ಕನ್ನಡ ಬರಹದ ಸೊಲ್ಲರಿಮೆ — ಸಂಪುಟ ೪

ಲೇಖಕರು: ಡಿ. ಎನ್. ಶಂಕರ ಭಟ್ ಪ್ರಕಟಣೆ: —, ಬಾಶಾಪ್ರಕಾಶನ, ಹೆಗ್ಗೋಡು ಮೂಲ: PDF (Google Drive) — Baraha ಫಾಂಟ್ → Unicode ಪರಿವರ್ತನೆ

← ಸೂಚಿ ಇಂಗ್ಲಿಶ್ ವಿಶ್ಲೇಷಣೆ: en Eke: eke

ಒಳಪಿಡಿ (ಸಂಪುಟ ೪)


ಅಧ್ಯಾಯ ೯ — ಆಡುಪದಗಳ ಬಳಕೆ

9.1 ಮುನ್ನೋಟ

Eke →

9.1.1 ಆಡುಪದಗಳ ಕೆಲಸ

ನಾನು, ನೀನು, ಮತ್ತು ತಾನು ಎಂಬ ಮೂರು ಪದಗಳು ಸೊಲ್ಲುಗಳಲ್ಲಿ ತಮ್ಮದೇ ಆದ ಒಂದು ಕೆಲಸವನ್ನು ನಡೆಸಬೇಕಾಗಿದ್ದು, ಅದರಿಂದಾಗಿ ಅವು ಹಲವು ವಿಶಯಗಳಲ್ಲಿ ಬೇರೆಲ್ಲಾ ಪದಗಳಿಂದಲೂ ಬೇರಾಗಿ ಕಾಣಿಸಿಕೊಳ್ಳುತ್ತವೆ; ಹಾಗಾಗಿ, ಈ ಮೂರು ಪದಗಳನ್ನು ಇಲ್ಲಿ ಆಡುಪದಗಳು ಎಂಬ ಒಂದು ಬೇರೆಯೇ ಒಂದು ಗುಂಪಿನಲ್ಲಿ ಗುಂಪಿಸಲಾಗಿದೆ. ಸೊಲ್ಲಿನಲ್ಲಿ ಬರುವ ಒಂದು ಪಾಂಗು ಅದರ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬುದಾಗಿ ಆ ಪಾಂಗಿಗೂ ಸೊಲ್ಲಿನ ಉಂಟುಮಾಡುವಿಕೆಗೂ ನಡುವಿರುವ ಸಂಬಂದವನ್ನು ತಿಳಿಸುವುದೇ ಅವುಗಳ ಈ ತಮ್ಮದೇ ಆದ ಕೆಲಸವಾಗಿರುತ್ತದೆ: (1ಕ) ನಾನು ಊಟ ಮಾಡುತ್ತಿದ್ದೇನೆ. (1ಚ) ರಾಜು ನಿನಗೊಂದು ಪುಸ್ತಕ ಕೊಡಲಿದ್ದಾನೆ. (1ಟ) ತನಗೆ ನೋವಾದರೂ ರಾಜು ಮಾತನಾಡುವುದಿಲ್ಲ. (1ಕ)ದಲ್ಲಿ ಸೊಲ್ಲಿನಲ್ಲಿ ಬಂದಿರುವ ನಾನು ಪದ ಆ ಸೊಲ್ಲಿನ ಮಾಡುಗ ಪಾಂಗಾಗಿ ಬಂದಿರುವುದು ಅದರ ಆಡುಗ ಎಂದಿಶ್ಟೇ ತಿಳಿಸುತ್ತದೆ; ಈ ಆಡುಗ ಯಾರು ಎಂಬುದಾಗಿ ಆತನನ್ನು ಅದು ಗುರುತಿಸಲು ಹೋಗುವುದಿಲ್ಲ. ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ನಿನಗೆ ಎಂಬ ಪದ ಆ ಸೊಲ್ಲಿನ ಗುರಿ ಪಾಂಗು ಅದರ ಕೇಳುಗ ಎಂದಿಶ್ಟೇ ತಿಳಿಸುತ್ತದೆ. ಈ ಎರಡು ಸೊಲ್ಲುಗಳಲ್ಲೂ ಆಡುಗ ಮತ್ತು ಕೇಳುಗರಾಗಿ ತೊಡಗಿಕೊಂಡಿರುವ ವ್ಯಕ್ತಿಗಳು ಯಾರು ಎಂಬುದನ್ನು ತಿಳಿಯಬೇಕಿದ್ದಲ್ಲಿ ಆ ಸೊಲ್ಲುಗಳನ್ನು ಯಾರು ಯಾರೊಂದಿಗೆ ಆಡಿದ್ದಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. (1ಟ)ದಲ್ಲಿ ಬಂದಿರುವ ತನಗೆ ಎಂಬ ಪದ ನಾನು ಮತ್ತು ನೀನು ಎಂಬ ಪದಗಳಿಗಿಂತ ತುಸು ಬೇರಾಗಿದೆ; ಅದು ಆ ಸೊಲ್ಲಿನ ಗುರಿ ಪಾಂಗು ಅದರ ಆಡುಗ ಇಲ್ಲವೇ ಕೇಳುಗರಲ್ಲ, ಬೇರೊಬ್ಬ ಎಂಬುದಾಗಿ ಒಂದು ಬಗೆಯ ಅಲ್ಲಗಳೆಯುವಂತಹ ಹುರುಳನ್ನು ಕೊಡುತ್ತದೆ; ಇದಲ್ಲದೆ, ಈ ಬೇರೊಬ್ಬ

ಯಾರು ಎಂಬುದನ್ನು ತಾನು ಪದವೂ ನೇರವಾಗಿ ತಿಳಿಸುವುದಿಲ್ಲ; ಅದನ್ನು ತಿಳಿಸಬಲ್ಲ ರಾಜು ಎಂಬ ಬೇರೊಂದು ಪದ ಅದೇ ಸೊಲ್ಲಿನಲ್ಲಿ ಬಂದಿದ್ದು, ಅದನ್ನು ಹಿನ್ನುಡಿತವಾಗಿ ಪಡೆಯುವ ಮೂಲಕ ಅದು ಈ ಕೆಲಸವನ್ನು ನಡೆಸುತ್ತದೆ. ಈ ಮೂರು ಪದಗಳಿಗೂ ಒಂದೇ ಬಗೆಯ ಹಲವೆಣಿಕೆಯ ರೂಪಗಳಿವೆ, ಮತ್ತು ಈ ರೂಪಗಳು ಹೆಸರುಪದಗಳ ಹಲವೆಣಿಕೆಯ ರೂಪಗಳಿಂದ ಬೇರಾಗಿವೆ: ನು ಎಂಬ ಅವುಗಳ ಎರಡನೇ ಉಲಿಕಂತೆಯ ಬದಲು ವು ಎಂಬ ಉಲಿಕಂತೆಯನ್ನು ಬಳಸುವ ಮೂಲಕ ಅವುಗಳ ಈ ಹಲವೆಣಿಕೆಯ ರೂಪವನ್ನು ಉಂಟುಮಾಡಲಾಗುತ್ತದೆ (ನಾನು-ನಾವು, ನೀನು-ನೀವು, ತಾನು-ತಾವು). ಇದಲ್ಲದೆ, (4.2.9)ರಲ್ಲಿ ವಿವರಿಸಿದ ಹಾಗೆ, ಈ ಮೂರು ಪದಗಳ ಇಲ್ಲವೇ ಅವುಗಳ ಹಲವೆಣಿಕೆಯ ರೂಪಗಳ ಬಳಿಕ ಪತ್ತುಗೆಯ ಒಟ್ಟುಗಳನ್ನು ಬಳಸಿದಾಗ, ಅವುಗಳ ಮೊದಲನೇ ಉಲಿಕಂತೆಯ ಉದ್ದ ತೆರೆಯುಲಿ ಗಿಡ್ಡವಾಗುತ್ತದೆ (ನಾನು-ನನಗೆ, ನೀವು-ನಿಮ್ಮ, ತಾವು-ತಮ್ಮಿಂದ), ವಕಾರ ಮಕಾರವಾಗುತ್ತದೆ (ನಾನು-ನನ್ನಲ್ಲಿ, ನೀವು-ನಿಮ್ಮಿಂದ, ತಾವು-ತಮಗೆ), ಮತ್ತು ಕೆಲವೆಡೆಗಳಲ್ಲಿ ಎರಡನೇ ಉಲಿಕಂತೆಯ ನಕಾರ ಇಲ್ಲವೇ ಮಕಾರ ಇಮ್ಮಡಿಯಾಗುತ್ತದೆ; ಈ ಸೇರಿಕೆಯ ಮಾರ್ಪಾಡುಗಳೂ ಆಡುಪದಗಳನ್ನು ಒಟ್ಟುಸೇರಿಸುತ್ತವೆ ಮತ್ತು ಅವನ್ನು ಬೇರೆ ಪದಗಳಿಂದ ಬೇರ್ಪಡಿಸುತ್ತವೆ. ಸೊಲ್ಲುಗಳಲ್ಲಿ ಬಂದಿರುವ ಪಾಂಗುಗಳನ್ನು ಗುರುತಿಸಹೋಗದೆ, ಅವಕ್ಕೂ ಸೊಲ್ಲಿನ ಆಡುಗ, ಕೇಳುಗ ಮತ್ತು ಬೇರೊಬ್ಬ ಎಂಬವರಿಗೂ ನಡುವಿರುವ ಸಂಬಂದವನ್ನು ಮಾತ್ರವೇ ತಿಳಿಸಬಲ್ಲ ನಾನು, ನೀನು, ಮತ್ತು ತಾನು ಎಂಬ ಈ ಮೂರು ಪದಗಳನ್ನು ಸೊಲ್ಲುಗಳಲ್ಲಿ ಯಾಕೆ ಬಳಸಬೇಕಾಗುತ್ತದೆ ಎಂಬುದು ಕೆಳಗೆ ಕೊಟ್ಟಿರುವ ಸೂಳುನುಡಿಯನ್ನು ಪರಿಶೀಲಿಸಿದಲ್ಲಿ ಗೊತ್ತಾಗುತ್ತದೆ: (1ಕ) ರಾಜು: ನಾನು ಇವತ್ತು ಬೇಗನೆ ಮನೆಗೆ ಹೋಗುತ್ತೇನೆ. (1ಚ) ಜಾನಕಿ: ನಾನೂ ಬೇಗನೆ ಹೋಗುತ್ತೇನೆ. (1ಟ) ರಾಜು: ಆದರೆ ನೀನು ಈ ಕೆಲಸವನ್ನು ಇವತ್ತೇ ಮುಗಿಸಬೇಕು. ಮೇಲಿನ ಸೂಳುನುಡಿಯಲ್ಲಿ ರಾಜು ಮತ್ತು ಜಾನಕಿ ಎಂಬ ಇಬ್ಬರು ವ್ಯಕ್ತಿಗಳು ತೊಡಗಿಕೊಂಡಿದ್ದಾರೆ; (1ಕ) ಮತ್ತು (1ಟ) ಸೊಲ್ಲುಗಳ ಆಡುಗ ರಾಜು, ಮತ್ತು (1ಚ) ಸೊಲ್ಲಿನ ಆಡುಗ ಜಾನಕಿ; (1ಕ) ಮತ್ತು (1ಚ) ಸೊಲ್ಲುಗಳೆರಡರಲ್ಲೂ ನಾನು ಎಂಬ ಪದ ಬಂದಿದ್ದು, ಈ ಎರಡು ಕಡೆಗಳಲ್ಲೂ ಸೊಲ್ಲಿನ ಮಾಡುಗ ಅದರ ಆಡುಗ ಎಂಬುದನ್ನಶ್ಟೇ ಆ ಪದ ತಿಳಿಸುತ್ತದೆ. ಸೊಲ್ಲಿನ ಮಾಡುಗರು ನಿಜಕ್ಕೂ ಯಾರು ಎಂಬುದನ್ನೂ ಈ ಸೊಲ್ಲುಗಳಲ್ಲಿ ತಿಳಿಸಬೇಕೆಂದಿದ್ದಲ್ಲಿ ಅವೆರಡರಲ್ಲೂ ನಾನು ಎಂಬ ಒಂದೇ ಪದವನ್ನು ಬಳಸಲು

ಬರುತ್ತಿರಲಿಲ್ಲ. ಯಾಕೆಂದರೆ, ರಾಜು ಮತ್ತು ಜಾನಕಿ ಎಂಬ ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಅವುಗಳಲ್ಲಿ ಮಾಡುಗರಾಗಿ ತೊಡಗಿಕೊಂಡಿದ್ದಾರೆ. ಒಂದು ಸೂಳುನುಡಿ ಮುಂದುವರಿಯುತ್ತಿರುವಂತೆ, ಅದರ ಆಡುಗ ಮತ್ತು ಕೇಳುಗರು ಬದಲಾಗುತ್ತಾ ಹೋಗುತ್ತಾರೆ; ಆಡುಗನಾಗಿದ್ದ ವ್ಯಕ್ತಿ ಕೇಳುಗನಾಗಬಹುದು, ಇಲ್ಲವೇ ಆಡುಗನೂ ಅಲ್ಲ, ಕೇಳುಗನೂ ಅಲ್ಲ, ಬೇರೊಬ್ಬ ಎಂದಾಗಬಹುದು. ಹಾಗಾಗಿ, ಸೊಲ್ಲಿನ ಪಾಂಗುಗಳಿಗೂ ಅವುಗಳ ಉಂಟುಮಾಡುವಿಕೆಯಲ್ಲಿ ತೊಡಗಿಕೊಂಡಿರುವ ಪಾಂಗುಗಳಿಗೂ ನಡುವಿರುವ ಸಂಬಂದವನ್ನು ತಿಳಿಸಬೇಕಾಗಿರುವ ಆಡುಪದಗಳು ಆ ಪಾಂಗುಗಳಾಗಿ ಬಂದಿರುವ ವ್ಯಕ್ತಿಗಳು ಯಾರು ಎಂಬುದನ್ನು ನೇರವಾಗಿ ತಿಳಿಸಲಾರವು. ಆಡುಪದಗಳಿಗಿರುವ ಈ ವಿಶಿಶ್ಟವಾದ ಕೆಲಸವನ್ನು ನಡೆಸುವುದಕ್ಕಾಗಿ ಅವುಗಳ ಬಳಕೆಯಲ್ಲಿ ಎಂತಹ ಕಟ್ಟುಪಾಡುಗಳು ಕಾಣಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ವಿವರವಾಗಿ 9.2ರಲ್ಲಿ ಕೊಡಲಾಗಿದೆ.

9.1.2 ತಾನು ಪದದ ಬೇರ್ಪಡುಗೆ

ಆಡುಪದಗಳಲ್ಲಿ ನಾನು ಮತ್ತು ನೀನು ಪದದಿಂದ ತಾನು ಪದ ಹಲವು ವಿಶಯಗಳಲ್ಲಿ ಬೇರಾಗಿದೆ; ಹಾಗಾಗಿ, ಅದನ್ನೊಂದು ಆಡುಪದವೆಂದು ತಿಳಿಯಬೇಕೇ ಇಲ್ಲವೇ ಬೇರೊಂದು ಬಗೆಯ ಪದವೆಂದು ತಿಳಿಯಬೇಕೇ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು. ಆದರೆ, ಈ ಮೂರು ಪದಗಳ ನಡುವೆ ಹಲವು ಹೋಲಿಕೆಗಳೂ ಕಾಣಿಸುತ್ತವೆ; ಇವು ಎಂತಹವು ಎಂಬುದನ್ನು 9.3ರಲ್ಲಿ ವಿವರಿಸಲಾಗಿದೆ. ಇದಲ್ಲದೆ, ತಾನು ಪದಕ್ಕೂ ನಾನು ಮತ್ತು ನೀನು ಪದಕ್ಕೂ ನಡುವಿರುವ ವ್ಯತ್ಯಾಸಗಳಿಗೆ ಅದು ಸೊಲ್ಲಿನ ಉಂಟುಮಾಡುವಿಕೆಯಲ್ಲಿ ನೇರವಾಗಿ ತೊಡಗಿಕೊಂಡಿಲ್ಲದಂತಹ ಬೇರೊಬ್ಬ ಎಂಬ ಪಾಂಗನ್ನು ತಿಳಿಸಬೇಕಾಗುತ್ತದೆಯೆಂಬುದೇ ಮುಕ್ಯ ಕಾರಣವಾಗಿದೆ; ಇದನ್ನೂ 9.3ರಲ್ಲಿ ವಿವರಿಸಲಾಗಿದೆ. ನಾನು ಮತ್ತು ನೀನು ಪದಗಳ ನಡುವೆಯೂ ಕೆಲವು ವ್ಯತ್ಯಾಸಗಳಿದ್ದು, ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆಡುಗನಿಗಿರುವ ಹೆಚ್ಚುಗಾರಿಕೆಯಿಂದಾಗಿ ಈ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಎತ್ತುಗೆಗಾಗಿ, ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ಆಡುಗನನ್ನು ತಿಳಿಸುವ ನಾನು ಪದದ ಹಲವೆಣಿಕೆಯ ರೂಪದಿಂದ ತಿಳಿಸಲಾಗುತ್ತದೆಯಲ್ಲದೆ, ಕೇಳುಗನನ್ನು ತಿಳಿಸುವ ನೀನು ಪದದ ಹಲವೆಣಿಕೆಯ ರೂಪದಿಂದಲ್ಲ: (1ಕ) ನಾನೂ ನೀನೂ ಕಳೆದ ವರ್ಶ ಒಂದೇ ಕೋಣೆಯಲ್ಲಿದ್ದರೂ ನಮ್ಮೊಳಗೆ ಜಗಳವಾಗಿರಲಿಲ್ಲ.

(1ಚ) ನಾನೂ ಅವನೂ ಕಳೆದ ವರ್ಶ ಒಂದೇ ಕೋಣೆಯಲ್ಲಿದ್ದರೂ ನಮ್ಮೊಳಗೆ ಜಗಳವಾಗಿರಲಿಲ್ಲ. (1ಟ) ನೀನೂ ಅವನೂ ಕಳೆದ ವರ್ಶ ಒಂದೇ ಕೋಣೆಯಲ್ಲಿದ್ದರೂ ನಿಮ್ಮೊಳಗೆ ಜಗಳವಾಗಿರಲಿಲ್ಲ. (1ಕ-ಚ)ಗಳಲ್ಲಿ ಆಡುಗನೊಂದಿಗೆ ಕೇಳುಗ ಮತ್ತು ಬೇರೊಬ್ಬರ ಸೇರಿಕೆಯಾಗಿದ್ದು, ಅವರಿಬ್ಬರನ್ನು ಒಟ್ಟಾಗಿ ತಿಳಿಸಲು ನಾವು ಪದವೇ (ನಮ್ಮೊಳಗೆ ಎಂಬ ರೂಪದಲ್ಲಿ) ಬಳಕೆಯಾಗಿದೆ; ಕೇಳುಗನೊಂದಿಗೆ ಬೇರೊಬ್ಬ ಸೇರಿರುವ (1ಟ) ಸೊಲ್ಲಿನಲ್ಲಿ ಮಾತ್ರ ನೀವು ಪದ ನಿಮ್ಮೊಳಗೆ ಎಂಬ ರೂಪದಲ್ಲಿ ಬಳಕೆಯಾಗಿದೆ. ಎಸಕಪದರೂಪಗಳ ಕೊನೆಯಲ್ಲಿ ಬರುವ ಗುರುತಿನ ಒಟ್ಟುಗಳಲ್ಲೂ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ತಿಳಿಸಲು ಆಡುಗನನ್ನು ಗುರುತಿಸುವ ಒಟ್ಟಿನ ಹಲವೆಣಿಕೆಯ ರೂಪವನ್ನು ಬಳಸಲಾಗುತ್ತದಲ್ಲದೆ ಕೇಳುಗನನ್ನು ಗುರುತಿಸುವ ಒಟ್ಟಿನ ಹಲವೆಣಿಕೆಯ ರೂಪವನ್ನಲ್ಲ ಎಂಬುದನ್ನು ಗಮನಿಸಬಹುದು: (1ಕ) ಅಂತೂ ನಾನೂ ನೀನೂ ಒಟ್ಟಿಗೆ ಒಂದು ಸಿನೆಮಾ ನೋಡಿದೆವು. ಕೇಳುಗ ಮತ್ತು ಬೇರೊಬ್ಬರ ಕೂಡಿಕೆಯನ್ನು ತಿಳಿಸುವಲ್ಲಿ ಮಾತ್ರ ನೀನು ಪದದ ಹಲವೆಣಿಕೆಯ ರೂಪವನ್ನು ಬಳಸಲಾಗುತ್ತದೆ; ಇಂತಹ ಸಂದರ್ಬದಲ್ಲಿ ಎಸಕಪದರೂಪದ ಗುರುತಿನ ಒಟ್ಟೂ ಕೇಳುಗನನ್ನು ಗುರುತಿಸುವ ಒಟ್ಟಿನ ಹಲವೆಣಿಕೆಯ ರೂಪವಾಗಿರುತ್ತದೆ: (1ಚ) ಅಂತೂ ನೀನೂ ಅವನೂ ಒಟ್ಟಿಗೆ ಒಂದು ಸಿನಿಮಾ ನೋಡಿದಿರಿ. ಹಾಗಾಗಿ, ನಾನು ಎಂಬುದು ನೀನು ಎಂಬುದರಿಂದ ಮುಕ್ಯ ಮತ್ತು ನೀನು ಎಂಬುದು ತಾನು ಪದಕ್ಕಿಂತ ಮುಕ್ಯ ಎಂದು ಹೇಳಲು ಬರುತ್ತದೆ. ನಾನು ಪದದ ಹಲವೆಣಿಕೆಯ ರೂಪಕ್ಕೆ ಅದರ ಎಲ್ಲಾ ಬಳಕೆಗಳಲ್ಲೂ ಕೂಡಿಕೆಯ ಹುರುಳು ಸಿಗುತ್ತದೆ; ಆದರೆ, ನೀನು ಪದದ ಹಲವೆಣಿಕೆಯ ರೂಪಕ್ಕೆ ಅದರ ಕೆಲವು ಬಳಕೆಗಳಲ್ಲಿ ಮಾತ್ರ ಕೂಡಿಕೆಯ ಹುರುಳು ಸಿಗುತ್ತದೆ; ಬೇರೆ ಕೆಲವು ಬಳಕೆಗಳಲ್ಲಿ ಅದು ಹೆಸರುಪದಗಳ ಹಲವೆಣಿಕೆಯ ರೂಪಗಳನ್ನು ಹೋಲುತ್ತದೆ. ತಾನು ಎಂಬುದಕ್ಕೆ ಅದರ ಯಾವ ಬಳಕೆಯಲ್ಲೂ ಕೂಡಿಕೆಯ ಹುರುಳಿಲ್ಲ. ಈ ಮೂರು ಆಡುಪದಗಳು ಹಲವೆಣಿಕೆಯ ಬಳಕೆಗಳಲ್ಲಿ ಈ ರೀತಿ ಬೇರೆ ಬೇರಾಗಿವೆಯಾದರೂ, ಅವು ಮೂರೂ ಸೊಲ್ಲಿನ ಆಡುವಿಕೆಗೆ ಸಂಬಂದಿಸಿದ ಪಾಂಗುಗಳನ್ನು ತಿಳಿಸುತ್ತಿವೆಯೆಂಬುದರಲ್ಲಿ ಹೆಸರುಪದಗಳಿಗಿಂತ ಬೇರಾಗಿವೆ.

ಎಸಕಪದಗಳ ಅರಿಕೆರೂಪವನ್ನು ಬಳಸಿರುವ ಸೊಲ್ಲುಗಳಲ್ಲಿ ಕೇಳುಗನನ್ನು ತಿಳಿಸುವ ನೀನು ಇಲ್ಲವೇ ನೀವು ಎಂಬ ಪದವೇ ಮಾಡುಗ ಪಾಂಗಾಗಿ ಬಂದಿರುತ್ತದೆ; ಇಂತಹದೊಂದು ಕಟ್ಟಲೆಯಿರುವ ಕಾರಣ, ಕೆಲವೊಮ್ಮೆ ಅರಿಕೆ ಸೊಲ್ಲುಗಳ ಮಾಡುಗ ಪಾಂಗನ್ನು ಸೊಲ್ಲಿನಲ್ಲಿ ತಿಳಿಸದೆಯೂ ಇರಲು ಬರುತ್ತದೆ: (1ಕ) ಮೂರು ಗಂಟೆ ಹೊತ್ತಿಗೆ ನೀನು ಮನೆಗೆ ಹೋಗು. (1ಚ) ನೀವಿಬ್ಬರೂ ಮಾಳಿಗೆಗೆ ಹೋಗಿ. (1ಟ) ಮದುವೆಗೆ ತಪ್ಪದೆ ಬನ್ನಿ. ಕೆಳಗೆ ಕೊಟ್ಟಿರುವಂತಹ ಕೆಲವು ಸೊಲ್ಲುಗಳು ಈ ಕಟ್ಟಲೆಗೆ ಹೊರಪಡಿಕೆಗಳೆಂದು ಅನಿಸಬಹುದು; ಆದರೆ, ಇಂತಹ ಕಡೆಗಳಲ್ಲೂ ಕೇಳುಗರು ಸೇರಿಕೊಂಡಿರುವುದನ್ನು ಕಾಣಬಹುದು: (1ಕ) ಯಾರೂ ಹೊರಗೆ ಹೋಗಬೇಡಿ. (1ಚ) ಯಾರಾದರೂ ಡಾಕ್ಟರರನ್ನು ಬರಹೇಳಿ. (1ಟ) ಹೊಸದಾಗಿ ಬಂದವರು ಅಲ್ಲಿ ಹೆಸರು ಬರೆಸಿಕೊಳ್ಳಿ. ಮೇಲಿನ ಸೊಲ್ಲುಗಳಲ್ಲಿ ಕೇಳುಗನನ್ನು ತಿಳಿಸುವ ನೀನು ಇಲ್ಲವೇ ನೀವು ಪದ ಮಾಡುಗ ಪಾಂಗಾಗಿ ಬಂದಿಲ್ಲವಾದರೂ ಅವುಗಳ ಮಾಡುಗ ಪಾಂಗುಗಳು ನಿಜಕ್ಕೂ ಕೇಳಗರೇ ಆಗಿರುತ್ತಾರೆ; ಯಾಕೆಂದರೆ, ಅವುಗಳ ಮಾಡುಗ ಪಾಂಗನ್ನು ಗುರುತಿಸುವ ಪದದೊಂದಿಗೆ ನಿಮ್ಮಲ್ಲಿ ಎಂಬುದನ್ನು ಸೇರಿಸಲು ಬರುತ್ತದೆ. (1ಕ) ನಿಮ್ಮಲ್ಲಿ ಯಾರೂ ಹೊರಗೆ ಹೋಗಬೇಡಿ. (1ಚ) ನಿಮ್ಮಲ್ಲಿ ಯಾರಾದರೂ ಡಾಕ್ಟರರನ್ನು ಬರಹೇಳಿ. (1ಟ) ನಿಮ್ಮಲ್ಲಿ ಹೊಸದಾಗಿ ಬಂದವರು ಅಲ್ಲಿ ಹೆಸರು ಬರೆಸಿಕೊಳ್ಳಿ. ಆಡುಗನನ್ನು ತಿಳಿಸುವ ಪದಕ್ಕಿಂತ ಕೇಳುಗನನ್ನು ತಿಳಿಸುವ ಪದ ಬೇರಾಗಿರುವ ಇನ್ನೊಂದು ಬಳಕೆಯೆಂದರೆ, ಕೇಳುಗನನ್ನು ತಿಳಿಸುವಲ್ಲಿ ಆತನಿಗೆ ಹೆಚ್ಚಿನ ಮದಿಪನ್ನು ಕೊಡಲು ಬೇರೊಬ್ಬನನ್ನು ತಿಳಿಸುವ ತಾನು ಪದದ ಹಲವೆಣಿಕೆಯ ರೂಪದ ಬಳಕೆ: (1ಕ) ನಿಮಗೆ ತೊಂದರೆಯಾಗದಿದ್ದರೆ, ಒಮ್ಮೆ ನಮ್ಮಲ್ಲಿಗೆ ಬನ್ನಿ. (1ಚ) ತಮಗೆ ತೊಂದರೆಯಾಗದಿದ್ದರೆ, ಒಮ್ಮೆ ನಮ್ಮಲ್ಲಿಗೆ ಬಂದರಾಗುತ್ತಿತ್ತು.

(1ಕ)ದಲ್ಲಿ ಕೇಳುಗನನ್ನು ಮದಿಪನ್ನು ಕೊಟ್ಟು ತಿಳಿಸಲು ನೇರವಾಗಿ ನೀನು ಎಂಬ ಆಡುಪದದ ಹಲವೆಣಿಕೆಯ ರೂಪವನ್ನು ಬಳಸಲಾಗಿದೆ; ಆದರೆ, (1ಚ)ದಲ್ಲಿ ಆತನಿಗೆ ಇನ್ನಶ್ಟು ಹೆಚ್ಚಿನ ಮದಿಪನ್ನು ಕೊಡಲು ಬೇರೊಬ್ಬನನ್ನು ತಿಳಿಸುವ ತಾನು ಪದದ ಹಲವೆಣಿಕೆಯ ರೂಪವನ್ನು ಬಳಸಲಾಗಿದೆ. ನಾನು, ನೀನು ಮತ್ತು ತಾನು ಪದಗಳ ನಡುವಿರುವ ಇಂತಹ ಹೋಲಿಕೆ ಮತ್ತು ವ್ಯತ್ಯಾಸಗಳಲ್ಲಿ ಹೋಲಿಕೆಗಳಿಗೇನೇ ಹೆಚ್ಚಿನ ಬೆಲೆ ಕೊಟ್ಟು ಇಲ್ಲಿ ಅವು ಮೂರನ್ನೂ ಒಟ್ಟಾಗಿ ಆಡುಪದಗಳೆಂದು ಕರೆಯಲಾಗಿದೆ.

9.1.3 ಹೆಸರುಪದಗಳಿಂದ ಬೇರಾಗಿರುವುದು

ಆಡುಪದಗಳು ಕೆಲವು ವಿಶಯಗಳಲ್ಲಿ ಹೆಸರುಪದಗಳನ್ನು ಹೋಲುತ್ತವೆ; ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವು ಹೆಸರುಪದಗಳಿಂದ ಬೇರಾಗಿವೆ. ಸೊಲ್ಲುಗಳಲ್ಲಿ ಈ ಎರಡು ಬಗೆಯ ಪದಗಳು ನಡೆಸಬೇಕಾಗಿರುವ ಕೆಲಸಗಳ ನಡುವೆ ಹೋಲಿಕೆ ಮತ್ತು ವ್ಯತ್ಯಾಸಗಳು ಇವೆಯೆಂಬುದೇ ಅವುಗಳ ಪರಿಚೆಯಲ್ಲಿ ಕಾಣಿಸುವ ಈ ಹೋಲಿಕೆ ಮತ್ತು ವ್ಯತ್ಯಾಸಗಳಿಗೆ ಕಾರಣವಾಗಿದೆ. ಈ ಎರಡು ಬಗೆಯ ಪದಗಳೂ ಸೊಲ್ಲಿನಲ್ಲಿ ಬಳಕೆಯಾಗಿರುವ ಒಂದು ಪಾಂಗು ಎಂತಹದು (ಮಾಡುಗ, ಈಡು, ಗುರಿ, ಸುರು, ಜಾಗ ಮೊದಲಾದವುಗಳಲ್ಲಿ ಯಾವುದು) ಎಂಬುದನ್ನು ತಿಳಿಸಬೇಕಾಗುತ್ತದೆಯೆಂಬುದು ಅವುಗಳ ನಡುವಿರುವ ಹೋಲಿಕೆ; ಆದರೆ, ಅವುಗಳಲ್ಲಿ ಹೆಸರುಪದಗಳು ಈ ಪಾಂಗು ನಿಜಕ್ಕೂ ಯಾವುದು ಎಂಬುದಾಗಿ ಅದನ್ನು ಗುರುತಿಸಬೇಕಾಗುತ್ತದೆ, ಮತ್ತು ಆಡುಪದಗಳು ಅದನ್ನು ಗುರುತಿಸದಿರಬೇಕಾಗುತ್ತದೆ ಎಂಬುದು ಅವುಗಳ ನಡುವಿರುವ ವ್ಯತ್ಯಾಸ. ಆಡುಪದ ಮತ್ತು ಹೆಸರುಪದಗಳು ನಡೆಸಬೇಕಾಗಿರುವ ಕೆಲಸಗಳ ನಡುವೆ ಈ ರೀತಿ ಹೋಲಿಕೆಗಳೂ ಇವೆ, ಮತ್ತು ವ್ಯತ್ಯಾಸಗಳೂ ಇವೆ; ಹಾಗಾಗಿ, ಅವುಗಳ ಬಳಕೆಯಲ್ಲೂ ಹೋಲಿಕೆ ಮತ್ತು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಪರಿಚೆಪದಗಳ ಇಲ್ಲವೇ ಎಣಿಕೆಪದಗಳ ಬಳಿಕ ಬಳಕೆಯಾಗದಿರುವಲ್ಲಿ (*ದೊಡ್ಡ ನಾನು, *ಇಬ್ಬರು ನೀವು, *ಕಪ್ಪು ತಾನು), ಎಣಿಕೆರೂಪಗಳನ್ನು ಎಣಿಕೆಯ ಬದಲು ಕೂಡಿಕೆಯ ಹುರುಳನ್ನು ತಿಳಿಸುವಲ್ಲಿ (ನಾವಿಬ್ಬರು = ನಾನು ಮತ್ತು ನೀನು ಇಲ್ಲವೇ ನಾನು ಮತ್ತು ಅವನು; ನೀವಿಬ್ಬರು = ನೀನು ಮತ್ತು ಅವನು), ಮತ್ತು ಬೇರೆಯೂ ಹಲವು ವಿಶಯಗಳಲ್ಲಿ ಆಡುಪದಗಳು ಹೆಸರುಪದಗಳಿಂದ ಬೇರಾಗಿವೆ. ಆದರೆ, ಅನ್ನು, ಇಂದ, ಇಗೆ, ಮತ್ತು ಅಲ್ಲಿ ಎಂಬ ಪತ್ತುಗೆ ಒಟ್ಟುಗಳೊಂದಿಗೆ ಬರುವಲ್ಲಿ (ನನ್ನನ್ನು, ನನ್ನಿಂದ, ನಿನಗೆ, ತನ್ನಲ್ಲಿ) ಅವು ಹೆಸರುಪದಗಳನ್ನು ಹೋಲುತ್ತವೆ. ಹೆಸರುಪದಗಳ ಹಾಗೆ ಅವಕ್ಕೂ

ಸೊಲ್ಲುಗಳಲ್ಲಿ ಬರುವ ಪಾಂಗುಗಳನ್ನು ತಿಳಿಸಬೇಕಾಗುತ್ತದೆಯೆಂಬುದೇ ಇದಕ್ಕೆ ಹೆಸರುಪದಗಳಿಗೂ ಆಡುಪದಗಳಿಗೂ ನಡುವೆ ಈ ರೀತಿ ಹಲವು ವ್ಯತ್ಯಾಸಗಳಿವೆ, ಮತ್ತು ಕೆಲವು ಹೋಲಿಕೆಗಳೂ ಇವೆ; ಹಾಗಾಗಿ, ಅವನ್ನು ಎರಡು ಬೇರೆ ಬೇರೆ ಗುಂಪುಗಳಲ್ಲಿ ಇರಿಸಬೇಕಾಗಿದೆ. ಈ ಹೋಲಿಕೆ ಮತ್ತು ವ್ಯತ್ಯಾಸಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು (9.3)ರಲ್ಲಿ ಕೊಡಲಾಗಿದೆ.

9.1.4 ತೋರುಪದಗಳಿಂದ ಬೇರಾಗಿರುವುದು

ಹೆಚ್ಚಿನ ಸೊಲ್ಲರಿಮೆಗಳಲ್ಲೂ ಆಡುಪದ ಮತ್ತು ತೋರುಪದಗಳನ್ನು ಒಟ್ಟಿಗೆ ಪ್ರೋನವ್್ನ ಎಂಬ ಹೆಸರಿನ ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ; ಈ ಎರಡು ಬಗೆಯ ಪದಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಬೇಕಿದ್ದಲ್ಲಿ ಸೊಲ್ಲಿನ ಉಂಟುಮಾಡುವಿಕೆಗೆ ಮತ್ತು ಆಡುಗನ ಕುಳ್ಳಿಹಕ್ಕೆ ಸಂಬಂದಿಸಿದಂತಹ ಕೆಲವು ವಿಶಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆಯೆಂಬುದೇ ಇದಕ್ಕೆ ಕಾರಣ. ಮೇಲೆ ತಿಳಿಸಿದ ಹಾಗೆ, ಸೊಲ್ಲು ತಿಳಿಸುವ ಎಸಕ ಇಲ್ಲವೇ ಇರುಹದ ಪಾಂಗುಗಳಿಗೂ ಸೊಲ್ಲಿನ ಉಂಟುಮಾಡುವಿಕೆಯಲ್ಲಿ ತೊಡಗಿರುವ ಪಾಂಗುಗಳಿಗೂ ನಡುವಿರುವ ಸಂಬಂದವನ್ನು ತಿಳಿಸುವುದು ಆಡುಪದಗಳ ಕೆಲಸವಾಗಿದೆ; ಹಾಗಾಗಿ, ಸೊಲ್ಲನ್ನು ಉಂಟುಮಾಡಿದವರು ಯಾರು ಎಂಬುದನ್ನು ತಿಳಿಯದೆ ಆಡುಪದಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಲು ಬರುವುದಿಲ್ಲ. (1ಕ) ನಾನು ಇವತ್ತು ಊಟಮಾಡುವುದಿಲ್ಲ. (1ಚ) ನೀನು ಇವತ್ತು ಎಲ್ಲಿಗೂ ಹೋಗಬೇಡ. (1ಕ) ಸೊಲ್ಲು ಇವತ್ತು ಊಟಮಾಡುವುದಿಲ್ಲ ಎಂಬುದನ್ನು ಯಾರ ಕುರಿತಾಗಿ ಹೇಳುತ್ತದೆ ಎಂಬುದನ್ನು ತಿಳಿಯಬೇಕಿದ್ದಲ್ಲಿ, ಆ ಸೊಲ್ಲಿನ ಆಡುಗ ಯಾರು ಎಂಬುದನ್ನು ತಿಳಿಯಬೇಕಾಗುತ್ತದೆ; ಯಾಕೆಂದರೆ, ಅದರ ಮಾಡುಗ ಪಾಂಗನ್ನು ತಿಳಿಸುವ ನಾನು ಪದ ಆ ಪಾಂಗು ಸೊಲ್ಲಿನ ಆಡುಗ ಎಂದಿಶ್ಟೇ ತಿಳಿಸುತ್ತದಲ್ಲದೆ, ಅದು ಯಾರು ಎಂಬುದನ್ನು ಗುರುತಿಸಲು ಹೋಗುವುದಿಲ್ಲ. ತೋರುಪದಗಳ ಬಳಕೆಯಲ್ಲೂ ಇಂತಹದೇ ತೊಡಕನ್ನು ಕಾಣಬಹುದು; ಅವನ್ನು ಬಳಸಿರುವ ಸೊಲ್ಲುಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಲು ಆ ಸೊಲ್ಲುಗಳನ್ನು ಉಂಟುಮಾಡಿದವರು ಯಾರು, ಅವನ್ನು ಎಲ್ಲಿ ಮತ್ತು ಯಾವಾಗ ಉಂಟುಮಾಡಲಾಗಿದೆ ಎಂಬುದನ್ನು ತಿಳಿಯಬೇಕಾಗುತ್ತದೆ: (1ಕ) ಇವರು ಈ ಕಾರಿನ ಒಡೆಯರು.

(1ಚ) ಇಲ್ಲಿ ಹೊಗೆಬತ್ತಿ ಸೇದಬಾರದು. (1ಕ) ಸೊಲ್ಲು ಯಾರನ್ನು ಕಾರಿನ ಒಡೆಯರೆಂದು ತಿಳಿಸುತ್ತಿದೆ, ಮತ್ತು ಯಾವ ಕಾರಿನ ಒಡೆಯರೆಂದು ತಿಳಿಸುತ್ತಿದೆ ಎಂಬುದನ್ನು ತಿಳಿಯಬೇಕಿದ್ದಲ್ಲಿ, ಆ ಸೊಲ್ಲಿನ ಆಡುಗ ಯಾರು, ಆತನ ಹತ್ತಿರ ಯಾವ ವ್ಯಕ್ತಿ ಇದ್ದಾರೆ, ಮತ್ತು ಯಾವ ಕಾರು ಇದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಇದೇ ರೀತಿಯಲ್ಲಿ (1ಚ) ಸೊಲ್ಲು ಯಾವ ಜಾಗದಲ್ಲಿ ಹೊಗೆಬತ್ತಿಯನ್ನು ಸೇದಬಾರದೆಂದು ಹೇಳುತ್ತಿದೆ ಎಂಬುದನ್ನು ತಿಳಿಯಲು ಅದರ ಆಡುಗ ಎಲ್ಲಿದ್ದಾನೆ ಎಂಬುದನ್ನು (ಇಲ್ಲವೇ ಆ ಸೊಲ್ಲನ್ನು ಎಲ್ಲಿ ಬರೆಯಲಾಗಿದೆ ಎಂಬುದನ್ನು) ತಿಳಿಯಬೇಕಾಗುತ್ತದೆ (ತೋರುಪದಗಳಿಗೆ ಬೇರೆಯೂ ಹಲವು ಬಗೆಯ ಬಳಕೆಗಳಿವೆ ಎಂಬುದನ್ನು ಮುಂದೆ ನೋಡಲಿರುವೆವು). ಆದರೆ, ಆಡುಪದಗಳು ಮತ್ತು ತೋರುಪದಗಳು ಮಾತ್ರವಲ್ಲದೆ ಬೇರೆಯೂ ಹಲವು ಪದಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಲು ಅವನ್ನು ಉಂಟುಮಾಡಿರುವ ಆಡುಗ ಯಾರು ಎಂಬುದನ್ನು, ಮತ್ತು ಅದನ್ನು ಉಂಟುಮಾಡಿರುವ ಜಾಗ ಮತ್ತು ಹೊತ್ತುಗಳು ಯಾವುವು ಎಂಬುದನ್ನು ತಿಳಿದಿರಬೇಕಾಗುತ್ತದೆ. ನಿನ್ನೆ, ನಾಳೆ, ಹಗೆ, ನಂಟ, ಅಣ್ಣ, ಅಕ್ಕ ಮೊದಲಾದ ಹಲವು ಬಗೆಯ ಪದಗಳು ಇಂತಹವು: (1ಕ) ನಿನ್ನೆ ರಾಜು ಊಟಮಾಡಿರಲಿಲ್ಲ. (1ಚ) ಅಣ್ಣ ಇವತ್ತು ಮನೆಗೆ ತಡವಾಗಿ ಬರುತ್ತಾನೆ. (1ಕ) ಸೊಲ್ಲನ್ನು ಹೇಳಿದುದು ಯಾವಾಗ ಎಂಬುದನ್ನು ತಿಳಿಯದೆ ರಾಜು ಊಟಮಾಡದಿರುವುದು ಯಾವಾಗ ಎಂಬುದನ್ನು ತಿಳಿಯಲು ಬರುವುದಿಲ್ಲ. ಇದೇ ರೀತಿಯಲ್ಲಿ ಮನೆಗೆ ತಡವಾಗಿ ಬರುವುದು ಯಾರು (ಯಾರ ಅಣ್ಣ) ಎಂಬುದನ್ನು ತಿಳಿಯಲು ಆ ಸೊಲ್ಲಿನ ಆಡುಗ ಯಾರು ಎಂಬುದನ್ನು ತಿಳಿಯಬೇಕಾಗುತ್ತದೆ. ಇಂತಹ ಪದಗಳನ್ನೆಲ್ಲ ಒಟ್ಟಾಗಿ ತೋರ್ಕೆಯ ಪದಗಳೆಂದು ಕರೆಯಬಹುದು; ಅವನ್ನು ಬಳಸಿರುವ ಸೊಲ್ಲುಗಳ ಹುರುಳನ್ನು ತಿಳಿಯಲು ಆ ಸೊಲ್ಲುಗಳಲ್ಲಿ ಬಂದಿರುವ ಪದಗಳ ಹುರುಳನ್ನು ಮಾತ್ರವೇ ತಿಳಿದರೆ ಸಾಕಾಗುವುದಿಲ್ಲ; ಆ ಸೊಲ್ಲುಗಳನ್ನು ಉಂಟುಮಾಡಿರುವ ವ್ಯಕ್ತಿ, ಆತನ ಜಾಗ, ಹೊತ್ತು ಮೊದಲಾದುವನ್ನೂ ತಿಳಿದಿರಬೇಕಾಗುತ್ತದೆ. ಆಡುಪದಗಳು ಈ ರೀತಿ ತೋರ್ಕೆಯ ಪದಗಳಾಗಿರುವಲ್ಲಿ ತೋರುಪದಗಳನ್ನು ಹೋಲುತ್ತಿವೆಯಾದರೂ, ಬೇರೆ ಹಲವು ವಿಶಯಗಳಲ್ಲಿ ಅವುಗಳಿಂದ ತೀರ ಬೇರಾಗಿವೆ. ಎತ್ತುಗೆಗಾಗಿ, ತೋರುಪದಗಳು ಅವು ಬಳಕೆಯಾಗಿರುವ ಸೊಲ್ಲಿನ ಪಾಂಗನ್ನು ಗುರುತಿಸುತ್ತವೆ, ಆದರೆ ಆಡುಪದಗಳು ಗುರುತಿಸುವುದಿಲ್ಲ.

(1ಕ) ಇವನು ಊಟಮಾಡಲಿಲ್ಲ. (1ಚ) ನಾನು ಊಟಮಾಡಲಿಲ್ಲ. (1ಟ) ಈ ಹುಡುಗ ಊಟಮಾಡಲಿಲ್ಲ. (1ಕ)ದಲ್ಲಿ ಬಂದಿರುವ ಇವನು ಎಂಬ ತೋರುಪದ ಊಟಮಾಡದಿರುವ ವ್ಯಕ್ತಿಯನ್ನು ಗುರುತಿಸುತ್ತದೆ; ಆತ ಯಾರು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮಾತ್ರ, ಆಡುಗನ ಹತ್ತಿರ ಯಾರಿದ್ದಾರೆ, ಮತ್ತು ಆತ ಯಾರನ್ನು ತೋರಿಸುತ್ತಿದ್ದಾನೆ ಎಂಬುದನ್ನು ತಿಳಿದಿರಬೇಕು, ಅಶ್ಟೆ. ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ನಾನು ಎಂಬ ಆಡುಪದ ಊಟಮಾಡದವನು ಆಡುಗ ಎಂದಶ್ಟೇ ತಿಳಿಸುತ್ತದಲ್ಲದೆ, ಅದು ಯಾರು ಎಂಬುದನ್ನು ತಿಳಿಸುವುದಿಲ್ಲ. ತೋರುಪದಗಳಿಗೂ ಆಡುಪದಗಳಿಗೂ ನಡುವಿರುವ ಈ ವ್ಯತ್ಯಾಸ (1ಟ)ದಲ್ಲಿ ಇನ್ನಶ್ಟು ಸರಿಯಾಗಿ ತಿಳಿಯುತ್ತದೆ; ಈ ಹುಡುಗ ಎಂಬಲ್ಲಿ ಈ ಎಂಬ ತೋರುಪದದೊಂದಿಗೆ ಊಟಮಾಡದವರು ಯಾರು ಎಂಬುದನ್ನು ಗುರುತಿಸುವ ಹುಡುಗ ಎಂಬ ಪದವೂ ಬಂದಿದೆ. ಆದರೆ, ಆಡುಪದಗಳೊಂದಿಗೆ ಈ ರೀತಿ ಪಾಂಗುಗಳನ್ನು ನೇರವಾಗಿ ಗುರುತಿಸಬಲ್ಲ ಪದಗಳು ಒಂದೇ ಪದಕಂತೆಯಲ್ಲಿ ಬಳಕೆಯಾಗಲಾರವು. ಆಡುಪದಗಳಿಗೂ ತೋರುಪದಗಳಿಗೂ ನಡುವಿರುವ ಇನ್ನೊಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ತೋರುಪದಗಳಲ್ಲೆಲ್ಲ ಎರಡೆರಡು ಅಂಗಗಳಿರುತ್ತವೆ; ಇವುಗಳಲ್ಲಿ ಮೊದಲನೆಯದು ಅವುಗಳ ಕೆಲಸ ಎಂತಹದು ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವುಗಳ ಹರವು ಎಂತಹದು ಎಂಬುದನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಇಲ್ಲಿ ಎಂಬ ತೋರುಪದದಲ್ಲಿ ಇ ಮತ್ತು ಲ್ಲಿ ಎಂಬ ಎರಡು ಅಂಗಗಳಿವೆ; ಅದನ್ನು ಅಲ್ಲಿ ಮತ್ತು ಎಲ್ಲಿ ಎಂಬ ಬೇರೆ ಎರಡು ತೋರುಪದಗಳೊಂದಿಗೆ ಹೋಲಿಸಿದಾಗ, ಅದರ ಈ ಮೊದಲ ಅಂಗ ಹೇಗೆ ಅದು ನಡೆಸಬೇಕಾಗಿರುವ ಕೆಲಸವನ್ನು ತಿಳಿಸುತ್ತದೆ ಎಂಬುದು ಗೊತ್ತಾಗುತ್ತದೆ, ಮತ್ತು ಅದನ್ನು ಇಂದು, ಇಶ್ಟು, ಇವನು ಮೊದಲಾದ ಬೇರೆ ಕೆಲವು ತೋರುಪದಗಳೊಂದಿಗೆ ಹೋಲಿಸಿದಾಗ, ಅದರ ಈ ಎರಡನೆಯ ಅಂಗ ಹೇಗೆ ಅದರ ಹರವನ್ನು ತಿಳಿಸುತ್ತದೆ ಎಂಬುದು ಗೊತ್ತಾಗುತ್ತದೆ. ಆಡುಪದಗಳಿಗೂ ತೋರುಪದಗಳಿಗೂ ನಡುವೆ ಬೇರೆಯೂ ಹಲವು ವ್ಯತ್ಯಾಸಗಳಿವೆ; ಈ ವ್ಯತ್ಯಾಸಗಳನ್ನು ಹೆಚ್ಚು ವಿವರವಾಗಿ (9.4)ರಲ್ಲಿ ಕೊಡಲಾಗಿದೆ. ಈ ರೀತಿ ಅವೆರಡರ ನಡುವೆ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳೇ ಹೆಚ್ಚು ಕಾಣಿಸುವ ಕಾರಣ, ಅವೆರಡನ್ನೂ ಒಂದೇ

ಗುಂಪಿನಲ್ಲಿರಿಸುವ ಬದಲು ಎರಡು ಬೇರೆ ಬೇರೆ ಗುಂಪುಗಳಲ್ಲಿ ಇರಿಸುವುದೇ ಸರಿಯೆಂದು ಇಲ್ಲಿ ತೀರ್ಮಾನಿಸಲಾಗಿದೆ.

9.1.5 ಸೊಲ್ಲನ್ನು ಉಂಟುಮಾಡುವಲ್ಲಿ ಬಗೆಗಳು

ಆಡುಪದಗಳು ಅವು ಬಳಕೆಯಾಗಿರುವ ಸೊಲ್ಲು ತಿಳಿಸುವ ಎಸಕ ಇಲ್ಲವೇ ಇರುಹದ ಒಂದು ಪಾಂಗಿಗೂ ಅದನ್ನು ಉಂಟುಮಾಡುವ ಕೆಲಸದಲ್ಲಿ ತೊಡಗಿರುವ ಒಂದು ಪಾಂಗಿಗೂ ನಡುವಿರುವ ಸಂಬಂದವನ್ನು ತಿಳಿಸುತ್ತವೆ ಎಂಬುದನ್ನು ಮೇಲೆ ನೋಡಿರುವೆವು. ಎತ್ತುಗೆಗಾಗಿ, ನಾನು ಒಂದು ಕತೆ ಬರೆದೆ ಎಂಬ ಸೊಲ್ಲಿನಲ್ಲಿ ಬಂದಿರುವ ನಾನು ಎಂಬ ಆಡುಪದ ಆ ಸೊಲ್ಲು ತಿಳಿಸುವಂತಹ ಕತೆ ಬರೆಯುವ ಎಸಕದ ಮಾಡುಗ ಪಾಂಗಿಗೂ ಆ ಸೊಲ್ಲಿನ ಆಡುಗನಿಗೂ ನಡುವಿರುವ ಸಂಬಂದವನ್ನು, ಎಂದರೆ, ಆ ಸೊಲ್ಲಿನ ಆಡುಗನೇ ಕತೆ ಬರೆಯುವ ಎಸಕದ ಮಾಡುಗ ಎಂಬುದನ್ನು, ತಿಳಿಸುತ್ತದೆ. ಒಂದು ಸೊಲ್ಲಿನ ಒಳಸೊಲ್ಲಾಗಿ ಇನ್ನೊಂದು ಸೊಲ್ಲು ಬಂದಿರುವಲ್ಲಿ ಹೊರಸೊಲ್ಲನ್ನು ಉಂಟುಮಾಡುವ ಪಾಂಗುಗಳು ಒಳಸೊಲ್ಲನ್ನು ಉಂಟುಮಾಡುವ ಪಾಂಗುಗಳಿಂದ ಬೇರಾಗಿರಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನಾನು ಬರುವುದಿಲ್ಲವೆಂದು ನಿನ್ನೊಡನೆ ನಿನ್ನೆಯೇ ಹೇಳಿದ್ದೆ. (1ಚ) ನಾನು ಬರುವುದಿಲ್ಲವೆಂದು ರಾಜು ನನ್ನ ಹತ್ತಿರ ಹೇಳಿದ್ದ. (1ಟ) ನಾನು ಬರುವುದಿಲ್ಲವೆಂದು ರಾಜು ಆತನ ಹೆಂಡತಿಯ ಹತ್ತಿರ ಹೇಳಿದ್ದ. (1ಕ)ದಲ್ಲಿ ನಾನು ಬರುವುದಿಲ್ಲ ಎಂಬುದು ಒಳಸೊಲ್ಲಾಗಿ ಬಂದಿದೆ, ಮತ್ತು ಎಂದು ನಿನ್ನೊಡನೆ ನಿನ್ನೆಯೀ ಹೇಳಿದ್ದೆ ಎಂಬುದು ಹೊರಸೊಲ್ಲಾಗಿ ಬಂದಿದೆ; ಈ ಎರಡು ಸೊಲ್ಲುಗಳ ನಡುವೆ ಆಡುಗ ಇಲ್ಲವೇ ಕೇಳುಗರಲ್ಲಿ ವ್ಯತ್ಯಾಸವಿಲ್ಲ; ಅವುಗಳ ಹೊತ್ತಿನಲ್ಲಿ ಮಾತ್ರ ವ್ಯತ್ಯಾಸವಿದೆ. ಇದಕ್ಕೆ ಬದಲು, (1ಚ) ಸೊಲ್ಲಿನಲ್ಲಿ ನಾನು ಬರುವುದಿಲ್ಲ ಎಂಬ ಒಳಸೊಲ್ಲಿನ ಕೇಳುಗ ಎಂದು ರಾಜು ಹೇಳಿದ್ದ ಎಂಬ ಹೊರಸೊಲ್ಲಿನಲ್ಲಿ ಆಡುಗನಾಗಿದ್ದಾನೆ. (1ಟ)ದಲ್ಲಿಯೂ ಒಳಸೊಲ್ಲಿನ ಆಡುಗ ಮತ್ತು ಕೇಳುಗರು ಹೊರಸೊಲ್ಲಿನಲ್ಲಿ ಬೇರೊಬ್ಬರಾಗಿದ್ದಾರೆ. ಒಳಸೊಲ್ಲು ಮತ್ತು ಹೊರಸೊಲ್ಲುಗಳ ಆಡುಗ ಇಲ್ಲವೇ ಕೇಳುಗರು ಈ ರೀತಿ ಬೇರೆ ಬೇರಾಗಿರುವಲ್ಲಿ ಕೆಲವೊಮ್ಮೆ ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:

(1ಕ) ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆಂದು ರಾಜು ಹೇಳಿದ್ದ. (1ಚ) ನೀವು ಬೇಗನೆ ಬರಬೇಕೆಂದು ಶಾಮರಾಯರು ಹರಿಯ ಹತ್ತಿರ ಹೇಳಿದ್ದಾರೆ. (1ಕ) ಸೊಲ್ಲಿನಲ್ಲಿ ನಿಜಕ್ಕೂ ರಾಜು ಹೇಳಿರುವುದು ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ ಎಂಬುದಾಗಿರಬಹುದು, ಇಲ್ಲವೇ ಎಲ್ಲರೂ ನಿನ್ನನ್ನು ಹೊಗಳುತ್ತಿದ್ದಾರೆ ಎಂಬುದೂ ಆಗಿರಬಹುದು. (1ಚ)ದಲ್ಲೂ ಇಂತಹದೇ ಇಪ್ಪುರುಳು ಕಾಣಿಸಿಕೊಳ್ಳುತ್ತದೆ; ಅದರಲ್ಲಿ ಬಂದಿರುವ ನೀವು ಎಂಬುದು ಹರಿಯ ಕುರಿತಾಗಿರಬಹುದು, ಇಲ್ಲವೇ ಹೊರಸೊಲ್ಲಿನ ಕೇಳುಗನಾಗಿರಬಹುದು. ಈ ವ್ಯತ್ಯಾಸವನ್ನು ಮಾತಿನಲ್ಲಿ ಕಾಣಿಸಲು ಬರುವುದಿಲ್ಲವಾದರೂ ಬರಹದಲ್ಲಿ ಕಾಣಿಸಲು ಬರುತ್ತದೆ: (1ಕ) “ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ” ಎಂದು ರಾಜು ಹೇಳಿದ್ದ. (1ಚ) “ಎಲ್ಲರೂ ನಿನ್ನನ್ನು ಹೊಗಳುತ್ತಿದ್ದಾರೆ” ಎಂದು ರಾಜು ಹೇಳಿದ್ದ. (2ಕ) “ನೀವು ಬೇಗನೆ ಬರಬೇಕು” ಎಂದು ಶಾಮರಾಯರು ಹರಿಯ ಹತ್ತಿರ ಹೇಳಿದ್ದಾರೆ. (2ಚ) “ಅವರು ಬೇಗನೆ ಬರಬೇಕು” ಎಂದು ಶಾಮರಾಯರು ಹರಿಯ ಹತ್ತಿರ ಹೇಳಿದ್ದಾರೆ. ಒಳಸೊಲ್ಲನ್ನು ಎತ್ತುಗೆಯ ಗುರುತುಗಳಿಂದ ಬೇರ್ಪಡಿಸಿದಲ್ಲಿ, ಆ ಸೊಲ್ಲಿನ ಆಡುಗ ಮತ್ತು ಕೇಳುಗರನ್ನೇ ಆಡುಪದಗಳು ತಿಳಿಸುತ್ತವೆ; ಇದಕ್ಕೆ ಬದಲು, ಅದನ್ನು ಆ ರೀತಿ ಬೇರ್ಪಡಿಸದಿದ್ದಲ್ಲಿ, ಅವು ಒಳಸೊಲ್ಲಿನ ಆಡುಗ ಇಲ್ಲವೇ ಕೇಳುಗರನ್ನು ತಿಳಿಸಬಹುದು, ಇಲ್ಲವೇ ಹೊರಸೊಲ್ಲಿನ ಆಡುಗ ಇಲ್ಲವೇ ಕೇಳುಗರನ್ನೂ ತಿಳಿಸಬಹುದು. ಒಳಸೊಲ್ಲನ್ನು ಈ ರೀತಿ ಬೇರ್ಪಡಿಸದಿರುವ ಕೆಲವು ಬಳಕೆಗಳಲ್ಲಿ ಬೇರೊಬ್ಬನೆಂದು ತಿಳಿಸುವ ತಾನು ಪದವನ್ನು ಬಳಸಿಯೂ ಇಂತಹ ಇಪ್ಪುರುಳನ್ನು ಹೋಗಲಾಡಿಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (1ಕ) ರಾಜು ಕಾಡಿನಲ್ಲಿ ಬರುವಾಗ ನನಗೆ ಒಂದು ಹುಲಿ ಕಾಣಿಸಿತೆಂದು ಹೇಳಿದ. (1ಚ) ರಾಜು ಕಾಡಿನಲ್ಲಿ ಬರುವಾಗ ತನಗೆ ಒಂದು ಹುಲಿ ಕಾಣಿಸಿತೆಂದು ಹೇಳಿದ.

(1ಕ) ಸೊಲ್ಲಿನಲ್ಲಿ ಬಂದಿರುವ ನನಗೆ ಎಂಬುದು ಒಳಸೊಲ್ಲಿನ ಆಡುಗನನ್ನಾಗಲಿ ಇಲ್ಲವೇ ಹೊರಸೊಲ್ಲಿನ (ಎಂದರೆ ಇಡೀ ಸೊಲ್ಲಿನ) ಆಡುಗನನ್ನಾಗಲಿ ಗುರುತಿಸಬಲ್ಲುದು; ಆದರೆ, (1ಚ) ಸೊಲ್ಲಿನಲ್ಲಿ ಬಂದಿರುವ ತನಗೆ ಎಂಬುದು ಒಳಸೊಲ್ಲಿನ ಆಡುಗನನ್ನು ಮಾತ್ರವೇ ಗುರುತಿಸಬಲ್ಲುದಲ್ಲದೆ ಹೊರಸೊಲ್ಲಿನ ಆಡುಗನನ್ನು ಗುರುತಿಸಲಾರದು. ಸೊಲ್ಲಿನ ಉಂಟುಮಾಡುವಲ್ಲಿ ಕಾಣಿಸುವಂತಹ ಇಂತಹ ಹೆಚ್ಚಿನ ಬಗೆಗಳನ್ನು ಹೇಗೆ ತಿಳಿಸಲಾಗುತ್ತದೆ ಎಂಬುದನ್ನು ಕೆಳಗೆ (9.2.4-7)ರಲ್ಲಿ ವಿವರಿಸಲಾಗಿದೆ.

9.2 ಆಡುಪದಗಳ ಕೆಲಸ

Eke →

ಮೇಲೆ 9.1ರಲ್ಲಿ ತಿಳಿಸಿದ ಹಾಗೆ, ಸೊಲ್ಲುಗಳಲ್ಲಿ ಬರುವ ಒಂದು ಪಾಂಗು (ಅದರ ಆಗುಗ, ಮಾಡುಗ, ಈಡು, ಗುರಿ, ಸುರು, ಜಾಗ ಮೊದಲಾದವುಗಳಲ್ಲಿ ಒಂದು) ಅದರ ಆಡುಗ, ಕೇಳುಗ ಇಲ್ಲವೇ ಬೇರೊಬ್ಬ ಎಂಬುದಾಗಿ ಆ ಪಾಂಗಿಗೂ ಸೊಲ್ಲಿನ ಉಂಟುಮಾಡುವಿಕೆಯಲ್ಲಿ ತೊಡಗಿರುವ ಪಾಂಗಿಗೂ ನಡುವಿರುವ ಸಂಬಂದವನ್ನು ತಿಳಿಸುವುದೇ ಆಡುಪದಗಳ ಮುಕ್ಯ ಕೆಲಸವಾಗಿದೆ: (1ಕ) ನಾನು ರಾಜುವಿಗೆ ಒಂದು ಪುಸ್ತಕ ಕೊಟ್ಟಿದ್ದೆ. (1ಚ) ರಾಜು ನನ್ನನ್ನು ಇವತ್ತು ಅವನ ಮನೆಗೆ ಕರೆದಿದ್ದಾನೆ. (1ಟ) ರಾಜು ನನಗೆ ಒಂದು ಪುಸ್ತಕ ಕೊಟ್ಟಿದ್ದ. (1ತ) ಅವನು ನನ್ನಿಂದ ಅಗಲಿದ. (1ಪ) ಅವನಿಗೆ ನನ್ನಲ್ಲಿ ನಂಬಿಕೆಯಿದೆ. (1ಕ)ದಲ್ಲಿ ನಾನು ಪದವನ್ನು ಪತ್ತುಗೆ ಒಟ್ಟಿನ ನೆರವಿಲ್ಲದೆ ಬಳಸಲಾಗಿದ್ದು, ಆ ಸೊಲ್ಲು ತಿಳಿಸುವಂತಹ ಕೊಡು ಎಂಬ ಎಸಕದ ಮಾಡುಗ ಪಾಂಗು ಆ ಸೊಲ್ಲಿನ ಆಡುಗ ಎಂಬುದನ್ನು ಅದು ತಿಳಿಸುತ್ತದೆ; ಇದಕ್ಕೆ ಬದಲು, (1ಚ-ಪ) ಸೊಲ್ಲುಗಳಲ್ಲಿ ಅದೇ ಪದವನ್ನು ಅನ್ನು, ಗೆ, ಇಂದ, ಮತ್ತು ಅಲ್ಲಿ ಎಂಬ ಪತ್ತುಗೆ ಒಟ್ಟುಗಳೊಂದಿಗೆ ಬಳಸಲಾಗಿದ್ದು, ಈ ಸೊಲ್ಲುಗಳು ತಿಳಿಸುವ ಎಸಕ ಇಲ್ಲವೇ ಇರುಹಗಳಲ್ಲಿ ಅವುಗಳ ಈಡು, ಗುರಿ, ಸುರು, ಮತ್ತು ಜಾಗ ಪಾಂಗುಗಳಾಗಿ ಆ ಸೊಲ್ಲುಗಳ ಆಡುಗರು ತೊಡಗಿಕೊಂಡಿದ್ದಾರೆ ಎಂಬುದನ್ನು ಅದು ತಿಳಿಸುತ್ತದೆ. ಈ ರೀತಿ, ನಾನು ಎಂಬ ಆಡುಪದ ಅದರೊಂದಿಗೆ ಬರುವ ಪತ್ತುಗೆ ಒಟ್ಟಿನ ನೆರವಿನಿಂದ ಅದನ್ನು ಬಳಸಿರುವ ಸೊಲ್ಲು ಯಾವ ಎಸಕ ಇಲ್ಲವೇ ಇರುಹವನ್ನು ತಿಳಿಸುತ್ತದೆಯೋ ಅದರಲ್ಲಿ ಸೊಲ್ಲಿನ ಆಡುಗ ಎಂತಹ ಪಾಂಗಾಗಿ ತೊಡಗಿಕೊಂಡಿದೆ ಎಂಬುದನ್ನು ತಿಳಿಸುತ್ತದೆ; ಆದರೆ, ಸೊಲ್ಲಿನ ಆಡುಗ ನಿಜಕ್ಕೂ ಯಾರು ಎಂಬುದನ್ನು ಈ ಆಡುಪದ ತಿಳಿಸುವುದಿಲ್ಲ. ಇದನ್ನು ತಿಳಿಯಬೇಕಿದ್ದಲ್ಲಿ ಆ ಸೊಲ್ಲನ್ನು ಆಡಿದವರು ಯಾರು ಎಂಬುದನ್ನು ಗಮನಿಸಬೇಕಾಗುತ್ತದೆ. ನೀನು ಎಂಬ ಆಡುಪದದ ಬಳಕೆಯೂ ಇಂತಹದೇ; ಅದು ಒಂದು ಸೊಲ್ಲಿನ ಕೇಳುಗ ಆ ಸೊಲ್ಲು ತಿಳಿಸುವ ಎಸಕ ಇಲ್ಲವೇ ಇರುಹದಲ್ಲಿ ಯಾವ ಪಾಂಗಾಗಿ

ತೊಡಗಿಕೊಂಡಿದೆ ಎಂಬುದನ್ನು ಮಾತ್ರ ತಿಳಿಸುತ್ತದಲ್ಲದೆ, ನಿಜಕ್ಕೂ ಆ ಕೇಳುಗ ಯಾರು ಎಂಬುದನ್ನು ತಿಳಿಸುವುದಿಲ್ಲ: (1ಕ) ನೀನು ಮನೆಗೆ ಹೋಗು. (1ಚ) ರಾಜು ನಿನ್ನನ್ನು ಕರೆಯುತ್ತಿದ್ದಾನೆ. (1ಟ) ಜಾನಕಿ ನಿನಗೊಂದು ಪುಸ್ತಕ ಕೊಟ್ಟಿದ್ದಾಳೆ. (1ಕ)ದಲ್ಲಿ ಬಂದಿರುವ ನೀನು ಪದ ಮನೆಗೆ ಹೋಗುವ ಎಸಕದಲ್ಲಿ ಆ ಸೊಲ್ಲಿನ ಕೇಳುಗ ಮಾಡುಗನಾಗಿರಬೇಕಾಗಿದೆ ಎಂದಶ್ಟೇ ತಿಳಿಸುತ್ತದಲ್ಲದೆ, ಆ ಕೇಳುಗ ನಿಜಕ್ಕೂ ಯಾರು ಎಂಬುದನ್ನು ತಿಳಿಸುವುದಿಲ್ಲ. ಇದೇ ರೀತಿಯಲ್ಲಿ, ರಾಜು ಕರೆಯುತ್ತಿರುವುದು ಸೊಲ್ಲಿನ ಕೇಳುಗನನ್ನು ಎಂಬುದನ್ನಶ್ಟೇ (1ಚ) ಸೊಲ್ಲಿನಲ್ಲಿ ಬಂದಿರುವ ನಿನ್ನನ್ನು ಪದ ತಿಳಿಸುತ್ತದಲ್ಲದೆ, ಆ ಕೇಳುಗ ಯಾರು ಎಂಬುದನ್ನು ಅದು ತಿಳಿಸುವುದಿಲ್ಲ. (1ಟ) ಸೊಲ್ಲಿನಲ್ಲೂ ಹೀಗೆಯೇ. ಹಾಗಾಗಿ, ಈ ಸೊಲ್ಲುಗಳನ್ನು ಅವುಗಳ ಆಡುಗರು ಯಾರೊಂದಿಗೆ ಆಡುತ್ತಿದ್ದಾರೆ ಎಂಬುದನ್ನು ಗಮನಿಸದೆ ಅವುಗಳಲ್ಲಿ ಬಂದಿರುವ ನೀನು ಪದ ಅವು ತಿಳಿಸುವ ಎಸಕಗಳಲ್ಲಿ ಯಾವ ವ್ಯಕ್ತಿಯ ತೊಡಗುವಿಕೆಯನ್ನು ತಿಳಿಸುತ್ತದೆ ಎಂಬುದನ್ನು ತಿಳಿಯಲು ಬರುವುದಿಲ್ಲ. ತಾನು ಪದದ ಬಳಕೆ ಇವೆರಡರ ಬಳಕೆಯಿಂದ ತುಸು ಮಟ್ಟಿಗೆ ಬೇರಾಗಿದೆ; ಅದು ತಿಳಿಸುವ ಬೇರೊಬ್ಬ ಎಂಬ ಪಾಂಗು ನಿಜಕ್ಕೂ ಯಾರು ಎಂಬುದನ್ನು ಆ ಪದವೇ ನೇರವಾಗಿ ತಿಳಿಸುವುದಿಲ್ಲವಾದರೂ, ಸಾಮಾನ್ಯವಾಗಿ ಅದೇ ಸೊಲ್ಲಿನಲ್ಲಿ ಬರುವ ಬೇರೊಂದು ಪದ ಇಲ್ಲವೇ ಪದಕಂತೆ ಅದನ್ನು ತಿಳಿಸುತ್ತಿರಬೇಕಾಗುತ್ತದೆ. (1ಕ) ತಾನು ಇಶ್ಟು ದೊಡ್ಡ ಕೆಲಸವನ್ನು ನಡೆಸಬಹುದೆಂದು ರಾಜುವಿಗೆ ಯಾವತ್ತೂ ಅನಿಸಿರಲಿಲ್ಲ. (1ಚ) ರಾಜುವಿಗೆ ತನ್ನಲ್ಲೂ ನಂಬಿಕೆಯಿಲ್ಲ. (1ಟ) ತನ್ನನ್ನು ಯಾರೂ ಮಾತನಾಡಿಸಬಾರದೆಂದು ರಾಜು ಮೊದಲೇ ಹೇಳಿಬಿಟ್ಟಿದ್ದ. (1ಕ)ದಲ್ಲಿ ಬಂದಿರುವ ತಾನು ಪದ ಆ ಸೊಲ್ಲು ತಿಳಿಸುವ ಎಸಕದ ಮಾಡುಗ ಪಾಂಗು ಅದರ ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಒಬ್ಬ ವ್ಯಕ್ತಿ ಎಂದಶ್ಟೇ ತಿಳಿಸುತ್ತದಲ್ಲದೆ, ಅದು ಯಾರು ಎಂಬುದನ್ನು ತಿಳಿಸುವುದಿಲ್ಲ; ಆದರೆ, ಅದೇ ಸೊಲ್ಲಿನ ಹೊರಸೊಲ್ಲಿನಲ್ಲಿ ಬಂದಿರುವ ರಾಜುವಿಗೆ ಎಂಬ ಹೆಸರುಪದ ಆ ವ್ಯಕ್ತಿ ಯಾರು ಎಂಬುದನ್ನು ಗುರುತಿಸಿ ಹೇಳುತ್ತದೆ; (1ಚ-ಟ) ಸೊಲ್ಲುಗಳಲ್ಲೂ ಹೀಗೆಯೇ.

ತಾನು ಪದಕ್ಕೂ ಉಳಿದ ಎರಡು ಆಡುಪದಗಳಿಗೂ ನಡುವಿರುವ ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಯಾವುದೇ ವ್ಯಕ್ತಿಯೂ ಈ ಬೇರೊಬ್ಬನಾಗಿರಬಹುದು; ಹಾಗಾಗಿ, ತಾನು ಪದವನ್ನು ಬಳಸುವಾಗಲೆಲ್ಲ ಆಡುಗನು ತನ್ನ ಮನಸ್ಸಿನಲ್ಲಿ ಯಾರಿದ್ದಾರೆ ಎಂಬುದನ್ನು ತಿಳಿಸುತ್ತಿರಬೇಕಾಗುತ್ತದೆ; ಇಲ್ಲವಾದರೆ, ಅದು ಯಾರು ಎಂಬುದು ಕೇಳುಗನಿಗೆ ತಿಳಿಯಲಾರದು. ಮೇಲೆ 9.1ರಲ್ಲಿ ತಿಳಿಸಿದ ಹಾಗೆ, ಆಡುಪದಗಳ ಮೂಲಕ ಅವು ತಿಳಿಸುವ ಪಾಂಗನ್ನು ನೇರವಾಗಿ ಗುರುತಿಸದಿರಲು ಕಾರಣವೇನೆಂದರೆ, ಅವನ್ನು ಮಾತಿನಲ್ಲಿ ಬಳಸುತ್ತಿರುವಾಗ ಅವು ಗುರುತಿಸಬೇಕಾಗಿರುವ ವ್ಯಕ್ತಿಗಳು ಬದಲಾಗುತ್ತಲೇ ಇರುತ್ತವೆ; ಒಂದು ಸೊಲ್ಲಿನ ಆಡುಗನಾಗಿದ್ದ ವ್ಯಕ್ತಿ ಮುಂದಿನ ಸೊಲ್ಲಿನ ಕೇಳುಗನಾಗಬಹುದು, ಮತ್ತು ಕೇಳುಗನಾಗಿದ್ದ ವ್ಯಕ್ತಿ ಆಡುಗನಾಗಬಹುದು, ಇಲ್ಲವೇ ಬೇರೊಬ್ಬನಾಗಬಹುದು. ಇಂತಹ ಮಾರ್ಪಾಡು ನಡೆಯುವುದನ್ನು ಸೂಳುನುಡಿಗಳಲ್ಲಿ ತುಂಬಾ ಚನ್ನಾಗಿ ಕಾಣಬಹುದು: (1ಕ) ನಿನ್ನಮ್ಮ ಕರೆಯುತ್ತಿದ್ದಾಳೆ; ಬೇಗ ಹೋಗು. (1ಚ) ನೀನೂ ಬಾ; ಇಬ್ಬರೂ ಒಟ್ಟಿಗೆ ಹೋಗೋಣ. (1ಟ) ನಾನು ಯಾಕೆ? ಕರೆದುದು ನಿನ್ನನ್ನಲ್ಲವೇ? ಮೇಲಿನ ಎತ್ತುಗೆಗಳನ್ನು ಒಂದೇ ಸೂಳುನುಡಿಯ ಅಂಗಗಳೆಂದು ತಿಳಿಯಬಹುದು; ಈ ಮೂರು ಅಂಗಗಳಲ್ಲೂ (1ಕ-ಟಗಳಲ್ಲೂ) ನೀನು ಎಂಬ ಆಡುಪದ ಬಂದಿದೆ; ಆದರೆ, ಈ ಪದ ತಿಳಿಸುವ ಕೇಳುಗರು ಒಬ್ಬರೇ ಅಲ್ಲ; ಯಾಕೆಂದರೆ, (1ಕ)ದಲ್ಲಿ ಕೇಳುಗನಾಗಿದ್ದ ವ್ಯಕ್ತಿ (1ಚ)ದಲ್ಲಿ ಆಡುಗನಾಗಿ, ಮತ್ತು (1ಟ)ದಲ್ಲಿ ತಿರುಗಿ ಕೇಳುಗನಾಗಿ ಬದಲಾಗಿರುವುದನ್ನು ಕಾಣಬಹುದು; ಇದೇ ರೀತಿಯಲ್ಲಿ, (1ಕ)ದಲ್ಲಿ ಆಡುಗನಾಗಿದ್ದ ವ್ಯಕ್ತಿ (1ಚ)ದಲ್ಲಿ ಕೇಳುಗನಾಗಿ, ಮತ್ತು (1ಟ)ದಲ್ಲಿ ತಿರುಗಿ ಆಡುಗನಾಗಿ ಬದಲಾಗಿರುವುದನ್ನು ಕಾಣಬಹುದು. ಈ ರೀತಿ, ಸೊಲ್ಲುಗಳ ಆಡುಗ ಮತ್ತು ಕೇಳುಗರಾಗಿ ಬರುವ ವ್ಯಕ್ತಿಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದರೂ ಅವರನ್ನು ತಿಳಿಸುವ ನಾನು ಮತ್ತು ನೀನು ಎಂಬ ಆಡುಪದಗಳಲ್ಲಿ ಯಾವ ಬದಲಾವಣೆಗಳೂ ನಡೆಯುವುದಿಲ್ಲ; ಉದ್ದಕ್ಕೂ ನಾನು ಎಂಬುದು ಸೊಲ್ಲುಗಳ ಆಡುಗನನ್ನು, ಅದು ಯಾರೇ ಇರಲಿ, ತಿಳಿಸುತ್ತಿರುತ್ತದೆ, ಮತ್ತು ನೀನು ಎಂಬುದು ಸೊಲ್ಲುಗಳ ಕೇಳುಗನನ್ನು, ಅದು ಯಾರೇ ಇರಲಿ, ತಿಳಿಸುತ್ತಿರುತ್ತದೆ. ತಾನು ಎಂಬ ಪದವೂ ಇದೇ ರೀತಿಯಲ್ಲಿ ಅದು ತಿಳಿಸುವ ವ್ಯಕ್ತಿಗಳಲ್ಲಿ ಬದಲಾವಣೆಯಾದಾಗ ಬದಲಾಗದಿರುತ್ತದೆ; ಆದರೆ, ನಾನು ಮತ್ತು ನೀನು ಪದಗಳ ಹಾಗೆ ಅದು ತಿಳಿಸುವ ವ್ಯಕ್ತಿ ಸೊಲ್ಲಿನ ಉಂಟುಮಾಡುವಿಕೆಯಲ್ಲಿ

ನೇರವಾಗಿ ತೊಡಗಿಕೊಳ್ಳುವುದಿಲ್ಲವಾದ ಕಾರಣ, ಸೂಳುನುಡಿಗಳಲ್ಲಿ ಅದಕ್ಕೆ ನಾನು ಮತ್ತು ನೀನು ಪದಗಳಿಗಿರುವಂತಹ ಬಳಕೆ ಕಾಣಿಸುವುದಿಲ್ಲ. ಸೊಲ್ಲುಗಳ ಆಡುಗ ಮತ್ತು ಕೇಳುಗರು ಬದಲಾದಾಗಲೂ ಈ ರೀತಿ ಬದಲಾಗದೆ ಉಳಿಯುವ ಕಾರಣ, ಆಡುಪದಗಳನ್ನು ಮಾರಿಕೆಯ ಪದಗಳೆಂದು ಕರೆಯಲಾಗುತ್ತದೆ; ಸೊಲ್ಲು ತಿಳಿಸುವ ಎಸಕದ ಒಂದು ಪಾಂಗಿಗೂ ಸೊಲ್ಲಿನ ಆಡುಗ ಇಲ್ಲವೇ ಕೇಳುಗರಿಗೂ ನಡುವಿರುವ ಸಂಬಂದವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಅವು ಈ ರೀತಿ ಪಾಂಗುಗಳಾಗಿರುವ ವ್ಯಕ್ತಿ ಬದಲಾದಾಗಲೂ ಬದಲಾಗದಿರಬೇಕಾಗುತ್ತದೆ, ಎಂದರೆ ಮಾರಿಕೆಯ ಪದಗಳಾಗಿರಬೇಕಾಗುತ್ತದೆ.

9.2.1 ಮಾರಿಕೆಯ ಪದಗಳು

ಆಡುಪದಗಳು ಗುರುತಿಸಬೇಕಾಗಿರುವ ವ್ಯಕ್ತಿಗಳಲ್ಲಿ ಮಾರ್ಪಾಡುಗಳು ನಡೆಯುತ್ತಾ ಇದ್ದರೂ ಆ ಪದಗಳು ಮಾರ್ಪಡದೆ ಇರುತ್ತವೆ ಎಂಬುದಕ್ಕಾಗಿ ಅವನ್ನು ಮಾರಿಕೆಯ ಪದಗಳೆಂದು ಕರೆಯಲಾಗಿದೆ; ಆದರೆ ಮೇಲೆ ವಿವರಿಸಿದ ಹಾಗೆ, ನಿಜಕ್ಕೂ ಅವು ಸೊಲ್ಲಿನ ಆಡುಗರು, ಕೇಳುಗರು, ಇಲ್ಲವೇ ಬೇರೊಬ್ಬರು ಸೊಲ್ಲು ತಿಳಿಸುವ ಎಸಕದಲ್ಲಿ ಯಾವ ಪಾಂಗುಗಳಾಗಿ ಬಂದಿವೆ ಎಂಬುದನ್ನಶ್ಟೇ ತಿಳಿಸುತ್ತವಲ್ಲದೆ, ಅಂತಹ ಪಾಂಗುಗಳಾಗಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ನೇರವಾಗಿ ಗುರುತಿಸಲು ಹೋಗುವುದಿಲ್ಲ. ಹಾಗಾಗಿ, ಅವಕ್ಕೂ ಪಾಂಗುಗಳಾಗಿ ತೊಡಗಿಕೊಂಡಿರುವ ವ್ಯಕ್ತಿಗಳಿಗೂ ನಡುವೆ ನೇರವಾದ ಸಂಬಂದವಿಲ್ಲದಿರುವುದೇ ಅವು ಈ ರೀತಿ ಮಾರಿಕೆಯ ಪದಗಳಾಗಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಪಾಂಗುಗಳಾಗಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಆಡುಪದಗಳು ನೇರವಾಗಿ ಗುರುತಿಸುವುದಿಲ್ಲವಾದ ಕಾರಣ, ಅವನ್ನು ಗುರುತಿಸುವಲ್ಲಿ ನೆರವಾಗುವಂತಹ ಹಲವು ಬಗೆಯ ನುಡಿತಗಳು ಆಡುಪದಗಳೊಂದಿಗೆ ಬರುವುದಿಲ್ಲ. ವ್ಯಕ್ತಿಗಳ ಪರಿಚೆಯನ್ನು ತಿಳಿಸುವುದು, ಅಳವಿಯನ್ನು ತಿಳಿಸುವುದು, ಮತ್ತು ಅವನ್ನು ನೆಲೆಗೊಳಿಸುವುದು ಎಂಬುದಾಗಿ ಮೂರು ಬಗೆಯ ಕೆಲಸಗಳನ್ನು ನಡೆಸಬಲ್ಲ ನುಡಿತಗಳನ್ನು ಹೆಸರುಪದಗಳೊಂದಿಗೆ ಬಳಸಲಾಗುತ್ತದೆ; ಈ ಮೂರು ಬಗೆಯ ನುಡಿತಗಳೂ ಆಡುಪದಗಳೊಂದಿಗೆ ಬರುವುದಿಲ್ಲ: (1ಕ) ಚಿಕ್ಕ ಹುಡುಗ ಇವತ್ತು ಶಾಲೆಗೆ ಹೋಗಲಿಲ್ಲ. (1ಚ) *ಚಿಕ್ಕ ನಾನು ಇವತ್ತು ಶಾಲೆಗೆ ಹೋಗಲಿಲ್ಲ. (2ಕ) ಮೂವರು ಹುಡುಗರು ಶಾಲೆಗೆ ಹೋಗಲಿಲ್ಲ. (2ಚ) *ಮೂವರು ನಾವು ಶಾಲೆಗೆ ಹೋಗಲಿಲ್ಲ. (3ಕ) ಈ ಹುಡುಗರು ಆಟದಲ್ಲಿ ಚುರುಕಾಗಿದ್ದಾರೆ. (3ಚ) *ಈ ನೀವು ಆಟದಲ್ಲಿ ಚುರುಕಾಗಿದ್ದೀರಿ.

(1ಕ) ಮತ್ತು (2ಕ) ಸೊಲ್ಲುಗಳಲ್ಲಿ ಬಂದಿರುವ ಚಿಕ್ಕ ಮತ್ತು ಮೂವರು ಎಂಬವು ಪಾಂಗುಗಳ ಪರಿಚೆ ಮತ್ತು ಅಳವಿಗಳನ್ನು ತಿಳಿಸುತ್ತವೆ ಮತ್ತು (3ಕ) ಸೊಲ್ಲಿನಲ್ಲಿ ಬಂದಿರುವ ಈ ಎಂಬುದು ಪಾಂಗನ್ನು ನೆಲೆಗೊಳಿಸುತ್ತದೆ; ಈ ಮೂರು ಬಗೆಯ ಪದಗಳನ್ನೂ ಹೆಸರುಪದಗಳೊಂದಿಗೆ ಬಳಸಿದುದರಿಂದಾಗಿ, ಅವು ಗುರುತಿಸುವ ಪಾಂಗುಗಳು ಯಾವುವೆಂಬುದನ್ನು ತಿಳಿಸುವಲ್ಲಿ ಅವಕ್ಕೆ ನೆರವು ದೊರೆತಿದೆ; ಆದರೆ, ಇವನ್ನೇ ಆಡುಪದಗಳೊಂದಿಗೆ ಬಳಸಿರುವ (1ಚ), (2ಚ), ಮತ್ತು (3ಚ) ಸೊಲ್ಲುಗಳು ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು. ಒಬ್ಬ ವ್ಯಕ್ತಿಯ ಗಮನವನ್ನು ಸೆಳೆಯುವುದಕ್ಕಾಗಿ ಗಮನರೂಪಗಳನ್ನು ಬಳಸಲಾಗುತ್ತದೆ; ಹಲವು ಬಗೆಯ ಹೆಸರುಪದಗಳನ್ನು ಈ ರೀತಿ ಅವುಗಳ ಗಮನರೂಪದಲ್ಲಿ ಬಳಸಲು ಬರುತ್ತದೆ: (1ಕ) ಹುಡುಗರೇ, ಗಲಾಟೆ ಮಾಡಬೇಡಿ! (1ಚ) ಅಪ್ಪಾ, ಇದು ಯಾರ ಮನೆ? (1ಟ) ರಾಜು, ಇವುಗಳಲ್ಲಿ ನಿನಗೆ ಯಾವುದು ಬೇಕು? (1ತ) ಏ ಹುಡುಗ, ನಿನಗೆ ಕಿವಿ ಕೇಳಿಸುವುದಲ್ಲವೋ? ಆದರೆ, ಆಡುಪದಗಳು ವ್ಯಕ್ತಿಗಳನ್ನು ಗುರುತಿಸುವುದಿಲ್ಲವಾದ ಕಾರಣ, ಅವನ್ನು ಈ ರೀತಿ ಗಮನರೂಪದಲ್ಲಿ ಬಳಸಲು ಬರುವುದಿಲ್ಲ: (1ಕ) *ನೀನು, ಕೋಣೆಯಿಂದ ಹೊರಗೆ ಬಾ. (1ಚ) *ನೀವು, ಊರಿನಿಂದ ಬಂದುದು ಯಾವಾಗ? (1ಟ) *ಏ ನೀನು, ನಿನಗೆ ಕಿವಿ ಕೇಳಿಸುವುದಿಲ್ಲವೋ? ಆಡುಪದಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಪದಗಳನ್ನು ಮಾರಿಕೆಯ ಪದಗಳೆಂದು ಕರೆಯಲಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೂಳುನುಡಿಯಲ್ಲಿ ಮನೆ ಪದದ ಬಳಕೆಯನ್ನು ಗಮನಿಸಬಹುದು: (1ಕ) ರಾಜು: ನಾನು ಮನೆಗೆ ಹೋಗುತ್ತೇನೆ. ಜಾನಕಿ: ನಾನೂ ಮನೆಗೆ ಹೋಗುತ್ತೇನೆ. (1ಕ)ದ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಮನೆ ಎಂಬುದು ರಾಜುವಿನ ಮನೆಯನ್ನು ತಿಳಿಸುತ್ತದೆ; ಆದರೆ, ಎರಡನೇ ಸೊಲ್ಲಿನಲ್ಲಿ ಬಂದಿರುವ ಅದೇ ಪದ ಜಾನಕಿಯ ಮನೆಯನ್ನು ತಿಳಿಸುತ್ತದೆ. ಇಲ್ಲಿ ಮನೆ ಪದ ತಿಳಿಸುವ ಜಾಗ ಬದಲಾಗಿರುವಾಗಲೂ ಆ ಪದ ಬದಲಾಗದೆ ಉಳಿದಿದೆ. ನಂಟಸ್ತಿಕೆಯನ್ನು ತಿಳಿಸುವ ತಾಯಿ, ತಂದೆ, ಅಣ್ಣ ಮೊದಲಾದುವು, ಬೇರೆ ಬಗೆಯ

ಸಂಬಂದಗಳನ್ನು ತಿಳಿಸುವ ಗೆಳೆಯ, ಹಗೆ, ಮೇಲಾಳು, ಮೇಶ್ಟ್ರು ಮೊದಲಾದುವು, ತೋರ್ಕೆಯ ಹುರುಳಿರುವ ನಿನ್ನೆ, ನಾಳೆ, ಅಲ್ಲಿ, ಹಾಗೆ ಮೊದಲಾದವು ಈ ರೀತಿ ಮಾರಿಕೆಯ ಪದಗಳಾಗಿ ಬಳಕೆಯಾಗುತ್ತವೆ. ಆದರೆ, ಆಡುಪದಗಳಿಗೂ ಇಂತಹ ಬೇರೆ ಬಗೆಯ ಮಾರಿಕೆಯ ಪದಗಳಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ; ವ್ಯಕ್ತಿ, ವಸ್ತು, ದಿನ, ಜಾಗ ಮೊದಲಾದವುಗಳನ್ನು ಗುರುತಿಸುವುದೇ ಅಂತಹ ಪದಗಳ ಮುಕ್ಯ ಕೆಲಸವಾಗಿದೆ; ಈ ಕೆಲಸವನ್ನು ನಡೆಸುವಲ್ಲಿ ನೆರವಾಗುವ ಹಾಗೆ ಅವು ನಂಟಸ್ತಿಕೆ, ಬೇರೆ ಬಗೆಯ ಸಂಬಂದ, ದಿನ, ಬಗೆ ಮೊದಲಾದವುಗಳನ್ನು ಬಳಸಿಕೊಳ್ಳುತ್ತವೆ. ಇದಕ್ಕೆ ಬದಲು, ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬುದಾಗಿ ಒಂದು ಪಾಂಗನ್ನು ತಿಳಿಸುವುದೇ ಆಡುಪದಗಳ ಮುಕ್ಯ ಕೆಲಸವಾಗಿದೆ; ವ್ಯಕ್ತಿಯನ್ನು ಗುರುತಿಸುವುದು ಅವುಗಳ ಕೆಲಸವಲ್ಲ. ಹಾಗಾಗಿ, ತಾಯಿ, ತಂದೆ, ಮನೆ, ಗೆಳೆಯ ಮೊದಲಾದ ಪದಗಳು ಮಾರಿಕೆಯ ಪದಗಳಾಗಿ ಕಾಣಿಸಿಕೊಳ್ಳುವುದಿದ್ದರೂ, ಆಡುಪದಗಳ ಹಾಗೆ ಅವು ಗುರುತಿಸುವ ಕೆಲಸಕ್ಕೆ ನೆರವಾಗುವ ನುಡಿತಗಳೊಂದಿಗೆ ಬಾರದಿರುವುದಿಲ್ಲ. ಎತ್ತುಗೆಗಾಗಿ, ಮನೆ ಪದದೊಂದಿಗೆ ಪರಿಚೆಪದ (ದೊಡ್ಡ ಮನೆ), ಹೆಸರುಪದದ ಪತ್ತುಗೆ ರೂಪ (ರಾಜುವಿನ ಮನೆ), ತೋರುಪದ (ಈ ಮನೆ) ಮೊದಲಾದುವು ಬರುತ್ತವೆ; ಆದರೆ, ಆಡುಪದಗಳೊಂದಿಗೆ ಇವು ಬರುವುದಿಲ್ಲ. ಆಡುಪದಗಳು ವ್ಯಕ್ತಿಗಳನ್ನು ಗುರುತಿಸಲು ಹೋಗುವುದಿಲ್ಲವಾದರೂ, ಅವು ತಿಳಿಸುವ ಪಾಂಗುಗಳನ್ನು ನಡೆಸಿಕೊಡುವ ವ್ಯಕ್ತಿಗಳು ಇದ್ದೇ ಇರುತ್ತಾರೆ. ಎತ್ತುಗೆಗಾಗಿ, ನಾನು ಮನೆಗೆ ಹೋಗುತ್ತೇನೆ ಎಂಬ ಸೊಲ್ಲಿನಲ್ಲಿ ಬಂದಿರುವ ನಾನು ಪದ ಹೋಗುವವನು ಆಡುಗ ಎಂದಶ್ಟೇ ತಿಳಿಸುತ್ತದಲ್ಲದೆ, ಅದು ಯಾರು ಎಂಬುದನ್ನು ತಿಳಿಸುವುದಿಲ್ಲ; ಆದರೆ, ಅಂತಹವನೊಬ್ಬ ವ್ಯಕ್ತಿ ಇದ್ದೇ ಇರುತ್ತಾನೆ. ಈ ರೀತಿ ಪಾಂಗುಗಳನ್ನು ಗುರುತಿಸದಿರುವುದಕ್ಕೂ ಪಾಂಗಾಗಿ ತೊಡಗಿಕೊಂಡಿರುವ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಇಲ್ಲದಿರುವುದಕ್ಕೂ ನಡುವೆ ವ್ಯತ್ಯಾಸವಿದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಪಾಂಗುಗಳನ್ನು ಮಾತ್ರ ತಿಳಿಸಲಾಗಿದೆಯಲ್ಲದೆ, ಆ ಪಾಂಗುಗಳಾಗಿ ಯಾವ ವ್ಯಕ್ತಿ ಇಲ್ಲವೇ ವಸ್ತುವೂ ತೊಡಗಿಕೊಂಡಿಲ್ಲ: (1ಕ) ಬೇಟೆಗಾರನಿಗೆ ತುಂಬಾ ಎದೆಗಾರಿಕೆಯಿರಬೇಕು. (1ಚ) ಹಿಟ್ಟನ್ನು ಹಾಲಿಗೆ ಹಾಕುವ ಮೊದಲು ಹಾಲನ್ನು ಬಿಸಿಮಾಡಿಕೊಳ್ಳಬೇಕು. (1ಟ) ಮಕ್ಕಳಿಗೆ ಕಲಿಸಬೇಕೆಂದಿದ್ದಲ್ಲಿ ನಿಮಗೆ ತುಂಬಾ ತಾಳ್ಮೆ ಬೇಕು. (1ತ) ಮಕ್ಕಳಿಗೆ ಕಲಿಸಬೇಕಿದ್ದಲ್ಲಿ ನಮಗೆ ತುಂಬಾ ತಾಳ್ಮೆ ಬೇಕು.

(1ಕ)ದಲ್ಲಿ ಬೇಟೆಗಾರನಿಗೆ ಎಂಬುದು ಯಾವನೇ ಒಬ್ಬ ವ್ಯಕ್ತಿಯನ್ನು ಗುರುತಿಸಲು ಹೋಗುವುದಿಲ್ಲ; ಯಾಕೆಂದರೆ, ಯಾರೇ ಆಗಲಿ, ಬೇಟೆಗಾರನಾಗಬೇಕಿದ್ದಲ್ಲಿ ಆತ ಹೇಗಿರಬೇಕು ಎಂಬುದನ್ನಶ್ಟೇ ಆ ಸೊಲ್ಲು ತಿಳಿಸುತ್ತದೆ; (1ಚ)ದಲ್ಲೂ ಹೀಗೆಯೇ. (1ಟ-ತ)ಗಳಲ್ಲಿ ಬಂದಿರುವ ನಿಮಗೆ ಮತ್ತು ನಮಗೆ ಎಂಬ ಪದಗಳಿಗೂ ಇಂತಹ ಬಳಕೆಯಿರಬಲ್ಲುದು; ಮಕ್ಕಳಿಗೆ ಕಲಿಸಲು ಕೇಳುಗರು ಇಲ್ಲವೇ ಆಡುಗರು ಹೇಗಿರಬೇಕು ಎಂಬುದನ್ನು ತಿಳಿಸುವ ಬದಲು, ಮಕ್ಕಳಿಗೆ ಕಲಿಸುವವರು ಯಾರೇ ಆಗಿರಲಿ, ಆತ ಇಲ್ಲವೇ ಆಕೆ ಹೇಗಿರಬೇಕು ಎಂಬುದನ್ನು ಅದು ತಿಳಿಸುತ್ತಿರಬಲ್ಲುದು.

9.2.2 ಪಾಂಗುಗಳನ್ನು ಗುರುತಿಸಲು ನೇರವಲ್ಲದ ಹೊಲಬು

ಕೆಲವು ಕಡೆಗಳಲ್ಲಿ ನಿಜಕ್ಕೂ ಆಡುಗ ಯಾರು ಎಂಬುದನ್ನು ಕೇಳುಗನಿಗೆ ತಿಳಿಸಿಕೊಡಬೇಕಾಗುತ್ತದೆ; ಎತ್ತುಗೆಗಾಗಿ, ಟೆಲಿ¥sóÉೂೀನ್ನಲ್ಲಿ ಮಾತನಾಡುವವರು ಇಲ್ಲವೇ ಬಾಗಿಲು ಹಾಕಿರುವಲ್ಲಿ ಹೊರಗಿನಿಂದ ಮಾತನಾಡುವವರು ಯಾರು ಎಂಬುದು ಕೇಳುಗರಿಗೆ ಗೊತ್ತಾಗದಿರಬಹುದು, ಮತ್ತು ಅಂತಹ ಕಡೆಗಳಲ್ಲಿ ಆಡುಗನು ತಾನು ಯಾರು ಎಂಬುದನ್ನು ಕೇಳುಗನಿಗೆ ತಿಳಿಸಬೇಕಾಗಬಹುದು. ಇಂತಹ ಕಡೆಗಳಲ್ಲಿಯೂ ಆಡುಗನನ್ನು ಗುರುತಿಸಲು ಬೇಕಾಗುವ ನುಡಿತಗಳನ್ನು ನೇರವಾಗಿ ಆಡುಪದದೊಂದಿಗೆ ಬಳಸುವ ಬದಲು, ಅದನ್ನೊಂದು ಬೇರೆಯೇ ಪದಕಂತೆಯಾಗಿ ಬಳಸಲಾಗುತ್ತದೆ: (1ಕ) ನಾನು, ಜಾನಕಿ, ಮಾತನಾಡುವುದು. (1ಚ) ಯಾರದು? ನಾನು, ಜಾನಕಿ. (1ಟ) ನಾವು, ಕಲಿತವರು, ಇಂತಹ ಕೆಲಸ ಮಾಡಬಾರದು. (1ಕ)ದಲ್ಲಿ ಆಡುಗನನ್ನು ತಿಳಿಸುವ ನಾನು ಪದ ಮತ್ತು ವ್ಯಕ್ತಿಯನ್ನು ಗುರುತಿಸುವ ಜಾನಕಿ ಪದ ಬೇರೆ ಬೇರೆ ಪದಕಂತೆಗಳಾಗಿ ಬಂದಿವೆ; (1ಚ- ಟ)ಗಳಲ್ಲೂ ಹೀಗೆಯೇ. ಕೋರ್ಟಿನಲ್ಲಿ ಇಲ್ಲವೇ ಬೇರೆ ಕೆಲವು ಕಡೆಗಳಲ್ಲಿ ಸೂರುಳಿಡಬೇಕಾದಾಗಲೂ ಆಡುಪದದೊಂದಿಗೆ ಆಡುಗನನ್ನು ಗುರುತಿಸಲು ನೆರವಾಗುವ ಬೇರೊಂದು ನುಡಿತವನ್ನು ಬಳಸಬೇಕಾಗುತ್ತದೆ; ಇಂತಹ ಸಂದರ್ಬಗಳಲ್ಲಿಯೂ ಆಡುಗನನ್ನು ಗುರುತಿಸುವ ನುಡಿತವನ್ನು ಬೇರೆಯೇ ಪದಕಂತೆಯಾಗಿ ಬಳಸಲಾಗುತ್ತದೆ: (1) ನಾನು, ರಾಜು ಅಡ್ಯಂತಾಯ, ದೇವರ ಸಾಕ್ಶಿಯಾಗಿ…..

ತೆರಿಗೆ ಕಟ್ಟುವ ಸಮಯದಲ್ಲಿ ನಾನು ಇಲ್ಲವೇ ನಾವು ಎಂಬುದರೊಂದಿಗೆ ಕಟ್ಟುವವರ ಹೆಸರನ್ನೂ ಬರೆಯಬೇಕಾಗುತ್ತದೆ; ಆದರೆ, ಇಲ್ಲಿಯೂ ಆಡುಪದವನ್ನು ಹೆಸರಿನಿಂದ ಬೇರ್ಪಡಿಸಿ ಬರೆಯಲಾಗುತ್ತದೆ. ಕೇಳುಗರು ಹಲವರಿರುವಾಗ, ಅವರಲ್ಲಿ ಕೆಲವರನ್ನು ಬೇರ್ಪಡಿಸಿ ಹೇಳುವುದಕ್ಕಾಗಿ ಕೆಲವೊಮ್ಮೆ ಗುರುತಿಸುವ ನುಡಿತಗಳನ್ನು ಬಳಸಬೇಕಾಗುತ್ತದೆ; ಇಂತಹ ಕಡೆಗಳಲ್ಲೂ ಬೇರ್ಪಡಿಸಿ ಗುರುತಿಸುವ ನುಡಿತಗಳಿಂದ ಕೇಳುಗರನ್ನು ತಿಳಿಸುವ ಆಡುಪದವನ್ನು ಬೇರಾಗಿ ಇರಿಸಲಾಗುತ್ತದೆ: (1ಕ) ನೀವು, ಮೂರನೇ ತರಗತಿಯ ಹುಡುಗರು, ಮನೆಗೆ ಹೋಗಬಹುದು. (1ಚ) ನೀನು, ಶ್ರೀನಿವಾಸ, ಹಾಗೆ ನಗಾಡುವುದು ಯಾಕೆ? (1ಟ) ನೀನು, ಮೂಲೆಯಲ್ಲಿ ಕುಳಿತವನು, ಹೊರಗೆ ಹೋಗು. ಇಂತಹ ಬಳಕೆಗಳಲ್ಲಿ ಆಡುಪದಗಳು ಮತ್ತು ಗುರುತಿಸುವ ನುಡಿತಗಳು ಬೇರೆ ಬೇರಾಗಿ ಉಳಿಯುತ್ತವೆ ಎಂಬುದು ಅವಕ್ಕೆ ಪತ್ತುಗೆ ಒಟ್ಟುಗಳ ಸೇರಿಸಿದಾಗ ಇನ್ನಶ್ಟು ಚನ್ನಾಗಿ ಗೊತ್ತಾಗುತ್ತದೆ: ಈ ಒಟ್ಟುಗಳನ್ನು ಆಡುಪದಗಳಿಗೆ ಮತ್ತು ಗುರುತಿಸುವ ನುಡಿತಗಳಿಗೆ ಬೇರೆ ಬೇರಾಗಿ ಸೇರಿಸಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನಿಮಗೆ, ಮೂರನೇ ತರಗತಿಯ ಮಕ್ಕಳಿಗೆ, ನಾಳೆ ರಜೆ. (1ಚ) ನಿಮ್ಮನ್ನು, ಮೂರನೇ ತರಗತಿಯ ಮಕ್ಕಳನ್ನು, ಮನೆಗೆ ಕಳುಹಿಸಲು ಹೇಳಿದ್ದಾರೆ. (1ಟ) ನಿಮ್ಮಿಂದ, ಮೂರನೇ ತರಗತಿಯ ಮಕ್ಕಳಿಂದ, ಎರಡೆರಡು ರುಪಾಯಿ ಪಡೆಯಲು ಹೇಳಿದ್ದಾರೆ. (1ತ) ನಿಮ್ಮಲ್ಲಿ, ಮೂರನೇ ತರಗತಿಯ ಮಕ್ಕಳಲ್ಲಿ, ಮೂವರು ನಾಟಕಕ್ಕೆ ಸೇರಬಹುದು. (1ಕ)ದಲ್ಲಿ ಗೆ ಒಟ್ಟನ್ನು ನೀವು ಎಂಬ ಆಡುಪದದೊಂದಿಗೆ ಮಾತ್ರವಲ್ಲದೆ ಮೂರನೇ ತರಗತಿಯ ಮಕ್ಕಳು ಎಂಬುದರೊಂದಿಗೂ ಬಳಸಲಾಗಿದೆ; (1ಚ- ತ) ಸೊಲ್ಲುಗಳಲ್ಲೂ ಇಂದ ಮತ್ತು ಅಲ್ಲಿ ಒಟ್ಟುಗಳನ್ನು ಹೀಗೆಯೇ ಆಡುಪದಗಳಿಗೂ ಅವುಗಳ ಬಳಿಕ ಬರುವ ನುಡಿತಗಳಿಗೂ ಬೇರೆ ಬೇರಾಗಿ ಸೇರಿಸಲಾಗಿದೆ. ಕೇಳುಗನ ಹೆಸರನ್ನು ಗಮನರೂಪದಲ್ಲಿ ಬಳಸುವ ಮೂಲಕವೂ ಆತನು ಯಾರೆಂಬುದನ್ನು ತಿಳಿಸಲು ಬರುತ್ತದೆ. ಸಾಮಾನ್ಯವಾಗಿ, ಕೇಳುಗನ ಗಮನವನ್ನು ತನ್ನೆಡೆಗೆ ಸೆಳೆಯುವುದಕ್ಕಾಗಿ ಆಡುಗರು ಈ ಹೊಲಬನ್ನು ಬಳಸುತ್ತಾರೆ; ಒಂದು

ಗುಂಪಿನಲ್ಲಿರುವ ಜನರಿಂದ ಕೇಳುಗನನ್ನು ಬೇರ್ಪಡಿಸುವುದಕ್ಕಾಗಿಯೂ ಈ ಹೊಲಬನ್ನು ಬಳಸಲು ಬರುತ್ತದೆ. ಈ ಹೊಲಬಿನಲ್ಲೂ ಕೇಳುಗರನ್ನು ಗುರುತಿಸುವುದಕ್ಕಾಗಿ ಬಳಸುವ ನುಡಿತಗಳು ಆಡುಪದಗಳಿಂದ ಬೇರಾಗಿ ನಿಲ್ಲುತ್ತವೆ ಎಂಬುದನ್ನು ಗಮನಿಸಬಹುದು: (1ಕ) ಮೇಶ್ಟ್ರೇ, ನಿಮ್ಮನ್ನು ಯಾರೋ ಕರೆಯುತ್ತಿದ್ದಾರೆ. (1ಚ) ರಾಜು, (ನೀನು) ಇಲ್ಲಿ ಬಾ! (1ಟ) ದೇವರೇ, ನನ್ನನ್ನು (ನೀನು) ಈ ತೊಂದರೆಯಿಂದ ಪಾರುಮಾಡು. (1ಕ)ದಲ್ಲಿ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಮೇಶ್ಟ್ರೇ ಎಂಬ ಪದವನ್ನು ಬಳಸಲಾಗಿದೆ; ಆದರೆ ಈ ಪದವನ್ನು, ಸೊಲ್ಲಿನ ಒಂದು ಪಾಂಗು ಕೇಳುಗ ಎಂಬುದನ್ನು ತಿಳಿಸುವ ನಿಮ್ಮನ್ನು ಎಂಬ ಪದದಿಂದ ಬೇರಾಗಿ ಇರಿಸಲಾಗಿದೆ. ಸೊಲ್ಲಿನ ಕೇಳುಗರು ಸೊಲ್ಲು ತಿಳಿಸುವ ಎಸಕದ ಪಾಂಗಾಗಿ ತೊಡಗಿಕೊಂಡಿಲ್ಲದಿರುವಲ್ಲೂ ಈ ಹೊಲಬನ್ನು ಬಳಸಲು ಬರುತ್ತದೆ: (1ಕ) ರಾಜು, ಜಾನಕಿ ಪುಣೆಗೆ ಹೋದದ್ದು ಯಾವಾಗ? (1ಚ) ಸಾರ್, ಈ ಬಸ್ಸು ಎಶ್ಟು ಗಂಟೆಗೆ ಹೊರಡುತ್ತದೆ? ಮೇಲಿನ ಕೇಳ್ವಿಗಳಲ್ಲಿ ಗಮನರೂಪದಲ್ಲಿ ಬಂದಿರುವ ರಾಜು ಮತ್ತು ಸಾರ್ ಎಂಬ ಪದಗಳು ಸೊಲ್ಲಿನ ಕೇಳುಗರು ಯಾರು ಎಂಬುದನ್ನು ತಿಳಿಸುತ್ತವೆಯೇನೋ ನಿಜ; ಆದರೆ, ಈ ಕೇಳುಗರು ಸೊಲ್ಲುಗಳು ತಿಳಿಸುವ ಎಸಕದಲ್ಲಿ ಪಾಂಗುಗಳಾಗಿ ಬಂದಿಲ್ಲ, ಮತ್ತು ಈ ಸೊಲ್ಲುಗಳಲ್ಲಿ ನೀನು ಪದದ ಬಳಕೆಯಾಗಿಲ್ಲ. ಕೆಲವು ಬಗೆಯ ಬರಹಗಳಲ್ಲಿ ಆಡುಗರು ನುಡಿದ ಮಾತುಗಳನ್ನು ಎತ್ತಿಕೊಡಬೇಕಾಗುತ್ತದೆ, ಮತ್ತು ಹಾಗೆ ಎತ್ತಿಕೊಡುವಾಗ ಅವುಗಳ ಆಡುಗರು ಮತ್ತು ಕೇಳುಗರು ಯಾರು ಎಂಬುದನ್ನು ತಿಳಿಸಬೇಕಾಗುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿಗಳಲ್ಲಿ ಹಲವು ಬಗೆಯ ಸೂಳುನುಡಿಗಳನ್ನು ಕೊಡಬೇಕಾಗುತ್ತಿದ್ದು, ಅವುಗಳಲ್ಲಿ ಆಡುಗರು ಮತ್ತು ಕೇಳುಗರು ಬದಲಾಗುತ್ತಿರುತ್ತಾರೆ. ಹಾಗಾಗಿ, ಈ ಸೂಳುನುಡಿಗಳ ಮಾತುಗಳನ್ನು ಎತ್ತಿಕೊಡುವುದರೊಂದಿಗೆ, ಹಾಗೆ ಎತ್ತಿಕೊಟ್ಟಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದ್ದಾರೆ ಎಂಬುದನ್ನೂ ತಿಳಿಸಬೇಕಾಗುತ್ತದೆ.

ಇದಕ್ಕಾಗಿ ಕೆಲವು ಹೊಲಬುಗಳೂ ಬಳಕೆಗೆ ಬಂದಿವೆ; ಸೊಲ್ಲುಗಳ ಮೊದಲಿಗೆ ಅವುಗಳ ಆಡುಗರನ್ನು ಹೆಸರಿಸುವುದು ಇಂತಹ ಒಂದು ಹೊಲಬು; ಇದನ್ನು ಬರಹರೂಪದಲ್ಲಿರುವ ನಾಟಕಗಳಲ್ಲಿ ಕಾಣಬಹುದು: ರಾಜು: ನನಗೆ ನೀನು ಏನೂ ಹೇಳಬೇಕಾಗಿಲ್ಲ. ಜಾನಕಿ: ಯಾಕೆ? ನಿನಗೆ ನನ್ನಲ್ಲಿ ನಂಬಿಕೆಯಿಲ್ಲವೇ? ಹರಿ: ಅವನ ಮನಸ್ಸಿನಲ್ಲಿ ಬೇರೇನೋ ಇರುವ ಹಾಗಿದೆ. ಸೊಲ್ಲಿನ ಮೊದಲು ಇಲ್ಲವೇ ಬಳಿಕ ಅದನ್ನು ಹೇಳಿದವರು ಯಾರು ಮತ್ತು ಯಾರೊಂದಿಗೆ ಅದನ್ನು ಹೇಳಲಾಗಿದೆ ಎಂಬುದನ್ನು ತಿಳಿಸುವುದು ಇನ್ನೊಂದು ಹೊಲಬು: ರಾಜು ಹೇಳಿದ, “ನನಗೆ ನೀನು ಏನೂ ಹೇಳಬೇಕಾಗಿಲ್ಲ”. “ಯಾಕೆ? ನಿನಗೆ ನನ್ನಲ್ಲಿ ನಂಬಿಕೆಯಿಲ್ಲವೇ?” ಎಂದು ಜಾನಕಿ ಕೇಳಿದಳು. ಅದಕ್ಕೆ ಹರಿ ಹೇಳಿದ, “ಅವನ ಮನಸ್ಸಿನಲ್ಲಿ ಬೇರೇನೋ ಇರುವ ಇಂತಹ ಕಡೆಗಳಲ್ಲಿ ಈ ಬೇರೆ ಬೇರೆ ಸೊಲ್ಲುಗಳ ಆಡುಗರು ಮತ್ತು ಕೇಳುಗರು ಯಾರು ಎಂಬುದು ಸಂದರ್ಬದಿಂದಲೇ ಗೊತ್ತಾಗುವ ಹಾಗಿದ್ದರೆ, ಅವರನ್ನು ಬೇರಾಗಿ ತಿಳಿಸದಿರಲೂ ಬರುತ್ತದೆ. ಆದರೆ, ಈ ಎಲ್ಲಾ ಕಡೆಗಳಲ್ಲೂ ಸೊಲ್ಲಿನ ಆಡುಗ, ಕೇಳುಗ, ಮತ್ತು ಬೇರೊಬ್ಬರನ್ನು ಗುರುತಿಸುವ ಪದಗಳು ಅವರನ್ನು ತಿಳಿಸುವ ನಾನು, ನೀನು ಮತ್ತು ತಾನು ಎಂಬ ಆಡುಪದಗಳಿಂದ ಬೇರಾಗಿ ಉಳಿಯುತ್ತವೆ.

9.2.3 ಹೊರಪಡಿಕೆಯಾಗಿ ಮದಿಪಿನ ಬಳಕೆ

ಆಡುಪದಗಳು ಸರಿಯಾಗಿ ತಮ್ಮ ಕೆಲಸವನ್ನು ನಡೆಸಬೇಕಿದ್ದಲ್ಲಿ ಅವು ಪಾಂಗುಗಳನ್ನು ಗುರುತಿಸಲು ಹೋಗಬಾರದು; ಸೊಲ್ಲಿನ ಆಡುಗ ಇಲ್ಲವೇ ಕೇಳುಗರಲ್ಲಿ ಮಾರ್ಪಾಡುಗಳಾದಾಗಲೂ ಅವು ಮಾರ್ಪಡದೆ ಉಳಿಯಬೇಕು ಎಂಬುದನ್ನು ಮೇಲೆ ನೋಡಿರುವೆವು. ಆದರೆ, ಕೆಲವು ಬಗೆಯ ಬಳಕೆಗಳಲ್ಲಿ ಆಡುಪದಗಳು ಈ ಕಟ್ಟಲೆಯನ್ನು ಮುರಿಯುತ್ತವೆ, ಮತ್ತು ಇದರಿಂದಾಗಿ ಅವುಗಳ ಕೆಲಸದಲ್ಲಿ ಅಶ್ಟರ ಮಟ್ಟಿಗೆ ಕುಂದುಂಟಾಗುತ್ತದೆಯೆಂದು ಹೇಳಬಹುದು. ಪಾಂಗುಗಳಿಗೆ ಮದಿಪನ್ನು ತೋರಿಸುವುದಕ್ಕಾಗಿ ಹಲವೆಣಿಕೆಯ ಆಡುಪದಗಳನ್ನು ಓರೆಣಿಕೆಯ ಪಾಂಗುಗಳಿರುವಲ್ಲಿ ಬಳಸುವುದು ಇಂತಹದೊಂದು ಹೊರಪಡಿಕೆಯಾಗಿದೆ.

ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1) “ಏನು, ನಿಮಗೆ ನಿದ್ದೆ ಬರುವುದಿಲ್ಲವೇ?” ಆಕೆ ಕೇಳಿದಳು. “ಇಲ್ಲ. ನಿನಗೊಂದು ವಿಶಯ ತಿಳಿಸಬೇಕಾಗಿದೆ” (1)ರಲ್ಲಿ ಗಂಡ-ಹೆಂಡತಿಯರ ನಡುವಿನ ಸೂಳುನುಡಿಯನ್ನು ಕೊಡಲಾಗಿದೆ; ಇದರಲ್ಲಿ ಹೆಂಡತಿ ನುಡಿದ ಮೊದಲನೆಯ ಸೊಲ್ಲಿನಲ್ಲಿ ಕೇಳುಗ (ಗಂಡ) ಒಬ್ಬನೇ ಆದರೂ ಮದಿಪಿಗಾಗಿ ಹಲವೆಣಿಕೆಯ ನಿಮಗೆ ಎಂಬುದನ್ನು ಬಳಸಲಾಗಿದೆ; ಆದರೆ, ಗಂಡ ನುಡಿದ ಎರಡನೆಯ ಸೊಲ್ಲಿನಲ್ಲಿ ಆತನ ಕೇಳುಗನನ್ನು ತಿಳಿಸಲು ಓರೆಣಿಕೆಯ ನಿನಗೆ ಎಂಬುದನ್ನು ಬಳಸಲಾಗಿದೆ. (1)ರಲ್ಲಿ ಆಡುಗ ಮತ್ತು ಕೇಳುಗರು ಬೇರಾದಾಗಲೂ ಕೇಳುಗನನ್ನು ತಿಳಿಸುವ ಪದ ಬದಲಾಗದೆ ಒಂದೇ ಆಗಿರಬೇಕಾಗಿತ್ತು; ಯಾಕೆಂದರೆ, ಹಾಗೆ ಬದಲಾಗದೆ ಉಳಿದಾಗ ಮಾತ್ರ ಅದು ಸೊಲ್ಲುಗಳು ತಿಳಿಸುವ ಎಸಕಗಳ ಪಾಂಗುಗಳಿಗೂ ಸೊಲ್ಲನ್ನು ಉಂಟುಮಾಡುವಲ್ಲಿನ ಪಾಂಗಿಗೂ ನಡುವಿನ ಸಂಬಂದವನ್ನು ಸರಿಯಾಗಿ ತಿಳಿಸಬಲ್ಲುದು. ಹಾಗಾಗಿ, ನೀನು-ನೀವು ಪದಗಳ ಮೇಲಿನ ಬಳಕೆ ಒಂದು ಹೊರಪಡಿಕೆಯಾಗುತ್ತದೆ. ಇಂತಹ ಮದಿಪಿನ ಬಳಕೆಯಲ್ಲಿ ಮುಕ್ಯವಾಗಿ ಅಳವು ಮತ್ತು ಹೊಂದಾಣಿಕೆ ಎಂಬ ಎರಡು ಬಗೆಯ ಸಂಬಂದಗಳ ಕಯ್ವಾಡ ಕಾಣಿಸುತ್ತದೆ: ಆಡುಗ ಮತ್ತು ಕೇಳುಗರ ನಡುವೆ ಅಳವಿನ ಸಂಬಂದವಿದೆಯಾದರೆ, ಅವರು ಬೇರೆ ಬೇರೆ ಎಣಿಕೆಯ ತೋರುಪದಗಳನ್ನು ಬಳಸಬೇಕಾಗುತ್ತದೆ. ಗಂಡ-ಹೆಂಡತಿ, ಜಮೀನ್ದಾರ-ಕೆಲಸದಾಳು, ಹಣವಂತ-ಬಡವ, ಹಿರಿಯ-ಕಿರಿಯ, ಕಲಿಸುಗ- ಕಲಿಗ ಮೊದಲಾದವರ ನಡುವಿನ ಸಂಬಂದಗಳು ಇಂತಹ ಅಳವಿನ ಸಂಬಂದಗಳಾಗಿವೆ. ಅಳವಿನ ಸಂಬಂದದಲ್ಲಿ ಒಬ್ಬನು ಅಳವುಳ್ಳವನಾಗಿದ್ದರೆ, ಇನ್ನೊಬ್ಬನು ಅಳವಿಲ್ಲದವನಾಗಿರುತ್ತಾನೆ. ಅಳವುಳ್ಳವನು ಓರೆಣಿಕೆಯ ನೀನು ಪದವನ್ನು ಬಳಸಿದರೆ, ಅಳವಿಲ್ಲದವನು ಹಲವೆಣಿಕೆಯ ನೀವು ಪದವನ್ನು ಬಳಸಬೇಕಾಗುತ್ತದೆ. ಇದೇ ರೀತಿಯಲ್ಲಿ, ಅಳವುಳ್ಳವನು ಅಳವಿಲ್ಲದವನ ಕುರಿತಾಗಿ ಮಾತನಾಡುವಾಗ ಓರೆಣಿಕೆಯ ಅವನು (ಇಲ್ಲವೇ ಇವನು) ಪದವನ್ನು ಬಳಸಿದರೆ, ಅಳವಿಲ್ಲದವನು ಅಳವುಳ್ಳವನ ಕುರಿತಾಗಿ (ಅದರಲ್ಲೂ ಆತನ ಇರುವಿಕೆಯಲ್ಲಿ) ಮಾತನಾಡುವಾಗ ಹಲವೆಣಿಕೆಯ ಅವರು (ಇಲ್ಲವೇ ಇವರು) ಪದವನ್ನು ಬಳಸಬೇಕಾಗುತ್ತದೆ. ಇದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (1ಕ) ನೀನು ಇಶ್ಟು ಹೊತ್ತಿಗೆ ಕೆಲಸ ಮಾಡುತ್ತಿರದೆ ಇಲ್ಲಿಗೆ ಯಾಕೆ §AzÉ?

(1ಚ) ಅಲ್ಲಿಗೆ ಯಾರೋ ಆಪೀಸರು ಕಾರಿನಲ್ಲಿ ಬಂದಿದ್ದಾರೆ; ಅವರು ನಿಮ್ಮನ್ನು ಕರೆಯಲು ನನ್ನನ್ನಿಲ್ಲಿಗೆ ಅಟ್ಟಿದ್ದಾರೆ. ಜಮೀನ್ದಾರನಿಗೂ ಆತನ ಕೆಲಸದಾಳಿಗೂ ನಡುವೆ ನಡೆದ (1ಕ-ಚ) ಸೂಳುನುಡಿಯಲ್ಲಿ ನೀನು-ನೀವು ಪದಗಳ ಬಳಕೆಯಲ್ಲಿ ಕಾಣಿಸುವಂತಹ ಓರೆಣಿಕೆ-ಹಲವೆಣಿಕೆಯ ನಡುವಿನ ಮದಿಪಿನ ವ್ಯತ್ಯಾಸ ಇದೆ; ಜಮೀನ್ದಾರನು ನುಡಿದ (1ಕ) ಸೊಲ್ಲಿನಲ್ಲಿ ಕೆಲಸದಾಳು ಕೇಳುಗನಾಗಿದ್ದಾನೆ, ಮತ್ತು ಈ ಕೇಳುಗನನ್ನು ತಿಳಿಸುವುದಕ್ಕಾಗಿ ಓರೆಣಿಕೆಯ ನೀನು ಪದ ಬಳಕೆಯಾಗಿದೆ; ಇದಕ್ಕೆ ಬದಲು, ಕೆಲಸದಾಳು ನುಡಿದ (1ಚ) ಸೊಲ್ಲಿನಲ್ಲಿ ಜಮೀನ್ದಾರ ಕೇಳುಗನಾಗಿದ್ದಾನೆ, ಮತ್ತು ಈ ಕೇಳುಗನನ್ನು ತಿಳಿಸುವುದಕ್ಕಾಗಿ ಮದಿಪಿನ ಹಲವೆಣಿಕೆಯ ನೀವು ಪದ ಬಳಕೆಯಾಗಿದೆ. ಅಳವಿನ ಸಂಬಂದವಿರುವಲ್ಲಿ ಮೇಲೆ ವಿವರಿಸಿದ ಹಾಗೆ ಇಬ್ಬರು ಬೇರೆ ಬೇರೆ ಎಣಿಕೆಯ ಆಡುಪದಗಳನ್ನು ಬಳಸುತ್ತಾರಾದರೆ, ಹೊಂದಾಣಿಕೆಯ ಸಂಬಂದವಿರುವಲ್ಲಿ ಇಬ್ಬರೂ ಒಂದೇ ಎಣಿಕೆಯ ಆಡುಪದಗಳನ್ನು ಬಳಸುತ್ತಾರೆ; ಅವರ ನಡುವೆ ಹತ್ತಿರದ ಇಲ್ಲವೇ ಸಲಿಗೆಯ ಸಂಬಂದವಿದೆಯಾದಲ್ಲಿ ಓರೆಣಿಕೆಯ ಪದ ಬಳಕೆಯಾಗುತ್ತದೆ, ಮತ್ತು ಅಶ್ಟೊಂದು ಹತ್ತಿರದ ಸಂಬಂದವಿಲ್ಲವಾದಲ್ಲಿ ಹಲವೆಣಿಕೆಯ ಪದ ಬಳಕೆಯಾಗುತ್ತದೆ. ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (1ಕ) ನಾನು ಕರೆದರೆ ನೀನು ಬರುತ್ತೀಯೋ? (1ಚ) ಮೊದಲು ನೀನು ಕರೆದು ನೋಡು. (2ಕ) ನೀವು ಗಡಿಬಿಡಿಯಲ್ಲಿದ್ದೀರೇನೋ; ನನಗಿನ್ನೂ ಊಟ ಆಗಿಲ್ಲ. (2ಚ) ಇಲ್ಲ. ನೀವು ಊಟಮಾಡಿ ಬನ್ನಿ. ನಾನು ಕಾಯುತ್ತೇನೆ. (1ಕ-ಚ)ದಲ್ಲಿ ಸಲಿಗೆಯ ಮತ್ತು ಹತ್ತಿರದ ಸಂಬಂದವಿರುವ ಇಬ್ಬರು ಗೆಳೆಯರ ನಡುವೆ ನಡೆದ ಸೂಳುನುಡಿಯನ್ನು ಕೊಡಲಾಗಿದೆ; ಇದರಲ್ಲಿ ಇಬ್ಬರೂ ಓರೆಣಿಕೆಯ ನೀನು ಪದವನ್ನು ಬಳಸಿದ್ದಾರೆ; ಇದಕ್ಕೆ ಬದಲು, (2ಕ-ಚ)ದಲ್ಲಿ ಅಂತಹ ಹತ್ತಿರದ ಸಂಬಂದವಿಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಸೂಳುನುಡಿಯನ್ನು ಕೊಡಲಾಗಿದೆ, ಮತ್ತು ಇದರಲ್ಲಿ ಇಬ್ಬರೂ ಹಲವೆಣಿಕೆಯ ನೀವು ಪದವನ್ನು ಬಳಸಿದ್ದಾರೆ. ಈ ಎರಡು ಸೂಳುನುಡಿಗಳಲ್ಲೂ ಆಡುಗ ಮತ್ತು ಕೇಳುಗರ ನಡುವೆ ಹೊಂದಾಣಿಕೆಯ ಸಂಬಂದವಿದೆ. ಇತ್ತೀಚೆಗೆ ಅಳವಿನ ಸಂಬಂದಗಳೆಲ್ಲ ಹೊಂದಾಣಿಕೆಯ ಸಂಬಂದಗಳಾಗಿ ಮಾರ್ಪಡುತ್ತಿರುವುದನ್ನು ಕಾಣಬಹುದು. ಎತ್ತುಗೆಗಾಗಿ, ಹಲವು ಮಂದಿ ಕಲಿತ ಹೆಂಡತಿಯರು ಗಂಡನೊಂದಿಗೆ ಮಾತನಾಡುವಾಗ ಓರೆಣಿಕೆಯ ನೀನು ಪದವನ್ನೇ ಬಳಸುತ್ತಿದ್ದಾರೆ; ಇದರಿಂದಾಗಿ, ಅವರೊಳಗಿನ ಸಂಬಂದ

ಅಳವಿನದಾಗಿರುವ ಬದಲು ಹೊಂದಾಣಿಕೆಯದಾಗಿ ಮಾರ್ಪಟ್ಟಿದೆ. ಮೇಲ್ವರ್ಗ- ಕೆಳವರ್ಗದವರ ನಡುವೆ, ಮೇಲಾಳು-ಕೀಳಾಳುಗಳ ನಡುವೆ, ಮತ್ತು ಕಲಿಸುಗ- ಕಲಿಗರ ನಡುವೆಯೂ ಹಿಂದೆ ಇದ್ದ ಅಳವಿನ ಸಂಬಂದ ಇವತ್ತು ಹೊಂದಾಣಿಕೆಯದಾಗಿ ಮಾರ್ಪಡುತ್ತಿರುವುದನ್ನು ಕಾಣಬಹುದು.

9.2.4 ಎತ್ತುಗೆ ಸೊಲ್ಲುಗಳಲ್ಲಿ ಬಳಕೆ

ಒಬ್ಬನು ನುಡಿದ ಮಾತನ್ನು ಇನ್ನೊಬ್ಬನು ಎತ್ತಿಹೇಳಬೇಕಿರುವ ಕಡೆಗಳಲ್ಲಿ ಎರಡೆರಡು ಮಂದಿ ಆಡುಗ ಮತ್ತು ಕೇಳುಗರನ್ನು ಆಡುಪದಗಳು ತಿಳಿಸಬೇಕಾಗುತ್ತದೆ; ಕೆಲವೊಮ್ಮೆ ಇದು ಇಪ್ಪುರುಳಿಗೂ ಎಡೆಕೊಡುತ್ತದೆ. ಇಂತಹ ಕಡೆಗಳಲ್ಲಿ ಆಡುಪದಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: ಇನ್ನೊಬ್ಬನ ಮಾತನ್ನು ಎತ್ತಿಹೇಳಲು (1) ಎತ್ತಿಹೇಳಬೇಕಾಗಿರುವ ಸೊಲ್ಲನ್ನು ಎತ್ತುಗೆ ಗುರುತಿನ ಒಳಗೆ ಇರಿಸುವುದು, (2) ಎಂದು (ಇಲ್ಲವೇ ಎಂಬುದು, ಎಂದುದು) ಎಂಬ ಪದವನ್ನು ಸೇರಿಸುವುದು, ಮತ್ತು (3) ಅಂತೆ ಎಂಬ ಪದವನ್ನು ಸೇರಿಸುವುದು ಎಂಬುದಾಗಿ ಮೂರು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: (1ಕ) ಜಾನಕಿ ಹೇಳಿದಳು: “ನಾನು ಮದುವೆಯಾಗುವುದಿಲ್ಲ”. (1ಚ) ನಾನು ಮದುವೆಯಾಗುವುದಿಲ್ಲವೆಂದು ಜಾನಕಿ ಹೇಳಿದಳು. (1ಟ) ಜಾನಕಿ ಮದುವೆಯಾಗುವುದಿಲ್ಲವಂತೆ. ಮೊದಲನೆಯ ಹೊಲಬನ್ನು ಬಳಸಿರುವಲ್ಲಿ ಎತ್ತಿಹೇಳಿದ ಸೊಲ್ಲು ತುಸುವೂ ಮಾರ್ಪಡದೆ ಉಳಿಯುತ್ತದೆ; ಆದರೆ, ಉಳಿದ ಎರಡು ಹೊಲಬುಗಳಲ್ಲಿ ಅದು ಹಲವು ಬಗೆಯ ಮಾರ್ಪಾಡುಗಳಿಗೆ ಒಳಗಾಗುತ್ತದೆ. ಎಂದು ಎಂಬುದನ್ನು ಬಳಸಿರುವ ಎರಡನೇ ಹೊಲಬಿನಲ್ಲೂ ಎತ್ತುಗೆ ಸೊಲ್ಲನ್ನು ಎತ್ತುಗೆ ಗುರುತಿನ ಒಳಗೆ ಇರಿಸಲು ಬರುತ್ತದೆ; ಆದರೆ ಸಾಮಾನ್ಯವಾಗಿ, ಆ ರೀತಿ ಎತ್ತುಗೆ ಗುರುತಿನ ಒಳಗೆ ಇರಿಸಿರುವ ಸೊಲ್ಲುಗಳಲ್ಲಿ ಅವುಗಳ ಬಳಿಕ ಎಂದು ಎಂಬುದನ್ನು ಬಳಸಿದೆಯಾದರೂ, ಎತ್ತುಗೆ ಗುರುತನ್ನು ಬಳಸದಿರುವಲ್ಲಿ ನಡೆಯುವಂತಹ ಮಾರ್ಪಾಡುಗಳು ಯಾವುವೂ ನಡೆಯುವುದಿಲ್ಲವೆಂದೇ ಹೇಳಬಹುದು: (1ಕ) ನಾನು ಪಾಸಾಗಿದ್ದೇನೆಂದು ಜಾನಕಿ ಹೇಳಿದ್ದಾಳೆ. (1ಚ) “ನೀನು ಪಾಸಾಗಿದ್ದಿ” ಎಂದು ಜಾನಕಿ ಹೇಳಿದ್ದಾಳೆ.

(1ಕ)ದಲ್ಲಿ ಎಂದು ಪದವನ್ನು ಬಳಸಲಾಗಿದೆ ಮತ್ತು ಎತ್ತುಗೆ ಗುರುತುಗಳನ್ನು ಬಳಸಿಲ್ಲ; ಅದು ಎತ್ತಿಹೇಳುವ ನಾನು ಪಾಸಾಗಿದ್ದೇನೆ ಎಂಬ ಒಳಸೊಲ್ಲು ನಿಜಕ್ಕೂ ನೀನು ಪಾಸಾಗಿದ್ದಿ ಎಂಬುದಾಗಿದ್ದು, ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ ಅದರ ನೀನು ಎಂಬ ಪದವನ್ನು ನಾನು ಎಂಬುದಾಗಿ ಮಾರ್ಪಡಿಸಲಾಗಿದೆ. ಆದರೆ, (1ಚ)ದಲ್ಲಿ ಎಂದು ಎಂಬುದನ್ನು ಬಳಸುವುದರೊಂದಿಗೆ ಎತ್ತುಗೆ ಗುರುತುಗಳನ್ನೂ ಬಳಸಲಾಗಿದೆ; ಹಾಗಾಗಿ, ಇಲ್ಲಿ ಮೇಲಿನ ಮಾರ್ಪಾಡನ್ನು ನಡೆಸಿಲ್ಲ. ಎಂದು ಪದವನ್ನು ಬಳಸಿರುವಲ್ಲಿ ಎತ್ತುಗೆ ಸೊಲ್ಲಿನಲ್ಲಿ ಬರುವ ನಾನು ಮತ್ತು ನೀನು ಪದಗಳು ಆ ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ತಿಳಿಸಬಲ್ಲುವು, ಮತ್ತು ಅದರ ಹೊರಸೊಲ್ಲಿನ ಆಡುಗ ಮತ್ತು ಕೇಳುಗರನ್ನೂ ತಿಳಿಸಬಲ್ಲುವು ಎಂಬುದನ್ನು ಮುಂದೆ ನೋಡಲಿರುವೆವು. ಆದರೆ, ಅಂತಹ ಸೊಲ್ಲುಗಳಲ್ಲಿ ಬಂದಿರುವ ಎತ್ತುಗೆ ಸೊಲ್ಲನ್ನು ಎತ್ತುಗೆ ಗುರುತುಗಳೊಳಗೆ ಇರಿಸಿರುವ ಸೊಲ್ಲುಗಳಲ್ಲಿ ಎಂದು ಪದವನ್ನು ಬಳಸಲಾಗಿದೆಯಾದರೂ, ಅದರಲ್ಲಿ ಬಂದಿರುವ ನಾನು ಮತ್ತು ನೀನು ಪದಗಳು ಎತ್ತುಗೆ ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ಮಾತ್ರವೇ ತಿಳಿಸಬಲ್ಲುವಲ್ಲದೆ ಅವಕ್ಕಿಂತ ಬೇರಾಗಿರುವ ಹೊರಸೊಲ್ಲಿನ ಆಡುಗ ಮತ್ತು ಕೇಳುಗರನ್ನು ತಿಳಿಸಲಾರವು.

9.2.5 ಎಂದು ಪದದ ಬಳಕೆ

ಎಂದು ಪದದ ಮೂಲಕ ಇನ್ನೊಬ್ಬನು ನುಡಿದ ಸೊಲ್ಲನ್ನು ಎತ್ತಿಹೇಳುವಲ್ಲಿ ಎತ್ತುಗೆ ಸೊಲ್ಲು ಒಳಸೊಲ್ಲಾಗಿ ಬರುತ್ತದೆ, ಮತ್ತು ಎಂದು ಹೇಳಿದ್ದಾನೆ ಎಂಬಂತಹ ಎತ್ತಿಹೇಳುವ ಸೊಲ್ಲು ಹೊರಸೊಲ್ಲಾಗಿ ಬರುತ್ತದೆ: (1ಕ) ನಿಮಗೆ ಸಾವಿರ ರುಪಾಯಿ ಕೊಡುತ್ತೇನೆಂದು ರಾಜು ಹೇಳಿದ್ದಾನೆ. (1ಚ) ಈ ಕೋಣೆಯೊಳಗೆ ಯಾರೂ ಹೊಗೆಬತ್ತಿ ಸೇದಬಾರದೆಂದು ರಾಜು ಎಚ್ಚರಿಸಿದ್ದಾನೆ. ಎಂದು ಎಂಬುದು ಎನ್ನು ಎಂಬ ಎಸಕಪದದ ಪರಿಚೆರೂಪವಾಗಿದ್ದು, ಅದರ ಬಳಿಕ ಇನ್ನೊಂದು ಎಸಕಪದ ಬರಬೇಕಾಗುತ್ತದೆ; ಆದರೆ, ಎನ್ನು ಎಂಬ ಪದ ತಿಳಿಸುವ ಹುರುಳನ್ನು ಕೊಡಬಲ್ಲ ಹೇಳು, ತಿಳಿಸು, ಉಲಿ, ಅಳು, ಕೇಳು, ಅನ್ನು, ಕಿರುಚು, ಎಚ್ಚರಿಸು, ಬಯ್ಯು ಮೊದಲಾದ ಎಸಕಪದಗಳು ಮಾತ್ರವಲ್ಲದೆ, ಅನಿಸು, ತೋರು, ಗೊತ್ತಿರು, ಗೊತ್ತಾಗು, ನೆನಪಿಸು, ಎಣಿಸು ಮೊದಲಾದ ಬೇರೆ ಕೆಲವು ಬಗೆಯ ಎಸಕಪದಗಳೂ ಎಂದು ಪದದ ಬಳಿಕ ಬರಬಲ್ಲುವು:

(1ಕ) ನೀನು ಬಂದಿದ್ದಿಯೆಂದು ಅವನಿಗೆ ಗೊತ್ತಿದೆ. (1ಚ) ಇವತ್ತು ಮಳೆ ಬರಬಹುದೆಂದು ಅವನಿಗೆ ಅನಿಸುತ್ತದೆ. (1ಟ) ಅವರು ತುಂಬಾ ತಿಳಿದವರೆಂದು ಅವನು ಎಣಿಸುತ್ತಿದ್ದ. ಈ ರೀತಿ ಇನ್ನೊಬ್ಬನ ಸೊಲ್ಲನ್ನು ಇಲ್ಲವೇ ಅನಿಸಿಕೆಯನ್ನು ಎತ್ತಿ ಹೇಳುವಲ್ಲಿ ಮಾತ್ರವಲ್ಲದೆ, ಬೇರೆಯೂ ಕೆಲವು ಕಡೆಗಳಲ್ಲಿ ಎಂದು ಎಂಬುದನ್ನು ಬಳಸಿ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಒಳಸೊಲ್ಲನ್ನಾಗಿ ಮಾಡಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಒಳಸೊಲ್ಲು ಹೊರಸೊಲ್ಲು ತಿಳಿಸುವ ಎಸಕಕ್ಕೆ ಕತ(ಕಾರಣ)ವನ್ನು ಒದಗಿಸುತ್ತದೆ: (1) ಊರಿಗೆ ಹೋಗಲಿದೆಯೆಂದು ರಾಜು ಇವತ್ತು ನಾಲ್ಕು ಗಂಟೆಗೇ ಎದ್ದಿದ್ದಾನೆ. ಎಂದು ಎಂಬ ಪರಿಚೆರೂಪವನ್ನು ಮಾತ್ರವಲ್ಲದೆ, ಎಂಬುದು ಎಂಬ ಹೆಸರುರೂಪವನ್ನೂ ಇಂತಹ ಎತ್ತುಗೆ ಸೊಲ್ಲುಗಳ ಬಳಿಕ ಬಳಸಲು ಬರುತ್ತದೆ: (1ಕ) ತನ್ನ ಮನೆಗೆ ಬಣ್ಣ ಬಳಿಯುವುದಿನ್ನೂ ಬಾಕಿಯಿದೆ ಎಂಬುದು ಅವನಿಗೆ ಇದ್ದಕ್ಕಿಂದ್ದಂತೆ ನೆನಪಾಯಿತು. (1ಚ) ತಾನು ಮನೆ ಕೊಂಡಿದ್ದೇನೆ ಎಂಬುದನ್ನು ಅವನು ಯಾರಿಗೂ ಹೇಳಿರಲಿಲ್ಲ. ಎಂದು ಪದವನ್ನು ಬಳಸಿರುವಲ್ಲಿ ಎತ್ತುಗೆ ಸೊಲ್ಲು ಮತ್ತು ಹೊರಸೊಲ್ಲು ಎಂಬುದಾಗಿ ಎರಡು ಸೊಲ್ಲುಗಳನ್ನು ಒಟ್ಟು ಸೇರಿಸಲಾಗಿದೆ; ಹೀಗೆ ಒಟ್ಟು ಸೇರಿಸುವಾಗ, ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಗೆ ಮತ್ತು ಅವರ ಜಾಗ ಮತ್ತು ಹೊತ್ತುಗಳಿಗೆ ಹೊಂದಿಕೊಳ್ಳುವ ಹಾಗೆ ಎತ್ತುಗೆ ಸೊಲ್ಲಿನಲ್ಲಿ ಕೆಲವು ಬಗೆಯ ಮಾರ್ಪಾಡುಗಳನ್ನು ಮಾಡಲು ಬರುತ್ತದೆ. ಎತ್ತುಗೆ ಸೊಲ್ಲಿನಲ್ಲಿ ಬರುವ ಆಡುಪದಗಳಲ್ಲಿ ನಡೆಸಬಲ್ಲ ಮಾರ್ಪಾಡುಗಳು ಅವುಗಳ ಆಡುಗ, ಕೇಳುಗ, ಮತ್ತು ಬೇರೊಬ್ಬರಿಗೂ ಹೊರಸೊಲ್ಲಿನ ಆಡುಗ, ಕೇಳುಗ, ಮತ್ತು ಕೇಳುಗರಿಗೂ ನಡುವಿರುವ ಸಂಬಂದ ಎಂತಹದು ಎಂಬುದನ್ನು ಅವಲಂಬಿಸಿರುತ್ತದೆ. (1) ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಆಡುಗ: ಎರಡು ಸೊಲ್ಲುಗಳಲ್ಲೂ ಆಡುಗ ಒಬ್ಬನೇ ಆಗಿರುವಲ್ಲಿ ಯಾವ ಬದಲಾವಣೆಯೂ

ನಡೆಯುವುದಿಲ್ಲ; ಯಾಕೆಂದರೆ, ಎತ್ತುಗೆ ಸೊಲ್ಲಿನಲ್ಲಿ ಬರುವ ನಾನು ಪದ ಹೊರಸೊಲ್ಲಿಗೆ ಹೊಂದಿಕೆಯಾಗಿಯೇ ಇರುತ್ತದೆ: (1ಕ) ನಾನು ಪಾಸಾಗಿದ್ದೇನೆಂದು ನಾನೇ ರಾಜುವಿನ ಹತ್ತಿರ ಹೇಳಿದ್ದೆ. (1ಚ) ನಾನು ಬರುವುದಿಲ್ಲವೆಂದು ಆವತ್ತೇ (ನಾನು) ನಿಮಗೆ ಹೇಳಿದ್ದೆ. (2) ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಕೇಳುಗ: ಇಂತಹ ಸೊಲ್ಲುಗಳ ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ನಾನು ಪದವನ್ನು ಸಾಮಾನ್ಯವಾಗಿ ಬಿಟ್ಟುಕೊಡಲಾಗುತ್ತದೆ, ಮತ್ತು ಹೊರಸೊಲ್ಲಿನ ನೀನು ಪದವನ್ನು ಎತ್ತುಗೆ ಸೊಲ್ಲಿನ ಮೊದಲು ಕೊಡಲಾಗುತ್ತದೆ: (1ಕ) “ನಾನು ಮನೆಗೆ ಹೋಗುತ್ತೇನೆ” ಎಂದು ನೀನು ಹೇಳಿದ್ದಿ. (1ಚ) ನೀನು ಮನೆಗೆ ಹೋಗುತ್ತೇನೆಂದು ಹೇಳಿದ್ದಿ. (1ಚ) ಸೊಲ್ಲಿನಲ್ಲಿ ನೀನು ಎಂಬುದನ್ನು ಇನ್ನೊಮ್ಮೆ ಹೊರಸೊಲ್ಲಿನಲ್ಲಿ ಬಳಸಲು ಬರುವುದಿಲ್ಲ; ಹಾಗಾಗಿ, ಅದು ಎತ್ತುಗೆ ಸೊಲ್ಲಿನ ಪದವಲ್ಲ, ಹೊರಸೊಲ್ಲಿನ ಪದವೇ ಎಂಬುದಾಗಿ, ಮತ್ತು ಎತ್ತುಗೆ ಸೊಲ್ಲಿನ ನಾನು ಎಂಬುದು (1ಚ)ದಲ್ಲಿ ಬಿದ್ದುಹೋಗಿದೆ ಎಂಬುದಾಗಿಯೂ ತಿಳಿಯಲು ಬರುತ್ತದೆ. ಹೊರಸೊಲ್ಲಿನ ಕೇಳುಗವನ್ನು ತಿಳಿಸಲು ಮದಿಪಿನ ಹಲವೆಣಿಕೆಯ ರೂಪವನ್ನು ಬಳಸಿರುವಲ್ಲಿ ಇದು ಇನ್ನಶ್ಟು ಸರಿಯಾಗಿ ಗೊತ್ತಾಗುತ್ತದೆ: (1ಕ) “ನಾನು ಮನೆಗೆ ಹೋಗುತ್ತೇನೆ” ಎಂದು ನೀವು ಹೇಳಿದ್ದಿರಿ. (1ಚ) ನೀವು ಮನೆಗೆ ಹೋಗುತ್ತೇನೆಂದು ಹೇಳಿದ್ದಿರಿ. (1ಚ)ದಲ್ಲಿ ಬಂದಿರುವ ನೀವು ಎಂಬುದನ್ನು ಎಂದು ಪದದ ಬಳಿಕವೂ ಬಳಸಲು ಬರುತ್ತದೆ ಎಂಬುದನ್ನು ಗಮನಿಸಬಹುದು: (1ಟ) ಮನೆಗೆ ಹೋಗುತ್ತೇನೆಂದು ನೀವು ಹೇಳಿದ್ದಿರಿ. (3) ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಬೇರೊಬ್ಬ: ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಂದ ಬೇರೊಬ್ಬ ವ್ಯಕ್ತಿಯಾಗಿರುವಲ್ಲಿ ಎತ್ತುಗೆ ಸೊಲ್ಲಿನ ನಾನು ಪದವನ್ನು ಹಾಗೆಯೇ ಉಳಿಸಬಹುದು, ಇಲ್ಲವೇ ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ ತಾನು ಎಂಬುದಾಗಿ ಮಾರ್ಪಡಿಸಬಹುದು:

(1ಕ) ರಾಜು ಜಾನಕಿಯ ಹತ್ತಿರ ನಾನೊಂದು ಹುಲಿಯನ್ನು ಕೊಂದಿದ್ದೇನೆಂದು ಹೇಳಿದ್ದಾನೆ. (1ಚ) ರಾಜು ಜಾನಕಿಯ ಹತ್ತಿರ ತಾನೊಂದು ಹುಲಿಯನ್ನು ಕೊಂದಿದ್ದೇನೆಂದು ಹೇಳಿದ್ದಾನೆ. ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನ ಕೇಳುಗ ಹೊರಸೊಲ್ಲಿನ ಆಡುಗವಾಗಿದೆಯಾದರೆ, ಅದರ ಎತ್ತುಗೆ ಸೊಲ್ಲಿನಲ್ಲಿ ಬರುವ ನಾನು ಪದ ಇಪ್ಪುರುಳಿಗೆ ಎಡೆಕೊಡಬಲ್ಲುದು: (1) ನಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಕ) “ನಾನು ಪಾಸಾಗಿದ್ದೇನೆ” ಎಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಚ) “ನೀನು ಪಾಸಾಗಿದ್ದೀ” ಎಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1)ನೇ ಸೊಲ್ಲಿಗೆ (1ಕ) ಸೊಲ್ಲಿನ ಹುರುಳೂ ಸಿಗಬಲ್ಲುದು, ಮತ್ತು (1ಚ) ಸೊಲ್ಲಿನ ಹುರುಳೂ ಸಿಗಬಲ್ಲುದು. ಎತ್ತುಗೆ ಸೊಲ್ಲಿನಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಅದಕ್ಕೆ ಎಂದು ಎಂಬ ಪದವನ್ನು ಸೇರಿಸಲಾಗಿದೆಯಾದರೆ, ಆ ಸೊಲ್ಲಿಗೆ (1ಕ) ಸೊಲ್ಲಿನ ಹುರುಳು ಸಿಗುತ್ತದೆ, ಮತ್ತು ಅದರಲ್ಲಿ ಬಂದಿರುವ ನೀನು ಪದವನ್ನು, ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ, ನಾನು ಎಂಬುದಾಗಿ ಮಾರ್ಪಡಿಸಲಾಗಿದೆಯಾದರೆ (1ಚ) ಸೊಲ್ಲಿನ ಹುರುಳು ಸಿಗುತ್ತದೆ. ಮೇಲೆ ವಿವರಿಸಿದ ಹಾಗೆ, ಎತ್ತುಗೆ ಸೊಲ್ಲಿನ ನಾನು ಪದದ ಬದಲು ತಾನು ಪದವನ್ನು ಬಳಸಿದಲ್ಲಿ ಈ ಇಪ್ಪುರುಳು ಇಲ್ಲವಾಗುತ್ತದೆ: (1ಟ) ತಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಟ) ಸೊಲ್ಲಿಗೆ (1ಕ) ಸೊಲ್ಲಿನ ಹುರುಳು ಬರಬಲ್ಲುದಲ್ಲದೆ (1ಚ) ಸೊಲ್ಲಿನ ಹುರುಳು ಬರಲಾರದು. ಅದರಲ್ಲಿ ಬಂದಿರುವ ತಾನು ಪದ ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಂದ ಬೇರೆ ಎಂಬುದನ್ನು ತಿಳಿಸುತ್ತದೆ; ಹಾಗಾಗಿ, ಅದು ಆ ಸೊಲ್ಲಿನಲ್ಲೇನೇ ಬಂದಿರುವ ಜಾನಕಿಯನ್ನು ಮಾತ್ರ ತಿಳಿಸಬಲ್ಲುದು. (4) ಎತ್ತುಗೆ ಸೊಲ್ಲಿನ ಕೇಳುಗ ಹೊರಸೊಲ್ಲಿನ ಆಡುಗ: ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನ ಕೇಳುಗನನ್ನು ತಿಳಿಸುವ ನೀನು ಪದವನ್ನು ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ ನಾನು ಎಂಬುದಾಗಿ ಮಾರ್ಪಡಿಸಲು ಬರುತ್ತದೆ:

(1ಕ) “ನೀನು ಪಾಸಾಗಿದ್ದಿ” ಎಂದು ಅವಳು ನನ್ನ ಹತ್ತಿರ ಹೇಳಿದ್ದಾಳೆ. (1ಚ) ನಾನು ಪಾಸಾಗಿದ್ದೇನೆಂದು ಅವಳು ನನ್ನ ಹತ್ತಿರ ಹೇಳಿದ್ದಾಳೆ. ಆದರೆ, ನೀನು ಎಂಬುದನ್ನು ನಾನು ಎಂಬುದಾಗಿ ಮಾರ್ಪಡಿಸಿದ ಸೊಲ್ಲಿಗೆ ಎತ್ತುಗೆ ಸೊಲ್ಲಿನ ಆಡುಗ ಹೊರಸೊಲ್ಲಿನ ಬೇರೊಬ್ಬನಾಗಿರುವಂತಹ (1ಟ) ಸೊಲ್ಲಿನ ಹುರುಳೂ ಬರಬಲ್ಲುದು: (1ಟ) “ನಾನು ಪಾಸಾಗಿದ್ದೇನೆ” ಎಂದು ಅವಳು ನನ್ನ ಹತ್ತಿರ ಹೇಳಿದ್ದಾಳೆ. ಈ ಇಪ್ಪುರುಳನ್ನು ಇಲ್ಲವಾಗಿಸಲು (1ಟ)ದಲ್ಲಿ ಬಂದಿರುವ ಎತ್ತುಗೆ ಸೊಲ್ಲಿನ ನಾನು ಎಂಬುದನ್ನು (1ಚ)ದಲ್ಲಿ ಕಾಣಿಸಿದ ಹಾಗೆ ಮಾರ್ಪಡಿಸದೆ ಉಳಿಸುವ ಬದಲು, ತಾನು ಎಂಬುದಾಗಿ ಮಾರ್ಪಡಿಸಬಹುದು: (1ತ) ತಾನು ಎಂಟು ಗಂಟೆಗೆ ಹೋಗಬೇಕೆಂದು ಅವಳು ನನ್ನ ಹತ್ತಿರ ಹೇಳಿದ್ದಾಳೆ. (5) ಎತ್ತುಗೆ ಸೊಲ್ಲಿನ ಕೇಳುಗ ಹೊರಸೊಲ್ಲಿನ ಕೇಳುಗ: ಇಂತಹ ಸೊಲ್ಲುಗಳ ಎತ್ತುಗೆ ಸೊಲ್ಲಿನಲ್ಲಿ ಬರುವ ನೀನು ಪದ ಹೊರಸೊಲ್ಲಿಗೂ ಹೊಂದಿಕೆಯಾಗುವ ಕಾರಣ, ಅದನ್ನು ಯಾವ ರೀತಿಯಲ್ಲೂ ಮಾರ್ಪಡಿಸಬೇಕಾಗುವುದಿಲ್ಲ. (1ಕ) “ನಿನಗೆ ಮೇಲಿನ ಕೆಲಸ ಸಿಕ್ಕಿದೆ” ಎಂದು ಅವರು ನಿನ್ನ ಹತ್ತಿರ ಹೇಳಿದ್ದರಲ್ಲವೇ? (1ಚ) ನಿನಗೆ ಮೇಲಿನ ಕೆಲಸ ಸಿಕ್ಕಿದೆಯೆಂದು ಅವರು ನಿನ್ನ ಹತ್ತಿರ ಹೇಳಿದ್ದರಲ್ಲವೇ? (6) ಎತ್ತುಗೆ ಸೊಲ್ಲಿನ ಕೇಳುಗ ಹೊರಸೊಲ್ಲಿನ ಬೇರೊಬ್ಬ: ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನ ನೀನು ಪದಕ್ಕೆ ಬದಲಾಗಿ, ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ, ಅದು ತಿಳಿಸುವ ಪಾಂಗನ್ನು ಗುರುತಿಸುವ ಹೆಸರುಪದವನ್ನು ಬಳಸಲು ಬರುತ್ತದೆ: (1) “ನೀನು ಎಂಟು ಗಂಟೆಗೆ ಹೋಗಬೇಕು” ಎಂದು ಅವಳು ಹರಿಯ ಹತ್ತಿರ ಹೇಳಿದ್ದಾಳೆ.

(1ಕ) ನೀನು ಎಂಟು ಗಂಟೆಗೆ ಹೋಗಬೇಕೆಂದು ಅವಳು ಹರಿಯ ಹತ್ತಿರ ಹೇಳಿದ್ದಾಳೆ. (1ಚ) ಹರಿ ಎಂಟು ಗಂಟೆಗೆ ಹೋಗಬೇಕೆಂದು ಅವಳು ಆತನ ಹತ್ತಿರ ಹೇಳಿದ್ದಾಳೆ. (7) ಎತ್ತುಗೆ ಸೊಲ್ಲಿನ ಬೇರೊಬ್ಬ ಹೊರಸೊಲ್ಲಿನ ಆಡುಗ: ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನಲ್ಲಿ ಬೇರೊಬ್ಬ ವ್ಯಕ್ತಿಯನ್ನು ಗುರುತಿಸುವುದಕ್ಕಾಗಿ ಬಂದಿರುವ ಹೆಸರುಪದವನ್ನು ನಾನು ಎಂಬುದಾಗಿ ಮಾರ್ಪಡಿಸಲು ಬರುತ್ತದೆ: (1ಕ) “ರಾಜು ಪಾಸಾಗಿದ್ದಾನೆ” ಎಂದು ಜಾನಕಿ ಹರಿಯ ಹತ್ತಿರ ಹೇಳಿದ್ದಾಳೆ. (1ಚ) ನಾನು ಪಾಸಾಗಿದ್ದೇನೆಂದು ಜಾನಕಿ ಹರಿಯ ಹತ್ತಿರ ಹೇಳಿದ್ದಾಳೆ. ಆದರೆ, ಈ ರೀತಿ ಬಳಕೆಯಾಗಿರುವ ನಾನು ಪದ ಎತ್ತುಗೆ ಸೊಲ್ಲಿನ ಆಡುಗವನ್ನೂ ತಿಳಿಸಬಲ್ಲುದಾದ ಕಾರಣ ಇಪ್ಪುರುಳು ಕಾಣಿಸಿಕೊಳ್ಳುತ್ತದೆ; ಮೇಲೆ ತಿಳಿಸಿದ ಹಾಗೆ, ಈ ಎರಡನೇ ಹುರುಳು ಬಂದಿರುವಲ್ಲಿ ನಾನು ಪದದ ಬದಲು ತಾನು ಪದವನ್ನು ಬಳಸುವ ಮೂಲಕ ಇಪ್ಪುರುಳನ್ನು ಇಲ್ಲವಾಗಿಸಲು ಬರುತ್ತದೆ: (1ಟ) ತಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (8) ಎತ್ತುಗೆ ಸೊಲ್ಲಿನ ಬೇರೊಬ್ಬ ಹೊರಸೊಲ್ಲಿನ ಕೇಳುಗ: ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನಲ್ಲಿ ಬೇರೊಬ್ಬನನ್ನು ಗುರುತಿಸಲು ಬಳಸಿರುವ ಪದಕ್ಕೆ ಬದಲಾಗಿ ನೀನು ಪದವನ್ನು ಬಳಸಲು ಬರುತ್ತದೆ: (1ಕ) “ರಾಜು ಪಾಸಾಗಿದ್ದಾನೆ” ಎಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಚ) ನೀನು ಪಾಸಾಗಿದ್ದೀಯೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. ಆದರೆ, ಇಂತಹ ಎತ್ತುಗೆ ಸೊಲ್ಲುಗಳ ಕೇಳುಗ ಹೊರಸೊಲ್ಲಿನ ಆಡುಗವಾಗಿದ್ದಲ್ಲಿ, ಈ ಮಾರ್ಪಾಡು ಇಪ್ಪುರುಳಿಗೆ ಎಡೆಕೊಡಬಲ್ಲುದು; ಯಾಕೆಂದರೆ, ಹೆಸರುಪದದ ಬದಲಿಗೆ ಬಂದ ನೀನು ಪದ ಎತ್ತುಗೆ ಸೊಲ್ಲಿನ ಕೇಳುಗನನ್ನೂ ತಿಳಿಸಬಲ್ಲುದು: (1ಟ) “ನೀನು ಪಾಸಾಗಿದ್ದೀ” ಎಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ.

ಈ ಇಪ್ಪುರುಳನ್ನು ಹೋಗಲಾಡಿಸಲು (1ಟ) ಸೊಲ್ಲಿನ ನೀನು ಪದದ ಬದಲು ನಾನು ಪದವನ್ನು ಬಳಸಬಹುದು, ಮತ್ತು ಹಾಗೆ ಮಾಡಿದಾಗ ಕಾಣಿಸಿಕೊಳ್ಳುವ ಇನ್ನೊಂದು ಬಗೆಯ ಇಪ್ಪುರುಳನ್ನು ನಾನು ಪದದ ಬದಲು ತಾನು ಪದವನ್ನು ಬಳಸಿ ಇಲ್ಲವಾಗಿಸಬಹುದು: (1ತ) ನಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಪ) ತಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (9) ಎತ್ತುಗೆ ಸೊಲ್ಲಿನ ಬೇರೊಬ್ಬ ಹೊರಸೊಲ್ಲಿನ ಬೇರೊಬ್ಬ: ಇಂತಹ ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನ ಹೆಸರುಪದದ ಬದಲಿಗೆ ಯಾವ ಆಡುಪದವನ್ನೂ ಬಳಸಲು ಬರುವುದಿಲ್ಲ: (1ಕ) ರಾಜು ಪಾಸಾಗಿದ್ದಾನೆಂದು ಹರಿ ಅವನ ಅಣ್ಣನ ಹತ್ತಿರ ಹೇಳಿದ್ದಾನೆ. (1ಚ) ನಿನ್ನ ತಮ್ಮ ಪಾಸಾಗಿದ್ದಾನೆಂದು ಹರಿ ರಾಜುವಿನ ಅಣ್ಣನ ಹತ್ತಿರ ಹೇಳಿದ್ದಾನೆ. (1ಕ)ದಲ್ಲಿ ಎತ್ತುಗೆ ಸೊಲ್ಲಿನ ರಾಜು ಎಂಬುದನ್ನು ನಿನ್ನ ತಮ್ಮ ಎಂಬುದಾಗಿ ಮಾರ್ಪಡಿಸಲು ಬರುತ್ತದೆ; ಆದರೆ, ಅದರಲ್ಲಿ ಬಳಕೆಯಾಗಿರುವ ನಿನ್ನ ಎಂಬ ಆಡುಪದ ಹೊರಸೊಲ್ಲಿನ ಕೇಳುಗನನ್ನು ತಿಳಿಸುತ್ತದಲ್ಲದೆ ಬೇರೊಬ್ಬನನ್ನಲ್ಲ.

9.2.6 ಬೇರೆ ಮಾರ್ಪಾಡುಗಳು

ಮೇಲೆ ವಿವರಿಸಿದ ಹಾಗೆ, ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ಹೆಸರುಪದಗಳನ್ನು ಮತ್ತು ಆಡುಪದಗಳನ್ನು ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಗೆ ಹೊಂದಿಕೆಯಾಗುವ ಹಾಗೆ ಮಾರ್ಪಡಿಸಿದಾಗ, ಅದರೊಂದಿಗೆ ಎತ್ತುಗೆ ಸೊಲ್ಲಿನ ಎಸಕರೂಪದಲ್ಲೂ ಮಾರ್ಪಾಡುಗಳನ್ನು ನಡೆಸಬೇಕಾಗುತ್ತದೆ; ಅವುಗಳ ಕೊನೆಯಲ್ಲಿ ಬರುವ ಹೊತ್ತಿನ ಒಟ್ಟುಗಳು ಈ ಆಡುಪದಗಳಿಗೆ ಹೊಂದಿಕೆಯಾಗುವಂತೆ ಮಾರ್ಪಡುವುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) “ರಾಜು ಪಾಸಾಗಿದ್ದಾನೆ” ಎಂದು ಜಾನಕಿ ಹರಿಯ ಹತ್ತಿರ ಹೇಳಿದ್ದಾಳೆ. (1ಚ) ನಾನು ಪಾಸಾಗಿದ್ದೇನೆಂದು ಜಾನಕಿ ಹರಿಯ ಹತ್ತಿರ ಹೇಳಿದ್ದಾಳೆ.

(2ಕ) “ನೀನು ಪಾಸಾಗಿದ್ದಿ” ಎಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (2ಚ) ನಾನು ಪಾಸಾಗಿದ್ದೇನೆಂದು ಜಾನಕಿ ನನ್ನ ಹತ್ತಿರ ಹೇಳಿದ್ದಾಳೆ. (1ಕ) ಸೊಲ್ಲಿನಲ್ಲಿ ಬಂದಿರುವ ಎತ್ತುಗೆ ಸೊಲ್ಲಿನ ಬೇರೊಬ್ಬ ಹೊರಸೊಲ್ಲಿನ ಆಡುಗವಾಗಿರುವುದರಿಂದ, ರಾಜು ಎಂಬ ಹೆಸರುಪದವನ್ನು (1ಚ) ಸೊಲ್ಲಿನಲ್ಲಿ ನಾನು ಎಂಬುದಾಗಿ ಮಾರ್ಪಡಿಸಲಾಗಿದೆ, ಮತ್ತು ಅದಕ್ಕೆ ಹೊಂದಿಕೆಯಾಗುವಂತೆ, ಪಾಸಾಗಿದ್ದಾನೆ ಎಂಬ ಎಸಕರೂಪವನ್ನು ಪಾಸಾಗಿದ್ದೇನೆ ಎಂಬುದಾಗಿಯೂ ಮಾರ್ಪಡಿಸಲಾಗಿದೆ. ಇದೇ ರೀತಿಯಲ್ಲಿ, (2ಕ) ಸೊಲ್ಲಿನಲ್ಲಿ ಬಂದಿರುವ ಎತ್ತುಗೆ ಸೊಲ್ಲಿನ ಕೇಳುಗ ಹೊರಸೊಲ್ಲಿನ ಆಡುಗವಾಗಿರುವುದರಿಂದ, ನೀನು ಎಂಬುದನ್ನು ನಾನು ಎಂಬುದಾಗಿ ಮಾರ್ಪಡಿಸಲಾಗಿದೆ, ಮತ್ತು ಅದಕ್ಕೆ ಹೊಂದಿಕೆಯಾಗುವಂತೆ ಪಾಸಾಗಿದ್ದಿ ಎಂಬುದನ್ನು ಪಾಸಾಗಿದ್ದೇನೆ ಎಂಬುದಾಗಿಯೂ ಮಾರ್ಪಡಿಸಲಾಗಿದೆ. ತಾನು ಎಂಬ ಆಡುಪದ ಮಾತ್ರ ಈ ಕಟ್ಟಲೆಗೆ ಹೊರಪಡಿಕೆಯಾಗಿದೆ; ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ನಾನು ಎಂಬ ಪದವನ್ನು ಹೊರಸೊಲ್ಲಿನ ಬೇರೊಬ್ಬ ಎಂಬುದಕ್ಕೆ ಹೊಂದಿಕೆಯಾಗುವಂತೆ ತಾನು ಎಂಬುದಾಗಿ ಮಾರ್ಪಡಿಸಿದಾಗಲೂ ಅದರ ಎಸಕಪದರೂಪ ಮಾರ್ಪಡದೆ ಉಳಿಯುತ್ತದೆ: (1ಕ) “ನಾನು ಮನೆಗೆ ಹೋಗುತ್ತೇನೆ” ಎಂದು ರಾಜು ನನ್ನ ಹತ್ತಿರ ಹೇಳಿದ್ದ. (1ಚ) ತಾನು ಮನೆಗೆ ಹೋಗುತ್ತೇನೆಂದು ರಾಜು ನನ್ನ ಹತ್ತಿರ ಹೇಳಿದ್ದ. (1ಚ)ದಲ್ಲಿ ಎತ್ತುಗೆ ಸೊಲ್ಲಿನ ನಾನು ಎಂಬುದು ತಾನು ಎಂಬುದಾಗಿ ಮಾರ್ಪಟ್ಟಿದೆಯಾದರೂ, ಅದರ ಹೋಗುತ್ತೇನೆ ಎಂಬ ಎಸಕಪದ ಮಾರ್ಪಡದೆ G½¢zÉ. ಎತ್ತುಗೆ ಸೊಲ್ಲಿನ ಆಡುಪದಗಳು ಮತ್ತು ಎಸಕಪದದ ಕೊನೆಯಲ್ಲಿ ಬರುವ ಗುರುತಿನ ಒಟ್ಟುಗಳು ಈ ರೀತಿ ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಗೆ ಹೊಂದಿಕೆಯಾಗುವಂತೆ ಮಾರ್ಪಾಡುತ್ತವೆಯಾದರೂ, ಅದರ ಎಸಕಪದರೂಪದಲ್ಲಿ ಬರುವ ಹೊತ್ತಿನ ಒಟ್ಟು ಮಾರ್ಪಡದೆ ಉಳಿಯುತ್ತದೆ: (1ಕ) “ನಾನು ಮನೆಗೆ ಹೋಗುತ್ತೇನೆ” ಎಂದು ನೀವು ಹೇಳಿದ್ದಿರಿ. (1ಚ) ಮನೆಗೆ ಹೋಗುತ್ತೇನೆಂದು ನೀವು ಹೇಳಿದ್ದಿರಲ್ಲವೇ? (2ಕ) “ನಾನು ಎಂಟು ಗಂಟೆಗೆ ಹೋಗುತ್ತೇನೆ” ಎಂದು ಆಕೆ ಹೇಳಿದ್ದಳು.

(2ಚ) ತಾನು ಎಂಟು ಗಂಟೆಗೆ ಹೋಗುತ್ತೇನೆಂದು ಆಕೆ ಹೇಳಿದ್ದಳು. (1ಚ) ಮತ್ತು (2ಚ) ಸೊಲ್ಲುಗಳಲ್ಲಿ ಎತ್ತುಗೆ ಸೊಲ್ಲಿನ ಎಸಕಪದದ ಹೊತ್ತಿನ ಒಟ್ಟು ಹೊರಸೊಲ್ಲಿನ ಹೊತ್ತಿನ ಒಟ್ಟಿಗೆ ಹೊಂದಿಕೆಯಾಗುವಂತೆ ಮಾರ್ಪಟ್ಟಿಲ್ಲ. ಎತ್ತಿಹೇಳುವ ಸೊಲ್ಲು ಅರಿಕೆರೂಪದಲ್ಲಿದ್ದರೆ, ಸಾಮಾನ್ಯವಾಗಿ ಅದನ್ನು ಹೇಳಿಕೆಯ ರೂಪಕ್ಕೆ ಮಾರ್ಪಡಿಸಲಾಗುತ್ತದೆ: (1ಕ) “ಯಾರೂ ಹೊರಗೆ ಹೋಗಬೇಡಿ” (1ಚ) ಯಾರೂ ಹೊರಗೆ ಹೋಗಬಾರದೆಂದು ರಾಜು ಹೇಳಿದ್ದ. (2ಕ) “ನೀವು ಹೊರಗೆ ಹೋಗಿ” (2ಚ) ನಾವು ಹೊರಗೆ ಹೋಗಬೇಕೆಂದು ರಾಜು ಹೇಳಿದ್ದಾನೆ. ಎತ್ತುಗೆ ಸೊಲ್ಲಿನಲ್ಲಿ ಬರುವ ಎಸಕಪದದ ಹೊತ್ತಿನ ರೂಪ ಮಾರ್ಪಡದೆ ಉಳಿಯುವುದಾದರೂ, ಅದಕ್ಕೆ ಹೊಂದಿಕೊಂಡಿರುವ ಹೊತ್ತಿನ ಪರಿಚೆಪದಗಳು ಬದಲಾಗುತ್ತವೆ; ಅವನ್ನು ಹೊರಸೊಲ್ಲಿನ ಹೊತ್ತಿಗೆ ಹೊಂದಿಕೆಯಾಗುವಂತೆ ಮಾರ್ಪಡಿಸಲಾಗುತ್ತದೆ, ಮತ್ತು ಇದರಿಂದಾಗಿ ಕೆಲವೊಮ್ಮೆ ಅವಕ್ಕೂ ಎಸಕಪದದ ಹೊತ್ತಿನ ರೂಪಕ್ಕೂ ನಡುವಿದ್ದ ಹೊಂದಾಣಿಕೆ ಇಲ್ಲವಾಗುತ್ತದೆ: (1ಕ) “ನಾನು ನಾಳೆ ಬರುತ್ತೇನೆ” ಎಂದು ರಾಜು ಹೇಳಿದ್ದ. (1ಚ) ರಾಜು ನಿನ್ನೆಯೇ ಬರುತ್ತೇನೆಂದು ಹೇಳಿದ್ದ. (1ಕ)ದಲ್ಲಿ ಎತ್ತುಗೆ ಸೊಲ್ಲನ್ನು ಮಾರ್ಪಡಿಸದೆ ಎತ್ತುಗೆ ಗುರುತುಗಳೊಳಗೆ ಕೊಡಲಾಗಿದೆ; ಇದಕ್ಕೆ ಬದಲು, (1ಚ)ದಲ್ಲಿ ಅದನ್ನು ಹೊರಸೊಲ್ಲಿನ ಹೊತ್ತಿಗೆ ಹೊಂದಿಕೆಯಾಗುವ ಹಾಗೆ ಮಾರ್ಪಡಿಸಲಾಗಿದೆ; ಹೀಗೆ ಮಾಡಿದಾಗ, ನಾಳೆ ಎಂಬುದು ನಿನ್ನೆ ಎಂಬುದಾಗಿ ಬದಲಾಗಿದೆ, ಮತ್ತು ಇದರಿಂದಾಗಿ ಅದಕ್ಕೂ ಬರುತ್ತೇನೆ ಎಂಬ ಎಸಕಪದ ತಿಳಿಸುವ ಹೊತ್ತಿಗೂ ನಡುವಿದ್ದ ಹೊಂದಾಣಿಕೆ ಇಲ್ಲವಾಗಿದೆ. ಹೊತ್ತಿನ ಪರಿಚೆಪದಗಳ ಹಾಗೆ ಜಾಗದ ಪರಿಚೆಪದಗಳನ್ನೂ ಹೊರಸೊಲ್ಲಿನ ಜಾಗಕ್ಕೆ ಹೊಂದಿಕೆಯಾಗುವಂತೆ ಮಾರ್ಪಡಿಸಲಾಗುತ್ತದೆ: (1ಕ) “ಇಲ್ಲಿ ಜೋರಾಗಿ ಮಳೆ ಬರುತ್ತಿದೆ” ಎಂದು ರಾಜು ಹೇಳಿದ್ದಾನೆ. (1ಚ) ಅಲ್ಲಿ ಜೋರಾಗಿ ಮಳೆ ಬರುತ್ತಿದೆಯೆಂದು ರಾಜು ಹೇಳಿದ್ದಾನೆ.

(1ಕ)ದಲ್ಲಿ ಬಂದಿರುವ ಇಲ್ಲಿ ಎಂಬ ಪರಿಚೆಪದ ಎತ್ತುಗೆ ಸೊಲ್ಲಿನ ಆಡುಗನ ಜಾಗವನ್ನು ತಿಳಿಸುತ್ತದೆ; ಇದನ್ನು ಹೊರಸೊಲ್ಲಿನ ಆಡುಗನ ಜಾಗಕ್ಕೆ ಹೊಂದಿಕೆಯಾಗುವಂತೆ ಮಾಡಲು (1ಚ)ದಲ್ಲಿ ಅಲ್ಲಿ ಎಂಬುದಾಗಿ ಮಾರ್ಪಡಿಸಲಾಗಿದೆ. ಬರು ಮತ್ತು ಹೋಗು ಎಂಬ ಎರಡು ಎಸಕಪದಗಳ ಬಳಕೆ ಅವುಗಳ ಪಾಂಗುಗಳಾಗಿ ಬರುವ ಆಡುಪದಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಹೊರಸೊಲ್ಲಿನ ಆಡುಗ ಮತ್ತು ಕೇಳುಗರಿಗೆ ಹೊಂದಿಕೊಳ್ಳುವಂತೆ ಎತ್ತುಗೆ ಸೊಲ್ಲಿನಲ್ಲಿ ಮಾರ್ಪಾಡುಗಳನ್ನು ನಡೆಸುವಾಗ, ಅದರ ಎಸಕಪದಗಳಾಗಿ ಬರು ಇಲ್ಲವೇ ಹೋಗು ಬಂದಿವೆಯಾದರೆ ಅವುಗಳನ್ನೂ ಮಾರ್ಪಡಿಸಲಾಗುತ್ತದೆ: (1ಕ) “ನಾನು ಹರಿಯಲ್ಲಿಗೆ ಹೊಗುತ್ತೇನೆ”ಂದು ರಾಜು ಹೇಳಿದ್ದಾನೆ. (1ಚ) ನಾನು ನಿಮ್ಮಲ್ಲಿಗೆ ಬರುತ್ತೇನೆಂದು ರಾಜು ಹೇಳಿದ್ದಾನೆ. (1ಕ) ಸೊಲ್ಲಿನಲ್ಲಿ ಬಂದಿದ್ದ ಎತ್ತುಗೆ ಸೊಲ್ಲನ್ನು ಅದರ ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ ಮಾಡಲು ಹರಿಯಲ್ಲಿಗೆ ಎಂಬುದನ್ನು ನಿಮ್ಮಲ್ಲಿಗೆ ಎಂಬುದಾಗಿ ಮಾರ್ಪಡಿಸಲಾಗಿದೆ; ಹೀಗೆ ಮಾರ್ಪಡಿಸುವುದರೊಂದಿಗೆ, ಎತ್ತುಗೆ ಸೊಲ್ಲಿನ ಎಸಕಪದವನ್ನೂ ಹೋಗು ಎಂಬುದರಿಂದ ಬರು ಎಂಬುದಕ್ಕೆ ಮಾರ್ಪಡಿಸಲಾಗಿದೆ. ಬರು ಮತ್ತು ಹೋಗು ಪದಗಳ ಬಳಕೆಯ ಹಿಂದಿರುವ ಕಟ್ಟಲೆಯೇನೆಂದರೆ, ಅವುಗಳ ಗುರಿ ಇಲ್ಲವೇ ಸುರು ಪಾಂಗು ತಿಳಿಸುವ ಜಾಗದಲ್ಲಿ ಆಡುಗ ಇಲ್ಲವೇ ಕೇಳುಗರು ಇರುವರಾದರೆ ಬರು ಎಂಬುದನ್ನು ಬಳಸಬೇಕಾಗುತ್ತದೆ, ಮತ್ತು ಅಲ್ಲಿ ಅವರಿಬ್ಬರೂ ಇರುವುದಿಲ್ಲವಾದರೆ ಹೋಗು ಎಂಬುದನ್ನು ಬಳಸಬೇಕಾಗುತ್ತದೆ. (1ಕ) ನಾನು (ನಮ್ಮ) ಮನೆಗೆ ನಾಳೆ ಹೋಗುತ್ತೇನೆ. (1ಚ) ನೀವು ನಮ್ಮ ಮನೆಗೆ ಯಾವಾಗ ಬರುತ್ತೀರಿ? (1ಟ) ನಾನು ನಾಳೆ ನಿಮ್ಮ ಮನೆಗೆ ಹೋಗುವುದಿಲ್ಲ; ಯಾಕೆಂದರೆ, ನೀವು ಅಲ್ಲಿ ಇರುವುದಿಲ್ಲ. (1ಕ) ಸೊಲ್ಲನ್ನು ಆಡುವ ಸಮಯದಲ್ಲಿ ಅದರ ಆಡುಗ ತನ್ನ ಮನೆಯಲ್ಲಿ ಇಲ್ಲ ಎಂಬುದನ್ನು ಅದರಲ್ಲಿ ಬಂದಿರುವ ಹೋಗು ಎಸಕಪದ ತಿಳಿಸುತ್ತದೆ; (1ಚ) ಸೊಲ್ಲನ್ನು ಆಡುವ ಸಮಯದಲ್ಲಿ ಅದರ ಆಡುಗನು ತನ್ನ ಮನೆಯಲ್ಲಿ ಇಲ್ಲದಿದ್ದರೂ, ಕೇಳುಗನು ಅಲ್ಲಿಗೆ ಬರುವ ಸಮಯದಲ್ಲಿ ಅವನು ಅಲ್ಲಿ ಇರುತ್ತಾನೆ ಎಂಬ ಅನಿಸಿಕೆಯ ಮೇಲೆ ಬರು ಎಂಬ ಪದ ಬಳಕೆಯಾಗಿದೆ; ಇದಕ್ಕೆ ಬದಲು, (1ಟ)ದಲ್ಲಿ ಕೇಳುಗ ಆತನ ಮನೆಯಲ್ಲಿ ಇರುವುದಿಲ್ಲ ಎಂಬ ವಿಶಯ ಮೊದಲೇ ತಿಳಿದಿದೆಯಾದ ಕಾರಣ, ಹೋಗು ಪದವನ್ನು ಬಳಸಲಾಗಿದೆ.

9.2.7 ಅಂತೆ ಪದದ ಬಳಕೆ

ಬೇರೊಬ್ಬನು ನುಡಿದ ಸೊಲ್ಲನ್ನು ಎತ್ತಿಹೇಳಲು ಅದರ ಕೊನೆಯಲ್ಲಿ ಅಂತೆ ಎಂಬುದನ್ನು ಸೇರಿಸುವುದು ಇನ್ನೊಂದು ಹೊಲಬು; ಈ ಅಂತೆ ಎಂಬ ಪದವೂ ಅನ್ನು ಎಂಬ ಎಸಕಪದದ ಒಂದು ರೂಪವಾಗಿದೆ; ಆದರೆ, ಇದನ್ನು ಬಳಸಿರುವಲ್ಲಿ ಎತ್ತುಗೆ ಸೊಲ್ಲನ್ನು ಯಾರು ಯಾರಿಗೆ ಯಾವಾಗ ಎಲ್ಲಿ ಹೇಳಿದ್ದಾರೆ ಎಂಬಂತಹ ಆ ಸೊಲ್ಲಿನ ಉಂಟುಮಾಡುವಿಕೆಗೆ ಸಂಬಂದಿಸಿರುವ ವಿಶಯಗಳನ್ನು ತಿಳಿಸಲು ಬರುವುದಿಲ್ಲ. ಹಾಗಾಗಿ, ಅದರ ಆಡುಗ, ಕೇಳುಗ, ಹೊತ್ತು, ಜಾಗ ಮೊದಲಾದವುಗಳನ್ನೆಲ್ಲ ಹೊರ ಸೊಲ್ಲಿನ ಉಂಟುಮಾಡುವಿಕೆಗೆ ಹೊಂದಿಕೊಳ್ಳುವಂತೆ ಕಡ್ಡಾಯವಾಗಿ ಮಾರ್ಪಡಿಸಬೇಕಾಗುತ್ತದೆ. (1ಕ) “ರಾಜು ಇವತ್ತು ಬೆಳಿಗ್ಗೆ ಬಂದ” ಎಂದು ಜಾನಕಿ ಹೇಳಿದಳು. (1ಚ) ನೀವು ನಿನ್ನೆ ಬೆಳಿಗ್ಗೆ ಬಂದಿರಂತೆ. (2ಕ) “ನಾನು ನಿಮಗೆ ಈ ಪುಸ್ತಕವನ್ನು ಕೊಡುವುದಿಲ್ಲ” ಎಂದು ಆತ ಹೇಳಿದ. (2ಚ) ನನಗೆ ಆತ ಆ ಪುಸ್ತಕವನ್ನು ಕೊಡುವುದಿಲ್ಲವಂತೆ. ಎಂದು ಪದದ ಬಳಕೆಯಲ್ಲಿ ಎತ್ತುಗೆ ಸೊಲ್ಲಿನ ಎಸಕಪದದ ಹೊತ್ತಿನ ರೂಪ ಹೊರಸೊಲ್ಲಿಗೆ ಹೊಂದಿಕೆಯಾಗುವಂತೆ ಮಾರ್ಪಡುವುದಿಲ್ಲ; ಆದರೆ, ಅಂತೆ ಪದದ ಬಳಕೆಯಲ್ಲಿ ಎಸಕಪದದ ಹೊತ್ತಿನ ರೂಪವೂ ಹೊರಸೊಲ್ಲಿನ ಉಂಟುಮಾಡುವಿಕೆಗೆ ಹೊಂದಿಕೊಳ್ಳುವಂತೆ ಮಾರ್ಪಡುತ್ತದೆ: (1ಕ) “ಅವರು ಇಲ್ಲಿಗೆ ನಾಳೆ ಬರಲಿ” ಎಂದು ರಾಜು ಹೇಳಿದ್ದಾನೆ. (1ಚ) ನೀವು ಅಲ್ಲಿಗೆ ಇವತ್ತು ಹೋಗಬೇಕಂತೆ. (1ಕ)ದಲ್ಲಿ ಎಂದು ಎಂಬುದರ ಮೂಲಕ ಎತ್ತಿಹೇಳಿದ ಸೊಲ್ಲನ್ನೇ (1ಚ)ದಲ್ಲಿ ಅಂತೆ ಎಂಬುದರ ಮೂಲಕ ಎತ್ತಿ ಹೇಳಲಾಗಿದೆ; (1ಕ)ದ ಎತ್ತುಗೆಸೊಲ್ಲಿನಲ್ಲಿ ಬಂದಿದ್ದ ಅವರು ಎಂಬುದನ್ನು ನೀವು ಎಂಬುದಾಗಿ, ಮತ್ತು ನಾಳೆ ಎಂಬುದು ಇವತ್ತು ಎಂಬುದಾಗಿ ಇಡೀ ಸೊಲ್ಲಿನ ಉಂಟುಮಾಡುವಿಕೆಗೆ ಹೊಂದಿಕೆಯಾಗುವಂತೆ ಮಾರ್ಪಡಿಸಲಾಗಿದೆ; ಇದಲ್ಲದೆ, ಬರಲಿ ಎಂಬ ಎಸಕರೂಪವನ್ನೂ ಹೋಗಬೇಕು ಎಂಬುದಾಗಿ ಮಾರ್ಪಡಿಸಲಾಗಿದೆ.

9.3 ತಾನು ಪದದ ಬಳಕೆ

Eke →

ಆಡುಪದಗಳಲ್ಲಿ ಮೂರನೆಯದಾದ ತಾನು ಎಂಬ ಪದ ಕೆಲವು ವಿಶಯಗಳಲ್ಲಿ ನಾನು ಮತ್ತು ನೀನು ಎಂಬ ಉಳಿದ ಎರಡು ಪದಗಳನ್ನು ಹೋಲುತ್ತದೆ; ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅದು ಅವುಗಳಿಂದ ಬೇರಾಗಿದೆ. ಹಾಗಾಗಿ, ಅದನ್ನೊಂದು ಆಡುಪದವೆಂದು ತಿಳಿಯಬೇಕೇ ಇಲ್ಲವೇ ಬೇರೆಯೇ ಒಂದು ಬಗೆಯ ಪದವೆಂದು ತಿಳಿಯಬೇಕೇ ಎಂಬ ಕೇಳ್ವಿಗೆ ಸುಳುವಾಗಿ ಮರುನುಡಿಯನ್ನು ಕೊಡಲು ಬರುವುದಿಲ್ಲ. ಈ ಸೊಲ್ಲರಿಮೆಯಲ್ಲಿ ಅದಕ್ಕೂ ನಾನು ಮತ್ತು ನೀನು ಎಂಬ ಉಳಿದ ಎರಡು ಪದಗಳಿಗೂ ನಡುವಿರುವ ಹೋಲಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಅದು ಒಂದು ಆಡುಪದವೆಂಬುದಾಗಿ ತೀರ್ಮಾನಿಸಲಾಗಿದೆ. ತಾನು ಪದಕ್ಕಿರುವ ಹಲವು ಬಗೆಯ ಬಳಕೆಗಳನ್ನು ಈ ಮೇಲಿನ ತೀರ್ಮಾನವನ್ನು ಬೆಂಬಲಿಸುವ ಹಾಗೆ ಕಾಣಲು ಬರುತ್ತದೆಯೇ ಎಂಬುದನ್ನು ಇಲ್ಲಿ ಪರಿಶೀಲಿಸಲಾಗಿದೆ.

9.3.1 ಹೋಲಿಕೆಗಳು

ನಾನು ಮತ್ತು ನೀನು ಪದಗಳ ಹಾಗೆ ತಾನು ಪದವೂ ಒಂದು ಆಡುಪದ ಎಂಬುದನ್ನು ಅವುಗಳ ನಡುವೆ ಕಾಣಿಸುವ ಹಲವು ಹೋಲಿಕೆಗಳು ಬೆಂಬಲಿಸುತ್ತವೆ; ಇಂತಹ ಹೋಲಿಕೆಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ: (1) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದವೂ ಅದನ್ನು ಬಳಸಿರುವ ಸೊಲ್ಲಿನ ಉಂಟುಮಾಡುವಿಕೆಗೆ ಸಂಬಂದಿಸಿರುವಂತಹ ಒಂದು ಪಾಂಗನ್ನು ತಿಳಿಸುತ್ತದೆಯೆಂದು ಹೇಳಬಹುದು; ಯಾಕೆಂದರೆ, ಅದರ ಹೆಚ್ಚಿನ ಬಳಕೆಗಳಲ್ಲೂ ಸೊಲ್ಲಿನ ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ವ್ಯಕ್ತಿ ಎಂಬ ಹುರುಳು ಅದಕ್ಕಿದೆ, ಮತ್ತು ಈ ಹುರುಳು ಅದನ್ನು ಸೊಲ್ಲಿನ ಉಂಟುಮಾಡುವಿಕೆಯೊಂದಿಗೆ ಸಂಬಂದಿಸುತ್ತದೆ. (2) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದವೂ ಎಲ್ಲಾ ಬಗೆಯ ಪತ್ತುಗೆ ಒಟ್ಟುಗಳೊಂದಿಗೂ ಬಳಕೆಯಾಗಬಲ್ಲುದು:

(1ಕ) ತನ್ನನ್ನು ಯಾರೂ ಗುರುತಿಸಲಾರರೆಂದು ರಾಜು ತಿಳಿದಿದ್ದ. (1ಚ) ತನ್ನಿಂದ ಯಾರಿಗೂ ತೊಂದರೆಯಾಗಬಾರದೆಂದು ರಾಜು ಹೇಳುತ್ತಿದ್ದ. (1ಟ) ತನಗೆ ಏನೂ ಸಿಗಲಿಲ್ಲವೆಂದು ರಾಜು ಬೇಸರಿಸಿದ್ದ. (1ತ) ತನ್ನಲ್ಲಿ ಯಾರಿಗೂ ನಂಬಿಕೆಯಿಲ್ಲವೆಂದು ರಾಜು ಸಿಟ್ಟಾಗಿದ್ದ. (1ಪ) ತನ್ನ ಕೆಲಸವನ್ನು ರಾಜು ತಾನೇ ಮಾಡಿಕೊಳ್ಳುತ್ತಿದ್ದ. ಇದಲ್ಲದೆ, ಈ ಪತ್ತುಗೆ ಒಟ್ಟುಗಳೊಂದಿಗೆ ಬರುವ ತಾನು ಪದದ ರೂಪಗಳು (ತನ್ನನ್ನು, ತನ್ನಿಂದ, ತನಗೆ, ತನ್ನಲ್ಲಿ, ತನ್ನ ಎಂಬವು) ನಾನು ಮತ್ತು ನೀನು ಪದಗಳ ರೂಪಗಳನ್ನು ಹೋಲುತ್ತವೆ (ನನ್ನನ್ನು, ನನ್ನಿಂದ, ನನಗೆ, ನನ್ನಲ್ಲಿ, ನನ್ನ). (3) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದವೂ ಅದು ತಿಳಿಸುವ ವ್ಯಕ್ತಿಯನ್ನು ನೇರವಾಗಿ ಗುರುತಿಸಲು ಹೋಗುವುದಿಲ್ಲ; ಈ ಗುರುತಿಸುವ ಕೆಲಸವನ್ನು ಸೊಲ್ಲಿನಲ್ಲಿ ಬಂದಿರುವ ಬೇರೊಂದು ಪದ ಇಲ್ಲವೇ ಪದಕಂತೆ ನಡೆಸುತ್ತದೆ. ಹಾಗಾಗಿ, ವ್ಯಕ್ತಿಗಳನ್ನು ಗುರುತಿಸಲು ಬೇಕಾಗುವ ಹಲವು ಬಗೆಯ ನುಡಿತಗಳು ತಾನು ಪದದೊಂದಿಗೂ ಬಳಕೆಯಾಗುವುದಿಲ್ಲ: (1ಕ) *ದೊಡ್ಡ ತಾನು ಮನೆಗೆ ಹೋಗುತ್ತೇನೆಂದು ರಾಜು ಹೇಳಿದ. (1ಚ) *ಮೂವರು ತಾವು ಮನೆಗೆ ಹೋಗುತ್ತೇವೆಂದು ರಾಜು ಹೇಳಿದ. (1ಟ) *ಈ ತಾನು ಮನೆಗೆ ಹೋಗುತ್ತೇನೆಂದು ರಾಜು ಹೇಳಿದ. (1ಕ)ದಲ್ಲಿ ತಾನು ಪದದೊಂದಿಗೆ (ಅದಕ್ಕೆ ಮೊದಲು) ದೊಡ್ಡ ಎಂಬ ಪರಿಚೆಪದವನ್ನು ಬಳಸಿರುವ ಕಾರಣ ಆ ಸೊಲ್ಲು ಸರಿಯಾಗಿಲ್ಲ; (1ಚ-ಟ) ಸೊಲ್ಲುಗಳಲ್ಲೂ ಹೀಗೆಯೇ. (4) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದ ತಿಳಿಸುವ ವ್ಯಕ್ತಿಗಳ ಪರಿಚೆ ಮತ್ತು ಎಣಿಕೆಗಳನ್ನು ಅದರ ಬಳಿಕ ಬರುವ ಬೇರೊಂದು ಪದಕಂತೆಯ ಮೂಲಕ ತಿಳಿಸಲು ಬರುತ್ತದೆ: (1ಕ) ತನಗೆ ದೊಡ್ಡವನಿಗೆ ಸರಿಯಾದ ಮದಿಪು ಸಿಗಲಿಲ್ಲವೆಂದು ರಾಜು ಬೇಸರಿಸಿದ್ದ. (1ಚ) ತಾವು ಮೂವರು ಯಾವಾಗಲೂ ಒಟ್ಟಿಗೇ ಇರಬೇಕೆಂದು ಆ ಹುಡುಗರು ತೀರ್ಮಾನಿಸಿದ್ದರು. (1ಟ) ತಮಗೆ ಮೂವರಿಗೆ ಏನೂ ಸಿಗಲಿಲ್ಲವೆಂದು ಆ ಹುಡುಗರು ಸಿಟ್ಟಾಗಿದ್ದರು.

(1ಕ)ದ ಒಳಸೊಲ್ಲಿನಲ್ಲಿ ಬಂದಿರುವ ತಾನು ಎಂಬ ಪದ ತಿಳಿಸುವ ವ್ಯಕ್ತಿ ಯಾರು ಎಂಬುದನ್ನು ಹೊರಸೊಲ್ಲಿನಲ್ಲಿ ಬಂದಿರುವ ರಾಜು ಎಂಬ ಪದ ಗುರುತಿಸಿ ತಿಳಿಸುತ್ತದೆ. ಹೀಗಿದ್ದರೂ, ಆ ವ್ಯಕ್ತಿಯ ಪರಿಚೆಯೊಂದನ್ನು ತಿಳಿಸಲು ತಾನು ಪದದ ಬಳಿಕ ದೊಡ್ಡವನು ಎಂಬ ಬೇರೊಂದು ಪದಕಂತೆಯನ್ನು ಬಳಸಲು ಸಾದ್ಯವಾಗಿದೆ. (1ಕ) ಮತ್ತು (1ಟ) ಸೊಲ್ಲುಗಳಲ್ಲಿ ಕಾಣಿಸಿದ ಹಾಗೆ, ಇಂತಹ ಬಳಕೆಗಳಲ್ಲಿ ಪತ್ತುಗೆ ಒಟ್ಟನ್ನು ತಾನು ಪದದ ಬಳಿಕ ಬರುವ ಪದಕಂತೆಗಳಿಗೆ ಮಾತ್ರವಲ್ಲದೆ ತಾನು ಪದಕ್ಕೂ ಸೇರಿಸಬೇಕಾಗುತ್ತದೆಯೆಂಬುದರಿಂದ ಅವೆರಡೂ ಬೇರೆ ಬೇರೆ ಪದಕಂತೆಗಳೆಂದು ತೀರ್ಮಾನಿಸಲು ಬರುತ್ತದೆ. (5) ಹಲವೆಣಿಕೆಯ ಹುರುಳನ್ನು ಕೊಡುವುದಕ್ಕಾಗಿ ನಾನು ಮತ್ತು ನೀನು ಪದಗಳ ಹಾಗೆ ತಾನು ಪದಕ್ಕೂ ವು ಎಂಬ ಒಟ್ಟನ್ನು ಸೇರಿಸಲಾಗುತ್ತದೆ; ಇದಲ್ಲದೆ, ನಾನು ಮತ್ತು ನೀನು ಪದಗಳ ಹಾಗೆ, ಈ ಒಟ್ಟಿಗೆ ಪತ್ತುಗೆ ಒಟ್ಟು ಸೇರಿದಾಗ ಅದು ಮ್-ಮ್್ಮ ಎಂಬ ರೂಪಕ್ಕೆ ಬದಲಾಗುತ್ತದೆ, ಮತ್ತು ತಾನು ಪದದಲ್ಲಿರುವ ಉದ್ದ ಅಕಾರ ಗಿಡ್ಡ ಅಕಾರವಾಗಿ ಬದಲಾಗುತ್ತದೆ (ನಾವು, ನಮಗೆ ನಮ್ಮನ್ನು - ತಾವು, ತಮಗೆ, ತಮ್ಮನ್ನು). ಆದರೆ, ಹಲವೆಣಿಕೆಯ ತಾವು ಪದಕ್ಕೆ ಕೂಡಿಕೆಯ ಹುರುಳಿಲ್ಲ. ಅದು ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಹಲವು ಮಂದಿ ಎಂಬ ಹುರುಳನ್ನು ಮಾತ್ರ ಕೊಡಬಲ್ಲುದು. ಓರೆಣಿಕೆಯಲ್ಲಿರುವ ತಾನು ಪದಕ್ಕೆ ಪತ್ತುಗೆ ಒಟ್ಟು ಸೇರಿದಾಗ, ಅದರ ಉದ್ದ ಅಕಾರ ಗಿಡ್ಡ ಅಕಾರವಾಗಿ ಬದಲಾಗುತ್ತದೆ (ತಾನು, ತನಗೆ) ಮತ್ತು ಗೆ ಒಟ್ಟನ್ನು ಹೊರತುಪಡಿಸಿ ಉಳಿದ ಪತ್ತುಗೆ ಒಟ್ಟುಗಳು ಸೇರಿದಾಗ ಅದರ ನಕಾರ ಇಮ್ಮಡಿ ರೂಪಕ್ಕೆ ಬದಲಾಗುತ್ತದೆ (ತನ್ನನ್ನು, ತನ್ನಲ್ಲಿ); ಈ ಎರಡು ವಿಶಯಗಳಲ್ಲೂ ಅದು ನಾನು ಮತ್ತು ನೀನು ಪದಗಳನ್ನು ಹೋಲುತ್ತದೆ (ನನಗೆ, ನಿನಗೆ, ನನ್ನನ್ನು, ನನ್ನಲ್ಲಿ). (6) ಹಲವೆಣಿಕೆಯ ನಾವು ಮತ್ತು ನೀವು ಪದಗಳನ್ನು ಆಡುಗ ಮತ್ತು ಕೇಳುಗರೊಂದಿಗೆ ಬೇರೊಬ್ಬನನ್ನೂ ಒಳಗೊಂಡಿರುವಂತಹ ಹುರುಳಿನಲ್ಲಿ ಬಳಸಲು ಬರುತ್ತದೆ: (1ಕ) ನಮಗೆ ಯಾರೂ ಹಣ ಕೊಡಬೇಕಾಗಿಲ್ಲವೆಂದು ರಾಜು ಹೇಳಿದ. (1ಚ) ನಿಮಗೆ ಯಾರೂ ಹಣ ಕೊಡಲಿಕ್ಕಿಲ್ಲವೆಂದು ರಾಜು ಹರಿಗೆ ಹೇಳಿದ.

(1ಕ)ದಲ್ಲಿ ನಮಗೆ ಎಂಬುದು ಹಲವೆಣಿಕೆಯಲ್ಲಿದ್ದರೂ ಅದರ ಹಿನ್ನುಡಿತವಾಗಿ ಓರೆಣಿಕೆಯಲ್ಲಿರುವ ರಾಜು ಎಂಬ ಪದ ಬಂದಿದೆ; ಇದೇ ರೀತಿಯಲ್ಲಿ (1ಚ)ದಲ್ಲಿ ನಿಮಗೆ ಎಂಬ ಹಲವೆಣಿಕೆಯ ಪದ ಬಂದಿದ್ದು, ಅದಕ್ಕೆ ಹಿನ್ನುಡಿತವಾಗಿ ಓರೆಣಿಕೆಯ ಹರಿ ಎಂಬ ಪದ ಬಂದಿದೆ. (1ಕ)ದ ನಮಗೆ ಎಂಬುದರಲ್ಲಿ ಆಡುಗನೊಂದಿಗೆ ಬೇರೊಬ್ಬನ ಒಳಗೊಳ್ಳುವಿಕೆಯಿದೆ, ಮತ್ತು (1ಚ)ದ ನಿಮಗೆ ಎಂಬುದರಲ್ಲಿ ಕೇಳುಗನೊಂದಿಗೆ ಬೇರೊಬ್ಬನ ಒಳಗೊಳ್ಳುವಿಕೆಯಿದೆ ಎಂಬುದೇ ಇದಕ್ಕೆ ಕಾರಣ. ತಾನು ಪದದ ಹಲವೆಣಿಕೆಯ ರೂಪಕ್ಕೂ ಇಂತಹದೇ ಒಳಗೊಳ್ಳುವ ಹುರುಳಿರುವುದನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು: (1ಟ) ತಮಗೆ ಯಾರೂ ಹಣ ಕೊಡಬೇಕಾಗಿಲ್ಲವೆಂದು ರಾಜು ಹೇಳಿದ. (1ಟ)ದಲ್ಲಿ ಹಲವೆಣಿಕೆಯ ತಮಗೆ ಎಂಬುದಕ್ಕೆ ಓರೆಣಿಕೆಯ ರಾಜು ಎಂಬುದು ಹಿನ್ನುಡಿತವಾಗಿ ಬಂದಿದೆ, ಮತ್ತು ಇಲ್ಲಿ ತಮಗೆ ಎಂಬುದರಲ್ಲಿ ರಾಜುವಿನೊಂದಿಗೆ ಬೇರೊಬ್ಬನ ಒಳಗೊಳ್ಳುವಿಕೆಯಿದೆ. ಆದರೆ, ಈ ಒಳಗೊಳ್ಳುವಿಕೆಯಲ್ಲಿ ನಾನು, ನೀನು, ಮತ್ತು ತಾನು ಪದಗಳ ನಡುವೆ ಒಂದು ವ್ಯತ್ಯಾಸವಿದೆ: ನಾವು ಎಂಬುದು ಆಡುಗನೊಂದಿಗೆ ಕೇಳುಗನನ್ನಾಗಲಿ ಇಲ್ಲವೇ ಬೇರೊಬ್ಬನನ್ನಾಗಲಿ ಒಳಗೊಳ್ಳಬಲ್ಲುದು, ಮತ್ತು ನೀವು ಎಂಬುದು ಕೇಳುಗನೊಂದಿಗೆ ಬೇರೊಬ್ಬನನ್ನು ಒಳಗೊಳ್ಳಬಲ್ಲುದು; ಆದರೆ, ತಾವು ಎಂಬುದು ಬೇರೊಬ್ಬನೊಂದಿಗೆ ಬೇರೊಬ್ಬನನ್ನು ಮಾತ್ರ ಒಳಗೊಳ್ಳಬಲ್ಲುದಲ್ಲದೆ ಆಡುಗ ಇಲ್ಲವೇ ಕೇಳುಗನನ್ನು ಒಳಗೊಳ್ಳಲಾರದು. (7) ಹಲವೆಣಿಕೆಯ ನಾವು ಮತ್ತು ನೀವು ಪದಗಳ ಹಾಗೆ, ತಾವು ಪದಕ್ಕೂ ಒಂದು ಮದಿಪಿನ ಬಳಕೆಯಿದೆ; ಅದರ ಹಿನ್ನುಡಿತ ಹಲವೆಣಿಕೆಂiÀi ರೂಪದಲ್ಲಿದ್ದು, ಅದನ್ನು ಒಬ್ಬನೇ ವ್ಯಕ್ತಿಯನ್ನು ಆತನಿಗೆ ಮದಿಪು ಕೊಟ್ಟು ಗುರುತಿಸುವುದಕ್ಕಾಗಿ ಬಳಸಲಾಗಿದೆಯಾದರೆ, ಅದಕ್ಕೆ ಸಂಬಂದಿಸಿದ ತಾವು ಪದಕ್ಕೂ ಮದಿಪಿನ ಓರೆಣಿಕೆಯ ಹುರುಳು ಸಿಗುತ್ತದೆ: (1ಕ) ಇಶ್ಟು ಹೊತ್ತಿಗೆ ಶೆಟ್ಟರು ತಮ್ಮ ಅಂಗಡಿಯಲ್ಲಿ ಇರುತ್ತಾರೆ. (1ಚ) ಅವರು ತಾವೇ ನಿಮ್ಮೊಂದಿಗೆ ಮಾತನಾಡಲಿದ್ದಾರೆ. (1ಕ)ದಲ್ಲಿ ಬಂದಿರುವ ತಮ್ಮ ಪದಕ್ಕೆ ಮದಿಪಿನ ಓರೆಣಿಕೆಯ ಹುರುಳಿದೆ; ಯಾಕೆಂದರೆ, ಅದರ ಹಿನ್ನುಡಿತವಾದ ಶೆಟ್ಟರು ಪದವನ್ನು ಅಂತಹ ಮದಿಪಿನ ಓರೆಣಿಕೆಯ ಹುರುಳಿನಲ್ಲಿ ಬಳಸಲಾಗಿದೆ. (1ಚ)ದಲ್ಲಿ ಬಂದಿರುವ ಅವರು ಪದಕ್ಕೆ ಹಲವೆಣಿಕೆಯ ಹುರುಳೂ ಇರಬಲ್ಲುದು, ಇಲ್ಲವೇ ಮದಿಪಿನ ಓರೆಣಿಕೆಯ

ಹುರುಳೂ ಇರಬಲ್ಲುದು; ಹಾಗಾಗಿ, ಅದನ್ನು ಹಿನ್ನುಡಿತವಾಗಿ ಪಡೆದಿರುವ ತಾವು ಪದಕ್ಕೂ ಈ ಎರಡು ಬಗೆಯ ಹುರುಳುಗಳಿರಬಲ್ಲುವು. ಈ ರೀತಿ ಬೇರೊಬ್ಬ ವ್ಯಕ್ತಿಗೆ ಮದಿಪನ್ನು ಕೊಡುವುದಕ್ಕಾಗಿ ಮಾತ್ರವಲ್ಲದೆ, ಕೇಳುಗನಿಗೆ ಮದಿಪನ್ನು ಕೊಡುವುದಕ್ಕಾಗಿಯೂ ತಾನು ಪದದ ಹಲವೆಣಿಕೆಯ ರೂಪವನ್ನು ಬಳಸಲು ಬರುತ್ತದೆ; ಈ ಬಳಕೆಯಲ್ಲಿ ಅದು ನೀವು ಎಂಬುದಕ್ಕಿಂತ ಹೆಚ್ಚು ಮದಿಪನ್ನು ಹೊಂದಿರುವ ಕೇಳುಗನನ್ನು ತಿಳಿಸುತ್ತದೆ: (1ಕ) ತಾವು ಈ ಕೆಲಸವನ್ನು ಇವತ್ತೇ ನಡೆಸಿಕೊಡಬೇಕು. (1ಚ) ತಮಗೆ ಒಪ್ಪಿಗೆಯಾದರೆ ಇವತ್ತೇ ಅಲ್ಲಿಗೆ ಹೋಗಿಬರೋಣ. (1ಕ-ಚ)ಗಳಲ್ಲಿ ತಾವು ಪದದ ಮೂಲಕ ಕೇಳುಗನನ್ನು ತಿಳಿಸಲಾಗಿದೆಯಲ್ಲದೆ ಬೇರೊಬ್ಬನನ್ನಲ್ಲ. ಇಂತಹ ಮದಿಪಿನ ಕೇಳುಗನನ್ನು ತಿಳಿಸುವ ಬಳಕೆಯಲ್ಲಿ ತಾವು ಪದದೊಂದಿಗೆ ಅದು ತಿಳಿಸುವ ವ್ಯಕ್ತಿ ಯಾರೆಂಬುದನ್ನು ಸೊಲ್ಲಿನಲ್ಲೇನೇ ಬೇರೆಡೆ ಗುರುತಿಸಬೇಕಾಗುವುದಿಲ್ಲ ಎಂಬುದನ್ನು ಗಮನಿಸಬಹುದು. (8) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದವೂ ಗುರ್ತದ ವ್ಯತ್ಯಾಸವನ್ನು ತೋರಿಸುವುದಿಲ್ಲ; ಅದು ತಿಳಿಸುವ ಬೇರೊಬ್ಬ ವ್ಯಕ್ತಿ ಹೆಣ್ಣಾಗಿರಲಿ ಇಲ್ಲವೇ ಗಂಡಾಗಿರಲಿ, ಅದು ಒಂದೇ ರೂಪದಲ್ಲಿರುತ್ತದೆ: (1ಕ) ರಾಜು ತನ್ನ ಮನೆಗೆ ಹೋಗಿದ್ದಾನೆ. (1ಚ) ಜಾನಕಿ ತನ್ನ ಮನೆಗೆ ಹೊಗಿದ್ದಾಳೆ. ತನ್ನ ಎಂಬುದು (1ಕ)ದಲ್ಲಿ ರಾಜುವನ್ನು, ಮತ್ತು (1ಚ)ದಲ್ಲಿ ಜಾನಕಿಯನ್ನು ತಿಳಿಸುತ್ತಿದ್ದು, ಈ ಎರಡು ಹುರುಳುಗಳಲ್ಲೂ ಅದು ಒಂದೇ ರೂಪದಲ್ಲಿ ಉಳಿದಿದೆಯೆಂಬುದನ್ನು ಗಮನಿಸಬಹುದು. (9) ನಾನು ಮತ್ತು ನೀನು ಪದಗಳ ಹಾಗೆ, ತಾನು ಪದವನ್ನೂ ಸಾಮಾನ್ಯವಾಗಿ ಆಳ್ತನವಿರುವ ಪಾಂಗುಗಳನ್ನು ತಿಳಿಸುವುದಕ್ಕಾಗಿ ಮಾತ್ರವೇ ಬಳಸಲಾಗುತ್ತದೆ; ಸೊಲ್ಲಿನ ಉಂಟುಮಾಡುವಿಕೆಯಲ್ಲಿ ತೊಡಗಿಕೊಳ್ಳುವ ಪಾಂಗುಗಳು ಸಾಮಾನ್ಯವಾಗಿ ಆಳ್ತನವಿರುವ (ಇಲ್ಲವೇ ಆಳ್ತನವನ್ನು ಹೊರಿಸಲಾಗಿರುವ) ಪಾಂಗುಗಳು ಮಾತ್ರ ಎಂಬುದೇ ಅವುಗಳ ಬಳಕೆಯ ಮೇಲಿರುವ ಈ ಕಟ್ಟಲೆಗೆ ಕಾರಣವಿರಬೇಕು. ಆದರೆ, ತಾನು ಪದಕ್ಕೆ ಬೇರೆಯೂ ಕೆಲವು ಬಳಕೆಗಳಿದ್ದು, ಇವುಗಳಲ್ಲಿ ಅದು ಆಳ್ತನವಿಲ್ಲದ ಪಾಂಗುಗಳನ್ನೂ ತಿಳಿಸಬಲ್ಲುದು:

(ಕ) ಆಗಿ ಎಂಬ ಎಸಕರೂಪದೊಂದಿಗೆ ಬಳಸಿದಲ್ಲಿ, ಅದಕ್ಕೆ ಸೊಲ್ಲುಗಳಲ್ಲಿ ಆಗುಗಗಳಾಗಿ ಬಂದಿರುವ ಆಳ್ತನವಿಲ್ಲದ ಪಾಂಗುಗಳೂ ಹಿನ್ನುಡಿತವಾಗಿ ಬರಬಲ್ಲುವು: (1ಕ) ಕಣ್ಣಿನಿಂದ ನೀರು ತಾನಾಗಿ ಒಸರತೊಡಗಿತು. (1ಚ) ಮರದಿಂದ ಹಣ್ಣು ತಾನಾಗಿ ಕಳಚಿಬಿತ್ತು. (1ಟ) ಆತ ತಾನಾಗಿ ಬೆಳೆದ ಬೆಳೆಗಳನ್ನು ಮಾತ್ರ ಬಳಸುತ್ತಿದ್ದ. (ಚ) ಅಶ್ಟಕ್ಕೇ ಎಂಬುದರೊಂದಿಗೆ ಬಳಸಿರುವ ತಾನು ಎಂಬುದಕ್ಕೂ ಆಗುಗವಾಗಿ ಬಂದಿರುವ ಆಳ್ತನವಿಲ್ಲದ ಪಾಂಗು ಹಿನ್ನುಡಿತವಾಗಬಲ್ಲುದು: (1ಕ) ಕೊಡ ತನ್ನಶ್ಟಕ್ಕೇ ಒಡೆದುಹೋಯಿತು. (1ಚ) ಗಿಡ ತನ್ನಶ್ಟಕ್ಕೇ ಸತ್ತುಹೋಯಿತು. (ಟ) ತನ್ನಿಂದ ತಾನೇ ಎಂಬುದಕ್ಕೂ ಇಂತಹ ಆಗುಗವಾಗಿ ಬಂದಿರುವ ಆಳ್ತನವಿಲ್ಲದ ಪಾಂಗು ಹಿನ್ನುಡಿತವಾಗಬಲ್ಲುದು: (1ಕ) ಈ ಮನೆ ತನ್ನಿಂದ ತಾನೇ ಬಿದ್ದುಹೋಗಿದೆ. (1ಚ) ನೀರಿನಲ್ಲಿ ಈಜಾಡಲು ನಾಯಿಗಳಿಗೆ ತನ್ನಿಂದ ತಾನೇ ಬರುತ್ತದೆ. (10) ನಾನು ಮತ್ತು ನೀನು ಪದಗಳಿಗೂ ತಾನು ಪದಕ್ಕೂ ನಡುವೆ ಅವು ತೋರಿಸುವ ಹೊಂದಾಣಿಕೆಯಲ್ಲಿ ವ್ಯತ್ಯಾಸವಿದೆ; ನಾನು ಮತ್ತು ನೀನು ಪದಗಳು ಸೊಲ್ಲಿನ ಇರುಗ, ಆಗುಗ ಇಲ್ಲವೇ ಮಾಡುಗಗಳಾಗಿ ಬರಬಲ್ಲುವಾಗಿದ್ದು, ಸೊಲ್ಲಿನಲ್ಲಿ ಬರುವ ಎಸಕಪದದೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತವೆ: (1ಕ) ನಾನು ಸಂಜೆ ಮನೆಯಲ್ಲಿ ಇರುತ್ತೇನೆ. (1ಚ) ನಾನು ಆ ಹುಡುಗನನ್ನು ಮೆಚ್ಚಿದೆ. (1ಟ) ನಾನು ಅ ಹುಡುಗನನ್ನು ಮನೆಗೆ ಕಳುಹಿಸಿದೆ. ಮೇಲಿನ ಸೊಲ್ಲುಗಳಲ್ಲಿ ನಾನು ಪದಕ್ಕೂ ಸೊಲ್ಲಿನ ಎಸಕಪದಕ್ಕೂ ನಡುವಿರುವ ಹೊಂದಾಣಿಕೆಯನ್ನು ಕಾಣಬಹುದು. ತಾನು ಪದ?

9.3.2 ಪಾಂಗು ಸೊಲ್ಲಿನೊಳಗಿರಬೇಕೆಂಬ ಕಟ್ಟಲೆ

ಒಂದು ಸೊಲ್ಲು ತಿಳಿಸುವ ಎಸಕ ಇಲ್ಲವೇ ಇರುಹದ ಪಾಂಗುಗಳಿಗೂ ಆ ಸೊಲ್ಲನ್ನು ಉಂಟುಮಾಡುವಲ್ಲಿ ತೊಡಗಿಕೊಂಡಿರುವ ಆಡುಗ, ಕೇಳುಗ, ಮತ್ತು ಬೇರೊಬ್ಬ ಎಂಬವರಿಗೂ ನಡುವೆ ಸಂಬಂದವಿದೆಯೇ ಮತ್ತು ಇದ್ದರೆ ಅದು ಎಂತಹದು ಎಂಬುದನ್ನು ತಿಳಿಸುವುದೇ ಆಡುಪದಗಳ ಮುಕ್ಯ ಕೆಲಸ ಎಂಬುದನ್ನು ಮೇಲೆ ನೋಡಿರುವೆವು. ಸೊಲ್ಲಿನ ಒಂದು ಪಾಂಗನ್ನು ನಾನು ಎಂಬುದಾಗಿ ತಿಳಿಸಲಾಗಿದೆಯಾದರೆ, ಆ ಪಾಂಗಾಗಿ ಬಂದಿರುವುದು ಆ ಸೊಲ್ಲಿನ ಆಡುಗ ಎಂದು ಗೊತ್ತಾಗುತ್ತದೆ, ಮತ್ತು ನೀನು ಎಂಬುದಾಗಿ ತಿಳಿಸಲಾಗಿದೆಯಾದರೆ, ಆ ಪಾಂಗಾಗಿ ಬಂದಿರುವುದು ಆ ಸೊಲ್ಲಿನ ಕೇಳುಗ ಎಂದು ಗೊತ್ತಾಗುತ್ತದೆ; ಇದೇ ರೀತಿಯಲ್ಲಿ ಒಂದು ಪಾಂಗನ್ನು ತಾನು ಎಂಬುದಾಗಿ ತಿಳಿಸಲಾಗಿದೆಯಾದರೆ, ಆ ಪಾಂಗಾಗಿ ಬಂದಿರುವುದು ಆ ಸೊಲ್ಲಿನ ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ವ್ಯಕ್ತಿ ಎಂದೂ ಗೊತ್ತಾಗುತ್ತದೆ. ಸಾಮಾನ್ಯವಾಗಿ, ಒಂದು ಸೊಲ್ಲಿನ ಪಾಂಗು ಅದರ ಆಡುಗ ಇಲ್ಲವೇ ಕೇಳುಗ ಎಂದು ತಿಳಿಸಿರುವಲ್ಲಿ ಆ ವ್ಯಕ್ತಿ ಯಾರು ಎಂಬುದನ್ನು ಗುರುತಿಸಬೇಕಾಗುವುದಿಲ್ಲ; ಯಾಕೆಂದರೆ, ಅವರಿಬ್ಬರೂ ಎದುರೆದುರೇ ಇರುತ್ತಾರೆ. ಆದರೆ, ತಾನು ಎಂಬ ಪದವನ್ನು ಬಳಸಿ ಒಂದು ಸೊಲ್ಲಿನ ಪಾಂಗು ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ವ್ಯಕ್ತಿ ಎಂದು ತಿಳಿಸಿರುವಲ್ಲೆಲ್ಲ ಅಂತಹ ಹಲವು ಮಂದಿ ವ್ಯಕ್ತಿಗಳು ಮಾತನಾಡುವಲ್ಲಿ ಇರಬಲ್ಲರಾಗಿದ್ದು, ಅವರಲ್ಲಿ ಯಾರನ್ನು ಮನಸ್ಸಿನಲ್ಲಿರಿಸಿಕೊಂಡು ಆಡುಗ ಈ ತಾನು ಎಂಬ ಪದವನ್ನು ಬಳಸಿದ್ದಾನೆ ಎಂಬುದು ಸಾಮಾನ್ಯವಾಗಿ ಕೇಳುಗನಿಗೆ ಗೊತ್ತಾಗಲಾರದು. ಈ ತೊಡಕನ್ನು ಹೋಗಲಾಡಿಸುವುದಕ್ಕಾಗಿ, ಸೊಲ್ಲುಗಳಲ್ಲಿ ತಾನು ಪದವನ್ನು ಬಳಸಿರುವಲ್ಲೆಲ್ಲ ಸಾಮಾನ್ಯವಾಗಿ ಅದು ತಿಳಿಸುವ ಪಾಂಗು ಯಾವ ವ್ಯಕ್ತಿಯನ್ನು ಗುರುತಿಸುತ್ತದೆ ಎಂಬುದನ್ನು ಅದೇ ಸೊಲ್ಲಿನ ಬೇರೊಂದು ಪದಕಂತೆಯ ಮೂಲಕ ತಿಳಿಸಲಾಗುತ್ತದೆ. (1ಕ) ರಾಜುವಿಗೆ ತನ್ನ ಊರನ್ನು ತಲಪಲು ಎರಡು ದಿನ ಬೇಕಾಯಿತು. (1ಚ) ತನಗೆ ಅಶ್ಟೊಂದು ತೊಂದರೆ ಕೊಟ್ಟ ಮಲತಾಯಿಯನ್ನು ಜಾನಕಿ ಮರೆಯಲಾರಳು. (1ಕ)ದಲ್ಲಿ ಬಂದಿರುವ ತಾನು ಪದ ಯಾರನ್ನು ತಿಳಿಸುತ್ತದೆ ಎಂಬುದನ್ನು ಅದೇ ಸೊಲ್ಲಿನಲ್ಲಿ ಬಂದಿರುವ ರಾಜುವಿಗೆ ಎಂಬ ಪದ ಗುರುತಿಸಿಕೊಡುತ್ತದೆ, ಮತ್ತು (1ಚ)ದಲ್ಲಿ ಬಂದಿರುವ ಅದೇ ತಾನು ಎಂಬ ಪದ ಯಾರನ್ನು ತಿಳಿಸುತ್ತದೆ ಎಂಬುದನ್ನು ಜಾನಕಿ ಎಂಬ ಪದ ಗುರುತಿಸಿಕೊಡುತ್ತದೆ.

ಈ ರೀತಿ, ತಾನು ಪದ ತಿಳಿಸುವ ವ್ಯಕ್ತಿ ಯಾರು ಎಂಬುದನ್ನು ತಿಳಿಸುವ ಪದ ಒಂದು ತೋರುಪದವಾಗಿರಲೂ ಸಾದ್ಯವಿದೆ, ಮತ್ತು ಆ ತೋರುಪದ ಹೊರತೋರ್ಕೆಯ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತಿರಬಲ್ಲುದು: (1ಕ) ಅವನಿಗೆ ತನ್ನ ಕೆಲಸ ಮಾಡಲು ಇನ್ನೂ ಸಮಯ ಸಿಕ್ಕಿರಲಿಲ್ಲ. (1ಚ) ಅವಳು ಕನ್ನಡಿಯಲ್ಲಿ ತನ್ನನ್ನೇ ತುಂಬಾ ಹೊತ್ತು ನೋಡಿಕೊಳ್ಳುತ್ತಿದ್ದಳು. (1ಕ)ದಲ್ಲಿ ತನ್ನ ಎಂಬ ಪದ ಯಾರನ್ನು ತಿಳಿಸುತ್ತದೆ ಎಂಬುದನ್ನು ಅದರ ಮೊದಲು ಬಂದಿರುವ ಅವನಿಗೆ ಎಂಬ ತೊರುಪದ ತಿಳಿಸುತ್ತದೆ, ಮತ್ತು ಈ ತೋರುಪದ ಒಬ್ಬ ವ್ಯಕ್ತಿಯನ್ನು ಹೊರತೋರ್ಕೆಯ ಮೂಲಕ ಗುರುತಿಸುತ್ತದೆ. ತಾನು ಎಂಬುದು ಆಡುಗ ಮತ್ತು ಕೇಳುಗರಿಂದ ಬೇರಾಗಿದ್ದರೂ ನೇರವಾಗಿ ಅದನ್ನು ಬಳಸಿರುವ ಸೊಲ್ಲಿನ ಉಂಟುಮಾಡುವಿಕೆಗೆ ಸಂಬಂದಿಸಿರುವಂತಹ ಪಾಂಗಾಗಿದೆ ಎಂಬುದರಿಂದಲೂ ಈ ಕಟ್ಟಲೆ ಬಂದಿರಬಲ್ಲುದು. ಯಾಕೆಂದರೆ, ಅಂತಹ ಪಾಂಗಾಗಿರಬೇಕಾಗಿಲ್ಲದ ಅವನು (ಇಲ್ಲವೇ ಅವಳು) ಪದ ಈ ವಿಶಯದಲ್ಲಿ ತಾನು ಪದಕ್ಕಿಂತ ಬೇರಾಗಿದೆ. ಅವನು ಪದ ಬೇರೊಂದು ಸೊಲ್ಲಿನಲ್ಲಿ ಗುರುತಿಸಿರುವ ವ್ಯಕ್ತಿಯನ್ನೂ ತಿಳಿಸುತ್ತಿರಬಲ್ಲುದು, ಮತ್ತು ಯಾವ ಸೊಲ್ಲಿನಲ್ಲೂ ಗುರುತಿಸಿರದಂತಹ ವ್ಯಕ್ತಿಯನ್ನೂ ಅದು ಹೊರತೋರ್ಕೆಯ ಮೂಲಕ ತಿಳಿಸಬಲ್ಲುದು. (1ಕ) ಒಬ್ಬ ಹುಡುಗ ದೊಡ್ಡವರ ಉಡುಪು ತೊಟ್ಟುಕೊಂಡು ಬಂದ; ಅವನನ್ನು ನೋಡಿ ಮಕ್ಕಳೆಲ್ಲ ಬೊಬ್ಬೆ ಹಾಕಿದರು. (1ಚ) ಅವನನ್ನು ಇಲ್ಲಿಗೆ ಕಳುಹಿಸಿದ್ದು ಯಾರು? (1ಕ)ದ ಎರಡನೇ ಸೊಲ್ಲಿನಲ್ಲಿ ಬಂದಿರುವ ಅವನು ಪದ ತಿಳಿಸುವ ವ್ಯಕ್ತಿ ಯಾರು ಎಂಬುದನ್ನು ಮೊದಲನೇ ಸೊಲ್ಲಿನಲ್ಲಿ ಬಂದಿರುವ ಒಬ್ಬ ಹುಡುಗ ಎಂಬ ಪದಕಂತೆ ಗುರುತಿಸುತ್ತದೆ; ಆದರೆ, (1ಚ)ದಲ್ಲಿ ಬಂದಿರುವ ಅದೇ ಪದ ಯಾರನ್ನು ಗುರುತಿಸುತ್ತದೆ ಎಂಬುದನ್ನು ಎಲ್ಲಿಯೂ ತಿಳಿಸಿಲ್ಲ; ಅದನ್ನು ಹೊರತೋರ್ಕೆಯ ನೆರವಿನಿಂದ (ಎಂದರೆ, ಆಡುಗನು ಯಾರನ್ನು ತೋರಿಸಿ ಈ ಸೊಲ್ಲನ್ನು ಕೇಳುಗನಿಗೆ ಹೇಳಿದ್ದಾನೆ ಎಂಬುದನ್ನು ಗಮನಿಸುವ ಮೂಲಕ) ತಿಳಿಯಬೇಕಾಗಿದೆ. ಇದಲ್ಲದೆ, ಒಂದು ಸುಳುಸೊಲ್ಲಿನಲ್ಲಿ ಬಂದಿರುವ ಎರಡು ಪಾಂಗುಗಳು ಒಂದೇ ವ್ಯಕ್ತಿಯನ್ನು ಗುರುತಿಸುತ್ತವೆ ಎಂಬುದನ್ನು ತಿಳಿಸಲು ಅವುಗಳಲ್ಲೊಂದನ್ನು ತಾನು ಪದದ ಮೂಲಕ ತಿಳಿಸಲು ಬರುತ್ತದೆ, ಆದರೆ ಅವನು ಪದದ ಮೂಲಕ ತಿಳಿಸಲು ಬರುವುದಿಲ್ಲ:

(1ಕ) ರಾಜು ತನಗೆ ಒಂದು ಹಣ್ಣನ್ನು ಉಳಿಸಿಕೊಂಡ. (1ಚ) ರಾಜು ಅವನಿಗೆ ಒಂದು ಹಣ್ಣನ್ನು ಉಳಿಸಿಕೊಂಡ. (2ಕ) ರಾಜುವಿಗೆ ತನ್ನಲ್ಲಿ ನಂಬಿಕೆಯಿಲ್ಲ. (2ಚ) ರಾಜುವಿಗೆ ಅವನಲ್ಲಿ ನಂಬಿಕೆಯಿಲ್ಲ. (3ಕ) ರಾಜು ತನ್ನನ್ನು ಕನ್ನಡಿಯಲ್ಲಿ ನೋಡಿದ. (3ಚ) ರಾಜು ಅವನನ್ನು ಕನ್ನಡಿಯಲ್ಲಿ ನೋಡಿದ. ಮೇಲೆ (ಕ) ಸೊಲ್ಲುಗಳಲ್ಲಿ ಬಂದಿರುವ ತಾನು ಪದ ಅದೇ ಸೊಲ್ಲಿನ ಇನ್ನೊಂದು ಪಾಂಗಾಗಿ ಬಂದಿರುವ ರಾಜು ಪದ ಗುರುತಿಸುವ ವ್ಯಕ್ತಿಯನ್ನೇ ಗುರುತಿಸುತ್ತದೆ; ಆದರೆ, (ಚ) ಸೊಲ್ಲುಗಳಲ್ಲಿ ಬಂದಿರುವ ಅವನು ಪದ ಆ ರೀತಿ ಅದೇ ಸೊಲ್ಲಿನ ಇನ್ನೊಂದು ಪಾಂಗು ತಿಳಿಸುವ ವ್ಯಕ್ತಿಯನ್ನು ಗುರುತಿಸಲಾರದು. ತಾನು ಪದ ತಿಳಿಸುವ ಬೇರೊಬ್ಬ ವ್ಯಕ್ತಿ ನಿಜಕ್ಕೂ ಯಾರು ಎಂಬುದನ್ನು ಗುರುತಿಸಿಕೊಡುವ ಹಿನ್ನುಡಿತ' ಅದರ ಮೊದಲೇ ಬಂದಿರಬೇಕೆಂದೇನೂ ಇಲ್ಲ; ಅದು ಸೊಲ್ಲಿನಲ್ಲಿ ಅದರ ಬಳಿಕವೂ (ಎಂದರೆ ಮುನ್ನುಡಿತ’ವಾಗಿಯೂ) ಬಂದಿರಬಲ್ಲುದು: (1ಕ) ರಾಜು ತನ್ನನ್ನೇ ದೂರಿಕೊಂಡ. (1ಚ) ತನ್ನನ್ನೇ ರಾಜು ದೂರಿಕೊಂಡ. (2ಕ) ರಾಜು ತನ್ನ ಮಗಳನ್ನು ಶಾಲೆಗೆ ಸೇರಿಸಿದ್ದಾನೆ. (2ಚ) ತನ್ನ ಮಗಳನ್ನು ರಾಜು ಶಾಲೆಗೆ ಸೇರಿಸಿದ್ದಾನೆ. ತಾನು ಪದ ತಿಳಿಸುವ ಪಾಂಗು ಯಾರನ್ನೂ ಗುರುತಿಸದಿರುವಂತಹ ಕಡೆಗಳಲ್ಲಿ ಮಾತ್ರ ಅದಕ್ಕೊಂದು ಹಿನ್ನುಡಿತ (ಇಲ್ಲವೇ ಮುನ್ನುಡಿತ) ಬೇಕಾಗುವುದಿಲ್ಲ; ಇಂತಹ ಬಳಕೆಯನ್ನು ಮುಕ್ಯವಾಗಿ ಕೆಲವು ಗಾದೆಮಾತುಗಳಲ್ಲಿ ಕಾಣಬಹುದು: (1ಕ) ತಾನು ಹೋದರೆ ಮಜ್ಜಿಗೆಯಿಲ್ಲ, ಹೇಳಿ ಕಳಿಸಿದರೆ ಮೊಸರು ಕೊಟ್ಟಾರೋ? (1ಚ) ತಾನೂ ಕುಡಿಯ, ಕುಡಿಯುವವರಿಗೂ ಬಿಡ. (1ಟ) ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ. (1ತ) ಅವರಲ್ಲಿ ಯಾರಿಗೂ ತಾನು ಹೊರಗೆ ಹೋಗಬೇಕಾಗಬಹುದೆಂದು ಅನಿಸಿರಲಿಲ್ಲ.

(1ಕ)ದಲ್ಲಿ ಬಂದಿರುವ ತಾನು ಪದ ಯಾರನ್ನೂ ಗುರುತಿಸಬೇಕಾಗಿಲ್ಲ; ಯಾಕೆಂದರೆ, ಯಾರಿಗೆ ಬೇಕಾದರೂ ಸಂಬಂದಿಸುವ ಹಾಗೆ ಅದು ಒಂದು ಸಂಗತಿಯನ್ನು ತಿಳಿಸುತ್ತಿದೆ. ಹಾಗಾಗಿ, ಅದು ತಿಳಿಸುವ ವ್ಯಕ್ತಿಯನ್ನು ಗುರುತಿಸುವುದಕ್ಕಾಗಿ ಬೇರೆ ಪದ ಇಲ್ಲವೇ ಪದಕಂತೆಯನ್ನು ಆ ಸೊಲ್ಲಿನಲ್ಲಿ ಬಳಸಿಲ್ಲ. (1ಚ-ಟ)ಗಳಲ್ಲೂ ಹೀಗೆಯೇ. (1ತ) ಸೊಲ್ಲು ಒಂದು ಗಾದೆಯಲ್ಲದಿದ್ದರೂ ಅದರಲ್ಲಿ ಬಂದಿರುವ ಅವರಲ್ಲಿ ಎಂಬುದು ಯಾರಿಗೂ ಎಂಬುದರ ಹರವನ್ನು ಮಾತ್ರ ತಿಳಿಸುತ್ತದೆ; ಹಾಗಾಗಿ, ಅದನ್ನು ಹಿನ್ನುಡಿತವಾಗಿ ಪಡೆದಿರುವ ತಾನು ಪದ ಯಾರನ್ನೂ ಗುರುತಿಸಲು ಹೋಗುವುದಿಲ್ಲವೆಂದು ಹೇಳಬೇಕಾಗುತ್ತದೆ. ಬರಹಗಳಲ್ಲಿ ಸೊಲ್ಲನ್ನು ಬಳಸಿರುವ ಸಂದರ್ಬದಿಂದ ತಾನು ಪದ ತಿಳಿಸುವ ವ್ಯಕ್ತಿ ಯಾರೆಂದು ಗೊತ್ತಾಗುವಲ್ಲೂ ಕೆಲವೊಮ್ಮೆ ಅದರ ಹಿನ್ನುಡಿತವನ್ನು ಸೊಲ್ಲಿನಲ್ಲೇನೇ ತಿಳಿಸದಿರಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (1) ಅವನಿಗೆ ತಾನು ಹಣ್ಣು ಕೊಡದಿದ್ದರೆ ಸಿಟ್ಟಿನಿಂದ ಅರಚುತ್ತಿದ್ದ. (1)ನೇ ಸೊಲ್ಲಿನಲ್ಲಿ ಬಂದಿರುವ ತಾನು ಪದದ ಹಿನ್ನುಡಿತ ಅದೇ ಸೊಲ್ಲಿನಲ್ಲಿ ಬಂದಿಲ್ಲ; ಆದರೆ, ಅದು ತಿಳಿಸುವ ವ್ಯಕ್ತಿ ಸೊಲ್ಲಿನ ಬರಹಗಾರನಿಂದ ಬೇರಾಗಿದ್ದು, ಅದು ಯಾರು ಎಂಬುದು ಸೊಲ್ಲನ್ನು ಬಳಸಿರುವ ಸಂದರ್ಬದಿಂದ ಗೊತ್ತಾಗುತ್ತದೆ. ಹಾಗಾಗಿ, ಅದು ಯಾರೆಂಬುದನ್ನು ಈ ಸೊಲ್ಲಿನಲ್ಲಿ ತಿಳಿಸಿಲ್ಲ. ಕತೆಯ ಒಂದು ಪಾಂಗನ್ನೇ ಅದರ ಹೇಳುಗನಾಗಿ ಮಾಡಿರುವಲ್ಲೆಲ್ಲ ಈ ರೀತಿ ತಾನು ಪದದ ಮೂಲಕ ಆ ವ್ಯಕ್ತಿಯನ್ನು ತಿಳಿಸಲು ಬರುತ್ತದೆ; ಇಂತಹ ಬರಹಗಳಲ್ಲಿ ಇಡೀ ಕತೆಯನ್ನೇ ಬರಹಗಾರನು ಅದರ ಒಂದು ಪಾಂಗಿನ ಹೇಳಿಕೆಯಾಗಿ ಕೊಡುತ್ತಿರುವುದೇ ಇದಕ್ಕೆ ಕಾರಣ (9.3.3 ನೋಡಿ). ತಾನು ಪದದ ಹಲವೆಣಿಕೆಯ ರೂಪವಾದ ತಾವು ಎಂಬುದನ್ನು ಕೇಳುಗನಿಗೆ ಹೆಚ್ಚಿನ ಮದಿಪನ್ನು ಕೊಡುವುದಕ್ಕಾಗಿಯೂ ಬಳಸಲು ಬರುತ್ತಿದ್ದು, ಇಂತಹ ಬಳಕೆಗಳಲ್ಲೂ ಆ ಪದ ತಿಳಿಸುವ ವ್ಯಕ್ತಿ ಯಾರು ಎಂಬುದನ್ನು ಸೊಲ್ಲಿನಲ್ಲಿ ಬೇರೆಡೆ ತಿಳಿಸಬೇಕಾಗುವುದಿಲ್ಲ: (1ಕ) ತಾವು ಈ ಕುರ್ಚಿಯಲ್ಲಿ ಕುಳಿತುಕೊಳ್ಳಿ. (1ಚ) ತಮಗೆ ತೊಂದರೆಯಾಗುವುದಾದರೆ ಬರಬೇಕಾಗಿಲ್ಲ. ಮೇಲಿನ ಸೊಲ್ಲುಗಳಲ್ಲಿ ತಾವು ಪದ ಸೊಲ್ಲಿನ ಕೇಳುಗನನ್ನು ತಿಳಿಸಲು ಬಳಕೆಯಾಗಿದೆ, ಮತ್ತು ಈ ಸೊಲ್ಲುಗಳಲ್ಲಿ ಅದು ಯಾರನ್ನು ತಿಳಿಸುತ್ತದೆ (ಆ ಕೇಳುಗನು ಯಾರು) ಎಂಬುದನ್ನು ತಿಳಿಸುವ ಬೇರೆ ಪದ ಬಂದಿಲ್ಲ.

9.3.3 ಇಬ್ಬಿಬ್ಬರು ಆಡುಗರು ಮತ್ತು ಕೇಳುಗರಿರುವ ಸೊಲ್ಲುಗಳು

ಮೇಲೆ 9.2.4ರಲ್ಲಿ ವಿವರಿಸಿದ ಹಾಗೆ, ಬೇರೊಬ್ಬನ ಮಾತನ್ನು (ಇಲ್ಲವೇ ಅನಿಸಿಕೆಯನ್ನು) ಎತ್ತಿಹೇಳುವ ಸೊಲ್ಲುಗಳಲ್ಲಿ ಇಬ್ಬಿಬ್ಬರು ಆಡುಗರು ಮತ್ತು ಕೇಳುಗರು ತೊಡಗಿಕೊಂಡಿರುತ್ತಾರೆ, ಮತ್ತು ಇದರಿಂದಾಗಿ, ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ಆಡುಪದಗಳು ಅದೇ (ಎತ್ತುಗೆ) ಸೊಲ್ಲಿನ ಆಡುಗ ಇಲ್ಲವೇ ಕೇಳುಗರನ್ನು ತಿಳಿಸುತ್ತವೆಯೋ ಇಲ್ಲವೇ ಹೊರಸೊಲ್ಲಿನ ಆಡುಗ ಇಲ್ಲವೇ ಕೇಳುಗರನ್ನು ತಿಳಿಸುತ್ತವೆಯೋ ಎಂಬ ವಿಶಯದಲ್ಲಿ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1) ರಾಜು ಜಾನಕಿಯ ಹತ್ತಿರ ನಾನೊಂದು ಹುಲಿಯನ್ನು ಕೊಂದಿದ್ದೇನೆಂದು ಹೇಳಿದ್ದಾನೆ. (2) ನಾನು ಪಾಸಾಗಿದ್ದೇನೆಂದು ರಾಜು ನನ್ನ ಹತ್ತಿರ ಹೇಳಿದ್ದ. (1)ನೇ ಸೊಲ್ಲಿನಲ್ಲಿ ನಾನೊಂದು ಹುಲಿಯನ್ನು ಕೊಂದಿದ್ದೇನೆ ಎಂಬುದು ಎತ್ತುಗೆ ಸೊಲ್ಲಾಗಿ ಬಂದಿದೆ, ಮತ್ತು ಎಂದು ರಾಜು ಹೇಳಿದ್ದಾನೆ ಎಂಬುದು ಅದನ್ನು ಎತ್ತಿ ಹೇಳುವ ಹೊರಸೊಲ್ಲಾಗಿ ಬಂದಿದೆ; ಇವುಗಳಲ್ಲಿ ಎತ್ತುಗೆ ಸೊಲ್ಲಿಗೆ ರಾಜು ಮತ್ತು ಜಾನಕಿಯರು ಆಡುಗ ಮತ್ತು ಕೇಳುಗರಾಗಿ ಬಂದಿದ್ದಾರೆ, ಮತ್ತು ಹೊರಸೊಲ್ಲಿಗೆ ಇವರಿಬ್ಬರಿಗಿಂತ ತೀರ ಬೇರಾಗಿರುವ ವ್ಯಕ್ತಿಗಳು ಆಡುಗ ಮತ್ತು ಕೇಳುಗರಾಗಿ ಬಂದಿದ್ದಾರೆ. ಇದಕ್ಕೆ ಬದಲು, (2)ನೇ ಸೊಲ್ಲಿನಲ್ಲಿ ನಾನು ಪಾಸಾಗಿದ್ದೇನೆ ಎಂಬುದು ಎತ್ತುಗೆ ಸೊಲ್ಲಾಗಿ ಬಂದಿದ್ದು, ರಾಜು ಅದರ ಆಡುಗನಾಗಿ ಮತ್ತು ಹೊರಸೊಲ್ಲಿನ ಆಡುಗ ಅದರ ಕೇಳುಗನಾಗಿ ಬಂದಿರುವುದನ್ನು ಕಾಣಬಹುದು. ಈ ಎರಡು ಸೊಲ್ಲುಗಳಲ್ಲೂ ಹೊರಸೊಲ್ಲಿನ ಆಡುಗ ಮತ್ತು ಕೇಳುಗರು ಯಾರು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವನ್ನು ಯಾರು ಯಾರ ಹತ್ತಿರ ಆಡಿದ್ದಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ಎತ್ತುಗೆ ಸೊಲ್ಲುಗಳಲ್ಲಿ ಬರುವ ನಾನು ಮತ್ತು ನೀನು ಎಂಬ ಆಡುಪದಗಳು ಅವುಗಳದ್ದೇ ಆದ ಆಡುಗ ಮತ್ತು ಕೇಳುಗರನ್ನು ತಿಳಿಸುತ್ತಿರಬಲ್ಲುವು, ಇಲ್ಲವೇ ಅವುಗಳ ಹೊರಸೊಲ್ಲಿನ ಆಡುಗ ಮತ್ತು ಕೇಳುಗರನ್ನೂ ತಿಳಿಸುತ್ತಿರಬಲ್ಲುವು, ಮತ್ತು ಇದರಿಂದಾಗಿ ಅವುಗಳಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಮೇಲೆ ಕೊಟ್ಟಿರುವ (1-2) ಸೊಲ್ಲುಗಳಿಗೆ ಕೆಳಗೆ ಕೊಟ್ಟಿರುವಂತಹ ಎರಡೆರಡು ಹುರುಳುಗಳು ಸಿಗಬಲ್ಲುವು; ಅವುಗಳಲ್ಲಿ

ಬಂದಿರುವ ಎತ್ತುಗೆ ಸೊಲ್ಲನ್ನು ಎತ್ತುಗುರುತುಗಳ ನಡುವೆ ಇರಿಸಿ ಈ ಎರಡು ಹುರುಳುಗಳನ್ನು ಕೆಳಗೆ ತೋರಿಸಿದ ಹಾಗೆ ಬೇರ್ಪಡಿಸಲು ಬರುತ್ತದೆ: (1ಕ) ರಾಜು ಜಾನಕಿಯ ಹತ್ತಿರ “ನಾನೊಂದು ಹುಲಿಯನ್ನು ಕೊಂದಿದ್ದೇನೆ” ಎಂದು ಹೇಳಿದ್ದಾನೆ. (1ಚ) ರಾಜು ಜಾನಕಿಯ ಹತ್ತಿರ “ಹರಿ ಒಂದು ಹುಲಿಯನ್ನು ಕೊಂದಿದ್ದಾನೆ” ಎಂದು ಹೇಳಿದ್ದಾನೆ. (2ಕ) “ನಾನು ಪಾಸಾಗಿದ್ದೇನೆ” ಎಂದು ರಾಜು ನನ್ನ ಹತ್ತಿರ ಹೇಳಿದ್ದ. (2ಚ) “ನೀನು ಪಾಸಾಗಿದ್ದೀ” ಎಂದು ರಾಜು ನನ್ನ ಹತ್ತಿರ ಹೇಳಿದ್ದ. ಇಂತಹ ಸೊಲ್ಲುಗಳನ್ನು ಎತ್ತಿಹೇಳುವ ವ್ಯಕ್ತಿಯ (ಹೊರಸೊಲ್ಲಿನ ಆಡುಗನ) ಮಟ್ಟಿಗೆ ಎತ್ತುಗೆ ಸೊಲ್ಲಿನ ಆಡುಗ `ಬೇರೊಬ್ಬ’ ವ್ಯಕ್ತಿಯಾಗಿರುವುದರಿಂದ, ಆತನನ್ನು ತಿಳಿಸಲು ನಾನು ಪದದ ಬದಲು ತಾನು ಪದವನ್ನು ಬಳಸಲು ಬರುತ್ತದೆ, ಮತ್ತು ಈ ಬಳಕೆಯ ಮೂಲಕ (1) ಮತ್ತು (2)ನೇ ಸೊಲ್ಲುಗಳಿಗಿರುವ ಇಪ್ಪುರುಳನ್ನು ಇಲ್ಲವಾಗಿಸಲು ಬರುತ್ತದೆ: (1ಟ) ರಾಜು ಜಾನಕಿಯ ಹತ್ತಿರ ತಾನು ಒಂದು ಹುಲಿಯನ್ನು ಕೊಂದಿದ್ದೇನೆಂದು ಹೇಳಿದ್ದಾನೆ. (2ಟ) ತಾನು ಪಾಸಾಗಿದ್ದೇನೆಂದು ರಾಜು ನನ್ನ ಹತ್ತಿರ ಹೇಳಿದ್ದ. (1ಟ) ಮತ್ತು (2ಟ) ಸೊಲ್ಲುಗಳಿಗೆ (1ಕ) ಮತ್ತು (2ಕ) ಹುರುಳುಗಳು ಮಾತ್ರ ಸಿಗಬಹುದಲ್ಲದೆ (1ಚ) ಮತ್ತು (2ಚ) ಹುರುಳುಗಳು ಸಿಗಲಾರವು ಎಂಬುದನ್ನು ಗಮನಿಸಬಹುದು. ತಾನು ಪದದ ಈ ಬಳಕೆಯಲ್ಲಿ ಎತ್ತುಗೆ ಸೊಲ್ಲಿನ ಎಸಕರೂಪಗಳು ಬದಲಾಗದೆ ಉಳಿಯುತ್ತವೆ: (1) ಮತ್ತು (2)ನೇ ಸೊಲ್ಲುಗಳ ಕೊಂದಿದ್ದೇನೆ ಮತ್ತು ಪಾಸಾಗಿದ್ದೇನೆ ಎಂಬ ಎಸಕರೂಪಗಳು (1ಟ) ಮತ್ತು (2ಟ) ಸೊಲ್ಲುಗಳಲ್ಲಿ ಬದಲಾಗದೆ ಉಳಿದಿವೆ ಎಂಬುದನ್ನು ಗಮನಿಸಬಹುದು. ಎತ್ತುಗೆ ಸೊಲ್ಲುಗಳು ತಿಳಿಸುವ ಎಸಕದ ಮಾಡುಗ ಪಾಂಗು ಆ ಸೊಲ್ಲುಗಳ ಆಡುಗ ಎಂಬುದನ್ನು ಈ ಎಸಕರೂಪಗಳು ತಿಳಿಸುತ್ತವೆ, ಮತ್ತು ಈ ಮಾಡುಗ ಪಾಂಗು ಹೊರಸೊಲ್ಲಿನ ಮಟ್ಟಿಗೆ ಆಡುಗ ಇಲ್ಲವೇ ಕೇಳುಗನಲ್ಲ, ಬೇರೊಬ್ಬ ಎಂಬುದನ್ನು ತಾನು ಪದ ತಿಳಿಸುತ್ತದೆ. ಬೇರೊಬ್ಬ ಆಡುಗನ ಹೇಳಿಕೆಗಳನ್ನು ಎತ್ತಿಹೇಳುವಲ್ಲಿ ಮಾತ್ರವಲ್ಲದೆ, ಬೇರೊಬ್ಬ ವ್ಯಕ್ತಿಯ ಅನಿಸಿಕೆಗಳನ್ನು ಎತ್ತಿಹೇಳುವಲ್ಲೂ ಇಂತಹ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು, ಮತ್ತು ಅದನ್ನು ಹೋಗಲಾಡಿಸಲು ತಾನು ಪದವನ್ನು

ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನನ್ನನ್ನು ಯಾರೂ ಗಮನಿಸುವುದಿಲ್ಲವೆಂದು ರಾಜು ಕೊರಗುತ್ತಿದ್ದಾನೆ. (1ಚ) ತನ್ನನ್ನು ಯಾರೂ ಗಮನಿಸುವುದಿಲ್ಲವೆಂದು ರಾಜು ಕೊರಗುತ್ತಿದ್ದಾನೆ. (1ಕ) ಸೊಲ್ಲಿನಲ್ಲಿ ನನ್ನನ್ನು ಎಂಬ ಆಡುಪದವನ್ನು ಬಳಸಲಾಗಿದ್ದು, ಅದರ ಈಡು ಪಾಂಗು ಎತ್ತುಗೆ ಸೊಲ್ಲು ತಿಳಿಸುವ ಅನಿಸಿಕೆಯನ್ನು ಹೊಂದಿದವನಾಗಿರಬಹುದು (ಎಂದರೆ ರಾಜುವಾಗಿರಬಹುದು), ಇಲ್ಲವೇ ಹೊರಸೊಲ್ಲಿನ ಆಡುಗನಾಗಿರಬಹುದು; ಈ ಇಪ್ಪುರುಳೂ (1ಚ) ಸೊಲ್ಲಿನಲ್ಲಿ ಕಾಣಿಸುವುದಿಲ್ಲ; ಅದರ ಎತ್ತುಗೆ ಸೊಲ್ಲಿನಲ್ಲಿ ತನ್ನನ್ನು ಎಂಬುದನ್ನು ಬಳಸಿರುವ ಕಾರಣ, ಆ ಸೊಲ್ಲಿನ ಈಡು ಪಾಂಗು ಹೊರಸೊಲ್ಲಿನ ಮಟ್ಟಿಗೆ ಬೇರೊಬ್ಬನಾಗಿರಬೇಕಾಗುತ್ತದೆ; ಎಂದರೆ, ಹೊರಸೊಲ್ಲಿನ ಆಡುಗ ಇಲ್ಲವೇ ಕೇಳುಗನಾಗಿರಲು ಬರುವುದಿಲ್ಲ. ಹಾಗಾಗಿ, ಅದು ಎತ್ತುಗೆ ಸೊಲ್ಲು ತಿಳಿಸುವ ಅನಿಸಿಕೆಯನ್ನು ಹೊಂದಿದವನಾಗಿರಬೇಕಾಗುತ್ತದೆ. ಎತ್ತಿಹೇಳುವ ಸೊಲ್ಲುಗಳಲ್ಲಿ ಬರುವ ತಾನು ಪದ ಆ ಸೊಲ್ಲಿನಲ್ಲಿ ಬೇರೆ ಬೇರೆ ಪಾಂಗುಗಳಾಗಿ ಬಂದಿರುವ ಆಡುಗನನ್ನು (ಇಲ್ಲವೇ ಅನಿಸಿಕೆಯಿರುವವನನ್ನು) ತಿಳಿಸಬಲ್ಲುದು; ಆದರೆ, ಹೊರಸೊಲ್ಲಿನಲ್ಲಿ `ಹೇಳು’ ಎಂಬ ಹುರುಳಿನ ಎಸಕಪದ ಬಂದಿದೆಯಾದಲ್ಲಿ, ಅದು ಆ ಹೇಳುವ ಎಸಕದ ಮಾಡುಗ ಪಾಂಗಾಗಿರಬೇಕಾಗುತ್ತದೆ: (1ಕ) ತಾನು ಆ ದಿವಸ ಮನೆಯಲ್ಲಿರಲಿಲ್ಲವೆಂದು ರಾಜು ಹೇಳಿದ. (1ಚ) ತನ್ನನ್ನು ಹೊರಗೆ ಬಿಡಿರೆಂದು ರಾಜು ಬೇಡಿದ. (1ಟ) ತನ್ನಿಂದ ಒಂದು ತಪ್ಪಾಗಿದೆಯೆಂದು ರಾಜು ತಿಳಿಸಿದ. (1ತ) ತನಗೆ ಕೆಲಸ ಕೊಡಿಸಬೇಕೆಂದು ರಾಜು ಅರಿಕೆಮಾಡಿದ. (1ಪ) ತನ್ನಲ್ಲಿ ಯಾವ ಕೆಲಸವೂ ಇಲ್ಲವೆಂದು ರಾಜು ಹೇಳಿದ. ಮೇಲೆ ಕೊಟ್ಟಿರುವ ಎಲ್ಲಾ (1ಕ-ಪ) ಸೊಲ್ಲುಗಳಲ್ಲೂ ತಾನು ಪದ ಬಂದಿದ್ದು, ಎತ್ತುಗೆ ಸೊಲ್ಲಿನ ಆಡುಗ ಅದರಲ್ಲಿ ಮಾಡುಗ, ಈಡು, ಸುರು, ಗುರಿ ಮತ್ತು ಜಾಗ ಪಾಂಗುಗಳಾಗಿ ತೊಡಗಿಕೊಂಡಿರುವುದನ್ನು ಅದು ತಿಳಿಸುತ್ತದೆ; ಆದರೆ, ಈ ಎಲ್ಲಾ ಸೊಲ್ಲುಗಳಲ್ಲೂ ತಾನು ಪದದ ಹಿನ್ನುಡಿತವಾಗಿರುವ ರಾಜು ಎಂಬುದು ಹೊರಸೊಲ್ಲಿನ ಮಾಡುಗ ಪಾಂಗಾಗಿ ಬಂದಿದೆ.

ಹೊರಸೊಲ್ಲಿನಲ್ಲಿ ಮಾಡುಗ ಪಾಂಗಿನೊಂದಿಗೆ ಬೇರೆ ಪಾಂಗುಗಳೂ ಬರಬಲ್ಲುವು; ಆದರೆ, ಅವು ತಾನು ಪದದ ಹಿನ್ನುಡಿತವಾಗಲಾರವು: (1ಕ) ತನ್ನಲ್ಲಿ ಯಾವ ಕೆಲಸವೂ ಇಲ್ಲವೆಂದು ರಾಜು ಹರಿಗೆ ಹೇಳಿದ. (1ಚ) ತನ್ನನ್ನು ಯಾರೂ ಕಂಡಿರಲಿಲ್ಲವೆಂದು ರಾಜು ಹರಿಯ ಹತ್ತಿರ ಹೇಳಿದ್ದ. (1ಕ)ದ ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ತಾನು ಪದಕ್ಕೆ ಹಿನ್ನುಡಿತವಾಗಿ ರಾಜು ಪದ ಬರಬಲ್ಲುದಲ್ಲದೆ ಹರಿ ಎಂಬುದು ಬರಲಾರದು; (1ಚ)ದಲ್ಲೂ ಹೀಗೆಯೇ. ಹೇಳು ಎಂಬ ಹುರುಳಿನ ಬದಲು, ಹೊರಸೊಲ್ಲಿನ ಎಸಕಪದ ಒಂದು ಅನಿಸಿಕೆಯನ್ನು ತಿಳಿಸುತ್ತಿದೆಯಾದಲ್ಲಿ, ತಾನು ಪದದ ಹಿನ್ನುಡಿತವಾಗಿ ಬರುವ ಪದ ಇಲ್ಲವೇ ಪದಕಂತೆ ಆ ಎಸಕಪದದ ಗುರಿ ಪಾಂಗಾಗಿರುತ್ತದೆ: (1ಕ) ತಾನು ಹೇಳಿದ್ದು ಹೆಚ್ಚಾಯಿತೆಂದು ರಾಜುವಿಗೆ ಅನಿಸುತ್ತದೆ. (1ಚ) ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ರಾಜುವಿಗೆ ತೋರಿತು. (1ಟ) ತನಗೆ ಯಾವ ತೊಂದರೆಯೂ ಆಗದೆಂದು ರಾಜುವಿಗೆ ತಿಳಿದಿತ್ತು. ಮೇಲಿನ (1ಕ-ಟ) ಸೊಲ್ಲುಗಳಲ್ಲಿ ತಾನು ಪದ ಎತ್ತುಗೆ ಸೊಲ್ಲಿನ ಮಾಡುಗ, ಈಡು, ಮತ್ತು ಗುರಿ ಪಾಂಗಾಗಿ ಬಂದಿದೆ; ಆದರೆ, ಅದರ ಹಿನ್ನುಡಿತವಾಗಿರುವ ರಾಜು ಎಂಬ ಪದ ಈ ಮೂರು ಕಡೆಗಳಲ್ಲೂ ಹೊರಸೊಲ್ಲಿನ ಗುರಿ ಪಾಂಗಾಗಿ ಬಂದಿದೆ. ಎಂದು ಎಂಬುದರಲ್ಲಿ ಕೊನೆಗೊಳ್ಳುವ ಒಳಸೊಲ್ಲು ಹೊರಸೊಲ್ಲು ತಿಳಿಸುವ ಎಸಕದ ಕತ(ಕಾರಣ)ವೇನೆಂಬುದನ್ನೂ ತಿಳಿಸುತ್ತಿರಬಲ್ಲುದು, ಮತ್ತು ಇಂತಹ ಒಳಸೊಲ್ಲಿನಲ್ಲೂ ತಾನು ಪದ ಬಳಕೆಯಾಗಬಲ್ಲುದು: (1ಕ) ತಾನು ಮಂಗಳೂರಿನಿಂದ ಹಿಂದಿರುಗುವಾಗ ಕತ್ತಲೆಯಾಗಬಹುದೆಂದು ರಾಜು ಒಂದು ಟಾರ್ಚನ್ನು ಚೀಲದಲ್ಲಿರಿಸಿಕೊಂಡಿದ್ದ. (1ಚ) ತನಗೆ ತೊಂದರೆಯಾಗಬಾರದೆಂದು ರಾಜು ಹುಡುಗನನ್ನು ತಾಯಿಯ ಹತ್ತಿರ ಬಿಟ್ಟು ಬಂದಿದ್ದ. (1ಕ)ದಲ್ಲಿ ಬಂದಿರುವ ಒಳಸೊಲ್ಲು ಎಂದು ಎಂಬುದರಲ್ಲಿ ಕೊನೆಗೊಳ್ಳುತ್ತದೆಯಾದರೂ, ಒಂದು ಹೇಳಿಕೆ ಇಲ್ಲವೇ ಅನಿಸಿಕೆಯನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಅದು ಹೊರಸೊಲ್ಲು ತಿಳಿಸುವ ಎಸಕದ

ಕತವನ್ನು ತಿಳಿಸುತ್ತಿದೆ. ಹೀಗಿದ್ದರೂ, ಅದರಲ್ಲಿ ತಾನು ಪದ ಬಂದಿದ್ದು, ಅದು ಹೊರಸೊಲ್ಲಿನ ಮಾಡುಗ ಪಾಂಗನ್ನು (ರಾಜುವನ್ನು) ತಿಳಿಸುತ್ತದೆ. (1ಚ) ಸೊಲ್ಲಿನಲ್ಲಿ ತಾನು ಪದವನ್ನು ಬಳಸಿದುದರಿಂದಾಗಿ ಬೇರೊಂದು ಬಗೆಯ ಇಪ್ಪುರುಳು ಇಲ್ಲವಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು: (1ಟ) ಅವನಿಗೆ ತೊಂದರೆಯಾಗಬಾರದೆಂದು ರಾಜು ಹುಡುಗನನ್ನು ತಾಯಿಯ ಹತ್ತಿರ ಬಿಟ್ಟು ಬಂದಿದ್ದ. (1ಟ) ಸೊಲ್ಲಿನಲ್ಲಿ ಬಂದಿರುವ ಅವನಿಗೆ ಎಂಬ ತೋರುಪದಕ್ಕೆ ರಾಜುವನ್ನಾಗಲಿ, ಹುಡುಗನನ್ನಾಗಲಿ, ಇಲ್ಲವೇ ಬೇರೊಬ್ಬ ವ್ಯಕ್ತಿಯನ್ನಾಗಲಿ ತಿಳಿಸುವ ಹುರುಳು ಸಿಗಬಲ್ಲುದು; ಆದರೆ, ಮೇಲೆ ಕೊಟ್ಟಿರುವ (1ಚ) ಸೊಲ್ಲಿಗೆ ಈ ಮೂರು ಹುರುಳುಗಳಲ್ಲಿ ಮೊದಲಿನದು ಮಾತ್ರ ಸಿಗಬಲ್ಲುದು. ತಾನು ಪದದ ಹಿನ್ನುಡಿತ ಹೊರಸೊಲ್ಲಿನಲ್ಲಿ ಮಾಡುಗ (ಇಲ್ಲವೇ ಆಗುಗ) ಪಾಂಗಾಗಿ ಮಾತ್ರ ಬರಬಲ್ಲುದಲ್ಲದೆ ಈಡು ಪಾಂಗಾಗಿ ಬರಲಾರದೆಂಬ ಕಟ್ಟಲೆಯಿಂದಾಗಿ ಎರಡನೆಯ ಹುರುಳು ಅದಕ್ಕೆ ಸಿಗುವುದಿಲ್ಲ, ಮತ್ತು ಅದಕ್ಕೆ ತೋರ್ಕೆಯ ಹುರುಳಿಲ್ಲ ಎಂಬುದರಿಂದ ಮೂರನೆಯ ಹುರುಳೂ ಸಿಗುವುದಿಲ್ಲ. ಸಿಕ್ಕಲು ಸೊಲ್ಲುಗಳಲ್ಲಿ ಒಂದಕ್ಕಿಂತ ಹೆಚ್ಚು ತಾನು ಪದಗಳು ಬಳಕೆಯಾಗಬಲ್ಲುವಾಗಿದ್ದು, ಅವು ಬೇರೆ ಬೇರೆ ಹೊರಸೊಲ್ಲುಗಳ ಮಾಡುಗರನ್ನು ಹಿನ್ನುಡಿತವಾಗಿ ಪಡೆಯಬಲ್ಲುವು. ಎತ್ತುಗೆಗಾಗಿ ಕ್ರುಶ್ಣಮೂರ್ತಿ ಪುರಾಣಿಕರ ದರ್ಮದೇವತೆ ಎಂಬ ಕಾದಂಬರಿಯಲ್ಲಿ ಬಂದ ಕೆಳಗಿನ ಸೊಲ್ಲನ್ನು ಗಮನಿಸಬಹುದು: (1) ಅವನು ಕುರುಡನಾಗಿ ಅನೇಕ ತಿಂಗಳುಗಳಿಂದಲೂ ಹೆಂಡತಿ ತನ್ನ ದೇಹವನ್ನು ತನಗಾಗಿ ಗಂದದ ಕೊರಡಿನಂತೆ ತೇಯುತ್ತಿರುವುದನ್ನು ಪ್ರತಿದಿನ ಅನುಬವಿಸುತ್ತಿದ್ದಾನೆ. (1)ನೇ ಸೊಲ್ಲಿನಲ್ಲಿ ತಾನು ಪದ ಎರಡು ಬಾರಿ ಬಳಕೆಯಾಗಿದೆ; ಮೊದಲನೆಯ ಬಳಕೆಯಲ್ಲಿ ಅದು ತೇಯು ಎಂಬ ಎಸಕಪದದ ಮಾಡುಗವಾಗಿರುವ ಹೆಂಡತಿ ಪದವನ್ನು ಹಿನ್ನುಡಿತವಾಗಿ ಪಡೆದಿದೆ, ಮತ್ತು ಎರಡನೆಯ ಬಳಕೆಯಲ್ಲಿ ಅನುಬವಿಸು ಎಂಬ ಎಸಕಪದದ ಮಾಡುಗವಾಗಿರುವ ಅವನು ಪದವನ್ನು ಹಿನ್ನುಡಿತವಾಗಿ ಪಡೆದಿದೆ.

9.3.4 ಬೇರೆ ಬಗೆಯ ಒಳಸೊಲ್ಲುಗಳಲ್ಲಿ ಬಳಕೆ

ಎತ್ತುಗೆ ಸೊಲ್ಲುಗಳಲ್ಲಿ ಮಾತ್ರವಲ್ಲದೆ, ಬೇರೆಯೂ ಕೆಲವು ಬಗೆಯ ಒಳಸೊಲ್ಲುಗಳಲ್ಲಿ ತಾನು ಪದವನ್ನು ಬಳಸಲಾಗುತ್ತದೆ. ಆದರೆ, ಈ ಎಲ್ಲಾ ಬಗೆಯ ಸೊಲ್ಲುಗಳಲ್ಲೂ ಅದರ ಹಿನ್ನುಡಿತವಾಗಿ ಒಂದು ಪದ ಇಲ್ಲವೇ ಪದಕಂತೆ ಹೊರಸೊಲ್ಲಿನಲ್ಲಿ ಬಂದಿರುತ್ತದೆ. (1) ಒಂದು ಸೊಲ್ಲಿನ ಹೆಸರುರೂಪವನ್ನು ಬೇರೊಂದು ಸೊಲ್ಲಿನ ಒಂದು ಪಾಂಗಾಗಿ ಬಳಸಲು ಬರುತ್ತದೆ, ಮತ್ತು ಇಂತಹ ಕಡೆಗಳಲ್ಲಿ ಒಳಸೊಲ್ಲಿನ ಒಂದು ಪಾಂಗನ್ನು ತಾನು ಪದದಿಂದ ತಿಳಿಸಲು ಬರುತ್ತದೆ; ಅದರ ಹಿನ್ನುಡಿತ ಹೊರಸೊಲ್ಲಿನಲ್ಲಿ ಬರುತ್ತದೆ: (1ಕ) ಅವರು ತನಗೆ ಕಶ್ಟದಲ್ಲಿ ನೆರವಾದುದನ್ನು ರಾಜು ಮರೆತಿರಲಿಲ್ಲ. (1ಚ) ಆಕೆ ತನ್ನನ್ನು ಮನೆಗೆ ಕರೆಯದುದರಿಂದ ರಾಜು ಸಿಟ್ಟಾಗಿದ್ದಾನೆ. (1ಟ) ತಾನು ಬೆಟ್ಟಕ್ಕೆ ಹೋಗುವುದನ್ನು ರಾಜು ಯಾರಿಗೂ ತಿಳಿಸಲಿಲ್ಲ. (1ಕ)ದಲ್ಲಿ ಅವರು ತನಗೆ ಕಶ್ಟದಲ್ಲಿ ನೆರವಾದುದು ಎಂಬ ಹೆಸರುರೂಪದಲ್ಲಿರುವ ಸೊಲ್ಲಿನಲ್ಲಿ ತಾನು ಪದ ಬಂದಿದೆ, ಮತ್ತು ಅದರ ಹಿನ್ನುಡಿತವಾದ ರಾಜು ಎಂಬುದು ಹೊರಸೊಲ್ಲಿನಲ್ಲಿ ಬಂದಿದೆ; (1ಚ- ಟ)ಗಳಲ್ಲೂ ಹೀಗೆಯೇ. (2) ಒಂದು ಸೊಲ್ಲಿನ ಪರಿಚೆರೂಪವನ್ನು ಇನ್ನೊಂದು ಸೊಲ್ಲಿನಲ್ಲಿ ಬರುವ ಹೆಸರುಕಂತೆಯಲ್ಲಿ ಒಂದು ಪರಿಚೆ ನುಡಿತವಾಗಿ ಬಳಸಲು ಬರುತ್ತದೆ, ಮತ್ತು ಇಂತಹ ಪರಿಚೆರೂಪದ ಸೊಲ್ಲಿನ ಒಂದು ಪಾಂಗನ್ನು ತಾನು ಪದದಿಂದ ತಿಳಿಸಲು ಬರುತ್ತದೆ; ಈ ತಾನು ಪದದ ಹಿನ್ನುಡಿತವೂ ಆ ಇನ್ನೊಂದು ಸೊಲ್ಲಿನ ಒಂದು ಪಾಂಗಾಗಿ ಬರುತ್ತದೆ: (1ಕ) ತಾನು ಮಯ್ಸೂರಿನಿಂದ ತಂದ ಸೀರೆಯನ್ನು ರಾಜು ಯಾರಿಗೂ ಕೊಟ್ಟಿರಲಿಲ್ಲ. (1ಚ) ತನಗೆ ಮರೆತುಹೋಗಿದ್ದ ಕೆಲಸವನ್ನು ರಾಜು ಹರಿಯ ಕಯ್ಯಲ್ಲಿ ಮಾಡಿಸಿದ. (1ಕ)ದಲ್ಲಿ ತಾನು ಮಯ್ಸೂರಿನಿಂದ ತಂದ ಎಂಬ ಪರಿಚೆರೂಪದ ಸೊಲ್ಲಿನಲ್ಲಿ ತಾನು ಪದ ಬಂದಿದೆ; ಮತ್ತು ಅದರ ಹಿನ್ನುಡಿತ (ರಾಜು) ಇನ್ನೊಂದು ಸೊಲ್ಲಿನಲ್ಲಿ ಬಂದಿದ್ದು, ಆ ಸೊಲ್ಲಿನ ಸೀರೆ ಎಂಬುದಕ್ಕೆ ಮೇಲಿನ ಪರಿಚೆರೂಪದ ಸೊಲ್ಲು ಪರಿಚೆ ನುಡಿತವಾಗಿ ಬಂದಿದೆ. (3) ತಿಳಿಯದ ತೋರುಪದವನ್ನು ಬಳಸಿಯೂ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನಲ್ಲಿ ಬಂದಿರುವ ಹೆಸರುಕಂತೆಯಲ್ಲಿ ಪರಿಚೆನುಡಿತವಾಗಿ

ಬಳಸಲು ಬರುತ್ತದೆ, ಮತ್ತು ಇಂತಹ ಸೊಲ್ಲಿನಲ್ಲಿ ಬರುವ ಪಾಂಗನ್ನೂ ತಾನು ಪದದಿಂದ ತಿಳಿಸಲು ಬರುತ್ತದೆ: (1ಕ) ಹಿಂದಿನ ವರ್ಶ ತನಗೆ ಯಾರು ನೆರವು ನೀಡಿದ್ದರೋ ಅವರನ್ನು ರಾಜು ಮರೆತಿರಲಿಲ್ಲ. (1ಚ) ಯಾವ ಹುಡುಗನಿಗೆ ತಾನು ಕಾಗದ ಬರೆದಿದ್ದನೋ ಆತ ಇವತ್ತು ರಾಜುವಿಗೆ ಪೇಟೆಯಲ್ಲಿ ಕಾಣಲು ಸಿಕ್ಕಿದ್ದ. (1ಕ)ದಲ್ಲಿ ಯಾರು ಎಂಬ ತಿಳಿಯದ ತೋರುಪದವನ್ನು ಬಳಸಿ, ಹಿಂದಿನ ವರ್ಶ ಅವರು ನನಗೆ ನೆರವು ನೀಡಿದ್ದರು ಎಂಬ ಸೊಲ್ಲನ್ನು ರಾಜು ಅವರನ್ನು ಮರೆತಿಲ್ಲ ಎಂಬ ಬೇರೊಂದು ಸೊಲ್ಲಿನಲ್ಲಿ ಬಂದಿರುವ ಅವರನ್ನು ಎಂಬ ಪಾಂಗಿಗೆ ಪರಿಚೆನುಡಿತವಾಗಿ ಬಳಸಲಾಗಿದೆ, ಮತ್ತು ಇದರಲ್ಲಿ ತಾನು ಎಂಬುದನ್ನು ಪರಿಚೆನುಡಿತದಲ್ಲೂ, ಅದರ ಹಿನ್ನುಡಿತವಾದ ರಾಜು ಎಂಬುದನ್ನು ಆ ಪರಿಚೆನುಡಿತಕ್ಕಿರುವ ಹೊರಸೊಲ್ಲಿನಲ್ಲೂ ಬಳಸಲಾಗಿದೆ. (1ಚ)ದಲ್ಲೂ ಹೀಗೆಯೇ. ಈ ಎಲ್ಲಾ ಕಡೆಗಳಲ್ಲೂ ತಾನು ಪದವನ್ನು ಒಳಸೊಲ್ಲಿನಲ್ಲಿ ಮತ್ತು ಅದರ ಹಿನ್ನುಡಿತವನ್ನು ಹೊರಸೊಲ್ಲಿನಲ್ಲಿ ಬಳಸಲಾಗುತ್ತದೆಯಲ್ಲದೆ, ತಾನು ಪದವನ್ನು ಹೊರಸೊಲ್ಲಿನಲ್ಲಿ ಮತ್ತು ಹಿನ್ನುಡಿತವನ್ನು ಅದರ ಒಳಸೊಲ್ಲಿನಲ್ಲಿ ಬಳಸಲು ಬರುವುದಿಲ್ಲ ಎಂಬುದನ್ನು ಗಮನಿಸಬಹುದು: (1ಕ) *ಅವರು ರಾಜುವಿಗೆ ಕಶ್ಟದಲ್ಲಿ ನೆರವಾದುದನ್ನು ತಾನು ಮರೆತಿರಲಿಲ್ಲ. (1ಚ) *ರಾಜು ಮಯ್ಸೂರಿನಿಂದ ತಂದ ಸೀರೆಯನ್ನು ತಾನು ಯಾರಿಗೂ ಕೊಟ್ಟಿರಲಿಲ್ಲ. (1ಟ) *ಹಿಂದಿನ ವರ್ಶ ರಾಜುವಿಗೆ ಯಾರು ನೆರವು ನೀಡಿದ್ದರೋ ಅವರನ್ನು ತಾನು ಮರೆತಿರಲಿಲ್ಲ. ಮೇಲಿನ (1ಕ-ಟ) ಸೊಲ್ಲುಗಳಲ್ಲಿ ತಾನು ಪದ ಹೊರಸೊಲ್ಲಿನಲ್ಲಿ ಬಂದಿದ್ದು, ಅದರ ಹಿನ್ನುಡಿತ ಒಳಸೊಲ್ಲಿನಲ್ಲಿ ಬಂದಿದೆ; ಈ ಕಾರಣಕ್ಕಾಗಿ, ಈ ಮೂರು ಸೊಲ್ಲುಗಳೂ ಸರಿಯಾಗಿಲ್ಲ. ಮೇಲಿನ ಸೊಲ್ಲುಗಳಲ್ಲಿ ತಾನು ಪದದ ಹಿನ್ನುಡಿತ ಸೊಲ್ಲಿನ ಆಡುಗನಾಗಿರಲು (ಎಂದರೆ ಕತೆಯನ್ನು ಬರೆದವನಿಗೆ ಅದನ್ನು ಹೇಳಿದವನಾಗಿರಲು) ಬರುತ್ತದೆ, ಮತ್ತು ಅಂತಹ ಹುರುಳಿನಲ್ಲಿ ಮೇಲಿನ ಸೊಲ್ಲುಗಳು ಸರಿಯಾಗಿವೆ ಎಂಬುದನ್ನು ಗಮನಿಸಬಹುದು. ಎತ್ತುಗೆಗಾಗಿ, `ಅವರು ರಾಜುವಿಗೆ ಕಶ್ಟದಲ್ಲಿ ನೆರವಾದುದನ್ನು ತಾನು (ಎಂದರೆ, (1ಕ)

ಸೊಲ್ಲಿನ ಆಡುಗ) ಮರೆತಿರಲಿಲ್ಲ’ ಎಂಬ ಹುರುಳಿನಲ್ಲಿ (1ಕ) ಸೊಲ್ಲು ಸರಿಯಾಗಿಯೇ ಇದೆ.

9.3.5 ಸೇರಿಕೆಯ ಸೊಲ್ಲುಗಳಲ್ಲಿ ಬಳಕೆ

ಒಂದು ಸೊಲ್ಲಿನಲ್ಲಿ ಬರುವ ಎರಡು ಪಾಂಗುಗಳ ನಡುವೆ ಒಗ್ಗುರುತಿಸುವಿಕೆಯಿದೆ (ಎಂದರೆ, ಅವೆರಡೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತವೆ) ಎಂಬುದನ್ನು ತಿಳಿಸುವುದಕ್ಕಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ; ಅದರ ಎಸಕಪದಕ್ಕೆ ಕೊಳ್ಳು ಎಂಬುದನ್ನು ಸೇರಿಸುವುದು ಒಂದು ಹೊಲಬು, ಮತ್ತು ಆ ಎರಡು ಪಾಂಗುಗಳಲ್ಲಿ ಒಂದಕ್ಕೆ ಬದಲಾಗಿ ಆಡುಪದವನ್ನು ಬಳಸುವುದು ಇನ್ನೊಂದು ಹೊಲಬು (8.4 ನೋಡಿ). ಕೆಲವು ಕಡೆಗಳಲ್ಲಿ ಈ ಎರಡು ಹೊಲಬುಗಳಲ್ಲಿ ಒಂದನ್ನು ಮಾತ್ರ ಬಳಸಲಾಗುತ್ತದೆ, ಮತ್ತು ಇನ್ನು ಕೆಲವು ಕಡೆಗಳಲ್ಲಿ ಎರಡನ್ನೂ ಒಟ್ಟಾಗಿ ಬಳಸಲಾಗುತ್ತದೆ. (1ಕ) ರಾಜು ಹರಿಯನ್ನು ದೂರಿದ. (1ಚ) ರಾಜು ತನ್ನನ್ನೇ ದೂರಿದ. (1ಟ) ರಾಜು ತನ್ನನ್ನೇ ದೂರಿಕೊಂಡ. (2ಕ) ರಾಜು ಹರಿಗೆ ಅನ್ನ ಬಡಿಸಿದ. (2ಚ) ರಾಜು ಅನ್ನ ಬಡಿಸಿಕೊಂಡ. (1ಕ)ದಲ್ಲಿ ಮಾಡುಗ ಮತ್ತು ಈಡು ಪಾಂಗುಗಳನ್ನು ರಾಜು ಮತ್ತು ಹರಿ ಎಂಬ ಎರಡು ಬೇರೆ ಬೇರೆ ಪದಗಳ ಮೂಲಕ ತಿಳಿಸಲಾಗಿದೆ; (1ಚ)ದಲ್ಲಿ ಇವೆರಡರ ನಡುವೆ ಒಗ್ಗುರುತಿಸುವಿಕೆಯಿದೆ ಎಂಬುದನ್ನು ತಿಳಿಸಲು ಈಡು ಪಾಂಗಾಗಿ ತಾನು ಪದವನ್ನು ಬಳಸಲಾಗಿದೆ, ಮತ್ತು (1ಟ)ದಲ್ಲಿ ಅದರೊಂದಿಗೆ ಬರುವ ಎಸಕಪದವನ್ನು ದೂರಿಕೊಂಡ ಎಂಬುದಾಗಿ ಸೇರಿಕೆರೂಪಕ್ಕೆ ಮಾರ್ಪಡಿಸಲಾಗಿದೆ. ಈ ಎರಡು ಹೊಲಬುಗಳೂ ಒಟ್ಟಿಗೆ ಬರಬಲ್ಲುವು ಎಂಬುದನ್ನು (1ಟ) ಸೊಲ್ಲು ತಿಳಿಸುತ್ತದೆ, ಮತ್ತು ಅವೆರಡು ಬೇರೆ ಬೇರಾಗಿಯೂ ಬರಬಲ್ಲುವು ಎಂಬುದನ್ನು (1ಚ) ಮತ್ತು (2ಚ) ಸೊಲ್ಲುಗಳು ತಿಳಿಸುತ್ತವೆ. ಪಾಂಗುಗಳ ಒಗ್ಗುರುತಿಸುವಿಕೆಯಲ್ಲಿ ಆಡುಗ ಇಲ್ಲವೇ ಕೇಳುಗರು ತೊಡಗಿಕೊಂಡಿರುವರಾದರೆ, ಆ ಎರಡು ಪಾಂಗುಗಳನ್ನು ನಾನು ಮತ್ತು ನೀನು ಪದಗಳ ಮೂಲಕವೇನೇ ತಿಳಿಸಲಾಗುತ್ತದೆ; ಬೇರೊಬ್ಬ ತೊಡಗಿಕೊಂಡಿರುವಲ್ಲಿ ಮಾತ್ರ ಎರಡನೆಯ ಪಾಂಗನ್ನು ತಾನು ಪದದ ಮೂಲಕ ತಿಳಿಸಲಾಗುತ್ತದೆ: (1ಕ) ನಾನು ನನ್ನನ್ನು ದೂರುತ್ತಿದ್ದೆ.

(1ಚ) ನೀನು ನಿನ್ನನ್ನು ದೂರುತ್ತಿದ್ದಿ. (1ಟ) ರಾಜು ತನ್ನನ್ನು ದೂರುತ್ತಿದ್ದ. ಇದಲ್ಲದೆ, ಬೇರೊಬ್ಬ ತೊಡಗಿಕೊಂಡಿರುವ ಇಂತಹ ಸೇರಿಕೆಯ ಸೊಲ್ಲುಗಳಲ್ಲಿ ಅವನು, ಅವಳು ಮೊದಲಾದ ತೋರುಪದಗಳನ್ನು ಬಳಸಲು ಬರುವುದಿಲ್ಲ: (1ತ) ರಾಜು ಅವನನ್ನು ದೂರುತ್ತಿದ್ದ. (1ತ) ಸೊಲ್ಲಿಗೆ (1ಟ) ಸೊಲ್ಲು ಕೊಡಬಲ್ಲ ಸೇರಿಕೆಯ ಹುರುಳಿಲ್ಲ; ಎಂದರೆ, ಅದರಲ್ಲಿ ಬಂದಿರುವ ಅವನು ಪದಕ್ಕೆ ರಾಜು ಪದ ಹಿನ್ನುಡಿತವಾಗಲಾರದು. ಈಡು ಪಾಂಗಿಗೆ ಮಾತ್ರವಲ್ಲದೆ ಬೇರೆ ಪಾಂಗುಗಳಿಗೂ ಮಾಡುಗ ಇಲ್ಲವೇ ಆಗುಗ ಪಾಂಗಿನೊಂದಿಗಿರುವ ಒಗ್ಗುರುತಿಸುವಿಕೆಯನ್ನು ಈ ರೀತಿ ತಾನು ಪದದ ಮೂಲಕ ತಿಳಿಸಲು ಬರುತ್ತದೆ: (1ಕ) ರಾಜುವಿಗೆ ತನ್ನಲ್ಲೇ ನಂಬಿಕೆಯಿರಲಿಲ್ಲ. (1ಚ) ರಾಜು ತನಗೇನೇ ಹೊಡೆದುಕೊಂಡ. (1ಟ) ರಾಜು ಎಲ್ಲರನ್ನೂ ತನ್ನಿಂದ ದೂರ ಮಾಡಿಕೊಂಡಿದ್ದ. ತಾನು ಪದವನ್ನು ಬಳಸಿರುವ ಇಂತಹ ಸೇರಿಕೆಯ ಸೊಲ್ಲುಗಳನ್ನು ಒಳಸೊಲ್ಲಾಗಿ ಬಳಸಿರುವಲ್ಲಿ ಕೆಲವೊಮ್ಮೆ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು: (1ಕ) ಹರಿ ತನ್ನನ್ನು ಹೊಗಳುತ್ತಿದ್ದಾನೆಂದು ರಾಜುವಿಗೆ ಗೊತ್ತಿದೆ. (1ಚ) ಹರಿ ತನ್ನನ್ನು ಹೊಗಳಿಕೊಳ್ಳುತ್ತಿದ್ದಾನೆಂದು ರಾಜುವಿಗೆ ಗೊತ್ತಿದೆ. (1ಕ)ದ ಎತ್ತುಗೆ ಸೊಲ್ಲಿನಲ್ಲಿ ಬಂದಿರುವ ತಾನು ಪದ ರಾಜುವನ್ನಾಗಲಿ ಇಲ್ಲವೇ ಹರಿಯನ್ನಾಗಲಿ ತಿಳಿಸಬಲ್ಲುದು. ಆದರೆ, ಎಸಕಪದದೊಂದಿಗೆ ಕೊಳ್ಳು ಎಂಬುದನ್ನು ಬಳಸಿರುವ (1ಚ) ಸೊಲ್ಲಿನಲ್ಲಿ ಈ ಇಪ್ಪುರುಳು ಇಲ್ಲವಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಕೊಳ್ಳು ಪದ ಅದರೊಂದಿಗೆ ಬಂದಿರುವ ಎಸಕಪದಕ್ಕಿರುವ ಪಾಂಗುಗಳ ನಡುವಿನ ಒಗ್ಗುರುತಿಸುವಿಕೆಯನ್ನು ಮಾತ್ರ ತಿಳಿಸಬಲ್ಲುದು; ಇದಕ್ಕೆ ಬದಲು, ತಾನು ಪದ ಅದು ಬಳಕೆಯಾಗಿರುವ ಸೊಲ್ಲಿನ ಎರಡು ಇಲ್ಲವೇ ಹೆಚ್ಚು ಎಸಕಪದಗಳ ಪಾಂಗುಗಳಲ್ಲಿ ಯಾವುದೇ ಎರಡು ಪಾಂಗುಗಳ ನಡುವಿರುವ ಒಗ್ಗುರುತಿಸುವಿಕೆಯನ್ನೂ ತಿಳಿಸಬಲ್ಲುದು.

ಆದರೆ, ಈ ರೀತಿ ಒಟ್ಟು ಸೇರುವ ಪಾಂಗುಗಳಲ್ಲಿ ಹೊರಸೊಲ್ಲಿನದಾಗಿರುವ ಪಾಂಗು ಅದರ ಮಾಡುಗ ಇಲ್ಲವೇ ಆಗುಗವಾಗಿರಬೇಕು, ಮತ್ತು ಅವೆರಡೂ ಇಲ್ಲದಲ್ಲಿ ಗುರಿಯಾಗಿರಬೇಕು ಎಂಬ ಕಟ್ಟಲೆಯಿದೆ (9.3.3 ನೋಡಿ).

9.3.6 ಪತ್ತುಗೆರೂಪದಲ್ಲಿ ಬಳಕೆ

ಒಂದು ಹೆಸರುಪದದ ಪತ್ತುಗೆರೂಪವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಿ, ಆ ಎರಡು ಪದಗಳು ಗುರುತಿಸುವ ಪಾಂಗುಗಳ ನಡುವಿರುವ ನಂಟಸ್ತನ (ರಾಜುವಿನ ಅಣ್ಣ), ಒಡೆತನ (ರಾಜುವಿನ ಮನೆ), ಬರಹಗಾರತನ (ರಾಜುವಿನ ಕತೆ) ಮೊದಲಾದ ಹಲವು ಬಗೆಯ ಸಂಬಂದಗಳನ್ನು ತಿಳಿಸಲು ಬರುತ್ತದೆ. ಇಂತಹ ಪತ್ತುಗೆರೂಪದಲ್ಲಿರುವ ಹೆಸರುಪದದ ಜಾಗದಲ್ಲೂ ತಾನು ಪದವನ್ನು ಬಳಸಲು ಬರುತ್ತದೆ: (1ಕ) ರಾಜು ತನ್ನ ಮಗಳನ್ನು ಶಾಲೆಗೆ ಸೇರಿಸಿದ್ದಾನೆ. (1ಚ) ರಾಜು ತನ್ನ ಕೆಲಸದಲ್ಲಿ ಹಿಂದೆ ಬಿದ್ದಿದ್ದಾನೆ. (1ಟ) ತನ್ನ ಮನೆಯ ಅಂಗಳದಲ್ಲಿ ಜಾನಕಿ ತರಕಾರಿ ಬೆಳೆಸಿದ್ದಾಳೆ. (1ಕ)ದಲ್ಲಿ ರಾಜುವಿನ ಮಗಳನ್ನು ಎಂಬ ಹುರುಳಿನಲ್ಲಿ ತನ್ನ ಮಗಳನ್ನು ಎಂಬುದನ್ನು ಬಳಸಲಾಗಿದೆ. (1ಚ-ಟ)ಗಳಲ್ಲೂ ತನ್ನ ಎಂಬ ಪತ್ತುಗೆರೂಪಕ್ಕೆ ಇಂತಹದೇ ಬಳಕೆಯಿದೆ. ನಾನು ಮತ್ತು ನೀನು ಪದಗಳಿಗೂ ಇಂತಹ ಬಳಕೆಯಿದೆ (ನಾನು ನನ್ನ ಮಗಳನ್ನು ಶಾಲೆಗೆ ಸೇರಿಸಿದ್ದೇನೆ); ಅವು ಈ ಬಳಕೆಯಲ್ಲಿ ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ತಿಳಿಸುವ ಹಾಗೆ, ತಾನು ಪದವೂ ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ವ್ಯಕ್ತಿಯೊಬ್ಬನನ್ನು ತಿಳಿಸುತ್ತದೆ ಎಂದು ಹೇಳಲು ಬರುತ್ತದೆ; ಇದಲ್ಲದೆ, ಆ ವ್ಯಕ್ತಿ ಯಾರೆಂಬುದನ್ನು ತಾನು ಪದದ ಇಂತಹ ಬಳಕೆಯಲ್ಲೂ ಅದೇ ಸೊಲ್ಲಿನ ಬೇರೊಂದು ಪದ (ಹಿನ್ನುಡಿತ) ತಿಳಿಸಬೇಕಾಗುತ್ತದೆ. ಪತ್ತುಗೆರೂಪದಲ್ಲಿ ಬರುವ ತಾನು ಪದದ ಹಿನ್ನುಡಿತ ಸೊಲ್ಲಿನ ಆಗುಗ ಇಲ್ಲವೇ ಮಾಡುಗವಾಗಿರಬೇಕೆಂಬ ಕಟ್ಟಲೆಯಿದೆ; ಹಾಗಾಗಿ, ಆಗುಗ ಇಲ್ಲವೇ ಮಾಡುಗ ಇರುವಲ್ಲಿ ಬೇರೆ ಪಾಂಗುಗಳು ಅದರ ಹಿನ್ನುಡಿತವಾಗಿ ಬರಲಾರವು. ಅವೆರಡೂ ಇಲ್ಲದಲ್ಲಿ ಮಾತ್ರ ಗುರಿ ಪಾಂಗು ಅದರ ಹಿನ್ನುಡಿತವಾಗಬಲ್ಲುದು: (1ಕ) ರಾಜು ತನ್ನ ಹೆಂಡತಿಗೆ ಹೆದರುತ್ತಾನೆ. (1ಚ) *ರಾಜುವಿಗೆ ತನ್ನ ಹೆಂಡತಿ ಹೆದರುತ್ತಾಳೆ. (2ಕ) ರಾಜುವಿಗೆ ತನ್ನ ಮಗನಲ್ಲಿ ನಂಬಿಕೆ ಇದೆ.

(2ಚ) *ತನ್ನ ಮಗನಿಗೆ ರಾಜುವಿನಲ್ಲಿ ನಂಬಿಕೆ ಇದೆ. (1ಕ)ದಲ್ಲಿ ತಾನು ಪದದ ಹಿನ್ನುಡಿತವಾಗಿ ಆ ಸೊಲ್ಲಿನ ಆಗುಗ ಪಾಂಗಾದ ರಾಜು ಪದ ಬಂದಿರುವ ಕಾರಣ ಆ ಸೊಲ್ಲು ಸರಿಯಾಗಿದೆ; ಇದಕ್ಕೆ ಬದಲು, (1ಚ)ದಲ್ಲಿ ಅದೇ ಪದದ ಹಿನ್ನುಡಿತವಾಗಿ ಆ ಸೊಲ್ಲಿನ ಗುರಿ ಪಾಂಗು (ರಾಜುವಿಗೆ) ಬಂದಿರುವ ಕಾರಣ ಆ ಸೊಲ್ಲು ಸರಿಯಾಗಿಲ್ಲ. (2ಕ)ದಲ್ಲಿ ಆಗುಗ ಇಲ್ಲವೇ ಮಾಡುಗ ಪಾಂಗು ಬಂದಿಲ್ಲ; ಹಾಗಾಗಿ, ತಾನು ಪದದ ಹಿನ್ನುಡಿತವಾಗಿ ರಾಜುವಿಗೆ ಎಂಬ ಗುರಿ ಪಾಂಗನ್ನು ಬಳಸಿರುವುದು ಸರಿಯಾಗಿದೆ; ಆದರೆ, (2ಚ)ದಲ್ಲಿ ತಾನು ಪದದ ಹಿನ್ನುಡಿತವಾಗಿ ಆ ಸೊಲ್ಲಿನ ಜಾಗ ಪಾಂಗಾದ ರಾಜುವಿನಲ್ಲಿ ಎಂಬುದನ್ನು ಬಳಸಿರುವ ಕಾರಣ, ಆ ಸೊಲ್ಲು ಸರಿಯಾಗಿಲ್ಲ. ಮಾಡುಗ ಪಾಂಗಿನ ಬದಲು ಗುರಿ, ಸುರು, ಜಾಗ ಮತ್ತು ಈಡು ಪಾಂಗುಗಳನ್ನು ತಾನು ಪದದ ಹಿನ್ನುಡಿತವಾಗಿ ಬಳಸಿರುವ ಕಾರಣ, ಮತ್ತು ಆ ಸೊಲ್ಲುಗಳಲ್ಲಿ ಮಾಡುಗ ಪಾಂಗು ಬಂದಿರುವ ಕಾರಣ, ಕೆಳಗೆ ಕೊಟ್ಟಿರುವ (ಚ) ಸೊಲ್ಲುಗಳೂ ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು: (1ಕ) ಆಕೆ ತನ್ನ ಮಕ್ಕಳಿಗೆ ಒಂದು ಕತೆ ಹೇಳಿದಳು. (1ಚ) *ಆಕೆಗೆ ತನ್ನ ಮಕ್ಕಳು ಒಂದು ಕತೆ ಹೇಳಿದರು. (2ಕ) ಅವನು ತನ್ನ ಅಣ್ಣನಿಂದ ಹಣ ಕಸಿದ. (2ಚ) *ಅವನಿಂದ ತನ್ನ ಅಣ್ಣ ಹಣ ಕಸಿದ. (3ಕ) ಅವನು ತನ್ನ ಗೆಳೆಯನಲ್ಲಿ ಮೂರು ದಿನ ತಂಗಿದ. (3ಚ) *ಅವನಲ್ಲಿ ತನ್ನ ಗೆಳೆಯ ಮೂರು ದಿನ ತಂಗಿದ. (4ಕ) ಅವನು ತನ್ನ ಗೆಳೆಯನನ್ನು ದೂಡಿದ. (4ಚ) *ಅವನನ್ನು ತನ್ನ ಗೆಳೆಯ ದೂಡಿದ. ಆದರೆ, ಮಾಡುಗವನ್ನು ಮರೆಮಾಚಿರುವ ಸೊಲ್ಲುಗಳಲ್ಲಿ ತಾನು ಪದ ಸೊಲ್ಲಿನ ಈಡು ಪಾಂಗನ್ನೂ ಹಿನ್ನುಡಿತವಾಗಿ ಪಡೆಯಬಲ್ಲುದು: (1ಟ) ಅವರನ್ನು ತಮ್ಮ ತಮ್ಮ ಮನೆಗಳಿಗೆ ಕಳುಹಿಸಿಕೊಡಲಾಯಿತು. (1ಟ)ದಲ್ಲಿ ಕಳುಹಿಸಿಕೊಡಲಾಯಿತು ಎಂಬ ಎಸಕರೂಪವನ್ನು ಬಳಸುವ ಮೂಲಕ ಮಾಡುಗವನ್ನು ಮರೆಮಾಚಲಾಗಿದೆ; ಹಾಗಾಗಿ, ಅದರಲ್ಲಿ ಬಂದಿರುವ ತಾನು (ತಮ್ಮ) ಪದಕ್ಕೆ ಅವರನ್ನು ಎಂಬ ಈಡು ಪಾಂಗು ಹಿನ್ನುಡಿತವಾಗಿದೆ.

ತಾನು ಪದದ ಪತ್ತುಗೆರೂಪವನ್ನು ಒಳಸೊಲ್ಲುಗಳಲ್ಲಿಯೂ ಬಳಸಲು ಬರುತ್ತದೆ, ಮತ್ತು ಅದರ ಹಿನ್ನುಡಿತ ಸಾಮಾನ್ಯವಾಗಿ ಹೊರಸೊಲ್ಲಿನಲ್ಲಿ ಬಂದಿರುತ್ತದೆ; ಅದು ಅದೇ ಒಳಸೊಲ್ಲಿನಲ್ಲಿ ಬಂದಿರುವಾಗಲೂ ಹೊರಸೊಲ್ಲಿನ ಗುರಿ ಇಲ್ಲವೇ ಮಾಡುಗ ಅದೇ ವ್ಯಕ್ತಿಯಾಗಿರಬೇಕಾಗುತ್ತದೆ: (1ಕ) ತನ್ನ ಮನೆಯಲ್ಲಿ ಕಳ್ಳತನವಾಗಿದೆಯೆಂದು ರಾಜುವಿಗೆ ಗೊತ್ತಿರಲಿಲ್ಲ. (1ಚ) ರಾಜು ತನ್ನ ಮನೆಗೆ ಹತ್ತು ಲಕ್ಶ ಕೊಟ್ಟುದನ್ನು ಯಾರಿಗೂ ಹೇಳಿರಲಿಲ್ಲ. (1ಕ)ದಲ್ಲಿ ತಾನು ಪದದ ಹಿನ್ನುಡಿತವಾಗಿರುವ ರಾಜು ಪದ ಹೊರಸೊಲ್ಲಿನಲ್ಲಿ ಬಂದಿದೆ; (1ಚ)ದಲ್ಲಿ ಅದು ಒಳಸೊಲ್ಲಿನಲ್ಲೇ ಬಂದಿದೆಯಾದರೂ, ಹೊರಸೊಲ್ಲಿನ ಮಾಡುಗವೂ ಅದೇ ಆಗಿದೆ; ಅದನ್ನು ಅಲ್ಲಿ ಬೇರಾಗಿ ಹೇಳಿಲ್ಲ, ಅಶ್ಟೆ. (1ಕ)ದಲ್ಲಿ ತಾನು ಪದದ ಹಿನ್ನುಡಿತ ಹೊರಸೊಲ್ಲಿನ ಗುರಿ ಪಾಂಗಾಗಿದೆ (ಅದರಲ್ಲಿ ಆಗುಗ ಇಲ್ಲವೇ ಮಾಡುಗ ಬಂದಿಲ್ಲ), ಮತ್ತು (1ಚ)ದಲ್ಲಿ ಅದು ಒಳ (ಮತ್ತು ಹೊರ) ಸೊಲ್ಲಿನ ಮಾಡುಗ ಪಾಂಗಾಗಿದೆ. ತಾನು ಪದವನ್ನು ಒಳಸೊಲ್ಲಿನಲ್ಲಿ ಬಳಸಿದ್ದು, ಅದರ ಹಿನ್ನುಡಿತವಾಗಬಲ್ಲ ಪದಗಳು ಒಳಸೊಲ್ಲು ಮತ್ತು ಹೊರಸೊಲ್ಲುಗಳಲ್ಲಿ ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸುತ್ತಿವೆಯಾದರೆ, ಅಂತಹ ಸೊಲ್ಲಿನಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: (1ಕ) ಜಾನಕಿ ತನ್ನ ಅಣ್ಣನೊಂದಿಗೆ ಮಾತನಾಡಿದ್ದಳೆಂದು ರಾಜುವಿಗೆ ಗೊತ್ತಿರಲಿಲ್ಲ. (1ಚ) ಜಾನಕಿ ಅವಳ ಅಣ್ಣನೊಂದಿಗೆ ಮಾತನಾಡಿದ್ದಳೆಂದು ರಾಜುವಿಗೆ ಗೊತ್ತಿರಲಿಲ್ಲ. (1ಕ)ದ ಒಳಸೊಲ್ಲಿನಲ್ಲಿ ಬಂದಿರುವ ತನ್ನ ಪದಕ್ಕೆ ಆ ಒಳಸೊಲ್ಲಿನಲ್ಲೇನೇ ಬಂದಿರುವ ಜಾನಕಿ ಎಂಬುದು ಹಿನ್ನುಡಿತವಾಗಬಲ್ಲುದು, ಇಲ್ಲವೇ ಹೊರಸೊಲ್ಲಿನಲ್ಲಿ ಬಂದಿರುವ ರಾಜು ಎಂಬುದೂ ಹಿನ್ನುಡಿತವಾಗಬಲ್ಲುದು. (1ಚ)ದಲ್ಲಿ ಕಾಣಿಸಿದ ಹಾಗೆ, (1ಕ)ದಲ್ಲಿರುವ ತನ್ನ ಪದದ ಬದಲು ಅವಳ ಎಂಬುದನ್ನು ಬಳಸಿ ಮೇಲಿನ ಇಪ್ಪುರುಳನ್ನು ಹೋಗಲಾಡಿಸಲು ಬರುತ್ತದೆ; ಆದರೆ, ಈ (1ಚ) ಸೊಲ್ಲಿನಲ್ಲಿ ಬೇರೆಯೇ ಒಂದು ಇಪ್ಪುರುಳು ಕಾಣಿಸಿಕೊಳ್ಳುತ್ತದೆ: ಅದರಲ್ಲಿ ಬಂದಿರುವ ಅವಳ ಎಂಬುದಕ್ಕೆ ಜಾನಕಿ ಎಂಬ ಹುರುಳು ಮಾತ್ರವಲ್ಲದೆ ತೋರ್ಕೆಯ ಹುರುಳೂ ಸಿಗಬಲ್ಲುದು.

ಸೇರಿಕೆಯೆಸಕ ಸೊಲ್ಲುಗಳಲ್ಲಿ ಕಾಣಿಸುವ ಕೆಲವು ಬಗೆಯ ಇಪ್ಪುರುಳುಗಳನ್ನು ಪತ್ತುಗೆ ರೂಪದಲ್ಲಿರುವ ತಾನು ಪದದ ಬಳಕೆಯ ಮೂಲಕ ಹೋಗಲಾಡಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಪುಸ್ತಕಗಳನ್ನು ಚೀಲದಲ್ಲಿ ತುಂಬಿಸಿಕೊಂಡ. (1ಚ) ಅವನು ತನ್ನ ಪುಸ್ತಕಗಳನ್ನು ಚೀಲದಲ್ಲಿ ತುಂಬಿಸಿಕೊಂಡ. (1ಟ) ಅವನು ಪುಸ್ತಕಗಳನ್ನು ತನ್ನ ಚೀಲದಲ್ಲಿ ತುಂಬಿಸಿಕೊಂಡ. (1ತ) ಅವನು ಪುಸ್ತಕಗಳನ್ನು ಚೀಲದಲ್ಲಿ ತಾನೇ ತುಂಬಿಸಿಕೊಂಡ. (1ಕ) ಸೊಲ್ಲಿಗೆ ಮೂರು ಬಗೆಯ ಹುರುಳುಗಳಿರಬಲ್ಲುದಾಗಿದ್ದು, ಅವನ್ನು (1ಚ-ತ) ಸೊಲ್ಲುಗಳು ಬೇರ್ಪಡಿಸಿ ತಿಳಿಸುತ್ತವೆ. ಹಾಗಾಗಿ, (1ಕ) ಸೊಲ್ಲಿಗಿರುವ ಇಪ್ಪುರುಳು (1ಚ-ತ) ಸೊಲ್ಲುಗಳಲ್ಲಿ ಇಲ್ಲವಾಗಿದೆಯೆಂದೂ ಹೇಳಲು ಬರುತ್ತದೆ.

9.3.7 ಮದಿಪಿನ ಬಳಕೆ

ತಾನು ಪದದ ಹಲವೆಣಿಕೆಯ ರೂಪವಾದ ತಾವು ಎಂಬುದನ್ನು ಅದು ತಿಳಿಸುವ ವ್ಯಕ್ತಿಗೆ ಮದಿಪನ್ನು ಕೊಡುವುದಕ್ಕಾಗಿ ಓರೆಣಿಕೆಯ ಹುರುಳಿನಲ್ಲೂ ಬಳಸಲು ಬರುತ್ತದೆ; ಆದರೆ, ಈ ಬಳಕೆಯಲ್ಲಿ ಅದು ಆಡುಗ ಮತ್ತು ಕೇಳುಗರಿಂದ ಬೇರಾಗಿರುವ ಒಬ್ಬ ವ್ಯಕ್ತಿಯನ್ನು ತಿಳಿಸುವ ಬದಲು, ಕೇಳುಗನನ್ನು ತಿಳಿಸುತ್ತದೆ: (1ಕ) ತಾವು ದಯವಿಟ್ಟು ನಾಳೆ ಸಂಜೆ ನಮ್ಮ ಮನೆಗೆ ಬರಬೇಕು. (1ಚ) ತಮ್ಮನ್ನು ಮನೆಗೆ ಕರೆದು ತರಲು ನಾನೇ ತಮ್ಮಲ್ಲಿಗೆ ನಾಳೆ ಸಂಜೆ ಬರುತ್ತೇನೆ. (1ಟ) ತಮಗೆ ತೊಂದರೆಯಾಗದಿದ್ದರೆ ಇವತ್ತೇ ಒಂದು ವಿಶಯ ತಿಳಿಸಬೇಕೆಂದಿದೆ. ಇದಲ್ಲದೆ, ಬೇರೊಬ್ಬ ವ್ಯಕ್ತಿಗೆ ಮದಿಪನ್ನು ಕೊಡಬೇಕಾಗಿರುವಲ್ಲೂ ತಾವು ಎಂಬುದನ್ನು ಓರೆಣಿಕೆಯ ಹುರುಳಿನಲ್ಲಿ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಯಲ್ಲಿ ಅದರ ಹಿನ್ನುಡಿತವನ್ನು ಸೊಲ್ಲಿನಲ್ಲೇನೇ ತಿಳಿಸುವ ಕಾರಣ, ಮೇಲಿನ ಬಳಕೆಗೂ ಈ ಬಳಕೆಗೂ ನಡುವೆ ಗೊಂದಲವುಂಟಾಗುವುದಿಲ್ಲ: (1ಕ) ತಾವೇ ಬಂದು ಅವರು ಈ ಕೆಲಸವನ್ನು ನಡೆಸಿಕೊಡಲಿದ್ದಾರೆ. (1ಚ) ತಾವು ಕೇಳಿದಾಗ ಒಳಗೆ ಬಿಡದವರು ತಮ್ಮ ಸಿಟ್ಟಿಗೆ ಒಳಗಾಗ ಬೇಕಾಗುತ್ತದೆಯೆಂದು ಶೆಟ್ಟರು ರಾಜುವನ್ನು ಹೆದರಿಸಿದರು.

(1ಕ)ದಲ್ಲಿ ಅವರು ಎಂಬ ಹಲವೆಣಿಕೆಯ ತೋರುಪದವನ್ನು ಅದು ತಿಳಿಸುವ ವ್ಯಕ್ತಿಗೆ ಮದಿಪನ್ನು ಕೊಡುವುದಕ್ಕಾಗಿ ಓರೆಣಿಕೆಯ ಹುರುಳಿನಲ್ಲಿ ಬಳಸಲಾಗಿದೆ, ಮತ್ತು ಅದನ್ನು ಹಿನ್ನುಡಿತವಾಗಿ ಪಡೆದಿರುವ ತಾವು ಎಂಬ ಪದವನ್ನೂ ಅಂತಹದೇ ಮದಿಪಿಗಾಗಿ ಓರೆಣಿಕೆಯ ಹುರುಳಿನಲ್ಲಿ ಬಳಸಲಾಗಿದ್ದು ಅದು ಆಡುಗ ಮತ್ತು ಕೇಳುಗರಿಗಿಂತ ಬೇರಾಗಿರುವ ಒಬ್ಬ ವ್ಯಕ್ತಿಯನ್ನು ತಿಳಿಸುತ್ತಿದೆ. (1ಚ)ದಲ್ಲೂ ಶೆಟ್ಟರು ಎಂಬ ಹಲವೆಣಿಕೆಯ ಹೆಸರುಪದವನ್ನು ಅದು ಗುರುತಿಸುವ ವ್ಯಕ್ತಿಗೆ ಮದಿಪು ಕೊಡುವುದಕ್ಕಾಗಿ ಓರೆಣಿಕೆಯ ಹುರುಳಿನಲ್ಲಿ ಬಳಸಲಾಗಿದೆ, ಮತ್ತು ಅದನ್ನು ಹಿನ್ನುಡಿತವಾಗಿ ಪಡೆದಿರುವ ಹಲವೆಣಿಕೆಯ ತಾವು ಮತ್ತು ತಮ್ಮ ಎಂಬ ಪದಗಳೂ ಓರೆಣಿಕೆಯ ಹುರುಳಿನಲ್ಲಿ ಬಂದಿವೆ.

9.3.8 ಒತ್ತಿಹೇಳುವ ಹುರುಳು

ತಾನು ಪದಕ್ಕೆ ಒತ್ತಿಹೇಳುವ ಏ ಒಟ್ಟನ್ನು ಸೇರಿಸಿ, ಸೊಲ್ಲಿನ ಮಾಡುಗ ಪಾಂಗು ಎಸಕವನ್ನು ಬೇರೊಬ್ಬರ ನೆರವಿಲ್ಲದೆ ನಡೆಸಿದೆಯೆಂಬುದನ್ನು ಒತ್ತಿಹೇಳುವುದಕ್ಕಾಗಿ ಬಳಸಲು ಬರುತ್ತದೆ: (1ಕ) ಆ ಹುಡುಗ ಇದನ್ನು ಒಡೆದುಹಾಕಿದ್ದಾನೆ. (1ಚ) ಆ ಹುಡುಗ ತಾನೇ ಇದನ್ನು ಒಡೆದುಹಾಕಿದ್ದಾನೆ. (2ಕ) ಶೆಟ್ಟರು ಹಣವನ್ನು ಇಲ್ಲಿಗೆ ತಂದು ಕೊಟ್ಟಿದ್ದಾರೆ. (2ಚ) ಶೆಟ್ಟರು ತಾವೇ ಹಣವನ್ನು ಇಲ್ಲಿಗೆ ತಂದು ಕೊಟ್ಟಿದ್ದಾರೆ. ಇಂತಹ ಬಳಕೆಯಲ್ಲಿ ತಾನು ಪದವನ್ನು ಮಾಡುಗ ಪಾಂಗಿನ ಹತ್ತಿರ ಇರಿಸುವ ಬದಲು ಬೇರೆ ಕಡೆಗಳಲ್ಲೂ ಇರಿಸಲು ಬರುತ್ತದೆ: (1ಟ) ಆ ಹುಡುಗ ಇದನ್ನು ತಾನೇ ಒಡೆದುಹಾಕಿದ್ದಾನೆ. (2ಟ) ಶೆಟ್ಟರು ಹಣವನ್ನು ತಾವೇ ಇಲ್ಲಿಗೆ ತಂದು ಕೊಟ್ಟಿದ್ದಾರೆ. (2ತ) ಶೆಟ್ಟರು ಹಣವನ್ನು ಇಲ್ಲಿಗೆ ತಾವೇ ತಂದುಕೊಟ್ಟಿದ್ದಾರೆ. ತಾನು ಪದವನ್ನು ಬಳಸದೆ ಒತ್ತಿಹೇಳುವ ಏ ಒಟ್ಟನ್ನು ನೇರವಾಗಿ ಮಾಡುಗ ಪಾಂಗನ್ನು ಗುರುತಿಸುವ ಪದಕ್ಕೆ ಸೇರಿಸುವ ಮೂಲಕವೂ ಈ ಹುರುಳನ್ನು ಪಡೆಯಲು ಬರುತ್ತದೆ: (1ತ) ಆ ಹುಡುಗನೇ ಇದನ್ನು ಒಡೆದುಹಾಕಿದ್ದಾನೆ. (2ಪ) ಶೆಟ್ಟರೇ ಹಣವನ್ನು ಇಲ್ಲಿಗೆ ತಂದುಕೊಟ್ಟಿದ್ದಾರೆ.

ಒತ್ತಿಹೇಳುವ ಏ ಒಟ್ಟನ್ನು ಮಾತ್ರವಲ್ಲದೆ, ಮತ್ತು ಎಂಬ ಹುರುಳನ್ನು ಕೊಡುವ ಊ ಒಟ್ಟನ್ನೂ ತಾನು ಪದದೊಂದಿಗೆ ಸೇರಿಸಿ ಮಾಡುಗ ಪಾಂಗಿನೊಂದಿಗೆ ಬಳಸಲು ಬರುತ್ತದೆ; ಇದಲ್ಲದೆ, ಊ ಒಟ್ಟನ್ನು ನೇರವಾಗಿ ಮಾಡುಗನನ್ನು ಗುರುತಿಸುವ ಪದಕ್ಕೂ ಸೇರಿಸಲು ಬರುತ್ತದೆ: (1ಕ) ಆ ಹುಡುಗ ತಾನೂ ಒಂದು ಕೊಡವನ್ನು ಒಡೆದುಹಾಕಿದ್ದಾನೆ. (1ಚ) ಆ ಹುಡುಗನೂ ಒಂದು ಕೊಡವನ್ನು ಒಡೆದುಹಾಕಿದ್ದಾನೆ. ಈ ಎರಡು ಬಗೆಯ ಬಳಕೆಗಳಲ್ಲೂ ತಾನು ಪದ ಮಾಡುಗ ಪಾಂಗಿನೊಂದಿಗೆ ಮಾತ್ರ ಬರುತ್ತದಲ್ಲದೆ ಬೇರೆ ಪಾಂಗುಗಳೊಂದಿಗೆ ಬಳಕೆಯಾಗುವುದಿಲ್ಲ. (1ಕ) *ಶೆಟ್ಟರು ಹಣವನ್ನು ತಾನೇ ಇಲ್ಲಿಗೆ ತಂದುಕೊಟ್ಟಿದ್ದಾರೆ. (1ಚ *ಶೆಟ್ಟರು ಹಣವನ್ನು ಇಲ್ಲಿಗೆ ತಾನೇ ತಂದುಕೊಟ್ಟಿದ್ದಾರೆ. (1ಟ) ಆ ಹುಡುಗ ಒಂದು ಕೊಡವನ್ನು ತಾನೂ ಒಡೆದುಹಾಕಿದ್ದಾನೆ. (1ಕ) ಸೊಲ್ಲಿನಲ್ಲಿ ಬಂದಿರುವ ತಾನೇ ಪದಕ್ಕೆ ಶೆಟ್ಟರು ಎಂಬುದು ಹಿನ್ನುಡಿತವಾಗಲಾರದು; ಯಾಕೆಂದರೆ ಅದು ಶೆಟ್ಟರು ಪದದ ಹಾಗೆ ಮದಿಪಿನ ಹಲವೆಣಿಕೆಯ ರೂಪದಲ್ಲಿಲ್ಲ; ಉಳಿದ ಹಣ ಮತ್ತು ಇಲ್ಲಿಗೆ ಎಂಬವುಗಳೂ ಅದಕ್ಕೆ ಹಿನ್ನುಡಿತವಾಗಲಾರವು; ಯಾಕೆಂದರೆ, ಅವು ಸೊಲ್ಲಿನ ಮಾಡುಗ ಪಾಂಗನ್ನು ತಿಳಿಸುವುದಿಲ್ಲ. ಹಾಗಾಗಿ, (1ಕ) ಮತ್ತು (1ಚ) ಸೊಲ್ಲುಗಳೆರಡೂ ಸರಿಯಾಗಿಲ್ಲ. (1ಟ) ಸೊಲ್ಲು ಸರಿಯಾಗಿದೆ; ಆದರೆ, ಅದರಲ್ಲಿ ಬಂದಿರುವ ತಾನು ಪದಕ್ಕೆ ಆ ಹುಡುಗ ಎಂಬುದು ಹಿನ್ನುಡಿತವಾಗಬಲ್ಲುದಲ್ಲದೆ ಕೊಡವನ್ನು ಎಂಬುದು ಹಿನ್ನುಡಿತವಾಗಲಾರದು. ತಾನು ಪದ ಒಳಸೊಲ್ಲಿನಲ್ಲಿ ಬಂದಿದ್ದು, ಅದರ ಹಿನ್ನುಡಿತ ಹೊರಸೊಲ್ಲಿನಲ್ಲಿ ಬಂದಿದೆಯಾದರೆ, ಆ ಹಿನ್ನುಡಿತ ಗುರಿ ಪಾಂಗಾಗಿರಬಲ್ಲುದು; ಆದರೆ, ತಾನು ಪದ ಒಳಸೊಲ್ಲಿನ ಮಾಡುಗ ಪಾಂಗಾಗಿರಬೇಕಾಗುತ್ತದೆ: (1ಕ) ಅವಳಿಗೆ ಸೀರೆಯನ್ನು ತಾನೇ ಕೊಂಡುಕೊಳ್ಳಬೇಕೆಂದಿತ್ತು. (1ಚ) ಮದುವೆಗೆ ತಾನೇ ಬರಲಿಲ್ಲವಾದ ಕಾರಣ, ಅವನಿಗೆ ಉಳಿದವರನ್ನು ದೂರಲು ಬರುವುದಿಲ್ಲ. ಮೇಲಿನ ಕಟ್ಟುಪಾಡುಗಳು ತಾನು ಪದಕ್ಕೆ ಸಂಬಂದಿಸಿದುವಲ್ಲದೆ, ಏ ಇಲ್ಲವೇ ಊ ಒಟ್ಟುಗಳಿಗೆ ಸಂಬಂದಿಸಿದುವಲ್ಲ; ಯಾಕೆಂದರೆ, ಸೊಲ್ಲುಗಳಲ್ಲಿ

ಬಂದಿರುವ ಈ ಬೇರೆ ಬಗೆಯ ಪಾಂಗುಗಳಿಗೆ ಏ ಇಲ್ಲವೇ ಊ ಒಟ್ಟನ್ನು ನೇರವಾಗಿ ಸೇರಿಸಿ ಹೇಳಲು ಬರುತ್ತದೆ: (1ಕ) ಶೆಟ್ಟರು ಹಣವನ್ನೇ ಇಲ್ಲಿಗೆ ತಂದು ಕೊಟ್ಟಿದ್ದಾರೆ. (1ಚ) ಆ ಹುಡುಗ ಒಂದು ಕೊಡವನ್ನೂ ಒಡೆದುಹಾಕಿದ್ದಾನೆ. (1ಟ) ಶೆಟ್ಟರು ಹಣವನ್ನು ಇಲ್ಲಿಗೂ ತಂದುಕೊಟ್ಟಿದ್ದಾರೆ. ಒತ್ತಿಹೇಳುವ ಏ ಒಟ್ಟನ್ನು ತಾನು ಪದದ ಪತ್ತುಗೆ ರೂಪಕ್ಕೂ ಸೇರಿಸಲು ಬರುತ್ತದೆ; ಆದರೆ, ಹೀಗೆ ಮಾಡುವ ಮೊದಲು ಅದನ್ನು ಹೆಸರುರೂಪಕ್ಕೆ ಮಾರ್ಪಡಿಸಬೇಕಾಗುತ್ತದೆ: (1ಕ) ಮಕ್ಕಳು ತಮ್ಮದೇ ಪ್ರಾಯದ ಮಕ್ಕಳೊಂದಿಗೆ ಆಡುತ್ತಿದ್ದಾರೆ. (1ಚ) ಅವನಿಗೆ ತನ್ನದೇ ಕೆಲಸವನ್ನು ಮಾಡಲು ಸಮಯವೇ ಇಲ್ಲ. ಮೇಲಿನ ಸೊಲ್ಲುಗಳಲ್ಲಿ ತಮ್ಮ ಮತ್ತು ತನ್ನ ಎಂಬ ಪತ್ತುಗೆ ರೂಪಗಳಿಗೆ ನೇರವಾಗಿ ಏ ಒಟ್ಟನ್ನು ಸೇರಿಸುವ ಬದಲು, ದು ಒಟ್ಟನ್ನು ಸೇರಿಸುವ ಮೂಲಕ ಅವನ್ನು ಹೆಸರುರೂಪಕ್ಕೆ ಮಾರ್ಪಡಿಸಿ ಆಮೇಲೆ ಸೇರಿಸಲಾಗಿದೆ. ಸೊಲ್ಲಿನಲ್ಲಿ ಬಂದಿರುವ ಹೊತ್ತಿನ ಪಾಂಗನ್ನು ಒತ್ತಿಹೇಳುವುದಕ್ಕಾಗಿಯೂ ತಾನೇ ಎಂಬುದನ್ನು ಬಳಸಲು ಬರುತ್ತದೆ: (1ಕ) ನಾನು ಮುಂಬಯಿಯಿಂದ ಈಗ ತಾನೇ ಬಂದೆ. (1ಚ) ನಾನು ಇವತ್ತು ತಾನೇ ಬೆಂಗಳೂರಿನಿಂದ ಹಿಂದಿರುಗಿದೆ. ಈ ರೀತಿ ಹೊತ್ತಿನ ಪಾಂಗನ್ನು ಒತ್ತಿ ಹೇಳುವುದಕ್ಕಾಗಿ ತಾನೇ ಪದವನ್ನು ಹಿಂಬೊತ್ತಿನ ಸೊಲ್ಲುಗಳಲ್ಲಿ ಮಾತ್ರ ಬಳಸಲು ಬರುತ್ತದೆಯೆಂದು ತೋರುತ್ತದೆ; ಯಾಕೆಂದರೆ, ಮುಂಬೊತ್ತಿನ ಸೊಲ್ಲಿನಲ್ಲಿ ಬಳಸಿರುವ ಕೆಳಗಿನ (1ಟ) ಸೊಲ್ಲು ಸರಿಯಿಲ್ಲ. ಆದರೆ, ಇಂತಹ ಎರಡು ಬಗೆಯ ಸೊಲ್ಲುಗಳಲ್ಲೂ ಏ ಒಟ್ಟನ್ನು ನೇರವಾಗಿ ಹೊತ್ತಿನ ಪಾಂಗಿಗೆ ಸೇರಿಸಿ ಹೇಳಲು ಬರುತ್ತದೆ: (1ಟ) *ಅವನು ನಾಳೆ ತಾನೇ ಬರಲಿದ್ದಾನೆ. (1ತ) ಅವನು ನಾಳೆಯೇ ಬರಲಿದ್ದಾನೆ. (1ಪ) ನಾನು ಮುಂಬಯಿಂದ ಇವತ್ತೇ ಹಿಂದಿರುಗಿದೆ. ತಾನೇ ಪದಕ್ಕೆ ಇನ್ನೊಂದು ಬಗೆಯ ಒತ್ತಿಹೇಳುವ ಬಳಕೆಯೂ ಇದೆ; ಅದನ್ನು ಕೆಳಗೆ ಕೊಟ್ಟಿರುವಂತಹ ಕೇಳ್ವಿಗಳಲ್ಲಿ ಕಾಣಬಹುದು:

(1ಕ) ಆ ಹುಡುಗ ತಾನೇ ನನ್ನ ಕೊಡವನ್ನು ಒಡೆದುಹಾಕಿದ್ದು? (1ಚ) ಶೆಟ್ಟರು ತಾನೇ ಹಣವನ್ನು ಇಲ್ಲಿಗೆ ತಂದು ಕೊಟ್ಟಿದ್ದು? ಈ ಕೇಳ್ವಿಗಳಲ್ಲಿ ಸೊಲ್ಲಿನ ಒಂದು ಪಾಂಗಿಗೆ ಒತ್ತು ಕೊಡುವುದಕ್ಕಾಗಿ ಅದನ್ನು ಸೊಲ್ಲಿನಿಂದ ಬೇರ್ಪಡಿಸಿ ಹೇಳಲಾಗಿದೆ, ಮತ್ತು ಸೊಲ್ಲಿನ ಉಳಿದ ಅಂಶವನ್ನು ಹೆಸರುರೂಪಕ್ಕೆ ಮಾರ್ಪಡಿಸಿ ಆ ಪಾಂಗಿನ ಒಂದು ಪರಿಚೆಯನ್ನಾಗಿ ಮಾಡಿ ತಿಳಿಸಲಾಗಿದೆ. ಈ ರೀತಿ ಬೇರ್ಪಡಿಸಿರುವ ಪಾಂಗಿನ ಮೇಲೆ ಹೆಚ್ಚಿನ ಒತ್ತು ಕೊಡುವುದಕ್ಕಾಗಿ ಅದರ ಬಳಿಕ ತಾನೇ ಎಂಬ ಪದವನ್ನು ಬಳಸಲಾಗಿದೆ. ಈ ರೀತಿ ಬೇರ್ಪಡಿಸಿರುವ ಪಾಂಗು ಸೊಲ್ಲಿನ ಕೊನೆಯಲ್ಲೂ ಬರಬಲ್ಲುದು: (1ಟ) ನನ್ನ ಕೊಡವನ್ನು ಒಡೆದುಹಾಕಿದ್ದು ಆ ಹುಡುಗ ತಾನೇ? ತಾನೇ ಎಂಬುದರ ಈ ಬಳಕೆ ಕೆಲವು ವಿಶಯಗಳಲ್ಲಿ ಮೇಲೆ ವಿವರಿಸಿದ ಬಳಕೆಗಿಂತ ಬೇರಾಗಿದೆ: (ಕ) ಬೇರ್ಪಡಿಸಿದ ಪಾಂಗಿನೊಂದಿಗೆ ಬರುವ ತಾನೇ ಎಂಬುದು ಹೆಸರುಪದಗಳೊಂದಿಗೆ ಮಾತ್ರವಲ್ಲದೆ ಆಡುಪದಗಳೊಂದಿಗೂ ಬರಬಲ್ಲುದು: (1ಕ) ನೀನು ತಾನೇ ಆ ಕೊಡವನ್ನು ಒಡೆದುಹಾಕಿದ್ದು? (1ಚ) ನಾನು ತಾನೇ ನಾಳೆ ನಿಮ್ಮಲ್ಲಿಗೆ ಬರಬೇಕಾದುದು? ಆದರೆ, ಪಾಂಗನ್ನು ಈ ರೀತಿ ಬೇರ್ಪಡಿಸದಿರುವ ಸೊಲ್ಲುಗಳಲ್ಲಿ ಆಡುಪದಗಳ ಮೇಲೆ ಒತ್ತು ಕೊಡಬೇಕಿದ್ದಲ್ಲಿ ಏ ಒಟ್ಟನ್ನು ಅವಕ್ಕೆ ನೇರವಾಗಿ ಸೇರಿಸಬೇಕಾಗುತ್ತದೆ: (1ಕ) *ನೀನು ತಾನೇ ಇದನ್ನು ಒಡೆದುಹಾಕು. (1ಚ) ನೀನೇ ಇದನ್ನು ಒಡೆದುಹಾಕು. (1ಟ) ನಿಮ್ಮಲ್ಲಿಗೆ ನಾಳೆ ನಾನೇ ಬರುತ್ತೇನೆ. (2) ಬೇರ್ಪಡಿಸಿದ ಪಾಂಗಿನೊಂದಿಗೆ ಬರುವ ತಾನೇ ಎಂಬುದು ಕೇಳ್ವಿಗಳಲ್ಲಿ ಮಾತ್ರ ಬರುತ್ತದೆ; ಬೇರ್ಪಡಿಸಿದ ಪಾಂಗಿರುವ ಬೇರೆ ಬಗೆಯ ಸೊಲ್ಲುಗಳಲ್ಲಿ ಅದು ಬರುವ ಹಾಗೆ ಕಾಣಿಸುವುದಿಲ್ಲ. ಇದಲ್ಲದೆ, ಪಾಂಗನ್ನು ಬೇರ್ಪಡಿಸದಿರುವ ಕೇಳ್ವಿಗಳಲ್ಲೂ ಈ ತಾನೇ ಪದ ಬರುವುದಿಲ್ಲ; ಆದರೆ, ಹಿಂದೆ ವಿವರಿಸಿದಂತಹ ಆಡುಪದಗಳೊಂದಿಗೆ ಬಳಕೆಯಾಗದ ತಾನೇ ಎಂಬುದು ಬರುತ್ತದೆ:

(1ಕ) ಆ ಹುಡುಗ ತಾನೇ ಇದನ್ನು ಒಡೆದುಹಾಕಿದ್ದಾನೋ? (1ಚ) *ನೀನು ಇದನ್ನು ತಾನೇ ಒಡೆದುಹಾಕಿದ್ದೀಯೋ? (3) ಪಾಂಗನ್ನು ಬೇರ್ಪಡಿಸಿರುವ ಕೇಳ್ವಿಗಳಲ್ಲಿ ತಾನೇ ಎಂಬುದನ್ನು ಆ ಪಾಂಗಿನೊಂದಿಗೇನೇ ಇರಿಸಬೇಕಾಗುತ್ತದೆ; ಅದನ್ನು ಬೇರೆಡೆಗೆ ಮಾರೆಡೆಗೊಳಿಸಲು ಬರುವುದಿಲ್ಲ. ಆದರೆ, ಒತ್ತಿ ಹೇಳುವ ತಾನೇ ಎಂಬುದನ್ನು ಬೇರೆಡೆಗೂ ಮಾರೆಡೆಗೊಳಿಸಲು ಬರುತ್ತದೆ: (1ಕ) ತಾನೇ ಇದನ್ನು ಆ ಹುಡುಗ ಒಡೆದುಹಾಕಿದ್ದಾನೆ. (1ಚ) *ತಾನೇ ಇದನ್ನು ಆ ಹುಡುಗ ಒಡೆದುಹಾಕಿದ್ದು? (4) ಬೇರ್ಪಡಿಸಿದ ಪಾಂಗಿನೊಂದಿಗೆ ಬರುವ ತಾನೇ ಎಂಬುದಕ್ಕೆ ಹಲವೆಣಿಕೆಯ ರೂಪವಿಲ್ಲ; ಅದರ ಹಿನ್ನುಡಿತ ಹಲವೆಣಿಕೆಯದಾಗಿರುವಲ್ಲೂ ಅದು ಓರೆಣಿಕೆಯ ರೂಪದಲ್ಲೇ ಬರುತ್ತದೆ: (1ಕ) ಈ ಹುಡುಗರು ತಾನೇ ಇದನ್ನು ಒಡೆದುಹಾಕಿದ್ದು? (1ಚ) ನೀವು ತಾನೇ ನಮ್ಮನ್ನು ಬರಹೇಳಿದ್ದು?

9.3.9 ಕಡಿತಗೊಳಿಸಿದ ಹರವು

ಆಡುಪದಗಳ ಹರವನ್ನು ಕಡಿತಗೊಳಿಸುವ ಹೆಸರುಕಂತೆಗಳಲ್ಲಿ ನಾನು ಮತ್ತು ನೀನು ಪದಗಳ ಬದಲು ತಾನು ಪದವನ್ನು ಬಳಸಲಾಗುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಇಲ್ಲಿ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವನು ನಾನು ಮಾತ್ರ. (1ಚ) ಇಲ್ಲಿ ತಾನು ಬೇಯಿಸಿದುದನ್ನು ತಿನ್ನದವನು ನೀನು ಮಾತ್ರ. (1ಟ) ಈ ಊರಿನಲ್ಲಿ ತಮ್ಮ ಮಕ್ಕಳನ್ನು ಇಂಗ್ಲಿಶ್ ಶಾಲೆಗೆ ಸೇರಿಸಬೇಕೆಂದು ಹೇಳುವವರು ನೀವು ಮಾತ್ರ. (1ಕ)ದಲ್ಲಿ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವನು ಎಂಬ ತಾನು ಪದವನ್ನು ಬಳಸಿರುವ ಹೆಸರುಕಂತೆ ಬಂದಿದ್ದು, ಅದೇ ಸೊಲ್ಲಿನಲ್ಲಿ ಬಂದಿರುವ ನಾನು ಪದದ ಹರವನ್ನು ಆ ಹೆಸರುಕಂತೆ ಕಡಿತಗೊಳಿಸುತ್ತದೆ; ಇದೇ ರೀತಿಯಲ್ಲಿ, (1ಚ) ಮತ್ತು (1ಟ) ಸೊಲ್ಲುಗಳಲ್ಲೂ ನೀನು ಮತ್ತು ಮದಿಪಿನ ನೀವು ಪದಗಳ ಹರವನ್ನು ಕಡಿತಗೊಳಿಸುವ, ಮತ್ತು ತಾನು ಪದವನ್ನು ಬಳಸಿರುವ ಹೆಸರುಕಂತೆಗಳು ಬಂದಿವೆ.

ಇಂತಹ ಹೆಸರುಕಂತೆಗಳಲ್ಲಿ ತಾನು ಪದದ ಬದಲು ನಾನು ಇಲ್ಲವೇ ನೀನು ಪದಗಳನ್ನು ಬಳಸಿದಲ್ಲಿ ಅವಕ್ಕೆ ಆಡುಪದಗಳ ಹರವನ್ನು ಕಡಿತಗೊಳಿಸುವ ಹುರುಳು ಇಲ್ಲವಾಗುತ್ತದೆ ಎಂಬುದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (1ತ) ಇಲ್ಲಿ ನನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವನು ನಾನು ಮಾತ್ರ. (1ಕ) ಸೊಲ್ಲಿಗಿದ್ದ `ಇಲ್ಲಿ ಬೇರೆ ಯಾರೂ ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ’ ಎಂಬ ಹುರುಳು (1ತ) ಸೊಲ್ಲಿಗಿಲ್ಲ ಎಂಬುದನ್ನು ಗಮನಿಸಬಹುದು; ಅದಕ್ಕೆ ಬದಲು, ಆಡುಗನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವರು ಆತನಲ್ಲದೆ ಬೇರೆ ಯಾರು ಇಲ್ಲ ಎಂಬ ಬೇರೆಯೇ ಹುರುಳು ಅದಕ್ಕೆ ಸಿಗುತ್ತದೆ. ಅವನು, ಅವರು ಮೊದಲಾದ ತೋರುಪದಗಳ ಬದಲಾಗಿಯೂ ಹರವನ್ನು ಕಡಿತಗೊಳಿಸುವ ಹುರುಳನ್ನು ಮಾತ್ರವೇ ಪಡೆಯಬೇಕಾಗಿರುವಲ್ಲಿ ತಾನು, ತಾವು ಎಂಬವುಗಳನ್ನು ಬಳಸಲು ಬರುತ್ತದೆ: (1ಕ) ಯಾವ ಹುಡುಗನೂ ಅವನಿಗೆ ಪೆಟ್ಟಾದುದನ್ನು ತಿಳಿಸಿರಲಿಲ್ಲ. (1ಚ) ಯಾವ ಹುಡುಗನೂ ತನಗೆ ಪೆಟ್ಟಾದುದನ್ನು ತಿಳಿಸಿರಲಿಲ್ಲ. (1ಕ) ಸೊಲ್ಲಿನಲ್ಲಿ ಬಂದಿರುವ ಅವನು ಪದಕ್ಕೆ ಒಬ್ಬ ಹುಡುಗ ಎಂಬ ತೋರ್ಕೆಯ ಹುರುಳು ಸಿಗಬಲ್ಲುದು, ಇಲ್ಲವೇ ಯಾವ ಹುಡುಗನೂ ಎಂಬುದರ ಹರವನ್ನು ಕಡಿತಗೊಳಿಸುವ ಹುರುಳೂ ಸಿಗಬಲ್ಲುದು; ಆದರೆ, (1ಚ) ಸೊಲ್ಲಿನಲ್ಲಿ ಬಂದಿರುವ ತನಗೆ ಎಂಬುದಕ್ಕೆ ಈ ಎರಡನೆಯ ಹುರುಳು ಮಾತ್ರ ಸಿಗಬಲ್ಲುದು. ತೋರುಪದಗಳನ್ನು ಪತ್ತುಗೆ ಒಟ್ಟಿನೊಂದಿಗೆ ಬಳಸಿರುವಲ್ಲಿ, ಇಂತಹ ಕಡಿತಗೊಳಿಸಿದ ಹುರುಳು ಮಾತ್ರವೇ ಬರುವಂತೆ ಮಾಡಲು ಅವನ್ನು ಇಮ್ಮಡಿ ರೂಪದಲ್ಲಿ ಬಳಸಲು ಬರುತ್ತದೆ: (1ಕ) ಎಲ್ಲರೂ ಅವರ ಮಕ್ಕಳನ್ನು ಕರೆತಂದಿದ್ದಾರೆ. (1ಚ) ಎಲ್ಲರೂ ಅವರವರ ಮಕ್ಕಳನ್ನು ಕರೆತಂದಿದ್ದಾರೆ. (2ಕ) ಇಬ್ಬರು ಹುಡುಗರೂ ಅವರ ಪುಸ್ತಕಗಳನ್ನು ತೆಗೆದುಕೊಂಡು ಹೊರಬರಬೇಕೆಂದು ಟೀಚರ್ ಹೇಳಿದರು. (2ಚ) ಇಬ್ಬರು ಹುಡುಗರೂ ಅವರವರ ಪುಸ್ತಕಗಳನ್ನು ತೆಗೆದುಕೊಂಡು ಹೊರಬರಬೇಕೆಂದು ಟೀಚರ್ ಹೇಳಿದರು.

(1ಕ) ಸೊಲ್ಲಿನಲ್ಲಿ ಬಂದಿರುವ ಅವರ ಎಂಬ ತೋರುಪದಕ್ಕೆ ಎಲ್ಲರೂ ಎಂಬ ಪದ ಹಿನ್ನುಡಿತವಾಗಿರಬಲ್ಲುದು, ಇಲ್ಲವೇ ಅದಕ್ಕೆ ತೋರ್ಕೆಯ ಹುರುಳೂ ಇರಬಲ್ಲುದು. ಆದರೆ, (1ಚ)ದಲ್ಲಿ ಬಂದಿರುವ ಅವರವರ ಎಂಬ ಇಮ್ಮಡಿರೂಪಕ್ಕೆ ಎಲ್ಲರೂ ಎಂಬುದು ಹಿನ್ನುಡಿತವಾಗಿರಬಲ್ಲುದಲ್ಲದೆ ತೋರ್ಕೆಯ ಹುರುಳು ಸಿಗಲಾರದು. ಇಂತಹ ಸೊಲ್ಲುಗಳಲ್ಲಿ ತಾನು ಪದವನ್ನು ಬಳಸಿದಾಗಲೂ ಕಡಿತಗೊಳಿಸಿದ ಹುರುಳು ಮಾತ್ರವೇ ದೊರಕುತ್ತದೆ; ಹಾಗಿದ್ದರೂ, ಅವರು ಪದದ ಹಾಗೆ ತಾನು ಪದವನ್ನೂ ಇಮ್ಮಡಿರೂಪದಲ್ಲಿ ಬಳಸಲು ಬರುತ್ತದೆ, ಮತ್ತು ಅದು ಆ ಹುರುಳನ್ನು ಒತ್ತಿಹೇಳುತ್ತದೆ: (1ಕ) ಎಲ್ಲರೂ ತಮ್ಮ ಮಕ್ಕಳನ್ನು ಕರೆತಂದಿದ್ದಾರೆ. (1ಚ) ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಕರೆತಂದಿದ್ದಾರೆ. ಮೇಲಿನ ಎರಡು ಸೊಲ್ಲುಗಳಿಗೂ ಕಡಿತಗೊಳಿಸಿದ ಹುರುಳೇ ಇದೆಯೆಂದು ಹೇಳಬಹುದು; ಯಾಕೆಂದರೆ, ತಮ್ಮ ಮತ್ತು ತಮ್ಮ ತಮ್ಮ ಎಂಬುವೆರಡಕ್ಕೂ ಅವರವರ ಎಂಬುದರ ಹುರುಳೇ ಇದೆ. ಇವುಗಳ ನಡುವಿನ ವ್ಯತ್ಯಾಸವೇನೆಂದರೆ, (1ಚ) ಸೊಲ್ಲು ಈ ಹುರುಳನ್ನು ಒತ್ತಿ ಹೇಳುತ್ತದೆ.

9.4 ಆಡುಪದಗಳು ಮತ್ತು

Eke →

ಹೆಸರುಪದಗಳು ಮೇಲೆ 9.1.2ರಲ್ಲಿ ತಿಳಿಸಿದ ಹಾಗೆ, ಸೊಲ್ಲುಗಳು ತಿಳಿಸುವ ಇರುಹ ಇಲ್ಲವೇ ಎಸಕಗಳಲ್ಲಿ ಪಾಂಗುಗಳಾಗಿ ಯಾವ ವ್ಯಕ್ತಿ, ವಸ್ತು ಇಲ್ಲವೇ ವಿಶಯಗಳು ತೊಡಗಿಕೊಂಡಿವೆ ಎಂಬುದನ್ನು ತಿಳಿಸುವುದೇ ಹೆಸರುಪದಗಳ ಮುಕ್ಯ ಕೆಲಸ; ಇದಕ್ಕೆ ಬದಲು, ಒಂದು ಸೊಲ್ಲಿನ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಆ ಸೊಲ್ಲು ತಿಳಿಸುವ ಇರುಹದ ಇಲ್ಲವೇ ಎಸಕದ ಪಾಂಗಾಗಿ ಬಂದಿದೆಯೇ ಎಂಬುದನ್ನು ತಿಳಿಸುವುದು ಆಡುಪದಗಳ ಕೆಲಸ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಹೋಲಿಸಿ ನೋಡಬಹುದು: (1ಕ) ಹುಡುಗ ಕೋಣೆಯೊಳಗಿದ್ದಾನೆ. (1ಚ) ನಾನು ಕೋಣೆಯೊಳಗಿದ್ದೇನೆ. (1ಕ)ದಲ್ಲಿ ಬಳಕೆಯಾಗಿರುವ ಹುಡುಗ ಎಂಬ ಹೆಸರುಪದ ಕೋಣೆಯೊಳಗೆ ಯಾರಿದ್ದಾರೆ ಎಂಬುದನ್ನು ತಿಳಿಸುವುದಕ್ಕಾಗಿ ಕೋಣೆಯೊಳಗಿರುವ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ನಾನು ಎಂಬ ಆಡುಪದ ಆ ಸೊಲ್ಲಿನ ಆಡುಗ ಕೋಣೆಯೊಳಗಿದ್ದಾನೆ ಎಂದಿಶ್ಟೇ ತಿಳಿಸುತ್ತದಲ್ಲದೆ, ಆ ವ್ಯಕ್ತಿ ಯಾರು ಎಂಬುದನ್ನು ಗುರುತಿಸಲು ಹೋಗುವುದಿಲ್ಲ. ಆಡುಪದಗಳು ನಡೆಸುವ ಈ ಕೆಲಸವನ್ನು ಬೇರೆ ಯಾವ ಪದವೂ ನಡೆಸಲಾರದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನಾನು ಜಾನಕಿಯನ್ನು ಮೆಚ್ಚಿದ್ದೇನೆ. (1ಚ) ರಾಜು ಜಾನಕಿಯನ್ನು ಮೆಚ್ಚಿದ್ದಾನೆ. (2ಕ) ನಿನಗೆ ಓದಲು ಬರುತ್ತಿದೆಯೇ? (2ಚ) ರಾಜುವಿಗೆ ಓದಲು ಬರುತ್ತಿದೆಯೇ?

(1ಕ) ಮತ್ತು (1ಚ)ಗಳೆರಡೂ ಒಂದೇ ಸಂಗತಿಯನ್ನು ತಿಳಿಸುತ್ತಿರಬಹುದು; ಆದರೆ, ಜಾನಕಿಯನ್ನು ಮೆಚ್ಚಿದವನು ಅದನ್ನು ತಿಳಿಸುವ ಸೊಲ್ಲಿನ ಆಡುಗ ಎಂಬ ವಿಶಯವನ್ನು ನಾನು ಎಂಬ ಪದವನ್ನು ಬಳಸಿರುವ (1ಕ) ಸೊಲ್ಲು ತಿಳಿಸಬಲ್ಲುದಲ್ಲದೆ, ರಾಜು ಪದವನ್ನು ಬಳಸಿರುವ (1ಚ) ಸೊಲ್ಲು ತಿಳಿಸಲಾರದು. ಇಂತಹದೇ ವ್ಯತ್ಯಾಸ (2ಕ) ಮತ್ತು (2ಚ) ಸೊಲ್ಲುಗಳ ನಡುವೆಯೂ ಇದೆ. ಆಡುಗನೂ ಅಲ್ಲ, ಕೇಳುಗನೂ ಅಲ್ಲ, ಬೇರೊಬ್ಬ ಎಂಬುದನ್ನು ತಿಳಿಸುವ ತಾನು ಪದದ ಬಳಕೆಯಲ್ಲಿ ಮಾತ್ರ ಇಂತಹ ವ್ಯತ್ಯಾಸ ಕಾಣಿಸುವುದಿಲ್ಲ; ಯಾಕೆಂದರೆ, ಅದನ್ನು ಬಳಸಿರುವ ಸೊಲ್ಲಿನಲ್ಲೇ ಬೇರೆಡೆ ಆ ಬೇರೊಬ್ಬ ಯಾರು ಎಂಬುದನ್ನು ತಿಳಿಸುವ ಹೆಸರುಪದ ಬಂದಿರುತ್ತದೆ. ಹೀಗಿದ್ದರೂ, ಅದನ್ನು ಬಳಸುವುದಕ್ಕೂ ಅದರ ಬದಲು ಬೇರೊಂದು ತೋರುಪದವನ್ನು ಬಳಸುವುದಕ್ಕೂ ನಡುವೆ ವ್ಯತ್ಯಾಸವಿದೆ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ರಾಜು ಜಾನಕಿಯ ಹತ್ತಿರ ತನ್ನ ಅಣ್ಣನನ್ನು ದೂರುತ್ತಿದ್ದಾನೆ. (1ಚ) ರಾಜು ಜಾನಕಿಯ ಹತ್ತಿರ ಅವನ ಅಣ್ಣನನ್ನು ದೂರುತ್ತಿದ್ದಾನೆ. ರಾಜು ದೂರುತ್ತಿರುವುದು ರಾಜುವಿನ ಅಣ್ಣನನ್ನು ಎಂಬ ಒಂದು ಹುರುಳು ಮಾತ್ರ (1ಕ) ಸೊಲ್ಲಿಗೆ ಬರಬಲ್ಲುದು; ಇದಕ್ಕೆ ಬದಲು, (1ಚ) ಸೊಲ್ಲಿಗೆ ಆ ಹುರುಳು ಮಾತ್ರವಲ್ಲದೆ ಆತ ಬೇರೊಬ್ಬನ ಅಣ್ಣನನ್ನು ದೂರುತ್ತಿದ್ದಾನೆ ಎಂಬ ಹುರುಳೂ ಬರಬಲ್ಲುದು. ಸಾಮಾನ್ಯವಾಗಿ, ತಾನು ಪದ ತಿಳಿಸುವ ಬೇರೊಬ್ಬ ವ್ಯಕ್ತಿ ನಿಜಕ್ಕೂ ಯಾರು ಎಂಬುದನ್ನು ಅದೇ ಸೊಲ್ಲಿನಲ್ಲಿ ಬೇರೆಡೆ ತಿಳಿಸಿರಬೇಕಾಗುತ್ತದೆ; ಹಾಗಾಗಿ, (1ಕ)ದ ತನ್ನ ಅಣ್ಣ ಎಂಬುದು ರಾಜುವಿನ ಅಣ್ಣನನ್ನು ಮಾತ್ರ ಗುರುತಿಸಬಲ್ಲುದು. ಹೆಸರುಪದ ಮತ್ತು ಆಡುಪದಗಳು ಸೊಲ್ಲುಗಳಲ್ಲಿ ನಡೆಸಬೇಕಾಗಿರುವ ಕೆಲಸದ ಮಟ್ಟಿಗೆ ಇಂತಹದೊಂದು ಮುಕ್ಯವಾದ ವ್ಯತ್ಯಾಸ ಇದೆಯಾದ ಕಾರಣ, ಅವೆರಡರ ಬಳಕೆಗಳ ನಡುವೆಯೂ ಹಲವು ವ್ಯತ್ಯಾಸಗಳು ತೋರಿಬರುತ್ತವೆ; ಆದರೆ, ಅವು ನಡೆಸಬೇಕಾಗಿರುವ ಕೆಲಸಗಳ ನಡುವೆ ಕೆಲವು ಹೋಲಿಕೆಗಳೂ ಇವೆಯಾದ ಕಾರಣ, ಅವುಗಳ ಬಳಕೆಗಳ ನಡುವೆ ಕೆಲವು ಹೋಲಿಕೆಗಳೂ ಕಾಣಿಸಿಕೊಳ್ಳುತ್ತವೆ. ಈ ವ್ಯತ್ಯಾಸ ಮತ್ತು ಹೋಲಿಕೆಗಳು ಎಂತಹವು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

9.4.1 ಪತ್ತುಗೆ ಒಟ್ಟುಗಳೊಂದಿಗೆ ಬಳಕೆ

ಒಂದು ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆ ಸೊಲ್ಲಿನ ಆಡುಗ, ಕೇಳುಗ, ಮತ್ತು ಆ ಸೊಲ್ಲಿನ ಮೂಲಕ ತಿಳಿಸಿರುವ ವಿಶಯ ಎಂಬುದಾಗಿ ಮೂರು

ಪಾಂಗುಗಳು ತೊಡಗಿರುತ್ತವೆ; ಇವುಗಳಲ್ಲಿ ಮೊದಲ ಎರಡು ಪಾಂಗುಗಳನ್ನು ಮಾತ್ರ ಆಡುಪದಗಳು ಬಳಸಿಕೊಳ್ಳುತ್ತವೆ. ಇದಲ್ಲದೆ, ಈ ಎರಡು ಪಾಂಗುಗಳೂ ಅಲ್ಲದಿರುವ ಬೇರೊಬ್ಬ ಎಂಬ ಮೂರನೆಯದೊಂದು ಪಾಂಗನ್ನೂ ಅದು ಬಳಸಿಕೊಳ್ಳುತ್ತದೆ. ಮೇಲೆ ಏಳನೇ ಪಸುಗೆಯಲ್ಲಿ ವಿವರಿಸಿದ ಹಾಗೆ, ಈ ರೀತಿ ಉಂಟುಮಾಡಿರುವ ಸೊಲ್ಲುಗಳು ತಿಳಿಸುವ ಎಸಕ ಇಲ್ಲವೇ ಇರುಹಗಳಲ್ಲಿ ಆಗುಗ, ಮಾಡುಗ, ಈಡು, ಸುರು, ಗುರಿ, ಜಾಗ ಮೊದಲಾದ ಹಲವು ಬಗೆಯ ಪಾಂಗುಗಳು ತೊಡಗಿಕೊಂಡಿರುತ್ತವೆ; ಅವುಗಳಲ್ಲಿ ಯಾವುದಾದರೂ ಒಂದು ಸೊಲ್ಲಿನ ಉಂಟುಮಾಡುವಿಕೆಯಲ್ಲಿ ತೊಡಗಿರುವಂತಹ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬ ಪಾಂಗಾಗಿಯೂ ಬಂದಿದೆಯೇ ಎಂಬುದನ್ನು ಆಡುಪದಗಳು ತಿಳಿಸಬೇಕಾಗುತ್ತದೆ; ಮತ್ತು ಹೀಗೆ ತಿಳಿಸುವುದಕ್ಕಾಗಿ ಅವು ಸೊಲ್ಲಿನ (ಅದು ತಿಳಿಸುವ ಎಸಕ ಇ¯್ಲವೇ ಇರುಹದ) ಪಾಂಗೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೆಸರುಪದಗಳೂ ಸೊಲ್ಲಿನ ಪಾಂಗೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ; ಆದರೆ, ಇದಕ್ಕೆ ಕಾರಣ ಬೇರೆಯೇ ಇದೆ; ಸೊಲ್ಲಿನ ಪಾಂಗುಗಳಾಗಿ ಯಾವ ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳು ತೊಡಗಿಕೊಂಡಿವೆ ಎಂಬುದಾಗಿ ಸೊಲ್ಲಿನ ಪಾಂಗುಗಳಿಗೂ ವ್ಯಕ್ತಿ, ವಸ್ತು, ಇಲ್ಲವೇ ವಿಶಯಗಳಿಗೂ ನಡುವಿರುವ ಸಂಬಂದವನ್ನು ತಿಳಿಸುವುದಕ್ಕಾಗಿ ಅವು ಸೊಲ್ಲಿನ ಪಾಂಗುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೆಸರುಪದ ಮತ್ತು ಆಡುಪದಗಳೆರಡೂ ಈ ರೀತಿ ಸೊಲ್ಲಿನ ಪಾಂಗೊಂದನ್ನು ಆರಿಸಿಕೊಳ್ಳಬೇಕಾಗಿದೆಯಾದ ಕಾರಣ, ಅವೆರಡೂ ಪತ್ತುಗೆ ಒಟ್ಟುಗಳೊಂದಿಗೆ ಬರಬೇಕಾಗುತ್ತದೆ, ಮತ್ತು ಈ ವಿಶಯದಲ್ಲಿ ಅವೆರಡರ ನಡುವೆ ಹೋಲಿಕೆಯಿದೆ; ಆಡುಪದಗಳು ಪತ್ತುಗೆ ಪಾಂಗುಗಳೊಂದಿಗೆ ಬಳಕೆಯಾಗಬಲ್ಲುವೆಂಬುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ನಾನು ನಿಮಗೆ ಮೂರು ಪುಸ್ತಕಗಳನ್ನು ತಂದಿದ್ದೇನೆ. (1ಚ) ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿತು. (1ಟ) ನಿಮ್ಮಲ್ಲಿ ಎಶ್ಟು ಮಂದಿ ಇದ್ದಾರೆ? (1ತ) ಅವನು ನನ್ನನ್ನು ಕರೆಯಲು ಬಂದಿದ್ದ. (1ಪ) ಅದು ತನಗೆ ಸಿಗಬೇಕೆಂದು ಆತ ಹಂಬಲಿಸುತ್ತಿದ್ದಾನೆ. ನಾನು ಪದವನ್ನು (1ಕ)ದಲ್ಲಿ ಮಾಡುಗ ಪಾಂಗಾಗಿ, (1ಚ)ದಲ್ಲಿ ಸುರು ಪಾಂಗಾಗಿ, ಮತ್ತು (1ತ)ದಲ್ಲಿ ಈಡು ಪಾಂಗಾಗಿ ಬಳಸಲಾಗಿದೆ; ನೀವು ಪದವನ್ನು (1ಕ-ಚ)ಗಳಲ್ಲಿ ಗುರಿ ಪಾಂಗಾಗಿ ಮತ್ತು (1ಟ)ದಲ್ಲಿ ಜಾಗ

ಪಾಂಗಾಗಿ ಬಳಸಲಾಗಿದೆ; ಮತ್ತು ತಾನು ಪದವನ್ನು (1ಪ)ದಲ್ಲಿ ಗುರಿ ಪಾಂಗಾಗಿ ಬಳಸಲಾಗಿದೆ. ಈ ರೀತಿ ನಾನು, ನೀವು ಮತ್ತು ತಾನು ಎಂಬವುಗಳನ್ನು (1ಕ-ಟ) ಸೊಲ್ಲುಗಳಲ್ಲಿ ಬೇರೆ ಬೇರೆ ಪಾಂಗುಗಳಾಗಿ ಬಳಸಬೇಕಾಗಿರುವುದರಿಂದ, ಅವಕ್ಕೆ ಗೆ, ಇಂದ, ಅಲ್ಲಿ, ಮತ್ತು ಅನ್ನು ಎಂಬ ಪತ್ತುಗೆ ಒಟ್ಟುಗಳನ್ನೂ ಸೇರಿಸಬೇಕಾಗುತ್ತದೆ ಎಂಬುದನ್ನು ಗಮನಿಸಬಹುದು.

9.4.2 ಬೇರೆ ಕೆಲವು ಒಟ್ಟುಗಳೊಂದಿಗೆ ಬಳಕೆ

ಸೇರಿಕೆಯ ಊ ಒಟ್ಟು, ಆಯ್ಕೆಯ ಓ ಒಟ್ಟು, ಮತ್ತು ಒತ್ತಿಹೇಳುವ ಏ ಒಟ್ಟು ಎಂಬುದಾಗಿ ಮೂರು ಬಗೆಯ ಒಟ್ಟುಗಳು ಹೆಸರುಪದಗಳೊಂದಿಗೆ ಬರಬಲ್ಲುವು; ಈ ಮೂರು ಬಗೆಯ ಒಟ್ಟುಗಳನ್ನು ಆಡುಪದಗಳೊಂದಿಗೂ ಬಳಸಲು ಬರುತ್ತವೆ. ಯಾಕೆಂದರೆ, ಇವು ಪಾಂಗುಗಳ ಸೇರಿಕೆ, ಅವುಗಳ ನಡುವಿನ ಆಯ್ಕೆ, ಮತ್ತು ಅವುಗಳ ಮೇಲೆ ಇರಿಸಿದ ಒತ್ತು ಎಂಬವುಗಳನ್ನು ತಿಳಿಸುತ್ತವಲ್ಲದೆ, ನೇರವಾಗಿ ಅವು ತಿಳಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುರುತಿಸುವಿಕೆಗೆ ಸಂಬಂದಿಸಿಲ್ಲ. (1ಕ) ಅವನೊಂದಿಗೆ ಒಬ್ಬ ಹುಡುಗನೂ ಬರುತ್ತಾನೆ. (1ಚ) ಅವನೊಂದಿಗೆ ನಾನೂ ಬರುತ್ತೇನೆ. (2ಕ) ಹುಡುಗನೋ ಹುಡುಗಿಯೋ ಬರುತ್ತಾರೆ. (2ಚ) ನಾನೋ ನೀನೋ ಹೋಗಬೇಕಾಗುತ್ತದೆ. (3ಕ) ಅವರಲ್ಲಿಗೆ ರಾಜುವೇ ಹೋಗಬೇಕಾಗಿದೆ. (3ಚ) ಅವರಲ್ಲಿಗೆ ತಾನೇ ಹೋಗಬೇಕಾಗುತ್ತದೆಯೆಂದು ರಾಜುವಿಗೆ ಗೊತ್ತಿದೆ. ಹೆಸರುಪದಗಳ ಹಾಗೆ, ಆಡುಪದಗಳಲ್ಲೂ ಈ ಒಟ್ಟುಗಳು ಪತ್ತುಗೆ ಒಟ್ಟುಗಳ ಬಳಿಕ ಬಳಕೆಯಾಗುತ್ತವೆ: (1ಕ) ನನ್ನನ್ನೂ ಅವನು ಕರೆದಿದ್ದಾನೆ. (1ಚ) ಅದು ನಿಮಗೋ ನನಗೋ ಸಿಕ್ಕಬಹುದು. (1ಟ) ರಾಜು ನೀವು ಹೇಳಿದುದನ್ನು ತನ್ನಲ್ಲೇ ಇರಿಸಿಕೊಂಡಿದ್ದಾನೆ.

9.4.3 ಆಳ್ತನದ ಕಟ್ಟುಪಾಡು

ಸಾಮಾನ್ಯವಾಗಿ, ಸೊಲ್ಲುಗಳ ಉಂಟುಮಾಡುವಿಕೆಯಲ್ಲಿ ಪಾಂಗುಗಳಾಗಿ ಆಳ್ತನವುಳ್ಳವರು (ಮನುಶ್ಯರು) ಮಾತ್ರ ತೊಡಗಿಕೊಳ್ಳಬಲ್ಲರು; ಯಾಕೆಂದರೆ,

ಮಾತನಾಡುವ ಅಳವು ಆಳ್ತನವುಳ್ಳವರಲ್ಲಿ ಮಾತ್ರ ಕಾಣಿಸುತ್ತದೆ. ಹಾಗಾಗಿ, ಸೊಲ್ಲಿನ ಪಾಂಗುಗಳಲ್ಲಿ ಆಳ್ತನವುಳ್ಳವರು ನಡೆಸಬಲ್ಲವುಗಳನ್ನು ಮಾತ್ರ ಆಡುಪದಗಳು ಆರಿಸಿಕೊಳ್ಳುತ್ತವೆ. ಈ ಆಳ್ತನದ ಕಟ್ಟುಪಾಡಿಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1) ಆಳ್ತನವುಳ್ಳವರನ್ನು ಆಗುಗಳಾಗಿ ಪಡೆಯಲಾಗದ ಅರಳು, ಹಳಸು, ಒಡೆ ಮೊದಲಾದ ಎಸಕಪದಗಳ ಆಗುಗ ಪಾಂಗಾಗಿ ಆಡುಪದಗಳು ಬರುವುದಿಲ್ಲ, ಮತ್ತು ಮೊದಲನೇ ಹಂತದ ಪಾಂಗುಗಳನ್ನು ಈಡು ಪಾಂಗುಗಳಾಗಿ ಪಡೆಯಲಾಗದ ಜರಗು, ಎಸಗು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಆಡುಪದಗಳು ಈಡು ಪಾಂಗಾಗಿ ಬರುವುದಿಲ್ಲ: (1ಕ) ಗುಲಾಬಿ ಹೂ ಅರಳಿದೆ. (1ಚ) *ಹುಡುಗ ಅರಳಿದ. (1ಟ) *ನಾನು ಅರಳಿದೆ. (2ಕ) ಹುಡುಗ ನೀವು ಹೇಳಿದ ಕೆಲಸವನ್ನು ಎಸಗಿದ್ದಾನೆ. (2ಚ) *ಹುಡುಗ ತನ್ನ ಅಣ್ಣನನ್ನು ಎಸಗಿದ್ದಾನೆ. (2ತ) *ಹುಡುಗ ನಿಮ್ಮನ್ನು ಎಸಗಿದ್ದಾನೆ. ಆಳ್ತನವಿರುವ ಹುಡುಗ ಪದವನ್ನು ಅರಳು ಪದದ ಆಗುಗವಾಗಿ ಬಳಸಿರುವ (1ಚ) ಸೊಲ್ಲು, ಮತ್ತು ಅಂತಹದೇ ಅಣ್ಣ ಪದವನ್ನು ಎಸಗು ಪದದ ಈಡಾಗಿ ಬಳಸಿರುವ (2ಚ) ಸೊಲ್ಲು ಸರಿಯಾಗಿಲ್ಲ; ಇದೇ ರೀತಿಯಲ್ಲಿ, ನಾನು ಆಡುಪದವನ್ನು ಅರಳು ಪದದ ಆಗುಗವಾಗಿ ಬಳಸಿರುವ (1ಟ) ಸೊಲ್ಲು, ಮತ್ತು ನೀವು ಆಡುಪದವನ್ನು ಎಸಗು ಪದದ ಈಡಾಗಿ ಬಳಸಿರುವ (2ಟ) ಸೊಲ್ಲು - ಇವೆರಡೂ ಸರಿಯಾಗಿಲ್ಲ. (2) ಈಡು ಪಾಂಗುಗಳಾಗಿ ಬರುವ ಹೆಸರುಪದಗಳು ಆಳ್ತನವುಳ್ಳವರನ್ನು ಹೊರತುಪಡಿಸಿ, ಬೇರೆ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತಿವೆಯಾದರೆ, ಮತ್ತು ಅವು ನೇರವಾಗಿ ಎಸಕಪದದ ಮೊದಲು ಬರುತ್ತಿವೆಯಾದರೆ, ಅವುಗಳೊಂದಿಗೆ ಬರುವ ಅನ್ನು ಒಟ್ಟನ್ನು ಬಳಸದಿರಲೂ ಬರುತ್ತದೆ: (1ಕ) ಅವನು ಊಟಕ್ಕೆ ಒಬ್ಬ ಹುಡುಗನನ್ನು ಕರೆದಿದ್ದಾನೆ. (1ಚ) *ಅವನು ಊಟಕ್ಕೆ ಒಬ್ಬ ಹುಡುಗ ಕರೆದಿದ್ದಾನೆ. (2ಕ) ಅವನು ಅಂಗಡಿಯಿಂದ ಒಂದು ಮೇಜನ್ನು ತಂದಿದ್ದಾನೆ. (2ಚ) ಅವನು ಅಂಗಡಿಯಿಂದ ಒಂದು ಮೇಜು ತಂದಿದ್ದಾನೆ.

(1ಚ)ದಲ್ಲಿ ಈಡು ಪಾಂಗಾಗಿ ಹುಡುಗ ಎಂಬ ಒಬ್ಬ ಆಳ್ತನವುಳ್ಳವನನ್ನು ಗುರುತಿಸುವ ಹೆಸರುಪದ ಬಂದಿದ್ದು, ಅದರ ಬಳಿಕ ಬಂದ ಅನ್ನು ಒಟ್ಟನ್ನು ಬಳಸಿಲ್ಲ, ಮತ್ತು ಈ ಕಾರಣಕ್ಕಾಗಿ ಆ ಸೊಲ್ಲು ಸರಿಯಿಲ್ಲ; ಇದಕ್ಕೆ ಬದಲು, (2ಚ)ದಲ್ಲಿ ಈಡು ಪಾಂಗಾಗಿ ಮೇಜು ಎಂಬ ಆಳ್ತನವಿಲ್ಲದ ಹೆಸರುಪದ ಬಂದಿದ್ದು, ಅದರ ಬಳಿಕ ಬಂದಿರುವ ಅನ್ನು ಒಟ್ಟನ್ನು ಬಳಸಿಲ್ಲವಾದರೂ ಆ ಸೊಲ್ಲು ಸರಿಯಾಗಿದೆ. ಇಂತಹದೇ ಕಟ್ಟುಪಾಡು ಆಡುಪದಗಳ ಬಳಕೆಯಲ್ಲೂ ಕಾಣಿಸುತ್ತದೆ; ಸೊಲ್ಲು ತಿಳಿಸುವ ಎಸಕದ ಈಡು ಸೊಲ್ಲಿನ ಆಡುಗ, ಕೇಳುಗ ಇಲ್ಲವೇ ಬೇರೊಬ್ಬ ಎಂಬುದನ್ನು ತಿಳಿಸುವ ನಾನು, ನೀನು, ಮತ್ತು ತಾನು ಎಂಬ ಪದಗಳ ಬಳಿಕ ಬರುವ ಅನ್ನು ಒಟ್ಟನ್ನು ಬಳಸದಿರಲು ಬರುವುದಿಲ್ಲ: (1ಕ) ಅವನು ನನ್ನನ್ನು ಕರೆಯುತ್ತಿದ್ದಾನೆ. (1ಚ) *ಅವನು ನಾನು ಕರೆಯುತ್ತಿದ್ದಾನೆ. (2ಕ) ಅವನು ನಿನ್ನನ್ನು ಕರೆಯುತ್ತಿದ್ದಾನೆ. (2ಚ) *ಅವನು ನೀನು ಕರೆಯುತ್ತಿದ್ದಾನೆ. ಈಡು ಪಾಂಗಾಗಿ ಬಂದಿರುವ ನಾನು ಮತ್ತು ನೀನು ಪದಗಳ ಬಳಿಕ ಅನ್ನು ಒಟ್ಟನ್ನು ಬಳಸದಿರುವ (1ಚ) ಮತ್ತು (2ಚ) ಸೊಲ್ಲುಗಳು ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು. (3) ಆಳ್ತನವುಳ್ಳವರನ್ನು ಗುರುತಿಸುವ ಹೆಸರುಪದಗಳನ್ನು ಜಾಗ ಪಾಂಗಾಗಿ ಬಳಸಿರುವಲ್ಲಿ ಅವು ನೇರವಾಗಿ ಜಾಗವನ್ನು ತಿಳಿಸುವ ಬದಲು ಜಾಗವುಳ್ಳವನನ್ನು ಇಲ್ಲವೇ ಜಾಗದ ಒಡೆಯನನ್ನು ತಿಳಿಸುತ್ತವೆ (7.4.9 ನೋಡಿ); ಆಡುಪದಗಳನ್ನು ಜಾಗ ಪಾಂಗುಗಳಾಗಿ ಬಳಸಿರುವಲ್ಲೂ ಅವು ಸೊಲ್ಲಿನ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಜಾಗವುಳ್ಳವನು ಇಲ್ಲವೇ ಜಾಗದ ಒಡೆಯ ಎಂಬುದನ್ನೇ ತಿಳಿಸುತ್ತವೆ: (1ಕ) ಅವನು ನಮ್ಮಲ್ಲಿ ಮೂರು ದಿನ ತಂಗಿದ್ದ. (1ಚ) ನಿಮ್ಮಲ್ಲಿ ಎಶ್ಟು ಹಸುಗಳಿವೆ? (1ಟ) ತಮ್ಮಲ್ಲಿ ಆರು ಹಸುಗಳಿವೆಯೆಂದು ರಾಜು ಹೇಳಿದ್ದ. ಆದರೆ, ಅನಿಸಿಕೆಗಳ ಇಲ್ಲವೇ ಬೇರೆ ಕೆಲವು ಪರಿಚೆಗಳ ಜಾಗವಾಗಿ ಆಳ್ತನವುಳ್ಳವರನ್ನು ಕಾಣುವಲ್ಲಿ ಅವು ನೇರವಾದ ಜಾಗಗಳೆಂಬ ಹುರುಳೂ ದೊರಕಬಲ್ಲುದು, ಮತ್ತು ಆಡುಪದಗಳೂ ಇಂತಹ ಹುರುಳನ್ನು ಕೊಡಬಲ್ಲುವು:

(1ಕ) ಅವನಿಗೆ ನನ್ನಲ್ಲಿ ನಂಬಿಕೆಯಿಲ್ಲ. (1ಚ) ನಿನ್ನಲ್ಲಿ ಕೆಲವು ಕೆಟ್ಟ ಗುಣಗಳಿವೆ. (1ಟ) ನೀವು ನನ್ನಲ್ಲಿ ಏನು ಕಂಡಿದ್ದೀರಿ? (4) ಕೆಲವು ಬಗೆಯ ಬರಹಗಳಲ್ಲಿ ಆಳ್ತನವಿಲ್ಲದವುಗಳ ಮೇಲೆ ಆಳ್ತನವನ್ನು ಹೊರಿಸಲಾಗುತ್ತದೆ; ಅಂತಹ ಬರಹಗಳಲ್ಲಿ ಆಳ್ತನವಿಲ್ಲದವುಗಳೂ ಸೊಲ್ಲುಗಳನ್ನು ಉಂಟುಮಾಡಬಲ್ಲುವು, ಮತ್ತು ಅಂತಹ ಉಂಟುಮಾಡುವಿಕೆಯಲ್ಲಿ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬ ಪಾಂಗುಗಳಾಗಿ ಕಾಣಿಸಿಕೊಳ್ಳಬಲ್ಲುವು: (1ಕ) ಮಕ್ಕಳಿಗೆ ದಿನಾಲೂ ಒಂದು ರೋಬೋಟ್ ಕತೆ ಹೇಳುತ್ತದೆ. (1ಚ) ನೀವು ಹೇಳಿದ ಕೆಲಸವನ್ನು ನಾನು ಮಾಡಲಾರೆ ಎಂದು ರೋಬೋಟ್ ಹೇಳಿತು. (1ಟ) ನನ್ನ ಹಾಸಿಗೆಯಲ್ಲಿ ಯಾರೋ ಮಲಗಿದ್ದಾರೆ ಎಂದು ಚಿಕ್ಕ ಕರಡಿ ಅಳುತ್ತಿತ್ತು. (1ತ) ರೋಬೋಟ್ ಮೇಜಿನಿಂದ ಕೆಳಗೆ ಬಿದ್ದು ತನ್ನ ಕಾಲನ್ನು ಮುರಿದುಕೊಂಡಿತು. ಮೇಲಿನ ಸೊಲ್ಲುಗಳಲ್ಲಿ ಆಳ್ತನವನ್ನು ಹೊರಿಸಿರುವ ರೋಬೋಟ್ ಮತ್ತು ಕರಡಿ ಎಂಬ ಎರಡು ಪಾಂಗುಗಳನ್ನು ಮಾತನಾಡುವಂತೆ ಕಾಣಲಾಗಿದ್ದು, ಅವುಗಳಿಗೆ ಸಂಬಂದಿಸಿದಂತೆ ಆಡುಪದಗಳನ್ನು ಬಳಸಲಾಗಿದೆ; ಆದರೆ, ಅವು ನಡೆಸುವ ಎಸಕವನ್ನು ತಿಳಿಸುವ ಹೇಳುತ್ತದೆ, ಅಳುತ್ತಿತ್ತು ಮೊದಲಾದ ಎಸಕಪದರೂಪಗಳು ಉಳಿಕೆಗುರ್ತದಲ್ಲೇ ಇವೆ. (5) ಈ ಆಳ್ತನದ ಕಟ್ಟುಪಾಡಿಗೆ ತಾನು ಪದದ ಕೆಲವು ಬಳಕೆಗಳು ಹೊರಪಡಿಕೆಗಳಾಗುತ್ತವೆ ಎಂಬುದನ್ನು ಮೇಲೆ 9.3.1(9)ರಲ್ಲಿ ವಿವರಿಸಲಾಗಿದೆ.

9.4.4 ಹಲವೆಣಿಕೆಯ ಬಳಕೆ

ಹೆಸರುಪದಗಳ ಹಾಗೆ, ಆಡುಪದಗಳಿಗೂ ಹಲವೆಣಿಕೆಯ ರೂಪಗಳಿವೆ (ನಾನು- ನಾವು, ನೀನು-ನೀವು, ತಾನು-ತಾವು); ಆದರೆ, ಆಡುಪದಗಳ ಈ ರೂಪಗಳು ಹೆಸರುಪದಗಳ ಹಲವೆಣಿಕೆಯ ರೂಪಗಳಿಗಿಂತ ಕೆಳಗೆ ವಿವರಿಸಿದಂತಹ ಕೆಲವು ವಿಶಯಗಳಲ್ಲಿ ಬೇರಾಗಿವೆ: (1) ಕೂಡಿಕೆಯ ಹುರುಳು:

ಹೆಸರುಪದಗಳ ಹಲವೆಣಿಕೆಯ ರೂಪಕ್ಕೆ ಅವು ಗುರುತಿಸುವ ವ್ಯಕ್ತಿ, ವಸ್ತು, ಇಲ್ಲವೇ ವಿಶಯದ ಎಣಿಕೆಯನ್ನು ತಿಳಿಸುವ ಹುರುಳಿದೆ; ಆದರೆ, ಆಡುಪದಗಳ ಹಲವೆಣಿಕೆಯ ರೂಪಕ್ಕೆ ಅವು ತಿಳಿಸುವ ಸೊಲ್ಲಿನ ಆಡುಗ, ಕೇಳುಗ ಮತ್ತು ಬೇರೊಬ್ಬ ಎಂಬವುಗಳ ಕೂಡಿಕೆಯನ್ನು ತಿಳಿಸುವ ಹುರುಳಿದೆ: (1ಕ) ಹುಡುಗರು ಊಟಮಾಡುತ್ತಿದ್ದಾರೆ. (1ಚ) ನಾವು ಊಟಮಾಡೋಣ. (1ಟ) ನಾವು ಊಟಮಾಡುತ್ತಿದ್ದೇವೆ. (1ಕ)ದಲ್ಲಿ ಬಂದಿರುವ ಹುಡುಗರು ಎಂಬ ಹಲವೆಣಿಕೆಯ ಹೆಸರುಪದ ಹಲವು ಮಂದಿ ಹುಡುಗರನ್ನು ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ನಾವು ಎಂಬ ಹಲವೆಣಿಕೆಯ ಆಡುಪದ ಆಡುಗ ಮತ್ತು ಕೇಳುಗರ ಕೂಡಿಕೆಯನ್ನು ತಿಳಿಸುತ್ತದೆ, ಮತ್ತು (1ಟ)ದಲ್ಲಿ ಬಂದಿರುವ ಇದೇ ಪದ ಆಡುಗ ಮತ್ತು ಬೇರೊಬ್ಬನ (ಇಲ್ಲವೇ ಬೇರೆ ಕೆಲವು ಮಂದಿಯ) ಕೂಡಿಕೆಯನ್ನು ತಿಳಿಸುತ್ತದೆ. (1ಟ) ಸೊಲ್ಲನ್ನು ಹಲವು ಮಂದಿ ಒಟ್ಟಿಗೆ ಆಡಿರುವರಾದರೆ, ಅಂತಹ ಕಡೆಗಳಲ್ಲಿ ಅದರಲ್ಲಿ ಬಂದಿರುವ ನಾವು ಪದಕ್ಕೆ ಹಲವು ಮಂದಿ ಆಡುಗರನ್ನು ತಿಳಿಸುವ ಹುರುಳಿದೆಯೆಂದು ಅನಿಸಬಹುದು; ಆದರೆ, ನಿಜಕ್ಕೂ ಇಲ್ಲಿ (1ಟ) ಸೊಲ್ಲನ್ನು ಹಲವು ಬಾರಿ ಆಡಲಾಗಿದೆ, ಮತ್ತು ಅದರ ಒಂದೊಂದು ಆಡುವಿಕೆಯಲ್ಲೂ ನಾವು ಪದವನ್ನು ಆಡುಗನು ತಾನು ಮತ್ತು ಬೇರೊಬ್ಬ (ಇಲ್ಲವೇ ಬೇರೆ ಹಲವರು) ಎಂಬುದಾಗಿ ಕೂಡಿಕೆಯ ಹುರುಳಿನಲ್ಲೇ ಬಳಸಿರುತ್ತಾನೆ ಎಂದು ಹೇಳಲು ಬರುತ್ತದೆ. ನಾನು, ನೀನು, ಮತ್ತು ತಾನು ಎಂಬ ಈ ಮೂರು ಆಡುಪದಗಳ ಹಲವೆಣಿಕೆಯ ರೂಪಗಳಲ್ಲಿ ನಾವು ಎಂಬುದು ಮಾತ್ರ ಆಡುಗನೊಂದಿಗೆ ಕೇಳುಗನ ಕೂಡಿಕೆಯನ್ನು, ಆಡುಗನೊಂದಿಗೆ ಬೇರೊಬ್ಬನ ಕೂಡಿಕೆಯನ್ನು, ಇಲ್ಲವೇ ಈ ಮೂರೂ ಪಾಂಗುಗಳ ಕೂಡಿಕೆಯನ್ನು ತಿಳಿಸಬಲ್ಲುದು; ನೀವು ಎಂಬುದು ಕೇಳುಗರೊಂದಿಗೆ ಬೇರೊಬ್ಬರ ಕೂಡಿಕೆಯನ್ನು ಮಾತ್ರ ತಿಳಿಸಬಲ್ಲುದಲ್ಲದೆ, ಆಡುಗನ ಕೂಡಿಕೆಯನ್ನು ತಿಳಿಸಲಾರದು; ಮತ್ತು, ತಾವು ಎಂಬುದು ಬೇರೊಬ್ಬನೊಂದಿಗೆ ಬೇರೆ ಯಾವ ಪಾಂಗಿನ (ಆಡುಗ ಇಲ್ಲವೇ ಕೇಳುಗರ) ಕೂಡಿಕೆಯನ್ನೂ ತಿಳಿಸಲಾರದು. ಹಾಗಾಗಿ, ತಾವು ಎಂಬುದರ ಹುರುಳು ಹೆಚ್ಚುಕಡಿಮೆ ಹೆಸರುಪದಗಳ ಹಲವೆಣಿಕೆಯ ರೂಪಗಳ ಹುರುಳಿನ ಹಾಗೆಯೇ ಇರುವಂತೆ ಕಾಣಿಸುತ್ತದೆ. ಆದರೆ, ನೇರವಾಗಿ ವ್ಯಕ್ತಿಗಳನ್ನು ಗುರುತಿಸುವ ಬದಲು ಸೊಲ್ಲಿನ ಉಂಟುಮಾಡುವಿಕೆಯ ಪಾಂಗೊಂದನ್ನು ಮಾತ್ರವೇ ತಿಳಿಸುವುದರಿಂದ, ಅದು ಹೆಸರುಪದಗಳ ಹಲವೆಣಿಕೆಯ ರೂಪಗಳಿಗಿಂತ ಬೇರಾಗಿದೆ:

(1ಕ) ತಮ್ಮ ಮಕ್ಕಳನ್ನು ಇಂಗ್ಲಿಶ್ ಶಾಲೆಗೆ ಸೇರಿಸಬೇಕೆಂದು ಹೇಳುವವರು ನೀವು ಮಾತ್ರ. (1ಚ) ನಿಮ್ಮ ಮಕ್ಕಳನ್ನು ಇಂಗ್ಲಿಶ್ ಶಾಲೆಗೆ ಸೇರಿಸಬೇಕೆಂದು ಹೇಳುವವರು ನೀವು ಮಾತ್ರ. (1ಟ) ನಮ್ಮ ಮಕ್ಕಳನ್ನು ಇಂಗ್ಲಿಶ್ ಶಾಲೆಗೆ ಸೇರಿಸಬೇಕೆಂದು ಹೇಳುವವರು ನೀವು ಮಾತ್ರ. (1ಕ)ದಲ್ಲಿ ಬಂದಿರುವ ತಮ್ಮ ಮಕ್ಕಳು ಎಂಬುದು ಸೊಲ್ಲಿನ ಆಡುಗನ ಮಕ್ಕಳ ಕುರಿತಾಗಲಿ, ಇಲ್ಲವೇ ಕೇಳುಗನ ಮಕ್ಕಳ ಕುರಿತಾಗಲಿ ನೇರವಾಗಿ ತಿಳಿಸಲು ಹೋಗುವುದಿಲ್ಲ; ಅಂತಹ ಕಚಿತವಾದ ಹುರುಳಿರುವ (1ಚ) ಮತ್ತು (1ಟ) ಸೊಲ್ಲುಗಳಿಗಿಂತ (1ಕ) ಸೊಲ್ಲು ಬೇರಾಗಿದೆಯೆಂಬುದನ್ನು ಗಮನಿಸಬಹುದು. ನಾವು ಎಂಬುದು ಆಡುಗ ಮತ್ತು ಕೇಳುಗರ ಕೂಡಿಕೆಯ ಹುರುಳಿನಲ್ಲಾಗಲಿ, ಇಲ್ಲವೇ ಆಡುಗ ಮತ್ತು ಬೇರೊಬ್ಬರ ಕೂಡಿಕೆಯ ಹುರುಳಿನಲ್ಲಾಗಲಿ ಬಳಕೆಯಾಗಬಲ್ಲುದೆಂಬುದಕ್ಕೆ ಇನ್ನೊಂದು ಬಗೆಯ ಎತ್ತುಗೆಯನ್ನು ಕೆಳಗೆ ಕೊಡಲಾಗಿದೆ: (1ಕ) ನಾವು ನಿನ್ನೆ ಸಂತೆಗೆ ಹೋಗಿದ್ದೆವು, ಅಲ್ಲವೇ? (1ಚ) ಹವುದು, ಹೋಗಿದ್ದೆವು. (1ಟ) ಹವುದು, ಹೋಗಿದ್ದಿರಿ. (1ಕ) ಸೊಲ್ಲಿನಲ್ಲಿ ಬಂದಿರುವ ನಾವು ಪದಕ್ಕೆ ಆಡುಗನೊಂದಿಗೆ ಕೇಳುಗನನ್ನು ಸೇರಿಸಿ ಹೇಳುವ ಹುರುಳಿದೆಯಾದರೆ, ಆ ಸೊಲ್ಲಿಗೆ (1ಚ) ಸೊಲ್ಲು ಸರಿಯಾದ ಮರುನುಡಿಯಾಗಬಲ್ಲುದು, ಮತ್ತು ಆಡುಗನೊಂದಿಗೆ ಕೇಳುಗನನ್ನು ಸೇರಿಸದ (ಬೇರೊಬ್ಬನನ್ನು ಸೇರಿಸುವ) ಹುರುಳಿದೆಯಾದರೆ (1ಟ) ಸೊಲ್ಲು ಸರಿಯಾದ ಮರುನುಡಿಯಾಗಬಲ್ಲುದು. ಅದಕ್ಕೆ ಈ ಎರಡು ಬಗೆಯ ಸೊಲ್ಲುಗಳೂ ಸರಿಯಾದ ಮರುನುಡಿಗಳಾಗಬಲ್ಲುವು ಎಂಬುದರಿಂದ, ನಾವು ಪದಕ್ಕೆ ಈ ಎರಡು ಹುರುಳುಗಳೂ ಸಿಗಬಲ್ಲುವು ಎಂಬುದು ಗೊತ್ತಾಗುತ್ತದೆ. (2) ಹೆಸರುಪದಗಳ ಬಳಕೆಯಲ್ಲಿ ಕೂಡಿಕೆಯ ಹುರುಳು: ಆಡುಪದಗಳ ಹಲವೆಣಿಕೆಯ ರೂಪಗಳಿಗೆ ಸಿಗುವಂತಹ ಕೂಡಿಕೆಯ ಹುರುಳು ಹೆಸರುಪದಗಳಿಗೆ ದೊರಕಬೇಕಿದ್ದಲ್ಲಿ, ಅವನ್ನು ಹಲವೆಣಿಕೆಯ ರೂಪದಲ್ಲಿ ಬಳಸುವ ಬದಲು, ಮತ್ತು ಪದದಿಂದ ಇಲ್ಲವೇ ಊ ಒಟ್ಟಿನಿಂದ

ಜೋಡಿಸಿರುವ ರೂಪದಲ್ಲಿ ಬಳಸಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು, ಹರಿ, ಮತ್ತು ರಾಮು ಓದುತ್ತಿದ್ದಾರೆ. (1ಚ) ರಾಜುವೂ, ಹರಿಯೂ, ರಾಮುವೂ ಓದುತ್ತಿದ್ದಾರೆ. (1ಟ) ಹುಡುಗರು ಓದುತ್ತಿದ್ದಾರೆ. (1ಕ-ಚ) ಸೊಲ್ಲುಗಳಿಗಿರುವಂತಹ ಕೂಡಿಕೆಯ ಹುರುಳು (1ಟ) ಸೊಲ್ಲಿಗಿಲ್ಲ ಎಂಬುದನ್ನು ಗಮನಿಸಬಹುದು. ಹೆಸರುಪದಗಳನ್ನು ಈ ರೀತಿ ಜೋಡಿಸಿ ಬಳಸುವುದಕ್ಕೂ, ಹಲವೆಣಿಕೆಯ ರೂಪದಲ್ಲಿ ಬಳಸುವುದಕ್ಕೂ ನಡುವಿರುವ ವ್ಯತ್ಯಾಸವೇನೆಂದರೆ, ಅವನ್ನು ಜೋಡಿಸಿ ಬಳಸಿರುವಲ್ಲಿ ಅವು ಗುರುತಿಸುವ ಹಲವು ವ್ಯಕ್ತಿ ಇಲ್ಲವೇ ವಸ್ತುಗಳ ನಡುವಿನ ವ್ಯತ್ಯಾಸವನ್ನು ಗಮನಿಸಲಾಗುತ್ತದೆ, ಮತ್ತು ಹಲವೆಣಿಕೆಯ ರೂಪವನ್ನು ಬಳಸಿರುವಲ್ಲಿ ಅಂತಹ ಯಾವ ವ್ಯತ್ಯಾಸವನ್ನೂ ಗಮನಿಸದಿರಲಾಗುತ್ತದೆ: (1ಕ) ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಬಿಸಿಲಲ್ಲಿ ಕುಳಿತಿವೆ. (1ಚ) ಬೆಕ್ಕುಗಳು ಬಿಸಿಲಲ್ಲಿ ಕುಳಿತಿವೆ. (1ಚ) ಸೊಲ್ಲನ್ನು ಬಳಸಿರುವಲ್ಲೂ ಬಿಸಿಲಲ್ಲಿ ಕುಳಿತಿರುವ ಬೆಕ್ಕುಗಳಲ್ಲಿ ಒಂದು ಕಪ್ಪಿರಬಹುದು, ಮತ್ತು ಇನ್ನೊಂದು ಬಿಳಿಯಿರಬಹುದು; ಆದರೆ, ಈ ವ್ಯತ್ಯಾಸವನ್ನು ಗಮನಿಸದಿರಲು ಬೆಕ್ಕುಗಳು ಎಂಬ ಹಲವೆಣಿಕೆಯ ರೂಪವನ್ನು ಬಳಸಲಾಗಿದೆ. ಆಡುಪದಗಳನ್ನೂ ಈ ರೀತಿ ಎರಡು ಬಗೆಯ ಇಟ್ಟಳಗಳಲ್ಲಿ ಬಳಸಲು ಬರುತ್ತದೆ; ಆದರೆ, ಅವುಗಳ ನಡುವೆ ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹ ವ್ಯತ್ಯಾಸವಿಲ್ಲ: (1ಕ) ನಾನೂ ನೀನೂ ಸಂತೆಗೆ ಹೋಗೋಣ. (1ಚ) ನಾವು ಸಂತೆಗೆ ಹೋಗೋಣ. (1ಚ)ದಲ್ಲಿ ಬಂದಿರುವ ನಾವು ಪದಕ್ಕೆ (1ಕ)ದಲ್ಲಿ ಬಂದಿರುವ ನಾನೂ ನೀನೂ ಎಂಬುದರ ಹುರುಳೇ ಇದೆ. ಹೆಸರುಪದಗಳ ಹಾಗೆ ಕೂಡಿಕೆಯ ಹುರುಳನ್ನು ಮರೆಮಾಚುವ ಹುರುಳು ಆಡುಪದಗಳ ಹಲವೆಣಿಕೆಯ ರೂಪಗಳಿಗಿಲ್ಲ.

ಆಡುಪದಗಳ ಹಲವೆಣಿಕೆಯ ರೂಪಗಳನ್ನು ಬಳಸುವಲ್ಲಿ ಈ ರೀತಿ ಕೂಡಿಕೆಯ ಹುರುಳು ಇಲ್ಲವಾಗದಿರಲು ಅವು ಪಾಂಗುಗಳಾಗಿ ಬರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸದಿರುವುದೇ ಮುಕ್ಯ ಕಾರಣ. ನಾವು ಪದ ಆಡುಗ ಮತ್ತು ಕೇಳುಗರ ಇಲ್ಲವೇ ಆಡುಗ ಮತ್ತು ಬೇರೊಬ್ಬರ ಕೂಡಿಕೆಯನ್ನಶ್ಟೇ ತಿಳಿಸುತ್ತದೆ; ಈ ರೀತಿ ಕೂಡಿಕೊಂಡಿರುವ ವ್ಯಕ್ತಿಗಳು ಯಾರು ಎಂಬುದನ್ನು ಅದು ತಿಳಿಸಹೋಗುವುದಿಲ್ಲ. ಹಾಗಾಗಿ, ಕೂಡಿಕೆಯ ಹುರುಳನ್ನು ತೆಗೆದುಹಾಕಿದಲ್ಲಿ ಅದಕ್ಕೆ ಹುರುಳಾಗಿರಲು ಬೇರೆ ಏನೂ ಉಳಿಯುವುದಿಲ್ಲ. ಇದಕ್ಕೆ ಬದಲು, ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕುಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿದಲ್ಲಿ ಅವಕ್ಕೆ ಸಮನಾಗಿರುವ ಅಂಶ ಉಳಿಯುತ್ತದೆ, ಮತ್ತು ಇದು ಬೆಕ್ಕುಗಳು ಎಂಬ ಹಲವೆಣಿಕೆಯ ರೂಪಕ್ಕೆ ಹುರುಳಾಗಿ ಬರುತ್ತದೆ. (3) ರೂಪದಲ್ಲಿ ವ್ಯತ್ಯಾಸ: ಹುರುಳಿನಲ್ಲಿ ಮಾತ್ರವಲ್ಲದೆ ರೂಪದಲ್ಲೂ ಆಡುಪದಗಳು ಹಲವೆಣಿಕೆಯ ಮಟ್ಟಿಗೆ ಹೆಸರುಪದಗಳಿಗಿಂತ ಬೇರಾಗಿವೆ: ಹೆಸರುಪದಗಳಿಗೆ ಅರು ಇಲ್ಲವೇ ಗಳು ಎಂಬ ಒಟ್ಟನ್ನು ಸೇರಿಸಿ ಹಲವೆಣಿಕೆಯ ರೂಪಗಳನ್ನು ಪಡೆಯಲಾಗುತ್ತದೆ; ಎತ್ತುಗೆಗಾಗಿ, ಹುಡುಗ ಪದಕ್ಕೆ ಅರು ಒಟ್ಟನ್ನು ಸೇರಿಸಿ, ಹಲವೆಣಿಕೆಯ ಹುಡುಗರು ರೂಪವನ್ನೂ, ಮುಂದಾಳು ಪದಕ್ಕೆ ಗಳು ಒಟ್ಟನ್ನು ಸೇರಿಸಿ ಹಲವೆಣಿಕೆಯ ಮುಂದಾಳುಗಳು ರೂಪವನ್ನೂ ಪಡೆಯಲಾಗುತ್ತದೆ (4.8.1 ನೋಡಿ). ಇದಕ್ಕೆ ಬದಲು, ಆಡುಪದಗಳಿಗೆ ವು ಒಟ್ಟನ್ನು ಸೇರಿಸಿ ಹಲವೆಣಿಕೆಯ ರೂಪಗಳನ್ನು ಪಡೆಯಲಾಗುತ್ತದೆ, ಮತ್ತು ಈ ಒಟ್ಟನ್ನು ಸೇರಿಸಿದಾಗ, ಅವುಗಳ ಕೊನೆಯ ನು ಎಂಬುದು ಬಿದ್ದುಹೋಗುತ್ತದೆ (ನಾನು-ನಾವು, ನೀನು-ನೀವು, ತಾನು-ತಾವು). ಇದಲ್ಲದೆ, ಆಡುಪದಗಳ ಹಲವೆಣಿಕೆಯ ರೂಪಗಳಿಗೆ ಪತ್ತುಗೆ ಒಟ್ಟುಗಳನ್ನು ಸೇರಿಸಿದಾಗ, ಅವುಗಳ ಕೊನೆಯಲ್ಲಿ ಬರುವ ವು ಒಟ್ಟು ಮ್್ಮ (ನಮ್ಮನ್ನು, ನಿಮ್ಮಿಂದ, ತಮ್ಮಲ್ಲಿ) ಮತ್ತು ಮ (ನಮಗೆ, ನಿಮಗೆ, ತಮಗೆ) ಎಂಬ ರೂಪಗಳಲ್ಲಿ ಬರುತ್ತದೆ.

9.4.5 ಸೂಳುನುಡಿಗಳಲ್ಲಿ ಬಳಕೆ

ಆಡುಪದಗಳಿಗೂ ಹೆಸರುಪದಗಳಿಗೂ ನಡುವೆ ಅವು ನಡೆಸಬೇಕಾಗಿರುವ ಕೆಲಸಗಳ ನಡುವಿರುವ ವ್ಯತ್ಯಾಸ ಸೂಳುನುಡಿಗಳಲ್ಲಿ ತುಂಬಾ ಚನ್ನಾಗಿ ಗೊತ್ತಾಗುತ್ತದೆ: ಒಂದು ಸೂಳುನುಡಿ ಮುಂದುವರಿಯುತ್ತಿರುವಂತೆ, ಅದರ ಆಡುಗ, ಕೇಳುಗ ಮತ್ತು ಬೇರೊಬ್ಬರು ಬದಲಾಗುತ್ತಲೇ ಇರುತ್ತಾರೆ; ಮೊದಲಿಗೆ

ಆಡುಗನಾಗಿದ್ದವನು ಕೇಳುಗನಾಗುತ್ತಾನೆ, ಮತ್ತು ಮೊದಲಿಗೆ ಕೇಳುಗನಾಗಿದ್ದವನು ಇಲ್ಲವೇ ಬೇರೊಬ್ಬ ಆಡುಗನಾಗುತ್ತಾನೆ. ಆದರೆ, ಈ ರೀತಿ ಸೂಳುನುಡಿಯ ಆಡುಗ, ಕೇಳುಗ, ಮತ್ತು ಬೇರೊಬ್ಬರ ನಡುವೆ ಜರಗುವ ಈ ಮಾರ್ಪಾಡುಗಳಲ್ಲಿ ಯಾವುವೂ ಆಡುಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ; ಸೊಲ್ಲಿನ ಆಡುಗ ಯಾರೇ ಆಗಿರಲಿ, ಸೂಳುನುಡಿಯ ಉದ್ದಕ್ಕೂ ನಾನು ಎಂಬುದೇ ಬಳಕೆಯಾಗುತ್ತದೆ, ಮತ್ತು ಸೂಳುನುಡಿಯ ಕೇಳುಗ ಯಾರೇ ಆಗಿರಲಿ, ನೀನು ಎಂಬುದೇ ಬಳಕೆಯಾಗುತ್ತದೆ: (1ಕ) ರಾಜು: ನನಗೊಂದು ಪೆನ್ನು ಬೇಕಾಗಿತ್ತು; ನಿಮ್ಮಲ್ಲಿ ಎಂತಹ ಪೆನ್ನುಗಳೆಲ್ಲ ಇವೆ? (1ಚ) ಅಂಗಡಿಯಾತ: ನೋಡಿ, ಈ ಎಲ್ಲಾ ಬಗೆಯ ಪೆನ್ನುಗಳೂ ನಮ್ಮಲ್ಲಿವೆ; ನಿಮಗೆ ಇವುಗಳಲ್ಲಿ ಯಾವುದು ಬೇಕು? (1ಟ) ರಾಜು: ನನಗೆ ಈ ಪೆನ್ನು ಕೊಡಿ; ಇದಕ್ಕೆ ಬೆಲೆ ಎಶ್ಟು? ರಾಜು ಮತ್ತು ಅಂಗಡಿಯಾತನ ನಡುವೆ ನಡೆದಿರುವ ಈ ಸೂಳುನುಡಿಯಲ್ಲಿ ಆಡುಗನಾಗಿರುವುದು (1ಕ) ಮತ್ತು (1ಟ)ಗಳಲ್ಲಿ ರಾಜು, ಮತ್ತು (1ಚ)ದಲ್ಲಿ ಅಂಗಡಿಯಾತ; ಆದರೆ, ನಿಜಕ್ಕೂ ಆಡುಗರು ಯಾರು ಎಂಬ ವಿಶಯದಲ್ಲಿ ನಡೆದಿರುವ ಈ ಮಾರ್ಪಾಡನ್ನು (1ಕ-ಚ)ಗಳಲ್ಲಿ ಬಂದಿರುವ ನಾನು-ನಾವು ಪದ ಗಮನಿಸುವುದೇ ಇಲ್ಲ. ಇದೇ ರೀತಿಯಲ್ಲಿ (1ಕ)ದಲ್ಲಿ ಕೇಳುಗನಾಗಿರುವುದು ಅಂಗಡಿಯಾತ, ಮತ್ತು (1ಚ)ದಲ್ಲಿ ರಾಜು; ಆದರೆ, (1ಕ-ಚ) ಸೊಲ್ಲುಗಳಲ್ಲಿ ಬಂದಿರುವ ನೀವು ಪದವೂ ಈ ಮಾರ್ಪಾಡನ್ನು ಗಮನಿಸುವುದಿಲ್ಲ. ಹೆಸರುಪದಗಳು ನೇರವಾಗಿ ವ್ಯಕ್ತಿಗಳನ್ನು ಗುರುತಿಸಬೇಕಾಗುತ್ತದೆಯಾದ ಕಾರಣ, ಸೊಲ್ಲಿನ ಆಡುಗ, ಕೇಳುಗ ಇಲ್ಲವೇ ಬೇರೊಬ್ಬ ವ್ಯಕ್ತಿ ಬದಲಾದಂತೆಲ್ಲ ಆತನನ್ನು ಗುರುತಿಸಬೇಕಾಗಿರುವ ಹೆಸರುಪದಗಳೂ ಬದಲಾಗುತ್ತಾ ಹೋಗುತ್ತವೆ; ಇದನ್ನು ಕೆಳಗೆ ಕೊಟ್ಟಿರುವ ಸೂಳುನುಡಿಯಲ್ಲಿ ಕಾಣಬಹುದು: (1ಕ) ನನಗೆ ಇವತ್ತು ತಲೆನೋವೆಂದು ರಾಜು ಹೇಳಿದ. (1ಚ) ನನಗೂ ತಲೆನೋವಿದೆಯೆಂದು ಹರಿ ಹೇಳಿದ. (1ಟ) ನನಗೆ ತಲೆನೋವೂ ಇಲ್ಲ ಬೆನ್ನು ನೋವೂ ಇಲ್ಲ ಎಂದು ಜಾನಕಿ ಹೇಳಿದಳು. ಮೇಲಿನ ಸೂಳುನುಡಿಯಲ್ಲಿ ಬರುವ ಮೂರು ಸೊಲ್ಲುಗಳಲ್ಲೂ ನನಗೆ ಎಂಬ ಆಡುಪದ ಬಂದಿದ್ದು, ಅದು ಆ ಮೂರು ಸೊಲ್ಲುಗಳ ಆಡುಗರನ್ನು ತಿಳಿಸುತ್ತದೆ; ಈ ಮೂರು ಸೊಲ್ಲುಗಳ ಆಡುಗರು ಒಬ್ಬರೇ ಅಲ್ಲ, ಬೇರೆ ಬೇರೆ

ಎಂಬುದನ್ನಾಗಲಿ, ಅವರು ನಿಜಕ್ಕೂ ಯಾರು ಎಂಬುದನ್ನಾಗಲಿ ಅದು ತಿಳಿಸುವುದಿಲ್ಲ. ಆದರೆ, ಇದೇ ಸೂಳುನುಡಿಯಲ್ಲಿ ಬಂದಿರುವ ರಾಜು, ಹರಿ, ಮತ್ತು ಜಾನಕಿ ಎಂಬ ಮೂರು ಹೆಸರುಪದಗಳು ಅದರಲ್ಲಿ ಮೂರು ಬೇರೆ ಬೇರೆ ಆಡುಗರು ಉಂಟುಮಾಡಿರುವಂತಹ ಸೊಲ್ಲುಗಳಿವೆ ಎಂಬುದನ್ನು ತಿಳಿಸುತ್ತವೆ, ಮತ್ತು ಈ ಸೊಲ್ಲುಗಳ ಆಡುಗರಾಗಿರುವವರು ನಿಜಕ್ಕೂ ಯಾರು ಎಂಬುದನ್ನೂ ಅವು ತಿಳಿಸುತ್ತವೆ. ಆಡುಪದಗಳ ಬಳಕೆಯಲ್ಲಿ ಕಾಣಿಸುವ ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಆಡುಗನಿಗೂ ಕೇಳುಗನಿಗೂ ನಡುವಿರುವ ಸಂಬಂದವನ್ನು ತಿಳಿಸುವಂತೆ, ಕೆಲವೆಡೆಗಳಲ್ಲಿ ನೀನು ಪದದ ಬದಲು ನೀವು ಇಲ್ಲವೇ ತಾವು ಎಂಬುದನ್ನು ಬಳಸಲಾಗುತ್ತದೆ, ಮತ್ತು ನಾನು ಎಂಬುದರ ಬದಲು ನಾವು ಎಂಬುದನ್ನು ಬಳಸಲಾಗುತ್ತದೆ: (1ಕ) ನೀವು ಈ ಶಾಲೆಯ ಮಾಸ್ತರರೆಂದು ತಿಳಿಯಿತು. (1ಚ) ತಾವು ಊಟಕ್ಕೆ ದಯಮಾಡಿಸಬೇಕು. (1ಟ) ನಾವು ಈ ನಾಡಿನ ಅರಸರಾಗಿದ್ದೇವೆ. (1ಕ)ದಲ್ಲಿ ಬಂದಿರುವ ನೀವು ಎಂಬುದನ್ನು ಆ ಸೊಲ್ಲಿಗಿರುವ ಒಬ್ಬ ಕೇಳುಗನ ಕುರಿತಾಗಿ ಬಳಸಲಾಗಿದೆ; ಹಾಗಿದ್ದರೂ ಅದು ಹಲವೆಣಿಕೆಯ ರೂಪದಲ್ಲಿರಲು ಆಡುಗನಿಗೆ ಆ ಕೇಳುಗನ ವಿಶಯದಲ್ಲಿರುವ ಮದಿಪು ಕಾರಣವಾಗಿದೆ; ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ತಾವು ಎಂಬ ಹಲವೆಣಿಕೆಯ ರೂಪವೂ ಆ ಸೊಲ್ಲಿಗಿರುವ ಒಬ್ಬ ಕೇಳುಗನ ಕುರಿತಾಗಿದ್ದು, ಆಡುಗನಿಗೆ ಆತನ ಮೇಲಿರುವ ಇನ್ನಶ್ಟು ಹೆಚ್ಚಿನ ಮದಿಪನ್ನು ತೋರಿಸುತ್ತದೆ (… ನೋಡಿ). ಇದಕ್ಕೆ ಬದಲು, (1ಟ)ದಲ್ಲಿ ಬಂದಿರುವ ನಾವು ಎಂಬ ಹಲವೆಣಿಕೆಯ ರೂಪಕ್ಕೆ ಆಡುಗನು ಅರಸನಾಗಿದ್ದಾನೆ ಎಂಬುದಾಗಿ ಆತನ ದೊಡ್ಡಸ್ತಿಕೆಯನ್ನು ತಿಳಿಸುವ ಕೆಲಸ ಇದೆ. ಇಂತಹ ಕೆಲವು ಹೊರಪಡಿಕೆಗಳನ್ನು ಬಿಟ್ಟರೆ, ಉಳಿದೆಲ್ಲಾ ಕಡೆಗಳಲ್ಲೂ ಆಡುಪದಗಳು ತಿಳಿಸಬೇಕಾಗಿರುವ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ವ್ಯಕ್ತಿ ಬದಲಾಗುತ್ತಿದ್ದರೂ, ಆ ಪದಗಳು ಬದಲಾಗದೆ ಉಳಿಯುತ್ತವೆ; ಅವು ನೇರವಾಗಿ ಈ ವ್ಯಕ್ತಿಗಳನ್ನು ಗುರುತಿಸಬೇಕಾಗಿಲ್ಲವೆಂಬುದೇ ಇದಕ್ಕೆ ಕಾರಣ.

9.4.6 ಗುರ್ತವ್ಯತ್ಯಾಸ

ಹೆಸರುಪದಗಳು ಗುರ್ತವ್ಯತ್ಯಾಸವನ್ನು ತೋರಿಸಬಲ್ಲುವು; ಆದರೆ, ಆಡುಪದಗಳು ಈ ವ್ಯತ್ಯಾಸವನ್ನು ತೋರಿಸುವುದಿಲ್ಲ. ಸೊಲ್ಲುಗಳ ಆಡುಗ, ಕೇಳುಗ, ಮತ್ತು ಬೇರೊಬ್ಬ ಎಂಬ ಪಾಂಗುಗಳಾಗಿ ಬಂದಿರುವುದು ನಿಜಕ್ಕೂ ಯಾರು ಎಂಬುದನ್ನು ಆಡುಪದಗಳು ತಿಳಿಸಬೇಕಾಗಿಲ್ಲದಿರುವುದೇ ಅವುಗಳಲ್ಲಿ ಗುರ್ತ ವ್ಯತ್ಯಾಸ ಕಾಣಿಸದಿರುವುದಕ್ಕೆ ಕಾರಣ: (1ಕ) ನಾನು ಮನೆಗೆ ಹೋಗುತ್ತೇನೆಂದು ರಾಜು ಹೇಳಿದ. (1ಚ) ನಾನು ಮನೆಗೆ ಹೋಗುತ್ತೇನೆಂದು ಜಾನಕಿ ಹೇಳಿದಳು. (2ಕ) ನಾನು ಊರಿಗೆ ಹೋದವನು ಆತನನ್ನೂ ಮಾತನಾಡಿಸಿದ್ದೆ. (2ಚ) ನಾನು ಊರಿಗೆ ಹೋದವಳು ಆತನನ್ನೂ ಮಾತನಾಡಿಸಿದ್ದೆ. (1ಕ-ಚ)ಗಳ ಹೊರಸೊಲ್ಲಿನಲ್ಲಿ ರಾಜು ಮತ್ತು ಜಾನಕಿ ಎಂಬ ಹೆಸರುಪದಗಳು ಮಾಡುಗ ಪಾಂಗುಗಳಾಗಿ ಬಂದಿದ್ದು, ಅವುಗಳ ನಡುವೆ ಗುರ್ತ ವ್ಯತ್ಯಾಸವಿರುವುದನ್ನು ಹೇಳಿದ ಮತ್ತು ಹೇಳಿದಳು ಎಂಬ ಎಸಕಪದರೂಪಗಳು ತಿಳಿಸುತ್ತವೆ; ಆದರೆ, ಇವೆರಡರ ಒಳಸೊಲ್ಲುಗಳಲ್ಲೂ ನಾನು ಎಂಬ ಒಂದೇ ಆಡುಪದ ಬಂದಿದ್ದು, ಅವೆರಡರಲ್ಲೂ ಹೋಗುತ್ತೇನೆ ಎಂಬ ಒಂದೇ ಎಸಕಪದರೂಪ ಬಂದಿದೆ. ಹೊರಸೊಲ್ಲಿನಲ್ಲಿದ್ದ ಗುರ್ತ ವ್ಯತ್ಯಾಸ ಒಳಸೊಲ್ಲಿನಲ್ಲಿಲ್ಲ. ಇದಕ್ಕೆ ಬದಲು, (2ಕ)ದಲ್ಲಿ ನಾನು ಪದವನ್ನು ಒಬ್ಬ ಗಂಡಸು ಬಳಸಿದ್ದಾನೆ, ಮತ್ತು (2ಚ)ದಲ್ಲಿ ಅದೇ ಪದವನ್ನು ಒಬ್ಬ ಹೆಂಗಸು ಬಳಸಿದ್ದಾಳೆ ಎಂಬುದನ್ನು ಅದರ ಬಳಿಕ ಬಂದ ಪದಕಂತೆ (ಊರಿಗೆ ಹೋದವನು - ಊರಿಗೆ ಹೋದವಳು) ತಿಳಿಸುತ್ತದೆ; ಹೀಗಿದ್ದರೂ ನಾನು ಪದ ಈ ಎರಡು ಸೊಲ್ಲುಗಳಲ್ಲೂ ಒಂದೇ ರೂಪದಲ್ಲಿದೆ. ಹೆಸರುಪದಗಳ ಬಳಕೆಯಲ್ಲಿ ಕಾಣಿಸುವ ಬೇರೆಯೂ ಹಲವು ವ್ಯತ್ಯಾಸಗಳು ನಾನು, ನೀನು, ಮತ್ತು ತಾನು ಎಂಬ ಆಡುಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ. ಮುದುಕರು, ಮಕ್ಕಳು, ಕುಂಟರು, ಕುರುಡರು ಮೊದಲಾದ ಹಲವು ಬಗೆಯ ವ್ಯತ್ಯಾಸಗಳನ್ನು ಹೆಸರುಪದಗಳು ತೋರಿಸುತ್ತಿವೆ; ಆದರೆ, ಇಂತಹ ಪದಗಳು ಗುರುತಿಸುವ ವ್ಯಕ್ತಿಗಳಲ್ಲಿ ಸೊಲ್ಲುಗಳನ್ನು ಬಳಸಬಲ್ಲವರು ಯಾರು ಬೇಕಿದ್ದರೂ ನಾನು ಪದವನ್ನು ಬಳಸಬಲ್ಲರು, ಮತ್ತು ಸೊಲ್ಲುಗಳನ್ನು ಕೇಳಿ ತಿಳಿದುಕೊಳ್ಳಬಲ್ಲ ಯಾರು ಬೇಕಿದ್ದರೂ ನೀನು ಪದದಿಂದ ಕರೆಸಿಕೊಳ್ಳಬಲ್ಲರು. ಇದಲ್ಲದೆ, ಹೆಸರುಪದಗಳಲ್ಲಿ ಕಾಣಿಸುವ ಕೊಟ್ಟಹೆಸರು (ರಾಜು, ಜಾನಕಿ) ಮತ್ತು ಇರುವ ಹೆಸರುಗಳ (ಹುಡುಗ, ಮನೆ) ನಡುವಿನ ವ್ಯತ್ಯಾಸವೂ ಆಡುಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ; ಈ ಎರಡು ಬಗೆಯ ಹೆಸರುಪದಗಳ ನಡುವಿನ ವ್ಯತ್ಯಾಸ ಪಾಂಗುಗಳನ್ನು ಗುರುತಿಸುವ ಬಗೆಯಲ್ಲಿದೆ:

ಇರುವಹೆಸರು ಒಂದು ಬಗೆಯ ಪಾಂಗನ್ನು ಗುರುತಿಸುತ್ತದೆ, ಮತ್ತು ಇಟ್ಟಹೆಸರು ಒಂದೇ ಒಂದು ಪಾಂಗನ್ನು ಮಾತ್ರ ಗುರುತಿಸುತ್ತದೆ. ಆಡುಪದಗಳು ಪಾಂಗುಗಳನ್ನು ಗುರುತಿಸುವುದಿಲ್ಲವಾದ ಕಾರಣ, ಅವುಗಳಿಗೆ ಈ ವ್ಯತ್ಯಾಸ ಬೇಕಾಗುವುದಿಲ್ಲ. ಇನ್ನು ಒತ್ತೆ ಮತ್ತು ಒಟ್ಟಲು ಹೆಸರುಗಳು, ಬೇರೆ ಬೇರೆ ಹಂತಗಳಲ್ಲಿ ಬಳಕೆಯಾಗುವ ಹೆಸರುಗಳು, ಪರಿಜಿರುವ ಮತ್ತು ಪರಿಜಿಲ್ಲದ ಹೆಸರುಗಳು, ಎಣಿಸಬಲ್ಲ ಮತ್ತು ಎಣಿಸಲಾಗದ ಹೆಸರುಗಳು ಎಂಬಂತಹ ಹೆಸರುಪದಗಳಲ್ಲಿ ಕಾಣಿಸುವ ಬೇರೆ ಹಲವು ವ್ಯತ್ಯಾಸಗಳು ಆಡುಪದಗಳಲ್ಲಿ ಕಾಣಿಸದಿರಲು ಕಾರಣ ಬೇರೆಯೇ ಇದೆ; ಸೊಲ್ಲುಗಳನ್ನು ಬಳಸಬಲ್ಲ ಮಂದಿ ಮಾತ್ರ ಅವುಗಳ ಆಡುಗ ಇಲ್ಲವೇ ಕೇಳುಗರಾಗಬಲ್ಲರು, ಮತ್ತು ಈ ಮಂದಿ ಒತ್ತೆಯಾಗಿರುವ, ಮೊದಲ ಹಂತದಲ್ಲಿ ಬರುವ, ಪರಿಜಿರುವ ಮತ್ತು ಎಣಿಸಬಲ್ಲ ಪಾಂಗುಗಳಾಗಿರುತ್ತಾರೆ.

9.4.7 ಹೆಸರು ಮತ್ತು ಕೊಗೆತ

ಎಸಕಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಎರಡು ಬಗೆಗಳಲ್ಲಿ ಬಳಸಲಾಗುತ್ತದೆ: (1) ನೇರವಾಗಿ ಅವನ್ನು ಹೆಸರಿಸುವ ಮೂಲಕ ಗುರುತಿಸುವುದು ಒಂದು ಬಗೆ, ಮತ್ತು (2) ಅವುಗಳ ಕೊಗೆತವೊಂದನ್ನು ಕೊಡುವ ಮೂಲಕ ಗುರುತಿಸುವುದು ಇನ್ನೊಂದು ಬಗೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಬೆಕ್ಕು ಮರಕ್ಕೆ ಹತ್ತಿದೆ. (1ಚ) ಮುದುಕಿಯ ಬೆಕ್ಕು ಮರಕ್ಕೆ ಹತ್ತಿದೆ. (1ಕ)ದಲ್ಲಿ ಮರಕ್ಕೆ ಹತ್ತುವಂತಹ ಎಸಕದಲ್ಲಿ ತೊಡಗಿಕೊಂಡಿರುವ ಪಾಂಗನ್ನು ಬೆಕ್ಕು ಎಂಬ ಅದರ ಹೆಸರುಪದದ ಮೂಲಕ ಗುರುತಿಸಲಾಗಿದೆ; ಇದಕ್ಕೆ ಬದಲು, (1ಚ)ದಲ್ಲಿ ಅದನ್ನೇ ಮುದುಕಿಯ ಬೆಕ್ಕು ಎಂಬ ಕೊಗೆತದ ಮೂಲಕ ಗುರುತಿಸಲಾಗಿದೆ. ಬರಿಯ ಬೆಕ್ಕು ಎಂಬ ಹೆಸರನ್ನು ಮಾತ್ರವೇ ಬಳಸಿದಲ್ಲಿ ಕೇಳುಗನಿಗೆ ಅದನ್ನು ಗುರುತಿಸಲು ಸಾದ್ಯವಾಗಲಾರದೆಂಬ ಅನಿಸಿಕೆ ಆಡುಗನಲ್ಲಿದ್ದ ಕಾರಣ, ಅವನು ಅದನ್ನು ಗುರುತಿಸುವುದಕ್ಕಾಗಿ ಈ ರೀತಿ ಒಂದು ಕೊಗೆತವನ್ನು ಬಳಸಿರಬೇಕು. ಆಡುಪದಗಳು ಸೊಲ್ಲಿನ ಪಾಂಗುಗಳಾಗಿ ಬಂದಿರುವ ವ್ಯಕ್ತಿಗಳನ್ನು ನೇರವಾಗಿ ಗುರುತಿಸಲು ಹೋಗುವುದಿಲ್ಲವಾದ ಕಾರಣ, ವ್ಯಕ್ತಿಗಳನ್ನು ಗುರುತಿಸುವಲ್ಲಿ ಕಾಣಿಸಿಕೊಳ್ಳುವ ಹೆಸರಿಸುವುದು ಮತ್ತು ಕೊಗೆತವನ್ನು ಕೊಡುವುದು ಎಂಬ ಈ ಎರಡು ಬಗೆಯ ಬಳಕೆಗಳು ಆಡುಪದಗಳಿಗಿಲ್ಲ; ಹಾಗಾಗಿ, ಹೆಸರುಪದಗಳಿಂದ ಕೊಗೆತಗಳನ್ನು ಕೊಡುವ ಹೆಸರುಕಂತೆಗಳನ್ನು ಉಂಟುಮಾಡುವುದಕ್ಕಾಗಿ ಅವಕ್ಕೆ

ಸೇರಿಸುವ ಪರಿಚೆಪದಗಳು, ಹೆಸರುಪದಗಳ ಪತ್ತುಗೆರೂಪಗಳು, ಎಣಿಕೆಯ ಪದಗಳು, ತೋರುಪದಗಳು ಮೊದಲಾದ ಹಲವು ಬಗೆಯ ಪದಗಳು ಆಡುಪದಗಳೊಂದಿಗೆ ಬಳಕೆಯಾಗುವುದಿಲ್ಲ. ಹೆಸರುಪದಗಳಿಂದ ಕೊಗೆತಗಳನ್ನು ಪಡೆಯುವಲ್ಲಿ ಮುಕ್ಯವಾಗಿ (1) ಪಾಂಗುಗಳ ಪರಿಚೆಯನ್ನು ತಿಳಿಸುವುದು, (2) ಪಾಂಗುಗಳ ಅಳವಿಯನ್ನು ತಿಳಿಸುವುದು, ಮತ್ತು (3) ಪಾಂಗುಗಳನ್ನು ನೆಲೆಗೊಳಿಸುವುದು ಎಂಬ ಮೂರು ಬಗೆಯ ಹೊಲಬುಗಳು ಬಳಕೆಯಾಗುತ್ತವೆಯೆಂಬುದನ್ನು ಆರನೇ ಪಸುಗೆಯಲ್ಲಿ ವಿವರಿಸಲಾಗಿದೆ. ಈ ಮೂರು ಬಗೆಯ ಹೊಲಬುಗಳಲ್ಲಿಯೂ ಆಡುಪದಗಳನ್ನು ಬಳಸಲಾಗುವುದಿಲ್ಲ: (1) ಪಾಂಗುಗಳ ಪರಿಚೆಯನ್ನು ತಿಳಿಸುವುದು ಪಾಂಗುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳೊಂದಿಗೆ (ಕ) ಹಲವು ಬಗೆಯ ಪರಿಚೆಪದಗಳು, (ಚ) ಪರಿಚೆಪದಗಳ ಹೋಲಿಕೆಯ ರೂಪಗಳು, (ಟ) ಹೆಸರುಪದಗಳ ಪತ್ತುಗೆ ರೂಪಗಳು, (ತ) ಎಸಕಪದಗಳ ಪರಿಚೆರೂಪಗಳು, (ಪ) ಎಸಕಪರಿಚೆಗಳ ಪತ್ತುಗೆರೂಪಗಳು, ಮತ್ತು (ಗ) ಕೆಲವು ತೋರುಪದಗಳು ಬಳಕೆಯಾಗುತ್ತವೆ (ವಿವರಗಳಿಗೆ 6.3 ನೋಡಿ). ಆಡುಪದಗಳು ಪಾಂಗುಗಳನ್ನು ಗುರುತಿಸುವುದಿಲ್ಲವಾದ ಕಾರಣ, ಅವು ಪಾಂಗುಗಳ ಪರಿಚೆಯನ್ನೂ ತಿಳಿಸಬೇಕಾಗಿಲ್ಲ; ಆ ಪಾಂಗುಗಳು ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬ ಮೂರು ಪಾಂಗುಗಳಲ್ಲಿ ಎಂತಹದು ಎಂಬುದನ್ನು ಮಾತ್ರ ಅವು ತಿಳಿಸಬೇಕಾಗಿದೆ. ಹಾಗಾಗಿ, ಮೇಲಿನ ನುಡಿತಗಳು ಅವುಗಳೊಂದಿಗೆ ಬಳಕೆಯಾಗುವುದಿಲ್ಲ. (ಕ) ಪರಿಚೆಪದಗಳ ಬಳಕೆ: ಹೆಸರುಪದಗಳೊಂದಿಗೆ ಪರಿಚೆಪದಗಳನ್ನು ಬಳಸಿ ಕೊಗೆತಗಳನ್ನು ಕೊಡಬಲ್ಲ ಹೆಸರುಕಂತೆಗಳನ್ನು ಉಂಟುಮಾಡಲು ಬರುತ್ತದೆ. ದೊಡ್ಡ ಹುಡುಗ, ಕೆಂಪು ಹೂ, ಉದ್ದ ಹಗ್ಗ, ಒದ್ದೆ ಬಟ್ಟೆ, ಒಳ್ಳೆ ಕೆಲಸ ಮೊದಲಾದ ಹೆಸರುಕಂತೆಗಳನ್ನು ಈ ರೀತಿ ಹೆಸರುಪದಗಳಿಗೆ ಪರಿಚೆಪದಗಳನ್ನು ಸೇರಿಸಿ ಉಂಟುಮಾಡಲಾಗಿದೆ. ಆಡುಪದಗಳಿಗೆ ಈ ರೀತಿ ಪರಿಚೆಪದಗಳನ್ನು ಸೇರಿಸಿ ಕೊಗೆತವನ್ನು ಕೊಡಬಲ್ಲ ಪದಕಂತೆಗಳನ್ನು ಉಂಟುಮಾಡಲು ಬರುವುದಿಲ್ಲ: (1ಕ) ರಾಜು ಆ ಜಾಣ ಹುಡುಗನನ್ನು ಊಟಕ್ಕೆ ಕರೆಯಬೇಕೆಂದಿದ್ದಾನೆ. (1ಚ) *ರಾಜು ಜಾಣ ನಿನ್ನನ್ನು ಊಟಕ್ಕೆ ಕರೆಯಬೇಕೆಂದಿದ್ದಾನೆ. (2ಕ) ಅವನು ಚಿಕ್ಕ ಹುಡುಗನ ಚೀಲವನ್ನು ಮೇಜಿನ ಮೇಲಿರಿಸಿದ್ದಾನೆ. (2ಚ) *ಅವನು ಚಿಕ್ಕ ತನ್ನ ಚೀಲವನ್ನು ಮೇಜಿನ ಮೇಲಿರಿಸಿದ್ದಾನೆ.

(1ಕ)ದಲ್ಲಿ ಜಾಣ ಹುಡುಗನನ್ನು ಎಂಬುದರ ಬಳಕೆ ಸರಿಯಿರುವ ಹಾಗೆ, (1ಚ)ದಲ್ಲಿ ಜಾಣ ನಿನ್ನನ್ನು ಎಂಬುದರ ಬಳಕೆ ಸರಿಯಿಲ್ಲ ಎಂಬುದನ್ನು ಗಮನಿಸಬಹುದು; (2ಕ-ಚ)ದಲ್ಲೂ ಹೀಗೆಯೇ; ಚಿಕ್ಕ ಹುಡುಗನ ಎಂಬುದು ಸರಿಯಿದೆ; ಆದರೆ, ಚಿಕ್ಕ ತನ್ನ ಎಂಬುದು ಸರಿಯಿಲ್ಲ. (2) ಪರಿಚೆಪದಗಳ ಹೋಲಿಕೆಯ ರೂಪದ ಬಳಕೆ: ಹೆಸರುಪದಗಳೊಂದಿಗೆ ಅದರ ಪರಿಚೆಗೂ ಬೇರೊಂದು ಪಾಂಗಿನ ಪರಿಚೆಗೂ ನಡುವಿರುವ ಹೋಲಿಕೆಯನ್ನು ತಿಳಿಸುವ ನುಡಿತಗಳನ್ನು ಬಳಸಲು ಬರುತ್ತದೆ (6.3.4 ನೋಡಿ); ಆದರೆ, ಇಂತಹ ನುಡಿತಗಳನ್ನು ನೇರವಾಗಿ ಆಡುಪಪದಗಳೊಂದಿಗೆ ಬಳಸಲು ಬರುವುದಿಲ್ಲ: (1ಕ) ಅವನಶ್ಟು ದೊಡ್ಡ ಹುಡುಗ ನಮ್ಮ ತರಗತಿಯಲ್ಲಿಲ್ಲ. (1ಕ) *ಅವನಶ್ಟು ದೊಡ್ಡ ನೀನು ಈ ಕೆಲಸ ಮಾಡಬಾರದಿತ್ತು. (2ಕ) ಅವನಿಗಿಂತ ದಡ್ಡ ಹುಡುಗ ಎಲ್ಲೂ ಇರಲಿಕ್ಕಿಲ್ಲ. (2ಚ) *ಅವನಿಗಿಂತ ದಡ್ಡ ನೀನು ಪಾಸಾಗುವುದು ಹೇಗೆ? (3ಕ) ಅವನಂತಹ ಹುಡುಗನನ್ನು ನಾನೆಲ್ಲೂ ನೋಡಿಲ್ಲ. (3ಚ) *ಅವನಂತಹ ನಿನ್ನನ್ನು ನಾನು ಮಾತನಾಡಿಸುವುದಿಲ್ಲ. ಹೋಲಿಕೆಯ ನುಡಿತಗಳು ಆಡುಪದಗಳೊಂದಿಗೆ ಸೇರಿ ಒಂದೇ ಪದಕಂತೆಯಗಿ ಬಳಕೆಯಾಗದಿದ್ದರೂ, ಅವು ತಿಳಿಸುವ ಪಾಂಗುಗಳ ಪರಿಚೆಯನ್ನು ಬೇರೆ ರೀತಿಯಲ್ಲಿ ತಿಳಿಸಬಲ್ಲುವು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನೀನು ಅವನಿಗಿಂತ ದಡ್ಡ. (1ಚ) ನಾನು ಅವನಂತಹ ಹುಡುಗ. (3) ಹೆಸರುಪದಗಳ ಪತ್ತುಗೆರೂಪದ ಬಳಕೆ: ಹೆಸರುಪದಗಳಿಂದ ಕೊಗೆತವನ್ನು ಕೊಡುವ ಹೆಸರುಕಂತೆಗಳನ್ನು ಉಂಟುಮಾಡಲು ಅವಕ್ಕೆ ಹೆಸರುಪದಗಳ ಪತ್ತುಗೆ ರೂಪವನ್ನೂ ಸೇರಿಸಲು ಬರುತ್ತದೆ; ಆದರೆ, ಆಡುಪದಗಳಿಗೆ ಅವನ್ನೂ ಸೇರಿಸಲು ಬರುವುದಿಲ್ಲ: (1ಕ) ಅಣ್ಣನ ಮಗ ಶಾಲೆಗೆ ಹೋಗಲಿ. (1ಚ) *ಅಣ್ಣನ ನೀನು ಶಾಲೆಗೆ ಹೋಗು.

(2ಕ) ಈ ಶಾಲೆಯ ಹುಡುಗರು ಓದಿನಲ್ಲಿ ಮುಂದಿದ್ದಾರೆ. (2ಚ) *ಈ ಶಾಲೆಯ ನಾವು ಓದಿನಲ್ಲಿ ಮುಂದಿದ್ದೇವೆ. (1ಕ)ದಲ್ಲಿ ಮಗ ಪದದೊಂದಿಗೆ ಅಣ್ಣನ ಎಂಬ ಅಣ್ಣ ಪದದ ಪತ್ತುಗೆರೂಪವನ್ನು ಸೇರಿಸಿ ಕೊಗೆತವನ್ನು ಕೊಡುವ ಹೆಸರುಕಂತೆಯನ್ನು ಉಂಟುಮಾಡಲಾಗಿದೆ; (1ಚ)ದಲ್ಲಿ ಅಂತಹದೇ ಒಂದು ಪದಕಂತೆಯನ್ನು ನೀನು ಎಂಬ ಆಡುಪದದಿಂದ ಪಡೆಯಲು ಪ್ರಯತ್ನಿಸಲಾಗಿದೆಯಾದ ಕಾರಣ, ಆ ಸೊಲ್ಲು ಸರಿಯಿಲ್ಲ. (4) ಎಸಕಪದಗಳ ಪರಿಚೆರೂಪದ ಬಳಕೆ: ಎಸಕಪದಗಳ ಪರಿಚೆರೂಪವನ್ನು ಸೇರಿಸಿಯೂ ಹೆಸರುಪದಗಳಿಂದ ಕೊಗೆತವನ್ನು ಕೊಡುವ ಹೆಸರುಕಂತೆಗಳನ್ನು ಉಂಟುಮಾಡಲು ಬರುತ್ತದೆ; ಇಂತಹ ಪರಿಚೆರೂಪಗಳನ್ನು ಆಡುಪದಗಳೊಂದಿಗೂ ಸೇರಿಸಿ ಹೇಳಲು ಬರುತ್ತದೆ; ಆದರೆ, ಅವು ಒಂದು ಕೊಗೆತವನ್ನು ಕೊಡುವ ಬದಲು ಕೆಲವು ಹೆಚ್ಚಿನ ವಿಶಯಗಳನ್ನು ತಿಳಿಸುವಲ್ಲಿ ಬಳಕೆಯಾಗುತ್ತವೆ: (1ಕ) ತಡವಾಗಿ ಹೋಗಿದ್ದ ಹುಡುಗರನ್ನು ಒಳಗೆಬಿಡಲಿಲ್ಲ. (1ಚ) ತಡವಾಗಿ ಹೋಗಿದ್ದ ನಮ್ಮನ್ನು ಅವರ ಒಳಗೆ ಬಿಡಲಿಲ್ಲ. (2ಕ) ಊರಿಗೆ ಹೋಗುವ ಹುಡುಗನಿಗೆ ಒಂದು ಪುಸ್ತಕ ಕೊಡುತ್ತೇನೆ. (2ಚ) ಊರಿಗೆ ಹೋಗುವ ನಿಮಗೆ ಒಂದು ಪುಸ್ತಕ ಕೊಡುತ್ತೇನೆ. (1ಕ)ದಲ್ಲಿ ಬಂದಿರುವ ತಡವಾಗಿ ಹೋಗಿದ್ದ ಎಂಬ ಪರಿಚೆರೂಪ ಒಳಗೆ ಬಿಡದಿದ್ದ ಹುಡುಗರು ಯಾರು ಎಂಬುದನ್ನು ತಿಳಿಸುವಲ್ಲಿ, ಎಂದರೆ ಅಂತಹ ಹುಡುಗರನ್ನು ಗುರುತಿಸುವಲ್ಲಿ, ನೆರವಾಗಬಲ್ಲುದು. ಆದರೆ, (1ಚ)ದಲ್ಲಿ ಬಂದಿರುವ ಅದೇ ಪರಿಚೆರೂಪಕ್ಕೆ ಅಂತಹ ಹುರುಳಿಲ್ಲ; ಆ ರೀತಿ ಕೆಲವು ವ್ಯಕ್ತಿಗಳನ್ನು ಗುರುತಿಸುವಲ್ಲಿ ನೆರವಾಗುವ ಬದಲು, ಅದು ಒಳಗೆ ಬಿಡದಿರಲು ಕಾರಣವನ್ನು ಮಾತ್ರ ಕೊಡುತ್ತದೆ. (2ಕ) ಮತ್ತು (2ಚ)ಗಳ ನಡುವೆಯೂ ಎಸಕಪದದ ಪರಿಚೆರೂಪದ ಬಳಕೆಯಲ್ಲಿ ಇಂತಹದೇ ವ್ಯತ್ಯಾಸವಿರುವುದನ್ನು ಕಾಣಬಹುದು. (5) ಎಸಕಪರಿಚೆಗಳ ಪತ್ತುಗೆರೂಪದ ಬಳಕೆ: ಹೆಸರುಪದಗಳೊಂದಿಗೆ ಕೆಲವು ಎಸಕಪರಿಚೆಗಳನ್ನು ಅವುಗಳ ಪತ್ತುಗೆರೂಪದಲ್ಲಿ ಬಳಸಲು ಬರುತ್ತದೆ (6.3.7 ನೋಡಿ); ಆದರೆ, ಇಂತಹ ಪದರೂಪಗಳನ್ನು ಆಡುಪದಗಳೊಂದಿಗೆ ಬಳಸಲು ಬರುವುದಿಲ್ಲ:

(1ಕ) ಒಳಗಿನ ಹುಡುಗ ಊಟಮಾಡಲಿಲ್ಲ. (1ಚ) *ಒಳಗಿನ ನಾನು ಊಟಮಾಡಲಿಲ್ಲ. (6) ತೋರುಪದಗಳ ಬಳಕೆ: ಆ ಮತ್ತು ಈ ಎಂಬ ಎರಡು ತೋರುಪದಗಳು ಪಾಂಗುಗಳ ಜಾಗವನ್ನು ತಿಳಿಸುವ ಮೂಲಕ ಅವನ್ನು ಗುರುತಿಸುವಲ್ಲಿ ನೆರವಾಗುತ್ತವೆ, ಮತ್ತು ಯಾವ ಎಂಬ ಇನ್ನೊಂದು ತೋರುಪದ ಅವುಗಳ ನೆಲೆ ಎಂತಹದು ಎಂಬುದನ್ನು ಕೇಳುವಲ್ಲಿ ನೆರವಾಗುತ್ತದೆ. ಈ ಮೂರು ಪದಗಳೂ ಪಾಂಗುಗಳ ಗುರುತಿಸುವಿಕೆಗೆ ಸಂಬಂದಿಸಿವೆಯಾದ ಕಾರಣ, ಅವನ್ನು ಆಡುಪದಗಳೊಂದಿಗೆ ಬಳಸಲು ಬರುವುದಿಲ್ಲ: (1ಕ) ಈ ಹುಡುಗ ಯಾರಿಗೂ ಹೆದರುವುದಿಲ್ಲ. (1ಚ) *ಈ ನಾನು ಯಾರಿಗೂ ಹೆದರುವುದಿಲ್ಲ. (2ಕ) ಯಾವ ಹುಡುಗನನ್ನು ನೀವು ನೋಡಿದ್ದು? (2ಚ) *ಯಾವ ನಿನ್ನನ್ನು ನಾವು ಇವತ್ತು ಬರಹೇಳಿದ್ದು? (2ಟ) ಯಾವ ಕೇಳುಗನನ್ನು ನಾವು ಇವತ್ತು ಬರಹೇಳಿದ್ದು? (2ಟ)ದಲ್ಲಿ ಬಂದಿರುವ ಕೇಳುಗ ಎಂಬ ಪದ ಒಂದು ಹೆಸರುಪದವಾಗಿದ್ದು, ಅದರ ಮೂಲಕ ಒಂದು ಸೊಲ್ಲಿನ ಕೇಳುಗನನ್ನು ಗುರುತಿಸಲು ಬರುತ್ತದೆ; ಹಾಗಾಗಿ, ಅದರೊಂದಿಗೆ ಯಾವ ಎಂಬ ಪದವನ್ನೂ ಬಳಸಲು ಬರುತ್ತದೆ. ಆದರೆ, (2ಚ)ದಲ್ಲಿ ಬಂದಿರುವ ನೀನು ಎಂಬ ಆಡುಪದವಾಗಿದ್ದು, ಅದು ಆ ಸೊಲ್ಲಿನ ಕೇಳುಗನನ್ನು ಗುರುತಿಸುವ ಬದಲು, ಅದರ ಈಡು ಪಾಂಗು ಆ ಸೊಲ್ಲಿನ ಕೇಳುಗ ಎಂದಿಶ್ಟೇ ತಿಳಿಸುತ್ತದೆ. ಹಾಗಾಗಿ, ಅದರೊಂದಿಗೆ ಕೇಳುಗನಾಗಿ ಬಂದಿರುವ ವ್ಯಕ್ತಿಯ ಗುರುತನ್ನು ತಿಳಿಯಬಯಸುವ ಯಾವ ಎಂಬ ಪದವನ್ನು ಬಳಸಲು ಬರುವುದಿಲ್ಲ. ತಿಳಿಯದ ತೋರುಪದಗಳನ್ನು ಹೆಸರುಪದಗಳೊಂದಿಗೆ ಬಳಸಿ, ಅವು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಕುರಿತಾಗಿ ಆಡುಗನಲ್ಲಿ ಸರಿಯಾದ ತಿಳಿವಿಲ್ಲ ಎಂಬುದನ್ನು ತಿಳಿಸಲಾಗುತ್ತದೆ (10.5 ನೋಡಿ): (1ಕ) ಯಾವನೋ ಒಬ್ಬ ಹುಡುಗ ನಿಮ್ಮನ್ನು ಕಾಣಲು ಬಂದಿದ್ದ. (1ಚ) ಯಾವನಾದರೂ ಒಬ್ಬ ಹುಡುಗ ಇವತ್ತು ನಿಮ್ಮಲ್ಲಿಗೆ ಬರಬಹುದು. (1ಟ) ಯಾವ ಹುಡುಗ ಈ ಕಟ್ಟನ್ನು ಇಲ್ಲಿ ತಂದಿರಿಸಿದ್ದು?

ಆದರೆ, ಆಡುಪದಗಳೊಂದಿಗೆ ಈ ರೀತಿ ತಿಳಿಯದ ತೋರುಪದಗಳನ್ನು ಬಳಸಲು ಬರುವುದಿಲ್ಲ; ಅವು ಪಾಂಗುಗಳನ್ನು ಗುರುತಿಸುವುದಿಲ್ಲವಾದ ಕಾರಣ, ಅವುಗಳೊಂದಿಗೆ ಪಾಂಗುಗಳ ಕುರಿತಾಗಿರುವ ಅರಿಯಮೆಯನ್ನು ತಿಳಿಸುವ ಈ ಪದಗಳು ಬರಲಾರವು: (1ಕ) *ಯಾವನೋ ನೀನು ನನ್ನನ್ನು ಕಾಣಲು ಬಂದಿದ್ದೆ. (1ಚ) *ಯಾವರಾದರೂ ನೀವು ನಮ್ಮ ಮನೆಗೆ ಬರಬಹುದು. (1ಟ) *ಯಾವ ನೀವು ಈ ಕಟ್ಟನ್ನು ಇಲ್ಲಿ ತಂದಿರಿಸಿದ್ದು? ಆಯ್ಕೆಯನ್ನು ಕೇಳುಗರಿಗೆ ಬಿಡಬೇಕಾದಂತಹ ಕಡೆಗಳಲ್ಲಿ, ಇಲ್ಲವೇ ಆಯ್ಕೆಯನ್ನು ಮಾಡದಿರುವಲ್ಲಿ ಇಂತಹ ತಿಳಿಯದ ತೋರುಪದಗಳನ್ನು ಆಡುಪದಗಳ ಬಳಿಕ ಬೇರೆಯೇ ಒಂದು ಪದಕಂತೆಯಾಗಿ ಬಳಸಲಾಗುತ್ತದಲ್ಲದೆ ಅವನ್ನು ಬಳಸಿರುವ ಪದಕಂತೆಯ ಒಂದು ಅಂಗವಾಗಿ ಬಳಸುವುದಿಲ್ಲ: (1ಕ) ನೀವು ಯಾರಾದರೂ ಆ ಕಟ್ಟನ್ನು ಇಲ್ಲಿಗೆ ತನ್ನಿ. (1ಚ) ನಾವು ಯಾರಾದರೂ ಆ ಕಟ್ಟನ್ನು ಇಲ್ಲಿಗೆ ತರಬೇಕು. (1ಟ) ನಿಮ್ಮಲ್ಲಿ ಯಾರು ಈ ಕಟ್ಟನ್ನು ಇಲ್ಲಿ ತಂದಿರಿಸಿದ್ದು? (2) ಪಾಂಗುಗಳ ಅಳವಿಯನ್ನು ತಿಳಿಸುವುದು ಪಾಂಗುಗಳ ಅಳವಿಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳೊಂದಿಗೆ ಎಣಿಕೆ ಪದಗಳನ್ನು ಬಳಸಲಾಗುತ್ತದೆ, ಮತ್ತು ಇದನ್ನೇ ಅಡಕವಾಗಿ ತಿಳಿಸಲು ಹಲವೆಣಿಕೆಯ ಒಟ್ಟನ್ನೂ ಬಳಸಲಾಗುತ್ತದೆ. ಇದಲ್ಲದೆ, ಹಲವು, ಕೆಲವು, ತುಂಬಾ ಎಂಬಂತಹ ಕೆಲವು ಅಳವಿಯ ಪದಗಳನ್ನೂ ಈ ಕೆಲಸಕ್ಕಾಗಿ ಬಳಸಲಾಗುತ್ತದೆ. ಆಡುಪದಗಳೊಂದಿಗೆ ಹಲವೆಣಿಕೆಯ ಒಟ್ಟು ಬರಬಲ್ಲುದಾದರೂ, ಅದಕ್ಕೆ ಹೆಸರುಪದಗಳೊಂದಿಗೆ ಬರುವ ಒಟ್ಟಿನ ಹಾಗೆ ಪಾಂಗುಗಳ ಅಳವಿಯನ್ನು ತಿಳಿಸುವ ಹುರುಳಿಗಿಂತಲೂ ಮುಕ್ಯವಾಗಿ ಸೊಲ್ಲಿನ ಉಂಟುಮಾಡುವಿಕೆಯಲ್ಲಿ ತೊಡಗಿರುವ ಆಡುಗ, ಕೇಳುಗ ಮತ್ತು ಬೇರೊಬ್ಬರೆಂಬ ಪಾಂಗುಗಳ ಕೂಡಿಕೆಯನ್ನು ತಿಳಿಸುವ ಹುರುಳಿದೆಯೆಂಬುದನ್ನು ಮೇಲೆ 9.4.4ರಲ್ಲಿ ನೋಡಿರುವೆವು. ಹೆಸರುಪದಗಳೊಂದಿಗೆ ಬರುವ ಉಳಿದ ಅಳವಿಯ ನುಡಿತಗಳು ಅವು ಗುರುತಿಸುವ ವ್ಯಕ್ತಿ, ವಸ್ತು, ವಿಶಯ ಮೊದಲಾದವುಗಳ ಅಳವಿಯನ್ನು ತಿಳಿಸಲು ಬಳಕೆಯಾಗುತ್ತಿರುವ ಕಾರಣ, ಅವನ್ನು ಆಡುಪದಗಳೊಂದಿಗೆ ಬಳಸಲು ಬರುವುದಿಲ್ಲ.

(ಕ) ಎಣಿಕೆ ಪದಗಳ ಬಳಕೆ: ಹೆಸರುಪದಗಳ ಮೊದಲಿಗೆ ಎಣಿಕೆ ಪದಗಳನ್ನು ಸೇರಿಸಿ ಕೊಗೆತವನ್ನು ಕೊಡಬಲ್ಲ ಪದಕಂತೆಗಳನ್ನು ಉಂಟುಮಾಡಲು ಬರುತ್ತದೆ. ಆದರೆ, ಆಡುಪದಗಳ ಮೊದಲಿಗೆ ಎಣಿಕೆ ಪದಗಳನ್ನು ಬಳಸಲು ಬರುವುದಿಲ್ಲ: (1ಕ) ಇಬ್ಬರು ಹುಡುಗರು ಒಳಗಿದ್ದಾರೆ. (1ಚ) *ಇಬ್ಬರು ನಾವು ಒಳಗೆ ಹೋಗುತ್ತೇವೆ. (2ಕ) ಅವನು ಇಬ್ಬರು ಹುಡುಗರನ್ನು ಬರಹೇಳಿದ್ದಾನೆ. (2ಚ) *ಅವನು ಇಬ್ಬರು ನಿಮ್ಮನ್ನು ಬರಹೇಳಿದ್ದಾನೆ. (1ಕ)ದಲ್ಲಿ ಇಬ್ಬರು ಹುಡುಗರು ಎಂಬುದು ಒಳಗೆ ಹೋಗಿರುವ ಹುಡುಗರ ಕೊಗೆತವನ್ನು ಅವರ ಎಣಿಕೆಯನ್ನು ತಿಳಿಸುವ ಮೂಲಕ ಕೊಡುತ್ತದೆ. (1ಚ)ದಲ್ಲಿ ಬಂದಿರುವ ಇಬ್ಬರು ನೀವು ಎಂಬುದು ಇಂತಹದೇ ಒಂದು ಕೊಗೆತವನ್ನು ಕೊಡಲು ಬಳಕೆಯಾಗಿದೆಯಾದ ಕಾರಣ, ಆ ಸೊಲ್ಲು ಸರಿಯಾಗಿಲ್ಲ. (2ಕ- ಚ)ಗಳಲ್ಲೂ ಹೀಗೆಯೇ. (ಚ) ಅಳವಿ ಪದಗಳ ಬಳಕೆ: ಅಳವಿಯನ್ನು ತಿಳಿಸುವ ಹಲವು, ಕೆಲವು, ಎಲ್ಲಾ ಮೊದಲಾದ ಪದಗಳೂ ಹೆಸರುಪದಗಳೊಂದಿಗೆ ಬರಬಲ್ಲುವು; ಆದರೆ, ಆಡುಪದಗಳೊಂದಿಗೆ ಬರಲಾರವು: (1ಕ) ಕೆಲವು ಹುಡುಗರು ಮರಕ್ಕೆ ಹತ್ತಿದ್ದಾರೆ. (1ಚ) *ಕೆಲವು ನೀವು ಮರಕ್ಕೆ ಹತ್ತಿದ್ದೀರಿ. (2ಕ) ಎಲ್ಲಾ ಹುಡುಗರೂ ಅಳುತ್ತಿದ್ದರು. (2ಚ) *ಎಲ್ಲಾ ನಾವೂ ಅಳುತ್ತಿದ್ದೆವು. ನೀವು ಎಂಬ ಆಡುಪದದೊಂದಿಗೆ ಕೆಲವು ಎಂಬ ಅಳವಿಪದವನ್ನು ಬಳಸಿದುದರಿಂದಾಗಿ, (1ಚ) ಸೊಲ್ಲು ಸರಿಯಾಗಿಲ್ಲ, ಮತ್ತು ನಾವು ಎಂಬ ಆಡುಪದದೊಂದಿಗೆ ಎಲ್ಲಾ ಎಂಬ ಅಳವಿ ಪದವನ್ನು ಬಳಸಿದುದರಿಂದಾಗಿ (2ಚ) ಸೊಲ್ಲೂ ಸರಿಯಾಗಿಲ್ಲ (9.4.8 ನೋಡಿ). (3) ಪಾಂಗುಗಳನ್ನು ನೆಲೆಗೊಳಿಸುವುದು ಪಾಂಗುಗಳನ್ನು ನೆಲೆಗೊಳಿಸುವುದಕ್ಕಾಗಿ ಅವನ್ನು ಗುರುತಿಸುವ ಹೆಸರುಪದಗಳೊಂದಿಗೆ ಪರಿಚೆರೂಪದಲ್ಲಿರುವ ತೋರುಪದಗಳನ್ನು

ಬಳಸಲಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಗಿಡಕ್ಕೆ ನೀರು ಹಾಕಿದ್ದು ಯಾರು? (1ಚ) ಇಶ್ಟು ಹಣವನ್ನು ನೀವು ಎಲ್ಲಿಂದ ತಂದಿರಿ? (1ಕ)ದಲ್ಲಿ ಗಿಡ ಎಂಬ ಹೆಸರುಪದ ಗುರುತಿಸುವ ಪಾಂಗನ್ನು ನೆಲೆಗೊಳಿಸುವುದಕ್ಕಾಗಿ ಅದರ ಮುಂದೆ ಈ ಎಂಬ ತೋರುಪದವನ್ನು ಬಳಸಲಾಗಿದೆ; ಅದು ಆಡುಗನ ಹತ್ತಿರ ಇರುವ ಗಿಡವೊಂದನ್ನು ಗುರುತಿಸುತ್ತದೆ. ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ಹಣ ಎಂಬುದರೊಂದಿಗೆ ಇಶ್ಟು ಎಂಬ ತೋರುಪದವನ್ನು ಬಳಸಲಾಗಿದ್ದು, ಅದು ಆಡುಗನ ಹತ್ತಿರವಿರುವ ಹಣದ ಅಳವಿಯನ್ನು ಗುರುತಿಸುತ್ತದೆ. ಆಡುಪದಗಳು ಪಾಂಗುಗಳನ್ನು ಗುರುತಿಸುವುದಿಲ್ಲವಾದ ಕಾರಣ, ಅವುಗಳೊಂದಿಗೆ ಇಂತಹ ನೆಲೆಗೊಳಿಸುವ ತೋರುಪದಗಳು ಬರಲಾರವು: (1ಕ) *ಈ ನನಗೆ ಹೊಡೆದದ್ದು ಯಾರು? (1ಚ) *ಇಶ್ಟು ನಿಮ್ಮನ್ನು ಕರೆದದ್ದು ಯಾರು?

9.4.8 ಆಡುಗ ಮತ್ತು ಕೇಳುಗರ ಕುರಿತು ಹೆಚ್ಚಿನ ತಿಳಿವು

ಆಡುಪದಗಳು ಎಸಕದ ಪಾಂಗುಗಳನ್ನು ನೇರವಾಗಿ ಗುರುತಿಸಲು ಹೋಗುವುದಿಲ್ಲವೆಂಬುದನ್ನು ಮೇಲೆಯೇ ನೋಡಿರುವೆವು; ಸಾಮಾನ್ಯವಾಗಿ, ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ಆ ರೀತಿ ಗುರುತಿಸಬೇಕಾಗುವುದಿಲ್ಲ; ಯಾಕೆಂದರೆ, ಅವರಿಬ್ಬರೂ ಎದುರೆದುರೇ ಇರುತ್ತಾರೆ. ಹಾಗಿದ್ದರೂ, ಕೆಲವು ಕಡೆಗಳಲ್ಲಿ ಅವರ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಬೇಕಾಗಿ ಬರುತ್ತದೆ, ಮತ್ತು ಅಂತಹ ಕಡೆಗಳಲ್ಲಿ ಕೆಲವು ಬೇರೆಯೇ ನೇರವಲ್ಲದ ಹೊಲಬನ್ನು ಬಳಸಬೇಕಾಗುತ್ತದೆ. ಇಂತಹ ಕೆಲವು ಹೊಲಬುಗಳನ್ನು ಕೆಳಗೆ ವಿವರಿಸಲಾಗಿದೆ: (1) ಆಡುಪದಗಳ ಬಳಿಕ ಪದಕಂತೆಯ ಬಳಕೆ: ಆಡುಪದಗಳ ಬಳಿಕ ಒಂದು ಪದ ಇಲ್ಲವೇ ಪದಕಂತೆಯನ್ನು ಬಳಸುವುದು ಇಂತಹ ಒಂದು ಹೊಲಬು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನಾವು ದೊಡ್ಡವರು ನಡೆದು ಹೋಗುತ್ತೇವೆ. (1ಚ) ನೀವು ಮಕ್ಕಳು ಗಾಡಿಯಲ್ಲಿ ಬನ್ನಿ.

(1ಟ) ಅವರು ತಮಗೆ ಗಂಡುಸರಿಗೆ ಬೇರೆಯೇ ಏರ್ಪಾಡನ್ನು ಮಾಡಿ ಕೊಂಡಿದ್ದಾರೆ. (1ತ) ನಿಮಗೆ ಹೆಂಗಸರಿಗೆ ಒಳಗೆ ಎಲೆ ಹಾಕಿದ್ದಾರೆ. (ಕ) ಆಡುಪದಗಳ ಬಳಿಕ ಬರುವ ಈ ಪದಗಳು ಬೇರೆಯೇ ಪದಕಂತೆಗಳಾಗಿ ಬರುತ್ತವೆಯಲ್ಲದೆ, ಆಡುಪದದೊಂದಿಗೆ ಸೇರಿ ಒಂದೇ ಪದಕಂತೆಯಾಗಿ ಬರುವುದಿಲ್ಲ; ಸೊಲ್ಲುಗಳಲ್ಲಿ ಇವು ಯಾವ ಪಾಂಗುಗಳಾಗಿ ಬರುತ್ತವೆಯೆಂಬುದನ್ನು ತಿಳಿಸುವ ಪತ್ತುಗೆ ಒಟ್ಟುಗಳನ್ನು ಈ ಪದಗಳೊಂದಿಗೆ ಮಾತ್ರವಲ್ಲದೆ ಆಡುಪದಗಳೊಂದಿಗೂ ಬಳಸಬೇಕಾಗುತ್ತದೆಯೆಂಬುದು ಈ ವಿಶಯವನ್ನು ಬೆಂಬಲಿಸುತ್ತದೆ: (1ಕ) ನನಗೊಬ್ಬನಿಗೆ ಈ ಕೋಣೆ ಸಾಕು. (1ಚ) *ನಾನೊಬ್ಬನಿಗೆ ಈ ಕೋಣೆ ಸಾಕು. (2ಕ) ನಿಮ್ಮನ್ನು ಹೆಂಗಸರನ್ನು ಅವರು ಇವತ್ತೇ ಬರಹೇಳಿದ್ದಾರೆ. (2ಚ) *ನೀವು ಹೆಂಗಸರನ್ನು ಅವರು ಇವತ್ತೇ ಬರಹೇಳಿದ್ದಾರೆ. ಆಡುಪದಗಳೊಂದಿಗೆ ಪತ್ತುಗೆ ಒಟ್ಟನ್ನು ಬಳಸದಿರುವ, ಎಂದರೆ ಆಡುಪದವನ್ನೂ ಅದರ ಬಳಿಕ ಬಂದಿರುವ ಪದವನ್ನೂ ಒಂದೇ ಪದಕಂತೆಯಾಗಿ ಕಾಣುವ, (ಚ) ಸೊಲ್ಲುಗಳು ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು. ಇದಲ್ಲದೆ, ಆಡುಪದಗಳ ಬಳಿಕ ಬರುವ ಪದಗಳು ಇಲ್ಲವೇ ಪದಕಂತೆಗಳು ಅವುಗಳ ಎಣಿಕೆ ಮತ್ತು ಗುರ್ತರೂಪದಲ್ಲೇ ಬರುತ್ತವೆ; ಈ ವಿಶಯವೂ ಅವು ಆಡುಪದಗಳಿಂದ ಬೇರಾಗಿರುವ ಪದಕಂತೆಗಳಾಗಿರುತ್ತವೆ ಎಂಬುದನ್ನು ಬೆಂಬಲಿಸುತ್ತದೆ: (1ಕ) ನಾನೊಬ್ಬ ಇಲ್ಲೇ ಉಳಿಯುತ್ತೇನೆ. (1ಚ) ನಾನೊಬ್ಬಳು ಇಲ್ಲೇ ಉಳಿಯುತ್ತೇನೆ. (1ಟ) ನಾವಿಬ್ಬರು ಇಲ್ಲೇ ಉಳಿಯುತ್ತೇವೆ. (2ಕ) ನೀನು ದೊಡ್ಡವನು ಮನೆಯಲ್ಲೇ ಇರು. (2ಚ) ನೀನು ದೊಡ್ಡವಳು ಮನೆಯಲ್ಲೇ ಇರು. (2ಟ) ನೀವು ದೊಡ್ಡವರು ಮನೆಯಲ್ಲೇ ಇರಿ. ಮೇಲಿನ ಸೊಲ್ಲುಗಳಲ್ಲಿ ಆಡುಪದಗಳು ಎಣಿಕೆಯ ವ್ಯತ್ಯಾಸವನ್ನು ಮಾತ್ರವೇ ತೋರಿಸುತ್ತವೆ; ಇದಕ್ಕೆ ಬದಲು, ಅವುಗಳ ಬಳಿಕ ಬೇರೆಯೇ ಒಂದು ಪದಕಂತೆಯಾಗಿ ಬರುವ ಪದಗಳು ಗುರ್ತದ ವ್ಯತ್ಯಾಸವನ್ನೂ ತೋರಿಸುತ್ತವೆ.

(ಚ) ಇಂತಹ ಇಟ್ಟಳವನ್ನು ಬಳಸಬೇಕಾಗುವ ಕೆಲವು ಸಂದರ್ಬಗಳನ್ನು ಗಮನಿಸಿದಾಗಲೂ ಅವು ಆಡುಪದಗಳು ತಿಳಿಸುವ ವ್ಯಕ್ತಿಯ ಕುರಿತಾಗಿ ಅವು ತಿಳಿಸಲಾಗದಂತಹ ಹೆಚ್ಚಿನ ಮಾಹಿತಿಯನ್ನು ಕೊಡುವುದಕ್ಕಾಗಿ ಬಳಕೆಯಾಗುತ್ತವೆ ಎಂಬುದು ಗೊತ್ತಾಗುತ್ತದೆ. ಎತ್ತುಗೆಗಾಗಿ, ಒಂದು ಮನೆಗೆ ಹೋಗಿ ಬಾಗಿಲು ತಟ್ಟಿದಾಗ, ಯಾರು? ಎಂಬುದಾಗಿ ಒಳಗಿದ್ದವರು ಕೇಳಬಹುದು; ಅಂತಹ ಸಂದರ್ಬದಲ್ಲಿ ನಾನು ಎಂದಿಶ್ಟೇ ಹೇಳಿದರೆ, ಕೆಲವೊಮ್ಮೆ ಒಳಗಿದ್ದವರಿಗೆ ಆಡುಗನು ಯಾರೆಂದು ಗೊತ್ತಾಗದಿರಬಹುದು; ಹಾಗಿದ್ದಲ್ಲಿ, ಅವನು ತನ್ನ ಕುರಿತಾಗಿ ಹೆಚ್ಚಿನ ಸಂಗತಿಯನ್ನು ತಿಳಿಸಲು ಮೇಲಿನ ಇಟ್ಟಳವನ್ನು ಬಳಸಿ, ನಾನು ರಾಜು, ನಾನು ಹಾಲಿನವನು ಎಂಬಂತಹ ಸೊಲ್ಲನ್ನು ಹೇಳಬಹುದು. (ಟ) ಸೂರುಳಿಡುವುದನ್ನು ಬರಹದ ಮೂಲಕ ನಡೆಸಬೇಕಾಗಿರುವಲ್ಲಿಯೂ ಇಂತಹದೇ ಇಟ್ಟಳವನ್ನು ಬಳಸಲಾಗುತ್ತದೆ: (1) ನಾನು, ರಾಜು ಪೂಜಾರಿ, ಸುಬ್ಬ ಪೂಜಾರಿಯ ಮಗ, ಮೇಲೆ ಕೊಟ್ಟಿರುವ ಸಂಗತಿಗಳೆಲ್ಲ ಸರಿಯೆಂದು ಈ ಮೂಲಕ ತಿಳಿಯಪಡಿಸುತ್ತೇನೆ. (1)ನೇ ಸೊಲ್ಲಿನಲ್ಲಿ ತಿಳಿಯಪಡಿಸುವ ಎಸಕವನ್ನು ನಡೆಸಿರುವುದು (ಅದರ ಮಾಡುಗ) ಸೊಲ್ಲಿನ ಆಡುಗ (ಸೊಲ್ಲನ್ನು ಬರೆದಿರುವವನು) ಎಂಬುದನ್ನಶ್ಟೇ ನಾನು ಪದ ತಿಳಿಸುತ್ತದೆ; ನಿಜಕ್ಕೂ ಆತ ಯಾರು ಎಂಬುದನ್ನು ಸೊಲ್ಲಿನಲ್ಲಿ ಬೇರೆಯೇ ಹೆಸರುಕಂತೆಗಳಾಗಿ ಬಂದಿರುವ ರಾಜು ಪೂಜಾರಿ ಮತ್ತು ಸುಬ್ಬ ಪೂಜಾರಿಯ ಮಗ ಎಂಬ ನುಡಿತಗಳು ತಿಳಿಸುತ್ತವೆ. (ತ) ಹೆಸರುಪದಗಳ ಬಳಿಕವೂ ಕೆಲವು ಬಗೆಯ ಹೆಸರುಕಂತೆಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು; ಈ ಹೆಸರುಕಂತೆಗಳನ್ನು ಹೆಸರುಪದಗಳಿಂದ ಬೇರ್ಪಡಿಸಿಯೂ ತೋರಿಸಲು ಬರುತ್ತದೆ: (1ಕ) ಹುಡುಗರು ದೊಡ್ಡವರು ಆಟಕ್ಕೆ ಹೋಗಿದ್ದಾರೆ. (1ಚ) ಮಗುವಿಗೆ ಚಿಕ್ಕದಕ್ಕೆ ಸರಿಯಾಗಿ ಮಾತನಾಡಲು ಬರುವುದಿಲ್ಲ. (1ಟ) ಹಸುವಿಗೆ, ನಾನು ಕೊಂಡುದಕ್ಕೆ, ಹೆಚ್ಚು ಹಾಲಿಲ್ಲ. ಆದರೆ, ಇಂತಹ ಇಟ್ಟಳವನ್ನು ಬರಹಗಳಲ್ಲಿ ಬರುವುದು ಕಡಿಮೆ; ಹೆಸರುಪದ ಇಲ್ಲವೇ ಹೆಸರುಕಂತೆಯೊಂದನ್ನು ಮಾತಿನಲ್ಲಿ ಬಳಸಿದೊಡನೆ, ಅದು ಏನನ್ನು ಗುರುತಿಸುತ್ತಿದೆ ಎಂಬುದು ಕೇಳುಗನಿಗೆ ಸರಿಯಾಗಿ ಗೊತ್ತಾಗಲಾರದು ಎಂಬ

ಅನಿಸಿಕೆ ಆಡುಗನಲ್ಲಿ ಮೂಡಿದಾಗ, ಆತ ಈ ರೀತಿ ಅದರ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಲು ಇನ್ನೊಂದು ಹೆಸರುಕಂತೆಯನ್ನು ಬಳಸುತ್ತಾನೆ. ಆದರೆ, ಬರಹಗಳಲ್ಲಿ ಇಂತಹ ಅನಿಸಿಕೆ ಮೂಡಿದಾಗ ಬರಹಗಾರರು ತಾವು ಬರೆದುದನ್ನು ತಿದ್ದಿ ಬರೆಯುತ್ತಾರೆ. ನೆಲೆಗೊಳಿಸುವ ಆ ಇಲ್ಲವೇ ಈ ಪದಗಳನ್ನು ಸೇರಿಸಿರುವ ಎಣಿಕೆ ಪದಗಳನ್ನು ಸಾಮಾನ್ಯವಾಗಿ ಹೆಸರುಪದಗಳ ಮೊದಲು ಬಳಸಲಾಗುತ್ತದೆ; ಇದಕ್ಕೆ ಬದಲು, ಅವನ್ನು ಆಡುಪದಗಳ ಬಳಿಕ ಬೇರೆಯೇ ಒಂದು ಪದಕಂತೆಯಾಗಿ ಬಳಸಲಾಗುತ್ತದೆ: (1ಕ) ಈ ಮೂರು ಪುಸ್ತಕಗಳನ್ನು ರಾಜುವಿಗೆ ಕೊಡಬೇಕಾಗಿದೆ. (1ಚ) ನಿಮ್ಮನ್ನು ಈ ಮೂವರನ್ನು ಬೆಂಗಳೂರಿಗೆ ಕಳುಹಿಸಬೇಕಾಗಿದೆ. (1ಟ) ನಾವು ಈ ನಾಲ್ಕು ಮಂದಿ ಪೇಟೆಗೆ ಹೋಗುತ್ತೇವೆ. ಇಂತಹ ನೆಲೆಗೊಳಿಸುವ ಎಣಿಕೆಪದಗಳು ಹೆಸರುಪದಗಳ ಬಳಿಕ ಬರುವ ಹಾಗೆ ಕಾಣಿಸುವುದಿಲ್ಲ. (2) ಗಮನರೂಪದ ಬಳಕೆ: ಒಂದು ಸೊಲ್ಲನ್ನು ಆಡುಗನು ಯಾವ ಕೇಳುಗನನ್ನು ಮನಸ್ಸಿನಲ್ಲಿರಿಸಿಕೊಂಡು ಹೇಳಿದ್ದಾನೆ ಎಂಬುದನ್ನು ತಿಳಿಸಲು ಅದರ ಮೊದಲಿಗೆ ಆತನನ್ನು ಗುರುತಿಸುವ ಹೆಸರುಪದವನ್ನು ಗಮನರೂಪದಲ್ಲಿ ಬಳಸಬಹುದು, ಇಲ್ಲವೇ ಅಂತಹದೇ ಕೆಲಸವನ್ನು ನಡೆಸಬಲ್ಲ ಬೇರೆ ನುಡಿತವನ್ನು ಬಳಸಬಹುದು: (1ಕ) ರಾಜು! ನೀನು ಎಲ್ಲಿಗೆ ಹೋಗಿದ್ದೆ? (1ಚ) ತಂಗೀ! ಇವನು ನಿನ್ನನ್ನು ಕಾಣಲು ಬಂದಿದ್ದಾನೆ. (1ಟ) ಹುಡುಗರೇ! ಇವತ್ತು ನೀವೊಂದು ಕತೆ ಕೇಳಲಿದ್ದೀರಿ. (1ತ) ಮೇಶ್ಟ್ರೇ! ನಿಮ್ಮ ಶಾಲು ಕೆಳಗೆ ಬಿದ್ದಿದೆ. (1ಪ) ಏನೋ ರಾಜು, ನೀನು ಇಶ್ಟು ತಡಮಾಡಿ ಬಂದರೆ ಹೇಗೆ? ನೀನು ಎಂಬುದು ತಿಳಿಸುವ ಕೇಳುಗ ನಿಜಕ್ಕೂ ಯಾರು ಎಂಬುದನ್ನು (1ಕ- ತ)ಗಳಲ್ಲಿ ಅದರ ಮೊದಲು ಬಂದಿರುವ ಹೆಸರುಪದಗಳ ಗಮನರೂಪಗಳು ತಿಳಿಸುತ್ತವೆ, ಮತ್ತು (1ಪ)ದಲ್ಲಿ ಅದರ ಮೊದಲು ಬಂದಿರುವ ಏನೋ ರಾಜು ಎಂಬ ಇನ್ನೊಂದು ಬಗೆಯ ಗಮನವನ್ನು ಸೆಳೆಯುವ ನುಡಿತ ತಿಳಿಸುತ್ತದೆ. ಒಂದು ಗುಂಪಿನಲ್ಲಿ ಹಲವು ಮಂದಿಯಿದ್ದು, ಅವರಲ್ಲಿ ಒಬ್ಬ ತನ್ನ ಕೇಳುಗನಾಗಬೇಕಿದ್ದಲ್ಲಿಯೂ ಆಡುಗನಿಗೆ ಈ ಹೊಲಬು ನೆರವಿಗೆ ಬರುತ್ತದೆ.

(3) ಹೊರಸೊಲ್ಲಿನ ಬಳಕೆ: ಆಡುಪದವಿರುವ ಸೊಲ್ಲನ್ನು ಒಳಸೊಲ್ಲಾಗಿ, ಮತ್ತು ಅದು ತಿಳಿಸುವ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ನಿಜಕ್ಕೂ ಯಾರು ಎಂಬುದನ್ನು ತಿಳಿಸುವ ಹೆಸರುಪದವಿರುವ ಸೊಲ್ಲನ್ನು ಒಳಸೊಲ್ಲಾಗಿ ಮಾಡಿಯೂ ಆಡುಪದಗಳು ತಿಳಿಸುವ ಪಾಂಗಿನ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಲು ಬರುತ್ತದೆ: (1ಕ) ನನಗೆ ಆಪೀಸಿನಲ್ಲಿ ತುಂಬಾ ಕೆಲಸ ಇತ್ತು ಎಂದು ರಾಜು ಹೇಳಿದ. (1ಚ) ನಿನಗೆ ಬೇರೆ ಕೆಲಸವಿದ್ದರೆ ಹೋಗಬಹುದೆಂದು ಅವರು ಜಾನಕಿಯ ಹತ್ತಿರ ಹೇಳಿದರು. (1ಟ) ತನಗೆ ಹಣ ದೊರೆತರೆ ದೊಡ್ಡ ಮಾಳಿಗೆ ಮನೆ ಕಟ್ಟಿಸಬಹುದೆಂದು ರಾಜು ಕನಸು ಕಾಣುತ್ತಿದ್ದ. (1ಕ)ದ ಒಳಸೊಲ್ಲಿನಲ್ಲಿ ಬಂದಿರುವ ನನಗೆ ಎಂಬ ಆಡುಪದ ಸೊಲ್ಲಿನ ಗುರಿ ಪಾಂಗು ಅದರ ಆಡುಗ ಎಂಬುದನ್ನಶ್ಟೇ ತಿಳಿಸುತ್ತದೆ; ನಿಜಕ್ಕೂ ಅದು ಯಾರು ಎಂಬುದನ್ನು ಹೊರಸೊಲ್ಲಿನಲ್ಲಿ ಬಂದಿರುವ ರಾಜು ಎಂಬ ಹೆಸರುಪದ ತಿಳಿಸುತ್ತದೆ. ಇದೇ ರೀತಿಯಲ್ಲಿ, (1ಚ)ದ ಒಳಸೊಲ್ಲಿನಲ್ಲಿ ಬಂದಿರುವ ನಿನಗೆ ಎಂಬುದು ಕೆಲಸವಿರುವ ಪಾಂಗು ಕೇಳುಗ ಎಂದಿಶ್ಟೇ ತಿಳಿಸುತ್ತದೆ; ನಿಜಕ್ಕೂ ಆತ ಯಾರು ಎಂಬುದನ್ನು ಹೊರಸೊಲ್ಲಿನ ಜಾನಕಿ ಎಂಬ ಹೆಸರುಪದ ತಿಳಿಸುತ್ತದೆ. (1ಟ)ದ ಒಳಸೊಲ್ಲಿನಲ್ಲಿ ಬಂದಿರುವ ತನಗೆ ಎಂಬ ಪದವೂ ಅದು ತಿಳಿಸುವ ವ್ಯಕ್ತಿ ಸೊಲ್ಲಿನ ಆಡುಗ ಇಲ್ಲವೇ ಕೇಳುಗರಲ್ಲಿ, ಬೇರೊಬ್ಬ ಎಂಬುದನ್ನಶ್ಟೇ ತಿಳಿಸುತ್ತದೆ; ನಿಜಕ್ಕೂ ಅದು ಯಾರು ಎಂಬುದನ್ನು ಹೊರಸೊಲ್ಲಿನ ರಾಜು ಎಂಬ ಪದ ತಿಳಿಸುತ್ತದೆ. ಒಳಸೊಲ್ಲಿನ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಯಾರೆಂಬುದನ್ನು ತಿಳಿಸುವುದರೊಂದಿಗೆ, ಅವರ ಕುರಿತಾಗಿ ಬೇರೆಯೂ ಹಲವು ವಿಶಯಗಳನ್ನು ಇಂತಹ ಹೊರಸೊಲ್ಲುಗಳಲ್ಲಿ ತಿಳಿಸಲು ಬರುತ್ತದೆ: (1ಕ) ನಾನು ಎಲ್ಲಿಗೂ ಬರುವುದಿಲ್ಲವೆಂದು ಅದುವರೆಗೆ ಅಳುತ್ತಾ ಕುಳಿತಿದ್ದ ಹುಡುಗ ಒಮ್ಮೆಲೇ ಬೊಬ್ಬಿರಿದ. (1ಚ) ನೂರು ರುಪಾಯಿ ಕೊಡದೆ ನಿಮ್ಮನ್ನು ಒಳಗೆ ಬಿಡುವುದಿಲ್ಲವೆಂದು ಅದುವರೆಗೆ ತನ್ನೆದುರು ಗೋಗರೆಯುತ್ತಿದ್ದ ಮುದುಕನಿಗೆ ಕಾವಲುಗಾರ ಹೇಳಿದ. (1ಟ) ತಾನೇ ಮಾಡಬೇಕಿದ್ದ ಕೆಲಸವನ್ನು ರಾಜುವಿನ ಅಪ್ಪ ರಾಜುವಿನ ಕಯ್ಯಲ್ಲಿ ಮಾಡಿಸುತ್ತಿದ್ದಾನೆ.

(4) ಎಣಿಕೆಪದಗಳ ಬಳಕೆ: ಆಡುಪದಗಳು ತಿಳಿಸುವ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬರ ಅಳವಿಯನ್ನು ತಿಳಿಸುವುದಕ್ಕಾಗಿ ಅವುಗಳ ಬಳಿಕ ಎಣಿಕೆಪದಗಳನ್ನು ಬಳಸಲು ಬರುತ್ತದೆ: (1ಕ) ನಾವು ಹತ್ತು ಮಂದಿ ಊಟಿಗೆ ಹೊಗುತ್ತೇವೆ. (1ಚ) ನೀವು ಆರು ಮಂದಿ ಮೊದಲು ಊಟ ಮಾಡಿ ಬನ್ನಿ. (1ಟ) ತಮಗೆ ಮೂವರಿಗೆ ಕೋಣೆ ಸಿಗದುದರಿಂದ ಅವರು ನಾಲ್ಕು ದಿನಗಳಿಂದ ಆಪೀಸಿನಲ್ಲೇ ಮಲಗುತ್ತಿದ್ದಾರೆ. ಹೆಸರುಪದಗಳ ಬಳಿಕವೂ ಈ ರೀತಿ ಎಣಿಕೆಪದಗಳನ್ನು ಬಳಸಲು ಬರುತ್ತದೆ; ಆದರೆ, ಅವು ಹೆಸರುಪದಗಳೊಂದಿಗೆ ಸೇರಿ ಒಂದೇ ಪದಕಂತೆಯಾಗಿಯೂ ಬರಬಲ್ಲುವು, ಇಲ್ಲವೇ ಬೇರಾಗಿಯೂ ಉಳಿಯಬಲ್ಲುವು; ಹಾಗಾಗಿ, ಅವೆರಡಕ್ಕೆ ಒಟ್ಟಾಗಿ ಒಂದೇ ಪತ್ತುಗೆ ಒಟ್ಟನ್ನು ಬಳಸಬಹುದು, ಇಲ್ಲವೇ ಬೇರೆ ಬೇರೆ ಪತ್ತುಗೆ ಒಟ್ಟುಗಳನ್ನೂ ಬಳಸಬಹುದು: (1ಕ) ಹುಡುಗರು ಮೂವರಿಗೆ ನೂರು ನೂರು ರುಪಾಯಿ ಸಿಗುತ್ತದೆ. (1ಚ) ಹುಡುಗರಿಗೆ ಮೂವರಿಗೆ ನೂರು ನೂರು ರುಪಾಯಿ ಸಿಗುತ್ತದೆ. (2ಕ) ತಮ್ಮಂದಿರಿಬ್ಬರನ್ನು ಆಕೆ ಊಟಕ್ಕೆ ಕೂರಿಸಿದ್ದಾಳೆ. (2ಚ) ತಮ್ಮಂದಿರನ್ನು ಇಬ್ಬರನ್ನು ಆಕೆ ಊಟಕ್ಕೆ ಕೂರಿಸಿದ್ದಾಳೆ. (1ಕ)ದಲ್ಲಿ ಇಗೆ ಪತ್ತುಗೆ ಒಟ್ಟನ್ನು ಮೂವರು ಎಂಬ ಒಂದು ಪದಕ್ಕೆ ಮಾತ್ರ (ಎಂದರೆ, ಹುಡುಗರು ಮೂವರು ಎಂಬುದಕ್ಕೆ ಒಟ್ಟಾಗಿ) ಸೇರಿಸಲಾಗಿದೆ; ಆದರೆ, (1ಚ)ದಲ್ಲಿ ಅದನ್ನು ಹುಡುಗರು ಮತ್ತು ಮೂವರು ಎಂಬ ಎರಡು ಪದಗಳಿಗೆ ಬೇರೆ ಬೇರಾಗಿ ಸೇರಿಸಲಾಗಿದೆ. (2ಕ-ಚ)ದಲ್ಲೂ ಹೀಗೆಯೇ. ಈ ವಿಶಯದಲ್ಲಿ ಆಡುಪದಗಳು ಹೆಸರುಪದಗಳಿಂದ ಬೇರಾಗಿವೆ; ಯಾಕೆಂದರೆ, ಅವುಗಳ ಬಳಿಕ ಬರುವ ಎಣಿಕೆ ಪದಗಳು ಬೇರೆಯೇ ಪದಕಂತೆಗಳಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವೆರಡಕ್ಕೂ ಬೇರೆ ಬೇರಾಗಿ ಪತ್ತುಗೆ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ. (1ಕ) ನಮಗೆ ಇಬ್ಬರಿಗೆ ನೂರು ರುಪಾಯಿ ಸಿಕ್ಕಿದೆ. (1ಚ) *ನಾವು ಇಬ್ಬರಿಗೆ ನೂರು ರುಪಾಯಿ ಸಿಕ್ಕಿದೆ.

ಇದಲ್ಲದೆ, ಎಣಿಕೆಪದಗಳನ್ನು ಹೆಸರುಪದಗಳ ಮೊದಲೂ ಬಳಸಬಹುದು, ಮತ್ತು ಬಳಿಕವೂ ಬಳಸಬಹುದು; ಆದರೆ, ಅವನ್ನು ಆಡುಪದಗಳ ಬಳಿಕ ಮಾತ್ರ ಬಳಸಲು ಬರುತ್ತದಲ್ಲದೆ ಮೊದಲು ಬಳಸಲು ಬರುವುದಿಲ್ಲ. (1ಕ) ಇಬ್ಬರು ಹುಡುಗರು ಮನೆಗೆ ಹೋಗಿದ್ದೇವೆ. (1ಚ) *ಇಬ್ಬರು ನೀವು ಮನೆಗೆ ಹೋಗಿ. ಹೆಸರುಪದಗಳ ಮೊದಲು ಬಂದಿರುವ ಎಣಿಕೆಪದಗಳು ಅವು ಗುರುತಿಸುವ ಪಾಂಗುಗಳ ಎಣಿಕೆಯನ್ನಶ್ಟೇ ಕೊಡುತ್ತವೆ; ಇದಕ್ಕೆ ಬದಲು, ಹೆಸರುಪದಗಳ ಬಳಿಕ ಬಂದಿರುವ ಎಣಿಕೆಪದಗಳು ಅವು ತಿಳಿಸುವ ಪಾಂಗಿನ ಒಂದು ಅಂಶವನ್ನು ತಿಳಿಸುತ್ತವೆ. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಇಬ್ಬರು ಹುಡುಗರು ಪುಣೆಗೆ ಹೋಗಿದ್ದಾರೆ. (1ಚ) ಹುಡುಗರಿಬ್ಬರು ಪುಣೆಗೆ ಹೋಗಿದ್ದಾರೆ. (1ಕ)ದಲ್ಲಿ ಬಂದಿರುವ ಇಬ್ಬರು ಹುಡುಗರು ಎಂಬುದು ಪುಣೆಗೆ ಹೋಗಿರುವ ಹುಡುಗರ ಎಣಿಕೆಯನ್ನಶ್ಟೇ ಕೊಡುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಹುಡುಗರಿಬ್ಬರು ಎಂಬುದು ಹಲವು ಹುಡುಗರಲ್ಲಿ ಪುಣೆಗೆ ಹೋಗಿರುವವರು ಎಶ್ಟು ಮಂದಿ ಎಂಬುದನ್ನು ತಿಳಿಸುತ್ತದೆ. ಎಣಿಕೆಪದಗಳು ಆಡುಪದಗಳ ಬಳಿಕ ಮಾತ್ರ ಬರುತ್ತವೆಯಾದ ಕಾರಣ, ಆಡುಪದಗಳೊಂದಿಗಿನ ಅವುಗಳ ಬಳಕೆಯಲ್ಲಿ ಇಂತಹ ಹುರುಳಿನ ವ್ಯತ್ಯಾಸವಿಲ್ಲ. (5) ಸೊಲ್ಲಿನ ಮೊದಲು ತಿಳಿಸುವುದು: ನಾಟಕಗಳಲ್ಲಿ ಬರುವ ಸೂಳುನುಡಿಗಳಲ್ಲಿ ಯಾವ ಮಾತನ್ನು ಯಾರು ಹೇಳಬೇಕು ಎಂಬುದನ್ನು ಆ ಮಾತುಗಳ ಮೊದಲು ಅವರ ಹೆಸರುಗಳನ್ನಿರಿಸಿ ತಿಳಿಸಲಾಗುತ್ತದೆ. ಬರಹರೂಪದಲ್ಲಿರುವ ನಾಟಕಗಳಲ್ಲಿ ಈ ರೀತಿ ಉದ್ದಕ್ಕೂ ಮಾತುಗಳನ್ನು ಹೇಳಬೇಕಾಗಿರುವ ಪಾಂಗುಗಳನ್ನು ಆ ಮಾತುಗಳ ಮೊದಲು ಹೆಸರಿಸಲಾಗುತ್ತದೆ ಮತ್ತು ಅದರೊಂದಿಗೆ ಆ ಪಾಂಗುಗಳ ಕುರಿತಾಗಿ ಬೇರೆಯೂ ಕೆಲವು ಬಗೆಯ ತಿಳಿವುಗಳನ್ನು ಕೊಡಲಾಗುತ್ತದೆ.

9.4.9 ಗಮನರೂಪದಲ್ಲಿ ಬಳಕೆ

ಬಳಸಲಿರುವ ಸೊಲ್ಲಿನ ಕಡೆಗೆ ಇಲ್ಲವೇ ಅದರಲ್ಲಿ ಬರುವ ಒಂದು ಪಾಂಗಿನ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ, ಆತನನ್ನು ಗುರುತಿಸಬಲ್ಲ ಹೆಸರುಪದವನ್ನು ಅದರ ಗಮನರೂಪದಲ್ಲಿ ಬಳಸಲಾಗುತ್ತದೆ:

(1ಕ) ಅಣ್ಣಾ! ಯಾರೋ ನಿನ್ನನ್ನು ಕರೆಯುತ್ತಿದ್ದಾರೆ. (1ಚ) ರಾಜು! ಈಗ ಎಶ್ಟು ಗಂಟೆ? (1ಟ) ಅಮ್ಮಾ! ನೀನು ಹೊರಗೆ ಬರಬೇಕಂತೆ. ಎಲ್ಲಾ ಬಗೆಯ ಸೊಲ್ಲುಗಳೊಂದಿಗೂ ಈ ರೀತಿ ಹೆಸರುಪದಗಳ ಗಮನರೂಪಗಳನ್ನು ಬಳಸಲು ಬರುತ್ತದೆ; ಕೇಳುಗನ ಗಮನವನ್ನು ಸೆಳೆಯುವುದು ಮಾತ್ರವಲ್ಲದೆ ಆತನ ಕುರಿತಾಗಿ ಆಡುಗನು ತನ್ನ ಅನಿಸಿಕೆಯನ್ನು ತಿಳಿಸುವುದಕ್ಕಾಗಿಯೂ ಇಂತಹ ಗಮನರೂಪಗಳನ್ನು ಬಳಸುವುದಿದೆ: (1ಕ) ಏ ಕೆಪ್ಪ! ನಾನು ಹೇಳಿದ್ದು ಕೇಳಿಸಲಿಲ್ಲವೇನೋ? (1ಚ) ಏ ಹೆಡ್ಡ! ನಾನು ಹೇಳಿದ್ದೇನು, ನೀನು ಮಾಡಿದ್ದೇನು? ಆಡುಪದಗಳನ್ನು ಇಂತಹ ಗಮನರೂಪದಲ್ಲಿ ಬಳಸಲು ಬರುವುದಿಲ್ಲ; ಕೇಳುಗನ ಗಮನವನ್ನು ಸೆಳೆಯುವುದು ಅವುಗಳ ಕೆಲಸವಲ್ಲವೆಂಬುದೇ ಇದಕ್ಕೆ ಕಾರಣವಿರಬಹುದು.

9.4.10 ಪಾಂಗು ಮತ್ತು ಪಾಂಗಿನ ಬಗೆ

ಹೆಸರುಪದಗಳು ಇಲ್ಲವೇ ಹೆಸರುಕಂತೆಗಳು ನೇರವಾಗಿ ಒಂದು ಪಾಂಗನ್ನು ಗುರುತಿಸಬಹುದು, ಇಲ್ಲವೇ ಪಾಂಗಿನ ಬಗೆಯನ್ನು ಮಾತ್ರವೇ ಗುರುತಿಸಬಹುದು (6.5.5 ನೋಡಿ). ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (1ಕ) ರಾಜುವಿಗೆ ಒಂದು ಮನೆ ಕೊಂಡುಕೊಳ್ಳಬೇಕೆಂದಿದೆ. ರಾಜು ಕೋರಮಂಗಲದಲ್ಲಿ ಒಂದು ಮನೆಯನ್ನು ನೋಡಿಬಂದಿದ್ದು, ಆತನಿಗೆ ಅದನ್ನು ಕೊಂಡುಕೊಳ್ಳಬೇಕೆಂದಿದೆಯೆಂಬುದಾಗಿ (1ಕ) ಸೊಲ್ಲು ತಿಳಿಸುತ್ತಿರಬಹುದು; ಈ ಬಳಕೆಯಲ್ಲಿ ಒಂದು ಮನೆ ಎಂಬುದು ನೇರವಾಗಿ ಒಂದು ಪಾಂಗನ್ನು ಗುರುತಿಸುತ್ತದೆ. ಇದಕ್ಕೆ ಬದಲು, ರಾಜುವಿಗೆ ಒಂದು ಮನೆಯನ್ನು ಕೊಂಡುಕೊಳ್ಳಬೇಕೆಂದಿದೆಯಲ್ಲದೆ, ಆತ ಇದಕ್ಕಾಗಿ ಇನ್ನೂ ಮನೆಯನ್ನು ಹುಡುಕಲು ಸುರುಮಾಡಿಲ್ಲ ಎಂಬಂತಹ ಕಡೆಗಳಲ್ಲೂ (1ಕ) ಸೊಲ್ಲನ್ನು ಬಳಸಲು ಬರುತ್ತದೆ; ಹಾಗಿದ್ದಲ್ಲಿ, ಅದರಲ್ಲಿ ಬಂದಿರುವ ಒಂದು ಮನೆ ಎಂಬ ಪದಕಂತೆ ಪಾಂಗಿನ ಬಗೆಯನ್ನಶ್ಟೇ ತಿಳಿಸುತ್ತದಲ್ಲದೆ, ನೇರವಾಗಿ ಒಂದು ಪಾಂಗನ್ನು ಗುರುತಿಸುವುದಿಲ್ಲ ಎಂಬುದಾಗಿ ಹೇಳಬಹುದು.

ಹೆಸರುಪದ ಇಲ್ಲವೇ ಹೆಸರುಕಂತೆಗಳಿಗಿರುವ ಇಂತಹ ಎರಡು ಬಗೆಯ ಬಳಕೆಗಳು ಆಡುಪದಗಳಿಗಿಲ್ಲ. ಅವು ಪಾಂಗುಗಳನ್ನು ನೇರವಾಗಿ ಗುರುತಿಸಲು ಹೋಗದೆ, ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆ ಪಾಂಗುಗಳು ತೊಡಗಿಕೊಂಡಿವೆಯೇ, ಮತ್ತು ತೊಡಗಿಕೊಂಡಿದ್ದಲ್ಲಿ ಅದರ ಆಡುಗವಾಗಿ ಇಲ್ಲವೇ ಕೇಳುಗವಾಗಿ ಬಂದಿದೆಯೇ ಎಂಬುದನ್ನಶ್ಟೇ ಅವು ತಿಳಿಸಬೇಕಾಗಿರುವುದು ಇದಕ್ಕೆ ಕಾರಣ. ಆಡುಪದಗಳನ್ನು ಬಳಸಿರುವ ಸೊಲ್ಲುಗಳು ಕೆಲವೊಮ್ಮೆ ಪಾಂಗುಗಳ ಬಗೆಯನ್ನು ಮಾತ್ರ ತಿಳಿಸಬೇಕಾಗಿ ಬರುವುದಿದೆ; ಅಂತಹ ಕಡೆಗಳಲ್ಲಿ ನಾನು ಇಲ್ಲವೇ ನೀನು ಎಂಬವುಗಳ ಬದಲು ತಾನು ಎಂಬುದನ್ನು ಬಳಸಲಾಗುತ್ತದೆ: (1ಕ) ಈ ಊರಲ್ಲಿ ನನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವನು ನಾನು ಮಾತ್ರ. (1ಚ) ಈ ಊರಲ್ಲಿ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವವನು ನಾನು ಮಾತ್ರ. (2ಕ) ನಿನ್ನ ಒಡವೆಗಳನ್ನು ಯಾರಾದರೂ ಕದ್ದುಕೊಂಡುಹೋದರೂ ಏನೂ ಮಾಡದೆ ಇರಬಲ್ಲವನು ನೀನೊಬ್ಬನೇ. (2ಚ) ತನ್ನ ಒಡವೆಗಳನ್ನು ಯಾರಾದರೂ ಕದ್ದುಕೊಂಡು ಹೋದರೂ ಏನೂ ಮಾಡದೆ ಇರಬಲ್ಲವನು ನೀನೊಬ್ಬನೇ. ಮೇಲೆ ಕೊಟ್ಟಿರುವ (ಕ) ಸೊಲ್ಲುಗಳಿಗೂ (ಚ) ಸೊಲ್ಲುಗಳಿಗೂ ನಡುವೆ ವ್ಯತ್ಯಾಸವಿರುವುದನ್ನು ಗಮನಿಸಬಹುದು; ಎತ್ತುಗೆಗಾಗಿ, (1ಕ) ಸೊಲ್ಲಿನಲ್ಲಿ ಬಂದಿರುವ ನನ್ನ ಮಕ್ಕಳನ್ನು ಎಂಬುದು ನೇರವಾಗಿ ಒಂದು ಪಾಂಗನ್ನು (ಆಡುಗನ ಮಕ್ಕಳನ್ನು) ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ತನ್ನ ಮಕ್ಕಳನ್ನು ಎಂಬುದು ಆ ರೀತಿ ನೇರವಾಗಿ ಒಂದು ಪಾಂಗನ್ನು (ಬೇರೊಬ್ಬರ ಮಕ್ಕಳನ್ನು) ಗುರುತಿಸುವ ಬದಲು, ಪಾಂಗಿನ ಬಗೆಯನ್ನು ಮಾತ್ರವೇ ತಿಳಿಸುತ್ತದೆ. (2ಕ) ಮತ್ತು (2ಚ) ಸೊಲ್ಲುಗಳ ನಡುವೆಯೂ ಇಂತಹದೇ ವ್ಯತ್ಯಾಸವಿದೆ. ತಾನು ಎಂಬುದನ್ನು ಬೇರೆ ಕಡೆಗಳಲ್ಲೂ ಪಾಂಗಿನ ಬಗೆಯನ್ನು ತಿಳಿಸಲು ಬಳಸಲಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದವರಿಗೆ ನಮ್ಮ ನೆರವು ಸಿಗಲಾರದು. (1ಚ) ತನ್ನ ಕೆಲಸವನ್ನು ಚೊಕ್ಕಟವಾಗಿ ಮಾಡಿಕೊಳ್ಳಬಲ್ಲವನೇ ಜಾಣ.

ಮೇಲಿನ ಸೊಲ್ಲುಗಳಲ್ಲಿ ಪಾಂಗಿನ ಬಗೆಯನ್ನು ತಿಳಿಸುವುದಕ್ಕಾಗಿ ತಾನು ಪದವನ್ನು ಬಳಸಲಾಗಿದ್ದು, ಅದು ನಾನು ಇಲ್ಲವೇ ನೀನು ಎಂಬುದಕ್ಕೆ ಬದಲಾಗಿ ಬಂದಿಲ್ಲ.

9.4.11 ಪಾಂಗುಗಳ ಪರಿಚೆ ಮತ್ತು ಸರಿಗಟ್ಟುವಿಕೆ

ಆಡುಪದಗಳಿಗೂ ಹೆಸರುಪದಗಳಿಗೂ ನಡುವಿರುವ ಇನ್ನೊಂದು ಹೋಲಿಕೆ ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಕಾಣಿಸುತ್ತದೆ; ಪಾಂಗುಗಳ ಪರಿಚೆಯನ್ನು ತಿಳಿಸುವಂತಹ ಇರುಹ ಸೊಲ್ಲುಗಳಲ್ಲಿ ಇರು ಪದವನ್ನು ಬಳಸದಿರಲು ಬರುತ್ತದೆ, ಮತ್ತು ಇಂತಹ ಸೊಲ್ಲುಗಳು ಪಾಂಗುಗಳಲ್ಲಿ ಪರಿಚೆಯ ಇರುವಿಕೆಯನ್ನು ತಿಳಿಸುತ್ತಿರಬಲ್ಲುವು, ಇಲ್ಲವೇ ಆ ಪಾಂಗುಗಳನ್ನು ಪರಿಚೆಯೊಂದಿಗೆ ಸರಿಗಟ್ಟುವಂತಹ ಹುರುಳನ್ನೂ ಕೊಡಬಲ್ಲುವು (ವಿವರಗಳಿಗೆ 7.2.4(6) ನೋಡಿ). ಇಂತಹ ಸೊಲ್ಲುಗಳನ್ನು ಅಲ್ಲಗಳೆಯುವುದಕ್ಕಾಗಿ, ಪಾಂಗುಗಳಲ್ಲಿ ಪರಿಚೆಯ ಇರುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಇಲ್ಲ ಪದವನ್ನೂ, ಪಾಂಗುಗಳನ್ನು ಪರಿಚೆಯೊಂದಿಗೆ ಸರಿಗಟ್ಟುವ ಸೊಲ್ಲುಗಳಲ್ಲಿ ಅಲ್ಲ ಪದವನ್ನೂ ಬಳಸಲಾಗುತ್ತದೆ: (1) ಆ ಹೂವು ಕೆಂಪು. (1ಕ) ಅ ಹೂವು ಕೆಂಪಿಲ್ಲ. (1ಚ) ಆ ಹೂವು ಕೆಂಪಲ್ಲ, ಕಂದು. (1)ನೇ ಸೊಲ್ಲಿಗೆ ಹೂವಿನಲ್ಲಿ ಕೆಂಪು ಬಣ್ಣದ ಇರವನ್ನು ತಿಳಿಸುವ ಹುರುಳು, ಇಲ್ಲವೇ ಹೂವಿನೊಂದಿಗೆ ಕೆಂಪು ಬಣ್ಣವನ್ನು ಸರಿಗಟ್ಟುವ ಹುರುಳು ಎಂಬುದಾಗಿ ಎರಡು ಹುರುಳುಗಳು ದೊರಕಬಲ್ಲುವು; ಇವುಗಳಲ್ಲಿ ಮೊದಲನೆಯ ಹುರುಳನ್ನು ಅಲ್ಲಗಳೆಯುವುದಕ್ಕಾಗಿ (1ಕ)ದಲ್ಲಿ ಅಲ್ಲ ಪದವನ್ನು ಬಳಸಲಾಗಿದೆ, ಮತ್ತು ಎರಡನೆಯ ಹುರುಳನ್ನು ಅಲ್ಲಗಳೆಯುವುದಕ್ಕಾಗಿ (1ಚ)ದಲ್ಲಿ ಇಲ್ಲ ಪದವನ್ನು ಬಳಸಲಾಗಿದೆ. ಪರಿಚೆಪದದ ಜಾಗದಲ್ಲಿ ಹೆಸರುಪದವನ್ನು ಬಳಸಿದೆಯಾದರೆ, ಅಂತಹ ಸೊಲ್ಲಿಗೆ ಸರಿಗಟ್ಟುವ ಹುರುಳು ದೊರಕುತ್ತದಲ್ಲದೆ, ಪರಿಚೆಯ ಇರವನ್ನು ತಿಳಿಸುವ ಹುರುಳು ದೊರಕುವುದಿಲ್ಲ; ಇದೇ ರೀತಿಯಲ್ಲಿ, ಪರಿಚೆಪದದ ಜಾಗದಲ್ಲಿ ಆಡುಪದವನ್ನು ಬಳಸಿರುವಲ್ಲೂ ಸರಿಗಟ್ಟುವ ಹುರುಳು ಮಾತ್ರ ದೊರಕುತ್ತದೆ; ಈ ಎರಡು ಬಗೆಯ ಸೊಲ್ಲುಗಳನ್ನೂ ಅಲ್ಲ ಎಂಬ ಪದದಿಂದ ಅಲ್ಲಗಳೆಯಲು ಬರುತ್ತದಲ್ಲದೆ ಇಲ್ಲ ಪದದಿಂದ ಅಲ್ಲಗಳೆಯಲು ಬರುವುದಿಲ್ಲ: (1ಕ) ಮನೆಗೆ ಹೋದವನು ರಾಜು.

(1ಚ) ಮನೆಗೆ ಹೋದವನು ರಾಜು ಅಲ್ಲ. (2ಕ) ಮನೆಗೆ ಹೋದವನು ನಾನು. (2ಚ) ಮನೆಗೆ ಹೋದವನು ನಾನಲ್ಲ.

9.5 ಆಡುಪದಗಳು ಮತ್ತು

Eke →

ತೋರುಪದಗಳು ನಾನು, ನೀನು, ಮತ್ತು ತಾನು ಎಂಬ ಮೂರು ಪದಗಳನ್ನು ಮಾತ್ರ ಆಡುಪದಗಳೆಂಬ ಒಂದು ಗುಂಪಿನಲ್ಲಿರಿಸಿ, ಅವನು, ಅವಳು, ಅದು, ಅಲ್ಲಿ, ಅಶ್ಟು, ಆಗ ಮೊದಲಾದ ಬೇರೆ ಹಲವು ಪದಗಳನ್ನು ತೋರುಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿರಿಸಲು ಅವುಗಳ ಪರಿಚೆ ಮತ್ತು ಬಳಕೆಗಳಲ್ಲಿ ಕಾಣಿಸುವ ಹಲವು ವ್ಯತ್ಯಾಸಗಳು ಕಾರಣಗಳಾಗಿವೆ. ಈ ವ್ಯತ್ಯಾಸಗಳು ಎಂತಹವು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

9.5.1 ಇಟ್ಟಳದಲ್ಲಿ ವ್ಯತ್ಯಾಸ

ಆಡುಪದಗಳಿಗೂ ತೋರುಪದಗಳಿಗೂ ನಡುವೆ ಅವುಗಳ ಇಟ್ಟಳದಲ್ಲಿ ಒಂದು ಮುಕ್ಯವಾದ ವ್ಯತ್ಯಾಸವಿದೆ: ತೋರುಪದಗಳಲ್ಲಿ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯ ಅಂಗ ತೋರುಪದಗಳು ನಡೆಸಬೇಕಾಗಿರುವ ಕೆಲಸ ಎಂತಹದು ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯ ಅಂಗ ಅವುಗಳ ಹರವು ಎಂತಹದು ಎಂಬುದನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಇಶ್ಟು ಎಂಬ ತೋರುಪದದಲ್ಲಿ ಇ ಮತ್ತು ಶ್ಟು ಎಂಬ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಆ ತೋರುಪದಕ್ಕಿರುವ ಕೆಲಸ ಎಂತಹದು ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅದಕ್ಕಿರುವ ಹರವು ಎಂತಹದು ಎಂಬುದನ್ನು ತಿಳಿಸುತ್ತದೆ. ಇಶ್ಟು ಎಂಬ ಪದದಲ್ಲಿರುವ ಈ ಎರಡು ಅಂಗಗಳು ಆಡುಗನ ಹತ್ತಿರ ಇರುವ ಒಂದು ಪಾಂಗನ್ನು ಗುರುತಿಸುವ ಕೆಲಸ ಅದಕ್ಕಿದೆ ಎಂಬುದನ್ನು, ಮತ್ತು ಪಾಂಗುಗಳ ಅಳವಿಯನ್ನು ತಿಳಿಸುವಂತಹ ಹರವು ಅದಕ್ಕಿದೆ ಎಂಬುದನ್ನು ತಿಳಿಸುತ್ತವೆ. ಈ ಎರಡು ಅಂಗಗಳನ್ನೂ ಒಂದೊಂದಾಗಿ ಬದಲಾಯಿಸುವ ಮೂಲಕ ಹಲವು ಬಗೆಯ ತೋರುಪದಗಳನ್ನು ಪಡೆಯಲು ಬರುತ್ತದೆ; ಎತ್ತುಗೆಗಾಗಿ, ಇಶ್ಟು ಎಂಬುದರ ಮೊದಲನೆಯ ಅಂಗವನ್ನು ಬದಲಾಯಿಸುವ ಮೂಲಕ ಅಶ್ಟು ಮತ್ತು ಎಶ್ಟು ಎಂಬ ಇನ್ನೆರಡು ತೋರುಪದಗಳನ್ನು ಪಡೆಯಲು ಬರುತ್ತದೆ, ಮತ್ತು ಅದರ ಎರಡನೆಯ ಅಂಗವನ್ನು ಬದಲಾಯಿಸುವ ಮೂಲಕ ಇಲ್ಲಿ,

ಇಂದು, ಇಂತಹ, ಇದು, ಇವನು ಮೊದಲಾದ ಬೇರೆ ಹಲವು ತೋರುಪದಗಳನ್ನು ಪಡೆಯಲು ಬರುತ್ತದೆ. ಆದರೆ, ಆಡುಪದಗಳಲ್ಲಿ ಇಂತಹ ಎರಡು ಅಂಗಗಳಿಲ್ಲ; ಅವು ನಡೆಸಬೇಕಾಗಿರುವ ಕೆಲಸ ತೋರುಪದಗಳು ನಡೆಸಬೇಕಾಗಿರುವ ಕೆಲಸಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ. ಸೊಲ್ಲು ತಿಳಿಸುವ ಎಸಕದ ಪಾಂಗುಗಳಲ್ಲಿ ಒಂದು ಆ ಸೊಲ್ಲಿನ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬುದನ್ನು ತಿಳಿಸುವುದಶ್ಟೇ ಅವುಗಳಿಗಿರುವ ಕೆಲಸ. ಆಡುಪದಗಳಲ್ಲೂ ಎರಡು ಅಂಗಗಳನ್ನು ಕಾಣಲು ಬರುತ್ತದೆಯೇನೋ ನಿಜ: ಓರೆಣಿಕೆಯ ನಾನು, ನೀನು, ಮತ್ತು ತಾನು ಎಂಬವುಗಳನ್ನು ಹಲವೆಣಿಕೆಯ ನಾವು, ನೀವು, ಮತ್ತು ತಾವು ಎಂಬವುಗಳೊಂದಿಗೆ ಹೋಲಿಸಿದಲ್ಲಿ, ಅವುಗಳಲ್ಲಿ ಮೊದಲನೆಯ ಉಲಿಕಂತೆ (ನಾ, ನೀ, ಮತ್ತು ತಾ ಎಂಬವುಗಳು) ಅವುಗಳ ಕೆಲಸವನ್ನು ತಿಳಿಸುತ್ತವೆ, ಮತ್ತು ಎರಡನೆಯ ಉಲಿಕಂತೆ (ನು ಮತ್ತು ವು ಎಂಬವುಗಳು) ಅವುಗಳ ಎಣಿಕೆಯನ್ನು (ಎಂದರೆ ಹರವನ್ನು) ತಿಳಿಸುತ್ತದೆ ಎಂದೂ ಹೇಳಲು ಬರುತ್ತದೆ. ಹೀಗೆ ಹೇಳಿದಲ್ಲಿ, ಅವನು-ಅವರು, ಅವಳು-ಅವರು ಮೊದಲಾದ ಕೆಲವು ತೋರುಪದಗಳ ಜೋಡಿಗಳಲ್ಲಿ ಕಾಣಿÂಸುವ ಹಾಗೆ ನಾನು-ನಾವು, ನೀನು- ನೀನು ಮತ್ತು ತಾನು-ತಾವು ಎಂಬ ಆಡುಪದಗಳ ಜೋಡಿಗಳಲ್ಲಿಯೂ ಎರಡೆರಡು ಅಂಗಗಳಿವೆಯೆಂದು ಹೇಳಲು ಬರುತ್ತದೆ. ಆದರೆ, ಆಡುಪದಗಳಲ್ಲಿ ಕಾಣಿಸುವಂತಹ ಎಣಿಕೆಯ ವ್ಯತ್ಯಾಸ ಕೆಲವು ತೋರುಪದಗಳಲ್ಲಿಯೂ ಕಾಣಿಸುತ್ತಿದ್ದು, ಅದು ಮೇಲೆ ವಿವರಿಸಿದ ಎರಡು ಅಂಗಗಳಿಂದ ಬೇರಾಗಿದೆ: ಎತ್ತುಗೆಗಾಗಿ, ಅವನು-ಅವರು ಮತ್ತು ಅವಳು- ಅವರು ಎಂಬ ತೋರುಪದ ಜೋಡಿಗಳಲ್ಲಿ ಎರಡನೆಯ ಅಂಗವಾಗಿ ವನು- ವರು ಮತ್ತು ವಳು-ವರು ಎಂಬವು ಬರುತ್ತಿದ್ದು, ಇವುಗಳಲ್ಲೂ ಓರೆಣಿಕೆಯ ನು-ಳು ಮತ್ತು ಹಲವೆಣಿಕೆಯ ರು ಎಂಬುದಾಗಿ ಬೇರೆಯೇ ಎರಡು ಅಂಗಗಳನ್ನು ಕಾಣಲು ಬರುತ್ತದೆ. ಹಾಗಾಗಿ, ಕೆಲಸ ಮತ್ತು ಹರವುಗಳನ್ನು ತಿಳಿಸುವಂತಹ ಎರಡು ಬಗೆಯ ಅಂಗಗಳು ತೋರುಪದಗಳಲ್ಲಿ ಮಾತ್ರ ಇವೆ, ಆಡುಪದಗಳಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ.

9.5.2 ಕೆಲಸದಲ್ಲಿ ವ್ಯತ್ಯಾಸ

ಮೇಲೆ ತಿಳಿಸಿದ ಹಾಗೆ, ಸೊಲ್ಲು ತಿಳಿಸುವ ಎಸಕ ಇಲ್ಲವೇ ಇರುಹಗಳಲ್ಲಿ ತೊಡಗಿಕೊಂಡಿರುವ ಪಾಂಗುಗಳು ಆ ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆಡುಗ, ಕೇಳುಗ ಇಲ್ಲವೇ ಬೇರೊಬ್ಬ ಎಂಬುದಾಗಿ ತೊಡಗಿಕೊಂಡಿವೆಯಾದಲ್ಲಿ ಅದನ್ನು ತಿಳಿಸುವುದಶ್ಟೇ ಆಡುಪದಗಳ ಕೆಲಸವಾಗಿದೆ; ಹಾಗಾಗಿ, ಅವು ಆಡುಗ,

ಕೇಳುಗ ಮತ್ತು ಬೇರೊಬ್ಬ ಎಂಬುದಾಗಿ ಮೂರು ಬಗೆಯವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಬದಲು, ತೋರುಪದಗಳು ಹಲವು ಬಗೆಯ ಕೆಲಸಗಳನ್ನು ನಡೆಸಬೇಕಾಗುತ್ತದೆ: (1) ಆಡುಗನಿಗೆ ತಿಳಿದ ಪಾಂಗು ಮತ್ತು ತಿಳಿಯದ ಪಾಂಗು ಎಂಬುದಾಗಿ ಎರಡು ಬಗೆಯ ಪಾಂಗುಗಳನ್ನು ಅವು ಗುರುತಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವುಗಳ ಕೆಲಸವನ್ನು ತಿಳಿಸುವ ಮೊದಲನೆಯ ಅಂಗವಾಗಿ ಎರಡು ಬಗೆಯ ಬೇರುಗಳು ಬಳಕೆಯಾಗಬೇಕಾಗುತ್ತದೆ: ತಿಳಿದ ಪಾಂಗು ತಿಳಿಯದ ಪಾಂಗು ಅವರು ಯಾರು ಅದು ಯಾವುದು ಅಲ್ಲಿ ಎಲ್ಲಿ ಅಶ್ಟು ಎಶ್ಟು (2) ತಿಳಿದ ಪಾಂಗುಗಳಲ್ಲಿ ಆಡುಗನ ಹತ್ತಿರ ಇರುವ ಪಾಂಗು ಮತ್ತು ದೂರ ಇರುವ ಪಾಂಗು ಎಂಬುದಾಗಿ ಎರಡು ಬಗೆಗಳನ್ನು ಅದು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವುಗಳ ಮೊದಲನೆಯ ಅಂಗದಲ್ಲಿ ಬೇರೆಯೂ ಎರಡು ಬಗೆಗಳನ್ನು ಕಾಣಿಸಬೇಕಾಗುತ್ತದೆ: ಹತ್ತಿರದ ಪಾಂಗು ದೂರದ ಪಾಂಗು ಅವರು ಇವರು ಅದು ಇದು ಅಲ್ಲಿ ಇಲ್ಲಿ ಅಶ್ಟು ಇಶ್ಟು

9.5.3 ಹರವಿನಲ್ಲಿ ವ್ಯತ್ಯಾಸ

ಆಡುಪದಗಳು ಪಾಂಗುಗಳನ್ನು ಗುರುತಿಸಬೇಕಾಗುವುದಿಲ್ಲವಾದ ಕಾರಣ, ಅವುಗಳ ಮೂಲಕ ಆಡುಗ, ಕೇಳುಗ, ಮತ್ತು ಬೇರೊಬ್ಬ ಎಂಬ ಮೂರು ಬಗೆಯ ವ್ಯತ್ಯಾಸಗಳನ್ನು ಮಾತ್ರ ತೋರಿಸಿದರೆ ಸಾಕಾಗುತ್ತದೆ; ಇದಲ್ಲದೆ, ಸಾಮಾನ್ಯವಾಗಿ ಆಳ್ತನವಿರುವ ಪಾಂಗುಗಳು ಮಾತ್ರ ಸೊಲ್ಲುಗಳ ಉಂಟುಮಾಡುವಿಕೆಯಲ್ಲಿ ತೊಡಗಿಕೊಳ್ಳಬಲ್ಲುವಾದ ಕಾರಣ, ಬೇರೆ ಹೆಚ್ಚಿನ ಹರವಿನ ವ್ಯತ್ಯಾಸಗಳನ್ನು ಅವುಗಳಲ್ಲಿ ಕಾಣಿಸಬೇಕಾಗುವುದಿಲ್ಲ. ಇದಕ್ಕೆ ಬದಲು, ತೋರುಪದಗಳು ಹಲವು ಬಗೆಯ ಪಾಂಗುಗಳನ್ನು ಮತ್ತು ಪರಿಚೆಗಳನ್ನು ಅಡಕವಾಗಿ ಗುರುತಿಸಿ ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವುಗಳಲ್ಲಿ ಹರವನ್ನು ತಿಳಿಸುವ ಬೇರೆಯೇ ಒಂದು ಅಂಗ ಕಾಣಿಸಿಕೊಳ್ಳುತ್ತದೆ.

ಪಾಂಗುಗಳು ಎಂತಹವು ಎಂಬುದನ್ನು ಅವು ತುಂಬಾ ಅಡಕವಾಗಿ ತಿಳಿಸಬೇಕಾಗಿರುವುದಕ್ಕೆ ಎರಡು ಮುಕ್ಯ ಕಾರಣಗಳಿವೆ: ತಿಳಿದ ತೋರುಪದಗಳನ್ನು ಬಳಸಿರುವಲ್ಲಿ ಅವು ಗುರುತಿಸಬೇಕಾಗಿರುವ ಪಾಂಗುಗಳು ಎದುರಿಗೇನೇ ಇರುವ ಕಾರಣ, ಇಲ್ಲವೇ ಅವನ್ನು ಹಿಂದೆ ಗುರುತಿಸಲಾಗಿದ್ದು, ಅವು ಕೇಳುಗನ ಗಮನದಲ್ಲೇನೇ ಇರುವ ಕಾರಣ, ಅವನ್ನು ಅಡಕವಾಗಿ ಗುರುತಿಸಿದರೆ ಸಾಕಾಗುತ್ತದೆ; ಇದಕ್ಕೆ ಬದಲು, ತಿಳಿಯದ ತೋರುಪದಗಳನ್ನು ಬಳಸಿರುವಲ್ಲಿ ಅವು ಗುರುತಿಸುವ ಪಾಂಗುಗಳು ನಿಜಕ್ಕೂ ಎಂತಹವು ಎಂಬುದನ್ನು ಆಡುಗನು ತಿಳಿದಿಲ್ಲವಾದ ಕಾರಣ, ಅವನ್ನೂ ಅಡಕವಾಗಿ ಮಾತ್ರವೇ ಗುರುತಿಸಲು ಬರುತ್ತದೆ. ಈ ರೀತಿ, ಪಾಂಗುಗಳನ್ನು ಮತ್ತು ಪರಿಚೆಗಳನ್ನು ಅಡಕವಾಗಿ ಗುರುತಿಸುವುದಕ್ಕಾಗಿ ಅವುಗಳ ಎರಡನೆಯ ಅಂಗದಲ್ಲಿ ಹೆಸರು ಮತ್ತು ಪರಿಚೆ ಎಂಬ ಎರಡು ಮುಕ್ಯ ಬಗೆಗಳನ್ನು, ಮತ್ತು ಪರಿಚೆಗಳಲ್ಲಿ ಎಸಕಪರಿಚೆ ಮತ್ತು ಹೆಸರುಪರಿಚೆ ಎಂಬ ಬೇರೆ ಎರಡು ಬಗೆಗಳನ್ನು ಕಾಣಲು ಬರುತ್ತದೆ. ಎತ್ತುಗೆಗಾಗಿ, ತಿಳಿದ ದೂರದ ತೋರುಪದಗಳಲ್ಲಿ ಅವನು, ಅವಳು, ಅದು ಎಂಬ ಹೆಸರಿನ ಪದಗಳು, ಅಲ್ಲಿ, ಅತ್ತ, ಆಗ, ಅಂದು, ಹಾಗೆ ಎಂಬ ಎಸಕಪರಿಚೆಯ ಪದಗಳು, ಮತ್ತು ಅಶ್ಟು, ಅಂತಹ, ಆ ಎಂಬ ಹೆಸರುಪರಿಚೆಯ ಪದಗಳು ಕಾಣಿಸುತ್ತವೆ. ಇಂತಹವೇ ವ್ಯತ್ಯಾಸಗಳು ತಿಳಿದ ಹತ್ತಿರದ ತೋರುಪದಗಳಲ್ಲಿ (ಇವನು, ಇವಳು, ಇದು, ಇಲ್ಲಿ, ಇತ್ತ, ಈಗ, ಇಂದು, ಹೀಗೆ, ಇಶ್ಟು, ಇಂತಹ, ಈ) ಮತ್ತು ತಿಳಿಯದ ತೋರುಪದಗಳಲ್ಲಿಯೂ (ಯಾವನು, ಯಾವಳು, ಯಾವುದು, ಎಲ್ಲಿ, ಎತ್ತ, ಯಾವಾಗ, ಹೇಗೆ, ಎಶ್ಟು, ಹೇಗೆ, ಯಾವ) ಕಾಣಿಸುತ್ತವೆ (10.1 ನೋಡಿ). ತೋರುಪದಗಳಲ್ಲಿ ಕಾಣಿಸುವ ಈ ಹರವಿನ ವ್ಯತ್ಯಾಸ ಆಡುಪದಗಳಲ್ಲಿ ಕಾಣಿಸದಿರುವುದಕ್ಕೆ ಅವು ನಡೆಸಬೇಕಾಗಿರುವ ಕೆಲಸಗಳ ನಡುವಿನ ವ್ಯತ್ಯಾಸವೇ

9.5.4 ಪತ್ತುಗೆ ಒಟ್ಟುಗಳೊಂದಿಗೆ ಬಳಕೆ

ಆಡುಪದಗಳ ಹಾಗೆ ತೋರುಪದಗಳೂ ಸೊಲ್ಲು ತಿಳಿಸುವ ಇರುಹ ಇಲ್ಲವೇ ಎಸಕದಲ್ಲಿ ತೊಡಗಿಕೊಂಡಿರುವ ಪಾಂಗುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ; ಆದರೆ, ಹಾಗೆ ಆರಿಸಿರುವ ಪಾಂಗು ಸೊಲ್ಲಿನ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬ ಎಂಬುದನ್ನು ಮಾತ್ರ ಆಡುಪದಗಳು ತಿಳಿಸುತ್ತವೆ; ಇದಕ್ಕೆ ಬದಲು, ಹಾಗೆ ಆರಿಸಿದ ಪಾಂಗಿನ ಕಡೆಗೆ, ಬೇರೆ ಬೇರೆ ಕಾರಣಗಳಿಗಾಗಿ, ಕೇಳುಗನ ಗಮನವನ್ನು ಸೆಳೆಯುವಂತಹ ಕೆಲಸವನ್ನು ತೋರುಪದಗಳು ನಡೆಸಬೇಕಾಗುತ್ತದೆ.

ಈ ಎರಡು ಬಗೆಯ ಪದಗಳೂ ತಮ್ಮವೇ ಆದ ಕಾರಣಗಳಿಗಾಗಿ ಸೊಲ್ಲಿನ ಪಾಂಗುಗಳಲ್ಲೊಂದನ್ನು ಆರಿಸಿಕೊಳ್ಳಬೇಕಾಗಿದೆಯಾದ ಕಾರಣ, ಅವೆರಡೂ ಪತ್ತುಗೆ ಒಟ್ಟುಗಳೊಂದಿಗೆ ಬರಬೇಕಾಗುತ್ತದೆ. ಆದರೆ, ಈ ರೀತಿ ಪಾಂಗನ್ನು ಆರಿಸಿಕೊಳ್ಳುವಲ್ಲಿ, ಮತ್ತು ಅದಕ್ಕಾಗಿ ಪತ್ತುಗೆ ಒಟ್ಟನ್ನು ಪಡೆಯುವಲ್ಲಿ ಆಡುಪದಗಳಿಗೂ ತೋರುಪದಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ: ಮೇಲೆ 9.2.2ರಲ್ಲಿ ವಿವರಿಸಿದ ಹಾಗೆ, ಆಡುಪದಗಳು ಪಾಂಗುಗಳನ್ನು ಆರಿಸಿಕೊಳ್ಳುವಲ್ಲಿ ಆಳ್ತನದ ಕಟ್ಟುಪಾಡಿಗೆ ಒಳಗಾಗುತ್ತವೆ; ಇದಕ್ಕೆ ಕಾರಣವೇನೆಂದರೆ, ಸೊಲ್ಲುಗಳ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬನಾಗಿ ಆಳ್ತನವಿರುವ ಪಾಂಗುಗಳು ಮಾತ್ರ ಬರಬಲ್ಲುವು. ತೋರುಪದಗಳಲ್ಲಿಯೂ ಕೆಲವು ಈ ಆಳ್ತನದ ಕಟ್ಟುಪಾಡಿಗೆ ಒಳಗಾಗುತ್ತವೆ; ಆದರೆ ಉಳಿದವು ಬೇರೆ ಬಗೆಯ ಕಟ್ಟುಪಾಡುಗಳಿಗೆ ಒಳಗಾಗುತ್ತವೆ; ಅವನ್ನು ಹೆಸರುಪದಗಳು, ಎಸಕಪರಿಚೆಗಳು, ಮತ್ತು ಹೆಸರುಪರಿಚೆಗಳು ಎಂಬುದಾಗಿ ಮೂರು ಗುಂಪುಗಳಲ್ಲಿ ಗುಂಪಿಸಲು ಬರುತ್ತಿದ್ದು, ಇವುಗಳಲ್ಲಿ ಒಂದೊಂದು ಗುಂಪಿನಲ್ಲಿ ಬರುವವುಗಳನ್ನೂ, ಅವುಗಳ ಹರವನ್ನವಲಂಬಿಸಿ, ಕೆಲವು ಒಳಗುಂಪುಗಳಲ್ಲಿ ಗುಂಪಿಸಲು ಬರುತ್ತದೆ (10.1.2 ನೋಡಿ); ಈ ಎಲ್ಲಾ ಗುಂಪಿಕೆಗಳೂ ಅವು ಆರಿಸಿಕೊಳ್ಳಬಲ್ಲ ಪಾಂಗುಗಳು ಎಂತಹವು ಎಂಬುದರ ಮೇಲೆ ಕಟ್ಟುಪಾಡುಗಳನ್ನು ಹೊರಿಸುತ್ತವೆ (10.1.8 ನೋಡಿ). ಗಂಡಸು, ಹೆಂಗಸು, ಮತ್ತು ಹಲವರು ಎಂಬ ಮೂರು ಗುಂಪುಗಳಲ್ಲಿ ಸೇರುವ ಅವನು, ಇವಳು, ಅವರು, ಯಾರು ಮೊದಲಾದ ತೋರುಪದಗಳು ಆಳ್ತನದ ಕಟ್ಟುಪಾಡಿಗೆ ಒಳಗಾಗುತ್ತವೆ; ಆದರೆ, ಅದು, ಇದು, ಅವು, ಯಾವುದು ಮೊದಲಾದ ಉಳಿದ ತೋರುಪದಗಳು ಆಳ್ತನವಿರುವ ಪಾಂಗುಗಳನ್ನು ಗುರುತಿಸುವುದಿಲ್ಲವಾದ ಕಾರಣ, ಬೇರೊಂದು ಬಗೆಯ ಕಟ್ಟುಪಾಡಿಗೆ ಒಳಗಾಗುತ್ತವೆ. ಎಸಕಪರಿಚೆಗಳಾಗಿ ಬರಬಲ್ಲ ಅಲ್ಲಿ, ಇಶ್ಟು, ಅಂದು ಮೊದಲಾದುವು ಇನ್ನೊಂದು ಬಗೆಯ ಕಟ್ಟುಪಾಡಿಗೆ ಒಳಗಾಗುತ್ತವೆ: ಅವುಗಳೊಂದಿಗೆ ಇಂದ ಮತ್ತು ಇಗೆ ಎಂಬ ಎರಡು ಪತ್ತುಗೆ ಒಟ್ಟುಗಳು ಮಾತ್ರ ಬರಬಲ್ಲುವು. ಯಾಕೆಂದರೆ, ಅವು ಆಗುಗ, ಮಾಡುಗ, ಇಲ್ಲವೇ ಈಡು ಪಾಂಗಾಗಿ ಬರಲಾರವು, ಮತ್ತು ಜಾಗ ಇಲ್ಲವೇ ಹೊತ್ತು ಪಾಂಗಾಗಿ ಬರಲು ಅವಕ್ಕೆ ಪತ್ತುಗೆ ಒಟ್ಟನ್ನು ಸೇರಿಸಬೇಕಾಗುವುದಿಲ್ಲ (10.2.1 ನೋಡಿ). ಇದಲ್ಲದೆ, ಹೆಸರುಪರಿಚೆಗಳಾಗಿ ಬರಬಲ್ಲ ಆ, ಯಾವ, ಅಂತಹ, ಇಂತಹ ಎಂಬಂತಹ ತೋರುಪದಗಳು ಯಾವ ಪತ್ತುಗೆ ಒಟ್ಟನ್ನೂ ಪಡೆಯುವುದಿಲ್ಲ; ಯಾಕೆಂದರೆ, ಅವು ಹೆಸರುಪದಗಳೊಂದಿಗೆ ಪದಕಂತೆಗಳಲ್ಲಿ ಬರುತ್ತಿದ್ದು, ಪತ್ತುಗೆ ಒಟ್ಟುಗಳನ್ನು ಅವುಗಳ ಬಳಿಕ ಬರುವ ಹೆಸರುಪದಗಳಿಗೆ

ಸೇರಿಸಲಾಗುತ್ತದೆ (ಆ ಹುಡುಗನಿಗೆ, ಯಾವ ಮನೆಯಲ್ಲಿ, ಇಂತಹ ಕೆಲಸವನ್ನು).

9.5.5 ಪಾಂಗುಗಳನ್ನು ಗುರುತಿಸುವುದು

ಆಡುಪದಗಳು ಪಾಂಗುಗಳನ್ನು ಗುರುತಿಸಲು ಹೋಗುವುದಿಲ್ಲ; ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಅವು ತಿಳಿಸುವ ಪಾಂಗುಗಳು ತೊಡಗಿಕೊಂಡಿವೆಯಾದಲ್ಲಿ, ಹಾಗೆ ತೊಡಗಿಕೊಂಡಿವೆ ಎಂಬುದನ್ನು ಮಾತ್ರ ಅವು ತಿಳಿಸುತ್ತವೆ. ಇದಕ್ಕೆ ಬದಲು, ತೋರುಪದಗಳು ತೋರ್ಕೆಯ ಮೂಲಕ ಕೇಳುಗನ ಇಲ್ಲವೇ ಓದುಗನ ಗಮನವನ್ನು ಪಾಂಗುಗಳ ಕಡೆಗೆ ಸೆಳೆಯುತ್ತವೆ, ಮತ್ತು ಹಾಗೆ ಮಾಡುವ ಮೂಲಕ ಅವು ಪಾಂಗುಗಳನ್ನು ಗುರುತಿಸುತ್ತವೆ. ಇದು ಆಡುಪದಗಳಿಗೂ ತೋರುಪದಗಳಿಗೂ ನಡುವೆ ಪಾಂಗುಗಳ ಗುರುತಿಸುವಿಕೆಯ ಕುರಿತಾಗಿರುವ ಮುಕ್ಯ ವ್ಯತ್ಯಾಸವಾಗಿದೆ. ಈ ವ್ಯತ್ಯಾಸದಿಂದಾಗಿ, ಆಡುಪದ ಮತ್ತು ತೋರುಪದಗಳ ಬಳಕೆಗಳ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ: (1) ಆಡುಪದಗಳು ಗುರ್ತದ ವ್ಯತ್ಯಾಸವನ್ನು ತೋರಿಸುವುದಿಲ್ಲ; ಸೊಲ್ಲಿನ ಉಂಟುಮಾಡುವಿಕೆಯಲ್ಲಿ ಆಡುಗ, ಕೇಳುಗ, ಇಲ್ಲವೇ ಬೇರೊಬ್ಬನಾಗಿ ಬಂದಿರುವ ವ್ಯಕ್ತಿ ಗಂಡುಸಾಗಿರಲಿ, ಇಲ್ಲವೇ ಹೆಂಗುಸಾಗಿರಲಿ, ಅವುಗಳಲ್ಲಿ ಯಾವ ಮಾರ್ಪಾಡೂ ನಡೆಯುವುದಿಲ್ಲ: (1ಕ) ನಾನು ದೊಡ್ಡವನು. (1ಚ) ನಾನು ದೊಡ್ಡವಳು. (1ಕ) ಸೊಲ್ಲಿನ ಆಡುಗನಾಗಿರುವ ವ್ಯಕ್ತಿ ಒಬ್ಬ ಗಂಡುಸು, ಮತ್ತು (1ಚ) ಸೊಲ್ಲಿನ ಆಡುಗನಾಗಿರುವ ವ್ಯಕ್ತಿ ಒಬ್ಬ ಹೆಂಗುಸು; ಈ ವ್ಯತ್ಯಾಸ ಆಡುಗನ ಪರಿಚೆಯನ್ನು ತಿಳಿಸುವ ದೊಡ್ಡವನು-ದೊಡ್ಡವಳು ಪದದಿಂದ ಗೊತ್ತಾಗುತ್ತದೆ; ಆದರೆ, ಆಡುಗನನ್ನು ತಿಳಿಸುವ ನಾನು ಪದದಿಂದ ಗೊತ್ತಾಗುವುದಿಲ್ಲ. ನೀನು ಮತ್ತು ತಾನು ಪದಗಳಿಂದಲೂ ಇದೇ ರೀತಿಯಲ್ಲಿ ಅವು ತಿಳಿಸುವ ವ್ಯಕ್ತಿಗಳ ನಡುವಿರುವ ವ್ಯತ್ಯಾಸ ಗೊತ್ತಾಗುವುದಿಲ್ಲವೆಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ನೀನು ದೊಡ್ಡವನು. (1ಚ) ನೀನು ದೊಡ್ಡವಳು. (2ಕ) ತಾನು ದೊಡ್ಡವನೆಂಬುದನ್ನು ಅವನು ಮರೆತಿದ್ದ.

(2ಚ) ತಾನು ದೊಡ್ಡವಳೆಂಬುದನ್ನು ಅವಳು ಮರೆತಿದ್ದಳು. ಇದಕ್ಕೆ ಬದಲು, ವ್ಯಕ್ತಿಗಳನ್ನು ಗುರುತಿಸುವ ತೋರುಪದಗಳು ಓರೆಣಿಕೆಯಲ್ಲಿ ಗಂಡುಸು-ಹೆಂಗುಸು ಗುರ್ತವ್ಯತ್ಯಾಸವನ್ನು ತೋರಿಸುತ್ತವೆ: (1ಕ) ಅವನು ದೊಡ್ಡವನು. (1ಚ) ಅವಳು ದೊಡ್ಡವಳು. ಹಲವೆಣಿಕೆಯಲ್ಲಿ ಈ ತೋರುಪದಗಳು ಗಂಡುಸು-ಹೆಂಗುಸು ವ್ಯತ್ಯಾಸವನ್ನು ತೋರಿಸುವುದಿಲ್ಲವಾದರೂ ಅವಕ್ಕೂ ಉಳಿದುವಕ್ಕೂ ನಡುವಿರುವ ಗುರ್ತ ವ್ಯತ್ಯಾಸವನ್ನು ತೋರಿಸುತ್ತವೆ: (1ಕ) ಅವರು ದೊಡ್ಡವರು. (1ಚ) ಅವು ದೊಡ್ಡವು. ಆಡುಪದಗಳಿಗೂ ತೋರುಪದಗಳಿಗೂ ನಡುವಿರುವ ಈ ವ್ಯತ್ಯಾಸ, ಆಡುಪದಗಳು ವ್ಯಕ್ತಿಗಳನ್ನು ಗುರುತಿಸಬೇಕಾಗಿಲ್ಲ, ಆದರೆ ತೋರುಪದಗಳು ಗುರುತಿಸಬೇಕಾಗುತ್ತದೆ ಎಂಬ ಅವುಗಳ ಬಳಕೆಯ ಮೇಲಿರುವ ಕಟ್ಟುಪಾಡಿನಿಂದ ಮೂಡಿಬಂದಿವೆಯೆಂದು ಹೇಳಬಹುದು. (2) ತೋರುಪದಗಳ ಹಲವೆಣಿಕೆಯ ರೂಪಗಳ ಹಾಗೆ, ಆಡುಪದಗಳ ಹಲವೆಣಿಕೆಯ ರೂಪಗಳನ್ನೂ ಅವು ತಿಳಿಸುವ ವ್ಯಕ್ತಿಗೆ ಮದಿಪು ಕೊಡುವುದಕ್ಕಾಗಿ ಓರೆಣಿಕೆಯಲ್ಲಿ ಬಳಸಲು ಬರುತ್ತದೆ: (1ಕ) ನೀವು ಮುಂಬಯಿಯಿಂದ ಬಂದುದು ಯಾವಾಗ? (1ಚ) ಅವರು ಮುಂಬಯಿಯಿಂದ ಬಂದುದು ಯಾವಾಗ? (1ಕ)ದಲ್ಲಿ ಬಂದಿರುವ ನೀವು ಆಡುಪದಕ್ಕೆ ಹಲವೆಣಿಕೆಯ ಬಳಕೆಯೂ ಇರಬಲ್ಲುದು (ಆ ಕೇಳ್ವಿ ಸೊಲ್ಲಿನ ಕೇಳುಗ ಮತ್ತು ಬೇರೆ ಕೆಲವು ವ್ಯಕ್ತಿಗಳ ಕುರಿತಾಗಿರಬಲ್ಲುದು), ಇಲ್ಲವೇ ಓರೆಣಿಕೆಯ ಬಳಕೆಯೂ ಇರಬಲ್ಲುದು (ಆ ಕೇಳ್ವಿ ಒಬ್ಬ ಕೇಳುಗನ ಕುರಿತಾಗಿಯೂ ಇರಬಲ್ಲುದು). ಈ ಎರಡನೆಯ ಬಳಕೆಯಲ್ಲಿ ಅದನ್ನು ಕೇಳುಗನಿಗೆ ಮದಿಪನ್ನು ಕೊಡುವುದಕ್ಕಾಗಿ ಬಳಸಲಾಗಿದೆ. ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ಅವರು ತೋರುಪದಕ್ಕೂ ಹಲವು ಮಂದಿಯನ್ನು ಗುರುತಿಸುವ ಹಲವೆಣಿಕೆಯ ಬಳಕೆ ಇಲ್ಲವೇ ಒಬ್ಬನೇ ವ್ಯಕ್ತಿಯನ್ನು ಗುರುತಿಸುವ ಓರೆಣಿಕೆಯ (ಮದಿಪಿನ) ಬಳಕೆ ಎಂಬುದಾಗಿ ಎರಡು

ಬಳಕೆಗಳಿರಬಲ್ಲುದಾಗಿದ್ದು, ಆ ಸೊಲ್ಲಿಗೆ ಎರಡು ಹುರುಳುಗಳು ದೊರಕಬಲ್ಲುವು. ಆಡುಪದ ಮತ್ತು ತೋರುಪದಗಳಿಗಿರುವ ಈ ಮದಿಪಿನ ಬಳಕೆಗಳು ಪಾಂಗುಗಳನ್ನು ಗುರುತಿಸುವಲ್ಲಿ ಆ ಎರಡು ಬಗೆಯ ಪದಗಳ ಮೇಲಿರುವ ಕಟ್ಟುಪಾಡುಗಳಿಗೆ ಹೊರಪಡಿಕೆಗಳಾಗಿವೆ: (ಕ) ಆಡುಪದಗಳು ಪಾಂಗುಗಳನ್ನಶ್ಟೇ ತಿಳಿಸಬೇಕಲ್ಲದೆ, ಅವು ಗುರುತಿಸುವ ವ್ಯಕ್ತಿಗಳ ಕುರಿತು ಏನೂ ತಿಳಿಸಬಾರದು; ಯಾಕೆಂದರೆ, ಹಾಗೆ ತಿಳಿಸಹೋದರೆ, ಅವುಗಳಿಗಿರುವ ಮಾರಿಕೆಯ ಕೆಲಸಕ್ಕೆ ಅಡ್ಡಿಯಾಗುತ್ತದೆ. ಆದರೆ, ಮದಿಪಿರುವ ವ್ಯಕ್ತಿಗೂ ಮದಿಪಿಲ್ಲದ ವ್ಯಕ್ತಿಗೂ ನಡುವಿರುವ ವ್ಯತ್ಯಾಸವನ್ನು ಆಡುಪದಗಳ ಎಣಿಕೆರೂಪಗಳ ಮೂಲಕ ತಿಳಿಸುತ್ತಿರುವುದು ಈ ಕಟ್ಟಲೆಗೆ ಹೊರಪಡಿಕೆಯಾಗುತ್ತದೆ. (ಚ) ತೋರುಪದಗಳು ತೋರ್ಕೆಯ ಮೂಲಕ ಆಡುಗನ ಕುಳ್ಳಿಹದಲ್ಲಿರುವ ಒಂದು ಪಾಂಗನ್ನು, ಇಲ್ಲವೇ ಹಿಂದಿನ ಸೊಲ್ಲುಗಳಲ್ಲಿ ಗುರುತಿಸಿರುವ ಬೇರೊಂದು ಪಾಂಗನ್ನು ಕೇಳುಗನ ಗಮನಕ್ಕೆ ತರಲು ಬಳಕೆಯಾಗುತ್ತವೆ; ಹೀಗೆ ಗಮನಕ್ಕೆ ತರುವಲ್ಲಿ ತೋರುಪದಗಳ ಗುರ್ತವ್ಯತ್ಯಾಸ ಮತ್ತು ಎಣಿಕೆವ್ಯತ್ಯಾಸಗಳು ನೆರವಿಗೆ ಬರುತ್ತವೆ. ಓರೆಣಿಕೆಯ ಪದದಿಂದ ಒಬ್ಬ ವ್ಯಕ್ತಿಯನ್ನು ಮತ್ತು ಹಲವೆಣಿಕೆಯ ಪದದಿಂದ ಹಲವು ವ್ಯಕ್ತಿಗಳನ್ನು ಈ ರೀತಿ ಕೇಳುಗನ ಗಮನಕ್ಕೆ ತರಲಾಗುತ್ತದೆ. ಹಾಗಾಗಿ, ಒಬ್ಬನೇ ವ್ಯಕ್ತಿಯನ್ನು ಕೇಳುಗನ ಗಮನಕ್ಕೆ ತರುವಲ್ಲಿ ಆತನಿಗೆ ಮದಿಪನ್ನು ಕೊಡುವುದಕ್ಕಾಗಿ ಹಲವೆಣಿಕೆಯ ಅವರು, ಇವರು ಎಂಬಂತಹ ಪದಗಳನ್ನು ಬಳಸುವುದೆಂದರೆ ಮೇಲಿನ ಕಟ್ಟಲೆಗೆ ಹೊರಪಡಿಕೆಯೊಂದನ್ನು ತಂದು ಹಾಕಿದಂತೆಯೇ ಸರಿ.

9.5.6 ಮಾರಿಕೆಯ ಹುರುಳು ಮತ್ತು ತೋರ್ಕೆಯ ಹುರುಳು

ಆಡುಪದಗಳಿಗೆ ಮಾರಿಕೆಯ ಹುರುಳಿರುವ ಹಾಗೆ ತೋರುಪದಗಳಿಗೆ ತೋರ್ಕೆಯ ಹುರುಳಿದೆ; ಹಾಗಾಗಿ, ಈ ಎರಡು ಬಗೆಯ ಪದಗಳೊಂದಿಗೂ ಅವು ತಿಳಿಸುವ ಪಾಂಗುಗಳ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಬಲ್ಲ ನುಡಿತಗಳನ್ನು ನೇರವಾಗಿ ಬಳಸಲು ಬರುವುದಿಲ್ಲ. ಅಂತಹ ನುಡಿತಗಳನ್ನು ಮಾರಿಕೆಯ ಹುರುಳಿರುವ ಆಡುಪದಗಳೊಂದಿಗೆ ಬಳಸಿದಲ್ಲಿ ಅವುಗಳ ಮಾರಿಕೆಯ ಹುರುಳು ಇಲ್ಲವಾಗುತ್ತದೆ: (1ಕ) *ದೊಡ್ಡ ನನಗೆ ಈ ಉಡುಪು ಸರಿಯಾಗಿದೆ. (1ಚ) *ಹಾಗಿದ್ದರೆ ಚಿಕ್ಕ ನನಗೆ ಅದು ಬೇಡ.

ನನಗೆ ಎಂಬ ಆಡುಪದ ಈ ಎರಡು ಸೊಲ್ಲುಗಳಲ್ಲೂ ಆಡುಗನನ್ನು ತಿಳಿಸಬೇಕಾಗಿದೆ; ಆದರೆ, ಅದರೊಂದಿಗೆ ಬಂದಿರುವ ದೊಡ್ಡ ಮತ್ತು ಚಿಕ್ಕ ಪದಗಳು ಅದಕ್ಕಿಂತ ಹೆಚ್ಚಿನ ಸಂಗತಿಗಳನ್ನು ತಿಳಿಸಹೋಗಿ ಆ ಕೆಲಸಕ್ಕೆ ಅಡ್ಡಿಯನ್ನುಂಟುಮಾಡುತ್ತವೆ, ಮತ್ತು ಈ ಕಾರಣಕ್ಕಾಗಿ (1ಕ-ಚ) ಸೊಲ್ಲುಗಳು ಸರಿಯಾಗಿಲ್ಲ. ತೋರ್ಕೆಯ ಹುರುಳಿರುವ ತೋರುಪದಗಳೊಂದಿಗೆ ಇಂತಹ ಪದಗಳನ್ನು ಬಳಸದಿರುವುದಕ್ಕೆ ಕಾರಣವೇನೆಂದರೆ, ಆಡುಗನ ಕುಳ್ಳಿಹದಿಂದಲೇನೇ ಅವು ಎಂತಹ ಪಾಂಗನ್ನು ಗುರುತಿಸುತ್ತವೆ ಎಂಬುದು ಗೊತ್ತಾಗುತ್ತದೆ; ಹಾಗಾಗಿ ಅಂತಹ ಹೆಚ್ಚಿನ ಪದಗಳು ಬೇಕಾಗುವುದೇ ಇಲ್ಲ: (1ಕ) *ದೊಡ್ಡ ಇವನು ನನ್ನ ತಮ್ಮ. (1ಚ) ಈ ಪುಸ್ತಕವನ್ನು ನಾನು ಬೆಂಗಳೂರಿನಿಂದ ತಂದೆ; *ಚಿಕ್ಕ ಇದು ತುಂಬಾ ಚನ್ನಾಗಿದೆ. (1ಕ)ದಲ್ಲಿ ಇವನು ಎಂಬುದು ಆಡುಗನ ಹತ್ತಿರ ಇರುವ ವ್ಯಕ್ತಿಯನ್ನು ಹೊರತೋರ್ಕೆಯ ಮೂಲಕ ತಿಳಿಸುತ್ತದೆ; ಆತ ಯಾರೆಂಬುದು ಕೇಳುಗನಿಗೆ ಸುಳುವಾಗಿ ತಿಳಿಯುವುದಾದ ಕಾರಣ, ಆ ಪದದೊಂದಿಗೆ ದೊಡ್ಡ ಎಂಬ ಪದವನ್ನು ಬಳಸಬೇಕಾಗುವುದಿಲ್ಲ; ಹಾಗಾಗಿ, ಆ ಸೊಲ್ಲು ಸರಿಯಿಲ್ಲ. ಇದಕ್ಕೆ ಬದಲು, (1ಚ)ದ ಎರಡನೇ ಸೊಲಿನಲ್ಲಿ ಬಂದಿರುವ ಇದು ಎಂಬ ತೋರುಪದ ಏನನ್ನು ಗುರುತಿಸುತ್ತದೆ ಎಂಬುದು ಅದರ ಹಿಂದಿನ ಸೊಲ್ಲಿನಲ್ಲಿ ಬಂದಿರುವ ಈ ಪುಸ್ತಕ ಎಂಬ ಹಿನ್ನುಡಿತದಿಂದ ಗೊತ್ತಾಗುತ್ತದೆ; ಹಾಗಾಗಿ, ಅದರ ಕುರಿತು ಹೆಚ್ಚಿನ ತಿಳಿವನ್ನು ಕೊಡಲು ಬಳಸಿರುವ ಚಿಕ್ಕ ಎಂಬುದರಿಂದಾಗಿ ಆ ಸೊಲ್ಲೂ ಸರಿಯಾಗಿಲ್ಲ. ಈ ಎರಡು ಬಗೆಯ ಪದಗಳ ಬಳಿಕವೂ ಅವು ತಿಳಿಸುವ ಪಾಂಗುಗಳ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡುವ ನುಡಿತಗಳನ್ನು ಬೇರೆಯೇ ಪದಕಂತೆಗಳಾಗಿ ಬಳಸಲು ಬರುತ್ತದೆ: (1ಕ) ನಾವು, ಮೂರನೇ ತರಗತಿಯ ಹುಡುಗರು, ತೋಟದಲ್ಲಿ ಕೆಲಸ ಮಾಡುತ್ತೇವೆ. (1ಚ) ಇವರು, ಮೂರನೇ ತರಗತಿಯ ಹುಡುಗರು, ತೋಟದಲ್ಲಿ ಕೆಲಸ ಮಾಡುತ್ತಾರೆ. ತಿಳಿದ ತೋರುಪದಗಳಲ್ಲಿ ಅವನು, ಅದು, ಅಲ್ಲಿ ಮೊದಲಾದ ದೂರದ ತೋರುಪದಗಳನ್ನು ತೋರ್ಕೆಯ ಹುರುಳಿಲ್ಲದೆಯೂ ಬಳಸಲು ಬರುತ್ತದೆ (10.3.4 ನೋಡಿ); ಹಾಗಾಗಿ, ಆ ರೀತಿ ತೋರ್ಕೆಯ ಹುರುಳಿಲ್ಲದೆ

ಬಳಕೆಯಾಗಿರುವ ದೂರದ ತೋರುಪದಗಳೊಂದಿಗೆ ಅವು ಗುರುತಿಸುವ ಪಾಂಗುಗಳ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡುವ ನುಡಿತಗಳನ್ನು ನೇರವಾಗಿಯೂ ಬಳಸಲು ಬರುತ್ತದೆ: (1ಕ) ದೊಡ್ಡವರು ಮನೆಯಲ್ಲಿದ್ದಾರೆ. (1ಚ) ನೆರೆಮನೆಯವಳು ತನ್ನ ತವರಿಗೆ ಹೋಗಿದ್ದಾಳೆ. (1ಟ) ಮುಂಬಯಿಯಿಂದ ಬಂದವನು ಒಳಗೆಯೇ ಕುಳಿತಿದ್ದಾನೆ. ಆದರೆ, ಆಡುಪದಗಳಲ್ಲಿ ಯಾವುವೂ ಆ ರೀತಿ ಮಾರಿಕೆಯ ಹುರುಳಿಲ್ಲದೆ ಬರುವುದಿಲ್ಲ, ಮತ್ತು ಈ ಕಾರಣಕ್ಕಾಗಿ ಅವನ್ನು ನೇರವಾಗಿ ಅಂತಹ ನುಡಿತಗಳೊಂದಿಗೆ ಬಳಸಲೂ ಬರುವುದಿಲ್ಲ. ಒಂದು ಸೂಳುನುಡಿ ಮುಂದುವರಿಯುತ್ತಿರುವಂತೆ, ಅದರ ಆಡುಗ, ಕೇಳುಗ, ಮತ್ತು ಬೇರೊಬ್ಬರಾಗಿರುವ ವ್ಯಕ್ತಿಗಳ ನಡುವೆ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ; ಕೇಳುಗನಾಗಿದ್ದವನು ಆಡುಗನಾಗಬಹುದು, ಆಡುಗನಾಗಿದ್ದವನು ಕೇಳುಗನಾಗಬಹುದು, ಮತ್ತು ಬೇರೊಬ್ಬನಾಗಿದ್ದವನು ಆಡುಗ ಇಲ್ಲವೇ ಕೇಳುಗನಾಗಬಹುದು. ಇಂತಹ ಮಾರ್ಪಾಡುಗಳು ನಡೆಯುತ್ತಲೇ ಇದ್ದರೂ ಉದ್ದಕ್ಕೂ ನಾನು ಎಂಬುದು ಸೊಲ್ಲುಗಳ ಆಡುಗನನ್ನು ತಿಳಿಸುತ್ತದೆ, ನೀನು ಎಂಬುದು ಕೇಳುಗನನ್ನು ತಿಳಿಸುತ್ತದೆ, ಮತ್ತು ತಾನು ಎಂಬುದು ಬೇರೊಬ್ಬನನ್ನು ತಿಳಿಸುತ್ತದೆ. ಈ ರೀತಿ ಸೊಲ್ಲುಗಳ ಆಡುಗ, ಕೇಳುಗ, ಮತ್ತು ಬೇರೊಬ್ಬರಾಗಿರುವ ವ್ಯಕ್ತಿಗಳು ಬದಲಾಗುತ್ತಾ ಇರುವಾಗಲೂ ಆಡುಪದಗಳು ಬದಲಾಗದೆ ಉಳಿಯುವುದರಿಂದ ಅವಕ್ಕೆ ಮಾರಿಕೆಯ ಹುರುಳಿದೆಯೆಂದು ಹೇಳಲಾಗುತ್ತದೆ. ತೋರ್ಕೆಯ ಹುರುಳು ಇದರಿಂದ ಬೇರಾದುದು; ಸೊಲ್ಲುಗಳಲ್ಲಿ ಬಳಕೆಯಾಗಿರುವ ತೋರುಪದಗಳು ಆಡುಗನ ಕುಳ್ಳಿಹದಲ್ಲಿರುವ ವ್ಯಕ್ತಿ, ವಸ್ತು, ಜಾಗ, ಹೊತ್ತು, ಬಗೆ ಮೊದಲಾದವುಗಳ ಕಡೆಗೆ ಕೇಳುಗನ ಗಮನವನ್ನು ಸೆಳೆಯುವ ಮೂಲಕ ಅವನ್ನು ಗುರುತಿಸುತ್ತವೆ, ಇಲ್ಲವೇ ಹಿಂದಿನ ಸೊಲ್ಲುಗಳಲ್ಲಿ ಗುರುತಿಸಿರುವ ಪಾಂಗೊಂದನ್ನು ಕೇಳುಗನ ಗಮನಕ್ಕೆ ತರುವ ಮೂಲಕ ಇನ್ನೊಮ್ಮೆ ಗುರುತಿಸುತ್ತವೆ. ಈ ಎರಡು ಕಡೆಗಳಲ್ಲೂ ತೋರುಪದಗಳ ಮೂಲಕ ಪಾಂಗೊಂದನ್ನು ಕೇಳುಗನಿಗೆ ತೋರಿಸಿ ಗುರುತಿಸಲಾಗುತ್ತದೆ ಎಂಬುದರಿಂದ ಅವಕ್ಕೆ ತೋರ್ಕೆಯ ಹುರುಳಿದೆಯೆಂದು ಹೇಳಲಾಗುತ್ತದೆ. ಈ ಎರಡು ಬಗೆಯ ಹುರುಳುಗಳಲ್ಲೂ ಆಡುಗನ ಕುಳ್ಳಿಹ ಬಳಕೆಯಾಗುತ್ತದೆಯೆಂಬುದೇ ಈ ಎರಡು ಬಗೆಯ ಪದಗಳ ನಡುವಿರುವ ಹೋಲಿಕೆಯಾಗಿದೆ; ಆದರೆ, ತೋರುಪದಗಳ ಬಳಕೆಯಲ್ಲಿ ಆಡುಗನ ಕುಳ್ಳಿಹದ ಬದಲು ಒಳತೋರ್ಕೆಯೆಂಬ ಹೆಸರಿನಲ್ಲಿ ಸೊಲ್ಲಿನ ಕುಳ್ಳಿಹವೂ

ಬಳಕೆಯಾಗಬಲ್ಲುದಾಗಿದ್ದು, ಅದು ಆಡುಪದಗಳ ಮಾರಿಕೆ ಹುರುಳಿಗೂ ತೋರುಪದಗಳ ತೋರ್ಕೆ ಹುರುಳಿಗೂ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವಾಗಿದೆ: (1ಕ) ಜಾನಕಿ ಅವಳ ತಂಗಿಯನ್ನು ಪೇಟೆಗೆ ಕರೆದುಕೊಂಡು ಹೋಗಿದ್ದಾಳೆ. (1ಚ) ಜಾನಕಿ ಇಲ್ಲಿಗೆ ಬಂದಿದ್ದಾಗ ನಾನು ಅವಳನ್ನು ಮಾತನಾಡಿಸಿದ್ದೆ. (1ಟ) ರಾಜುವನ್ನು ಆಕೆ ಅವನು ಆಪೀಸಿನಿಂದ ಬಂದೊಡನೆಯೇ ಬಂiÀi್ಯಲು ತೊಡಗುತ್ತಾಳೆ. (1ಕ)ದಲ್ಲಿ ಬಂದಿರುವ ಅವಳ ಎಂಬ ತೋರುಪದ ಅದೇ ಸೊಲ್ಲಿನಲ್ಲಿ ಬಂದಿರುವ ಜಾನಕಿ ಎಂಬ ಹೆಸರುಪದ ತಿಳಿಸುವ ಪಾಂಗನ್ನೂ ಗುರುತಿಸಬಲ್ಲುದು, ಮತ್ತು ಆ ಸೊಲ್ಲಿನಲ್ಲಿ ಗುರುತಿಸಿಲ್ಲದಂತಹ ಬೇರೊಂದು ವ್ಯಕ್ತಿಯನ್ನೂ ಗುರುತಿಸಬಲ್ಲುದು. ಇವುಗಳಲ್ಲಿ ಮೊದಲನೆಯದನ್ನು ಪಾಂಗುತೋರ್ಕೆ(ಒಳತೋರ್ಕೆ)ಯೆಂದು, ಮತ್ತು ಎರಡನೆಯದನ್ನು ಹೊರತೋರ್ಕೆಯೆಂದು ಹೆಸರಿಸಲಾಗಿದೆ. (1ಚ-ಟ)ಗಳಲ್ಲಿ ಬಂದಿರುವ ಅವಳು ಮತ್ತು ಅವನು ಎಂಬ ತೋರುಪದಗಳಿಗೂ ಈ ರೀತಿ ಎರಡು ಬಗೆಯ ಹುರುಳುಗಳು ಸಿಗಬಲ್ಲುವು. ಆದರೆ, ಆಡುಪದಗಳಿಗೆ ಇಂತಹ ಹೆಚ್ಚಿನ ಬಳಕೆಯಿಲ್ಲ; ಅವನ್ನು ಮಾರಿಕೆಯ ಹುರುಳಿನಲ್ಲಿ ಸೊಲ್ಲಿನ ಆಡುಗ, ಕೇಳುಗ, ಮತ್ತು ಬೇರೊಬ್ಬ ಎಂಬ ಸೊಲ್ಲಿನ ಉಂಟುಮಾಡುವಿಕೆಗೆ ಸಂಬಂದಿಸಿದ ಪಾಂಗುಗಳನ್ನು ತಿಳಿಸುವುದಕ್ಕಾಗಿ ಮಾತ್ರ ಬಳಸಲಾಗುತ್ತದೆ: (1ತ) ಜಾನಕಿ ನನ್ನ ತಂಗಿಯನ್ನು ಪೇಟೆಗೆ ಕರೆದುಕೊಂಡು ಹೋಗಿದ್ದಾಳೆ. (1ತ) ಸೊಲ್ಲಿನಲ್ಲಿ ಬಂದಿರುವ ನನ್ನ ಎಂಬ ಆಡುಪದಕ್ಕೆ ಸೊಲ್ಲಿನ ಆಡುಗನನ್ನು ತಿಳಿಸುವ ಹುರುಳು ಮಾತ್ರ ದೊರಕಬಲ್ಲುದಲ್ಲದೆ ಬೇರಾವ ಹುರುಳೂ ದೊರಕಲಾರದು. ತೋರುಪದಗಳು ತೋರ್ಕೆಯ ಮೂಲಕ ಒಂದು ಪಾಂಗನ್ನು ಕೇಳುಗನ ಗಮನಕ್ಕೆ ತರಬಲ್ಲುವಾದ ಕಾರಣ, ಆ ಕೆಲಸವನ್ನಶ್ಟೇ ಮಾಡಲು ಇಗೋ ಮತ್ತು ಅಗೋ ಎಂಬ ಎರಡು ಬೇರೆಯೇ ಬಗೆಯ ತಿಳಿದ ತೋರುಪದಗಳು ಬಳಕೆಯಾಗುತ್ತವೆ; ಇವುಗಳಲ್ಲಿ ಇಗೋ ಎಂಬುದು ಹತ್ತಿರದ ಪಾಂಗಿನ ಕಡೆಗೆ ಮತ್ತು ಅಗೋ ಎಂಬುದು ಹತ್ತಿರದ್ದಲ್ಲದ ಪಾಂಗಿನ ಕಡೆಗೆ ಕೇಳುಗನ ಗಮನವನ್ನು ಸೆಳೆಯುತ್ತವೆ:

(1ಕ) ಇಗೋ! ಈ ಹುಡುಗ ನಿಮ್ಮೊಂದಿಗೆ ಬರಲಿದ್ದಾನೆ. (1ಚ) ಅಗೋ! ಅಲ್ಲೊಂದು ಮಂಗ ನಮ್ಮನ್ನೇ ಗಮನಿಸುತ್ತಾ ಇದೆ. ಆದರೆ, ಆಡುಪದಗಳನ್ನು ಈ ರೀತಿ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಬಳಸಲು ಬರುವುದಿಲ್ಲ.

9.5.7 ಹೊಂದಾಣಿಕೆಯಲ್ಲಿ ವ್ಯತ್ಯಾಸ

ಆಡುಪದಗಳು ಸೊಲ್ಲಿನ ಆಗುಗ ಪಾಂಗನ್ನು, ಮಾಡುಗ ಪಾಂಗನ್ನು ಇಲ್ಲವೇ ಇರುಗ ಪಾಂಗನ್ನು ತಿಳಿಸುತ್ತಿರುವಾಗ, ಅವಕ್ಕೂ ಸೊಲ್ಲಿನ ಎಸಕಪದರೂಪಕ್ಕೂ ನಡುವೆ ಇರುವಂತಹ ಒಂದು ಬಗೆಯ ಹೊಂದಾಣಿಕೆಯನ್ನು ಮಾತ್ರವೇ ತೋರಿಸುತ್ತವೆ; ಇಲ್ಲಿಯೂ ಕೂಡ, ಅವು ಸೊಲ್ಲಿನ ಆಡುಗ, ಕೇಳುಗ ಮತ್ತು ಬೇರೊಬ್ಬ ಎಂಬ ವ್ಯತ್ಯಾಸವನ್ನು, ಮತ್ತು ಓರೆಣಿಕೆ, ಹಲವೆಣಿಕೆ ಎಂಬ ಇನ್ನೊಂದು ಬಗೆಯ ಕೂಡಿಕೆಯ ವ್ಯತ್ಯಾಸವನ್ನು ಮಾತ್ರ ಹೊಂದಾಣಿಕೆಯಲ್ಲಿ ತೋರಿಸುತ್ತವಲ್ಲದೆ ಗುರ್ತದ ವ್ಯತ್ಯಾಸವನ್ನು ಹೊಂದಾಣಿಕೆಯಲ್ಲಿ ತೋರಿಸುವುದಿಲ್ಲ. ನಾನು ಬರುತ್ತೇನೆ ನಾವು ಬರುತ್ತೇವೆ ನೀನು ಬರುತ್ತಿ ನೀವು ಬರುತ್ತೀರಿ ಈ ರೀತಿ ಗುರ್ತದ ಹೊಂದಾಣಿಕೆಯನ್ನು ತೋರಿಸದಿರುವುದಕ್ಕೆ, ಮತ್ತು ಎಣಿಕೆಯ ಹೊಂದಾಣಿಕೆಯನ್ನು ಮುಕ್ಯವಾಗಿ ಕೂಡಿಕೆಯ ಹುರುಳಿನಲ್ಲಿ ತೋರಿಸುತ್ತಿರುವುದಕ್ಕೆ ಅವು ಪಾಂಗುಗಳನ್ನು ಗುರುತಿಸದಿರುವುದೇ ಕಾರಣ. ಇದಕ್ಕೆ ಬದಲು, ತೋರುಪದಗಳು ಎಸಕಪದದೊಂದಿಗೆ (ಕ) ಓರೆಣಿಕೆ- ಹಲವೆಣಿಕೆ ವ್ಯತ್ಯಾಸವನ್ನು, ಮತ್ತು (ಚ) ಓರೆಣಿಕೆಯಲ್ಲಿ ಹೆಂಗಸು, ಗಂಡಸು, ಮತ್ತು ಉಳಿಕೆ ಎಂಬ ವ್ಯತ್ಯಾಸವನ್ನು, ಹಾಗೂ ಹಲವೆಣಿಕೆಯಲ್ಲಿ ಮನುಶ್ಯರು ಮತ್ತು ಉಳಿಕೆ ಎಂಬ ಗುರ್ತದ ವ್ಯತ್ಯಾಸವನ್ನು ಹೊಂದಾಣಿಕೆಯಲ್ಲಿ ತೋರಿಸುತ್ತವೆ. ಅವನು ಬರುತ್ತಾನೆ ಅವರು ಬರುತ್ತಾರೆ ಅವಳು ಬರುತ್ತಾಳೆ ಅದು ಬರುತ್ತದೆ ಅವು ಬರುತ್ತವೆ

ಈ ಹೊಂದಾಣಿಕೆಯ ವಿಶಯದಲ್ಲಿ ನಾನು ಮತ್ತು ನೀನು ಎಂಬ ಎರಡು ಆಡುಪದಗಳಿಂದ ತಾನು ಪದ ಬೇರಾಗಿದೆ; ಅದು ಗುರುತಿಸುವ ಪಾಂಗನ್ನು ಸೊಲ್ಲಿನಲ್ಲೇನೇ ಬೇರೊಂದು ಪದ ಗುರುತಿಸಬೇಕಾಗಿದ್ದು, ಆ ಪದಕ್ಕೂ ತಾನು ಪದಕ್ಕೂ ನಡುವೆ ಎಣಿಕೆಯಲ್ಲಿ ಹೊಂದಾಣಿಕೆಯಿರಬೇಕಾಗುತ್ತದೆ: (1ಕ) ತಾನು ಒಳಗೆ ಬಂದುದನ್ನು ಯಾರೂ ನೋಡಿರಲಿಲ್ಲವೆಂಬುದು ರಾಜುವಿಗೆ ಗೊತ್ತಾಗಿತ್ತು. (1ಚ) ತಾವು ಒಳಗೆ ಬಂದುದನ್ನು ಯಾರೂ ನೋಡಿರಲಿಲ್ಲವೆಂಬುದು ಆ ಹುಡುಗರಿಗೆ ಗೊತ್ತಾಗಿತ್ತು. (1ಕ)ದಲ್ಲಿ ಹಿನ್ನುಡಿತವಾಗಿ ರಾಜು ಪದ ಬಂದಿದ್ದು, ಅದಕ್ಕೆ ಹೊಂದುವಂತೆ ಓರೆಣಿಕೆಯ ತಾನು ಪದವನ್ನು ಬಳಸಲಾಗಿದೆ, ಮತ್ತು (1ಚ)ದಲ್ಲಿ ಹಿನ್ನುಡಿತವಾಗಿ ಆ ಹುಡುಗರು ಬಂದಿದ್ದು, ಅದಕ್ಕೆ ಹೊಂದುವಂತೆ ಹಲವೆಣಿಕೆಯ ತಾವು ಪದವನ್ನು ಬಳಸಲಾಗಿದೆ ತೋರುಪದಗಳು ಎಸಕಪದದ ಪದರೂಪದೊಂದಿಗಿನ ಹೊಂದಾಣಿಕೆಯನ್ನು ಮಾತ್ರವಲ್ಲದೆ, ಪಾಂಗುತೋರ್ಕೆ ಇಲ್ಲವೇ ಸೊಲ್ಲುತೋರ್ಕೆಯ ಬಳಕೆಯಲ್ಲಿ ಹಿನ್ನುಡಿತದೊಂದಿಗಿನ ಹೊಂದಾಣಿಕೆಯನ್ನೂ ತೋರಿಸುತ್ತವೆ; ಇದಲ್ಲದೆ, ಪಾಂಗುತೋರ್ಕೆಯಲ್ಲಿ ಅವು ಅದೇ ಸೊಲ್ಲಿನಲ್ಲಿ ಬರುವ ಹಿನ್ನುಡಿತದೊಂದಿಗೆ ಮಾತ್ರವಲ್ಲದೆ ಬೇರೆ ಸೊಲ್ಲುಗಳಲ್ಲಿ ಬರುವ ಹಿನ್ನುಡಿತದೊಂದಿಗೂ ಹೊಂದಾಣಿಕೆಯನ್ನು ತೋರಿಸಬಲ್ಲುವು: (1ಕ) ಆ ಹುಡುಗನಿಗೆ ಕೊಟ್ಟ ಪುಸ್ತಕವನ್ನು ಅವನು ಹರಿದು ಹಾಕಿದ್ದಾನೆ. (1ಚ) ಆ ಹುಡುಗರಿಗೆ ಕೊಟ್ಟ ಪುಸ್ತಕವನ್ನು ಅವರು ಹರಿದು ಹಾಕಿದ್ದಾರೆ. (2ಕ) ಈ ಹಣ್ಣು ಚನ್ನಾಗಿದೆ; ಇದನ್ನು ಯಾರೂ ತಿನ್ನಬಹುದು. (2ಚ) ಈ ಹಣ್ಣುಗಳು ಚನ್ನಾಗಿವೆ; ಇವನ್ನು ಯಾರೂ ತಿನ್ನಬಹುದು. (1ಕ-ಚ)ಗಳಲ್ಲಿ ಅವನು-ಅವರು ಪದಗಳು ಅದೇ ಸೊಲ್ಲಿನಲ್ಲಿ (ಅವುಗಳ ಒಳಸೊಲ್ಲಿನಲ್ಲಿ) ಬರುವ ಹಿನ್ನುಡಿತದೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತವೆ, ಮತ್ತು (2ಕ-ಚ)ಗಳಲ್ಲಿ ಇದು-ಇವು ಪದಗಳು ಬೇರೊಂದು (ಅಂದರೆ ಹಿಂದಿನ) ಸೊಲ್ಲಿನಲ್ಲಿ ಬರುವ ಹಿನ್ನುಡಿತದೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತವೆ. ಹೊಂದಾಣಿಕೆಯ ಮಟ್ಟಿಗೆ ಆಡುಪದಗಳಿಗೂ ತೋರುಪದಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಅವೆರಡರಲ್ಲಿ ಆಡುಪದಗಳಿಗೆ

ತೋರುಪದಗಳಿಗಿಂತ ಮೇಲಿನ ಜಾಗವಿದೆ; ಒಂದು ಆಡುಪದವನ್ನು ಇನ್ನೊಂದು ತೋರುಪದದೊಂದಿಗೆ ಜೋಡಿಸಿ ಹೇಳುವಲ್ಲೆಲ್ಲ ಆ ಆಡುಪದದೊಂದಿಗಿನ ಹೊಂದಾಣಿಕೆಯೇ ಕಾಣಿಸುತ್ತದಲ್ಲದೆ ತೋರುಪದದೊಂದಿಗಿನ ಹೊಂದಾಣಿಕೆ ಕಾಣಿಸುವುದಿಲ್ಲ: (1ಕ) ನಾನು ಮತ್ತು ಅವನು ನಿನ್ನೆ ಪೇಟೆಗೆ ಹೋಗಿದ್ದೆವು. (1ಚ) ನೀನು ಮತ್ತು ಅವನು ನಿನ್ನೆ ಪೇಟೆಗೆ ಹೋಗಿದ್ದಿರಿ. (1ಕ)ದಲ್ಲಿ ನಾನು ಮತ್ತು ಅವನು ಎಂಬವು ಒಟ್ಟಾಗಿ ಬಂದಿದ್ದು, ಎಸಕಪದಕ್ಕೆ ನಾನು ಪದದೊಂದಿಗಿನ ಹೊಂದಾಣಿಕೆಯಿದೆ; ಅವನು ಪದ ಸೇರಿದುದರಿಂದಾಗಿ ಅದು ಹಲವೆಣಿಕೆಯಲ್ಲಿ ಬಂದಿದೆ, ಅಶ್ಟೆ; (1ಚ)ದಲ್ಲೂ ಹೀಗೆಯೇ.

9.5.8 ಸುಳುಸೊಲ್ಲಿನಲ್ಲಿ ಬಳಕೆ

ಒಂದು ಸುಳುಸೊಲ್ಲಿನ ಎರಡು ಪಾಂಗುಗಳಾಗಿ ಒಂದೇ ವ್ಯಕ್ತಿ ಬಂದಿರುವಲ್ಲಿ ಆ ಎರಡು ಪಾಂಗುಗಳನ್ನೂ ಆಡುಪದಗಳನ್ನು ಬಳಸಿ ತಿಳಿಸಲು ಬರುತ್ತದೆ; ಆದರೆ, ತೋರುಪದಗಳನ್ನು ಆ ರೀತಿ ಒಂದು ಸುಳುಸೊಲ್ಲಿನ ಎರಡು ಪಾಂಗುಗಳನ್ನೂ ತಿಳಿಸುವುದಕ್ಕಾಗಿ ಬಳಸಲು ಬರುವುದಿಲ್ಲ; ಅವುಗಳಲ್ಲಿ ಒಂದನ್ನು ತಿಳಿಸುವುದಕ್ಕಾಗಿ ಮಾತ್ರ ಅವನ್ನು ಬಳಸಲು ಬರುತ್ತದೆ: (1ಕ) ನಾನು ನನಗೊಂದು ಕಾರು ಕೊಂಡುಕೊಂಡೆ. (1ಚ) ನೀನು ನಿನಗೊಂದು ಕಾರನ್ನು ಬೇಕಿದ್ದರೆ ಕೊಂಡುಕೊಳ್ಳಬಹುದು. (1ಟ) *ಅವನು ಅವನಿಗೊಂದು ಕಾರು ಕೊಂಡುಕೊಂಡ. (1ತ) ರಾಜು ಅವನಿಗೊಂದು ಕಾರು ಕೊಂಡುಕೊಂಡ. (1ತ)ದಲ್ಲಿ ಬಂದಿರುವ ಅವನಿಗೆ ಎಂಬ ತೋರುಪದಕ್ಕೆ ಹೊರತೋರ್ಕೆಯ ಹುರುಳು ಬರಬಲ್ಲುದಲ್ಲದೆ ಪಾಂಗುತೋರ್ಕೆಯ ರಾಜುವಿಗೆ ಎಂಬ ಹುರುಳು ಬರಲಾರದು; ಎಂದರೆ, (1ತ)ದಲ್ಲಿ ಬಂದಿರುವ ರಾಜು ಮತ್ತು ಅವನು ಪದಗಳು ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸಬಲ್ಲುವಲ್ಲದೆ, ಒಬ್ಬನೇ ವ್ಯಕ್ತಿಯನ್ನು ಗುರುತಿಸಲಾರವು. (1ತ)ದಲ್ಲಿ ಬಂದಿರುವ ಎರಡು ಪಾಂಗುಗಳೂ ಒಬ್ಬನೇ ವ್ಯಕ್ತಿಯನ್ನು ತಿಳಿಸುವಂತಾಗಬೇಕಿದ್ದಲ್ಲಿ, ಅದರ ಎರಡನೇ ಪಾಂಗನ್ನು ಅದು ಸೊಲ್ಲಿನ ಆಡುಗ ಮತ್ತು ಕೇಳುಗರಿಂದ ಬೇರೆ ಎಂಬುದನ್ನು ತಿಳಿಸಬಲ್ಲ ತಾನು ಎಂಬ ಇನ್ನೊಂದು ಆಡುಪದವನ್ನು ಬಳಸಬೇಕಾಗುತ್ತದೆ:

(1ಪ) ರಾಜು ತನಗೊಂದು ಕಾರು ಕೊಂಡುಕೊಂಡ. ತೋರುಪದಗಳ ಹಾಗೆ, ಹೆಸರುಪದಗಳನ್ನೂ ಕೂಡ ಮೇಲೆ ವಿವರಿಸಿದಂತಹ ಸುಳುಸೊಲ್ಲಿನ ಎರಡೂ ಪಾಂಗುಗಳನ್ನು ಗುರುತಿಸುವಂತೆ ಬಳಸಲು ಬರುವುದಿಲ್ಲ: (1ಕ) *ರಾಜು ರಾಜುವಿಗೆ ಒಂದು ಕಾರು ಕೊಂಡುಕೊಂಡ. (1ಚ) ರಾಜು ತನಗೆ ಒಂದು ಕಾರು ಕೊಂಡುಕೊಂಡ. (1ತ)ದಲ್ಲಿ ರಾಜು ಎಂಬ ಹೆಸರುಪದ ಎರಡು ಬಾರಿ ಬಂದಿದ್ದು, ಅದು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿದೆಯಾದರೆ, ಆ ಸೊಲ್ಲು ಸರಿಯಲ್ಲ; ಅದು ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸುತ್ತಿದೆಯಾದಲ್ಲಿ ಮಾತ್ರ ಆ ಸೊಲ್ಲು ಸರಿಯಾಗಬಲ್ಲುದು. ಎರಡು ಪಾಂಗುಗಳೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿರುವಲ್ಲಿ, (1ಚ)ದಲ್ಲಿ ತೋರಿಸಿದ ಹಾಗೆ, ತಾನು ಎಂಬ ಆಡುಪದವನ್ನೇ ಬಳಸಬೇಕಾಗುತ್ತದೆ.

9.5.9 ಇಮ್ಮಡಿರೂಪಗಳ ಬಳಕೆ

ತೋರುಪದಗಳ ಹಾಗೆ, ಆಡುಪದಗಳನ್ನೂ ಹಂಚಿಕೆಯ ಹುರುಳನ್ನು ತಿಳಿಸುವುದಕ್ಕಾಗಿ ಇಮ್ಮಡಿ ರೂಪದಲ್ಲಿ ಬಳಸಲು ಬರುತ್ತದೆ: (1ಕ) ಅವರೆಲ್ಲ ಅವರವರ ಮನೆಗಳಿಗೆ ಹೋದರು. (1ಚ) ನಾವೆಲ್ಲ ನಮ್ಮ ನಮ್ಮ ಮನೆಗಳಿಗೆ ಹೋದೆವು. (1ಟ) ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ಹೋಗಿರಿ. ಈ ವಿಶಯದಲ್ಲಿ ಆಡುಪದಗಳು ಮತ್ತು ತೋರುಪದಗಳು ಹೆಸರುಪದಗಳಿಂದ ಬೇರಾಗಿವೆ; ಯಾಕೆಂದರೆ, ಹೆಸರುಪದಗಳನ್ನು ಈ ರೀತಿ ಹಂಚಿಕೆಯ ಹುರುಳನ್ನು ತಿಳಿಸಲು ಇಮ್ಮಡಿರೂಪದಲ್ಲಿ ಬಳಸಲು ಬರುವುದಿಲ್ಲ; ಅವುಗಳ ಬದಲು ತೋರುಪದಗಳನ್ನು, ಇಲ್ಲವೇ ತಾನು ಎಂಬ ಆಡುಪದವನ್ನು ಬಳಸಬೇಕಾಗುತ್ತದೆ: (2ಕ) *ಹುಡುಗರೆಲ್ಲ ಹುಡುಗರ ಹುಡುಗರ ಮನೆಗಳಿಗೆ ಹೋದರು. (2ಚ) ಹುಡುಗರೆಲ್ಲ ಅವರವರ ಮನೆಗಳಿಗೆ ಹೋದರು. (2ಟ) ಹುಡುಗರೆಲ್ಲ ತಮ್ಮ ತಮ್ಮ ಮನೆಗಳಿಗೆ ಹೋದರು.

ಆದರೆ, ಎಸಕಗಳ ಹಂಚಿಕೆಯನ್ನು ತಿಳಿಸಲು ಹೆಸರುಪದಗಳನ್ನೂ ಇಮ್ಮಡಿರೂಪದಲ್ಲಿ ಬಳಸಲು ಬರುತ್ತದೆ (5.6.6 ನೋಡಿ): (1) ಮನೆಮನೆಗಳಿಗೆ ಹೋಗಿ ಹೇಳಿಕೆ ಕೊಟ್ಟು ಬಂದ. ಬೇರ್ಪಡಿಕೆಯ ಇನ್ನೊಂದು ಹುರುಳಿನಲ್ಲೂ ತೋರುಪದಗಳನ್ನು ಇಮ್ಮಡಿರೂಪದಲ್ಲಿ ಬಳಸಲು ಬರುತ್ತದೆ, ಮತ್ತು ಈ ವಿಶಯದಲ್ಲೂ ಆಡುಪದಗಳು ಅವನ್ನು ಹೋಲುತ್ತವೆ: (1ಕ) ಇದನ್ನು ನಾವು ನಾವೇ ಮಾತನಾಡಿಕೊಂಡು ಸರಿಪಡಿಸೋಣ. (1ಚ) ಇದನ್ನು ನೀವು ನೀವೇ ಮಾತನಾಡಿಕೊಳ್ಳಿ. (1ಟ) ಅವರವರೇ ಮಾತನಾಡಿಕೊಂಡಿರಲಿ. (1ಕ) ಸೊಲ್ಲಿಗೆ ಬೇರೆಯವರ ನೆರವಿಲ್ಲದೆ ಎಂಬ ಬೇರ್ಪಡಿಕೆಯ ಹುರುಳಿದೆ; (1ಚ-ಟ) ಸೊಲ್ಲುಗಳಿಗೂ ಇಂತಹವೇ ಹುರುಳುಗಳಿವೆ.

9.6 ತಿರುಳು

Eke →

ಈ ಪಸುಗೆಯಲ್ಲಿ ನಾನು, ನೀನು, ಮತ್ತು ತಾನು ಎಂಬ ಮೂರು ಪದಗಳ ಕುರಿತಾಗಿ ಹಲವು ವಿಶಯಗಳನ್ನು ವಿವರಿಸಲಾಗಿದೆ; ಈ ಮೂರು ಪದಗಳನ್ನು ಆಡುಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಇರಿಸಿ ಹೇಳಲು ಸಾಕಶ್ಟು ಕಾರಣಗಳಿದ್ದು ಅವನ್ನೆಲ್ಲ ಪಟ್ಟಿಮಾಡಲಾಗಿದೆ. ಸಾಮಾನ್ಯವಾಗಿ ಅವನ್ನು ಅವನು, ಇವನು, ಅವಳು, ಇವಳು, ಅದು, ಇದು ಮೊದಲಾದ ತೋರುಪದಗಳೊಂದಿಗೆ ಗುಂಪಿಸಲಾಗುತ್ತದೆ; ಅವಕ್ಕೂ ಈ ತೋರುಪದಗಳಿಗೂ ನಡುವೆ ಹಲವು ಹೋಲಿಕೆಗಳಿರುವುದು ನಿಜವಾದರೂ, ಅವುಗಳ ನಡುವೆ ಹಲವು ವ್ಯತ್ಯಾಸಗಳೂ ಇವೆ. ಇದಲ್ಲದೆ, ತೋರುಪದಗಳ ಗುಂಪಿನಲ್ಲಿ ಆಡುಪದಗಳನ್ನು ಹೋಲುವ ಮೇಲಿನ ಪದಗಳು ಮಾತ್ರವಲ್ಲದೆ, ಅಲ್ಲಿ, ಇಲ್ಲಿ, ಅಶ್ಟು, ಇಶ್ಟು, ಅಂದು, ಇಂದು ಮೊದಲಾದ ಎಸಕಪರಿಚೆಗಳನ್ನು ಮತ್ತು ಆ, ಈ, ಅಂತಹ, ಇಂತಹ ಮೊದಲಾದ ಹೆಸರುಪರಿಚೆಗಳನ್ನು ಗುಂಪಿಸಬೇಕಾಗುತ್ತದೆ, ಮತ್ತು ಇವು ಆಡುಪದಗಳಿಂದ ಇನ್ನಶ್ಟು ಬೇರಾಗಿವೆ. ಇದಲ್ಲದೆ, ಯಾರು, ಏನು, ಎಲ್ಲಿ, ಎಶ್ಟು, ಯಾವ, ಎಂತಹ ಮೊದಲಾದ ತಿಳಿಯದ ಪದಗಳನ್ನೂ ತೋರುಪದಗಳ ಗುಂಪಿನಲ್ಲಿ ಗುಂಪಿಸಬೇಕಾಗುತ್ತದೆ, ಮತ್ತು ಇವು ಆಡುಪದಗಳಿಂದ ಮತ್ತಶ್ಟು ಬೇರಾಗಿವೆ. ಹಾಗಾಗಿ, ನಾನು,

ನೀನು, ಮತ್ತು ತಾನು ಎಂಬ ಪದಗಳನ್ನು ತೋರುಪದಗಳಿಂದ ಬೇರಾಗಿರುವ ಆಡುಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಗುಂಪಿಸಬೇಕಾಗುತ್ತದೆ. ಕೆಲವು ಸೊಲ್ಲರಿಮೆಗಳಲ್ಲಿ ಆಡುಪದಗಳನ್ನು ಮತ್ತು ಕೆಲವು ತೋರುಪದಗಳನ್ನು ಹೆಸರುಪದಗಳ ಗುಂಪಿನಲ್ಲಿ ಗುಂಪಿಸಲಾಗುತ್ತದೆ. ತೋರುಪದಗಳಲ್ಲಿ ಹೆಸರುಪದಗಳ ಜಾಗದಲ್ಲಿ ಬರಬಲ್ಲ ಅವನು, ಇವನು, ಅದು, ಇದು ಮೊದಲಾದ ಕೆಲವು ಪದಗಳನ್ನು ಮಾತ್ರ ಈ ರೀತಿ ಹೆಸರುಪದಗಳ ಗುಂಪಿನಲ್ಲಿ ಇರಿಸಲಾಗುತ್ತದೆ. ಆಡುಪದಗಳು ಹಲವು ವಿಶಯಗಳಲ್ಲಿ ಹೆಸರುಪದಗಳನ್ನು ಹೋಲುತ್ತಿವೆಯಾದರೂ ಬೇರೆ ಹಲವು ವಿಶಯಗಳಲ್ಲಿ ಅವು ಹೆಸರುಪದಗಳಿಂದ ಬೇರಾಗಿವೆ. ಅವು ಸೊಲ್ಲುಗಳಲ್ಲಿ ನಡೆಸಬೇಕಾಗಿರುವ ಕೆಲಸಗಳು ಹೆಸರುಪದಗಳು ನಡೆಸಬೇಕಾಗಿರುವ ಕೆಲಸಗಳಿಂದ ತೀರಾ ಬೇರಾಗಿವೆ. ಹಾಗಾಗಿ, ಅವನ್ನು ಬೇರೆಯೇ ಒಂದು ಗುಂಪಿನಲ್ಲಿ ಗುಂಪಿಸಿ ಹೇಳುವುದೇ ಸರಿಯಾದ ದಾರಿಯೆಂದು ಇಲ್ಲಿ ತೀರ್ಮಾನಿಸಲಾಗಿದೆ.

ಅಧ್ಯಾಯ ೧೦ — ತೋರುಪದಗಳ ಬಳಕೆ

10.1 ಮುನ್ನೋಟ

Eke →

10.1.1 ತೋರುಪದಗಳ ಇಟ್ಟಳ

ಅವರು-ಇವರು-ಯಾರು, ಅಲ್ಲಿ-ಇಲ್ಲಿ-ಎಲ್ಲಿ, ಅಶ್ಟು-ಇಶ್ಟು-ಎಶ್ಟು, ಆ-ಈ- ಯಾವ ಎಂಬಂತಹ ಕೆಲವು ಪದಗಳನ್ನು (ಇವುಗಳ ಪಟ್ಟಿಯನ್ನು ಕೆಳಗೆ 10.1.2-3ರಲ್ಲಿ ಕೊಡಲಾಗಿದೆ) ಇಲ್ಲಿ ಒಟ್ಟಾಗಿ ತೋರುಪದಗಳೆಂದು ಕರೆಯಲಾಗಿದೆ; ಇವು ಮುಕ್ಯವಾಗಿ ಮೂರು ಬಗೆಯವಾಗಿದ್ದು, ಅವುಗಳಲ್ಲಿ ಕೆಲವು ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ, ಕೆಲವು ಎಸಕಪರಿಚೆಗಳ ಹಾಗೆ ಬಳಕೆಯಾಗುತ್ತವೆ, ಮತ್ತು ಬೇರೆ ಕೆಲವು ಹೆಸರುಪರಿಚೆಗಳ ಹಾಗೆ ಬಳಕೆಯಾಗುತ್ತವೆ. ಇವುಗಳಲ್ಲೆಲ್ಲ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಅವು ನಡೆಸುವ ಕೆಲಸವನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವುಗಳ ಹರವನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಇಲ್ಲಿ ಎಂಬ ತೋರುಪದದಲ್ಲಿ ಇ ಮತ್ತು ಲ್ಲಿ ಎಂಬ ಎರಡು ಅಂಗಗಳಿವೆ; ಆಡುಗನ ಹತ್ತಿರ ಇರುವುದನ್ನು ಗುರುತಿಸುವುದು ಈ ಪದದ ಕೆಲಸ ಎಂಬುದನ್ನು ಅದರ ಇ ಎಂಬ ಮೊದಲನೆಯ ಅಂಗ ತಿಳಿಸುತ್ತದೆ, ಮತ್ತು ಅದರ ಹರವು ಒಂದು ಜಾಗವನ್ನು ಮಾತ್ರ ಒಳಗೊಂಡಿದೆ ಎಂಬುದನ್ನು ಲ್ಲಿ ಎಂಬ ಅದರ ಎರಡನೆಯ ಅಂಗ ತಿಳಿಸುತ್ತದೆ. ಇವನ್ನು ತೋರುಪದಗಳೆಂದು ಕರೆಯಲು ಕಾರಣವೇನೆಂದರೆ, ಅವು ಯಾವ ಪಾಂಗನ್ನು ಗುರುತಿಸುತ್ತವೆ ಇಲ್ಲವೇ ಏನು ತಿಳಿಸುತ್ತವೆ ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವಕ್ಕೂ ಮಾತಿನ ಕುಳ್ಳಿಹ(ಸನ್ನಿವೇಶ)ಕ್ಕೂ ನಡುವಿರುವ ಸಂಬಂದವನ್ನು ತಿಳಿಯಬೇಕಾಗುತ್ತದೆ. ಮಾತಿನ ಕುಳ್ಳಿಹದಲ್ಲಿರುವ ವ್ಯಕ್ತಿ, ವಸ್ತು, ಜಾಗ, ಹೊತ್ತು ಮೊದಲಾದವುಗಳಲ್ಲಿ ಒಂದನ್ನು ತೋರಿಸುವ ಮೂಲಕ ಅವು ತಮ್ಮ ಈ ಕೆಲಸವನ್ನು ನಡೆಸುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಬೆರಳಿಗೆ ಪೆಟ್ಟಾಗಿದೆ. (1ಚ) ಅಲ್ಲಿ ಒಂದು ಮಂಗ ಕಾದುಕುಳಿತಿದೆ. (1ಟ) ಇವತ್ತು ನಾನು ಹೊರಗೆ ಹೋಗುವುದಿಲ್ಲ.

(1ಕ) ಸೊಲ್ಲನ್ನು ಬಳಸುತ್ತಿರುವಾಗ ಆಡುಗನು ತನ್ನ ಒಂದು ಬೆರಳನ್ನು ತೋರಿಸುತ್ತಿರುತ್ತಾನೆ; ಅದು ಯಾವ ಬೆರಳು ಎಂಬುದನ್ನು ಗಮನಿಸದೆ, ಈ ಬೆರಳು ಎಂಬುದು ಏನು ಹೇಳುತ್ತದೆ ಎಂಬುದನ್ನು ತಿಳಿಯಲು ಬರುವುದಿಲ್ಲ. ಇದೇ ರೀತಿಯಲ್ಲಿ (1ಚ)ದಲ್ಲಿ ಬಂದಿರುವ ಅಲ್ಲಿ ಎಂಬ ಪದ ತಿಳಿಸುವ ಜಾಗ ಮತ್ತು ಇವತ್ತು ಎಂಬ ಪದ ತಿಳಿಸುವ ದಿವಸ ಯಾವುದೆಂಬುದನ್ನು ತಿಳಿಯಬೇಕಿದ್ದಲ್ಲಿ, ಆ ಸೊಲ್ಲನ್ನು ಎಲ್ಲಿ ಮತ್ತು ಯಾವಾಗ ಆಡಲಾಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ತೋರುಪದಗಳು ಮಾತ್ರವಲ್ಲದೆ, ಬೇರೆಯೂ ಹಲವು ಬಗೆಯ ಪದಗಳು ಏನು ತಿಳಿಸುತ್ತವೆ ಎಂಬುದನ್ನು ಈ ರೀತಿ ಮಾತಿನ ಕುಳ್ಳಿಹವನ್ನು ಗಮನಿಸದೆ ತಿಳಿಯಲು ಬರುವುದಿಲ್ಲ. ಎತ್ತುಗೆಗಾಗಿ, ಹಿಂದಿನ ಪಸುಗೆಯಲ್ಲಿ ಪರಿಶೀಲಿಸಿದ ನಾನು, ನೀನು ಮತ್ತು ತಾನು ಎಂಬ ಆಡುಪದಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯಬೇಕಿದ್ದಲ್ಲಿ, ಅವು ಬಳಕೆಯಾಗಿರುವ ಸೊಲ್ಲನ್ನು ಆಡಿದವರು ಯಾರು ಮತ್ತು ಅದನ್ನು ಹೇಳಿದ್ದು ಯಾರಿಗೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮೇಲೆ, ಕೆಳಗೆ, ಎಡಕ್ಕೆ, ಬಲಕ್ಕೆ ಮೊದಲಾದ ಕೆಲವು ಬಗೆಯ ಜಾಗವನ್ನು ತಿಳಿಸುವ ಪದಗಳು, ನಾಳೆ, ನಾಡಿದ್ದು, ನಿನ್ನೆ, ರವಿವಾರ ಮೊದಲಾದ ಹೊತ್ತನ್ನು ತಿಳಿಸುವ ಪದಗಳು, ಬರು, ಹೋಗು ಎಂಬಂತಹ ಕೆಲವು ಎಸಕಪದಗಳು, ಹಿಂಬೊತ್ತು, ಮುಂಬೊತ್ತು, ಈಪೊತ್ತು ಎಂಬಂತಹ ಎಸಕಪದಗಳ ಹೊತ್ತಿನ ರೂಪಗಳು ಮೊದಲಾದುವನ್ನು ಬಳಸಿರುವಲ್ಲಿಯೂ ಮಾತಿನ ಕುಳ್ಳಿಹವನ್ನು ಗಮನಿಸದೆ ಅವು ಏನು ತಿಳಿಸುತ್ತವೆ ಎಂಬುದನ್ನು ತಿಳಿಯಲು ಬರುವುದಿಲ್ಲ. ಈ ಎಲ್ಲಾ ಬಗೆಯ ಪದ ಇಲ್ಲವೇ ಪದರೂಪಗಳನ್ನೂ ಒಟ್ಟಾಗಿ ತೋರ್ಕೆಯ ಪದಗಳೆಂದು ಕರೆಯಬಹುದು; ಇವಕ್ಕೆಲ್ಲ ಒಂದು ತೋರ್ಕೆನಡು ಎಂಬುದಿರುತ್ತದೆ, ಮತ್ತು ಈ ತೋರ್ಕೆನಡು ಯಾವುದೆಂದು ತಿಳಿಯದೆ ಇವು ಏನನ್ನು ತಿಳಿಸುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಬರುವುದಿಲ್ಲ. ಸಾಮಾನ್ಯವಾಗಿ ಆಡುಗನು ತಾನು ಬಳಸುವ ತೋರ್ಕೆಯ ಪದಗಳಿಗೆ ತನ್ನನ್ನೇ ತೋರ್ಕೆನಡುವನ್ನಾಗಿ ಬಳಸಿರುತ್ತಾನೆ. ಹಾಗಾಗಿ, ಆಡುಗನು ಏನು ಹೇಳುತ್ತಿದ್ದಾನೆ ಎಂಬುದನ್ನು ತಿಳಿಯಲು ಕೇಳುಗನು ಆತನ ಕಾಣ್ಬಟ್ಟೆಯನ್ನು, ಎಂದರೆ ಆತನು ಕಾಣುವ ಬಗೆಯನ್ನು, ತನ್ನದಾಗಿಸಿಕೊಳ್ಳಬೇಕಾಗುತ್ತದೆ. ಚಿಕ್ಕ ಮಕ್ಕಳಿಗೆ ಈ ರೀತಿ ಇನ್ನೊಬ್ಬನ ಕಾಣ್ಬಟ್ಟೆಯನ್ನು ತಮ್ಮದಾಗಿಸಿಕೊಳ್ಳುವ ಅಳವು ಇರುವುದಿಲ್ಲ. ಹಾಗಾಗಿ, ನನ್ನ-ನಿನ್ನ, ಅಲ್ಲಿ-ಇಲ್ಲಿ ಮೊದಲಾದ ಪದಗಳ ಬಳಕೆ ಅವರನ್ನು ಗೊಂದಲಗೊಳಿಸುತ್ತದೆ. ಇಬ್ಬರು ಮಾತನಾಡುತ್ತಿರುವಾಗ, ಆಡುಗರು ಮತ್ತು ಕೇಳುಗರು ಬದಲಾಗುತ್ತಿರುತ್ತಾರೆ, ಮತ್ತು ಅದರೊಂದಿಗೆ ಈ ತೋರ್ಕೆನಡುವೂ

ಬದಲಾಗುತ್ತಲೇ ಇರುತ್ತದೆ. ನನ್ನ-ನಿನ್ನ, ಅಲ್ಲಿ-ಇಲ್ಲಿ ಮೊದಲಾದ ತೋರ್ಕೆಯ ಪದಗಳ ಹುರುಳನ್ನು ತಿಳಿಯಲು ಕೇಳುಗರು ಈ ಬದಲಾವಣೆಗಳನ್ನು ಗಮನಿಸುತ್ತಲೇ ಇರಬೇಕಾಗುತ್ತದೆ (ಈ ತೋರ್ಕೆನಡುವಿನ ಕುರಿತು ಹೆಚ್ಚಿನ ವಿವರಗಳನ್ನು 10.4.4ರಲ್ಲಿ ಕೊಡಲಾಗಿದೆ). ಇಂತಹ ತೋರ್ಕೆಯ ಪದಗಳಲ್ಲಿ ಮೇಲೆ ವಿವರಿಸಿದಂತಹ ಎರಡು ಅಂಗಗಳಿರುವ ಪದಗಳನ್ನು ಮಾತ್ರ ಒಟ್ಟಾಗಿ ಇಲ್ಲಿ ತೋರುಪದಗಳೆಂದು ಕರೆಯಲಾಗಿದೆ.

10.1.2 ತೋರುಪದಗಳ ನಿರುಗೆ

ತೋರುಪದಗಳಲ್ಲಿ ಕಾಣಿಸುವ ಎರಡು ಅಂಗಗಳನ್ನವಲಂಬಿಸಿ, ಅವನ್ನು ಕೆಳಗೆ ಕೊಟ್ಟಿರುವ ನಿರುಗೆಯಲ್ಲಿ ಇರಿಸಿ ಹೇಳಲು ಬರುತ್ತದೆ (3.5 ನೋಡಿ): ಹರವು ತಿಳಿದವು ತಿಳಿಯದವು ದೂರದವು ಹತ್ತಿರದವು ಹೆಸರುಪದಗಳು: ಗಂಡಸು ಅವನು ಇವನು ಯಾವನು ಹೆಂಗಸು ಅವಳು ಇವಳು ಯಾವಳು ಉಳಿದವು ಅದು ಇದು ಯಾವುದು ಹಲವರು ಅವರು ಇವರು ಯಾವರು ಹಲವು ಅವು ಇವು ಯಾವುವು ಎಸಕಪರಿಚೆಗಳು: ಜಾಗ ಅಲ್ಲಿ ಇಲ್ಲಿ ಎಲ್ಲಿ ದಿಕ್ಕು ಅತ್ತ ಇತ್ತ ಎತ್ತ ಹೊತ್ತು ಆಗ ಈಗ ಯಾವಾಗ ದಿನ ಅಂದು ಇಂದು ಎಂದು ಹೊಲಬು ಹಾಗೆ ಹೀಗೆ ಹೇಗೆ ಹೆಸರುಪರಿಚೆಗಳು: ಅಳವಿ ಅಶ್ಟು ಇಶ್ಟು ಎಶ್ಟು ಬಗೆ ಅಂತಹ ಇಂತಹ ಎಂತಹ ತೋರ್ಕೆ ಆ ಈ ಯಾವ ಈ ನಿರುಗೆಯಲ್ಲಿ ಮೂರು ನೀಟಸಾಲುಗಳು ಮತ್ತು ಹದಿಮೂರು ಅಡ್ಡಸಾಲುಗಳಿವೆ; ನೀಟಸಾಲುಗಳಲ್ಲಿ ಬಂದಿರುವ ತೋರುಪದಗಳ ಮೊದಲನೆಯ

ಅಂಗ ಒಂದೇ ಆಗಿದೆ, ಮತ್ತು ಅಡ್ಡಸಾಲುಗಳಲ್ಲಿ ಬಂದಿರುವ ತೋರುಪದಗಳ ಎರಡನೆಯ ಅಂಗ ಒಂದೇ ಆಗಿದೆ ಎಂಬುದನ್ನು ಗಮನಿಸಬಹುದು. (ಕ) ಮೂರು ನೀಟಸಾಲುಗಳಲ್ಲಿ ಮೊದಲನೆಯ ಎರಡು ಸಾಲುಗಳಲ್ಲಿ ಬಂದಿರುವ ಪದಗಳು ಆಡುಗನಿಗೆ ತಿಳಿದ ಪಾಂಗುಗಳನ್ನು ಗುರುತಿಸುತ್ತವೆ, ಮತ್ತು ಮೂರನೆಯ ಸಾಲಿನಲ್ಲಿ ಬಂದಿರುವ ಪದಗಳು ಆಡುಗನಿಗೆ ತಿಳಿಯದ ಪಾಂಗುಗಳನ್ನು ಗುರುತಿಸುತ್ತವೆ; ಎತ್ತುಗೆಗಾಗಿ, ಆರನೆಯ ಅಡ್ಡಸಾಲಿನಲ್ಲಿ ಅಲ್ಲಿ, ಇಲ್ಲಿ ಮತ್ತು ಎಲ್ಲಿ ಎಂಬ ಮೂರು ಪದಗಳು ಬಂದಿದ್ದು, ಇವುಗಳಲ್ಲಿ ಮೊದಲ ಎರಡು ಪದಗಳು ಆಡುಗನಿಗೆ ತಿಳಿದ ಜಾಗವನ್ನು, ಮತ್ತು ಮೂರನೆಯ ಪದ ಆಡುಗನಿಗೆ ತಿಳಿಯದ ಜಾಗವನ್ನು ಗುರುತಿಸುತ್ತವೆ: (1ಕ) ಅವನು ಅಲ್ಲಿಗೆ ನಿನ್ನೆಯೂ ಬಂದಿದ್ದ. (1ಚ) ಅವನು ಇಲ್ಲಿಗೆ ಬಂದರೆ ನಮಗೆ ತೊಂದರೆಯಾಗುತ್ತದೆ. (1ಟ) ಅವನನ್ನು ನೀವು ಎಲ್ಲಿಂದ ಕರೆತಂದಿರಿ? (1ಕ)ದಲ್ಲಿ ಬಂದಿರುವ ಅಲ್ಲಿ ಪದ ಮತ್ತು (1ಚ)ದಲ್ಲಿ ಬಂದಿರುವ ಇಲ್ಲಿ ಪದ ಆಡುಗನಿಗೆ ತಿಳಿದಿರುವ ಜಾಗವನ್ನು ಗುರುತಿಸುತ್ತವೆ; ಆದರೆ, (1ಟ)ದಲ್ಲಿ ಬಂದಿರುವ ಎಲ್ಲಿ ಪದ ಆತನಿಗೆ ತಿಳಿಯದಿರುವ ಜಾಗವೊಂದನ್ನು ಗುರುತಿಸುತ್ತಿದ್ದು, ಅದರ ಕುರಿತಾಗಿ ಕೇಳುಗನಿಂದ ತಿಳಿವನ್ನು ಪಡೆಯುವುದಕ್ಕಾಗಿ (1ಟ) ಸೊಲ್ಲನ್ನು ಬಳಸಲಾಗಿದೆ. ಮೊದಲ ಎರಡು ಸಾಲುಗಳಲ್ಲಿ ಬಂದಿರುವ ಪದಗಳು ತಿಳಿದ ಪಾಂಗುಗಳನ್ನೇ ಗುರುತಿಸುತ್ತಿವೆಯಾದರೂ, ಅವುಗಳಲ್ಲಿ ಮೊದಲನೆಯ ಸಾಲಿನಲ್ಲಿ ಬಂದಿರುವವು ಆಡುಗನಿಗಿಂತ ದೂರ ಇರುವ ಪಾಂಗುಗಳನ್ನು, ಮತ್ತು ಎರಡನೆಯ ಸಾಲಿನಲ್ಲಿ ಬಂದಿರುವವು ಅದಕ್ಕಿಂತ ಹತ್ತಿರ ಇರುವ ಪಾಂಗುಗಳನ್ನು ಗುರುತಿಸುತ್ತವೆಯೆಂಬ ವ್ಯತ್ಯಾಸ ಅವುಗಳ ನಡುವೆ ಇದೆ. (ಚ) ಮೇಲಿನ ನಿರುಗೆಯಲ್ಲಿರುವ ಹದಿಮೂರು ಅಡ್ಡಸಾಲುಗಳು ತೋರುಪದಗಳಿಗಿರುವ ಹದಿಮೂರು ಬಗೆಯ ಹರವುಗಳನ್ನು ತಿಳಿಸುತ್ತವೆ; ಇವು ಎಂತಹವು ಎಂಬುದನ್ನು ಅಡ್ಡಸಾಲುಗಳ ಮೊದಲಿಗೆ ಕೊಟ್ಟಿರುವ ಗಂಡಸು, ಹೆಂಗಸು, ಉಳಿದವು, ಹಲವರು ಮೊದಲಾದ ಹದಿಮೂರು ಪದಗಳು ತಿಳಿಸುತ್ತವೆ. ಮೊದಲ ಅಯ್ದು ಅಡ್ಡಸಾಲುಗಳಲ್ಲಿ ಬಂದಿರುವ ಪದಗಳು ಹೆಸರುಪದಗಳ ಹಾಗೆ, ಮತ್ತು ಉಳಿದ ಅಡ್ಡಸಾಲುಗಳಲ್ಲಿ ಬಂದಿರುವ ಪದಗಳು ಪರಿಚೆಪದಗಳ ಹಾಗೆ ಬಳಕೆಯಾಗುತ್ತವೆ; ಈ ಉಳಿದ ಪದಗಳಲ್ಲಿ ಅಯ್ದು ಬಗೆಯವು

ಎಸಕಪರಿಚೆಯ ಪದಗಳ ಹಾಗೆ, ಮತ್ತು ಉಳಿದವು ಹೆಸರುಪರಿಚೆಯ ಪದಗಳ ಹಾಗೆ ಬಳಕೆಯಾಗುತ್ತವೆ. ಇದಲ್ಲದೆ, ಕೊನೆಯ ಅಡ್ಡಸಾಲಿನಲ್ಲಿ ಬಂದಿರುವ ಆ, ಈ, ಮತ್ತು ಯಾವ ಎಂಬ ಮೂರು ಪದಗಳಲ್ಲಿ ತೋರುಪದದ ಕೆಲಸವನ್ನು ತಿಳಿಸುವ ಒಂದು ಅಂಗ ಮಾತ್ರ ಇದೆ; ಹರವನ್ನು ತಿಳಿಸುವ ಎರಡನೆಯ ಅಂಗ ಅವುಗಳಲ್ಲಿಲ್ಲ; ಆದರೆ, ಈ ಮೂರು ಪದಗಳು ಹೆಸರುಪದಗಳ ಮೊದಲು ಬಳಕೆಯಾಗುತ್ತಿದ್ದು (ಆ ಹುಡುಗ, ಈ ಮನೆ, ಯಾವ ಹಾಡು) ಅವುಗಳ ಹರವನ್ನು ಈ ಹೆಸರುಪದಗಳೇ ತಿಳಿಸುತ್ತವೆಯೆಂದು ಹೇಳಬಹುದು. ಎಸಕಪರಿಚೆಗಳಲ್ಲಿ ತಿಳಿಯದ ಹೊತ್ತನ್ನು ತಿಳಿಸುವ ಯಾವಾಗ ಎಂಬುದು ಯಾವ ಎಂಬ ಹೆಸರುಪರಿಚೆ ಪದಕ್ಕೆ ದೂರದ ಹೊತ್ತನ್ನು ತಿಳಿಸುವ ಆಗ ಪದವನ್ನು ಸೇರಿಸಿ ಮಾಡಿರುವ ಹಾಗಿದೆ.

10.1.3 ಕೆಲವು ಹೆಚ್ಚಿನ ತೋರುಪದಗಳು

ಮೇಲಿನ ನಿರುಗೆಯಲ್ಲಿ ಕೊಟ್ಟಿರುವ ಪದಗಳಲ್ಲದೆ ಅಂತಹ ಬೇರೆಯೂ ಕೆಲವು ಪದಗಳು ಬಳಕೆಯಲ್ಲಿವೆ; ಆದರೆ, ಇವಕ್ಕೆ ಸಂಬಂದಿಸಿದಂತಹ ಎಲ್ಲಾ ಮೂರು ನೀಟಸಾಲುಗಳಲ್ಲೂ ಬರಬಲ್ಲ ಪದಗಳಿಲ್ಲ; ಹಾಗಾಗಿ, ಅವನ್ನು ಮೇಲಿನ ನಿರುಗೆಯಲ್ಲಿ ತೋರಿಸಿಲ್ಲ. ಅವು ಯಾವ ರೀತಿಯಲ್ಲಿ ಮೇಲಿನ ಪದಗಳೊಂದಿಗೆ ಸಂಬಂದಿಸಿವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ಯಾರು, ಏನು ಮತ್ತು ಯಾಕೆ ಎಂಬ ಮೂರು ಹೆಚ್ಚಿನ ತಿಳಿಯದ ತೋರುಪದಗಳು ಬಳಕೆಯಲ್ಲಿವೆ; ಆದರೆ, ಅವಕ್ಕೆ ಸಮನಾದ ತಿಳಿದ ತೋರುಪದಗಳು ಬಳಕೆಯಲ್ಲಿಲ್ಲ; ಹಾಗಾಗಿ, ಅವನ್ನು ಮೇಲಿನ ನಿರುಗೆಯಲ್ಲಿ ತೋರಿಸಿಲ್ಲ. ಇವುಗಳಲ್ಲಿ ಯಾರು ಎಂಬುದು ಯಾವನು, ಯಾವಳು ಮತ್ತು ಯಾವರು ಎಂಬ ಮೂರು ತೋರುಪದಗಳಿಗೆ ಬದಲಾಗಿ ಬಳಕೆಯಾಗುತ್ತದೆ, ಮತ್ತು ಏನು ಎಂಬುದು ಯಾವುದು ಮತ್ತು ಯಾವುವು ಎಂಬುವಕ್ಕೆ ಬದಲಾಗಿ ಬಳಕೆಯಾಗುತ್ತದೆ. ಎಂದರೆ, ಯಾರು ಪದದಲ್ಲಿ ಗಂಡು-ಹೆಣ್ಣು ಗುರ್ತದ ವ್ಯತ್ಯಾಸವನ್ನು ಹಾಗೂ ಓರೆಣಿಕೆ-ಹಲವೆಣಿಕೆ ವ್ಯತ್ಯಾಸವನ್ನು ಕಡೆಗಣಿಸಲಾಗಿದೆ, ಮತ್ತು ಏನು ಪದದಲ್ಲಿ ಹೆರತುಗುರ್ತದಲ್ಲಿರುವ ಓರೆಣಿಕೆ-ಹಲವೆಣಿಕೆ ವ್ಯತ್ಯಾಸವನ್ನು ಕಡೆಗಣಿಸಲಾಗಿದೆ. ನಿಜಕ್ಕೂ ಏನು ಎಂಬುದು ಮೇಲಿನ ಎಲ್ಲಾ ತಿಳಿಯದ ತೋರುಪದಗಳಿಗೂ ಬದಲಾಗಿ ಬಳಕೆಯಾಗುತ್ತದೆಯೆಂದೂ ಹೇಳಬಹುದು; ಯಾಕೆಂದರೆ, ಯಾವ ಬಗೆಯ ಗುರ್ತದ ವ್ಯತ್ಯಾಸವನ್ನೂ ತಿಳಿಯದಿರುವ ಕಡೆಗಳಲ್ಲೂ ಅದನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ದೂರದಲ್ಲಿ ಕಾಣಿಸುವುದು ಒಂದು ಮರವೇ ಇಲ್ಲವೇ

ಒಬ್ಬ ಆಳೇ ಎಂಬುದನ್ನು ತೀರ್ಮಾನಿಸಲು ಬಾರದಿರುವಲ್ಲೂ ಅದನ್ನು ಬಳಸಲಾಗುತ್ತದೆ: (1ಕ) ಅಲ್ಲಿ ಕಾಣಿಸುವುದು ಏನು? (1ಚ) ಏನದು? ಹೊರಗಡೆ ಏನೋ ಸದ್ದು ಕೇಳಿಸುತ್ತಿದೆ. ಹಾಗಾಗಿ, ಏನು ಮತ್ತು ಯಾರು ಎಂಬ ಎರಡು ತಿಳಿಯದ ಪದಗಳನ್ನು ಆರಿಸದ ಪದಗಳೆಂದು, ಮತ್ತು ಉಳಿದುವನ್ನು ಆರಿಸಿದ ಪದಗಳೆಂದು ಕರೆಯಲು ಬರುತ್ತದೆ; ಏನು ಪದದ ಬಳಕೆಯಲ್ಲಿ ಗುರುತಿಸಬೇಕಾಗಿರುವ ಪಾಂಗಿನ ಕುರಿತಾಗಿ ಆಡುಗ ಏನನ್ನೂ ಆರಿಸಿಲ್ಲ, ಮತ್ತು ಯಾರು ಪದದ ಬಳಕೆಯಲ್ಲಿ ಗುರುತಿಸಬೇಕಾದ ಪಾಂಗು ಒಬ್ಬ ಆಳು ಎಂಬುದನ್ನಶ್ಟೇ ಆತ ಆರಿಸಿರುತ್ತಾನೆ; ಆ ಆಳಿನ ಗುರ್ತವನ್ನು (ಹೆಂಗಸೇ, ಗಂಡಸೇ ಎಂಬುದನ್ನು), ಇಲ್ಲವೇ ಎಣಿಕೆಯನ್ನು (ಒಂದೇ, ಹಲವೇ ಎಂಬುದನ್ನು) ಆರಿಸಿಲ್ಲ; ಹಾಗಾಗಿ, ಇವುಗಳಲ್ಲಿ ಏನು ಎಂಬುದು ಯಾರು ಎಂಬುದಕ್ಕಿಂತ ಹೆಚ್ಚಿನ ಮಟ್ಟಿಗೆ ಆರಿಸದ ಪದವಾಗಿರುತ್ತದೆ. ಯಾಕೆ ಎಂಬುದಕ್ಕೆ `ಕಾರಣ ತಿಳಿಯದು’ ಎಂಬ ಹುರುಳಿದೆ; ಆದರೆ, ಕಾರಣ ತಿಳಿದಿರುವಲ್ಲಿ ಬಳಕೆಯಾಗಬಲ್ಲ ತೋರುಪದಗಳಿಲ್ಲ; ಅಂತಹ ಕಡೆಗಳಲ್ಲಿ ಹಾಗಾಗಿ ಮತ್ತು ಹೀಗಾಗಿ ಎಂಬ ನುಡಿತಗಳನ್ನು ಬಳಸಬೇಕಾಗುತ್ತದೆ. (2) ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಅಗೋ ಮತ್ತು ಇಗೋ ಎಂಬ ಎರಡು ತಿಳಿದ ತೋರುಪದಗಳು ಬಳಕೆಯಾಗುತ್ತವೆ; ಆದರೆ, ಇವಕ್ಕೆ ಸಮನಾದ ತಿಳಿಯದ ತೋರುಪದವಿಲ್ಲ. ಇವು ಗಮನರೂಪದ ಹೆಸರುಪದಗಳ ಹಾಗೆ ಸೊಲ್ಲಿನ ಹೊರಗೆ ನಿಲ್ಲುತ್ತವೆ. (3) ಮೇಲಿನ ನಿರುಗೆಯಲ್ಲಿ ಕೊಟ್ಟಿರುವ ಅತ್ತ, ಇತ್ತ, ಮತ್ತು ಎತ್ತ ಎಂಬ ಪದಗಳು ಹೆಚ್ಚು ಬಳಕೆಯಲ್ಲಿಲ್ಲ; ಅವುಗಳ ಬದಲು ಆಚೆ, ಈಚೆ, ಮತ್ತು ಎಲ್ಲಿಗೆ ಎಂಬ ಪದಗಳು ಬಳಕೆಯಾಗುತ್ತಿವೆ. (4) ಆ, ಈ ಮತ್ತು ಯಾವ ಎಂಬ ಪದಗಳಿಗೆ ಹೊತ್ತು ಎಂಬ ಪದವನ್ನು ಸೇರಿಸಿ ಉಂಟುಮಾಡಿರುವ ಆವತ್ತು, ಈವತ್ತು ಮತ್ತು ಯಾವತ್ತು ಎಂಬ ಪದಗಳೂ ಬಳಕೆಯಲ್ಲಿವೆ; ಇವುಗಳಲ್ಲಿ ಈವತ್ತು ಎಂಬುದು ಇವತ್ತು ಎಂಬ ಇನ್ನೊಂದು ರೂಪದಲ್ಲೂ ಬರುತ್ತಿದ್ದು, ಅದಕ್ಕೆ ಇಂದು ಎಂಬುದರ ಹುರುಳೇ EzÉ. ಇದಲ್ಲದೆ, ಯಾವನು, ಯಾವಳು ಮತ್ತು ಯಾವರು ಎಂಬುವಕ್ಕೆ ಸ್ವಲ್ಪ ಮಟ್ಟಿಗೆ ಕೀಳ್ತನವನ್ನು ಕೊಡುವ ಹುರುಳೂ ಇದೆ; ಹಾಗಾಗಿ, ಅವಕ್ಕೆ ಬದಲಾಗಿ ಯಾರು ಎಂಬುದೇ ಇವತ್ತು ಹೆಚ್ಚು ಬಳಕೆಯಾಗುತ್ತಿದೆ. (5) ತೋರುಪದಗಳ ಪಟ್ಟಿಯನ್ನು ಕೊಡುವಲ್ಲಿ ನಾವು ಎದುರಿಸಬೇಕಾಗಿರುವ ಇನ್ನೊಂದು ತೊಡಕೇನೆಂದರೆ, ಯಾವ ಪದವನ್ನು ಬರಹ

ಕನ್ನಡದ ಪದವೆಂದು ತಿಳಿಯಬೇಕು, ಮತ್ತು ಯಾವುದನ್ನು ಬರಹದಲ್ಲಿ ಬಳಕೆಯಾದ ಆಡುಗನ್ನಡದ ಪದವೆಂದು ತಿಳಿಯಬೇಕು ಎಂಬುದನ್ನು ತೀರ್ಮಾನಿಸುವುದು ಅಶ್ಟೇನೂ ಸುಲಬವಲ್ಲ. ಯಾಕೆಂದರೆ, ಬರಹದಲ್ಲಿ ಬರುವ ಪದಗಳೆಲ್ಲವೂ ಬೇರೆ ಬೇರೆ ಆಡುನುಡಿಗಳಿಂದ ಬೇರೆ ಬೇರೆ ಸಂದರ್ಬಗಳಲ್ಲಿ ಆಯ್ಕೆಯಾಗಿ ಬಂದವುಗಳೇ. ಈ ಆಯ್ಕೆಯೆಂಬುದು ಬರಹಗಾರರ ಬಳಕೆಯನ್ನು ಅವಲಂಬಿಸಿದೆಯಾದ ಕಾರಣ, ಬರಹದ ಪದಗಳಿಗೂ ಆಡುನುಡಿಯ ಪದಗಳಿಗೂ ನಡುವೆ ಒಂದು ಕಚಿತವಾದ ಗಡಿಯನ್ನು ಕಾಣಲು ಬರುವುದಿಲ್ಲ. ಎತ್ತುಗೆಗಾಗಿ, ಅವರು ಮತ್ತು ಇವರು ಎಂಬವುಗಳು ಕಚಿತವಾಗಿ ಬರಹದ ಪದಗಳು; ಆದರೆ, ಆತ ಮತ್ತು ಈತ ಎಂಬವುಗಳು, ಇಲ್ಲವೇ ಆಕೆ ಮತ್ತು ಈಕೆ ಎಂಬವುಗಳು ಸ್ವಲ್ಪ ಮಟ್ಟಿಗೆ ಆಡುನುಡಿಯ ವಾಸನೆಯನ್ನು ಹೊತ್ತಿವೆ; ಕೆಲವು ಬರಹಗಳಲ್ಲಿ ಆತ ಮತ್ತು ಆಕೆ ಎಂಬ ಪದಗಳನ್ನು ಅವನು ಮತ್ತು ಅವಳು ಪದಗಳಿಗಿಂತ ತುಸು ಮಟ್ಟಿಗೆ ಹೆಚ್ಚಿಗಿನ ಮದಿಪನ್ನು ಕೊಡುವುದಕ್ಕಾಗಿಯೂ ಬಳಸಲಾಗುತ್ತದೆ. ಇದಕ್ಕೆ ಬದಲು, ಆಚ (ಆ ಕಡೆಯ) - ಈಚ (ಈ ಕಡೆಯ), ದಾವ (ಯಾವ) ಎಂಬಂತಹವು ಪೂರ್ತಿ ಆಡುನುಡಿಯ ಪದಗಳೆಂದು ಹೇಳಲು ಬರುತ್ತದೆ. ಆದರೆ, ಆಚ ಮತ್ತು ಈಚ ಎಂಬ ಎರಡು ಪದಗಳೂ ಅದರಿಂದಾಚೆಗೆ ಮತ್ತು ಇತ್ತೀಚೆಗೆ ಎಂಬ ಪದಕಂತೆಗಳಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ತೋರುಪದಗಳ ಇಟ್ಟಳದಲ್ಲಿ ಕಾಣಿಸುವ ಈ ಕೆಲಸದ ಅಂಗ ಮತ್ತು ಹರವಿನ ಅಂಗ ಎಂಬ ಎರಡು ಅಂಗಗಳ ಓರಣಕ್ಕೂ ಹೆಸರುಕಂತೆಗಳಲ್ಲಿ ಕಾಣಿಸುವ ಪರಿಚೆಪದ ಮತ್ತು ಹೆಸರುಪದಗಳೆಂಬ ಎರಡು ಬಗೆಯ ಪದಗಳ ಓರಣಕ್ಕೂ ನಡುವೆ ಸಂಬಂದವಿರುವ ಹಾಗೆ ಕಾಣಿಸುತ್ತದೆ: ಹೆಸರುಕಂತೆಗಳಲ್ಲಿ ಪರಿಚೆಪದ (ಚಿಕ್ಕ ಮನೆ ಎಂಬುದರಲ್ಲಿ ಚಿಕ್ಕ ಎಂಬುದು) ಮೊದಲಿಗೆ ಬರುವ ಹಾಗೆ ತೊರುಪದಗಳಲ್ಲಿ ಅವುಗಳ ಕೆಲಸವನ್ನು ತಿಳಿಸುವ ಅಂಗ ಮೊದಲಿಗೆ ಬರುತ್ತದೆ, ಮತ್ತು ಹೆಸರುಕಂತೆಗಳಲ್ಲಿ ಅವುಗಳ ಹರವನ್ನು ತಿಳಿಸುವ ಹೆಸರುಪದ (ಮನೆ ಎಂಬುದು) ಬಳಿಕ ಬರುವ ಹಾಗೆ ತೋರುಪದಗಳಲ್ಲಿ ಅವುಗಳ ಹರವನ್ನು ತಿಳಿಸುವ ಅಂಗ ಬಳಿಕ ಬರುತ್ತದೆ.

10.1.4 ತೋರ್ಕೆಯ ಬಗೆಗಳು

ಮಾತಿನಲ್ಲಿ ಬಳಸುವಾಗ, ತೋರುಪದಗಳನ್ನು ಮುಕ್ಯವಾಗಿ ಆಡುಗನ ಹತ್ತಿರ ಇಲ್ಲವೇ ದೂರ ಇರುವ ವ್ಯಕ್ತಿ, ವಸ್ತು ಮೊದಲಾದುವನ್ನು, ಅವುಗಳ ಅಳವಿ, ಎಣಿಕೆ, ಇಲ್ಲವೇ ಬಗೆಯನ್ನು, ಮತ್ತು ಅವು ನಡೆಸುವ ಎಸಕಗಳ ಹೊತ್ತು, ದಿನ,

ಜಾಗ, ದಿಕ್ಕು, ಇಲ್ಲವೇ ಹೊಲಬನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಇವರನ್ನು ಒಳಗೆ ಕರೆದುಕೊಂಡು ಹೋಗಿ. (1ಚ) ಇದನ್ನು ಒಡೆದುಹಾಕಿದ್ದು ಯಾರು? (1ಟ) ಇಶ್ಟು ಹೂಗಳನ್ನು ನೆರೆಮನೆಯವರಿಗೆ ಕೊಡು. (1ತ) ಅವರು ಇವತ್ತು ಬೇಗನೆ ಬರುತ್ತಾರೆ. (1ಪ) ಇಲ್ಲಿಗೆ ಯಾರೂ ಬರುವುದಿಲ್ಲ. (1ಗ) ಈ ಪೆಟ್ಟಿಗೆಯನ್ನು ಹೀಗೆ ತೆರೆಯಬೇಕು. (1ಕ-ಚ)ಗಳಲ್ಲಿ ಬಂದಿರುವ ಇವರು ಮತ್ತು ಇದು ಎಂಬ ತೋರುಪದಗಳು ಆಡುಗನ ಹತ್ತಿರ ಇರುವ ಒಬ್ಬ ಆಳು ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ; (1ಟ)ದಲ್ಲಿ ಬಂದಿರುವ ಇಶ್ಟು ಎಂಬ ತೋರುಪದ ಒಂದು ವಸ್ತುವಿನ (ಹೂಗಳ) ಅಳವಿಯನ್ನು ತಿಳಿಸುತ್ತದೆ; ಮತ್ತು (1ತ-ಗ)ಗಳಲ್ಲಿ ಬಂದಿರುವ ಇವತ್ತು, ಇಲ್ಲಿಗೆ ಮತ್ತು ಹೀಗೆ ಎಂಬ ತೋರುಪದಗಳು ಆ ಸೊಲ್ಲುಗಳು ತಿಳಿಸುವ ಎಸಕದ ದಿನ, ಜಾಗ, ಮತ್ತು ಹೊಲಬುಗಳನ್ನು ತಿಳಿಸುತ್ತವೆ. ಈ ಎಲ್ಲಾ ಪದಗಳೂ ಆಡುಗನ ಕುಳ್ಳಿಹವನ್ನವಲಂಬಿಸಿವೆ; ಆಡುಗನ ಜಾಗ ಮತ್ತು ಹೊತ್ತುಗಳು ಯಾವುವೆಂಬುದನ್ನು ತಿಳಿಯದೆ ಅವು ಏನು ಹೇಳುತ್ತವೆಯೆಂಬುದನ್ನು ತಿಳಿಯಲು ಬರುವುದಿಲ್ಲ; ಹಾಗಾಗಿ, ಅವಕ್ಕೆಲ್ಲ ಆಡುಗನ ಜಾಗ ಮತ್ತು ಹೊತ್ತುಗಳು ತೋರ್ಕೆನಡುಗಳಾಗಿವೆಯೆಂದು ಹೇಳಬಹುದು. ಈ ರೀತಿ ಆಡುಗನ ಜಾಗ ಮತ್ತು ಹೊತ್ತುಗಳನ್ನು ತೋರ್ಕೆನಡುವಾಗಿ ಬಳಸುವ ಬದಲು, ಮಾತನ್ನೇ ತೋರ್ಕೆನಡುವಾಗಿ ಬಳಸಲು ಬರುತ್ತದೆ; ಇಂತಹ ಬಳಕೆಯಲ್ಲಿ ಮಾತಿನಲ್ಲಿ ಬಂದಿರುವ ಪದಕಂತೆ, ಸೊಲ್ಲು, ಸೊಲ್ಲುಕಂತೆ ಮೊದಲಾದವುಗಳ ಕಡೆಗೆ ಈ ತೋರುಪದಗಳು ಕೇಳುಗನ ಗಮನವನ್ನು ಸೆಳೆಯುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹುಡುಗನಿಗೆ ಕಾಲುನೋವು; ಹಾಗಾಗಿ, ಅವನು ಇವತ್ತು ಶಾಲೆಗೆ ಹೋಗಲಿಲ್ಲ. (1ಚ) ಅವನು ಹತ್ತುಸಾವಿರ ಕೊಟ್ಟ; ಬೇರೆ ಯಾರೂ ಅಶ್ಟು ಕೊಟ್ಟಿರಲಿ¯್ಲ. (1ಟ) ಅವರು ಊಟಮಾಡದೆ ಹೋದರು; ಇದು ಆಕೆಗೆ ಒಪ್ಪಿಗೆಯಾಗಲಿಲ್ಲ.

(1ತ) ಕಾಡಿನಲ್ಲಿ ನಾನೊಂದು ಕೆಂಪು ಬಣ್ಣದ ಚಿಟ್ಟೆಯನ್ನು ನೋಡಿದೆ; ಅಂತಹ ಚಿಟ್ಟೆಯನ್ನು ನಾನು ಬೇರೆಲ್ಲಿಯೂ ನೋಡಿರಲಿಲ್ಲ. (1ಕ)ದಲ್ಲಿ ಬಂದಿರುವ ಅವನು ಎಂಬುದು ಅದಕ್ಕೆ ಮೊದಲು ಬಂದಿದ್ದ ಹುಡುಗ ಎಂಬ ಪದ ತಿಳಿಸುವ ಪಾಂಗನ್ನು ಗುರುತಿಸುತ್ತದೆ; ಇದಲ್ಲದೆ, ಅದರಲ್ಲೇನೇ ಬಳಕೆಯಾಗಿರುವ ಹಾಗೆ (ಹಾಗಾಗಿ) ಎಂಬ ಪದ `ಹುಡುಗ ಇವತ್ತು ಶಾಲೆಗೆ ಹೋಗದಿರಲು ಕಾರಣ ಏನು’ ಎಂಬುದರ ಕಡೆಗೆ ಕೇಳುಗನ ಗಮನವನ್ನು ಸೆಳೆಯುತ್ತದೆ, ಮತ್ತು ಹಾಗೆ ಮಾಡುವ ಮೂಲಕ ಅದು ಅದಕ್ಕಿಂತ ಹಿಂದೆ ಬಂದಿದ್ದ ಅವನಿಗೆ ಕಾಲುನೋವು ಎಂಬ ಸೊಲ್ಲನ್ನು ಮುಂದಿನ ಸೊಲ್ಲಿನೊಂದಿಗೆ ಸಂಬಂದಿಸುತ್ತದೆ. ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ಅಶ್ಟು, (1ಟ)ದಲ್ಲಿ ಬಂದಿರುವ ಇದು, ಮತ್ತು (1ತ)ದಲ್ಲಿ ಬಂದಿರುವ ಅಂತಹ ಎಂಬ ತೋರುಪದಗಳು ಅವುಗಳಿಗಿಂತ ಮೊದಲು ಬಂದಿದ್ದ ಸೊಲ್ಲುಗಳ ಕಡೆಗೆ ಕೇಳುಗನ ಗಮನವನ್ನು ಸೆಳೆದು, ಅವು ಆ ಸೊಲ್ಲಿಗೆ ಬೇಕಾಗುವ ಅಳವಿ, ಎಸಕ, ಮತ್ತು ಬಗೆಗಳನ್ನು ಕೊಡುತ್ತವೆಯೆಂದು ತಿಳಿಸುವ ಮೂಲಕ, ಅವೆರಡನ್ನು ಸಂಬಂದಿಸುತ್ತವೆ. ತೋರ್ಕೆಯ ಬಗೆಗಳ ಕುರಿತಾಗಿ ಹೆಚ್ಚಿನ ತಿಳಿವನ್ನು ಮುಂದೆ (10.3)ರಲ್ಲಿ ಕೊಡಲಾಗುವುದು.

10.1.5 ಅರಿವಿನ ಎರಡು ಬಗೆಗಳು: ಬಳಕೆ ಮತ್ತು ನನಸು

ಪಾಂಗುಗಳ ಕುರಿತಾಗಿ ಎರಡು ಬಗೆಯ ಅರಿವುಗಳನ್ನು ಇಲ್ಲವೇ ಅರಿಯಮೆಗಳನ್ನು ತಿಳಿಸಲು ಬರುತ್ತದೆ; ಪಾಂಗುಗಳ ಬಳಕೆಗೆ ಸಂಬಂದಿಸಿದಂತಹ ಅರಿವು ಇಲ್ಲವೇ ಅರಿಯಮೆ ಒಂದು ಬಗೆಯದು, ಮತ್ತು ಅವುಗಳ ನನಸಿಗೆ (ವಾಸ್ತವಿಕತೆಗೆ) ಸಂಬಂದಿಸಿದಂತಹ ಅರಿವು ಇಲ್ಲವೇ ಅರಿಯಮೆ ಇನ್ನೊಂದು ಬಗೆಯದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜುವಿಗೆ ಒಂದು ಪುಸ್ತಕ ಬೇಕಾಗಿದೆ. (1ಚ) ರಾಜುವಿಗೆ ಯಾವುದೋ ಪುಸ್ತಕ ಬೇಕಾಗಿದೆ. (1ಕ)ದಲ್ಲಿ ಬಂದಿರುವ ಒಂದು ಪುಸ್ತಕ ಎಂಬುದು ಪಾಂಗುಗಳ ಬಳಕೆಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುತ್ತದೆ; ರಾಜುವಿಗೆ ಬೇಕಾಗಿರುವ ಪುಸ್ತಕ ಯಾವುದು ಎಂಬುದು ಆಡುಗನಿಗೆ ತಿಳಿದಿರಬಹುದು; ಆದರೆ, ಅದು ಕೇಳುಗನಿಗೆ ತಿಳಿದಿರಲಾರದು. ಇದಲ್ಲದೆ, ತನಗೆ ತಿಳಿದಿದ್ದರೂ ಅದನ್ನು

ಕೇಳುಗನಿಗೆ ತಿಳಿಸಬೇಕೆಂದು ಆಡುಗನಿಗೆ ಅನಿಸದೆಯೂ ಇರಬಹುದು; ಈ ಕಾರಣಕ್ಕಾಗಿ, ಒಂದು ಪುಸ್ತಕ ಎಂದಿಶ್ಟೇ ಆತ ಹೇಳಿರಬಹುದು. ಹಾಗೆ ಹೇಳುವ ಬದಲು, ರಾಜುವಿಗೆ ಕಾರಂತರ ಮರಳಿ ಮಣ್ಣಿಗೆ ಬೇಕಾಗಿದೆ ಎಂಬುದಾಗಿಯೂ ಆತ ಹೇಳಬಹುದಿತ್ತು; ಇಲ್ಲಿ ರಾಜುವಿಗೆ ಬೇಕಾಗಿರುವ ಪುಸ್ತಕ ಯಾವುದು ಎಂಬುದನ್ನು ಹೆಚ್ಚು ಕಚಿತವಾಗಿ ತಿಳಿಸಲಾಗಿದೆ. (1ಚ)ದಲ್ಲಿ ಬಂದಿರುವ ಯಾವುದೋ ಪುಸ್ತಕ ಎಂಬುದು ನನಸಿಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುತ್ತದೆ; ರಾಜುವಿಗೆ ಬೇಕಾಗಿರುವ ಪುಸ್ತಕ ಯಾವುದೆಂದು ಆಡುಗನಿಗೆ ತಿಳಿದಿಲ್ಲದಂತಹ ಸಂದರ್ಬದಲ್ಲಿ ಈ ರೀತಿ ಯಾವುದೋ ಎಂಬ ತಿಳಿಯದ ತೋರುಪದವನ್ನು ಬಳಸಲಾಗುತ್ತದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೂಳುನುಡಿಯಲ್ಲೂ ಕಾಣಬಹುದು: (1ಕ) ರಾಜು: ಇವತ್ತು ಜಾನಕಿ ಒಂದು ಕಾರು ಕೊಂಡುಕೊಂಡಿದ್ದಾಳೆ. (1ಚ) ಹರಿ: ಎಂತಹ ಕಾರು? ಜಾನಕಿ ಕೊಂಡುಕೊಂಡಿರುವ ಕಾರನ್ನು ರಾಜು ನೋಡಿದ್ದಾನೆ; ಆದರೆ, ಹರಿ ನೋಡಿಲ್ಲ. ಹಾಗಾಗಿ, (1ಕ)ದಲ್ಲಿ ಬಳಕೆಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುವ ಒಂದು ಕಾರು ಎಂಬ ಪದಕಂತೆಯನ್ನು ಬಳಸಲಾಗಿದೆ. ಈ ಬಳಕೆಯಿಂದಾಗಿ, ಹರಿಗೆ ಜಾನಕಿ ಕೊಂಡುಕೊಂಡಿರುವ ಕಾರಿನ ಕುರಿತಾಗಿ ಬಳಕೆಯ ಅರಿವು ಬಂದಿದೆ; ಆದರೆ, ಅದರ ನನಸಿನ ಅರಿವು ಬಂದಿಲ್ಲ. ಹಾಗಾಗಿ, ಕಾರಿನ ಕುರಿತಾಗಿ ನನಸಿನ ಅರಿವನ್ನು ಪಡೆಯಲು (1ಚ)ದಲ್ಲಿ ಎಂತಹ ಕಾರು ಎಂಬ ಪದಕಂತೆಯನ್ನು ಬಳಸಲಾಗಿದೆ. ಈ ಎರಡು ಬಗೆಯ ಅರಿವು ಇಲ್ಲವೇ ಅರಿಯಮೆಗಳ ನಡುವಿನ ವ್ಯತ್ಯಾಸವನ್ನು ಸೊಲ್ಲುಗಳಲ್ಲಿ ಕಾಣಿಸುವ ಬೇರೆಯೂ ಹಲವು ಬಗೆಯ ವ್ಯತ್ಯಾಸಗಳಲ್ಲಿ ಕಾಣಲು ಬರುತ್ತದೆ: (1) ಬಳಕೆಗೆ ಸಂಬಂದಿಸಿದ ಅರಿಯಮೆಯೆಂಬುದು ಯಾವ ರೀತಿಯಲ್ಲಿ ಪಾಂಗುಗಳನ್ನು ಸೊಲ್ಲಿನಲ್ಲಿ ಕೇಳುಗನ ಮುಂದಿಡಲಾಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆಯಲ್ಲದೆ, ಆಡುಗನಿಗೆ ಆ ಪಾಂಗಿನ ಕುರಿತಾಗಿ ಎಂತಹ ಅರಿವಿದೆ ಎಂಬುದರ ಮೇಲೆ ಅವಲಂಬಿಸಿರುವುದಿಲ್ಲ. ಹಾಗಾಗಿ, ಒಬ್ಬ ಆಡುಗನು ಒಂದು ಪಾಂಗನ್ನು ಕೇಳುಗನಿಗೆ ಕಚಿತವಾಗಿ ತಿಳಿಯುವ ಹಾಗೆಯೂ ಮುಂದಿಡಬಹುದು, ಇಲ್ಲವೇ ಅಶ್ಟೊಂದು ಕಚಿತವಾಗಿ ತಿಳಿಯದ ಹಾಗೆಯೂ ಮುಂದಿಡಬಹುದು: (1ಕ) ಜಾನಕಿ ಒಂದು ಕಾರನ್ನು ಕೊಂಡುಕೊಂಡಿದ್ದಾಳೆ.

(1ಚ) ಸೆಟ್ಟರು ಮಾರಾಟಕ್ಕಿರಿಸಿದ ಕೆಂಪು ಬಣ್ಣದ ಮಾರುತಿ ಕಾರನ್ನು ಜಾನಕಿ ಕೊಂಡುಕೊಂಡಿದ್ದಾಳೆ. (1ಕ)ದಲ್ಲಿ ಜಾನಕಿ ಕೊಂಡುಕೊಂಡ ಕಾರನ್ನು ಒಂದು ಕಾರು ಎಂಬ ಪದಕಂತೆಯ ಮೂಲಕ ತಿಳಿಸಲಾಗಿದೆ; ಈ ಪದಕಂತೆ ಅದನ್ನು ಹೆಚ್ಚು ಕಚಿತವಾಗಿ ತಿಳಿಸದಿರುವಂತಹ ರೂಪದಲ್ಲಿದೆ; ಇದನ್ನೇ (1ಚ)ದಲ್ಲಿ ಸೆಟ್ಟರು ಮಾರಾಟಕ್ಕಿರಿಸಿದ ಕೆಂಪು ಬಣ್ಣದ ಮಾರುತಿ ಕಾರು ಎಂಬುದಾಗಿ ತುಂಬಾ ಕಚಿತವಾಗಿ ತಿಳಿಸುವ ರೂಪದಲ್ಲಿ ಕೇಳುಗನ ಮುಂದಿಡಲಾಗಿದೆ. ಆದರೆ, ನನಸಿಗೆ ಸಂಬಂದಿಸಿದ ಅರಿಯಮೆಯನ್ನು ಈ ರೀತಿ ಹಲವು ಬಗೆಗಳಲ್ಲಿ ಮಾರ್ಪಡಿಸಿ ಹೇಳಲು ಬರುವುದಿಲ್ಲ; ಯಾಕೆಂದರೆ, ಈ ಅರಿಯಮೆ ಆಡುಗನಲ್ಲೇ ಇರುತ್ತದೆ; ಆತನು ತನಗೆ ಒಂದು ಪಾಂಗಿನ ಕುರಿತಾಗಿ ಎಶ್ಟು ತಿಳಿದಿದೆಯೋ ಅಶ್ಟನ್ನು ಮಾತ್ರ ಕೇಳುಗನಿಗೆ ತಿಳಿಸಬಲ್ಲನು. (1) ನನ್ನ ಸ್ಕೂಟರನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. (1)ನೇ ಸೊಲ್ಲಿನಲ್ಲಿ ಬಂದಿರುವ ಯಾರೋ ಎಂಬ ಪದ ನನಸಿಗೆ ಸಂಬಂದಿಸಿದ ಅರಿಯಮೆಯನ್ನು ತಿಳಿಸುತ್ತದೆ; ಆಡುಗನಿಗೆ ತನ್ನ ಸ್ಕೂಟರನ್ನು ಕದ್ದವನ ಕುರಿತಾಗಿ ಬೇರೇನೂ ತಿಳಿದಿಲ್ಲವಾದುದರಿಂದ ಆ ಕಳ್ಳನ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡುವಂತೆ ಅವನಿಗೆ ಯಾರೋ ಎಂಬುದನ್ನು ಬದಲಾಯಿಸಿ ಹೇಳಲು ಬರುವುದಿಲ್ಲ. (2) ಬಳಕೆಗೆ ಸಂಬಂದಿಸಿದ ಅರಿಯಮೆಗಳು ಒಂದು ಪದವನ್ನು ಇಲ್ಲವೇ ಪದಕಂತೆಯನ್ನು ಸೊಲ್ಲಿನಲ್ಲಿ ಬಳಸಿದೊಡನೆ ಇಲ್ಲವಾಗುತ್ತವೆ; ಆದರೆ, ನನಸಿಗೆ ಸಂಬಂದಿಸಿದ ಅರಿಯಮೆಗಳು ಸರಿಯಾದ ಅರಿವು ಕೇಳುಗನಿಗೆ ದೊರಕುವಲ್ಲಿವರೆಗೂ ಹಾಗೆಯೇ ಉಳಿಯುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ತಂಗುದಾಣದಲ್ಲಿ ಒಬ್ಬ ಹೆಂಗಸಿನೊಂದಿಗೆ ಒಬ್ಬ ಹುಡುಗ ನಿಂತಿದ್ದ; ಬಸ್ಸು ಬಂದೊಡನೆ ಅವನು ಹೆಂಗಸಿನ ಕಯ್ಯನ್ನು ಹಿಡಿದುಕೊಂಡ. (1ಚ) ತಂಗುದಾಣದಲ್ಲಿ ಒಬ್ಬ ಹೆಂಗಸಿನೊಂದಿಗೆ ಒಬ್ಬ ಹುಡುಗ ನಿಂತಿದ್ದ; ಬಸ್ಸು ಬಂದೊಡನೆ ಒಬ್ಬ ಹುಡುಗ ಹೆಂಗಸಿನ ಕಯ್ಯನ್ನು ಹಿಡಿದುಕೊಂಡ.

(1ಕ) ಸೊಲ್ಲಿನಲ್ಲಿ ಹೆಂಗಸಿನೊಂದಿಗೆ ನಿಂತಿದ್ದ ಹುಡುಗನೇ ಬಸ್ಸು ಬಂದೊಡನೆ ಆಕೆಯ ಕಯ್ಯನ್ನು ಹಿಡಿದುಕೊಂಡುದು ಎಂಬ ಹುರುಳು ದೊರಕುತ್ತದೆ; ಇದಕ್ಕೆ ಬದಲು, (1ಚ) ಸೊಲ್ಲಿನಲ್ಲಿ ಆಕೆಯ ಕಯ್ಯನ್ನು ಹಿಡಿದುಕೊಂಡ ಹುಡುಗ ಆಕೆಯೊಂದಿಗೆ ನಿಂತಿದ್ದ ಹುಡುಗನಲ್ಲ, ಬೇರೊಬ್ಬ ಹುಡುಗ ಎಂಬ ಹುರುಳು ದೊರಕುತ್ತದೆ. ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಒಬ್ಬ ಹುಡುಗ ಎಂಬುದು ಬಳಕೆಯ ಅರಿಯಮೆಯನ್ನು ತಿಳಿಸುತ್ತದಲ್ಲದೆ, ನನಸಿನ ಅರಿಯಮೆಯನ್ನಲ್ಲ; ಆ ಹೆಸರುಕಂತೆಯನ್ನು ಸೊಲ್ಲಿನಲ್ಲಿ ಬಳಸಿದೊಡನೆ ಅದು ಗುರುತಿಸುವ ಪಾಂಗು ಕೇಳುಗನ ಮಟ್ಟಿಗೆ ಗುರುತಿಸಬಲ್ಲ ಪಾಂಗಾಗುತ್ತದೆ, ಮತ್ತು ಅದರ ಕುರಿತಾಗಿದ್ದ ಬಳಕೆಯ ಅರಿಯಮೆ ಇಲ್ಲವಾಗುತ್ತದೆ. ಹಾಗಾಗಿ, ಆ ಪಾಂಗಿನ ಕುರಿತಾಗಿ ಬೇರೇನಾದರೂ ಹೇಳಬೇಕೆಂದಿದ್ದರೆ, ಅದನ್ನು ಗುರುತಿಸಲು ಒಬ್ಬ ಹುಡುಗ ಎಂಬ ಬಳಕೆಯ ಅರಿಯಮೆಯನ್ನು ತಿಳಿಸುವ ಹೆಸರುಕಂತೆಯನ್ನು ಬಳಸಲು ಬರುವುದಿಲ್ಲ. ಇದಕ್ಕೆ ಬದಲು, ಯಾರು, ಎಲ್ಲಿ, ಏನು ಮೊದಲಾದ ತಿಳಿಯದ ತೋರುಪದಗಳು ನನಸಿನ ಅರಿಯಮೆಯನ್ನು ತಿಳಿಸುತ್ತಿದ್ದು, ಅವು ಗುರುತಿಸುವ ಪಾಂಗುಗಳ ಕುರಿತಾಗಿ ಆಡುಗನಲ್ಲಿರುವ ಅರಿಯಮೆ ಅವುಗಳ ಹಲವು ಬಳಕೆಗಳಲ್ಲಿ ಅಳಿಯದೆ ಉಳಿಯಬಲ್ಲುವು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಕಟ್ಟನ್ನು ಯಾರೋ ಬೆಳಿಗ್ಗೆ ತಂದುಕೊಟ್ಟಿದ್ದಾರೆ; ಅವನು ಯಾರೆಂದು ನನಗೆ ತಿಳಿಯದು. (1ಚ) ಅವನು ನಮ್ಮನ್ನು ಇವತ್ತು ಎಲ್ಲಿಗೋ ಕರೆದುಕೊಂಡು ಹೋಗಲಿದ್ದಾನೆ; ಆದರೆ, ಎಲ್ಲಿಗೆಂದು ಆತ ಯಾರಿಗೂ ಹೇಳಿಲ್ಲ. (1ಕ)ದಲ್ಲಿ ಯಾರು ಪದವನ್ನು ಎರಡು ಬಾರಿ ಬಳಸಲಾಗಿದೆ; ಈ ಎರಡು ಬಳಕೆಗಳಲ್ಲೂ ಅದು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತದೆ; ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ಎಲ್ಲಿಗೆ ಎಂಬ ಪದದ ಎರಡು ಬಳಕೆಗಳೂ ಒಂದೇ ಜಾಗವನ್ನು ಗುರುತಿಸುತ್ತವೆ. (3) ನನಸಿನ ಅರಿಯಮೆಯನ್ನು ತಿಳಿಸುವ ತಿಳಿಯದ ತೋರುಪದಗಳು ಆಡುಗನಲ್ಲಿರುವ ಅರಿಯಮೆಯನ್ನು ತಿಳಿಸುತ್ತವೆ, ಮತ್ತು ಬಳಕೆಯ ಅರಿಯಮೆಯನ್ನು ತಿಳಿಸುವ ಒಂದು ಪುಸ್ತಕ ಎಂಬಂತಹ ಪದಕಂತೆಗಳು ಕೇಳುಗನಲ್ಲಿ ಇರಬಹುದಾದ (ಎಂದರೆ, ಇರಬಹುದೆಂದು ಆಡುಗನು ಊಹಿಸಿರುವ) ಅರಿಯಮೆಯನ್ನು ತಿಳಿಸುತ್ತವೆ.

ಹಾಗಾಗಿ, ಒಂದು ಪಾಂಗಿನ ಕುರಿತಾಗಿ ತಮಗೆ ತಿಳಿಯದಿರುವ ಸಂಗತಿಗಳನ್ನು ಕೇಳುಗನಿಂದ ತಿಳಿದುಕೊಳ್ಳುವುದಕ್ಕಾಗಿ ಆಡುಗರು ತಿಳಿಯದ ತೋರುಪದಗಳಿರುವ ಕೇಳ್ವಿಗಳನ್ನು ಬಳಸುತ್ತಾರೆ: (1ಕ) ಈ ಕಟ್ಟನ್ನು ಯಾರು ತಂದರು? (1ಚ) ಅವನು ಎಲ್ಲಿಗೆ ಹೋಗಿದ್ದಾನೆ? ತಿಳಿಯದ ತೋರುಪದಗಳು ನನಸಿನ ಅರಿಯಮೆಯನ್ನು ತಿಳಿಸುವ ಕಾರಣ, ಮತ್ತು ಈ ವಿಶಯ ಕೇಳುಗನಿಗೆ ತಿಳಿದಿರಬಹುದೆಂಬ ಅನಿಸಿಕೆ ಆಡುಗನಲ್ಲಿ ಇರುತ್ತದೆಯಾದ ಕಾರಣ, ಆತನು ಇಂತಹ ಕೇಳ್ವಿಗಳ ಮೂಲಕ ತನ್ನಲ್ಲಿರುವ ಅರಿಯಮೆಯನ್ನು ಹೋಗಲಾಡಿಸಲು ಬಯಸುತ್ತಾನೆ. ಆದರೆ, ನನಸಿನ ಅರಿಯಮೆಯನ್ನು ಕೇಳುಗನ ನೆರವಿನಿಂದ ಹೋಗಲಾಡಿಸಲು ಬರುವ ಹಾಗೆ ಬಳಕೆಯ ಅರಿಯಮೆಯನ್ನು ಒಂದು ಕೇಳ್ವಿಯ ಮೂಲಕ ಹೋಗಲಾಡಿಸಲು ಬರುವುದಿಲ್ಲ: (1ಕ) ಈ ಟಿ.ವಿಯನ್ನು ಯಾರೋ ಒಡೆದುಹಾಕಿದ್ದಾರೆ; ಅದು ಯಾರೆಂದು ನಿಮಗೆ ತಿಳಿದಿದೆಯೇ? (1ಚ) ನಿನ್ನೆ ನಾನು ಒಬ್ಬ ಹುಡುಗನನ್ನು ಕಂಡಿದ್ದೆ; *ಯಾರನ್ನು ಕಂಡಿದ್ದೆನೆಂದು ನಿಮಗೆ ಗೊತ್ತಿದೆಯೇ? (1ಕ)ದಲ್ಲಿ ಯಾರೋ ಎಂಬುದು ನನಸಿನ ಅರಿಯಮೆಯನ್ನು ತಿಳಿಸುತ್ತದೆ; ಹಾಗಾಗಿ, ಅದರ ಕುರಿತಾಗಿ ಕೇಳುಗನಿಂದ ಹೆಚ್ಚಿನ ಅರಿವನ್ನು ಪಡೆಯಲು (1ಕ)ದ ಎರಡನೆಯ ಸೊಲ್ಲಾಗಿ ಒಂದು ಕೇಳ್ವಿಯನ್ನು ಬಳಸಿರುವುದು ಸರಿಯಾಗಿದೆ. ಇದಕ್ಕೆ ಬದಲು, (1ಚ)ದಲ್ಲಿ ಒಬ್ಬ ಹುಡುಗ ಎಂಬುದು ಬಳಕೆಯ ಅರಿಯಮೆಯನ್ನು ತಿಳಿಸುತ್ತದೆ; ಹಾಗಾಗಿ, ಅದನ್ನು ಕೇಳುಗನ ನೆರವಿನಿಂದ ಹೋಗಲಾಡಿಸಲು ಬರುವುದಿಲ್ಲ, ಮತ್ತು ಆ ರೀತಿ ಹೋಗಲಾಡಿಸುವುದಕ್ಕಾಗಿ ಬಳಕೆಯಾಗಿರುವ ಅದರ ಎರಡನೆಯ ಸೊಲ್ಲು (ಕೇಳ್ವಿ) ಸರಿಯಿಲ್ಲ; ಕೇಳುಗನ ತಿಳಿವನ್ನು ಪರೀಕ್ಶಿಸುವಲ್ಲಿ ಮಾತ್ರ (1ಚ)ದಂತಹ ಸೊಲ್ಲಿನ ಬಳಕೆ ಸರಿಯಾಗಬಲ್ಲುದು. ಇದೇ ಕಾರಣಕ್ಕಾಗಿ, ಕೇಳುಗನಿಂದ ಕೆಲಸವನ್ನು ಮಾಡಿಸುವುದಕ್ಕಾಗಿ ಬಳಕೆಯಾಗುವ ಸೊಲ್ಲುಗಳಲ್ಲಿಯೂ ನನಸಿನ ಅರಿಯಮೆಯನ್ನು ತಿಳಿಸುವ ತೋರುಪದಗಳನ್ನು ಬಳಸಲು ಬರುತ್ತದೆ, ಆದರೆ, ಬಳಕೆಯ ಅರಿಯಮೆಯನ್ನು ತಿಳಿಸುವ ಪದಕಂತೆಗಳನ್ನು ಬಳಸಲು ಬರುವುದಿಲ್ಲ:

(1ಕ) ಈ ಕಿಟಿಕಿಯನ್ನು ಯಾರೋ ಒಡೆದುಹಾಕಿದ್ದಾರೆ; ಅದು ಯಾರು ಎಂಬುದನ್ನು ನೀವು ಕಂಡುಹಿಡಿಯಬೇಕು. (1ಚ) ಈ ಪುಸ್ತಕವನ್ನು ನನಗೆ ಒಬ್ಬ ಹುಡುಗ ಕೊಟ್ಟಿದ್ದಾನೆ; *ಅವನಿಗೆ ನೀವು ಇದನ್ನು ಹಿಂದಿರುಗಿಸಬೇಕು. (1ಕ)ದಲ್ಲಿ ಕಿಟಿಕಿಯನ್ನು ಒಡೆದವರು ಯಾರೆಂದು ಆಡುಗನಿಗೆ ತಿಳಿದಿಲ್ಲ; ಹಾಗಾಗಿ, (1ಕ)ದ ಎರಡನೆಯ ಸೊಲ್ಲಿನ ಮೂಲಕ ಅದನ್ನು ಕಂಡುಹಿಡಿಯಲು ಕೇಳುಗನ ನೆರವನ್ನು ಪಡೆಯುವುದು ಸರಿಯಾಗಿದೆ; ಆದರೆ, (1ಚ)ದಲ್ಲಿ ಪುಸ್ತಕವನ್ನು ಕೊಟ್ಟವರು ಯಾರೆಂದು ಆಡುಗನಿಗೆ ತಿಳಿದಿದೆ; ಹೀಗಿದ್ದರೂ, ಅದನ್ನು ಕಚಿತವಾಗಿ ತಿಳಿಸಹೋಗದೆ ಒಬ್ಬ ಹುಡುಗ ಎಂದಿಶ್ಟೇ ಹೇಳಲಾಗಿದೆ; ಇಂತಹ ಕಚಿತವಲ್ಲದ ತಿಳಿವನ್ನು ಕೇಳುಗನಿಗೆ ಕೊಟ್ಟಲ್ಲಿ, ಆಡುಗನು ಹೇಳಿದ ಕೆಲಸವನ್ನು ನಡೆಸಲು, ಎಂದರೆ (1ಚ)ದ ಎರಡನೇ ಸೊಲ್ಲು ತಿಳಿಸುವ ಕೆಲಸವನ್ನು ನಡೆಸಲು, ಆತನಿಗೆ ಸಾದ್ಯವಾಗದು. (4) ಬಳಕೆಯ ಅರಿಯಮೆಯೆಂಬುದು ಹೆಸರುಪದಗಳು ತಿಳಿಸುವ ಪಾಂಗುಗಳ ಕುರಿತಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ; ಇದಕ್ಕೆ ಬದಲು, ನನಸಿನ ಅರಿಯಮೆಯೆಂಬುದು ಹೆಸರುಪದಗಳು ತಿಳಿಸುವ ಪಾಂಗುಗಳ ಕುರಿತಾಗಿ ಮಾತ್ರವಲ್ಲದೆ, ಪರಿಚೆಪದಗಳು ತಿಳಿಸುವ ಹುರುಳುಗಳ ಕುರಿತಾಗಿಯೂ ಕಾಣಿಸಿಕೊಳ್ಳಬಲ್ಲುವು. ಹಾಗಾಗಿ, ಬಳಕೆಯ ಅರಿಯಮೆಯನ್ನು ಹೆಸರುಕಂತೆಗಳ ಬಳಕೆಯಲ್ಲಿ ಮಾತ್ರ ಕಾಣಲು ಬರುತ್ತದೆ; ಇದಕ್ಕೆ ಬದಲು, ನನಸಿನ ಅರಿಯಮೆಯನ್ನು ತಿಳಿಸುವ ತಿಳಿಯದ ತೋರುಪದಗಳು ಹೆಸರುಪದಗಳ ಜಾಗದಲ್ಲಿ ಮಾತ್ರವಲ್ಲದೆ, ಹೆಸರುಪರಿಚೆಗಳ ಮತ್ತು ಎಸಕಪರಿಚೆಗಳ ಜಾಗದಲ್ಲಿಯೂ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಬಳಕೆಯ ಅರಿಯಮೆಯನ್ನು ತಿಳಿಸುವುದಕ್ಕಾಗಿ ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ಒಂದು, ಒಬ್ಬ, ಕೆಲವು, ಹಲವು ಮೊದಲಾದ ಪದಗಳು ಮಾತ್ರ ಬಳಕೆಯಲ್ಲಿವೆ; ಇವನ್ನು ಹೆಸರುಕಂತೆಗಳಲ್ಲಿ ಮಾತ್ರ ಬಳಸಲು ಬರುತ್ತದೆ; ಈ ಬಳಕೆಯಲ್ಲಿ ಅವು ಇಡೀ ಪದಕಂತೆ ತಿಳಿಸುವ ಪಾಂಗಿನ ಕುರಿತಾಗಿರುವ ಅರಿಯಮೆಯನ್ನೇ ತಿಳಿಸುತ್ತವೆ; ಇದಲ್ಲದೆ, ಎಸಕಪರಿಚೆಯ ಪದಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ: (1ಕ) ಅವನು ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದಾನೆ. (1ಚ) *ಅವನು ಅದನ್ನು ಒಂದು ಬೆಳ್ಳಗೆ ಮಾಡಿದ. (1ಕ)ದಲ್ಲಿ ಬಂದಿರುವ ಒಂದು ಎಂಬ ಪದ ದೊಡ್ಡ ಎಂಬ ಪದದ ಕುರಿತಾಗಿರುವ ಅರಿಯಮೆಯನ್ನು ತಿಳಿಸುವುದಿಲ್ಲ; ದೊಡ್ಡ ಮನೆ ಎಂಬ ಇಡೀ

ಪದಕಂತೆ ಗುರುತಿಸುವ ಪಾಂಗಿನ ಕುರಿತಾಗಿರುವ ಅರಿಯಮೆಯನ್ನು ತಿಳಿಸುತ್ತದೆ. (1ಚ)ದಲ್ಲಿ ಬಳಕೆಯ ಅರಿಯಮೆಯನ್ನು ತಿಳಿಸಬಲ್ಲ ಒಂದು ಎಂಬ ಪದವನ್ನು ಬೆಳ್ಳಗೆ ಎಂಬ ಎಸಕಪರಿಚೆ ಪದದೊಂದಿಗೆ ಬಳಸಿರುವ ಕಾರಣ, ಆ ಸೊಲ್ಲು ಸರಿಯಿಲ್ಲ. ಇದಕ್ಕೆ ಬದಲು, ನನಸಿನ ಅರಿಯಮೆಯನ್ನು ತಿಳಿಸುವ ಪದಗಳಲ್ಲಿ (ಕ) ಹೆಸರುಪದಗಳ ಜಾಗದಲ್ಲಿ ಬರಬಲ್ಲ ಯಾರು, ಏನು, ಯಾವನು ಮೊದಲಾದವು, (ಚ) ಎಸಕಪರಿಚೆಗಳ ಜಾಗದಲ್ಲಿ ಬರಬಲ್ಲ ಎಲ್ಲಿ, ಎಂದು, ಯಾವಾಗ ಮೊದಲಾದುವು, ಮತ್ತು (ಟ) ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ಎಶ್ಟು, ಯಾವ, ಎಂತಹ ಎಂಬವು ಎಂಬುದಾಗಿ ಮೂರು ಬಗೆಯವುಗಳಿವೆ. ಹಾಗಾಗಿ, ಇವು ಹೆಸರುಪದದ ಕುರಿತಾಗಿರುವ ಅರಿಯಮೆಯನ್ನು ಮಾತ್ರವಲ್ಲದೆ, ಎಸಕಪದ ಮತ್ತು ಪರಿಚೆಪದಗಳ ಕುರಿತಾಗಿರುವ ಅರಿಯಮೆಯನ್ನೂ ತಿಳಿಸಬಲ್ಲುವು: (1ಕ) ಅವರ ಮನೆಗೆ ಯಾರು ಹೋಗಿದ್ದಾರೆ? (1ಚ) ಅವರು ಬೆಂಗಳೂರಿನಿಂದ ಯಾವಾಗ ಬಂದರು? (1ಟ) ಅವರು ಎಶ್ಟು ದೊಡ್ಡ ಮನೆ ಕಟ್ಟಿದ್ದಾರೆ? (1ಕ)ದಲ್ಲಿ ಬಂದಿರುವ ಯಾರು ಎಂಬುದು ಒಂದು ಹೆಸರುಪದ ತಿಳಿಸಬಹುದಾದ ಪಾಂಗಿನ ಕುರಿತಾಗಿ ಅರಿಯಮೆಯನ್ನು ತಿಳಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಯಾವಾಗ ಎಂಬುದು ಬರುವ ಎಸಕದ (ಹೊತ್ತಿನ) ಕುರಿತಾಗಿ, ಮತ್ತು (1ಟ)ದಲ್ಲಿ ಬಂದಿರುವ ಎಶ್ಟು ಎಂಬುದು ದೊಡ್ಡ ಎಂಬ ಪರಿಚೆಯ ಅಳವಿನ ಕುರಿತಾಗಿ ಆಡುಗನ ಅರಿಯಮೆಯನ್ನು ತಿಳಿಸುತ್ತವೆ. (5) ಬಳಕೆಯ ಅರಿಯಮೆ ಮತ್ತು ನನಸಿನ ಅರಿಯಮೆ ಎಂಬ ಈ ಎರಡು ಬಗೆಯ ಅರಿಯಮೆಗಳನ್ನು ಮಾತುಗಳಲ್ಲಿ ಇಲ್ಲವೇ ಬರಹಗಳಲ್ಲಿ ಬಳಸಬೇಕಾಗುತ್ತಿರುವುದಕ್ಕೆ ಒಂದು ಮುಕ್ಯವಾದ ಕಾರಣವಿದೆ: ಒಬ್ಬನು ಮಾತನಾಡುತ್ತಿರುವಾಗ, ಹಲವು ಬಗೆಯ ಪಾಂಗುಗಳನ್ನು ಗುರುತಿಸುತ್ತಾ ಹೋಗುತ್ತಿರಬೇಕಾಗುತ್ತದೆ; ಎತ್ತುಗೆಗಾಗಿ, ನಾನು ಇವತ್ತು ಕಾಡಿನಲ್ಲಿ ಬರುವಾಗ ಒಂದು ಹುಲಿಯನ್ನು ನೋಡಿದೆ ಎಂಬುದಾಗಿ ಹೇಳುವಲ್ಲಿ ಆಡುಗನು ಕಾಡು ಮತ್ತು ಒಂದು ಹುಲಿ ಎಂಬ ಎರಡು ಪಾಂಗುಗಳನ್ನು ಗುರುತಿಸಬೇಕಾಗಿದೆ. ಇಂತಹ ಕೆಲವು ಪಾಂಗುಗಳ ಬಗೆಗೆ ಕೇಳುಗನಲ್ಲಿ ಸಂಶಯವೇಳಬಹುದು; ಎತ್ತುಗೆಗಾಗಿ, ಆಡುಗನು ಬಂದ ಕಾಡಿನಲ್ಲಿ ಹುಲಿಯೇ ಇಲ್ಲ ಎಂಬ ತಿಳಿವು ಆತನಲ್ಲಿರಬಹುದು. ಆದರೆ, ಇಂತಹ ಸಂಶಯಗಳನ್ನೆಲ್ಲ ಆತನು ಅಲ್ಲಲ್ಲೇ

ಹೋಗಲಾಡಿಸಲು ತೊಡಗಿದಲ್ಲಿ, ಆಡುಗನ ಮಾತು ಸಲೀಸಾಗಿ ಮುಂದುವರಿಯಲಾರದು. ಹಾಗಾಗಿ, ಆಡುಗನ ಮಾತು ಮುಂದುವರಿಯುತ್ತಿದ್ದಂತೆ, ಅವನು ಗುರುತಿಸುವ ಪಾಂಗುಗಳನ್ನೆಲ್ಲ ಕೇಳುಗನು ಬಳಕೆಯ ಮಟ್ಟದಲ್ಲಿ ಒಪ್ಪಿಕೊಳ್ಳುತ್ತಾ ಹೋಗಬೇಕಾಗುತ್ತದೆ ಮತ್ತು ಅವುಗಳ ಕುರಿತಾಗಿ ನನಸಿನ ಮಟ್ಟದಲ್ಲಿರುವ ತನ್ನ ಸಂಶಯಗಳನ್ನೆಲ್ಲ ತನ್ನಲ್ಲೇ ಇರಿಸಿಕೊಳ್ಳಬೇಕಾಗುತ್ತದೆ. ಆಡುಗನ ಮಾತು ಮುಂದುವರಿದಂತೆ, ಈ ಸಂಶಯಗಳಲ್ಲಿ ಕೆಲವು ತಾವಾಗಿಯೇ ಬಿದ್ದುಹೋಗಬಹುದು, ಮತ್ತು ಆಮೇಲೂ ಉಳಿದುಕೊಂಡಿರುವ ಸಂಶಯಗಳ ಕುರಿತಾಗಿ ಆತನಿಂದ ಮುಂದೆ ಹೆಚ್ಚಿನ ಮಾಹಿತಿಯನ್ನು ಪಡೆದು ಅವನ್ನು ಹೋಗಲಾಡಿಸಿಕೊಳ್ಳಬಹುದು. ಈ ಎರಡು ಬಗೆಯ ಬಳಕೆಗಳನ್ನು ಕೆಳಗೆ ಕೊಟ್ಟಿರುವ ಸೂಳುನುಡಿಯಲ್ಲಿ ಕಾಣಬಹುದು: (1ಕ) ರಾಜು: ನಾನು ಇವತ್ತು ನಮ್ಮ ಕಾಡಿನಲ್ಲಿ ಬರುವಾಗ ಒಂದು ಹುಲಿಯನ್ನು ನೋಡಿದೆ. (1ಚ) ಹರಿ: ಅದು ಏನು ಮಾಡುತ್ತಿತ್ತು? ಅದು ಎಶ್ಟು ದೊಡ್ಡದಾಗಿತ್ತು? ಅದನ್ನು ನೋಡಿ ನಿನಗೆ ಹೆದರಿಕೆಯಾಗಲಿಲ್ಲವೇ? (1ಕ)ದಲ್ಲಿ ಒಂದು ಹುಲಿ ಎಂಬ ಹೆಸರುಕಂತೆಯ ಮೂಲಕ ಒಂದು ಪಾಂಗನ್ನು ಗುರುತಿಸಲಾಗಿದೆ; ಇದನ್ನು ಕೇಳುಗನು ಬಳಕೆಯ ಮಟ್ಟದಲ್ಲಿ ಒಪ್ಪಿಕೊಂಡಿದ್ದಾನೆ ಎಂಬುದು (1ಚ)ದಲ್ಲಿ ಆತನು ಬಳಸಿರುವ ಅದು ಎಂಬ ತಿಳಿದ ತೋರುಪದದಿಂದ ಗೊತ್ತಾಗುತ್ತದೆ; ಹೀಗಿದ್ದರೂ ಅದರ ಕುರಿತಾಗಿ ಹೆಚ್ಚಿನ ತಿಳಿವನ್ನು ಪಡೆಯಲು ಮುಂದೆ ಏನು ಮತ್ತು ಎಶ್ಟು ಎಂಬ ತಿಳಿಯದ ತೋರುಪದಗಳನ್ನು ಬಳಸಲಾಗಿದೆ. (6) ನನಸಿಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುವ ನುಡಿತಗಳನ್ನು ಎಂತಹ ಸೊಲ್ಲುಗಳಲ್ಲಿ ಬಳಸಬಹುದು ಎಂಬುದರ ಕುರಿತಾಗಿ ಹಲವು ಕಟ್ಟುಪಾಡುಗಳಿವೆ; ಎತ್ತುಗೆಗಾಗಿ, ಒಂದು ಎಸಕ ನಡೆದುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುವ ಸೊಲ್ಲುಗಳಲ್ಲಿ ಓ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಮಾತ್ರ ಬರಬಲ್ಲುವಲ್ಲದೆ, ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಲಾರವು: (1ಕ) ಅವರ ಮನೆಗೆ ಯಾರೋ ಬಂದಿದ್ದಾರೆ. (1ಚ) *ಅವರ ಮನೆಗೆ ಯಾರೂ ಬಂದಿದ್ದಾರೆ.

ಅರಿಕೆಯ ಸೊಲ್ಲುಗಳಲ್ಲಿ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು, ಆದರೆ ಓ ಒಟ್ಟನ್ನು ಸೇರಿಸಿರುವವು ಬರಲಾರವು; ಇದಕ್ಕೆ ಬದಲು, ಅಲ್ಲಗಳೆಯುವ ಸೊಲ್ಲುಗಳಲ್ಲಿ ಓ ಒಟ್ಟನ್ನು ಸೇರಿಸಿರುವವು ಬರಬಲ್ಲುವು, ಆದರೆ ಆದರೂ ಎಂಬುದನ್ನು ಸೇರಿಸಿರುವವು ಬರಲಾರವು (ಈ ಕಟ್ಟಲೆಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು (10.4.2)ರಲ್ಲಿ ಕೊಡಲಾಗಿದೆ): (1ಕ) ಯಾರಾದರೂ ಬರಲಿ. (1ಚ) *ಯಾರೋ ಬರಲಿ. (2ಕ) ಯಾರೋ ಬರಲಿಲ್ಲ. (2ಚ) *ಯಾರಾದರೂ ಬರಲಿಲ್ಲ. ಇಂತಹ ಕಟ್ಟಲೆಗಳು ನನಸಿಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುವ ನುಡಿತಗಳನ್ನು ತಾಗುತ್ತವಲ್ಲದೆ, ಬಳಕೆಗೆ ಸಂಬಂದಿಸಿದಂತಹ ಅರಿಯಮೆಯನ್ನು ತಿಳಿಸುವ ನುಡಿತಗಳನ್ನು ತಾಗುವುದಿಲ್ಲ. ಎತ್ತುಗೆಗಾಗಿ, ಒಂದು ಪುಸ್ತಕ ಎಂಬ ಹೆಸರುಕಂತೆಯನ್ನು ಈ ಎಲ್ಲಾ ಬಗೆಯ ಸೊಲ್ಲುಗಳಲ್ಲೂ ಬಳಸಲು ಬರುತ್ತದೆ: (1ಕ) ಅವನು ಒಂದು ಪುಸ್ತಕ ಕೊಟ್ಟಿದ್ದಾನೆ. (1ಚ) ಅವನು ಒಂದು ಪುಸ್ತಕ ಕೊಡಲಿ. (1ಟ) ಅವನು ಒಂದು ಪುಸ್ತಕ ಕೊಡಲಿಲ್ಲ. ಮೇಲೆ ವಿವರಿಸಿದ ಸಂಗತಿಗಳು ನನಸು ಮತ್ತು ಬಳಕೆ ಎಂಬ ಈ ವ್ಯತ್ಯಾಸ ಕನ್ನಡದ ಸೊಲ್ಲರಿಮೆಯ ಮಟ್ಟಿಗೆ ತುಂಬಾ ಮುಕ್ಯವಾದುದು ಎಂಬುದನ್ನು ತೋರಿಸಿಕೊಡುತ್ತವೆ.

10.2 ತೋರುಪದಗಳ ಹರವು

Eke →

ತೋರುಪದಗಳ ಹರವನ್ನು ತಿಳಿಸುವುದಕ್ಕಾಗಿ ಅವುಗಳ ಎರಡನೆಯ ಅಂಗವನ್ನು ಬಳಸಲಾಗುತ್ತದೆ, ಮತ್ತು ತೋರುಪದಗಳಲ್ಲಿ ಮುಕ್ಯವಾಗಿ ಇಂತಹ ಹನ್ನೆರಡು ಅಂಗಗಳು ಬಳಕೆಯಲ್ಲಿವೆ ಎಂಬುದನ್ನು ಮೇಲೆ 10.1.1ರಲ್ಲಿ ಕೊಟ್ಟಿರುವ ನಿರುಗೆಯಲ್ಲಿ ಕಾಣಬಹುದು. ಪಾಂಗುಗಳನ್ನು ಗುರುತಿಸುವಲ್ಲಿ, ಇಲ್ಲವೇ ಅವುಗಳ ಕುರಿತಾಗಿ ಆಡುಗನ ಅರಿಯಮೆಯನ್ನು ತಿಳಿಸುವಲ್ಲಿ ಎಂತಹ ಬಗೆಗಳನ್ನು ಮತ್ತು ಎಶ್ಟು ಬಗೆಗಳನ್ನು ನಾವು ಬಳಸುತ್ತೇವೆ ಎಂಬುದನ್ನು ಈ ಅಂಗಗಳು ತಿಳಿಸುತ್ತವೆ. ಎಂದರೆ, ನಮ್ಮ ತಿಳಿವಿಗೆ ಬರುವವುವನ್ನೆಲ್ಲ ಯಾವ ರೀತಿಯಲ್ಲಿ ನಾವು ಗುಂಪಿಸುತ್ತೇವೆ ಎಂಬುದನ್ನು ತೋರುಪದಗಳಲ್ಲಿ ಎರಡನೆಯದಾಗಿ ಬರುವ ಈ ಅಂಗಗಳು ತಿಳಿಸುತ್ತವೆ.

10.2.1 ಹೆಸರುಪದಗಳ ಹಾಗೆ ಬಳಕೆಯಾಗುವ ತೋರುಪದಗಳು

ಹೆಸರುಪದಗಳ ಹಾಗೆ ಬಳಕೆಯಾಗುವ ತೋರುಪದಗಳನ್ನು ಮುಕ್ಯವಾಗಿ ತಿಳಿದ ತೋರುಪದಗಳು ಮತ್ತು ತಿಳಿಯದ ತೋರುಪದಗಳು ಎಂಬುದಾಗಿ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ಇವುಗಳಲ್ಲಿ ತಿಳಿದ ತೋರುಪದಗಳನ್ನು ಹತ್ತಿರದ ತೋರುಪದಗಳು ಮತ್ತು ದೂರದ ತೋರುಪದಗಳು ಎಂಬುದಾಗಿ ಬೇರೆ ಎರಡು ಗುಂಪುಗಳಲ್ಲಿಯೂ ಗುಂಪಿಸಲು ಬರುತ್ತದೆ. ಈ ಎರಡು ಬಗೆಯ ಗುಂಪಿಕೆಗಳೂ ತೋರುಪದಗಳ ಮೊದಲನೇ ಅಂಗವನ್ನು ಅವಲಂಬಿಸಿರುತ್ತವೆ. (1) ಹೆಸರುಪದಗಳ ಹಾಗೆ ಬಳಕೆಯಾಗಬಲ್ಲ ತೋರುಪದಗಳ ಎರಡನೆಯ ಅಂಗವನ್ನವಲಂಬಿಸಿ ಅವನ್ನು ಮುಕ್ಯವಾಗಿ ಗಂಡಸು, ಹೆಂಗಸು, ಮತ್ತು ಉಳಿದವು ಎಂಬ ಮೂರು ಬಗೆಯವುಗಳಾಗಿ ಗುಂಪಿಸಲು ಬರುತ್ತದೆ, ಮತ್ತು ಅವುಗಳಲ್ಲೇನೇ ಒಂದು-ಹಲವು ಎಂಬ ಎಣಿಕೆಯ ವ್ಯತ್ಯಾಸವನ್ನೂ ಕಾಣಲು ಬರುತ್ತದೆ; ಆದರೆ, ಹಲವೆಣಿಕೆಯಲ್ಲಿ ಗಂಡಸು-ಹೆಂಗಸು ಎಂಬ ಗುರ್ತದ ವ್ಯತ್ಯಾಸ ಇಲ್ಲವಾಗುತ್ತದೆ. ಎತ್ತುಗೆಗಾಗಿ, ತಿಳಿದ ತೋರುಪದಗಳಲ್ಲಿ ಮೂರು ಬಗೆಯ ಗುರ್ತ ವ್ಯತ್ಯಾಸ ಮತ್ತು ಎರಡು ಬಗೆಯ ಎಣಿಕೆಯ ವ್ಯತ್ಯಾಸವಿರುವುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:

(1ಕ) ಇವತ್ತು ರಾಜು ಅವನ ಅಣ್ಣನನ್ನು ಕರೆತಂದಿದ್ದಾನೆ. (1ಚ) ಇವತ್ತು ಜಾನಕಿ ಅವಳ ಅಣ್ಣನನ್ನು ಕರೆತಂದಿದ್ದಾಳೆ (1ಟ) ನಾಯಿ ಅದರ ಬಾಲವನ್ನೇ ಕಡಿಯುತ್ತಿದೆ. (1ಟ) ಹುಡುಗರು ಅವರ ಕಾಲುಗಳನ್ನು ತೊಳೆದುಕೊಳ್ಳುತ್ತಿದ್ದಾರೆ. (1ತ) ಹಕ್ಕಿಗಳು ಅವುಗಳ ಗೂಡಿನಿಂದ ಹೊರಬಂದಿಲ್ಲ. (1ಕ-ತ) ಸೊಲ್ಲುಗಳಲ್ಲಿ ಅವನ, ಅವಳ, ಅದರ, ಅವರ ಮತ್ತು ಅವುಗಳ ಎಂಬ ದೂರದ ತೋರುಪದಗಳು ಅವುಗಳ ಹಿನ್ನುಡಿತಕ್ಕೆ ಹೊಂದಿಕೆಯಾಗುವಂತೆ ಗುರ್ತ ಮತ್ತು ಎಣಿಕೆಗಳ ವ್ಯತ್ಯಾಸವನ್ನು ತೋರಿಸುತ್ತಿವೆ; ಹತ್ತಿರದ ತೋರುಪದಗಳಲ್ಲೂ ಇಂತಹವೇ ವ್ಯತ್ಯಾಸಗಳಿದ್ದು, ಅವು ಈ ವ್ಯತ್ಯಾಸಗಳನ್ನು ಹೊರತೋರ್ಕೆಯಲ್ಲಿ ತೋರಿಸುವುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಇವನು ನಮ್ಮ ಹುಡುಗ. (1ಚ) ಇವಳು ಈ ವರ್ಶ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. (1ಟ) ಇದನ್ನು ಮೊದಲಿಗೆ ಮೇಜಿನ ಮೇಲಿರಿಸಿ. (1ತ) ಇವನ್ನು ಕಾರಿನ ಡಿಕ್ಕಿಯಲ್ಲಿರಿಸಬೇಕು. (1ಪ) ಇವರು ನಿಮಗೆ ಎಲ್ಲಿ ಸಿಕ್ಕಿದರು? (2) ಅವರು ಮತ್ತು ಇವರು ಎಂಬ ಎರಡು ಹಲವೆಣಿಕೆಯ ಪದಗಳನ್ನು ಅವು ಗುರುತಿಸುವ ಪಾಂಗಿಗೆ ಮದಿಪನ್ನು ಕೊಡುವುದಕ್ಕಾಗಿ ಓರೆಣಿಕೆಯ ಹುರುಳಿನಲ್ಲೂ ಬಳಸಲು ಬರುತ್ತದೆ. (1ಕ) ಅವರು ಒಬ್ಬರೇ ಇಲ್ಲಿವರೆಗೂ ಬಂದಿದ್ದಾರೆ. (1ಚ) ಇವರನ್ನು ಈ ಶಾಲೆಯ ಹೆಡ್ಮಾಸ್ಟರರನ್ನಾಗಿ ಮಾಡಿದ್ದಾರೆ. ಮೇಲಿನ ಸೊಲ್ಲುಗಳಲ್ಲಿ ಅವರು ಮತ್ತು ಇವರು ಪದಗಳಿಗೆ ಮದಿಪಿನ ಓರೆಣಿಕೆಯ ಹುರುಳಿರುವುದನ್ನು ಗಮನಿಸಬಹುದು. (3) ಹೆಸರು ಪದಗಳ ಹಾಗೆ ಬಳಕೆಯಾಗುವ ತಿಳಿಯದ ತೋರುಪದಗಳನ್ನು ಮುಕ್ಯವಾಗಿ ಆರಿಸದ ತೋರುಪದಗಳು ಮತ್ತು ಆರಿಸಿದ ತೋರುಪದಗಳು ಎಂಬ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ಯಾರು ಮತ್ತು ಏನು ಎಂಬವು ಆರಿಸದ ತೋರುಪದಗಳು ಮತ್ತು ಉಳಿದವು ಆರಿಸಿದ ತೋರುಪದಗಳು. ಈ ಎರಡು ಬಗೆಯ ತೋರುಪದಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು:

(1ಕ) ಇವುಗಳಲ್ಲಿ ನಿಮಗೆ ಯಾವುದು ಬೇಕು? (1ಚ) *ಇವುಗಳಲ್ಲಿ ನಿಮಗೆ ಏನು ಬೇಕು? (1ಟ) ನಿಮಗೆ ಏನು ಬೇಕು? (2ಕ) ಇವರಲ್ಲಿ ನಿಮಗೆ ಯಾವನು ಬೇಕು? (2ಚ) ಇವರಲ್ಲಿ ನಿಮಗೆ ಯಾರು ಬೇಕು? (2ಟ) ನಿಮಗೆ ಯಾರು ಬೇಕು? ಯಾರು ಎಂಬುದರ ಬಳಕೆಯಲ್ಲಿ ಸ್ವಲ್ಪಮಟ್ಟಿಗಿನ ಆಯ್ಕೆಯಿದೆ; ಅದು ಆಳ್ತನವಿರುವ ಪಾಂಗುಗಳನ್ನು ಮಾತ್ರ ಗುರುತಿಸಬಲ್ಲುದು, ಮತ್ತು ಯಾವನು, ಯಾವಳು ಎಂಬಂತಹ ತೋರುಪದಗಳಿಗೆ ಸ್ವಲ್ಪಮಟ್ಟಿಗೆ ಕೀಳ್ಮೆಯ ಹುರುಳಿದೆ; ಹಾಗಾಗಿ, ಆಯ್ಕೆಯ ಹುರುಳಿರುವ ಸೊಲ್ಲುಗಳಲ್ಲೂ ಹೆಚ್ಚಾಗಿ ಯಾರು ಪದವನ್ನೇ ಬಳಸಲಾಗುತ್ತದೆ; ಈ ಕಾರಣಕ್ಕಾಗಿ (2ಚ) ಸೊಲ್ಲೂ ಸರಿಯಾಗಿದೆ. ಆದರೆ, ಏನು ಪದದ ಹಾಗೆ, ಯಾರು ಪದವೂ ಎಣಿಕೆಯ ಮಟ್ಟಿಗೆ ಆಯ್ಕೆಯನ್ನು ಮಾಡುವುದಿಲ್ಲ ಎಂಬುದನ್ನು ಗಮನಿಸಬಹುದು; (2ಟ) ಸೊಲ್ಲಿಗೆ ಒಬ್ಬನು ಬೇಕಾಗಿರುವ (2ಚ) ಸೊಲ್ಲಿನ ಹುರುಳೂ ಸಿಗಬಲ್ಲುದು, ಮತ್ತು ಹೆಚ್ಚು ಜನ ಬೇಕಾಗಿರುವ (1ಚ) ಹುರುಳೂ ಸಿಗಬಲ್ಲುದು. ಏನು ಪದದ ಬಳಕೆಯಲ್ಲಿ ಮಾತ್ರ ಆಯ್ಕೆ ತುಸುವೂ ಇರುವುದಿಲ್ಲ; ಮತ್ತು ಈ ಕಾರಣಕ್ಕಾಗಿ, ಆಯ್ಕೆಯ ಹುರುಳು ಬೇಕಾಗಿರುವ (1ಚ) ಸೊಲ್ಲು ಸರಿಯಿಲ್ಲ. ಈ ಎರಡು ಪದಗಳನ್ನೂ ಹಲವೆಣಿಕೆಯ ಹೆಸರುಪದಗಳ ಕುರಿತಾಗಿ ಕೇಳ್ವಿಗಳನ್ನು ಕೇಳುವಲ್ಲಿ ಮಾತ್ರವಲ್ಲದೆ ಓರೆಣಿಕೆಯ ಹೆಸರುಪದಗಳ ಕುರಿತಾಗಿ ಕೇಳ್ವಿಗಳನ್ನು ಕೇಳುವಲ್ಲೂ ಬಳಸಲಾಗುತ್ತದೆ: (1ಕ) ಅಲ್ಲಿ ದೂರದಲ್ಲಿ ಕಾಣಿಸುತ್ತಿರುವುದು ಏನು? (1ಚ) ಅಲ್ಲಿ ದೂರದಲ್ಲಿ ಕಾಣಿಸುತ್ತಿರುವುವು ಏನು? (2ಕ) ಈ ಹುಡುಗ ಯಾರು? (2ಚ) ಈ ಹುಡುಗರು ಯಾರು? ಏನು ಎಂಬುದು ಓರೆಣಿಕೆಯ ಎಸಕರೂಪದೊಂದಿಗೆ ಬರುತ್ತದೆ, ಮತ್ತು ಯಾರು ಎಂಬುದು ಹಲವೆಣಿಕೆಯ ಎಸಕರೂಪದೊಂದಿಗೆ ಬರುತ್ತದೆ ಎಂಬ ಇನ್ನೊಂದು ವ್ಯತ್ಯಾಸವೂ ಈ ಎರಡು ತೋರುಪದಗಳ ನಡುವೆ ಇದೆ: (1ಕ) ಅಲ್ಲಿ ದೂರದಲ್ಲಿ ನಿಮಗೆ ಏನು ಕಾಣಿಸುತ್ತಿದೆ? (1ಚ) ಅಲ್ಲಿ ದೂರದಲ್ಲಿ ನಿಮಗೆ ಯಾರು ಕಾಣಿಸುತ್ತಿದ್ದಾರೆ?

(1ಕ) ಸೊಲ್ಲಿನಲ್ಲಿ ಓರೆಣಿಕೆಯ ಕಾಣಿಸುತ್ತಿದೆ ಎಂಬ ಎಸಕರೂಪ ಬಂದಿದೆಯಾದರೂ, ಕಾಣಿಸುತ್ತಿರುವವು ಹಲವು ಆನೆಗಳಿರಬಹುದು, ಮತ್ತು (1ಚ) ಸೊಲ್ಲಿನಲ್ಲಿ ಕಾಣಿಸುತ್ತಿದ್ದಾರೆ ಎಂಬ ಹಲವೆಣಿಕೆಯ ಎಸಕರೂಪ ಬಂದಿದೆಯಾದರೂ ಕಾಣಿಸುತ್ತಿರುವವನು ಒಬ್ಬ ಹುಡುಗ ಮಾತ್ರ ಇರಬಹುದು. (4) ಏನು ಪದಕ್ಕೆ ಎಸಕಗಳನ್ನು ಗುರುತಿಸುವ ಹುರುಳೂ ಇದೆಯೆಂಬುದು ಅದನ್ನು ಹೆಸರುಪದಗಳಾಗಿ ಬರಬಲ್ಲ ಉಳಿದ ತೋರುಪದಗಳಿಂದ ಬೇರ್ಪಡಿಸುತ್ತದೆ; ಅದನ್ನು ಆಗು ಮತ್ತು ಮಾಡು ಎಂಬ ಎರಡು ಎಸಕಪದಗಳೊಂದಿಗೆ ಬಳಸಿ, ಆಗುವಿಕೆಗಳನ್ನು ಮತ್ತು ಮಾಡುವಿಕೆಗಳನ್ನು ಗುರುತಿಸಲು ಬರುತ್ತದೆ: (1ಕ) ಶಾಲೆಯಲ್ಲಿ ಇವತ್ತು ಏನಾಯಿತು? (1ಚ) ಶಾಲೆಯಲ್ಲಿ ಇವತ್ತು ಏನು ಮಾಡಿದ್ದಾರೆ? (2ಕ) ಶಾಲೆಯಲ್ಲಿ ಇವತ್ತು ಏನೋ ಆಗಿದೆ. (2ಚ) ಶಾಲೆಯಲ್ಲಿ ಇವತ್ತು ಏನೋ ಮಾಡಿದ್ದಾರೆ. (5) ಅದು, ಇದು, ಮತ್ತು ಯಾವುದು ಎಂಬ ತೋರುಪದಗಳೂ ಎಸಕಗಳನ್ನು ಗುರುತಿಸಬಲ್ಲುವು: (1ಕ) ರಾಜು ನಾಳೆ ಬರುವುದಿಲ್ಲವಂತೆ; ಇದನ್ನು ನನಗೆ ಅವನೇ ಹೇಳಿದ್ದಾನೆ. (1ಚ) ಅವರು ಮಾಡಿದ ಕೆಲಸಗಳಲ್ಲಿ ನಿಮಗೆ ಯಾವುದು ಒಪ್ಪಿಗೆಯಾಗಿದೆ? (1ಕ)ದಲ್ಲಿ ಇದು ಎಂಬುದು ರಾಜು ನಾಳೆ ಬರುವುದಿಲ್ಲ ಎಂಬ ಸೊಲ್ಲು ತಿಳಿಸುವ ಎಸಕವನ್ನು ಗುರುತಿಸುತ್ತದೆ, ಮತ್ತು (1ಚ)ದಲ್ಲಿ ಬಂದಿರುವ ಯಾವುದು ಎಂಬುದು ಅವರು ಮಾಡಿದ ಕೆಲಸಗಳಲ್ಲಿ ಎಂಬ ಹೆಸರುಕಂತೆ ಗುರುತಿಸುವ ಎಸಕಗಳಲ್ಲಿ ಒಂದನ್ನು ಗುರುತಿಸುತ್ತದೆ; ಆದರೆ, ಇವು ಆಯ್ಕೆಯಾಗಿರುವ ಎಸಕಗಳನ್ನು ಗುರುತಿಸುತ್ತವೆ, ಮತ್ತು ಏನು ಎಂಬುದು ಆಯ್ಕೆಯಾಗಿಲ್ಲದ ಎಸಕಗಳನ್ನು ಗುರುತಿಸುತ್ತದೆ ಎಂಬ ವ್ಯತ್ಯಾಸ ಇವುಗಳ ನಡುವೆ ಇದೆ. (6) ಹಂಚಿಕೆಯ ಹುರುಳನ್ನು ಕೊಡುವುದಕ್ಕಾಗಿ ಅವರು ಮತ್ತು ಯಾರು ಎಂಬ ಎರಡು ಪದಗಳನ್ನು ಇಮ್ಮಡಿ ರೂಪದಲ್ಲಿ ಬಳಸಲು ಬರುತ್ತದೆ:

(1ಕ) ಎಲ್ಲರೂ ಅವರವರ ಮನೆಗಳಿಗೆ ಹೋದರು. (1ಚ) ಯಾರು ಯಾರು ಎಲ್ಲೆಲ್ಲಿ ನಿಲ್ಲಬೇಕೆಂಬುದನ್ನು ಈಗ ಮೊದಲು ತೀರ್ಮಾನಿಸಬೇಕಾಗಿದೆ. ಇದಕ್ಕೆ ಬದಲು, ಏನು ಪದದ ಇಮ್ಮಡಿ ರೂಪವನ್ನು ಊ ಒಟ್ಟಿನೊಂದಿಗೆ ಸೇರಿಸಿ ಒತ್ತಿಹೇಳುವ ಹುರುಳನ್ನು ಕೊಡುವುದಕ್ಕಾಗಿ ಬಳಸಲಾಗುತ್ತದೆ: (1ಟ) ಅವರು ಕೊಟ್ಟುದು ಏನೇನೂ ಸಾಲದು.

10.2.2 ಎಸಕಪರಿಚೆಗಳ ಹಾಗೆ ಬಳಕೆಯಾಗುವ ತೋರುಪದಗಳು

ಎಸಕಪರಿಚೆಗಳ ಹಾಗೆ ಬಳಕೆಯಾಗುವ ತೋರುಪದಗಳನ್ನೂ ಕೂಡ, ಅವುಗಳ ಮೊದಲನೆಗ ಅಂಗವನ್ನವಲಂಬಿಸಿ, ತಿಳಿದ ಮತ್ತು ತಿಳಿಯದ ತೋರುಪದಗಳೆಂಬ ಎರಡು ಗುಂಪುಗಳಲ್ಲಿ ಗುಂಪಿಸಬಹುದು, ಮತ್ತು ಅವುಗಳಲ್ಲಿ ತಿಳಿದ ತೋರುಪದಗಳನ್ನು ದೂರದ ಮತ್ತು ಹತ್ತಿರದ ತೋರುಪದಗಳೆಂಬ ಬೇರೆ ಎರಡು ಗುಂಪುಗಳಲ್ಲಿ ಗುಂಪಿಸಬಹುದು. ಈ ತೋರುಪದಗಳ ಎರಡನೆಯ ಅಂಗವನ್ನವಲಂಬಿಸಿ, ಅವನ್ನು ಮುಕ್ಯವಾಗಿ ಜಾಗ, ದಿಕ್ಕು, ಹೊತ್ತು, ದಿನ, ಮತ್ತು ಹೊಲಬು ಎಂಬ ಅಯ್ದು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ತಿಳಿಯದ ತೋರುಪದಗಳಲ್ಲಿ ಮಾತ್ರ ಕತ (ಕಾರಣ) ಎಂಬ ಆರನೆಯದೊಂದು ಬಗೆಯೂ ಕಾಣಿಸಿಕೊಳ್ಳುತ್ತದೆ: ಹತ್ತಿರದವು ದೂರದವು ತಿಳಿಯದವು ಜಾಗ ಇಲ್ಲಿ ಅಲ್ಲಿ ಎಲ್ಲಿ ದಿಕ್ಕು ಇತ್ತ ಅತ್ತ ಎತ್ತ ಹೊತ್ತು ಈಗ ಆಗ ಯಾವಾಗ ದಿನ ಇಂದು ಅಂದು ಎಂದು ಹೊಲಬು ಹೀಗೆ ಹಾಗೆ ಹೇಗೆ ಕತ – – ಯಾಕೆ ಇವುಗಳಲ್ಲಿ ತಿಳಿದ ತೋರುಪದಗಳ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ಅಲ್ಲಿಗೆ ಹೋದವರು ಇಲ್ಲಿಗೂ ಬಂದಿದ್ದಾರೆ. (1ಚ) ಅಂದು ಮೂರು ಮಂದಿ ಇದ್ದರು; ಇಂದು ನೂರು ಮಂದಿ ಇದ್ದಾರೆ. (1ಟ) ಈಗ ಶಾಮರಾಯರು ಮಾತನಾಡಲಿದ್ದಾರೆ.

(1ತ) ಅವನು ಹಾಗೆ ಕುಳಿತ; ಇವನು ಹೀಗೆ ಕುಳಿತುಕೊಳ್ಳಲಿ. (1) ಈ ತಿಳಿದ ತೋರುಪದಗಳಲ್ಲಿ ಅತ್ತ ಎಂಬುದನ್ನು ಇತ್ತ ಎಂಬುದರೊಂದಿಗೆ ಸೇರಿಸಿ ಅತ್ತಿತ್ತ ಎಂಬ ರೂಪದಲ್ಲಿ ಬಳಸಲು ಬರುತ್ತದೆ, ಮತ್ತು ಇದಕ್ಕೆ `ಅತ್ತ ಮತ್ತು ಇತ್ತ’ ಎಂಬ ಹುರುಳಿದೆ. (1ಕ) ಅವನು ಅತ್ತಿತ್ತ ನೋಡದೆ ನಡೆಯುತ್ತಿದ್ದ. ಉಳಿದ ತೋರುಪದಗಳನ್ನು ಈ ರೀತಿ ಸೇರಿಸಿ ಹೇಳಲು ಬರುವುದಿಲ್ಲ. (2) ಆಗ ಮತ್ತು ಅಲ್ಲಿ ಎಂಬ ಎರಡು ಪದಗಳನ್ನು ಇಮ್ಮಡಿ ರೂಪದಲ್ಲಿ ಬಳಸಲು ಬರುತ್ತಿದ್ದು, ಅವಕ್ಕೆ ಹಲವು ಬಾರಿ ಮತ್ತು ಹಲವು ಕಡೆ ಎಂಬ ಹುರುಳು ದೊರಕುತ್ತದೆ. ಹೀಗೆ ಎಂಬುದರ ಇಮ್ಮಡಿ ರೂಪಕ್ಕೂ ಇಂತಹದೇ ಹುರುಳಿದೆ; ಅದು ಒಂದು ಕೆಲಸವನ್ನು ನಡೆಸುವ ಬಗೆ ಹೇಗೆ ಎಂಬುದರ ಕುರಿತಾಗಿ ವಿವರವನ್ನು ಕೊಡುವಲ್ಲಿ ಬಳಕೆಯಾಗುತ್ತದೆ: (1ಕ) ಅವನು ಇಲ್ಲಿಗೆ ಆಗಾಗ ಬಂದು ತೊಂದರೆ ಕೊಡುತ್ತಾನೆ. (1ಚ) ನಿನ್ನೆ ಸಂಜೆ ಅಲ್ಲಲ್ಲಿ ಮಳೆಯಾಗಿತ್ತು. (1ಟ) ಅವನು ಹೀಗೆ ಹೀಗೆ ಮಾಡಬೇಕೆಂದು ಹೇಳಿಕೊಟ್ಟ. ಈಗ ಎಂಬುದರ ಇಮ್ಮಡಿ ರೂಪವಾದ ಈಗೀಗ ಎಂಬುದಕ್ಕೆ ಇತ್ತೀಚೆಗೆ ಎಂಬುದಕ್ಕಿರುವಂತಹ ಒತ್ತಿಹೇಳುವ ಹುರುಳಿದೆ; ಇದಲ್ಲದೆ, ಇತ್ತೀಚೆಗಿನ ದಿನಗಳಲ್ಲಿ ಎಂಬ ಪದಕಂತೆ ತಿಳಿಸುವ ಹಲವು ಹೊತ್ತುಗಳೆಂಬ ಹುರುಳೂ (1ತ) ಈಗೀಗ ಅವನು ಯಾರ ಮಾತನ್ನೂ ಕೇಳುವುದಿಲ್ಲ. (3) ಇತ್ತೀಚೆಗೆ ಎಂಬ ನುಡಿತದಲ್ಲಿ ಇತ್ತ ಮತ್ತು ಈಚೆ ಎಂಬ ಎರಡು ಹತ್ತಿರದ ತೋರುಪದಗಳು ಒಟ್ಟುಸೇರಿದ್ದು, ಅದು ದಿಕ್ಕಿನ ಹುರುಳನ್ನು ಕೊಡುವ ಬದಲು ಹೊತ್ತಿನ ಹುರುಳನ್ನು ಕೊಡುತ್ತದೆ: (1ಪ) ಇತ್ತೀಚೆಗೆ ಅವನು ತುಂಬಾ ಹಣ ಕರ್ಚುಮಾಡುತ್ತಿದ್ದಾನೆ. (4) ಎಸಕಪದಗಳ ಜಾಗದಲ್ಲಿ ಬರಬಲ್ಲ ತಿಳಿಯದ ತೋರುಪದಗಳ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

(1ಕ) ನಿಮಗೆ ಈ ಪುಸ್ತಕ ಎಲ್ಲಿ ಸಿಕ್ಕಿತು? (1ಚ) ಅವರು ಇಲ್ಲಿಗೆ ಯಾವಾಗ ಬಂದಿದ್ದರು? (1ಟ) ಅವರು ಇದನ್ನು ಹೇಗೆ ಮಾಡಿದ್ದಾರೋ ಗೊತ್ತಿಲ್ಲ. (1ತ) ನಿಮ್ಮನ್ನು ಇಲ್ಲಿಗೆ ಯಾಕೆ ಕರೆಸಿದ್ದೆಂದು ನಾಳೆ ಹೇಳುತ್ತೇನೆ. (1) ಹೊತ್ತನ್ನು ತಿಳಿಸುವ ಯಾವಾಗ ಎಂಬ ಪದವನ್ನು ಯಾವ ಎಂಬ ಹೆಸರುಪರಿಚೆ ಪದಕ್ಕೆ ಆಗ ಎಂಬ ದೂರದ ತೋರುಪದವನ್ನು ಸೇರಿಸಿ ಉಂಟುಮಾಡಿರುವ ಹಾಗೆ ಕಾಣಿಸುತ್ತದೆ; ಇದರಲ್ಲಿ ಆಗ ಎಂಬುದು ತನ್ನ ತೋರ್ಕೆಯ ಹುರುಳನ್ನು ಕಳೆದುಕೊಂಡು ಹೊತ್ತನ್ನು ತಿಳಿಸುವ ಹುರುಳನ್ನು ಮಾತ್ರ ಉಳಿಸಿಕೊಂಡಿದೆಯೆಂದು ಹೇಳಬಹುದು.

10.2.3 ಹೆಸರುಪರಿಚೆಗಳ ಜಾಗದಲ್ಲಿ ಬಳಕೆಯಾಗುವ ತೋರುಪದಗಳು

ಇವುಗಳನ್ನೂ ಕೂಡ, ಅವುಗಳ ಮೊದಲನೆಯ ಅಂಗವನ್ನವಲಂಬಿಸಿ ತಿಳಿದ ಮತ್ತು ತಿಳಿಯದ ತೋರುಪದಗಳೆಂಬುದಾಗಿ, ಮತ್ತು ತಿಳಿದ ತೋರುಪದಗಳನ್ನು ಹತ್ತಿರದ ಮತ್ತು ದೂರದ ತೋರುಪದಗಳೆಂಬುದಾಗಿ ಗುಂಪಿಸಲು ಬರುತ್ತದೆ. ಇದಲ್ಲದೆ, ಅವುಗಳ ಎರಡನೆಯ ಅಂಗವನ್ನವಲಂಬಿಸಿ ಅಳವಿ, ಬಗೆ, ಮತ್ತು ತೋರ್ಕೆ ಎಂಬ ಮೂರು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ: ಹತ್ತಿರದವು ದೂರದವು ತಿಳಿಯದವು ಅಳವಿ ಇಶ್ಟು ಅಶ್ಟು ಎಶ್ಟು ಬಗೆ ಹೀಗೆ ಹಾಗೆ ಹೇಗೆ ತೋರ್ಕೆ ಈ ಆ ಯಾವ ಇವುಗಳ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ಅಶ್ಟು ಮಂದಿಯನ್ನು ಅವನೊಬ್ಬನೇ ಎದುರಿಸಿ ನಿಂತಿದ್ದ. (1ಚ) ಹೀಗೆ ಮಾಡಬೇಕೆಂದು ನಿನಗೆ ಹೇಳಿಕೊಟ್ಟುದು ಯಾರು? (1ಟ) ಈ ಮನೆಗೆ ಎರಡು ಸಾವಿರ ಬಾಡಿಗೆಯಿದೆ. (1ತ) ಈ ಹಸು ಒಳಗೆ ಬಂದುದು ಹೇಗೆ? (1ಪ) ಅವರು ಯಾವ ಮನೆಯಲ್ಲಿದ್ದಾರೆಂದು ನಿಮಗೆ ಗೊತ್ತಿದೆಯೇ? (1) ಅಶ್ಟು ಮತ್ತು ಇಶ್ಟು ಎಂಬವುಗಳನ್ನು ಒಟ್ಟು ಸೇರಿಸಿ ಬಳಸಲು ಸಾದ್ಯವಿದ್ದು, ಅದಕ್ಕೆ ತುಸು ಎಂಬ ಪದದ ಹುರುಳಿದೆ:

(1ಕ) ನಿಮಗೂ ಅಶ್ಟಿಶ್ಟು ಸಿಗಬಹುದು. ಅಶ್ಟರಲ್ಲಿ ಮತ್ತು ಅಶ್ಟರೊಳಗೆ ಎಂಬ ಎರಡು ಪದರೂಪಗಳಿಗೆ ಹೊತ್ತಿನ ಹುರುಳಿದೆ: (1ಚ) ಅಶ್ಟರಲ್ಲಿ ಮಗು ಅಳಲು ಸುರುಮಾಡಿತು. (1ಟ) ಅಶ್ಟರೊಳಗೆ ಆತನೂ ಒಳಗೆ ಬಂದಿದ್ದ. (2) ಮೇಲಿನ ತೋರುಪದಗಳಲ್ಲಿ ಕೆಲವನ್ನು ಇಮ್ಮಡಿ ರೂಪದಲ್ಲಿ ಬಳಸಲು ಸಾದ್ಯವಿದ್ದು, ಅವಕ್ಕೆ ಹಂಚಿಕೆಯ ಹುರುಳು ಸಿಗುತ್ತದೆ: (1ಕ) ಎಲ್ಲರಿಗೂ ಇಶ್ಟಿಶ್ಟು ಕೊಡಬಹುದು. (1ಚ) ಎಲ್ಲೆಲ್ಲಿ ನೋಡಿದರೂ ಆತನ ಅಬ್ಬರವೇ ಕಾಣಿಸುತ್ತಿತ್ತು. (1ಟ) ಎಂತೆಂತಹ ಹುಡುಗಿಯರನ್ನು ತೋರಿಸಿದರೂ ಅವನಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ತಿಳಿದ ತೋರುಪದಗಳಲ್ಲಿ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಬಳಸುವ ಅಗೋ ಮತ್ತು ಇಗೋ ಎಂಬ ಎರಡು ಹೆಚ್ಚಿನ ಗಮನಪದಗಳಿವೆ. ಹೆಸರುಪದ, ಎಸಕಪರಿಚೆ, ಮತ್ತು ಹೆಸರುಪರಿಚೆ ಎಂಬ ಈ ಮೂರು ಗುಂಪುಗಳಲ್ಲಿ ಬರುವ ತೋರುಪದಗಳು ಹೇಗೆ ಅವುಗಳ ಬಳಕೆಯಲ್ಲಿ ಬೇರೆ ಬೇರಾಗಿವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

10.2.4 ಪತ್ತುಗೆ ಒಟ್ಟುಗಳೊಂದಿಗೆ ಬಳಕೆ

ಹೆಸರುಪದಗಳ ಗುಂಪಿನಲ್ಲಿರುವ ತೋರುಪದಗಳು ಎಲ್ಲಾ ಬಗೆಯ ಪತ್ತುಗೆ ಒಟ್ಟುಗಳೊಂದಿಗೂ ಬರಬಲ್ಲುವು; ಎತ್ತುಗೆಗಾಗಿ, ಅವನು ಎಂಬ ತೋರುಪದವನ್ನು ಅಯ್ದು ಬಗೆಯ ಪತ್ತುಗೆ ಒಟ್ಟುಗಳೊಂದಿಗೆ ಬಳಸಿರುವುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನನ್ನು ಹೊರಗೆ ಕಳಿಸಿ. (1ಚ) ಅವನಿಗೆ ನೂರು ರುಪಾಯಿ ಕೊಡಿ. (1ಟ) ಅವನಿಂದ ನಮಗೆ ತುಂಬಾ ತೊಂದರೆಯಾಗಿದೆ. (1ತ) ತೊಂದರೆಗಳನ್ನು ಅವನಲ್ಲಿ ಹೇಳಿಕೊಳ್ಳುತ್ತಿದ್ದಾರೆ. (1ಪ) ಅವನ ಮನೆಯಲ್ಲಿ ಇವತ್ತು ಹಲವು ಮಂದಿ ಸೇರಿದ್ದಾರೆ.

(1ಕ-ತ)ಗಳಲ್ಲಿ ಅವನು ಪದದೊಂದಿಗೆ ನಾಲ್ಕು ಎಸಕಪತ್ತುಗೆ ಒಟ್ಟುಗಳು ಬಂದಿವೆ, ಮತ್ತು (1ಪ)ದಲ್ಲಿ ಹೆಸರುಪತ್ತುಗೆ ಒಟ್ಟು ಬಂದಿದೆ. ಎಸಕಪರಿಚೆಗಳ ಗುಂಪಿನಲ್ಲಿ ಬರುವ ಅಶ್ಟು, ಇಶ್ಟು, ಮತ್ತು ಎಶ್ಟು ಎಂಬ ಅಳವಿಯ ತೋರುಪದಗಳು ಹೆಸರುಪದಗಳಂತೆಯೂ ಬಳಕೆಯಾಗಬಲ್ಲುವಾಗಿದ್ದು, ಹಾಗೆ ಬಳಕೆಯಾಗುವಲ್ಲಿ ಅವು ಎಲ್ಲಾ ಬಗೆಯ ಎಸಕಪತ್ತುಗೆಯ ಒಟ್ಟುಗಳೊಂದಿಗೂ ಬರಬಲ್ಲುವು: (1ಕ) ಅಶ್ಟನ್ನೂ ಈ ಕೋಣೆಯೊಳಗೆ ಇರಿಸಬಹುದು. (1ಚ) ಇಶ್ಟಕ್ಕೆ ನೀವು ಎಶ್ಟು ಕೊಟ್ಟಿರಿ? (1ಟ) ಅಶ್ಟರಿಂದ ನಿಮಗೆ ಏನು ಮಾಡಲು ಬರುತ್ತದೆ? (1ತ) ಅಶ್ಟರಲ್ಲಿ ಅವರು ಎರಡು ಪುಸ್ತಕಗಳನ್ನು ಮುಗಿಸಿದ್ದರು. (1ಪ) ಅಶ್ಟು ನಿಮಗೆ ಎಲ್ಲಿ ಸಿಕ್ಕಿತು? ಆದರೆ, ಹೆಸರುಪತ್ತುಗೆಯ ಅ ಒಟ್ಟು ಮಾತ್ರ ಅವುಗಳೊಂದಿಗೆ ಬರುವುದಿಲ್ಲ; ಅವು ಯಾವ ಒಟ್ಟೂ ಇಲ್ಲದೆ ಹೆಸರುಪರಿಚೆಯ ಪದಗಳಾಗಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ: (1) ಅಶ್ಟು ಪುಸ್ತಕಗಳನ್ನು ನೀವು ಎಲ್ಲಿಂದ ತಂದಿರಿ? ಹೆಸರುಪರಿಚೆಗಳ ಗುಂಪಿನಲ್ಲಿ ಬರುವ ಜಾಗ ಮತ್ತು ದಿನಗಳನ್ನು ತಿಳಿಸುವ ತೋರುಪದಗಳು (ಅಲ್ಲಿ, ಇಲ್ಲಿ, ಎಲ್ಲಿ ಮತ್ತು ಅಂದು, ಇಂದು, ಎಂದು ಎಂಬವುಗಳು) ಇಂದ ಮತ್ತು ಗೆ ಎಂಬ ಎರಡು ಎಸಕಪತ್ತುಗೆಯ ಒಟ್ಟುಗಳೊಂದಿಗೆ ಮಾತ್ರ ಬರಬಲ್ಲುವು ((1ಕ-ಟ) ನೋಡಿ); ಇದಲ್ಲದೆ, ಹೆಸರುಪತ್ತುಗೆಯ ಅ ಒಟ್ಟಿನೊಂದಿಗೂ ಅವು ಬರಬಲ್ಲುವು (1ತ): (1ಕ) ಅಲ್ಲಿಂದ ಇಲ್ಲಿಗೆ ಬರಲು ಅವನಿಗೆ ಮೂರು ಗಂಟೆ ಹಿಡಿಯಿತು. (1ಚ) ಅಲ್ಲಿನ ಕೆಲಸವನ್ನು ಮುಗಿಸಿ ಇಲ್ಲಿಗೆ ಬಂದಿದ್ದೇವೆ. (1ಟ) ನೀವು ಎಂದಿನಿಂದ ಈ ಕೆಲಸವನ್ನು ಮಾಡುತ್ತಿದ್ದೀರಿ? (1ತ) ಇಂದಿನ ಕೆಲಸವನ್ನು ಇಂದೇ ಮುಗಿಸಿಬಿಡಿ. ಆಳುಗಳನ್ನು ಗುರುತಿಸುವ ಹೆಸರುಪದಗಳಿಗೆ ಜಾಗವನ್ನು ತಿಳಿಸುವ ಅಲ್ಲಿ ಒಟ್ಟನ್ನು ಸೇರಿಸಿದಾಗ, ಅವು ಆಳುಗಳನ್ನು ಜಾಗವಾಗಿ ತಿಳಿಸುವ ಬದಲು ಅವರ ಒಡೆತನದಲ್ಲಿರುವ, ಇಲ್ಲವೇ ಅವರಿಗೆ ಸಂಬಂದಿಸಿರುವ ಜಾಗವನ್ನು ತಿಳಿಸುತ್ತವೆ ಎಂಬುದನ್ನು (7.4.9)ರಲ್ಲಿ ವಿವರಿಸಲಾಗಿದೆ; ಇಂತಹ ಜಾಗವನ್ನು ತಿಳಿಸುವ

ಪತ್ತುಗೆರೂಪಗಳ ಬಳಿಕವೂ ಇಂದ, ಗೆ, ಮತ್ತು ಅ ಒಟ್ಟುಗಳನ್ನು ಬಳಸಲು ಬರುತ್ತದೆ: (1ಕ) ಅವರಲ್ಲಿಂದ ಇಲ್ಲಿಗೆ ಮೂರು ಕಿ.ಮೀ. ಇದೆ. (1ಚ) ಅವನಲ್ಲಿಗೆ ಇವತ್ತು ಪೋಲೀಸರು ಬಂದಿದ್ದರು. (1ಟ) ಇವರಲ್ಲಿನ ವಿಶಯಗಳನ್ನು ಬೇರೆಲ್ಲೂ ಹೇಳಬೇಡ. ಜಾಗವನ್ನು ತಿಳಿಸುವ ಪತ್ತುಗೆ ಒಟ್ಟು ಅಲ್ಲಿ ಎಂಬ ತೋರುಪದದ ಹಾಗೆಯೇ ಇದೆ ಎಂಬುದನ್ನು ಗಮನಿಸಬಹುದು; ಹಾಗಾಗಿ, ಈ ಪದರೂಪಗಳಲ್ಲಿ ಎರಡೆರಡು ಪತ್ತುಗೆ ಒಟ್ಟುಗಳು ಒಟ್ಟಾಗಿ ಬಂದಿವೆ ಎಂದು ಹೇಳುವ ಬದಲು, ಆಳುಗಳನ್ನು ಗುರುತಿಸುವ ಈ ಪದಗಳೊಂದಿಗೆ ಅಲ್ಲಿ ಎಂಬ ಪತ್ತುಗೆ ಒಟ್ಟಿನ ಬದಲು ಅಲ್ಲಿ ಎಂಬ ತೋರುಪದ ಬಂದಿದೆ ಎಂದೂ ಹೇಳಲು ಬರುತ್ತದೆ. ಅತ್ತ, ಇತ್ತ, ಮತ್ತು ಎತ್ತ ಎಂಬವುಗಳ ಬದಲು, ಆ ಕಡೆ, ಈ ಕಡೆ, ಮತ್ತು ಯಾವ ಕಡೆ ಎಂಬಂತಹ ನುಡಿತಗಳೇ ಹೆಚ್ಚು ಬಳಕೆಯಲ್ಲಿರುವ ಕಾರಣ, ಅವುಗಳೊಂದಿಗೆ ಪತ್ತುಗೆ ಒಟ್ಟುಗಳ ಬಳಕೆ ಹೇಗಿದೆ ಎಂಬುದರ ಕುರಿತು ಕಚಿತವಾಗಿ ಹೇಳಲು ಬರುವುದಿಲ್ಲ. ಅಂದು, ಇಂದು, ಮತ್ತು ಎಂದು ಎಂಬವುಗಳ ಬಳಕೆಯ ಕುರಿತಾಗಿಯೂ, ಇದೇ ಕಾರಣಕ್ಕಾಗಿ, ಕಚಿತವಾದ ವಿವರಗಳನ್ನು ಕೊಡಲು ಬರುವುದಿಲ್ಲ; ಅವುಗಳ ಬದಲು ಆವತ್ತು, ಈವತ್ತು (ಇಲ್ಲವೇ ಇವತ್ತು), ಮತ್ತು ಯಾವತ್ತು ಎಂಬ ನುಡಿತಗಳು ಹೆಚ್ಚು ಬಳಕೆಯಲ್ಲಿವೆ. ಆದರೆ, ಈ ನುಡಿತಗಳಲ್ಲಿ ಹೊತ್ತು ಎಂಬ ಪದದ ಬಳಕೆಯಿದ್ದು, ಇವು ದಿನದ ಹುರುಳಿನ ಬದಲು ಹೊತ್ತಿನ ಹುರುಳನ್ನೂ ಕೊಡಬಲ್ಲುವು: (1ಕ) ಇವತ್ತು ಕೆಲಸಕ್ಕೆ ಯಾರೆಲ್ಲ ಬರುತ್ತಾರೆ? (1ಚ) ಇವತ್ತಿನ ಮಕ್ಕಳಿಗೆ ತಂದೆತಾಯಿಯರೇ ಹೊರೆಯಾಗುತ್ತಿದ್ದಾರೆ. (1ಕ)ದಲ್ಲಿ ಇವತ್ತು ಎಂಬುದು ದಿನವನ್ನು ತಿಳಿಸುತ್ತದೆ; ಆದರೆ, (1ಚ)ದಲ್ಲಿ ಅದು ಹೊತ್ತನ್ನು ತಿಳಿಸುತ್ತದೆ. ಆಗ, ಈಗ, ಮತ್ತು ಯಾವಾಗ ಎಂಬ ಹೊತ್ತಿನ ತೋರುಪದಗಳು ಇಂದ ಮತ್ತು ಅ ಎಂಬ ಪತ್ತಿನ ಒಟ್ಟುಗಳೊಂದಿಗೆ ಬರಬಲ್ಲುವು; ಆದರೆ, ಗುರಿಯನ್ನು ತಿಳಿಸುವುದಕ್ಕಾಗಿ ಅವು ನೇರವಾಗಿ ಗೆ ಒಟ್ಟಿನೊಂದಿಗೆ ಬರುವ ಬದಲು (*ಆಗಕ್ಕೆ, *ಈಗಕ್ಕೆ, *ಯಾವಾಗಕ್ಕೆ), ವರೆಗೆ ಎಂಬ ಪದದೊಂದಿಗೆ ಬಳಕೆಯಾಗುತ್ತವೆ: (1ಕ) ಆಗಿನಿಂದ ಈಗಿನ ವರೆಗೂ ಆತನ ನಡತೆಯಲ್ಲಿ ಮಾರ್ಪಾಡಾಗಿಲ್ಲ.

(1ಚ) ಅವನು ಯಾವಾಗಿನಿಂದ ಈ ಊರಲ್ಲಿದ್ದಾನೆ? (1ಟ) ಈಗಿನ ಹುಡುಗರು ಹಿರಿಯರಿಗೆ ಮದಿಪು ಕೊಡುವುದಿಲ್ಲ. ಹಾಗೆ, ಹೀಗೆ, ಮತ್ತು ಹೇಗೆ ಎಂಬ ಹೊಲಬಿನ ತೋರುಪದಗಳು, ಯಾಕೆ ಎಂಬ ಕಾರಣದ ತೋರುಪದ, ಆ, ಈ, ಮತ್ತು ಯಾವ ಎಂಬ ತೋರ್ಕೆಯ ತೋರುಪದಗಳು, ಮತ್ತು ಕೇಳುಗನ ಗಮನವನ್ನು ಸೆಳೆಯಲು ಬಳಕೆಯಾಗುವ ಅಗೋ ಮತ್ತು ಇಗೋ ಎಂಬ ಗಮನದ ತೋರುಪದಗಳು ಯಾವ ಪತ್ತುಗೆ ಒಟ್ಟಿನೊಂದಿಗೂ ಬರುವುದಿಲ್ಲ.

10.2.5 ಪಾಂಗುಗಳನ್ನು ಗುರುತಿಸುವುದು

ಮೇಲೆ (6.3-5)ರಲ್ಲಿ ವಿವರಿಸಿದ ಹಾಗೆ, ಪಾಂಗುಗಳನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಪಾಂಗುಗಳ ಪರಿಚೆಯನ್ನು ತಿಳಿಸುವುದು, ಅವುಗಳ ಅಳವಿಯನ್ನು ತಿಳಿಸುವುದು, ಮತ್ತು ಅವನ್ನು ನೆಲೆಗೊಳಿಸುವುದು ಎಂಬ ಮೂರು ಬಗೆಯ ಇಟ್ಟಳಗಳಲ್ಲಿ ಬಳಸಲಾಗುತ್ತದೆ. ಹೆಸರುಪದಗಳ ಜಾಗದಲ್ಲಿ ಬರಬಲ್ಲ ತೋರುಪದಗಳೂ ಹೆಸರುಪದಗಳ ಹಾಗೆ ಪಾಂಗುಗಳನ್ನು ಗುರುತಿಸುವ ಕೆಲಸವನ್ನೇ ನಡೆಸುತ್ತವೆ; ಆದರೆ, ಈ ಕೆಲಸಕ್ಕಾಗಿ ಅವು ಪಾಂಗುಗಳ ಕೊಗೆತದ ಬದಲು ತೋರ್ಕೆಯನ್ನು ಬಳಸುತ್ತವೆ ಎಂಬುದು ಇವಕ್ಕೂ ಹೆಸರುಪದಗಳಿಗೂ ನಡುವಿರುವ ಮುಕ್ಯ ವ್ಯತ್ಯಾಸ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಹೋಲಿಸಿ ನೋಡಬಹುದು: (1ಕ) ರಾಜುವಿನ ಹುಡುಗನಿಗೆ ಮನೆಗೆ ಹೋಗಬೇಕಂತೆ. (1ಚ) ಇವನಿಗೆ ಮನೆಗೆ ಹೋಗಬೇಕಂತೆ. (1ಕ)ದಲ್ಲಿ ರಾಜುವಿನ ಹುಡುಗ ಎಂಬ ಪದಕಂತೆ ಒಂದು ಕೊಗೆತದ ಮೂಲಕ ಪಾಂಗನ್ನು ಗುರುತಿಸುತ್ತದೆ; ಹುಡುಗ ಎಂಬ ಪದದ ಹುರುಳು ಮತ್ತು ಅದರೊಂದಿಗೆ ಬಂದಿರುವ ರಾಜುವಿನ ಎಂಬ ಪದರೂಪದ ಹುರುಳು ಒಟ್ಟುಸೇರಿ ಇಂತಹ ಕೊಗೆತವನ್ನು ಒದಗಿಸುತ್ತವೆ. ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಇವನಿಗೆ ಎಂಬ ತೋರುಪದ ಆಡುಗನ ಹತ್ತಿರ ನಿಂತಿರುವ ಒಬ್ಬ ವ್ಯಕ್ತಿಯ ಕಡೆಗೆ ಕೇಳುಗನ ಗಮನವನ್ನು ಸೆಳೆಯುವ ಮೂಲಕ ಆತನನ್ನು ಗುರುತಿಸುವ ಕೆಲಸವನ್ನು ನಡೆಸುತ್ತದೆ. ಈ ಪದವನ್ನು ಆಡುವುದರೊಂದಿಗೆ ಆಡುಗನು ತನ್ನ ಬೆರಳಿನಿಂದ ಹುಡುಗನನ್ನು ತೋರಿಸಿಯೂ ಕೇಳುಗನ ಗಮನವನ್ನು ಸರಿಯಾದ ವ್ಯಕ್ತಿಯ ಕಡೆಗೆ ಸೆಳೆಯಬಹುದು.

ಇದಲ್ಲದೆ, ಬೇರೆ ಕೆಲವು ಬಗೆಯ ತೋರ್ಕೆಯ ಹುರುಳುಗಳೂ ಈ ಪದಗಳಿಗೆ ಸಿಗುತ್ತವೆ ಎಂಬುದನ್ನು ಮೇಲೆ 10.1.4ರಲ್ಲಿ ನೋಡಿರುವೆವು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಅವು ಅದೇ ಸೊಲ್ಲಿನಲ್ಲಿ ಇಲ್ಲವೇ ಹಿಂದಿನ ಬೇರೆ ಸೊಲ್ಲುಗಳಲ್ಲಿ ಗುರುತಿಸಲಾಗಿರುವ ಪಾಂಗುಗಳನ್ನು ಓದುಗನ ಇಲ್ಲವೇ ಕೇಳುಗನ ಗಮನಕ್ಕೆ ತರುತ್ತವೆ: (1ಕ) ರಾಜುವಿಗೆ ಸಿಟ್ಟು ಬಂದುದರಿಂದ ಅವನು ಯಾರ ಹತ್ತಿರವೂ ಮಾತನಾಡದೆ ಕುಳಿತಿದ್ದಾನೆ. (1ಚ) ರಾಜುವಿಗೆ ಶಾಮ ಹೊಡೆದ, ಮತ್ತು ಅವನಿಗೆ ಇವನು ಹೊಡೆದ. (1ಕ)ದಲ್ಲಿ ಬಂದಿರುವ ಅವನು ಎಂಬುದು ಅದಕ್ಕೆ ಮೊದಲು ಒಳಸೊಲ್ಲಿನಲ್ಲಿ ಬಂದಿರುವ ರಾಜು ಎಂಬ ಪದ ಗುರುತಿಸುವ ಪಾಂಗನ್ನೇ ಗುರುತಿಸುತ್ತದೆ, ಮತ್ತು (1ಚ)ದಲ್ಲಿ ಬಂದಿರುವ ಅವನು ಮತ್ತು ಇವನು ಎಂಬವು ಹಿಂದಿನ ಸೊಲ್ಲಿನಲ್ಲಿ ಬಂದಿರುವ ರಾಜು ಮತ್ತು ಶಾಮ ಎಂಬವು ಗುರುತಿಸುವ ಪಾಂಗುಗಳನ್ನು ಗುರುತಿಸುತ್ತವೆ. ತೋರುಪದಗಳ ಬಳಕೆಯಲ್ಲಿ ಈ ರೀತಿ ಪಾಂಗುಗಳನ್ನು ಗುರುತಿಸುವ ಕೆಲಸ ಮುಕ್ಯವಾಗಿ ತೋರ್ಕೆಯ ಮೇಲೆ ಅವಲಂಬಿಸಿದೆಯಾದ ಕಾರಣ, ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹ ಪಾಂಗುಗಳ ಪರಿಚೆಯನ್ನು ತಿಳಿಸುವುದು, ಅವುಗಳ ಅಳವಿಯನ್ನು ತಿಳಿಸುವುದು, ಮತ್ತು ಅವನ್ನು ನೆಲೆಗೊಳಿಸುವುದು ಎಂಬ ಮೂರು ಬಗೆಯ ಹೊಲಬುಗಳು ತೋರುಪದಗಳಿಗೆ ಬೇಕಾಗುವುದಿಲ್ಲ. ಹೀಗಿದ್ದರೂ, ಹೆಸರುಪದಗಳ ಜಾಗದಲ್ಲಿ ಬರಬಲ್ಲ ತಿಳಿದ ತೋರುಪದಗಳಲ್ಲಿ ಅವನು, ಅವಳು, ಅದು, ಅವರು ಮತ್ತು ಅವು ಎಂಬ ಅಯ್ದು ದೂರದ ತೋರುಪದಗಳನ್ನು ಇಂತಹ ಕೆಲವು ಹೊಲಬುಗಳಲ್ಲಿ ಬಳಸಲು ಬರುತ್ತದೆ; ಆದರೆ, ಈ ಬಳಕೆಗಳಲ್ಲಿ ಅವು ತಮ್ಮ ತೋರ್ಕೆಯ ಹುರುಳನ್ನು ಪೂರ್ತಿ ಕಳೆದುಕೊಳ್ಳುತ್ತವೆ, ಮತ್ತು ಗುರ್ತ ಮತ್ತು ಎಣಿಕೆಯ ಹುರುಳುಗಳನ್ನು ಮಾತ್ರ ಉಳಿಸಿಕೊಳ್ಳುತ್ತವೆ: (1ಕ) ದೊಡ್ಡವಳನ್ನು ಊಟಕ್ಕೆ ಕರೆದಿದ್ದೇವೆ. (1ಚ) ಈ ಊರಿನವರು ಯಾರ ತಂಟೆಗೂ ಹೋಗುವುದಿಲ್ಲ. (1ಟ) ಕೆಳಗೆ ಬಿದ್ದುದನ್ನೆಲ್ಲ ಅವನು ತನ್ನ ಚೀಲದಲ್ಲಿ ತುಂಬಿಸಿಕೊಂಡ. (1ಕ)ದಲ್ಲಿ ಅವಳು ಎಂಬ ತೋರುಪದವನ್ನು ದೊಡ್ಡ ಎಂಬ ಪರಿಚೆಪದದೊಂದಿಗೆ ಬಳಸಲಾಗಿದೆ, ಮತ್ತು (1ಚ-ಟ)ಗಳಲ್ಲಿ ಅವರು ಮತ್ತು ಅದು (ಉದು) ಎಂಬುವನ್ನು ನೆಲೆಗೊಳಿಸುವ ಈ ಊರಿನ ಮತ್ತು ಕೆಳಗೆ ಬಿದ್ದ

ಎಂಬ ನುಡಿತಗಳೊಂದಿಗೆ ಬಳಸಲಾಗಿದೆ. ಈ ಎಲ್ಲಾ ಬಳಕೆಗಳಲ್ಲೂ ದೂರದ ತೋರುಪದಗಳು ತಮ್ಮ ತೋರ್ಕೆಯ ಹುರುಳನ್ನು ಕಳೆದುಕೊಂಡಿದ್ದು, ಪಾಂಗಿನ ಗುರ್ತ ಮತ್ತು ಎಣಿಕೆಗಳನ್ನಶ್ಟೇ ಅವು ತಿಳಿಸುತ್ತವೆ; ಪಾಂಗನ್ನು ಗುರುತಿಸುವುದಕ್ಕೆ ಬೇಕಾಗುವ ಬೇರೆ ವಿಶಯಗಳನ್ನು ಅವುಗಳ ಮೊದಲು ಬಂದಿರುವ ನುಡಿತಗಳು ತಿಳಿಸುತ್ತವೆ. ಎಸಕಪರಿಚೆ ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳೂ ಇಂತಹ ಕೆಲವು ಬಗೆಯ ಹೊಲಬುಗಳಲ್ಲಿ ಬಳಕೆಯಾಗಬಲ್ಲುವಾಗಿದ್ದು, ಹೆಸರುಪದಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳ ಹಾಗೆ, ಈ ತೋರುಪದಗಳೂ ಇಂತಹ ಬಳಕೆಯಲ್ಲಿ ತೋರ್ಕೆಯ ಹುರುಳನ್ನು ಕಳೆದುಕೊಳ್ಳುತ್ತವೆ: (1ಕ) ಅವನು ಕುಳಿತಲ್ಲಿ ತುಂಬಾ ಇರುವೆಗಳಿದ್ದುವು. (1ಚ) ಅವನು ಕೊಟ್ಟಶ್ಟು ಹಣವನ್ನು ನಾನೂ ಕೊಡುತ್ತೇನೆ. (1ಕ)ದಲ್ಲಿ ಬಂದಿರುವ ಅಲ್ಲಿ ಎಂಬ ತೋರುಪದಕ್ಕಾಗಲಿ, (1ಚ)ದಲ್ಲಿ ಬಂದಿರುವ ಅಶ್ಟು ತೋರುಪದಕ್ಕಾಗಲಿ ತೋರ್ಕೆಯ ಹುರುಳಿಲ್ಲ ಎಂಬುದನ್ನು ಗಮನಿಸಬಹುದು. ಅವು ತಿಳಿಸುವ ಜಾಗ ಮತ್ತು ಅಳವಿಗಳನ್ನು ಗುರುತಿಸುವುದಕ್ಕಾಗಿ ಅವುಗಳ ಮೊದಲು ಬಂದಿರುವ ಸೊಲ್ಲಿನ ಪರಿಚೆರೂಪವನ್ನು ಬಳಸಬೇಕಾಗುತ್ತದೆ. ತಿಳಿದ ತೋರುಪದಗಳಲ್ಲಿ ದೂರದವುಗಳ ಈ ಬಳಕೆ ಎಂತಹದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

10.2.6 ಪಾಂಗುಗಳ ಪರಿಚೆಯನ್ನು ತಿಳಿಸುವುದು

ತೋರುಪದಗಳು ಗುರುತಿಸುವ ಪಾಂಗಿನ ಪರಿಚೆಯೇನೆಂಬುದನ್ನು ಅವುಗಳ ಎರಡನೆಯ ಅಂಗವೇ ಅಡಕವಾಗಿ ತಿಳಿಸುತ್ತದೆ; ಓರೆಣಿಕೆಯ ಪದಗಳಲ್ಲಿ ಗಂಡಸು, ಹೆಂಗಸು, ಮತ್ತು ಉಳಿದವು ಎಂಬ ವ್ಯತ್ಯಾಸ, ಮತ್ತು ಹಲವೆಣಿಕೆಯಲ್ಲಿ ಹಲವರು ಮತ್ತು ಹಲವು ಎಂಬ ವ್ಯತ್ಯಾಸ ಈ ಎರಡನೆಯ ಅಂಗದಲ್ಲಿ ಕಾಣಿಸುತ್ತಿದ್ದು, ಅವು ಅಡಕವಾಗಿ ಪಾಂಗುಗಳ ಪರಿಚೆಯನ್ನು ತಿಳಿಸುತ್ತವೆ. ತೋರುಪದಗಳು ನಡೆಸಬೇಕಾಗಿರುವ ಕೆಲಸಕ್ಕೆ ಪಾಂಗುಗಳ ಕುರಿತಾಗಿ ಇದಕ್ಕಿಂತ ಹೆಚ್ಚು ವಿವರವಾಗಿ ಪರಿಚೆಗಳನ್ನು ತಿಳಿಸಬೇಕಾಗುವುದಿಲ್ಲ; ಯಾಕೆಂದರೆ, ಅವು ಮುಕ್ಯವಾಗಿ ತೋರ್ಕೆಯ ಮೂಲಕವೇ ಕೇಳುಗನ ಗಮನವನ್ನು ಪಾಂಗಿನ ಕಡೆಗೆ ಹೊರಳುವಂತೆ ಮಾಡುತ್ತವೆ; ಹಾಗಾಗಿ, ಪಾಂಗುಗಳ ಪರಿಚೆಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳೊಂದಿಗೆ ಬಳಕೆಯಾಗುವ ಬೇರೆ

ಬೇರೆ ಬಗೆಯ ನುಡಿತಗಳು ತೋರ್ಕೆಯ ಮೂಲಕ ಪಾಂಗುಗಳನ್ನು ಗುರುತಿಸುವ ತೋರುಪದಗಳೊಂದಿಗೆ ಬರುವುದಿಲ್ಲ. ಹೆಸರುಪದಗಳೊಂದಿಗೆ ಪಾಂಗುಗಳ ಪರಿಚೆಗಳನ್ನು ತಿಳಿಸುವುದಕ್ಕಾಗಿ (1) ಪರಿಚೆಪದಗಳನ್ನು, (2) ಹೆಸರುಪದಗಳ ಪತ್ತುಗೆರೂಪಗಳನ್ನು, (3) ಎಸಕಪದಗಳ ಪರಿಚೆರೂಪಗಳನ್ನು, (4) ಎಸಕಪರಿಚೆಗಳ ಪತ್ತುಗೆರೂಪಗಳನ್ನು, ಮತ್ತು (5) ಹೆಸರುಪರಿಚೆಯ ತೋರುಪದಗಳನ್ನು ಬಳಸಲಾಗುತ್ತದೆ. ಮೇಲೆ ತಿಳಿಸಿದ ಹಾಗೆ, ತೋರುಪದಗಳಲ್ಲಿ ತೋರ್ಕೆಯ ಹುರುಳನ್ನು ಕಳೆದುಕೊಳ್ಳಬಲ್ಲ ದೂರದ ತೋರುಪದಗಳು ಮಾತ್ರ ಇಂತಹ ನುಡಿತಗಳೊಂದಿಗೆ ಬರಬಲ್ಲುವು. ಇವುಗಳ ಬಳಕೆಯಲ್ಲೂ ಕೆಲವು ಕಟ್ಟುಪಾಡುಗಳಿದ್ದು, ಅವನ್ನು ಕೆಳಗೆ ವಿವರಿಸಲಾಗಿದೆ: (1) ಪರಿಚೆಪದಗಳೊಂದಿಗೆ ಬಳಕೆ: ಪರಿಚೆಪದಗಳಲ್ಲಿ ದೊಡ್ಡ ಮತ್ತು ಚಿಕ್ಕ ಎಂಬ ಎರಡು ಪದಗಳೊಂದಿಗೆ ಮಾತ್ರ ಹೆಸರುಪದಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳು ನೇರವಾಗಿ ಬಳಕೆಯಾಗುತ್ತವೆ: ದೊಡ್ಡವನು ದೊಡ್ಡವರು ಚಿಕ್ಕವನು ಚಿಕ್ಕವರು ದೊಡ್ಡವಳು ,, ಚಿಕ್ಕವಳು ,, ದೊಡ್ಡದು ದೊಡ್ಡವು ಚಿಕ್ಕದು ಚಿಕ್ಕವು ಹೊಸ ಎಂಬ ಪದದೊಂದಿಗೂ ಅದು ಮತ್ತು ಅವು ಎಂಬವುಗಳನ್ನು ನೇರವಾಗಿ ಬಳಸಲು ಬರುತ್ತದೆ (ಹೊಸದು, ಹೊಸವು); ಆದರೆ, ಉಳಿದ ದೂರದ ತೋರುಪದಗಳನ್ನು ಅದರೊಂದಿಗೆ ಬಳಸಲು ಬರುವುದಿಲ್ಲ. ದೊಡ್ಡ, ಚಿಕ್ಕ ಮತ್ತು ಹೊಸ ಎಂಬ ಮೂರು ಪರಿಚೆಪದಗಳನ್ನು ಹೊರತುಪಡಿಸಿ ಉಳಿದ ಪರಿಚೆಪದಗಳೊಂದಿಗೆ ದೂರದ ತೋರುಪದಗಳನ್ನು ಬಳಸಬೇಕಿದ್ದಲ್ಲಿ ಅಂತಹ ಪರಿಚೆಪದಗಳಿಗೆ ಹೆಸರುಪತ್ತುಗೆಯ ಅ ಒಟ್ಟನ್ನು ಸೇರಿಸಬೇಕಾಗುತ್ತದೆ; ಅವುಗಳಿಗೆ ಈ ಒಟ್ಟು ಸೇರಿದಾಗ, ಅವು ಎಕಾರ ಇಲ್ಲವೇ ಇಕಾರಗಳಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಅವುಗಳ ಬಳಿಕ ಯಕಾರ ಸೇರುತ್ತದೆ: ಒಳ್ಳೆಯವನು ಒಳ್ಳೆಯವರು ಬಿಳಿಯವನು ಬಿಳಿಯವರು ಒಳ್ಳೆಯವಳು ,, ಬಿಳಿಯವಳು ,, ಒಳ್ಳೆಯದು ಒಳ್ಳೆಯವು ಬಿಳಿಯದು ಬಿಳಿಯವು

ಅಕಾರದಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಅವುಗಳ ಬಳಿಕ ದಕಾರ ಸೇರುತ್ತದೆ, ಮತ್ತು ಅದರ ಬಳಿಕ ಬರುವ ಪತ್ತುಗೆ ಒಟ್ಟಿನ ಅಕಾರ ಮಾತ್ರವಲ್ಲದೆ ಅದು ಎಂಬುದರ ಅಕಾರವೂ ಬಿದ್ದುಹೋಗುತ್ತದೆ: ದಪ್ಪದವನು ದಪ್ಪದವರು ಉದ್ದದವನು ಉದ್ದದವರು ದಪ್ಪದವಳು ,, ಉದ್ದದವಳು ,, ದಪ್ಪದ್ದು ದಪ್ಪದವು ಉದ್ದದ್ದು ಉದ್ದದವು ಉಕಾರದಲ್ಲಿ ಕೊನೆಗೊಳ್ಳುವುದಿದ್ದಲ್ಲಿ, ಅವುಗಳ ಬಳಿಕ ಇನ್ ಎಂಬುದು ಸೇರುತ್ತದೆ; ಆದರೆ, ಈ ರೀತಿ ಉಕಾರದಲ್ಲಿ ಕೊನೆಗೊಳ್ಳುವ ಪರಿಚೆಪದಗಳಲ್ಲಿ ಎರಡು ಬರಿಗೆಕಂತೆಗಳಿದ್ದು, ಉದ್ದ ತೆರೆಯುಲಿ ಇಲ್ಲವೇ ಒತ್ತುಬರಿಗೆ ಬಂದಿಲ್ಲವಾದರೆ, ಇನ್ ಎಂಬುದರ ಬದಲು ವಿನ್ ಎಂಬುದು ಸೇರುತ್ತದೆ: ಕಪ್ಪಿನವನು ಕಪ್ಪಿನವರು ತೆಳುವಿನವನು ತೆಳುವಿನವರು ಕಪ್ಪಿನವಳು ,, ತೆಳುವಿನವಳು ,, ಕಪ್ಪಿನದು ಕಪ್ಪಿನವು ತೆಳುವಿನದು ತೆಳುವಿನವು ಈ ನುಡಿತಗಳ ಕೆಲವು ಬಳಕೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ದೊಡ್ಡವರು ಹಿಂದಿನ ಸಾಲಿನಲ್ಲಿ ನಿಲ್ಲಲಿ. (1ಚ) ಒಳ್ಳೆಯವನು ತೊಂದರೆಗೆ ಸಿಲುಕಿದ್ದಾನೆ. (1ಟ) ಕಪ್ಪಿನವಳಿಗೆ ಇನ್ನೂ ಮದುವೆಯಾಗಿಲ್ಲ. (1ತ) ತೆಳುವಿನದಕ್ಕೆ ಬಾಳಿಕೆ ಹೆಚ್ಚು. (1ಪ) ಉರುಟಿನದು ಹೊರಳುತ್ತಾ ಹೋಯಿತು. ಎಸಕಪರಿಚೆ ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳು ಈ ರೀತಿ ಪರಿಚೆಪದಗಳೊಂದಿಗೆ ಬಳಕೆಯಾಗುವ ಹಾಗೆ ಕಾಣಿಸುವುದಿಲ್ಲ. (2) ಹೆಸರುಪದಗಳ ಪತ್ತುಗೆರೂಪದೊಂದಿಗೆ ಬಳಕೆ: ಹೆಸರುಪದಗಳ ಜಾಗದಲ್ಲಿ ಬರಬಲ್ಲ ಎಲ್ಲಾ ಅಯ್ದು ದೂರದ ತೋರುಪದಗಳೂ ಹೆಸರುಪದಗಳ ಪತ್ತುಗೆರೂಪದೊಂದಿಗೆ ಬಳಕೆಯಾಗಬಲ್ಲುವು: (1ಕ) ಈ ಹಳ್ಳಿಯವರು ತುಂಬಾ ಬಡವರು.

(1ಚ) ಆತ ಕಾರಿನವಳಿಗೆ ಮೊದಲು ಟೀ ಕೊಡಿಸಿದ. (1ಟ) ಕಾಡಿನವನು ನಾಡಿಗೆ ಬಂದಿದ್ದಾನೆ. (1ತ) ನಮ್ಮ ಊರಿನದನ್ನು ಬೇರೆಯೇ ಇರಿಸಿದ್ದಾರೆ. (1ಪ) ಈ ಹಟ್ಟಿಯವು ತೊಂದರೆ ಕೊಡುವುದಿಲ್ಲ. ಅಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಆಳುಗಳನ್ನು ಹೊರತುಪಡಿಸಿ ಬೇರೆಯವನ್ನು ಗುರುತಿಸುತ್ತಿದ್ದಲ್ಲಿ ಅವುಗಳ ಬಳಿಕ ಪತ್ತುಗೆ ಒಟ್ಟಿನ ಮೊದಲು ದಕಾರ ಸೇರುತ್ತದೆ (4.8.3 ನೋಡಿ); ಈ ರೀತಿ ದಕಾರ ಸೇರಿರುವ ಪತ್ತುಗೆರೂಪಗಳ ಬಳಿಕವೂ ಅದು ಎಂಬ ತೋರುಪದ ಬಂದಾಗ, ಪತ್ತುಗೆ ಒಟ್ಟಿನ ಅಕಾರ ಮಾತ್ರವಲ್ಲದೆ, ಅದು ಪದದ ಅಕಾರವೂ ಬಿದ್ದುಹೋಗುತ್ತದೆ: (1ಕ) ಈ ಮರದ್ದು ತುಂಬಾ ದೊಡ್ಡದಾಗಿರುತ್ತದೆ. (1ಚ) ಸಂಬಳದ್ದು ಬಾಕಿ ಇವತ್ತೇ ಕೊಡುತ್ತಾರೆ. ಎಸಕಪರಿಚೆ ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳಲ್ಲಿ ಕೆಲವನ್ನು ಹೆಸರುಪದಗಳ ಪತ್ತುಗೆರೂಪದೊಂದಿಗೆ ಬಳಸಲು ಬರುತ್ತದೆ; ಆದರೆ, ಈ ಬಳಕೆಯ ಹಿಂದೆ ಕೆಲವು ಕಟ್ಟುಪಾಡುಗಳೂ ಇವೆ: (ಕ) ಎಸಕಪರಿಚೆಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳಲ್ಲಿ ಅಲ್ಲಿ ಎಂಬುದು ಹೆಸರುಪದಗಳ ಪತ್ತುಗೆರೂಪದ ಬಳಿಕ ಜಾಗವನ್ನು ತಿಳಿಸುವ ಪತ್ತುಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ: (1ಕ) ಆಕೆ ತನ್ನ ಮಕ್ಕಳನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಾಳೆ. (1ಚ) ನಾಲ್ಕು ಮಂದಿ ಹುಡುಗರಲ್ಲಿ ಇಬ್ಬರು ಹಿಂದಿರುಗಿದ್ದಾರೆ. ಅಲ್ಲಿ ಎಂಬ ಈ ಪತ್ತುಗೆ ಒಟ್ಟಿಗೆ ಹೊತ್ತನ್ನು ತಿಳಿಸುವ ಹುರುಳೂ ಇದೆಯಾದ ಕಾರಣ, ಹೆಸರುಪದಗಳ ಪತ್ತುಗೆರೂಪದ ಬಳಿಕ ಆಗ ಎಂಬ ಹೊತ್ತಿನ ತೋರುಪದ ಬರುವುದಿಲ್ಲ: (1ಕ) ಅವನು ಎರಡು ಗಂಟೆಯಲ್ಲಿ ಮೂರು ಬಾರಿ ಬಂದು ಹೋದ. (1ಚ) ಅವನು ದಿವಸದಲ್ಲಿ ಮೂರು ಬಾರಿ ಉಣ್ಣುತ್ತಾನೆ. ಆದರೆ, ದಿನವನ್ನು ತಿಳಿಸುವ ಅಂದು ಎಂಬುದಕ್ಕೆ ದಿನ ಇಲ್ಲವೆ ದಿವಸ ಎಂಬುದರೊಂದಿಗೆ ಇಂತಹ ಬಳಕೆಯಿದೆ:

(1ಟ) ಹಬ್ಬದ ದಿವಸದಂದು ಅವನು ಹೆಚ್ಚು ಉಣ್ಣುತ್ತಾನೆ. ದಿಕ್ಕನ್ನು ತಿಳಿಸುವ ಅತ್ತ ಎಂಬ ತೋರುಪದವೂ `ಕಡೆಗಾಗಿ’ ಎಂಬ ದಿಕ್ಕಿನ ಹುರುಳನ್ನು ತಿಳಿಸಲು ಹೆಸರುಪದಗಳ ಪತ್ತುಗೆರೂಪದೊಂದಿಗೆ ಬರಬಲ್ಲುದು: (1ಕ) ಅವನು ಕಾಡಿನತ್ತ ಹೆಜ್ಜೆ ಹಾಕಿದ. (1ಚ) ಅವನು ಬಾನಿನತ್ತ ನೋಡುತ್ತಿದ್ದ. ಹಾಗೆ ಎಂಬ ಇನ್ನೊಂದು ತೋರುಪದವೂ ಹೆಸರುಪದಗಳ ಪತ್ತುಗೆರೂಪದೊಂದಿಗೆ ಬರಬಲ್ಲುದು. ಈ ಬಳಕೆಯಲ್ಲಿ ಅದಕ್ಕೆ ಒಂದು ಹೊಲಬಿನ ಮಟ್ಟಿಗಿರುವ ಹೋಲಿಕೆಯನ್ನು ತಿಳಿಸುವ ಹುರುಳಿದೆ: (1ಕ) ರಾಜುವಿನ ಹಾಗೆ ನಾನೂ ನೆಲದ ಮೇಲೆ ಕುಳಿತಿದ್ದೇನೆ. (1ಚ) ನಮ್ಮ ಮನೆಯ ಹಾಗೆ ಅವರ ಮನೆಯೂ ಗುಡ್ಡದ ತುದಿಯಲ್ಲಿದೆ. (1ಟ) ಅಕ್ಕನ ಹಾಗೆ ತಮ್ಮನೂ ತನ್ನ ಪುಸ್ತಕಕ್ಕೆ ತಟ್ಟಿ ಹಾಕಿದ್ದಾನೆ. ಹೋಲಿಕೆಯನ್ನು ತಿಳಿಸುವಲ್ಲಿ ಬಳಕೆಯಾಗುವ ಅಂತೆ ಎಂಬ ಇನ್ನೊಂದು ಪದವೂ ಇದೆ: (1ಕ) ರಾಜುವಿನಂತೆ ನಾನೂ ನೆಲದ ಮೇಲೆ ಕುಳಿತಿದ್ದೇನೆ. (1ಚ) ನಮ್ಮ ಮನೆಯಂತೆ ಅವರ ಮನೆಯೂ ಗುಡ್ಡದ ತುದಿಯಲ್ಲಿದೆ. ಆದರೆ, ಇದಕ್ಕೆ ತೋರ್ಕೆಯ ಹುರುಳಿನಲ್ಲಿ ಬಳಕೆಯಿಲ್ಲ, ಮತ್ತು ಹತ್ತಿರದ (ಇಂತೆ) ಮತ್ತು ತಿಳಿಯದ (ಎಂತೆ) ರೂಪಗಳೂ ಇಲ್ಲ; ಹಾಗಾಗಿ, ಇದನ್ನೊಂದು ತೋರುಪದವೆಂದು ತಿಳಿಯುವ ಬದಲು ಹೋಲಿಕೆಯ ಹುರುಳನ್ನು ಕೊಡುವ ಒಂದು ಒಟ್ಟು ಎಂಬುದಾಗಿ ತಿಳಿಯುವುದೇ ಒಳ್ಳೆಯದು. (ಚ) ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳಲ್ಲಿ ಅಶ್ಟು ಮತ್ತು ಅಂತಹ ಎಂಬ ಎರಡು ಪದಗಳು ಹೆಸರುಪದಗಳ ಪತ್ತುಗೆರೂಪಗಳ ಬಳಿಕ ಅಳವಿ ಮತ್ತು ಬಗೆಗಳ ಮಟ್ಟಿಗೆ ಹೋಲಿಕೆಯನ್ನು ತಿಳಿಸುವುದಕ್ಕಾಗಿ ಬಳಕೆಯಾಗಬಲ್ಲುವು: (1ಕ) ಜಾನಕಿಯಶ್ಟು ಹಣ ನನ್ನಲ್ಲಿಲ್ಲ. (1ಚ) ಈ ಮನೆಯಶ್ಟು ದೊಡ್ಡ ಮನೆ ನಮ್ಮ ಊರಲ್ಲಿಲ್ಲ.

(1ಟ) ಆ ಹುಡುಗನಶ್ಟು ಬೇಗನೆ ನಾನು ಓಡಲಾರೆ. (2ಕ) ಈ ಮನೆಯಂತಹ ಕಟ್ಟಡವನ್ನು ನಾನು ಬೊಂಬಾಯಿಯಲ್ಲಿ ನೋಡಿದ್ದೇನೆ. (2ಚ) ರಾಜುವಿನಂತಹ ಕೆಲಸಗಾರರನ್ನು ನಾವು ಉಳಿಸಿಕೊಳ್ಳಬೇಕು. ಮೇಲಿನ ಎಲ್ಲಾ ಬಳಕೆಗಳಲ್ಲೂ ದೂರದ ತೋರುಪದಗಳಿಗೆ ತೋರ್ಕೆಯ ಹುರುಳಿಲ್ಲ ಎಂಬುದನ್ನು ಗಮನಿಸಬಹುದು. (3) ಎಸಕಪದಗಳ ಪರಿಚೆರೂಪದೊಂದಿಗೆ ಬಳಕೆ: (ಕ) ಎಸಕಪದಗಳ ಪರಿಚೆರೂಪಗಳ ಬಳಿಕವೂ ಹೆಸರುಪದಗಳ ಜಾಗದಲ್ಲಿ ಬರಬಲ್ಲ ಎಲ್ಲಾ ಅಯ್ದು ಬಗೆಯ ದೂರದ ತೋರುಪದಗಳೂ ಬಳಕೆಯಾಗಬಲ್ಲುವು; ಆದರೆ, ಅದು ಎಂಬ ತೋರುಪದಕ್ಕೆ ಇಲ್ಲಿ ಉದು ಎಂಬ ರೂಪವಿದೆ: (1ಕ) ಊರಿಗೆ ಬಂದವನು ನನ್ನನ್ನು ಕಾಣದಿರಲಾರ. (1ಚ) ಇದನ್ನು ನಿನಗೆ ಹೇಳಿದವಳು ಈಗ ಎಲ್ಲಿದ್ದಾಳೆ? (1ಟ) ನಾಳೆ ಬರುವವರು ಊಟಕ್ಕೆ ಏನು ಮಾಡುತ್ತಾರೆ? (1ತ) ನೀವು ಹೇಳಿದುದನ್ನು ನಿನ್ನೆಯೇ ತಂದಿರಿಸಿದ್ದೆ. (1ಪ) ಕೆಳಗೆ ಬಿದ್ದವನ್ನು ಇಲ್ಲಿ ಇರಿಸಿದ್ದೇನೆ. ಎಸಕಪದಗಳಿಗೆ ಹಿಂಬೊತ್ತಿನ ರೂಪ, ಮುಂಬೊತ್ತಿನ ರೂಪ, ಮತ್ತು ಅಲ್ಲಗಳೆತದ ರೂಪ ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ (4.7.1 ನೋಡಿ). ಈ ಮೂರು ಬಗೆಯ ರೂಪಗಳೊಂದಿಗೂ ಮೇಲಿನ ಅಯ್ದು ದೂರದ ತೋರುಪದಗಳು ಬಳಕೆಯಾಗಬಲ್ಲುವು: (1ಕ) ನೀವು ಹೇಳಿದುದನ್ನು ತಂದಿದ್ದೇನೆ. (1ಚ) ನೀವು ಹೇಳುವುದನ್ನು ಹೇಳುವ ಮೊದಲೇ ತಂದಿದ್ದೇನೆ. (1ಟ) ನೀವು ಹೇಳದುದನ್ನೂ ತಂದಿದ್ದೇನೆ. (ಚ) ಎಸಕಪರಿಚೆಗಳಾಗಿ ಬರಬಲ್ಲ ಅಯ್ದು ದೂರದ ತೋರುಪದಗಳೂ ಪಾಂಗಿನ ಜಾಗ, ದಿಕ್ಕು, ಹೊತ್ತು, ದಿನ, ಮತ್ತು ಹೊಲಬುಗಳನ್ನು ತಿಳಿಸುವುದಕ್ಕಾಗಿ ಎಸಕಪದಗಳ ಪರಿಚೆರೂಪದೊಂದಿಗೆ ಬಳಕೆಯಾಗಬಲ್ಲುವು: (1ಕ) ರಾಜು ಹೋಗಿರುವಲ್ಲಿ ಬೆಳಿಗ್ಗೆ ತಿಂಡಿಯಿಲ್ಲ. (1ಚ) ಅವನು ಹೋಗುವತ್ತ ನೀನು ಹೋಗಬೇಡ.

(1ಟ) ಅವರು ಬರುವಾಗ ಎಲ್ಲರೂ ಎದ್ದು ನಿಲ್ಲಬೇಕು. (1ತ) ನಾನು ಹೇಳಿದಂದು ನೀವೊಬ್ಬರೂ ಬಂದಿರಲಿಲ್ಲ. (1ಪ) ಅವನು ನಾನು ಹೇಳಿದ ಹಾಗೆ ಮಾಡಿದ. (ಟ) ಹೆಸರುಪರಿಚೆಗಳಾಗಿ ಬರಬಲ್ಲ ಅಶ್ಟು ಮತ್ತು ಅಂತಹ ಎಂಬ ಎರಡು ದೂರದ ತೋರುಪದಗಳು ಪಾಂಗುಗಳ ಅಳವಿ ಮತ್ತು ಬಗೆಗಳನ್ನು ತಿಳಿಸುವುದಕ್ಕಾಗಿ ಎಸಕಪದಗಳ ಪರಿಚೆರೂಪದೊಂದಿಗೆ ಬಳಕೆಯಾಗಬಲ್ಲುವು: (1ಕ) ನೀವು ಕೊಟ್ಟಶ್ಟನ್ನು ತಿರುಗಿ ಕೊಡುತ್ತಿದ್ದೇನೆ. (1ಚ) ನೀವು ತೋರಿಸಿದಂತಹ ಹಣ್ಣು ಇಲ್ಲೂ ಇದೆ. (1ಟ) ನಿವು ಕೊಡುವಶ್ಟು ನಾನೂ ಕೊಡುತ್ತೇನೆ. (4) ಎಸಕಪರಿಚೆಗಳ ಪತ್ತುಗೆರೂಪದೊಂದಿಗೆ ಬಳಕೆ: (ಕ) ಎಸಕಪರಿಚೆಗಳಲ್ಲಿ ಹಲವಕ್ಕೆ ಹೆಸರುಪತ್ತುಗೆಯ ಅ ಒಟ್ಟನ್ನು ಸೇರಿಸಿ ಅವನ್ನು ಪತ್ತುಗೆರೂಪಕ್ಕೆ ಮಾರ್ಪಡಿಸಲು ಬರುತ್ತದೆ, ಮತ್ತು ಇಂತಹ ಪತ್ತುಗೆರೂಪದೊಂದಿಗೆ, ಹೆಸರುಪದಗಳ ಹಾಗೆ, ದೂರದ ತೋರುಪದಗಳನ್ನೂ ಬಳಸಲು ಬರುತ್ತದೆ: (1ಕ) ತಣ್ಣಗಿನದನ್ನು ತುಸು ಹೊತ್ತು ಬಿಸಿಲಲ್ಲಿರಿಸಬೇಕು. (1ಚ) ಹೊರಗಿನವರಿಗೆ ಇನ್ನೂ ಊಟ ಆಗಿಲ್ಲ. (1ಟ) ಹಿಂದಿನವಳು ತುಂಬಾ ಹಿಂದೆ ಬಿದ್ದಿದ್ದಾಳೆ. (1ತ) ಇವತ್ತಿನವನು ನಿನ್ನೆಯೇ ಬಂದಿದ್ದ. (ಚ) ಎಸಕಪರಿಚೆಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಹಾಗೆ ಎಂಬ ದೂರದ ತೋರುಪದವನ್ನು, ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಅಶ್ಟು ಮತ್ತು ಅಂತಹ ಎಂಬ ದೂರದ ತೋರುಪದಗಳನ್ನು ಎಸಕಪರಿಚೆಗಳ ಹೆಸರುಪತ್ತುಗೆರೂಪದ ಬಳಿಕ ಬಳಸಲು ಬರುತ್ತದೆ: (1ಕ) ಅಲ್ಲಿನ ಹಾಗೆ ಇಲ್ಲೂ ಮನೆಯೆದುರು ಚಂದದ ತೋಟ ಇದೆ. (2ಕ) ಅವನಿಗೆ ಈಗ ಹಿಂದಿನಶ್ಟು ಬೇಗ ನಡೆಯಲು ಬರುವುದಿಲ್ಲ. (2ಚ) ಇವತ್ತಿನಂತಹ ಕೆಲಸವನ್ನು ನಾನು ಇದುವರೆಗೆ ಒಮ್ಮೆಯೂ ನಡೆಸಲಿಲ್ಲ.

ಎಸಕಪರಿಚೆ ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ಉಳಿದ ತೋರುಪದಗಳಲ್ಲಿ ಯಾವುದನ್ನೂ ಈ ರೀತಿ ಎಸಕಪರಿಚೆಗಳ ಪತ್ತುಗೆರೂಪದ ಬಳಿಕ ಬಳಸಲು ಬರುವುದಿಲ್ಲ. (5) ಹೆಸರುಪರಿಚೆಯ ತೋರುಪದದೊಂದಿಗೆ ಬಳಕೆ: ಹೆಸರುಪರಿಚೆಯ ತೋರುಪದಗಳಲ್ಲಿ ಪಾಂಗಿನ ಬಗೆಯನ್ನು ತಿಳಿಸುವ ಅಂತಹ, ಇಂತಹ ಮತ್ತು ಎಂತಹ ಎಂಬವುಗಳೊಂದಿಗೆ ನೇರವಾಗಿ ದೂರದ ತೋರುಪದಗಳನ್ನು ಬಳಸಲು ಬರುತ್ತದೆ: (1ಕ) ಇಂತಹವನು ನಿಮ್ಮನ್ನು ಗುರುತಿಸಿದ್ದು ಹೇಗೆ? (1ಚ) ಅಂತಹವಳನ್ನು ಅವನು ಮದುವೆಯಾಗಲಿದ್ದಾನೆ. (1ಟ) ನಿಮ್ಮನ್ನು ಕರೆದವರು ಎಂತಹವರೆಂದು ತಿಳಿದಿದೆಯೇ? (1ತ) ಅಂತಹದು ಇಲ್ಲಿ ನಡೆಯುವುದಿಲ್ಲ. ಅಳವಿಯನ್ನು ತಿಳಿಸುವ ಅಶ್ಟು, ಇಶ್ಟು, ಮತ್ತು ಎಶ್ಟು ಎಂಬವುಗಳೊಂದಿಗೆ ದೂರದ ತೋರುಪದಗಳನ್ನು ಬಳಸಲು ಬರುವುದಿಲ್ಲವಾದರೂ, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಿದ ಬಳಿಕ ಬಳಸಲು ಬರುತ್ತದೆ. ಎಸಕಪರಿಚೆಯ ಜಾಗದಲ್ಲಿ ಬರುವ ಅಲ್ಲಿ ಎಂಬುದನ್ನೂ ಇವುಗಳ ಪತ್ತುಗೆರೂಪದೊಂದಿಗೆ ಬಳಸಲು ಬರುತ್ತದೆ: (1ಕ) ನಿಮ್ಮನ್ನು ತೆಗಳಲು ಅವನೆಶ್ಟರವನು? (1ಚ) ಅಶ್ಟರಲ್ಲಿ ಹತ್ತಿಪ್ಪತ್ತು ಜನರು ಒಳಗೆ ನುಗ್ಗಿದ್ದರು. ಆದರೆ, ತೋರ್ಕೆಯನ್ನು ತಿಳಿಸುವ ಆ, ಈ, ಮತ್ತು ಯಾವ ಎಂಬವುಗಳೊಂದಿಗೆ ದೂರದ ತೋರುಪದಗಳು ಬಳಕೆಯಾಗುವ ಹಾಗೆ ತೋರುವುದಿಲ್ಲ (*ಆ ಅವನು, *ಈ ಯಾರು, *ಯಾವ ಅವನು). ಅವನ್ನು ತೋರ್ಕೆಯ ಹುರುಳಿಲ್ಲದೆ ಬಳಸಲು ಬಾರದಿರುವುದೇ ಇದಕ್ಕೆ ಕಾರಣವಿರಬಹುದು.

10.2.7 ಪಾಂಗುಗಳ ಅಳವಿಯನ್ನು ತಿಳಿಸುವುದು

ಹೆಸರುಪದಗಳಾಗಿ ಬಳಕೆಯಾಗಬಲ್ಲ ತೋರುಪದಗಳಲ್ಲಿ ಓರೆಣಿಕೆ-ಹಲವೆಣಿಕೆ ವ್ಯತ್ಯಾಸ ಕಾಣಿಸುತ್ತಿದ್ದು (ಅವನು-ಅವರು, ಅದು-ಅವು, ಇದು-ಇವು, ಯಾವುದು-ಯಾವುವು), ಈ ವ್ಯತ್ಯಾಸ ಪಾಂಗುಗಳ ಅಳವಿಯನ್ನು ತುಂಬಾ ಅಡಕವಾಗಿ ತಿಳಿಸುತ್ತದೆ. ಆದರೆ, ಇದಕ್ಕಿಂತ ಹೆಚ್ಚಿನ ವಿವರಗಳನ್ನು

ಕೊಡುವುದಕ್ಕಾಗಿ, ಹೆಸರುಪದಗಳ ಹಾಗೆ, ಅವುಗಳೊಂದಿಗೆ ಎಣಿಕೆಯ ಪದಗಳನ್ನು ಬಳಸಲು ಬರುವುದಿಲ್ಲ: (1ಕ) ಇಬ್ಬರು ಹುಡುಗರು ಹಾಡುತ್ತಿದ್ದಾರೆ. (1ಚ) *ಇಬ್ಬರವರು ಹಾಡುತ್ತಿದ್ದಾರೆ. (1ಕ)ದಲ್ಲಿ ಹುಡುಗರು ಎಂಬ ಹೆಸರುಪದ ಗುರುತಿಸುವ ಪಾಂಗಿನ ಎಣಿಕೆಯನ್ನು ಹೆಚ್ಚು ಕಚಿತವಾಗಿ ತಿಳಿಸಲು ಇಬ್ಬರು ಎಂಬ ಎಣಿಕೆಯ ಪದವನ್ನು ಅದರೊಂದಿಗೆ ಬಳಸಲಾಗಿದೆ; ಆದರೆ, (1ಚ)ದಲ್ಲಿ ಅವರು ಎಂಬ ತೋರುಪದ ಗುರುತಿಸುವ ಪಾಂಗಿನ ಎಣಿಕೆಯನ್ನು ಹೆಚ್ಚು ಕಚಿತವಾಗಿ ತಿಳಿಸಲು ಆ ರೀತಿ ಇಬ್ಬರು ಎಂಬುದನ್ನು ಅದರೊಂದಿಗೆ ಬಳಸಲು ಬರುವುದಿಲ್ಲ. (1) ಇಂತಹ ಎಣಿಕೆಯ ಪದಗಳನ್ನು ಹೆಸರುಪದಗಳ ಬಳಿಕವೂ ಹುಡುಗರಿಬ್ಬರು ಎಂಬುದಾಗಿ ಬಳಸಲು ಬರುತ್ತದೆ, ಮತ್ತು ಇಂತಹ ಬಳಕೆಯಲ್ಲಿ ಅದಕ್ಕೆ ಹುಡುಗರಲ್ಲಿ ಇಬ್ಬರು ಎಂಬ ಹುರುಳು ದೊರಕುತ್ತದೆ. ಈ ಎರಡನೆಯ ಬಗೆಯ ಬಳಕೆಯನ್ನು ತೋರುಪದಗಳೊಂದಿಗೂ ನಡೆಸಲು ಬರುತ್ತದೆ: (1ಕ) ಹುಡುಗರಿಬ್ಬರು ಹಾಡುತ್ತಿದ್ದಾರೆ. (1ಚ) ಅವರಿಬ್ಬರು ಹಾಡುತ್ತಿದ್ದಾರೆ. ಆದರೆ, ಇಂತಹ ಬಳಕೆಯಲ್ಲಿ ತೋರುಪದಗಳು ತಮ್ಮ ತೋರ್ಕೆಯ ಹುರುಳನ್ನು ಕಳೆದುಕೊಳ್ಳುವುದಿಲ್ಲ, ಮತ್ತು ಹೆಸರುಪದಗಳ ಜಾಗದಲ್ಲಿ ಬರಬಲ್ಲ ಎಲ್ಲಾ ಬಗೆಯ ತೋರುಪದಗಳ ಬಳಿಕವೂ ಈ ರೀತಿ ಎಣಿಕೆಯ ಪದಗಳು ಬಳಕೆಯಾಗಬಲ್ಲುವು: (1ಕ) ಇವರು ನಾಲ್ವರು ತುಂಬಾ ಚನ್ನಾಗಿ ಹಾಡುತ್ತಾರೆ. (1ಚ) ಇವಳೊಬ್ಬಳು ಇಲ್ಲೇ ಉಳಿದಿದ್ದಾಳೆ. (1ಟ) ಅವನಿಗೆ ಏನೊಂದೂ ಸಿಗಲಿಲ್ಲ. (1ತ) ಯಾರೋ ಮೂವರು ನಿಮ್ಮನ್ನು ಕಾಣಲು ಬಂದಿದ್ದರು. ಇದಲ್ಲದೆ, ಹೆಸರುಪದಗಳ ಬಳಿಕ ಬರುವ ಎಣಿಕೆ ಪದಗಳ ಹಾಗೆ, ತೋರುಪದಗಳ ಬಳಿಕ ಬರುವ ಎಣಿಕೆಪದಗಳಿಗೆ ಹೆಸರುಪದಗಳು ತಿಳಿಸುವ ಪಾಂಗುಗಳ ಒಂದು ಅಂಗವನ್ನಶ್ಟೇ ಗುರುತಿಸುವ ಹುರುಳು ಸಿಗುವುದಿಲ್ಲ; ಎತ್ತುಗೆಗಾಗಿ, ಹುಡುಗರು ನಾಲ್ವರು ಎಂಬುದಕ್ಕೆ ಹುಡುಗರಲ್ಲಿ ನಾಲ್ವರು ಎಂಬ

ಹುರುಳು ಸಿಗುವ ಹಾಗೆ, ಇವರು ನಾಲ್ವರು ಎಂಬುದಕ್ಕೆ ಇವರಲ್ಲಿ ನಾಲ್ವರು ಎಂಬ ಹುರುಳು ಸಿಗುವುದಿಲ್ಲ. (2) ಹೆಸರುಪದಗಳ ಮೊದಲು ಎಣಿಕೆಪದಗಳ ಪತ್ತುಗೆರೂಪವನ್ನು ಬಳಸಿ, ಇಲ್ಲವೇ ಎಣಿಕೆಪದಕ್ಕೆ ಮೊದಲು ಅನೆ ಒಟ್ಟನ್ನು ಮತ್ತು ಆಮೇಲೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ, ಒಂದು ಪಟ್ಟಿಯಲ್ಲಿ ಇಲ್ಲವೇ ಸಾಲಿನಲ್ಲಿ ಪಾಂಗಿನ ಜಾಗ ಯಾವುದು ಎಂಬುದನ್ನು ತಿಳಿಸಲು ಬರುತ್ತದೆ (6.4.8 ನೋಡಿ): (1ಕ) ಹತ್ತರ ನೋಟು ಹರಿದುಹೋಗಿದೆ. (1ಚ) ಎರಡನೆಯ ತರಗತಿಯಲ್ಲಿ ಹತ್ತು ಮಕ್ಕಳಿದ್ದಾರೆ. ಇಂತಹ ಬಳಕೆಯಲ್ಲಿ ಎಣಿಕೆಪದಗಳು ಪಾಂಗಿನ ಅಳವಿಯನ್ನು ತಿಳಿಸುವ ಬದಲು ಅದರ ಪರಿಚೆಯನ್ನು ತಿಳಿಸುತ್ತವೆ; ಹಾಗಾಗಿ, ಇವುಗಳ ಬಳಿಕ ದೂರದ ತೋರುಪದಗಳನ್ನೂ ಬಳಸಲು ಬರುತ್ತದೆ: (1ಕ) ಎರಡನೆಯವನು ಸರಿಯಾಗಿ ನಿಂತಿಲ್ಲ. (1ಚ) ಹತ್ತರದು ಹರಿದುಹೋಗಿದೆ. (1ಟ) ಏಳನೆಯವರೊಬ್ಬರೂ ಇವತ್ತು ಬರಲಿಲ್ಲ. ಎಣಿಕೆಪದಗಳ ಪತ್ತುಗೆರೂಪದ ಬಳಿಕ ಎಸಕಪರಿಚೆ ಮತ್ತು ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಕೆಲವು ದೂರದವುಗಳನ್ನೂ ಬಳಸಲು ಬರುತ್ತದೆ. ಈ ತೋರುಪದಗಳಲ್ಲಿ ಅಲ್ಲಿ ಎಂಬುದು ಜಾಗವನ್ನು ತಿಳಿಸುವ ಪತ್ತುಗೆ ಒಟ್ಟಾಗಿ ಬಳಕೆಯಾಗುತ್ತದೆ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಮೂರರಲ್ಲಿ ಒಂದು ಕೆಟ್ಟುಹೋಗಿದೆ. (1ಚ) ಮೂವರಲ್ಲಿ ಒಬ್ಬ ಬರಲಿಲ್ಲ. ಅಂದು ಎಂಬುದನ್ನು ಎಣಿಕೆಪದಗಳ ಪತ್ತುಗೆರೂಪದೊಂದಿಗೆ ಬಳಸಿದಾಗ, ಆ ಎಣಿಕೆಪದಗಳು ಅಳವಿಯನ್ನು ತಿಳಿಸುವ ಬದಲು ಪರಿಚೆಯನ್ನು ತಿಳಿಸುತ್ತವೆ; ಹೆಚ್ಚಿನೆಡೆಗಳಲ್ಲೂ ಅವು ಯಾವ ದಿನ ಎಂಬುದಾಗಿ ದಿನದ ತಾರೀಕನ್ನು ತಿಳಿಸುತ್ತವೆ: (1ಕ) ಅಯ್ದರಂದು ನಮ್ಮಲ್ಲಿ ಒಂದು ಪೂಜೆಯಿದೆ. (1ಚ) ಜನವರಿ ಹತ್ತರಂದು ಅವನು ಎಲ್ಲಿಗೂ ಹೋಗುವುದಿಲ್ಲ.

ಆದರೆ, ಬಳಸಿದ ಸಂದರ್ಬವನ್ನನುಸರಿಸಿ ಬೇರೆ ಹುರುಳುಗಳನ್ನೂ ಅದು ದಿನದ ಪರಿಚೆಯಾಗಿ ತಿಳಿಸಬಲ್ಲುದು: (1ಟ) ಅವನು ಬಂದು ಮೂರರಂದು ಇವನೂ ಬಂದ. ಹಾಗೆ ಎಂಬುದನ್ನು ಎಣಿಕೆಪದಗಳ ಪತ್ತುಗೆರೂಪದೊಂದಿಗೆ ಬಳಸಿ ಎರಡು ಹೊಲಬುಗಳ ನಡುವಿನ ಹೋಲಿಕೆಯನ್ನು ತಿಳಿಸಲು ಬರುತ್ತದೆ: (1ಕ) ಒಂದರ ಹಾಗೆ ಇನ್ನೊಂದನ್ನೂ ಮೇಜಿನ ಕೆಳಗೆ ಇರಿಸಿ. (1ಚ) ಇಬ್ಬರ ಹಾಗೆ ಮತ್ತೊಬ್ಬರೂ ಬಾವಿಗೆ ಇಳಿದರು. ಹೆಸರುಪರಿಚೆಗಳಲ್ಲಿ ಅಶ್ಟು ಎಂಬುದನ್ನೂ ಎಣಿಕೆಪದಗಳ ಪತ್ತುಗೆರೂಪದ ಬಳಿಕ ಬಳಸಲು ಬರುತ್ತದೆ: (1ಕ) ನೂರರಶ್ಟು ಮಂದಿ ಇವತ್ತಿನ ಕೂಟಕ್ಕೆ ಬರಬಹುದು. (1ಚ) ಅಯ್ವತ್ತರಶ್ಟು ಆಡುಗಳು ಸತ್ತುಹೋಗಿವೆ. ಆದರೆ, ಈ ಎಲ್ಲಾ ಬಳಕೆಗಳಲ್ಲೂ ದೂರದ ತೋರುಪದಗಳಿಗೆ ತೋರ್ಕೆಯ ಹುರುಳಿಲ್ಲ ಎಂಬುದನ್ನು ಗಮನಿಸಬಹುದು.

10.2.8 ಪಾಂಗುಗಳನ್ನು ನೆಲೆಗೊಳಿಸುವುದು

ಹೆಸರುಪದಗಳು ತಾವಾಗಿಯೇ ಪಾಂಗುಗಳನ್ನು ನೆಲೆಗೊಳಿಸಲಾರವು; ಹಾಗಾಗಿ ಅವುಗಳೊಂದಿಗೆ ಹಲವು ಬಗೆಯ ನುಡಿತಗಳನ್ನು ಬಳಸಿ ಈ ಕೆಲಸವನ್ನು ನಡೆಸಬೇಕಾಗುತ್ತದೆ (6.5 ನೋಡಿ). ಇದಕ್ಕೆ ಬದಲು, ತೋರುಪದಗಳು ಅವುಗಳ ಮೊದಲನೆಯ ಅಂಗದ ನೆರವಿನಿಂದ ಪಾಂಗುಗಳನ್ನು ನೆಲೆಗೊಳಿಸಬಲ್ಲುವು; ಹಾಗಾಗಿ, ಅವುಗಳೊಂದಿಗೆ ನೆಲೆಗೊಳಿಸುವ ನುಡಿತಗಳನ್ನು ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಆ, ಈ, ಮತ್ತು ಯಾವ ಎಂಬ ತೋರ್ಕೆಯ ತೋರುಪದಗಳನ್ನು ಹೆಸರುಪದಗಳೊಂದಿಗೆ ಅವು ಗುರುತಿಸುವ ಪಾಂಗುಗಳನ್ನು ನೆಲೆಗೊಳಿಸುವುದಕ್ಕಾಗಿ ಬಳಸಲಾಗುತ್ತದೆ; ಆದರೆ, ಈ ತೋರ್ಕೆಯ ತೋರುಪದಗಳು ನಡೆಸುವ ಕೆಲಸವನ್ನೇ ಬೇರೆ ತೋರುಪದಗಳ ಮೊದಲನೆಯ ಅಂಗ ನಡೆಸುತ್ತದೆ; ಹಾಗಾಗಿ, ಈ ತೋರ್ಕೆಯ ತೋರುಪದಗಳನ್ನು ತೋರುಪದಗಳೊಂದಿಗೆ ಬಳಸಲು ಬರುವುದಿಲ್ಲ.

(1ಕ) ಈ ಮನೆಯನ್ನು ಬಾಡಿಗೆಗೆ ಕೊಡಬೇಕೆಂದಿದ್ದಾರೆ. (1ಚ) *ಈ ಇವನು ಯಾರೆಂದು ನಿಮಗೆ ಗೊತ್ತಿದೆಯೇ? (2ಕ) ಯಾವ ಮರವನ್ನು ಅವರು ಕಡಿಯಬೇಕೆಂದಿದ್ದಾರೆ? (2ಚ) *ಯಾವ ಯಾರನ್ನು ಅವರು ಕರೆದಿದ್ದಾರೆ? ಈ ಕಟ್ಟಲೆಗೆ ಹೊರಪಡಿಕೆಯಾಗಿ, ಪಾಂಗುಗಳನ್ನು ನೆಲೆಗೊಳಿಸುವಲ್ಲಿ ಬಳಕೆಯಾಗುವ ಕೆಲವು ನುಡಿತಗಳನ್ನು ತೋರುಪದಗಳೊಂದಿಗೆ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಗಳಲ್ಲಿ ತೋರುಪದಗಳಿಗೆ ಪಾಂಗುಗಳನ್ನು ನೆಲೆಗೊಳಿಸುವ ಕೆಲಸವಿರುವುದಿಲ್ಲ: (1) ಹೆಸರುಪದಗಳ ಪತ್ತುಗೆ ರೂಪಗಳನ್ನು ಬಳಸಿ ಹೆಸರುಪದಗಳು ಗುರುತಿಸುವ ಪಾಂಗನ್ನು ನೆಲೆಗೊಳಿಸಲು ಬರುತ್ತದೆ, ಮತ್ತು ದೂರದ ತೋರುಪದಗಳೊಂದಿಗೂ ಆ ರೀತಿ ಹೆಸರುಪದಗಳ ಪತ್ತುಗೆರೂಪಗಳನ್ನು ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಯಲ್ಲಿ ಈ ದೂರದ ತೋರುಪದಗಳಿಗೆ ತೋರ್ಕೆಯ ಹುರುಳಿಲ್ಲ: (1ಕ) ಈ ಊರಿನ ಜನರು ತಮ್ಮೊಳಗೆ ಜಗಳಾಡುವುದಿಲ್ಲ. (1ಚ) ಈ ಊರಿನವರು ತಮ್ಮೊಳಗೆ ಜಗಳಾಡುವುದಿಲ್ಲ. ಅವರು ಎಂಬ ದೂರದ ತೋರುಪದವನ್ನು (1ಚ)ದಲ್ಲಿ ಹೆಸರುಪದದ ಪತ್ತುಗೆರೂಪದೊಂದಿಗೆ ಬಳಸಲಾಗಿದೆ; ಆದರೆ, ಇಲ್ಲಿ ಅವರು ಎಂಬುದಕ್ಕೆ ತೋರ್ಕೆಯ ಹುರುಳಿಲ್ಲ ಎಂಬುದನ್ನು ಗಮನಿಸಬಹುದು. ಹೆಸರುಪದಗಳ ಜಾಗದಲ್ಲಿ ಬರುವ ಎಲ್ಲಾ ದೂರದ ತೋರುಪದಗಳೂ ಈ ರೀತಿ ಹೆಸರುಪದಗಳ ಪತ್ತುಗೆರೂಪದೊಂದಿಗೆ ಬರಬಲ್ಲುವು; ಆದರೆ, ಈ ಎಲ್ಲಾ ಬಳಕೆಗಳಲ್ಲೂ ಅವಕ್ಕೆ ಪಾಂಗಿನ ಗುರ್ತ ಮತ್ತು ಎಣಿಕೆಗಳನ್ನು ತಿಳಿಸುವ ಹುರುಳು ಮಾತ್ರ ಇರುತ್ತದೆ: (1ಕ) ಈ ಊರಿನವಳು ಪೋಟಿಯಲ್ಲಿ ಗೆದ್ದಿದ್ದಾಳೆ. (1ಚ) ಈ ಪೆಟ್ಟಿಗೆಯದನ್ನು ದೂರ ಇರಿಸಬೇಕು. (1ಟ) ಹಾಲಿನವನು ಇವತ್ತು ಬೇಗ ಬಂದಿದ್ದಾನೆ. (2) ಎಸಕಪದಗಳ ಪರಿಚೆರೂಪವನ್ನು ಬಳಸಿಯೂ ಹೆಸರುಪದಗಳನ್ನು ನೆಲೆಗೊಳಿಸಲು ಬರುತ್ತದೆ, ಮತ್ತು ಇಂತಹ ರೂಪಗಳ ಬಳಿಕವೂ ಹೆಸರುಪದಗಳ ಜಾಗದಲ್ಲಿ ಬರುವ ಅಯ್ದು ದೂರದ ತೋರುಪದಗಳು ಬಳಕೆಯಾಗಬಲ್ಲುವು. ಇದಲ್ಲದೆ, ಎಸಕಪರಿಚೆ ಮತ್ತು ಹೆಸರುಪರಿಚೆಗಳ

ಜಾಗದಲ್ಲಿ ಬರಬಲ್ಲ ಬೇರೆ ಕೆಲವು ದೂರದ ತೋರುಪದಗಳೂ ಇಂತಹ ರೂಪಗಳ ಬಳಿಕ ಬರಬಲ್ಲುವು. ಇವುಗಳ ಬಳಕೆಯನ್ನು ಮೇಲೆಯೇ (10.2.3)ರಲ್ಲಿ ವಿವರಿಸಲಾಗಿದೆ; ಈ ಎಲ್ಲಾ ಬಳಕೆಗಳಲ್ಲೂ ದೂರದ ತೋರುಪದಗಳು ಅವುಗಳ ತೋರ್ಕೆಯ ಹುರುಳನ್ನು ಕಳೆದುಕೊಳ್ಳುತ್ತವೆ.

10.2.9 ನೇರವಲ್ಲದ ಹೊಲಬಿನ ಬಳಕೆ

ತೋರುಪದಗಳು ಮುಕ್ಯವಾಗಿ ತೋರ್ಕೆಯ ಮೂಲಕ ಪಾಂಗುಗಳನ್ನು ಗುರುತಿಸುವ ಇಲ್ಲವೇ ತಿಳಿಸುವ ಕೆಲಸವನ್ನು ನಡೆಸಬೇಕಾಗಿದೆ; ಹಾಗಾಗಿ, ಆ ಪಾಂಗುಗಳು ಎಂತಹವು ಎಂಬುದನ್ನು ಅವು ತುಂಬಾ ಅಡಕವಾಗಿ ತಿಳಿಸಿದರೆ ಸಾಕಾಗುತ್ತದೆ; ಮೇಲೆ ವಿವರಿಸಿದ ಹಾಗೆ, ಅವುಗಳ ಎರಡನೆಯ ಅಂಗವೇ ಈ ರೀತಿ ಅವು ಗುರುತಿಸಬೇಕಾಗಿರುವ ಪಾಂಗುಗಳು ಎಂತಹವು ಎಂಬುದನ್ನು ಅಡಕವಾಗಿ ತಿಳಿಸುತ್ತವೆ. ಹಾಗಾಗಿ, ತೋರ್ಕೆಯ ಹುರುಳಿರುವ ತೋರುಪದಗಳೊಂದಿಗೆ ಅವು ತಿಳಿಸುವ ಪಾಂಗುಗಳ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಬಲ್ಲ ಪರಿಚೆಪದ, ಹೆಸರುಪದ ಇಲ್ಲವೇ ಎಸಕಪದದ ಪತ್ತುಗೆರೂಪ ಮೊದಲಾದುವನ್ನು ಬಳಸದಿರಲಾಗುತ್ತದೆ. ತೋರ್ಕೆಯನ್ನು ಮಾತ್ರವೇ ತಿಳಿಸಬಲ್ಲ ಆ, ಈ ಮತ್ತು ಯಾವ ಎಂಬ ತೋರುಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ: ಅವನ್ನು ಎಲ್ಲಾ ಬಗೆಯ ಹೆಸರುಕಂತೆಗಳಲ್ಲೂ ಬಳಸಲು ಬರುತ್ತದೆ, ಮತ್ತು ಇಂತಹ ಬಳಕೆಯ ಮೂಲಕ ಪಾಂಗುಗಳ ಕುರಿತಾಗಿ ಸಾಕಶ್ಟು ಹೆಚ್ಚಿನ ತಿಳಿವನ್ನೂ ಕೊಡಲು ಬರುತ್ತದೆ. ಆದರೆ, ಇಂತಹ ಹೆಸರುಕಂತೆಗಳಲ್ಲಿ ಆ, ಈ, ಮತ್ತು ಯಾವ ಎಂಬ ತೋರುಪದಗಳು ಮೊದಲಿಗೆ ಬರುತ್ತವೆ, ಮತ್ತು ಆ ಹೆಸರುಕಂತೆಗಳು ಗುರುತಿಸಬೇಕಾಗಿರುವ ಪಾಂಗನ್ನು ನೆಲೆಗೊಳಿಸುವಲ್ಲಿ ಅವು ನೆರವು ನೀಡುತ್ತವೆ: (1ಕ) ಆ ಹುಡುಗ ನಮ್ಮ ನೆರೆಮನೆಯಲ್ಲಿರುತ್ತಾನೆ. (1ಚ) ಆ ದೊಡ್ಡ ಹುಡುಗ ನಮ್ಮ ನೆರೆಮನೆಯಲ್ಲಿರುತ್ತಾನೆ. (1ಟ) ಆ ಇಬ್ಬರು ಮೂರನೇ ತರಗತಿಯ ಹುಡುಗರು ನಮ್ಮ ನೆರೆಮನೆಯಲ್ಲಿರುತ್ತಾರೆ. (1ತ) ಆ ತರಗತಿಯಲ್ಲಿ ಮೊದಲು ಬಂದ ಹುಡುಗ ನಮ್ಮ ನೆರೆಮೆನೆಯಲ್ಲಿರುತ್ತಾನೆ. (1ಕ)ದಲ್ಲಿ ಆ ಎಂಬ ತೋರ್ಕೆಯ ತೋರುಪದವನ್ನು ಹುಡುಗ ಎಂಬ ಹೆಸರುಪದದೊಂದಿಗೆ ಬಳಸಲಾಗಿದೆ; ಇದಕ್ಕೆ ಬದಲು, (1ಚ-ತ)ಗಳಲ್ಲಿ ಅದನ್ನು ಹುಡುಗನ ಕುರಿತು ಸಾಕಶ್ಟು ತಿಳಿವನ್ನು ಕೊಡಬಲ್ಲ ಹೆಸರುಕಂತೆಗಳೊಂದಿಗೆ ಬಳಸಲಾಗಿದೆ.

ಎಲ್ಲಾ ತೋರುಪದಗಳಲ್ಲಿಯೂ ಎರಡೆರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಅವುಗಳ ಕೆಲಸವನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅವುಗಳ ಹರವನ್ನು ತಿಳಿಸುತ್ತದೆ; ಆ, ಈ, ಮತ್ತು ಯಾವ ಎಂಬ ಮೂರು ತೋರುಪದಗಳು ಮಾತ್ರ ಈ ಕಟ್ಟುಪಾಡಿಗೆ ಹೊರಪಡಿಕೆಗಳಾಗಿವೆ, ಅವುಗಳಲ್ಲಿ ಒಂದೇ ಒಂದು ಅಂಗವಿದ್ದು, ಅದು ಅವುಗಳ ಕೆಲಸವನ್ನು ಮಾತ್ರ ತಿಳಿಸಬಲ್ಲುದು; ಹಾಗಾಗಿ, ಅವುಗಳ ಬಳಿಕ ಬರುವ ಈ ಹೆಸರುಕಂತೆಗಳು ಅವುಗಳ ಹರವನ್ನು ತಿಳಿಸುವ ಎರಡನೆಯ ಅಂಗದ ಕೆಲಸವನ್ನು ನಡೆಸುತ್ತವೆ. ತೋರ್ಕೆಯ ಹುರುಳಿನಲ್ಲಿ ಬಳಕೆಯಾಗುವ ಉಳಿದ ತೋರುಪದಗಳ ಹರವನ್ನು ಅವುಗಳ ಎರಡನೇ ಅಂಗವೇ ತಿಳಿಸುತ್ತಿದೆಯಾದರೂ, ಕೆಲವು ಕಡೆಗಳಲ್ಲಿ ಅದರ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಬೇಕಾಗುತ್ತದೆ; ಆದರೆ, ಇಂತಹ ಕಡೆಗಳಲ್ಲಿ ಆ ರೀತಿ ಹೆಚ್ಚಿನ ತಿಳಿವನ್ನು ಕೊಡಬಲ್ಲ ನುಡಿತಗಳನ್ನು ನೇರವಾಗಿ ಈ ತೋರುಪದಗಳೊಂದಿಗೆ ಒಂದೇ ಹೆಸರುಕಂತೆಯಲ್ಲಿ ಬಳಸುವ ಬದಲು, ಅವೆರಡನ್ನೂ ಬೇರೆ ಬೇರೆ ಹೆಸರುಕಂತೆಗಳಾಗಿ ಮಾಡಿ ಬಳಸಲಾಗುತ್ತದೆ: (1ಕ) ಇವನು, ಮೂರನೇ ತರಗತಿಯ ಹುಡುಗ, ನಿನ್ನೆ ಶಾಲೆಗೆ ಬಂದಿರಲಿಲ್ಲ. (1ಚ) ಇಲ್ಲಿ, ಬಸ್ಸಿನ ಒಳಗೆ, ಹೊಗೆಬತ್ತಿ ಸೇದಬಾರದು. (1ಟ) ಈಗ, ಎರಡೇ ಎರಡು ಮಿನಿಟಿನಲ್ಲಿ, ಆತ ಕೊಂಬೆಯಿಂದ ಕೆಳಗೆ ಜಿಗಿಯಲಿದ್ದಾನೆ. ಇಂತಹ ಬಳಕೆಯಲ್ಲಿ ಪತ್ತುಗೆ ಒಟ್ಟುಗಳನ್ನು ಈ ಎರಡು ಬಗೆಯ ನುಡಿತಗಳಿಗೆ ಬೇರೆ ಬೇರಾಗಿ ಸೇರಿಸಬೇಕಾಗುತ್ತದೆ ಎಂಬುದರಿಂದ ಅವು ಬೇರೆ ಬೇರೆ ಹೆಸರುಕಂತೆಗಳಾಗಿ ಬರುತ್ತವೆಯೆಂಬುದು ಗೊತ್ತಾಗುತ್ತದೆ: (1ತ) ಇವರನ್ನು, ಮೂರನೇ ತರಗತಿಯ ಹುಡುಗರನ್ನು, ತೋಟದ ಕೆಲಸಕ್ಕೆ ಕಳುಹಿಸುತ್ತೇನೆ. ಹೆಸರುಪದಗಳೊಂದಿಗೆ ಬಳಕೆಯಾಗಿರುವ ಆ ಮತ್ತು ಈ ಎಂಬ ತೋರ್ಕೆಯ ತೋರುಪದಗಳನ್ನು ಬಳಸಿರುವ ಹೆಸರುಕಂತೆಗಳ ಬಳಿಕವೂ ಇಂತಹ ನುಡಿತಗಳನ್ನು ಬಳಸಲು ಬರುತ್ತದೆ: (1ಕ) ಆ ಹುಡುಗ, ನನ್ನ ಅಣ್ಣನ ಮಗ, ಇಲ್ಲೇ ಓದುತ್ತಿದ್ದಾನೆ. (1ಚ) ಈ ಪುಸ್ತಕ, ನೀವು ಕೊಟ್ಟಿದ್ದು, ತುಂಬಾ ಚನ್ನಾಗಿದೆ.

10.2.10 ಊ, ಓ, ಮತ್ತು ಏ ಒಟ್ಟುಗಳೊಂದಿಗೆ ಬಳಕೆ

ಕೂಡಿಕೆಯ ಊ, ಆಯ್ಕೆಯ ಓ, ಮತ್ತು ಒತ್ತುಕೊಡುವ ಏ ಎಂಬ ಮೂರು ಬಗೆಯ ಒಟ್ಟುಗಳನ್ನೂ ತೋರುಪದಗಳೊಂದಿಗೆ ಬಳಸಲು ಬರುತ್ತದೆ. ತಿಳಿದ ತೋರುಪದಗಳೊಂದಿಗೆ ಬಳಕೆಯಾದಾಗ ಇವು ಕೂಡಿಕೆ, ಆಯ್ಕೆ, ಮತ್ತು ಒತ್ತುಕೊಡುವಿಕೆಗಳೆಂಬ ಅವುಗಳ ನೇರವಾದ ಹುರುಳನ್ನೇ ಕೊಡುತ್ತವೆ: (1ಕ) ಆಟಕ್ಕೆ ಇವನನ್ನೂ ಸೇರಿಸಿಕೊಳ್ಳಬೇಕು. (1ಚ) ಅವನೋ ಅವಳೋ ಬರಬಹುದು. (1ಟ) ಅವನೇ ಬರಲಿ. (1ಕ) ಸೊಲ್ಲಿನಲ್ಲಿ ಬಂದಿರುವ ಇವನನ್ನೂ ಎಂಬುದಕ್ಕೆ ಉಳಿದವರೊಂದಿಗೆ ಈತನನ್ನೂ ಸೇರಿಸಿಕೊಳ್ಳಬೇಕೆಂಬ ಕೂಡಿಕೆಯ ಹುರುಳಿದೆ; (1ಚ)ದಲ್ಲಿ ಬಂದಿರುವ ಅವನೋ ಅವಳೋ ಎಂಬುದಕ್ಕೆ ಅವನು ಇಲ್ಲವೇ ಅವಳು ಎಂಬುದಾಗಿ ಆಯ್ಕೆಯ ಹುರುಳಿದೆ; ಮತ್ತು (1ಟ)ದಲ್ಲಿ ಬಂದಿರುವ ಅವನೇ ಎಂಬುದಕ್ಕೆ ಅವನಲ್ಲದೆ ಬೇರೊಬ್ಬರಲ್ಲ ಎಂಬುದಾಗಿ ಒತ್ತಿಹೇಳುವ ಹುರುಳಿದೆ. ಆದರೆ, ತಿಳಿಯದ ತೋರುಪದಗಳೊಂದಿಗೆ ಬಂದಾಗ ಅವಕ್ಕೆ ಬೇರೆಯೇ ಹುರುಳುಗಳು ದೊರಕುತ್ತವೆ; ಅವಕ್ಕೆ ಕೂಡಿಕೆಯ ಊ ಒಟ್ಟನ್ನು ಸೇರಿಸಿದಾಗ ಎಲ್ಲವನ್ನೂ ಒಳಗೊಳ್ಳುವ, ಮತ್ತು ಪಾಂಗಿನ ಇರುವಿಕೆಯನ್ನು ತಿಳಿಸದಿರುವ ಹುರುಳು ದೊರಕುತ್ತದೆ: (1ಕ) ಆತನನ್ನು ಯಾರೂ ಸೋಲಿಸಬಲ್ಲರು. (1ಚ) ಇದನ್ನು ಹೇಗೂ ತಿರುಗಿಸಬಹುದು. (1ಕ)ದಲ್ಲಿ ಬಂದಿರುವ ಯಾರೂ ಎಂಬುದು ಎಲ್ಲರನ್ನೂ ಒಳಗೊಂಡಿದೆಯಾದರೂ ಅವರಲ್ಲಿ ಯಾರನ್ನೂ ಎತ್ತಿಹೇಳಿಲ್ಲ. ಇದೇ ರೀತಿಯಲ್ಲಿ, (1ಚ)ದಲ್ಲಿ ಬಂದಿರುವ ಹೇಗೂ ಎಂಬುದು ಎಲ್ಲಾ ಬಗೆಯ ತಿರುಗಿಸುವಿಕೆಗಳನ್ನೂ ಒಳಗೊಂಡಿದೆ, ಆದರೆ, ಅವುಗಳಲ್ಲಿ ಯಾವುದನ್ನು ಎತ್ತಿಹೇಳಿಲ್ಲ. ತಿಳಿಯದ ತೋರುಪದಗಳಿಗೆ ಆಯ್ಕೆಯ ಓ ಒಟ್ಟನ್ನು ಸೇರಿಸಿದಾಗ ಅದು ತಿಳಿಯದ ಒಂದು ಪಾಂಗಿನ ಇರುವಿಕೆಯನ್ನು ತಿಳಿಸುತ್ತದೆ; ತಿಳಿದ ತೋರುಪದಗಳಲ್ಲಿ ಕಾಣಿಸುವ ಹಾಗೆ ಎರಡು ಪದಗಳ ನಡುವಿನ ಕೊಂಡಿಯಾಗಿ ಅದು ಇಲ್ಲಿ ಬಳಕೆಯಾಗುವುದಿಲ್ಲ: (1ಕ) ರಾಜುವಿಗೆ ಏನೋ ಸಿಕ್ಕಿದೆ.

(1ಚ) ಅವರು ಎಲ್ಲಿಗೋ ಹೋಗಿದ್ದಾರೆ. (1ಕ) ಸೊಲ್ಲು ಸಿಕ್ಕಿರುವುದು ಏನೋ ಇದೆ ಎಂಬುದನ್ನು ತಿಳಿಸುತ್ತದಲ್ಲದೆ, ಅದು ಏನು ಎಂಬುದನ್ನು ತಿಳಿಸುವುದಿಲ್ಲ; ಅದು ಆಡುಗನಿಗೆ ತಿಳಿಯದು ಎಂಬ ಹುರುಳು ಇಲ್ಲಿ ಬರುತ್ತದೆ; (1ಚ)ದಲ್ಲೂ ಹೀಗೆಯೇ. ಒತ್ತುಕೊಡುವ ಏ ಒಟ್ಟನ್ನು ತಿಳಿಯದ ತೋರುಪದಗಳೊಂದಿಗೆ ಬಳಸಿದಾಗ, ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡುವ ಹುರುಳು ಸಿಗುತ್ತದೆ: (1ಕ) ನೀವು ಯಾರನ್ನೇ ಕರೆಯಿರಿ, ನಾನು ಅವನೊಂದಿಗೆ ಮಾತನಾಡುತ್ತೇನೆ. (1ಚ) ನೀವು ಅದನ್ನು ಎಲ್ಲೇ ಇರಿಸಿ, ನಾನು ಹುಡುಕಿ ತೆಗೆಯುತ್ತೇನೆ. ಯಾರನ್ನು ಕರೆಯಬೇಕು ಎಂಬುದನ್ನು (1ಕ)ದಲ್ಲಿ, ಮತ್ತು ಎಲ್ಲಿ ಇರಿಸಬೇಕು ಎಂಬುದನ್ನು (1ಚ)ದಲ್ಲಿ ಕೇಳುಗನಿಗೆ ಬಿಟ್ಟುಕೊಡಲಾಗಿದೆ ಎಂಬುದನ್ನು ಗಮನಿಸಬಹುದು. ತಿಳಿಯದ ತೋರುಪದಗಳೊಂದಿಗೆ ಬಳಕೆಯಾದಾಗ ಈ ಒಟ್ಟುಗಳಿಗೆ ಬರುವ ಈ ಹೆಚ್ಚಿನ ಹುರುಳುಗಳ ಕುರಿತಾಗಿ ಇನ್ನಶ್ಟು ವಿವರಗಳನ್ನು ಮುಂದೆ (10.6.1)ರಲ್ಲಿ ಕೊಡಲಾಗುವುದು.

10.2.11 ತೋರುಪದಗಳ ಬಳಕೆಯಲ್ಲಿ ಹೊಂದಾಣಿಕೆಗಳು

ಒಂದು ಸೊಲ್ಲಿನ ಆಗುಗ ಪಾಂಗು, ಇರುಗ ಪಾಂಗು, ಇಲ್ಲವೇ ಮಾಡುಗ ಪಾಂಗನ್ನು ಒಂದು ತೋರುಪದ ಗುರುತಿಸುತ್ತಿದೆಯಾದರೆ, ಆ ಸೊಲ್ಲಿನ ಎಸಕಪದ ಇಲ್ಲವೇ ಇರುಹಪದವನ್ನು ಆ ತೋರುಪದದೊಂದಿಗೆ ಹೊಂದಾಣಿಕೆಯಾಗುವಂತಹ ಪದರೂಪದಲ್ಲಿ ಬಳಸಬೇಕಾಗುತ್ತದೆ: (1ಕ) ಅವಳು ನನಗೆ ಹೆದರಿದಳು. (1ಚ) ಅವನು ಮನೆಗೆ ಹೋಗಿದ್ದಾನೆ. (1ಟ) ಅವರು ಊರಲ್ಲೇ ಇದ್ದಾರೆ. (1ತ) ನಿಮ್ಮಲ್ಲಿಗೆ ಯಾರು ಬಂದಿದ್ದಾರೆ? (1ಕ-ಟ)ಗಳಲ್ಲಿ ಬಂದಿರುವ ತೋರುಪದಗಳು ಆಗುಗ, ಮಾಡುಗ, ಮತ್ತು ಇರುಗ ಪಾಂಗುಗಳನ್ನು ಗುರುತಿಸುತ್ತಿದ್ದು, ಅವುಗಳ ಎಸಕಪದಗಳು ಆ ತೋರುಪದಗಳಿಗೆ ಹೊಂದಿಕೆಯಾಗುವಂತಹ ಗುರ್ತ ಮತ್ತು ಎಣಿಕೆಯ ರೂಪಗಳಲ್ಲಿ ಬಂದಿವೆ; (1ತ)ದಲ್ಲಿ ಬಂದಿರುವ ಯಾರು ಎಂಬ ತಿಳಿಯದ ತೋರುಪದವೂ ಮಾಡುಗ ಪಾಂಗನ್ನು ಗುರುತಿಸುತ್ತಿದ್ದು, ಇಂತಹದೇ ಹೊಂದಾಣಿಕೆಯನ್ನು ತೋರಿಸುತ್ತದೆ.

ಇಂತಹ ಎಸಕಪದಗಳ ಪದರೂಪಗಳೊಂದಿಗಿನ ಹೊಂದಾಣಿಕೆಯಲ್ಲಿ ತೋರುಪದಗಳು ಹೆಸರುಪದಗಳನ್ನು ಹೋಲುತ್ತವೆ; ಆದರೆ, ಬೇರೆಯೂ ಎರಡು ಬಗೆಯ ಹೊಂದಾಣಿಕೆಗಳನ್ನು ತೋರುಪದಗಳು ತೋರಿಸುತ್ತಿದ್ದು, ಈ ವಿಶಯದಲ್ಲಿ ಅವು ಹೆಸರುಪದಗಳಿಂದ ಬೇರಾಗಿವೆ. (ಕ) ಪಾಂಗುತೋರ್ಕೆಯಲ್ಲಿ ಹೊಂದಾಣಿಕೆ: ತಿಳಿದ ತೋರುಪದಗಳು ಪಾಂಗುತೋರ್ಕೆಯಲ್ಲಿ ಬಳಕೆಯಾದಾಗ, ಅವಕ್ಕೂ ಅವುಗಳ ಹಿನ್ನುಡಿತಕ್ಕೂ ನಡುವೆ ಹೊಂದಾಣಿಕೆ ಬೇಕಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಪುಸ್ತಕ ಹರಿದುಹೋಗಿದೆ; ಅದನ್ನು ಬೇರೆ ಇರಿಸಬೇಕು. (1ಚ) ಈ ಪುಸ್ತಕಗಳು ಹರಿದುಹೋಗಿವೆ; ಅವನ್ನು ಬೇರೆ ಇರಿಸಬೇಕು. (2ಕ) ರಾಜು ಜಾನಕಿಯನ್ನು ಅವನ ಮನೆಗೆ ಕರೆದುಕೊಂಡು ಹೋದ. (2ಚ) ರಾಜು ಜಾನಕಿಯನ್ನು ಅವಳ ಮನೆಗೆ ಕರೆದುಕೊಂಡು ಹೋದ. (1ಕ) ಸೊಲ್ಲಿನಲ್ಲಿ ಪುಸ್ತಕ ಎಂಬ ಹಿನ್ನುಡಿತ ಓರೆಣಿಕೆಯಲ್ಲಿ ಬಂದಿದ್ದು, ಅದನ್ನು ತಿಳಿಸುವ ಅದನ್ನು ಎಂಬ ತೋರುಪದವೂ ಓರೆಣಿಕೆಯಲ್ಲಿ ಬಂದಿದೆ, ಮತ್ತು ಅವೆರಡೂ ಉಳಿಕೆಗುರ್ತದಲ್ಲಿವೆ; ಇದಕ್ಕೆ ಬದಲು, (1ಚ) ಸೊಲ್ಲಿನಲ್ಲಿ ಪುಸ್ತಕಗಳು ಎಂಬ ಹಲವೆಣಿಕೆಯ ಹಿನ್ನುಡಿತ ಬಂದಿದ್ದು, ಅದನ್ನು ತಿಳಿಸುವ ಅವನ್ನು ಎಂಬ ತೋರುಪದವೂ ಹಲವೆಣಿಕೆಯಲ್ಲಿ ಬಂದಿದೆ. (2ಕ)ದಲ್ಲಿ ಅವನ ಎಂಬುದು ರಾಜು ಎಂಬ ಪದದೊಂದಿಗೆ, ಮತ್ತು (2ಚ)ದಲ್ಲಿ ಅವಳು ಎಂಬುದು ಜಾನಕಿ ಎಂಬ ಪದದೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತಿವೆ. ಈ ಹೊಂದಾಣಿಕೆ ಎಸಕಪದಗಳೊಂದಿಗಿನ ಹೊಂದಾಣಿಕೆಗಿಂತ ಕೆಲವು ವಿಶಯಗಳಲ್ಲಿ ಬೇರಾಗಿದೆ: (1) ಎಸಕಪದಗಳೊಂದಿಗಿನ ಹೊಂದಾಣಿಕೆ ಒಂದು ಸೊಲ್ಲಿನಲ್ಲಿ ಬರುವ ಎಸಕಪದಕ್ಕೂ ಅದರ ಪಾಂಗುಗಳಿಗೂ ನಡುವೆ ಮಾತ್ರ ಕಾಣಿಸಿಕೊಳ್ಳುತ್ತದೆ; ಇದಕ್ಕೆ ಬದಲು, ಹಿನ್ನುಡಿತದೊಂದಿಗಿನ ಹೊಂದಾಣಿಕೆ ತೋರುಪದ ಮತ್ತು ಹಿನ್ನುಡಿತಗಳು ಬೇರೆ ಬೇರೆ ಸೊಲ್ಲುಗಳಲ್ಲಿರುವಾಗಲೂ ಕಾಣಿಸಿಕೊಳ್ಳುತ್ತದೆ. ಇದನ್ನು ಮೇಲೆ ಕೊಟ್ಟಿರುವ (1-2) ಸೊಲ್ಲುಗಳಲ್ಲಿ ಕಾಣಬಹುದು. ಇದಲ್ಲದೆ, ಹಿನ್ನುಡಿತ ಮತ್ತು ತೋರುಪದಗಳು ಒಂದೇ ಸೊಲ್ಲಿನಲ್ಲಿ ಬಂದಿರುವಾಗಲೂ ಅವುಗಳ ನಡುವೆ ಹೊಂದಾಣಿಕೆ ಬೇಕಾಗುತ್ತದೆ; ಆದರೆ, ಅವುಗಳಲ್ಲಿ ತೋರುಪದ ಮತ್ತು ಹಿನ್ನುಡಿತಗಳೆರಡೂ ಒಂದೇ ಸೊಲ್ಲಿನ ಪಾಂಗುಗಳಾಗಿ ಬರುವುದಿಲ್ಲ; ತೋರುಪದ ಹೊರಸೊಲ್ಲಿನ ಪಾಂಗಾಗಿ ಬಂದರೆ, ಅದರ ಹಿನ್ನುಡಿತ ಒಳಸೊಲ್ಲಿನಲ್ಲಿ ಬರುತ್ತದೆ, ಮತ್ತು ಹಿನ್ನುಡಿತ ಹೊರಸೊಲ್ಲಿನ

ಪಾಂಗಾಗಿ ಬಂದರೆ, ತೋರುಪದ ಒಳಸೊಲ್ಲಿನಲ್ಲಿ (ಇಲ್ಲವೇ ಹೊರಸೊಲ್ಲಿನಲ್ಲಿ) ಪತ್ತುಗೆ ರೂಪದಲ್ಲಿ ಬರುತ್ತದೆ: (1ಕ) ರಾಜು ಜಾನಕಿಗೆ ಕೊಟ್ಟ ಪುಸ್ತಕವನ್ನು ಅವಳು ಹರಿದುಹಾಕಿದ್ದಾಳೆ. (1ಚ) ಅವನ ಅಣ್ಣನಿಗೆ ಕೊಟ್ಟ ಪುಸ್ತಕವನ್ನು ರಾಜು ಹರಿದಿದ್ದಾನೆ. (1ಕ) ಸೊಲ್ಲಿನಲ್ಲಿ ಅವಳು ಎಂಬ ತೋರುಪದ ಹೊರಸೊಲ್ಲಿನಲ್ಲಿ ಬಂದಿದೆ, ಮತ್ತು ಅದರ ಹಿನ್ನುಡಿತ (ಜಾನಕಿಗೆ) ಒಳಸೊಲ್ಲಿನ ಗುರಿ ಪಾಂಗಾಗಿ ಬಂದಿದೆ; ಇದಕ್ಕೆ ಬದಲು, (1ಚ) ಸೊಲ್ಲಿನಲ್ಲಿ ಹಿನ್ನುಡಿತ (ರಾಜು) ಹೊರಸೊಲ್ಲಿನ ಒಂದು ಪಾಂಗಾಗಿ ಬಂದಿದೆ; ಆದರೆ, ಅವನ ಎಂಬ ತೋರುಪದ ಪತ್ತುಗೆ ರೂಪದಲ್ಲಿ ಬಂದಿದೆ. (2) ಎಸಕಪದಗಳೊಂದಿಗಿನ ಹೊಂದಾಣಿಕೆ ಆಗುಗ, ಇರುಗ, ಮತ್ತು ಮಾಡುಗ ಪಾಂಗುಗಳೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ; ಇದಕ್ಕೆ ಬದಲು, ಹಿನ್ನುಡಿತಗಳೊಂದಿಗಿನ ಹೊಂದಾಣಿಕೆ ಎಲ್ಲಾ ಬಗೆಯ ಪಾಂಗುಗಳೊಂದಿಗೂ ಕಾಣಿಸಿಕೊಳ್ಳುತ್ತದೆ: (1ಕ) ಅವನು ಕಾಡಿನಿಂದ ಹೊರಬಂದವನು ತಿರುಗಿ ಅಲ್ಲಿಗೇನೇ ಹೋದ. (1ಚ) ನಾನು ರಾಜುವಿಗೆ ಪುಸ್ತಕ ಕೊಂಡುಕೊಳ್ಳಲು ಕೊಟ್ಟ ಹಣವನ್ನು ಅವನು ಸಿನಿಮಾ ನೋಡಲು ಬಳಸಿದ. (1ಟ) ರಾಜುವನ್ನು ಊಟಕ್ಕೆ ಕರೆದವರು ಅವನು ಹೋಗುವಾಗ ಮನೆಯಲ್ಲೇ ಇರಲಿಲ್ಲ. ಮೇಲಿನ ಸೊಲ್ಲುಗಳಲ್ಲಿ ಸುರು (ಕಾಡಿನಿಂದ), ಗುರಿ (ರಾಜುವಿಗೆ), ಮತ್ತು ಈಡು (ರಾಜುವನ್ನು) ಪಾಂಗುಗಳು ತೋರುಪದಗಳ ಹಿನ್ನುಡಿತಗಳಾಗಿ ಬಂದಿವೆ. (3) ಒಂದು ಸೊಲ್ಲಿನಲ್ಲಿ ಆಗುಗ, ಮಾಡುಗ, ಇಲ್ಲವೇ ಇರುಗ ಪಾಂಗು ಬಾರದಿರುವಲ್ಲಿ ಎಸಕಪದಗಳು ಉಳಿದ ಯಾವ ಪಾಂಗಿನೊಂದಿಗೂ ಹೊಂದಾಣಿಕೆಯನ್ನು ತೋರಿಸದೆ ಓರೆಣಿಕೆಯ ಉಳಿಕೆಗುರ್ತದ ರೂಪದಲ್ಲಿ ಬಳಕೆಯಾಗುತ್ತವೆ; ಆದರೆ, ತೋರುಪದಗಳು ಎಲ್ಲಾ ಬಗೆಯ ಪಾಂಗುಗಳೊಂದಿಗೂ ಹೊಂದಾಣಿಕೆಯನ್ನು ತೋರಿಸಬಲ್ಲುವಾದ ಕಾರಣ, ಅವುಗಳ ಬಳಕೆಯಲ್ಲಿ ಇಂತಹ ತೊಡಕು ಕಾಣಿಸಿಕೊಳ್ಳುವುದಿಲ್ಲ. (1ಕ) ರಾಜುವಿಗೆ ಒಂದು ಶಾಲನ್ನು ಹೊದಿಸಲಾಯಿತು. (1ಚ) ರಾಜುವಿಗೆ ಹೊದಿಸಿದ ಶಾಲು ಅವನ ಕಾಲಿಗೆ ತೊಡಕಿತು.

(1ಕ)ದಲ್ಲಿ ಗುರಿ ಮತ್ತು ಈಡು ಪಾಂಗುಗಳು ಮಾತ್ರ ಬಂದಿವೆ; ಹಾಗಾಗಿ, ಅದರ ಎಸಕಪದ ಅವುಗಳಲ್ಲಿ ಯಾವುದರೊಂದಿಗೂ ಹೊಂದಾಣಿಕೆಯನ್ನು ತೋರಿಸದೆ ಓರೆಣಿಕೆಯ ಉಳಿಕೆಗುರ್ತದ ರೂಪದಲ್ಲಿ ಬಂದಿದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಅವನ ಎಂಬ ತೋರುಪದ ಗುರಿ ಪಾಂಗಾಗಿ ಬಂದಿರುವ ರಾಜು ಪದವನ್ನು ಹಿನ್ನುಡಿತವಾಗಿ ಪಡೆದಿದ್ದು ಅದರೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತದೆ. (4) ಎಸಕಪದಗಳು ಹೆಸರುಪದ ಮತ್ತು ಅವುಗಳ ಜಾಗದಲ್ಲಿ ಬರಬಲ್ಲ ತೋರುಪದ ಮತ್ತು ಎಣಿಕೆಪದಗಳಂತಹ ಬೇರೆ ಪದಗಳೊಂದಿಗೆ ಮಾತ್ರ ಹೊಂದಾಣಿಕೆಯನ್ನು ತೋರಿಸುತ್ತವೆ; ಇದಕ್ಕೆ ಬದಲು, ತೋರುಪದಗಳು ತೋರಿಸುವ ಹಿನ್ನುಡಿತದ ಹೊಂದಾಣಿಕೆ ಎಸಕಪರಿಚೆ ಮತ್ತು ಹೆಸರುಪರಿಚೆಗಳೊಂದಿಗೂ ಕಾಣಿಸಿಕೊಳ್ಳುತ್ತದೆ: (1ಕ) ಆಕೆಯ ಮೋರೆ ಬೆಳ್ಳಗಿದೆ; ಆದರೆ ಈಕೆಯದು ಹಾಗಿಲ್ಲ. (1ಚ) ಆ ದೊಡ್ಡ ಪುಸ್ತಕವನ್ನು ಬರೆದ ಪಂಡಿತರು ಬೇರೆ ಯಾರೂ ಅಂತಹ ಪುಸ್ತಕವನ್ನು ಬರೆಯಲಾರರೆಂದು ಹೇಳುತ್ತಿದ್ದಾರೆ. (1ಕ)ದಲ್ಲಿ ಹಾಗೆ ಎಂಬ ತೋರುಪದಕ್ಕೆ ಬೆಳ್ಳಗೆ ಎಂಬ ಎಸಕಪರಿಚೆ ಹಿನ್ನುಡಿತವಾಗಿದ್ದು, ಅವುಗಳ ನಡುವೆ ಹೊಂದಾಣಿಕೆಯಿದೆ; ಇದೇ ರೀತಿಯಲ್ಲಿ, (1ಚ) ಅಂತಹ ಎಂಬ ತೋರುಪದಕ್ಕೆ ದೊಡ್ಡ ಎಂಬ ಹೆಸರುಪರಿಚೆಯೊಂದಿಗೆ ಹೊಂದಾಣಿಕೆಯಿದೆ. (5) ಇದಲ್ಲದೆ, ಎಲ್ಲಾ ಬಗೆಯ ತೋರುಪದಗಳೂ ಹಿನ್ನುಡಿತದೊಂದಿಗಿನ ಹೊಂದಾಣಿಕೆಯನ್ನು ತೋರಿಸುತ್ತವೆ; ಅವು ಹೆಸರುಪದಗಳ ಜಾಗದಲ್ಲಿ ಬರಬಲ್ಲುವಿರಬಹುದು, ಇಲ್ಲವೇ ಪರಿಚೆಪದಗಳ ಜಾಗದಲ್ಲೂ ಬರಬಲ್ಲುವಿರಬಹುದು: (1ಕ) ಮನೆಗೆ ಹೋದಾಗ ಅಲ್ಲಿ ಬಹಳ ಮಂದಿ ಸೇರಿದ್ದರು. (1ಚ) ಸೆರೆಮನೆಯಲ್ಲಿರುವವರು ಅಲ್ಲಿಂದ ಹೊರಬರುವುದು ಹೇಗೆಂದು ಕೇಳುತ್ತಿದ್ದಾರೆ. (1ಟ) ಅವನಿಗೆ ಅರುವತ್ತು ಕೊಟ್ಟವನು ನನಗೂ ಅಶ್ಟು ಕೊಡುತ್ತಾನೆ. (6) ಆ, ಈ, ಮತ್ತು ಯಾವ ಎಂಬ ಮೂರು ತೋರ್ಕೆಯ ತೋರುಪದಗಳು ಅವುಗಳ ಹಿನ್ನುಡಿತಗಳೊಂದಿಗೆ ಯಾವ ಬಗೆಯ ಹೊಂದಾಣಿಕೆಯನ್ನೂ ತೋರಿಸುವುದಿಲ್ಲ; ಎಲ್ಲಾ ಬಳಕೆಗಳಲ್ಲೂ ಅವು ಒಂದೇ ರೂಪದಲ್ಲಿ ಬರುತ್ತವೆ.

ಆದರೆ, ಅವುಗಳ ಬಳಿಕ ಬರುವ ಹೆಸರುಪದಗಳು ಹಿನ್ನುಡಿತಗಳೊಂದಿಗೆ ಹೊಂದಾಣಿಕೆಯನ್ನು ತೋರಿಸುತ್ತವೆ. (1ಕ) ಜಾನಕಿಯ ಅಮ್ಮ ಆ ಹುಡುಗಿಯನ್ನು ಶಾಲೆಗೆ ಸೇರಿಸಲು ಹೋಗಿದ್ದಾರೆ. (1ಚ) ರಾಜುವಿನ ಅಮ್ಮ ಆ ಹುಡುಗನನ್ನು ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. (7) ವ್ಯಕ್ತಿ, ವಸ್ತು ಮೊದಲಾದುವನ್ನು ಕೇಳುಗನಿಗೆ ಗುರುತು ಮಾಡುವುದಕ್ಕಾಗಿ ಅದು ಮತ್ತು ಇದು ಎಂಬ ತೋರುಪದಗಳನ್ನು ತೋರ್ಕೆಯ ಹುರುಳಿನಲ್ಲಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು (10.2.9 ನೋಡಿ): (1ಕ) ಇದು ಈ ಊರಿನ ಆಸ್ಪತ್ರೆ. (1ಚ) ಅದು ನನ್ನ ಅಣ್ಣ. (1ಟ) ಅದು ನನ್ನ ತಂದೆಯವರು. ಈ ಬಳಕೆಯಲ್ಲಿ ಬರುವ ತೋರುಪದಗಳು ಹಿನ್ನುಡಿತದೊಂದಿಗೆ ಹೊಂದಾಣಿಕೆಯನ್ನು ತೋರಿಸುವುದಿಲ್ಲ; ಮೇಲಿನ ಎಲ್ಲಾ ಸೊಲ್ಲುಗಳಲ್ಲೂ ಅವು ಓರೆಣಿಕೆಯ ಉಳಿಕೆ ಗುರ್ತದಲ್ಲಿ ಬಂದಿರುವುದನ್ನು ಕಾಣಬಹುದು. (ಚ) ತಿಳಿದ ಮತ್ತು ತಿಳಿಯದ ತೋರುಪದಗಳ ನಡುವಿನ ಹೊಂದಾಣಿಕೆ: ತೋರುಪದಗಳ ಬಳಕೆಯಲ್ಲಿ ಕಾಣಿಸುವ ಇನ್ನೊಂದು ಬಗೆಯ ಹೊಂದಾಣಿಕೆಯನ್ನು ತಿಳಿಯದ ಮತ್ತು ತಿಳಿದ ತೋರುಪದಗಳ ನಡುವೆ ನೋಡಬಹುದು. ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಪರಿಚೆ ನುಡಿತವಾಗಿ ಮಾಡಲು ಅದರ ಒಂದು ಪಾಂಗನ್ನು ತಿಳಿಯದ ತೋರುಪದದ ಮೂಲಕ ತಿಳಿಸಲಾಗುತ್ತದೆ, ಮತ್ತು ಅದರ ಕೊನೆಯಲ್ಲಿ ಓ ಒಟ್ಟನ್ನು ಬಳಸಲಾಗುತ್ತದೆ; ಇದಲ್ಲದೆ, ಪರಿಚೆನುಡಿತವಾಗಿ ಸಂಬಂದಿಸಬೇಕಾಗಿರುವ ಹೆಸರುಪದದ ಬದಲು ಒಂದು ತಿಳಿದ ತೋರುಪದವನ್ನು ಬಳಸಲಾಗುತ್ತದೆ; ಈ ಎರಡು ಬಗೆಯ ತೋರುಪದಗಳೂ ಹೆಸರುಪದಗಳ ಮೊದಲಿಗೆ ಪರಿಚೆಪದಗಳಾಗಿಯೂ ಬರಬಲ್ಲುವು (10.6.5 ನೋಡಿ). ಇಂತಹ ಸೊಲ್ಲುಗಳಲ್ಲಿ ಬರುವ ತಿಳಿದ ಮತ್ತು ತಿಳಿಯದ ತೋರುಪದಗಳ ನಡುವೆ ಹೊಂದಾಣಿಕೆಯಿರಬೇಕಾಗುತ್ತದೆ:

(1ಕ) ಯಾವುದು ಚನ್ನಾಗಿ ಕಾಣಿಸುವುದಿಲ್ಲವೋ ಅದನ್ನು ಬೇರೆಯಾಗಿರಿಸುವುದು ಒಳ್ಳೆಯದು. (1ಚ) ಯಾರಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲವೋ ಅವರು ಮುಂದೆ ಬಂದು ಕುಳಿತುಕೊಳ್ಳಲಿ. (1ಕ)ದಲ್ಲಿ ಅದನ್ನು ಬೇರೆಯಾಗಿರಿಸುವುದು ಒಳ್ಳೆಯದು ಎಂಬ ಸೊಲ್ಲಿನಲ್ಲಿ ಬಂದಿರುವ ಅದು ಎಂಬ ತೋರುಪದದ ಪರಿಚೆನುಡಿತವಾಗಿ ಯಾವುದು ಚನ್ನಾಗಿ ಕಾಣಿಸುವುದಿಲ್ಲವೋ ಎಂಬುದನ್ನು ಬಳಸಲಾಗಿದೆ; ಇಲ್ಲಿ ಯಾವುದು ಮತ್ತು ಅದು ಎಂಬವುಗಳ ನಡುವೆ ಹೊಂದಾಣಿಕೆಯಿದೆ. ಇದೇ ರೀತಿಯಲ್ಲಿ (1ಚ)ದಲ್ಲಿ ಬಂದಿರುವ ಯಾರಿಗೆ ಮತ್ತು ಅವರು ಎಂಬವುಗಳ ನಡುವೆಯೂ ಹೊಂದಾಣಿಕೆಯಿದೆ. ಇಂತಹ ಸೊಲ್ಲುಗಳಲ್ಲಿ ಎಲ್ಲಾ ಬಗೆಯ ತಿಳಿದ ಮತ್ತು ತಿಳಿಯದ ತೋರುಪದಗಳೂ ಬರಬಲ್ಲುವಾಗಿದ್ದು, ಅವೆಲ್ಲವೂ ಇಂತಹ ಹೊಂದಾಣಿಕೆಯನ್ನು ತೋರಿಸುತ್ತವೆ; ಆದರೆ, ತಿಳಿದ ತೋರುಪದಗಳಲ್ಲಿ ದೂರದವು ಮಾತ್ರ ಇಂತಹ ಸೊಲ್ಲುಗಳಲ್ಲಿ ಬಳಕೆಯಾಗಬಲ್ಲುವು: (1ಕ) ಸುಂದರಿ ಎಶ್ಟು ಲಾಡು ತಿಂದಿದ್ದಾಳೋ ಅಶ್ಟನ್ನು ಜಾನಕಿಯೂ ತಿಂದಿದ್ದಾಳೆ. (1ಚ) ಎಲ್ಲಿ ತುಂಬಾ ಜನ ಸೇರಿರುತ್ತಾರೋ ಅಲ್ಲಿ ರಾಜುವಿನ ವ್ಯಾಪಾರವೂ ನಡೆದಿರುತ್ತದೆ. (1ಟ) ಹೇಗೆ ಆಕೆ ನೀರಿನ ಕೊಡವನ್ನು ಹೊರುತ್ತಾಳೋ ಹಾಗೆ ಪುಸ್ತಕದ ಚೀಲವನ್ನೂ ಹೊರುತ್ತಾಳೆ. (1ತ) *ಈ ಮನೆಯನ್ನು ಯಾರು ಕೊಂಡುಕೊಳ್ಳುತ್ತಾರೋ ಇವರು ಈ ಮನೆಯಲ್ಲೇ ಉಳಿಯಬೇಕಾಗುತ್ತದೆ. (1ಕ-ಟ) ಸೊಲ್ಲುಗಳಲ್ಲಿ ಯಾರು-ಅವರು, ಎಶ್ಟು-ಅಶ್ಟು, ಎಲ್ಲಿ-ಅಲ್ಲಿ, ಮತ್ತು ಹೇಗೆ-ಹಾಗೆ ಎಂಬ ತಿಳಿಯದ ಮತ್ತು ತಿಳಿದ ತೋರುಪದಗಳ ನಡುವೆ ಹೊಂದಾಣಿಕೆಯಿರುವುದನ್ನು ಕಾಣಬಹುದು. (1ತ) ಸೊಲ್ಲಿನಲ್ಲಿ ಇವರು ಎಂಬ ಹತ್ತಿರದ ತೋರುಪದವನ್ನು ಎರಡನೆಯ ತೋರುಪದವಾಗಿ ಬಳಸಲಾಗಿದೆಯಾದ ಕಾರಣ, ಆ ಸೊಲ್ಲು ಸರಿಯಿಲ್ಲ.

10.2.12 ಗುರುತು ಮಾಡಿಸುವಲ್ಲಿ ಬಳಕೆ

ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಕೇಳುಗನಿಗೆ ಗುರುತು ಮಾಡಿಸುವಲ್ಲಿ ಇದು ಮತ್ತು ಅದು ಎಂಬ ತೋರುಪದಗಳನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅದು ಈ ಶಾಲೆಯ ಹೆಡ್ಮಾಸ್ಟರರು. (1ಚ) ಅದು ನನ್ನ ಅಕ್ಕ. (1ಟ) ಇದು ನಮ್ಮೂರಿನ ಎಲಿಮೆಂಟರಿ ಶಾಲೆ. ತೋರುಪದಗಳ ಈ ಬಳಕೆ ಅವುಗಳ ಬೇರೆ ಬಳಕೆಗಳಿಂದ ಹಲವು ವಿಶಯಗಳಲ್ಲಿ ಬೇರಾಗಿದೆ: (1) ಮೇಲೆ ತಿಳಿಸಿದ ಹಾಗೆ, ಈ ಬಳಕೆಯಲ್ಲಿ ತೋರುಪದಗಳು ಅವುಗಳ ಹಿನ್ನುಡಿತಗಳೊಂದಿಗೆ ಹೊಂದಾಣಿಕೆಯನ್ನು ತೋರಿಸುವುದಿಲ್ಲ; ಇದನ್ನು ಮೇಲೆ ಕೊಟ್ಟಿರುವ (1ಕ-ಚ) ಸೊಲ್ಲುಗಳಲ್ಲಿ ಕಾಣಬಹುದು. ಇವುಗಳ ಬದಲು ಹೊಂದಾಣಿಕೆಯನ್ನು ತೋರಿಸುವ ತೋರುಪದಗಳನ್ನೂ ಇಂತಹ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ; ಆದರೆ, ಅಂತಹ ಬಳಕೆ ಮೇಲಿನ ಗುರುತು ಮಾಡಿಸುವ ಬಳಕೆಗಿಂತ ಬೇರಾಗಿದೆ: (1ಕ) ಅವರು ಈ ಶಾಲೆಯ ಹೆಡ್ಮಾಸ್ಟರರು. (1ಚ) ಅವಳು ನನ್ನ ಅಕ್ಕ. (2) ಈ ಎರಡು ಬಗೆಯ ಸೊಲ್ಲುಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಎತ್ತುಗೆಯಲ್ಲಿ ಕಾಣಬಹುದು: (1ಕ) ಈ ಶಾಲೆಯ ಹೆಡ್ಮಾಸ್ಟರರು ರಾಮರಾಯರಲ್ಲ; ಅದು ಶಾಮರಾಯರು/ *ಅವರು ಶಾಮರಾಯರು. (1ಚ) ನಮ್ಮ ತರಗತಿಯ ಮುಂದಾಳು ರಾಜು; ಅದು ಇವನಲ್ಲ/ *ಅವನು ಇವನಲ್ಲ. (1ಕ)ದ ಮೊದಲನೇ ಸೊಲ್ಲಿನ ಬಳಿಕ ಅದು ಶಾಮರಾಯರು ಎಂಬುದನ್ನು ಬಳಸಲು ಬರುತ್ತದಲ್ಲದೆ, ಅವರು ಶಾಮರಾಯರು ಎಂಬುದನ್ನು ಬಳಸಲು ಬರುವುದಿಲ್ಲ. ಅವರು ಎಂಬುದಕ್ಕೆ ಇಲ್ಲಿ ಬಗೆಯನ್ನು ತಿಳಿಸುವ ಹುರುಳು ಬಾರದಿರುವುದೇ ಇದಕ್ಕೆ ಕಾರಣ.

(3) ಒಂದು ಸೊಲ್ಲಿನಲ್ಲಿ ಬರುವ ಪಾಂಗುಗಳಲ್ಲಿ ಒಂದನ್ನು ಸೊಲ್ಲಿನ ಉಳಿದ ಅಂಶದಿಂದ ಬೇರ್ಪಡಿಸಿ, ಇಡೀ ಸೊಲ್ಲು ಅದರ ಕುರಿತಾಗಿ ಹೇಳಿಕೆಯೊಂದನ್ನು ಕೊಡುತ್ತದೆ ಎಂಬುದಾಗಿ ತಿಳಿಸಲು ಬರುತ್ತದೆ; ಇಂತಹ ಸೊಲ್ಲುಗಳನ್ನು ಸೀಳುಸೊಲ್ಲುಗಳೆಂದು ಕರೆಯಬಹುದು: (1ಕ) ರಾಜು ಮನೆಗೆ ಹೋದ. (1ಚ) ಮನೆಗೆ ಹೋದವನು ರಾಜು. (1ಟ) ಮನೆಗೆ ಹೋದುದು ರಾಜು. (1ಕ) ಸೊಲ್ಲನ್ನು ಇಲ್ಲಿ ಎರಡು ಬಗೆಯಲ್ಲಿ ಸೀಳುಸೊಲ್ಲುಗಳಾಗಿ ಮಾರ್ಪಡಿಸಲಾಗಿದೆ; (1ಚ)ದಲ್ಲಿ ಮನೆಗೆ ಹೋದವನು ಎಂಬುದು ಒಬ್ಬ ವ್ಯಕ್ತಿಯನ್ನು ಗುರುತಿಸುತ್ತಿದ್ದು, ಅದೇ ವ್ಯಕ್ತಿಯನ್ನು ರಾಜು ಎಂಬುದೂ ಗುರುತಿಸುತ್ತದೆ. ಇದಕ್ಕೆ ಬದಲು, (1ಟ)ದಲ್ಲಿ ಮನೆಗೆ ಹೋದುದು ಎಂಬುದು ಒಂದು ಬಗೆಯನ್ನು ತಿಳಿಸುತ್ತಿದ್ದು, ಅದನ್ನು ಗುರುತು ಮಾಡಿಸಲು ರಾಜು ಎಂಬುದನ್ನು ಬಳಸಲಾಗಿದೆ. ಈ ಎರಡನೆಯ ಮಾರ್ಪಾಡಿನಲ್ಲಿ ಬಳಕೆಯಾಗಿರುವ ಉದು ಎಂಬುದು ಮೇಲೆ ವಿವರಿಸಿದ ಅದು ಎಂಬುದರ ಒಂದು ರೂಪವಾಗಿದೆ. ಈ ಎರಡನೇ ಬಗೆಯ ಸೀಳುಸೊಲ್ಲುಗಳಲ್ಲಿ ಬರುವ ಎರಡು ತುಂಡುಗಳ ನಡುವೆ ಹೊಂದಾಣಿಕೆಯಿರುವುದಿಲ್ಲ ಎಂಬುದೇ ಈ ಎರಡು ಬಗೆಯ ಸೀಳುಸೊಲ್ಲುಗಳ ನಡುವಿರುವ ವ್ಯತ್ಯಾಸ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವಳಿಗೆ ಇದನ್ನು ಕೊಟ್ಟುದು ನಾನು. (1ಚ) ಅವಳಿಗೆ ನಾನು ಕೊಟ್ಟಿರುವುದು ಒಂದು ಪುಸ್ತಕ. (1ಟ) ನಾನು ನೋಡಿರುವುದು ಒಂದು ಹಕ್ಕಿ. (1ತ) ಅವನು ಬಂದಿರುವುದು ಕೆಲಸ ಮಾಡಲು. (4) ಗುರುತು ಮಾಡಿಸುವ ಸೊಲ್ಲುಗಳಲ್ಲಿ ಬಳಕೆಯಾಗುವ ಅದು ಮತ್ತು ಇದು ಎಂಬ ತೋರುಪದಗಳು ಅವು ಗುರುತು ಮಾಡಿಸುವ ವ್ಯಕ್ತಿ, ವಸ್ತು, ಜಾಗ ಮೊದಲಾದವು ಎಂತಹವು ಎಂಬುದಾಗಿ ಅವುಗಳ ಬಗೆಯನ್ನು ತಿಳಿಸುವ ಕೆಲಸವನ್ನು ನಡೆಸುತ್ತವೆ. ಹಾಗಾಗಿ, ಅವುಗಳೊಂದಿಗೆ ಬರುವ ಪದ ಇಲ್ಲವೇ ಪದಕಂತೆ ಆ ರೀತಿ ವ್ಯಕ್ತಿ, ವಸ್ತು ಮೊದಲಾದುವುಗಳ ಬಗೆಯನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳಾಗಿರುತ್ತವೆ: (1ಕ) ಇದು ಜಾನಕಿ. (1ಚ) ಅದು ತಾಜಮಹಾಲ್.

(1ಟ) ಇದೊಂದು ಚಂದದ ಆಟಿಗೆ. (5) ಒಂದು ಚಿತ್ರದಲ್ಲಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತು ಮಾಡಿಸಲು ಕೆಳಗೆ ಕೊಟ್ಟಂತಹ ಸೊಲ್ಲುಗಳನ್ನೂ ಬಳಸಲು ಬರುತ್ತದೆ: (1ಕ) ಇದು ಜಾನಕಿ; ಅದೂ ಜಾನಕಿಯೇ. (1ಚ) ಇದು ನಾನು. (1ಟ) ಅದು ರಾಜು ಇಲ್ಲವೇ ಅವನ ಗೆಳೆಯರಲ್ಲೊಬ್ಬ. (6) ಗುರುತು ಮಾಡಿಸುವಲ್ಲಿ ಬಳಕೆಯಾಗುವ ತೋರುಪದಗಳು ಉಳಿದ ತೋರುಪದಗಳ ಹಾಗೆ ಪರಿಚೆಪದಗಳೊಂದಿಗೆ ಇಲ್ಲವೇ ಪರಿಚೆನುಡಿತಗಳೊಂದಿಗೆ ಬಳಕೆಯಾಗಲಾರವು: (1ಕ) *ದೊಡ್ಡ ಇದು ನನ್ನ ಅಜ್ಜ. (1ಚ) *ಕುರ್ಚಿಯಲ್ಲಿ ಕುಳಿತ ಇದು ರಾಜು. ಅವನ್ನು ಬೇರೆ ಹೆಸರುಪದಗಳೊಂದಿಗೆ ಜೋಡಿಸಿ ಹೇಳಲೂ ಬರುವುದಿಲ್ಲ: (1ಕ) *ರಾಜು ಮತ್ತು ಇದು ನನ್ನ ಅಣ್ಣಂದಿರು. (1ಚ) *ಜಾನಕಿ ಮತ್ತು ಅದು ನನ್ನ ಗೆಳತಿಯರು. (7) ಗುರುತು ಮಾಡಿಸುವ ಅದು ಮತ್ತು ಇದು ತೋರುಪದಗಳೊಂದಿಗೆ ಬೇಕು ಮತ್ತು ಬಹುದು ಎಂಬವುಗಳನ್ನು ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಯಲ್ಲಿ ಅವಕ್ಕಿರುವ ಅರಿವು ಮತ್ತು ಒತ್ತಾಸೆ ಎಂಬ ಎರಡು ಹುರುಳುಗಳಲ್ಲಿ (5.5.6 ನೋಡಿ) ಅರಿವಿನ ಹುರುಳು ಮಾತ್ರ ಬರಬಲ್ಲುದು: (1ಕ) ಅದು ನನ್ನ ಅಣ್ಣನಿರಬೇಕು. (1ಚ) ಇದೊಂದು ಆಟಿಗೆಯಾಗಿರಬಹುದು. (1ಕ-ಚ) ಸೊಲ್ಲುಗಳ ಮೂಲಕ ಆಡುಗನು ತನ್ನ ಅರಿವನ್ನು ತಿಳಿಸುತ್ತಿದ್ದಾನಲ್ಲದೆ, ಒತ್ತಾಸೆಯನ್ನಲ್ಲ.

10.3 ತಿಳಿದ ತೋರುಪದಗಳ ಬಳಕೆ:

Eke →

ಹೊರತೋರ್ಕೆ ತಿಳಿದ ತೋರುಪದಗಳು ತೋರ್ಕೆಯ ಮೂಲಕ ಕೇಳುಗನ ಗಮನವನ್ನು ಒಂದು ಪಾಂಗಿನ ಕಡೆಗೆ, ಒಂದು ಎಸಕದ ಜಾಗ, ದಿಕ್ಕು, ಹೊತ್ತು, ದಿನ, ಇಲ್ಲವೇ ಹೊಲಬುಗಳ ಕಡೆಗೆ, ಇಲ್ಲವೇ ಒಂದು ಪಾಂಗಿನ ಅಳವಿ ಇಲ್ಲವೇ ಬಗೆಯ ಕಡೆಗೆ ಸೆಳೆಯುವಲ್ಲಿ ಬಳಕೆಯಾಗುತ್ತವೆ; ಈ ಹಲವು ಬಗೆಯ ಕೆಲಸಗಳನ್ನು ನಡೆಸುವುದಕ್ಕಾಗಿ ಹಲವು ಬಗೆಯ ತೋರುಪದಗಳು ಬಳಕೆಯಲ್ಲಿವೆ. ಇವು ಎಂತಹವು ಎಂಬುದನ್ನು 10.2ರಲ್ಲಿ ವಿವರಿಸಲಾಗಿದೆ. ಮೇಲಿನ ಕೆಲಸಗಳಿಗಾಗಿ ತೋರುಪದಗಳು ಬಳಸುವ ತೋರ್ಕೆಯಲ್ಲೂ ಹಲವು ಬಗೆಗಳಿವೆ; ಇವುಗಳಲ್ಲಿ ಹೊರತೋರ್ಕೆ ಮತ್ತು ಒಳತೋರ್ಕೆ ಎಂಬವು ಮುಕ್ಯವಾದವುಗಳು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಇದನ್ನು ಮಾಸ್ತರರಿಗೆ ಕೊಡಬೇಕಾಗಿತ್ತು. (1ಚ) ಇವತ್ತು ಶಾಲೆಗೆ ರಜೆ; ಇದನ್ನು ಮಾಸ್ತರರೇ ನನಗೆ ತಿಳಿಸಿದ್ದಾರೆ. (1ಕ)ದ ಇದನ್ನು ಎಂಬ ತೋರುಪದ ಹೊರತೋರ್ಕೆಯನ್ನು ಬಳಸಿದೆ; ಅದು ಯಾವುದನ್ನು ಗುರುತಿಸುತ್ತದೆ ಎಂಬುದು ಗೊತ್ತಾಗಬೇಕಿದ್ದಲ್ಲಿ, (1ಕ) ಸೊಲ್ಲಿನ ಆಡುಗನು ತನ್ನೊಂದಿಗೆ ಏನನ್ನು ತೆಗೆದುಕೊಂಡು ಬಂದಿದ್ದಾನೆ ಎಂಬ ಮಾತಿನ ಕುಳ್ಳಿಹಕ್ಕೆ ಸಂಬಂದಿಸಿದಂತಹ ವಿಶಯವನ್ನು ತಿಳಿದಿರಬೇಕಾಗುತ್ತದೆ. ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಇದನ್ನು ಎಂಬ ತೋರುಪದ ಒಳತೋರ್ಕೆಯನ್ನು ಬಳಸಿದೆ; ಯಾಕೆಂದರೆ, ಅದು ಯಾವುದನ್ನು ಗುರುತಿಸುತ್ತದೆ ಎಂಬುದು ಗೊತ್ತಾಗಬೇಕಿದ್ದಲ್ಲಿ ಮಾತಿನ ಕುಳ್ಳಿಹವನ್ನು ಗಮನಿಸಬೇಕಾಗಿಲ್ಲ; (1ಚ)ದಲ್ಲೇನೇ ಮೊದಲಿಗೆ ಬಂದಿರುವ ಸೊಲ್ಲು ಏನು ತಿಳಿಸುತ್ತದೆ ಎಂಬುದನ್ನು ಗಮನಿಸಿದರೆ ಸಾಕು; ಆ ತಿಳಿವು ಇಲ್ಲವೇ ಸುದ್ದಿಯನ್ನೇ ಇದನ್ನು ಎಂಬ ತೋರುಪದ ಗುರುತಿಸುತ್ತದೆ. ಒಳತೋರ್ಕೆಯಲ್ಲಿ ಮುಕ್ಯವಾಗಿ ಪಾಂಗುತೋರ್ಕೆ ಮತ್ತು ಸೊಲ್ಲುತೋರ್ಕೆ ಎಂಬ ಬೇರೆ ಎರಡು ಬಗೆಗಳನ್ನೂ ಕಾಣಲು ಬರುತ್ತದೆ; ಇವೆರಡರ ನಡುವಿರುವ

ವ್ಯತ್ಯಾಸವೇನೆಂದರೆ, ಪಾಂಗುತೋರ್ಕೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಒಂದು ಪಾಂಗು ಕೇಳುಗನ ನೇರ ಗಮನದಲ್ಲೇ ಉಳಿಯುವಂತೆ ಮಾಡಲು, ಇಲ್ಲವೇ ಅದನ್ನು ಇನ್ನೊಮ್ಮೆ ಆತನ ಗಮನಕ್ಕೆ ತರಲು ತಿರುಗಿ ಗುರುತಿಸಲಾಗುತ್ತದೆ. ಇದಕ್ಕೆ ಬದಲು, ಸೊಲ್ಲುತೋರ್ಕೆಯಲ್ಲಿ ಒಂದು ಸೊಲ್ಲು ಇಲ್ಲವೇ ಸೊಲ್ಲುಕಂತೆ ತಿಳಿಸಿರುವ ಸಂಗತಿಯನ್ನು ಕೇಳುಗನ ಗಮನಕ್ಕೆ ತರಲಾಗುತ್ತದೆ; ಹಿಂದಿನ ಸೊಲ್ಲು ಈ ಸಂಗತಿಯ ತಿಳಿವನ್ನು ಮಾತ್ರ ಕೊಟ್ಟಿರುತ್ತದಲ್ಲದೆ, ಅದನ್ನು ಒಂದು ಪಾಂಗಾಗಿ ಗುರುತಿಸಿರುವುದಿಲ್ಲ. ಹಾಗಾಗಿ, ತೋರುಪದ ಇಲ್ಲಿ ಒಂದು ಪಾಂಗನ್ನು ಹೊಸದಾಗಿ ಗುರುತಿಸುತ್ತಿದೆಯೆಂದೂ ಹೇಳಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ (1ಟ) ಸೊಲ್ಲನ್ನು ಮೇಲಿನ (1ಚ) ಸೊಲ್ಲಿನೊಂದಿಗೆ ಹೋಲಿಸಿ ನೋಡಬಹುದು: (1ಟ) ರಾಜುವಿಗೆ ಚಿನ್ನದ ನಾಣ್ಯ ಸಿಕ್ಕಿದ್ದು ಅವನು ಕೊಂಡುಕೊಂಡ ಅಕ್ಕಿಯಲ್ಲಿ. (1ಟ)ದಲ್ಲಿ ಬಂದಿರುವ ಅವನು ಎಂಬ ತೋರುಪದ ಅದೇ ಸೊಲ್ಲಿನಲ್ಲಿ ಮೊದಲಿಗೆ ಬಂದಿರುವ ರಾಜು ಎಂಬ ಹೆಸರುಪದ ಗುರುತಿಸುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುತ್ತದೆ. ಎಂದರೆ, ಅವನು ಎಂಬ ತೋರುಪದ ಇಲ್ಲಿ ಪಾಂಗುತೋರ್ಕೆಯ ಮೂಲಕ ಒಂದು ಪಾಂಗನ್ನು ಗುರುತಿಸುತ್ತದೆ. ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಇದನ್ನು ಎಂಬುದು ಹಿಂದಿನ ಸೊಲ್ಲು ತಿಳಿಸುವ ಸಂಗತಿಯನ್ನು ಒಂದು ಪಾಂಗಾಗಿ ಮಾಡಿ, ಆ ಪಾಂಗನ್ನು ಗುರುತಿಸುತ್ತದೆ; ಆ ಸಂಗತಿಯನ್ನು ಹಿಂದಿನ ಸೊಲ್ಲು ತಿಳಿಸುತ್ತದಲ್ಲದೆ, ಅದನ್ನು ಒಂದು ಪಾಂಗಾಗಿ ಗುರುತಿಸಿರುವುದಿಲ್ಲ. ಹಾಗಾಗಿ, (1ಚ) ಸೊಲ್ಲಿನ ಇದನ್ನು ಎಂಬುದು ಸೊಲ್ಲುತೋರ್ಕೆಯ ಮೂಲಕ ಒಂದು ಹೊಸ ಪಾಂಗನ್ನು ಗುರುತಿಸಿ, ಅದರ ಕಡೆಗೆ ಕೇಳುಗನ ಗಮನವನ್ನು ಸೆಳೆಯುತ್ತದೆಯೆಂದು ಹೇಳಬಹುದು. ತೋರುಪದಗಳು ಮೇಲಿನ ಎರಡು ಬಗೆಯ ತೋರ್ಕೆಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಬಗೆಯ ತೋರ್ಕೆಗಳನ್ನು ಬಳಸಿಕೊಳ್ಳಬಲ್ಲುವು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ನೆನಪಿನ ತೋರ್ಕೆಯನ್ನು ಬಳಸಲಾಗಿದೆ: (1ತ) ಕಳೆದ ವರ್ಶ ಇದೇ ಪಾರ್ಕಿನಲ್ಲಿ ನಮ್ಮನ್ನು ಪೇಚಿಗೆ ಸಿಲುಕಿಸಿದ ಆ ಮುಕನ ನೆನಪಿದೆಯೇ? (1ತ)ದಲ್ಲಿ ಆ ಮುದುಕನ ಎಂಬುದು ಹೊರತೋರ್ಕೆ, ಪಾಂಗುತೋರ್ಕೆ, ಇಲ್ಲವೇ ಸೊಲ್ಲುತೋರ್ಕೆಯನ್ನು ಬಳಸುವುದಿಲ್ಲ; ಇದಕ್ಕೆ ಬದಲು, ಕೇಳುಗನ ನೆನಪಿನಲ್ಲಿರುವ ಪಾಂಗೊಂದನ್ನು ನೆನಪಿಗೆ ತರುವ ಮೂಲಕ ಅದನ್ನು

ಗುರುತಿಸುತ್ತದೆ. ಆದರೆ, ಇದನ್ನು ಹೊರತೋರ್ಕೆಯೆಂದೂ ಕರೆಯಲು ಬರುತ್ತದೆ; ಯಾಕೆಂದರೆ, ಒಂದು ಮಾತುಕತೆ ಇಲ್ಲವೇ ಬರಹದ ಒಳಗೆ ಇಲ್ಲದಿರುವುದೆಲ್ಲವನ್ನೂ ಹೊರತೋರ್ಕೆಯಲ್ಲಿ ಸೇರಿಸಿಕೊಳ್ಳಲು ಬರುತ್ತದೆ. ಒಂದು ಸೊಲ್ಲಿನಲ್ಲಿ ಬರುವ ತೋರುಪದ ಅದರ ಮೊದಲು ಬಂದಿದ್ದ ಸೊಲ್ಲಿನ ಎಸಕಪದ ತಿಳಿಸುವ ಹೊತ್ತಿನ ಮೇಲೆಯೂ ಅವಲಂಬಿಸಿರಬಲ್ಲುದು: (1ಕ) ಅವನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು; ಆಗ ಜೋರಾಗಿ ಮಳೆ ಸುರಿಯುತ್ತಿತ್ತು. (1ಚ) ಅವನು ನಿಮ್ಮನ್ನು ಕಾಣಲು ಬರುತ್ತಿದ್ದಾನೆ; ಆದರೆ ಆಗ ನಾನು ಇಲ್ಲಿರುವುದಿಲ್ಲ. (1ಕ-ಚ)ಗಳ ಎರಡನೇ ಸೊಲ್ಲಿನಲ್ಲಿ ಬಂದಿರುವ ಆಗ ಎಂಬ ತೋರುಪದಕ್ಕೆ ಹೊಂದಿಕೆಯಾಗಬಲ್ಲ ಯಾವ ಹಿನ್ನುಡಿತವೂ ಅದರ ಹಿಂದಿರುವ ಮೊದಲನೇ ಸೊಲ್ಲಿನಲ್ಲಿ ಕಾಣಿಸುವುದಿಲ್ಲ; ಆದರೆ, ಅದು ತಿಳಿಸುವ ಎಸಕದ ಹೊತ್ತು (1ಕ)ದಲ್ಲಿ ಆಡುಗನ ಹೊತ್ತಿಗಿಂತ ಹಿಂದಿನದಾಗಿದೆ, ಮತ್ತು (1ಚ)ದಲ್ಲಿ ಮುಂದಿನದಾಗಿದೆ. ಈ ವ್ಯತ್ಯಾಸವನ್ನು (1ಕ-ಚ)ಗಳ ಮೊದಲನೇ ಸೊಲ್ಲಿನ ಎಸಕಪದದಲ್ಲಿ ಬಂದಿರುವ ಹೊತ್ತಿನ ಒಟ್ಟುಗಳು ತಿಳಿಸುವುದರಿಂದ, ಆ ಹೊತ್ತಿನ ಒಟ್ಟುಗಳೇ ಅವುಗಳ ಎರಡನೇ ಸೊಲ್ಲಿನಲ್ಲಿ ಬಂದಿರುವ ಆಗ ಎಂಬುದರ ಹಿನ್ನುಡಿತಗಳು ಎಂದು ಹೇಳಬಹುದು. ಹೊರತೋರ್ಕೆಯಲ್ಲಿ ಇಲ್ಲವೇ ಒಳತೋರ್ಕೆಯಲ್ಲಿ ಈಗಾಗಲೇ ಆಡುಗನ ಇಲ್ಲವೇ ಸೊಲ್ಲಿನ ಕುಳ್ಳಿಹದಲ್ಲಿರುವಂತಹ ಒಂದು ಪಾಂಗಿನ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ತೋರುಪದವನ್ನು ಬಳಸುತ್ತಿರಬಹುದು, ಇಲ್ಲವೇ ಮುಂದೆ ಉಂಟುಮಾಡಲಿರುವ ಒಂದು ಪಾಂಗಿನ ಕಡೆಗೆ ಆತನ ಗಮನವನ್ನು ಸೆಳೆಯುವುದಕ್ಕಾಗಿಯೂ ಬಳಸುತ್ತಿರಬಹುದು. ಈ ವ್ಯತ್ಯಾಸವನ್ನು ಹಾಗೆ ಮತ್ತು ಹೀಗೆ ಎಂಬ ಪದಗಳ ಬಳಕೆಯಲ್ಲಿ ಕಾಣಬಹುದು: ಹಾಗೆ ಎಂಬುದು ಹಿಂದೆ ಮಾಡಿ ತೋರಿಸಿರುವ (ಎಂದರೆ ಹೊರತೋರ್ಕೆಯ) ಇಲ್ಲವೇ ತಿಳಿಸಿರುವ (ಎಂದರೆ ಒಳತೋರ್ಕೆಯ) ಬಗೆಯನ್ನು ಕೇಳುಗನ ಗಮನಕ್ಕೆ ತರುತ್ತದೆ, ಮತ್ತು ಹೀಗೆ ಎಂಬುದು ಮುಂದೆ ಮಾಡಿ ತೋರಿಸಲಿರುವ ಇಲ್ಲವೇ ತಿಳಿಸಲಿರುವ ಬಗೆಯನ್ನು ಆತನ ಗಮನಕ್ಕೆ ತರುತ್ತದೆ: (1ಕ) ಹಣ್ಣಿನ ಬೀಜಗಳನ್ನು ನೀವೂ ಹಾಗೆಯೇ ತೆಗೆಯಿರಿ. (1ಚ) ಈ ಹಣ್ಣಿನ ಬೀಜಗಳನ್ನು ನೀವು ಹೀಗೆ ತೆಗೆಯಬೇಕು. (2ಕ) ಅವನು ಹಾಗೆ ತಲೆ ತಿರುಗಿಸಿದ. (2ಚ) ಅವನು ಹೀಗೆ ತಲೆ ತಿರುಗಿಸಿದ.

(3ಕ) ನಾನು ಮಾಡಿದ ಹಾಗೆ ನೀವೂ ಮಾಡುವುದು ಯಾಕೆ? (3ಚ) *ನಾನು ಮಾಡಿದ ಹೀಗೆ ನೀವೂ ಮಾಡುವುದು ಯಾಕೆ? (1ಕ)ದಲ್ಲಿ ಹಣ್ಣಿನ ಬೀಜಗಳನ್ನು ತೆಗೆಯುವ ಬಗೆ ಹೇಗೆ ಎಂಬುದನ್ನು ಮೊದಲಿಗೆ ತಿಳಿಸಿಕೊಡಲಾಗಿದ್ದು, ಕೇಳುಗನೂ ಹಾಗೆಯೇ ಮಾಡಬೇಕೆಂದು ತಿಳಿಸಲಾಗಿದೆ; ಇದಕ್ಕೆ ಬದಲು, (1ಚ)ದಲ್ಲಿ ಇದನ್ನು ಮುಂದೆ ತಿಳಿಸಲಾಗುತ್ತದೆ, ಮತ್ತು ಅದರ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಹೀಗೆ ಎಂಬ ತೋರುಪದವನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ, ಆತ ತಲೆ ತಿರುಗಿಸಿದುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ಮೇಲೆ (2ಕ) ಸೊಲ್ಲನ್ನು ನುಡಿಯಲಾಗುತ್ತದೆ; ಆದರೆ, (2ಚ) ಸೊಲ್ಲನ್ನು ನುಡಿದ ಮೇಲೆ ಆತ ತಲೆ ತಿರುಗಿಸಿದುದು ಹೇಗೆ ಎಂಬುದನ್ನು ತೋರಿಸಿಕೊಡಲಾಗುತ್ತದೆ. ಹೀಗೆ ಎಂಬುದರ ಮೂಲಕ ಮುಂದೆ ನಡೆಯಲಿರುವ ಬಗೆಯನ್ನು ತಿಳಿಸಬೇಕಾಗಿರುವ (3ಕ) ಸೊಲ್ಲು ಸರಿಯಿದೆ, ಮತ್ತು ಅದರ ಮೂಲಕ ಹಿಂದೆ ನಡೆದಿರುವ ಬಗೆಯನ್ನು ತಿಳಿಸಹೋಗುವ (3ಚ) ಸೊಲ್ಲು ಸರಿಯಿಲ್ಲ. ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತು ಮಾಡಿಸುವಲ್ಲಿ ಮೊದಲಿಗೆ ಇದು ಇಲ್ಲವೇ ಅದು ಎಂಬ ತೋರುಪದ ಬಳಕೆಯಾಗುತ್ತದೆ; ಆ ವ್ಯಕ್ತಿ ಹತ್ತಿರವಿದ್ದರೆ ಇದು, ಮತ್ತು ದೂರ ಇದ್ದರೆ ಅದು; ಈ ಎರಡು ತೋರುಪದಗಳು ಹೊರತೋರ್ಕೆಯ ಮೂಲಕ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸುತ್ತವೆ; ಹಾಗೆ ಗುರುತಿಸಿದ ಮೇಲೆ, ಆ ವ್ಯಕ್ತಿ ಇಲ್ಲವೇ ವಸ್ತು ಎಂತಹವು ಎಂಬುದನ್ನು ತಿಳಿಸುವುದಕ್ಕಾಗಿ ಒಂದು ಹೆಸರುಕಂತೆಯನ್ನು ಬಳಸಲಾಗುತ್ತದೆ: (1ಕ) ಇದು ನನ್ನ ಅಣ್ಣ. (1ಚ) ಅದು ಈ ಊರಿನ ಆಸ್ಪತ್ರೆ. (1ಟ) ಅದು ನಮ್ಮ ಊರಿನ ಗುರಿಕಾರರು, (1ತ) ಇದೊಂದು ಚಂದದ ಆಟಿಗೆ. (1ಪ) ಇದು ನಾನು (ಒಂದು ಪೊಟೊವನ್ನು ತೋರಿಸುತ್ತ) ಈ ಬಳಕೆಯಲ್ಲಿ ತೋರುಪದಕ್ಕೂ ಅದು ಗುರುತು ಮಾಡುವ ಪಾಂಗಿಗೂ (ಹೆಸರುಕಂತೆಗೂ) ನಡುವೆ ಹೊಂದಾಣಿಕೆಯಿಲ್ಲ ಎಂಬುದನ್ನು ಗಮನಿಸಬಹುದು. ಇಲ್ಲಿ ತೋರುಪದ ಹೊರತೋರ್ಕೆಯನ್ನು ಬಳಸುತ್ತಿದೆಯಲ್ಲದೆ ಒಳತೋರ್ಕೆ (ಪಾಂಗುತೋರ್ಕೆ)ಯನ್ನಲ್ಲ ಎಂಬುದೇ ಇದಕ್ಕೆ ಕಾರಣ.

10.3.1 ಹೊರತೋರ್ಕೆಯ ಬಳಕೆ

ಒಂದು ತೋರುಪದ ಹೊರತೋರ್ಕೆಯನ್ನು ಬಳಸುತ್ತಿದೆಯಾದರೆ, ಅದು ಯಾವುದನ್ನು ಪಾಂಗಾಗಿ ಬಳಸುತ್ತದೆ ಎಂಬುದನ್ನು ತಿಳಿಯಲು ಅದನ್ನು ಬಳಸಿರುವ ಸೊಲ್ಲನ್ನಶ್ಟೇ ಗಮನಿಸಿದರೆ ಸಾಕಾಗುವುದಿಲ್ಲ; ಆಡುಗನ ಜಾಗ, ಹೊತ್ತು, ಅವನ ಬಳಿಯಿರುವ ವಸ್ತುಗಳು ಇಲ್ಲವೇ ಜನರು, ಮೊದಲಾದ ಆತನ ಕುಳ್ಳಿಹಕ್ಕೆ ಸಂಬಂದಿಸಿದವುಗಳನ್ನೂ ಗಮನಿಸಬೇಕಾಗುತ್ತದೆ. (1) ಎಲ್ಲಾ ಬಗೆಯ ತೋರುಪದಗಳನ್ನೂ ಹೊರತೋರ್ಕೆಯಲ್ಲಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಗಿಡಗಳಿಗೆ ಜಾನಕಿ ನೀರು ಹಾಕಿದ್ದಾಳಾ? (1ಚ) ಇವರು ಯಾವ ಊರಿನಿಂದ ಬಂದಿದ್ದಾರೆ? (1ಟ) ಕುಡಿಯುವ ನೀರಿಗೆ ಇಲ್ಲಿ ತುಂಬಾ ತೊಂದರೆಯಿದೆ. (1ತ) ಈ ಹಣ್ಣನ್ನು ಹೀಗೆ ಸುಲಿಯಬೇಕು. (1ಪ) ನನ್ನ ಕಯ್ಯಲ್ಲಿ ಇಶ್ಟು ಹಣ ಇದೆ, ನೋಡಿ. (1ಕ)ದಲ್ಲಿ ಬಂದಿರುವ ಈ ಎಂಬ ತೋರುಪದ ಯಾವ ಗಿಡಗಳನ್ನು ಗುರುತಿಸುತ್ತಿದೆ ಎಂಬುದನ್ನು ತಿಳಿಯಲು ಅದರ ಆಡುಗ ಬೆರಳಿನಿಂದ ಯಾವ ಗಿಡಗಳನ್ನು ತೋರಿಸುತ್ತಿದ್ದಾನೆ ಎಂಬುದನ್ನು ಗಮನಿಸಬೇಕಾಗುತ್ತದೆ; ಉಳಿದ ಸೊಲ್ಲುಗಳಲ್ಲಿಯೂ ಇವರು, ಇಲ್ಲಿ, ಈ, ಹೀಗೆ, ಮತ್ತು ಇಶ್ಟು ಎಂಬ ಪದಗಳ ಬಳಕೆಯಲ್ಲಿ ಇದೇ ರೀತಿಯಲ್ಲಿ ಇಂತಹದೇ ಹೊರತೋರ್ಕೆಯ ಬಳಕೆಯಾಗಿದೆ. ಮೇಲಿನ ಸೊಲ್ಲುಗಳಲ್ಲಿ ಹೊರತೋರ್ಕೆಯನ್ನು ಬಳಸಿರುವ ಹತ್ತಿರದ ತೋರುಪದಗಳನ್ನು ಕೊಡಲಾಗಿದೆ; ಇದೇ ರೀತಿಯಲ್ಲಿ ಎಲ್ಲಾ ಬಗೆಯ ದೂರದ ತೋರುಪದಗಳನ್ನೂ ಹೊರತೋರ್ಕೆಯಲ್ಲಿ ಬಳಸಲು ಬರುತ್ತದೆ: (1ಕ) ಆಕೆ ಉಟ್ಟಿರುವ ಹಸುರು ಸೀರೆ ತುಂಬಾ ಚನ್ನಾಗಿದೆ. (1ಚ) ಆ ಗಿಡದಲ್ಲಿ ಒಂದು ಹೂವಶ್ಟೇ ಉಳಿದಿದೆ. (1ಟ) ಅಶ್ಟು ದೊಡ್ಡ ಕಲ್ಲನ್ನು ರಾಜು ಒಬ್ಬನೇ ಹೊತ್ತು ತಂದಿದ್ದಾನೆ. (2) ಹೊರತೋರ್ಕೆಯಲ್ಲಿ ಬಳಕೆಯಾಗುವ ಕುಳ್ಳಿಹದ ಹರವು ತುಂಬಾ ಕಡಿಮೆಯಿರಬಲ್ಲುದು, ಇಲ್ಲವೇ ತುಂಬಾ ಹೆಚ್ಚೂ ಇರಬಲ್ಲುದು. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಈ ಕೋಣೆಯಲ್ಲಿ ಮೂರು ಮೇಜುಗಳಿವೆ. (1ಚ) ಈ ದೇಶದಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಕಡಿಮೆ. (1ಟ) ಈ ಜಗತ್ತಿನಲ್ಲಿ ಹಣವಿಲ್ಲದೆ ಬದುಕು ನಡೆಯದು.

(1ಕ)ದಲ್ಲಿ ಬಂದಿರುವ ಈ ಕೋಣೆಯಲ್ಲಿ ಎಂಬುದು ಬಳಸುವ ಕುಳ್ಳಿಹದ ಹರವಿಗಿಂತ (1ಚ)ದಲ್ಲಿ ಬಂದಿರುವ ಈ ದೇಶದಲ್ಲಿ ಎಂಬುದು ಬಳಸುವ ಕುಳ್ಳಿಹದ ಹರವು ದೊಡ್ಡದು, ಮತ್ತು (1ಟ)ದಲ್ಲಿ ಬಂದಿರುವ ಈ ಜಗತ್ತಿನಲ್ಲಿ ಎಂಬುದು ಬಳಸುವ ಕುಳ್ಳಿಹದ ಹರವು ಅದಕ್ಕಿಂತಲೂ ದೊಡ್ಡದು. (3) ಹೊರತೋರ್ಕೆಯಲ್ಲಿ ಬಳಕೆಯಾಗುವ ಆಡುಗನ ಕುಳ್ಳಿಹ ನಿಜವಾದುದಿರಬಹುದು, ಇಲ್ಲವೇ ಕಲ್ಪಿತವಾದುದೂ ಇರಬಹುದು; ಎತ್ತುಗೆಗಾಗಿ, ಕತೆ-ಕಾದಂಬರಿಗಳಲ್ಲಿ ಬರುವ ತೋರುಪದಗಳು ಕಲ್ಪಿತವಾಗಿರುವಂತಹ ಕುಳ್ಳಿಹವನ್ನು ಬಳಸಿಕೊಳ್ಳುತ್ತವೆ; ಇದನ್ನು ಒಂದು ಕತೆಯಲ್ಲಿ ಬಂದಿರುವ ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (1) ಹುಡುಗ ಇವನ ಬೆನ್ನಿಗೆ ಗುದ್ದಿದುದನ್ನು ಯಾರೂ ನೋಡಲಿಲ್ಲ. (1)ನೇ ಸೊಲ್ಲಿನಲ್ಲಿ ಬಂದಿರುವ ಇವನ ಎಂಬ ತೋರುಪದ ಹೊರತೋರ್ಕೆಯನ್ನು ಬಳಸಿದೆ; ಆದರೆ, ಅದು ಯಾರನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಲು ಆ ಕತೆಗೆ ಸಂಬಂದಿಸಿದಂತಹ ಒಂದು ಕುಳ್ಳಿಹವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಆದರೆ, ಆ ವ್ಯಕ್ತಿಯನ್ನು ಕತೆಯಲ್ಲೇನೇ ಮೊದಲಿಗೆ ಗುರುತಿಸಿರುವ ಕಾರಣ, ಇದು ಒಳತೋರ್ಕೆಯೇ (ಪಾಂಗುತೋರ್ಕೆ) ಎಂದೂ ಹೇಳಲು ಬರುತ್ತದೆ. (4) ಇನ್ನೊಬ್ಬನ ಮಾತನ್ನು ಎತ್ತಿಹೇಳುವ ಸಂದರ್ಬದಲ್ಲಿ ಎರಡು ಬಗೆಯ ಕುಳ್ಳಿಹಗಳು ಬಳಕೆಯಾಗುತ್ತಿದ್ದು, ಅವುಗಳೊಳಗೆ ಹೊಂದಾಣಿಕೆಯಿರಬೇಕಾಗುತ್ತದೆ: (1ಕ) ಇದನ್ನು ನಾನು ಒಡೆದದ್ದು. (1ಚ) ಇದನ್ನು ನಾನು ಒಡೆದದ್ದೆಂದು ರಾಜು ಹೇಳಿದ್ದಾನೆ. (1ಟ) ಅದನ್ನು ನಾನು ಒಡೆದದ್ದೆಂದು ರಾಜು ಹೇಳಿದ್ದಾನೆ. (1ಕ) ಸೊಲ್ಲು ರಾಜುವಿನ ಹೇಳಿಕೆಯಾಗಿದೆ; ಅದರಲ್ಲಿ ಬಂದಿರುವ ಇದನ್ನು ಎಂಬ ತೋರುಪದ ರಾಜುವಿನ ಕುಳ್ಳಿಹವನ್ನು ಹೊರತೋರ್ಕೆಯಾಗಿ ಬಳಸಿದೆ; ಆತನು ತನ್ನ ಹತ್ತಿರ ಇರುವ ವಸ್ತುವೊಂದನ್ನು ತೋರಿಸುತ್ತಿದ್ದು, ಅದರ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಇದನ್ನು ಎಂಬ ತೋರುಪದವನ್ನು ಬಳಸಿರುತ್ತಾನೆ. (1ಚ) ಸೊಲ್ಲಿನಲ್ಲಿ ರಾಜುವಿನ (1ಕ) ಸೊಲ್ಲನ್ನು ಎತ್ತಿಹೇಳಲಾಗಿದೆ; ಆದರೆ, ಅದರಲ್ಲಿ ಬಂದಿರುವ ಇದನ್ನು ಎಂಬ ಪದ ಅದರ ಆಡುಗನ ಕುಳ್ಳಿಹವನ್ನು ಹೊರತೋರ್ಕೆಯಾಗಿ ಬಳಸಿದೆ; (1ಕ) ಸೊಲ್ಲನ್ನಾಡುವಾಗ ರಾಜುವಿನ

ಕುಳ್ಳಿಹದಲ್ಲಿ ಯಾವ ವಸ್ತು ಇತ್ತೋ ಅದು (1ಚ) ಸೊಲ್ಲನ್ನಾಡುವಾಗ ಅದರ ಆಡುಗನ ಕುಳ್ಳಿಹದಲ್ಲೂ ಇದೆ ಎಂಬುದೇ ಈ ರೀತಿ ಇದನ್ನು ಎಂಬ ಪದವನ್ನು ಈ ರೀತಿ (1ಚ)ದಲ್ಲಿ ಮಾರ್ಪಡಿಸದೆ ಬಳಸಲು ಕಾರಣ. ಇದಕ್ಕೆ ಬದಲು, ರಾಜುವಿನ ಕುಳ್ಳಿಹದಲ್ಲಿದ್ದ ವಸ್ತು (1ಟ) ಸೊಲ್ಲನ್ನಾಡಿರುವ ಆಡುಗನ ಕುಳ್ಳಿಹದಲ್ಲಿ ಇರಲಿಲ್ಲವಾದ ಕಾರಣ, ಅದರಲ್ಲಿ ಆ ವಸ್ತುವನ್ನು ಗುರುತಿಸುವುದಕ್ಕಾಗಿ ಅದನ್ನು ಎಂಬ ದೂರದ ತೋರುಪದವನ್ನು ಬಳಸಲಾಗಿದೆ. (5) ಬೇರೆ ಬೇರೆ ಊರುಗಳಲ್ಲಿರುವ ಆಡುಗ ಮತ್ತು ಕೇಳುಗರು ನಡೆಸುವ ಸೂಳುನುಡಿಯಲ್ಲಿ ಬೇರೆ ಬೇರೆ ಕುಳ್ಳಿಹಗಳು ಬಳಕೆಯಾಗುತ್ತಿರುವುದನ್ನು ಕಾಣಬಹುದು: (1ಕ) ರಾಜು: ಇಲ್ಲಿ ತುಂಬಾ ಮಳೆಯಿದೆ. (1ಚ) ಹರಿ: ಇಲ್ಲಿಯೂ ತುಂಬಾ ಮಳೆಯಿದೆ. (1ಕ)ದಲ್ಲಿ ಬಳಕೆಯಾಗಿರುವ ಇಲ್ಲಿ ಎಂಬುದು ರಾಜುವಿನ ಊರನ್ನು ತಿಳಿಸುತ್ತದೆ, ಮತ್ತು (1ಚ)ದಲ್ಲಿ ಬಳಕೆಯಾಗಿರುವ ಅದೇ ತೋರುಪದ ಅದಕ್ಕಿಂತ ತೀರ ಬೇರಾಗಿರುವ ಹರಿಯ ಊರನ್ನು ತಿಳಿಸುತ್ತದೆ. (1ಕ)ದಲ್ಲಿ ರಾಜುವಿನ ಕುಳ್ಳಿಹ ಬಳಕೆಯಾಗಿದೆ, ಮತ್ತು (1ಚ)ದಲ್ಲಿ ಹರಿಯ ಕುಳ್ಳಿಹ ಬಳಕೆಯಾಗಿದೆ. (6) ಒಂದು ನಾಡುತಿಟ್ಟ(ಬೂಪಟ)ವನ್ನು ಬಳಸಿ ನುಡಿಯುವ ಮಾತಿನಲ್ಲಿ ತೋರುಪದ ಗುರುತಿಸುವ ಜಾಗ ಮಾರೆಡೆಗೊಳ್ಳುತ್ತದೆ: (1) ಇವತ್ತು ನಾನು ಹೋಗಬೇಕಾಗಿರುವ ಜಾಗ ಇಲ್ಲಿದೆ. ನಿಜಕ್ಕೂ ಆಡುಗನು ಹೋಗಬೇಕಾಗಿರುವ ಜಾಗ ನಾಡುತಿಟ್ಟದಲ್ಲಿ ಆತ ತೋರಿಸುತ್ತಿರುವ ಜಾಗವಲ್ಲ, ಅದು ಗುರುತಿಸುವ ಬೇರೊಂದು ಜಾಗ. (7) ಆಡುಗನ ಕುಳ್ಳಿಹ ಎಂಬುದು ಮಾರ್ಪಡುತ್ತಿರಬಲ್ಲುದು, ಮತ್ತು ಅದನ್ನು ಬಳಸುವ ತೋರುಪದಗಳೂ ಈ ಮಾರ್ಪಾಡನ್ನು ತೋರಿಸುತ್ತಿರಬಲ್ಲುವು: (1ಕ) ಈಗ ರಾಜು ಕುಳಿತಿದ್ದಾನೆ; ಈಗ ನಿಂತಿದ್ದಾನೆ. (1ಚ) ಇಲ್ಲಿ ಬೇಡ; ಹಾ! ಇಲ್ಲಿ ಇಳಿಯಿರಿ. (1ಕ)ದಲ್ಲಿ ಈಗ ಎಂಬ ತೋರುಪದ ಎರಡು ಬಾರಿ ಬಂದಿದೆ; ಆದರೆ, ಅದು ಎರಡು ಬೇರೆ ಬೇರೆ ಹೊತ್ತುಗಳನ್ನು ತಿಳಿಸುತ್ತದೆ; ಇದೇ ರೀತಿಯಲ್ಲಿ (1ಚ)ದಲ್ಲಿ ಬಂದಿರುವ ಇಲ್ಲಿ ಎಂಬ ತೋರುಪದವೂ ಎರಡು ಬೇರೆ ಬೇರೆ

ಜಾಗಗಳನ್ನು ತಿಳಿಸುತ್ತಿದೆ; (1ಚ)ದ ಎರಡು ಸೊಲ್ಲುಗಳನ್ನು ಚಲಿಸುತ್ತಿರುವ ಒಂದು ಗಾಡಿಯಲ್ಲಿ ಕುಳಿತಿರುವ ಆಡುಗನು ಹೇಳಿರಬಹುದು. (8) ಕೆಲವು ಕಡೆಗಳಲ್ಲಿ ಹೊರತೋರ್ಕೆಯ ತೋರುಪದವನ್ನು ಬಳಸಿದಾಗ ಅದರೊಂದಿಗೆ ಕಯ್ಸನ್ನೆ ಇಲ್ಲವೇ ಕಣ್ಣುಸನ್ನೆಯನ್ನೂ ಆಡುಗನು ಬಳಸಬೇಕಾಗುತ್ತದೆ; ಆದರೆ, ಬೇರೆ ಕೆಲವು ಕಡೆಗಳಲ್ಲಿ ಅದು ಬೇಕಾಗುವುದಿಲ್ಲ: (1ಕ) ಈ ಬೆರಳಿಗೆ ಪೆಟ್ಟಾಗಿದೆ. (1ಚ) ಮೊದಲಿಗೆ ಈ ಮರ ಮುರಿಯಿತು; ಆಮೇಲೆ ಆ ಪಕ್ಕದ ಮರ ಮುರಿಯಿತು. (1ಟ) ನನಗೆ ಈ ಊರು ಹಿಡಿಸಿದೆ. (1ಕ) ಸೊಲ್ಲನ್ನು ಆಡುವುದರೊಂದಿಗೆ ಪೆಟ್ಟಾಗಿರುವ ಬೆರಳನ್ನೂ ಎತ್ತಿಹಿಡಿಯದಿದ್ದಲ್ಲಿ ಪೆಟ್ಟಾಗಿರುವುದು ಯಾವ ಬೆರಳಿಗೆ ಎಂಬುದು ಕೇಳುಗನಿಗೆ ಗೊತ್ತಾಗಲಾರದು; (1ಚ)ದಲ್ಲೂ ಹೀಗೆಯೇ; ಈ ಮರ ಮತ್ತು ಆ ಮರ ಎಂಬ ಪದಕಂತೆಗಳನ್ನು ಬಳಸುತ್ತಿರುವಾಗ, ಅವು ಗುರುತಿಸುವ ಮರಗಳನ್ನು ಒಂದಾದ ಮೇಲೆ ಒಂದರಂತೆ ಕಯ್ಸನ್ನೆಯಿಂದ ಇಲ್ಲವೇ ಕಣ್ಣುಸನ್ನೆಯಿಂದ ತೋರಿಸುವ ಮೂಲಕ ಮೊದಲು ಮುರಿದ ಮರ ಯಾವುದು, ಮತ್ತು ಆಮೇಲೆ ಮುರಿದುದು ಯಾವುದು ಎಂಬುದನ್ನು ಕೇಳುಗನಿಗೆ ತಿಳಿಸಲಾಗುತ್ತದೆ. ಇದಕ್ಕೆ ಬದಲು, (1ಟ) ಸೊಲ್ಲನ್ನು ಆಡುವುದರೊಂದಿಗೆ, ಆಡುಗನಿಗೆ ಹಿಡಿಸಿರುವ ಊರು ಯಾವುದು ಎಂಬುದನ್ನು ಕಯ್ಸನ್ನೆಯಿಂದ ತೋರಿಸಬೇಕಾಗಿಲ್ಲ; ಯಾಕೆಂದರೆ, ಆಡುಗನಿರುವ ಊರೇ ಆತನಿಗೆ ಹಿಡಿಸಿರುವ ಊರು ಎಂಬುದು ಅಂತಹ ಸನ್ನೆಯಿಲ್ಲದಿದ್ದರೂ ಕೇಳುಗನಿಗೆ ಗೊತ್ತಾಗುತ್ತದೆ. (9) ಇಗೋ ಮತ್ತು ಅಗೋ ಎಂಬ ಎರಡು ತೋರುಪದಗಳಿಗೆ ಹೊರತೋರ್ಕೆಯ ಮೂಲಕ ಪಾಂಗೊಂದನ್ನು ಕೇಳುಗನ ಗಮನಕ್ಕೆ ತರುವ ಕೆಲಸ ಮಾತ್ರ ಇದೆ; ಅವನ್ನು ಎಲ್ಲಾ ಬಗೆಯ ಸೊಲ್ಲುಗಳೊಂದಿಗೂ ಬಳಸಲು ಬರುತ್ತಿದ್ದು, ಅವು ಆ ಸೊಲ್ಲಿನ ಹೊರಗೆ ನಿಲ್ಲುತ್ತವೆ; ಅವು ನೇರವಾಗಿ ಯಾವ ಸೊಲ್ಲಿನಲ್ಲೂ ತೊಡಗಿಕೊಳ್ಳುವುದಿಲ್ಲ. ಅವುಗಳ ಮೂಲಕ ಕೇಳುಗನ ಗಮನಕ್ಕೆ ಬರುವ ಪಾಂಗು ಮಾತ್ರ ಆ ಸೊಲ್ಲಿನಲ್ಲಿ ನೇರವಾಗಿ ತೊಡಗಿಕೊಂಡಿರುತ್ತದೆ: (1ಕ) ಇಗೋ, ಈ ಗೊಂಬೆಯನ್ನು ನಾನು ನಿನಗಾಗಿಯೇ ಪುಣೆಯಿಂದ ತಂದಿದ್ದೇನೆ. (1ಚ) ಅಗೋ, ನೀನು ಹೇಳಿದ ಕೆಲಸ ಮುಗಿಯಿತು. (1ಟ) ಇಗೋ, ಈ ಕಟ್ಟನ್ನು ಒಳಗೆ ಇರಿಸಿಬಿಡು.

(1ಕ) ಸೊಲ್ಲಿನಲ್ಲಿ ಗೊಂಬೆಯ ಕಡೆಗೆ ಕೇಳುಗನ ಗಮನವನ್ನು ಸೆಳೆಯುವುದಕ್ಕಾಗಿ ಇಗೋ ಪದವನ್ನು ಬಳಸಲಾಗಿದೆ; ಅದು ಆ ಒಂದು ಕೆಲಸವನ್ನು ಬಿಟ್ಟರೆ, ಅದರ ಮುಂದೆ ಬರುವ ಸೊಲ್ಲಿನಲ್ಲಿ ಬೇರೆ ಯಾವ ಕೆಲಸವನ್ನೂ ನಡೆಸುವುದಿಲ್ಲ. ಅದರ ಮೂಲಕ ಕೇಳುಗನ ಗಮನಕ್ಕೆ ಬಂದಿರುವ ಗೊಂಬೆ ಎಂಬುದು ಮಾತ್ರ ಆ ಸೊಲ್ಲಿನಲ್ಲಿ ಈಡು ಪಾಂಗಾಗಿ ತೊಡಗಿಕೊಂಡಿದೆ.

10.3.2 ಎರಡು ಬಗೆಯ ತಿಳಿದ ತೋರುಪದಗಳು

ಎಲ್ಲಾ ಬಗೆಯ ತಿಳಿದ ತೋರುಪದಗಳೂ ಹತ್ತಿರದವು ಮತ್ತು ದೂರದವು ಎಂಬುದಾಗಿ ಎರಡೆರಡು ಪದಗಳ ಜೋಡಿಗಳಲ್ಲಿ ಬರುತ್ತವೆ: ಇವನು-ಅವನು, ಇವಳು-ಅವಳು, ಇಲ್ಲಿ-ಅಲ್ಲಿ, ಇಶ್ಟು-ಅಶ್ಟು ಮೊದಲಾದ ಈ ತೋರುಪದಗಳ ಜೋಡಿಗಳಲ್ಲಿ ಮೊದಲನೆಯ ಪದ ಆಡುಗನ ಹತ್ತಿರ ಇರುವ ಪಾಂಗನ್ನು ತಿಳಿಸುತ್ತದೆ, ಮತ್ತು ಎರಡನೆಯ ಪದ ಆಡುಗನಿಗಿಂತ ದೂರ ಇರುವ ಪಾಂಗನ್ನು ತಿಳಿಸುತ್ತದೆ. ಮೇಲೆ (10.1.1)ರಲ್ಲಿ ವಿವರಿಸಿದ ಹಾಗೆ, ಈ ಪದಗಳಲ್ಲಿ ಬರುವ ಎರಡು ಅಂಗಗಳಲ್ಲಿ ಮೊದಲನೆಯ ಅಂಗ ಹತ್ತಿರ-ದೂರ ವ್ಯತ್ಯಾಸವನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಇಲ್ಲಿ ಮತ್ತು ಅಲ್ಲಿ ಎಂಬ ಎರಡು ಪದಗಳ ಮೊದಲನೆಯ ಅಂಗದಲ್ಲಿ ಕಾಣಿಸುವ ಇ-ಅ ವ್ಯತ್ಯಾಸ ಹತ್ತಿರ-ದೂರ ವ್ಯತ್ಯಾಸವನ್ನು ತಿಳಿಸುತ್ತದೆ. ಇಂತಹ ಜೋಡಿಗಳಲ್ಲಿರುವ ಎರಡು ಪದಗಳನ್ನು ಒಟ್ಟಿಗೆ ಎದುರೆದುರಾಗಿ ಬಳಸಿರುವಲ್ಲಿ ಅವುಗಳ ನಡುವಿರುವ ಈ ವ್ಯತ್ಯಾಸವನ್ನು ಸರಿಯಾಗಿ ಕಾಣಬಹುದು: (1ಕ) ಇವನು ಅವನಿಗಿಂದ ಮುಂದೆ ಬಂದಿದ್ದಾನೆ. (1ಚ) ಇಲ್ಲಿ ತುಂಬಾ ಚಳಿ; ಅಲ್ಲೇ ಚನ್ನಾಗಿತ್ತು. (1ಟ) ಇಶ್ಟು ಅನ್ನ ಅಶ್ಟು ಜನರಿಗೆ ಸಾಕಾಗದು. (1ಕ)ದಲ್ಲಿ ಇವನು ಎಂಬುದು ಆಡುಗನ ಹತ್ತಿರದ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ಅವನು ಎಂಬುದು ಆತನಿಗಿಂತ ದೂರ ಇರುವ ವ್ಯಕ್ತಿಯನ್ನು ಗುರುತಿಸುತ್ತದೆ. ಇದೇ ರೀತಿಯಲ್ಲಿ, (1ಚ)ದ ಇಲ್ಲಿ-ಅಲ್ಲಿ ಎಂಬವುಗಳ ನಡುವೆ, ಮತ್ತು (1ಟ)ದ ಇಶ್ಟು-ಅಶ್ಟು ಎಂಬವುಗಳ ನಡುವೆ ಆಡುಗನ ಜಾಗಕ್ಕೆ ಸಂಬಂದಿಸಿದಂತಹ ವ್ಯತ್ಯಾಸಗಳಿವೆ. ಆಡುಗನ ಹತ್ತಿರ ಮತ್ತು ದೂರ ಎಂಬ ಎರಡು ಬಗೆಯ ಹುರುಳುಗಳನ್ನು ಕೊಡುವಲ್ಲಿ ಈ ಎರಡು ಬಗೆಯ ಪದಗಳ ನಡುವೆ ಒಂದು ಮುಕ್ಯವಾದ

ವ್ಯತ್ಯಾಸವಿದೆ: ಇವನು, ಇಲ್ಲಿ, ಇಶ್ಟು ಮೊದಲಾದ ಆಡುಗನ ಹತ್ತಿರ ಎಂಬ ಹುರುಳನ್ನು ಕೊಡುವ ಪದಗಳನ್ನು ಮಾತ್ರವೇ ಬಳಸಿರುವಲ್ಲೆಲ್ಲ ಆಡುಗನಿಂದ ದೂರ ಅಲ್ಲ ಎಂಬ ಅಲ್ಲಗಳೆಯುವ ಹುರುಳೂ ಸಿಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಇವನಿಗೆ ಎರಡು ಸಾವಿರ ಕೊಡಿ. (1ಚ) ಆ ಕಲ್ಲುಗಳನ್ನು ಇಲ್ಲಿಗೆ ತಂದುಹಾಕಿ. (1ಟ) ಈ ಚೀಲವನ್ನು ಇಲ್ಲಿಗೆ ತಂದವರು ಯಾರು? (1ಕ-ಟ) ಸೊಲ್ಲುಗಳಲ್ಲಿ ಬಂದಿರುವ ಇವನಿಗೆ, ಇಲ್ಲಿಗೆ, ಮತ್ತು ಈ ಚೀಲ ಎಂಬ ಪದಗಳು ಕಚಿತವಾಗಿ ಆಡುಗನ ಹತ್ತಿರ ಇರುವ ಪಾಂಗುಗಳನ್ನು ತಿಳಿಸುತ್ತಿದ್ದು, ಅವಕ್ಕೆ ಆಡುಗನಿಂದ ದೂರ ಇರುವವಲ್ಲ ಎಂಬ ಅಲ್ಲಗಳೆಯುವ ಹುರುಳೂ ಇದೆಯೆಂದು ಹೇಳಬಹುದು. ಆದರೆ, ಆಡುಗನಿಂದ ದೂರ ಇರುವ ಪಾಂಗುಗಳನ್ನು ತಿಳಿಸುವ ಅವನು, ಅಲ್ಲಿ, ಅದು ಮೊದಲಾದ ಪದಗಳನ್ನು ಹತ್ತಿರ ಇರುವ ಪಾಂಗುಗಳನ್ನು ತಿಳಿಸುವ ಪದಗಳಿಗೆ ಇದಿರಾಗಿ ಬಳಸದಿರುವಲ್ಲಿ ಆ ರೀತಿ ಅವಕ್ಕೆ ಆಡುಗನಿಗೆ ಹತ್ತಿರ ಇರುವ ಪಾಂಗಲ್ಲ ಎಂಬ ಅಲ್ಲಗಳೆಯುವ ಹುರುಳು ಬರುವುದಿಲ್ಲ. (1ಕ) ಅವನನ್ನು ನಾನು ಬೊಂಬಾಯಿಗೆ ಕಳಿಸಬೇಕೆಂದಿದ್ದೇನೆ. (1ಚ) ಅವನನ್ನು ಇಲ್ಲಿ ಕುಳ್ಳಿರಿಸಿದ್ದು ಯಾರು? (1ಟ) ಅವನನ್ನು ಅಲ್ಲಿ ಕುಳ್ಳಿರಿಸಿದ್ದು ಯಾರು? (1ಕ)ದಲ್ಲಿ ಬಂದಿರುವ ಅವನನ್ನು ಎಂಬ ಪದ ಆಡುಗನ ಹತ್ತಿರ ಇರುವ ಒಬ್ಬ ವ್ಯಕ್ತಿಯನ್ನೂ ಗುರುತಿಸಬಲ್ಲುದು, ಇಲ್ಲವೇ ದೂರ ಇರುವ ವ್ಯಕ್ತಿಯನ್ನೂ ಗುರುತಿಸಬಲ್ಲುದು; (1ಚ) ಮತ್ತು (1ಟ) ಸೊಲ್ಲುಗಳನ್ನು ಹೋಲಿಸಿ ನೋಡಿದಲ್ಲಿ ಇದು ಗೊತ್ತಾಗುತ್ತದೆ: (1ಚ)ದಲ್ಲಿ ಅವನನ್ನು ಎಂಬ ಪದ ಗುರುತಿಸುವ ವ್ಯಕ್ತಿಯ ಜಾಗವನ್ನು ಇಲ್ಲಿ ಎಂಬ ಪದದ ಮೂಲಕ ತಿಳಿಸಲು ಸಾದ್ಯವಾಗಿದೆ, ಮತ್ತು (1ಟ)ದಲ್ಲಿ ಅದನ್ನೇ ಅಲ್ಲಿ ಎಂಬ ಪದದ ಮೂಲಕವೂ ತಿಳಿಸಲು ಸಾದ್ಯವಾಗಿದೆ. ಅವನು ಎಂಬ ದೂರದ ತೋರುಪದಕ್ಕೆ ಆಡುಗನ ಹತ್ತಿರ ಇರುವ ಪಾಂಗಲ್ಲ ಎಂಬ ಅಲ್ಲಗಳೆಯುವ ಹುರುಳಿದೆಯಾದಲ್ಲಿ ಅದರ ಜಾಗವನ್ನು ಈ ರೀತಿ ಅಲ್ಲಿ ಮತ್ತು ಇಲ್ಲಿ ಎಂಬ ಎರಡು ಬಗೆಯ ಪದಗಳಿಂದಲೂ ತಿಳಿಸಲು ಸಾದ್ಯವಾಗದು. ಆಡುಗನು ಗುರುತಿಸುತ್ತಿರುವ ಪಾಂಗು ದೂರದ ತೋರುಪದ ತಿಳಿಸುವುದಕ್ಕಿಂತಲೂ ಹೆಚ್ಚು ದೂರದಲ್ಲಿದೆ ಎಂಬುದನ್ನು ತಿಳಿಸಲು ಅದರೊಂದಿಗೆ ಓ ಎಂಬ ಪದವನ್ನು ಬಳಸಲಾಗುತ್ತದೆ:

(1ಕ) ಅವನನ್ನಲ್ಲ, ಓ ಅವನನ್ನು ಬರಹೇಳಿ. (1ಚ) ಓ ಅಲ್ಲಿ ಇರುವ ಮನೆ ಯಾರದು? ಹತ್ತಿರ ಮತ್ತು ದೂರ ಎಂಬ ಜಾಗದ ವ್ಯತ್ಯಾಸ ಈ ಎರಡು ಬಗೆಯ ತೋರುಪದಗಳ ನಡುವಿರುವ ಮುಕ್ಯ ವ್ಯತ್ಯಾಸವೆಂದು ಹೇಳಬಹುದು; ಅದರಿಂದ ಪಡೆಯಬಹುದಾದ ಬೇರೆಯೂ ಕೆಲವು ಬಗೆಯ ಹುರುಳುಗಳನ್ನು ಈ ಎರಡು ಬಗೆಯ ತೋರುಪದಗಳು ಕೊಡಬಲ್ಲುವು. ಎತ್ತುಗೆಗಾಗಿ, ಜಾಗದ ಹತ್ತಿರ-ದೂರ ವ್ಯತ್ಯಾಸದ ಬದಲು ಹೊತ್ತಿನ ಹತ್ತಿರ-ದೂರ ವ್ಯತ್ಯಾಸವನ್ನೂ ಈ ಎರಡು ಬಗೆಯ ತೋರುಪದಗಳು ಕೊಡಬಲ್ಲುವು. ಇದನ್ನು ಮುಕ್ಯವಾಗಿ ಅಂದು-ಇಂದು ಮತ್ತು ಆಗ-ಈಗ ಎಂಬ ತೋರುಪದಗಳ ಬಳಕೆಯಲ್ಲಿ ಕಾಣಬಹುದು: (1ಕ) ಈ ಊರಲ್ಲಿ ಅಂದು ನಲುವತ್ತು ಮನೆಗಳಿದ್ದುವು; ಆದರೆ, ಅವುಗಳಲ್ಲಿ ಇಂದು ಉಳಿದಿರುವುದು ಹತ್ತು ಮಾತ್ರ. (1ಚ) ಆಗ ನೀವು ಇದು ಬೇಡವೆಂದು ಹೇಳಿದ್ದಿರಿ; ಆದರೆ, ಈಗ ಇದನ್ನೇ ಬೇಕೆಂದು ಹೇಳುತ್ತಿದ್ದೀರಿ. ಮೇಲಿನ ಸೊಲ್ಲುಗಳಲ್ಲಿ ಜಾಗದ ಮಾರ್ಪಾಡಿಲ್ಲದಿದ್ದರೂ ಹೊತ್ತಿನ ಮಾರ್ಪಾಡು ನಡೆದಿರುವುದನ್ನು ಕಾಣಬಹುದು.

10.3.3 ಹೊತ್ತಿನ ಹತ್ತಿರ ಮತ್ತು ದೂರ

ತಿಳಿದ ತೋರುಪದಗಳ ಬಳಕೆಯಲ್ಲಿ ಕಾಣಿಸುವ ಹತ್ತಿರ ಮತ್ತು ದೂರ ಎಂಬ ವ್ಯತ್ಯಾಸ ಮುಕ್ಯವಾಗಿ ಆಡುಗನ ಜಾಗಕ್ಕೆ ಸಂಬಂದಿಸಿರುತ್ತದೆ; ಹೊಲಬು (ಹಾಗೆ-ಹೀಗೆ), ಅಳವಿ (ಅಶ್ಟು-ಇಶ್ಟು) ಮತ್ತು ಬಗೆ (ಅಂತಹ-ಇಂತಹ) ಎಂಬವುಗಳನ್ನು ಬಳಸುವಲ್ಲೂ ಜಾಗದ ವ್ಯತ್ಯಾಸವೇ ಹೆಚ್ಚಿನೆಡೆಗಳಲ್ಲೂ ಕಾಣಿಸಿಕೊಳ್ಳುತ್ತದೆ: (1ಕ) ಅವನು ಹಾಗೆ ಹೇಳುತ್ತಾನೆ, ಇವನು ಹೀಗೆ ಹೇಳುತ್ತಾನೆ. (1ಚ) ಅವನು ಅಶ್ಟು ಕೊಟ್ಟಿದ್ದಾನೆ, ಇವನು ಇಶ್ಟು ಕೊಟ್ಟಿದ್ದಾನೆ. (1ಟ) ನಿನ್ನದು ಅಂತಹ ಕೆಲಸ, ನನ್ನದು ಇಂತಹ ಕೆಲಸ. ಆದರೆ, ಮೇಲೆ ತಿಳಿಸಿದ ಹಾಗೆ, ಹೊತ್ತು ಮತ್ತು ದಿನಗಳನ್ನು ತಿಳಿಸುವ ಆಗ- ಈಗ ಮತ್ತು ಅಂದು-ಇಂದು ಎಂಬ ಎರಡು ಜೋಡಿಗಳನ್ನು ಆಡುಗನ ಜಾಗದ ಬದಲು ಹೊತ್ತಿಗೆ ಸಂಬಂದಿಸಿದಂತೆ ದೂರ ಇಲ್ಲವೇ ಹತ್ತಿರ ಇರುವ

ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬಳಸಲಾಗುತ್ತದೆ. ಹೀಗೆ ಬಳಸಿದಾಗ, ಅವುಗಳೊಂದಿಗೆ ಬರುವ ಬೇರೆ ತೋರುಪದಗಳೂ ಅದೇ ವ್ಯತ್ಯಾಸವನ್ನು ತಿಳಿಸಬಲ್ಲುವು: (1ಕ) ನೀವು ಆಗ ಹಾಗೆ ಹೇಳಿದ್ದಿರಿ, ಈಗ ಹೀಗೆ ಹೇಳುತ್ತೀರಿ. (1ಚ) ಆವತ್ತು ಅಶ್ಟು ಕೊಟ್ಟವನು, ಈವತ್ತು ಇಶ್ಟು ಕೊಟ್ಟಿದ್ದಾನೆ. (1ಟ) ಅಂದು ಅಲ್ಲಿಗೆ ಹೋಗಿದ್ದೆ, ಇಂದು ಇಲ್ಲಿಗೆ ಬಂದಿದ್ದೇನೆ. (1ಕ)ದಲ್ಲಿ ಆಗ ಮತ್ತು ಈಗ ಎಂಬವುಗಳು ಆಡುಗನ ಹೊತ್ತಿಗೆ ಸಂಬಂದಿಸಿದಂತೆ ದೂರ ಮತ್ತು ಹತ್ತಿರ ನಡೆದ ಎಸಕಗಳನ್ನು ತಿಳಿಸುತ್ತವಲ್ಲದೆ, ಆತನ ಜಾಗಕ್ಕೆ ಸಂಬಂದಿಸಿದಂತೆ ದೂರ ಇಲ್ಲವೇ ಹತ್ತಿರ ನಡೆದ ಎಸಕಗಳನ್ನಲ್ಲ; ಅವುಗಳೊಂದಿಗೆ ಬಂದಿರುವ ಹಾಗೆ ಮತ್ತು ಹೀಗೆ ಎಂಬವುಗಳೂ ಅದೇ ಹೊತ್ತಿನ ವ್ಯತ್ಯಾಸಕ್ಕೆ ಸಂಬಂದಿಸಿದಂತಹ ಅಳವಿಯ ಮತ್ತು ಬಗೆಯ ವ್ಯತ್ಯಾಸಗಳನ್ನು ತಿಳಿಸುತ್ತವೆಯೆಂದು ಹೇಳಬಹುದು. ಹಲವು ಕಡೆಗಳಲ್ಲಿ ಈ ರೀತಿ ಎರಡು ಬಗೆಯ ತೋರುಪದಗಳನ್ನು ಒಟ್ಟಿಗೆ ಬಳಸಬೇಕಾದಾಗ, ಅವಕ್ಕೆ ಸಂಬಂದಿಸಿರುವ ಹತ್ತಿರ-ದೂರ ವ್ಯತ್ಯಾಸಗಳ ನಡುವೆ ಹೊಂದಾಣಿಕೆಯೂ ಇರಬೇಕಾಗುತ್ತದೆ; ಅಂತಹ ಹೊಂದಾಣಿಕೆಯಿಲ್ಲದ ಕೆಳಗೆ ಕೊಟ್ಟಿರುವ ಸೊಲ್ಲು ಸರಿಯಾಗಿಲ್ಲವೆಂಬುದನ್ನು ಗಮನಿಸಬಹುದು: (1ತ) *ಆಗ ಹೀಗೆ ಹೇಳಿದ, ಈಗ ಹಾಗೆ ಹೇಳುತ್ತಾನೆ. ಆಗ ಪದದೊಂದಿಗೆ ಹೀಗೆ ಎಂಬುದನ್ನು, ಮತ್ತು ಈಗ ಪದದೊಂದಿಗೆ ಹಾಗೆ ಎಂಬುದನ್ನು ಬಳಸಿರುವ (1ತ) ಸೊಲ್ಲು ಸರಿಯಾಗಿಲ್ಲ; ಇದಕ್ಕೆ ಕಾರಣವೇನೆಂದರೆ, ಹೀಗೆ-ಹಾಗೆ ಎಂಬವು ಒಟ್ಟಾಗಿ ಆಗ-ಈಗ ಎಂಬವುಗಳು ತಿಳಿಸುವ ಹೊತ್ತಿನ ವ್ಯತ್ಯಾಸಕ್ಕೆ ಹೊಂದಿಕೊಳ್ಳುವುದಿಲ್ಲ. ಆದರೆ, ಒಟ್ಟಿಗೆ ಬಂದಿರುವ ತೋರುಪದಗಳಲ್ಲಿ ಒಂದು ಹೊತ್ತಿಗೆ ಸಂಬಂದಿಸಿದ ಹತ್ತಿರ-ದೂರವನ್ನು ಮತ್ತು ಇನ್ನೊಂದು ಜಾಗಕ್ಕೆ ಸಂಬಂದಿಸಿದ ಹತ್ತಿರ-ದೂರವನ್ನು ತಿಳಿಸುತ್ತಿದ್ದಲ್ಲಿ, ಅವುಗಳ ನಡುವೆ ಇಂತಹ ಹೊಂದಾಣಿಕೆ ಇರಬೇಕಾಗುವುದಿಲ್ಲ: (1ಕ) ಆವತ್ತು ಇಲ್ಲಿ ಕುಳಿತಿದ್ದ, ಈವತ್ತು ಅಲ್ಲಿ ಕುಳಿತಿದ್ದಾನೆ. (1ಚ) ನಿನ್ನೆ ಇಂತಹದನ್ನು ಕೊಟ್ಟವನು ಇವತ್ತು ಅಂತಹದನ್ನು ಕೊಟ್ಟರೆ ಹೇಗೆ?

(1ಕ)ದಲ್ಲಿ ಆವತ್ತು-ಈವತ್ತು ಎಂಬುದು ಹೊತ್ತಿನ ಹತ್ತಿರ-ದೂರವನ್ನು ಮತ್ತು ಇಲ್ಲಿ-ಅಲ್ಲಿ ಎಂಬುದು ಜಾಗದ ಹತ್ತಿರ-ದೂರವನ್ನು ತಿಳಿಸುವುದರಿಂದ, ಅವುಗಳ ನಡುವೆ ಹೊಂದಾಣಿಕೆಯಿಲ್ಲದಿದ್ದರೂ ಸೊಲ್ಲು ಸರಿಯಾಗಿದೆ; (1ಚ)ದಲ್ಲೂ ಹೀಗೆಯೇ. ಆ ಮತ್ತು ಈ ಎಂಬ ತೋರುಪದಗಳ ಬಳಕೆಯಲ್ಲಿ ಇನ್ನೊಂದು ಬಗೆಯ ಹೊತ್ತಿನ ವ್ಯತ್ಯಾಸವೂ ಕಾಣಿಸಿಕೊಳ್ಳುತ್ತದೆ; ಆ ಎಂಬುದು ಹಿಂದಿನ ಹೊತ್ತನ್ನು ಮತ್ತು ಈ ಎಂಬುದು ಮುಂದಿನ ಹೊತ್ತನ್ನು ತಿಳಿಸಬಲ್ಲುವು: (1ಕ) ಈ ರವಿವಾರ ನಾವು ಹಂಪಿಗೆ ಹೋಗಲಿದ್ದೇವೆ. (1ಚ) ಆ ರವಿವಾರ ನಾವು ಮನೆಯಲ್ಲೇ ಇದ್ದೆವು. (1ಟ) ಆ ರವಿವಾರ ನಾವು ಹಂಪಿಗೆ ಹೋಗಲಿದ್ದೇವೆ. (1ಚ) ಸೊಲ್ಲಿನಲ್ಲಿ ಈ ರವಿವಾರ ಎಂಬುದನ್ನು ಬಳಸಲು ಬರುವುದಿಲ್ಲ; ಆದರೆ, (1ಕ) ಸೊಲ್ಲಿನಲ್ಲಿ ಆ ರವಿವಾರ ಎಂಬುದನ್ನು ಬಳಸಲು ಬರುತ್ತದೆ; ಇದನ್ನು (1ಟ) ಸೊಲ್ಲಿನಲ್ಲಿ ಕಾಣಬಹುದು. ಇದಲ್ಲದೆ, ಮುಂದಿನ ಹೊತ್ತನ್ನು ತಿಳಿಸುವ ಕೆಳಗೆ ಕೊಟ್ಟಿರುವಂತಹ ಸೊಲ್ಲಿನಲ್ಲಿಯೂ ಆ ಎಂಬುದು ಬರಬಲ್ಲುದು: (1ತ) ಅವರು ಯಾವ ರವಿವಾರ ಇಲ್ಲಿಗೆ ಬರುತ್ತಾರೋ, ಆ ರವಿವಾರ ನಾವು ಎಲ್ಲಿಗೂ ಹೋಗುವುದಿಲ್ಲ. ಹಾಗೆ ಮತ್ತು ಹೀಗೆ ಎಂಬ ಪದಗಳ ಬಳಕೆಯಲ್ಲಿಯೂ ಇಂತಹದೇ ವ್ಯತ್ಯಾಸ ಇರುವುದನ್ನು ಕಾಣಬಹುದು: (1ಕ) ಅವರು ಹೇಳಿದುದನ್ನು ಹೀಗೆ ಅಡಕವಾಗಿ ತಿಳಿಸಬಹುದು. (1ಚ) ಅವರು ಹಾಗೆ ಹೇಳಿದುದು ಯಾರಿಗೂ ಹಿಡಿಸಲಿಲ್ಲ. (1ಕ)ದಲ್ಲಿ ಬಂದಿರುವ ಹೀಗೆ ಎಂಬುದು ಮುಂದೆ ತಿಳಿಸಲಿರುವ ಬಗೆಯನ್ನು ಸೂಚಿಸುತ್ತದೆ, ಮತ್ತು (1ಚ)ದಲ್ಲಿ ಬಂದಿರುವ ಹಾಗೆ ಎಂಬುದು ಹಿಂದೆ ತಿಳಿಸಿದ ಬಗೆಯನ್ನು ಸೂಚಿಸುತ್ತದೆ.

10.3.4 ಹತ್ತಿರ-ದೂರ ವ್ಯತ್ಯಾಸ ಬೇಕಿಲ್ಲದಲ್ಲಿ ಬಳಕೆ

ಅವನು, ಅದು, ಅಲ್ಲಿ ಮೊದಲಾದ ದೂರದ ತೋರುಪದಗಳಿಗೆ ಹತ್ತಿರದ ಪಾಂಗಲ್ಲ ಎಂಬ ಅಲ್ಲಗಳೆಯುವ ಹುರುಳಿಲ್ಲ (10.3.2 ನೋಡಿ); ಹಾಗಾಗಿ, ಹತ್ತಿರ ಮತ್ತು ದೂರ ಎಂಬ ಜಾಗದ ವ್ಯತ್ಯಾಸವನ್ನು ತಿಳಿಸಬೇಕಾಗಿಲ್ಲದಂತಹ

ಹಲವು ಬಗೆಯ ಬಳಕೆಗಳಲ್ಲಿ ದೂರದ ತೋರುಪದಗಳನ್ನು ಬಳಸಲು ಬರುತ್ತದೆ; ಇದಕ್ಕೆ ಬದಲು, ಇವನು, ಇದು, ಇಲ್ಲಿ ಮೊದಲಾದ ಹತ್ತಿರದ ತೋರುಪದಗಳಿಗೆ ದೂರದ ಪಾಂಗಲ್ಲ ಎಂಬ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಜಾಗದ ವ್ಯತ್ಯಾಸವನ್ನು ತಿಳಿಸಬೇಕಾಗಿಲ್ಲದಂತಹ ಕಡೆಗಳಲ್ಲಿ ಅವನ್ನು ಬಳಸಲು ಬರುವುದಿಲ್ಲ: (1) ಪತ್ತುಗೆ ಒಟ್ಟಾಗಿ ಬಳಕೆ: ಜಾಗವನ್ನು ತಿಳಿಸುವ ಪತ್ತುಗೆ ಒಟ್ಟಾಗಿ ಅಲ್ಲಿ ಎಂಬುದರ ಬಳಕೆಯಿದೆಯಲ್ಲದೆ ಇಲ್ಲಿ ಎಂಬುದರ ಬಳಕೆಯಿಲ್ಲ: (1ಕ) ಮರದಲ್ಲಿ ಒಂದು ಮಂಗ ಕುಳಿತಿದೆ. (1ಚ) *ಮರದಿಲ್ಲಿ ಒಂದು ಮಂಗ ಕುಳಿತಿದೆ. (2ಕ) ಅವನಿಗೆ ನನ್ನಲ್ಲಿ ನಂಬಿಕೆಯಿಲ್ಲ. (2ಚ) *ಅವನಿಗೆ ನನ್ನಿಲ್ಲಿ ನಂಬಿಕೆಯಿಲ್ಲ. (1ಕ) ಸೊಲ್ಲಿನ ಮರದಲ್ಲಿ ಎಂಬ ಪತ್ತುಗೆ ರೂಪದಲ್ಲಿ ಅಲ್ಲಿ ಪದ ಬಳಕೆಯಾಗಿದೆ; ಈ ಜಾಗದಲ್ಲಿ ಇಲ್ಲಿ ಪದವನ್ನು ಬಳಸಲು ಬರುವುದಿಲ್ಲ ಎಂಬುದನ್ನು ಮರದಿಲ್ಲಿ (ಮರದ+ಇಲ್ಲಿ) ಎಂಬುದನ್ನು ಬಳಸಿರುವ (1ಚ) ಸೊಲ್ಲು ಸರಿಯಲ್ಲ ಎಂಬುದು ತಿಳಿಸುತ್ತದೆ. (2ಕ)ದಲ್ಲಿ ಬಂದಿರುವ ನನ್ನಲ್ಲಿ ಎಂಬುದು ಆಡುಗನಿಗೆ ಹತ್ತಿರ ಮಾತ್ರವಲ್ಲ, ಆಡುಗನಲ್ಲೇ ಎಂಬ ಹುರುಳನ್ನೂ ಕೊಡುವುದಾದರೂ, ಇಲ್ಲಿ ಪದದ ಬಳಕೆಯಿಲ್ಲ. ಅಲ್ಲಿ ಮತ್ತು ಇಲ್ಲಿ ಎಂಬವುಗಳ ನಡುವಿನ ಹತ್ತಿರ-ದೂರ ವ್ಯತ್ಯಾಸ ಇಲ್ಲಿ ಮುಕ್ಯವಲ್ಲವಾದುದರಿಂದ ಆ ವ್ಯತ್ಯಾಸವನ್ನು ಒತ್ತಿಹೇಳುವ ಇಲ್ಲಿ ಎಂಬುದು ಬರುವುದಿಲ್ಲ, ಮತ್ತು ಹಾಗೆ ಒತ್ತಿ ಹೇಳದಿರುವ ಅಲ್ಲಿ ಎಂಬುದು ಬರುತ್ತದೆ. (2) ಎಸಕಪದಗಳ ಪರಿಚೆ ರೂಪದೊಂದಿಗೆ ಬಳಕೆ: ಎಸಕಪದಗಳ ಪರಿಚೆ ರೂಪದೊಂದಿಗೆ ಹಲವು ಬಗೆಯ ತೋರುಪದಗಳನ್ನು ಬಳಸಲು ಬರುತ್ತದೆ; ಆದರೆ, ಇಂತಹ ಕಡೆಗಳಲ್ಲೆಲ್ಲ ದೂರದ ತೋರುಪದಗಳು ಬಳಕೆಯಾಗುತ್ತವಲ್ಲದೆ, ಹತ್ತಿರದ ತೋರುಪದಗಳು ಬಳಕೆಯಾಗುವುದಿಲ್ಲ. ಎತ್ತುಗೆಗಾಗಿ, ಹೊತ್ತನ್ನು ತಿಳಿಸುವುದಕ್ಕಾಗಿ ಒಂದು ಎಸಕವನ್ನು ಬಳಸಿರುವಲ್ಲಿ, ಎಸಕಪದದ ಪತ್ತುಗೆರೂಪದೊಂದಿಗೆ ಆಗ ಎಂಬ ಪದ ಬರುತ್ತದಲ್ಲದೆ ಈಗ ಎಂಬ ಪದ ಬರುವುದಿಲ್ಲ: (1ಕ) ಮಳೆ ಬಂದಾಗ ಅವನು ಮರದ ಕೆಳಗೆ ನಿಂತಿದ್ದ.

(1ಚ) *ಮಳೆ ಬಂದೀಗ ಅವನು ಮರದ ಕೆಳಗೆ ನಿಂತಿದ್ದ. ಬಂದಾಗ (ಬಂದ+ಆಗ) ಎಂಬುದರ ಬದಲು ಬಂದೀಗ (ಬಂದ+ಈಗ) ಎಂಬುದನ್ನು ಬಳಸಿರುವ (1ಚ) ಸೊಲ್ಲು ಸರಿಯಿಲ್ಲ. ಇದೇ ರೀತಿಯಲ್ಲಿ, ಬಂದವನು ಎಂಬುದರ ಬದಲು *ಬಂದಿವನು ಎಂಬುದನ್ನಾಗಲಿ, ಕೊಟ್ಟವರು ಎಂಬುದರ ಬದಲು *ಕೊಟ್ಟಿವರು ಎಂಬುದನ್ನಾಗಲಿ, ಹೋಗುವಲ್ಲಿ ಎಂಬುದರ ಬದಲು *ಹೋಗುವಿಲ್ಲಿ ಎಂಬುದನ್ನಾಗಲಿ ಬಳಸಲು ಬರುವುದಿಲ್ಲ. ತೋರ್ಕೆಯನ್ನು ತಿಳಿಸುವ ಆ ಎಂಬ ತೋರುಪದವನ್ನು ಹೊರತುಪಡಿಸಿ, ಉಳಿದೆಲ್ಲಾ ದೂರದ ತೋರುಪದಗಳನ್ನೂ ಈ ರೀತಿ ಎಸಕಪದಗಳ ಪರಿಚೆ ರೂಪದೊಂದಿಗೆ ಸೇರಿಸಿ ಬಳಸಲು ಬರುತ್ತದೆ; ಆದರೆ, ಅದು ಎಂಬುದು ಮಾತ್ರ ಉದು ಎಂಬ ರೂಪದಲ್ಲಿ ಬಳಕೆಯಾಗುತ್ತದೆ: (1ಕ) ನಾನು ಹೇಳುವುದನ್ನು ಯಾರೂ ಕೇಳಲಿಲ್ಲ. (1ಚ) ನಾನು ಹೇಳಿದುದನ್ನು ಅವರು ಒಪ್ಪಿದ್ದಾರೆ. ಎಸಕಪದಗಳ ಪರಿಚೆರೂಪದೊಂದಿಗೆ ಬರುವ ಅಲ್ಲಿ ಎಂಬ ತೋರುಪದಕ್ಕೆ ಜಾಗವನ್ನು ತಿಳಿಸುವ ಹುರುಳು ಮಾತ್ರವಲ್ಲದೆ, ಬೇಡಿಕೆಯನ್ನು ತಿಳಿಸುವ ಹುರುಳೂ ಇದೆ: (1ಕ) ಅವನು ಕುಳಿತಲ್ಲಿ ತುಂಬಾ ಇರುವೆಗಳಿದ್ದುವು. (1ಚ) ಅವನು ಬರಲು ಒಪ್ಪಿದಲ್ಲಿ ನಾನೂ ಒಪ್ಪುತ್ತೇನೆ. (1ಕ)ದಲ್ಲಿ ಬಂದಿರುವ ಕುಳಿತಲ್ಲಿ ಎಂಬುದು ಆತನು ಕುಳಿತಿರುವ ಜಾಗವನ್ನು ತಿಳಿಸುತ್ತದೆ; ಆದರೆ, (1ಚ)ದಲ್ಲಿ ಬಂದಿರುವ ಒಪ್ಪಿದಲ್ಲಿ ಎಂಬುದು ಆಡುಗನು ಒಪ್ಪಲು ಬೇಕಾಗಿರುವ ಬೇಡಿಕೆಯನ್ನು ತಿಳಿಸುತ್ತದೆ. (1ಕ)ದಲ್ಲಿದ್ದ ಅಲ್ಲಿ ಎಂಬುದರ ಹರವನ್ನು (1ಚ)ದಲ್ಲಿ ಹೆಚ್ಚಿಸಲಾಗಿದೆ. ಎಸಕಪದಗಳ ಪರಿಚೆರೂಪದೊಂದಿಗೆ ದಿನ, ಹೊಲಬು, ಅಳವಿ, ಮತ್ತು ಬಗೆಗಳನ್ನು ತಿಳಿಸುವ ದೂರದ ತೋರುಪದಗಳ ಬಳಕೆಯನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು; ಇಂತಹ ಕಡೆಗಳಲ್ಲೆಲ್ಲೂ ಹತ್ತಿರದ ತೋರುಪದಗಳನ್ನು ಬಳಸಲು ಬರುವುದಿಲ್ಲ: (1ಕ) ನೀವು ಹೇಳಿದಂದೇ ಬಂದಿದ್ದೆ. (1ಚ) ನೀವು ಹೇಳಿದ ಹಾಗೆಯೇ ಮಾಡಿದ್ದೇನೆ. (1ಟ) ನೀವು ಹೇಳಿದಶ್ಟೇ ಕೊಟ್ಟಿದ್ದೇನೆ.

(1ತ) ನೀವು ಹೇಳಿದಂತಹ ಪುಸ್ತಕ ಸಿಗಲಿಲ್ಲ. *ಹೇಳಿದಿಂದೇ, *ಹೇಳಿದ ಹೀಗೆಯೇ, *ಹೇಳಿದಿಶ್ಟೇ, ಮತ್ತು *ಹೇಳಿದಿಂತಹ ಎಂಬ ನುಡಿತಗಳು ಬಳಕೆಯಲ್ಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಎಸಕಪದಗಳಿಗೆ ಮೂರು ಬಗೆಯ ಪರಿಚೆರೂಪಗಳಿದ್ದು, ಈ ಮೂರು ಬಗೆಂiÀi ಪರಿಚೆರೂಪಗಳ ಬಳಿಕವೂ ದೂರದ ತೋರುಪದಗಳನ್ನು ಈ ರೀತಿ ಬಳಸಲು ಬರುತ್ತದೆ: (1ಕ) ಮನೆಗೆ ಹೋಗುವವನು ಇನ್ನೂ ಇಲ್ಲೇ ಇದ್ದಾನೆ. (1ಚ) ಮನೆಗೆ ಹೋದವನು ಮರಳಿ ಬರಲಿಲ್ಲ. (1ಟ) ಊಟಮಾಡದವರು ಬಾಳೆಹಣ್ಣು ತಿಂದರು. ಆದರೆ, ಇಂತಹ ಕೆಲವು ಕಡೆಗಳಲ್ಲಿ ಹತ್ತಿರ-ದೂರ ವ್ಯತ್ಯಾಸವನ್ನು ಒತ್ತಿಹೇಳಲು ಬರುತ್ತದೆ, ಮತ್ತು ಅಂತಹ ಕಡೆಗಳಲ್ಲಿ ಎರಡು ಬಗೆಯ ತೋರುಪದಗಳನ್ನೂ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಗಳಲ್ಲಿ ಎಸಕಪದಗಳ ಪರಿಚೆರೂಪವನ್ನು ತೋರುಪದಗಳಿಂದ ಬೇರ್ಪಡಿಸಿ ಇರಿಸಲಾಗುತ್ತದೆ: (1ಕ) ಮನೆಗೆ ಹೋಗುವ ಇವನು ಇನ್ನೂ ಇಲ್ಲೇ ಇದ್ದಾನೆ. (1ಚ) ಮನೆಗೆ ಹೋದ ಇವನು ಇನ್ನೂ ಮರಳಿ ಬರಲಿಲ್ಲ. (1ಟ) ಊಟಮಾಡದ ಇವರು ಬಾಳೆಹಣ್ಣಿನ ಇಡೀ ಕೊನೆಯನ್ನೇ ತಿಂದು ಮುಗಿಸಿದರು. (1ತ) ಕೆಲಸ ಮಾಡದ ಈ ದಿವಸ ಅವರಿಗೆ ಸಂಬಳವಿಲ್ಲ. (1ಪ) ಊಟಮಾಡದ ಅವರು ಬಾಳೆಯಣ್ಣು ತಿಂದರು. (1ಕ)ದಲ್ಲಿ ಹೋಗುವ ಮತ್ತು ಇವನು ಎಂಬ ಪದಗಳನ್ನು ಬೇರ್ಪಡಿಸಿ ಇರಿಸಲಾಗಿದೆ; ಅವನ್ನು ಒಟ್ಟುಸೇರಿಸಿ ಹೋಗುವಿವನು ಎಂದು ಬರೆದಲ್ಲಿ ಆ ಸೊಲ್ಲು ಸರಿಯಾಗಿರುವುದಿಲ್ಲ; (1ಚ-ಪ) ಸೊಲ್ಲುಗಳಲ್ಲೂ ಹೀಗೆಯೇ. (3) ಹೆಸರುಪದಗಳ ಪರಿಚೆರೂಪದೊಂದಿಗೆ ಬಳಕೆ: ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಉಂಟುಮಾಡಲಾಗುತ್ತದೆ; ಇಂತಹ ಪರಿಚೆರೂಪಗಳ ಬಳಿಕವೂ ದೂರದ

ತೋರುಪದಗಳನ್ನು ಬಳಸಲು ಬರುತ್ತದೆ; ಆದರೆ, ಹತ್ತಿರದ ತೋರುಪದಗಳನ್ನು ಬಳಸಲು ಬರುವುದಿಲ್ಲ: (1ಕ) ಕೆಲಸದವಳು ಎಂಟು ಗಂಟೆಗೇನೇ ಬಂದಿದ್ದಳು. (1ಚ) *ಕೆಲಸದಿವಳು ಎಂಟು ಗಂಟೆಗೇನೇ ಬಂದಿದ್ದಳು. (2ಕ) ಅವನಂತಹ ಕೆಲಸಗಾರರು ಈ ಊರಲ್ಲಿಲ್ಲ. (2ಚ) *ಅವನಿಂತಹ ಕೆಲಸಗಾರರು ಈ ಊರಲ್ಲಿಲ್ಲ. ತೋರ್ಕೆಯ ಆ ಮತ್ತು ಹೊತ್ತಿನ ಆಗ ಎಂಬವುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದೂರದ ತೋರುಪದಗಳೂ ಇಂತಹ ಹೆಸರುಪದಗಳ ಪರಿಚೆರೂಪದೊಂದಿಗೆ ಬಳಕೆಯಾಗಬಲ್ಲುವು. ಆದರೆ, ಜಾಗವನ್ನು ತಿಳಿಸುವ ಅಲ್ಲಿ ಎಂಬುದು ಈ ಬಳಕೆಯಲ್ಲಿ ಎಸಕಪತ್ತುಗೆಯ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ (7.3.5 ನೋಡಿ). ಈ ಬಳಕೆಗಳಿಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ಈ ಮನೆಯವರು ಯಾರ ಹತ್ತಿರವೂ ಮಾತನಾಡುವುದಿಲ್ಲ. (1ಚ) ಅವನತ್ತ ಯಾರೂ ಗಮನಹರಿಸಲಿಲ್ಲ. (1ಟ) ಆತ ಮನೆಗೆ ಹೋಗುವ ನಾಳಿನಂದು ಎಲ್ಲರೂ ಬಂದಿದ್ದರು. (1ತ) ಅವನ ಹಾಗೆ ನಗುವವರು ಬೇರೆ ಯಾರಿದ್ದಾರೆ? (1ಪ) ಈ ಮರದಶ್ಟು ದೊಡ್ಡ ಮರ ಹತ್ತಿರ ಎಲ್ಲೂ ಇಲ್ಲ. ಅತ್ತ ಎಂಬುದರ ಬದಲು, ಸಾಮಾನ್ಯವಾಗಿ ಕಡೆಗೆ ಎಂಬುದೇ ಬಳಕೆಯಾಗುತ್ತದೆ: (1ಗ) ಅವನ ಕಡೆಗೆ ಯಾರೂ ಗಮನಹರಿಸಲಿಲ್ಲ. (5) ಪರಿಚೆ ಪದಗಳೊಂದಿಗೆ ಬಳಕೆ: ಕೆಲವು ಬಗೆಯ ಪರಿಚೆಪದಗಳೊಂದಿಗೂ ತೋರುಪದಗಳು ಬಳಕೆಯಾಗಬಲ್ಲುವು; ಆದರೆ, ಇಂತಹ ಪರಿಚೆಪದಗಳೊಂದಿಗೆ ದೂರದ ತೋರುಪದಗಳು ಬಳಕೆಯಾಗುತ್ತವಲ್ಲದೆ, ಹತ್ತಿರದ ತೋರುಪದಗಳು ಬಳಕೆಯಾಗುವುದಿಲ್ಲ: (1ಕ) ದೊಡ್ಡವನು ಮೊದಲೇ ಹೋಗಿದ್ದಾನೆ. (1ಚ) *ದೊಡ್ಡಿವನು ಮೊದಲೇ ಹೋಗಿದ್ದಾನೆ.

ಇದಲ್ಲದೆ, ದೂರದ ತೋರುಪದಗಳಲ್ಲೂ ಹೆಸರುಪದಗಳ ಜಾಗದಲ್ಲಿ ಬರುವ ಅವನು, ಅವಳು, ಅದು, ಅವರು, ಮತ್ತು ಅವು ಎಂಬವುಗಳು ಮಾತ್ರ ಇಂತಹ ಪರಿಚೆಪದಗಳೊಂದಿಗೆ ಬಳಕೆಯಾಗುತ್ತವಲ್ಲದೆ, ಹೆಸರುಪರಿಚೆ ಇಲ್ಲವೇ ಎಸಕಪರಿಚೆಗಳ ಜಾಗದಲ್ಲಿ ಬರುವ ಅಲ್ಲಿ, ಅಶ್ಟು, ಅತ್ತ ಮೊದಲಾದುವು ಬಳಕೆಯಾಗುವುದಿಲ್ಲ (*ದೊಡ್ಡಲ್ಲಿ, *ದೊಡ್ಡಶ್ಟು, *ದೊಡ್ಡತ್ತ ಎಂಬಂತಹ ಬಳಕೆಗಳಿಲ್ಲ). (6) ಬಿಡುವನ್ನು ತುಂಬುವ ತೋರುಪದ: ಮಾತನಾಡುತ್ತಿರುವಾಗ ಸರಿಯಾದ ಪದ ಸಿಗದಿದ್ದಲ್ಲಿ, ಇಲ್ಲವೇ ಹೇಳಬೇಕಿರುವುದನ್ನು ಹೇಳಲು ಹಿಂಜರಿಕೆಯಾಗುತ್ತಿದ್ದಲ್ಲಿ, ಮಾತಿನಲ್ಲುಂಟಾಗುವ ಬಿಡುವನ್ನು ತುಂಬುವುದಕ್ಕಾಗಿ ಅದು ಎಂಬ ದೂರದ ತೋರುಪದವನ್ನು ಬಳಸಲಾಗುತ್ತದಲ್ಲದೆ, ಇದು ಎಂಬ ಹತ್ತಿರದ ತೋರುಪದವನ್ನು ಬಳಸುವುದಿಲ್ಲ. (1) ತಂದೆ: ಯಾಕೆ ಇವತ್ತು ಇಶ್ಟು ತಡವಾಯಿತು? ಮಗಳು: ಅದು… ಅದು… ಬಸ್ಸಿಗೆ ಬಹಳ ಹೊತ್ತು ಕಾಯಬೇಕಾಯಿತು. (7) ಸೊಲ್ಲನ್ನು ಹೆಸರುಕಂತೆಯ ಪರಿಚೆಯನ್ನಾಗಿ ಮಾಡುವುದು: ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನಲ್ಲಿರುವ ಹೆಸರುಕಂತೆಯ ಪರಿಚೆಯನ್ನಾಗಿ ಮಾಡಲು ಅದರ ಎಸಕಪದವನ್ನು ಪರಿಚೆರೂಪಕ್ಕೆ ಮಾರ್ಪಡಿಸುವುದು ಒಂದು ಹೊಲಬು, ಮತ್ತು ಅದರ ಒಂದು ಹೆಸರುಕಂತೆಯ ಜಾಗದಲ್ಲಿ ತಿಳಿಯದ ತೋರುಪದವನ್ನು ಬಳಸಿ, ಅದನ್ನು ಪರಿಚೆಪದವಾಗಿ ಪಡೆಯುವ ಹೆಸರುಕಂತೆಯ ಮುಂದೆ ದೂರದ ತೋರುಪದವನ್ನು ಬಳಸುವುದು ಇನ್ನೊಂದು ಹೊಲಬು. (1ಕ) ಹಣ್ಣು ತಂದ ಹುಡುಗರು ಮುಂದೆ ಬರಲಿ. (1ಚ) ಹಣ್ಣನ್ನು ಯಾರು ತಂದಿದ್ದಾರೋ ಆ ಹುಡುಗರು ಮುಂದೆ ಬರಲಿ. (1ಟ) ಹಣ್ಣನ್ನು ಯಾರು ತಂದಿದ್ದಾರೋ ಅವರು ಮುಂದೆ ಬರಲಿ. (1ತ) *ಹಣ್ಣನ್ನು ಯಾರು ತಂದಿದ್ದಾರೋ ಇವರು ಮುಂದೆ ಬರಲಿ. ಈ ಎರಡನೇ ಹೊಲಬಿನಲ್ಲಿ ದೂರದ ತೋರುಪದ ಮಾತ್ರ ಬರುತ್ತದಲ್ಲದೆ ಹತ್ತಿರದ ತೋರುಪದ ಬರುವುದಿಲ್ಲ ಎಂಬುದನ್ನು ಸರಿಯಲ್ಲದ (1ತ) ಸೊಲ್ಲು ತೋರಿಸಿಕೊಡುತ್ತದೆ.

(8) ಮದಿಪಿನ ಬಳಕೆ: ಮದಿಪನ್ನು ತೋರಿಸುವುದಕ್ಕಾಗಿ ಪಾಂಗನ್ನು ಗುರುತಿಸುವ ಹೆಸರುಪದಗಳ ಬಳಿಕ ಅವರು ಎಂಬುದನ್ನು ಬಳಸಲಾಗುತ್ತದೆ; ಆದರೆ ಇಲ್ಲಿ ಇವರು ಎಂಬುದರ ಬಳಕೆಯಿಲ್ಲ. (1ಕ) ಹೆಗ್ಗಡೆಯವರು ಇಶ್ಟು ಹೊತ್ತಿಗೆ ಯಾರನ್ನೂ ಕಾಣುವುದಿಲ್ಲ. (1ಚ) *ಹೆಗ್ಗಡೆಯಿವರು….

ತಿಳಿದ ತೋರುಪದಗಳಿಗೆಲ್ಲ ಒಂದು ತೋರ್ಕೆನಡು ಬೇಕಾಗುತ್ತದೆ; ಅವು ತಿಳಿಸುವ ಜಾಗ ಇಲ್ಲವೇ ಹೊತ್ತಿನ ಹತ್ತಿರ-ದೂರ ಎಂಬುದು ಆ ತೋರ್ಕೆನಡುವಿಗೆ ಸಂಬಂದಿಸಿರುತ್ತದೆ. ತೋರುಪದಗಳ ಹೆಚ್ಚಿನ ಬಳಕೆಗಳಲ್ಲೂ ತೋರ್ಕೆನಡು ಸೊಲ್ಲಿನ ಆಡುಗನಲ್ಲಿರುತ್ತದೆ. ಸೂಳುನುಡಿಗಳಲ್ಲಿ ಸೊಲ್ಲುಗಳ ಆಡುಗ ಮತ್ತು ಕೇಳುಗರು ಬದಲಾಗುತ್ತಲೇ ಇರುವ ಕಾರಣ, ಅವರೊಂದಿಗೆ ಸೊಲ್ಲುಗಳ ತೋರ್ಕೆನಡುಗಳೂ ಬದಲಾಗುತ್ತಲೇ ಇರುತ್ತವೆ: (1ಕ) ರಾಜು: ಇಲ್ಲಿ ತುಂಬಾ ಮಳೆಯಾಗುತ್ತಿದೆ; ಅಲ್ಲಿ ಹೇಗಿದೆ? (1ಚ) ಹರಿ: ಇಲ್ಲಿಯೂ ತುಂಬಾ ಮಳೆ ಬರುತ್ತಿದೆ; ಆದರೆ, ಅಲ್ಲಿನ ಹಾಗೆ ಇಲ್ಲಿ ಮಳೆ ಬಂದರೂ ಚಳಿ ಇಲ್ಲ. ಇಲ್ಲಿ ಮತ್ತು ಅಲ್ಲಿ ಪದಗಳಿಗೆ (1ಕ) ಮತ್ತು (1ಚ)ಗಳಲ್ಲಿ ಬೇರೆ ಬೇರೆ ತೋರ್ಕೆನಡುಗಳಿವೆಯೆಂಬುದನ್ನು ಗಮನಿಸಬಹುದು. ಬೇರೊಬ್ಬನ ಮಾತನ್ನು ಎತ್ತಿ ಹೇಳುವಲ್ಲಿ, ಆ ಮಾತಿನಲ್ಲಿ ಬಂದಿರುವ ತೋರುಪದಗಳಿಗೆ ಅದರ ಆಡುಗನೇ ತೋರ್ಕೆನಡುವಾಗಿರುತ್ತಾನೆ. ಇಂತಹ ಸಂದರ್ಬಗಳಲ್ಲಿ, ಆಡುಗನು ತನ್ನ ಹತ್ತಿರಕ್ಕೆ ಇಲ್ಲವೇ ದೂರಕ್ಕೆ ಹೊಂದಿಕೊಳ್ಳುವಂತೆ ಎತ್ತಿ ಹೇಳುವ ಮಾತುಗಳಲ್ಲಿರುವ ತೋರುಪದಗಳನ್ನು ಮಾರ್ಪಡಿಸಬಹುದು, ಇಲ್ಲವೇ ಹಾಗೆಯೇ ಇರಿಸಲೂಬಹುದು. ಇಂತಹ ಆಯ್ಕೆ ಆಡುಗನಿಗಿರುವ ಕಾರಣ, ಕೆಲವೊಮ್ಮೆ ಸೊಲ್ಲುಗಳಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: (1ಕ) ರಾಜು ಇಲ್ಲಿಗೆ ಇವತ್ತು ಬರುತ್ತೇನೆಂದು ಹೇಳಿದ್ದ. (1ಚ) ಇವತ್ತೇ ಬರುತ್ತೇನೆಂದು ರಾಜು ನಿನ್ನೆ ಹೇಳಿದ್ದ.

(1ಕ)ದಲ್ಲಿ ರಾಜು ನಿಜಕ್ಕೂ ಹೇಳಿದ್ದು ನಾನು ಅಲ್ಲಿಗೆ ನಾಳೆ ಬರುತ್ತೇನೆ ಎಂಬುದಾಗಿರಬಹುದು, ಮತ್ತು ಅದನ್ನು ಎತ್ತಿ ಹೇಳುವಾಗ, (1ಕ)ದ ಆಡುಗನು ತನ್ನ ಜಾಗ ಮತ್ತು ಹೊತ್ತಿಗೆ ಹೊಂದಿಕೆಯಾಗುವಂತೆ ಅಲ್ಲಿಗೆ ಎಂಬುದನ್ನು ಇಲ್ಲಿಗೆ ಎಂಬುದಾಗಿ, ಮತ್ತು ನಾಳೆ ಎಂಬುದನ್ನು ಇವತ್ತು ಎಂಬುದಾಗಿ ಮಾರ್ಪಡಿಸಿರಬಹುದು. ಇಂತಹ ಮಾರ್ಪಾಡನ್ನು ನಡೆಸಲಾಗಿದೆಯೇ, ಇಲ್ಲವೇ ಎಂಬುದರ ಮೇಲೆ (1ಚ) ಸೊಲ್ಲಿಗೆ ಎರಡು ಹುರುಳುಗಳು ಸಿಗಬಲ್ಲುವು: (1ಟ) ಇವತ್ತೇ ಬರುತ್ತೇನೆ'' ಎಂದು ರಾಜು ನಿನ್ನೆ ಹೇಳಿದ್ದ. (1ತ)ನಾಳೆ ಬರುತ್ತೇನೆ’’ ಎಂದು ರಾಜು ನಿನ್ನೆ ಹೇಳಿದ್ದ. (1ಚ) ಸೊಲ್ಲಿನಲ್ಲಿ ಬಂದಿರುವ ತೋರುಪದವನ್ನು ಮಾರ್ಪಡಿಸಿಲ್ಲವಾದರೆ ಅದಕ್ಕೆ (1ಟ) ಹುರುಳು ದೊರಕುತ್ತದೆ, ಮತ್ತು ಮಾರ್ಪಡಿಸಿದೆಯಾದರೆ (1ತ) ಹುರುಳು ದೊರಕುತ್ತದೆ ಎಂಬುದನ್ನು ಗಮನಿಸಬಹುದು.

10.4 ತಿಳಿದ ತೋರುಪದಗಳ ಬಳಕೆ:

Eke →

ಒಳತೋರ್ಕೆ ತಿಳಿದ ತೋರುಪದಗಳನ್ನು ಹೊರತೋರ್ಕೆಯಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು 10.3ರಲ್ಲಿ ವಿವರಿಸಲಾಗಿದೆ; ಈ ಬಳಕೆ ಅವುಗಳ ಮುಕ್ಯ ಬಳಕೆಯೆಂದು ಹೇಳಬಹುದು; ಆದರೆ, ಅವಕ್ಕೆ ಇನ್ನೊಂದು ಬಗೆಯ ಬಳಕೆಯೂ ಇದ್ದು, ಅದನ್ನು ಇಲ್ಲಿ ಒಳತೋರ್ಕೆಯೆಂದು ಕರೆಯಲಾಗಿದೆ. ಈ ತೋರ್ಕೆಯಲ್ಲಿ ತೋರುಪದ ಗುರುತಿಸುವ ಪಾಂಗನ್ನು ಹಿಂದೆ ಬಳಕೆಯಾಗಿರುವ ಇಲ್ಲವೇ ಮುಂದೆ ಬಳಕೆಯಾಗಲಿರುವ ಸೊಲ್ಲುಗಳಲ್ಲಿ ಕಾಣಲು ಬರುತ್ತದೆ. ಈ ಒಳತೋರ್ಕೆಯಲ್ಲಿ ಮುಕ್ಯವಾಗಿ ಪಾಂಗುತೋರ್ಕೆ ಮತ್ತು ಸೊಲ್ಲುತೋರ್ಕೆ ಎಂಬುದಾಗಿ ಎರಡು ಬಗೆಗಳಿವೆ: (1) ಬೇರೊಂದು ಸೊಲ್ಲಿನಲ್ಲಿ ಇಲ್ಲವೇ ಅದೇ ಸೊಲ್ಲಿನಲ್ಲಿ ಬೇರೊಂದು ಕಡೆ ಗುರುತಿಸಿರುವ ಪಾಂಗನ್ನೇ ತೋರುಪದ ಗುರುತಿಸುತ್ತಿರಬಹುದು; ಹೀಗಿದ್ದಲ್ಲಿ ಅದನ್ನು ಪಾಂಗುತೋರ್ಕೆಯೆಂದು ಕರೆಯಲಾಗುತ್ತದೆ. (2) ಒಂದು ಸೊಲ್ಲು ಇಲ್ಲವೇ ಸೊಲ್ಲುಕಂತೆ ತಿಳಿಸುವ ಸಂಗತಿಯನ್ನು ಒಂದು ಹೊಸದಾದ ಪಾಂಗನ್ನಾಗಿ ಮಾಡಿ ತೋರುಪದ ಗುರುತಿಸುತ್ತಿರಬಹುದು; ಹೀಗಿದ್ದಲ್ಲಿ ಅದನ್ನು ಸೊಲ್ಲುತೋರ್ಕೆಯೆಂದು ಕರೆಯಲಾಗುತ್ತದೆ. ಈ ಎರಡು ಬಗೆಯ ಬಳಕೆಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ರಾಜು ಮೇಜಿನ ಮೇಲೆ ಒಂದು ಪುಸ್ತಕವನ್ನು ತಂದಿರಿಸಿದ್ದಾನೆ; ಆದರೆ, ಈಗ ಅದು ಅಲ್ಲಿ ಕಾಣಿಸುವುದಿಲ್ಲ. (1ಚ) ರಾಜು ಮೇಜಿನ ಮೇಲೆ ಒಂದು ಪುಸ್ತಕವನ್ನು ತಂದಿರಿಸಿದ್ದಾನೆ; ಆದರೆ, ಅದು ಯಾರ ಗಮನಕ್ಕೂ ಬಂದಿರಲಿಲ್ಲ.

(1ಕ)ದ ಎರಡನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬ ತೋರುಪದ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಪುಸ್ತಕ ಎಂಬ ಪದ ಗುರುತಿಸುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುತ್ತದೆ. ಇದಕ್ಕೆ ಬದಲು, (1ಚ)ದ ಎರಡನೇ ಸೊಲ್ಲಿನಲ್ಲಿ ಬಂದಿರುವ ಅದೇ ತೋರುಪದ ಮೊದಲನೇ ಸೊಲ್ಲು ತಿಳಿಸುವ ಎಸಕವನ್ನು ಒಂದು ಪಾಂಗಾಗಿ ಮಾಡಿ ಗುರುತಿಸುತ್ತದೆ; ಆ ಎಸಕ (ರಾಜು ಮೇಜಿನ ಮೇಲೆ ಒಂದು ಪುಸ್ತಕವನ್ನು ತಂದಿರಿಸಿರುವುದು) ಯಾರ ಗಮನಕ್ಕೂ ಬಂದಿರಲಿಲ್ಲ ಎಂಬುದಾಗಿ ಆ ಸೊಲ್ಲು ತಿಳಿಸುತ್ತದಲ್ಲದೆ, ಮೇಜಿನ ಮೇಲಿರುವ ಪುಸ್ತಕ ಯಾರ ಗಮನಕ್ಕೂ ಬಂದಿರಲಿಲ್ಲ ಎಂಬುದಾಗಿ ಅದು ತಿಳಿಸುವುದಿಲ್ಲ ಎಂಬುದನ್ನು ಗಮನಿಸಬಹುದು. ತೋರುಪದಗಳ ಈ ಎರಡು ಬಗೆಯ ಬಳಕೆಗಳಲ್ಲಿ ಪಾಂಗುತೋರ್ಕೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಕೆಳಗೆ 10.4.1-6ರಲ್ಲಿ ಕೊಡಲಾಗಿದೆ, ಮತ್ತು ಸೊಲ್ಲುತೋರ್ಕೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ 10.4.7ರಲ್ಲಿ ಕೊಡಲಾಗುತ್ತದೆ.

10.4.1 ಪಾಂಗುತೋರ್ಕೆಯ ಬಳಕೆ

ಹಿಂದಿನ ಸೊಲ್ಲುಗಳಲ್ಲಿ ಇಲ್ಲವೇ ಅದೇ ಸೊಲ್ಲಿನಲ್ಲಿ ಬಂದಿದ್ದ ಒಂದು ಹೆಸರುಪದ ಇಲ್ಲವೇ ಹೆಸರುಕಂತೆ ಯಾವ ಪಾಂಗನ್ನು ಗುರುತಿಸುತ್ತದೆಯೋ ಅದನ್ನೇ ಪಾಂಗುತೋರ್ಕೆಯ ತೋರುಪದವೂ ಗುರುತಿಸುತ್ತದೆ; ಎಂದರೆ, ಹಿಂದಿನ ಹೆಸರುಪದ ಇಲ್ಲವೇ ಪದಕಂತೆ ಗುರುತಿಸಿರುವ ಒಂದು ಪಾಂಗನ್ನೇ ಪಾಂಗುತೋರ್ಕೆಯ ತೋರುಪದ ಇನ್ನೊಮ್ಮೆ ಕೇಳುಗನ ಗಮನಕ್ಕೆ ತರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಒಂದು ಕತೆ ಬರೆದಿದ್ದಾನೆ; ಅದನ್ನು ನಾನಿನ್ನೂ ಓದಿಲ್ಲ. (1ಚ) ರಾಜು ಬರೆದ ಕತೆಯನ್ನು ಅವನ ಅಕ್ಕ ಓದುತ್ತಿದ್ದಾಳೆ. (1ಟ) ರಾಜುವಿನ ತಂಗಿ ಅವನು ಬರೆದ ಕತೆಯನ್ನು ಓದುವುದಿಲ್ಲ. (1ಕ)ದಲ್ಲಿ ಒಂದು ಕತೆ ಎಂಬ ಹೆಸರುಕಂತೆ ಗುರುತಿಸಿರುವ ಪಾಂಗನ್ನೇ ಇನ್ನೊಮ್ಮೆ ಕೇಳುಗನ ಗಮನಕ್ಕೆ ತರುವುದಕ್ಕಾಗಿ ಅದು ಎಂಬ ತೋರುಪದವನ್ನು ಬಳಸಲಾಗಿದೆ; (1ಚ)ದಲ್ಲಿ ರಾಜು ಎಂಬ ಹೆಸರುಪದ ಗುರುತಿಸಿದ ಪಾಂಗನ್ನೇ ಅವನು ಎಂಬ ತೋರುಪದ ಗುರುತಿಸುತ್ತದೆ; ಮತ್ತು (1ಟ)ದಲ್ಲಿ ರಾಜುವಿನ ತಂಗಿ ಎಂಬ ಹೆಸರುಕಂತೆಯಲ್ಲಿ ಬಂದಿರುವ ರಾಜು ಎಂಬ ಪದ ಗುರುತಿಸಿದ ಪಾಂಗನ್ನೇ ಅವನು ಎಂಬ ತೋರುಪದ ಗುರುತಿಸುತ್ತದೆ. ಒಂದು ಕತೆಯ ಇಲ್ಲವೇ ಬೇರೆ ಬಗೆಯ ಬರಹದ ಓದು ಮುಂದುವರಿಯುತ್ತಿರುವಂತೆ, ಒಂದೊಂದಾಗಿ ಬೇರೆ ಬೇರೆ ಪಾಂಗುಗಳು

ಓದುಗನ ಗಮನವನ್ನು ಸೆಳೆಯುತ್ತಿರುತ್ತವೆ; ಅವುಗಳಲ್ಲಿ ಯಾವುದೇ ಒಂದು ಪಾಂಗು ತುಸು ಹೊತ್ತು ಆತನ ಗಮನದಲ್ಲಿ ಉಳಿದಿರುತ್ತದೆ, ಮತ್ತು ಆಮೇಲೆ ಬೇರೆ ಪಾಂಗುಗಳು ಆತನ ಗಮನವನ್ನು ಸೆಳೆಯುವುದರಿಂದಾಗಿ, ಅದು ಆತನ ಗಮನದಿಂದ ಹೊರಗೆ ಬೀಳುತ್ತದೆ. ಹಾಗಾಗಿ, ಓದು ಮುಂದುವರಿಯುತ್ತಿರುವಂತೆ ಉದ್ದಕ್ಕೂ ಒಂದು ಪಾಂಗು ಓದುಗನ ಗಮನದಲ್ಲಿ ಉಳಿಯುವಂತಾಗಬೇಕಾದರೆ, ಅದನ್ನು ತಿರುತಿರುಗಿ ಆತನ ಗಮನಕ್ಕೆ ತರುತ್ತಿರಬೇಕಾಗುತ್ತದೆ; ಈ ಕೆಲಸವನ್ನು ತೋರುಪದಗಳ ಪಾಂಗುತೋರ್ಕೆಯ ಬಳಕೆ ನಡೆಸುತ್ತದೆ. ಇದಲ್ಲದೆ, ಒಂದರ ಬಳಿಕ ಒಂದರಂತೆ ಬರುವ ಹಲವು ಸೊಲ್ಲುಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಬೇರೆ ಬೇರೆ ಪಾಂಗುಗಳಾಗಿ ತೊಡಗಿಕೊಂಡಿರಬಲ್ಲುದು; ಹಾಗಾಗಿ, ಅದು ಈ ಸೊಲ್ಲುಗಳಲ್ಲಿ ಎಂತಹ ಪಾಂಗಾಗಿ ತೊಡಗಿಕೊಂಡಿದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಅದನ್ನು ಅಡಕವಾಗಿ ಗುರುತಿಸಬಲ್ಲ ಒಂದು ಪದ ಬೇಕಾಗುತ್ತದೆ, ಮತ್ತು ಈ ಕೆಲಸವನ್ನೂ ತೋರುಪದಗಳು ನಡೆಸುತ್ತವೆ. ಒಂದು ಹೆಸರುಪದ ಇಲ್ಲವೇ ಹೆಸರುಕಂತೆಯನ್ನೇ ತಿರುತಿರುಗಿ ಬಳಸುವ ಮೂಲಕವೂ ಅದು ಗುರುತಿಸುವ ಪಾಂಗು ಓದುಗನ ಗಮನದಲ್ಲಿ ಉಳಿಯುವಂತೆ, ಮತ್ತು ಅದು ಎಂತಹ ಪಾಂಗು ಎಂಬುದು ಗೊತ್ತಾಗುವಂತೆ ಮಾಡಬಹುದೇನೋ ನಿಜ; ಆದರೆ, ಹಾಗೆ ಮಾಡಿದಲ್ಲಿ ಬರಹದ ಅಂದ ಕೆಡುತ್ತದೆ. ಇದಲ್ಲದೆ, ಒಂದು ಪಾಂಗನ್ನು ಹೊಸದಾಗಿ ಓದುಗನ ಗಮನಕ್ಕೆ ತರಬೇಕಾದಾಗ, ಅದರ ಪರಿಚೆಗಳನ್ನು ವಿವರವಾಗಿ ತಿಳಿಸಬೇಕಾಗುತ್ತದೆ; ಆದರೆ, ಅದು ಮುಂದೆಯೂ ಆತನ ಗಮನದಲ್ಲಿ ಉಳಿಯುವಂತೆ ಮಾಡಲು ಅವನ್ನೆಲ್ಲ ತಿರುತಿರುಗಿ ತಿಳಿಸಬೇಕಾಗುವುದಿಲ್ಲ; ತೋರುಪದಗಳ ಮೂಲಕ ಅವನ್ನು ಅಡಕವಾಗಿ ತಿಳಿಸಿ, ಪಾಂಗನ್ನು ಗಮನದಲ್ಲಿ ಉಳಿಸಲು ಬರುತ್ತದೆ: (1ಕ) ಶಾಮರಾಯರು ತಮ್ಮ ಕೆಂಪು ಬಣ್ಣದ ಹಳೇ ಕಾರನ್ನು ಮಾರಿ, ತಮ್ಮ ಕೆಂಪು ಬಣ್ಣದ ಹಳೇ ಕಾರಿನ ರಿಪೇರಿಗೆ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದಾರೆ. (1ಚ) ಶಾಮರಾಯರು ತಮ್ಮ ಕೆಂಪು ಬಣ್ಣದ ಹಳೇ ಕಾರನ್ನು ಮಾರಿ, ಅದರ ರಿಪೇರಿಗೆ ಮಾಡಿದ ಸಾಲವನ್ನು ತೀರಿಸಿಕೊಂಡಿದ್ದಾರೆ. ಅದು(ಅದರ) ಎಂಬ ತೋರುಪದದ ಪಾಂಗುತೋರ್ಕೆದ ಬಳಕೆಯಿಂದಾಗಿ, (1ಚ) ಸೊಲ್ಲು (1ಕ) ಸೊಲ್ಲಿಗಿಂತ ಅಡಕವಾಗಿದೆ, ಮತ್ತು ಚನ್ನಾಗಿದೆ ಎಂಬುದನ್ನು ಗಮನಿಸಬಹುದು.

ಒಂದು ಪಾಂಗು ಓದುಗನ ನೇರವಾದ ಗಮನದಲ್ಲಿ ಉಳಿದಿರಲಾರದೆಂಬ ಸಂಶಯವಿರುವಲ್ಲಿ ಮಾತ್ರ ಅದನ್ನು ಈ ರೀತಿ ತೋರುಪದಗಳ ನೆರವಿನಿಂದ ಆತನ ಗಮನಕ್ಕೆ ತರಬೇಕಾಗುತ್ತದೆ; ಅದು ಆತನ ನೇರ ಗಮನದಲ್ಲೇನೇ ಉಳಿದಿರುವಲ್ಲಿ ಎಂತಹ ನುಡಿತವನ್ನೂ ಬಳಸದೇನೇ ಸೊಲ್ಲನ್ನು ಮುಂದುವರಿಸಲು ಬರುತ್ತದೆ: (1ಕ) ಜಾನಕಿ ಹುಟ್ಟಿದ್ದು ಮಯ್ಸೂರಲ್ಲಿ; ಬೆಳೆದದ್ದೂ ಅಲ್ಲೇ. (1ಚ) ಆವತ್ತು ರಾಜು ತಡವಾಗಿ ಎದ್ದುದರಿಂದ ತಿಂಡಿ ತಿನ್ನಲು ಸಮಯವಿರಲಿಲ್ಲ. (1ಕ)ದಲ್ಲಿ ಜಾನಕಿ ಎಂಬುದು ಮೊದಲನೆಯ ಸೊಲ್ಲಿನಲ್ಲಿ ಬಳಕೆಯಾಗಿದೆ, ಆದರೆ ಎರಡನೆಯ ಸೊಲ್ಲಿನಲ್ಲಿ ಅದನ್ನೇ ಗಮನಕ್ಕೆ ತರಬೇಕಾದ ಅವಳು ಎಂಬುದು ಬಳಕೆಯಾಗಿಲ್ಲ; ಇದೇ ರೀತಿಯಲ್ಲಿ (1ಚ)ದ ಒಳಸೊಲ್ಲಿನಲ್ಲಿ ಬಳಕೆಯಾಗಿರುವ ರಾಜು ಎಂಬುದಕ್ಕೆ ಬದಲಾಗಿ ಹೊರಸೊಲ್ಲಿನಲ್ಲಿ ಅವನಿಗೆ ಎಂಬ ತೋರುಪದ ಬಳಕೆಯಾಗಿಲ್ಲ. ಇಂತಹ ಕಡೆಗಳಲ್ಲಿ ತೋರುಪದವನ್ನು ಬಳಸಿದರೂ ಸೊಲ್ಲು ತಪ್ಪಾಗುವುದಿಲ್ಲ: (1ಕ) ಜಾನಕಿ ಹುಟ್ಟಿದ್ದು ಮಯ್ಸೂರಲ್ಲಿ; ಅವಳು ಬೆಳೆದದ್ದೂ ಅಲ್ಲೇ. (1ಚ) ಆವತ್ತು ರಾಜು ತಡವಾಗಿ ಎದ್ದುದರಿಂದ ಅವನಿಗೆ ತಿಂಡಿ ತಿನ್ನಲು ಸಮಯವಿರಲಿಲ್ಲ. ಆದರೆ, ಬೇರೆ ಕೆಲವು ಕಡೆಗಳಲ್ಲಿ ಈ ರೀತಿ ಪಾಂಗನ್ನು ಓದುಗನ ಇಲ್ಲವೇ ಕೇಳುಗನ ಗಮನಕ್ಕೆ ತರುವುದಕ್ಕಾಗಿ ತೋರುಪದವನ್ನು ಬಳಸಿದಲ್ಲಿ ಸೊಲ್ಲು ಸರಿಯಾಗಿಲ್ಲವೆಂದು ಅನಿಸುತ್ತದೆ; ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಮನೆಗೆ ಹೋಗಿ ಬರುತ್ತಾನೆ. (1ಚ) *ರಾಜು ಮನೆಗೆ ಹೋಗಿ ಅವನು ಬರುತ್ತಾನೆ. (2ಕ) ರಾಜುವಿಗೆ ಒಮ್ಮೆ ಕಾರಿನಲ್ಲಿ ಕುಳಿತು ಊರು ಸುತ್ತಬೇಕಾಗಿದೆ. (2ಚ) *ರಾಜುವಿಗೆ ಒಮ್ಮೆ ಕಾರಿನಲ್ಲಿ ಕುಳಿತು ಅವನಿಗೆ ಊರು ಸುತ್ತಬೇಕಾಗಿದೆ. ಕೇಳುಗನ ನೇರ ಗಮನದಲ್ಲಿ ಉಳಿದಿರುವಂತಹ ಪಾಂಗುಗಳನ್ನು ಆತನ ಗಮನಕ್ಕೆ ತರಬೇಕಾಗುವುದಿಲ್ಲವೆಂಬುದೇ ಇಂತಹ ಸೊಲ್ಲುಗಳಲ್ಲಿ ತೋರುಪದಗಳನ್ನು ಬಳಸಲು ಬರುವುದಿಲ್ಲವೆಂಬುದಕ್ಕೆ ಕಾರಣ. ಎಲ್ಲಿ ಈ ರೀತಿ

ತೋರುಪದಗಳನ್ನು ಬಳಸದಿರಬಹುದು, ಮತ್ತು ಎಲ್ಲಿ ಅವನ್ನು ಬಳಸದಿರಬೇಕು ಎಂಬ ವಿಶಯದಲ್ಲಿ ಕೆಲವು ಕಟ್ಟಲೆಗಳಿವೆ; ಅವುಗಳ ಕುರಿತಾಗಿ ಕೆಲವು ವಿವರಗಳನ್ನು ಮುಂದೆ 10.4.2ರಲ್ಲಿ ಕೊಡಲಾಗಿದೆ. ಪಾಂಗುತೋರ್ಕೆಯ ಬಳಕೆಯಲ್ಲಿ ಎರಡು ಬಗೆಯ ನುಡಿತಗಳ ನಡುವಿನ ಪತ್ತುಗೆಯನ್ನು ಗಮನಿಸಬೇಕಾಗುತ್ತದೆ; ಅವುಗಳಲ್ಲಿ ಮೊದಲನೆಯದು ಒಂದು ಹೆಸರುಕಂತೆಯಿರಬಹುದು, ಹೆಸರುಪದವಿರಬಹುದು, ಇಲ್ಲವೇ ಪರಿಚೆಪದವೂ ಇರಬಲ್ಲುದು, ಮತ್ತು ಎರಡನೆಯದು ಒಂದು ತೋರುಪದವಿರಬಹುದು, ಇಲ್ಲವೇ ತೋರುಪದದೊಂದಿಗೆ ಬಳಕೆಯಾಗಿರುವ ಹೆಸರುಪದವಿರಬಹುದು. ಇಂತಹ ನುಡಿತಗಳ ಬಳಕೆಯನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (1ಕ) ಮೇಜಿನ ಮೇಲಿರಿಸಿದ ಪೆಟ್ಟಿಗೆ ಹೊಸದಾಗಿತ್ತು; ಅದನ್ನು ಹರಿ ಬೊಂಬಾಯಿಯಿಂದ ತಂದಿದ್ದ. (1ಚ) ರಾಜುವಿನ ಅಣ್ಣ ಅವನನ್ನು ಬೊಂಬಾಯಿಗೆ ಕಳಿಸಿದ್ದಾನೆ. (1ಟ) ಜಾನಕಿಯ ಹತ್ತಿರ ಮಾತನಾಡುವ ಬೊಂಬೆಯಿದೆ; ಆದರೆ, ಕಾವೇರಿಯ ಹತ್ತಿರ ಅಂತಹ ಬೊಂಬೆಯಿಲ್ಲ. (1ತ) ಅವನು ಹತ್ತು ಹಣ್ಣು ತಿಂದಿದ್ದಾನೆ; ಆದರೆ, ನಾನು ಅಶ್ಟು ಹಣ್ಣು ತಿನ್ನಲಾರೆ. (1ಕ)ದಲ್ಲಿ ಅದನ್ನು ಎಂಬ ತೋರುಪದಕ್ಕೂ ಮೇಜಿನ ಮೇಲಿರಿಸಿದ ಪೆಟ್ಟಿಗೆ ಎಂಬ ಹೆಸರುಕಂತೆಗೂ ನಡುವಿರುವ ಪತ್ತುಗೆಯನ್ನು ಗಮನಿಸಬೇಕಾಗಿದೆ; ಇದಕ್ಕೆ ಬದಲು, (1ಚ)ದಲ್ಲಿ ಅವನನ್ನು ಎಂಬ ತೋರುಪದಕ್ಕೂ ರಾಜು ಎಂಬ ಹೆಸರುಪದಕ್ಕೂ ನಡುವಿರುವ ಪತ್ತುಗೆಯನ್ನು, (1ಟ)ದಲ್ಲಿ ಅಂತಹ ಎಂಬ ತೋರುಪದಕ್ಕೂ ಮಾತನಾಡುವ ಎಂಬ ಪರಿಚೆಪದಕ್ಕೂ (ಎಸಕಪದದ ಪರಿಚೆರೂಪಕ್ಕೂ) ನಡುವಿರುವ ಪತ್ತುಗೆಯನ್ನು, ಮತ್ತು (1ತ)ದಲ್ಲಿ ಅಶ್ಟು ಎಂಬ ತೋರುಪದಕ್ಕೂ ಹತ್ತು ಎಂಬ ಎಣಿಕೆಪದಕ್ಕೂ ನಡುವಿರುವ ಪತ್ತುಗೆಯನ್ನು ಗಮನಿಸಬೇಕಾಗಿದೆ. ಪಾಂಗುತೋರ್ಕೆಯ ತೋರುಪದಗಳೊಂದಿಗೆ ಈ ರೀತಿ ಹಲವು ಬಗೆಯ ನುಡಿತಗಳನ್ನು ಸಂಬಂದಿಸಲಾಗುತ್ತದೆ; ಅವನ್ನೆಲ್ಲ ಒಟ್ಟಾಗಿ ಇಲ್ಲಿ ಹಿನ್ನುಡಿತಗಳೆಂದು ಕರೆಯಲಾಗಿದೆ. ಹಿನ್ನುಡಿತ ಎಂಬ ಈ ಪದದಲ್ಲಿ ಹಿಂದೆ ಎಂಬುದು ಸೇರಿಕೊಂಡಿದೆಯಾದರೂ ಅದು ತೋರುಪದದ ಮೊದಲೇ ಬಂದಿರಬೇಕೆಂದೇನೂ ಇಲ್ಲ, ಬಳಿಕವೂ ಬರಬಲ್ಲುದು ಎಂಬುದನ್ನು ಮೇಲೆಯೇ (10.3)ರಲ್ಲಿ ತಿಳಿಸಲಾಗಿದೆ. ಈ ಹಿನ್ನುಡಿತಗಳು ಎಂತಹವು ಎಂಬುದು ತುಸುಮಟ್ಟಿಗೆ ತೋರುಪದಗಳನ್ನು ಅವಲಂಬಿಸಿರುತ್ತದೆ, ಮತ್ತು ತುಸುಮಟ್ಟಿಗೆ ಸೊಲ್ಲುಗಳ ಇಟ್ಟಳವನ್ನೂ

ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಒಂದು ಪಾಂಗನ್ನು ಗುರುತು ಮಾಡಿಸುವುದಕ್ಕಾಗಿ ಬಳಕೆಯಾಗುವ ಸೊಲ್ಲುಗಳಲ್ಲಿ ಅವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಕೆಳಗೆ (10.4.9)ರಲ್ಲಿ ಕೊಡಲಾಗಿದೆ. ಪಾಂಗುತೋರ್ಕೆಯ ತೋರುಪದಗಳಾಗಿ ಹತ್ತಿರದ ತೋರುಪದಗಳಿಗಿಂತ ದೂರದ ತೋರುಪದಗಳೇ ಹೆಚ್ಚಿನ ಕಡೆಗಳಲ್ಲೂ ಬಳಕೆಯಾಗುತ್ತವೆ. ಸಾಮಾನ್ಯವಾಗಿ, ಆಡುಗನ ಗಮನದಲ್ಲಿರುವ ಒಂದು ಪಾಂಗು ಮುಂದಿನ ಸೊಲ್ಲುಗಳಲ್ಲೂ ಆತನ ಗಮನದಲ್ಲೇನೇ ಉಳಿಯುವಂತೆ ಮಾಡಲು ದೂರದ ತೋರುಪದಗಳನ್ನು ಬಳಸಲಾಗುತ್ತದೆ, ಮತ್ತು ಆತನ ಗಮನದಿಂದ ಬಿದ್ದುಹೋಗಿರುವ ಪಾಂಗೊಂದನ್ನು ಇನ್ನೊಮ್ಮೆ ಆತನ ಗಮನಕ್ಕೆ ತರುವುದಕ್ಕಾಗಿ ಹತ್ತಿರದ ತೋರುಪದಗಳನ್ನು ಬಳಸಲಾಗುತ್ತದೆ. ಈ ಎರಡು ಬಗೆಯ ತೋರುಪದಗಳಲ್ಲಿ ದೂರದ ತೋರುಪದಗಳನ್ನು ಪಾಂಗುತೋರ್ಕೆಯಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಮುಂದೆ (10.4.3- 6)ರಲ್ಲಿ ವಿವರಿಸಿ, ಆಮೇಲೆ (10.4.7)ರಲ್ಲಿ ಹತ್ತಿರದ ತೋರುಪದಗಳ ಬಳಕೆಯನ್ನು ವಿವರಿಸಲಾಗಿದೆ. ಇದಕ್ಕಿಂತಲೂ ಮೊದಲು, ಪಾಂಗುತೋರ್ಕೆಯಲ್ಲಿ ಯಾವ ಬಗೆಯ ತೋರುಪದವನ್ನೂ ಬಳಸದಿರುವಂತಹ ಸಂದರ್ಬಗಳನ್ನು ಕೆಳಗೆ ವಿವರಿಸಲಾಗಿದೆ.

10.4.2 ಯಾವ ಪದವನ್ನೂ ಬಳಸದಿರುವುದು

ಒಮ್ಮೆ ಗುರುತಿಸಿರುವ ಪಾಂಗು ಕೇಳುಗನ ನೇರ ಗಮನದಲ್ಲಿದೆಯಾದರೆ, ಅದನ್ನು ಇನ್ನೊಮ್ಮೆ ಗುರುತಿಸಬೇಕಾಗುವ ಕೆಲವು ಸಂದರ್ಬಗಳಲ್ಲಿ ಯಾವ ಪದವನ್ನೂ ಬಳಸದಿರಲು ಬರುತ್ತದೆ: (1ಕ) ರಾಜು ಮನೆಗೆ ಹೋಗಿ ಊಟ ಮಾಡಿದ. (1ಚ) ಮನೆಗೆ ಹೋದ ರಾಜು ಊಟ ಮಾಡಿದ. (1ಕ)ದಲ್ಲಿ ರಾಜು ಮನೆಗೆ ಹೋದ ಮತ್ತು ರಾಜು ಊಟ ಮಾಡಿದ ಎಂಬ ಎರಡು ಸೊಲ್ಲುಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಅವುಗಳಲ್ಲಿ ಮೊದಲನೇ ಸೊಲ್ಲಿನ ಹೋದ ಎಂಬ ಎಸಕಪದವನ್ನು ಹೋಗಿ ಎಂಬ ಜೋಡಿಸುವ ರೂಪಕ್ಕೆ ಮಾರ್ಪಡಿಸಲಾಗಿದೆ; ಇದಲ್ಲದೆ, ಈ ಎರಡು ಸೊಲ್ಲುಗಳಲ್ಲೂ ಬಂದಿರುವ ರಾಜು ಎಂಬ ಮಾಡುಗ ಪಾಂಗನ್ನು ಎರಡನೇ ಸೊಲ್ಲಿನಿಂದ ಬಿಟ್ಟುಕೊಡಲಾಗಿದ್ದು, ಅದರ ಬದಲು ಪಾಂಗುತೋರ್ಕೆಗಾಗಿ ಯಾವ ಪದವನ್ನೂ ಬಳಸಿಲ್ಲ.

(1ಚ)ದಲ್ಲಿ ಮೇಲಿನ ಎರಡು ಸೊಲ್ಲುಗಳನ್ನು ಈ ರೀತಿ ಜೋಡಿಸುವ ಬದಲು ಅವುಗಳಲ್ಲಿ ಮೊದಲಿನದನ್ನು ಎರಡನೆಯದರಲ್ಲಿ ಬಂದಿರುವ ರಾಜು ಎಂಬ ಪದದ ಪರಿಚೆನುಡಿತವಾಗಿ ಮಾಡಲಾಗಿದೆ, ಮತ್ತು ಇದಕ್ಕಾಗಿ ಅದರ ಎಸಕಪದವನ್ನು ಹೋದ ಎಂಬ ಪರಿಚೆರೂಪಕ್ಕೆ ಮಾರ್ಪಡಿಸಲಾಗಿದೆ. ಇದಲ್ಲದೆ, ಅದರಲ್ಲಿ ಬಂದಿರುವ ರಾಜು ಪದವನ್ನು ಬಿಟ್ಟುಕೊಡಲಾಗಿದೆ, ಮತ್ತು ಅದರ ಬದಲು ಪಾಂಗುತೋರ್ಕೆಗಾಗಿ ಯಾವ ಪದವನ್ನೂ ಬಳಸಿಲ್ಲ. ಈ ರೀತಿ ಎರಡು (ಇಲ್ಲವೇ ಹೆಚ್ಚು) ಸೊಲ್ಲುಗಳನ್ನು ಜೋಡಿಸಿರುವಲ್ಲಿ ಮತ್ತು ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಒಳಸೊಲ್ಲನ್ನಾಗಿ ಮಾಡಿ ಬಳಸಿರುವಲ್ಲಿ ಪಾಂಗುತೋರ್ಕೆಗಾಗಿ ಯಾವ ಪದವನ್ನೂ ಬಳಸದಿರಲು ಬರುತ್ತದೆ. (ಕ) ಜೋಡಿಸಿದ ಸೊಲ್ಲುಗಳಲ್ಲಿ ಬಳಸದಿರುವುದು: ಎರಡು ಸೊಲ್ಲುಗಳನ್ನು ಜೋಡಿಸಿ ಒಂದೇ ಸೊಲ್ಲನ್ನಾಗಿ ಮಾಡಿ ಹೇಳಲು ಮತ್ತು, ಇಲ್ಲವೇ, ಆದರೆ ಎಂಬ ಪದಗಳನ್ನು ಬಳಸುವುದು, ಊ, ಓ ಎಂಬ ಒಟ್ಟುಗಳನ್ನು ಬಳಸುವುದು, ಇಲ್ಲವೇ ಮೊದಲನೇ ಸೊಲ್ಲಿನ ಎಸಕಪದವನ್ನು ಜೋಡಿಸುವ ರೂಪಕ್ಕೆ ಮಾರ್ಪಡಿಸಿ ಬಳಸುವುದು ಎಂಬುದಾಗಿ ಮೂರು ಮುಕ್ಯ ಹೊಲಬುಗಳು ಬಳಕೆಯಲ್ಲಿವೆ. ಎರಡು ಸೊಲ್ಲುಗಳನ್ನು ಹೀಗೆ ಒಂದೇ ಸೊಲ್ಲನ್ನಾಗಿ ಮಾಡಿರುವಲ್ಲಿ ಮೊದಲನೇ ಸೊಲ್ಲಿನ ಒಂದು ಇಲ್ಲವೇ ಹೆಚ್ಚು ಪಾಂಗುಗಳು ಎರಡನೇ ಸೊಲ್ಲಿನಲ್ಲೂ ಪಾಂಗುಗಳಾಗಿ ಬಂದಿವೆಯಾದರೆ, ಅವನ್ನು ತಿರುಗಿ ಗುರುತಿಸುವುದಕ್ಕಾಗಿ ಕೆಲವೆಡೆಗಳಲ್ಲಿ ಯಾವ ಪದವನ್ನೂ ಬಳಸದಿರಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಗೋಡೆಗೆ ಹಳದಿ ಬಣ್ಣ ಹಚ್ಚಿದ್ದಾನೆ ಮತ್ತು ಬಾಗಿಲಿಗೆ ಕೆಂಪು ಬಣ್ಣ ಹಚ್ಚಿದ್ದಾನೆ. (1ಚ) ರಾಜು ಊರಿಗೆ ಬಂದಿದ್ದಾನೆ, ಆದರೆ ಮೇಶ್ಟ್ರನ್ನು ಕಾಣಲಿಲ್ಲ. (1ಟ) ರಾಜು ಗೋಡೆಗೆ ಹಳದಿ ಬಣ್ಣವನ್ನೂ ಬಾಗಿಲಿಗೆ ಕೆಂಪು ಬಣ್ಣವನ್ನೂ ಹಚ್ಚಿದ್ದಾನೆ. (1ತ) ರಾಜು ಬೆಂಗಳೂರಿಗೆ ಹೋಗಿ ಒಂದು ಕಾರು ಕೊಂಡುಕೊಂಡ. (1ಕ)ದಲ್ಲಿ ಎರಡು ಸೊಲ್ಲುಗಳನ್ನು ಮತ್ತು ಎಂಬ ಪದದ ಮೂಲಕ ಜೋಡಿಸಲಾಗಿದೆ; ಅದರ ಮೊದಲನೆಯ ಸೊಲ್ಲಿನಲ್ಲಿ ಮಾಡುಗ ಪಾಂಗನ್ನು ರಾಜು ಎಂಬ ಪದ ತಿಳಿಸುತ್ತದೆ; ಅದರ ಎರಡನೆಯ ಸೊಲ್ಲಿನಲ್ಲೂ ರಾಜುವೇ ಮಾಡುಗ ಪಾಂಗಾಗಿರುವುದರಿಂದ ಅದನ್ನು ತಿಳಿಸುವುದಕ್ಕಾಗಿ ಯಾವ ಪದವನ್ನೂ ಬಳಸಿಲ್ಲ.

(1ಚ)ದಲ್ಲಿ ಆದರೆ ಪದದ ಮೂಲಕ, (1ಟ)ದಲ್ಲಿ ಊ ಒಟ್ಟಿನ ಮೂಲಕ, ಮತ್ತು (1ತ)ದಲ್ಲಿ ಮೊದಲನೇ ಸೊಲ್ಲಿನ ಎಸಕಪದವನ್ನು ಹೋಗಿ ಎಂಬ ಜೋಡಿಸುವ ರೂಪಕ್ಕೆ ಮಾರ್ಪಡಿಸುವ ಮೂಲಕ ಎರಡು ಸೊಲ್ಲುಗಳನ್ನು ಜೋಡಿಸಲಾಗಿದೆ, ಮತ್ತು ಈ ಎಲ್ಲಾ ಸೊಲ್ಲುಗಳಲ್ಲೂ ಎರಡನೇ ಸೊಲ್ಲಿನ ಮಾಡುಗ ಪಾಂಗನ್ನು ತಿಳಿಸುವ ಪದ ಬಂದಿಲ್ಲ ಎಂಬುದನ್ನು ಗಮನಿಸಬಹುದು. (1) ಇಂತಹ ಜೋಡಿಸಿದ ಸೊಲ್ಲುಗಳಲ್ಲಿ ಎರಡು ಸೊಲ್ಲುಗಳು ತುಂಬಾ ಹತ್ತಿರ ಇವೆಯಾದರೆ, ಅವುಗಳ ಎರಡನೆಯ ಸೊಲ್ಲಿನಲ್ಲಿ ತಿರುಗಿ ಗುರುತಿಸಬೇಕಾಗಿರುವ ಪಾಂಗನ್ನು ಬಳಸದಿರಲು ಬರುತ್ತದೆ; ಆದರೆ, ಅವು ಅಶ್ಟೊಂದು ಹತ್ತಿರ ಇಲ್ಲವೆಂದು ಅನಿಸುವಲ್ಲಿ ಅವುಗಳ ಬದಲು ಒಂದು ತೋರುಪದವನ್ನು ಬಳಸಲಾಗುತ್ತದೆ: (1ಕ) ರಾಜು ಗೋಡೆಗೆ ಹಳದಿ ಬಣ್ಣ ಹಚ್ಚಿದ್ದಾನೆ ಮತ್ತು ಬಾಗಿಲಿಗೆ ಅವನು ಕೆಂಪು ಬಣ್ಣ ಹಚ್ಚಿದ್ದಾನೆ. (1ಚ) ರಾಜು ಊರಿಗೆ ಬಂದಿದ್ದಾನೆ, ಆದರೆ ಅವನು ಮೇಶ್ಟ್ರನ್ನು ಕಾಣಲಿಲ್ಲ. (1ಟ) *ರಾಜು ಗೋಡೆಗೆ ಹಳದಿ ಬಣ್ಣವನ್ನೂ ಬಾಗಿಲಿಗೆ ಅವನು ಕೆಂಪು ಬಣ್ಣವನ್ನೂ ಹಚ್ಚಿದ್ದಾನೆ. (1ತ) *ರಾಜು ಬೆಂಗಳೂರಿಗೆ ಹೋಗಿ ಅವನು ಒಂದು ಕಾರು ಕೊಂಡುಕೊಂಡ. ಮೇಲಿನ ಎಲ್ಲಾ ಸೊಲ್ಲುಗಳಲ್ಲೂ ಎರಡನೇ ಸೊಲ್ಲಿನ ಮಾಡುಗ ಪಾಂಗನ್ನು ಗುರುತಿಸಲು ಅವನು ಪದವನ್ನು ಬಳಸಲಾಗಿದೆ; ಆದರೆ, (1ಕ) ಮತ್ತು (1ಚ)ಗಳು ಮಾತ್ರ ಸರಿಯಾಗಿವೆ. ಊ ಒಟ್ಟನ್ನು ಇಲ್ಲವೇ ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ (1ಟ) ಮತ್ತು (1ತ)ಗಳಲ್ಲಿ ಒಟ್ಟು ಸೇರಿರುವ ಸೊಲ್ಲುಗಳು ತುಂಬಾ ಹತ್ತಿರ ಇವೆಯೆಂದು ಅನಿಸುವ ಕಾರಣ (ಊ ಒಟ್ಟನ್ನು ಸೇರಿಸಿರುವಲ್ಲಿ ಎರಡು ಸೊಲ್ಲುಗಳ ಎಸಕಪದವೂ ಒಂದೇ ಆಗಿರಬೇಕಾಗುತ್ತದೆ) ಅವುಗಳ ಎರಡನೆಯ ಸೊಲ್ಲಿನಲ್ಲಿ ಆ ರೀತಿ ಅವನು ಪದವನ್ನು ಬಳಸಲು ಬರುವುದಿಲ್ಲ. (2) ಊ ಒಟ್ಟನ್ನು ಬಳಸಿ ಜೋಡಿಸಿರುವ ಸೊಲ್ಲುಗಳಲ್ಲಿ ಎರಡನೇ ಸೊಲ್ಲಿನ ಅವನು ತೋರುಪದ ಹೊರತೋರ್ಕೆಯ ಹುರುಳಿನಲ್ಲಿ ಬರಬಲ್ಲುದು; ಆದರೆ, ಎಸಕಪದಗಳ ಜೋಡಿಸುವ ರೂಪವನ್ನು ಬಳಸಿರುವ ಸೊಲ್ಲುಗಳಲ್ಲಿ ಅದನ್ನು ಈ ಹುರುಳಿನಲ್ಲೂ ಬಳಸಲು ಬರುವುದಿಲ್ಲ; ಯಾಕೆಂದರೆ, ಅಂತಹ

ಸೊಲ್ಲುಗಳಲ್ಲಿ ಮಾಡುಗ ಪಾಂಗು ಬಂದಿದೆಯಾದರೆ, ಅದು ಎರಡು ಸೊಲ್ಲುಗಳಲ್ಲೂ ಒಂದೇ ಇರಬೇಕೆಂಬ ಕಟ್ಟಲೆಯಿದೆ. (1ಕ) ರಾಜು ಗೋಡೆಗೆ ಹಳದಿ ಬಣ್ಣವನ್ನೂ ಅವನು ಕೆಂಪು ಬಣ್ಣವನ್ನೂ ಹಚ್ಚಿದ್ದಾರೆ. (1ಚ) ರಾಜು ಗೋಡೆಗೆ ಹಳದಿ ಬಣ್ಣವನ್ನು ಹಚ್ಚಿ ಅವನು ಕೆಂಪು ಬಣ್ಣ ಹಚ್ಚಿದ್ದಾನೆ. (1ಕ)ದಲ್ಲಿ ಅವನು ಎಂಬ ತೋರುಪದ ರಾಜುವಿಗಿಂತ ಬೇರಾಗಿರುವ ಒಬ್ಬ ವ್ಯಕ್ತಿಯನ್ನು ಹೊರತೋರ್ಕೆಯ ಮೂಲಕ ಗುರುತಿಸಬಲ್ಲುದು; ಹಾಗಾಗಿ, ಆ ಸೊಲ್ಲು ಸರಿಯಾಗಿದೆ. ಆದರೆ, (1ಚ) ಸೊಲ್ಲಿನಲ್ಲಿ ಬಂದಿರುವ ಅವನು ಪದ ರಾಜುವಿಗಿಂತ ಬೇರಾಗಿರುವ ವ್ಯಕ್ತಿಯನ್ನೂ ಗುರುತಿಸಲಾರದು; ಯಾಕೆಂದರೆ, ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ ಇಂತಹ ಸೊಲ್ಲುಗಳಲ್ಲಿ ಜೋಡಿಸಿರುವ ಎರಡು ಸೊಲ್ಲುಗಳ ಮಾಡುಗ ಪಾಂಗುಗಳೂ ಒಬ್ಬನೇ ವ್ಯಕ್ತಿಯನ್ನು ತಿಳಿಸಬೇಕೆಂಬ ಕಟ್ಟಲೆಯಿದೆ. (3) ಜೋಡಿಸಿರುವ ಎರಡು ಸೊಲ್ಲುಗಳಲ್ಲಿ ಬಂದಿರುವ ಆಗುಗ ಪಾಂಗುಗಳು ಒಬ್ಬನೇ ವ್ಯಕ್ತಿ ಇಲ್ಲವೇ ಒಂದೇ ವಸ್ತುವನ್ನು ತಿಳಿಸುತ್ತಿರುವಲ್ಲೂ ಮೇಲೆ ವಿವರಿಸಿದಂತಹ ಕಟ್ಟಲೆಯೇ ಕಾಣಿಸಿಕೊಳ್ಳುತ್ತದೆ; ಮತ್ತು, ಆದರೆ ಮೊದಲಾದ ಪದಗಳನ್ನು ಬಳಸಿ ಜೋಡಿಸಿರುವಲ್ಲಿ ತೋರುಪದಗಳನ್ನು ಬಳಸಲು ಬರುತ್ತದೆ; ಆದರೆ, ಊ ಒಟ್ಟನ್ನು ಇಲ್ಲವೇ ಎಸಕಪದದ ಜೋಡಿಸುವ ರೂಪವನ್ನು ಬಳಸಿ ಜೋಡಿಸಿರುವಲ್ಲಿ ತೋರುಪದವನ್ನು ಬಳಸಲು ಬರುವುದಿಲ್ಲ. (1ಕ) ರಾಜುವಿಗೆ ಲಾಟರಿಯಲ್ಲಿ ಒಂದು ಲಕ್ಶ ಸಿಕ್ಕಿದೆ, ಮತ್ತು ವ್ಯಾಪಾರದಲ್ಲಿ (ಅವನಿಗೆ) ಹತ್ತು ಲಕ್ಶ ಸಿಕ್ಕಿದೆ. (1ಚ) ರಾಜುವಿಗೆ ಲಾಟರಿಯಲ್ಲಿ ಒಂದು ಲಕ್ಶವೂ ವ್ಯಾಪಾರದಲ್ಲಿ (ಅವನಿಗೆ) ಹತ್ತು ಲಕ್ಶವೂ ಸಿಕ್ಕಿದೆ. (1ಟ) ರಾಜುವಿಗೆ ಲಾಟರಿಯಲ್ಲಿ ಒಂದು ಲಕ್ಶ ಸಿಕ್ಕಿ ವ್ಯಾಪಾರದಲ್ಲಿ (*ಅವನಿಗೆ) ತುಂಬಾ ಲಾಬವಾಗಿದೆ. (1ಚ) ಮತ್ತು (1ಟ)ಗಳಲ್ಲಿ ಅವನಿಗೆ ಎಂಬುದು ರಾಜುವನ್ನು ಹಿನ್ನುಡಿತವಾಗಿ ಪಡೆದಿದೆಯಾದರೆ ಆ ಎರಡು ಸೊಲ್ಲುಗಳೂ ಸರಿಯಾಗಿರುವುದಿಲ್ಲ; ಆದರೆ, ಅದು ಬೇರೊಬ್ಬ ವ್ಯಕ್ತಿಯನ್ನು ಹೊರತೋರ್ಕೆಯ ಮೂಲಕ ತಿಳಿಸುತ್ತಿದೆಯಾದರೆ, (1ಚ) ಸೊಲ್ಲು ಮಾತ್ರವಲ್ಲದೆ (1ಟ) ಸೊಲ್ಲೂ ಸರಿಯಾಗಿರುತ್ತದೆ; ಯಾಕೆಂದರೆ, ಎರಡು ಸೊಲ್ಲುಗಳಲ್ಲೂ ಆಗುಗ ಪಾಂಗು ಬಂದಿದೆಯಾದರೆ, ಇಲ್ಲವೇ ಒಂದರಲ್ಲಿ ಆಗುಗ ಪಾಂಗು ಮತ್ತು ಇನ್ನೊಂದರಲ್ಲಿ

ಮಾಡುಗ ಪಾಂಗು ಬಂದಿದೆಯಾದರೆ, ಅವೆರಡೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುವುದಿಲ್ಲವಾದರೂ ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ ಸೊಲ್ಲುಗಳು ಸರಿಯಾಗಿರುತ್ತವೆ. (4) ಜೋಡಿಸಿದ ಸೊಲ್ಲಿನ ಎರಡು ಸೊಲ್ಲುಗಳಲ್ಲಿ ಬಂದಿರುವ ಮಾಡುಗ ಮತ್ತು ಆಗುಗ ಪಾಂಗುಗಳನ್ನು ಹೊರತುಪಡಿಸಿ, ಬೇರೆ ಪಾಂಗುಗಳು ಈ ರೀತಿ ಒಬ್ಬನೇ ವ್ಯಕ್ತಿಯನ್ನು ಇಲ್ಲವೇ ಒಂದೇ ವಸ್ತು, ಜಾಗ, ಹೊತ್ತು, ಬಗೆ ಮೊದಲಾದುವನ್ನು ತಿಳಿಸುತ್ತಿವೆಯಾದರೆ, ಎರಡನೆಯ ಸೊಲ್ಲಿನಲ್ಲಿ ಅವನ್ನು ಗುರುತಿಸುವುದಕ್ಕಾಗಿ ಯಾವ ಪದವನ್ನೂ ಬಳಸದಿರಬಹುದು ಇಲ್ಲವೇ ಒಂದು ತೋರುಪದವನ್ನು ಬಳಸಬಹುದು: (1ಕ) ರಾಜು ಆಪೀಸಿಗೆ ನಿನ್ನೆ ಒಂಬತ್ತು ಗಂಟೆಗೆ ಹೋಗಿದ್ದ ಮತ್ತು ಇವತ್ತು (ಅಲ್ಲಿಗೆ) ಎಂಟಕ್ಕೇ ಹೋಗಿದ್ದಾನೆ. (1ಚ) ಜೂನ್ ಇಪ್ಪತ್ತಮೂರರಂದು ಅವನು ಎಂಟು ಗಂಟೆಗೇನೇ ಆಪೀಸಿಗೆ ಹೋಗಿದ್ದ, ಆದರೆ, (ಅಂದು) ಆತನ ಪಿ.ಎ. ಆಪೀಸಿಗೆ ಬರುವಾಗ ಗಂಟೆ ಹತ್ತಾಗಿತ್ತು. (1ಟ) ಜಾನಕಿ ಕೊಡವನ್ನು ಯಾರಿಂದಲೋ ಎರವಲು ಪಡೆದು (ಅದನ್ನು) ಒಡೆದುಹಾಕಿದ್ದಳು. (1ತ) ರಾಜು ಆಪೀಸಿಗೆ ನಿನ್ನೆ ಒಂಬತ್ತು ಗಂಟೆಗೂ ಇವತ್ತು (ಅಲ್ಲಿಗೆ) ಎಂಟು ಗಂಟೆಗೂ ಹೋಗಿದ್ದ. ಮೇಲಿನ ಸೊಲ್ಲುಗಳಲ್ಲಿ ಕಂಸದೊಳಗೆ ಕೊಟ್ಟಿರುವ ತೋರುಪದವನ್ನು ಬಳಸಿದರೂ ಬಳಸದಿದ್ದರೂ ಸೊಲ್ಲು ತಪ್ಪಾಗುವುದಿಲ್ಲ. (5) ಜೋಡಿಸಿರುವ ಎರಡು ಸೊಲ್ಲುಗಳಲ್ಲಿ ಒಬ್ಬನೇ ವ್ಯಕ್ತಿ ಇಲ್ಲವೇ ಒಂದೇ ವಸ್ತು ಬೇರೆ ಬೇರೆ ಪಾಂಗುಗಳಾಗಿ ಬಂದಿದೆಯಾದರೆ, ಸಾಮಾನ್ಯವಾಗಿ ಅದನ್ನು ಎರಡು ಸೊಲ್ಲುಗಳಲ್ಲೂ ಗುರುತಿಸಬೇಕಾಗುತ್ತದೆ: (1ಕ) ರಾಜು ಇವತ್ತು ಸಿನಿಮಾಕ್ಕೆ ಹೋಗಬೇಕೆಂದಿದ್ದ; ಆದರೆ, ತಂದೆ ಅವನನ್ನು ಮಾರ್ಕೆಟ್ಟಿಗೆ ಹೋಗಲು ಹೇಳಿದರು. (1ಚ) ಅವನು ಈ ಪುಸ್ತಕವನ್ನು ನೂರಕ್ಕೆ ಕೊಂಡುಕೊಂಡ, ಮತ್ತು ನಾನೂ ಅದಕ್ಕೆ ನೂರು ಕೊಟ್ಟೆ. (1ಕ)ದಲ್ಲಿ ರಾಜು ಎಂಬ ವ್ಯಕ್ತಿ ಮೊದಲನೇ ಸೊಲ್ಲಿನಲ್ಲಿ ಮಾಡುಗ ಪಾಂಗಾಗಿ ಮತ್ತು ಎರಡನೇ ಸೊಲ್ಲಿನಲ್ಲಿ ಈಡು ಪಾಂಗಾಗಿ ಬಂದಿರುವ ಕಾರಣ, ಎರಡು ಸೊಲ್ಲುಗಳಲ್ಲೂ ಆ ವ್ಯಕ್ತಿಯನ್ನು ಗುರುತಿಸಲು ಪದಗಳನ್ನು

ಬಳಸಬೇಕಾಗಿದೆ (ರಾಜು, ಅವನನ್ನು). ಇದೇ ರೀತಿಯಲ್ಲಿ ಪುಸ್ತಕವನ್ನು (1ಚ)ದ ಮೊದಲನೇ ಸೊಲ್ಲಿನಲ್ಲಿ ಈಡು ಪಾಂಗಾಗಿ, ಮತ್ತು ಎರಡನೇ ಸೊಲ್ಲಿನಲ್ಲಿ ಗುರಿ ಪಾಂಗಾಗಿ ಬಳಸಿರುವುದರಿಂದ ಅದನ್ನು ತಿಳಿಸಲು ಎರಡನೇ ಸೊಲ್ಲಿನಲ್ಲಿ ಅದು ಪದವನ್ನು ಬಳಸಬೇಕಾಗಿದೆ. (ಚ) ಒಳಸೊಲ್ಲುಗಳಿರುವಲ್ಲಿ ಬಳಸದಿರುವುದು ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಒಳಸೊಲ್ಲನ್ನಾಗಿ ಮಾಡಿ ಬಳಸಿರುವಲ್ಲಿ ಸಾಮಾನ್ಯವಾಗಿ ಹೆಸರುಪದ ?ಹೊರಸೊಲ್ಲಿನಲ್ಲಿ ಬರುತ್ತದೆ, ಮತ್ತು ತೋರುಪದ ?ಒಳಸೊಲ್ಲಿನಲ್ಲಿ ಬರುತ್ತದೆ. ಆದರೆ, ಕೆಲವು ಕಡೆಗಳಲ್ಲಿ ತೋರುಪದವನ್ನು ಒಳಸೊಲ್ಲಿನಲ್ಲಿ ಬಳಸದಿರಲು ಬರುತ್ತದೆ, ಮತ್ತು ಬೇರೆ ಕೆಲವು ಕಡೆಗಳಲ್ಲಿ ಅದನ್ನು ಕಡ್ಡಾಯವಾಗಿ ಬಳಸದಿರಬೇಕಾಗುತ್ತದೆ. (1) ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಹೆಸರುಪದಕ್ಕೆ ಪರಿಚೆನುಡಿತವನ್ನಾಗಿ ಮಾಡಿ ಬಳಸಿರುವಲ್ಲಿ ಆ ಹೆಸರುಪದ ಗುರುತಿಸುವ ಪಾಂಗನ್ನೇ ಇನ್ನೊಮ್ಮೆ ಗುರುತಿಸಲು ಒಳಸೊಲ್ಲಿನಲ್ಲಿ ತೋರುಪದವನ್ನು ಬಳಸಲು ಬರುವುದಿಲ್ಲ: (1ಕ) ಶಾಲೆಗೆ ಹೋಗದ ಹುಡುಗ ತಾಯಿಯ ಕಯ್ಯಲ್ಲಿ ಪೆಟ್ಟು ತಿಂದಿದ್ದಾನೆ. (1ಚ) ನಿನ್ನೆ ಕಿವಿ ನೋವಾಗಿದ್ದ ಹುಡುಗಿ ಇವತ್ತು ಮಳೆಯಲ್ಲಿ ನೆನೆಯುತ್ತಿದ್ದಾಳೆ. (1ಕ)ದಲ್ಲಿ ಹುಡುಗ ಎಂಬುದು ಹೊರಸೊಲ್ಲು ಮತ್ತು ಒಳಸೊಲ್ಲುಗಳೆರಡರಲ್ಲೂ ಮಾಡುಗ ಪಾಂಗಾಗಿ ಬಂದಿದೆ; ಆದರೆ, ಇದನ್ನು ಹೊರಸೊಲ್ಲಿನಲ್ಲಿ ಮಾತ್ರ ಗುರುತಿಸಲು ಬರುತ್ತದೆ. (1ಚ)ದಲ್ಲಿ ಹುಡುಗಿ ಎಂಬುದು ಹೊರಸೊಲ್ಲಿನ ಮಾಡುಗ ಪಾಂಗಾಗಿ ಮತ್ತು ಒಳಸೊಲ್ಲಿನ ಗುರಿ ಪಾಂಗಾಗಿ ಬಂದಿದೆ; ಇಲ್ಲಿಯೂ ಕೂಡ ಅದನ್ನು ಹೊರಸೊಲ್ಲಿನಲ್ಲಿ ಮಾತ್ರ ಗುರುತಿಸಲು ಬರುತ್ತದೆ; (1ಚ)ದ ಒಳಸೊಲ್ಲಿನಲ್ಲಿ ಅದನ್ನು ಅವಳಿಗೆ ಎಂಬ ತೋರುಪದದ ಮೂಲಕವೂ ಗುರುತಿಸಲು ಬರುವುದಿಲ್ಲ: (1ಟ) *ಅವಳಿಗೆ ನಿನ್ನೆ ಕಿವಿನೋವಾಗಿದ್ದ ಹುಡುಗಿ ಇವತ್ತು ಮಳೆಯಲ್ಲಿ ನೆನೆಯುತ್ತಿದ್ದಾಳೆ.

(2) ಇಂತಹ ಸೊಲ್ಲುಗಳ ಒಳಸೊಲ್ಲಿನಲ್ಲಿ ಬಂದಿರುವ ಬೇರೆ ಪಾಂಗುಗಳು ಹೊರಸೊಲ್ಲಿನಲ್ಲೂ ಬಂದಿವೆಯಾದರೆ, ಅವನ್ನು ಹೊರಸೊಲ್ಲಿನಲ್ಲಿ ಗುರುತಿಸಲು ತೋರುಪದವನ್ನು ಬಳಸಬಹುದು ಇಲ್ಲವೇ ಬಳಸದೆಯೂ ಇರಬಹುದು: (1ಕ) ನಾನು ರಾಜುವಿಗೆ ಕೊಟ್ಟ ಪುಸ್ತಕವನ್ನು (ಅವನು) ಹರಿಗೆ ಕೊಟ್ಟಿದ್ದಾನೆ. (1ಚ) ನಾನು ರಾಜುವನ್ನು ಸಿನಿಮಾಕ್ಕೆ ಕರೆದುಕೊಂಡು ಹೋದ ದಿವಸವೇ (ಅವನಿಗೆ) ಜ್ವರ ಬರಲು ಸುರುವಾಗಿತ್ತು.

10.4.3 ದೂರದ ತೋರುಪದಗಳ ಬಳಕೆ

ವ್ಯಕ್ತಿ, ವಸ್ತು, ವಿಶಯ, ಜಾಗ, ಹೊತ್ತು, ಬಗೆ, ಹೊಲಬು ಮೊದಲಾದವುಗಳು ಒಂದಕ್ಕಿಂತ ಹೆಚ್ಚು ಸೊಲ್ಲುಗಳಲ್ಲಿ ಪಾಂಗುಗಳಾಗಿ, ಪಾಂಗುಗಳನ್ನು ತಿಳಿಸುವ ಹೆಸರುಕಂತೆಗಳ ಅಂಗಗಳಾಗಿ, ಇಲ್ಲವೇ ಎಸಕಪರಿಚೆಗಳಾಗಿ ತೊಡಗಿಕೊಂಡಿವೆಯಾದರೆ, ಅವನ್ನು ತಿರುತಿರುಗಿ ಕೇಳುಗನ ಗಮನಕ್ಕೆ ತರುವುದಕ್ಕಾಗಿ ತೋರುಪದಗಳನ್ನು ಬಳಸಲಾಗುತ್ತದೆ: (1ಕ) ರಾಜು ನಿದ್ದೆ ಮಾಡುತ್ತಿದ್ದಾನೆ. ಅವನನ್ನು ಎಬ್ಬಿಸಬಾರದೆಂದು ತಾಯಿ ಹೇಳಿದ್ದಾರೆ; ಯಾಕೆಂದರೆ, ಎದ್ದರೆ ಅವನು ಗಲಾಟೆ ಮಾಡುತ್ತಾನೆ. (1ಚ) ಈ ಸಲ ಪಾರ್ವತಿ ಹೆರಿಗೆಗೆ ತವರಿಗೆ ಹೋಗಲಿಲ್ಲ; ಅವಳ ನೆರವಿಗಾಗಿ ಅಲ್ಲಿಂದ ಅವಳ ತಂಗಿಯನ್ನು ಕಳುಹಿಸಿದ್ದರು. (1ಟ) ಬೀಗದ ಕಯ್ಯನ್ನು ಮೇಜಿನ ಮೇಲಿರಿಸಿದ್ದೆ; ಅದು ಈಗಲೂ ಅಲ್ಲೇ ಇರಬಹುದು. (1ತ) ನಮ್ಮ ಮನೆಯಲ್ಲಿ ನಾಡಿದ್ದು ಒಂದು ಕೂಟ ಇದೆ; ಆವತ್ತು ಒಟ್ಟು ಅಯ್ವತ್ತು ಜನ ಸೇರಬಹುದು. (1ಪ) ರಾಜು ಹತ್ತು ರುಪಾಯಿ ಕೊಟ್ಟ; ಹರಿಯೂ ಅಶ್ಟೇ ಕೊಟ್ಟ. (1ಕ-ಪ)ಗಳಲ್ಲಿ ಮೊದಲನೆಯ ಸೊಲ್ಲಿನಲ್ಲಿ ಬಂದ ಪಾಂಗುಗಳಲ್ಲೊಂದನ್ನು ಇನ್ನೊಮ್ಮೆ ಕೇಳುಗನ ಇಲ್ಲವೇ ಓದುಗನ ಗಮನಕ್ಕೆ ತರುವುದಕ್ಕಾಗಿ ಎರಡನೆಯ ಸೊಲ್ಲಿನಲ್ಲಿ ಅವನು, ಅವಳು, ಅದು, ಅಲ್ಲಿ, ಆವತ್ತು ಮತ್ತು ಅಶ್ಟು ಎಂಬ ದೂರದ ತೋರುಪದಗಳನ್ನು ಬಳಸಲಾಗಿದೆ. (1ಚ) ಮತ್ತು (1ಟ)ಗಳಲ್ಲಿ ಎರಡೆರಡು ಪಾಂಗುಗಳನ್ನು (ಅವಳ, ಅಲ್ಲಿಂದ; ಅದು, ಅಲ್ಲಿ) ಈ ರೀತಿ ತೋರುಪದಗಳ ಮೂಲಕ ಕೇಳುಗನ ಗಮನಕ್ಕೆ ತರಲಾಗಿದೆ, ಮತ್ತು (1ಕ) ಮತ್ತು (1ಚ)ಗಳಲ್ಲಿ ತೋರುಪದಗಳನ್ನು ಎರಡೆರಡು ಬಾರಿ ಬಳಸಲಾಗಿದೆ.

ಪಾಂಗುತೋರ್ಕೆಯಲ್ಲಿ ಬರುವ ದೂರದ ತೋರುಪದಕ್ಕೆ ಅದರ ಮೊದಲು ಬಂದಿರುವ ನುಡಿತದೊಂದಿಗೆ ಯಾವ ರೀತಿಯ ಸಂಬಂದವಿರಬಲ್ಲುದು ಎಂಬ ವಿಶಯದಲ್ಲಿ ಕೆಲವು ಕಟ್ಟುಪಾಡುಗಳಿವೆ: (1) ಸಾಮಾನ್ಯವಾಗಿ, ಮೊದಲು ಬಂದಿರುವ ಹೆಸರುಕಂತೆ ಇಲ್ಲವೇ ಹೆಸರುಪದ ಯಾವ ಪಾಂಗನ್ನು ಗುರುತಿಸುತ್ತದೆಯೋ ಅದನ್ನೇ ಪಾಂಗುತೋರ್ಕೆಯ ತೋರುಪದವೂ ಗುರುತಿಸುತ್ತದೆ. ಇದಕ್ಕೆ ಎತ್ತುಗೆಯನ್ನು ಮೇಲೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ)ದಲ್ಲಿ ರಾಜು ಎಂಬ ಹೆಸರುಪದ ಗುರುತಿಸುವ ಪಾಂಗನ್ನೇ ಅವನು ಎಂಬ ತೋರುಪದವೂ ಗುರುತಿಸುತ್ತದೆ, ಮತ್ತು (1ಚ)ದಲ್ಲಿ ಪಾರ್ವತಿ ಎಂಬ ಪದ ಗುರುತಿಸುವ ಪಾಂಗನ್ನೇ ಅವಳು ಎಂಬ ತೋರುಪದವೂ ಗುರುತಿಸುತ್ತದೆ. (2) ಆದರೆ, ಕೆಲವೆಡೆಗಳಲ್ಲಿ ಹಿಂದಿನ ಹೆಸರುಪದ ಗುರುತಿಸುವ ಪಾಂಗಿಗಿಂತ ತೋರುಪದ ಗುರುತಿಸುವ ಪಾಂಗು ಬೇರಾಗಿರಬಲ್ಲುದು; ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಕೆಲವು ಸೊಲ್ಲುಗಳನ್ನು ಗಮನಿಸಬಹುದು: (1ಕ) ಆ ಹಲ್ಲಿಯ ಬಾಲ ಬಿದ್ದುಹೋಗಿತ್ತು; ಆದರೆ, ಈಗ ಅದು ತಿರುಗಿ ಬೆಳೆದುಕೊಂಡಿದೆ. (1ಚ) ಆ ಮರದ ಎಲೆಗಳೆಲ್ಲ ಉದುರಿಹೋಗಿದ್ದುವು; ಆದರೆ, ಈಗ ಅವು ತಿರುಗಿ ಚಿಗುರಿವೆ. (1ಟ) ನಾನು ಒಂದು ಕಾದಂಬರಿ ಓದಿದ್ದೆ, ಮತ್ತು ಹರಿಯೂ ಅದನ್ನು (1ತ) ಎರಡು ಸವ್ತೆಕಾಯಿಗಳನ್ನು ಚನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು, ಮತ್ತು ಆಮೇಲೆ ಅವನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. (1ಕ)ದಲ್ಲಿ ಬಿದ್ದುಹೋದ ಹಲ್ಲಿಯ ಬಾಲ ಬೆಳೆದುಕೊಂಡಿಲ್ಲ, ಬೇರೊಂದು ಬಾಲ ಬೆಳೆದುಕೊಂಡಿದೆ; (1ಚ)ದಲ್ಲಿ ಉದುರಿಹೋದ ಮರದ ಎಲೆಗಳು ಚಿಗುರಿಕೊಂಡಿಲ್ಲ, ಬೇರೆ ಹೊಸ ಎಲೆಗಳು ಚಿಗುರಿಕೊಂಡಿವೆ; ಇದೇ ರೀತಿಯಲ್ಲಿ, (1ಟ)ದಲ್ಲಿ ಸೊಲ್ಲಿನ ಆಡುಗ ಓದಿದ ಕಾದಂಬರಿಯ ಪ್ರತಿ ಹರಿ ಓದಿದ ಕಾದಂಬರಿಯ ಪ್ರತಿಗಿಂತ ಬೇರಾಗಿರಬಲ್ಲುದು, ಮತ್ತು (1ತ)ದಲ್ಲಿ ಬೇಯಿಸಬೇಕಾಗಿರುವುದು ಎರಡು ಸವ್ತೆಕಾಯಿಗಳನ್ನಲ್ಲ, ಅವುಗಳ ತುಂಡುಗಳನ್ನು. ಹಾಗಾಗಿ, (1ಕ) ಮತ್ತು (1ಟ)ಗಳಲ್ಲಿ ಬಳಕೆಯಾಗಿರುವ ಅದು ತೋರುಪದ, ಇಲ್ಲವೇ (1ಚ) ಮತ್ತು (1ತ)ಗಳಲ್ಲಿ ಬಳಕೆಯಾಗಿರುವ ಅವು

ತೋರುಪದ ಗುರುತಿಸುವ ಪಾಂಗುಗಳು ಮತ್ತು ಅವುಗಳ ಮೊದಲು ಬಂದಿರುವ ಹೆಸರುಕಂತೆಗಳು ಗುರುತಿಸುವ ಪಾಂಗುಗಳು ಒಂದೇ ಆಗಿಲ್ಲ. ಆದರೆ, ಬೇರೊಂದು ಬಗೆಯಲ್ಲಿ ಅವು ಒಂದೇ ಪಾಂಗನ್ನು ಗುರುತಿಸುತ್ತಿವೆಯೆಂದೂ ಹೇಳಲು ಬರುತ್ತದೆ; ಈ ತೋರುಪದಗಳ ಬಳಕೆಯನ್ನು ಒಂದು ಇಲ್ಲವೇ ಒಬ್ಬ ಎಂಬ ಎಣಿಕೆ ಪದದ ಬಳಕೆಯೊಂದಿಗೆ ಹೋಲಿಸಿ ನೋಡಿದಾಗ ಈ ವಿಶಯ ಗೊತ್ತಾಗುತ್ತದೆ: (1ಕ) ರಾಜು ಒಂದು ಕಾದಂಬರಿಯನ್ನು ಓದಿದ್ದ, ಮತ್ತು ಹರಿಯೂ ಒಂದನ್ನು ಓದಿದ್ದ. (1ಚ) ರಾಜು ಒಂದು ಕಾದಂಬರಿಯನ್ನು ಓದಿದ್ದ, ಮತ್ತು ಹರಿಯೂ ಅದನ್ನು ಓದಿದ್ದ. (2ಕ) ನಾನು ಒಬ್ಬ ಮುದುಕನಿಗೆ ನೂರು ರುಪಾಯಿ ಕೊಟ್ಟಿದ್ದೆ, ಮತ್ತು ಹರಿಯೂ ಒಬ್ಬನಿಗೆ ನೂರು ರುಪಾಯಿ ಕೊಟ್ಟಿದ್ದ. (2ಚ) ನಾನು ಒಬ್ಬ ಮುದುಕನಿಗೆ ನೂರು ರುಪಾಯಿ ಕೊಟ್ಟಿದ್ದೆ, ಮತ್ತು ಹರಿಯೂ ಅವನಿಗೆ ನೂರು ರುಪಾಯಿ ಕೊಟ್ಟಿದ್ದ. (1ಕ) ಸೊಲ್ಲಿನಲ್ಲಿ ರಾಜು ಮತ್ತು ಹರಿ ಓದಿದ ಕಾದಂಬರಿಗಳು ಬೇರೆ ಬೇರೆ; ಆದರೆ, (1ಚ)ದಲ್ಲಿ ಅವರಿಬ್ಬರು ಓದಿರುವ ಕಾದಂಬರಿಯ ಪ್ರತಿಗಳು ಬೇರಾಗಿದ್ದರೂ ಅವರು ಒಂದೇ ಕಾದಂಬರಿಯನ್ನು ಓದಿದ್ದಾರೆ. ಇದೇ ರೀತಿಯಲ್ಲಿ (2ಕ)ದಲ್ಲಿ ಸೊಲ್ಲಿನ ಆಡುಗ ಮತ್ತು ಹರಿ ನೂರು ರುಪಾಯಿ ಕೊಟ್ಟ ಮುದುಕರು ಬೇರೆ ಬೇರೆ, ಮತ್ತು (2ಚ)ದಲ್ಲಿ ಅವರಿಬ್ಬರೂ ಒಬ್ಬನೇ. (3) ಹೆಸರುಕಂತೆಗಳಲ್ಲಿ ಬೇರೊಂದು ಹೆಸರುಪದ ಪತ್ತುಗೆರೂಪದಲ್ಲಿ ಬರಲು ಸಾದ್ಯವಿದ್ದು, ಅಂತಹ ಹೆಸರುಪದ ಗುರುತಿಸುವ ಪಾಂಗನ್ನೂ ತೋರುಪದ ಗುರುತಿಸಬಲ್ಲುದು: (1ಕ) ನಾನು ಹರಿಯ ವಿಶಯ ಮಾತನಾಡುತ್ತಿದ್ದಾಗ ಅವನೇ ನಮ್ಮ ಮುಂದೆ ಬಂದು ನಿಂತ. (1ಚ) ರಾಜುವಿನ ಹೆಂಡತಿ ಯಾವಾಗಲೂ ಅವನೊಂದಿಗೆ ಜಗಳ ಮಾಡುತ್ತಿರುತ್ತಾಳೆ. (1ಟ) ಆ ಬೆಕ್ಕಿನ ಕಾಲನ್ನು ಮಕ್ಕಳು ಅದರ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಿದ್ದಾರೆ. (1ತ) ಮರದ ರೆಂಬೆಗಳನ್ನೆಲ್ಲ ಕಡಿದು ಅದರ ಬುಡದಲ್ಲಿ ರಾಶಿಹಾಕಿದ್ದಾರೆ.

(1ಕ)ದಲ್ಲಿ ಬಂದಿರುವ ಅವನು ಎಂಬ ತೋರುಪದ ಹರಿಯ ವಿಶಯ ಎಂಬ ಹೆಸರುಕಂತೆಯಲ್ಲಿ ಬಂದಿರುವ ಹರಿಯ ಎಂಬ ಪತ್ತುಗೆ ರೂಪದ ಹೆಸರುಪದ ಗುರುತಿಸುವ ಪಾಂಗನ್ನೇ ಗುರುತಿಸುತ್ತದೆ; (1ಚ-ತ) ಸೊಲ್ಲುಗಳಲ್ಲೂ, ಇದೇ ರೀತಿಯಲ್ಲಿ, ತೋರುಪದಗಳು ಪತ್ತುಗೆರೂಪದಲ್ಲಿರುವ ಹೆಸರುಪದಗಳು ಗುರುತಿಸುವ ಪಾಂಗುಗಳನ್ನೇ ಗುರುತಿಸುತ್ತವೆ; (1ಟ-ತ)ಗಳಲ್ಲಿ ತೋರುಪದಗಳೂ ಪತ್ತುಗೆರೂಪದಲ್ಲಿವೆ. ಈ ಸೊಲ್ಲುಗಳಲ್ಲಿ ತೋರುಪದದ ಹಿನ್ನುಡಿತವಾಗಿ ಅದರ ಮೊದಲಿಗೆ ಬಂದಿದ್ದ ಒಂದು ಹೆಸರುಕಂತೆಯ ಬದಲು, ಪತ್ತುಗೆರೂಪದಲ್ಲಿರುವ ಅದರ ಒಂದು ಅಂಗ ಬಳಕೆಯಾಗಿದೆಯೆಂದೂ ಹೇಳಬಹುದು. (4) ಸಾಮಾನ್ಯವಾಗಿ ಪಾಂಗುತೋರ್ಕೆಯಲ್ಲಿ ಬಂದಿರುವ ತೋರುಪದಗಳು ಅವುಗಳ ಹಿನ್ನುಡಿತ ತಿಳಿಸುವ ಪಾಂಗನ್ನೇ ಹೆಚ್ಚು ಅಡಕವಾಗಿ ತಿಳಿಸುತ್ತವೆ; ಆದರೆ, ಕೆಲವೊಮ್ಮೆ ಅವು ಆ ಪಾಂಗಿನ ಕುರಿತಾಗಿ ಹಿನ್ನುಡಿತ ತಿಳಿಸದಿರುವಂತಹ ಸಂಗತಿಗಳನ್ನೂ ತಿಳಿಸುತ್ತಿರಬಲ್ಲುವು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ತನ್ನ ಪಿ.ಎಯನ್ನು ಆಕೆಯ ಊರಿಗೆ ಕಳುಹಿಸಿದ್ದಾನೆ. (1ಚ) ಆತನನ್ನು ಗಮನಿಸುತ್ತಿದ್ದ ಡಾಕ್ಟರ್ ಇವತ್ತು ಆಕೆಯ ಊರಿಗೆ ಹೋಗಿದ್ದಾಳೆ. (1ಕ)ದಲ್ಲಿ ಹಿನ್ನುಡಿತವಾಗಿ ಬಂದಿರುವ ಪಿ.ಎ ಎಂಬುದು ಅದು ಗುರುತಿಸುವ ಪಾಂಗು ಒಬ್ಬ ಗಂಡಸೋ ಇಲ್ಲವೇ ಹೆಂಗಸೋ ಎಂಬುದನ್ನು ತಿಳಿಸುವುದಿಲ್ಲ; ಆದರೆ, ಅದರ ಪಾಂಗುತೋರ್ಕೆಯಾಗಿ ಬಂದಿರುವ ಆಕೆ ಎಂಬ ತೋರುಪದ ಅದು ಹೆಂಗಸು ಎಂಬ ಈ ಹೆಚ್ಚಿನ ವಿಶಯವನ್ನು ತಿಳಿಸುತ್ತದೆ. (1ಚ)ದಲ್ಲಿ ಬಂದಿರುವ ತೋರುಪದವೂ ಅದರ ಹಿನ್ನುಡಿತ ತಿಳಿಸದಿರುವ ಇಂತಹದೇ ಹೆಚ್ಚಿನ ಹುರುಳನ್ನು ಕೊಡುತ್ತದೆ. (5) ಪಾಂಗುತೋರ್ಕೆಯಲ್ಲಿ ಬಂದಿರುವ ತೋರುಪದಗಳಿಗೂ ಅವುಗಳ ಹಿನ್ನುಡಿತಕ್ಕೂ ನಡುವಿರುವ ಸಂಬಂದ ನಿಜಕ್ಕೂ ಇನ್ನಶ್ಟು ಸಿಕ್ಕಲಾದುದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (1ಕ) ಇವತ್ತು ನಾನೊಂದು ಕತೆ ಓದಿದ್ದೆ; ಅದು ತುಂಬಾ ಚನ್ನಾಗಿತ್ತು. (1ಕ)ದ ಎರಡನೆಯ ಸೊಲ್ಲು ಒಂದು ಕತೆ ತುಂಬಾ ಚೆನ್ನಾಗಿತ್ತು ಎಂದಶ್ಟೇ ತಿಳಿಸುವುದಿಲ್ಲ; ನಾನು ಇವತ್ತು ಓದಿದ ಕತೆ ತುಂಬಾ ಚೆನ್ನಾಗಿತ್ತು ಎಂದು

ತಿಳಿಸುತ್ತದೆ; ಹಾಗಾಗಿ, ಅದರಲ್ಲಿ ಬಂದಿರುವ ಅದು ಎಂಬ ತೋರುಪದ ಕತೆ ಎಂಬ ಅದರ ಹಿನ್ನುಡಿತ ತಿಳಿಸುವ ಸಂಗತಿಯನ್ನು ಮಾತ್ರವಲ್ಲದೆ, ಆ ಹಿನ್ನುಡಿತವನ್ನು ಬಳಸಿರುವ ಇವತ್ತು ನಾನೊಂದು ಕತೆ ಓದಿದ್ದೆ ಎಂಬ ಮೊದಲನೆಯ ಸೊಲ್ಲು ತಿಳಿಸುವ ಸಂಗತಿಯನ್ನೂ ಒಳಗೊಂಡಿದೆಯೆಂದು ಹೇಳಬೇಕಾಗುತ್ತದೆ.

10.4.4 ದೂರದ ತೋರುಪದ ಮತ್ತು ಅದರ ಹಿನ್ನುಡಿತ

ಪಾಂಗುತೋರ್ಕೆಯಲ್ಲಿ ಬಳಕೆಯಾಗುವ ದೂರದ ತೋರುಪದಕ್ಕೂ ಅದರ ಹಿನ್ನುಡಿತಕ್ಕೂ ನಡುವಿರುವ ಸಂಬಂದವನ್ನು ಎರಡು ಕಾಣ್ಬಗೆಗಳ ಮೂಲಕ ಗಮನಿಸಲು ಬರುತ್ತದೆ: ತಾನು ಬರೆದ ಒಂದು ಸೊಲ್ಲಿನ ಬಳಿಕ ಇನ್ನೊಂದು ಸೊಲ್ಲಿನಲ್ಲಿ ಅದರ ಯಾವ ಪಾಂಗನ್ನು ದೂರದ ತೋರುಪದದ ಮೂಲಕ ತಿಳಿಸಲು ಬರುತ್ತದೆ ಎಂಬುದನ್ನು ತೀರ್ಮಾನಿಸಬೇಕಿರುವ ಬರಹಗಾರನ ಕಾಣ್ಬಗೆಯೊಂದು, ಮತ್ತು ತಾನು ಓದುತ್ತಿರುವ ಒಂದು ಸೊಲ್ಲಿನಲ್ಲಿ ಬಂದಿರುವ ದೂರದ ತೋರುಪದ ಹಿಂದಿನ ಸೊಲ್ಲಿನಲ್ಲಿ ಬಂದಿರುವ ಪಾಂಗುಗಳಲ್ಲಿ ಯಾವುದನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗಿರುವ ಓದುಗನ ಕಾಣ್ಬಗೆ ಇನ್ನೊಂದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಹರಿಯನ್ನು ಮೆಚ್ಚಿದ್ದ; ಯಾಕೆಂದರೆ, ಅತ ಎಂತಹ ಸಂದರ್ಬದಲ್ಲೂ ತಾಳ್ಮೆಗೆಡುವುದಿಲ್ಲ. (1ಚ) ರಾಜು ಹರಿಯನ್ನು ಬೆರಗಾಗಿಸಿದ್ದ; ಯಾಕೆಂದರೆ, ಆತ ಎಂತಹ ಸಂದರ್ಬದಲ್ಲೂ ತಾಳ್ಮೆಗೆಡುವುದಿಲ್ಲ. (1ಕ) ಮತ್ತು (1ಚ)ಗಳಲ್ಲಿ ಬಂದಿರುವ ಆತ ಎಂಬ ತೋರುಪದಕ್ಕೆ ಬೇರೆ ಬೇರೆ ಹೆಸರುಪದಗಳು ಹಿನ್ನುಡಿತಗಳಾಗಿರುತ್ತವೆ; ಅವುಗಳ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಎಸಕಪದಗಳು ಬೇರೆ ಬೇರಾಗಿರುವುದೇ ಇದಕ್ಕೆ ಕಾರಣ. (1ಕ)ದ ಮೊದಲನೆಯ ಸೊಲ್ಲಿನಲ್ಲಿ ಮೆಚ್ಚು ಎಂಬ ಎಸಕಪದವನ್ನು ಬಳಸಿರುವುದರಿಂದ, ಎರಡನೇ ಸೊಲ್ಲಿನಲ್ಲಿ ಬಂದಿರುವ ಆತ ಎಂಬುದು ಹರಿಯನ್ನು ಗುರುತಿಸುತ್ತದೆ, ಮತ್ತು (1ಚ)ದ ಮೊದಲನೆಯ ಸೊಲ್ಲಿನಲ್ಲಿ ಬೆರಗಾಗಿಸು ಎಂಬ ಎಸಕಪದವನ್ನು ಬಳಸಿರುವುದರಿಂದ, ಎರಡನೇ ಸೊಲ್ಲಿನಲ್ಲಿ ಬಂದಿರುವ ಅದೇ ತೋರುಪದ ರಾಜುವನ್ನು ಗುರುತಿಸುತ್ತದೆ. ಈ ವ್ಯತ್ಯಾಸವನ್ನು ಬರಹಗಾರನ ಕಾಣ್ಬಗೆಯಿಂದ ಗಮನಿಸುವುದಿದ್ದಲ್ಲಿ, ಎರಡನೆಯ ಸೊಲ್ಲನ್ನು ಬರೆಯುವಾಗ ಅವನು ಆತ ಎಂಬುದನ್ನು ಯಾರನ್ನು ಗುರುತಿಸಲು ಬಳಸಬಲ್ಲೆವು ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ; ಇದಕ್ಕೆ

ಬದಲು, ಓದುಗನ ಕಾಣ್ಬಗೆಯಿಂದ ಗಮನಿಸುವುದಿದ್ದಲ್ಲಿ, ಅವನು ಆತ ಎಂಬುದು ಯಾರನ್ನು ಗುರುತಿಸುತ್ತದೆ ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಆದರೆ, ಈ ಎರಡು ಬಗೆಯ ತೀರ್ಮಾನಗಳೂ ಇಲ್ಲಿ ಮೊದಲನೇ ಸೊಲ್ಲಿನ ಎಸಕಪದವನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬಹುದು. ಈ ಎರಡು ಕಾಣ್ಬಗೆಗಳೂ ಹೆಚ್ಚು ಕಡಿಮೆ ಒಂದೇ ಬಗೆಯ ಸಂಗತಿಗಳನ್ನು ಅವಲಂಬಿಸಿರುತ್ತವೆಯಾದರೂ, ಅದಕ್ಕಾಗಿ ಬಳಕೆಯಾಗುವ ಸಂಗತಿಗಳು ಹಲವಿದ್ದು, ಅವುಗಳ ಹಿಂದಿರುವ ಕಟ್ಟಲೆಗಳನ್ನು ಕಂಡುಹಿಡಿಯುವುದು ತುಂಬಾ ತೊಡಕಿನ ಕೆಲಸವಾಗಿದೆ. ಇಲ್ಲಿ ಅವುಗಳ ಬಳಕೆಗೆ ಸಂಬಂದಿಸಿದ ಕೆಲವು ಮುಕ್ಯವಾದ ಸಂಗತಿಗಳನ್ನಶ್ಟೇ ಪಟ್ಟಿಮಾಡಲು ಸಾದ್ಯವಾಗಿದೆ: (1) ಮೆಚ್ಚು ಮತ್ತು ಬೆರಗಾಗಿಸು ಎಂಬ ಎಸಕಪದಗಳನ್ನು ಬಳಸಿರುವ ಮೇಲೆ ಕೊಟ್ಟ (1ಕ)-(1ಚ) ಸೊಲ್ಲುಗಳಲ್ಲಿ ಕಾಣಿಸಿದ ಹಾಗೆ, ಒಂದು ಸೊಲ್ಲಿನಲ್ಲಿ ಬಳಕೆಯಾಗುವ ತೋರುಪದದ ಹಿನ್ನುಡಿತ ಯಾವುದು ಎಂಬುದು ಅದರ ಹಿಂದಿನ ಸೊಲ್ಲಿನಲ್ಲಿ ಎಂತಹ ಎಸಕಪದ ಬಂದಿದೆ ಎಂಬುದರ ಮೇಲೆ ಅವಲಂಬಿಸಿರಬಲ್ಲುದು. ಸಾಮಾನ್ಯವಾಗಿ, ಒಂದು ಎಸಕಪದ ತಿಳಿಸುವ ಅನಿಸಿಕೆ ಯಾರಲ್ಲಿ ಉಂಟಾಗಿದೆ ಎಂಬುದಕ್ಕಿಂತಲೂ ಅದಕ್ಕೆ ಕಾರಣ ಯಾರು ಎಂಬುದು ತೋರುಪದದ ಹಿನ್ನುಡಿತವನ್ನು ತೀರ್ಮಾನಿಸುವಲ್ಲಿ ಮುಕ್ಯವಾಗುತ್ತದೆ. (1ಕ)ದಲ್ಲಿ ಮೆಚ್ಚುಗೆ ಉಂಟಾಗಿರುವುದು ರಾಜುವಿನಲ್ಲಿ, ಮತ್ತು ಅದಕ್ಕೆ ಕಾರಣ ಹರಿ; ಹಾಗಾಗಿ, (1ಕ)ದ ಎರಡನೇ ಸೊಲ್ಲಿನ ಆತ ಎಂಬುದು ಹರಿಯನ್ನು ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬೆರಗು ಉಂಟಾದುದು ಹರಿಯಲ್ಲಿ, ಮತ್ತು ಅದಕ್ಕೆ ಕಾರಣ (ಅದನ್ನು ಉಂಟುಮಾಡಿದುದು) ರಾಜು; ಹಾಗಾಗಿ, (1ಚ)ದ ಎರಡನೇ ಸೊಲ್ಲಿನಲ್ಲಿ ಆತ ಎಂಬುದು ರಾಜುವನ್ನು ಗುರುತಿಸುತ್ತದೆ. ತೋರುಪದದ ಹಿನ್ನುಡಿತ ಅದರೊಂದಿಗೆ ಬಂದಿರುವ ಎಸಕಪದದ ಮೇಲೆ ಅವಲಂಬಿಸಿರುವುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲೂ ಕಾಣಬಹುದು: (1ಕ) ಆ ಹಕ್ಕಿ ಬೆಕ್ಕನ್ನು ಅದು ಹಾರಿಹೋಗುವ ಮೊದಲೇ ಕಂಡಿತ್ತು. (1ಚ) ಆ ಹಕ್ಕಿ ಬೆಕ್ಕನ್ನು ಅದು ತನ್ನ ಮೇಲೆ ನೆಗೆಯುವ ಮೊದಲೇ ಕಂಡಿತ್ತು. (1ಕ) ಸೊಲ್ಲಿನಲ್ಲಿ ಬಂದಿರುವ ಅದು ಎಂಬ ತೋರುಪದಕ್ಕೆ ಹಕ್ಕಿ ಎಂಬುದು ಹಿನ್ನುಡಿತವಾಗಿದೆ; ಆದರೆ, (1ಚ)ದಲ್ಲಿ ಅದೇ ತೋರುಪದಕ್ಕೆ ಬೆಕ್ಕು ಎಂಬುದು ಹಿನ್ನುಡಿತವಾಗಿದೆ. ಈ ವ್ಯತ್ಯಾಸಕ್ಕೆ ತೋರುಪದಗಳ ಬಳಿಕ ಬಂದಿರುವ ಎಸಕಪದಗಳ ನಡುವಿನ ವ್ಯತ್ಯಾಸ ಕಾರಣ. (1ಕ)ದಲ್ಲಿ ಹಕ್ಕಿಯನ್ನು ಮಾಡುಗ ಪಾಂಗಾಗಿ ಪಡೆದಿರುವ ಹಾರಿಹೋಗು ಎಂಬ ಎಸಕಪದ ಬಂದಿದೆ, ಮತ್ತು

(1ಚ)ದಲ್ಲಿ ಬೆಕ್ಕನ್ನು ಮಾಡುಗ ಪಂಗಾಗಿ ಪಡೆದಿರುವ ನೆಗೆ ಎಂಬ ಎಸಕಪದ ಬಂದಿದೆ. ಇಲ್ಲಿ ಎಸಕಪದದ ಮಾಡುಗ ಪಾಂಗು ಯಾವುದು ಎಂಬುದು ಮುಕ್ಯವಾಗಿದೆ. (2) ಮೊದಲನೇ ಸೊಲ್ಲಿನ ಪದಗಳಲ್ಲಿ ಯಾವುದನ್ನು ಆಡುಗನು ಎರಡನೇ ಸೊಲ್ಲಿನ ತೋರುಪದಕ್ಕೆ ಹಿನ್ನುಡಿತವಾಗಿ ಆರಿಸಿಕೊಂಡಿದ್ದಾನೆ, ಎಂದರೆ ಯಾವ ರೀತಿ ಅವನು ಮಾತನ್ನು ಮುಂದುವರಿಸಿದ್ದಾನೆ ಎಂಬುದರ ಮೇಲೆಯೂ ಆ ಎರಡು ಸೊಲ್ಲುಗಳ ನಡುವಿನ ಸಂಬಂದ ಅವಲಂಬಿಸಿರಬಲ್ಲುದು; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ರಾಜುವಿಗೆ ಜಾನಕಿಯ ಮೇಲೆ ಕೋಪ ಬಂತು; ಅವನು ಆಕೆಯನ್ನು ಹೊರಗೆ ಹೋಗಲು ಹೇಳಿದ. (1ಚ) ರಾಜುವಿಗೆ ಜಾನಕಿಯ ಮೇಲೆ ಕೋಪ ಬಂತು; ಆಕೆ ಇವತ್ತೂ ತಡವಾಗಿ ಬಂದಿದ್ದಳು. (1ಕ)ದಲ್ಲಿ ರಾಜು ಎಂಬ ಮೊದಲನೇ ಸೊಲ್ಲಿನ ಮಾಡುಗ ಪಾಂಗನ್ನು ಅವನು ಎಂಬ ಎರಡನೇ ಸೊಲ್ಲಿನ ಮಾಡುಗ ಪಾಂಗಿಗೆ ಹಿನ್ನುಡಿತವಾಗಿ ಬಳಸಲಾಗಿದೆ; ಹಾಗಾಗಿ, ಮೊದಲನೇ ಸೊಲ್ಲು ತಿಳಿಸುವ ಎಸಕದ ಬಳಿಕ ಏನಾಯಿತು ಎಂಬುದನ್ನು ಎರಡನೇ ಸೊಲ್ಲು ತಿಳಿಸುತ್ತದೆ. ಇದಕ್ಕೆ ಬದಲು, (1ಚ)ದಲ್ಲಿ ಜಾನಕಿಯ ಮೇಲೆ ಎಂಬ ಮೊದಲನೇ ಸೊಲ್ಲಿನ ಜಾಗ ಪಾಂಗನ್ನು ಆಕೆ ಎಂಬ ಎರಡನೇ ಸೊಲ್ಲಿನ ಮಾಡುಗ ಪಾಂಗಿಗೆ ಹಿನ್ನುಡಿತವಾಗಿ ಬಳಸಲಾಗಿದೆ; ಹಾಗಾಗಿ, ಮೊದಲನೇ ಸೊಲ್ಲು ತಿಳಿಸುವ ಎಸಕಕ್ಕೆ ಎರಡನೇ ಸೊಲ್ಲು ಕಾರಣವನ್ನು ಕೊಡುತ್ತದೆ. ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಮೊದಲನೇ ಸೊಲ್ಲನ್ನು ಆಡುಗನು ಯಾವ ರೀತಿಯಲ್ಲಿ ಮುಂದುವರಿಸಿದ್ದಾನೆ ಎಂಬುದರ ಮೇಲೆ ಎರಡನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬ ತೋರುಪದಕ್ಕೆ ಮೂರು ಬೇರೆ ಬೇರೆ ಹಿನ್ನುಡಿತಗಳು ದೊರಕಿವೆ ಎಂಬುದನ್ನು ಗಮನಿಸಬಹುದು: (1ಕ) ಮಂಗ ಹಣ್ಣನ್ನು ತಿಂದಿತು; ಯಾಕೆಂದರೆ, ಅದಕ್ಕೆ ಹಸಿವಾಗಿತ್ತು. (1ಚ) ಮಂಗ ಹಣ್ಣನ್ನು ತಿಂದಿತು; ಯಾಕೆಂದರೆ, ಅದು ನೋಡಲು ತುಂಬಾ ಚನ್ನಾಗಿತ್ತು. (1ಟ) ಮಂಗ ಹಣ್ಣನ್ನು ತಿಂದಿತು; ಯಾಕೆಂದರೆ, ಅದು ತಿನ್ನುವ ಹೊತ್ತಾಗಿತ್ತು.

ಅದು ಎಂಬುದಕ್ಕೆ (1ಕ)ದಲ್ಲಿ ಮೊದಲನೇ ಸೊಲ್ಲಿನ ಮಂಗ ಎಂಬ ಪದ, (1ಚ)ದಲ್ಲಿ ಹಣ್ಣು ಎಂಬ ಪದ, ಮತ್ತು (1ಟ)ದಲ್ಲಿ ಮೊದಲನೇ ಸೊಲ್ಲಿನ ಎಸಕಪದದ ಹೊತ್ತಿನ ಒಟ್ಟು ಹಿನ್ನುಡಿತವಾಗಿ ಬಂದಿದೆ. (3) ಎರಡು ಸೊಲ್ಲುಗಳನ್ನು ಜೋಡಿಸುವುದಕ್ಕಾಗಿ ಮತ್ತು, ಯಾಕೆಂದರೆ, ಹಾಗಾಗಿ, ಇಲ್ಲವೇ ಎಂಬಂತಹ ಪದಗಳಲ್ಲಿ ಯಾವುದನ್ನು ಬಳಸಲಾಗಿದೆ ಎಂಬುದರ ಮೇಲೂ ಮೊದಲನೇ ಸೊಲ್ಲಿನ ಪಾಂಗುಗಳಲ್ಲಿ ಯಾವುದು ಎರಡನೇ ಸೊಲ್ಲಿನ ತೋರುಪದಕ್ಕೆ ಹಿನ್ನುಡಿತವಾಗಿದೆ ಎಂಬುದು ಅವಲಂಬಿಸಿರಬಲ್ಲುದು: (1ಕ) ರಾಜು ಹರಿಯ ಮೇಲೆ ಸಿಟ್ಟಾಗಿದ್ದಾನೆ; ಹಾಗಾಗಿ, ಅವನು ಇವತ್ತು ತುಂಬಾ ತಡವಾಗಿ ಬಂದಿದ್ದಾನೆ. (1ಚ) ರಾಜು ಹರಿಯ ಮೇಲೆ ಸಿಟ್ಟಾಗಿದ್ದಾನೆ; ಯಾಕೆಂದರೆ, ಅವನು ಇವತ್ತು ತುಂಬಾ ತಡವಾಗಿ ಬಂದಿದ್ದಾನೆ. (1ಕ)ದಲ್ಲಿ ಬಂದಿರುವ ಅವನು ಎಂಬುದಕ್ಕೆ ರಾಜು ಎಂಬುದು ಹಿನ್ನುಡಿತವಾಗಿದೆ; ಆದರೆ, (1ಚ)ದಲ್ಲಿ ಬಂದಿರುವ ಅದೇ ತೋರುಪದಕ್ಕೆ ಹರಿ ಎಂಬುದು ಹಿನ್ನುಡಿತವಾಗಿದೆ. ಈ ವ್ಯತ್ಯಾಸಕ್ಕೆ ಇವುಗಳಲ್ಲಿ ಬಂದಿರುವ ಹಾಗಾಗಿ ಮತ್ತು ಯಾಕೆಂದರೆ ಎಂಬ ಪದಗಳು ಕಾರಣಗಳಾಗಿವೆ. ಆದರೆ, ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಹಾಗಾಗಿ ಎಂಬುದು ಬಂದಿದೆಯಾದರೂ ತೋರುಪದದ ಹಿನ್ನುಡಿತ ಸೊಲ್ಲಿನ ಮಾಡುಗ ಪಾಂಗೂ ಆಗಿರಬಲ್ಲುದು, ಈಡು ಪಾಂಗೂ ಆಗಿರಬಲ್ಲುದು; ಅವೆರಡರಲ್ಲಿ ಯಾವುದು ಹಿನ್ನುಡಿತವಾಗಿರುತ್ತದೆ ಎಂಬುದನ್ನು ಸೊಲ್ಲಿನ ಕುಳ್ಳಿಹದಿಂದ ತಿಳಿದುಕೊಳ್ಳಬೇಕಾಗುತ್ತದೆ: (1ಟ) ರಾಜು ಹರಿಯನ್ನು ಬಯ್ದಿದ್ದ; ಹಾಗಾಗಿ, ಅವನು ಇಡೀ ದಿವಸ ಬೇಸರದಲ್ಲಿದ್ದ. (1ಟ)ದಲ್ಲಿ ಇಡೀ ದಿವಸ ಬೇಸರದಲ್ಲಿದ್ದುದು ರಾಜುವೂ ಆಗಿರಬಲ್ಲುದು, ಮತ್ತು ಹರಿಯೂ ಆಗಿರಬಲ್ಲುದು; ನಿಜಕ್ಕೂ ಯಾರು ಎಂಬುದು ಕತೆ ಹೇಗೆ ನಡೆದಿದೆ ಮತ್ತು ಹೇಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಮತ್ತು ಮತ್ತು ಹಾಗಾಗಿ ಎಂಬವುಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು:

(1ಕ) ರಾಜು ಹರಿಗೆ ಹೊಡೆದ, ಮತ್ತು ಕೇಶವ ಅವನಿಗೆ ಗುದ್ದಿದ. (1ಚ) ರಾಜು ಹರಿಗೆ ಹೊಡೆದ; ಹಾಗಾಗಿ, ಕೇಶವ ಅವನಿಗೆ ಗುದ್ದಿದ. (1ಕ)ದಲ್ಲಿ ಎರಡು ಸೊಲ್ಲುಗಳನ್ನು ಮತ್ತು ಎಂಬುದರಿಂದ ಜೋಡಿಸಲಾಗಿದೆ; ಹಾಗಾಗಿ, ಅದರಲ್ಲಿ ಬಂದಿರುವ ಅವನಿಗೆ ಎಂಬುದಕ್ಕೆ ಹರಿ ಎಂಬುದು ಹಿನ್ನುಡಿತವಾಗಿರುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಎರಡು ಸೊಲ್ಲುಗಳನ್ನು ಹಾಗಾಗಿ ಎಂಬುದರಿಂದ ಜೋಡಿಸಲಾಗಿದೆ; ಎಂದರೆ, ಅವುಗಳಲ್ಲಿ ಮೊದಲನೆಯ ಎಸಕದಿಂದಾಗಿ ಎರಡನೆಯ ಎಸಕ ಉಂಟಾಗಿದೆ. ಹಾಗಾಗಿ, ಅದರಲ್ಲಿ ಬಂದಿರುವ ಅವನಿಗೆ ಎಂಬುದಕ್ಕೆ ರಾಜು ಎಂಬುದು ಹಿನ್ನುಡಿತವಾಗಿದೆ. (4) ಒಂದು ಸೊಲ್ಲಿನ ಮಾಡುಗ ಇಲ್ಲವೇ ಆಗುಗ ಪಾಂಗು ಉಳಿದ ಪಾಂಗುಗಳಿಗಿಂತ ಹೆಚ್ಚು ಕಡೆಗಳಲ್ಲಿ ಮುಂದಿನ ಸೊಲ್ಲಿನಲ್ಲಿ ಬಂದಿರುವ ತೋರುಪದದ ಹಿನ್ನುಡಿತವಾಗಿರುತ್ತದೆ; ಸಾಮಾನ್ಯವಾಗಿ, ಮನುಶ್ಯರನ್ನು ಗುರುತಿಸುವ ಅವನು, ಅವಳು, ಮತ್ತು ಅವರು ಎಂಬ ತೊರುಪದಗಳು ಈ ರೀತಿ ಹಿಂದಿನ ಸೊಲ್ಲಿನಲ್ಲಿ ಬಂದಿರುವ ಮಾಡುಗ ಪಾಂಗನ್ನು ಹಿನ್ನುಡಿತವಾಗಿ ಪಡೆಯುತ್ತವೆ: (1ಕ) ರಾಜು ಹರಿಯನ್ನು ಊಟಕ್ಕೆ ಕರೆದಿದ್ದಾನೆ; ಅವನ ಮನೆಯಲ್ಲಿ ಇವತ್ತು ಒಂದು ಪೂಜೆಯಿದೆ. (1ಚ) ಹರಿಯನ್ನು ಕಂಡು ರಾಜು ಹೆದರಿದ; ಆದರೆ, ಅವನು ಅದನ್ನು ತೋರಿಸಿಕೊಳ್ಳಲಿಲ್ಲ. ಆದರೆ, ಎರಡನೇ ಸೊಲ್ಲಿನಲ್ಲಿ ಬಂದಿರುವ ಮಾಡುಗ ಪಾಂಗಿನೊಂದಿಗೆ ಕೂಡಿಕೆಯ ಊ ಒಟ್ಟನ್ನು ಬಳಸಿದೆಯಾದಲ್ಲಿ, ತೋರುಪದದ ಹಿನ್ನುಡಿತವಾಗಿ ಮಾಡುಗದ ಬದಲು ಬೇರೆ ಪಾಂಗುಗಳು ಬರಬಲ್ಲುವು: (1ಕ) ರಾಜು ಹರಿಯನ್ನು ದೂಡಿದ; ಜಾನಕಿ ಅವನನ್ನು ದೂಡಿದಳು. (1ಚ) ರಾಜು ಹರಿಯನ್ನು ದೂಡಿದ; ಜಾನಕಿಯೂ ಅವನನ್ನು ದೂಡಿದಳು. (2ಕ) ರಾಜು ಹರಿಗೆ ಹೊಡೆದ; ಜಾನಕಿ ಅವನಿಗೆ ಹೊಡೆದಳು. (2ಚ) ರಾಜು ಹರಿಗೆ ಹೊಡೆದ; ಜಾನಕಿಯೂ ಅವನಿಗೆ ಹೊಡೆದಳು. (1ಕ) ಮತ್ತು (2ಕ)ಗಳಲ್ಲಿ ಎರಡನೇ ಸೊಲ್ಲಿನ ಅವನು ಎಂಬ ತೋರುಪದಕ್ಕೆ ಮೊದಲನೇ ಸೊಲ್ಲಿನಲ್ಲಿ ಮಾಡುಗ ಪಾಂಗಾಗಿ ಬಂದಿರುವ

ರಾಜು ಎಂಬ ಪದ ಹಿನ್ನುಡಿತವಾಗಿ ಬಂದಿದೆ; ಆದರೆ, (1ಚ) ಮತ್ತು (2ಚ)ಗಳಲ್ಲಿ ಎರಡನೇ ಸೊಲ್ಲಿನ ಮಾಡುಗ ಪಾಂಗಿನೊಂದಿಗೆ ಊ ಒಟ್ಟನ್ನು ಬಳಸಿದೆಯಾದ ಕಾರಣ, ಅವುಗಳಲ್ಲಿ ಬಂದಿರುವ ಅವನು ಪದಕ್ಕೆ ಮೊದಲನೇ ಸೊಲ್ಲಿನ ಈಡು ಮತ್ತು ಗುರಿ ಪಾಂಗುಗಳು (ಹರಿ) ಹಿನ್ನುಡಿತವಾಗಿ ಬಂದಿವೆ. (5) ಉಳಿಕೆ ಗುರ್ತದ ಅದು ಇಲ್ಲವೆ ಅವು ಎಂಬ ತೋರುಪದವನ್ನು ಬಳಸಿರುವಲ್ಲಿ ಅದರ ಹಿನ್ನುಡಿತ ಹೆಚ್ಚಿನೆಡೆಗಳಲ್ಲೂ ಹಿಂದಿನ ಸೊಲ್ಲಿನ ಈಡು ಪಾಂಗಾಗಿರುತ್ತದೆ: (1ಕ) ಇತ್ತೀಚೆಗೆ ಅವರೊಂದು ನಾಟಕವನ್ನು ಓದಿದ್ದರು; ಅದರಲ್ಲಿ ಒಂದು ರಾಕ್ಶಸನ ಪಾತ್ರ ಇದೆ. (1ಚ) ಮಕ್ಕಳು ಕೆಲವು ಪುಸ್ತಕಗಳನ್ನು ಹರಿದುಹಾಕಿದ್ದಾರೆ; ಅವನ್ನು ಬೇರೆಯಾಗಿ ಇರಿಸಬೇಕು. ಈಡು ಪಾಂಗಿನ ಬದಲು ಸೊಲ್ಲಿನಲ್ಲಿರುವ ಬೇರೆ ಪಾಂಗನ್ನು ಇಲ್ಲವೇ ಪದವನ್ನು ಓದುಗನ ಗಮನಕ್ಕೆ ತರಬೇಕಾದಾಗ ಅದನ್ನೇ ಇನ್ನೊಮ್ಮೆ ಆ ಎಂಬ ತೋರ್ಕೆಯ ತೋರುಪದದೊಂದಿಗೆ ಬಳಸಬೇಕಾಗುತ್ತದೆ: (1ಕ) ಅವನು ಪುಸ್ತಕಗಳ ಕಟ್ಟನ್ನು ಮೇಜಿನ ಮೇಲಿರಿಸಿದ್ದ; ಆದರೆ, ಆ ಮೇಜು ತುಂಬಾ ಹಳೆಯದಾಗಿತ್ತು. (1ಕ)ದಲ್ಲಿ ಆ ಮೇಜು ಎಂಬುದರ ಬದಲು ಅದು ಎಂಬುದನ್ನು ಬಳಸಿದಲ್ಲಿ ಅದಕ್ಕೆ ಪುಸ್ತಕಗಳ ಕಟ್ಟು ಎಂಬ ಈಡು ಪಾಂಗು ಹಿನ್ನುಡಿತವಾಗಬಲ್ಲುದಲ್ಲದೆ ಮೇಜು ಎಂಬ ಜಾಗ ಪಾಂಗು ಹಿನ್ನುಡಿತವಾಗಲಾರದು. (6) ಒಂದು ಪದ ಇಲ್ಲವೇ ಪದಕಂತೆ ಅದರ ಬಳಿಕ ಬಂದಿರುವ ತೋರುಪದಕ್ಕೆ ಹಿನ್ನುಡಿತವಾಗಬಲ್ಲುದೇ ಎಂಬುದು ಆ ತೋರುಪದಕ್ಕೆ ಬೇಕಾಗಿರುವ ಹುರುಳು ಎಶ್ಟು ಸುಲಬವಾಗಿ ಅದರಿಂದ ಸಿಗಬಲ್ಲುದು ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ; ಎತ್ತುಗೆಗಾಗಿ, ಒಂದು ಹೆಸರುಪದದಿಂದ ಪಡೆಯಬಲ್ಲ ಹುರುಳಿನಲ್ಲಿ ಕಾಣಿಸುವ ಪದವೊಂದು ಅದರ ಬಳಿಕ ಬರುವ ತೋರುಪದದ ಹಿನ್ನುಡಿತವಾಗಲಾರದು: (1ಕ) ಮದುವೆಯಾದ ಗಂಡಸರೆಲ್ಲರೂ ಆಕೆಯನ್ನು ಹೊಗಳುವುದಿಲ್ಲ.

(1ಕ)ದಲ್ಲಿ ಬಂದಿರುವ ಮದುವೆಯಾದ ಗಂಡಸರು ಎಂಬ ಹೆಸರುಪದ ಗಂಡಸರು ಹೆಂಗಸರನ್ನು ಮದುವೆಯಾಗಿದ್ದಾರೆ ಎಂಬ ಹುರುಳನ್ನು ಕೊಡಬಲ್ಲುದು; ಆದರೆ, ಅದರ ಬಳಿಕ ಬಂದ ಆಕೆ ಎಂಬ ತೋರುಪದಕ್ಕೆ ಈ ಹುರುಳಿನಲ್ಲಿ ಅಡಗಿರುವ ಹೆಂಗಸು ಎಂಬ ಪದ ಹಿನ್ನುಡಿತವಾಗಲಾರದು. ಇದೇ ರೀತಿಯಲ್ಲಿ, ಜೋಡುಪದದ ಒಂದು ಅಂಗವಾಗಿರುವ ಪದ ಅದರ ಬಳಿಕ ಬರುವ ತೋರುಪದದ ಹಿನ್ನುಡಿತವಾಗಲಾರದು: (1ಕ) ಕಲ್ಲುಕುಟಿಗರು ಅದನ್ನು ಸುತ್ತಿಗೆಯಿಂದ ಒಡೆಯುತ್ತಿದ್ದಾರೆ. (1ಕ)ದಲ್ಲಿ ಬಂದಿರುವ ಅದು ತೋರುಪದಕ್ಕೆ ಕಲ್ಲುಕುಟಿಗ ಎಂಬ ಜೋಡುಪದದ ಅಂಗವಾಗಿರುವ ಕಲ್ಲು ಎಂಬ ಪದ ಹಿನ್ನುಡಿತವಾಗಲಾರದು. (7) ಸುಳುಸೊಲ್ಲಿನಲ್ಲಿ ಬರುವ ತೋರುಪದಕ್ಕೆ ಅದೇ ಸೊಲ್ಲಿನ ಇನ್ನೊಂದು ಪದ ಇಲ್ಲವೇ ಪದಕಂತೆ ಹಿನ್ನುಡಿತವಾಗಲಾರದು: (1ಕ) ಜಾನಕಿ ಅವಳಿಗೆ ಎರಡು ದೋಸೆ ಎರೆದಳು. (1ಚ) ಜಾನಕಿ ಅವಳಿಂದ ಒಂದು ಹಾಡು ಕಲಿತಳು. (1ಟ) ಕುರುಡರು ಅವರಿಗೆ ತಿಂಡಿ ಕೊಡಿಸಿದರು. (1ತ) ರಾಜು ಅವನನ್ನು ಹೊಗಳಿದ. (1ಕ) ಸೊಲ್ಲಿನಲ್ಲಿ ಬಂದಿರುವ ಅವಳಿಗೆ ಎಂಬ ತೋರುಪದಕ್ಕೆ ಅದೇ ಸೊಲ್ಲಿನ ಜಾನಕಿ ಎಂಬುದು ಹಿನ್ನುಡಿತವಾಗಲಾರದು. ಇದೇ ರೀತಿಯಲ್ಲಿ (1ಚ)ದ ಅವಳಿಂದ ಎಂಬುದಕ್ಕೆ, (1ಟ)ದ ಅವರಿಗೆ ಎಂಬುದಕ್ಕೆ, ಮತ್ತು (1ತ)ದ ಅವನನ್ನು ಎಂಬುದಕ್ಕೆ ಅವೇ ಸೊಲ್ಲುಗಳಲ್ಲಿ ಹಿನ್ನುಡಿತ ಸಿಗಲಾರದು. ಇಂತಹ ಸುಳುಸೊಲ್ಲುಗಳಲ್ಲಿ ಒಂದು ಪದ ಇಲ್ಲವೇ ಪದಕಂತೆ ಇನ್ನೊಂದರ ಹಿನ್ನುಡಿತವಾಗಬೇಕಿದ್ದಲ್ಲಿ, ತಾನು ಎಂಬ ಆಡುಪದನ್ನು ಬಳಸಬೇಕಾಗುತ್ತದೆ (… ನೋಡಿ): (1ಕ) ಜಾನಕಿ ತನಗೆ ಎರಡು ದೋಸೆ ಎರೆದಳು (ಎರೆದುಕೊಂಡಳು). (1ಚ) ಕುರುಡರು ತಮಗೆ ತಿಂಡಿ ಕೊಡಿಸಿಕೊಂಡರು. (8) ತೋರುಪದವೊಂದರ ಪತ್ತುಗೆರೂಪವನ್ನು ಸುಳುಸೊಲ್ಲಿನ ಹೆಸರುಕಂತೆಯಲ್ಲಿ ಬಳಸಿದೆಯಾದರೆ, ಅದಕ್ಕೆ ಅದೇ ಸೊಲ್ಲಿನ ಇನ್ನೊಂದು ಪದ ಇಲ್ಲವೇ ಪದಕಂತೆ ಹಿನ್ನುಡಿತವಾಗಬಲ್ಲುದು:

(1ಕ) ರಾಜು ಪುಸ್ತಕಗಳನ್ನು ಅವನ ಚೀಲದಲ್ಲಿ ತುಂಬಿಸಿದ. (1ಚ) ರಾಜು ಕೆರೆಯಲ್ಲಿ ಅವನ ಬಟ್ಟೆಗಳನ್ನು ಒಗೆಯುತ್ತಿದ್ದ. (1ಟ) ನಾಯಿ ಅದರ ಬಾಲವನ್ನೇ ಕಡಿಯುತ್ತಿತ್ತು. (1ಕ)ದಲ್ಲಿ ಅವನು ಎಂಬ ತೊರುಪದದ ಪತ್ತುಗೆ ರೂಪವನ್ನು ಒಂದು ಹೆಸರುಕಂತೆಯ ಅಂಗವಾಗಿ ಬಳಸಿದ್ದು, ಅದರ ಹಿನ್ನುಡಿತವಾಗಿ ಅದೇ ಸೊಲ್ಲಿನ ರಾಜು ಎಂಬ ಪದ ಬಂದಿದೆ; (1ಚ-ಟ)ಗಳಲ್ಲೂ ಹೀಗೆಯೇ. ಆದರೆ, ಇಂತಹ ಸೊಲ್ಲುಗಳಲ್ಲಿ ಬಂದಿರುವ ತೋರುಪದಕ್ಕೆ ಹೊರತೋರ್ಕೆಯ ಹುರುಳೂ ಬರಬಲ್ಲುದಾಗಿದ್ದು, ಈ ಇಪ್ಪುರುಳನ್ನು ಹೋಗಲಾಡಿಸಬೇಕಿದ್ದಲ್ಲಿ ಅದರ ಬದಲು ತಾನು ಪದವನ್ನು ಬಳಸಲಾಗುತ್ತದೆ: (2ಕ) ರಾಜು ಪುಸ್ತಕಗಳನ್ನು ತನ್ನ ಚೀಲದಲ್ಲಿ ತುಂಬಿಸಿದ. (2ಚ) ರಾಜು ಕೆರೆಯಲ್ಲಿ ತನ್ನ ಬಟ್ಟೆಗಳನ್ನು ಒಗೆಯುತ್ತಿದ್ದ. (2ಟ) ನಾಯಿ ತನ್ನ ಬಾಲವನ್ನೇ ಕಡಿಯುತ್ತಿತ್ತು. ಪತ್ತುಗೆ ರೂಪದಲ್ಲಿರುವ ತೋರುಪದಕ್ಕೆ ಈ ರೀತಿ ಒಂದು ಸುಳುಸೊಲ್ಲಿನಲ್ಲಿರುವ ಹೆಸರುಪದ ಹಿನ್ನುಡಿತವಾಗಬಲ್ಲುದಲ್ಲದೆ, ಪತ್ತುಗೆ ರೂಪದಲ್ಲಿರುವ ಹೆಸರುಪದ ಸುಳುಸೊಲ್ಲಿನಲ್ಲಿ ಬಂದಿರುವ ತೋರುಪದಕ್ಕೆ ಹಿನ್ನುಡಿತವಾಗಲಾರದು: (1ಕ) ರಾಜುವಿನ ಪುಸ್ತಕಗಳನ್ನು ಅವನು ಚೀಲದಲ್ಲಿ ತುಂಬಿಸಿದ. (1ಚ) ನಾಯಿಯ ಬಾಲವನ್ನೇ ಅದು ಕಡಿಯುತ್ತಿತ್ತು. (1ಕ)ದಲ್ಲಿ ಅವನು ಎಂಬ ತೋರುಪದಕ್ಕೆ ರಾಜು ಎಂಬ ಪದ ಹಿನ್ನುಡಿತವಾಗಲಾರದು, ಮತ್ತು (1ಚ)ದಲ್ಲಿ ಅದು ಎಂಬ ತೋರುಪದಕ್ಕೆ ನಾಯಿ ಎಂಬ ಪದ ಹಿನ್ನುಡಿತವಾಗಲಾರದು. (9) ಸೊಲ್ಲಿನ ಹೆಸರುಕಂತೆಯೊಂದರಲ್ಲಿ ಒಳಸೊಲ್ಲು ಬಂದಿದೆಯಾದರೂ, ಆ ಒಳಸೊಲ್ಲಿನ ಅಂಗವಾಗಿರುವ ಹೆಸರುಪದವೊಂದು ಆ ಸೊಲ್ಲಿನಲ್ಲಿ ಬಂದಿರುವ ತೋರುಪದದ ಹಿನ್ನುಡಿತವಾಗಬಲ್ಲುದು. (1ಕ) ರಾಜು ತನ್ನ ತಂಗಿಗೆ ಕೊಟ್ಟ ಪುಸ್ತಕವನ್ನು ಅವಳು ಹರಿದುಹಾಕಿದ್ದಾಳೆ. (1ಚ) ರಾಜು ಬೆಂಗಳೂರಿಗೆ ಹೋದ ದಿವಸ ಅಲ್ಲಿ ತುಂಬಾ ಮಳೆ ಬರುತ್ತಿತ್ತು.

(10) ಒಂದು ಹೆಸರುಕಂತೆಯ ಒಂದು ಅಂಗವನ್ನಶ್ಟೇ ತೆಗೆದುಹಾಕಿ, ಅದರ ಜಾಗದಲ್ಲಿ ಪಾಂಗುತೋರ್ಕೆಯ ತೋರುಪದವನ್ನು ಬಳಸಲು ಬರುತ್ತದೆ; ಇಂತಹ ಬಳಕೆಯಲ್ಲಿ ಹೆಸರುಕಂತೆಯ ಒಂದು ಅಂಗ ಇನ್ನೊಂದು ಹೆಸರುಕಂತೆಯ ಒಂದು ಅಂಗವಾಗಿರುವ ತೋರುಪದಕ್ಕೆ ಹಿನ್ನುಡಿತವಾಗಿರುತ್ತದೆ: (1ಕ) ಕೆಂಪುಸೀರೆಯ ಹೆಂಗಸಿನೊಂದಿಗೆ ಇವತ್ತು ಬಿಳಿಸೀರೆಯವಳೂ ಹೋಗುತ್ತಿದ್ದಾಳೆ. (1ಚ) ಜಾನಕಮ್ಮ ಸ್ಟೀಲಿನ ಪಾತ್ರೆಗಳ ಬದಲು ಮಣ್ಣಿನವನ್ನೇ ಬಳಸುತ್ತಿದ್ದಾರೆ. (1ಟ) ಆ ದೊಡ್ಡ ಹುಡುಗಿಗೆ ಚಿಕ್ಕವಳನ್ನು ಕಂಡರಾಗುವುದಿಲ್ಲ. (1ಕ)ದಲ್ಲಿ ಬಿಳಿಸೀರೆಯವಳು ಎಂಬುದರಲ್ಲಿರುವ ಅವಳು ಎಂಬ ತೋರುಪದಕ್ಕೆ ಕೆಂಪುಸೀರೆಯ ಹೆಂಗಸು ಎಂಬ ಹೆಸರುಕಂತೆಯಲ್ಲಿರುವ ಹೆಂಗಸು ಎಂಬುದಶ್ಟೇ ಹಿನ್ನುಡಿತವಾಗಿದೆ; ಇದೇ ರೀತಿಯಲ್ಲಿ, (1ಚ-ಟ) ಸೊಲ್ಲುಗಳಲ್ಲೂ ಹೆಸರುಕಂತೆಯ ಅಂಗವಾಗಿ ಬಂದಿರುವ ಅವನ್ನು ಮತ್ತು ಅವಳನ್ನು ಎಂಬ ತೋರುಪದಗಳಿಗೆ ಹಿನ್ನುಡಿತವಾಗಿ ಅವಕ್ಕೆ ಮೊದಲು ಬಂದಿರುವ ಹೆಸರುಕಂತೆಗಳ ಒಂದು ಅಂಗ (ಪಾತ್ರೆಗಳು ಮತ್ತು ಹುಡುಗಿ) ಮಾತ್ರ ಬರುತ್ತದೆ.

10.4.5 ಹತ್ತಿರದ ತೋರುಪದಗಳ ಬಳಕೆ

ಕೇಳುಗನ ಇಲ್ಲವೇ ಓದುಗನ ನೇರ ಗಮನದಲ್ಲಿರುವ ಪಾಂಗನ್ನೇ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ದೂರದ ತೋರುಪದಗಳನ್ನು ಬಳಸಲಾಗುತ್ತದೆ ಎಂಬುದನ್ನು ಮೇಲೆ ವಿವರಿಸಲಾಗಿದೆ; ಹಿಂದೆ ಗುರುತಿಸಿದ್ದರೂ ಓದುಗನ ನೇರ ಗಮನದಲ್ಲಿ ಉಳಿಯದಿರುವಂತಹ ಒಂದು ಪಾಂಗನ್ನು ಆತನ ಗಮನಕ್ಕೆ ತಂದು, ಆಮೇಲೆ ಅದನ್ನೇ ಮುಂದುವರಿಸಿಕೊಂಡು ಹೋಗಬೇಕಾಗಿರುವಲ್ಲಿ ಹತ್ತಿರದ ತೋರುಪದಗಳನ್ನು ಬಳಸಲಾಗುತ್ತದೆ. ದೂರದ ತೋರುಪದಗಳ ಬಳಕೆಯಲ್ಲಿ ಮಾತಿನ ನೆಲೆ ಮುಂದುವರಿಯುತ್ತದೆ, ಮತ್ತು ಹತ್ತಿರದ ತೋರುಪದಗಳ ಬಳಕೆಯಲ್ಲಿ ಮಾತಿನ ನೆಲೆ ಮಾರ್ಪಡುತ್ತದೆ. ಆ ಮತ್ತು ಈ ಎಂಬ ಎರಡು ತೋರುಪದಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸವಿರುವುದನ್ನು ಕೆಳಗೆ ತೋರಿಸಿಕೊಡಲಾಗಿದೆ; ಕೇಳುಗನ ಇಲ್ಲವೇ ಓದುಗನ ನೇರ ಗಮನದಲ್ಲಿರುವ ಪಾಂಗನ್ನು ಮುಂದುವರಿಸುವಲ್ಲಿ ಆ ಎಂಬುದನ್ನು ಬಳಸಲಾಗುತ್ತದೆ, ಮತ್ತು ನೇರ ಗಮನದಲ್ಲಿಲ್ಲದ ಪಾಂಗನ್ನು

ತಿರುಗಿ ಗಮನಕ್ಕೆ ತಂದು ಮುಂದುವರಿಸುವಲ್ಲಿ ಈ ಎಂಬುದನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಕೊಡಗಿನ ಗವ್ರಮ್ಮ ಅವರು ಬರೆದ ಕವ್ಸಲ್ಯಾನಂದನ ಎಂಬ ಕತೆಯಲ್ಲಿ ಬರುವ ಈ ಎರಡು ತೋರುಪದಗಳ ಬಳಕೆಗಳನ್ನು ಗಮನಿಸಬಹುದು: (1ಕ) ಒಂದು ಮೂಲೆಯಲ್ಲಿ ಕೂತು ಮೇಜಿನ ಮೇಲಿದ್ದ ಕವ್ಸಲ್ಯಾನಂದರ ಪುಸ್ತಕವೊಂದನ್ನು ತೆಗೆದು ಓದತೊಡಗಿದೆ. ನಾನು ಆ ಪುಸ್ತಕವನ್ನು ತೆಗೆದುದನ್ನು ನೋಡಿ….. (1ಚ) ಮನೆಯಿಂದ ಅಣ್ಣ ಕಾಗದ ಬರೆದಿದ್ದರು. `ಇಲ್ಲೆಲ್ಲ ಸಿಡುಬಿನ ಗಲಾಟೆ’. ಬಹಳ ದಿನದಿಂದ ಹಂಬಲಿಸಿದ ರಜೆಗೆ ಒಂದೇ ವಾರ ಬಾಕಿಯಿತ್ತು. ಹುಡುಗಿಯರೆಲ್ಲಾ ಊರಿಗೆ ಹೊರಡುವ ಸನ್ನಾಹ ಮಾಡುತ್ತಿದ್ದರು. ನಾನಂತೂ ಎಲ್ಲರಿಗಿಂತ ಮೊದಲೇ ಪುಸ್ತಕಗಳನ್ನೂ ಬಟ್ಟೆಗಳನ್ನೂ ಕಟ್ಟಿ ಮುಗಿಸಿದೆ. ರಜಾದಿನಗಳನ್ನು ಹೇಗೆ ಕಳೆಯಬೇಕು, ಏನೇನು ಮಾಡಬೇಕು ಎಂದು ಯೋಚಿಸಿ ಸಂತೋಶ ಪಡುತ್ತಿದ್ದಾಗ ಈ ಕಾಗದ! (1ಕ)ದಲ್ಲಿ ಕವ್ಸಲ್ಯಾನಂದರ ಪುಸ್ತಕವೊಂದು ಎಂಬ ಪದಕಂತೆಯ ಮೂಲಕ ಮೊದಲನೆಯ ಸೊಲ್ಲಿನಲ್ಲಿ ಓದುಗನ ಗಮನಕ್ಕೆ ತಂದಿರುವ ಪಾಂಗನ್ನೇ ಇನ್ನೊಮ್ಮೆ ಎರಡನೆಯ ಸೊಲ್ಲಿನಲ್ಲಿ ಎತ್ತಿ ತೋರಿಸುವುದಕ್ಕಾಗಿ ಆ ಪುಸ್ತಕ ಎಂಬುದು ಬಂದಿದ್ದು, ಅದರಲ್ಲಿ ಆ ಎಂಬ ತೋರುಪದ ಓದುಗನ ನೇರ ಗಮನದಲ್ಲಿರುವ ಪಾಂಗಿನ ಮುಂದುವರಿಕೆಯನ್ನು ತಿಳಿಸುತ್ತದೆ. ಇದಕ್ಕೆ ಬದಲು, (1ಚ)ದಲ್ಲಿ ಕಾಗದ ಎಂಬ ಪದದ ಮೂಲಕ ಮೊದಲನೆಯ ಸೊಲ್ಲಿನಲ್ಲಿ ಓದುಗನ ಗಮನಕ್ಕೆ ತಂದ ಪಾಂಗಿನ ಕುರಿತಾಗಿ ಮುಂದಿನ ಮೂರು ನಾಲ್ಕು ಸೊಲ್ಲುಗಳಲ್ಲಿ ಏನೂ ಹೇಳಿಲ್ಲ; ಅದಕ್ಕೆ ಬದಲು, ರಜಾದಿನಗಳ ಕುರಿತಾಗಿ ತಿಳಿವನ್ನು ನೀಡಲಾಗಿದೆ; ಹಾಗಾಗಿ, ಕಾಗದ ಎಂಬುದು ಓದುಗನ ನೇರ ಗಮನದಿಂದ ಹೊರಗೆ ಹೋಗಿರಬೇಕು; ಅದನ್ನು ಇನ್ನೊಮ್ಮೆ ಆತನ ಗಮನಕ್ಕೆ ತರುವುದಕ್ಕಾಗಿ ಈ ಕಾಗದ ಎಂಬುದರಲ್ಲಿ ಬಂದಿರುವ ಈ ಎಂಬ ತೋರುಪದವನ್ನು ಬಳಸಲಾಗಿದೆ. ಒಂದು ಪಾಂಗನ್ನು ಓದುಗನ ಗಮನಕ್ಕೆ ತಂದ ಹೆಸರುಕಂತೆಗೂ ತೋರುಪದಕ್ಕೂ ನಡುವೆ ಬೇರೆ ಹಲವು ಸೊಲ್ಲುಗಳು ಬಂದಿವೆಯಾದರೂ, ಅವೆಲ್ಲವೂ ಆ ಪಾಂಗನ್ನು ಓದುಗನ ಗಮನದಲ್ಲೇನೇ ಉಳಿಸುವಂತಿವೆಯಾದರೆ, ಆ ಎಂಬ ತೋರುಪದವನ್ನೇ ಬಳಸಲು ಬರುತ್ತದೆ; ಇದಕ್ಕೆ ಎತ್ತುಗೆಯಾಗಿ ಕೊಡಗಿನ ಗವ್ರಮ್ಮ ಅವರ ಅವಳ ಬಾಗ್ಯ ಎಂಬ ಇನ್ನೊಂದು ಕತೆಯಲ್ಲಿ ಬಂದ ಕೆಳಗಿನ ಸಂದರ್ಬವನ್ನು ಗಮನಿಸಬಹುದು:

(1) ನನ್ನ ಮೆಚ್ಚುಗೆಯ ಅರಿವಿಲ್ಲದೆಯೇ ಅವಳು ಹಾಡುತ್ತಿದ್ದಳು. ಯಾವಾಗಲೂ ನೆಲವನ್ನು ನೋಡುವ ಅವಳ ನೋಟವು ಅವಳ ಅರಿವಿಲ್ಲದೆ ಪರಮಾತ್ಮನನ್ನು ನೋಡುತ್ತಿದೆಯೋ ಎಂಬಂತೆ ಆಕಾಶದ ಕಡೆಗೆ ನೋಡುತ್ತಿತ್ತು…….(ಇಲ್ಲಿ ಹಾಡುವವಳ ವರ್ಣನೆ ಹಲವು ಸೊಲ್ಲುಗಳಲ್ಲಿ ಬರುತ್ತದೆ). ಕೂತು ಬೇಸತ್ತಿದ್ದ ಕಿಟ್ಟಣ್ಣನ ಬೇಸರವೆಲ್ಲಿ ಹೋಯ್ತೋ? ಆ ಹಾಡು ಮುಗಿಯುವುದೇ vÀqÀ…. (1)ರಲ್ಲಿ ಹಾಡುವಿಕೆಯನ್ನು ಓದುಗನ ಗಮನಕ್ಕೆ ತಂದ ಎಸಕರೂಪ ಮೊದಲನೆಯ ಸೊಲ್ಲಿನಲ್ಲಿ ಬಂದಿದೆ; ಆಮೇಲಿನ ಹಲವು ಸೊಲ್ಲುಗಳಲ್ಲಿ ಹಾಡುಗಾರ್ತಿಯ ಕೊಗೆತ ಬಂದಿದ್ದು, ಅದು ಆಕೆಯ ಹಾಡುವಿಕೆ ಓದುಗನ ಗಮನದಲ್ಲಿಯೇ ಉಳಿಯುವ ಹಾಗೆ ಮಾಡುತ್ತದೆ; ಹಾಗಾಗಿ, ಹಾಡು ಎಂಬುದೂ ಓದುಗನ ನೇರ ಗಮನದಲ್ಲಿಯೇ ಉಳಿದಿರುತ್ತದೆ, ಮತ್ತು ಅದರ ಮುಂದುವರಿಕೆಗಾಗಿ ಆ ಎಂಬ ತೋರುಪದವನ್ನೇ (1)ರ ಕೊನೆಯ ಸೊಲ್ಲಿನಲ್ಲಿ ಬಳಸಲಾಗಿದೆ. ಹತ್ತಿರದ ಪಾಂಗನ್ನು ಗುರುತಿಸುವ ಈ ಎಂಬುದನ್ನು ಇಲ್ಲಿ ಗಮನದಿಂದ ಬಿದ್ದುಹೋಗಿರುವ ಹಳೆಯ ಪಾಂಗನ್ನು ತಿರುಗಿ ಗಮನಕ್ಕೆ ತರುವುದಕ್ಕಾಗಿ ಬಳಸುತ್ತಿರುವುದು, ಮತ್ತು ದೂರದ ಪಾಂಗನ್ನು ಗುರುತಿಸುವ ಆ ಎಂಬುದನ್ನು ಗಮನದಲ್ಲಿರುವ ಪಾಂಗನ್ನೇ ಮುಂದುವರಿಸುವುದಕ್ಕಾಗಿ ಬಳಸುವುದು ಬೇರೆ ಕಡೆಗಳಲ್ಲಿ ಅವುಗಳಿಗಿರುವ ಹತ್ತಿರ-ದೂರ ಎಂಬ ಹುರುಳಿಗೆ ವಿರುದ್ದವಾಗಿರುವಂತೆ ತೋರಬಹುದು. ಆದರೆ, ಇದನ್ನು ಬೇರೆ ಬಗೆಯಲ್ಲಿ ವಿವರಿಸಲು ಬರುತ್ತದೆ: ಈ ಎಂಬುದಕ್ಕೆ, ಮತ್ತು ಬೇರೆ ಹತ್ತಿರದ ತೋರುಪದಗಳಿಗೆ ಒತ್ತಿಹೇಳುವ ಹುರುಳಿದೆ; ಒಂದು ಪಾಂಗನ್ನು ಮುಂದುವರಿಸುತ್ತಿರುವಾಗ ಅದನ್ನು ಒತ್ತಿಹೇಳಬೇಕಾಗುವುದಿಲ್ಲ; ಇದಕ್ಕೆ ಬದಲು, ಗಮನದಲ್ಲಿರುವ ಪಾಂಗನ್ನು ಬಿಟ್ಟುಕೊಟ್ಟು, ಗಮನದಿಂದ ಬಿದ್ದುಹೋದ ಬೇರೊಂದು ಪಾಂಗನ್ನು ಗಮನಕ್ಕೆ ತರಬೇಕಾದರೆ, ಅದನ್ನು ಒತ್ತಿಹೇಳಬೇಕಾಗುತ್ತದೆ. ಹಾಗಾಗಿ, ಈ ಕೆಲಸಕ್ಕೆ ಒತ್ತಿಹೇಳುವ ಹುರುಳಿರುವ ಹತ್ತಿರದ ತೋರುಪದಗಳೇ ಸರಿಯಾದವುಗಳು. (1) ಈ ಮತ್ತು ಆ ಎಂಬ ತೋರುಪದಗಳ ನಡುವಿರುವ ಮೇಲಿನ ವ್ಯತ್ಯಾಸ ಅವುಗಳ ಪಾಂಗುತೋರ್ಕೆಯ ಬಳಕೆಯಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ವ್ಯತ್ಯಾಸ ಎಂಬುದನ್ನು ಇಲ್ಲಿ ಗಮನಿಸಬೇಕು; ಯಾಕೆಂದರೆ, ಈ ಎರಡು ತೋರುಪದಗಳಿಗೆ ಹೊರತೋರ್ಕೆಯ ಬಳಕೆಯೂ ಇದೆ, ಮತ್ತು ಈ ಬಳಕೆಯಲ್ಲಿ ಅವು ಹತ್ತಿರ ಮತ್ತು ದೂರ ಎಂಬ ವ್ಯತ್ಯಾಸವನ್ನೇ ತೋರಿಸುತ್ತವೆ. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳಲ್ಲಿ ಆ ಮತ್ತು ಈ ಎಂಬ ತೋರುಪದಗಳಿಗೆ ಹೊರತೋರ್ಕೆಯ

ಬಳಕೆಯಿದೆ, ಮತ್ತು ಈ ಬಳಕೆಯಲ್ಲಿ ಮೇಲೆ ವಿವರಿಸಿದಂತಹ ವ್ಯತ್ಯಾಸ ಕಾಣಿಸುವುದಿಲ್ಲ. (1ಕ) ಆ ಪುಸ್ತಕವನ್ನು ನಾನು ಬೆಂಗಳೂರಿನಿಂದ ತಂದೆ. (1ಚ) ಈ ಪುಸ್ತಕವನ್ನು ನಾನು ಬೆಂಗಳೂರಿನಿಂದ ತಂದೆ. (1ಕ)ದಲ್ಲಿ ಬಂದಿರುವ ಆ ಪುಸ್ತಕ ಎಂಬುದು ಆಡುಗನಿಂದ ದೂರ ಇರುವ ಪುಸ್ತಕವನ್ನು ಮತ್ತು (1ಚ)ದಲ್ಲಿ ಬಂದಿರುವ ಈ ಪುಸ್ತಕ ಎಂಬುದು ಆತನ ಹತ್ತಿರ ಇರುವ ಪುಸ್ತಕವನ್ನು ಗುರುತಿಸುತ್ತದೆ. (2) ಹತ್ತಿರದ ತೋರುಪದಕ್ಕೆ ಹೊಂದಿಕೆಯಾಗಬಲ್ಲ, ಮತ್ತು ಓದುಗನ ನೇರ ಗಮನದಲ್ಲಿಲ್ಲದಿರುವ ಒಂದು ಪಾಂಗು ಹಿಂದಿನ ಸೊಲ್ಲುಗಳಲ್ಲಿ ಇಲ್ಲವೇ ಅದೇ ಸೊಲ್ಲಿನಲ್ಲಿ ಬಂದಿಲ್ಲವಾದರೆ, ಅದಕ್ಕೆ ಹೊರತೋರ್ಕೆಯ ಹುರುಳೇ ಸಿಗುತ್ತದೆ: (1ಕ) ಶ್ರೀನಿವಾಸನು ಹುಡುಗಿಯ ಹತ್ತಿರ ಅವಳ ಅಣ್ಣನನ್ನು ಕರೆಯಲು ಹೇಳಿದ. (1ಚ) ಶ್ರೀನಿವಾಸನು ಹುಡುಗಿಯ ಹತ್ತಿರ ಇವಳ ಅಣ್ಣನನ್ನು ಕರೆಯಲು ಹೇಳಿದ. (1ಕ)ದಲ್ಲಿ ಬಂದಿರುವ ಅವಳ ಎಂಬ ಪದಕ್ಕೆ ಓದುಗನ ಗಮನದಲ್ಲಿರುವ ಹುಡುಗಿ ಎಂಬ ಹೆಸರುಪದ ಗುರುತಿಸಿರುವ ಪಾಂಗನ್ನು ಆತನ ಗಮನದಲ್ಲಿ ಉಳಿಸುವ ಕೆಲಸವಿದೆ; ಆದರೆ, (1ಚ)ದಲ್ಲಿ ಬಂದಿರುವ ಇವಳ ಎಂಬ ಪದಕ್ಕೆ ಅಂತಹ ಪಾಂಗುತೋರ್ಕೆಯ ಹುರುಳು ಸಿಗುವುದಿಲ್ಲ; ಯಾಕೆಂದರೆ, ಅದಕ್ಕೆ ಹೊಂದಿಕೆಯಾಗಬಲ್ಲ, ಮತ್ತು ಓದುಗನ ನೇರ ಗಮನದಲ್ಲಿಲ್ಲದ ಬೇರೊಂದು ಪಾಂಗನ್ನು (1ಚ)ದಲ್ಲಿ ಗುರುತಿಸಿಲ್ಲ. ಹಾಗಾಗಿ, ಅದಕ್ಕೆ ಹೊರತೋರ್ಕೆಯ ಹುರುಳೇ ದೊರಕುತ್ತದೆ. ನೇರ ಗಮನದಲ್ಲಿರುವ ಪಾಂಗನ್ನು ಗುರುತಿಸಲು ಹತ್ತಿರದ ತೋರುಪದಗಳನ್ನು ಬಳಸಲು ಬರುವುದಿಲ್ಲ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿಯೂ ಕಾಣಬಹುದು: (1ಕ) ಹರಿಯನ್ನು ನಿನ್ನೆ ಒಂದು ನಾಯಿ ಕಚ್ಚಿತ್ತು; ಇವತ್ತು ಅದೇ ನಾಯಿ (ಇದೇ ನಾಯಿ) ಅವನ ತಂಗಿಯನ್ನು ಕಚ್ಚಿದೆ. (1ಚ) ಪುಸ್ತಕಗಳನ್ನು ನೀವು ಈ ಕಪಾಟಿನಿಂದ ತೆಗೆದಿದ್ದೀರಾದರೆ, ಅದನ್ನು (ಇದನ್ನು) ಅಲ್ಲೇ ಇರಿಸಿ.

(1ಕ)ದಲ್ಲಿ ಅದೇ ಎಂಬುದು ಹಿಂದಿನ ಸೊಲ್ಲು ತಿಳಿಸುವ ನಾಯಿಯನ್ನು ಗುರುತಿಸುತ್ತದೆ; ಈ ನಾಯಿ ಓದುಗನ ನೇರ ಗಮನದಲ್ಲಿದೆಯಾದ ಕಾರಣ, ಅದನ್ನು ತಿಳಿಸಲು ಇದೇ ನಾಯಿ ಎಂಬುದನ್ನು ಬಳಸಲು ಬರುವುದಿಲ್ಲ. (1ಚ)ದಲ್ಲಿ ಈ ಕಪಾಟು ಎಂಬುದರಲ್ಲಿ ಈ ಎಂಬ ತೋರುಪದ ಬಂದಿದ್ದು, ಅದು ಆಡುಗನ ಹತ್ತಿರ ಇರುವ ಕಪಾಟನ್ನು ಗುರುತಿಸುತ್ತದೆ; ಆದರೆ, ಅದನ್ನೇ ತಿರುಗಿ ಗುರುತಿಸುವಲ್ಲಿ ಅದನ್ನು ಎಂಬುದನ್ನು ಬಳಸಲಾಗಿದ್ದು, ಅದು ಕೇಳುಗನ ನೇರ ಗಮನದಲ್ಲಿರುವ ಪಾಂಗನ್ನು ಗುರುತಿಸುತ್ತದೆ; ಈ ಪಾಂಗು ಆಡುಗನ ಹತ್ತಿರವೇ ಇದೆಯಾದರೂ, ಅದನ್ನು ಗುರುತಿಸುವುದಕ್ಕಾಗಿ ಇದನ್ನು ಎಂಬ ಹತ್ತಿರದ ತೋರುಪದವನ್ನು ಬಳಸಲು ಬರುವುದಿಲ್ಲ. (3) ಹೊರತೋರ್ಕೆಯಲ್ಲಿರುವ ಹಾಗೆ, ಪಾಂಗುತೋರ್ಕೆಯಲ್ಲೂ ಕೂಡ ಎರಡು ಪಾಂಗುಗಳನ್ನು ಬೇರ್ಪಡಿಸಿ ತಿಳಿಸಲು ಹತ್ತಿರ-ದೂರ ವ್ಯತ್ಯಾಸವನ್ನು ಬಳಸಲು ಬರುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಯಲ್ಲಿ ಕಾಣಬಹುದು: (1ಕ) ಹರಿಗೆ ರಾಜುವಿನೊಂದಿಗೆ ಪೇಟೆಗೆ ಹೋಗಬೇಕೆಂದಿತ್ತು; ಆದರೆ, ಅವನು ಇವನನ್ನು ಕರೆಯಲಿಲ್ಲ. (1ಚ) ರಾಜುವಿನ ಮದುವೆಯಲ್ಲಿ ಹರಿ ಅವನಿಗೊಂದು ವಾಚು ಕೊಟ್ಟಿದ್ದ; ಆದರೆ, ಇವನ ಮದುವೆಯಲ್ಲಿ ಅವನು ಏನೂ ಕೊಡಲಿಲ್ಲ. (1ಕ)ದಲ್ಲಿ ಅವನು ಎಂಬುದು ರಾಜುವನ್ನು ತಿಳಿಸುತ್ತದೆ ಮತ್ತು ಇವನು ಎಂಬುದು ಹರಿಯನ್ನು ತಿಳಿಸುತ್ತದೆ. ಇಲ್ಲಿ ಆಡುಗನು ಹರಿಯ ಕುರಿತಾಗಿ ಒಂದು ಸಂಗತಿಯನ್ನು ತಿಳಿಸುತ್ತಿರುವನಾದ ಕಾರಣ, ಆತ ಹತ್ತಿರದವನಾಗುತ್ತಾನೆ ಮತ್ತು ಆತನನ್ನು ಗುರುತಿಸಲು ಇವನು ಪದ ಬರುತ್ತದೆ; (1ಚ)ದಲ್ಲೂ ಹೀಗೆಯೇ. (4) ನೇರ ಗಮನದಲ್ಲಿಲ್ಲದ ಪಾಂಗನ್ನು ಗಮನಕ್ಕೆ ತರಲು ಕೆಲವು ಕಡೆಗಳಲ್ಲಿ ಹತ್ತಿರದ ತೋರುಪದವನ್ನೂ ಬಳಸಲು ಬರುವುದಿಲ್ಲ; ಅಂತಹ ಕಡೆಗಳಲ್ಲಿ ಪಾಂಗನ್ನು ತಿಳಿಸುವ ಹೆಸರುಪದವನ್ನು ಆ ಎಂಬ ತೋರುಪದದೊಂದಿಗೆ ಇನ್ನೊಮ್ಮೆ ಬಳಸಬೇಕಾಗುತ್ತದೆ: (1ಕ) ಆತನ ಪೆಟ್ಟಿಗೆ ಮೇಜಿನ ಮೇಲಿತ್ತು; ಅದು ಹೊಸದಿದ್ದ ಹಾಗೆ ಕಾಣಿಸಿತು. (1ಚ) ಆತನ ಪೆಟ್ಟಿಗೆ ಮೇಜಿನ ಮೇಲಿತ್ತು; ಅ ಮೇಜು ಮುಟ್ಟಿದರೆ ಮುರಿದು ಬೀಳುವ ಹಾಗಿತ್ತು.

(1ಟ) ಜಾನಕಿ ನಿನ್ನೆ ಒಂದು ಸಿನಿಮಾಕ್ಕೆ ಹೋಗಿದ್ದಳು; ಆದರೆ, ಅವಳಿಗೆ ಅದು / ಆ ಸಿನಿಮಾ ಹಿಡಿಸಲಿಲ್ಲ. (1ಕ)ದಲ್ಲಿ ಬಳಕೆಯಾಗಿರುವ ಅದು ಎಂಬ ದೂರದ ತೋರುಪದಕ್ಕೆ ಪೆಟ್ಟಿಗೆ ಎಂಬುದು ಹಿನ್ನುಡಿತವಾಗಬಲ್ಲುದಲ್ಲದೆ, ಮೇಜು ಎಂಬುದು ಹಿನ್ನುಡಿತವಾಗಲಾರದು; ಆದರೆ, ಅದನ್ನು ಹಿನ್ನುಡಿತವಾಗಿ ಮಾಡಲು ಅದು (ಇಲ್ಲವೇ ಇದು) ಎಂಬುದನ್ನು ಬಳಸಲು ಬರುವುದಿಲ್ಲ; ಹಾಗಾಗಿ, (1ಚ)ದಲ್ಲಿ ಆ ಮೇಜು ಎಂಬುದನ್ನು ಬಳಸಲಾಗಿದೆ. ಇದಕ್ಕೆ ಬದಲು, (1ಟ)ದಲ್ಲಿ ಈ ಎರಡು ಬಗೆಯ ನುಡಿತಗಳನ್ನೂ ಬಳಸಲು ಬರುತ್ತದೆ. (5) ಹತ್ತಿರದ ತೋರುಪದದ ಮೂಲಕ ನೇರ ಗಮನದಲ್ಲಿಲ್ಲದ ಒಂದು ಪಾಂಗನ್ನು ಗಮನದಲ್ಲಿ ತಂದ ಬಳಿಕ ಅದನ್ನು ಇನ್ನೊಮ್ಮೆ ಗುರುತಿಸಬೇಕಾದಾಗ ದೂರದ ತೋರುಪದವನ್ನೇ ಬಳಸಲಾಗುತ್ತದೆ; ಎಂದರೆ, ಹತ್ತಿರದ ತೋರುಪದದಿಂದಾಗಿ ಅದು ಕೇಳುಗನ ನೇರ ಗಮನಕ್ಕೆ ಬರುತ್ತದೆ: (1ಕ) ಈ ಕಾಗದವನ್ನು ಮೇಜಿನ ಮೇಲಿರಿಸು, ಮತ್ತು ಅದರ ಮೇಲೆ ಒಂದು ಹಾಳೆತೂಕವನ್ನಿರಿಸು. (1ಚ) ಈ ಹುಡುಗ ತರಗತಿಯಲ್ಲಿ ಮೊದಲಿಗನಾಗಿದ್ದಾನೆ, ಮತ್ತು ಅವನ ತಂಗಿಯೂ ಮೊದಲಿಗಳಾಗಿದ್ದಾಳೆ. (1ಕ)ದಲ್ಲಿ ಈ ಕಾಗದ ಎಂಬ ಹತ್ತಿರದ ತೋರುಪದವಿರುವ ಪದಕಂತೆಯಿಂದ ಗುರುತಿಸಿರುವ ಪಾಂಗನ್ನು ಇನ್ನೊಮ್ಮೆ ಗುರುತಿಸಬೇಕಾದಾಗ ಅದರ ಎಂಬ ದೂರದ ತೋರುಪದವನ್ನು ಬಳಸಲಾಗಿದೆ; (1ಚ)ದಲ್ಲೂ ಇದೇ ರೀತಿಯಲ್ಲಿ ಈ ಹುಡುಗ ಎಂಬ ಪದಕಂತೆ ಗುರುತಿಸುವ ಪಾಂಗನ್ನು ಇನ್ನೊಮ್ಮೆ ಅವನ ಎಂಬ ದೂರದ ತೋರುಪದದ ಮೂಲಕ ಗುರುತಿಸಲಾಗಿದೆ.

10.3.6 ಸೊಲ್ಲುತೋರ್ಕೆಯ ಬಳಕೆ

ಹೆಸರುಪದಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಉಳಿಕೆ ಗುರ್ತದ ಅದು, ಇದು, ಅವು, ಮತ್ತು ಇವು ಎಂಬ ನಾಲ್ಕು ಪದಗಳು ಮಾತ್ರ ಸೊಲ್ಲುತೋರ್ಕೆಯಲ್ಲಿ ಬಳಕೆಯಾಗಬಲ್ಲುವು: (1ಕ) ಯಾರಾದರೂ ಒಬ್ಬರು ಇಲ್ಲಿ ಕಸ ಗುಡಿಸಬೇಕಾಗಿತ್ತು; ಅದನ್ನು ರಾಜುವೇ ಮಾಡಿದ.

(1ಚ) ರಾತ್ರಿ ಹನ್ನೊಂದಾದರೂ ಕೋಣೆಯಲ್ಲಿ ಬೆಳಕು ಕಾಣಿಸುತ್ತಿತ್ತು; ಇದರಿಂದ ರಾಜು ಹನ್ನೊಂದರ ವರೆಗೂ ಬರೆಯುತ್ತಿದ್ದನೆಂದು ಗೊತ್ತಾಗುತ್ತದೆ. (1ಟ) ಇವೆಲ್ಲ ರಾಜುವಿನ ಮನಸ್ಸಿನಲ್ಲಿ ಮೂಡಿದ ಅನಿಸಿಕೆಗಳು. ಎಸಕಪದಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಹಾಗೆ, ಹೀಗೆ ಮತ್ತು ಅಶ್ಟು, ಇಶ್ಟು ಎಂಬವು, ಮತ್ತು ಹೆಸರುಪದಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಎಲ್ಲವೂ ಸೊಲ್ಲುತೋರ್ಕೆಯಲ್ಲಿ ಬಳಕೆಯಾಗಬಲ್ಲುವು: (1ಕ) ರಾಜುವಿಗೆ ಕೊಟ್ಟ ಪೆನ್ನನ್ನು ಅವನು ಹರಿಗೆ ಕೊಟ್ಟ; ಅದನ್ನು ನನಗೆ ಕೊಟ್ಟಿದ್ದರೆ ನಾನು ಹಾಗೆ ಮಾಡುತ್ತಿರಲಿಲ್ಲ. (1ಚ) ಅಶ್ಟು ಕೆಲಸ ಮಾಡಿ ಅವನು ಕುಳಿತುಕೊಂಡ. (1ಟ) ಅಂತಹ ಕೆಲಸವನ್ನು ಬೇರೆ ಯಾರೂ ಮಾಡಿರಲಾರರು. (1ತ) ನಾನು ಎಲ್ಲಾ ಕೆಲಸಗಳನ್ನೂ ಮುಗಿಸಿದ್ದೇನೆಂದು ರಾಜು ಹೇಳಿದ್ದ; ಆದರೆ, ಅವನ ಈ ಮಾತನ್ನು ನಾನು ನಂಬಿರಲಿಲ್ಲ. ಸೊಲ್ಲುತೋರ್ಕೆಯಲ್ಲಿ ಬರುವ ತೋರುಪದಗಳು ಒಂದು ಸೊಲ್ಲನ್ನು ಮಾತ್ರವೇ ಹಿನ್ನುಡಿತವಾಗಿ ಪಡೆದಿರಬಲ್ಲುವು, ಇಲ್ಲವೇ ಹಲವು ಸೊಲ್ಲುಗಳ ಒಂದು ಕಂತೆಯನ್ನೂ ಹಿನ್ನುಡಿತವಾಗಿ ಪಡೆದಿರಬಲ್ಲುವು. ಬರಹದಲ್ಲಿ ಬರುವ ಸೊಲ್ಲುಗಳೆಲ್ಲ ಈ ರೀತಿ ಬೇರೆ ಬೇರೆ ಬಗೆಯ ಸೊಲ್ಲುಕಂತೆಗಳಾಗಿ ಗುಂಪುಗೂಡಿರುತ್ತವೆ. ಸಾಮಾನ್ಯವಾಗಿ ಒಂದು ನಿಶ್ಚಿತವಾದ ಉದ್ದೇಶದಿಂದ ಬಳಕೆಯಾಗಿರುವ ಸೊಲ್ಲುಗಳೆಲ್ಲ ಒಟ್ಟಿಗೆ ಒಂದು ಸೊಲ್ಲುಕಂತೆಯಾಗಿ ಬರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: ಒಂದು ತೋರುಪದದ ಹಿನ್ನುಡಿತವನ್ನು ಹಿಂದಿನ ಸೊಲ್ಲಿನಲ್ಲಿ ಬಂದಿರುವ ಎಸಕಪದದಲ್ಲೂ ಕಾಣಲು ಬರುತ್ತದೆ: (1ಕ) ನನ್ನನ್ನು ಕಂಡು ರಾಜು ಹೆದರಿದ; ಆದರೆ, ಅವನು ಅದನ್ನು ತೋರಿಸಿಕೊಳ್ಳಲಿಲ್ಲ. (1ಚ) ರಾಜುವಿಗೆ ತು (1ಕ)ದ ಎರಡನೇ ಸೊಲ್ಲಿನಲ್ಲಿ ಬಂದಿರುವ ಅದನ್ನು ಎಂಬ ತೋರುಪದದ ಹಿನ್ನುಡಿತವನ್ನು ಅದರ ಹಿಂದಿನ ಸೊಲ್ಲಿನಲ್ಲಿರುವ ಹೆದರಿದ ಎಂಬ ಎಸಕಪದದಲ್ಲಿ ಕಾಣಬೇಕಾಗುತ್ತದೆ.

ಸೊಲ್ಲುತೋರ್ಕೆಯಲ್ಲಿ ನುಡಿತತೋರ್ಕೆ ಮತ್ತು ಹುರುಳುತೋರ್ಕೆ ಎಂಬುದಾಗಿ ಎರಡು ಬಗೆಗಳನ್ನು ಕಾಣಲು ಬರುತ್ತದೆ; ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ನೀವು ಏನು ಹೇಳಿದ್ದು? ಅದು ನನಗೆ ಸರಿಯಾಗಿ ಕೇಳಿಸಲಿಲ್ಲ; ಇನ್ನೊಮ್ಮೆ ಹೇಳಿ. (1ಚ) ನೀವು ಏನು ಹೇಳಿದ್ದು? ಅದು ನನಗೆ ಗೊತ್ತಾಗಲಿಲ್ಲ; ಸಾದ್ಯವಾದರೆ ಅದನ್ನು ಇನ್ನೊಂದು ಬಗೆಯಲ್ಲಿ ಹೇಳಿ. (1ಕ)ದಲ್ಲಿ ಬಂದಿರುವ ಅದು ಎಂಬ ತೋರುಪದ ಅದಕ್ಕೆ ಹಿಂದೆ ಬಂದಿದ್ದ ಸೊಲ್ಲಿನ ನುಡಿತವನ್ನು ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಅದೇ ತೋರುಪದ ಅದಕ್ಕೆ ಹಿಂದೆ ಬಂದಿದ್ದ ಸೊಲ್ಲಿನ ಹುರುಳನ್ನು ಗುರುತಿಸುತ್ತದೆ. ಸೊಲ್ಲಿನ ಹುರುಳನ್ನು ಗುರುತಿಸುವಲ್ಲೂ ಎರಡು ಬಗೆಗಳಿವೆ; ಸೊಲ್ಲುತೋರ್ಕೆಯ ತೋರುಪದ ಹಿಂದಿನ ಸೊಲ್ಲು ತಿಳಿಸುವ ಎಸಕವನ್ನು ಮಾತ್ರವೇ ಒಂದು ಪಾಂಗಾಗಿ ಮಾಡಿ ಗುರುತಿಸಬಲ್ಲುದು, ಇಲ್ಲವೇ ಇಡೀ ಹೇಳಿಕೆಯನ್ನೇ ಒಂದು ಪಾಂಗಾಗಿ ಮಾಡಿಯೂ ಗುರುತಿಸಬಲ್ಲುದು; ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1) ನೀವು ಕೊಟ್ಟ ವಾಚನ್ನು ರಾಜು ಮಾರಿದ್ದಾನೆ. (1ಕ) ಅದು ಸುಳ್ಳು; ಆತ ಹಾಗೆ ಮಾಡಿರಲಾರ. (1ಚ) ಅದು ಸರಿಯಲ್ಲ; ಆತ ಹಾಗೆ ಮಾಡಬಾರದಿತ್ತು. (1ಕ)ದ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬುದು (1)ನೇ ಸೊಲ್ಲು ತಿಳಿಸುವ ಹೇಳಿಕೆಯನ್ನು ಸೊಲ್ಲುತೋರ್ಕೆಯ ಮೂಲಕ ಗುರುತಿಸುತ್ತದೆ, ಮತ್ತು ಅದನ್ನೇ ಎರಡನೇ ಸೊಲ್ಲಿನ ಹಾಗೆ ಎಂಬುದು ಗುರುತಿಸಿ, ಅದನ್ನು ಆ ಸೊಲ್ಲು ಅಲ್ಲಗಳೆಯುತ್ತದೆ. ಇದಕ್ಕೆ ಬದಲು, (1ಚ)ದ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬುದು (1)ನೇ ಸೊಲ್ಲು ತಿಳಿಸುವ ಎಸಕವನ್ನು ಸೊಲ್ಲುತೋರ್ಕೆಯ ಮೂಲಕ ಗುರುತಿಸುತ್ತದೆ, ಮತ್ತು ಅದನ್ನೇ ಎರಡನೇ ಸೊಲ್ಲಿನ ಹಾಗೆ ಎಂಬುದು ಗುರುತಿಸುತ್ತದೆ. ಯಾಕೆಂದರೆ, ಒಂದು ಹೇಳಿಕೆ ಸುಳ್ಳಾಗಿರಬಲ್ಲುದಲ್ಲದೆ, ಒಂದು ಎಸಕ ಸುಳ್ಳಾಗಲಾರದು; ಅದನ್ನು ನಡೆಸಿರುವುದು ಸರಿಯಿರಬಲ್ಲುದು ಇಲ್ಲವೇ ಸರಿಯಲ್ಲದಿರಬಲ್ಲುದು. ಸೊಲ್ಲುತೋರ್ಕೆಯಲ್ಲಿ ಬಂದ ತೋರುಪದ ಯಾವ ಬಗೆಯ ಪಾಂಗನ್ನು ಗುರುತಿಸುತ್ತದೆ ಎಂಬುದು ಅದು ಬಂದಿರುವ ಸೊಲ್ಲಿನ ಎಸಕಪದವನ್ನು

ಅವಲಂಬಿಸಿರುತ್ತದೆ; ಎತ್ತುಗೆಗಾಗಿ, ನಂಬು ಎಂಬುದರ ಈಡು ಪಾಂಗು ಒಂದು ಹೇಳಿಕೆಯಾಗಬೇಕಿದ್ದು, ಅದನ್ನು ಗುರುತಿಸುವ ತೋರುಪದ ಒಂದು ಹೇಳಿಕೆಯನ್ನು ಗುರುತಿಸುತ್ತದೆ; ಇದಕ್ಕೆ ಬದಲು, ಗೊತ್ತಾಗು ಎಂಬುದರ ಈಡು ಪಾಂಗು ಒಂದು ತಿಳಿವಾಗಬೇಕಿದ್ದು, ಅದನ್ನು ಗುರುತಿಸುವ ತೋರುಪದ ಒಂದು ತಿಳಿವನ್ನು ಗುರುತಿಸುತ್ತದೆ: (1ಕ) ರಾಜು ಪಾಸಾಗಿದ್ದಾನಂತೆ; ಆದರೆ, ಅದನ್ನು ನಾನು ನಂಬುವುದಿಲ್ಲ. (1ಚ) ರಾಜು ಪಾಸಾಗಿದ್ದಾನಂತೆ; ಅದು ನನಗೆ ಗೊತ್ತಾಗಿದೆ. ನಾನು ರಾಜುವನ್ನು ನಂಬುವುದಿಲ್ಲ ಎಂಬ ಸೊಲ್ಲಿನಲ್ಲಿ ನಂಬು ಪದದ ಈಡು ಪಾಂಗಾಗಿ ಒಬ್ಬ ವ್ಯಕ್ತಿ (ರಾಜು) ಬಂದಿರುವುದನ್ನು ಕಾಣಬಹುದು; ಆದರೆ, ನಿಜಕ್ಕೂ ಇದಕ್ಕೆ ಆತನ ಹೇಳಿಕೆಯನ್ನು ನಂಬುವುದಿಲ್ಲ ಎಂಬ ಹುರುಳೇ ಇದೆ.

10.4.10 ಪಾಂಗುತೋರ್ಕೆ ಮತ್ತು ಸೊಲ್ಲುತೋರ್ಕೆ

ಪಾಂಗುತೋರ್ಕೆಯಲ್ಲಿ ಬಳಕೆಯಾಗುವ ತೋರುಪದಗಳಲ್ಲೇ ಕೆಲವು ಸೊಲ್ಲುತೋರ್ಕೆಯಲ್ಲೂ ಬಳಕೆಯಾಗುವ ಕಾರಣ, ಒಂದು ಬರಹದಲ್ಲಿ ಬಳಕೆಯಾಗಿರುವ ತೋರುಪದಗಳು ಇವೆರಡು ಕೆಲಸಗಳಲ್ಲಿ ಯಾವುದನ್ನು ನಡೆಸುತ್ತಿವೆ ಎಂಬುದನ್ನು ಓದುಗನು ತಿಳಿದುಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಅದು ಮತ್ತು ಇದು ಎಂಬ ತೋರುಪದಗಳನ್ನು ಈ ಎರಡು ಬಗೆಯ ಒಳತೋರ್ಕೆಗಳಲ್ಲೂ ಬಳಸಲಾಗಿದೆ: (1ಕ) ಅದನ್ನೇ ನಾನೂ ಹೇಳುತ್ತಿದ್ದೇನೆ; ಆ ಕಾರಿನಲ್ಲಿ ಕುಳಿತವನ ತಲೆಗೆ ಏನೋ ತಾಗಿದೆ; ಅದು ಯಾವುದು? (1ಚ) ನಾನು ಅವನ ಬೆನ್ನಿಗೆ ಒಂದು ಚೆಂಡನ್ನೆಸೆದೆ; ಅದು ಅವನಿಗೆ ಚನ್ನಾಗಿ ತಾಗಿತು; ಆದರೆ, ಇದನ್ನು ನಾನು ಒಂದು ತಮಾಶೆಯಾಗಿ ಮಾತ್ರ ಮಾಡಿದ್ದೆ. (1ಕ)ದ ಮೊದಲನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬುದು ಹಿಂದೆ ಬಂದಿದ್ದ ಒಂದು ಹೇಳಿಕೆಯನ್ನು ಸೊಲ್ಲುತೋರ್ಕೆಯ ಮೂಲಕ ತಿಳಿಸುತ್ತದೆ; ಇದಕ್ಕೆ ಬದಲು, ಅದರ ಮೂರನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬುದು ಎರಡನೇ ಸೊಲ್ಲಿನ ಏನೋ ಎಂಬುದು ಗುರುತಿಸುವ ಪಾಂಗನ್ನೇ ಪಾಂಗುತೋರ್ಕೆಯ ಮೂಲಕ ಇನ್ನೊಮ್ಮೆ ಗುರುತಿಸುತ್ತದೆ.

ಇದೇ ರೀತಿಯಲ್ಲಿ, (1ಚ)ದ ಅದು ಎಂಬುದು ಚೆಂಡನ್ನು ಪಾಂಗುತೋರ್ಕೆಯ ಮೂಲಕ ಗುರುತಿಸುತ್ತದೆ, ಮತ್ತು ಇದು ಎಂಬುದು (1ಚ) ಮೊದಲನೇ ಸೊಲ್ಲು ತಿಳಿಸುವ ಎಸಕವನ್ನು ಸೊಲ್ಲುತೋರ್ಕೆಯ ಮೂಲಕ ಗುರುತಿಸುತ್ತದೆ. ಪಾಂಗುತೋರ್ಕೆಗೂ ಸೊಲ್ಲುತೋರ್ಕೆಗೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ: (1) ಪಾಂಗುತೋರ್ಕೆಯಲ್ಲಿ ಬರುವ ತೋರುಪದ ಅದರ ಹಿನ್ನುಡಿತ ಗುರುತಿಸುವ ಪಾಂಗನ್ನೇ ಇನ್ನೊಮ್ಮೆ ಗುರುತಿಸುತ್ತದೆ; ಇದಕ್ಕೆ ಬದಲು, ಸೊಲ್ಲುತೋರ್ಕೆಯಲ್ಲಿ ಬರುವ ತೋರುಪದ ಹಿನ್ನುಡಿತವನ್ನು ಬಳಸಿ ಪಾಂಗೊಂದನ್ನು ಹೊಸತಾಗಿ ಉಂಟುಮಾಡಿ ಗುರುತಿಸುತ್ತದೆ. ಈ ಕಟ್ಟಲೆಗಿರುವ ಒಂದು ಹೊರಪಡಿಕೆಯೆಂದರೆ, ಒಂದು ಎಸಕಪದದ ಇಲ್ಲವೇ ಸೊಲ್ಲಿನ ಹೆಸರುರೂಪವನ್ನು ಹಿನ್ನುಡಿತವಾಗಿ ಬಳಸಿರುವಲ್ಲಿ ಅದು ಗುರುತಿಸುವ ಪಾಂಗನ್ನೇ ತೋರುಪದ ಇನ್ನೊಮ್ಮೆ ಗುರುತಿಸುತ್ತದೆ; ಹೀಗೆ ಗುರುತಿಸಲಾಗುವ ಪಾಂಗು ಸೊಲ್ಲುತೋರ್ಕೆಯಲ್ಲಿ ಗುರುತಿಸಲಾಗುವ ಪಾಂಗಿಗಿಂತ ಬೇರಾಗಿರುವ ಹಾಗೆ ಕಾಣಿಸುವುದಿಲ್ಲ: (1ಕ) ನಾನು ಎಲ್ಲಿಗೂ ಹೋಗುವುದಿಲ್ಲವೆಂದು ರಾಜು ಹೇಳಿದ; ಆದರೆ, ಅದು ಯಾರಿಗೂ ಕೇಳಿಸಲಿಲ್ಲ ಮತ್ತು ನನಗೂ ಕೇಳಿಸಲಿಲ್ಲ. (1ಚ) ರಾಜು ಹೇಳಿದುದು ಯಾರಿಗೂ ಕೇಳಿಸಲಿಲ್ಲ; ಅದು ನನಗೂ ಕೇಳಿಸಲಿಲ್ಲ. (1ಕ)ದ ಎರಡನೇ ಸೊಲ್ಲಿನಲ್ಲಿ ಬಂದಿರುವ ಅದು ಎಂಬ ತೋರುಪದ ಮೊದಲನೇ ಸೊಲ್ಲು ತಿಳಿಸುವ ರಾಜುವಿನ ಹೇಳಿಕೆಯನ್ನು ಸೊಲ್ಲುತೋರ್ಕೆಯ ಮೂಲಕ ಒಂದು ಪಾಂಗಾಗಿ ಮಾಡಿ ಗುರುತಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಅದು ಎಂಬ ತೋರುಪದಕ್ಕೆ ರಾಜು ಹೇಳಿದುದು ಎಂಬ ಸೊಲ್ಲಿನ ಹೆಸರುರೂಪ ಹಿನ್ನುಡಿತವಾಗಿ ಬಂದಿದೆ, ಮತ್ತು ಆ ಹೆಸರುರೂಪ ಗುರುತಿಸುವ ಪಾಂಗನ್ನೇ ಅದು ಇನ್ನೊಮ್ಮೆ ಗುರುತಿಸುತ್ತದೆ. (1ಚ)ದಲ್ಲಿ ಬಂದಿರುವ ಅದು ಎಂಬ ತೋರುಪದ ಮೇಲ್ನೋಟಕ್ಕೆ ಪಾಂಗುತೋರ್ಕೆಯನ್ನು ಬಳಸುವ ಹಾಗೆ ಕಾಣಿಸುತ್ತಿದೆಯಾದರೂ ಅದು ಗುರುತಿಸುವ ಪಾಂಗು ಸೊಲ್ಲುತೋರ್ಕೆಯ ಮೂಲಕ ಗುರುತಿಸಲಾಗುವ ಪಾಂಗನ್ನು ಹೋಲುತ್ತದೆ.

(2) ಮೇಲೆ ತಿಳಿಸಿದ ಹಾಗೆ, ಸೊಲ್ಲುತೋರ್ಕೆಯಲ್ಲಿ ಬರುವ ತೋರುಪದ ಎಂತಹ ಪಾಂಗನ್ನು ಗುರುತಿಸುತ್ತದೆ ಎಂಬುದು ಅದು ಬಂದಿರುವ ಸೊಲ್ಲಿನ ಎಸಕಪದದ ಮೇಲೆ ಅವಲಂಬಿಸಿರುತ್ತದೆ; ಇದಕ್ಕೆ ಬದಲು, ಪಾಂಗುತೋರ್ಕೆಯಲ್ಲಿ ಬಂದಿರುವ ತೋರುಪದ ಎಂತಹ ಪಾಂಗನ್ನು ಗುರುತಿಸುತ್ತದೆ ಎಂಬುದು ಆ ತೋರುಪದದ ಎರಡನೇ ಅಂಗವನ್ನು ಅವಲಂಬಿಸಿರುತ್ತದೆ. ಈ ಕಟ್ಟಲೆ ಮುಕ್ಯವಾಗಿ ಹೆಸರುಪದಗಳ ಜಾಗದಲ್ಲಿ ಬರಬಲ್ಲ ಅದು ಮತ್ತು ಇದು ಎಂಬ ಎರಡು ತೋರುಪದಗಳ ಮತ್ತು ಅವುಗಳ ಹಲವೆಣಿಕೆಯ ರೂಪಗಳ ಬಳಕೆಯಲ್ಲಿ ಕಾಣಿಸುತ್ತದೆ; ಅವಕ್ಕಿಂತ ಬೇರಾಗಿರುವ ಹಾಗೆ, ಹೀಗೆ, ಅಶ್ಟು, ಇಶ್ಟು, ಅಂತಹ, ಇಂತಹ, ಆ, ಈ ಎಂಬ ತೋರುಪದಗಳ ಸೊಲ್ಲುತೋರ್ಕೆಯ ಬಳಕೆಯಲ್ಲಿ ಅವುಗಳ ಎರಡನೆಯ ಅಂಗವೇ ಅವು ಎಂತಹ ಪಾಂಗನ್ನು ತಿಳಿಸುತ್ತವೆ ಎಂಬುದನ್ನು ತಿಳಿಸುತ್ತವೆ. (3) ಪಾಂಗುತೋರ್ಕೆಯಲ್ಲಿ ದೂರದ ತೋರುಪದಗಳನ್ನು ನೇರ ಗಮನದಲ್ಲಿರುವ ಪಾಂಗುಗಳನ್ನು ಗುರುತಿಸುವುದಕ್ಕಾಗಿ, ಮತ್ತು ಹತ್ತಿರದ ತೋರುಪದಗಳನ್ನು ಆ ರೀತಿ ನೇರ ಗಮನದಲ್ಲಿಲ್ಲದ ಪಾಂಗುಗಳನ್ನು ಗುರುತಿಸುವುದಕ್ಕಾಗಿ ಬಳಸಲಾಗುತ್ತದೆ; ಹಾಗಾಗಿ, ಬರಹಗಳಲ್ಲಿ ದೂರದ ತೋರುಪದಗಳೇ ಪಾಂಗುತೋರ್ಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು, ಸೊಲ್ಲುತೋರ್ಕೆಯಲ್ಲಿ ಬಳಕೆಯಾಗುವ ದೂರದ ಮತ್ತು ಹತ್ತಿರದ ತೋರುಪದಗಳು ಅವುಗಳ ಹೊರತೋರ್ಕೆಯ ಬಳಕೆಯನ್ನು ಹೋಲುತ್ತವೆ: (1ಕ) ರಾಜುವಿಗೆ ಮೇಲಿನ ಕೆಲಸ ಸಿಕ್ಕಿದೆ; ಆದರೆ, ಅದು ಸರಿಯಲ್ಲ. (1ಚ) ರಾಜುವಿಗೆ ಮೇಲಿನ ಕೆಲಸ ಸಿಕ್ಕಿದೆ. ಇದು ಯಾವಾಗ ನಡೆಯಿತು? (4) ಪಾಂಗುತೋರ್ಕೆಯಲ್ಲಿ ಎಲ್ಲಾ ಬಗೆಯ ತಿಳಿದ ತೋರುಪದಗಳೂ ಬಳಕೆಯಾಗಬಲ್ಲುವು; ಆದರೆ, ಸೊಲ್ಲುತೋರ್ಕೆಯಲ್ಲಿ ಯಾವ ತೋರುಪದ ಬಳಕೆಯಾಗಬಲ್ಲುದು ಎಂಬ ವಿಶಯದಲ್ಲಿ ಕೆಲವು ಕಟ್ಟುಪಾಡುಗಳಿವೆ; ಎತ್ತುಗೆಗಾಗಿ, ಹೆಸರುಪದಗಳ ಜಾಗದಲ್ಲಿ ಬರಬಲ್ಲ ತೋರುಪದಗಳಲ್ಲಿ ಅದು ಮತ್ತು ಇದು ಎಂಬ ಎರಡು ತೋರುಪದಗಳು ಮತ್ತು ಅವುಗಳ ಹಲವೆಣಿಕೆಯ ರೂಪಗಳು ಮಾತ್ರ ಸೊಲ್ಲುತೋರ್ಕೆಯಲ್ಲಿ ಬಳಕೆಯಾಗಬಲ್ಲುವು.

10.5 ತಿಳಿಯದ ತೋರುಪದಗಳು

Eke →

ಕೇಳ್ವಿಪದಗಳಲ್ಲ ಮೇಲೆ (10.1.2)ರಲ್ಲಿ ಕೊಟ್ಟಿರುವ ನಿರುಗೆಯ ಮೂರನೇ ನೀಟಸಾಲಿನಲ್ಲಿ ಬಂದಿರುವ ಪದಗಳನ್ನು ತಿಳಿಯದ ತೋರುಪದಗಳೆಂದು ಕರೆಯಲಾಗಿದೆ; ಆದರೆ, ಇವನ್ನು ಹೆಚ್ಚಾಗಿ ಕೇಳ್ವಿಗಳಲ್ಲಿ ಬಳಸಲಾಗುತ್ತದೆಯಾದ ಕಾರಣ, ಮತ್ತು ಇಂತಹ ಬಳಕೆಯಲ್ಲಿ ಇವಕ್ಕೆ ಕೇಳ್ವಿಯ ಹುರುಳಿರುವುದೆಂದು ಅನಿಸುವ ಕಾರಣ, ಸೊಲ್ಲರಿಮೆಗಳಲ್ಲೆಲ್ಲ ಇಂತಹ ತೋರುಪದಗಳನ್ನು ಕೇಳ್ವಿಪದಗಳೆಂದೇ ಕರೆಯಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಈ ಪುಸ್ತಕವನ್ನು ಹರಿದುದು ಯಾರು? (1ಚ) ನೀವು ಈ ತಿಂಡಿಯನ್ನು ಹೇಗೆ ಮಾಡಿದಿರಿ? (1ಟ) ಹುಡುಗ ಎಲ್ಲಿಗೆ ಹೋಗಿದ್ದಾನೆ? (1ಕ-ಟ) ಸೊಲ್ಲುಗಳಲ್ಲಿ ಯಾರು, ಹೇಗೆ ಮತ್ತು ಎಲ್ಲಿಗೆ ಎಂಬ ತೋರುಪದಗಳು ಬಳಕೆಯಾಗಿದ್ದು, ಅವಕ್ಕೆ ಕೇಳ್ವಿಯ ಹುರುಳಿದೆಯೆಂದು ಅನಿಸುತ್ತದೆ. ಆದರೆ, ಈ ಪದಗಳು ಬೇರೆಯೂ ಹಲವು ಬಗೆಯ ಸೊಲ್ಲುಗಳಲ್ಲಿ ಬರುತ್ತಿದ್ದು, ಅಂತಹ ಸೊಲ್ಲುಗಳಲ್ಲಿ ಅವಕ್ಕೆ ಕೇಳ್ವಿಯ ಹುರುಳಿಲ್ಲ: (1ಕ) ಅವರ ಮನೆಗೆ ಯಾರೋ ಬಂದಿದ್ದಾರೆ. (1ಚ) ಈ ಮರಕ್ಕೆ ಯಾರೂ ಹತ್ತಬಹುದು. (1ಟ) ಈ ಮನೆ ಎಶ್ಟು ಚನ್ನಾಗಿದೆ! (1ತ) ಅವನು ಎಲ್ಲಿಗೆ ಹೋಗಿದ್ದಾನೆಂದು ಯಾರಿಗೂ ಗೊತ್ತಿಲ್ಲ. (1ಕ) ಮತ್ತು (1ಚ) ಸೊಲ್ಲುಗಳಲ್ಲಿ ಯಾರು ಪದಕ್ಕೆ ಓ ಮತ್ತು ಊ ಎಂಬ ಒಟ್ಟುಗಳನ್ನು ಸೇರಿಸಿ ಬಳಸಲಾಗಿದ್ದು, ಅದಕ್ಕೆ ಕೇಳ್ವಿಯ ಹುರುಳಿಲ್ಲ; (1ಟ)ದಲ್ಲಿ ಎಶ್ಟು ಪದವನ್ನು ಬೆರಗನ್ನು ತಿಳಿಸುವುದಕ್ಕಾಗಿ ಬಳಸಲಾಗಿದೆ, ಮತ್ತು

(1ತ)ದಲ್ಲಿ ಎಲ್ಲಿಗೆ ಪದವನ್ನು ಒಂದು ಒಳಸೊಲ್ಲಾಗಿ ಬಂದಿರುವ ಕೇಳ್ವಿಯಲ್ಲಿ ಬಳಸಲಾಗಿದೆ. ಈ ಎರಡು ಬಳಕೆಗಳಲ್ಲೂ ಅವಕ್ಕೆ ಕೇಳ್ವಿಯ ಹುರುಳಿಲ್ಲ. ಇಂತಹ ಹಲವು ಬಳಕೆಗಳಲ್ಲಿ ಮೇಲಿನ ಪದಗಳಿಗೆ ಮುಕ್ಯವಾಗಿ ತಿಳಿಯದುದು ಎಂಬ ಹುರುಳಿದೆಯಾದ ಕಾರಣ, ಅವನ್ನು ತಿಳಿಯದ ತೋರುಪದಗಳೆಂದು ಇಲ್ಲಿ ಕರೆಯಲಾಗಿದೆ. ಅವನ್ನು ಕೇಳ್ವಿಪದಗಳೆಂದು ಕರೆಯದಿರುವುದಕ್ಕೆ ಬೇರೆಯೂ ಒಂದು ಕಾರಣವಿದೆ: ಕೇಳ್ವಿಗಳಲ್ಲಿ ಬಳಕೆಯಾಗುವ ಯಾರು, ಏನು, ಎಲ್ಲಿ, ಯಾಕೆ ಮೊದಲಾದ ಪದಗಳನ್ನು ಕೇಳ್ವಿಪದಗಳೆಂದು ಕರೆದಲ್ಲಿ ಕೆಲವು ಬಗೆಹರಿಸಲಾಗದ ತೊಡಕುಗಳನ್ನು ನಾವು ಎದುರಿಸಬೇಕಾಗುತ್ತದೆ; ಇದಕ್ಕೆ ಬದಲಾಗಿ, ಅವನ್ನು ತಿಳಿಯದ ತೋರುಪದಗಳೆಂದು ಕರೆದಲ್ಲಿ ಈ ತೊಡಕುಗಳೆಲ್ಲ ಇಲ್ಲವಾಗುತ್ತವೆ. ಇಂತಹ ತೊಡಕುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ:

10.5.1 ಕೂಡಿಕೆಯ ಇಲ್ಲವೇ ಆಯ್ಕೆಯ ಒಟ್ಟಿನೊಂದಿಗೆ ಬಳಸುವುದು

ಕೇಳ್ವಿಯ ಹುರುಳಿರುವ ಸೊಲ್ಲುಗಳಲ್ಲಿ ಬಳಕೆಯಾಗಿರುವ ಈ ಪದಗಳಿಗೆ ಕೂಡಿಕೆಯ ಊ ಒಟ್ಟನ್ನು ಇಲ್ಲವೇ ಆಯ್ಕೆಯ ಓ ಒಟ್ಟನ್ನು ಸೇರಿಸಿದಾಗ, ಅವುಗಳಿಗಿರುವ ಕೇಳ್ವಿಯ ಹುರುಳು ಇಲ್ಲವಾಗುತ್ತದೆ: (1ಕ) ರಾಜು ಎಲ್ಲಿಗೆ ಹೋಗಿರಬಹುದು? (1ಚ) ರಾಜು ಎಲ್ಲಿಗೂ ಹೋಗಿರಬಹುದು. (2ಕ) ಅವನು ಎಲ್ಲಿಗೆ ಹೋಗಿದ್ದಾನೆ? (2ಚ) ಅವನು ಎಲ್ಲಿಗೋ ಹೋಗಿದ್ದಾನೆ. (1ಕ) ಸೊಲ್ಲನ್ನು ಬಳಸಿರುವ ಆಡುಗನಿಗೆ ರಾಜು ಹೋಗಿರಬಹುದಾದ ಜಾಗ ಯಾವುದು ಎಂಬುದು ತಿಳಿದಿಲ್ಲ; ಅದನ್ನು ಕೇಳುಗನಿಂದ ತಿಳಿದುಕೊಳ್ಳುವುದಕ್ಕಾಗಿ ಆತ ಈ ಸೊಲ್ಲನ್ನು ಬಳಸಿದ್ದಾನೆ; ಎಂದರೆ, ಆತನು ಬಳಸಿರುವ ಈ ಸೊಲ್ಲು ತಿಳಿಯದಿಕೆ ಮತ್ತು ಕೇಳ್ವಿ ಎಂಬ ಎರಡು ಹುರುಳುಗಳನ್ನು ಕೊಡಬೇಕಾಗಿದೆ. (2ಕ) ಸೊಲ್ಲಿನಿಂದಲೂ ಇಂತಹವೇ ಎರಡು ಹುರುಳುಗಳನ್ನು ಪಡೆಯಬೇಕಾಗಿದೆ. ಇಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು (ಕ-ತ) ಸಂಗತಿಗಳನ್ನು ಗಮನಿಸಬೇಕಾಗುತ್ತದೆ: (1) ಎಲ್ಲಿಗೆ ಎಂಬ ಪದಕ್ಕೆ ಕೂಡಿಕೆಯ ಊ ಒಟ್ಟನ್ನು ಸೇರಿಸಿರುವ (1ಚ) ಸೊಲ್ಲಿನಲ್ಲಿ, ಮತ್ತು ಆಯ್ಕೆಯ ಓ ಒಟ್ಟನ್ನು ಸೇರಿಸಿರುವ (2ಚ) ಸೊಲ್ಲಿನಲ್ಲಿ ತಿಳಿಯದಿಕೆಯ ಹುರುಳು ಉಳಿದಿದ್ದು, ಕೇಳ್ವಿಯ ಹುರುಳು ಇಲ್ಲವಾಗಿದೆಯೆಂದು ಹೇಳಬೇಕಾಗುತ್ತದೆ; ಯಾಕೆಂದರೆ, ಈ ಎರಡು ಸೊಲ್ಲುಗಳನ್ನು ಬಳಸಿರುವಲ್ಲೂ

ಆಡುಗನಿಗೆ ಕೇಳುಗನಿಂದ ರಾಜು ಹೋಗಿರಬಹುದಾದ ಇಲ್ಲವೇ ಹೋಗಿರುವ ಜಾಗ ಯಾವುದೆಂಬುದನ್ನು ತಿಳಿಯಬೇಕೆಂಬ ಬಯಕೆಯಿದೆಯೆಂಬುದಾಗಿ ಆ ಸೊಲ್ಲುಗಳು ತಿಳಿಸುವುದಿಲ್ಲ. ಹಾಗಾಗಿ, (1ಕ) ಮತ್ತು (2ಕ) ಸೊಲ್ಲುಗಳಲ್ಲಿ ತಿಳಿಯದಿಕೆ ಮತ್ತು ಕೇಳ್ವಿ ಎಂಬ ಎರಡು ಹುರುಳುಗಳು ಎಲ್ಲಿಗೆ ಎಂಬ ಪದದಿಂದ ದೊರೆಯುತ್ತವೆಯೆಂದು ಹೇಳಿದಲ್ಲಿ, ಅದಕ್ಕೆ ಕೂಡಿಕೆಯ ಮತ್ತು ಆಯ್ಕೆಯ ಒಟ್ಟುಗಳನ್ನು ಸೇರಿಸಿದಾಗ, ಅದರ ಕೇಳ್ವಿಯ ಹುರುಳು ಇಲ್ಲವಾಗುವುದು ಹೇಗೆ ಎಂಬುದನ್ನು ವಿವರಿಸಬೇಕಾಗುತ್ತದೆ, ಮತ್ತು ಇದೊಂದು ಬಗೆಹರಿಸಲಾಗದ ತೊಡಕಾಗಿ ಉಳಿಯುತ್ತದೆ. ಇದಕ್ಕೆ ಬದಲು, ಮೇಲಿನ ಎರಡು ಬಗೆಯ ಸೊಲ್ಲುಗಳಲ್ಲೂ ಎಲ್ಲಿಗೆ ಎಂಬ ಪದ ತಿಳಿಯದಿಕೆಯ ಹುರುಳನ್ನು ಮಾತ್ರ ಕೊಡುತ್ತದೆ ಎಂದು ಹೇಳಿದಲ್ಲಿ, ಈ ತೊಡಕು ಇಲ್ಲವಾಗುತ್ತದೆ; ಯಾಕೆಂದರೆ, (1ಕ) ಮತ್ತು (2ಕ) ಸೊಲ್ಲುಗಳಲ್ಲಿ ಬರುವ ಕೇಳ್ವಿಯ ಹುರುಳನ್ನು ಅವುಗಳ ಕೊನೆಯಲ್ಲಿ ಬರುವ ? ಎಂಬ ಕೇಳ್ವಿಯ ಬರಿಗೆ (ಇಲ್ಲವೇ ಮಾತಿನಲ್ಲಿ ಬರುವ ಉಲಿಯ ಏರಿಕೆ ಇಲ್ಲವೇ ಇಳಿಯದಿಕೆ) ಕೊಡುತ್ತದೆ ಎಂದು ಹೇಳಲು ಬರುತ್ತದೆ. ಇನ್ನು (1ಚ) ಮತ್ತು (2ಚ) ಸೊಲ್ಲುಗಳಲ್ಲಿ ಎಲ್ಲಿಗೆ ಪದದ ಬಳಿಕ ಬರುವ ಕೂಡಿಕೆಯ ಮತ್ತು ಆಯ್ಕೆಯ ಒಟ್ಟುಗಳಿಗೆ ಬೇರೆಯೇ ಹುರುಳುಗಳನ್ನು ಕೊಡಲು ಬರುತ್ತದೆ, ಮತ್ತು ಅವನ್ನು ಅವುಗಳ ಮುಕ್ಯ ಹುರುಳಿನಿಂದ ಪಡೆಯಲು ಬರುತ್ತದೆ. ಈ ಹುರುಳುಗಳು ಎಂತಹವು ಎಂಬುದನ್ನು 10.1.3(2)ರಲ್ಲಿ ವಿವರಿಸಲಾಗಿದೆ. (2) ಮೇಲಿನ ತೋರುಪದಗಳನ್ನು ಬಳಸಿರುವ ಕೇಳ್ವಿಸೊಲ್ಲುಗಳನ್ನು ಒಳಸೊಲ್ಲುಗಳಾಗಿ ಬಳಸಿದಾಗ, ಅವುಗಳ ಕೇಳ್ವಿ ಹುರುಳು ಇಲ್ಲವಾಗುತ್ತದೆ: (1ಕ) ಕೆಲಸಕ್ಕೆ ಯಾರು ಬರುವುದಿಲ್ಲ? (1ಚ) ಕೆಲಸಕ್ಕೆ ಯಾರು ಬರುವುದಿಲ್ಲವೆಂದು ನನಗೆ ಗೊತ್ತಿದೆ. (2ಕ) ಅವನು ಎಲ್ಲಿಗೆ ಹೋಗಿದ್ದಾನೆ? (2ಚ) ಅವನು ಎಲ್ಲಿಗೆ ಹೋಗಿದ್ದಾನೆಂದು ಯಾರಿಗೂ ಗೊತ್ತಾಗಿಲ್ಲ. (1ಕ) ಸೊಲ್ಲಿಗೆ ಕೇಳ್ವಿಯ ಹುರುಳಿದೆ; ಅದರೆ ಇದನ್ನು ಒಳಸೊಲ್ಲಾಗಿ ಬಳಸಿರುವ (1ಚ) ಸೊಲ್ಲಿಗೆ ಕೇಳ್ವಿಯ ಹುರುಳಿಲ್ಲ; ಅದು ಒಂದು ತಿಳಿವನ್ನಶ್ಟೇ ಕೊಡುತ್ತದೆ. ಇಂತಹದೇ ವ್ಯತ್ಯಾಸ (2ಕ) ಮತ್ತು (2ಚ) ಸೊಲ್ಲುಗಳ ನಡುವೆಯೂ ಇದೆ.

(1ಕ)ದಲ್ಲಿ ಯಾರು ಎಂಬ ತೋರುಪದ ಮತ್ತು ? ಎಂಬ ಕೇಳ್ವಿಬರಿಗೆ ಇವೆರಡೂ ಬಂದಿವೆ; ಇವುಗಳಲ್ಲಿ ? ಎಂಬ ಕೇಳ್ವಿಬರಿಗೆ ಮಾತ್ರ (1ಚ)ದಲ್ಲಿ ಇಲ್ಲವಾಗಿದೆ. ಹಾಗಾಗಿ, (1ಚ)ದಲ್ಲಿ ಇಲ್ಲವಾಗುವ (1ಕ) ಸೊಲ್ಲಿನ ಕೇಳ್ವಿಹುರುಳನ್ನು ಯಾರು ಎಂಬ ತೋರುಪದದ ಮೇಲೆ ಹೊರಿಸುವುದಕ್ಕಿಂತಲೂ ? ಎಂಬ ಕೇಳ್ವಿಬರಿಗೆಯ ಮೇಲೆ ಹೊರಿಸುವುದೇ ಸರಿಯಾದ ದಾರಿ. (2ಕ- ಚ)ಗಳಲ್ಲೂ ಹೀಗೆಯೇ. (3) ಕೇಳ್ವಿಸೊಲ್ಲುಗಳಲ್ಲಿ ಬರುವ ಕೇಳ್ವಿಹುರುಳನ್ನು ಅವುಗಳ ಕೊನೆಯಲ್ಲಿ ಬರುವ ಕೇಳ್ವಿಬರಿಗೆಯಿಂದ ಪಡೆಯುವುದೇ ಒಳ್ಳೆಯದು ಎಂಬುದನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, ಬೇರೆ ಕೆಲವು ಸೊಲ್ಲುಗಳಲ್ಲಿ ಕೇಳ್ವಿಬರಿಗೆಯನ್ನು ಬಳಸಲಾಗಿದೆಯೇ ಇಲ್ಲವೇ ಎಂಬುದರ ಮೇಲೇನೇ ಅದು ಕೇಳ್ವಿಹುರುಳನ್ನು ಕೊಡುತ್ತದೆಯೇ ಇಲ್ಲವೇ ಎಂಬುದು ಅವಲಂಬಿಸಿರುತ್ತದೆ: (1ಕ) ಅವನು ಇದನ್ನು ಯಾರಿಗೆ ಕೊಡಬೇಕೆಂದು ಹೇಳಿದ್ದಾನೆ? (1ಚ) ಅವನು ಇದನ್ನು ಯಾರಿಗೆ ಕೊಡಬೇಕೆಂದು ಹೇಳಿದ್ದಾನೆ. (1ಕ) ಸೊಲ್ಲು ಕೇಳ್ವಿಯ ಹುರುಳನ್ನು ಕೊಡುತ್ತದೆ; ಆದರೆ, (1ಚ) ಸೊಲ್ಲು ಅಂತಹ ಹುರುಳನ್ನು ಕೊಡುವುದಿಲ್ಲ; ಅದೊಂದು ತಿಳಿಸುವ ಸೊಲ್ಲಾಗಿದೆ. ಈ ಎರಡು ಸೊಲ್ಲುಗಳ ನಡುವಿರುವ ವ್ಯತ್ಯಾಸವೇನೆಂದರೆ, (1ಕ) ಸೊಲ್ಲಿನ ಕೊನೆಯಲ್ಲಿ ? ಎಂಬ ಕೇಳ್ವಿಬರಿಗೆಯನ್ನು ಬಳಸಲಾಗಿದೆ, ಮತ್ತು (1ಚ) ಸೊಲ್ಲಿನ ಕೊನೆಯಲ್ಲಿ ಅದನ್ನು ಬಳಸಿಲ್ಲ; (ಮಾತಿನಲ್ಲಾದರೆ, ಉಲಿಯ ಏರಿಳಿತ ಎಂತಹದು ಎಂಬುದೇ ಈ ಎರಡು ಸೊಲ್ಲುಗಳ ನಡುವಿನ ವ್ಯತ್ಯಾಸ); ಯಾರಿಗೆ ಎಂಬ ತೋರುಪದ ಎರಡರಲ್ಲೂ ಒಂದೇ ರೂಪದಲ್ಲಿ ಬಂದಿದೆ. ಹಾಗಾಗಿ, ಕೇಳ್ವಿಯ ಹುರುಳನ್ನು ಕೇಳ್ವಿಸೊಲ್ಲುಗಳಲ್ಲಿ ಬಂದಿರುವ ತೋರುಪದದ ಮೇಲೆ ಹೊರಿಸುವ ಬದಲು, ಅವುಗಳ ಕೊನೆಯಲ್ಲಿ ಬಂದಿರುವ ಕೇಳ್ವಿಬರಿಗೆಯ ಮೇಲೆ ಹೊರಿಸುವುದೇ ಒಳ್ಳೆಯದು ಎಂಬುದನ್ನು ಇಂತಹ ಸೊಲ್ಲುಗಳೂ ಬೆಂಬಲಿಸುತ್ತವೆ. (4) ಯಾರು, ಏನು, ಎಲ್ಲಿ ಮೊದಲಾದ ತೋರುಪದಗಳು ಬರುವ ಕೇಳ್ವಿಸೊಲ್ಲುಗಳಿಗೆಲ್ಲ ಒಂದು ಅಡಿಹೇಳಿಕೆಯಿರುತ್ತದೆ; ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಎಲ್ಲಿಗೆ ಹೋಗಿದ್ದಾನೆ? (1ಚ) ಅವನು ಎಲ್ಲಿಗೋ ಹೋಗಿದ್ದಾನೆ.

(2ಕ) ಅವನು ಏನು ತಂದಿದ್ದಾನೆ? (2ಚ) ಅವನು ಏನೋ ತಂದಿದ್ದಾನೆ. (3ಕ) ಇದನ್ನು ಯಾರು ಒಡೆದದ್ದು? (3ಚ) ಇದನ್ನು ಯಾರೋ ಒಡೆದಿದ್ದಾರೆ. ಮೇಲೆ ಕೊಟ್ಟಿರುವ ಸೊಲ್ಲುಗಳಲ್ಲಿ (ಕ) ಸೊಲ್ಲುಗಳಿಗೆ (ಚ) ಸೊಲ್ಲುಗಳು ಅಡಿಹೇಳಿಕೆಗಳಾಗುತ್ತವೆಯೆಂದು ಹೇಳಬಹುದು; ಎತ್ತುಗೆಗಾಗಿ, (1ಕ) ತೋರುಕೇಳ್ವಿಯನ್ನು ಬಳಸಿದ ಆಡುಗನಿಗೆ (1ಚ) ಸೊಲ್ಲು ತಿಳಿಸುವ ಎಸಕ ನಡೆದಿದೆಯೆಂಬ ಅನಿಸಿಕೆಯಿರುತ್ತದೆ; ಎಂದರೆ, (1ಚ) ಸೊಲ್ಲು ತಿಳಿಸುವ ವಿಶಯವನ್ನು ಒಪ್ಪಿಕೊಂಡು ಆತ (1ಕ) ಸೊಲ್ಲನ್ನು ಬಳಸಿದ್ದಾನೆ. ಹಾಗಾಗಿ, (ಚ) ಸೊಲ್ಲಿನಲ್ಲಿ ಬರುವ ತಿಳಿಯದ ತೋರುಪದಗಳಿಂದ (ಕ) ಸೊಲ್ಲಿನಲ್ಲಿ ಬರುವ ಕೇಳ್ವಿಪದಗಳನ್ನು (ಎಲ್ಲಿಗೋ ಎಂಬುದರಿಂದ ಎಲ್ಲಿಗೆ ಎಂಬುದನ್ನು, ಏನೋ ಎಂಬುದರಿಂದ ಏನು ಎಂಬುದನ್ನು, ಮತ್ತು ಯಾರೋ ಎಂಬುದರಿಂದ ಯಾರು ಎಂಬುದನ್ನು), ಅವಕ್ಕೆ ಕೇಳ್ವಿಹುರುಳನ್ನು ಸೇರಿಸುವ ಮೂಲಕ ಪಡೆಯಬಹುದೆಂಬ ಸೂಚನೆಯೊಂದಿದೆ. ಆದರೆ, ಕನ್ನಡದಲ್ಲಿ (ಕ) ಸೊಲ್ಲುಗಳಲ್ಲಿ ಬರುವ ಎಲ್ಲಿಗೆ, ಏನು, ಯಾರು ಎಂಬ ಪದಗಳಿಗೆ ಓ ಎಂಬ ಒಟ್ಟನ್ನು ಸೇರಿಸಿ (ಚ) ಸೊಲ್ಲುಗಳಲ್ಲಿ ಬರುವ ಎಲ್ಲಿಗೋ, ಏನೋ, ಯಾರೋ ಎಂಬ ಪದಗಳನ್ನು ಪಡೆಯಲಾಗಿದೆ; ಎಂದರೆ, ಕನ್ನಡದ (ಚ) ಸೊಲ್ಲುಗಳಲ್ಲಿ ಬರುವ ಎಲ್ಲಿಗೋ, ಏನೋ, ಯಾರೋ ಪದರೂಪಗಳನ್ನು (ಕ) ಸೊಲ್ಲುಗಳಲ್ಲಿ ಬರುವ ಎಲ್ಲಿಗೆ, ಏನು, ಯಾರು ಎಂಬವುಗಳಿಂದ ಪಡೆಯಲು ಬರುತ್ತದಲ್ಲದೆ, (ಕ) ಸೊಲ್ಲುಗಳಲ್ಲಿ ಬರುವವನ್ನು (ಚ) ಸೊಲ್ಲುಗಳಲ್ಲಿ ಬರುವವುಗಳಿಂದ ಪಡೆಯಲು ಬರುವುದಿಲ್ಲ. ಬೇರೆಯೂ ಹಲವು ನುಡಿಗಳಲ್ಲಿ ಇಂತಹದೇ ಹಮ್ಮುಗೆಯಿದೆ. ಹಾಗಾಗಿ, ಕನ್ನಡದ ಸೊಲ್ಲರಿಮೆಯ ಮಟ್ಟಿಗೆ ಈ ಸೂಚನೆಯನ್ನು ಒಪ್ಪಿಕೊಳ್ಳಲು ಬರುವುದಿಲ್ಲ.

10.5.2 ತಿಳಿಯದಿಕೆಯ ಅಯ್ದು ಬಗೆಗಳು

ಆಡುಗನಿಗೆ ಒಂದು ಸೊಲ್ಲಿನ ಮೂಲಕ ತನ್ನ ತಿಳಿಯದಿಕೆಯನ್ನು ಮಾತ್ರವೇ ತಿಳಿಸಬೇಕೆಂದಿರುವಲ್ಲಿ ತಿಳಿಯದ ತೋರುಪದಗಳನ್ನು ಹಾಗೆಯೇ ಬಳಸಲಾಗುವುದಿಲ್ಲ; ಇದಕ್ಕೆ ಬದಲು, ಅವಕ್ಕೆ (1) ಕೂಡಿಕೆಯ ಊ, (2) ಆಯ್ಕೆಯ ಓ, (3) ಒತ್ತಿ ಹೇಳುವ ಏ, ಇಲ್ಲವೇ (4) ಆದರೆ+ಊ ಎಂಬವುಗಳನ್ನು ಸೇರಿಸಿ ಬಳಸಲಾಗುತ್ತದೆ, ಇಲ್ಲವೇ (5) ಅದನ್ನೊಂದು ಒಳಸೊಲ್ಲಿನಲ್ಲಿರಿಸಿ ಬಳಸಲಾಗುತ್ತದೆ: (1ಕ) ಅವನು ಎಲ್ಲಿಗೂ ಹೋಗಿರಬಹುದು.

(1ಚ) ಅವನು ಎಲ್ಲಿಗೋ ಹೋಗಿದ್ದಾನೆ. (1ಟ) ಅವನು ಎಲ್ಲಿಗೇ ಹೋಗಿರಲಿ, ನಾಳೆ ಬರದಿರುವುದಿಲ್ಲ. (1ತ) ಅವನು ಎಲ್ಲಿಗಾದರೂ ಹೋಗಿರಬಹುದು. (1ಪ) ಅವನು ಎಲ್ಲಿಗೆ ಹೋಗಿದ್ದಾನೆಂದು ರಾಜು ಹೇಳಲಿಲ್ಲ. ಮೇಲೆ ತಿಳಿಸಿದ ಹಾಗೆ, ತಿಳಿಯದ ತೋರುಪದಗಳಿಗೆ ಕೇಳ್ವಿಯ ಹುರುಳೂ ಇದೆಯೆಂದು ಹೇಳಿದಲ್ಲಿ (ಎಂದರೆ ಅವನ್ನು ಕೇಳ್ವಿಪದಗಳೆಂದು ಪರಿಗಣಿಸಿದಲ್ಲಿ), ಅವಕ್ಕೆ ಊ, ಓ, ಏ, ಮತ್ತು ಆದರೆ+ಊ ಎಂಬವುಗಳನ್ನು ಸೇರಿಸಿದಾಗ, ಇಲ್ಲವೇ ಅವನ್ನೊಂದು ಒಳಸೊಲ್ಲಿನಲ್ಲಿ ಬಳಸಿದಾಗ, ಅವುಗಳ ಕೇಳ್ವಿಯ ಹುರುಳು ಇಲ್ಲವಾಗುವುದು ಹೇಗೆ ಎಂಬುದನ್ನು ವಿವರಿಸಲು ಬರುವುದಿಲ್ಲ; ಇದಕ್ಕೆ ಬದಲು, ಅವಕ್ಕೆ ತಿಳಿಯದಿಕೆಯ ಹುರುಳು ಮಾತ್ರ ಇದೆ ಎಂದು ಹೇಳಿದಲ್ಲಿ, ಮೇಲಿನ ಅಯ್ದು ಬಳಕೆಗಳಲ್ಲಿ ಅವಕ್ಕೆ ದೊರಕುವ ಹೆಚ್ಚಿನ ಹುರುಳುಗಳನ್ನು ಅವುಗಳಿಗೆ ಸೇರಿಸಿರುವ ಊ, ಓ, ಏ ಮತ್ತು ಆದರೆ+ಊ ಎಂಬವುಗಳ ಹುರುಳಿನಿಂದ, ಇಲ್ಲವೇ ಹೊರಸೊಲ್ಲಿನ ಹುರುಳಿನಿಂದ ನೇರವಾಗಿ ಪಡೆಯಲು ಬರುತ್ತದೆ: (1) ಆಯ್ಕೆಯ ಓ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ತಿಳಿಯದಿಕೆಯ ಹುರುಳಿನೊಂದಿಗೆ ಇರುವಿಕೆಯ ಹುರುಳನ್ನೂ ಕೊಡುತ್ತವೆ; ಇದಕ್ಕೆ ಬದಲು, ಕೂಡಿಕೆಯ ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ತಿಳಿಯದಿಕೆಯ ಹುರುಳಿನೊಂದಿಗೆ ಎಲ್ಲವನ್ನೂ ಒಳಗೊಂಡಿರುವಂತಹ ಹುರುಳನ್ನು ಕೊಡುತ್ತವೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನಿಗೆ ಯಾವುದೋ ಸಿಗಲಿಲ್ಲ. (1ಚ) ಅವನು ಯಾವುದೂ ಸಿಗಲಿಲ್ಲ. (1ಕ)ದಲ್ಲಿ ಬಂದಿರುವ ಯಾವುದೋ ಎಂಬ ನುಡಿತಕ್ಕೆ ಸಿಗದಿರುವ ವಸ್ತುವಿನ ಕುರಿತಾಗಿ (ಕ) ಇರುವಿಕೆಯ ಹುರುಳು ಮತ್ತು (ಚ) ತಿಳಿಯದಿಕೆಯ ಹುರುಳು ಎಂಬುದಾಗಿ ಎರಡು ಹುರುಳುಗಳು ಇವೆ; ಯಾಕೆಂದರೆ, ಯಾವುದೋ ಒಂದು ವಸ್ತು ಇದೆ, ಮತ್ತು ಅದು ಅವನಿಗೆ ಸಿಗಲಿಲ್ಲ ಎಂಬ ಹುರುಳು (1ಕ) ಸೊಲ್ಲಿಗಿದೆ. ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಯಾವುದೂ ಎಂಬುದಕ್ಕೆ ಸಿಗದಿರುವ ವಸ್ತುವಿನ ಕುರಿತಾಗಿ (ಕ) ಅದು ಎಲ್ಲವನ್ನೂ ಒಳಗೊಂಡಿದೆಯೆಂಬ ಹುರುಳು, ಮತ್ತು (ಚ) ತಿಳಿಯದಿಕೆಯ ಹುರುಳು ಎಂಬ ಈ ಎರಡು

ಹುರುಳುಗಳಿವೆ; ಯಾಕೆಂದರೆ, ಎಲ್ಲಾ ವಸ್ತುಗಳ ಕುರಿತಾಗಿಯೂ ಅದು ಅವನಿಗೆ ಸಿಗಲಿಲ್ಲ ಎಂಬ ಹೇಳಿಕೆಯನ್ನು (1ಚ) ಸೊಲ್ಲು ಕೊಡುತ್ತದೆ. ಆಯ್ಕೆಯ ಒಟ್ಟಿನಿಂದ ಇರುವಿಕೆಯ ಹುರುಳನ್ನು, ಮತ್ತು ಕೂಡಿಕೆಯ ಒಟ್ಟಿನಿಂದ ಎಲ್ಲವನ್ನೂ ಒಳಗೊಳ್ಳುವ ಹುರುಳನ್ನು ಪಡೆಯುವುದು ತುಂಬಾ ಸುಳುವಾದ ಕೆಲಸ. ಇದನ್ನು ತೀರ್ಮೆಯರಿಗರು (ತಾರ್ಕಿಕರು) ಹಿಂದಿನಿಂದಲೂ ಕೆಳಗೆ ತೋರಿಸಿದಂತೆ ವಿವರಿಸುತ್ತ ಬಂದಿದ್ದಾರೆ: ಒಂದು ಕಚಿತವಾದ ಎಣಿಕೆಯ ಪಾಂಗುಗಳ ಕುರಿತಾಗಿ (1) ಇರುವಿಕೆಯನ್ನು ತಿಳಿಸುವುದೂ ಆಯ್ಕೆಯ ಹುರುಳಿನಲ್ಲಿ ಬಳಸುವುದೂ ಒಂದೇ, ಮತ್ತು (2) ಎಲ್ಲವನ್ನೂ ಒಳಗೊಂಡಿರುವಂತೆ ತಿಳಿಸುವುದೂ ಕೂಡಿಕೆಯ ಹುರುಳಿನಲ್ಲಿ ಬಳಸುವುದೂ ಒಂದೇ. (2) ಒತ್ತಿಹೇಳುವ ಏ ಒಟ್ಟನ್ನು ಬಳಸಿರುವಲ್ಲಿ ಎಲ್ಲವನ್ನೂ ಒಳಗೊಳ್ಳುವ ಹುರುಳು ಮತ್ತು ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡುವ ಹುರುಳು ಎಂಬುದಾಗಿ ಎರಡು ಬಗೆಯ ಹುರುಳುಗಳು ಸಿಗುತ್ತವೆ: (1ಕ) ಯಾರನ್ನೇ ಕೇಳಿ, ಅವರು ಇದನ್ನೇ ಹೇಳುತ್ತಾರೆ. (1ಚ) ಅವನು ಎಲ್ಲಿಗೇ ಹೋಗಲಿ, ನಾನು ಕಂಡುಹಿಡಿಯುತ್ತೇನೆ. (1ಟ) ನೀನು ಎಶ್ಟೇ ಕೊಡು, ಅವನಿಗೆ ಒಪ್ಪಿಗೆಯಾಗುವುದಿಲ್ಲ. (1ಕ)ದಲ್ಲಿ ಬಂದಿರುವ ಯಾರನ್ನೇ ಎಂಬುದಕ್ಕೆ ಎಲ್ಲರನ್ನೂ ಒಳಗೊಳ್ಳುವ ಹುರುಳಿದೆ; ಆದರೆ, ಅದರೊಂದಿಗೆ ಆಯ್ಕೆಯ ಹುರುಳೂ ಇದೆಯಾದ ಕಾರಣ, ಎಲ್ಲರೂ ಎಂಬ ಪದದ ಹುರುಳು ಅದಕ್ಕಿಲ್ಲ. ಇಲ್ಲಿ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಲಾಗುತ್ತದೆ. ಈ ಒಟ್ಟನ್ನು ಬಳಸಿರುವ ತಿಳಿಯದ ತೋರುಪದಗಳನ್ನು ಅರಿಕೆಯ ಸೊಲ್ಲುಗಳಲ್ಲಿ ಮಾತ್ರ ಬಳಸಲಾಗುತ್ತದೆಯಾದ ಕಾರಣ, ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಲಾಗುತ್ತದೆ ಎಂಬ ಹುರುಳು ಅರಿಕೆಯ ಎಸಕರೂಪದಿಂದ ದೊರೆಯುತ್ತದೆಯೆಂದು ಹೇಳಬಹುದು. ಹಾಗಾಗಿ, ಎಲ್ಲವನ್ನೂ ಒಳಗೊಳ್ಳುವ ಹುರುಳನ್ನು ಮಾತ್ರವೇ ಏ ಒಟ್ಟಿನ ಒತ್ತಿಹೇಳುವ ಹುರುಳಿನಿಂದ ಪಡೆದರೆ ಸಾಕು; ಇದು ತೊಡಕಿನ ಕೆಲಸವಲ್ಲ; ಯಾಕೆಂದರೆ, ಒತ್ತಿಹೇಳುವ ಹುರುಳು ಎಲ್ಲವನ್ನೂ ಒಳಗೊಳ್ಳುವ ಹುರುಳನ್ನು ಕೊಡಬಲ್ಲುದು.

(3) ತಿಳಿಯದ ತೋರುಪದಗಳಿಗೆ ಆದರೆ+ಊ ಎಂಬುದನ್ನು ಸೇರಿಸಿರುವಲ್ಲಿ ಎಲ್ಲವನ್ನೂ ಒಳಗೊಳ್ಳುವ ಹುರುಳಿಲ್ಲ, ಮತ್ತು ಇರುವಿಕೆಯ ಹುರುಳೂ ಇಲ್ಲ: (1ಕ) ಇವತ್ತು ಯಾರಾದರೂ ಬರಬಹುದು. (1ಚ) ಅವನು ಏನಾದರೂ ಹೇಳಿರಬಹುದು. (1ಕ) ಸೊಲ್ಲಿನಲ್ಲಿ ಯಾರಾದರೂ ಎಂಬುದರ ಬಳಕೆಯಾಗಿದ್ದು, ಯಾರೂ ಎಂಬುದಕ್ಕಿರುವ ಎಲ್ಲವನ್ನೂ ಒಳಗೊಳ್ಳುವ ಹುರುಳು ಇಲ್ಲಿ ಇಲ್ಲವಾಗಿದೆ; ಇದಲ್ಲದೆ, ಯಾರೋ ಎಂಬುದಕ್ಕಿರುವ ಇರುವಿಕೆಯ ಹುರುಳೂ ಅದಕ್ಕಿಲ್ಲ ಎಂಬುದನ್ನು ಗಮನಿಸಬಹುದು. ಊ ಒಟ್ಟಿಗಿರುವ ಎಲ್ಲವನ್ನೂ ಒಳಗೊಳ್ಳುವ ಹುರುಳು ಆದರೂ ಎಂಬುದರಲ್ಲಿ ಊ ಒಟ್ಟಿನೊಂದಿಗೆ ಆಗು ಪದದ ಬೇಡಿಕೆಯ ರೂಪವಾದ ಆದರೆ ಎಂಬುದನ್ನು ಬಳಸಿದುದರಿಂದಾಗಿ ಬಿದ್ದುಹೋಗಿದೆ ಎಂದು ಹೇಳಬಹುದು. ಈ ಬೇಡಿಕೆಯ ರೂಪವೇ ಇರುವಿಕೆಯ ಹುರುಳು ಬಾರದಂತೆಯೂ ತಡೆಯುತ್ತದೆ. ಬೇರೆ ಎಸಕಪದಗಳ ಬೇಡಿಕೆಯ ರೂಪಗಳ ಬಳಿಕ ಊ ಒಟ್ಟನ್ನು ಬಳಸಿರುವಲ್ಲೂ ಈ ರೀತಿ ಯಾರು, ಎಲ್ಲಿ, ಯಾಕೆ ಮೊದಲಾದ ತೋರುಪದಗಳಿಗೆ ತಿಳಿಯದ ಹುರುಳು ಬರುತ್ತದಲ್ಲದೆ ಕೇಳ್ವಿಯ ಹುರುಳು ಬರುವುದಿಲ್ಲ: (1ಕ) ಅವನು ಯಾರು ಕರೆದರೂ ಬರುವುದಿಲ್ಲ. (1ಚ) ಅವನು ಎಲ್ಲಿಗೆ ಹೋದರೂ ತೊಂದರೆಗೊಳಗಾಗುತ್ತಾನೆ. (1ಟ) ಅವನಿಗೆ ಎಶ್ಟು ಹಣ ಕೊಟ್ಟರೂ ಸಾಕಾಗುವುದಿಲ್ಲ. (1ತ) ಅವನು ಯಾರು ಕರೆದರೆ ಬರುವುದಿಲ್ಲ? (1ಕ)ದಲ್ಲಿ ಯಾರು ಪದ ಬಂದಿದೆಯಾದರೂ ಅದಕ್ಕೆ ಕೇಳ್ವಿಯ ಹುರುಳಿಲ್ಲ; ಸೊಲ್ಲಿನ ಕೊನೆಯಲ್ಲಿ ? ಕೇಳ್ವಿಬರಿಗೆ ಬಾರದಿರುವುದೇ ಇದಕ್ಕೆ ಕಾರಣವೆಂದು ಹೇಳಬಹುದು; (1ಚ-ಟ)ಗಳಲ್ಲೂ ಹೀಗೆಯೇ. ಕೊನೆಯಲ್ಲಿ ? ಎಂಬ ಕೇಳ್ವಿಬರಿಗೆ ಬಂದಿರುವ (1ತ) ಸೊಲ್ಲಿನಲ್ಲಿ ಮಾತ್ರ ಕೇಳ್ವಿಯ ಹುರುಳಿದೆ ಎಂಬುದನ್ನು ಗಮನಿಸಬಹುದು. ಇದಲ್ಲದೆ, (1ಕ-ಟ)ಗಳಲ್ಲಿ ಬೇಡಿಕೆಯ ರೂಪವಾಗಿ ಆಗು ಪದ ಬಂದಿಲ್ಲವಾದ ಕಾರಣ, ಊ ಒಟ್ಟಿಗಿರುವ ಎಲ್ಲವನ್ನೂ ಒಳಗೊಳ್ಳುವ ಹುರುಳು ಬಿದ್ದುಹೋಗಿಲ್ಲ.

10.5.3 ಪತ್ತುಗೆಯ ಒಳಸೊಲ್ಲುಗಳಲ್ಲಿ ಬಳಕೆ

ಬೇರೊಂದು ಸೊಲ್ಲಿನಲ್ಲಿ ಬಂದಿರುವ ಹೆಸರುಪದದ ಪರಿಚೆಗಳನ್ನು ತಿಳಿಸುವುದಕ್ಕಾಗಿ ಸೊಲ್ಲುಗಳನ್ನು ಹಲವು ಬಗೆಗಳಲ್ಲಿ ಮಾರ್ಪಡಿಸಿ ಬಳಸಲು ಬರುತ್ತದೆ; ಆ ಸೊಲ್ಲುಗಳಿಗೆ ಓ ಒಟ್ಟನ್ನು ಸೇರಿಸಿ, ಮತ್ತು ಅವುಗಳಲ್ಲಿ ತಿಳಿಯದ ತೋರುಪದವೊಂದನ್ನು ಬಳಸಿ, ಇನ್ನೊಂದು ಸೊಲ್ಲಿನ ಒಳಸೊಲ್ಲನ್ನಾಗಿ ಮಾಡುವುದು ಇಂತಹ ಬಳಕೆಗಳಲ್ಲಿ ಒಂದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಒಂದು ಸೀರೆಯನ್ನು ಆಕೆ ಮಯ್ಸೂರಿನಿಂದ ತಂದಿದ್ದಳು. (1ಚ) ಆ ಸೀರೆ ಹರಿದುಹೋಗಿದೆ. (1ಟ) ಯಾವ ಒಂದು ಸೀರೆಯನ್ನು ಆಕೆ ಮಯ್ಸೂರಿನಿಂದ ತಂದಿದ್ದಳೋ ಆ ಸೀರೆ ಹರಿದುಹೋಗಿದೆ. (1ಕ) ಸೊಲ್ಲನ್ನು (1ಚ) ಸೊಲ್ಲಿನ ಒಳಸೊಲ್ಲನ್ನಾಗಿ ಮಾಡಿ (1ಟ) ಸೊಲ್ಲನ್ನು ಉಂಟುಮಾಡಲಾಗಿದೆ; ಹೀಗೆ ಮಾಡುವುದಕ್ಕಾಗಿ, (1ಕ) ಸೊಲ್ಲಿನ ಕೊನೆಯಲ್ಲಿ ಓ ಒಟ್ಟನ್ನು ಸೇರಿಸಲಾಗಿದೆ, ಮತ್ತು ಅದರ ಮೊದಲಿಗೆ ಯಾವ ಎಂಬ ತಿಳಿಯದ ತೋರುಪದವನ್ನು ಸೇರಿಸಲಾಗಿದೆ. ಹೀಗೆ ಮಾರ್ಪಡಿಸಿದ (1ಕ) ಸೊಲ್ಲನ್ನು (1ಚ) ಸೊಲ್ಲಿನ ಆ ಸೀರೆ ಎಂಬ ಪದಕಂತೆಯ ಪರಿಚೆಯನ್ನಾಗಿ ಮಾಡಿ (1ಟ) ಸೊಲ್ಲನ್ನು ಉಂಟುಮಾಡಲಾಗಿದೆ. ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲೂ ಇಂತಹದೇ ಹಮ್ಮುಗೆಯನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು: (1ಕ) ಯಾವಾಗ ಆಕೆ ಹಾಡಲು ತೊಡಗುತ್ತಾಳೋ ಆಗ ಆಕೆಯ ಮಗು ನಿದ್ದೆಮಾಡಲು ತೊಡಗುತ್ತದೆ. (1ಚ) ಅವಳು ನೀರಿನ ಕೊಡವನ್ನು ಎಲ್ಲಿ ಇರಿಸುತ್ತಾಳೋ ಅಲ್ಲಿ ಇರುವೆಗಳು ಸೇರಿರುತ್ತವೆ. (1ಟ) ಆಕೆ ಹೇಗೆ ನೀರಿನ ಕೊಡವನ್ನು ಹೊರುತ್ತಾಳೋ ಹಾಗೆಯೇ ಪುಸ್ತಕಗಳನ್ನೂ ಹೊರುತ್ತಾಳೆ. ಸೊಲ್ಲಿನಲ್ಲಿ ತಿಳಿಯದ ತೋರುಪದವನ್ನು ಬಳಸುವುದರೊಂದಿಗೆ, ಅದರ ಎಸಕಪದವನ್ನು ಬೇಡಿಕೆಯ ರೂಪಕ್ಕೆ ಮಾರ್ಪಡಿಸಿ, ಮತ್ತು ಅದಕ್ಕೆ ಊ ಒಟ್ಟನ್ನು ಸೇರಿಸಿ ಇನ್ನೊಂದು ಸೊಲ್ಲಿನ ಹೆಸರುಪದದ ಪರಿಚೆ ನುಡಿತವನ್ನಾಗಿ ಮಾಡುವುದು ಇನ್ನೊಂದು ಬಗೆ:

(1ಕ) ನೀವು ಏನು ಕೇಳುವುದಿದ್ದರೂ ಅದಕ್ಕೆ ನನ್ನ ಹತ್ತಿರ ಉತ್ತರ EzÉ. (1ಚ) ನೀವು ಯಾರನ್ನು ಕರೆದರೂ ಅವರ ಹತ್ತಿನ ನಾನು ಮಾತನಾಡುತ್ತೇನೆ. (1ಟ) ನೀವು ಎಲ್ಲಿಗೆ ಹೋಗುವುದಿದ್ದರೂ ಈತನನ್ನು (ಅಲ್ಲಿಗೆ) ಕರೆದುಕೊಂಡು ಹೋಗಬೇಕು. ಈ ಎರಡು ಬಗೆಯ ಪತ್ತುಗೆಸೊಲ್ಲುಗಳ ನಡುವಿರುವ ವ್ಯತ್ಯಾಸವೇನೆಂದರೆ, ಓ ಒಟ್ಟನ್ನು ಬಳಸಿರುವಲ್ಲಿ ಇರುವಿಕೆಯ ಹುರುಳಿದೆ, ಮತ್ತು ಊ ಒಟ್ಟನ್ನು ಬಳಸಿರುವಲ್ಲಿ ಎಲ್ಲವನ್ನೂ ಒಳಗೊಳ್ಳುವ ಹುರುಳಿದೆ. ಇಂತಹ ಪತ್ತುಗೆಸೊಲ್ಲುಗಳಲ್ಲಿ ಬರುವ ಯಾರು, ಏನು, ಎಲ್ಲಿ ಮೊದಲಾದ ತೋರುಪದಗಳು ಕೇಳ್ವಿಹುರುಳನ್ನು ಕೊಡುವುದಿಲ್ಲ ಎಂಬುದನ್ನು ಗಮನಿಸಬಹುದು; ತಿಳಿಯದಿಕೆಯ ಹುರುಳನ್ನು ಮಾತ್ರ ಅವು ಕೊಡುತ್ತವೆ. ಕೇಳ್ವಿಹುರುಳನ್ನು ಕೊಡಬಲ್ಲ ? ಎಂಬ ಬರಿಗೆ ಈ ಸೊಲ್ಲುಗಳಲ್ಲಿ ಇಲ್ಲದಿರುವುದೇ ಇವಕ್ಕೆ ಕೇಳ್ವಿಹುರುಳು ಬಾರದಿರುವುದಕ್ಕೆ ಕಾರಣ ಎಂದು ಹೇಳುವುದೇ ಇಲ್ಲಿ ನಮಗಿರುವ ದಾರಿ. ಎಂದರೆ, ಯಾರು, ಏನು, ಎಲ್ಲಿ ಮೊದಲಾದ ತೋರುಪದಗಳಿಗೇನೇ ಕೇಳ್ವಿಹುರುಳಿದೆಯೆಂದು ಹೇಳಿದಲ್ಲಿ, ಅವನ್ನು ಈ ರೀತಿ ಪತ್ತುಗೆಸೊಲ್ಲುಗಳಲ್ಲಿ ಬಳಸಿದಾಗ ಅವುಗಳ ಕೇಳ್ವಿಹುರುಳು ಇಲ್ಲವಾಗುವುದು ಹೇಗೆ ಎಂಬುದನ್ನು ವಿವರಿಸಲು ಬರುವುದಿಲ್ಲ. ಮೇಲೆ ಕೊಟ್ಟಿರುವ ಎಲ್ಲಾ ವಿಶಯಗಳನ್ನೂ ಗಮನಿಸಿದಾಗ, ಯಾರು, ಏನು, ಎಲ್ಲಿ, ಎಶ್ಟು, ಹೇಗೆ ಮೊದಲಾದ ತೋರುಪದಗಳನ್ನು ಕೇಳ್ವಿಪದಗಳೆಂದು ಕರೆಯುವುದಕ್ಕಿಂತಲೂ ತಿಳಿಯದ ತೋರುಪದಗಳೆಂದು ಕರೆಯುವುದೇ ಒಳ್ಳೆಯದು ಎಂಬುದು ಸ್ಪಶ್ಟವಾಗುತ್ತದೆ; ಅವನ್ನು ಕೇಳ್ವಿಗಳೆಂದು ಕರೆದಲ್ಲಿ ಹಲವು ಬಗೆಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ; ತಿಳಿಯದ ತೋರುಪದಗಳೆಂದು ಕರೆದಲ್ಲಿ ಈ ಎಲ್ಲಾ ತೊಡಕುಗಳೂ ಇಲ್ಲವಾಗುತ್ತವೆ. ಹಾಗಾಗಿ, ಈ ಸೊಲ್ಲರಿಮೆಯಲ್ಲಿ ಅವನ್ನು ತಿಳಿಯದ ತೋರುಪದಗಳೆಂದೇ ಕರೆಯಲಾಗಿದೆ.

10.6 ತಿಳಿಯದ ತೋರುಪದಗಳ ಬಳಕೆ

Eke →

ಏನು, ಯಾರು, ಯಾವನು, ಎಲ್ಲಿ ಮೊದಲಾದ ಒಟ್ಟು ಹದಿನಾರು ತೋರುಪದಗಳನ್ನು (10.1)ರಲ್ಲಿ ತಿಳಿಯದ ತೋರುಪದಗಳೆಂದು ಕರೆಯಲಾಗಿದೆ; ಇವುಗಳಲ್ಲಿ ಕೆಲವು ಪದಗಳು ಆಡುಗನಿಗೆ ತಿಳಿದಿಲ್ಲದಂತಹ ಒಂದು ಪಾಂಗನ್ನು ಗುರುತಿಸುತ್ತವೆ, ಮತ್ತು ಬೇರೆ ಕೆಲವು ಪದಗಳು ಹಾಗೆ ಗುರುತಿಸುವಲ್ಲಿ ನೆರವಾಗುತ್ತವೆ. ಈ ತಿಳಿಯದ ತೋರುಪದಗಳಿಗೆ ಹಲವು ಬಗೆಯ ಬಳಕೆಗಳಿವೆ: ಅವನ್ನು ತಿಳಿಯದ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ತಿಳಿಸಬೇಕಾಗಿರುವಲ್ಲಿ ಮಾತ್ರವಲ್ಲದೆ, ಕೇಳ್ವಿಗಳಲ್ಲಿ, ಪತ್ತುಗೆಯ ಒಳಸೊಲ್ಲುಗಳಲ್ಲಿ, ಬೆರಗನ್ನು ತಿಳಿಸುವ ಸೊಲ್ಲುಗಳಲ್ಲಿ, ಮತ್ತು ಎತ್ತಿಹೇಳುವ ಒಳಸೊಲ್ಲುಗಳಲ್ಲಿಯೂ ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವರು ಎಲ್ಲಿಗೋ ಹೋಗಿದ್ದಾರೆ. (1ಚ) ಅವರು ಎಲ್ಲಿಗೆ ಹೋಗಿದ್ದಾರೆ? (1ಟ) ಅವರು ಎಲ್ಲಿಗೆ ಹೋಗಿದ್ದಾರೋ ಅಲ್ಲಿಗೆ ನಾನೂ ಹೋಗಿದ್ದೇನೆ. (1ತ) ಮದುಗೆಗೆ ಎಶ್ಟು ಜನ ಬಂದಿದ್ದರು! (1ಪ) ಅವರು ಎಲ್ಲಿಗೆ ಹೋಗಿದ್ದಾರೆಂದು ನನಗೆ ಗೊತ್ತಿದೆ. (1ಕ)ದಲ್ಲಿ ಎಲ್ಲಿಗೆ ಎಂಬ ತಿಳಿಯದ ತೋರುಪದವನ್ನು ಬಳಸಲಾಗಿದ್ದು, ಅವರು ಹೋಗಿರುವ ಜಾಗ ಯಾವುದೆಂಬುದು ಆಡುಗನಿಗೆ ತಿಳಿದಿಲ್ಲ ಎಂಬುದನ್ನು ಅದು ತಿಳಿಸುತ್ತದೆ; (1ಚ)ದಲ್ಲಿ ಅದೇ ಪದವನ್ನು ಒಂದು ಕೇಳ್ವಿಯಲ್ಲಿ ಬಳಸಲಾಗಿದ್ದು, ಅದರಲ್ಲಿ ಆಡುಗನಿಗೆ ಜಾಗ ಯಾವುದೆಂದು ತಿಳಿದಿಲ್ಲ ಎಂಬುದಾಗಿ ಮಾತ್ರವಲ್ಲದೆ, ಅದು ಯಾವುದೆಂಬುದನ್ನು ಆತನಿಗೆ ಕೇಳುಗನಿಂದ ತಿಳಿಯಬೇಕಾಗಿದೆ ಎಂಬುದನ್ನೂ ತಿಳಿಸಲಾಗಿದೆ. ಆದರೆ, (1ಟ)ದಲ್ಲಿ ಅದನ್ನೇ ಬೇರೊಂದು ಕೆಲಸಕ್ಕಾಗಿ ಬಳಸಲಾಗಿದೆ: ಎಲ್ಲಿಗೆ ಮತ್ತು ಅಲ್ಲಿಗೆ ಎಂಬ ಎರಡು ಪದಗಳ ಮೂಲಕ ಇಲ್ಲಿ ಎರಡು ಸೊಲ್ಲುಗಳನ್ನು ಸೇರಿಸುವ ಕೆಲಸವನ್ನು ನಡೆಸಲಾಗಿದೆ. (1ತ)ದಲ್ಲಿ ಎಶ್ಟು ಎಂಬ ಇನ್ನೊಂದು ತಿಳಿಯದ ತೋರುಪದವನ್ನು ಬೆರಗನ್ನು ತಿಳಿಸುವುದಕ್ಕಾಗಿ ಬಳಸಲಾಗಿದೆ, ಮತ್ತು (1ಪ)ದಲ್ಲಿ ಜಾಗ ಯಾವುದೆಂಬುದು ತನಗೆ

ತಿಳಿದಿದೆಯೆಂಬುದನ್ನು ತಿಳಿಸುವಲ್ಲಿ (ಆದರೆ ಅದನ್ನು ಕೇಳುಗನಿಗೆ ಗೊತ್ತಾಗದ ಹಾಗೆ ಇರಿಸಿಕೊಳ್ಳುವಲ್ಲಿ) ಎಲ್ಲಿಗೆ ಎಂಬ ತಿಳಿಯದ ತೋರುಪದವನ್ನು ಬಳಸಲಾಗಿದೆ. ತಿಳಿಯದ ತೋರುಪದಗಳಿಗಿರುವ ಈ ಹಲವು ಬಗೆಯ ಬಳಕೆಗಳನ್ನು ಕೆಳಗೆ ವಿವರಿಸಲಾಗಿದ್ದು, ಈ ಬಳಕೆಗಳಿಗೆಲ್ಲ ಆಡುಗನಿಗೆ ಪಾಂಗಿನ ಕುರಿತಾಗಿ ಯಾವುದಾದರೂ ಒಂದು ಬಗೆಯ ತಿಳಿವು ಇಲ್ಲದಿರುವುದೇ ಮುಕ್ಯವಾದ ಹುರುಳೆಂಬುದನ್ನು ಗಮನಿಸಬಹುದು.

10.6.1 ಆಡುಗನ ಅರಿಯಮೆಯನ್ನು ತಿಳಿಸುವಲ್ಲಿ ಬಳಕೆ

ಒಂದು ಪಾಂಗಿನ ಕುರಿತಾಗಿ ಆಡುಗನಲ್ಲಿರುವ ಅರಿಯಮೆಯನ್ನು ತಿಳಿಸುವುದಕ್ಕಾಗಿ ತಿಳಿಯದ ತೋರುಪದಗಳಿಗೆ ಮೂರು ಬಗೆಯ ಒಟ್ಟುಗಳನ್ನು ಸೇರಿಸಲಾಗುತ್ತದೆ: (1) ಕೂಡಿಕೆಯ ಹುರುಳಿರುವ ಊ ಒಟ್ಟು (ಯಾರೂ, ಏನೂ, ಯಾವನೂ, ಎಲ್ಲಿಯೂ), (2) ಆಯ್ಕೆಯ ಹುರುಳಿರುವ ಓ ಒಟ್ಟು (ಯಾರೋ, ಏನೋ, ಯಾವನೋ, ಎಲ್ಲೋ), ಮತ್ತು (3) ಒತ್ತು ಕೊಡುವ ಹುರುಳಿರುವ ಏ ಒಟ್ಟು (ಯಾರೇ, ಏನೇ, ಯಾವನೇ, ಎಲ್ಲೇ). ಇದಲ್ಲದೆ, ತಿಳಿಯದ ತೋರುಪದಗಳೊಂದಿಗೆ ಆದರೆ ಎಂಬ ಪದವನ್ನು (ಆಗು ಎಸಕಪದದ ಬೇಡಿಕೆಯ ರೂಪವನ್ನು) ಮತ್ತು ಊ ಒಟ್ಟನ್ನು ಒಟ್ಟಾಗಿ ಬಳಸಿಯೂ ಆಡುಗನ ಅರಿಯಮೆಯನ್ನು ತಿಳಿಸಲು ಬರುತ್ತದೆ. ಈ ನಾಲ್ಕು ಬಗೆಯ ಬಳಕೆಗಳನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನ ಮನೆಗೆ ಇವತ್ತು ಯಾರೋ ಬಂದಿದ್ದರು. (1ಚ) ಅವನ ಮನೆಗೆ ಇವತ್ತು ಯಾರೂ ಬರಲಿಲ್ಲ. (1ಟ) ಅವನ ಮನೆಗೆ ಇವತ್ತು ಯಾರೇ ಬರಲಿ, ಅವರನ್ನು ಒಳಗೆ ಬಿಡುವುದಿಲ್ಲ. (1ತ) ಅವನ ಮನೆಗೆ ಇವತ್ತು ಯಾರಾದರೂ ಬರಬಹುದು. ಮೇಲಿನ ಸೊಲ್ಲುಗಳಲ್ಲಿ ಯಾರು ಪದ ಊ, ಓ ಮತ್ತು ಏ ಒಟ್ಟುಗಳೊಂದಿಗೆ, ಮತ್ತು ಆದರೂ ಎಂಬುದರೊಂದಿಗೆ ಬಂದಿದ್ದು, ಅದಕ್ಕೆ ಆಡುಗನಲ್ಲಿರುವ ನಾಲ್ಕು ಬಗೆಯ ಅರಿಯಮೆಯನ್ನು ತಿಳಿಸುವ ಹುರುಳುಗಳು ಬಂದಿವೆ.

ಯಾವ ಮತ್ತು ಎಂತಹ ಎಂಬ ಎರಡು ತಿಳಿಯದ ತೋರುಪದಗಳು ಉಳಿದ ತೋರುಪದಗಳಿಂದ ಒಂದು ವಿಶಯದಲ್ಲಿ ಬೇರಾಗಿವೆ: ಅವಕ್ಕೆ ಊ, ಓ ಮತ್ತು ಏ ಎಂಬ ಒಟ್ಟುಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಇದಕ್ಕೆ ಬದಲು, ಪದಕಂತೆಗಳಲ್ಲಿ ಅವುಗಳ ಬಳಿಕ ಬರುವ ಹೆಸರುಪದಗಳಿಗೆ ಈ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ: (1ಕ) ಅವನು ಎಂತಹ ಕೆಲಸಕ್ಕೂ ಹೇಸುವುದಿಲ್ಲ. (1ಚ) ಅವನು ಯಾವ ಕೆಲಸವನ್ನೂ ಮಾಡಬಲ್ಲ. (1ಟ) ಅವನು ಯಾವ ಕೆಲಸವನ್ನೇ ಮಾಡಲಿ, ಅದಕ್ಕೆ ಆಕೆಯ ಮೆಚ್ಚುಗೆ ಸಿಗುವುದಿಲ್ಲ. (1ತ) ಅವನು ಯಾವ ಕೆಲಸವನ್ನಾದರೂ ಮಾಡುತ್ತಲೇ ಇರಬೇಕು. ಎಶ್ಟು ಪದಕ್ಕೆ ಈ ಒಟ್ಟುಗಳನ್ನು ನೇರವಾಗಿಯೂ ಸೇರಿಸಬಹುದು, ಇಲ್ಲವೇ ಅದರ ಬಳಿಕ ಬಂದಿರುವ ಹೆಸರುಪದಕ್ಕೂ ಸೇರಿಸಬಹುದು; ಆದರೆ ಊ ಒಟ್ಟನ್ನು, ಅದರ ಬಳಿಕ ಹೆಸರುಪದ ಬಂದಿರುವಲ್ಲೂ, ನೇರವಾಗಿ ಆ ಪದಕ್ಕೆ ಸೇರಿಸುವುದೇ ಹೆಚ್ಚು ಎಂದು ತೋರುತ್ತದೆ (ಇಂತಹ ಬಳಕೆ ಬೇರೆ ತಿಳಿಯದ ತೋರುಪದಗಳಿಗೂ ಇವೆ ಎಂಬುದನ್ನು ಮುಂದೆ (10.4.2)ರಲ್ಲಿ ನೋಡಲಿರುವೆವು): (1ಕ) ಅವನು ಎಶ್ಟೂ ಕೊಡಬಲ್ಲ. (1ಚ) ಅವನು ಎಶ್ಟು ಚೀಲಗಳನ್ನೂ ಹೊರಬಲ್ಲ. (2ಕ) ಅವನು ಎಶ್ಟೇ ಕೊಡಲಿ, ಆಕೆಗೆ ಸಾಕೆನ್ನಿಸುವುದಿಲ್ಲ. (2ಚ) ಅವನು ಎಶ್ಟು ಚೀಲಗಳನ್ನೇ ತರಿಸಲಿ, ಅದು ಸಾಕಾಗುವುದಿಲ್ಲ. (3ಕ) ಅವನಿಗೆ ಎಶ್ಟೋ ಸಿಕ್ಕಿದೆ. (3ಚ) ಅವನು ಎಶ್ಟೋ ಕಡೆಗಳಿಗೆ ಹೋಗಿದ್ದಾನೆ. (4ಕ) ಅವನು ಎಶ್ಟನ್ನಾದರೂ ತರಲಿ. (4ಚ) ಅವನು ಎಶ್ಟು ಕೆಲಸಗಳನ್ನಾದರೂ ಮಾಡಲಿ. ತಿಳಿಯದ ತೋರುಪದಗಳೊಂದಿಗೆ ಇಲ್ಲವೇ ಅವುಗಳ ಬಳಿಕ ಬಂದಿರುವ ಹೆಸರುಪದಗಳೊಂದಿಗೆ ಎಣಿಕೆಯ ಒಟ್ಟುಗಳು ಇಲ್ಲವೇ ಪತ್ತುಗೆಯ ಒಟ್ಟುಗಳು ಬಂದಿರುವಲ್ಲಿ, ಊ, ಓ ಮತ್ತು ಏ ಎಂಬವು ಆ ಒಟ್ಟುಗಳ ಬಳಿಕ ಬರುತ್ತವೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನು ಯಾರನ್ನೂ ಒಳಗೆ ಕರೆಯಲಿಲ್ಲ. (1ಚ) ಅವನು ಎಲ್ಲರಿಗೂ ಎರಡೆರಡು ಹಣ್ಣು ಕೊಟ್ಟ.

(2ಕ) ಯಾವ ಪುಸ್ತಕವನ್ನೂ ಆತ ನನಗೆ ಕೊಡಲಿಲ್ಲ. (2ಚ) ಅವನು ಎಶ್ಟು ಹಣ್ಣುಗಳನ್ನೂ ತಿನ್ನಬಲ್ಲ. (1ಕ-ಚ)ಗಳಲ್ಲಿ ಊ ಒಟ್ಟು ತಿಳಿಯದ ತೋರುಪದಗಳಿಗೆ ನೇರವಾಗಿ ಸೇರದೆ, ಅನ್ನು ಮತ್ತು ಗೆ ಎಂಬ ಪತ್ತುಗೆ ಒಟ್ಟುಗಳ ಬಳಿಕ ಸೇರಿದೆ, ಮತ್ತು (2ಕ-ಚ)ಗಳಲ್ಲಿ ಅವುಗಳ ಬಳಿಕ ಬಂದಿರುವ ಹೆಸರು ಪದಗಳಿಗೆ ನೇರವಾಗಿ ಸೇರದೆ, ಎಣಿಕೆಯ ಒಟ್ಟು (ಗಳು) ಮತ್ತು ಪತ್ತುಗೆ ಒಟ್ಟು(ಅನ್ನು)ಗಳ ಬಳಿಕ ಸೇರಿದೆ ಎಂಬುದನ್ನು ಗಮನಿಸಬಹುದು. ಎತ್ತ ಮತ್ತು ಯಾವಾಗ ಎಂಬ ಪದಗಳಿಗೆ ಈ ಒಟ್ಟುಗಳನ್ನು ಸೇರಿಸಿದಾಗ, ಅದರ ಬಳಿಕ ಲಕಾರವೊಂದು ಕಾಣಿಸಿಕೊಳ್ಳುತ್ತದೆ: (ಎತ್ತಲೋ, ಎತ್ತಲೂ, ಎತ್ತಲೇ, ಎತ್ತಲಾದರೂ; ಯಾವಾಗಲೋ, ಯಾವಾಗಲೂ, ಯಾವಾಗಲೇ, ಯಾವಾಗಲಾದರೂ). ಮೇಲೆ ವಿವರಿಸಿದ ನಾಲ್ಕು ಬಗೆಯ ಬಳಕೆಗಳಲ್ಲಿ ತಿಳಿಯದ ತೋರುಪದಗಳು ಎಂತಹ ಹುರುಳುಗಳನ್ನು ಕೊಡುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ಊ ಒಟ್ಟಿನ ಬಳಕೆ: ಹೆಸರುಪದಗಳೊಂದಿಗೆ ಊ ಒಟ್ಟನ್ನು ಬಳಸಿದಾಗ, ಮೊದಲೇ ತಿಳಿಸಿರುವ ಒಂದು ಪಾಂಗಿನೊಂದಿಗೆ ಆ ಹೆಸರುಪದ ತಿಳಿಸುವ ಪಾಂಗನ್ನೂ ಸೇರಿಸುವಂತಹ ಕೂಡಿಕೆಯ ಹುರುಳು ಸಿಗುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಸೀರೆ ತರಲು ರಾಜು ಹೋಗಿದ್ದಾನೆ. (1ಚ) ಸೀರೆ ತರಲು ರಾಜುವೂ ಹೋಗಿದ್ದಾನೆ. (1ಕ) ಸೊಲ್ಲು ರಾಜು ಹೋಗಿದ್ದಾನೆಂಬ ಹುರುಳನ್ನಶ್ಟೇ ಕೊಡುತ್ತದೆ; ಇದಕ್ಕೆ ಬದಲು, ರಾಜು ಪದದೊಂದಿಗೆ ಊ ಒಟ್ಟನ್ನೂ ಬಳಸಿರುವ (1ಚ) ಸೊಲ್ಲು, ರಾಜು ಮಾತ್ರವಲ್ಲದೆ ಬೇರೊಬ್ಬನೂ ಹೋಗಿದ್ದಾನೆ ಎಂಬ ಹೆಚ್ಚಿನ ಹುರುಳನ್ನು ಕೊಡುತ್ತದೆ. ಎರಡು ಪಾಂಗುಗಳ ಕೂಡಿಕೆಯನ್ನು ತಿಳಿಸುವ ಒಂದು ಕೊಂಡಿಯನ್ನಾಗಿಯೂ ಊ ಒಟ್ಟನ್ನು ಬಳಸಲು ಬರುತ್ತದೆ; ಇಂತಹ ಬಳಕೆಯಲ್ಲಿ ಅದನ್ನು ಆ ಎರಡು ಪಾಂಗುಗಳನ್ನು ಗುರುತಿಸುವ ಎರಡು ಹೆಸರುಪದಗಳೊಂದಿಗೂ ಬಳಸಲಾಗುತ್ತದೆ: (1ಟ) ಸೀರೆ ತರಲು ರಾಜುವೂ ಹರಿಯೂ ಹೋಗಿದ್ದಾರೆ.

ತಿಳಿಯದ ತೋರುಪದಗಳಿಗೆ, ಇಲ್ಲವೇ ಆ ಪದಗಳೊಂದಿಗೆ ಹೆಸರು ಪದವೊಂದನ್ನು ಬಳಸಿರುವ ಪದಕಂತೆಗಳಿಗೆ, ಊ ಒಟ್ಟನ್ನು ಸೇರಿಸಿದಾಗ, ಅವಕ್ಕೆ ಎಲ್ಲವನ್ನೂ ಒಳಗೊಳ್ಳುವಂತಹ ಹುರುಳು ದೊರಕುತ್ತದೆ; ಇದು ಮೇಲೆ ವಿವರಿಸಿದಂತಹ ಕೂಡಿಕೆಯ ಹುರುಳಿನ ಹರವನ್ನು ಹೆಚ್ಚಿಸಿದುದರಿಂದಾಗಿ ಬೆಳೆದುಬಂದಿದೆಯೆಂಬುದನ್ನು ಗಮನಿಸಬಹುದು: (1ಕ) ಇವತ್ತಿನ ನಾಟಕಕ್ಕೆ ಯಾರೂ ಹೋಗಬಹುದು. (1ಚ) ಅವನ ಮನೆಯಲ್ಲಿ ಬೇಡುಗರಿಗೆ ಏನೂ ಸಿಗುವುದಿಲ್ಲ. (1ಟ) ಈ ಗಾಲಿಯನ್ನು ಹೇಗೂ ತಿರುಗಿಸಬಹುದು. (1ತ) ಅವನು ಎಲ್ಲಿಗೂ ಹೋಗುವುದಿಲ್ಲ. ಆದರೆ, ಯಾರೂ ಎಂಬುದು ತಿಳಿಸುವ ತಿಳಿಯದ ಹುರುಳಿಗೂ, ಎಲ್ಲರೂ ಎಂಬುದು ತಿಳಿಸುವ ತಿಳಿದ ಹುರುಳಿಗೂ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು: (1ಕ) ಮದುವೆಗೆ ಯಾರೂ ಹೋಗಬಹುದು. (1ಚ) ಮದುವೆಗೆ ಎಲ್ಲರೂ ಹೋಗಬಹುದು. (1ಕ) ಸೊಲ್ಲಿಗೆ ಯಾರು ಹೋಗುವುದಕ್ಕೂ ಅಡ್ಡಿಯಿಲ್ಲ ಎಂಬ ಹುರುಳಿದೆಯಲ್ಲದೆ, (1ಚ) ಸೊಲ್ಲು ಕೊಡುವ ಎಲ್ಲರೂ ಹೋಗಬಹುದು ಎಂಬ ಹುರುಳಿಲ್ಲ. ಹೋಗುವುದು ಯಾರು ಎಂಬುದನ್ನು (1ಕ) ಸೊಲ್ಲು ತಿಳಿಸುವುದಿಲ್ಲ, ಮತ್ತು (1ಚ) ಸೊಲ್ಲು ತಿಳಿಸುತ್ತದೆ. ಈ ವಿಶಯದಲ್ಲಿ ಯಾವಾಗ ಎಂಬ ಪದ ಉಳಿದ ತಿಳಿಯದ ತೋರುಪದಗಳಿಗಿಂತ ಬೇರಾಗಿದೆ; ಅದರೊಂದಿಗೆ ಊ ಒಟ್ಟನ್ನು ಬಳಸಿದಾಗ, ಅದಕ್ಕೆ ತಿಳಿಯದ ಹುರುಳೂ ದೊರಕಬಲ್ಲುದು ಮತ್ತು ತಿಳಿದ ಹುರುಳೂ ದೊರಕಬಲ್ಲುದು. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು: (1ಕ) ನೀವಿಲ್ಲಿಗೆ ಯಾವಾಗಲೂ ಬರಬಹುದು. (1ಚ) ಈ ಕೊಳದಲ್ಲಿ ಯಾವಾಗಲೂ ನೀರಿರುತ್ತದೆ. (1ಕ) ಸೊಲ್ಲಿಗೆ ಯಾವಾಗ ಬೇಕಿದ್ದರೂ ಬರಬಹುದು ಎಂಬ ತಿಳಿಯದ ಹುರುಳಿದೆಯಲ್ಲದೆ, ಎಲ್ಲಾ ಹೊತ್ತಿನಲ್ಲೂ ಬರಬಹುದು ಎಂಬ ತಿಳಿದ ಹುರುಳಿಲ್ಲ; ಇದಕ್ಕೆ ಬದಲು, (1ಚ) ಸೊಲ್ಲಿಗೆ ಕೊಳದಲ್ಲಿ ಎಲ್ಲಾ ಹೊತ್ತಿನಲ್ಲೂ ನೀರಿರುತ್ತದೆ ಎಂಬ ತಿಳಿದ ಹುರುಳಿದೆ.

(2) ಓ ಒಟ್ಟಿನ ಬಳಕೆ: ಹೆಸರುಪದಗಳೊಂದಿಗೆ ಓ ಒಟ್ಟನ್ನು ಬಳಸಿದಾಗ ಅವಕ್ಕೆ ಇಲ್ಲವೇ ಎಂಬ ಪದ ತಿಳಿಸುವ ಆಯ್ಕೆಯ ಹುರುಳು ದೊರಕುತ್ತದೆ; ಸಾಮಾನ್ಯವಾಗಿ ಈ ಒಟ್ಟನ್ನು ಎರಡು ಹೆಸರುಪದಗಳ ಇಲ್ಲವೇ ಪದಕಂತೆಗಳ ನಡುವಿನ ಕೊಂಡಿಯನ್ನಾಗಿ ಬಳಸಲಾಗುತ್ತದೆ: (1ಕ) ರಾಜುವೋ ಹರಿಯೋ ಬಂದರೆ, ನಾವು ಹೋಗಬಹುದು. (1ಚ) ರಾಜು ಇಲ್ಲವೇ ಹರಿ ಬಂದರೆ, ನಾವು ಹೋಗಬಹುದು. (2ಕ) ಅವನು ನಮ್ಮನ್ನೋ ನಿಮ್ಮನ್ನೋ ಕರೆದಿರಬೇಕು. (2ಚ) ಅವನು ನಮ್ಮನ್ನು ಇಲ್ಲವೇ ನಿಮ್ಮನ್ನು ಕರೆದಿರಬೇಕು. ಮೇಲೆ (ಕ) ಸೊಲ್ಲುಗಳಿಗಿರುವ ಹುರುಳೇ (ಚ) ಸೊಲ್ಲುಗಳಿಗೂ ಇದೆ ಎಂಬುದನ್ನು ಗಮನಿಸಬಹುದು. ತಿಳಿಯದ ತೋರುಪದಗಳಿಗೆ ಈ ಒಟ್ಟನ್ನು ಸೇರಿಸಿದಾಗ ಅವು ಆಡುಗನಿಗೆ ತಿಳಿಯದಿರುವಂತಹ ಒಂದು ಪಾಂಗನ್ನು ಗುರುತಿಸುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವರ ಮನೆಗೆ ಯಾರೋ ಬಂದಿದ್ದಾರೆ. (1ಚ) ಅವನಿಗೆ ಏನೋ ಸಿಕ್ಕಿರಲಿಲ್ಲ. (1ಟ) ಮರದ ಮೇಲೆ ಯಾವುದೋ ಒಂದು ಹಕ್ಕಿ ಕುಳಿತಿತ್ತು. (1ತ) ಅವಳ ಮಗ ಯಾಕೋ ಸಿಟ್ಟಾಗಿದ್ದಾನೆ. (1ಪ) ಅವನಿಗೆ ಎಲ್ಲಿಗೋ ಹೋಗಲಿಕ್ಕಿದೆ. (1ಕ)ದಲ್ಲಿ ಬಂದಿರುವ ಯಾರೋ ಪದ ಮನೆಗೆ ಬಂದಿರುವ ವ್ಯಕ್ತಿಯ ಇರುವಿಕೆಯನ್ನು ತಿಳಿಸುತ್ತದೆ, ಮತ್ತು ಇದರೊಂದಿಗೆ ಆ ವ್ಯಕ್ತಿ ಯಾರೆಂದು ಆಡುಗನಿಗೆ ತಿಳಿದಿಲ್ಲ ಎಂಬುದನ್ನೂ ತಿಳಿಸುತ್ತದೆ; ಇದೇ ರೀತಿಯಲ್ಲಿ (1ಚ)ದಲ್ಲಿ ಬಂದಿರುವ ಏನೋ ಪದ ಸಿಕ್ಕಿರುವ ವಸ್ತುವಿನ ಇರುವಿಕೆನ್ನು ತಿಳಿಸುತ್ತದೆ, ಮತ್ತು ಅದರೊಂದಿಗೆ ಆ ವಸ್ತು ಯಾವುದೆಂಬುದು ಆಡುಗನಿಗೆ ತಿಳಿದಿಲ್ಲ ಎಂಬುದನ್ನೂ ತಿಳಿಸುತ್ತದೆ; (1ಟ-ಪ) ಸೊಲ್ಲುಗಳಲ್ಲೂ ಹೀಗೆಯೇ. ಊ ಒಟ್ಟಿನೊಂದಿಗೆ ಬಂದಿರುವ ತಿಳಿಯದ ತೋರುಪದಗಳಿಗೂ ಓ ಒಟ್ಟಿನೊಂದಿಗೆ ಬಂದಿರುವ ತಿಳಿಯದ ತೋರುಪದಗಳಿಗೂ ನಡುವಿರುವ ವ್ಯತ್ಯಾಸವೇನೆಂದರೆ, ಊ ಒಟ್ಟಿನೊಂದಿಗೆ ಬಂದಿರುವವು ಪಾಂಗಿನ ಇರುವಿಕೆಯನ್ನು ತಿಳಿಸುವುದಿಲ್ಲ, ಆದರೆ ಓ ಒಟ್ಟಿನೊಂದಿಗೆ ಬಂದಿರುವವು ಅದನ್ನು ತಿಳಿಸುತ್ತವೆ:

(1ಕ) ಅವನಿಗೆ ಏನೂ ಸಿಗಲಿಲ್ಲ. (1ಚ) ಅವನಿಗೆ ಏನೋ ಸಿಗಲಿಲ್ಲ. (2ಕ) ಅವನು ಯಾರನ್ನೂ ಕಾಣಲಿಲ್ಲ. (2ಚ) ಅವನು ಯಾರನ್ನೋ ಕಾಣಲಿಲ್ಲ. (1ಕ)ದಲ್ಲಿ ಬಂದಿರುವ ಏನೂ ಎಂಬುದು ಸಿಗದೇ ಇರುವ ಯಾವುದೇ ಪಾಂಗಿನ ಇರುವಿಕೆಯನ್ನು ತಿಳಿಸುವುದಿಲ್ಲ, ಆದರೆ, (1ಚ) ಸೊಲ್ಲಿನಲ್ಲಿ ಬಂದಿರುವ ಏನೋ ಎಂಬುದು ಅಂತಹದೊಂದು ಪಾಂಗಿನ ಇರುವಿಕೆಯನ್ನು ತಿಳಿಸುತ್ತದೆ. (2ಕ-ಚ)ಗಳಲ್ಲಿ ಬಂದಿರುವ ಯಾರನ್ನೂ ಮತ್ತು ಯಾರನ್ನೋ ಎಂಬವುಗಳ ನಡುವೆಯೂ ಇಂತಹದೇ ವ್ಯತ್ಯಾಸ ಇದೆ. (3) ಏ ಒಟ್ಟಿನ ಬಳಕೆ: ಹೆಸರುಪದಗಳೊಂದಿಗೆ ಬಳಸಿದಾಗ ಏ ಒಟ್ಟಿಗೆ ಒತ್ತಿಹೇಳುವ ಹುರುಳು ಸಿಗುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅಣ್ಣ ಅವರ ಮನೆಗೆ ಹೋಗಿದ್ದ. (1ಚ) ಅಣ್ಣನೇ ಅವರ ಮನೆಗೆ ಹೋಗಿದ್ದ. (1ಟ) ಅಣ್ಣ ಅವರ ಮನೆಗೇನೇ ಹೋಗಿದ್ದ. (1ಕ)ದಲ್ಲಿ ಏ ಒಟ್ಟನ್ನು ಬಳಸಿಲ್ಲ; (1ಚ)ದಲ್ಲಿ ಅದನ್ನು ಅಣ್ಣ ಎಂಬ ಪದದೊಂದಿಗೆ, ಮತ್ತು (1ಟ)ದಲ್ಲಿ ಮನೆಗೆ ಎಂಬ ಪದದೊಂದಿಗೆ ಬಳಸಲಾಗಿದೆ; (1ಚ)ದಲ್ಲಿ ಅಣ್ಣ ಎಂಬುದರ ಮೇಲೆ (ಬೇರೊಬ್ಬನನ್ನು ಕಳಿಸಿಲ್ಲ, ಅಣ್ಣನೇ ಹೋಗಿದ್ದ), ಮತ್ತು (1ಟ)ದಲ್ಲಿ ಮನೆಗೆ ಎಂಬುದರ (ಬೇರೆ ಕಡೆಗೆ ಹೋದುದಲ್ಲ, ಮನೆಗೇನೇ ಹೋದುದು) ಮೇಲೆ ಒತ್ತು ಬಿದ್ದಿರುವುದನ್ನು ಕಾಣಬಹುದು. ಏ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳಿಗೆ ಪಾಂಗು ಯಾವುದೆಂಬುದು ಆಡುಗನಿಗೆ ತಿಳಿದಿಲ್ಲ ಎಂಬ ಹುರುಳಿನೊಂದಿಗೆ ಬೇರೆಯೂ ಎರಡು ಬಗೆಯ ಹುರುಳುಗಳಿವೆ: ಅದರ ಹರವನ್ನು ಕಡಿತಗೊಳಿಸಲಾಗಿದೆಯೆಂಬುದು ಒಂದು ಹುರುಳು, ಮತ್ತು ಅದರ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಲಾಗಿದೆ ಎಂಬುದು ಇನ್ನೊಂದು ಹುರುಳು. ಈ ಮೂರು ಬಗೆಯ ಹುರುಳುಗಳ ಇರುವಿಕೆಯನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (1ಕ) ಯಾರನ್ನೇ ಕರೆಯಿರಿ, ನಾನು ಮಾತನಾಡುತ್ತೇನೆ. (1ಚ) ನೀವು ಯಾವುದನ್ನೇ ಕೇಳಿ, ನಾನು ಕೊಡುತ್ತೇನೆ.

(1ಟ) ಅವನು ಎಲ್ಲಿಗೇನೇ ಹೋಗಲಿ, ನನ್ನ ಕಯ್ಯಿಂದ ತಪ್ಪಿಸಿಕೊಳ್ಳಲಾರ. (1ಕ)ದಲ್ಲಿ ಬಂದಿರುವ ಯಾರನ್ನೇ ಎಂಬುದು ಕರೆಯಬೇಕಾಗಿರುವುದು ಒಬ್ಬ ವ್ಯಕ್ತಿಯನ್ನು ಎಂಬುದಾಗಿ ತಿಳಿಸುತ್ತದೆಯಾದರೂ ಆತ ಯಾರು ಎಂಬುದನ್ನು ತೀರ್ಮಾನಿಸುವ ಕೆಲಸವನ್ನು ಕೇಳುಗನಿಗೆ ಬಿಟ್ಟುಕೊಡುತ್ತದೆ; ಹಾಗಾಗಿ, ಆಡುಗನ ಮಟ್ಟಿಗೆ ಅದು ತಿಳಿಯದ ವ್ಯಕ್ತಿ; (1ಚ)ದಲ್ಲಿ ಬಂದಿರುವ ಯಾವುದನ್ನೇ ಮತ್ತು (1ಟ)ದಲ್ಲಿ ಬಂದಿರುವ ಎಲ್ಲಿಗೇನೇ ಎಂಬ ಪದಗಳೂ ಇದೇ ರೀತಿಯಲ್ಲಿ ಆಡುಗನಿಗೆ ತಿಳಿಯದ ಮತ್ತು ಕೇಳುಗನು (ಇಲ್ಲವೇ ಬೇರೊಬ್ಬ ವ್ಯಕ್ತಿ) ಆರಿಸಬೇಕಾಗಿರುವ ಪಾಂಗುಗಳ ಇರುವಿಕೆಯನ್ನು ತಿಳಿಸುತ್ತವೆ. ಯಾರನ್ನೇ ಕೇಳಿ ಎಂಬುದಕ್ಕೆ ಎಲ್ಲರನ್ನೂ ಕೇಳಿ ಎಂಬುದರ ಹುರುಳಿಲ್ಲ ಎಂಬುದನ್ನು ಗಮನಿಸಬಹುದು; ಕೇಳಬೇಕಾಗಿರುವುದು ಒಬ್ಬ ವ್ಯಕ್ತಿಯನ್ನು ಮಾತ್ರ; ಅದು ಯಾರೆಂಬುದರ ಆಯ್ಕೆಯನ್ನು ಇಲ್ಲಿ ಕೇಳುಗನಿಗೆ ಬಿಟ್ಟುಕೊಡಲಾಗಿದೆ. ಈ ರೀತಿ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಲಾಗಿದೆ ಎಂಬುದನ್ನು ಒತ್ತಿಹೇಳಲು ತಿಳಿಯದ ತೋರುಪದದೊಂದಿಗೆ ಬೇಕಿದ್ದರೂ ಇಲ್ಲವೇ ಬೇಕಾದರೂ ಎಂಬುದನ್ನೂ ಬಳಸಲು ಬರುತ್ತದೆ: (1ಕ) ಯಾರನ್ನು ಬೇಕಿದ್ದರೂ ಕರೆಯಿರಿ, ನಾನು ಅವನ ಹತ್ತಿರ ಮಾತನಾಡುತ್ತೇನೆ. (1ಚ) ನೀವು ಯಾವುದನ್ನು ಬೇಕಾದರೂ ಕೇಳಿ, ನಾನು ಕೊಡುತ್ತೇನೆ. (1ಟ) ಅವನು ಎಲ್ಲಿಗೆ ಬೇಕಾದರೂ ಹೋಗಲಿ, ನನ್ನಿಂದ ತಪ್ಪಿಸಿಕೊಳ್ಳಲಾರ. (4) ಆದರೆ+ಊ ಎಂಬುದರ ಬಳಕೆ: ತಿಳಿಸದ ತೋರುಪದಗಳೊಂದಿಗೆ ಆದರೆ ಎಂಬ ಪದವನ್ನು ಮತ್ತು ಕೂಡಿಕೆಯ ಹುರುಳಿರುವ ಊ ಒಟ್ಟನ್ನು ಸೇರಿಸಿರುವ ನುಡಿತವನ್ನು ಹಲವಾರು ಕಡೆಗಳಲ್ಲಿ ಬಳಸಲಾಗುತ್ತದೆ; ಹೆಸರುಪದಗಳೊಂದಿಗೂ ಈ ನುಡಿತವನ್ನು ಬಳಸಲು ಬರುತ್ತಿದ್ದು, ಊ ಒಟ್ಟನ್ನು ಮಾತ್ರವೇ ಬಳಸಿರುವಲ್ಲಿ ಕಾಣಿಸುವ ಹಾಗೆ, ಅದನ್ನು ಎರಡು ಹೆಸರುಪದಗಳ ನಡುವಿನ ಕೊಂಡಿಯಾಗಿ ಬಳಸುವ ಬದಲು, ಒಂದೇ ಹೆಸರುಪದದೊಂದಿಗೆ ಬಳಸಲಾಗುತ್ತದೆ, ಮತ್ತು ಇದಕ್ಕೆ ಕೂಡಿಕೆಯ ಹುರುಳಿಲ್ಲ: (1ಕ) ಹುಡುಗ ಮನೆಗೆ ಹೋಗಲಿ. (1ಚ) ಹುಡುಗನಾದರೂ ಮನೆಗೆ ಹೋಗಲಿ.

(1ಕ)ದಲ್ಲಿ ಬೇರೆಯವರ ವಿಶಯವೇನೂ ಹೇಳಿಲ್ಲ; ಆದರೆ, (1ಚ)ದಲ್ಲಿ ಆದರೂ ಎಂಬುದನ್ನು ಬಳಸಿರುವ ಕಾರಣ, ಬೇರೆಯವರು ಹೋಗದಿದ್ದರೂ ಹುಡುಗ ಹೋಗಲಿ ಎಂಬ ಹುರುಳು ಸಿಗುತ್ತದೆ; ಇದನ್ನೇ ಒಂದು ಒಳಸೊಲ್ಲಿನ ಮೂಲಕವೂ ತಿಳಿಸಲು ಬರುತ್ತದೆ: (2ಕ) ಸಾವಿರ ಇಲ್ಲದಿದ್ದರೆ ಅಯ್ನೂರಾದರೂ ಕೊಡಲಿ. ಆದರೂ ಎಂಬ ನುಡಿತವನ್ನು ತಿಳಿಯದ ತೋರುಪದಗಳಿಗೆ ಸೇರಿಸಿರುವಲ್ಲೂ ಕೂಡಿಕೆಯ ಹುರುಳನ್ನು ಅಲ್ಲಗಳೆಯುವಂತಹ ಈ ಹುರುಳು ಕಾಣಿಸಿಕೊಳ್ಳುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ನೋಡಬಹುದು: (1ಕ) ಮಯ್ಸೂರಿನಿಂದ ಅವನು ನಿನಗೆ ಏನಾದರೂ ತರಬಹುದು. (1ಚ) ಇವತ್ತು ಇಲ್ಲಿಗೆ ಯಾರಾದರೂ ಬಾರದೆ ಇರಲಿಕ್ಕಿಲ್ಲ. (1ಟ) ಆಕೆ ಯಾವುದಾದರೂ ಒಂದು ಹಾಡು ಹೇಳಲಿ. (1ತ) ಯಾವಾಗಲಾದರೂ ಈ ಕಡೆ ಬಂದರೆ ನಿಮ್ಮನ್ನು ಕಾಣುತ್ತೇನೆ. (1ಕ)ದಲ್ಲಿ ಬಂದಿರುವ ಏನಾದರೂ ಎಂಬುದಕ್ಕೆ ಕೂಡಿಕೆಯ ಹುರುಳಿಲ್ಲ; ಆಡುಗನಿಗೆ ತಿಳಿಯದಿರುವ ಒಂದು ವಸ್ತುವನ್ನು ಮಾತ್ರ ಅದು ತಿಳಿಸುತ್ತದೆ. ಇದಲ್ಲದೆ, ಆ ವಸ್ತುವಿನ ಇರುವಿಕೆಯ ಕುರಿತಾಗಿಯೂ ಅದು ಏನನ್ನೂ ಹೇಳುವುದಿಲ್ಲ. ಕೂಡಿಕೆಯ ವಿಶಯದಲ್ಲಿ ಅದರ ಬಳಕೆಗೂ ಊ ಒಟ್ಟಿನ ನೇರ ಬಳಕೆಗೂ ನಡುವಿರುವ ವ್ಯತ್ಯಾಸವನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ರಾಜು ಎಲ್ಲಿಗೂ ಹೋಗಬಹುದು. (1ಚ) ರಾಜು ಎಲ್ಲಿಗಾದರೂ ಹೋಗಬಹುದು. (1ಕ)ದಲ್ಲಿ ಬಂದಿರುವ ಎಲ್ಲಿಗೂ ಎಂಬುದಕ್ಕೆ ಕೂಡಿಕೆಯ ಹುರುಳಿದೆ; ಯಾಕೆಂದರೆ, ಹೋಗಬೇಕಾಗಿರುವ ಜಾಗ ಯಾವುದೇ ಇರಲಿ, ಅಲ್ಲಿಗೆ ರಾಜು ಹೋಗಬಲ್ಲ ಎಂಬ ಹುರುಳು (1ಕ) ಸೊಲ್ಲಿಗಿದೆ. ಆದರೆ, (1ಕ) ಸೊಲ್ಲಿಗೆ ಇಂತಹ ಹುರುಳಿಲ್ಲ; ರಾಜು ಹೋಗಬಹುದಾದ, ಮತ್ತು ಆಡುಗನಿಗೆ ತಿಳಿದಿಲ್ಲದ ಒಂದು ಜಾಗವನ್ನು ಮಾತ್ರ ಅದು ತಿಳಿಸುತ್ತದೆ. ಊ ಒಟ್ಟಿಗಿರುವ ಕೂಡಿಕೆಯ ಹುರುಳು ಅದರೊಂದಿಗೆ ಆದರೆ ಎಂಬುದನ್ನು ಬಳಸಿದಾಗ ಇಲ್ಲವಾಗಲು ಆದರೆ ಎಂಬುದು ಆಗು ಎಂಬ ಎಸಕಪದದ ಒಂದು ರೂಪವಾಗಿರುವುದೇ ಕಾರಣವಿರಬೇಕು.

10.6.2 ಆಡುಗನ ಅರಿಯಮೆಯನ್ನು ತಿಳಿಸುವಲ್ಲಿ ಕಟ್ಟುಪಾಡುಗಳು

ಮೇಲೆ ವಿವರಿಸಿದಂತಹ ನಾಲ್ಕು ಬಗೆಯ ನುಡಿತಗಳನ್ನು ಬಳಸುವಲ್ಲಿ ಕೆಲವು ಕಟ್ಟುಪಾಡುಗಳಿವೆ; ಇವು ಆ ನುಡಿತಗಳು ಎಂತಹ ಅರಿಯಮೆಯನ್ನು ತಿಳಿಸುತ್ತವೆ ಎಂಬುದರ ಮೇಲೆ ಅವಲಂಬಿಸಿವೆ. ಈ ಕಟ್ಟುಪಾಡುಗಳನ್ನು ವಿವರಿಸುವುದಕ್ಕಾಗಿ ಒಟ್ಟು ಆರು ಬಗೆಯ ಬಳಕೆಗಳನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ; ಈ ಬಳಕೆಗಳಲ್ಲಿ ಎಂತಹ ನುಡಿತಗಳು ಬರಬಲ್ಲುವು, ಮತ್ತು ಎಂತಹವು ಬರಲಾರವು ಎಂಬುದನ್ನು, ಮತ್ತು ಈ ಕಟ್ಟುಪಾಡುಗಳಿಗೆ ಕಾರಣವೇನು ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ತಿಳಿಸುವ ಸೊಲ್ಲುಗಳಲ್ಲಿ ಬಳಕೆ: ತಿಳಿಸುವ ಸೊಲ್ಲುಗಳು ಹಿಂದೆ ನಡೆದ, ಈಗ ನಡೆಯುತ್ತಿರುವ, ಇಲ್ಲವೇ ಮುಂದೆ ಕಚಿತವಾಗಿಯೂ ನಡೆಯಲಿರುವ ಎಸಕಗಳ ಕುರಿತಾಗಿ ಕೇಳುಗನಿಗೆ ತಿಳಿವನ್ನು ಕೊಡುತ್ತವೆ; ಹಾಗಾಗಿ, ಅಂತಹ ಸೊಲ್ಲುಗಳಲ್ಲಿ ಯಾವುದಾದರೂ ಒಂದು ಪಾಂಗನ್ನು ಗುರುತಿಸಬೇಕಿದ್ದಲ್ಲಿ, ಅದರ ಇರುವಿಕೆಯನ್ನು ಆಡುಗನು ಒಪ್ಪಿಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಆ ಮನೆಯಲ್ಲಿ ಒಂದು ದೆವ್ವ ಇದೆ. (1ಚ) ಆ ಮನೆಯಲ್ಲಿ ಒಂದು ದೆವ್ವ ಇದೆಯಂತೆ. (1ಕ) ಸೊಲ್ಲಿನಲ್ಲಿ ಮನೆ ಮತ್ತು ದೆವ್ವ ಎಂಬ ಎರಡು ಹೆಸರುಪದಗಳನ್ನು ಬಳಸಲಾಗಿದ್ದು, ಅವುಗಳ ಮೂಲಕ ಎರಡು ಪಾಂಗುಗಳನ್ನು ಗುರುತಿಸಲಾಗಿದೆ; ಇದೊಂದು ತಿಳಿಸುವ ಸೊಲ್ಲಾಗಿರುವ ಕಾರಣ, ಅದನ್ನು ಬಳಸಿರುವ ಆಡುಗನು ಆ ಎರಡು ಪಾಂಗುಗಳ ಇರುವಿಕೆಯನ್ನು ಒಪ್ಪಿಕೊಂಡ ಹಾಗಾಗುತ್ತದೆ. ಆಡುಗನಿಗೆ ಇದು ಒಪ್ಪಿಗೆಯಿಲ್ಲವಾದರೆ, (1ಚ)ದಲ್ಲಿ ಕೊಟ್ಟಿರುವಂತಹ ಸೊಲ್ಲನ್ನು ಆತನು ಬಳಸಬಹುದು; ಇದರಲ್ಲಿ ಒಂದು ಒಳಸೊಲ್ಲಿದ್ದು, ಅದನ್ನು ಹೇಳಿರುವ ಆಡುಗ ತಾನಲ್ಲ, ಬೇರೊಬ್ಬ ಎಂಬುದಾಗಿ ಆತ (1ಚ) ಸೊಲ್ಲಿನ ಕೊನೆಯಲ್ಲಿ ಬರುವ ಅಂತೆ ಎಂಬ ಪದದ ಮೂಲಕ ತಿಳಿಸಿರುತ್ತಾನೆ. ಇಂತಹ ಸೊಲ್ಲಿನಲ್ಲಿ ಪಾಂಗಿನ ಇರುವಿಕೆಯನ್ನು ಅದರ ಆಡುಗ ಒಪ್ಪಿರುವುದಿಲ್ಲ; ಹಾಗಿದ್ದರೂ, ಬೇರೊಬ್ಬ (ಒಳಸೊಲ್ಲಿನ ಆಡುಗ) ಅದನ್ನು ಒಪ್ಪಿರುತ್ತಾನೆ. ತಿಳಿಸುವ ಸೊಲ್ಲುಗಳಲ್ಲಿ ಆಡುಗನಿಗೆ ತಿಳಿಯದಿರುವಂತಹ ಒಂದು ಪಾಂಗನ್ನು ಬಳಸಬೇಕಿದ್ದರೂ, ಅದರ ಇರುವಿಕೆಯನ್ನು ಆತನಿಗೆ (ಇಲ್ಲವೇ ಬೇರೊಬ್ಬನಿಗೆ) ಒಪ್ಪಿಕೊಳ್ಳಲು ಬರುವಂತಿರಬೇಕು. ಮೇಲೆ (10.4.1)ರಲ್ಲಿ ವಿವರಿಸಿದ ಹಾಗೆ, ತಿಳಿಯದ ತೋರುಪದಗಳಿಗೆ ಓ ಒಟ್ಟನ್ನು ಸೇರಿಸಿರುವ ಏನೋ, ಯಾರೋ,

ಎಲ್ಲಿಗೋ, ಎಶ್ಟೋ ಮೊದಲಾದ ನುಡಿತಗಳು ಮಾತ್ರ ಪಾಂಗಿನ ಇರುವಿಕೆಯನ್ನು ತಿಳಿಸುತ್ತವೆ; ಉಳಿದ ನುಡಿತಗಳು (ಏನೂ, ಏನೇ ಮತ್ತು ಏನಾದರೂ ಎಂಬಂತಹವು) ತಿಳಿಸುವುದಿಲ್ಲ. ಹಾಗಾಗಿ, ಓ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಮಾತ್ರ ತಿಳಿಸುವ ಸೊಲ್ಲುಗಳಲ್ಲಿ ಬಳಕೆಯಾಗಬಲ್ಲುವು: (1ಕ) ಪೋಲೀಸರಿಗೆ ಅವರ ಮನೆಯಲ್ಲಿ ಏನೋ ಸಿಕ್ಕಿದೆ. (1ಚ) ಅವನನ್ನು ಯಾರೋ ಕರೆದಿದ್ದರು. (1ಟ) ಅವನು ಯಾವುದನ್ನೋ ಹುಡುಕುತ್ತಿದ್ದಾನೆ. (1ತ) ಅವರು ನಾಳೆ ಎಲ್ಲಿಗೋ ಹೋಗುತ್ತಾನೆ. (1ಪ) ಅವರು ಮನೆಗೆ ಯಾವಾಗಲೋ ಹೋಗಿಬಿಟ್ಟಿದ್ದಾರೆ. ಉಳಿದ ಮೂರು ಬಗೆಯ ನುಡಿತಗಳು ಇಂತಹ ತಿಳಿಸುವ ಸೊಲ್ಲುಗಳಲ್ಲಿ ಬರಲಾರವೆಂಬುದಕ್ಕೆ ಕೆಳಗೆ ಕೊಟ್ಟಿರುವ ಮೂರು ಸರಿಯಲ್ಲದ ಸೊಲ್ಲುಗಳನ್ನು ಎತ್ತುಗೆಯಾಗಿ ಕೊಡಬಹುದು: (1ಕ) *ಅವರ ಮನೆಗೆ ಯಾರೂ ಬಂದಿದ್ದರು. (1ಚ) *ಅವರನ್ನು ಯಾರೇ ಕರೆದರು. (1ಟ) *ಅವರ ಮನೆಗೆ ಯಾರಾದರೂ ಬಂದಿದ್ದಾರೆ. ಪರಿಚೆಪದಗಳಾಗಿ ಬರುವ ಉಳಿದ ತಿಳಿಯದ ತೋರುಪದಗಳೂ ಇಂತಹ ಸೊಲ್ಲುಗಳಲ್ಲಿ ಓ ಒಟ್ಟಿನೊಂದಿಗೆ ಮಾತ್ರ ಬಳಕೆಯಾಗಬಲ್ಲುವು: (1ಕ) ಅವನು ನನಗೆ ಎಶ್ಟೋ ಬಾರಿ ನೆರವು ನೀಡಿದ್ದಾನೆ. (1ಚ) ಬಾಗಿಲನ್ನು ಹೇಗೋ ತೆಗೆಯಲು ಬಂತು. (1ಟ) ಯಾವ ಹುಡುಗನನ್ನೋ ಅವನು ಶಾಲೆಗೆ ಕರೆತಂದಿದ್ದಾನೆ. (1ತ) ಎಂತಹ ಹಾಡನ್ನೋ ಆತ ಗುಣುಗುಣಿಸುತ್ತಿದ್ದಾನೆ. ತಿಳಿಸುವ ಎಸಕಪದಗಳಲ್ಲಿ ಕೆಲವನ್ನು ಬಳಕೆಯಲ್ಲಿರುವ ಎಸಕವನ್ನು ತಿಳಿಸುವುದಕ್ಕಾಗಿಯೂ ಬಳಸಲು ಬರುತ್ತದೆ ಎಂಬುದನ್ನು (5.6.3)ರಲ್ಲಿ ವಿವರಿಸಲಾಗಿದೆ. ಇಂತಹ ಬಳಕೆಯ ಹುರುಳಿರುವ ಸೊಲ್ಲುಗಳು ಒಂದು ಕಚಿತವಾಗಿಯೂ ನಡೆಯುವ ಇಲ್ಲವೇ ನಡೆದ ಎಸಕವನ್ನು ತಿಳಿಸುವುದಿಲ್ಲ; ಹಾಗಾಗಿ, ಅವುಗಳಲ್ಲಿ ಪಾಂಗಿನ ಇರುವಿಕೆಯನ್ನು ತಿಳಿಸದಿದ್ದರೂ, ಆಡುಗನಿಗೆ ತಿಳಿಯದ ಯಾವುದೋ ಒಂದು ಪಾಂಗನ್ನು ಗುರುತಿಸುವಂತಹ ಆದರೂ ಎಂಬುದರೊಂದಿಗಿರುವ ನುಡಿತವನ್ನು ಬಳಸಲು ಬರುತ್ತದೆ:

(1ಕ) ಇಶ್ಟು ಹೊತ್ತಿಗೆ ಅವನು ಏನಾದರೂ ಮಾಡುತ್ತಿರುತ್ತಾನೆ. (1ಚ) ಅವನು ಇಲ್ಲಿಗೆ ಬರುವಾಗಲೆಲ್ಲ ಯಾರನ್ನಾದರೂ ಕರೆತರುತ್ತಾನೆ. (1ಟ) ಬಸ್ಸಿನಲ್ಲಿ ಹೋಗುವಾಗ ಆತ ಏನನ್ನಾದರೂ ಓದುತ್ತಿದ್ದ. (1ತ) ಮನೆಗೆ ಹೊರಟಾಗಲೆಲ್ಲ ಆತನನ್ನು ಕಾಣಲು ಯಾರಾದರೂ ಬರುತ್ತಿದ್ದರು. ಆದರೆ, ನೇರವಾಗಿ ಊ ಒಟ್ಟಿನೊಂದಿಗೆ ಮತ್ತು ಏ ಒಟ್ಟಿನೊಂದಿಗೆ ಬರುವ ತಿಳಿಯದ ತೋರುಪದಗಳು ಇಂತಹ ಸೊಲ್ಲುಗಳಲ್ಲೂ ಬರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಈ ಎರಡು ಬಗೆಯ ನುಡಿತಗಳನ್ನು ಬಳಸಿರುವಲ್ಲೂ ಯಾವುದಾದರೂ ಒಂದು ಪಾಂಗನ್ನು ಗುರುತಿಸಲಾಗುವುದಿಲ್ಲ: ಊ ಒಟ್ಟಿನೊಂದಿಗೆ ಬರುವ ನುಡಿತಗಳನ್ನು ಬಳಸಿರುವಲ್ಲಿ ಆಡುಗನು ಆಯ್ಕೆಯನ್ನು ನಡೆಸಿರುವುದಿಲ್ಲ, ಮತ್ತು ಏ ಒಟ್ಟಿನೊಂದಿಗೆ ಬರುವ ನುಡಿತಗಳನ್ನು ಬಳಸಿರುವಲ್ಲಿ ಆಯ್ಕೆಯನ್ನು ಕೇಳುಗನಿಗೆ ಇಲ್ಲವೇ ಬೇರೊಬ್ಬನಿಗೆ ಬಿಟ್ಟುಕೊಡಲಾಗಿರುತ್ತದೆ. ಓ ಒಟ್ಟಿನೊಂದಿಗೆ ಬರುವ ತಿಳಿಯದ ತೋರುಪದಗಳೂ ಇಂತಹ ಸೊಲ್ಲುಗಳಲ್ಲಿ ಬರುವುದಿಲ್ಲ; ಅದು ಒಂದು ಪಾಂಗಿನ ಇರುವಿಕೆಯನ್ನು ತಿಳಿಸುತ್ತಿದ್ದು, ಆ ಪಾಂಗು ಯಾವುದೆಂಬುದು ಆಡುಗನಿಗೆ ತಿಳಿದಿಲ್ಲದಿರುವುದೇ ಅವು ಇಂತಹ ಬಳಕೆಯ ಹುರುಳಿರುವ ಸೊಲ್ಲುಗಳಲ್ಲಿ ಬಾರದಿರುವುದಕ್ಕೆ ಕಾರಣವಿರಬೇಕು: (1ಕ) *ಇಲ್ಲಿಗೆ ಬರುವಾಗಲೆಲ್ಲ ಅವನು ಯಾರನ್ನೂ ಕರೆತರುತ್ತಾನೆ. (1ಚ) *ಇಲ್ಲಿಗೆ ಬರುವಾಗಲೆಲ್ಲ ಅವನು ಯಾರನ್ನೇ ಕರೆತರುತ್ತಾನೆ. (1ಟ) *ಇಲ್ಲಿಗೆ ಬರುವಾಗಲೆಲ್ಲ ಅವನು ಯಾರನ್ನೋ ಕರೆತರುತ್ತಾನೆ. (2) ಕೇಳ್ವಿಗಳಲ್ಲಿ ಬಳಕೆ: ತಿಳಿಯದ ತೋರುಪದಗಳಿರುವವು ಮತ್ತು ಇಲ್ಲದಿರುವವು ಎಂಬುದಾಗಿ ಕನ್ನಡದಲ್ಲಿ ಮುಕ್ಯವಾಗಿ ಎರಡು ಬಗೆಯ ಕೇಳ್ವಿಗಳು ಬಳಕೆಯಲ್ಲಿವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಕೇಳ್ವಿಗಳನ್ನು ಗಮನಿಸಬಹುದು: (1ಕ) ಹುಡುಗ ಎಲ್ಲಿಗೆ ಹೋಗಿದ್ದಾನೆ? (1ಚ) ಹುಡುಗ ಮನೆಗೆ ಹೋಗಿದ್ದಾನೋ?

(1ಕ) ಕೇಳ್ವಿಯಲ್ಲಿ ಎಲ್ಲಿಗೆ ಎಂಬ ತೋರುಪದ ಬಂದಿದೆ; ಆದರೆ, (1ಚ) ಕೇಳ್ವಿಯಲ್ಲಿ ಅಂತಹ ಯಾವ ತೋರುಪದವೂ ಬಂದಿಲ್ಲ; ಇದಕ್ಕೆ ಬದಲು, ಸೊಲ್ಲಿನ ಕೊನೆಯಲ್ಲಿ ಓ ಎಂಬ ಒಟ್ಟು ಬಂದಿದೆ. ಈ ಎರಡು ಬಗೆಯ ಕೇಳ್ವಿಗಳನ್ನು ತೋರುಕೇಳ್ವಿ ಮತ್ತು ಸೊಲ್ಲುಕೇಳ್ವಿ ಎಂಬುದಾಗಿ ಹೆಸರಿಸಬಹುದು. ತೋರುಕೇಳಿಗಳಲ್ಲಿ ಆಡುಗನು ತನಗೆ ತಿಳಿಯದಿರುವ ಒಂದು ಪಾಂಗನ್ನು ಕೇಳುಗನ ಗಮನಕ್ಕೆ ತಂದು, ಅದರ ಕುರಿತಾಗಿ ಒಂದು ಕೇಳ್ವಿಯನ್ನು ಆತನ ಮುಂದಿರಿಸುತ್ತಾನೆ; ಎತ್ತುಗೆಗಾಗಿ, ಹುಡುಗ ಹೋಗಿರುವ ಜಾಗ ಯಾವುದೆಂದು ತಿಳಿಯದು ಎಂಬುದನ್ನು ಎಲ್ಲಿಗೆ ಎಂಬ ಪದದಿಂದ ಕೇಳುಗನ ಗಮನಕ್ಕೆ ತಂದು, ಅದರ ಕುರಿತಾಗಿ (1ಕ) ಕೇಳ್ವಿಯನ್ನು ಕೇಳಲಾಗಿದೆ. ಇದಕ್ಕೆ ಬದಲು, ಸೊಲ್ಲುಕೇಳ್ವಿಗಳಲ್ಲಿ ಒಂದು ಇಡೀ ಸೊಲ್ಲಿನ ಕುರಿತಾಗಿ ಅದು ಸರಿಯೋ ತಪ್ಪೋ ಎಂಬುದನ್ನು ಕೇಳುಗನಿಂದ ತಿಳಿದುಕೊಳ್ಳಲು ಆ ಸೊಲ್ಲನ್ನು ಆತನ ಮುಂದಿರಿಸಲಾಗುತ್ತದೆ; ಎತ್ತುಗೆಗಾಗಿ, ಹುಡುಗ ಮನೆಗೆ ಹೋಗಿದ್ದಾನೆ ಎಂಬ ಒಂದು ಇಡೀ ಸೊಲ್ಲಿನ ಕುರಿತಾಗಿ, ಅದು ಸರಿಯೋ ತಪ್ಪೋ ಎಂಬುದನ್ನು ಕೇಳುಗನಿಂದ ತಿಳಿದುಕೊಳ್ಳುವುದಕ್ಕಾಗಿ (1ಚ)ದಲ್ಲಿ ಆ ಸೊಲ್ಲಿಗೆ ಓ ಒಟ್ಟನ್ನು ಸೇರಿಸಿ ಅದನ್ನು ಆತನ ಮುಂದಿರಿಸಲಾಗಿದೆ. ಸೊಲ್ಲುಕೇಳ್ವಿಗಳಲ್ಲಿ ಒಂದು ಇಡೀ ಸೊಲ್ಲಿನ ಕುರಿತಾಗಿ ಕೇಳ್ವಿಯನ್ನು ಕೇಳಲಾಗುತ್ತಿದೆಯಾದ ಕಾರಣ, ಅದರ ಯಾವುದೇ ಒಂದು ಪಾಂಗಿನ ಕುರಿತಾಗಿಯೂ ಆಡುಗನಿಗೆ ತನ್ನ ಅರಿಯಮೆಯನ್ನು ತಿಳಿಸಲು ಬರುತ್ತದೆ; ಆದರೆ, ಆತನಿಗೆ ಅದರ ಕುರಿತಾಗಿ ತಿಳಿವನ್ನು ಪಡೆಯುವ ಬಯಕೆಯಿರುವುದಿಲ್ಲ; ಇಡೀ ಸೊಲ್ಲು ಸರಿಯೋ ತಪ್ಪೋ ಎಂಬುದನ್ನು ಮಾತ್ರ ಆತನು ಕೇಳುಗನಿಂದ ತಿಳಿಯಲು ಬಯಸುತ್ತಾನೆ. ಇದಲ್ಲದೆ, ಆದರೂ ಎಂಬುದನ್ನು ಸೇರಿಸಿರುವಂತಹ ತಿಳಿಯದ ತೋರುಪದಗಳನ್ನು ಮಾತ್ರ ಇಂತಹ ಸೊಲ್ಲುಕೇಳ್ವಿಗಳಲ್ಲಿ ಬಳಸಲು ಬರುತ್ತದೆ: (1ಕ) ಅವನು ಈ ಹುಡುಗಿಗೆ ಏನಾದರೂ ಕೊಟ್ಟಿದ್ದಾನೋ? (1ಚ) ಈ ಬಾಗಿಲನ್ನು ನೀವು ಎಂದಾದರೂ ತೆರೆದಿದ್ದೀರೋ? (1ಟ) ಅವನು ಎಶ್ಟಾದರೂ ಕೊಟ್ಟಿದ್ದಾನೋ? (1ತ) ನೀವು ಯಾವ ಹುಡುಗನನ್ನಾದರೂ ಬರಹೇಳಿದ್ದೀರೋ? (1ಪ) ಅವನು ಹೇಗಾದರೂ ಒಳಗೆ ಬಂದಿದ್ದಾನೋ? ಸೊಲ್ಲುಕೇಳ್ವಿಗಳಲ್ಲಿ ಊ, ಏ ಇಲ್ಲವೇ ಓ ಒಟ್ಟುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಲಾರವೆಂಬುದನ್ನು ತೋರಿಸುವುದಕ್ಕಾಗಿ ಕೆಲವು ಸರಿಯಲ್ಲದ ಸೊಲ್ಲುಗಳನ್ನು ಎತ್ತುಗೆಯಾಗಿ ಕೆಳಗೆ ಕೊಡಲಾಗಿದೆ:

(1ಕ) *ಅವನು ಈ ಹುಡುಗಿಗೆ ಏನೂ ಕೊಟ್ಟಿದ್ದಾನೋ? (1ಚ) *ಅವನು ಎಲ್ಲಿಗೇ ಹೋಗಿದ್ದಾನೋ? (1ಟ) *ಅವನು ಎಲ್ಲಿಗೋ ಹೋಗಿದ್ದಾನೋ? *ಅವನು ಈ ಹುಡುಗಿಗೆ ಏನೂ ಕೊಟ್ಟಿದ್ದಾನೆ ಎಂಬ ಸೊಲ್ಲೇ ಸರಿಯಲ್ಲ, ಮತ್ತು ಹಾಗಾಗಿ ಅದು ಎಂತಹ ಹುರುಳನ್ನೂ ಕೊಡುವುದಿಲ್ಲ; ಅದು ಸರಿಯೋ ತಪ್ಪೋ ಎಂಬುದನ್ನು ಕೇಳುಗನಿಂದ ಕೇಳಿ ತಿಳಿಯಲು ಬಳಕೆಯಾಗಿರುವ (1ಕ) ಕೇಳ್ವಿ ಈ ಕಾರಣಕ್ಕಾಗಿ ಸರಿಯಾಗಿಲ್ಲ; (1ಚ) ಕೇಳ್ವಿಯೂ ಇದೇ ರೀತಿಯಲ್ಲಿ *ಅವನು ಎಲ್ಲಿಗೇ ಹೋಗಿದ್ದಾನೆ ಎಂಬ ಇನ್ನೊಂದು ಸರಿಯಲ್ಲದ ಸೊಲ್ಲಿನ ಕುರಿತಾಗಿ ಬಂದಿದೆ, ಮತ್ತು ಇದರಿಂದಾಗಿ ಆ ಕೇಳ್ವಿಯೂ ಸರಿಯಾಗಿಲ್ಲ. ಅವನು ಎಲ್ಲಿಗೋ ಹೋಗಿದ್ದಾನೆ ಎಂಬ ಸರಿಯಾಗಿರುವ ಸೊಲ್ಲಿನ ಕುರಿತಾಗಿಯೇ (1ಟ) ಕೇಳ್ವಿ ಬಂದಿದೆಯಾದರೂ, ಎಲ್ಲಿಗೋ ಎಂಬುದು ಆಡುನಿಗೆ ತಿಳಿಯದಿರುವ ಒಂದು ಪಾಂಗಿನ ಇರುವಿಕೆಯನ್ನು ತಿಳಿಸುತ್ತಿದೆಯಾದ ಕಾರಣ, ಅದನ್ನೊಳಗೊಂಡಿರುವ ಸೊಲ್ಲು ಸರಿಯೋ ತಪ್ಪೋ ಎಂಬುದನ್ನು ಕೇಳುಗನಿಗೆ ತೀರ್ಮಾನಿಸಲು ಬರುವುದಿಲ್ಲ; ಹಾಗಾಗಿ, ಆ ಕೇಳ್ವಿ ಸರಿಯಿಲ್ಲ. ಇದರ ಬದಲು, *ಅವನು ಎಲ್ಲಿಗಾದರೂ ಹೋಗಿದ್ದಾನೆ ಎಂಬ ಸೊಲ್ಲು ಸರಿಯಿಲ್ಲವಾದರೂ, ಅದರಲ್ಲಿ ಬಂದಿರುವ ಎಲ್ಲಿಗಾದರೂ ಎಂಬುದು ಆಡುಗನಿಗೆ ತಿಳಿಯದಿರುವ ಒಂದು ಪಾಂಗಿನ ಇರುವಿಕೆಯನ್ನು ತಿಳಿಸುವುದಿಲ್ಲ; ಹಾಗಾಗಿ, ಅಂತಹ ಇರುವಿಕೆಯನ್ನು ಕೇಳುಗನು ಆಯ್ದುಕೊಳ್ಳಬಲ್ಲನಾದ ಕಾರಣ, ಅದನ್ನೊಳಗೊಂಡಿರುವ ಕೆಳಗೆ ಕೊಟ್ಟಿರುವ (1ತ) ಕೇಳ್ವಿ ಸರಿಯಾಗಿದೆ: (1ತ) ಅವನು ಎಲ್ಲಿಗಾದರೂ ಹೋಗಿದ್ದಾನೋ? ತೋರುಕೇಳ್ವಿಗಳಲ್ಲಿಯೂ ಮೇಲಿನ ನುಡಿತಗಳಲ್ಲಿ ಕೆಲವನ್ನು ಬಳಸಲು ಬರುತ್ತದೆ; ಆದರೆ, ಅಂತಹ ನುಡಿತಗಳಿರುವ ತಿಳಿಸುವ ಸೊಲ್ಲುಗಳ ಒಂದು ಪಾಂಗಿನ ಕುರಿತಾಗಿ ಹೆಚ್ಚಿನ ತಿಳಿವನ್ನು ಪಡೆಯಬೇಕಿರುವಲ್ಲಿ ಮಾತ್ರ ಇವನ್ನು ಬಳಸಲು ಬರುವ ಹಾಗೆ ಕಾಣಿಸುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವರು ಎಲ್ಲಿಗೋ ಹೋಗಿದ್ದಾರೆ. (1ಚ) ಯಾರು ಎಲ್ಲಿಗೋ ಹೋಗಿದ್ದಾರೆ? (2ಕ) ಅವರು ಎಲ್ಲಿಗೂ ಹೋಗಬಹುದು. (2ಚ) ಯಾರು ಎಲ್ಲಿಗೂ ಹೋಗಬಹುದು? (3ಕ) ಯಾರಾದರೂ ನಿಮಗೊಂದು ಪುಸ್ತಕ ಕೊಡಬಹುದು.

(3ಚ) ಯಾರಾದರೂ ನನಗೆ ಏನು ಕೊಡಬಹುದು? ಓ, ಊ ಮತ್ತು ಆದರೂ ಎಂಬವುಗಳೊಂದಿಗೆ ಬಂದಿರುವ, ಮತ್ತು ಆಡುಗನ ಅರಿಯಮೆಯನ್ನು ತಿಳಿಸುವ ನುಡಿತಗಳು ಮೇಲಿನ (ಚ) ತೋರುಕೇಳ್ವಿಗಳಲ್ಲಿ ಬಂದಿರುವುದನ್ನು ಕಾಣಬಹುದು; ಈ ಎಲ್ಲಾ ತೋರುಕೇಳ್ವಿಗಳೂ ಅಂತಹ ನುಡಿತಗಳಿರುವ (ಕ) ಸೊಲ್ಲುಗಳಲ್ಲಿ (ಇವೆಲ್ಲವೂ ತಿಳಿಸುವ ಸೊಲ್ಲುಗಳು) ಬಂದಿರುವ ಒಂದು ಪದದ ಕುರಿತಾಗಿ ಹೆಚ್ಚಿನ ತಿಳಿವನ್ನು ಪಡೆಯುವುದಕ್ಕಾಗಿ ಬಳಕೆಯಾಗಿವೆ ಎಂಬುದನ್ನೂ ಗಮನಿಸಬಹುದು. (3) ಆಡುಗನ ನಿಲುವನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಕೆ: ಒಂದು ಎಸಕದ ಕುರಿತಾಗಿ ಆಡುಗನ ನಿಲುವು ಎಂತಹದು ಎಂಬುದನ್ನು ತಿಳಿಸಲು ಸೊಲ್ಲಿನ ಎಸಕಪದಕ್ಕೆ ಬಹುದು, ಬಾರದು, ಬೇಕು, ತಕ್ಕದ್ದು, ಬಲ್ಲೆ ಮೊದಲಾದ ನೆರವೆಸಕಪದಗಳನ್ನು ಬಳಸಲಾಗುತ್ತದೆ, ಮತ್ತು ಈ ನೆರವೆಸಕಪದಗಳು ಆಡುಗನ ಅರಿವು, ಒತ್ತಾಸೆ ಮತ್ತು ಅಳವು ಎಂಬ ಮೂರು ವಿಶಯಗಳಲ್ಲಿ ಆಡುಗನ ನಿಲುವೇನು ಎಂಬುದನ್ನು ತಿಳಿಸುತ್ತವೆ ಎಂಬುದನ್ನು (5.5)ರಲ್ಲಿ ವಿವರಿಸಲಾಗಿದೆ. ಇಂತಹ ನೆರವೆಸಕಪದಗಳನ್ನು ಬಳಸಿರುವ ಸೊಲ್ಲುಗಳಲ್ಲಿ ಊ, ಓ, ಏ, ಇಲ್ಲವೇ ಆದರೂ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳಲ್ಲಿ ಕೆಲವನ್ನು ಬಳಸಲು ಬರುತ್ತದೆ; ಈ ಬಳಕೆಗಳ ಹಿಂದಿರುವ ಕಟ್ಟುಪಾಡುಗಳು ಎಂತಹವು ಎಂಬುದನ್ನು ಕೆಳಗೆ ವಿವರಿಸಲಾಗಿದೆ: (ಕ) ಆಡುಗನ ಅರಿವನ್ನು ತಿಳಿಸುವ ಸೊಲ್ಲುಗಳು: ಒಂದು ಎಸಕದ ಕುರಿತಾಗಿ ಆಡುಗನಿಗೆ ತನ್ನಲ್ಲಿರುವ ಎರಡು ಬಗೆಯ ಅರಿವುಗಳನ್ನು ತಿಳಿಸಲು ಬರುತ್ತದೆ: ಎಸಕದ ಕುರಿತಾಗಿ ಸಂಶಯವಿದೆ ಎಂಬುದನ್ನು ಬಹುದು ಪದವನ್ನು ಬಳಸುವುದರಿಂದ, ಮತ್ತು ಅಂತಹ ಸಂಶಯವೇನೂ ಇಲ್ಲ ಎಂಬುದನ್ನು ಬೇಕು ಪದವನ್ನು ಬಳಸುವುದರಿಂದ ಆತನು ತಿಳಿಸಬಲ್ಲನು: (1ಕ) ಅವನು ಇಶ್ಟು ಹೊತ್ತಿಗೆ ಮನೆಗೆ ಬಂದಿರಬಹುದು. (1ಚ) ಅವನು ಇಶ್ಟು ಹೊತ್ತಿಗೆ ಮನೆಗೆ ಬಂದಿರಬೇಕು. (1ಕ)ದಲ್ಲಿ ಬಹುದು ಎಂಬುದರ ಬಳಕೆಯಾಗಿದ್ದು, ಅವನು ಮನೆಗೆ ಬಂದಿರುವ ಕುರಿತು ಆಡುಗನಿಗೆ ಸಂಶಯವಿದೆ; ಆದರೆ, (1ಚ)ದಲ್ಲಿ ಬೇಕು ಎಂಬುದರ ಬಳಕೆಯಾಗಿದ್ದು, ಅಂತಹ ಸಂಶಯವಿಲ್ಲ.

(1) ಬಹುದು ಎಂಬುದರ ಬಳಕೆಯಾಗಿರುವ ಸೊಲ್ಲುಗಳಲ್ಲಿ ನೇರವಾಗಿ ಊ ಒಟ್ಟನ್ನು ಇಲ್ಲವೇ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನ ಹತ್ತಿರ ಆಕೆ ಏನೂ ಹೇಳಿರಬಹುದು. (1ಚ) ಅವನು ಯಾರನ್ನೂ ಮಾತನಾಡಿಸಿರಬಹುದು. (1ಟ) ಅವನು ಎಲ್ಲಿಗೂ ಹೋಗಿರಬಹುದು; ಹಾಗಾಗಿ, ಎಲ್ಲಿ ಎಂದು ಅವನನ್ನು ಹುಡುಕುವುದು? (1ತ) ಈ ಗಾಲಿಯನ್ನು ಹೇಗೂ ತಿರುಗಿಸಬಹುದು. (2ಕ) ಅವರ ಹತ್ತಿರ ಆಕೆ ಏನಾದರೂ ಹೇಳಿರಬಹುದು. (2ಚ) ಅವನು ಯಾರನ್ನಾದರೂ ಮಾತನಾದಿಸಿರಬಹುದು. (2ಟ) ಅವನು ಎಲ್ಲಿಗಾದರೂ ಹೋಗಿರಬಹುದು. (2ತ) ಈ ಗಾಲಿಯನ್ನು ಹೇಗಾದರೂ ತಿರುಗಿಸಬಹುದು. ಊ ಎಂಬುದರ ಬಳಕೆಯಲ್ಲಿ ಪಾಂಗಿನ ಹರವನ್ನು ಮಿತಿಗೊಳಿಸಿಲ್ಲ, ಮತ್ತು ಆದರೂ ಎಂಬುದರ ಬಳಕೆಯಲ್ಲಿ ಮಿತಿಗೊಳಿಸಿದೆ; ಇದೇ ವ್ಯತ್ಯಾಸವೇ (1ಕ-ತ) ಸೊಲ್ಲುಗಳಿಗೂ (2ಕ-ತ) ಸೊಲ್ಲುಗಳಿಗೂ ನಡುವೆ ಇದೆ ಎಂಬುದನ್ನು ಗಮನಿಸಬಹುದು. ಓ (ಇಲ್ಲವೇ ಏ) ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಇಂತಹ ಸೊಲ್ಲುಗಳಲ್ಲಿ ಬರಲಾರವು; ಓ ಒಟ್ಟು ಕೊಡುವ ಇರುವಿಕೆಯ ಹುರುಳು ಬಹುದು ಪದ ಕೊಡುವ ಸಂಶಯದ ಹುರುಳಿನೊಂದಿಗೆ ಸೇರಿಕೊಳ್ಳದಿರುವುದೇ ಈ ಕಟ್ಟುಪಾಡಿಗೆ ಕಾರಣವಿರಬೇಕು: (1ಕ) *ಅವನ ಹತ್ತಿರ ಆಕೆ ಏನೋ ಹೇಳಿರಬಹುದು. (1ಚ) *ಅವನ ಹತ್ತಿರ ಆಕೆ ಏನೇ ಹೇಳಿರಬಹುದು. (2) ಇದಕ್ಕೆ ಬದಲು, ಬೇಕು ಎಂಬುದನ್ನು ಬಳಸಿರುವ ಸೊಲ್ಲುಗಳಲ್ಲಿ ಓ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು: (1ಕ) ಅವನು ಇಲ್ಲೇ ಎಲ್ಲೋ ಇರಬೇಕು. (1ಚ) ಅವನು ಆಕೆಗೆ ಏನೋ ಹೇಳಿರಬೇಕು. (1ಟ) ಅವನು ಈ ಗಾಲಿಯನ್ನು ಹೇಗೋ ತಿರುಗಿಸಿರಬೇಕು.

ಆದರೆ, ಊ, ಆದರೂ, ಇಲ್ಲವೇ ಏ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ: (1ಕ) *ಅವನು ಆಕೆಗೆ ಏನೂ ಹೇಳಿರಬೇಕು. (1ಚ) *ಅವನು ಆಕೆಗೆ ಏನಾದರೂ ಹೇಳಿರಬೇಕು. (1ಟ) *ಅವನು ಆಕೆಗೆ ಏನೇ ಹೇಳಿರಬೇಕು. ಬಹುದು ಮತ್ತು ಬೇಕು ಪದಗಳನ್ನು ಅರಿವಿನ ಹುರುಳಿನಲ್ಲಿ ಮಾತ್ರವಲ್ಲದೆ, ಒತ್ತಾಸೆಯ ಹುರುಳಿನಲ್ಲೂ ಬಳಸಲು ಬರುತ್ತದೆ; ಮೇಲೆ ತಿಳಿಸಿದ ಕಟ್ಟುಪಾಡುಗಳು ಅರಿವಿನ ಹುರುಳಿನಲ್ಲಿ ಬರುವ ಅವುಗಳ ಬಳಕೆಗೆ ಮಾತ್ರ ಸಂಬಂದಿಸಿದವು; ಒತ್ತಾಸೆಯ ಬಳಕೆಯಲ್ಲಿ ಬೇರೆಯೇ ಕಟ್ಟುಪಾಡುಗಳಿವೆ ಎಂಬುದನ್ನು ಕೆಳಗೆ (ಚ)ದಲ್ಲಿ ವಿವರಿಸಲಾಗಿದೆ. (3) ಬಹುದು ಪದ ತಿಳಿಸುವಂತಹ ಅರಿವನ್ನು ಅಲ್ಲಗಳೆಯುವುದಕ್ಕಾಗಿ ಆರ್ ಪದವನ್ನು ನೆರವೆಸಕಪದವಾಗಿ ಬಳಸಲಾಗುತ್ತದೆ: (1ಕ) ಅವನು ಇಶ್ಟು ಹೊತ್ತಿಗೆ ಮನೆಗೆ ಬಂದಿರಲಾರ. (1ಚ) ಇದರಲ್ಲಿ ತಪ್ಪುಗಳು ಇರಲಾರವು. ಇಂತಹ ಪದಗಳಿರುವ ಸೊಲ್ಲುಗಳಲ್ಲಿ ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದಲ್ಲದೆ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುವುದಿಲ್ಲ: (1ಕ) ಅವನು ಎಲ್ಲಿಗೂ ಹೋಗಿರಲಾರ. (1ಚ) ಅವನು ಯಾರನ್ನೂ ಮಾತನಾಡಿಸಿರಲಾರ. (1ಟ) ನಾಳೆ ಇಶ್ಟು ಹೊತ್ತಿಗೆ ಅವನು ಎಲ್ಲಿಗೂ ಹೋಗಿರಲಾರ. (2ಕ) *ಅವನು ಎಲ್ಲಿಗಾದರೂ ಹೋಗಿರಲಾರ. (2ಚ) *ಅವನು ಯಾರನ್ನಾದರೂ ಮಾತನಾಡಿಸಿರಲಾರ. ಊ ಒಟ್ಟಿನೊಂದಿಗೆ ಆದರೆ ಎಂಬುದನ್ನು ಪಾಂಗಿನ ಹರವನ್ನು ಮಿತಿಗೊಳಿಸುವುದಕ್ಕಾಗಿ ಬಳಸಲಾಗುತ್ತದೆ; ಎಸಕಗಳನ್ನು ಅಲ್ಲಗಳೆಯುವಂತಹ ಮೇಲಿನ ಸೊಲ್ಲುಗಳಲ್ಲಿ ಪಾಂಗಿನ ಹುರುಳನ್ನು ಮಿತಿಗೊಳಿಸಬೇಕಾಗುವುದಿಲ್ಲವೆಂಬುದೇ ಅವುಗಳಲ್ಲಿ ಆದರೂ ಎಂಬುದರ ಬಳಕೆಯಾಗದಿರುವುದಕ್ಕೆ ಕಾರಣವಿರಬೇಕು.

ಇಂತಹ ಸೊಲ್ಲುಗಳಲ್ಲಿ ಓ ಮತ್ತು ಏ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನೂ ಬಳಸಲು ಬರುವುದಿಲ್ಲ: (1ಕ) *ಅವನು ಎಲ್ಲಿಗೋ ಹೋಗಿರಲಾರ. (1ಟ) *ಅವನು ಎಲ್ಲಿಗೇ ಹೋಗಿರಲಾರ. (ಚ) ಆಡುಗನ ಒತ್ತಾಸೆಯನ್ನು ತಿಳಿಸುವ ಸೊಲ್ಲುಗಳು: ಆಡುಗನ ಒತ್ತಾಸೆಯನ್ನು ತಿಳಿಸುವ ಸೊಲ್ಲುಗಳು ಕಡ್ಡಾಯ ಮತ್ತು ಒಪ್ಪಿಗೆ ಎಂಬ ಎರಡು ಹುರುಳುಗಳಲ್ಲಿ ಬರುತ್ತವೆ, ಮತ್ತು ಇದಕ್ಕಾಗಿ ಮೇಲೆ ವಿವರಿಸಿದಂತಹ ಬೇಕು ಮತ್ತು ಬಹುದು ಎಂಬ ನೆರವೆಸಕಪದಗಳನ್ನೇ ಬಳಸಲಾಗುತ್ತದೆ; ಹೆಚ್ಚಿನೆಡೆಗಳಲ್ಲೂ ಇವನ್ನು ಬಳಸಿರುವ ಸಂದರ್ಬದಿಂದಲೇ ಅವನ್ನು ಒತ್ತಾಸೆಯನ್ನು ತಿಳಿಸಲು ಬಳಸಲಾಗಿದೆಯೇ ಇಲ್ಲವೇ ಅರಿವನ್ನು ತಿಳಿಸಲು ಬಳಸಲಾಗಿದೆಯೇ ಎಂಬುದು ಗೊತ್ತಾಗುತ್ತದೆ (5.5.4 ನೋಡಿ): (1ಕ) ಇಶ್ಟು ಹೊತ್ತಿಗೆ ಅವನು ಮಯ್ಸೂರು ತಲಪಿರಬೇಕು. (1ಚ) ನೀವು ನಾಳೆ ಎಂಟು ಗಂಟೆಯೊಳಗೆ ಇಲ್ಲಿಗೆ ಬಂದಿರಬೇಕು. (2ಕ) ಅವರು ನಾಳೆ ನಾಲ್ಕು ಗಂಟೆಗೆ ಬರಬಹುದು. (2ಚ) ಈಗ ನೀವು ಮನೆಗೆ ಹೋಗಬಹುದು. (1ಕ) ಮತ್ತು (2ಕ) ಸೊಲ್ಲುಗಳು ಆಡುಗನ ಸಂಶಯವಿಲ್ಲದ ಮತ್ತು ಸಂಶಯವಿರುವ ಅರಿವುಗಳನ್ನು ತಿಳಿಸುತ್ತವೆ, ಮತ್ತು (1ಚ) ಮತ್ತು (2ಚ) ಸೊಲ್ಲುಗಳು ಆಡುಗನ ಕಡ್ಡಾಯ ಮತ್ತು ಒಪ್ಪಿಗೆಗಳೆಂಬ ಎರಡು ಬಗೆಯ ಒತ್ತಾಸೆಗಳನ್ನು ತಿಳಿಸುತ್ತವೆ ಎಂಬುದನ್ನು ಗಮನಿಸಬಹುದು. (1) ಕಡ್ಡಾಯವನ್ನು ತಿಳಿಸುವ ಒತ್ತಾಸೆಯ ಸೊಲ್ಲುಗಳಲ್ಲಿ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು: (1ಕ) ನೀವು ನಾಳೆ ಯಾರನ್ನಾದರೂ ಕರೆತರಬೇಕು. (1ಚ) ನೀವು ಹೇಗಾದರೂ ಈ ಬಾಗಿಲನ್ನು ತೆರೆಸಬೇಕು. (1ಟ) ಇವನನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕು. ಆದರೆ, ಊ, ಓ, ಇಲ್ಲವೇ ಏ ಒಟ್ಟುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ: (1ಕ) *ನೀವು ನಾಳೆ ಯಾರನ್ನೂ ಕರೆತರಬೇಕು.

(1ಚ) *ನೀವು ನಾಳೆ ಯಾರನ್ನೋ ಕರೆತರಬೇಕು. (1ಟ) *ನೀವು ನಾಳೆ ಯಾರನ್ನೇ ಕರೆತರಬೇಕು. ಕಡ್ಡಾಯವನ್ನು ತಿಳಿಸುವ ಸೊಲ್ಲಿನಲ್ಲಿ ತಿಳಿಯದ ತೋರುಪದವನ್ನು ಬಳಸಬೇಕಿದ್ದಲ್ಲಿ, ಆಡುಗನು ಅದರ ಆಯ್ಕೆಯನ್ನು ಕೇಳುಗನಿಗೆ ಬಿಟ್ಟುಕೊಡಬೇಕು, ಮತ್ತು ಈ ಕಾರಣಕ್ಕಾಗಿ (1ಚ) ಸೊಲ್ಲು ಸರಿಯಿಲ್ಲ; ಇದಲ್ಲದೆ, ಪಾಂಗಿನ ಹರವನ್ನು ಮಿತಿಗೊಳಿಸದಿರುವ ಊ ಮತ್ತು ಏ ಒಟ್ಟುಗಳ ಬಳಕೆಯೂ ಕಡ್ಡಾಯದ ಹುರುಳಿನೊಂದಿಗೆ ಹೊಂದಿಕೆಯಾಗುವುದಿಲ್ಲವಾದ ಕಾರಣ, (1ಕ-ಟ) ಸೊಲ್ಲುಗಳೂ ಸರಿಯಾಗಿಲ್ಲ. (2) ಇದಕ್ಕೆ ಬದಲು, ಒಪ್ಪಿಗೆಯನ್ನು ತಿಳಿಸುವ ಒತ್ತಾಸೆಯ ಸೊಲ್ಲುಗಳಲ್ಲಿ ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು: (1ಕ) ಅಲ್ಲಿಗೆ ಯಾರೂ ಹೋಗಬಹುದು. (1ಚ) ಅವರ ಹತ್ತಿರ ಆಕೆ ಏನೂ ಹೇಳಬಹುದು. (1ಟ) ಈ ಗಾಲಿಯನ್ನು ಹೇಗೂ ತಿರುಗಿಸಬಹುದು. ಆದರೆ, ಆದರೂ, ಓ ಇಲ್ಲವೇ ಏ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳು ಇಂತಹ ಸೊಲ್ಲುಗಳಲ್ಲಿ ಬರಲಾರವು: (1ಕ) *ಅಲ್ಲಿಗೆ ಯಾರಾದರೂ ಹೋಗಬಹುದು. (1ಚ) *ಅಲ್ಲಿಗೆ ಯಾರೋ ಹೋಗಬಹುದು. (1ಟ) *ಅಲ್ಲಿಗೆ ಯಾರೇ ಹೋಗಬಹುದು. (1ಕ) ಸೊಲ್ಲು ಅರಿವಿನ ಹುರುಳನ್ನು ಮಾತ್ರ ಕೊಡಬಲ್ಲುದಲ್ಲದೆ, ಒಪ್ಪಿಗೆಂiÀi ಹುರುಳನ್ನು ಕೊಡಲಾರದು; ಹಾಗಾಗಿ, ಒಪ್ಪಿಗೆಯ ಹುರುಳಿನಲ್ಲಿ ಅದು ಸರಿಯಲ್ಲ ಎಂಬುದನ್ನು ಈ ಎತ್ತುಗೆ ತಿಳಿಸುತ್ತದೆ. ಒಪ್ಪಿಗೆಯನ್ನು ತಿಳಿಸುವಲ್ಲಿ ಪಾಂಗಿನ ಹರವನ್ನು ಮಿತಿಗೊಳಿಸಬೇಕಾಗುವುದಿಲ್ಲ ಎಂಬುದು (1ಕ) ಸೊಲ್ಲು ಸರಿಯಿಲ್ಲದುದಕ್ಕೆ ಕಾರಣ; ಕೇಳುಗನಿಗೆ ಆಯ್ಕೆಯನ್ನು ಬಿಟ್ಟುಕೊಟ್ಟಿಲ್ಲವೆಂಬುದು (1ಚ) ಸರಿಯಿಲ್ಲದುದಕ್ಕೆ ಕಾರಣ; ಮತ್ತು ಯಾರೇ ಎಂಬುದು ಒಳಸೊಲ್ಲಿನಲ್ಲಿ ಬಂದಿಲ್ಲವೆಂಬುದು (1ಟ) ಸೊಲ್ಲು ಸರಿಯಿಲ್ಲದುದಕ್ಕೆ ಕಾರಣ. (3) ತಕ್ಕದ್ದು ಎಂಬ ಪದವನ್ನೂ ಕಡ್ಡಾಯದ ಒತ್ತಾಸೆಯನ್ನು ತಿಳಿಸಲು ಬಳಸಲಾಗುತ್ತದೆ, ಮತ್ತು ಈ ಪದವನ್ನು ಬಳಸಿರುವ ಸೊಲ್ಲುಗಳಲ್ಲೂ ಆದರೂ

ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು; ಊ, ಓ ಇಲ್ಲವೇ ಏ ಒಟ್ಟುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳು ಇಂತಹ ಸೊಲ್ಲುಗಳಲ್ಲೂ ಬರಲಾರವು. ಬೇಕು ಎಂಬುದರ ಬಳಕೆಯಲ್ಲಿರುವ ಕಟ್ಟುಪಾಡುಗಳೇ ಇಲ್ಲಿಯೂ ಬರುತ್ತವೆಯೆಂಬುದನ್ನು ಗಮನಿಸಬಹುದು: (1ಕ) ಅವರು ಬರುವ ಮೊದಲೇ ಯಾರಾದರೂ ಈ ಕೆಲಸವನ್ನು ಮುಗಿಸತಕ್ಕದ್ದು. (1ಚ) ತೆರಿಗೆಯನ್ನು ಇವತ್ತೇ ಎಲ್ಲಾದರೂ ಕಟ್ಟತಕ್ಕದ್ದು. (1ಟ) *ತೆರಿಗೆಯನ್ನು ಇವತ್ತೇ ಎಲ್ಲೂ ಕಟ್ಟತಕ್ಕದ್ದು. (1ತ) *ತೆರಿಗೆಯನ್ನು ಇವತ್ತೇ ಎಲ್ಲೋ ಕಟ್ಟತಕ್ಕದ್ದು. (4) ಬಲ್ ಎಂಬ ಇನ್ನೊಂದು ನೆರವೆರಕಪದವನ್ನು ಬಳಸಿಯೂ ಒಪ್ಪಿಗೆಯನ್ನು ತಿಳಿಸಲು ಬರುತ್ತದೆ, ಮತ್ತು ಇದನ್ನು ಬಳಸಿರುವ ಸೊಲ್ಲುಗಳಲ್ಲಿ, ಬಹುದು ಪದವನ್ನು ಬಳಸಿರುವ ಸೊಲ್ಲುಗಳ ಹಾಗೆ, ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು, ಮತ್ತು ಆದರೂ, ಓ ಮತ್ತು ಏ ಎಂಬವುಗಳನ್ನು ಸೇರಿಸಿರುವ ತೋರುಪದಗಳು ಬರಲಾರವು: (1ಕ) ಅವನು ಮನೆಗೆ ಹೋಗಬಲ್ಲ. (1ಚ) ಅವನು ಎಲ್ಲಿಗೂ ಹೋಗಬಲ್ಲ. (1ಟ) *ಅವನು ಎಲ್ಲಿಗಾದರೂ ಹೋಗಬಲ್ಲ. (2ಕ) ಅವನು ದೊಡ್ಡವರನ್ನು ಮಾತನಾಡಿಸಬಲ್ಲ. (2ಚ) ಅವನು ಯಾರನ್ನೂ ಮಾತನಾಡಿಸಬಲ್ಲ. (2ಟ) *ಅವನು ಯಾರನ್ನೋ ಮಾತನಾಡಿಸಬಲ್ಲ. (2ತ) *ಅವನು ಯಾರನ್ನೇ ಮಾತನಾಡಿಸಬಲ್ಲ. (5) ಕಡ್ಡಾಯದ ಒತ್ತಾಸೆಯನ್ನು ಅಲ್ಲಗಳೆಯಲು ಕೂಡದು ಮತ್ತು ಬಾರದು ಎಂಬ ಎರಡು ಬಗೆಯ ನೆರವೆಸಕಪದಗಳನ್ನು ಬಳಸಲಾಗುತ್ತದೆ; ಈ ಪದಗಳು ಬಂದಿರುವ ಸೊಲ್ಲುಗಳಲ್ಲಿ ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು; ಆದರೆ, ಆದರೂ, ಓ ಇಲ್ಲವೇ ಏ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಲಾರವು: (1ಕ) ಅವರು ಇಲ್ಲಿಗೆ ಬರಕೂಡದು. (1ಚ) ಇಲ್ಲಿಗೆ ಯಾರೂ ಬರಕೂಡದು. (1ಟ) *ಇಲ್ಲಿಗೆ ಯಾರಾದರೂ ಬರಕೂಡದು. (2ಕ) ಅವರು ಇವತ್ತು ಮನೆಗೆ ಹೋಗಬಾರದು.

(2ಚ) ಅವರು ಇವತ್ತು ಎಲ್ಲಿಗೂ ಹೋಗಬಾರದು. (2ಟ) *ಅವರು ಇವತ್ತು ಎಲ್ಲಿಗೋ ಹೋಗಬಾರದು. (ಟ) ಆಡುಗನ ಅಳವನ್ನು ತಿಳಿಸುವ ಸೊಲ್ಲುಗಳು: ಆಡುಗನ ಅಳವನ್ನು ತಿಳಿಸುವುದಕ್ಕಾಗಿ ಬಲ್ ಪದವನ್ನು ನೆರವೆಸಕಪದವಾಗಿ ಬಳಸಲಾಗುತ್ತದೆ; ಇದನ್ನು ಬಳಸಿರುವ ಸೊಲ್ಲುಗಳಲ್ಲಿ ಊ ಒಟ್ಟನ್ನು ಇಲ್ಲವೇ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು; ಆದರೆ, ಓ ಇಲ್ಲವೇ ಏ ಒಟ್ಟನ್ನು ಸೇರಿಸಿರುವ ಪದಗಳು ಬರಲಾರವು: (1ಕ) ಅವನು ಈ ಮರಕ್ಕೆ ಹತ್ತಬಲ್ಲ. (1ಚ) ಅವನು ಯಾವ ಮರಕ್ಕೂ ಹತ್ತಬಲ್ಲ. (1ಟ) ಅವನು ಯಾವ ಮರಕ್ಕಾದರೂ ಹತ್ತಬಲ್ಲ. (1ತ) *ಅವನು ಯಾವ ಮರಕ್ಕೋ ಹತ್ತಬಲ್ಲ. (2ಕ) ಹಣವಿರುವ ಕಾರಣ, ಆಕೆ ಕಾಶಿಗೆ ಹೋಗಬಲ್ಲಳು. (2ಚ) ಹಣವಿರುವ ಕಾರಣ, ಆಕೆ ಎಲ್ಲಿಗೂ ಹೋಗಬಲ್ಲಳು. (2ಟ) ಹಣವಿರುವ ಕಾರಣ, ಆಕೆ ಎಲ್ಲಿಗಾದರೂ ಹೋಗಬಲ್ಲಳು. (2ತ) *ಹಣವಿರುವ ಕಾರಣ, ಆಕೆ ಎಲ್ಲಿಗೇ ಹೋಗಬಲ್ಲಳು. ಅಳವಿನ ಅಲ್ಲಗಳೆತವನ್ನು ತಿಳಿಸಲು ಆರ್ ಮತ್ತು ಒಲ್ ಎಂಬ ಬೇರೆ ಎರಡು ನೆರವೆಸಕಗಳನ್ನು ಬಳಸಲಾಗುತ್ತದೆ; ಇವುಗಳಲ್ಲಿ ಆರ್ ಎಂಬುದು ನೇರವಾಗಿ ಅಳವಿನ ಅಲ್ಲಗಳೆತವನ್ನು ತಿಳಿಸುತ್ತದೆ, ಮತ್ತು ಒಲ್ ಎಂಬುದು ಬಯಕೆಯ ಅಲ್ಲಗಳೆತವನ್ನು ತಿಳಿಸುವ ಮೂಲಕ ಅಳವನ್ನು ಅಲ್ಲಗಳೆಯುತ್ತದೆ. ಈ ಎರಡು ಬಗೆಯ ಸೊಲ್ಲುಗಳಲ್ಲೂ ಊ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳು ಬರಬಲ್ಲುವು: (1ಕ) ಅವನು ನಿಮ್ಮನ್ನು ಕಾಣಲಾರ. (1ಚ) ಅವನು ಯಾರನ್ನೂ ಕಾಣಲಾರ. (2ಕ) ಅವನು ಈ ಕೆಲಸವನ್ನು ಮಾಡಲೊಲ್ಲ. (2ಚ) ಅವನು ಯಾವ ಕೆಲಸವನ್ನೂ ಮಾಡಲೊಲ್ಲ. ಅಳವನ್ನು ತಿಳಿಸುವ ಇಂತಹ ಸೊಲ್ಲುಗಳಲ್ಲಿ ಓ ಇಲ್ಲವೇ ಏ ಒಟ್ಟನ್ನು, ಇಲ್ಲವೇ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುವುದಿಲ್ಲ. (1ಕ) *ಅವನು ಯಾರನ್ನೋ ಕಾಣಲಾರ.

(1ಚ) *ಅವನು ಯಾರನ್ನೇ ಕಾಣಲಾರ. (1ಟ) *ಅವನು ಯಾರನ್ನಾದರೂ ಕಾಣಲಾರ. (4) ಅರಿಕೆಯ ಸೊಲ್ಲುಗಳಲ್ಲಿ ಬಳಕೆ: ಕೇಳುಗನಿಂದ ಇಲ್ಲವೇ ಬೇರೊಬ್ಬನಿಂದ ಒಂದು ಎಸಕವನ್ನು ಮಾಡಿಸಿಕೊಳ್ಳುವುದಕ್ಕಾಗಿ ಬಳಕೆಯಾಗುವ ಅರಿಕೆಯ ಸೊಲ್ಲುಗಳಲ್ಲಿ ಊ, ಆದರೂ, ಮತ್ತು ಏ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ: (1ಕ) ಎಲ್ಲಿಗೂ ಹೋಗಿ, ನನಗೇನು? (1ಚ) ಎಲ್ಲಿಗಾದರೂ ಹೋಗಿ! (1ಟ) ಎಲ್ಲಿಗೇ ಹೋಗಿ, ಅವನಲ್ಲಿರುತ್ತಾನೆ. (2ಕ) ಅವನು ಯಾರನ್ನೂ ಕೇಳಲಿ, ತೊಂದರೆಯಿಲ್ಲ. (2ಚ) ಅವನು ಯಾರನ್ನಾದರೂ ಕೇಳಲಿ. (2ಟ) ಅವನು ಯಾರನ್ನೇ ಕೇಳಲಿ, ಅವರು ಇದನ್ನೇ ಹೇಳುತ್ತಾರೆ. ಏ ಒಟ್ಟನ್ನು ಸೇರಿಸಿರುವ ತೋರುಪದಗಳು, (1ಟ) ಮತ್ತು (2ಟ)ಗಳಲ್ಲಿ ಕಾಣಿಸಿದ ಹಾಗೆ, ಒಳಸೊಲ್ಲುಗಳಲ್ಲಿ ಬಳಕೆಯಾಗುವುದೇ ಹೆಚ್ಚು. ಓ ಒಟ್ಟನ್ನು ಬಳಸಿರುವ ತಿಳಿಯದ ತೋರುಪದಗಳು ಆಡುಗನಿಗೆ ತಿಳಿಯದಿರುವ ಮತ್ತು ಇರುವಿಕೆಯಿರುವ ಪಾಂಗನ್ನು ಗುರುತಿಸುತ್ತವೆ; ಇಂತಹ ಪಾಂಗಿನ ಆಯ್ಕೆಯನ್ನು ಕೇಳುಗನಿಗೆ ಇಲ್ಲವೇ ಬೇರೊಬ್ಬನಿಗೆ ಬಿಟ್ಟುಕೊಡಲು ಬರುವುದಿಲ್ಲ. ಹಾಗಾಗಿ, ಅವನ್ನು ಅರಿಕೆಯ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ: (1ಕ) *ಎಲ್ಲಿಗೋ ಹೋಗಿ! (1ಚ) *ಅವನು ಯಾರನ್ನೋ ಕರೆಯಲಿ. ಮಾಡುಗರು ಕೇಳುಗರಾಗಿರುವ ರೂಪಗಳು (ಹೋಗು, ತಿನ್ನು, ಮಾಡಿ, ಮಾಡಿರಿ), ಆಡುಗರಾಗಿರುವ ರೂಪಗಳು (ಹೋಗೋಣ, ಮಾಡೋಣ, ಬರಲಾ), ಮತ್ತು ಬೇರೊಬ್ಬರಾಗಿರುವ ರೂಪಗಳು (ಮಾಡಲಿ, ಹೇಳಲಿ, ಬರಲಿ) ಎಂಬುದಾಗಿ ಮೂರು ಬಗೆಯ ಅರಿಕೆಯ ರೂಪಗಳು ಬಳಕೆಯಾಗುತ್ತವೆ ಎಂಬುದನ್ನು ಮೇಲೆ (4.6.1)ರಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಮಾಡುಗರು ಕೇಳುಗರಾಗಿರುವ ರೂಪಗಳೊಂದಿಗೆ ಸಾಮಾನ್ಯವಾಗಿ ನೀನು ಮತ್ತು ನೀವು ಎಂಬ ಆಡುಪದಗಳನ್ನೇ ಮಾಡುಗ ಪಾಂಗನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ.

ಆದರೆ ಬೇರೆ ಪದಗಳನ್ನೂ, ಅವು ತಿಳಿಸುವ ಪಾಂಗನ್ನು ಕೇಳುಗರು ಒಳಗೊಂಡಿರುವ ಸಂದರ್ಬಗಳಲ್ಲಿ, ಬಳಸಲು ಬರುತ್ತದೆ, ಮತ್ತು ಇಂತಹ ಕಡೆಗಳಲ್ಲಿ ಯಾರಾದರೂ ಮತ್ತು ಯಾರೂ ಎಂಬವುಗಳನ್ನು ಬಳಸಲು ಬರುತ್ತದೆ: (1ಕ) ಯಾರಾದರೂ ಇಲ್ಲಿ ಬನ್ನಿ! (1ಚ) ಯಾರೂ ಒಳಗೆ ಹೋಗಬೇಡಿ! (5) ಅಲ್ಲಗಳೆಯುವ ಸೊಲ್ಲುಗಳಲ್ಲಿ ಬಳಕೆ: ಅಲ್ಲಗಳೆಯುವ ಸೊಲ್ಲುಗಳಲ್ಲಿ ಊ ಇಲ್ಲವೇ ಓ ಒಟ್ಟುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ; ಆದರೆ, ಆದರೂ ಇಲ್ಲವೇ ಏ ಎಂಬುದನ್ನು ಸೇರಿಸಿರುವ ತೋರುಪದಗಳನ್ನು ಬಳಸಲು ಬರುವುದಿಲ್ಲ: (1ಕ) ಇವತ್ತು ತರಗತಿಗೆ ಯಾರೂ ಬರಲಿಲ್ಲ. (1ಚ) ಅವನಿಗೆ ಇವತ್ತು ಏನೂ ಸಿಗಲಿಲ್ಲ. (1ಟ) ಅವನು ಯಾರನ್ನೂ ಹೊಗಳುವುದಿಲ್ಲ. (2ಕ) ಇವತ್ತು ತರಗತಿಗೆ ಯಾರೋ ಬರಲಿಲ್ಲ. (2ಚ) ಅವನಿಗೆ ಸಂತೆಯಲ್ಲಿ ಏನೋ ಸಿಗಲಿಲ್ಲ. (2ಟ) ಅವನು ಯಾವುದನ್ನೋ ತಿನ್ನುವುದಿಲ್ಲ. (1ಕ) ಸೊಲ್ಲಿಗೆ ತರಗತಿಗೆ ಒಬ್ಬರೂ ಬರಲಿಲ್ಲ ಎಂಬ ಹುರುಳಿದೆ, ಮತ್ತು (2ಕ) ಸೊಲ್ಲಿಗೆ ತರಗತಿಗೆ ಯಾರೋ ಒಬ್ಬ ಬರಲಿಲ್ಲ ಎಂಬ ಹುರುಳಿದೆ. ಉಳಿದ (1ಚ-2ಚ) ಮತ್ತು (1ಟ-2ಟ) ಸೊಲ್ಲುಗಳ ನಡುವೆಯೂ ಇಂತಹದೇ ವ್ಯತ್ಯಾಸ ಇರುವುದನ್ನು ಕಾಣಬಹುದು. ಆದರೂ ಇಲ್ಲವೇ ಏ ಎಂಬವುಗಳನ್ನು ಸೇರಿಸಿರುವ ತೋರುಪದಗಳನ್ನು ಅಲ್ಲಗಳೆಯುವ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ ಎಂಬುದಕ್ಕೆ ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) *ಇವತ್ತು ತರಗತಿಗೆ ಯಾರಾದರೂ ಬರಲಿಲ್ಲ. (1ಚ) *ತರಗತಿಗೆ ಯಾರೇ ಬರಲಿಲ್ಲ. (6) ಬೇಡಿಕೆಯ ಒಳಸೊಲ್ಲುಗಳಲ್ಲಿ ಬಳಕೆ: ಒಂದು ಎಸಕಕ್ಕೆ ಇನ್ನೊಂದು ಎಸಕ ಬೇಡಿಕೆ ಎಂಬುದನ್ನು ತಿಳಿಸುವುದಕ್ಕಾಗಿ ಬೇಡಿಕೆಯ ಎಸಕವನ್ನು ತಿಳಿಸುವ ಎಸಕಪದಕ್ಕೆ ಹಿಂಬೊತ್ತಿನ ಒಟ್ಟನ್ನು ಮತ್ತು ಅರೆ ಎಂಬ ಒಟ್ಟನ್ನು ಸೇರಿಸಿ, ಅದನ್ನು ಬಳಸಿರುವ ಸೊಲ್ಲನ್ನು ಒಳಸೊಲ್ಲಾಗಿ

ಮಾಡಲಾಗುತ್ತದೆ (4.7.3 ನೋಡಿ). ಇಂತಹ ಒಳಸೊಲ್ಲುಗಳಲ್ಲಿ ಆದರೂ ಎಂಬುದನ್ನು ಸೇರಿಸಿರುವ ತಿಳಿಯದ ತೋರುಪದಗಳು ಮಾತ್ರ ಬರಬಲ್ಲುವು: (1ಕ) ಯಾರಾದರೂ ಬಂದರೆ ನಿಮ್ಮನ್ನು ಕರೆಯುತ್ತೇನೆ. (1ಚ) ಏನಾದರೂ ಸಿಕ್ಕಿದರೆ ಕೊಡುತ್ತೇನೆ. (1ಟ) ಎಲ್ಲಿಗಾದರೂ ಹೋಗುವುದಿದ್ದರೆ ರಾಜುವನ್ನು ಕರೆಯುತ್ತೇನೆ. ಊ, ಓ ಇಲ್ಲವೇ ಏ ಒಟ್ಟುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳು ಇಂತಹ ಒಳಸೊಲ್ಲುಗಳಲ್ಲಿ ಬಾರದಿರುವುದಕ್ಕೆ ಕೆಲವು ಸರಿಯಲ್ಲದ ಸೊಲ್ಲುಗಳನ್ನು ಎತ್ತುಗೆಯಾಗಿ ಕೆಳಗೆ ಕೊಡಲಾಗಿದೆ: (2ಕ) *ಯಾರೂ ಬಂದರೆ ಹೇಳುತ್ತೇನೆ. (2ಚ) *ಯಾರೋ ಬಂದರೆ ಹೇಳುತ್ತೇನೆ. (2ಟ) *ಯಾರೇ ಬಂದರೆ ಹೇಳುತ್ತೇನೆ. ಮೇಲಿನ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಬೇಡಿಕೆಯನ್ನು ತಿಳಿಸುವ ಒಳಸೊಲ್ಲಿನ ಕೊನೆಯಲ್ಲಿ ಊ ಒಟ್ಟನ್ನು ಬಳಸಿದೆಯಾದರೆ, ಅಂತಹ ಸೊಲ್ಲಿನಲ್ಲಿ ಏ ಒಟ್ಟನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ: (1ಕ) ಯಾರೇ ಬಂದು ಕೇಳಿದರೂ ಇದನ್ನು ಕೊಡಬಾರದೆಂದು ಹೇಳಿದ್ದಾರೆ. (1ಚ) ಎಶ್ಟೇ ತೊಂದರೆಯಾದರೂ ನಿಮ್ಮನ್ನು ಬಿಡುವುದಿಲ್ಲ. (1ಟ) ಅವರು ಏನೇ ಕೊಟ್ಟರೂ ಅದನ್ನು ನಾನು ನಿಮಗೆ ಕೊಡುತ್ತೇನೆ. (7) ಹೆಸರುಕಂತೆಗಳೊಂದಿಗೆ ಬಳಕೆ: ಓ ಇಲ್ಲವೇ ಆದರೂ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಹೆಸರುಕಂತೆಗಳೊಂದಿಗೂ ಬಳಸಲು ಬರುತ್ತದೆ: (1ಕ) ಯಾವನೋ ಒಬ್ಬ ಕುಡುಕ ಅವರ ಮನೆಯ ಕಿಟಿಕಿಯನ್ನು ಒಡೆದಿದ್ದಾನೆ. (1ಚ) ಯಾರೋ ಇಬ್ಬರು ಹುಡುಗರು ಹೊರಗೆ ನಿಂತಿದ್ದಾರೆ. (1ಟ) ಯಾವುದೋ ಒಂದು ಮರವನ್ನು ಆತ ಕಡಿಯುತ್ತಿದ್ದಾನೆ. (2ಕ) ಯಾರಾದರೂ ಇಬ್ಬರು ಹುಡುಗರು ಇಲ್ಲಿಗೆ ಬರಲಿ. (2ಚ) ಯಾವುದಾದರೂ ಎರಡು ಮನೆಗಳಿಗೆ ಬಣ್ಣ ಹಚ್ಚಬೇಕೆಂದಿದ್ದಾರೆ. (2ಟ) ಎಲ್ಲಾದರೂ ಒಂದು ಕಡೆ ಇದನ್ನು ಅಡಗಿಸಬೇಕಾಗಿದೆ.

ಈ ತೋರುಪದಗಳು, ಮೇಲಿನ ಸೊಲ್ಲುಗಳಲ್ಲಿ ಕಾಣಿಸಿದ ಹಾಗೆ, ಹೆಸರುಕಂತೆಗಳೊಂದಿಗೆ ಸೇರಿ ಒಂದೇ ಪದಕಂತೆಯಾಗಿಯೂ ಬರಬಲ್ಲುವು, ಇಲ್ಲವೇ ಅವುಗಳಿಂದ ಬೇರಾಗಿಯೂ ನಿಲ್ಲಬಲ್ಲುವು; ಮೇಲಿನ ಸೊಲ್ಲುಗಳಲ್ಲಿ ಅವು ಹೆಸರುಕಂತೆಗಳೊಂದಿಗೆ ಸೇರಿಕೊಂಡಿವೆ ಎಂಬುದನ್ನು (1ಟ) ಮತ್ತು (2ಚ) ಸೊಲ್ಲುಗಳಲ್ಲಿ ಕಾಣಬಹುದು; ಅನ್ನು ಮತ್ತು ಇಗೆ ಪತ್ತುಗೆ ಒಟ್ಟುಗಳನ್ನು ಇಲ್ಲಿ ಒಂದು ಬಾರಿ ಮಾತ್ರ ಬಳಸಲಾಗಿದೆ. ಇದಕ್ಕೆ ಬದಲು, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಪತ್ತುಗೆ ಒಟ್ಟುಗಳನ್ನು ಎರಡು ಬಾರಿ ಬಳಸಲಾಗಿದ್ದು, ತೋರುಪದಗಳು ಇಲ್ಲಿ ಹೆಸರುಕಂತೆಗಳಿಂದ ಬೇರಾಗಿ ನಿಂತಿವೆ: (1ಕ) ಯಾವುದನ್ನೋ ಒಂದು ಮರವನ್ನು ಆತ ಕಡಿಯುತ್ತಿದ್ದಾನೆ. (1ಚ) ಯಾವುದಕ್ಕೋ ಎರಡು ಮನೆಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. (1ಟ) ಯಾರಿಂದಲೋ ಇಬ್ಬರು ಹುಡುಗರಿಂದ ಕೆಲಸ ಮಾಡಿಸಿದರು. (1ತ) ಯಾವುದಕ್ಕಾದರೂ ಎರಡು ಮನೆಗಳಿಗೆ ಬಣ್ಣ ಹಚ್ಚಲಿ. (1ಪ) ಯಾರಿಗಾದರೂ ಇಬ್ಬರು ಹುಡುಗರಿಗೆ ಕೆಲಸ ಹೇಳಲಿ. ಇಲ್ಲಿ ತಿಳಿಯದ ತೋರುಪದಗಳು ಮತ್ತು ಹೆಸರುಕಂತೆಗಳು ಬೇರೆ ಬೇರೆ ಹೆಸರುಕಂತೆಗಳಾಗಿ ಬಂದಿವೆಯಾದರೂ ಅವನ್ನು ಒಟ್ಟಿಗೇನೇ ಬಳಸಬೇಕಾಗುತ್ತದೆ; ಅವುಗಳ ಓರಣವನ್ನು ಬದಲಾಯಿಸಲು ಬರುವುದಿಲ್ಲ, ಮತ್ತು ಅವುಗಳ ನಡುವೆ ಬೇರೆ ಹೆಸರುಕಂತೆಗಳನ್ನು ತೂರಿಸಲು ಬರುವುದಿಲ್ಲ: (1ಕ) *ಒಂದು ಮರವನ್ನು ಯಾವುದನ್ನೋ ಆತ ಕಡಿಯುತ್ತಿದ್ದಾನೆ. (1ಚ) *ಯಾವುದನ್ನೋ ಆತ ಒಂದು ಮರವನ್ನು ಕಡಿಯುತ್ತಿದ್ದಾನೆ. ಊ ಇಲ್ಲವೇ ಏ ಒಟ್ಟುಗಳನ್ನು ಸೇರಿಸಿರುವ ತೋರುಪದಗಳನ್ನು ಈ ರೀತಿ ಹೆಸರುಕಂತೆಗಳೊಂದಿಗೆ ಬಳಸಲು ಬರುವುದಿಲ್ಲ: (1ಕ) *ಯಾರೂ ಒಬ್ಬ ಹುಡುಗ ಬರಲಿಲ್ಲ. (1ಚ) *ಯಾರೇ ಇಬ್ಬರು ಹುಡುಗರು ಬರಲಿಲ್ಲ. ಮೇಲೆ ಕೊಟ್ಟಿರುವ ಸೊಲ್ಲುಗಳಲ್ಲೆಲ್ಲ ಹೆಸರುಕಂತೆಗಳ ಮೊದಲಿಗೆ ಒಂದು ಎಣಿಕೆಪದ ಬಂದಿದೆ; ಈ ರೀತಿ ಎಣಿಕೆ ಪದವನ್ನು ಬಳಸದಿರುವ ಹೆಸರುಕಂತೆಗಳೊಂದಿಗೂ ಓ ಇಲ್ಲವೇ ಆದರೂ ಎಂಬವುಗಳನ್ನು ಸೇರಿಸಿರುವ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ:

(1ಕ) ಯಾರೋ ಕುಡುಕರು ಮಾಡಿಗೆ ಕಲ್ಲೆಸೆಯುತ್ತಿದ್ದಾರೆ. (1ಚ) ಯಾರಾದರೂ ಬೇಡುಗರು ಸಿಕ್ಕಿದರೆ ಕರೆದುಕೊಂಡು ಬನ್ನಿ. (1ಟ) ಅದು ಎಲ್ಲೋ ಬಲ್ಲೆಯೊಳಗೆ ಬಿದ್ದಿರಬೇಕು. ಈ ರೀತಿ ಎಣಿಕೆಪದವನ್ನು ಬಳಸದಿರುವಂತಹ ಹೆಸರುಕಂತೆಗಳನ್ನು ಓ ಇಲ್ಲವೇ ಆದರೂ ಎಂಬವುಗಳನ್ನು ಸೇರಿಸಿರುವ ತೋರುಪದಗಳ ಮೊದಲಿಗೂ ಬಳಸಲು ಬರುತ್ತದೆ: (1ಕ) ಕುಡುಕರು ಯಾರೋ ಮಾಡಿಗೆ ಕಲ್ಲೆಸೆಯುತ್ತಿದ್ದಾರೆ. (1ಚ) ಬೇಡುಗರು ಯಾರಾದರೂ ಸಿಕ್ಕಿದರೆ ಕರೆದುಕೊಂಡು ಬನ್ನಿ. (1ಟ) ಅದು ಬಲ್ಲೆಯೊಳಗೆಲ್ಲೋ ಬಿದ್ದಿರಬೇಕು. ಆದರೆ, ಮೇಲೆ ತಿಳಿಸಿದ ಹಾಗೆ, ಎಣಿಕೆಪದವನ್ನು ಬಳಸಿರುವಂತಹ ಹೆಸರುಕಂತೆಗಳನ್ನು ಈ ರೀತಿ ತೋರುಪದಗಳ ಮೊದಲಿಗೆ ಬಳಸಲು ಬರುವುದಿಲ್ಲ: (1ಕ) *ಇಬ್ಬರು ಹುಡುಗರು ಯಾರೋ ಹೊರಗೆ ನಿಂತಿದ್ದಾರೆ. (1ಚ) *ಒಂದು ಮರವನ್ನು ಯಾವುದನ್ನೋ ಅವರು ಕಡಿದಿದ್ದಾರೆ. ಇದಲ್ಲದೆ, ಎಣಿಕೆಪದವನ್ನು ಬಳಸದಿರುವ ಹೆಸರುಕಂತೆಗಳು ಮತ್ತು ತಿಳಿಯದ ತೋರುಪದಗಳು ಕೂಡ ಒಟ್ಟೊಟ್ಟಿಗೆ ಬರಬೇಕಾಗುತ್ತದಲ್ಲದೆ, ಅವುಗಳ ನಡುವೆ ಬೇರೆ ಹೆಸರುಕಂತೆಗಳು ಬರಲಾರವು: (1ಟ) *ಕುಡುಕರು ಮಾಡಿಗೆ ಯಾರೋ ಕಲ್ಲೆಸೆಯುತ್ತಿದ್ದಾರೆ. ತಿಳಿಯದ ತೋರುಪದಗಳಲ್ಲಿ ಯಾವುವು ಈ ರೀತಿ ಹೆಸರುಕಂತೆಗಳೊಂದಿಗೆ ಬಳಕೆಯಾಗಬಲ್ಲುವು ಎಂಬ ವಿಶಯದಲ್ಲಿ ಕೆಲವು ಕಟ್ಟುಪಾಡುಗಳಿವೆ; ಹೆಸರುಕಂತೆಗಳು ಪಾಂಗನ್ನು ಆರಿಸಬಲ್ಲುವಾದ ಕಾರಣ, ಅವುಗಳೊಂದಿಗೆ ಆರಿಸದ ಪದವಾದ ಏನು ಎಂಬುದು ಬಳಕೆಯಾಗುವುದಿಲ್ಲ: (1ಕ) *ಏನಾದರೂ ಪುಸ್ತಕ ಸಿಕ್ಕಿದರೆ ತನ್ನಿ. (1ಚ) ಯಾವುದಾದರೂ ಪುಸ್ತಕ ಸಿಕ್ಕಿದರೆ ತನ್ನಿ.

ಆದರೆ, ಆರಿಕೆಯಾಗಿಲ್ಲ ಎಂಬ ಹುರುಳು ಸಿಗುವಂತಿದ್ದರೆ, ಅದನ್ನೂ ಬಳಸಲು ಬರುತ್ತದೆ: (1ಟ) ಏನಾದರೂ ಕಾರಣ ಹೇಳಿ ಅವನನ್ನು ಬಿಡಿಸಿ. ಎಸಕಪರಿಚೆಗಳಾಗಿ ಬರುವ ತಿಳಿಯದ ತೋರುಪದಗಳಲ್ಲಿ ಎತ್ತ ಮತ್ತು ಹೇಗೆ ಎಂಬವುಗಳನ್ನು ಹೊರತುಪಡಿಸಿ ಉಳಿದುವನ್ನು ಹೆಸರುಕಂತೆಗಳೊಂದಿಗೆ ಬಳಸಲು ಬರುತ್ತದೆ: (1ಕ) ಅವನು ಎಲ್ಲಾದರೂ ಒಂದು ಊರಿನಲ್ಲಿ ಅಡಗಿರಬಹುದು. (1ಚ) ಅವರು ಯಾವಾಗಲಾದರೂ ಒಂದು ದಿವಸ ಬಾರದಿರಲಾರರು. (1ಟ) ಅವರು ಎಂದಾದರೂ ಒಂದು ದಿವಸ ಬಾರದಿರಲಾರರು. ಹೆಸರುಪರಿಚೆಗಳಾಗಿ ಬರುವ ತೋರುಪದಗಳನ್ನು ಇಂತಹ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ.

10.6.3 ಕೇಳ್ವಿಗಳಲ್ಲಿ ಬಳಕೆ

ಆಡುಗನಿಗೆ ಯಾವುದಾದರೊಂದು ಪಾಂಗಿನ ಕುರಿತಾಗಿ ತಿಳಿವಿಲ್ಲದಿರುವಲ್ಲಿ, ಮತ್ತು ಆ ತಿಳಿವನ್ನು ಕೇಳುಗನಿಂದ ಪಡೆಯಬೇಕೆಂದಿರುವಲ್ಲಿ, ತಿಳಿಯದ ತೋರುಪದಗಳಿರುವ ಕೇಳ್ವಿಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಪುಣೆಯಲ್ಲಿ ಏನು ಮಾಡುತ್ತಿದ್ದಾನೆ? (1ಚ) ಹೊರಗೆ ಕುಳಿತಿರುವವರು ಯಾರು? (1ಟ) ಈ ಸೊಲ್ಲನ್ನು ನೀವು ಎಲ್ಲಿ ನೋಡಿದಿರಿ? (1ಕ) ಸೊಲ್ಲನ್ನು ಬಳಸಿದ ಆಡುಗನಿಗೆ ರಾಜು ಪುಣೆಯಲ್ಲಿದ್ದಾನೆಂದು ಗೊತ್ತಿದೆ, ಆದರೆ ಆತ ಅಲ್ಲಿ ಏನು ಮಾಡುತ್ತಿದ್ದಾನೆಂದು ತಿಳಿದಿಲ್ಲ; ಆ ವಿಶಯವನ್ನು ತಿಳಿಯುವುದಕ್ಕಾಗಿ ಆತ (1ಕ) ಸೊಲ್ಲನ್ನು ಬಳಸಿದ್ದಾನೆ, ಮತ್ತು ತನಗೆ ಎಂತಹ ವಿಶಯವನ್ನು ತಿಳಿಯಬೇಕಾಗಿದೆ ಎಂಬುದನ್ನು ಕೇಳುಗನಿಗೆ ತಿಳಿಸಲು ಅದರಲ್ಲಿ ಏನು ಪದವನ್ನು ಬಳಸಿದ್ದಾನೆ. ಇದೇ ರೀತಿಯಲ್ಲಿ, ಆಡುಗನಿಗೆ ಕೇಳುಗನಿಂದ ತಿಳಿಯಬೇಕಾಗಿರುವ ವಿಶಯ ಎಂತಹದು ಎಂಬುದನ್ನು ತಿಳಿಸುವುದಕ್ಕಾಗಿ (1ಚ)ದಲ್ಲಿ ಯಾರು ಪದವನ್ನು, ಮತ್ತು (1ಟ)ದಲ್ಲಿ ಎಲ್ಲಿ ಪದವನ್ನು ಬಳಸಲಾಗಿದೆ.

ಮೇಲೆ 10.4.1(2)ರಲ್ಲಿ ವಿವರಿಸಿದ ಹಾಗೆ, ಕನ್ನಡದಲ್ಲಿ ಮುಕ್ಯವಾಗಿ ಸೊಲ್ಲುಕೇಳ್ವಿಗಳು ಮತ್ತು ತೋರುಕೇಳ್ವಿಗಳು ಎಂಬುದಾಗಿ ಎರಡು ಬಗೆಯ ಕೇಳ್ವಿಗಳು ಬಳಕೆಯಲ್ಲಿವೆ; ಇವುಗಳಲ್ಲಿ ಸೊಲ್ಲುಕೇಳ್ವಿಗಳನ್ನು ಒಂದು ಸೊಲ್ಲು ತಿಳಿಸುವ ಸಂಗತಿ ಸರಿಯೋ ತಪ್ಪೋ ಎಂಬುದನ್ನು ಕೇಳುಗನಿಂದ ತಿಳಿಯಲು ಬಳಸಲಾಗುತ್ತದೆ, ಮತ್ತು ತೋರುಕೇಳ್ವಿಗಳನ್ನು ಸೊಲ್ಲುಗಳಲ್ಲಿ ಒಂದು ಇಲ್ಲವೇ ಹೆಚ್ಚು ತಿಳಿಯದ ತೋರುಪದಗಳನ್ನು ಬಳಸಿ, ಅವು ಗುರುತಿಸುವ ಪಾಂಗಿನ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಳಸಲಾಗುತ್ತದೆ. ಎಲ್ಲಾ ಬಗೆಯ ತಿಳಿಯದ ತೋರುಪದಗಳನ್ನೂ ತೋರುಕೇಳ್ವಿಗಳಲ್ಲಿ ಬಳಸಲು ಬರುತ್ತದೆ; ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (ಕ) ಹೆಸರುಪದಗಳು: (1ಕ) ಇದನ್ನು ನಿಮಗೆ ತಿಳಿಸಿದವರು ಯಾರು? (1ಚ) ಯಾವನಿಂದ ನಿಮಗೆ ಈ ತೊಂದರೆ ಬಂತು? (1ಟ) ಅವರಲ್ಲಿ ನಿಮಗೆ ಏನು ಸಿಕ್ಕಿತು? (1ತ) ಯಾವುದನ್ನು ನೀವು ಕವಾಟಿನಲ್ಲಿರಿಸಿದ್ದೀರಿ? (1ಪ) ಇವುಗಳಲ್ಲಿ ಹೊಸದಾಗಿ ಕೊಂಡುಕೊಂಡವು ಯಾವುವು? (1ಗ) ನಾನು ತಂದ ಸೀರೆಯನ್ನು ಅವನು ಯಾವಳಿಗೆ ಕೊಟ್ಟ? (ಚ) ಎಸಕಪರಿಚೆಗಳು: (2ಕ) ಹುಡುಗ ಎಲ್ಲಿಗೆ ಹೋಗಿದ್ದಾನೆ? (2ಚ) ಅವನು ಮನೆಯಿಂದ ಯಾವಾಗ ಬಂದ? (2ಟ) ಅವನು ಒಳಗೆ ಬಂದುದು ಹೇಗೆ? (ಟ) ಹೆಸರುಪರಿಚೆಗಳು: (3ಕ) ಅವನು ಎಂತಹ ಕೆಲಸ ಮಾಡಿದ್ದಾನೆ? (3ಚ) ಅವನು ಎಶ್ಟು ಕೆಲಸ ಮಾಡಿದ್ದಾನೆ? (3ಟ) ಅವನು ಯಾವ ಕೆಲಸ ಮಾಡಿದ್ದಾನೆ? (1) ಹೆಸರುಪದಗಳಾಗಿ ಬರುವ ತಿಳಿಯದ ತೋರುಪದಗಳಲ್ಲಿ ಯಾವನು, ಯಾವಳು, ಯಾವುದು, ಮತ್ತು ಯಾವುವು ಎಂಬವು ಹೆಸರುಪರಿಚೆಯಾಗಿ ಬರುವ ಯಾವ ಎಂಬ ಪದಕ್ಕೆ ಗುರ್ತ ಮತ್ತು ಎಣಿಕೆಗಳನ್ನು ತಿಳಿಸುವ ನು, ಳು, ಉದು ಮತ್ತು ಉವು ಎಂಬ ಒಟ್ಟುಗಳನ್ನು ಸೇರಿಸಿ ಉಂಟುಮಾಡಿದವುಗಳೆಂದು ಹೇಳಬಹುದು.

ಯಾಕೆಂದರೆ, ಪರಿಚೆಪದವಾಗಿ ಬರುವ ಎಂತಹ ಎಂಬ ಇನ್ನೊಂದು ತಿಳಿಯದ ತೋರುಪದಕ್ಕೂ ಇಂತಹವೇ ಗುರ್ತ ಮತ್ತು ಎಣಿಕೆಯ ರೂಪಗಳಿವೆ; ಆದರೆ, ಇಲ್ಲಿ ಮೇಲಿನ ಒಟ್ಟುಗಳು ಬಳಕೆಯಾಗುವ ಬದಲು ಅವನು, ಅವಳು, ಮತ್ತು ಅವರು ಎಂಬ ತೋರುಪದಗಳು ಮತ್ತು ದು ಮತ್ತು ವು ಎಂಬ ಒಟ್ಟುಗಳು ಬಳಕೆಯಾಗುತ್ತವೆ: ಓರೆಣಿಕೆ ಹಲವೆಣಿಕೆ ಗಂಡಸು ಎಂತಹವನು ಎಂತಹವರು ಹೆಂಗಸು ಎಂತಹವಳು ,, ಉಳಿಕೆ ಎಂತಹದು ಎಂತಹವು ಇದಲ್ಲದೆ, ಯಾವನು ಮತ್ತು ಯಾವಳು ಎಂಬ ಪದಗಳಿಗೆ ಕೀಳ್ಮೆಯ ಹುರುಳೂ ಇದೆಯಾದ ಕಾರಣ, ಅವನ್ನು ಬಳಸುವ ಬದಲು ಯಾರು ಎಂಬುದನ್ನೇ ಹೆಚ್ಚಿನೆಡೆಗಳಲ್ಲೂ ಬಳಸಲಾಗುತ್ತದೆ: (1ಕ) ಆ ಹುಡುಗ ಯಾರು? (1ಚ) ನಿಮ್ಮನ್ನು ಕಾಣಲು ಬಂದಿರುವ ಹೆಂಗಸು ಯಾರು? (1ಟ) ಆ ಮರದ ಕೆಳಗೆ ಕುಳಿತಿರುವವರು ಯಾರು? (2) ಯಾವ, ಎಂತಹ ಮತ್ತು ಎಶ್ಟು ಎಂಬ ಮೂರು ಪದಗಳನ್ನು ಕೇಳ್ವಿಗಳಲ್ಲಿ ಹೆಸರುಪದಗಳೊಂದಿಗೆ ಸೇರಿಸಿ ಬಳಸಲಾಗುತ್ತದೆ: (1ಕ) ಆತ ಯಾವ ಹೋಟೆಲಿನಲ್ಲಿ ಇಳಿದುಕೊಂಡಿದ್ದಾನೆ? (1ಚ) ಅವನು ಎಂತಹ ಮನೆಯನ್ನು ಕೊಂಡುಕೊಂಡ? (1ಟ) ಅವನಿಗೆ ಎಶ್ಟು ಸಂಬಳ ಬರುತ್ತದೆ? ಎಶ್ಟು ಪದವನ್ನು ಈ ರೀತಿ ಹೆಸರುಪದವನ್ನು ಸೇರಿಸದೆಯೂ ಕೇಳ್ವಿಗಳಲ್ಲಿ ಬಳಸಲು ಬರುತ್ತದೆ; ಆದರೆ, ಇಂತಹ ಬಳಕೆಗಳಲ್ಲೂ ಓದುಗನಿಗೆ ಹೆಸರುಪದವೊಂದರ ಸುಳಿವು ಸಿಗುತ್ತದೆ, ಮತ್ತು ಇದು ಆತನಿಗೆ ಸಂದರ್ಬದಿಂದಲೇ ಗೊತ್ತಾಗುವಂತಿರುತ್ತದೆ: (1ಕ) ನೀವು ಈ ಪುಸ್ತಕವನ್ನು ಎಶ್ಟಕ್ಕೆ ಕೊಂಡುಕೊಂಡಿರಿ? (1ಚ) ನಿಮ್ಮ ಎಣಿಕೆಯನ್ನು ಎಶ್ಟರಿಂದ ಸುರುಮಾಡಿದಿರಿ?

(1ಕ) ಸೊಲ್ಲಿನಲ್ಲಿ ಎಶ್ಟಕ್ಕೆ ಎಂಬುದು ಪುಸ್ತಕದ ಬೆಲೆಯನ್ನು ಕೇಳುತ್ತದೆ, ಮತ್ತು (1ಚ) ಸೊಲ್ಲಿನಲ್ಲಿ ಎಶ್ಟರಿಂದ ಎಂಬುದು ಸುರುಮಾಡಿದ ಎಣಿಕೆಯನ್ನು ಕೇಳುತ್ತದೆ; ಹಾಗಾಗಿ, ಅವಕ್ಕೆ ಬದಲು ಎಶ್ಟು ಬೆಲೆಗೆ (ರುಪಾಯಿಗೆ) ಮತ್ತು ಎಶ್ಟನೇ ಎಣಿಕೆಯಿಂದ ಎಂಬ ನುಡಿತಗಳನ್ನೂ ಬಳಸಲು ಬರುತ್ತದೆ. ಒಂದು ಪಟ್ಟಿಯಲ್ಲಿ ಇಲ್ಲವೇ ಓರಣದಲ್ಲಿ ಪಾಂಗಿನ ಜಾಗ ಯಾವುದು ಎಂಬುದನ್ನು ಕೇಳುವ ನೇ ಒಟ್ಟನ್ನೂ ಎಶ್ಟು ಪದದೊಂದಿಗೆ ಬಳಸಲು ಬರುತ್ತದೆ: (1ಕ) ಎಶ್ಟು ಮನೆ ಆತನದು? (1ಚ) ಎಶ್ಟನೇ ಮನೆ ಆತನದು? (1ಕ)ದಲ್ಲಿ ಬಂದಿರುವ ಎಶ್ಟು ಎಂಬುದು ಆತನ ಒಡೆತನದಲ್ಲಿರುವ ಮನೆಗಳ ಎಣಿಕೆಯನ್ನು ಕೇಳುತ್ತದೆ, ಮತ್ತು (1ಚ)ದಲ್ಲಿರುವ ಎಶ್ಟನೇ ಎಂಬುದು ಒಂದು ಓಣಿಯಲ್ಲಿರುವ ಮನೆಗಳಲ್ಲಿ ಆತನದು ಯಾವುದು ಎಂಬುದನ್ನು ಕೇಳುತ್ತದೆ. (3) ಮೇಲೆ (10.1.2)ರಲ್ಲಿ ವಿವರಿಸಿದ ಹಾಗೆ, ಏನು ಮತ್ತು ಯಾರು ಪದಗಳು ಆರಿಸದ ಪದಗಳಾಗಿಯೂ, ಯಾವನು, ಯಾವುದು ಮೊದಲಾದ ಪದಗಳು ಆರಿಸಿದ ಪದಗಳಾಗಿಯೂ ಬಳಕೆಯಾಗುತ್ತವೆ; ಆದರೆ, ಯಾವನು, ಯಾವಳು ಮತ್ತು ಯಾವರು ಎಂಬವಕ್ಕೆ ಕೀಳ್ಮೆಯ ಹುರುಳಿರುವ ಕಾರಣ, ಯಾರು ಪದವನ್ನೇ ಆರಿಸಿದ ಮತ್ತು ಆರಿಸದ ಪದಗಳಾಗಿ ಬಳಸಲಾಗುತ್ತದೆ: (1ಕ) ಈ ಮನೆಗಳಲ್ಲಿ ನಿಮ್ಮದು ಯಾವುದು? (1ಚ) *ಈ ಮನೆಗಳಲ್ಲಿ ನಿಮ್ಮದು ಏನು? (2ಕ) ಅವಳು ನಿಮಗೆ ಯಾವುದನ್ನು ಕೊಟ್ಟಿದ್ದಾಳೆ? (2ಚ) ಅವಳು ನಿಮಗೆ ಏನನ್ನು ಕೊಟ್ಟಿದ್ದಾಳೆ? (1ಕ-ಚ) ಸೊಲ್ಲುಗಳಲ್ಲಿ ಈ ಮನೆಗಳಲ್ಲಿ ಎಂಬುದು ಒಂದು ಗುಂಪನ್ನು ಗುರುತಿಸುತ್ತಿದ್ದು, ಅದರಿಂದ ಒಂದು ಪಾಂಗನ್ನು ಆರಿಸಬೇಕಾಗಿದೆ; ಹಾಗಾಗಿ, ಏನು ಎಂಬುದನ್ನು ಬಳಸಿರುವ (1ಚ) ಸೊಲ್ಲು ಸರಿಯಾಗಿಲ್ಲ; (2ಕ) ಮತ್ತು (2ಚ)ಗಳ ನಡುವೆಯೂ ಈ ಆರಿಸುವಿಕೆಯ ಮಟ್ಟಿಗೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬಹುದು. ಯಾರು ಎಂಬುದನ್ನು ಈ ಎರಡು ಬಗೆಯ ಸಂದರ್ಬಗಳಲ್ಲೂ ಬಳಸಲು ಬರುತ್ತದೆ; ಆದರೆ, (2ಕ-ಚ)ಗಳ ನಡುವಿರುವಂತಹ ವ್ಯತ್ಯಾಸವನ್ನು ಯಾರು ಪದದ ಬಳಕೆಯಲ್ಲಿ ಕಾಣಲು ಬರುವುದಿಲ್ಲ:

(1ಕ) ಈ ಹುಡುಗರಲ್ಲಿ ನಿಮ್ಮವರು ಯಾರು? (1ಚ) ಅವರು ಯಾರನ್ನು ಕರೆದಿದ್ದಾರೆ? ಇದಲ್ಲದೆ, ಏನು ಪದದೊಂದಿಗೆ ಅನ್ನು ಎಂಬ ಪತ್ತುಗೆ ಒಟ್ಟನ್ನು ಮಾತ್ರ ಬಳಸಲು ಬರುತ್ತದಲ್ಲದೆ, ಇಗೆ, ಇಂದ ಮತ್ತು ಅಲ್ಲಿ ಎಂಬವುಗಳನ್ನಾಗಲಿ, ಇಲ್ಲವೇ ಅ ಎಂಬ ಹೆಸರುಪತ್ತುಗೆಯ ಒಟ್ಟನ್ನಾಗಲಿ ಬಳಸಲು ಬರುವುದಿಲ್ಲ; ಅನ್ನು ಒಟ್ಟನ್ನೂ ಅದರೊಂದಿಗೆ ಬಳಸದಿರುವುದೇ ಹೆಚ್ಚು. ಈ ಒಟ್ಟುಗಳ ಬಳಕೆಯಾಗಿರುವಲ್ಲಿ ಒಂದು ಬಗೆಯ ಆಯ್ಕೆಯಾಗಿರುತ್ತದೆಯೆಂಬುದೇ ಈ ಕಟ್ಟುಪಾಡಿಗೆ ಕಾರಣವಿರಬೇಕು: (1ಕ) ಅವನು ನಿಮಗೆ ಕೊಟ್ಟುದು ಯಾವುದನ್ನು? (1ಚ) ಅವನು ನಿಮಗೆ ಕೊಟ್ಟುದು ಏನನ್ನು? (2ಕ) ಅವನು ಇಳಿದುದು ಯಾವುದರಿಂದ? (2ಚ) ಅವನು ಇಳಿದುದು *ಏನಿಂದ? (3ಕ) ಅವನು ಯಾವುದಕ್ಕೆ ಹೆದರಿದ? (3ಚ) ಅವನು *ಏನಿಗೆ ಹೆದರಿದ? (4ಕ) ಅವನು ನೀವು ಕೊಟ್ಟುದನ್ನು ಯಾವುದರಲ್ಲಿ ಅಡಗಿಸಿದ್ದಾನೆ? (4ಚ) ಅವನು ನೀವು ಕೊಟ್ಟುದನ್ನು *ಏನಲ್ಲಿ ಅಡಗಿಸಿದ್ದಾನೆ? (5ಕ) ಇದು ಯಾವುದರ ಕೊಂಬು? (5ಚ) ಇದು *ಏನರ ಕೊಂಬು? (3ಚ) ಮತ್ತು (4ಚ) ಸೊಲ್ಲುಗಳಲ್ಲಿ ಬಳಕೆಯಾಗಲು ಯಾಕೆ ಮತ್ತು ಎಲ್ಲಿ ಎಂಬ ಬೇರೆಯೇ ತಿಳಿಯದ ತೋರುಪದಗಳಿವೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಇವು ಏನು ಪದದಶ್ಟು ಆರಿಸದ ಪದಗಳಲ್ಲವಾದರೂ, ಯಾವುದಕ್ಕೆ ಮತ್ತು ಯಾವುದರಲ್ಲಿ ಎಂಬವುಗಳೊಂದಿಗೆ ಹೋಲಿಸಿದಾಗ, ಆರಿಸದ ಪದಗಳಾಗಿಯೇ ಕಾಣಿಸಿಕೊಳ್ಳುತ್ತವೆ: (3ಟ) ಅವನು ಯಾಕೆ ಹೆದರಿದ? (4ಟ) ಅವನು ಎಲ್ಲಿ ಅಡಗಿದ್ದಾನೆ? (4) ಏನು ಪದವನ್ನು ಆಗು ಮತ್ತು ಮಾಡು ಎಂಬ ಎಸಕಪದಗಳೊಂದಿಗೆ ಬಳಸಿ, ಆಗುವಿಕೆ ಮತ್ತು ಮಾಡುವಿಕೆಗಳೆಂಬ ಎರಡು ಬಗೆಯ ಎಸಕಗಳ ಕುರಿತಾಗಿ ಕೇಳ್ವಿಗಳನ್ನು ಕೇಳಲು ಬರುತ್ತದೆ:

(1ಕ) ಬೆಕ್ಕಿನ ಮರಿಗೆ ಏನಾಯಿತು? ಸತ್ತುಹೋಯಿತು. (1ಚ) ಬೆಕ್ಕಿನ ಮರಿಯನ್ನು ಅವನು ಏನು ಮಾಡಿದ? ಕೊಂದುಹಾಕಿದ. (5) ತೋರುಕೇಳ್ವಿಗಳಲ್ಲಿ ಒಂದಕ್ಕಿಂತ ಹೆಚ್ಚು ತಿಳಿಯದ ತೋರುಪದಗಳನ್ನೂ ಬಳಸಲು ಬರುತ್ತದೆ; ಸಾಮಾನ್ಯವಾಗಿ ಇಂತಹ ಕೇಳ್ವಿಗಳಲ್ಲಿ ಎರಡು ಕೇಳ್ವಿಗಳು ಸೇರಿಕೊಂಡಿದ್ದು, ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸಲು ಬಾರದಂತಿರುತ್ತದೆ: (1ಕ) ಯಾವ ಹಸುವನ್ನು ಯಾವ ಗೂಟಕ್ಕೆ ಕಟ್ಟಬೇಕು? (1ಚ) ಯಾವ ಕಪಾಟಿನಲ್ಲಿ ಯಾವ ಪುಸ್ತಕವನ್ನಿರಿಸಬೇಕು? ಇಂತಹ ಸೊಲ್ಲುಗಳಲ್ಲಿ ಎರಡು ಪಾಂಗುಗಳ ನಡುವಿನ ಸಂಬಂದವನ್ನು ಒತ್ತಿ ಹೇಳಲು ತಿಳಿಯದ ತೋರುಪದಗಳನ್ನು ಇಮ್ಮಡಿ ರೂಪದಲ್ಲಿಯೂ ಬಳಸಲು ಬರುತ್ತದೆ: (1ಕ) ಯಾವ ಯಾವ ಕಪಾಟುಗಳಲ್ಲಿ ಯಾವ ಯಾವ ಪುಸ್ತಕಗಳನ್ನು ಇರಿಸಬೇಕು? (1ಚ) ಯಾರು ಯಾರಿಗೆ ಯಾವ ಯಾವ ಪುಸ್ತಕ ಬೇಕು? ಇಂತಹ ಕೇಳ್ವಿಗಳನ್ನು ಹೊರತುಪಡಿಸಿ, ಸೊಲ್ಲಿನಲ್ಲಿ ಬರುವ ಪಾಂಗುಗಳಲ್ಲಿ ಒಂದಕ್ಕಿಂತ ಹೆಚ್ಚು ಪಾಂಗುಗಳನ್ನು ತಿಳಿಯದ ತೋರುಪದಗಳಾಗಿ ಬಳಸುವುದನ್ನು ಕೇಳ್ವಿಹಾಳೆ(ಪ್ರಶ್ನಪತ್ರಿಕೆ)ಗಳಲ್ಲಿ ಮಾತ್ರ ಕಾಣಬಹುದು: (1ಕ) ಅರಸನು ಯಾರನ್ನು ಯಾವಾಗ ಎಲ್ಲಿ ಕೊಲ್ಲಿಸಿದನು? (1ಚ) ಈ ಮಾತನ್ನು ಯಾರು ಯಾವಾಗ ಎಲ್ಲಿ ಮತ್ತು ಯಾಕಾಗಿ ಹೇಳಿದರು?

1.6.4 ಬೆರಗನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಕೆ

ಎಶ್ಟು, ಏನು ಮತ್ತು ಎಂತಹ ಎಂಬ ಮೂರು ತಿಳಿಯದ ತೋರುಪದಗಳನ್ನು ಬೆರಗನ್ನು ತಿಳಿಸುವ ಸೊಲ್ಲುಗಳಲ್ಲೂ ಬಳಸಲು ಬರುತ್ತದೆ. ಇಂತಹ ಸೊಲ್ಲುಗಳನ್ನು ಬಳಸಿ, ಒಂದು ಪಾಂಗಿನಲ್ಲಿರುವ ಪರಿಚೆ ಬೆರಗನ್ನುಂಟುಮಾಡುವಂತಿದೆ ಎಂಬುದಾಗಿ ತಿಳಿಸಲಾಗುತ್ತದೆ. (1ಕ) ಅವಳು ಎಶ್ಟು ಚನ್ನಾಗಿ ಹಾಡುತ್ತಾಳೆ!

(1ಚ) ಮದುವೆ ನಾಳೆಯಾದರೂ ಅವರ ಮನೆಯಲ್ಲಿ ಇವತ್ತೇ ಏನು ಗದ್ದಲ! (1ಟ) ನಿನ್ನೆ ಎಂತಹ ಮಳೆ ಬಂದಿತ್ತು! (1ಕ)ದಲ್ಲಿ ಹಾಡುವ ಎಸಕದ ಪರಿಚೆಯ ಕುರಿತಾಗಿ ಬೆರಗನ್ನು ತಿಳಿಸಲು ಚನ್ನಾಗಿ ಎಂಬ ಪರಿಚೆನುಡಿತದೊಂದಿಗೆ ಎಶ್ಟು ಎಂಬ ತಿಳಿಯದ ತೋರುಪದವನ್ನು ಬಳಸಲಾಗಿದೆ; ಇದೇ ರೀತಿಯಲ್ಲಿ ಗದ್ದಲದ ಕುರಿತು ಬೆರಗನ್ನು ಸೂಚಿಸಲು (1ಚ)ದಲ್ಲಿ ಏನು ಪದವನ್ನು, ಮತ್ತು ಮಳೆಯ ಕುರಿತು ಬೆರಗನ್ನು ಸೂಚಿಸಲು (1ಟ)ದಲ್ಲಿ ಎಂತಹ ಪದವನ್ನು ಬಳಸಲಾಗಿದೆ. ತೋರುಕೇಳ್ವಿಗಳಲ್ಲಿರುವ ಹಾಗೆ, ಬೆರಗುಸೊಲ್ಲುಗಳಲ್ಲೂ ಪರಿಚೆಗಳನ್ನು ಒಂದಕ್ಕೊಂದು ಸಂಬಂದಿಸಿ ಹೇಳಲು ಬರುವ ಹಾಗಿರುವಲ್ಲಿ ಎರಡೆರಡು ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ: (1ಕ) ಎಶ್ಟು ಚಿಕ್ಕ ಹುಡುಗಿಗೆ ಎಶ್ಟು ಹಾಡುಗಳು ಬರುತ್ತವೆ! (1ಚ) ಎಂತಹ ಹೆಣ್ಣಿಗೆ ಎಂತಹ ಗಂಡು! (1ಕ)ದಲ್ಲಿ ಹುಡುಗಿಯ ಹರಯವನ್ನು ಆಕೆಗೆ ಬರುವ ಹಾಡುಗಳ ಎಣಿಕೆಯೊಂದಿಗೆ ಸಂಬಂದಿಸಲಾಗಿದೆ, ಮತ್ತು (1ಚ)ದಲ್ಲಿ ಹೆಣ್ಣಿನ ರೂಪವನ್ನು ಗಂಡಿನ ರೂಪದೊಂದಿಗೆ ಸಂಬಂದಿಸಲಾಗಿದೆ ಎಂಬುದನ್ನು ಗಮನಿಸಬಹುದು. ಬೆರಗುಸೊಲ್ಲುಗಳಲ್ಲಿ ಒಂದು ಪಾಂಗಿನ ಪರಿಚೆ, ಎಣಿಕೆ, ಇಲ್ಲವೇ ಅಳವಿ ಎಂತಹದು ಎಂಬುದನ್ನು ಆಡುಗನಿಗೆ ಕಚಿತವಾಗಿ ಹೇಳಲು ಬರುವುದಿಲ್ಲ; ಆತನಲ್ಲಿರುವ ಈ ಬಲ್ಲತನದ ಇಲ್ಲಮೆಯನ್ನೇ ಅವುಗಳಲ್ಲಿ ಬರುವ ತಿಳಿಯದ ತೋರುಪದಗಳು ತಿಳಿಸುತ್ತವೆ ಎಂದು ಹೇಳಬಹುದು.

10.6.5 ಪತ್ತುಗೆಯ ಒಳಸೊಲ್ಲುಗಳಲ್ಲಿ ಬಳಕೆ

ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನಲ್ಲಿ ಬಂದಿರುವ ಹೆಸರುಪದದ ಪರಿಚೆನುಡಿತವನ್ನಾಗಿ ಮಾಡಲು ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಅದರ ಎಸಕಪದವನ್ನು ಪರಿಚೆರೂಪಕ್ಕೆ ಮಾರ್ಪಡಿಸಿ ಬಳಸುವುದು ಒಂದು ಹೊಲಬು: (1ಕ) ಹಲಸಿನ ಮರದ ಗೆಲ್ಲನ್ನು ಕಡಿದಿದ್ದಾರೆ. (1ಚ) ಹಲಸಿನ ಮರ ಸತ್ತುಹೋಗಿದೆ. (1ಟ) ಗೆಲ್ಲನ್ನು ಕಡಿದಿರುವ ಹಲಸಿನ ಮರ ಸತ್ತುಹೋಗಿದೆ.

(1ಟ) ಸೊಲ್ಲಿನಲ್ಲಿ (1ಕ) ಸೊಲ್ಲನ್ನು (1ಚ) ಸೊಲ್ಲಿನಲ್ಲಿ ಬಂದಿರುವ ಹಲಸಿನ ಮರ ಎಂಬುದರ ಪರಿಚೆನುಡಿತವನ್ನಾಗಿ ಮಾಡಿ ಬಳಸಲಾಗಿದೆ, ಮತ್ತು ಇದಕ್ಕಾಗಿ ಕಡಿದಿದ್ದಾರೆ ಎಂಬ (1ಕ) ಸೊಲ್ಲಿನ ಎಸಕಪದವನ್ನು ಕಡಿದಿರುವ ಎಂಬ ಪರಿಚೆರೂಪಕ್ಕೆ ಮಾರ್ಪಡಿಸಲಾಗಿದೆ; ಇದಲ್ಲದೆ, ಹಲಸಿನ ಮರ ಎಂಬುದು ಈ (1ಕ) ಮತ್ತು (1ಚ) ಸೊಲ್ಲುಗಳೆರಡರಲ್ಲೂ ಬಂದಿದೆಯಾದ ಕಾರಣ, ಅದನ್ನು (1ಕ) ಸೊಲ್ಲಿನ ಪರಿಚೆರೂಪದಿಂದ (1ಟ)ದಲ್ಲಿ ಬಿಟ್ಟುಕೊಡಲಾಗಿದೆ. ಸಂಬಂದಿಸಬೇಕಾಗಿರುವ ಹೆಸರುಪದದ ಮುಂದೆ ತಿಳಿಯದ ತೋರುಪದವೊಂದನ್ನು ಬಳಸಿ, ಮತ್ತು ಎಸಕಪದರೂಪದ ಕೊನೆಯಲ್ಲಿ ಓ ಒಟ್ಟನ್ನು ಬಳಸಿ, ಅದನ್ನು ಹೆಸರುಪದದೊಂದಿಗೆ ಸೇರಿಸುವುದು ಇನ್ನೊಂದು ಹೊಲಬು: (1ತ) ಯಾವ ಹಲಸಿನ ಮರವನ್ನು ಕಡಿದಿದ್ದಾರೋ ಆ ಹಲಸಿನ ಮರ ಸತ್ತುಹೋಗಿದೆ. (1ತ) ಸೊಲ್ಲಿನಲ್ಲಿ (1ಕ) ಸೊಲ್ಲಿನ ಹಲಸಿನ ಮರ ಎಂಬುದಕ್ಕೆ ಯಾವ ಎಂಬ ತಿಳಿಯದ ತೋರುಪದವನ್ನು ಸೇರಿಸಲಾಗಿದೆ, ಮತ್ತು ಕಡಿದಿದ್ದಾರೆ ಎಂಬ ಅದರ ಎಸಕಪದರೂಪಕ್ಕೆ ಓ ಒಟ್ಟನ್ನು ಸೇರಿಸಿ ಅದನ್ನು (1ಚ) ಸೊಲ್ಲಿನ ಹಲಸಿನ ಮರ ಎಂಬುದರ ಪರಿಚೆಯನ್ನಾಗಿ ಮಾಡಲಾಗಿದೆ. ಇದಲ್ಲದೆ, ಈ ರೀತಿ (1ಕ) ಮತ್ತು (1ಚ) ಸೊಲ್ಲುಗಳನ್ನು ಒಟ್ಟು ಸೇರಿಸಿ (1ತ) ಸೊಲ್ಲನ್ನು ಉಂಟುಮಾಡಿದಾಗ, ಅದರಲ್ಲಿ ಹಲಸಿನ ಮರ ಎಂಬುದು ಎರಡು ಬಾರಿ ಬರುತ್ತದೆಯಾದ ಕಾರಣ, ಅವೆರಡೂ ಒಂದೇ ಎಂಬುದನ್ನು ತಿಳಿಸಲು ಅದರ ಎರಡನೆಯ ಬಳಕೆಗೆ ಮೊದಲು ಆ ಎಂಬ ದೂರದ ತೋರುಪದವನ್ನು ಬಳಸಲಾಗಿದೆ. (1) ಹೆಸರುಪರಿಚೆಗಳ ಜಾಗದಲ್ಲಿ ಬರಬಲ್ಲ ಯಾವ, ಎಂತಹ, ಮತ್ತು ಎಶ್ಟು ಎಂಬ ಮೂರು ತಿಳಿಯದ ತೋರುಪದಗಳನ್ನು ಈ ರೀತಿ ಹೆಸರುಪದಗಳ ಪರಿಚೆಯನ್ನಾಗಿ ಮಾಡಿರುವ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ, ಮತ್ತು ಇಂತಹ ಸೊಲ್ಲುಗಳಲ್ಲಿ ಎರಡನೆಯ ಬಾರಿಗೆ ಬರುವ ಹೆಸರುಕಂತೆಯ ಮೊದಲು ಆ, ಅಂತಹ, ಮತ್ತು ಅಶ್ಟು ಎಂಬ ದೂರದ ತೋರುಪದಗಳನ್ನು ಬಳಸಲಾಗುತ್ತದೆ: (1ಕ) ಟೀಚರು ಯಾವ ಹುಡುಗರನ್ನು ಕರೆದಿದ್ದಾರೋ ಆ ಹುಡುಗರು ಇವತ್ತು ಬೇಗನೆ ಬಂದಿದ್ದಾರೆ. (1ಚ) ಅವನು ಎಂತಹ ಪುಸ್ತಕವನ್ನು ತರುತ್ತಾನೋ ಅಂತಹ ಪುಸ್ತಕವನ್ನು ನಾನೂ ತರುತ್ತೇನೆ.

(1ಟ) ಅವನು ಎಶ್ಟು ಹಣ ಕೊಡುತ್ತಾನೋ ಅಶ್ಟು ಹಣ ನಾನೂ ಕೊಡುತ್ತೇನೆ. (2) ಎರಡನೇ ಬಾರಿ ಬರುವ ಹೆಸರುಕಂತೆಯನ್ನು ಆ, ಅಂತಹ, ಮತ್ತು ಅಶ್ಟು ಎಂಬವುಗಳೊಂದಿಗೆ ಬಳಸುವ ಬದಲು, ಸೊಲ್ಲಿಗೆ ಹೊಂದಿಕೆಯಾಗುವಂತಹ ಹೆಸರುಪದಗಳ ಜಾಗದಲ್ಲಿ ಬರಬಲ್ಲ ದೂರದ ತೋರುಪದಗಳನ್ನೂ ಬಳಸಲು ಬರುತ್ತದೆ: (2ಕ) ಟೀಚರು ಯಾವ ಹುಡುಗರನ್ನು ಕರೆದಿದ್ದಾರೋ ಅವರು ಇವತ್ತು ಬೇಗನೆ ಬಂದಿದ್ದಾರೆ. (2ಚ) ಅವನು ಎಂತಹ ಪುಸ್ತಕವನ್ನು ತರುತ್ತಾನೋ ಅಂತಹದನ್ನು ನಾನೂ ತರುತ್ತೇನೆ. (2ಟ) ಅವನು ಎಶ್ಟು ಹಣ ಕೊಡುತ್ತಾನೋ ಅಶ್ಟನ್ನು ನಾನೂ ಕೊಡುತ್ತೇನೆ. (3) ಇದಲ್ಲದೆ, ಮೊದಲನೆಯ ಬಾರಿಗೆ ಬರುವ ಹೆಸರುಕಂತೆಯನ್ನೂ ಯಾವ, ಎಂತಹ, ಮತ್ತು ಎಶ್ಟು ಎಂಬ ತಿಳಿಯದ ತೋರುಪದಗಳೊಂದಿಗೆ ಬಳಸುವ ಬದಲು, ಸೊಲ್ಲಿಗೆ ಹೊಂದಿಕೆಯಾಗುವಂತಹ ಹೆಸರುಪದಗಳ ಜಾಗದಲ್ಲಿ ಬರಬಲ್ಲ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ: (1ಕ) ಟೀಚರು ಯಾರನ್ನು ಕರೆದಿದ್ದಾರೋ ಅವರು ಇವತ್ತು ಬೇಗನೆ ಬಂದಿದ್ದಾರೆ. (1ಚ) ಅವನು ಎಂತಹದನ್ನು ತರುತ್ತಾನೋ ಅಂತಹದನ್ನು ನಾನೂ ತರುತ್ತೇನೆ. (1ಟ) ಅವನು ಎಶ್ಟು ಕೊಡುತ್ತಾನೋ ಅಶ್ಟು ನಾನೂ ಕೊಡುತ್ತೇನೆ. (1ತ) ಅವನಿಗೆ ಏನು ಸಿಗುತ್ತದೆಯೋ ಅದು ನಿನಗೂ ಸಿಗುತ್ತದೆ. (4) ಎಸಕಪರಿಚೆಗಳ ಜಾಗದಲ್ಲಿ ಬರಬಲ್ಲ ತಿಳಿಯದ ತೋರುಪದಗಳನ್ನೂ ಇಂತಹ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ: (1ಕ) ಅದು ಎಲ್ಲಿ ಬೀಳುತ್ತದೆಯೋ ಅಲ್ಲಿ ಒಂದು ದೊಡ್ಡ ಗುಂಡಿಯಾಗುತ್ತದೆ. (1ಚ) ಅವನು ಯಾವಾಗ ಬರುತ್ತಾನೋ ಅಗ ನಾನೂ ಬರುತ್ತೇನೆ. (1ಟ) ಆಕೆ ಹೇಗೆ ನೀರಿನ ಕೊಡ ಹೊರುತ್ತಾಳೋ ಹಾಗೆ ಪುಸ್ತಕದ ಚೀಲವನ್ನೂ ಹೊರುತ್ತಾಳೆ.

(5) ಒಂದಕ್ಕಿಂತ ಹೆಚ್ಚು ಸೊಲ್ಲುಗಳನ್ನೂ ಈ ರೀತಿ ಇನ್ನೊಂದು ಸೊಲ್ಲಿನಲ್ಲಿ ಬಂದಿರುವ ಹೆಸರುಪದದ ಪರಿಚೆನುಡಿತವನ್ನಾಗಿ ಮಾಡಲು ಬರುತ್ತದೆ: (1ಕ) ಯಾವ ಪೆಟ್ಟಿಗೆಯನ್ನು ಚೀನಾದಿಂದ ತಂದಿದ್ದಾರೋ, ಯಾವುದು ಕಪ್ಪು ಬಣ್ಣದಲ್ಲಿದೆಯೋ, ಮತ್ತು ಯಾವುದನ್ನು ಕಾಗದದಿಂದ ಮಾಡಲಾಗಿದೆಯೋ, ಆ ಪೆಟ್ಟಿಗೆ ಕಪಾಟಿನಲ್ಲಿದೆ. (1ಚ) ಯಾವ ಶಾಲೆಯಲ್ಲಿ ಇವತ್ತು ಗವ್ಡರ ಮಗಳ ಮದುವೆ ಇದೆಯೋ ಮತ್ತು ಯಾವ ಶಾಲೆಗೆ ಇವತ್ತು ರಜೆ ಕೊಟ್ಟಿದ್ದಾರೋ ಆ ಶಾಲೆಗೆ ಇವತ್ತು ಇನ್ಸ್ಪೆಕ್ಟರ್ ಬಂದಿದ್ದಾರೆ. (1ಕ)ದಲ್ಲಿ ಪೆಟ್ಟಿಗೆಯನ್ನು ಚೀನಾದಿಂದ ತಂದಿದ್ದಾರೆ, ಪೆಟ್ಟಿಗೆ ಕಪ್ಪು ಬಣ್ಣದಲ್ಲಿದೆ, ಮತ್ತು ಪೆಟ್ಟಿಗೆಯನ್ನು ಕಾಗದದಿಂದ ಮಾಡಲಾಗಿದೆ ಎಂಬ ಮೂರು ಸೊಲ್ಲುಗಳನ್ನು ಪೆಟ್ಟಿಗೆ ಕಪಾಟಿನಲ್ಲಿದೆ ಎಂಬ ಸೊಲ್ಲಿನ ಪೆಟ್ಟಿಗೆ ಎಂಬ ಹೆಸರುಪದಕ್ಕೆ ಪರಿಚೆನುಡಿತವನ್ನಾಗಿ ಮಾಡಿ ಬಳಸಲಾಗಿದೆ. ಇದೇ ರೀತಿಯಲ್ಲಿ, ಎರಡು ಸೊಲ್ಲುಗಳನ್ನು (1ಚ)ದಲ್ಲಿ ಬೇರೊಂದು ಸೊಲ್ಲಿನ ಶಾಲೆ ಎಂಬ ಹೆಸರುಪದಕ್ಕೆ ಪರಿಚೆನುಡಿತವನ್ನಾಗಿ ಮಾಡಿ ಬಳಸಲಾಗಿದೆ. ಸೊಲ್ಲಿನ ಪಾಂಗುಗಳೊಂದಿಗೆ ಮಾತ್ರವಲ್ಲದೆ ಅದರ ಎಲ್ಲಾ ಬಗೆಯ ನೆರವು ಪಾಂಗುಗಳೊಂದಿಗೂ ಬೇರೊಂದು ಸೊಲ್ಲಿನ ಪರಿಚೆನುಡಿತವನ್ನು ಈ ರೀತಿ ತಿಳಿಯದ ತೋರುಪದದ ನೆರವಿನಿಂದ ಬಳಸಲು ಬರುತ್ತದೆ: (1ಕ) ಯಾವ ಬಿಸಿಲಿಗೆ ಆಕೆಯ ಬಟ್ಟೆಯೆಲ್ಲ ಒಣಗಿತ್ತೋ ಅದೇ ಬಿಸಿಲಿಗೆ ಆಕೆಯ ಹೂಗಿಡಗಳೂ ಬಾಡಿದ್ದುವು. (1ಚ) ಯಾವ ರಾಜನ ಮಗಳಿಗೆ ಮದುವೆಯಾಗಿ¯್ಲವೋ ಆ ರಾಜ ತುಂಬಾ ಬೇಸರದಲ್ಲಿದ್ದಾನೆ. (1ಟ) ಯಾವ ಕೆಲಸಕ್ಕಾಗಿ ನಾನು ಒಂದು ವಾರ ರಜೆ ತೆಗೆದುಕೊಂಡಿದ್ದೆನೋ ಆ ಕೆಲಸ ಮೂರು ದಿವಸದಲ್ಲೇ ಮುಗಿದುಹೋಗಿದೆ. (1ತ) ಯಾವ ಹುಡುಗನೊಂದಿಗೆ ಜಾನಕಿ ಸಂತೆಗೆ ಹೋಗಿದ್ದಳೋ ಆ ಹುಡುಗ ಕಾಣೆಯಾಗಿದ್ದಾನೆ. (1ಪ) ಯಾರ ಮನೆಯ ಹಾಗೆ ಅವರು ತಮ್ಮ ಮನೆಯನ್ನು ಕಟ್ಟಬೇಕೆಂದಿದ್ದಾರೋ ಆ ಮನೆ ಚೆನ್ನಯ್ಯಲ್ಲಿದೆ.

1.6.6 ಬೇರೆ ಬಗೆಯ ಒಳಸೊಲ್ಲುಗಳಲ್ಲಿ ಬಳಕೆ

ಹೆಸರುಪದಗಳ ಪರಿಚೆನುಡಿತಗಳಾಗಿ ಬರುವ ಒಳಸೊಲ್ಲುಗಳಲ್ಲಿ ಮಾತ್ರವಲ್ಲದೆ, ಬೇರೆ ಬಗೆಯ ಒಳಸೊಲ್ಲುಗಳಲ್ಲೂ ತಿಳಿಯದ ತೋರುಪದಗಳನ್ನು ಬಳಸಲು ಬರುತ್ತದೆ; ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಎಲ್ಲಿಗೆ ಹೋಗಿದ್ದಾನೆಂದು ನನಗೆ ಗೊತ್ತಿದೆ. (1ಚ) ಅವನು ಯಾರನ್ನು ಕಂಡಿದ್ದಾನೆಂಬುದನ್ನು ನನಗೆ ತಿಳಿಸಿದ್ದಾನೆ. (1ಟ) ಅವನು ಯಾವ ಮನೆಯನ್ನು ಕೊಂಡುಕೊಂಡಿದ್ದಾನೆಂಬುದು ಗೊತ್ತಾಗಿದೆ. (1ಕ)ದಲ್ಲಿ ಹೋಗಿರುವ ಜಾಗ ಯಾವುದು ಎಂಬುದನ್ನು ಕೇಳುಗನಿಗೆ ತಿಳಿಸಹೋಗದೆ, ಅದು ತನಗೆ ತಿಳಿದಿದೆಯೆಂಬುದನ್ನಶ್ಟೇ ಆತನಿಗೆ ತಿಳಿಸಲು ಎಲ್ಲಿಗೆ ಎಂಬ ತಿಳಿಯದ ತೋರುಪದವನ್ನು ಬಳಸಲಾಗಿದೆ; ಇಂತಹದೇ ಬಳಕೆಯನ್ನು (1ಚ) ಮತ್ತು (1ಟ)ಗಳಲ್ಲೂ ಕಾಣಬಹುದು. ಸೊಲ್ಲುಕೇಳ್ವಿಗಳಲ್ಲಿ ಬರಬಲ್ಲ ಎಲ್ಲಾ ತಿಳಿಯದ ತೋರುಪದಗಳೂ ಇಂತಹ ಒಳಸೊಲ್ಲುಗಳಲ್ಲಿ ಬಳಕೆಯಾಗಬಲ್ಲುವು.

10.7 ತಿರುಳು

Eke →

ಕೆಲವು ಅರಿಮೆಯ ಪದಗಳು ಅಡಿಹೇಳಿಕೆ ಠಿಡಿesuಠಿಠಿosiಣioಟಿ ಅರಿಕೆರೂಪ imಠಿeಡಿಚಿಣive ಅಲ್ಲಗಳೆತ ಟಿegಚಿಣioಟಿ C¼À« quantity, amount DUÀÄUÀ patient, theme ಆಗುಹ eveಟಿಣ DqÀÄUÀ speaker ಆಡುಗನ ನಿಲುವು mooಜ ಆಡುಪದ ಠಿeಡಿsoಟಿಚಿಟ ಠಿಡಿoಟಿouಟಿ Dj¸ÀzÀ non-selective Dj¹zÀ selective ಆಳ್ತನ humಚಿಟಿಟಿess ElÖ¼À structure ಇಪ್ಪುರುಳು ಚಿmbiguiಣಥಿ ಇರುವ ಹೆಸರು ಛಿommoಟಿ ಟಿಚಿme ಇರುವಿಕೆ exisಣeಟಿಛಿe ಇರುಹ sಣಚಿಣe ಇಸುವೆಸಕ ಛಿಚಿusಚಿಣive eveಟಿಣ FqÀÄ patient, theme ಈಪೊತ್ತು ಠಿಡಿeseಟಿಣ ಣeಟಿse G°PÀAvÉ syllable G¸ÀÄj animate JtÂPÉ number ಎಣಿಕೆಪದ ಟಿumeಡಿಚಿಟ ಎತ್ತಿಹೇಳು quoಣe ಎತ್ತುಗೆ exಚಿmಠಿಟe ಎತ್ತುಗೆ ಗುರುತು quoಣಚಿಣioಟಿ mಚಿಡಿಞ ಎತ್ತುಗೆಸೊಲ್ಲು quoಣeಜ seಟಿಣeಟಿಛಿe J¸ÀPÀ event ಎಸಕಪತ್ತುಗೆ ಛಿಚಿse ಎಸಕಪದ veಡಿb

ಎಸಕಪರಿಚೆ ಚಿಜveಡಿb ಒಗ್ಗುರುತಿಸುವಿಕೆ ಛಿoಡಿeಜಿeಡಿeಟಿಛಿe ಒಟ್ಟಲು ಹೆಸರು mಚಿss ಟಿouಟಿ MlÄÖ suffix, affix ಒತ್ತಾಸೆಯ ಜeoಟಿಣiಛಿ ಒತ್ತಿಹೇಳುವ emಠಿhಚಿಣiಛಿ MvÀÄÛ emphasis ಒತ್ತೆ ಹೆಸರು ಛಿouಟಿಣ ಟಿouಟಿ ಒಳತೋರ್ಕೆ eಟಿಜoಠಿhoಡಿiಛಿ ಜeixis ಒಳಸೊಲ್ಲು ಛಿಟಚಿuse, embeಜಜeಜ seಟಿಣeಟಿಛಿe NgÉtÂPÉ singular ಕಟ್ಟಲೆ ಡಿuಟe ಕಟ್ಟುಪಾಡು ಡಿesಣಡಿiಛಿಣioಟಿ PÀvÀ cause ಕಯ್ವಾಡ iಟಿಜಿಟueಟಿಛಿe PÁtâUÉ viewpoint ಕುಳ್ಳಿಹ ಛಿoಟಿಣexಣ PÀÆrPÉ conjunction ಕೇಳುಗ ಚಿಜಜಡಿessee, heಚಿಡಿeಡಿ ಕೇಳ್ವಿಪದ iಟಿಣeಡಿಡಿogಚಿಣive ಠಿಡಿoಟಿouಟಿ ಕೇಳ್ವಿಬರಿಗೆ quesಣioಟಿ mಚಿಡಿಞ ಕೊಗೆತ ಜesಛಿಡಿiಠಿಣioಟಿ ಕೊಟ್ಟ ಹೆಸರು ಠಿಡಿoಠಿeಡಿ ಟಿಚಿme ಗಮನರೂಪ voಛಿಚಿಣive ಗುರ್ತ geಟಿಜeಡಿ UÀÄj goal ಗುರುತುಮಾಡಿಸು iಜeಟಿಣiಜಿಥಿ ಜಾಗ ಪಾಂಗು ಟoಛಿಚಿಣioಟಿ ಜೋಡುಪದ ಛಿomಠಿouಟಿಜ ತಿಳಿದ ತೋರುಪದ ಜemoಟಿsಣಡಿಚಿಣive ಠಿಡಿoಟಿouಟಿ ತಿಳಿಯದ ತೋರುಪದ iಟಿಜeಜಿiಟಿiಣe ಠಿಡಿoಟಿouಟಿ ತಿಳಿಸುವ ಸೊಲ್ಲು iಟಿಜiಛಿಚಿಣive seಟಿಣeಟಿಛಿe ತೆರೆಯುಲಿ voತಿeಟ ತೋರ್ಕೆನಡು ಜeiಛಿಣiಛಿ ಛಿeಟಿಣಡಿe ತೋರ್ಕೆಯ ಜeiಛಿಣiಛಿ ತೋರುಪದ ಠಿಡಿoಜಿoಡಿm ನನಸು ಡಿeಚಿಟiಣಥಿ

ನಾಡುತಿಟ್ಟ mಚಿಠಿ ನಿರುಗೆ ಣಚಿbಟe ನುಡಿತ exಠಿಡಿessioಟಿ ನೆನಸು uಟಿಡಿeಚಿಟ, ಚಿbsಣಡಿಚಿಛಿಣ ನೆರವುಪಾಂಗು ಚಿಜರಿuಟಿಛಿಣ ನೆರೆವೆಸಕಪದ ಚಿuxiಟiಚಿಡಿಥಿ veಡಿb ನೆಲೆಗೊಳಿಸುವಿಕೆ gಡಿouಟಿಜiಟಿg ಪತ್ತುಗೆ ಡಿeಟಚಿಣioಟಿ ಪತ್ತುಗೆ ಒಟ್ಟು ಛಿಚಿse suಜಿಜಿix ಪತ್ತುಗೆಯ ಪದ ಡಿeಟಚಿಣioಟಿಚಿಟ ಟಿouಟಿ ಪತ್ತುಗೆಸೊಲ್ಲು ಡಿeಟಚಿಣive ಛಿಟಚಿuse ಪದಕಂತೆ ಠಿhಡಿಚಿse ¥ÀjZÉ property ಪರಿಚೆಪದ ಚಿಜರಿeಛಿಣive, ಚಿಜveಡಿb ¥ÀjdÄ form ಪಸುಗೆ ಛಿhಚಿಠಿಣeಡಿ ಪಾಂಗು ಛಿಚಿse ಡಿoಟe ಪಾಂಗುಕೇಳ್ವಿ ಛಿoಟಿsಣiಣueಟಿಣ quesಣioಟಿ §UÉ manner ಬೆರಗು ಸೊಲ್ಲು exಛಿಟಚಿmಚಿಣoಡಿಥಿ seಟಿಣeಟಿಛಿe ಬೇಡಿಕೆಯ ರೂಪ ಛಿoಟಿಜiಣioಟಿಚಿಟ ಜಿoಡಿm ಮದಿಪಿನ hoಟಿoಡಿiಜಿiಛಿ ಮಾಡುಗ ಜoeಡಿ ಮಾಡುಹ ಚಿಛಿಣiviಣಥಿ ಮಾರಿಕೆಯ ಪದ shiಜಿಣeಡಿ ಮುಂಬೊತ್ತು ಜಿuಣuಡಿe ಣeಟಿse ಸರಿಗಟ್ಟು equಚಿಣe ಸಿಕ್ಕಲು ಸೊಲ್ಲು ಛಿomಠಿಟex seಟಿಣeಟಿಛಿe ಸೀಳುಸೊಲ್ಲು ಛಿಟeಜಿಣeಜ seಟಿಣeಟಿಛಿe ಸುರು souಡಿಛಿe ಸುಳುಸೊಲ್ಲು simಠಿಟe seಟಿಣeಟಿಛಿe ಸೂಳುನುಡಿ ಛಿoಟಿveಡಿsಚಿಣioಟಿ ಸೊಲ್ಲರಿಮೆ gಡಿಚಿmmಚಿಡಿ ಸೊಲ್ಲು seಟಿಣeಟಿಛಿe ಸೊಲ್ಲುಕೇಳ್ವಿ ಥಿes-ಟಿo quesಣioಟಿ, seಟಿಣeಟಿಣiಚಿಟ quesಣioಟಿ ಹಂಚಿಕೆಯ ಜisಣಡಿibuಣive ºÀAvÀ level

ಹಲವೆಣಿಕೆ ಠಿಟuಡಿಚಿಟ ಹಿಂಬೊತ್ತು ಠಿಚಿsಣ ಣeಟಿse ಹಿನ್ನುಡಿತ ಚಿಟಿಣeಛಿeಜeಟಿಣ ಹುರುಳು meಚಿಟಿiಟಿg ಹೆಸರುಕಂತೆ ಟಿouಟಿ ಠಿhಡಿಚಿse ಹೆಸರುಪತ್ತುಗೆ geಟಿiಣive ಹೆಸರುಪದ ಟಿouಟಿ ಹೆಸರುಪರಿಚೆ ಚಿಜರಿeಛಿಣive ಹೇಳುಗ ಟಿಚಿಡಿಡಿಚಿಣoಡಿ ಹೊಂದಾಣಿಕೆ ಚಿgಡಿeemeಟಿಣ ಹೊರತೋರ್ಕೆ exoಠಿhoಡಿiಛಿ ಜeixis ಹೊರಪಡಿಕೆ exಛಿeಠಿಣioಟಿ ಹೊರಸೊಲ್ಲು mಚಿಣಡಿix seಟಿಣeಟಿಛಿe ಹೊಲಬು meಣhoಜ


← ಸೂಚಿ