡೆದಿದ್ದಾನೆ) adversity ಹೆ ತೊಂದರೆ (ಮಗಳ ಮದುವೆಗೆ ಸಾಲ ಮಾಡಲು ಹೋಗಿ ಆತ ತೊಂದರೆಗೆ ಸಿಲುಕಿದ್ದಾನೆ), ತತ್ತು, ಕೇಡು advertise ಎ ತಿಳಿಯಪಡಿಸು (ತೆರವಾಗಿರುವ ಕೆಲಸಗಳನ್ನು ಸುದ್ದಿಹಾಳೆಗಳಲ್ಲಿ ತಿಳಿಯಪಡಿಸಲಾಗಿದೆ), ಅರಿಕೆಮಾಡು advertisement ಹೆ ಬಯಲರಿಕೆ (ಬಯಲರಿಕೆಗಳನ್ನಶ್ಟೇ ನೋಡಿ, ಕೊಳ್ಳಲು ಹೋಗಬಾರದು) advice ಹೆ ಮೆಚ್ಚುಹೇಳಿಕೆ (ಎಣ್ಣುಕ ಕೊಂಡುಕೊಳ್ಳಲು ಹೋದಾಗ ಆತನ ಮೆಚ್ಚುಹೇಳಿಕೆ ನೆನಪಿನಲ್ಲಿತ್ತು), ತಿಳಿಹೇಳಿಕೆ (ಅವರ ತಿಳಿಹೇಳಿಕೆ ತುಂಬಾ ನೆರವಾಯಿತು) advise ಎ ಅರಿವು ಕೊಡು, ಅರಿವು ಹೇಳು, ತಿಳಿಹೇಳು (ಈ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಹೇಳ- ಲಾಯಿತು) adviser ಹೆ ತಿಳಿಹೇಳುಗ (ಈ ಹಮ್ಮುಗೆಯ ತಿಳಿ- ಹೇಳುಗರಾಗಿ ಅವರನ್ನು ಹೆಸರಿಸಲಾಗಿದೆ) ಅರಿವಿಗ, ಅರಿವೀಯುಗ advisory ಪ ತಿಳಿಹೇಳಿಕೆಯ (ಆಳ್ವಿಕೆಯವರು ತಿಳಿ- ಹೇಳಿಕೆಯ ಕೂಟವನ್ನು ಗೊತ್ತುಮಾಡಿದ್ದಾರೆ) advocate ಎ ಒಲವುತೋರು, ಬೆಂಬಲನೀಡು (ಕಲಿಸುಗರ ಸಂಬಳದ ಹೆಚ್ಚಳಕ್ಕೆ ಅವರು ಬೆಂಬಲನೀಡಿದ್ದಾರೆ) ಹೆ 1 ಬೆಂಬಲಿಗ (ಅವರು ಮುಂದಿಟ್ಟಿರುವ ಹಮ್ಮುಗೆಗೆ ಹಲವು ಮಂದಿ ಬೆಂಬಲಿಗರಿದ್ದಾರೆ) 2 ಕಟ್ಟಲೆಯರಿಗ adze ಹೆ ಕೋಸುಕೊಡಲಿ (ಕೋಸುಕೊಡಲಿಯ ಅಲಗು ಬಾಗಿರುತ್ತದೆ) aegis ಹೆ ಕಾವಲು, ಕಾಹು (ಅವರ ಮಾತುಕತೆ ನಾಡೊಕ್ಕೂಟದ ಕಾಹಿನಲ್ಲಿ ನಡೆಯಿತು) aerate ಎ ಗಾಳಿತುಂಬು (ಕೊಚ್ಚೆನೀರಿಗೆ ಗಾಳಿತುಂಬಿ ಅದರಲ್ಲಿರುವ ಕೊಳೆಯನ್ನು ಕಡಿಮೆಮಾಡಲಾಗುತ್ತದೆ) aerial ಹೆ 1 ತೂಗುಹಾದಿ (ಗಣಿಗಾರಿಕೆಯ ಕೆಲಸದ ಕಡೆ ಹಲವು ತೂಗುಹಾದಿಗಳಿವೆ), ಹಗ್ಗಹಾದಿ, ಹುರಿದಾರಿ 2 ತೂಗುಸಾಗಣೆ aerobatics ಹೆ ಹಾರ್ಕೆಯಾಟ (ಇವತ್ತು ಇಲ್ಲಿನ ಹಾರ್ಕೆಮನೆ- ಯಲ್ಲಿ ಹಲವು ಬಗೆಯ ಹಾರ್ಕೆಯಾಟಗಳನ್ನು ತೋರಿಸ- ಲಿದ್ದಾರೆ), ಹಾರಾಟ aerobe ಹೆ ಗಾಳಿಯುಸಿರಿ (ಹಲವು ಗಾಳಿಯುಸಿರಿಗಳು ಈಗ ಸತ್ತುಹೋಗಿವೆ), ಗಾಳಿಯುಸಿರುಗ aerobics ಹೆ ಉಸಿರುಪಳಗಿಕೆ (ಉಸಿರುಪಳಗಿಕೆಯಿಂದ ಹೆಚ್ಚು ಹೆಚ್ಚು ಹುಳಿವುಟ್ಟುಕವನ್ನು ಬಳಸಿಕೊಳ್ಳಲು ಬರುತ್ತದೆ) advanced aerobics A


12 aerobiology ಹೆ ಗಾಳಿಯುಸಿರರಿಮೆ (ಗಾಳಿಯಲ್ಲಿ ಹರಡುವ ಕುತ್ತಗಳ ಬಗ್ಗೆ ತಿಳಿಯಲು ಗಾಳಿಯುಸಿರರಿಮೆ- ಯನ್ನು ಓದಬೇಕಾಗುತ್ತದೆ) aerodrome ಹೆ ಹಾರ್ಕೆಮನೆ (ಈ ಊರಿನ ಹಾರ್ಕೆಮನೆಗೆ ಈಗ ಯಾವ ಬಾನೋಡವೂ ಬರುವುದಿಲ್ಲ) aerodynamics ಹೆ ಗಾಳಿಕಸುವರಿಮೆ, ಗಾಳಿಕದಲಿಕೆ- ಯರಿಮೆ (ಬಾನೋಡದ ಹಾರಾಟ ತಿಳಿಯಬೇಕಾದರೆ ಗಾಳಿಕದಲಿಕೆಯರಿಮೆಯನ್ನು ಓದಿಕೊಳ್ಳಬೇಕಾಗುತ್ತದೆ) aeroengine ಹೆ ಬಾನೋಡದ ಬಿಣಿಗೆ (ಈ ಬಾನೋಡದ ಬಿಣಿಗೆ ಚೆನ್ನಾಗಿ ಕೆಲಸ ಮಾಡುತ್ತಿದೆ), ಹಾರುಪೆರ್ಚೂಟಿ aerofoil ಹೆ ಗಾಳಿಪಟ್ಟಿ, ಗಾಳಿತಗಡು, ಹಾರುಮಯ್, ಹಾರೆಲೆ, ಗಾಳಿರೇಕು (ಈ ಗಾಳಿರೇಕು ತೇಲಾಡುತ್ತಿದೆ) aerology ಹೆ ಸುತ್ತಾವಿಗವನ (ಈ ನಾಡಿನಲ್ಲಿ ಸುತ್ತಾವಿ- ಗವನವು ತುಂಬಾ ಮುಂದುವರಿದಿದೆ), ಗಾಳಿಯರಿಮೆ (ಅವರು ಗಾಳಿಯರಿಮೆಯಲ್ಲಿ ಎತ್ತಿದಕಯ್ಯಾದುದರಿಂದ ಮುಂದಿನ ವಾರದ ಮಳೆಯ ಬಗ್ಗೆ ಹೇಳಬಲ್ಲರು) aerometer ಹೆ ಆವಿದಿಣ್ಮೆಯಳಕ (ಆವಿಯ ದಟ್ಟಣೆಯನ್ನು ಅಳೆಯಲು ಆವಿದಿಣ್ಮೆಯಳಕವನ್ನು ಬಳಸುತ್ತಾರೆ), ಗಾಳಿದಿಣ್ಮೆಯಳಕ aeronautics ಹೆ ಹಾರಾಟದರಿಮೆ aeroplane ಹೆ ನಡೆಮಾಡ, ಗಾಳಿತೇರು, ಹಾರ್ಕೆ, ಬಾನೋಡ (ಅವನಿಗೆ ಒಮ್ಮೆಯಾದರೂ ಬಾನೋಡದಲ್ಲಿ ಕುಳಿತು- ಕೊಳ್ಳಬೇಕೆಂದಿದೆ), ಪಾರು aerothermodynamics ಹೆ ಗಾಳಿ ಕಾವುಮಾರ್ಪರಿಮೆ (ಆವಿ ಹೆಚ್ಚು ಉರುಬಿನಲ್ಲೂ ಓಡಾಡುವಾಗ ಅದನ್ನು ತಿಳಿಯಬಲ್ಲ ಅರಿಮೆ ಗಾಳಿ ಕಾವುಮಾರ್ಪರಿಮೆಯಾಗಿದೆ) aesthete ಹೆ ಅಂದಮೆಚ್ಚುಗ (ಅಂದಮೆಚ್ಚುಗರು ನೇಸರು ಮೂಡುವುದನ್ನು ನೋಡಲು ಗುಡ್ಡಕ್ಕೆ ಹೋಗುತ್ತಾರೆ) aesthetics ಹೆ ಅಂದದರಿಮೆ (ಅಂದದರಿಮೆ ಎಂಬುದು ಎಲ್ಲರಿಗೂ ಒಂದೇ ಎಂದು ತಿಳಿದಿದ್ದರು) aetiology ಹೆ ಕುತ್ತಸಲುವರಿಮೆ (ಹಲವು ಕುತ್ತಗಳ ಸೆಲೆ ತಿಳಿಯಲು ಕುತ್ತಸಲುವರಿಮೆಯನ್ನು ಓದಬೇಕಾಗುತ್ತದೆ), ಕುತ್ತವುಟ್ಟರಿಮೆ affability ಹೆ ಸದರ (ನಾಯಿಗಳಿಗೆ ಹೆಚ್ಚು ಸದರ ಕೊಡಬಾರದು) affable ಪ ನೊಚ್ಚಗಿನ (ನೊಚ್ಚಗಿನ ಮಾತಿನಿಂದ ಆತ ಎಲ್ಲರನ್ನೂ ಹತ್ತಿರವಾಗಿಸಿದ್ದ) affair ಹೆ 1 ನೆಗಳ್ತೆ, ಆಗುಹ (ಅಲ್ಲಿ ನಡೆದ ಆಗುಹವೇನೆಂದು ಗೊತ್ತಾಗಲಿಲ್ಲ) 2 ಕೂರ್ಮೆಯಾಗುಹ 3 ನೇರಿಲಿನಂಟು (ಅವರಿಬ್ಬರ ನಡುವೆ ನೇರಿಲಿನಂಟಿದೆ), ಗುಟ್ಟುನಂಟು, ಗುಟ್ಟುಸೇರ್ಕೆ affect ಎ ತಾಗು, ನಾಟು (ನಾನು ಹೇಳಿದ್ದು ಅವನಿಗೆ ಸರಿಯಾಗಿ ನಾಟಿದೆ) affectation ಹೆ ಸೋಗು (ಅವನ ಆದರವೆಲ್ಲ ಬರೀ ಸೋಗು) affection ಹೆ ಅರಮೆ (ಅರಮೆ ಮಾಡು; ಅರಮೆ ತೋರಿಸು), ಕಾದಲು (ಕಾದಲ; ಕಾದಲೆ; ಕಾದಲ್ಮೆ), ಉಪ್ಪು, ಉಪ್ಪುಪ್ಪು (ಉಪ್ಪುಪ್ಪು ಮಾಡು), ಓಲಾಟ, ನಲ್ಮೆ (ನಲ್ಮೆಗಾರ; ನಲ್ಮೆಗಾರ್ತಿ), ನನ್ನಿ, ಅಕ್ಕರೆ (ವೆಂಕಜ್ಜಿಗೆ ಮಕ್ಕಳೆಂದರೆ ಬಲು ಅಕ್ಕರೆ), ತಕ್ಕು affectionate ಪ ಅಕ್ಕರೆಯ, ನಲ್ಮೆಯ (ಅವರು ನಲ್ಮೆಯ ಹೇಳಿಕೆ ಕಳುಹಿಸಿದುದರಿಂದ ಹೋಗದಿರಲಾಗದು) affidavit ಹೆ ಒಟ್ಟಿಟ್ಟ ಹೇಳಿಕೆ (ಮೊರೆಮನೆಯಲ್ಲಿ ನಿಂದರಿಕೆ- ಯಾಗಿ ಒಟ್ಟಿಟ್ಟ ಹೇಳಿಕೆಗಳನ್ನಶ್ಟೇ ಕೊಡಲು ಬರುತ್ತದೆ) affiliate ಎ ಸೇರು, ಸೇರಿಸು (ಅವರು ಹಲವು ಕೂಟಗಳನ್ನು ತಮ್ಮ ಕೂಟಕ್ಕೆ ಸೇರಿಸಿ ಅದನ್ನು ದೊಡ್ಡದು ಮಾಡಿದ್ದಾರೆ) ಹೆ ಸೇರಿಕೆ affinity ಹೆ ಒಲವು, ನಂಟು (ನಮ್ಮೊಳಗೆ ಎಂತಹ ನಂಟೂ E®è) affirm ಎ ಎತ್ತಿಹಿಡಿ (ನನ್ನ ಹೇಳಿಕೆಯನ್ನು ಅವರು ಎತ್ತಿಹಿಡಿದಿದ್ದಾರೆ) affirmative ಪ ಎತ್ತಿಹಿಡಿಯುವ, ಒಪ್ಪಿಕೊಳ್ಳುವ, ಒಡಂಬಡುವ affirmative ಹೆ ಎತ್ತಿಹಿಡಿಯುವ ಕೆಲಸ, ಮೇಲ್ತರುವ ಕೆಲಸ, ಒಳಿತಿನ ಕೆಲಸ, ಹುರುಪಿನ ಎಸಕ, ಹುರುಪಿಸುವ ಎಸಕ (ಆಳ್ವಿಕೆಯವರ ಹುರುಪಿಸುವ ಎಸಕದಿಂದ ಕೂಡಣದಲ್ಲಿ ಸಾಟಿತನ ಹೆಚ್ಚಾಗಿದೆ) affix ಎ ಅಂಟಿಸು (ಸುತ್ತೋಲೆಯ ಹೊದಿಕೆಗಳ ಮೇಲೆ ಬೆಟ್ಟುಗೆಯನ್ನು ಅಂಟಿಸುತ್ತಿದ್ದ), ಹಚ್ಚು ಹೆ ಒಟ್ಟು (ಮನೆಗೆ ಎಂಬುದರಲ್ಲಿ ಗೆ ಎಂಬುದು ಒಂದು ಒಟ್ಟು) aerobiology affix A


13 afflict ಎ ನೋಯು, ಹೊದಕುಳಿಗೊಳ್ಳು (ತಂದೆಯ ಸಾವಿನಿಂದ ಆತ ತುಂಬಾ ಹೊದಕುಳಿಗೊಂಡಿದ್ದ) affliction ಹೆ ಹೊದಕುಳಿ (ಆ ಊರಿನ ಮೂರು ತಿಂಗಳ ನೆಲಸಿಕೆಯಿಂದ ಆತ ಪಡೆದ ಹೊದಕುಳಿ ಇನ್ನೂ ಮಾಸಿಲ್ಲ) affluence ಹೆ ಸೊಮ್ಮು (ಅವರ ಸೊಮ್ಮಿನ ದೂಸರೇ- ನೆಂಬುದನ್ನು ತಿಳಿಯಬೇಕು), ಪೊರುಳು, ಹೆಚ್ಚುಗೆ affluent ಪ ಸೊಮ್ಮುಳ್ಳ (ಸೊಮ್ಮುಳ್ಳ ಮಂದಿ ತಪ್ಪು ಮಾಡಿದರೂ ಸಿಕ್ಕಿಬೀಳುವುದಿಲ್ಲ) ಹೆ 1 ಸೊಮ್ಮಿಗ (ಈ ಊರಲ್ಲಿ ಸೊಮ್ಮಿಗರಶ್ಟೇ ಇರಬಲ್ಲರು) 2 ಕೂಡುಹೊಳೆ (ಈ ಹೊಳೆಗೆ ನಾಲ್ಕು ದೊಡ್ಡ ಕೂಡುಹೊಳೆಗಳು ಸೇರುತ್ತವೆ), ಅಡ್ಡಹೊಳೆ, ಅಡ್ಡತೊರೆ (ಈ ಅಡ್ಡತೊರೆಗಳೆಲ್ಲ ಕೊನೆಗೆ ಒಂದು ಹೊಳೆಯನ್ನು ಸೇರುತ್ತವೆ) afford ಎ 1 ಕೊಡು (ಅವರು ಎಶ್ಟು ಬೇಕಿದ್ದರೂ ಕೊಟ್ಟಾರು) 2 ಒದಗಿಸು (ಈ ಕಿಂಡಿ ಸಾಕಶ್ಟು ಗಾಳಿ- ಯನ್ನು ಒದಗಿಸುತ್ತದೆ) affordable ಪ ಕೊಡಬಲ್ಲ (ಇದು ನಮ್ಮಂತಹವರೂ ಕೊಡಬಲ್ಲ ಬೆಲೆ) afforest ಎ ಕಾಡು ಬೆಳೆ (ಈ ಗುಡ್ಡದಲ್ಲೆಲ್ಲ ಕಾಡು ಬೆಳೆಯಲಿದ್ದೇವೆ) afforestation ಹೆ ಕಾಡುಬೆಳೆತ (ಈ ಗುಡ್ಡದಲ್ಲಿ ನಡೆಸಿದ ಕಾಡುಬೆಳೆತದಿಂದಾಗಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ) affront ಎ ಸಿಟ್ಟುಬರಿಸು, ನೋಯಿಸು, ಮದಿಪುಕಳೆ (ಅವನು ಮದಿಪುಕಳೆಯುವುದಕ್ಕಾಗಿಯೇ ಹಾಗೆ ಹೇಳಿರಬೇಕು) ಹೆ ಮದಿಪುಕಳೆತ afield ಪ ದೂರ (ಅದು ನಮ್ಮನ್ನು ಗುರಿಯಿಂದ ದೂರ ಕೊಂಡುಹೋಯಿತು) afire ಪ ಉರಿಯುವ (ಉರಿಯುವ ಕಾಡು) aflame ಪ ಕಿಚ್ಚಿನಲ್ಲಿ (ಬಂಡಿಯ ಗಾಲಿಗಳೂ ಕಿಚ್ಚಿನಲ್ಲಿದ್ದುವು) aflatoxin ಹೆ ಅಣಬೆನಂಜು (ಈ ತಿಂಡಿಯಲ್ಲಿ ಅಣಬೆ- ನಂಜಿನ ಮಟ್ಟ ಹೆಚ್ಚಿದೆ) afloat ಪ ತೇಲುವ (ತೇಲುವ ಕಟ್ಟಿಗೆಗಳು) afoot ಪ 1 ಮುನ್ನಡೆವ (ಮುನ್ನಡೆವ ಹಮ್ಮುಗೆಗಳು), ಮುಂದುವರಿಯುವ 2 ಕಾಲ್ನಡೆಯಲ್ಲಿ (ಅಲ್ಲಿಂದ ಗುಡ್ಡದ ತುದಿಯ ವರೆಗೆ ಕಾಲ್ನಡೆಯಲ್ಲಿ ಮುಂದುವರಿಯಬೇಕು) afraid ಪ ಹೆದರಿದ (ಹೆದರಿದ ಆಕಳು ಬೇಲಿಯನ್ನು ದೂಡಿ ಮುರಿದುಹಾಕಿತು) afresh ಪ ಹೊಸದಾಗಿ (ಆ ಕೆಲಸವನ್ನು ಅವನು ಇನ್ನೊಮ್ಮೆ ಹೊಸದಾಗಿ ಮಾಡಹೊರಟ) aft ಪ ಹಿಂದೆ (ಗಂಟುಮೂಟೆಗಳನ್ನೆಲ್ಲ ಹಿಂದೆ ಇರಿಸಿ) afterbirth ಹೆ ಮಾಸು, ಕಸ (ಆಕಳು ಇನ್ನೂ ಕಸ ಹಾಕಿಲ್ಲ) aftercare ಹೆ ಮಾರಾರಯ್ಕೆ, ಮರುಜೋಕೆ (ಸೆರೆಯಾಳು- ಗಳು ಸೆರೆಯಿಂದ ಹೊರಬಂದ ಮೇಲೆ ಅವರ ಮರುಜೋಕೆಗೆ ನಿಮ್ಮಲ್ಲಿ ಎಂತಹ ಏರ್ಪಾಡಿದೆ?) aftercare ಹೆ ಮೇಲಾರಯ್ಕೆ (ಇವರು ನೀಡುವ ಮೇಲಾ- ರಯ್ಕೆ ತುಂಬಾ ಗುಣಮಟ್ಟದ್ದು) after-effect ಹೆ ಮಾರಾಗುಹ (ಈ ಮದ್ದಿನ ಮಾರಾಗುಹ- ಗಳಲ್ಲಿ ತಲೆನೋವೂ ಒಂದು) afterglow ಹೆ 1 ಹಿಮ್ಮೆರುಗು (ಅವನು ತನ್ನ ಗೆಲುವಿನ ಹಿಮ್ಮೆರುಗಿನಲ್ಲಿದ್ದಾನೆ), ಹಿಂಬೆಳಕು 2 ಬಯ್ಗುಬೆಳಕು, ಕಾರ್ಬೆಳಕು afterlife ಹೆ ಮರುಬಾಳ್ವೆ (ಸತ್ತವರಿಗೆ ಮರುಬಾಳ್ವೆ- ಯೆಂಬುದಿದೆಯೆಂಬುದನ್ನು ಅವರು ನಂಬುವುದಿಲ್ಲ) aftermath ಹೆ ದೊರೆತ (ಕಳಪೆ ಮಟ್ಟದ ಕೆಲಸದ ದೊರೆತವಾಗಿ ಕೆಲಸ ಕಳೆದುಕೊಳ್ಳಬೇಕಾಯಿತು) afternoon ಹೆ ಇಳಿಹೊತ್ತು (ಇಳಿಹೊತ್ತಿನಲ್ಲಿ ಅವರು ಯಾರನ್ನೂ ಕಾಣುವುದಿಲ್ಲ) aftershave ಹೆ ಕೆರೆಹಚ್ಚುಗೆ (ಗಡ್ಡ ಕೆರೆದುಕೊಂಡ ಮೇಲೆ ಆತ ಗಡ್ಡಕ್ಕೆ ಕೆರೆಹಚ್ಚುಗೆÀ ಹಚ್ಚಿಕೊಂಡ) aftertaste ಹೆ ಮರುಸವಿ (ಈ ತಿಂಡಿಯ ಮರುಸವಿ ಚನ್ನಾಗಿಲ್ಲ) afterthought ಹೆ ಹಿನ್ನೆಣಿಕೆ (ಮದುವೆಗೆ ಹೋಗದಿದ್ದುದು ಸರಿಯಲ್ಲವೆಂಬ ಹಿನ್ನೆಣಿಕೆ ಆತನಿಗುಂಟಾಗಿದೆ) afterwards ಪ ಬಳಿಕ, ಮತ್ತೆ, ತರುವಾಯ, ಕೇಸ (ಅಲ್ಲಿಗೆ ಹೋಗಿ ಕೇಸ ಬಂದ) afterword ಹೆ ಹಿನ್ನುಡಿ (ಕಡತದ ಕೊನೆಯಲ್ಲಿ ದೊಡ್ಡವ- ರಿಂದ ಒಂದು ಹಿನ್ನುಡಿಯನ್ನು ಬರೆಸಿದ್ದಾರೆ) again ಪ ಮರಳಿ, ತಿರುಗಿ (ತಿರುಗಿ ಅವನನ್ನೇ ಕಾಣಲು ಹೋಗಬೇಡ), ಮಗುಳಿ (ಮಗುಳಿ ಬಂದವರು), ಮತ್ತೆ (ನೀನು ಮತ್ತೆ ಕೆಡದಿರು), ಇನ್ನೊಮ್ಮೆ, ತೇನ (ತೇನ ತೇನ ಬರುತ್ತಿದ್ದಾನೆ) afflict again A


14 against ಪ ಎದುರು (ಅವನ ಎದುರು ನಾನು ನಿಲ್ಲುವುದಿಲ್ಲ) agape ಪ ತೆರೆದ (ಅವನು ತೆರೆದ ಬಾಯಿಯಿಂದ ನೋಡುತ್ತಿದ್ದ) age ಹೆ ಹರೆಯಗುಂಪು, ಓರಗೆ (ಈ ಓರಗೆಯವರು ಎಲ್ಲಾ ಆಟಗಳಲ್ಲೂ ಹುರುಪು ತೋರಿಸಿದ್ದಾರೆ) age ಎ ಮುಪ್ಪಾಗು (ಅವನ ಮನಸ್ಸು ಮುಪ್ಪಾಗಲಿಲ್ಲ), ಮುದಿಯಾಗು, ಮಾಗು age ಹೆ ಹರೆಯ (ನಿಮ್ಮ ಹರೆಯವೆಶ್ಟೆಂದು ಕೇಳುತ್ತಿದ್ದಾರೆ) ಎ ದೊಡ್ಡವನಾಗು agency ಹೆ ಮಾರಾಳು ಕೂಟ (ಇವರು ಈ ಮಾರಾಳು ಕೂಟವನ್ನು ಹಲವು ಏಡುಗಳಿಂದ ನಡೆಸುತ್ತಿದ್ದಾರೆ) agenda ಹೆ ಹಮ್ಮುಗೆಪಟ್ಟಿ (ಇವತ್ತಿನ ಕೂಡುಹದಲ್ಲಿ ಗಮನಿಸಬೇಕಾಗಿರುವ ಹಮ್ಮುಗೆಗಳ ಪಟ್ಟಿಯನ್ನು ಈಗಲೇ ಮಾಡಿರಿಸಬೇಕು), ನೆಗಳ್ತೆಯರಿಕೆ agent ಹೆ 1 ಮಾರಾಳು (ಅವನು ತನ್ನ ಮಾರಾಳುಗಳನ್ನು ಎಲ್ಲಾ ಕಡೆಗಳಿಗೂ ಕಳುಹಿಸಿದ್ದಾನೆ) 2 ಸೋವುಗಾರ (ಆತನೊಬ್ಬ ಸೋವುಗಾರನೆಂದು ಗೊತ್ತೇ ಇರಲಿಲ್ಲ) 3 ದೂಸರು (ಈ ಕುತ್ತಿನ ದೂಸರೇನೆಂದು ಅವರಿಗೆ ತಿಳಿಯದು) agglomeration ಹೆ ಇಟ್ಟಳ, ಗಡಣ (ಅದೊಂದು ಹಲವು ಬಗೆಯ ಸರಕುಗಳ ಗಡಣವಾಗಿತ್ತು), ಹೊರಳಿ agglutinate ಎ ಅಂಟಿಸು (ಹಲವು ಹಾಳೆಗಳನ್ನು ಅಂಟಿಸಿ ಇದನ್ನು ಮಾಡಿದ್ದಾರೆ) agglutination ಹೆ ಅಂಟಿಕ್ಕಿಕೆ (ನೆತ್ತರ ಗುಂಪನ್ನು ಕಂಡು- ಹಿಡಿಯುವುದಕ್ಕೆ ಅಂಟಿಕ್ಕಿಕೆಯ ನೆರವು ಪಡೆಯ- ಬೇಕಾಗುತ್ತದೆ) aggravate ಎ ಕೆರಳು, ಹದಗೆಡು (ಅವನ ಕುತ್ತು ಹದಗೆಟ್ಟಿದೆ) aggregate ಪ ಒಟ್ಟಾರೆ (ಒಟ್ಟಾರೆ ನೂರು ಮಂದಿ ಸೇರಿದ್ದರು) ಹೆ ಮೊತ್ತ (ಮೊತ್ತ ಎಶ್ಟೆಂದು ಗೊತ್ತಾಗಿಲ್ಲ) ಎ ಸೇರಿಸು aggressive ಪ 1 ಹಗೆತನದ (ಆ ನಾಡಿಗರು ಹಲವು ಹಗೆತನದ ಮಾಳ್ಕೆಗಳನ್ನು ನಮ್ಮ ನಾಡಿನ ಮೇಲೆ ನಡೆಸಿದ್ದಾರೆ), ಸಿಟ್ಟಿನ 2 ತರಿಸಲಿನ (ಆತನೊಳ್ಳೇ ತರಿಸಲಿನ ಹೋರೇವುಗಳನ್ನು ನಡೆಸುತ್ತಿದ್ದಾನೆ) aggrieved ಪ ನೊಂದ (ನೆರೆಯಿಂದ ನೊಂದ ಮಂದಿಗೆ ಏನಾದರೂ ಕೊಡಿಸಿ) aghast ಪ ಹೆದರಿದ, ಅಸುರಿನ (ಆತನ ಅಸುರಿನ ನೋಟ ಇನ್ನೂ ನನ್ನ ಕಣ್ಣಮುಂದಿದೆ) agile ಪ ಚುರುಕಾದ (ಒಬ್ಬ ಒಳ್ಳೆ ಚುರುಕಾದ ಹುಡುಗನನ್ನು ಕರೆದುಕೊಂಡು ಬನ್ನಿ) aging ಪ ಮುಪ್ಪಾಗುವ (ಅವರು ಮುಪ್ಪಾಗುವ ಮಂದಿ- ಯಾದರೂ ಹುರುಪು ಕಡಿಮೆಯಾಗಿಲ್ಲ), ನರೆಯುತ್ತಿರುವ aging ಹೆ ಮುದಿಯುವಿಕೆ, ಮುಪ್ಪಾಗಿಕೆ, ಮುದಿತನ (ಅವರಲ್ಲಿ ಮುದಿತನದ ಮೊದಲ ಕುರುಹುಗಳನ್ನು ಕಂಡೆವು) agitate ಎ 1 ತುಳುಕು (ಆಕೆಯ ತಲೆಯ ಮೇಲಿದ್ದ ಕೊಡದ ನೀರು ಅಲ್ಲಾಡಿ ತುಳುಕುತ್ತಿತ್ತು), ಕಲಕು 2 ಬೆಳ್ಪಳಿಸು (ಬೆಚ್ಚಿ ಬೆಳ್ಪಳಿಸಿ ಬಂದ), ತಲ್ಲಣಿಸು, ತಲ್ಲಣ- ಗೊಳ್ಳು, ಕವ್ವರ ಗೊಳ್ಳು, ತೂಳಗವೇಳು agitation ಹೆ ತೂಳು (ತೂಳು ಬಂದು ಹೇಳಿದ ಮಾತು), ಕಳವಳ, ತಲ್ಲಣ, ತೂಣ, ಬೆಳ್ಪಳ, ಎದೆಗುದಿ, ಕಾಬಳತೆ, ಕವ್ವರ, ಕಾಳಿ, ತೂಳಗ, ಕದಲಿಕೆ aglow ಪ 1 ಉರಿಯುವ 2 ಬೆಳಗುವ (ನೂರಾರು ತೊಡರುಗಳಿಂದ ಬೆಳಗುವ ಮನೆ) agmatology ಹೆ ಮುರಿತದರಿಮೆ agnail ಹೆ ಉಗುರುಸುತ್ತು (ಅವನ ಹೆಬ್ಬೆರಳಿನ ಉಗುರುಸುತ್ತು ನೋಯುತ್ತಿದೆ) agnostic ಪ ನಂಬಲೊಲ್ಲದ (ನಂಬಲೊಲ್ಲದ ಮಂದಿ ನಂಬಿಕಸ್ತರನ್ನು ಕೀಳು ಮಾಡುತ್ತಾರೆ) agony ಹೆ ಕಳವಳ, ಎದೆಗುದಿ, ಬೇಗುದಿ (ಅರೆಮರಿಕೆಯ ಬೇಗುದಿ ಆತನನ್ನು ಸುಡುತ್ತಿದೆ) agoraphobia ಹೆ ಬಯಲಬೆದರಿಕೆ (ಬಯಲಬೆದರಿಕೆ- ಯಿರುವುದರಿಂದ ಅವನು ಈ ದಾರಿಯಾಗಿ ಬರುವು- ದಿಲ್ಲ), ಬಯಲಂಜಿಕೆ agrarian ಪ ಸಾಗುವಳಿಯ, ಆರಂಬದ, ಉಳುಮೆಯ, ಬೇಸಾಯದ (ಇದೊಂದು ಬೇಸಾಯದ ಸೇರುವೆ) against agrarian A


15 agree ಎ 1 ಸೇರು (ಬೆಕ್ಕುಗಳಿಗೆ ಹೊಲಸುತನ ಸೇರುವು- ದಿಲ್ಲ), ಒಗ್ಗು (ಅದು ಯಾರಿಗೂ ಒಗ್ಗದ ಊರು), ಒಂಟು (ಅವಳ ಅಡುಗೆ ಅವನಿಗೆ ಒಂಟುವುದಿಲ್ಲ), ಊರು (ಆ ಊರಿನ ನೀರು ಅವನಿಗೆ ಊರಿತು), ಹಿಡಿ (ಆ ಊರಿನ ನೀರು ನನಗೆ ಹಿಡಿಯುವುದಿಲ್ಲ), ಹೊಂದು (ಹೊಂದಿಕೊಳ್ಳು; ಅವನು ಎಲ್ಲರೊಂದಿಗೆ ಹೊಂದಿ- ಕೊಂಡಿದ್ದಾನೆ) 2 ನೇರು (ನೀವು ನೇರದಿದ್ದರೆ ನಾನು ಹೊರಡುವುದಿಲ್ಲ), ಒಮ್ಮು, ಒಪ್ಪು (ಒಪ್ಪಿಕೊಳ್ಳು; ತನ್ನ ತಪ್ಪುಗಳನ್ನೆಲ್ಲ ಒಪ್ಪಿಕೊಂಡಿದ್ದಾನೆ), ಏಗೊಳ್ಳು (ಆತ ಮದುವೆಗೆ ಏಗೊಂಡ), ಒಡಂಬಡು (ನಾವೆಂದುದಕ್ಕೆ ಒಡಂಬಡುವುದಿದ್ದರೆ ಬನ್ನಿ), ತಲೆದೂಗು agreement ಹೆ ಒಪ್ಪಂದ (ಕೊನೆಗೂ ಅವರೊಂದು ಒಪ್ಪಂದಕ್ಕೆ ಬಂದರು), ಒಡಂಬಡಿಕೆ, ಕಂದಣೆ, ಮುಗುವಳಿ, ಒಪ್ಪೋಲೆ, ಗೊತ್ತುವಳಿ agriculture ಹೆ ಸಾಗುವಳಿ, ಆರಂಬ, ಉಕ್ಕೆ, ಉಳುಮೆ (ಈ ಊರಿನಲ್ಲಿ ಹೆಚ್ಚಿನ ಮಂದಿಯೂ ಉಳುಮೆಯ ಕೆಲಸ ಮಾಡುತ್ತಿದ್ದಾರೆ), ಒಕ್ಕಲುತನ, ಗೆಯ್ಮೆ, ಹೊಲಗೆಯ್ಮೆ (ಈ ಊರಿನಲ್ಲಿ ತುಂಬಾ ಮಂದಿ ಹೊಲಗೆಯ್ಮೆಯ ಕೆಲಸ ಮಾಡುತ್ತಿದ್ದಾರೆ) agrobiology ಹೆ ಸಾಗುಸಸಿಯರಿಮೆ (ಆ ನಾಡಿನ ಕಲಿಕೆವೀಡಿನಲ್ಲಿ ಸಾಗುಸಸಿಯರಿಮೆಯ ಕಲಿಕೆ ಏರ್ಪಾಟು ತುಂಬಾ ಚೆನ್ನಾಗಿದೆ), ಉಳುಸಸಿಯರಿಮೆ agroclimate ಹೆ ಉಳುಗಾಳಿಪರಿಚೆ (ಸಾಗುವಳಿಗೆ ಈ ಉಳುಗಾಳಿಪರಿಚೆಯ ಮಿಂದಾಣ ತುಂಬ ನೆರವು ನೀಡುತ್ತದೆ) agroclimatology ಹೆ ಸಾಗುಸುತ್ತಾವಿಯರಿಮೆ (ಸಾಗು- ಸುತ್ತಾವಿಯರಿಮೆಯ ಅರಕೆಗಳಿಂದ ಆ ನಾಡಿನಲ್ಲಿ ಸಾಗುವಳಿ ತುಂಬಾ ಮುಂದುವರಿದಿದೆ) agroecology ಹೆ ಸಾಗುಹೊಂದಿಕೆಯರಿಮೆ (ಸಾಗು- ವಳಿಯ ಸಲುವಾಗಿ ಸಾಗುಹೊಂದಿಕೆಯರಿಮೆಯನ್ನು ಓದಿಕೊಂಡರೆ ಒಳಿತು) agroforestry ಹೆ ಅಡವಿಯುಳುಮೆ (ಈ ಊರಿನಲ್ಲಿ ಹಲವು ಅಡವಿಯುಳುಮೆಯ ಕೆಲಸಗಳು ನಡೆಯುತ್ತಿವೆ), ಹಳುವುಳುಮೆ, ಕಾಡೊಕ್ಕಲು agrogeology ಹೆ ಸಾಗುನೆಲದರಿಮೆ (ಸಾಗುವಳಿಯ ಹುಟ್ಟುವಳಿ ಹೆಚ್ಚಿಸಬೇಕಾದರೆ ಸಾಗುನೆಲದರಿಮೆಯ ತಿಳುವಳಿಕೆ ಬೇಕಾಗುತ್ತದೆ) agrology ಹೆ ಬೆಳೆಮಣ್ಣರಿಮೆ (ಈ ಊರಿನ ಮಣ್ಣಿನ ಬಗ್ಗೆ ತಿಳಿಯಲು ಅವರು ಬೆಳೆಮಣ್ಣರಿಮೆಯ ನೆರವನ್ನು ಪಡೆದರು) agronomy ಹೆ ಬೆಳೆಯರಿಮೆ, ಬೆಳೆ ಮಾಳ್ಕೆಯರಿಮೆ, ಆರಂಬದರಿಮೆ agronomy ಹೆ ಉಳುಮೆಯರಿಮೆ (ಉಳುಮೆಯರಿಮೆ ಕಲಿತುದರಿಂದ ಇಳುವರಿ ಹೆಚ್ಚಿಸುವುದು ಹೇಗೆ ಎಂಬು- ದನ್ನು ಕಂಡುಕೊಂಡ) agrotechnology ಹೆ ಸಾಗುಚಳಕದರಿಮೆ (ಇತ್ತೀಚೆಗೆ ಸಾಗುವಳಿಯಲ್ಲಿ ಸಾಗುಚಳಕದರಿಮೆಯ ಬಳಕೆ ಹೆಚ್ಚು- wÛzÉ) aground ಪ ನೆಲಮುಟ್ಟಿದ (ನೆಲಮುಟ್ಟಿದ ಹಡಗನ್ನು ಅಲ್ಲಿಂದ ಹೊರಡಿಸಲಾಗುತ್ತಿಲ್ಲ) ague ಹೆ ಚಳಿಬಿಸುಪು (ಚಳಿಬಿಸುಪಿನಿಂದ ಹುಡುಗ ಕಂಗೆಟ್ಟಿದ್ದಾನೆ) ahead ಪ ಮುಂದೆ, ಮುಂದಾಗಿ (ಅವರನ್ನೆಲ್ಲ ಮುಂದಾಗಿ ಕಳುಹಿಸಿದ್ದೇವೆ) aid ಹೆ ನೆರವು (ನನಗೀಗ ನಿಮ್ಮ ನೆರವು ಬೇಕಾಗಿದೆ), ಬೆಂಬಲ (ಅವರ ಬೆಂಬಲವಿದ್ದರೆ ನಾನು ಏನೂ ಮಾಡಬಲ್ಲೆ), ಒತ್ತಾಸೆ ail ಎ ನರಳು (ಆತ ಎದೆನೋವೆಂದು ಆರು ತಿಂಗಳಿನಿಂದ ನರಳುತ್ತಿದ್ದಾನೆ) aileron ಹೆ ಉಕ್ಕುಪುಕ್ಕ (ಈ ಬಾನೋಡದ ಉಕ್ಕುಪುಕ್ಕ ಸರಿಯಾಗಿ ಕೆಲಸ ಮಾಡುತ್ತಿಲ್ಲ), ಉರುಳುಪಟ್ಟಿ ailment ಹೆ ನರಳಾಟ, ತೊಂದರೆ (ಅವನೊಂದು ಚಿಕ್ಕ ತೊಂದರೆಯನ್ನು ಹೋಗಲಾಡಿಸಲು ಮಾಂಜುಗರಲ್ಲಿಗೆ ಹೋಗಿದ್ದಾನೆ) aim ಎ ಪೂಣಿಸು, ಗುರಿಯಿಡು, ಕರು (ಅವನು ಕರುತ್ತು ಮರದಲ್ಲಿದ್ದ ಹಕ್ಕಿಯನ್ನು ಹೊಡೆದುರುಳಿಸಿದ) aim ಹೆ ಗುರಿ (ಯಾವುದು ನಿಮ್ಮ ಗುರಿ?), ಚೂಟಿ, ಸೂಟಿ air ಹೆ ಗಾಳಿಪಾಡುಕ (ಈ ಮನೆಗೆ ಇವತ್ತು ಹೊಸ ಗಾಳಿಪಾಡುಕವನ್ನು ನೆಲೆಗೊಳಿಸಿದ್ದಾರೆ), ಗಾಳಿ- ಹೊಂದುಕ air ಹೆ ಗಾಳಿದಣಿಕ (ಗಾಳಿದಣಿಕದಿಂದಾಗಿ ಮನೆಯ ಕಾವು ಬೇಗನೆ ಕಡಿಮೆಯಾಗಿದೆ), ಗಾಳಿಕಾವಿಳಿಕ, ಗಾಳಿದಣಿಗೆ agree air cooler A


16 air ಹೆ ಗಾಳಿಯ ಹರಿವು (ಈಗ ಗಾಳಿಯ ಹರಿವು ಬಡಗದಿಂದ ತೆಂಕದ ಕಡೆಗಿದೆ), ಗಾಳಿಯ ಬೀಸುವಿಕೆ air ಹೆ ಗಾಳಿಪಡೆ (ಆ ನಾಡಿನ ಗಾಳಿಪಡೆ ಹಲವಾರು ಹೊಸ ಗಾಳಿತೇರುಗಳನ್ನು ಕೊಂಡುಕೊಂಡಿದೆ) air ಹೆ ಗಾಳಿಕೋವಿ air ಹೆ ಬಾನಿಗ (ಬಾನೋಡದಲ್ಲಿ ನಲ್ಬರವನ್ನು ಹೇಳಲು ಬಾನಿಗರು ಕಾದಿರುತ್ತಾರೆ) air ಹೆ ಮುಗಿಲ್ಗಿತ್ತಿ, ಬಾನಿಗಿತ್ತಿ (ಬಾನೋಡದಲ್ಲಿ ಬಾನಿಗಿತ್ತಿಯರು ಇರುಳೂಟವನ್ನು ಕೊಡಲು ತೊಡಗಿ- ದ್ದರು) air ಹೆ 1 ಎರಲು, ಎಲರು, ಗಾಳಿ (ಉಗಿಬಂಡಿಯಲ್ಲಿ ಹೋಗುವಾಗ ಆತ ಗಾಳಿ ತುಂಬಿದ ತಲೆದಿಂಬನ್ನು ಬಳಸುತ್ತಾನೆ) 2 ಸೋಗುನಡತೆ ಎ 1 ಬಗೆಯರಿಸು, ಅನಿಸಿಕೆ ತಿಳಿಸು 2 ಹರವು (ಬಟ್ಟೆಗಳನ್ನೆಲ್ಲ ಹೊರಗಡೆ ಹರವಿದ್ದಾರೆ) air ಹೆ ಗಾಳಿದಾಳಿ (ಇವತ್ತಿನ ಗಾಳಿದಾಳಿಯಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾದುವು) airbag ಹೆ ಗಾಳಿಚೀಲ (ಇತ್ತೀಚೆಗಿನ ಎಲ್ಲಾ ಬಂಡಿಗಳಲ್ಲಿ ಗಾಳಿಚೀಲದ ಏರ್ಪಾಟು ಇದೆ), ಕಾಪುಚೀಲ airbrake ಹೆ ಗಾಳಿಬಿರಿ (ಬಸ್ಸಿನ ಗಾಳಿಬಿರಿಯನ್ನು ಒತ್ತಿದಾಗ ಹಿಸ್ಸೆಂದು ಸದ್ದಾಗುತ್ತದೆ) aircraft ಹೆ ಗಾಳಿತೇರು (ಗಾಳಿತೇರು ತುಂಬಾ ಕೆಳಗೆ ಬಂದಿತ್ತು) airfield ಹೆ ಗಾಳಿಬಯಲು (ಗಾಳಿತೇರುಗಳು ಇಳಿಯಲು ಮತ್ತು ಮೇಲೇರಲು ಗಾಳಿಬಯಲುಗಳು ಬೇಕಾಗುತ್ತವೆ) airfoil ಹೆ ಹಾರುಗೆರೆ (ತಿರುಗಂಬಿನ ರೆಕ್ಕೆಗಳಿಗೆ ಹಾರುಗೆರೆಯ ಮಾಳ್ಪಿರುತ್ತದೆ) airframe ಹೆ ಗಾಳಿಕಟ್ಟು (ಈ ಗಾಳಿಕಟ್ಟಿನ ತಿಟ್ಟ ತುಂಬಾ ಚೆನ್ನಾಗಿ ಮೂಡಿ ಬಂದಿದೆ), ಹೊರಕಟ್ಟು, ಮಯ್ಕಟ್ಟು airline ಹೆ ಗಾಳಿಸಾರಿಗೆ (ಈ ಗಾಳಿಸಾರಿಗೆಯವರು ಒಟ್ಟು ಅರುವತ್ತು ಬಾನೋಡಗಳನ್ನು ಓಡಿಸುತ್ತಿದ್ದಾರೆ) airlock ಹೆ ಗಾಳಿತಡೆ (ಆ ಕೋಣೆಗೆ ಗಾಳಿತಡೆಯ ಬಾಗಿಲುಗಳಿವೆ) airmail ಹೆ ಎಲರಂಚೆ (ಎಲರಂಚೆಯಲ್ಲಿ ಕಳುಹಿಸಿದ್ದರೂ ಮದುವೆಯ ಹೇಳಿಕೆ ತಲುಪಲು ಹತ್ತು ದಿನ ಹಿಡಿಯಿತು) airpassenger ಹೆ ಬಾನ್ದಾರಿಗ (ಬಾನ್ದಾರಿಗರಿಗೆ ಹೊರ- ಡುವುದಕ್ಕೆ ಮುಂಚೆಯೇ ಎಚ್ಚರಿಕೆಯ ತಿಳಿವನ್ನು ಕೊಡಲಾಗುತ್ತದೆ) airport ಹೆ ಗಾಳಿರೇವು (ಈ ಗಾಳಿರೇವಿನಲ್ಲಿ ದೊಡ್ಡ ದೊಡ್ಡ ಗಾಳಿತೇರುಗಳೂ ಇಳಿಯಬಲ್ಲುವು), ಬಾನೋಡ ನಿಲ್ಮನೆ airship ಹೆ ಗಾಳಿಹಡಗು (ಆಟದ ಬಯಲ ಮೇಲೆ ಒಂದು ಗಾಳಿಹಡಗು ತೇಲುತ್ತಿತ್ತು) airstream ಹೆ ಗಾಳಿಹರಿವು (ಗಾಳಿತೇರಿನ ತಳ್ಳುಕದಿಂದ ಗಾಳಿಹರಿವು ಹಿಂದಕ್ಕೆ ಸಾಗುತ್ತದೆ) airstrip ಹೆ ಗಾಳಿಪಟ್ಟಿ (ಗಾಳಿತೇರು ಮೇಲೇರಲು ಸಾಕಶ್ಟು ಉದ್ದದ ಗಾಳಿಪಟ್ಟಿ ಬೇಕಾಗುತ್ತದೆ) airtight ಪ ಗಾಳಿಹೋಗದ, ಗಾಳಿತಡೆವ (ಇದನ್ನು ಗಾಳಿತಡೆವ ಬುರುಡೆಯಲ್ಲಿರಿಸಿದರೆ ಬೇಗನೆ ಕೆಡುವುದಿಲ್ಲ) airtime ಹೆ ಬಳಕೆಹೊತ್ತು (ನಡೆಯುಲಿಯಲ್ಲಿ ಬಳಕೆಹೊತ್ತಿಗೆ ಸರಿಯಾಗಿ ಹಣದ ಕಳೆತವಾಗುತ್ತಿರುತ್ತದೆ) airy ಪ 1 ಹರವಾದ (ಆ ಹರವಾದ ಕೋಣೆಯಲ್ಲಿ ಹತ್ತು ಮಂದಿ ಮಲಗಬಹುದು) 2 ತಳ್ಳಿ ಹಾಕುವ (ಅವನ ತಳ್ಳಿಹಾಕುವ ಕಯ್ಸನ್ನೆ ನೋಡಿ ಆಕೆ ಕೆರಳಿದಳು) aisle ಹೆ ನಡುಹಾದಿ, ಕಾಲುದಾರಿ, ನಡುದಾರಿ (ಬಾನೋಡ- ದಲ್ಲಿ ಕಿಂಡಿಕುರ್ಚಿ ಮತ್ತು ನಡುದಾರಿಯ ಕುರ್ಚಿಗಳ ಆಯ್ಕೆ ಕೊಡಲಾಗುತ್ತದೆ), ಓಣಿ ajar ಪ ನಸುತೆರೆದ (ನಸುತೆರೆದ ಬಾಗಿಲಿನಿಂದ ಆತ ಎಲ್ಲವನ್ನೂ ನೋಡುತ್ತಿದ್ದ) akin ಪ 1 ನೆತ್ತರನಂಟಿನ (ಆತನಿಗೆ ನೆತ್ತರನಂಟಿನ ನೆನಪಿರ- ಲಿಲ್ಲ) 2 ಹೋಲಿಕೆಯ, ಹೋಲುವ (ಅವನನ್ನು ಹೋಲುವ ಮಂದಿ ಇಲ್ಲೂ ಕೆಲವರಿದ್ದಾರೆ) alabaster ಹೆ ಹಾಲುಗಲ್ಲು (ಇಲ್ಲಿ ಕೆಲವು ಹಾಲುಗಲ್ಲಿನ ಒಡವೆಗಳೂ ದೊರೆಯುತ್ತವೆ) alacrity ಹೆ ಚುರುಕುತನ (ತುಂಬಾ ಚುರುಕುತನದಿಂದ ಆತ ನೀವೆಂದುದನ್ನು ಒಪ್ಪಿಕೊಂಡ) alarm ಹೆ ಎಚ್ಚರಗಂಟೆ (ಈ ತಂಗುಮನೆಯ ಕೋಣೆಗಳಲ್ಲಿ ಎಚ್ಚರಗಂಟೆಗಳನ್ನು ಇಡಲಾಗಿದೆ) air flow alarm clock A


17 alarm ಎ ಬೆದರು (ತಿಂಗಳ ಬೆಳಕಿನಲ್ಲಿ ಕಾಣುವ ಮರವನ್ನು ಗಾಳಿಗನೆಂದು ತಿಳಿದು ಬೆದರಿದ), ದೊಮ್ಮಳಿಸು (ದೊಮ್ಮಳಿಸುವ ಕರು), ತಳಮಳಗೊಳ್ಳು, ತಳಮಳಿಸು, ದಿಗಿಲುಬೀಳು, ದಿಗಿಲುಹಾರು ಹೆ ಬೆದರಿಕೆ (ಬೆದರಿಕೆ- ಯಿಂದ ಎತ್ತು ಕೆಳಗೆ ಹಾರಿತು), ಬೆದರಣೆ (ಬೆದರಣೆ ಸೊಲ್ಲು), ದಿಗಿಲು (ದಿಗಿಲುಗೊಳಿಸು; ದಿಗಿಲುಗನಸು), ತಳಮಳ alarming ಪ ದಿಗಿಲೆಬ್ಬಿಸುವ (ಈ ಊರಿನಲ್ಲಿ ದಿಗಿಲೆಬ್ಬಿಸುವ ಕೆಲವು ಆಗುಹಗಳು ಇತ್ತೀಚೆಗೆ ನಡೆದಿವೆ), ಹೆದರಿಸುವ, ಅಳುಕಿಸುವ, ಎಚ್ಚರಿಸುವ alarmist ಹೆ ದಿಗಿಲುಗಾರ (ಆತ ಚಿಕ್ಕ ತೊಡಕನ್ನು ದೊಡ್ಡದೆಂದು ಕೊಗೆದು ಎಲ್ಲರನ್ನೂ ದಿಗಿಲುಗೊಳಿಸುವ ದಿಗಿಲುಗಾರನಾಗಿದ್ದ) albedo ಹೆ ಅರೆಮರುಹೊಳಪು, ಅರೆತಿರು ಹೊಳೆಪು, ಚಿಂಬೆಳಕು (ನೀರಿಗೆ ಹೋಲಿಸಿದರೆ ಮಂಜುಗಡ್ಡೆಯ ಚಿಂಬೆಳಕು ಹೆಚ್ಚಿನದು), ಮಾರ್ಕದಿರು, ಮಾರ್ವೆಳಕು album ಹೆ 1 ತಿಟ್ಟಕಡತ (ಆತನ ತಿಟ್ಟಕಡತದಲ್ಲಿ ನಿನ್ನ ತಿಟ್ಟವೂ ಇದೆ) 2 ಹಾಡುಕಡತ (ಈ ಹಾಡುಕಡತದಲ್ಲಿ ಹತ್ತು ಹಾಡುಗಾರರ ಹಾಡುಗಳಿವೆ) albumen ಹೆ ತತ್ತಿಬಿಳುಪು (ತತ್ತಿಯನ್ನೊಡೆದು ತತ್ತಿ- ಬಿಳುಪನ್ನು ಬೇರ್ಪಡಿಸಿದಳು) alchemy ಹೆ 1 ಒಡಪಾಂಗು (ಗೊತ್ತಿಲ್ಲದ ಒಡಪಾಂಗು ಅವರಿಬ್ಬರನ್ನೂ ಹತ್ತಿರ ತಂದಿದೆ) 2 ಹುಸಿಯಿರ್ಪರಿಮೆ (ಹಿಂದೆ ಯೂರೋಪಿನಲ್ಲಿ ಹುಸಿಯಿರ್ಪರಿಮೆ ಇತ್ತೆಂದು ಹೇಳಲಾಗುತ್ತದೆ) alcohol ಹೆ ಹೆಂಡ (ಆತ ಹೆಂಡ ಕುಡಿದು ತೂರಾಡು- ತ್ತಿದ್ದಾನೆ; ಬೆಲ್ಲದ ಹೆಂಡ; ಬತ್ತದ ಹೆಂಡ) alcoholic ಪ ಹೆಂಡದ (ಎಲ್ಲರ ಮುಂದೆಯೂ ಹೆಂಡದ ಕುಡಿಗೆಗಳನ್ನಿರಿಸಿದರು) ಹೆ ಕುಡುಕ (ಹೆಂಡತಿ ಸತ್ತಮೇಲೆ ಆತನೊಬ್ಬ ಕುಡುಕನಾಗಿಬಿಟ್ಟಿದ್ದ) alcoholism ಹೆ ಕುಡುಕತನ alcolock ಹೆ ಹೆಂಡಬೀಗ (ಅವನು ಬಿದ್ದಿನಲ್ಲಿ ಹೆಂಡ ಕುಡಿದುದರಿಂದ ಅವನ ಬಂಡಿಯ ಹೆಂಡಬೀಗ ಬಂಡಿ- ಯನ್ನು ಓಡಿಸಲು ಬಿಡಲಿಲ್ಲ), ಕಳ್ಬೀಗ, ಸೇಂದಿಬೀಗ, ಕಳ್ಬೆಣೆ alcove ಹೆ ಕಿಂಡಿ (ಬೆಂಕಿಪೆಟ್ಟಿಗೆಯನ್ನು ಆಕೆ ಗೋಡೆಯ ಕಿಂಡಿಯಲ್ಲಿರಿಸಿದ್ದಾಳೆ) aleatory ಪ ತೆರಹಿನ, ಅಮಗದ (ಬಾಳಿನಲ್ಲಿ ಅಮಗದ ಆಗುಹಗಳೂ ಹಲವಿರುತ್ತವೆ) alert ಪ ಚುರುಕು (ಚುರುಕು ಹುಡುಗರು ಇನ್ನೊಬ್ಬರಿಂದ ಮೋಸಹೋಗುವುದಿಲ್ಲ), ಎಚ್ಚರಿಕೆಯ ಹೆ ಎಚ್ಚರ, ಎಚ್ಚರಿಕೆ ಎ ಎಚ್ಚರಿಸು alga ಹೆ ಪಾಚಿ (ಈ ಕೆರೆಯಲ್ಲಿ ಎಲ್ಲೆಡೆ ಪಾಚಿ ಕಾಣಿಸುತ್ತದೆ), ಹಾವಸೆ alga ಹೆ ಕಡಲುಪಾಚಿ (ಕಡಲುಪಾಚಿಗಳಿಗೆ ಬೇರುಗಳಾಗಲಿ, ಕಾವುಗಳಾಗಲಿ, ಎಲೆಗಳಾಗಲಿ ಇರುವುದಿಲ್ಲ) algebra ಹೆ ಬಿತ್ತೆಣಿಕೆಯರಿಮೆ (ಬಿತ್ತೆಣಿಕೆಯರಿಮೆಯಲ್ಲಿ ಹಲವು ಸಾಟಿಗೆಗಳನ್ನು ಕಲಿಯಬೇಕಾಗುತ್ತದೆ), ಸರಿ- ಯೆಣಿಕೆಯರಿಮೆ algorithm ಹೆ ಎಸಗುಬಗೆ (ಪದಗಳ ಪಟ್ಟಿಯಲ್ಲಿ ಯಾವುದೇ ಪದವನ್ನು ಹುಡುಕುವ ಸಲುವಾಗಿ ಎಸಗುಬಗೆಯನ್ನು ಕಂಡುಹಿಡಿದರು), ಹೊಲಬು alias ಹೆ ಸೋಗುಗುರುತು, ಕಳ್ಳಗುರುತು (ಆತ ಈ ಊರಲ್ಲಿ ಒಂದು ಕಳ್ಳಗುರುತಿನಲ್ಲಿ ಓಡಾಡುತ್ತಿದ್ದಾನೆ), ಮರುಹೆಸರು alibi ಹೆ ಬೇರಿರವು, ಬೇರಿರುವಿಕೆ (ಕೊಲೆಯ ಮಟ್ಟಿಗೆ ಅವರಿಗೆ ತಮ್ಮ ಬೇರಿರುವಿಕೆಯ ಬಗೆಗೆ ನೆನಪಿಲ್ಲ), ಬೇರಿರುಹ (ಕೊಲೆಯಾದ ಹೊತ್ತಿಗೆ ಆತನಿಗೆ ಬೇರೆ ಕಡೆ ಇದ್ದ ಬೇರಿರುಹವಿತ್ತು) alien ಹೆ ಹೊರನಾಡಿಗ (ಹೊರನಾಡಿಗರು ತಮ್ಮೊಂದಿಗೆ ಪಾರೋಲೆಯೊಂದನ್ನು ಇರಿಸಿಕೊಳ್ಳಬೇಕಾಗುತ್ತದೆ), ಹೊರಬ ಪ 1 ಒಪ್ಪಲಾಗದ (ಇದು ನಾನು ಒಪ್ಪಲಾಗದ ಕೆಲಸ) alienable ಪ ಮಾರೆಡೆಗೊಳಿಸಬಲ್ಲ alienate ಎ ಒಂಟಿಯಾಗಿಸು (ಚಿಕ್ಕ ಮಕ್ಕಳನ್ನು ಒಂಟಿ- ಯಾಗಿಸಬಾರದು), ಒಂಟಿಮಾಡು (ಎಲ್ಲರೂ ಸೇರಿ- ಕೊಂಡು ಅವನನ್ನು ಒಂಟಿ ಮಾಡಿದರು) alight ಎ ಇಳಿ (ತೇರಿನಿಂದ ಇಳಿದ ಅರಸು; ಬಾನಿನಿಂದ ಇಳಿದು ಬಂದು ಮರದ ಗೆಲ್ಲಿನ ಮೇಲೆ ಕುಳಿತ ಹಕ್ಕಿ) ಪ 1 ತಳತಳಿಸುವ 2 ಉರಿಯುವ (ಸಿಡಿಲು ಬಿದ್ದು ಉರಿಯುವ ಮರಗಳು) alarm alight A


18 align ಎ 1 ಒಂದು (ಅವರಿಬ್ಬರು ಇವತ್ತು ಒಂದಿದರು) 2 ಹೊಂದಿಸು, ಸಾಲಾಗಿಡು (ಹಣ್ಣುಗಳನ್ನು ಸಾಲಾಗಿಟ್ಟಿ- zÁÝgÉ) alignment ಹೆ ಒಂದಾಣಿಕೆ (ಈ ಗುಂಪುಗಳ ನಡುವೆ ಒಂದಾಣಿಕೆ ತರುವುದು ಒಂದು ದೊಡ್ಡ ಕೆಲಸವಲ್ಲ) alike ಪ ಹೋಲುವ (ಎರಡು ಹೋಲುವ ಹೋರಿಗಳನ್ನು ಕೊಂಡುತಂದಿದ್ದಾರೆ), ಪುದು (ಪುದುಮಾಡು) alimentary ಹೆ ಕೂಳ್ಗೊಳವೆ (ಆತನ ಕೂಳ್ಗೊಳ- ವೆಗೆ ಸೋಂಕು ತಗುಲಿದೆ), ತಿನಿಸುಗೊಳವೆ (ಬಾಯಿ ಮತ್ತು ಹೊಟ್ಟೆಗಳನ್ನು ತಿನಿಸುಗೊಳವೆ ಕೂಡಿಸುತ್ತದೆ) alimony ಹೆ ಬಾಳ್ವೆಪಡಿ (ಬೇರ್ಪಡಿಕೆಯಾದ ಬಳಿಕ ಅವನೀಗ ಆಕೆಗೆ ತಿಂಗಳು ತಿಂಗಳು ಬಾಳ್ವೆಪಡಿ ಕೊಡಬೇಕಾಗುತ್ತದೆ), ಅಗಲ್ಕಾಣಿಕೆ (ಆಕೆಗೆ ಗಂಡನಿಂದ ಅಗಲ್ಕಾಣಿಕೆ ಕೊಡಿಸಲಾಯಿತು) alive ಪ 1 ಉಸಿರುಳ್ಳ (ಸಂತೆಯಲ್ಲಿ ಉಸಿರುಳ್ಳ ಮೀನು- ಗಳನ್ನು ನೀರಿನಲ್ಲಿರಿಸಿ ಮಾರುತ್ತಿದ್ದಾರೆ) 2 ಉಳಿಸಿದ, ಉಳಿಸಿರುವ (ಉಳಿಸಿರುವ ಹಾರಯ್ಕೆಗಳು ಆತನಿನ್ನೂ ಸಾಯದಿರುವಂತೆ ಮಾಡಿವೆ) 3 ಎಚ್ಚರಿಕೆಯ, ಚುರುಕಿನ alkali ಹೆ ಹುಳಿಕಳೆಯ alkali ಹೆ ಕಾರ (ಕಾರದಿಂದ ಹುಳಿಗಳನ್ನು ಉಪ್ಪುಗಳನ್ನಾಗಿ ಮಾರ್ಪಡಿಸಲಾಗುತ್ತದೆ) alkaline ಪ ಕಾರದ (ಕಾರದ ಉಪ್ಪು) allay ಎ ತಣಿಸು, ಕಡಿಮೆಮಾಡು (ಅವಳ ಹೆದರಿಕೆಯನ್ನು ಕಡಿಮೆಮಾಡಲು ಆತ ಮನೆಯಲ್ಲೇ ಉಳಿಯ- ಬೇಕಾಯಿತು) allegation ಹೆ ತಪ್ಪುಹೊರಿಕೆ (ತಪ್ಪುಹೊರಿಕೆಯಿಂದ ಹೊರಬರುವುದು ಹೇಗೆಂದು ಅತ ಇಡೀ ಇರುಳು ಉನ್ನುತ್ತಿದ್ದ) allegiance ಹೆ ಮುಡಿಪು, ನಂಬಿಕೆ (ಆತ ತನ್ನ ನಾಡಿನ ಆಳ್ಮನಲ್ಲಿ ನಂಬಿಕೆಯಿರಿಸಿದ್ದ) allegory ಹೆ ಸಣ್ಣರಗತೆ (ಮಕ್ಕಳಿಗೆ ದಿನಾಲೂ ಒಂದು ಸಣ್ಣರಗತೆಯನ್ನು ಹೇಳುವುದು ಒಳ್ಳೆಯದು) allergen ಹೆ ಒಗ್ಗದಿಕ (ದೂಳು ಕೂಡ ಒಂದು ಒಗ್ಗದಿಕ- ವಾಗಿರುತ್ತದೆ), ನೂರಕ allergy ಹೆ ಒಗ್ಗದಿಕೆ (ಆ ಮಗುವಿಗೆ ಆಕಳ ಹಾಲಿನ ಒಗ್ಗದಿಕೆಯಿದೆ) alleviate ಎ ಇಳಿಸು, ಹಿಂಗಿಸು (ನಿನ್ನ ತೊಂದರೆಗಳನ್ನು ತುಸು ಹಿಂಗಿಸಬಲ್ಲೆ) alley ಹೆ ಓಣಿ (ಆತ ಕಿಟಿಕಿಯ ಬಳಿ ನಿಂತು ಓಣಿಯಲ್ಲಿ ಹೋಗುವವರನ್ನು ಗಮನಿಸುತ್ತಿದ್ದ) alleyway ಹೆ ಓಣಿ (ಹಳೇ ಹೊಳಲುಗಳಲ್ಲಿ ಓಣಿಗಳು ಹೆಚ್ಚು) alliance ಹೆ ಹೊಂದಾಣಿಕೆ (ನೆರೆನಾಡಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು) alligator ಹೆ ನೆಗಳೆ (ಮೊಸಳೆಯ ತಲೆಗಿಂತ ನೆಗಳೆಯ ತಲೆ ಚಿಕ್ಕದಿರುತ್ತದೆ) alliteration ಹೆ ಗೀಗೀಕಾರ (ಅವನು ತನ್ನ ಬರಹದಲ್ಲಿ ಹಲವು ಕಡೆ ಗೀಗೀಕಾರ ಬಳಸಿದ್ದಾನೆ) allocate ಎ ಗೊತ್ತುಗೊಳಿಸು (ತಿಳಿಹದ ತಾವುಗಳನ್ನು ಎಣ್ಣುಕ ತಾನಾಗಿಯೇ ಗೊತ್ತುಗೊಳಿಸುತ್ತದೆ), ಹಂಚು allogamy ಹೆ ಬೇರೆಹಸನು, ಬೇರೆಬೆರಕೆ (ಚಿಟ್ಟೆಗಳು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುವುದರಿಂದ ಬೇರೆಬೆರೆಕೆಯನ್ನುಂಟುಮಾಡುತ್ತವೆ) allometry ಹೆ ಬಿಡಿಬೆಳೆತದರಿಮೆ (ಅವರು ಬಿಡಿಬೆಳೆತ- ದರಿಮೆಯಲ್ಲಿ ಹೆಚ್ಚಿನ ಓದನ್ನು ನಡೆಸಿದ್ದಾರೆ) allomorph ಹೆ ಬೇರೆಗಟ್ಟಿಪರಿಜು, ಹಲಗಟ್ಟಿಪರಿಜು (ಕರಿ- ಯಲ್ಲಿ ಹಲಗಟ್ಟಿಪರಿಜು ಕಾಣಿಸುತ್ತದೆ) allopathy ಹೆ ಬೇನೆಮಾಂಜುಗೆ (ಬೇನೆ ಬೇಗನೆ ಮಾಂಜ- ಬೇಕಿದ್ದಲ್ಲಿ ಬೇನೆಮಾಂಜುಗೆಯ ಮೊರೆಹೋಗ- ಬೇಕಾಗುತ್ತದೆ) allot ಎ ಹಂಚು (ತಮ್ಮ ಒಡೆತನದಲ್ಲಿದ್ದ ನಾಲ್ಕು ಮನೆಗಳನ್ನು ಅವರೀಗ ಮೂವರಿಗೆ ಹಂಚಬೇಕಾಗಿದೆ) allotment ಹೆ ಹಂಚಿಕೆ (ಈ ಮನೆಗಳ ಹಂಚಿಕೆಯಿನ್ನೂ ನಡೆದಿಲ್ಲ) allotropy ಹೆ ಹಲಪರಿಜು (ಕರಿಯು ಹಲವು ಪರಿಜುಗಳಲ್ಲಿ ದೊರೆಯುವುದನ್ನು ಕರಿಯ ಹಲಪರಿಜು ಎಂದು ಹೇಳಲಾಗುತ್ತದೆ), ಹಲಹದಿರು align allotropy A


19 allow ಎ 1 ಎಡೆಗೊಡು, ಈಸು (ಈ ಆಕಳು ಚಿಕ್ಕ ಮಕ್ಕಳಿಗೂ ಹಾಲು ಕರೆಯಲು ಈಸುತ್ತದೆ) 2 ಕಾದಿರಿಸು, ತೆಗೆದಿರಿಸು (ನಡುವೆ ಅವರನ್ನು ಕಂಡುಬರಲು ಒಂದು ಗಂಟೆ ತೆಗೆದಿರಿಸಿದ) 3 ಒಪ್ಪು (ಅವರು ಹೇಳಿದ್ದು ಸರಿಯೆಂದು ಅವನು ಒಪ್ಪಿದ) allowance ಹೆ ಪಡಿ (ಪಡಿಗೆ ಬಂದವರು; ಪಡಿಯಕ್ಕಿ; ಪಡಿಬೇಡು; ಪಡಿತರ), ಹಡದೆ (ಹಡಪಿಗನಿಗೆ ನಮ್ಮ ಮನೆಯಲ್ಲಿ ಏಡಿಗೆ ಮೂವತ್ತು ರುಪಾಯಿ ಹಡದೆ ಕೊಡುತ್ತಿದ್ದರು) alloy ಹೆ ಬೆರಹೊನ್ನು, ಬೆರಕೆಜಲ್ಲಿ, ತಮರ (ಉಕ್ಕು ಒಂದು ತಮರ) allude ಎ ಸುಳಿವು ಕೊಡು (ಅವರು ಇವತ್ತು ಇಲ್ಲಿಗೆ ಬರುವ ಕುರಿತಾಗಿ ಸುಳಿವು ಕೊಟ್ಟಿದ್ದರು) allure ಎ ಸೆಳೆ, ಕೆಳೆ (ಆತನನ್ನು ತನ್ನೆಡೆಗೆ ಕೆಳೆದುಕೊಂಡಿ- ದ್ದಾಳೆ) ಹೆ ಸೆಳೆತ alluring ಪ ಸೆಳೆಯುವ, ಕೆಣಕುವ, ಕೆಟ್ಟದಾರಿಗೆಳೆವ allusion ಹೆ ಸುಳಿವು, ಎತ್ತುಗೆ, ಸುಳುಹು (ಒಗಟನ್ನು ಬಿಡಿಸಲು ಸುಳುಹು ಕೊಟ್ಟಿದ್ದಾರೆ) allusiveness ಹೆ ಬಳಸುತನ (ಅವನ ಮಾತುಗಳಲ್ಲಿ ಬಳಸುತನವೇ ಹೆಚ್ಚು ಕಾಣಿಸುತ್ತದೆ) alluvial ಹೆ ಮೆಕ್ಕಲು ಮಣ್ಣು (ಈ ಊರಿನ ಸಾಗುವಳಿಗೆ ಮೆಕ್ಕಲು ಮಣ್ಣು ನೆರವು ನೀಡುತ್ತದೆ) alluvium ಹೆ ಹೂಳು (ನೆರೆಯಿಂದಾಗಿ ಅವರ ಗದ್ದೆಗಳಲ್ಲಿ ತುಂಬಾ ಹೂಳು ತುಂಬಿಕೊಂಡಿದೆ) ally ಎ ನಂಟು ಬೆಳೆಸು, ಒಂದಾಗು (ಹೊಡೆದಾಡುತ್ತಿದ್ದ ಎರಡು ನಾಡುಗಳು ಈಗ ಒಂದಾಗಿವೆ) ಹೆ ಅಳವಿಗ (ಇವರಿಬ್ಬರು ಅಳವಿಗರಾದುದು ಯಾವಾಗ?), ಗೆಳೆಯ almanac ಹೆ ನಾಳ್ತೋರುಕ (ಮುನ್ನರಿವನ್ನು ತಿಳಿಯುವುದ- ಕ್ಕಾಗಿ ನಾಳ್ತೋರುಕವನ್ನು ನೋಡಿಸಿದರು), ಬಾನ್ಗನ್ನಡಿ (ಬಾನ್ಗನ್ನಡಿಯಿಂದ ಪಡೆಯಬಹುದಾದ ಅರಿವಿನ ಮೇಲೆ ಅವನಿಗೆ ನಂಬಿಕೆಯಿಲ್ಲ) almighty ಹೆ ಪೇರದಟು (ಪೇರದಟಿನ ಸೆಲವಿಲ್ಲದೆ ಹುಲ್ಲುಕಡ್ಡಿಯು ಅಲುಗಾಡುವುದಿಲ್ಲ), ಹಿರಿಯದಟು (ಹಿರಿಯದಟಿನ ಆಟ ಬಲ್ಲವರಾರು?) almost ಪ 1 ಬಲುಹತ್ತಿರ (ಅವನು ಗುರಿಯ ಬಲುಹತ್ತಿರ ತಲುಪಿದ್ದ) 2 ಹೆಚ್ಚುಕಡಿಮೆ (ಅವನು ಕೆಲಸವನ್ನು ಹೆಚ್ಚುಕಡಿಮೆ ಮುಗಿಸಿಬಿಟ್ಟಿದ್ದ) alms ಹೆ ತಿರುಪೆ (ಮಕ್ಕಳು ದೊಡ್ಡ ದೊಡ್ಡ ಕೆಲಸದಲ್ಲಿದ್ದರೂ ಅವರ ತಾಯಿತಂದೆಯರು ತಿರುಪೆ ಎತ್ತುತ್ತಿದ್ದಾರೆ), ಅರ (ಅರವಟ್ಟಿಗೆ) almshouse ಹೆ ಅರವಟ್ಟಿಗೆ (ಉಳ್ಳವರು ಅರವಟ್ಟಿಗೆ ಕಟ್ಟಿಸಿ ಬಡವರಿಗೆ ಊಟಹಾಕುತ್ತಾರೆ) alone ಪ ತನಿ (ತನಿಯಾಗಿ ಹಾಡು), ಒಬ್ಬನೇ, ಒಂಟಿಯಾಗಿ (ಒಂಟಿಯಾಗಿ ಬಂದ), ಒಬ್ಬನೇ (ಅವನೊಬ್ಬನೇ ಇದನ್ನು ಬಿಡಿಸಬಲ್ಲ) aloof ಪ ಬೇರಾಗಿ (ಒಬ್ಬನೇ ಬೇರಾಗಿ ಕುಳಿತಿದ್ದಾನೆ) aloud ಪ ಗಟ್ಟಿಯಾಗಿ (ಇಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಬಾರದು) alphabet ಹೆ ಬರಿಗೆಪಟ್ಟಿ (ಇಲ್ಲಿ ಮಕ್ಕಳಿಗೆ ಮೊದಲು ಬರಿಗೆಪಟ್ಟಿಯನ್ನು ಕಲಿಸುತ್ತಾರೆ), ಉಲಿಪಟ್ಟಿ alphabetical ಪ ಬರಿಗೆಪಟ್ಟಿಯ (ಪದನೆರಕೆಯಲ್ಲಿ ಪದಗಳನ್ನು ಬರಿಗೆಪಟ್ಟಿಯ ಓರಣದಲ್ಲಿ ಕೊಡಲಾಗುತ್ತದೆ) alphanumeric ಪ ಬರಿಗೆಯೆಣಿಯ, ಎಣಿಬರಿಗೆಯ (ಎಣಿಬರಿಗೆಯ ಬರಹಗಳಲ್ಲಿ ಎಣಿಗಳನ್ನೂ ಬರಿಗೆ- ಗಳನ್ನೂ ಒಟ್ಟಾಗಿ ಬಳಸಲಾಗುತ್ತದೆ) alphine ಪ ಹೆಬ್ಬೆಟ್ಟದ (ಹೆಬ್ಬೆಟ್ಟದ ಮರಗಳು ಚಳಿಗಾಲದಲ್ಲಿ ಎಲೆಗಳನ್ನು ಉದುರಿಸುತ್ತವೆ) alter ಎ ಮಾರು, ಮಾರ್ಪಡು (ಇಲಿ ಹುಲಿಯಾಗಿ ಮಾರ್ಪಟ್ಟಿತು) alteration ಹೆ ಮಾರ್ಪಾಟು (ಈ ಮನೆಯಲ್ಲಿ ಏನೆಲ್ಲ ಮಾರ್ಪಾಟು ನಡೆದಿದೆ?) altercate ಎ ಜಗಳಾಡು, ಕಿತ್ತಾಡು (ಅವರು ಯಾವುದಕ್ಕಾಗಿ ಇಶ್ಟೆಲ್ಲ ಕಿತ್ತಾಡುತ್ತಿದ್ದಾರೆ?) alternate ಎ ಮರುಜರಗು (ಈ ಏರುಪೇರುಗಳು ಮರುಜರಗುಗಳಾಗಿ ನಡೆಯುತ್ತವೆ), ಸೂಳಿಸು (ಈ ಕೆಲಸವು ಪಾಳಿಯಲ್ಲಿ ಸೂಳಿಸುತ್ತದೆ) alternately ಪ ಒಂದರಮೇಲೊಂದು, ಒಂದಾದ ಮೇಲೊಂದು (ಒಂದಾದ ಮೇಲೊಂದು ತೊಡಕುಗಳು ಬರುತ್ತಲೇ ಇವೆ) allow alternately A


20 alternating ಹೆ ಮಾರ್ಪುಮಿಂಚು (ಮನೆಗಳಲ್ಲೆಲ್ಲ ಮಾರ್ಪುಮಿಂಚನ್ನು ಬಳಸಲಾಗುತ್ತದೆ), ಮಾರ್ಮಿಂಚು, ಏರಿಳಿಮಿಂಚು (ಈ ಚೂಟಿಯೂ ಏರಿಳಿಮಿಂಚಿನಿಂದ ನಡೆಯುತ್ತದೆ), ಇಮ್ಮಿಂಚು, ತೂಗುಮಿಂಚು alternative ಪ ಆಯ್ಕೆಯ (ಅಲ್ಲಿ ಆಯ್ಕೆಯ ಕೆಲಸ ಇರಲಿಲ್ಲ), ಮಾರ್ಪಿನ (ದಾರಿಯ ನಡುವೆ ಬಂಡಿ ಕೆಟ್ಟುದುದರಿಂದ ಮಾರ್ಪಿನ ಬಂಡಿ ಕೊಟ್ಟರು) ಹೆ ಮತ್ತೊಂದಾಯ್ಕೆ, ಬೇರೆದಾರಿ, ಮಾರಾಯ್ಕೆ (ತೊಂದರೆ- ಯನ್ನು ಬಗೆಹರಿಸಲು ಮಾರಾಯ್ಕೆಯಿರಲಿಲ್ಲ), ಮರುವಾಯ್ಕೆ, ಹೆರತಾಯ್ಕೆ altimeter ಹೆ ಎತ್ತರಳಕ (ಬೆಟ್ಟದ ಎತ್ತರ ಎಶ್ಟಿದೆ- ಯೆಂಬುದನ್ನು ತಿಳಿಯಲು ಅವರು ಎತ್ತರಳಕವನ್ನು ತಂದಿದ್ದರು), ಏರಳಕ altitude ಹೆ ಎತ್ತರ (ಕಡಲಿನ ಮಟ್ಟದಿಂದ ಈ ಬೆಟ್ಟ ಎಶ್ಟು ಎತ್ತರ ಇದೆ?), ಏರಳತೆ (ಈ ಬಾನೋಡದ ಏರಳತೆ FUÀ 4000 Cr) altostratus ಹೆ ಮಬ್ಬುನೀಲಿಮೋಡ (ಈಗ ಹೊರಗಡೆ ಮಬ್ಬುನೀಲಿಮೋಡ ಕಾಣಿಸುತ್ತಿದೆ), ನಾರು ಮೋಡ, ಕೆನೆಮೋಡ altruism ಹೆ ತನ್ಮೆಯಿಲ್ಲದ ಕಳಕಳಿ ಂಐU (ಂಡಿiಣhmeಣiಛಿ ಐogiಛಿ Uಟಿiಣ) ಹೆ ಲೆಕ್ಕದರಿಮೆಯ ಒಪ್ಪಗೆಸಕದ ಬಿಡಿ (ಲೆಒಬಿ) (ಎಣ್ಣುಕದಲ್ಲಿ ಲೆಒಬಿ ಲೆಕ್ಕದ ಕೆಲಸಗಳನ್ನು ಮಾಡುತ್ತದೆ) alum ಹೆ ಮಂಕುಹರಳು (ಬಾವಿಯನ್ನು ಚೊಕ್ಕಗೊಳಿಸಲು ಮಂಕುಹರಳನ್ನು ಬಳಸುತ್ತಾರೆ), ಪಟಿಕ aluminium ಹೆ ಬೆಳ್ಳಿಹೊನ್ನು (ಬೆಳ್ಳಿಹೊನ್ನು ನೆಲದ ಹಕ್ಕಳೆಯಲ್ಲಿ ಸುಳುವಾಗಿ ಸಿಗುತ್ತದೆ), ಬಿಳಿಹೊನ್ನು alveolus ಹೆ ಗಾಳಿಗೂಡು (ಇವರ ಗಾಳಿಗೂಡುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮಾಂಜುಗರು ತಿಳಿಸಿದ್ದಾರೆ) amalgamate ಎ ಸೇರಿಸು (ಆತ ಕುಣಿತದೊಂದಿಗೆ ಹಾಡನ್ನು ತುಂಬಾ ಚನ್ನಾಗಿ ಸೇರಿಸಿದ್ದ), ಕೂಡಿಸು, ಬೆರೆಸು amanuensis ಹೆ ಬರಹನೆರವಿಗ (ಆತ ಬರಹಗಾರರಿಗೆ ನೆರವನ್ನೀಯುವ ಬರಹನೆರವಿಗನಾಗಿದ್ದ) amass ಎ ಉಗ್ರಾಣಿಸು, ಕಲೆಹಾಕು (ಆತ ಹಲವಾರು ಬಗೆಯ ಬೆಟ್ಟುಗೆಗಳನ್ನು ಕಲೆಹಾಕಿದ್ದಾನೆ), ಒಟ್ಟುಗೂಡಿಸು amateur ಹೆ 1 ಅರೆಚಳಕಿಗ (ಇಲ್ಲಿ ಅರೆಚಳಕಿಗರಿಗಾಗಿ ಒಂದು ಪೋಟಿಯನ್ನು ಏರ್ಪಡಿಸಲಾಗಿದೆ) 2 ಕಲೆ- ಯೊಲವಿಗ (ಕಲೆಯೊಲವಿಗರು ತಮ್ಮ ಕಲೆಯ ಕೆಲಸ- ವನ್ನು ಹಣಕ್ಕಾಗಿ ಮಾಡುವುದಿಲ್ಲ) amateurism ಹೆ ಕಲೆಯೊಲವು (ಕಲೆಯೊಲವಿನಿಂದ ನಡೆಸಿದ ಆಟವು ಚೆನ್ನಾಗಿ ನಡೆಯಿತು) amaze ಎ ಬೆಗಡು (ಆತನ ಕೆಲಸವನ್ನು ನೋಡಿ ನಾನು ಬೆಗಡಿದೆ) amazement ಹೆ ಬೆರಗು (ಬೆರಗಾಗು; ನಿಬ್ಬೆರಗು), ಮಲ್ಲಣಿ (ನಿಮ್ಮ ಮಾತನ್ನು ಕೇಳಿ ಆತ ಮಲ್ಲಣಿಗೊಂಡ), ಬೆಗಡಿಕೆ amazing ಪ ಬೆಚ್ಚಬೆರಗಿನ (ಅವರ ಬೆಚ್ಚಬೆರಗಿನ ಆಟವನ್ನು ಎಲ್ಲರೂ ಮೆಚ್ಚಿದರು), ಬೆಕ್ಕಸ ಬೆರಗಿನ, ಬೆರಗಾಗಿಸುವ ambassador ಹೆ ದೊರೆಮಾರಾಳು, ಅರಮಾರಾಳು (ಎರಡು ನಾಡುಗಳ ಅರಮಾರಾಳುಗಳ ನಡುವೆ ಮಾತುಕತೆ ನಡೆಯಿತು), ಮಾರಳವಿಗ amber ಪ ತೇನ್ಹಳದಿ (ತೇನ್ಹಳದಿ ಬಣ್ಣದ ಹೊದಿಕೆ ತುಂಬಾ ಚನ್ನಾಗಿರುತ್ತದೆ) ಹೆ ಮರದಂಟು (ಈ ಹರಳಿನ ಬಣ್ಣ ಮರದಂಟು), ಕೆಡದಂಟು, ಮರದಮೇಣ ambidexterity ಹೆ ಸಾಟಿಯಿರ್ಗಯ್ (ಆ ಹುಡುಗನಿಗೆ ಸಾಟಿಯಿರ್ಗಯ್ಯ ಚಳಕಗಳು ಗೊತ್ತಿವೆ) ambience ಹೆ ನಲ್ನೆರೆ (ಕಲಿಮನೆಯ ನಲ್ನೆರೆ ಕಲಿಕೆಗೆ ಇಂಬು ಕೊಡುವಂತಿತ್ತು), ನಲ್ಮುತ್ತು (ಅಲ್ಲಿ ಹುರುಪಿನ ನಲ್ಮುತ್ತು ಕಾಣಬರುತ್ತಿತ್ತು), ನಲ್ಸುತ್ತು ambiguity ಹೆ ಪದಿರು (ಆತನ ಕೇಳ್ವಿ ಪದಿರಿನಿಂದ ಕೂಡಿತ್ತು), ಇಪ್ಪುರುಳು (ಅವನ ಮಾತಿನಲ್ಲಿ ಇಪ್ಪುರುಳಿದೆ) ambiguous ಪ ಇಬ್ಬಗೆಯ (ಅವನ ಮಾತಿಗೆ ಇಬ್ಬಗೆಯ ಹುರುಳಿದೆ), ಪದಿರಿನ, ಇಪ್ಪುರುಳಿನ (ನಲ್ಬರಹಗಾರರು ಬೇಕೆಂದೇ ಇಪ್ಪುರುಳಿನ ಪದಗಳನ್ನು ಬಳಸುತ್ತಾರೆ) ambit ಹೆ ಎಲ್ಲೆ (ನಾಡಿನ ಪಡು ಎಲ್ಲೆಯಲ್ಲಿ ಕಡಲಿದೆ), ಮೇರೆ ambition ಹೆ ಏರಿಕೆಯ ಹಂಬಲ, ಏರ್ಗೀಳು (ಒಮ್ಮೆ- ಯಾದರೂ ಆ ಹೆಬ್ಬೆಟ್ಟದ ತುದಿಗೆ ಹೋಗಬೇಕೆಂಬುದು ಆತನ ಏರ್ಗೀಳಾಗಿತ್ತು), ಹಿರಿಹಂಬಲ (ಹಿರಿಹಂಬಲ- ವಿದ್ದರೆ ಅದು ಬದುಕಿನಲ್ಲಿ ಗುರಿ ಮುಟ್ಟುವುದಕ್ಕೆ ನೆರವಾಗುತ್ತದೆ) alternating current ambition A


21 ambitious ಪ ಹಿರಿಹಂಬಲದ (ಆತ ಹಿರಿಹಂಬಲದ D¼ÀÄ) ambivalent ಪ ಇಬ್ಬಗೆಯ (ಯಾವುದೇ ಕೆಲಸವನ್ನು ಮಾಡುವಾಗ ಇಬ್ಬಗೆಯ ಅನಿಸಿಕೆ ಇರಬಾರದು) ambivert ಹೆ ಇರ್ಪರಿಚಿಗ (ಅವರು ಇರ್ಪರಿಚಿಗರಾಗಿರುವು- ದರಿಂದ ಅವರೊಡನೆ ಕೆಲಸ ಮಾಡುವುದು ಸುಳುವಲ್ಲ) amble ಎ ಮೆಲ್ಲ ನಡೆ (ಆಕೆ ತುಂಬಾ ಮೆಲ್ಲ ನಡೆಯುತ್ತಾಳೆ) ಹೆ ಮೆಲ್ನಡೆ (ಅವನು ಮೆಲ್ನಡೆಯಿಂದ ಊರಿಗೊಂದು ಸುತ್ತು ಹಾಕಿದ) ambrosia ಹೆ ನಲ್ಕುಡಿಗೆ (ನಲ್ಕುಡಿಗೆ ಕುಡಿದುದರಿಂದ ಅವರಿಗೆ ಸಾವೇ ಇಲ್ಲವಾಯಿತು) ambulance ಹೆ ಬೇನೆಬಂಡಿ (ಬೇನೆಬಂಡಿ ಹೋಗುತ್ತಿರು- ವಾಗ ಉಳಿದ ಬಂಡಿಗಳು ದಾರಿ ಬಿಟ್ಟುಕೊಡಬೇಕು), ಮದ್ದುಮನೆಬಂಡಿ ambulatory ಪ 1 ನಡೆಯಬಲ್ಲ (ನಡೆಯಬಲ್ಲ ಓಣಿ), ನಡೆಯ 2 ಸರಿಸಬಲ್ಲ (ಸರಿಸಬಲ್ಲ ಗೋಡೆ) ambush ಎ ತಾಗುಡಿಯಿಡು (ತಾಗುಡಿಯಿಟ್ಟು ಹಗೆಗಳನ್ನು ಸೋಲಿಸಿದರು) ಹೆ ತಾಗುಡಿ (ಇಲ್ಲಿ ತುಸು ಮುಂದೆ ಅವರ ತಾಗುಡಿಯಿದೆ; ಎಚ್ಚರಿಕೆಯಿಂದ ಮುಂದೆ ಹೋಗಿ), ಅಡಗುದಾಳಿ, ತಾಗುಡಿದಾಳಿ ameliorate ಎ ಮೇಲೆತ್ತು, ಒಳ್ಳೆಯದಾಗಿಸು (ತನ್ನ ತಿದ್ದಿಕೆ- ಗಳಿಂದ ಆತ ಬರಹವನ್ನು ಸಾಕಶ್ಟು ಒಳ್ಳೆಯದಾಗಿಸಿದ್ದ) amenable ಪ ಒಗ್ಗುವ, ಒಳಗಾಗುವ, ಒಲಿಸಬಲ್ಲ (ಮೂವರಲ್ಲಿ ಇಬ್ಬರು ಒಲಿಸಬಲ್ಲವರಾಗಿದ್ದಾರೆ) amend ಎ ತಿದ್ದು (ಅವರು ಬರೆದುದನ್ನೊಮ್ಮೆ ಓದಿ ತಿದ್ದಲು ಹೇಳಿದ್ದಾರೆ), ಸರಿಪಡಿಸು amendment ಹೆ ತಿದ್ದುಪಡಿ (ನಿನ್ನೆಯ ಹೇಳಿಕೆಯಲ್ಲಿ ತುಸು ತಿದ್ದುಪಡಿ ಮಾಡಿದ್ದಾರೆ) amenity ಹೆ 1 ಒಗ್ಗುವಿಕೆ 2 ಹದುಳ (ಆ ಕೋಣೆಯಲ್ಲಿ ಹದುಳವೇನೂ ಇರಲಿಲ್ಲ) amethyst ಹೆ ಕೆಂಬರಳು (ಈ ಬೀದಿಯಲ್ಲಿ ಒಂದು ಕೆಂಬರಳಿನ ಅಂಗಡಿಯಿದೆ) amiable ಪ ಒಳ್ಳೆನಡತೆಯ, ನಣ್ಪಿನ (ಅವರಲ್ಲಿಗೆ ಹೋದರೆ ಅಲ್ಲಿ ಯಾವಾಗಲೂ ನಣ್ಪಿನ ನಲ್ಬರವು ದೊರಕುತ್ತದೆ) amicable ಪ ಹೊಂದಾಣಿಕೆಯ (ಆ ಊರಿನಲ್ಲಿ ಅವನು ತುಂಬಾ ಹೊಂದಾಣಿಕೆಯ ಹರದನಾಗಿದ್ದ) amiss ಪ ತಪ್ಪಿದ (ಈ ಬಿಣಿಗೆಯ ಓಟದಲ್ಲಿ ಏನೋ ತಪ್ಪಿದಹಾಗಿದೆ), ತಪ್ಪಾಗಿ (ಅವರು ತಪ್ಪಾಗಿ ಏನೋ ಹೇಳಿರಬೇಕು) amity ಹೆ ನಣ್ಪು (ಆ ಎರಡು ನಾಡುಗಳ ನಡುವೆ ನಣ್ಪೇನೂ ಕಾಣಿಸುವುದಿಲ್ಲ), ಗೆಳೆತನ ammeter ಹೆ ಮಿಂಪರಿವಿನಳಕ, ಮಿನ್ಹರಿವಿನಳಕ (ಕಲಿಮನೆ- ಯಲ್ಲಿ ಮಿನ್ಹರಿವಿನಳಕವನ್ನು ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡುತ್ತಾರೆ) ammunition ಹೆ ಮದ್ದುಗುಂಡು (ಈ ಉಗ್ರಾಣದಲ್ಲಿ ತುಂಬಾ ಮದ್ದುಗುಂಡು ತುಂಬಿದ್ದಾರೆ) amnesia ಹೆ ನೆನಪಳಿವು (ನೆನಪಳಿವಿನಿಂದ ಬಳಲುವವರು ಎಲ್ಲವನ್ನೂ ಬರೆದಿಟ್ಟುಕೊಳ್ಳುತ್ತಾರೆ) amnesiac ಹೆ ನೆನಪಳಿಗ (ಆತ ನೆನಪಳಿಗನೆಂಬುದು ಇವತ್ತು ಬರದುದರಿಂದ ಗೊತ್ತಾಗುತ್ತದೆ) amnesty ಹೆ ತಪ್ಪುಮರೆತ (ಕಗ್ಗೊಲೆ ಮಾಡಿದವನಿಗೆ ತಪ್ಪುಮರೆತ ಸಿಗಬಾರದು ಎನ್ನುವವರು ಇದ್ದಾರೆ) amoeba ಹೆ ಸೀರ್ಮಾರ್ಪುಸುರಿ, ಒಚ್ಚೀರು (ಒಚ್ಚೀರಿನ ಪರಿಜು ಆಗಾಗ ಮಾರ್ಪಾಟಿಗೆ ಒಳಗಾಗುತ್ತದೆ), ಒರ್ಸೀರು amok ಪ ಹುಚ್ಚೆದ್ದ (ಹುಚ್ಚೆದ್ದ ಗುಂಪೊಂದು ಅಂಗಡಿಗಳಿಗೆ ನುಗ್ಗಿ ಸೂರೆ ಮಾಡಿತು), ಯರ್ರಾಬಿರ್ರಿ amoral ಎ ಅರವಲ್ಲದ (ತಾನು ಮಾಡಿದ್ದು ಅರವಲ್ಲದ ಕೆಲಸವೆಂದು ಅವನಿಗೆ ಅನಿಸುತ್ತಿತ್ತು) amorality ಹೆ ಅರವಲ್ಲಮೆ (ಕೆಲವರು ಇತ್ತೀಚೆಗೆ ಅರವಲ್ಲಮೆ ಹೆಚ್ಚುತ್ತಿದೆಯೆಂದು ಹೇಳುತ್ತಿದ್ದಾರೆ) amorous ಪ ಬೇಟದ (ಬೇಟದ ಹೊತ್ತಿನಲ್ಲಿ ನವಿಲು ರೆಕ್ಕೆ ಬಿಡಿಸಿ ಚೆನ್ನಾಗಿ ಕುಣಿಯುತ್ತದೆ) amorphous ಪ ಪಾಂಗುಗೆಟ್ಟ, ಪರಿಜಿಲ್ಲದ (ಪರಿಜಿಲ್ಲದ ಮೋಡಗಳಲ್ಲಿ ಪರಿಜನ್ನು ಕಾಣಬಯಸುತ್ತಾನೆ) amorphous ಪ ಹೊಂದಾಣಿಕೆಯಿಲ್ಲದ (ಈ ಹೊಂದಾಣಿ- ಕೆಯಿಲ್ಲದ ತಂಡ ಒಳ್ಳೆ ಕೆಲಸ ಮಾಡುತ್ತಿಲ್ಲ) amortize ಎ ಸಾಲಕಳೆ (ಆತ ತಿಂಗಳು ತಿಂಗಳು ಹಣ ತುಂಬುತ್ತಾ ಬಂದು ಸಾಲಕಳೆದಿದ್ದಾನೆ), ಸಾಲತೀರಿಸು ambitious amortize A


22 amortization ಹೆ ಸಾಲತೀರಿಕೆ (ಮನೆಸಾಲದ ಸಾಲ- ತೀರಿಕೆಯ ಕಂತುಗಳ ನಾಳೆಣಿಕೆಗಳನ್ನು ಇದರಲ್ಲಿ ಕೊಡಲಾಗಿದೆ) amount ಹೆ 1 ಮೊತ್ತ (ಅವನಿಗೆ ದೊರೆತ ಪಡಪಿನ ಮೊತ್ತ ಎಶ್ಟೆಂದು ಅವನಿಗೇ ತಿಳಿಯದು) 2 ಅಳವಿ (ಈ ಕೆರೆಯಲ್ಲಿರುವ ನೀರಿನ ಅಳವಿಯೆಶ್ಟೆಂದು ಕಂಡು- ಹಿಡಿಯಿರಿ) ಎ 1 ಆಗು (ಆ ತಿಂಗಳ ಮುಟ್ಟುವಳಿ ಹತ್ತುಸಾವಿರವಾಗಿದೆ) 2 ಸರಿಯಾಗು (ಅವನು ಮಾಡಿದುದು ಮಲೆತಕ್ಕೆ ಸರಿಯಾಗಿದೆ) amperage ಹೆ ಮಿನ್ನಳವು (ಮಿನ್ನಳವು ಎಶ್ಟಿದೆಯೆಂಬು- ದನ್ನು ಎಂಪಿಯರ್ನಲ್ಲಿ ಲೆಕ್ಕಹಾಕುತ್ತಾರೆ) amphibian ಹೆ ಈರಿರುಗ (ಈರಿರುಗಗಳು ನೆಲದ ಮೇಲೂ ನೀರಿನಡಿಯಲ್ಲೂ ಇರಬಲ್ಲುವು), ನೆಲನೀರುಸಿರಿ amphibiology ಹೆ ಈರಿರುಗದರಿಮೆ (ಕಪ್ಪೆ, ಓತಿ ಮುಂತಾದ ಉಸುರಿಗಳ ಬಗ್ಗೆ ತಿಳಿಯಲು ಈರಿರುಗ- ದರಿಮೆಯನ್ನು ಓದಬೇಕಾಗುತ್ತದೆ) amphitheatre ಹೆ ದುಂಡುಕಲೆಮನೆ (ದುಂಡುಕಲೆ- ಮನೆಯಲ್ಲಿ ನಡೆಯುವ ಬಯಲಾಟವನ್ನು ಕಲೆಮನೆಯ ಸುತ್ತಲೂ ಕುಳಿತು ನೋಡಬಹುದು) amphoteric ಪ ಇರ್ಪರಿಚೆಯ (ಅಲ್ಯುಮಿನಿಯಂ ಹುಳಿ ಮತ್ತು ಮೂಲಗಳೆರಡರ ಇರ್ಪರಿಚೆಯನ್ನು ಹೊಂದಿದೆ) ample ಪ ಸಾಕಶ್ಟು (ಅವತ್ತಿನ ಬಯಲಾಟವನ್ನು ನೋಡಲು ಸಾಕಶ್ಟು ಮಂದಿ ನೆರೆದಿದ್ದರು), ಸಾಕನಿತು, ತುಂಬ, ಹೇರಳ (ಅವನಿಗೆ ಹೇರಳ ಹಣ ಸಿಕ್ಕಿದೆ) amplifier ಹೆ ಹೆಚ್ಚುಕ (ಒಸಗೆಗಳಲ್ಲಿ ಉಲಿಹೆಚ್ಚುಕಗಳಿಂದ ಹಾಡು ಕೇಳಿಸುತ್ತಾರೆ) amplify ಎ ಹೆಚ್ಚು (ಆಕೆಯಲ್ಲಿ ಅವನ ಬಗೆಗಿನ ಹೆದರಿಕೆ ಹೆಚ್ಚುತ್ತಾ ಹೋಯಿತು), ಹೆಚ್ಚಿಸು, ಮೊಕ್ಕಳಿಸು amplitude ಹೆ ಅಲೆಯೆತ್ತರ (ಸದ್ದು ಹೆಚ್ಚಾದಾಗ ಅದರ ಅಲೆಯೆತ್ತರ ಹೆಚ್ಚಿರುತ್ತದೆ) amputate ಎ ಕೊಯ್ತೆಗೆ (ಸಕ್ಕರೆಬೇನೆ ಹೆಚ್ಚಾದುದರಿಂದ ಕಾಲಬೆರಳನ್ನು ಕೊಯ್ತೆಗೆಯಲಾಯಿತು), ತುಂಡಿಸು, ಕಡಿದು ತೆಗೆ amputation ಹೆ ಕೊಯ್ತೆಗೆತ (ಕಾಲಿನ ಕೊಯ್ತೆಗೆತದಿಂದಾಗಿ ಅವನಿಗೆ ನಡೆಯಲು ತೊಂದರೆಯಾಗಿದೆ) amuse ಎ ಚಲ್ಲವಾಡಿಸು (ಅವರು ತಮ್ಮ ಕುಣಿತದಿಂದ ನೆರೆದವರನ್ನು ಚಲ್ಲವಾಡಿಸಿದರು), ಚಲ್ಲವಾಡು, ಜಕ್ಕುಳಿಸು amusement ಹೆ ಚಲ್ಲ (ಚಲ್ಲಕ್ಕಾಗಿ ಅವರು ಬಿಡುವಿನಲ್ಲಿ ಚೆನ್ನೆಮಣೆ ಆಡುತ್ತಾರೆ; ಚಲ್ಲವಾಡು; ಚಲ್ಲಗಾರ್ತಿ; ಚಲ್ಲಗಣ್ಣು), ಚಕ್ಕಂದ, ನೆಬ್ಬುವ amylaceous ಪ ಗಂಜಿಯ (ಬಿಸಿಕುತ್ತ ಆದಾಗ ಗಂಜಿಯ ಕುಡಿಗೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ) anabolism ಹೆ ಕಟ್ಟುತರುಮಾರ್ಪ್ಪು (ಅಂಗಗಳನ್ನು ಕಟ್ಟುವ ಕೆಲಸದಲ್ಲಿ ಕಟ್ಟುತರುಮಾರ್ಪಿನ ಪಾಂಗು ಹಿರಿದು), ಹುರುಪುತರುಮಾರು anachronic ಪ ತಪ್ಪುಹೊತ್ತಿನ (ಮಕ್ಕಳಿಗೆ ಚಿಕ್ಕಂದಿನಲ್ಲೇ ಮದುವೆ ಮಾಡಿಬಿಡುವುದು ತಪ್ಪುಹೊತ್ತಿನ ನಿಲುವು) anachronism ಹೆ ತಪ್ಪುಹೊತ್ತಿನದು (ಅವರ ನಿಲುವು ತಪ್ಪುಹೊತ್ತಿನದಾಗಿದೆ) anaemia ಹೆ ನೆತ್ತರಿಳಿತ (ಆಕೆ ನೆತ್ತರಿಳಿತದಿಂದ ಬಳಲು- ತ್ತಿದ್ದಾಳೆ) anaesthesia ಹೆ ಅರಿವಳಿಕೆ (ಕೊಯ್ತಾರಯ್ಕೆ ನಡೆಸಲು ಮಗುವಿಗೆ ಅರಿವಳಿಕೆ ನೀಡಲಾಯಿತು) anaesthesiology ಹೆ ಅರಿವಳಿಕೆಯರಿಮೆ (ಕೊಯ್ಮದ್ದಿನ ಕೆಲಸದ ಮುನ್ನ ಕುತ್ತಿಗರನ್ನು ಮಯ್ಮರೆಗೊಳಿಸಲು ಬೇಕಾದ ಅರಿಮೆಯೇ ಅರಿವಳಿಕೆಯರಿಮೆಯಾಗಿದೆ) anagram ಹೆ ಮಾರ್ಬರಿಗೆಪದ (ಒಂದು ಪದದ ಬರಿಗೆಗಳ ಓರಣವನ್ನು ಮಾರ್ಪಡಿಸಿ ಮಾರ್ಬರಿಗೆಪದವನ್ನು ಪಡೆಯ- ಲಾಗುತ್ತದೆ), ಕಲಕುಪದ, ಕದಲುಪದ (ಅಲರ್ ಮತ್ತು ಅರಲ್ ಎಂಬವುಗಳು ಕಲಕುಪದಗಳು) analeptic ಪ ಕೆರಳಿಸುವ (ಅವರು ಕೊಟ್ಟ ಮದ್ದಿಗೆ ಕೆರಳಿ- ಸುವ ಅಳವಿದೆ) analgesic ಹೆ ನೋವಳಿಕ (ತಲೆನೋವೆಂದು ಆಕೆ ದಿನಾಲೂ ನೋವಳಿಕಗಳನ್ನು ನುಂಗುತ್ತಿದ್ದಾಳೆ) analog ಪ ಎಡೆಬಿಡದ (ಎಡೆಬಿಡದ ತೋರುಕಗಳನ್ನು ಅಂಕೆಗೊಳಿಸಿ ಎಣ್ಣುಕಗಳಲ್ಲಿ ಕೂಡಿಡಬಹುದು) analog ಹೆ ಎಡೆಬಿಡದ ನಿಕ್ಕಿಪಾಳಿ ತೋರುಗ (ಈ ಎಡೆಬಿಡದ ನಿಕ್ಕಿಪಾಳಿ ತೋರುಗದ ಸಲದೆಣಿಕೆ 20 ಕಿಲೊಹರ್್ಟ) amortization analog periodic signal A


23 analogous ಪ ಹೋಲುವ (ಈ ತಿಳಿವನ್ನು ಕೊಗೆಯಲು ಹೋಲುವ ಎತ್ತುಗೆಗಳನ್ನು ಕೊಡಬೇಕಾಗುತ್ತದೆ) analogy ಹೆ ಹೋಲಿಕೆ (ಎಣ್ಣುಕಗಳು ಕೆಲಸ ಮಾಡುವು- ದಕ್ಕೂ ನಮ್ಮ ಮಿದುಳು ಕೆಲಸ ಮಾಡುವುದಕ್ಕೂ ನಡುವೆ ಹೋಲಿಕೆಯಿದೆ), ದೊರೆ analyse ಎ ಬಿಡಿನೋಡು (ಹಿನ್ನಡವಳಿಗಳನ್ನು ಬಿಡಿ- ನೋಡುವುದರಿಂದ ಅದನ್ನು ಅರಿಯಲು ಸುಳುವಾಗು- ತ್ತದೆ), ಬಿಡಿಸಿನೋಡು analyser ಹೆ ಬಿಡಿನೋಡುಕ (ಈ ಬಿಡಿನೋಡುಕವನ್ನು ಮಾಂಜುಮನೆಗಳಲ್ಲಿ ಹಲವು ಏಡುಗಳಿಂದ ಬಳಕೆ ಮಾಡುತ್ತಿದ್ದಾರೆ) analysis ಹೆ ಸೀಳುನೋಟ, ಬಿಡಿನೋಟ (ಅವನು ನಡೆಸಿದ ಬಿಡಿನೋಟ ಅಶ್ಟೊಂದು ಸರಿಯಲ್ಲವೆಂದು ತೋರುತ್ತದೆ) analyst ಹೆ ಬಿಡಿನೋಡುಗ (ಮಾರುಕಟ್ಟೆಯ ಏರಿಳಿತವನ್ನು ಬಿಡಿನೋಡುಗರು ಗಮನಿಸುತ್ತಿರುತ್ತಾರೆ) analytical ಪ ಬಿಡಿನೋಟದ (ಕಲಿಗರಿಗೆ ಬಿಡಿನೋಟದ ಕಲಿಕೆಯನ್ನು ಮೊದಲು ಕೊಡಿಸಲಾಗುತ್ತದೆ) analyze ಎ ಬಗೆದರಿ, ಬಗೆಯರಿ (ಅವರು ಈ ತೊಂದರೆ- ಯನ್ನು ತುಂಬಾ ಚೆನ್ನಾಗಿ ಬಗೆಯರಿದರು), ಸೀಳು- ನೋಡು, ಬಿಡಿನೋಡು analyzer ಹೆ ಒರೆಹಚ್ಚುಕ (ಅರಿವನ್ನು ಕೂಡಿಡುವ ಕೆಲಸ- ವನ್ನು ಈ ಒರೆಹಚ್ಚುಕ ಮಾಡುತ್ತಿದೆ) anarchism ಹೆ ಆಳ್ತೆಯಿಲ್ಲಮೆ (ಇಂದಿಗೂ ಆಳ್ತೆಯಿಲ್ಲಮೆ- ಯಿಂದ ಹೊರಬರಲು ಹಲವು ನಾಡುಗಳು ಮೊಗಸು- wÛªÉ) anarchy ಹೆ ಕಟ್ಟಲೆಗೆಡುಹ (ಅರಸನ ಸಾವಿನ ಬಳಿಕ ಆ ನಾಡಿನಲ್ಲಿ ಕಟ್ಟಲೆಗೆಡುಹವುಂಟಾಗಿದೆ), ಕಟ್ಟಲೆಯಳಿವು, ಆಳ್ತೆಯಿಲ್ಲದಿಕೆ (ನಾವು ಮಂದಿಯಾಳ್ವಿಕೆಗೆ ಒಳಗಾಗಿದ್ದರೂ ಕೆಲವರು ಆಳ್ತೆಯಿಲ್ಲದಿಕೆಗೆ ಒಳಗಾಗಿದ್ದೇವೆ ಎಂದು ಹೇಳುತ್ತಾರೆ) anathema ಹೆ 1 ಉಸುರಿಡುಗೆ 2 ಹೇಸಾಳು (ಆತನು ನನಗೆ ಹೇಸಾಳಾಗಿ ಕಾಣಿಸುತ್ತಾನೆ), ಹೇಸಿಗೆ anathematise ಎ ಬಯ್ಯು, ಹಳಿ, ಹೀಗಳೆ (ತಮ್ಮ ಹೇಳಿಕೆಗಳಿಗೆ ಒಪ್ಪಿಗೆ ಕೊಡದವರನ್ನೆಲ್ಲ ಅವರು ಹೀಗಳೆ- ಯುತ್ತಿದ್ದಾರೆ) anatomist ಹೆ ಮಯ್ಯರಿಗ (ಈ ಕಲಿಕೆಕೂಟದಲ್ಲಿ ಹಲವು ಮಯ್ಯರಿಗರು ಮಾತನಾಡಲಿದ್ದಾರೆ), ಒಡಲರಿಗ anatomy ಹೆ ಮಯ್ಯಿಟ್ಟಳದರಿಮೆ (ಮಾಂಜುಗರಾಗುವವರು ಮಯ್ಯಿಟ್ಟಳದರಿಮೆಯನ್ನು ಮೊದಲು ತಿಳಿಯ- ಬೇಕಾಗುತ್ತದೆ) ancestor ಹೆ ಹಿರೀಕ (ಇಲ್ಲೆಲ್ಲ ಕಾಡನ್ನು ಕಡಿದು ತೋಟ ಮಾಡಿದವರು ನಮ್ಮ ಹಿರೀಕರು) ancestral ಪ ಮನೆತನದ (ಅವರಿಗೆ ಅವರ ಮನೆತನದ ದಕ್ಕು ಬೇಕಾದಶ್ಟಿದೆ) ancestry ಹೆ ಮನೆತನ (ಅವರದು ತುಂಬಾ ಹಿರಿಮೆಯುಳ್ಳ ಮನೆತನ), ತಳಿಯಿಳಿಕೆ anchor ಹೆ 1 ಹಿಡಿಗೂಟ (ಹಿಡಿಗೂಟಗಳನ್ನು ಕೆಳಗೆ ಬಿಟ್ಟು ಹಡಗು ಕದಲದೆ ಉಳಿಯುವಂತೆ ಮಾಡಿದರು) 2 ನಡೆಸುಗ (ಟಿ.ವಿ.ಯಲ್ಲಿ ಇವರು ನಡೆಸುಗರಾಗಿ ಕೆಲಸ ಮಾಡುತ್ತಿದ್ದಾರೆ) ಎ 1 ಹಿಡಿಗೂಟವಿಕ್ಕು 2 ನಾಟು (ಕಂಬವನ್ನು ಗಟ್ಟಿಯಾಗಿ ನಾಟಿದ್ದಾರೆ) anchorage ಹೆ 1 ಹಿಡಿಗೂಡಿಕೆ (ಗಿಡವು ಚೆನ್ನಾಗಿ ಬೆಳೆಯಲು ಗಟ್ಟಿಯಾದ ಹಿಡಿಗೂಡಿಕೆ ಬೇಕು) 2 ಹಡಗುನಿಲ್ಲೆಡೆ anchorite ಹೆ ತೊರವಿಗ (ತೊರವಿಗನಾದರೂ ಆತನಿನ್ನೂ ಹಣದಾಸೆ ಬಿಟ್ಟಿಲ್ಲ) anchorman ಹೆ ಉಟ್ಟುಗಾರ, ಅಂಕೆಗಾರ (ಅವರು ಹಲವು ಬಾನುಲಿಗಳಲ್ಲಿ ಅಂಕೆಗಾರರಾಗಿ ಕೆಲಸ ಮಾಡಿದ್ದಾರೆ) anchovy ಹೆ ಮೀನ್ಬಾಳಕ (ಕರಾವಳಿಯವರು ಮೀನ್ಬಾಳಕ ಮಾಡಿ ಒಳನಾಡಿಗರಿಗೆ ಮಾರುತ್ತಾರೆ) ancient ಪ ಕಿಗ್ಗಳ (ಮಕ್ಕಳಿಗೆ ಅಜ್ಜಿ ಒಂದು ಕಿಗ್ಗಳ ಕತೆ ಹೇಳುತ್ತಿದ್ದಾಳೆ), ಹಳೇಕಾಲದ ancillary ಪ 1 ಒತ್ತಾಸೆಯ (ಅವರೊಂದಿಗೆ ಒಂದು ಒತ್ತಾಸೆಯ ತಂಡವೂ ಬಂದಿತ್ತು), ನೆರವಿನ, ಕೆಳಗಿನ 2 ಒಳಪಟ್ಟ, ಹೆಚ್ಚಿನ ಂಓಆ gಚಿಣe ಹೆ ಮತ್ತುಕದ (ಮಿನ್ಕೆಯಲ್ಲಿ ಮತ್ತುಕದವನ್ನು ಬಳಸಿ ದೂಸರನ್ನು ಜಾರಿಗೆ ತರಲಾಗುತ್ತದೆ) andante ಪ ನಡುತರ (ಮುದಿಹರೆಯದಲ್ಲಿ ನಡುತರ ನಡೆಯುವುದು ಒಳ್ಳೆಯದು), ಮೆಲ್ಲಗಿನ analogous andante A


24 androecium ಹೆ ಗಂಡುಹೂ (ಈ ಹೂವಿನ ಬಿಡಿಗಳಲ್ಲಿ ಗಂಡುಹೂ ಬಿಡಿಯನ್ನು ಚೆನ್ನಾಗಿ ಗುರುತಿಸಬಹುದು), ಗಂಡುಹೂಪುಡಿ androgen ಹೆ ಗಂಡುಹುಟ್ಟುಕ (ಗಂಡಿನ ಪರಿಚೆಗಳನ್ನು ಪಡೆಯಲು ಈ ಗಂಡುಹುಟ್ಟುಕಗಳು ನೆರವಾಗಬಲ್ಲುವು), ಗಂಡುಹೆಚ್ಚುಕ androgyne ಪ ಹೆಂಗಂಡಿನ (ಕೆಲವರಲ್ಲಿ ಹೆಂಗಂಡಿನ ಪರಿಚೆಗಳು ಬೆಳೆಯುವಾಗಲೇ ಕಾಣಿಸಿಕೊಳ್ಳುತ್ತವೆ) android ಹೆ ಆಳೆಣಿ (ಬಂಡಿಯ ಬಿಡಿಗಳನ್ನು ಜೋಡಿಸಲು ಆಳೆಣಿಗಳನ್ನು ಬಳಸಲಾಗುತ್ತದೆ) andrology ಹೆ ಗಂಡುಕುತ್ತದರಿಮೆ, ಗಂಕುತ್ತದರಿಮೆ (ಈ ಮಾಂಜುಗರು ಗಂಕುತ್ತದರಿಮೆಯಲ್ಲಿ ಹೆಚ್ಚಿನ ಓದನ್ನು ಮಾಡಿದ್ದಾರೆ) andropause ಹೆ ಗಂಡಿಳಿಕೆ (ವಯಸ್ಸಾದ ಗಂಡಸರಲ್ಲಿ ಗಂಡಿಳಿಕೆ ಆಗುವ ತೆರಹು ಹೆಚ್ಚಿರುತ್ತದೆ) anecdote ಹೆ ಕಿರುಕತೆ (ಆತನ ಬಾಳಿನಲ್ಲಿ ನಡೆದ ಎಸಕ- ವೊಂದನ್ನು ಈ ಕಿರುಕತೆ ತಿಳಿಸುತ್ತದೆ), ಕಿರುಗತೆ anemia ಹೆ ನೆತ್ತರಕೊರತೆ (ಅವರಿಗೆ ನೆತ್ತರಕೊರತೆ ಇರುವುದರಿಂದ ಬಿಳಿಚಿಕೊಂಡಿದ್ದಾರೆ), ಕೆಂಗಣಕೊರತೆ anemograph ಹೆ ಗಾಳಿಬಿರುಸುತಿಟ್ಟ (ಈ ಊರಿನಲ್ಲಿ ಇವತ್ತು ಬಿರುಗಾಳಿ ಇತ್ತು ಎಂಬುದು ಈ ಗಾಳಿಬಿರುಸು- ತಿಟ್ಟದಿಂದ ತಿಳಿಯುತ್ತದೆ) anemometer ಹೆ ಗಾಳಿಯೊತ್ತರಳಕ, ಎಲರೊತ್ತರಳಕ (ಎಲರೊತ್ತರಳಕದಿಂದ ಗಾಳಿಯು ಎಶ್ಟು ಜೋರಾಗಿ ಬೀಸುತ್ತಿದೆಯೆಂಬುದನ್ನು ಅಳೆಯಲು ಬರುತ್ತದೆ) anew ಪ 1 ಹೊಸದಾಗಿ (ಅವನು ಆ ಊರಲ್ಲಿ ತನ್ನ ಬಾಳನ್ನು ಹೊಸದಾಗಿ ತೊಡಗಬೇಕೆಂದಿದ್ದಾನೆ) 2 ಇನ್ನೊಮ್ಮೆ (ಅದನ್ನೇ ಇನ್ನೊಮ್ಮೆ ಮಾಡಲು ತೊಡಗಿದ) angel ಹೆ ಕಡವಳು, ಕಡವಮಾರಾಳು (ಅವನ ಕನಸಿನಲ್ಲಿ ಕಡವಮಾರಾಳುಗಳು ಬಂದು ಹರಸಿದರು) anger ಹೆ ಸಿಟ್ಟು (ಸಿಟ್ಟಾಗು; ಸಿಟ್ಟುಬರು; ಸಿಟ್ಟುಮಾಡು; ಸಿಟ್ಟುಬಿಡು), ಮುನಿಸು (ಮುನಿಸುಮಾಡು; ಮುನಿಸು- ಗೊಳ್ಳು), ಮುನಿಪು, ಸೀತರು (ಸೀತರುಗೊಳ್ಳು), ಕಾತಿ (ಕಾತಿಯಲ್ಲಿ ಆತ ಏನೇನೋ ಒದರಿದ), ಕಿನಿಸು (ಕಿನಿಸು ಮಾತು; ಕಿನಿಸೇರು), ಕಾವು, ಕಾಯ್ಪು (ಕಡುಗಾಯ್ಪು), ಮೊರಹು, ಕತಿ (ಕತಿಗೊಳ್ಳು), ಮುಳಿಸು, ಕನಲ್ಕೆ ಎ ಕತಿಗೊಳಿಸು (ನಿಮ್ಮ ಮಾತು ಆತನನ್ನು ಕತಿಗೊಳಿಸಿದೆ) angina ಹೆ ಎದೆನೋವು (ನೆತ್ತರ ತಡೆತದಿಂದಾದ ಎದೆ- ನೋವು) angiogram ಹೆ ನೆತ್ತರಗೊಳವೆತಿಟ್ಟ (ನೆತ್ತರ ತಡೆಯಳಿಕೆಗೆ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಲು ನೆತ್ತರಗೊಳವೆ- ತಿಟ್ಟವನ್ನು ತೆಗೆಯಬೇಕಾಗುತ್ತದೆ) angioplasty ಹೆ ನೆತ್ತರ ತಡೆಯಳಿಕೆ (ನೆತ್ತರ ಕೊಳವೆಗಳಲ್ಲಿ ಉಂಟಾದ ಅಡೆತಡೆಗಳನ್ನು ನೆತ್ತರ ತಡೆಯಳಿಕೆಯಿಂದ ಹೋಗಲಾಡಿಸಬಹುದು) angle ಹೆ ಚೂಪು ಒಂಡಿ, ಕೋನ ಒಂಡಿ (ಈ ಲೆಕ್ಕಗಳಲ್ಲಿ ಚೂಪು ಒಂಡಿಯ ಬಳಕೆ ಮಾಡಿದ್ದಾರೆ) angle ಹೆ ಮೂಲೆ (ಈ ಎರಡು ಗೆರೆಗಳ ನಡುವಿನ ಮೂಲೆಯನ್ನು ಅಳೆದು ತಿಳಿಸಿರಿ), ಕೋನ, ಗೋಟು, ಓರೆ, ವಾಟ (ಗೆರೆಗಳ ನಡುವಿನ ವಾಟ), ಬಾಗು (ಈ ಎರಡು ಗೆರೆಗಳ ನಡುವೆ ಇರುವ ಬಾಗು 40 ಡಿಗ್ರಿ) ಪ ಬದಿಹಿಡಿದ (ಅವನ ಬದಿಹಿಡಿದ ತೀರ್ಮಾನ ಹೆಚ್ಚಿನ- ವರಿಗೂ ಒಪ್ಪಿಗೆಯಾಗಲಿಲ್ಲ) ಎ 1 ಓರೆಯಿರಿಸು, ವಾಲಿಸು (ಕಂಬವನ್ನು ಅಶ್ಟೊಂದು ವಾಲಿಸುವುದು ಬೇಡ) 2 ಸುಳಿವುಕೊಡು angrily ಪ ಕವ್ವನೆ (ಕವ್ವನೆ ಏನನ್ನೋ ಹೇಳಲು ಹೊರಟವನು ಸುಮ್ಮನೆ ಕುಳಿತ) angry ಎ ಮುನಿ (ಮುನಿದುಕೊಳ್ಳು), ಮುಳಿ (ಮುಳಿಸು; ಮುಳಿಸುಗ), ರೇಗು, ರೊಚ್ಚುಗೊಳ್ಳು, ಕನಲು (ಕನಲ್ಕೆ), ಕೆರಳು (ಕೆರಳಿ ನುಡಿ), ಕಿನಿ (ಕಿನಿಯು- ವವನಿಗೆ ಕಿನಿಯಬೇಡ), ಸೀರು, ಕಾಯು, ಕಂಗು (ಕಂಗಾಗು) ಪ ಮುನಿದ, ಸಿಟ್ಟಿಗೆದ್ದ, ಕೆರಳಿದ angst ಹೆ ಬೇವಸ, ತಲ್ಲಣ (ಅವನಲ್ಲಿ ಬಾಳಿನ ಕುರಿತಾಗಿ ತಲ್ಲಣವುಂಟಾಗಿದೆ) anguish ಹೆ ಬೇಗುದಿ (ಆತ ತನ್ನವರನ್ನು ಕಳೆದುಕೊಂಡು ಬೇಗುದಿಗೆ ಒಳಗಾಗಿದ್ದಾನೆ; ಬೇಗುದಿಗೊಳ್ಳು), ಅಲ್ಲರ (ನಲ್ಲನಿಂದ ಬೇರಾಗಿರಬೇಕಾದ ಅಲ್ಲರ), ಎದೆಗುದಿ, ಕಳವಳ, ಬಗೆಯುರಿ (ಆಟದಲ್ಲಿ ಸೋತುದರಿಂದಾಗಿ ಅವರು ತುಂಬಾ ಬಗೆಯುರಿಯಲ್ಲಿದ್ದರು) angular ಪ 1 ಬಡಕಲು (ಬಡಕಲು ಹಸು) 2 ಹಲ- ಕೋನದ androecium angular A


25 angular ಪ ಓರೆಯ (ಇದು ಓರೆಯ ಕದಲಿಕೆ) angular ಹೆ ಸುತ್ತುರುಬು (ಈ ಸುತ್ತಳಕದ ಸುತ್ತುರುಬನ್ನು ತಿಳಿಹೊತ್ತಗೆಯಲ್ಲಿ ಕೊಡಲಾಗಿದೆ) angularly ಪ ಓರೆಯಾಗಿ (ಅವರು ಚೆಂಡನ್ನು ಓರೆಯಾಗಿ ಎಸೆದರು) anhedral ಪ ಮೊಂಡುಮೋರೆಯ (ಇದೊಂದು ಮೊಂಡುಮೋರೆಯ ಕಲ್ಲು) ಹೆ ಇಳಿರೆಕ್ಕೆ (ಇಳಿರೆಕ್ಕೆಯ ಮೇಲೆ ತುಂಬಾ ದೂಳು ಕೂತಿದೆ) anhydrous ಪ ನೀರಿಲ್ಲದ (ಈ ಇರ್ಪಿನಲ್ಲಿ ಹಲವು ನೀರಿಲ್ಲದ ಇರ್ಕೆಗಳಿವೆ) aniline ಹೆ ಅಚ್ಚಿನೆಣ್ಣೆ (ತಮ್ಮ ಕಯ್ಗಾರಿಕೆಯಲ್ಲಿ ಅವರು ಅಚ್ಚಿನೆಣ್ಣೆ ಬಳಸುತ್ತಾರೆ), ಬಣ್ಣದೆಣ್ಣೆ animadversion ಹೆ ತೆಗಳಿಕೆ (ಅವರ ತೆಗಳಿಕೆಯಿಂದ ಇವನು ನೊಂದುಕೊಂಡ), ಹೀಗಳಿಕೆ animadvert ಎ ತೆಗಳು (ಅವನು ತನ್ನವರನ್ನು ಎಂದೂ ತೆಗಳುವುದಿಲ್ಲ), ಹೀಗಳೆ animal ಹೆ ಕದಲುಸಿರುಗ, ಕದಲುಸುರಿ (ಕದಲುಸುರಿಗಳು ತಾವೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬಲ್ಲುವು) animate ಎ ಉಸಿರುಹಚ್ಚು (ಈ ತಿಟ್ಟಗಳು ಆತನ ಅನಿಸಿಕೆಗಳಿಗೆ ಉಸಿರುಹಚ್ಚಿವೆ), ತೆಪ್ಪರು (ತೆಪ್ಪತ್ತುಕೊಳ್ಳು) ಪ 1 ತೆಪ್ಪತ್ತ, ಉಸಿರುಳ್ಳ 2 ಮಿಡುಕಿದ (ಮೇಲ್ಮನೆಯಲ್ಲಿ ಕಟ್ಟಲೆಗಾರರು ಮಿಡುಕಿದ ಮಾತುಕತೆಯಲ್ಲಿ ತೊಡಗಿ- ದ್ದರು) animated ಪ ಹುರುಪಿನ (ಇದೊಂದು ಹುರುಪಿನ ಮಾತುಕತೆ), ಹುರಿದುಂಬಿದ animation ಹೆ ತಿಟ್ಟಾಟ (ತಿಟ್ಟಾಟ ಎಲ್ಲ ಮಕ್ಕಳ ಗಮನವನ್ನು ಸೆಳೆಯಿತು), ತಿಟ್ಟೋಟ (ಈ ಚಲ್ಲತಿಟ್ಟದ ತಿಟ್ಟೋಟ ಎಲ್ಲರಿಗೂ ಅಚ್ಚರಿ ಮೂಡಿಸಿದೆ), ಮಿಡುಕು (ಮಿಡುಕಿನ ಓಡುತಿಟ್ಟಗಳಲ್ಲಿ ಹೆಚ್ಚು ಜಾಣ್ಮೆಯ ಚಳಕವನ್ನು ಬಳಸ- ಲಾಗುತ್ತಿದೆ) animosity ಹೆ ಹಗೆತನ (ಅವರಿಬ್ಬರ ನಡುವೆ ಹಿಂದಿ- ನಿಂದಲೂ ಹಗೆತನ ಬೆಳೆದುಕೊಂಡು ಬಂದಿದೆ) animus ಹೆ ಹಗೆತನ (ಹೆಚ್ಚಾದ ಹಗೆತನವು ಕೇಡಿನೆಡೆಗೆ ಕೊಂಡೊಯ್ಯುತ್ತದೆ), ಅಸುರಿಕೆ anisotropy ಹೆ ಪೊಲನೆಚ್ಚು (ಈ ವಸ್ತುವಿನಲ್ಲಿ ಪೊಲನೆಚ್ಚು ಕಾಣುತ್ತದೆ), ದಿಕ್ಕುನೆಚ್ಚು ankle ಹೆ ಪರಡು (ಕೆಳಗೆ ಬಿದ್ದಾಗ ಅವನ ಪರಡು ಒಂದು ಕಲ್ಲಿಗೆ ಜೋರಾಗಿ ಹೊಡೆದಿದೆ), ಮಂಡ, ಚೀಲಮಂಡೆ, VjUÉ anklet ಹೆ ಕಳಲು (ಮಗು ನಡೆಯುವಾಗ ಕಳಲುಲಿ ಕೇಳಿಸುತ್ತಿರುತ್ತದೆ), ತಂಡೆ (ಈ ಕುಣಿತಕ್ಕೆ ಎಲ್ಲರೂ ಬೆಳ್ಳಿ ತಂಡೆಗಳನ್ನು ಹಾಕಿಕೊಳ್ಳಬೇಕು) annals ಹೆ ಸಾಲ್ಬರೆಪ (ಬೇರೆ ಬೇರೆ ಸಾಲುಗಳಲ್ಲಿ ನಡೆಸಿದ ಎಸಕಗಳನ್ನು ಬೇರೆ ಬೇರೆ ಸಾಲ್ಬರೆಪಗಳಲ್ಲಿ ಬರೆದಿರಿಸ- ¯ÁVzÉ) anneal ಎ ಬಿಸಿತಣಿಸು (ಬಿಸಿತಣಿಸಿದ ಕಬ್ಬಿಣ ತುಂಬಾ ಗಟ್ಟಿಯಾಗಿರುತ್ತದೆ), ಕಾದಾರಿಸು, ಮೆಲುತಣಿಸು, ಕಾವ್ತಣಿಸು, ಹದತಣಿಸು annealing ಹೆ ಕಾದಾರಿಸಿಕೆ, ಕಾವುತಣಿಕೆ, ಬಿಸಿದಣ್ಣಿಕೆ (ಬಿಸಿದಣ್ಣಿಕೆ ಮಾಡುವುದರಿಂದಲೇ ಉಕ್ಕಿಗೆ ಗಟ್ಟಿತನ ಸಿಗುತ್ತದೆ) annelid ಹೆ ತುಂಡುಹುಳ (ಹಲವು ತುಂಡುಗಳಿಂದ ಕೂಡಿದ ಎರೆಹುಳವನ್ನು ತುಂಡುಹುಳವೆಂದು ಹೇಳ- ಬಹುದು), ತೆವಳುಹುಳ, ಉಂಗುರಹುಳ, ಎರೆಹುಳ annex ಎ 1 ಸೇರಿಸಿಕೊಳ್ಳು (ಹತ್ತಿರದ ಹಲವು ನಾಡು- ಗಳನ್ನು ಸೋಲಿಸಿ ಅವನು ತನ್ನ ನಾಡಿಗೆ ಸೇರಿಸಿಕೊಂಡಿ- ದ್ದಾನೆ) 2 ತಗಲಿಸು (ಕಡತದ ಕೊನೆಗೆ ಕೆಲವು ತಿಟ್ಟ- ಗಳನ್ನು ತಗಲಿಸಲಾಗಿದೆ) ಹೆ 1 ಹೊರಮನೆ (ಮನೆಯ ಬಲಬದಿಯಲ್ಲಿ ಬಾಡಿಗೆ ಕೊಡುವುದಕ್ಕಾಗಿ ಒಂದು ಹೊರಮನೆಯನ್ನು ಕಟ್ಟಿಸಿದ್ದಾರೆ) 2 ಸೇರಿಕೆ (ಕಡತದ ಕೊನೆಯಲ್ಲಿ ಬರುವ ಸೇರಿಕೆಗಳು) annexture ಹೆ ಜೋಡಣೆ, ಸೇರಿಕೆ (ಈ ಕಟ್ಟಡಕ್ಕೊಂದು ಸೇರಿಕೆಯನ್ನು ಕಟ್ಟುತ್ತಿದ್ದಾರೆ; ಕಡತದ ಕೊನೆಯಲ್ಲಿ ಅಯ್ದು ಸೇರಿಕೆಗಳಿವೆ) annihilate ಎ 1 ಹುಟ್ಟಡಗಿಸು (ಮಾರಿಬೇನೆ ಬಂದು ಇಡೀ ಊರನ್ನೇ ಹುಟ್ಟಡಗಿಸಿಬಿಟ್ಟಿತು), ಅಳಿಸು 2 ಸಲೆ- ಸೋಲಿಸು (ಹಗೆಗಳನ್ನು ಸಲೆಸೋಲಿಸಿ ಹಿಂದಿರುಗಿದ) anniversary ಹೆ ಸೂಳುಹಬ್ಬ, ಏಡುಹಬ್ಬ (ಕೂಟದ ಏಡುಹಬ್ಬಕ್ಕೆ ಆತ ಎಲ್ಲರಿಗೂ ಊಟ ಕೊಡಿಸಿದ) angular anniversary A


26 annotate ಎ ತಿಳುಪಿಕ್ಕು (ಹಿಂದಿನ ಕಾಲದ ಕೆಲವು ಬರಹ- ಗಳಿಗೆ ತಿಳುಪಿಕ್ಕುವುದು ಆತನ ಕೆಲಸ), ತಿಳುಪಿಸು annotation ಹೆ ತಿಳುಪು (ಅವನು ಬರೆದಿರುವ ತಿಳುಪು- ಗಳನ್ನು ಕಡತದ ಕೊನೆಯಲ್ಲಿ ಕೊಡಲಾಗಿದೆ) announce ಎ 1 ಸೂಳ್ಗರೆ, ಸಾರು (ಪೋಟಿಯಲ್ಲಿ ಗೆದ್ದವರ ಹೆಸರನ್ನು ಕೂಟದ ಕೊನೆಯಲ್ಲಿ ಸಾರಲಾಗು- ವುದು) 2 ಸೋಹಾಗು (ಕಪ್ಪೆಗಳ ಕೂಗು ಮಳೆಗಾಲದ ಬರವಿಗೆ ಸೋಹಾಗುತ್ತವೆ) announcement ಹೆ ಸೂಳ್ಗರೆತ (ಕೊನೆಯ ಸೂಳ್ಗರೆತ- ಕ್ಕಾಗಿ ಎಲ್ಲರೂ ಕಾಯುತ್ತಿದ್ದರು), ಸಾರಿಕೆ (ಈ ನಿಲ್ದಾಣ- ದಲ್ಲಿ ಹೊತ್ತು ಹೊತ್ತಿಗೂ ಸಾರಿಕೆಗಳು ಕೇಳಿಬರುತ್ತವೆ) announcer ಹೆ ಸೂಳಾಯ್ತ, ಸಾರುಗ (ಆತ ಬಾನುಲಿಯಲ್ಲಿ ಸಾರುಗನಾಗಿ ಕೆಲಸ ಮಾಡುತ್ತಿದ್ದಾನೆ) annoy ಎ 1 ಮಸಗು (ಆತ ಬೆಳಿಗ್ಗೆಯೇ ಬಂದುದನ್ನು ಕಂಡು ಆತ ಮಸಗಿದ) 2 ಕಾಡು (ಆತ ಬೆಳಿಗ್ಗೆಯೇ ಬಂದು ಕಾಡಲು ತೊಡಗಿದ) annoyance ಹೆ ಕಾಟ (ಈ ಮಕ್ಕಳ ಕಾಟವನ್ನು ತಡೆಯುವುದು ಹೇಗೆ?), ಕಿರುಕುಳ (ಕಿರುಕುಳ ಕೊಡು) annual ಪ ಸೂಳಿನ (ಆತನಿಗೆ ಇನ್ನೂರು ಸಾವಿರ ಸೂಳಿನ ಹುಟ್ಟುವಳಿಯಿದೆ), ಸಾಲೆಸಾಲು (ಸಾಲೆಸಾಲು ಕಾಣ್ಕೆ ನಾಳೆ ನಡೆಯಲಿದೆ), ಏಡಿನ (ಇದೊಂದು ಏಡಿನ ಹಬ್ಬ) annual ಹೆ ಏಡಿನುಂಗುರ (ಮರದ ಏಡಿನುಂಗುರ) annuity ಹೆ ಸೂಳ್ಕೊಡುಗೆ (ಆಕೆಗೆ ಹತ್ತು ಸಾವಿರ ಸೂಳ್ಕೊಡುಗೆ ಬರುತ್ತದೆ) annul ಎ ಅಳಿಸು, ನೀಗಾಡು (ಅವರ ನಡುವಿನ ಒಪ್ಪಂದ- ವನ್ನು ನೀಗಾಡಲಾಗಿದೆ) annular ಪ ಉರುಟಾದ, ಸುತ್ತುವ (ಸುತ್ತುವ ಸುಂಟರಗಾಳಿ ಕೆಲವು ಮರಗಳನ್ನೇ ಮೇಲೆತ್ತಿ ಎಸೆದಿದೆ) anode ಹೆ ಏರುಗಣೆ (ಯಾವುದೇ ಮಿಂಕಟ್ಟಿನಲ್ಲಿ ಒಂದು ತುದಿ ಏರುಗಣೆಯಾಗಿರುತ್ತದೆ) anodyne ಪ 1 ನೋವಳಿಕ (ತಲೆನೋವೆಂದು ಒಂದು ನೋವಳಿಕ ಕಡುಹನ್ನು ನುಂಗಿದ) 2 ನಯ, ನೋಯಿಸದ anoint ಎ ತಳ್ಕು (ಅರಸುಮಗನಿಗೆ ಎಣ್ಣೆ ತಳ್ಕಿ ಮೀಯಿಸಿ- ದರು), ಸವರು (ಎಣ್ಣೆ ಸವರು) anomalist ಹೆ ಮಿಗೆಯೊಲವಿಗ (ಈ ಸಿನಿಮಾ ಮಾಡಿದ- ವರು ಮಿಗೆಯೊಲವಿಗರೆಂದು ತೋರುತ್ತದೆ) anomalistic ಪ ಮಿಗೆಯೊಲವಿನ (ಈ ಸಿನಿಮಾದಲ್ಲಿ ಹಲವು ಮಿಗೆಯೊಲವಿನ ಕಾಣ್ಕೆಗಳಿವೆ) anomalous ಪ ಒಮ್ಮದ (ಇವೆರಡು ಈ ಕೋಣೆಗೆ ಒಮ್ಮದವುಗಳು), ಓಜೆಗೆಟ್ಟ anonym ಹೆ ಕಳ್ಳಹೆಸರು, ಸುಳ್ಳುಹೆಸರು (ಅವನ ಬರಹಗಳೆಲ್ಲ ಸುಳ್ಳುಹೆಸರಿನಲ್ಲಿವೆ) anonymous ಪ ಹೆಸರು ತಿಳಿಯದ, ಹೆಸರಿಲ್ಲದ (ಅವನಿಗೊಂದು ಹೆಸರಿಲ್ಲದ ಓಲೆ ಬಂದಿದೆ) answer ಹೆ 1 ಮಾರ್ನುಡಿ (ನನ್ನ ಕೇಳ್ವಿಗೆ ಆತನ ಮಾರ್ನುಡಿಯಿಲ್ಲ), ಮರುಮಾತು, ಮರುನುಡಿ, ಬದಲು (ಅವಳು ನಿಮ್ಮ ಮಾತಿಗೆ ಏನೂ ಬದಲು ಹೇಳದಿರುವು- ದಿಲ್ಲ) 2 ಬಗೆಹರಿಕೆ (ಅವನ ಈ ಸಿಕ್ಕಲಿಗೆ ಬಗೆಹರಿಕೆಯೇ ಇಲ್ಲವೇ?) ಎ 1 ಮರುನುಡಿ (ಅವನು ಏನನ್ನೂ ಮರುನುಡಿಯದೆ ಹೊರಟುಹೋದ) 2 ಅನುವಾಗು (ಇದು ನಿಮ್ಮ ತೊಡಕಿಗೆ ಅನುವಾಗುವ ಮುಟ್ಟು) ant ಹೆ ಗೊದ್ದ (ಈ ಕಪ್ಪು ಗೊದ್ದ ಕಡಿದರೆ ತುಂಬಾ ನೋಯುತ್ತದೆ), ಇರುವೆ (ಬೆಲ್ಲಕ್ಕೆ ಇರುವೆ ಮುತ್ತಿದೆ) antacid ಹೆ ಹುಳಿಯಳಿಕ (ಹೊಟ್ಟೆನೋವಿಗೆ ಆತನೊಂದು ಹುಳಿಯಳಿಕದ ಕಡುಹು ನುಂಗಿದ), ಹುಳಿಯಿಳಿಕ antagonism ಹೆ ಹಗೆತನ, ಕಡ್ಡತನ (ನಿಮ್ಮ ಕಡ್ಡತನವನ್ನು ಎಶ್ಟು ನಾಳು ಮುಂದುವರಿಸಬೇಕೆಂದಿದ್ದೀರಿ?) antagonist ಹೆ ಹಗೆ, ಎದುರಾಳಿ (ಅವನಿಗೆ ಎದುರಾಳಿ- ಯಾಗಿ ಯಾರೂ ಮುಂದೆ ಬರಲಿಲಿಲ್ಲ), ಉದ್ದಿ, ಮರುವಸಲ (ಈ ಕತೆಯಲ್ಲಿ ಮರುವಸಲ ಪಾಂಗಿನ ಕೊಗೆತ ಮೆಲ್ಲಗೆ ಮಾರ್ಪಡುತ್ತಾ ಹೋಗುತ್ತದೆ) antagonize ಎ ಹಗೆಯಾಗಿಸು (ಅವನು ಎಲ್ಲರನ್ನೂ ಹಗೆಯಾಗಿಸಿಕೊಂಡಿದ್ದಾನೆ) ante ಹೆ ಏರುಹೊತ್ತು (ಈ ಕೂಟವನ್ನು ಏರುಹೊತ್ತಿನ 10 ಗಂಟೆಗೆ ಏರ್ಪಡಿಸಲಾಗಿದೆ), ಮುಂಬೆಳಗಿನ (ಅವರು ಮುಂಬೆಳಗಿನ ಕೆಲಸಗಳನ್ನು ಮುಗಿಸಿಕೊಂಡು ಕೆಲಸಕ್ಕೆ ಹೋಗುತ್ತಾರೆ) annotate ante meridian (AM) A


27 anteater ಹೆ ಇರುವೆತಿನಿ (ಇರುವೆತಿನಿಗಳಿಗೆ ಪಂಗೊಲಿನ್ ಒಂದು ಎತ್ತುಗೆಯಾಗಿದೆ), ಅಳಂಕು antecedent ಪ ಹಿಂದಿನ (ಹಿಂದಿನ ಕತೆಗಳನ್ನು ನೆನಪಿಸು- ತ್ತಿದ್ದಾರೆ), ಮೊದಲಿನ ಹೆ 1 ಹಿಂದಿನದು, ಹಿಂದಿನವರು (ಅವನ ಹಿಂದಿನವರು ದೊಡ್ಡ ಕೆಲಸಗಳಲ್ಲಿದ್ದರು), ತಲೆಮಾರಿನವರು 2 ಹಿನ್ನುಡಿತ (ತೋರುಪದಗಳ ಕೆಲವು ಬಳಕೆಗಳಲ್ಲಿ ಅವಕ್ಕೆ ಹಿನ್ನುಡಿತಗಳಿರುತ್ತವೆ ಎಂಬ ಈ ಸೊಲ್ಲಿನಲ್ಲಿ ಅವಕ್ಕೆ ಎಂಬುದಕ್ಕೆ ತೋರುಪದಗಳು ಎಂಬುದು ಹಿನ್ನುಡಿತ) antechamber ಹೆ ಒಳಕೋಣೆ (ಒಳಕೋಣೆಯಲ್ಲಿ ಯಾರಿದ್ದಾರೆಂದು ತಿಳಿಯಲಿಲ್ಲ) antedate ಎ ಹಿಂದೆಹೋಗು (ಕಲ್ಲುಮುಟ್ಟುಗಳು ಹೊನ್ನು- ಮುಟ್ಟುಗಳಿಗಿಂತ ಹಿಂದೆಹೋಗುತ್ತವೆ) antediluvian ಪ ಹಳೆಮಾಟಿಯ (ಇವು ತುಂಬಾ ಹಳೆ- ಮಾಟಿಯ ಒಡವೆಗಳು), ಹಳೆಬಗೆಯ antelope ಹೆ ಜಿಂಕೆ (ಈ ಕಾಡಿನಲ್ಲಿ ಕೆಲವು ಜಿಂಕೆಗಳು ಇನ್ನೂ ಉಳಿದುಕೊಂಡಿವೆ), ಚಿಗರೆ, ಎರಳೆ (ಎರಳೆ- ಗಣ್ಣು), ಹುಲ್ಲೆ antenatal ಹೆ ಹುಟ್ಟುಮುನ್ನ (ಮಗುವಿನ ಹುಟ್ಟುಮುನ್ನದ ಬೆಳವಣಿಗೆ ಒಂಬತ್ತು ತಿಂಗಳವರೆಗೆ ನಡೆಯುತ್ತದೆ) antenna ಹೆ ಅಲೆಪಿಡಿ (ಇವರ ಮನೆಯ ಮೇಲೆ ಒಂದು ಅಲೆಪಿಡಿ ಇದೆ) antepenultimate ಪ ಇರ್ಕೊನೆಯ (ಇರ್ಕೊನೆಯ ಆಟ ಕೊನೆಯ ಆಟಕ್ಕಿಂತ ಎರಡು ಆಟಗಳಶ್ಟು ಹಿಂದೆ ನಡೆಯುತ್ತದೆ) anterior ಪ 1 ಮುಂದಿನ 2 ಹಿಂದಿನ, ಮುಂಚಿನ anteroom ಹೆ ಮುನ್ಕೋಣೆ (ಅವನು ಕಡತಗಳನ್ನೆಲ್ಲ ಮುನ್ಕೋಣೆಯಲ್ಲಿ ಇರಿಸಿದ್ದ) anthelion ಹೆ ಬೆಳಕಿನುಂಗುರ, ನೇಸರದುಂಗುರ, ಬಾನ- ಬಳೆ, ಹೊತ್ತಿನುಂಗುರ (ಈಗ ಮುಗಿಲಿನಲ್ಲಿ ಹೊತ್ತಿ- ನುಂಗುರ ಕಾಣುತ್ತಿದೆ) anthem ಹೆ ಹೊಗಳುಹಾಡು (ಕೂಟದ ಕೊನೆಗೆ ನಾಡಿನ ಹೊಗಳುಹಾಡನ್ನು ಹಾಡಲಾಯಿತು) anthill ಹೆ ಹುತ್ತ (ಮನೆಯ ಹಿಂದಿರುವ ಗೆದ್ದಲಿನ ಹುತ್ತದಲ್ಲಿ ಒಂದು ಹಾವು ಸೇರಿಕೊಂಡಿದೆ) anthology ಹೆ 1 ಆಯ್ಬರಹ (ಇಪ್ಪತ್ತಯ್ದು ಕತೆಗಳ ಒಂದು ಆಯ್ಬರಹವನ್ನು ಅವರು ಹೊರತಂದಿದ್ದಾರೆ) 2 ಆಯೆಸೆಗೆ (ಹಲವು ಮಂದಿ ಹಾಡುಗಾರರ ಒಂದು ಆಯೆಸೆಗೆಯನ್ನು ಮಾಡಬೇಕೆಂದಿದ್ದಾರೆ) anthracite ಹೆ ಗಟ್ಟಿದ್ದಲು (ಗಟ್ಟಿದ್ದಲು ಉರಿಯುವಾಗ ಹೊಗೆ ಏಳುವುದಿಲ್ಲ) anthropology ಹೆ ಮಂದಿಯರಿಮೆ (ಮಂದಿಯರಿಮೆ- ಯಲ್ಲಿ ಮಂದಿಯ ಹುಟ್ಟು, ಸೇರುವೆಗಳು ಮತ್ತು ಪೊಳಲಿಗತನ ಮೊದಲಾದುವನ್ನು ತಿಳಿಸಲಾಗುತ್ತದೆ) ಂಟಿಣi ಟoಛಿಞ ಃಡಿಚಿಞiಟಿg Sಥಿsಣem (ಂಃS) ಹೆ ಬಿರಿತಡೆಯ ಏರ್ಪಾಡು, ಜಾರುತಡೆಯ ಏರ್ಪಾಡು (ಬಂಡಿಯ ಜಾರುತಡೆಯ ಏರ್ಪಾಡು ಈಗ ಎಲ್ಲಾ ಬಂಡಿಗಳಲ್ಲೂ ಇರುತ್ತದೆ) antiallergic ಹೆ ಒಗ್ಗದೆದುರಿ (ಒಗ್ಗದೆದುರಿಯನ್ನು ಬಳಸಿ ಅವರು ಒಗ್ಗದಿಕೆಯಿಂದ ನೆಮ್ಮದಿ ಪಡೆದರು) antibiotic ಹೆ ಸೀರುಸುರಿಯಳಿಕ, ಸೀರಳಿಕ (ಸೀರಳಿಕಗಳ ಬಳಕೆ ತುಂಬಾ ಹೆಚ್ಚಿದುದರಿಂದಾಗಿ ಆ ನಾಡಿನವರ ಒಡಲಗಾಪು ಕಡಿಮೆಯಾಗಿದೆ) antibody ಹೆ ಸೀರುಕೆಡುಕ, ಎದುರುಕಂಟು (ಕುತ್ತಗಳು ಬಂದಾಗ ಒಡಲಲ್ಲಿ ಎದುರುಕಂಟುಗಳು ಉಂಟಾಗಿ ಅವು ಕುತ್ತಗಳನ್ನು ತಡೆಯುತ್ತವೆ), ಉಸುರಿಯೆದುರುಕ, ಮರುನಂಜು, ಮರುಕುತ್ತ anticipate ಎ ಎದುರುನೋಡು (ನಿಮ್ಮ ಬರವನ್ನು ಎದುರುನೋಡುತ್ತಿದ್ದೇನೆ), ಕಾದಿರು anticlimax ಹೆ ಬೀಳ್ಗೊನೆ, ಕುಂದುತೀರ್ಕೆ, ಕೆಡುಕೊನೆ, ಕುಂದುಕೊನೆ, ಸಪ್ಪೆಕೊನೆ (ಇದು ಅವರಿಗೆ ಒಂದು ಬಗೆಯಲ್ಲಿ ಸಪ್ಪೆಕೊನೆಯ ಹಾಗಿದೆ), ಕೆಡುಗೊನೆ (ಕೆಡುಗೊನೆಗಾಣು) anticlockwise ಪ ಎಡತಿರುವಿಗೆ (ಇದನ್ನು ಗಟ್ಟಿಮಾಡಲು ಎಡತಿರುವಿಗೆ ತಿರುವಬೇಕು), ಎಡಸುತ್ತಿನ (ಈ ಬಂಡಿಯ ಗಾಲಿಗೆ ಎಡಸುತ್ತಿನ ತಿರುಪುಗಳನ್ನು ಹಾಕಿರುತ್ತಾರೆ), ಎಡತಿರುಗ anticoalant ಹೆ ಹೆಪ್ಪಡ್ಡಕ, ಹೆಪ್ಪುತಡೆಕ (ನೆತ್ತರನ್ನು ತಿಳಿ ಮಾಡಲು ಅವರು ಹೆಪ್ಪುತಡೆಕವನ್ನು ಬಳಸಿದ್ದಾರೆ), ಹೆಪ್ಪಳಿಕ anteater anticoalant A


28 antics ಹೆ 1 ಸಂಚು, ಬೂಟಾಟಿಕೆ 2 ಮಂಗಾಟ (ಅವನ ಮಂಗಾಟಗಳನ್ನು ನೋಡಿದರೆ ಸಿಟ್ಟು ಬರುತ್ತದೆ) antidote ಹೆ ಮರುಮದ್ದು (ನಂಜನ್ನು ತಗ್ಗಿಸಲು ಮೊದಲಿಗೆ ಮರುಮದ್ದು ಕೊಟ್ಟಿದ್ದಾರೆ) antifreeze ಹೆ ಹೆಪ್ಪೆದುರಿ (ತಂಪಿಸುಕಕ್ಕೆ ಹಾಕಿದ ನೀರು ಹೆಪ್ಪುಗಟ್ಟದ ಹಾಗೆ ಅದಕ್ಕೆ ಹೆಪ್ಪೆದುರಿಯನ್ನು ಸೇರಿಸು- vÁÛgÉ) antigen ಹೆ ಇದಿರ್ವುಟ್ಟುಕ (ಇದಿರ್ವುಟ್ಟುಕಗಳು ಒಡಲಿಗೆ ಸೇರಿದಾಗ ಅವು ಎದುರುಕಂಟುಗಳುಂಟಾಗುವಂತೆ ಮಾಡುತ್ತವೆ) anti-hero ಹೆ ಗಂಡಾಡಿಯೆದುರಿ (ಆಡುಗಬ್ಬದಲ್ಲಿ ಆತನಿಗೆ ಒಬ್ಬ ಗಂಡಾಡಿಯೆದುರಿಯ ಪಾಂಗು ಕೊಟ್ಟಿದ್ದಾರೆ) antimicrobial ಹೆ ಸೀರುಸಿರಿಯೆದುರಿ antimony ಹೆ ಹೊಳೆನೆರೆಹೊನ್ನು (ಈ ನಾಡಿನವರು ಹೊಳೆನೆರೆಹೊನ್ನಿನ ಮಾಡುಗೆಯಲ್ಲಿ ತುಂಬಾ ಮುಂದಿ- zÁÝgÉ) antipathy ಹೆ ಅಸುರು, ಕಿಸುರು (ಆತನಿಗೆ ನಿಮ್ಮ ಮೇಲೆ ತುಂಬಾ ಕಿಸುರಿರಬೇಕು) antiperspirant ಹೆ ಬೆವರಳಿಕ (ಕಂಕುಳಿನ ಬೆವರು ಕಾಣಿ- ಸದ ಹಾಗೆ ಆಟಗಾರರು ಬೆವರಳಿಕವನ್ನು ಚಿಮ್ಮಿಸಿ- ಕೊಂಡಿದ್ದಾರೆ), ಬೆವರೆದುರಿ antiquary ಹೆ ಪಳಮೆನೆರಪುಗ (ಪಳಮೆನೆರಪುಗನೊಬ್ಬ ಅವರ ಮನೆಯ ಹಳೇ ಮಣೆಗಳನ್ನು ಕೊಂಡುಕೊಳ್ಳಲು ಬಂದಿದ್ದ) antiquated ಪ ಬಳಕೆಯಿಲ್ಲದ, ಹಳೆಬಗೆಯ (ಆಕೆಗೆ ಹಳೆಬಗೆಯ ಒಡವೆಗಳೇ ಆಗಬೇಕು) antiquity ಹೆ ಪಳಮೆ, ಹಳಮೆ (ಹಳಮೆಯಲ್ಲಿ ಏನು ನಡೆದಿರಬಹುದೆಂಬುದನ್ನು ತಿಳಿಯಲು ಆತನ ಅರಕೆಗಳು ನೆರವಾಗಬಲ್ಲುವು) antiseptic ಹೆ ಕೊಳೆಯಳಿಕ (ಗಾಯಗಳಿಗೆ ಮೊದಲು ಯಾವುದಾದರೂ ಕೊಳೆಯಳಿಕವನ್ನು ಹಚ್ಚಿ ಅವು ಹುಣ್ಣಾಗದಂತೆ ನೋಡಿಕೊಳ್ಳಬೇಕು), ನಂಜುಮುರಿ, ನಂಜಳಿಕ antithesis ಹೆ ಎದುರಿ (ತನ್ನ ಎದುರಿಯನ್ನು ನೋಡಲು ಆತ ಹಾತೊರೆಯುತ್ತಿದ್ದಾನೆ) antithetical ಪ ಹೊಂದಿಕೊಳ್ಳದ, ಎದುರಿಸುವ antitoxin ಹೆ ನಂಜಳಿಕ, ನಂಜೆದುರಿ antler ಹೆ ಉದುರುಗೊಂಬು, ಕವಲ್ಗೊಂಬು (ಗಂಡು ಜಿಂಕೆಗಳಿಗೆ ಕವಲ್ಗೊಂಬುಗಳಿರುತ್ತವೆ) antonym ಹೆ ಮರುಹುರುಳು (ನನ್ನಿ ಎಂಬುದಕ್ಕೆ ಸುಳ್ಳು ಎಂಬುದು ಮರುಹುರುಳು), ಮಾರೊರೆ, ಮರುಪದ anus ಹೆ ಗೊಳ್ಳೆ (ಅವನಿಗೆ ಗೊಳ್ಳೆಯಲ್ಲಿ ಹುಣ್ಣಾಗಿದೆ) anvil ಹೆ ಪಟ್ಟಡಿ (ಪಟ್ಟಡಿಮನೆ; ಆತನು ಹೊಡೆದ ಪೆಟ್ಟಿಗೆ ಪಟ್ಟಡಿಯೇ ಒಡೆದು ಹೋಯಿತು), ಬಡಿಗಲ್ಲು, ಅದ್ದಗಣಿ (ಅದ್ದಗಣಿಯ ಮೇಲೆ ಇರಿಸಿದ ಕತ್ತಿಯ ಮೇಲೆ ಸುತ್ತಿಗೆಯ ಹೊಡೆತ ಬಿತ್ತು) anxiety ಹೆ ಬೇವಸ (ಬೇವಸಗೊಳ್ಳು; ಬೇವಸಪಡು), ಸೆಡೆ (ಸೆಡೆವಡು), ತಲ್ಲಣ (ಆಕೆ ತುಂಬಾ ತಲ್ಲಣ- ಗೊಂಡಿದ್ದಾಳೆ), ತೂಣ, ಅಳರು, ಅತ್ತಳಗ, ಎದೆಗುದಿ (ಎದೆಗುದಿಪಡು), ಕಳವಳ (ಒಡಲ ಕಳವಳ; ಕಳವಳಿಸು), ಕದಲಿಕೆ, ತಳ್ಳಂಕ, ಸಿಡಿಮಿಡಿ, ಬೆಗಡು anxious ಪ ತಲ್ಲಣಗೊಂಡ, ಕಳವಳಿಸುವ, ಬೇವಸಪಡುವ aorta ಹೆ ಪೆರ್ನೆತ್ತರಕೊಳವೆ, ಕನ್ನೆತ್ತರ ಕೊಳವೆ, ಹೆನ್ನೆತ್ತರ- ಕೊಳವೆ (ಗುಂಡಿಗೆಯಿಂದ ಉಸಿರುಚೀಲ ಹೊರತು ಎಲ್ಲಾ ಕಡೆಗೆ ಉಸಿರುಗಾಳಿಯ ನೆತ್ತರನ್ನು ಹೆನ್ನೆತ್ತರಕೊಳವೆ ಕಳುಹಿಸುತ್ತದೆ) apart ಪ ಪಂಗಡ (ಪಂಗಡವಾದವನು), ಹಕ್ಕಲು (ಅದೊಂದು ಹಕ್ಕಲು ಮನೆಯಾದುದರಿಂದ ಅಲ್ಲಿ ಏನು ನಡೆದರೂ ಬೇರೆಯವರಿಗೆ ಗೊತ್ತಾಗುತ್ತಿರಲಿಲ್ಲ) apartheid ಹೆ ಬೇರ್ಪಡಿಕೆ (ತೆಂಕು ಆಪ್ರಿಕಾದಲ್ಲಿ ಬಿಳಿಯರ ಮತ್ತು ಕರಿಯರ ನಡುವೆ ಬೇರ್ಪಡಿಕೆಯಿತ್ತು) apartment ಹೆ ಕೂಡುಮನೆ (ಈ ಕಟ್ಟಡದಲ್ಲಿ ಒಟ್ಟು ಹತ್ತು ಕೂಡುಮನೆಗಳಿವೆ) apathy ಹೆ ಗೊಡವೆಯಿಲ್ಲದಿಕೆ (ಆಕೆಗೆ ತನ್ನ ಗಂಡನ ಕುರಿತಾಗಿ ಗೊಡವೆಯಿಲ್ಲದಿಕೆಯಿದೆ), ಗೊಡವೆಯಿಲ್ಲಮೆ, ಹುರುಪಿಲ್ಲಮೆ (ಊಟದ ಕೊರತೆಯಿಂದಾಗಿ ಅವನಲ್ಲಿ ಹುರುಪಿಲ್ಲಮೆ ಇದೆ) ape ಹೆ ಕೋತಿ ಎ ಅಣಕಿಸು (ಅವನು ಕೋತಿಯ ಹಾಗೆ ನನ್ನನ್ನು ಅಣಕಿಸುತ್ತಿದ್ದಾನೆ) aperture ಹೆ ಕಿಂಡಿ (ಗೋಡೆಯಲ್ಲೊಂದು ಕಿಂಡಿಯಿದೆ), ತೂತು antics aperture A


29 apex ಹೆ ಕೋಡು, ತುದಿ (ಬೆಟ್ಟದ ತುದಿಯಲ್ಲಿ ಆತ ಒಂದು ಮನೆ ಕಟ್ಟಿಸಿಕೊಂಡಿದ್ದಾನೆ) aphorism ಹೆ ನಾಣ್ಣುಡಿ, ಗಾದೆಮಾತು (ತನ್ನ ಮಾತನ್ನು ಬೆಂಬಲಿಸಲು ಅವನೊಂದು ಗಾದೆಮಾತನ್ನೂ ಹೇಳಿದ) aphototropism ಹೆ ಕತ್ತಲೆಯೆಡೆತನ (ಕೆಲವು ಗಿಡಗಳು ಕತ್ತಲೆಯೆಡೆತನವನ್ನು ತೋರುತ್ತವೆ) aphyllous ಪ ಎಲೆಯಿರದ (ಅದು ಎಲೆಯಿರದ ಗಿಡ- ವಾಗಿದೆ), ಎಲೆಯಿಲ್ಲದ apiary ಹೆ ಜೇನುಗೂಡು (ಅವರು ತಮ್ಮ ತೋಟದಲ್ಲಿ ಹತ್ತು ಜೇನುಗೂಡುಗಳನ್ನು ಇರಿಸಿದ್ದಾರೆ) apical ಪ ತುದಿಯ (ನಾಲಿಗೆಯ ತುದಿಯಿಂದ ಉಂಟು- ಮಾಡುವ ಉಲಿಗಳು ತುದಿಯ ಉಲಿಗಳು) apiculture ಹೆ ಜೇನಾರಂಬ (ಅವರ ಮನೆಯವರು ಹಲವು ಸಾಲುಗಳಿಂದ ಜೇನಾರಂಬದಲ್ಲಿ ತೊಡಗಿದ್ದಾರೆ) apiologist ಹೆ ಜೇನರಿಗ (ಇವರು ಈ ನಾಡಿನ ತುಂಬಾ ಹೆಸರಾಂತ ಜೇನರಿಗರು) apiology ಹೆ ಜೇನರಿಮೆ (ಅವರು ಜೇನರಿಮೆಯಲ್ಲಿ ಎತ್ತಿದಕಯ್), ಜೇನ್ನೊಣದರಿಮೆ aplomb ಹೆ ತನ್ನಂಬಿಕೆ (ಎಂತಹ ತೊಡಕುಗಳು ಎದು- ರಾದಾಗಲೂ ಆತ ತನ್ನಂಬಿಕೆಯಿಂದ ಕೆಲಸಮಾಡಬಲ್ಲ) apocalypse ಹೆ ಪೆರ್ಚಟ್ಟು (ಅವನು ನಡೆಸಿದ ಪೆರ್ಚಟ್ಟು ಎಂದಿಗೂ ಮರೆಯದಂತಹದು) apod ಪ ಅಡಿಯಿರದ (ಹಾವುಗಳು ಅಡಿಯಿರದ ಉಸುರಿ- ಗಳಾಗಿವೆ), ಅಡಿಯಿಲ್ಲದ apogamy ಹೆ ಸೇರಿರದಹುಟ್ಟು, ಕೂಡಿರದಹುಟ್ಟು (ಕೆಲವು ಗಿಡಗಳಲ್ಲಿ ಸೇರಿರದಹುಟ್ಟು ನಡೆಯುತ್ತಿರುತ್ತದೆ) apogee ಹೆ 1 ಹಿರಿದೂರ (ಈ ಬಾನಬಂಡಿ ಮಂಗಳಕ್ಕೆ 365.3 ಕಿ.ಮೀ. ಕಿರುದೂರದಲ್ಲಿ ಮತ್ತು 80,000 ಕಿ.ಮೀ. ಹಿರಿದೂರದಲ್ಲಿ ಮೊಟ್ಟೆಯಾಕಾರದ ದಾರಿಯಲ್ಲಿ ಸುತ್ತಲಿದೆ) 2 ತುತ್ತತುದಿ (ಅವನು ತನ್ನ ಬರವಣಿಗೆಯ ತುತ್ತತುದಿಯನ್ನು ಹತ್ತೇಡುಗಳ ಮೊದಲೇ ತಲಪಿದ್ದ) apologize ಎ ತಪ್ಪೊಪ್ಪು (ಆವತ್ತಿನ ತನ್ನ ಮಾತಿನ ಬಗೆಗೆ ಆತ ತಪ್ಪೊಪ್ಪಿಕೊಂಡಿದ್ದಾನೆ) apology ಹೆ ತಪ್ಪೊಪ್ಪಿಕೆ (ಆತನ ತಪ್ಪೊಪ್ಪಿಕೆಗೆ ಅವರು ಯಾವ ಬೆಲೆಯನ್ನೂ ಕೊಡಲಿಲ್ಲ) apoplectic ಪ ಸಿಟ್ಟಿಗೆದ್ದ (ತುಂಬಾ ಸಿಟ್ಟಿಗೆದ್ದ ಮಂದಿ ಏನು ಮಾಡುತ್ತಾರೆಂದು ಹೇಳಲು ಬರುವುದಿಲ್ಲ) apoplexy ಹೆ ಪೆರ್ಮುನಿಸು (ಆತ ಪೆರ್ಮುನಿಸಿನಲ್ಲಿ ಎದುರಿನಲ್ಲಿದ್ದ ಕಡತವನ್ನು ಮೇಲೆಸೆದ) apostasy ಹೆ ನೀಗಾಡಿಕೆ (ಅವನ ಈ ನಂಬಿಕೆಗಳ ನೀಗಾಡಿಕೆಗೆ ದೂಸರೇನಿರಬಹುದು?) apostate ಹೆ ನೀಗಾಡುಗ apostrophe ಹೆ ಪತ್ತುಗೆ ಗುರುತು, ಬಿಡುಹ ಗುರುತು apothecary ಹೆ ಮದ್ದುಗ (ಆತ ಒಂದು ಮದ್ದಿನಂಗಡಿ- ಯಲ್ಲಿ ಮದ್ದುಗನಾಗಿ ಕೆಲಸ ಮಾಡುತ್ತಿದ್ದಾನೆ) appal ಎ ಅಂಜಿಸು, ಕೆಕ್ಕಸಗೊಳಿಸು, ಕೆಚ್ಚಳಿಸು (ಅಲ್ಲಿ ಕಂಡ ನೋಟ ಆತನನ್ನು ಕೆಚ್ಚಳಿಸಿತು) appalling ಪ ಅಂಜಿಸುವ, ಹೆದರಿಸುವ, ಕೆಚ್ಚಳಿಸುವ (ಕೆಚ್ಚಳಿಸುವ ನೋಟ) apparatus ಹೆ ಮುಟ್ಟು (ತನ್ನ ಕೆಲಸಕ್ಕೆ ಬೇಕಾಗುವ ಮುಟ್ಟುಗಳನ್ನೆಲ್ಲ ಅವನು ತನ್ನೊಂದಿಗೆ ತಂದಿದ್ದ) apparel ಹೆ ಉಡುಪು, ಬಟ್ಟೆಬರೆ (ಅವಳು ತನ್ನ ಬಟ್ಟೆಬರೆಯ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆಯಿಂದಿದ್ದಳು) apparent ಪ 1 ಕಾಣುವ 2 ಮೇಲ್ನೋಟದ (ಮೇಲ್ನೋ- ಟದ ದೂಸರು ನಿಕ್ಕಿಯಾದ ದೂಸರಲ್ಲ) apparition ಹೆ ಗಾಳಿಗ (ನಿನ್ನೆ ಇರುಳು ಗಾಳಿಗನೊಂದನ್ನು ನೋಡಿದೆನೆಂದು ಆತ ಎಲ್ಲರ ಹತ್ತಿರವೂ ಹೇಳುತ್ತಿದ್ದಾನೆ), ಮರಳು appeal ಎ 1 ಮೊರೆಯಿಡು (ತನ್ನ ತಪ್ಪನ್ನು ಮನ್ನಿಸ- ಬೇಕೆಂದು ಆತ ಮೊರೆಯಿಟ್ಟ) 2 ಸೆಳೆ (ಅವಳ ಹಾಡಿಕೆ ಎಲ್ಲರನ್ನೂ ಸೆಳೆಯಿತು) ಹೆ 1 ಮೇಲ್ಮನವಿ (ಮೇಲ್ಮನವಿ ಮಾಡುವ ಮೊದಲು ತಪ್ಪು ಕಟ್ಟಬೇಕಾಗುತ್ತದೆ) 2 ಸೆಳೆತ appear ಎ 1 ಸೂಸು (ಹೊರಸೂಸು), ಪೊಚ್ಚರಿಸು, ಮಯ್ದೋರು, ಮೂಡು (ನೇಸರು ಮೂಡಿತು; ಒಡ- ಮೂಡು), ಒಗೆ (ಕಾಡಿನಲ್ಲಿ ಕಿಚ್ಚು ಒಗೆದಿದೆ), ಹೊಳಕು (ಹೊಳಕಿದ ಗುಮ್ಮ), ತೋರು (ಇಲ್ಲಿ ಹುಡುಕಿದರೆ ಅಲ್ಲಿ ತೋರುತ್ತಾನೆ), ತಳಿ, ಕಾಣು (ಬಿಸಿಲಿನಿಂದ ಒಳಗೆ ಬಂದರೆ ಏನೂ ಕಾಣುವುದಿಲ್ಲ) 2 ಹೊಡಕರಿಸು, ತಲೆದೋರು, ತೋಚು (ನನಗೆ ಹೀಗೆ ತೋಚುತ್ತದೆ), ತೋರು (ಬಂದಿದ್ದಾನೆಂದು ತೋರುತ್ತದೆ; ತೋರ್ಪು), ಪೊದಳು (ಪೊದಳ್ಕೆ) apex appear A


30 appearance ಹೆ ತೋರಿಕೆ (ಅವರ ತೋರಿಕೆ ಇವರಿಗೆ ಅಚ್ಚರಿ ಮೂಡಿಸಿತು), ಕಾಣ್ಕೆ appearing ಹೆ ಕಳಿಕೆ (ಮರುಕಳಿಕೆ) appease ಎ ತಣಿಸು (ಆತನನ್ನು ತಣಿಸುವುದಕ್ಕಾಗಿ ಏನೇನೋ ಮಾಡುತ್ತಿದ್ದಾರೆ) appellant ಹೆ ಮೇಲ್ಮನವಿಗಾರ (ಮೇಲ್ಮನವಿಗಾರನನ್ನು ಇವತ್ತು ಬರಹೇಳಿದ್ದಾರೆ) appellation ಹೆ ಹೆಸರು (ನಿಮ್ಮ ಹೆಸರನ್ನು ಇಲ್ಲಿ ಬರೆಯಿರಿ) append ಎ ಸೇರಿಸು (ಬರಹದ ಕೊನೆಯಲ್ಲಿ ಒಂದು ತಿಟ್ಟವನ್ನು ಸೇರಿಸಿದ್ದಾರೆ), ಒಟ್ಟು appendicitis ಹೆ ಕರುಳುಬಾಲದುರಿತ (ಅವರು ಕರುಳು- ಬಾಲದುರಿತದಿಂದ ಬಳಲುತ್ತಿದ್ದಾರೆ), ಕರುಳುಬಾಲದ ಉರಿಯೂತ appendix ಹೆ 1 ಕರುಳುಬಾಲ (ಕರುಳುಬಾಲದಲ್ಲಿ ಹುಣ್ಣಾದರೆ ಅದನ್ನು ಕತ್ತರಿಸಿ ತೆಗೆಯುತ್ತಾರೆ) 2 ಸೇರಿಕೆ (ಕಡತದ ಕೊನೆಯಲ್ಲಿ ಮೂರು ಸೇರಿಕೆಗಳಿವೆ) appertain ಎ ಸೇರಿರು, ಪತ್ತುಗೆಯಿರು (ಇದಕ್ಕೆ ಯಾವುದ- ರೊಂದಿಗೆ ಪತ್ತುಗೆಯಿದೆ?) appetite ಹೆ 1 ಹಸಿವು (ಊಟ ಮಾಡಲು ನನಗೆ ಹಸಿವಿಲ್ಲ) 2 ಒಲವು (ಆತನಿಗೆ ಕಲಿಕೆಯಲ್ಲಿ ಒಲವು ಇಲ್ಲವಾಗಿದೆ), ಅಕ್ಕರೆ appetizer ಹೆ ಹಸಿಯಿಸುಕ (ಊಟದ ಮೊದಲು ಹಸಿ- ಯಿಸುಕವಾಗಿ ಆತ ಒಂದು ಗಿಣ್ಣಲು ಸಾರು ಕುಡಿಯು- ತ್ತಾನೆ) applaud ಎ ಕೊಂಡಾಡು, ಮೆಚ್ಚು, ಹೊಗಳು (ಆತನನ್ನು ಎಲ್ಲರೂ ಹೊಗಳಿದರು) applause ಹೆ ಹೊಗಳಿಕೆ (ಅಶ್ಟು ಮಂದಿಯ ಹೊಗಳಿಕೆ ಆತನನ್ನು ಉಬ್ಬಿಸಿಬಿಟ್ಟಿದೆ), ಮೆಚ್ಚುಗೆ appliance ಹೆ ಚೂಟಿ (ಆತ ತನ್ನ ಹೆಂಡತಿಗೆ ಒಂದು ಕಾಯಿ ತುರಿಯುವ ಚೂಟಿಯನ್ನು ತಂದುಕೊಟ್ಟಿದ್ದಾನೆ) applicable ಪ ಹೊಂದಿಕೆಯಾಗುವ, ಬಳಸಬಲ್ಲ (ಈ ಕುಳ್ಳಿಹದಲ್ಲಿ ಬಳಸಬಲ್ಲ ನುಡಿತವೊಂದನ್ನು ಹೇಳಿ) applicant ಹೆ ಮನವಿಗಾರ (ಮನವಿಗಾರರು ಒಬ್ಬೊಬ್ಬರಾಗಿ ಒಳಗೆ ಬರಲಿ) application ಹೆ 1 ಬಳಕೆ (ಇದರ ಬಳಕೆ ಹೇಗೆಂಬುದನ್ನು ಮೊದಲು ತಿಳಿಸಿ) 2ಬಳಕ (ಆ ಎಣ್ಣುಕದಲ್ಲಿ ಈ ಬಳಕ- ವನ್ನು ನೆಲೆಗೊಳಿಸಿಲ್ಲ) 3 ಮನವಿ (ಅವರ ಮನವಿಯನ್ನು ನಾನಿನ್ನೂ ನೋಡಿಲ್ಲ), ಅರಿಕೆ, ಅರಿಕೆಯೋಲೆ (ಈ ಕೆಲಸಕ್ಕೆ ಕರೆ ಕೊಟ್ಟ ಕಂಪನಿಗೆ ಈಗ ನೂರು ಅರಿಕೆ- ಯೋಲೆಗಳು ಬಂದಿವೆ) Application Programming Interface (API) ºÉ ಮುಟ್ಟಿನ ಹಮ್ಮುಗಾರಿಕೆಯ ಒಡನುಡಿ (ಮುಹಒ) (ಅವರು ಕೂಡಣತಾಣಗಳ ಎತ್ತುಗೆಯನ್ನು ಕೊಟ್ಟು ‘ಮುಟ್ಟಿನ ಹಮ್ಮುಗಾರಿಕೆಯ ಒಡನುಡಿ’ಯ ಬಗ್ಗೆ ಹೇಳಿದ್ದರು) applied ಪ ಬಳಸುವ, ಬಳಕೆಯ (ಅವರು ಬಳಕೆಯ ಅರಿಮೆಯಲ್ಲಿ ಮುಂದಿನ ಓದನ್ನು ಮಾಡುತ್ತಿದ್ದಾರೆ) apply ಎ 1 ಹಚ್ಚು (ಮಯ್ಗೆ ಎಣ್ಣೆ ಹಚ್ಚಿಕೊಂಡ) 2 ಮನವಿ ಕೊಡು (ಈ ಒಂದು ಕೆಲಸಕ್ಕೆ ಇನ್ನೂರು ಮಂದಿ ಮನವಿ ಕೊಟ್ಟಿದ್ದಾರೆ) 3 ತಕ್ಕುದಾಗಿರು (ಅದು ಈ ಕೆಲಸಕ್ಕೆ ತಕ್ಕುದಾಗಿದೆ), ತಗು 4 ಊಕವಿಡು (ಊಕವಿಟ್ಟು ಓದಿದರಶ್ಟೇ ತೇರ್ಗಡೆಯಾಗಬಲ್ಲೆ) appoint ಎ 1 ಆರಿಸು (ಎರಡು ಗಂಟೆಗೆ ಸರಿಯಾಗಿ ಆರಿಸಿದ ಜಾಗಕ್ಕೆ ಹೋಗಿ ಸೇರಬೇಕು) 2 ಕೆಲಸ ಕೊಡು appointed ಹೆ ಪನವು (ಆತ ತನ್ನನ್ನು ಕಾಣಬೇಕಾದ ಪನವು ಯಾವುದೆಂದು ತಿಳಿಸಿದ್ದಾನೆ), ಕೊಂಬು (ಆತ ಮೆಲ್ಲನೆ ಕೊಂಬಿನೆಡೆಗೆ ನಡೆದ) appointment ಹೆ 1 ಕೆಲಸ (ಅವನಿಗೆ ಇನ್ನೂ ಕೆಲಸ ಆಗಿಲ್ಲ) 2 ಪೂಣ್ದ ಕದೆ (ಅವನಿಗೆ ಇವತ್ತು ಎರಡು ಪೂಣ್ದ ಕದೆಗಳಿವೆ), ಕಾಣ್ಹೊತ್ತು, ಹೊತ್ತೊಪ್ಪಿಗೆ, ಗೊತ್ತು (ಅವರು ಮಾಂಜುಗರನ್ನು ನೋಡುವ ಮುನ್ನ ಗೊತ್ತು ಪಡೆದುಕೊಂಡರು) apportion ಎ ಪಾಲುಹಚ್ಚು, ಪಾಲುಮಾಡು (ಕದ್ದುತಂದ ಹಣವನ್ನು ಪಾಲುಮಾಡುತ್ತಿದ್ದಾರೆ) apposite ಪ ತಕ್ಕ (ಆಕೆ ಅವನಿಗೆ ತಕ್ಕ ಹೆಂಡತಿಯಾಗಿದ್ದಳು) appraisal ಹೆ ಬೆಲೆಕಟ್ಟಾಣ್ಕೆ (ಅವರ ಮೇಲುಗರಿಗೆ ಅವರ ಬೆಲೆಕಟ್ಟಾಣ್ಕೆ ಬಗ್ಗೆ ತುಂಬಾ ಮೆಚ್ಚಿಗೆಯಿತ್ತು), ಬೆಲೆಕಟ್ಟಿಕೆ appraise ಎ 1 ತಿಳಿಯಪಡಿಸು (ಆತನಿಗೆ ಎಲ್ಲವನ್ನೂ ತಿಳಿಯಪಡಿಸಿದ್ದೇವೆ) 2 ಬೆಲೆಕಟ್ಟು (ಇವರು ನಮ್ಮ ಕಟ್ಟಡಕ್ಕೆ ಬೆಲೆಕಟ್ಟಲಿದ್ದಾರೆ) appearance appraise A


31 appreciate ಎ 1 ಬೆಲೆಹೆಚ್ಚು (ಪಲ್ಲೆಸಪ್ಪುಗಳು ಬೆಲೆ- ಹೆಚ್ಚುತ್ತಿರುವುದನ್ನು ನೋಡಿದರೆ ಹೆದರಿಕೆಯಾಗುತ್ತದೆ) 2 ತಿಳಿದುಕೊಳ್ಳು (ನೀವು ಪಟ್ಟ ತೊಂದರೆಗಳನ್ನು ಆತ ತಿಳಿದುಕೊಂಡಿದ್ದಾನೆ) appreciation ಹೆ 1 ಮೆಚ್ಚಿಕೆ (ಅವರು ತಮ್ಮ ಮೆಚ್ಚಿಕೆ- ಯನ್ನು ತಿಳಿಸಿದ್ದಾರೆ) 2 ಬೆಲೆಹೆಚ್ಚಿಕೆ apprehend ಎ 1 ಸೆರೆಹಿಡಿ (ಕಳ್ಳರನ್ನು ಕಾಪುಗರು ಸೆರೆಹಿಡಿದ್ದಾರೆ) 2 ತಿಳಿ (ನಾನು ಹೇಳಿದ್ದು ತಿಳಿಯಿತೇ?) 3 ಅಂಜು, ಹೆದರು (ಯಾರಿಗೂ ಹೆದರಬೇಡ) apprehension ಹೆ 1 ಹೆದರಿಕೆ (ಏನಾಗಿಬಿಡುತ್ತದೋ ಎಂಬ ಹೆದರಿಕೆ ಅವನನ್ನು ಕಾಡುತ್ತಿತ್ತು) 2 ತಿಳುವಳಿಕೆ, ಅರಿವು 3 ಸೆರೆಹಿಡಿತ (ಕೊಲೆಗಾರನ ಸೆರೆಹಿಡಿತಕ್ಕೆ ಎಲ್ಲರೂ ಕಾದಿದ್ದರು) apprentice ಹೆ ಪಳಗುಗ (ಅಲ್ಲಿ ಆರು ತಿಂಗಳು ಪಳಗುಗನಾಗಿರಬೇಕಾಗುತ್ತದೆ) apprise ಎ ತಿಳಿಸು (ನಡೆದುದನ್ನೆಲ್ಲ ಆತ ಯಾರಿಗೋ ತಿಳಿಸಿದ್ದಾನೆ) approach ಎ ಸಾರು (ಬಳಿಸಾರು; ಕೆಲಸಾರು), ಅಣೆ (ಅಣೆದು ನೂಕು), ಅಂಡು (ಅಂಡುಗೊಳ್ಳು), ಎಯ್ತರು, ಎಳ್ತರು, ಹೊಂದು (ಹೊಂದತಕ್ಕುದು), ಮುಟ್ಟಯಿಸು, ಎಡೆವೊಗು ಹೆ 1 ಹಮ್ಮುಗೆ (ಯಾವ ತೊಡಕೇ ಆಗಲಿ, ಮೊದಲಿಗೆ ಅದನ್ನು ಬಗೆಹರಿಸಲು ಬಳಸಬಲ್ಲ ದಾರಿ- ಗಳನ್ನು ಪಟ್ಟಿಮಾಡುವುದು ಅವನ ಹಮ್ಮುಗೆಯಾಗಿತ್ತು) 2 ಎಯ್ತರಿಕೆ (ಮಳೆಗಾಲದ ಎಯ್ತರಿಕೆಗೆ ಇನ್ನು ಹೆಚ್ಚು ನಾಳುಗಳಿಲ್ಲ) 3 ನೀಡಿಕೆ (ಆತನ ನೀಡಿಕೆಗಳನ್ನು ಅವಳು ಗಮನಿಸಲಿಲ್ಲ) approbation ಹೆ ಮೆಚ್ಚುಗೆ, ಹೊಗಳಿಕೆ appropriate ಪ ತಕ್ಕ (ಕೆಲಸಕ್ಕೆ ತಕ್ಕ ಉಡುಪು; ತಕ್ಕುಮೆ), ಸರಿಯಾದ (ಅವರದು ಸರಿಯಾದ ಹೇಳಿಕೆ) ಎ 1 ಬಳಸಿಕೊಳ್ಳು (ಹೆದರಿ ಓಡಿಹೋದವರ ಮನೆಗಳನ್ನು ಹೆದರಿಸಿದವರು ಬಳಸಿಕೊಳ್ಳುತ್ತಿದ್ದಾರೆ) 2 ತೆಗೆದಿರಿಸು (ಮಗಳ ಮದುವೆಗಾಗಿ ತಿಂಗಳು ತಿಂಗಳು ಹಣವನ್ನು ತೆಗೆದಿರಿಸುತ್ತಿದ್ದಾರೆ) approval ಹೆ 1 ಒಪ್ಪಿಗೆ (ಆ ಕೆಲಸಕ್ಕೆ ತಂದೆಯವರ ಒಪ್ಪಿಗೆ ಸಿಕ್ಕಿದೆ) 2 ಮೆಚ್ಚುಗೆ (ಅವರು ನಿಮ್ಮನ್ನು ಮೆಚ್ಚುಗೆಯಿಂದ ಕಾಣುತ್ತಾರೆ) approve ಎ 1 ಮೆಚ್ಚು (ಈ ಊರಲ್ಲಿ ನಿನ್ನ ಅಳವನ್ನು ಮೆಚ್ಚದವರಿಲ್ಲ; ಮೆಚ್ಚವಣಿಕೆ; ಮೆಚ್ಚುಗಾಣಿಕೆ; ಮೆಚ್ಚುಗೆ) 2 ಒಪ್ಪು (ನಿಮ್ಮ ಹಮ್ಮುಗೆಯನ್ನು ಅವರು ಒಪ್ಪಿದ್ದಾರೆ) approver ಹೆ ಒಪ್ಪಿಕೊಂಡವ, ಒಪ್ಪುಗ (ಸಿಕ್ಕಿಬಿದ್ದ ಕಳ್ಳರಲ್ಲಿ ಒಬ್ಬನನ್ನು ಒಪ್ಪುಗನನ್ನಾಗಿ ಮಾಡಿಕೊಂಡಿದ್ದಾರೆ) approximately ಪ ಹೆಚ್ಚುಕಡಿಮೆ (ಹೆಚ್ಚು ಕಡಿಮೆ ಇನ್ನೂರು ರುಪಾಯಿ ಬೇಕಾದೀತು), ಹತ್ಹತ್ತಿರ, ಹತ್ತಿರ ಹತ್ತಿರ approximation ಹೆ ತೋರೆಣಿಕೆ (ಇದರ ಬೆಲೆಯ ಕುರಿತಾಗಿ ನಿಮ್ಮ ತೋರೆಣಿಕೆಯನ್ನು ತಿಳಿಸಿ), ತೋರುಬೆಲೆ appurtenances ಹೆ ಮುಟ್ಟುಗಳು (ಈ ಕೆಲಸಕ್ಕೆ ಬೇಕಾಗುವ ಮುಟ್ಟುಗಳನ್ನೆಲ್ಲ ನೀವೇ ತರಬೇಕು) ಂಠಿಡಿiಟ ಹೆ ಇಬ್ಬೇಸಿಗೆ (ಇಬ್ಬೇಸಿಗೆಯಲ್ಲಿ ಮಕ್ಕಳಿಗೆ ಕಲಿಮನೆ- ಯಿಂದ ಬಿಡುವು ಇರುತ್ತದೆ) apron ಹೆ ತಡಪು (ತಡಪು ಕಟ್ಟಿಕೊಂಡು ಅಡಿಗೆ ಮಾಡಲು ಹೋದ), ಮೇಲುಡುಪು apt ಪ ತಕ್ಕ (ಅವನಿಗೆ ತಕ್ಕ ಆಳು ಸಿಗಲಿಲ್ಲ) aptitude ಹೆ ಒಲವು (ಹುಡುಗನ ಒಲವು ಯಾವುದರಲ್ಲಿದೆ- ಯೆಂಬುದನ್ನು ಮೊದಲು ತಿಳಿದುಕೊಳ್ಳಬೇಕು) aqualung ಹೆ ನೀರುಸಿರುಕ (ನೀರಲ್ಲಿ ಮುಳುಗು ಹಾಕು- ವವರು ಒಂದು ನೀರುಸಿರುಕವನ್ನು ಕಟ್ಟಿಕೊಳ್ಳುತ್ತಾರೆ) aquaplane ಎ ಜಾರಿಬೀಳು (ಒದ್ದೆ ನೆಲದ ಮೇಲೆ ಕಾಲಿಡಲು ಹೋಗಿ ಜಾರಿಬಿದ್ದ) aquarium ಹೆ ಮೀನುಮನೆ (ಅವರ ಮನೆಯಲ್ಲಿ ಒಂದು ದೊಡ್ಡ ಮೀನುಮನೆ ಇದೆ), ಮೀನುತೊಟ್ಟಿ, ನೀರುಸುರಿ ಮನೆ aquatic ಪ 1 ನೀರಿನ 2 ನೀರಿನಲ್ಲಿರುವ, ನೀರಿನಲ್ಲಿ ಬೆಳೆವ (ನೀರಿನಲ್ಲಿ ಬೆಳೆವ ಈ ಹೂಗಳು ಚನ್ನಾಗಿ ಕಾಣಿಸುತ್ತವೆ) aqueduct ಹೆ ಮೇಲ್ಗಾಲುವೆ (ಮೇಲ್ಗಾಲುವೆಯಲ್ಲಿ ಹರಿದುಬರುತ್ತಿದೆ), ಕಟ್ಟುಕಾಲುವೆ aquifer ಹೆ ನೀರೊಯ್ಯುಕ (ಇಲ್ಲಿ ನೆಲದ ಕೆಳಗೆ ನೀರೊ- ಯ್ಯುಕವಿದೆ), ಕೆಳನೀರಹಾದಿ arable ಪ ಉಳತಕ್ಕ (ಅವನಿಗೆ ಉಳತಕ್ಕ ನೆಲ ಇರುವುದು ತುಂಬಾ ಕಡಿಮೆ) appreciate arable A


32 arachnophobia ಹೆ ಜೇಡನಂಜಿಕೆ (ಆಕೆಗೆ ಜೇಡನಂಜಿಕೆ- ಯಿರುವುದರಿಂದ ಅವನು ಮನೆಯೊಳಗೆ ಜೇಡಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕಾಗಿದೆ) arbiter ಹೆ ತೀರ್ಪುಗಾರ (ಕೊನೆಗೆ ತೀರ್ಪುಗಾರರು ಹೇಳು- ವುದನ್ನು ಒಪ್ಪಿಕೊಳ್ಳುವುದೆಂದು ಅವರೊಳಗೆ ತೀರ್ಮಾನಿಸ- ಲಾಯಿತು) arbitrary ಪ 1 ಕಟ್ಟಳೆಯಿಲ್ಲದ, ಕಟ್ಟಿಲ್ಲದ (ಅವನ ತೀರ್ಮಾನ- ಗಳೆಲ್ಲ ಕಟ್ಟಿಲ್ಲದವುಗಳಾಗಿದ್ದುವು) 2 ಹತೋಟಿಯಿಲ್ಲದೆ (ಆತನ ಆಳ್ವಿಕೆಯಲ್ಲಿ ಕೆಲಸಗಳೆಲ್ಲ ಹತೋಟಿಯಿಲ್ಲದೆ ನಡೆಯುತ್ತಿದ್ದುವು) arbitrate ಎ ತೀರ್ಮಾನಿಸು (ಅವರ ನಡುವಿನ ಜಗಳವನ್ನು ಯಾರು ತೀರ್ಮಾನಿಸುತ್ತಾರೆ?) arbitration ಹೆ ನಡುವಸ್ತಿಕೆ (ಈ ತೊಂದರೆಯನ್ನು ಇವತ್ತು ನಡುವಸ್ತಿಕೆಯ ಮೂಲಕ ಕೊನೆಗೊಳಿಸಲಾಗಿದೆ), ಬೇರ್ಮೆಬಗೆಹರಿಕೆ arbitrator ಹೆ ತೀರ್ಪುಗಾರ (ಅವರ ಜಗಳವನ್ನು ಬಗೆ- ಹರಿಸಲು ತೀರ್ಪುಗಾರರನ್ನು ಕರೆಸಲಾಗಿದೆ) arbour ಹೆ ಹಂಬಿನ ಹಂದರ (ಅವರು ಹಂಬಿನ ಹಂದರದ ಕೆಳಗೆ ಕುಳಿತು ತುಂಬಾ ಹೊತ್ತು ಹರಟೆಹೊಡೆದರು) arc ಹೆ ಬಾಗು ಎ ಬಾಗು (ಅವಳ ಬೆನ್ನು ಬಾಗಿದೆ) arcade ಹೆ ಬಾಗುದಾರಿ (ಬಾಗುದಾರಿ ಹಂಬಿನ ಹಂದರಗಳ ಅಡಿಯಲ್ಲಿ ಸಾಗುತ್ತದೆ) arcana ಹೆ ಗುಟ್ಟು (ಅವಳ ಅಡಿಗೆಯ ಗುಟ್ಟು ಬೇರೆ ಯಾರಿಗೂ ತಿಳಿಯದು) arch ಎ ಬಾಗು (ಬಾಗಿದ ಬೆನ್ನು) ಹೆ ಬಾಗು (ಮೆರವಣಿಗೆ ಬರುವಲ್ಲಿ ಹಲವಾರು ಬಾಗುಗಳನ್ನು ಮಾಡಿರಿಸಿದ್ದಾರೆ) archaeastronomy ಹೆ ಪಳಬಾನರಿಮೆ (ಆ ನಾಡಿನ ಪಳಬಾನರಿಮೆಯ ಬಗ್ಗೆ ಹಲವು ಹೊತ್ತಗೆಗಳನ್ನು ಅರಿಗರು ಬರೆದಿದ್ದಾರೆ) archaeologist ಹೆ ಪಳಮೆಯರಿಗ (ಅವರು ಈ ನಾಡಿನ ಹೆಸರಾಂತ ಪಳೆಮೆಯರಿಗರು) archaeology ಹೆ ಪಳಮೆಯರಿಮೆ (ಅವರು ಪಳಮೆ- ಯರಿಮೆಯಲ್ಲಿ ಹೆಚ್ಚಿನ ಓದು ನಡೆಸುತ್ತಿದ್ದಾರೆ) archaeomagnetic ಪ ಹಳೆಸೆಳೆಗಲ್ಲಿನ (ನೆಲದ ಸೆಳೆತದ ಹರವಿನ ಬಗ್ಗೆ ತಿಳಿಯಲು ಹಳೆಸೆಳೆಗಲ್ಲಿನ ಅರಿವು ಬೇಕು) archaic ಪ ಬಳಕೆಯಲ್ಲಿಲ್ಲದ, ಹಳೆಯ (ಈ ಹಳೆಯ ಕಟ್ಟಲೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು) arch-enemy ಹೆ ಅರಿದು ಹಗೆ (ನಿಮ್ಮನ್ನೇ ಆತ ತನ್ನ ಅರಿದು ಹಗೆಯೆಂದು ತಿಳಿದಿದ್ದಾನೆ) archeology ಹೆ ಪಳಮೆಯರಿಮೆ (ಇಲ್ಲಿ ಪಳಮೆ- ಯರಿಮೆಯಲ್ಲಿ ಕಲಿಕೆ ಏರ್ಪಾಟು ತುಂಬಾ ಚೆನ್ನಾಗಿದೆ) archer ಹೆ ಪೂಣಿಗ, ಬಿಲ್ಲುಗಾರ archery ಹೆ ಬಿಲ್ಲಾಟ (ಬಿಲ್ಲಾಟದಲ್ಲಿ ಆ ನಾಡಿನವರು ತುಂಬಾ ಮುಂದಿದ್ದಾರೆ), ಬಿಲ್ಲುಪೋಟಿ, ಅಂಬುಪೋಟಿ archipelago ಹೆ ಕುದುರೊಗ್ಗಡ, ಕುದುರೊರಳಿ (ಈ ನಾಡಿನ ಬಡಗಕ್ಕೊಂದು ಕುದುರೊರಳಿಯಿದೆ), ಕುರ್ವ- ಗುಂಪು architect ಹೆ ಕಟ್ಟಡರಿಗ (ಕಟ್ಟಡರಿಗರನ್ನು ಕಂಡು ನಮ- ಗೊಂದು ಹೊಸಮನೆಯ ಹಮ್ಮುಗೆಯನ್ನು ಹಾಕಿಕೊಡಲು ಹೇಳಿದ್ದೇನೆ) architecture ಹೆ 1 ಕಟ್ಟಡರಿಮೆ (ಕಟ್ಟಡರಿಮೆಯಲ್ಲಿ ಆತ ತುಂಬಾ ಓದಿಕೊಂಡಿದ್ದಾನೆ) 2 ಕಟ್ಟಡಹಮ್ಮುಗೆ (ಅವರು ನಮ್ಮ ಮನೆಯ ಕಟ್ಟಡಹಮ್ಮುಗೆ ಚನ್ನಾಗಿಲ್ಲವೆಂದು ಹೇಳುತ್ತಿದ್ದಾರೆ), ತಡಿಕೆ (ಈ ಮಾಡುಗೆಯ ತಡಿಕೆ ಸರಿಯಿಲ್ಲ) architrave ಹೆ ಪಡಿ (ಅವರ ಮನೆಯಲ್ಲಿ ಬಾಗಿಲ ಪಡಿಗೆ ಒರಳೆ ಹಿಡಿದಿದೆ; ಕಿಟಿಕಿಪಡಿ) archive ಹೆ ಹಳೆಗೂಡಿಕೆ (ಈ ಕಡತಗಳನ್ನು ಪಾಳಿಯಲ್ಲಿ ಹಳೆಗೂಡಿಕೆಗೊಳಿಸಲಾಗುತ್ತದೆ), ಹಳೆಕಲೆತ ಎ ಹಳೆ- ಕಲೆತಗೊಳಿಸು archivist ಹೆ ಹಳೆಗೂಡುಗ (ಹಳೆಗೂಡುಗನೊಬ್ಬ ಇಲ್ಲಿನ ಕಡತಗಳನ್ನು ಹೊತ್ತೋರಣಗೊಳಿಸುತ್ತಿದ್ದಾನೆ) ardent ಪ 1 ಕಾವರದ (ಅವನೊಬ್ಬ ಕಾವರದ ಒಲುಮೆಗ- ನಾಗಿದ್ದ), ತೂಳಿನ 2 ಹುರುಪಿನ (ತುಂಬಾ ಹುರುಪಿನ ಪೆರ್ಮಾರ್ಪಾಡುಗರು ಯಾವುದನ್ನೂ ಗಮನಿಸುವುದಿಲ್ಲ) 3 ಉರಿಯುವ (ಉರಿಯುವ ಕಣ್ಣುಗಳು) arachnophobia ardent A


33 ardent ಹೆ ಹಂಬಲ, ಗೀಳು (ಹೆಂಡತಿಯ ಗೀಳಿ- ನಲ್ಲಿ ಅವನು ಇವತ್ತು ಕೆಲಸಕ್ಕೆ ಹೋಗಲಿಲ್ಲ; ಗೀಳು »r) ardour ಹೆ ಪಸ, ಪದೆಪು (ಕೆಲಸಕ್ಕೆ ಸೇರುವ ಪದೆಪು ಆತನಲ್ಲಿಲ್ಲ) arduous ಪ ತೊಡಕಿನ (ಅವರಿಗೆ ಸಿಕ್ಕಿರುವುದು ತುಂಬಾ ತೊಡಕಿನ ಕೆಲಸ) area ಹೆ ಹರವು (ಅಂಗಳದ ಹರವು ತುಸು ಕಡಿಮೆ- ಯಾಯಿತು) arecanut ಹೆ ಅಡಿಕೆ (ಅಡಿಕೆಗೆ ಈಗ ಒಳ್ಳೆ ಬೆಲೆ ಬಂದಿದೆ) arena ಹೆ ಕಳ, ಅಂಗಳ, ಕಣ (ಆಟದ ಕಣದ ಸುತ್ತ ನೋಡುಗರು ಕುಳಿತಿದ್ದರು; ಹೋರಾಟದ ಕಣ) argon ಹೆ ಮದಡಾವಿ, ಮಂಕಾವಿ (ಮಂಕಾವಿಯನ್ನು ಕೆಲವೊಮ್ಮೆ ಬೆಂಕಿಗಳನ್ನು ಆರಿಸುವಲ್ಲಿ ಬಳಸುತ್ತಾರೆ) argot ಹೆ ಕೀಸರ, ತೊಂಡು (ಕಟ್ಟಲೆಯರಿಗರು ಅವರದೇ ಆದ ತೊಂಡಿನಲ್ಲಿ ಮಾತನಾಡುತ್ತಾರೆ) arguable ಪ 1 ಮರುಬಗೆಯಬಲ್ಲ (ಇದು ಮರು- ಬಗೆಯಬಲ್ಲ ಮಾತೆಂಬುದು ನೆನಪಿನಲ್ಲಿರಲಿ) 2 ನೇರ್ಪಾದ, ದೂಸರಿತ್ತ argue ಎ 1 ಬಕ್ಕುಡಿಗೆಯ್ಯು, ಬಕ್ಕುಡಿಗಟ್ಟು (ಅವರಿಬ್ಬರೂ ತುಂಬಾ ಹೊತ್ತು ಬಕ್ಕುಡಿಗಟ್ಟುತ್ತಿದ್ದರು) 2 ದೂಸರೀಯು (ತನ್ನ ಮಾತಿಗೆ ಅವನ ಹಾಗೆ ದೂಸರೀಯಬಲ್ಲವರು ಬೇರೆ ಯಾರೂ ಇಲ್ಲ) argument ಹೆ ಬಕ್ಕುಡಿ (ಅವನ ಬಕ್ಕುಡಿ ಉಳಿದವರಿಗೆ ಒಪ್ಪಿಗೆಯಾಗಲಿಲ್ಲ) arid ಪ 1 ಒಣ (ಆ ಒಣ ಊರಿನಲ್ಲಿ ಒಂದು ಮರವೂ ಇರಲಿಲ್ಲ), ಗಾರು, ಕೀಚು 2 ಸಪ್ಪೆ, ಚಿಟ್ಟುಹಿಡಿಸುವ arid ಹೆ ಬೆಂಗಾಡು (ಅವರು ಯಾವುದೋ ಒಂದು ಬೆಂಗಾಡಿನಲ್ಲಿ ಕೆಲಸ ಮಾಡಬೇಕಾಗಿದೆ) arise ಎ ಉಂಟಾಗು, ಹುಟ್ಟು, ಉಣ್ಮು (ಒಲವುಣ್ಮು; ಉಣ್ಮಿದ ಮಿಂಚು; ಉಣ್ಮೆ), ತಲೆದೋರು, ಮೂಡು (ಮೂಡಿ ಬಂದ ನೇಸರು) aristrocrat ಹೆ ಮೇಲ್ಕೂಡಣಿಗ (ಮೇಲ್ಕೂಡಣಿಗರು ಕೂಡಣದಲ್ಲಿ ತುಂಬಾ ಮೇಲಿನ ನೆಲೆಯಲ್ಲಿದ್ದಾರೆ) arithmetic ಹೆ ಲೆಕ್ಕದರಿಮೆ (ಈ ಮಗು ಲೆಕ್ಕದರಿಮೆಯಲ್ಲಿ ಮಾಡಿರುವ ಎಲ್ಲಾ ಲೆಕ್ಕಗಳೂ ಸರಿಯಾಗಿವೆ; ಲೆಕ್ಕದರಿಗ) arm ಹೆ ರಟ್ಟೆ (ಆತನ ರಟ್ಟೆ ಹಿಡಿದು ಎಳೆದುಕೊಂಡು ಬಂದೆ), ತೋಳು (ತೋಳಾಟ; ತೋಳಿನ ಕೆಲಸ; ತೋಳೇರಿಸು) ಎ 1 ಕಯ್ದುಕೊಡಿಸು (ಆ ನಾಡಿಗರು ನಮ್ಮ ಹಗೆಗಳಿಗೆ ಕಯ್ದುಕೊಡಿಸುತ್ತಿದ್ದಾರೆ) 2 ಒದಗಿಕೆ ಕೊಡಿಸು, ತಿಳಿವೀಯು armada ಹೆ ಮೊನೆಹಡಗುಪಡೆ armament ಹೆ ಮೊನೆಯೊದಗಿಕೆ (ಎರಡು ಕಡೆಗಳಿಗೂ ಮೊನೆಯೊದಗಿಕೆಗಳನ್ನು ಮಾರಿ ಅವರ ಜಗಳದಿಂದ ಹಣ ಮಾಡುತ್ತಿರುವವರು ಈ ಪಡುನಾಡಿಗರು) armchair ಹೆ ತೋಳೇರ್ವಣೆ (ಅಪ್ಪ ಕುಳಿತುಕೊಳ್ಳುವ ತೋಳೇರ್ವಣೆಯಲ್ಲಿ ಬೇರೆ ಯಾರೂ ಕುಳಿತುಕೊಳ್ಳುವು- ¢®è) armistice ಹೆ ಕಾಳಗನಿಲುಮೆ, ಕಾಳಗಸಯ್ಪು (ಇವರ ನಡುವಿನ ಕಾಳಗಸಯ್ಪು ಎಶ್ಟು ದಿವಸ ಉಳಿಯುವುದೋ ನೋಡಬೇಕು) armlet ಹೆ ವಂಕಿ (ಆತ ತೋಳುಗಳಿಗೆ ಚಿನ್ನದ ವಂಕಿ ಹಾಕಿಕೊಂಡಿದ್ದಾನೆ) armour ಹೆ ಮಯ್ಕಾಪು (ಹಿಂದಿನ ಮೊನೆಯಾಳುಗಳು ಕಬ್ಬಿಣದ ಮಯ್ಕಾಪು ಹಾಕಿಕೊಳ್ಳುತ್ತಿದ್ದರು) armourer ಹೆ ಕಯ್ದೊದಗಿಸುಗ, ಕಯ್ದುಪಣ್ಣುಗ armoury ಹೆ ಕಯ್ದುಸೇರುವೆ, ಕಯ್ದಂಗಡಿ (ಅವನೊಂದು ಕೋವಿ ಕೊಂಡುಕೊಳ್ಳಲು ಕಯ್ದಂಗಡಿಗೆ ಹೋಗಿದ್ದಾನೆ) armpit ಹೆ ಕಂಕುಳು (ಅವನ ಕಂಕುಳಲ್ಲಿ ಕೊಡೆ ಇತ್ತು) army ಹೆ ಪಡೆ (ಅವರ ಪಡೆ ಇರುಳು ಕಳೆದ ಊರು ಬೆಳಿಗ್ಗೆ ನೋಡಿದಾಗ ಹಾಳುಸುರಿಯುತ್ತಿತ್ತು), ಪಾಳೆಯ, ಒಡ್ಡಣ (ಇದಿರೊಡ್ಡಣ) aroma ಹೆ ಕಂಪು (ಹೂವಿನ ಕಂಪು ಮನೆಯಿಡೀ ಹರಡಿತ್ತು) aromatherapy ಹೆ ಕಂಪುಮಾಂಜುಗೆ (ಕಂಪು- ಮಾಂಜುಗೆಯಲ್ಲಿ ಗಿಡಗಳಿಂದ ಪಡೆದ ಕಂಪಿನ ಎಣ್ಣೆ- ಗಳನ್ನು ಬಳಸಲಾಗುತ್ತದೆ) around ಪ ಸುತ್ತ (ಮನೆಯ ಸುತ್ತಲಿನ ಗೋಡೆ; ಸುತ್ತಮುತ್ತ) ardent desire around A


34 arouse ಎ 1 ಎಬ್ಬಿಸು (ª Àುಕ್ಕಳ ಕೂಗಾಟ ಆಕೆಯನ್ನು ಒರಕಿನಿಂದ ಎಬ್ಬಿಸಿತು) 2 ಕಾವೇರಿಸು (ಈ ಓಡುತಿಟ್ಟ ಗಂಡಸರಿಗೆ ಕಾವೇರಿಸುತ್ತದೆ) arrange ಎ 1 ಏರ್ಪಡು (ಅವರಲ್ಲಿ ಒಂದು ಮದುವೆ ಏರ್ಪಟ್ಟಿದೆ) 2 ಸಾವಗಿಸು (ಸೀರೆಯ ನೆರಿಗಳನ್ನು ಸಾವಗಿಸಿಕೊಳ್ಳುತ್ತ ಬಂದಳು) 3 ಹೂಡು (ಒಲೆ ಹೂಡು; ಕೋವಿ ಹೂಡು), ಅಣಿಗೊಳಿಸು arrangement ಹೆ ಏರ್ಪಾಡು, ನಿರುಗೆ (ಸಂತೆಯಲ್ಲಿರಿಸಿದ ಹಣ್ಣುಗಳ ನಿರುಗೆ ನೋಡಲು ಚನ್ನಾಗಿತ್ತು), ಪೊಂಕ (ಪೊಂಕಗೆಡು), ಅಟ್ಟಣೆ (ಆಕೆಗೆ ಮದುವೆಯ ಅಟ್ಟಣೆ ಮಾಡಲಿದೆ), ಕಡಕಟ್ಟು, ಗೊತ್ತುಪಾಡು, ಪಣ್ಣುಗೆ, ಪಣ್ಣಿಕೆ, ಒಡ್ಡವ, ಮುರಿ arrant ಪ ಕೆಟ್ಟ (ಅವನು ತುಂಬಾ ಕೆಟ್ಟ ಹುಡುಗನಾಗಿದ್ದ), ದೋವಿಲಿನ array ಹೆ ಓರಣ (ತಬ್ಬಿಬ್ಬುಗೊಳಿಸುವ ಕಡತಗಳ ದೊಡ್ದ ಓರಣವೊಂದು ಅವನ ಎದುರಿಗಿತ್ತು), ಅಣಿ (ಆ ಅಣಿಯಲ್ಲಿ ಎಣಿಕೆಗಳಿವೆ) ಎ ಓರಣಿಸು (ಎಲ್ಲವನ್ನೂ ತುಂಬಾ ಚನ್ನಾಗಿ ಓರಣಿಸಿದ್ದರು) arrears ಹೆ ಉಳಿಕೆ (ಅವರಿಗೆ ಸಂಬಳದ ಉಳಿಕೆಯನ್ನು ಇವತ್ತು ಕೊಡಲಿದ್ದಾರೆ) arrest ಹೆ 1 ಕಯ್ಸೆರೆ (ಆತನ ಕಯ್ಸೆರೆಯ ಸುದ್ದಿ ಎಲ್ಲೆಡೆ ಹರಡಿತು) 2 ನಿಲುವು ಎ 1 ಸೆರೆಹಿಡಿ (ಆತನನ್ನು ಸೆರೆಹಿಡಿಯಲು ಕಾಪುಗರಿಗೆ ಎರಡು ತಿಂಗಳು ಹಿಡಿಯಿತು), ಕಯ್ಸೆರೆಹಿಡಿ 2 ತಡೆ, ತಡೆಹಿಡಿ, ನಿಲ್ಲಿಸು (ಈ ಕೆಲಸದ ಮುಂದುವರಿಕೆಯನ್ನು ನಿಲ್ಲಿಸಬೇಕಾಗಿದೆ) arrival ಹೆ ಪುಗಿಲು (ಆತನ ಪುಗಿಲನ್ನು ನೋಡಲು ಸಾವಿರ ಮಂದಿ ಸೇರಿದ್ದರು), ಬರುವಿಕೆ, ಎಳ್ತರವು, ಬರವು, ಬರ್ತನ arrival ಹೆ ಸೇರುವ ಹೊತ್ತು, ಬರುವ ಹೊತ್ತು (ಅವರು ಬರುವ ಹೊತ್ತಾದರೂ ಯಾಕೆ ಇನ್ನೂ ಬಂದಿಲ್ಲ?) arrive ಎ ಎಯ್ತರು, ಎಯ್ದು, ತಲಪು (ನಿನ್ನೆ ಮನೆಗೆ ಎಶ್ಟು ಹೊತ್ತಿಗೆ ತಲಪಿದಿರಿ?), ಬರು (ಈ ತೀರ್ಮಾನಕ್ಕೆ ಬರಲು ಎಶ್ಟು ಹೊತ್ತು ಹಿಡಿಯಿತು?) arrogance ಹೆ ಸೊಕ್ಕು, ಕೊಬ್ಬು, ಪಪ್ಪ (ಆತನ ಪಪ್ಪವನ್ನು ಕಂಡರೆ ನನಗಾಗುವುದಿಲ್ಲ), ಪುಗ್ಗು (ಪುಗ್ಗಾಯಿಲ ; ಪುಗ್ಗಾಯಿಲತನ), ಮಲೆಪು (ಮಯ್ಯುಬ್ಬಿಸಿ ಮಲೆಪಿನಿಂದ ನಿಂತಿದ್ದಾನೆ), ಮುರುಕು (ಮುರಿಕಿನಿಂದ ಎದೆಯುಬ್ಬಿಸಿ ನಡೆದ), ಮುಕ್ಕು, ಹಮ್ಮು, ಎಂಟು (ಎಂಟೆದೆ), ತಾಮರ arrogant ಪ ಕೊಬ್ಬಿನ, ಸೊಕ್ಕಿನ, ಮಲೆಪಿನ arrogate ಎ ತನ್ನದಾಗಿಸು (ತನ್ನದಲ್ಲದ ಕೋಣೆಯನ್ನು ಅವನು ಒತ್ತಾಯದಿಂದ ತನ್ನದಾಗಿಸಿಕೊಂಡಿದ್ದ) arrow ಹೆ ಸರಳು, ಕಣೆ, ಅಂಬು (ಅಂಬು ಬಿಟ್ಟು ಮರದಲ್ಲಿ ಕುಳಿತಿದ್ದ ಹಕ್ಕಿಯನ್ನು ಹೊಡೆದುಹಾಕಿದ) arrowroot ಹೆ ಕೂವೆ (ಕೂವೆ ಹುಡಿಯಿಂದ ಮಾಡಿದ ತಿಂಡಿ ತುಂಬಾ ಚನ್ನಾಗಿರುತ್ತದೆ) arsenal ಹೆ 1 ಕಯ್ದುಸೇರುವೆ, ಕಯ್ದುಕಲೆತ (ಆ ನಾಡಿನ ಕಯ್ದುಕಲೆತ ತುಂಬಾ ದೊಡ್ಡದು) 2 ಒದಗಿಕೆ (ಸಾಕಶ್ಟು ಮದ್ದುಗಳ ಒದಗಿಕೆಯನ್ನು ಆತ ತನ್ನೊಂದಿಗೆ ತಂದಿದ್ದ) arsenic ಹೆ ನಂಜಿರ್ಪು (ಈ ಕುಡಿಯುವ ನೀರಿನಲ್ಲಿ ನಂಜಿರ್ಪಿನ ಮಟ್ಟ ತುಂಬಾ ಹೆಚ್ಚಾಗಿದೆ) arson ಹೆ ಕಿಚ್ಚಿಡುಗೆ, ಕಿಚ್ಚಿಕ್ಕಿಕೆ (ಹಗೆಗಳ ಕಿಚ್ಚಿಕ್ಕಿಕೆಯಿಂದಾಗಿ ಆತ ಸಾಕಶ್ಟು ಕಳೆದುಕೊಂಡಿದ್ದ), ಬೆಂಕಿಹಚ್ಚಿಕೆ art ಹೆ ಕಲೆ, ಕಾಣ್ಕೆಯ್ತ (ಈ ಕಡತದಲ್ಲಿ ಬರುವ ಕಾಣ್ಕೆಯ್ತ- ಗಳೆಲ್ಲ ಬರಹಗಾರನವು) artefact ಹೆ 1 ಮಾಡುದಿಟ (ಈ ಹೊಲಬಿನಲ್ಲಿ ಮಾಡು- ದಿಟಗಳಿಲ್ಲ) 2 ಪಳಬಳಕ (ಮನೆ ಕಟ್ಟಲು ನೆಲವನ್ನು ಅಗೆದಾಗ ಕೆಲವು ಪಳಬಳಕಗಳು ದೊರೆತುವು) artery ಹೆ ನೆತ್ತರಕೊಳವೆ (ನೆತ್ತರಕೊಳವೆಗಳು ಗುಂಡಿಗೆ- ಯಿಂದ ನೆತ್ತರನ್ನು ಒಡಲಿನ ಬೇರೆ ಕಡೆಗಳಿಗೆ ಕಳುಹಿಸುತ್ತದೆ), ತೊರೆಗೊಳವೆ artful ಪ ಕಯ್ಮೆಯ (ಕೆಲಸದಿಂದ ತಪ್ಪಿಸಿಕೊಳ್ಳುವುದರಲ್ಲಿ ಅವನು ತುಂಬಾ ಕಯ್ಮೆಯ ಆಳಾಗಿದ್ದ), ಚಳಕದ arthritis ಹೆ ಕೀಲೂತ (ಅವನು ತನ್ನ ಅಯ್ವತ್ತನೇ ಸಾಲಿನಿಂದಲೂ ಕೀಲೂತದಿಂದ ನರಳುತ್ತಿದ್ದಾನೆ) article ಹೆ 1 ಹುರುಳು, ಪುರುಳು (ಅವನು ಕಿಸೆಯಿಂದ ಒಂದು ಪುರುಳನ್ನು ಹೊರತೆಗೆದ) 2 ಬರಹ (ಅವನ ಒಂದು ಬರಹ ಕೆನಡಾದ ನಾಳ್ಕಡತದಲ್ಲಿ ಅಚ್ಚಾಗಿದೆ) 3 ಪಸುಗೆ (ಈ ಕಟ್ಟಲೆಬರಹದಲ್ಲಿ ಒಂದು ಪಸುಗೆ ಸರಿಯಾಗಿಲ್ಲ) arouse article A


35 articulate ಎ 1 ಉಲಿ 2 ನುಡಿಗೊಡು (ಅವನಿಗೆ ತನ್ನ ಅನಿಸಿಕೆಗಳನ್ನು ಸರಿಯಾಗಿ ನುಡಿಗೊಡಲು ಬರುವುದಿಲ್ಲ), ತಿಳಿಸು articulation ಹೆ ಉಲಿಕೆ (ಅವನಿಗೆ ಮಡಚುಲಿಗಳ ಉಲಿಕೆ ಹೇಗೆಂದು ತಿಳಿಯದು) artifice ಹೆ ಸಂಚು, ಗನ್ನ (ಅವನು ತನ್ನ ಗನ್ನದಿಂದ ಹಲವರ ಹಣವನ್ನು ದೋಚಿದ್ದ) artificer ಹೆ ಕೆಯ್ತಗಾರ (ಇದನ್ನು ಮಾಡಿದವನು ದೊಡ್ಡ ಕೆಯ್ತಗಾರನಾಗಿರಬೇಕು) artificial ಪ ತನ್ಪರಿಜಲ್ಲದ, ಮಾಳ್ಕೆಯ (ಈ ನಾಡಿನ ಕಟ್ಟಲೆಯಂತೆ ಮಾಳ್ಕೆಯ ಗುಂಡಿಗೆಗಳನ್ನು ಯಾರೂ ಬಳಸಬಾರದು) artificial ಹೆ ಮಾಳ್ಕೆಯ ಕಲಿವಳವು artificial ಹೆ ಮಾಳ್ಕೆಯ ಉಸಿರಾಟ (ಮಾಳ್ಕೆಯ ಉಸಿರಾಟವನ್ನು ನೀಡಿದರೂ ಅವರು ಬದುಕಲಿಲ್ಲ) artificial ಹೆ ಮಾಳ್ಕೆಯಟ್ಟುಕ (ಈ ಮಾಳ್ಕೆ- ಯಟ್ಟುಕವು ಹಲವು ಏಡುಗಳಿಂದ ಬುವಿಯನ್ನು ಸುತ್ತುತ್ತಿದೆ), ಮಾಳ್ಕೆಬೆಂಬಲಿಗ artillery ಹೆ ಪೆರ್ಕೋವಿ (ಅವರ ಪೆರ್ಕೋವಿಗಳಿಗೆ ಸಿಕ್ಕಿ ಹಗೆಗಳ ಪಡೆ ನುಚ್ಚುನೂರಾಯಿತು) artisan ಹೆ ಕೆಯ್ತಗಾರ (ತಮಗೆ ಬೇಕಾದ ಮುಟ್ಟುಗಳನ್ನೆಲ್ಲ ಅವರು ಕೆಯ್ತಗಾರರಿಂದ ಮಾಡಿಸಿಕೊಂಡಿದ್ದಾರೆ) artist ಹೆ ಕಾಣ್ಕೆಯ್ತಗಾರ (ಈ ಬರ್ಚಣೆಯನ್ನು ಬಿಡಿಸಿದ ಕಾಣ್ಕೆಯ್ತಗಾರನಲ್ಲಿ ಈಗ ಊಟಕ್ಕೂ ಹಣವಿಲ್ಲ) artistic ಪ ಕಾಣ್ಕೆಯ್ತದ (ಇದೊಂದು ಒಳ್ಳೇ ಕಾಣ್ಕೆಯ್ತದ ಕೆಲಸವೆಂದು ಹೇಳಬಹುದು) artless ಪ ಸಯ್ಪಿನ (ಆತನ ಸಯ್ಪಿನ ನಡತೆ ನಮಗೆ ಮೆಚ್ಚುಗೆಯಾಯಿತು), ನೇರ್ಪಿನ asbestos ಹೆ ಕಲ್ನಾರು (ಹಳೇ ಕಲ್ನಾರನ್ನು ಬಳಸುವವರಿಗೆ ಏಡಿಹುಣ್ಣು ಬರಬಲ್ಲುದು) ascend ಎ ಅಡರು (ಬಳ್ಳಿ ಮರದ ತುದಿವರೆಗೆ ಅಡರಿದೆ), ಏರು (ನಾಲ್ಕು ಮಂದಿ ಬೆಟ್ಟ ಏರುತ್ತಿದ್ದಾರೆ), ಹತ್ತು ascending ಹೆ ಏರಿಕೆ (ಇಲ್ಲಿರುವ ಎಣಿಕೆಗಳನ್ನು ಏರಿಕೆಯಂತೆ ಓರಣಿಸಲಾಗಿದೆ) ascending ಹೆ ಏರುವರಸೆ (ಅವರು ಅಂಕೆಗಳನ್ನು ಏರುವರಸೆಯಲ್ಲಿ ಜೋಡಿಸಿದರು), ಏರೋರಣ ascent ಹೆ ಏತ, ಏರಿಕೆ (ಈ ಏರಿಕೆ ಇನ್ನೂ ಎರಡು ಕಿ.ಮೀ.ಗಳಶ್ಟಿದೆ) ascertain ಎ ಕಂಡುಹಿಡಿ (ಅವನು ಹೇಳುವುದು ಸರಿಯೋ ಎಂಬುದನ್ನು ಕಂಡುಹಿಡಿಯಬೇಕು), ತಿಳಿದುಕೊಳ್ಳು ascetic ಹೆ ಕಿತ್ತಡಿ (ಕಿತ್ತಡಿಗಳು ನಾಳಿಗೊಮ್ಮೆಯಶ್ಟೇ ಊಟಮಾಡುತ್ತಾರೆ), ಗೊರವ ascribe ಎ ಹೊರಿಸು (ನೀವು ಅವನ ಮೇಲೆ ತಪ್ಪು- ಹೊರಿಸಿದ್ದು ಹೇಗೆ?) aseptic ಪ ನಂಜಿಲ್ಲದ, ಕೊಳೆಸದ ash ಹೆ ಬುಗ್ಗಿ, ನೀರು (ಹಣೆಗೆ ನೀರು ಹಚ್ಚಿಕೊಂಡಿದ್ದಾನೆ) ashamed ಎ ನಾಚು (ಆಕೆ ಹೊರ ಬರಲು ನಾಚುತ್ತಿದ್ದಾಳೆ) ಪ ನಾಚಿದ, ಗಲಿಬಿಲಿಗೊಂಡ (ತನ್ನ ಬಟ್ಟೆ ಹರಿದುಹೋಗಿರುವುದಕ್ಕೆ ಆತ ಗಲಿಬಿಲಿಗೊಂಡಿ- ದ್ದಾನೆ) ashen ಪ ಬಿಳಿಚಿದ (ಮಯ್ಸರಿಯಿಲ್ಲದುದರಿಂದ ಬಿಳಿಚಿದ ಮೋರೆ), ಬೆಳರಿದ ask ಎ 1 ಕೇಳು (ನೀವು ಯಾವಾಗ ಬಂದದ್ದೆಂದು ಕೇಳಿದ) 2 ಎರೆ (ನೂರು ರುಪಾಯಿ ಕೊಡಿರೆಂದು ಎರೆದ; ಎರೆಯುವವನಿಗೆ ನಾಚಿಕೆಯಿಲ್ಲ; ಎರವಲು), ಕೇಳು 3 ಕರೆ (ಅವನು ಮದುವೆಗೆ ಕರೆಯಲು ಬಂದಿದ್ದ) askance ಪ ಅದುಹಿನಿಂದ (ಅವನು ಆಕೆಯೆಡೆಗೆ ಅದುಹಿನಿಂದ ನೋಡಿದ) askew ಪ ಓರೆ (ಗಿಡ ನಟ್ಟದ್ದು ಓರೆಯಾಗಿದೆ) asking ಹೆ ಬೇಡಿಕೆ (ಅವರ ಬೇಡಿಕೆಯ ಬೆಲೆ ಎಶ್ಟು?), ಕೇಳಿಕೆ aslant ಪ ಓರೆ (ಅವಳು ಬೊಟ್ಟು ಇಟ್ಟದ್ದು ಓರೆಯಾಗಿದೆ), NgÉAiÀiÁV asleep ಪ ಒರಗಿದ (ಒರಗಿದ ಹುಲಿಯ ಮೇಲೆ ಮಕ್ಕಳು ಕಲ್ಲು ಎಸೆದರು) aspect ಹೆ 1 ತೋರ್ಕೆ (ಎಲ್ಲರೂ ಬಿಟ್ಟು ಹೋದುದು ಆ ಊರಿಗೆ ಬೆದರಿಕೆಯ ತೋರ್ಕೆಯನ್ನು ಕೊಟ್ಟಿತ್ತು) 2 ನೋಟ (ಕಟ್ಟಡದ ಹಿಂಬದಿಯ ನೋಟವನ್ನಶ್ಟೇ ಈ ತಿಟ್ಟ ಕಾಣಿಸುತ್ತದೆ) articulate aspect A


36 ಂsಠಿeಛಿಣ ಔಡಿieಟಿಣeಜ Pಡಿogಡಿಚಿmmiಟಿg ಹೆ ಹಲನೋಟಕ್ಕೆ ಒತ್ತಿರುವ ಹಮ್ಮುಗಾರಿಕೆ (ಹಲನೋಟಕ್ಕೆ ಒತ್ತಿರುವ ಹಮ್ಮುಗಾರಿಕೆಯಿಂದಾಗಿ ಸಿಲುಕಾಗಿರುವ ಹಮ್ಮುಗೆಗಳನ್ನು ಬರೆಯುವುದು ಸುಳುವಾಗಿದೆ) aspect ಹೆ ಉದ್ದಗಲಳತೆ, ತೋರ್ಕೆ ಹೊಂದಿಕೆ (ಈ ತಿಟ್ಟದ ತೋರ್ಕೆ ಹೊಂದಿಕೆ ಸರಿಯಿಲ್ಲ) asperity ಹೆ ಪಪ್ಪರಿಕೆ, ಪರಿಗೆ (ಈ ಊರಿನಲ್ಲಿ ಚಳಿಗಾಲದ ಪರಿಗೆಯನ್ನು ತಡೆಯಲಾಗುವುದಿಲ್ಲ) aspersion ಹೆ ಕೊಂಡೆಯ (ಆತನ ಮೇಲೆ ದೂಸರಿಲ್ಲದೆ ಕೊಂಡೆಯವನ್ನು ಹೇರುತ್ತಿರುವುದು ಸರಿಯಲ್ಲ), ಹೆಸರು ಕೆಡಿಸುವುದು asphalt ಹೆ ಕಲ್ಲರಗು (ಮೇಲ್ಮಾಳಿಗೆಯ ಸೋರಿಕೆಯನ್ನು ತಡೆಯಲು ಕಲ್ಲರಗು ಹಾಸಿದ್ದಾರೆ) asphyxia ಹೆ ಉಸಿರು ಕಟ್ಟುವುದು, ಉಸಿರುತಡೆತ (ಮಗು ಉಸಿರುತಡೆತದಿಂದಾಗಿ ತೀರಿಹೋಯಿತು) aspirant ಹೆ ಹಂಬಲಿಗ (ಹುಡುಗ ತುಂಬಾ ಹಂಬಲಿಗ- ನಾಗಿದ್ದು, ಹಗಲಿರುಳು ಓದುತ್ತಿದ್ದಾನೆ) aspirated ಹೆ ಊದುಲಿ (ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಊದುಲಿಗಳು ಬಳಕೆಯಾಗುವುದಿಲ್ಲ) aspiration ಹೆ 1 ಹಂಬಲ (ಅವನಿಗೊಬ್ಬ ದೊಡ್ಡ ಆಟಗಾರನಾಗಬೇಕೆಂಬ ಹಂಬಲವಿದೆ) 2 ಊದಿಕೆ (ಊದುಲಿಗಳ ಬಳಕೆಯಲ್ಲಿ ಊದಿಕೆಯಿದೆ) aspire ಎ ಹಂಬಲಿಸು (ತಾನೊಬ್ಬ ಪಾಣ್ಬೆಯಾಗಬೇಕೆಂದು ಆಕೆ ಹಂಬಲಿಸುತ್ತಿದ್ದಾಳೆ) ass ಹೆ ಕತ್ತೆ (ಅಗಸನ ಕತ್ತೆ ತುಂಬಾ ಬಟ್ಟೆಗಳನ್ನು ಹೊರಬೇಕಾಗುತ್ತದೆ) assail ಎ 1 ಕಯ್ಮಾಡು, ದಾಳಿಮಾಡು (ಆ ಊರಿನ ಮೇಲೆ ಎರಡು ಬಾರಿ ದಾಳಿಮಾಡಲಾಗಿತ್ತು) 2 ಕವ್ವರೆ- ಗೊಳಿಸು (ನಿಮ್ಮ ಮಾತುಗಳು ಆತನನ್ನು ಕವ್ವರೆಗೊಳಿಸಿವೆ) assailant ಹೆ ದಾಳಿಗಾರ (ದಾಳಿಗಾರರು ಯಾವ ಕಡೆಯಿಂದ ಬಂದಿದ್ದರೆಂದು ಗೊತ್ತಾಗಲಿಲ್ಲ) assassin ಹೆ ಕಗ್ಗೊಲೆಗಾರ, ಅರಕೊಲೆಗಾರ (ಈ ನಾಡಿನ ಅರಕೊಲೆಗಾರರನ್ನು ಹಿಡಿಯಲು ಬಲೆಬೀಸಲಾಗಿದೆ), ಸಂಚುಕೊಲೆಗಾರ assassinate ಎ ದಿಡೀರ್ಕೊಲು (ಈ ಆಳ್ವೆಗಾರರನ್ನು ದಿಡೀರ್ಕೊಲ್ಲಲಾಯಿತು), ಸಂಚುಕೊಲ್ಲ್ಲು, ಹೆಸರಾಂತ ಕೊಲ್ಲು assassination ಹೆ ದಿಡೀರ್ಕೊಲೆ, ಹೆಸರಾಂತ ಕೊಲೆ, ಸಂಚುಕೊಲೆ (ಈ ನಾಡಿನಲ್ಲಿ ಇವತ್ತು ಸಂಚುಕೊಲೆ ನಡೆದಿದೆಯೆಂದು ಹೇಳಲಾಗಿದೆ) assault ಎ ದಾಳಿಯಿಡು, ದಾಳಿಮಾಡು ಹೆ 1 ದಾಳಿ 2 ಪೂನು (ಅವರು ಎವರೆಸ್ಟನ್ನು ಏರಲು ಇನ್ನೊಂದು ಪೂನನ್ನು ನಡೆಸಲಿದ್ದಾರೆ) assay ಎ ಒರೆಹಚ್ಚು (ಆ ಊರಲ್ಲಿ ದೊರೆತ ಅದುರನ್ನು ಒರೆಹಚ್ಚಲು ಅವರು ಅದನ್ನು ಬೆಂಗಳೂರಿಗೆ ಕಳುಹಿಸಿ- ದ್ದಾರೆ) ಹೆ ಒರೆಹಚ್ಚಿಕೆ assemblage ಹೆ ಸೇರುವೆ (ನೂರಾರು ಮಂದಿಯ ಸೇರುವೆ), ಗೊಂದಣ (ಹಬ್ಬದ ಗೊಂದಣ), ಕೊತ್ತಣ, ನೆರವಿ (ಕಾಗೆಗಳ ನೆರವಿ), ಜಂಗುಳಿ (ಮಂದಿಯ ಜಂಗುಳಿ), ಹೊರಳಿ, ಕೂಟ, ಒಳ್ಗು, ಒಟ್ಟಿಲು assemble ಎ 1 ಸೇರು, ನೆರೆ (ಹಲವರು ನೆರೆದಿದ್ದರು), ಗೊಂದಣಿಸು, ಹೊರಳಿಗಟ್ಟು 2 ಸೇರಿಸು (ಒಡೆದ ಮಡಕೆಯ ಚೂರುಗಳನ್ನು ಸೇರಿಸಿ ಅವನೊಂದು ಗೊಂಬೆ ಮಾಡಿದ) assembly ಹೆ 1 ಸೇರುವೆ, ಗೊಂದಣ, ನೆರವಿ, ಕೂಟ 2 ಆಳ್ಮಕೂಟ assent ಎ ಒಮ್ಮು, ಒಪ್ಪು (ನಾವು ಹೇಳಿದುದಕ್ಕೆ ಅವರು ಒಪ್ಪಲಿಲ್ಲ) 2 ಒಪ್ಪಿಗೆ (ಅವರು ನಿಮ್ಮ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ) assert ಎ ಒತ್ತಿಹೇಳು (ಎಲ್ಲರೂ ಬರಬೇಕೆಂದು ಆಕೆ ಒತ್ತಿಹೇಳಿದ್ದಳು) assertion ಹೆ 1 ಒತ್ತಾಯ (ಆಕೆ ತುಂಬಾ ಒತ್ತಾಯ ಮಾಡಿದ್ದಾಳೆ) 2 ಬಲ್ಮೆಯ ನುಡಿ (ಆತನ ಬಲ್ಮೆಯ ನುಡಿ ಅವರ ಹೆದರಿಕೆಯನ್ನು ಕಡಿಮೆ ಮಾಡಿತು) assess ಎ ಬೆಲೆಕಟ್ಟು (ನೆರೆಯ ಹಾವಳಿ ಎಶ್ಟೆಂದು ಬೆಲೆಕಟ್ಟಬೇಕಾಗಿದೆ) asset ಹೆ ಬೆಲೆಯೊಡಮೆ (ಆತನ ಬಳಿ ಬೆಲೆಯೊಡಮೆ ಎಶ್ಟಿದೆಯೆಂದು ತಿಳಿಯಬೇಕಾಗಿದೆ), ದಕ್ಕು assiduous ಪ ಕಟ್ಟುನಿಟ್ಟಿನ (ಅವನು ತನ್ನ ಕಟ್ಟುನಿಟ್ಟಿನ ಕಲಿಕೆಯಿಂದ ತರಗತಿಯಲ್ಲಿ ಮೊದಲಿಗನಾಗಿದ್ದಾನೆ) Aspect Oriented Programming assiduous A


37 assign ಎ ಹಂಚು, ಕೊಡು (ಅವರು ಇವತ್ತಿನ ಕಾವಲನ್ನು ನಿಮಗೆ ಕೊಟ್ಟಿದ್ದಾರೆ), ಹಾಕು assignation ಹೆ ಗುಟ್ಟುಕದೆತ (ಅವರಿಬ್ಬರ ನಡುವೆ ಹಲವು ಬಾರಿ ಗುಟ್ಟುಕದೆತಗಳು ನಡೆದಿದ್ದುವು) assignment ಹೆ ಕೆಲಸ, ಕೊಡುಹ (ನಮ್ಮ ಇವತ್ತಿನ ಕೊಡುಹ ತುಂಬಾ ಸಿಕ್ಕಲಾದುದು) assimilate ಎ 1 ಹೀರಿಕೊಳ್ಳು (ಆತನ ಮಯ್ ತಿಂದು- ದನ್ನೆಲ್ಲ ಸುಳುವಾಗಿ ಹೀರಿಕೊಳ್ಳುತ್ತದೆ) 2 ಹೊಂದಿಕೊಳ್ಳು (ಹೊರಗಿನಿಂದ ಬಂದವರು ಈ ಊರಲ್ಲಿ ಬೇಗನೆ ಹೊಂದಿಕೊಳ್ಳುತ್ತಾರೆ) 3 ತಿಳಿದುಕೊಳ್ಳು 4 ಹಾಗಾಗು (ಪೆರ್ಮೆ ಎಂಬುದು ಹೆಮ್ಮೆ ಎಂದಾಗಿರುವಲ್ಲಿ ರಕಾರ ಮಕಾರದ ಹಾಗಾಗಿದೆ) assist ಎ ನೆರವಾಗು (ಆ ಊರಲ್ಲಿ ಅವನಿಗೆ ಯಾರೂ ನೆರವಾಗಿರಲಿಲ್ಲ), ನೆರವು ನೀಡು, ಒತ್ತಾಸೆ ನೀಡು assistance ಹೆ ನೆರವು (ಆತನ ನೆರವಿಗೆ ಯಾರೂ ಬರಲಿಲ್ಲ; ನೆರವು ತಪ್ಪು), ಒತ್ತಾಸೆ, ಕಯ್ನೆರವು assistant ಹೆ ನೆರವಿಗ (ಈ ಮಣಿಹದಲ್ಲಿ ಇವರು ಹಲವು ದಿನಗಳಿಂದ ನೆರವಿಗರಾಗಿ ಕೆಲಸ ಮಾಡುತ್ತಿದ್ದಾರೆ) associate ಎ 1 ಅಡಸು (ಇನ್ನೊಬ್ಬನ ಹೆಂಡತಿಗೆ ಅಡಸಿದರೆ ತೊಂದರೆ ತಪ್ಪದು), ಒಡನಾಡು, ಒಡಗೂಡು 2 ಪತ್ತುಗೆಗೊಳಿಸು (ಆತನಿಗೆ ಇವತ್ತಿನ ಎಸಕಗಳನ್ನು ಪತ್ತುಗೆಗೊಳಿಸಲು ಬರುವುದಿಲ್ಲ) ಹೆ ಪತ್ತಿಗ (ನನ್ನ ಪತ್ತಿಗನನ್ನು ಕರೆದು ತರುತ್ತೇನೆ) association ಹೆ 1 ಒಡನಾಟ, ಕೂಡಾಟ, ತಳ್ಳಿ (ಅವನ ತಳ್ಳಿಗೆ ಹೋಗಬೇಡ), ಸೇರಿಕೆ 2 ಉರಳಿ, ಕೂಟ (ಅವರು ತಮ್ಮದೊಂದು ಕೂಟವನ್ನು ಕಟ್ಟಿಕೊಂಡಿದ್ದಾರೆ) associative ¥À MqÀ (a+(b+c) = (a+b)+c EzÀÄ ಒಡ ಕಟ್ಟಲೆಯೆಂದು ಅವರು ಮಕ್ಕಳಿಗೆ ಹೇಳಿಕೊಟ್ಟರು) assort ಎ ಬೇರ್ಪಡಿಸು (ಇವನ್ನು ಹಲವು ಗುಂಪುಗಳಲ್ಲಿ ಬೇರ್ಪಡಿಸಬೇಕಾಗಿದೆ), ಹಂಚು, ಓರಣಿಸು assortment ಹೆ ಸೇರುವೆ, ಕಲೆತ (ಅಲ್ಲಿ ಹಲವು ಬಗೆಯ ಬಳಪಗಳ ಕಲೆತವಿತ್ತು) assuage ಎ 1 ತಣಿಸು (ಅವನ ಹಸಿವನ್ನು ತಣಿಸುವ ಊಟ ಅಣಿಯಾಗಿತ್ತು) 2 ಕಡಿಮೆ ಮಾಡು, ಕುಂದಿಸು (ಅವನ ಸಿಟ್ಟನ್ನು ಕುಂದಿಸಲು ಏನಾದರೂ ಹೇಳಿ) assume ಎ 1 ಅಂದುಕೊಳ್ಳು (ಅವರು ಊರಲ್ಲಿ ಇರುವು- ದಿಲ್ಲವೆಂದು ಅವರ ಗೆಳೆಯರು ಅಂದುಕೊಂಡರು) 2 ಕಯ್ಗೊಳ್ಳು (ಅವನು ಆ ಕೆಲಸವನ್ನು ಕಯ್ಗೊಳ್ಳಬಲ್ಲ) 3 ತೊಡಗು (ಇತ್ತೀಚೆಗೆ ಅವರಿಗೆ ಹೆಚ್ಚು ಪೆರ್ಮೆ ಬರಲು ತೊಡಗಿದೆ) 4 ಸೋಗುಹಾಕು (ತಾನು ತುಂಬಾ ಬಲ್ಲಿದನೆಂಬ ಸೋಗುಹಾಕುತ್ತಿದ್ದಾನೆ), ತೋರ್ಪಡಿಸಿಕೊಳ್ಳು assumption ಹೆ 1 ತೆಗಹು (ನೀವು ಬರುತ್ತೀರೆಂಬುದೇ ನನ್ನ ತೆಗಹಾಗಿತ್ತು), ಅಂದುಕೊಳ್ಳಿಕೆ, ಅನ್ಕೆ (ಈ ಸಲ ಅವರ ಅನ್ಕೆ ತಪ್ಪಾಗಿತ್ತು) 2 ಕಯ್ಗೊಳ್ಳಿಕೆ assurance ಹೆ 1 ಹದುಳಿಕೆ (ಆಳ್ವಿಕೆಯವರು ಮಂದಿ- ಯಾಯ್ಕೆಯ ಹೊತ್ತಿನಲ್ಲಿ ಹಲವು ಹದುಳಿಕೆಗಳನ್ನು ಕೊಡುತ್ತಾರೆ) 2 ತನ್ನಂಬುಗೆ (ಅವನು ತನ್ನಂಬುಗೆ- ಯಿಂದ ಮಾತನಾಡಲು ತೊಡಗಿದ) assure ಎ ಮಾತುಕೊಡು (ನಿಮಗೆ ತೊಂದರೆಯಾದಾಗ ಹಣ ಹಿಂದಿರುಗಿಸುತ್ತೇನೆಂದು ಆತ ಮಾತುಕೊಟ್ಟಿದ್ದ) asterisk ಹೆ ಚುಕ್ಕೆ (ಒಂದು ಪದದ ಎದುರು * ಎಂಬ ಚುಕ್ಕೆಯನ್ನಿರಿಸಿ ಅದು ಈಗ ಬಳಕೆಯಲ್ಲಿಲ್ಲವೆಂದು ತಿಳಿಸಲುಬರುತ್ತದೆ) asteroid ಹೆ ಮಾರುಚುಕ್ಕಿ, ಹುಸಿಯರಿಲು (ಮಾರ್್ಸ ಮತ್ತು ಜೂಪಿಟರ್ ಅರಿಲ್ಸುತ್ತುಗಗಳ ನಡುವೆ ಹಲವು ಹುಸಿ- ಯರಿಲುಗಳಿವೆ) asthma ಹೆ ಉಬ್ಬಸ (ಉಬ್ಬಸದಿಂದ ಆತನಿಗೆ ಮಾತ- ನಾಡಲು ತೊಂದರೆಯಾಗುತ್ತದೆ), ಗೂರು (ಗೂರಲು; ಗೂರುಬ್ಬಸ) astir ಪ 1 ಎಚ್ಚತ್ತ 2 ಪಸಿಯಿಸಿದ (ಪಸಿಯಿಸಿದ ಊರು), ಓಡಾಡುವ astonish ಎ ಬೆರಗಾಗು (ಅವರ ಮಾತನ್ನು ಕೇಳಿ ಎಲ್ಲರೂ ಬೆರಗಾದರು), ಬೆಕ್ಕಸಪಡು, ತೂಣಗೊಳ್ಳು (ತೂಣ- ಗೊಂಡ ಮಕ್ಕಳು) astonishment ಹೆ ಬೆಕ್ಕಸ (ಬೆಕ್ಕಸಪಡು, ಬೆಕ್ಕಸ ಬೆರಗಾಗು), ಬೆಕ್ಕಟ (ಬೆಕ್ಕಟದಿಂದ ನೋಡು), ಬೆರಗು (ಬೆರಗಿನ ನೋಟ), ತೂಣ astound ಎ ಪೆರ್ಬೆರಗುಗೊಳ್ಳು (ಆತ ಅಶ್ಟು ಚನ್ನಾಗಿ ತಮ್ಮ ನುಡಿಯಲ್ಲಿ ಮಾತನಾಡುವುದನ್ನು ಕಂಡು ಹುಡುಗರು ಪೆರ್ಬೆರಗುಗೊಂಡರು) assign astound A


38 astral ಪ ಅರಿಲ್ಗಳ (ಅರಿಲ್ಗಳ ಬೆಳಕಿನಲ್ಲಿ ಅವರು ಮೆಲ್ಲನೆ ನಡೆಯುತ್ತಿದ್ದರು) astray ಪ ದಾರಿತಪ್ಪಿದ (ದಾರಿತಪ್ಪಿದ ಹುಡುಗನನ್ನು ಸರಿದಾರಿಗೆ ತರುವವರಿರಲಿಲ್ಲ) astride ಪ 1 ಕಾಲಗಲಿಸಿ (ಕಾಲಗಲಿಸಿ ಕುಳಿತ ಮಗಳನ್ನು ಅಮ್ಮ ಬಯ್ದಳು) 2 ಕಾಲುಬಿಟ್ಟು (ಕುದುರೆಯ ಮೇಲೆ ಎರಡು ಬದಿಗೂ ಕಾಲುಬಿಟ್ಟು ಕುಳಿತಿದ್ದ) astringent ಪ ಒಗರು (ಉದುರಿದ ಎಲೆಗಳಿಂದ ಒಗರಾದ ನೀರು), ಕಸರು (ಕಾಯಿಕಸರು; ಕಸರುಗಾಯಿ), ಕನರು, ತೊಗರು, ಚೊಗರು astrobiologist ಹೆ ಅರಿಲುಸಿರಿಯರಿಗ (ಈ ಅರಿಲು- ಸಿರಿಯರಿಗರು ತುಂಬಾ ಅರಕೆ ಮಾಡಿದ್ದಾರೆ) astrodome ಹೆ ಹೊರಗಮನಗಿಂಡಿ, ದುಂಡಸಿಲುಮಾಡು (ದುಂಡುಸಿಲುಮಾಡಿನ ನೆರವಿನಿಂದ ಅವರು ಇವತ್ತು ಬೆಳ್ಳಿಯನ್ನು ನೋಡಿದರು) astrolabe ಹೆ ಚುಕ್ಕಿಯಳಕ (ಹಿಂದಿನ ಕಾಲದಲ್ಲಿ ಚುಕ್ಕಿಗಳ ದೂರವನ್ನು ತಿಳಿಯಲು ಚುಕ್ಕಿಯಳಕವನ್ನು ಬಳಸು- ತ್ತಿದ್ದರು) astrologer ಹೆ ನುಡಿಗ (ಆ ನುಡಿಗನ ಮಾತು ಕೇಳಬೇಡ), ಮುನ್ನರಿವಿಗ, ನಾಳರಿಗ, ಮುನ್ನರಿಗ (ಮುನ್ನರಿಗರಿಗೆ ದಿಟವಾಗಿಯೂ ಮುಂದೆ ಏನಾಗುವುದೆಂದು ತಿಳಿದಿರು- ವುದಿಲ್ಲ) astronaut ಹೆ ಹೊರಬಾನಾಡಿಗ (ಹೊರಬಾನಾಡಿಗರು ಹೊರಬಾನಿಗೆ ಹೋಗುವ ಮೊದಲು ಪಳಗಬೇಕಾಗುತ್ತದೆ) astronomer ಹೆ ಬಾನರಿಗ (ಈ ಏರುಬಂಡಿಯನ್ನು ಕಟ್ಟಿದ ಈ ಬಾನರಿಗರ ತಂಡವನ್ನು ಎಲ್ಲರೂ ಮೆಚ್ಚಿದರು) astronomical ಪ ಹೊರಬಾನಿನ (ಹೊರಬಾನಿನ ಕುರಿ- ತಾಗಿ ಬೇರೆಯೇ ಬಗೆಯ ಅಳತೆಗಳನ್ನು ಬಳಸಬೇಕಾಗು- vÀÛzÉ) astronomy ಹೆ ಬಾನರಿಮೆ (ಬಾನರಿಮೆಯಲ್ಲಿ ಚುಕ್ಕಿಗಳ ಮತ್ತು ಅರಿಲ್ಸುತ್ತುಗಗಳ ಕುರಿತಾಗಿ ತಿಳಿವನ್ನು ಪಡೆಯ- ಲಾಗುತ್ತದೆ) astrophysics ಹೆ ಬಾನಿರ್ಕದರಿಮೆ (ಅವರು ಬಾನಿರ್ಕ- ದರಿಮೆಯಲ್ಲಿ ಮುಂದಿನ ಕಲಿಕೆ ನಡೆಸುತ್ತಿದ್ದಾರೆ) astute ಪ ಸುಟಿ (ಸುಟಿಯಾದ ಹುಡುಗರು), ಕಯ್ಮೆಯ (ಕಯ್ಮೆಯ ಮಂದಿ ಉಳಿದವರ ಹಾಗೆ ಸುಳುವಾಗಿ ಮೋಸಹೋಗುವುದಿಲ್ಲ) asunder ಪ ಬೇರಾಗಿ, ತುಂಡು ತುಂಡಾಗಿ (ತುಂಡು ತುಂಡಾಗಿ ಕೆಳಗೆ ಬಿದ್ದುವು) asylum ಹೆ 1 ತಳಿ (ಈ ತಳಿಯ ಕೂಳು ಚಿಕ್ಕ ಮಕ್ಕಳಿಗೆ ಒಗ್ಗುವುದಿಲ್ಲ), ಮೊಗ್ಗು 2 ವಲಸೆಕಾಹು (ವಲಸೆ ಬಂದ- ವರು ಹಲವರು ಈ ವಲಸೆಕಾಹುವಿನಲ್ಲಿ ತಂಗಿದ್ದಾರೆ) at ಪ ತೆಪ್ಪಗೆ (ನೀವು ಹಾಗೆ ತೆಪ್ಪಗೆ ಕುಳಿತರೆ ಹೇಗೆ?; ತೆಪ್ಪಗಾಗು; ತೆಪ್ಪಗಿರು) at ಪ ನೆಕ್ಕನೆ, ಒಮ್ಮೆಲೆ, ತಪಕ್ಕನೆ (ಕಪ್ಪೆ ತಪಕ್ಕನೆ ಮೇಲೆ ಹಾರಿತು) atavism ಹೆ ಹಿಮ್ಮರುಕಳಿ (ಮುದುಕರಿಗೆ ಹಿಮ್ಮರುಕಳಿ- ಯಿಂದ ನಲಿವುಂಟಾಗುತ್ತದೆ) atheism ಹೆ ನಂಬಿಲಿತನ, ನಂಬಿಕೆಯಿಲ್ಲಮೆ (ಅವರಿಗೆ ನಂಬಿಕೆಯಿಲ್ಲಮೆಯನ್ನು ಕಂಡರಾಗುವುದಿಲ್ಲ) atheist ಹೆ ನಂಬಿಲಿ (ಅವರು ಯಾವತ್ತಿದ್ದರೂ ನಂಬಿಲಿ- ಯಾಗಿಯೇ ಇರುತ್ತಾರೆ) athlete ಹೆ ಓಟಪೋಟಿಗ (ಓಟಪೋಟಿಗರು ಕೆಲವರು ರೋಮ್ ನಗರಕ್ಕೆ ಹೊರಟಿದ್ದಾರೆ) athletics ಹೆ ಓಡುಪೋಟಿ (ಓಡುಪೋಟಿಯಲ್ಲಿ ಯಾವಾ- ಗಲೂ ಅವರ ತಂಡ ಗೆಲುವು ಪಡೆಯುತ್ತದೆ), ಓಟ- ಪೋಟಿ atlas ಹೆ ನಾಡತಿಟ್ಟಕಡತ (ಆತ ನಾಡತಿಟ್ಟಕಡತದಲ್ಲಿ ತನ್ನ ಊರನ್ನು ಹುಡುಕುತ್ತಿದ್ದಾನೆ), ನೆಲದಚ್ಚು ಹೊತ್ತಗೆ, ನಾಡತಿಟ್ಟೊತ್ತಗೆ, ನೆಲಪಟಹೊತ್ತಗೆ (ಈ ಓದುಮನೆಯಲ್ಲಿ ಒಂದು ಒಳ್ಳೆಯ ನೆಲಪಟಹೊತ್ತಗೆ ಇದೆ) ಂಖಿಒ guಚಿಡಿಜ ಹೆ ಹಣಗಾಹಿ (ಹಣಗಾಹಿ ಕಳ್ಳನನ್ನು ತಟ್ಟನೆ »rzÀ) atmosphere ಹೆ 1 ಗಾಳಿಹೊದಿಕೆ, ಸುತ್ತಾವಿ, ಗಾಳಿಪದರ (ಗಾಳಿಪದರದ ಆವಿಗಳು ನೀಲಿ ಬೆಳಕನ್ನು ಬೇರೆ ಬೆಳಕು- ಗಳಿಗಿಂತ ಹೆಚ್ಚು ಚದುರಿಸುತ್ತವೆ) 2 ಗಾಳಿಪರಿಚೆ (ಅಲ್ಲಿನ ಗಾಳಿಪರಿಚೆ ಚನ್ನಾಗಿಲ್ಲ) 3 ಪರಿಜು (ಆ ತಿಂಡಿಮನೆಯಲ್ಲಿ ಗೆಳೆತನದ ಪರಿಜಿತ್ತು) astral atmosphere A


39 atom ಹೆ ಸೀರ (ಒಂದು ಸೀರದಲ್ಲಿ ಹೆಚ್ಚು ಒಟ್ಟಲು ಇರುವುದು ಅದರ ನಡುವಿನಲ್ಲಿ) atomize ಎ ತುಂತುರುಗೊಳಿಸು (ಆ ಜೋಗಿನಲ್ಲಿ ಕೆಳಗೆ ಸುರಿವ ನೀರನ್ನು ಗಾಳಿ ತುಂತುರುಗೊಳಿಸಿ ಮೇಲೆ ಚಿಮ್ಮಿಸುತ್ತದೆ) atone ಎ ತಪ್ಪುಕಳೆ (ತಪ್ಪುಕಳೆಯಲು ಅವನು ಗಂಗೆಯಲ್ಲಿ ನೂರು ಬಾರಿ ಮುಳುಗುಹಾಕಿದ) atonement ಹೆ ತಪ್ಪುಕಳೆತ (ತಪ್ಪುಕಳೆತಕ್ಕಾಗಿ ಅವನು ದೇವರಿಗೆ ಹತ್ತು ರುಪಾಯಿ ಮುಡಿಪಿಟ್ಟಿದ್ದ) atrial ಹೆ ಮೇಲ್ಗುಂಡಿಗೆಯ ತಪ್ಪುಬಡಿತ (ಅವರು ಮೇಲ್ಗುಂಡಿಗೆಯ ತಪ್ಪುಬಡಿತದಿಂದ ನರಳು- ತ್ತಿದ್ದಾರೆ) atrium ಹೆ ಗುಂಡಿಗರೆ, ಗುಂಡಿಗೂಣು, ಮೇಲ್ಗುಂಡಿಗೆ- ಕೋಣೆ, ಮೇಲ್ಗುಂಡಿಗೂಡು (ಇವರು ಮೇಲ್ಗುಂಡಿ- ಗೂಡಿನ ನೋವಿನಿಂದ ಬಳಲುತ್ತಿದ್ದಾರೆ), ಮೇಲೆದೆಕುಣಿ, ಸೇರುಗೋಣೆ atrocious ಪ ಒಗ್ಗದ (ನೀವು ಮಾಡಿದುದು ಯಾರಿಗೂ ಒಗ್ಗದ ಕೆಲಸ), ಬೆಚ್ಚಿಸುವ atrophy ಹೆ ಮಯ್ಸವೆತ (ಬಳಸದಿರುವ ನರಕಟ್ಟುಗಳು ಮಯ್ಸವೆತಕ್ಕೆ ಒಳಗಾಗುತ್ತವೆ) ಎ ಮಯ್ಸವೆ attach ಎ 1 ಹಚ್ಚು, ತಗಲು (ಒಂದು ಹುಲ್ಲುಕಡ್ಡಿ ನನ್ನ ಬಟ್ಟೆಗೆ ತಗಲಿಕೊಂಡಿದೆ) 2 ಉಳುಗು (ಅಜ್ಜಿ ಮೊಮ್ಮಗ- ನನ್ನು ತುಂಬಾ ಉಳುಗುತ್ತಾಳೆ) 3 ಆರಿಸು (ನೀವು ಈ ಕೆಲಸಕ್ಕೆ ಯಾರನ್ನು ಆರಿಸಲಿದ್ದೀರಿ?) attachment ಹೆ 1 ಈಲು (ನಮ್ಮ ಈಲಾಗಿರುವ ಕುರಿಮರಿ), ಉಳ್ಗೆ, ಕೂರ್ಮೆ 2 ತಗಲಿಕೆ (ಈ ಮಿಂಚೆ- ಯೊಂದಿಗೆ ಒಂದು ತಗಲಿಕೆಯನ್ನೂ ಕಳುಹಿಸುತ್ತಿದ್ದೇನೆ), ಸೇರಿಕೆ, ಅಂಟಿಕೆ (ಈ ಮಿಂಚೆಯ ಅಂಟಿಕೆ ತುಂಬಾ ದೊಡ್ಡದಾಗಿರುವುದರಿಂದ ಅದು ತುಂಬಾ ಮೆಲ್ಲಗೆ ಬರುತ್ತಿದೆ) attack ಎ 1 ಅಡಸು (ಕಡುಬಡತನ ಅವನನ್ನಡಸಿತು) 2 ಮೇಲೆ ಬೀಳು, ಎರಗು (ಎರಗಿ ಬೀಳು), ಏರು, ಕಯ್ಮಾಡು, ತಾಗು (ತಾಗಲಾಡು; ತಾಗಲಿಕ್ಕು), ಮೇಲ್ವಾಯು, ತೂಳು, ಮುಕ್ಕುರಿಕು, ದಾಳಿಯಿಡು, ದಾಳಿ ಮಾಡು ಹೆ 1 ಎರಗಿಕೆ, ದಾಳಿ (ಅವರ ದಾಳಿ ಇರುಳು ಹತ್ತು ಗಂಟೆಯವರೆಗೆ ಮುಂದುವರಿಯಿತು) 2 ತಾಗಿಕೆ (ಬಿಸುಪಿನ ತಾಗಿಕೆ) attacker ಹೆ ದಾಳಿಗ, ದಾಳಿಗಾರ (ದಾಳಿಗಾರರು ಯಾರೆಂದು ಅವರಿಗೆ ಗುರುತುಹಿಡಿಯಲಾಗಲಿಲ್ಲ) attain ಎ ಹೊಂದು (ಇದು ಗಂಟೆಗೆ ನೂರು ಕಿ.ಮೀ.ಯಶ್ಟು ಉರುಬನ್ನು ಹೊಂದಬಲ್ಲುದು), ಪಡೆ (ಬಿಡುಗಡೆ ಪಡೆದ ಹುಡುಗ) attempt ಎ ಪೂನು (ಇನ್ನೊಂದು ಬಾರಿ ಪೂತು- ಬಿಡೋಣ), ಒಡರ್ಚು attend ಎ 1 ನೋಡಿಕೊಳ್ಳು (ಮಗುವನ್ನು ನೋಡಿಕೊಳ್ಳಲು ಒಬ್ಬ ಹುಡುಗಿಯಿದ್ದಾಳೆ) 2 ಹೋಗಿರು (ಅವನೊಂದು ಕೂಟಕ್ಕೆ ಹೋಗಿದ್ದಾನೆ), ಬಂದಿರು attendance ಹೆ 1 ಇರುವಿಕೆ, ಇರುಹ (ಇಲ್ಲಿ ನಿಮ್ಮ ಇರುಹ ಬೇಕಾಗಿಲ್ಲ) 2 ಇರುಹದೆಣಿಕೆ (ಈ ಹುಡುಗನಿಗೆ ಇರುಹದೆಣಿಕೆ ಸಾಕಶ್ಟಿಲ್ಲ) attendant ಹೆ ಅಚ್ಚುಳಾಯ್ತ (ಅಚ್ಚುಳಾಯ್ತರು ಸಂಬಳ ಹೆಚ್ಚಿಸಬೇಕೆಂದು ಹೇಳುತ್ತಿದ್ದಾರೆ) ಪ ಒಂದಿಗಿನ (ಮುದಿತನದೊಂದಿಗಿನ ಕುತ್ತಗಳು) attention ಹೆ 1 ಗಮನ (ನನ್ನ ಗಮನವೆಲ್ಲ ಬೇರೆಲ್ಲೋ ಇತ್ತು) 2 ಆರಯ್ಕೆ 3 ನೇರನಿಲುವು (ಪಡೆಯಿಲರೆಲ್ಲ ನೇರನಿಲುವಿನಲ್ಲಿ ನಿಂತಿದ್ದರು) attentive ಪ ನೆರವಾಗುವ (ನೆರವಾಗುವ ನೆರೆಹೊರೆ) attentively ಪ ಕಿವಿಯಾರೆ (ಕಿವಿಯಾರೆ ಕೇಳು), ಗಮನಿಸಿ attenuate ಎ ಸೊಪ್ಪು (ಹುಡುಗ ತುಂಬಾ ಸೊಪ್ಪಿರುವ- ಹಾಗಿದೆ), ತೆಳ್ಳಗಾಗು attest ಎ 1 ನನ್ನಿಯೆನ್ನು, ಸರಿಯೆನ್ನು (ಅವರು ನೀವು ಹೇಳಿದ್ದೆಲ್ಲ ಸರಿಯೆಂದಿದ್ದಾರೆ) 2 ನಿಂದರಿಕೆ ನೀಡು attic ಹೆ ಅಟ್ಟ (ಅಟ್ಟಕ್ಕೆ ಹತ್ತು), ಕುತ್ತಟ್ಟ (ಕುತ್ತಟ್ಟದಲ್ಲಿ ಹಪ್ಪಳದ ಕಟ್ಟುಗಳನ್ನಿರಿಸಿದ್ದಾರೆ) attire ಹೆ ಉಡುಪು (ಕಟ್ಟಲಿಗರು ತಮ್ಮದೇ ಆದ ಉಡುಪನ್ನು ತೊಡಬೇಕಾಗುತ್ತದೆ) attitude ಹೆ ನಿಲುವು (ಈ ಕೆಲಸದ ಮಟ್ಟಿಗೆ ನಿಮ್ಮ ನಿಲುವೇನು?) attorney ಹೆ ಕಟ್ಟಲೆಬಳಸುಗ (ತಮ್ಮ ತೋಟದ ಕೆಲವು ಹಕ್ಕುಗಳನ್ನು ಅವರು ತಮ್ಮ ಕಟ್ಟಲೆಬಳಸುಗರಿಗೆ ಕೊಟ್ಟಿದ್ದಾರೆ) atom attorney A


40 attract ಎ 1 ಕಂಗೊಳಿಸು (ಮಿಂಚಿನ ಗೊಂಚಲು ಕಂಗೊಳಿಸುತ್ತಿತ್ತು) 2 ಸೆಳೆ, ಎಳೆ, ಕೆಳೆ (ಆತ ಯಾರನ್ನೂ ತನ್ನೆಡೆಗೆ ಕೆಳೆಯಬಲ್ಲ) attraction ಹೆ ಸೆಳವು (ಆಕೆಗೆ ತವರು ಮನೆಯ ಸೆಳವು ಹೆಚ್ಚು), ತುಯಿತ, ಇಳ್ಕುಳಿ attribute ಎ ನೆಮ್ಮಿಸು (ಅವರು ನಮ್ಮ ಮೇಲೆ ಇಶ್ಟೊಂದು ತಪ್ಪನ್ನು ನೆಮ್ಮಿಸಿದರೆ ಹೇಗೆ?), ಹೊರಿಸು ಹೆ ಪರಿಚೆ (ಬೇಗನೆ ಒಡೆದುಹೋಗುವುದು ಕನ್ನಡಿಯ ಪರಿಚೆ) attrition ಹೆ ತೇಮಾನ (ಚಿನ್ನದ ಒಡವೆಗೆ ತೇಮಾನ ತೆಗೆದ), ಸವೆತ au ಹೆ ಸಿಗೋಣ (ಆವತ್ತಿನ ಸೇರುವೆಯಾದ ಮೇಲೆ ಎಲ್ಲರು ಒಬ್ಬರಿಗೊಬ್ಬರು ಸಿಗೋಣ ಎಂದು ಹೇಳಿ ಹೊರಟರು) auburn ಪ ಕೆಂಗಂದು (ಆಕೆ ಇವತ್ತು ಕೆಂಗಂದು ಬಣ್ಣದ ಸೀರೆ ಉಟ್ಟಿದ್ದಾಳೆ) auction ಹೆ ಕೂಗುಮಾರಾಟ (ಅವರು ಈ ಚಿತ್ರವನ್ನು ತುಂಬಾ ಹೆಚ್ಚು ಬೆಲೆಗೆ ಕೂಗುಮಾರಾಟದಲ್ಲಿ ಕೊಂಡು- ಕೊಂಡರು) ಎ ಮಾರುಕೂಗು, ಮಾರ್ಕೂಗು (ಅವರೀಗ ಒಂದು ಮನೆಯನ್ನು ಮಾರ್ಕೂಗಲಿದ್ದಾರೆ) auctioneer ಹೆ ಮಾರ್ಕೂಗುಗ (ಎಲ್ಲರೂ ಮಾರ್ಕೂಗುಗನ ಮುಂದಿನ ನಡೆಯನ್ನು ಕಾಯುತ್ತಿದ್ದಾರೆ) audacious ಪ ಆರ್ಪಿನ (ಅವನೊಂದು ಆರ್ಪಿನ ಕೆಲಸದಲ್ಲಿ ತೊಡಗಿದ್ದಾನೆ), ಅದಟಿನ, ಕಡುವಿನ audacity ಹೆ ಆರ್ಪು (ನನ್ನ ಮಾತಿಗೆ ಎದುರು ಹೇಳುವ ಆರ್ಪು ಆತನಲ್ಲಿದೆಯೇ?), ಕಡುವು audible ಪ ಕೇಳುವ (ಉಲಿಗಳಲ್ಲಿ ಕಿವಿಗೆ ಕೇಳುವ ಮತ್ತು ಕೇಳಿಸದ ಎಂಬ ಎರಡು ಬಗೆಗಳಿವೆ), ಕೇಳಿಸುವ (ಕಿವಿಗೆ ಕೇಳಿಸುವ ಹಾಗೆ ಮಾತನಾಡಿ), ಕೇಳಬಲ್ಲ (ಆತ ಎಲ್ಲವನ್ನೂ ನನಗಶ್ಟೇ ಕೇಳಬಲ್ಲ ಪಿಸುನುಡಿಯಲ್ಲಿ w½¹zÀ) audience ಹೆ ಕೇಳುಗರು (ಕೇಳುಗರ ನೆರವಿಯಲ್ಲಿ ಕೆಲವರು ತೂಕಡಿಸುತ್ತಿದ್ದರು) audiobility ಹೆ ಕೇಳಾರ್ಮೆ (ಅವನ ಉಲಿಯ ಕೇಳಾರ್ಮೆ ತುಂಬ ಕಡಿಮೆಯಾಗಿತ್ತು), ಕೇಳಬಲ್ಮೆ audiobook ಹೆ ಕೇಳೊತ್ತಗೆ (ಕುರುಡರಿಗೆ ಈ ಕೇಳೊತ್ತಗೆ- ಯಿಂದ ತುಂಬಾ ಉಪಯೋಗವಾಯಿತು) audiologist ಹೆ ಕೇಳುವಿಕೆಯರಿಗ (ಅವರು ಈ ಊರಿನಲ್ಲಿ ಹಲವು ಏಡುಗಳಿಂದ ಕೇಳುವಿಕೆಯರಿಗರಾಗಿ ಕೆಲಸ ಮಾಡುತ್ತಿದ್ದಾರೆ) audiology ಹೆ ಕೇಳುವಿಕೆಯರಿಮೆ (ಅವರು ತಮ್ಮ ಮುಂದಿನ ಕಲಿಕೆಯನ್ನು ಕೇಳುವಿಕೆಯರಿಮೆಯಲ್ಲಿ ಮಾಡಲಿದ್ದಾರೆ) audiometrer ಹೆ ಕೇಳಳತೆ (ಅವನ ಕಿವಿಯ ಕೇಳಳತೆ- ಯನ್ನು ತಿಳಿಯಲು ಉಲಿಯಳಕವನ್ನು ಬಳಸಿದ್ದರು) audio-visual ಪ ಕೇಳ್ನೋಟದ (ಈ ಮಕ್ಕಳಿಗೆ ಆ ಕೇಳ್ನೋಟದ ಹಮ್ಮುಗೆ ತುಂಬಾ ಹಿಡಿಸಿತು) audit ಹೆ ಲೆಕ್ಕದೊರೆತ (ಅವರ ಮಣಿಹದ ಲೆಕ್ಕದೊರೆತಕ್ಕಾಗಿ ಇಬ್ಬರು ಒರೆತಗಾರರು ಬಂದಿದ್ದಾರೆ) ಎ ಲೆಕ್ಕದೊರೆತ ನಡೆಸು audition ಹೆ ಕೇಳುಹ (ಇವತ್ತು ಆಕೆಯ ಹಾಡುಗಾರಿಕೆಯ ಕೇಳುಹ ಇದೆ), ಆಯ್ತನೊರೆ auditor ಹೆ 1 ಒರೆತಗಾರ, ಲೆಕ್ಕದೊರೆತಗಾರ 2 ಕೇಳುಗ (ಆತನ ಮಾತನ್ನು ಕೇಳುಗರು ಗಮನವಿಟ್ಟು ಕೇಳುತ್ತಿದ್ದರು) auditorium ಹೆ ಅಂಬಲ (ಈ ಅಂಬಲದಲ್ಲಿ ಹತ್ತು ಸಾವಿರ ಮಂದಿ ಕುಳಿತುಕೊಳ್ಳಬಲ್ಲರು) auger ಹೆ ತೂತುಕೊರಕ (ತೂತುಕೊರಕದಲ್ಲಿ ಆತ ಮೂರು ತೂತುಗಳನ್ನು ಕೊರೆದ) augment ಎ ಹೆಚ್ಚಿಸು (ಆತನ ಪೆರ್ಮಾತಿನಿಂದ ಅಲ್ಲಿ ನೆರೆದವರಲ್ಲಿದ್ದ ಬಿಗಿತ ಇನ್ನಶ್ಟು ಹೆಚ್ಚಿತು) ಂugusಣ ಹೆ ಮುಮ್ಮಳೆ (ಅವನ ಹುಟ್ಟುಹಬ್ಬ ಮುಮ್ಮಳೆಯ ತಿಂಗಳಿನಲ್ಲಿ ಬರುತ್ತದೆ) aunt ಹೆ ಅತ್ತೆ (ಅತ್ತೆ-ಸೊಸೆಯರ ನಡುವಿನ ಜಗಳ ಮುಗಿಯುವುದೇ ಇಲ್ಲ) aural ಪ ಕಿವಿಯ (ಒರ್ತಲೆನೋವಿಗೆ ಮೊದಲು ಕೆಲವು ಕಿವಿಯ ನೋವುಗಳು ಕಾಣಿಸಿಕೊಳ್ಳುತ್ತವೆ) aureole ಹೆ ಬಳಸಿ (ದೇವರ ತಿಟ್ಟದಲ್ಲಿ ಆತನ ತಲೆಯ ಸುತ್ತ ಒಂದು ಬಳಸಿಯನ್ನಿರಿಸುತ್ತಾರೆ) aurora ಹೆ ಸುಸಿಲು, ಮುಂಬೆಳಗು (ಬಡಗು ಕೊನೆಯಲ್ಲಿ ಆರು ತಿಂಗಳ ಮುಂಬೆಳಗಿರುತ್ತದೆ) auspicious ಪ ಒಳ್ಳೆಯ, ಗೆಲುವಿನ, ಒಳಿತು, ಸುಬ್ಬಲೆ (ಆತ ಸುಬ್ಬಲೆ ಹೊತ್ತಿನಲ್ಲಿ ಮನೆಬಿಟ್ಟಿದ್ದ) attract auspicious A


41 austere ಪ ಕಟ್ಟುನಿಟ್ಟಿನ (ಆತ ಕಟ್ಟುನಿಟ್ಟಿನ ಬಾಳನ್ನು ನಡೆಸುತ್ತಿದ್ದಾನೆ) austerity ಹೆ 1 ನೋಂಪಿ (ಆಕೆ ನೋಂಪಿಯಲ್ಲಿದ್ದಾಳೆ) 2 ಕಟ್ಟುನಿಟ್ಟು auteur ಹೆ ತನ್ತನತೋರುಗ (ಆ ಸಿನಿಮಾ ಮಾಡುಗರು ತನ್ತನತೋರುಗರಾಗಿದ್ದರು), ತನ್ತನತೋರಾಳು authentic ಪ ನಂಬಬಲ್ಲ (ಇಲ್ಲಿ ನಂಬಬಲ್ಲ ಪಳಮೆ- ಗಳನ್ನಶ್ಟೇ ಮಾರುತ್ತಾರೆ), ನನ್ನಿಯ, ಸಯ್ದ authenticate ಎ ನನ್ನಿತೋರು (ಯಾರನ್ನಾದರೂ ಈ ಕೂಟಕ್ಕೆ ಸೇರಿಸುವ ಮೊದಲು ಆತನನ್ನು ನನ್ನಿತೋರ- ಬೇಕಾಗುತ್ತದೆ) author ಹೆ ಬರಹಗಾರ (ಈ ಕಡತದ ಬರಹಗಾರ ನಮ್ಮ ಮನೆಯ ಹತ್ತಿರವೇ ಇದ್ದಾನೆ) authority ಹೆ 1 ಅಳವಿಗ (ಈ ಮಣಿಹದಲ್ಲಿ ಅಳವಿಗರು ಯಾರು?), ಎರೆಯ (ಈ ನಾಡಿನ ಎರೆಯನ ಮೇಲೆ ತುಂಬಾ ಕಟ್ಟಲೆಗಳನ್ನು ಹಾಕಲಾಗಿದೆ) 2 ಒಪ್ಪಿಗೆ (ಒಳಗೆ ಬರಲು ನಿಮಗೆ ಒಪ್ಪಿಗೆಯಿದೆಯೇ?) 3 ತಿಳಿವಿಗ (ಆತ ನುಡಿಯರಿಮೆಯಲ್ಲಿ ತಿಳಿವಿಗನಾಗಿದ್ದಾನೆ), ಅರಿಗ authorize ಎ ಒಪ್ಪಿಗೆ ಕೊಡು, ಒಪ್ಪಿಗೆ ನೀಡು (ನನ್ನ ಮಾರ್ಪಾಗಿ ಹೋಗಲು ಆತನಿಗೆ ಒಪ್ಪಿಗೆ ನೀಡಿದ್ದೇನೆ) autism ಹೆ ತಂತಾನಿಕೆ (ಇವರ ಮಗ ತಂತಾನಿಕೆಯಿಂದ ಬಳಲುತ್ತಿದ್ದಾನೆ) auto ಹೆ ಮುಗ್ಗಾಲಿ ಅಳಕ (ಈಗ ಮುಗ್ಗಾಲಿಯ ಅಳಕಗಳು ಎಣ್ಬಗೆಯಲ್ಲಿ ಇರಬೇಕೆಂದು ಆಳ್ವಿಕೆಯು ಕಡ್ಡಾಯ ಮಾಡಿದೆ) auto ಎ ತಾನ್ಮರುನುಡಿ (ಅವರ ಮಿಳಿರುಗೆಗೆ ತಾನ್ಮರುನುಡಿಯ ಅಳವಿದೆ) auto ಹೆ ತಾನ್ಮರುನುಡಿಕ (ಆ ಚೂಟಿಯುಲಿ- ಯಲ್ಲಿ ಕರೆ ಬಂದಾಗ ತಾನ್ಮರುನುಡಿಕ ಎಚ್ಚೆತ್ತುಕೊಳ್ಳು- ತ್ತದೆ), ತಾನ್ಮರುನುಡಿಗೆ autobiography ಹೆ ತನ್ಬದುಕಿನ ಬರಹ (ಈ ತನ್ಬದುಕಿನ ಬರಹದಲ್ಲಿ ಹಲವು ಕಿರುಗತೆಗಳನ್ನು ಕೊಡಲಾಗಿದೆ), ತನ್ಬಾಳ್ಕೊಗೆತ autocracy ಹೆ ಓರಾಳ್ವಿಕೆ (ಓರಾಳ್ವಿಕೆಯಲ್ಲಿ ಯಾರಿಗೂ ಮಾತೆತ್ತುವ ಹಕ್ಕಿಲ್ಲ) autocratic ಪ ಕಟ್ಟಾಣ್ಮೆಯ (ಅವರೊಬ್ಬ ಕಟ್ಟಾಣ್ಮೆ- ಯಾಳೆಂದು ಎಲ್ಲರೂ ಅರಿತುಕೊಂಡಿದ್ದಾರೆ) autofit ಎ ತಾನ್ವೊಂದು autograph ಹೆ ಕಯ್ಗುರುತು (ಇದರಲ್ಲಿ ನಿಮ್ಮದೊಂದು ಕಯ್ಗುರುತಿರಲಿ) ಎ ಕಯ್ಗುರುತು ಹಾಕು autoignition ಹೆ ತಾನುರಿತ (ಈ ಉರುವಲು ತನ್ನ ಕೋಣೆಯ ಯಾವುದಾದರೊಂದು ಕಾವಳತೆಯಲ್ಲಿ ತಾನುರಿತದ ಪರಿಚೆ ತೋರಿಸುತ್ತದೆ) autoimmunity ಹೆ ತನ್ಕಾಪು (ಅವರಲ್ಲಿ ತನ್ಕಾಪಿನ ತೊಂದರೆ ಕಾಣಿಸಿಕೊಂಡಿದೆ), ಹುಸಿಕಾಪು, ತಪ್ಪುಕಾಪು, ಮರೆಕಾಪು, ತನ್ಮರೆಕಾಪು automate ಎ ತನ್ನಡೆಯಿಸು Automated Teller Machine (A TM) ºÉ ºÀt- ಚೂಟಿ (ಈ ಊರಿನೆಲ್ಲೆಡೆ ಇತ್ತೀಚೆಗೆ ಹೆಚ್ಚು ಹಣಚೂಟಿ- ಗಳು ಕಂಡುಬರುತ್ತಿವೆ), ಹಣಗೂಡು automatic ಎ ತನ್ನಡೆತದ (ಈ ಗಾಡಿಯಲ್ಲಿ ತನ್ನಡೆತದ ಬಿರಿಯನ್ನು ಅಳವಡಿಸಲಾಗಿದೆ) automatic ಹೆ ತನ್ನಡೆತದ ಕೂಡು- ಹಲ್ಗಾಲಿ (ಈ ನಾಡಿನ ಎಲ್ಲಾ ಬಂಡಿಗಳಲ್ಲೂ ತನ್ನಡೆತದ ಕೂಡುಹಲ್ಗಾಲಿಗಳನ್ನು ಇರಿಸಲಾಗಿದೆ) automation ಹೆ ತನ್ನಡೆತ (ಈ ಮಾಡುಗೆಯಲ್ಲಿ ಮೇಲ್ಮಟ್ಟದ ತನ್ನಡೆತಗಳನ್ನು ಅಳವಡಿಸಲಾಗಿದೆ) automobile ಹೆ ತಾಂತೇರು (ಈಗ ತಾಂತೇರು ತುಂಬಾ ಬಳಕೆಯಲ್ಲಿದೆ), ತಾನೋಡ autonomic ಪ ತನ್ನಂಕೆಯ (ಈ ತನ್ನಂಕೆಯ ನರ ಸರಿಯಾಗಿ ಕೆಲಸ ಮಾಡುತ್ತಿಲ್ಲ), ತನ್ನಡೆತದ, ತನ್ಹಿಡಿತದ autonomous ಪ ತನ್ನಡೆಯ, ತನ್ನಾಳ್ವಿಕೆಯ (ಈ ಕಾಲೇಜು ಈಗ ತನ್ನಾಳ್ವಿಕೆಯ ಕಾಲೇಜಾಗಿದೆ) autonomy ಹೆ ತನ್ನಾಳ್ಕೆ, ತನ್ನಾಳ್ವಿಕೆ (ಈ ನಾಡಿನಲ್ಲಿ ತನ್ನಾಳ್ವಿಕೆಯಿಂದ ತುಂಬಾ ಬೆಳವಣಿಗೆಯಾಗಿದೆ) autopsy ಹೆ ಹೆಣದೊರೆ (ಹೆಣದೊರೆಯನ್ನು ನಡೆಸಿದಾಗ ಆಕೆಯದು ತನ್ಕೊಲೆಯಲ್ಲ, ಕೊಲೆ ಎಂದು ತಿಳಿದು- §A¢zÉ) austere autopsy A


42 autorickshaw ಹೆ ಮುಗ್ಗಾಲಿ (ಇತ್ತೀಚಗೆ ಕಿಲೋ- ಮೀಟರಿಗಿದ್ದ ಮುಗ್ಗಾಲಿಯ ಬಾಡಿಗೆಯನ್ನು ಹೆಚ್ಚಿಸ- ¯ÁVzÉ) autotroph ಹೆ ಆಡುಕುಳಿ, ತನ್ನಾರಯ್ಕುಳಿ (ಗಿಡಗಳು ತನ್ನಾರಯ್ಕುಳಿಗಳೆಂದು ಹೇಳಲಾಗಿದೆ) autumn ಹೆ ಇಳಿಗೆ (ಈ ಇಳಿಗೆಯಲ್ಲೂ ಮಳೆ ಬರುತ್ತಿರು- ವುದು ಎಲ್ಲರಿಗೂ ಬೆರಗನ್ನುಂಟುಮಾಡಿತು) auxiliary ಪ ಒತ್ತಾಸೆಯ, ನೆರವಿನ (ಬಲ್ಲೆ, ಆರೆ ಮೊದಲಾದುವು ಕನ್ನಡದಲ್ಲಿ ನೆರವಿನ ಎಸಕಪದಗಳು) auxin ಹೆ ಬೆಳವಿಕ (ಈ ಗಿಡದಲ್ಲಿ ಬೆಳವಿಕದ ಮಟ್ಟ ಕಡಿಮೆ EzÉ) avail ಎ ಬಳಸಿಕೊಳ್ಳು (ನಿಮಗೆ ದೊರೆತಿರುವ ಈ ತೆರಹನ್ನು ಸರಿಯಾಗಿ ಬಳಸಿಕೊಳ್ಳಿ) availability ಹೆ ಸಿಗುವಿಕೆ, ದೊರೆಯುವಿಕೆ, ದೊರೆತ (ಈ ಊರಿನಲ್ಲಿ ನೀರಿನ ದೊರೆತದ ಬಗೆಗೆ ಇವತ್ತು ಒಂದು ಕೂಡುಹವಿತ್ತು) available ಪ 1 ದೊರೆಯುವ (ಇಲ್ಲಿ ದೊರೆಯುವ ಹಣ್ಣುಗಳು ಎಂತಹವು?) 2 ಬಳಸಬಲ್ಲ (ಬಳಸಬಲ್ಲ ತೆರಹು) avalanche ಹೆ ಜಾರುಮಂಜು (ಹೆಬ್ಬೆಟ್ಟಕ್ಕೆ ಹತ್ತಲು ಹೋದವರಲ್ಲಿ ಮೂರು ಮಂದಿ ಜಾರುಮಂಜಿಗೆ ಸಿಲುಕಿ ಸತ್ತಿದ್ದಾರೆ) avarice ಹೆ ನೆಲಕಲ (ಅವನೊಬ್ಬ ದೊಡ್ಡ ನೆಲಕಲನಾಗಿದ್ದ) avenge ಹೆ ಮುಯ್ಯಿ (ಮುಯ್ಯಿ ತೀರಿಸಲು ಆತ ಕಾಯು- ತ್ತಿದ್ದಾನೆ) avenue ಹೆ 1 ಅಗಲದಾರಿ (ಕಟ್ಟಡದ ಎದುರಿಗೆ ಒಂದು ಅಗಲದಾರಿಯಿದೆ) 2 ಗುರಿಮುಟ್ಟುವ ಬಗೆ aver ಎ ನನ್ನಿಯೆನ್ನು (ಆತ ತಾನು ತಿಳಿಸಿದುದೇ ನನ್ನಿ- ಯೆನ್ನುತ್ತಿದ್ದಾನೆ) average ಪ ಸರಾಸರಿ (ಹೊಳೆಯ ಆಳ ಸರಾಸರಿ ಮೂರು ಅಡಿ) ಎ ಸರಾಸರಿಯಾಗು (ಅವನು ಒರೆತದಲ್ಲಿ 50 ಸರಾಸರಿಯಾಗುತ್ತಿದ್ದ) aversion ಹೆ ಹೇವರಿಕೆ (ಅವನಿಗೆ ಅಲ್ಲಿಗೆ ಹೋಗಲು ಹೇವರಿಕೆಯೆನಿಸುತ್ತದೆ), ಹೇಸಿಗೆ avert ಎ 1 ಮೋರೆ ತಿರುಗಿಸು 2 ತಪ್ಪಿಸು (ಅವರಿಬ್ಬರ ಸೇರಿಕೆಯನ್ನು ತಪ್ಪಿಸಬೇಕು), ಮಲರು aviary ಹೆ ಹಕ್ಕಿಕಾಪು (ಈ ಹಕ್ಕಿಕಾಪಿನಲ್ಲಿ ಹಲವು ಚಂದ ಚಂದದ ಹಕ್ಕಿಗಳನ್ನು ಇರಿಸಿದ್ದಾರೆ) aviation ಹೆ ಗಾಳಿಸಾರಿಗೆ (ಆ ನಾಡಿನ ಗಾಳಿಸಾರಿಗೆ ತುಂಬಾ ಮುಂದುವರಿದಿದೆ), ಹಾರುಸಾರಿಗೆ avid ಪ ಚುರುಕು (ಅವನೊಬ್ಬ ಚುರುಕು ಓದುಗನಾಗಿದ್ದ) avoid ಎ 1 ತಪ್ಪಿಸಿಕೊಳ್ಳು (ಅವನ ಗೆಳೆಯರೆಲ್ಲ ಈಗ ಅವನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ) 2 ತಡೆ (ಅವರು ಎದುರುಬದುರಾಗದಂತೆ ತಡೆಯಬೇಕು), ತಪ್ಪಿಸು avow ಎ ಒಪ್ಪಿಕೊಳ್ಳು (ಅವನು ತಾನು ತಪ್ಪು ಮಾಡಿರು- ವುದನ್ನು ಒಪ್ಪಿಕೊಂಡಿದ್ದಾನೆ) avuncular ಪ ಅಕ್ಕರೆಯ (ಅವನು ಮಕ್ಕಳಿಗೆಲ್ಲ ಅಕ್ಕರೆಯ ಮಾತುಗಳನ್ನು ಆಡುತ್ತಿದ್ದ), ಮುಚ್ಚಟೆಯ await ಎ ಕಾದಿರು (ಎಲ್ಲರೂ ಅರಕೆಯ ದೊರೆತಕ್ಕಾಗಿ ಕಾದಿದ್ದಾರೆ), ಎದುರುನೋಡು awake ಎ ಎಚ್ಚರಗೊಳ್ಳು (ಈಗ ತಾನೇ ಆತ ನಿದ್ದೆಯಿಂದ ಎಚ್ಚರಗೊಂಡ ಹಾಗಿದೆ) ಪ ಎಚ್ಚರಗೊಂಡ awaken ಎ ಎಬ್ಬಿಸು (ಎಂಟು ಗಂಟೆಯಾದರೂ ಆತನನ್ನು ಎಬ್ಬಿಸಲು ಒಬ್ಬರೂ ಯಾಕೆ ಹೋಗಲಿಲ್ಲ?), ಎಚ್ಚರಿಸು award ಎ ಕೊಡು (ಅವರಿಗೆಲ್ಲ ಇವತ್ತು ಪಟ್ಟಗಳನ್ನು ಕೊಡಲಿದ್ದಾರೆ) ಹೆ ಕೊಡುಗೆ, ಮೆಚ್ಚು (ಮೆಚ್ಚುಗಳನ್ನು ಪಡೆಯಲಿರುವವರು ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ) aware ಪ ತಿಳಿವುಳ್ಳ (ಇವತ್ತು ಏನು ನಡೆಯಲಿದೆಯೆಂಬು- ದರ ತಿಳಿವುಳ್ಳವನು ಅವನೊಬ್ಬನೇ) awareness ಹೆ ಎಚ್ಚರಿಕೆ, ತಿಳಿವು (ಅವನಿಗೆ ತನ್ನ ತಪ್ಪುಗಳ ತಿಳಿವೇ ಇರಲಿಲ್ಲ) awe ಹೆ ಬೆರಗು (ಅವನು ಎಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದ), ಅಕ್ಕಜ awesome ಪ ಮನತಟ್ಟುವ (ಅವನಲ್ಲಿ ಮನತಟ್ಟುವ ಮಾತುಗಾರಿಕೆಯಿತ್ತು) awful ಪ 1 ಕೆಟ್ಟ (ಕೆಟ್ಟ ಮಾತು) 2 ತುಂಬಾ (ಅಲ್ಲಿ ತುಂಬಾ ಮಂದಿ ನೆರೆದಿದ್ದರು) autorickshaw awful A


43 ಚಿತಿಞತಿಚಿಡಿಜ ಗು ತೊಡಕಿನ, ಅಡ್ಡಾದಿಡ್ಡಿ (ಆತನ ಕೆಲಸವೆಲ್ಲ ಬರೀ ಅಡ್ಡಾದಿಡ್ಡಿ) awl ಹೆ ಒಟ್ಟೆಕೊರಕ (ಒಟ್ಟೆಕೊರಕದಲ್ಲಿ ಒಂದು ಚಿಕ್ಕ ತೂತು ಮಾಡಿದ) awn ಹೆ ಊಬು (ಹುಲ್ಲಿನ ಊಬುಗಳು ಬಟ್ಟೆಗೆ ಸಿಕ್ಕಿಹಾಕಿ- ಕೊಂಡಿವೆ) awning ಹೆ ಮೇಲ್ಕಾಪು (ಗಾಳಿಗೆ ಮೇಲ್ಕಾಪು ಹಾರಿ- ಹೋಗಿದೆ), ಮೇಲ್ಕಟ್ಟು awry ಪ ದಾರಿತಪ್ಪಿದ (ಅವರ ಹಮ್ಮುಗೆಯೆಲ್ಲೋ ದಾರಿತಪ್ಪಿದ ಹಾಗಿದೆ), ತಿರುಚಿದ (ತಿರುಚಿದ ಕಯ್ಗಳು) axe ಹೆ ಮಚ್ಚು, ಕೊಡಲಿ (ಕೊಡಲಿಯಲ್ಲಿ ಮರ ಕಡಿದ) axis ಹೆ ನಡುಗೆರೆ (ನೆಲ ತನ್ನ ನಡುಗೆರೆಯ ಮೇಲೆ ತಿರುಗುತ್ತದೆ), ತಿರುಗುಗೆರೆ (ನೆಲವು ತನ್ನ ತಿರುಗುಗೆರೆಯ ಸುತ್ತಲೂ ತಿರುಗುತ್ತದೆ), ಗೆರಿಗೆ, ನಡುಗೆ axis ಹೆ ಸರಿಬದಿಯ ನಡುಗೆರೆ (ಯಾವುದೇ ವಸ್ತು ತನ್ನ ಸರಿಬದಿಯ ನಡುಗೆರೆಯ ಎರಡೂ ಕಡೆ ಒಂದೇ ತೆರನಾಗಿರುತ್ತದೆ) axle ಹೆ ಇರಸು (ಬಂಡಿಯ ಇರಸು ಮುರಿದಿದೆ), ಗಾಲಿಕೋಲು, ತಿರುಗೋಲು (ಬಂಡಿಗಳ ಗಾಲಿಗಳಿಗೆ ತಿರುಗೋಲನ್ನು ಹಾಕುತ್ತಿದ್ದಾರೆ) axon ಹೆ ನರದ ನಾರು (ನರದ ನಾರಿನ ಮುಕ್ಯ ಕೆಲಸವೇನೆಂದರೆ, ನರದಿಂದ ನರಕ್ಕೆ ಇಲ್ಲವೇ ನರದಿಂದ ಕಂಡಕ್ಕೆ ಒಸಗೆಯನ್ನು ಮುಟ್ಟಿಸುವುದು), ನರಗೂಡಿನ ನಾರು, ನರತುದಿ azeotrope ಹೆ ನಿಲ್ಮೆಬೆಸವು azimuth ಹೆ ಕೋನಳತೆ (ಇದರ ಕೋನಳತೆ ಸುಮಾರು 45 ಡಿಗ್ರಿ ಇರಬಹುದು) azure ಪ ಕಡುನೀಲಿ (ಈ ಕಡುನೀಲಿ ಬಣ್ಣದ ಹೂ ತುಂಬಾ ಚನ್ನಾಗಿದೆ) awkward azure A