ಕನ್ನಡ ಪದಗಳ ಒಳರಚನೆ
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Sarvam Vision OCR)
ಪರಿವಿಡಿ
- ಅಧ್ಯಾಯ 1 — ಪೀಠಿಕೆ
- ಅಧ್ಯಾಯ 2 — ಕನ್ನಡದ ಪದಗುಂಪುಗಳು
- ಅಧ್ಯಾಯ 3 — ನಾಮಪದಗಳ ಒಳರಚನೆ
- ಅಧ್ಯಾಯ 4 — ಪ್ರತ್ಯಯವಿರುವ ನಾಮಪದಗಳು
- ಅಧ್ಯಾಯ 5 — ಜೋಡುಪದಗಳು
- ಅಧ್ಯಾಯ 6 — ಕ್ರಿಯಾಪದಗಳ ಒಳರಚನೆ
- ಅಧ್ಯಾಯ 7 — ಗುಣಪದಗಳ ಒಳರಚನೆ
- ಅಧ್ಯಾಯ 8 — ಎರವಲಾಗಿ ಬಂದ ಪದಗಳ ಒಳರಚನೆ
- ಅಧ್ಯಾಯ 9 — ಮುಕ್ತಾಯ
ಅನುಕ್ರಮಣಿಕೆ
ಅಧ್ಯಾಯ ಒಂದು : ಪೀಠಿಕೆ
೧.೧ ಒಳರಚನೆ ೧೩ ೧.೨ ಒಳರಚನೆ ಮತ್ತು ಚರಿತ್ರೆ ೧೭ ೧.೩ ಪದಗಳು ಮತ್ತು ಇತರ ವಾಕ್ಯಾಂಗಗಳು ೧೭ ೧.೪ ಪದಗಳು ಮತ್ತು ಶಬ್ದಗಳು ೧೯ ೧.೫ ಪದಗಳು ಮತ್ತು ಪ್ರತ್ಯಯಗಳು ೨೧ ೧.೬ ಪದಪ್ರತ್ಯಯಗಳು ಮತ್ತು ಪದರೂಪ ಪ್ರತ್ಯಯಗಳು ೨೩ ೧.೬.೧ ತಯಾರಿಕೆ ಮತ್ತು ಬಳಕೆ ೨೫ ೧.೬.೨ ಬಳಕೆಯಲ್ಲಿ ಖಡ್ಡಾಯ ೨೫ ೧.೬.೩ ರೂಪಾವಳಿಗಳು ೨೬ ೧.೬.೪ ಎರವಲು ೨೭ ೧.೬.೫ ಅರ್ಥದಲ್ಲಿ ವ್ಯತ್ಯಾಸ ೨೮ ೧.೬.೬ ಬಳಕೆಯಲ್ಲಿಲ್ಲದ ಪದಗಳು ೨೯ ೧.೭ ಉತ್ಪಾದಕ ಮತ್ತು ಅನುತ್ಪಾದಕ ರಚನೆಗಳು ೩೦ ೧.೮ ಪುಸ್ತಕದ ಸ್ವರೂಪ ೩೨
ಅಧ್ಯಾಯ ಎರಡು: ಕನ್ನಡದ ಪದವರ್ಗಗಳು
೨.೧ ಪೀಠಿಕೆ ೩೪ ೨.೨ ಪದವರ್ಗದಲ್ಲಿ ವೈವಿಧ್ಯ ೩೬
ಕನ್ನಡ ಪದಗಳ ಒಳರಚನೆ
೨.೩ ಗುಣಧರ್ಮಗಳಲ್ಲಿ ವ್ಯತ್ಯಾಸ ೪೧ ೨.೩.೧ ನೇರವಾದ ಬಳಕೆ ೪೧ ೨.೩.೨ ಅರ್ಥದಲ್ಲಿ ವ್ಯತ್ಯಾಸ ೪೫ ೨.೩.೩ ಹೋಲಿಕೆಯನ್ನು ಸೂಚಿಸುವ ವಾಕ್ಯಗಳಲ್ಲಿ ಬಳಕೆ ೪೬ ೨.೩.೪ ಆಶ್ಚರ್ಯವನ್ನು ಸೂಚಿಸುವ ವಾಕ್ಯಗಳಲ್ಲಿ ಬಳಕೆ ೪೭ ೨.೩.೫ ಮಾರ್ದನಿ ಪದಗಳ ಬಳಕೆ ೪೮ ೨.೩.೬ ಬಳಕೆಯಲ್ಲಿ ಸ್ವಾತಂತ್ರ್ಯ ೪೯ ೨.೩.೭ ಸ್ಥಾಯಿ ಮತ್ತು ಅಸ್ಥಾಯಿ ೫೨ ೨.೪ ಪದವರ್ಗಗಳ ಸದಸ್ಯತ್ವ ೫೩ ೨.೫ ಸಾರಾಂಶ ೫೪
ಅಧ್ಯಾಯ ಮೂರು : ನಾಮಪದಗಳ ಒಳರಚನೆ
೩.೧ ಹೆಸರಿಸುವುದು ಮತ್ತು ವರ್ಣಿಸುವುದು ೫೬ ೩.೨ ಜೋಡುಪದಗಳು ಮತ್ತು ನಾಮಪದಗುಚ್ಛಗಳು ೬೦ ೩.೩ ವ್ಯತ್ಯಾಸಗಳು ೬೩ ೩.೩.೧ ತಯಾರಿಕೆ ಮತ್ತು ಬಳಕೆ ೬೩ ೩.೩.೨ ಗುಣಧರ್ಮದ ಆಯ್ಕೆ ೬೪ ೩.೩.೩ ಅರ್ಥದಲ್ಲಿ ವ್ಯತ್ಯಾಸ ೬೭ ೩.೩.೪ ಪರಿಮಿತಿಯಲ್ಲಿ ವ್ಯತ್ಯಾಸ ೬೯ ೩.೩.೫ ಬದಲಾವಣೆಯಲ್ಲಿ ವ್ಯತ್ಯಾಸ ೭೦ ೩.೩.೬ ಒಳರಚನೆಯ ನಿಯಮಗಳಲ್ಲಿ ವ್ಯತ್ಯಾಸ ೭೨ ೩.೩.೭ ನಾಮಪದಗಳು ಮತ್ತು ನಾಮಪದಗುಚ್ಛಗಳು ೭೩ ೩.೪ ವಿಭಜನೆಯ ಕೆಲವು ಸಮಸ್ಯೆಗಳು ೭೬ ೩.೫ ಹೆಸರಿಸುವ ನಾಮಪದಗಳಲ್ಲಿ ವೈವಿಧ್ಯ ೭೮ ೩.೬ ರೂಢನಾಮಗಳು ಮತ್ತು ಅಂಕಿತನಾಮಗಳು ೮೦ ೩.೬.೧ ಅರ್ಥದಲ್ಲಿ ವ್ಯತ್ಯಾಸ ೮೧ ೩.೬.೨ ಸಂಬಂಧದಲ್ಲಿ ವ್ಯತ್ಯಾಸ ೮೨ ೩.೬.೩ ಗಣ್ಯ ಮತ್ತು ಅಗಣ್ಯ ೮೪ ೩.೭ ಸಾರಾಂಶ ೮೫
8
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅನುಕ್ರಮಣಿಕೆ
ಅಧ್ಯಾಯ ನಾಲ್ಕು : ಪ್ರತ್ಯಯವಿರುವ ನಾಮಪದಗಳು
೪.೧ ಪೀಠಿಕೆ ೮೬ ೪.೨ ಪ್ರತ್ಯಯಗಳ ಸ್ವರೂಪ ೮೯ ೪.೩ ಕ್ರಿಯಾಪದಗಳಿಂದ ತಯಾರಾದ ನಾಮಪದಗಳು ೯೧ ೪.೩.೧ ಇಕೆ-ಇಗೆ ಪ್ರತ್ಯಯ ೯೧ (ಕ) ರೂಪಭೇದಗಳು ೯೨ (ಖ) ಅರ್ಥಭೇದಗಳು ೯೪ (ಗ) ನಾಮಪದಗಳೊಂದಿಗೆ ಬಳಕೆ ೯೫ (ಘ) ಇಕೆ ಎಂಬ ಪದರೂಪ ಪ್ರತ್ಯಯ ೯೬ (ಙ) ಕೆಲವು ವ್ಯತ್ಯಾಸಗಳು ೯೭ ೪.೩.೨ ತ-ತ್ ಪ್ರತ್ಯಯ ೯೯ ೪.೩.೩ ಅ ಪ್ರತ್ಯಯ ೧೦೧ ೪.೩.೪ ವು ಪ್ರತ್ಯಯ ೧೦೨ ೪.೩.೫ ವಳಿ ಪ್ರತ್ಯಯ ೧೦೩ ೪.೩.೬ ವಣ್ ಪ್ರತ್ಯಯ ೧೦೪ ೪.೩.೭ ಎ ಪ್ರತ್ಯಯ ೧೦೪ ೪.೩.೮ ಅಲು ಪ್ರತ್ಯಯ ೧೦೫ ೪.೩.೯ ಕು ಪ್ರತ್ಯಯ ೧೦೬ ೪.೩.೧೦ ‘ಸೊನ್ನೆ’ ಪ್ರತ್ಯಯ ೧೦೬ ೪.೩.೧೧ ಬೇರೆ ಕೆಲವು ಪ್ರತ್ಯಯಗಳು ೧೦೭ ೪.೪ ನಾಮಪದಗಳಿಂದ ತಯಾರಾದ ನಾಮಪದಗಳು ೧೦೯ ೪.೫ ಗುಣಪದಗಳಿಂದ ತಯಾರಾದ ನಾಮಪದಗಳು ೧೧೨ ೪.೫.೧ ನೇರವಾದ ಬಳಕೆ ೧೧೨ ೪.೫.೨ ಪ್ರತ್ಯಯಗಳ ಬಳಕೆ ೧೧೪ ೪.೬ ಸಾರಾಂಶ ೧೧೬
9
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅಧ್ಯಾಯ ಐದು : ಜೋಡುಪದಗಳು
೫.೧ ಗೊಂದಲವನ್ನು ಹೋಗಲಾಡಿಸುವುದು ೧೧೭ ೫.೨ ಜೋಡುಪದಗಳು ಮತ್ತು ಪದಗುಚ್ಛಗಳು ೧೧೮ ೫.೩ ಜೋಡುಪದಗಳು ಮತ್ತು ಪ್ರತ್ಯಯವಿರುವ ಪದಗಳು ೧೨೨ ೫.೪ ಜೋಡುಪದಗಳ ಗುಣಧರ್ಮಗಳು ೧೨೪ ೫.೫ ಜೋಡುಪದಗಳ ಒಳರಚನೆ ೧೨೬ ೫.೬ ಜೋಡುಪದಗಳ ವಿಭಜನೆ ೧೩೦ ೫.೬.೧ ಸಂಖ್ಯೆಯನ್ನು ಬಳಸುವ ವಿಭಜನೆ ೧೩೨ ೫.೬.೨ ಪದವರ್ಗವನ್ನು ಬಳಸುವ ವಿಭಜನೆ ೧೩೨ (ಕ) ಮೊದಲನೆಯ ಅಂಗ ನಾಮಪದ ೧೩೩ (ಖ) ಮೊದಲನೆಯ ಅಂಗ ಕ್ರಿಯಾಪದ ೧೩೬ (ಗ) ಮೊದಲನೆಯ ಅಂಗ ಗುಣಪದ ೧೩೮ ೫.೬.೩ ಎರಡನೆಯ ಅಂಗದಲ್ಲಿ ವೈವಿಧ್ಯ ೧೪೩ ೫.೬.೪ ಕೇಂದ್ರಬಿಂದುವಿನ ಸ್ಥಾನವನ್ನು ಬಳಸುವ ವಿಭಜನೆ ೧೪೫ ೫.೭ ಸೇರಿಕೆಯ ನಿಯಮಗಳು ೧೪೮ ೫.೭.೧ ಎರಡನೆಯ ಪದದ ಬದಲಾವಣೆಗಳು ೧೪೮ ೫.೭.೨ ಮೊದಲನೆಯ ಪದದ ಬದಲಾವಣೆಗಳು ೧೪೯ ೫.೮ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆ ೧೫೩ ೫.೮.೧ ವಿಭಜನೆಯ ಆಧಾರ ೧೫೪ ೫.೮.೨ ಪದವರ್ಗಗಳ ಸಂಖ್ಯೆ ೧೫೬ ೫.೮.೩ ವಿಶೇಷಣಗಳು ಮತ್ತು ವಿಶೇಷ್ಯಗಳು ೧೫೭ ೫.೮.೪ ಸುಬಂತ ಪ್ರತ್ಯಯ ೧೬೦ ೫.೮.೫ ಅವ್ಯಯಿಭಾವ ಸಮಾಸ ೧೬೨ ೫.೮.೬ ದ್ವಂದ್ವ ಸಮಾಸ ೧೬೪ ೫.೮.೭ ಗಮಕ ಸಮಾಸ ೧೬೪ ೫.೮.೮ ಕ್ರಿಯಾಸಮಾಸ ೧೬೭ ೫.೯ ಸಾರಾಶ ೧೬೮
10
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅನುಕ್ರಮಣಿಕೆ
ಅಧ್ಯಾಯ ಆರು : ಕ್ರಿಯಾಪದಗಳ ಒಳರಚನೆ
೬.೧ ಪೀಠಿಕೆ ೧೬೯ ೬.೧.೧ ಕ್ರಿಯಾಪದಗಳ ಕೆಲಸ ೧೬೯ ೬.೧.೨ ಕ್ರಿಯಾಸಮಾಸ ೧೭೧ ೬.೨ ಒಳರಚನೆಯಿಲ್ಲದ ಕ್ರಿಯಾಪದಗಳು ೧೭೨ ೬.೩ ಕೆಲವು ಪಳೆಯಳಿಕೆಗಳು ೧೭೪ ೬.೩.೧ ಚು ಪ್ರತ್ಯಯ ೧೭೫ ೬.೩.೨ ಬೇರೆ ಕೆಲವು ಪ್ರತ್ಯಯಗಳು ೧೭೬ ೬.೪ ಇಸು ಪ್ರತ್ಯಯದ ಬಳಕೆ ೧೭೭ ೬.೫ ಕೂಡುಪದಗಳು ೧೭೯ ೬.೫.೧ ಕೂಡುಪದಗಳು ಮತ್ತು ಜೋಡುಪದಗಳು ೧೭೯ ೬.೫.೨ ಕೂಡುಪದಗಳ ರಚನೆ ೧೮೦ ೬.೫.೩ ಬೇರೆ ಕೆಲವು ಕ್ರಿಯಾಪದಗಳ ಬಳಕೆ ೧೮೬ ೬.೬ ಸಾರಾಂಶ ೧೮೭
ಅಧ್ಯಾಯ ಏಳು : ಗುಣಪದಗಳ ಒಳರಚನೆ
೭.೧ ಪೀಠಿಕೆ ೧೮೮ ೭.೨ ಕೆಲವು ವ್ಯತ್ಯಾಸಗಳು ೧೮೯ ೭.೩ ಗುಣಪದಗಳ ಸ್ವರೂಪ ೧೯೦ ೭.೪ ಪ್ರತ್ಯಯಗಳ ಬಳಕೆ ೧೯೩ ೭.೫ ಸಾರಾಂಶ ೧೯೪
ಅಧ್ಯಾಯ ಎಂಟು : ಎರವಲಾಗಿ ಬಂದ ಪದಗಳ ಒಳರಚನೆ
೮.೧ ಎರವಲಿನ ಸ್ವರೂಪ ೧೯೫ ೮.೧.೧ ಭಾಷೆಗಳೊಳಗೆ ಎರವಲಿನಲ್ಲಿ ವೈವಿಧ್ಯ ೧೯೫ ೮.೧.೨ ತತ್ಸಮ ಮತ್ತು ತದ್ಭವ ಪದಗಳು ೧೯೭ ೮.೧.೩ ಬದಲಾವಣೆಗಳಿಗೆ ಕಾರಣಗಳು ೧೯೮ ೮.೧.೪ ಪದಗಳ ವರ್ಗಭೇದ ೨೦೦
11
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
೮.೨ ಎರವಲಾಗಿ ಬಂದ ಪದಗಳ ಒಳರಚನೆ ೨೦೧ ೮.೨.೧ ಒಳರಚನೆಯಲ್ಲಿ ವ್ಯತ್ಯಾಸ ೨೦೧ ೮.೨.೨ ಎರವಲು ಕೊಟ್ಟ ಭಾಷೆಯ ನಿಯಮಗಳು ೨೦೩ ೮.೨.೩ ಪದಗಳ ವಿಭಜನೆ ೨೦೪ ೮.೩ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ೨೦೪ ೮.೩.೧ ಪದವರ್ಗದಲ್ಲಿ ವ್ಯತ್ಯಾಸ ೨೦೬ ೮.೩.೨ ಪೂರ್ವ ಮತ್ತು ಪರ ಪ್ರತ್ಯಯಗಳು ೨೦೭ ೮.೩.೩ ಧಾತುಗಳಲ್ಲಿ ವ್ಯತ್ಯಾಸ ೨೧೦ ೮.೩.೪ ತಯಾರಿಕೆ ಮತ್ತು ಬಳಕೆ ೨೧೧ ೮.೪ ಪ್ರತ್ಯಯವಿರುವ ಪದಗಳು ೨೧೭ ೮.೪.೧ ಪೂರ್ವಪ್ರತ್ಯಯಗಳು ೨೧೭ ೮.೪.೨ ಪರಪ್ರತ್ಯಯಗಳು ೨೨೦ ೮.೪.೩ ಪದಗಳಲ್ಲಿ ಬದಲಾವಣೆ ೨೨೪ ೮.೫ ಕ್ರಿಯಾಪದಗಳು ೨೨೫ ೮.೬ ಜೋಡುಪದಗಳು ೨೨೭ ೮.೭ ಸಾರಾಂಶ ೨೨೯
ಅಧ್ಯಾಯ ಒಂಬತ್ತು : ಮುಕ್ತಾಯ ೨೩೧
ಗ್ರಂಥಸೂಚಿ ೨೩೪ ವಿಷಯಸೂಚಿ ೨೩೬
12
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
೧. ಮುನ್ನೋಟ
೧.೧ ಒಳರಚನೆ
ಕನ್ನಡದ ಸೊಲ್ಲುಗಳಲ್ಲಿ ಮುಕ್ಯವಾಗಿ ಎರಡು ರೀತಿಯ ಪದಗಳು ಬಳಕೆಯಲ್ಲಿವೆ. ಒಳರಚನೆಯಿರುವ ಪದಗಳು ಮತ್ತು ಒಳರಚನೆಯಿಲ್ಲದ ಪದಗಳು. ಎತ್ತುಗೆಗಾಗಿ, ಮುನ್ನುಡಿ ಎಂಬ ಪದಕ್ಕೆ ಒಳರಚನೆಯಿದೆ. ಮುಂದೆ ಮತ್ತು ನುಡಿ ಎಂಬ ಎರಡು ಪದಗಳು ಒಟ್ಟು ಸೇರಿ ಈ ಮುನ್ನುಡಿ ಎಂಬ ಪದ ತಯಾರಾಗಿದೆ; ಮತ್ತು ಹೀಗೆ ತಯಾರಾಗುವಾಗ, ಮುಂದೆ ಎಂಬ ಪದ ಅದರ ಮುನ್ ಎಂಬ ಅಡಕ ರೂಪದಲ್ಲಿ ಬಂದಿದೆ.
ಇದಕ್ಕೆ ಬದಲು, ತಲೆ ಎಂಬ ಪದಕ್ಕೆ ಒಳರಚನೆಯೆಂಬುದಿಲ್ಲ. ಅದು ತಕಾರ, ಅಕಾರ, ಲಕಾರ ಮತ್ತು ಎಕಾರಗಳ ಸೇರಿಕೆಯಿಂದ ತಯಾರಾಗಿದೆಯೇನೋ ನಿಜ; ಆದರೆ, ಹೀಗೆ ಒಟ್ಟು ಸೇರಿರುವ ಈ ಉಲಿಗಳನ್ನು ಮುನ್ನುಡಿ ಎಂಬ ಒಳರಚನೆಯಿರುವ ಪದದಲ್ಲಿ ಕಾಣಿಸುವ ಹಾಗೆ ಎರಡು ಪದಗಳಾಗಿ, ಇಲ್ಲವೇ ಕುಣಿತ ಎಂಬ ಇನ್ನೊಂದು ಒಳರಚನೆಯಿರುವ ಪದದಲ್ಲಿ ಕಾಣಿಸುವ ಹಾಗೆ ಕುಣಿ ಎಂಬ ಒಂದು ಪದ ಮತ್ತು ತ ಎಂಬ ಒಂದು ಒಟ್ಟು (ಒಟ್ಟು) ಎಂಬುದಾಗಿ ಒಡೆದು ಹೇಳಲಾರೆವು.
ಈ ಪುಸ್ತಕದಲ್ಲಿ ಮುಕ್ಯವಾಗಿ ಒಳರಚನೆಯಿರುವ ಕನ್ನಡ ಪದಗಳನ್ನು ಪರಿಶೀಲಿಸಬೇಕಾಗಿದೆ. ಎಂದರೆ, ಅಂತಹ ಪದಗಳ ಅಂಗಗಳಾಗಿ ಬರುವ ಪದಗಳು ಮತ್ತು ಒಟ್ಟುಗಳು ಯಾವುವು, ಅವುಗಳ ನಡುವೆ ಎಂತಹ ಸಂಬಂದವಿದೆ, ಮತ್ತು ಈ ರೀತಿ ಒಂದು ಪದದ ಅಂಗಗಳಾಗಿ ಬರುವಾಗ ಅವುಗಳಲ್ಲಿ ಎಂತಹ ಮಾರಾಡುಗಳೆಲ್ಲ ನಡೆಯುತ್ತವೆ ಎಂಬುದನ್ನು ಕಂಡುಹಿಡಿಯಬೇಕಾಗಿದೆ.
ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ಮುನ್ನುಡಿ ಎಂಬ ಪದದ ಅಂಗವಾಗಿ ಬಂದಿರುವ ನುಡಿ ಎಂಬುದು ಒಂದು ಎಸಕಪದವೇ ಇಲ್ಲವೇ ಅದೇ ರೂಪದ ಒಂದು ಹೆಸರುಪದವೇ? ಅದಕ್ಕೂ ಮುಂದೆ ಎಂಬ ಇನ್ನೊಂದು ಅಂಗಕ್ಕೂ ಅದಕ್ಕೂ ನಡುವ ಈ ಪದದಲ್ಲಿ ಎಂತಹ ಸಂಬಂಧವಿದೆ? ನುಡಿ ಎಂಬುದು ಎಸಕಪದವಾದರೆ, ಅದರಿಂದ ಮುನ್ನುಡಿ ಎಂಬ ಹೆಸರುಪದ ಹೇಗೆ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ತಯಾರಾಗುತ್ತದೆ? ಅದು ಹೆಸರುಪದವಾದರೆ, ಮುಂದೆ ಎಂಬ ಪರಿಚೆಪದದೊಂದಿಗೆ ಅದು ಹೇಗೆ ಸಂಬಂಧಿಸುತ್ತದೆ? ಅವೆರಡರ ನಡುವೆ ಮುನ್ನುಡಿ ಎಂಬ ಪದದಲ್ಲಿ ಕಾಣಿಸದಿರುವ ಒಂದು ಇಲ್ಲವೇ ಹೆಚ್ಚು ಎಸಕಪದಗಳನ್ನಿರಿಸಿ ಮುಂದಾಗಿ ಹೇಳುವ ನುಡಿ ಎಂಬುದರೊಂದಿಗೆ ಅದನ್ನು ಸಂಬಂದಿಸಬೇಕೇ, ಇಲ್ಲವೇ ಮುಂದೆ ಎಂಬುದನ್ನು ಮುಂದಿನ ಎಂಬುದಾಗಿ ಮಾರ್ಪಡಿಸಿಕೊಳ್ಳಬೇಕೇ? ಇಂತಹ ಹಲವಾರು ಕೇಳ್ವಿಗಳು ಈ ಪದದ ಒಳರಚನೆಯನ್ನು ಪರಿಶೀಲಿಸುವಾಗ ನಮ್ಮೆದುರು ನಿಲ್ಲುತ್ತವೆ.
ಒಳರಚನೆಯಿರುವ ಪದಗಳನ್ನು ಸೊಲ್ಲುಗಳಲ್ಲಿ ಬಳಸಬೇಕಾದಾಗಲೆಲ್ಲ ನಾವು ಅವುಗಳ ಒಳರಚನೆಯಂತಹದು ಎಂಬುದನ್ನು ತಿಳಿದಿರಲೇಬೇಕೆಂದೇನೂ ಇಲ್ಲ. ಆ ಪದಗಳ ಹುರುಳೇನು ಮತ್ತು ಸೊಲ್ಲುಗಳಲ್ಲಿ ಅವುಗಳನ್ನು ಬಳಸುವ ಬಗೆ ಹೇಗೆ ಎಂದಿಶ್ಚನ್ನು ಮಾತ್ರ ತಿಳಿದಿದ್ದರೆ ಸಾಕು. ಈ ವಿಷಯದಲ್ಲಿ ಒಳರಚನೆಯಿರುವ ಪದಗಳಿಗೂ ಒಳರಚನೆಯಿಲ್ಲದ ಪದಗಳಿಗೂ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.
ಈ ಕಾರಣಕ್ಕಾಗಿ ಪದರಚನೆಯೆಂಬುದು ಸೊಲ್ಲರಿಮೆಯ ಅಂಗವಲ್ಲವೆಂಬುದಾಗಿ ವಾದಿಸುವವರೂ ಕೆಲವರಿದ್ದಾರೆ. ಹೆಸರುಪದಗಳ ಬಳಕೆಯ ಮಟ್ಟಿಗೆ ಹೇಳುವುದಾದರೆ ಇದು ಒಂದು ರೀತಿಯಲ್ಲಿ ನಿಜವೆಂದೂ ಅನಿಸದಿರದು. ಯಾಕೆಂದರೆ ಅವುಗಳ ಹುರುಳೇನು ಎಂಬುದನ್ನು ಇಲ್ಲವೇ ಸೊಲ್ಲುಗಳಲ್ಲಿ ಅವನ್ನು ಬಳಸುವ ಬಗೆ ಹೇಗೆ ಎಂಬುದನ್ನು ಒಳರಚನೆಯ ಆದಾರದ ಮೇಲೆ ಮಾತ್ರವೇ ತಿಳಿದುಕೊಳ್ಳಲು ಹೆಚ್ಚಿನೆಡೆಗಳಲ್ಲೂ ಸಾದ್ಯವಾಗುವುದಿಲ್ಲ (೩.೩.೩ ನೋಡಿ).
ಹೀಗಿದ್ದರೂ ಕೂಡ, ಹಲವಾರು ಕಡೆಗಳಲ್ಲಿ ಪದಗಳ ಒಳರಚನೆ ನಮ್ಮ ಸಹಾಯಕ್ಕೆ ಬರುತ್ತದೆ. ಎತ್ತುಗೆಗಾಗಿ ನಮ್ಮ ನುಡಿಯಲ್ಲಿ ಬಳಕೆಯಾಗುವ ಎಲ್ಲಾ ಪದಗಳನ್ನೂ ನಾವು ತಿಳಿದಿರುವುದಿಲ್ಲ. ಇದಲ್ಲದೆ ಗೊತ್ತಿದ್ದರೂ ನೆನಪಿನಲ್ಲಿ ಉಳಿಯುವ ಪದಗಳ ಎಣಿಕೆ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ.
ನಮಗೆ ಗೊತ್ತಿಲ್ಲದ ಇಲ್ಲವೇ ನೆನಪಿನಲ್ಲಿಲ್ಲದ ಪದಗಳನ್ನು ಬೇರೆ ಯಾರಾದರೂ ಬಳಸಿದಲ್ಲಿ ಅದರ ಹುರುಳೇನಿರಬಹುದು ಎಂಬುದನ್ನು ಸ್ವಲ್ಪ ಮಟ್ಟಿಗೆ ಅದನ್ನು ಬಳಸಿದ ಸಂದರ್ಹದ ಸಹಾಯದಿಂದ ಊಹಿಸಿಕೊಳ್ಳಬಲ್ಲೆವು ಮತ್ತು ಇನ್ನು ಸ್ವಲ್ಪ ಮಟ್ಟಿಗೆ ಅದರ ಒಳರಚನೆಯೇನು ಎಂಬುದನ್ನು ಕಂಡುಹಿಡಿಯಬಲ್ಲೆವಾದರೆ ಅದರಿಂದಲೂ ಊಹಿಸಿಕೊಳ್ಳಬಲ್ಲೆವು.
ಬೇರೆ ಕೆಲವು ಸಂದರ್ಭಗಳಲ್ಲೂ ಪದಗಳ ಒಳರಚನೆ ನಮಗೆ ಒದವಿಯನ್ನೊದಗಿಸುತ್ತದೆ. ಎತ್ತುಗೆಗಾಗಿ, ಪದಗಳಿಗೆ ಹೊಸ ಹೊಸ ಬಳಕೆಗಳನ್ನು ಉಂಟುಮಾಡಿಕೊಡಲು ಬಯಸುವ ಮಾತುಗಾರರಿಗೆ ಮತ್ತು ಬರಹಗಾರರಿಗೆ ಅವುಗಳ ಒಳರಚನೆಯ ಅರಿವು ಸಹಾಯಕವಾಗಬಲ್ಲುದು.
14
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಸಂಶೋಧನೆಗಳಲ್ಲಿ ತೊಡಗಿರುವವರು ಹೊಸ ಹೊಸ ವಿಷಯಗಳನ್ನು ಇಲ್ಲವೇ ವಿದಾನಗಳನ್ನು ಕಂಡುಹಿಡಿದಾಗ ಅವನ್ನು ಹೆಸರಿಸುವುದಕ್ಕಾಗಿ ಹೊಸ ಹೊಸ ಪದಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ; ಬೇರೆ ನುಡಿಗಳಲ್ಲಿರುವ ಬರಹಗಳನ್ನು ತಮ್ಮ ನುಡಿಗೆ ನುಡಿಮಾರ(ಅನುವಾದಿಸ)ಬೇಕಾದಾಗಲೂ ಅವುಗಳಲ್ಲಿ ಬರುವ ಪದಗಳಿಗೆ ಸರಿಹೊಂದುವ ಪದಗಳನ್ನು ತಮ್ಮ ನುಡಿಯಲ್ಲಿ ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ.
ಇದಲ್ಲದೆ ಹೊಸದಾಗಿ ಮೂಡಿಬರುವ ಸುದ್ದಿಗಳನ್ನು ಒಡನೆಯೇ ಬರೆದುಕೊಡಬೇಕಾಗಿರುವ ದಿನಪತ್ರಿಕೆಗಳ ವರದಿಗಾರರೂ ಹೊಸ ಹೊಸ ಪದಗಳನ್ನು ಆಗಾಗ ಉಂಟುಮಾಡಿಕೊಳ್ಳಬೇಕಾಗುತ್ತದೆ. ಇಂತಹ ಕಡೆಗಳಲ್ಲೆಲ್ಲ ನುಡಿಯನ್ನು ಬಳಸುವವರಿಗೆ ತಮ್ಮ ನುಡಿಯಲ್ಲಿ ಬರುವ ಪದಳ ಒಳರಚನೆಯಂತಹದು ಮತ್ತು ಅದರ ಹಿಂದಿರುವ ಕಟ್ಟಳೆ(ನಿಯಮ)ಗಳೆಂತಹವು ಎಂಬುದು ತಿಳಿದಿದೆಯಾದರೆ ಅವರ ಕೆಲಸ ಹೆಚ್ಚು ಸುಲಬವಾಗಬಲ್ಲುದು.
೧.೨ ಒಳರಚನೆ ಮತ್ತು ಚರಿತ್ರೆ
ಪದಗಳ ಒಳರಚನೆಯೆಂಬುದು ಮುಕ್ಯವಾಗಿ ಆ ಪದಗಳ ಚರಿತ್ರೆಯ ಮೇಲೆ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಮೇಲೆ ವಿವರಿಸಿರುವ ಬೇರೆ ಬೇರೆ ರೀತಿಯ ಸಂದರ್ಭಗಳಲ್ಲಿ ನುಡಿಯೊಂದನ್ನು ಬಳಸುವ ಜನರಿಗೆ ಅವರೆದುರಿರುವ ವಸ್ತುಗಳನ್ನು ಇಲ್ಲವೇ ಅವರ ಮನಸ್ಸಿನಲ್ಲಿರುವ ವಿಷಯಗಳನ್ನು ಹೆಸರಿಸಲು ಸರಿ ಯಾದ ಪದ ಸಿಗದಿದ್ದಾಗ, ಅವರು ತಮ್ಮ ನುಡಿಯಲ್ಲಿರುವ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟು ಸೇರಿಸಿ, ಇಲ್ಲವೇ ಪದವೊಂದಕ್ಕೆ ಒಂದೋ ಎರಡೋ ಒಟ್ಟುಗಳನ್ನು ಸೇರಿಸಿ ಹೊಸ ಹೆಸರುಗಳನ್ನು ತಯಾರುಮಾಡಿರಬೇಕು. ಮುಂದೆ ಆ ಹೆಸರುಗಳು ಬೇರೆ ಬೇರೆ ಜನರ ಮಾತಿನಲ್ಲಿ ಸೇರಿಕೊಂಡು ನುಡಿಯ ಪದಗಳಾಗಿ ಬಳಕೆಗೆ ಬಂದಿರಬೇಕು.
ಒಳರಚನೆಯಿರುವ ಪದಗಳೆಲ್ಲವೂ ಇದೇ ರೀತಿಯಲ್ಲಿ ಬೇರೆ ಬೇರೆ ಜನರು ಬೇರೆ ಬೇರೆ ಸಂದರ್ಭಗಳಲ್ಲಿ ಉಂಟುಮಾಡಿ ಬಳಕೆಗೆ ತಂದಿರುವ ಪದಗಳೆಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಅವುಗಳ ಒಳರಚನೆಯೆಂಬುದು ಯಾರು ಯಾವ ಕಾರಣಕ್ಕಾಗಿ ಯಾವ ರೀತಿಯಲ್ಲಿ ಅವನ್ನು ಮೇಲೆ ಹೇಳಿದಂತೆ ಉಂಟುಮಾಡಿ ಬಳಕೆಗೆ ತಂದರು ಎಂಬ ಚಾರಿತ್ರಿಕ ಅಂಶದ ಮೇಲೆ ಅವಲಂಬಿಸಿರುತ್ತದೆ.
ಪದವೊಂದನ್ನು ಬಳಕೆಗೆ ತಂದಿರುವ ಸಮಯದಲ್ಲಿ ಅದರ ಒಳರಚನೆ ಮತ್ತು ಚರಿತ್ರೆ ಇವೆರಡೂ ಒಂದೇ ಆಗಿರುತ್ತವೆ. ಆದರೆ, ಅದರ ಬಳಕೆಯಾಗುತ್ತಿದ್ದಂತೆ, ಈ ಚರಿತ್ರೆಗೂ ಒಳರಚನೆಗೂ ನಡುವೆ ಹಲಕೆಲವು ವ್ಯತ್ಯಾಸಗಳು ಮೂಡಿಬರಬಲ್ಲುವು. ಯಾಕೆಂದರೆ, ಪದವೊಂದಕ್ಕೆ ನುಡಿಯಲ್ಲಿ
15
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಇವತ್ತು ಎಂತಹ ಸ್ಥಾನವಿದೆ, ಅದಕ್ಕೂ ನುಡಿಯ ಇತರ ಪದಗಳಿಗೂ ನಡುವೆ ಇವತ್ತು ಎಂತಹ ಸಂಬಂಧವಿದೆ ಎಂಬುದರ ಮೇಲೂ ಅದರ ಒಳರಚನೆ ಅವಲಂಬಿಸಿರಬಲ್ಲುದು.
ಒಂದು ನುಡಿಯಲ್ಲಿರುವ ಪದಗಳು ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಮಾರಾಡುಗಳಿಗೆ ಒಳಗಾಗುತ್ತಿರುತ್ತವೆ. ಈ ಮಾರಾಡುಗಳಿಂದಾಗಿ ಅವುಗಳ ಒಳರಚನೆಯಲ್ಲಿ ಬಳಕೆಯಾಗಿರುವ ಪದಗಳಲ್ಲಿ ಕೆಲವು ಮೊಟಕುಗೊಂಡು ಒಟ್ಟುಗಳ ರೂಪವನ್ನು ಪಡೆಯುತ್ತವೆ. ಎತ್ತುಗೆಗಾಗಿ ಹಳೆಗನ್ನಡದಲ್ಲಿ ಇಸು ಎಂಬುದು ಒಂದು ಎಸಕಪದವಾಗಿತ್ತು. ಆದರೆ ಇವತ್ತು ಹೊಸಗನ್ನಡದಲ್ಲಿ ಅದು ಮಾಡಿಸು, ಕೊಡಿಸು ಮೊದಲಾದ ಎಸಕಪದಗಳೊಂದಿಗೆ ಬರುವ ಒಂದು ಒಟ್ಟಾಗಿ ಮಾತ್ರ ಬಳಕೆಯಲ್ಲಿದೆ.
ಬೇರೆ ಕೆಲವು ಪದಗಳು ಇಲ್ಲವೇ ಒಟ್ಟುಗಳು ತಮ್ಮ ಬೇರ್ಪಡಿಕೆಯನ್ನೇ ಕಳೆದುಕೊಂಡು ಅವುಗಳು ಅಂಗಗಳಾಗಿ ಬಂದಿರುವ ಪದಗಳಿಗೆ ಒಳರಚನೆಯಿದೆಯೆಂಬ ವಿಷಯವೇ ಗೊತ್ತಾಗದಂತಾಗುತ್ತದೆ. ಎಂದರೆ, ಈ ಎರಡನೇ ರೀತಿಯ ಪದಗಳಿಗೆ ಒಳರಚನೆಯಿತ್ತು ಎಂಬುದನ್ನು ತೋರಿಸಿಕೊಡಲು ಆ ನುಡಿಯಲ್ಲಿ ಯಾವ ಆದಾರವೂ ಇಲ್ಲದಾಗುತ್ತದೆ.
ಎತ್ತುಗೆಗಾಗಿ, ಎಣ್ಣೆ ಎಂಬ ಪದ ಎಳ್ಳು ಮತ್ತು ನೆಯ್ ಎಂಬ ಎರಡು ಪದಗಳ ಸೇರಿಕೆಯಿಂದ ಉಂಟಾಗಿದೆಯೆಂದು ಹೇಳಲು ಚರಿತ್ರೆಯ ಆದಾರಗಳಿವೆ. ಆದರೆ ಹೊಸಗನ್ನಡದಲ್ಲಿ ಎಳ್ಳು ಎಂಬ ಪದದ ಹುರುಳು ಈ ಎಣ್ಣೆ ಎಂಬ ಪದದಲ್ಲಿ ಸ್ವಲ್ಪವೂ ಉಳಿದಿಲ್ಲವಾದ ಕಾರಣ ಇವತ್ತು ಅದನ್ನು ಎಣ್ಣೆ ಎಂಬುದರ ಒಳರಚನೆಯಲ್ಲಿ ಬರುವ ಪದವೆಂದು ಹೇಳುವುದು ಕಶ್ಚ.
ಇದೇ ರೀತಿಯಲ್ಲಿ ತಮ್ಮ, ತಂಗಿ, ತಾಯಿ, ತಂದೆ ಎಂಬಂತಹ ತಕಾರ ದಿಂದ ಮೊದಲಾಗುವ ನಂಟಿನ ಪದಗಳಿಗೆ ಒಳರಚನೆಯೊಂದಿದೆಯೆಂಬುದನ್ನು ಚರಿತ್ರೆಯ ಆದಾರದ ಮೇಲೆ ಮಾತ್ರವೇ ಹೇಳಬಲ್ಲೆವು. ಕನ್ನಡಕ್ಕೆ ಹತ್ತಿರದ ನುಡಿಯಾಗಿರುವ ತಮಿಳಿನಲ್ಲಿ ಈ ಪದಗಳಿಗೆ ಮೂರು ಮೂರು ರೂಪಗಳಿದ್ದು, ಅವುಗಳಲ್ಲಿ ಒಂದು ಮಾತ್ರ ತಕಾರದಲ್ಲಿ ಮೊದಲಾಗುತ್ತದೆ.
| ತಮಿಳು | ಕನ್ನಡ | ತಮಿಳು | ಕನ್ನಡ |
|---|---|---|---|
| ಎಂದೈ | ‘ನನ್ನ ತಂದೆ’ | ಎಂಗೈ | ‘ನನ್ನ ತಂಗಿ’ |
| ನುಂದೈ | ‘ನಿನ್ನ ತಂದೆ’ | ನುಂಗೈ | ‘ನಿನ್ನ ತಂಗಿ’ |
| ತಂದೈ | ‘ಅವನ ತಂದೆ’ | ತಂಗೈ | ‘ಅವನ ತಂಗಿ’ |
16
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಹಾಗಾಗಿ, ಕನ್ನಡದಲ್ಲಿಯೂ ತಂದೆ, ತಂಗಿ, ತಮ್ಮ, ತಾಯಿ ಮೊದಲಾದ ಪದಗಳ ಮೊದಲಿಗೆ ಬರುವ ತಂ (ಇಲ್ಲವೇ ತ್) ಎಂಬುದು ತಾನು ಎಂಬ ತೋರುಗ ಪದದ ಅಡಕ ರೂಪ ಎಂಬುದಾಗಿ ಚರಿತ್ರೆಯ ಆದಾರದ ಮೇಲೆ ಹೇಳಲು ಬರುತ್ತದೆ. ಆದರೆ ಇವತ್ತು ಈ ತಕಾರ ತಂದೆ, ತಂಗಿ, ತಮ್ಮ ಮೊದಲಾದ ಪದಗಳಲ್ಲಿ ‘ಅವನ’ ಎಂಬ ಹುರುಳನ್ನು ಕೊಡುವುದಿಲ್ಲ. ಮೊದಲಿದ್ದ ಮೂರು ರೂಪಗಳಲ್ಲಿ ಒಂದೇ ಉಳಿದು ಅದನ್ನು ಎಲ್ಲಾ ಕಡೆಗಳಲ್ಲೂ ಬಳಸುವ ಹಾಗಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ, ಈ ಪದಗಳಿಗೆ ಹೊಸಗನ್ನಡದಲ್ಲಿ ಮೇಲೆ ಸೂಚಿಸಿದ ಒಳರಚನೆಯಿದೆಯೆಂದು ಹೇಳುವುದು ಕಶ್ಚ.
ಕನ್ನಡದಲ್ಲಿ ಬರುವ ಪದಗಳ ಚರಿತ್ರೆಯಂತಹದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವು ಹಳೆಗನ್ನಡ ಮತ್ತು ನಡುಗನ್ನಡಗಳಲ್ಲಿ ಹೇಗೆ ಬಳಕೆಯಾಗುತ್ತಿದ್ದುವು ಮತ್ತು ಕನ್ನಡದ ಬೇರೆ ಬೇರೆ ಆಡುನುಡಿಗಳಲ್ಲಿ ಇವತ್ತು ಹೇಗೆ ಬಳಕೆಯಲ್ಲಿವೆ ಎಂಬುದನ್ನು ತಿಳಿಯಬೇಕಾಗುತ್ತದೆ. ಇದಲ್ಲದೆ ತಮಿಳು, ಮಲಯಾಳ, ತೆಲುಗು, ತುಳು, ಗೋಂಡಿ, ಕುಡುಖ್ ಮೊದಲಾದ ಬೇರೆ ದ್ರಾವಿಡ ನುಡಿಗಳಲ್ಲಿ ಅವುಗಳ ರೂಪ ಮತ್ತು ಬಳಕೆ ಹೇಗಿದೆಯೆಂಬುದನ್ನೂ ತಿಳಿಯಬೇಕಾಗುತ್ತದೆ.
ಇದಕ್ಕೆ ಬದಲು ಕನ್ನಡ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವು ಕನ್ನಡದಲ್ಲಿ ಇವತ್ತು ಹೇಗೆ ಮತ್ತು ಎಂತಹ ರೂಪಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ತಿಳಿಯಬೇಕಾಗುತ್ತದೆ. ಪದಗಳ ಚರಿತ್ರೆಗೂ ಅವುಗಳ ಒಳರಚನೆಗೂ ನಡುವೆ ಈ ರೀತಿ ಒಂದು ಮುಕ್ಯವಾದ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು.
೧.೩ ಪದಗಳು ಮತ್ತು ಪದರೂಪಗಳು
ಸೊಲ್ಲುಗಳನ್ನು ಪದಗಳಾಗಿ ಒಡೆಯಬಲ್ಲೆವಾದ ಕಾರಣ ಅವನ್ನು ಸೊಲ್ಲುಗಳ ಅಂಗಗಳೆಂಬುದಾಗಿ ಕರೆಯಬಹುದು. ಆದರೆ ಸೊಲ್ಲುಗಳಲ್ಲಿ ಪದಗಳು ಮಾತ್ರವಲ್ಲದೆ ಬೇರೆ ಅಂಗಗಳೂ ಬರುತ್ತವೆ. ಎತ್ತುಗೆಗಾಗಿ ಈ ಕೆಳಗಿನ ಸೊಲ್ಲನ್ನು ಗಮನಿಸಬಹುದು.
(೧) ಬಡ ಮುದುಕನನ್ನು, ರಾಜು ಬಿಸಿನೀರಿನಲ್ಲಿ ಮೆಲ್ಲಗೆ ಮುಳುಗಿಸಿದ.
17
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
(೧)ನೇ ಸೊಲ್ಲಿನಲ್ಲಿ ಬಡ, ಮುದುಕ, ರಾಜು, ಬಿಸಿ, ನೀರು, ಮೆಲ್ಲಗೆ ಮತ್ತು ಮುಳುಗಿಸು ಎಂಬ ಏಳು ಪದಗಳು ಅದರ ಅಂಗಗಳಾಗಿ ಬಂದಿವೆ. ಈ ಪದಗಳಲ್ಲಿ ಮುದುಕ ಎಂಬುದರೊಂದಿಗೆ ಅನ್ನು ಎಂಬ ಒಟ್ಟು, ನೀರು ಎಂಬುದರೊಂದಿಗೆ ಅಲ್ಲಿ ಎಂಬ ಒಟ್ಟು, ಮತ್ತು ಮುಳುಗಿಸು ಎಂಬುದರೊಂದಿಗೆ ದ್ ಮತ್ತು ಅ ಎಂಬ ಒಟ್ಟುಗಳು ಬಂದಿವೆ.
ಈ ಒಟ್ಟುಗಳಲ್ಲಿ ಕೆಲವು ಸೊಲ್ಲಿನಲ್ಲಿ ಬರುವ ಪದಗಳ ನಡುವೆ ಎಂತಹ ಸಂಬಂದವಿದೆಯೆಂಬುದನ್ನು ತಿಳಿಸುತ್ತವೆ. ಎತ್ತುಗೆಗಾಗಿ ಮುದುಕ ಪದದೊಂದಿಗೆ ಬಂದಿರುವ ಅನ್ನು ಎಂಬ ಒಟ್ಟು ಮುಳುಗಿಸುವ ಎಸಕಕ್ಕೂ ಆ ಎಸಕಕ್ಕೊಳಗಾಗಿರುವ ವ್ಯಕ್ತಿಗೂ ನಡುವಿರುವ ಸಂಬಂಧವನ್ನು ಸೂಚಿಸುತ್ತದೆ.
ಬೇರೆ ಕೆಲವು ಒಟ್ಟುಗಳು ಪದಗಳು ತಿಳಿಸುವ ಎಸಕದ ಇಲ್ಲವೇ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಕುರಿತಾಗಿ ಕೆಲವು ಹೆಚ್ಚಿನ ಸಂಗತಿಗಳನ್ನು ತಿಳಿಸುತ್ತವೆ. ಎತ್ತುಗೆಗಾಗಿ ಮುಳುಗಿಸು ಪದದೊಂದಿಗೆ ಬಂದಿರುವ ದ್ ಒಟ್ಟು ಆ ಎಸಕ ಯಾವಾಗ ನಡೆಯಿತು ಎಂಬುದನ್ನು ಸೂಚಿಸುತ್ತದೆ ಮತ್ತು ಅದರ ಅನಂತರ ಬಂದಿರುವ ಅ ಒಟ್ಟು ಆ ಎಸಕವನ್ನು ನಡೆಸಿದ ವ್ಯಕ್ತಿ ಯಾರು ಎಂಬುದನ್ನು ಚುಟುಕಾಗಿ ಸೂಚಿಸುತ್ತದೆ.
ಈ ಎಲ್ಲಾ ಒಟ್ಟುಗಳನ್ನೂ ಪದರೂಪದ ಒಟ್ಟುಗಳೆಂದು ಕರೆಯಬಹುದು. ಯಾಕೆಂದರೆ ಅವು ಸೊಲ್ಲುಗಳಲ್ಲಿ ಬರುವ ಪದಗಳಿಗೆ ಬೇರೆ ಬೇರೆ ರೂಪಗಳನ್ನು ಕೊಡುವಲ್ಲಿ ಬಳಕೆಯಾಗುತ್ತವೆ. ಈ ರೂಪಗಳ ಮೂಲಕ ಸೊಲ್ಲುಗಳಲ್ಲಿರುವ ಪದಗಳನ್ನು ಒಂದರೊಡನೊಂದು ಸಂಬಂದಿಸಲು ಸಾದ್ಯವಾಗುತ್ತದೆ ಮತ್ತು ಅವುಗಳ ಮೂಲಕ (೧)ನೇ ಸೊಲ್ಲು ಕೊಡಬೇಕಾಗಿರುವ ಹುರುಳನ್ನು ಪಡೆಯಲು ಸಾದ್ಯವಾಗುತ್ತದೆ. ಪದರೂಪಗಳಿಂದ ಇಂತಹ ಒಟ್ಟುಗಳನ್ನು ಬೇರ್ಪಡಿಸಿದಾಗ ಉಳಿಯುವ ಅಂಶಗಳೇ ಪದಗಳು.
ವಾಕ್ಯಗಳನ್ನು ಈ ರೀತಿ ಬೇರೆ ಬೇರೆ ಪದಗಳಾಗಿ ಒಡೆಯುವ ಬದಲು ಪದ ಕಂತೆಗಳಾಗಿಯೂ ಒಡೆಯಬಹುದು. ಎತ್ತುಗೆಗಾಗಿ ಮೇಲೆ ಕೊಟ್ಟಿರುವ (೧)ನೇ ಸೊಲ್ಲನ್ನು ಏಳು ಬೇರೆ ಬೇರೆ ಪದಗಳಾಗಿ ಒಡೆಯುವವ ಬದಲು ಬಡ ಮುದುಕ, ರಾಜು, ಬಿಸಿನೀರು ಮತ್ತು ಮೆಲ್ಲಿಗೆ ಮುಳುಗಿಸು ಎಂಬ ನಾಲ್ಕು ಅಂಗಗಳಾಗಿಯೂ ಒಡೆಯಬಹುದು. ಇವುಗಳಲ್ಲಿ ಬಡ ಮುದುಕ ಮತ್ತು ಬಿಸಿನೀರು ಎಂಬವುಗಳೆರಡು ಹೆಸರು ಪದಕಂತೆಗಳು ಮತ್ತು ಮೆಲ್ಲಿಗೆ ಮುಳುಗಿಸು ಎಂಬುದೊಂದು ಎಸಕ ಪದಕಂತೆ.
ಪದಗಳಿಗೆ ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಪಡೆಯುವುದು ಮತ್ತು ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟು ಸೇರಿಸಿ ಪದಕಂತೆಗಳನ್ನು ಪಡೆಯುವುದು ಇವೆರಡೂ ಸೊಲ್ಲುಗಳ ಒಳರಚನೆಗೆ ಸಂಬಂಧಿಸಿದ ಕಟ್ಟಲೆಗಳನ್ನವಲಂಬಿಸಿವೆ. ಹಾಗಾಗಿ ಅವನ್ನು ಈ ಪುಸ್ತಕದಲ್ಲಿ ವಿವರಿಸಿಲ್ಲ.
18
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಪದಗಳನ್ನು ಇನ್ನೂ ಚಿಕ್ಕ ಅಂಗಗಳಾಗಿಯೂ ಒಡೆಯಬಹುದು. ಎತ್ತುಗೆಗಾಗಿ ಮುದುಕ ಪದವನ್ನು ಮುದಿ ಮತ್ತು ಕ ಎಂಬುದಾಗಿ, ಮೆಲ್ಲಿಗೆ ಎಂಬುದನ್ನು ಮೆಲ್ಲ ಮತ್ತು ಗೆ ಎಂಬುದಾಗಿ ಮತ್ತು ಮುಳುಗಿಸು ಎಂಬುದನ್ನು ಮುಳುಗು ಮತ್ತು ಇಸು ಎಂಬುದಾಗಿ ಒಡೆಯಬಹುದು.
ಇಂತಹ ಒಡೆಯುವಿಕೆಗಳು ಸೊಲ್ಲಿನಲ್ಲಿ ಬರುವ ಪದಗಳ ಒಡೆಯುವಿಕೆಗಳಲ್ಲದೆ ಸೊಲ್ಲಿನ ಒಡೆಯುವಿಕೆಗಳಲ್ಲ. ಇವುಗಳಲ್ಲಿ ಕಾಣಿಸುವ ಒಟ್ಟುಗಳು ಪದಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುವುವಾದ ಕಾರಣ ಅವನ್ನು ಪದದೊಟ್ಟುಗಳೆಂದು ಕರೆಯಬಹುದು. ಅವುಗಳ ಬಳಕೆ ಮೇಲೆ ಹೇಳಿದ ಸೊಲ್ಲುಗಳ ಒಳರಚನೆಯ ಕಟ್ಟಲೆಗಳಿಂದ ಬೇರಾಗಿರುವ ಪದರಚನೆಯ ಕಟ್ಟಲೆಗಳನ್ನವಲಂಬಿಸಿದೆ.
ನಮ್ಮೆದುರಿರುವ ಒಂದು ಅಂಗ ಪದವೇ ಇಲ್ಲವೇ ಪದಕಂತೆಯೇ ಎಂಬ ವಿಶಯದಲ್ಲಿ ಸಂದೇಹವುಂಟಾಗಬಲ್ಲುದು. ಎತ್ತುಗೆಗಾಗಿ ಬಿಸಿನೀರು ಎಂಬುದು ಮೇಲಿನ ಸೊಲ್ಲಿನಲ್ಲಿ ಕಾಣಿಸುವ ಹಾಗೆ ಪದಕಂತೆಯಾಗಿ ಬಂದಿರಬಲ್ಲುದು, ಇಲ್ಲವೇ ಜೋಡುಪದವಾಗಿದ್ದು ಒಂದು ಪದವಾಗಿಯೂ ಬಂದಿರಬಲ್ಲುದು (೩.೪ ನೋಡಿ). ಸಾಮಾನ್ಯವಾಗಿ ಸೊಲ್ಲುಗಳನ್ನು ಬಳಸಿರುವ ಸಂದರ್ಬವೇ ಇಂತಹ ಸಂದೇಹಗಳನ್ನು ನಿವಾರಿಸಬಲ್ಲುದು.
ಇದಲ್ಲದೆ, ನಮ್ಮೆದುರಿರುವ ಒಂದು ಒಟ್ಟನ್ನು ಪದದೊಟ್ಟೆಂದು ಹೇಳಬೇಕೇ ಇಲ್ಲವೇ ಪದರೂಪದ ಒಟ್ಟೆಂದು ಹೇಳಬೇಕೇ ಎಂಬ ವಿಷಯದಲ್ಲೂ ಸಂದೇಹವೇಳಬಲ್ಲುದು (… ನೋಡಿ). ಆದರೆ ಇದು ಮುಕ್ಯವಾಗಿ ಒಬ್ಬ ಸೊಲ್ಲರಿಗನ ಮನಸ್ಸಿನಲ್ಲಿ ಏಳಬಹುದಾದ ಸಂದೇಹವಾಗಿದ್ದು ಅದನ್ನು ಆತನು ತಯಾರಿಸುವ ಸೊಲ್ಲರಿಮೆಯೇ ನಿವಾರಿಸಬೇಕು.
೧.೪ ಪದಗಳು ಮತ್ತು ಒಟ್ಟುಗಳು
ಪದವೊಂದರ ಅಂಗಗಳಾಗಿ ಎರಡು ಪದಗಳು ಬಂದಿರಬಹುದು (ಚಿಕ್ಕ+ಅಮ್ಮ
ಚಿಕ್ಕಮ್ಮ), ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು ಬಂದಿರಬಹುದು (ಎಚ್ಚರ+ಇಕೆ > ಎಚ್ಚರಿಕೆ) ಎಂಬುದನ್ನು ಮೇಲೆಯೇ ನೋಡಿರುವೆವು. ಇದಲ್ಲದೆ, ಪದವೊಂದರ ಅಂಗಗಳಾಗಿ ಎರಡು ಪದಗಳು ಮಾತ್ರವಲ್ಲದೆ ಒಂದು ಒಟ್ಟು ಬಂದಿರಬಹುದು (ಹಣೆ+ಕಣ್ಣು+ಅ > ಹಣೆಗಣ್ಣ). ಆದರೆ, ಎರಡಕ್ಕಿಂತ ಹೆಚ್ಚು ಪದಗಳು ಇಲ್ಲವೇ ಒಂದಕ್ಕಿಂತ ಹೆಚ್ಚು ಒಟ್ಟುಗಳು ಪದವೊಂದರ ಅಂಗಗಳಾಗಿ ಬರುವುದು ಕನ್ನಡದ ಮಟ್ಟಿಗೆ ಅಪರೂಪವೆಂದೇ ಹೇಳಬಹುದು.
ಒಳರಚನೆಯಿರುವ ಒಂದು ಪದದಲ್ಲಿ ಎರಡು ಪದಗಳು ಒಟ್ಟುಸೇರಿವೆಯೇ ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು ಸೇರಿಕೊಂಡಿವೆಯೇ ಎಂಬುದನ್ನು
19
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ತಿಳಿಯಬೇಕಿದ್ದಲ್ಲಿ ಮೊದಲಿಗೆ ಪದ ಮತ್ತು ಒಟ್ಟುಗಳ ನಡುವಿರುವ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಬೇರೆ ಕಡೆಗಳಲ್ಲಿ ಬರುವ ಪದಗಳೊಂದಿಗೆ ರೂಪ ಮತ್ತು ಹುರುಳುಗಳಲ್ಲಿ ಸಂಬಂಧವನ್ನು ತೋರಿಸುವ ಅಂಗಗಳನ್ನು ಪದಗಳೆಂದು ಕರೆಯಬಹುದು ಮತ್ತು ಆ ರೀತಿ ಸಂಬಂಧವನ್ನು ತೋರಿಸದಿರುವ ಅಂಗಗಳನ್ನು ಒಟ್ಟುಗಳೆಂದು ಕರೆಯಬಹುದು.
ಎತ್ತುಗೆಗಾಗಿ, ಕಾಲ್ಮಣೆ ಎಂಬ ಪದದ ಮೊದಲನೆಯ ಅಂಗವಾದ ಕಾಲ್ ಎಂಬುದು ಬೇರೆ ಕಡೆಗಳಲ್ಲಿ ಬರುವ ಕಾಲು ಎಂಬ ಪದಕ್ಕೆ ಸಂಬಂಧಿಸಿದೆ, ಮತ್ತು ಅದರ ಎರಡನೆಯ ಅಂಗವಾದ ಮಣೆ ಎಂಬುದು ಬೇರೆ ಕಡೆಗಳಲ್ಲಿ ಅದೇ ರೂಪದಲ್ಲಿ ಒಂದು ಹೆಸರುಪದವಾಗಿ ಬಳಕೆಯಾಗುತ್ತದೆ. ಹಾಗಾಗಿ, ಕಾಲ್ಮಣೆ ಎಂಬುದರಲ್ಲಿ ಎರಡು ಪದಗಳು ಸೇರಿಕೊಂಡಿವೆ ಎಂದು ಹೇಳಬಹುದು.
ಕುಣಿತ ಎಂಬ ಪದದಲ್ಲೂ ಮೊದಲನೆಯ ಅಂಗವಾದ ಕುಣಿ ಎಂಬುದು ಬೇರೆ ಕಡೆಗಳಲ್ಲಿ ಎಸಕಪದವಾಗಿ ಬಳಕೆಯಾಗುತ್ತದೆ. ಆದರೆ ತ ಎಂಬ ಅದರ ಎರಡನೆಯ ಅಂಗಕ್ಕೆ ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬಳಕೆಯಿಲ್ಲ. ರೂಪ ಮತ್ತು ಹುರುಳುಗಳಲ್ಲಿ ಅದರೊಡನೆ ಸಂಬಂದವನ್ನು ತೋರಿಸುವ ಬೇರೆ ಪದವೂ ಕನ್ನಡದಲ್ಲಿಲ್ಲ. ಹಾಗಾಗಿ, ಅದನ್ನು ಒಂದು ಒಟ್ಟು ಎಂಬುದಾಗಿ ಕರೆಯಬೇಕಾಗುತ್ತದೆ.
ಆದರೆ ಎಲ್ಲಾ ಕಡೆಗಳಲ್ಲೂ ಪದಗಳ ಅಂಗಗಳನ್ನು ಈ ರೀತಿ ಅವುಗಳ ಬಳಕೆಯ ಮೇಲೆ ಒಟ್ಟುಗಳಿಂದ ಬೇರ್ಪಡಿಸಲು ಬರುವುದಿಲ್ಲ. ಎತ್ತುಗೆಗಾಗಿ ಹಾರಯ್ಸು ಎಂಬ ಪದವನ್ನು ಗಮನಿಸಬಹುದು. ಇದರಲ್ಲಿ ಹಾರಯ್ ಮತ್ತು ಸು ಎಂಬ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಹಾರಯ್ಕೆ ಎಂಬ ಪದದಲ್ಲಿ ಕೆ ಎಂಬ ಒಟ್ಟಿನೊಡನೆ ಬರುತ್ತದೆ, ಮತ್ತು ಎರಡನೆಯದು ಕುಣಿಸು, ಬರೆಸು, ನಡೆಸು, ತಿಳಿಸು ಮೊದಲಾದ ಪದಗಳಲ್ಲಿ ಕುಣಿ, ಬರೆ, ನಡೆ, ತಿಳಿ ಮೊದಲಾದ ಬೇರೆ ಎಸಕಪದಗಳೊಡನೆ ಬರುತ್ತದೆ.
ಇವುಗಳಲ್ಲಿ ಎರಡನೆಯದಾದ ಸು ಎಂಬುದನ್ನು ಒಂದು ಒಟ್ಟು ಎಂದು ಕರೆಯುವಲ್ಲಿ ಯಾವ ತೊಂದರೆಯೂ ಇಲ್ಲ. ಯಾಕೆಂದರೆ, ಅದು ಹೊಸಗನ್ನಡದಲ್ಲಿ ಬರಬಲ್ಲ ಯಾವ ಪದದೊಡನೆಯೂ ಸಂಬಂದಿಸಿಲ್ಲ. ಚಾರಿತ್ರಿಕವಾಗಿ ಅದನ್ನು ಹಳೆಗನ್ನಡದ ಇಸು ‘ಎಸೆ’ ಎಂಬ ಎಸಕಪದದೊಂದಿಗೆ ಸಂಬಂದಿಸಬಲ್ಲೆವಾದರೂ ಹೊಸಗನ್ನಡದ ಮಟ್ಟಿಗೆ ಅದು ಒಂದು ಒಟ್ಟಾಗಿ ಮಾತ್ರ ಬಳಕೆಯಲ್ಲಿದೆ.
ಹಾರಯ್ಯು ಎಂಬ ಪದದ ಮೊದಲನೆಯ ಅಂಗವಾದ ಹಾರಯ್ ಎಂಬುದೂ ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬರಲಾರದು; ಹಾಗಾಗಿ, ಮೇಲೆ
20
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಕೊಟ್ಟಿರುವ ಕಟ್ಟಲೆಯ ಪ್ರಕಾರ ಅದನ್ನು ಒಂದು ಪದವೆಂದು ಹೇಳಲು ಬರುವುದಿಲ್ಲ. ಆದರೆ, ಅದನ್ನೊಂದು ಒಟ್ಟೆಂದು ಕರೆಯುವುದೂ ಸರಿಯಲ್ಲ. ಯಾಕೆಂದರೆ, ಎರಡು ಒಟ್ಟುಗಳನ್ನು ಮಾತ್ರವೇ ಒಟ್ಟು ಸೇರಿಸುವುದರ ಮೂಲಕ ಪದವೊಂದನ್ನು ತಯಾರಿಸಲು ಬರುವುದಿಲ್ಲ. ಅಂತಹ ಒಟ್ಟುಗಳಿಗೆ ಆದಾರವನ್ನು ಕೊಡಬಲ್ಲ ಒಂದು ಪದವನ್ನೂ ಅವುಗಳೊಂದಿಗೆ ಸೇರಿಸಬೇಕಾಗುತ್ತದೆ.
ಹಾಗಾಗಿ, ಹಾರಯ್ ಎಂಬುದನ್ನು ಸು ಇಲ್ಲವೇ ಕೆ ಒಟ್ಟಿನ ನೆರವಿಲ್ಲದೆ ಬರಲಾರದಂತಹ ಒಂದು ಹೊರಕುಳಿ ಪದ ಎಂಬುದಾಗಿ ಹೇಳಬೇಕಾಗುತ್ತದೆ. ಚಾರಿತ್ರಿಕವಾಗಿ ಹಾರಯ್ ಎಂಬುದು ಹಳೆಗನ್ನಡದ ಪಾರ್ ‘ನೋಡು’ ಎಂಬ ಪದಕ್ಕೆ ಸಂಬಂಧಿಸಿದೆ.
ನಮ್ಮೆದುರಿರುವ ಪದದ ಒಂದು ಅಂಗವನ್ನು ಪದವೆಂದು ಹೇಳಬೇಕೇ ಇಲ್ಲವೇ ಒಂದು ಒಟ್ಟೆಂದು ಹೇಳಬೇಕೇ ಎಂಬ ವಿಶಯದಲ್ಲಿ ಒಂದು ತೀರಾನಕ್ಕೆ ಬರುವುದು ಕೆಲವೊಮ್ಮೆ ತುಂಬಾ ಕಶ್ಚವೆಂದು ತೋರಬಲ್ಲುದು. ಎತ್ತುಗೆಗಾಗಿ, ಇಬ್ಬದಿ ಎಂಬ ಪದದಲ್ಲಿ ಬರುವ ಇಬ್ ಎಂಬ ಮೊದಲನೆಯ ಅಂಗ ಎರಡು ಎಂಬ ಸ್ವತಂತ್ರ ಪದಕ್ಕೆ ಸಂಬಂಧಿಸಿದೆಯೇ ಇಲ್ಲವೇ ಎಂಬುದರ ಮೇಲೆ ಅದು ಒಂದು ಪದವೇ ಇಲ್ಲವೇ ಒಟ್ಟೇ ಎಂಬುದು ಅವಲಂಬಿಸಿದೆ.
ಆದರೆ, ಇಬ್ಬರು ಎಂಬ ಪದದಲ್ಲೂ ಅದೇ ಇಬ್ ಎಂಬುದು ಬಂದಿದೆ, ಮತ್ತು ಅದರೊಂದಿಗೆ ಇಲ್ಲಿ ಬ ಎಂಬ ಮನುಷ್ಯರನ್ನು ಸೂಚಿಸುವ ಒಟ್ಟು ಮತ್ತು ರು ಎಂಬ ಹಲವೆಣಿಕೆಯ ಒಟ್ಟು - ಇವೆರಡು ಒಟ್ಟುಗಳು ಬಂದಿವೆ; ಹಾಗಾಗಿ, ಈ ಇಬ್ಬರು ಎಂಬ ಪದದಲ್ಲಿ ಮೊದಲನೆಯ ಅಂಗವಾಗಿ ಬಂದಿರುವ ಇಬ್ ಎಂಬುದನ್ನು ಒಂದು ಪದವೆಂದು ಕರೆಯದಿದ್ದಲ್ಲಿ ಮೂರು ಒಟ್ಟುಗಳ ಸೇರಿಕೆಯಿಂದ ಪದವೊಂದನ್ನು ಉಂಟುಮಾಡಲಾಗಿದೆಯೆಂದು ಹೇಳಬೇಕಾದೀತು. ಇದು ಪದಗಳ ಕುರಿತು ನಮಗಿರುವ ಕಲ್ಪನೆಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ, ಇಬ್ಬದಿ ಮತ್ತು ಇಬ್ಬರು ಇವೆರಡರಲ್ಲೂ ಬರುವ ಇಬ್ ಎಂಬುದು ಒಂದು ಪದವಲ್ಲದೆ ಒಟ್ಟಲ್ಲ ಎಂಬ ತೀರಾನಕ್ಕೆ ಬರಬೇಕಾಗುತ್ತದೆ.
ಈ ರೀತಿಯಾಗಿ ಪದ ಮತ್ತು ಒಟ್ಟುಗಳ ನಡುವಿನ ವ್ಯತ್ಯಾಸವನ್ನು ಎರಡು ಬೇರೆ ಬೇರೆ ಪರಿಚೆಗಳ ಮೇಲೆ ತೀರ್ಮಾನಿಸಬೇಕಾಗುತ್ತದೆ. ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬರಬಲ್ಲುದು ಎಂಬುದು ಒಂದು ಪರಿಚೆಯಾದರೆ, ಪದವೊಂದರ ಅಂಗವಾಗಿ ಮಾತ್ರವೇ ಬರಬಲ್ಲುದಾದರೂ ಬೇರೆ ಅಂಗಗಳಿಗೆ (ಎಂದರೆ ಒಟ್ಟುಗಳಿಗೆ) ನೆಲೆಯಾಗಬಲ್ಲುದು (ಎಂದರೆ, ಪದದ ಮುಕ್ಯ ಹುರುಳನ್ನು ಕೊಡಬಲ್ಲುದು) ಎಂಬುದು ಇನ್ನೊಂದು ಪರಿಚೆ. ಈ ಎರಡು ಪರಿಚೆಗಳನ್ನೂ ತೋರಿಸದಿರುವಂತಹ ಪದಗಳ ಅಂಗಗಳು ಒಟ್ಟುಗಳು ಎಂದು ಹೇಳಬಹುದು.
21
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮೇಲೆ ಸೂಚಿಸಿದಂತೆ, ಚಾರಿತ್ರಿಕವಾಗಿ ಒಟ್ಟುಗಳು ಪದಗಳಿಂದ ಬೆಳೆಯ ಬಲ್ಲುವು. ಬೇರೆ ಪದಗಳ ಅಂಗಗಳಾಗಿ ಬರುವ ಪದಗಳು ಸಾಮಾನ್ಯವಾಗಿ ತಮ್ಮ ಚುಟುಕು ರೂಪಗಳಲ್ಲಿ ಬರುವುವಾದ ಕಾರಣ, ಕೆಲವೊಮ್ಮೆ ಅವುಗಳ ಪದರೂಪಗಳು ಅಳಿದು ಹೋಗಿ, ಇಂತಹ ಚುಟುಕಾಗಿರುವ ರೂಪಗಳು ಮಾತ್ರವೇ ನುಡಿಯಲ್ಲಿ ಉಳಿದುಕೊಂಡು ಒಟ್ಟುಗಳೆನಿಸಬಲ್ಲುವು.
ಎತ್ತುಗೆಗಾಗಿ ಮೇಲೆ ಕೊಟ್ಟಿರುವ ಸು ಎಂಬ ಒಟ್ಟು ಮೊದಲಿಗೆ ಇಸು ಎಂಬ ಎಸಕಪದದೊಂದಿಗೆ ಸಂಬಂಧಿಸಿದ್ದು, ಒಂದು ಪದವಾಗಿತ್ತು. ಆದರೆ, ಅದರ ಈ ಎಸಕಪದದ ಬಳಕೆ ಅಳಿದು ಹೋಗಿ, ಈಗ ಹೊಸಗನ್ನಡದಲ್ಲಿ ಅದು ಬೇರೆ ಪದಗಳ ಅಂಗವಾಗಿ ಮಾತ್ರ ಬರುತ್ತದೆ. ಇಂತಹ ಪದಗಳಲ್ಲಿ (ಕುಣಿಸು, ಬರೆಸು) ಅದಕ್ಕೆ ಪದದ ಮುಕ್ಯ ಹುರುಳನ್ನು ತಿಳಿಸುವ ಅಳವಿಲ್ಲವಾದ ಕಾರಣ, ಅದನ್ನೊಂದು ಒಟ್ಟೆಂದು ಮಾತ್ರವೇ ಹೇಳಬಲ್ಲೆವು.
೧.೫ ಪದದೊಟ್ಟುಗಳು ಮತ್ತು ಪದರಪದೊಟ್ಟುಗಳು
ನುಡಿಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಒಟ್ಟುಗಳು ಬಳಕೆಯಲ್ಲಿರುತ್ತವೆ: ಪದಗಳನ್ನು ತಯಾರಿಸುವಲ್ಲಿ (ಎಂದರೆ ಅವುಗಳ ಒಳರಚನೆಯಲ್ಲಿ) ಬರು ವವುಗಳು ಒಂದು ಬಗೆಯವುಗಳಾದರೆ, ಪದಗಳ ಬೇರೆ ಬೇರೆ ರೂಪಗಳನ್ನು ತಯಾರಿಸುವಲ್ಲಿ ಬರುವವುಗಳು ಇನ್ನೊಂದು ಬಗೆಯವು. ಇವನ್ನು ‘ಪದದೊಟ್ಟು’ ಮತ್ತು ‘ಪದರೂಪದೊಟ್ಟು’ ಎಂಬುದಾಗಿ ಕರೆಯಬಹುದು.
ಎತ್ತುಗೆಗಾಗಿ ಕುಣಿತ ಪದದ ಒಳರಚನೆಯಲ್ಲಿ ಕಾಣಿಸುವ ತ ಎಂಬುದು ಪದವೊಂದನ್ನು ತಯಾರಿಸುವಲ್ಲಿ ಬಳಕೆಯಾಗುವ ಪದದೊಟ್ಟು. ಈ ಒಟ್ಟನ್ನು ಕುಣಿ ಎಸಕಪದಕ್ಕೆ ಸೇರಿಸುವ ಮೂಲಕ ಕುಣಿತ ಹೆಸರುಪದವನ್ನು ತಯಾರಿಸಲಾಗಿದೆ. ಮೆಟ್ಟಲು ಎಂಬುದರಲ್ಲಿ ಕಾಣಿಸುವ ಅಲು ಎಂಬುದು ಇನ್ನೊಂದು ಪದದೊಟ್ಟು. ಈ ಒಡ್ಡನ್ನು ಮೆಟ್ಟು ಎಸಕಪದಕ್ಕೆ ಸೇರಿಸುವುದರ ಮೂಲಕ ಮೆಟ್ಟಲು ಹೆಸರುಪದವನ್ನು ತಯಾರಿಸಲಾಗಿದೆ.
ಮೆಟ್ಟಲು ಹೆಸರುಪದಕ್ಕೆ ಕೆಲವು ಪದರೂಪದೊಟ್ಟುಗಳನ್ನು ಸೇರಿಸಿ ಪದರೂಪಗಳನ್ನು ತಯಾರಿಸಬಲ್ಲೆವು. ಎತ್ತುಗೆಗಾಗಿ, ಅದಕ್ಕೆ ಗಳು ಒಟ್ಟನ್ನು ಸೇರಿಸಿ ಮೆಟ್ಟಲುಗಳು ಎಂಬ ಹಲವೆಣಿಕೆಯಲ್ಲಿರುವ ಪದರೂಪವನ್ನು ತಯಾರಿಸಬಹುದು, ಮತ್ತು ಅದೇ ಪದಕ್ಕೆ ಅನ್ನು, ಇಂದ, ಗೆ, ಅ ಮೊದಲಾದ ಬೇರೆ ಕೆಲವು ಒಟ್ಟುಗಳನ್ನು ಸೇರಿಸಿ ಮೆಟ್ಟಲನ್ನು, ಮೆಟ್ಟಲಿನಿಂದ, ಮೆಟ್ಟಲಿಗೆ, ಮೆಟ್ಟಲಿನ ಮೊದಲಾದ ಪತ್ತುಗೆರೂಪಗಳನ್ನು ತಯಾರಿಸಬಹುದು. ಈ ಎಲ್ಲಾ ಒಟ್ಟುಗಳೂ ಮೆಟ್ಟಲು ಪದದ ಬೇರೆ ಬೇರೆ ಪದರೂಪಗಳನ್ನು ತಯಾರಿಸುವಲ್ಲಿ ಬರುವುವಾದ ಕಾರಣ, ಅವೆಲ್ಲ ಪದರೂಪದೊಟ್ಟುಗಳು.
22
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಎಸಕಪದಗಳಿಗೂ ಇದೇ ರೀತಿಯಲ್ಲಿ ಹೊತ್ತು, ಆಡುಗ, ಗುರ್ತ, ಎಣಿಕೆ ಮೊದಲಾದುವನ್ನು ತಿಳಿಸುವ ಪದರೊಪದೊಟ್ಟುಗಳನ್ನು ಸೇರಿಸಿ ಅವುಗಳ ಬೇರೆ ಬೇರೆ ಪದರೊಪಗಳನ್ನು ತಯಾರಿಸಬಹುದು. ಎತ್ತುಗೆಗಾಗಿ, ಕುಣಿ ಎಸಕಪದಕ್ಕೆ ಮುಂಬೊತ್ತಿನ ಉತ್ತ ಒಟ್ಟನ್ನು ಮತ್ತು ಆಡುಗ-ಗುರ್ತ-ಎಣಿಕೆಗಳ ಆನೆ ಒಟ್ಟನ್ನು ಸೇರಿಸಿ ಕುಣಿಯುತ್ತಾನೆ ಎಂಬ ರೂಪವನ್ನು ಪಡೆಯಬಹುದು, ಮತ್ತು ಹಿಂಬೊತ್ತಿನ ದ ಒಟ್ಟನ್ನು, ಹಾಗೂ ಬೇರೊಂದು ಆಡುಗ-ಗುರ್ತ-ಎಣಿಕೆಯ ಳು ಒಟ್ಟನ್ನು ಸೇರಿಸಿ ಕುಣಿದಳು ಎಂಬ ರೂಪವನ್ನು ಪಡೆಯಬಹುದು. ಇಂತಹವೇ ಕುಣಿಯುತ್ತಾರೆ, ಕುಣಿಯುತ್ತದೆ, ಕುಣಿದೆ, ಕುಣಿಯಲಿ ಮೊದಲಾದ ಬೇರೆ ಬೇರೆ ಹಲವು ರೂಪಗಳೂ ಈ ಎಸಕಪದಕ್ಕಿದೆ.
ಈ ಎರಡು ಬಗೆಯ ಒಟ್ಟುಗಳ ನಡುವೆ ಹಲವಾರು ಮುಕ್ಯವಾದ ವ್ಯತ್ಯಾಸಗಳಿವೆ. ಪದದೊಟ್ಟುಗಳಿಗೆ ಒಂದು ನಿಶ್ಚಿತವಾದ ಹುರುಳನ್ನು ಕೊಡುವುದು ಕಶ್ಚ. ಅವು ಪದಗಳ ತಯಾರಿಕೆಗೆ ಸಂಬಂದಿಸಿದುವಾದ ಕಾರಣ, ಅವನ್ನು ಬಳಸಿ ತಯಾರಿಸಿದ ಪದಗಳು ನುಡಿಯಲ್ಲಿ ಬಳಕೆಗೆ ಬಂದ ಮೇಲೆ ಬೇರೆ ಬೇರೆ ಬಗೆಯ ಬದಲಾವಣೆಗಳಿಗೆ ಒಳಪಡಬಲ್ಲುವು. ಆದರೆ, ಪದರೂಪದೊಟ್ಟುಗಳಿಗೆ ನಿಶ್ಚಿತವಾದ ಹುರುಳಿದ್ದು, ನುಡಿಯಲ್ಲಿ ಬದಲಾವಣೆ ನಡೆದರೂ ಅವು ಅಷ್ಟು ಸುಲಬವಾಗಿ ತಮ್ಮ ಹುರುಳನ್ನು ಬಿಟ್ಟುಕೊಡುವುದಿಲ್ಲ. ಪದಗಳೊಂದಿಗೆ ಪದದೊಟ್ಟುಗಳು ಸುಳುವಾಗಿ ಬೇರೆ ನುಡಿಗಳಿಂದ ಎರವಲಾಗಿ ಬರಬಲ್ಲುವು, ಆದರೆ ಪದರೂಪದೊಟ್ಟುಗಳು ಆ ರೀತಿ ಎರವಲಾಗಿ ಬರುವುದು ಬಹಳ ಅಪರೂಪ. ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಇಂತಹ ವ್ಯತ್ಯಾಸಗಳಲ್ಲಿ ಕೆಲವನ್ನು ಕೆಳಗೆ ಸ್ವಲ್ಪ ವಿವರವಾಗಿ ಕೊಡಲಾಗಿದೆ.
೧.೬.೧ ತಯಾರಿಕೆ ಮತ್ತು ಬಳಕೆ
ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಪದದೊಟ್ಟು ಪದದ ಒಳರಚನೆಯಲ್ಲಿ ಬರುತ್ತಿದ್ದು ಅದಕ್ಕೆ ಪದದ ತಯಾರಿಕೆಯಲ್ಲಿ ಒಂದು ಮುಕ್ಯವಾದ ಜಾಗವಿದೆ. ಆದರೆ, ಪದದ ದಿನನಿತ್ಯದ ಬಳಕೆಯಲ್ಲಿ ಅದಕ್ಕೆ ಹೆಚ್ಚಿನ ಮಹತ್ವವಿಲ್ಲ. ಸಾಮಾನ್ಯವಾಗಿ ನಾವು ನಮ್ಮ ನುಡಿಯಲ್ಲಿರುವ ಪದಗಳನ್ನೆಲ್ಲ ನಮ್ಮ ನೆನಪಿನಲ್ಲಿರಿಸಿಕೊಂಡು ಹಾಗೆಯೇ ಇಡಿ ಇಡಿಯಾಗಿ ಬಳಸುತ್ತೇವೆ.
ಎತ್ತುಗೆಗಾಗಿ, ಮೆಟ್ಟಲು ಪದವನ್ನು ಗಮನಿಸಬಹುದು: ತಯಾರಿಕೆಯ ಕಾಲದಲ್ಲಿ ಅದನ್ನು ಮೆಟ್ಟು ಎಸಕಪದಕ್ಕೆ ಅಲು ಒಟ್ಟನ್ನು ಸೇರಿಸುವುದರ ಮೂಲಕ ಪಡೆಯಲಾಗಿದೆಯೆಂಬುದು ಸ್ಪಷ್ಟ. ಹೀಗಿದ್ದರೂ ನಮ್ಮ ದಿನನಿತ್ಯದ ಬಳಕೆಯಲ್ಲಿ ಅದು ಹೆಚ್ಚಿನ ಮಟ್ಟಿಗೆ ಒಂದು ಒಳರಚನೆಯಿಲ್ಲದ ಪದದ ಹಾಗೆಯೇ ಕಾಣಿಸುತ್ತದೆ. ಅದನ್ನು ಬಳಸುವಾಗ, ಮೆಟ್ಟು ಎಸಕಪದಕ್ಕೂ
23
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅದಕ್ಕೂ ನಡುವಿರುವ ಸಂಬಂಧ ಸಾಮಾನ್ಯವಾಗಿ ನಮ್ಮ ಗಮನಕ್ಕೇ ಬರುವುದಿಲ್ಲ.
ಪದರೂಪದೊಟ್ಟುಗಳ ಬಳಕೆ ಇದಕ್ಕಿಂತ ತೀರ ಬೇರಾದುದು. ಪದ ವೊಂದನ್ನು ಅದರ ಬೇರೆ ಬೇರೆ ರೂಪಗಳಲ್ಲಿ ಬಳಸುವಾಗಲೆಲ್ಲ ನಾವು ಅವುಗಳ ರಚನೆಗೆ ಬೇಕಾಗಿರುವ ಈ ಪದರೂಪದೊಟ್ಟುಗಳನ್ನು ಆ ಪದಕ್ಕೆ ಸೇರಿಸುವುದರ ಮೂಲಕ ಒಂದೊಂದು ಬಾರಿಯೂ ಅವನ್ನು ಹೊಸದಾಗಿ ತಯಾರಿಸಿಯೇ ಬಳಸುತ್ತೇವೆ. ಈ ತಯಾರಿಕೆ ಹೆಚ್ಚಿನ ಮಟ್ಟಿಗೆ ನಮ್ಮ ಗಮನಕ್ಕೆ ಬಾರದಿರು ವಂತಹ ಮಿದುಳಿನ ಒಂದು ಕೆಲಸದಿಂದಾಗಿ ನಡೆಯುತ್ತಿದೆಯಾದರೂ ಒಂದು ಪದಕ್ಕೂ ಅದರ ಬೇರೆ ಬೇರೆ ರೂಪಗಳಿಗೂ ನಡುವಿರುವ ಸಂಬಂದ ಹೆಚ್ಚಿನಡೆಗಳಲ್ಲೂ ನಮ್ಮ ಗಮನದಲ್ಲಿರುತ್ತದೆ. ಮೇಲೆ ಕೊಟ್ಟಿರುವ ಮೆಟ್ಟಲು ಮತ್ತು ಕುಣಿ ಎಂಬ ಎರಡು ಪದಗಳ ಬೇರೆ ಬೇರೆ ಪದರೂಪಗಳನ್ನು (ಮೆಟ್ಟಲನ್ನು, ಮೆಟ್ಟಲಿನಿಂದ, ಕುಣಿಯುತ್ತಾನೆ, ಕುಣಿದನು ಮೊದಲಾದುವನ್ನು) ವಾಕ್ಯಗಳಲ್ಲಿ ಬಳಸುವಾಗ ಅವೆಲ್ಲವೂ ಆ ಎರಡು ಪದಗಳಿಗೆ ಸಂಬಂಧಿಸಿದವುಗಳೆಂಬ ವಿಶಯ ಸ್ಪಷ್ಟವಾಗಿಯೂ ನಮಗೆ ತಿಳಿದಿರುತ್ತದೆ.
೧.೬.೨ ಬಳಕೆಯಲ್ಲಿ ಕಡ್ಡಾಯ
ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಇನ್ನೊಂದು ಮುಕ್ಯ ವ್ಯತ್ಯಾಸವೇನೆಂದರೆ, ಪದರೂಪದೊಟ್ಟುಗಳು ನಿಯಮಿತವಾಗಿ ಒಂದು ಗುಂಪಿಗೆ ಸೇರಿದ ಎಲ್ಲಾ ಪದಗಳಿಗೂ ಬರಬಲ್ಲ ಒಟ್ಟುಗಳಾಗಿವೆ, ಮತ್ತು ಪದ ಗಳನ್ನು ಸೊಲ್ಲುಗಳಲ್ಲಿ ಬಳಸುವಾಗಲೆಲ್ಲ ಈ ಪದರೂಪದೊಟ್ಟುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಕಡ್ಡಾಯವಾಗಿಯೂ ಬಳಸಲೇಬೇಕೆಂಬ ಕಟ್ಟಲೆಯಿರುತ್ತದೆ.
ಎತ್ತುಗೆಗಾಗಿ, ಒಂದು ಸೊಲ್ಲಿನ ಆಡುಗನನ್ನು ಸೂಚಿಸುವ ನೆ ಎಂಬ ಪದರೂಪದೊಟ್ಟನ್ನು ಎಲ್ಲಾ ಎಸಕಪದಗಳಿಗೂ ಸೇರಿಸಿ ಹೇಳಬಲ್ಲೆವು, ಮತ್ತು ಒಂದು ಸೊಲ್ಲು ತಿಳಿಸುವ ಎಸಕವನ್ನು ಆಡುಗನೇ ನಡೆಸಿರುವನಾದಲ್ಲಿ ಅಂತಹ ಎಸಕವನ್ನು ತಿಳಿಸುವ ಎಸಕಪದದೊಂದಿಗೆ ಈ ಒಟ್ಟನ್ನು ಬಳಸಲೇಬೇಕೆಂಬ ಕಡ್ಡಾಯವಾದ ಕಟ್ಟಲೆಯೂ ಕನ್ನಡದಲ್ಲಿದೆ. ನಾನು ನಾಳೆ ಬೆಳಿಗ್ಗೆ ಬರುತ್ತೇನೆ ಎಂಬ ಸೊಲ್ಲಿನಲ್ಲಿ ಬರು ಎಸಕಪದವನ್ನು ಅದರೊಂದಿಗೆ ಈ ನೆ ಎಂಬ ಒಟ್ಟನ್ನು ಸೇರಿಸದೆ ಮುಕ್ಯ ಎಸಕಪದವಾಗಿ ಬಳಸಲಾರೆವು.
ಪದದೊಟ್ಟುಗಳ ಬಳಕೆಯಲ್ಲಿ ಇಂತಹ ಕಟ್ಟಲೆಯಿಲ್ಲ. ಮೊದಲನೆಯದಾಗಿ ಅವು ಒಂದು ಗುಂಪಿಗೆ ಸೇರಿದ ಪದಗಳಲ್ಲಿ ಕೆಲವೇ ಕೆಲವು ಪದಗಳೊಂದಿಗೆ ಮಾತ್ರ ಬರುತ್ತವೆ. ಆ ಗುಂಪಿನಲ್ಲಿರುವ ಉಳಿದ ಪದಗಳನ್ನು ಇಂತಹ ಒಟ್ಟುಗಳಿಲ್ಲದೆಯೂ ಬಳಸಬಲ್ಲೆವು. ಎತ್ತುಗೆಗಾಗಿ, ತ ಪದದೊಟ್ಟು ಕುಣಿ, ಕುಡಿ, ನೆಗೆ, ಹೊಡೆ ಮೊದಲಾದ ಕೆಲವು ಎಸಕಪದಗಳೊಂದಿಗೆ ಮಾತ್ರ
24
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಬರಬಲ್ಲುದು. ಅಗಿ, ತಿಳಿ, ತೆರೆ, ಬರೆ ಮೊದಲಾದ ಅಂತಹವೇ ಬೇರೆ ಹಲವಾರು ಎಸಕಪದಗಳೊಂದಿಗೆ ಅದು ಬರಲಾರದು.
ಇದರ ಬಳಕೆಯೂ ಪದರೊಪದೊಟ್ಟುಗಳ ಹಾಗೆ ಕಡ್ಡಾಯವಲ್ಲ. ನಗು, ಓದು, ಮಿಂಚು ಮೊದಲಾದ ಎಸಕಪದಗಳು ಈ ಒಟ್ಟಿನ ನೆರವಿಲ್ಲದೇನೇ ಹೆಸರುಪದಗಳಾಗಿ ಬರುತ್ತವೆ ಮಾತ್ರವಲ್ಲ, ಬೇರೆ ಹಲವಾರು ಹೆಸರುಪದಗಳ ಬಳಕೆಯಲ್ಲಿಯೂ ಇಂತಹ ಒಟ್ಟುಗಳು ಬರಲೇಬೇಕೆಂಬ ಕಟ್ಟಲೆಯಿಲ್ಲ. ಎತ್ತುಗೆಗಾಗಿ ಒಳರಚನೆಯಿಲ್ಲದ ಮರ, ಗಿಡ ಮೊದಲಾದ ಹೆಸರುಪದಗಳ ಬಳಕೆಯನ್ನು ಗಮನಿಸಬಹುದು.
೧.೬.೩ ರೂಪಪಟ್ಟಿಗಳು
ಪದರೂಪದೊಟ್ಟುಗಳು ರೂಪಪಟ್ಟಿಗಳ ಅಂಗಗಳಾಗಿ ಬರುತ್ತವೆ. ಎತ್ತುಗೆಗಾಗಿ ಸೊಲ್ಲೊಂದರಲ್ಲಿ ಬರುವ ಹೆಸರುಪದಗಳಿಗೂ ಎಸಕಪದಕ್ಕೂ ನಡುವಿರುವ ಸಂಬಂದವೇನೆಂಬುದನ್ನು ತಿಳಿಸುವ ಪತ್ತುಗೆ ಒಟ್ಟುಗಳದೊಂದು ರೂಪಪಟ್ಟಿಯಿದೆ. ಮಾಡುಗನ (ಇಲ್ಲವೇ ಆಗುಗದ) ಆಡುಗ-ಗುರ- ಎಣಿಕೆಗಳನ್ನು ತಿಳಿಸುವ ಒಟ್ಟುಗಳದೊಂದು ರೂಪಪಟ್ಟಿಯಿದೆ, ಮತ್ತು ಹೊತ್ತುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸುವ ಹೊತ್ತಿನ ಒಟ್ಟುಗಳದೊಂದು ರೂಪಪಟ್ಟಿಯಿದೆ.
ಈ ರೂಪಪಟ್ಟಿಗಳ ಬಳಕೆ ಎಲ್ಲಿ ನಡೆಯಬೇಕೆಂಬುದನ್ನು ತಿಳಿಸುವ ಸೊಲ್ಲಿಟ್ಟಳದ ಕಟ್ಟಲೆಗಳಿವೆ, ಮತ್ತು ಹಾಗೆ ಅವನ್ನು ಬಳಸಬೇಕಾಗಿರುವಲ್ಲೆಲ್ಲ ಈ ರೂಪಪಟ್ಟಿಗಳ ಅಂಗಗಳಾಗಿ ಬಂದಿರುವ ಒಟ್ಟುಗಳಲ್ಲಿ ಯಾವುದಾದರೂ ಒಂದನ್ನು ಬಳಸಲೇಬೇಕೆಂಬ ಕಡ್ಡಾಯವೂ ಇದೆ. ಎತ್ತುಗೆಗಾಗಿ, ಎಸಕವೊಂದರ ಮಾಡುಗ ಇಲ್ಲವೇ ಆಗುಗವನ್ನು ತಿಳಿಸುವುದಕ್ಕಾಗಿ ಎಸಕಪದದೊಂದಿಗೆ ಬರಬಲ್ಲ ಏನೆ, ಏವೆ, ಈ, ಈರಿ, ಆನೆ ಮೊದಲಾದ ಒಟ್ಟುಗಳ ರೂಪಪಟ್ಟಿಯೊಂದಿದೆ ಮಾತ್ರವಲ್ಲ, ತಿಳಿಸುವ ಸೊಲ್ಲುಗಳಲ್ಲೆಲ್ಲ ಈ ರೂಪಪಟ್ಟಿಗೆ ಸೇರಿದ ಒಟ್ಟುಗಳಲ್ಲೊಂದನ್ನು ಎಸಕಪದದೊಂದಿಗೆ ಬಳಸಲೇಬೇಕೆಂಬ ಕಡ್ಡಾಯವೂ ಇದೆ.
ಪದದೊಟ್ಟುಗಳನ್ನು ಈ ರೀತಿ ಬೇರೆ ಬೇರೆ ರೂಪಪಟ್ಟಿಗಳಲ್ಲಿ ಹೊಂದಿಸಿ ಹೇಳಲು ಬರುವುದಿಲ್ಲ. ಅವು ಪದರೂಪದೊಟ್ಟುಗಳ ಹಾಗೆ ಒಂದಕ್ಕೊಂದು ಹೊಂದಿಕೊಂಡಿಲ್ಲದಿರುವುದೇ ಇದಕ್ಕೆ ಕಾರಣ. ಪದದೊಟ್ಟುಗಳನ್ನು ವರಿಸುವಾ ನುಡಿಯಲ್ಲಿ ಎಂತಹ ಒಟ್ಟುಗಳೆಲ್ಲ ಬಳಕೆಯಲ್ಲಿವೆ ಎಂಬುದಾಗಿ ಅವುಗಳ ಒಂದು ಪಟ್ಟಿಯನ್ನು ಕೊಡಲು ಮಾತ್ರ ಬರುತ್ತದೆ. ಪದರೂಪದೊಟ್ಟುಗಳ ಹಾಗೆ ಅವುಗಳಲ್ಲಿ ಒಂದನ್ನು ಬಳಸದಿದ್ದಲ್ಲಿ ಇನ್ನೊಂದನ್ನು ಬಳಸಬೇಕು ಎಂಬಂತಹ ಕಡ್ಡಾಯವೂ ಕಾಣಿಸುವುದಿಲ್ಲ.
25
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
೧.೬.೪ ಎರವಲು
ಪದದೊಟ್ಟುಗಳನ್ನು ಬೇರೆ ನುಡಿಗಳಿಂದ ತುಂಬಾ ಸುಳುವಾಗಿ ಎರವಲು ಪಡೆಯಬಹುದು. ಆದರೆ, ಪದರೂಪದೊಟ್ಟುಗಳನ್ನು ಆ ರೀತಿ ಎರವಲಾಗಿ ಪಡೆಯುವುದು ಕಶ್ಚ. ಅವನ್ನು ಎರವಲಾಗಿ ಪಡೆಯಲಾಗದೆಂದೂ ಹೇಳಬಲ್ಲೆವು. ಇದಕ್ಕೆ ಕಾರಣವೇನೆಂದರೆ, ಮೇಲೆ ತಿಳಿಸಿದ ಹಾಗೆ, ಪದರೂಪದೊಟ್ಟುಗಳು ಅಚ್ಚುಕಟ್ಟಾಗಿ ಒಂದು ರೂಪಪಟ್ಟಿಯಲ್ಲಿ ಹೊಂದಿಕೊಂಡಿರುತ್ತವೆ; ನುಡಿಯಲ್ಲಿ ಅವುಗಳಿಗಿರುವ ಕೆಲಸವೇನೆಂಬುದನ್ನು ಅಂತಹ ರೂಪಪಟ್ಟಿಗಳೇ ತೀರಾನಿಸುತ್ತವೆ. ಹಾಗಾಗಿ, ಅವನ್ನು ಎರವಲಾಗಿ ಪಡೆಯುವುದಿದ್ದಲ್ಲಿ ಇಡೀ ರೂಪಪಟ್ಟಿಯನ್ನೇ ಎರವಲಾಗಿ ಪಡೆಯಬೇಕಾದೀತು. ಇದು ಅಸಾದ್ಯವೇ.
ಎತ್ತುಗೆಗಾಗಿ, ಕನ್ನಡದಲ್ಲಿಲ್ಲದಿರುವ ಈರೆಣಿಕೆಯ (ದ್ವಿವಚನದ) ಒಟ್ಟನ್ನು ಸಂಸ್ಕೃತದಿಂದ ಎರವಲಾಗಿ ತರುವುದು ಅಸಾದ್ಯವೆಂದೇ ಹೇಳಬಹುದು. ಯಾಕೆಂದರೆ, ಸಂಸ್ಕೃತದಲ್ಲಿ ಇದು ಲಿಂಗ ಮತ್ತು ವಿಬಕ್ತಿಗಳೊಂದಿಗೆ ಸೇರಿ ‘ಸುಬಂತ’ವೆಂಬ ಒಂದು ರೂಪಪಟ್ಟಿಯಲ್ಲಿ ಬರುತ್ತಿದ್ದು, ಅದಕ್ಕೆ ಈ ರೂಪಪಟ್ಟಿಯ ಹೊರಗೆ ತನ್ನದೇ ಆದ ಇರುವಿಕೆಯಿಲ್ಲ.
ಪದದೊಟ್ಟುಗಳು ಈ ರೀತಿ ಒಂದಕ್ಕೊಂದು ಸಂಬಂಧಿಸಿಲ್ಲವಾದ ಕಾರಣ, ಅವು ಬೇರೆ ನುಡಿಗಳಿಂದ ಸುಳುವಾಗಿ ನಮ್ಮ ನುಡಿಗೆ ಎರವಲಾಗಿ ಬರಬಲ್ಲುವು. ಇಂತಹ ಹಲಕೆಲವು ಪದದೊಟ್ಟುಗಳು ಕನ್ನಡಕ್ಕೆ ಬೇರೆ ನುಡಿಗಳಿಂದ ಎರವಲಾಗಿ ಬಂದಿವೆಯೆಂಬುದನ್ನು ನಾವು ಮುಂದೆ ಎಂಟನೇ ಪಸುಗೆಯಲ್ಲಿ ನೋಡಲಿರುವೆವು. ಈ ರೀತಿ ಬೇರೆ ಪದಗಳೊಂದಿಗೆ ಎರವಲಾಗಿ ಬಂದ ಈ ಒಟ್ಟುಗಳು ನುಡಿಯಲ್ಲಿರುವ ಬೇರೆ ಪದಗಳಿಗೂ ಸೇರಿಕೊಂಡು ನುಡಿಯವೇ ಆಗಿಬಿಡುವುದೂ ಇದೆ.
ಎತ್ತುಗೆಗಾಗಿ, ಕನ್ನಡದಲ್ಲಿ ಮುನ್ನೊಟ್ಟು ಎಂಬುದಿಲ್ಲದಿದ್ದರೂ ಅಂತಹ ಒಟ್ಟನ್ನೊಳಗೊಂಡಿರುವ ಸಂಸ್ಕೃತದ ಅಪಜಯ, ಅಪಹಾರ, ಅಪವಾದ, ಅಪಮಾನ, ಅಪಮೃತ್ಯು ಮೊದಲಾದ ಹಲವಾರು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿವೆ. ಇದಲ್ಲದೆ, ಈ ಪದಗಳಲ್ಲಿರುವ ಅಪ ಎಂಬ ಮುನ್ನೊಟ್ಟು ಕನ್ನಡದವೇ ಆದ ನಂಬಿಕೆ ಎಂಬಂತಹ ಪದಗಳಿಗೂ (ಅಪನಂಬಿಕೆ) ಸೇರಿಕೊಂಡು ಹೊಸ ಪದಗಳ ತಯಾರಿಕೆಯಲ್ಲಿ ಬಳಕೆಯಾಗಿದೆ. (ಆದರೆ ಕನ್ನಡದಲ್ಲಿ ಈ ಒಟ್ಟು ಒಂದು ‘ಒಟ್ಟಾ’ಗಿ ಉಳಿಯುವ ಬದಲು ಒಂದು ಹೊರಕುಳಿ ಪದದ ಹಾಗೆ ಬಳಕೆಯಲ್ಲಿದೆ - ೮.೩.೭ ನೋಡಿ).
೧.೬.೫ ಹುರುಳಿನಲ್ಲಿ ವ್ಯತ್ಯಾಸ
26
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಪದರೂಪದೊಟ್ಟುಗಳಿಗೆ ಒಂದು ಹುರುಳು ಇಲ್ಲವೇ ಉದ್ದೇಶವನ್ನು ಕೊಡಲು ಬರುತ್ತದೆ. ಎತ್ತುಗೆಗಾಗಿ, ಪತ್ತುಗೆ ಒಟ್ಟುಗಳಿಗೆ ಹೆಸರುಪದಕ್ಕೂ ಎಸಕಪದಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವ ಉದ್ದೇಶವಿದೆ, ಮತ್ತು ಅವುಗಳಲ್ಲೊಂದಾದ ಜಾಗ ಒಟ್ಟಿಗೆ ಒಂದು ಜಾಗವನ್ನು ತಿಳಿಸುವ ಹುರುಳಿದೆ. ಹೊತ್ತಿನ ಒಟ್ಟುಗಳಿಗೆ ಎಸಕಪದವು ತಿಳಿಸುವ ಎಸಕದ ಹೊತ್ತನ್ನು ಮಾತನಾಡುವವನ ಹೊತ್ತಿಗೆ ಸಂಬಂದಿಸಿದಂತೆ ತಿಳಿಸುವ ಉದ್ದೇಶ ಮತ್ತು ಹುರುಳುಗಳಿವೆ.
ಆದರೆ, ಪದದೊಟ್ಟುಗಳಿಗೆ ಹೆಚ್ಚಿನೆಡೆಗಳಲ್ಲೂ ಇಂತಹ ಒಂದು ಹುರುಳನ್ನು ಕೊಡಲು ಬರುವುದಿಲ್ಲ. ಎತ್ತುಗೆಗಾಗಿ, ಇಕೆ-ಇಗೆ ಒಟ್ಟಿಗೆ ಅದರ ಬೇರೆ ಬೇರೆ ಬಳಕೆಗಳಲ್ಲಿ ಬೇರೆ ಬೇರೆ ಹುರುಳುಗಳು ಬರುವುವೆಂಬುದನ್ನು ಮುಂದೆ ೪.೩ರಲ್ಲಿ ನೋಡಲಿರುವೆವು. ಕೆಲವು ಬಳಕೆಗಳಲ್ಲಿ ಅದಕ್ಕೆ ಎಸಕವನ್ನು ಹೆಸರಿಸುವ ಹುರುಳಿದೆಯಾದರೆ (ಹೊಗಳು-ಹೊಗಳಿಕೆ, ಅಂಜು-ಅಂಜಿಕೆ, ಮೆಚ್ಚು- ಮೆಚ್ಚುಗೆ), ಇನ್ನು ಕೆಲವು ಬಳಕೆಗಳಲ್ಲಿ ಅಂತಹ ಎಸಕದ ಮೂಲಕ ತಯಾರಾದ ವಸ್ತುಗಳನ್ನು ಹೆಸರಿಸುವ ಹುರುಳಿದೆ (ಕೆತ್ತು-ಕೆತ್ತಿಗೆ, ಮೊಳೆ-ಮೊಳಕೆ). ಹಾಗಾಗಿ, ಅವಕ್ಕೆ ನಿಶ್ಚಿತವಾಗಿ ಇಂತಹದೇ ಎಂಬುದಾಗಿ ಒಂದು ಹುರುಳನ್ನು ಕೊಡಲು ಬರುವುದಿಲ್ಲ.
ಪದಗಳನ್ನು ಬೇರೆ ಪದಗಳಿಂದ ಬೇರ್ಪಡಿಸುವುದಿಷ್ಟೇ ಪದದೊಟ್ಟುಗಳ ಮುಕ್ಯ ಕೆಲಸ; ಹಾಗಾಗಿ, ಅವಕ್ಕೊಂದು ನಿಶ್ಚಿತವಾದ ಹುರುಳಿರಬೇಕಾಗುವುದಿಲ್ಲ. ಇದಲ್ಲದೆ, ಅವು ಪದರೂಪದೊಟ್ಟುಗಳ ಹಾಗೆ ಒಂದು ಗುಂಪಿನಲ್ಲಿರುವ ಎಲ್ಲಾ ಪದಗಳೊಂದಿಗೂ ಬರುವುದಿಲ್ಲವಾದ ಕಾರಣ, ಅವಕ್ಕೆ ಎಲ್ಲ ಬಳಕೆಗಳಿಗೂ ಹೊಂದಿಕೆಯಾಗಬಲ್ಲ ಹುರುಳನ್ನು ಕೊಡಲು ಬರುವುದಿಲ್ಲ.
ಪದದೊಟ್ಟು ಮತ್ತು ಪದರೂಪದೊಟ್ಟು ಎಂಬ ಈ ಒಟ್ಟುಗಳ ಒಡೆತ ಮುಕ್ಯವಾಗಿ ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹದು. ಪದದೊಟ್ಟುಗಳನ್ನೊಳಗೊಂಡಿರುವ ಹೆಸರುಪದಗಳ ಹುರುಳು ಅವುಗಳ ಒಳರಚನೆಯ ಮೇಲೆ ನಿಂತಿರದೆ, ಅವು ಎಂತಹ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ ಎಂಬುದರ ಮೇಲೆ ನಿಂತಿದೆ ಎಂಬುದನ್ನು ಮುಂದೆ ನಾಲ್ಕನೇ ಪಸುಗೆಯಲ್ಲಿ ನೋಡಲಿರುವೆವು. ಕಾಲದಿಂದ ಕಾಲಕ್ಕೆ ಇಂತಹ ಪದಗಳಲ್ಲಾಗುವ ಹುರುಳಿನ ಬದಲಾವಣೆಗಳೂ ಅವುಗಳಲ್ಲಿರುವ ಒಟ್ಟುಗಳನ್ನು ಅವಲಂಬಿಸಿರುವುದಿಲ್ಲ. ಒಂದೇ ಪದದೊಟ್ಟನ್ನೊಳಗೊಂಡಿರುವ ಪದಗಳೆಲ್ಲವಕ್ಕೂ ಒಂದೇ ರೀತಿಯ ಹುರುಳನ್ನು ಕೊಡಲು ಬಾರದಿರುವುದಕ್ಕೆ ಇದೂ ಒಂದು ಕಾರಣ.
೧.೬.೬ ಬಳಕೆಯಲ್ಲಿಲ್ಲದ ಪದಗಳು
27
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಪದದೊಟ್ಟುಗಳ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಈ ಎರಡು ಕೆಲಸಗಳು ಬೇರೆ ಬೇರಾಗಿರುತ್ತವೆ. ಹಾಗಾಗಿ, ಅವನ್ನೊಳಗೊಂಡಿರುವ ಪದಗಳು ಒಂದು ಕಟ್ಟಲೆಗನುಸಾರವಾಗಿ ತಯಾರಾಗಿವೆಯಾದರೂ, ಅವುಗಳ ಬಳಕೆಯಲ್ಲಿ ಆ ಕಟ್ಟಲೆ ಕಟ್ಟುನಿಟ್ಟಾಗಿ ಕಾಣಿಸದಿರಬಲ್ಲುದು. ಎತ್ತುಗೆಗಾಗಿ, ಕನ್ನಡದಲ್ಲಿ ತ ಎಂಬ ಪದದೊಟ್ಟನ್ನು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳಿಗೆ ಸೇರಿಸಿ ಹೆಸರುಪದಗಳನ್ನು ಉಂಟುಮಾಡಬಲ್ಲೆವು (೪.೩.೨ ನೋಡಿ). ಈ ಕಟ್ಟಲೆಯಂತೆ, ಕುಡಿ-ತ, ದುಡಿ-ತ, ನೆಗೆ-ತ, ಒದೆ-ತ ಮೊದಲಾದ ಬಳಕೆಯಲ್ಲಿರುವ ಪದಗಳನ್ನು ಮಾತ್ರವಲ್ಲದೆ ಅಗಿ-ತ, ಹುರಿ-ತ, ಕರೆ-ತ, ಅಳೆ-ತ ಮೊದಲಾದ ಬಳಕೆಯಲ್ಲಿಲ್ಲದ ಪದಗಳನ್ನೂ ಉಂಟುಮಾಡಬಲ್ಲೆವು. ಆದರೆ, ಬಳಕೆಗೆ ಬಾರದಿರುವ ಪದಗಳನ್ನು ನುಡಿಯಲ್ಲಿರುವ ಪದಗಳೆಂದು ಹೇಳಲಾರೆವಾದ ಕಾರಣ, ಅವು ಕಟ್ಟಲೆಗೆ ಹೊರಪಡಿಕೆಗಳಾಗುತ್ತವೆ.
ಈ ರೀತಿ ಪದದೊಟ್ಟುಗಳನ್ನು ಬಳಸುವಲ್ಲಿ (೧) ಬಳಕೆಯಲ್ಲಿರುವವು (ಕುಡಿತ, ನೆರೆತ), (೨) ಬಳಕೆಯಲ್ಲಿಲ್ಲದವು (ಹುರಿತ, ಅಳೆತ) ಮತ್ತು (೩) ಕಟ್ಟಲೆಗೆ ಹೊಂದಿಕೆಯಾಗದವು (*ನಡು-ತ, *ಕೊಲ್ಲು-ತ) ಎಂಬುದಾಗಿ ಮೂರು ಬಗೆಯವನ್ನು ಕಾಣಬಲ್ಲೆವು; ಆದರೆ, ಪದರೂಪದೊಟ್ಟುಗಳನ್ನು ಬಳಸುವಲ್ಲಿ ಕಟ್ಟಲೆಗೆ ಹೊಂದಿಕೆಯಾಗುವವು ಮತ್ತು ಹೊಂದಿಕೆಯಾಗದವು ಎಂಬುದಾಗಿ ಎರಡು ಬಗೆಯವನ್ನು ಮಾತ್ರ ಕಾಣಬಲ್ಲೆವು.
ಎತ್ತುಗೆಗಾಗಿ ಅಲಿ ಎಂಬ ಪದರೂಪದೊಟ್ಟನ್ನು ಎಸಕಪದಗಳಿಗೆ ಮಾತ್ರ ಸೇರಿಸಬಹುದು ಎಂಬ ಕಟ್ಟಲೆಯೊಂದಿದೆ. ಇದರಂತೆ, ಮಾಡಲಿ, ಹೋಗಲಿ, ಬರಲಿ, ಹೇಳಲಿ ಮೊದಲಾದ ಪದರೂಪಗಳು ಕಟ್ಟಲೆಗೆ ಹೊಂದಿಕೆಯಾಗುವವು; ಇದೇ ಒಟ್ಟನ್ನು ಹೆಸರುಪದಗಳಿಗೆ ಇಲ್ಲವೇ ಎಸಕಪದಗಳಿಗೆ ಸೇರಿಸಿದಲ್ಲಿ (*ಹಗಲ-ಲಿ, ಕೆಂಪ-ಲಿ), ಅಂತಹ ಪದರೂಪಗಳನ್ನು ಕಟ್ಟಲೆಗೆ ಹೊಂದಿಕೆಯಾಗದವೆಂದು ಹೇಳಬೇಕಾದೀತು. ಈ ಪದರೂಪದೊಟ್ಟಿನ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆಗಳ ನಡುವೆ ವ್ಯತ್ಯಾಸವಿಲ್ಲ; ತಯಾರಿಸಲು ಬರುವ ರೂಪಗಳೆಲ್ಲವೂ ಬಳಕೆಯಲ್ಲಿರುವವುಗಳೇ.
೧.೬ ಬಳಕೆಗೆ ಬರುವ ಒಟ್ಟುಗಳು
ಪದಗಳ ಒಳರಚನೆ ಪದರೂಪಗಳ ಒಳರಚನೆಯಷ್ಟು ಕಟ್ಟುನಿಟ್ಟಾದುದಲ್ಲವೆಂಬುದನ್ನು ಮೇಲೆ ನೋಡಿರುವೆವು. ಹೀಗಿದ್ದರೂ ಪದಗಳಲ್ಲಿ ಕಾಣಿಸುವ ಒಳರಚನೆಗಳಲ್ಲಿ ಕೆಲವನ್ನು ಬಳಕೆಬರುವವೆಂದು ಮತ್ತು ಇನ್ನು ಕೆಲವನ್ನು ಬಳಕೆಗೆ ಬಾರದವೆಂದು ಗುರುತಿಸಬಲ್ಲೆವು. ಸಾಮಾನ್ಯವಾಗಿ ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸುವಂತಹ ಒಳರಚನೆಗಳು ಬಳಕೆಗೆ
28
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಬಾರದವೆಂದು ಮತ್ತು ಜಾಸ್ತಿ ಪದಗಳಲ್ಲಿ ಕಾಣಿಸುವವುಗಳನ್ನು ಬಳಕೆಗೆ ಬರುವವುಗಳೆಂದು ಹೇಳಬಹುದು.
ಹೊಸ ಪದಗಳನ್ನು ಉಂಟುಮಾಡಬೇಕಾದಾಗ (ಎತ್ತುಗೆಗಾಗಿ, ಹೊಸ ಅರಿಮೆಯ ಪದಗಳನ್ನು ಉಂಟುಮಾಡಬೇಕಾದಾಗ) ಈ ರೀತಿ ಬಳಕೆಗೆ ಬರುವ ಒಳರಚನೆಗಳನ್ನು ಬಳಸಿಕೊಂಡೆವಾದರೆ, ಅಂತಹ ಪದಗಳು ಹೆಚ್ಚು ಸುಳುವಾಗಿ ನುಡಿಯಲ್ಲಿ ಬಳಕೆಗೆ ಬರಬಲ್ಲುವು. ಕೆಲವೇ ಕೆಲವು ಪದಗಳಲ್ಲಿ ಮಾತ್ರವೇ ಬಳಕೆಯಾಗಿರುವ ರಚನೆಗಳನ್ನು ಬಳಸಿ ರಚಿಸಿದ ಪದಗಳು ಓದುಗರಿಗೆ ತುಸು ತೊಡಕಿನವೆಂದು ತೋರಬಲ್ಲುವು, ಮತ್ತು ಈ ಕಾರಣಕ್ಕಾಗಿ ಅವು ನುಡಿಯಲ್ಲಿ ರೂಡಿಗೆ ಬರದಿರಬಲ್ಲುವು.
ಎತ್ತುಗೆಗಾಗಿ, ಕನ್ನಡದ ಜೋಡುಪದಗಳಲ್ಲಿ ಎರಡಕ್ಕಿಂತ ಹೆಚ್ಚು ಅಂಗಗಳಿರುವುದು ಬಹಳ ಕಡಿಮೆ. ಹಾಗಾಗಿ, ಅಂತಹ ಜೋಡುಪದಗಳ ಒಳರಚನೆ ಕನ್ನಡದ ಮಟ್ಟಿಗೆ ಬಳಕೆಗೆ ಬಾರದವೆಂದು ಹೇಳಬಹುದು. ಅರಿವೆಯ ಪದಗಳನ್ನು ರಚಿಸುವವರು ಎರಡಕ್ಕಿಂತ ಹೆಚ್ಚು ಪದಗಳನ್ನು ಸೇರಿಸಿ ಉದ್ದುದ್ದವಾದ ಪದಗಳನ್ನು ತಯಾರಿಸಿ ಹಾಕಿದಲ್ಲಿ, ಅವು ಕನ್ನಡದಲ್ಲಿ ಬಳಕೆಗೆ ಬರುವುದು ಸ್ವಲ್ಪ ಕಶ್ಚ.
ಒಟ್ಟುಗಳಿರುವ ಪದಗಳಲ್ಲೂ ಇದೇ ರೀತಿ ಬಳಕೆಗೆ ಬರಬಲ್ಲ ಮತ್ತು ಬಳಕೆಗೆ ಬರಲಾರದ ರಚನೆಗಳನ್ನು ಕಾಣಬಹುದು. ಕನ್ನಡದಲ್ಲಿ ಇಕೆ-ಇಗೆ, ತ- ತೆ, ವು ಮೊದಲಾದ ಕೆಲವು ಒಟ್ಟುಗಳು ಹಲವು ಪದಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವನ್ನು ಬಳಸಿ ಹೊಸ ಪದಗಳನ್ನು ತಯಾರಿಸಿದಲ್ಲಿ ಅಂತಹ ಪದಗಳು ಸುಳುವಾಗಿ ನುಡಿಯಲ್ಲಿ ರೂಡಿಗೆ ಬರಬಲ್ಲುವು. ಬೇರೆ ಹಲವು ಒಟ್ಟುಗಳು ಒಂದೆರಡು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು (ಉದಾ: ಡ, ಳ, ಹ ಇತ್ಯಾದಿ), ಅವನ್ನು ಬಳಸಿ ತಯಾರಿಸಿದ ಪದಗಳು ಅಶ್ಶೊಂದು ಸುಳುವಾಗಿ ಬಳಕೆಗೆ ಬರಲಾರವು.
ಪದಗಳ ಒಳರಚನೆಗೆ ಅವುಗಳ ದಿನನಿತ್ಯದ ಬಳಕೆಯಲ್ಲಿ ವಿಶೇಷವಾದ ಸ್ಥಾನವೇನೂ ಇಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು. ಹೆಚ್ಚಿನ ಕಡೆಗಳಲ್ಲೂ ಪದಗಳನ್ನು ಬಳಸುವಾಗ ಅವುಗಳಿಗೆ ಒಳರಚನೆಯೆಂಬು ದೊಂದಿದೆಯೆಂಬುದೇ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಈ ವಿಶಯದಲ್ಲಿ ಬಳಕೆಗೆ ಬರಬಲ್ಲ ರಚನೆಯಿರುವ ಪದಗಳು ಬಳಕೆಗೆ ಬರಲಾರದ ರಚನೆಯಿರುವ ಪದಗಳಿಗಿಂತ ಸ್ವಲ್ಪ ಮಟ್ಟಿಗಾದರೂ ಬೇರಾಗಿರಬಲ್ಲುವು. ಎತ್ತುಗೆಗಾಗಿ, ಕಟ್ಟಡ, ತಿಂಡಿ, ಬೀಳಲು, ಬಿರುಕು ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳ ರಚನೆಯಲ್ಲಿ ಕಟ್ಟು, ತಿನ್ನು, ಬೀಳು, ಬಿರಿ ಮೊದಲಾದ ಎಸಕಪದಗಳು ಬಳಕೆಯಾಗುವುವೆಂಬ ವಿಶಯ ನಮ್ಮ ಗಮನಕ್ಕೆ ಬಾರದಿದ್ದರೂ, ಬಳಲಿಕೆ, ನಂಬಿಕೆ, ಹೋಲಿಕೆ ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳರಚನೆ
29
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಯಲ್ಲಿ ಬಳಲು, ನಂಬು, ಹೋಲು ಮೊದಲಾದ ಎಸಕಪದಗಳಿರುವುದು ನಮ್ಮ ಗಮನಕ್ಕೆ ಬರಬಲ್ಲುದು.
ಈ ವ್ಯತ್ಯಾಸದ ಮೇಲೆ, ಬಳಸಬಲ್ಲ ಒಳರಚನೆಯಿರುವ ಪದಗಳನ್ನು ಮಾತ್ರವೇ ವ್ಯಾಕರಣದಲ್ಲಿ ವಿವರಿಸಬೇಕು, ಬಳಸಲಾಗದ ಒಳರಚನೆ ಯಿರುವವುಗಳನ್ನು ವಿವರಿಸಬೇಕಾಗಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಈ ಪುಸ್ತಕದಲ್ಲಿ ಇವೆರಡು ರೀತಿಯ ಪದಗಳನ್ನೂ ಪರಿಶೀಲನೆಗೆ ತೆಗೆದುಕೊಂಡಿದ್ದು, ಎರಡಕ್ಕೂ ಒಳರಚನೆಗಳನ್ನು ಮುಕ್ಯವಾಗಿ ಚಾರಿತ್ರಿಕ ಅಂಶಗಳ ಮೇಲೆ ಕಲ್ಪಿಸಿಕೊಡಲಾಗಿದೆ.
೧.೨ ಹೆಸರುಪದಗಳು ಮತ್ತು ಬೇರೆ ಪದಗಳು
ಪದಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಳರಚನೆಯ ಪಾತ್ರವೆಂತಹದು ಎಂಬ ವಿಷಯದಲ್ಲಿ ಹೆಸರುಪದಗಳಿಗೂ ಮತ್ತು ಬೇರೆ ಪದಗಳಿಗೂ (ಎಸಕಪದ ಮತ್ತು ಪರಿಚೆಪದಗಳಿಗೂ) ನಡುವೆ ಮುಕ್ಯವಾದ ವ್ಯತ್ಯಾಸವಿದೆಯೆಂಬುದನ್ನು ಇಲ್ಲಿ ಗಮನಿಸಬೇಕು. ಪದಗಳ ಕುರಿತಾಗಿ ಮೇಲೆ ಹೇಳಿರುವ ಸಂಗತಿಗಳಲ್ಲಿ ಹೆಚ್ಚಿನವೂ ಹೆಸರುಪದಗಳಿಗೆ ಮಾತ್ರ ಅನ್ವಯಿಸುವಂತಹವುಗಳು. ಎಸಕಪದ ಇಲ್ಲವೇ ಪರಿಚೆಪದಗಳಿಗೆ ಅನ್ವಯಿಸುವಂತಹವುಗಳಲ್ಲ.
ಎತ್ತುಗೆಗಾಗಿ, ಒಳರಚನೆಯಿರುವ ಹೆಸರುಪದಗಳ ಹುರುಳು ಹೆಚ್ಚಿನಡೆಗಳಲ್ಲೂ ಅವುಗಳ ಒಳರಚನೆಯಿಂದ ದೊರಕುವ ಹುರುಳಿಗಿಂತ ಬೇರಾಗಿರುತ್ತದೆ. ಆದರೆ, ಒಳರಚನೆಯಿರುವ ಎಸಕಪದ ಮತ್ತು ಪರಿಚೆಪದಗಳ ಹುರುಳು ಹೆಚ್ಚಿನೆಡೆಗಳಲ್ಲೂ ಅವುಗಳ ಒಳರಚನೆಯಿಂದ ದೊರಕುವ ಹುರುಳೇ ಆಗಿರುತ್ತದೆ. ಹಾಗಾಗಿ, ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹ ಒಳರಚನೆಯಿರುವ ಪದ ಮತ್ತು ಪದಕಂತೆ ಎಂಬವುಗಳ ನಡುವಿರುವ ವ್ಯತ್ಯಾಸ ಎಸಕಪದ ಇಲ್ಲವೇ ಪರಿಚೆಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.
ಹೆಸರುಪದಗಳಿಗೂ ಬೇರೆ ಪದಗಳಿಗೂ ನಡುವೆ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳಲು ಮುಕ್ಯ ಕಾರಣವೇನೆಂದರೆ, ಹೆಸರಿಸುವುದು ಮತ್ತು ವರಿಸು ವುದು ಎಂಬ ಎರಡು ರೀತಿಯ ಗುರುತಿಸುವ ವಿದಾನಗಳು ಹೆಸರುಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವಲ್ಲದೆ ಎಸಕಪದ ಇಲ್ಲವೇ ಪರಿಚೆಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ (೩.೧ ನೋಡಿ). ಯಾಕೆಂದರೆ, ವ್ಯಕ್ತಿ, ವಸ್ತು, ಎಸಕ, ಪರಿಚೆ, ಮೊದಲಾದುವನ್ನು ಗುರುತಿಸುವ ಕೆಲಸವನ್ನು ಹೆಸರುಪದಗಳು ಮಾತ್ರ ಮಾಡಬಲ್ಲುವು. ಎಸಕಪದಗಳು ಎಸಕಗಳನ್ನು ತಿಳಿಸುತ್ತವಲ್ಲದೆ ಗುರುತಿಸುವುದಿಲ್ಲ. ಇದೇ ರೀತಿಯಲ್ಲಿ, ಪರಿಚೆಪದಗಳು ಪರಿಚಿಗಳನ್ನು ಸೂಚಿಸುತ್ತವಲ್ಲದೆ ಗುರುತಿಸುವುದಿಲ್ಲ. ಅವು ಸೂಚಿಸುವ ಪರಿಚೆಗಳ
30
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪೀಠಿಕೆ
ಸಹಾಯದಿಂದ ವ್ಯಕ್ತಿ, ವಸ್ತು, ಎಸಕ, ಪರಿಚೆ ಮೊದಲಾದುವನ್ನು ಗುರುತಿಸುವ ಕೆಲಸವನ್ನು ಹೆಸರುಪದಗಳು ನಡೆಸುತ್ತವೆ.
ಪದಗಳ ಒಳರಚನೆಯ ಕುರಿತಾಗಿ ಮೇಲೆ ಹೇಳಿರುವ ಪರಿಚಿಗಳಲ್ಲಿ ಹೆಚ್ಚಿನವೂ ಈ ರೀತಿ ಅವು ಹೆಸರಿಸುವ ವಿದಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುವ ಕಡೆಗಳಲ್ಲಿ ಅವಕ್ಕೆ ಅನ್ವಯಿಸುವಂತಹವುಗಳು. ಹಾಗಾಗಿ, ಈ ಪರಿಚಿಗಳು ಹೆಸರುಪದಗಳಿಗೆ ಮಾತ್ರ ಅನ್ವಯಿಸಬಲ್ಲುವು. ಪದಗಳ ಪರಿಚಿಗಳನ್ನು ವಿವರಿಸುವಾಗ ಈ ರೀತಿ ಹೆಸರುಪದ ಮತ್ತು ಬೇರೆ ಪದಗಳ ನಡುವಿರುವ ವ್ಯತ್ಯಾಸವನ್ನು ಗಮನಕ್ಕೆ ತೆಗೆದುಕೊಳ್ಳದಿರಲು ನುಡಿಯಲ್ಲಿ ಬರುವ ಪದಗಳಲ್ಲಿ ಹೆಚ್ಚಿನವೂ ಹೆಸರುಪದಗಳಾಗಿರುವುದೇ ಮುಕ್ಯ ಕಾರಣವೆಂದು ಹೇಳಬಹುದು.
೧.೯ ಪುಸ್ತಕದ ಸ್ವರೂಪ
ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳ ಒಳರಚನೆಯನ್ನು ಕನ್ನಡದವೇ ಆದ ಸೊಲ್ಲರಿಮೆಯ ಕಟ್ಟಲೆಗಳ (ಇಲ್ಲವೇ ಒಲವುಗಳ) ಮೂಲಕ ವಿವರಿಸಿ ಹೇಳುವುದೇ ಈ ಪುಸ್ತಕದ ಮುಕ್ಯ ಉದ್ದೇಶ. ಇಂತಹ ನಿಯಮಗಳನ್ನು ಕನ್ನಡಕ್ಕೆ ಮೂಲವಾಗಿರುವ ಭಾಶೆಯೊಂದರಿಂದ ಇಳಿದು ಬಂದಿರುವ ಪದಗಳಲ್ಲಿ ಮತ್ತು ಬೇರೆ ಭಾಶೆಗಳಿಂದ ಎರವಲಾಗಿ ಬಂದಿದ್ದರೂ ಬೇರೆ ಬೇರೆ ಬದಲಾವಣೆಗಳ ಮೂಲಕ ಕನ್ನಡದವೇ ಆಗಿರುವ ಪದಗಳಲ್ಲಿ ಕಾಣಬಹುದು.
ಕನ್ನಡದಲ್ಲಿ ಬರುವ ಇಂತಹ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಲು ಅವನ್ನು ಬೇರೆ ಬೇರೆ ಪದವರ್ಗಗಳಲ್ಲಿ ವಿಂಗಡಿಸಿಕೊಳ್ಳುವುದು ಅವಶ್ಯ. ಯಾಕೆಂದರೆ, ಬೇರೆ ಬೇರೆ ಪದವರ್ಗಗಳಲ್ಲಿ ಬರುವ ಪದಗಳು ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸಬೇಕಾಗಿದ್ದು, ಇದಕ್ಕನುಗುಣವಾಗಿ ಅವು ಬೇರೆ ಬೇರೆ ಒಳರಚನೆಗಳನ್ನು ಪಡೆದಿರಬೇಕಾಗುತ್ತದೆ. ಹಾಗಾಗಿ, ಕನ್ನಡದ ಪದಗಳು ಮುಕ್ಯವಾಗಿ ಮೂರು ಪದವರ್ಗಗಳಲ್ಲಿ ಹೇಗೆ ಸೇರಿಕೊಳ್ಳುತ್ತವೆ ಎಂಬುದನ್ನು ಎರಡನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.
ಹೆಸರುಪದ, ಎಸಕಪದ ಮತ್ತು ಪರಿಚೆಪದಗಳೆಂಬುದಾಗಿ ಮೂರು ಮುಕ್ಯ ಪದವರಗಳಲ್ಲಿ ಸೇರುವ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಇವುಗಳಲ್ಲಿ ಹೆಸರುಪದವೆಂಬ ವರಕ್ಕೆ ಸೇರುವ ಪದಗಳಲ್ಲೇನೇ ಹೆಚ್ಚಿನ ಒಳರಚನೆಗಳೂ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಮುಂದಿನ ಮೂರು ಅದ್ಯಾಯಗಳಲ್ಲೂ (೩-೫) ಹೆಸರುಪದಗಳ ಒಳರಚನೆಯಂತಹದು ಎಂಬುದನ್ನೇ ವಿವರಿಸಲಾಗಿದೆ. ಮೂರನೆಯ ಅದ್ಯಾಯದಲ್ಲಿ ಇವುಗಳ ಒಳರಚನೆಯಲ್ಲಿ ಕಾಣಿಸುವ ಕೆಲವು ವಯ್ಯಿಶ್ಚಗಳನ್ನು ಪರಿಶೀಲಿಸಲಾಗಿದೆ, ಮತ್ತು ಮುಂದಿನ ಎರಡು ಅಧ್ಯಾಯಗಳಲ್ಲಿ ಒಟ್ಟುಗಳನ್ನು ಬಳಸಿ ರಚಿಸಿದ ಹೆಸರುಪದಗಳನ್ನು ಮತ್ತು
31
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎರಡು ಪದಗಳನ್ನು ಒಟ್ಟು ಸೇರಿಸಿ ರಚಿಸಿದ ಹೆಸರುಪದಗಳನ್ನು ಬೇರೆ ಬೇರಾಗಿ ಪರಿಶೀಲಿಸಲಾಗಿದೆ.
ಎಸಕಪದ ಮತ್ತು ಪರಿಚೆಪದಗಳ ಒಳರಚನೆಯಲ್ಲಿ ಅಶ್ಶೊಂದು ವಯ್ದಿದ್ಯತೆಯಿಲ್ಲ. ಅವುಗಳ ಒಟ್ಟು ಎಣಿಕೆಯೂ ಹೆಸರುಪದಗಳಿಗಿಂತ ಬಹಳ ಕಡಿಮೆ. ಆರು ಮತ್ತು ಏಳನೆಯ ಅಧ್ಯಾಯಗಳಲ್ಲಿ ಈ ಎರಡು ವರ್ಗಗಳಿಗೆ ಸೇರುವ ಪದಗಳ ಒಳರಚನೆಯಲ್ಲಿ ಕಾಣಿಸುವ ಕೆಲವು ಒಟ್ಟುಗಳ ಬಳಕೆಯೆಂತಹದೆಂಬುದನ್ನು ಪರಿಶೀಲಿಸಲಾಗಿದೆ.
ಬೇರೆ ನುಡಿಗಳಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಇತ್ತೀಚೆಗಿನವು ಅವನ್ನು ಎರವಲು ಕೊಟ್ಟಿರುವ ನುಡಿಯ ಹಲವು ವಯ್ದಿಶ್ಯಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ. ಬೇರೆ ಬೇರೆ ಬದಲಾವಣೆಗಳ ಮೂಲಕ ಅವು ಕನ್ನಡದವೇ ಎಂದೆನಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ, ಇಂತಹ ಪದಗಳ ಒಳರಚನೆಯನ್ನು ಬೇರೆಯೇ ಕೆಲವು ನಿಯಮಗಳ ಮೂಲಕ ವರಿಸಬೇಕಾಗುತ್ತದೆ. ಸಂಸ್ಕೃತದಿಂದ ಎರವಲಾಗಿ ಬಂದಿರುವ ಇಂತಹ ಹಲವು ಪದಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು, ಅವುಗಳ ಒಳರಚನೆಯೆಂತಹದು ಎಂಬು ದನ್ನು ಎಂಟನೇ ಅದ್ಯಾಯದಲ್ಲಿ ವಿವರಿಸಲಾಗಿದೆ.
ಪುಸ್ತಕದ ಕೊನೆಯಲ್ಲಿ ಬರುವ ಒಂಬತ್ತನೆಯ ಅದ್ಯಾಯದಲ್ಲಿ ಕನ್ನಡಕ್ಕೆ ಅದರದೇ ಆದ ಸೊಲ್ಲರಿಮೆಯ ಪರಂಪರೆಯೊಂದನ್ನು ತಯಾರಿಸಿಕೊಡುವಲ್ಲಿ ಈ ಪುಸ್ತಕದ ಪಾತ್ರವೇನು ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಈ ಪುಸ್ತಕದ ತಯಾರಿಕೆಯಲ್ಲಿ ಸಹಾಯಕವಾದ ಕೆಲವು ಪುಸ್ತಕಗಳ ಪಟ್ಟಿಯನ್ನೂ ಮತ್ತು ಈ ಪುಸ್ತಕದಲ್ಲಿ ಬರುವ ಕೆಲವು ಮುಕ್ಯ ವಿಷಯಗಳ ಪಟ್ಟಿಯನ್ನೂ ಕೊನೆಯಲ್ಲಿ ಕಾಣಬಹುದು.
32
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
೨. ಕನ್ನಡದ ಪದಗುಂಪುಗಳು
೨.೧ ಮುನ್ನೋಟ
ನುಡಿಯೊಂದರಲ್ಲಿ ಬರುವ ಪದಗಳನ್ನು ಅವುಗಳ ಹುರುಳು ಮತ್ತು ಸೊಲ್ಲುಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ ಈ ಎರಡು ವಿಷಯಗಳ ಮೇಲೆ ಕೆಲವು ಮುಕ್ಯವಾದ ಗುಂಪುಗಳಲ್ಲಿ ಸೇರಿಸಿ ಹೇಳಬಹುದು. ಕನ್ನಡ ಸೊಲ್ಲುಗಳಲ್ಲಿ ಬರುವ ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದು, ಎಸಕಗಳನ್ನು ತಿಳಿಸುವುದು ಮತ್ತು ವ್ಯಕ್ತಿ, ವಸ್ತು ಮೊದಲಾದವುಗಳ ಇಲ್ಲವೇ ಅವು ನಡೆಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಕ್ಯವಾದ ಕೆಲಸಗಳನ್ನು ನಡೆಸಬೇಕಾಗಿದೆ. ಹಾಗಾಗಿ, ಈ ಕೆಲಸಗಳ ಮೇಲೆ ಅವನ್ನು ಹೆಸರುಪದ, ಎಸಕಪದ, ಮತ್ತು ಪರಿಚೆಪದಗಳೆಂಬ ಮೂರು ಮುಕ್ಯ ಪದಗುಂಪುಗಳಾಗಿ ವಿಂಗಡಿಸಬಲ್ಲೆವು.
ಎತ್ತುಗೆಗಾಗಿ, ರಾಜು, ಹುಡುಗಿ, ಆನೆ, ಮನೆ, ಆಸೆ ಮೊದಲಾದ ಪದಗಳು ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಸೊಲ್ಲುಗಳಲ್ಲಿ ಬರುವುವಾದ ಕಾರಣ, ಅವು ಹೆಸರುಪದಗಳು; ಹೇಳು, ಬೀಳು, ಒಡೆ, ತಿನ್ನು, ಒಣಗು, ತಿರುಗು ಮೊದಲಾದ ಪದಗಳು ಎಸಕಗಳನ್ನು ತಿಳಿಸುವುದಕ್ಕಾಗಿ ಬರುವುವಾದ ಕಾರಣ ಎಸಕಪದಗಳು; ಬಿಳಿ, ಒಳ್ಳೆ, ದೊಡ್ಡ, ತುಸು ಮೊದಲಾದ ಪದಗಳು ವ್ಯಕ್ತಿ, ವಸ್ತು ಮೊದಲಾದವುಗಳ ಇಲ್ಲವೇ ಅವು ನಡೆಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದಕ್ಕಾಗಿ ಬರುವುವಾದ ಕಾರಣ ಪರಿಚೆಪದಗಳು. ಇವು ಈ ಮೂರು ಬಗೆಯ ಕೆಲಸಗಳನ್ನು ನಡೆಸುವವೆಂಬುದನ್ನು ಕೆಳಗಿನ ಎತ್ತುಗೆಗಳಿಂದ ತಿಳಿಯಬಹುದು.
(೧) ರಾಜು ದೊಡ್ಡ ಹುಡುಗನಿಗೆ ತುಸು ಹೊಡೆದ.
(೨) ಗಿರಿ ಕಪ್ಪು ಚಿತ್ರಗಳನ್ನು ಕಾಗದದಲ್ಲಿ ಬಿಡಿಸುತ್ತಾನೆ.
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
(೩) ವತ್ಸಲ ಒಂದು ಕಪ್ಪು ಬೆಕ್ಕನ್ನು ಸಾಕುತ್ತಿದ್ದಾಳೆ.
(೪) ಸಪ್ತವರ ಮಾರ್ಗಗಳಲ್ಲಿ ವಾಹನಗಳು ಒಂದೇ ದಿಕ್ಕಿನಲ್ಲಿ ಚಲಿಸಲಿ.
ಮೇಲೆ ಕೊಟ್ಟಿರುವ (೧)ನೇ ಸೊಲ್ಲಿನಲ್ಲಿ ಹೊಡೆ ಎಂಬ ಪದ ಒಂದು ಎಸಕವನ್ನು ತಿಳಿಸುತ್ತಿದೆಯಾದ ಕಾರಣ ಎಸಕಪದ; ಹುಡುಗ ಮತ್ತು ರಾಜು ಎಂಬ ಪದಗಳು ಆ ಎಸಕದಲ್ಲಿ ನಿರತರಾಗಿರುವ ಇಬ್ಬರು ವ್ಯಕ್ತಿಗಳನ್ನು ಗುರುತಿಸುತ್ತಿವೆಯಾದ ಕಾರಣ ಹೆಸರುಪದಗಳು; ದೊಡ್ಡ ಎಂಬ ಪದ ಹುಡುಗ ಎಂಬ ಪದವು ಗುರುತಿಸುವ ವ್ಯಕ್ತಿಯ ಪರಿಚೆಯೊಂದನ್ನು ಸೂಚಿಸುತ್ತಿಯಾದ ಕಾರಣ ಪರಿಚೆಪದ; ಮತ್ತು ತುಸು ಎಂಬ ಪದ ಹೊಡೆ ಎಂಬ ಎಸಕಪದವು ತಿಳಿಸುವ ಎಸಕದ ಪರಿಚೆಯೊಂದನ್ನು ಸೂಚಿಸುತ್ತಿದೆಯಾದ ಕಾರಣ ಅದೂ ಒಂದು ಪರಿಚೆಪದವೇ. ಇವುಗಳಲ್ಲಿ ದೊಡ್ಡ ಎಂಬುದನ್ನು ಹೆಸರುಪರಿಚೆಯೆಂದು ಮತ್ತು ತುಸು ಎಂಬುದನ್ನು ಎಸಕಪರಿಚೆಯೆಂದು ಕರೆಯಬಹುದು.
ಇತರ ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಈ ಮೂರು ಕೆಲಸಗಳನ್ನು ನಡೆಸುವುದಕ್ಕಾಗಿ ಬೇರೆ ಬೇರೆ ಪದಗಳು ಬಂದಿದ್ದು, ಅವನ್ನು ಈ ಕೆಲಸಗಳ ಮೇಲೆ ಮೂರು ಪದವರ್ಗಗಳಲ್ಲಿ ವಿಂಗಡಿಸಿ ಹೇಳಬಹುದು. ಎತ್ತುಗೆಗಾಗಿ, (೨)ನೇ ಸೊಲ್ಲಿನಲ್ಲಿ ಗಿರಿ, ಕಾಗದ ಮತ್ತು ಚಿತ್ರ ಎಂಬ ಹೆಸರುಪದಗಳು, ಬಿಡಿಸು ಎಂಬ ಎಸಕಪದ, ಮತ್ತು ಕಪ್ಪು ಎಂಬ ಹೆಸರುಪರಿಚೆಗಳು ಬಂದಿವೆ.
ಪದಗಳ ಒಳರಚನೆಯೆಂಬುದು ಸ್ವಲ್ಪಮಟ್ಟಿಗೆ ಅವು ಯಾವ ಗುಂಪಿನಲ್ಲಿ ಸೇರುತ್ತವೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಯಾಕೆಂದರೆ, ಅವು ಸೊಲ್ಲಿನಲ್ಲಿ ಎಂತಹ ಕೆಲಸವನ್ನು ನಡೆಸಬೇಕಾಗುತ್ತದೆಯೋ ಅದಕ್ಕೆ ತಕ್ಕುದಾದ ಒಳರಚನೆಯೂ ಅವಕ್ಕಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಮತ್ತು ಅವುಗಳ ಪರಿಚಿಗಳನ್ನು ಸೂಚಿಸುವುದಕ್ಕಾಗಿ ಪರಿಚೆಪದಗಳನ್ನು ಬಳಸಲಾಗುತ್ತದೆ; ಈ ಎರಡು ಬಗೆಯ ಪದಗಳ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ:
ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ‘ಹೆಸರಿಸುವ ಹಮ್ಮುಗೆ’ ಮತ್ತು ‘ವರಿಸುವ ಹಮ್ಮುಗೆ’ ಎಂಬುದಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ ಎಂಬುದನ್ನು ನಾವು ಮುಂದೆ ೩.೧ರಲ್ಲಿ ನೋಡಲಿರುವೆವು. ಆದರೆ, ಈ ಎರಡು ಹಮ್ಮುಗೆಗಳಲ್ಲಿ ಒಂದನ್ನು ಮಾತ್ರ (ಎಂದರೆ ವರಿಸುವ ಹಮ್ಮುಗೆಯನ್ನು ಮಾತ್ರ) ಪರಿಚೆಯೊಂದನ್ನು ಸೂಚಿಸುವ ಕೆಲಸದಲ್ಲಿ ಬಳಸಲು ಬರುತ್ತದೆ. ಈ ವ್ಯತ್ಯಾಸದ ಪರಿಣಾಮವನ್ನು ನಾವು ಹೆಸರುಪದ ಮತ್ತು ಪರಿಚೆಪದಗಳ ಒಳರಚನೆಯಲ್ಲಿ ಸ್ಪಷ್ಟವಾಗಿ ಕಾಣಬಹುದು:
ಎತ್ತುಗೆಗಾಗಿ, ಹೆಸರುಪದಗಳ ಒಳರಚನೆಯಲ್ಲಿ ಜೋಡುಪದ (ಸಮಾಸ) ಎಂಬ ಪದರಚನೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಎರಡು (ಇಲ್ಲವೇ ಹೆಚ್ಚು)
35
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಪದಗಳ ಜೋಡಣೆಯಿಂದ ಹೊಸ ಪದವೊಂದನ್ನು ತಯಾರಿಸಲಾಗುತ್ತದೆ. ಆದರೆ, ಪರಿಚೆಪದಗಳ ಒಳರಚನೆಯಲ್ಲಿ ಜೋಡುಪದಗಳು ಕಾಣಿಸುವುದಿಲ್ಲ. ಇಂತಹ ರಚನೆ ‘ಹೆಸರಿಸುವ’ ಹಮ್ಮುಗೆಗೆ ಸೀಮಿತವಾಗಿರುವುದೇ ಇದಕ್ಕೆ ಕಾರಣ.
ಹಾಗಾಗಿ, ಕನ್ನಡದ ಪದಗಳನ್ನು ಎಂತಹ ಗುಂಪುಗಳಲ್ಲೆಲ್ಲ ಸೇರಿಸಿ ಹೇಳಬಹುದು ಎಂಬ ವಿಶಯ ಕನ್ನಡ ಪದರಚನೆಯ ಪರಿಶೀಲನೆಯಲ್ಲಿ ಮುಕ್ಯವಾಗುತ್ತದೆ. ಸಂಸ್ಕೃತದಲ್ಲಿ ಹೆಸರುಪದ ಎಂಬುದಕ್ಕಿಂತ ಬೇರಾಗಿರುವ ಪರಿಚೆಪದ ಎಂಬ ಪದಗುಂಪಿಲ್ಲ. ಕನ್ನಡದಲ್ಲಿರುವ ಈ ಎರಡು ಬಗೆಯ ಪದಗಳಿಗೆ ಬದಲಾಗಿ ಅದರಲ್ಲಿ ಹೆಸರುಪದವೆಂಬ ಒಂದು ಪದಗುಂಪಿನಲ್ಲಿ ಸೇರುವ ಪದಗಳು ಮಾತ್ರ ಕಾಣಿಸುತ್ತವೆ. ಇದಕ್ಕೆ ಆ ನುಡಿಯ ಸೊಲ್ಲುಗಳಲ್ಲಿ ಈ ಪದಗಳು ನಡೆಸಿಕೊಡಬೇಕಾಗಿರುವ ಕೆಲಸಗಳು ಕನ್ನಡದ ಸೊಲ್ಲುಗಳಲ್ಲಿ ಅವು ನಡೆಸಿಕೊಡಬೇಕಾಗಿರುವ ಕೆಲಸಗಳಿಗಿಂತ ಬೇರಾಗಿರುವುದೇ ಕಾರಣವೆಂಬುದನ್ನು ಮುಂದೆ (೨.೨ರಲ್ಲಿ) ನೋಡಲಿರುವೆವು. ಈ ವ್ಯತ್ಯಾಸವನ್ನು ಅರಿತುಕೊಳ್ಳದೆ, ಸಂಸ್ಕೃತದ ಹಾಗೆ ಕನ್ನಡದಲ್ಲೂ ಪರಿಚೆಪದಗಳು ಹೆಸರುಪದಗಳಿಗಿಂತ ಬೇರಲ್ಲ ಎಂದು ತಪ್ಪಾಗಿ ತಿಳಿದುಕೊಂಡೆವಾದರೆ, ಕನ್ನಡದಲ್ಲಿ ಬರುವ ಹೆಸರುಪದ ಮತ್ತು ಪರಿಚೆಪದಗಳ ಒಳರಚನೆಯಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ನಾವು ತಪ್ಪಿಬೀಳುತ್ತೇವೆ.
೨.೨ ಪದಗುಂಪುಗಳಲ್ಲಿ ವ್ಯತ್ಯಾಸಗಳು
ಮೇಲೆ ಹೇಳಿರುವಂತೆ, ಎಲ್ಲಾ ನುಡಿಗಳೂ ತಾವು ಬಳಸುವ ಪದಗಳನ್ನು ಒಂದೇ ರೀತಿಯಾಗಿ ಗುಂಪುಗೂಡಿಸುವುದಿಲ್ಲ. ಇದಕ್ಕೆ ಮುಕ್ಯ ಕಾರಣವೇನೆಂದರೆ, ಸೊಲ್ಲುಗಳ ರಚನೆ ನುಡಿಯಿಂದ ನುಡಿಗೆ ಬೇರೆ ಬೇರಾಗಿದ್ದು, ಅವುಗಳಲ್ಲಿ ಪದಗಳು ನಡೆಸಬೇಕಾಗಿರುವ ಕೆಲಸಗಳೂ ಬೇರೆ ಬೇರಾಗಿರುತ್ತವೆ. ನುಡಿಯೊಂದರಲ್ಲಿ ಪದಗಳು ಎಂತಹ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅದರಲ್ಲಿ ಬರುವ ಪದಗಳನ್ನು ಎಂತಹ ಗುಂಪುಗಳಲ್ಲಿ ಸೇರಿಸಿ ಹೇಳಬಹುದು ಎಂಬುದು ಅವಲಂಬಿಸಿದೆ.
ಭಾರತದಲ್ಲಿ ದ್ರಾವಿಡ, ಆರ್ಯ (ಇಂಡೋ-ಆರ್ಯನ್), ಟಿಬೆಟೋ-ಬರ್ಮನ್ ಮತ್ತು ಆಸ್ಟೋ-ಏಶಿಯಾಟಿಕ್ ಎಂಬುದಾಗಿ ನಾಲ್ಕು ಮುಕ್ಯ ನುಡಿಕುಟುಂಬಗಳಿಗೆ ಸೇರಿದ ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸೊಲ್ಲುಗಳನ್ನು ಕಟ್ಟುವ ಹಮ್ಮುಗೆಗಳು ಬೇರೆ ಬೇರಾಗಿದ್ದು, ಅವುಗಳಲ್ಲಿ ಪದಗಳು ನಡೆಸಬೇಕಾಗಿರುವ ಕೆಲಸಗಳೂ ಬೇರೆ ಬೇರಾಗಿವೆ. ಈ ಕಾರಣಕ್ಕಾಗಿ, ಈ ನಾಲ್ಕು ಬಗೆಯ ನುಡಿಗಳಲ್ಲಿರುವ ಪದಗುಂಪುಗಳ ಎಣಿಕೆ ಮತ್ತು ಪರಿಚೆಗಳೆರಡೂ ಬೇರೆ ಬೇರಾಗಿವೆ.
36
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಕನ್ನಡ ನುಡಿಯು ತಮಿಳು, ತೆಲುಗು, ತುಳು, ಮಲಯಾಳ, ಗೋಂಡಿ, ಕುಡುಕ್ ಮೊದಲಾದ ಬೇರೆ ಕೆಲವು ನುಡಿಗಳೊಂದಿಗೆ ‘ದ್ರಾವಿಡ’ ಎಂಬ ಹೆಸರಿನ ನುಡಿಕುಟುಂಬಕ್ಕೆ ಸೇರಿರುವ ನುಡಿ. ಈ ಎಲ್ಲಾ ನುಡಿಗಳಲ್ಲೂ ಕನ್ನಡದ ಹಾಗೆ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಕ್ಯ ಪದಗುಂಪುಗಳಿವೆ, ಮತ್ತು ಅವು ಸೊಲ್ಲುಗಳಲ್ಲಿ ವ್ಯಕ್ತಿ, ವಸ್ತು ಮೊದಲಾ ದುವನ್ನು ಗುರುತಿಸುವುದು, ಎಸಕಗಳನ್ನು ತಿಳಿಸುವುದು ಮತ್ತು ಪರಿಚೆಗಳನ್ನು ಸೂಚಿಸುವುದು ಎಂಬುದಾಗಿ ಮೂರು ಕೆಲಸಗಳನ್ನು ನಡೆಸಿಕೊಡುತ್ತವೆ.
ಸಂಸ್ಕೃತ ನುಡಿಯು ಹಿಂದಿ, ಮರಾಟಿ, ಗುಜರಾತಿ, ಬಂಗಾಲಿ, ಕಾಶ್ಮೀರಿ ಮೊದಲಾದ ಬೇರೆ ಕೆಲವು ನುಡಿಗಳೊಂದಿಗೆ ಆರ್ಯ (ಇಲ್ಲವೇ ಇಂಡೋ- ಆರ್ಯನ್) ಎಂಬ ನುಡಿಕುಟುಂಬಕ್ಕೆ ಸೇರಿರುವ ನುಡಿ. ಈ ನುಡಿಗಳಲ್ಲಿ ಬರುವ ಪದಗಳು ಮುಕ್ಯವಾಗಿ ಹೆಸರುಪದ ಮತ್ತು ಎಸಕಪದಗಳೆಂಬ ಎರಡು ಪದಗುಂಪುಗಳಲ್ಲಿ ಸೇರುತ್ತವೆ. ಇವುಗಳಲ್ಲಿ ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕೆಲಸವನ್ನು, ಮತ್ತು ಎಸಕಪದಗಳು ಎಸಕಗಳನ್ನು ತಿಳಿಸುವ ಕೆಲಸವನ್ನು ನಡೆಸುತ್ತವೆ. ಪರಿಚೆಪದಗಳೆಂಬ ಮೂರನೇ ಪದಗುಂಪು ಈ ನುಡಿಗಳಲ್ಲಿಲ್ಲ. ‘ಬಿಳೀ’, ‘ದೊಡ್ಡ’, ‘ಒಳ್ಳೇ’ ಮೊದಲಾದ ಪರಿಚಿಗಳನ್ನು ಸೂಚಿಸಬೇಕಾಗಿರುವ ಪದಗಳು ಈ ನುಡಿಗಳಲ್ಲಿ ಹೆಸರುಪದಗಳಾಗಿ ಬರುತ್ತವೆ, ಮತ್ತು ಅವು ಆ ಪರಿಚಿಗಳನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ.
ಎತ್ತುಗೆಗಾಗಿ, ಕನ್ನಡದ ಕಪ್ಪು ಹಾವು ಎಂಬ ಪದಕಂತೆಯಲ್ಲಿ ಬರುವ ಹಾವು ಎಂಬ ಹೆಸರುಪದ ಒಂದು ಪ್ರಾಣಿಯನ್ನು ಗುರುತಿಸುತ್ತದೆ, ಮತ್ತು ಕಪ್ಪು ಎಂಬ ಪರಿಚೆಪದ ಒಂದು ಪರಿಚೆಯನ್ನು ಸೂಚಿಸುತ್ತದೆ. ಇವೆರಡು ಪದಗಳನ್ನು ಒಟ್ಟಿಗೆ ಒಂದು ಪದಕಂತೆಯಲ್ಲಿ ಕಪ್ಪು ಹಾವು ಎಂಬುದಾಗಿ ಬಳಸಿದಾಗ, ಕಪ್ಪು ಎಂಬ ಪದ ಒಂದು ಪರಿಚೆವನ್ನು ಸೂಚಿಸುವುದರ ಮೂಲಕ ಹಾವು ಎಂಬ ಹೆಸರುಪದಕ್ಕೆ ಒಂದು ವಿಶಿಷ್ಟವಾದ (ಕಪ್ಪು ಬಣ್ಣವಿರುವ) ಹಾವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಸಂಸ್ಕೃತದಲ್ಲಿ ಬರುವ ಕೃಷ್ಣಃ ಸರ್ವಃ ಎಂಬ ಇದೇ ಹುರುಳಿನ ಪದಕಂತೆ ಇದಕ್ಕಿಂತ ತೀರ ಬೇರಾದುದು. ಆ ಪದಕಂತೆಯ ಅಂಗಗಳಾಗಿರುವ ಕೃಷ್ಣಃ ಮತ್ತು ಸರ್ವಃ ಎಂಬ ಈ ಎರಡು ಪದಗಳೂ ಸ್ವತಂತ್ರವಾದ ಹೆಸರುಪದಗಳು. ಕೃಷ್ಣಃ ಎಂಬ ಹೆಸರುಪದ ಕಪ್ಪಾಗಿರುವ ಒಂದು ಪ್ರಾಣಿ (ಇಲ್ಲವೇ ವಸ್ತುವನ್ನು) ಗುರುತಿಸುತ್ತದೆ, ಮತ್ತು ಸರ್ವಃ ಎಂಬ ಹೆಸರುಪದ ‘ಹಾವಾ’ಗಿರುವ ಒಂದು ಪ್ರಾಣಿಯನ್ನು ಗುರುತಿಸುತ್ತದೆ. ಈ ಎರಡು ಪದಗಳನ್ನು ಒಟ್ಟಿಗೆ ಒಂದು ಪದಕಂತೆಯ ಅಂಗಗಳಾಗಿ (ಕೃಷ್ಣಃ ಸರ್ವಃ ಎಂಬುದಾಗಿ) ಬಳಸಿದಾಗ, ಅವೆರಡು ಹೆಸರುಪದಗಳು ಗುರುತಿಸುವ ವಸ್ತು ಇಲ್ಲವೇ ಪ್ರಾಣಿಗಳು ಒಂದೇ ಎಂಬ
37
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಹುರುಳು ದೊರಕುತ್ತದೆ, ಮತ್ತು ಇದರಿಂದಾಗಿ ಆ ಪದಕಂತೆ ವಿಶಿಷ್ಟವಾದೊಂದು ಪ್ರಾಣಿಯನ್ನು (ಎಂದರೆ ಕಪ್ಪು ಬಣ್ಣದ ಹಾವನ್ನು) ಗುರುತಿಸುವಂತಾಗುತ್ತದೆ.
ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಈ ವ್ಯತ್ಯಾಸ ಅವು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಎಂತಹ ಹಮ್ಮುಗೆಯನ್ನು ಬಳಸುತ್ತವೆ ಎಂಬುದರ ಮೇಲೆ ಅವಲಂಬಿಸಿದೆ ಎಂಬುದನ್ನು ಗಮನಿಸಬೇಕು. ಕನ್ನಡದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಹೆಸರುಪದಗಳ ನೆರವಿನಿಂದ ಗುರುತಿಸಿ, ಅವುಗಳಲ್ಲಿ ಕೆಲವನ್ನು ಮಾತ್ರ ಪ್ರತ್ಯೇಕಿಸಿ ಹೇಳಲು ಪರಿಚೆಪದಗಳನ್ನು ಬಳಸುವ ಕ್ರಮ ಬಳಕೆಯಲ್ಲಿದೆ. ಎತ್ತುಗೆಗಾಗಿ, ಹಾವು ಎಂಬ ಹೆಸರುಪದ ಹಲವಾರು ರೀತಿಯ ಪ್ರಾಣಿ(ಹಾವು)ಗಳನ್ನು ಗುರುತಿಸಬಲ್ಲುದಾಗಿದ್ದು, ಅವುಗಳಲ್ಲಿ ಕೆಲವನ್ನು ಕಪ್ಪು ಹಾವು ಎಂಬ ಪದಕಂತೆಯಿಂದಲೂ, ಬೇರೆ ಕೆಲವನ್ನು ಹಸುರು ಹಾವು ಎಂಬ ಪದಕಂತೆಯಿಂದಲೂ, ಮತ್ತು ಇನ್ನು ಕೆಲವನ್ನು ದೊಡ್ಡ ಹಾವು ಎಂಬ ಪದಕಂತೆಯಿಂದಲೂ ಪ್ರತ್ಯೇಕಿಸಿ ಹೇಳಲು ಬರುತ್ತದೆ. ಇಲ್ಲಿ ಕಪ್ಪು, ಹಸುರು, ದೊಡ್ಡ ಮೊದಲಾದ ಪರಿಚೆಪದಗಳು ಬೇರೆ ಬೇರೆ ಪರಿಚೆಗಳನ್ನು ಸೂಚಿಸುತ್ತಿದ್ದು, ಆ ಪರಿಚೆಗಳು ಹಾವು ಎಂಬ ಪದವು ತಿಳಿಸುವ ಹುರುಳಿಗೆ ಸೇರುವುದರ ಮೂಲಕ ಮೇಲಿನ ಕೆಲಸ ಸಾದ್ಯವಾಗುತ್ತದೆ.
ಸಂಸ್ಕೃತದಲ್ಲಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸಲು, ಮೇಲೆ ವಿವರಿಸಿದಂತೆ, ಇದಕ್ಕಿಂತ ಬೇರೆಯೇ ಆಗಿರುವ ಒಂದು ಹಮ್ಮುಗೆಯನ್ನು ಬಳಸಲಾಗುತ್ತದೆ. ಕೃಷ್ಣಃ ಎಂಬ ಹೆಸರುಪದ ಕಪ್ಪು ಬಣ್ಣವಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತದೆ (ಇದರಲ್ಲಿ ಹಾವುಗಳೂ ಸೇರುತ್ತವೆ); ಸರ್ವಃ ಎಂಬ ಹೆಸರುಪದ ಬೇರೆ ಬೇರೆ ಬಣ್ಣದ ಮತ್ತು ಆಕಾರದ ಹಾವುಗಳನ್ನು ಗುರುತಿಸುತ್ತದೆ (ಇದರಲ್ಲಿ ಕಪ್ಪು ಬಣ್ಣದ ಹಾವುಗಳೂ ಸೇರುತ್ತವೆ); ಈ ಎರಡು ಹೆಸರುಪದಗಳನ್ನು ಒಟ್ಟು ಸೇರಿಸಿ ಒಂದು ಪದಕಂತೆಯಾಗಿ ಮಾಡಿ ಬಳಸಿದಾಗ ಆ ಎರಡು ಪದಗಳು ಗುರುತಿಸುವವುಗಳಲ್ಲಿ ಸಮಾನವಾಗಿರುವಂತಹ ಕಪ್ಪು ಬಣ್ಣದ ಹಾವು ಗುರುತಿಸಲ್ಪಡುತ್ತದೆ.
ಸಂಸ್ಕೃತದಲ್ಲಿ ಈ ರೀತಿ ‘ಪರಿಚೆ’ಗಳ ಹುರುಳನ್ನು ಕೊಡುವ ಹೆಸರು ಪದಗಳನ್ನಲ್ಲದೆ ಬೇರೆ ಹೆಸರುಪದಗಳನ್ನೂ ಇನ್ನೊಂದು ಹೆಸರುಪದದೊಂದಿಗೆ ಸೇರಿಸಿ ಪದಕಂತೆಗಳನ್ನಾಗಿ ಮಾಡಿ ಹೇಳಲು ಬರುತ್ತದೆ. ಎತ್ತುಗೆಗಾಗಿ, ಮೃತ್ತಿಕಂ ಘಟಂ ಎಂಬ ಪದಕಂತೆಯಲ್ಲಿ ಮೃತ್ತಿಕ ‘ಮಣ್ಣು’ ಮತ್ತು ಘಟ ‘ಕೊಡ’ ಎಂಬ ಎರಡು ಹೆಸರುಪದಗಳನ್ನು ಒಟ್ಟಿಗೆ ಬಳಸಲಾಗಿದೆ. ಇವುಗಳಲ್ಲಿ ಮೊದಲನೆಯದು ‘ಮಣ್ಣಾ’ ಗಿರುವ ಒಂದು ವಸ್ತುವನ್ನೂ ಮತ್ತು ಎರಡನೆಯದು ‘ಕೊಡ’ವಾಗಿರುವ ಒಂದು ವಸ್ತುವನ್ನೂ ಬೇರೆ ಬೇರಾಗಿ ಗುರುತಿಸುತ್ತಿದ್ದು, ಅವು ಎರಡೂ ಒಂದೇ ಪದಕಂತೆಯ ಅಂಗವಾಗಿ ಬಂದಿರುವ ಕಾರಣ ‘ಮಣ್ಣಿನ ಕೊಡ’ ವನ್ನು ಗುರುತಿಸಬಲ್ಲುವು. ಕನ್ನಡದಲ್ಲಿ ಈ ರೀತಿ ಎರಡು ಹೆಸರುಪದಗಳನ್ನು
38
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಒಟ್ಟಿಗೆ ಒಂದು ಪದಕಂತೆಯ ಅಂಗಗಳಾಗಿ ಬಳಸಬೇಕಿದ್ದಲ್ಲಿ, ಅವುಗಳ ನಡು ವಿರುವ ಪತ್ತುಗೆಯನ್ನು ತಿಳಿಸಲು ಮೊದಲನೆಯದಕ್ಕೆ ಅ ಒಟ್ಟನ್ನು ಸೇರಿಸಿ ಮಣ್ಣಿನ ಕೊಡ ಎಂಬುದಾಗಿ ಹೇಳಬೇಕಾಗುತ್ತದೆ.
ಪದಗುಂಪುಗಳ ಮಟ್ಟಿಗೆ ಕನ್ನಡ ಮತ್ತು ಸಂಸ್ಕೃತ ನುಡಿಗಳ ನಡುವಿರುವ ಈ ಮುಕ್ಯವಾದ ವ್ಯತ್ಯಾಸದಿಂದಾಗಿ ಅವೆರಡು ನುಡಿಗಳೊಳಗೆ ಪದರಚನೆಯ ಹಮ್ಮುಗೆಯಲ್ಲೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನಾವು ಮುಂದೆ ನೋಡಲಿರುವೆವು. ಎತ್ತುಗೆಗಾಗಿ, ಕರ್ಮದಾರಯ ಸಮಾಸವನ್ನು ತತ್ಪುರುಶದ ಒಂದು ಬಗೆಯೆಂದು ಸಂಸ್ಕೃತದ ಸೊಲ್ಲರಿಗರು ತಿಳಿಯಲು ಆ ನುಡಿಯಲ್ಲಿ ವಿಶೇಷಣ ಮತ್ತು ವಿಶೇಷ್ಯಗಳ ನಡುವಿನ ಪತ್ತುಗೆಯನ್ನು ….. ಸಾಧ್ಯವಾಗ ದಿರುವುದೇ ಕಾರಣ. ಕರ್ಮಧಾರಯದಲ್ಲಿ ಅಂತಹ ಸಂಬಂಧದ ಬದಲು ಸಮಾ ನಾಧಿಕರಣ (ಎಂದರೆ ಅಂಗಗಳಾಗಿರುವ ಎರಡು ಪದಗಳೂ ಒಂದೇ ವಿಭಕ್ತಿ ಯಲ್ಲಿ ಬರುತ್ತವೆ) ಎಂಬ ವಿಷಯವನ್ನು ಆಧಾರವಾಗಿರಿಸಿಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ಈ ಸಮಸ್ಯೆಯಿಲ್ಲದಿದ್ದರೂ ಹಲವಾರು ವೈಯಾಕರಣಿಗಳು ಅದರಲ್ಲೂ ಸಂಸ್ಕೃತದ ಹಾಗೆ ಸಮಾನಾಧಿಕರಣವೇ ಕರ್ಮಧಾರಯ ಸಮಾಸಕ್ಕೆ ಆಧಾರವೆಂದು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ (೫.೬.೫ ನೋಡಿ).
ಭಾರತದ ವಾಯವ್ಯ ಗಡಿ ಪ್ರದೇಶದಲ್ಲಿ ‘ಟಿಬೆಟೋ-ಬರ್ಮನ್’ ಎಂಬ ಭಾಷಾ ಕುಟುಂಬಕ್ಕೆ ಸೇರಿದ ಮಣಿಪುರಿ, ಬೋಡೋ, ಲುಶಾಯಿ, ಸೆಮ, ತಾಂಖುರ್ ನಾಗ ಮೊದಲಾದ ನೂರಕ್ಕೂ ಜಾಸ್ತಿ ನುಡಿಗಳು ಪ್ರಚಾರದಲ್ಲಿವೆ. ಇವು ಸೊಲ್ಲುಗಳ ರಚನೆಗಾಗಿ ಬೇರೆಯೇ ಒಂದು ವಿಧಾನವನ್ನು ಬಳಸುತ್ತವೆ. ಈ ನುಡಿಗಳಲ್ಲೂ ಹೆಸರುಪದ ಮತ್ತು ‘ಸಕಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರ ಕಾಣಿಸುತ್ತವೆ. ಆದರೆ, ಪರಿಚೆಧರ್ಮಗಳನ್ನು ಸೂಚಿಸುವ ಪದಗಳು ಈ ನುಡಿಗಳಲ್ಲಿ ಸಂಸ್ಕೃತದಲ್ಲಿರುವ ಹಾಗೆ ಹೆಸರುಪದಗಳಾಗಿ ಬಾರದೆ ‘ಸಕಪದಗಳಾಗಿ ಬರುತ್ತವೆ.
ಎತ್ತುಗೆಗಾಗಿ, ಈ ನುಡಿಗಳಲ್ಲಿ ‘ಸಕಪದಗಳು ‘ಓಡು’, ‘ಬೀಳು’, ‘ಒಡೆ’, ‘ತೊಳೆ’ ಮೊದಲಾದ ಎಸಕಗಳನ್ನು ನಿರ್ದೇಶಿಸುವುದು ಮಾತ್ರವಲ್ಲದೆ ಬೇರೆ ಬೇರೆ ರೀತಿಯ ‘ಸ್ಥಿತಿ’ಗಳನ್ನೂ ನಿರ್ದೇಶಿಸುತ್ತಿದ್ದು, ‘ಕಪ್ಪು’, ‘ದೊಡ್ಡ’, ‘ಒಳ್ಳೇ’ ಮೊದಲಾದ ಪರಿಚೆಧರ್ಮಗಳನ್ನು ಸೂಚಿಸುವ ಪದಗಳು ಈ ನುಡಿಗಳಲ್ಲಿ ಇಂತಹ ಸ್ಥಿತಿಗಳನ್ನು ನಿರ್ದೇಶಿಸುವ ಸಕಪದಗಳಾಗಿ ಬರುತ್ತವೆ. ಹೆಸರುಪದಗಳೊಂದಿಗೆ ಈ ಎರಡು ರೀತಿಯ ‘ಸಕಪದಗಳನ್ನೂ ಅವುಗಳ ಕೃದಂತ ರೂಪದಲ್ಲಿ ಮಾತ್ರವೇ ಬಳಸಲು ಸಾಧ್ಯ.
ಮಣಿಪುರಿ ನುಡಿಯಲ್ಲಿ ಎಸಕಗಳನ್ನು ನಿರ್ದೇಶಿಸುವ ಚಾ (ತಿನ್ನು), ಚತ್ (ಹೋಗು), ಮೊದಲಾದವುಗಳ ಹಾಗೆಯೇ ಪರಿಚೆಧರ್ಮ (ಸ್ಥಿತಿ)ಗಳನ್ನು ನಿರ್ದೇ
39
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಶಿಸುವ ಸಾಜ್ (ಉದ್ದ), ಮೂ (ಕಪ್ಪು) ಮೊದಲಾದವುಗಳನ್ನೂ ಹೆಸರುಪದ ಗಳೊಂದಿಗೆ ಬಳಸಬೇಕಿದ್ದಲ್ಲಿ ಅವುಗಳನ್ನು ಕೃದಂತರೂಪಕ್ಕೆ ಬದಲಾಯಿಸಿ ಕೊಳ್ಳಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ. ಉದಾ:
| ಅಬಾಬ ಮೀ | ‘ತಿನ್ನುವ ಮನುಷ್ಯ’ |
| ಅಚತ್‌ಪ ಮೀ | ‘ಹೋಗುವ ಮನುಷ್ಯ’ |
| ಅಸಾಬ್‌ಮೀ | ‘ಉದ್ದ ಮನುಷ್ಯ’ |
| ಅಮೂಬ ಮೀ | ‘ಕಪ್ಪು ಮನುಷ್ಯ’ |
ಕನ್ನಡದ ಹಾಗೆ ಪರಿಚೆಧರ್ಮಗಳನ್ನು ಸೂಚಿಸುವ ಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಬಳಸಲು ಈ ನುಡಿಯಲ್ಲಿ ಸಾಧ್ಯವಾಗದು. ಇದಲ್ಲದೆ ಬೇರೆ ಹಲವಾರು ರೀತಿಗಳಲ್ಲೂ ಈ ಎರಡು ರೀತಿಯ ಪದಗಳು ಮಣಿಪುರಿ ಯಲ್ಲಿ ಒಂದೇ ರೀತಿಯವಾಗಿವೆ. ಎತ್ತುಗೆಗಾಗಿ, ಕನ್ನಡದಲ್ಲಿ ‘ಸಕಪದಗಳು ಕಾಲವಾಚಕ ಪ್ರತ್ಯಯಗಳೊಂದಿಗೆ ಬರಬಲ್ಲುವಲ್ಲದೆ (ಉದಾ: ಬರುತ್ತಾನೆ, ಬಂದ, ಬಂದಿದ್ದ ಇತ್ಯಾದಿ) ಪರಿಚೆಪದಗಳು ಬರಲಾರವು. ಆದರೆ ಮಣಿಪುರಿ ನುಡಿಯಲ್ಲಿ ‘ಸಕಪದ ಮತ್ತು ಪರಿಚೆಪದಗಳೆರಡೂ ಬೇರೆ ಬೇರೆ ಕಾಲವಾಚಕ ಪ್ರತ್ಯಯಗಳೊಂದಿಗೆ ಬರಬಲ್ಲುವು. ಉದಾ:
| ಬಾಗನಿ | ‘ತಿಂದಾನು’ |
| ಚತ್‌ಕನಿ | ‘ಹೋದಾನು’ |
| ಸಾಜ್‌ಗನಿ | ‘ಉದ್ದವಿದ್ದಾನು’ |
| ಮೂರನಿ | ‘ಕಪ್ಪಿದ್ದಾನು’ |
ಕನ್ನಡದಲ್ಲಿ ಉದ್ದ ಮತ್ತು ಕಪ್ಪು ಎಂಬ ಪರಿಚೆಪದಗಳಿಗೆ ಕಾಲವಾಚಕ ಪ್ರತ್ಯಯಗಳನ್ನು ನೇರವಾಗಿ ಸೇರಿಸಲು ಸಾಧ್ಯವಾಗದು. ಇದಕ್ಕಾಗಿ ಅವುಗಳ ಮುಂದೆ ಇರು ಎಂಬ ‘ಸಕಪದವನ್ನಿರಿಸಿ ಆ ‘ಸಕಪದಕ್ಕೆ ಕಾಲವಾಚಕ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ; ಆದರೆ, ಮಣಿಪುರಿಯಲ್ಲಿ ಈ ಎರಡು ಕನ್ನಡ ಪದಗಳಿಗೆ ಸಮಾನವಾಗಿರುವ ಪದಗಳಿಗೂ (ಸಾಜ್ ಮತ್ತು ಮೂ ಎಂಬಂತಹವುಗಳಿಗೂ) ನೇರವಾಗಿ ಕಾಲವಾಚಕ ಪ್ರತ್ಯಯಗಳನ್ನು ಸೇರಿಸಲು ಸಾಧ್ಯ ಎಂಬುದನ್ನು ಮೇಲಿನ ಎತ್ತುಗೆಗಳು ಸ್ಪಷ್ಟಪಡಿಸುತ್ತವೆ.
40
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಭಾರತದಲ್ಲಿ ಆಸ್ಟೋ-ಏಶಿಯಾಟಿಕ್ ಎಂಬ ಇನ್ನೊಂದು ಭಾಷಾಕುಟುಂಬಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯಾ ಸೋರಾ ಮೊದಲಾದ ಬೇರೆ ಕೆಲವು ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಮುಂಡ ಎಂಬ ಉಪಕುಟುಂಬಕ್ಕೆ ಸೇರಿದ ಮುಂಡಾರಿ, ಸಂತಾಲಿ ಮೊದಲಾದ ಕೆಲವು ನುಡಿಗಳಲ್ಲಿ ಬರುವ ಪದಗಳೆಲ್ಲ ಒಂದೇ ಪದವರ್ಗದಲ್ಲಿ ಸೇರುತ್ತವೆ. ಈ ಪದವರ್ಗವನ್ನು ‘ಸಕಪದ ಇಲ್ಲವೇ ‘ಆಖ್ಯಾತಪದ’ ಎಂಬುದಾಗಿ ಹೆಸರಿಸಬಹುದು.
ಈ ನುಡಿಗಳಲ್ಲಿ ಬರುವ ಸೊಲ್ಲುಗಳು ಈ ‘ಸಕಪದದ ಮೂಲಕ ಒಂದು ಎಸಕ ಇಲ್ಲವೇ ಸ್ಥಿತಿಯನ್ನು ನಿರ್ದೇಶಿಸುತ್ತಿದ್ದು, ಆ ಎಸಕೆಯಲ್ಲಿ ಇಲ್ಲವೇ ಸ್ಥಿತಿಯಲ್ಲಿ ತೊಡಗಿರುವ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಸೂಕ್ಷ್ಮವಾಗಿ ಪ್ರತ್ಯಯಗಳ ಸಹಾಯದಿಂದ ‘ಸಕರೂಪದಲ್ಲೇನೇ ಗುರುತಿಸುತ್ತವೆ. ಇದಲ್ಲದೆ ಇಂತಹ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳ ವಿಷಯವಾಗಿ, ಮತ್ತು ಸೊಲ್ಲುಗಳು ನಿರ್ದೇಶಿಸುವ ಎಸಕ ಇಲ್ಲವೇ ಸ್ಥಿತಿಗಳ ವಿಷಯವಾಗಿ ಹೆಚ್ಚಿನ ಸಂಗತಿಗಳನ್ನು ತಿಳಿಸುವುದಕ್ಕಾಗೆ ಈ ನುಡಿಗಳು ಬೇರೆ ಬೇರೆ ರೀತಿಯ ‘ಸಕರೂಪಗಳನ್ನೇ ಬಳಸುತ್ತವೆ. ಹೀಗೆ ಈ ನುಡಿಗಳು ಬೇರೆಯೇ ಒಂದು ಸೊಲ್ಲುಗಳ ರಚನೆಯ ವಿಧಾನವನ್ನನುಸರಿಸುವ ಕಾರಣ ಅವಕ್ಕೆ ‘ಸಕಪದವೆಂಬ ಒಂದೇ ಒಂದು ಪದವರ್ಗವಿದ್ದರೆ ಸಾಕಾಗುತ್ತದೆ; ಹೆಸರುಪದ ಮತ್ತು ಪರಿಚೆಪದ ಗಳೆಂಬ ಬೇರೆ ಎರಡು ಪದವರ್ಗಗಳ ಅವಶ್ಯಕತೆ ಬರುವುದಿಲ್ಲ.
ಭಾರತದ ನುಡಿಗಳು ಹೀಗೆ ತಮ್ಮಲ್ಲಿರುವ ಪದಗಳನ್ನು ಬೇರೆ ಬೇರೆ ರೀತಿ ಯಲ್ಲಿ ಪದವರ್ಗಗಳಾಗಿ ವಿಂಗಡಿಸುವ ಕಾರಣ ಅವೆಲ್ಲವನ್ನೂ ಒಂದೇ ರೀತಿ ಯಲ್ಲಿ (ಸಂಸ್ಕೃತದಲ್ಲಿರುವ ಹಾಗೆ) ವರ್ಣಿಸಲು ಪ್ರಯತ್ನಿಸಿದಲ್ಲಿ ಆ ನುಡಿಗಳ ನಿಜವಾದ ಸ್ವರೂಪವೆಂತಹದು ಎಂಬುದನ್ನು ತಿಳಿಯಲು ನಮಗೆ ಸಾಧ್ಯವಾಗದು.
೨.೩ ಪರಿಚೆಧರ್ಮಗಳಲ್ಲಿ ವ್ಯತ್ಯಾಸ
ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಖ್ಯ ಪದವರ್ಗಗಳಿಗೆ ಸೇರುವ ಪದಗಳಿವೆಯೆಂದು ಹೇಳಲು ಮೇಲೆ ಸೂಚಿಸಿದಂತೆ ಅವು ಸೊಲ್ಲುಗಳಲ್ಲಿ ಮೂರು ಬೇರೆ ಬೇರೆ ಕೆಲಸಗಳನ್ನು ನಡೆಸಿಕೊಡಬೇಕಾಗುತ್ತದೆ ಎಂಬ ವಿಷಯ ಆಧಾರವಾಗಬಲ್ಲುದು ಮಾತ್ರವಲ್ಲ, ಈ ಮೂರು ಪದವರ್ಗ ಗಳಲ್ಲಿ ಸೇರುವ ಪದಗಳು ಕನ್ನಡದಲ್ಲಿ ಬೇರೆ ಬೇರೆ ರೀತಿಯ ಪರಿಚೆಧರ್ಮಗಳನ್ನು ತೋರಿಸುತ್ತವೆ ಎಂಬ ವಿಷಯವೂ ಆಧಾರವಾಗಬಲ್ಲುದು. ಇವೆರಡಕ್ಕೂ ನಡು ವಿರುವ ಸಂಬಂಧವೇನೆಂದರೆ, ಈ ಮೂರು ರೀತಿಯ ಪದಗಳು ತೋರಿಸುವ ಪರಿಚೆಧರ್ಮಗಳು ಅವು ಸೊಲ್ಲಿನಲ್ಲಿ ನಡೆಸಬೇಕಾಗಿರುವ ಬೇರೆ ಬೇರೆ ಕೆಲಸಗಳಿಗೆ ಸಹಾಯಕವಾಗುವಂತಹವುಗಳು.
41
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳನ್ನು ಮೂರು ಬೇರೆ ಬೇರೆ ಪದವರ್ಗಗಳಲ್ಲಿ ವಿಂಗಡಿಸಬೇಕೆಂಬುದಕ್ಕೆ ಆಧಾರವಾಗಬಲ್ಲ ಈ ಪರಿಚೆಧರ್ಮಗಳನ್ನು ಕೆಳಗೆ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.
೨.೩.೧ ನೇರವಾದ ಬಳಕೆ
ಸಾಮಾನ್ಯವಾಗಿ ಪದಗಳು ತಮ್ಮವೇ ಆದ ಕೆಲಸಗಳನ್ನು ನಡೆಸಬೇಕಾದಾಗಲೆಲ್ಲ ಯಾವ ಪ್ರತ್ಯಯವೂ ಸೇರಿರದ ‘ಪ್ರತ್ಯಯರಹಿತ’ ರೂಪದಲ್ಲಿ ಬರುತ್ತವೆ. ಆದರೆ ಬೇರೆ ಪದವರ್ಗಗಳಿಗೆ ಸೇರಿದ ಪದಗಳ ಕೆಲಸಗಳನ್ನು ನಡೆಸಬೇಕಾಗಿ ಬಂದಾಗ ಅವು ಬೇರೆ ಬೇರೆ ರೀತಿಯ ಪ್ರತ್ಯಯಗಳೊಂದಿಗೆ ಸೇರುವುದರ ಮೂಲಕ ಸಿದ್ಧವಾದ ‘ಪ್ರತ್ಯಯಯುಕ್ತ’ ರೂಪಗಳಲ್ಲಿ ಬರುತ್ತವೆ. ಕನ್ನಡದಲ್ಲಿ ಈ ರೀತಿ ಪ್ರತ್ಯಯರಹಿತ ರೂಪದಲ್ಲಿ ಬರಲು ಪದಗಳಿಗೆ ಮೂರು ಬೇರೆ ಬೇರೆ ಸಂದರ್ಭಗಳಿವೆ. ಈ ವಿಷಯವನ್ನು ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಬೇರೆ ಬೇರೆ ಪದವರ್ಗಗಳಿವೆಯೆಂಬುದಕ್ಕೆ ಆಧಾರ ವಾಗಿ ಕೊಡಬಹುದು.
ಎತ್ತುಗೆಗಾಗಿ, ಹೆಸರುಪದಗಳನ್ನು ವಿಭಕ್ತಿಪ್ರತ್ಯಯಗಳೊಂದಿಗೆ, ‘ಸಕ ಪದಗಳನ್ನು ಕಾಲವಾಚಕ ಪ್ರತ್ಯಯಗಳೊಂದಿಗೆ, ಮತ್ತು ಪರಿಚೆಪದಗಳನ್ನು ಹೆಸರು ಪದಗಳೊಂದಿಗೆ (ಇಲ್ಲವೇ ‘ಸಕಪದಗಳೊಂದಿಗೆ) ನೇರವಾಗಿ ಬಳಸಲು ಸಾಧ್ಯ ವಿದೆ. ಇದಕ್ಕೆ ವ್ಯತಿರಿಕ್ತವಾಗಿ, ‘ಸಕಪದಗಳನ್ನು ಇಲ್ಲವೇ ಪರಿಚೆಪದಗಳನ್ನು ವಿಭಕ್ತಿಪ್ರತ್ಯಯಗಳೊಂದಿಗೆ ಬಳಸಬೇಕಾದಲ್ಲಿ, ಹೆಸರುಪದಗಳನ್ನು ಇಲ್ಲವೇ ಪರಿಚೆ ಪದಗಳನ್ನು ಕಾಲವಾಚಕ ಪ್ರತ್ಯಯಗಳೊಂದಿಗೆ ಬಳಸಬೇಕಾದಲ್ಲಿ, ಮತ್ತು ಹೆಸರು ಪದಗಳನ್ನು ಇಲ್ಲವೇ ‘ಸಕಪದಗಳನ್ನು ಬೇರೆ ಹೆಸರುಪದಗಳೊಂದಿಗೆ ಇಲ್ಲವೇ ‘ಸಕಪದಗಳೊಂದಿಗೆ ಬಳಸಬೇಕಾದಲ್ಲಿ, ಅವಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು (ಅಥವಾ ಪದಗಳನ್ನು) ಸೇರಿಸುವ ಅವಶ್ಯಕತೆಯಿದೆ.
ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳ ನಡುವೆ ಅವುಗಳ ನೇರವಾದ ಬಳಕೆಯಲ್ಲಿ ಕಾಣಿಸುವ ಈ ಪ್ರಾಮುಖ್ಯವಾದ ವ್ಯತ್ಯಾಸವನ್ನು ಕೆಳಗಿನ ಎತ್ತುಗೆಗಳು ಸ್ಪಷ್ಟಪಡಿಸುತ್ತವೆ.
(೧) ವಿಭಕ್ತಿ ಪ್ರತ್ಯಯದೊಂದಿಗೆ ಬಳಕೆ
ಹೆಸರುಪದ ‘ಸಕಪದ ಪರಿಚೆಪದ ಕಾಡ-ನ್ನು ಹಾಡು-ವು-ದ-ನ್ನು ತೆಳು-ವಿನದ-ನ್ನು ಮನೆ-ಯನ್ನು ಬರೆ-ದು-ದ-ನ್ನು ಹಳೆ-ಯದ-ನ್ನು
42
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು ಮರ-ವನ್ನು ಕೊಡು-ವು-ದ-ನ್ನು ದೊಡ್ಡ-ದ-ನ್ನು ಕಿವಿ-ಯನ್ನು ಕಲಿ-ತು-ದ-ನ್ನು ಬಿಳಿ-ಯದ-ನ್ನು ಕೊರಳಿ-ಗೆ ಹೊರಡು-ವು-ದ-ಕ್ಕೆ ಮುಂದಿ-ನದ-ಕ್ಕೆ
ಮೇಲೆ ಮೊದಲನೆಯ ಕಾಲಂನಲ್ಲಿ ಹೆಸರುಪದಗಳು ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಪಡೆದಿರುವುದನ್ನು ಕಾಣಬಹುದು. ಈ ಪ್ರತ್ಯಯಗಳ (ಅನ್ನು ಮತ್ತು ಇಗೆ ಎಂಬವುಗಳ) ಮೊದಲಿಗೆ ಸ್ವರ ಇದೆಯಾದ ಕಾರಣ ಹೆಸರುಪದಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗಿದೆ ಮತ್ತು ಇತರ ಸ್ವರಗಳ ಅನಂತರ ಯಕಾರ ಇಲ್ಲವೇ ವಕಾರಗಳು ಹೆಚ್ಚುವರಿಯಾಗಿ ಬಂದಿವೆ. ಆದರೆ ಇವೆಲ್ಲ ಕನ್ನಡದಲ್ಲಿ ನಡೆಯುವ ಸಂಧಿ ನಿಯಮಗಳಿಗನುಸಾರವಾಗಿ ನಡೆಯುವ ಬದಲಾ ವಣೆಗಳು.
‘ಸಕಪದಗಳು ಈ ಪ್ರತ್ಯಯಗಳೊಂದಿಗೆ ಬರಲು ಅವುಗಳೊಂದಿಗೆ ಸಮಯವನ್ನು ಸೂಚಿಸುವ ವ್ ಇಲ್ಲವೇ ದ್(ತ್) ಎಂಬ ಪ್ರತ್ಯಯವೂ ಮತ್ತು ಪುರುಷ, ವಚನ ಮತ್ತು ಲಿಂಗಗಳನ್ನು ಸೂಚಿಸುವ ಉದ್ ಎಂಬ ಪ್ರತ್ಯಯವೂ ಬರುವುದು ಅವಶ್ಯ ಎಂಬುದನ್ನು ಎರಡನೆಯ ಕಾಲಂನ ಎತ್ತುಗೆಗಳಿಂದ ತಿಳಿಯಬಹುದು. ಇದೇ ರೀತಿಯಲ್ಲಿ ಪರಿಚೆಪದಗಳು ಈ ವಿಭಕ್ತಿಪ್ರತ್ಯಯ ಗಳೊಂದಿಗೆ ಬರಬೇಕಿದ್ದಲ್ಲಿ ಅವಕ್ಕೆ ಅದ್ (ಇಲ್ಲವೇ ಇನ್ + ಅದ್) ಎಂಬ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸುವುದು ಅವಶ್ಯ ಎಂಬು ದನ್ನು ಮೂರನೆಯ ಕಾಲಂನ ಎತ್ತುಗೆಗಳಿಂದ ತಿಳಿಯಬಹುದು.
ಕನ್ನಡದಲ್ಲಿ ಕೆಲವು ಪರಿಚೆಪದಗಳು ನೇರವಾಗಿ ವಿಭಕ್ತಿಪ್ರತ್ಯಯಗಳೊಂದಿಗೆ ಬರಬಲ್ಲುವೆಂಬುದನ್ನು ಕೆಂಪ-ನ್ನು, ಹಸುರಿ-ಗೆ ಮೊದಲಾದ ಪ್ರಯೋಗಗಳಲ್ಲಿ ಕಾಣಬಹುದು. ಆದರೆ ಇಂತಹ ಪ್ರಯೋಗಗಳಲ್ಲಿ ಈ ಪದಗಳು ಹೆಸರು ಪದಗಳಾಗಿಯೇ ಬಂದಿವೆ. ಇಲ್ಲಿ ಅವಕ್ಕೆ ‘ಸೊನ್ನೆ’ ಪ್ರತ್ಯಯವೊಂದನ್ನು ಸೇರಿಸಿ ಹೆಸರುಪದಗಳನ್ನಾಗಿ ಬದಲಿಸಲಾಗಿದೆಯೆಂದೂ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಇಂತಹ ಪ್ರಯೋಗಗಳಲ್ಲಿ ಈ ಪದಗಳು ಪರಿಚೆಪದಗಳ ಹಾಗೆ ಪರಿಚೆಧರ್ಮ ವೊಂದನ್ನು ಸೂಚಿಸುವ ಬದಲು ಹೆಸರುಪದಗಳ ಹಾಗೆ ಅದನ್ನು ಹೆಸರಿಸುತ್ತವೆ ಎಂಬುದನ್ನೂ ಗಮನಿಸಬಹುದು.
- (೫) ಇದರಿಂದ ಸ್ವಲ್ಪ ಕೆಂಪನ್ನು ಕಡಿಮೆ ಮಾಡಲು ಸಾಧ್ಯವಾದೀತೇ?
- (೫)ನೇ ಸೊಲ್ಲಿನಲ್ಲಿ ಕೆಂಪನ್ನು ಎಂಬ ಪದಕ್ಕೆ ‘ಕೆಂಪು ಬಣ್ಣವನ್ನು’ ಎಂಬ
- ಹೆಸರುಪದಕಂಗಿದ ಅರ್ಥವಿದೆಯೆಂಬುದನ್ನು ಗಮನಿಸಬಹುದು.
43
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
- (೨) ಸಮಯವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಕೆ
- ಕನ್ನಡದಲ್ಲಿ ‘ಸಕಪದಗಳು ಮಾತ್ರವೇ ಸಮಯವನ್ನು ಸೂಚಿಸುವ ಪ್ರತ್ಯಯ
- ಗಳೊಂದಿಗೆ ಬರಬಲ್ಲುವು. ಹೆಸರುಪದ ಮತ್ತು ಪರಿಚೆಪದಗಳು ಅವುಗಳೊಂದಿಗೆ
- ಬರಲಾರವು. ಕೆಲವು ಹೆಸರುಪದ ಮತ್ತು ಪರಿಚೆಪದಗಳನ್ನು ಈ ರೀತಿ ಸಮಯ
- ವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆಯಾದರೂ
- ಇದಕ್ಕಾಗಿ ಅವಕ್ಕೆ ಇಸು ಎಂಬ ಪ್ರತ್ಯಯವನ್ನಾಗಲೀ (ಉದಾ: ಹಂಬಲ-
- ಹಂಬಲಿಸು, ಹೆಸರು-ಹಸರಿಸು, ಎತ್ತರ-ಎತ್ತರಿಸು) ಇಲ್ಲವೇ ಬೇರೆ ಕೆಲವು
- ಅನಿಯಮಿತವಾದ ಪ್ರತ್ಯಯಗಳನ್ನಾಗಲೀ (ಉದಾ: ಅಗಲಿ-ಅಗಲು, ಒಣ-
- ಒಣಗು) ಸೇರಿಸುವುದರ ಮೂಲಕ ಅವನ್ನು ‘ಸಕಪದಗಳನ್ನಾಗಿ ಬದಲಾಯಿಸಿ
- ಕೊಳ್ಳುವ ಅವಶ್ಯಕತೆಯಿದೆ.
- (೩) ಹೆಸರುಪದಗಳೊಂದಿಗೆ ಬಳಕೆ
- ಹೆಸರುಪದ ‘ಸಕಪದ ಪರಿಚೆಪದ
- ಕಲ್ಲಿನ ಮನೆ ಕಟ್ಟುವ ಮನೆ ದೊಡ್ಡ ಮನೆ
- ಬಣ್ಣದ ಕಾಗದ ಬರೆಯುವ ಕಾಗದ ಬಿಳಿ ಕಾಗದ
- ಕಾಗದದ ಹೂವು ಬಾಡಿದ ಹೂವು ಹಳೆ ಹೂವು
- ಮಾವಿನ ಹಣ್ಣು ಕೊಳೆತ ಹಣ್ಣು ಹುಳಿ ಹಣ್ಣು
- ರಾಜುವಿನ ಬಟ್ಟೆ ಹರಿದ ಬಟ್ಟೆ ಒದ್ದೆ ಬಟ್ಟೆ
- ಮೇಲೆ ಮೂರನೇ ಕಾಲಂನಲ್ಲಿರುವ ಪದಕಂಗೆ’ಗಳಲ್ಲಿ ದೊಡ್ಡ, ಬಿಳೀ, ಹಳೆ
- ಮೊದಲಾದ ಪರಿಚೆಪದಗಳು ಹೆಸರುಪದಗಳೊಂದಿಗೆ ನೇರವಾಗಿ ಪ್ರತ್ಯಯಗಳ
- ಸಹಾಯವಿಲ್ಲದೆ ಸೇರಿವೆ. ಆದರೆ ಎರಡನೆಯ ಕಾಲಂನಲ್ಲಿರುವ ಪದಕಂಗೆ’ಗಳಲ್ಲಿ
- ಕಟ್ಟು, ಬರೆ, ಬಾಡು ಮೊದಲಾದ ‘ಸಕಪದಗಳು ಇಂತಹ ಬಳಕೆಗಾಗಿ
- ಸಮಯವನ್ನು ಸೂಚಿಸುವ ವ್ ಇಲ್ಲವೇ ದ್(ತ್) ಎಂಬ ಪ್ರತ್ಯಯದೊಂದಿಗೆ
- ಮತ್ತು ಅವು ವಿಶೇಷಣಗಳೆಂಬುದನ್ನು ಸೂಚಿಸುವ ಅ ಎಂಬ ಪ್ರತ್ಯಯದೊಂದಿಗೆ
- ಬರಬೇಕಾಗಿದೆ. ಇದೇ ರೀತಿಯಲ್ಲಿ, ಮೊದಲನೆಯ ಕಾಲಂನಲ್ಲಿರುವ ಪದಕಂಗೆ’
- ಗಳಲ್ಲಿ ಕಲ್ಲು, ಬಣ್ಣ, ಕಾಗದ ಮೊದಲಾದ ಹೆಸರುಪದಗಳು ಇಂತಹ
- ಬಳಕೆಗಾಗಿ ಸಂಬಂಧವನ್ನು ಸೂಚಿಸುವ ಅ ಎಂಬ ಪ್ರತ್ಯಯದೊಂದಿಗೆ
- ಬರಬೇಕಾಗಿದೆ.
44
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಕೆಲವು ಹೆಸರುಪದಗಳು ನೇರವಾಗಿ ಬೇರೆ ಹೆಸರುಪದಗಳೊಂದಿಗೆ ಬರ ಬಲ್ಲುವು. ಎತ್ತುಗೆಗಾಗಿ, ತಲೆಗೂದಲು, ಹೊಗೆಸೊಪ್ಪು, ಆನೆಕಾಲು ಮೊದಲಾದ ಬಳಕೆಗಳನ್ನು ಗಮನಿಸಬಹುದು. ಆದರೆ ಇಂತಹ ಬಳಕೆಗಳಲ್ಲಿ ಹೆಸರುಪದಗಳೆರಡು ಒಟ್ಟು ಸೇರಿ ಒಂದೇ ಹೆಸರುಪದವಾಗಿವೆ. ಹಾಗಾಗಿ, ಇವನ್ನು ಪದಕಂಗೆ’ಗಳೆಂದು ಕರೆಯುವ ಬದಲು ‘ಜೋಡುಪದ’ಗಳೆಂದು ಕರೆಯುವ ಅವಶ್ಯಕತೆಯಿದೆ.
ಇದೇ ರೀತಿಯಲ್ಲಿ ಕೆಲವು ‘ಸಕಪದಗಳೂ ನೇರವಾಗಿ ಹೆಸರುಪದ ಗಳೊಂದಿಗೆ ಬರಬಲ್ಲುವು. ಹುಟ್ಟುಪರಿಚೆ, ಬೀಸುಗಲ್ಲು, ಸುಳಿಗಾಳಿ ಮೊದ ಲಾದ ಬಳಕೆಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಆದರೆ ಇಂತಹ ಬಳಕೆಗಳಲ್ಲೂ ಎರಡು ಪದಗಳು ಒಟ್ಟು ಸೇರಿ ಜೋಡುಪದಗಳಾಗಿವೆಯಲ್ಲದೆ, ಅವು ಪದಕಂಗೆ’ಗಳಾಗಿ ಉಳಿದಿಲ್ಲ. ‘ಸಕಪದಗಳು ಹೆಸರುಪದಗಳೊಂದಿಗೆ ಒಂದು ಪದಕಂಗಿದ ಅಂಗವಾಗಿ ಬರಬೇಕಿದ್ದಲ್ಲಿ ಮೇಲೆ ಸೂಚಿಸಿದಂತೆ ಅವಕ್ಕೆ ಸಮಯವನ್ನು (ಇಲ್ಲವೇ ನಿಷೇಧಾರ್ಥವನ್ನು) ಸೂಚಿಸುವ ಪ್ರತ್ಯಯವನ್ನೂ ಮತ್ತು ಅವು ವಿಶೇಷಣಗಳೆಂಬುದನ್ನು ಸೂಚಿಸುವ ಪ್ರತ್ಯಯವನ್ನೂ ಸೇರಿಸುವ ಅವಶ್ಯಕತೆ ಯಿದೆ.
ಕನ್ನಡದಲ್ಲಿ ಕೆಲವು ಪರಿಚೆಪದಗಳೂ ಹೆಸರುಪದಗಳೊಂದಿಗೆ ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬರಬಲ್ಲುವು. ಎತ್ತುಗೆಗಾಗಿ, ಎತ್ತರ ಗೋಡೆ ಎನ್ನುವ ಬದಲು ಎತ್ತರದ ಗೋಡೆ ಎಂಬುದಾಗಿಯೂ ಮತ್ತು ಕೆಂಪು ಬಟ್ಟೆ ಎನ್ನುವ ಬದಲು ಕೆಂಪಿನ ಬಟ್ಟೆ ಎಂಬುದಾಗಿಯೂ ಹೇಳಲು ಸಾಧ್ಯವಿದೆ. ಆದರೆ ಈ ಎರಡು ರೀತಿಯ ಬಳಕೆಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ. ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಂದಾಗ ಇವು ಹೆಸರುಪದಗಳ ಹಾಗೆ ಅರ್ಥ ಕೊಡುತ್ತವೆಯಲ್ಲದೆ ಪರಿಚೆಪದಗಳ ಹಾಗೆ ಅರ್ಥ ಕೊಡುವುದಿಲ್ಲ. ಎತ್ತುಗೆಗಾಗಿ ಈ ಕೆಳಗಿನ (೬-೭) ಸೊಲ್ಲುಗಳನ್ನು ಗಮನಿಸಬಹುದು.
(೬) ಆ ಕಲ್ಲಿನ ಗೋಡೆಗಿಂತ ಈ ಕಲ್ಲಿನ ಗೋಡೆ ನೋಡಲು ಚನ್ನಾಗಿದೆ.
(೭) ಆ ಎತ್ತರದ ಗೋಡೆಗಿಂತ ಈ ಎತ್ತರದ ಗೋಡೆ ನೋಡಲು ಚನ್ನಾಗಿದೆ.
(೬)ನೇ ಸೊಲ್ಲಿನಲ್ಲಿ ಎರಡು ಬೇರೆ ಬೇರೆ ರೀತಿಯ ಕಲ್ಲುಗಳಿಂದ (ಉದಾ ಕಗ್ಗಲ್ಲಿನಿಂದ ಮತ್ತು ಮುರಕಲ್ಲಿನಿಂದ) ಕಟ್ಟಿದ ಗೋಡೆಗಳನ್ನು ಹೋಲಿಸಲಾಗಿದೆ; (೭)ನೇ ಸೊಲ್ಲಿನಲ್ಲೂ ಇದೇ ರೀತಿ ಎರಡು ಬೇರೆ ಬೇರೆ ಎತ್ತರಗಳಿರುವ (ಉದಾ: ಆರು ಅಡಿ ಮತ್ತು ಆರೂವರೆ ಅಡಿ) ಗೋಡೆಗಳನ್ನು ಹೋಲಿಸ
45
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಲಾಗಿದೆಯೆಂದು ಹೇಳಲು ಸಾಧ್ಯವಿದೆ. ಎಂದರೆ, ಎತ್ತರ ಎಂಬ ಪದ ಇಲ್ಲಿ ಹೆಸರುಪದವಾಗಿ ಬಂದಿದೆ.
ಪರಿಚೆಪದಗಳಿಗೆ ಈ ರೀತಿ ಹೆಸರುಪದಗಳಿಗಿರುವಂತಹ ಅರ್ಥ ಅವನ್ನು ಹೆಸರುಪದಗಳೊಂದಿಗೆ ಸಂಬಂಧವನ್ನು ಸೂಚಿಸುವ ಪ್ರತ್ಯಯದೊಂದಿಗೆ ಬಳಸಿ ದಾಗ ಮಾತ್ರ ಬರಬಲ್ಲುದು. ಅವನ್ನು ನೇರವಾಗಿ ಎತ್ತರ ಗೋಡೆ ಎಂಬುದರ ಲ್ಲಿರುವಂತೆ ಬಳಸಿದಾಗ ಅವಕ್ಕೆ ಈ ಅರ್ಥ ಬರಲಾರದೆಂಬುದನ್ನು (೮)ನೇ ಸೊಲ್ಲಿನಿಂದ ತಿಳಿಯಬಹುದು.
(೮) ಆ ಎತ್ತರ ಗೋಡೆ ಈ ಎತ್ತರ ಗೋಡೆಗಿಂತ ನೋಡಲು ಚನ್ನಾಗಿದೆ.
ಈ (೮)ನೇ ಸೊಲ್ಲಿಗೆ ಮೇಲೆ (೭)ನೇ ಸೊಲ್ಲಿಗೆ ಬಂದಿರುವಂತೆ ‘ಎರಡು ಬೇರೆ ಬೇರೆ ಎತ್ತರಗಳಿರುವ ಗೋಡೆಗಳು’ ಎಂಬ ಅರ್ಥ ಬರಲಾರದೆಂಬುದನ್ನು ಇಲ್ಲಿ ಗಮನಿಸಬಹುದು.
೨.೩.೨ ಅರ್ಥದಲ್ಲಿ ವ್ಯತ್ಯಾಸ
ಹೆಸರುಪದ, ‘ಸಕಪದ, ಮತ್ತು ಪರಿಚೆಪದಗಳ ನಡುವೆ ಅವು ಕೊಡುವ ಅರ್ಥ ದಲ್ಲೂ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಸೊಲ್ಲುಗಳಲ್ಲಿ ಈ ಮೂರು ರೀತಿಯ ಪದಗಳು ನಡೆಸಿಕೊಡಬೇಕಾಗಿರುವ ಕೆಲಸಗಳು ಬೇರೆ ಬೇರಾಗಿರುವುದೇ ಅವಕ್ಕೆ ಈ ರೀತಿ ಬೇರೆ ಬೇರೆ ರೀತಿಯ ಅರ್ಥಗಳು ಬರಲು ಮುಖ್ಯ ಕಾರಣ. ಪರಿಚೆ ಪದಗಳು ಹೆಸರುಪದಗಳೊಂದಿಗೆ ಸೇರಿ ಅವುಗಳ ಅರ್ಥವನ್ನು ಸಂಕುಚಿತ ಗೊಳಿಸಬೇಕಾಗಿದೆ. ಹಾಗಾಗಿ, ಅವಕ್ಕೆ ಯಾವುದಾದರೂ ಒಂದು ನಿಶ್ಚಿತವಾದ ಪರಿಚೆಧರ್ಮವನ್ನು ಮಾತ್ರವೇ ಸೂಚಿಸುವಂತಹ ಅರ್ಥವಿರುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಹೆಸರುಪದಗಳು ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಬೇಕಾಗಿದೆ. ಹಾಗಾಗಿ, ಅವಕ್ಕೆ ಸಾಮಾನ್ಯ ವಾಗಿ ಅಂತಹ ವ್ಯಕ್ತಿ, ವಸ್ತು, ವಿಷಯ ಮೊದಲಾದುವಕ್ಕೆ ಸಂಬಂಧಿಸಿದಂತಹ ಹಲವಾರು ಪರಿಚೆಧರ್ಮಗಳ ಒಂದು ಸಮೂಹವನ್ನೇ ಸೂಚಿಸುವ ಅರ್ಥವಿರು ತ್ತದೆ.
ಎತ್ತುಗೆಗಾಗಿ ಕುರುಡು ಎಂಬ ಪರಿಚೆಪದವನ್ನು ಕುರುಡ ಎಂಬ ಹೆಸರು ಪದದೊಂದಿಗೆ ಹೋಲಿಸಿ ನೋಡಬಹುದು. ಕುರುಡು ಎಂಬ ಪರಿಚೆಪದ ‘ಕಣ್ಣಿಲ್ಲ ದಿರುವಿಕೆ’ ಎಂಬ ಒಂದೇ ಒಂದು ಪರಿಚೆಧರ್ಮವನ್ನು ಮಾತ್ರ ಸೂಚಿಸಬಲ್ಲುದು. ಆದರೆ, ಕುರುಡ ಎಂಬ ಹೆಸರುಪದ ಈ ಒಂದು
46
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಪರಿಚೆಧರ್ಮವನ್ನು ಮಾತ್ರ ವಲ್ಲದೆ, ಬೇರೆಯೂ ಹಲವು ಪರಿಚೆಧರ್ಮಗಳನ್ನು (ಉದಾ: ‘ಗಂಡಸು’, ‘ಬೆತ್ತ ಹಿಡಿದು ನಡೆಯುವವನು’, ‘ಕಿವಿ ಬಹಳ ಸೂಕ್ಷ್ಮವಾಗಿರುವವನು’, ಇತ್ಯಾದಿ) ಸೂಚಿಸಬಲ್ಲುದು.
ಹೆಸರುಪದಗಳಿಗೆ ಈ ರೀತಿ ಬೇರೆ ಬೇರೆ ಪರಿಚೆಧರ್ಮಗಳ ಒಂದು ಸಮೂಹ ವನ್ನೇ ಸೂಚಿಸುವಂತಹ ಅರ್ಥವಿದೆ ಮಾತ್ರವಲ್ಲ, ಅಂತಹ ಪರಿಚೆಧರ್ಮಗಳನ್ನು ಪಡೆದಿರುವ ಒಬ್ಬ ವ್ಯಕ್ತಿ, ವಸ್ತು ಇಲ್ಲವೇ ವಿಷಯವನ್ನು ಗುರುತಿಸುವಂತಹ ಹೆಚ್ಚಿನ ಅರ್ಥವೂ ಇದೆ. ನಿಜಕ್ಕೂ ಈ ಎರಡನೇ ರೀತಿಯ ಅರ್ಥವನ್ನು ಕೊಡುವುದೇ ಹೆಸರುಪದಗಳ ಮುಖ್ಯ ಕೆಲಸ. ಎತ್ತುಗೆಗಾಗಿ, ಕುರುಡ ಎಂಬ ಪದ ಪ್ರಾಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಮೇಲೆ ಸೂಚಿಸಿದ ಪರಿಚೆಧರ್ಮಗಳಲ್ಲಿ ಕೆಲವು ಆತನಲ್ಲಿಲ್ಲದಿದ್ದರೂ (ಉದಾ: ಆತ ಒಂದು ಕೋಲನ್ನು ಹಿಡಿದಿಲ್ಲವಾದರೂ) ಅದು ಒಬ್ಬ ವ್ಯಕ್ತಿಯನ್ನು ಗುರುತಿಸಬಲ್ಲುದು. ಪರಿಚೆಪದಗಳಿಗೆ ಈ ಎರಡನೇ ರೀತಿಯ ಅರ್ಥವಿಲ್ಲ. ಇದು ಹೆಸರುಪದಗಳಿಗೂ ಮತ್ತು ಪರಿಚೆಪದಗಳಿಗೂ ನಡುವಿರುವ ಅತ್ಯಂತ ಪ್ರಾಮುಖ್ಯವಾದ ವ್ಯತ್ಯಾಸ.
ಹೆಸರುಪದ ಮತ್ತು ‘ಸಕಪದಗಳ ನಡುವೆಯೂ ಅರ್ಥದ ಮಟ್ಟಿಗೆ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾ ದುವನ್ನು ಗುರುತಿಸುತ್ತಿದ್ದು, ಅವಕ್ಕೆ ಸ್ವತಂತ್ರವಾದ ಅಸ್ತಿತ್ವವಿದೆ. ಆದರೆ ‘ಸಕ ಪದಗಳು ಒಂದು ಎಸಕೆಯನ್ನು (ಇಲ್ಲವೇ ಸ್ಥಿತಿಯನ್ನು) ನಿರ್ದೇಶಿಸುತ್ತಿದ್ದು, ಸಾಮಾನ್ಯವಾಗಿ ಅವನ್ನು ಬಳಸಬೇಕಿದ್ದಲ್ಲಿ ಆ ಎಸಕೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು, ಸ್ಥಾನ, ಕಾಲ ಮೊದಲಾದುವನ್ನೂ ಸೇರಿಸಿ ಹೇಳುವ ಅವಶ್ಯಕತೆಯಿದೆ. ಎತ್ತುಗೆಗಾಗಿ, ತಿನ್ನು ಎಂಬ ‘ಸಕಪದವನ್ನು ಮಾತಿನಲ್ಲಿ ಬಳಸಿದೊಡನೆ ಯಾರು ತಿಂದರು, ಯಾವುದನ್ನು ತಿಂದರು, ಯಾವಾಗ ತಿಂದರು, ಎಲ್ಲಿ ತಿಂದರು ಮೊದಲಾದ ಪ್ರಶ್ನೆಗಳು ಏಳದಿರುವುದಿಲ್ಲ. ಹೆಸರುಪದಗಳು (ಉದಾ: ಆನೆ, ಕಾಡು, ಇತ್ಯಾದಿ) ಈ ರೀತಿ ‘ಸಕಪದಗಳ ಹಾಗೆ ಅಸ್ವತಂತ್ರವಾಗಿಲ್ಲವಾದ ಕಾರಣ ಅವನ್ನು ಬಳಸಿದಾಗ ಇಂತಹ ಪ್ರಶ್ನೆಗಳು ಏಳದಿರಲು ಸಾಧ್ಯವಿದೆ.
೨.೩.೩ ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಬಳಕೆ
ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಪರಿಚೆಪದಗಳನ್ನು ಮಾತ್ರವೇ ಬಳಸಲು ಸಾಧ್ಯ ಎಂಬ ನಿಯಮ ಕನ್ನಡದಲ್ಲಿದೆ. ಹೆಸರುಪದಗಳನ್ನಾಗಲೀ ಇಲ್ಲವೇ ‘ಸಕಪದಗಳನ್ನಾಗಲೀ ಅಂತಹ ರಚನೆಗಳಲ್ಲಿ ಬಳಸಲು ಸಾಧ್ಯವಾಗದು. ಎತ್ತುಗೆಗಾಗಿ ಈ ಕೆಳಗಿನ (೯-೧೨) ಸೊಲ್ಲುಗಳನ್ನು ಗಮನಿಸಬಹುದು.
47
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
- (೯) ಇದು ಆ ಮನೆಗಿಂತ ದೊಡ್ಡ ಮನೆ.
- (೧೦) ಅವನಷ್ಟು ಬೇಗ ಓಡುವವನನ್ನು ನಾನು ಕಾಣಲಿಲ್ಲ.
- (೧೧) ಈ ಗೋಡೆ ಆ ಗೋಡೆಗಿಂತ ಎತ್ತರ.
- (೧೨) ಎಲ್ಲರಿಗಿಂತಲೂ ಹೆಚ್ಚು ಹಣವನ್ನು ತಂದವರಿಗೆ ಬಹುಮಾನವಿದೆ.
ಮೇಲೆ ಕೊಟ್ಟಿರುವ ನಾಲ್ಕು ಸೊಲ್ಲುಗಳಲ್ಲೂ ಹೋಲಿಕೆಯನ್ನು ಸೂಚಿಸುವ ರಚನೆಗಳಿದ್ದು, ಇವುಗಳಲ್ಲೆಲ್ಲ ಪರಿಚೆಪದವೊಂದು (ದೊಡ್ಡ, ಬೇಗ, ಎತ್ತರ ಇಲ್ಲವೇ ಹೆಚ್ಚು ಎಂಬುದು) ಖಡ್ಡಾಯವಾಗಿ ಬಂದಿದೆಯೆಂಬುದನ್ನು ಗಮನಿಸ ಬಹುದು. ಇಂತಹ ರಚನೆಗಳಲ್ಲಿ ಯಾವುದಾದರೂ ಒಂದು ವಿಶಿಷ್ಟವಾದ ಪರಿಚೆ ಧರ್ಮವನ್ನು ಹೋಲಿಕೆಗಾಗಿ ಸೂಚಿಸುವುದು ಅವಶ್ಯ. ಎತ್ತುಗೆಗಾಗಿ (೯)ನೇ ಸೊಲ್ಲಿನಲ್ಲಿ ಎರಡು ಮನೆಗಳನ್ನು ಅವುಗಳ ಗಾತ್ರಕ್ಕೆ ಸಂಬಂಧಿಸಿದಂತೆ ಹೋಲಿಸ ಲಾಗಿದೆ. ಈ ರೀತಿ ವಿಶಿಷ್ಟವಾದ ಒಂದು ಪರಿಚೆಧರ್ಮವನ್ನು ಸೂಚಿಸುವ ಕೆಲಸವನ್ನು ಪರಿಚೆಪದಗಳು ಮಾತ್ರ ನಡೆಸಬಲ್ಲುವು.
ಹೆಸರುಪದಗಳು ಒಂದಕ್ಕಿಂತ ಜಾಸ್ತಿ ಪರಿಚೆಧರ್ಮಗಳನ್ನು ಸೂಚಿಸುವು ವಾದ್ದರಿಂದ ಅವನ್ನು ಇಂತಹ ಹೋಲಿಕೆಯನ್ನು ಸೂಚಿಸುವ ರಚನೆಗಳಲ್ಲಿ ಬಳಸಲು ಸಾಧ್ಯವಾಗದು. ಇದೇ ರೀತಿಯಲ್ಲಿ ‘ಸಕಪದಗಳು ಪರಿಚೆಧರ್ಮವನ್ನು ಸೂಚಿಸುವ ಬದಲು ಎಸಕೆಯನ್ನು ಸೂಚಿಸುವುವಾದ ಕಾರಣ ಅವನ್ನೂ ಇಂತಹ ರಚನೆಗಳಲ್ಲಿ ಬಳಸಲು ಸಾಧ್ಯವಾಗದು.
೨.೩.೪ ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳಲ್ಲಿ ಬಳಕೆ
ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳಿಗೆ ಆಧಾರವಾಗಿ ಪರಿಚೆಪದವೊಂದರ ಅವಶ್ಯಕತೆಯಿದೆಯೆಂಬುದು ಹೆಸರುಪದ ಮತ್ತು ‘ಸಕಪದಗಳನ್ನು ಪರಿಚೆಪದ ಗಳಿಂದ ಬೇರ್ಪಡಿಸುವ ಇನ್ನೊಂದು ಸೊಲ್ಲುಗಳ ರಚನೆಯ ನಿಯಮ. ಕನ್ನಡದಲ್ಲಿ ಎಷ್ಟು ಎಂಬ ಪದದ ಸಹಾಯದಿಂದ ಆಶ್ಚರ್ಯಸೂಚಕ ಸೊಲ್ಲುಗಳನ್ನು ರಚಿಸ ಬೇಕಾದಾಗಲೆಲ್ಲ ಅದರೊಂದಿಗೆ ಪರಿಚೆಪದವೊಂದನ್ನು ಬಳಸುವ ಅವಶ್ಯಕತೆಯಿದೆ. ಎತ್ತುಗೆಗಾಗಿ (೧೩-೧೫) ಸೊಲ್ಲುಗಳನ್ನು ಗಮನಿಸಬಹುದು.
- (೧೩) ಈ ಆನೆಯ ಕಿವಿ ಎಷ್ಟು ದೊಡ್ಡದು!
- (೧೪) ಅವಳು ಎಷ್ಟು ಜೋರಾಗಿ ಹಾಡುತ್ತಿದ್ದಾಳೆ!
- (೧೫) ಈ ಹುಡುಗಿಯದು ಎಷ್ಟು ಒಳ್ಳೇ ಪರಿಚೆ!
48
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಇದಲ್ಲದೆ, ಏನು, ಹೇಗೆ ಮತ್ತು ಎಂತಹ ಎಂಬ ಪದಗಳನ್ನು ಬಳಸಿಯೂ ಕನ್ನಡದಲ್ಲಿ ಆಶ್ಚರ್ಯವನ್ನು ಸೂಚಿಸುವ ಸೊಲ್ಲುಗಳನ್ನು ರಚಿಸಲು ಸಾಧ್ಯವಿದೆ. ಇವುಗಳೊಂದಿಗೆ ಪರಿಚೆಪದವೊಂದನ್ನು ಬಳಸದಿರಲು ಸಾಧ್ಯವಿದೆಯಾದರೂ ಅಂತಹ ಒಂದು ಪದದ ಅರ್ಥ ಇವುಗಳಲ್ಲಿ ಧ್ವನಿತವಾಗದಿರುವುದಿಲ್ಲವೆಂಬು ದನ್ನು (೧೬-೧೮) ಸೊಲ್ಲುಗಳಲ್ಲಿ ಕಾಣಬಹುದು.
- (೧೬) ಅವನು ಹೇಗೆ ಓಡಿದ! (ಜೋರಾಗಿ ಓಡಿದ)
- (೧೭) ಅವರು ಎಂತಹ ಮನೆ ಕಟ್ಟಿಸಿದ್ದಾರೆ! (ದೊಡ್ಡ ಮನೆ)
- (೧೮) ಏನು ಸಾಮರ್ಥ್ಯ ಅವನದು! (ಹೆಚ್ಚಿನ ಸಾಮರ್ಥ್ಯ)
ಆಶ್ಚರ್ಯಕ್ಕೆ ಯಾವುದಾದರೂ ಒಂದು ಪರಿಚೆಧರ್ಮ ಮೂಲವಾಗಿರಬೇಕು ಮತ್ತು ಅಂತಹ ಪರಿಚೆಧರ್ಮವೊಂದನ್ನು ಪರಿಚೆಪದಗಳು ಮಾತ್ರವೇ ಪ್ರತ್ಯೇಕಿಸಿ ಸೂಚಿಸ ಬಲ್ಲುವು ಎಂಬುದೇ ಈ ನಿರ್ಬಂಧಕ್ಕೆ ಕಾರಣವಿರಬೇಕು.
೨.೩.೫ ಮಾರ್ದನಿಸುವ ಪದಗಳ ಬಳಕೆ
ಪದಗಳೊಂದಿಗೆ ಅವುಗಳ ಮಾರ್ದನಿಯಂತೆ ಕಾಣಿಸುವ ಇನ್ನೊಂದು ಪದವನ್ನು ಬಳಸುವ ಕ್ರಮ ಕನ್ನಡದಲ್ಲಿದೆ. ಎತ್ತುಗೆಗಾಗಿ, ಮನೆ-ಗಿನೆ, ಮಾರಾಟ-ಗೀರಾಟ, ಕಾಡು-ಗೀಡು, ಕುರಿ-ಗಿರಿ, ಎಮ್ಮೆ-ಗಿಮ್ಮೆ, ಕೋಲು-ಗೀಲು ಮೊದಲಾದ ಬಳಕೆಗಳಲ್ಲಿ ಇಂತಹ ಮಾರ್ದನಿಸುವ ಪದಗಳನ್ನು ಕಾಣಬಹುದು. ಪದದ ಮೊದಲನೆಯ ಅಕ್ಷರಕ್ಕೆ ಬದಲಾಗಿ ಅದು ಗಿಡ್ಡಸ್ವರದೊಂದಿಗಿದ್ದರೆ ಗಿ ಎಂಬ ಅಕ್ಷರವನ್ನೂ ಮತ್ತು ಉದ್ದಸ್ವರದೊಂದಿಗಿದ್ದರೆ ಗೀ ಎಂಬ ಅಕ್ಷರವನ್ನೂ ಬಳಸಿ ಈ ಮಾರ್ದನಿಸುವ ಪದಗಳನ್ನು ರಚಿಸಬಹುದು.
ಒಂದು ಪದದೊಂದಿಗೆ ಇಂತಹ ಮಾರ್ದನಿಸುವ ಪದವನ್ನು ಬಳಸಿದಾಗ, ಆ ಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ವಿಷಯದಲ್ಲಿ ಅನಿಶ್ಚಿತತೆ ಇಲ್ಲವೇ ಅಸ್ಪಷ್ಟತೆ ಸೂಚಿತವಾಗುತ್ತದೆ. ಎತ್ತುಗೆಗಾಗಿ ಈ (೧೯-೨೧) ಸೊಲ್ಲುಗಳಲ್ಲಿ ಬಂದಿರುವ ಇಂತಹ ಮಾರ್ದನಿಸುವ ಪದಗಳ ಅರ್ಥವನ್ನು ಪರಿ ಶೀಲಿಸಬಹುದು.
(೧೯) ಪೇಟೆಗೆ ಹೋಗಲು ಕಾರುಗೀರು ಇದ್ದರೆ ಚೆನ್ನಾಗಿರುತ್ತದೆ.
(೨೦) ಆ ಹಾದಿಯಲ್ಲಿ ಹಾವುಗೀವು ಇರಬಹುದು.
49
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
- (೨೧) ಅವರು ಮನೆಗಿನ್ ಎಲ್ಲಾ ಕಳೆದುಕೊಂಡು ಕಷ್ಟದಲ್ಲಿದ್ದಾರೆ.
- (೧೯)ನೇ ಸೊಲ್ಲಿನಲ್ಲಿ ಕಾರು ಎಂಬುದನ್ನು ಬಳಸುವ ಬದಲು ಕಾರು ಗೀರು
- ಎಂಬುದನ್ನು ಬಳಸಿದ್ದರಿಂದಾಗಿ, ಅದು ಗುರುತಿಸುವ ವಸ್ತುವಿನ ರೂಪ ಅಸ್ಪಷ್ಟ
- ವಾಗಿದೆಯೆಂದು ಸೂಚಿತವಾಗುತ್ತದೆ. ಕಾರು, ಬೈಕ್, ಸ್ಕೂಟರ್, ಸೈಕಲ್,
- ಇತ್ಯಾದಿಗಳಲ್ಲಿ ಯಾವುದು ಇದ್ದರೂ ನಡೆದು ಹೋಗುವುದಕ್ಕಿಂತ ಇಲ್ಲವೇ
- ಬಸ್ಸಿಗೆ ಕಾಯುವುದಕ್ಕಿಂತ ಲೇಸು ಎಂಬರ್ಥ ಈ ಸೊಲ್ಲಿಗೆ ಬರುತ್ತದೆ.
- ಕನ್ನಡದಲ್ಲಿ ಇಂತಹ ಮಾರ್ದನಿಸುವ ಪದಗಳನ್ನು ಹೆಸರುಪದ ಮತ್ತು ‘ಸಕ
- ಪದಗಳೊಂದಿಗೆ (ಉದಾ: ನೋಡಿ-ಗೀಡಿ, ತಿಂದರೆ-ನಿಂದರೆ, ಹೊಡೆಯಲು
- ಗಿಡಯಲು, ಇತ್ಯಾದಿ) ಬಳಸಲು ಸಾಧ್ಯವಿದೆಯಲ್ಲದೆ ಪರಿಚೆಪದಗಳೊಂದಿಗೆ
- ಬಳಸಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಪರಿಚೆಪದಗಳು ಒಂದು
- ವಿಶಿಷ್ಟವಾದ ಪರಿಚೆಧರ್ಮವನ್ನು ಸೂಚಿಸುವುದರ ಮೂಲಕ ಅವುಗಳ ಅನಂತರ
- ಬರುವ ಹೆಸರುಪದದ ಅರ್ಥವನ್ನು ಸಂಕುಚಿತಗೊಳಿಸಬೇಕಾಗುತ್ತದೆ ಇಲ್ಲವೇ
- ಬೇರೆ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ. ಅವುಗಳ ಈ ಕೆಲಸಕ್ಕೆ ಅವು
- ಸೂಚಿಸುವ ವಿಷಿಷ್ಠವಾದ ಪರಿಚೆಧರ್ಮ ಅತ್ಯಂತ ಪ್ರಾಮುಖ್ಯವಾದುದಾದ
- ಕಾರಣ, ಅದನ್ನು ಅಸ್ಪಷ್ಟವಾಗಿ ಮಾಡಬಲ್ಲ ಮಾರ್ದನಿಸುವ ಪದ ಅದರೊಂದಿಗೆ
- ಬರ ಲಾರದು.
- ೩.೬ ಬಳಕೆಯಲ್ಲಿ ಸ್ವಾತಂತ್ರ್ಯ
- ಹೆಸರುಪದಗಳಿಗೂ ಪರಿಚೆಪದಗಳಿಗೂ ನಡುವೆ ಕಾಣಿಸುವ ಇನ್ನೊಂದು
- ಮುಕ್ಯವಾದ ವ್ಯತ್ಯಾಸವೇನೆಂದರೆ, ಹೆಸರುಪದಗಳಿಗೆ ಸೊಲ್ಲಿನಲ್ಲಿ ಹೆಚ್ಚಿನ
- ಸ್ವಾತಂತ್ರ್ಯವಿದೆ, ಆದರೆ ಪರಿಚೆಪದಗಳಿಗೆ ಇಂತಹ ಸ್ವಾತಂತ್ರ್ಯವಿಲ್ಲ. ಅವು
- ಯಾವಾಗಲೂ ಒಂದು ಹೆಸರುಪದದೊಂದಿಗೆ ಹೆಸರುಪದಕಂ’ದ ಅಂಗವಾಗಿ
- ಬರಬೇಕಾಗುತ್ತದೆ. ಈ ರೀತಿ ಈ ಎರಡು ಪದವರ್ಗಗಳ ನಡುವೆ ಕನ್ನಡದಲ್ಲಿ
- ಅವುಗಳ ಸ್ವಾತಂತ್ರ್ಯದ ಮಟ್ಟಿಗಿರುವ ವ್ಯತ್ಯಾಸವನ್ನು ಕೆಳಗಿನ ವ್ಯಾಕರಣ
- ನಿಯಮಗಳು ಸ್ಪಷ್ಟಪಡಿಸುತ್ತವೆ.
- (೧) ಕೆಲವು ಪ್ರತ್ಯಯಗಳ ಬಳಕೆ
- ಒಂದು ಪದವನ್ನು ಒತ್ತಿ ಹೇಳಲು ಬಳಸುವ ಏ ಎಂಬ ಪ್ರತ್ಯಯ, ‘ಮತ್ತು’
- ಎಂಬ ಅರ್ಥವನ್ನು ಕೊಡುವ ಊ ಎಂಬ ಪ್ರತ್ಯಯ, ಮತ್ತು ‘ಆದರೆ’ ಎಂಬ
- ಅರ್ಥವನ್ನು ಕೊಡುವ ಓ ಎಂಬ ಪ್ರತ್ಯಯ ಈ ಮೂರನ್ನೂ ಕನ್ನಡ
- ಸೊಲ್ಲುಗಳಲ್ಲಿ ಬರುವ ಹೆಸರುಪದಗಳೊಂದಿಗೆ (ಇಲ್ಲವೇ
50
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಹೆಸರುಪದಕಂಗಿಗಳೊಂದಿಗೆ) ಸೇರಿಸಿ ಹೇಳಲು ಸಾಧ್ಯವಿದೆ, ಆದರೆ ಹೆಸರುಪದಕಂಗಿಗಳಲ್ಲಿ ಬರುವ ಪರಿಚೆಪದ ಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿಲ್ಲ.
- (೨೨) ರಾಜು ಹರಿಯನ್ನು ಮನೆಗೆ ಕರೆಯಲಿಲ್ಲ.
- (೨೩) ರಾಜು ಹರಿಯನ್ನೇ ಮನೆಗೆ ಕರೆಯಲಿಲ್ಲ.
- (೨೪) ರಾಜು ಹರಿಯನ್ನೂ ಮನೆಗೆ ಕರೆಯಲಿಲ್ಲ.
- (೨೫) ರಾಜು ಹರಿಯನ್ನೋ ರವಿಯನ್ನೋ ಮನೆಗೆ ಕರೆದಾನು.
- (೨೬) ರಾಜು ದೊಡ್ಡ ಕೋಲನ್ನೂ ಮುರಿದು ಹಾಕಿದ.
(೨೬)ನೇ ಸೊಲ್ಲಿನಲ್ಲಿ ದೊಡ್ಡ ಕೋಲನ್ನು ಎಂಬ ಪದಕಂಗೊಂದಿಗೆ ಊ ಎಂಬ ಪ್ರತ್ಯಯವನ್ನು ಸೇರಿಸಿ ಹೇಳಲಾಗಿದೆ. ಆದರೆ ಈ ಪ್ರತ್ಯಯವನ್ನು ದೊಡ್ಡ ಎಂಬ ಪರಿಚೆಪದದೊಂದಿಗೆ ಸೇರಿಸಿ ಹೇಳಲು ಸಾಧ್ಯವಾಗದು. ಇತರ ಎರಡು ಪ್ರತ್ಯಯಗಳೂ ಹೀಗೆಯೇ.
ಕನ್ನಡ ಸೊಲ್ಲುಗಳಲ್ಲಿ ಕಾಣಿಸುವ ಈ ನಿಯಮಕ್ಕೆ ಕಾರಣವೇನೆಂದರೆ, ಪರಿಚೆಪದಗಳು ಹೆಸರುಪದಗಳೊಂದಿಗೆ ಅವಕ್ಕೆ ಸಹಾಯಕಗಳಾಗಿ ಬರುತ್ತವೆ ಮತ್ತು ಈ ಕಾರಣಕ್ಕಾಗಿ ಅವಕ್ಕೆ ಸೊಲ್ಲಿನಲ್ಲಿ ಸ್ವತಂತ್ರವಾದ ಅಸ್ತಿತ್ವವಿಲ್ಲ. ಮೇಲೆ ಕೊಟ್ಟ ಮೂರು ಪ್ರತ್ಯಯಗಳು ಅವನ್ನು ಹೆಸರುಪದಗಳಿಂದ ಬೇರ್ಪಡಿಸಿ ಸ್ವತಂತ್ರ ಪದಗಳನ್ನಾಗಿ ಮಾಡಬಲ್ಲುವಾದ ಕಾರಣ, ಮತ್ತು ಹೀಗೆ ಮಾಡುವುದರಿಂದ ಅವುಗಳ (ಎಂದರೆ ಪರಿಚೆಪದಗಳ) ಮುಖ್ಯ ಕೆಲಸಕ್ಕೆ ಅಡ್ಡಿಯುಂಟಾಗುವುದಾದ ಕಾರಣ ಅವುಗಳೊಂದಿಗೆ ಈ ಪ್ರತ್ಯಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
(೨) ಸೊಲ್ಲಿ ನದ ಮೊದಲ ಸ್ಥಾನಕ್ಕೆ ತರುವುದು
ಸೊಲ್ಲಿನ ಬೇರೆ ಬೇರೆ ಭಾಗಗಳಲ್ಲಿ ಬರುವ ಹೆಸರುಪದಗಳನ್ನು (ಇಲ್ಲವೇ ಹೆಸರುಪದಕಂಗೆಗಳನ್ನು) ಸೊಲ್ಲಿನ ಮೊದಲ ಸ್ಥಾನಕ್ಕೆ ತಂದಿರಿಸಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಆ ಹೆಸರುಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದುವಕ್ಕೆ ಸೊಲ್ಲಿನ ಮುಖ್ಯ ವ್ಯಕ್ತಿ ಇಲ್ಲವೇ ವಸ್ತು ಎಂಬ ಅರ್ಥ ಲಭಿಸುತ್ತದೆ. ಎತ್ತುಗೆಗಾಗಿ (೨೭-೨೯) ಸೊಲ್ಲುಗಳನ್ನು ಗಮನಿಸಬಹುದು.
(೨೭) ರಾಜು ಮದುಮಗನಿಗೆ ಕೆಂಪು ಹೂ ಕೊಟ್ಟ.
(೨೮) ಮದುಮಗನಿಗೆ ರಾಜು ಕೆಂಪು ಹೂ ಕೊಟ್ಟ.
51
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
- (೨೯) ಕೆಂಪು ಹೂವನ್ನು ರಾಜು ಮದುಮಗನಿಗೆ ಕೊಟ್ಟ.
- (೨೭)ನೇ ಸೊಲ್ಲಿನಲ್ಲಿ ರಾಜು ಎಂಬ ಹೆಸರುಪದವೂ, (೨೮)ನೇ ಸೊಲ್ಲಿನಲ್ಲಿ
- ಮದುಮಗ ಎಂಬ ಹೆಸರುಪದವೂ ಮತ್ತು (೨೯)ನೇ ಸೊಲ್ಲಿನಲ್ಲಿ ಕೆಂಪು ಹೂ
- ಎಂಬ ಹೆಸರುಪದಕಂಗೆ’ವೂ ಮೊದಲನೆಯ ಸ್ಥಾನದಲ್ಲಿ ಬಂದಿವೆ.
- ಆದರೆ ಈ ರೀತಿ ಸೊಲ್ಲಿನಲ್ಲಿರುವ ಪರಿಚೆಪದಗಳನ್ನು ಮೊದಲನೆಯ
- ಸ್ಥಾನಕ್ಕೆ ತಂದಿರಿಸಲು ಸಾಧ್ಯವಾಗದು. ಅವು ಯಾವಾಗಲೂ ಅವಕ್ಕೆ ಸಂಬಂಧಿಸಿದ
- ಹೆಸರು ಪದದೊಂದಿಗೆ ಮಾತ್ರವೇ ಬರಬಲ್ಲುವು. ಎತ್ತುಗೆಗಾಗಿ (೨೯)ನೇ
- ಸೊಲ್ಲಿನಲ್ಲಿ ಕೆಂಪು ಎಂಬ ಪರಿಚೆಪದ ಹೂ ಎಂಬ ಹೆಸರುಪದದೊಂದಿಗೆ
- ಮೊದಲನೆಯ ಸ್ಥಾನಕ್ಕೆ ಬಂದಿದೆ. ಕೆಂಪು ಎಂಬುದನ್ನು ಮಾತ್ರವೇ ಈ ರೀತಿ
- ಮೊದಲನೆಯ ಸ್ಥಾನಕ್ಕೆ ತರಲು ಸಾಧ್ಯವಾಗದು ಎಂಬುದನ್ನು ಕನ್ನಡದ ವ್ಯಾಕರಣ
- ನಿಯಮಕ್ಕೆ ಒಳಪಡದ (೩೦)ನೇ ಸೊಲ್ಲಿನಿಂದ ತಿಳಿಯಬಹುದು.
- (೩೦) *ಕೆಂಪು ರಾಜು ಮದುಮಗನಿಗೆ ಹೂ ಕೊಟ್ಟ.
- (೩) ಸೊಲ್ಲು ಮುಗಿದ ಮೇಲೆ ಸೂಚಿಸುವುದು
- ಹೆಸರುಪದವೊಂದನ್ನು (ಇಲ್ಲವೇ ಹೆಸರುಪದಕಂಗಿ’ವೊಂದನ್ನು) ಸೊಲ್ಲಿನಲ್ಲಿ
- ಸೂಚಿಸದೆ ಸೊಲ್ಲಿನ ಅನಂತರ ಸೂಚಿಸಲೂ ಸಾಧ್ಯವಿದೆ. ಆದರೆ
- ಪರಿಚೆಪದವನ್ನು ಈ ರೀತಿ ಸೊಲ್ಲಿನ ಹೊರಗೆ ನಿಲ್ಲಿಸಿ ಹೇಳಲು ಸಾಧ್ಯವಾಗದು
- ಎಂಬುದನ್ನು (೩೪)ನೇ ಸೊಲ್ಲು ವ್ಯಾಕರಣ ಸಮ್ಮತವಲ್ಲ ಎಂಬುದರಿಂದ
- ತಿಳಿಯಬಹುದು.
- (೩೧) ಮದುಮಗನಿಗೆ ಕೆಂಪು ಹೂ ಕೊಟ್ಟಿದ್ದ, ರಾಜು.
- (೩೨) ರಾಜು ಕೆಂಪು ಹೂ ಕೊಟ್ಟಿದ್ದ, ಮದುಮಗನಿಗೆ.
- (೩೩) ರಾಜು ಮದುಮಗನಿಗೆ ಕೊಟ್ಟಿದ್ದ, ಕೆಂಪು ಹೂ.
- (೩೪) *ರಾಜು ಮದುಮಗನಿಗೆ ಹೂ ಕೊಟ್ಟಿದ್ದ, ಕೆಂಪು.
- (೪) ಸೊಲ್ಲಿನ ಎದುರು ನಿಲ್ಲಿಸುವುದು
- ಹೆಸರುಪದವೊಂದನ್ನು ಸೊಲ್ಲಿನಿಂದ ಬೇರ್ಪಡಿಸಿ ಅದಕ್ಕೆದುರಾಗಿ ನಿಲ್ಲಿಸಲು
- ಕನ್ನಡದಲ್ಲೊಂದು ವಿಶಿಷ್ಟವಾದ ಸೊಲ್ಲುರೂಪದ ಬಳಕೆಯಿದೆ. ಇದಕ್ಕಾಗಿ
- ಸೊಲ್ಲಿನಲ್ಲಿ ಬರುವ ‘ಸಕಪದವನ್ನು ಅದರ ವಿಶೇಷಣ ರೂಪಕ್ಕೆ ಬದಲಾಯಿಸ
52
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಬೇಕಾಗುತ್ತದೆ. ಆದರೆ, ಪರಿಚೆಪದಗಳನ್ನು ಈ ರೀತಿ ಅವು ಬರುವ ಸೊಲ್ಲಿನ ಎದುರು ನಿಲ್ಲಿಸಲು ಸಾಧ್ಯವಾಗದು.
- (೩೫) ಮದುಮಗನಿಗೆ ಕೆಂಪು ಹೂ ಕೊಟ್ಟದ್ದು ರಾಜು.
- (೩೬) ರಾಜು ಕೆಂಪು ಹೂ ಕೊಟ್ಟದ್ದು ಮದುಮಗನಿಗೆ.
- (೩೭) ರಾಜು ಮದುಮಗನಿಗೆ ಕೊಟ್ಟದ್ದು ಕೆಂಪು ಹೂ.
- (೩೮) *ರಾಜು ಮದು ಮಗನಿಗೆ ಹೂ ಕೊಟ್ಟದ್ದು ಕೆಂಪು.
ಹೆಸರುಪದ ಮತ್ತು ಪರಿಚೆಪದಗಳ ನಡುವೆ ಕಾಣಿಸುವ ಈ ಎಲ್ಲಾ ವ್ಯತ್ಯಾಸಗಳೂ ಸೊಲ್ಲಿನಲ್ಲಿ ಹೆಸರುಪದಗಳಿಗೆ ಸ್ವತಂತ್ರವಾದ ಸ್ಥಾನವಿದೆ, ಆದರೆ ಪರಿಚೆಪದಗಳಿಗೆ ಅಂತಹ ಸ್ವತಂತ್ರವಾದ ಸ್ಥಾನವಿಲ್ಲ, ಅವು ಹೆಸರುಪದಗಳಿಗೆ ಸಹಾಯಕಗಳಾಗಿ ಅವುಗಳ ಅಧೀನದಲ್ಲಿ ಬರುವವುಗಳು ಎಂಬುದರಿಂದ ಮೂಡಿಬಂದಿವೆ ಎಂಬುದ ನ್ನಿಲ್ಲಿ ಗಮನಿಸಬಹುದು.
೨.೩.೭ ಸ್ಥಾಯಿ ಮತ್ತು ಅಸ್ಥಾಯಿ
ಹೆಸರುಪದ ಮತ್ತು ‘ಸಕಪದಗಳ ನಡುವೆ ಕನ್ನಡದಲ್ಲಿ ‘ಸ್ಥಾಯಿ’ ಮತ್ತು ‘ಅಸ್ಥಾಯಿ’ ಎಂಬ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವನ್ನು ಕಾಣಲು ಸಾಧ್ಯವಿದೆ. ಹೆಸರುಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಬದಲಾಗದೆ ಉಳಿಯಬಲ್ಲುವು ಮತ್ತು ಬದಲಾದರೂ ಅವುಗಳ ಮೂಲರೂಪ ಹಾಗೆಯೇ ಉಳಿಯಬಲ್ಲುದು. ಹಾಗಾಗಿ ಅವನ್ನು ಸ್ಥಾಯಿಗಳೆಂದು ಹೇಳಲು ಸಾಧ್ಯವಿದೆ. ಆದರೆ, ‘ಸಕಪದಗಳು ನಿರ್ದೇಶಿಸುವ ಎಸಕಗಳು ಸಾಮಾನ್ಯವಾಗಿ ನಡೆದು ಹೋಗುವಂತಹವುಗಳಾದ ಕಾರಣ ಅಸ್ಥಾಯಿಗಳಾಗಿರುತ್ತವೆ.
ಈ ವ್ಯತ್ಯಾಸಕ್ಕೆ ಅನುಸಾರವಾಗಿ, ಹೆಸರುಪದಗಳೊಂದಿಗೆ ಬರುವ ಪರಿಚೆಪದ ಗಳು ಸಾಮಾನ್ಯವಾಗಿ ಸ್ಥಾಯಿ ಪರಿಚೆಧರ್ಮಗಳನ್ನು ಸೂಚಿಸುತ್ತಿರುತ್ತವೆ ಮತ್ತು ‘ಸಕಪದಗಳೊಂದಿಗೆ ಬರುವವುಗಳು ಸಾಮಾನ್ಯವಾಗಿ ಅಸ್ಥಾಯಿ ಪರಿಚೆಧರ್ಮ ಗಳನ್ನು ಸೂಚಿಸುತ್ತಿರುತ್ತವೆ.
‘ಸಕಪದಗಳು ನಿರ್ದೇಶಿಸುವ ಎಸಕಗಳೆಲ್ಲ ನಡೆದು ಹೋಗುವಂತಹವು ಗಳು. ಅವುಗಳಲ್ಲಿ ಒಡೆ, ಬಿಡು, ಬಿರಿ, ಮುರಿ ಮೊದಲಾದ ಕೆಲವು ‘ಸಕಪದಗಳು ನಿರ್ದೇಶಿಸುವ ಎಸಕಗಳು ಕ್ಷಣಿಕ ಎಸಕಗಳಾದರೆ, ಓದು, ಓಡು, ಬರೆ, ಇಳಿ ಮೊದಲಾದ ಬೇರೆ ಕೆಲವು ‘ಸಕಪದಗಳು ನಿರ್ದೇಶಿಸುವ ಎಸಕಗಳು ಸ್ವಲ್ಪ ಕಾಲ ನಡೆಯಬಲ್ಲಂತಹವುಗಳು. ಆದರೆ ಈ ಎಲ್ಲಾ ಎಸಕ ಗಳೂ
53
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ನಡೆದುಹೋಗುವಂತಹವುಗಳೇ ಎಂಬುದನ್ನು ಸೊಲ್ಲಿನಲ್ಲಿ ಅವನ್ನು ಬಳಸ ಬೇಕಾದಾಗಲೆಲ್ಲ ಸಾಮಾನ್ಯವಾಗಿ ಅವುಗಳೊಂದಿಗೆ ಕಾಲವಾಚಕ ಪ್ರತ್ಯಯಗಳನ್ನು ಬಳಸಬೇಕಾಗುತ್ತದೆ ಎಂಬುದರಿಂದ ತಿಳಿಯಬಹುದು. ಕನ್ನಡದಲ್ಲಿ ಸ್ಥಾಯಿ ಎನ್ನಿಸ ಬಹುದಾದ ‘ಸಕಪದಗಳು ಬಹಳ ಅಪರೂಪ. ಇರು ಎಂಬುದೊಂದು ಇಂತಹ ಸ್ಥಾಯಿ ‘ಸಕಪದವೆಂದು ಹೇಳಬಹುದು.
ಇದಲ್ಲದೆ, ಕನ್ನಡದಲ್ಲಿ ‘ಸಕಪದವೊಂದನ್ನು ಎರಡು ಮೂರು ಬೇರೆ ಬೇರೆ ಸೊಲ್ಲುಗಳಲ್ಲಿ ಪ್ರಯೋಗಿಸಿದೆಯಾದರೆ, ಆ ‘ಸಕಪದವು ನಿರ್ದೇಶಿಸುವ ಎಸಕ ಎರಡು ಮೂರು ಬಾರಿ ನಡೆದಿದೆಯೆಂಬ ಅರ್ಥ ಬರುವುದಲ್ಲದೆ ಒಂದು ಬಾರಿ ನಡೆದ ಎಸಕೆಯನ್ನು ಅದು ಮೂರು ಬಾರಿ ನಿರ್ದೇಶಿಸುವಂತಹ ಅರ್ಥ ಬರುವುದಿಲ್ಲ. ಎತ್ತುಗೆಗಾಗಿ, (೩೯)ರಲ್ಲಿ ಬಂದಿರುವ ಸೊಲ್ಲುಗಳನ್ನು ಗಮನಿಸ ಬಹುದು.
- (೩೯) ರಾಜು ಮನೆಗೆ ಓಡಿದ. ಅಲ್ಲಿಂದ ಅರ್ಧ ಗಂಟೆ ಬಿಟ್ಟು ಶಾಲೆಗೆ
- ಓಡಿದ.
- (೩೯)ರಲ್ಲಿ ಬಂದ ಓಡು ಎಂಬ ‘ಸಕಪದದ ಎರಡು ಪ್ರಯೋಗಗಳು ಎರಡು
- ಬೇರೆ ಬೇರೆ ಎಸಕಗಳನ್ನು ನಿರ್ದೇಶಿಸುತ್ತಿವೆಯೆಂಬುದನ್ನು ಗಮನಿಸಬಹುದು.
- ಇದಕ್ಕೆ ವ್ಯತಿರಿಕ್ತವಾಗಿ, ಹೆಸರುಪದಗಳು ಗುರುತಿಸುವ ವ್ಯಕ್ತಿ, ವಸ್ತು
- ಮೊದಲಾದವುಗಳು ಸ್ಥಾಯಿಗಳಾಗಿದ್ದು, ಅವುಗಳಲ್ಲಿ ಒಂದನ್ನೇ ಹಲವಾರು ಬಾರಿ
- ಬೇರೆ ಬೇರೆ ಸೊಲ್ಲುಗಳಲ್ಲಿ ಪುನ: ಪುನ: ಗುರುತಿಸಿ ಹೇಳಲು ಸಾಧ್ಯವಿದೆ.
- (೪೦) ರಾಜು ಕಳೆದ ವಾರ ಒಂದು ಮದುವೆಗೆ ಹೋಗಿದ್ದ. ಅಲ್ಲಿ
- ರಾಜುವಿನ ತಂಗಿಯ ಕಚೇರಿ ಇತ್ತು.
- (೪೦)ರಲ್ಲಿ ಬಂದ ರಾಜು ಎಂಬ ಪದದ ಎರಡೂ ಪ್ರಯೋಗಗಳೂ ಒಬ್ಬನೇ
- ವ್ಯಕ್ತಿಯನ್ನು ಗುರುತಿಸುತ್ತವೆ ಎಂಬುದನ್ನು ಗಮನಿಸಬಹುದು.
- ಹೆಸರುಪದವೊಂದು ಈ ರೀತಿ ಹಲವಾರು ಬಾರಿ ಸೊಲ್ಲುಗಳಲ್ಲಿ ಬಂದಾಗ
- ಅದು ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆಯೇ ಅಥವಾ ಬೇರೆ
- ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದೆಯೇ ಎಂಬುದನ್ನು ಸೂಚಿಸು
- ವುದಕ್ಕಾಗಿ ಆ, ಈ ಮೊದಲಾದ ನಿರ್ದೇಶಕ ಪದಗಳ ಇಲ್ಲವೇ ಸರ್ವಹೆಸರುಗಳ
- ಬಳಕೆಯಾಗುತ್ತದೆ.
54
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
‘ಸಕಪದಗಳೊಂದಿಗೆ ನೇರವಾಗಿ ಬರಬಲ್ಲ ಸಮಯವನ್ನು ಸೂಚಿಸುವ ಪ್ರತ್ಯಯಗಳು ಹೆಸರುಪದಗಳೊಂದಿಗೆ ಬರಲಾರವು ಎಂಬ ನಿಯಮಕ್ಕೂ (೨.೩.೧ ನೋಡಿ) ಹೆಸರುಪದ ಮತ್ತು ‘ಸಕಪದಗಳ ನಡುವಿರುವ ಈ ವ್ಯತ್ಯಾಸವೇ ಕಾರಣವಿರಬೇಕು.
೨.೪ ಪದವರ್ಗಗಳ ಸದಸ್ಯತ್ವ
ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಮುಖ್ಯ ಪದವರ್ಗ ಗಳು ಕನ್ನಡದಲ್ಲಿವೆಯೆಂಬುದನ್ನು ಈ ಮೂರು ರೀತಿಯ ಪದಗಳ ನಡುವೆ ಕನ್ನಡ ಸೊಲ್ಲುಗಳಲ್ಲಿ ಕಾಣಿಸುವ ಮೇಲೆ ವಿವರಿಸಿದಂತಹ ವ್ಯತ್ಯಾಸಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ. ಹೆಸರುಪದ ಮತ್ತು ಪರಿಚೆಪದಗಳ ನಡುವೆ ಇಂತಹ ವ್ಯತ್ಯಾಸಗಳಾವುವೂ ಸಂಸ್ಕೃತದಲ್ಲಿ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಆ ಭಾಷೆಯಲ್ಲಿ ಈ ರೀತಿ ಎರಡು ಬೇರೆ ಬೇರೆ ಪದವರ್ಗಗಳಿರುವ ಬದಲು ಹೆಸರುಪದವೆಂಬ ಒಂದೇ ಪದವರ್ಗವಿದೆಯೆಂದು ಹೇಳುವ ಅವಶ್ಯಕತೆಯಿದೆ. ಕನ್ನಡ ಮತ್ತು ಸಂಸ್ಕೃತ ನುಡಿಗಳ ನಡುವಿರುವ ಈ ಒಂದು ಪ್ರಾಮುಖ್ಯವಾದ ವ್ಯತ್ಯಾಸವೇ ಅವುಗಳ ಪದರಚನೆಯಲ್ಲಿ ಕಾಣಿಸುವ ಹಲವಾರು ವ್ಯತ್ಯಾಸಗಳಿಗೆ ಮೂಲ ಕಾರಣವೆಂಬುದನ್ನು ಮುಂದೆ ನೋಡಲಿರುವೆವು.
ಕನ್ನಡ ಪದಗಳನ್ನೆಲ್ಲ ಈ ರೀತಿ ಮೂರು ಮುಖ್ಯ ಪದವರ್ಗಗಳಲ್ಲಿ ವಿಂಗಡಿಸ ಹೊರಟಾಗ ಯಾವ ಯಾವ ಪದಗಳನ್ನು ಯಾವ ಯಾವ ವರ್ಗಗಳಲ್ಲಿ ಸೇರಿಸಬೇಕು ಎಂಬ ವಿಷಯದಲ್ಲಿ ಸಂದೇಹವುಂಟಾಗಲು ಸಾಧ್ಯವಿದೆ, ಇದಕ್ಕೆ ಒಂದು ಕಾರಣವೇನೆಂದರೆ, ಕೆಲವು ಪದಗಳ ಬಳಕೆ ಒಂದು ಪದವರ್ಗಕ್ಕೆ ಮಾತ್ರವೇ ಸೀಮಿತವಾಗಿರದೆ ಎರಡು ಇಲ್ಲವೇ ಮೂರು ಪದವರ್ಗಗಳಿಗೂ ವಿಸ್ತರಿಸಿರಲು ಸಾಧ್ಯವಿದೆ.
ಎತ್ತುಗೆಗಾಗಿ, ಉದ್ದ ಎಂಬ ಪದ ಒಂದು ಸೊಲ್ಲಿನಲ್ಲಿ ಪರಿಚೆಪದ ವಾಗಿಯೂ ಬರಬಲ್ಲುದು (ಉದಾ: ಉದ್ದ ಗೋಡೆ), ಮತ್ತು ಹೆಸರುಪದ ವಾಗಿಯೂ ಬರಬಲ್ಲುದು (ಉದಾ: ಗೋಡೆಯ ಉದ್ದ); ಹಾಡು ಎಂಬ ಪದ ಹೆಸರುಪದವಾಗಿಯೂ ಬರಬಲ್ಲುದು (ಉದಾ: ಅವನೊಂದು ಹಾಡನ್ನು ಬರೆದ), ‘ಸಕಪದವಾಗಿಯೂ ಬರಬಲ್ಲುದು (ಉದಾ: ಅವನೊಂದು ಕವಿತೆ ಯನ್ನು ಹಾಡಿದ).
ಇನ್ನೊಂದು ಕಾರಣವೇನೆಂದರೆ, ಕೆಲವು ಪದಗಳು ಕೆಲವು ವಿಷಯಗಳಲ್ಲಿ ಒಂದು ಪದವರ್ಗಕ್ಕೆ ಸೇರುವಂತಿದ್ದರೆ ಬೇರೆ ಕೆಲವು ವಿಷಯಗಳಲ್ಲಿ ಇನ್ನೊಂದು ಪದವರ್ಗಕ್ಕೆ ಸೇರುವಂತಿರುತ್ತವೆ. ಎತ್ತುಗೆಗಾಗಿ, ನಾಲ್ಕು ಎಂಬ ಸಂಖ್ಯೆ ಯನ್ನು ಸೂಚಿಸುವ ಪದ ಕೆಲವು ವಿಷಯಗಳಲ್ಲಿ ಪರಿಚೆಪದಗಳ ಹಾಗಿದೆ (ಉದಾ:
55
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ನಾಲ್ಕು ಪುಸ್ತಕ ಎಂಬಲ್ಲಿ ಅದು ನೇರವಾಗಿ (ಎಂದರೆ, ಸಂಬಂಧವನ್ನು ಸೂಚಿಸುವ ಅ ಎಂಬ ಪ್ರತ್ಯಯದ ಸಹಾಯವಿಲ್ಲದೆ) ಹೆಸರುಪದದ ಮುಂದೆ ಬಂದಿದೆ). ಆದರೆ ಬೇರೆ ಕೆಲವು ವಿಷಯಗಳಲ್ಲಿ ಅದು ಹೆಸರುಪದಗಳ ಹಾಗಿದೆ. (ಉದಾ: ನಾಲ್ಕಕ್ಕೆ, ನಾಲ್ಕರಿಂದ, ನಾಲ್ಕನ್ನು ಇತ್ಯಾದಿ ವಿಭಕ್ತಿ ರೂಪಗಳು ಅದಕ್ಕಿವೆ). ಹಾಗಾಗಿ, ಇಂತಹ ಪದಗಳನ್ನು ಯಾವ ಪದವರ್ಗದಲ್ಲಿ ಸೇರಿಸಿ ಕೊಳ್ಳಬೇಕು ಎಂಬ ವಿಷಯದಲ್ಲಿ ಸಂದೇಹವುಂಟಾಗಲು ಸಾಧ್ಯವಿದೆ.
ಆದರೆ ಇಂತಹ ಪರಿಸ್ಥಿತಿಯಿರುವುದು ನುಡಿಗಳಲ್ಲಿ ಬರುವ ಪದಗಳ ಸ್ವಾಭಾವಿಕವಾದ ಪರಿಚೆಧರ್ಮವೇ ಆಗಿದೆ. ಪದವರ್ಗವೊಂದರಲ್ಲಿ ಸೇರಿಕೊಳ್ಳುವ ಪದಗಳಲ್ಲಿ ಎಲ್ಲವೂ ಒಂದೇ ರೀತಿಯಾಗಿ ಆ ಪದವರ್ಗದ ಪರಿಚೆಧರ್ಮಗಳನ್ನು ತೋರಿಸುವುದಿಲ್ಲ. ಕೆಲವು ಪದಗಳು ಎಲ್ಲಾ ಪರಿಚೆಧರ್ಮಗಳನ್ನೂ ಸ್ಪಷ್ಟವಾಗಿ ತೋರಿಸುತ್ತಿದ್ದು, ಆ ಪದವರ್ಗದ ‘ಮಾದರಿ’ ಪದಗಳೆಂದೆನಿಸಿಕೊಳ್ಳುತ್ತವೆ. ಆದರೆ, ಬೇರೆ ಕೆಲವು ಪದಗಳು ಅಂತಹ ಪರಿಚೆಧರ್ಮಗಳಲ್ಲಿ ಕೆಲವನ್ನು ಮಾತ್ರವೇ ತೋರಿಸಿಕೊಡುತ್ತಿದ್ದು ಅವು ಆ ಪದವರ್ಗದ ಅಂಚಿನಲ್ಲಿ ನಿಲ್ಲು ವಂತಹವುಗಳಾಗಿರುತ್ತವೆ.
ಹಾಗಾಗಿ, ಪದವರ್ಗವೊಂದರ ಪರಿಚೆಧರ್ಮಗಳು ಅದರ ಮಾದರಿ ಪದಗಳ ಪರಿಚೆಧರ್ಮಗಳು ಮಾತ್ರ, ಆ ಪದವರ್ಗದಲ್ಲಿ ಸೇರುವ ಎಲ್ಲಾ ಪದಗಳೂ ತೋರಿಸುವ (ಇಲ್ಲವೇ ತೋರಿಸಬೇಕಾಗಿರುವ) ಪರಿಚೆಧರ್ಮಗಳಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.
೨.೫ ಸಾರಾಂಶ
ಕನ್ನಡದಲ್ಲಿ ಮುಖ್ಯವಾಗಿ ಮೂರು ವರ್ಗಗಳಿಗೆ ಸೇರುವ ಪದಗಳಿವೆ. ಇವನ್ನು ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂದು ಕರೆಯಬಹುದು. ಇವುಗಳಲ್ಲಿ ಹೆಸರುಪದಗಳು ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವು ದಕ್ಕಾಗಿಯೂ ಮತ್ತು ‘ಸಕಪದಗಳು ಎಸಕಗಳನ್ನು ನಿರ್ದೇಶಿಸುವುದಕ್ಕಾಗಿಯೂ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ. ಹೆಸರುಪದ ಇಲ್ಲವೇ ‘ಸಕಪದಗಳ ಅರ್ಥ ವನ್ನು ಹೆಚ್ಚಿಸಿ, ಅವುಗಳ ವ್ಯಾಪ್ತಿ ಕಡಿಮೆಯಾಗುವಂತೆ ಮಾಡಲು ಪರಿಚೆಪದಗಳು ಬಳಕೆಯಾಗುತ್ತವೆ.
ಪದವರ್ಗಗಳ ಸಂಖ್ಯೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರಾಗಿರುತ್ತದೆ. ಸಂಸ್ಕೃತದಲ್ಲಿ ಹೆಸರುಪದ ಮತ್ತು ‘ಸಕಪದಗಳೆಂಬ ಎರಡೇ ಪದವರ್ಗ ಗಳಿದ್ದು, ಕನ್ನಡದ ಪರಿಚೆಪದಗಳಿಗೆ ಸಮನಾದ ಪದಗಳು ಸಂಸ್ಕೃತದಲ್ಲಿ ಹೆಸರು ಪದವರ್ಗಕ್ಕೆ ಸೇರುತ್ತವೆ. ಇದಕ್ಕೆ ಬದಲು ಈ ಪದಗಳು ‘ಸಕಪದವರ್ಗಕ್ಕೆ ಸೇರುವ ಮಣಿಪುರಿಯಂತಹ ನುಡಿಗಳೂ ಮತ್ತು ಈ ಮೂರು ರೀತಿಯ ಪದಗಳೂ ಒಂದೇ ಪದವರ್ಗದಲ್ಲಿ ಬರುವ ಮುಂಡಾರಿಯಂತಹ ನುಡಿಗಳೂ
56
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡದ ಪದವರ್ಗಗಳು
ಭಾರತದಲ್ಲಿವೆ. ಈ ಬೇರೆ ಬೇರೆ ನುಡಿಗಳಲ್ಲಿ ಸೊಲ್ಲು ರಚನೆಯ ನಿಯಮಗಳು ಬೇರೆ ಬೇರಾಗಿದ್ದು, ಸೊಲ್ಲುಗಳಲ್ಲಿ ಈ ಪದಗಳು ನಡೆಸಬೇಕಾಗುವ ಕೆಲಸಗಳೂ ಬೇರೆ ಬೇರಾಗಿರುವುದೇ ಈ ರೀತಿ ಅವುಗಳಲ್ಲಿ ಬರುವ ಪದವರ್ಗಗಳ ಸಂಖ್ಯೆ ಯಲ್ಲಿ ವ್ಯತ್ಯಾಸ ಕಾಣಿಸಲು ಮುಖ್ಯ ಕಾರಣ.
ಈ ಮೂರು ಪದವರ್ಗಗಳಿಗೆ ಸೇರುವ ಪದಗಳ ನಡುವೆ ಕನ್ನಡದಲ್ಲಿ ಹಲವು ರೀತಿಯ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಈ ವ್ಯತ್ಯಾಸಗಳು ಸೊಲ್ಲುಗಳಲ್ಲಿ ಈ ಪದಗಳು ನಡೆಸಬೇಕಾಗಿರುವ ಪ್ರಾಮುಖ್ಯವಾದ ಕೆಲಸಗಳು ಯಾವುವು ಎಂಬುದರ ಮೇಲೆ ಅವಲಂಬಿಸಿವೆ. ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರುಪದಗಳನ್ನು ಹಾಗೆಯೇ ನೇರವಾಗಿ ಬಳಸಲು ಸಾಧ್ಯ ವಿದೆ, ಆದರೆ ‘ಸಕಪದ ಇಲ್ಲವೇ ಪರಿಚೆಪದಗಳನ್ನು ಅವುಗಳದಲ್ಲದ ಈ ಕೆಲಸ ದಲ್ಲಿ ಬಳಸಲು ಅವಕ್ಕೆ ಕೆಲವು ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ‘ಸಕಪದಗಳ ಕೆಲಸದಲ್ಲಿ ಹೆಸರುಪದ ಇಲ್ಲವೇ ಪರಿಚೆಪದಗಳನ್ನು ಮತ್ತು ಪರಿಚೆಪದಗಳ ಕೆಲಸದಲ್ಲಿ ಹೆಸರುಪದ ಇಲ್ಲವೇ ‘ಸಕಪದಗಳನ್ನು ನೇರ ವಾಗಿ ಬಳಸಲು ಸಾಧ್ಯವಾಗದು.
ಈ ಮೂರು ರೀತಿಯ ಪದಗಳ ನಡುವೆ ಅವುಗಳ ಅರ್ಥದಲ್ಲೂ ವ್ಯತ್ಯಾಸ ವಿದೆ. ಪರಿಚೆಪದಗಳು ಒಂದೇ ಒಂದು ವಿಶಿಷ್ಟವಾದ ಪರಿಚೆಧರ್ಮವನ್ನಷ್ಟೇ ಸೂಚಿಸುವುವಾದರೆ, ಹೆಸರುಪದಗಳು ಹಲವು ಪರಿಚೆಧರ್ಮಗಳನ್ನು ಒಟ್ಟಾಗಿ ಸೂಚಿಸುತ್ತವೆ ಮತ್ತು ಇವುಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳ ಲ್ಲೊಂದನ್ನು ಗುರುತಿಸುತ್ತವೆ. ಪರಿಚೆಧರ್ಮಗಳನ್ನು ಸೂಚಿಸುವುದಕ್ಕಿಂತಲೂ ಅಂತಹ ಪರಿಚೆಧರ್ಮವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಲ್ಲೊಂದನ್ನು ಗುರುತಿಸುವುದೇ ಇವುಗಳ ಮುಖ್ಯ ಕೆಲಸ. ಹಾಗಾಗಿ, ಹೆಸರುಪದಗಳ ಬಳಕೆಯಲ್ಲಿ ಅವುಗಳ ಒಳರಚನೆಗೆ ಇಲ್ಲವೇ ಅಂತಹ ರಚನೆಯಿಂದ ದೊರಕುವ ಅರ್ಥಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿಲ್ಲ.
ಕನ್ನಡದಲ್ಲಿ ಬರುವ ಪದಗಳ ಒಳರಚನೆಯಂತಹದು ಎಂಬುದನ್ನು ಸರಿ ಯಾಗಿ ತಿಳಿದೊಕೊಳ್ಳಲು ಅವು ಬರುವ ಈ ಮೂರು ಪದವರ್ಗಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಂಡಿರುವುದು ಅತ್ಯವಶ್ಯ.
57
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ಮೂರು ನಾಮಪದಗಳ ಒಳರಚನೆ
೩.೧ ಹೆಸರಿಸುವುದು ಮತ್ತು ವರ್ಣಿಸುವುದು
ವಾಕ್ಯದ ಮೂಲಕ ಒಂದು ಘಟನೆಯನ್ನು ತಿಳಿಸಬೇಕಾದಲ್ಲಿ, ಇಲ್ಲವೇ ವಿಧಿಸುವುದು, ನಿಷೇಧಿಸುವುದು, ಪ್ರಶ್ನಿಸುವುದು ಮೊದಲಾದ ಇತರ ಮಾತಿನ ಕೆಲಸಗಳಲ್ಲಿ ಅದನ್ನು ತೊಡಗಿಸಬೇಕಾದಲ್ಲಿ, ಅಂತಹ ಘಟನೆಯಲ್ಲಿ ನಿರತ ರಾಗಿರುವ ಇಲ್ಲವೇ ನಿರತರಾಗಲಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾ ದವುಗಳನ್ನು ಅವು ಇಂತಹವೇ ಎಂಬುದಾಗಿ ಗುರುತಿಸಿ ಹೇಳುವ ಅವಶ್ಯಕತೆ ಯಿದೆ. ಹೀಗೆ ಗುರುತಿಸಿ ಹೇಳುವುದಕ್ಕಾಗಿ ನಾವು ನಾಮಪದಗಳನ್ನು ಇಲ್ಲವೇ ನಾಮಪದಗುಚ್ಛಗಳನ್ನು ಬಳಸುತ್ತೇವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (೧)ನೇ ವಾಕ್ಯವನ್ನು ಗಮನಿಸಬಹುದು.
(೧) ರಾಜು ಅವನ ಹೆಂಡತಿಗೆ ಮೈಸೂರಿನಿಂದ ರೇಷ್ಮೆ ಸೀರೆ ತಂದಿದ್ದಾನೆ.
(೧)ನೇ ವಾಕ್ಯದಲ್ಲಿ ರಾಜು ಮತ್ತು ಅವನ ಹೆಂಡತಿ ಎಂಬ ಎರಡು ವ್ಯಕ್ತಿಗಳನ್ನೂ, ಮೈಸೂರು ಎಂಬ ಒಂದು ಸ್ಥಳವನ್ನೂ, ಮತ್ತು ರೇಷ್ಮೆ ಸೀರೆ ಎಂಬ ಒಂದು ವಸ್ತುವನ್ನೂ ಗುರುತಿಸಿ ಹೇಳಲಾಗಿದೆ. ಇವು ತರು ಎಂಬ ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ತೊಡಗಿದ್ದ ವ್ಯಕ್ತಿ, ಸ್ಥಳ ಮತ್ತು ವಸ್ತು ಗಳಾಗಿವೆ.
ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸಿ ಹೇಳುವ ಕೆಲಸ ವನ್ನು ನಾಮಪದಗಳು ಎರಡು ಮುಖ್ಯವಾದ ವಿಧಾನಗಳ ಮೂಲಕ ನಡೆಸಿ ಕೊಡಬಲ್ಲುವು. ಆ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಹೆಸರಿಸುವುದರ ಮೂಲಕ ಅವನ್ನು ಗುರುತಿಸುವುದು ಒಂದು ವಿಧಾನ, ಮತ್ತು ಅವುಗಳಲ್ಲಿ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಕಾಣಿಸುವುದ ವಿಶಿಷ್ಟವಾದೊಂದು ಗುಣಧರ್ಮವನ್ನು ವರ್ಣಿಸುವುದರ ಮೂಲಕ ಅವನ್ನು ಗುರುತಿಸುವುದು ಇನ್ನೊಂದು ವಿಧಾನ.
ಮೇಲೆ ಕೊಟ್ಟಿರುವ (೧)ನೇ ವಾಕ್ಯದಲ್ಲಿ ಈ ಎರಡು ರೀತಿಯ ಗುರುತಿಸುವ ವಿಧಾನಗಳನ್ನೂ ಬಳಸಲಾಗಿದೆಯೆಂಬುದನ್ನು ಗಮನಿಸಬಹುದು. ರಾಜು ಮತ್ತು ಮೈಸೂರು ಎಂಬ ಎರಡು ನಾಮಪದಗಳು ಹೆಸರಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿ ಮತ್ತು ಒಂದು ಸ್ಥಳವನ್ನು ಗುರುತಿಸುತ್ತವೆ. ಇದಕ್ಕೆ ಬದಲು, ಅವನ ಹೆಂಡತಿ ಮತ್ತು ರೇಷ್ಮೆ ಸೀರೆ ಎಂಬ ಎರಡು ನಾಮಪದಗುಚ್ಛಗಳು ವರ್ಣಿಸುವ ವಿಧಾನದ ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಮತ್ತು ಇನ್ನೊಂದು ವಸ್ತುವನ್ನು ಗುರುತಿಸುತ್ತವೆ.
ಹೆಸರಿಸುವ ನಾಮಪದಗಳು ವ್ಯಕ್ತಿ, ವಸ್ತು ಮೊದಲಾದವುಗಳ ಅಂಕಿತ ನಾಮಗಳಿರಬಹುದು ಇಲ್ಲವೇ ರೂಢನಾಮಗಳಿರಬಹುದು (೩.೫.೧ ನೋಡಿ). ಮೇಲೆ ಕೊಟ್ಟಿರುವ (೧)ನೇ ವಾಕ್ಯದಲ್ಲಿ ಬಂದಿರುವ ಹೆಸರಿಸುವ ನಾಮಪದ ಗಳೆರಡೂ ಅಂಕಿತ ನಾಮಗಳೇ. ಆದರೆ ಈ ಕೆಲಸವನ್ನು ರೂಢನಾಮಗಳೂ ನಡೆಸಬಲ್ಲುವೆಂಬುದನ್ನು ಕೆಳಗೆ ಕೊಟ್ಟಿರುವ (೨)ನೇ ವಾಕ್ಯದಿಂದ ತಿಳಿಯ ಬಹುದು.
(೨) ಅಗಸ ಕತ್ತೆಗೆ ಹೊಡೆಯುತ್ತಿದ್ದಾನೆ.
ಈ (೨)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳು ಹೆಸರಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ.
ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿರುವ ಗುಣಧರ್ಮವೊಂದನ್ನು ವರ್ಣಿಸು ವುದರ ಮೂಲಕ ಅವನ್ನು ಗುರುತಿಸುವಂತಹ ನಾಮಪದಗುಚ್ಛಗಳಲ್ಲೂ ಹೆಸರಿಸುವ ನಾಮಪದಗಳಿರಬಲ್ಲುವು. ಆದರೆ ಇವು ಬೇರೆ ಹೆಸರಿಸುವ ನಾಮ ಪದಗಳೊಂದಿಗೆ, ಇಲ್ಲವೇ ಗುಣಪದ, ಸಂಖ್ಯಾಪದ, ಸರ್ವನಾಮ ಮೊದಲಾದವು ಗಳೊಂದಿಗೆ ಸೇರಿಕೊಂಡು ಈ ರೀತಿ ವರ್ಣಿಸುವ ಕೆಲಸವನ್ನು ನಡೆಸುತ್ತವೆ.
ಉದಾಹರಣೆಗಾಗಿ, ರಾಜುವಿನ ಅಣ್ಣ ಎಂಬ ನಾಮಪದಗುಚ್ಛದಲ್ಲಿ ಅಣ್ಣ ಎಂಬ ಹೆಸರಿಸುವ ನಾಮಪದ(ರೂಢನಾಮ)ವು ರಾಜು ಎಂಬ ಇನ್ನೊಂದು ಹೆಸರಿಸುವ ನಾಮಪದ(ಅಂಕಿತನಾಮ)ದೊಂದಿಗೆ ಸೇರಿ, ವರ್ಣಿಸುವ ಕೆಲಸವನ್ನು ನಡೆಸುತ್ತದೆ. ಕೆಂಪು ಗುಲಾಬಿ ಎಂಬ ನಾಮಪದಗುಚ್ಛದಲ್ಲಿ ಗುಲಾಬಿ ಎಂಬ ಹೆಸರಿಸುವ ನಾಮಪದವು ಕೆಂಪು ಎಂಬ ಗುಣಪದದೊಂದಿಗೆ ಸೇರಿ ಈ ಕೆಲಸವನ್ನು ನಡೆಸುತ್ತದೆ.
ವರ್ಣಿಸುವ ಕೆಲಸವನ್ನು ಒಂದಕ್ಕಿಂತ ಜಾಸ್ತಿ ಪದಗಳಿರುವ ‘ಪದಗುಚ್ಛ’ವೇ ನಡೆಸಿಕೊಡಬೇಕೆಂಬ ನಿಯಮವೇನೂ ಇಲ್ಲ. ಒಂದೇ ಒಂದು ನಾಮಪದದ
57
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಬಳಕೆಯಾಗಿರುವಾಗಲೂ ಅದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಹೆಸರಿಸುವ ಬದಲು ವರ್ಣಿಸುತ್ತಿರಲು ಸಾಧ್ಯವಿದೆ. ಆದರೆ ಇಂತಹ ಬಳಕೆಯಲ್ಲಿ ಬರುವ ನಾಮಪದಗಳು ಒಬ್ಬ ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಿಲ್ಲ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (೩)ನೇ ವಾಕ್ಯವನ್ನು ಗಮನಿಸಬಹುದು.
- (೩) ಆಕೆಗೆ ಹೆಪ್ಪು ಹಾಕಲು ಮಜ್ಜಿಗೆ ಬೇಕಾಗಿದೆ.
- ಈ (೩)ನೇ ವಾಕ್ಯದಲ್ಲಿ ಬಂದಿರುವ ಮಜ್ಜಿಗೆ ಎಂಬ ನಾಮಪದ ಯಾವುದೇ
- ಒಂದು ವಿಶಿಷ್ಟವಾದ ವಸ್ತುವನ್ನು ಗುರುತಿಸುತ್ತಿಲ್ಲ. ಅಂತಹ ವಸ್ತುವಿನ ವರ್ಣನೆ
- ಯನ್ನು ಮಾತ್ರ ಅದು ಕೊಡುತ್ತಿದೆ. ಆ ವರ್ಣನೆಗೆ ಹೊಂದುವಂತಹ ವಸ್ತು
- ವೊಂದನ್ನು ಗುರುತಿಸುವ ಕೆಲಸ ಮಾತನಾಡುವವನದಲ್ಲ, ಬೇರೊಬ್ಬನದು -
- ಎಂದರೆ ಮಜ್ಜಿಗೆಯನ್ನು ಕೊಡಬೇಕಾಗಿರುವ ವ್ಯಕ್ತಿಯದು - ಎಂಬುದನ್ನಿಲ್ಲಿ
- ಗಮನಿಸಬಹುದು.
- ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳನ್ನು
- ಗುರುತಿಸುವ ಕೆಲಸವನ್ನು ನಾಮಪದಗುಚ್ಛಗಳು ಮಾತ್ರವಲ್ಲದೆ ಕ್ರಿಯಾಪದ
- ಮತ್ತು ಗುಣಪದಗಳೂ ನಡೆಸಬಲ್ಲುವು. ಆದರೆ ಇದಕ್ಕಾಗಿ ಕ್ರಿಯಾಪದಗಳಿಗೆ
- ಮತ್ತು ಗುಣಪದಗಳಿಗೆ ಕೆಲವು ವಿಶಿಷ್ಟವಾದ ಪ್ರತ್ಯಯಗಳನ್ನು ಸೇರಿಸಿಕೊಳ್ಳುವ
- ಅವಶ್ಯಕತೆಯಿದೆ. ಉದಾಹರಣೆಗಾಗಿ ಕ್ರಿಯಾಪದಗಳಿಗೆ -ಇಕೆ ಎಂಬ ಪ್ರತ್ಯಯ
- ವನ್ನು ಸೇರಿಸುವುದರ ಮೂಲಕ ದೊರೆಯುವ ಕ್ರಿಯಾರೂಪಗಳು ಅಂತಹ ಕ್ರಿಯಾ
- ಪದಗಳು ನಿರ್ದೇಶಿಸುವ ಘಟನೆಗಳನ್ನು ವರ್ಣಿಸುವ ವಿಧಾನದ ಮೂಲಕ
- ಗುರುತಿಸಬಲ್ಲುವು.
- (೪) ಅವನ ಬರೆಯುವಿಕೆ ಇನ್ನೂ ಮುಗಿದಿಲ್ಲ.
- (೫) ಅಜ್ಜನ ಬೈಯುವಿಕೆಗೆ ಯಾರೂ ಸೊಪ್ಪು ಹಾಕುವುದಿಲ್ಲ.
- ಇದೇ ರೀತಿಯಲ್ಲಿ ಗುಣಪದಗಳಿಗೆ -ತನ ಎಂಬ ಪ್ರತ್ಯಯವನ್ನು ಸೇರಿಸು
- ವುದರ ಮೂಲಕ ದೊರೆಯುವ ಗುಣಪದರೂಪಗಳು ಆ ಗುಣಪದಗಳು
- ಸೂಚಿಸುವ ಗುಣಧರ್ಮಗಳನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸ
- ಬಲ್ಲುವು.
- (೬) ಅವನ ದೊಡ್ಡನತವನ್ನು ಎಲ್ಲರೂ ಬಲ್ಲರು.
- (೭) ಅವನ ಒಳ್ಳೆತನವನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಂಡಿ
- ದ್ದಾರೆ.
58
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಕನ್ನಡ ವಾಕ್ಯಗಳಲ್ಲಿ ಬರುವ ನಾಮಪದಗಳ ಒಳರಚನೆಯಂತಹದು ಎಂಬು ದನ್ನು ತಿಳಿಯುವಲ್ಲಿ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವಂತಹ ನಾಮಪದಗಳನ್ನು ಮಾತ್ರವೇ ಗಮನಕ್ಕೆ ತೆಗೆದುಕೊಂಡರೆ ಸಾಕು. ಯಾಕೆಂದರೆ, ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವವುಗಳೆಲ್ಲ ನಾಮಪದಗುಚ್ಛಗಳು (ಇಲ್ಲವೇ ಕ್ರಿಯಾಪದ ರೂಪಗಳು ಅಥವಾ ಗುಣಪದ ರೂಪಗಳು). ಬರಿಯ ನಾಮಪದಗಳು ಆ ರೀತಿ ಬಳಕೆಯಾಗುವುದಿಲ್ಲ.
ವರ್ಣಿಸುವ ನಾಮಪದಗುಚ್ಛಗಳ ಒಳರಚನೆ ವಾಕ್ಯರಚನೆಯ ತತ್ವಗಳ ನ್ನನುಸರಿಸಿದೆಯಲ್ಲದೆ ಪದರಚನೆಯ ತತ್ವಗಳನ್ನನುಸರಿಸಿಲ್ಲವಾದ ಕಾರಣ ಪದ ರಚನೆಯನ್ನು ವಿಶ್ಲೇಷಿಸುವ ಈ ಪುಸ್ತಕದಲ್ಲಿ ಅವನ್ನು ಪರಿಶೀಲಿಸುವ ಅವಶ್ಯಕತೆ ಯಿಲ್ಲ.
ಆದರೆ, ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಈ ವ್ಯತ್ಯಾಸವನ್ನು ಸರಿಯಾಗಿ ಗಮನಿಸಿದಂತಿಲ್ಲ. ಉದಾಹರಣೆಗಾಗಿ, ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವೂ ಮಾವಿನ ಮರ, ನೆರೆಮನೆ ಸುದ್ದಿ, ಕೆಟ್ಟ ಬುದ್ಧಿ, ಬಿಳಿಯ ಬಟ್ಟೆ ಮೊದಲಾದುವನ್ನು ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಟ್ಟಿರುವುದನ್ನು ಕಾಣ ಬಹುದು. ನಿಜಕ್ಕೂ ಇವು ವರ್ಣಿಸುವ ವಿಧಾನದ ಮೂಲಕ ವಸ್ತು, ವಿಷಯ ಮೊದಲಾದನ್ನು ಗುರುತಿಸುತ್ತವೆಯಲ್ಲದೆ ಹೆಸರಿಸುವ ವಿಧಾನದ ಮೂಲಕ ಗುರುತಿಸುತ್ತಿಲ್ಲ. ಎಂದರೆ, ಇವೆಲ್ಲ ನಾಮಪದಗುಚ್ಛಗಳಲ್ಲದೆ ನಾಮಪದಗಳಲ್ಲ. ಹಾಗಾಗಿ, ಇವನ್ನು ‘ಸಮಾಸ’ ಎಂಬ ಪದರಚನೆಯ ವಿಧಾನದಿಂದ ಸಿದ್ಧವಾದ ನಾಮಪದಗಳೆಂದು ಹೇಳುವುದು ತಪ್ಪು.
ಕನ್ನಡದ ವೈಯಾಕರಣಿಗಳು ಈ ರೀತಿ ನಾಮಪದ ಮತ್ತು ನಾಮಪದ ಗುಚ್ಛ ಇವೆರಡರ ನಡುವಿರುವ ವ್ಯತ್ಯಾಸವನ್ನು ಗಮನಿಸದಿರಲು ಒಂದು ಮುಖ್ಯ ವಾದ ಕಾರಣವಿದೆ. ಅವರು ಕನ್ನಡದ ಸಮಾಸವನ್ನು ನೇರವಾಗಿ ಕನ್ನಡದಲ್ಲಿ ಬರುವ ಪದಗಳ ಪರಿಶೀಲನೆಯ ಆಧಾರದ ಮೇಲೆ ವರ್ಣಿಸುವ ಬದಲು, ಸಂಸ್ಕೃತ ಸಮಾಸಗಳನ್ನು ಮೊದಲು ವರ್ಣಿಸಿ, ಅನಂತರ ಅವಕ್ಕೆ ಸರಿಹೊಂದು ವಂತೆ ಕನ್ನಡದಲ್ಲಿ ಉದಾಹರಣೆಗಳನ್ನು ಕಂಡುಹಿಡಿಯುವ ಇಲ್ಲವೇ ತಯಾರಿಸಿ ಕೊಳ್ಳುವ ಪ್ರಯತ್ನವನ್ನು ಮಾಡಿರುತ್ತಾರೆ. ಈ ಪದ್ಧತಿ ಕೇಶಿರಾಜನ ಕಾಲ ದಿಂದಲೂ ನಡೆದು ಬಂದಿದೆಯಾದ ಕಾರಣ, ಕನ್ನಡ ವ್ಯಾಕರಣಗಳ ಮಟ್ಟಿಗೆ ಸಮಾಸವೆಂಬುದು ಒಂದು ಅರ್ಥವಾಗದ ಕಗ್ಗಂಟಾಗಿದೆ.
ಕನ್ನಡದಲ್ಲಿ ಬಳಕೆಯಲ್ಲಿರುವ ನಾಮಪದಗಳು ಎಂತಹವು, ಅವುಗಳ ಒಳರಚನೆಗೂ ಮತ್ತು ಅವುಗಳ ಬಳಕೆಗೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು, ‘ಸಮಾಸ’ ಎಂಬ ವ್ಯಾಕರಣ ವಿಧಾನಕ್ಕೆ ಈ ನಾಮಪದಗಳ ರಚನೆಯಲ್ಲಿ ಯಾವ ಸ್ಥಾನವಿದೆ ಎಂಬುದನ್ನು ಪರಿಶೀಲಿಸಿ
59
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ದಾಗ ಮಾತ್ರ ಕನ್ನಡದ ಸಮಾಸವೆಂತಹದು ಎಂಬ ವಿಷಯ ಸ್ಪಷ್ಟವಾದೀತು. ಇಂತಹ ಪರಿಶೀಲನೆಗೆ ಅನುಕೂಲವಾಗುವಂತೆ ಮೊದಲು ಹೆಸರಿಸುವ ಮತ್ತು ವರ್ಣಿಸುವ ವಿಧಾನಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ. ಈ ಎರಡು ರೀತಿಯ ವಿಧಾನಗಳನ್ನು ಬಳಸುವ ನಾಮಪದ ಮತ್ತು ನಾಮಪದಗುಚ್ಛಗಳನ್ನು ಬೇರ್ಪಡಿಸುವ ಬಗೆ ಹೇಗೆ ಎಂಬು ದನ್ನು ಅನಂತರ ತಿಳಿದುಕೊಳ್ಳಬಹುದು.
೩.೨ ಜೋಡುಪದಗಳು ಮತ್ತು ನಾಮಪದಗುಚ್ಛಗಳು
ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನಗಳ ನಡುವಿನ ಮುಖ್ಯ ವ್ಯತ್ಯಾಸವೆಂತಹದು ಎಂಬುದನ್ನು ಹೆಸರಿಸುವ ವಿಧಾನವನ್ನು ಬಳಸುವ ‘ಜೋಡುಪದ’ಗಳಿಗೂ (ಎಂದರೆ ಎರಡು ಅಥವಾ ಜಾಸ್ತಿ ಪದಗಳನ್ನು ‘ಸಮಾಸ’ ವೆಂಬ ವಿಧಾನದ ಮೂಲಕ ಜೋಡಿಸುವುದರ ಮೂಲಕ ತಯಾರಾದ ಪದ ಗಳಿಗೂ) ಮತ್ತು ನಾಮಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವೆಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಕರಿಹಲಗೆ ಎಂಬ ಜೋಡುಪದದೊಂದಿಗೆ ಬಿಳಿಸೀರೆ ಎಂಬ ನಾಮಪದಗುಚ್ಛವನ್ನು ಹೋಲಿಸಿ ನೋಡಬಹುದು.
ಇವೆರಡರ ನಡುವೆ ಬಳಕೆಯಲ್ಲಿ ಬಹಳ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬೇಕು. ಬಿಳಿ ಸೀರೆ ಎಂಬುದರ ಮೂಲಕ ಬೆಳ್ಳಗಿರುವ ಯಾವುದೇ ಸೀರೆಯನ್ನು ಬೇಕಿದ್ದರೂ ಗುರುತಿಸಿ ಹೇಳಲು ಸಾಧ್ಯವಿದೆ. ಆದರೆ ಈ ಸೀರೆ ಬಿಳಿ ಬಣ್ಣದ್ದೇ ಆಗಿರುವುದು ಅವಶ್ಯ. ಕೆಂಪು, ಕಪ್ಪು, ನೀಲಿ, ಹಳದಿ ಮೊದಲಾದ ಬಣ್ಣಗಳಲ್ಲಿರುವ ಸೀರೆಗಳನ್ನು ಈ ಪದಗುಚ್ಛದ ಮೂಲಕ ಗುರುತಿಸಿ ಹೇಳಲು ಸಾಧ್ಯವಾಗದು.
ಇದಲ್ಲದೆ ಬಿಳಿಸೀರೆ ಎಂಬುದು ಗುರುತಿಸುವ ವಸ್ತು ಒಂದು ಸೀರೆಯೇ ಆಗಿರುವುದೂ ಅವಶ್ಯ. ಬಿಳಿ ಬಣ್ಣದಲ್ಲಿರುವ ಬೇರೆ ವಸ್ತುಗಳನ್ನು (ಉದಾ: ಪಂಚೆ, ಟೋಪಿ, ಕಾಗದ ಮೊದಲಾದುವನ್ನು) ಬಿಳಿಸೀರೆ ಎಂಬ ಈ ಪದಗುಚ್ಛದ ಮೂಲಕ ಗುರುತಿಸಿ ಹೇಳಲು ಸಾಧ್ಯವಾಗದು. ಬಿಳಿಸೀರೆ ಎಂಬುದು ಒಂದು ವಿಶಿಷ್ಟವಾದ ಗುಣಧರ್ಮವನ್ನು ಪಡೆದಿರುವ ವಸ್ತುವನ್ನು (ಬಿಳಿಯಾಗಿರುವ ಸೀರೆಯನ್ನು) ವರ್ಣಿಸುತ್ತಿರುವುದೇ ಇದಕ್ಕೆ ಕಾರಣ.
ಕರಿಹಲಗೆ ಎಂಬ ಜೋಡುಪದದ ಬಳಕೆ ಇದರಿಂದ ತೀರ ಭಿನ್ನವಾದುದು. ಅದು ಶಾಲೆಯಲ್ಲಿ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಕಾಣಿಸುವಂತೆ ದೊಡ್ಡ ಅಕ್ಷರಗಳಲ್ಲಿ ಬರೆಯಲು ಬಳಸುವ ಒಂದು ಸಾಧನವನ್ನು ಹೆಸರಿಸುತ್ತದೆ. ಈ ಸಾಧನ ಕಪ್ಪು ಬಣ್ಣದ್ದೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಹಸುರು, ನೀಲಿ ಮೊದಲಾದ ಇತರ ಬಣ್ಣದವೂ ಆಗಿರಬಹುದು. ಎಂದರೆ, ಬಣ್ಣ ತಪ್ಪಿಲ್ಲದಿದ್ದರೂ
60
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಈ ಸಾಧನವನ್ನು ಕರಿದಲಿಗೆ ಎಂಬ ಜೋಡುಪದದ ಮೂಲಕ ಗುರುತಿಸಿ ಹೇಳಲು ಸಾಧ್ಯವಿದೆ.
ಇದಲ್ಲದೆ, ಈ ಸಾಧನದ ರಚನೆಯಲ್ಲಿ ಹಲಗೆಯ ಉಪಯೋಗವಾಗಿರ ಬೇಕೆಂಬ ನಿಯಮವೂ ಇಲ್ಲ. ಅದು ರಟ್ಟಿನದಿರಬಹುದು, ಇಲ್ಲವೇ ಪ್ಲಾಸ್ಟಿಕ್‌ನ ದಿರಬಹುದು. ಗೋಡೆಯ ಒಂದು ಭಾಗಕ್ಕೆ ಬಣ್ಣ ಹಚ್ಚಿ, ಸೀಮೆ ಸುಣ್ಣದಲ್ಲಿ (ಇಲ್ಲವೇ ಇತರ ಬರೆಯುವ ಸಾಧನದಲ್ಲಿ) ಬರೆದುದು ಕಾಣಿಸುವಂತೆ ಮಾಡ ಲಾಗಿದೆಯಾದರೂ ಅದನ್ನು ಕರಿಹಲಗೆ ಎಂಬ ಜೋಡುಪದದ ಸಹಾಯದಿಂದ ಗುರುತಿಸಿ ಹೇಳಲು ಸಾಧ್ಯವಿದೆ.
ಇಂತಹ ಬರೆಯುವ ಸಾಧನವೊಂದನ್ನು ಬಿಟ್ಟು ಬೇರೆ ವಸ್ತುಗಳು ಕಪ್ಪು ಬಣ್ಣದವಾಗಿದ್ದು, ಹಲಗೆಯಿಂದ ರಚಿತವಾಗಿವೆಯಾದರೂ ಅವನ್ನು ಕರಿಹಲಗೆ ಎಂಬ ಈ ಜೋಡುಪದದ ಮೂಲಕ ಗುರುತಿಸಲು ಸಾಧ್ಯವಾಗದು. ಅಂತಹ ವಸ್ತುಗಳನ್ನು ಗುರುತಿಸಲು ಕಪ್ಪುಹಲಗೆ ಎಂಬ ಬೇರೆಯೇ ಒಂದು ನಾಮಪದ ಗುಚ್ಛವನ್ನು ಬಳಸಬೇಕಾದೀತು.
ಕರಿಹಲಗೆ ಎಂಬ ಪದ ಒಂದು ವಿಶಿಷ್ಟವಾದ ವಸ್ತುವನ್ನು ಹೆಸರಿಸುತ್ತಿದ್ದು, ಆ ಪದಕ್ಕೂ ಮತ್ತು ಅದು ಹೆಸರಿಸುವ ವಸ್ತುವಿಗೂ ನಡುವೆ ರೂಢಿಮೂಲವಾದ ಒಂದು ಸಂಬಂಧವೇರ್ಪಟ್ಟಿದೆಯಲ್ಲದೆ ಅದು ಆ ವಸ್ತುವನ್ನು ವರ್ಣಿಸುತ್ತಿಲ್ಲ ಎಂಬುದೇ ಆ ಜೋಡುಪದದ ಅಂಗಗಳಾಗಿರುವ ಕರಿ ಮತ್ತು ಹಲಗೆ ಎಂಬ ಪದಗಳಿಗೂ ಮತ್ತು ಅದು ಹೆಸರಿಸುವ ವಸ್ತುವಿಗೂ ನಡುವೆ ನೇರವಾದ ಸಂಬಂಧವಿಲ್ಲ ಎಂಬುದಕ್ಕೆ ಮುಖ್ಯ ಕಾರಣ.
ಹೆಸರಿಸುವ ವಿಧಾನವನ್ನು ಬಳಸುವ ಜೋಡುಪದಕ್ಕೂ ಮತ್ತು ವರ್ಣಿಸುವ ವಿಧಾನವನ್ನು ಬಳಸುವ ನಾಮಪದಗುಚ್ಛಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಇನ್ನೊಂದು ಉದಾಹರಣೆಗೆ ಮೂಲಕ ಇನ್ನಷ್ಟು ಸ್ಪಷ್ಟವಾಗುವಂತೆ ಮಾಡ ಬಹುದು. ಚಿಕ್ಕಮ್ಮ ಎಂಬುದು ಒಂದು ಜೋಡುಪದ. ಅದು ಹೆಸರಿಸುವ ವಿಧಾನದ ಮೂಲಕ ಒಂದು ವಿಶಿಷ್ಟವಾದ ಸಂಬಂಧವನ್ನು (ಮತ್ತು ಆ ಸಂಬಂಧದಲ್ಲಿರುವ ವ್ಯಕ್ತಿಯನ್ನು) ಗುರುತಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಿಕ್ಕ ಹುಡುಗಿ ಎಂಬುದು ಒಂದು ನಾಮಪದಗುಚ್ಛ. ಅದು ವರ್ಣಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ.
ಚಿಕ್ಕಮ್ಮ ಎಂಬ ಜೋಡುಪದದ ಅಂಗಗಳಾಗಿರುವ ಚಿಕ್ಕ ಮತ್ತು ಅಮ್ಮ ಎಂಬ ಎರಡು ಪದಗಳು ಅದು ಗುರುತಿಸುವ ಸಂಬಂಧ ಎಂತಹದು ಎಂಬುದನ್ನು ಸೂಚಿಸುತ್ತವೆಯೇನೋ ನಿಜ; ಆದರೆ, ಚಿಕ್ಕಮ್ಮ ಎಂಬ ಪದದ ಅರ್ಥವನ್ನು ನೇರವಾಗಿ ಈ ଅଙ୍ଗಗಳ ಅರ್ಥದಿಂದ ಸಾಧಿಸಲು ಸಾಧ್ಯವಾಗದು. ಯಾಕೆಂದರೆ, ಒಬ್ಬ ವ್ಯಕ್ತಿಯ ಚಿಕ್ಕಮ್ಮ ವಯಸ್ಸಿನಲ್ಲಿ ಆತನ ತಾಯಿಗಿಂತ ದೊಡ್ಡವಳಾಗಿರಲು ಸಾಧ್ಯವಿದೆ. (ಆಕೆ ಚಿಕ್ಕಪ್ಪನ ಮಡದಿಯಾಗಿದ್ದರೆ ಸಾಕು). ಅಷ್ಟೇ ಅಲ್ಲ, ಒಬ್ಬ
61
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವ್ಯಕ್ತಿಯ ಚಿಕ್ಕಮ್ಮ ಆ ವ್ಯಕ್ತಿಗಿಂತ ಚಿಕ್ಕವಳಾಗಿಯೂ ಇರಲು ಸಾಧ್ಯವಿದೆ. (ಆತನ ಅಮ್ಮ ಹೀಗಿರಲು ಸಾಧ್ಯವಿಲ್ಲ ತಾನೇ!).
ಇದಲ್ಲದೆ, ಚಿಕ್ಕ ಎಂಬ ಪದಕ್ಕಿರುವ ಇತರ ಅರ್ಥಗಳೂ ಈ ಜೋಡು ಪದದ ಅರ್ಥವನ್ನು ಸಾಧಿಸುವಲ್ಲಿ ಸಹಾಯಕವಾಗಲಾರವು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯ ಚಿಕ್ಕಮ್ಮ ಆತನ ಅಮ್ಮನಿಗಿಂತ ಗಾತ್ರದಲ್ಲಿ ಚಿಕ್ಕವಳಾಗಿರ ಬೇಕೆಂದೇನಿಲ್ಲ.
ಚಿಕ್ಕಮ್ಮ ಎಂಬ ಪದ ಒಂದು ವಿಶಿಷ್ಟವಾದ ಸಂಬಂಧವನ್ನು ಹೆಸರಿಸುತ್ತಿದ್ದು, ಅದನ್ನು ಆ ಸಂಬಂಧದೊಂದಿಗೆ ಜೋಡಿಸುವುದು ಬರಿಯ ರೂಢಿಯಲ್ಲದೆ ಬೇರೇ ನಲ್ಲ ಎಂಬುದೇ ಅದರ ಅರ್ಥದಲ್ಲಿ ಕಾಣಿಸುವ ಈ ವೈಶಿಷ್ಟ್ಯಗಳಿಗೆ ಕಾರಣ.
ಇದಕ್ಕೆ ವ್ಯತಿರಿಕ್ತವಾಗಿ, ಚಿಕ್ಕ ಹುಡುಗಿ ಎಂಬ ನಾಮಪದಗುಚ್ಛದ ಅರ್ಥವನ್ನು ನೇರವಾಗಿ ಅದರ ಅಂಗಗಳಾಗಿ ಬಂದಿರುವ ಚಿಕ್ಕ ಮತ್ತು ಹುಡುಗಿ ಎಂಬ ಪದಗಳ ಸಹಾಯದಿಂದ ಪಡೆಯಲು ಸಾಧ್ಯವಿದೆ. ಈ ಎರಡು ಪದಗಳು ಒಟ್ಟಾಗಿ ಕೊಡುವ ಅರ್ಥಕ್ಕೆ ವ್ಯತಿರಿಕ್ತವಾಗುವಂತಹ ಅರ್ಥ ಈ ನಾಮಪದ ಗುಚ್ಛಕ್ಕೆ ಬರಲಾರದು. ಚಿಕ್ಕ ಹುಡುಗಿ ಎಂಬುದು ಒಂದು ವಿಶಿಷ್ಟವಾದ ಗುಣ ಧರ್ಮವನ್ನು ಸೂಚಿಸುತ್ತಿದ್ದು, ಅದು ಆ ಗುಣಧರ್ಮವಿರುವ ವ್ಯಕ್ತಿಯನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸುತ್ತಿರುವುದೇ ಇದಕ್ಕೆ ಕಾರಣ.
ಜೋಡುಪದಗಳು ಮಾತ್ರವಲ್ಲದೆ, ತೆರಿಗೆ, ಕಟ್ಟಡ, ಉಡುಪು, ಮೆಟ್ಟಲು ಮೊದಲಾದ ಪ್ರತ್ಯಯವಿರುವ ನಾಮಪದಗಳೂ ಇದೇ ರೀತಿಯಲ್ಲಿ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಅವುಗಳ ಅರ್ಥವನ್ನು ನೇರವಾಗಿ ಅವುಗಳ ಅಂಗಗಳಾಗಿರುವ ಪದ ಮತ್ತು ಪ್ರತ್ಯಯಗಳ ಸಹಾಯದಿಂದ ಸಾಧಿಸಲು ಸಾಧ್ಯವಾಗದು. ಅವಕ್ಕೂ ಅವುಗಳ ಅರ್ಥಕ್ಕೂ ನಡುವಿರುವ ಸಂಬಂಧ ರೂಢಿಯಿಂದ ಸಿದ್ದವಾದುದೆಂಬುದೇ ಇದಕ್ಕೆ ಕಾರಣ.
ಇದೇ ರೀತಿಯಲ್ಲಿ ಯಾವ ಒಳರಚನೆಯೂ ಇಲ್ಲದ ಮರ, ಆನೆ, ಗಿಡ, ಗಾಣ ಮೊದಲಾದ ನಾಮಪದಗಳೂ ಹೆಸರಿಸುವ ವಿಧಾನದ ಮೂಲಕವೇ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ. ಅವಕ್ಕೆ ಅವು ಕೊಡುವ ಅರ್ಥ ದೊಂದಿಗೆ ರೂಢಿಯಿಂದ ದೊರೆತ ಸಂಬಂಧವನ್ನು ಮಾತ್ರವೇ ಕಲ್ಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು.
ಉದಾಹರಣೆಗಾಗಿ, ಮರ ಎಂಬ ನಾಮಪದಕ್ಕೆ ಅರ್ಥವನ್ನು ಕೊಡಬಲ್ಲ ಒಳರಚನೆ ಆ ಪದದಲ್ಲಿಲ್ಲ. ಮಕಾರ, ಅಕಾರ, ರಕಾರ ಮತ್ತು ಅಕಾರಗಳು ಸೇರಿ ಅದು ಸಿದ್ಧವಾಗಿದೆಯಾದರೂ, ಅದರ ರಚನೆಯಲ್ಲಿ ಬರುವ ಈ ವರ್ಣಗಳಿಗೆ ಅಥವಾ ಅವುಗಳ ಬೇರೆ ಬೇರೆ ಸೇರಿಕೆಗಳಿಗೆ (ಮ, ರ, ಮರ್, ಅರ್, ಅರ ಇತ್ಯಾದಿಗಳಿಗೆ) ಮರ ಎಂಬುದರ ಅರ್ಥವನ್ನು ಸಾಧಿಸುವಲ್ಲಿ ಸಹಾಯಕವಾಗು
62
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ವಂತಹ ಸ್ವತಂತ್ರವಾದ ಅಸ್ತಿತ್ವವಿಲ್ಲ. ಹಾಗಾಗಿ ಮರ ಎಂಬ ನಾಮಪದಕ್ಕೆ ಒಳ ರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯವಾಗದು.
ಪ್ರತ್ಯಯವಿರುವ ನಾಮಪದಗಳು ಈ ರೀತಿಯವಲ್ಲವೇನೋ ನಿಜ. ಯಾವು ದಾದರೊಂದು ಪದಕ್ಕೆ ಒಂದೋ ಎರಡೋ ಪ್ರತ್ಯಯಗಳನ್ನು ಸೇರಿಸಿ ಅವನ್ನು ತಯಾರಿಸಲಾಗಿದೆ. ಅವುಗಳ ರಚನೆಯಲ್ಲಿ ಬರುವ ಪದಗಳಿಗೆ ಮತ್ತು ಪ್ರತ್ಯಯ ಗಳಿಗೆ ಅರ್ಥ ಹೇಳಲು ಸಾಧ್ಯವಿದ್ದು, ಈ ಅರ್ಥದ ಆಧಾರದ ಮೇಲೆ ಅವಕ್ಕೂ ಅರ್ಥವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಆದರೆ ನಿಜಕ್ಕೂ ಅವುಗಳ ಬಳಕೆ ಈ ರೀತಿ ಅವುಗಳ ಒಳರಚನೆಯಿಂದ ದೊರೆಯುವ ಅರ್ಥದ ಮೇಲೆ ಅವಲಂಬಿಸಿರು ವುದಿಲ್ಲ. ಜೋಡುಪದಗಳ ಬಳಕೆಯ ಹಾಗೆ ಅವುಗಳ ಬಳಕೆಯೂ ಅವಕ್ಕೂ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದುವಕ್ಕೂ ನಡುವೆ ರೂಢಿಯಲ್ಲಿರುವ ಸಂಬಂಧದ ಮೇಲೆ ಮಾತ್ರವೇ ಅವಲಂಬಿಸಿರುತ್ತದೆ.
ಉದಾಹರಣೆಗಾಗಿ ನಡತೆ ಎಂಬ ನಾಮಪದದ ಬಳಕೆಯನ್ನು ಪರಿಶೀಲಿಸ ಬಹುದು. ಈ ನಾಮಪದವನ್ನು ನಡೆ ಎಂಬ ಕ್ರಿಯಾಪದಕ್ಕೆ ತೆಂಬ ಪ್ರತ್ಯಯ ವನ್ನು ಸೇರಿಸಿ ರಚಿಸಲಾಗಿದೆ. ಆದರೆ ಈ ನಾಮಪದಕ್ಕೆ ಅರ್ಥ ಹೇಳಲು ಅದರ ಒಳರಚನೆಯನ್ನು ಮಾತ್ರವೇ ಪರಿಶೀಲಿಸಿದರೆ ಸಾಕಾಗದು. ನಡತೆ ಎಂಬ ಪದ ಒಬ್ಬ ವ್ಯಕ್ತಿ ಹೇಗೆ ನಡೆಯುತ್ತಾನೆ ಎಂಬುದನ್ನು ತಿಳಿಸುವುದಕ್ಕಿಂತಲೂ ಅವನು ಬೇರೆ ಬೇರೆ ರೀತಿಯ ಕೆಲಸಗಳನ್ನು ಹೇಗೆ ಮಾಡುತ್ತಾನೆ, ಬೇರೆ ಬೇರೆ ಸಂದರ್ಭ ಗಳಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ತಿಳಿಸುತ್ತದೆ. ಎಂದರೆ, ಈ ಪ್ರತ್ಯಯ ವಿರುವ ನಾಮಪದದ ಅರ್ಥ ಹೇಳಲು ಅದಕ್ಕೆ ಎಂತಹ ಬಳಕೆ ರೂಢಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.
ಪ್ರತ್ಯಯವಿರುವ ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸುವುವಲ್ಲದೆ ವರ್ಣಿಸುವ ವಿಧಾನದ ಮೂಲಕ ಗುರುತಿಸುವುದಿಲ್ಲ ಎಂಬುದೇ ಅವುಗಳ ಬಳಕೆಯಲ್ಲಿ ಮತ್ತು ಅರ್ಥದಲ್ಲಿ ಕಾಣಿಸುವ ಈ ವೈಶಿಷ್ಟ್ಯಗಳಿಗೆ ಮೂಲ ಕಾರಣ.
೩.೩ ವ್ಯತ್ಯಾಸಗಳು
ಮೇಲೆಯೇ ಸೂಚಿಸಿರುವಂತೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವು ದಕ್ಕಾಗಿ ಹೆಸರಿಸುವ ವಿಧಾನವನ್ನು ಬಳಸುವ ನಾಮಪದಗಳಿಗೂ ಮತ್ತು ವರ್ಣಿಸುವ ವಿಧಾನವನ್ನು ಬಳಸುವ ನಾಮಪದಗುಚ್ಛಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ. ಅವುಗಳಿಗೆ ಅರ್ಥ ಹೇಳುವ ಕ್ರಮದಲ್ಲಿ, ವಾಕ್ಯಗಳಲ್ಲಿ ಬಳಸ ಬೇಕಾದಾಗ ಅವನ್ನು ಆಯ್ದುಕೊಳ್ಳುವ ಕ್ರಮದಲ್ಲಿ, ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳ ಸ್ವರೂಪದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇವೆಲ್ಲವಕ್ಕೂ ಅವು ಬಳಸುವ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು
63
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವಿಧಾನಗಳ ನಡುವಿರುವ ವ್ಯತ್ಯಾಸಗಳೇ ಮೂಲಕಾರಣವೆಂಬುದನ್ನು ಈ ವ್ಯತ್ಯಾಸ ಗಳ ಪರಿಶೀಲನೆಯಿಂದ ತಿಳಿಯಬಹುದು.
೩.೩.೧ ತಯಾರಿಕೆ ಮತ್ತು ಬಳಕೆ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವೆ ಅವುಗಳ ತಯಾರಿಕೆ ಮತ್ತು ಬಳಕೆಗಳಲ್ಲಿ ವ್ಯತ್ಯಾಸವಿದೆ. ಹೆಸರಿಸುವ ನಾಮಪದಗಳಲ್ಲಿ ಪ್ರತಿಯೊಂದನ್ನೂ ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳ ಅವಶ್ಯಕತೆ ತೋರಿಬಂದಾಗ ಭಾಷೆಯನ್ನು ಬಳಸುವ ಒಬ್ಬ ವ್ಯಕ್ತಿ ತಯಾರಿಸಿರು ತಾನೆ ಇಲ್ಲವೇ ಬೇರೆ ಭಾಷೆಯಿಂದ ಎರವಲಾಗಿ ಪಡೆದಿರುತ್ತಾನೆ. ಅನಂತರ ಸಮಾಜದ ಮನ್ನಣೆ ಪಡೆದು, ಇಂತಹ ಪದಗಳೆಲ್ಲವೂ ಒಂದೊಂದಾಗಿ ಭಾಷೆಯಲ್ಲಿ ಬಳಕೆಗೆ ಬಂದಿರುತ್ತವೆ. ಇದಕ್ಕೆ ವಿರುದ್ಧವಾಗಿ, ವರ್ಣಿಸುವ ನಾಮಪದಗುಚ್ಛಗಳು ಅವನ್ನು ಬಳಸಬೇಕಾಗಿರುವ ಪ್ರತಿಯೊಂದು ಸಂದರ್ಭ ದಲ್ಲೂ ವ್ಯಾಕರಣ ನಿಯಮಗಳಿಗನುಸಾರವಾಗಿ ಪುನಃ ಪುನಃ ರಚಿತವಾಗುತ್ತವೆ.
ಉದಾಹರಣೆಗಾಗಿ ಉಗಿಬಂಡಿ ಎಂಬ ಹೆಸರಿಸುವ ನಾಮಪದವನ್ನು ಪರಿ ಶೀಲಿಸಬಹುದು. ಅದು ಹೆಸರಿಸುವ ಸಾಧನ ನಮ್ಮ ಗಮನಕ್ಕೆ ಇಲ್ಲವೇ ಉಪ ಯೋಗಕ್ಕೆ ಬಂದಾಗ ಅದನ್ನು ಹೆಸರಿಸುವುದಕ್ಕಾಗಿ ಯಾರೋ ಒಬ್ಬರು ಆ ಪದವನ್ನು ರಚಿಸಿರಬೇಕು. ಮತ್ತು ಅನಂತರ ಇತರರೂ ಆ ಪದ ಸರಿಯಾದು ದೆಂದು ಅದನ್ನು ಬಳಸತೊಡಗಿದುದರಿಂದ ಅದು ನಮ್ಮ ಭಾಷೆಯಲ್ಲಿ ಬಳಕೆಗೆ ಬಂದಿರಬೇಕು. ಇದಕ್ಕೆ ಬದಲಾಗಿ, ಬಸ್ಸು ಎಂಬ ಪದ ಸೂಚಿಸುವ ಇಂತಹದೇ ಇನ್ನೊಂದು ಸಾಧನವನ್ನು ನಾವು ಬಳಸತೊಡಗಿದಾಗ ಅದನ್ನು ಹೆಸರಿಸಲು ಇಂಗ್ಲಿಷ್ ಭಾಷೆಯಿಂದ ಪದವೊಂದನ್ನು ಎರವಲಾಗಿ ಪಡೆದಿದ್ದು, ಆ ಪದವೇ ರೂಡಿಗೆ ಬಂದಿರಬೇಕು. ಇಂತಹ ಹೆಸರಿಸುವ ನಾಮಪದಗಳೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ತಯಾರಾಗಿ ಇಲ್ಲವೇ ಎರವಲಾಗಿ ಬೇರೆ ಭಾಷೆಗಳಿಂದ ಬಂದು ನಮ್ಮ ಭಾಷೆಯಲ್ಲಿ ರೂಢಿಯಾಗಿರುವ ಪದಗಳು.
ವರ್ಣಿಸುವ ನಾಮಪದಗುಚ್ಛಗಳ ಬಳಕೆ ಈ ರೀತಿಯದಲ್ಲ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸಬೇಕಾದಾಗ, ಅವುಗಳಲ್ಲಿ ಕಾಣಿಸುವ ಇಲ್ಲವೇ ಬೇರೆ ರೀತಿಯಲ್ಲಿ ನಮ್ಮ ಗೋಚರಕ್ಕೆ ಬರುವ ಗುಣಧರ್ಮಗಳ ಲ್ಲೊಂದನ್ನು ಆರಿಸಿ, ಅದರ ಮೂಲಕ ಆ ವ್ಯಕ್ತಿ ಇಲ್ಲವೇ ವಸ್ತುವನ್ನು ವರ್ಣಿಸಿ ಹೇಳಲು ನಾಮಪದಗುಚ್ಛವೊಂದನ್ನು ರಚಿಸಿಕೊಳ್ಳುತ್ತೇವೆ.
ಉದಾಹರಣೆಗಾಗಿ ಮೇಜಿನ ಮೇಲೆ ಮೂರು ನಾಲ್ಕು ಚೆಂಡುಗಳಿದ್ದು ಅವಲ್ಲೊಂದನ್ನು ಗುರುತಿಸಿ ಹೇಳಲು (ಎಂದರೆ ಇತರ ಚೆಂಡುಗಳಿಂದ ಅದನ್ನು ಪ್ರತ್ಯೇಕಿಸಿ ಹೇಳಲು) ಆ ಚೆಂಡಿನಲ್ಲಿ ಕಾಣಿಸುವ ಮತ್ತು ಇತರ ಚೆಂಡುಗಳಲ್ಲಿ ಕಾಣಿಸದಿರುವ ಗುಣಧರ್ಮವೊಂದನ್ನು ಆರಿಸಿಕೊಳ್ಳುತ್ತೇವೆ, ಮತ್ತು ಅದನ್ನು ಸೂಚಿಸುವಂತಹ ಪದಗುಚ್ಛವೊಂದನ್ನು ರಚಿಸಿಕೊಳ್ಳುತ್ತೇವೆ. ಈ ರೀತಿ, ಸಂದರ್ಭ
64
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಕ್ಕನುಸಾರವಾಗಿ, ಕೆಂಪು ಚೆಂಡು, ದೊಡ್ಡ ಚೆಂಡು, ಒಡೆದ ಚೆಂಡು ಮೊದಲಾದ ಪದಗುಚ್ಛಗಳಲ್ಲೊಂದನ್ನು ರಚಿಸಿ, ಅದು ಆ ಗುಣಧರ್ಮವನ್ನು ವರ್ಣಿಸುವುದರ ಮೂಲಕ ನಾವು ಗುರುತಿಸಬೇಕಾಗಿರುವ ಚೆಂಡನ್ನು ಗುರುತಿಸು ವಂತೆ ಮಾಡುತ್ತೇವೆ.
೩.೩.೨ ಗುಣಧರ್ಮದ ಆಯ್ಕೆ
ಮೇಲೆ ಸೂಚಿಸಿರುವ ವ್ಯತ್ಯಾಸದ ಫಲವೇನೆಂದರೆ, ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭದಲ್ಲಿ ಅವು ಗುರುತಿಸ ಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂದಿಲ್ಲ. ಆದರೆ, ವರ್ಣಿಸುವ ನಾಮಪದ ಗುಚ್ಛಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭಗಳಲ್ಲೆಲ್ಲ ಅವಶ್ಯವಾಗಿಯೂ ಅವು ಗುರುತಿಸಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂಬ ನಿಯಮವಿದೆ. ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಆ ಹೆಸರನ್ನು ಉತ್ಪಾದಿಸುವ ಸಮಯದಲ್ಲಿ ಮಾತ್ರವೇ ಅವು ಗುರುತಿಸುವ ವಸ್ತು ವಿನಲ್ಲಿ ಇದ್ದಿರಲು ಸಾಧ್ಯವಿದೆ.
ಉದಾಹರಣೆಗಾಗಿ, ಹೊಸಮನೆ ಎಂಬ ನಾಮಪದ ಒಂದು ವಠಾರದಲ್ಲಿ ಇರುವ ಒಂದು ಮನೆಗೆ ಆ ವಠಾರದವರು ಕೊಟ್ಟಿರುವ ಮತ್ತು ಅನಂತರ ರೂಢಿಗೆ ಬಂದಿರುವ ಹೆಸರಾಗಿರಲು ಸಾಧ್ಯವಿದೆ. ಆ ಮನೆ ಹಳೆಯದಾದ ಮೇಲೂ ಅದನ್ನು ಅದೇ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ, ಮತ್ತು ಬೇರೆ ಹಲವಾರು ಹೊಸ ಹೊಸ ಮನೆಗಳನ್ನು ಅದರ ಸುತ್ತ ಮುತ್ತ ಕಟ್ಟಲಾಗಿದೆಯಾದರೂ, ಆ ಹಳೆಯದಾಗಿರುವ ಮನೆಯನ್ನೇ ಹೊಸಮನೆಯೆಂಬ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ.
ಮೇಲೆ ಕೊಟ್ಟಿರುವ ಕರಿಹಲಗೆಯೆಂಬ ಪದದ ಬಳಕೆಯೂ ಇದೇ ರೀತಿ ಯದು. ಆ ಪದವನ್ನು ಮೊದಲ ಬಾರಿಗೆ ತಯಾರಿಸಿ, ಬಳಸಿದ ಸಮಯದಲ್ಲಿ ಉಪಾಧ್ಯಾಯರು ಕ್ಲಾಸಿನಲ್ಲಿ ಬರೆಯಲು ಬಳಸುತ್ತಿದ್ದ ಸಾಧನ ಹಲಗೆಗೆ ಕಪ್ಪು ಬಣ್ಣ ಬಳಿಯುವುದರ ಮೂಲಕ ರಚಿತವಾಗಿದ್ದುದಾಗಿರಬೇಕು. ಹಾಗಾಗಿ, ಕರಿಹಲಗೆ ಎಂಬ ಹೆಸರು ಆವತ್ತಿನ ಕಾಲದಲ್ಲಿ ಸರಿಯಾಗಿಯೇ ಆ ಸಾಧನದ ಗುಣಧರ್ಮವೊಂದನ್ನು ಸೂಚಿಸುತ್ತಿತ್ತು. ಆದರೆ, ಅನಂತರ ಬೇರೆ ಬೇರೆ ಬಣ್ಣದ ಮತ್ತು ಬೇರೆ ಬೇರೆ ದ್ರವ್ಯಗಳಿಂದ ಮಾಡಿದ ಸಾಧನಗಳು ಆ ಕಾರ್ಯಕ್ಕಾಗಿ ಬಳಕೆಗೆ ಬಂದಿವೆಯಾದರೂ ಕರಿಹಲಗೆ ಎಂಬ ಆ ಸಾಧನದ ಹೆಸರು ಬದಲಾಗದೆ ಹಾಗೆಯೇ ರೂಢಿಯಲ್ಲಿ ಉಳಿದಿದೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗಳಿಗೂ ನಡುವೆ ಅವು ಸೂಚಿಸಬೇಕಾಗಿರುವ ಗುಣಧರ್ಮವನ್ನು ಆಯ್ದುಕೊಳ್ಳುವ ಕ್ರಮದಲ್ಲಿ ವ್ಯತ್ಯಾಸವಿದೆ. ಹೆಸರುಗಳು ಸೂಚಿಸುವ ಗುಣಧರ್ಮ ಆ ಪದಗಳನ್ನು ತಯಾರಿಸುವ ಸಮಯದಲ್ಲಿ ಆಯ್ಕೆ
65
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗೊಳ್ಳುತ್ತದೆ, ಆದರೆ ವರ್ಣನೆಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭಗಳಲ್ಲೆಲ್ಲ ಪ್ರತಿಯೊಂದು ಬಾರಿಯೂ ಪುನಃ ಪುನಃ ಆಯ್ಕೆಗೊಳ ಗಾಗುತ್ತಿರುತ್ತದೆ. ಈ ಕಾರಣದಿಂದಾಗಿ, ಹೆಸರನ್ನು ಬಳಸುವ ಸಂದರ್ಭಗಳಲ್ಲಿ ವರ್ಣನೆಗಳನ್ನು ಬಳಸುವಾಗ ಇರುವ ಹಾಗೆ ಅವು ಸೂಚಿಸುವ ಗುಣಧರ್ಮ ಜನರ ಮನಸ್ಸಿನಲ್ಲಿ ಇರುವುದಿಲ್ಲ.
ಉದಾಹರಣೆಗಾಗಿ, ಕರಿಹಲಗೆ ಎಂಬ ಪದವನ್ನು ಪ್ರಯೋಗಿಸಿದಾಗ, ಒಂದು ವಿಶಿಷ್ಟವಾದ ಸಾಧನ ನಮ್ಮ ಮನಸ್ಸಿಗೆ ಬರುವುದಲ್ಲದೆ, ‘ಕಪ್ಪು ಬಣ್ಣ’ ಇಲ್ಲವೇ ‘ಹಲಗೆಯಿಂದ ರಚಿತವಾದ ಸಾಧನ’ ಎಂಬ ಅಂಶಗಳು ನಮ್ಮ ಮನಸ್ಸಿಗೆ ಬರುವುದಿಲ್ಲ. ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಮಾತ್ರ ಇವು ನಮ್ಮ ಗಮನಕ್ಕೆ ಬಂದು, ಇಲ್ಲವೇ ಯಾರಾದರೂ ಇವನ್ನು ನಮ್ಮ ಗಮನಕ್ಕೆ ತಂದು, ಅಂತಹ ಸಮಯದಲ್ಲಿ ಆ ಹೆಸರಿಗೂ ಮತ್ತು ಅದು ಗುರುತಿಸುವ ವಸ್ತುವಿಗೂ ನಡುವೆ ಗುಣಧರ್ಮದ ಮಟ್ಟಿಗೆ ಅಸಾಂಗತ್ಯವಿದೆಯೆಂಬ ವಿಷಯ ನಮ್ಮ ಗಮನಕ್ಕೆ ಬರುತ್ತದೆ.
ಗುಣಧರ್ಮದ ಆಯ್ಕೆಯಲ್ಲಿ ಹೆಸರುಗಳಿಗೂ ಮತ್ತು ವರ್ಣನೆಗಳಿಗೂ ನಡುವೆ ಇನ್ನೊಂದು ವ್ಯತ್ಯಾಸವಿದೆ. ಒಂದು ವಸ್ತುವನ್ನು ಹೆಸರಿಸುವಾಗ, ಅದರಲ್ಲಿ ಕಾಣಿಸುವ ಹಲವಾರು ಗುಣಧರ್ಮಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಜಿಲಿಜನಕ ಎಂಬುದು ಒಂದು ವಿಶಿಷ್ಟವಾದ ಅನಿಲದ ಹೆಸರು. ಇದು ನೀರಿನ ಒಂದು ಘಟಕವಾಗಿದ್ದು, ಆಮ್ಲಜನಕವೆಂಬ ಇನ್ನೊಂದು ಅನಿಲದೊಡನೆ ಸೇರಿ ನೀರನ್ನುಂಟುಮಾಡುವ ಗುಣಧರ್ಮ ಇದಕ್ಕಿದೆ. ಈ ಗುಣ ಧರ್ಮದ ಆಧಾರದ ಮೇಲೆ ಇದನ್ನು ಜಿಲಿಜನಕ ಎಂಬ ಹೆಸರಿನಿಂದ ಕರೆಯಲಾಗಿದೆ.
ಈ ಒಂದು ಗುಣಧರ್ಮ ಮಾತ್ರವಲ್ಲದೆ ಬೇರೆಯೂ ಹಲಕೆಲವು ಗುಣ ಧರ್ಮಗಳು ಜಲಿಜನಕವೆಂಬ ಈ ಅನಿಲಕ್ಕಿವೆ. ಉದಾಹರಣೆಗಾಗಿ, ಇದು ಅತ್ಯಂತ ಹಗುರವಾದ, ಬಣ್ಣವೂ ವಾಸನೆಯೂ ಇಲ್ಲದ, ಕಣ್ಣಿಗೆ ಕಾಣಿಸದ ಒಂದು ಮೂಲ ಧಾತು. ಇದನ್ನು ಹೆಸರಿಸಲು ಈ ಗುಣಧರ್ಮಗಳಲ್ಲಿ ಯಾವು ದನ್ನು ಬೇಕಿದ್ದರೂ ಆರಿಸಿಕೊಳ್ಳಬಹುದಿತ್ತು. ಆದರೆ ನೀರಿನ ಘಟಕವೆಂಬ ಅಂಶ ಮುಖ್ಯವಾಗಿ ತೋರಿದ ಕಾರಣ, ಅದನ್ನೇ ಆ ಹೆಸರನ್ನು ತಯಾರಿಸುವವರು ಆರಿಸಿಕೊಂಡಿರಬೇಕು. ಸಾಮಾನ್ಯವಾಗಿ ಕಣ್ಣಿಗೆ ಅಥವಾ ಮನಸ್ಸಿಗೆ ಎದ್ದು ಕಾಣಿಸು ವಂತಹ ಮತ್ತು ಶಾಶ್ವತವಾಗಿ ಉಳಿಯಬಹುದೆಂದು ಮನಸ್ಸಿಗೆ ಅನಿಸುವಂತಹ ಗುಣಧರ್ಮವನ್ನು ವಸ್ತುವೊಂದಕ್ಕೆ ಹೆಸರಿಡುವಾಗ ಆರಿಸಿಕೊಳ್ಳುವುದು ರೂಢಿ.
ಹೆಸರಿಸುವ ನಾಮಪದಗಳ ಉತ್ಪಾದನೆಯಲ್ಲಿ ಕಾಣಿಸುವ ಈ ಆಯ್ಕೆಯೆಂಬ ಅಂಶ ವರ್ಣಿಸುವ ನಾಮಪದಗುಚ್ಛಗಳ ಉತ್ಪಾದನೆ ಇಲ್ಲವೇ ಬಳಕೆಯಲ್ಲಿ ಕಾಣಿಸುವುದಿಲ್ಲ. ಒಂದು ವಸ್ತುವಿನಲ್ಲಿ ಎಷ್ಟೆಲ್ಲಾ ಗುಣಧರ್ಮಗಳಿವೆಯೋ ಅವೆಲ್ಲವನ್ನೂ ಬೇರೆ ಬೇರೆ ವರ್ಣಿಸುವ ಪದಗುಚ್ಛಗಳ ಮೂಲಕ ಸೂಚಿಸಲು
66
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಸಾಧ್ಯವಿದೆ. ಈ ಗುಣಧರ್ಮಗಳು ಶಾಶ್ವತವಿರಬಹುದು, ಇಲ್ಲವೇ ಕ್ಷಣಿಕವಿರ ಬಹುದು; ಕಣ್ಣಿಗೆ ಎದ್ದು ಕಾಣಿಸುವಂತಹವಿರಬಹುದು, ಇಲ್ಲವೇ ಅಸ್ಪಷ್ಟವಾದು ವಾಗಿರಲೂಬಹುದು.
ಇದಲ್ಲದೆ, ಹೆಸರಿಸುವುದಕ್ಕಾಗಿ ಗುಣಧರ್ಮವೊಂದನ್ನು ಆರಿಸುವಾಗ, ಹೆಸರಿಸಬೇಕಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಅಂತಹವೇ ಇತರ ವ್ಯಕ್ತಿ, ವಸ್ತು ಮೊದಲಾದವುಗಳಿಗಿಂತ ಭಿನ್ನವಾದವುಗಳೆಂಬುದನ್ನು ತೋರಿಸ ಬಲ್ಲಂತಹ ಗುಣಧರ್ಮವನ್ನೇ ಆರಿಸಿಕೊಳ್ಳುವ ಕ್ರಮ ರೂಢಿಯಲ್ಲಿದೆ. ಉದಾ ಹರಣೆಗಾಗಿ, ಯುದ್ಧದಲ್ಲಿ ತೊಡಗಿರುವ ಸೈನಿಕರಲ್ಲಿ ಕಾಲಿನಲ್ಲಿ ಚಲಿಸಿ ಕಾದಾಡುವವರನ್ನು ಹೆಸರಿಸಲು ಕಾಲಾಳು ಎಂಬ ಪದ ರೂಢಿಗೆ ಬಂದಿದೆ. ಈ ಹೆಸರು ಕುದುರೆಯ ಮೇಲೆ ಇಲ್ಲವೇ ಆನೆಯ ಮೇಲೆ ಕುಳಿತು ಕಾದಾಡುವ ಇತರ ಸೈನಿಕರಿಗಿಂತ ಅವರು ಭಿನ್ನರಾಗಿರುವುದನ್ನು ಸೂಚಿಸುತ್ತದೆ. ಬೇರೆ ಸಂದರ್ಭ ಗಳಲ್ಲಿ ಕಾಲಿನಿಂದ ಚಲಿಸುವವರನ್ನು (ಉದಾ: ರಸ್ತೆಯಲ್ಲಿ ಚಲಿಸುವವರನ್ನು) ಕಾಲಾಳು ಎಂಬ ಈ ಪದ ಗುರುತಿಸಲಾರದು. ಅವರು ಸೈಕಲ್, ಸ್ಕೂಟರ್, ಕಾರು ಮೊದಲಾದವುಗಳಲ್ಲಿ ಚಲಿಸುವವರಿಗಿಂತ ಬೇರೆ ಎಂಬುದನ್ನು ಸೂಚಿಸಲು ಪಾದಚಾರಿ ಎಂಬ ಸಂಸ್ಕೃತದಿಂದ ಎರವಲಾಗಿ ಬಂದ ಬೇರೆಯೇ ಒಂದು ಹೆಸರು ರೂಢಿಗೆ ಬಂದಿದೆ.
೩.೩.೩ ಅರ್ಥದಲ್ಲಿ ವ್ಯತ್ಯಾಸ
ವರ್ಣಿಸುವ ನಾಮಪದಗುಚ್ಛಗಳಿಗೆ ಅರ್ಥ ಹೇಳುವುದು ಸುಲಭ. ಅವುಗಳ ಅಂಗ ಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳಿಂದ ಸಿದ್ಧವಾಗುವ ಅರ್ಥವೇ ಅವುಗಳ ಅರ್ಥವೂ ಆಗಿರುವುದರಿಂದ ಈ ಕೆಲಸವನ್ನು ಭಾಷೆಯನ್ನು ಬಳಸು ವವರೆಲ್ಲರೂ ಮಾಡಬಲ್ಲರು. ಉದಾಹರಣೆಗಾಗಿ ಕೆಂಪು ಚೆಂಡು ಎಂಬ ವರ್ಣಿಸುವ ನಾಮಪದಗುಚ್ಛಕ್ಕೆ ಅರ್ಥ ಹೇಳುವುದು ಸುಲಭ. ಕೆಂಪು ಮತ್ತು ಚೆಂಡು ಎಂಬ ಎರಡು ಪದಗಳ ಸೇರಿಕೆಯಿಂದ ಈ ಪದಗುಚ್ಛವನ್ನು ತಯಾರಿಸ ಲಾಗಿದ್ದು, ‘ಕೆಂಪಾಗಿರುವ ಚೆಂಡು’ ಎಂಬುದಾಗಿ ಇದಕ್ಕೆ ಅರ್ಥವನ್ನು ಹೇಳ ಬಹುದು.
ಹೆಸರಿಸುವ ನಾಮಪದಗಳು ಇವಕ್ಕಿಂತ ತೀರ ಭಿನ್ನವಾದವುಗಳು. ಮೇಲೆ ಸೂಚಿಸಿದಂತೆ, ಅವುಗಳ ಅರ್ಥವೇನೆಂಬುದನ್ನು ತಿಳಿಯಲು ಆ ಪದಗಳ ಒಳ ರಚನೆ ಸಹಾಯಕವಾಗಬಲ್ಲುದಾದರೂ ಅದೊಂದೇ ಅವುಗಳ ಅರ್ಥಕ್ಕೆ ಆಧಾರ ವಾಗಲಾರದು. ಹೆಸರಿಸುವ ನಾಮಪದವೊಂದು ಎಂತಹ ವಸ್ತುಗಳನ್ನು ಇಲ್ಲವೇ ವ್ಯಕ್ತಿಗಳನ್ನು ಹೆಸರಿಸುತ್ತದೆ, ಮತ್ತು ಅವುಗಳಲ್ಲಿ ಸಮಾನವಾಗಿರುವ ಗುಣಧರ್ಮ ಗಳು ಯಾವುವು ಎಂಬುದನ್ನು ಪರಿಶೀಲಿಸಿದ ಮೇಲೇನೇ ಆ ಪದಕ್ಕೆ ಸರಿಯಾದ ಅರ್ಥವನ್ನು ಹೇಳಲು ಸಾಧ್ಯವಾದೀತು.
67
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಉದಾಹರಣೆಗಾಗಿ ಹೊಗೆಸೊಪ್ಪು ಎಂಬ ನಾಮಪದವನ್ನು ಪರಿಶೀಲಿಸ ಬಹುದು. ಇದೊಂದು ಹೆಸರಿಸುವ ನಾಮಪದ. ಹೊಗೆ ಮತ್ತು ಸೊಪ್ಪು ಎಂಬ ಎರಡು ಪದಗಳ ಜೋಡಣೆಯಿಂದ ಈ ಪದ ತಯಾರಾಗಿದೆ. ಅದರ ಈ ಒಳರಚನೆ ಅದರ ಅರ್ಥವೇನೆಂಬುದನ್ನು ಸೂಕ್ಷ್ಮವಾಗಿ ತಿಳಿಸಬಲ್ಲುದು, ಆದರೆ ಸ್ಪಷ್ಟವಾಗಿ ತಿಳಿಸಲಾರದು. ಎಲ್ಲಾ ರೀತಿಯ ಎಲೆಗಳನ್ನು ಉರಿಸಿದಾಗಲೂ ಹೊಗೆ ಹೊರಬರುತ್ತದೆ. ಆದರೆ ಅವನ್ನೆಲ್ಲ ನಾವು ಹೊಗೆಸೊಪ್ಪು ಎಂಬ ಹೆಸರಿನಿಂದ ಕರೆಯುವುದಿಲ್ಲ. ಹೊಗೆ ಸೇದುವುದಕ್ಕಾಗಿ ಬೀಡಿ, ಸಿಗರೇಟ್ ಮೊದಲಾದುವನ್ನು ತಯಾರಿಸಲು ಬಳಸುವ, ಮತ್ತು ಹೊಗೆಯನ್ನು ಬರಿಸದೇನೇ ನೇರವಾಗಿ ಬಾಯ ಲ್ಲಿಟ್ಟು ಜಗಿಯುವ, ಇಲ್ಲವೇ ಪುಡಿಮಾಡಿ ನಸ್ಯವಾಗಿ ಬಳಸುವ ಒಂದು ವಿಶಿಷ್ಟ ವಾದ ಗಿಡವನ್ನು ಮತ್ತು ಅದರ ಎಲೆಯನ್ನು ಮಾತ್ರವೇ ಅದು ಗುರುತಿಸುತ್ತದೆ. ಈ ಗಿಡದ ಗುಣಧರ್ಮಗಳನ್ನು ಮಾತ್ರವೇ ಹೊಗೆಸೊಪ್ಪು ಎಂಬ ಪದಕ್ಕೆ ಅರ್ಥ ಹೇಳುವಾಗ ಬಳಸಿಕೊಳ್ಳಲು ಸಾಧ್ಯ.
ಮೇಲೆ ಕೊಟ್ಟಿರುವ ಜಲಜನಕ ಎಂಬ ಪದದ ಅರ್ಥವೂ ಹೀಗೆಯೇ. ‘ನೀರನ್ನುಂಟುಮಾಡುವ ಅನಿಲ’ ಎಂಬುದಾಗಿ ಬರಿಯ ಒಳರಚನೆಯ ಆಧಾರದ ಮೇಲೆ ಅದಕ್ಕೆ ಅರ್ಥ ಕೊಟ್ಟೆವಾದರೆ ಅದು ತಪ್ಪಾದೀತು. ಯಾಕೆಂದರೆ, ಆಮ್ಲ ಜನಕವೆಂಬ ಇನ್ನೊಂದು ಅನಿಲವೂ (ಜಲಜನಕದ ಜತೆ ಸೇರಿ) ನೀರನ್ನುಂಟು ಮಾಡಬಲ್ಲುದು. ಜಲಜನಕವೆಂಬ ಹೆಸರು ರೂಢಿಯಲ್ಲಿ ಯಾವ ಅನಿಲವನ್ನು ಗುರುತಿಸುತ್ತದೆಯೋ ಆ ಅನಿಲದ ಬೇರೆ ಬೇರೆ ಗುಣಧರ್ಮಗಳ ಆಧಾರದ ಮೇಲೆ ಮಾತ್ರವೇ ಆ ಪದದ ಅರ್ಥವನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯ.
ಪ್ರತ್ಯಯವಿರುವ ಪದಗಳು ಹೆಸರಿಸುವ ವಿಧಾನದಲ್ಲಿ ಬಳಕೆಯಾಗುತ್ತಿವೆ ಯಾದರೆ, ಅವಕ್ಕೆ ಅರ್ಥ ಹೇಳಬೇಕಿದ್ದರೂ ನಾವು ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗಾಗಿ, ಅಂಜಿಕೆ, ನಂಬಿಕೆ, ಹೊದಿಕೆ, ಹೇಳಿಕೆ, ಮೊಳಕೆ, ಹಿಡಿಕೆ ಮೊದಲಾದ ನಾಮಪದಗಳು ಇಕೆ ಎಂಬ ಪ್ರತ್ಯಯ ವನ್ನು ಅಂಜು, ನಂಬು, ಹೊದೆ, ಹೇಳು, ಮೊಳೆ, ಹಿಡಿ ಮೊದಲಾದ ಬೇರೆ ಬೇರೆ ಕ್ರಿಯಾಪದಗಳಿಗೆ ಸೇರಿಸುವುದರ ಮೂಲಕ ಸಿದ್ಧವಾಗಿವೆ. ಈ ಎಲ್ಲಾ ಪದಗಳದೂ ಒಳರಚನೆ ಒಂದೇ ರೀತಿಯದಾಗಿದೆಯಾದರೂ ಇವುಗಳಿಗಿರುವ ಅರ್ಥ ಒಂದೇ ರೀತಿಯದಾಗಿಲ್ಲ.
ಈ ಪದಗಳಲ್ಲಿ ಕೆಲವಕ್ಕೆ ಅವುಗಳ ಅಂಗವಾಗಿ ಬರುವ ಕ್ರಿಯಾಪದಕ್ಕೆ ಸಂಬಂಧಿಸಿದಂತಹ ಭಾವಾರ್ಥವಿದೆ (ಉದಾ: ನಂಬಿಕೆ); ಆದರೆ, ಇನ್ನು ಕೆಲವಕ್ಕೆ ಅಂತಹ ಕ್ರಿಯೆಯಲ್ಲಿ ಬಳಸುವ (ಉದಾ: ಹೊದಿಕೆ, ಹಿಡಿಕೆ) ಇಲ್ಲವೇ ಅಂತಹ ಕ್ರಿಯೆಯಿಂದ ದೊರಕುವ (ಉದಾ: ಮೊಳಕೆ) ವಿಶಿಷ್ಟವಾದ ವಸ್ತುಗಳನ್ನು ಗುರುತಿಸುವ ಅರ್ಥವಿದೆ (೪.೩.(೧) ನೋಡಿ). ಹಾಗಾಗಿ, ಜೋಡುಪದಗಳ ಹಾಗೆ ಹೆಸರಿಸುವ ವಿಧಾನವನ್ನು ಬಳಸುವಂತಹ ಪ್ರತ್ಯಯವಿರುವ ಪದಗಳಿಗೂ
68
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಅರ್ಥ ಹೇಳಬೇಕಿದ್ದಲ್ಲಿ, ಭಾಷೆಯಲ್ಲಿ ಅವುಗಳ ಬಳಕೆಯಂತಹದು ಎಂಬುದನ್ನು ತಿಳಿಯುವುದು ಅತ್ಯವಶ್ಯ.
ಈ ಕಾರಣಕ್ಕಾಗಿ, ಹೆಸರಿಸುವ ಪದಗಳ ಸರಿಯಾದ ಅರ್ಥವನ್ನು ಭಾಷಾ ಶಾಸ್ತ್ರಜ್ಞರು ಮಾತ್ರವೇ ನಿರ್ಧರಿಸಿ ಹೇಳಬಲ್ಲರು. ಭಾಷೆಯನ್ನು ಬಳಸುವ ಇತರ ಜನರಿಗೆ ಆ ಅರ್ಥ ತಿಳಿದಿದೆಯಾದರೂ ಅವರ ತಿಳುವಳಿಕೆ ಮಿದುಳಿನಲ್ಲಿ ಅರಿವಿಗೆ ಬಾರದಂತಹ (ಆದರೂ ಪದಗಳ ಪ್ರಯೋಗವನ್ನು ಸರಿಯಾಗಿ ಮಾಡಲು ಸಹಾಯಕವಾಗುವಂತಹ) ಸ್ಥಿತಿಯಲ್ಲಿರುತ್ತದೆ.
ಹೆಸರಿಸುವ ನಾಮಪದಗಳ ಅರ್ಥ ಊರಿನಿಂದ ಊರಿಗೆ ಮತ್ತು ಜಾತಿ ಯಿಂದ ಜಾತಿಗೆ ಬೇರೆ ಬೇರಾಗಿರಲು ಸಾಧ್ಯವಿದೆ. ಕಾಲದಿಂದ ಕಾಲಕ್ಕೂ ಇದು ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. ಆದರೆ ವರ್ಣಿಸುವ ನಾಮಪದಗುಚ್ಛಗಳ ಅರ್ಥ ಈ ರೀತಿ ಊರಿಂದೂರಿಗೆ ವ್ಯತ್ಯಾಸಗೊಳ್ಳುವುದಿಲ್ಲ. ಉದಾಹರಣೆಗಾಗಿ, ಬಿಳಿಸೀರೆ ಎಂಬ ಪದಗುಚ್ಛಕ್ಕೆ ಎಲ್ಲಾ ಊರುಗಳಲ್ಲೂ ‘ಬೆಳ್ಳಗಿನ ಬಣ್ಣವಿರುವ ಸೀರೆ’ ಎಂಬ ಒಂದೇ ಅರ್ಥವಿದೆ. ವರ್ಣಿಸುವ ನಾಮಪದಗುಚ್ಛಗಳ ಅರ್ಥದಲ್ಲಿ ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳು ಕಾಣಿಸಿಕೊಳ್ಳಬೇಕಿದ್ದಲ್ಲಿ ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಹೆಸರಿಸುವ ನಾಮಪದಗಳ ಅರ್ಥದಲ್ಲಿ ಅಂತಹ ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳಿರ ಬೇಕಾಗುತ್ತದೆ.
ಹೆಸರಿಸುವ ನಾಮಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳೆಂದು ಎರಡು ವಿಧವಿದ್ದು, ಇವುಗಳ ನಡುವೆ ಅರ್ಥದಲ್ಲಿ ಕೆಲವು ವ್ಯತ್ಯಾಸಗಳಿವೆ ಯೆಂಬುದನ್ನು ಮುಂದೆ (೩.೫)ರಲ್ಲಿ ನೋಡಲಿರುವೆವು. ಆದರೆ ಈ ಎರಡು ರೀತಿಯ ನಾಮಪದಗಳಿಗೂ ಅರ್ಥ ಹೇಳಲು ಅವು ಎಂತಹ ವ್ಯಕ್ತಿ, ವಸ್ತು, ಮೊದಲಾದುವನ್ನು ಗುರುತಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ.
೩.೩.೪ ಪರಿಮಿತಿಯಲ್ಲಿ ವ್ಯತ್ಯಾಸ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸವೇನೆಂದರೆ, ಭಾಷೆಯೊಂದರಲ್ಲಿ ಬಳಕೆ ಯಲ್ಲಿರುವ ಹೆಸರಿಸುವ ನಾಮಪದಗಳಿಗೆ ಅವುಗಳ ಸಂಖ್ಯೆಯ ಮಟ್ಟಿಗೆ ಒಂದು ಪರಿಮಿತಿಯಿದೆ, ಆದರೆ ವರ್ಣಿಸುವ ನಾಮಪದಗುಚ್ಛಗಳಿಗೆ ಇಂತಹ ಪರಿಮಿತಿ ಯಿಲ್ಲ. ಹೊಸ ಹೊಸ ಸಂದರ್ಭಗಳಲ್ಲಿ ಹೊಸ ಹೊಸ ವರ್ಣನೆಗಳನ್ನು ಮಾತನಾಡುವವನೇ ರಚಿಸಿಕೊಳ್ಳಬೇಕಾಗುವುದಾದ ಕಾರಣ ಒಂದು ಭಾಷೆಯಲ್ಲಿ ವರ್ಣಿಸುವ ನಾಮಪದಗುಚ್ಛಗಳು ಇಷ್ಟೇ ಇವೆಯೆಂಬುದಾಗಿ ಅವುಗಳ ಸಂಖ್ಯೆಯ ಮೇಲೆ ಒಂದು ಪರಿಮಿತಿಯನ್ನಿರಿಸಿ ಹೇಳಲು ಸಾಧ್ಯವಾಗದು.
ಇದಲ್ಲದೆ ಮಾತನಾಡುವವನ ಕಲ್ಪನಾಶಕ್ತಿಯನ್ನನುಸರಿಸಿ, ಹೊಸ ಹೊಸ ರೀತಿಯ ವರ್ಣನೆಗಳನ್ನು ತಯಾರಿಸಿ ಹೇಳಲು ಎಲ್ಲಾ ಭಾಷೆಗಳಲ್ಲೂ
69
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆಸ್ಪದವಿದ್ದೇ ಇರುತ್ತದೆ. ಈ ಕಾರಣಕ್ಕಾಗಿಯೂ ವರ್ಣಿಸುವ ನಾಮಪದಗಳ ಸಂಖ್ಯೆ ಅಪರಿಮಿತವಾದುದೆಂದು ಹೇಳುವ ಅವಶ್ಯಕತೆಯಿದೆ.
ಹೆಸರಿಸುವ ನಾಮಪದಗಳನ್ನೂ ಹೊಸದಾಗಿ ರಚಿಸಿಕೊಳ್ಳಲು ಸಾಧ್ಯವಿದೆ ಯೇನೋ ನಿಜ. ಆದರೆ, ಈ ರೀತಿ ಅವನ್ನು ರಚಿಸಿಕೊಳ್ಳುವುದು ಒಂದು ಭಾಷೆಯಲ್ಲಾಗುವ ಬದಲಾವಣೆಯನ್ನು ಸೂಚಿಸುತ್ತದಲ್ಲದೆ ಅದರ ದಿನನಿತ್ಯದ ಬಳಕೆಯನ್ನಲ್ಲ. ಭಾಷೆಯೊಂದನ್ನು ಬಳಸುತ್ತಿರುವ ಸಮಯದಲ್ಲಿ, ಅದರಲ್ಲಿ ಆಗಲೇ ರಚಿತವಾಗಿ ರೂಢಿಗೆ ಬಂದಿರುವ ನಾಮಪದಗಳನ್ನು ಮಾತ್ರವೇ ಆ ಭಾಷೆಯ ‘ಹೆಸರಿಸುವ ನಾಮಪದ’ಗಳೆಂದು ಪರಿಗಣಿಸಲು ಸಾಧ್ಯ. ಇಂತಹ ನಾಮಪದಗಳ ಸಂಖ್ಯೆಗೆ ಒಂದು ಪರಿಮಿತಿಯಿದೆ. ಬಾಷೆಯನ್ನು ಬಳಸುವವರ ನೆನಪಿನಲ್ಲಿ ಉಳಿಯಬಲ್ಲಷ್ಟು ನಾಮಪದಗಳು ಮಾತ್ರ ಈ ವಿಧಾನದ ಮೂಲಕ ಪ್ರಯುಕ್ತವಾಗಬಲ್ಲುವಾದುದರಿಂದ ಭಾಷೆಯನ್ನು ಬಳಸುವವರ ನೆನಪಿನ ಶಕ್ತಿಯೇ ಈ ಸಂಖ್ಯೆಗೆ ಪರಿಮಿತಿಯನ್ನು ತಂದೊಡ್ಡುತ್ತದೆ.
ಆದರೆ ಇದು ಇಡೀ ಸಮಾಜದ ನೆನಪಿನ ಶಕ್ತಿಯನ್ನವಲಂಬಿಸಿರುತ್ತದಲ್ಲದೆ ಒಬ್ಬ ವ್ಯಕ್ತಿಯ ನೆನಪಿನ ಶಕ್ತಿಯನ್ನಲ್ಲ. ಯಾಕೆಂದರೆ ಈ ನೆನಪಿನ ಶಕ್ತಿ ಒಂದು ಭಾಷೆಯನ್ನು ಬಳಸುವ ಎಲ್ಲಾ ಜನರಲ್ಲೂ ಒಂದೇ ರೀತಿಯದಾಗಿರುವುದಿಲ್ಲ. ಕೆಲವರಿಗೆ ಹೆಚ್ಚು ನೆನಪಿನ ಶಕ್ತಿಯಿರುತ್ತದೆ ಮತ್ತು ಕೆಲವರಿಗೆ ಕಡಿಮೆಯಿರುತ್ತದೆ. ಹಾಗಾಗಿ, ಕೆಲವರಿಗೆ ಜಾಸ್ತಿ ಹೆಸರಿಸುವ ನಾಮಪದಗಳ ಜ್ಞಾನವಿರುತ್ತದೆ, ಮತ್ತು ಕೆಲವರಿಗೆ ಕಡಿಮೆ ಪದಗಳ ಜ್ಞಾನವಿರುತ್ತದೆ. ನೆನಪಿನ ಶಕ್ತಿ ಕಡಿಮೆ ಇರುವವರು ತಮಗೆ ತಿಳಿಯದಿರುವ ಮತ್ತು ಭಾಷೆಯಲ್ಲಿ ಬಳಕೆಯಲ್ಲಿರುವ ನಾಮಪದಗಳನ್ನು ಬೇರಾರಾದರೂ ಬಳಸಿದಾಗ ಅವುಗಳ ಅರ್ಥವೇನೆಂಬುದನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ, ಇಲ್ಲವೇ ಆ ಭಾಷೆಗೆ ಅರ್ಥಕೋಶ, ವಸ್ತು ಕೋಶ ಮೊದಲಾದವುಗಳಿದ್ದಲ್ಲಿ ಅವುಗಳಲ್ಲಿ ನೋಡಿ ತಿಳಿದುಕೊಳ್ಳಬೇಕಾಗುತ್ತದೆ.
ಇದಲ್ಲದೆ, ಬೇರೆ ಬೇರೆ ವ್ಯವಹಾರಗಳಲ್ಲಿರುವ ಜನರಲ್ಲಿ ಬೇರೆ ಬೇರೆ ರೀತಿಯ ಹೆಸರಿಸುವ ನಾಮಪದಗಳು ಬಳಕೆಯಲ್ಲಿದ್ದು, ಈ ವಿಷಯದಲ್ಲೂ ಒಂದೇ ಭಾಷೆಯನ್ನಾಡುವ ಜನರೊಳಗೆ ವ್ಯತ್ಯಾಸ ತೋರಿಬರುತ್ತದೆ. ಉದಾ ಹರಣೆಗಾಗಿ, ಸಮುದ್ರದ ಬದಿಯಲ್ಲಿ ವಾಸಿಸುವ ಮೀನುಗಾರರ ಮಾತಿನಲ್ಲಿ ಮೀನಿಗೆ ಮತ್ತು ಸಮುದ್ರಕ್ಕೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ ಇರುತ್ತವೆ, ಮತ್ತು ಕಾಡಿನಲ್ಲಿ ಬೇಟೆಯಾಡಿ ಬದುಕುವ ಬೇಟೆಗಾರರ ಮಾತಿನಲ್ಲಿ ಕಾಡಿಗೆ ಮತ್ತು ಬೇಟೆಗೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ ಇರುತ್ತವೆ. ಇಂತಹ ವ್ಯತ್ಯಾಸಗಳಾವುವೂ ವರ್ಣಿಸುವ ನಾಮಪದಗುಚ್ಛಗಳಲ್ಲಿ ಕಾಣಿಸುವುದಿಲ್ಲ.
ಬೇರೆ ಬೇರೆ ಶಾಸ್ತ್ರಗಳಿಗೆ ಸಂಬಂಧಿಸಿದಂತಹ ಹೆಸರಿಸುವ ನಾಮಪದಗಳೂ ಬೇರೆ ಬೇರಾಗಿದ್ದು, ಇವನ್ನು ಆಯಾ ಶಾಸ್ತ್ರಗಳನ್ನು ಕಲಿಯುವವರು ನೆನಪಿನಲ್ಲಿ
70
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಇರಿಸಿಕೊಳ್ಳಬೇಕಾಗುತ್ತದೆ. ಇಂತಹ ಹೆಸರಿಸುವ ನಾಮಪದಗಳಿಗೆ ‘ಪಾರಿಭಾಷಿಕ ಪದ’ಗಳೆಂಬ ಹೆಸರಿದೆ. ಈ ಪದಗಳನ್ನು ಅವು ಹೆಸರಿಸುವ ವಸ್ತುಗಳನ್ನು ಕಂಡು ಹಿಡಿದಾಗ ಇಲ್ಲವೇ ತಯಾರಿಸಿದಾಗ ಉತ್ಪಾದಿಸಿ ಬಳಕೆಗೆ ತರಲಾಗಿತ್ತು. ಇಂತಹ ಪದಗಳನ್ನೆಲ್ಲ ಸಂಗ್ರಹಿಸಿ, ಬೇರೆ ಬೇರೆ ಶಾಸ್ತ್ರಗಳಿಗೆ ಬೇರೆ ಬೇರೆ ಪಾರಿಭಾಷಿಕ ಪದಗಳ ‘ಕೋಶ’ಗಳನ್ನು ರಚಿಸಲು ಸಾಧ್ಯವಿದೆಯೆಂಬುದರಿಂದ, ಅಂತಹ ಹೆಸರಿಸುವ ನಾಮಪದಗಳಿಗೂ ಒಂದು ಪರಿಮಿತಿಯಿದೆಯೆಂಬ ವಿಷಯ ಸ್ಪಷ್ಟ ವಾಗುತ್ತದೆ. ಆದರೆ, ಈ ಶಾಸ್ತ್ರಗಳಲ್ಲಿ ಬಳಕೆಯಾಗುವ ವರ್ಣಿಸುವ ನಾಮಪದ ಗುಚ್ಛಗಳಿಗೆ ಇಂತಹ ಪರಿಮಿತಿಯಿಲ್ಲ, ಮತ್ತು ಅವನ್ನು ಅರ್ಥಕೋಶಗಳಲ್ಲಿ ಸಂಗ್ರಹಿಸುವ ಅವಶ್ಯಕತೆಯೂ ಇಲ್ಲ ಸಾಧ್ಯತೆಯೂ ಇಲ್ಲ.
೩.೩.೫ ಬದಲಾವಣೆಯಲ್ಲಿ ವ್ಯತ್ಯಾಸ
ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ನಡೆಯುವ ಬದಲಾವಣೆಗಳು ಅದರಲ್ಲಿ ಬಳಕೆ ಯಾಗುವ ನಾಮಪದಗಳನ್ನೂ ಬಾಧಿಸುತ್ತವೆ. ಆದರೆ ಈ ಬದಲಾವಣೆಗಳು ಎಂತಹವು ಎಂಬ ವಿಷಯದಲ್ಲಿ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿ ಸುವ ನಾಮಪದಗುಚ್ಛಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ. ಈ ವ್ಯತ್ಯಾಸ ಗಳಿಗೂ ಅವುಗಳ ತಯಾರಿಕೆ ಮತ್ತು ಬಳಕೆಗಳ ನಡುವಿರುವ ವ್ಯತ್ಯಾಸಗಳೇ ಕಾರಣ ಎಂಬುದನ್ನು ಗಮನಿಸಬಹುದು.
ಹೆಸರಿಸುವ ನಾಮಪದಗಳಿಗೆ ಅರ್ಥ ಹೇಳಲು ಅವುಗಳ ಒಳರಚನೆ ಮುಖ್ಯವಲ್ಲ. ಅವು ರೂಢಿಯಲ್ಲಿ ಎಂತಹ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಅನ್ವಯಿಸುತ್ತವೆ ಎಂಬುದು ಮುಖ್ಯ ಎಂಬುದನ್ನು ನಾವು ಮೇಲೆಯೇ ನೋಡಿರುವೆವು. ಈ ಕಾರಣಕ್ಕಾಗಿ, ಅವುಗಳ ಒಳರಚನೆಯನ್ನು ಬದಲಾಗದಂತೆ ಉಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇದಲ್ಲದೆ, ಹೆಸರಿಸುವ ನಾಮಪದಗಳನ್ನು ನೆನಪಿನಲ್ಲಿಟ್ಟುಕೊಂಡು ಬಳಸಬೇಕಾಗಿದೆಯಾದ ಕಾರಣ, ಅವು ಸಂಕ್ಷಿಪ್ತವಾಗಿ ಇದ್ದಷ್ಟೂ ಬಳಕೆಗೆ ಅನುಕೂಲ.
ಹಾಗಾಗಿ, ಅಂತಹ ನಾಮಪದಗಳು ಸಮಯ ಕಳೆದಂತೆಲ್ಲ ಬದಲಾವಣೆಗಳ ಮೂಲಕ ಸಂಕ್ಷಿಪ್ತಗೊಳ್ಳುತ್ತಾ ಹೋಗುವುದನ್ನು ನಾವು ಕಾಣಬಹುದು. ಪ್ರತ್ಯಯ ವಿರುವ ಪದಗಳಲ್ಲಿರುವ ಪ್ರತ್ಯಯ ಮತ್ತು ಪದಗಳು ಒಟ್ಟುಸೇರಿ, ಪ್ರತ್ಯಯದ ಗುರುತಿಲ್ಲದಂತಾಗುತ್ತದೆ, ಮತ್ತು ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳು ಒಂದಾಗಿ, ಅವು ಬೇರೆ ಬೇರೆ ಪದಗಳಾಗಿದ್ದುವೆಂಬ ವಿಷಯವೇ ಗೋಚರಕ್ಕೆ ಬರದಂತಾಗುತ್ತದೆ. ಇಂತಹ ಪದಗಳ ಅಂಗಗಳಲ್ಲಿ ಯಾವುದಾದರೂ ಒಂದು ಸಂಕ್ಷಿಪ್ತಗೊಂಡು ಪ್ರತ್ಯಯದ ಹಾಗೆ ಕಾಣಿಸತೊಡಗುವುದೂ ಇಂತಹ ಬದಲಾವಣೆಗಳಲ್ಲೊಂದು.
ಉದಾಹರಣೆಗಾಗಿ, ಹೆಗ್ಗಡೆ, ಹೆಜ್ಜೆನು, ಹೆದ್ದಾರಿ, ಹೆಬ್ಬಾವು ಮೊದಲಾದ ಪದಗಳಲ್ಲಿ ಹಿರಿ ಎಂಬ ಪದ (ಪೆರ್ ಎಂಬುದು ಇದರ ಹಳೆಯ
71
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ರೂಪ) ಮೊದಲನೆಯ ಅಂಗವಾಗಿ ಬಂದಿದೆಯೆಂಬ ವಿಷಯ ಈ ಪದಗಳ ಚಾರಿತ್ರಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ. ಆದರೆ, ಈ ಪದಗಳ ಅರ್ಥವೇನೆಂಬುದನ್ನು ತಿಳಿಯಲು ಇವುಗಳ ಒಳರಚನೆಯಂತಹದು ಎಂಬುದನ್ನು ಇಲ್ಲವೇ ಆ ರಚನೆ ಯಲ್ಲಿ ಹಿರಿ ಎಂಬ ಪದ ಬಂದಿದೆಯೆಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಹಾಗಾಗಿ, ಅವು ಮೇಲೆ ಸೂಚಿಸಿದಂತಹ ಬದಲಾವಣೆಗಳಿಗೆ ಒಳಗಾಗಲು ಸಾಧ್ಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಮನೆ, ದೊಡ್ಡ ಮರ, ದೊಡ್ಡ ಹಾವು ಮೊದಲಾದ ವರ್ಣಿಸುವ ಪದಗುಚ್ಛಗಳಲ್ಲಿ ಅಂಗವಾಗಿ ಬರುವ ದೊಡ್ಡ ಎಂಬ ಪದ ಈ ರೀತಿ ಸಂಕ್ಷಿಪ್ತಗೊಳ್ಳದೆ ಪ್ರತ್ಯೇಕವಾಗಿಯೇ ಉಳಿಯಬೇಕಾಗು ತ್ತದೆ.
ವರ್ಣಿಸುವ ಪದಗುಚ್ಛಗಳ ಅರ್ಥವೇನೆಂಬುದನ್ನು ಅವುಗಳ ಒಳರಚನೆ ಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯವಿದೆಯಾದ ಕಾರಣ, ಅವುಗಳ ಒಳ ರಚನೆ ಯಾವಾಗಲೂ ಸ್ಪಷ್ಟವಾಗಿ ತಿಳಿಯುವಂತಿರಬೇಕಾಗುತ್ತದೆ. ಈ ಕಾರಣ ಕ್ಕಾಗಿ, ಅವು ಯಾವಾಗಲೂ ನಾಮಪದಗುಚ್ಛಗಳಾಗಿಯೇ ಉಳಿಯುತ್ತವಲ್ಲದೆ ಪದಗಳಾಗಿ ಸಂಕ್ಷಿಪ್ತಗೊಳ್ಳುವುದಿಲ್ಲ. ಅವನ್ನು ಬಾಧಿಸುವ ಬದಲಾವಣೆಗಳೆಂದರೆ, ಅವುಗಳ ಒಳರಚನೆಯಲ್ಲಿ ಕಾಣಿಸುವ ಬೇರೆ ಬೇರೆ ರೀತಿಯ ಪದಗಳನ್ನು ಮತ್ತು ಪ್ರತ್ಯಯಗಳನ್ನು ವೈಯಕ್ತಿಕವಾಗಿ ಬಾಧಿಸುವ ಬದಲಾವಣೆಗಳು ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳನ್ನು ಬಾಧಿಸುವ ಬದಲಾವಣೆಗಳು ಮಾತ್ರ.
೩.೩.೬ ಒಳರಚನೆಯ ನಿಯಮಗಳಲ್ಲಿ ವ್ಯತ್ಯಾಸ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವೆ ಅವುಗಳ ಒಳರಚನೆಯಲ್ಲಿ ಬರುವ ನಿಯಮಗಳ ಮಟ್ಟಿಗೂ ಹಲವಾರು ವ್ಯತ್ಯಾಸಗಳು ಕಾಣಿಸುತ್ತವೆ. ವರ್ಣಿಸುವ ನಾಮಪದಗುಚ್ಛಗಳ ರಚನೆಯಲ್ಲಿ ಬರುವ ನಿಯಮಗಳು ವ್ಯವಸ್ಥಿತವಾಗಿದ್ದು, ಕೆಲವೇ ಕೆಲವು ಸಾರ್ವತ್ರಿಕ ನಿಯಮ ಗಳ ಮೂಲಕ ಈ ಪದಗುಚ್ಛಗಳ ರಚನೆಯನ್ನು ವಿವರಿಸಿ ಹೇಳಲು ಸಾಧ್ಯವಿದೆ.
ಆದರೆ ಹೆಸರಿಸುವ ನಾಮಪದಗಳ ರಚನೆಯಲ್ಲಿ ಹಲವಾರು ನಿಯಮಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಹೆಚ್ಚಿನವೂ ಬಹಳ ಅವ್ಯವಸ್ಥಿತವಾಗಿರುತ್ತವೆ ಮತ್ತು ತೊಡಕು ತೊಡಕಾಗಿರುತ್ತವೆ. ಹಲವಾರು ನಾಮಪದಗಳಿಗೆ ಅವುಗಳವೇ ಆದ ವಿಶಿಷ್ಟ ನಿಯಮಗಳ ಅವಶ್ಯಕತೆಯಿದ್ದು, ಅವುಗಳ ರಚನೆ ಅನಿಯಮಿತವೆಂದೇ ಹೇಳಲೂ ಬರುತ್ತದೆ.
ಮೇಲೆಯೇ ತಿಳಿಸಿರುವಂತೆ, ಹೆಸರಿಸುವ ನಾಮಪದಗಳ ಒಳರಚನೆ ಅವುಗಳ ಅರ್ಥವನ್ನು ತಿಳಿದುಕೊಳ್ಳುವಲ್ಲಿ ಅವಶ್ಯವಾದುದಲ್ಲ ಮತ್ತು ಅವನ್ನು ಹಾಗೆಯೇ ನೆನಪಿನಲ್ಲಿ ಇರಿಸಿಕೊಂಡು ಬಳಸಬೇಕಾಗುತ್ತದೆ ಎಂಬ ಈ ಎರಡು ವಿಷಯಗಳು ಅವುಗಳ ಒಳರಚನೆ ಮೇಲೆ ಸೂಚಿಸಿದ ಹಾಗೆ ಭಾಷೆಯಲ್ಲಾಗುವ ಬೇರೆ ಬೇರೆ ಬದಲಾವಣೆಗಳ ಮೂಲಕ ಕ್ಲಿಷ್ಟವಾಗುತ್ತಾ ಹೋಗಲು ಸಾಧ್ಯವಾಗುವಂತೆ
72
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಮಾಡುತ್ತವೆ. ವರ್ಣಿಸುವ ನಾಮಪದಗುಚ್ಛಗಳನ್ನು ಪ್ರತಿಯೊಂದು ಬಾರಿ ಬಳಸು ವಾಗಲೂ ಹೊಸದಾಗಿ ತಯಾರಿಸಿಕೊಳ್ಳಬೇಕಾಗಿದೆಯಾದ ಕಾರಣ, ಮತ್ತು ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯಿಂದಲೇ ಸಾಧಿಸಿಕೊಳ್ಳ ಬೇಕಾಗುವುದಾದ ಕಾರಣ, ಅವು ಇಂತಹ ಬದಲಾವಣೆಗಳಿಗೆ ಒಳಗಾಗದಿರುತ್ತವೆ.
ಉದಾಹರಣೆಗಾಗಿ ಪೂರ್ವದ ಹಳೆಗನ್ನಡದಲ್ಲಿ ಹೊಸಗನ್ನಡದ ಹಿರಿಯ ಎಂಬ ಪದ ಪಿರಿಯ ಎಂದಿತ್ತು. ಎರಡನೆಯ ಅಕ್ಷರದಲ್ಲಿ (ರಿ ಎಂಬುದರಲ್ಲಿ) ಇಕಾರ ಬಂದುದರಿಂದಾಗಿ ಆ ಪದದ ಮೊದಲನೆಯ ಅಕ್ಷರದ ಎಕಾರ ಇಕಾರ ವಾಯಿತು ಮತ್ತು ಹಾಗಾಗಿ ಅದು ಹಳೆಗನ್ನಡದಲ್ಲಿ ಪಿರಿಯ ಎಂದಾಯಿತು. ಅನಂತರ ಅದರ ಮೊದಲನೆಯ ಅಕ್ಷರದಲ್ಲಿರುವ ಪಕಾರ ಹಕಾರವಾದುದ ರಿಂದಾಗಿ ಅದು ಅನಂತರ ಹೊಸಗನ್ನಡದಲ್ಲಿ ಹಿರಿಯ ಎಂದಾಯಿತು.
ಹೊಸಗನ್ನಡದ ನಾಮಪದಗುಚ್ಛಗಳಲ್ಲೆಲ್ಲ ಇದು ಈ ಹಿರಿಯ ಎಂಬ ಹೊಸ ರೂಪದಲ್ಲೇ ಬರುತ್ತದೆ (ಉದಾ: ಹಿರಿಯ ಮಗ, ಹಿರಿಯ ವಿದ್ವಾಂಸರು, ಇತ್ಯಾದಿ). ಆದರೆ ಕೆಲವು ಹೆಸರಿಸುವ ನಾಮಪದಗಳಲ್ಲಿ ಇದು ಇವತ್ತಿಗೂ ಅದರ ಹಳೆಯ ರೂಪವನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿದೆ. ಉದಾಹರಣೆಗಾಗಿ, ಹೆಬ್ಬಾವು ಎಂಬ ಪದದ ಎರಡನೇ ಅಕ್ಷರದಲ್ಲಿ ಇಕಾರವಿಲ್ಲದ ಕಾರಣ, ಮೊದಲನೆಯ ಅಕ್ಷರದ ಎಕಾರ ಬದಲಾಗದೆ ಹಾಗೆಯೇ ಉಳಿದಿದೆ. ಇದಲ್ಲದೆ ಎರಡನೇ ಅಕ್ಷರದಲ್ಲಿದ್ದ ರಕಾರವು ಮೂರನೇ ಅಕ್ಷರದ ವ್ಯಂಜನದೊಡನೆ ಸೇರಿ ಸಮಾನತೆಯನ್ನು ಪಡೆದಿದೆ. ಹೆಬ್ಬಾವು ಎಂಬ ಈ ಪದದೊಡನೆ ಹೆದ್ದಾರಿ, ಹೆಜ್ಜೆನು, ಹೆಗ್ಗಡೆ ಮೊದಲಾದ ಪದಗಳನ್ನು ಹೋಲಿಸಿ ನೋಡಿದಾಗ ಈ ಎರಡನೆಯ ವಿಷಯ ಸ್ಪಷ್ಟವಾಗುತ್ತದೆ.
ಇದೇ ರೀತಿಯಲ್ಲಿ ಹಳೆಗನ್ನಡದ ಪಕಾರ ಹಕಾರವಾಗದೆ ಉಳಿದಿರುವಂತಹ ಬೇರೆ ಕೆಲವು ಬಳಕೆಗಳು ಅನಿಯಮಿತವಾಗಿ ಹೆಸರಿಸುವ ನಾಮಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೈಪಿಡಿ ಎಂಬ ಪದದಲ್ಲಿ ಹಿಡಿ ಎಂಬ ಪದವು ಪಿಡಿ ಎಂಬ ಅದರ ಹಳೆಯ ರೂಪದಲ್ಲೇ ಉಳಿದಿದೆ. ಕಂಬನಿ ಎಂಬುದರಲ್ಲೂ ಹನಿ ಎಂಬ ಪದ ಅದರೆ ಹಳೆಯ ಪಕಾರವನ್ನು ಹಕಾರವಾಗಿ ಮಾಡಿಕೊಳ್ಳದೆ ಬಕಾರವಾಗಿ ಮಾಡಿ ಉಳಿಸಿಕೊಂಡಿದೆ. ಹೊಂಬಣ್ಣ, ಬೆಂಗಾವಲು ಮೊದಲಾದ ಪದಗಳ ಅಂಗಗಳಾಗಿ ಬಂದಿರುವ ಹೊನ್ನು, ಬೆನ್ನು ಮೊದಲಾದ ಪದಗಳು ಅವುಗಳ ಹಳೆಯ ಏಕಾಕ್ಷರ ರೂಪದಲ್ಲೇ ಉಳಿದಿವೆ. ಹೊಸಗನ್ನಡದಲ್ಲಿ ಇವು ಉಕಾರದ ಸೇರಿಕೆಯಿಂದಾಗಿ ಎರಡಕ್ಷರದವುಗಳಾಗಿವೆ ಮತ್ತು ಹೊನ್ನಿನ ಬಣ್ಣ, ಬೆನ್ನಿನ ಕಾವಲು ಮೊದಲಾದ ವರ್ಣಿಸುವ ನಾಮಪದಗುಚ್ಛಗಳಲ್ಲಿ ಈ ಹೊಸ ಎರಡಕ್ಷರದ ರೂಪಗಳೇ ಕಾಣಿಸಿಕೊಳ್ಳುತ್ತವೆ.
೩.೩.೭ ನಾಮಪದಗಳು ಮತ್ತು ನಾಮಪದಗುಚ್ಛಗಳು
73
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸು ವುದಕ್ಕಾಗಿ ನಾವು ನಾಮಪದಗುಚ್ಛಗಳನ್ನು ಬಳಸುತ್ತೇವಲ್ಲದೆ ಬರಿಯ ನಾಮಪದ ಗಳನ್ನು ಬಳಸುವುದಿಲ್ಲ ಎಂಬುದನ್ನು ಮೇಲೆಯೇ ನೋಡಿರುವೆವು. ಬರಿಯ ನಾಮಪದಗಳನ್ನು ವರ್ಣಿಸುವ ಕಾರ್ಯದಲ್ಲಿ ಬಳಸಬಲ್ಲೆವಾದರೂ, ವ್ಯಕ್ತಿ, ವಸ್ತು ಮೊದಲಾದುವನ್ನು ‘ಗುರುತಿಸ’ಬೇಕಾದಾಗಲೆಲ್ಲ ಅವನ್ನು ಹೆಸರಿಸುವ ವಿಧಾನ ದಲ್ಲಿ ಮಾತ್ರವೇ ಬಳಸುವುದು ರೂಢಿ. ಈ ಕಾರಣಕ್ಕಾಗಿ, ಮೇಲೆ ನಾಮಪದ ಮತ್ತು ನಾಮಪದಗುಚ್ಛಗಳ ನಡುವಿರುವ ವ್ಯತ್ಯಾಸವೆಂಂತಹದು ಎಂಬುದನ್ನು ತಿಳಿಯುವುದರ ಮೂಲಕ, ಹೆಸರಿಸುವ ವಿಧಾನಕ್ಕೂ ಮತ್ತು ವರ್ಣಿಸುವ ವಿಧಾನಕ್ಕೂ ನಡುವಿನ ವ್ಯತ್ಯಾಸಗಳೆಂತಹವು ಎಂಬುದನ್ನು ತಿಳಿಯಲು ಸಾಧ್ಯ ವಾಗಿತ್ತು.
ಆದರೆ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಕನ್ನಡದಲ್ಲಿ ಬರಿಯ ನಾಮಪದಗಳನ್ನು ಮಾತ್ರವಲ್ಲದೆ ನಾಮಪದ ಗುಚ್ಛಗಳನ್ನೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಹೂವಿನ ಗಿಡ ಎಂಬ ನಾಮಪದಗುಚ್ಛದ ಬಳಕೆಯನ್ನು ಪರಿಶೀಲಿಸಬಹುದು. ಈ ಪದಗುಚ್ಛದ ಮೂಲಕ ನಾವು ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಗಿಡವನ್ನು (ಎಂದರೆ ಅದರ ಹೂವಿನ ಅಂದಕ್ಕಾಗಿ ಸಾಕುವ ಗಿಡವನ್ನು) ಗುರುತಿಸುತ್ತೇವೆ. ಹೂವಿನ ಗಿಡದಲ್ಲಿ ಎಲ್ಲಾ ಸಮಯಗಳಲ್ಲೂ ಹೂವಿರಬೇಕೆಂದೇನಿಲ್ಲ. ಆ ಜಾತಿಗೆ ಸೇರಿದ ಗಿಡ ವೊಂದರಲ್ಲಿ ಹೂವೇ ಆಗದಿರಲೂ ಸಾಧ್ಯವಿದೆ.
ಈ ಕಾರಣಗಳಿಂದಾಗಿ, ಈ ನಾಮಪದಗುಚ್ಛವನ್ನು, ಮತ್ತು ಇಂತಹವೇ ಬೇರೆ ಹಲವಾರು ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವವುಗಳೆಂದು ಹೇಳಬೇಕಲ್ಲದೆ ವರ್ಣಿಸುವ ವಿಧಾನದ ಮೂಲಕ ಗುರುತಿಸುವವುಗಳೆಂದು ಹೇಳಲು ಸಾಧ್ಯ ವಾಗದು. ಹೂವಿಲ್ಲದ ಇಲ್ಲವೇ ಹೂವೇ ಆಗದ ಗಿಡವನ್ನು ಹೂವಿನ ಗಿಡವೆಂದು ‘ವರ್ಣಿಸಲು’ ಸಾಧ್ಯವಿಲ್ಲವಾದ ಕಾರಣ ಹೂವಿನ ಗಿಡ ಎಂಬುದು ಒಂದು ಗಿಡದ ವರ್ಣನೆಯಾಗಲಾರದು.
ಈ ರೀತಿ, ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನಗಳೆಂಬ ಈ ಎರಡು ವಿಧಾನಗಳಲ್ಲೂ ನಾಮಪದಗುಚ್ಛಗಳನ್ನು ಬಳಸಲು ಸಾಧ್ಯವಿದೆ. ಆದರೆ, ಈ ಎರಡು ವಿಧಾನಗಳಲ್ಲಿ ಬಳಕೆಯಾಗುವ ನಾಮಪದಗುಚ್ಛಗಳ ನಡುವೆ ಒಳ ರಚನೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಎರಡು ನಾಮಪದ ಗಳನ್ನು ಅ ಎಂಬ ಪ್ರತ್ಯಯದ ಮೂಲಕ ಸಂಬಂಧಿಸಿ ಪದಗುಚ್ಛಗಳನ್ನು ತಯಾರಿಸಲು ಸಾಧ್ಯವಿದೆಯಷ್ಟೆ. ಇಂತಹ ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲೂ ಬಳಸಬಹುದು ಮತ್ತು ವರ್ಣಿಸುವ ವಿಧಾನದಲ್ಲೂ ಬಳಸ ಬಹುದು. ಆದರೆ ಈ ಎರಡು ರೀತಿಯ ಬಳಕೆಗಳ ನಡುವೆ ಅವು ಯಾವ ಅರ್ಥದಲ್ಲಿ ಸಂಬಂಧಿತವಾಗುತ್ತವೆ ಎಂಬುದರಲ್ಲಿ ವ್ಯತ್ಯಾಸವಿದೆ. ಕೆಳಗೆ
74
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಕೊಟ್ಟಿರುವ ನಾಮಪದಗುಚ್ಛಗಳನ್ನು ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟ ವಾಗುತ್ತದೆ.
- ಷಷ್ಠಿ ಸಂಬಂಧದ ಅರ್ಥ ಹೆಸರಿಸುವ ವಿಧಾನ ವರ್ಣಿಸುವ ವಿಧಾನ
- (ಕ) ಆಕರ ಹಾಲಿನ ಕೊಡ ಕೊಡದ ಹಾಲು
- ಪುಸ್ತಕದ ಕಪಾಟು ಕಪಾಟಿನ ಪುಸ್ತಕ
- (ಖ) ಅಂಗ ಹೂವಿನ ಗಿಡ ಗಿಡದ ಹೂವು
- ಬಾಲದ ಹುಳ ಹುಳದ ಬಾಲ
- (ಗ) ಒಡೆತನ ಹಣದ ಮುದುಕ ಮುದುಕನ ಹಣ
- ಟೊಪ್ಪಿಯ ಹುಡುಗ ಹುಡುಗನ ಟೊಪ್ಪಿ
- (ಘ) ಗುಣಧರ್ಮ ಬಣ್ಣದ ಚಿಟ್ಟೆ ಚಿಟ್ಟೆಯ ಬಣ್ಣ
- ಧೈರ್ಯದ ಹುಡುಗ ಹುಡುಗನ ಧೈರ್ಯ
- (ಇ) ಭಾವನೆ ಹೆದರಿಕೆಯ ಹುಡುಗ ಹುಡುಗನ ಹೆದರಿಕೆ
- ಪ್ರೀತಿಯ ಹೆಂಡತಿ ಹೆಂಡತಿಯ ಪ್ರೀತಿ
ಮೇಲೆ ಎರಡನೇ ಕಾಲಂನಲ್ಲಿ ಕೊಟ್ಟಿರುವ ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲೂ ಮತ್ತು ಮೂರನೇ ಕಾಲಂನಲ್ಲಿ ಕೊಟ್ಟಿರುವ ನಾಮ ಪದಗುಚ್ಛಗಳನ್ನು ವರ್ಣಿಸುವ ವಿಧಾನದಲ್ಲೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬಳಸುವುದು ರೂಢಿ. ಉದಾಹರಣೆಗಾಗಿ, ಈ ಹೂವಿನ ಗಿಡದಲ್ಲಿ ಹೂವೇ ಇಲ್ಲ ಎನ್ನಬಹುದು ಆದರೆ ನೇರವಾಗಿ ಈ ಗಿಡದ ಹೂ ಗಿಡದ್ದಲ್ಲ ಎನ್ನಲು ಸಾಧ್ಯವಾಗದು (‘ಕಾಗದದ ಹೂವೊಂದನ್ನು ಈ ಗಿಡಕ್ಕೆ ಸಿಕ್ಕಿಸಿದ್ದಾರೆ’ ಎಂಬಂತಹ ವಿಶಿಷ್ಟವಾದ ಅರ್ಥದಲ್ಲಿ ಮಾತ್ರ ಅಂತಹ ಪ್ರಯೋಗ ಸಾಧ್ಯ). ಗಿಡದ ಹೂ ಎಂಬ ಪದಗುಚ್ಛವನ್ನು ಸಾಮಾನ್ಯವಾಗಿ ವರ್ಣಿಸುವ ವಿಧಾನದಲ್ಲಿ ಬಳಸುವುದೇ ಜಾಸ್ತಿ ಎಂಬುದೇ ಇದಕ್ಕೆ ಕಾರಣ.
ಈ ಎರಡು ರೀತಿಯ ನಾಮಪದಗುಚ್ಛಗಳ ನಡುವೆ ಬಂದಿರುವ ಅ ಎಂಬ ಪ್ರತ್ಯಯ ಎಂತಹ ಸಂಬಂಧವನ್ನು ಸೂಚಿಸುತ್ತದೆ ಎಂಬ ವಿಷಯದಲ್ಲಿ ವ್ಯತ್ಯಾಸ ವಿದೆಯೆಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ (ಕ)ದಲ್ಲಿ ಬಂದಿರುವ ಮೊದಲನೆಯ ಕಾಲಂನ ಹಾಲಿನ ಕೊಡ ಮತ್ತು ಪುಸ್ತಕದ ಕಪಾಟು ಎಂಬೆರಡು ನಾಮಪದಗುಚ್ಛಗಳು ವಸ್ತುಗಳ ಮೂಲಕ ಅವನ್ನಿರಿಸುವ ಆಕರಗಳನ್ನು ಗುರುತಿಸುವುವಾದರೆ, ಅದೇ ಸಾಲಿನ ಮೂರನೆಯ ಕಾಲಂನಲ್ಲಿ
75
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಬಂದಿರುವ ಕೊಡದ ಹಾಲು ಮತ್ತು ಕಪಾಟಿನ ಪುಸ್ತಕ ಎಂಬೆರಡು ನಾಮ ಪದಗುಚ್ಛಗಳು ಆಕರಗಳ ಮೂಲಕ ಅವುಗಳಲ್ಲಿರಿಸುವ ವಸ್ತುಗಳನ್ನು ಗುರುತಿಸು ತ್ತವೆ. ಈ ಎರಡು ರೀತಿಯ ಆಕರ ಸಂಬಂಧಗಳಲ್ಲಿ ಮೊದಲನೆಯದನ್ನು ಸಾಮಾನ್ಯವಾಗಿ ಹೆಸರಿಸುವುದಕ್ಕೂ ಮತ್ತು ಎರಡನೆಯದನ್ನು ವರ್ಣಿಸುವುದಕ್ಕೂ ಬಳಸುವ ರೂಢಿ ಕನ್ನಡದಲ್ಲಿದೆ.
ಮೇಲೆ ಕೊಟ್ಟಿರುವ ಇತರ ನಾಮಪದಗುಚ್ಛಗಳಲ್ಲಿಯೂ ಇದೇ ರೀತಿಯ ವಿರುದ್ಧ ಪ್ರಯೋಗಗಳಿರುವುದನ್ನು ಕಾಣಬಹುದು. (ಖ)ದಲ್ಲಿ ಬಂದಿರುವ ಹೂವಿನ ಗಿಡ ಮತ್ತು ಬಾಲದ ಹುಳ ಎಂಬೆರಡು ಪದಗುಚ್ಛಗಳು ಅಂಗಗಳ ಮೂಲಕ ಆ ಅಂಗಗಳನ್ನು ಹೊಂದಿರುವ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸು ವುವಾದರೆ, ಅವುಗಳ ಎದುರು ಕೊಟ್ಟಿರುವ ಗಿಡದ ಹೂ ಮತ್ತು ಹುಳದ ಬಾಲ ಎಂಬೆರಡು ಪದಗುಚ್ಛಗಳು ಅಂಗಗಳನ್ನು ಹೊಂದಿರುವ ಸಸ್ಯ ಮತ್ತು ಪ್ರಾಣಿಗಳ ಮೂಲಕ ಅವುಗಳ ಅಂಗಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಮೊದಲನೆಯ ವನ್ನು ಹೆಸರಿಸುವುದಕ್ಕಾಗಿಯೂ ಮತ್ತು ಎರಡನೆಯದನ್ನು ವರ್ಣಿಸುವು ದಕ್ಕಾಗಿಯೂ ಬಳಸುವುದು ಕನ್ನಡದಲ್ಲಿ ರೂಢಿಯಾಗಿದೆ.
ಇದೇ ರೀತಿಯಲ್ಲಿ ವಸ್ತುವಿನ ಒಡೆಯನನ್ನು ವಸ್ತುವಿನಿಂದ ಗುರುತಿಸುವ ಪದಗುಚ್ಛವನ್ನು (ಉದಾ: ಹಣದ ಮುದುಕ ಮತ್ತು ಟೊಪ್ಪಿಯ ಹುಡುಗ) ಹೆಸರಿಸುವುದಕ್ಕಾಗಿಯೂ ಮತ್ತು ಒಡೆಯನಿಂದ ವಸ್ತುವನ್ನು ಗುರುತಿಸುವ ಪದ ಗುಚ್ಛವನ್ನು (ಉದಾ: ಮುದುಕನ ಹಣ ಮತ್ತು ಹುಡುಗನ ಟೊಪ್ಪಿ) ವರ್ಣಿಸುವುದಕ್ಕಾಗಿಯೂ ಬಳಸುವುದನ್ನು ಒಡೆತನವೆಂಬ ಸಂಬಂಧವನ್ನು ತೋರಿಸುವ (ಗ)ದ ಸಾಲುಗಳಲ್ಲಿ ಕಾಣಬಹುದು, ಗುಣಧರ್ಮದಿಂದ ಗುಣ ಧರ್ಮವುಳ್ಳುದನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಬಣ್ಣದ ಚಿಟ್ಟೆ ಮತ್ತು ಧೈರ್ಯದ ಹುಡುಗ) ಹೆಸರಿಸುವುದಕ್ಕಾಗಿಯೂ ಮತ್ತು ಗುಣಧರ್ಮ ವುಳ್ಳುದರಿಂದ ಗುಣಧರ್ಮವನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಚಿಟ್ಟೆಯ ಬಣ್ಣ ಮತ್ತು ಹುಡುಗನ ಧೈರ್ಯ) ವರ್ಣಿಸುವುದಕ್ಕಾಗಿಯೂ ಬಳಸು ವುದನ್ನು ಗುಣಧರ್ಮವೆಂಬ ಸಂಬಂಧವನ್ನು ತೋರಿಸುವ (ಘ)ದ ಸಾಲುಗಳಲ್ಲಿ ಕಾಣಬಹುದು ಮತ್ತು ಭಾವನೆಯಿಂದ ಭಾವಿಸುವವನನ್ನು ಗುರುತಿಸುವ ಪದ ಗುಚ್ಛವನ್ನು (ಉದಾ: ಹೆದರಿಕೆಯ ಹುಡುಗ ಮತ್ತು ಪ್ರೀತಿಯ ಹೆಂಡತಿ) ಹೆಸರಿಸುವುದಕ್ಕಾಗಿಯೂ ಮತ್ತು ಭಾವಿಸುವವನಿಂದ ಭಾವನೆಯನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಹುಡುಗನ ಹೆದರಿಕೆ ಮತ್ತು ಹೆಂಡತಿಯ ಪ್ರೀತಿ) ವರ್ಣಿಸುವುದಕ್ಕಾಗಿ ಬಳಸುವುದನ್ನು ಭಾವನೆಯೆಂಬ ಸಂಬಂಧವನ್ನು ತೋರಿಸುವ (ಇ)ದ ಸಾಲುಗಳಲ್ಲಿ ಕಾಣಬಹುದು.
ಆದರೆ ಈ ಎರಡು ರೀತಿಯ ವಿರುದ್ಧ ಸಂಬಂಧಗಳಲ್ಲಿ ಬರುವ ಪದಗುಚ್ಛ ಗಳ ಬಳಕೆ ಅಷ್ಟೊಂದು ಕಟ್ಟುನಿಟ್ಟಿನದೇನಲ್ಲ. ಎರಡನೇ ಕಾಲಂನಲ್ಲಿ ಬರುವ
76
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲಿ ಮಾತ್ರವಲ್ಲದೆ ವರ್ಣಿಸುವ ವಿಧಾನ ದಲ್ಲೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಧೈರ್ಯದ ಹುಡುಗ ಎಂಬ ಪದಗುಚ್ಛ ಧೈರ್ಯದ ಹುಡುಗನ ಧೈರ್ಯವೆಲ್ಲ ಇಂಗಿಹೋಗಿದೆ ಎಂಬ ವಾಕ್ಯದಲ್ಲಿ ಒಬ್ಬ ಹುಡುಗನನ್ನು ವರ್ಣಿಸುವ ಬದಲು ಹೆಸರಿಸುತ್ತಿರುವ ಹಾಗೆ ಕಾಣಿಸುತ್ತದೆ. ಇದೇ ರೀತಿಯಲ್ಲಿ ಮೂರನೇ ಕಾಲಂನಲ್ಲಿ ಬರುವ ಪದಗುಚ್ಛ ಗಳಲ್ಲಿ ಕೆಲವನ್ನು ಹೆಸರಿಸುವ ವಿಧಾನದ ಮೂಲಕ ಬಳಸಲೂ ಸಾಧ್ಯವಿದೆ. ಆದರೆ ಅಂತಹ ಪ್ರಯೋಗಗಳು ಬಹಳ ಕಡಿಮೆ.
೩.೪ ವಿಭಜನೆಯ ಕೆಲವು ಸಮಸ್ಯೆಗಳು
ಕನ್ನಡದಲ್ಲಿ ನಾಮಪದಗಳ ಒಳರಚನೆಯಂತಹದು ಎಂಬುದನ್ನು ನಿರ್ಧರಿಸಲು ಹೊರಡುವ ಮೊದಲು ನಾಮಪದಗಳನ್ನು ಇತರ ವಾಕ್ಯಾಂಶಗಳಿಂದ (ಅದರಲ್ಲೂ ನಾಮಪದಗುಚ್ಛಗಳಿಂದ) ಪ್ರತ್ಯೇಕಿಸುವುದು ಅವಶ್ಯ ಎಂಬುದನ್ನು ಮೇಲೆ ನೋಡಿದ್ದೆವು. ಹೀಗೆ ಪ್ರತ್ಯೇಕಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಸಾಮಾನ್ಯವಾಗಿ ನಾಮಪದಗಳು ಹೆಸರಿಸುವ ವಿಧಾನದ ಮೂಲಕವೂ ಮತ್ತು ನಾಮಪದ ಗುಚ್ಛಗಳು ವರ್ಣಿಸುವ ವಿಧಾನದ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಹಾಗಾಗಿ ಈ ವ್ಯತ್ಯಾಸದ ಆಧಾರದ ಮೇಲೆ ಅವೆರಡನ್ನು ಹೆಚ್ಚಿನ ಸಂದರ್ಭಗಳಲ್ಲೂ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ.
ಆದರೆ ಮೇಲೆ ಸೂಚಿಸಿದಂತೆ, ಕೆಲವೊಂದು ಸಂದರ್ಭಗಳಲ್ಲಿ ನಾಮಪದ ಗುಚ್ಛಗಳನ್ನೂ ಹೆಸರಿಸುವ ವಿಧಾನದ ಮೂಲಕ ಗುರುತಿಸುವ ಕಾರ್ಯದಲ್ಲಿ ಬಳಸಲು ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಈ ಎರಡು ರೀತಿಯ ವಾಕ್ಯಾಂಶಗಳನ್ನು ವಾಕ್ಯದಲ್ಲಿ ಅವು ನಡೆಸುವ ಕೆಲಸವೇನು ಎಂಬುದರ ಸಹಾಯದಿಂದ ಬೇರ್ಪಡಿಸಲು ಸಾಧ್ಯವಾಗದು.
ನಾಮಪದ ಮತ್ತು ನಾಮಪದಗುಚ್ಛಗಳ ನಡುವೆ ಅವುಗಳ ಹೆಚ್ಚಿನ ಬಳಕೆಗಳಲ್ಲೂ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ನಾಮಪದಗುಚ್ಛಗಳ ಅಂಗಗಳಾಗಿ ಬರುವ ಪದಗಳು ಬೇರೆ ಬೇರಾಗಿರುತ್ತವೆ ಮತ್ತು ಅವುಗಳಲ್ಲಿ ಒಂದರೊಡನೆ ಇನ್ನೊಂದನ್ನು ಸಂಬಂಧಿಸಲು ಪದರೂಪ ಪ್ರತ್ಯಯಗಳು (ಉದಾ: ಅ ಎಂಬ ಪ್ರತ್ಯಯ) ಬಳಕೆಯಾಗಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನಾಮಪದಗಳ ಅಂಗಗಳಾಗಿ ಬರುವ ಪದಗಳು ಒಟ್ಟು ಸೇರಿ ಒಂದೇ ಪದವಾಗಿರುತ್ತವೆ, ಮತ್ತು ಅವುಗಳ ನಡುವೆ ಪ್ರತ್ಯಯಗಳಾವುವೂ ಬರುವುದಿಲ್ಲ. ಹಾಗೇನಾದರೂ ಪ್ರತ್ಯಯ ಗಳು ಬರುವುದಿದ್ದರೂ ಅವು ಪದಪ್ರತ್ಯಯಗಳಾಗಿರುತ್ತವಲ್ಲದೆ ಪದರೂಪ ಪ್ರತ್ಯಯಗಳಾಗಿರುವುದಿಲ್ಲ.
ಆದರೆ ನಾಮಪದಗಳನ್ನು ನಾಮಪದಗುಚ್ಛಗಳಿಂದ ಪ್ರತ್ಯೇಕಿಸಲು ಈ ರೀತಿ ಒಳರಚನೆಯನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸಲು ಸಾಧ್ಯವಾಗದು. ಉದಾ ಹರಣೆಗಾಗಿ, ಕನ್ನಡದಲ್ಲಿ ನಾಮಪದಗಳೊಂದಿಗೆ ಗುಣಪದಗಳನ್ನು ಬಳಸುವಾಗ
77
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅವಕ್ಕೆ ಪದರೂಪ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ. ಗುಣಪದಗಳು ನೇರವಾಗಿ ನಾಮಪದಗಳ ಮುಂದೆ ಬಂದು ನಿಲ್ಲುತ್ತವೆ. ಕೆಂಪು ಗೋಡೆ, ಕಪ್ಪು ಬಣ್ಣ, ದೊಡ್ಡ ಮನೆ ಮೊದಲಾದ ನಾಮಪದಗುಚ್ಛಗಳಲ್ಲಿ ಈ ರೀತಿ ಪದಗ ಳೆರಡು ಪದರೂಪ ಪ್ರತ್ಯಯಗಳ ಸಹಾಯವಿಲ್ಲದೆ ನೇರವಾಗಿ ಸಂಬಂಧಿತ ವಾಗಿರುವುದನ್ನು ಕಾಣಬಹುದು. ಇಂತಹ ವಾಕ್ಯಾಂಶಗಳು ನಾಮಪದಗುಚ್ಛಗಳೇ ಅಥವಾ ಬರಿಯ ನಾಮಪದಗಳೇ (ಎಂದರೆ ಜೋಡುಪದಗಳೇ) ಎಂಬ ವಿಷಯ ದಲ್ಲಿ ಸಂದಿಗ್ಧತೆಯುಂಟಾಗಲು ಸಾಧ್ಯವಿದೆ.
ಉದಾಹರಣೆಗಾಗಿ, ಬಿಸಿನೀರು ಎಂಬ ವಾಕ್ಯಾಂಶದಲ್ಲಿ ಬಿಸಿ ಎಂಬ ಗುಣ ಪದವನ್ನು ನೀರು ಎಂಬ ನಾಮಪದದೊಂದಿಗೆ ಬಳಸಲಾಗಿದೆ. ಇವುಗಳ ನಡುವೆ ಪದರೂಪ ಪ್ರತ್ಯಯವಾವುದೂ ಇಲ್ಲ. ಹಾಗಾಗಿ ಇಲ್ಲಿ ಅಂಗಗಳಾಗಿ ಬಂದಿರುವ ಪದಗಳು ಬೇರೆ ಬೇರಾಗಿವೆಯೇ (ಎಂದರೆ ಇದು ಒಂದು ನಾಮಪದಗುಚ್ಛವೇ) ಅಥವಾ ಒಟ್ಟು ಸೇರಿ ಒಂದೇ ಪದವಾಗಿ ಬಂದಿವೆಯೇ (ಎಂದರೆ ಇದು ಜೋಡುಪದವೇ) ಎಂಬುದನ್ನು ಈ ಪದದ ಒಳರಚನೆಯ ಆಧಾರದ ಮೇಲೆ ಮಾತ್ರವೇ ನಿರ್ಧರಿಸಿ ಹೇಳಲು ಸಾಧ್ಯವಾಗದು. ಈ ವಾಕ್ಯಾಂಶವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ ಮತ್ತು ಬಳಸುವವನ ಆಶಯವೇನು ಎಂಬುದನ್ನು ತಿಳಿಯುವ ಮೂಲಕ ಮಾತ್ರವೇ ಇಂತಹ ಸಂದರ್ಭಗಳಲ್ಲಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯ.
ಬಿಸಿನೀರು ಎಂಬ ವಾಕ್ಯಾಂಶಕ್ಕೆ ಕನ್ನಡದಲ್ಲಿ ನಾಮಪದಗುಚ್ಛವಾಗಿಯೂ ಬಳಕೆಯಿದೆ ಮತ್ತು ಬರಿಯ ನಾಮಪದ (ಜೋಡುಪದ)ವಾಗಿಯೂ ಬಳಕೆಯಿದೆ. ಅದಕ್ಕೆ ‘ಬೆಚ್ಚಗಿರುವ ನೀರು’ ಎಂಬ ಅರ್ಥವಿದೆಯಾದರೆ ಅದನ್ನು ಒಂದು ನಾಮ ಪದಗುಚ್ಛವೆಂದೂ ಮತ್ತು ‘ಒಮ್ಮೆ ಬಿಸಿಮಾಡಿದ (ಎಂದರೆ ಕುದಿಸಿ ಆರಿಸಿದ) ನೀರು’ ಎಂಬ ಅರ್ಥವಿದೆಯಾದರೆ ಜೋಡುಪದವೆಂದೂ ಹೇಳಬಹುದು. ಮೊದಲನೆಯದು ಒಂದು ವಸ್ತುವನ್ನು ವರ್ಣಿಸುತ್ತದೆ ಮತ್ತು ಎರಡನೆಯದು ಹೆಸರಿಸುತ್ತದೆ. ಇಂತಹ ಅರ್ಥಸಂದಿಗ್ಧತೆಗಳಿರುವಲ್ಲಿ ಸಾಮಾನ್ಯವಾಗಿ ಬಳಕೆಯ ಸಂದರ್ಭಗಳೇ ಸರಿಯಾದ ಅರ್ಥವನ್ನು ಒದಗಿಸಿಕೊಡುತ್ತವೆ. ಉದಾಹರಣೆಗಾಗಿ, ಸ್ನಾನ ಮಾಡಲು ಹೊರಟವನು ಬಿಸಿನೀರು ಬೇಕೆಂದು ಹೇಳಿದಲ್ಲಿ ಬೆಚ್ಚಗಿನ ನೀರು ಬೇಕೆಂಬ ಆಶಯ ಆಡುಗನದಾಗಿರಬೇಕಾದ ಕಾರಣ, ಇಲ್ಲಿ ಬಿಸಿನೀರು ಎಂಬುದನ್ನು ಒಂದು ವರ್ಣನೆಯೆಂದು ಹೇಳಬೇಕಾಗುತ್ತದೆ. ಆದರೆ, ಊಟಕ್ಕೆ ಕುಳಿತವನು ಬಿಸಿನೀರು ಬೇಕೆಂದು ಹೇಳಿದಲ್ಲಿ ಸಾಮಾನ್ಯವಾಗಿ ಕುಡಿಯಲು ಬಿಸಿಮಾಡಿ ತಣಿಸಿರುವ (ಎಂದರೆ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿರುವ) ನೀರು ಬೇಕೆಂಬುದಾಗಿ ಆಡುಗನ ಆಶಯವಿರಬೇಕಾದ ಕಾರಣ, ಬಿಸಿನೀರು ಎಂಬುದು ಇಲ್ಲಿ ಒಂದು ಹೆಸರಿಸುವ ನಾಮಪದವಾಗಿ (ಜೋಡುಪದವಾಗಿ) ಬಂದಿದೆಯೆಂದು ಹೇಳಬೇಕಾಗುತ್ತದೆ.
78
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
೩.೫ ಹೆಸರಿಸುವ ನಾಮಪದಗಳಲ್ಲಿ ವೈವಿಧ್ಯ
ಹೆಸರಿಸುವ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತತ್ವಗಳ ಆಧಾರದ ಮೇಲೆ ವಿಭಜಿಸಲು ಸಾಧ್ಯವಿದೆ. ಇವುಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳೆಂಬ ವಿಭಜನೆ ಅತ್ಯಂತ ಪ್ರಾಮುಖ್ಯವಾದುದು. ಇದು ನಾಮ ಪದಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳೊಂದಿಗೆ ಯಾವ ರೀತಿಯಲ್ಲಿ ಸಂಬಂಧಿತವಾಗಿವೆ, ಎಂದರೆ ಅವಕ್ಕೆ ಆ ಹೆಸರುಗಳು ಹೇಗೆ ಬಂದಿವೆ ಎಂಬುದರ ಮೇಲೆ ಅವಲಂಬಿಸಿದೆ. ಅಂಕಿತನಾಮಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಪ್ರತಿಯೊಂದಕ್ಕೂ ಬೇರೆ ಬೇರಾಗಿ ಸಂಬಂಧಿತ ವಾಗಿರುವುವಾದರೆ, ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗಿರುತ್ತವೆ (ವಿವರಗಳಿಗೆ ೩.೫.೧ ನೋಡಿ).
ಸಾಮಾನ್ಯವಾಗಿ ಅಂಕಿತನಾಮಗಳನ್ನು ಮಾತ್ರವೇ ‘ಹೆಸರು’ ಎಂಬ ಪದದ ಮೂಲಕ ಗುರುತಿಸುವುದು ರೂಢಿ. ಆದರೆ ಈ ಪುಸ್ತಕದಲ್ಲಿ ಹೆಸರಿಸು ಎಂಬ ಪದವನ್ನು ವರ್ಣಿಸು ಎಂಬ ಪದಕ್ಕೆ ಎದುರಾಗಿ ನಿಲ್ಲಿಸಿರುವ ಕಾರಣ, ಹೆಸರು ಎಂಬ ಪದಕ್ಕೆ ಈ ಎರಡು ರೀತಿಯ ನಾಮಪದಗಳನ್ನೂ ಗುರುತಿಸುವಂತಹ ಅರ್ಥ ಬಂದಿದೆ. ಇದನ್ನು ಹೆಸರಿಸು ಮತ್ತು ಹೆಸರು ಎಂಬ ಪದಗಳ ಪಾರಿ ಭಾಷಿಕ ಪ್ರಯೋಗವೆಂದು ಪರಿಗಣಿಸಬಹುದು.
ಹೆಸರಿಸುವ ನಾಮಪದಗಳನ್ನು ಅವುಗಳ ಒಳರಚನೆಯ ಆಧಾರದ ಮೇಲೂ ವಿಭಜಿಸಲು ಸಾಧ್ಯವಿದೆ. ಆದರೆ ಈ ವಿಭಜನೆ ಮೇಲೆ ಕೊಟ್ಟಿರುವ ರೂಢನಾಮ-ಅಂಕಿತನಾಮ ಎಂಬ ವಿಭಜನೆಯನ್ನು ಅಡ್ಡಕ್ಕೆ ಕತ್ತರಿಸುತ್ತದೆ. ಈ ವಿಭಜನೆಯಲ್ಲಿ ಯಾವ ಒಳರಚನೆಯನ್ನೂ ತೋರಿಸದಿರುವ ನೀರು, ಗಿಡ, ಮರ, ಸೀತೆ ಮೊದಲಾದವುಗಳದು ಒಂದು ವಿಭಾಗವಾದರೆ, ಯಾವುದಾದರೂ ಒಂದು ಪ್ರತ್ಯಯವನ್ನು ಸೇರಿಸುವುದರ ಮೂಲಕ ಸಿದ್ಧವಾದ ‘ಪ್ರತ್ಯಯವಿರುವ’ ನಾಮ ಪದಗಳದು (ಉದಾ: ಅಂಜಿಕೆ, ಕುಣಿತ, ಅಳಿವು, ತಟ್ಟೆ ಇತ್ಯಾದಿ) ಇನ್ನೊಂದು ವಿಭಾಗ, ಮತ್ತು ಎರಡು (ಅಥವಾ ಜಾಸ್ತಿ) ಪದಗಳ ಸೇರಿಕೆಯಿಂದ (ಎಂದರೆ ಸಮಾಸದಿಂದ) ಸಿದ್ಧವಾದ ‘ಜೋಡುಪದ’ಗಳದು (ಉದಾ: ಕಸಬರಿಕೆ, ಕಣ್ಣೀರು, ದೊಡ್ಡಮ್ಮ, ಕೈಗಂಬ ಇತ್ಯಾದಿ) ಮತ್ತೊಂದು ವಿಭಾಗ.
ಇದಲ್ಲದೆ ನಾಮಪದಗಳ ಅರ್ಥ, ಅವು ವಾಕ್ಯದಲ್ಲಿ ನಡೆಸಬೇಕಾಗಿರುವ ಕೆಲಸ, ಮೊದಲಾದವುಗಳನ್ನಾಧರಿಸಿಯೂ ಅವನ್ನು ಬೇರೆ ಬೇರೆ ಪಂಗಡಗಳಾಗಿ ವಿಂಗಡಿಸಲು ಸಾಧ್ಯವಿದೆ. ಘಟನೆಗಳನ್ನು ಹೆಸರಿಸುವ ಭಾವನಾಮಗಳು, ಗುಣಧರ್ಮಗಳನ್ನು ಹೆಸರಿಸುವ ಗುಣನಾಮಗಳು, ಗಣ್ಯ ಮತ್ತು ಅಗಣ್ಯ ನಾಮಪದಗಳು, ಸಜೀವಿ ಮತ್ತು ನಿರ್ಜೀವಿ ನಾಮಪದಗಳು, ಮನುಷ್ಯ- ಮನುಷ್ಯೇತರ ನಾಮಪದಗಳು, ಸಂಖ್ಯಾಪದಗಳು, ಸರ್ವನಾಮಗಳು ಇತ್ಯಾದಿ ವಿಭಜನೆಗಳನ್ನು ಇಲ್ಲಿ ಉದಾಹರಿಸಬಹುದು.
79
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಕ್ರಿಯಾಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ನಿರ್ದೇಶಿಸುವ ಕ್ರಿಯೆಯನ್ನು ಹೆಸರಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕುಣಿ ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಕುಣಿತ ಎಂಬ ನಾಮಪದ ಹೆಸರಿಸುತ್ತದೆ; ಬೆದರು ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಬೆದರಿಕೆ ಎಂಬ ನಾಮಪದವು ಹೆಸರಿಸುತ್ತದೆ. ಇಂತಹ ಪ್ರತ್ಯಯವಿರುವ ನಾಮಪದಗಳನ್ನು ‘ಭಾವನಾಮ’ಗಳೆಂದು ಕರೆಯುವ ರೂಢಿಯಿದೆ.
ಇದೇ ರೀತಿಯಲ್ಲಿ ಗುಣಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ಸೂಚಿಸುವ ಗುಣಧರ್ಮಗಳನ್ನು ಹೆಸರಿಸುವಂತಹ ನಾಮಪದ ಗಳನ್ನು ರಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಬಿಳಿ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಬಿಳುಪು ಎಂಬ ನಾಮಪದ ಹೆಸರಿಸುತ್ತದೆ; ಜಾಣ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಜಾಣ್ಮೆ ಎಂಬ ನಾಮಪದ ಹೆಸರಿಸುತ್ತದೆ. ಇಂತಹ ಪ್ರತ್ಯಯವಿರುವ ನಾಮಪದಗಳನ್ನು ‘ಗುಣನಾಮ’ಗಳೆಂದು ಕರೆಯಬಹುದು.
ಸಂಖ್ಯಾಪದಗಳೊಂದಿಗೆ ಬರುವ ಸಾಧ್ಯತೆಯನ್ನವಲಂಬಿಸಿ ನಾಮಪದಗಳನ್ನು ‘ಗಣ್ಯ’ ಮತ್ತು ‘ಅಗಣ್ಯ’ಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಲು ಸಾಧ್ಯ ವಿದೆ. ಆದರೆ ಈ ವಿಭಜನೆ ರೂಢನಾಮಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂಕಿತನಾಮಗಳೆಲ್ಲ ಗಣ್ಯನಾಮಪದಗಳಾಗಿ ಮಾತ್ರವೇ ಇರಬಲ್ಲುವೆಂಬುದನ್ನು ಮುಂದೆ (೩.೫.೧)ರಲ್ಲಿ ನೋಡಲಿರುವೆವು.
ಸಜೀವಿ ಮತ್ತು ನಿರ್ಜೀವಿ ಎಂಬುದಾಗಿ ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು, ಪ್ರಾಣಿ ಮೊದಲಾದುವನ್ನು ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದ್ದು, ಅವನ್ನು ಹೆಸರಿಸುವ ನಾಮಪದಗಳನ್ನೂ ಈ ಎರಡು ವಿಭಾಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಇದಲ್ಲದೆ, ಮನುಷ್ಯ-ಮನುಷ್ಯೇತರ ಎಂಬ ಇನ್ನೊಂದು ಸಜೀವಿಗಳ ವಿಭಜನೆ ಮತ್ತು ಗಂಡು-ಹೆಣ್ಣು ಎಂಬ ಮತ್ತೊಂದು ಸಜೀವಿಗಳ ವಿಭಜನೆ - ಇವೂ ಕೂಡ ಕನ್ನಡದ ನಾಮಪದಗಳಲ್ಲಿ ಕಾಣಿಸುತ್ತವೆ. ವಾಕ್ಯದಲ್ಲಿ ನಾಮಪದಗಳು ನಡೆಸುವ ಕೆಲಸವನ್ನಾಧರಿಸಿಯೂ ಅವನ್ನು ಬೇರೆ ಬೇರೆ ವಿಭಜನೆಗಳಿಗೆ ಒಳಪಡಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಗಣ್ಯ ವಸ್ತುಗಳ ಗಣನೆಯಲ್ಲಿ ಪ್ರಯುಕ್ತವಾಗುವ ಒಂದು, ಎರಡು, ಮೂರು ಮೊದಲಾದುವನ್ನು ಸಂಖ್ಯಾಪದಗಳೆಂಬ ವಿಭಾಗದಲ್ಲೂ ಮತ್ತು ಮಾತಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕೆಲಸಗಳನ್ನು ಸಾಧಿಸಿಕೊಡುವ ವ್ಯಕ್ತಿಗಳನ್ನು ಗುರುತಿಸುವ ನಾನು, ನೀನು, ಅವನು, ತಾನು ಮೊದಲಾದುವನ್ನು ‘ಸರ್ವನಾಮ’ಗಳೆಂಬ ವಿಭಾಗದಲ್ಲೂ ಸೇರಿಸಿ ಹೇಳಲು ಸಾಧ್ಯವಿದೆ. ಇಂತಹ ವಿಭಜನೆಗಳೂ ರೂಢನಾಮಗಳಲ್ಲಿ ಮಾತ್ರ ಕಾಣಿಸುತ್ತವೆ.
80
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ನಾಮಪದಗಳ ಈ ಬೇರೆ ಬೇರೆ ರೀತಿಯ ವಿಭಜನೆಗಳಲ್ಲಿ ಅತ್ಯಂತ ಪ್ರಾಮುಖ್ಯವಾಗಿರುವ ರೂಢನಾಮ-ಅಂಕಿತನಾಮ ಎಂಬ ವಿಭಜನೆಯನ್ನು ಈ ಕೆಳಗೆ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸಲಾಗಿದೆ.
೩.೬ ರೂಢನಾಮಗಳು ಮತ್ತು ಅಂಕಿತನಾಮಗಳು
ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬಲ್ಲ ನಾಮಪದಗಳನ್ನು ರೂಢನಾಮಗಳು ಮತ್ತು ಅಂಕಿತನಾಮಗಳು ಎಂಬ ಎರಡು ಮುಖ್ಯ ಪಂಗಡಗಳಲ್ಲಿ ವಿಂಗಡಿಸಲು ಸಾಧ್ಯವೆಂಬುದನ್ನು ಮೇಲೆ ನೋಡಿರುವೆವು. ಈ ಎರಡರ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ, ಅಂಕಿತನಾಮಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಇಲ್ಲವೇ ಸ್ಥಳಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಂಬಂಧಿತ ವಾಗುತ್ತವೆ, ಆದರೆ ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗುತ್ತವೆ.
ಉದಾಹರಣೆಗಾಗಿ ಬಸವಪ್ಪ ಎಂಬ ಅಂಕಿತನಾಮವನ್ನು ಪರಿಶೀಲಿಸ ಬಹುದು. ಒಂದೇ ಊರಿನಲ್ಲಿ ಈ ಹೆಸರಿನವರು ಹಲವು ಮಂದಿ ಇರಲು ಸಾಧ್ಯವಿದೆ. ಆದರೆ ಇವರೆಲ್ಲರಿಗೂ ಒಂದೇ ಬಾರಿಗೆ ಈ ಹೆಸರನ್ನು ಕೊಟ್ಟಿಲ್ಲ. ಪ್ರತಿಯೊಬ್ಬನಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಜನರು ಈ ಹೆಸರನ್ನಿಡಲು ನಿರ್ಧರಿಸಿರುತ್ತಾರೆ. ಇದಲ್ಲದೆ, ಹೆಸರು ಒಂದೇ ಆದರೂ ಈ ವ್ಯಕ್ತಿಗಳೊಳಗೆ ಬೇರೆ ಯಾವ ಸಾಮ್ಯತೆಯೂ ಇರಬೇಕಾಗಿಲ್ಲ.
ರೂಢನಾಮಗಳ ಬಳಕೆ ಇದರಿಂದ ತೀರ ಭಿನ್ನವಾದುದು. ಉದಾಹರಣೆಗಾಗಿ ಬಡಗಿ ಎಂಬ ರೂಢನಾಮವನ್ನು ಪರಿಶೀಲಿಸಬಹುದು. ಒಂದೇ ಊರಿನಲ್ಲಿ ಈ ನಾಮಪದ ಹೆಸರಿಸುವ ವ್ಯಕ್ತಿಗಳು ಹಲವಾರು ಮಂದಿ ಇರಲು ಸಾಧ್ಯವಿದೆ ಯೇನೋ ನಿಜ. ಆದರೆ, ಇಂತಹ ವ್ಯಕ್ತಿಗಳನ್ನೆಲ್ಲ ಈ ಪದದ ಮೂಲಕ ಹೆಸರಿಸುವ ನಿರ್ಧಾರವನ್ನು ಕನ್ನಡ ಭಾಷೆಯನ್ನಾಡುವ ಸಮಾಜದಲ್ಲಿ ಯಾವಾಗಲೋ ಒಮ್ಮೆ ಮಾಡಿರಬೇಕು. ಆ ನಿರ್ಧಾರದ ಫಲವಾಗಿ ಆವತ್ತು ಜೀವಿಸುತ್ತಿದ್ದ ಕೆಲವು ವಿಶಿಷ್ಟ ವ್ಯಕ್ತಿಗಳನ್ನು ಮಾತ್ರವಲ್ಲದೆ ಮುಂದೆ ಜೀವಿಸ ಲಿರುವ (ಮತ್ತು ಅದಕ್ಕಿಂತ ಹಿಂದೆ ಜೀವಿಸುತ್ತಿದ್ದ) ಅಂತಹ ಇತರ ಎಲ್ಲಾ ವ್ಯಕ್ತಿಗಳನ್ನೂ ಅದು ಹೆಸರಿಸುವಂತಾಯಿತು. ಈ ಪದ ಹೆಸರಿಸುವ ವ್ಯಕ್ತಿಗಳೊಳಗೆ ಒಂದು ರೀತಿಯ ಸಾಮ್ಯವೂ ಇದೆ. ಅವರೆಲ್ಲ ಒಂದೇ ರೀತಿಯ (ಮರದ ಕೆಲಸ ಮಾಡುವ) ವೃತ್ತಿಯಲ್ಲಿರುವವರು ತಾನೇ!.
೩.೬.೧ ಅರ್ಥದಲ್ಲಿ ವ್ಯತ್ಯಾಸ
ಆದರೆ ಈ ವ್ಯತ್ಯಾಸವನ್ನಾಧರಿಸಿ ರೂಢನಾಮಗಳಿಗೆ ಅರ್ಥವಿದೆ (ಆ ಅರ್ಥವು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳೊಳಗೆ ಸಮಾನವಾಗಿರುವ ಗುಣಧರ್ಮವನ್ನವಲಂಬಿಸಿರುತ್ತದೆ) ಮತ್ತು ಅಂಕಿತನಾಮಗಳಿಗೆ (ಅವು
81
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ನಡುವೆ ಸಾಮ್ಯವಿರಬೇಕಾಗಿಲ್ಲ ಎಂಬುದರಿಂದಾಗಿ) ಅರ್ಥವಿಲ್ಲ ಎಂದು ವಾದಿಸಿದೆವಾದರೆ, ಅದು ತಪ್ಪಾದೀತು. ಯಾಕೆಂದರೆ, ಎರಡಕ್ಕೂ ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮಗಳನ್ನಾಧರಿಸಿ ಅರ್ಥ ಹೇಳಲು ಸಾಧ್ಯವಿದೆ ಮತ್ತು ಎರಡಕ್ಕೂ ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯ ವಿಲ್ಲ.
ಅರ್ಥದ ಮಟ್ಟಿಗೆ ಈ ಎರಡು ರೀತಿಯ ನಾಮಪದಗಳ ನಡುವಿರುವ ವ್ಯತ್ಯಾಸವೇನೆಂದರೆ, ಒಂದು ರೂಢನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಒಂದೇ ಬಾರಿಗೆ ಸಂಬಂಧಿತವಾಗುವುದಾದ ಕಾರಣ, ಅವೆಲ್ಲವುಗಳಿಗೂ ಸಮಾನವಾಗಿರುವಂತಹ ಗುಣಧರ್ಮಗಳು ಅದರ ಅರ್ಥವಾಗ ಬಲ್ಲುವು. ಆದರೆ, ಒಂದು ಅಂಕಿತನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಬೇರೆ ಬೇರಾಗಿ ಸಂಬಂಧಿತವಾಗುವುದಾದ ಕಾರಣ, ಅದು ಹೆಸರಿಸುವ ಪ್ರತಿಯೊಂದು ವ್ಯಕ್ತಿ ಇಲ್ಲವೇ ವಸ್ತುವಿಗೂ ಸಂಬಂಧಿಸಿದಂತೆ ಅದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳಿರುತ್ತವೆ. ಈ ಎರಡು ರೀತಿಯ ನಾಮಪದಗಳ ಬಳಕೆಗೂ ಅರ್ಥದ ಅವಶ್ಯಕತೆಯಿದೆಯೆಂಬುದನ್ನು ಈ ಕೆಳಗಿನ ವಿಷಯ ಸ್ಪಷ್ಟಪಡಿಸುತ್ತದೆ.
ರೂಢನಾಮದ ಅರ್ಥವನ್ನಾಧರಿಸಿ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತು ವನ್ನು ಗುರುತಿಸಲು ಸಾಧ್ಯವಿರುವಂತೆ, ಅಂಕಿತನಾಮದ ಅರ್ಥವನ್ನಾಧರಿಸಿ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವನ್ನೂ ಗುರುತಿಸಲು ಸಾಧ್ಯವಿದೆ. ಉದಾ ಹರಣೆಗಾಗಿ ನಳಿನಿ ಎಂಬ ಅಂಕಿತನಾಮ ನಮಗೆ ಪರಿಚಯವಿರುವ ಹುಡುಗಿ ಯೊಬ್ಬಳನ್ನು ಹೆಸರಿಸುವುದಿದ್ದಲ್ಲಿ, ಆ ಹುಡುಗಿಯ ಕೆಲವು ವಿಶಿಷ್ಟವಾದ ಗುಣ ಧರ್ಮಗಳನ್ನು ಅದರ ಅರ್ಥವೆಂದು ಪರಿಗಣಿಸಲು ಸಾಧ್ಯವಿದೆ. ನಳಿನಿ ಎಂಬ ಪದದ ಮೂಲಕ ನಾವು ಆ ಹುಡುಗಿಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ - ಆಕೆ ಲಂಗ ಹಾಕಿರುವಾಗ, ಸೀರೆ ತೊಟ್ಟಿರುವಾಗ, ಇಲ್ಲವೇ ಕಾಯಿಲೆಯಿಂದ ಬಹಳ ಕೃಶವಾಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ಗುರುತಿಸಬೇಕಿದ್ದಲ್ಲಿ ಈ ವಿಶಿಷ್ಟ ಗುಣಧರ್ಮಗಳು, ಎಂದರೆ ನಳಿನಿ ಎಂಬ ಪದಕ್ಕೆ ನಾವು ಕೊಡಬಹುದಾದ ಅರ್ಥ, ಸಹಾಯಕವಾಗುತ್ತದೆ.
ಹುಡುಗಿ ಎಂಬ ರೂಢನಾಮಕ್ಕೂ ಅದು ಹೆಸರಿಸುವ ವ್ಯಕ್ತಿಗಳಲ್ಲಿ ಕಾಣಿಸುವ ಕೆಲವು ವಿಶಿಷ್ಟವಾದ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳಬೇಕಾಗುತ್ತದೆ, ಮತ್ತು ಈ ವ್ಯಕ್ತಿಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹುಡುಗಿ ಎಂಬ ಹೆಸರಿನ ಮೂಲಕ ಗುರುತಿಸಬೇಕಾದಾಗ ಈ ಗುಣಧರ್ಮಗಳು
- ಎಂದರೆ ಅವನ್ನಾಧರಿಸಿ ಸಾಧಿಸಲಾಗಿರುವ ಹುಡುಗಿ ಎಂಬ ಪದದ ಅರ್ಥ ಸಹಾಯಕ್ಕೆ ಬರುತ್ತದೆ. ಆದರೆ ಅಂಕಿತನಾಮದ ಹಾಗೆ ಇಲ್ಲಿ ಒಂದೇ ವ್ಯಕ್ತಿಯ ಗುಣಧರ್ಮದ ಆಧಾರದ ಮೇಲೆ ಅರ್ಥ ಹೇಳುವುದಿಲ್ಲ. ಇದಕ್ಕೆ ಬದಲು ಆ
82
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಪದ ಹೆಸರಿಸುವ ಬೇರೆ ಬೇರೆ ಹಲವಾರು ವ್ಯಕ್ತಿಗಳಿಗೆ ಸಮಾನವಾಗಿರುವ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳುತ್ತೇವೆ.
ಆದರೆ, ಒಂದು ಅಂಕಿತನಾಮ ಈ ರೀತಿ ಹಲವಾರು ವ್ಯಕ್ತಿಗಳನ್ನು ಹೆಸರಿಸುತ್ತಿದೆಯಾದರೆ (ಎಂದರೆ, ನಳಿನಿ ಎಂಬ ಹೆಸರಿನ ಹುಡುಗಿಯರು ಹಲವರಿರುವರಾದರೆ) ಅವರಲ್ಲಿ ಪ್ರತಿಯೊಬ್ಬರಿಗೂ ಸಂಬಂದಿಸಿದಂತೆ ಆ ಪದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳನ್ನು ಸಾಧಿಸಿಕೊಳ್ಳಬೇಕಾದೀತು. ಅಂಕಿತನಾಮ ವನ್ನು ಈ ವ್ಯಕ್ತಿಗಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರಾಗಿ ಸಂಬಂಧಿಸ ಲಾಗಿದೆ ಮತ್ತು ರೂಢನಾಮವನ್ನು ಒಂದೇ ಸಂದರ್ಭದಲ್ಲಿ ಎಲ್ಲರಿಗೂ ಒಟ್ಟಾಗಿ ಸಂಬಂಧಿಸಲಾಗಿದೆ ಎಂಬುದೇ ಈ ವ್ಯತ್ಯಾಸಕ್ಕೆ ಮೂಲ ಕಾರಣ.
ರೂಢನಾಮದ ಅರ್ಥವನ್ನು ನೇರವಾಗಿ ಅದರ ಒಳರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದೆಂಬುದನ್ನು ಮೇಲೆಯೇ ನೋಡಿರುವೆವು. ಕರಿಹಲಗೆ ಎಂಬ ರೂಢನಾಮವು ಗುರುತಿಸುವ ಸಾಧನ ಕಪ್ಪಾಗಿಯೂ ಇರ ಬೇಕಾಗಿಲ್ಲ, ಹಲಗೆಯಿಂದ ತಯಾರಿಸಿದ್ದೂ ಆಗಬೇಕಾಗಿಲ್ಲ; ಊಟದ ಸಮಯ ದಲ್ಲಿ ಕೊಡುವ ಬಿಸಿನೀರು ತಣ್ಣೀರಿಗಿಂತಲೂ ತಣ್ಣಗಾಗಿರಲು ಸಾಧ್ಯವಿದೆ; ಚಿಕ್ಕಮ್ಮನು ಪ್ರಾಯದಲ್ಲಿ ಮತ್ತು ಗಾತ್ರದಲ್ಲಿ ಅಮ್ಮನಿಗಿಂತ ದೊಡ್ಡವಳಾಗಿರಲು ಸಾಧ್ಯವಿದೆ; ಇಂತಹ ಹಲವಾರು ಉದಾಹರಣೆಗಳನ್ನು ಇದಕ್ಕೆ ಆಧಾರವಾಗಿ ಕೊಡಬಹುದು.
ಅಂಕಿತನಾಮದ ಅರ್ಥವನ್ನೂ ಇದೇ ರೀತಿಯಲ್ಲಿ ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಕ್ಷೀರಸಾಗರ ಎಂಬ ಹೆಸರು (ಅಂಕಿತನಾಮ) ಇರುವ ಒಬ್ಬ ವ್ಯಕ್ತಿಯ ಮನೆಯಲ್ಲಿ ಸ್ವಲ್ಪವೂ ಹಾಲಿಲ್ಲದಿರಲು ಸಾಧ್ಯವಿದೆ; ಕರಿಯಪ್ಪ ಎಂಬ ಹೆಸರಿನ ವ್ಯಕ್ತಿ ಬೆಳ್ಳಪ್ಪ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿಗಿಂತ ಹೆಚ್ಚು ಬೆಳ್ಳಗಿರಲು ಸಾಧ್ಯವಿದೆ; ವಿದ್ಯಾಶಾಸ್ತ್ರಿ ಎಂಬ ಹುಡುಗಿ ನಾಲ್ಕು ಬಾರಿ ಪರೀಕ್ಷೆಯಲ್ಲಿ ಫೇಲಾಗಿರಲು ಸಾಧ್ಯವಿದೆ; ಇತ್ಯಾದಿ. ಈ ಎರಡು ರೀತಿಯ ನಾಮಪದಗಳೂ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುವಾದ ಕಾರಣ, ಅವುಗಳ ಅರ್ಥವನ್ನು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾ ದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಸಾಧಿಸಲು ಸಾಧ್ಯ. ಈ ವಿಷಯದಲ್ಲಿ ರೂಢನಾಮ ಮತ್ತು ಅಂಕಿತನಾಮಗಳ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನಿಲ್ಲಿ ಗಮನಿಸಿಕೊಳ್ಳುವುದು ಅವಶ್ಯ.
೩.೬.೨ ಸಂಬಂಧದಲ್ಲಿ ವ್ಯತ್ಯಾಸ
ಒಂದು ಭಾಷೆಯಲ್ಲಿ ಬರುವ ರೂಢನಾಮಗಳ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಅಂಕಿತನಾಮಗಳ ನಡುವೆ ಇಂತಹ ಸಂಬಂಧಗಳಿರುವುದಿಲ್ಲ ಎಂಬುದು ಈ ಎರಡು ರೀತಿಯ ನಾಮಪದಗಳ
83
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸ. ಇದಕ್ಕೂ ಕೂಡ ರೂಢನಾಮಗಳು ತಾವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದುವನ್ನು ಒಟ್ಟಾಗಿ ಹೆಸರಿಸುತ್ತವೆ, ಮತ್ತು ಅಂಕಿತನಾಮಗಳು ಅವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೆಸರಿಸುತ್ತವೆ ಎಂಬುದೇ ಮೂಲ ಕಾರಣ.
ಒಬ್ಬ ವ್ಯಕ್ತಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಸಮಾನ ಗುಣಧರ್ಮಗಳನ್ನು ತೋರಿಸುತ್ತಿರಲು ಸಾಧ್ಯವಿದೆಯಾದ ಕಾರಣ, ಆ ವ್ಯಕ್ತಿಯನ್ನು ಬೇರೆ ಬೇರೆ ರೂಢನಾಮಗಳ ಮೂಲಕ ಗುರುತಿಸಲು ಸಾಧ್ಯವಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಯನ್ನು ಮುದುಕ, ಬಡವ, ಕುಳ್ಳ, ಮೇಷ್ಟ್ರು, ಬ್ರಹ್ಮಚಾರಿ, ಕುರುಡ ಮೊದಲಾದ ಹಲವಾರು ರೂಢನಾಮಗಳ ಮೂಲಕ ಗುರುತಿಸಿ ಹೇಳಲು ಸಾಧ್ಯ ವಿದೆ. ಆತನಿಗೆ ಇತರ ಮುದುಕರೊಂದಿಗೆ ಸಮಾನ ಗುಣಧರ್ಮಗಳಿವೆಯಾದರೆ ಆತನನ್ನು ಮುದುಕ ಎಂಬ ರೂಢನಾಮದಿಂದ ಗುರುತಿಸಬಹುದು, ಮತ್ತು ಅದೇ ವ್ಯಕ್ತಿಗೆ ಇತರ ಬಡವರೊಂದಿಗೆ ಸಮಾನ ಗುಣಧರ್ಮಗಳಿವೆಯಾದರೆ ಆತನನ್ನು ಬಡವ ಎಂಬ ರೂಢನಾಮದಿಂದ ಗುರುತಿಸಬಹುದು, ಇತ್ಯಾದಿ.
ಇದಲ್ಲದೆ, ರೂಢನಾಮಗಳು ಗುರುತಿಸುವ ವ್ಯಕ್ತಿಗಳು ಎಂತೆಂತಹ ಗುಂಪು ಗಳಲ್ಲೆಲ್ಲ ಸೇರಿಕೊಂಡಿರಬಲ್ಲರು ಮತ್ತು ಆ ಗುಂಪುಗಳ ನಡುವೆ ಯಾವ ಯಾವ ರೀತಿಯ ಸಂಬಂಧಗಳೆಲ್ಲ ಇವೆ ಎಂಬ ವಿಷಯದ ಆಧಾರದ ಮೇಲೆ ಅವರನ್ನು ಗುರುತಿಸುವ ರೂಢನಾಮಗಳ ನಡುವೆಯೂ ಬೇರೆ ಬೇರೆ ರೀತಿಯ ಸಂಬಂಧ ಗಳನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಒಂದು ರೂಢನಾಮವು ಗುರುತಿಸುವ ವ್ಯಕ್ತಿಗಳನ್ನೆಲ್ಲ ಇನ್ನೊಂದು ರೂಢನಾಮವೂ ಗುರುತಿಸಬಲ್ಲುದಾದರೆ (ಉದಾ: ನೌಕರ ಮತ್ತು ಸೇವಕ) ಅಂತಹ ಎರಡು ಪದಗಳು ಸಮಾನಾರ್ಥಕಗಳು ಇಲ್ಲವೇ ‘ಪರ್ಯಾಯ’ ಪದಗಳೆಂದು ಹೇಳಬಹುದು. ಎರಡನೆಯ ಪದ ಬೇರೆಯೂ ಕೆಲವು ವ್ಯಕ್ತಿಗಳನ್ನು ಗುರುತಿಸಬಲ್ಲುದಾದರೆ (ಉದಾ: ಗಂಡಸು ಮತ್ತು ಮನುಷ್ಯ) ಅವುಗಳಲ್ಲಿ ಮೊದಲನೆಯದು ಎರಡನೆಯದರಲ್ಲಿ ‘ಅಂತರ್ಗತ’ವಾಗಿರುವ ಪದವೆಂದು ಹೇಳಬಹುದು.
ಎರಡು ರೂಢನಾಮಗಳಲ್ಲಿ ಒಂದು ಗುರುತಿಸುವ ವ್ಯಕ್ತಿಗಳಲ್ಲಿ ಕೆಲವರನ್ನು ಮಾತ್ರ ಇನ್ನೊಂದು ಗುರುತಿಸುತ್ತಿದ್ದು, ಅದು ಬೇರೆ ಕೆಲವು ವ್ಯಕ್ತಿಗಳನ್ನೂ ಗುರುತಿಸುತ್ತಿದೆಯಾದರೆ (ಉದಾ: ಮುದುಕ ಮತ್ತು ಬಡವ) ಅವುಗಳೊಳಗೆ ಒಂದನ್ನೊಂದು ‘ಸೀಳುವ’ ಸಂಬಂಧವಿದೆಯೆಂದು ಹೇಳಬಹುದು. ಮತ್ತು ಎರಡು ರೂಢನಾಮಗಳು ಗುರುತಿಸುವ ವ್ಯಕ್ತಿಗಳು ಭಿನ್ನ ಭಿನ್ನರಾಗಿರುವರಾದರೆ (ಉದಾ: ಗಂಡಸು ಮತ್ತು ಹೆಂಗಸು) ಅವುಗಳ ನಡುವೆ ‘ಅಸಂಗತ’ ಸಂಬಂಧವಿದೆ ಯೆಂದು ಹೇಳಬಹುದು.
ಆದರೆ, ಅಂಕಿತನಾಮಗಳ ನಡುವೆ ಈ ರೀತಿ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಕಾಣಲು ಸಾಧ್ಯವಾಗದು. ಹೆಚ್ಚಿನ ಅಂಕಿತನಾಮಗಳಿಗೂ ಅವು ಗುರುತಿಸುವ ವ್ಯಕ್ತಿಗಳು (ಇಲ್ಲವೇ ವಸ್ತುಗಳು) ಹಲವಿರುವುದು ನಿಜವಾದರೂ
84
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಇಂತಹ ವ್ಯಕ್ತಿ ಇಲ್ಲವೇ ವಸ್ತುಗಳೊಳಗೆ ಸಾಮ್ಯವೇನೂ ಇರಬೇಕಾಗಿಲ್ಲ. ಈ ನಿಯಮಕ್ಕೆ ಕೆಲವು ಅಪವಾದಗಳಿವೆಯೇನೋ ನಿಜ. ಉದಾಹರಣೆಗಾಗಿ, ಗಂಡಸರನ್ನು ಮತ್ತು ಹೆಂಗಸರನ್ನು ಗುರುತಿಸುವ ಅಂಕಿತನಾಮಗಳು ಸಾಮಾನ್ಯ ವಾಗಿ ಬೇರೆ ಬೇರಾಗಿರುತ್ತವೆ. ಜಾನಕಿ ಎಂಬ ಹೆಸರನ್ನು ಗಂಡಸರಿಗಾಗಲೀ ಇಲ್ಲವೇ ರಾಜು ಎಂಬ ಹೆಸರನ್ನು ಹೆಂಗಸರಿಗಾಗಲೀ ಕೊಟ್ಟಿರುವುದನ್ನು ನಾವು ಕಾಣುವುದಿಲ್ಲ. ಹಾಗಾಗಿ, ಈ ಎರಡು ರೀತಿಯ ಪದಗಳ ನಡುವೆ ‘ಅಸಂಗತ’ ಎಂಬ ಸಂಬಂಧವಿದೆಯೆಂದು ವಾದಿಸಲು ಸಾಧ್ಯವಿದೆ.
ಆದರೆ ಈ ನಿಯಮಕ್ಕೆ ಅಪವಾದಗಳಿರಲೂ ಸಾಧ್ಯವಿದೆ. ಇಲ್ಲಿ ಗಮನಿಸ ಬೇಕಾಗಿರುವ ಮುಖ್ಯವಾದ ಅಂಶವೇನೆಂದರೆ, ಅಂಕಿತನಾಮಗಳ ಬಳಕೆಗೆ ಅವು ಗುರುತಿಸುವ ಬೇರೆ ಬೇರೆ ವ್ಯಕ್ತಿಗಳ ಇಲ್ಲವೇ ವಸ್ತುಗಳ ನಡುವೆ ಸಾಮ್ಯವಿರುವ ಅವಶ್ಯಕತೆಯಿಲ್ಲ, ಮತ್ತು ಹಾಗೆ ಇದ್ದರೂ ಅದು ಅವುಗಳ ತಯಾರಿಕೆ ಮತ್ತು ಬಳಕೆಯ ಹಿಂದಿರುವ ಮೂಲ ತತ್ವಗಳಿಂದ ಸಾಧಿತವಾದುದಲ್ಲ.
೩.೬.೩ ಗಣ್ಯ ಮತ್ತು ಅಗನ್ಯ
ರೂಢನಾಮಗಳನ್ನು ಗಣ್ಯ ಮತ್ತು ಅಗಣ್ಯವೆಂದು ಎರಡು ವಿಧವಾಗಿ ವಿಂಗಡಿಸಲು ಸಾಧ್ಯವಿದೆ. ಗಣ್ಯನಾಮಗಳು ಗುರುತಿಸುವ ವಸ್ತುಗಳನ್ನು ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ಲೆಕ್ಕ ಹಾಕಿ ಹೇಳಲು ಸಾಧ್ಯವಿದೆ (ಉದಾ: ಬಾಲೆಹಣ್ಣು) ಮತ್ತು ಅಗಣ್ಯನಾಮಗಳು ಗುರುತಿಸುವ ವಸ್ತುಗಳನ್ನು ಈ ರೀತಿ ಲೆಕ್ಕ ಹಾಕಿ ಹೇಳಲು ಸಾಧ್ಯವಿಲ್ಲ (ಉದಾ: ನೀರು) ಎಂಬುದೇ ಈ ಎರಡು ರೀತಿಯ ರೂಢನಾಮಗಳ ನಡುವಿರುವ ವ್ಯತ್ಯಾಸ. ಗಣ್ಯನಾಮಗಳು ಗುರುತಿಸುವ ವಸ್ತುಗಳು ನಮ್ಮ ಕಣ್ಣಿಗೆ ಕಾಣಿಸುವಂತೆ ಪ್ರತ್ಯೇಕ ಪ್ರತ್ಯೇಕವಾದ ಅಸ್ತಿತ್ವವಿರುವ ಹಲವು ವಸ್ತುಗಳ ಸಮುದಾಯವಾಗಿರುವುದೇ ಇದಕ್ಕೆ ಕಾರಣ.
ಆದರೆ, ಅಂಕಿತನಾಮಗಳನ್ನು ಈ ರೀತಿ ಗಣ್ಯ ಮತ್ತು ಅಗಣ್ಯ ಎಂಬುದಾಗಿ ವಿಂಗಡಿಸಲು ಸಾಧ್ಯವಾಗದು. ಅವುಗಳ ಮೂಲಕ ಸಾಮಾನ್ಯವಾಗಿ ಗಣ್ಯವಸ್ತು ಗಳನ್ನು ಮಾತ್ರವೇ ಗುರುತಿಸಲಾಗುತ್ತದೆ ಎಂಬುದೇ ಇದಕ್ಕೆ ಕಾರಣ. ಇದು ಈ ಎರಡು ರೀತಿಯ ನಾಮಪದಗಳ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವೆಂದು ಹೇಳಬಹುದು. ನೀರಿನಂತಹ ಅಗಣ್ಯವಸ್ತುಗಳು ಅವುಗಳ ಪಾತ್ರೆಗಳ ಆಧಾರದ ಮೇಲೆ ಪ್ರತ್ಯೇಕತೆಯನ್ನು ಪಡೆದು ಗಣ್ಯವಸ್ತುಗಳಾದಾಗ ಮಾತ್ರ ಅವನ್ನು ಅಂಕಿತನಾಮಗಳ ಮೂಲಕ ಗುರುತಿಸಲು ಸಾಧ್ಯವಾದೀತು. ಉದಾಹರಣೆಗಾಗಿ ಒಂದು ನದಿಯಾಗಿ ಹರಿಯುವ ನೀರನ್ನು ಕಾವೇರಿ ಎಂಬ ಅಂಕಿತನಾಮದ ಮೂಲಕ ಗುರುತಿಸಬಲ್ಲೆವು ಮತ್ತು ಒಂದು ದೇಶವಾಗಿ ನಿಲ್ಲುವ ಮಣ್ಣನ್ನು ಭಾರತ ಎಂಬ ಅಂಕಿತನಾಮದ ಮೂಲಕ ಗುರುತಿಸಬಲ್ಲೆವು, ಇತ್ಯಾದಿ.
ಅಂಕಿತನಾಮಗಳನ್ನು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಅನ್ವಯಿಸಬೇಕಾಗಿದೆಯಾದ ಕಾರಣ ಮತ್ತು ಅಗಣ್ಯ ವಸ್ತು
85
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗಳು ಈ ರೀತಿ ಪ್ರತ್ಯೇಕ ಪ್ರತ್ಯೇಕವಾಗಿ ಒಡೆದುಕೊಂಡಿಲ್ಲವಾದ ಕಾರಣ, ಅಂಕಿತನಾಮಗಳು ಅಗಣ್ಯವಸ್ತುಗಳಿಗೆ ಹೆಸರುಗಳಾಗಿ ಬರುವುದಿಲ್ಲವೆಂದು ಹೇಳ ಬಹುದು. ಹೀಗೆ ಈ ಮೂರನೆಯ ಮುಖ್ಯ ವ್ಯತ್ಯಾಸವೂ ಈ ಎರಡು ರೀತಿಯ ನಾಮಪದಗಳು ಯಾವ ರೀತಿಯಲ್ಲಿ ಅವು ಗುರುತಿಸುವ ವಸ್ತುಗಳೊಂದಿಗೆ ಸಂಬಂಧಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.
೩.೭ ಸಾರಾಂಶ
ನಾಮಪದ ಇಲ್ಲವೇ ನಾಮಪದಗುಚ್ಛಗಳನ್ನು ಪ್ರಾಮುಖ್ಯವಾಗಿ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ವಾಕ್ಯಗಳಲ್ಲಿ ಬಳಸುತ್ತೇವೆ. ಈ ಗುರುತಿಸುವ ಕೆಲಸವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ಬೇರೆ ಬೇರೆ ವಿಧಾನಗಳ ಮೂಲಕ ನಡೆಸಲು ಸಾಧ್ಯವಿದೆ. ಸಾಮಾನ್ಯ ವಾಗಿ, ನಾಮಪದಗಳು ಹೆಸರಿಸುವ ವಿಧಾನದಲ್ಲೂ ಮತ್ತು ನಾಮಪದಗುಚ್ಛಗಳು ವರ್ಣಿಸುವ ವಿಧಾನದಲ್ಲೂ ಬಳಕೆಯಾಗುತ್ತವೆ. ಆದರೆ ಕೆಲವು ವಿಶಿಷ್ಟವಾದ ನಾಮಪದಗುಚ್ಛಗಳು ಹೆಸರಿಸುವ ವಿಧಾನದಲ್ಲೂ ಬಳಕೆಯಾಗಬಲ್ಲುವು. ಇದ ಲ್ಲದೆ, ವರ್ಣಿಸುವ ವಿಧಾನದಲ್ಲಿ ಕ್ರಿಯಾಪದಗಳ ಮತ್ತು ಗುಣಪದಗಳ ಕೆಲವು ರೂಪಗಳೂ ಬರಬಲ್ಲುವು.
ಕೆಲವು ಸಂದರ್ಭಗಳಲ್ಲಿ ನಾಮಪದಗಳನ್ನು ನಾಮಪದಗುಚ್ಛಗಳಿಂದ ಪ್ರತ್ಯೇ ಕಿಸುವುದು ಸ್ವಲ್ಪ ಕಷ್ಟವೆಂದು ತೋರಬಹುದು. ಆದರೆ ಹೆಸರಿಸುವ ವಿಧಾನದಲ್ಲಿ ಬಳಕೆಯಾಗುವ ಪದಕ್ಕೂ ಮತ್ತು ವರ್ಣಿಸುವ ವಿಧಾನದಲ್ಲಿ ಬಳಕೆಯಾಗುವ ಪದಗುಚ್ಛ ಇಲ್ಲವೇ ಪದರೂಪಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಈ ಎಲ್ಲಾ ವ್ಯತ್ಯಾಸಗಳನ್ನೂ ಆಧಾರವಾಗಿರಿಸಿಕೊಂಡು ಅವನ್ನು ಬೇರ್ಪಡಿಸಲು ಸಾಧ್ಯ. ಪದಗಳ ಒಳರಚನೆಯನ್ನು ವರ್ಣಿಸುವ ಈ ಪುಸ್ತಕದಲ್ಲಿ ಹೆಸರಿಸುವ ವಿಧಾನ ದಲ್ಲಿ ಬಳಕೆಯಾಗುವ ಪದಗಳನ್ನು ಮಾತ್ರ ಪರಿಶೀಲಿಸುವ ಅವಶ್ಯಕತೆಯಿದೆ. ವರ್ಣಿಸುವ ವಿಧಾನದಲ್ಲಿ ಬರುವ ಪದಗುಚ್ಛಗಳು ಮತ್ತು ಪದರೂಪಗಳು ವಾಕ್ಯರಚನೆಯ ನಿಯಮಕ್ಕೆ ಅನುಸಾರವಾಗಿ ತಯಾರಾಗುವ ಕಾರಣ, ಅವನ್ನು ವಾಕ್ಯಗಳ ಒಳರಚನೆಯೆಂಬ ಬೇರೊಂದು ಪುಸ್ತಕದಲ್ಲಿ ಪರಿಶೀಲಿಸಬಹುದು.
ಹೆಸರಿಸುವ ವಿಧಾನದಲ್ಲಿ ಬರುವ ಪದಗಳನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಇವುಗಳಲ್ಲಿ ರೂಢನಾಮ ಮತ್ತು ಅಂಕಿತನಾಮ ಎಂಬ ವಿಂಗಡನೆ ಬಹಳ ಪ್ರಾಮುಖ್ಯವಾದುದು. ಅಂಕಿತನಾಮಗಳಲ್ಲಿ ಪ್ರತಿಯೊಂದನ್ನೂ ಅವು ಹೆಸರಿಸುವ ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಅನ್ವಯಿಸಲಾಗಿದೆ, ಮತ್ತು ರೂಢನಾಮಗಳಲ್ಲಿ ಪ್ರತಿಯೊಂದನ್ನೂ ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಒಂದೇ ಬಾರಿಗೆ ಅನ್ವಯಿಸ
86
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನಾಮಪದಗಳ ಒಳರಚನೆ
ಲಾಗಿದೆ ಎಂಬುದೇ ಈ ಎರಡು ರೀತಿಯ ನಾಮಪದಗಳ ನಡುವಿರುವ ಮುಖ್ಯ ವ್ಯತ್ಯಾಸ.
87
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ನಾಲ್ಕು
ಪ್ರತ್ಯಯವಿರುವ ನಾಮಪದಗಳು
೪.೧ ಪೀಠಿಕೆ
ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ಪ್ರತ್ಯಯವಿರುವ ನಾಮಪದಗಳು ಬಳಕೆಯಲ್ಲಿವೆ. ಇವು ಅನುಕ್ರಮವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಾಗಿರುತ್ತವೆ. ಉದಾಹರಣೆಗಾಗಿ ಗಾಣಿಗ ಎಂಬ ಪ್ರತ್ಯಯವಿರುವ ನಾಮ ಪದವು ಗಾಣ ಎಂಬ ನಾಮಪದಕ್ಕೆ ಇಗ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಅಗಲಿಕೆ ಎಂಬ ನಾಮಪದವು ಅಗಲು ಎಂಬ ಕ್ರಿಯಾ ಪದಕ್ಕೆ ಇಕೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಮತ್ತು ಬಡವ ಎಂಬ ನಾಮಪದವು ಬಡ ಎಂಬ ಗುಣಪದಕ್ಕೆ ವ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ.
ಈ ಮೂರು ರೀತಿಯ ಪ್ರತ್ಯಯವಿರುವ ನಾಮಪದಗಳಲ್ಲಿ ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಾಗಿರುವ ಎರಡನೆಯ ರೀತಿಯ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ನಾಮಪದಗಳನ್ನು ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೇ ಅಥವಾ ಅದೇ ರೂಪದ ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೇ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿರುವುದೂ ಇದೆ. ಉದಾಹರಣೆಗಾಗಿ ಹಿಡಿಕೆ ಎಂಬ ನಾಮಪದವನ್ನು ಹಿಡಿ (ಉದಾ: ಕತ್ತಿಯನ್ನು ಹಿಡಿ) ಎಂಬ ಕ್ರಿಯಾಪದದಿಂದಲಾಗಲಿ ಇಲ್ಲವೇ ಅದೇ ರೂಪದ ಹಿಡಿ (ಉದಾ: ಕತ್ತಿಯ ಹಿಡಿ) ಎಂಬ ನಾಮಪದದಿಂದಲಾಗಲಿ ತಯಾರಿಸಿರಲು ಸಾಧ್ಯವಿದೆ. (ಹಿಡಿ ಎಂಬ ನಾಮಪದದಲ್ಲಿ ‘ಸೊನ್ನೆ’ ಪ್ರತ್ಯಯವಿದೆಯೆಂದು ಹೇಳುವುದು (೪.೩.೧೧
ಪ್ರತ್ಯಯವಿರುವ ನಾಮಪದಗಳು
ನೋಡಿ) ಈ ಸಮಸ್ಯೆಗೆ ವ್ಯಯಾಕರಣಿಗಳು ಕಂಡುಹಿಡಿದಿರುವ ಒಂದು ಪರಿಹಾರ.)
ಪ್ರತ್ಯಯವಿರುವ ನಾಮಪದಗಳಲ್ಲಿ ಹೆಚ್ಚಿನವೂ ಒಂದು ಪದಕ್ಕೆ ಒಂದು ಪ್ರತ್ಯಯವನ್ನು ಮಾತ್ರ ಸೇರಿಸುವುದರ ಮೂಲಕ ತಯಾರಾದವುಗಳು. ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿರುವ ನಾಮಪದಗಳ ಸಂಖ್ಯೆ ಕನ್ನಡ ದಲ್ಲಿ ಬಹಳ ಕಡಿಮೆ. ತಿಳುವಳಿಕೆ ಎಂಬುದು ಈ ರೀತಿ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳಿರುವ ನಾಮಪದ. ಇದರಲ್ಲಿ ತಿಳಿ ಎಂಬ ಕ್ರಿಯಾಪದಕ್ಕೆ ವಳಿ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳನ್ನು ಸೇರಿಸಲಾಗಿದೆ. ಇಂತಹ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳಿರುವ ನಾಮಪದಗಳಲ್ಲಿ ಹೆಚ್ಚಿನವೂ ಪ್ರತ್ಯಯಗಳನ್ನು ಒಂದೊಂದಾಗಿ ಎಂದರೆ, ಎರಡು ಬೇರೆ ಬೇರೆ ಸ್ತರಗಳಲ್ಲಿ ಸೇರಿಸುವುದರ ಮೂಲಕ ತಯಾ ರಾಗಿರುತ್ತವೆ ಎಂಬುದನ್ನು ಗಮನಿಸಬಹುದು.
ಉದಾಹರಣೆಗಾಗಿ ಮೀನುಗಾರಿಕೆ ಎಂಬ ಪದದಲ್ಲಿ ಮೀನು ಎಂಬ ನಾಮ ಪದದೊಂದಿಗೆ ಗಾರ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳು ಬರುವು ವಾದರೂ ಅದನ್ನು ಮೊದಲಿಗೆ ಮೀನು ಎಂಬ ಪದಕ್ಕೆ ಗಾರ ಎಂಬ ಪ್ರತ್ಯಯ ವನ್ನು ಸೇರಿಸಿ ಮೀನುಗಾರ ಎಂಬ ಪದವನ್ನು ತಯಾರಿಸಿ, ಅನಂತರ ಆ ಪದಕ್ಕೆ ಇಕೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ. ತಿಳುವಳಿಕೆ ಎಂಬುದರ ಹಿಂದೆ ತಿಳುವಳಿ ಎಂಬ ಪದವಿಲ್ಲ ದಿದ್ದರೂ ಅದಕ್ಕೆ ಸಮನಾಗಿರುವ ಹಿಡುವಳಿ, ಗೊತ್ತುವಳಿ ಮೊದಲಾದವು ಗಳಿವೆಯೆಂಬುದನ್ನು ಗಮನಿಸಬಹುದು.
ಕನ್ನಡದಲ್ಲಿ ಬರುವ ಪ್ರತ್ಯಯಗಳೆಲ್ಲವೂ ಪರಪ್ರತ್ಯಯಗಳು, ಎಂದರೆ, ನಾಮ ಪದ, ಕ್ರಿಯಾಪದ ಇಲ್ಲವೇ ಗುಣಪದಗಳ ಅನಂತರ ಬರುವವುಗಳು. ಉದಾ: ಮೆಚ್ಚು-ಗೆ, ನಡ-ತೆ, ಅಳಿ-ವು ಇತ್ಯಾದಿ. ಪೂರ್ವಪ್ರತ್ಯಯಗಳು ಎಂದರೆ ಪದಗಳ ಮೊದಲ ಭಾಗವಾಗಿ ಬರುವ ಪ್ರತ್ಯಯಗಳು ಕನ್ನಡದಲ್ಲಿ ಬೇರೆ ಭಾಷೆ ಗಳಿಂದ ಎರವಲಾಗಿ ಬಂದ ಪದಗಳಲ್ಲಿ ಮಾತ್ರ ಕಾಣಿಸುತ್ತವೆ. ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದ ಅ-ತೃಪ್ತಿ, ನಿರ್-ಭಾಗ್ಯ, ವಿ-ಜ್ಞಾನ ಮೊದಲಾದ ನಾಮಪದಗಳಲ್ಲಿ ಅ-, ನಿರ್-, ವಿ- ಮೊದಲಾದ ಪೂರ್ವ ಪ್ರತ್ಯಯಗಳು ಕಾಣಿಸುತ್ತವೆ (೮.೩.೫ ನೋಡಿ). ಇದಲ್ಲದೆ, ಹೀಗೆ ಎರವಲಾಗಿ ಬಂದ ಪದಗಳಲ್ಲಿ ಕಾಣಿಸುವ ಕೆಲವು ಪೂರ್ವಪ್ರತ್ಯಯಗಳು ಕನ್ನಡದವೇ ಆದ ಪದಗಳಿಗೂ ಅಂಟಿಕೊಳ್ಳುವುದನ್ನು ಅಪ-ನಂಬಿಕೆ ಎಂಬಂತಹ ಪ್ರತ್ಯಯವಿರುವ ಪದಗಳಲ್ಲಿ ಅಪರೂಪವಾಗಿ ಕಾಣಬಹುದು.
ಇತ್ತೀಚೆಗೆ ಶ್ರೀಧರ್ (೧೯೯೫:೧೩೩,೧೫೭) ಅವರು ಕನ್ನಡದಲ್ಲಿ ಬರುವ ಹೆಜ್ಜೆನು, ಹಿಂಗಾಲು, ಇಬ್ಬದಿ, ಕೆಮ್ಮಣ್ಣು ಮೊದಲಾದ ಪದಗಳಲ್ಲಿ ಪೂರ್ವಪ್ರತ್ಯಯದ ಪ್ರಯೋಗವಿದೆಯೆಂದು ವಾದಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಪದಗಳನ್ನು ಜೋಡುಪದಗಳೆಂದೂ ಮತ್ತು ಅವುಗಳ ಆದಿಯಲ್ಲಿ
87
ಕನ್ನಡ ಪದಗಳ ಒಳರಚನೆ
ಬರುವ ಹೆಜ್, ಹಿಮ್, ಇನ್, ಇಬ್, ಕೆಮ್ ಮೊದಲಾದ ಅಂಗಗಳನ್ನು ಪದಗಳೆಂದೂ ಪರಿಗಣಿಸುವುದು ರೂಢಿ. ಶ್ರೀಧರ್ ಅವರು ಇದು ಸರಿಯಲ್ಲ, ಇವುಗಳ ಆದಿಯಲ್ಲಿ ಬರುವ ಅಂಗಗಳು ಪ್ರತ್ಯಯಗಳಲ್ಲದೆ ಪದಗಳಲ್ಲ ಎಂದು ವಾದಿಸಿದ್ದಾರೆ.
ಪದ ಮತ್ತು ಪ್ರತ್ಯಯಗಳ ನಡುವಿರುವ ವಿಭಜನೆ ಕೆಲವೊಂದು ಸಂದರ್ಭ ಗಳಲ್ಲಿ ಅಸ್ಪಷ್ಟವಾಗಿರಲು ಸಾಧ್ಯವಿದೆಯಾದ ಕಾರಣ, ಮತ್ತು ಚಾರಿತ್ರಿಕವಾಗಿ ಪ್ರತ್ಯಯಗಳು ಸ್ವತಂತ್ರವಾಗಿದ್ದ ಪದಗಳಿಂದ ಬೆಳೆದು ಬಂದಿರಲು ಸಾಧ್ಯವಿದೆ ಯಾದ ಕಾರಣ, ಇಂತಹ ವಾದಗಳಿಗೆ ಕೆಲವೊಮ್ಮೆ ಕೊನೆಯೇ ಇಲ್ಲವೆಂದಾಗುವು ದಿದೆ. ಆದರೆ ಈ ಮೇಲಿನ ವಾದ ಅಂತಹದಲ್ಲವೆಂದು ತೊರುತ್ತದೆ. ಕನ್ನಡದಲ್ಲಿ ಸ್ವತಂತ್ರವಾಗಿ ಬರುವ ಹಿರಿದು, ಹಿಂದೆ, ಎರಡು, ಕೆಂಪು ಮೊದಲಾದ ಪದ ಗಳಿಗೂ ಮತ್ತು ಮೇಲೆ ಕೊಟ್ಟಿರುವ ಹೆಜ್ಜೆನು, ಹಿಂಗಾಲು ಮೊದಲಾದ ಪದಗಳ ಆದಿಯಲ್ಲಿ ಬರುವ ಅಂಗಗಳಿಗೂ ನಡುವೆ ಸ್ಪಷ್ಟವಾದ ಸಂಬಂಧವಿದೆ. ಈ ಸಂಬಂಧ ಎಂತಹದು ಎಂಬುದನ್ನು ನಿರ್ಧರಿಸಿದಾಗ ಹೆಜ್, ಹಿಮ್ ಮೊದಲಾದವುಗಳು ಪ್ರತ್ಯಯಗಳೇ ಅಥವಾ ಪದಗಳೇ ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತದೆ.
ಹಿರಿದು ಎಂಬುದರಲ್ಲಿ ಬರುವ ದು ಎಂಬ ಅಂಗ ದೊಡ್ಡದು, ಬಿಳಿದು ಮೊದಲಾದವುಗಳಲ್ಲಿ ಕಾಣಿಸುವ ನಪುಂಸಕ ಏಕವಚನ ಪ್ರತ್ಯಯ; ಹಿರಿ ಎಂಬುದು ಬೇರೆಡೆಗಳಲ್ಲಿ ಸ್ವತಂತ್ರವಾಗಿ ಬರಬಲ್ಲ ಗುಣಪದ (ಉದಾ: ಹಿರಿ ಮಗಳು); ಹಿಂದೆ ಎಂಬುದನ್ನು ದೆ ಎಂಬ ಪ್ರತ್ಯಯದ ಮೂಲಕ ತಯಾರಿಸಲು ಸಾಧ್ಯವಿದ್ದು, ಇದರಲ್ಲಿ ಹಿಂ ಎಂಬ ಮೊದಲನೆಯ ಭಾಗವೇ ಪದವೆಂದು ಹೇಳ ಬೇಕಾಗುತ್ತದೆ; ಎರಡು ಎಂಬುದರಲ್ಲೂ ಡು ಎಂಬುದು ಒಂದು ಪ್ರತ್ಯಯ ಮತ್ತು ಅದರ ಮುಂದಿರುವ ಎರ ಎಂಬುದೇ ಪದ; ಕೆಂಪು ಎಂಬುದರಲ್ಲಿ ಬರುವ ಪು ಎಂಬ ಅಂಗ ತಂಪು, ನುಣುಪು, ಬಿಳುಪು, ಇಂಪು ಮೊದಲಾ ದವುಗಳಲ್ಲಿ ಕಾಣಿಸುವ ಪ್ರತ್ಯಯವಾಗಿದ್ದು, ಅದರ ಮುಂದಿರುವ ಕೆಂ ಎಂಬುದೇ ಪದವಾಗಿದೆ.
ಮೇಲೆ ಕೊಟ್ಟಿರುವ ಹೆಜ್ಜೆನು, ಹಿಂಗಾಲು, ಇನ್ನೂರು ಮೊದಲಾದ ಜೋಡುಪದಗಳಲ್ಲಿ ಈ ಪದಗಳು ಮೊದಲನೆಯ ಅಂಗವಾಗಿ ಬಂದಿದ್ದು ಅವು ಹಿರಿದು, ಹಿಂದೆ, ಎರಡು ಮೊದಲಾದವುಗಳಲ್ಲಿ ಕಾಣಿಸುವ ಪ್ರತ್ಯಯಗಳನ್ನು ಕಳೆದುಕೊಂಡು ಈ ಜೋಡುಪದಗಳಲ್ಲಿ ಬಂದಿವೆಯೆಂದು ಹೇಳುವುದೇ ಸರಿ ಯೆಂದು ತೋರುತ್ತದೆ. ಇವುಗಳಲ್ಲಿ ಹಿರಿ ಎಂಬುದು ಹೆರ್ (ಹೆಜ್) ಎಂಬ ರೂಪದಲ್ಲೂ ಮತ್ತು ಎರ ಎಂಬುದು ಇರ್ (ಇಜ್, ಇನ್) ಎಂಬ ರೂಪದಲ್ಲೂ ಬರಲು ಕನ್ನಡದಲ್ಲಿ ನಡೆದ ಎರಡು ಧ್ವನಿ ಬದಲಾವಣೆಗಳು ಕಾರಣ.
(೧) ಹೆರ್ ಎಂಬುದರ ಎಕಾರ ಹಿರಿ ಎಂಬುದರಲ್ಲಿ ಇಕಾರವಾಗಿದೆ. ಈ ಪದದ ಎರಡನೆಯ ಅಕ್ಷರದಲ್ಲಿ ಇಕಾರವಿದ್ದುದೇ ಈ ಬದಲಾವಣೆಗೆ ಕಾರಣ.
88
ಪ್ರತ್ಯಯವಿರುವ ನಾಮಪದಗಳು
(ಇದೇ ಬದಲಾವಣೆಯನ್ನು ಬೆಳ್ಳಗೆ-ಬಿಳಿ ಎಂಬುದರಲ್ಲೂ ಕಾಣಬಹುದು). (೨) ಇರ್ ಎಂಬುದರ ಇಕಾರ ಎರಡು ಎಂಬುದರಲ್ಲಿ ಎಕಾರವಾಗಿದೆ. ಈ ಬದಲಾವಣೆಗೆ ಎರಡು ಎಂಬ ಪದದ ಎರಡನೆಯ ಅಕ್ಷದಲ್ಲಿ ಅಕಾರ ಬಂದಿರುವುದೇ ಕಾರಣ (ಇದೇ ಬದಲಾವಣೆಯನ್ನು ನಿಲ್ಲು-ನೆಲಸು ಎಂಬುದರಲ್ಲೂ ಕಾಣಬಹುದು).
ಈ ಸಂದರ್ಭದಲ್ಲಿ ಒಂದು ಮುಖ್ಯವಾದ ವಿಷಯವನ್ನು ಗಮನಕ್ಕೆ ತಂದು ಕೊಳ್ಳುವುದು ಅವಶ್ಯ. ಜೋಡುಪದವೊಂದರ ಒಳರಚನೆಯೆಂಬುದು ಮುಖ್ಯವಾಗಿ ಅದರ ಚಾರಿತ್ರಿಕ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಅದನ್ನು ತಯಾರಿಸಿ ಬಳಕೆಗೆ ತಂದಾಗ ಯಾವ ಗುಣಧರ್ಮವನ್ನು ಆರಿಸಲಾಗಿತ್ತು ಮತ್ತು ಆ ಗುಣಧರ್ಮವನ್ನು ಸೂಚಿಸಲು ಯಾವ ಪದಗಳನ್ನು ಬಳಸಲಾಗಿತ್ತು ಎಂಬುದು ಅದರ ಒಳರಚನೆಯಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಹಾಯಕ ವಾಗುತ್ತದೆ (ಮುಂದೆ ೫.೫ ನೋಡಿ). ಹಳೆಗನ್ನಡದಲ್ಲೇನೇ ಕಾಣಿಸುವ ಕೆಮ್ಮಣ್ಣು, ಇನ್ನೂರು ಮೊದಲಾದ ಪದಗಳನ್ನು ಚಾರಿತ್ರಿಕವಾಗಿ ಎರಡು ಪದಗಳ ಜೋಡಣೆಯಿಂದ (ಸಮಾಸದಿಂದ) ಸುಲಭವಾಗಿ ಸಾಧಿಸಲು ಸಾಧ್ಯವಿದೆಯಾದ ಕಾರಣ, ಇವನ್ನು ಜೋಡುಪದಗಳೆಂದು ಪರಿಗಣಿಸುವುದರಲ್ಲಿ ಯಾವ ತೊಂದರೆಯೂ ಇಲ್ಲ. ಹಾಗಾಗಿ, ಇವುಗಳಲ್ಲಿ ಪೂರ್ವಪ್ರತ್ಯಯಗಳಿವೆಯೆಂದು ಕಲ್ಪಿಸಿಕೊಂಡು ಇವನ್ನು ಪ್ರತ್ಯಯವಿರುವ ಪದಗಳೆಂದು ಹೇಳುವುದು ಸರಿಯಾಗ ಲಾರದು.
೪.೨ ಪ್ರತ್ಯಯಗಳ ಸ್ವರೂಪ
ಪದಗಳ ಒಳರಚನೆಯಲ್ಲಿ ಬಳಕೆಯಾಗುವ ಪದಪ್ರತ್ಯಯಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳೊಂದಿಗೆ ಮಾತ್ರ ಬಳಕೆಯಾಗುವುವಾದ ಕಾರಣ, ಅವುಗಳ ಸ್ವರೂಪವನ್ನು ನಿಯಮಗಳ ಸಹಾಯದಿಂದ ವರ್ಣಿಸುವುದು ಕಷ್ಟ. ಆದರೂ ಕೂಡ, ಅವುಗಳ ಪ್ರಯೋಗದಲ್ಲಿ ಕೆಲವು ‘ಒಲವು’ಗಳನ್ನು ಕಾಣಲು ಸಾಧ್ಯವಿದೆ ಯಾದ ಕಾರಣ ಅಂತಹ ಒಲವುಗಳನ್ನು ನಿಯಮಗಳ ರೂಪದಲ್ಲಿ ವರ್ಣಿಸುವು ದರ ಮೂಲಕ ಈ ಪ್ರತ್ಯಯಗಳ ಸ್ವರೂಪದ ಮೇಲೆ ಬೆಳಕನ್ನು ಚೆಲ್ಲಲು ಸಾಧ್ಯವಿದೆ.
ಉದಾಹರಣೆಗಾಗಿ ಇಕೆ-ಇಗೆ ಎಂಬ ಪ್ರತ್ಯಯ ಎಲ್ಲಾ ರೀತಿಯ ಕ್ರಿಯಾಪದ ಗಳೊಂದಿಗೂ ಬರಬಲ್ಲುದಾದರೆ, ತ-ತೆ ಎಂಬ ಪ್ರತ್ಯಯ ಸಾಮಾನ್ಯವಾಗಿ ಇಕಾರಾಂತ ಮತ್ತು ಎಕಾರಾಂತ ಕ್ರಿಯಾಪದಗಳೊಂದಿಗೆ ಮಾತ್ರವೇ ಬರ ಬಲ್ಲುದು; ಅಲು ಎಂಬ ಇನ್ನೊಂದು ಪ್ರತ್ಯಯ ಉಕಾರಾಂತ ಕ್ರಿಯಾಪದ ಗಳೊಂದಿಗೆ ಮಾತ್ರವೇ ಬರಬಲ್ಲುದು. ಇಂತಹ ಹಲವು ಹೇಳಿಕೆಗಳನ್ನು ಕನ್ನಡದಲ್ಲಿ ಬಳಕೆಯಲ್ಲಿರುವ ನಾಮಪದಗಳನ್ನು ಪರಿಶೀಲಿಸುವುದರ ಮೂಲಕ ರಚಿಸಿ ಹೇಳಲು ಸಾಧ್ಯವಿದೆಯಾದರೂ ಇವಕ್ಕೆಲ್ಲ ಒಂದಲ್ಲ ಒಂದು ಅಪವಾದ
89
ಕನ್ನಡ ಪದಗಳ ಒಳರಚನೆ
ವನ್ನು ಕಾಣಲು ಸಾಧ್ಯವಿದೆಯಾದ ಕಾರಣ ಇವು ಒಲವುಗಳಲ್ಲದೆ ನಿಯಮಗಳಲ್ಲ. ಪದಪ್ರತ್ಯಯಗಳು ಈ ರೀತಿ ನಿಯಮಬದ್ಧವಾಗಿ ಇಲ್ಲದಿರುವುದಕ್ಕೆ ಅವುಗಳ ಒಳರಚನೆಗೆ ಚಾರಿತ್ರಿಕ ಮಹತ್ವವಿದೆಯಲ್ಲದೆ ಮಾತಿನ ಬಳಕೆಯಲ್ಲಿ ಹೆಚ್ಚಿನ ಮಹತ್ವವಿಲ್ಲವೆಂಬುದೇ ಮುಖ್ಯ ಕಾರಣ.
ಪದಪ್ರತ್ಯಯಗಳ ಸ್ವರೂಪವೇನೆಂಬುದನ್ನು ವರ್ಣಿಸುವಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆಯೇನೆಂದರೆ, ಸಾಮಾನ್ಯವಾಗಿ ಈ ಪ್ರತ್ಯಯಗಳು ಪದರೂಪ ಪ್ರತ್ಯಯಗಳ ಹಾಗೆ ಒಂದಕ್ಕೊಂದು ಸಂಬಂಧಿತವಾಗಿರುವುದಿಲ್ಲ. ಉದಾಹರಣೆ ಗಾಗಿ, ಪದರೂಪಪ್ರತ್ಯಯಗಳನ್ನು ವಚನಪ್ರತ್ಯಯಗಳು, ವಿಭಕ್ತಿ ಪ್ರತ್ಯಯಗಳು, ಕಾಲಪ್ರತ್ಯಯಗಳು, ಆಖ್ಯಾತಪ್ರತ್ಯಯಗಳು ಇತ್ಯಾದಿಯಾಗಿ ಬೇರೆ ಬೇರೆ ಗುಂಪು ಗಳಲ್ಲಿ ವಿಂಗಡಿಸಲು ಸಾಧ್ಯವಿದೆ, ಮತ್ತು ಕೆಲವು ಸಂದರ್ಭಗಳಲ್ಲಿ ಇಂತಹ ಒಂದು ಗುಂಪಿಗೆ ಸೇರಿದ ಪದರೂಪಪ್ರತ್ಯಯಗಳಲ್ಲಿ ಯಾವುದಾದರೂ ಒಂದನ್ನು ಖಡ್ಡಾಯವಾಗಿಯೂ ಬಳಸಲೇಬೇಕೆಂಬ ನಿಯಮವನ್ನು ಮಾಡಲು ಸಾಧ್ಯವಿದೆ. ಉದಾಹರಣೆಗಾಗಿ ಬಂದೆ ಎಂಬಂತಹ ಪೂರ್ಣ ಕ್ರಿಯಾರೂಪಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವ ಕಾಲಪ್ರತ್ಯಯಗಳಲ್ಲೊಂದನ್ನು ಮತ್ತು ಅದರ ಅನಂತರ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಬಳಸಲೇಬೇಕೆಂಬ ನಿಯಮವಿದೆ.
ಪದಪ್ರತ್ಯಯಗಳನ್ನು ಈ ರೀತಿ ವಿಶಿಷ್ಟವಾದ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವುಗಳ ಬಳಕೆಯಲ್ಲಿ ಖಡ್ಡಾಯವೆಂದು ಹೇಳ ಬಹುದಾದ ನಿಯಮಗಳೂ ಇಲ್ಲ. ಈ ಕಾರಣಕ್ಕಾಗಿ ಅವುಗಳನ್ನು ಬರಿಯ ಒಂದು ಪಟ್ಟಿಯಲ್ಲಿ ಕೊಟ್ಟು, ಒಂದೊಂದಾಗಿ ಅವುಗಳ ಬಳಕೆಯಲ್ಲಿ ಕಾಣಿಸುವ ಒಲವುಗಳನ್ನಷ್ಟೇ ವರ್ಣಿಸಲು ಸಾಧ್ಯವಾಗುತ್ತದೆ. ಪದಪ್ರತ್ಯಯಗಳ ಅರ್ಥವೂ ಅನಿಯಮಿತವಾದುದಾದ ಕಾರಣ ಅವನ್ನು ಅವು ಕೊಡುವ ಅರ್ಥದ ಆಧಾರದ ಮೇಲೂ ನಿಯಮಿತವಾಗಿ ವರ್ಗೀಕರಿಸಲು ಸಾಧ್ಯವಾಗುವುದಿಲ್ಲ.
ಈ ಪ್ರತ್ಯಯಗಳು ಎಂತಹ ಪದಗಳೊಂದಿಗೆ ಬರುತ್ತವೆ, ಎಂದರೆ ನಾಮಪದ ಗಳೊಂದಿಗೆ ಬರುತ್ತವೆಯೇ, ಕ್ರಿಯಪದಗಳೊಂದಿಗೆ ಬರುತ್ತವೆಯೇ ಅಥವಾ ಗುಣಪದಗಳೊಂದಿಗೆ ಬರುತ್ತವೆಯೇ ಎಂಬುದರ ಆಧಾರದ ಮೇಲೂ ಅವನ್ನು ವ್ಯವಸ್ಥಿತವಾಗಿ ವರ್ಗೀಕರಿಸಲು ಸಾಧ್ಯವಾಗುವುದಿಲ್ಲ. ಅವು ಪ್ರಾಮುಖ್ಯವಾಗಿ ಯಾವ ವರ್ಗದ ಪದಗಳೊಂದಿಗೆ ಬರುತ್ತವೆ ಎಂದಷ್ಟೇ ಹೇಳಲು ಸಾಧ್ಯವಾಗು ತ್ತದೆ. ಉದಾಹರಣೆಗಾಗಿ ಇಕೆ-ಇಗೆ ಎಂಬ ಪ್ರತ್ಯಯ ಪ್ರಾಮುಖ್ಯವಾಗಿ ಕ್ರಿಯಾ ಪದಗಳೊಂದಿಗೆ ಬರುವುದಾದರೂ (ಉದಾ: ನಂಬಿಕೆ, ಬಳಲಿಕೆ, ಇತ್ಯಾದಿ), ಬಿಲ್ಲುಗಾರಿಕೆ, ತಿಳುವಳಿಕೆ ಮೊದಲಾದ ಬೇರೆ ಕೆಲವು ಪದಗಳಲ್ಲಿ ನಾಮಪದ ಗಳೊಂದಿಗೂ ಬಂದಿರುವುದನ್ನು ಕಾಣಬಹುದು. ಇಲ್ಲೂ ಪದಪ್ರತ್ಯಯಗಳ ಬಳಕೆ ಯಲ್ಲಿ ಅನಿಯಮಿತತೆಯೇ ಎದ್ದು ಕಾಣಿಸುತ್ತದೆ.
ಈ ಕಾರಣಗಳಿಗಾಗಿ, ಪ್ರತ್ಯಯವಿರುವ ಪದಗಳಲ್ಲಿ ಕಾಣಿಸುವ ಪದಪ್ರತ್ಯಯ ಗಳನ್ನು ಈ ಕೆಳಗೆ ಬರಿಯ ಪಟ್ಟಿಯ ಮೂಲಕ ಮಾತ್ರವೇ ವಿವರಿಸಿ ಹೇಳಲು
90
ಪ್ರತ್ಯಯವಿರುವ ನಾಮಪದಗಳು
ಸಾಧ್ಯವಾಗಿದೆ. ಪ್ರತಿಯೊಂದು ಪ್ರತ್ಯಯದ ಕೆಳಗೂ ಅದರ ಬಳಕೆಯಲ್ಲಿ ಕಾಣಿಸುವ ಕೆಲವು ಒಲವುಗಳನ್ನು ಉದಾಹರಣೆಗಳ ಮೂಲಕ ವಿವರಿಸಲು ಪ್ರಯತ್ನಿಸ ಲಾಗಿದೆ. ಈ ಪ್ರತ್ಯಯಗಳ ಸಹಾಯದಿಂದ ಕ್ರಿಯಾಪದ ಇಲ್ಲವೇ ಗುಣಪದಗಳನ್ನು ನಾಮಪದಗಳನ್ನಾಗಿ ಪರಿವರ್ತಿಸಲಾಗಿದೆಯೇ ಅಥವಾ ನಾಮಪದಗಳನ್ನೇ ಅವಕ್ಕಿಂತ ಭಿನ್ನವಾದ ಬೇರೆ ನಾಮಪದಗಳನ್ನಾಗಿ ಬದಲಾಯಿಸಲಾಗಿದೆಯೇ ಎಂಬುದನ್ನು ತಿಳಿಸುವುದಕ್ಕಾಗಿ ಮಾತ್ರ ಈ ಪ್ರತ್ಯಯಗಳನ್ನು ಮೂರು ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲು ಪ್ರಯತ್ನಿಸಲಾಗಿದೆ. ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಯಾವುದೂ ಸಂಪೂರ್ಣವಾದುದಲ್ಲ. ಈ ಪ್ರತ್ಯಯಗಳ ಸ್ವರೂಪವೆಂತಹದು ಎಂಬುದನ್ನು ತಿಳಿಸಲು ಸಹಾಯಕವಾಗುವಂತೆ ಜಾಸ್ತಿ ಬಳಕೆಯಲ್ಲಿರುವ ಪ್ರತ್ಯಯವಿರುವ ನಾಮಪದಗಳಲ್ಲಿ ಕಾಣಿಸುವ ಪದಪ್ರತ್ಯಯಗಳನ್ನು ಮಾತ್ರವೇ ಇಲ್ಲಿ ಪರಿಶೀಲಿಸಲಾಗಿದೆ.
೪.೩ ಕ್ರಿಯಾಪದಗಳಿಂದ ತಯಾರಾದ ನಾಮಪದಗಳು
ಕನ್ನಡದ ನಾಮಪದಗಳಲ್ಲಿ ಕಾಣಿಸುವ ಪದಪ್ರತ್ಯಯಗಳಲ್ಲಿ ಹೆಚ್ಚಿನವೂ ಕ್ರಿಯಾ ಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯ ಗಳು. ಗುಣಪದಗಳಿಂದ ಇಲ್ಲವೇ ನಾಮಪದಗಳಿಂದ ಬೇರೆ ನಾಮಪದಗಳನ್ನು ತಯಾರಿಸಲು ಬಳಸುವ ಪದಪ್ರತ್ಯಯಗಳ ಸಂಖ್ಯೆ ಕನ್ನಡದಲ್ಲಿ ಬಹಳ ಕಡಿಮೆ. ಇದಕ್ಕಾಗಿ, ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದರಲ್ಲಿ ಬಳಕೆ ಯಾಗುವ ಪದಪ್ರತ್ಯಯಗಳನ್ನು ಇಲ್ಲಿ ಮೊದಲಿಗೆ ಪರಿಶೀಲಿಸಲಾಗಿದೆ.
೪.೩.೧ ಇಕೆ-ಇಗೆ ಪ್ರತ್ಯಯ
ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸಲು ಬಳಸುವ ಪದಪ್ರತ್ಯಯ ಗಳಲ್ಲಿ ಇಕೆ-ಇಗೆ ಮತ್ತು ಕೆ-ಗೆ ಎಂಬ ರೂಪಗಳಲ್ಲಿ ಬರುವ ಪ್ರತ್ಯಯವೇ ಅತ್ಯಂತ ಪ್ರಾಮುಖ್ಯವಾದುದು. ಬಳಲು-ಬಳಲಿಕೆ, ಒಪ್ಪು-ಒಪ್ಪಿಗೆ, ಕೊಡು- ಕೊಡುಗೆ, ಹಿಡಿ-ಹಿಡಿಕೆ ಮೊದಲಾದ ಪದಯುಗ್ಧಗಳಲ್ಲಿ ಇದು ಕ್ರಿಯಾಪದಗಳಿಗೆ ಸೇರಿಕೊಳ್ಳುವುದೆಂಬ ವಿಷಯ ಸ್ಪಷ್ಟವಾಗಿರುವುದಾದರೂ, ತುರಿಸು-ತುರಿಕೆ, ಬಯಸು-ಬಯಕೆ, ಬೇಸರಿಸು (ಬೇಸರ)-ಬೇಸರಿಕೆ ಮೊದಲಾದವುಗಳಲ್ಲಿ ಈ ವಿಷಯ ಅಷ್ಟೊಂದು ಸ್ಪಷ್ಟವಾಗಿಲ್ಲ. ಬಯಸು ಎಂಬುದರಲ್ಲಿ ಸು ಎಂಬ ಪ್ರತ್ಯಯ ಮತ್ತು ಬಯಕೆ ಎಂಬುದರಲ್ಲಿ ಕೆ ಎಂಬ ಪ್ರತ್ಯಯ ಯಾವ ವರ್ಗಕ್ಕೂ ಸೇರದ ಬಯ- ಎಂಬ ಅಸ್ವತಂತ್ರ ಪದವೊಂದಕ್ಕೆ ಸೇರಿವೆಯೆಂದು ಹೇಳಲೂ ಸಾಧ್ಯವಿದೆ. ಹೀಗಿದ್ದರೂ ಇಕೆ-ಇಗೆ ಎಂಬ ಈ ಪ್ರತ್ಯಯವನ್ನೊಳಗೊಂಡಿರುವ ಹೆಚ್ಚಿನ ಪದಗಳಿಗೂ ಕ್ರಿಯಾಪದವೇ ಮೂಲ ಎಂಬುದನ್ನು ಮುಂದೆ ನೋಡ ಲಿರುವೆವು.
91
ಕನ್ನಡ ಪದಗಳ ಒಳರಚನೆ
ಕ್ರಿಯಾಪದಗಳಿಂದ ಕ್ರಿಯಾರೂಪವೊಂದನ್ನು ಪಡೆಯುವುದಕ್ಕಾಗಿ ಬಳಸುವ ಇಕೆ ಎಂಬ ಪ್ರದರೂಪ ಪ್ರತ್ಯಯವೊಂದಿದೆ. ಇದನ್ನು ಬಳಲುವಿಕೆ, ಒಪ್ಪುವಿಕೆ, ಹಿಡಿಯುವಿಕೆ, ಕೊಡುವಿಕೆ ಮೊದಲಾದ ಪದರೂಪಗಳಲ್ಲಿ ಕಾಣಬಹುದು. ಇದು ರೂಪದಲ್ಲಿ ಮೇಲಿನ ಪ್ರತ್ಯಯವನ್ನೇ ಹೋಲುತ್ತಿದೆಯಾದರೂ ಅದಕ್ಕಿಂತ ಭಿನ್ನ ವಾದುದೆಂಬುದನ್ನು ಮುಂದೆ ನೋಡಲಿರುವೆವು.
ಸಂಸ್ಕೃತದಿಂದ ಎರವಲಾಗಿ ಬಂದ ಹಲವಾರು ಪದಗಳಲ್ಲಿ ಇಕೆ ಎಂಬ ಬೇರೊಂದು ಪ್ರತ್ಯಯ ಕಾಣಿಸುತ್ತದೆ. ಉದಾ: ಪೂರ್ವ-ಪೂರ್ವಿಕ, ಸಮಾಜ- ಸಾಮಾಜಿಕ, ಕ್ಷಣ-ಕ್ಷಣಿಕ, ವರ್ಷ-ವಾರ್ಷಿಕ ಇತ್ಯಾದಿ. ಇದು ಸಾಮಾನ್ಯವಾಗಿ ನಾಮಪದಗಳಿಂದ ನಾಮವಿಶೇಷಣಗಳನ್ನು ಸಾಧಿಸುವಲ್ಲಿ ಬಳಕೆಯಾಗುತ್ತದೆ. ಕನ್ನಡದ ಇಕೆ-ಇಗೆ ಪ್ರತ್ಯಯ ಸಂಸ್ಕೃತದಿಂದ ಬಂದುದೇನೋ ಎಂದು ಕಿಟ್ಟೆಲ್ (೧೮೯೪:೧೮೦,೪೬೨) ಅವರು ಸೂಚಿಸಲು ಈ ಎರಡು ಪ್ರತ್ಯಯಗಳ ನಡುವಿರುವ ಸಾರೂಪ್ಯ ಕಾರಣವಿರಬಹುದು. ಆದರೆ ಇವೆರಡಕ್ಕೂ ನಡುವೆ ಹಲವಾರು ವ್ಯತ್ಯಾಸಗಳಿದ್ದು, ಕನ್ನಡ ನಾಮಪದಗಳ ರಚನೆಯಲ್ಲಿ ಅತ್ಯಂತ ಪ್ರಾಮುಖ್ಯವಾದ ಸ್ಥಾನವನ್ನು ಪಡೆದಿರುವ ಇಕೆ-ಇಗೆ ಪ್ರತ್ಯಯ ಕನ್ನಡದ್ದೇ ಎಂದು ಪರಿಗಣಿಸುವುದು ಹೆಚ್ಚು ಸಮಂಜಸವೆಂದು ತೋರುತ್ತದೆ.
(ಕ) ರೂಪಭೇದಗಳು
ಈ ಪ್ರತ್ಯಯಕ್ಕೆ ಇಕೆ, ಕೆ, ಇಗೆ ಮತ್ತು ಗೆ ಎಂಬುದಾಗಿ ನಾಲ್ಕು ಬೇರೆ ಬೇರೆ ರೂಪಗಳಿವೆ. ಇವುಗಳಲ್ಲಿ ಇಕೆ ಎಂಬುದು ಮುಖ್ಯವಾಗಿ ಉಕಾರದಲ್ಲಿ ಕೊನೆ ಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ ಮತ್ತು ಈ ಪ್ರತ್ಯಯ (ಹಾಗೂ ಇದರ ಇಗೆ ಎಂಬ ರೂಪ) ಸೇರಿದಾಗ ಕ್ರಿಯಾಪದದ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಉದಾ:
ಬಳಲು ಬಳಲಿಕೆ ಹೇಳು ಹೇಳಿಕೆ ಬೆದರು ಬೆದರಿಕೆ ತೋರು ತೋರಿಕೆ ಹೊಗಳು ಹೊಗಳಿಕೆ ಅಂಜು ಅಂಜಿಕೆ ಅಗಲು ಅಗಲಿಕೆ ನಂಬು ನಂಬಿಕೆ
ಮೇಲೆ ಕೊಟ್ಟಿರುವ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮೂರಕ್ಷರದವುಗಳು (ಮೊದಲನೆಯ ಕಾಲಂ) ಮತ್ತು ಎರಡಕ್ಷರದವುಗಳು (ಮೂರನೆಯ ಕಾಲಂ) ಎಂಬುದಾಗಿ ಎರಡು ವಿಧದವುಗಳಿವೆ. ಇವುಗಳಲ್ಲಿ ಎರಡಕ್ಷರದವುಗಳು ಮೊದಲನೆಯ ಅಕ್ಷರದಲ್ಲಿ ಉದ್ದಸ್ವರವುಳ್ಳವುಗಳು (ಹೇಳು ಮತ್ತು ತೋರು) ಮತ್ತು ಗಿಡ್ಡಸ್ವರವಿದ್ದರೂ ಸೊನ್ನೆಯೊಂದಿಗೆ ಬರುವವುಗಳು
92
ಪ್ರತ್ಯಯವಿರುವ ನಾಮಪದಗಳು
(ಅಂಜು ಮತ್ತು ನಂಬು) ಎಂಬುದಾಗಿ ಎರಡು ವಿಧದವುಗಳೆಂಬುದನ್ನು ಗಮನಿಸಬಹುದು.
ಉಕಾರದಲ್ಲಿ ಕೊನೆಗೊಳ್ಳುವ ಮತ್ತು ಎರಡಕ್ಷರವಿರುವ ಕ್ರಿಯಾಪದಗಳ ಮೊದಲನೆಯ ಅಕ್ಷರದಲ್ಲಿ ಗಿಡ್ಡಸ್ವರ ಮಾತ್ರ ಇದೆಯಾದರೆ ಅಥವಾ ಗಿಡ್ಡಸ್ವರ ದೊಂದಿಗೆ ಎರಡನೆಯ ಅಕ್ಷರದಲ್ಲಿ ಒತ್ತಕ್ಷರವಿದೆಯಾದರೆ, ಅಂತಹ ಕ್ರಿಯಾಪದ ಗಳೊಂದಿಗೆ ಈ ಪ್ರತ್ಯಯ ಗೆ ಇಲ್ಲವೇ ಇಗೆ ಎಂಬ ರೂಪದಲ್ಲಿ ಬರುತ್ತದೆ. ಉದಾ:
| ಕೊಡು | ಕೊಡುಗೆ | ಬಪ್ಪು | ಬಪ್ಪುಗೆ/ಬಪ್ಪಿಗೆ |
| ಉಡು | ಉಡುಗೆ | ಮೆಚ್ಚು | ಮೆಚ್ಚುಗೆ |
| ತೊಡು | ತೊಡುಗೆ |
| ಹೆರು | ಹೆರಿಗೆ | ಮುಚ್ಚು |
|---|---|---|
| ಮುಚ್ಚಿಗೆ | ||
| ತೆರು | ತೆರಿಗೆ | ಮುತ್ತು ಮುತ್ತಿಗೆ |
ಆದರೆ ಇವುಗಳಲ್ಲಿ ಇಗೆ ಎಂಬುದು ಎಲ್ಲಿ ಬರುತ್ತದೆ ಮತ್ತು ಗೆ ಎಂಬುದು ಎಲ್ಲಿ ಬರುತ್ತದೆ ಎಂದು ಹೇಳುವುದು ಕಷ್ಟ. ಇದಲ್ಲದೆ, ಈ ನಿಯಮಗಳಿಗೆ ಬೇರೆಯೂ ಕೆಲವು ಅಪವಾದಗಳಿವೆ. ಉದಾಹರಣೆಗಾಗಿ, ಇಗೆ ಮತ್ತು ಗೆ ಎಂಬ ರೂಪಗಳು ಕೆಲವು ಉದ್ದಸ್ವರವಿರುವ ಎರಡಕ್ಷರದ ಕ್ರಿಯಾಪದಗಳೊಂದಿಗೂ ಬರ ಬಲ್ಲುವು ಮತ್ತು ಬೇರೆ ಕೆಲವು ಗಿಡ್ಡಸ್ವರದೊಂದಿಗೆ ಸೊನ್ನೆಯಿರುವ ಎರಡಕ್ಷರದ ಕ್ರಿಯಾಪದಗಳೊಂದಿಗೂ ಬರಬಲ್ಲುವು.
| ನಾಚು | ನಾಚುಗೆ | ನಂಬು | ನಂಬುಗೆ |
| ಏಳು | ಏಳಿಗೆ | ಹೇಸು | ಹೇಸಿಗೆ |
ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು ಸು (ಇಲ್ಲವೇ ಇಸು) ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವುವಾದರೆ ಅವುಗಳೊಂದಿಗೆ ಕೆ ಎಂಬ ರೂಪ ದಲ್ಲಿರುವ ಪ್ರತ್ಯಯ ಬರುತ್ತದೆ, ಮತ್ತು ಈ ಪ್ರತ್ಯಯ ಸೇರಿದಾಗ ಅವುಗಳ ಕೊನೆ ಯಲ್ಲಿರುವ ಸು ಎಂಬ ಪ್ರತ್ಯಯ ಬಿದ್ದುಹೋಗುತ್ತದೆ. ಉದಾ:
| ಬಯಸು | ಬಯಕೆ | ಹಾರೈಸು |
|---|---|---|
| ಹಾರೈಕೆ | ಮಡಿಸು | ಗದರಿಸು |
| ಮಡಿಕೆ | ಗದರಿಕೆ |
93
ಕನ್ನಡ ಪದಗಳ ಒಳರಚನೆ
| ಬೆರಸು | ಬೆರಕೆ | ಆಕಳಿಸು |
|---|---|---|
| ಆಕಳಿಕೆ | ||
| ತುರಿಸು | ತುರಿಕೆ | ಮೂದಲಿಸು ಮೂದಲಿಕೆ |
| ಬಳಸು | ಬಳಕೆ | ತೂಕಡಿಸು |
| ತೂಕಡಿಕೆ |
ಮೇಲೆಯೇ ಸೂಚಿಸಿರುವಂತೆ, ಇಲ್ಲಿ ಸು ಎಂಬ ಪ್ರತ್ಯಯದಲ್ಲಿ ಕೊನೆ ಗೊಳ್ಳುವ ಕ್ರಿಯಾಪದಕ್ಕೆ ಕೆ ಎಂಬ ಪ್ರತ್ಯಯವನ್ನು ಸೇರಿಸಿ ನಾಮಪದವನ್ನು ತಯಾರಿಸಲಾಗಿದೆ ಎಂದು ಹೇಳುವ ಬದಲು, ಯಾವ ಪದವರ್ಗಕ್ಕೂ ಸೇರದ ಬಯ-, ಮಡಿ-, ಬೆರ-, ಬಳ-, ಹರ-, ಆಕಳಿ- ಮೊದಲಾದ ಅಸ್ವತಂತ್ರ ಪದಗಳಿಗೆ ಸು ಎಂಬ ಪ್ರತ್ಯಯವನ್ನು ಸೇರಿಸಿ ಕ್ರಿಯಾಪದವನ್ನೂ ಮತ್ತು ಕೆ ಎಂಬ ಪ್ರತ್ಯಯವನ್ನು ಸೇರಿಸಿ ನಾಮಪದವನ್ನೂ ತಯಾರಿಸಲಾಗಿದೆ ಎಂದು ಹೇಳಲು ಸಾಧ್ಯವಿದೆ.
ಇದಲ್ಲದೆ, ಸು ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ಬೇರೆ ಕೆಲವು ಕ್ರಿಯಾ ಪದಗಳಿಗೆ ಅ ಇಲ್ಲವೇ ಕೆ ಎಂಬ ಎರಡು ಪ್ರತ್ಯಯಗಳಲ್ಲಿ ಒಂದನ್ನು ಸೇರಿಸು ವುದರ ಮೂಲಕ (ಮತ್ತು ಅವುಗಳ ಕೊನೆಯಲ್ಲಿ ಬರುವ ಸು ಎಂಬುದನ್ನು ತೆಗೆದು ಹಾಕುವುದರ ಮೂಲಕ) ಎರಡು ಬೇರೆ ಬೇರೆ ರೀತಿಯ ನಾಮಪದ ಗಳನ್ನು ತಯಾರಿಸಲು ಸಾಧ್ಯವಿದೆ. ಅ ಎಂಬ ಪ್ರತ್ಯಯ ಸೇರಿದಾಗ ಇವುಗಳ ಕೊನೆಯ ಇಕಾರವೂ ಬಿದ್ದುಹೋಗುತ್ತದೆ.
| ಹಂಬಲಿಸು | ಹಂಬಲ | ಹಂಬಲಿಕೆ |
| ಬೇಸರಿಸು | ಬೇಸರ | ಬೇಸರಿಕೆ |
| ಎಚ್ಚರಿಸು | ಎಚ್ಚರ | ಎಚ್ಚರಿಕೆ |
| ಅಬ್ಬರಿಸು | ಅಬ್ಬರ | ಅಬ್ಬರಿಕೆ |
ಎಕಾರಾಂತ ಕ್ರಿಯಾಪದಗಳಿಗೆ ಕೆ ಎಂಬ ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಎಕಾರ ಅಕಾರವಾಗುತ್ತದೆ ಎಂಬುದನ್ನು ಮೊಳೆ- ಮೊಳಕೆ ಮತ್ತು ಬೆರೆ-ಬೆರಕೆ ಎಂಬ ಉದಾಹರಣೆಗಳಲ್ಲಿ ಕಾಣಬಹುದು. ಆದರೆ ಹೊದೆ-ಹೊದಿಕೆ ಎಂಬುದರಲ್ಲಿ ಈ ಎಕಾರ ಇಕಾರವಾಗಿದೆ (ಅಥವಾ ಮೇಲಿನ ಇಕೆ-ಇಗೆ ಪ್ರತ್ಯಯ ಅದರ ಇಕೆ ಎಂಬ ರೂಪದಲ್ಲಿ ಬಂದಿದ್ದು, ಕ್ರಿಯಾಪದದ ಕೊನೆಯ ಎಕಾರ ಬಿದ್ದುಹೋಗಿದೆ) ಮತ್ತು ನಡೆ-ನಡುಗೆ ಎಂಬುದರಲ್ಲಿ ಎಕಾರ ಉಕಾರವಾಗಿದೆ. ಇದಲ್ಲದೆ, ಈ ಕೊನೆಯ ಪದದಲ್ಲಿ ಕೆಯ ಬದಲು ಗೆ ಬಂದಿದೆ.
94
ಪ್ರತ್ಯಯವಿರುವ ನಾಮಪದಗಳು
ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಗೆ ಎಂಬ ರೂಪದಲ್ಲಿ ಬರುವುದನ್ನು ಸುಲಿ-ಸುಲಿಗೆ ಮತ್ತು ಹೊಲಿ-ಹೊಲಿಗೆ ಎಂಬ ಉದಾಹರಣೆಗಳಲ್ಲಿ ಕಾಣಬಹುದು. ಆದರೆ ಹಿಡಿ-ಹಿಡಿಕೆ ಎಂಬುದರಲ್ಲಿ ಇದು ಕೆ ಎಂಬ ರೂಪದಲ್ಲಿ ಬಂದಿದೆ. ಇದಲ್ಲದೆ, ಮೇಲೆ ಸೂಚಿಸಿದಂತೆ ಹಿಡಿ ಎಂಬುದು ಕನ್ನಡದಲ್ಲಿ ಕ್ರಿಯಾಪದವೂ ಹೌದು, ನಾಮಪದವೂ ಹೌದು.
ಪ್ರತ್ಯಯವಿರುವ ಪದಗಳ ಒಳರಚನೆಯಲ್ಲಿ ಬಳಕೆಯಾಗುವ ನಿಯಮಗಳು ಒಲವುಗಳು ಮಾತ್ರ, ಅವುಗಳಿಗೆ ಅಪವಾದಗಳಿರುವುದು ಜಾಸ್ತಿ ಎಂಬುದನ್ನು ಈ ಇಕೆ-ಇಗೆ ಪ್ರತ್ಯಯದ ಬಳಕೆಯ ಹಿಂದಿರುವ ‘ನಿಯಮ’ವನ್ನು ಬರೆಯಲು ನಡೆಸಿದ ಈ ಪ್ರಯತ್ನ ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಕನ್ನಡದ ಕ್ರಿಯಾಪದಗಳಲ್ಲಿ ಯಾವವುಗಳೊಂದಿಗೆ ಈ ಪ್ರತ್ಯಯ ಬರಬಲ್ಲುದು ಮತ್ತು ಯಾವವುಗಳೊಂದಿಗೆ ಬರಲಾರದು ಎಂಬ ವಿಷಯದಲ್ಲೂ ಬಹಳಷ್ಟು ಅನಿಯಮಿತತೆ ಇದೆ. ಉದಾ ಹರಣೆಗಾಗಿ, ಮಾಡು, ಕುಡಿ, ಬರೆ, ಅಡಗು, ಹೊರಡು, ಕೊಲ್ಲು, ಕಟ್ಟು, ತುಂಬು, ಊದು ಮೊದಲಾದ ಹಲವಾರು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಳಕೆಯಾಗಿಲ್ಲ.
(ಖ) ಅರ್ಥಭೇದಗಳು
ಕ್ರಿಯಾಪದಗಳಿಗೆ ಇಕೆ-ಇಗೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗುವ ಈ ಪ್ರತ್ಯಯವಿರುವ ನಾಮಪದಗಳಿಗೆ ಅರ್ಥ ಹೇಳುವುದೂ ಬಹಳ ಕಷ್ಟವಾದ ಕೆಲಸವಾಗಿದೆ. ಸಾಮಾನ್ಯವಾಗಿ ಈ ನಾಮಪದಗಳು ಅವುಗಳ ಒಳರಚನೆಯಲ್ಲಿ ಬಂದಿರುವ ಕ್ರಿಯಾಪದಗಳು ಯಾವ ಘಟನೆಗಳನ್ನು ನಿರ್ದೇಶಿಸು ತ್ತವೆಯೋ ಅವನ್ನೇ ಹೆಸರಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ನಿರ್ದೇಶಿಸುತ್ತಿದ್ದು, ಅವನ್ನೇ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ನಾಮಪದ ಗಳು ಹೆಸರಿಸುತ್ತಿವೆಯೆಂಬುದನ್ನು ಗಮನಿಸಬಹುದು.
ಅಂಜು ಅಂಜಿಕೆ ಹೊಗಳು ಹೊಗಳಿಕೆ ಬಯಸು ಬಯಕೆ ತೂಕಡಿಸು ತೂಕಡಿಕೆ
ಆದರೆ, ಈ ನಿಯಮಕ್ಕೆ ಹಲವಾರು ಬೇರೆ ಬೇರೆ ರೀತಿಯ ಅಪವಾದಗಳಿವೆ. ಉದಾಹರಣೆಗಾಗಿ, ಮೊಳಕೆ, ಕೆತ್ತಿಗೆ, ಹಾಸಿಗೆ, ತೆರಿಗೆ ಮೊದಲಾದವುಗಳು ಅವುಗಳ ಒಳರಚನೆಯಲ್ಲಿ ಬರುವ ಮೊಳೆ, ಕೆತ್ತು, ಹಾಸು, ತೆರು ಮೊದಲಾದ ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳನ್ನು ಹೆಸರಿಸುವ ಬದಲು, ಆ ಘಟನೆ
95
ಕನ್ನಡ ಪದಗಳ ಒಳರಚನೆ
ಗಳಿಂದ ಸಿದ್ಧವಾದ ವಸ್ತುಗಳನ್ನು ಹೆಸರಿಸುತ್ತವೆ; ಹಿಡಿಕೆ, ಹೊದಿಕೆ ಮೊದಲಾ ದವುಗಳು ಅಂತಹ ಘಟನೆಗಳನ್ನು ನಡೆಸಲು ಬೇಕಾಗುವ ಉಪಕರಣಗಳನ್ನು ಹೆಸರಿಸುತ್ತವೆ. ಪ್ರತ್ಯಯವಿರುವ ಪದಗಳು ‘ಹೆಸರಿಸುವ’ ಪದಗಳಾಗಿದ್ದು, ಅಂತಹ ಹೆಸರಿಸುವ ಪದಗಳ ಅರ್ಥವನ್ನು ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸುವ ಅವಶ್ಯಕತೆಯಿಲ್ಲವೆಂಬುದೇ (೩.೩.೩ ನೋಡಿ) ಅವುಗಳ ಅರ್ಥ ದಲ್ಲಿ ಇಂತಹ ಅನಿಯಮಿತತೆ ಕಾಣಿಸಿಕೊಳ್ಳಲು ಮುಖ್ಯ ಕಾರಣ.
(ಗ) ನಾಮಪದದೊಂದಿಗೆ ಬಳಕೆ
ಇಕೆ-ಇಗೆ ಪ್ರತ್ಯಯವು ಅದರ ಇಕೆ ಎಂಬ ರೂಪದಲ್ಲಿ ನೇರವಾಗಿ ಕ್ರಿಯಾಪದದ ಅನಂತರ ಬರುವ ಬದಲು ವಳಿ ಇಲ್ಲವೇ ಅಳೆ ಎಂಬ ಪ್ರತ್ಯಯದ ಅನಂತರ ಬರಬಲ್ಲುದು, ಮತ್ತು ಅದರ ಇಗೆ ಎಂಬ ರೂಪದಲ್ಲಿ ಅಣೆ ಎಂಬ ಪ್ರತ್ಯಯದ ಅನಂತರವೂ ಬರಬಲ್ಲುದು ಎಂಬುದನ್ನು ಕೆಳಗೆ ಕೊಟ್ಟಿರುವ ಪದಗಳಲ್ಲಿ ಕಾಣಬಹುದು.
| ನಡೆ | ನಡವಳಿಕೆ | ಬರೆ | ಬರವಣಿಗೆ |
| ತಿಳಿ | ತಿಳುವಳಿಕೆ | ಬೆಳೆ | ಬೆಳವಣಿಗೆ |
| ಮುಚ್ಚು | ಮುಚ್ಚಳಿಕೆ | ಮೆರೆ | ಮೆರವಣಿಗೆ |
| ಬೀಸು | ಬೀಸಣಿಗೆ |
ಆದರೆ, ಸಾಗಣಿಕೆ ಎಂಬುದರಲ್ಲಿ ಈ ಪ್ರತ್ಯಯ ಅಣ್ (ಇಲ್ಲವೇ ಅಣೆ) ಎಂಬು ದರ ಮುಂದೆ ಇಕೆ ಎಂಬ ರೂಪದಲ್ಲಿ ಬಂದಿದೆ. ದಬ್ಬಾಳಿಕೆ ಎಂಬುದರಲ್ಲಿ ಈ ಪ್ರತ್ಯಯದೊಂದಿಗೆ ಆಳೆ ಎಂಬ ಪ್ರತ್ಯಯ ಬಂದಿರುವ ಹಾಗೆ ಕಾಣಿಸುತ್ತದೆ.
ಮೇಲೆ ಕೊಟ್ಟಿರುವ ನಾಮಪದಗಳನ್ನು ಕ್ರಿಯಾಪದವೊಂದಕ್ಕೆ ಎರಡು ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೆಂದು ಹೇಳುವ ಬದಲು ಅಳಿ ಇಲ್ಲವೇ ಅಣ್ ಎಂಬ ಪ್ರತ್ಯಯಗಳ ಬಳಕೆಯಿಂದ ತಯಾರಾದ ನಾಮಪದಗಳಿಗೆ ಇಕೆ-ಇಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆಯೆಂದೂ ಹೇಳಲು ಸಾಧ್ಯ ವಿದೆ. ಹುಟ್ಟುವಳಿ, ಸಾಗುವಳಿ ಮೊದಲಾದ ಪದಗಳಲ್ಲಿ ವಳಿ ಎಂಬ ಪ್ರತ್ಯಯದ ಮೂಲಕ, ಮತ್ತು ಸಾಗಣೆ, ತಿರುಗಣೆ ಮೊದಲಾದ ಪದಗಳಲ್ಲಿ ಅಣೆ ಎಂಬ ಪ್ರತ್ಯಯದ ಮೂಲಕ ಇಂತಹ ನಾಮಪದಗಳನ್ನು ತಯಾರಿಸಲಾಗಿದೆ.
ಒಂದು ವ್ಯವಸಾಯ ಇಲ್ಲವೇ ಗುಣಧರ್ಮವನ್ನಾಧರಿಸಿ ವ್ಯಕ್ತಿಗಳನ್ನು ಹೆಸರಿಸುವಂತಹ (ಇಲ್ಲವೇ ಅಂತಹ ಗುಣಧರ್ಮವನ್ನೇ ಸೂಚಿಸುವಂತಹ) ಕೆಲವು ಶಬ್ದಗಳಿಗೆ ಇಕೆ ಎಂಬ ಪ್ರತ್ಯಯವೊಂದನ್ನು ಸೇರಿಸಿ ಆ ವ್ಯವಸಾಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವಂತಹ ನಾಮಪದವನ್ನು ತಯಾರಿಸಲು
96
ಪ್ರತ್ಯಯವಿರುವ ನಾಮಪದಗಳು
ಸಾಧ್ಯವಿದೆ. ಇಂತಹ ಶಬ್ದಗಳು ನೇರವಾಗಿ ಸಂಸ್ಕೃತದಿಂದ ಎರವಲಾಗಿ ಬಂದು ವಿರಬಹುದು, ಇಲ್ಲವೇ ಕನ್ನಡದ ಶಬ್ದಗಳಿಗೆ ಗಾರ (ಇಲ್ಲವೇ ವಂತ) ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಿದವುಗಳಿರಬಹುದು. ಉದಾ:
ಮಧ್ಯಸ್ಥ ಮಧ್ಯಸ್ಥಿಕೆ ಬಿಲ್ಲುಗಾರ ಬಿಲ್ಲುಗಾರಿಕೆ ಶ್ರೀಮಂತ ಶ್ರೀಮಂತಿಕೆ ಮೀನುಗಾರ ಮೀನುಗಾರಿಕೆ ಉನ್ನತ ಉನ್ನತಿಕೆ ಮಡಿವಂತ ಮಡಿವಂತಿಕೆ
ಮಾಸ್ಟರಿಕ್ ಎಂಬ ಪದದಲ್ಲಿ ಈ ಪ್ರತ್ಯಯ ಇಂಗ್ಲಿಷ್‌ನಿಂದ ಎರವಲಾಗಿ ಬಂದಿರುವ ಮಾಸ್ಟರ್ ಎಂಬ ಪದದೊಂದಿಗೆ ಬಂದಿದೆ.
ಇಂತಹ ಪದಗಳಲ್ಲಿ ಬರುವ ಇಕೆ ಎಂಬ ಪ್ರತ್ಯಯ ಮೇಲೆ ವಿವರಿಸಿರುವ ಇಕೆ-ಇಗೆ ಪ್ರತ್ಯಯಕ್ಕೆ ಸಂಬಂಧಿಸಿದುದೇ ಅಥವಾ ಸಂಸ್ಕೃತದಿಂದ ಎರವಲಾಗಿ ಬಂದಿರುವ ಬೇರೆ ಕೆಲವು ಪದಗಳಲ್ಲಿ ಕಾಣಿಸುವ ಇಕ ಎಂಬ ಇನ್ನೊಂದು ಪ್ರತ್ಯಯಕ್ಕೆ (ಉದಾ: ಕ್ಷಣ-ಕ್ಷಣಿಕ, ಯಂತ್ರ-ಯಾಂತ್ರಿಕ ಇತ್ಯಾದಿ (ವಿವರಗಳಿಗೆ ೮.೩.೫ ನೋಡಿ)) ಸಂಬಂಧಿಸಿದುದೇ ಎಂಬ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರುವುದು ಸ್ವಲ್ಪ ಕಷ್ಟ.
(ಫ) ಇಕೆ ಎಂಬ ಪದರೂಪ ಪ್ರತ್ಯಯ
ಮೇಲೆ ಕೊಟ್ಟಿರುವ ಇಕೆ-ಇಗೆ ಎಂಬ ಪ್ರತ್ಯಯದಿಂದ ಭಿನ್ನವಾಗಿರುವ ಮತ್ತು ಎಲ್ಲಾ ಸಂದರ್ಭಗಳಲ್ಲೂ ಇಕೆ ಎಂಬ ಒಂದೇ ರೂಪದಲ್ಲಿರುವ ಪದರೂಪ ಪ್ರತ್ಯಯವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಕ್ರಿಯಾಪದಗಳಿಗೆ ಸೇರಿಸಿ ಅವುಗಳ ಕ್ರಿಯಾರೂಪವೊಂದನ್ನು ತಯಾರಿಸಲು ಸಾಧ್ಯವಿದೆ. ಇದು ಕ್ರಿಯಾಪದ ಗಳು ನಿರ್ದೇಶಿಸುವ ಘಟನೆಗಳನ್ನು ವರ್ಣಿಸುತ್ತದಲ್ಲದೆ ಹೆಸರಿಸುವುದಿಲ್ಲ. ಉದಾ:
ಅಂಜು ಅಂಜುವಿಕೆ ಬರೆ ಬರೆಯುವಿಕೆ ಮಾಡು ಮಾಡುವಿಕೆ ಕುಡಿ ಕುಡಿಯುವಿಕೆ ಹೊಗಳು ಹೊಗಳುವಿಕೆ ಇರು ಇರುವಿಕೆ ಬಯಸು ಬಯಸುವಿಕೆ ತಪ್ಪು ತಪ್ಪುವಿಕೆ
ಈ ಪ್ರತ್ಯಯವನ್ನು ಸೇರಿಸಿದಾಗ ಉಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ವಕಾರ ಸೇರಿಕೊಳ್ಳುತ್ತದೆ, ಮತ್ತು ಇಕಾರಾಂತ ಮತ್ತು ಎಕಾರಾಂತ ಕ್ರಿಯಾಪದ
97
ಕನ್ನಡ ಪದಗಳ ಒಳರಚನೆ
ಗಳ ಕೊನೆಯಲ್ಲಿ ವಕಾರ ಮಾತ್ರವಲ್ಲದೆ ಯ ಎಂಬ ಅಕ್ಷರವೂ ಸೇರಿಕೊಳ್ಳುತ್ತದೆ ಎಂಬುದನ್ನು ಮೇಲಿನ ಉದಾಹರಣೆಗಳಿಂದ ತಿಳಿಯಬಹುದು.
ಇಕೆ ಎಂಬ ಈ ಪ್ರತ್ಯಯವನ್ನೊಳಗೊಂಡಿರುವ ಕ್ರಿಯಾರೂಪಗಳನ್ನು ನಾಮ ಪದಗಳ ಸ್ಥಾನದಲ್ಲಿ ಬಳಸಲು ಸಾಧ್ಯವಿದ್ದು, ಇವಕ್ಕೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನೂ ಸೇರಿಸಲು ಸಾಧ್ಯವಿದೆ. ಉದಾ:
- (೧ಕ) ಆಕೆಯ ಹಾಡುವಿಕೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ.
- (೧ಖ) ನಿಮ್ಮ ಹೊಗಳುವಿಕೆಯಿಂದ ಅವನು ಉಬ್ಬಿಹೋಗಿದ್ದಾನೆ.
-
(೧ಗ) ಅವಳ ಅಳುವಿಕೆಗೆ ಕಲ್ಲೂ ಕರಗೀತು.
- (ಇ) ಕೆಲವು ವ್ಯತ್ಯಾಸಗಳು
- ಕ್ರಿಯಾಪದಗಳಿಂದ ಕ್ರಿಯಾರೂಪಗಳನ್ನು ತಯಾರಿಸಲು ಬಳಸುವ ಈ ಇಕೆ ಎಂಬ
- ಪ್ರತ್ಯಯ ಪದರೂಪ ಪ್ರತ್ಯಯವಲ್ಲದೆ ಪದಪ್ರತ್ಯಯವಲ್ಲ. ಅದು ಮೇಲೆ
- ವಿವರಿಸಿರುವ ಇಕೆ-ಇಗೆ ಎಂಬ ಪದಪ್ರತ್ಯಯಕ್ಕಿಂತ ತೀರ ಭಿನ್ನವಾದುದು. ಪದ
- ಪ್ರತ್ಯಯಗಳಿಗೂ ಮತ್ತು ಪದರೂಪ ಪ್ರತ್ಯಯಗಳಿಗೂ ನಡುವೆ ಎಂತಹ ವ್ಯತ್ಯಾಸ
- ಗಳೆಲ್ಲ ಕಾಣಿಸಬಲ್ಲುವು ಎಂಬುದನ್ನು ಮೇಲೆ ೧.೬ರಲ್ಲಿ ವಿವರಿಸಲಾಗಿದೆ.
- ಇಂತಹ ವ್ಯತ್ಯಾಸಗಳು ಈ ಇಕೆ-ಇಗೆ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳ
- ನಡುವೆಯೂ ಕಾಣಿಸುವುವೆಂಬುದನ್ನು ಅವುಗಳ ನಡುವಿರುವ ಕೆಳಗಿನ ವ್ಯತ್ಯಾಸ
- ಗಳು ಸ್ಪಷ್ಟಪಡಿಸುತ್ತವೆ.
- (೧) ಇಕೆ ಎಂಬ ಪದರೂಪ ಪ್ರತ್ಯಯ ಎಲ್ಲಾ ಕ್ರಿಯಾಪದಗಳೊಂದಿಗೂ
- ಬರಬಲ್ಲುದು. ಈ ವಿಷಯದಲ್ಲಿ ಒಂದೂ ಅಪವಾದವಿಲ್ಲ. ಸಂಸ್ಕೃತದಿಂದ
- ಎರವಲಾಗಿ ಬಂದಿರುವ ಮತ್ತು ಇಸು ಎಂಬ ಪ್ರತ್ಯಯದ ಮೂಲಕ ಕನ್ನಡದಲ್ಲಿ
- ಕ್ರಿಯಾಪದವಾಗಿ ಬಳಕೆಯಾಗುವ ಪದಗಳೊಂದಿಗೂ ಇದು ಬರಬಲ್ಲುದೆಂಬು
- ದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
- ಅನುಮತಿಸು ಅನುಮತಿಸುವಿಕೆ
- ಶಿಕ್ಷಿಸು ಶಿಕ್ಷಿಸುವಿಕೆ
- ವಿರೋಧಿಸು ವಿರೋಧಿಸುವಿಕೆ
- ರಕ್ಷಿಸು ರಕ್ಷಿಸುವಿಕೆ
- ಇದಕ್ಕೆ ವ್ಯತಿರಿಕ್ತವಾಗಿ, ಇಕೆ-ಇಗೆ ಎಂಬ ಪದಪ್ರತ್ಯಯದ ಬಳಕೆ ಕೆಲವೇ
- ಕೆಲವು ಕ್ರಿಯಾಪದಗಳೊಂದಿಗೆ ಮಾತ್ರ ರೂಢಿಯಲ್ಲಿದೆ. ಉದಾಹರಣೆಗಾಗಿ, ಬರೆ,
- ಕುಡಿ, ಮಾಡು, ದುಡುಕು, ತಿರುಗು ಮೊದಲಾದ ಹಲವಾರು ಕ್ರಿಯಾಪದ
- ಗಳೊಂದಿಗೆ ಈ ಪ್ರತ್ಯಯದ ಬಳಕೆ ರೂಢಿಯಲ್ಲಿಲ್ಲ. ಇಕೆ ಎಂಬ ಪದರೂಪ
98
ಪ್ರತ್ಯಯವಿರುವ ನಾಮಪದಗಳು
ಪ್ರತ್ಯಯವನ್ನು ಇವೆಲ್ಲವಕ್ಕೂ ಸೇರಿಸಿ ಹೇಳಲು ಸಾಧ್ಯವಿದೆ. ಇದಲ್ಲದೆ, ಸಂಸ್ಕೃತ ದಿಂದ ಎರವಲಾಗಿ ಬಂದಿರುವ ಅನುಮತಿಸು, ಶಿಕ್ಷಿಸು ಮೊದಲಾದ ಕ್ರಿಯಾಪದ ಗಳೊಂದಿಗೆ ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿ ಹೇಳುವ ಹಾಗೆ ಇಕೆ-ಇಗೆ ಎಂಬ ಪದಪ್ರತ್ಯಯವನ್ನು ಸೇರಿಸಿ ಹೇಳಲು ಸಾಧ್ಯವಾಗದು.
(೨) ಇಕೆ ಎಂಬ ಪದರೂಪ ಪ್ರತ್ಯಯದ ಬಳಕೆಯಲ್ಲಿ ಇಕೆ-ಇಗೆ ಎಂಬ ಪದಪ್ರತ್ಯಯದ ಬಳಕೆಯಲ್ಲಿ ಕಾಣಿಸುವಂತಹ ಅನಿಯಮಿತ ಬದಲಾವಣೆಗ ಳಾವುವೂ ಕಾಣಿಸುವುದಿಲ್ಲ. ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಅದು ಇಕೆ ಎಂಬ ಒಂದೇ ರೂಪದಲ್ಲಿ ಬರುತ್ತದೆ. ಮೇಲೆ ಸೂಚಿಸಿದಂತೆ, ಉಕಾರದ ಅನಂತರ ವಕಾರ ಸೇರಿಕೊಳ್ಳುವುದು ಮತ್ತು ಎಕಾರ ಹಾಗೂ ಇಕಾರಗಳ ಅನಂತರ ಯವ್ ಎಂಬುದು ಸೇರಿಕೊಳ್ಳುವುದು ಎಂಬ ಎರಡು ಸಂಧಿನಿಯಮ ಗಳು ಮಾತ್ರ ಇವುಗಳ ಬಳಕೆಯಲ್ಲಿ ಕಾಣಿಸುವ ಬದಲಾವಣೆಗಳು. ಈ ಎರಡು ಬದಲಾವಣೆಗಳು ಎಲ್ಲಾ ಸಂದರ್ಭಗಳಲ್ಲೂ ನಿಯಮಿತವಾಗಿ ಬರುತ್ತಿದ್ದು, ಅವಕ್ಕೆ ಯಾವ ಅಪವಾದವೂ ಇಲ್ಲ.
ಕ್ರಿಯಾಪದಗಳೂ ಕೂಡ, ಇಕೆ ಎಂಬ ಪದರೂಪ ಪ್ರತ್ಯಯದೊಂದಿಗೆ ಸ್ವಲ್ಪವೂ ಬದಲಾವಣೆಯಿಲ್ಲದೆ ಸೇರಿಕೊಳ್ಳುತ್ತವೆ. ಉದಾಹರಣೆಗಾಗಿ, ಕ್ರಿಯಾಪದ ಗಳ ಕೊನೆಯಲ್ಲಿ ಬರುವ ಸು ಎಂಬ ಪ್ರತ್ಯಯ ಇಲ್ಲವೇ ಉ ಎಂಬ ಸ್ವರ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗುವುದಿಲ್ಲ, ಮತ್ತು ಕ್ರಿಯಾಪದಗಳ ಕೊನೆ ಯಲ್ಲಿ ಬರುವ ಎಕಾರ ಅಕಾರವಾಗಿ ಇಲ್ಲವೇ ಉಕಾರವಾಗಿ ಬದಲಾಗುವುದಿಲ್ಲ. ಇಕೆ-ಇಗೆ ಎಂಬ ಪದಪ್ರತ್ಯಯಕ್ಕೂ ಮತ್ತು ಇಕೆ ಎಂಬ ಪದರೂಪ ಪ್ರತ್ಯಯಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣ ಬಹುದು.
| ಕ್ರಿಯಾಪದ | ಇಕೆ-ಇಗೆ | ಇಕೆ |
|---|---|---|
| ಬಯಸು | ಬಯಕೆ | ಬಯಸುವಿಕೆ |
| ಬೆರಸು | ಬೆರಕೆ | ಬೆರಸುವಿಕೆ |
| ತುರಿಸು | ತುರಿಕೆ | ತುರಿಸುವಿಕೆ |
| ಅಂಜು | ಅಂಜಿಕೆ | ಅಂಜುವಿಕೆ |
| ಹೇಳು | ಹೇಳಿಕೆ | ಹೇಳುವಿಕೆ |
| ಹೊಗಳು | ಹೊಗಳಿಕೆ ಹೊಗಳುವಿಕೆ | |
| ಬೆರೆ | ಬೆರಕೆ | ಬೆರೆಯುವಿಕೆ |
| ಹೊದೆ | ಹೊದಿಕೆ | ಹೊದೆಯುವಿಕೆ |
| ನಡೆ | ನಡುಗೆ | ನಡೆಯುವಿಕೆ |
99
ಕನ್ನಡ ಪದಗಳ ಒಳರಚನೆ
(೩) ಅರ್ಥದ ಮಟ್ಟಿಗೂ ಈ ಎರಡು ಪ್ರತ್ಯಯಗಳ ನಡುವೆ ವ್ಯತ್ಯಾಸವಿದೆ. ಮೇಲೆಯೇ ವಿವರಿಸಿದಂತೆ, ಇಕೆ-ಇಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ನಾಮಪದಗಳಿಗೆ ಅವುಗಳ ಒಳರಚನೆಯ ಆಧಾರದ ಮೇಲೆ ನಿಯಮಿತವಾಗಿ ಅರ್ಥ ಹೇಳಲು ಸಾಧ್ಯವಾಗದು. ಅವೆಲ್ಲವಕ್ಕೂ ಒಳರಚನೆ ಒಂದೇ ರೀತಿಯ ದಾದರೂ ಅರ್ಥ ಮಾತ್ರ ಅನಿಯಮಿತವಾಗಿ ಬೇರೆ ಬೇರಾಗಿರುತ್ತದೆ. ಆದರೆ, ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಎಲ್ಲಾ ಕ್ರಿಯಾರೂಪ ಗಳಿಗೂ ಒಂದೇ ರೀತಿಯ ಅರ್ಥವಿದೆ. ಅವೆಲ್ಲ ವರ್ಣಿಸುವ ವಿಧಾನದ ಮೂಲಕ ಅವುಗಳಲ್ಲಿ ಬಂದಿರುವ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಗುರುತಿಸು ತ್ತವೆ.
ಬಯಸು ಬಯಕೆ ಬಯಸುವಿಕೆ
ಕೆತ್ತು ಕೆತ್ತಿಗೆ ಕೆತ್ತುವಿಕೆ
ಹಾಸು ಹಾಸುಗೆ ಹಾಸುವಿಕೆ
ಹಿಡಿ ಹಿಡಿಕೆ ಹಿಡಿಯುವಿಕೆ
ಮೊಳೆ ಮೊಳಕೆ ಮೊಳೆಯುವಿಕೆ
ಹೊಲಿ ಹೊಲಿಗೆ ಹೊಲಿಯುವಿಕೆ
ಈ ಎಲ್ಲಾ ವ್ಯತ್ಯಾಸಗಳ ಆಧಾರದ ಮೇಲೆ ಇಕೆ ಎಂಬುದು ಕ್ರಿಯಾ ಪದಗಳಿಂದ ಕ್ರಿಯಾರೂಪಗಳನ್ನು ತಯಾರಿಸುವುದಕ್ಕಾಗಿ ಬಳಸುವ ಪದರೂಪ ಪ್ರತ್ಯಯವೆಂದೂ ಮತ್ತು ಇಕೆ-ಇಗೆ ಎಂಬುದು ಪ್ರಾಮುಖ್ಯವಾಗಿ ಕ್ರಿಯಾಪದ ಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಸುವ ಅದಕ್ಕಿಂತ ತೀರ ಭಿನ್ನವಾದ ಪದಪ್ರತ್ಯಯವೆಂದೂ ಹೇಳಬೇಕಾಗುತ್ತದೆ.
೪.೩.೨ ತ-ತೇ ಪ್ರತ್ಯಯ
ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ತ ಇಲ್ಲವೇ ತೆ ಎಂಬ ರೂಪದಲ್ಲಿರುವ ಈ ಪ್ರತ್ಯಯವನ್ನು ಸೇರಿಸಿ ಕೆಲವು ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಎರಡು ರೂಪಗಳಲ್ಲಿ ತೆ ಎಂಬುದರ ಬಳಕೆ ಗಿಂತಲೂ ತ ಎಂಬುದರ ಬಳಕೆಯೇ ಜಾಸ್ತಿ. ಆದರೆ ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬ ವಿಷಯದಲ್ಲಿ ನಿಯಮವೇನೂ ಇರುವ ಹಾಗೆ ಕಾಣಿಸುವುದಿಲ್ಲ. ತೆ ಎಂಬುದರೊಂದಿಗೆ ಬಂದಾಗ ಕ್ರಿಯಾಪದಗಳ ಕೊನೆಯ ಎಕಾರ ಅಕಾರವಾಗುತ್ತದೆ (ಉದಾ: ನಡೆ-ನಡತೆ), ಆದರೆ ತ ಎಂಬುದ ರೊಂದಿಗೆ ಬಂದಾಗ ಅದು ಹಾಗೆಯೇ ಬದಲಾಗದೆ ಉಳಿಯುತ್ತದೆ (ಉದಾ: ಹೊಡೆ-ಹೊಡೆತ).
100
ಪ್ರತ್ಯಯವಿರುವ ನಾಮಪದಗಳು
ಈ ಪ್ರತ್ಯಯದ ಮೂಲಕ ತಯಾರಾದ ನಾಮಪದಗಳು ಸಾಮಾನ್ಯವಾಗಿ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಇಲ್ಲವೇ ಅದರಿಂದ ಸಿದ್ಧವಾಗುವ ಗುಣಧರ್ಮವನ್ನು ಹೆಸರಿಸುತ್ತವೆ. ಉದಾ:
| ಕುಣಿ | ಕುಣಿತ | ಅಲೆ | ಅಲೆತ |
| ಕುಡಿ | ಕುಡಿತ | ನೆಗೆ | ನೆಗೆತ |
| ಹಿಡಿ | ಹಿಡಿತ | ಒದೆ | ಒದೆತ |
| ದುಡಿ | ದುಡಿತ | ಎಸೆ | ಎಸೆತ |
| ಉರಿ | ಉರಿತ | ಮೊರೆ | ಮೊರೆತ |
| ತುಳಿ | ತುಳಿತ | ಸವೆ | ಸವೆತ |
| ಕುದಿ | ಕುದಿತ | ಅಗೆ | ಅಗೆತ |
| ಅಳೆ | ಅಳತೆ | ನಡೆ | ನಡತೆ |
| ಅಗೆ | ಅಗತೆ | ಮಿಡಿ | ಮಿಡಿತೆ |
ಅನಿಯಮಿತವಾಗಿ ಇಂತಹ ನಾಮಪದಗಳು ಕ್ರಿಯಾಪದವು ನಿರ್ದೇಶಿಸುವ ಘಟನೆಯಲ್ಲಿ ಬರುವ ವಸ್ತು, ಪ್ರಾಣಿ ಮೊದಲಾದುವನ್ನು ಹೆಸರಿಸುತ್ತಿರಲೂ ಸಾಧ್ಯವಿದೆ (ಉದಾ: ಮಿಡಿ-ಮಿಡಿತೆ). ತಪ್ಪು-ತಪ್ಪಿತ ಎಂಬುದರಲ್ಲಿ ಈ ಪ್ರತ್ಯಯ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೂ ಬಂದಿರುವ ಹಾಗೆ ಕಾಣಿಸುತ್ತದೆ.
ಸಂಸ್ಕೃತದಿಂದ ಎರವಲಾಗಿ ಬಂದಿರುವ ಕೆಲವು ನಾಮಪದಗಳಲ್ಲಿ ತೆ ಎಂಬ ಪ್ರತ್ಯಯವೊಂದು ಕಾಣಿಸುತ್ತದೆ. ಉದಾ:
ಅಧ್ಯಕ್ಷ ಅಧ್ಯಕ್ಷತೆ ಅರ್ಹ ಅರ್ಹತೆ ಕವಿ ಕವಿತೆ ದಕ್ಷ ದಕ್ಷತೆ
ಆದರೆ ಈ ತೆ ಎಂಬ ಪ್ರತ್ಯಯವನ್ನು ನಾಮಪದಗಳಿಗಲ್ಲದೆ ಕ್ರಿಯಾಪದಗಳಿಗೆ ಸೇರಿಸುವುದಿಲ್ಲ. ವ್ಯಕ್ತಿಯೊಬ್ಬನನ್ನು ಹೆಸರಿಸುವ ನಾಮಪದದಿಂದ ಆ ವ್ಯಕ್ತಿಯ ಗುಣಧರ್ಮವನ್ನು ಹೆಸರಿಸುವ ಬೇರೊಂದು ನಾಮಪದವನ್ನು ಸಾಧಿಸಲು ಈ ಪ್ರತ್ಯಯದ ಬಳಕೆಯಾಗುತ್ತದೆ. ಇದು ಸಂಸ್ಕೃತದ ತಾ ಎಂಬ ಪ್ರತ್ಯಯದ ಕನ್ನಡ ರೂಪ. ಮೇಲೆ ವಿವರಿಸಿರುವ ತ-ತೆ ಇದಕ್ಕಿಂತ ಭಿನ್ನವಾದುದು.
101
ಕನ್ನಡ ಪದಗಳ ಒಳರಚನೆ
೪.೩.೩ ಆ ಪ್ರತ್ಯಯ
ಇದು ಮುಖ್ಯವಾಗಿ ಗು ಇಲ್ಲವೇ ಡು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿರುವ ಗು ಮತ್ತು ಡು ಎಂಬ ಅಕ್ಷರಗಳು ಕ್ ಮತ್ತು ಟ್ ಎಂದಾಗುತ್ತವೆ (ಎಂದರೆ, ಗಕಾರ, ಡಕಾರಗಳು ಕಕಾರ, ಟಕಾರಗಳಾಗುತ್ತವೆ ಮತ್ತು ಅವುಗಳ ಅನಂತರ ಬರುವ ಉಕಾರ ಬಿದ್ದುಹೋಗುತ್ತದೆ).
| ನಡುಗು | ನಡುಕ | ಆಡು | ಆಟ |
| ತಿರುಗು | ತಿರುಕ | ಓಡು | ಓಟ |
| ಮರುಗು | ಮರುಕ | ನೋಡು | ನೋಟ |
| ತೂಗು | ತೂಕ | ಕಾಡು | ಕಾಟ |
| ಮಾಡು | ಮಾಟ | ||
| ಕೂಡು | ಕೂಟ |
ಆಡು ಎಂಬುದರಲ್ಲಿ ಕೊನೆಗೊಳ್ಳುವ ಹಲವು ‘ಕೂಡು’ಕ್ರಿಯಾಪದಗಳು ಕನ್ನಡದಲ್ಲಿದ್ದು ಅವುಗಳಲ್ಲಿ ಕೆಲವು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬರ ಬಲ್ಲುದು. ಇಂತಹ ಬಳಕೆಯಲ್ಲೂ ಕ್ರಿಯಾಪದದ ಕೊನೆಯ ಡು ಎಂಬ ಅಕ್ಷರ ಟ್ ಎಂದಾಗುತ್ತದೆ. ಉದಾ:
ಹೋರಾಡು ಹೋರಾಟ
ತಿರುಗಾಡು ತಿರುಗಾಟ
ಓಡಾಡು ಓಡಾಟ
ಬದ್ದಾಡು ಬದ್ದಾಟ
ಆದರೆ ಈ ಪ್ರತ್ಯಯ ಇಂತಹ ಎಲ್ಲಾ ಕೂಡುಕ್ರಿಯಾಪದಗಗಳೊಂದಿಗೂ ನಿಯಮಿತವಾಗಿ ಬರುವುದಿಲ್ಲ. ಉದಾಹರಣೆಗಾಗಿ, ಬಿಸಾಡು, ನಗಾಡು, ಮಾತ ನಾಡು ಮೊದಲಾದವುಗಳೊಂದಿಗೆ ಇದು ಬರುವುದಿಲ್ಲ, ಮತ್ತು ಈ ಪ್ರತ್ಯಯವ ನ್ನೊಳಗೊಂಡಿರುವ ಮಾರಾಟ, ಹುಡುಗಾಟ ಮೊದಲಾದ ಬೇರೆ ಕೆಲವು ನಾಮಪದಗಳಿಗೆ ಸಮನಾದ ಕೂಡುಕ್ರಿಯಾಪದ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಇದಲ್ಲದೆ, ತಲೆತಿರುಕ, ದಾರಿಹೋಕ ಮೊದಲಾದ ಬೇರೆ ಕೆಲವು ನಾಮಪದ ಗಳಲ್ಲಿ ಈ ಪ್ರತ್ಯಯ ಬಂದಿರುವ ಹಾಗೆ ಕಾಣಿಸುತ್ತದೆ, ಆದರೆ ಇವನ್ನು ತಯಾರಿಸಲು ಬೇಕಾಗುವ ಕೂಡುಕ್ರಿಯಾಪದಗಳು ಕನ್ನಡದಲ್ಲಿ ಬಳಕೆಯಲ್ಲಿಲ್ಲ.
102
ಪ್ರತ್ಯಯವಿರುವ ನಾಮಪದಗಳು
ಊದು ಎಂಬ ಕ್ರಿಯಾಪದಕ್ಕೆ ಇದೇ ಪ್ರತ್ಯಯವನ್ನು ಸೇರಿಸಿ ಊತ ಎಂಬ ಪದವನ್ನು ತಯಾರಿಸಿರುವಲ್ಲಿ ದಕಾರ ತಕಾರವಾಗಿರುವುದನ್ನು ಕಾಣಬಹುದು.
ಈ ಪ್ರತ್ಯಯದ ಮೂಲಕ ತಯಾರಾಗುವ ನಾಮಪದಗಳ ಅರ್ಥವೂ ಅನಿಯಮಿತವಾದುದು. ಹೆಚ್ಚಿನೆಡೆಗಳಲ್ಲೂ ಇದು ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಹೆಸರಿಸುತ್ತದೆ (ಉದಾ: ನಡುಗು-ನಡುಕ, ಮರುಗು-ಮರುಕ). ಆದರೆ, ಕೆಲವೆಡೆಗಳಲ್ಲಿ ಒಂದು ವಿಶಿಷ್ಟವಾದ ಘಟನೆಯನ್ನು ಮಾತ್ರವೇ ಹೆಸರಿಸು ತ್ತದೆ (ಉದಾ: ಮಾಡು-ಮಾಟ), ಮತ್ತು ಬೇರೆ ಕೆಲವು ಕಡೆಗಳಲ್ಲಿ ಅಂತಹ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಹೆಸರಿಸುತ್ತದೆ (ಉದಾ: ತಿರುಗು-ತಿರುಕ).
ಅಗಲು-ಅಗಲಿ ಮತ್ತು ತೀರು-ತೀರ ಎಂಬವುಗಳಲ್ಲಿ ಇದೇ ಪ್ರತ್ಯಯ ರು ಮತ್ತು ಲು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬಂದಿರುವುದನ್ನು ಕಾಣಬಹುದು.
೪.೩.೪ ವು ಪ್ರತ್ಯಯ
ಈ ಪ್ರತ್ಯಯವು ಪ್ರಾಮುಖ್ಯವಾಗಿ ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳಲ್ಲಿ ಹೆಚ್ಚಿನವೂ ಈ ಪ್ರತ್ಯಯ ಸೇರಿದಾಗ ಅವುಗಳ ಕೊನೆಯಲ್ಲಿ ಬರುವ ಎಕಾರವನ್ನು ಅಕಾರವಾಗಿ ಬದಲಾಯಿಸುತ್ತವೆ. ಉದಾ:
| ಅಳಿ | ಅಳಿವು | ಮರೆ | ಮರೆವು |
| ದಣಿ | ದಣಿವು | ಕಳೆ | ಕಳವು |
| ಹಸಿ | ಹಸಿವು | ನೆರೆ | ನೆರವು |
| ತಿಳಿ | ತಿಳಿವು | ತೆರೆ | ತೆರವು |
| ಅರಿ | ಅರಿವು | ಸೆಳೆ | ಸೆಳವು |
| ಹರಿ | ಹರಿವು |
ಒಲವು ಎಂಬ ಪದದಲ್ಲಿ ಅದರ ಒಳರಚನೆಯಲ್ಲಿ ಬರುವ ಒಲಿ ಎಂಬ ಕ್ರಿಯಾಪದದ ಕೊನೆಯ ಇಕಾರವೂ ಅಕಾರವಾಗಿರುವ ಹಾಗೆ ಕಾಣಿಸುತ್ತದೆ.
ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲೂ ಕೆಲವು ಈ ಪ್ರತ್ಯಯದೊಂದಿಗೆ ಸೇರಿ ನಾಮಪದಗಳಾಗಿವೆ. ಆದರೆ, ಇಂತಹ ಪದಗಳಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ಯು ಎಂಬ ಅಕ್ಷರದಲ್ಲಿ ಕೊನೆಗೊಳ್ಳುವ ಮತ್ತು ಅದರೆ ಹಿಂದೆ ಉದ್ದಸ್ವರವಿರುವ ಕೆಲವು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬರಲು ಸಾಧ್ಯವಿದ್ದು, ಹಾಗೆ ತಯಾ ರಾಗಿರುವ ಪದಗಳಲ್ಲಿ ಆ ಕ್ರಿಯಾಪದದ ಎರಡನೆಯ ಅಕ್ಷರ ಬಿದ್ದು ಹೋಗಿದೆ.
103
ಕನ್ನಡ ಪದಗಳ ಒಳರಚನೆ
| ಸಾಯು | ಸಾವು |
| ನೋಯು | ನೋವು |
| ಕಾಯು | ಕಾವು |
| ಮೇಯು | ಮೇವು |
ಉಕಾರದಲ್ಲಿ ಕೊನೆಗೊಳ್ಳುವ ನಿಲ್ಲು ಮತ್ತು ಗೆಲ್ಲು ಎಂಬ ಬೇರೆ ಎರಡು ಕ್ರಿಯಾಪದಗಳೊಂದಿಗೂ ಈ ಪ್ರತ್ಯಯ ಬರುತ್ತಿದ್ದು, ಈ ಪದಗಳಲ್ಲಿರುವ ಒತ್ತಕ್ಷರದ ಒಂದು ವ್ಯಂಜನ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗಿದೆ.
| ನಿಲ್ಲು | ನಿಲುವು |
| ಗೆಲ್ಲು | ಗೆಲುವು |
ಇದಲ್ಲದೆ ಇರವು ಎಂಬುದರ ಒಳರಚನೆಯಲ್ಲಿ ಇರು ಎಂಬ ಕ್ರಿಯಾಪದದ ಕೊನೆಯ ಉಕಾರ ಅಕಾರವಾಗಿದೆ, ಮತ್ತು ತಿರುವು ಎಂಬುದರಲ್ಲಿ ತಿರುಗು ಎಂಬ ಕ್ರಿಯಾಪದದ ಮೂರನೆಯ ಅಕ್ಷರ ಬಿದ್ದು ಹೋಗಿದೆ. ಬಿಡುವು ಎಂಬುದರಲ್ಲಿ ಮಾತ್ರ ಈ ಪ್ರತ್ಯಯ ಬಿಡು ಎಂಬ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೆ ಯಾವ ಬದಲಾವಣೆಯನ್ನೂ ಮಾಡದೆ ಬಂದಿದೆ.
ಅರ್ಥದ ಮಟ್ಟಿಗೆ ಈ ಪ್ರತ್ಯಯದ ಬಳಕೆಯಲ್ಲೂ ಅನಿಯಮಿತತೆಯಿದೆ ಯೆಂಬುದನ್ನು ಗಮನಿಸಬಹುದು. ಸಾವು, ನೋವು, ಮರೆವು ಮೊದಲಾದವು ಗಳು ಘಟನೆಗಳನ್ನು ಹೆಸರಿಸುವುವಾದರೆ, ಮೇವು ಎಂಬುದು ಘಟನೆಯ ಸಾಧನ ವನ್ನೂ ಮತ್ತು ತಿರುವು ಎಂಬುದು ಘಟನೆಯ ಸ್ಥಾನವನ್ನೂ ಹೆಸರಿಸುತ್ತವೆ.
೪.೩.೫ ವಳಿ ಪ್ರತ್ಯಯ
ಕ್ರಿಯಾಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿದಾಗ, ಅವುಗಳ ಕೊನೆಯಲ್ಲಿ ಬರುವ ಎಕಾರ ಅಕಾರವಾಗುತ್ತದೆ, ಮತ್ತು ಇಕಾರ ಉಕಾರವಾಗುತ್ತದೆ. ಆದರೆ ಉಕಾರ ಮಾತ್ರ ಬದಲಾಗದೆ ಹಾಗೆಯೇ ಉಳಿಯುತ್ತದೆ. ಇದಲ್ಲದೆ, ಉದಾ:
| ಹಿಡಿ | ಹಿಡುವಳಿ | ಸಾಗು | ಸಾಗುವಳಿ |
| ತಿಳಿ | ತಿಳುವಳಿಕೆ | ಹುಟ್ಟು | ಹುಟ್ಟುವಳಿ |
| ನಡೆ | ನಡವಳಿಕೆ | ಆಳು | ಆಡಳಿತ |
ತಿಳುವಳಿಕೆ ಮತ್ತು ನಡವಳಿಕೆ ಎಂಬ ಎರಡು ಪದಗಳಲ್ಲಿ ಈ ಪ್ರತ್ಯಯ ಕೆ ಎಂಬ ಇನ್ನೊಂದು ಪ್ರತ್ಯಯದೊಂದಿಗೆ ಬಂದಿದೆ. ಮತ್ತು ಆಡಳಿತ ಎಂಬ ಪದದಲ್ಲಿ ತ ಎಂಬ ಪ್ರತ್ಯಯದೊಂದಿಗೆ ಬಂದಿದೆ. ಇದಲ್ಲದೆ, ಆಡಳಿತ ಎಂಬ
104
ಪ್ರತ್ಯಯವಿರುವ ನಾಮಪದಗಳು
ಪದದಲ್ಲಿ ಕ್ರಿಯಾಪದದಲ್ಲಿದ್ದ ಳಕಾರ ಡಕಾರವಾಗಿದೆ, ಮತ್ತು ವಳಿ ಪ್ರತ್ಯಯದ ವಕಾರ ಬಿದ್ದು ಹೋಗಿದೆ.
ಗೊತ್ತು ಎಂಬ ಆಖ್ಯಾತ ಪದದೊಂದಿಗೂ ಈ ಪ್ರತ್ಯಯ ಬಂದಿರುವುದನ್ನು ಗೊತ್ತುವಳಿ ಎಂಬ ನಾಮಪದದಲ್ಲಿ ಕಾಣಬಹುದು. ದಬ್ಬಾಳಿಕೆ ಎಂಬುದರಲ್ಲೂ ಇದೇ ಪ್ರತ್ಯಯ (ದಬ್ಬು ಎಂಬ ಕ್ರಿಯಾಪದದೊಂದಿಗೆ) ಬಂದಿರಲು ಸಾಧ್ಯವಿದ್ದು, ಇಲ್ಲಿ ಇದಕ್ಕೆ ಆಳಿ ಎಂಬ ರೂಪವಿದೆ.
ಅಳಿ ಎಂಬ ರೂಪದಲ್ಲಿರುವ ಪ್ರತ್ಯಯವೊಂದು ಆಕಳಿಸು, ಅಪ್ಪಳಿಸು, ಕುಪ್ಪಳಿಸು, ಬಿಕ್ಕಳಿಸು ಮೊದಲಾದ ಕೆಲವು ಕ್ರಿಯಾಪದಗಳಲ್ಲಿ ಬರುವುದೆಂಬು ದನ್ನು ಮುಂದೆ ಆರನೇ ಅಧ್ಯಾಯದಲ್ಲಿ ನೋಡಲಿರುವೆವು. ಅದು ಈ ಪ್ರತ್ಯಯಕ್ಕೆ ಸಂಬಂಧಿಸಿರಲು ಸಾಧ್ಯವಿದೆ. ಇದೇ ಪ್ರತ್ಯಯ ಹೆಗ್ಗಳಿಕೆ ಎಂಬ ಪದದಲ್ಲಿ ಹಿರಿ ಎಂಬ ಗುಣಪದದ ಹೆಗ್ ಎಂಬ ರೂಪದೊಂದಿಗೆ ಬಂದಿದೆ.
೪.೩.೬ ವಣ್ ಪ್ರತ್ಯಯ
ಈ ಪ್ರತ್ಯಯ ಅದರ ಎಲ್ಲಾ ಬಳಕೆಗಳಲ್ಲೂ ಮೇಲೆ ೪.೩.೧ರಲ್ಲಿ ವಿವರಿಸಿದ ಇಕೆ-ಇಗೆ ಪ್ರತ್ಯಯದ ಇಗೆ ಎಂಬ ರೂಪದೊಂದಿಗೆ ಬರುತ್ತದೆ. ಕ್ರಿಯಾಪದದ ಕೊನೆಯ ಎಕಾರ ಈ ಪ್ರತ್ಯಯ ಸೇರಿದಾಗ ಅಕಾರವಾಗುತ್ತದೆ ಮತ್ತು ಉಕಾರ ಬಿದ್ದು ಹೋಗುತ್ತದೆ. ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೆ ಇದು ಅಣ್ ಎಂಬ ರೂಪದಲ್ಲಿ ಬರುತ್ತದೆ.
| ಬರೆ | ಬರವಣಿಗೆ | ಬೀಸು | ಬೀಸಣಿಗೆ |
| ಮೆರೆ | ಮೆರವಣಿಗೆ | ಬಾಚು | ಬಾಚಣಿಗೆ |
| ಬೆಳೆ | ಬೆಳವಣಿಗೆ |
ಮದುವಣಿಗ ಎಂಬ ನಾಮಪದದಲ್ಲಿ ಈ ಪ್ರತ್ಯಯ ಕ್ರಿಯಾಪದದೊಂದಿಗೆ ಬರುವ ಬದಲು ಮದುವೆ ಎಂಬ ಬೇರೊಂದು ನಾಮಪದದೊಂದಿಗೆ (ಮತ್ತು ಇಗ ಎಂಬ ಪ್ರತ್ಯಯದೊಂದಿಗೆ) ಬಂದಿರುವುದನ್ನು ಕಾಣಬಹುದು.
ತಿರುಗಣೆ, ಸಾಗಣೆ ಮತ್ತು ಬದಲಾವಣೆ ಎಂಬ ಪದಗಳಲ್ಲಿ ಕಾಣಿಸುವ ಅಣೆ ಎಂಬ ಪ್ರತ್ಯಯ ಮತ್ತು ಹೊಂದಾಣಿಕೆ, ಸಾಗಾಣಿಕೆ, ತಿದ್ದಾಣಿಕೆ ಮೊದಲಾದ ಪದಗಳಲ್ಲಿ ಕಾಣಿಸುವ ಆಣ್ ಎಂಬ ಪ್ರತ್ಯಯ - ಇವುಗಳೂ ಈ ಪ್ರತ್ಯಯಕ್ಕೆ ಸಂಬಂಧಿಸಿದವುಗಳಾಗಿರಲು ಸಾಧ್ಯವಿದೆ.
೪.೩.೭ ಎ ಪ್ರತ್ಯಯ
ಉಕಾರದಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳಿಗೆ ಎ ಎಂಬ ಈ ಪ್ರತ್ಯಯ ವನ್ನು ಸೇರಿಸಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಪ್ರತ್ಯಯ ಸೇರಿ
105
ಕನ್ನಡ ಪದಗಳ ಒಳರಚನೆ
ದಾಗ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಆದರೆ ಬಾಳು ಎಂಬ ಕ್ರಿಯಾಪದದಲ್ಲಿ ಮಾತ್ರ, ಅದು ವಕಾರವಾಗಿ ಬದಲಾಗುತ್ತದೆ. ಇದಲ್ಲದೆ, ಕೊಲ್ಲು ಎಂಬ ಕ್ರಿಯಾಪದದಲ್ಲಿ ಬರುವ ಒತ್ತಕ್ಷರದಿಂದ ಒಂದು ವ್ಯಂಜನವೂ ಬಿದ್ದು ಹೋಗುತ್ತದೆ. ಉದಾ:
| ಕಟ್ಟು | ಕಟ್ಟೆ | ನಗು | ನಗೆ |
| ತಟ್ಟು | ತಟ್ಟೆ | ಹೊರು | ಹೊರೆ |
| ಕೊಲ್ಲು | ಕೊಲೆ | ಬಾಳು | ಬಾಳ್ವೆ |
| ಹರಟು | ಹರಟೆ |
ನೆಲೆ ಎಂಬ ಪದದಲ್ಲೂ ಈ ಪ್ರತ್ಯಯ ಬಂದಿದ್ದು, ಅದರಲ್ಲಿ ನಿಲ್ಲು ಇಲ್ಲವೇ ನೆಲ ಎಂಬ ಪದ ಬಳಕೆಯಾಗಿರಬೇಕು.
೪.೩.೮ ಅಲು ಪ್ರತ್ಯಯ
ಈ ಪ್ರತ್ಯಯ ಪ್ರಾಮುಖ್ಯವಾಗಿ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳೊಂದಿಗೆ ಬರುತ್ತದೆ. ಸಿಡಿ ಎಂಬುದರಿಂದ ತಯಾರಾದ ಸಿಡಿಲು ಎಂಬುದು ಮಾತ್ರ ಇದಕ್ಕೆ ಅಪವಾದವಾಗಿರುವ ಹಾಗೆ ಕಾಣಿಸುತ್ತದೆ. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಉಕಾರ ಬಿದ್ದು ಹೋಗುತ್ತದೆ. ಉದಾ:
| ಕೆಮ್ಮು | ಕೆಮ್ಮಲು | ಮಾಸು | ಮಾಸಲು |
| ಮೆಟ್ಟು | ಮೆಟ್ಟಲು | ಅಳು | ಅಳಲು |
| ಬೀಳು | ಬೀಳಲು | ಮೂಡು | ಮೂಡಲು |
ಕೆಲವು ಕ್ರಿಯಾಪದಗಳೊಂದಿಗೆ ಇದಕ್ಕೆ ಇಲು ಎಂಬ ರೂಪವಿದೆ.
| ಕೊಯ್ಯು | ಕೊಯಿಲು |
| ಮಿಗು | ಮಿಗಿಲು |
ಮಡಿಸು ಎಂಬ ಕ್ರಿಯಾಪದದೊಂದಿಗೆ ಇದು ಈ ಎರಡು ರೂಪಗಳಲ್ಲೂ ಬರಲು ಸಾಧ್ಯವಿದ್ದು, ಇದರಿಂದ ತಯಾರಾಗುವ ನಾಮಪದಗಳಿಗೆ ಬೇರೆ ಬೇರೆ ಅರ್ಥಗಳಿವೆ: ಅಲು ಎಂಬುದನ್ನು ಸೇರಿಸಿ ತಯಾರಿಸಿದ ಮಡಲು ಎಂಬ ಪದಕ್ಕೆ ‘ತೆಂಗಿನ ಗರಿ’ ಎಂಬ ಅರ್ಥವೂ ಮತ್ತು ಇಲು ಎಂಬುದನ್ನು ಸೇರಿಸಿ ತಯಾರಿಸಿದ
106
ಪ್ರತ್ಯಯವಿರುವ ನಾಮಪದಗಳು
ಮಡಿಲು ಎಂಬುದಕ್ಕೆ ‘ಉಡಿ’ ಎಂಬ ಅರ್ಥವೂ ಬರುತ್ತದೆ. ಬಿಸಿಲು ಎಂಬ ಪದದಲ್ಲಿ ಈ ಪ್ರತ್ಯಯ ಬಿಸಿ ಎಂಬ ಗುಣಪದದೊಂದಿಗೆ ಬಂದಿದೆ.
ಆ.೨.೯ ಕು ಪ್ರತ್ಯಯ
ಈ ಪ್ರತ್ಯಯವನ್ನು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳಿಗೆ ಸೇರಿಸಿ ನಾಮಪದಗಳನ್ನು ತಯಾರಿಸಬಹುದು. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಇಕಾರ ಉಕಾರವಾಗುತ್ತದೆ ಮತ್ತು ಎಕಾರ ಅಕಾರವಾಗುತ್ತದೆ. ಇದಲ್ಲದೆ, ಕೆಲವು ಕ್ರಿಯಾಪದಗಳೊಂದಿಗೆ ಇದಕ್ಕೆ ಕ ಎಂಬ ಅಕಾರದಲ್ಲಿ ಕೊನೆಗೊಳ್ಳುವ ರೂಪವಿದೆ. ಉದಾ:
| ಬಿರಿ | ಬಿರುಕು | ಒಡೆ | ಒಡಕು |
| ಹರಿ | ಹರುಕು | ಕೊಳೆ | ಕೊಳಕು |
| ಮುರಿ | ಮುರುಕು | ಕರಿ | ಕರಕು |
| ಕುಡಿ | ಕುಡುಕ | ಎರೆ | ಎರಕ |
೪.೩.೧೦ ‘ಸೊನ್ನೆ’ ಪ್ರತ್ಯಯ
ಕನ್ನಡದಲ್ಲಿ ಕೆಲವು ಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದಗಳನ್ನಾಗಿ ಇಲ್ಲವೇ ಕ್ರಿಯಾಪದಗಳನ್ನಾಗಿ ಬಳಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (೨ಕ-ಗ) ವಾಕ್ಯಗಳನ್ನು ಗಮನಿಸ ಬಹುದು.
- (೨ಕ) ಅವಳು ಒಂದು ಹಾಡನ್ನು ಹಾಡಿದಳು.
- (೨ಖ) ಗುಡುಗು ಗುಡುಗಿತು, ಮಿಂಚು ಮಿಂಚಿತು.
- (೨ಗ) ಅವನು ಕಟ್ಟಿದ ಕಟ್ಟು ಸಡಿಲಾಗಿದೆ.
(೨ಕ)ದಲ್ಲಿ ಹಾಡು ಎಂಬ ಪದ ಎರಡು ಬಾರಿ ಬಂದಿದ್ದು, ಮೊದಲನೆಯ ಬಳಕೆ ಯಲ್ಲಿ ಅದು ನಾಮಪದವಾಗಿಯೂ ಮತ್ತು ಎರಡನೆಯ ಬಳಕೆಯಲ್ಲಿ ಕ್ರಿಯಾಪದ ವಾಗಿಯೂ ಬಂದಿದೆ. ಇದೇ ರೀತಿಯಲ್ಲಿ (೨ಖ)ದಲ್ಲಿ ಗುಡುಗು ಮತ್ತು ಮಿಂಚು ಎಂಬ ಪದಗಳು ಮತ್ತು (೨ಗ)ದಲ್ಲಿ ಕಟ್ಟು ಎಂಬ ಪದ ಯಾವ ರೀತಿಯ ಬದಲಾವಣೆಗೂ ಒಳಗಾಗದೆ ನಾಮಪದ ಮತ್ತು ಕ್ರಿಯಾಪದಗಳಾಗಿ ಬಂದಿರು ವುದನ್ನು ಕಾಣಬಹುದು.
ಇಂತಹ ಪದಗಳು ಮೂಲದಲ್ಲಿ ಕ್ರಿಯಾಪದಗಳೆಂದೂ, ಮತ್ತು ಅವಕ್ಕೊಂದು ‘ಸೊನ್ನೆ’ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅವುಗಳಿಂದ ನಾಮಪದಗಳನ್ನು ತಯಾರಿಸಲಾಗಿದೆಯೆಂದೂ ಹೇಳುವ ಕ್ರಮವಿದೆ. ಕನ್ನಡದಲ್ಲಿ
107
ಕನ್ನಡ ಪದಗಳ ಒಳರಚನೆ
ಸಾಮಾನ್ಯವಾಗಿ ಕ್ರಿಯಾಪದಗಳಿಂದ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳನ್ನು ತಯಾರಿಸುವುದೇ ಜಾಸ್ತಿ. ಇಸು ಎಂಬ ಪ್ರತ್ಯಯವನ್ನು ಬಳಸಿ ನಾಮಪದಗಳಿಂದ ಕ್ರಿಯಾಪದಗಳನ್ನು ತಯಾರಿಸಲು ಸಾಧ್ಯವಿದೆಯೇನೋ ನಿಜ. ಆದರೆ ಇದಕ್ಕೆ ಕನ್ನಡದ ನಾಮಪದ ಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಬಂದ ನಾಮಪದಗಳನ್ನು ಬಳಸು ವುದೇ ಜಾಸ್ತಿ (೬.೪ ನೋಡಿ). ಇದಕ್ಕಿಂತ ಭಿನ್ನವಾದ ಪ್ರತ್ಯಯಗಳು ಕನ್ನಡದ ಕ್ರಿಯಾಪದಗಳಲ್ಲಿ ಚಾರಿತ್ರಿಕ ಅವಶೇಷಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ (೬.೩ ನೋಡಿ).
ಈ ವಿಷಯಗಳ ಆಧಾರದ ಮೇಲೆ, ನಾಮಪದ ಮತ್ತು ಕ್ರಿಯಾಪದಗಳ ನಡುವೆ ಸಂಬಂಧವಿರುವಲ್ಲೆಲ್ಲ ಕ್ರಿಯಾಪದವೇ ಮೂಲವೆಂದೂ ಮತ್ತು ನಾಮ ಪದ ಕ್ರಿಯಾಪದಕ್ಕೆ ಯಾವುದಾದರೊಂದು ಪ್ರತ್ಯಯವನ್ನು (ಇಲ್ಲವೇ ಪದವನ್ನು) ಸೇರಿಸುವುದರ ಮೂಲಕ ತಯಾರಾಗುವಂತಹದೆಂದೂ ವಾದಿಸಲು ಸಾಧ್ಯವಿದೆ.
ಈ ರೀತಿ ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ಒಂದೇ ರೂಪ ವಿರುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
| ನಗು | ಓದು | ಮಿಂಚು |
| ಅಳು | ಹಾಡು | ಗುಡುಗು |
| ನುಡಿ | ಕೆಮ್ಮು | ಬೆವರು |
| ಉರಿ | ತಪ್ಪು | ಬದುಕು |
| ಬೆಳೆ | ಕಟ್ಟು | ಉಗುಳು |
| ಕರೆ | ಗುದ್ದು | ಉರುಳು |
ಇಂತಹ ಪದಗಳ ಪ್ರಯೋಗದಲ್ಲಿ ಕ್ರಿಯಾಪದಗಳು ನಿಯಮಿತವಾಗಿ ಒಂದು ಘಟನೆಯನ್ನು ನಿರ್ದೇಶಿಸುವುವಾದರೆ, ನಾಮಪದಗಳು ಅನಿಯಮಿತವಾಗಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡುತ್ತವೆ. ಉದಾಹರಣೆಗಾಗಿ, ಓದು, ಅಳು, ಕೆಮ್ಮು ಮೊದಲಾದ ನಾಮಪದಗಳು ಅದೇ ರೂಪದ ಕ್ರಿಯಾಪದಗಳು ನಿರ್ದೇ ಶಿಸುವ ಘಟನೆಗಳನ್ನು ಹೆಸರಿಸುವುವಾದರೆ, ಹಾಡು, ಬೆಳೆ, ಬೆವರು ಮೊದಲಾದ ನಾಮಪದಗಳು ಅಂತಹ ಘಟನೆಗಳಿಂದ ದೊರೆಯುವ ಫಲಿತಾಂಶವನ್ನು ಹೆಸರಿಸು ತ್ತವೆ.
ಅರ್ಥದಲ್ಲಿ ಅನಿಯಮಿತತೆ ಮತ್ತು ವೈವಿಧ್ಯವನ್ನು ನಾವು ಸಾಮಾನ್ಯವಾಗಿ ಪ್ರತ್ಯಯವಿರುವ ನಾಮಪದಗಳಲ್ಲೇ ಕಾಣುವೆವಾದ ಕಾರಣ, ಇಂತಹ ನಾಮಪದ ಗಳಲ್ಲಿ ಕ್ರಿಯಾಪದಗಳೊಂದಿಗೆ ಒಂದು ‘ಸೊನ್ನೆ’ ಪ್ರತ್ಯಯ ಬಂದಿದೆಯೆಂಬ ಮೇಲಿನ ವಾದಕ್ಕೆ ಈ ನಾಮಪದಗಳ ಅರ್ಥದಲ್ಲಿ ಕಾಣಿಸುವ ಅನಿಯಮಿತತೆ ಯೂ ಒಂದು ಆಧಾರವಾಗಬಲ್ಲುದು.
108
ಪ್ರತ್ಯಯವಿರುವ ನಾಮಪದಗಳು
೪.೩.೧೧ ಬೇರೆ ಕೆಲವು ಪ್ರತ್ಯಯಗಳು
ಮೇಲೆ ವಿವರಿಸಿರುವ ಪ್ರತ್ಯಯಗಳು ಮಾತ್ರವಲ್ಲದೆ, ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಬೇರೆಯೂ ಕೆಲವು ಪ್ರತ್ಯಯಗಳು ಕನ್ನಡದಲ್ಲಿ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುತ್ತವೆ. ಇವನ್ನು ಬೇರೆ ಬೇರಾಗಿ ವರ್ಣಿಸುವ ಬದಲು ಪಟ್ಟಿಮಾಡಿ ಹೇಳುವುದೇ ಸುಲಭ ವಾದುದರಿಂದ ಅಂತಹ ಪ್ರತ್ಯಯಗಳಿರುವ ಪದಗಳ ಪಟ್ಟಿಯೊಂದನ್ನು ಕೆಳಗೆ ಕೊಡಲಾಗಿದೆ.
-
ಪ್ರತ್ಯಯ ಕ್ರಿಯಾಪದ ನಾಮಪದ - | :—: | :—: | :—: | :—: |
-
೧. ಡ ಕಟ್ಟು ಕಟ್ಟಡ -
ಒತ್ತು ಒತ್ತಡ -
ಹೆಚ್ಚು ಹಚ್ಚಡ -
೨. ಪು ಹೊಳೆ ಹೊಳಪು -
ಉಡು ಉಡುಪು -
ನೆನೆ ನೆನಪು -
ತೀರು ತೀರ್ಪು -
೩. ಅನೆ ಕೆತ್ತು ಕೆತ್ತನೆ -
ಬಿತ್ತು ಬಿತ್ತನೆ -
೪. ಗ ಕೇಳು ಕೇಳುಗ -
ಓದು ಓದುಗ -
ನೋಡು ನೋಡುಗ -
೫. ಮೆ ತಾಳು ತಾಳ್ಮೆ -
ದುಡಿ ದುಡಿಮೆ -
ಉಳು ಉಳುಮೆ -
ನಲಿ ನಲ್ಕೆ -
೬. ಅಳ ಮುಚ್ಚು ಮುಚ್ಚಳ -
ಹೆಚ್ಚು ಹೆಚ್ಚಳ -
೭. ಹ ಬರೆ ಬರಹ -
೮. ಗಳು ಬಯ್ಯು ಬೈಗಳು -
೯. ಚು ಗೀರು ಗೀಚು -
೧೦. ಇಸು ತಿನ್ನು ತಿನಿಸು -
ಮುನಿ ಮುನಿಸು -
೧೧. ಆಯ ಒತ್ತು ಒತ್ತಾಯ -
೧೨. ಅಂದ ಒಪ್ಪು ಒಪ್ಪಂದ
109
| ಕನ್ನಡ ಪದಗಳ ಒಳರಚನೆ | |||
|---|---|---|---|
| ೧೩. | ಡಿ | ತಿನ್ನು | ತಿಂಡಿ |
| ಹೆದರು | ಹೇಡಿ | ||
| ೧೪. | ಇ | ಹಿಂಡು | ಹಿಂದಿ |
| ಏರು | ಏರಿ | ||
| ೧೫. | ದಿ | ಹಾಯು | ಹಾದಿ |
| ೧೬. | ಗೆ | ನೇಯು | ನೆಯ್ಯೆ |
| ೧೭ | ಪೆ | ತಿರುಗು | ತಿರುಪ್ |
ಇದಲ್ಲದೆ, ಕೇಡು ಎಂಬ ನಾಮಪದವನ್ನು ಕೆಡು ಎಂಬ ಕ್ರಿಯಾಪದದಿಂದ ಅದರ ಮೊದಲನೆಯ ಅಕ್ಷರದಲ್ಲಿ ಬರುವ ಸ್ವರವನ್ನು ಉದ್ದಸ್ವರವಾಗಿ ಮಾಡುವು ದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ಗಮನಿಸಬಹುದು.
೪.೪ ನಾಮಪದಗಳಿಂದ ತಯಾರಾದ ನಾಮಪದಗಳು
ಕನ್ನಡದಲ್ಲಿ ನಾಮಪದಗಳನ್ನು ಬೇರೆ ನಾಮಪದಗಳಿಗೆ ಯಾವುದಾದರೊಂದು ಪ್ರತ್ಯಯವನ್ನು ಸೇರಿಸುವುದರ ಮೂಲಕವೂ ತಯಾರಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ಗಾಣಿಗ ಎಂಬ ನಾಮಪದವನ್ನು ಗಾಣ ಎಂಬ ಬೇರೊಂದು ನಾಮ ಪದಕ್ಕೆ ಇಗ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ ಮತ್ತು ಮೂಗುತಿ ಎಂಬ ನಾಮಪದವನ್ನು ಮೂರು ಎಂಬ ಬೇರೊಂದು ನಾಮಪದಕ್ಕೆ ತಿ ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ.
ಆದರೆ ಕನ್ನಡದಲ್ಲಿ ಈ ರೀತಿ ತಯಾರಿಸಲಾಗಿರುವ ನಾಮಪದಗಳ ಸಂಖ್ಯೆ ಜಾಸ್ತಿ ಇಲ್ಲ. ಸಾಮಾನ್ಯವಾಗಿ ನಾಮಪದಗಳನ್ನು ಬೇರೆ ನಾಮಪದಗಳೊಂದಿಗೆ ಇಲ್ಲವೇ ಕ್ರಿಯಾಪದ ಅಥವಾ ಗುಣಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ತಯಾರಿಸುವುದೇ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನ. ಉದಾಹರಣೆ ಗಾಗಿ, ಕೈ ಎಂಬ ನಾಮಪದವನ್ನು ಬಳಸಿ ಹಲವು ಒಳರಚನೆಯಿರುವ ನಾಮ ಪದಗಳನ್ನು ತಯಾರಿಸಲಾಗಿದ್ದು, ಇವೆಲ್ಲವೂ ಜೋಡುಪದಗಳ ರೂಪದಲ್ಲಿರುವು ದನ್ನು ಗಮನಿಸಬಹುದು.
ಕೈಕೊಡಲಿ ಕೈಗೂಸು ಕೈಗನ್ನಡಿ ಕೈಚೀಲ ಕೈಗಾಡಿ ಕೈಚಳಕ ಕೈಗೆಲಸ ಕೈಪಿಡಿ ಕೈಗೂಲಿ ಕೈಬರಹ ಕೈಗಡ ಕೈಮಗ್ಗ, ಇತ್ಯಾದಿ
110
ಪ್ರತ್ಯಯವಿರುವ ನಾಮಪದಗಳು
ನಾಮಪದಗಳಿಂದ ಬೇರೆ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಸುವ ಪ್ರತ್ಯಯಗಳು ಕೆಲವು ಕನ್ನಡದಲ್ಲಿ ಕಾಣಿಸುವುವಾದರೂ, ಅವುಗಳಲ್ಲಿ ಸಂಸ್ಕೃತ ದಿಂದ ಎರವಲಾಗಿ ಬಂದವುಗಳು ಇಲ್ಲವೇ ಸಂಸ್ಕೃತದ ಪ್ರತ್ಯಯಗಳ ಮಾದರಿ ಯಲ್ಲಿ ಸಿದ್ಧವಾದವುಗಳೇ ಜಾಸ್ತಿ. ಉದಾಹರಣೆಗಾಗಿ, ಸಂಸ್ಕೃತದ ಕೃ ‘ಮಾಡು’ ಎಂಬ ಕ್ರಿಯಾಪದದಿಂದ ಸಿದ್ಧವಾದ ಕಾರ ಎಂಬ ಪ್ರತ್ಯಯ (ಉದಾ: ಚಿತ್ರಕಾರ, ನಮಸ್ಕಾರ, ಬಲಾತ್ಕಾರ ಇತ್ಯಾದಿ) ಕನ್ನಡದಲ್ಲಿ ಗಾರ ಎಂಬ ಪ್ರತ್ಯಯವಾಗಿ ಹಲವು ನಾಮಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾ:
| ಬಳೆ | ಬಳೆಗಾರ | ಮೋಸ | ಮೋಸಗಾರ |
| ಮಾಲೆ | ಮಾಲೆಗಾರ | ಮಾಟ | ಮಾಟಗಾರ |
| ಕೊಲೆ | ಕೊಲೆಗಾರ | ಮಾತು | ಮಾತುಗಾರ |
| ಜೊತೆ | ಜೊತೆಗಾರ | ಎದೆ | ಎದೆಗಾರ |
| ಬಿಲ್ಲು | ಬಿಲ್ಲುಗಾರ | ಕಾವಲು | ಕಾವಲುಗಾರ |
| ಮೀನು | ಮೀನುಗಾರ | ಹಾಸ್ಯ | ಹಾಸ್ಯಗಾರ |
| ಸಾಲಿ | ಸಾಲಿಗಾರ | ಬೇಟೆ | ಬೇಟೆಗಾರ |
| ಹೊಣೆ | ಹೊಣೆಗಾರ |
ಇದೇ ರೀತಿಯಲ್ಲಿ, ಮೇಲೆ ೪.೩.೧ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದ ಇಕೆ ಎಂಬ ಪ್ರತ್ಯಯದ ಮಾದರಿಯಲ್ಲಿ ಒಂದು ವ್ಯವಸಾಯ ಇಲ್ಲವೇ ಗುಣಧರ್ಮ ವನ್ನಾಧರಿಸಿ ವ್ಯಕ್ತಿಗಳನ್ನು ಹೆಸರಿಸುವ ನಾಮಪದಗಳಿಂದ ಆ ವ್ಯವಸಾಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವ ನಾಮಪದವನ್ನು ತಯಾರಿಸಲು ಕನ್ನಡದಲ್ಲಿ ಇಕೆ ಎಂಬ ಪ್ರತ್ಯಯದ ಬಳಕೆಯಾಗುತ್ತದೆ. ಕೊಲೆಗಾರಿಕೆ, ಬಿಲ್ಲುಗಾರಿಕೆ, ಮೊದಲಾದ ನಾಮಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.
ಕನ್ನಡದವೇ ಆದ ಕೆಲವು ಪದಗಳಲ್ಲಿ ಕಾಣಿಸುವ ಸ್ತ್ರೀ-ಪುರುಷ ಲಿಂಗಭೇದ ವನ್ನು ಸೂಚಿಸುವ ಇ ಮತ್ತು ಅ ಎಂಬೆರಡು ಪ್ರತ್ಯಯಗಳಿಗೂ (ಉದಾ: ಮುದುಕ-ಮುದುಕಿ) ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಬೇರೆ ಹಲವು ಪದಗಳಲ್ಲಿ ಕಾಣಿಸುವ ಇದೇ ರೂಪದ ಪ್ರತ್ಯಯಗಳು (ಉದಾ: ನಟ- ನಟಿ, ಲೇಖಕ-ಲೇಖಕಿ, ಶಿಕ್ಷಕ-ಶಿಕ್ಷಕಿ, ಇತ್ಯಾದಿ) ಮಾದರಿಯಾಗಿರಲು ಸಾಧ್ಯ ವಿದೆ. ಆದರೆ, ಉಕಾರದಲ್ಲಿ ಕೊನೆಗೊಳ್ಳುವ ಹಲವು ಗುಣಪದಗಳಿಂದಲೂ ವ್ಯವಸ್ಥಿತವಾಗಿ ಈ ಪ್ರತ್ಯಯಗಳನ್ನು ಬಳಸಿ ನಾಮಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಮುಂದೆ ೪.೫ರಲ್ಲಿ ನೋಡಲಿರುವೆವು.
ಗಂಡು-ಹೆಣ್ಣು ಎಂಬ ಅರ್ಥಭೇದವನ್ನು ಸೂಚಿಸುವ ಬೇರೆಯೂ ಕೆಲವು ಪ್ರತ್ಯಯಗಳು ಕನ್ನಡದಲ್ಲಿವೆ. ಉದಾಹರಣೆಗಾಗಿ, ಮೇಲೆ ಕೊಟ್ಟಿರುವ ಗಾರ
111
ಕನ್ನಡ ಪದಗಳ ಒಳರಚನೆ
ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ನಾಮಪದಗಳಲ್ಲಿ ಕೆಲವಕ್ಕೆ ತಿ ಎಂಬ ಪ್ರತ್ಯಯವನ್ನು ಸೇರಿಸಿ ಹೆಣ್ಣು ಎಂಬ ಅರ್ಥ ಬರುವಂತೆ ಮಾಡಲು ಸಾಧ್ಯವಿದೆ. ಉದಾ:
ಬಳೆಗಾರ ಬಳೆಗಾರ್ತಿ ಮಾಲೆಗಾರ ಮಾಲೆಗಾರ್ತಿ ಎದೆಗಾರ ಎದೆಗಾರ್ತಿ ಜೊತೆಗಾರ ಜೊತೆಗಾರ್ತಿ
ವಸ್ತು, ವಿಷಯ, ಸ್ಥಳ ಮೊದಲಾದುವನ್ನು ಗುರುತಿಸುವ ನಾಮಪದಗಳಿಗೆ ಇಗ ಪ್ರತ್ಯಯವನ್ನು ಸೇರಿಸಿ, ಆ ವಸ್ತು, ವಿಷಯ, ಸ್ಥಳ ಮೊದಲಾದುವಕ್ಕೆ ಸಂಬಂಧಿಸಿರುವ ವ್ಯಕ್ತಿಗಳನ್ನು ಗುರುತಿಸುವ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಉದಾ:
| ಕನ್ನಡ | ಕನ್ನಡಿಗ | ಒಕ್ಕಲು | ಒಕ್ಕಲಿಗ |
| ಸಾಲಿ | ಸಾಲಿಗ | ಪಟ್ಟಣ | ಪಟ್ಟಣಿಗ |
| ಗಾಣ | ಗಾಣಿಗ | ಹೆಣ್ಣು | ಹೆಣ್ಣಿಗ |
| ದಾರಿ | ದಾರಿಗ | ಲೆಕ್ಕ | ಲೆಕ್ಕಿಗ |
ಇಂತಹದೇ ಅರ್ಥವನ್ನು ಕೊಡುವುದಕ್ಕಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಇಕ ಎಂಬ ಒಂದು ಪ್ರತ್ಯಯ ಕಾಣಿಸುತ್ತದೆ (ಉದಾ: ಧನ-ಧನಿಕ, ರಸ-ರಸಿಕ, ಪೂರ್ವ-ಪೂರ್ವಿಕ, ಲೋಕ-ಲೌಕಿಕ, ಇತ್ಯಾದಿ). ಕನ್ನಡದ ಇಗ ಪ್ರತ್ಯಯ ಸಂಸ್ಕೃತದ ಈ ಇಕ ಪ್ರತ್ಯಯದ ಮಾದರಿ ಯಲ್ಲಿ ತಯಾರಾಗಿರುವ ಹಾಗೆ ಕಾಣಿಸುತ್ತದೆ.
ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವ ನಾಮಪದಗಳಿಗೆ ತನ ಎಂಬ ಪ್ರತ್ಯಯವನ್ನು ಸೇರಿಸಿ, ಅಂತಹ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವಭಾವವನ್ನು ಗುರುತಿಸುವ ನಾಮಪದಗಳನ್ನು ತಯಾರಿಸಬಹುದು. ಉದಾ:
| ನಂಟ | ನಂಟತನ | ದಡ್ಡ | ದಡ್ಡತನ |
| ತುಂಟ | ತುಂಟತನ | ಗೆಳೆ(ಯ) | ಗೆಳೆತನ |
| ಜಾಣ | ಜಾಣತನ | ಮನೆ | ಮನೆತನ |
ಈ ತನ ಎಂಬ ಪ್ರತ್ಯಯ ಗುಣಪದಗಳೊಂದಿಗೂ ಬರಬಲ್ಲುದೆಂಬುದನ್ನು ಮುಂದೆ ೪.೫ರಲ್ಲಿ ನೋಡಲಿರುವೆವು.
112
ಪ್ರತ್ಯಯವಿರುವ ನಾಮಪದಗಳು
ಇದಲ್ಲದೆ, ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸುವಂತಹ ಬೇರೆ ಕೆಲವು ಪ್ರತ್ಯಯಗಳೂ ಕನ್ನಡದಲ್ಲಿವೆ. ಇವುಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಕಾಣಬಹುದು.
| ೧. | ಎ | ನೆಲ ತಡ ಕೊಕ್ಕು ಮುಳ್ಳು | ನೆಲೆ ತಡೆ ಕೊಕ್ಕೆ ಮೊಳೆ |
| ೨. | ಇತಿ | ಬೀಗ | ಬೀಗಿತಿ |
| ೩. | ಳು | ಮಗ | ಮಗಳು |
| ೪. | ತಿ | ಮೂಗು | ಮೂಗುತಿ |
| ೫. | ಡು | ಕಿವಿ | ಕಿವುಡು |
| ೬. | ಅಲು | ಗಂಟು | ಗಂಟಲು |
| ೭. | ವು | ಗಡಿ | ಗಡುವು |
೪.೫ ಗುಣಪದಗಳಿಂದ ತಯಾರಾದ ನಾಮಪದಗಳು
ಗುಣಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕವೂ ಕನ್ನಡದಲ್ಲಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಇದಲ್ಲದೆ ಕೆಲವು ಗುಣಪದಗಳು ಪ್ರತ್ಯಯಗಳ ಸಹಾಯವಿಲ್ಲದೆ ಹಾಗೆಯೇ ನೇರವಾಗಿ ನಾಮಪದಗಳಾಗಿಯೂ ಬರ ಬಲ್ಲುವು. (ಇಂತಹ ಗುಣಪದಗಳಿಗೆ ಒಂದು ‘ಸೊನ್ನೆ’ಪ್ರತ್ಯಯವನ್ನು ಸೇರಿಸ ಲಾಗಿದೆಯೆಂದೂ ಹೇಳಲು ಸಾಧ್ಯವಿದೆ).
೪.೫.೧ ನೇರವಾದ ಬಳಕೆ
ಕನ್ನಡದಲ್ಲಿ ಬರುವ ಗುಣಪದಗಳಲ್ಲಿ ಹಲವನ್ನು ಅವುಗಳಲ್ಲಿ ಯಾವ ಬದಲಾ ವಣೆಯನ್ನೂ ಮಾಡದೆ ನೇರವಾಗಿ ನಾಮಪದಗಳ ಸ್ಥಾನದಲ್ಲಿ ಬಳಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಕೆಂಪು ಎಂಬ ಪದ ಗುಣಪದವಾಗಿಯೂ ಬಳಕೆಯಾಗ ಬಲ್ಲುದು ಮತ್ತು ನಾಮಪದವಾಗಿಯೂ ಬಳಕೆಯಾಗಬಲ್ಲುದು. ಉದಾ:
(೩ಕ) ಈ ಗೋಡೆಗೆ ಕೆಂಪು ಬಣ್ಣ ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು. (೩ಖ) ಈ ಗೋಡೆಗೆ ಕೆಂಪು ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು.
(೩ಕ)ದಲ್ಲಿ ಕೆಂಪು ಎಂಬುದು ಗುಣಪದವಾಗಿ ಬಂದಿದೆ ಮತ್ತು (೩ಖ)ದಲ್ಲಿ ಅದೇ ಪದ ಯಾವ ಬದಲಾವಣೆಯೂ ಇಲ್ಲದೆ ನಾಮಪದವಾಗಿ ಬಂದಿದೆ.
113
ಕನ್ನಡ ಪದಗಳ ಒಳರಚನೆ
ಈ ರೀತಿ ಗುಣಧರ್ಮವನ್ನು ಹೆಸರಿಸುವ ಬದಲು ಅಂತಹ ಗುಣಧರ್ಮ ವನ್ನೊಳಗೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿಯೂ ಕೆಲವು ಗುಣಪದಗಳು ಪ್ರತ್ಯಯಗಳ ಸಹಾಯವಿಲ್ಲದೆ ನಾಮಪದಗಳಾಗಿ ಬರ ಬಲ್ಲುವು. ಉದಾ:
(೪ಕ) ಪಾರ್ವತಮ್ಮನವರು ಇವತ್ತು ಒಂದು ಸಿಹಿ ತಿಂಡಿ ಮಾಡಿದ್ದರೆ. (೪ಖ) ಪಾರ್ವತಮ್ಮನವರು ಇವತ್ತು ಒಂದು ಸಿಹಿ ಮಾಡಿದ್ದಾರೆ.
(೪ಕ)ದಲ್ಲಿ ಸಿಹಿ ಎಂಬುದು ಒಂದು ಗುಣಪದವಾಗಿ ಬಂದಿದೆ ಮತ್ತು (೪ಖ) ದಲ್ಲಿ ಅದೇ ಪದ ಒಂದು ನಾಮಪದವಾಗಿ ಬಂದಿದೆ. ಆದರೆ ಈ ಎರಡನೆಯ ಬಳಕೆಯಲ್ಲಿ ಅದು ಸಿಹಿ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಹೆಸರಿಸುವ ಬದಲು ಅಂತಹ ಗುಣಧರ್ಮವನ್ನು ಪಡೆದಿರುವ ಒಂದು ವಸ್ತುವನ್ನು (ಸಿಹಿಯಾಗಿರುವ ತಿಂಡಿಯನ್ನು) ಹೆಸರಿಸುತ್ತದೆ.
ಹುಳಿ, ಗಟ್ಟಿ, ದಡ್ಡ, ಜಾಣ ಮೊದಲಾದ ಗುಣಪದಗಳೂ ಇದೇ ರೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲದೆ ನಾಮಪದಗಳಾಗಿ ಗುಣಧರ್ಮ ವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸಲು ಬರಬಲ್ಲುವು.
ಗುಣಪದಗಳನ್ನು ಅವುಗಳ ಅರ್ಥದ ಆಧಾರದ ಮೇಲೆ ಅಳತೆ, ಪ್ರಾಯ, ಬೆಲೆ, ಬಣ್ಣ, ಭೌತಿಕ ಗುಣಧರ್ಮ, ಮಾನವೀಯ ಗುಣಧರ್ಮ ಮತ್ತು ವೇಗ ಎಂಬುದಾಗಿ ಬೇರೆ ಬೇರೆ ಉಪವರ್ಗಗಳಲ್ಲಿ ವಿಂಗಡಿಸಲು ಸಾಧ್ಯವಿದ್ದು, ಇವುಗಳಲ್ಲಿ ಮೊದಲನೆಯ ನಾಲ್ಕು ಉಪವರ್ಗಗಳಲ್ಲಿ ಬರುವ ಪದಗಳು ಮಾದರಿ ಗುಣಪದಗಳಾಗಿರುತ್ತವೆ. ಉಳಿದ ಪದಗಳು ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗಿದ್ದರೆ, ಬೇರೆ ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗಿರುತ್ತವೆ. ಸಾಮಾನ್ಯವಾಗಿ ನಾಮಪದ ಮತ್ತು ಗುಣಪದಗಳೆಂಬ ಎರಡೂ ವರ್ಗಗಳಲ್ಲಿ ಬರುವ ಪದಗಳು ಇಂತಹವು.
ಮಾದರಿ ಗುಣಪದಗಳನ್ನು ನಾಮಪದಗಳಾಗಿ ಬಳಸಬೇಕಿದ್ದಲ್ಲಿ ಅವುಗಳಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೇ ಬೇರೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಉದಾಹರಣೆಗಾಗಿ, ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳ ಅಳತೆ ಇಲ್ಲವೇ ಪರಿಮಾಣವನ್ನು ಸೂಚಿಸುವ ಗುಣಪದಗಳನ್ನು ಉದ್ದ-ಗಿಡ್ಡ, ಎತ್ತರ-ತಗ್ಗು, ಅಗಲ-ಸಪುರ, ದಪ್ಪ-ತೆಳು, ಭಾರ-ಹಗುರ ಎಂಬಂತಹ ಬೇರೆ ಬೇರೆ ವಿರುದ್ಧಾರ್ಥದ ಜೋಡಿಗಳಾಗಿ ಸೇರಿಸಿ ಹೇಳಲು ಸಾಧ್ಯವಿದೆ.
ಇಂತಹ ಗುಣಪದಗಳ ಪ್ರತಿಯೊಂದು ಜೋಡಿಯಲ್ಲೂ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಗುಣಪದವನ್ನು ಮಾತ್ರ ನೇರವಾಗಿ ಒಂದು ನಾಮಪದದ ಸ್ಥಾನದಲ್ಲಿ ಬಳಸಲು ಸಾಧ್ಯವಿದೆ. ಇದಲ್ಲದೆ, ಆ ಎರಡು ಪದಗಳೂ ಒಟ್ಟಾಗಿ
114
ಪ್ರತ್ಯಯವಿರುವ ನಾಮಪದಗಳು
ಸೂಚಿಸುವ ಅಳತೆಯನ್ನು ಈ ಒಂದೇ ಗುಣಪದ ಹೆಸರಿಸುತ್ತದೆ. ಉದಾಹರಣೆ ಗಾಗಿ ಕೆಳಗೆ ಕೊಟ್ಟಿರುವ (೫ಕ-ಗ) ವಾಕ್ಯಗಳನ್ನು ಗಮನಿಸಬಹುದು.
(ಆಕ) ಆ ಕೋಲು ಈ ಕೋಲಿಗಿಂತ ಉದ್ದ.
(೫೨) ಈ ಕೋಲು ಆ ಕೋಲಿಗಿಂತ ಗಿಡ್ಡ.
(೫ಗ) ಆ ಕೋಲಿನ ಉದ್ದ ನಾಲ್ಕಡಿ, ಮತ್ತು ಈ ಕೋಲಿನ ಉದ್ದ ಮೂರಡಿ.
ಮೇಲೆ (೫ಕ) ವಾಕ್ಯದಲ್ಲಿ ಆಖ್ಯಾತವಾಗಿ ಬಂದಿರುವ ಉದ್ದ ಎಂಬ ಗುಣಪದಕ್ಕೂ ಮತ್ತು (೫ಖ) ವಾಕ್ಯದಲ್ಲಿ ಬಂದಿರುವ ಗಿಡ್ಡ ಎಂಬ ಗುಣಪದಕ್ಕೂ ಪ್ರತಿಯಾಗಿ (೫ಗ) ವಾಕ್ಯದಲ್ಲಿ ಉದ್ದ ಎಂಬುದೇ ನಾಮಪದವಾಗಿ ಬಂದಿದೆಯೆಂಬುದನ್ನು ಗಮನಿಸಬಹುದು. ಕೋಲು ಉದ್ದ ಇದ್ದರೂ ಗಿಡ್ಡ ಇದ್ದರೂ ಅದರ ಅಳತೆಯನ್ನು ಸೂಚಿಸಲು ಉದ್ದ ಎಂಬ ಪದವನ್ನೇ ನಾಮಪದವಾಗಿ ಬಳಸಬೇಕಾಗುತ್ತದೆ.
ಇದೇ ರೀತಿಯಲ್ಲಿ ಎತ್ತರ ಮತ್ತು ತಗ್ಗು ಎಂಬ ಗುಣಪದಗಳು ಸೂಚಿಸುವ ಅಳತೆಯನ್ನು ಹೆಸರಿಸಲು ಎತ್ತರ ಎಂಬ ಪದವೇ ನಾಮಪದವಾಗಿ ಬಳಕೆ ಯಾಗುತ್ತದೆ, ಮತ್ತು ಅಗಲಿ ಹಾಗೂ ಸಪುರ ಎಂಬ ಗುಣಪದಗಳು ಸೂಚಿಸುವ ಅಳತೆಯನ್ನು ಹೆಸರಿಸಲು ಅಗಲಿ ಎಂಬುದೇ ನಾಮಪದವಾಗಿ ಬಳಕೆಯಾಗುತ್ತದೆ. ಮೇಲೆ ಕೊಟ್ಟಿರುವ ಇತರ ಪದಗಳ ಬಳಕೆಯೂ ಇಂತಹದೇ ಎಂಬುದನ್ನು ಗಮನಿಸಬಹುದು.
೪.೫.೨ ಪ್ರತ್ಯಯಗಳ ಬಳಕೆ
ಕುರುಡು, ಕಿವುಡು, ಕುಳ್ಳು, ಹುಚ್ಚು ಮೊದಲಾದ ಮನುಷ್ಯರಲ್ಲಿ ಕಾಣಿಸುವ ಗುಣಧರ್ಮಗಳನ್ನು (ಅದರಲ್ಲೂ ಪ್ರಾಮುಖ್ಯವಾಗಿ ಕೊರತೆಗಳನ್ನು) ಸೂಚಿಸುವ ಕೆಲವು ಗುಣಪದಗಳು ಸಾಮಾನ್ಯವಾಗಿ ಉಕಾರದಲ್ಲಿ ಕೊನೆಗೊಳ್ಳುತ್ತವೆ. ಇಂತಹ ಗುಣಪದಗಳಿಗೆ ಅ ‘ಗಂಡಸು’ ಮತ್ತು ಇ ‘ಹೆಂಗಸು’ ಎಂಬ ಪ್ರತ್ಯಯಗಳ ಲ್ಲೊಂದನ್ನು ಸೇರಿಸಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಪ್ರತ್ಯಯಗಳನ್ನು ಸೇರಿಸಿದಾಗ ಗುಣಪದಗಳ ಕೊನೆಯ ಉಕಾರ ಬಿದ್ದು ಹೋಗು ತ್ತದೆ. ಉದಾ:
| ಗುಣಪದ | ನಾಮಪದಗಳು | |
|---|---|---|
| ಗಂಡಸು | ಹೆಂಗಸು | |
| ಕುರುಡು | ಕುರುಡ | ಕುರುಡಿ |
| ಕಿವುಡು | ಕಿವುಡ | ಕಿವುಡಿ |
| ಕುಂಟು | ಕುಂಟ | ಕುಂಟಿ |
115
ಕನ್ನಡ ಪದಗಳ ಒಳರಚನೆ
| ಕುಳ್ಳು | ಕುಳ್ಳ | ಕುಳ್ಳಿ |
| ಮರುಳು | ಮರುಳ | ಮರುಳಿ |
| ಹುಚ್ಚು | ಹುಚ್ಚ | ಹುಚ್ಚಿ |
| ತುಂಟು | ತುಂಟ | ತುಂಟಿ |
| ಬೆಲುವು | ಬೆಲುವ | ಬೆಲುವಿ |
| ಹೆಡ್ಡು | ಹೆಡ್ಡ | ಹೆಡ್ಡಿ |
ಇಂತಹ ಗುಣಪದಗಳಲ್ಲಿ ಕೆಲವು (ಉದಾ: ಕುರುಡು, ಕಿವುಡು) ಪ್ರತ್ಯಯಗಳ ಸಹಾಯವಿಲ್ಲದೆಯೂ ನಾಮಪದಗಳಾಗಿ ಬರಬಲ್ಲುವಾಗಿದ್ದು, ಅಂತಹ ಬಳಕೆ ಯಲ್ಲಿ ಅವಕ್ಕೆ ಗುಣಧರ್ಮವಿರುವವರನ್ನು ಹೆಸರಿಸುವ ಬದಲು ಗುಣಧರ್ಮ ವನ್ನೇ ಹೆಸರಿಸುವ ಅರ್ಥವಿರುತ್ತದೆ.
(ಟಕ) ಅವನದು ಕುರುಡು ಬುದ್ಧಿ.
(ಟವಿ) ಅವನ ಕಿವುದಿಗೆ ಮದ್ದಿಲ್ಲ.
ಕೆಲವು ಗುಣಪದಗಳಿಗೆ ತನ ಎಂಬ ಪ್ರತ್ಯಯವನ್ನು ಸೇರಿಸಿ, ಅವು ಸೂಚಿಸುವ ಗುಣಧರ್ಮವನ್ನು ಹೆಸರಿಸಲು ಸಾಧ್ಯವಿದೆ. ಉದಾ:
| ಬಳ್ಳೆ | ಬಳ್ಳೆತನ | ದೊಡ್ಡ | ದೊಡ್ಡತನ |
| ಬಡ | ಬಡತನ | ಹೊಸ | ಹೊಸತನ |
| ಮುದಿ | ಮುದಿತನ | ಹಿರಿ | ಹಿರಿತನ |
| ಎಳೆ | ಎಳೆತನ | ಮಂಕು | ಮಂಕುತನ |
ಈ ಪ್ರತ್ಯಯ ಪದಪ್ರತ್ಯಯವೇ ಅಥವಾ ಪದರೂಪ ಪ್ರತ್ಯಯವೇ (ಎಂದರೆ ಈ ಪ್ರತ್ಯಯವಿರುವ ಪದಗಳು ನಾಮಪದಗಳೇ ಅಥವಾ ಗುಣಪದಗಳ ಪದ ರೂಪಗಳೇ) ಎಂಬ ವಿಷಯದಲ್ಲಿ ಸಂದೇಹವಿದೆ. ಈ ಪ್ರತ್ಯಯ ಎಲ್ಲಾ ರೀತಿಯ ಗುಣಪದಗಳೊಂದಿಗೂ ಬಾರದಿರುವುದು ಇದನ್ನು ಪದಪ್ರತ್ಯಯವೆಂದು ಹೇಳಲು ಆಧಾರವಾಗಬಲ್ಲುದು. ಉದಾಹರಣೆಗಾಗಿ, ಕಪ್ಪು ಇಲ್ಲವೇ ಕೆಂಪು ಎಂಬ ಗುಣಪದದೊಂದಿಗೆ ಈ ಪ್ರತ್ಯಯ ಬರಲಾರದು.
ಆದರೆ ಇದು ಬರುವಲ್ಲೆಲ್ಲ ನಿಯಮಿತವಾಗಿ ಒಂದು ಗುಣಧರ್ಮವನ್ನೇ ಸೂಚಿಸುವ ಕಾರಣ, ಇದು ವರ್ಣಿಸುವ ವಿಧಾನದ ಮೂಲಕ (೩.೧ ನೋಡಿ) ಆ ಗುಣಧರ್ಮವನ್ನು ಗುರುತಿಸುವುದೆಂದು ಹೇಳಲು ಸಾಧ್ಯವಿದೆ. ಈ ವಿಷಯದ ಆಧಾರದ ಮೇಲೆ ಅದನ್ನು ಗುಣಪದದ ಪದರೂಪವೆಂದೂ ಹೇಳಲು ಸಾಧ್ಯವಿದೆ.
116
ಪ್ರತ್ಯಯವಿರುವ ನಾಮಪದಗಳು
ಒಂದೆರಡು ನಾಮಪದಗಳಲ್ಲಿ ಮಾತ್ರವೇ ಕಾಣಿಸುವ ಬೇರೆ ಕೆಲವು ಪ್ರತ್ಯಯ ಗಳೂ ಕನ್ನಡದಲ್ಲಿ ಗುಣಪದಗಳಿಂದ ನಾಮಪದಗಳನ್ನು ತಯಾರಿಸಲು ಬಳಕೆ ಯಲ್ಲಿವೆ. ಇಂತಹ ಪದಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.
| ಪ್ರತ್ಯಯ | ಗುಣಪದ | ನಾಮಪದ | |
|---|---|---|---|
| ೧. | ಬ | ಹೊಸ ಹಳೆ | ಹೊಸಬ ಹಳಬ |
| ೨. | ತು | ಹೊಸ ಹಳೆ ಎಳೆ | ಹೊಸತು ಹಳತು ಎಳತು |
| ೩. | ಪು | ಬಿಳಿ ತೆಳು ಮುದಿ | ಬಿಳುಪು ತೇಳುಪು ಮುಪ್ಪು |
| ೪. | ಮೆ | ಹಿರಿ ಜಾಣ | ಹೆಮ್ಮೆ ಜಾಣ್ಮೆ |
| ೫. | ಗ | ಗಟ್ಟಿ | ಗಟ್ಟಿಗ |
| ೬. | ಕ | ಮುದಿ | ಮುದುಕ |
| ೭. | ಕೆ | ತುರಿ | ತುರಿಕೆ |
| ೮. | ಇ | ಅಡ್ಡ | ಅಡ್ಡಿ |
| ೯. | ಸೆ | ಹುಳಿ | ಹುಣಿಸೆ |
೪. ಸಾರಾಂಶ
ಪ್ರತ್ಯಯಗಳನ್ನು ಬಳಸಿ ತಯಾರಿಸಿದ ನಾಮಪದಗಳು ಕನ್ನಡದಲ್ಲಿ ಜಾಸ್ತಿ ಇಲ್ಲ. ಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದಕ್ಕಿಂತಲೂ ಬೇರೆ ಪದಗಳನ್ನೇ ಸೇರಿಸಿ ಜೋಡುಪದಗಳನ್ನು ತಯಾರಿಸುವುದೇ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನ. ಇದಲ್ಲದೆ, ಪ್ರತ್ಯಯಗಳನ್ನು ಬಳಸುವಲ್ಲೂ ಒಂದು ಪದಕ್ಕೆ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ಪದಗಳು ಕನ್ನಡದಲ್ಲಿ ಬಹಳ ಕಡಿಮೆ.
ಪ್ರತ್ಯಯಗಳನ್ನು ಬಳಸಿ ತಯಾರಿಸಿದ ನಾಮಪದಗಳಲ್ಲಿ ಕ್ರಿಯಾಪದಕ್ಕೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಇಂತಹ ನಾಮಪದಗಳಲ್ಲಿ ಕಾಣಿಸುವ ಪ್ರತ್ಯಯಗಳಲ್ಲಿ ಇಕೆ-ಇಗೆ ಎಂಬುದೇ ಪ್ರಾಮುಖ್ಯ ವಾದುದು. ನಾಮಪದ ಮತ್ತು ಗುಣಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ನಾಮಪದಗಳು ಕೆಲವು ಕನ್ನಡದಲ್ಲಿ ಕಾಣಿಸುವುವಾದರೂ ಇಂತಹ ಪದಗಳ ಸಂಖ್ಯೆ ಬಹಳ ಕಡಿಮೆ. ಇದಲ್ಲದೆ, ನಾಮಪದಗಳೊಂದಿಗೆ ಬರುವ ಪದ
117
ಕನ್ನಡ ಪದಗಳ ಒಳರಚನೆ ಪ್ರತ್ಯಯಗಳಲ್ಲಿ ಹೆಚ್ಚಿನವೂ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಪ್ರತ್ಯಯಗಳ ಮಾದರಿಯಲ್ಲಿ ತಯಾರಾದವುಗಳ ಹಾಗಿವೆ.
118
ಅಧ್ಯಾಯ ಐದು ಜೋಡುಪದಗಳು
೫.೧ ಗೊಂದಲವನ್ನು ಹೋಗಲಾಡಿಸುವುದು
ಕೇಶಿರಾಜನ ಕಾಲದಿಂದಲೂ ಕನ್ನಡ ವ್ಯಾಕರಣಗಳಲ್ಲಿ ಸಮಾಸಗಳ ವರ್ಣನೆ ಯೆಂಬುದು ಒಂದು ದೊಡ್ಡ ಗೋಜಲುಮಯ ವಿಷಯವಾಗಿದೆ. ಸಂಸ್ಕೃತ ಸಮಾಸಗಳ ಪರಿಶೀಲನೆಯ ಮೂಲಕ ಕನ್ನಡ ಸಮಾಸಗಳನ್ನು ವಿವರಿಸಲು ಯತ್ನಿಸಿರುವುದು ಇದಕ್ಕೆ ಒಂದು ಕಾರಣವಾದರೆ, ಜೋಡುಪದಗಳಿಗೂ ಮತ್ತು ಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳದಿರು ವುದು ಇನ್ನೊಂದು ಕಾರಣ. ನಾವು ಪರಿಶೀಲಿಸಬೇಕಾದ ವಸ್ತು ಯಾವುದು ಎಂಬುದನ್ನೇ ಸರಿಯಾಗಿ ತಿಳಿದುಕೊಳ್ಳದೆ ಸ್ಪಷ್ಟವಾಗಿ ಅರ್ಥವಾಗುವಂತಹ ವರ್ಣನೆಯೊಂದನ್ನು ಕೊಡಲು ಸಾಧ್ಯವಿಲ್ಲ ತಾನೆ?
ಈ ಗೊಂದಲವನ್ನು ಹೋಗಲಾಡಿಸಲು ನಾವು ಮುಖ್ಯವಾಗಿ ಮಾಡ ಬೇಕಾದ ಕೆಲಸಗಳಿವು: ಹೊಸಗನ್ನಡದಲ್ಲಿ ಬರುವ ಸಮಾಸಗಳೆಂತಹವು ಎಂಬು ದನ್ನು ತಿಳಿಯಬೇಕಿದ್ದರೆ ನಾವು ಸಂಸ್ಕೃತದಲ್ಲಿ ಬರುವ ಸಮಾಸಗಳೆಂತಹವು ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಮಾತ್ರ ಸಂಸ್ಕೃತ ಸಮಾಸಗಳ ತಿಳುವಳಿಕೆ ಸಹಾಯಕವಾಗಬಲ್ಲುದಾದರೂ ಅಲ್ಲಿಯೂ ಅದು ಅತ್ಯವಶ್ಯವೇನಲ್ಲವೆಂಬುದನ್ನು ಮುಂದೆ (೮.೩.೭ರಲ್ಲಿ) ನೋಡ ಲಿರುವೆವು. ಹಾಗಾಗಿ, ಹೊಸಗನ್ನಡದಲ್ಲಿ ಬರುವ ಜೋಡುಪದಗಳ ಒಳರಚನೆ ಯನ್ನು ವರ್ಣಿಸುವಲ್ಲಿ ಸಂಸ್ಕೃತದ ಸಮಾಸಗಳನ್ನು ಗಮನಕ್ಕೆ ತೆಗೆದುಕೊಳ್ಳ ದಿರುವುದೇ ಒಳ್ಳೆಯದು.
ಇದೇ ರೀತಿಯಲ್ಲಿ, ಹಳೆಗನ್ನಡ ಇಲ್ಲವೇ ನಡುಗನ್ನಡದಲ್ಲಿ ಮಾತ್ರವೇ ಬಳಕೆ ಯಲ್ಲಿರುವಂತಹ ಜೋಡುಪದಗಳ ಒಳರಚನೆಯನ್ನೂ ಹೊಸಗನ್ನಡದಲ್ಲಿ ಬರುವ ಜೋಡುಪದಗಳನ್ನು ವರ್ಣಿಸುವವರು ಗಮನಕ್ಕೆ ತೆಗೆದುಕೊಳ್ಳಬೇಕಾಗಿಲ್ಲ. ಕನ್ನಡ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಭಾಷೆಯಲ್ಲಿ ಬರುವ ಪದಗಳ ಚರಿತ್ರೆಯಂತಹದು ಎಂಬುದನ್ನು ತಿಳಿಯುಬೇಕೆಂದಿ ರುವವರು ಮಾತ್ರ ಈ ರೀತಿ ಹಳೆಗನ್ನಡ ಮತ್ತು ನಡುಗನ್ನಡ ಪದಗಳ ಒಳರಚನೆ ಯನ್ನು ತಿಳಿಯುವ ಅವಶ್ಯಕತೆಯಿದೆ.
ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ತತ್ಪುರುಷ, ಕರ್ಮಧಾರಯ, ದ್ವಿಗು, ದ್ವಂದ್ವ, ಬಹುವ್ರೀಹಿ ಮೊದಲಾದ ಪಾರಿಭಾಷಿಕ ಪದಗಳನ್ನೇ ಕನ್ನಡದ ಜೋಡುಪದಗಳನ್ನು (ಮತ್ತು ಅವುಗಳ ಒಳರಚನೆಯಲ್ಲಿ ಕಾಣಿಸುವ ‘ಸಮಾಸ’ ವೆಂಬ ಹೆಸರಿನ ವಿಧಾನವನ್ನು) ವರ್ಣಿಸುವುದಕ್ಕಾಗಿಯೂ ಬಳಸುವುದು ರೂಢಿ. ಆದರೆ ಈ ಪದಗಳು ನಮ್ಮೆದುರು ಸಂಸ್ಕೃತ ಸಮಾಸಗಳನ್ನೇ ತಂದಿರಿಸುವ ಕಾರಣ, ಅವನ್ನು ಬಳಸಿದಲ್ಲಿ ಕನ್ನಡ ಜೋಡುಪದಗಳ ವರ್ಣನೆಯಲ್ಲಿ ಸಂಸ್ಕೃತ ಸಮಾಸಗಳಿಂದಾಗಿರುವ ಗೊಂದಲವನ್ನು ಹೋಗಲಾಡಿಸಲು ಸಾಧ್ಯವಾಗದು.
ಹಾಗಾಗಿ, ಈ ಅಧ್ಯಾಯದಲ್ಲಿ ಕನ್ನಡದ ಜೋಡುಪದಗಳನ್ನು ನೇರವಾಗಿ ಕನ್ನಡದಲ್ಲಿ ಅವಕ್ಕಿರುವ ಒಳರಚನೆಯಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ವರ್ಣಿಸಲಾಗಿದೆ. ಹಳೆಗನ್ನಡ ಇಲ್ಲವೇ ನಡುಗನ್ನಡದಲ್ಲಿ ಮಾತ್ರವೇ ಕಾಣಿಸುವ ಜೋಡುಪದಗಳನ್ನು ಇಲ್ಲಿ ಗಮನಿಸಿಲ್ಲ. ಸಂಸ್ಕೃತದ ಸಮಾಸಗಳನ್ನೂ ಈ ವರ್ಣನೆಯಲ್ಲಿ ಪರಿಶೀಲಿಸಿಲ್ಲ. ಇದಲ್ಲದೆ, ಈ ವರ್ಣನೆಯಲ್ಲಿ ತತ್ಪುರುಷ, ಕರ್ಮಧಾರಯ ಮೊದಲಾದ ಸಂಸ್ಕೃತದ ಪಾರಿಭಾಷಿಕ ಪದಗಳನ್ನೂ ಬಳಸಿಲ್ಲ. ಕನ್ನಡದ ಜೋಡುಪದಗಳನ್ನು ನೇರವಾಗಿ ಆ ಪದಗಳ ಒಳರಚನೆಯಲ್ಲಿ ಬರುವ ಪದಗಳ ಸಂಖ್ಯೆ, ಪದವರ್ಗ, ಅವುಗಳ ನಡುವೆ ಕಾಣಿಸುವ ಸಂಬಂಧ ಮೊದ ಲಾದ ವಿಷಯಗಳನ್ನಾಧರಿಸಿ ವರ್ಣಿಸಲಾಗಿದೆ.
ಅನಂತರ ಬೇರೆಯೇ ಒಂದು ವಿಭಾಗದಲ್ಲಿ (೫.೮ರಲ್ಲಿ) ಇವತ್ತು ಕನ್ನಡದ ವ್ಯಾಕರಣ ಪುಸ್ತಕಗಳಲ್ಲಿ ಕಾಣಿಸುವ ಜೋಡುಪದಗಳ (ಮತ್ತು ಕನ್ನಡ ಸಮಾಸ ಗಳ) ವರ್ಣನೆಗಳು ಯಾಕೆ ಇಷ್ಟೊಂದು ತೊಡಕು ತೊಡಕಾಗಿವೆ ಮತ್ತು ಕನ್ನಡದ ಜೋಡುಪದಗಳನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ತಿಳಿಸಿಕೊಡುವಲ್ಲಿ ಅಸಮರ್ಥ ವಾಗಿವೆ ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಕನ್ನಡದ ಜೋಡುಪದಗಳ ವರ್ಣನೆಯಲ್ಲಿ ಸಂಸ್ಕೃತದ ತತ್ಪುರುಷ, ಕರ್ಮಧಾರಯ ಮೊದಲಾದ ಪಾರಿ ಭಾಷಿಕ ಪದಗಳ ಬಳಕೆ ಯಾಕೆ ಸಮಾಧಾನಕಾರಕವಲ್ಲ ಎಂಬುದನ್ನೂ ವಿವರಿಸ ಲಾಗಿದೆ.
೫.೨ ಜೋಡುಪದಗಳು ಮತ್ತು ಪದಗುಚ್ಛಗಳು
ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಾಗಿ ಜೋಡಿಸಿ ಒಂದೇ ಪದವಾಗಿ ಮಾಡುವ ವಿಧಾನಕ್ಕೆ ಸಮಾಸವೆಂದೂ ಮತ್ತು ಅಂತಹ ವಿಧಾನದ ಮೂಲಕ ತಯಾರಾದ ಪದವನ್ನು ಜೋಡುಪದವೆಂದೂ ಕರೆಯಬಹುದು. ಉದಾಹರಣೆ ಗಾಗಿ, ಕೆಳದುಟಿ ಎಂಬುದು ಒಂದು ಜೋಡುಪದ. ಯಾಕೆಂದರೆ, ಇದರಲ್ಲಿ ಕೆಳಗೆ ಮತ್ತು ತುಟಿ ಎಂಬ ಎರಡು ಪದಗಳನ್ನು ಒಟ್ಟಾಗಿ ಜೋಡಿಸಿ ಬೇರೆಯೇ
118
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಒಂದು ಪದವನ್ನು ತಯಾರಿಸಲಾಗಿದೆ, ಮತ್ತು ಈ ಪದದ ಮೂಲಕ ಬಾಯಲ್ಲಿ ರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಹೆಸರಿಸಲಾಗಿದೆ. ಕನ್ನಡದಲ್ಲಿ ಸಾಮಾನ್ಯ ವಾಗಿ ಇಂತಹ ಪದಗಳಲ್ಲಿ ಎರಡು ಪದಗಳು ಮಾತ್ರವೇ ಸೇರಿರುತ್ತವೆಯಾದ ಕಾರಣ, ಜೋಡುಪದ ಎಂಬ ಈ ಹೆಸರು ಸೂಚಿಸಬಹುದಾದ ‘ಎರಡು’ ಎಂಬ ಅರ್ಥದಿಂದಲೂ ಕನ್ನಡದ ಮಟ್ಟಿಗೆ ತೊಂದರೆಯಾಗುವುದಿಲ್ಲ.
ಕನ್ನಡದಲ್ಲಿ ಯಾವ ರೀತಿಯ ಜೋಡುಪದಗಳೆಲ್ಲ ಬಳಕೆಯಲ್ಲಿವೆ ಮತ್ತು ಅವುಗಳ ಒಳರಚನೆಯಂತಹದು ಎಂಬುದನ್ನು ವಿವರಿಸಿ ಹೇಳುವುದೇ ಈ ಅಧ್ಯಾಯದ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಸರಿಯಾಗಿ ನೆರವೇರಿಸುವು ದಕ್ಕಾಗಿ ಮೊದಲಿಗೆ ಜೋಡುಪದಗಳಿಗೂ ಮತ್ತು ಕೆಲವು ವಿಷಯಗಳಲ್ಲಿ ಅವುಗಳ ಹಾಗೆಯೇ ಕಾಣಿಸುವ ಪದಗುಚ್ಛಗಳಿಗೂ ನಡುವೆ ಎಂತಹ ವ್ಯತ್ಯಾಸ ಗಳಿವೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಇದಲ್ಲದೆ, ಜೋಡುಪದ ಗಳಿಗೂ ಮತ್ತು ಹಿಂದಿನ (ನಾಲ್ಕನೇ) ಅಧ್ಯಾಯದಲ್ಲಿ ವಿವರಿಸಿರುವ ಪ್ರತ್ಯಯ ವಿರುವ ಪದಗಳಿಗೂ ನಡುವೆ ಎಂತಹ ವ್ಯತ್ಯಾಸವಿದೆಯೆಂಬುದನ್ನೂ ತಿಳಿದು ಕೊಳ್ಳುವ ಅವಶ್ಯಕತೆಯಿದೆ.
ಜೋಡುಪದ ಮತ್ತು ಪದಗುಚ್ಛಗಳ ನಡುವಿರುವ ವ್ಯತ್ಯಾಸವನ್ನು ತಿಳಿದು ಕೊಳ್ಳುವುದು ಕನ್ನಡದ ಮಟ್ಟಿಗೆ ಒಂದು ಪ್ರಾಮುಖ್ಯವಾದ ಕೆಲಸ. ಯಾಕೆಂದರೆ, ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ಈ ಎರಡು ರೀತಿಯ ವಾಕ್ಯಾಂಶಗಳ ನಡು ವಿರುವ ವ್ಯತ್ಯಾಸ ಅಸ್ಪಷ್ಟವಾಗಿಯೇ ಉಳಿದಿದೆ ಮಾತ್ರವಲ್ಲ, ಕೆಲವೆಡೆಗಳಲ್ಲಿ ಅವೆರಡೂ ಒಂದೇ ಎಂಬ ಭಾವನೆಯೂ ಬರುವಂತಿದೆ. ಉದಾಹರಣೆಗಾಗಿ, ಆ ಮನೆ, ಬಾಳೆಯ ಹಣ್ಣು, ಓದುವ ಹುಡುಗ ಮೊದಲಾದವುಗಳಲ್ಲಿ ಗಮಕ, ತತ್ಪುರುಷ ಮೊದಲಾದ ಸಮಾಸಗಳಿವೆಯೆಂಬುದಾಗಿ ಕನ್ನಡ ವ್ಯಾಕರಣಗಳಲ್ಲಿ ಬರೆದಿರುವುದನ್ನು ಕಾಣಬಹುದು.
ಆದರೆ ನಿಜಕ್ಕೂ ಆ ಮನೆ ಎಂಬುದರಲ್ಲಿ ಆ ಎಂಬ ನಿರ್ದೇಶಕ ಪದ ದೊಂದಿಗೆ ಮನೆ ಎಂಬ ನಾಮಪದವನ್ನು ಬಳಸಲಾಗಿದ್ದು, ಅದೊಂದು ಪದಗುಚ್ಛ ವಾಗಿದೆ. ಇದೇ ರೀತಿಯಲ್ಲಿ ಬಾಳೆಯ ಹಣ್ಣು ಎಂಬುದರಲ್ಲಿ ಎರಡು ನಾಮ ಪದಗಳನ್ನು ಅ ಎಂಬ ಪ್ರತ್ಯಯದ ಮೂಲಕ ಸಂಬಂಧಿಸಲಾಗಿದೆ, ಮತ್ತು ಓದುವ ಹುಡುಗ ಎಂಬುದರಲ್ಲಿ ಓದು ಎಂಬ ಕ್ರಿಯಾಪದವನ್ನು ಅದರ ಸಂಬಂಧಕ ಕ್ರಿಯಾರೂಪದ ಮೂಲಕ ಹುಡುಗ ಎಂಬ ನಾಮಪದದೊಂದಿಗೆ ಸಂಬಂಧಿಸಲಾಗಿದೆ. ಈ ಮೂರು ಕಡೆಗಳಲ್ಲೂ ಎರಡೆರಡು ಪದಗಳು ಬಂದಿದ್ದು, ಅವು ಪದಗುಚ್ಛಗಳಾಗಿ ಉಳಿದಿವೆಯಲ್ಲದೆ ಒಂದೇ ಪದವಾಗಿ ಒಟ್ಟು ಸೇರಿಲ್ಲ.
ಜೋಡುಪದಗಳು ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿ ಒಂದೇ ಪದವಾಗುವುದರ ಮೂಲಕ ಸಿದ್ಧವಾದ ಸಂಜ್ಞೆಗಳಲ್ಲದೆ ಪದಗುಚ್ಛಗಳಲ್ಲ. ಎರಡು ಅಥವಾ ಜಾಸ್ತಿ ಪದಗಳು ಒಟ್ಟಿಗೆ ಬಂದಿವೆಯಾದರೂ ಒಂದೇ ಸಂಜ್ಞೆ ಯಾಗದೆ ಬೇರೆ ಬೇರೆ ಸಂಜ್ಞೆಗಳಾಗಿ ಉಳಿದಿವೆಯಾದರೆ ಅದನ್ನು ಪದಗುಚ್ಛವೆನ್ನು
119
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ತ್ತೇವೆ. ಜೋಡುಪದಗಳ ರಚನೆಯಲ್ಲಿ ಪದರಚನೆಯ ನಿಯಮಗಳು ಬರುತ್ತ ವಾದರೆ, ಪದಗುಚ್ಛಗಳ ರಚನೆಯಲ್ಲಿ ವಾಕ್ಯರಚನೆಯ ನಿಯಮಗಳು ಬರುತ್ತವೆ.
ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದವನ್ನು ಕೆಳಗಿನ ತುಟಿ ಎಂಬ ಪದಗುಚ್ಛದೊಂದಿಗೆ ಹೋಲಿಸಿ ನೋಡಬಹುದು. ಇವುಗಳಲ್ಲಿ ಮೊದಲನೆ ಯದನ್ನು ತಯಾರಿಸುವಲ್ಲಿ ಕೆಳಗೆ ಎಂಬ ಪದದ ಗಿಡ್ಡರೂಪವಾದ ಕೆಳ ಎಂಬು ದನ್ನು ಬಳಸಲಾಗಿದೆ ಮತ್ತು ತುಟಿ ಎಂಬ ಪದದಲ್ಲಿ ಮೊದಲಿಗೆ ಬರುವ ತಕಾರವನ್ನು ದಕಾರವಾಗಿ ಬದಲಾಯಿಸಲಾಗಿದೆ. ಕನ್ನಡದಲ್ಲಿ ಇವೆರಡೂ ಪದ ರಚನೆಯಲ್ಲಿ ಬರುವ ಬದಲಾವಣೆಯ ನಿಯಮಗಳು (೫.೭ ನೋಡಿ). ಇದಕ್ಕೆ ಬದಲು ಕೆಳಗಿನ ತುಟಿ ಎಂಬ ಪದಗುಚ್ಛದಲ್ಲಿ ಈ ಎರಡು ಪದಗಳು ಬದಲಾಗದೆ ಉಳಿದಿವೆ ಮಾತ್ರವಲ್ಲ, ಅವುಗಳಲ್ಲಿ ಒಂದನ್ನು ಇನ್ನೊಂದರೊಡನೆ ಸಂಬಂಧಿಸುವುದಕ್ಕಾಗಿ ಕೆಳಗೆ ಎಂಬ ಪದದೊಂದಿಗೆ ಅ ಎಂಬ ಪ್ರತ್ಯಯವನ್ನು ಬಳಸಲಾಗಿದೆ. ಇದು ವಾಕ್ಯರಚನೆಯ ನಿಯಮವಲ್ಲದೆ ಪದರಚನೆಯ ನಿಯಮ ವಲ್ಲ.
ಜೋಡುಪದ ಮತ್ತು ಪದಗುಚ್ಛಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಮೇಲೆ ಮೂರನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ (೩.೩.೩ ನೋಡಿ), ಒಂದು ನಾಮಪದಗುಚ್ಛದ ಅರ್ಥವೇನೆಂಬುದನ್ನು ನೇರವಾಗಿ ಅದರ ಒಳರಚನೆಯನ್ನು ಪರಿಶೀಲಿಸುವುದರ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಆದರೆ, ಒಂದು ಜೋಡುಪದದ ಅರ್ಥವನ್ನು ಈ ರೀತಿ ನೇರವಾಗಿ ಅದರ ಒಳರಚನೆಯ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಾಗದು. ಅಂತಹ ಪದ ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೇನು ಎಂಬುದನ್ನು ತಿಳಿಯುವುದರ ಮೂಲಕವೇನೇ ಅದರ ಅರ್ಥವೇನೆಂದು ಹೇಳಲು ಸಾಧ್ಯ. ಜೋಡುಪದಗಳ ಅರ್ಥವನ್ನು ಅವುಗಳ ಒಳರಚನೆಯಿಂದ ಊಹಿಸಲು ಸಾಧ್ಯವಿದೆಯಾದರೂ ಹೆಚ್ಚಿನ ಸಂದರ್ಭಗಳಲ್ಲೂ ಅಂತಹ ಊಹೆ ತಪ್ಪಾಗಲು ಸಾಧ್ಯವಿದೆ.
ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದದ ಒಳರಚನೆಯಲ್ಲಿ ಕೆಳಗಿನ ತುಟಿ ಎಂಬ ನಾಮಪದಗುಚ್ಛವನ್ನು ಕಾಣುವೆವಾದರೂ ‘ಕೆಳಗಿನ ತುಟಿ’ ಗಳೆಲ್ಲ ಕೆಳದುಟಿಗಳಾಗಿರಬೇಕಾಗಿಲ್ಲ. ಎರಡು ತುಟಿಗಳ ಒಂದು ಚಿತ್ರದಲ್ಲಿ ಕೆಳಗಿನದು ಕೆಳಗಿನ ತುಟಿಯಾಗಿದೆಯಾದರೂ ಕೆಳದುಟಿಯಾಗಿಲ್ಲದಿರಲು ಸಾಧ್ಯ ವಿದೆ. ಯಾಕೆಂದರೆ ಆ ಚಿತ್ರದಲ್ಲಿ ಒಂದರ ಕೆಳಗೆ ಒಂದಾಗಿ ಚಿತ್ರಿಸಿರುವ ತುಟಿಗಳೆರಡೂ ಮೇಲ್ದುಟಿಯ ಚಿತ್ರಗಳಾಗಿರಲು ಸಾಧ್ಯವಿದೆ. ಇದಲ್ಲದೆ, ಇನ್ನೊಂದು ಚಿತ್ರದಲ್ಲಿ ಕೆಳದುಟಿಯನ್ನು ಮೇಲೆ ಮತ್ತು ಮೇಲ್ದುಟಿಯನ್ನು ಅದರ ಕೆಳಗೆ ಚಿತ್ರಿಸಿರಲು ಸಾಧ್ಯವಿದೆಯಾದ ಕಾರಣ, ಅದರಲ್ಲಿ ‘ಮೇಲಿನ ತುಟಿ’ಯೇ ಕೆಳದುಟಿಯಾಗಿರಲು ಸಾಧ್ಯವಿದೆ.
120
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಕೆಳದುಟಿ ಎಂಬ ಪದ ಒಬ್ಬ ವ್ಯಕ್ತಿಯ (ಇಲ್ಲವೇ ಪ್ರಾಣಿಯ) ಮುಖ ದಲ್ಲಿರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಹೆಸರಿಸುತ್ತದೆ. ಇದು ಈ ಜೋಡು ಪದಕ್ಕೆ ನಮ್ಮ ಭಾಷೆಯಲ್ಲಿ ರೂಢವಾಗಿ ಬಂದಿರುವಂತಹ ಬಳಕೆ. ಈ ಬಳಕೆಯ ಪ್ರಕಾರ, ಮುಖದಲ್ಲಿ ಕೆಳಗಿರುವ ತುಟಿಯ ಗುಣಧರ್ಮಗಳು ಯಾವುವೋ ಅವುಗಳ ಆಧಾರದ ಮೇಲೆ ಮಾತ್ರ ಕೆಳದುಟಿ ಎಂಬ ಈ ಜೋಡುಪದದ ಅರ್ಥವನ್ನು ನಿರ್ಧರಿಸಿ ಹೇಳಬೇಕಾಗುತ್ತದೆ. ಆ ಪದದ ಒಳರಚನೆಯಲ್ಲಿ ಬರುವ ಕೆಳ ಮತ್ತು ತುಟಿ ಎಂಬ ಪದಗಳ ಅರ್ಥದಿಂದ ನೇರವಾಗಿ ಅದರ ಅರ್ಥವನ್ನು ಪಡೆಯಲು ಸಾಧ್ಯವಾಗದು.
ಜೋಡುಪದ ಮತ್ತು ಪದಗುಚ್ಛಗಳ ನಡುವೆ ಈ ರೀತಿ ಬಹಳ ಮುಖ್ಯವಾದ ಮತ್ತು ಸ್ಪಷ್ಟವಾದ ವ್ಯತ್ಯಾಸಗಳಿವೆಯಾದರೂ, ಕೆಲವೊಂದು ಸಂದರ್ಭಗಳಲ್ಲಿ ಅವುಗಳನ್ನು ಬೇರ್ಪಡಿಸಿ ಹೇಳುವುದು ಸ್ವಲ್ಪ ಕಷ್ಟವೆಂದೇ ತೋರಲು ಸಾಧ್ಯವಿದೆ. ಇದಕ್ಕೆ ಕಾರಣವೇನೆಂದರೆ, ನಮ್ಮೆದುರಿರುವ ಒಂದು ವಾಕ್ಯಾಂಶ ಜೋಡುಪದವೇ ಅಥವಾ ಪದಗುಚ್ಛವೇ ಎಂಬುದನ್ನು ಬರಿಯ ಆ ವಾಕ್ಯಾಂಶವನ್ನು ಮಾತ್ರ ನೋಡಿ ನಿರ್ಧರಿಸಲು ಬರುವುದಿಲ್ಲ. ವಾಕ್ಯದಲ್ಲಿ ಅದರ ಬಳಕೆಯಂತಹದು, ಅದನ್ನು ಬಳಸಿರುವ ವ್ಯಕ್ತಿಯ ಆಶಯವೇನು ಎಂಬುದನ್ನೂ ಗಮನಿಸಿಕೊಳ್ಳುವುದು ಅವಶ್ಯ. ಉದಾಹರಣೆಗಾಗಿ, ನಾವು ಮೇಲೆ ಮೂರನೇ ಅಧ್ಯಾಯದಲ್ಲಿ (೩.೪ರಲ್ಲಿ) ನೋಡಿರುವಂತೆ, ಬಿಸಿನೀರು ಎಂಬ ವಾಕ್ಯಾಂಶ ಕೆಲವೊಂದು ಸಂದರ್ಭಗಳಲ್ಲಿ (ಉದಾ: ಆಡುಗನು ಸ್ನಾನ ಮಾಡಬೇಕೆಂದಿರುವಾಗ) ಪದಗುಚ್ಛವಾಗಿಯೂ ಮತ್ತು ಬೇರೆ ಕೆಲವು ಸಂದರ್ಭಗಳಲ್ಲಿ (ಉದಾ: ಆಡುಗನು ಊಟಕ್ಕೆ ಕುಳಿತಿರುವಾಗ) ಜೋಡುಪದವಾಗಿಯೂ ಬಳಕೆಯಾಗಿರಲು ಸಾಧ್ಯವಿದೆ. ಮೊದಲನೆಯ ಬಳಕೆ ಯಲ್ಲಿ ಅದರ ಅರ್ಥವನ್ನು ಅದರ ಅಂಗಗಳಾಗಿರುವ ಬಿಸಿ ಮತ್ತು ನೀರು ಎಂಬ ಎರಡು ಪದಗಳ ಅರ್ಥದಿಂದ ಪಡೆಯಲು ಸಾಧ್ಯವಿದೆ, ಆದರೆ ಎರಡನೆಯ ಬಳಕೆಯಲ್ಲಿ ಇದು ಸಾಧ್ಯವಾಗದು.
ಆದರೆ ಇದು ಭಾಷೆಯ ಇತರ ಪದಗಳ ಇಲ್ಲವೇ ವಾಕ್ಯಾಂಶಗಳ ಬಳಕೆ ಯಲ್ಲೂ ಕಾಣಿಸುವ ವೈಶಿಷ್ಟ್ಯವಲ್ಲದೆ ಜೋಡುಪದಗಳ ಬಳಕೆಯಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಸಮಸ್ಯೆಯೇನಲ್ಲ. ಒಂದು ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗಿದೆ ಮತ್ತು ಹಾಗೆ ಬಳಸಿದ ವ್ಯಕ್ತಿಯ ಆಶಯವೇನು ಎಂಬುದನ್ನು ತಿಳಿಯದೆ ಆ ಪದದ ಅರ್ಥ ಇಂತಹದು ಎಂದು ಸ್ಪಷ್ಟವಾಗಿ ಹೇಳಲು ಹೆಚ್ಚಿನಡೆ ಗಳಲ್ಲೂ ಸಾಧ್ಯವಾಗದು. ಉದಾಹರಣೆಗಾಗಿ, ಕನ್ನಡದ ಹಲವು ಪದಗಳು (ಹುಟ್ಟು, ತಗ್ಗು, ದೂರು, ಸೊಲು, ಅಳು, ತಡೆ ಇತ್ಯಾದಿ) ನಾಮಪದಗಳೇ ಅಥವಾ ಕ್ರಿಯಾಪದಗಳೇ ಎಂಬುದನ್ನು ಅವುಗಳ ಬಳಕೆಯಿಂದ ಮಾತ್ರವೇ ನಿರ್ಧರಿಸಲು ಸಾಧ್ಯವಿದೆ.
(೧ಕ) ಅವನು ದೂರಿದ.
121
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
(೧ಖ) ಅವನ ದೂರು ಕೇಳಿಸಿತು.
(೧ಕ)ದಲ್ಲಿ ದೂರು ಎಂಬುದು ಕ್ರಿಯಾಪದವಾಗಿಯೂ ಮತ್ತು (೧ಖ)ದಲ್ಲಿ ನಾಮಪದವಾಗಿಯೂ ಬಂದಿರುವುದನ್ನು ಗಮನಿಸಬಹುದು. ಹೀಗಿದ್ದರೂ ನಾಮ ಪದ ಮತ್ತು ಕ್ರಿಯಾಪದಗಳ ನಡುವಿರುವ ವ್ಯತ್ಯಾಸ ಕನ್ನಡ ವ್ಯಾಕರಣದಲ್ಲಿ ಒಂದು ಪ್ರಾಮುಖ್ಯವಾದ ವ್ಯತ್ಯಾಸ ಎಂಬುದರಲ್ಲಿ ಸಂಶಯವಿಲ್ಲ.
ಪದಗಳ ಅರ್ಥವನ್ನು ನಿರ್ಧರಿಸುವಲ್ಲೂ ಇದೇ ರೀತಿಯಲ್ಲಿ ಬಳಕೆಯ ಸಂದರ್ಭ ಮತ್ತು ಬಳಸುವವನ ಆಶಯ ಎಂಬೆರಡು ವಿಷಯಗಳು ಪ್ರಾಮುಖ್ಯ ವಾದ ಪಾತ್ರವನ್ನು ವಹಿಸುತ್ತವೆ. ಭಾಷೆಯೊಂದರಲ್ಲಿ ಬರುವ ಪದಗಳಲ್ಲಿ ಹೆಚ್ಚಿನ ವಕ್ಕೂ ಒಂದಕ್ಕಿಂತ ಜಾಸ್ತಿ ಅರ್ಥಗಳಿದ್ದು, ಒಂದು ಬಳಕೆಯಲ್ಲಿ ಅವಕ್ಕೆ ಯಾವ ಅರ್ಥವನ್ನು ಕೊಡಬೇಕು ಎಂಬುದನ್ನು ಈ ಎರಡು ವಿಷಯಗಳ ಆಧಾರದ ಮೇಲೆ ಮಾತ್ರವೇ ನಿರ್ಧರಿಸಿ ಹೇಳಲು ಸಾಧ್ಯ,
ಉದಾಹರಣೆಗಾಗಿ, ಕರೆ ಎಂಬ ಪದಕೆ ‘ಬರಹೇಳು’ ಎಂಬ ಅರ್ಥವೂ ಇದೆ, ‘ಹಾಲನ್ನು ಹಿಂಡು’ ಎಂಬ ಅರ್ಥವೂ ಇದೆ. ಈ ಪದವನ್ನು ಒಬ್ಬ ವ್ಯಕ್ತಿ ಬಳಸಿರುವನಾದರೆ, ಅವನು ಅದನ್ನು ಯಾವ ಅರ್ಥದಲ್ಲಿ ಬಳಸಿರಬಹುದು ಎಂಬುದನ್ನು ಆ ವ್ಯಕ್ತಿಯ ಆಶಯ ಮತ್ತು ಅದನ್ನು ಬಳಸಿರುವ ಸಂದರ್ಭ - ಇವೆರಡರ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯ. ಪದಗಳಿಗೆ ಈ ರೀತಿ ಅರ್ಥಗಳು ಹಲವಿರುವುದು ಅಪರೂಪವೇನಲ್ಲ ಎಂಬುದು ಒಂದು ಅರ್ಥ ಕೋಶದ ಹಾಳೆಗಳನ್ನು ಮಗುಚಿ ನೋಡಿದರೆ ಸುಲಭವಾಗಿ ಮನದಟ್ಟಾಗ ಬಹುದು.
೫.೩ ಜೋಡುಪದಗಳು ಮತ್ತು ಪ್ರತ್ಯಯವಿರುವ ಪದಗಳು
ಜೋಡುಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ವ್ಯತ್ಯಾಸವೂ ಕೆಲವು ವಿಷಯದಲ್ಲಿ ಮೇಲಿನ ವ್ಯತ್ಯಾಸದ ಹಾಗೆಯೇ ಅಸ್ಪಷ್ಟವಾಗಿದೆ. ಆದರೆ ಇದಕ್ಕೆ ಬೇರೆಯೇ ಒಂದು ಕಾರಣವಿದೆ. ಒಂದು ಪದಕ್ಕೆ ಒಂದು ಅಥವಾ ಜಾಸ್ತಿ ಪ್ರತ್ಯಯ ಗಳನ್ನು ಸೇರಿಸುವುದರ ಮೂಲಕ ಪ್ರತ್ಯಯವಿರುವ ಪದ ತಯಾರಾಗುತ್ತದೆ ಮತ್ತು ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡು ವುದರ ಮೂಲಕ ಜೋಡುಪದ ತಯಾರಾಗುತ್ತದೆ ಎಂಬುದಾಗಿ ಇವುಗಳ ನಡು ವಿರುವ ವ್ಯತ್ಯಾಸವೇನೋ ಸ್ಪಷ್ಟವಾಗಿದೆ, ಆದರೆ ಪದ ಮತ್ತು ಪ್ರತ್ಯಯಗಳ ನಡು ವಿರುವ ವ್ಯತ್ಯಾಸ ಅಷ್ಟೊಂದು ಸ್ಪಷ್ಟವಾದುದಲ್ಲ.
ಉದಾಹರಣೆಗಾಗಿ, ಹಿಂಗಾಲು ಎಂಬ ಪದದಲ್ಲಿರುವ ಹಿಂ ಎಂಬುದು ಹಿಂದು ಅಥವಾ ಹಿಂದೆ ಎಂಬುದರ ಗಿಡ್ಡರೂಪವೆಂದು ಹೇಳಿದಲ್ಲಿ ಅದೊಂದು ಪದವೆನಿಸುತ್ತದೆ. ಇದಕ್ಕೆ ಬದಲು ಅದು ಚಾರಿತ್ರಿಕವಾಗಿ ಮಾತ್ರ ಹಿಂದೆ ಎಂಬು ದಕ್ಕೆ ಸಂಬಂಧಿಸಿದೆ ಎಂದು ವಾದಿಸಿದಲ್ಲಿ ಅದೊಂದು ಪ್ರತ್ಯಯವೆನಿಸುತ್ತದೆ.
122
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಇದೇ ರೀತಿಯಲ್ಲಿ ಹೆಜ್ಜೆನು, ಕೆಂಗಣ್ಣು, ಇಬ್ಬದಿ ಮೊದಲಾದ ಪದಗಳಲ್ಲಿ ಕಾಣಿಸುವ ಹೆಜ್, ಕೆ, ಇಬ್ ಮೊದಲಾದ ಅಂಶಗಳು ಪದಗಳೇ ಅಥವಾ ಪ್ರತ್ಯಯಗಳೇ ಎಂಬ ವಿಷಯದಲ್ಲಿ ಅಭಿಪ್ರಾಯಭೇದಗಳು ಕಾಣಿಸಲು ಸಾಧ್ಯವಿದೆ.
ಪದ ಮತ್ತು ಪ್ರತ್ಯಯಗಳ ನಡುವಿರುವ ವ್ಯತ್ಯಾಸ ಈ ರೀತಿ ಅಸ್ಪಷ್ಟವಾಗಿ ಕಾಣಿಸಲು ಮತ್ತು ವಿವಾದಕ್ಕೆ ಎಡೆಮಾಡಿಕೊಡಲು ಮುಖ್ಯ ಕಾರಣವೇನೆಂದರೆ, ಚಾರಿತ್ರಿಕವಾಗಿ ಹೆಚ್ಚಿನ ಪ್ರತ್ಯಯಗಳೂ ಪದಗಳಿಂದ ಬೆಳೆದು ಬಂದವುಗಳು. ಮೊದಲಿಗೆ ಸ್ವತಂತ್ರವಾಗಿದ್ದ ಈ ಪದಗಳು ಕ್ರಮೇಣ ಗಿಡ್ಡವಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ ಮತ್ತು ಪ್ರತ್ಯಯಗಳಾಗಿ ಬದಲಾಗುತ್ತವೆ. ಸಾಮಾನ್ಯವಾಗಿ ಇಂತಹ ಪದಗಳು ಬೇರೆ ಸಂದರ್ಭಗಳಲ್ಲಿ ತಮ್ಮ ಉದ್ದರೂಪ ದಲ್ಲಿ ಬರುವುವಾದರೆ ಅವನ್ನು ಪ್ರತ್ಯಯಗಳೆಂದು ಹೇಳದೆ ಪದಗಳೆಂದು ಹೇಳು ವುದೇ ರೂಢಿ.
ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಇಸು ಎಂಬುದು ಒಂದು ಸ್ವತಂತ್ರ ಪದ (ಕ್ರಿಯಾಪದ)ವಾಗಿ ಬಳಕೆಯಲ್ಲಿತ್ತು. ಅದಕ್ಕಿದ್ದ ಅರ್ಥಗಳಲ್ಲಿ ‘ಅನುಮತಿಸು’ ಎಂಬುದೂ ಒಂದು ಎಂಬುದನ್ನು ಕಾಣಲಿಸದೆ, ಸೇರಿಸಿದರೆ ಮೊದಲಾದ ಬಳಕೆಗಳಿಂದ ತಿಳಿಯಬಹುದು. ನೇರವಾಗಿ ಬೇರೆ ಕ್ರಿಯಾಪದಗಳೊಂದಿಗೆ ಸೇರಿ ಕೂಡುಪದಗಳಾಗಿ ಬಂದಾಗಲೂ (ಉದಾ: ಮಾಡಿಸು, ಬರೆಸು, ತಿನ್ನಿಸು, ಇತ್ಯಾದಿ) ಇದಕ್ಕೆ ಈ ಅರ್ಥಕ್ಕೆ ಸಂಬಂಧಿಸಿದಂತಹ ಅರ್ಥವೇ ಬರುತ್ತದೆ. ಹಾಗಾಗಿ, ಹಳೆಗನ್ನಡದ ಮಟ್ಟಿಗೆ ಮಾಡಿಸು, ತಿನ್ನಿಸು ಮೊದಲಾದ ಕ್ರಿಯಾ ರೂಪಗಳಲ್ಲಿ ಬರುವ ಇಸು ಎಂಬುದನ್ನು ಒಂದು ಪ್ರತ್ಯಯವೆಂದು ಹೇಳುವ ಬದಲು ಕ್ರಿಯಾಪದವೆಂದು ಹೇಳುವುದೇ ಸರಿ.
ಆದರೆ, ಹೊಸಗನ್ನಡದಲ್ಲಿ ಇಸು (ಇಲ್ಲವೇ ಸು) ಎಂಬುದಕ್ಕೆ ಸ್ವತಂತ್ರ ಕ್ರಿಯಾಪದವಾಗಿ ಬಳಕೆಯಿಲ್ಲ. ಬೇರೆ ಕ್ರಿಯಾಪದಗಳೊಂದಿಗೆ ಬರೆಸು, ಕರೆಸು, ಮಾಡಿಸು ಮೊದಲಾದ ಕ್ರಿಯಾರೂಪಗಳಲ್ಲಿ ಮಾತ್ರವೇ ಅದು ಬರಬಲ್ಲುದು. ಹಾಗಾಗಿ, ಹೊಸಗನ್ನಡದ ಮಟ್ಟಿಗೆ ಅದೊಂದು ಪ್ರತ್ಯಯ ಮಾತ್ರ ಎಂದು ಹೇಳ ಬೇಕಾಗುತ್ತದೆ.
ಮೇಲೆ ಸೂಚಿಸಿದಂತೆ, ಚಾರಿತ್ರಿಕವಾಗಿ ಒಂದು ಪದದ ಅಂಶ ಇನ್ನೊಂದು ಪದದ ಗಿಡ್ಡರೂಪವಾಗಿದೆಯಾದರೂ ವರ್ತಮಾನ ಕಾಲದಲ್ಲಿ ಅವೆರಡರೊಳಗೆ ಯಾವ ಸಂಬಂಧವೂ ಇಲ್ಲ ಎಂಬುದಾಗಿಯೂ ವಾದಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ಮೇಲೆ ಮೊದಲನೆಯ ಅಧ್ಯಾಯದಲ್ಲಿ (೧.೧ರಲ್ಲಿ) ಸೂಚಿಸಿದಂತೆ, ಎಣ್ಣೆ ಎಂಬ ಪದದ ಎಣ್ ಎಂಬ ಅಂಶ ಚಾರಿತ್ರಿಕವಾಗಿ ಎಳ್ಳು ಎಂಬ ಪದಕ್ಕೆ ಸಂಬಂಧಿಸಿದೆ. ಆದರೆ ಕನ್ನಡದ ಆಧುನಿಕ ರೂಪದಲ್ಲಿ ಇವೆರಡಕ್ಕೆ ಸಂಬಂಧವನ್ನು ಕಲ್ಪಿಸಿ, ಎಣ್ಣೆ ಎಂಬುದು ಜೋಡುಪದ ಎಂದು ಹೇಳಲು ಸಾಧ್ಯವಾಗದು.
123
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆದರೆ ಇಂತಹ ವಿವಾದವಿರುವ ಸಂದರ್ಭಗಳಲ್ಲೆಲ್ಲ ವೈಯಾಕರಣಿಗಳು ಯಾವುದಾದರೊಂದು ನಿರ್ಧಾರಕ್ಕೆ ಬರುವ ಅವಶ್ಯಕತೆಯಿದೆ. ಹಾಗಾಗಿ, ಅವರು ಅಂತಹ ಒಂದು ನಿರ್ಧಾರಕ್ಕೆ ಬಂದಾಗ, ಪದ ಮತ್ತು ಪ್ರತ್ಯಯಗಳ ನಡುವೆ ಕಾಣಿಸುವ ಈ ಅಸ್ಪಷ್ಟತೆ ಮಾಯವಾಗುತ್ತದೆ ಮತ್ತು ಅದರೊಂದಿಗೆ ಜೋಡು ಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ಅಸ್ಪಷ್ಟತೆಯೂ ಮಾಯ ವಾಗುತ್ತದೆ.
ಜೋಡುಪದ ಮತ್ತು ಪ್ರತ್ಯಯವಿರುವ ಪದಗಳ ನಡುವೆ ಇನ್ನೊಂದು ರೀತಿಯ ಅಸ್ಪಷ್ಟತೆಯಿರುವುದನ್ನೂ ಇಲ್ಲಿ ಗಮನಿಸಬಹುದು. ಕೆಲವು ಜೋಡು ಪದಗಳ ಅಂಗಗಳಾಗಿ ಎರಡು ಅಥವಾ ಜಾಸ್ತಿ ಪದಗಳು ಮಾತ್ರವಲ್ಲದೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳೂ ಬಂದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಕಸಬರಿಕೆ ಎಂಬ ಪದದಲ್ಲಿ ಕಸ ಮತ್ತು ಬರಿ(ದು) ಎಂಬ ಎರಡು ಪದಗಳು ಮಾತ್ರವಲ್ಲದೆ, ಕೆ ಎಂಬ ಪ್ರತ್ಯಯವೂ ಬಂದಿದೆ. ಹಾವಾಡಿಗ ಎಂಬ ಪದದಲ್ಲಿ ಹಾವು ಮತ್ತು ಆಡು ಎಂಬ ಎರಡು ಪದಗಳು ಮಾತ್ರವಲ್ಲದೆ ಇರ ಎಂಬ ಪ್ರತ್ಯಯವೂ ಸೇರಿಕೊಂಡಿದೆ.
ಇಂತಹ ಪದಗಳನ್ನು ಜೋಡುಪದಗಳೆಂದೂ ಹೇಳಬಹುದು ಇಲ್ಲವೇ ಪ್ರತ್ಯಯವಿರುವ ಪದಗಳೆಂದೂ ಹೇಳಬಹುದು. ಆದರೆ ಸಾಮಾನ್ಯವಾಗಿ ವ್ಯಾಕರಣ ಗಳಲ್ಲಿ ಈ ರೀತಿ ಒಂದಕ್ಕಿಂತ ಜಾಸ್ತಿ ಪದಗಳಿರುವವುಗಳನ್ನೆಲ್ಲ (ಅವುಗಳೊಂದಿಗೆ ಪ್ರತ್ಯಯಗಳು ಬಂದಿರಲಿ ಅಥವಾ ಬಾರದಿರಲಿ) ಜೋಡುಪದಗಳೆಂದೇ ಕರೆಯು ವುದು ರೂಢಿ.
೫.೪ ಜೋಡುಪದಗಳ ಗುಣಧರ್ಮಗಳು
ಜೋಡುಪದಗಳ ಎರಡು ಮುಖ್ಯವಾದ ಗುಣಧರ್ಮಗಳನ್ನು ನಾವು ಮೇಲೆಯೇ ನೋಡಿರುವೆವು. ಪದರಚನೆಯ ನಿಯಮಗಳಿಗೆ ಅನುಸಾರವಾಗಿ ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿ ಒಂದೇ ಪದವಾಗಿವೆ ಎಂಬುದು ಅವುಗಳ ಒಂದು ಗುಣಧರ್ಮ; ಮತ್ತು ಹೀಗೆ ತಯಾರಾದ ಪದಗಳ ಅರ್ಥವನ್ನು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯ ಎಂಬುದು ಅವುಗಳ ಇನ್ನೊಂದು ಗುಣಧರ್ಮ. ಜೋಡು ಪದಗಳನ್ನು ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿ ಬಳಸಬೇಕಾ ಗಿದೆಯಾದ ಕಾರಣ, ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಾಗುವುದಿಲ್ಲ.
ಈ ಎರಡು ಮುಖ್ಯವಾದ ಗುಣಧರ್ಮಗಳು ಮಾತ್ರವಲ್ಲದೆ ಬೇರೆಯೂ ಕೆಲವು ಗುಣಧರ್ಮಗಳನ್ನು ಜೋಡುಪದಗಳಲ್ಲಿ ಕಾಣಲು ಸಾಧ್ಯವಿದೆ. ಇಂತಹ ಗುಣಧರ್ಮಗಳೂ ಜೋಡುಪದಗಳನ್ನು ಪದಗುಚ್ಛಗಳಿಂದ ಬೇರ್ಪಡಿಸಲು ಸಹಾಯಕವಾಗಬಲ್ಲುವು. ಸಾಮಾನ್ಯವಾಗಿ, ಪದಗುಚ್ಛಗಳಲ್ಲಿ ಬರುವ ಪದಗಳು
124
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಬೇರೆ ಬೇರೆ ಸ್ವತಂತ್ರ ಪದಗಳಾಗಿರುತ್ತವಲ್ಲದೆ ಒಂದೇ ಪದವಾಗಿ ಒಟ್ಟು ಸೇರುವುದಿಲ್ಲ. ಹಾಗಾಗಿ, ಅವುಗಳ ನಡುವೆ ಬೇರೆ ಪದಗಳನ್ನು ಸೇರಿಸಿ ಹೇಳಲು ಸಾಧ್ಯವಿದೆ. ಆದರೆ ಜೋಡುಪದಗಳಲ್ಲಿ ಬರುವ ಪದಗಳು ಒಟ್ಟು ಸೇರಿ ಒಂದೇ ಪದವಾಗಿದ್ದು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಹಾಗಾಗಿ ಅವುಗಳ ನಡುವೆ ಬೇರೆ ಪದಗಳನ್ನು ನುಗ್ಗಿಸಿ ಹೇಳಲು ಸಾಧ್ಯವಾಗದು.
ಉದಾಹರಣೆಗಾಗಿ, ಕೆಳಗಿನ ತುಟಿ ಎಂಬ ಪದಗುಚ್ಛದಲ್ಲಿ ಕೆಳಗಿನ ಮತ್ತು ತುಟಿ ಎಂಬ ಎರಡು ಸ್ವತಂತ್ರವಾದ ಪದಗಳು ಒಟ್ಟಿಗೆ ಬಂದಿವೆಯಾದರೂ ಬೇರೆ ಬೇರೆ ಪದಗಳಾಗಿ ಉಳಿದಿವೆ. ಹಾಗಾಗಿ, ಅವುಗಳ ನಡುವೆ ಕೆಂಪು, ಒಡೆದ ಮೊದಲಾದ ಬೇರೆ ಪದಗಳನ್ನು ಇರಿಸಿ, ಕೆಳಗಿನ ಕೆಂಪು ತುಟಿ, ಕೆಳಗಿನ ಒಡೆದ ತುಟಿ ಮೊದಲಾದ ಅವುಗಳಿಗಿಂತ ಜಾಸ್ತಿ ಉದ್ದವಾದ ಪದಗುಚ್ಛಗಳನ್ನು ತಯಾರಿಸಿ ಹೇಳಲು ಸಾಧ್ಯವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಳದುಟಿ ಎಂಬ ಜೋಡುಪದದಲ್ಲಿ ಕೆಳ(ಗೆ) ಮತ್ತು ದುಟಿ (ತುಟಿ) ಎಂಬ ಎರಡು ಪದಗಳು ಸ್ವತಂತ್ರ ಪದಗಳಾಗಿ ಉಳಿದಿಲ್ಲ ಮತ್ತು ಈ ಕಾರಣಕ್ಕಾಗಿ, ಅವುಗಳ ನಡುವೆ ಬೇರೆ ಪದಗಳನ್ನಿರಿಸಲು ಸಾಧ್ಯವಾಗದು.
ಹೆಚ್ಚಿನ ಪದಗುಚ್ಛಗಳೂ ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುತ್ತವೆ. ಆದರೆ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಪದಗುಚ್ಛಗಳು ಹೆಸರಿಸುವ ವಿಧಾನದಲ್ಲೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವಲ್ಲಿ ಬಳಕೆಯಾಗು ತ್ತವೆ ಎಂಬುದನ್ನು ನಾವು ಮೇಲೆ ಮೂರನೆಯ ಅಧ್ಯಾಯದಲ್ಲಿ (೩.೩.೭ರಲ್ಲಿ) ನೋಡಿರುವೆವು. ಈ ರೀತಿ ಹೆಸರಿಸುವ ವಿಧಾನದಲ್ಲಿ ಬಳಕೆಯಾಗಿರುವ ಪದ ಗುಚ್ಛಗಳ ನಡುವೆಯೂ ಬೇರೆ ಪದಗಳನ್ನು ಸೇರಿಸಲು ಸಾಧ್ಯವಾಗದು. ಉದಾ ಹರಣೆಗಾಗಿ, ಹೂವಿನ ಗಿಡ ಎಂಬುದು ಒಂದು ಪದಗುಚ್ಛವಾಗಿದೆಯಾದರೂ ಅದನ್ನು ಒಂದು ವಿಶಿಷ್ಟವಾದ ಗಿಡವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸುವುದಕ್ಕಾಗಿ ಬಳಸಲಾಗುತ್ತದೆ. ಹಾಗಾಗಿ, ಅದರಲ್ಲಿ ಬರುವ ಹೂವಿನ ಮತ್ತು ಗಿಡ ಎಂಬ ಎರಡು ಪದಗಳ ನಡುವೆ ಬೇರೆ ಪದಗಳನ್ನು (ಉದಾ: ದೊಡ್ಡ ಎಂಬುದನ್ನು) ಸೇರಿಸಿ ಹೇಳಲು (*ಹೂವಿನ ದೊಡ್ಡ ಗಿಡ ಎಂಬುದಾಗಿ ಹೇಳಲು) ಸಾಧ್ಯವಾಗದು.
ಆದರೆ ಇನ್ನೊಂದು ವಿಷಯದಲ್ಲಿ ಇಂತಹ ಹೆಸರಿಸುವ ಪದಗುಚ್ಛಗಳೂ ಜೋಡುಪದಗಳಿಂದ ಭಿನ್ನವಾಗಿವೆ. ಅವುಗಳಲ್ಲಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಗುಣಪದಗಳ ಸಹಾಯದಿಂದ ಬದಲಾಯಿಸಲು ಸಾಧ್ಯವಿದೆ, ಆದರೆ ಜೋಡುಪದಗಳಲ್ಲಿ ಬಂದಿರುವ ಪದಗಳ ಅರ್ಥವನ್ನು ಈ ರೀತಿ ಬೇರೆ ಬೇರಾಗಿ ಬದಲಾಯಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಹೂವಿನ ಗಿಡ ಎಂಬ ಪದಗುಚ್ಛಕ್ಕೆ ಬೇರೆ ಪದಗಳನ್ನು ಸೇರಿಸುವುದರ ಮೂಲಕ ಅದಲ್ಲಿ
125
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಬಂದಿರುವ ಎರಡು ಪದಗಳಲ್ಲಿ ಯಾವುದರ ಅರ್ಥವನ್ನು ಬೇಕಿದ್ದರೂ ಬದಲಾ ಯಿಸಲು ಸಾಧ್ಯವಿದೆ.
- (೨ಕ) ಕೆಂಪು ಹೂವಿನ ಗಿಡ
- (೨ಖ) ನಮ್ಮ ಹೂವಿನ ಗಿಡ
- (೨ಗ) ದೊಡ್ಡ ಹೂವಿನ ಗಿಡ
(೨ಕ)ದಲ್ಲಿ ಬಂದಿರುವ ಕೆಂಪು ಎಂಬ ಪದ ಹೂವಿನ ಗಿಡ ಎಂಬ ಪದಗುಚ್ಛದ ಮೊದಲನೆಯ ಪದದ ಅರ್ಥವನ್ನು ಹೆಚ್ಚಿಸಿದೆ. ಅದು ‘ಒಂದು ಗಿಡದ ಹೂ ಕೆಂಪಾಗಿದೆ’ಯೆಂದು ತಿಳಿಸುತ್ತದಲ್ಲದೆ, ‘ಗಿಡವೇ ಕೆಂಪಾಗಿದೆ’ಯೆಂದು ತಿಳಿಸುವು ದಿಲ್ಲ. ಆದರೆ (೨ಖ)ದಲ್ಲಿ ನಮ್ಮ ಎಂಬ ಪದದ ಮೂಲಕ ಅದೇ ಪದಗುಚ್ಛದ ಎರಡನೆಯ ಪದದ ಅರ್ಥವನ್ನು ಬದಲಾಯಿಸಲು ಸಾಧ್ಯವಾಗಿದೆ. (೨ಖ)ಕ್ಕೆ ‘ನಮ್ಮ ಗಿಡ’ ಎಂಬ ಅರ್ಥವಿದೆಯಲ್ಲದೆ ‘ನಮ್ಮ ಹೂವು’ ಎಂಬ ಅರ್ಥವಿಲ್ಲ. (೨ಗ)ದಲ್ಲಿ ಈ ಎರಡು ರೀತಿಯ ಅರ್ಥಗಳೂ ಬರಲು ಸಾಧ್ಯವಿದೆ. ಅದಕ್ಕೆ ‘ದೊಡ್ಡ ಹೂ ಬಿಡುವ ಗಿಡ’ ಎಂಬ ಅರ್ಥವಾಗಲೀ ಇಲ್ಲವೇ ‘ಹೂ ಬಿಡುವ ದೊಡ್ಡ ಗಿಡ’ ಎಂಬ ಅರ್ಥವಾಗಲೀ ಬರಲು ಸಾಧ್ಯವಿದ್ದು ಇಲ್ಲಿ ಅರ್ಥಸಂದಿಗ್ಧತೆ ಯಿದೆ.
ಆದರೆ, ಜೋಡುಪದಗಳ ಬಳಕೆಯಲ್ಲಿ ಇಂತಹ ಅರ್ಥಸಂದಿಗ್ಧತೆಗಳಿಗೆ ಅವಕಾಶವಿಲ್ಲ ಎಂಬುದನ್ನು ಗಮನಿಸಬಹುದು. ಇದಕ್ಕೆ ಕಾರಣವೇನೆಂದರೆ, ಜೋಡುಪದದೊಂದಿಗೆ ಬರುವ ಪದಗಳು ಆ ಪದದ ಒಟ್ಟು ಅರ್ಥವೇನಿದೆಯೋ ಅದನ್ನು ಮಾತ್ರ ಬದಲಾಯಿಸಬಲ್ಲುವಲ್ಲದೆ ಅದರ ಅಂಗಗಳಾಗಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಬದಲಾಯಿಸಲಾರವು. ಉದಾಹರಣೆಗಾಗಿ, ಮುಳ್ಳು ಹಂದಿ ಎಂಬ ಜೋಡುಪದಕ್ಕೆ ಚೂಪಾದ ಎಂಬ ಪದವನ್ನು ಸೇರಿಸಿ ಆ ಜೋಡುಪದದ ಅಂಗವಾಗಿ ಬಂದಿರುವ ಮುಳ್ಳು ಎಂಬ ಪದದ ಅರ್ಥವನ್ನು ಹೆಚ್ಚಿಸಲು ಸಾಧ್ಯವಾಗದು. ಇದೇ ರೀತಿಯಲ್ಲಿ ಕಣ್ಣೀರು ಎಂಬ ಜೋಡುಪದಕ್ಕೆ ಕೆಂಪು ಎಂಬ ಗುಣಪದವನ್ನು ಸೇರಿಸಿದಲ್ಲಿ, ಅದು ಇಡೀ ಪದವು ಸೂಚಿಸುವ ಅರ್ಥವನ್ನು (‘ಕೆಂಪಾಗಿರುವ ಕಣ್ಣೀರು’ ಎಂಬುದಾಗಿ) ಬದಲಾಯಿಸಬಲ್ಲುದಲ್ಲದೆ ಆ ಪದದ ಒಂದು ಅಂಗ ಸೂಚಿಸುವ ಅರ್ಥವನ್ನು ಮಾತ್ರವೇ ಬದಲಾಯಿಸ ಲಾರದು. ಕೆಂಪು ಕಣ್ಣೀರು ಎಂಬುದಕ್ಕೆ ‘ಕೆಂಪಾಗಿರುವ ಕಣ್ಣಿನ ನೀರು’ ಎಂಬ ಅರ್ಥ ಬರಲಾರದು.
೫.೫ ಜೋಡುಪದಗಳ ಒಳರಚನೆ
ಪ್ರತ್ಯಯವಿರುವ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಮುಖ್ಯವಾಗಿ ಎರಡು ಸಂಗತಿಗಳನ್ನು ಪರಿಶೀಲಿಸಿದರೆ ಸಾಕಾಗಿತ್ತು. ಅವುಗಳಲ್ಲಿ ಯಾವ ಪ್ರತ್ಯಯಗಳನ್ನು
126
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಬಳಸಲಾಗಿದೆ ಎಂಬುದನ್ನೂ ಮತ್ತು ಈ ಪ್ರತ್ಯಯಗಳನ್ನು ಯಾವ ವರ್ಗಕ್ಕೆ ಸೇರಿದ ಪದಗಳೊಂದಿಗೆ (ಎಂದರೆ ನಾಮಪದ, ಕ್ರಿಯಾಪದ ಇಲ್ಲವೇ ಗುಣಪದ ಗಳೊಂದಿಗೆ) ಬಳಸಲಾಗಿದೆ ಎಂಬುದನ್ನೂ ಪರಿಶೀಲಿಸಿದರೆ ಸಾಕಾಗಿತ್ತು. ಕೆಲವು ಪ್ರತ್ಯಯವಿರುವ ಪದಗಳಲ್ಲಿ ಹೀಗೆ ಪದ ಮತ್ತು ಪ್ರತ್ಯಯಗಳನ್ನು ಒಟ್ಟಿಗೆ ಸೇರಿಸು ವಾಗ ಅವುಗಳಲ್ಲಿ ಕೆಲವು ಬದಲಾವಣೆಗಳು ನಡೆಯುವುವಾದ ಕಾರಣ, ಇಂತಹ ಬದಲಾವಣೆಗಳನ್ನೂ ‘ಸೇರಿಕೆಯ ನಿಯಮ’ಗಳು (ಇಲ್ಲವೇ ಸಂಧಿನಿಯಮಗಳು) ಎಂಬ ಹೆಸರಿನಲ್ಲಿ ವರ್ಣಿಸುವ ಅವಶ್ಯಕತೆಯಿತ್ತು.
ಜೋಡುಪದಗಳ ಒಳರಚನೆಯನ್ನು ವಿವರಿಸುವಾಗ ಈ ರೀತಿ ಅವುಗಳ ರಚನೆಯಲ್ಲಿ ಬಳಕೆಯಾಗುವ ಪದಗಳು, ಅವುಗಳ ಪದವರ್ಗ ಮತ್ತು ಅವುಗಳ ರಚನೆಯ ಹಿಂದಿರುವ ಸೇರಿಕೆಯ ನಿಯಮಗಳು ಎಂಬ ಈ ಮೂರು ವಿಷಯ ಗಳನ್ನು ಮಾತ್ರವಲ್ಲದೆ, ಆ ಪದಗಳ ನಡುವಿರುವ ಸಂಬಂಧವೇನು ಎಂಬುದನ್ನೂ ವಿವರಿಸಿ ಹೇಳುವ ಕ್ರಮ ರೂಢಿಯಲ್ಲಿದೆ. ಪದಗಳೆರಡನ್ನು ಈ ರೀತಿ ಸಂಬಂಧಿಸಲು ಒಂದು ವಾಕ್ಯ ಇಲ್ಲವೇ ವಾಕ್ಯಾಂಶವನ್ನು ಬಳಸಬೇಕಾಗಿದ್ದು, ಇದನ್ನು ಸಂಸ್ಕೃತ ವ್ಯಾಕರಣಗಳಲ್ಲಿ ಮತ್ತು ಅವುಗಳನ್ನನುಸರಿಸುವ ಕನ್ನಡ ವ್ಯಾಕರಣಗಳಲ್ಲಿ ‘ವಿಗ್ರಹ ವಾಕ್ಯ’ ಎಂದು ಕರೆಯಲಾಗಿದೆ.
ಕನ್ನಡದಲ್ಲಿ ಇವು ಹೆಚ್ಚಿನಡೆಗಳಲ್ಲೂ ವಾಕ್ಯರೂಪದಲ್ಲಿರದೆ ಒಂದು ಪದ ಗುಚ್ಛದ ರೂಪದಲ್ಲಿರುತ್ತವೆ. ಹಾಗಾಗಿ ಇವನ್ನು ‘ವಾಕ್ಯ’ ಎಂದು ಕರೆಯುವುದು ಕನ್ನಡದ ಮಟ್ಟಿಗಂತೂ ಅಷ್ಟೊಂದು ತೃಪ್ತಿಕರವಾಗಿಲ್ಲ. ಜೋಡುಪದಗಳ ಒಳ ರಚನೆಯನ್ನು ಸೂಕ್ಷ್ಮವಾಗಿ ವಿವರಿಸಿ ಹೇಳುವುದಕ್ಕಾಗಿ ಇವು ಬಳಕೆಯಾಗುತ್ತಿವೆ ಯಾದ ಕಾರಣ ಈ ವಿಷಯವನ್ನು ಸೂಚಿಸುವ ಜೋಡುಪದಗಳ ‘ಒಳನುಡಿ’ ಎಂಬ ಹೆಸರನ್ನು ಇಲ್ಲಿ ಬಳಸಲಾಗಿದೆ.
ಉದಾಹರಣೆಗಾಗಿ, ಮಿಂಚುಹುಳ ಎಂಬ ಜೋಡುಪದದಲ್ಲಿ ಮಿಂಚು ಮತ್ತು ಹುಳ ಎಂಬ ಎರಡು ಪದಗಳು ಒಟ್ಟು ಸೇರಿವೆ. ಈ ಪದಗಳ ನಡುವಿರುವ ಸಂಬಂಧವನ್ನು ಮಿಂಚುವ ಹುಳ ಎಂಬ ಪದಗುಚ್ಛದ ವಿವರಿಸ ಬಹುದು. ಈ ಹುಳ ಮಿಂಚುತ್ತದೆ ಎಂಬ ವಾಕ್ಯ ಈ ಸಂಬಂಧವನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಇದೇ ರೀತಿಯಲ್ಲಿ ತಲೆಗೂದಲು ಎಂಬ ಜೋಡುಪದದ ಅಂಗಗಳಾಗಿ ಬಂದಿರುವ ತಲೆ ಮತ್ತು ಕೂದಲು ಎಂಬೆರಡು ಪದಗಳ ನಡುವಿರುವ ಸಂಬಂಧವನ್ನು ತಲೆಯ ಕೂದಲು ಇಲ್ಲವೇ ತಲೆಯಲ್ಲಿ ಬೆಳೆಯುವ ಕೂದಲು ಎಂಬ ಪದಗುಚ್ಛ ತೋರಿಸಿಕೊಡುತ್ತದೆ. ಇಂತಹ ಪದಗುಚ್ಛಗಳನ್ನು (ಇಲ್ಲವೇ ಹೆಚ್ಚು ವಿವರವಾಗಿ ಒಳರಚನೆಯನ್ನು ತಿಳಿಸುವ ವಾಕ್ಯಗಳನ್ನು) ಆ ಜೋಡುಪದಗಳ ಒಳನುಡಿಗಳೆಂದು ಹೇಳಬಹುದು.
ಜೋಡುಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಲು ಈ ರೀತಿ ಅವುಗಳಲ್ಲಿ ಬಂದಿರುವ ಪದಗಳ ನಡುವಿರುವ ಸಂಬಂಧವನ್ನೂ ತಿಳಿಯುವುದು ಯಾಕೆ ಅವಶ್ಯ ಎಂಬುದನ್ನು ಸ್ಪಷ್ಟಪಡಿಸಲು ಬೇರೆ ಕೆಲವು ಉದಾಹರಣೆಗಳನ್ನು
127
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗಮನಿಸಬಹುದು. ನಡುಬೆರಳು ಮತ್ತು ನಡುಹಗಲು ಎಂಬ ಎರಡು ಜೋಡು ಪದಗಳಲ್ಲೂ ಮೇಲಿನಿಂದ ಮೇಲೆ ನೋಡುವಾಗ ಒಳರಚನೆ ಒಂದೇ ರೀತಿಯ ದೆಂದು ಅನಿಸುತ್ತದೆ. ಎರಡರಲ್ಲೂ ನಡು ಎಂಬ ಗುಣಪದದೊಂದಿಗೆ ನಾಮ ಪದವೊಂದನ್ನು (ಬೆರಳು ಇಲ್ಲವೇ ಹಗಲು ಎಂಬುದನ್ನು) ಸೇರಿಸಿ ಹೇಳಿರುವು ದನ್ನು ಕಾಣಬಹುದು.
ಆದರೆ ಈ ಎರಡು ಪದಗಳ ನಡುವಿರುವ ಸಂಬಂಧ ಮಾತ್ರ ಮೇಲೆ ಕೊಟ್ಟಿರುವ ಜೋಡುಪದಗಳಲ್ಲಿ ಬೇರೆ ಬೇರಾಗಿದೆ. ನಡುಬೆರಳು ಎಂಬುದು ಕೈಯಲ್ಲಿ ಐದು ಬೆರಳುಗಳ ನಡುವಿನಲ್ಲಿರುವ ಬೆರಳನ್ನು ಗುರುತಿಸುವುದಾದ ಕಾರಣ, ಅದರಲ್ಲಿ ನಡು ಎಂಬ ಗುಣಪದ ಬೆರಳು ಎಂಬ ಪದದ ಅರ್ಥವನ್ನು ಹೆಚ್ಚಿಸುವುದಕ್ಕಾಗಿ ಬಂದಿದೆಯೆಂದು ಹೇಳಲು ಸಾಧ್ಯವಿದೆ. ಹಾಗಾಗಿ ಅವುಗಳ ನಡುವಿರುವ ಸಂಬಂಧವನ್ನು ನಡುವಿನ ಬೆರಳು ಎಂಬ ಪದಗುಚ್ಛ ಸರಿಯಾಗಿ ಸೂಚಿಸಬಲ್ಲುದು. ಆದರೆ ನಡುಹಗಲು ಎಂಬ ಜೋಡುಪದ ‘ನಡುವಿನಲ್ಲಿರುವ ಹಗಲ’ನ್ನು ಸೂಚಿಸುವುದಿಲ್ಲ, ಇದಕ್ಕೆ ಬದಲು ಅದು ‘ಹಗಲಿನ ನಡುಭಾಗವನ್ನು’ ಸೂಚಿಸುತ್ತದೆ. ಹಾಗಾಗಿ, ಈ ಜೋಡುಪದದಲ್ಲಿ ಬಂದಿರುವ ನಡು ಮತ್ತು ಹಗಲು ಎಂಬ ಪದಗಳ ನಡುವಿರುವ ಸಂಬಂಧವನ್ನು ನಡುವಿನ ಹಗಲು ಎಂಬ ಪದಗುಚ್ಛದ ಮೂಲಕ ಸೂಚಿಸಲು ಸಾಧ್ಯವಾಗದು. ಇದಕ್ಕೆ ಬದಲಾಗಿ, ಹಗಲಿನ ನಡುಭಾಗ ಎಂಬ ಬೇರೊಂದು ರೀತಿಯ ಪದಗುಚ್ಛವನ್ನು ಇಲ್ಲಿ ಬಳಸಬೇಕಾಗು ತ್ತದೆ.
ಇದೇ ರೀತಿಯಲ್ಲಿ ಕೆಳದುಟಿ ಎಂಬುದಕ್ಕೆ ಕೆಳಗಿನ ತುಟಿ (ಇಲ್ಲವೇ ಮುಖದಲ್ಲಿ ಕೆಳಗೆ ಇರುವ ತುಟಿ) ಎಂಬ ಒಳನುಡಿಯನ್ನು (ವಿಗ್ರಹವಾಕ್ಯವನ್ನು) ಕೊಡಲು ಸಾಧ್ಯವಿದೆ; ಆದರೆ ತುದಿಗಾಲು ಎಂಬುದಕ್ಕೆ ಅದೇ ರೀತಿಯಲ್ಲಿ ತುದಿಯ ಕಾಲು (ಇಲ್ಲವೇ ತುದಿಯಲ್ಲಿರುವ ಕಾಲು) ಎಂಬುದಾಗಿ ಒಳನುಡಿನ್ನು ಕೊಟ್ಟಲ್ಲಿ ಅದು ಸರಿಯಾಗಲಾರದು. ಈ ಎರಡನೆಯ ಜೋಡು ಪದಕ್ಕೆ ಕಾಲಿನ ತುದಿ ಇಲ್ಲವೇ ಕಾಲಿನ ತುದಿಯಲ್ಲಿರುವ ಭಾಗ ಎಂಬುದಾಗಿ ಒಳನುಡಿಯನ್ನು ಹೇಳಬೇಕಾಗುತ್ತದೆ. ಈ ಎರಡು ಜೋಡುಪದಗಳಲ್ಲೂ ನಾಮಪದವೊಂದಕ್ಕೆ ಗುಣಪದವೊಂದನ್ನು ಸೇರಿಸಿ ಹೇಳಲಾಗಿದೆಯಾದರೂ ಅವುಗಳ ನಡುವಿರುವ ಸಂಬಂಧ ಒಂದೇ ಅಲ್ಲ ಎಂಬುದನ್ನು ಈ ಎರಡು ಭಿನ್ನ ಭಿನ್ನವಾದ ಒಳನುಡಿಗಳು ತಿಳಿಸುತ್ತವೆ.
ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ಒಳನುಡಿಗಳ ಮೂಲಕ ಸಂಬಂಧಿಸುವಲ್ಲಿ ಒಂದು ಮುಖ್ಯವಾದ ಸಮಸ್ಯೆಯಿದೆ ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ. ನಾವು ಮೂರನೆಯ ಅಧ್ಯಾಯದಲ್ಲಿ (೩.೩.೧ರಲ್ಲಿ) ನೋಡಿರುವಂತೆ, ಜೋಡುಪದಗಳ ತಯಾರಿಕೆ ಮತ್ತು ಬಳಕೆಗಳ ನಡುವೆ ಅಸಾಂಗತ್ಯವಿರಲು ಸಾಧ್ಯವಿದೆ. ಅವನ್ನು ತಯಾರಿಸುವ ಸಮಯದಲ್ಲಿ ಅವು ಹೆಸರಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಕಣ್ಣಿಗೆ ಎದ್ದು ಕಾಣಿಸು
128
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ವಂತಹ ಯಾವುದಾದರೂ ಒಂದು ಗುಣಧರ್ಮವನ್ನು ಆಧಾರವಾಗಿರಿಸಿಕೊಂಡು ಅವನ್ನು ರಚಿಸಿರಬೇಕು. ಆದರೆ ಅವುಗಳ ಬಳಕೆಯಾಗುತ್ತಿರುವ ಸಮಯದಲ್ಲಿ ಈ ಗುಣಧರ್ಮ ಆ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಹಾಗೆಯೇ ಉಳಿಯಬೇಕೆಂದೇನೂ ಇಲ್ಲ.
ಉದಾಹರಣೆಗಾಗಿ, ಹೊಸಮನೆ ಎಂಬ ಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಹೆಸರಿಸುತ್ತಿರಲು ಸಾಧ್ಯವಿದೆ. ಆ ಮನೆಗೆ ಹೊಸಮನೆ ಎಂಬುದಾಗಿ ಹೆಸರು ಕೊಡುವ ಸಮಯದಲ್ಲಿ ಅದು ಹತ್ತಿರದಲ್ಲಿದ್ದ ಉಳಿದ ಎಲ್ಲಾ ಮನೆಗಳಿಂದಲೂ ಹೊಸತಾಗಿದ್ದಿರಬೇಕು; ಅನಂತರ ಆ ಹೆಸರು ಬಳಕೆ ಯಾಗುತ್ತಿರುವ ಸಮಯದಲ್ಲಿ ಅದು ಕ್ರಮೇಣ ಹಳೆಯದಾಗುತ್ತಾ ಬಂದರೂ, ಮತ್ತು ಹತ್ತಿರವೇ ಬೇರೆ ಮನೆಗಳು ಹೊಸದಾಗಿ ಮೇಲೆದ್ದಿವೆಯಾದರೂ, ಹೊಸಮನೆ ಎಂಬ ಅದರ ಹೆಸರನ್ನು ಬದಲಿಸಿ ಹಳೆಮನೆ ಎಂದು ಹೇಳಲು ಯಾರೂ ಪ್ರಯತ್ನಿಸುವುದಿಲ್ಲ. ಒಂದು ಹೆಸರಿನ ಬಳಕೆಗೆ (ಎಂದರೆ ಅದರ ಅರ್ಥಕ್ಕೆ) ಅದರ ಒಳರಚನೆಯಿಂದ ದೊರಕುವ ಅರ್ಥ ಆಧಾರವಾಗುವುದಿಲ್ಲ ವೆಂಬುದೇ ಇದಕ್ಕೆ ಕಾರಣ.
ಜೋಡುಪದಗಳ ತಯಾರಿಕೆ ಮತ್ತು ಆ ತಯಾರಿಕೆಯಲ್ಲಿ ಬಳಕೆಯಾಗುವ ಗುಣಧರ್ಮ ಇವೆರಡೂ ಆ ಪದಗಳ ಚರಿತ್ರೆಗೆ ಸಂಬಂಧಿಸಿದ ವಿಷಯಗಳೆಂದು ಹೇಳಬಹುದು. ಅವುಗಳ ಬಳಕೆ ಮತ್ತು ಬಳಕೆಗೆ ಸಂಬಂಧಿಸಿದ ಗುಣಧರ್ಮ (ಎಂದರೆ ಅವುಗಳ ಈಗಿನ ಅರ್ಥ) ಇವೆರಡೂ ಈಗಿನ ಕಾಲಕ್ಕೆ ಸಂಬಂಧಿಸಿದ ವಿಷಯಗಳು. ಜೋಡುಪದವೊಂದರ ಒಳರಚನೆಯನ್ನು ವಿವರಿಸುವಾಗ ಅದರಲ್ಲಿ ಬರುವ ಪದಗಳನ್ನು ಸಂಬಂಧಿಸುವಂತಹ ಒಳನುಡಿಗಳನ್ನು ಇವೆರಡು ವಿಷಯ ಗಳಲ್ಲಿ ಯಾವುದರ ಆಧಾರದ ಮೇಲೆ ಹೇಳಬೇಕು (ಚಾರಿತ್ರಿಕ ಆಧಾರದ ಮೇಲೋ ಅಥವಾ ಈಗಿನ ಕಾಲಕ್ಕೆ ಸಂಬಂಧಿಸಿದ ವಿಷಯಗಳ ಆಧಾರದ ಮೇಲೋ) ಎಂಬುದೇ ಇಲ್ಲಿ ತಲೆದೋರುವ ಸಮಸ್ಯೆ. ಸಾಮಾನ್ಯವಾಗಿ ಜೋಡು ಪದಗಳ ತಯಾರಿಕೆಗೆ ಸಂಬಂಧಿಸಿದಂತಹ ಚಾರಿತ್ರಿಕ ಅಂಶಗಳ ಆಧಾರದ ಮೇಲೇನೇ ಒಳನುಡಿಗಳನ್ನು ಹೇಳುವುದು ರೂಢಿಯಾದರೂ, ಅದು ಆ ಪದಗಳ ಈಗಿನ ಬಳಕೆಯೆಂತಹದು (ಎಂದರೆ ಅದರ ಅರ್ಥವೆಂತಹದು) ಎಂಬುದನ್ನು ಸೂಚಿಸುವಂತಿದ್ದರೆ ಒಳ್ಳೆಯದು ಎಂದೂ ಅನಿಸದಿರುವುದಿಲ್ಲ.
ಕೆಲವೊಮ್ಮೆ ಇವೆರಡನ್ನೂ ಹೊಂದಿಸಿಕೊಳ್ಳಲು ಸಾಧ್ಯವಾಗದಿರಬಹುದು. ಉದಾಹರಣೆಗಾಗಿ, ಹೊಸಮನೆ ಎಂಬ ಜೋಡುಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಹೆಸರಿಸುವುದಾದರೂ ಅದರ ಒಳನುಡಿಯನ್ನು ಹೊಸ ದಾದ ಮನೆ ಎಂದೇ ಕೊಡಬೇಕಾಗುತ್ತದೆ. ಆ ಮನೆಯಲ್ಲಿ ಈಗ ಕಾಣಿಸುವ ಯಾವ ಗುಣಧರ್ಮವೂ ಈ ಒಳನುಡಿಗೆ ಆಧಾರವಾಗಲಾರದು. ಇದೇ ರೀತಿ ಯಲ್ಲಿ ಉಗಿಬಂಡಿ ಎಂಬ ಜೋಡುಪದ ಇವತ್ತು ಉಗಿಯ ಬದಲು ಡೀಸೆಲ್ ಇಲ್ಲವೇ ವಿದ್ಯುಚ್ಛಕ್ತಿಯನ್ನು ಬಳಸಿ ಓಡುವ ಸಾಧನವನ್ನು ಹೆಸರಿಸುವುದೇ ಜಾಸ್ತಿ
129
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಯಾಗಿದೆಯಾದರೂ ಆ ಪದದ ಒಳನುಡಿಯನ್ನು ಉರಿಯ ಸಹಾಯದಿಂದ ಚಲಿಸುವ ಬಂಡಿ ಎಂದೇ ಕೊಡಬೇಕಾಗುತ್ತದೆ. ಒಳನುಡಿಗಳು ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳನ್ನು ಸಂಬಂಧಿಸುವಂತಿರಬೇಕೆಂಬುದೇ ಈ ರೀತಿ ಜೋಡುಪದಗಳ ಒಳನುಡಿಗಳಿಗೂ ಮತ್ತು ಅವುಗಳ ಅರ್ಥಕ್ಕೂ ನಡುವೆ ಕಾಣಿಸುವ ಅಸಾಂಗತ್ಯವನ್ನು ತೊಡೆದು ಹಾಕಲು ಸಾಧ್ಯವಿಲ್ಲದಂತೆ ಮಾಡಿದೆ.
ಬಹುಶಃ ಇಂತಹ ಸಂದರ್ಭಗಳಲ್ಲಿ ಜೋಡುಪದಗಳಿಗೆ ಅವುಗಳ ‘ಚರಿತ್ರೆ ಯನ್ನು ಸೂಚಿಸುವ ಒಳನುಡಿ’ ಮತ್ತು ‘ಈಗಿನ ಅರ್ಥವನ್ನು ಸೂಚಿಸುವ ಒಳ ನುಡಿ’ ಎಂಬುದಾಗಿ ಎರಡು ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯ ವಾದೀತು. ಉದಾಹರಣೆಗಾಗಿ ಹೊಸಮನೆ ಎಂಬ ಪದಕ್ಕೆ ಅದರ ಚರಿತ್ರೆಯನ್ನು ಸೂಚಿಸುವ ಹೊಸದಾದ ಮನೆ ಎಂಬ ಒಳನುಡಿಯನ್ನೂ ಮತ್ತು ಅದರ ಇವತ್ತಿನ ಅರ್ಥವನ್ನು ಸೂಚಿಸುವ ಹಳೆಯದಾಗಿರುವ ಮನೆ ಎಂಬ ಒಳನುಡಿ ಯನ್ನೂ ಹೇಳಲು ಸಾಧ್ಯವಾದೀತು. ಆದರೆ ಇಂತಹ ಒಳನುಡಿಗಳಲ್ಲಿ ಎರಡನೆಯದು ಜೋಡುಪದದ ‘ಒಳರಚನೆ’ಯನ್ನು ವಿವರಿಸುತ್ತದೆ ಎಂದು ಹೇಳುವುದು ಮಾತ್ರ ಸ್ವಲ್ಪ ಕಷ್ಟ. ಯಾಕೆಂದರೆ, ಹೊಸಮನೆ ಎಂಬ ಜೋಡು ಪದದ ಒಳರಚನೆಯಲ್ಲಿ ಹಳೆಯದಾಗಿರುವ ಎಂಬ ಅಂಶವನ್ನಾಗಲಿ, ಇಲ್ಲವೇ ಉಗಿಬಂಡಿ ಎಂಬ ಜೋಡುಪದದ ಒಳರಚನೆಯಲ್ಲಿ ಡೀಸೆಲ್ ಅಥವಾ ವಿದ್ಯುಚ್ಛಕ್ತಿಯನ್ನು ಬಳಸುವ ಎಂಬ ಅಂಶವನ್ನಾಗಲಿ ಕಾಣಿಸುವುದು ಕಷ್ಟ.
ಒಂದು ಜೋಡುಪದದ ಚರಿತ್ರೆಯನ್ನು ಸೂಚಿಸಬಲ್ಲಂತಹ ಒಳನುಡಿಯನ್ನು ಕಂಡುಹಿಡಿಯುವುದರಲ್ಲೂ ಹಲಕೆಲವು ಸಮಸ್ಯೆಗಳೇಳಬಲ್ಲುವು. ಯಾಕೆಂದರೆ, ಸಾಮಾನ್ಯವಾಗಿ ನಾವು ಒಂದು ಜೋಡುಪದದ ಇವತ್ತಿನ ಬಳಕೆಯ ಆಧಾರದ ಮೇಲೆ ಮತ್ತು ಅದರ ಒಳರಚನೆಯ ಆಧಾರದ ಮೇಲೆ, ಅದರ ತಯಾರಿಕೆಯಲ್ಲಿ ಎಂತಹ ಗುಣಧರ್ಮ ಬಳಕೆಯಾಗಿದ್ದಿರಬೇಕು ಎಂದು ಊಹಿಸಬೇಕಾಗುತ್ತದೆ. ಹೀಗೆ ಊಹಿಸಿಕೊಳ್ಳುವಾಗ ನಾವು ತಪ್ಪಿಬೀಳಲು ಸಾಧ್ಯವಿದೆ ಮತ್ತು ಕೆಲವೊಮ್ಮೆ ಒಂದಕ್ಕಿಂತ ಜಾಸ್ತಿ ಒಳನುಡಿಗಳನ್ನು ಕೊಡಲು ಸಾಧ್ಯವಿದ್ದು ಅವುಗಳಲ್ಲಿ ಯಾವುದು ಜೋಡುಪದದ ತಯಾರಿಕೆಯಲ್ಲಿ ಬಳಕೆಯಾಗಿದ್ದ ನಿಜವಾದ ಚಾರಿತ್ರಿಕ ಘಟನೆಯನ್ನು ಸೂಚಿಸುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗ ದಿರಬಹುದು.
ಉದಾಹರಣೆಗಾಗಿ, ಉಗಿಬಂಡಿ ಎಂಬ ಜೋಡುಪದಕ್ಕೆ ಉಗಿಯ ಸಹಾಯ ದಿಂದ ಚಲಿಸುವ ಬಂಡಿ ಎಂದಾಗಲಿ, ಇಲ್ಲವೇ ಉಗಿಯನ್ನು ಉಗುಳುತ್ತಾ ಚಲಿಸುವ ಬಂಡಿ ಎಂದಾಗಲಿ ಚಾರಿತ್ರಿಕ ಒಳನುಡಿಯನ್ನು ಕೊಡಲು ಸಾಧ್ಯವಿದೆ. ಆದರೆ ಇವುಗಳಲ್ಲಿ ಯಾವುದು ಸರಿ ಎಂಬುದನ್ನು ನಿರ್ಧರಿಸಲು ಉಗಿಬಂಡಿ ಎಂಬ ಜೋಡುಪದವನ್ನು ತಯಾರಿಸಿದಾಗ ಈ ಎರಡು ಒಳನುಡಿಗಳು ಸೂಚಿಸುವ ಗುಣಧರ್ಮಗಳಲ್ಲಿ ಯಾವುದನ್ನು ಗಮನದಲ್ಲಿರಿಸಿಕೊಳ್ಳಲಾಗಿತ್ತು ಎಂಬ ಚಾರಿತ್ರಿಕ ಅಂಶ ಮಾತ್ರವೇ ಆಧಾರವಾಗಬಲ್ಲುದು. ಆದರೆ ಇಂತಹ
130
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಚಾರಿತ್ರಿಕ ಅಂಶಗಳನ್ನು ಕಂಡುಹಿಡಿಯುವುದು ಕಷ್ಟಸಾಧ್ಯವಾದ ಕಾರಣ, ಈ ರೀತಿ ಒಂದಕ್ಕಿಂತ ಜಾಸ್ತಿ ಒಳನುಡಿಗಳನ್ನು ಕೊಡಲು ಸಾಧ್ಯವಿರುವ ಸಂದರ್ಭಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನಿರ್ಧರಿಸಲು ಸಾಧ್ಯವಾಗದು.
೫. ಜೋಡುಪದಗಳ ವಿಭಜನೆ
ಕನ್ನಡದ ಜೋಡುಪದಗಳನ್ನು ಅವುಗಳಲ್ಲಿ ಕಾಣಿಸುವ ವ್ಯತ್ಯಾಸಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಸಾಮಾನ್ಯವಾಗಿ ಅವುಗಳ ಒಳರಚನೆಯಲ್ಲಿ ಕಾಣಿಸುವ ವ್ಯತ್ಯಾಸಗಳನ್ನೇ ಇಂತಹ ವಿಭಜನೆಗೆ ಆಧಾರವಾಗಿ ತೆಗೆದುಕೊಳ್ಳುವುದು ರೂಢಿ. ಜೋಡುಪದಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆ ಮತ್ತು ಪದವರ್ಗ, ಈ ಪದಗಳ ನಡುವಿರುವ ಸಂಬಂಧ, ಮತ್ತು ಜೋಡುಪದಗಳ ಕೇಂದ್ರಬಿಂದು ಅವುಗಳ ಒಳಗೆಯೇ ಇದೆಯೇ ಅಥವಾ ಹೊರಗಿದೆಯೇ, ಒಳಗಿದೆಯಾದರೆ ಯಾವ ಪದದ ಮೇಲಿದೆ (ಮೊದಲಿನದರ ಮೇಲೆಯೇ ಅಥವಾ ಕೊನೆಯದರ ಮೇಲೆಯೇ) ಎಂಬಂತಹ ವಿಷಯಗಳ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಹೇಳಲು ಸಾಧ್ಯವಿದೆ.
ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯ ಅಂಶವೇನೆಂದರೆ, ಜೋಡು ಪದಗಳ ಈ ವಿಭಜನೆಗಳೆಲ್ಲ ಅವುಗಳ ಒಳರಚನೆಯ ಮೇಲೆ ಮತ್ತು ಅಂತಹ ರಚನೆಯಲ್ಲಿ ಬಳಕೆಯಾಗುವ ಪದಗಳ ಸ್ವಭಾವದ ಮೇಲೆ ಅವಲಂಬಿಸಿದೆಯಾದ ಕಾರಣ, ಇವು ಜೋಡುಪದಗಳ ಚರಿತ್ರೆಗೆ ಸಂಬಂಧಿಸಿದ ವಿಭಜನೆಗಳಲ್ಲದೆ ಅವುಗಳ ಈಗಿನ ಬಳಕೆಗೆ ಸಂಬಂಧಿಸಿದುವಲ್ಲ. ಬಳಕೆಗೆ ಸಂಬಂಧಿಸಿದಂತೆ ಕನ್ನಡದ ನಾಮಪದಗಳನ್ನು ಹೇಗೆ ವಿಭಜಿಸಬಹುದೆಂಬುದನ್ನು ನಾವು ಮೇಲೆಯೇ (೩.೫ರಲ್ಲಿ) ನೋಡಿರುವೆವು. ಜೋಡುಪದಗಳನ್ನೂ ಇದೇ ವಿಧಾನದ ಮೂಲಕ ಅಂಕಿತನಾಮ, ರೂಢನಾಮ ಇತ್ಯಾದಿಯಾಗಿ ವಿಂಗಡಿಸಲು ಸಾಧ್ಯವಿದೆ. ಆದರೆ ಇದು ಜೋಡುಪದಗಳಿಗೆ ಮಾತ್ರ ಅನ್ವಯಿಸುವ ವಿಭಜನೆಯಾಗಲಾರದು, ಮತ್ತು ಜೋಡುಪದಗಳ ವಿಶಿಷ್ಟ ಗುಣಗಳ ಮೇಲೆ ಅವಲಂಬಿಸುವ ವಿಭಜನೆಯೂ ಆಗ ಲಾರದು.
ಕನ್ನಡದಲ್ಲಿ ‘ಕ್ರಿಯಾಸಮಾಸ’ ಎಂಬೊಂದು ಸಮಾಸವಿದೆಯೆಂದು ಕೇಶಿರಾಜ ನಿಂದ ಆರಂಭಿಸಿ ಹಲವಾರು ವೈಯಾಕರಣಿಗಳು ಹೇಳುತ್ತಿದ್ದಾರೆ. ಹಾಗಾಗಿ, ಕನ್ನಡದ ಜೋಡುಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ವಿಧದವುಗಳೆಂದು ವಿಂಗಡಿಸಲು ಸಾಧ್ಯ ಎಂಬ ಅಭಿಪ್ರಾಯ ಕೆಲವರದಿರ ಬಹುದು. ಆದರೆ ಈ ‘ಕ್ರಿಯಾಸಮಾಸ’ದಿಂದ ತಯಾರಾಗುವ ವಾಕ್ಯಾಂಶಗಳೆಲ್ಲ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ ಎಂಬುದನ್ನು ಮುಂದೆ (೫.೮.೮ರಲ್ಲಿ) ನೋಡಲಿರುವೆವು. ಹಾಗಾಗಿ ‘ಕ್ರಿಯಾಸಮಾಸ’ವೆಂಬುದು ಕನ್ನಡದಲ್ಲಿ ಸಮಾಸ ವಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಜೋಡುಪದಗಳಿಗೂ ಮತ್ತು
131
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವನ್ನು ನಾಮಪದಗಳಲ್ಲಿ ಮಾತ್ರ ಕಾಣಬಲ್ಲೆವಲ್ಲದೆ ಕ್ರಿಯಾಪದ ಇಲ್ಲವೇ ಗುಣಪದಗಳಲ್ಲಿ ಕಾಣಲಾರೆವೆಂಬುದೇ ಈ ರೀತಿ ಜೋಡುಪದಗಳು ನಾಮಪದಗಳಾಗಿ ಮಾತ್ರ ಬರಬಲ್ಲುವೆಂಬುದಕ್ಕೆ ಮುಖ್ಯ ಕಾರಣ.
ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ (‘ಸಮಾಸ’ಗಳೆಂಬ ಹೆಸರಿನ) ಜೋಡು ಪದಗಳ ವಿಭಜನೆಗೆ ಮೇಲೆ ಸೂಚಿಸಿದ ವ್ಯತ್ಯಾಸಗಳಲ್ಲಿ ಹಲವನ್ನು ಒಟ್ಟಾಗಿ ಬಳಸಲಾಗುತ್ತದೆ. ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲಾಗಿದೆಯಾದ ಕಾರಣ, ಕನ್ನಡದ ಮಟ್ಟಿಗೆ ಇದು ಸ್ವಲ್ಪವೂ ತೃಪ್ತಿಕರವಾಗಿಲ್ಲ ಎಂಬುದನ್ನು ನಾವು ಮುಂದಿನ ಒಂದು ವಿಭಾಗದಲ್ಲಿ (೫.೮ರಲ್ಲಿ) ನೋಡಲಿರುವೆವು.
೫.೬.೧ ಸಂಖ್ಯೆಯನ್ನು ಬಳಸುವ ವಿಭಜನೆ
ಜೋಡುಪದಗಳನ್ನು ಅವುಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆಯ ಆಧಾರದ ಮೇಲೆ ವಿಂಗಡಿಸಿ ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವೂ ಎರಡು ಪದಗಳ ಸೇರಿಕೆಯಿಂದ ಮಾತ್ರವೇ ತಯಾರಾದವುಗಳಾದ ಕಾರಣ ಇಂತಹ ವಿಭಜನೆ ಕನ್ನಡದ ಮಟ್ಟಿಗೆ ಜಾಸ್ತಿ ಉಪಯುಕ್ತವಲ್ಲ. ಎರಡಕ್ಕಿಂತ ಜಾಸ್ತಿ ಪದಗಳಿಂದ ತಯಾರಾದ ಜೋಡುಪದ ಗಳು ಕನ್ನಡದಲ್ಲಿ ಬಹಳ ಅಪರೂಪ.
ಜೋಡುಪದಗಳ ಒಳರಚನೆಯಲ್ಲಿ ಪದಗಳು ಮಾತ್ರವಲ್ಲದೆ ಪ್ರತ್ಯಯಗಳೂ ಬರಲು ಸಾಧ್ಯವಿದ್ದು, ಇಂತಹ ಜೋಡುಪದಗಳನ್ನು ಉಳಿದ ಜೋಡುಪದಗಳಿಂದ ಬೇರ್ಪಡಿಸಿ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ದಾರಿಹೋಕ ಎಂಬುದ ರಲ್ಲಿ ದಾರಿ ಮತ್ತು ಹೋಗು ಎಂಬೆರಡು ಪದಗಳು ಮಾತ್ರವಲ್ಲದೆ ಅ ಎಂಬ ಪ್ರತ್ಯಯವೂ ಕಾಣಿಸುತ್ತದೆ. (ಈ ಪ್ರತ್ಯಯ ಸೇರಿದಾಗ ಹೋಗು ಎಂಬುದರ ಕೊನೆಯ ಉಕಾರ ಬಿದ್ದುಹೋಗುತ್ತದೆ ಮತ್ತು ಗಕಾರ ಕಕಾರವಾಗುತ್ತದೆ).
ಇದೇ ರೀತಿಯಲ್ಲಿ ಹಾವಾಡಿಗ ಎಂಬುದರಲ್ಲಿ ಹಾವು ಮತ್ತು ಆಡು ಎಂಬ ಪದಗಳು ಮಾತ್ರವಲ್ಲದೆ ಇಗ ಎಂಬ ಪ್ರತ್ಯಯವೂ ಕಾಣಿಸುತ್ತದೆ. ಕನ್ನಡದಲ್ಲಿ *ಹೋಕ ಮತ್ತು *ಆಡಿಗ ಎಂಬವುಗಳು ಸ್ವತಂತ್ರ ಪದಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ ಈ ರೀತಿ ಮೇಲಿನ ಜೋಡುಪದಗಳಲ್ಲಿ ಎರಡು ಪದಗಳೊಂದಿಗೆ ಒಂದು ಪ್ರತ್ಯಯವೂ ಸೇರಿಕೊಂಡಿದೆಯೆಂದು ಹೇಳುವ ಅವಶ್ಯ ಕತೆಯುಂಟಾಗುತ್ತದೆ. ಆದರೆ ಬೇರೆ ವಿಷಯಗಳಲ್ಲಿ ಇವು ಎರಡು ಪದಗಳಿಂದ ತಯಾರಾದ ಇತರ ಜೋಡುಪದಗಳ ಹಾಗೆಯೇ (ಉದಾ: ಬಯಲಾಟ, ತಲೆ ತಿರುಕ, ಇತ್ಯಾದಿ) ಕಾಣಿಸುವುವಾದ ಕಾರಣ, ಇವು ತಯಾರಾಗುವ ಸಮಯದಲ್ಲಿ *ಹೋಕ, *ಆಡಿಗ ಮೊದಲಾದವುಗಳು ಸ್ವತಂತ್ರ ಪದಗಳಾಗಿದ್ದುವೆಂದು ಕಲ್ಪಿಸಿ ಕೊಳ್ಳಲೂ ಸಾಧ್ಯವಿದೆ.
132
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
೫.೬.೨ ಪದವರ್ಗಗಳನ್ನು ಬಳಸುವ ವಿಭಜನೆ
ಜೋಡುಪದಗಳನ್ನು ತಯಾರಿಸಲು ಬಳಸಿರುವ ಪದಗಳು ಯಾವ ಪದವರ್ಗಕ್ಕೆ ಸೇರಿವೆ ಎಂಬ ವಿಷಯದ ಆಧಾರದ ಮೇಲೆ ಅವನ್ನು ಮೂರು ಮುಖ್ಯ ವಿಭಾಗ ಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಕನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಅಂಗ ನಾಮಪದವಾಗಿರುತ್ತದೆ. ಮೊದಲನೆಯದು ಮಾತ್ರ ನಾಮ ಪದವಿರಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು. ಈ ಕಾರಣಕ್ಕಾಗಿ, ಕನ್ನಡದ ಹೆಚ್ಚಿನ ಜೋಡುಪದಗಳನ್ನೂ ಅವುಗಳ ಮೊದಲನೆಯ ಅಂಗವಾಗಿ ಬರುವ ಪದಗಳ ವರ್ಗವನ್ನಾಧರಿಸಿ ನಾಮಪದವಿರುವವು, ಕ್ರಿಯಾ ಪದವಿರುವವು ಮತ್ತು ಗುಣಪದವಿರುವವು ಎಂಬುದಾಗಿ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿ ಹೇಳಬಹುದು.
ಮೊದಲನೆಯ ಅಂಗವಾಗಿ ನಾಮಪದ ಬಂದಿರುವ ಜೋಡುಪದಗಳು
| ಆನೆಕಾಲು | ಬಯಲಾಟ |
| ಬೆಂಕಿಪೆಟ್ಟಿಗೆ | ಕೈಮಗ್ಗ |
| ಕಾಲ್ಮಣೆ | ನೆಲಗಡಲೆ |
| ಮೊದಲನೆಯ ಅಂಗವಾಗಿ ಕ್ರಿಯಾಪದ ಬಂದಿರುವ ಜೋಡುಪದಗಳು | |
|---|---|
| ಊರುಗೋಲು | ಕಡೆಗೋಲು |
| ತೂಗುದೀಪ | ಅರಳುಮೊಗ್ಗು |
| ಸಿಡಿಮದ್ದು | ಬಿಚ್ಚು ಕತ್ತಿ |
| ಮೊದಲನೆಯ ಅಂಗವಾಗಿ ಗುಣಪದ ಬಂದಿರುವ ಜೋಡುಪದಗಳು | |
|---|---|
| ದೊಡ್ಡಮ್ಮ | ಬೆಳ್ಳುಳ್ಳಿ |
| ಬಿಸಿನೀರು | ಕಿರುಬೆರಳು |
| ಮುಂಗಾಲು | ಹಿಮ್ಮೇಳ |
ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಪದ ನಾಮಪದ ವಾಗಿರುವ ಬದಲು ಕ್ರಿಯಾಪದವಾಗಿರಲೂ ಸಾಧ್ಯವಿದೆಯೆಂಬುದನ್ನು (ಉದಾ: ಕೈಪಿಡಿ, ಬಾನುಲಿ), ಮುಂದೆ (೫.೬.೩ರಲ್ಲಿ) ನೋಡಲಿರುವೆವು. ಅದಕ್ಕೆ ಮೊದಲು ಕನ್ನಡದಲ್ಲಿ ಮುಖ್ಯವಾಗಿ ಬರುವ ಮೇಲೆ ಹೇಳಿದ ಮೂರು ರೀತಿಯ ಜೋಡುಪದಗಳ ಸ್ವರೂಪವೆಂತಹದೆಂಬುದನ್ನು ಈ ಕೆಳಗೆ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.
133
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
(ಕ) ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು
ಎರಡು ನಾಮಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಾಗಿರುವ ಜೋಡುಪದಗಳು ಕನ್ನಡದಲ್ಲಿ ಹಲವಿವೆ. ಇವುಗಳಲ್ಲಿ ಹೆಚ್ಚಿನವೂ ಅ ಎಂಬ ಸಂಬಂಧಕ ಪ್ರತ್ಯಯದ ಮೂಲಕ ಎರಡು ನಾಮಪದಗಳನ್ನು ಒಟ್ಟು ಸೇರಿಸುವು ದರ ಮೂಲಕ ತಯಾರಾದವುಗಳು. ಉದಾ:
| ಒಳನುಡಿ | ಜೋಡುಪದ |
|---|---|
| ಬಯಲಿನ ಆಟ | ಬಯಲಾಟ |
| ಬೆಂಕಿಯ ಪೆಟ್ಟಿಗೆ | ಬೆಂಕಿಪೆಟ್ಟಿಗೆ |
| ನೆಲದ ಕಡಲೆ | ನೆಲಿಕಡಲೆ |
| ಕಾಲಿನ ಮಣೆ | ಕಾಲ್ಮಣಿ |
| ಕೈಯ ಮಗ್ಗ | ಕೈಮಗ್ಗ |
ಈ ರೀತಿ ಸಂಬಂಧಕ ಪ್ರತ್ಯಯದ ಮೂಲಕ ತಯಾರಾಗಿರುವ ಜೋಡುಪದ ಗಳ ನಡುವೆಯೂ ಹಲಕೆಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತೋರಿಸಿ ಕೊಡಲು ಇವಕ್ಕೆ ಸಂಬಂಧಕ ಪ್ರತ್ಯಯದ ಮೂಲಕ ಒಳನುಡಿಗಳನ್ನು ಹೇಳುವ ಬದಲು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು ಬಳಸಿ ಒಳನುಡಿಗಳನ್ನು ಹೇಳ ಬೇಕಾಗುತ್ತದೆ, ಮತ್ತು ಇದಕ್ಕಾಗಿ ಈ ಒಳನುಡಿಗಳಲ್ಲಿ ಜೋಡುಪದಗಳಲ್ಲಿ ಕಾಣಿಸದಿರುವಂತಹ ಬೇರೆ ಬೇರೆ ಕ್ರಿಯಾಪದಗಳನ್ನೂ ಬಳಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಎರಡು ನಾಮಪದಗಳ ನಡುವಿನ ಸಂಬಂಧವನ್ನು ಜಾಸ್ತಿ ವಿವರಗಳನ್ನು ಕೊಡದೆ ಚುಟುಕಾಗಿ ಸೂಚಿಸಲು ಸಂಬಂಧಕ ಪ್ರತ್ಯಯವನ್ನು ಬಳಸುತ್ತೇವೆ. ಈ ಪ್ರತ್ಯಯ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸು ತ್ತದೆ. ವಿಭಕ್ತಿ ಪ್ರತ್ಯಯಗಳು ಈ ರೀತಿ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸುವುದಿಲ್ಲ. ಇದಕ್ಕೆ ಬದಲು ಅವು ಯಾವುದಾದರೊಂದು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾ ದವುಗಳು ಯಾವ ರೀತಿಯಲ್ಲಿ ನಿರತವಾಗಿವೆ ಎಂಬುದನ್ನು ತಿಳಿಸುವುದರ ಮೂಲಕ ಅಂತಹ ನಾಮಪದಗಳನ್ನು ಸಂಬಂಧಿಸುತ್ತವೆ.
ಉದಾಹರಣೆಗಾಗಿ, ಕಣ್ಣಿನ ನೀರು ಎಂಬುದರಲ್ಲಿ ಕಣ್ಣು ಎಂಬ ಪದ ದೊಂದಿಗೆ ಬಂದಿರುವ ಸಂಬಂಧಕ ಪ್ರತ್ಯಯ ಕಣ್ಣಿಗೂ ಮತ್ತು ನೀರಿಗೂ ನಡುವಿರುವ ಸಂಬಂಧವನ್ನು ನೇರವಾಗಿ ಸೂಚಿಸುತ್ತದೆ. ಇದಕ್ಕೆ ಬದಲು, ಕಣ್ಣಿನಲ್ಲಿ ಬರುವ ನೀರು ಎಂಬುದರಲ್ಲಿ ಅದೇ ಕಣ್ಣು ಎಂಬ ಪದದೊಂದಿಗೆ ಬಂದಿರುವ ಅಲ್ಲಿ ಎಂಬ ವಿಭಕ್ತಿ ಪ್ರತ್ಯಯ ಬರು ಎಂಬ ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಕಣ್ಣು ಮತ್ತು ನೀರು ಎಂಬವುಗಳು ಯಾವ
134
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ರೀತಿಯಲ್ಲಿ ನಿರತವಾಗಿವೆ (ಕಣ್ಣು ಆಕರವಾಗಿ ಮತ್ತು ನೀರು ಅಂತಹ ಆಕರದಲ್ಲಿ ಕಾಣಿಸುವ ವಸ್ತುವಾಗಿ) ಎಂಬುದನ್ನು ತಿಳಿಸುವುದರ ಮೂಲಕ ಸಂಬಂಧಿಸುತ್ತದೆ.
ಇದೇ ರೀತಿಯಲ್ಲಿ ಜೇನಿನ ಹುಳ ಎಂಬುದರಲ್ಲಿ ಕಾಣಿಸುವ ಸಂಬಂಧಕ ಪ್ರತ್ಯಯ ಜೇನು ಮತ್ತು ಹುಳ ಎಂಬ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸುವುದಾದರೆ, ಜೇನನ್ನು ಸಂಗ್ರಹಿಸುವ ಹುಳ ಎಂಬುದರಲ್ಲಿ ಬರುವ ಅನ್ನು ಎಂಬ ವಿಭಕ್ತಿ ಪ್ರತ್ಯಯ ಸಂಗ್ರಹಿಸು ಎಂಬ ಘಟನೆಯಲ್ಲಿ ಜೇನು ಮತ್ತು ಹುಳ ಎಂಬ ಪದಗಳು ಯಾವ ರೀತಿಯಲ್ಲಿ ಸಂಗ್ರಹಿಸು ಎಂಬ ಕ್ರಿಯಾಪದದೊಂದಿಗೆ ಸಂಬಂಧಿಸಿವೆ ಎಂಬುದನ್ನು ತಿಳಿಸುವುದರ ಮೂಲಕ ಆ ಎರಡು ನಾಮಪದಗಳ ನಡುವಿರುವ ಸಂಬಂಧವನ್ನು ಸುತ್ತು ಬಳಸಿ ಹೇಳುತ್ತವೆ.
ಈ ರೀತಿ ಸಂಬಂಧಕ ಪ್ರತ್ಯಯದ ಬದಲು ಬೇರೆ ಬೇರೆ ವಿಭಕ್ತಿ ಪ್ರತ್ಯಯ ಗಳನ್ನು (ಕ್ರಿಯಾಪದಗಳೊಂದಿಗೆ) ಬಳಸುವುದರ ಮೂಲಕ ಎರಡು ನಾಮಪದ ಗಳಿರುವ ಜೋಡುಪದಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ತೋರಿಸಲು ಸಾಧ್ಯವಿದೆ ಮತ್ತು ಈ ವೈವಿಧ್ಯತೆಯ ಆಧಾರದ ಮೇಲೆ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇಂತಹ ಒಳನುಡಿಗಳಲ್ಲಿ ಯಾವ ವಿಭಕ್ತಿ ಪ್ರತ್ಯಯ ಬಂದಿದೆ ಎಂಬುದು ಈ ವಿಭಜನೆಗೆ ಒಂದು ಆಧಾರವಾಗಬಲ್ಲುದು.
ಜೋಡುಪದ ಸಂಬಂಧಕ ಪ್ರತ್ಯಯ ವಿಭಕ್ತಿ ಪ್ರತ್ಯಯಗಳು ಜೇನುಹುಳ ಜೇನಿನ ಹುಳ ಜೇನನ್ನು ಸಂಗ್ರಹಿಸುವ ಹುಳ ಅಡಕತ್ತರಿ ಅಡಕೆಯ ಕತ್ತರಿ ಅಡಕೆಯನ್ನು ಕತ್ತರಿಸುವ ಕತ್ತರಿ ಬೆಂಕಿಪೆಟ್ಟಿಗೆ ಬೆಂಕಿಯ ಪೆಟ್ಟಿಗೆ ಬೆಂಕಿಯನ್ನು ಮಾಡಲು ಬಳಸುವ ಪೆಟ್ಟಿಗೆ ಕಣ್ಣುಸನ್ನೆ ಕಣ್ಣಿನ ಸನ್ನೆ ಕಣ್ಣಿನಿಂದ ಮಾಡಿದ ಸನ್ನೆ ನೂಲೇಣಿ ನೂಲಿನ ಏಣಿ ನೂಲಿನಿಂದ ಮಾಡಿದ ಏಣಿ ಕೈಕೊಡಲಿ ಕೈಯ ಕೊಡಲಿ ಕೈಯಿಂದ ಕಡಿಯಲು ಬಳಸುವ ಕೊಡಲಿ ಮೂರುದಾರ ಮೂಗಿನ ದಾರ (ಎತ್ತಿನ) ಮೂರಿಗೆ ಕಟ್ಟಿದ ದಾರ ತಪ್ಪು ಕಾಣಿಕೆ ತಪ್ಪಿನ ಕಾಣಿಕೆ ತಪ್ಪಿಗೆ ಕೊಡುವ ಕಾಣಿಕೆ ಕೈನೀರು ಕೈಯ ನೀರು (ಮದುವೆಯಲ್ಲಿ) ಕೈಗೆ ಎರೆಯುವ ನೀರು ಕಣ್ಣೀರು ಕಣ್ಣಿನ ನೀರು ಕಣ್ಣಿನಲ್ಲಿ ಬರುವ ನೀರು ತಲೆಗೂದಲು ತಲೆಯ ಕೂದಲು ತಲೆಯಲ್ಲಿ ಬೆಳೆಯುವ ಕೂದಲು ಕಾಳ್ಳಿಚ್ಚು ಕಾಡಿನ ಕಿಚ್ಚು ಕಾಡಿನಲ್ಲಿ ಉರಿಯುವ ಕಿಚ್ಚು (ಬೆಂಕಿ)
135
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಜೋಡುಪದಗಳಿಗೆಲ್ಲ ಅ ಎಂಬ ಸಂಬಂಧಕ ಪ್ರತ್ಯಯವನ್ನು ಬಳಸಿ ಒಂದೇ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆಯೆಂಬುದನ್ನು ಎರಡನೆಯ ಕಾಲಂನಿಂದಲೂ ಮತ್ತು ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲೊಂದನ್ನು ಬಳಸಿ ಅವಕ್ಕೇನೇ ಬೇರೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ ಯೆಂಬುದನ್ನು ಮೂರನೆಯ ಕಾಲಂನಿಂದಲೂ ತಿಳಿಯಬಹುದು.
ಈ ರೀತಿ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲಿ ಯಾವುದರ ಮೂಲಕ ಈ ಜೋಡುಪದಗಳ ಅಂಗಗಳಾಗಿ ಬರುವ ನಾಮಪದಗಳನ್ನು ಸಂಬಂಧಿಸಬಹುದು ಎಂಬ ವಿಷಯದ ಆಧಾರದ ಮೇಲೆ ಅವನ್ನು ವಿಂಗಡಿಸುವ ಬದಲು, ಹಾಗೆ ಸಂಬಂಧಿಸುವುದಕ್ಕಾಗಿ ಬಳಸುವ ಕ್ರಿಯಾಪದಗಳು ಯಾವುವು ಎಂಬ ವಿಷಯದ ಆಧಾರದ ಮೇಲೂ ಇವನ್ನು ವಿಂಗಡಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಜೋಡುಪದಗಳಿಗೆಲ್ಲ ಮಾಡು ಎಂಬ ಕ್ರಿಯಾಪದವನ್ನು ಬಳಸಿ ಒಳನುಡಿಯನ್ನು ತಯಾರಿಸಲು ಸಾಧ್ಯವಿದೆ.
| ಕಣ್ಣುಸನ್ನೆ | ಕಣ್ಣಿನಿಂದ ಮಾಡುವ ಸನ್ನೆ |
| ನೂಲೇಣಿ | ನೂಲಿನಿಂದ ಮಾಡಿದ ಏಣಿ |
| ಮರಗಾಲು | ಮರದಿಂದ ಮಾಡಿದ ಕಾಲು |
| ಮರಗಾಣ | ಮರದಿಂದ ಮಾಡಿದ ಗಾಣ |
ಎರಡು ನಾಮಪದಗಳನ್ನು ಸೇರಿಸಿ ತಯಾರಿಸಿರುವ ಎಲ್ಲಾ ಜೋಡುಪದ ಗಳಿಗೂ ಸಂಬಂಧಕ ಪ್ರತ್ಯಯವನ್ನು ಬಳಸಿ ಒಳನುಡಿಯನ್ನು ಕೊಡಲು ಸಾಧ್ಯ ವಾಗದು. ಉದಾಹರಣೆಗಾಗಿ, ಆನೆಕಾಲು ಎಂಬ ಜೋಡುಪದಕ್ಕೆ ಕಾಲುಗಳು ಆನೆಯ ಕಾಲಿನ ಹಾಗೆ ದಪ್ಪವಾಗುವ ಒಂದು ರೋಗವನ್ನು ಹೆಸರಿಸುವ ಅರ್ಥ ವಿದೆಯಾದ ಕಾರಣ, ಅದಕ್ಕೆ ಆನೆಯ ಕಾಲು ಎಂಬುದಾಗಿ ಸಂಬಂಧಕ ಪ್ರತ್ಯಯ ವಿರುವ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಇದೇ ರೀತಿಯಲ್ಲಿ ಇಲಿಕಿವಿ ಎಂಬ ಜೋಡುಪದಕ್ಕೂ ಇಲಿಯ ಕಿವಿ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಯಾಕೆಂದರೆ, ಅದು ಇಲಿಯ ಕಿವಿಯ ಹಾಗೆ ಕಾಣಿಸುವ ಎಲೆಗ ಳಿರುವ ಒಂದು ಗಿಡವನ್ನು ಹೆಸರಿಸುತ್ತದೆ.
ಕನ್ನಡದಲ್ಲಿ ಇಂತಹ ಮೂರು ರೀತಿಯ ಜೋಡುಪದಗಳು ಬಳಕೆಯಲ್ಲಿವೆ. ಆನೆಕಾಲು, ಇಲಿಕಿವಿ, ಕೈಗೊಂಬೆ ಮೊದಲಾದವುಗಳ ಹಾಗೆ ಅಂಗಗಳಾಗಿ ಬಂದಿರುವ ಪದಗಳಲ್ಲಿ ಎರಡೂ ಉಪಮಾನಕ್ಕೆ ಸಂಬಂಧಿಸಿದವುಗಳು, ಕಲ್ಲೆದೆ, ತಾಯಿಬೇರು, ಕೈಗಂಬ ಮೊದಲಾದವುಗಳ ಹಾಗೆ ಮೊದಲನೆಯ ಪದ ಮಾತ್ರ ಉಪಮಾನಕ್ಕೆ ಸಂಬಂಧಿಸಿ ಇರುವವುಗಳು, ಮತ್ತು ಜೇನುತುಪ್ಪ, ನೆಲದಾವರೆ, ಮೈಗಳ್ಳ ಮೊದಲಾದವುಗಳ ಹಾಗೆ ಎರಡನೆಯ ಪದ ಮಾತ್ರ ಉಪಮಾನಕ್ಕೆ
136
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಸಂಬಂಧಿಸಿ ಇರುವವುಗಳು ಎಂಬುದಾಗಿ ಈ ಮೂರು ವಿಧದ ಜೋಡುಪದ ಗಳನ್ನು ವರ್ಣಿಸಬಹುದು. ಉದಾ:
- (೧) ಅಂಗಗಳೆರಡೂ ಉಪಮೆಗಳು
- ಇಲಿಕಿವಿ ಇಲಿಯ ಕಿವಿಯಂತಿರುವ ಎಲೆಗಳಿರುವ ಗಿಡ
- ಕೈಗೊಂಬೆ ಕೈಯ ಗೊಂಬೆಯಂತೆ ವಶದಲ್ಲಿರುವವನು
- (೨) ಮೊದಲನೆಯ ಅಂಗ ಉಪಮೆ
- ಕಲ್ಲೆದೆ ಕಲ್ಲಿನ ಹಾಗೆ ಕಠಿಣವಾಗಿರುವ ಎದೆ
- ಕೈಗಂಬ ಕೈಯಿಂದ ತೋರಿಸುವ ಹಾಗೆ ದಾರಿ ತೋರಿಸುವ ಕಂಬ
- (೩) ಎರಡನೆಯ ಅಂಗ ಉಪಮೆ
- ನೆಲದಾವರೆ ನೆಲದಲ್ಲಿ ಬೆಳೆವ ತಾವರೆಯಂತಿರುವ ಹೂ
- ಜೇನುತುಪ್ಪ ಜೇನುಹುಳ ತಯಾರಿಸುವ ತುಪ್ನದಂತಿರುವ ದ್ರವ
(ಖ) ಮೊದಲನೆಯ ಅಂಗ ಕ್ರಿಯಾಪದವಾಗಿರುವ ಜೋಡುಪದಗಳು
ಮೊದಲನೆಯ ಅಂಗ ಕ್ರಿಯಾಪದವಾಗಿಯೂ ಮತ್ತು ಎರಡನೆಯ ಅಂಗ ನಾಮ ಪದವಾಗಿಯೂ ಇರುವ ಜೋಡುಪದಗಳು ಕನ್ನಡದಲ್ಲಿ ಕೆಲವಿವೆ. ಇವುಗಳಲ್ಲಿ ಬರುವ ಕ್ರಿಯಾಪದವು ಒಂದು ಘಟನೆಯನ್ನು ತಿಳಿಸುತ್ತಿದ್ದು, ಜೋಡುಪದವನ್ನು ತಯಾರಿಸುವ ಸಮಯದಲ್ಲಿ ಆ ಘಟನೆಯನ್ನು ಜೋಡುಪದವು ಹೆಸರಿಸಬೇಕಾ ಗಿರುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣಧರ್ಮವನ್ನಾಗಿ ಆರಿಸಲಾಗಿತ್ತೆಂದು ನಾವು ಊಹಿಸಬಹುದು. ಉದಾ:
ಸುಳಿಗಾಳಿ ಸುಳಿಯುವ ಗಾಳಿ ಸುರಿಮಳೆ ಸುರಿಯುವ ಮಳೆ ಸಿಡಿಮದ್ದು ಸಿಡಿಯುವ ಮದ್ದು ಬೀಸುಗಲ್ಲು (ಧಾನ್ಯವನ್ನು) ಬೀಸುವ ಕಲ್ಲು ನಿಲುಗಡೆ (ವಾಹನವನ್ನು) ನಿಲ್ಲಿಸುವ ಕಡೆ ಜಾರುಬಂಡಿ (ಮಕ್ಕಳು) ಜಾರುವ (ಆಟವಾಡುವ) ಬಂಡಿ ಚುಚ್ಚುಮದ್ದು ಚುಚ್ಚುವ (ಚುಚ್ಚಿಕೊಡುವ) ಮದ್ದು ಊರುಗೋಲು ಊರಲು ಬಳಸುವ ಕೋಲು ತೋರುಬೆರಳು (ಯಾವುದನ್ನಾದರೂ) ತೋರಿಸಲು ಬಳಸುವ ಬೆರಳು
137
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಇಂತಹ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಬರುವ ಕ್ರಿಯಾ ಪದಕ್ಕೂ ಮತ್ತು ಎರಡನೆಯ ಅಂಗವಾಗಿ ಬರುವ ನಾಮಪದಕ್ಕೂ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳಿರಲು ಸಾಧ್ಯವಿದೆ. ಉದಾಹರಣೆಗಾಗಿ, ಸುಳಿಗಾಳಿ, ಸಿಡಿಮದ್ದು ಮೊದಲಾದವುಗಳಲ್ಲಿ ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ನಾಮಪದವು ಗುರುತಿಸುವ ವಸ್ತು ತೊಡಗಿಕೊಂಡಿರುವುದನ್ನೂ ಮತ್ತು ತೂಗುದೀಪ, ಚುಚ್ಚುಮದ್ದು ಮೊದಲಾದವುಗಳಲ್ಲಿ ಬೇರಾರಾದರೂ ಅವನ್ನು ಆ ರೀತಿ ತೊಡಗಿಸಿರುವುದನ್ನೂ ಕಾಣಬಹುದು. ನಾಮಪದವು ಗುರುತಿಸುವ ವಸ್ತು ಕ್ರಿಯಾಪದವು ಸೂಚಿಸುವ ಘಟನೆಗೆ ಬೀಸುಗಲ್ಲು, ಕಡೆಗೋಲು ಮೊದ ಲಾದವುಗಳಲ್ಲಿ ಕರಣವಾಗಿದೆಯಾದರೆ, ಸುಡುಗಾಡು, ಜಾರುಬಂಡಿ ಮೊದಲಾ ದವುಗಳಲ್ಲಿ ಆಕರವಾಗಿದೆ. ಜೋಡುಪದಗಳ ನಡುವೆ ಕಾಣಿಸುವ ಈ ವ್ಯತ್ಯಾಸದ ಆಧಾರದ ಮೇಲೂ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ಹಂಚಿ ಹೇಳಲು ಸಾಧ್ಯವಿದೆ.
ಜೋಡುಪದದ ಒಳರಚನೆಯಲ್ಲಿ ಕಾಣಿಸುವ ಘಟನೆ ಹಲವು ಸಂದರ್ಭ ಗಳಲ್ಲಿ ನಡೆಯುವಂತಹದಾಗಿರಬಹುದು ಇಲ್ಲವೇ ಒಂದು ಬಾರಿ ಮಾತ್ರವೇ ನಡೆದುದಾಗಿರಬಹುದು. ಈ ವ್ಯತ್ಯಾಸವನ್ನು ಜೋಡುಪದದ ಒಳನುಡಿಯಲ್ಲಿ ಬರುವ ಕ್ರಿಯಾಪದದೊಂದಿಗೆ ವ ಇಲ್ಲವೇ ದ ಎಂಬ ಕಾಲವಾಚಕ ಪ್ರತ್ಯಯ ವನ್ನು ಬಳಸುವ ಮೂಲಕ ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ (೩ಕ)ದಲ್ಲಿ ಕೊಟ್ಟಿರುವ ಜೋಡುಪದಗಳ ಒಳರಚನೆಯಲ್ಲಿ ಹಲವು ಸಂದರ್ಭ ಗಳಲ್ಲಿ ನಡೆಯುವ ಘಟನೆಯೂ ಮತ್ತು (೩ಖ)ದಲ್ಲಿ ಕೊಟ್ಟಿರುವ ಜೋಡುಪದ ಗಳ ಒಳರಚನೆಯಲ್ಲಿ ಒಂದು ಬಾರಿಗೆ ಮಾತ್ರವೇ ನಡೆಯುವ ಘಟನೆಯೂ ಬಂದಿರುವುದನ್ನು ಕಾಣಬಹುದು.
(೩ಕ) ಜಾರುಬಂಡಿ ಮಕ್ಕಳು ಜಾರುವ ಬಂಡಿ ನಿಲುಗಡೆ ವಾಹನವನ್ನು ನಿಲ್ಲಿಸುವ ಜಾಗ ಸಿಡಿಮದ್ದು ಸಿಡಿಯುವ ಮದ್ದು ಊರುಗೋಲು ಊರಲು ಬಳಸುವ ಕೋಲು
(೩ಖ) ಬಿಡುಮುಡಿ ಬಿಟ್ಟ (ಕೆದರಿದ) ಮುಡಿ (ಕೂದಲು) ಕಡಿಯಕ್ಕಿ ಕಡಿದ (ತುಂಡಾದ) ಅಕ್ಕಿ ಹುಟ್ಟುಹಬ್ಬ ಹುಟ್ಟಿದ (ದಿನದ) ಹಬ್ಬ ಬಿಚ್ಚುಗತ್ತಿ ಬಿಚ್ಚಿದ ಕತ್ತಿ
138
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಜೋಡುಪದದ ಒಳರಚನೆಯಲ್ಲಿ ಕಾಣಿಸುವ ಕ್ರಿಯಾಪದವು ನಿಜವಾಗಿಯೂ ನಡೆದಿರುವ ಘಟನೆಯೊಂದನ್ನು ಸೂಚಿಸುವ ಬದಲು ಉಪಮೆಯಾಗಿರಲೂ ಸಾಧ್ಯ ವೆಂಬುದನ್ನು ಹಾಸುಗಲ್ಲು (ಹಾಸಿದ ಹಾಗೆ ಕಾಣಿಸುವ ಕಲ್ಲು) ಎಂಬುದರಲ್ಲಿ ನೋಡಬಹುದು.
ಮೊದಲನೆಯ ಅಂಗವು ಕ್ರಿಯಾಪದವೇ ಅಥವಾ ನಾಮಪದವೇ ಎಂಬ ವಿಷಯದಲ್ಲಿ ಸಂದೇಹವೇಳುವಂತಹ ಜೋಡುಪದಗಳೂ ಕೆಲವಿವೆ. ಉದಾ ಹರಣೆಗಾಗಿ, ಹುಟ್ಟುಕುರುಡ ಎಂಬ ಜೋಡುಪದದಲ್ಲಿ ಬರುವ ಹುಟ್ಟು ಎಂಬ ಪದವನ್ನು ಕ್ರಿಯಾಪದವೆಂದು ಪರಿಗಣಿಸಿ, ಹುಟ್ಟುವಾಗಲೇ ಕುರುಡನಾಗಿದ್ದ ವನು ಎಂಬುದಾಗಿ ಒಳನುಡಿಯನ್ನು ಕೊಡಬಹುದು, ಇಲ್ಲವೇ ಅದನ್ನು ನಾಮ ಪದವೆಂದು ಪರಿಗಣಿಸಿ, ಹುಟ್ಟಿನಲ್ಲೇ ಕುರುಡನಾಗಿದ್ದವನು ಎಂಬುದಾಗಿಯೂ ಒಳನುಡಿಯನ್ನು ಕೊಡಬಹುದು. ಇದೇ ರೀತಿಯಲ್ಲಿ ಹುಟ್ಟುಗುಣ (ಹುಟ್ಟು ವಾಗಲೇ ಪಡೆದಿದ್ದ ಗುಣ ಇಲ್ಲವೇ ಹುಟ್ಟಿನಲ್ಲೇ ಪಡೆದಿದ್ದ ಗುಣ), ಕಚ್ಚು ಗಾಲಿ (ಕಚ್ಚಿ ಹಿಡಿಯುವ ಗಾಲಿ ಇಲ್ಲವೇ ಕಚ್ಚುಗಳಿರುವ ಗಾಲಿ) ಎಂಬವು ಗಳ ಒಳರಚನೆಯಲ್ಲೂ ಮೊದಲನೆಯ ಪದವಾಗಿ ಕ್ರಿಯಾಪದ ಇಲ್ಲವೇ ನಾಮ ಪದವನ್ನು ಕಾಣಲು ಸಾಧ್ಯವಿದೆ.
(ಗ) ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದಗಳು
ಕನ್ನಡದಲ್ಲಿ ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ರಚಿಸಿದ ಜೋಡು ಪದಗಳೇ ಜಾಸ್ತಿಯೆಂದು ಹೇಳಬಹುದು. ಇವುಗಳಲ್ಲಿ ಬರುವ ನಾಮಪದಗಳು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಅಥವಾ ವಿಷಯವನ್ನು ಗುರುತಿಸುತ್ತಿದ್ದು, ಗುಣಪದಗಳು ಅವುಗಳಲ್ಲಿ ಕಾಣಿಸುವ ಬೇರೆ ಬೇರೆ ರೀತಿಯ ಗುಣಧರ್ಮಗಳನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕೆಂದಾಳಿ ಎಂಬ ಜೋಡುಪದಕ್ಕೆ (ಕೆಂಪು ತಾಳಿ (ತೆಂಗು)) ಎಂಬ ಒಳರಚನೆಯನ್ನು ಕೊಡಲು ಸಾಧ್ಯವಿದೆ. ಇದರಲ್ಲಿ ಕೆಂ (ಕೆಂಪು) ಎಂಬ ಗುಣಪದವೂ ಮತ್ತು ತಾಳಿ (ತೆಂಗು) ಎಂಬ ನಾಮಪದವೂ ಕಾಣಿಸುತ್ತಿದ್ದು, ನಾಮಪದವು ಗುರುತಿಸುವ ಮರದ ಗುಣಧರ್ಮವೊಂದನ್ನು ಗುಣಪದ ಸೂಚಿಸುತ್ತಿದೆ.
ಇಂತಹ ಜೋಡುಪದಗಳಲ್ಲಿ ಬರುವ ಗುಣಪದಗಳ ನಡುವೆ ಬೇರೆ ಬೇರೆ ರೀತಿಯ ವ್ಯತ್ಯಾಸಗಳನ್ನು ಕಾಣಲು ಸಾಧ್ಯವಿದ್ದು, ಅಂತಹ ವ್ಯತ್ಯಾಸಗಳನ್ನಾಧರಿಸಿ ಗುಣಪದವಿರುವ ಜೋಡುಪದಗಳನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಇಂತಹ ವಿಂಗಡನೆಗಳಲ್ಲಿ ಮುಖ್ಯವಾದುವನ್ನು ಕೆಳಗೆ ಸ್ವಲ್ಪ ವಿವರವಾಗಿ ಕೊಡಲಾಗಿದೆ.
(೧) ನಾಮವಿಶೇಷಣ ಮತ್ತು ಕ್ರಿಯಾವಿಶೇಷಣ
139
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗುಣಪದಗಳು ಕೆಳಗೆ (೪ಕ)ದಲ್ಲಿ ತೋರಿಸಿರುವಂತೆ ನೇರವಾಗಿ ಜೋಡುಪದಗಳ ಒಳರಚನೆಯಲ್ಲಿ ಕಾಣಿಸುವ ನಾಮಪದಗಳ ವಿಶೇಷಣಗಳಾಗಿರಬಹುದು ಇಲ್ಲವೇ (೪ಖ)ದಲ್ಲಿ ತೋರಿಸಿದಂತೆ ಅಂತಹ ನಾಮಪದಗಳಿಗೆ ಸಂಬಂಧಿಸಿದಂತಹ ಕ್ರಿಯಾಪದವೊಂದರ ವಿಶೇಷಣಗಳಾಗಿರಬಹುದು.
(೪ಕ) ಹೆಬ್ಬೆರಳು ಹಿರಿ (ದೊಡ್ಡ) ಬೆರಳು ಚಿಕ್ಕಾಸು ಚಿಕ್ಕ ಕಾಸು ಕೆಂದಾಳಿ ಕೆಂಪು ತಾಳಿ (ತೆಂಗು) ಕರಿತುಳಸಿ ಕರಿ (ಕಪ್ಪು) ತುಳಸಿ
(೪ಖ) ಮುಂಗಡ (ಕೆಲಸಕ್ಕೆ) ಮುಂದಾಗಿ ಕೊಡುವ ಕಡ (ಸಾಲಿ) ಅಡ್ಡದಾರಿ ಅಡ್ಡಲಾಗಿ (ಅಡ್ಡಕ್ಕೆ) ಹೋಗುವ ದಾರಿ ಬಳಕೋಣೆ (ಮನೆಯ) ಒಳಗಿರುವ ಕೋಣೆ ಹೊರಬಾಗಿಲು (ಮನೆಯ) ಹೊರಗಿರುವ ಬಾಗಿಲು
ಮೇಲೆ (೪ಕ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಹಿರಿ, ಚಿಕ್ಕ, ಕೆಂ(ಪು) ಮತ್ತು ಕರಿ ಎಂಬ ಗುಣಪದಗಳು ನೇರವಾಗಿ ಆ ಜೋಡುಪದಗಳಲ್ಲಿ ಬಂದಿರುವ ಬೆರಳು, ಕಾಸು, ತಾಳಿ ಮತ್ತು ತುಳಸಿ ಎಂಬ ನಾಮಪದ ಗಳೊಂದಿಗೆ ಸಂಬಂಧಿಸಿವೆ. ಆದರೆ (೪ಖ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಮುಂದೆ, ಅಡ್ಡಲಾಗಿ, ಒಳಗೆ ಮತ್ತು ಹೊರಗೆ ಎಂಬ ಗುಣಪದಗಳು ಅವುಗಳಲ್ಲಿರುವ ನಾಮಪದಗಳೊಂದಿಗೆ ಈ ರೀತಿ ನೇರವಾಗಿ ಸಂಬಂಧಿಸುವ ಬದಲು ಅವುಗಳ ಒಳರಚನೆಯಲ್ಲಿ ಮಾತ್ರವೇ ಕಾಣಿಸುವ ಕೊಡು, ಹೋಗು ಮತ್ತು ಇರು ಎಂಬ ಕ್ರಿಯಾಪದಗಳ ಮೂಲಕ ಸಂಬಂಧಿಸಿವೆ ಎಂಬುದನ್ನು ಅವುಗಳ ಎದುರು ಕೊಟ್ಟಿರುವ ಒಳನುಡಿಗಳಿಂದ ತಿಳಿಯಬಹುದು.
ಮೇಲೆ (೪ಕ)ದಲ್ಲಿ ಕೊಟ್ಟಿರುವಂತಹ ಜೋಡುಪದಗಳಿಗೆ ಒಳನುಡಿಗಳನ್ನು ಸೂಚಿಸುವಾಗ ಗುಣಪದಗಳನ್ನು ಬಳಸುವ ಬದಲು ಅದೇ ರೂಪದ ನಾಮ ಪದಗಳ ಸಂಬಂಧಕ ರೂಪವನ್ನು (ಇಲ್ಲವೇ ಕ್ರಿಯಾಪದದೊಂದಿಗೆ ಬರುವ ಗುಣಪದರೂಪವನ್ನು) ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕರಿತುಳಸಿ ಎಂಬ ಜೋಡುಪದಕ್ಕೆ ಒಳನುಡಿಯನ್ನು ಕರಿ (ಕಪ್ಪು) ತುಳಸಿ ಎಂದಷ್ಟೇ ಕೊಡುವ ಬದಲು ಕರಿಯ ತುಳಸಿ (ಇಲ್ಲವೇ ಕಪ್ಪಾದ ತುಳಸಿ) ಎಂದಾಗಲಿ, ಮತ್ತು ಹೆಬ್ಬೆರಳು ಎಂಬ ಜೋಡುಪದಕ್ಕೆ ಹಿರಿ (ದೊಡ್ಡ) ಬೆರಳು ಎಂದಷ್ಟೇ ಕೊಡುವ ಬದಲು ಹಿರಿದಾದ ಬೆರಳು ಎಂದಾಗಲಿ ಕೊಡಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಗುಣಪದಗಳು ಪದಗುಚ್ಛಗಳಲ್ಲಿ ನೇರವಾಗಿ ನಾಮಪದಗಳೊಂದಿಗೆ
140
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಬರಬಲ್ಲುವಾದ ಕಾರಣ, ಒಳನುಡಿಗಳಲ್ಲೂ ಅಂತಹ ನೇರವಾದ ಸಂಬಂಧವನ್ನು ಸೂಚಿಸಲು ಸಾಧ್ಯವಿರುವಲ್ಲೆಲ್ಲ ಅದನ್ನೇ ಸೂಚಿಸುವುದು ಒಳ್ಳೆಯದು.
- (೨) ಜೋಡುಪದದ ಒಳಗಿನ ಇಲ್ಲವೇ ಹೊರಗಿನ ಪದದ ವಿಶೇಷಣ
- ಗುಣಪದಗಳ ಬಳಕೆಯಲ್ಲಿ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ಅವು
- ಗಳಲ್ಲಿ ಕೆಲವು ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧರ್ಮ
- ವನ್ನು ಸೂಚಿಸುವುವಾದರೆ ಬೇರೆ ಕೆಲವು ಆ ವ್ಯಕ್ತಿ ಇಲ್ಲವೇ ವಸ್ತುವಿಗೂ ಮತ್ತು
- ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವೆ ಅಂತಹ ಗುಣಧರ್ಮದ ಮಟ್ಟಿಗೆ
- ಎಂತಹ ವ್ಯತ್ಯಾಸವಿದೆಯೆಂಬುದನ್ನು ತಿಳಿಸುತ್ತವೆ.
- ಉದಾಹರಣೆಗಾಗಿ, ಕರಿತುಳಸಿ ಎಂಬುದರಲ್ಲಿ ಬಂದಿರುವ ಕರಿ ಎಂಬ ಗುಣ
- ಪದ ನೇರವಾಗಿ ತುಳಸಿ ಎಂಬ ನಾಮಪದವು ಗುರುತಿಸುವ ಗಿಡದ ಗುಣಧರ್ಮ
- ವನ್ನು ಸೂಚಿಸುತ್ತದೆ, ಆದರೆ ದೊಡ್ಡಚೆಂಡು ಎಂಬುದರಲ್ಲಿ ಬಂದಿರುವ
- ದೊಡ್ಡ ಎಂಬ ಗುಣಪದ ಈ ರೀತಿ ನೇರವಾಗಿ ಚೆಂಡು ಎಂಬ ವಸ್ತುವಿನ
- ಗುಣಧರ್ಮ ವನ್ನು ಸೂಚಿಸುವ ಬದಲು ಬೇರೆ ಚೆಂಡುಗಳಿಗೂ ಅದಕ್ಕೂ ನಡುವೆ
- ಗಾತ್ರದಲ್ಲಿ ರುವ ವ್ಯತ್ಯಾಸವನ್ನು ಸೂಚಿಸುತ್ತದೆ.
- ನಾಮವಿಶೇಷಣಗಳ ಹಾಗೆ ಕ್ರಿಯಾವಿಶೇಷಣಗಳ ಬಳಕೆಯಲ್ಲಿಯೂ ಇಂತಹ
- ವ್ಯತ್ಯಾಸವನ್ನು ಕಾಣಬಹುದು. ಉದಾಹರಣೆಗಾಗಿ ಸ್ಥಾನಸೂಚಕಗಳಾದ ಮೇಲೆ,
- ಕೆಳಗೆ, ನಡುವೆ, ಒಳಗೆ ಮೊದಲಾದವುಗಳು ನೇರವಾಗಿ ಘಟನೆಯೊಂದರ
- ಗುಣ ಧರ್ಮವನ್ನು ಸೂಚಿಸುವ ಬದಲು ಯಾವುದಾದರೊಂದು ಸ್ಥಾನಕ್ಕೆ
- ಸಂಬಂಧಿಸಿ ದಂತೆ ಘಟನೆಯ ಸ್ಥಾನವನ್ನು ಸೂಚಿಸುತ್ತವೆ.
- ಈ ರೀತಿ ಎರಡು ಬೇರೆ ಬೇರೆ ಪದಗಳಿಗೆ ಸಂಬಂಧಿಸಿರುವಂತಹ ಗುಣ
- ಪದಗಳನ್ನು ಜೋಡುಪದಗಳಲ್ಲಿ ಬಳಸುವಾಗ ಅವು ಅಂತಹ ಜೋಡುಪದ
- ದಲ್ಲೇನೇ ಬಂದಿರುವ ಪದದ ಗುಣಧರ್ಮವನ್ನು ಬೇರೆ ಪದದ ಗುಣಧರ್ಮಕ್ಕೆ
- ಸಂಬಂಧಿಸಿದಂತೆ ಸೂಚಿಸುವುದೇ ಅಥವಾ ಆ ಪದಕ್ಕೆ ಸಂಬಂಧಿಸಿದಂತೆ ಬೇರೆ
- ಪದದ ಗುಣಧರ್ಮವನ್ನು ಸೂಚಿಸುವುದೇ ಎಂಬ ವಿಷಯದ ಆಧಾರದ ಮೇಲೆ
- ಜೋಡುಪದಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲು ಸಾಧ್ಯವಿದೆ.
- ಉದಾಹರಣೆಗಾಗಿ ಚಿಕ್ಕಾಸು ಎಂಬ ಜೋಡುಪದವನ್ನು ಚಿಕ್ಕಮ್ಮ ಎಂಬ
- ಜೋಡುಪದದೊಂದಿಗೆ ಹೋಲಿಸಿ ನೋಡಬಹುದು. ಚಿಕ್ಕಾಸು ಎಂಬುದಕ್ಕೆ ಚಿಕ್ಕ
- ಕಾಸು ಎಂದರೆ ‘ಬೇರೆ ಕಾಸುಗಳಿಂದ ಚಿಕ್ಕದಾಗಿರುವ ಕಾಸು’ ಎಂಬ ಅರ್ಥವಿದೆ.
- ಆದರೆ, ಚಿಕ್ಕಮ್ಮ ಎಂಬುದಕ್ಕೆ ಈ ರೀತಿ ಚಿಕ್ಕ ಅಮ್ಮ ಇಲ್ಲವೇ ‘ಇತರ
- ಅಮ್ಮಂದಿರಿಗಿಂತ ಚಿಕ್ಕ ಅಮ್ಮ’ ಎಂಬ ಅರ್ಥವಿಲ್ಲ. ಇದಕ್ಕೆ ಬದಲು ಅದಕ್ಕೆ
- ಅಮ್ಮನಿಗಿಂತ ಚಿಕ್ಕ ಹೆಂಗಸು ಎಂದರೆ ‘ಅಮ್ಮನ ತಂಗಿ’ ಎಂಬ ಅರ್ಥವಿದೆ.
- ಚಿಕ್ಕಾಸು ಎಂಬುದರಲ್ಲಿ ಚಿಕ್ಕ ಎಂಬ ಗುಣಪದ ನೇರವಾಗಿ ಆ ಜೋಡುಪದದ
- ಅಂಗವಾಗಿ ಬಂದಿರುವ ಕಾಸು ಎಂಬುದರ ಗುಣಧರ್ಮವನ್ನು ಸೂಚಿಸುತ್ತದೆ,
141
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆದರೆ ಚಿಕ್ಕಮ್ಮ ಎಂಬುದರಲ್ಲಿ ಅದೇ ಗುಣಪದ ಜೋಡುಪದದ ಹೊರಗಿರುವ ಹೆಂಗಸು ಎಂಬ ಪದ ಸೂಚಿಸುವ ವ್ಯಕ್ತಿಯ ಗುಣಧರ್ಮವನ್ನು ಜೋಡುಪದ ದಲ್ಲಿ ಬಂದಿರುವ ಅಮ್ಮ ಎಂಬುದಕ್ಕೆ ಸಂಬಂಧಿಸಿರುವಂತೆ ಸೂಚಿಸುತ್ತದೆ.
ಈ ರೀತಿ ಸಂಬಂಧಿತವಾಗುವ ನಾಮಪದಗಳು ಒಳನುಡಿಯಲ್ಲಿ ಮೊದಲ ನೆಯವಾಗಿ ಬರುವುವಾದರೂ ಜೋಡುಪದದಲ್ಲಿ ಎರಡನೆಯವಾಗಿ ಬರುತ್ತವೆ. ಹಾಗಾಗಿ, ಇಂತಹ ಜೋಡುಪದಗಳಲ್ಲಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಸ್ಥಾನಗಳು ಅದಲು ಬದಲಾಗಿರುವ ಹಾಗೆ ತೋರುತ್ತದೆ. ಉದಾಹರಣೆ ಗಾಗಿ, ಅಮ್ಮನಿಗಿಂತ ಚಿಕ್ಕ ಹೆಂಗಸು ಎಂಬ ಒಳನುಡಿಯಲ್ಲಿ ಅಮ್ಮ ಎಂಬ ಪದ ಚಿಕ್ಕ ಎಂಬುದಕ್ಕಿಂತ ಮೊದಲು ಬಂದಿದೆ, ಆದರೆ ಅದರಿಂದ ತಯಾರಾದ ಚಿಕ್ಕಮ್ಮ ಎಂಬ ಜೋಡುಪದದಲ್ಲಿ ಚಿಕ್ಕ ಎಂಬುದು ಮೊದಲು ಬಂದಿದೆ. ಇದೇ ರೀತಿಯಲ್ಲಿ ದೊಡ್ಡಪ್ಪ ಎಂಬ ಜೋಡುಪದದಲ್ಲಿ ಅಪ್ಪನಿಗಿಂತ ದೊಡ್ಡ ಗಂಡುಸು ಎಂಬ ಒಳನುಡಿಯಲ್ಲಿ ಬಂದಿರುವ ಅಪ್ಪ ಮತ್ತು ದೊಡ್ಡ ಎಂಬ ಎರಡು ಪದಗಳ ಸ್ಥಾನಗಳು ಅದಲು ಬದಲಾಗಿವೆ. ಆದರೆ, ಗುಣಪದವನ್ನು ನೇರವಾಗಿ ಸಂಬಂಧಿಸಿರುವ ದೊಡ್ಡಮನೆ ಎಂಬ ಜೋಡುಪದದಲ್ಲಿ ಈ ರೀತಿ ಪದಗಳ ಸ್ಥಾನಗಳು ಅದಲು ಬದಲಾಗಿಲ್ಲ.
ಕ್ರಿಯಾವಿಶೇಷಣಗಳಾಗಿ ಬರುವ ಗುಣಪದಗಳನ್ನು ಬಳಸಿ ತಯಾರಿಸಿದ ಜೋಡುಪದಗಳನ್ನೂ ಇದೇ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ನಡುಬೆರಳು ಎಂಬ ಜೋಡುಪದವನ್ನು ನಡುಹಗಲು ಎಂಬ ಜೋಡುಪದದೊಂದಿಗೆ ಹೋಲಿಸಿ ನೋಡಬಹುದು. ನಡುಬೆರಳು ಎಂಬುದು ಕೈಯಲ್ಲಿರುವ ಇತರ ಬೆರಳುಗಳ ನಡುವೆ ಇರುವ ಬೆರಳನ್ನು ಗುರುತಿಸುತ್ತದೆ. ಹಾಗಾಗಿ ಆ ಜೋಡುಪದದಲ್ಲಿ ನಡು ಎಂಬ ಗುಣಪದ (ಇರು ಎಂಬ ಕ್ರಿಯಾಪದದ ಮೂಲಕ) ಆ ಪದದ ಎರಡನೆಯ ಪದವಾದ ಬೆರಳು ಎಂಬುದರ ಗುಣಧರ್ಮವನ್ನು ಸೂಚಿಸುತ್ತದೆ.
ಆದರೆ ನಡುಹಗಲು ಎಂಬುದು ಈ ರೀತಿ ಇತರ ಹಗಲುಗಳ ನಡುವಿರುವ ಹಗಲನ್ನು ಸೂಚಿಸುವುದಿಲ್ಲ. ಇದಕ್ಕೆ ಬದಲು ಅದು ಹಗಲಿನ ನಡುವಿನಲ್ಲಿರುವ ಒಂದು ಭಾಗವನ್ನು ಸೂಚಿಸುತ್ತದೆ. ಎಂದರೆ, ಇರು ಎಂಬ ಕ್ರಿಯಾಪದದ ಮೂಲಕ ಅದು ಆ ಜೋಡುಪದದಲ್ಲಿಲ್ಲದಿರುವ ಭಾಗ ಎಂಬುದರ ಗುಣಧರ್ಮ ವನ್ನು ಸೂಚಿಸುತ್ತದಲ್ಲದೆ ಹಗಲು ಎಂಬುದರ ಗುಣಧರ್ಮವನ್ನು ಸೂಚಿಸುವು ದಿಲ್ಲ. ಹಗಲಿನ ನಡುವಿನಲ್ಲಿರುವ ಭಾಗ ಎಂಬ ಒಳನುಡಿಯಲ್ಲಿ ಹಗಲು ಎಂಬುದು ನಡು ಎಂಬುದಕ್ಕಿಂತ ಮೊದಲು ಬಂದಿದೆ ಮತ್ತು ನಡು ಹಗಲು ಎಂಬುದರಲ್ಲಿ ಇವೆರಡರ ಸ್ಥಾನಗಳು ಅದಲು ಬದಲಾಗಿವೆ, ಆದರೆ ನಡುಬೆರಳು ಎಂಬುದರಲ್ಲಿ ಈ ರೀತಿ ಪದಗಳ ಸ್ಥಾನ ಅದಲು ಬದಲಾಗಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.
142
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಇಂತಹದೇ ವ್ಯತ್ಯಾಸವನ್ನು ತೋರಿಸುವ ಬೇರೆ ಕೆಲವು ಜೋಡುಪದಗಳನ್ನು ಈ ಕೆಳಗೆ ಕೊಡಲಾಗಿದೆ.
- (೫ಕ) ಕಡೆಹಲ್ಲು (ಬಾಯಿಯ) ಕಡೆಯಲ್ಲಿರುವ ಹಲ್ಲು
- (೫ಖ) ಕಡೆಗಣ್ಣು ಕಣ್ಣಿನ ಕಡೆಯಲ್ಲಿರುವ (ಭಾಗ)
- (೬ಕ) ಮುಂಬಾಗಿಲು (ಮನೆಯ) ಮುಂದಿರುವ ಬಾಗಿಲು
- (೬ಖ) ಮುಂಗೈ ಕೈಯಲ್ಲಿ ಮುಂದಿರುವ (ಭಾಗ)
- (೭ಕ) ಹಿಮ್ಮೇಳ (ನರ್ತಕರ) ಹಿಂಬದಿಯಲ್ಲಿರುವ ಮೇಳ
- (೭ಖ) ಹಿಂಗಾಲು ಕಾಲಿನ ಹಿಂಬದಿಯಲ್ಲಿರುವ (ಭಾಗ)
- (೮ಕ) ಒಳಕೋಣೆ (ಮನೆಯ) ಒಳಭಾಗದಲ್ಲಿರುವ ಕೋಣೆ
- (೮ಖ) ಒಳದವಡೆ ದವಡೆಯ ಒಳಗಿರುವ (ಭಾಗ)
ಮೇಲೆ (ಕ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಬಂದಿರುವ ಗುಣಪದಗಳು ನೇರವಾಗಿ ಅವುಗಳಲ್ಲೇನೇ ಬಂದಿರುವ ನಾಮಪದದ ಗುಣಧರ್ಮವನ್ನು ಸೂಚಿಸುತ್ತವೆ, ಆದರೆ (ಖ)ದಲ್ಲಿ ಕೊಟ್ಟಿರುವ ಗುಣಪದಗಳು ಜೋಡುಪದಗಳ ಲ್ಲಿಲ್ಲದಿರುವ ಮತ್ತು ಒಳನುಡಿಗಳಲ್ಲಿ ಕಂಸದೊಳಗೆ ಕೊಟ್ಟಿರುವ ಭಾಗ ಎಂಬುದರ ಗುಣಧರ್ಮವನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು.
ನಾಲ್ಕು ಕಾಲಿರುವ ದನ, ನಾಯಿ ಮೊದಲಾದವುಗಳ ಬಗ್ಗೆ ಹೇಳುವಾಗ ಹಿಂಗಾಲು ಎಂಬುದು ‘ಹಿಂದಿರುವ ಕಾಲ’ನ್ನು ಗುರುತಿಸುವುದಾದ ಕಾರಣ, ಅಂತಹ ಸಂದರ್ಭಗಳಲ್ಲಿ ಅದು (ಖ) ವಿಭಾಗದ ಬದಲು (ಕ) ವಿಭಾಗಕ್ಕೆ ಸೇರುತ್ತದೆ. ಆದರೆ, ಮನುಷ್ಯರ ಕಾಲಿಗೆ ಸಂಬಂಧಿಸಿದಂತೆ ಆ ಪದವನ್ನು ಬಳಸಿದಾಗ, ಅದು ಮೇಲೆ ಸೂಚಿಸಿದಂತೆ (ಖ) ವಿಭಾಗದಲ್ಲಿ ಬರುತ್ತದೆ. ಮುಂಗಾಲು ಎಂಬ ಜೋಡುಪದಕ್ಕೂ ಇದೇ ರೀತಿಯಲ್ಲಿ ಸಂದರ್ಭಕ್ಕನುಸಾರ ವಾಗಿ ಈ ಎರಡು ಬೇರೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯ ವಿದೆ.
೫.೬.೩ ಎರಡನೆಯ ಅಂಗದಲ್ಲಿ ವೈವಿಧ್ಯ
ಮೇಲೆ ವಿವರಿಸಿದ ಜೋಡುಪದಗಳಲ್ಲೆಲ್ಲ ಎರಡನೆಯ ಅಂಗವಾಗಿ ನಾಮಪದ ಮಾತ್ರವೇ ಬಳಕೆಯಾಗಿದ್ದು, ಮೊದಲನೆಯ ಅಂಗವಾಗಿ ಮಾತ್ರ ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದದ ಬಳಕೆಯಾಗಿದೆ. ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿಯೂ ನಾಮಪದ ಮಾತ್ರವಲ್ಲದೆ ಕ್ರಿಯಾಪದ ಮತ್ತು
143
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗುಣಪದಗಳು ಬರಬಲ್ಲವೇ ಎಂಬ ಪ್ರಶ್ನೆಯನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆ ಯಿದೆ.
ಗುಣಪದಗಳಿರುವ ಜೋಡುಪದಗಳಿಗೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯ ಎಂಬುದನ್ನು ನಾವು ಹಿಂದಿನ ವಿಭಾಗದಲ್ಲಿ ನೋಡಿರುವೆವು. ಈ ವ್ಯತ್ಯಾಸ ವನ್ನು ಅವುಗಳಿಗಿ ಕೊಡಬಹುದಾದ ಒಳನುಡಿಗಳಲ್ಲಿ ಕಾಣಬಹುದು. ಉದಾ ಹರಣೆಗಾಗಿ, ಮುಂಬಾಗಿಲು ಎಂಬ ಜೋಡುಪದಕ್ಕೆ (ಮನೆಯ) ಮುಂದಿರುವ ಬಾಗಿಲು ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರಲ್ಲಿ ಮುಂ(ದೆ) ಎಂಬ ಗುಣಪದ ಬಾಗಿಲು ಎಂಬ ನಾಮಪದದ ಎಡಕ್ಕೆ ಬಂದಿದೆ. ಆದರೆ ಮುಂಗೈ ಎಂಬ ಜೋಡುಪದಕ್ಕೆ ಕೈಯಲ್ಲಿ ಮುಂದಿರುವ (ಭಾಗ) ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರಲ್ಲಿ ಮುಂ(ದೆ) ಎಂಬ ಗುಣಪದ ಕೈ ಎಂಬ ನಾಮಪದದ ಬಲಕ್ಕೆ ಬಂದಿದೆ. ಈ ರೀತಿ ಒಳನುಡಿ ಯಲ್ಲಿ ಗುಣಪದ ನಾಮಪದದ ಮೊದಲು ಇಲ್ಲವೇ ಅನಂತರ ಬರಬಲ್ಲು ದಾದರೂ ಜೋಡುಪದದಲ್ಲಿ ಅದು ಸಾಮಾನ್ಯವಾಗಿ ನಾಮಪದದ ಮೊದಲಿ ಗೇನೇ (ಎಡಕ್ಕೆ) ಬರುತ್ತದೆ.
ಆದರೆ ಕ್ರಿಯಾಪದಗಳ ವಿಷಯ ಇದಕ್ಕಿಂತ ಸ್ವಲ್ಪ ಭಿನ್ನವಾದುದು. ಒಳನುಡಿ ಯಲ್ಲಿ ನಾಮಪದದ ಅನಂತರ (ಅದರ ಬಲಕ್ಕೆ) ಬಂದಿರುವ ಕ್ರಿಯಾಪದ ಗುಣ ಪದದ ಹಾಗೆ ನಾಮಪದದೊಂದಿಗೆ ತನ್ನ ಸ್ಥಾನವನ್ನು ಅದಲು ಬದಲು ಮಾಡಿ ಕೊಳ್ಳುವುದಿಲ್ಲ; ಇದಕ್ಕೆ ಬದಲು, ಹೆಚ್ಚಿನ ಸಂದರ್ಭಗಳಲ್ಲೂ ಆ ಕ್ರಿಯಾಪದವೇ ನಾಮಪದವಾಗಿ ಬದಲಾಗುತ್ತದೆ. ಉದಾಹರಣೆಗಾಗಿ, ಹಾವಾಡಿಗ ಎಂಬ ಜೋಡುಪದಕ್ಕೆ ಹಾವನ್ನು ಆಡಿಸುವ ಮನುಷ್ಯ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು ಇದರಲ್ಲಿ ಆಡು ಎಂಬ ಕ್ರಿಯಾಪದ ಹಾವು ಎಂಬ ನಾಮಪದದ ಅನಂತರ ಬರುತ್ತದೆ; ಆದರೆ ಜೋಡುಪದದಲ್ಲಿ ಈ ಕ್ರಿಯಾಪದದೊಂದಿಗೆ ಇಗ ಎಂಬ ಪ್ರತ್ಯಯ ಸೇರಿ ಅದು ನಾಮಪದವಾಗಿದೆ.
ಈ ರೀತಿ ಒಳನುಡಿಯಲ್ಲಿ ಎರಡನೆಯ ಪದವಾಗಿ ಬಂದ ಕ್ರಿಯಾಪದವು ಜೋಡುಪದದಲ್ಲಿ ನಾಮಪದವಾಗಿ ಬದಲಾಗಿರುವುದನ್ನು ಈ ಕೆಳಗಿನ ಉದಾ ಹರಣೆಗಳಲ್ಲೂ ಕಾಣಬಹುದು.
ತಲೆತಿರುಕ ತಲೆ ತಿರುಗಿದ ವ್ಯಕ್ತಿ ದಾರಿಹೋಕ ದಾರಿಯಲ್ಲಿ ಹೋಗುವ ವ್ಯಕ್ತಿ ಕಲ್ಲು ಕುಟಿಗ ಕಲ್ಲನ್ನು ಕುಟ್ಟುವ ವ್ಯಕ್ತಿ ನಾಡಾಡಿ ನಾಡಿನಲ್ಲಿ ಆಡುವ (ತಿರುಗಾಡುವ) ವ್ಯಕ್ತಿ ಕಸಬರಿಕೆ ಕಸವನ್ನು ಬರಿದು ಮಾಡುವ ಸಾಧನ ಬಯಲಾಟ ಬಯಲಿನಲ್ಲಿ ಆಡುವ ನೃತ್ಯನಾಟಕ ತಲೆಹೊರೆ ತಲೆಯಲ್ಲಿ ಹೊರಬಹುದಾದ ಮೂಟೆ
144
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಇಂತಹ ಜೋಡುಪದಗಳ ಒಳರಚನೆಯಲ್ಲಿ ಎರಡನೆಯ ಪದವಾಗಿ ಕ್ರಿಯಾ ಪದವೊಂದು ಬಂದಿದೆಯೆಂದು ಹೇಳುವ ಬದಲು, ನಾಮಪದವೇ ಬಂದಿದೆ ಯೆಂದೂ ಹೇಳಲು ಸಾಧ್ಯವಿದೆ. ಹಾಗಿದ್ದಲ್ಲಿ ಅದು ನಾಮಪದಗಳೆರಡನ್ನು ಸೇರಿಸಿ ತಯಾರಿಸಿದ ಜೋಡುಪದವಾದೀತು. ಉದಾಹರಣೆಗಾಗಿ, ತಲೆಹೊರೆ ಎಂಬುದಕ್ಕೆ ತಲೆಯಲ್ಲಿ ಹೊರಬಹುದಾದ ಮೂಟೆ ಎಂಬ ಒಳನುಡಿಯನ್ನು ಕೊಡುವ ಬದಲು ತಲೆಯ ಹೊರೆ ಇಲ್ಲವೇ ತಲೆಯಲ್ಲಿ ಹೊರಬಹುದಾದ ಹೊರೆ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದೆ. ಇದೇ ರೀತಿಯಲ್ಲಿ ಹಣೆ ಬರಹ ಎಂಬುದಕ್ಕೆ ಹಣೆಯ ಬರಹ ಎಂದಾಗಲೀ ಇಲ್ಲವೇ ಹಣೆಯಲ್ಲಿ ಬರೆದಿರುವ ಬರಹ ಎಂದಾಗಲಿ ಒಳನುಡಿಯನ್ನು ಕೊಡಲು ಸಾಧ್ಯವಿದೆ. ತಲೆ ನೋವು, ಹುಲ್ಲುಗಾವಲು, ಹೊಟ್ಟೆನೋವು ಮೊದಲಾದುವಕ್ಕೂ ಇದೇ ರೀತಿಯಲ್ಲಿ ಎರಡನೆಯ ಅಂಗ ಕ್ರಿಯಾಪದದಿಂದ ಇಲ್ಲವೇ ನಾಮಪದದಿಂದ ಸಿದ್ಧವಾಗಿರುವಂತೆ ಒಳನುಡಿಗಳನ್ನು ಕೊಡಲು ಸಾಧ್ಯವಿದೆ.
ಆದರೆ ಎಲ್ಲಾ ಸಂದರ್ಭಗಳಲ್ಲೂ ಈ ರೀತಿ ಕ್ರಿಯಾಪದದ ಬದಲು ನಾಮ ಪದವನ್ನು ಬಳಸಿ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಇದಕ್ಕೆ ಕಾರಣ ವೇನೆಂದರೆ, ಹೊಸಗನ್ನಡದಲ್ಲಿ -ಹೋಕ, -ಅಡಿಗ, -ಆಡಿ ಮೊದಲಾದವುಗಳು ಸ್ವತಂತ್ರ ನಾಮಪದಗಳಾಗಿ ಬಳಕೆಯಲ್ಲಿಲ್ಲ. ಇದಲ್ಲದೆ ಬೇರೆ ಕೆಲವು ಜೋಡು ಪದಗಳಲ್ಲಿ ಬರುವ ನಾಮಪದಗಳಿಗೆ (ಉದಾ: ತಲೆತಿರುಕ ಎಂಬುದರಲ್ಲಿ ಬರುವ ತಿರುಕ ಎಂಬ ಪದಕ್ಕೆ ಇಲ್ಲವೇ ಬಯಲಾಟ ಎಂಬುದರಲ್ಲಿ ಬರುವ ಆಟ ಎಂಬ ಪದಕ್ಕೆ) ಜೋಡುಪದಗಳಲ್ಲಿ ಕೊಡಬೇಕಾಗಿರುವ ಅರ್ಥದಲ್ಲಿ ಸ್ವತಂತ್ರವಾದ ಬಳಕೆಯಿಲ್ಲ.
ಒಳನುಡಿಯಲ್ಲಿ ಬರುವ ಕ್ರಿಯಾಪದವು ಹಾಗೆಯೇ ಉಳಿದಿರುವಂತಹ ಜೋಡುಪದಗಳೂ ಕನ್ನಡದಲ್ಲಿ ಕೆಲವಿವೆ. ಉದಾಹರಣೆಗಾಗಿ ಕೈಪಿಡಿ ಎಂಬ ಪದಕ್ಕೆ ಕೈಯಲ್ಲಿ ಪಿಡಿ(ಹಿಡಿ)ಯುವಷ್ಟು ಚಿಕ್ಕ ಪುಸ್ತಕ ಎಂಬುದಾಗಿ ಒಳನುಡಿ ಯನ್ನು ಕೊಡಲು ಸಾಧ್ಯವಿದ್ದು, ಪಿಡಿ ಎಂಬ ಹಳೆಯ ಕ್ರಿಯಾಪದ ಆ ಜೋಡು ಪದದಲ್ಲಿ ಹಾಗೆಯೇ ಉಳಿದಿದೆ. ಬಾನುಲಿ ಎಂಬ ಪದಕ್ಕೆ ಬಾನಿನಿಂದ ಉಲಿಯುವ ಸಂಸ್ಥೆ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಇಲ್ಲೂ ಉಲಿ ಎಂಬ ಕ್ರಿಯಾಪದ ಜೋಡುಪದದಲ್ಲಿ ಹಾಗೆಯೇ ಉಳಿದಿದೆ. ಆದರೆ ಇಂತಹ ಜೋಡುಪದಗಳು ಕನ್ನಡದಲ್ಲಿ ಬಹಳ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ.
ಇನ್ನು ಕೆಲವು ಜೋಡುಪದಗಳಲ್ಲಿ ಎರಡನೆಯದಾಗಿ ಬರುವ ಅಂಗ ಕ್ರಿಯಾ ಪದದಂತಿದ್ದರೂ ಅದನ್ನು ಅದೇ ರೂಪದಲ್ಲಿರುವ ನಾಮಪದವೆಂದು ಪರಿಗಣಿ ಸಲು ಸಾಧ್ಯವಿದೆ. ಉದಾಹರಣೆಗಾಗಿ ಎದೆಗುದಿ ಎಂಬ ಜೋಡುಪದಕ್ಕೆ ಎದೆ ಯಲ್ಲಿ ಆಗುವ ಕುದಿ ಎಂಬುದಾಗಿ ಒಳನುಡಿಯನ್ನು ಕೊಟ್ಟು ಅದರಲ್ಲಿ ಬರುವ
145
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎರಡನೆಯ ಪದ ಒಂದು ನಾಮಪದವೆಂದು ಹೇಳಲು ಸಾಧ್ಯವಿದೆ. ಇದೇ ರೀತಿಯಲ್ಲಿ ಕಣ್ಣುರಿ (ಕಣ್ಣಿನಲ್ಲಿ ಆಗುವ ಉರಿ), ಕಂಬನಿ (ಕಣ್ಣಿನಲ್ಲಿ ಬರುವ ಹನಿ), ನಾಣ್ಣುಡಿ (ನಾಡಿನಲ್ಲಿ ರೂಢಿಯಾಗಿರುವ ನುಡಿ) ಮೊದಲಾದವುಗ ಳಲ್ಲೂ ಎರಡನೆಯ ಅಂಗವನ್ನು ಕ್ರಿಯಾಪದವೆಂದು ಹೇಳುವ ಬದಲು ನಾಮ ಪದವೆಂದು ವಾದಿಸಲು ಸಾಧ್ಯವಿದೆ.
ಮೊದಲನೆಯ ಅಂಗ ಕ್ರಿಯಾಪದ ಇಲ್ಲವೇ ಗುಣಪದವಾಗಿದ್ದು, ಎರಡನೆಯ ಅಂಗ ಕ್ರಿಯಾಪದವಾಗಿರುವ ಜೋಡುಪದಗಳು ಕನ್ನಡದಲ್ಲಿ ಬಹಳ ಅಪರೂಪ. ಇಳಿಜಾರು ಎಂಬುದರಲ್ಲಿ ಇಳಿ ಮತ್ತು ಜಾರು ಎಂಬ ಎರಡು ಕ್ರಿಯಾಪದಗಳು ಅಂಗಗಳಾಗಿ ಬಂದಿವೆಯೆಂದು ಹೇಳಲು ಸಾಧ್ಯವಿದೆಯಾದರೂ, ಜಾರು ಎಂಬ ಪದಕ್ಕೆ ‘ಜಾರುವ ಸ್ಥಳ’ ಎಂಬ ಅರ್ಥದಲ್ಲಿ ನಾಮಪದವಾಗಿ ಬಳಕೆಯಿದೆ. ಇದೇ ರೀತಿಯಲ್ಲಿ ಒಡಹುಟ್ಟು ಎಂಬುದರಲ್ಲಿ ಒಡ(ನೆ) ಎಂಬ ಗುಣಪದದೊಂದಿಗೆ ಹುಟ್ಟು ಎಂಬ ಕ್ರಿಯಾಪದ ಬಂದಿರುವಂತೆ ಕಾಣಿಸುವುದಾದರೂ ಹುಟ್ಟು ಎಂಬುದಕ್ಕೆ ‘ಹುಟ್ಟಿರುವಿಕೆ’ ಎಂಬ ಅರ್ಥದಲ್ಲಿ ನಾಮಪದವಾಗಿ ಬಳಕೆಯಿದೆ. ಹಾಗಾಗಿ, ಇಂತಹ ಜೋಡುಪದಗಳಲ್ಲೂ ಎರಡನೆಯ ಅಂಗವಾಗಿ ನಾಮಪದವೇ ಬಂದಿದೆಯೆಂದು ವಾದಿಸಲು ಸಾಧ್ಯವಿದೆ.
೫.೬.೪ ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ
ಜೋಡುಪದಗಳು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತವೆ ಎಂಬು ದರ ಆಧಾರದ ಮೇಲೆ ಅವುಗಳಿಗೊಂದು ಕೇಂದ್ರ ಬಿಂದುವನ್ನು ಕಲ್ಪಿಸಿಕೊಳ್ಳಲು ಬರುತ್ತದೆ. ಈ ಕೇಂದ್ರ ಬಿಂದು ಜೋಡುಪದದ ಒಳಗೇನೇ ಇರಬಹುದು ಇಲ್ಲವೇ ಅದರೆ ಹೊರಗಿರಬಹುದು. ಜೋಡುಪದದ ಒಳಗೇನೇ ಇದೆಯಾದರೆ, ಅದರ ಮೊದಲನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು ಇಲ್ಲವೇ ಎರಡನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು. ಈ ಬೇರೆ ಬೇರೆ ಸಾಧ್ಯತೆಗಳ ಆಧಾರದ ಮೇಲೆ ಜೋಡುಪದಗಳನ್ನು ಬೇರೆ ಬೇರೆ ವರ್ಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ.
ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದಕ್ಕೆ ಕೆಳಗಿರುವ ತುಟಿ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದು ಎರಡು ರೀತಿಯ ತುಟಿ ಗಳಲ್ಲಿ (ಮೇಲ್ದುಟಿ ಮತ್ತು ಕೆಳದುಟಿ ಎಂಬವುಗಳಲ್ಲಿ) ಒಂದನ್ನು ಗುರುತಿಸು ತ್ತದೆ. ಈ ರೀತಿ ಅದು ಹೆಸರಿಸುವುದು ಒಂದು ತುಟಿಯನ್ನಾದ ಕಾರಣ, ಅದರ ಕೇಂದ್ರ ಬಿಂದು ತುಟಿ ಎಂಬ ಅದರ ಎರಡನೆಯ ಅಂಗದ ಮೇಲಿದೆಯೆಂದು ಹೇಳಬಹುದು. ಇದಕ್ಕೆ ವ್ಯತಿರಿಕ್ತವಾಗಿ ಆನೆಕಾಲು ಎಂಬ ಜೋಡುಪದಕ್ಕೆ ಆನೆಯ ಕಾಲಿನಂತಿರುವ ಕಾಲನ್ನು ಹೊಂದುವ ರೋಗ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದು ಒಂದು ರೀತಿಯ ರೋಗವನ್ನು ಹೆಸರಿಸುವುದಾದ ಕಾರಣ (ಮತ್ತು ಒಂದು ರೀತಿಯ ಆನೆಯನ್ನಾಗಲೀ ಇಲ್ಲವೇ
146
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಕಾಲನ್ನಾಗಲೀ ಹೆಸರಿಸುವುದಿಲ್ಲವಾದ ಕಾರಣ) ಅದರ ಕೇಂದ್ರ ಬಿಂದು ಜೋಡು ಪದದ ಹೊರಗಿರುವ ರೋಗ ಎಂಬ ಪದದ ಮೇಲಿದೆಯೆಂದು ಹೇಳಬೇಕಾಗು ತ್ತದೆ.
ಕನ್ನಡದಲ್ಲಿ ಬರುವ ಹೆಚ್ಚಿನ ಜೋಡುಪದಗಳಿಗೂ ಅವುಗಳ ಕೇಂದ್ರ ಬಿಂದು ಜೋಡುಪದದಲ್ಲೇ ಇದ್ದು, ಅದು ಅವುಗಳ ಎರಡನೆಯ ಅಂಗವಾದ ನಾಮ ಪದದ ಮೇಲೆ ಬಿದ್ದಿರುತ್ತದೆ. ನಾವು ಮೇಲೆ (೫.೬.೨ರಲ್ಲಿ) ನೋಡಿರುವಂತೆ, ಕನ್ನಡದ ಜೋಡುಪದಗಳ ಮೊದಲನೆಯ ಅಂಗವಾಗಿ ನಾಮಪದ, ಕ್ರಿಯಾಪದ ಇಲ್ಲವೇ ಗುಣಪದ ಬರಬಲ್ಲುದು, ಆದರೆ ಎರಡನೆಯ ಅಂಗವಾಗಿ ಹೆಚ್ಚಿನೆಡೆ ಗಳಲ್ಲೂ ನಾಮಪದ ಮಾತ್ರವೇ ಬರಬಲ್ಲುದು. ಮೊದಲನೆಯ ಅಂಗ ಕ್ರಿಯಾಪದ ಇಲ್ಲವೇ ಗುಣಪದವಾಗಿರುವಂತಹ ಜೋಡುಪದಗಳಲ್ಲಿ ಆ ಕ್ರಿಯಾಪದ ಇಲ್ಲವೇ ಗುಣಪದ ಎರಡನೆಯ ಅಂಗವಾಗಿರುವ ನಾಮಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುವಾದ ಕಾರಣ, ಅಂತಹ ಜೋಡುಪದಗಳ ಕೇಂದ್ರ ಬಿಂದು ಎರಡನೆಯ ಅಂಗವಾಗಿರುವ ನಾಮಪದದ ಮೇಲೆ ಬೀಳುವುದು ಸ್ವಾಭಾವಿಕ.
ಉದಾಹರಣೆಗಾಗಿ, ಚುಚ್ಚುಮದ್ದು ಎಂಬ ಜೋಡುಪದದಲ್ಲಿ ಬರುವ ಚುಚ್ಚು ಎಂಬ ಕ್ರಿಯಾಪದವು ಆ ಜೋಡುಪದವು ಗುರುತಿಸುವ ಮದ್ದಿನ ಗುಣ ಧರ್ಮವೊಂದನ್ನು (ಚುಚ್ಚಿ ಕೊಡುವ ಮದ್ದು ಎಂಬುದಾಗಿ) ಸೂಚಿಸುತ್ತಿದೆ. ಚುಚ್ಚುಮದ್ದು ಎಂಬುದು ಒಂದು ರೀತಿಯ ಮದ್ದನ್ನು (ಎಂದರೆ ಔಷಧವನ್ನು) ಹೆಸರಿಸುತ್ತಿದೆಯಲ್ಲದೆ ಒಂದು ರೀತಿಯ ಚುಚ್ಚುವಿಕೆಯನ್ನಲ್ಲ. ಹಾಗಾಗಿ, ಇದರ ಕೇಂದ್ರ ಬಿಂದು ಮದ್ದು ಎಂಬುದರ ಮೇಲಿದೆಯೆಂದು ಹೇಳಬೇಕಾಗುತ್ತದೆ.
ಇದೇ ರೀತಿಯಲ್ಲಿ ಅಡ್ಡಹೆಸರು ಎಂಬ ಜೋಡುಪದದಲ್ಲಿ ಬರುವ ಅಡ್ಡ ಎಂಬ ಗುಣಪದವು ಹೆಸರಿನ ಗುಣಧರ್ಮವೊಂದನ್ನು ಸೂಚಿಸುತ್ತಿದೆ; ಅಡ್ಡಹೆಸರು ಎಂಬುದು ವಿಶಿಷ್ಟವಾದೊಂದು ರೀತಿಯ ಹೆಸರನ್ನು ಗುರುತಿಸು ತ್ತದೆ. ಹಾಗಾಗಿ, ಇಲ್ಲೂ ಕೂಡ ಜೋಡುಪದದ ಕೇಂದ್ರ ಬಿಂದು ಅದರ ಎರಡನೆಯ ಅಂಗವಾದ ಹೆಸರು ಎಂಬ ಪದದ ಮೇಲೆ ಬೀಳುತ್ತದೆಯೆಂದು ಹೇಳಬೇಕಾಗುತ್ತದೆ.
ಆದರೆ ಈ ನಿಯಮಕ್ಕೆ ಅಪವಾದವಾಗಬಲ್ಲ ಗುಣಪದಗಳಿರುವ ಜೋಡು ಪದಗಳು ಕೆಲವು ಕನ್ನಡದಲ್ಲಿ ಬಳಕೆಯಲ್ಲಿವೆ. ಉದಾಹರಣೆಗಾಗಿ, ನಾವು ಮೇಲೆ (೫.೬.೨(೩)ರಲ್ಲಿ) ನೋಡಿರುವಂತೆ, ಚಿಕ್ಕಮ್ಮ, ದೊಡ್ಡಪ್ಪ, ಮುಂಗಾಲು, ಹಿಂಗಾಲು ಮೊದಲಾದ ಕೆಲವು ಗುಣಪದಗಳಿರುವ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಅಮ್ಮ, ಅಪ್ಪ, ಕಾಲು ಮೊದಲಾದ ನಾಮ ಪದಗಳು ಒಳನುಡಿಯಲ್ಲಿ ಮೊದಲನೆಯ ಪದವಾಗಿ ಬರುತ್ತವೆ. ಇಂತಹ ಜೋಡುಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತು ಈ ನಾಮಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗಿಂತ ಭಿನ್ನವಾಗಿರುವುದಾದ ಕಾರಣ, ಈ
147
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಜೋಡುಪದಗಳ ಕೇಂದ್ರ ಬಿಂದುವನ್ನು ಅವುಗಳ ಒಳಗೇನೇ ಕಾಣಲು ಸಾಧ್ಯ ವಾಗದು.
ಉದಾಹರಣೆಗಾಗಿ, ಚಿಕ್ಕಮ್ಮ ಎಂಬ ಜೋಡುಪದ ಅಮ್ಮನಿಗಿಂತ ಚಿಕ್ಕವ ಳಾಗಿರುವ ಹೆಂಗಸನ್ನು ಎಂದರೆ ಅಮ್ಮನ ತಂಗಿಯನ್ನು ಗುರುತಿಸುವುದಾದ ಕಾರಣ, ಅದರ ಕೇಂದ್ರ ಬಿಂದು ಆ ಜೋಡುಪದದ ಹೊರಗಿರುವ ಹೆಂಗಸು (ಇಲ್ಲವೇ ತಂಗಿ) ಎಂಬ ಪದದ ಮೇಲೆ ಬೀಳುತ್ತದಲ್ಲದೆ ಅದರ ಒಳಗಿರುವ ಅಮ್ಮ (ಇಲ್ಲವೇ ಚಿಕ್ಕ) ಎಂಬ ಪದದ ಮೇಲೆ ಬೀಳುವುದಿಲ್ಲ.
ಇದೇ ರೀತಿಯಲ್ಲಿ ಹಿಂಗಾಲು ಎಂಬುದು ಕಾಲಿನ ಹಿಂದಿರುವ ಒಂದು ಭಾಗವನ್ನು ಗುರುತಿಸುವುದಾದ ಕಾರಣ, ಅದರ ಕೇಂದ್ರ ಬಿಂದು ಜೋಡುಪದದ ಹೊರಗಿರುವ ಭಾಗ ಎಂಬ ಒಂದು ಪದದ ಮೇಲೆ ಬೀಳುತ್ತದಲ್ಲದೆ, ಅದರ ಅಂಗಗಳಾಗಿರುವ ಹಿಂ(ದೆ) ಇಲ್ಲವೇ ಕಾಲು ಎಂಬ ಪದದ ಮೇಲೆ ಬೀಳುವು ದಿಲ್ಲ. ಅವಕ್ಕೂ ಮತ್ತು ಕೇಂದ್ರ ಬಿಂದು ಜೋಡುಪದದ ಒಳಗೇನೇ ಬರು ವಂತಹ ಕೆಳದುಟಿ, ಕಡೆಹಲ್ಲು, ಒಳಕೋಣೆ ಮೊದಲಾದುವಕ್ಕೂ ನಡುವಿರುವ ವ್ಯತ್ಯಾಸವೇನೆಂಬುದನ್ನು ನಾವು ಮೇಲೆಯೇ ವಿವರವಾಗಿ ಪರಿಶೀಲಿಸಿರುವೆವು.
ಎರಡು ಅಂಗಗಳೂ ನಾಮಪದಗಳಾಗಿರುವ ಜೋಡುಪದಗಳಲ್ಲಿ ಸಾಮಾನ್ಯ ವಾಗಿ ಕೇಂದ್ರಬಿಂದು ಎರಡನೆಯ ಪದದ ಮೇಲೇನೇ ಬೀಳುತ್ತದೆ. ಉದಾಹರಣೆ ಗಾಗಿ, ಕಣ್ಣೀರು ಎಂಬ ಜೋಡುಪದಕ್ಕೆ ಕಣ್ಣಿನಲ್ಲಿ ಬರುವ ನೀರು ಎಂಬುದಾಗಿ ವಿಗ್ರಹವಾಕ್ಯವನ್ನು ಹೇಳಲು ಸಾಧ್ಯವಿದ್ದು, ಅದು ಒಂದು ರೀತಿಯ ನೀರನ್ನು ಗುರುತಿಸುತ್ತದೆಯೆಂದು ಹೇಳಬಹುದು. ಹಾಗಾಗಿ, ಈ ಜೋಡುಪದದ ಕೇಂದ್ರ ಬಿಂದು ಅದರ ಎರಡನೆಯ ಅಂಗವಾಗಿರುವ ನೀರು ಎಂಬ ಪದದ ಮೇಲಿದೆ.
ಇದೇ ರೀತಿಯಲ್ಲಿ ಹೊಗೆಸೊಪ್ಪು ಎಂಬ ಪದ ಒಂದು ರೀತಿಯ ಸೊಪ್ಪನ್ನು (ಎಂದರೆ ಎಲೆಯನ್ನು) ಗುರುತಿಸುತ್ತದೆ, ಮತ್ತು ಬೆಂಕಿಕಡ್ಡಿ ಎಂಬ ಪದ ಒಂದು ರೀತಿಯ ಕಡ್ಡಿಯನ್ನು ಗುರುತಿಸುತ್ತದೆ. ಹಾಗಾಗಿ ಇಲ್ಲೂ ಕೂಡ ಕೇಂದ್ರ ಬಿಂದು ಜೋಡುಪದದ ಎರಡನೆಯ ಅಂಗವಾಗಿರುವ ಪದದ ಮೇಲೆ ಬೀಳುತ್ತದೆ.
ಈ ನಿಯಮಕ್ಕೆ ಅಪವಾದಗಳಾಗಿರುವ ಜೋಡುಪದಗಳು ಕೆಲವು ಕನ್ನಡ ದಲ್ಲಿವೆ. ಉದಾಹರಣೆಗಾಗಿ, ಎರಡನೆಯ ಪದ ಉಪಮಾನವಗಿರುವಂತಹ ಕೈ ಗೊಂಬೆ, ಇಲಿಕಿವಿ ಮೊದಲಾದ ಕೆಲವು ಜೋಡುಪದಗಳಲ್ಲಿ ಕೇಂದ್ರ ಬಿಂದು ಜೋಡುಪದಗಳ ಹೊರಗೆ ಬೀಳುತ್ತದಲ್ಲದೆ ಅವುಗಳ ಒಳಗಿರುವ ಪದಗಳ ಮೇಲೆ ಬೀಳುವುದಿಲ್ಲ. ಕೈಗೊಂಬೆ ಎಂಬ ಪದ ಒಂದು ಗೊಂಬೆಯನ್ನು ಗುರುತಿಸುವ ಬದಲು ಗೊಂಬೆಯ ಹಾಗೆ ವಶವರ್ತಿಯಾಗುವ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಇಲಿಕಿವಿ ಎಂಬ ಪದ ಒಂದು ರೀತಿಯ ಕಿವಿಯನ್ನು ಗುರುತಿಸುವ ಬದಲು ಇಲಿಯ ಕಿವಿಯ ಹಾಗೆ ಕಾಣಿಸುವ ಎಲೆಗಳಿರುವ ಒಂದು ರೀತಿಯ ಗಿಡವನ್ನು ಗುರುತಿಸುತ್ತದೆ. ಹಾಗಾಗಿ, ಇಂತಹ ಜೋಡುಪದಗಳಲ್ಲಿ ಕೇಂದ್ರ
148
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಒಂದು ಆ ಜೋಡುಪದಗಳ ಹೊರಗಿರುವ ವ್ಯಕ್ತಿ, ಗಿಡ ಮೊದಲಾದವುಗಳ ಮೇಲೆ ಬೀಳುತ್ತದೆಯೆಂದು ಹೇಳಬೇಕಾಗುತ್ತದೆ.
೫.೭ ಸೇರಿಕೆಯ ನಿಯಮಗಳು
ಜೋಡುಪದಗಳಲ್ಲಿ ಎರಡು ಪದಗಳು ಒಟ್ಟು ಸೇರಿ ಒಂದೇ ಪದವಾಗುವುವಾದ ಕಾರಣ, ಹೀಗೆ ಒಟ್ಟು ಸೇರುವ ಪದಗಳಲ್ಲಿ ಪ್ರಾಮುಖ್ಯವಾಗಿ ಮೊದಲನೆಯ ಪದದ ಕೊನೆಯ ಭಾಗದಲ್ಲಿ ಮತ್ತು ಎರಡನೆಯ ಪದದ ಮೊದಲ ಭಾಗದಲ್ಲಿ ಕೆಲವು ಬದಲಾವಣೆಗಳು ನಡೆಯುತ್ತವೆ. ಆದರೆ ಈ ಬದಲಾವಣೆಗಳು ನಿಯಮಿತವಾಗಿ ಎಲ್ಲಾ ಪದಗಳಲ್ಲೂ ನಡೆಯುವ ಬದಲಾವಣೆಗಳಲ್ಲ. ಕೆಲವು ಪದಗಳಲ್ಲಿ ನಡೆಯುತ್ತವೆ ಆದರೆ ಬೇರೆ ಕೆಲವು ಪದಗಳಲ್ಲಿ ನಡೆಯುವುದಿಲ್ಲ. ಪದರಚನೆಯಲ್ಲಿ ‘ನಿಯಮ’ಗಳಿಗಿಂತಲೂ ‘ಒಲವು’ಗಳಿರುವುದೇ ಜಾಸ್ತಿ ಎಂಬುದೇ ಇದಕ್ಕೆ ಕಾರಣ.
ಜೋಡುಪದಗಳ ರಚನೆಯಲ್ಲಿ ಕಾಣಿಸುವ ಇಂತಹ ಬದಲಾವಣೆಗಳಲ್ಲಿ ಕೆಲವು ಪ್ರಾಮುಖ್ಯವಾದುವನ್ನು ಈ ಕೆಳಗೆ ವಿವರಿಸಲಾಗಿದೆ.
೫.೨.೧ ಎರಡನೆಯ ಪದದಲ್ಲಿ ನಡೆಯುವ ಬದಲಾವಣೆಗಳು
ಜೋಡುಪದಗಳ ಎರಡನೆಯ ಪದದಲ್ಲಿ ಒಂದು ಮುಖ್ಯವಾದ ಬದಲಾವಣೆ ಮಾತ್ರ ಕಾಣಿಸಿಕೊಳ್ಳುವುದಾದ ಕಾರಣ, ಅದನ್ನು ಮೊದಲಿಗೆ ಪರಿಶೀಲಿಸಬಹುದು. ಈ ಪದಗಳ ಮೊದಲಿಗೆ ಬರುವ ಕ್, ತ್, ಪ್ ಇಲ್ಲವೇ ಸ್ ಎಂಬ ವ್ಯಂಜನ ಗ್, ದ್, ಬ್ ಇಲ್ಲವೇ ಜ್ ಎಂಬುದಾಗಿ ಬದಲಾಗುವುದೇ ಈ ಬದಲಾವಣೆ. ಈ ಬದಲಾವಣೆಯ ಮೂಲಕ ಕಕಾರ ಗಕಾರವಾಗುವುದನ್ನು ಹಲವಾರು ಜೋಡು ಪದಗಳಲ್ಲಿ ಕಾಣಬಹುದು. ತಕಾರ ದಕಾರವಾಗುವುದೂ ಉಳಿದ ಎರಡು ಬದಲಾವಣೆಗಳಿಗಿಂತ ಜಾಸ್ತಿ ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ.
(೧) ಜೋಡುಪದದಲ್ಲಿ ಬರುವ ಮೊದಲನೆಯ ಪದದ ಕೊನೆಯ ಅಕ್ಷರ ಬಿದ್ದುಹೋಗಿ, ಸೊನ್ನೆ ಮಾತ್ರ ಉಳಿದಿದೆಯಾದರೆ, ಇಂತಹ ಬದಲಾವಣೆಗಳು ಎಲ್ಲಾ ಪದಗಳಲ್ಲೂ ನಡೆಯುವ ಹಾಗೆ ಕಾಣಿಸುತ್ತದೆ. ಉದಾ:
ಸೊನ್ನೆಯ ಅನಂತರ ಬದಲಾವಣೆಯಾಗಿರುವುದು
| ಹಿಂ(ದೆ) + ತಲೆ | ಹಿಂದಲೆ |
| ಮುಂ(ದೆ) + ಕತ್ತಲೆ | ಮುಂಗತ್ತಲೆ |
| ಮುಂ(ದೆ) + ಕಾಲು | ಮುಂಗಾಲು |
| ಮುಂ(ದೆ) + ಕುರುಳು | ಮುಂಗುರುಳು |
| ಹಿಂ(ದೆ) + ಸರಿ | ಹಿಂಜರಿ |
| ಮುಂ(ದೆ) + ಪರಿ | ಮುಂಬರಿ |
149
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ ಕಂ(ಣು) + ಪನಿ (ಹನಿ) ಕಂಬನಿ
- (೨) ಜೋಡುಪದದಲ್ಲಿ ಬರುವ ಮೊದಲನೆಯ ಪದದ ಕೊನೆಯ ಸ್ವರ
- ಉಳಿದಿದೆಯಾದರೆ, ಮೇಲಿನ ಬದಲಾವಣೆ ಕೆಲವು ಪದಗಳಲ್ಲಿ ನಡೆಯುತ್ತದೆ,
- ಆದರೆ ಬೇರೆ ಕೆಲವು ಪದಗಳಲ್ಲಿ ನಡೆಯುವುದಿಲ್ಲ. ಉದಾ:
- (ಕ) ಸ್ವರದ ಅನಂತರ ಬದಲಾವಣೆಯಾಗಿರುವುದು
- ಮನೆ + ಕೆಲಸ ಮನಗೆಲಸ
- ನೆಲ + ಕಡಲೆ ನೆಲಗಡಲೆ
- ಕೈ + ಕಡ ಕೈಗಡ
- ಊರು + ಕೋಲು ಊರುಗೋಲು
- ಸುಡು + ಕಾಡು ಸುಡುಗಾಡು
- ಹುರಿ + ಕಡಲೆ ಹುರಿಗಡಲೆ
- ಎದೆ + ಕುದಿ ಎದೆಗುದಿ
- ನೆಲ + ತಾವರೆ ನೆಲದಾವರೆ
- ಕೆಳ(ಗೆ) + ತುಟಿ ಕೆಳದುಟಿ
- (ಖ) ಸ್ವರದ ಅನಂತರ ಬದಲಾವಣೆಯಾಗದಿರುವುದು
- ಒಳ(ಗೆ) + ಕೋಣೆ ಒಳಕೋಣೆ
- ಕೈ + ಕೆಲಸ ಕೈಕೆಲಸ
- ಆನೆ + ಕಾಲು ಆನೆಕಾಲು
- ತಲೆ + ತೆರಿಗೆ ತಲೆತೆರಿಗೆ
- ಕರಿ + ತುಳಸಿ ಕರಿತುಳಸಿ
- ಈ ರೀತಿ ಸ್ವರದ ಅನಂತರ ಬದಲಾವಣೆಯಾಗದಿರುವುದಕ್ಕೆ ಕಕಾರ, ತಕಾರ
- ಮೊದಲಾದವುಗಳ ಹಿಂದೆ ಅಥವಾ ಮುಂದೆ ಒತ್ತಕ್ಷರವಿರುವುದೂ ಒಂದು
- ಕಾರಣವಿರಬಹುದು ಎಂಬುದನ್ನು ಕೆಳಗಿನ ಉದಾಹರಣೆಗಳು ಸೂಚಿಸುತ್ತವೆ.
- ಹೊಟ್ಟೆ + ಕಿಚ್ಚು ಹೊಟ್ಟೆಕಿಚ್ಚು
- ಬಿಚ್ಚು + ಶಕ್ತಿ ಬಿಚ್ಚುಕತ್ತಿ
- ಅಣೆ + ಕಟ್ಟು ಅಣೆಕಟ್ಟು
- ಬಟ್ಟ + ತಲೆ ಬಟ್ಟತಲೆ
- ೭.೨ ಮೊದಲನೆಯ ಪದದಲ್ಲಿ ನಡೆಯುವ ಬದಲಾವಣೆಗಳು
150
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಜೋಡುಪದಗಳ ಮೊದಲನೆಯ ಪದ ಹಲವು ಬೇರೆ ಬೇರೆ ರೀತಿಯ ಬದಲಾ ವಣೆಗಳಿಗೊಳಗಾಗುತ್ತದೆ. ಇವುಗಳಲ್ಲಿ ಮುಖ್ಯವಾದುದೆಂದರೆ ಅವುಗಳ ಕೊನೆಯ ಸ್ವರದಲ್ಲಿ ಕಾಣಿಸುವ ಬದಲಾವಣೆಗಳು.
- (೧) ಕೊನೆಯ ಸ್ವರ ಉಕಾರ ಇಲ್ಲವೇ ಅಕಾರವಾಗಿದ್ದಲ್ಲಿ
- ಮೊದಲನೆಯ ಪದದ ಕೊನೆಯಲ್ಲಿ ಉಕಾರ ಇಲ್ಲವೇ ಅಕಾರ ಬಂದಿದೆಯಾದರೆ,
- ಅದರೊಂದಿಗೆ ಸ್ವರದಲ್ಲಿ ಸುರುವಾಗುವ ಎರಡನೆಯ ಪದ ಸೇರಿದಾಗ ಮೊದಲ
- ನೆಯ ಪದ ತನ್ನ ಕೊನೆಯ ಸ್ವರವನ್ನು ಕಳೆದುಕೊಳ್ಳುತ್ತದೆ. ಉದಾ:
- ಉಕಾರ ಬಿದ್ದು ಹೋಗುವುದು
- ಕಲ್ಲು + ಇದ್ದಲು ಕಲ್ಲಿದ್ದಲು
- ನೂಲು + ಏಣಿ ನೂಲೇಣಿ
- ಕಣ್ಣು + ಉರಿ ಕಣ್ಣುರಿ
- ಬಯಲು + ಆಟ ಬಯಲಾಟ
- ಕಲ್ಲು + ಎದೆ ಕಲ್ಲೆದೆ
- ಅಕಾರ ಬಿದ್ದು ಹೋಗುವುದು
- ಚಿಕ್ಕ + ಅಮ್ಮ ಚಿಕ್ಕಮ್ಮ
- ಹುಡುರ + ಆಟ ಹುಡುಗಾಟ
- (ಕ) ಕಡು, ನಡು ಮತ್ತು ನಿಡು ಎಂಬ ಮೂರು ಗುಣಪದಗಳು ಮೊದಲನೆಯ
- ಪದವಾಗಿ ಬಂದಿದ್ದು, ಅವುಗಳೊಂದಿಗೆ ಸ್ವರದಲ್ಲಿ ಸುರುವಾಗುವ ಎರಡನೆಯ
- ಪದವೊಂದು ಸೇರಿದಾಗ ಅವುಗಳ ಕೊನೆಯ ಉಕಾರ ಬಿದ್ದು ಹೋಗುವುದು
- ಮಾತ್ರವಲ್ಲದೆ, ಡಕಾರ ಟ್ಸ್ ಎಂಬ ಒತ್ತಕ್ಷರವಾಗುತ್ತದೆ. ಉದಾ:
- ಕಡು + ಇರುವೆ ಕಟ್ಟಿರುವೆ
- ಕಡು + ಆಳು ಕಟ್ಟಾಳು
- ನಿಡು + ಉಸಿರು ನಿಟ್ಟುಸಿರು
- ನಡು + ಅಡವಿ ನಟ್ಟಡವಿ
- ನಡು + ಇರುಳು ನಟ್ಟಿರುಳು
- ಕಡು ಎಂಬ ಪದ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳೊಂದಿಗೆ
- ಸೇರಿದಾಗಲೂ (ಆ ಪದಗಳು ಸ್ವರದಲ್ಲಿ ಸುರುವಾಗಿವೆಯಾದರೆ) ಈ ರೀತಿ ಕಟ್
151
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎಂಬುದಾಗಿ ಬದಲಾಗುವುದನ್ನು ಕಟ್ಟಾಜ್ಞೆ, ಕಟ್ಟಪ್ಪಣೆ ಮೊದಲಾದ ಪದಗಳಲ್ಲಿ ಕಾಣಬಹುದು.
- (ಖ) ಎರಡನೆಯ ಪದ ವ್ಯಂಜನದಲ್ಲಿ ಸುರುವಾಗುವುದಾದರೆ ಸಾಮಾನ್ಯವಾಗಿ
- ಈ ಪದಗಳು ಬದಲಾಗುವುದಿಲ್ಲ. ಆದರೆ ಆ ವ್ಯಂಜನ ಕಕಾರ ಇಲ್ಲವೇ ಗಕಾರ
- ವಾಗಿದೆಯಾದರೆ, ಕಡು ಎಂಬುದು ಕರ್ ಎಂದಾಗುತ್ತದೆ ಮತ್ತು ಅದರ
- ಅನಂತರ ಬರುವ ಕಕಾರ ಗಕಾರವಾಗುತ್ತದೆ. ಉದಾ:
- ಬದಲಾವಣೆಯಿಲ್ಲದಿರುವುದು
- ನಡು + ಹಗಲು ನಡುಹಗಲು
- ನಡು + ಬೆರಳು ನಡುಬೆರಳು
- ಕಡು + ಬಿಸಿಲು ಕಡುಬಿಸಿಲು
- ಕಡು + ಬಡವ ಕಡುಬಡವ
- ಕಕಾರ ಇಲ್ಲವೇ ಗಕಾರದೆದುರು ಬದಲಾವಣೆ
- ಕಡು + ಕತ್ತಲೆ ಕಗ್ಗತ್ತಲೆ
- ಕಡು + ಗಂಟು ಕಗ್ಗಂಟು
- (ಗ) ಕೆಂಪು ಮತ್ತು ತಂಪು ಎಂಬ ಎರಡು ಪದಗಳು ಅನಿಯಮಿತವಾಗಿ ಕೆಲವು
- ಜೋಡುಪದಗಳಲ್ಲಿ ಕೆಂ ಮತ್ತು ತಂ ಎಂಬ ಗಿಡ್ಡರೂಪವನ್ನು ಪಡೆಯುತ್ತವೆ.
- ಇದೇ ರೀತಿಯಲ್ಲಿ ಬೆನ್ನು ಎಂಬುದು ಬೆಂ ಎಂಬ ರೂಪವನ್ನೂ, ಕಣ್ಣು
- ಎಂಬುದು ಕಂ ಎಂಬ ರೂಪವನ್ನೂ ಮತ್ತು ಹೊನ್ನು ಎಂಬುದು ಹೊಂ ಎಂಬ
- ರೂಪವನ್ನೂ ಕೆಲವು ಜೋಡುಪದಗಳಲ್ಲಿ ಪಡೆಯುತ್ತವೆ. ಉದಾ:
- ಕೆಂಪು + ತಾಳಿ ಕೆಂದಾಳಿ
- ತಂಪು + ಗಾಳಿ ತಂಗಾಳಿ
- ಬೆನ್ನು + ಕಾವಲು ಬೆಂಗಾವಲು
- ಕಣ್ಣು + ಪನಿ (ಹನಿ) ಕಂಬನಿ
- ಹೊನ್ನು + ಬಣ್ಣ ಹೊಂಬಣ್ಣ
- (೨) ಕೊನೆಯ ಸ್ವರ ಇಕಾರ ಇಲ್ಲವೇ ಎಕಾರವಾಗಿದ್ದಲ್ಲಿ
- ಮೊದಲನೆಯ ಪದದ ಕೊನೆಯಲ್ಲಿ ಇಕಾರ ಇಲ್ಲವೇ ಎಕಾರ ಬಂದಿದೆಯಾದರೆ,
- ಅದು ಸ್ವರದಲ್ಲಿ ಸುರುವಾಗುವ ಎರಡನೆಯ ಪದದೆದುರು ಬಿದ್ದು ಹೋಗುವು
152
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ದಿಲ್ಲ. ಇದಕ್ಕೆ ಬದಲು ಆ ಎರಡು ಸ್ವರಗಳ ನಡುವೆ ಯಕಾರ ಒಂದು ಸೇರುತ್ತದೆ.
ಕೊನೆಯಲ್ಲಿ ಇಕಾರ ಬಂದಾಗ ಕಡಿ + ಅಕ್ಕಿ ಕಡಿಯಕ್ಕಿ
ಕೊನೆಯಲ್ಲಿ ಎಕಾರ ಬಂದಾಗ ನೆರೆ + ಊರು ನೆರೆಯೂರು ಮನೆ + ಆಳು ಮನೆಯಾಳು
- (ಕ) ಮುಂದೆ ಮತ್ತು ಹಿಂದೆ ಎಂಬ ಎರಡು ಪದಗಳು ಜೋಡುಪದಗಳ
- ಮೊದಲನೆಯ ಅಂಗವಾಗಿ ಬರುವಾಗ ಮುಂ ಮತ್ತು ಹಿಂ ಎಂಬ ಗಿಡ್ಡರೂಪ
- ವನ್ನು ಪಡೆಯುತ್ತವೆ. ಇವುಗಳ ಕೊನೆಯಲ್ಲಿರುವ ಸೊನ್ನೆ ಎರಡನೆಯ ಪದ
- ನಕಾರ ಇಲ್ಲವೇ ಮಕಾರದಲ್ಲಿ ಸುರುವಾಗಿರುವುದಾದರೆ ನಕಾರ ಮತ್ತು ಮಕಾರ
- ವಾಗಿ ಬದಲಾಗುತ್ತದೆ. ಉದಾ:
- ಮುಂದೆ + ಗೇಣಿ
- ಮುಂಗೇಣಿ
- ಮುಂದೆ + ಕತ್ತಲೆ
- ಮುಂಗತ್ತಲೆ
- ಮುಂದೆ + ತಲೆ
- ಮುಂದಲೆ
- ಮುಂದೆ + ನುಡಿ
- ಮುನ್ನುಡಿ
- ಹಿಂದೆ + ಕಾಳು
- ಹಿಂಗಾಲು
- ಹಿಂದೆ + ತಲೆ
- ಹಿಂದಲೆ
- ಹಿನ್ನೋಟ
- ಹಿಮ್ಮೇಳ
- (ಖ) ಬಿಳಿ ಎಂಬ ಪದ ಜೋಡುಪದಗಳಲ್ಲಿ ಬೆಳ್ ಇಲ್ಲವೇ ಬೆಣ್ ಎಂದಾಗುವು
- ದನ್ನು ಈ ಕೆಳಗಿನ ಪದಗಳಲ್ಲಿ ಕಾಣಬಹುದು.
- ಬಿಳಿ + ತಿಂಗಳು
- ಬೆಳ್ಳೆಂಗಳು
- ಬಿಳಿ + ಕಲ್ಲು
- ಬೆಳ್ಳಲ್ಲು, ಬೆಣ್ಣಲ್ಲು
- (ಗ) ಹಿರಿ ಎಂಬ ಪದ ಅದರ ಮುಂದಿರುವ ವ್ಯಂಜನವನ್ನನುಸರಿಸಿ ಹೆಗ್, ಹೆಜ್,
- ಹೆದ್, ಇಲ್ಲವೇ ಹೆಬ್ ಎಂಬುದಾಗಿ ಬದಲಾಗುವುದನ್ನು ಈ ಕೆಳಗಿನ ಜೋಡು
153
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಪದಗಳಲ್ಲಿ ಕಾಣಬಹುದು. ಅದರ ಮುಂದಿರುವ ಕಕಾರ ಮತ್ತು ಪಕಾರಗಳು ಗಕಾರ ಮತ್ತು ಬಕಾರಗಳಾಗುತ್ತವೆ.
- ಹಿರಿ + ಕಡೆ ಹೆಗ್ಗಡೆ
- ಹಿರಿ + ಜೇನು ಹೆಜ್ಜೆನು
- ಹಿರಿ + ದಾರಿ ಹೆದ್ದಾರಿ
- ಹಿರಿ + ಪುಲಿ (ಹುಲಿ) ಹೆಬ್ಬುಲಿ
- ಹಿರಿ + ಬಾಗಿಲು ಹೆಬ್ಬಾಗಿಲು
(ಘ) ಕರಿ ಎಂಬ ಪದವೂ ಕಕಾರ ಮತ್ತು ಗಕಾರಗಳೆದುರು ಕರ್ ಎಂಬುದಾಗಿ ಬದಲಾಗುತ್ತದೆ ಮತ್ತು ಅದರ ಮುಂದಿರುವ ಕಕಾರ ಗಕಾರವಾಗುತ್ತದೆ. ಉದಾ:
ಕರಿ + ಗವಿ
ಕಗ್ಗವಿ
ಕರಿ + ಕಲ್ಲು
ಕಗ್ಗಲ್ಲು
(೩) ಮೇಲೆ ವಿವರಿಸಿರುವ ‘ಬದಲಾವಣೆ’ಗಳಲ್ಲಿ ಕೆಲವು ಜೋಡುಪದಗಳ ಅಂಗ ಗಳಾಗಿ ಬಂದಿರುವ ಪದಗಳು ಹಳೆಗನ್ನಡದಲ್ಲಿ ಅಥವಾ ಅದಕ್ಕೂ ಹಿಂದೆ ಅವ ಕ್ಕಿದ್ದ ರೂಪವನ್ನು ಜೋಡುಪದಗಳಲ್ಲಿ ಮಾತ್ರ ಹಾಗೆಯೇ ಉಳಿಸಿಕೊಂಡುದರಿಂದ ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗಾಗಿ, ಹಿರಿ ಎಂಬ ಪದ ಪೂರ್ವದ ಹಳೆಗನ್ನಡ ದಲ್ಲಿ ಪೆರಿ ಎಂಬ ರೂಪದಲ್ಲಿತ್ತು. ಅನಂತರ ಈ ಪದದ ಸ್ವತಂತ್ರ ಪ್ರಯೋಗ ದಲ್ಲಿ (ಎಂದರೆ ಪದದ ಕೊನೆಯಲ್ಲಿ ಇಕಾರವಿದ್ದಗ) ಪಿರಿ ಎಂದು ಬದಲಾಗಿ ಅನಂತರ ಹೊಸಗನ್ನಡದಲ್ಲಿ ಹಿರಿ ಎಂದಾಯಿತು. ಹೆಗ್ಗಡೆ, ಹೆದ್ದಾರಿ ಮೊದಲಾದ ಜೋಡುಪದಗಳಲ್ಲಿ ಈ ಇಕಾರ ಬಿದ್ದುಹೋಗಿದೆಯಾದ ಕಾರಣ, ಈ ಪದದ ಮೊದಲನೆಯ ಅಕ್ಷರ ಪ್ ಎಂದೇ ಉಳಿದು ಅನಂತರ ಹೊಸಗನ್ನಡದಲ್ಲಿ ಹೆ ಎಂಬ ರೂಪವನ್ನು ಪಡೆಯಿತು. ಬಿಳಿ ಎಂಬ ಪದದಲ್ಲೂ ಇಂತಹದೇ ಬದಲಾವಣೆ ನಡೆದಿದೆಯೆಂಬುದನ್ನು ಬೆಳುದಿಂಗಳು, ಬೆಣ್ಯಲ್ಲು ಮೊದಲಾದ ಜೋಡುಪದಗಳೊಂದಿಗೆ ಅದನ್ನು ಹೋಲಿಸುವುದರ ಮೂಲಕ ತಿಳಿಯಬಹುದು.
ಬೆನ್ನು, ಕಣ್ಣು, ಹೊನ್ನು ಮೊದಲಾದ ಪದಗಳು ಅವುಗಳ ಎಲ್ಲಾ ಬಳಕೆ ಗಳಲ್ಲೂ ಬೆನ್, ಕಣ್, ಪೊನ್ ಎಂಬ ಕೊನೆಯಲ್ಲಿ ವ್ಯಂಜನವಿರುವ ರೂಪದ ಲ್ಲಿದ್ದುವು. ಹೊಸಗನ್ನಡದಲ್ಲಿ ಅವು ಸ್ವತಂತ್ರ ಪ್ರಯೋಗದಲ್ಲಿ ಮಾತ್ರ ಉಕಾರ ದಲ್ಲಿ ಕೊನೆಗೊಳ್ಳುತ್ತವೆ, ಜೋಡುಪದಗಳಲ್ಲಿ ಬರುವಾಗ ಅವುಗಳಿಗೆ ಈ ಉಕಾರ ಸೇರುವುದಿಲ್ಲ.
154
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಇಂತಹ ಜೋಡುಪದಗಳ ಒಳರಚನೆಯನ್ನು ವಿವರಿಸುವಾಗ ಅವುಗಳ ಅಂಗಗಳಾಗಿ ಬರುವ ಪದಗಳ ಸ್ವತಂತ್ರ ಪ್ರಯೋಗದಲ್ಲಿ ಬದಲಾವಣೆಯಾಗಿದೆ ಯೆಂದು ಹೇಳುವ ಬದಲು, ಜೋಡುಪದದಲ್ಲಿ ಬದಲಾವಣೆಯಾಗಿದೆಯೆಂದು ಹೇಳುವುದು ರೂಢಿ. ಆದರೆ ಇದು ಚಾರಿತ್ರಿಕ ಬದಲಾವಣೆಗಳ ವರ್ಣನೆಯಲ್ಲ ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ.
೫.೮ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಳು
ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ‘ಸಮಾಸಗಳು’ ಎಂಬ ಒಂದು ಅಧ್ಯಾಯ ವಿದ್ದು, ಅದರಲ್ಲಿ ಕನ್ನಡದ ಜೋಡುಪದಗಳ ವಿಭಜನೆ ಮತ್ತು ವರ್ಣನೆ ಯಿರುತ್ತದೆ. ಆದರೆ ಈ ವಿಭಜನೆ ಹೆಚ್ಚಿನ ಮಟ್ಟಿಗೆ ಸಂಸ್ಕೃತ ವೈಯಾಕರಣಿಗಳು ಆ ಭಾಷೆಯಲ್ಲಿ ಬರುವ ಜೋಡುಪದಗಳ ವಿಭಜನೆಗಾಗಿ ಬಳಸಿದ ವಿಧಾನವನ್ನೇ ಅವಲಂಬಿಸಿದೆ. ಸಂಸ್ಕೃತದ ಸಮಾಸಗಳು ಯಾವುವು, ಅವುಗಳಲ್ಲಿ ಯಾವುವು ಕನ್ನಡದಲ್ಲೂ ಕಾಣಿಸುತ್ತವೆ, ಮತ್ತು ಸಂಸ್ಕೃತದಲ್ಲಿಲ್ಲದಂತಹ ಬೇರೆ ಯಾವ ಸಮಾಸಗಳು ಕನ್ನಡದಲ್ಲಿವೆ ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಈ ವಿಭಜನೆ ಸಾಗುತ್ತದೆ.
ಆದರೆ ಈ ರೀತಿ ಸಂಸ್ಕೃತ ಸಮಾಸಗಳ ದೃಷ್ಟಿಕೋನದ ಮೂಲಕ ಕನ್ನಡದ ಜೋಡುಪದಗಳನ್ನು ವರ್ಣಿಸುವುದರಿಂದಾಗಿ ಆ ವರ್ಣನೆ ಅನವಶ್ಯಕವಾಗಿ ಬಹಳ ಕ್ಲಿಷ್ಟವಾಗುತ್ತದೆ ಮಾತ್ರವಲ್ಲ, ನಿಜಕ್ಕೂ ಕನ್ನಡದ ಜೋಡುಪದಗಳು ಯಾವ ರೀತಿ ಯವು ಎಂಬ ಪ್ರಶ್ನೆಗೆ ನೇರವಾದ ಉತ್ತರ ಸಿಗುವುದೇ ಇಲ್ಲ. ಮೇಲೆ (೫.೬ರಲ್ಲಿ) ಈ ತೊಡಕು ತೊಡಕಾದ ವಿಧಾನವನ್ನು ತೊರೆದು, ಕನ್ನಡದಲ್ಲಿ ಬಳಕೆಯಲ್ಲಿರುವ ಜೋಡುಪದಗಳನ್ನು ನೇರವಾಗಿ ಅವುಗಳ ಒಳರಚನೆಯಲ್ಲಿ ಕಾಣಿಸುವ ವೈಶಿಷ್ಟ್ಯ ಗಳ ಆಧಾರದ ಮೇಲೆ ವಿಭಜಿಸಿ ವಿವರಿಸಲಾಗಿದೆ.
ಈ ರೀತಿ ಕನ್ನಡದ ಜೋಡುಪದಗಳ ನೇರವಾದ ಪರಿಶೀಲನೆಯಿಂದ ಸಿದ್ದ ವಾದ ವಿಭಜನೆ ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ಸ್ವಲ್ಪ ಸ್ಕೂಲವಾಗಿಯಾದರೂ ಪರಿ ಶೀಲಿಸುವುದು ಅವಶ್ಯ. ಯಾಕೆಂದರೆ, ಹಾಗೆ ಮಾಡುವುದರಿಂದ ಈ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಳು ಯಾವ ರೀತಿಯಲ್ಲೆಲ್ಲ ಅಸಮರ್ಪಕ ವಾಗಿವೆ ಎಂಬ ವಿಷಯ ಸ್ಪಷ್ಟವಾದೀತು.
ತತ್ಪುರುಷ, ಕರ್ಮಧಾರಯ, ದ್ವಿಗು, ಬಹುವ್ರೀಹಿ, ದ್ವಂದ್ವ ಮತ್ತು ಅವ್ಯಯಿಭಾವಗಳೆಂಬ ಆರು ಸಂಸ್ಕೃತ ಸಮಾಸಗಳನ್ನೂ ಮತ್ತು ಇವಕ್ಕಿಂತ ಭಿನ್ನವಾದ ಕ್ರಿಯಾಸಮಾಸ ಮತ್ತು ಗಮಕಸಮಾಸಗಳೆಂಬ ಬೇರೆ ಎರಡು ರೀತಿಯ ಸಮಾಸಗಳನ್ನೂ ತೋರಿಸುವ ಜೋಡುಪದಗಳು ಕನ್ನಡದಲ್ಲಿವೆಯೆಂಬು ದಾಗಿ ಹದಿಮೂರನೆಯ ಶತಮಾನದ ಶಬ್ದಮಣಿದರ್ಪಣವೆಂಬ ವ್ಯಾಕರಣದಲ್ಲಿ ಹೇಳಲಾಗಿದೆ. ಇದು ಹಳೆಗನ್ನಡದಲ್ಲಿ ಬರುವ ಜೋಡುಪದಗಳ ವಿಭಜನೆ
155
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಯಾಗಿದೆಯಾದರೂ ಹೊಸಗನ್ನಡಕ್ಕೂ ಇದನ್ನೇ ಅನ್ವಯಿಸಿ ಹೇಳುವುದು ರೂಢಿ. ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವುಗಳಲ್ಲೂ ಈ ವಿಭಜನೆಯನ್ನೇ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿ ಹೊಸಗನ್ನಡದ್ದೆಂದು ಹೇಳಿರುವುದನ್ನು ಕಾಣ ಬಹುದು.
೫.೮.೧ ವಿಭಜನೆಯ ಆಧಾರ
ಈ ವಿಭಜನೆಗೆ ಆಧಾರವಾಗಿ ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗ, ಅವುಗಳ ನಡುವಿರುವ ಸಂಬಂಧ, ಮತ್ತು ಜೋಡುಪದಗಳಲ್ಲಿ ಕೇಂದ್ರ ಬಿಂದುವಿನ ಸ್ಥಾನ ಎಂಬ ಈ ಮೂರು ವಿಷಯಗಳನ್ನೂ ಒಟ್ಟಾಗಿ ಬಳಸಿಕೊಳ್ಳ ಲಾಗಿದೆ. ಉದಾಹರಣೆಗಾಗಿ, ಜೋಡುಪದದ ಮೊದಲನೆಯ ಅಂಗ ಸಂಖ್ಯಾ ವಾಚಕವಾಗಿದ್ದರೆ ಅದನ್ನು ದ್ವಿಗುವೆಂದೂ, ಮತ್ತು ಎರಡನೆಯದು ಕ್ರಿಯಾಪದ ವಾಗಿದ್ದರೆ ಅದನ್ನು ಕ್ರಿಯಾಸಮಾಸವೆಂದೂ ಕರೆಯಲಾಗುತ್ತದೆ. ಇದು ಜೋಡು ಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗವನ್ನಾಧರಿಸಿದ ವಿಭಜನೆ.
ಜೋಡುಪದದ ಅಂಗಗಳೆರಡು ನಾಮಪದಗಳಾಗಿದ್ದು ಬೇರೆ ಬೇರೆ ವಿಭಕ್ತಿ ಗಳಲ್ಲಿದ್ದರೆ ಅದನ್ನು ತತ್ಪುರುಷವೆಂದು ಕರೆಯಲಾಗುತ್ತದೆ, ಮತ್ತು ಒಂದೇ ವಿಭಕ್ತಿಯಲ್ಲಿದ್ದರೆ ಅದನ್ನು ಕರ್ಮಧಾರಯವೆಂದು ಕರೆಯಲಾಗುತ್ತದೆ. ಇದು ಜೋಡುಪದದ ಅಂಗಗಳ ನಡುವಿರುವ ಸಂಬಂಧವನ್ನಾಧರಿಸಿದ ವಿಭಜನೆ.
ಜೋಡುಪದದ ಕೇಂದ್ರ ಬಿಂದು ಎರಡನೆಯ ಅಂಗದ ಮೇಲಿದ್ದರೆ ಅದನ್ನು ತತ್ಪುರುಷವೆಂದೂ, ಮೊದಲನೆಯ ಅಂಗದ ಮೇಲಿದ್ದರೆ ಅವ್ಯಯಿಭಾವ (ಇಲ್ಲವೇ ಅಂಶಿ ಸಮಾಸ) ಎಂದೂ, ಎರಡರ ಮೇಲೂ ಇದ್ದರೆ ದ್ವಂದ್ವ ವೆಂದೂ ಮತ್ತು ಕೇಂದ್ರ ಬಿಂದು ಜೋಡುಪದದ ಯಾವ ಅಂಗದ ಮೇಲೂ ಬೀಳದೆ ಅದರ ಹೊರಗಿರುವ ಒಂದು ಪದದ ಮೇಲೆ ಬಿದ್ದಿದೆಯಾದರೆ ಅದನ್ನು ಬಹುವ್ರೀಹಿಯೆಂದೂ ಕರೆಯಲಾಗುತ್ತದೆ. ಇದು ಜೋಡುಪದದಲ್ಲಿ ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ. (ಜೋಡುಪದದ ಕೇಂದ್ರ ಬಿಂದು ವಿನಲ್ಲಿರುವ ಪದವನ್ನು ಕನ್ನಡ ವ್ಯಾಕರಣಗಳಲ್ಲಿ ‘ಪ್ರಧಾನ ಪದ’ ಎಂಬುದಾಗಿ ಕರೆಯುವುದು ರೂಢಿ).
ಕನ್ನಡದ ಜೋಡುಪದಗಳ ವಿಭಜನೆಯನ್ನು ಈ ರೀತಿ ಮೂರು ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ಆಧಾರವಾಗಿ ಇರಿಸಿಕೊಡು ತಯಾರಿಸಿರುವ ಕಾರಣ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗಿದೆ. ಉದಾಹರಣೆಗಾಗಿ, ಕೇಂದ್ರ ಬಿಂದು ಎರಡನೆಯ ಅಂಗದ ಮೇಲಿರುವ ಕರ್ಮಧಾರಯ, ದ್ವಿಗು, ಕ್ರಿಯಾಸಮಾಸ ಮತ್ತು ಗಮಕಸಮಾಸಗಳು ತತ್ಪುರುಷದ ಪ್ರಭೇದಗಳೆಂದು ಹೇಳಬೇಕಾಗು ಇದೆ, ಮತ್ತು ಅಂಗಗಳೆರಡೂ ಒಂದೇ ವಿಭಕ್ತಿಯಲ್ಲಿ ಬರುವ ದ್ವಿಗುಸಮಾಸ ವೆಂಬುದು ಕರ್ಮಧಾರಯದ ಪ್ರಭೇದವೆಂದು ಹೇಳಬೇಕಾಗುತ್ತದೆ. ಯಾವು
156
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ದಾದರೊಂದು ಸಂಖ್ಯೆ ಮೊದಲನೆಯ ಅಂಗವಾಗಿ ಬಂದಿರುವ ಜೋಡುಪದ ದ್ವಿಗುವಾಗಿರಲೂ ಸಾಧ್ಯವಿದೆ, ಗಮಕವಾಗಿರಲೂ ಸಾಧ್ಯವಿದೆ; ಹಾಗಾಗಿ, ನಿಜಕ್ಕೂ ಅವೆರಡರ ನಡುವಿನ ವ್ಯತ್ಯಾಸವೇನು, ಗಮಕವೆಂಬ ಸಮಾಸ ವಿಧಾನ ಕನ್ನಡಕ್ಕೆ ಅವಶ್ಯವೇ ಎಂದೆಲ್ಲ ವಾದ ವಿವಾದಗಳು ಇದರಿಂದಾಗಿ ಮೂಡಿ ಬಂದಿವೆ.
ಇದಲ್ಲದೆ, ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ ಕನ್ನಡದ ಮಟ್ಟಿಗೆ ಅಷ್ಟೊಂದು ಉಪಯುಕ್ತವಾದುದಲ್ಲ. ಯಾಕೆಂದರೆ, ಕನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಅಂಗ ನಾಮಪದವಾಗಿದ್ದು, ಕೇಂದ್ರ ಬಿಂದು ಆ ಎರಡನೆಯ ಪದದ ಮೇಲೆಯೇ ಬೀಳುತ್ತದೆ. ಕೆಲವು ಜೋಡುಪದಗಳಲ್ಲಿ (ಪ್ರಾಮುಖ್ಯವಾಗಿ ಗುಣಪದಗಳಿರುವವುಗಳಲ್ಲಿ) ಮಾತ್ರ ಕೇಂದ್ರ ಬಿಂದು ಅದರ ಹೊರಗಿರಲು ಸಾಧ್ಯ (೫.೬.೪ ನೋಡಿ). ಆದರೆ ಸಂಸ್ಕೃತದ ಜೋಡುಪದ ಗಳನ್ನು ವಿಭಜಿಸುವಲ್ಲಿ ಕೇಂದ್ರ ಬಿಂದುವಿನ ಸ್ಥಾನವೆಂಬ ಈ ವಿಷಯ ಪ್ರಾಮುಖ್ಯ ವಾದ ಪಾತ್ರವನ್ನು ವಹಿಸುತ್ತದೆ. ಈ ಕಾರಣಕ್ಕಾಗಿಯೂ ಸಂಸ್ಕೃತದ ಸಮಾಸ ಗಳನ್ನು ಅಲ್ಪಸ್ವಲ್ಪ ಬದಲಾವಣೆಗಳ ಮೂಲಕ ಕನ್ನಡಕ್ಕೆ ಅಳವಡಿಸುವ ಪ್ರಯತ್ನ ದಿಂದಾಗಿ ಗೊಂದಲವುಂಟಾಗಿದೆ.
ಜೋಡುಪದಗಳ ವಿಭಜನೆಗೆ ಆಧಾರವಾಗಬಲ್ಲ ಬೇರೆ ಬೇರೆ ವಿಷಯ ಗಳನ್ನು ಈ ರೀತಿ ಒಟ್ಟು ಸೇರಿಸಲು ಯತ್ನಿಸದೆ ಅವನ್ನು ಬೇರೆ ಬೇರಾಗಿ ಇರಿಸಿ ಕೊಂಡು, ಅವು ಜೋಡುಪದಗಳ ವಿಭಜನೆಗೆ ಯಾವ ರೀತಿಯಲ್ಲೆಲ್ಲ ಸಹಾಯಕ ವಾಗಬಲ್ಲುವು ಎಂಬುದನ್ನು ಪರಿಶೀಲಿಸಿ, ಅನಂತರ ಅವುಗಳಲ್ಲಿ ಅತ್ಯಂತ ಹೆಚ್ಚು ಸಹಾಯಕವಾಗಬಲ್ಲ ವಿಷಯವನ್ನು ವಿಭಜನೆಗೆ ಆಧಾರವಾಗಿ ತೆಗೆದುಕೊಳ್ಳು ವುದೇ ಸರಿಯಾದ ದಾರಿ. ಕನ್ನಡದ ಮಟ್ಟಿಗೆ ಮೇಲೆ (೫.೬.೪ರಲ್ಲಿ) ವಿವರಿಸಿ ದಂತೆ, ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗವನ್ನಾಧರಿಸಿದ ವಿಭಜನೆಯೇ ಅತ್ಯಂತ ಉಪಯುಕ್ತವಾದ ವಿಭಜನೆ.
೫.೮.೨ ಪದವರ್ಗಗಳ ಸಂಖ್ಯೆ
ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡುಪದಗಳ ವಿಭಜನೆಗಳು ಪದವರ್ಗ ಗಳ ವಿಷಯದಲ್ಲಿ ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವಿರುವ ಪ್ರಾಮುಖ್ಯ ವಾದ ಒಂದು ವ್ಯತ್ಯಾಸವನ್ನು ಸರಿಯಾಗಿ ಗಮನಿಸದಿರುವುದರಿಂದಾಗಿ ಬಹಳ ಮಟ್ಟಿಗೆ ತಪ್ಪು ಹಾದಿ ಹಿಡಿದಿವೆ. ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದ ಗಳೆಂಬ ಎರಡೇ ಎರಡು ಮುಖ್ಯ ಪದವರ್ಗಗಳಿದ್ದು, ಗುಣಪದಗಳ ಅರ್ಥ ಕೊಡುವ ಪದಗಳಲ್ಲಿ ಹೆಚ್ಚಿನವೂ ನಾಮಪದವೆಂಬ ಪದವರ್ಗದಲ್ಲೇನೇ ಸೇರಿ ಕೊಳ್ಳುತ್ತವೆ.
ಇದಕ್ಕೆ ವ್ಯತಿರಿಕ್ತವಾಗಿ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬೇರೆ ಬೇರೆ ಮುಖ್ಯ ಪದವರ್ಗಗಳಿವೆ ಎಂಬುದನ್ನು ನಾವು ಮೇಲೆ ಎರಡನೆಯ ಅಧ್ಯಾಯದಲ್ಲಿ (೨.೨ರಲ್ಲಿ) ನೋಡಿರುವೆವು.
157
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗುಣಪದಗಳ ಅರ್ಥ ಕೊಡುವ ನಾಮಪದಗಳನ್ನು ಇನ್ನೊಂದು ನಾಮಪದ ದೊಂದಿಗೆ ಸೇರಿಸಿ ಪದಗುಚ್ಛವೊಂದನ್ನು ತಯಾರಿಸಬೇಕಿದ್ದಲ್ಲಿ, ಅದಕ್ಕೆ ಆ ನಾಮ ಪದದ ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಿಕೊಳ್ಳ ಬೇಕು ಎಂಬುದು ಸಂಸ್ಕೃತದ ವಾಕ್ಯರಚನೆಯ ಒಂದು ನಿಯಮ. ಉದಾಹರಣೆ ಗಾಗಿ, ಈ ಕೆಳಗಿನ ಸಂಸ್ಕೃತ ವಾಕ್ಯಗಳನ್ನು ಗಮನಿಸಬಹುದು.
- (೯ಕ) ತತ್ರ ಏಕಃ ಕೃಷ್ಣಃ ಸರ್ಪಃ ಅಸ್ತಿ.
- ಅಲ್ಲಿ ಒಂದು ಕಪ್ಪು ಹಾವು ಇದೆ.
- (೧೦ಕ) ಹರಿಃ ಏಕಂ ಕೃಷ್ಣಂ ಸರ್ಪಂ ಅಪಶ್ಯತ್.
- ಹರಿ ಒಂದು ಕಪ್ಪು ಹಾವನ್ನು ನೋಡಿದ.
- (೧೧ಕ) ಹರಿಃ ಏಕೇನ ಕೃಷ್ಣೇನ ಸರ್ಪೇಣ ದಷ್ಟಃ.
- ಹರಿ ಒಂದು ಕಪ್ಪು ಹಾವಿನಿಂದ ಕಚ್ಚಲ್ಪಟ್ಟ.
ಮೇಲೆ ಕೊಟ್ಟಿರುವ (೯ಕ) ವಾಕ್ಯದಲ್ಲಿ ಏಕಃ ಕೃಷ್ಣಃ ಸರ್ಪಃ ‘ಒಂದು ಕಪ್ಪು ಹಾವು’ ಎಂಬ ನಾಮಪದಗುಚ್ಛ ಬಂದಿದ್ದು, ಅದರಲ್ಲಿರುವ ಮೂರು ಪದಗಳೂ ಪುಲ್ಲಿಂಗ-ಏಕವಚನ-ಪ್ರಥಮಾವಿಭಕ್ತಿ ಪ್ರತ್ಯಯದೊಂದಿಗೆ ಬಂದಿವೆ.
ಇದೇ ನಾಮಪದಗುಚ್ಛ (೧೦ಕ) ಮತ್ತು (೧೧ಕ) ವಾಕ್ಯಗಳಲ್ಲೂ ಬಂದಿದ್ದು, ಅದರಲ್ಲಿರುವ ಮೂರು ಪದಗಳೂ (೧೦ಕ) ವಾಕ್ಯದಲ್ಲಿ ಪುಲ್ಲಿಂಗ-ಏಕವಚನ- ದ್ವಿತೀಯಾವಿಭಕ್ತಿ ಪ್ರತ್ಯಯದೊಂದಿಗೂ (ಏಕಂ ಕೃಷ್ಣಂ ಸರ್ಪಂ ಎಂಬುದಾಗಿ), ಮತ್ತು (೧೧ಕ) ವಾಕ್ಯದಲ್ಲಿ ಪುಲ್ಲಿಂಗ-ಏಕವಚನ-ತೃತೀಯಾ ವಿಭಕ್ತಿ ಪ್ರತ್ಯಯ ದೊಂದಿಗೂ (ಏಕೇನ ಕೃಷ್ಣೇನ ಸರ್ಪೇಣ ಎಂಬುದಾಗಿ) ಬಂದಿವೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ, ಈ ಪದಗುಚ್ಛದ ಮೂರನೆಯ ಅಂಗವಾದ ಸರ್ಪಃ ‘ಹಾವು’ ಎಂಬ ಪದ ಮಾತ್ರವಲ್ಲದೆ ಅದರ ಮೊದಲನೆಯ ಅಂಗವಾದ ಏಕಃ ‘ಒಂದು’ ಎಂಬ ಪದ ಮತ್ತು ಎರಡನೆಯ ಅಂಗವಾದ ಕೃಷ್ಣಃ ‘ಕಪ್ಪು’ ಎಂಬ ಪದ - ಇವೆರಡೂ ಈ ರೀತಿ ಲಿಂಗ- ವಚನ-ವಿಭಕ್ತಿ ಪ್ರತ್ಯಯದೊಂದಿಗೆ ಬರಬೇಕಾಗಿದೆ. ಇದು ಸಂಸ್ಕೃತದಲ್ಲಿ ಪದಗುಚ್ಛಗಳನ್ನು ತಯಾರಿಸುವ ಒಂದು ನಿಯಮ.
ಕನ್ನಡ ಪದಗುಚ್ಛಗಳ ರಚನೆ ಇದಕ್ಕಿಂತ ತೀರ ಭಿನ್ನವಾದುದು. ಅವುಗಳಲ್ಲಿ ಬರುವ ಪದಗಳಲ್ಲಿ ಕೊನೆಯದಕ್ಕೆ ಮಾತ್ರ ವಿಭಕ್ತಿ ಪ್ರತ್ಯಯಗಳನ್ನು ಮತ್ತು ವಚನ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಿದೆ. ಮೇಲೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳ ಕನ್ನಡ ಅನುವಾದಗಳನ್ನು ಗಮನಿಸಿದೆವಾದರೆ ಈ ವಿಷಯ ಸ್ಪಷ್ಟವಾದೀತು. ಏಕಃ ಕೃಷ್ಣಃ ಸರ್ಪಃ ಎಂಬ ಸಂಸ್ಕೃತ ಪದಗುಚ್ಛದ
158
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಮೊದಲನೆಯ ಪದದ ಕನ್ನಡ ಅನುವಾದ ಒಂದು ಎಂಬುದು. ಈ ಪದ ಮೇಲೆ ಕೊಟ್ಟಿರುವ ಮೂರು ವಾಕ್ಯ ಗಳಲ್ಲೂ ಒಂದೇ ರೂಪದಲ್ಲಿ ಬಂದಿರುವುದನ್ನು ಗಮನಿಸಬಹುದು.
ಇದೇ ರೀತಿಯಲ್ಲಿ ಅದೇ ಪದಗುಚ್ಛದ ಎರಡನೆಯ ಪದದ ಅನುವಾದವಾದ ವಾಗಿರುವ ಕಪ್ಪು ಎಂಬ ಪದವೂ ಕನ್ನಡದ ಈ ಮೂರು ವಾಕ್ಯಗಳಲ್ಲೂ ಒಂದೇ ರೂಪದಲ್ಲಿ ಬಂದಿದೆ. ಅನ್ನು ಮತ್ತು ಇಂದ ಎಂಬ ವಿಭಕ್ತಿ ಪ್ರತ್ಯಯಗಳನ್ನು (೧೦ಕ) ಮತ್ತು (೧೧ಕ) ವಾಕ್ಯಗಳಲ್ಲಿ ಈ ಪದಗುಚ್ಛದ ಮೂರನೆಯ ಪದವಾದ ಹಾವು ಎಂಬುದಕ್ಕೆ ಮಾತ್ರವೇ ಸೇರಿಸಲಾಗಿದೆಯಲ್ಲದೆ, ಸಂಸ್ಕೃತದಲ್ಲಿರುವ ಹಾಗೆ ಮೊದಲನೆಯ ಮತ್ತು ಎರಡನೆಯ ಪದಗಳಿಗೆ ಸೇರಿಸಿಲ್ಲ ಎಂಬುದನ್ನು ಗಮನಿಸಬಹುದು.
ಕನ್ನಡದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಾದ ಬೇರೆಯೇ ಒಂದು ಪದವರ್ಗದಲ್ಲಿ ಬರುತ್ತವೆ ಮತ್ತು ನಾಮಪದಗಳೊಂದಿಗೆ ಅವನ್ನು ನೇರವಾಗಿ (ವಿಭಕ್ತಿ ಪ್ರತ್ಯಯಗಳ ಸಹಾಯವಿಲ್ಲದೆ) ಬಳಸಲು ಸಾಧ್ಯ ಎಂಬ ಕನ್ನಡ ವಾಕ್ಯರಚನೆಯ ನಿಯಮ ಮೇಲೆ ಕೊಟ್ಟಿರುವ ಸಂಸ್ಕೃತ ವಾಕ್ಯರಚನೆಯ ನಿಯಮಕ್ಕಿಂತ ಭಿನ್ನವಾಗಿರುವುದೇ ಈ ವ್ಯತ್ಯಾಸಕ್ಕೆ ಕಾರಣ.
ಸಂಸ್ಕೃತದಲ್ಲಿ ಏಕಃ ಕೃಷ್ಣಃ ಸರ್ಪಃ ಎಂಬ ಪದಗುಚ್ಛದ ಬದಲು ಏಕಃ ಕೃಷ್ಣಸರ್ಪಃ ಎಂಬುದಾಗಿ ಅದರಲ್ಲಿರುವ ಎರಡನೆಯ ಮತ್ತು ಮೂರನೆಯ ಪದ ಗಳನ್ನು ಒಟ್ಟು ಸೇರಿಸಿ ಒಂದು ಜೋಡುಪದವನ್ನಾಗಿ ಮಾಡಿ ಬಳಸಲು ಸಾಧ್ಯ ವಿದೆ. ಇಂತಹ ಜೋಡುಪದದಲ್ಲಿ ಮೊದಲನೆಯ ಅಂಗವಾಗಿ ಬರುವ ಪದ ತನ್ನ ಲಿಂಗ-ವಚನ-ವಿಭಕ್ತಿ ಪ್ರತ್ಯಯವನ್ನು ಕಳೆದುಕೊಳ್ಳುತ್ತದೆ ಎಂಬುದು ಸಂಸ್ಕೃತದ ಒಂದು ಪದರಚನೆಯ ನಿಯಮ. ಈ ಕಾರಣಕ್ಕಾಗಿ, ಕೃಷ್ಣಃ ಎಂಬ ಪದವನ್ನು ಒಂದು ಜೋಡುಪದದ ಅಂಗವಾಗಿ ಬಳಸಿದಾಗ ಅದು ಎಲ್ಲಾ ರೀತಿಯ ವಾಕ್ಯಗಳಲ್ಲೂ ಒಂದೇ ರೂಪದಲ್ಲಿ ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ (ಖ) ವಾಕ್ಯಗಳಲ್ಲಿ ಕಾಣಬಹುದು.
- (೯ಖ) ತತ್ರ ಏಕಃ ಕೃಷ್ಣಸರ್ಪಃ ಅಸ್ತಿ.
- ಅಲ್ಲಿ ಒಂದು ಕಪ್ಪು ಹಾವು ಇದೆ.
- (೧೦ಖ) ಹರಿಃ ಏಕಂ ಕೃಷ್ಣಸರ್ಪಂ ಅಪಶ್ಯತ್.
- ಹರಿ ಒಂದು ಕಪ್ಪು ಹಾವನ್ನು ನೋಡಿದ.
- (೧೧ಖ) ಹರಿಃ ಏಕೇನ ಕೃಷ್ಣಸರ್ಪೇಣ ದಷ್ಟಃ.
- ಹರಿ ಒಂದು ಕಪ್ಪು ಹಾವಿನಿಂದ ಕಚ್ಚಲ್ಪಟ್ಟ.
159
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮೇಲಿನ ಕನ್ನಡ ವಾಕ್ಯಗಳಲ್ಲಿ ಬಂದಿರುವ ಕಪ್ಪು ಹಾವು ಎಂಬ ಪದಗುಚ್ಛ ಸಂಸ್ಕೃತದ ಈ ಕೃಷ್ಣಸರ್ಪಃ ಎಂಬ ಜೋಡುಪದವನ್ನು ಹೋಲುವುದಾದ ಕಾರಣ (ಎರಡರಲ್ಲೂ ಮೊದಲಿನ ಅಂಗವಾಗಿ ಬರುವ ಪದದೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲವಾದ ಕಾರಣ) ಅದೂ ಕರ್ಮಧಾರಯವೆಂಬ ಸಮಾಸದಿಂದ ತಯಾರಾದ ಜೋಡುಪದವೆಂಬುದಾಗಿ ಕನ್ನಡ ವೈಯಾಕರಣಿಗಳೆಲ್ಲರೂ ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ನಿಜಕ್ಕೂ ಕಪ್ಪು ಹಾವು ಎಂಬುದು ಕನ್ನಡದ ವಾಕ್ಯ ರಚನೆಯ ನಿಯಮಗಳ ಪ್ರಕಾರ ತಯಾರಾದ ಪದಗುಚ್ಛವಲ್ಲದೆ ಜೋಡುಪದ ವಲ್ಲ. ಜೋಡುಪದಗಳಲ್ಲಿ ಕಾಣಿಸುವ ಗುಣಧರ್ಮಗಳಾವುವೂ ಅದರಲ್ಲಿ ಕಾಣಿ ಸುವುದಿಲ್ಲ.
ಇದೇ ರೀತಿಯಲ್ಲಿ ನಾಮಪದದೊಂದಿಗೆ ಗುಣಪದವೊಂದನ್ನು ಸೇರಿಸಿ ತಯಾರಿಸಿದ ದೊಡ್ಡ ಮನೆ, ಚಿಕ್ಕ ಪುಸ್ತಕ, ಕೆಂಪು ಶಾಯಿ, ಬಿಳಿ ಕಾಗದ ಮೊದಲಾದವುಗಳಲ್ಲಿ ಮೊದಲನೆಯ ಅಂಗವಾಗಿ ಬಂದಿರುವ ಪದ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿಲ್ಲವಾದರೂ ಕನ್ನಡದಲ್ಲಿ ಜೋಡುಪದಗಳಲ್ಲ, ಬರಿಯ ಪದಗುಚ್ಛಗಳು.
ಇಲ್ಲಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಅಂಗಗಳಾಗಿ ಬರುವ ಎರಡು ಪದಗಳನ್ನು ವಿಭಕ್ತಿ ಪ್ರತ್ಯಯವೊಂದು ಪ್ರತ್ಯೇಕಿಸುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ಸಂಸ್ಕೃತದಲ್ಲಿ ಪದಗುಚ್ಛಗಳನ್ನು ಜೋಡುಪದಗಳಿಂದ ಬೇರ್ಪಡಿಸಿ ಹೇಳಲು ಸಾಧ್ಯವಿದೆ, ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ.
೫.೮.೩ ವಿಶೇಷಣಗಳು ಮತ್ತು ವಿಶೇಷ್ಯಗಳು
ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳೆಂಬ ಎರಡು ಬೇರೆ ಬೇರೆ ಪದವರ್ಗಗಳಿಗೆ ಸೇರುವ ಪದಗಳಿಲ್ಲವಾದ ಕಾರಣ, ಅದರ ಪದಗುಚ್ಛಗಳಲ್ಲಿ ಬರುವ ಪದಗಳೊಳಗೆ ವಿಶೇಷಣ-ವಿಶೇಷ್ಯ ಸಂಬಂಧವನ್ನು ಕಲ್ಪಿಸುವುದು ಬಹಳ ಕಷ್ಟ. ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಕೃಷ್ಣಃ ಸರ್ಪಃ ಎಂಬ ಪದಗುಚ್ಛ ದಲ್ಲಿ ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದನ್ನು ನಿಷ್ಕೃಷ್ಟ ವಾಗಿ ತಿಳಿಸಿ ಹೇಳಲು ಸಾಧ್ಯವಾಗದು.
ಪದಗುಚ್ಛಗಳ ಮೊದಲನೆಯ ಸ್ಥಾನದಲ್ಲಿ ಬರುವ ಪದ ವಿಶೇಷಣವೆಂದು ಹೇಳುವುದಾದರೆ, ಸರ್ಪಃ ಕೃಷ್ಣಃ ಎಂಬುದಾಗಿ ಆ ಪದಗುಚ್ಛದಲ್ಲಿರುವ ಪದಗಳ ಸ್ಥಾನವನ್ನು ಬದಲಿಸಿ ಹೇಳಲು ಸಾಧ್ಯವಿದೆಯಾದ ಕಾರಣ, ಸರ್ಪಃ ಎಂಬ ಪದವೂ ಮೊದಲನೆಯ ಸ್ಥಾನಕ್ಕೆ ಬಂದು ವಿಶೇಷಣವೆಂದೆನಿಸಬಲ್ಲುದು. ಈ ಕಾರಣಕ್ಕಾಗಿ, ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದು ಇಂತಹ ಪದಗುಚ್ಛಗಳನ್ನು ಬಳಸುವವರ ದೃಷ್ಟಿಕೋನವನ್ನವಲಂಬಿಸಿದೆಯಲ್ಲದೆ ಅವುಗಳಲ್ಲಿ ಅಂಗಗಳಾಗಿ ಬರುವ ಪದಗಳ ಸ್ವರೂಪ ಇಲ್ಲವೇ ಗುಣಧರ್ಮ
160
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ವನ್ನವಲಂಬಿಸಿಲ್ಲ ಎಂಬುದಾಗಿ ಪತಂಜಲಿಯಂತಹ ಸಂಸ್ಕೃತ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದ ಪದಗುಚ್ಛಗಳು ಇದಕ್ಕಿಂತ ತೀರ ಭಿನ್ನವಾದವುಗಳು. ಕನ್ನಡದ ಕಪ್ಪು ಹಾವು ಎಂಬ ಪದಗುಚ್ಛದಲ್ಲಿ ಕಪ್ಪು ಎಂಬುದು ವಿಶೇಷಣವಾಗಿ ಮಾತ್ರವೇ ನಿಲ್ಲಬಲ್ಲುದು ಮತ್ತು ಹಾವು ಎಂಬುದು ವಿಶೇಷವಾಗಿ ಮಾತ್ರವೇ ನಿಲ್ಲಬಲ್ಲುದು. ಅದರಲ್ಲಿರುವ ಪದಗಳ ಸ್ಥಾನವನ್ನು ಬದಲಾಯಿಸಿ ಹಾವು ಕಪ್ಪು ಎಂದು ಹೇಳಿದೆವಾದರೆ ಅದು ಸಂಸ್ಕೃತದಲ್ಲಿರುವಂತೆ ಒಂದು ಪದಗುಚ್ಛವಾಗಿ ಉಳಿಯದೆ ಒಂದು ವಾಕ್ಯವಾಗಿಬಿಡುತ್ತದೆ.
ಕನ್ನಡದಲ್ಲಿ ಮೊದಲನೆಯ ಅಂಗ ನಾಮಪದವಾಗಿರುವ ಕೈದೀಪ, ತಾಯಿ ಮನೆ ಮೊದಲಾದ ಜೋಡುಪದಗಳಿಗೂ ಮತ್ತು ಮೊದಲನೆಯ ಅಂಗ ಗುಣ ಪದವಾಗಿರುವ ದೊಡ್ಡಮ್ಮ, ಬೆಣ್ಕಲ್ಲು ಮೊದಲಾದ ಜೋಡುಪದಗಳಿಗೂ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ. ಆದರೆ ಸಂಸ್ಕೃತದ ಜೋಡುಪದಗಳಲ್ಲಿ ಇಂತಹ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗದು. ಹಾಗಾಗಿ, ಗುಣಧರ್ಮವನ್ನು ಸೂಚಿಸುವ ಪದವೊಂದನ್ನು ಬಳಸಿ ರಚಿಸಿದ ಕೃಷ್ಣಸರ್ಪಃ ಎಂಬಂತಹ ಜೋಡು ಪದಗಳನ್ನು ಮಾತ್ರವಲ್ಲದೆ ವಸ್ತುವನ್ನು ಸೂಚಿಸುವ ಪದವೊಂದನ್ನು ಬಳಸಿ ರಚಿಸಿದ ಚಂದ್ರಮುಖಂ, ಗೋಗರ್ಭಿಣೀ ಎಂಬಂತಹ ಜೋಡುಪದಗಳನ್ನೂ ಸಂಸ್ಕೃತದ ವೈಯಾಕರಣಿಗಳು ಕರ್ಮಧಾರಯವೆಂದು ಪರಿಗಣಿಸಬೇಕಾಗಿದೆ.
ನಿಜಕ್ಕೂ ಕೃಷ್ಣಃ ಎಂಬ ಪದ ಸಂಸ್ಕೃತದಲ್ಲಿ ಕನ್ನಡದ ಕಪ್ಪು ಎಂಬ ಪದದ ಹಾಗೆ ಒಂದು ಗುಣಧರ್ಮವನ್ನು ಸೂಚಿಸುವುದಿಲ್ಲ. ಇದಕ್ಕೆ ಬದಲು ಆ ಗುಣಧರ್ಮವನ್ನು ಪಡೆದಿರುವ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಅದು ಸೂಚಿಸುತ್ತದೆ (೨.೨ ನೋಡಿ). ಹಾಗಾಗಿ, ಸಂಸ್ಕೃತದಲ್ಲಿ ಎರಡು ನಾಮಪದಗಳ ಸೇರಿಕೆಯಿಂದ ತಯಾರಾದ ತತ್ಪುರುಷಕ್ಕೂ ಮತ್ತು ಈ ಕರ್ಮಧಾರಯಕ್ಕೂ ನಡುವಿರುವ ವ್ಯತ್ಯಾಸ ಅವುಗಳ ಅಂಗಗಳಾಗಿ ಬರುವ ಪದಗಳು ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಯಾವ ವಿಭಕ್ತಿಯ ಮೂಲಕ ಸಂಬಂಧಿತವಾಗುತ್ತವೆ ಎಂಬುದು ಮಾತ್ರ. ಅವು ಪ್ರಥಮಾ ವಿಭಕ್ತಿಯ ಮೂಲಕ ಸಂಬಂಧಿತವಾಗುವು ವಾದರೆ ಕರ್ಮಧಾರಯವೆನಿಸುತ್ತವೆ ಮತ್ತು ಇತರ ವಿಭಕ್ತಿಗಳ ಮೂಲಕ ಸಂಬಂಧಿತವಾಗುವುವಾದರೆ ತತ್ಪುರುಷವೆನಿಸುತ್ತವೆ.
ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವೆ ಇಂತಹ ಜೊಡುಪದಗಳ ರಚನೆ ಯಲ್ಲಿ ಬಹಳ ಮುಖ್ಯವಾದ ವ್ಯತ್ಯಾಸಗಳಿವೆಯಾದ ಕಾರಣ, ಕನ್ನಡದ ಜೋಡು ಪದಗಳು ಸಂಸ್ಕೃತದ ಜೋಡುಪದಗಳ ಹಾಗೆಯೇ ಎಂಬುದಾಗಿ ಭ್ರಮಿಸಿ ಅವನ್ನು ವಿವರಿಸಲು ಯತ್ನಿಸಿದಲ್ಲಿ, ಮತ್ತು ಅವನ್ನು ಸಂಸ್ಕೃತದ ತತ್ಪುರುಷ, ಕರ್ಮಧಾರಯ ಮತ್ತು ದ್ವಿಗುಗಳೆಂಬ ಸಮಾಸಗಳೆಂಬ ಹೆಸರುಗಳನ್ನು ಬಳಸಿ ವಿಂಗಡಿಸಲು ಯತ್ನಿಸಿದಲ್ಲಿ ಅನವಶ್ಯಕವಾಗಿ ಗೊಂದಲವುಂಟಾಗದಿರದು.
161
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
೫.೮.೪ ಸುಬಂತ ಪ್ರತ್ಯಯ
ಸಂಸ್ಕೃತದ ನಾಮಪದಗಳು ಮನುಷ್ಯರನ್ನು ಗುರುತಿಸುತ್ತಿರಲಿ, ಇಲ್ಲವೇ ಬೇರೆ ಪ್ರಾಣಿ, ಮರ-ಗಿಡ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುತ್ತಿರಲಿ, ಅವುಗಳ ಲಿಂಗವೆಂಬುದು ಆ ಪದಗಳ ಕೊನೆಯ ಅಕ್ಷರವೆಂತಹದು ಮತ್ತು ಅವುಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಗೆ ಎಂತಹ ರೂಪವಿದೆ ಎಂಬ ವಿಷಯದ ಮೇಲೆ ಅವಲಂಬಿಸಿದೆ. ಆ ಪದಗಳ ಅರ್ಥವೇನು ಎಂಬುದು ಇಲ್ಲಿ ಪ್ರಾಮುಖ್ಯವಾದ ವಿಷಯವಲ್ಲ. ಕೆಳಗೆ ಕೊಟ್ಟಿರುವ ಸಂಸ್ಕೃತದ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗದ ಪದಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾದೀತು.
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗ ನೃಪಃ ‘ಅರಸು’ ಜನನೀ ‘ತಾಯಿ’ ಜ್ಞಾನಂ ‘ತಿಳುವಳಿಕೆ’ ವೃಕ್ಷಃ ‘ಮರ’ ಮಾಲಾ ‘ಮಾಲೆ’ ಉದಕಂ ‘ನೀರು’ ಅಶ್ವಃ ‘ಕುದುರೆ’ ಆಜ್ಞಾ ‘ಆಜ್ಞೆ’ ಬ್ರಹ್ಮ ‘ಪರಮಾತ್ಮ’ ಅನಿಲಃ ‘ಗಾಳಿ’ ಧನೂ ‘ಬಿಲ್ಲು’ ಕಲತ್ರಂ ‘ಹೆಂಡತಿ’ ದಾರಾಃ ‘ಹೆಂಡತಿ’ ಪತ್ನಿ ‘ಹೆಂಡತಿ’ ಪುರಂ ‘ಪಟ್ಟಣ’
ಇವುಗಳಲ್ಲಿ ದಾರಾಃ ‘ಹೆಂಡತಿ’ ಎಂಬ ಪದ ಬಹುವಚನದಲ್ಲಿ ಮಾತ್ರ ಬರುತ್ತದೆ.
ಸಂಸ್ಕೃತದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಸೂಚಿಸಲು ಕನ್ನಡದಲ್ಲಿರುವ ಹಾಗೆ ಬೇರೆ ಬೇರೆ ಪ್ರತ್ಯಯ ಗಳಿಲ್ಲ. ಇವು ಮೂರನ್ನೂ ಪದದ ಕೊನೆಯಲ್ಲಿ ಬರುವ ಸುಬಂತ ಎಂಬ ಹೆಸರಿನ ಒಂದೇ ಪ್ರತ್ಯಯ ಸೂಚಿಸುತ್ತದೆ. ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಪದಗಳೆಲ್ಲವೂ (ದಾರಾಃ ಎಂಬುದನ್ನು ಬಿಟ್ಟು) ಅಲ್ಲಿ ಸೂಚಿಸಿರುವ ಲಿಂಗವನ್ನು ಮಾತ್ರವಲ್ಲದೆ ಏಕವಚನ ಮತ್ತು ಪ್ರಥಮಾ ವಿಭಕ್ತಿಗಳನ್ನೂ ಸೂಚಿಸುವ ಪ್ರತ್ಯಯ ವೊಂದರೊಂದಿಗೆ ಬಂದಿವೆ.
ಕನ್ನಡದ ನಾಮಪದಗಳ ಲಿಂಗ ಭೇದ ಈ ರೀತಿ ಕೊನೆಯ ಅಕ್ಷರವನ್ನು ಇಲ್ಲವೇ ವಿಭಕ್ತಿ ಪ್ರತ್ಯಯದ ರೂಪವನ್ನು ಅವಲಂಬಿಸಿರದೆ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವರೂಪವನ್ನವಲಂಬಿಸಿದೆ. ಸಾಮಾನ್ಯವಾಗಿ ಗಂಡಸರನ್ನು ಗುರುತಿಸುವ ನಾಮಪದಗಳು ಪುಲ್ಲಿಂಗದಲ್ಲೂ, ಹೆಂಗಸರನ್ನು ಗುರುತಿಸುವ ನಾಮಪದಗಳು ಸ್ತ್ರೀಲಿಂಗದಲ್ಲೂ ಮತ್ತು ಉಳಿದ ನಾಮಪದಗಳು ನಪುಂಸಕ ಲಿಂಗದಲ್ಲೂ ಬರುತ್ತವೆಯೆಂದು ಕನ್ನಡದಲ್ಲಿ ಒಂದು ನಿಯಮವನ್ನು ಮಾಡಲು ಸಾಧ್ಯವಿದೆ. ಇದಕ್ಕೆ ಕೆಲವೇ ಕೆಲವು ಅಪವಾದಗಳು ಮಾತ್ರ ಇವೆ.
162
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಈ ಕಾರಣಕ್ಕಾಗಿ, ಕನ್ನಡದ ಅರ್ಥಕೋಶಗಳಲ್ಲಿ ನಾಮಪದಗಳ ಲಿಂಗ ಯಾವುದು ಎಂಬುದನ್ನು ಸೂಚಿಸುವ ಅವಶ್ಯಕತೆಯಿಲ್ಲ. ಆದರೆ ಸಂಸ್ಕೃತದ ಅರ್ಥಕೋಶದಲ್ಲಿ ಪ್ರತಿಯೊಂದು ನಾಮಪದದೆದುರು ಅದರ ಲಿಂಗ ಯಾವುದು ಎಂಬುದನ್ನು ಸೂಚಿಸುವುದು ಅತ್ಯವಶ್ಯ.
ಕನ್ನಡದಲ್ಲಿ ಬಹುವ್ರೀಹಿ ಎಂಬ ಹೆಸರಿನ ಸಮಾಸವಿದೆಯೇ ಅಥವಾ ಇಲ್ಲವೇ, ಮತ್ತು ಇದೆಯಾದರೆ ಅದಕ್ಕೆ ಕನ್ನಡ ವ್ಯಾಕರಣಗಳು ಕೊಡುವ ಚಲ ವಾದಿ, ಹಣೆಗಣ್ಣ, ಗೆಡ್ಡೆಮೂಗ ಮೊದಲಾದ ಜೋಡುಪದಗಳು ಉದಾಹರಣೆ ಗಳಾಗಬಲ್ಲುವೇ ಎಂಬುದನ್ನು ತಿಳಿಯಲು ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳ ಪ್ರಯೋಗದಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಒಂದು ಜೋಡುಪದದ ಕೇಂದ್ರ ಬಿಂದು ಆ ಪದದ ಅಂಗಗಳಾಗಿರುವ ಪದಗಳ ಮೇಲೆ ಬೀಳದೆ ಹೊರಗಿರುವ ಪದವೊಂದರ ಮೇಲೆ ಬಿದ್ದಿದೆಯಾದರೆ (ಎಂದರೆ ಹೊರಗಿರುವ ಪದ ‘ಪ್ರಧಾನ ಪದ’ವಾಗಿದೆಯಾದರೆ), ಅಂತಹ ಪದದ ತಯಾರಿಕೆಯಲ್ಲಿ ಬಹು ವ್ರೀಹಿ ಎಂಬ ಸಮಾಸ ವಿಧಾನ ಬಳಕೆಯಾಗಿದೆಯೆಂದು ಹೇಳಬಹುದು.
ಸಂಸ್ಕೃತದಲ್ಲಿ ಪೀತಾಂಬರಃ ಎಂಬ ಜೋಡುಪದ ಪೀತ ‘ಹಳದಿ’ ಮತ್ತು ಅಂಬರ ‘ಬಟ್ಟೆ’ ಎಂಬ ಎರಡು ಪದಗಳ ಜೋಡಣೆಯಿಂದ ತಯಾರಾಗಿದ್ದು, ಅದರ ಕೊನೆಯಲ್ಲಿ ಬಂದಿರುವ ವಿಸರ್ಗ ಅಸ್ ಎಂಬ ಪುಲ್ಲಿಂಗ-ಏಕವಚನ- ಪ್ರಥಮಾವಿಭಕ್ತಿ ಪ್ರತ್ಯಯವನ್ನು ಸೂಚಿಸುತ್ತದೆ. ವಚನ ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳು ಪದರೂಪ ಪ್ರತ್ಯಯಗಳಲ್ಲದೆ ಪದಪ್ರತ್ಯಯಗಳಲ್ಲ. ಹಾಗಾಗಿ ಪೀತಾಂಬರಃ ಎಂಬ ಪದದಲ್ಲಿ ಪೀತ ಮತ್ತು ಅಂಬರ ಎಂಬ ಎರಡು ಪದಗಳು ಮಾತ್ರ ಇವೆ. ಆದರೆ, ಇವುಗಳಲ್ಲಿ ಒಂದೂ ಈ ಪದದ ಕೇಂದ್ರ ಬಿಂದುವಾಗಿರಲು ಸಾಧ್ಯವಾಗದು. ಯಾಕೆಂದರೆ, ಈ ಪದಕ್ಕೆ ‘ಹಳದಿ ಬಟ್ಟೆಯನ್ನು ಉಟ್ಟಿರುವ ವ್ಯಕ್ತಿ’ ಎಂಬ ಅರ್ಥವಿದೆಯಲ್ಲದೆ ‘ಹಳದಿ ಬಟ್ಟೆ’ ಎಂಬ ಅರ್ಥವಿಲ್ಲ. ಹಾಗಾಗಿ, ಇದರ ಕೇಂದ್ರ ಬಿಂದು ಜೋಡುಪದದ ಹೊರಗಿರುವ ವ್ಯಕ್ತಿ ಎಂಬ ಪದದ ಮೇಲೆ ಬೀಳುತ್ತದಲ್ಲದೆ ಪೀತ ‘ಹಳದಿ’ ಇಲ್ಲವೇ ಅಂಬರ ‘ಬಟ್ಟೆ’ ಎಂಬ ಜೋಡುಪದದ ಅಂಗವಾಗಿರುವ ಪದದ ಮೇಲೆ ಬೀಳುವುದಿಲ್ಲ. ಹಾಗಾಗಿ ಇದು ಬಹುವ್ರೀಹಿ ಎಂಬ ಸಮಾಸಕ್ಕೆ ಉದಾಹರಣೆಯಾಗಬಲ್ಲುದು.
ಆದರೆ ಕನ್ನಡದಲ್ಲಿ ಇದಕ್ಕೆ ಸಮಾನವಾಗಿ ತೋರುವ ಹಣೆಗಣ್ಣ, ಚಲವಾದಿ ಮೊದಲಾದ ಜೋಡುಪದಗಳ ಕೊನೆಯಲ್ಲಿ ಬರುವ ಅ ಇಲ್ಲವೇ ಇ ಎಂಬ ಪ್ರತ್ಯಯಗಳು ಪದಪ್ರತ್ಯಯಗಳಲ್ಲದೆ ಪದರೂಪ ಪ್ರತ್ಯಯಗಳಲ್ಲ. ಹಾಗಾಗಿ ಇವು ಈ ಜೋಡುಪದಗಳ ಅಂಗಗಳಾಗಿರುತ್ತವೆ. ಚಲವಾದಿ ಎಂಬ ಜೋಡುಪದದಲ್ಲಿ ಚಲಿ ಮತ್ತು ವಾದಿ ಎಂಬ ಎರಡು ಪದಗಳನ್ನು ಸೇರಿಸಲಾಗಿದ್ದು, ಕೇಂದ್ರಬಿಂದು ವಾದಿ ಎರಡನೆಯ ಪದದ ಮೇಲೆ ಬೀಳುವ ಕಾರಣ ಅದು ತತ್ಪುರುಷಕ್ಕೆ ಉದಾಹರಣೆಯಾಗಬಲ್ಲುದಲ್ಲದೆ ಬಹುವ್ರೀಹಿಗೆ ಉದಾಹರಣೆಯಾಗಲಾರದು.
163
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಹಣೆಗಣ್ಣ ಎಂಬ ಪದವೂ ಹೀಗೆಯೇ. ಹೊಸಗನ್ನಡದಲ್ಲಿ ‘ಕಣ್ಣಿರುವವನು’ ಎಂಬ ಅರ್ಥದಲ್ಲಿ ಸ್ವತಂತ್ರವಾಗಿ ಕಣ್ಣ ಎಂಬ ಪದದ ಪ್ರಯೋಗವಿಲ್ಲದಿದ್ದರೂ, ಈ ಜೋಡುಪದದಲ್ಲಿ ಅಂತಹ ಪದದ ಪ್ರಯೋಗವಾಗಿದೆಯೆಂದೂ ಮತ್ತು ಆ ಪದವೇ ಅದರ ಕೇಂದ್ರ ಬಿಂದುವಾಗಿದೆಯೆಂದೂ ಇಲ್ಲಿ ಹೇಳಬೇಕಾಗುತ್ತದೆ.
೫.೮.೫ ಅವ್ಯಯೀಭಾವ ಸಮಾಸ
ಸಂಸ್ಕೃತದಲ್ಲಿ ಒಂದು ಅವ್ಯಯದೊಂದಿಗೆ ನಾಮಪದವೊಂದನ್ನು ಸೇರಿಸಿ ರಚಿಸಿದ ಯಥಾಶಕ್ತಿ, ಉಪಕೃಷ್ಣಂ, ಪ್ರತಿದಿನಂ, ಪರೋಕ್ಷಂ ಮೊದಲಾದ ಜೋಡುಪದ ಗಳನ್ನು ಅವ್ಯಯಿಭಾವವೆಂಬ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳು ಅವ್ಯಯಗಳಾಗಿ ಬಳಕೆಯಾಗುವುವಾದ ಕಾರಣ, ಅವುಗಳ ಕೇಂದ್ರ ಬಿಂದು ಅವುಗಳ ಮೊದಲನೆಯ ಅಂಗವಾಗಿರುವ ಅವ್ಯಯದ ಮೇಲೆ ಬೀಳುತ್ತದೆಯೆಂದು ಹೇಳಬಹುದು. ಉದಾಹರಣೆಗಾಗಿ, ಉಪಕೃಷ್ಣಂ ಎಂಬ ಪದಕ್ಕೆ ‘ಕೃಷ್ಣನ ಹತ್ತಿರ’ ಎಂಬ ಅರ್ಥವಿದ್ದು, ಅದರ ಕೇಂದ್ರ ಬಿಂದು ಉಪ ‘ಹತ್ತಿರ’ ಎಂಬ ಪದದ (ಅವ್ಯಯದ) ಮೇಲೆ ಬೀಳುತ್ತದೆ.
ಕನ್ನಡದಲ್ಲಿ ಈ ರೀತಿ ‘ಅವ್ಯಯ’ಗಳಾಗಿ ಬರುವ ಹಾಗೂ ಕೇಂದ್ರ ಬಿಂದು ಮೊದಲನೆಯ ಪದದ ಮೇಲೆ ಬೀಳುವ ಜೋಡುಪದಗಳಿಲ್ಲ. ಆದರೆ, ಸಂಸ್ಕೃದ ಅವ್ಯಯೀಭಾವ ಸಮಾಸದ ಇನ್ನೊಂದು ವೈಶಿಷ್ಟ್ಯದ ಆಧಾರದ ಮೇಲೆ ಕನ್ನಡ ದಲ್ಲೂ ಅವ್ಯಯೀಭಾವ ಸಮಾಸವನ್ನು ಕಾಣಲು ಕನ್ನಡದ ಕೆಲವರು ವೈಯಾ ಕರಣಿಗಳು ಪ್ರಯತ್ನಿಸಿದ್ದಾರೆ. ಯಥಾಶಕ್ತಿ, ಉಪಕೃಷ್ಣಂ ಮೊದಲಾದ ಜೋಡು ಪದಗಳ ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಅವ್ಯಯ ನಾಮಪದದ ಬಲಕ್ಕೆ ಬರುತ್ತದೆ, ಆದರೆ ಜೋಡುಪದಗಳಲ್ಲಿ ಇವುಗಳ ಸ್ಥಾನಪಲ್ಲಟವಾಗಿ, ಅವ್ಯಯ ನಾಮಪದದ ಎಡಕ್ಕೆ ಬರುತ್ತದೆ.
ಕನ್ನಡದಲ್ಲಿ ಈ ರೀತಿ ಜೋಡುಪದಗಳಿಗೂ ಮತ್ತು ಅವುಗಳ ಒಳನುಡಿ ಗಳಿಗೂ ನಡುವೆ ಅಂಗಗಳಾಗಿ ಬಂದಿರುವ ಪದಗಳ ಸ್ಥಾನದಲ್ಲಿ ಬದಲಾವಣೆ ಯನ್ನು ತೋರಿಸುವ ತುದಿನಾಲಿಗೆ (ನಾಲಿಗೆಯ ತುದಿ), ಹಿಂಗಾಲು (ಕಾಲಿನ ಹಿಂಭಾಗ), ನಡುಹಗಲು (ಹಗಲಿನ ನಡುಭಾಗ) ಮೊದಲಾದವುಗಳನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಗಳನ್ನಾಗಿ ಹೇಳಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಈ ಪದಗಳು ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅವ್ಯಯಗಳಲ್ಲ, ಅವ್ಯಯಗಳ ಅರ್ಥ ಕೊಡುವ ಗುಣಪದಗಳೂ ಅಲ್ಲ. ಕನ್ನಡದಲ್ಲಿ ಇವು ನಾಮ ಪದಗಳಾಗಿ ಮಾತ್ರವೇ ಬಳಕೆಯಲ್ಲಿವೆ. ಹಾಗಾಗಿ, ಇವುಗಳಲ್ಲಿ ಅವ್ಯಯಿ ಭಾವವೆಂಬ ಸಮಾಸವಿದೆಯೆಂದು ವಾದಿಸುವುದು ಸ್ವಲ್ಪ ಕಷ್ಟ. ಈ ಪದಗಳಲ್ಲಿ ಒಂದು ಅಂಗ ಇನ್ನೊಂದು ಅಂಗದ ‘ಅಂಶ’ (ಭಾಗ)ವೊಂದನ್ನು ಸೂಚಿಸುವುದಾದ
164
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ಕಾರಣ ಇವುಗಳಲ್ಲಿರುವ ಸಮಾಸವನ್ನು ‘ಅಂಶಿ’ ಎಂಬುದಾಗಿ ಕರೆಯಬಹುದೆಂದು ಬೇರೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇದರಲ್ಲೂ ಕೆಲವು ಸಮಸ್ಯೆಗಳಿವೆ. ಕನ್ನಡದಲ್ಲಿ ಬರುವ ಇಂತಹ ಎಲ್ಲಾ ಜೋಡುಪದಗಳಲ್ಲೂ ಈ ರೀತಿ ಮೊದಲನೆಯ ಅಂಗ ಎರಡನೆಯ ಅಂಗದ ‘ಅಂಶ’ವೊಂದನ್ನು ಗುರುತಿಸುವುದಿಲ್ಲ. ಉದಾಹರಣೆಗಾಗಿ ಚಿಕ್ಕಮ್ಮ ಎಂಬ ಪದ ಒಳರಚನೆಯಲ್ಲಿ ತುದಿನಾಲಿಗೆ ಎಂಬುದರ ಹಾಗೆಯೇ ಇದೆ ಯಾದರೂ ಅದರ ಮೊದಲನೆಯ ಅಂಗವಾಗಿ ಬಂದಿರುವ ಚಿಕ್ಕ ಎಂಬ ಪದ ಅಮ್ಮ ಎಂಬ ಎರಡನೆಯ ಪದ ಸೂಚಿಸುವ ವ್ಯಕ್ತಿಯ ಅಂಶವೊಂದನ್ನು ಸೂಚಿಸುವುದಿಲ್ಲ (೫.೬.೨(ಗ) ನೋಡಿ).
ಎರಡನೆಯದಾಗಿ, ‘ಅಂಶಿ’ ಎಂಬ ಸಮಾಸಕ್ಕೆ ಕನ್ನಡದ ವೈಯಾಕರಣಿಗಳು ಉದಾಹರಣೆಗಳಾಗಿ ಕೊಡುವ ಜೋಡುಪದಗಳಲ್ಲಿ ಕೆಲವನ್ನು ಮಾತ್ರ (ಉದಾ: ತುದಿನಾಲಿಗೆ) ‘ಮೊದಲನೆಯ ಪದ ಪ್ರಧಾನವಾಗಿರುವವುಗಳು’ ಎಂಬುದಾಗಿ ಪರಿಗಣಿಸಲು ಸಾಧ್ಯ. ಉಳಿದವುಗಳಲ್ಲಿ ಪ್ರಧಾನ ಪದ ಎರಡನೆಯದಿರಬಹುದು ಇಲ್ಲವೇ ಅವೆರಡು ಪದಗಳಿಗಿಂತಲೂ ಭಿನ್ನವಾಗಿರುವ ಹೊರಗಿನದೊಂದು ಪದ ವಿರಬಹುದು. ಹಾಗಾಗಿ, ಇಂತಹ ಪದಗಳನ್ನು ಕರ್ಮಧಾರಯ ಇಲ್ಲವೇ ಬಹು ವ್ರೀಹಿ ಎಂಬ ಸಮಾಸಕ್ಕೆ ಮಾತ್ರವೇ ಉದಾಹರಣೆಗಳೆಂದು ಹೇಳಲು ಸಾಧ್ಯ.
ಕೆಳದುಟಿ ಎಂಬ ಜೋಡುಪದದಲ್ಲಿ ಎರಡನೆಯ ಅಂಗ ಪ್ರಧಾನ ಪದ ವಾಗಿದೆ ಎಂಬುದನ್ನು ಸಾಧಿಸುವುದಕ್ಕಾಗಿ ಕೆಲವರು ವೈಯಾಕರಣಿಗಳು ಅದಕ್ಕೆ ತುಟಿಯ ಕೆಳಗು ಎಂಬುದಾಗಿ ವಿಗ್ರಹವಾಕ್ಯವನ್ನು ಕೊಟ್ಟಿದ್ದಾರೆ. ಆದರೆ ನಿಜಕ್ಕೂ ಕನ್ನಡದ ಕೆಳದುಟಿ ಎಂಬ ಪದ ಬಾಯಿಯಲ್ಲಿರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಸೂಚಿಸುವುದಲ್ಲದೆ, ತುಟಿಯ ಕೆಳಭಾಗವನ್ನು ಸೂಚಿಸುವುದಿಲ್ಲ. ಹಾಗಾಗಿ ಅದಕ್ಕೆ ತುಟಿಯ ಕೆಳಗು ಎಂಬುದಕ್ಕಿಂತಲೂ ಕೆಳಗಿನ ತುಟಿ ಎಂಬ ಒಳನುಡಿಯೇ ಸರಿ, ಮತ್ತು ಈ ಕಾರಣಕ್ಕಾಗಿ ಅದು ಕರ್ಮಧಾರಯಕ್ಕೆ ಉದಾಹರಣೆಯಾಗಬಲ್ಲುದಲ್ಲದೆ ಅಂಶಿ ಇಲ್ಲವೇ ಅವ್ಯಯಿಭಾವಕ್ಕೆ ಉದಾ ಹರಣೆಯಾಗಲಾರದು. ಹೊರಬಾಗಿಲು ಎಂಬ ಪದವೂ ಇದೇ ರೀತಿಯದು.
ಹಿಂಗಾಲು, ಹೊರಮೈ, ನಡುಹಗಲು ಮೊದಲಾದ ಬೇರೆ ಕೆಲವು ಜೋಡುಪದಗಳಲ್ಲಿ ಕಾಣಿಸುವ ಅಂಗಗಳಲ್ಲಿ ಯಾವುದೂ ಅವುಗಳ ಪ್ರಧಾನ ಪದವಾಗಿ ಇಲ್ಲವಾದ ಕಾರಣ, ಅವೂ ಕೂಡ ಅಂಶಿ ಇಲ್ಲವೇ ಅವ್ಯಯಿಭಾವ ಸಮಾಸಕ್ಕೆ ಉದಾಹರಣೆಗಳಾಗಲಾರವು. ನಡುಹಗಲು ಎಂಬ ಪದ ಹಗಲಿನ ನಡುವಿರುವ ಒಂದು ಭಾಗವನ್ನು ಗುರುತಿಸುವುದಾದ ಕಾರಣ, ಅದರ ಅಂಗ ಗಳಾಗಿ ಬಂದಿರುವ ನಡು ಇಲ್ಲವೇ ಹಗಲು ಎಂಬ ಎರಡು ಪದಗಳಲ್ಲಿ ಯಾವುದೂ ಅದರ ಪ್ರಧಾನ ಪದವೆನಿಸಲಾರದು. ಅವೆರಡಕ್ಕಿಂತಲೂ ಭಿನ್ನವಾದ ಭಾಗ ಎಂಬ ಪದದ ಮೇಲೆ ಆ ಜೋಡುಪದದ ಕೇಂದ್ರ ಬಿಂದು ಬೀಳುತ್ತದೆ. ಹಾಗಾಗಿ ಅದನ್ನೇ ಆ ಪದದ ಪ್ರಧಾನ ಪದವೆಂದು ಪರಿಗಣಿಸಬೇಕಾಗುತ್ತದೆ,
165
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮತ್ತು ಈ ಕಾರಣಕ್ಕಾಗಿ ಅದನ್ನು ಬಹುವ್ರೀಹಿ ಎಂಬ ಸಮಾಸಕ್ಕೆ ಉದಾಹರಣೆ ಯಾಗಿ ಕೊಡಬೇಕಾಗುತ್ತದೆ.
೫.೮.೬ ದ್ವಂದ್ವ ಸಮಾಸ
ಕನ್ನಡ ವ್ಯಾಕರಣಗಳಲ್ಲಿ ‘ದ್ವಂದ್ವ’ ಎಂಬ ಸಮಾಸಕ್ಕೆ ಕೊಟ್ಟಿರುವ ಉದಾಹರಣೆ ಗಳೆಲ್ಲ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ. ಸಂಸ್ಕೃತದಲ್ಲಿ ರಾಮ ಲಕ್ಷ್ಮಣ, ಮಾತಾಪಿತರ ಮೊದಲಾದವುಗಳನ್ನು ಜೋಡುಪದಗಳೆಂದು ಕರೆಯಲು ಅವುಗಳ ಅಂಗಗಳಾಗಿರುವ ಪದಗಳಲ್ಲಿ ಕೊನೆಯದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬರುವುವೆಂಬುದೇ ಕಾರಣ. ಕನ್ನಡದ ರಾಮಲಕ್ಷ್ಮಣರು, ಅಣ್ಣತಮ್ಮಂದಿರು ಎಂಬಂತಹವುಗಳಲ್ಲಿ ಇದೇ ರೀತಿಯಲ್ಲಿ ವಿಭಕ್ತಿಪ್ರತ್ಯಯ ಕೊನೆಯ ಪದದೊಂದಿಗೆ ಮಾತ್ರ ಬರುವುದಾದ ಕಾರಣ (ಉದಾ: ರಾಮಲಕ್ಷ್ಮಣ ರನ್ನು) ಅವನ್ನು ದ್ವಂದ್ವಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.
ಆದರೆ ಕನ್ನಡದಲ್ಲಿ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯದ ಬಳಕೆಯ ಆಧಾರದ ಮೇಲೆ ಜೋಡುಪದಗಳನ್ನು ಪದಗುಚ್ಛಗಳಿಂದ ಬೇರ್ಪಡಿಸಲು ಸಾಧ್ಯ ವಾಗದೆಂಬುದನ್ನು ನಾವು ಮೇಲೆಯೇ (೫.೮.೨ರಲ್ಲಿ) ನೋಡಿರುವೆವು. ಕನ್ನಡದ ರಾಮಲಕ್ಷ್ಮಣರು ಎಂಬಂತಹ ಬಳಕೆಗಳಲ್ಲಿ ಎರಡು ನಾಮಪದಗಳನ್ನು ಒಟ್ಟು ಸೇರಿಸಿ ಬಹುವಚನ ಪ್ರತ್ಯಯದೊಂದಿಗೆ ಹೇಳಲಾಗಿದೆಯಲ್ಲದೆ ಅವನ್ನು ಒಂದೇ ಪದವಾಗಿ ಪರಿವರ್ತಿಸಿಲ್ಲ. ಅವುಗಳ ಅರ್ಥವನ್ನೂ ನೇರವಾಗಿ ಅವುಗಳ ಒಳ ರಚನೆಯಿಂದಲೇನೇ ಪಡೆಯಲು ಸಾಧ್ಯವಿದೆ. ಹಾಗಾಗಿ ಇವು ಜೋಡುಪದಗಳಲ್ಲ.
೫.೮.೭ ಗಮಕ ಸಮಾಸ
ಕನ್ನಡಕ್ಕೇನೇ ವಿಶಿಷ್ಟವಾದುವೆಂದು ಹೇಳುವ ಗಮಕ ಮತ್ತು ಕ್ರಿಯಾಸಮಾಸಗಳ ಅವಸ್ಥೆಯೂ ಇದೇ ರೀತಿಯದು. ಅವುಗಳಿಗೆ ವೈಯಾಕರಣಿಗಳು ಕೊಡುವ ಇಪ್ಪತ್ತೈದು, ಕಿರಿಯ ಮಗ, ತೂಗುವ ತೊಟ್ಟಿಲು, ಕಂಡ ವಿಚಾರ ಮೊದ ಲಾದ ಉದಾಹರಣೆಗಳೆಲ್ಲ ಬರಿಯ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ. ಅವುಗಳಲ್ಲಿ ಎರಡು ಪದಗಳು ಒಟ್ಟಿಗೆ ಬಂದಿವೆಯೇನೋ ನಿಜ; ಆದರೆ ಅವು ಒಟ್ಟು ಸೇರಿ ಒಂದೇ ಪದವಾಗಿಲ್ಲ. ಎಂದರೆ, ಅವು ಕನ್ನಡದ ವಾಕ್ಯರಚನೆಯ ನಿಯಮಗಳಿಗೆ ಅನುಸಾರವಾಗಿ ಒಟ್ಟು ಸೇರಿವೆಯಲ್ಲದೆ, ಪದರಚನೆಯ ನಿಯಮ ಗಳಿಗೆ ಅನುಸಾರವಾಗಿ ಒಟ್ಟು ಸೇರಿಲ್ಲ.
ಕನ್ನಡದ ವೈಯಾಕರಣಿಗಳು ಇಲ್ಲಿಯೂ ಮೇಲೆ ಕರ್ಮಧಾರಯ ಸಮಾಸದ ವಿಷಯದಲ್ಲಿ ಮಾಡಿರುವಂತಹ ತಪ್ಪನ್ನೇ ಮಾಡಿದ್ದಾರೆ (೫.೮.೨ ನೋಡಿ). ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯರಚನೆಯಲ್ಲಿ ಕಾಣಿಸುವ ಅತ್ಯಂತ ಪ್ರಾಮುಖ್ಯವಾದ ವ್ಯತ್ಯಾಸವೊಂದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದೇ ಇದಕ್ಕೆ ಕಾರಣ. ಕ್ರಿಯಾಪದಗಳ ಸಂಬಂಧಕ ರೂಪ
166
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
ವನ್ನು (ಮಾಡುವ, ಮಾಡಿದ, ಮಾಡದ ಎಂಬಂತಹ ಕ್ರಿಯಾರೂಪಗಳನ್ನು) ಬಳಸುವಲ್ಲಿ ಈ ಎರಡು ಭಾಷೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಕೆಳಗಿನ ವಾಕ್ಯಗಳಿಂದ ತಿಳಿಯಬಹುದು.
- (೧೨ಕ) ತತ್ರ ಏಕಃ ಮೃತಃ ಸರ್ಪಃ ಅಸ್ತಿ.
- ಅಲ್ಲಿ ಒಂದು ಸತ್ತ ಹಾವು ಇದೆ.
- (೧೩ಕ) ರಾಮಃ ಏಕಂ ಮೃತಂ ಸರ್ಪ೦ ಅಪಶ್ಯತ್.
- ರಾಮ ಒಂದು ಸತ್ತ ಹಾವನ್ನು ನೋಡಿದ.
- (೧೪ಕ) ರಾಮಃ ಏಕೇನ ಮೃತೇನ ಸರ್ಪೇಣ ಭೀತಃ.
- ರಾಮ ಒಂದು ಸತ್ತ ಹಾವಿಗೆ ಹೆದರಿದ.
- (೧೫ಕ) ರಾಮಃ ಏಕಸ್ಯ ಮೃತಸ್ಯ ಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್.
- ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ.
ಮೇಲಿನ ವಾಕ್ಯಗಳಲ್ಲಿ ಮೃತಃ ಎಂಬುದು ಸಂಸ್ಕೃತದ ‘ಕೃದಂತ’ ಎಂಬ ಹೆಸರಿನ ಸಂಬಂಧಕ ಕ್ರಿಯಾರೂಪ (ಅದು ಸಾಯುವ ಘಟನೆಯನ್ನು ಸರ್ಪಃ ‘ಹಾವು’ ಎಂಬುದರೊಂದಿಗೆ ಸಂಬಂಧಿಸುತ್ತದೆ); ಇದೇ ಕೆಲಸವನ್ನು ಮಾಡುವುದ ಕ್ಕಾಗಿ ಕನ್ನಡದಲ್ಲಿ ಸತ್ತ ಎಂಬ ರೂಪ ಬಳಕೆಯಲ್ಲಿದೆ. ಇವುಗಳಲ್ಲಿ ಸಂಸ್ಕೃತದ ಮೃತಃ ಎಂಬುದು ಬೇರೆ ಬೇರೆ ವಾಕ್ಯಗಳಲ್ಲಿ ಬೇರೆ ಬೇರೆ ಲಿಂಗ-ವಚನ- ವಿಭಕ್ತಿಗಳೊಂದಿಗೆ ಬಂದಿದೆಯಾದರೆ, ಕನ್ನಡದ ಸತ್ತ ಎಂಬುದು ಎಲ್ಲಾ ವಾಕ್ಯ ಗಳಲ್ಲೂ ಒಂದೇ ರೂಪದಲ್ಲಿ ಬಂದಿದೆ.
ಕನ್ನಡದಲ್ಲಿ ಸಂಸ್ಕೃತದ ಹಾಗೆ ಸಂಬಂಧಕಗಳಿಗೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ ಮಾತ್ರವಲ್ಲ, ಹಾಗೆ ಸೇರಿಸಲು ಸಾಧ್ಯವೂ ಇಲ್ಲ. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಸಂಬಂಧಕಗಳು ಗುಣಪದಗಳ ಹಾಗೆ ಬಳಕೆಯಾಗುತ್ತವಲ್ಲದೆ ಸಂಸ್ಕೃತದಲ್ಲಿರುವಂತೆ ನಾಮ ಪದಗಳ ಹಾಗೆ ಬಳಕೆಯಾಗುವುದಿಲ್ಲ. ನಾಮಪದಗಳ ಹಾಗೆ ಬಳಕೆಯಾಗಲು ಅವಕ್ಕೆ ಅವನು, ಅದು ಮೊದಲಾದ ಸರ್ವನಾಮಗಳನ್ನು ಸೇರಿಸಿಕೊಳ್ಳಬೇಕಾಗು ಇದೆ (ಉದಾ: ಸತ್ತುದನ್ನು, ಸತ್ತುದಕ್ಕೆ, ಸತ್ತುದರಿಂದ, ಸತ್ತುದರಲ್ಲಿ, ಇತ್ಯಾದಿ).
ಸಂಸ್ಕೃತದ ಸಂಬಂಧಕ ಕ್ರಿಯಾರೂಪಗಳನ್ನು ಅವಕ್ಕೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆಯೂ ಬಳಸಲು ಸಾಧ್ಯವಿದೆ. ಆದರೆ ಅಂತಹ ಬಳಕೆ ಗಳನ್ನು ಮೇಲೆ ಕೊಟ್ಟಿರುವ ಬಳಕೆಗಳಿಂದ ಭಿನ್ನವಾದವುಗಳೆಂದು ತೋರಿಸುವು
167
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ದಕ್ಕಾಗಿ ಜೋಡುಪದಗಳೆಂದು ಪರಿಗಣಿಸುವ ಅವಶ್ಯಕತೆಯಿದೆ. ಇಂತಹ ಬಳಕೆ ಗಳನ್ನು ಕೆಳಗಿನ (ಖ) ವಾಕ್ಯಗಳಲ್ಲಿ ಕಾಣಬಹುದು.
- (೧೨ಖ) ತತ್ರ ಏಕಃ ಮೃತಸರ್ಪಃ ಅಸ್ತಿ.
- ಅಲ್ಲಿ ಒಂದು ಸತ್ತ ಹಾವು ಇದೆ.
- (೧೩ಖ) ರಾಮಃ ಏಕಂ ಮೃತಸರ್ಪ೦ ಅಪಶ್ಯತ್.
- ರಾಮ ಒಂದು ಸತ್ತ ಹಾವನ್ನು ನೋಡಿದ.
- (೧೪ಖ) ರಾಮಃ ಏಕೇನ್ ಮೃತಸರ್ಪೇಣ ಭೀತಃ.
- ರಾಮ ಒಂದು ಸತ್ತ ಹಾವಿಗೆ ಹೆದರಿದ.
- (೧೫ಖ) ರಾಮಃ ಏಕಸ್ಯ ಮೃತಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್.
- ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ.
ಮೇಲೆ (೧೨ಖ-೧೫ಖ)ಗಳಲ್ಲಿ ಕೊಟ್ಟಿರುವ ಎಲ್ಲಾ ಸಂಸ್ಕೃತ ವಾಕ್ಯ ಗಳಲ್ಲೂ ಮೃತ ಎಂಬ ಸಂಬಂಧಕ (ಕೃದಂತ) ರೂಪ ಲಿಂಗ-ವಚನ-ವಿಭಕ್ತಿ ಪ್ರತ್ಯಯವಿಲ್ಲದೆ ನೇರವಾಗಿ ಸರ್ಪ ಎಂಬ ನಾಮಪದದೊಂದಿಗೆ ಬಂದಿರುವುದನ್ನು ಕಾಣಬಹುದು. ಇದಕ್ಕೆ ಮೊದಲೇ ಕೊಟ್ಟಿರುವ (೧೨ಕ-೧೫ಕ) ವಾಕ್ಯಗಳಲ್ಲಿ ಈ ಪದದೊಂದಿಗೆ ಬೇರೆ ಬೇರೆ ವಿಭಕ್ತಿಪ್ರತ್ಯಯಗಳು ಬಂದಿದ್ದು, ಅವು ಇಲ್ಲಿ ಬಿದ್ದು ಹೋಗಿರುವುದು ಸಂಸ್ಕೃತದ ಮಟ್ಟಿಗೆ ಒಂದು ಪದರಚನೆಯ ನಿಯಮವೆಂದು ವೈಯಾಕರಣಿಗಳ ಅಭಿಪ್ರಾಯಪಟ್ಟಿದ್ದಾರೆ, ಮತ್ತು ಈ ಕಾರಣಕ್ಕಾಗಿ ಮೃತಸರ್ಪ ಎಂಬ ಪದದಲ್ಲಿ ಮೃತ ಮತ್ತು ಸರ್ಪ ಎಂಬ ಎರಡು ಪದಗಳು ಸಮಾಸವೆಂಬ ಪದರಚನೆಯ ವಿಧಾನದ ಮೂಲಕ ಒಟ್ಟುಸೇರಿವೆಯೆಂದು ಅವರು ವಾದಿಸು ತ್ತಾರೆ.
ಕನ್ನಡದ ಸತ್ತ ಹಾವು ಎಂಬುದು (೧೨ಖ-೧೫ಖ)ಗಳಲ್ಲಿ ಇದರ ಹಾಗೆಯೇ ಕಾಣಿಸುವುದಾದರೂ ಅದು ಒಂದು ಪದಗುಚ್ಛವಲ್ಲದೆ ಜೋಡುಪದ ವಲ್ಲ. ಯಾಕೆಂದರೆ, ಇಲ್ಲಿ ಸತ್ತ ಎಂಬ ಪದ ಲಿಂಗ-ವಚನ-ವಿಭಕ್ತಿ ಪ್ರತ್ಯಯ ಗಳೊಂದಿಗೆ ಬಾರದಿರುವುದಕ್ಕೆ ಮೇಲೆ ಸೂಚಿಸಿರುವಂತೆ ಕಾರಣ ಬೇರೆಯೇ ಇದೆ. ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಈ ಪ್ರಾಮುಖ್ಯವಾದ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಈ ರೀತಿ ಕ್ರಿಯಾಪದಗಳ ಸಂಬಂಧಕ ರೂಪಗಳನ್ನೊಳಗೊಂಡಿರುವ ಪದಗುಚ್ಛಗಳನ್ನು ಗಮಕ ಸಮಾಸದಲ್ಲಿ ಬಂದಿರುವ ಜೋಡುಪದಗಳೆಂದು ಭಾವಿಸಲು ಕಾರಣವಿರಬೇಕು.
168
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಜೋಡುಪದಗಳು
೫.೮.೮ ಕ್ರಿಯಾಸಮಾಸ
ಸಂಸ್ಕೃತದಲ್ಲಿಲ್ಲದ ಕ್ರಿಯಾಸಮಾಸವೆಂಬ ಇನ್ನೊಂದು ರೀತಿಯ ಪದರಚನೆಯ ವಿಧಾನವೂ ಕನ್ನಡದಲ್ಲಿದೆಯೆಂದು ಅದರೆ ವೈಯಾಕರಣಿಗಳು ಹೇಳಿರುವುದು ಇಂತಹದೇ ಕಾರಣದಿಂದ ಎಂದು ಹೇಳಬಹುದು. ಮರವೇರು, ಕೈಮುಗಿ, ನಿದ್ದೆ ಮಾಡು ಮೊದಲಾದವುಗಳನ್ನು ಈ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡ ಲಾಗಿದೆ. ಆದರೆ ಇಲ್ಲಿ ಮೊದಲನೆಯ ಪದದೊಂದಿಗೆ ಬಂದಿದ್ದ ಅನ್ನು ಎಂಬ ವಿಭಕ್ತಿ ಪ್ರತ್ಯಯ ಬಿದ್ದುಹೋಗಿರುವುದು ಕನ್ನಡದ ಒಂದು ವಾಕ್ಯರಚನೆಯ ನಿಯಮದ ಆಧಾರದ ಮೇಲಲ್ಲದೆ, ಪದರಚನೆಯ ನಿಯಮದ ಆಧಾರದ ಮೇಲಲ್ಲ.
ಇದಲ್ಲದೆ, ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಸ್ಥಾನಗಳಿಗೆ ವರ್ಗಾಯಿಸಿದಾಗ, ಇಲ್ಲವೇ ಅವುಗಳೊಂದಿಗೆ ಒತ್ತಿಹೇಳುವ ಅರ್ಥವಿರುವ ಊ ಎಂಬ ಪ್ರತ್ಯಯವನ್ನು ಬಳಸಿದಾಗ, ಹೀಗೆ ಬಿದ್ದು ಹೋದ ಅನ್ನು ಎಂಬ ಪ್ರತ್ಯಯ ಪುನಃ ಕಾಣಿಸಿಕೊಳ್ಳುತ್ತದೆ. ಉದಾ:
- (೧೬ಕ) ರಾಜು ನಿನ್ನೆ ಸರಿಯಾಗಿ ನಿದ್ದೆ ಮಾಡಿರಲಿಲ್ಲ.
- (೧೬ಖ) ರಾಜು ನಿನ್ನೆ ನಿದ್ದೆಯನ್ನು ಸರಿಯಾಗಿ ಮಾಡಿರಲಿಲ್ಲ.
- (೧೭ಕ) ರಾಜು ದೇವರಿಗೆ ಹೂಹಾಕಿ ಕೈಮುಗಿದ.
- (೧೭ಖ) ರಾಜು ದೇವರಿಗೆ ಹೂವನ್ನೂ ಹಾಕಿದ, ಕೈಯನ್ನೂ ಮುಗಿದ.
ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಸ್ಥಾನಗಳಿಗೆ ವರ್ಗಾಯಿಸಲು ಇಲ್ಲವೇ ಅವುಗಳಲ್ಲಿ ಮೊದಲಿನದರೊಂದಿಗೆ ಊ ಎಂಬ ಒತ್ತಿಹೇಳುವ ಪ್ರತ್ಯಯವನ್ನು ಸೇರಿಸಿ ಬಳಸಲು ಸಾಧ್ಯವಾಗದೆಂಬುದನ್ನು ಇಲ್ಲಿ ಗಮನಿಸಬಹುದು.
ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಕೆಲವು ಕ್ರಿಯಾಪದಗಳಲ್ಲಿ (ಉದಾ: ಮರೆಹೊಗು) ಈ ರೀತಿ ಮೊದಲನೆಯ ಅಂಗದೊಂದಿಗೆ ಅನ್ನು ಎಂಬ ಪ್ರತ್ಯಯ ವನ್ನು ಬಳಸಲು ಸಾಧ್ಯವಾಗದಿರಬಹುದು. ಆದರೆ ಇವನ್ನು ಜೋಡುಪದಗಳೆಂದು ಪರಿಗಣಿಸದೆ ನುಡಿಗಟ್ಟುಗಳೆಂದು ಪರಿಗಣಿಸುವುದೇ ಉತ್ತಮ. ಸಮಾಸವೆಂಬ ಪದರಚನೆಯ ವಿಧಾನದ ಮೂಲಕ ‘ಜೋಡು’ಕ್ರಿಯಾಪದಗಳನ್ನು ತಯಾರಿಸ ದಿರಲು ಕಾರಣವೇನೆಂಬುದನ್ನು ಆರನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.
೫.೯ ಸಾರಾಂಶ
ಎರಡು ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡಿರುವ ನಾಮಪದ ಗಳನ್ನು ಜೋಡುಪದಗಳೆಂದು ಕರೆಯಬಹುದು. ಕನ್ನಡದಲ್ಲಿ ಇಂತಹ ಪದಗಳು
169
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಹಲವಿದ್ದು, ಅವುಗಳಲ್ಲಿ ಎರಡನೆಯ ಅಂಗ ಹೆಚ್ಚಿನ ಕಡೆಗಳಲ್ಲೂ ನಾಮಪದ ವಾಗಿರುತ್ತದೆ. ಮೊದಲನೆಯ ಅಂಗ ಮಾತ್ರ ನಾಮಪದವಿರಬಹುದು, ಕ್ರಿಯಾಪದ ವಿರಬಹುದು ಇಲ್ಲವೇ ಗುಣಪದವಿರಬಹುದು. ಈ ವಿಷಯವನ್ನು ಬಳಸಿ ಕನ್ನಡದ ಜೋಡುಪದಗಳನ್ನು ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಲು ಸಾಧ್ಯವಿದೆ.
ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡುಪದಗಳ ವರ್ಣನೆ ಗಳು (ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಿರುವ ಸಮಾಸ ಎಂಬ ಪದ ರಚನೆಯ ವಿಧಾನದ ವರ್ಣನೆಗಳು) ಈ ವಿಷಯಕ್ಕೆ ಜಾಸ್ತಿ ಗಮನ ಕೊಟ್ಟಿಲ್ಲ. ಇದಕ್ಕೆ ಬದಲು, ಸಂಸ್ಕೃತ ವ್ಯಾಕರಣಗಳನ್ನನುಸರಿಸಿ, ಜೋಡುಪದದ ಅಂಗ ಗಳಾಗಿ ಬಂದಿರುವ ಪದಗಳಲ್ಲಿ ಯಾವುದು ‘ಪ್ರಧಾನ ಪದ’ ಎಂಬ ವಿಷಯಕ್ಕೆ ಅವು ಹೆಚ್ಚಿನ ಗಮನ ಕೊಟ್ಟಿವೆ. ಇದರಿಂದಾಗಿ ಅವುಗಳಲ್ಲಿ ಬರುವ ಜೋಡುಪದ ಗಳ ವರ್ಣನೆ ಕನ್ನಡದ ಮಟ್ಟಿಗೆ ಅಷ್ಟೊಂದು ತೃಪ್ತಿಕರವಾಗಿಲ್ಲ.
170
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ಆರು
ಕ್ರಿಯಾಪದಗಳ ಒಳರಚನೆ
ಓ.೧ ಪೀಠಿಕೆ
ಕನ್ನಡದ ಕ್ರಿಯಾಪದಗಳನ್ನೂ ನಾಮಪದಗಳ ಹಾಗೆ ಒಳರಚನೆಯಿರುವವುಗಳು ಮತ್ತು ಇಲ್ಲದವುಗಳು ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಮುಂದಾಗು ಎಂಬ ಕ್ರಿಯಾಪದದಲ್ಲಿ ಮುಂದೆ ಎಂಬ ಗುಣಪದವೂ ಮತ್ತು ಆಗು ಎಂಬ ಕ್ರಿಯಾಪದವೂ ಸೇರಿಕೊಂಡಿವೆ; ಹಂಬಲಿಸು ಎಂಬ ಕ್ರಿಯಾಪದದಲ್ಲಿ ಹಂಬಲ ಎಂಬ ನಾಮಪದವೂ ಮತ್ತು ಇಸು ಎಂಬ ಪ್ರತ್ಯಯವೂ ಸೇರಿಕೊಂಡಿವೆ.
ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ನಡುವಿರುವ ಒಂದು ಮುಖ್ಯ ವ್ಯತ್ಯಾಸವೇನೆಂದರೆ, ಒಳರಚನೆಯಿರುವ ಕ್ರಿಯಾಪದಗಳ ಅರ್ಥವನ್ನು ಹೆಚ್ಚಿನ ಸಂದರ್ಭಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಇಲ್ಲವೇ ಪ್ರತ್ಯಯಗಳ ಸಹಾಯದಿಂದ ಪಡೆಯಲು ಸಾಧ್ಯವಿದೆ. ಇದಕ್ಕೆ ಕೆಲವೇ ಕೆಲವು ಅಪವಾದಗಳಿದ್ದು, ಅವನ್ನು ‘ನುಡಿಗಟ್ಟು’ಗಳೆಂದು ಪರಿಗಣಿಸಲು ಸಾಧ್ಯ ವಿದೆ. ಒಳರಚನೆಯಿರುವ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಜೋಡು ಪದ ಮತ್ತು ಪದಗುಚ್ಛ ಎಂಬ ಭೇದ (೫.೨ ನೋಡಿ) ಒಳರಚನೆಯಿರುವ ಈ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.
೬.೧.೧ ಕ್ರಿಯಾಪದಗಳ ಕೆಲಸ
ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ನಡುವೆ ಅವುಗಳ ಒಳರಚನೆ ಯಲ್ಲಿ ಕಾಣಿಸುವ ಈ ಪ್ರಾಮುಖ್ಯವಾದ ವ್ಯತ್ಯಾಸಕ್ಕೆ ಅವು ವಾಕ್ಯದಲ್ಲಿ ನಡೆಸ ಬೇಕಾಗಿರುವ ಕೆಲಸಗಳು ಬೇರೆ ಬೇರಾಗಿರುವುದೇ ಮುಖ್ಯ ಕಾರಣ. ನಾಮಪದ ಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಾಗಿದೆಯಾದ ಕಾರಣ, ಅವುಗಳನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ಬೇರೆ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಬೇರೆ ವಿಧಾನಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ, ಅವನ್ನು ನೇರವಾಗಿ ಬಳಸಿದಾಗಲೆಲ್ಲ ಅವು ಹೆಸರಿಸುವ ಕೆಲಸವನ್ನೂ ಮತ್ತು ಪದಗುಚ್ಛ ಗಳ ರೂಪದಲ್ಲಿ ಬಳಸಿದಾಗ ವರ್ಣಿಸುವ ಕೆಲಸವನ್ನೂ ನಡೆಸುತ್ತವೆಯೆಂಬುದನ್ನು ನಾವು ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು.
ವಾಕ್ಯಗಳಲ್ಲಿ ಕ್ರಿಯಾಪದಗಳು ನಡೆಸಬೇಕಾಗಿರುವ ಕೆಲಸ ಇದಕ್ಕಿಂತ ತೀರ ಭಿನ್ನವಾದುದು. ಅವು ವಾಕ್ಯದ ಪ್ರಧಾನ ಪದವಾಗಿ ಬೇರೆ ಬೇರೆ ರೀತಿಯ ಘಟನೆ ಗಳನ್ನು ವರದಿ ಮಾಡಬೇಕಾಗುತ್ತದೆ, ಇಲ್ಲವೇ ಕೇಳುವುದು, ಬೇಡುವುದು, ಬಯಸುವುದು, ಅಲ್ಲಗಳೆಯುವುದು ಮೊದಲಾದ ಬೇರೆ ಬೇರೆ ರೀತಿಯ ‘ಮಾತಿನ ಕೆಲಸ’ಗಳಲ್ಲಿ ಅವನ್ನು ತೊಡಗಿಸಬೇಕಾಗುತ್ತದೆ. ಕ್ರಿಯಾಪದಗಳು ನಡೆಸ ಬಲ್ಲ ಇಂತಹ ಬೇರೆ ಬೇರೆ ರೀತಿಯ ಕೆಲವು ಮಾತಿನ ಕೆಲಸಗಳನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
- (೧ಕ) ರಾಜು ಪೇಟೆಗೆ ಹೋಗಿದ್ದಾನೆ.
- (೧ಖ) ರಾಜು ಪೇಟೆಗೆ ಹೋಗಿದ್ದಾನೋ?
- (೧ಗ) ರಾಜು ಪೇಟೆಗೆ ಹೋಗಲಿ.
- (೧ಘ) ರಾಜು ಪೇಟೆಗೆ ಹೋಗಲಿಲ್ಲ.
- (೧ಜ) ರಾಜು ಪೇಟೆಗೆ ಹೋಗಬಾರದು.
ಇಂತಹ ಬೇರೆ ಬೇರೆ ರೀತಿಯ ಮಾತಿನ ಕೆಲಸಗಳಲ್ಲಿ ಬರುವ ಘಟನೆಗಳು ವ್ಯಕ್ತಿ, ವಸ್ತು ಮೊದಲಾದವುಗಳ ಹಾಗೆ ಸ್ಥಾಯಿ (ಎಂದರೆ ಬದಲಾಗದ) ರೂಪದ ಲ್ಲಿರುವ ಬದಲು ಅಸ್ಥಾಯಿ ರೂಪದಲ್ಲಿರುತ್ತವೆ. ಹಾಗಾಗಿ, ವ್ಯಕ್ತಿ, ವಸ್ತು ಮೊದಲಾದವುಗಳಿಗೆ ನಾಮಪದಗಳ ಮೂಲಕ ಹೆಸರುಗಳನ್ನು ಕೊಡುವ ಹಾಗೆ, ಘಟನೆಗಳಿಗೆ ಕ್ರಿಯಾಪದಗಳ ಮೂಲಕ ಹೆಸರುಗಳನ್ನು ಕೊಡಲು ಸಾಧ್ಯ ವಾಗುವುದಿಲ್ಲ. ವರ್ಣನೆಯೆಂಬುದೊಂದೇ ಅವುಗಳ ಬಳಕೆಯಲ್ಲಿ ಕಾಣಿಸಿ ಕೊಳ್ಳುವ ವಿಧಾನ. ಈ ಕಾರಣಕ್ಕಾಗಿ ಒಳರಚನೆಯಿರುವ ಕ್ರಿಯಾಪದಗಳ ಅರ್ಥ ವನ್ನು ಹೆಚ್ಚಿನ ಸಂದರ್ಭಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಅರ್ಥದಿಂದಲೇನೇ ಪಡೆಯಲು ಸಾಧ್ಯವಾಗುತ್ತದೆ.
ನಾಮಪದಗಳನ್ನು ಪ್ರಾಮುಖ್ಯವಾಗಿ ಅಂಕಿತನಾಮ ಮತ್ತು ರೂಢನಾಮ ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದನ್ನು ನಾವು (೩.೫)ರಲ್ಲಿ ನೋಡಿರುವೆವು. ಅವು ಹೆಸರಿಸುವ ಪ್ರತಿಯೊಂದು ವ್ಯಕ್ತಿ, ವಸ್ತು ಮೊದಲಾದುವಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಬಂಧಿತವಾಗಿವೆಯಾದರೆ ಅಂಕಿತನಾಮಗಳು ಮತ್ತು ಒಟ್ಟಿಗೆ ಒಂದೇ ಬಾರಿ ಸಂಬಂಧಿತವಾಗಿವೆಯಾದರೆ ರೂಢನಾಮಗಳು ಎಂಬುದಾಗಿ ಈ ಎರಡು ರೀತಿಯ ನಾಮಪದಗಳ ನಡುವಿರುವ ಮುಖ್ಯ ವ್ಯತ್ಯಾಸವನ್ನು ವಿವರಿಸಿ ಹೇಳಬಹುದು.
170
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಆದರೆ ಕ್ರಿಯಾಪದಗಳನ್ನು ಈ ರೀತಿ ಅಂಕಿತಕ್ರಿಯೆ ಮತ್ತು ರೂಢಕ್ರಿಯೆ ಎಂಬುದಾಗಿ ವಿಂಗಡಿಸಲು ಸಾಧ್ಯವಾಗದು. ಅವು ಕ್ರಿಯೆಗಳನ್ನು ಹೆಸರಿಸುವುದಕ್ಕಾಗಿ ಬಳಕೆಯಾಗುವ ಬದಲು ನಿರ್ದೇಶಿಸುವುದಕ್ಕಾಗಿ ಬಳಕೆಯಾಗುತ್ತಿರುವುದೇ ಈ ರೀತಿ ಎರಡು ರೀತಿಯ ಕ್ರಿಯಾಪದಗಳಿಲ್ಲದಿರುವುದಕ್ಕೆ ಮುಖ್ಯ ಕಾರಣ.
೬.೧.೨ ಕ್ರಿಯಾಸಮಾಸ
ಕನ್ನಡದಲ್ಲಿ ಕ್ರಿಯಾಸಮಾಸ ಎಂಬುದಾಗಿ ಒಂದು ವಿಶಿಷ್ಟವಾದ ಸಮಾಸವಿದೆ ಯೆಂದು ಕನ್ನಡದ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಅಭಿ ಪ್ರಾಯಕ್ಕೆ ಆಧಾರವಾಗಿ ಅವರು ಕೊಡುವ ಕೈಮುಗಿ, ಮರವೇರು ಮೊದಲಾದ ಉದಾಹರಣೆಗಳೆಲ್ಲ ನಿಜಕ್ಕೂ ಜೋಡುಪದಗಳಲ್ಲ, ಬರಿಯ ಪದಗುಚ್ಛಗಳು ಮಾತ್ರ ಎಂಬುದನ್ನು ಹಿಂದಿನ ಅಧ್ಯಾಯದಲ್ಲಿ (೫.೮.೮ರಲ್ಲಿ) ನೋಡಿರುವೆವು. ಸಮಾಸವೆಂಬ ವ್ಯಾಕರಣ ವಿಧಾನವನ್ನು ನಾವು ಹೆಸರಿಸುವ ನಾಮಪದಗಳನ್ನು ತಯಾರಿಸುವುದಕ್ಕಾಗಿ ಮಾತ್ರ ಬಳಸುತ್ತೇವೆ. ಕ್ರಿಯಾಪದಗಳ ಮೂಲಕ ಘಟನೆ ಗಳನ್ನು ಹೆಸರಿಸಬೇಕಾಗುವುದಿಲ್ಲವಾದ ಕಾರಣ ಅವುಗಳ ತಯಾರಿಕೆಯಲ್ಲಿ ಸಮಾಸವೆಂಬ ವಿಧಾನಕ್ಕೆ ಯಾವ ಸ್ಥಾನವೂ ಇಲ್ಲ.
ಕ್ರಿಯಾಪದಗಳು ತಿಳಿಸುವ ಘಟನೆಯಿಂದ ಬಾಧಿತವಾಗುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ನಾಮಪದದೊಂದಿಗೆ ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮವಿದೆ. ಆದರೆ, ಈ ಪ್ರತ್ಯಯ ವನ್ನೊಳಗೊಂಡಿರುವ ನಾಮಪದ ಕ್ರಿಯಾಪದದ ಹತ್ತಿರ ಬಂದಾಗಲೆಲ್ಲ ಕ್ರಿಯಾ ಪದಕ್ಕೂ ನಾಮಪದಕ್ಕೂ ನಡುವೆ ಹತ್ತಿರದ ಸಂಬಂಧವಿರುವುದನ್ನು ಸೂಚಿಸಲು ಆ ಪ್ರತ್ಯಯ ಬಿದ್ದು ಹೋಗುವುದೇ ಜಾಸ್ತಿ. ವ್ಯಕ್ತಿಗಳನ್ನು ಗುರುತಿಸುವ ನಾಮಪದ ಗಳಲ್ಲಿ ಮಾತ್ರ ಈ ರೀತಿ ಅನ್ನು ಎಂಬ ಪ್ರತ್ಯಯ ಬಿದ್ದು ಹೋಗುವುದಿಲ್ಲ.
- (೨ಕ) ಸರಲೆ ಮಗುವನ್ನು ತೂಗುತ್ತಿದ್ದಾಳೆ.
- (೨ಖ) ಆಕೆ ಅಕ್ಕಿಯಿಂದ ಕಲ್ಲು ಹೆಕ್ಕುತ್ತಿದ್ದಾಳೆ.
- (೨ಗ) ಅವನು ಮೈಸೂರಿನಿಂದ ಒಂದು ಆನೆ ತಂದಿದ್ದಾನೆ.
(೨ಕ)ದಲ್ಲಿ ಅನ್ನು ಎಂಬ ಪ್ರತ್ಯಯ ವ್ಯಕ್ತಿಯೊಂದನ್ನು ಸೂಚಿಸುವ ಮಗು ಎಂಬ ಪದದೊಂದಿಗೆ ಬಂದಿದೆಯಾದ ಕಾರಣ ಕ್ರಿಯಾಪದದ ಹತ್ತಿರವೇ ಇದ್ದರೂ ಬಿದ್ದು ಹೋಗಿಲ್ಲ. ಆದರೆ (೨ಖ-ಗ)ಗಳಲ್ಲಿ ಕಲ್ಲು ಮತ್ತು ಆನೆ ಎಂಬ ಪದಗಳಿಂದ ಇದು ಬಿದ್ದು ಹೋಗಿದೆ.
ಈ ನಾಮಪದಗಳನ್ನು ವಾಕ್ಯದಲ್ಲೇನೇ ಬೇರೆ ಕಡೆಗಳಿಗೆ ವರ್ಗಾಯಿಸಿದಾಗ (ಕೆಳಗೆ ಕೊಟ್ಟಿರುವ (೩ಕ-ಖ) ವಾಕ್ಯಗಳನ್ನು ನೋಡಿ), ಇಲ್ಲವೇ ಅವು ಗಳೊಂದಿಗೆ ಒತ್ತುಕೊಡುವ ಏ ಎಂಬ ಪ್ರತ್ಯಯ ಅಥವಾ ‘ಮತ್ತು’ ಎಂಬ
171
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅರ್ಥದ ಊ ಎಂಬ ಪ್ರತ್ಯಯವನ್ನು ಸೇರಿಸಿ ಹೇಳಿದಾಗ (೪ಕ-ಗ ನೋಡಿ), ಬಿದ್ದು ಹೋಗಿರುವ ಈ ವಿಭಕ್ತಿ ಪ್ರತ್ಯಯ ಪುನಃ ಕಾಣಿಸಿಕೊಳ್ಳುತ್ತದೆ.
- (೩ಕ) ರಾಜು ಒಂದು ಲೋಟ ನೀರು ಕುಡಿದ.
- (೩ಖ) ಒಂದು ಲೋಟ ನೀರನ್ನು ರಾಜು ಕುಡಿದ.
- (೪ಕ) ರಾಜು ಸ್ವಲ್ಪ ಹೊತ್ತು ಪಾಠ ಓದಲಿ.
- (೪ಖ) ರಾಜು ಸ್ವಲ್ಪ ಹೊತ್ತು ಪಾಠವನ್ನೇ ಓದಲಿ.
- (೪ಗ) ರಾಜು ಸ್ವಲ್ಪ ಹೊತ್ತು ಪಾಠವನ್ನೂ ಓದಲಿ.
ಈ ಕಾರಣಕ್ಕಾಗಿ, ಕನ್ನಡದಲ್ಲಿ ಕೈಮುಗಿ (ಕೈಯನ್ನು ಮುಗಿ), ಮರವೇರು (ಮರವನ್ನು ಏರು), ಕರೆನೀಡು (ಕರೆಯನ್ನು ನೀಡು) ಎಂಬಂತಹ ಕ್ರಿಯಾಪದ ಗಳಲ್ಲಿ ಅನ್ನು ಎಂಬ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿರುವುದು ಸಮಾಸವೆಂಬ ಪದರಚನೆಯ ನಿಯಮದಿಂದಲ್ಲ, ಮೇಲೆ ಸೂಚಿಸಿರುವ ವಾಕ್ಯರಚನೆಯ ನಿಯಮ ದಿಂದ ಎಂದು ಹೇಳಲು ಸಾಧ್ಯವಿದೆ.
ನಾಮಪದ ಇಲ್ಲವೇ ಗುಣಪದದೊಂದಿಗೆ ಕ್ರಿಯಾಪದ ಸೇರಿ ಜೋಡುಪದ ವಾಗಿರುವಂತೆ ಕಾಣಿಸುವ ಬೇರೆಯೂ ಕೆಲವು ಪದಗಳು ಕನ್ನಡದಲ್ಲಿವೆ. ಇವನ್ನು ಜೋಡುಪದಗಳೆಂದು ಕರೆಯುವುದಕ್ಕಿಂತಲೂ ‘ಕೂಡುಪದ’ವೆಂಬ ಬೇರೊಂದು ಹೆಸರಿನಿಂದ ಕರೆಯುವುದೇ ಒಳ್ಳೆಯದೆಂಬುದನ್ನು ಮುಂದೆ ೬.೪ರಲ್ಲಿ ನೋಡಲಿರು ವೆವು. ಜೋಡುಪದಗಳ ಬಳಕೆಯಲ್ಲಿ ಕಾಣಿಸುವ ಅತ್ಯಂತ ಪ್ರಾಮುಖ್ಯವಾದ ಗುಣಧರ್ಮಗಳಾವುವೂ ಈ ಕೂಡುಪದಗಳ ಬಳಕೆಯಲ್ಲಿ ಕಾಣಿಸದಿರುವುದೇ ಅವನ್ನು ಈ ರೀತಿ ಜೋಡುಪದಗಳಿಂದ ಭಿನ್ನವಾದವುಗಳೆಂದು ಪರಿಗಣಿಸಲು ಕಾರಣ.
೬.೨ ಒಳರಚನೆಯಿಲ್ಲದ ಕ್ರಿಯಾಪದಗಳು
ಮೇಲೆ ಸೂಚಿಸಿರುವಂತೆ, ಕನ್ನಡದಲ್ಲಿ ಬಳಕೆಯಾಗುವ ಕ್ರಿಯಾಪದಗಳಿಗೆ ಒಳ ರಚನೆಯಿರಬಹುದು ಅಥವಾ ಇಲ್ಲದಿರಬಹುದು. ಇವುಗಳಲ್ಲಿ ಒಳರಚನೆಯಿಲ್ಲ ದಿರುವ ಅಳು, ಕೊಡು, ಕಲಿ, ಮರೆ ಮೊದಲಾದ ಕ್ರಿಯಾಪದಗಳನ್ನು ‘ಕ್ರಿಯಾಧಾತು’ಗಳೆಂದು ಕರೆಯಬಹುದು. ಇಂತಹ ಪದಗಳನ್ನು ಅವುಗಳಲ್ಲಿ ಬರುವ ಅಕ್ಷರಗಳ ಸಂಖ್ಯೆ ಮತ್ತು ಸ್ವರೂಪಗಳ ಆಧಾರದ ಮೇಲೆ ಮತ್ತು ಅವುಗಳ ಕೊನೆಯ ಸ್ವರದ ಆಧಾರದ ಮೇಲೆ ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲು ಸಾಧ್ಯವಿದೆ. ಇಂತಹ ವಿಂಗಡಣೆ ಅವುಗಳೊಂದಿಗೆ ಬರಬಹುದಾದ ಪ್ರತ್ಯಯಗಳ ಸ್ವರೂಪವನ್ನು ಮತ್ತು ಈ ರೀತಿ ಪ್ರತ್ಯಯಗಳು ಸೇರಿದಾಗ ಅವು
172
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಗಳಲ್ಲಿ ಇಲ್ಲವೇ ಪ್ರತ್ಯಯಗಳಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ವರ್ಣಿಸು ವಲ್ಲಿ ಸಹಾಯಕವಾಗುತ್ತದೆ.
ಕ್ರಿಯಾಧಾತುಗಳನ್ನು ಎಕಾರದಲ್ಲಿ ಕೊನೆಗೊಳ್ಳುವವು, ಇಕಾರದಲ್ಲಿ ಕೊನೆ ಗೊಳ್ಳುವವು ಮತ್ತು ಉಕಾರದಲ್ಲಿ ಕೊನೆಗೊಳ್ಳುವವು ಎಂಬುದಾಗಿ ಮೂರು ವರ್ಗಗಳಲ್ಲಿ ವಿಂಗಡಿಸುವುದು ಕನ್ನಡದ ಮಟ್ಟಿಗೆ ಒಂದು ಪ್ರಾಮುಖ್ಯವಾದ ವಿಂಗಡಣೆ. ಎಕಾರ ಮತ್ತು ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳೆಲ್ಲ ಎರಡಕ್ಷರದವುಗಳಾಗಿದ್ದು ಅವುಗಳಲ್ಲಿ ಬರುವ ಅಕ್ಷರಗಳೆರಡೂ ಲಘುವಾಗಿರು ತ್ತವೆ (ಎಂದರೆ, ಅವುಗಳಲ್ಲಿ ಉದ್ದಸ್ವರ, ಒತ್ತಕ್ಷರ ಇಲ್ಲವೇ ಸೊನ್ನೆ ಕಾಣಿಸುವು ದಿಲ್ಲ). ಉದಾ:
(೧) ಏಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು
| ಅಗೆ | ನಡೆ | ಒದೆ | ಕೊರೆ | ಅಲೆ | ಮಸೆ |
| ಒಗೆ | ತಡೆ | ನೆನೆ | ಮರೆ | ಬೆಳೆ | ಎಸೆ |
| ನೆಗೆ | ಒಡೆ | ಹೆಣೆ | ಬರೆ | ಕೊಳೆ | ಸವೆ |
| (೨) ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು | |||||
|---|---|---|---|---|---|
| ಅಗಿ | ಕಡಿ | ತಣಿ | ಹರಿ | ಕಲಿ | ಸವಿ |
| ಜಿಗಿ | ಕುಡಿ | ಮುನಿ | ಮುರಿ | ಉಳಿ | ಕವಿ |
| ಬಿಗಿ | ಕುದಿ | ಹನಿ | ಬಸಿ | ಇಳಿ | ತಿವಿ |
ಉಕಾರಾಂತ ಕ್ರಿಯಾಧಾತುಗಳಲ್ಲಿ ಮಾತ್ರ ಅಕ್ಷರದ ಸಂಖ್ಯೆಯಲ್ಲಿ ಮತ್ತು ಸ್ವರೂಪದಲ್ಲಿ ವೈವಿಧ್ಯತೆ ಕಾಣಿಸುತ್ತದೆ. ಇವುಗಳಲ್ಲಿ ಅಕ್ಷರಗಳು ಎರಡಿರ ಬಹುದು ಇಲ್ಲವೇ ಮೂರಿರಬಹುದು; ಅಕ್ಷರಗಳು ಎರಡೇ ಇದ್ದಲ್ಲಿ, ಅವೆರಡೂ ಲಘುವಾಗಿರಬಹುದು ಇಲ್ಲವೇ ಅವುಗಳಲ್ಲಿ ಮೊದಲನೆಯದು ಗುರುವಾಗಿರ ಬಹುದು; ಈ ರೀತಿ ಮೊದಲನೆಯ ಅಕ್ಷರ ಗುರುವಾಗಿರುವುದಕ್ಕೆ ಅದರ ಸ್ವರ ಉದ್ದವಾಗಿರುವುದು, ಆ ಸ್ವರದ ಅನಂತರ ಸೊನ್ನೆ ಬರುವುದು ಮತ್ತು ಎರಡನೆಯ ಅಕ್ಷರ ಒತ್ತಕ್ಷರವಾಗಿರುವುದು ಎಂಬುದಾಗಿ ಮೂರು ಬೇರೆ ಬೇರೆ ಕಾರಣಗಳಿರಲು ಸಾಧ್ಯವಿದೆ. ಮೂರು ಅಕ್ಷರಗಳಿರುವ ಉಕಾರಾಂತ ಕ್ರಿಯಾಧಾತು ಗಳಲ್ಲಿ ಮಾತ್ರ ಎಲ್ಲಾ ಅಕ್ಷರಗಳೂ ಲಘುವಾಗಿಯೇ ಇರುತ್ತವೆ.
ಈ ಬೇರೆ ಬೇರೆ ಸಾಧ್ಯತೆಗಳ ಆಧಾರದ ಮೇಲೆ ಉಕಾರದಲ್ಲಿ ಕೊನೆ ಗೊಳ್ಳುವ ಕ್ರಿಯಾಧಾತುಗಳನ್ನು ಕೆಳಗೆ ತೋರಿಸಿರುವಂತೆ ಎರಡು ಮುಖ್ಯ ವರ್ಗಗಳಲ್ಲಿ ಮತ್ತು ಅವುಗಳಲ್ಲಿ ಎರಡನೆಯ ವರ್ಗದವನ್ನು ನಾಲ್ಕು ಉಪವರ್ಗ ಗಳಲ್ಲಿ ವಿಂಗಡಿಸಬಹುದು. ಪ್ರತಿಯೊಂದು ವರ್ಗ ಇಲ್ಲವೇ ಉಪವರ್ಗದಲ್ಲಿ ಬರಬಲ್ಲ ಕ್ರಿಯಾಧಾತುಗಳಿಗೂ ಇಲ್ಲಿ ಉದಾಹರಣೆಗಳನ್ನಾಗಿ ಕೊಡಲಾಗಿದೆ.
173
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
- (೩) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು
- (೧) ಎರಡು ಲಘು ಅಕ್ಷರವಿರುವವುಗಳು
- ನಗು ಕೊಡು ಇರು ಅಳು
- ಸಿಗು ಸುಡು ಬರು ಉಳು
- ಸಿಗು ಸುಡು ತರು
- (೨) ಉಕಾರದಲ್ಲಿ ಕೊನೆಗೊಳ್ಳುವ ಇತರ ಕ್ರಿಯಾಧಾತುಗಳು
- (ಕ) ಮೊದಲನೆಯ ಅಕ್ಷರದಲ್ಲಿ ಉದ್ದಸ್ವರ ಇರುವವುಗಳು
- ಓಡು ಹೋಗು ಬೀಸು
- ಸಾಯು ತೇಲು ಕೇಳು
- (ಖ) ಸೊನ್ನೆಯಿರುವವುಗಳು
- ನುಂಗು ಮಿಂಚು ನಂಬು ಹೊಂದು
- ಅಂಜು ಹಂಚು ತುಂಬು ಕುಂಟು
- (ಗ) ಒತ್ತಕ್ಷರವಿರುವವುಗಳು
- ಹೆಕ್ಕು ಚುಚ್ಚು ಗುದ್ದು ಒಪ್ಪು ಕೊಲ್ಲು
- ಉಜ್ಜು ಮೆಟ್ಟು ತಿನ್ನು ಹಬ್ಬು ತಳ್ಳು
- ಚಿಮ್ಮು ಎತ್ತು ಕುಗ್ಗು ಬಯ್ಯು ಉಣ್ಣು
- (ಘ) ಮೂರು ಅಕ್ಷರಗಳಿರುವವುಗಳು
- ಅಡಗು ಕದಡು ಬೆವರು ಅರಳು
- ಕಿರುಚು ತಲಿಪು ಎಡವು ಬಳಲು
- ಮಡಚು ದುಡುಕು ಕೆಡವು ಕದಲು
- ಅಮುಕು ಹೊರಡು ಚಿಗುರು ಹೊಗಳು
೬.೩ ಕೆಲವು ಪಳೆಯುಳಿಕೆಗಳು
ಹೊಸಗನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಎಂಬ ಒಂದು ಪ್ರತ್ಯಯ ವನ್ನು ಬಿಟ್ಟರೆ (ಇದೂ ಕೂಡ ಹಳೆಗನ್ನಡದ ಕಾಲದಲ್ಲಿ ಒಂದು ಕ್ರಿಯಾಪದ ವಾಗಿತ್ತು), ಬೇರೆ ಪ್ರತ್ಯಯಗಳ ಬಳಕೆಯೇ ಇಲ್ಲವೆಂದೂ ಹೇಳಲು ಸಾಧ್ಯವಿದೆ.
ಈ ಮಾತಿಗೆ ಅಪವಾದವಾಗಿ ಕೆಲವು ಪಳೆಯಳಿಕೆಗಳನ್ನು ಮೇಲೆ ಕೊಟ್ಟಿರುವ ‘ಕ್ರಿಯಾಧಾತು’ಗಳಲ್ಲಿ ಕಾಣಬಹುದು. ಇವೆಲ್ಲ ಕನ್ನಡ, ತಮಿಳು, ತೆಲುಗು, ಗೋಂಡಿ, ಕುಯಿ, ಕುಡುಖ್ ಮೊದಲಾದ ಭಾಷೆಗಳಿಗೆ ಮೂಲವಾಗಿದ್ದ
174
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
‘ದ್ರಾವಿಡ’ಭಾಷೆಯ ಕ್ರಿಯಾಪದಗಳಲ್ಲಿ ಇದ್ದಿರಬಹುದಾದ ಒಳರಚನೆಯ ಪಳೆ ಯಳಿಕೆಗಳು. ಇವುಗಳಲ್ಲಿ ಕೆಲವನ್ನು ಪ್ರತ್ಯಯಗಳೆಂದು ಹೇಳಲು ಕನ್ನಡದಲ್ಲೇನೇ ಅಧಾರ ಸಿಗುವುದಾದರೂ ಕನ್ನಡದ ವ್ಯಾಕರಣದಲ್ಲಿ ಇವಕ್ಕೆ ಹೆಚ್ಚಿನ ಪ್ರಾಧಾನ್ಯ ವಿಲ್ಲ.
ಈ ಮೂಲ ಭಾಷೆಯಲ್ಲಿ ಕ್ರಿಯಾಧಾತುಗಳೆಲ್ಲ ಒಂದೇ ಅಕ್ಷರದವುಗಳಾಗಿ ಇದ್ದಿರಬೇಕೆಂದು ಬೇರೆ ಬೇರೆ ದ್ರಾವಿಡ ಭಾಷೆಗಳನ್ನು ಹೋಲಿಸಿ ನಡೆಸಿದ ಚಾರಿತ್ರಿಕ ಅಭ್ಯಾಸದ ಆಧಾರದ ಮೇಲೆ ಹೇಳಲು ಸಾಧ್ಯವಿದೆ. ಈ ಒಂದಕ್ಷರದ ಧಾತುಗಳಲ್ಲಿ ಹೆಚ್ಚಿನವೂ ಬೇರೆ ಬೇರೆ ಪ್ರತ್ಯಯಗಳೊಂದಿಗೆ ಸೇರಿಕೊಂಡು ಎರಡು ಮತ್ತು ಮೂರು ಅಕ್ಷರದವುಗಳಾಗಿವೆ. ಹಳೆಗನ್ನಡದಲ್ಲಿ ಇಂತಹ ಕೆಲವು ಒಂದಕ್ಷರದ ಧಾತುಗಳು ಕಾಣಿಸುತ್ತವೆಯಾದರೂ ಹೊಸಗನ್ನಡದಲ್ಲಿ ಅವೆಲ್ಲವೂ ಎರಡಕ್ಷರದವುಗಳಾಗಿವೆ (ಉದಾ: ಇರ್-ಇರು, ಸೋಲ್-ಸೋಲು, ಕಾಯ್- ಕಾಯು, ಇತ್ಯಾದಿ).
ಹೊಸಗನ್ನಡದಲ್ಲಿ ಬರುವ ಕ್ರಿಯಾಪದಗಳ ಒಳರಚನೆಯಂತಹದು ಎಂಬು ದನ್ನು ವಿವರಿಸುವಾಗ, ಅವು ಈ ರೀತಿ ಒಂದಕ್ಷರದ ಧಾತುಗಳಿಗೆ ಪ್ರತ್ಯಯಗಳು ಸೇರುವುದರ ಮೂಲಕ ಬೆಳೆದು ಬಂದವುಗಳೆಂಬ ಚಾರಿತ್ರಿಕ ವಿಷಯವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲವಾದರೂ, ಅದನ್ನು ಪ್ರತಿಬಿಂಬಿಸುವಂತಹ ಕೆಲವು ಅಂಶಗಳನ್ನು ಗಮನಿಸದಿರಲು ಸಾಧ್ಯವಾಗದು. ಉದಾಹರಣೆಗಾಗಿ, ಮೂರು ಅಕ್ಷರಗಳಿರುವ ಕ್ರಿಯಾಧಾತುಗಳಲ್ಲಿ ಕೆಲವು ಎರಡು ಅಕ್ಷರವಿರುವ ಕ್ರಿಯಾಧಾತು ಗಳಿಗೆ ಇಲ್ಲವೇ ಬೇರೆ ಮೂರು ಅಕ್ಷರಗಳಿರುವ ಕ್ರಿಯಾಧಾತುಗಳಿಗೆ ಸಂಬಂಧಿಸಿ ದಂತಿದ್ದು, ಅವುಗಳಲ್ಲಿ ಬರುವ ಮೂರನೆಯ ಅಕ್ಷರ ಒಂದು ಪ್ರತ್ಯಯವಾಗಿರು ವಂತೆ ತೋರುತ್ತದೆ. ಇಂತಹ ಕೆಲವು ಪ್ರತ್ಯಯಗಳನ್ನು ಕೆಳಗಿನ ವಿಭಾಗಗಳಲ್ಲಿ ಕೊಡಲಾಗಿದೆ.
ಟ.ಖ.ಗ ಚು ಎಂಬ ಪ್ರತ್ಯಯ
ಚು ಎಂಬ ಅಕ್ಷರದಲ್ಲಿ ಕೊನೆಗೊಳ್ಳುವ ತಿರುಚು, ನುಣುಚು, ಎರಚು, ಕಳಚು ಮೊದಲಾದ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಕಾಣಿಸುವ ಚು ಎಂಬುದು ಒಂದು ಪ್ರತ್ಯಯವಿರಬಹುದು ಎಂದು ವಾದಿಸಲು ಈ ಕೆಳಗಿನ ಹೋಲಿಕೆಗಳು ಆಧಾರವಾಗಬಲ್ಲುವು. ಇಲ್ಲಿ ಹೋಲಿಕೆಗಾಗಿ ಕ್ರಿಯಾಪದಗಳನ್ನು ಮಾತ್ರವಲ್ಲದೆ ನಾಮಪದ ಮತ್ತು ಗುಣಪದಗಳನ್ನೂ ಕೊಡಲಾಗಿದೆ.
| ತಿರುಗು | ತಿರುಚು | ಎರೆ | ಎರಚು |
| ನುಣುಪು | ನುಣುಚು | ಕಳೆ | ಕಳಚು |
| ಕೀರು | ಕಿರುಚು | ಮೊನೆ | ಮೊನಚು |
| ಮಡಿಕೆ | ಮಡಿಚು |
175
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎರಡು ಅಕ್ಷರಗಳಿರುವ ಕ್ರಿಯಾಪದಗಳಲ್ಲೂ ಕೊನೆಯಲ್ಲಿ ಚಕಾರವಿರುವ ಕೆಲವು ಪದಗಳು ಈ ರೀತಿ ಚು ಎಂಬ ಪ್ರತ್ಯಯವನ್ನು ಬಳಸಿ ತಯಾರಿಸಿದವುಗಳ ಹಾಗೆ ಕಾಣಿಸುತ್ತವೆ. ಉದಾ:
ಗೀರು ಗೀಚು ಬಿರಿ ಬಿಚ್ಚು ತೋರು ತೋಚು ಮಿನುಗು ಮಿಂಚು
೬.೩.೨ ಬೇರೆ ಕೆಲವು ಪ್ರತ್ಯಯಗಳು
ಇದೇ ರೀತಿಯಲ್ಲಿ ಬೇರೆ ಕೆಲವು ಪ್ರತ್ಯಯಗಳನ್ನು ತೋರಿಸುವ ಕ್ರಿಯಾಪದ ಗಳನ್ನು ಈ ಕೆಳಗಿನ ಹೋಲಿಕೆಗಳಲ್ಲಿ ಕಾಣಬಹುದು.
| ಪ್ರತ್ಯಯ | ಆಧಾರವಾಗಬಲ್ಲ ಪದಗಳು | ||
|---|---|---|---|
| ೧. | ಗು | ಬಣ ಕೊರತೆ ಬೆಳಕು ತಿರಿ ತೊಲೆ ಹೆಣ ತಾಳು | ಬಣಗು ಕೊರಗು ಬೆಳಗು ತಿರುಗು ತೊಲಗು ಹೆಣಗು ತಗ್ಗು |
| ೨. | ಕು | ತೂರು ದೊರೆ ನಿಲ್ಲು ಕುಟ್ಟು ಕಲೆ ಹಿಸಿ | ತುರುಕು ದೊರಕು ನಿಲುಕು ಕುಟುಕು ಕಲಕು ಹಿಸುಕು |
| ೩. | ಡು | ಕದಲು ಹೊರ ಹಬ್ಬು ಕಲೆ | ಕದಡು ಹೊರಡು ಹರಡು ಕಲಿಡು |
| ೪. | ಳು | ಉಗಿ ನುಸಿ ಸಿರಿ | ಉಗುಳು ನುಸುಳು ಸೀಳು |
| ೫. | ಬು | ಅಲೆ | ಅಲುಬು |
176
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
| ಹರಡು ಊದು | ಹಬ್ಬು ಉಬ್ಬು | ||
|---|---|---|---|
| ೬. | ಯು | ನೋವು ನೇಕಾರ | ನೋಯು ನೇಯು |
| ಎಡರು ಎಡವು | ಎಡವು ತಿರುವು |
ಇದಲ್ಲದೆ, ಕ್ರಿಯಾಪದಗಳ ಕೊನೆಯಲ್ಲಿ ಬರುವ ಇಕಾರ, ಎಕಾರ ಮತ್ತು ಉಕಾರಗಳೂ ಮೂಲಭಾಷೆಯಲ್ಲಿ ಪ್ರತ್ಯಯಗಳೇ ಆಗಿದ್ದಿರಲು ಸಾಧ್ಯವಿದೆ. ಕನ್ನಡದ ಎಕಾರಾಂತ ಕ್ರಿಯಾಪದಗಳಲ್ಲಿ ಕೆಲವು ಮೂಲದಲ್ಲಿ ಅಯ್ ಎಂಬುದ ರಲ್ಲೂ ಮತ್ತು ಬೇರೆ ಕೆಲವು ಅ ಎಂಬುದರಲ್ಲೂ ಕೊನೆಗೊಂಡಿದ್ದುವೆಂದು ವಾದಿಸುವುದಕ್ಕೆ ಬೇರೆ ದ್ರಾವಿಡ ಭಾಷೆಗಳ ಆಧಾರವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಕ್ರಿಯಾಪದಗಳನ್ನು ತಮಿಳು ಭಾಷೆಯ ಕ್ರಿಯಾಪದ ಗಳೊಂದಿಗೆ ಹೋಲಿಸಿ ನೋಡಬಹುದು.
| ಕನ್ನಡ | ತಮಿಳು | ಕನ್ನಡ | ತಮಿಳು |
|---|---|---|---|
| ಅಳೆ | அள | ಬೆಳೆ | விಳಯ್ |
| ಮರೆ | மఱಿ | ಕೊರೆ | ಕುಅಯ್ |
| ನಡೆ | நட | ಒಡೆ | ಉಡಯ್ |
| ಕರೆ | கఱ | ಕರೆ | ಕರಯ್ |
ಕನ್ನಡದ ಕರೆ ಎಂಬುದಕ್ಕೆ ಹಾಲನ್ನು, ಕರೆ ಮತ್ತು ಆತನನ್ನು, ಕರೆ ಎಂಬ ಎರಡು ಬಳಕೆಗಳಲ್ಲಿ ಕಾಣಿಸುವಂತೆ ಎರಡು ಬೇರೆ ಬೇರೆ ಅರ್ಥಗಳಿದ್ದು, ನಿಜಕ್ಕೂ ಆ ರೂಪದಲ್ಲಿ ಎರಡು ಎರಡು ಬೇರೆ ಬೇರೆ ಕ್ರಿಯಾಪದಗಳಿವೆ. ಇವುಗಳಲ್ಲಿ ಮೊದಲನೆಯದರ ಕೊನೆಯ ಎಕಾರ ಅಕಾರದಿಂದಲೂ ಮತ್ತು ಎರಡನೆಯದರ ಕೊನೆಯ ಎಕಾರ ಅಯ್ ಎಂಬುದರಿಂದಲೂ ಬಂದಿದೆಯೆಂಬುದನ್ನು ಅವುಗಳ ಎದುರು ಕೊಟ್ಟಿರುವ ತಮಿಳು ಪದಗಳು ಸ್ಪಷ್ಟಪಡಿಸುತ್ತವೆ.
೬.೪ ಇಸು ಎಂಬ ಪ್ರತ್ಯಯದ ಬಳಕೆ
ಮೇಲೆ ಕೊಟ್ಟಿರುವಂತಹ ಪಳೆಯಳಿಕೆಗಳಾಗಿ ಉಳಿದಿರುವ ಪ್ರತ್ಯಯಗಳನ್ನು ಬಿಟ್ಟರೆ, ಕನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಪ್ರತ್ಯಯಗಳ ಬಳಕೆಯೇ ಇಲ್ಲವೆಂದೂ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದವಾಗಿ, ಕನ್ನಡದ ಕೆಲವು ಕ್ರಿಯಾಪದಗಳಲ್ಲಿ ಇಸು ಎಂಬ ಒಂದು ಪ್ರತ್ಯಯ ಕಾಣಿಸಿಕೊಳ್ಳುತ್ತದೆ.
177
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಸಾಮಾನ್ಯವಾಗಿ ಈ ಪ್ರತ್ಯಯವನ್ನು ಸಂಸ್ಕೃತದಿಂದ ಎರವಲಾಗಿ ಬಂದ ನಾಮ ಪದಗಳನ್ನು ಕ್ರಿಯಾಪದಗಳ ಸ್ಥಾನದಲ್ಲಿ ಇರಿಸುವುದಕ್ಕಾಗಿ ಬಳಸಲಾಗುತ್ತದೆ ಯಾದರೂ (೮.೩.೬ ನೋಡಿ), ಕನ್ನಡದವೇ ಆದ ಕ್ರಿಯಾಪದಗಳಲ್ಲೂ ಕೆಲ ವೊಂದು ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಕಾಣಬಹುದು. ಉದಾ:
| ಅಬ್ಬರ | ಅಬ್ಬರಿಸು | ಹಂಗು | ಹಂಗಿಸು |
| ಹಂಬಲ | ಹಂಬಲಿಸು | ತುಂಡು | ತುಂಡಿಸು |
| ಬೇಸರ | ಬೇಸರಿಸು | ಹೆಸರು | ಹೆಸರಿಸು |
| ಕನ್ನಡ | ಕನ್ನಡಿಸು | ಮುದ್ದು | ಮುದ್ದಿಸು |
| ಒತ್ತಾಯ | ಒತ್ತಾಯಿಸು | ನೆಲೆ | ನೆಲಸು |
ಗುಣಪದಗಳಿಂದಲೂ ಕ್ರಿಯಾಪದಗಳನ್ನು ಈ ರೀತಿ ತಯಾರಿಸಲು ಸಾಧ್ಯವಿದೆ ಯೆಂಬುದನ್ನು ಕೆಳಗಿನ ಉದಾಹರಣೆಗಳು ತೋರಿಸಿಕೊಡುತ್ತವೆ. ಆದರೆ ಕನ್ನಡ ದವೇ ಆದ ಗುಣಪದಗಳೊಂದಿಗೆ ಈ ಇಸು ಪ್ರತ್ಯಯದ ಬಳಕೆ ಅಪರೂಪ.
| ಎತ್ತರ | ಎತ್ತರಿಸು | ತಂಪು | ತಂಪಿಸು |
| ಇದಿರು | ಇದಿರಿಸು | ಬೋಳು | ಬೋಳಿಸು |
ಯಾವುದಾದರೊಂದು ಶಬ್ದವನ್ನು ಅಣಕಿಸಿ ಹೇಳುವ ಬಡಬಡ, ಚಟಚಟ, ಗಹಗಹ ಎಂಬಂತಹ ಪದಗಳಿಗೆ, ಮತ್ತು ಬೇರೆ ಕೆಲವು ಅನುಭವಗಳನ್ನು ಸೂಚಿಸುವ ತಳತಳ, ಗಮಗಮ, ಎಂಬಂತಹ ಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ಕ್ರಿಯಾಪದಗಳನ್ನೂ ಮತ್ತು ನೆ ಎಂಬ ಪ್ರತ್ಯಯವನ್ನು ಸೇರಿಸಿ ಗುಣಪದಗಳನ್ನೂ ತಯಾರಿಸಲು ಸಾಧ್ಯವಿದೆ.
| ಬಡಬಡಿಸು | ಬಡಬಡನೆ | ತಳತಳಿಸು | ತಳತಳನೆ |
| ಚಟಚಟಿಸು | ಚಟಚಟನೆ | ಗಮಗಮಿಸು | ಗಮಗಮನೆ |
| ಗಹಗಹಿಸು | ಗಹಗಹನೆ | ಬಗಬಗಿಸು | ಬಗಬಗನೆ |
ಕೆಲವು ಪದಗಳು ಇಕೆ ಅಥವಾ ಕೆ ಎಂಬ ಪ್ರತ್ಯಯ ಸೇರಿದಾಗ ನಾಮಪದ ಗಳಾಗಿಯೂ ಮತ್ತು ಇಸು ಎಂಬ ಪ್ರತ್ಯಯ ಸೇರಿದಾಗ ಕ್ರಿಯಾಪದಗಳಾಗಿಯೂ ಬಳಕೆಯಾಗುತ್ತವೆ. ಇವುಗಳಲ್ಲಿ ಕೆ ಎಂಬ ಪ್ರತ್ಯಯವಿರುವ ಪದಗಳೆದುರು ಇಸು ಎಂಬ ಈ ಪ್ರತ್ಯಯಕ್ಕೆ ಸು ಎಂಬ ರೂಪವಿದೆ. ಉದಾ:
| ಆಕಳಿಕೆ | ಆಕಳಿಸು | ಬಯಕೆ | ಬಯಸು |
178
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
| ಕ್ರಿಯಾಪದಗಳ ಒಳರಚನೆ | |||
|---|---|---|---|
| ಬೆದರಿಕೆ | ಬೆದರಿಸು | ಹರಕೆ | ಹರಸು |
| ಮೂದಲಿಕೆ | ಮೂಡಲಿಸು | ಬಳಕೆ | ಬಳಸು |
ಇನ್ನು ಕೆಲವು ಇಸು ಎಂಬುದರಲ್ಲಿ ಕೊನೆಗೊಳ್ಳುವ ಪದಗಳು ಕ್ರಿಯಾಪದ ಗಳಾಗಿ ಮಾತ್ರ ಬಳಕೆಯಲ್ಲಿವೆ. ಇವುಗಳಲ್ಲಿ ಕೆಲವಕ್ಕೆ ಚಾರಿತ್ರಿಕವಾಗಿ ಬೇರೆ ಪದಗಳೊಂದಿಗೆ ಸಂಬಂಧವಿದೆಯಾದರೂ ಹೊಸಗನ್ನಡದಲ್ಲಿ ಇಂತಹ ಸಂಬಂಧ ಉಳಿದಿಲ್ಲ. ಉದಾ:
ಈ ಕೆಳಗಿನ ಕ್ರಿಯಾಪದಗಳಲ್ಲಿ ಇಸು ಎಂಬ ಪ್ರತ್ಯಯ ಬೇರೊಂದು ಪ್ರತ್ಯಯದೊಂದಿಗೆ ಇಲ್ಲವೇ ಬೇರೊಂದು ಕ್ರಿಯಾಧಾತುವಿನ ಸಂಕ್ಷಿಪ್ತ ರೂಪ ದೊಂದಿಗೆ ಬಂದಿರುವ ಹಾಗೆ ಕಾಣಿಸುತ್ತದೆ.
ಚಪ್ಪರಿಸು ಅಪ್ಪಳಿಸು ಓಲೈಸು ಮುಗ್ಗರಿಸು ಕುಪ್ಪಳಿಸು ಕೋರೈಸು ಕೇಕರಿಸು ಬಿಕ್ಕಳಿಸು ಆಕಳಿಸು
ಕ್ರಿಯಾಪದಗಳ ಒಳರಚನೆಯಲ್ಲಿ ಬರುವ ಈ ಇಸು ಎಂಬ ಪದಪ್ರತ್ಯಯ ವನ್ನೇ ಹೋಲುವ ಪದರೂಪ ಪ್ರತ್ಯಯವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಕ್ರಿಯಾಪದವೊಂದಕ್ಕೆ ಸೇರಿಸಿ, ‘ಅದು ಸೂಚಿಸುವ ಕೆಲಸವನ್ನು ಬೇರೆ ಯವರ ಮೂಲಕ ನಡೆಸಲಾಗಿದೆ’ ಎಂಬ ‘ಪ್ರೇರಣಾರ್ಥ’ವನ್ನು ಪಡೆಯಲು ಸಾಧ್ಯ ವಾಗುತ್ತದೆ (ಉದಾ: ಮಾಡು-ಮಾಡಿಸು, ತಿನ್ನು-ತಿನ್ನಿಸು, ಬೀಳು-ಬೀಳಿಸು, ಇತ್ಯಾದಿ). ಈ ಎರಡು ಪ್ರತ್ಯಯಗಳ ರೂಪ ಒಂದೇ ಆದರೂ ಅವುಗಳಲ್ಲಿ ಮೊದಲನೆಯದು ಮಾತ್ರ ಪದರಚನೆಗೆ ಸಂಬಂಧಿಸಿದುದು ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.
೬.೫ ಕೂಡುಪದಗಳು
ಆಗು, ಆಡು, ಕೊಡು, ಬಿಡು, ಕಚ್ಚು, ಬೀಳು, ಮಾಡು, ಹಾಕು ಮೊದಲಾದ ಕೆಲವು ವಿಶಿಷ್ಟವಾದ ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದಗಳನ್ನು ಸೇರಿಸಿ ‘ಕೂಡುಪದ’ಗಳನ್ನು ತಯಾರಿಸುವ ವಿಧಾನವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಈ ಕ್ರಿಯಾಪದಗಳೊಂದಿಗೆ ಬೇರೆ ಕ್ರಿಯಾಪದಗಳನ್ನು ಮಾತ್ರವಲ್ಲದೆ, ನಾಮಪದ
179
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಇಲ್ಲವೇ ಗುಣಪದಗಳನ್ನು ಸೇರಿಸಿಯೂ ಇಂತಹ ಕೂಡುಪದಗಳನ್ನು ತಯಾರಿ ಸಲು ಸಾಧ್ಯವಿದೆ. ಈ ಕೆಳಗಿನ ಕೆಲವು ಒಳರಚನೆಯಿರುವ ಕ್ರಿಯಾಪದಗಳನ್ನು ಈ ವಿಧಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.
ಹೊಡೆದಾಡು ಬೊಬ್ಬೆಹಾಕು ಅಡ್ಡಬೀಳು ಕಂಡುಬರು ಮಾತುಕೊಡು ಮುಂದೂಡು ಓಡಾಡು ಬೇರುಬಿಡು ಹಾಳಾಗು
೬.೫.೧ ಕೊಡುಪದಗಳು ಮತ್ತು ಜೋಡುಪದಗಳು
ಇಂತಹ ಒಳರಚನೆಯಿರುವ ಕ್ರಿಯಾಪದಗಳನ್ನು ಜೋಡುಪದಗಳೆಂದು ಕರೆಯದೆ ‘ಕೂಡುಪದ’ಗಳೆಂಬ ಬೇರೆಯೇ ಒಂದು ಹೆಸರಿನಿಂದ ಕರೆಯಲು ಜೋಡುಪದ ಗಳಿಗೂ ಮತ್ತು ನಾಮಪದಗುಚ್ಛಗಳಿಗೂ ನಡುವೆ ಅರ್ಥದಲ್ಲಿ ಇಲ್ಲವೇ ಬಳಕೆ ಯಲ್ಲಿ ಕಾಣಿಸುವಂತಹ ವ್ಯತ್ಯಾಸಗಳು (೩.೨ ನೋಡಿ) ಈ ಕ್ರಿಯಾಪದಗಳಿಗೂ ಮತ್ತು ಕ್ರಿಯಾಪದಗುಚ್ಛಗಳಿಗೂ ನಡುವೆ ಕಾಣಿಸದಿರುವುದೇ ಮುಖ್ಯ ಕಾರಣ. ನಿಜಕ್ಕೂ ಇವನ್ನು ಕ್ರಿಯಾಪದಗಳೆಂದು ಕರೆಯದೆ ಕ್ರಿಯಾಪದಗುಚ್ಛಗಳೆಂದು ಕರೆ ಯಲೂ ಸಾಧ್ಯವಿದೆ.
ಮೇಲೆ ಮೂರನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ, ಜೋಡುಪದಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸಿ ಹೇಳಲು ಸಾಧ್ಯವಾಗದು. ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಅವುಗಳ ಅರ್ಥವನ್ನು ನಿರ್ಧರಿಸಲು ಸಾಧ್ಯ. ಆದರೆ ಕೂಡುಪದಗಳಾಗಿ ಬರುವ ಕ್ರಿಯಾಪದಗಳ ಅರ್ಥವನ್ನು ನಿರ್ಧರಿಸುವಲ್ಲಿ ಇಂತಹ ಸಮಸ್ಯೆಯಿಲ್ಲ. ಹೆಚ್ಚಿನಡೆಗಳಲ್ಲಿಯೂ ಅವುಗಳ ಅರ್ಥ ವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೇನೇ ನಿರ್ಧರಿಸಿ ಹೇಳಲು ಸಾಧ್ಯವಿದೆ. ಇದಕ್ಕೆ ಕೆಲವು ಅಪವಾದಗಳಿವೆಯೇನೋ ನಿಜ; ಆದರೆ ಇಲ್ಲೂ ಜೋಡುಪದ ಮತ್ತು ಪದಗುಚ್ಛಗಳ ನಡುವೆ ಅವುಗಳ ಬಳಕೆಯಲ್ಲಿ ಕಾಣಿಸುವಂತಹ ವ್ಯತ್ಯಾಸವಿಲ್ಲ.
ಕ್ರಿಯಾಪದಗಳ ಒಳರಚನೆಯಲ್ಲಿ ಈ ರೀತಿ ಜೋಡುಪದಗಳಿಗಿಂತ ಭಿನ್ನ ವಾದ ‘ಕೂಡುಪದ’ ಎಂಬುದರ ಬಳಕೆ ಕಾಣಿಸುವುದಕ್ಕೆ ನಾಮಪದಗಳ ಹಾಗೆ ಅವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳಲ್ಲಿ ಬಳಸಲು ಸಾಧ್ಯವಾಗದಿರುವುದೇ ಮುಖ್ಯ ಕಾರಣ. ಕ್ರಿಯಾಪದಗಳು ಘಟನೆಗಳನ್ನು ನಿರ್ದೇಶಿಸುತ್ತವಲ್ಲದೆ ಗುರುತಿಸುವುದಿಲ್ಲ. ಅವು ಏನಾಯಿತು (ಯಾವ ಘಟನೆ ಜರಗಿತು) ಎಂಬುದನ್ನು ನೇರವಾಗಿ ತಿಳಿಸುತ್ತವಲ್ಲದೆ, ಘಟನೆಯೊಂದನ್ನು ಗುರುತಿಸಿ (ಹೆಸರಿಸಿ ಇಲ್ಲವೇ ವರ್ಣಿಸಿ), ಅನಂತರ ಆ ಘಟನೆಯ ಕುರಿತಾಗಿ ಏನಾಯಿತು (ಅದು ನಡೆಯಿತೇ, ನಡೆಯಲಿಲ್ಲವೇ, ನಡೆಯಬಹುದೇ, ಇತ್ಯಾದಿ
180
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಯಾಗಿ) ಎಂಬುದನ್ನು ತಿಳಿಸಲು ಪ್ರಯತ್ನಿಸುವುದಿಲ್ಲ. ಹಾಗಾಗಿ, ಅವುಗಳ ಬಳಕೆ ಯಲ್ಲಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ವ್ಯತ್ಯಾಸ ಕಾಣಿಸಲು ಸಾಧ್ಯ ವಿಲ್ಲ.
ಟ.ಜಿ.೨ ಕೊಡುಪದಗಳ ರಚನೆ
ಕೂಡುಪದಗಳಲ್ಲಿ ಎರಡು (ಅಥವಾ ಜಾಸ್ತಿ) ಪದಗಳು ಒಟ್ಟು ಸೇರಿರುತ್ತವೆ. ಇವುಗಳಲ್ಲಿ ಯಾವಾಗಲೂ ಕೊನೆಯ ಪದ ಕ್ರಿಯಾಪದವಾಗಿರುವುದು ಅವಶ್ಯ. ಮೇಲೆಯೇ ಸೂಚಿಸಿರುವಂತೆ, ಇವುಗಳ ಮೊದಲನೆಯ ಪದ ಕ್ರಿಯಾಪದವಿರ ಬಹುದು, ನಾಮಪದವಿರಬಹುದು, ಇಲ್ಲವೇ ಗುಣಪದವಿರಬಹುದು.
ಇದಲ್ಲದೆ, ಇವುಗಳ ಮೊದಲನೆಯ ಅಂಗವಾಗಿ ಬಂದಿರುವ ಕ್ರಿಯಾಪದವು ಧಾತು ರೂಪದಲ್ಲಿರಬಹುದು, ಇಲ್ಲವೇ ಅದರ ಯಾವುದಾದರೊಂದು ಕ್ರಿಯಾ ಪದರೂಪದಲ್ಲಿರಬಹುದು. ಉದಾಹರಣೆಗಾಗಿ, ಕುಣಿದಾಡು, ಕಂಡುಬರು, ತೇಲಿ ಬಿಡು, ಹೋಗಲಾಡಿಸು ಮೊದಲಾದ ಕೂಡುಪದಗಳಲ್ಲಿ ಕುಣಿದು, ಕಂಡು, ತೇಲಿ, ಹೋಗಲು ಮೊದಲಾದ ಕ್ರಿಯಾಪದರೂಪಗಳು ಮೊದಲನೆಯ ಅಂಗವಾಗಿ ಬಂದಿವೆ. ಅಪರೂಪವಾಗಿ ನಾಮಪದಗಳೂ ಅವುಗಳ ವಿಭಕ್ತಿ ರೂಪದಲ್ಲಿ ಇಂತಹ ಕೂಡುಪದಗಳ ಮೊದಲನೆಯ ಅಂಗವಾಗಿ ಬರಬಲ್ಲು ವೆಂಬುದಕ್ಕೆ ಮಾತನಾಡು (ಮಾತನ್ನು ಆಡು) ಎಂಬ ಉದಾಹರಣೆಯನ್ನು ಕೊಡಬಹುದು.
ಕೂಡುಪದಗಳ ಮೊದಲನೆಯ ಅಂಗವಾಗಿ ಬರುವ ನಾಮಪದ ಕನ್ನಡದ್ದೇ ಇರಬಹುದು, ಅಥವಾ ಇಂಗ್ಲಿಷ್ ಮೊದಲಾದ ಬೇರೆ ಭಾಷೆಗಳಿಂದ ಎರವಲಾಗಿ ಬಂದುದಿರಬಹುದು. ಬಂದಾಗು, ಸ್ಟಾರ್ಟ್‌ಮಾಡು, ದುಃಖವಾಗು ಮೊದಲಾ ದುವನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಈ ರೀತಿ ಎರವಲಾಗಿ ಬಂದ ಪದಗಳು ಬಹಳ ಸುಲಭವಾಗಿ ಇಂತಹ ಕೂಡುಪದಗಳಲ್ಲಿ ಸೇರಿಕೊಳ್ಳು ತ್ತವೆಯೆಂಬುದು ಅವಕ್ಕೂ ಮತ್ತು ಜೋಡುಪದಗಳಿಗೂ ನಡುವಿರುವ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸ.
ಕನ್ನಡದಲ್ಲಿ ಬಳಕೆಯಲ್ಲಿರುವ ಕೂಡುಪದಗಳನ್ನು ಈ ಕೆಳಗೆ ಅವುಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳ ಪರಿಶೀಲನೆಯ ಮೂಲಕ ವಿವರಿಸಲು ಯತ್ನಿಸಲಾಗಿದೆ.
(ಕ) ಆಗು
ಈ ಕ್ರಿಯಾಪದವನ್ನು ಮುಖ್ಯವಾಗಿ ನಾಮಪದ ಮತ್ತು ಗುಣಪದಗಳೊಂದಿಗೆ ಬಳಸಿ ಕೂಡುಪದಗಳನ್ನು ರಚಿಸಲು ಸಾಧ್ಯವಿದೆ. ಇಂತಹ ಕೂಡುಪದಗಳಲ್ಲೆಲ್ಲ ಆಗು ಎಂಬ ಕ್ರಿಯಾಪದಕ್ಕೆ ಅದರದೇ ಅರ್ಥವಿದ್ದು, ಕೂಡುಪದಗಳ ಅರ್ಥವನ್ನು
181
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ನೇರವಾಗಿ ಅವುಗಳ ಒಳರಚನೆಯ ಸಹಾಯದಿಂದಲೇ ಪಡೆಯಲು ಸಾಧ್ಯ ಎಂಬುದನ್ನು ಗಮನಿಸಬಹುದು.
ಉಕಾರದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಈ ಕ್ರಿಯಾಪದ ಬಂದಾಗ ಅವುಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗುತ್ತದೆ. ಆದರೆ ಇತರ ಪದ ಗಳೊಂದಿಗೆ ಬಂದಾಗ ಈ ರೀತಿ ಕೊನೆಯ ಸ್ವರ ಬಿದ್ದು ಹೋಗುವುದಿಲ್ಲ. ಇದಕ್ಕೆ ಬದಲು, ಅವುಗಳ ಕೊನೆಯಲ್ಲಿ ಇಕಾರ ಇಲ್ಲವೇ ಎಕಾರವಿದೆಯಾದಲ್ಲಿ ಆ ಎರಡು ಪದಗಳ ನಡುವೆ ಯಕಾರ ಬಂದು ಸೇರಿಕೊಳ್ಳುತ್ತದೆ, ಮತ್ತು ಅವುಗಳ ಕೊನೆಯಲ್ಲಿ ಅಕಾರವಿದೆಯಾದಲ್ಲಿ ವಕಾರ ಸೇರಿಕೊಳ್ಳುತ್ತದೆ. ಗುಣಪದ ಗಳೊಂದಿಗೆ ಈ ಕ್ರಿಯಾಪದ ಬಂದಿರುವಾಗ ಮಾತ್ರ ಕೆಲವೊಮ್ಮೆ ಈ ನಿಯಮಕ್ಕೆ ಅಪವಾದವಾಗಿ ಗುಣಪದಗಳ ಕೊನೆಯ ಅಕಾರ ಇಲ್ಲವೇ ಎಕಾರ ಬಿದ್ದುಹೋಗು ವುದನ್ನು ಕಾಣಬಹುದು.
- (೧) ನಾಮಪದಗಳೊಂದಿಗೆ ಬಳಕೆ
- ಪೆಟ್ಟಾಗು ಬಲಿಯಾಗು ಗುಣವಾಗು
- ಸಿಟ್ಟಾಗು ಗುರಿಯಾಗು ತಡವಾಗು
- ನೀರಾಗು ಎಡೆಯಾಗು ಮಾಯವಾಗು
- ಒಂದಾಗು
- (೨) ಗುಣಪದಗಳೊಂದಿಗೆ ಬಳಕೆ
- ಹಾಳಾಗು ಬಡವಾಗು ಮುಂದಾಗು
- ಕಪ್ಪಾಗು ಕಪ್ಪಗಾಗು ಮೇಲಾಗು
- ಇದಿರಾಗು ಅಡ್ಡಾಗು
- (೩) ಇತರ ಪದಗಳೊಂದಿಗೆ ಬಳಕೆ
- ಆಗು ಎಂಬ ಈ ಕ್ರಿಯಾಪದ ಸಾಮಾನ್ಯವಾಗಿ ಬೇರೆ ಕ್ರಿಯಾಪದಗಳೊಂದಿಗೆ
- ಕೂಡುಪದಗಳಲ್ಲಿ ಬಳಕೆಯಾಗುವುದಿಲ್ಲ. ಆದರೆ, ಅನಿಯಮಿತ ರೂಪಗಳಿರುವ
- ಬೇಕು, ಬೇಡು, ಸಾಕು, ಇಲ್ಲಿ ಎಂಬಂತಹವುಗಳೊಂದಿಗೆ, ಮತ್ತು ಕ್ರಿಯಾಪದ
- ಗಳ ಸ್ಥಾನದಲ್ಲಿ ಬರುವ ಸರಿ, ತಪ್ಪು, ಸುಳ್ಳು ಎಂಬಂತಹವುಗಳೊಂದಿಗೆ ಸೇರಿ
- ಇದು ಕೂಡುಪದಗಳಲ್ಲಿ ಬರಬಲ್ಲುದು. ಉದಾ:
- ಬೇಕಾಗು ತಪ್ಪಾಗು
- ಸಾಕಾಗು ಸರಿಯಾಗು
- ಬೇಡವಾಗು ಸುಳ್ಳಾಗು
- ಇಲ್ಲವಾಗು ಉಂಟಾಗು
182
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಇಂಗ್ಲಿಷ್‌ನಂತಹ ಬೇರೆ ಭಾಷೆಗಳಿಂದ ಎರವಲಾಗಿ ಬಂದ ಕ್ರಿಯಾಪದ ಗಳನ್ನು ಕ್ರಿಯಾಪದದ ಸ್ಥಾನದಲ್ಲಿ ಬಳಸುವುದಕ್ಕಾಗಿ ಕನ್ನಡದಲ್ಲಿ ಅವುಗಳೊಂದಿಗೆ ಆಗು ಮತ್ತು ಮಾಡು ಎಂಬ ಎರಡು ಕ್ರಿಯಾಪದಗಳನ್ನು ಸೇರಿಸಿ ಕೂಡುಪದ ಗಳಾಗಿ ಮಾಡಿ ಬಳಸುವ ವಿಧಾನ ಬಳಕೆಯಲ್ಲಿದೆ. ಇವುಗಳಲ್ಲಿ ಆಗು ಎಂಬುದು ಒಂದು ಘಟನೆಯನ್ನೂ ಮತ್ತು ಮಾಡು ಎಂಬುದು ಒಂದು ಕೆಲಸವನ್ನೂ ತಿಳಿಸು ತ್ತವೆ. (ಉದಾ: ಸ್ಟಾರ್ಟಾಗು, ಸ್ಟಾರ್ಟ್‌ಮಾಡು, ದಿಪ್ರೆಸ್ಸಾಗು, ಕೌಂಟ್ ಮಾಡು, ಇತ್ಯಾದಿ).
(ಖ) ಆಡು
ಈ ಕ್ರಿಯಾಪದವನ್ನು ಬಳಸಿ ರಚಿಸುವ ಕೂಡುಪದಗಳನ್ನು ಕ್ರಿಯಾಪದ, ನಾಮ ಪದ ಇಲ್ಲವೇ ಗುಣಪದಗಳಿಂದ ತಯಾರಿಸಲು ಸಾಧ್ಯವಿದೆ. ಕ್ರಿಯಾಪದಗಳನ್ನು ಸಾಮಾನ್ಯವಾಗಿ ಅವುಗಳ ‘ಭೂತನ್ಯೂನ’ ರೂಪದಲ್ಲಿ ಬಳಸುವುದು ರೂಢಿ. ಇಂತಹ ಕೂಡುಪದಗಳಲ್ಲಿ ಆಡು ಎಂಬ ಕ್ರಿಯಾಪದಕ್ಕೆ ಒಂದು ಘಟನೆ ಹಲವು ಬಾರಿ ಅಥವಾ ಬಹಳ ಹೊತ್ತು ನಡೆಯುವುದೆಂಬ ಅರ್ಥ ಬರುತ್ತದೆ. ಸಾಮಾನ್ಯವಾಗಿ ಇದು ಚಲನೆಯನ್ನು ಸೂಚಿಸುವಂತಹ ನಲಿ, ಕುಣಿ, ತಿರುಗು, ಹಾರು, ಓಡು, ತೇಲು, ತೂಗು, ಹೊರಳು ಮೊದಲಾದ ಕ್ರಿಯಾಪದಗಳೊಂದಿಗೆ ಬರುತ್ತದೆ. ಉದಾ:
| ಕುಣಿ | ಕುಣಿದಾಡು | ಎಳೆ | ಎಳೆದಾಡು |
| ಸುಳಿ | ಸುಳಿದಾಡು | ಅಲೆ | ಅಲೆದಾಡು |
| ನಲಿ | ನಲಿದಾಡು | ಹೊಡೆ | ಹೊಡೆದಾಡು |
ಉಕಾರದಲ್ಲಿ ಕೊನೆಗೊಳ್ಳುವ ಓಡು, ತಿರುಗು, ಹೊರಳು ಮೊದಲಾದ ಕ್ರಿಯಾಪದಗಳಿಗೆ ಇಕಾರದಲ್ಲಿ ಕೊನೆಗೊಳ್ಳುವ ಓಡಿ, ತಿರುಗಿ, ಹೊರಳಿ ಎಂಬಂತಹ ಭೂತನ್ಯೂನ ರೂಪಗಳಿದ್ದು, ಈ ಕ್ರಿಯಾಪದಗಳೊಂದಿಗೆ ಆಡು ಎಂಬ ಪದ ಸೇರಿದಾಗ ಅವುಗಳ ಕೊನೆಯ ಇಕಾರ ಬಿದ್ದು ಹೋಗುತ್ತದೆ. ಹಾಗಾಗಿ, ಈ ಕ್ರಿಯಾಪದಗಳಿಂದ ತಯಾರಾದ ಕೂಡುಪದಗಳಲ್ಲಿ ಇವು ನೇರವಾಗಿ ಧಾತುರೂಪದಲ್ಲೇ ಬಂದಿವೆಯೇನೋ ಎಂದು ತೋರುತ್ತದೆ. ಉದಾ:
| ಓಡು | ಓಡಾಡು | ತಿರುಗು | ತಿರುಗಾಡು |
| ತೂಗು | ತೂಗಾಡು | ಹೊರಳು | ಹೊರಳಾಡು |
| ಕಚ್ಚು | ಕಚ್ಚಾಡು | ಹೆಣಗು | ಹೆಣಗಾಡು |
| ಗುದ್ದು | ಗುದ್ದಾಡು | ಹುಡುಕು | ಹುಡುಕಾಡು |
183
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆದರೆ, ನಗು ಎಂಬ ಕ್ರಿಯಾಪದಕ್ಕೆ ನಕ್ಕು ಎಂಬ ಭೂತನ್ಯೂನ ರೂಪವಿದೆ ಯಾದರೂ ಅದರ ಕೂಡುಪದವಾದ ನಗಾಡು ಎಂಬುದರಲ್ಲಿ ಅದು ಧಾತು ರೂಪದಲ್ಲೇ ಬಂದಿರುವುದನ್ನು ಗಮನಿಸಬಹುದು.
ಆಡು ಎಂಬ ಈ ಕ್ರಿಯಾಪದವನ್ನು ಕೆಲವು ನಾಮಪದಗಳೊಂದಿಗೂ ಬಳಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಆದರೆ ಕ್ರಿಯಾಪದಗಳ ಭೂತನ್ಯೂನರೂಪದೊಂದಿಗೆ ಬಳಸಿ ದಾಗ ದೊರೆಯುವ ಅರ್ಥ (ಹಲವು ಬಾರಿ ಇಲ್ಲವೇ ಬಹಳ ಹೊತ್ತು ಎಂಬುದು) ಅದಕ್ಕೆ ಈ ಬಳಕೆಯಲ್ಲಿ ಬರುವುದಿಲ್ಲ. ಉದಾ:
ಜೂಜು ಜೂಜಾಡು
ಉಸಿರು ಉಸಿರಾಡು
ಜಗಳ ಜಗಳಾಡು
ಮಾತನಾಡು ಎಂಬ ಕೂಡುಪದದಲ್ಲಿ ಮಾತು ಎಂಬ ನಾಮಪದ ಅನ್ನು (ಅನ್) ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿರುವುದನ್ನು ಕಾಣಬಹುದು. ಇದೊಂದು ಅನಿಯಮಿತವಾದ ಬಳಕೆ.
ಆಡು ಎಂಬ ಕ್ರಿಯಾಪದ ಗುಣಪದಗಳೊಂದಿಗೂ ಕೂಡುಪದಗಳಲ್ಲಿ ಬರ ಬಲ್ಲುದು ಎಂಬುದಕ್ಕೆ ಕೆಳಗಿನ ಉದಾಹರಣೆಗಳನ್ನು ಕೊಡಬಹುದು.
ಅಡ್ಡ ಅಡ್ಡಾಡು ಬಡನೆ ಬಡನಾಡು
(ಗ) ಕೊಡು
ಈ ಕ್ರಿಯಾಪದವನ್ನು ನಿಯಮಿತವಾಗಿ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಕೂಡುಪದಗಳಲ್ಲಿ ಬಳಸಲು ಸಾಧ್ಯವಿದೆ. ಆದರೆ, ಒಂದು ಕೆಲಸವನ್ನು ಇನ್ನೊಬ್ಬನ ಹಿತಕ್ಕಾಗಿ ಮಾಡುವುದೆಂಬ ಅರ್ಥ ಇದಕ್ಕಿದೆಯಾದ ಕಾರಣ, ಅಂತಹ ಅರ್ಥವನ್ನು ಕೊಡಬಲ್ಲ ಕ್ರಿಯಾಪದಗಳೊಂದಿಗೆ ಮಾತ್ರ ಇದು ಬರಬಲ್ಲುದು. ಇದರೊಂದಿಗೆ ಕ್ರಿಯಾಪದಗಳು ಅವುಗಳ ಭೂತನ್ಯೂನರೂಪದಲ್ಲಿ ಬರುತ್ತವೆ. ಉದಾ:
| ಮಾಡು | ಮಾಡಿಕೊಡು | ತರು | ತಂದುಕೊಡು |
| ಹುಡುಕು | ಹುಡುಕಿಕೊಡು | ಬರೆ | ಬರೆದುಕೊಡು |
| ತಿದ್ದು | ತಿದ್ದಿಕೊಡು | ಸುಲಿ | ಸುಲಿದುಕೊಡು |
184
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಇದಲ್ಲದೆ ಅನಿಯಮಿತವಾಗಿ ಬೀಳ್ಕೊಡು ಎಂಬುದರಲ್ಲಿ ಇದು ನೇರವಾಗಿ ಒಂದು ಕ್ರಿಯಾಧಾತುವಿನೊಂದಿಗೂ, ಬರಗೊಡು ಎಂಬುದರಲ್ಲಿ ಬರು ಎಂಬ ಕ್ರಿಯಾಪದದ ಬರ(ಲು) ಎಂಬ ರೂಪದೊಂದಿಗೂ ಮತ್ತು ಕಿವಿಗೊಡು, ಬೆಲೆಕೊಡು ಎಂಬವುಗಳಲ್ಲಿ ನಾಮಪದಗಳೊಂದಿಗೂ ಬಂದಿರುವುದನ್ನು ಕಾಣ ಬಹುದು.
(ಫ) ಕೊಕ್ಕು
ಕನ್ನಡದಲ್ಲಿ ಈ ಕ್ರಿಯಾಪದಕ್ಕೆ ಸ್ವತಂತ್ರವಾದ ಬಳಕೆಯಿಲ್ಲ. ಆದರೆ ಕೂಡುಪದಗಳಲ್ಲಿ ಇದನ್ನು ಹೆಚ್ಚು ಕಡಿಮೆ ಎಲ್ಲಾ ರೀತಿಯ ಕ್ರಿಯಾಪದಗ ಳೊಂದಿಗೂ ಬಳಸಲು ಸಾಧ್ಯವಿದೆ. ಇಂತಹ ಕೂಡುಪದಗಳಲ್ಲಿ ಕ್ರಿಯಾಪದಗಳು ಅವುಗಳ ಭೂತನ್ಯೂನ ರೂಪದಲ್ಲಿ ಬರುತ್ತವೆ, ಮತ್ತು ಈ ಕೂಡುಪದಗಳಿಗೆ ಒಂದು ಘಟನೆ ತಾನಾಗಿ ನಡೆದಿದೆ ಇಲ್ಲವೇ ಒಂದು ಕೆಲಸವನ್ನು ಒಬ್ಬ ವ್ಯಕ್ತಿ ತನಗಾಗಿ ನಡೆಸಿದ್ದಾನೆ ಎಂಬ ಅರ್ಥ ಬರುತ್ತದೆ. ಉದಾ:
| ಮಾಡು | ಮಾಡಿಕೊಳ್ಳು | ಬರೆ | ಬರೆದುಕೊಳ್ಳು |
| ತಿನ್ನು | ತಿಂದುಕೊಳ್ಳು | ಕುಡಿ | ಕುಡಿದುಕೊಳ್ಳು |
| ಅಡಗು | ಅಡಗಿಕೊಳ್ಳು | ಇಡು | ಇಟ್ಟುಕೊಳ್ಳು |
ಕೊಳ್ಳು ಎಂಬ ಅಸ್ವತಂತ್ರ ಕ್ರಿಯಾಪದವೂ ಕೊಂಡುಕೊಳ್ಳು ಎಂಬ ಕೂಡು ಪದದಲ್ಲಿ ಮೊದಲನೆಯ (ನ್ಯೂನರೂಪದ) ಕ್ರಿಯಾಪದವಾಗಿ ಬಂದಿರುವುದನ್ನು ಕಾಣಬಹುದು. ಇದಲ್ಲದೆ ಬೇರೆಯೂ ಕೆಲವು ಕ್ರಿಯಾಪದಗಳು ಈ ರೀತಿ ಅಸ್ವತಂತ್ರ ಕ್ರಿಯಾಪದಗಳಾಗಿ ಇಂತಹ ಕೂಡುಪದಗಳಲ್ಲಿ ಬಂದಿರುವುದನ್ನು ಕದ್ದುಕೊಳ್ಳು, ಕುಳಿತುಕೊಳ್ಳು ಎಂಬಂತಹವುಗಳಲ್ಲಿ ಕಾಣಬಹುದು.
ಕೆಲವು ನಾಮಪದ ಮತ್ತು ಗುಣಪದಗಳೊಂದಿಗೂ ಕೊಳ್ಳು ಎಂಬ ಈ ಕ್ರಿಯಾಪದವನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.
| ನೆಲೆ | ನೆಲೆಗೊಳ್ಳು | ಇದಿರು | ಇದಿರುಗೊಳ್ಳು |
| ಮೋಸ | ಮೋಸಗೊಳ್ಳು | ||
| ಸಿಟ್ಟು | ಸಿಟ್ಟುಗೊಳ್ಳು | ||
| ಕೈ | ಕೈಗೊಳ್ಳು |
185
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಹದಗೊಳಿಸು ಮತ್ತು ಸಜ್ಜುಗೊಳಿಸು ಎಂಬವುಗಳಲ್ಲಿ ಕಾಣಿಸುವ ಕೂಡು ಪದಗಳು ಇಸು ಎಂಬ ಪ್ರತ್ಯಯದೊಂದಿಗೆ ಮಾತ್ರ ಬರಬಲ್ಲುವು.
(ಜ) ಬರು
ಈ ಕ್ರಿಯಾಪದವನ್ನೂ ಬೇರೆ ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಕೆಲವು ಬಳಕೆಗಳಲ್ಲಿ ಬರು ಎಂಬುದಕ್ಕೆ ಅದರ ನೇರವಾದ ಅರ್ಥವಿದೆಯಾದರೆ, ಇನ್ನು ಕೆಲವು ಬಳಕೆಗಳಲ್ಲಿ ಈ ಅರ್ಥಕ್ಕೇನೇ ಸಂಬಂಧಿಸಿದ ಬೇರೆ ಅರ್ಥಗಳು ಬಂದಿವೆ. ಉದಾ:
| ಓಡು | ಓಡಿಬರು | ಕಾಣು | ಕಂಡುಬರು |
| ಇಳಿ | ಇಳಿದುಬರು | ಕೂಡು | ಕೂಡಿಬರು |
| ಬೆಳೆ | ಬೆಳೆದುಬರು | ತೋರು | ತೋರಿಬರು |
ಕೆಲವು ನಾಮಪದ ಮತ್ತು ಗುಣಪದಗಳೊಂದಿಗೂ ಈ ಕ್ರಿಯಾಪದವನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಉದಾ:
| ಹೆಸರು | ಹೆಸರುಬರು | ಅಡ್ಡ | ಅಡ್ಡಬರು |
| ಅಡ್ಡಿ | ಅಡ್ಡಿಬರು | ಮುಂದೆ | ಮುಂದೆಬರು |
ಬರಬರುತ್ತಾ ಎಂಬುದರಲ್ಲಿ ಈ ಕ್ರಿಯಾಪದದೊಂದಿಗೆ ಬರು ಎಂಬ ಕ್ರಿಯಾ ಪದವೇ ಅದರ ಬರ(ಲು) ಎಂಬ ರೂಪದಲ್ಲಿ ಬಂದಿದೆ.
೬.೫.೩ ಬೇರೆ ಕೆಲವು ಕ್ರಿಯಾಪದಗಳ ಬಳಕೆ
ಇಂತಹ ಕೂಡುಪದಗಳಲ್ಲಿ ಎರಡನೆಯ ಕ್ರಿಯಾಪದವಾಗಿ ಕಾಣಿಸುವ ಇತರ ಕ್ರಿಯಾಪದಗಳಲ್ಲಿ ಪ್ರಾಮುಖ್ಯವಾದವುಗಳು ಈ ಕೆಳಗಿನವು. ಇವುಗಳಲ್ಲಿ ಕೆಲವು (ಉದಾ: ಮಾಡು, ಕೆಡು, ಎತ್ತು) ನಾಮಪದ ಮತ್ತು ಗುಣಪದಗಳೊಂದಿಗೆ ಮಾತ್ರ ಬರಬಲ್ಲುವೆಂದು ತೋರುತ್ತದೆ.
| ಬಿಡು | ಕಟ್ಟು | ಇಡು |
| ಬೀಳು | ಹಾಕು | ಕೆಡು |
| ಮಾಡು | ಎತ್ತು | ಹೋಗು |
ಕೂಡಪದಗಳಲ್ಲಿ ಈ ಕ್ರಿಯಾಪದಗಳ ಬಳಕೆಯನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
186
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾಪದಗಳ ಒಳರಚನೆ
ಕೈಬಿಡು
ಅಡ್ಡ ಕಟ್ಟು
ಬಾಯಿಬಿಡು
ಕಣ್ಣೆಡು
ಬೆಲೆಕಟ್ಟು
ಹೆಸರಿಡು
ತೇಲಿಬಿಡು
ಹೆಪ್ಪುಗಟ್ಟಿ
ಮುಚ್ಚಿಡು ಚ
ಎಡಬಿಡ(ದೆ)
ಎತ್ತಿ ಕಟ್ಟು
ಬರೆದಿಡು
ಅಡ್ಡಬೀಳು
ಬೊಬೆ ಹಾಕು
ಅಂದಗೆಡು
ಹಿಂದೆಬೀಳು
ತೆಗೆದುಹಾಕು
ಕಂಗೆಡು
ಗಂಟುಬೀಳು
ತೂಗಹಾಕು
ಎದೆಗೆಡು
ತಿರುಗಿಬೀಳು
ಕೈಹಾಕು
ಹದಗೆಡು
ಕೈಮಾಡು
ಉಸಿರೆತ್ತು
ಮೋಸಹೋಗು
ಹಾಳುಮಾಡು
ಕಣ್ಣೆತ್ತು
ಓಡಿಹೋಗು
ತಡಮಾಡು
ತಲೆಯೆತ್ತು
ಸೋತುಹೋಗು
ಊಟಮಾಡು
ಕೈಯೆತ್ತು
ಸತ್ತುಹೋಗು
ಈ ಕ್ರಿಯಾಪದಗಳಲ್ಲಿ ಕೆಡು ಎಂಬುದರ ಮೊದಲನೆಯ ಅಕ್ಷರದಲ್ಲಿರುವ ಕಕಾರ ಗಕಾರವಾಗಿರುವುದನ್ನು ಗಮನಿಸಬಹುದು. ಇಂತಹ ಸೇರಿಕೆಯ ಬದಲಾ ವಣೆಗಳು ಬೇರೆ ಕೆಲವು ಕೂಡುಪದಗಳಲ್ಲೂ ಕಾಣಿಸುತ್ತವೆ. ಕೆಲವು ಕ್ರಿಯಾಪದ ಗಳಲ್ಲಿ ಇವು ನಿಯಮಿತವಾಗಿ ಎಲ್ಲಾ ಕೂಡುಪದಗಳಲ್ಲೂ ಕಾಣಿಸುವುವಾದರೆ (ಉದಾ: ಕಾಣು-ಗಾಣು, ಕುಟ್ಟು-ಗುಟ್ಟು, ಕೆದರು-ಗೆದರು), ಬೇರೆ ಕೆಲವು ಕ್ರಿಯಾಪದಗಳಲ್ಲಿ ಅನಿಯಮಿತವಾಗಿ ಕಾಣಿಸಿಕೊಳ್ಳುತ್ತವೆ (ಉದಾ: ಕಟ್ಟು-ಗಟ್ಟು, ಕಳೆ-ಗಳೆ, ತಿರುಗು-ದಿರುಗು). ಉದಾ:
ಕಿರುಗುಟ್ಟು ಕೊನೆಗಾಣು ಕಳೆಗುಂದು ಬುಸುಗುಟ್ಟು ಮನಗಾಣು ಎದೆಗುಂದು
ಬಡಂಬಡು ತಡೆಗಟ್ಟಿ ಹಿಂದಿರುಗು ಬಳಪಡು ಅಡ್ಡಕಟ್ಟು ತಲೆತಿರುಗು
ಮೇಲೆ ಕೊಟ್ಟಿರುವ ಕ್ರಿಯಾಪದಗಳು ಮಾತ್ರವಲ್ಲದೆ ಬೇರೆಯೂ ಹಲವಾರು ಕ್ರಿಯಾಪದಗಳು ಇಂತಹ ಕೂಡುಪದಗಳ ಎರಡನೆಯ ಪದವಾಗಿ ಬರಬಲ್ಲು ವೆಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.
ಬಾಯಾರು ಕೈಯೊಡ್ಡು ಕಾಲತಳ್ಳು
187
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ಕೈಯಿಕ್ಕು | ಜಗಳಕಾಯು | ತಲೆದೂಗು |
| ಕುಳ್ಳಿರಿಸು | ಹಲ್ಲುಕಿರಿ | ಮುಂದೂಡು |
| ಬೇರೂರು | ಕಸಗುಡಿಸು | ಮುನ್ನಡೆ |
| ಈಡೇರು | ಹರಟೆಕೊಚ್ಚು | ಹಾರಿನೋಡು |
| ಗುಲ್ಲೆಬ್ಬಿಸು | ತಲೆಕೊಡು | ತಲೆಬಾಗು |
| ಕವಲೊಡೆ | ಕೈಬಾಚು | ಕೈಮುಗಿ |
| ಕಂಡುಹಿಡಿ | ಕೈಸೇರು | ಒರೆಹಚ್ಚು |
| ಕೈಹಾಕು | ಹಿಮ್ಮೆಟ್ಟು | ಮೊರೆಹೊಗು |
ಓ.ಓ ಸಾರಾಂಶ
ಕನ್ನಡದ ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಎಂಬುದನ್ನು ಬಿಟ್ಟರೆ ಬೇರೆ ಪ್ರತ್ಯಯಗಳ ಬಳಕೆ ಬಹಳ ಅಪರೂಪ. ಪಳೆಯಳಿಕೆಗಳಾಗಿರುವ ಕೆಲವು ಪ್ರತ್ಯಯ ಗಳನ್ನು ಮಾತ್ರ ಅವುಗಳಲ್ಲಿ ಕಾಣಲು ಸಾಧ್ಯವಿದೆ. ಇದಲ್ಲದೆ ನಾಮಪದಗಳ ಒಳರಚನೆಯಲ್ಲಿ ಕಾಣಿಸುವಂತಹ ಜೋಡುಪದಗಳ ಬಳಕೆಯೂ ಕ್ರಿಯಾಪದಗಳ ಲ್ಲಿಲ್ಲ. ಕನ್ನಡ ವೈಯಾಕರಣಿಗಳು ವರ್ಣಿಸುವ ಕ್ರಿಯಾಸಮಾಸವೆಂಬವುಗಳು ನಿಜಕ್ಕೂ ಪದಗುಚ್ಛಗಳಲ್ಲದೆ ಜೋಡುಪದ(ಸಮಸ್ತಪದ)ಗಳಲ್ಲ.
ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಮತ್ತು ಕೆಲವು ನಾಮಪದ ಮತ್ತು ಗುಣಪದಗಳೊಂದಿಗೆ ಕೆಲವು ವಿಶಿಷ್ಟವಾದ ಕ್ರಿಯಾಪದಗಳನ್ನು ಬಳಸಿ ‘ಕೂಡುಪದ’ಗಳೆಂಬ ಅಡಕವಾದ ಪದಗುಚ್ಛಗಳನ್ನು ತಯಾರಿಸಿ ಬಳಸುವುದು ಕನ್ನಡದ ಕ್ರಿಯಾಪದಗಳ ಇನ್ನೊಂದು ವೈಶಿಷ್ಟ್ಯ.
188
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ಏಳು ಗುಣಪದಗಳ ಒಳರಚನೆ
೭.೧ ಪೀಠಿಕೆ
ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿರುವ ‘ಗುಣಪದ’ಗಳೆಂಬ ಬೇರೆಯೇ ಒಂದು ಪದವರ್ಗಕ್ಕೆ ಸೇರುವ ಪದಗಳು ಕನ್ನಡದಲ್ಲಿವೆಯೆಂಬುದನ್ನು ನಾವು ಎರಡನೆಯ ಅಧ್ಯಾಯದಲ್ಲಿ ನೋಡಿರುವೆವು. ಈ ಪದಗಳು ವಾಕ್ಯದಲ್ಲಿ ಬರುವ ವಿಧಾನ, ತೆಗೆದುಕೊಳ್ಳುವ ಪ್ರತ್ಯಯಗಳು ಮತ್ತು ಸೂಚಿಸುವ ಅರ್ಥ ಎಂಬ ಈ ಮೂರು ವಿಷಯಗಳಲ್ಲೂ ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆಯೆಂಬುದನ್ನೂ ನೋಡಿರುವೆವು. ಒಳರಚನೆಯಲ್ಲೂ ಈ ಪದಗಳು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆಯೆಂಬುದನ್ನು ಈ ಅಧ್ಯಾಯ ದಲ್ಲಿ ನೋಡಲಿರುವೆವು.
ಕನ್ನಡ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಗುಣಪದಗಳು ಬಳಕೆ ಯಾಗುತ್ತವೆ. ಅವುಗಳಲ್ಲಿ ಕೆಲವು ನಾಮಪದಗಳೊಂದಿಗೆ ಬರಬಲ್ಲುವು ಮತ್ತು ಇನ್ನು ಕೆಲವು ಕ್ರಿಯಾಪದಗಳೊಂದಿಗೆ ಬರಬಲ್ಲುವು. ನಾಮಪದಗಳೊಂದಿಗೆ ಬರಬಲ್ಲ ಉದ್ದ, ಬಿಳಿ, ದೊಡ್ಡ, ಮೊದಲಾದ ಗುಣಪದಗಳು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮಗಳನ್ನು ಸೂಚಿಸು ವುವಾದರೆ, ಕ್ರಿಯಾಪದಗಳೊಂದಿಗೆ ಬರಬಲ್ಲ ಮೇಲೆ, ಹಿಂದೆ, ಮೆಲ್ಲಗೆ, ಮೊದಲಾದ ಗುಣಪದಗಳು ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳ ಗುಣ ಧರ್ಮಗಳನ್ನು ಸೂಚಿಸುತ್ತವೆ.
(೧) ದೊಡ್ಡ ಪೆಟ್ಟಿಗೆಯನ್ನು ಕೆಳಗೆ ಇರಿಸಿದ್ದೇನೆ.
(೨) ಹೊಸ ಬಟ್ಟೆಯನ್ನು ಹಳೇ ಬಟ್ಟೆಯ ಹಾಗೆ ಜಾಸ್ತಿ ನೆನಸಬೇಡ.
ಮೇಲೆ ಕೊಟ್ಟಿರುವ (೧-೨) ವಾಕ್ಯಗಳಲ್ಲಿ ದೊಡ್ಡ, ಹೊಸ ಮತ್ತು ಹಳೇ ಎಂಬ ಗುಣಪದಗಳು ಅವುಗಳ ಅನಂತರ ಬಂದಿರುವ ನಾಮಪದಗಳ ಗುಣ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಗುಣಪದಗಳ ಒಳರಚನೆ
ಧರ್ಮಗಳನ್ನೂ ಮತ್ತು ಕೆಳಗೆ ಮತ್ತು ಜಾಸ್ತಿ ಎಂಬ ಗುಣಪದಗಳು ಅವುಗಳ ಅನಂತರ ಬಂದಿರುವ ಕ್ರಿಯಾಪದಗಳ ಗುಣಧರ್ಮಗಳನ್ನೂ ಸೂಚಿಸುತ್ತವೆ.
ಈ ಎರಡು ರೀತಿಯ ಗುಣಪದಗಳ ನಡುವೆ ಅವುಗಳ ಅರ್ಥದಲ್ಲಿ ಮಾತ್ರ ವಲ್ಲದೆ, ಒಳರಚನೆಯಲ್ಲಿ ಮತ್ತು ವಾಕ್ಯದಲ್ಲಿ ಅವಕ್ಕಿರುವ ಸ್ವಾತಂತ್ರ್ಯದಲ್ಲಿ ವ್ಯತ್ಯಾಸಗಳಿವೆಯೆಂಬುದನ್ನು ಮುಂದೆ ನೋಡಲಿರುವೆವು.
ಇದಲ್ಲದೆ, ಗುಣಪದಗಳೊಂದಿಗೆ ಬರಬಲ್ಲ ಬಹಳ, ಬರೀ, ಬಲು, ಮೊದಲಾದ ಬೇರೆ ಕೆಲವು ಗುಣಪದಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಇವು ಗುಣಪದಗಳು ಸೂಚಿಸುವ ಗುಣಧರ್ಮಗಳ ಪ್ರಮಾಣವನ್ನು ತಿಳಿಸುತ್ತವೆ. ಉದಾ:
(೩) ಈ ಬಟ್ಟೆ ಬಹಳ ತೆಳ್ಳಗಿದೆ.
(೪) ಅವನು ಭಾರೀ ದೊಡ್ಡ ಮನೆ ಕಟ್ಟಿಸುತ್ತಿದ್ದಾನೆ.
ಆದರೆ ಇಂತಹ ಗುಣಪದಗಳ ಸಂಖ್ಯೆ ಜಾಸ್ತಿಯಿಲ್ಲ. ಇದಲ್ಲದೆ, ಇವುಗಳ ಒಳರಚನೆಯಲ್ಲಿ ಹೇಳುವಂತಹ ವಿಶಿಷ್ಟವಾದ ಸಂಗತಿಯೇನೂ ಇಲ್ಲವಾದ ಕಾರಣ, ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಎರಡು ರೀತಿಯ ಗುಣಪದಗಳ ಒಳರಚನೆಯನ್ನು ಮಾತ್ರವೇ ಈ ಅಧ್ಯಾಯದಲ್ಲಿ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.
೭.೨ ಕೆಲವು ವ್ಯತ್ಯಾಸಗಳು
ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಸಾಮಾನ್ಯವಾಗಿ ಬೇಗನೆ ಬದಲಾಗದಿರುವ ‘ಸ್ಥಾಯೀ’ ಗುಣಧರ್ಮಗಳನ್ನೂ ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳು ಅಷ್ಟೊಂದು ಸ್ಥಿರವಲ್ಲದಿರುವ ‘ಅಸ್ಥಾಯೀ’ ಗುಣಧರ್ಮ ಗಳನ್ನೂ ಸೂಚಿಸುತ್ತವೆ. ವ್ಯಕ್ತಿ, ವಸ್ತು ಮೊದಲಾದವುಗಳ ಆಕಾರ (ಉದ್ದ, ಎತ್ತರ, ತೆಳು, ಅಗಲಿ, ಇತ್ಯಾದಿ), ಭೌತಿಕ ಮತ್ತು ಮಾನಸಿಕ ಅವಸ್ಥೆಗಳು (ಚಿಕ್ಕ, ಗಟ್ಟಿ, ಒಣ, ಮೆದು, ಕುರುಡು, ಜಾಣ, ಇತ್ಯಾದಿ), ಬಣ್ಣ (ಕೆಂಪು, ಬಿಳೀ, ಕಪ್ಪು, ಇತ್ಯಾದಿ), ಪ್ರಾಯ (ಹೊಸ, ಹಿರಿ, ಇತ್ಯಾದಿ) ಮೊದಲಾದವು ಗಳನ್ನು ಸೂಚಿಸುವ ಗುಣಪದಗಳು ನಾಮಪದಗಳೊಂದಿಗೆ ಬರುತ್ತವೆ, ಮತ್ತು ಘಟನೆಗಳ ವಿಧಾನ, ಸಮಯ ಮತ್ತು ಜಾಗಗಳನ್ನು ಸೂಚಿಸುವ ಗಿರನೆ, ಸರನೆ, ತಟಕ್ಕನೆ, ಮೆಲ್ಲನೆ, ಮೇಲೆ, ಮುಂಚೆ, ಹಿಂದೆ ಮೊದಲಾದ ಗುಣಪದಗಳು ಕ್ರಿಯಾಪದಗಳೊಂದಿಗೆ ಬರುತ್ತವೆ.
ಕನ್ನಡದಲ್ಲಿ ಈ ರೀತಿ ಮುಖ್ಯವಾಗಿ ಎರಡು ರೀತಿಯ ಗುಣಪದಗಳಿವೆ ಯಾದರೂ ಸಾಮಾನ್ಯವಾಗಿ ಗುಣಪದ (ಇಲ್ಲವೇ ‘ಗುಣವಾಚಕ ಪದ’) ಎಂಬು ದನ್ನು ಈ ಎರಡು ರೀತಿಯ ಗುಣಪದಗಳನ್ನು ಒಟ್ಟಿಗೆ ಸೂಚಿಸುವುದಕ್ಕಿಂತಲೂ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ಮಾತ್ರವೇ ಸೂಚಿಸುವುದಕ್ಕಾಗಿ
189
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಬಳಸುವುದು ಜಾಸ್ತಿ. ಮೇಲೆ ಎರಡನೆಯ ಅಧ್ಯಾಯದಲ್ಲಿ ಕೊಟ್ಟಿರುವ ಗುಣಪದ ಗಳ ಗುಣಧರ್ಮಗಳಲ್ಲಿ ಎಲ್ಲವನ್ನೂ ತೋರಿಸುವುದು ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಮಾತ್ರ. ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದ ಗಳು ಅವುಗಳಲ್ಲಿ ಕೆಲವನ್ನು ಮಾತ್ರ ತೋರಿಸುತ್ತವೆ.
ಉದಾಹರಣೆಗಾಗಿ, ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ನಾಮಪದಗಳಿಂದ ಬೇರ್ಪಡಿಸಿ ವಾಕ್ಯದಲ್ಲೇನೇ ಬೇರೆ ಕಡೆಗಳಿಗೆ ವರ್ಗಾಯಿಸಲು ಸಾಧ್ಯವಾಗದು. ಆದರೆ ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ವಾಕ್ಯದಲ್ಲಿ ಎಲ್ಲಿ ಬೇಕಿದ್ದರೂ ಬಳಸಲು ಸಾಧ್ಯವಿದೆ. ಅವು ಕ್ರಿಯಾಪದದ ಹತ್ತಿರವೇ ಇರಬೇಕೆಂಬ ನಿಯಮವಿಲ್ಲ. ಉದಾ:
- (೫ಕ) ರಾಜು ಮಡಿಕೆಯನ್ನು ನೆಲದ ಮೇಲೆ ಮೆಲ್ಲಗೆ ಇರಿಸಿದ.
- (೫ಖ) ರಾಜು ಮಡಿಕೆಯನ್ನು ಮೆಲ್ಲಗೆ ನೆಲದ ಮೇಲೆ ಇರಿಸಿದ.
- (೫ಗ) ರಾಜು ಮಡಿಕೆಯನ್ನು ನೆಲದ ಮೇಲೆ ಇರಿಸಿದ, ಮೆಲ್ಲಗೆ.
ಮೆಲ್ಲಗೆ ಎಂಬ ಗುಣಪದ (ಮಡಿಕೆಯನ್ನು) ಇರಿಸಿರುವುದು ಹೇಗೆ ಎಂಬುದಾಗಿ ಇರಿಸುವಿಕೆ ಎಂಬ ಒಂದು ಘಟನೆಯ ಗುಣಧರ್ಮವನ್ನು ತಿಳಿಸುತ್ತಿದೆಯಾದರೂ ಅದು (೫ಕ)ದಲ್ಲಿ ಮಾತ್ರ ಆ ಕ್ರಿಯಾಪದದ ಹತ್ತಿರ ಬಂದಿದೆ. (೫ಖ)ದಲ್ಲಿ ಅದು ನೆಲದ ಎಂಬುದರೊಂದಿಗೂ ಮತ್ತು (೫ಗ)ದಲ್ಲಿ ವಾಕ್ಯದ ಹೊರಗೂ ಬಂದಿರು ವುದನ್ನು ಕಾಣಬಹುದು.
ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳಿಗಿರುವ ಈ ಸ್ವಾತಂತ್ರ್ಯವನ್ನು ಬೇರೆಯೂ ಕೆಲವು ವಿಷಯಗಳಲ್ಲಿ ಕಾಣಬಹುದು. ಉದಾಹರಣೆಗಾಗಿ, ಅವಕ್ಕೆ ಒತ್ತುಕೊಟ್ಟು, ಅವನ್ನು ವಾಕ್ಯದಿಂದ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ. ಆದರೆ ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ರೀತಿ ಪ್ರತ್ಯೇಕಿಸಿ ಹೇಳಲು ಸಾಧ್ಯವಾಗದು.
(ಟ) ರಾಜು ಮಡಿಕೆಯನ್ನು, ನೆಲದ ಮೇಲೆ ಮೆಲ್ಲಗೆ ಇರಿಸಬಲ್ಲಿ.
(ಟವಿ) ರಾಜು ಮಡಿಕೆಯನ್ನಿರಿಸಿದ್ದು ಮೆಲ್ಲಗೆ.
೭.೩ ಗುಣಪದಗಳ ಸ್ವರೂಪ
ಕನ್ನಡದಲ್ಲಿ ಒಳರಚನೆಯಿಲ್ಲದ ಗುಣ(ಪದ) ಧಾತುಗಳು ಹಲವಿವೆ. ಇವುಗಳಲ್ಲಿ ಒಂದೇ ಅಕ್ಷರವಿರುವ ಧಾತುಗಳೆಲ್ಲ ಅಸ್ವತಂತ್ರ ಪದಗಳಾಗಿದ್ದು, ಜೋಡುಪದ ಗಳಲ್ಲಿ (ನಾಮಪದಗಳಾಗಿ) ಇಲ್ಲವೇ ಪ್ರತ್ಯಯವಿರುವ ಪದಗಳಲ್ಲಿ (ಗುಣಪದ ಗಳಾಗಿ) ಬಳಕೆಯಗುತ್ತವೆ. ಉದಾಹರಣೆಗಾಗಿ, ಕೆಂ ಎಂಬ ಅಸ್ವತಂತ್ರ ಗುಣ ಧಾತು ಕೆಂದಾಳಿ, ಕೆಮ್ಮಣ್ಣು ಮೊದಲಾದ ಜೋಡುಪದಗಳಲ್ಲಿ ಬೇರೆ ಪದ
190
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಗುಣಪದಗಳ ಒಳರಚನೆ
ಗಳೊಂದಿಗೆ ಸೇರಿ ನಾಮಪದವಾಗಿ ಬಳಕೆಯಾಗುತ್ತದೆ, ಮತ್ತು ಕೆಂಪು ಮತ್ತು ಕೆಂಚು ಎಂಬವುಗಳಲ್ಲಿ ಪ್ರತ್ಯಯಗಳೊಂದಿಗೆ ಸೇರಿ ಗುಣಪದವಾಗಿ ಬಳಕೆ ಯಾಗುತ್ತದೆ. ಹಿನ್, ತಣ್, ಮುನ್, ನುಣ್, ಹೆರ್ (ಹಿರಿ) ಮೊದಲಾದವುಗಳು ಇಂತಹ ಒಂದಕ್ಷರವಿರುವ ಗುಣಧಾತುಗಳು.
ಒಂದಕ್ಕಿಂತ ಜಾಸ್ತಿ ಅಕ್ಷರವಿರುವ ಗುಣಧಾತುಗಳೂ ಕನ್ನಡದಲ್ಲಿ ಹಲವಿವೆ. ಚಾರಿತ್ರಿಕವಾಗಿ ಈ ಧಾತುಗಳೂ ಒಂದಕ್ಷರ ಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸು ವುದರ ಮೂಲಕ ಸಿದ್ಧವಾದವುಗಳೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಬಿಳಿ, ಬಿಸಿ ಮತ್ತು ಕರಿ ಎಂಬವುಗಳ ಕೊನೆಯ ಇಕಾರ, ಸಿಹಿ ಮತ್ತು ಕಹಿ ಎಂಬವುಗಳಲ್ಲಿ ಬರುವ ಹಿ ಎಂಬ ಎರಡನೆಯ ಅಕ್ಷರ, ಎಳೆ, ಹಳೆ, ಒಳ್ಳೆ ಮೊದಲಾದವುಗಳ ಕೊನೆಯಲ್ಲಿ ಬರುವ ಎಕಾರ, ಮೊದಲಾದವುಗಳು ಈ ರೀತಿ ಪ್ರತ್ಯಯಗಳಾಗಿರಲು ಸಾಧ್ಯವಿದೆ.
ಕನ್ನಡದಲ್ಲಿ ಕ್ರಿಯಾಧಾತು ಮತ್ತು ನಾಮಧಾತುಗಳಿಗಿಂತ ಬಿನ್ನವಾಗಿರುವ ಹಲವಾರು ಗುಣಧಾತುಗಳಿವೆಯೆಂಬುದನ್ನು ಕೆಳಗಿನ ಕೆಲವು ಉದಾಹರಣೆಗಳಿಂದ ತಿಳಿಯಬಹುದು.
| ಕರಿ | ಒಳ | ಎಳೆ | ತೋರ | ಅಡ್ಡ | ಮೊಂಡು |
| ಬಿಳಿ | ಹೊರ | ಹಳೆ | ನೇರ | ಉದ್ದ | ದುಂಡು |
| ಸಿಹಿ | ಎಡ | ತೆಳು | ಕೀಳು | ದೊಡ್ಡ | ಡೊಂಕು |
| ಕಹಿ | ಬಲ | ನಡು | ಮೇಲು | ದಪ್ಪ | ಕುಂಟು |
ನಾಮಪದಗಳ ಬದಲು ಕ್ರಿಯಾಪದಗಳ ವಿಶೇಷಣಗಳಾಗಿ ಬರಬಲ್ಲ ಗುಣ ಧಾತುಗಳು ಕನ್ನಡದಲ್ಲಿ ಜಾಸ್ತಿಯಿಲ್ಲ. ಆದರೆ ಶಬ್ದ ಇಲ್ಲವೇ ಅನುಭವವನ್ನು ಅಣಕಿಸಿ ಹೇಳುವ ಹಲವು ಪದಗಳು ಅನೆ ಇಲ್ಲವೇ ನೆ ಎಂಬ ಪ್ರತ್ಯಯ ದೊಂದಿಗೆ ಸೇರಿ ಈ ರೀತಿ ಕ್ರಿಯಾಪದಗಳ ವಿಶೇಷಣಗಳಾಗಿ ಬರಬಲ್ಲುವು. ಇವನ್ನು ಅಸ್ವತಂತ್ರ ಗುಣಧಾತುಗಳೆಂದು ಪರಿಗಣಿಸಲು ಸಾಧ್ಯವಿದೆ. ಇವು ಮುಖ್ಯ ವಾಗಿ ಮೂರು ರೀತಿಯ ರೂಪಗಳಲ್ಲಿ ಬರುವುವೆಂಬುದನ್ನು ಕೆಳಗಿನ ಉದಾ ಹರಣೆಗಳಿಂದ ತಿಳಿಯಬಹುದು.
| ಸರನೆ | ಜಮ್ಮನೆ | ಬಗ್ಗನೆ |
| ಗಿರನೆ | ತಟ್ಟನೆ | ದಿಗ್ಗನೆ |
| ಬರನೆ | ದೊಪ್ಪನೆ | ಜಗ್ಗನೆ |
| ಸರಕ್ಕನೆ | ತಟಕ್ಕನೆ | |
| ಕಿಸಕ್ಕನೆ | ಗುಳಕ್ಕನೆ |
191
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
| ಕನ್ನಡ ಪದಗಳ ಒಳರಚನೆ | ||
|---|---|---|
| ಗಬಕ್ಕನೆ | ಪಚಕ್ಕನೆ | |
| ಸರಸರನೆ | ಕತಕತನೆ | ಗಣಗಣನೆ |
| ಮಿರಮಿರನೆ | ಗಡಗಡನೆ | ಕಿಲಕಿಲನೆ |
ಕೆಲವು ಅಣಕಿಸುವ ಪದಗಳು ಈ ರೀತಿ ಅನ ಎಂಬ ಪ್ರತ್ಯಯದ ಸಹಾಯ ವಿಲ್ಲದೆಯೂ ನೇರವಾಗಿ ಕ್ರಿಯಾಪದಗಳೊಂದಿಗೆ ಅವುಗಳ ವಿಶೇಷಣಗಳಾಗಿ ಬರ ಬಲ್ಲುವು. ಉದಾಹರಣೆಗಾಗಿ, ಗಡಗಡ ನಡುಗು, ಗುಸು ಗುಸು ಮಾತ ನಾಡು, ಪಳಪಳ ಹೊಳೆ ಮೊದಲಾದ ಬಳಕೆಗಳನ್ನು ಗಮನಿಸಬಹುದು. ಇದ ಲ್ಲದೆ, ಎಂದು ಎಂಬ ಪದದ ಸಹಾಯದಿಂದ ಅಣಕಿಸುವ ಕೆಲವು ಪದಗಳನ್ನು ಎತ್ತಿ ಹೇಳಲು ಸಾಧ್ಯವಿದೆ (ಉದಾ: ಜೋ ಜೋ ಎಂದು ಹಾಡು). ಆದರೆ ಈ ಎರಡನೆಯ ವಿಧಾನದಲ್ಲಿ ಬರುವ ಅಣಕಿಸುವ ಪದಗಳನ್ನು ಗುಣಪದಗಳೆಂದು ಕರೆಯುವುದು ಕಷ್ಟ.
ಕೆಲವು ಅಣಕಿಸುವ ಪದಗಳು ಅನೆ ಎಂಬ ಪ್ರತ್ಯಯದ ಸಹಾಯದಿಂದ ಗುಣ ಪದಗಳಾಗಿಯೂ ಮತ್ತು ಇಸು ಎಂಬ ಪ್ರತ್ಯಯದ ಸಹಾಯದಿಂದ ಕ್ರಿಯಾಪದ ಗಳಾಗಿಯೂ ಬಳಕೆಯಾಗಬಲ್ಲುವು (೬.೪ ನೋಡಿ). ಇಂತಹ ಅಸ್ವತಂತ್ರ ಧಾತು ಗಳು ಕ್ರಿಯಾಧಾತುಗಳೇ ಅಥವಾ ಗುಣಧಾತುಗಳೇ ಎಂಬುದನ್ನು ನಿಷ್ಕೃಷ್ಟವಾಗಿ ಹೇಳಲು ಸಾಧ್ಯವಿಲ್ಲ.
ಗಮಗಮನೆ ಗಮಗಮಿಸು ತಳತಳನೆ ತಳತಳಿಸು ಬಡಬಡನೆ ಬಡಬಡಿಸು ಗಹಗಹನೆ ಗಹಗಹಿಸು
ಕನ್ನಡದಲ್ಲಿ ಬಳಕೆಯಾಗುವಂತಹ ಅಣಕಿಸುವ ಪದಗಳ ಅಕ್ಷರ ಸ್ವರೂಪ ದಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಅವುಗಳಲ್ಲೆಲ್ಲ ಮೊದಲಿಗೆ ಒಂದು ವ್ಯಂಜನ ಬಂದಿರುತ್ತದೆ. ಮೊದಲಿಗೆ ಸ್ವರ ಬಂದಿರುವ ಅಣಕಿಸುವ ಪದ ಕನ್ನಡದಲ್ಲಿ ಬಹುಶಃ ಇಲ್ಲವೆಂದೇ ಹೇಳಲೂ ಸಾಧ್ಯವಿದೆ. ಇದಲ್ಲದೆ, ಜೋಡಿಯಾಗಿ ಬರುವ ಪದಗಳಲ್ಲಿ (ಉದಾ: ಕಟಕಟನೆ, ಚಟಚಟನೆ, ಇತ್ಯಾದಿ) ಒತ್ತಕ್ಷರವಾಗಲಿ, ಉದ್ದ ಸ್ವರವಾಗಲಿ ಕಾಣಿಸುವುದಿಲ್ಲ, ಮತ್ತು ಈ ರೀತಿ ಜೋಡಿಯಾಗಿ ಬಾರದಿರುವ ಪದಗಳಲ್ಲಿ (ಉದಾ: ಬರನೆ, ಡಬ್ಬನೆ, ಪಟಾರನೆ, ಕಬಕ್ಕನೆ, ಸರಕ್ಕನೆ, ಇತ್ಯಾದಿ) ಒತ್ತಕ್ಷರವಾಗಲಿ, ಉದ್ದಸ್ವರವಾಗಲಿ ಕಾಣಿಸದಿರುವುದಿಲ್ಲ.
೭.೪ ಪ್ರತ್ಯಯಗಳ ಬಳಕೆ
192
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಗುಣಪದಗಳ ಒಳರಚನೆ
ಅಸ್ವತಂತ್ರ ಗುಣಧಾತುಗಳಿಂದ ಗುಣಪದಗಳನ್ನು ತಯಾರಿಸುವುದಕ್ಕಾಗಿ ಕೆಲವು ಪ್ರತ್ಯಯಗಳು ಅನಿಯಮಿತವಾಗಿ ಬಳಕೆಯಾಗುತ್ತವೆ. ಕೆಂ-ಕೆಂಪು, ಕರಿ-ಕಪ್ಪು, ತಣ್-ತಂಪು ಎಂಬವುಗಳಲ್ಲಿ ಕಾಣಿಸುವ ಪು ಎಂಬ ಪ್ರತ್ಯಯ ಇಂತಹದು. ಆದರೆ, ಹೊಳೆ-ಹೊಳಪು, ಬಿಳಿ-ಬಿಳುಪು, ಮುದಿ-ಮುಪ್ಪು ಎಂಬವುಗಳಲ್ಲಿ ಇದೇ ಪ್ರತ್ಯಯ ಗುಣಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗಿದೆ ಎಂಬು ದನ್ನು ಗಮನಿಸಬಹುದು.
ಕೆಂ-ಕೆಂಚು ಎಂಬುದರಲ್ಲಿ ಚು ಎಂಬ ಪ್ರತ್ಯಯ ಬಳಕೆಯಾಗಿದೆ, ಮತ್ತು ಇದೇ ಪ್ರತ್ಯಯ ಮುನೆ-ಮೊನಚು ಎಂಬುದರಲ್ಲಿ ನಾಮಪದದಿಂದ ಗುಣಪದ ವೊಂದನ್ನು ತಯಾರಿಸಲು ಬಳಕೆಯಾಗಿದೆ. ಮುಂ-ಮುಂಚೆ ಎಂಬುದರಲ್ಲಿ ಚೆ ಎಂಬ ಇನ್ನೊಂದು ಪ್ರತ್ಯಯ ಬಳಕೆಯಾಗಿದೆ, ಮತ್ತು ಇದೇ ಪ್ರತ್ಯಯ ಕೊಳೆ- ಕೊಳಚೆ ಎಂಬುದರಲ್ಲಿ ಕ್ರಿಯಾಪದದಿಂದ ಗುಣಪದ (ಇಲ್ಲವೇ ನಾಮಪದ)ವನ್ನು ತಯಾರಿಸಲು ಬಳಕೆಯಾಗಿದೆ. ತುಂಬು-ತುಂಬ (ತುಂಬಾ), ಅಗಲು-ಅಗಲಿ ಎಂಬವುಗಳಲ್ಲಿ ಕ್ರಿಯಾಪದದಿಂದ ಗುಣಪದವನ್ನು ತಯಾರಿಸಲು ಅ (ಇಲ್ಲವೇ ಆ) ಎಂಬ ಪ್ರತ್ಯಯ ಬಂದಿರುವುದನ್ನು ಕಾಣಬಹುದು.
ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳಿಂದ ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ತಯಾರಿಸುವುದಕ್ಕಾಗಿಯೂ ಕೆಲವು ಪ್ರತ್ಯಯಗಳ ಬಳಕೆಯಾಗುತ್ತದೆ. ಇವುಗಳಲ್ಲಿ ಅಗೆ ಎಂಬುದೇ ಪ್ರಾಮುಖ್ಯವಾದುದು. ಈ ಪ್ರತ್ಯಯದ ಬಳಕೆಯನ್ನು ಕೆಳಗಿನ ಗುಣಪದಗಳಲ್ಲಿ ಕಾಣಬಹುದು.
| ತೆಳು | ತೆಳ್ಳಗೆ | ಬಿಳಿ | ಬೆಳ್ಳಗೆ |
| ಕರಿ | ಕರಗೆ | ಬಿಸಿ | ಬೆಚ್ಚಗೆ |
| ಸಪ್ಪೆ | ಸಪ್ಪಗೆ | ಮಿದು | ಮೆತ್ತಗೆ |
| ಒಳ | ಒಳಗೆ | ಮೆಲು | ಮೆಲ್ಲಗೆ |
| ಹೊರ | ಹೊರಗೆ | ಗುಂಡು | ಗುಂಡಗೆ |
| ಕೆಳ | ಕೆಳಗೆ | ಕೆಂಪು | ಕೆಂಪಗೆ |
| ತಣ್ | ತಣ್ಣಗೆ | ದುಂಡು | ದುಂಡಗೆ |
| ನುಣ್ | ನುಣ್ಣಗೆ | ನೀಟ | ನೆಟ್ಟಗೆ |
ಈ ಪ್ರತ್ಯಯವನ್ನು ಸೇರಿಸಿದಾಗ ಗುಣಪದದಲ್ಲಿ ಅನಿಯಮಿತವಾಗಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆಯುತ್ತವೆ. ಉದಾಹರಣೆಗಾಗಿ, ಬಿಳಿ, ಬಿಸಿ ಮತ್ತು ಮಿದು ಎಂಬವುಗಳ ಮೊದಲನೆಯ ಅಕ್ಷರದಲ್ಲಿರುವ ಇಕಾರ ಎಕಾರ ವಾಗುತ್ತದೆ. (ನಿಜಕ್ಕೂ ಇಲ್ಲಿ ನಡೆದಿರುವ ಚಾರಿತ್ರಿಕ ಬದಲಾವಣೆ ಇದಕ್ಕೆ ವಿರುದ್ಧವಾದುದು: ಪೂರ್ವದ ಹಳೆಗನ್ನಡದಲ್ಲಿ ಈ ಸ್ವರ ಎಲ್ಲಾ ಕಡೆಗಳಲ್ಲೂ ಎಕಾರವಾಗಿತ್ತು; ಆದರೆ ಅನಂತರ ಬಿಳಿ, ಬಿಸಿ ಮೊದಲಾದವುಗಳ ಎರಡನೆಯ
193
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅಕ್ಷರದಲ್ಲಿ ಇಕಾರ ಬಂದಿದೆಯಾದ ಕಾರಣ ಅದು ಇಕಾರವಾಗಿತ್ತು, ಮತ್ತು ಬೆಚ್ಚಗೆ, ಬೆಳ್ಳಗೆ ಮೊದಲಾದ ಪದಗಳ ಎರಡನೆಯ ಅಕ್ಷರದಲ್ಲಿ ಇಕಾರದ ಬದಲು ಅಕಾರವಿದೆಯಾದ ಕಾರಣ, ಆ ಎಕಾರ ಬದಲಾಗದೆ ಹಾಗೆಯೇ ಉಳಿ ದಿತ್ತು.)
ಅಗೆ ಎಂಬ ಪ್ರತ್ಯಯವನ್ನೊಳಗೊಂಡಿರುವ ಬೇರೆಯೂ ಕೆಲವು ಗುಣಪದ ಗಳು ಕನ್ನಡದಲ್ಲಿವೆಯಾದರೂ ಅವಕ್ಕೆ ನೇರವಾಗಿ ಬೇರೆ ಗುಣಪದಗಳೊಂದಿಗೆ ಸಂಬಂಧವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗಾಗಿ ತೆಪ್ಪಗೆ ಎಂಬ ಪದವನ್ನು ತೆರವು ಎಂಬ ನಾಮಪದದೊಂದಿಗೆ ಹೋಲಿಸಿದಾಗ ಅದರಲ್ಲಿ ಈ ಪ್ರತ್ಯಯವಿದೆಯೆಂದು ಅನಿಸುತ್ತದೆ. ಈ ಅಗೆ ಎಂಬ ಪ್ರತ್ಯಯ ನಾಮಪದ ಗಳೊಂದಿಗೆ ಬರುವ ಗೆ ಎಂಬ ವಿಭಕ್ತಿ ಪ್ರತ್ಯಯಕ್ಕೆ ಸಂಬಂಧಿಸಿದೆ ಎಂಬುದನ್ನು ಕೊನೆ ಎಂಬ ನಾಮಪದದಿಂದ ತಯಾರಾಗಿರುವ ಕೊನೆಗೆ ಎಂಬ ಪದ ಸೂಚಿಸು ತ್ತದೆ.
ನಿಜಕ್ಕೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವ ನಾಮಪದಗಳಿಗೂ ಮತ್ತು ಕ್ರಿಯಾಪದಗಳೊಂದಿಗೆ ಬರುವ ಗುಣಪದಗಳಿಗೂ ನಡುವೆ ಹತ್ತಿರದ ಸಂಬಂಧ ವಿದೆ. ವಿಭಕ್ತಿ ಪ್ರತ್ಯಯಗಳು ನಾಮಪದಗಳನ್ನು ಕ್ರಿಯಾಪದಗಳೊಂದಿಗೆ ಸಂಬಂಧಿ ಸುತ್ತವೆ ಮತ್ತು ಈ ಕಾರಣಕ್ಕಾಗಿ, ಅವು ಒಂದು ರೀತಿಯಲ್ಲಿ ಗುಣಪದಗಳ ಹಾಗೆ ಕ್ರಿಯಾಪದಗಳ ವಿಶೇಷಣಗಳಾಗಿವೆಯೆಂದೂ ಹೇಳಲು ಸಾಧ್ಯವಿದೆ.
೭.೫ ಸಾರಾಂಶ
ಗುಣಪದಗಳ ರಚನೆಯಲ್ಲೂ ಪ್ರತ್ಯಯಗಳ ಬಳಕೆ ಜಾಸ್ತಿಯಿಲ್ಲ. ನಾಮಪದ ಗಳೊಂದಿಗೆ ಬರಬಲ್ಲ ಗುಣಪದಗಳಿಂದ ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣ ಪದಗಳನ್ನು ತಯಾರಿಸುವುದಕ್ಕಾಗಿ ಮಾತ್ರ, ಹಲವು ಪದಗಳಲ್ಲಿ ಕಾಣಿಸಿಕೊಳ್ಳುವ ಅಗೆ ಎಂಬ ಪ್ರತ್ಯಯ ಬಳಕೆಯಾಗುತ್ತದೆ. ಇದನ್ನು ಬಿಟ್ಟರೆ ಪ್ರತ್ಯಯಗಳ ಬಳಕೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಶಬ್ದಗಳನ್ನು ಇಲ್ಲವೇ ಅನುಭವಗಳನ್ನು ಅಣಕಿಸು ವಂತಹ ಪದಗಳ ಬಳಕೆಯಲ್ಲಿ ಮಾತ್ರ.
194
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ಎಂಟು
ಎರವಲು ಪದಗಳ ಒಳರಚನೆ
೮.೧ ಎರಡನೆಯ ಸ್ವರೂಪ
ಕನ್ನಡದಲ್ಲಿ ಸಂಸ್ಕೃತ, ಇಂಗ್ಲಿಷ್, ಹಿಂದಿ, ಪರ್ಶಿಯನ್ ಮೊದಲಾದ ಬೇರೆ ಬೇರೆ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಹಲವಿವೆ. ಇವುಗಳ ಒಳರಚನೆ ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದ ಕನ್ನಡ ಪದಗಳ ಒಳರಚನೆಗಿಂತ ಭಿನ್ನ ವಾಗಿರುವುದಾದ ಕಾರಣ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಅಂತಹ ಪರಿಶೀಲನೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಆದರೆ ಕನ್ನಡದವೇ ಆದ ಪದಗಳು ಮತ್ತು ಬೇರೆ ಭಾಷೆಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ಗಳನ್ನು ಎರಡು ಬೇರೆ ಬೇರೆ ವರ್ಗಗಳಲ್ಲಿ ವಿಭಜಿಸಿ ಹೇಳುವುದು ಮಾತ್ರ ಅಷ್ಟೊಂದು ಸುಲಭದ ಕೆಲಸವೇನಲ್ಲ. ಯಾಕೆಂದರೆ ಅನಾದಿ ಕಾಲದಿಂದಲೂ ಇಂತಹ ಪದಗಳ ಎರವಲು ನಮ್ಮ ಭಾಷೆಯಲ್ಲಿ ನಡೆಯುತ್ತಿದ್ದು, ಈ ಪ್ರಕ್ರಿಯೆಯ ಮೂಲಕ ಅದರಲ್ಲಿ ಸೇರಿಕೊಂಡಿರುವ ಪದಗಳಲ್ಲಿ ಬಹಳ ಇತ್ತೀಚೆಗೆ ಬಂದವುಗಳು ಮಾತ್ರ ತಮ್ಮತನವನ್ನು ಉಳಿಸಿಕೊಂಡು ಬೇರೆ ರೀತಿಯ ಪದಗಳ ಹಾಗೆ ಕಾಣಿಸುತ್ತವೆ. ಉಳಿದುವೆಲ್ಲ ಬೇರೆ ಬೇರೆ ಬದಲಾವಣೆಗಳ ಮೂಲಕ ಕನ್ನಡದವೇ ಆಗಿಬಿಟ್ಟಿವೆ.
೮.೧.೧ ಭಾಷೆಗಳೊಳಗೆ ಎರಡಲಿನಲ್ಲಿ ವೈವಿಧ್ಯ
ಎಲ್ಲಾ ಭಾಷೆಗಳಿಗೂ ಒಂದಲ್ಲ ಒಂದು ವಿಧದಲ್ಲಿ ಬೇರೆ ಭಾಷೆಗಳೊಂದಿಗೆ ಸಂಪರ್ಕವಿದ್ದೇ ಇರುತ್ತದೆಯಾದ ಕಾರಣ, ಎಲ್ಲಾ ಭಾಷೆಗಳಲ್ಲೂ ಎರವಲಾಗಿ ಬಂದ ಪದಗಳು ಇದ್ದೇ ಇರುತ್ತವೆ. ಕೆಲವು ಭಾಷೆಗಳಲ್ಲಿ ಇಂತಹ ಪದಗಳು ಜಾಸ್ತಿ ಇರುತ್ತವೆ, ಮತ್ತು ಬೇರೆ ಕೆಲವು ಭಾಷೆಗಳಲ್ಲಿ ಕಡಿಮೆ ಇರುತ್ತವೆ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎಂಬುದೇ ಈ ವಿಷಯದಲ್ಲಿ ಬೇರೆ ಬೇರೆ ಭಾಷೆಗಳ ನಡುವಿರುವ ವ್ಯತ್ಯಾಸ. ಈ ವ್ಯತ್ಯಾಸಕ್ಕೆ ಹಲವು ಕಾರಣಗಳಿವೆ.
ಪದಗಳನ್ನು ಎರವಲು ಕೊಡುವ ಭಾಷೆಗೂ ಮತ್ತು ಎರವಲು ಪಡೆಯುವ ಭಾಷೆಗೂ ನಡುವೆ ಬಹಳ ಹತ್ತಿರದ ಸಂಪರ್ಕವಿದೆಯಾದರೆ, ಮತ್ತು ಎರವಲು ಕೊಡುವ ಭಾಷೆ ಹೆಚ್ಚು ಪ್ರತಿಷ್ಠೆಯದಾದರೆ, ಹೆಚ್ಚು ಹೆಚ್ಚು ಪದಗಳು ಅದರಿಂದ ಎರಲಾಗಿ ಬಂದು ಎರವಲು ಪಡೆಯುವ ಭಾಷೆಯಲ್ಲಿ ಸೇರಿಕೊಳ್ಳಲು ಸಾಧ್ಯವಿದೆ. ಕನ್ನಡದ ಮಟ್ಟಿಗೆ ಸಂಸ್ಕೃತ ಬಹಳ ಪ್ರತಿಷ್ಠೆಯ ಭಾಷೆಯಾಗಿತ್ತಾದ ಕಾರಣ ಅದರಿಂದ ದೊಡ್ಡ ಸಂಖ್ಯೆಯಲ್ಲಿ ಪದಗಳು ಕನ್ನಡಕ್ಕೆ ಎರವಲಾಗಿ ಬಂದಿವೆ. ಇವತ್ತು ಇಂಗ್ಲಿಷ್ ಭಾಷೆ ಅಂತಹದೇ ಪ್ರತಿಷ್ಠೆಯ ಸ್ಥಾನದಲ್ಲಿದೆಯಾದ ಕಾರಣ ಅದರಿಂದಲೂ ಪದಗಳು ಹೆಚ್ಚಿನ ಸಂಖ್ಯೆಯಲ್ಲಿ ಎರವಲಾಗಿ ಬರುತ್ತಿವೆ.
ಇದಲ್ಲದೆ, ಒಂದು ಭಾಷೆಯನ್ನಾಡುವ ಜನರ ಮನಸ್ಥಿತಿಯಂತಹದು, ಅವರು ಸುಲಭವಾಗಿ ಪದಗಳ ಎರವಲಿಗೆ ಮರೆಹೊಗುವವರೇ ಅಥವಾ ಹೊಸ ಹೊಸ ಪದಗಳನ್ನು ಬಳಸಬೇಕಾಗುವ ಸಂದರ್ಭ ಬಂದಾಗಲೆಲ್ಲ ತಮ್ಮವೇ ಆದ ಪದಗಳನ್ನು ಸೃಷ್ಟಿಸಿಕೊಳ್ಳುವವರೇ ಎಂಬುದು ಈ ವ್ಯತ್ಯಾಸಕ್ಕೆ ಇನ್ನೊಂದು ಆಧಾರವಾಗುತ್ತದೆ. ತಮ್ಮ ಭಾಷೆಯ ಕುರಿತಾಗಿ ಜಾಸ್ತಿ ಅಭಿಮಾನವನ್ನು ಹೊಂದಿರುವ ಮಂದಿ ಎರವಲಿಗಿಂತಲೂ ಹೊಸ ಪದಗಳ ತಯಾರಿಕೆಗೇನೇ ಕೈ ಹಾಕುವುದು ಜಾಸ್ತಿ.
ಭಾಷೆಯಲ್ಲಿಲ್ಲದ ಹೊಸ ಪದಗಳ ಅವಶ್ಯಕತೆ ಬೇರೆ ಬೇರೆ ಕಾರಣಗಳಿಗಾಗಿ ಕಾಣಿಸಿಕೊಳ್ಳುತ್ತದೆ. ಬೇರೊಂದು ಭಾಷೆಯನ್ನಾಡುವ ಜನರಲ್ಲಿ ಬಳಕೆಯಲ್ಲಿರುವ ವಸ್ತುಗಳು ನಮ್ಮಲ್ಲಿ ಬಳಕೆಗೆ ಬಂದಾಗ, ಅಂತಹ ವಸ್ತುಗಳನ್ನು ಹೆಸರಿಸುವು ದಕ್ಕಾಗಿ ನಮಗೆ ಹೊಸ ಪದಗಳ ಅವಶ್ಯಕತೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಆ ವಸ್ತುಗಳೊಂದಿಗೆ ಅವುಗಳ ಹೆಸರುಗಳನ್ನೂ ನಾವು ಆಮದು ಮಾಡಿಕೊಳ್ಳಬಹುದು, ಇಲ್ಲವೇ ನಮ್ಮವೇ ಆದ ಹೆಸರುಗಳನ್ನು ತಯಾರಿಸಿ ಅವಕ್ಕೆ ಕೊಡಬಹುದು.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯನ್ನಾಡುವ ಸಮಾಜದಿಂದ ನಾವು ರೇಡಿಯೋ, ಟಿ.ವಿ., ಬಸ್ಸು, ಕಾರು, ಪೆನ್ನು, ರೈಲು, ಕಂಪ್ಯೂಟರ್ ಮೊದಲಾದ ಹಲವಾರು ವಸ್ತುಗಳನ್ನು ಬಳಕೆಗೆ ಪಡೆದಿದ್ದು, ಅವುಗಳೊಂದಿಗೆ ಆ ವಸ್ತುಗಳ ಹೆಸರುಗಳನ್ನೂ ಎರವಲಾಗಿ ಪಡೆದುಕೊಂಡಿದ್ದೇವೆ. ಇಂತಹ ವಸ್ತುಗಳಲ್ಲಿ ಕೆಲ ವಕ್ಕೆ (ಉದಾ: ಉಗಿಬಂಡಿ) ನಮ್ಮವೇ ಆದ ಹೆಸರುಗಳನ್ನು ಕೊಟ್ಟಿರುವೆವಾದರೂ ಬೇರೆ ಕೆಲವಕ್ಕೆ ಅವುಗಳ ಹೆಸರುಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಉಳಿಸಿಕೊಂಡಿದ್ದೇವೆ.
ಈ ರೀತಿ ಹೊಸ ಹೊಸ ರೀತಿಯ ವಸ್ತುಗಳನ್ನು ಬಳಕೆಗೆ ಪಡೆದುಕೊಳ್ಳು ವುದು ಮಾತ್ರವಲ್ಲ, ಹೊಸ ಹೊಸ ವಿಷಯಗಳನ್ನೂ ನಾವು ಬೇರೆ ಭಾಷೆಗಳ ನ್ನಾಡುವ ಜನರಿಂದ ತಿಳಿದುಕೊಳ್ಳುವವಾದ್ದರಿಂದ ಅಂತಹ ವಿಷಯಗಳನ್ನು
196
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಹೆಸರಿಸುವ ಪದಗಳೂ ನಮ್ಮ ಭಾಷೆಗೆ ಎರವಲಾಗಿ ಬರುತ್ತವೆ. ಈ ರೀತಿಯಲ್ಲಿ ಎರವಾಲಾಗಿ ಬಂದಿರುವ ನೂರಾರು ಪದಗಳನ್ನು ಶಾಸ್ತ್ರೀಯ ಗ್ರಂಥಗಳಲ್ಲಿ ಕಾಣ ಬಹುದು. ನಮ್ಮ ದಿನನಿತ್ಯದ ಬಳಕೆಯಲ್ಲಿರುವ ಭಾಷೆಯಲ್ಲೂ ಇಂತಹ ಹಲ ವಾರು ಪದಗಳು ಬೇರೆ ಭಾಷೆಗಳಿಂದ ಎರವಲಾಗಿ ಬಂದು ಸೇರಿಕೊಂಡಿರುತ್ತವೆ.
ಆ.೧.೨ ತತ್ತ್ವ ಮತ್ತು ತದ್ಭವ ಪದಗಳು
ಈ ರೀತಿ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತ ಭಾಷೆಯಿಂದ ಬಂದವು ಗಳನ್ನು ಮಾತ್ರ ಅವುಗಳ ಸ್ವರೂಪವನ್ನಾಧರಿಸಿ ತದ್ಭವ ಮತ್ತು ತದ್ಭವ ಎಂಬುದಾಗಿ ವಿಂಗಡಿಸಿ ಹೇಳುವ ಕ್ರಮ ಕನ್ನಡದ ವ್ಯಾಕರಣಗಳಲ್ಲಿ ಮತ್ತು ಅರ್ಥಕೋಶಗಳಲ್ಲಿ ಬಳಕೆಯಲ್ಲಿದೆ. ಸಂಸ್ಕೃತದಲ್ಲಿ ಇರುವ ಹಾಗೆಯೇ ಬಳಕೆ ಯಾಗುವ ಪದಗಳು (ಎಂದರೆ ಸಂಸ್ಕೃತದ ಪದಗಳಿಗೆ ಸಮಾನವಾದ ಪದಗಳು) ತದ್ಭವಗಳು ಮತ್ತು ಅಂತಹ ಪದಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆ ಗಳಾದುದರಿಂದಾಗಿ ಅವುಗಳಿಗಿಂತ ಭಿನ್ನವಾಗಿರುವ ಪದಗಳು ತದ್ಭವಗಳು (ಎಂದರೆ ಸಂಸ್ಕೃತದಿಂದ ಜನಿಸಿದ ಪದಗಳು) ಎಂಬುದಾಗಿ ಈ ವಿಭಜನೆಯನ್ನು ವರ್ಣಿಸಬಹುದು. ಆದರೆ, ಸಾಮಾನ್ಯವಾಗಿ ಪದಗಳ ಕೊನೆಯ ಭಾಗದಲ್ಲಿ ಮಾತ್ರವೇ ಬದಲಾವಣೆಯಾಗಿದೆಯಾದರೆ, ಅಂತಹ ಪದಗಳನ್ನು ತದ್ಭವಗಳೆಂದು ಹೇಳದೆ ತದ್ಭವಗಳೆಂದು ಹೇಳುವುದೇ ರೂಢಿ (ಶ್ರೀಕಂಠಯ್ಯ ೧೯೫೨:೧೯೬ ನೋಡಿ).
ಉದಾಹರಣೆಗಾಗಿ, ಯಾವ ಬದಲಾವಣೆಯನ್ನೂ ತೋರಿಸದಿರುವ ಸತ್ಯ, ಧರ್ಮ, ಅಧಿಕಾರಿ, ಕಪಿ ಮೊದಲಾದವುಗಳನ್ನು ಮತ್ತು ಕೊನೆಯಲ್ಲಿ ಮಾತ್ರವೇ ಬದಲಾವಣೆಯನ್ನು ತೋರಿಸುವ ಶಾಲೆ (ಶಾಲಾ), ಜನನಿ (ಜನನೀ), ಮನಸ್ಸು (ಮನಸ್) ಮೊದಲಾದವುಗಳನ್ನು ತತ್ಸಮ ಪದಗಳೆಂದೂ ಮತ್ತು ಇತರ ಭಾಗಗಳಲ್ಲಿ ಬದಲಾವಣೆಗಳನ್ನು ತೋರಿಸುವ ಆಸೆ (ಆಶಾ), ನಿದ್ದೆ (ನಿದ್ರಾ), ಹುಣ್ಣಿಮೆ (ಪೂರ್ಣಿಮಾ), ಬತ್ತಿ (ವರ್ತಿ) ಮೊದಲಾದ ಪದಗಳನ್ನು ತದ್ಭವ ಪದಗಳೆಂದೂ ಕರೆಯುವ ಕ್ರಮ ರೂಢಿಯಲ್ಲಿದೆ.
ಇಂತಹ ಪದಗಳ ವಿಭಜನೆ ಇಂಡೋ-ಆರ್ಯನ್ ಎಂಬ ಭಾಷಾಕುಟುಂಬಕ್ಕೆ ಸೇರಿರುವ ಪ್ರಾಕೃತ, ಪಾಲಿ, ಹಿಂದಿ, ಮರಾಠಿ, ಗುಜರಾತಿ ಮೊದಲಾದ ಭಾಷೆಗಳ ವ್ಯಾಕರಣ ಮತ್ತು ಅರ್ಥಕೋಶಗಳ ಮಟ್ಟಿಗೆ ಬಹಳ ಉಪಯುಕ್ತವಾದುದೆಂದು ಹೇಳಲು ಸಾಧ್ಯವಿದೆ. ನಿಜಕ್ಕೂ ಈ ಭಾಷೆಗಳಲ್ಲಿ ತತ್ಸಮ ಮತ್ತು ತದ್ಭವ ಎಂಬ ಎರಡು ರೀತಿಯ ಪದಗಳು ಮಾತ್ರ ಇವೆ. ಇವುಗಳಲ್ಲಿ ತದ್ಭವ ಪದಗಳೆಲ್ಲ ಚಾರಿತ್ರಿಕವಾಗಿ ಸಂಸ್ಕೃತಕ್ಕೂ ಮತ್ತು ಅವಕ್ಕೂ ಒಟ್ಟಿಗೆ ಮೂಲ ಭಾಷೆಯಾ ಗಿರುವ ಇಂಡೋ-ಆರ್ಯನ್‌ನಿಂದ ಬೆಳೆದುಬಂದವುಗಳು. ಸಂಸ್ಕೃತದ ಪದಗಳಿ ಗಿಂತ ಭಿನ್ನವಾಗಿಲ್ಲದಿರುವ ತತ್ಸಮ ಪದಗಳು ಮಾತ್ರ ನೇರವಾಗಿ ಸಂಸ್ಕೃತದಿಂದ ಎರವಲಾಗಿ ಬಂದವುಗಳು ಎಂಬುದಾಗಿ ಪರಿಗಣಿಸಲು ಸಾಧ್ಯವಿದೆ.
197
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆದರೆ ಕನ್ನಡ ಭಾಷೆ ಇದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಕಾರಣ, ಅದರಲ್ಲಿ ತತ್ಸಮ ಮತ್ತು ತದ್ಭವ ಪದಗಳು ಮಾತ್ರವಲ್ಲದೆ ಮೂಲ ಭಾಷೆಯಿಂದ ಬೆಳೆದು ಬಂದಿರುವ ದ್ರಾವಿಡ ಪದಗಳೂ ಹಲವಿವೆ. ನಿಜಕ್ಕೂ ಕನ್ನಡದಲ್ಲಿ ಕಾಣಿಸುವ ತತ್ಸಮ ಮತ್ತು ತದ್ಭವ ಪದಗಳೆರಡೂ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳೇ. ಅವುಗಳ ನಡುವಿರುವ ವ್ಯತ್ಯಾಸವೇನೆಂದರೆ, ತತ್ಸಮ ಪದಗಳಲ್ಲಿ ಕಡಿಮೆ ಬದಲಾವಣೆಗಳು ನಡೆದಿವೆ ಮತ್ತು ತದ್ಭವ ಪದಗಳಲ್ಲಿ ಜಾಸ್ತಿ ಬದಲಾವಣೆಗಳು ನಡೆದಿವೆ. ಹಾಗಾಗಿ, ಕನ್ನಡದ ವ್ಯಾಕರಣ ಇಲ್ಲವೇ ಅರ್ಥಕೋಶದ ಮಟ್ಟಿಗೆ ತತ್ಸಮ- ತದ್ಭವವೆಂಬ ಎರವಲು ಪದಗಳ ವಿಭಜನೆಯಿಂದ ವಿಶಿಷ್ಟವಾದ ಪ್ರಯೋಜನ ವೇನೂ ಇಲ್ಲ. ಕನ್ನಡದ ಮಟ್ಟಿಗೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳ ನ್ನೆಲ್ಲ ಒಂದೇ ವಿಭಾಗದಲ್ಲಿ ಇರಿಸಿ ಪರಿಶೀಲಿಸಿದರೆ ಸಾಕಾಗುತ್ತದೆ.
ಆ.೧.೩ ಬದಲಾವಣೆಗಳಿಗೆ ಕಾರಣಗಳು
ಎರವಲಾಗಿ ಬಂದ ಪದಗಳು ಬೇರೆ ಬೇರೆ ಕಾರಣಗಳಿಗಾಗಿ ಬದಲಾವಣೆಗಳಿಗೆ ಒಳಗಾಗುತ್ತವೆ. ಅವನ್ನು ಎರವಲಾಗಿ ಕೊಟ್ಟ ಭಾಷೆಗೂ ಮತ್ತು ಎರವಲಾಗಿ ಪಡೆದುಕೊಂಡ ಭಾಷೆಗೂ ನಡುವೆ ವರ್ಣಗಳ ಸಂಖ್ಯೆಯ ಮಟ್ಟಿಗೆ ಮತ್ತು ವರ್ಣಗಳು ಪದಗಳಲ್ಲಿ ಬರುವ ಕ್ರಮದ ಮಟ್ಟಿಗೆ ವ್ಯತ್ಯಾಸಗಳಿವೆಯಾದರೆ, ಪದಗಳನ್ನು ಎರವಲಾಗಿ ಪಡೆಯುವ ಭಾಷೆ ತನ್ನ ವರ್ಣವ್ಯವಸ್ಥೆಗೆ ಹೊಂದಿ ಕೊಳ್ಳುವಂತೆ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಉದಾಹರಣೆ ಗಾಗಿ ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಮೂಲತಃ ಇರಲಿಲ್ಲವಾದುದರಿಂದ, ಸಂಸ್ಕೃತದಿಂದ ಎರವಲಾಗಿ ಬಂದ ಹಲವಾರು ಪದಗಳಲ್ಲಿ ಮಹಾಪ್ರಾಣಕ್ಷರಗಳು ಅಲ್ಪಪ್ರಾಣಾಕ್ಷರಗಳಾಗಿ ಬದಲಾಗಿವೆ. ಉದಾ: ಬೀದಿ (ವೀಥಿ), ಸಂತೆ (ಸಂಸ್ಥಾ), ದಾರೆ (ಧಾರಾ), ಬಂದಿ (ಬಂಧಿ), ಇತ್ಯಾದಿ.
ಇನ್ನೊಂದು ಭಾಷೆಯಿಂದ ಜಾಸ್ತಿ ಪದಗಳನ್ನು ಎರವಲು ಪಡೆದಿರುವ ಭಾಷೆ ಅವುಗಳೊಂದಿಗೆ ಕೆಲವು ಹೊಸ ವರ್ಣಗಳನ್ನೂ ಪಡೆದುಕೊಂಡಿರಲು ಸಾಧ್ಯವಿದೆ, ಮತ್ತು ಅನಂತರ ಆ ಭಾಷೆಯಿಂದ ಎರವಲಾಗಿ ಬರುವ ಪದಗಳಲ್ಲಿ ಅಂತಹ ವರ್ಣಗಳು ಬದಲಾಗದೆ ಉಳಿಯಲು ಸಾಧ್ಯವಿದೆ. ಕನ್ನಡದ ಕೆಲವು ಪ್ರಭೇದ ಗಳಲ್ಲಿ (ಉದಾ: ಬರಹದ ಕನ್ನಡ) ಈ ರೀತಿ ಹೆಚ್ಚು ಹೆಚ್ಚು ಮಹಾ ಪ್ರಾಣಾಕ್ಷರಗಳಿರುವ ಪದಗಳು ಎರವಲಾಗಿ ಬಂದುದರಿಂದಾಗಿ ಅಂತಹ ಅಕ್ಷರ ಗಳು ಆ ಪ್ರಭೇದದ ವರ್ಣಗಳಾಗಿಬಿಟ್ಟಿವೆ. ತತ್ಸಮ ಮತ್ತು ತದ್ಭವಗಳೆಂಬ ಎರಡು ರೀತಿಯ ಎರವಲಾದ ಪದಗಳು ಕನ್ನಡದಲ್ಲಿ ಕಾಣಿಸಲು ಇದೂ ಒಂದು ಕಾರಣ. ತದ್ಭವಗಳು ಬದಲಾವಣೆ ಅವಶ್ಯವೆಂದು ಕಾಣಿಸುವ ಸಮಯದಲ್ಲಿ ಬಂದ ಪದಗಳು, ಮತ್ತು ತತ್ಸಮಗಳು ಆ ಅವಶ್ಯಕತೆ ಇಲ್ಲವಾದಾಗ ಎರವಲಾಗಿ ಬಂದ ಪದಗಳು. ಆದರೆ ಈ ರೀತಿಯ ವೈವಿಧ್ಯತೆ ಇಂಗ್ಲಿಷ್, ಹಿಂದಿ
198
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ಎರವಲಾಗಿ ಬಂದ ಪದಗಳಲ್ಲೂ ಕಾಣಿಸುತ್ತದೆ.
ಭಾಷೆಯ ವರ್ಣಗಳಲ್ಲಿ ಮತ್ತು ಅವುಗಳ ವ್ಯವಸ್ಥೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ನಡೆಯುತ್ತಾ ಇರುತ್ತವೆ. ಈ ಬದಲಾವಣೆಗಳು ಆ ಭಾಷೆಯವೇ ಆಗಿರುವ ಪದಗಳಲ್ಲಿ ಮಾತ್ರವಲ್ಲದೆ, ಆ ಭಾಷೆಗೆ ಬೇರೆ ಭಾಷೆ ಗಳಿಂದ ಎರವಲಾಗಿ ಬಂದಿರುವ ಪದಗಳಲ್ಲೂ ನಡೆಯುತ್ತವೆ. ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಹಲವು ವ್ಯತ್ಯಾಸಗಳಿಗೆ ಇಂತಹ ಚಾರಿತ್ರಿಕ ಬದಲಾವಣೆ ಇನ್ನೊಂದು ಮುಖ್ಯ ಕಾರಣ.
ಉದಾಹರಣೆಗಾಗಿ, ಕನ್ನಡದಲ್ಲಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದೆ ಪದಗಳ ಆದಿಯಲ್ಲಿ ಬರುವ ಪಕಾರ ಹಕಾರವಾಗುವ ಬದಲಾವಣೆ ಯೊಂದು ನಡೆಯಿತು. ಈ ಬದಲಾವಣೆಯ ಫಲವನ್ನು ಕನ್ನಡದವೇ ಆದ ಪದಗಳಲ್ಲಿ ಮಾತ್ರವಲ್ಲದೆ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದ ಗಳಲ್ಲೂ ಕಾಣಬಹುದು.
- (೧) ಕನ್ನಡದ ಪದಗಳಲ್ಲಿ ಪಕಾರ ಹಕಾರವಾಗಿರುವುದು
- ಹಳೆಗನ್ನಡ ಹೊಸಗನ್ನಡ
- ಪಾಲ್ ಹಾಲು
- ಪಣ್ ಹಣ್ಣು
- ಪುಲಿ ಹುಲಿ
- ಪೋ ಹೋ(ಗು)
- (೨) ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಪಕಾರ ಹಕಾರ
- ವಾಗಿರುವುದು
- ಸಂಸ್ಕೃತ ಕನ್ನಡ
- ಪಕ್ಷಿ ಹಕ್ಕಿ
- ಪಶು ಹಸು
- ಪರ್ವ ಹಬ್ಬ
- ಪಿಷ್ಟ ಹಿಟ್ಟು
ಇದೇ ರೀತಿಯಲ್ಲಿ ಗಿಡ್ಡಸ್ವರದ ಅನಂತರ ಬರುವ ರಕಾರವು, ಅದರ ಅನಂತರ ವ್ಯಂಜನವೊಂದು ಬಂದಿದ್ದಾಗ, ಆ ವ್ಯಂಜನದೊಂದಿಗೆ ಸೇರಿ ಒತ್ತಕ್ಷರ ವಾಗುವ ಬದಲಾವಣೆ ಕನ್ನಡದವೇ ಆದ ಪದಗಳಲ್ಲಿ ಮಾತ್ರವಲ್ಲದೆ ಸಂಸ್ಕೃತ ದಿಂದ ಎರವಲಾಗಿ ಬಂದಿರುವ ಪದಗಳಲ್ಲೂ ನಡೆದಿದೆ.
199
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ಹಳೆಗನ್ನಡ | ಹೊಸಗನ್ನಡ | ಸಂಸ್ಕೃತ | ಕನ್ನಡ |
|---|---|---|---|
| ಸೊರ್ಕು | ಸೊಕ್ಕು | ವರ್ಣ | ಬಣ್ಣ |
| ಪರ್ಬು | ಹಬ್ಬು | ವರ್ತಿ | ಬತ್ತಿ |
| ಪೆರ್ಮೆ | ಹೆಮ್ಮೆ | ಕರ್ತರಿ | ಕತ್ತರಿ |
| ಬಿರ್ಚು | ಬಿಚ್ಚು |
ಭಾಷೆಗಳಲ್ಲಿ ನಡೆಯುವ ಇಂತಹ ಚಾರಿತ್ರಿಕ ಬದಲಾವಣೆಗಳಲ್ಲಿ ಪ್ರತಿ ಯೊಂದಕ್ಕೂ ಸಾಮಾನ್ಯವಾಗಿ ಒಂದು ಅವಧಿಯಿರುತ್ತದೆ. ಈ ಅವಧಿ ದಾಟಿದ ಮೇಲೆ ಹೊಸದಾಗಿ ಭಾಷೆಯೊಳಕ್ಕೆ ಎರವಲಾಗಿ ಬರುವ ಪದಗಳು ಆ ಬದಲಾವಣೆಗೆ ಒಳಗಾಗುವುದಿಲ್ಲ. ಉದಾಹರಣೆಗಾಗಿ ಕನ್ನಡದಲ್ಲಿ ಪಕಾರ ಹಕಾರವಾಗುವ ಬದಲಾವಣೆ ಹದಿನಾಲ್ಕು-ಹದಿನೈದನೇ ಶತಮಾನದ ಹೊತ್ತಿಗೆ ಪೂರ್ಣಗೊಂಡಿರಬೇಕೆಂದು ತೋರುತ್ತದೆ. ಅದರ ಅನಂತರ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಪಕಾರ ಹಾಗೆಯೇ ಉಳಿದಿರುವುದನ್ನು ಪಕ್ಷ, ಪಟ್ಟಿ, ಪತ್ನಿ, ಪದಾರ್ಥ, ಪುಸ್ತಕ, ಪೂರ್ವ ಮೊದಲಾದ ಪದಗಳಲ್ಲಿ ಕಾಣ ಬಹುದು. ತತ್ಸಮ ಮತ್ತು ತದ್ಭವ ಪದಗಳ ನಡುವಿರುವ ವ್ಯತ್ಯಾಸಕ್ಕೆ ಈ ರೀತಿ ಬೇರೆ ಬೇರೆ ಕಾಲಗಳಲ್ಲಿ ಸಂಸ್ಕೃತದಿಂದ ಪದಗಳು ಎರವಲಾಗಿ ಬಂದಿರುವುದು ಇನ್ನೊಂದು ಕಾರಣ.
ಭಾಷೆಯೊಂದನ್ನು ಬಳಸುವ ಜನರು ಅದಕ್ಕೆ ಎರವಲಾಗಿ ಬರುವ ಪದ ಗಳನ್ನು ಬೇರೆ ಬೇರೆ ವಿಧಾನಗಳ ಮೂಲಕ ಪಡೆಯುತ್ತಾರೆಂಬುದು ಆ ಪದಗಳಲ್ಲಿ ಕಾಣಿಸುವ (ಇಲ್ಲವೇ ಕಾಣಿಸದಿರುವ) ಬದಲಾವಣೆಗಳಿಗೆ ಇನ್ನೊಂದು ಕಾರಣ. ಉದಾಹರಣೆಗಾಗಿ, ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಬಳಸುವ ಜನ ರಲ್ಲಿ ಕೆಲವರು ಸಂಸ್ಕೃತ ಭಾಷೆಯಲ್ಲಿ ಚೆನ್ನಾಗಿ ಪಳಗಿದವರಿರಬಹುದು ಮತ್ತು ಬೇರೆ ಕೆಲವರು ಸಂಸ್ಕೃತ ಭಾಷೆಯ ಅಲ್ಪ ಸ್ವಲ್ಪ ಜ್ಞಾನವಿರುವವರಿರಬಹುದು. ಇನ್ನುಳಿದವರಿಗೆ ಸಂಸ್ಕೃತದ ಜ್ಞಾನ ಸ್ವಲ್ಪವೂ ಇಲ್ಲದಿರಬಹುದು. ಸಂಸ್ಕೃತ ಬಲ್ಲವರು ಆ ಭಾಷೆಯ ಪದಗಳನ್ನು ಅದರಲ್ಲಿರುವಂತೆಯೇ ಬಳಸಬಲ್ಲರಾದರೆ, ಉಳಿದವರಿಗೆ ಇದು ಸಾಧ್ಯವಾಗದು.
ಎರವಲಾಗಿ ಬಂದ ಪದಗಳು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಕೆಗೆ ಬರುತ್ತವೆ ಎಂಬುದು ಹೀಗೆ ಆ ಭಾಷೆಯನ್ನಾಡುವವರಿಗೆ ಎರವಲಾಗಿ ಪದಗಳನ್ನು ಕೊಡುವ ಭಾಷೆಯ ಜ್ಞಾನ ಹೇಗಿದೆ ಎಂಬುದೂ ಆಧಾರವಾಗಿರುತ್ತದೆ. ಇದು ಸಂಸ್ಕೃತ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೂ ಅನ್ವಯಿಸುವಂತಹ ಸಂಗತಿ.
ಆ.೧.೪ ಪದಗಳ ವರ್ಗಭೇದ
200
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಭಾಷೆಯೊಂದಕ್ಕೆ ಎರವಲಾಗಿ ಬರುವ ಪದಗಳಲ್ಲಿ ಹೆಚ್ಚಿನವೂ ಪ್ರಾಣಿ, ವಸ್ತು, ವಿಷಯ ಮೊದಲಾದುವನ್ನು ಹೆಸರಿಸುವಂತಹ ರೂಢನಾಮಗಳಾಗಿರುತ್ತವೆ. ಕ್ರಿಯಾಪದ ಇಲ್ಲವೇ ಗುಣಪದಗಳಂತಹ ಬೇರೆ ಪದವರ್ಗಗಳಿಗೆ ಸೇರಿದ ಪದ ಗಳು ಈ ರೀತಿ ನಾಮಪದಗಳ ಹಾಗೆ ನೇರವಾಗಿ ಭಾಷೆಯೊಂದಕ್ಕೆ ಎರವಲಾಗಿ ಬರುವುದು ಕಡಿಮೆ. ಬರುವುದಿದ್ದರೂ ಇವು ನಾಮಪದಗಳ ಅಂಗಗಳಾಗಿ ಬಂದು ಅನಂತರ ಬೇರೆ ಪದಗಳೊಂದಿಗೆ ಬರುವಾಗ ಅವುಗಳಿಂದ ಬೇರ್ಪಟ್ಟು ಕ್ರಿಯಾಪದ ಇಲ್ಲವೇ ಗುಣಪದಗಳಾಗಿ ರೂಢಿಗೆ ಬರುವ ಸಾಧ್ಯತೆಯಿದೆ.
ಇದೇ ರೀತಿಯಲ್ಲಿ ಪದಗಳ ಅಂಗಗಳಾಗಿ ಬರುವ ಪ್ರತ್ಯಯಗಳೂ ನೇರವಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಎರವಲಾಗಿ ಬರುವುದಿಲ್ಲ. ಒಂದು ಪ್ರತ್ಯಯವನ್ನೊಳಗೊಂಡಿರುವ ಹಲವಾರು ಪದಗಳು ಎರವಲಾಗಿ ಬಂದಲ್ಲಿ, ಅವುಗಳಲ್ಲಿರುವ ಪ್ರತ್ಯಯ ಕಾಲಕ್ರಮೇಣ ಆ ಪದಗಳಿಂದ ಬೇರ್ಪಟ್ಟು ಭಾಷೆ ಯವೇ ಆದ ಬೇರೆ ಪದಗಳೊಂದಿಗೆ ಸೇರುವ ಮೂಲಕ ಆ ಭಾಷೆಯ ಪ್ರತ್ಯಯವೆಂದೆನಿಸಬಲ್ಲುದು.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ನಟ-ನಟಿ, ಲೇಖಕ-ಲೇಖಕಿ, ಶಿಕ್ಷಕ-ಶಿಕ್ಷಕಿ ಮೊದಲಾದ ಪದಯುಗಗಳಲ್ಲಿ ಕಾಣಿಸುವ ಅ ಮತ್ತು ಇ ಎಂಬ ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳ ಮಾದರಿಯಲ್ಲಿಯೇ ಕನ್ನಡದ ಹುಡುಗ-ಹುಡುಗಿ, ಕುರುಡ-ಕುರುಡಿ, ಮುದುಕ-ಮುದುಕಿ ಮೊದಲಾದವುಗಳಲ್ಲಿ ಕಾಣಿಸುವ ಪ್ರತ್ಯಯಗಳು ತಯಾರಾಗಿರುವಂತೆ ತೋರು ತ್ತದೆ. ಇದೇ ರೀತಿಯಲ್ಲಿ ಸಂಸ್ಕೃತದ ಧನ-ಧನಿಕ, ರಸ-ರಸಿಕ, ತರ್ಕ- ತಾರ್ಕಿಕ ಎಂಬಂತಹ ಪದಯುಗಗಳಲ್ಲಿ ಕಾಣಿಸುವ ಇಕ ಎಂಬ ಪ್ರತ್ಯಯವನ್ನನು ಸರಿಸಿ, ಕನ್ನಡದ ಗಾಣ-ಗಾಣಿಗ, ಹೆಣ್ಣು-ಹೆಣ್ಣಿಗ, ಸಾಲಿ-ಸಾಲಿಗ ಎಂಬಂತಹ ಪದಯುಗಗಳಲ್ಲಿ ಕಾಣಿಸುವ ಇಗ ಎಂಬ ಪ್ರತ್ಯಯ ತಯಾರಾಗಿರುವ ಹಾಗೆ ಕಾಣಿಸುತ್ತದೆ.
ಆದರೆ, ಸಾಮಾನ್ಯವಾಗಿ ಎರವಲಾಗಿ ಬಂದ ಇಂತಹ ಪ್ರತ್ಯಯವಿರುವ ಪದಗಳೆಲ್ಲ ಇತರ ಒಳರಚನೆಯಿಲ್ಲದ ಪದಗಳ ಹಾಗೆ ಬಳಕೆಯಾಗುವುದೇ ಜಾಸ್ತಿ.
ಆ.೨ ಎರವಲಾಗಿ ಬಂದ ಪದಗಳ ಒಳರಚನೆ
ಪದವೊಂದರ ಒಳರಚನೆ ಎಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಾಮಾನ್ಯ ವಾಗಿ ಅದನ್ನು ತಯಾರಿಸುವುದಕ್ಕಾಗಿ ಎಂತಹ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬ ಚಾರಿತ್ರಿಕ ಅಂಶಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಬೇಕಾಗುತ್ತದೆ ಎಂಬುದನ್ನು ನಾವು ಮೇಲೆ ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು. ಕ್ರಿಯಾಪದ ಮತ್ತು ಗುಣಪದಗಳ ಒಳರಚನೆಗಿಂತಲೂ ನಾಮಪದಗಳ ಒಳ ರಚನೆಯಲ್ಲಿ ಈ ವಿಷಯ ಎದ್ದು ಕಾಣಿಸುತ್ತದೆ. ಹೆಸರಿಸುವುದು ಮತ್ತು ವರ್ಣಿಸು
201
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವುದು ಎಂಬ ಎರಡು ರೀತಿಯ ಬಳಕೆಗಳಿಗೆ ನಾಮಪದಗಳು ಮಾತ್ರ ಒಳಗಾಗು ತ್ತವೆಯೆಂಬುದೇ ಇದಕ್ಕೆ ಮುಖ್ಯ ಕಾರಣ.
೮.೨.೧ ಒಳರಚನೆಯಲ್ಲಿ ವ್ಯತ್ಯಾಸ
ಆದರೆ ಎರವಲಾಗಿ ಬಂದ ಪದಗಳಿಗೂ ಮತ್ತು ಭಾಷೆಯಲ್ಲಿಯೇ ಬೆಳೆದು ಬಂದ ಪದಗಳಿಗೂ ನಡುವೆ ಈ ವಿಷಯದಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ. ಮೇಲೆಯೇ ಸೂಚಿಸಿರುವಂತೆ, ಎರವಲಾಗಿ ಬಂದ ಪದಗಳಿಗೆ ಅವುಗಳನ್ನು ಎರವಲಾಗಿ ಕೊಟ್ಟಿರುವ ಭಾಷೆಯಲ್ಲಿ ಒಳರಚನೆಯಿದೆಯಾದರೂ ಎರವಲಾಗಿ ಪಡೆದಿರುವ ಭಾಷೆಯಲ್ಲಿ ಅವು ಒಳರಚನೆಯಿಲ್ಲದ ಪದಗಳ ಹಾಗೆ ಬಳಕೆಯಾಗು ವುದೇ ಜಾಸ್ತಿ. ಉದಾಹರಣೆಗಾಗಿ, ರುಜುವಾತು ಎಂಬ ಪದ ಪರ್ಶಿಯನ್ ಭಾಷೆಯಲ್ಲಿ ರುಜು ಎಂಬ ಪದಕ್ಕೆ ವಾತ್ ಎಂಬ ಬಹುವಚನ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯಾದರೂ, ಕನ್ನಡದಲ್ಲಿ ಅದು ಒಳರಚನೆಯಿಲ್ಲದ ಪದದ ಹಾಗೆಯೇ ಬಳಕೆಯಾಗುತ್ತದೆ. ಆ ಪದಕ್ಕೆ ಬಹು ವಚನಾರ್ಥವೂ ಕನ್ನಡದಲ್ಲಿಲ್ಲ.
ಎರವಲಾಗಿ ಕೊಡುವ ಭಾಷೆಯಲ್ಲಿ ಒಳರಚನೆಯಿರುವ ಹಲವಾರು ಪದ ಗಳು ಈ ರೀತಿ ಇನ್ನೊಂದು ಭಾಷೆಗೆ ಎರವಲಾಗಿ ಬಂದಿವೆಯಾದರೆ, ಅಂತಹ ಪದಗಳ ನಡುವಿರುವ ಸಂಬಂಧವನ್ನು ಪರಿಶೀಲಿಸುವುದರ ಮೂಲಕ ಅವಕ್ಕೆ ಒಳರಚನೆಯನ್ನು ಎರವಲು ಪಡೆದ ಭಾಷೆಯಲ್ಲೂ ಕಲ್ಪಿಸಿಕೊಳ್ಳುವ ಅವಶ್ಯಕತೆ ಕಾಣಿಸಬಹುದು. ಉದಾಹರಣೆಗಾಗಿ, ಇಂಗ್ಲಿಷ್‌ನಿಂದ ಆಕ್ಟರ್ (ಆಕ್ಟ್ ಮಾಡು ವವನು), ಡಾನ್ಸರ್ (ಡಾನ್ಸ್ ಮಾಡುವವನು), ಶೇವರ್ (ಶೇವ್ ಮಾಡುವ ಸಾಧನ), ಮೊದಲಾದ ಹಲಕೆಲವು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿದ್ದು, ಇವನ್ನು ಆಕ್ಟ್, ಡಾನ್ಸ್, ಶೇವ್, ಮೊದಲಾದ ಆಖ್ಯಾತ ಪದಗಳಿಗೆ ಅರ್ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾದವುಗಳೆಂದು ಹೇಳಲು ಸಾಧ್ಯ ವಿದೆ.
ಆದರೆ ಕನ್ನಡದಲ್ಲಿ ಆಕ್ಟ್, ಡಾನ್ಸ್, ಶೇವ್ ಮೊದಲಾದವುಗಳು ಕ್ರಿಯಾಪದ ಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ (ಅವು ಮಾಡು ಎಂಬ ಕ್ರಿಯಾಪದ ದೊಂದಿಗೆ ‘ಆಖ್ಯಾತ’ಪದಗಳಾಗಿ ಮಾತ್ರ ಬಳಕೆಯಾಗುವುವಾದ ಕಾರಣ) ಇಂಗ್ಲೀಷ್‌ನಲ್ಲಿರುವಂತೆ ಕನ್ನಡದಲ್ಲೂ ಅವುಗಳ ಒಳರಚನೆಯಲ್ಲಿ ಕ್ರಿಯಾಪದ ಗಳಿವೆಯೆಂದು ಹೇಳಲು ಸಾಧ್ಯವಾಗದು. ಎಂದರೆ, ಚಾರಿತ್ರಿಕವಾಗಿ ಈ ಪದಗಳ ತಯಾರಿಕೆಯಲ್ಲಿ ಎಂತಹ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬುದಕ್ಕಿಂತಲೂ ಸದ್ಯಕ್ಕೆ ಈ ಪದಗಳಲ್ಲಿ ಎಂತಹ ರಚನೆ ಕಾಣಿಸುತ್ತಿದೆ ಎಂಬುದೇ ಇಲ್ಲಿ ಮುಖ್ಯ ವಾದ ಸಂಗತಿ.
ಇದೇ ರೀತಿಯಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆ ಎಂತಹದು ಎಂಬುದನ್ನು ತಿಳಿಯಲು ಅವು ಸಂಸ್ಕೃತ
202
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ದಿಂದಲೇನೇ ಎರವಲಾಗಿ ಬಂದಿರುವ ಬೇರೆ ಪದಗಳೊಂದಿಗೆ ಸಂಬಂಧಗಳನ್ನು ತೋರಿಸುತ್ತಿವೆಯೇ, ಮತ್ತು ಹಾಗೆ ತೋರಿಸುತ್ತಿವೆಯಾದರೆ ಆ ಸಂಬಂಧಗಳು ಎಂತಹವು ಎಂಬುದೇ ಆಧಾರವಾಗಬಲ್ಲುದಲ್ಲದೆ, ಅಂತಹ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತ ಭಾಷೆಯಲ್ಲಿ ಅವಕ್ಕೆ ಎಂತಹ ಒಳರಚನೆ ಯಿದೆ ಎಂಬುದು ಆಧಾರವಾಗಲಾರದು.
ಉದಾಹರಣೆಗಾಗಿ, ಕೃಷ್ಣಸರ್ಪ ಎಂಬ ಪದಕ್ಕೆ ಸಂಸ್ಕೃತದಲ್ಲಿ ಒಂದೇ ವಿಭಕ್ತಿಯಿರುವ ಎರಡು ನಾಮಪದಗಳನ್ನು (ಕೃಷ್ಣಃ ಮತ್ತು ಸರ್ಪಃ ಎಂಬವು ಗಳನ್ನು) ಕರ್ಮಧಾರಯವೆಂಬ ಸಮಾಸದ ಮೂಲಕ ಸೇರಿಸಿ ತಯಾರಿಸಿರು ವಂತಹ ಜೋಡುಪದ ಎಂಬುದಾಗಿ ಒಳರಚನೆಯನ್ನು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಈ ಪದಕ್ಕೆ ಕೊಡಬಹುದಾದ ಒಳರಚನೆ ಇದಕ್ಕಿಂತ ತೀರ ಭಿನ್ನವಾದುದು. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ‘ಕಪ್ಪು’ ಎಂಬರ್ಥದ ಕೃಷ್ಣ ಎಂಬ ಪದ ಗುಣವಾಚಕವಾಗಿ ಬಳಕೆಯಲ್ಲಿದೆಯಲ್ಲದೆ ನಾಮಪದವಾಗಿ ಬಳಕೆಯಲ್ಲಿಲ್ಲ. ಸಂಸ್ಕೃತದ ಹಾಗೆ ಕನ್ನಡದಲ್ಲಿ ಅದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು. ಹಾಗಾಗಿ, ಕನ್ನಡದ ಮಟ್ಟಿಗೆ ಹೇಳುವುದಾದರೆ, ಕೃಷ್ಣಸರ್ಪ ಎಂಬ ಜೋಡುಪದದಲ್ಲಿ ಕೃಷ್ಣ ಎಂಬ ಒಂದು ಗುಣಪದವೂ ಮತ್ತು ಸರ್ಪ ಎಂಬ ಒಂದು ನಾಮಪದವೂ ಸೇರಿಕೊಂಡಿವೆ.
ಕನ್ನಡದಲ್ಲಿ ಈ ರೀತಿ ಇಂಗ್ಲಿಷ್, ಸಂಸ್ಕೃತ, ಹಿಂದಿ, ಮರಾಠಿ ಮೊದಲಾದ ಹಲವಾರು ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಬಳಕೆಯಲ್ಲಿದ್ದು ಅವೆಲ್ಲವೂ ಎರವಲಾಗಿ ಬಂದ ಮೇಲೆ ಕನ್ನಡದವೇ ಆಗಿಬಿಟ್ಟಿವೆ. ಹಾಗಾಗಿ ಅವುಗಳ ಒಳರಚನೆಯನ್ನು ವರ್ಣಿಸುವಾಗ ಕನ್ನಡದವೇ ಆದ ಪದರಚನೆಯ ನಿಯಮಗಳನ್ನು ಅನುಸರಿಸಬೇಕಲ್ಲದೆ ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಬೇರೆ ಬೇರೆ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದರಚನೆಯ ನಿಯಮಗಳನ್ನು ಅನುಸರಿಸುವುದು ಸರಿಯಲ್ಲ. ಆದರೆ ಇಂತಹ ಎರವಲಾಗಿ ಬಂದ ಪದಗಳಿಂದಾಗಿ ಕನ್ನಡದ ಪದರಚನೆಯ ನಿಯಮಗಳು ಬೇರೆ ಬೇರೆ ರೀತಿಯಲ್ಲಿ ಬದಲಾಗಿರು ವುದನ್ನು ಮತ್ತು ಅವುಗಳೊಂದಿಗೆ ಬೇರೆ ಕೆಲವು ಹೊಸ ಪದರಚನೆಯ ನಿಯಮಗಳು ಸೇರಿಕೊಂಡಿರುವುದನ್ನು ಗಮನಿಸುವುದು ಅವಶ್ಯ.
ಆ.೨.೨ ಎರವಲು ಕೊಟ್ಟಿರುವ ಭಾಷೆಯ ನಿಯಮಗಳು
ಎರವಲಾಗಿ ಬಂದಿರುವ ಪದಗಳ ಮೂಲಕ ಭಾಷೆಯೊಂದರಲ್ಲಿ ಈ ರೀತಿ ಹೊಸತಾದ ಪದರಚನೆಯ ನಿಯಮಗಳು ಸೇರಿಕೊಂಡಿವೆಯಾದರೆ, ಅವುಗಳ ಸ್ವರೂಪವೇನು ಎಂಬುದನ್ನು ತಿಳಿಯಲು ಅಂತಹ ಪದಗಳ ಒಳರಚನೆ ಎರವಲು ಕೊಟ್ಟಿರುವ ಭಾಷೆಯಲ್ಲಿ ಹೇಗಿತ್ತು ಎಂಬುದನ್ನು ತಿಳಿಯುವುದು ಸ್ವಲ್ಪ ಮಟ್ಟಿಗೆ ಸಹಾಯಕವಾಗಬಲ್ಲುದು.
203
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವು ಪದಗಳಲ್ಲಿ ಅನೆ ಮತ್ತು ಅಣೆ ಎಂಬ ಎರಡು ಬೇರೆ ಬೇರೆ ರೂಪಗಳಲ್ಲಿರುವ ಪ್ರತ್ಯಯವೊಂದನ್ನು ಕಾಣಬಹುದು. (ಉದಾ: ಪ್ರಾರ್ಥನೆ-ಪ್ರಕಟಣೆ, ವರ್ಣನೆ- ಸ್ಮರಣೆ, ಕಲ್ಪನೆ-ರಕ್ಷಣೆ, ಆಲೋಚನೆ-ಆಕರ್ಷಣೆ, ಇತ್ಯಾದಿ). ಈ ಎರಡು ರೂಪಗಳ ಹಿಂದಿರುವ ನಿಯಮವೇನು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತದ ವೈಯಾಕರಣಿಗಳು ಈ ಪದಗಳ ಒಳರಚನೆಯನ್ನು ಹೇಗೆ ವಿವರಿಸಿದ್ದಾರೆ ಎಂಬುದನ್ನು ತಿಳಿದುಕೊಂಡಲ್ಲಿ ಸುಲಭವಾದೀತು (ಕೆಳಗೆ ೮.೩.೬ ನೋಡಿ).
ಇದೇ ರೀತಿಯಲ್ಲಿ ಸಂಸ್ಕೃತದಿಂದಲೇನೇ ಎರವಲಾಗಿ ಬಂದಿರುವ ರಾಜ್ಯ, ಶೌರ್ಯ, ವೈಚಿತ್ರ್ಯ ಮೊದಲಾದ ಬೇರೆ ಕೆಲವು ಪದಗಳಲ್ಲಿ ಯ ಎಂಬ ಒಂದು ಪ್ರತ್ಯಯದ ಬಳಕೆಯನ್ನು ಕಾಣಬಹುದು. ಈ ಪ್ರತ್ಯಯ ಸೇರಿದಾಗ ಕೆಲವು ಪದಗಳ ಸ್ವರದಲ್ಲಿ (ಉದಾ: ಶೂರ-ಶೌರ್ಯ, ಮಲಿನ-ಮಾಲಿನ್ಯ, ಇತ್ಯಾದಿ) ಬದಲಾವಣೆಯಾಗುತ್ತದೆ, ಆದರೆ ಬೇರೆ ಕೆಲವು ಪದಗಳ ಸ್ವರದಲ್ಲಿ (ಉದಾ: ರಾಜ-ರಾಜ್ಯ, ಪದ-ಪದ್ಯ, ಇತ್ಯಾದಿ) ಯಾವ ಬದಲಾವಣೆಯೂ ಆಗುವುದಿಲ್ಲ. ಇಕ ಎಂಬ ಪ್ರತ್ಯಯದ ಬಳಕೆಯಲ್ಲೂ ಇದೇ ಪರಿಸ್ಥಿತಿಯಿದೆ (ಉದಾ: ನಿಸರ್ಗ- ನೈಸರ್ಗಿಕ, ಮಂತ್ರ-ಮಾಂತ್ರಿಕ, ಲೋಕ-ಲೌಕಿಕ, ಇತ್ಯಾದಿ). ಈ ಬದಲಾವಣೆ ಗಳ ಹಿಂದಿರುವ ಪದರಚನೆಯ ನಿಯಮವೆಂತಹದು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತ ವ್ಯಾಕರಣಗಳ ಪರಿಶೀಲನೆ ಸಹಾಯಕವಾಗಬಲ್ಲುದು.
ಆ.೨.೩ ಪದಗಳ ವಿಭಜನೆ
ಎರವಲಾಗಿ ಬಂದಿರುವ ಪದಗಳ ಒಳರಚನೆ ಎಂತಹದು ಎಂಬುದನ್ನು ಪರಿ ಶೀಲಿಸುವ ಮೊದಲು ಅವನ್ನು ಯಾವ ಯಾವ ಭಾಷೆಗಳಿಂದ ಎರವಲಾಗಿ ಪಡೆ ಯಲಾಗಿದೆ ಎಂಬ ವಿಷಯದ ಆಧಾರದ ಮೇಲೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿಕೊಳ್ಳುವುದು ಅವಶ್ಯ. ಯಾಕೆಂದರೆ, ಒಂದರೊಡನೊಂದು ಸಂಬಂಧ ವನ್ನು ತೋರಿಸುವ ಪದಗಳೆಲ್ಲವೂ ಒಂದೇ ಭಾಷೆಯಿಂದ ಎರವಲಾಗಿ ಬಂದವು ಗಳಾಗಿರುವುದೇ ಜಾಸ್ತಿ.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು ಅವುಗಳೊಳಗೇನೇ ಒಂದರೊಡನೊಂದು ಸಂಬಂಧಿಸಿರಲು ಸಾಧ್ಯವಿದೆಯಲ್ಲದೆ, ಇಂಗ್ಲಿಷ್ ಇಲ್ಲವೇ ಪರ್ಶಿಯನ್‌ನಿಂದ ಎರವಲಾಗಿ ಬಂದಿರುವ ಪದಗಳೊಂದಿಗೆ ಸಂಬಂಧವನ್ನು ತೋರಿಸುವುದು ಬಹಳ ಅಪರೂಪವೆಂದೇ ಹೇಳಬಹುದು. ಪದಗಳ ಒಳರಚನೆಯನ್ನು ಇಂತಹ ಸಂಬಂಧಗಳ ಆಧಾರದ ಮೇಲೆ ಸಾಧಿಸ ಬೇಕಾಗಿದೆಯಾದ ಕಾರಣ, ಎರವಲು ಕೊಟ್ಟ ಭಾಷೆಗಳ ಆಧಾರದ ಮೇಲೆ ಅವನ್ನು ವಿಂಗಡಿಸಿಕೊಳ್ಳುವುದರಿಂದ ಅವುಗಳನ್ನು ವರ್ಣಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲುದು.
204
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಕೆಳಗಿನ ಕೆಲವು ವಿಭಾಗಗಳಲ್ಲಿ (೮.೪-೬ರಲ್ಲಿ) ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಕನ್ನಡದಲ್ಲಿ ಎಂತಹ ಒಳರಚನೆಯಿದೆ ಎಂಬುದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ. ಇದಕ್ಕೆ ಮೊದಲು ಕನ್ನಡದಲ್ಲಿ ಈ ಪದಗಳಿ ಗಿರುವ ಒಳರಚನೆ ಅವಕ್ಕೇನೇ ಸಂಸ್ಕೃತದಲ್ಲಿರುವ ಒಳರಚನೆಗಿಂತ ಯಾಕೆ ಭಿನ್ನ ವಾಗಿದೆ ಎಂಬುದನ್ನು (೮.೩ರಲ್ಲಿ) ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.
ಇಂಗ್ಲಿಷ್, ಹಿಂದಿ, ಮರಾಠಿ, ಪರ್ಶಿಯನ್, ತಮಿಳು ಮೊದಲಾದ ಬೇರೆ ಹಲವು ಭಾಷೆಗಳಿಂದಲೂ ಕನ್ನಡಕ್ಕೆ ಪದಗಳು ಎರವಲಾಗಿ ಬದಿದ್ದು, ಇವನ್ನೂ ಇದೇ ರೀತಿಯಲ್ಲಿ ಬೇರೆ ಬೇರಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಆದರೆ ಅಂತಹ ಪ್ರಯತ್ನವನ್ನು ಈ ಪುಸ್ತಕಕ್ಕಾಗಿ ನಡೆಸಲು ಸಾಧ್ಯವಾಗಲಿಲ್ಲ.
೮.೩ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು
ಕನ್ನಡದಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ಹಲವಿವೆ. ಇವುಗಳ ಸಂಖ್ಯೆ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರಾಗಿದೆ. ಶಾಸ್ತ್ರೀಯ ಬರಹಗಳಲ್ಲಿ ಇಂತಹ ಪದಗಳು ಜಾಸ್ತಿ ಇವೆ ಆದರೆ ಬೇರೆ ರೀತಿಯ ಬರಹ ಗಳಲ್ಲಿ ಕಡಿಮೆ ಇವೆ. ಎರವಲಾಗಿ ಬಂದ ಈ ಪದಗಳ ಸ್ವರೂಪವೂ ಪ್ರಭೇದ ದಿಂದ ಪ್ರಭೇದಕ್ಕೆ ಭಿನ್ನ ಭಿನ್ನವಾಗಿದೆ. ಕೆಲವು ಪ್ರಭೇದಗಳಲ್ಲಿ ಇವು ಮೂಲ ಸಂಸ್ಕೃತ ರೂಪದಲ್ಲೇ ಉಳಿದಿವೆಯಾದರೆ, ಇನ್ನು ಕೆಲವು ಪ್ರಭೇದಗಳಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗುವುದರ ಮೂಲಕ ಮೂಲ ಸಂಸ್ಕೃತ ಪದಗಳಿಗಿಂತ ತೀರ ಭಿನ್ನವಾಗಿವೆ.
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳೆಲ್ಲವೂ ಸಂಸ್ಕೃತ ದಲ್ಲಿ ಒಳರಚನೆಯುಳ್ಳವುಗಳೇ ಆಗಿರುತ್ತವೆಯೆಂದು ಹೇಳಬಹುದು. ಅವೆಲ್ಲಕ್ಕೂ ಮೂಲದಲ್ಲಿ ಬೇರೆ ಬೇರೆ ಕ್ರಿಯಾಧಾತುಗಳೇ ಆಧಾರವಾಗಿದ್ದು, ಆ ಧಾತುಗಳಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಇಲ್ಲವೇ ಇತರ ಧಾತುಗಳನ್ನು ಸೇರಿಸುವುದರ ಮೂಲಕ ಸಂಸ್ಕೃತದಲ್ಲಿ ಈ ಪದಗಳನ್ನು ರಚಿಸಲಾಗಿದೆ.
ಆದರೆ ಕನ್ನಡದ ಮಟ್ಟಿಗೆ ಇವುಗಳಲ್ಲಿ ಕೆಲವನ್ನು ಮಾತ್ರ ಒಳರಚನೆಯಿರು ವವುಗಳೆಂದು ಪರಿಗಣಿಸಲು ಸಾಧ್ಯವಿದೆ. ಯಾಕೆಂದರೆ, ಈ ರೀತಿ ಎರವಲಾಗಿ ಬಂದಿರುವ ಪದವೊಂದಕ್ಕೆ ಒಳರಚನೆಯಿದೆಯೆಂದು ಹೇಳಬೇಕಾದರೆ, ಕನ್ನಡ ದಲ್ಲೇ ಬೇರೆ ಪದಗಳೊಂದಿಗೆ ಅದು ರೂಪ ಮತ್ತು ಅರ್ಥಗಳಲ್ಲಿ ಸಂಬಂಧ ವನ್ನು ತೋರಿಸುತ್ತಿರುವುದು ಅವಶ್ಯ.
ಈ ಕಾರಣಕ್ಕಾಗಿ ಎರವಲಾಗಿ ಬಂದಿರುವ ಒಂದು ಪದಕ್ಕೆ ಒಳರಚನೆ ಯಿದೆಯೇ ಅಥವಾ ಇಲ್ಲವೇ ಎಂಬುದು ನಾವು ಪರಿಶೀಲಿಸುತ್ತಿರುವ ಕನ್ನಡದ ಪ್ರಭೇದವನ್ನನುಸರಿಸಿ ಬೇರೆ ಬೇರಾಗಿರಲು ಸಾಧ್ಯವಿದೆ. ಉದಾಹರಣೆಗಾಗಿ, ಸತ್ಯ ಎಂಬ ಪದಕ್ಕೆ ಕೆಲವು ಪ್ರಭೇದಗಳಲ್ಲಿ ಒಳರಚನೆಯಿಲ್ಲ ಎಂದು ಹೇಳಲು ಸಾಧ್ಯ ವಿದೆ, ಆದರೆ ಬೇರೆ ಕೆಲವು ಪ್ರಭೇದಗಳಲ್ಲಿ (ಎಂದರೆ ಸತ್ ಎಂಬ ಪದವನ್ನೂ
205
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಎರವಲಾಗಿ ಪಡೆದಿದ್ದು, ಅದಕ್ಕೆ ಯ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ಸತ್ಯ ಎಂಬ ಪದವನ್ನು ತಯಾರಿಸಲು ಸಾಧ್ಯವಿರುವಂತಹ ಪ್ರಭೇದ ದಲ್ಲಿ) ಅದಕ್ಕೆ ಒಳರಚನೆಯಿದೆಯೆಂದೂ ವಾದಿಸಲು ಸಾಧ್ಯವಾದೀತು. ಸಂಸ್ಕೃತ ದಿಂದ ಜಾಸ್ತಿ ಪದಗಳನ್ನು ಎರವಲಾಗಿ ಪಡೆದಿರುವ ಕನ್ನಡದ ಪ್ರಭೇದಗಳಲ್ಲಿ ಜಾಸ್ತಿ ಪದಗಳಿಗೆ ಒಳರಚನೆಯಿದೆಯೆಂದು ಪರಿಗಣಿಸಲು ಸಾಧ್ಯ ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ.
ಹೀಗಿದ್ದರೂ ಮೇಲೆ ಸೂಚಿಸಿದಂತೆ, ಎರವಲಾಗಿ ಬಂದಿರುವ ಪದಗಳ ಒಳ ರಚನೆ ಅವಕ್ಕೆ ಮೂಲ ಭಾಷೆಯಲ್ಲಿ (ಎಂದರೆ ಸಂಸ್ಕೃತದಲ್ಲಿ) ಇರುವ ಒಳ ರಚನೆಗಿಂತ ತೀರ ಭಿನ್ನವಾಗಿರಲು ಸಾಧ್ಯವಿದೆಯಾದ ಕಾರಣ, ಕನ್ನಡದ ವ್ಯಾಕರಣದಲ್ಲಿ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅವಶ್ಯ, ಮತ್ತು ಅಂತಹ ಪರಿಶೀಲನೆಯ ಆಧಾರದ ಮೇಲೆ ಅವಕ್ಕೆ ಕನ್ನಡದವೇ ಆದ ಪದ ರಚನೆಯ ನಿಯಮಗಳನ್ನು ತಯಾರಿಸಿಕೊಳ್ಳುವುದು ಅವಶ್ಯ.
ಸಂಸ್ಕೃತದ ವೈಯಾಕರಣಿಗಳು ಕೊಡುವ ಪದರಚನೆಯ ನಿಯಮಗಳನ್ನು ಹಾಗೆಯೇ ಕನ್ನಡದ ವ್ಯಾಕರಣದೊಳಗೆ ತಂದು ಹಾಕಿದಲ್ಲಿ ಅವು ಈ ಎರವಲಾಗಿ ಬಂದ ಪದಗಳ ಒಳರಚನೆಯನ್ನು ಸರಿಯಾಗಿ ತಿಳಿಸಿಹೇಳಲಾರವು. ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳ ನಡುವೆ ಹಲವಾರು ಪ್ರಾಮುಖ್ಯವಾದ ವ್ಯತ್ಯಾಸಗಳಿದ್ದು, ಎರವಲಾಗಿ ಬಂದ ಪದಗಳು ಕನ್ನಡದ ವ್ಯಾಕರಣ ನಿಯಮಗಳನ್ನನುಸರಿಸುವುದೇ ಹೀಗೆ ಮಾಡಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣ.
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಪದರಚನೆಗೆ ಸಂಬಂಧಿಸಿ ದಂತಹ ವ್ಯತ್ಯಾಸಗಳಲ್ಲಿ ಪ್ರಾಮುಖ್ಯವಾದ ಕೆಲವನ್ನು ಕೆಳಗಿನ ವಿಭಾಗಗಳಲ್ಲಿ ಪರಿಚಯಿಸಲಾಗಿದೆ. ಸಂಸ್ಕೃದದಿಂದ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಕನ್ನಡದಲ್ಲಿ ಸಂಸ್ಕೃತದಲ್ಲಿರುವುದಕ್ಕಿಂತ ಯಾಕೆ ಭಿನ್ನವಾಗಿದೆ ಮತ್ತು ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ತಿಳಿಯಲು ಈ ವ್ಯತ್ಯಾಸಗಳ ಅರಿವು ಸಹಾಯಕವಾಗಬಲ್ಲುದು.
ಆ.ಖ.೧ ಪದವರ್ಗದಲ್ಲಿ ವ್ಯತ್ಯಾಸ
ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬುದಾಗಿ ಮೂರು ಮುಖ್ಯವಾದ ಪದವರ್ಗಗಳಿವೆಯೆಂದೂ ಮತ್ತು ಇವುಗಳಲ್ಲಿ ಗುಣಪದಗಳು ನಾಮಪದಗಳೊಂದಿಗೆ ಸೇರಿಹೋಗುವುವಾದ ಕಾರಣ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದವರ್ಗಗಳು ಮಾತ್ರ ಇವೆ ಯೆಂದೂ ನಾವು ಎರಡನೆಯ ಅಧ್ಯಾಯದಲ್ಲಿ ನೋಡಿರುವೆವು.
ಸಂಸ್ಕೃತಕ್ಕೂ ಮತ್ತು ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸದ ಪರಿಣಾಮ ವಾಗಿ, ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಹಲವಕ್ಕೆ
206
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಸಂಸ್ಕೃತದಲ್ಲಿ ಕಾಣಿಸುವ ಒಳರಚನೆಗಿಂತ ಭಿನ್ನವಾದ ಒಳರಚನೆಯನ್ನು ಕಲ್ಪಿಸಿ ಕೊಡುವ ಅವಶ್ಯಕತೆ ಕಂಡುಬರುತ್ತದೆ.
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಹೆಚ್ಚಿನವೂ ನಾಮಪದಗಳೇ. ಅವುಗಳಲ್ಲಿ ಕೆಲವು ಗುಣಪದಗಳಾಗಿಯೂ ಮತ್ತು ಬೇರೆ ಕೆಲವು ನಾಮಪದಗಳಾಗಿಯೂ ಕನ್ನಡದಲ್ಲಿ ಬಳಕೆಯಾಗುತ್ತವೆ. ಉದಾಹರಣೆ ಗಾಗಿ, ನೀಲಿ, ಬೇಗ (ವೇಗ), ಮುಖ್ಯ, ಉತ್ತಮ, ಯೋಗ್ಯ ಮೊದಲಾದ ಸಂಸ್ಕೃತದ ನಾಮಪದಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಮತ್ತು ಗ್ರಾಮ, ಕವಿ, ಪಾಠ, ವಿದ್ಯೆ, ಸೇವಕ, ಯಂತ್ರ ಮೊದಲಾದ ನಾಮಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗುತ್ತವೆ.
ಸಂಸ್ಕೃತದ ಕ್ರಿಯಾಪದಗಳು ನೇರವಾಗಿ ಕ್ರಿಯಾಪದಗಳಾಗಿಯೇ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಇದಕ್ಕೆ ಬದಲು ಅವು ಭೂತಕೃದಂತ (ಸಂಬಂಧಕ) ರೂಪದಲ್ಲಿ ಗುಣಪದಗಳಾಗಿ ನಾಮಪದಗಳೊಂದಿಗೆ (ಉದಾ: ದೃಢ ಮನಸ್ಸು, ಗುಪ್ತ ಜೀವನ, ಭಗ್ನ ಕನಸು, ಶಾಂತ ಚಹರೆ, ಇತ್ಯಾದಿ), ಇಲ್ಲವೇ ಇರು ಎಂಬ ಕ್ರಿಯಾಪದದೊಂದಿಗೆ (ಉದಾ: ದೃಢವಾಗು, ಗುಪ್ತವಾಗು, ಶಾಂತ ವಾಗು, ಹಿತವಾಗು, ಇತ್ಯಾದಿ) ಬರುತ್ತವೆ.
ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರವಲ್ಲದೆ, ಅವ್ಯಯವೆಂಬ ಇನ್ನೊಂದು ಅಮುಖ್ಯ ಪದವರ್ಗವೂ ಇದೆ. ಈ ಪದವರ್ಗಕ್ಕೆ ಸೇರಿದ ಪದಗಳೂ ಕನ್ನಡಕ್ಕೆ ಗುಣಪದಗಳಾಗಿ ಎರವಲಾಗುತ್ತವೆ. (ಉದಾ: ಪುನಃ, ವೃಥಾ, ನಾನಾ, ಇತ್ಯಾದಿ).
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆ ಯೆಂಹದೆಂಬುದನ್ನು ನಿರ್ಧರಿಸುವಲ್ಲೂ ಪದವರ್ಗಗಳ ಮಟ್ಟಿಗೆ ಇವುಗಳ ನಡುವೆ ಕಾಣಿಸುವ ಈ ವ್ಯತ್ಯಾಸವನ್ನು ಪರಿಗಣಿಸುವ ಅವಶ್ಯಕತೆಯಿದೆ. ಇದನ್ನು ಮುಖ್ಯವಾಗಿ ಜೋಡುಪದಗಳ ಒಳರಚನೆಯಲ್ಲಿ ಕಾಣಬಹುದು. ಸಂಸ್ಕೃತದ ಜೋಡುಪದಗಳಿಗೆ ತತ್ಪುರುಷ, ಕರ್ಮಧಾರಯ, ದ್ವಿಗು, ದ್ವಂದ್ವ, ಬಹುವ್ರೀಹಿ ಮತ್ತು ಅವ್ಯಯಿಭಾವಗಳೆಂಬ ಆರು ಮುಖ್ಯವಾದ ಒಳರಚನೆ (ಸಮಾಸ)ಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆಯೆಂದು ಸಂಸ್ಕೃತದ ವೈಯಾಕರಣಿಗಳು ಅಭಿ ಪ್ರಾಯಪಟ್ಟಿದ್ದಾರೆ. ಆದರೆ ಕನ್ನಡದ ಜೋಡುಪದಗಳಿಗೆ ಇದಕ್ಕಿಂತ ತೀರ ಭಿನ್ನ ವಾದ ಒಳರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆಯೆಂಬುದನ್ನು ನಾವು ಮೇಲೆ ಆರನೆಯ ಅಧ್ಯಾಯದಲ್ಲಿ ನೋಡಿದ್ದೇವೆ.
ಕನ್ನಡದ ಜೋಡುಪದಗಳಿಗೆ ಮಾತ್ರವಲ್ಲದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೂ ಕನ್ನಡದಲ್ಲಿ ಸಂಸ್ಕೃತದ ಆರು ಒಳರಚನೆ (ಸಮಾಸ)ಗಳಿಗಿಂತ ಭಿನ್ನವಾಗಿರುವ ಒಳರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಯಿದೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ತತ್ಪುರುಷ ಮತ್ತು ಕರ್ಮಧಾರಯ ಗಳೆಂಬ ಎರಡು ರೀತಿಯ ಜೋಡುಪದಗಳ ನಡುವಿರುವ ವ್ಯತ್ಯಾಸವೇನೆಂದರೆ,
207
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ತತ್ಪುರುಷದಲ್ಲಿ ಒಟ್ಟು ಸೇರುವ ನಾಮಪದಗಳು ಬೇರೆ ಬೇರೆ ವಿಭಕ್ತಿಗಳಲ್ಲಿರು ತ್ತವೆ (ರಾಜ್ಞಃ ‘ರಾಜನ’ ಪುರುಷಃ ‘ಜನ’ ರಾಜಪುರುಷಃ), ಮತ್ತು ಕರ್ಮ ಧಾರಯದಲ್ಲಿ ಒಟ್ಟುಸೇರುವ ನಾಮಪದಗಳು ಒಂದೇ ವಿಭಕ್ತಿಯಲ್ಲಿರುತ್ತವೆ (ಕೃಷ್ಣಃ ‘ಕಪ್ಪು’ ಸರ್ಪಃ ‘ಹಾವು’ ಕೃಷ್ಣಸರ್ಪಃ).
ಆದರೆ ಕನ್ನಡಕ್ಕೆ ಎರವಲಾಗಿ ಬಂದಿರುವ ಇಂತಹ ಜೋಡುಪದಗಳಲ್ಲಿ ಕರ್ಮಧಾರಯ ಸಮಾಸವನ್ನು ತೋರಿಸುವ ಹಲವು ಪದಗಳಿಗೆ ಕನ್ನಡದಲ್ಲಿ ಬೇರೆಯೇ ಒಂದು ಒಳರಚನೆಯನ್ನು ಕಲ್ಪಿಸಿಕೊಡಬೇಕಾಗುತ್ತದೆ. ಯಾಕೆಂದರೆ, ವಿಭಕ್ತಿಯೊಂದಿಗೆ ಬರಲಾರದ ಗುಣಪದದೊಂದಿಗೆ ನಾಮಪದವೊಂದನ್ನು ಸೇರಿಸುವಂತಹ ಒಳರಚನೆ ಇವುಗಳಿಗಿದೆ. ಮೇಲೆ ಕೊಟ್ಟಿರುವ ಕೃಷ್ಣಸರ್ಪ ಎಂಬ ಪದ ಮಾತ್ರವಲ್ಲದೆ, ಪರಮಾನ್ನ, ಸದ್ಗುಣ, ಮಂದಬುದ್ಧಿ, ಮೂಲ ಧನ, ಶುಕ್ಲಪಕ್ಷ ಮೊದಲಾದವುಗಳೂ ಕನ್ನಡದಲ್ಲಿ ಇಂತಹ ಒಳರಚನೆಯನ್ನು ತೋರಿಸುತ್ತವೆ.
ಆ.ವಿ.೨ ಪೂರ್ವ ಮತ್ತು ಪರಪ್ರತ್ಯಯಗಳು
ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಪದಗಳಲ್ಲಿ ಹೆಚ್ಚಿನವನ್ನೂ (ಕೆಲವರ ಅಭಿ ಪ್ರಾಯದಂತೆ ಎಲ್ಲಾ ಪದಗಳನ್ನೂ) ಕ್ರಿಯಾಪದವೆಂಬ ಒಂದೇ ಒಂದು ಪದ ವರ್ಗಕ್ಕೆ ಸೇರಿದ ಧಾತುಗಳಿಂದ ತಯಾರಿಸಲಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ಸಂಸ್ಕೃತದ ಪದಗಳಲ್ಲಿ ಕಾಣಿಸಿಕೊಳ್ಳುವ ಪ್ರತ್ಯಯಗಳ ಸಂಖ್ಯೆ ಬಹಳ ದೊಡ್ಡದು. ಈ ಪ್ರತ್ಯಯಗಳು ಧಾತುವಿನ ಎಡಕ್ಕೆ ಸೇರುವುವಾದರೆ ಅವನ್ನು ಪೂರ್ವಪ್ರತ್ಯಯ (ಇಲ್ಲವೇ ಉಪಸರ್ಗ)ಗಳೆಂದೂ ಮತ್ತು ಬಲಕ್ಕೆ ಸೇರುವು ವಾದರೆ ಅವನ್ನು ಪರಪ್ರತ್ಯಯಗಳೆಂದೂ ಕರೆಯುವುದು ರೂಢಿ.
(೧) ಪೂರ್ವಪ್ರತ್ಯಯಗಳ ಬಳಕೆ
| ಹಾಸ್ಯ | ಅಪಹಾಸ್ಯ |
| ಅಪರಾಧಿ | ನಿರಪರಾಧಿ |
| ವಿವೇಕಿ | ಅವಿವೇಕಿ |
| ನಗರ | ಉಪನಗರ |
| ಶಬ್ದ | ನಿಶ್ಯಬ್ದ |
(೨) ಪರಪ್ರತ್ಯಯಗಳ ಬಳಕೆ
| (೨) ಪರ್ಯಾಯಗಳ ಬಳಕೆ | |
|---|---|
| ಅಧಿಕಾರ | ಅಧಿಕಾರಿ |
| ಪ್ರಾಂತ | ಪ್ರಾಂತ್ಯ |
| ಕೃತಜ್ಞ | ಕೃತಜ್ಞತೆ |
| ಕ್ಷಣ | ಕ್ಷಣಿಕ |
208
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ವಿದ್ಯಾರ್ಥಿ ವಿದ್ಯಾರ್ಥಿನಿ
ಕನ್ನಡದಲ್ಲಿ ನಾಮ, ಕ್ರಿಯೆ ಮತ್ತು ಗುಣಗಳೆಂಬ ಮೂರು ಬೇರೆ ಬೇರೆ ಪದವರ್ಗಗಳಿಗೆ ಸೇರುವ ಧಾತುಗಳಿವೆಯಾದ ಕಾರಣ ಅದಕ್ಕೆ ಅಷ್ಟೊಂದು ಪ್ರತ್ಯಯಗಳ ಅವಶ್ಯಕತೆಯಿಲ್ಲವೆಂದು ಹೇಳಲು ಸಾಧ್ಯವಿದೆ. ಇದಲ್ಲದೆ ಕನ್ನಡದಲ್ಲಿ ಪರಪ್ರತ್ಯಯಗಳು ಮಾತ್ರ ಇವೆಯಲ್ಲದೆ ಪೂರ್ವಪ್ರತ್ಯಯಗಳಿಲ್ಲ. ಈ ಕಾರಣಕ್ಕಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಪೂರ್ವಪ್ರತ್ಯಯವಿರುವವು ಗಳು ಕನ್ನಡದಲ್ಲಿ ಬೇರೆ ಬೇರೆ ರೀತಿಯ ಒಳರಚನೆಗಳನ್ನು ತೋರಿಸುತ್ತವೆ.
ಇಂತಹ ಪದಗಳಲ್ಲಿ ಕೆಲವನ್ನು ಕನ್ನಡದಲ್ಲಿ ಜೋಡುಪದಗಳೆಂದು ಕರೆಯು ವುದೇ ಒಳ್ಳೆಯದೆಂದು ತೋರುತ್ತದೆ. ಇವು ಕನ್ನಡದಲ್ಲಿ ಗುಣಪದ ಮತ್ತು ನಾಮ ಪದಗಳನ್ನು ಒಟ್ಟು ಸೇರಿಸಿ ರಚಿಸಿದ ಜೋಡುಪದಗಳ ಹಾಗೆ ಕಾಣಿಸುವುದೇ ಇದಕ್ಕೆ ಮುಖ್ಯ ಕಾರಣ. ಉದಾಹರಣೆಗಾಗಿ, ಸಂಸ್ಕೃತದ ಅತಿ ಎಂಬ ಪೂರ್ವ ಪ್ರತ್ಯಯ ಕನ್ನಡದಲ್ಲಿ ಅತಿ ದೊಡ್ಡ, ಅತಿಯಾಗಿ ಮೊದಲಾದ ಕಡೆಗಳಲ್ಲಿ ಗುಣ ಪದದ ಹಾಗೆ ಸ್ವತಂತ್ರವಾಗಿ ಬಳಕೆಯಾಗುತ್ತದೆ. ಹಾಗಾಗಿ, ಅತಿಕ್ರಮಣ, ಅತ್ಯಾಸ, ಅತ್ಯಂತ ಮೊದಲಾದವುಗಳಲ್ಲಿ ಸಂಸ್ಕೃತದಲ್ಲಿರುವಂತೆ ಪದ ವೊಂದಕ್ಕೆ ಪೂರ್ವ ಪ್ರತ್ಯಯ ಸೇರಿದೆಯೆಂದು ಹೇಳುವ ಬದಲು, ಗುಣಪದ ವೊಂದಕ್ಕೆ ನಾಮಪದ ಸೇರಿ ಜೋಡುಪದವಾಗಿದೆಯೆಂದು ಹೇಳುವುದೇ ಕನ್ನಡದ ಮಟ್ಟಿಗೆ ಹೆಚ್ಚು ಸರಿ.
ಇದೇ ರೀತಿಯಲ್ಲಿ ಪ್ರತಿ ಎಂಬ ಪೂರ್ವಪ್ರತ್ಯಯವೂ ಕನ್ನಡದಲ್ಲಿ ಒಂದು ಸ್ವತಂತ್ರವಾದ ಪದವಾಗಿ ಬಳಕೆಯಲ್ಲಿದ್ದು (ಉದಾ: ಪ್ರತಿಯಾಗಿ, ಪ್ರತಿಯೊಬ್ಬ), ಅದರೊಂದಿಗೆ ಬರುವ ಪದಗಳನ್ನೂ ಜೋಡುಪದಗಳೆಂದು ಕರೆಯಲು ಸಾಧ್ಯ ವಿದೆ. ಈ ರೀತಿ ಸ್ವತಂತ್ರವಾಗಿ ಬರದಿದ್ದರೂ ಪದಗಳ ಹಾಗೆ ಮುಖ್ಯವಾದ ಅರ್ಥವನ್ನೇ ಕೊಡಬಲ್ಲ ಉಪ, ದುರ್, ಸ್ವ ಮೊದಲಾದವುಗಳನ್ನೂ ಕನ್ನಡದಲ್ಲಿ ಅಸ್ವತಂತ್ರ ಪದಗಳೆಂದು ಕರೆಯಲು ಸಾಧ್ಯವಿದ್ದು, ಅವನ್ನೊಳಗೊಂಡಿರುವ ಪದ ಗಳನ್ನೂ ಕನ್ನಡದಲ್ಲಿ ಸಂಸ್ಕೃತದ ಹಾಗೆ ಪೂರ್ವಪ್ರತ್ಯಯಗಳಿರುವ ಪದಗಳೆಂದು ಹೇಳದೆ, ಜೋಡುಪದಗಳೆಂದು ಹೇಳಲು ಸಾಧ್ಯವಿದೆ. ಉದಾ:
ಪ್ರತಿ ಕ್ರಿಯೆ ಪ್ರತಿಕ್ರಿಯೆ ಸ್ಥಾಪನೆ ಪ್ರತಿಸ್ಥಾಪನೆ ಧ್ವನಿ ಪ್ರತಿಧ್ವನಿ ಪಾಲನೆ ಪ್ರತಿಪಾಲನೆ ಕೃತಿ ಪ್ರತಿಕೃತಿ
209
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ಕನ್ನಡ ಪದಗಳ ಒಳರಚನೆ | ||
|---|---|---|
| ಉಪ: | ಗ್ರಹ ನಗರ ಆಹಾರ ಜಾತಿ ಭಾಷೆ | ಉಪಗ್ರಹ ಉಪನಗರ ಉಪಾಹಾರ ಉಪಜಾತಿ ಉಪಭಾಷೆ |
| ದುರ್: | ಅಭಿಮಾನ ಆಲೋಚನೆ ಅಹಂಕಾರ ಬುದ್ಧಿ ಭಾಗ್ಯ | ದುರಭಿಮಾನ ದುರಾಲೋಚನೆ ದುರಹಂಕಾರ ದುರ್ಬುದ್ಧಿ ದುರ್ಭಾಗ್ಯ |
| ಸ್ವ: | ರೂಪ ಆಧೀನ ಇಚ್ಛೆ ರಾಜ್ಯ ದೇಶ | ಸ್ವರೂಪ ಸ್ವಾಧೀನ ಸ್ಟೇಚ್ಛೆ ಸ್ವರಾಜ್ಯ ಸ್ವದೇಶ |
ಆದರೆ ಇತರ ಕೆಲವು ಎರವಲಾಗಿ ಬಂದ ಪದಗಳನ್ನು ಪೂರ್ವಪ್ರತ್ಯಯ ವಿರುವ ಪದಗಳೆಂದು ಹೇಳುವುದೇ ಒಳ್ಳೆಯದೆಂದು ತೋರುತ್ತದೆ. ಉದಾಹರಣೆ ಗಾಗಿ, ಪ್ರಖ್ಯಾತ, ಪ್ರಯತ್ನ, ಮೊದಲಾದುವನ್ನು ಖ್ಯಾತ, ಯತ್ನ ಮೊದಲಾದ ವುಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳ ಮೊದಲನೆಯ ಅಂಗವಾದ ಪ್ರ ಎಂಬುದು ಒಂದು ಪೂರ್ವಪ್ರತ್ಯಯವಾಗಿ ಕಾಣಿಸಿಕೊಳ್ಳುತ್ತದೆ. ಇದೇ ರೀತಿಯಲ್ಲಿ, ವಿಖ್ಯಾತ, ವಿವಾದ, ವಿಜ್ಞಾನ, ವಿನಾಶ, ವಿಯೋಗ ಮೊದಲಾದವುಗಳನ್ನು ಖ್ಯಾತ, ವಾದ, ಜ್ಞಾನ, ನಾಶ ಮೊದಲಾದವುಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳಲ್ಲೂ ವಿ ಎಂಬ ಮೊದಲನೆಯ ಅಂಗ ಪೂರ್ವಪ್ರತ್ಯಯ ವಾಗಿ ಕಾಣಿಸಿಕೊಳ್ಳುತ್ತದೆ. ಕನ್ನಡದಲ್ಲಿ ಇವನ್ನು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳೆಂದು ಹೇಳುವುದು ಕಷ್ಟವಾದ ಕಾರಣ ಇವುಗಳಿಂದಾಗಿ ಕನ್ನಡದಲ್ಲಿಲ್ಲದ ಪೂರ್ವಪ್ರತ್ಯಯಗಳು ಎರವಲಿನಿಂದಾಗಿ ಬಂದಿವೆಯೆಂದು ಹೇಳಬೇಕಾಗುತ್ತದೆ.
ಆ.ಖ.ಖ ಧಾತುಗಳಲ್ಲಿ ವ್ಯತ್ಯಾಸ
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಲ್ಲಿ ಬಳಕೆಯಾಗುವ ಪದಗಳೆಲ್ಲವೂ ಒಳರಚನೆಯುಳ್ಳವುಗಳೇ ಆಗಿದ್ದು, ಅವನ್ನೆಲ್ಲ ಒಂದಲ್ಲ ಒಂದು ಕ್ರಿಯಾಧಾತು ವಿನಿಂದ ಸಾಧಿಸಲು ಸಾಧ್ಯ ಎಂಬುದಾಗಿ ವೈಯಾಕರಣಿಗಳು ಅಭಿಪ್ರಾಯಪಟ್ಟಿ
210
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕನ್ನಡದಲ್ಲಿ ಒಳರಚನೆಯಿಲ್ಲದಂತಹ ಹಲವಾರು ನಾಮಪದ, ಕ್ರಿಯಾಪದ ಮತ್ತು ಗುಣಪದಗಳು ಬಳಕೆಯಲ್ಲಿವೆ. ಹಾಗಾಗಿ, ಸಂಸ್ಕೃತದಲ್ಲಿ ‘ಧಾತು’ ಎಂಬ ಪದ ‘ಕ್ರಿಯಾಧಾತು’ ಎಂಬ ಒಂದು ಅರ್ಥದಲ್ಲಿ ಮಾತ್ರ ಬಳಕೆಯಾಗಬಲ್ಲುದಾದರೆ, ಕನ್ನಡದಲ್ಲಿ ನಾಮಧಾತು, ಕ್ರಿಯಾಧಾತು ಮತ್ತು ಗುಣಧಾತು ಎಂಬುದಾಗಿ ಮೂರು ಬೇರೆ ಬೇರೆ ಅರ್ಥಗಳಲ್ಲಿ ಬಳಕೆಯಾಗಬಲ್ಲುದು.
ಸಂಸ್ಕೃತದ ಪದರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ವಿಂಗಡಿಸುವ ಕ್ರಮವಿದೆ. ನೇರವಾಗಿ ಕ್ರಿಯಾಧಾತುಗ ಳೊಂದಿಗೆ ಬರುವ ಪ್ರತ್ಯಯಗಳನ್ನು ಕೃತ್ ಪ್ರತ್ಯಯಗಳೆಂದೂ ಮತ್ತು ಅಂತಹ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ಪದಗಳೊಂದಿಗೆ ಬರುವ ಪ್ರತ್ಯಯಗಳನ್ನು ತದ್ದಿತ ಪ್ರತ್ಯಯಗಳೆಂದೂ ಕರೆಯುವುದು ರೂಢಿ. ಉದಾಹರಣೆಗಾಗಿ, ಧನ್ ಎಂಬ ಕ್ರಿಯಾಧಾತುವಿನಿಂದ ಧನ ಎಂಬ ನಾಮಪದವನ್ನು ತಯಾರಿಸಲು ಬಳಸುವ ಅ ಎಂಬ ಪ್ರತ್ಯಯ ಒಂದು ಕೃತ್‌ಪ್ರತ್ಯಯ ಮತ್ತು ಧನ ಎಂಬ ಆ ನಾಮಪದದಿಂದ ಧನವತ್ (ಧನವಾನ್) ಎಂಬ ಬೇರೊಂದು ನಾಮಪದವನ್ನು ತಯಾರಿಸಲು ಬಳಸುವ ವತ್ ಎಂಬ ಪ್ರತ್ಯಯ ಒಂದು ತದ್ದಿತ ಪ್ರತ್ಯಯ.
ಇದಲ್ಲದೆ ಉಪಸರ್ಗಗಳೆಂಬ ಪೂರ್ವಪ್ರತ್ಯಯಗಳೂ ಸಂಸ್ಕೃತ ಪದಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ. ಇವು ಕೃತ್ ಮತ್ತು ತದ್ಧಿತ ಪ್ರತ್ಯಯಗಳ ಹಾಗೆ ಪದಗಳ ಅನಂತರ (ಬಲಕ್ಕೆ) ಬರುವ ಬದಲು ಅವುಗಳ ಮೊದಲಿಗೆ (ಎಡಕ್ಕೆ) ಬರುತ್ತವೆ. ಉದಾಹರಣೆಗಾಗಿ, ಜ್ಞಾನ ಎಂಬ ಪದಕ್ಕೆ ಅ ಎಂಬ ಉಪಸರ್ಗವನ್ನು ಸೇರಿಸಿ ಅಜ್ಞಾನ ಎಂಬ ಪದವನ್ನೂ, ಸ್ವಪ್ನ ಎಂಬ ಪದಕ್ಕೆ ದುರ್ ಎಂಬ ಉಪಸರ್ಗವನ್ನು ಸೇರಿಸಿ ದುಸ್ವಪ್ನ ಎಂಬ ಪದವನ್ನೂ ಮತ್ತು ಜೀವನ ಎಂಬ ಪದಕ್ಕೆ ಉಪ ಎಂಬ ಉಪಸರ್ಗವನ್ನು ಸೇರಿಸಿ ಉಪಜೀವನ ಎಂಬ ಪದವನ್ನೂ ತಯಾರಿಸಬಹುದು.
ಕನ್ನಡದ ವೈಯಾಕರಣಿಗಳು ಸಂಸ್ಕೃತದ ಈ ವಿಧಾನವನ್ನೇ ಅನುಸರಿಸಿ ಕನ್ನಡದವೇ ಆದ ಪದಗಳ ಒಳರಚನೆಯನ್ನು ಕೃತ್‌ಪ್ರತ್ಯಯ ಮತ್ತು ತದ್ಧಿತ ಪ್ರತ್ಯಯಗಳೆಂಬ ಎರಡು ರೀತಿಯ ಪ್ರತ್ಯಯಗಳ ಸಹಾಯದಿಂದ ವರ್ಣಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ಕನ್ನಡ ಪದಗಳ ಮಟ್ಟಿಗೆ ಯಶಸ್ವಿಯಾಗ ಲಾರದು. ಯಾಕೆಂದರೆ, ಕನ್ನಡದಲ್ಲಿ ನಾಮಧಾತು, ಕ್ರಿಯಾಧಾತು ಮತ್ತು ಗುಣಧಾತು ಎಂಬುದಾಗಿ ಮೂರು ರೀತಿಯ ಧಾತುಗಳಿದ್ದು, ಕನ್ನಡದ ಪದಗಳನ್ನು ಈ ಮೂರು ರೀತಿಯ ಧಾತುಗಳಿಗೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಾಧಿಸಬೇಕಾಗುತ್ತದೆ.
ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನೂ ಕನ್ನಡದವೇ ಆದ ಒಳರಚನೆಯ ವಿಧಾನಗಳ ಮೂಲಕ ವರ್ಣಿಸಬೇಕಾಗುತ್ತದಲ್ಲದೆ ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಧಾನಗಳ ಮೂಲಕ ವರ್ಣಿಸಲು ಸಾಧ್ಯ
211
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವಾಗದು. ಯಾಕೆಂದರೆ, ಮೇಲೆ (೮.೩)ರಲ್ಲಿ ಸೂಚಿಸಿದಂತೆ ಈ ಪದಗಳ ಒಳರಚನೆ ಮುಖ್ಯವಾಗಿ ಅವಕ್ಕೂ ಕನ್ನಡದಲ್ಲಿ ಬಳಕೆಯಲ್ಲಿರುವ ಇತರ ಪದ ಗಳಿಗೂ ನಡುವಿರುವ ಸಂಬಂಧದ ಮೇಲೆ ಆಧರಿಸಿರುತ್ತದೆಯಲ್ಲದೆ ಸಂಸ್ಕೃತ ದಲ್ಲಿ ಈ ಪದಗಳಿಗಿರುವ ಒಳರಚನೆಯ ಆಧಾರದ ಮೇಲಲ್ಲ.
ಉದಾಹರಣೆಗಾಗಿ ಕನ್ನಡಕ್ಕೆ ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಎರವಲಾಗುವುದಿಲ್ಲ. ಅವುಗಳೊಂದಿಗೆ ಕೃತ್ ಇಲ್ಲವೇ ತದ್ದಿತ ಪ್ರತ್ಯಯಗಳು ಸೇರಿರುವ ರೂಪದಲ್ಲಾಗಲಿ, ಇಲ್ಲವೇ ಕನ್ನಡದ ಇಸು ಎಂಬ ಪ್ರತ್ಯಯ ದೊಂದಿಗಾಗಲಿ ಅವು ಬಳಕೆಗೆ ಬರುತ್ತವೆ (ಉದಾ: ರಕ್ಷಣೆ-ರಕ್ಷಿಸು, ಆಶ್ರಯ- ಆಶ್ರಿತ-ಆಶ್ರಯಿಸು, ಇತ್ಯಾದಿ). ಹಾಗಾಗಿ, ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳ ಒಳರಚನೆಯನ್ನು ಸಂದರ್ಭಕ್ಕನುಸಾರವಾಗಿ ಕೆಲವು ಅಸ್ವತಂತ್ರವಾದ ಧಾತುಗಳನ್ನು ಕಲ್ಪಿಸುವುದರ ಮೂಲಕ ವರ್ಣಿಸಬೇಕಾಗುತ್ತದೆ. ಹೆಚ್ಚಿನಡೆಗಳಲ್ಲೂ ಈ ಧಾತುಗಳು ಯಾವ ವರ್ಗಕ್ಕೆ ಸೇರುತ್ತವೆ ಎಂಬುದನ್ನು ನಿರ್ಧರಿಸಲು ಕನ್ನಡದಲ್ಲಿ ಯಾವ ಆಧಾರವೂ ದೊರೆಯುವುದಿಲ್ಲ (೮.೫ ನೋಡಿ).
ಆ.ವಿ.ಆ ತಯಾರಿಕೆ ಮತ್ತು ಬಳಕೆ
ಕನ್ನಡ ಮತ್ತು ಸಂಸ್ಕೃತ ಪದಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕನ್ನಡದ ನಾಮಪದಗಳಿಗೆ ತಯಾರಿಕೆ ಮತ್ತು ಬಳಕೆ ಎಂಬುದಾಗಿ ಎರಡು ಭಿನ್ನ ಭಿನ್ನವಾದ ಅವಸ್ಥೆಗಳಿದ್ದು, ಈ ಪದಗಳು ಯಾವುದಾದರೊಂದು ಸಂದರ್ಭದಲ್ಲಿ ತಯಾರಾದ ಬಳಿಕ, ಬಳಕೆಗೆ ಬಂದು ಉಳಿದರೆ ಮಾತ್ರ ಭಾಷೆಯ ಪದಗಳೆಂದೆನಿಸಬಲ್ಲುವು (೧.೬.೧ ನೋಡಿ). ಈ ಕಾರಣಕ್ಕಾಗಿ, ಒಳರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಕಾಣಿಸುವ ಪ್ರತ್ಯಯವಿರುವ ನಾಮಪದ ಇಲ್ಲವೇ ಜೋಡುಪದಗಳೆಲ್ಲವೂ ಕನ್ನಡದಲ್ಲಿ ಭಾಷೆಯ ಪದಗಳಾಗುವುದಿಲ್ಲ. ಅಂತಹ ಪದಗಳು ಒಂದು ನಿಶ್ಚಿತವಾದ ಅರ್ಥದಲ್ಲಿ ರೂಢಿಗೆ ಬಂದಾಗ ಮಾತ್ರ ಅವು ಭಾಷೆಯ ಪದಗಳೆಂದೆನಿಸಬಲ್ಲುವು.
ಇದಲ್ಲದೆ, ಭಾಷೆಯಲ್ಲಿ ರೂಢಿಗೆ ಬಂದಿರುವ ಕನ್ನಡದ ಪದಗಳು ಒಳ ರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಇಲ್ಲದಿರಲೂ ಸಾಧ್ಯವಿದೆ. ಪದಕ್ಕೊಂದು ನಿಯಮ ಎನ್ನುವಷ್ಟರ ಮಟ್ಟಿಗೆ ಕನ್ನಡದಲ್ಲಿ ಪ್ರತ್ಯಯವಿರುವ ಪದಗಳ ಮತ್ತು ಜೋಡುಪದಗಳ ಒಳರಚನೆ ಅನಿಯಮಿತವಾಗಿರಲು ಸಾಧ್ಯವಿದೆ. ಇದಕ್ಕೆ ಕಾರಣ ವೇನೇಂದರೆ, ಕನ್ನಡ ಭಾಷೆಯ ನಿಜವಾದ ಸ್ವರೂಪ ಮಾತಿನ ಬಳಕೆಯಲ್ಲೇನೇ ಸಿದ್ಧವಾಗುವಂತಹದು. ಬರಹದಲ್ಲಿ ಅದನ್ನು ಬಳಸುತ್ತಿರುವೆವಾದರೂ, ಮಾತಿ ಗಿರುವಷ್ಟು ಮಹತ್ವ ಬರಹಕ್ಕಿಲ್ಲ. ಕಳೆದ ಒಂದೂವರೆ-ಎರಡು ಸಾವಿರ ವರ್ಷ ಗಳಲ್ಲಿ ಕನ್ನಡ ಭಾಷೆ ಎಷ್ಟೊಂದು ಬದಲಾವಣೆಗಳಿಗೊಳಗಾಗಿದೆ (ಪೂರ್ವದ ಹಳೆಗನ್ನಡವಿದ್ದುದು ಹಳೆಗನ್ನಡವಾಗಿ, ನಡುಗನ್ನಡವಾಗಿ ಅನಂತರ ಹೊಸಗನ್ನಡ
212
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ವಾಗಿದೆ ಮತ್ತು ಹೊಸಗನ್ನಡದಲ್ಲೂ ಊರಿಂದೂರಿಗೆ ಮತ್ತು ಜಾತಿಯಿಂದ ಜಾತಿಗೆ ಅದು ಭಿನ್ನ ಭಿನ್ನವಾಗಿದೆ) ಎಂಬುದನ್ನು ಪರಿಶೀಲಿಸಿದೆವಾದರೆ ಮಾತಿನ ಬಳಕೆಗೆ ಈ ಭಾಷೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಎಂತಹ ಮಹತ್ವವಿದೆ ಎಂಬ ವಿಷಯ ಸ್ಪಷ್ಟವಾದೀತು.
ಈ ಕಾರಣಕ್ಕಾಗಿ, ಕನ್ನಡದ ವ್ಯಾಕರಣ ನಿಯಮಗಳನ್ನು ರಚಿಸುವವರು ಅದು ಬರಹದಲ್ಲಿ ಮಾತ್ರವಲ್ಲದೆ ಮಾತಿನಲ್ಲೂ ಯಾವ ರೂಪದಲ್ಲಿದೆ ಎಂಬುದನ್ನು ಗಮನಿಸುವುದು ಅವಶ್ಯ. ಇನ್ನೊಂದು ಪ್ರಾಮುಖ್ಯವಾದ ಸಂಗತಿಯೇನೆಂದರೆ, ಬರಹಗಳು ಭಾಷೆಯ ಒಂದು ಚಿಕ್ಕ ಅಂಶವನ್ನು ಮಾತ್ರವೇ ಪ್ರತಿನಿಧೀಕರಿಸ ಬಲ್ಲುವು. ಉದಾಹರಣೆಗಾಗಿ, ತಿನ್ನು ಎಂಬ ಕ್ರಿಯಾಪದಕ್ಕಿರುವ ಹಲವು ರೂಪ ಗಳಲ್ಲಿ (ತಿನ್ನುತ್ತಾನೆ, ತಿಂದ, ತಿನ್ನಲಿ, ತಿನ್ನುತ್ತೇನೆ, ತಿನ್ನಲಿದ್ದೇನೆ, ತಿನ್ನುತ್ತಿದ್ದಾಳೆ, ಇತ್ಯಾದಿ) ಕೆಲವೇ ಕೆಲವನ್ನು ಮಾತ್ರ ಬರಹಗಳಲ್ಲಿ ಕಾಣ ಬಲ್ಲೆವು. ಉಳಿದ ರೂಪಗಳನ್ನು ಪಡೆಯಲು ಮಾತಿನ ಮರೆಹೊಗಬೇಕಾಗುತ್ತದೆ.
ಇದಲ್ಲದೆ ಭಾಷೆ ಮಾತಿನಲ್ಲಿ ಬದಲಾದಂತೆ ಬರಹದಲ್ಲೂ ಬದಲಾಗು ತ್ತಿದ್ದು, ಈ ವಿಷಯದಲ್ಲಿ ಬರಹ ಮಾತನ್ನನುಸರಿಸುವುದಲ್ಲದೆ, ಮಾತು ಬರಹ ವನ್ನನುಸರಿಸುವುದಿಲ್ಲ. ಕಾಲದಿಂದ ಕಾಲಕ್ಕೆ ಬರಹದ ಭಾಷೆಯಲ್ಲಿ ಬದಲಾವಣೆ ಗಳುಂಟಾಗಲು ಅದಕ್ಕೆ ಮೊದಲು ಮಾತಿನಲ್ಲಿ ಬದಲಾವಣೆಗಳುಂಟಾಗಿರುವುದೇ ಮುಖ್ಯ ಕಾರಣವಾಗಿರುತ್ತದೆ.
ಈ ವಿಷಯದಲ್ಲಿ ಸಂಸ್ಕೃತ ಭಾಷೆ ಕನ್ನಡಕ್ಕಿಂತ (ಮತ್ತು ಸಾವಿರಾರು ಇತರ ಭಾಷೆಗಳಿಗಿಂತ) ಬಹಳ ಮಟ್ಟಿಗೆ ಭಿನ್ನವಾಗಿದೆ. ಕಳೆದ ಎರಡು ಸಾವಿರ ವರ್ಷ ಗಳಲ್ಲಿ (ಪಾಣಿನಿಯ ಕಾಲದಿಂದೀಚೆಗೆ) ಸಂಸ್ಕೃತ ಭಾಷೆ ಸ್ವಲ್ಪವೂ ಬದಲಾಗದೆ ಹಾಗೆಯೇ ಉಳಿದಿದೆ. ಈ ದೀರ್ಘವಾದ ಅವಧಿಯಲ್ಲಿ ಅದರ ಪ್ರಯೋಗಗಳಿಗೆಲ್ಲ ಬರಹದ ಭಾಷೆ ಮೂಲಾಧಾರವಾಗಿದ್ದುದೇ ಇದಕ್ಕೆ ಮುಖ್ಯ ಕಾರಣ. ಎರಡು ಸಾವಿರ ವರ್ಷಗಳಷ್ಟು ಹಿಂದೆ ರಚಿತವಾಗಿದ್ದ ಪಾಣಿನಿಯ ವ್ಯಾಕರಣ ನಿಯಮ ಗಳು ಇವತ್ತಿಗೂ ಆ ಭಾಷೆಯಲ್ಲಿ ಪದಗಳನ್ನು ಮತ್ತು ಪದರೂಪಗಳನ್ನು ತಯಾರಿಸಲು ಆಧಾರವಾಗಿರುತ್ತವೆ. ಈ ನಿಯಮಗಳನ್ನು ಮೀರುವ ಪದಗಳು ಇಲ್ಲವೇ ಪದರೂಪಗಳು ಸಾಧುವೆನಿಸಬೇಕಾದರೆ, ಅವು ಮಹಾಕವಿಗಳ ಇಲ್ಲವೇ ವಿದ್ವಾಂಸರ ಬರಹಗಳಲ್ಲಿ ಕಾಣಿಸಬೇಕು, ಎಂದರೆ ಮಾನ್ಯವಾದ ಬರಹಗಳಲ್ಲಿ ರೂಢಿಗೆ ಬಂದಿರಬೇಕು.
ಪಾಣಿನಿಯ ಕಾಲದ ಸಂಸ್ಕೃತದಲ್ಲಿ ಪದಗಳ ತಯಾರಿಕೆ ಮತ್ತು ಬಳಕೆ ಗಳೆಂಬ ಎರಡು ಘಟ್ಟಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿತ್ತು. ಆತನ ವ್ಯಾಕರಣ ದಲ್ಲಿ ಒಂದೆರಡು ಪದಗಳ ರಚನೆಗೆ ಮಾತ್ರವೇ ಅನ್ವಯಿಸುವಂತಹ ನಿಯಮ ಗಳೂ ಹಲವಿವೆಯೆಂಬುದು ಈ ವಿಷಯವನ್ನು ಸ್ಪಷ್ಟಪಡಿಸುತ್ತವೆ. ಆದರೆ ಆತನ ಕಾಲದ ಅನಂತರದ ಕಾಲದಲ್ಲಿ ಸಂಸ್ಕೃತ ಭಾಷೆ ಬರಿಯ ಬರಹದ ಭಾಷೆಯಾಗಿ ಉಳಿದು, ಅದಕ್ಕೆ ಮಾತಿನ ಬಳಕೆಯ ಆಧಾರ ತಪ್ಪಿಹೋಯಿತು.
213
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮಾತಿನಲ್ಲಿ ಆ ಭಾಷೆ ಪಾಲಿ, ಪ್ರಾಕೃತ, ಅಪಭ್ರಂಶ ಇತ್ಯಾದಿಯಾಗಿ ಬದಲಾಗುತ್ತಾ ಹೋದರೂ ಬರಹದಲ್ಲಿ ಮಾತ್ರ ಅಂತಹ ಬದಲಾವಣೆಗಳನ್ನು ಅನುಸರಿಸದೆ ಇದ್ದುದಿದ್ದಂತೆಯೇ ಉಳಿದುಕೊಂಡುದೇ ಇದಕ್ಕೆ ಕಾರಣ. ಎಂದರೆ, ಕನ್ನಡ ಬರಹ ಹಳೆಗನ್ನಡವಿದ್ದದ್ದು ನಡುಗನ್ನಡವಾಗಿ ಅನಂತರ ಹೊಸಗನ್ನಡವಾಗಿ ಬದಲಾಗಿದೆ, ಆದರೆ ಸಂಸ್ಕೃತ ಬರಹ ಸಂಸ್ಕೃತವಿದ್ದದ್ದು ಪ್ರಾಕೃತವಾಗಿ ಅನಂತರ ಹಿಂದಿ, ಮರಾಠಿ ಮೊದಲಾದವುಗಳಲ್ಲಿ ಒಂದಾಗಲಿಲ್ಲ, ಇದಕ್ಕೆ ಬದಲು ಅದು ಸಂಸ್ಕೃತವಾಗಿಯೇ ಉಳಿದುಕೊಂಡಿದೆ.
ಭಾಷೆಯ ಮಟ್ಟಿಗೆ ಹೀಗೆ ಕಾಲದಿಂದ ಕಾಲಕ್ಕೆ ಬದಲಾಗದೆ ಉಳಿಯುವುದು ಒಂದು ಅಸ್ವಾಭಾವಿಕ ಘಟನೆಯೆಂದು ಹೇಳಬಹುದು. ಈ ಕಾರಣಕ್ಕಾಗಿ ಸಂಸ್ಕೃತದ ವ್ಯಾಕರಣವೂ ಕೆಲವು ಅಸ್ವಾಭಾವಿಕ ಗುಣಧರ್ಮಗಳನ್ನು ತೋರಿಸು ಇದೆ. ಅದರ ನಾಮಪದಗಳಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಈ ಎರಡು ಘಟ್ಟಗಳ ನಡುವಿರುವ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಇಲ್ಲವಾಗಿರುವುದು ಇಂತಹ ಗುಣಧರ್ಮಗಳಲ್ಲಿ ಪ್ರಾಮುಖ್ಯವಾದುದು. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಈ ವಿಷಯದಲ್ಲಿ ಬಹಳ ಸ್ಪಷ್ಟವಾದ ವ್ಯತ್ಯಾಸವಿದೆ. ಇದನ್ನು ಈ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ ಪರಿಶೀಲನೆಯಿಂದ ತಿಳಿದುಕೊಳ್ಳ ಬಹುದು.
ಕನ್ನಡದಲ್ಲಿ ಜೋಡುಪದಗಳನ್ನು ತಯಾರಿಸಿದ ಕೂಡಲೇ ಅವು ಭಾಷೆಯ ಪದಗಳಾಗುವುದಿಲ್ಲ. ಹಾಗೆ ತಯಾರಿಸಿದ ಪದಗಳು ಇದಕ್ಕಾಗಿ ಭಾಷೆಯಲ್ಲಿ ರೂಢಿಗೆ ಬರುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ತಯಾರಿಸಿರುವ ಬಯಲಾಟ, ನೆಲಿಗಡಲೆ, ಜೇನುಹುಳ, ತಾಯಿಮನೆ ಮೊದಲಾದ ಜೋಡುಪದಗಳನ್ನು ಗಮನಿಸಬಹುದು. ಬಯಲಿನ ಆಟ, ನೆಲದ ಕಡಲೆ, ಜೇನಿನ ಹುಳ, ತಾಯಿಯ ಮನೆ ಮೊದಲಾದ ಪದಗುಚ್ಛಗಳಲ್ಲಿ ಮೊದಲನೆಯ ಪದದೊಂದಿಗೆ ಬಂದಿರುವ ಅ ಎಂಬ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಈ ಜೋಡುಪದಗಳನ್ನು ತಯಾರಿಸ ಲಾಗಿದೆ.
ಆದರೆ ಎಲ್ಲಾ ರೀತಿಯ ಪದಗುಚ್ಛಗಳಿಂದಲೂ ಈ ರೀತಿ ಮೊದಲನೆಯ ಪದದೊಂದಿಗೆ ಬರುವ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಅವನ್ನು ಕನ್ನಡದ ಜೋಡುಪದಗಳೆಂದು ಕರೆಯಲು ಸಾಧ್ಯವಾಗದು. ಉದಾಹರಣೆಗಾಗಿ ಬಯಲಿನ ಓಟ, ನೆಲದ ಬಣ್ಣ, ಮರದ ಹುಳ, ತಾಯಿಯ ಸೀರೆ, ಮೊದಲಾದ ಪದಗುಚ್ಛಗಳಿಂದ ಅವುಗಳ ಮೊದಲನೆಯ ಪದದೊಂದಿಗೆ ಬರುವ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಬಯಲೋಟ, ನೆಲಬಣ್ಣ, ಮರಹುಳ, ತಾಯಿಸೀರೆ ಎಂಬುದಾಗಿ ಪದಗಳನ್ನು ತಯಾರಿಸಲು ಸಾಧ್ಯವಿದೆಯದರೂ ಅವು ನಿಜಕ್ಕೂ ಕನ್ನಡದ ಜೋಡುಪದಗಳಲ್ಲ. ಅಂತಹ ಪದಗಳನ್ನು ನಾವು ಕನ್ನಡದ ಅರ್ಥಕೋಶಗಳಲ್ಲಿ ಕಾಣುವುದೂ ಇಲ್ಲ.
214
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಬಯಲಾಟ, ನೆಲಗಡಲೆ ಮೊದಲಾ ದವುಗಳ ಹಾಗೆ ಅವಕ್ಕೊಂದು ವಿಶಿಷ್ಟವಾದ ಅರ್ಥ ದೊರಕಿದ ಮೇಲೆ ಮತ್ತು ಆ ಅರ್ಥದಲ್ಲಿ ಅವು ಭಾಷೆಯಲ್ಲಿ ಬಳಕೆಗೆ ಬಂದ ಮೇಲೆ ಮಾತ್ರವೇ ಅವನ್ನು ಕನ್ನಡದ ಜೋಡುಪದಗಳೆಂದು ಹೇಳಲು ಮತ್ತು ಕನ್ನಡದ ಅರ್ಥಕೋಶಗಳಲ್ಲಿ ಅವನ್ನು ಸೇರಿಸಿಕೊಳ್ಳಲು ಸಾಧ್ಯವಾದೀತು.
ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ತಯಾರಿಸಿರುವ ಜಾರು ಬಂಡಿ, ಚುಚ್ಚುಮದ್ದು, ಹುರಿಗಡಲೆ, ಬಿಚ್ಚುಗತ್ತಿ, ಹುಟ್ಟುಹಬ್ಬ ಮೊದಲಾದ ಜೋಡುಪದಗಳ ಬಳಕೆಯೂ ಇದೇ ರೀತಿಯದು. ಸಾಮಾನ್ಯವಾಗಿ ಕ್ರಿಯಾಪದ ವೊಂದನ್ನು ನಾಮಪದದೊಂದಿಗೆ ಬಳಸಬೇಕಿದ್ದಲ್ಲಿ ಅದನ್ನು ಸಂಬಂಧಕ ರೂಪ ದಲ್ಲಿರಿಸಬೇಕು. ಜಾರುವ ನೆಲ, ಚುಚ್ಚುವ ಮುಳ್ಳು, ಬಿಚ್ಚಿದ ಕೂದಲು, ಹುಟ್ಟಿದ ರಾತ್ರಿ ಮೊದಲಾದ ಪದಗುಚ್ಛಗಳಲ್ಲಿ ಇಂತಹ ರಚನೆಯನ್ನು ಕಾಣ ಬಹುದು. ಇಂತಹ ಪದಗುಚ್ಛಗಳಲ್ಲಿ ಜಾರುವ ಬಂಡಿ, ಚುಚ್ಚುವ ಮದ್ದು, ಹುರಿದ ಕಡಲೆ ಮೊದಲಾದ ಕೆಲವು ಪದಗುಚ್ಛಗಳು ಮಾತ್ರ ಅವುಗಳ ಮೊದಲನೆಯ ಪದದೊಂದಿಗೆ ಬಂದಿರುವ ಕಾಲಪ್ರತ್ಯಯ ಮತ್ತು ಸಂಬಂಧಕ ಪ್ರತ್ಯಯಗಳನ್ನು ಕಳೆದುಕೊಂಡು ಜೋಡುಪದಗಳಾಗಿ ಕನ್ನಡದಲ್ಲಿ ಬಳಕೆಗೆ ಬಂದಿವೆ.
ಜಾರುವ ನೆಲ, ಚುಚ್ಚುವ ಮುಳ್ಳು ಮೊದಲಾದ ಇತರ ಪದಗುಚ್ಛ ಗಳಿಂದಲೂ ಜಾರುನೆಲಿ, ಚುಚ್ಚುಮುಳ್ಳು ಮೊದಲಾದ ಇಂತಹ ಜೋಡುಪದ ಗಳನ್ನು ತಯಾರಿಸಲು ಸಾಧ್ಯವಿದೆಯಾದರೂ ಅವು ಕನ್ನಡದ ಜೋಡುಪದಗಳು ಎಂದೆನಿಸಬೇಕಿದ್ದಲ್ಲಿ ಅವಕ್ಕೆ ಮೇಲೆ ಹೇಳಿದಂತೆ ವಿಶಿಷ್ಟವಾದೊಂದು ಅರ್ಥ ಸಿಗಬೇಕು ಮತ್ತು ಆ ಅರ್ಥದಲ್ಲಿ ಅವು ಬಳಕೆಗೆ ಬರಬೇಕು.
ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ತಯಾರಿಸಿರುವ ದೊಡ್ಡಣ್ಣ, ಅಡ್ಡದಾರಿ, ಬೆಣ್ಕಲ್ಲು ಮೊದಲಾದ ಜೋಡುಪದಗಳ ಬಳಕೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆಯಾದರೂ ತಯಾರಿಕೆ ಮತ್ತು ಬಳಕೆಗಳ ನಡುವಿರುವ ಅಂತರ ಇಲ್ಲೂ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತದೆ. ಕನ್ನಡದಲ್ಲಿ ಗುಣಪದಗಳನ್ನು ನೇರವಾಗಿ ನಾಮಪದಗಳೊಂದಿಗೆ ಬಳಸಲು ಸಾಧ್ಯವಿದೆ. ಆದರೆ ಇಂತಹ ಬಳಕೆಗಳು ಬರಿಯ ಪದಗುಚ್ಛಗಳಾಗಿರುತ್ತವಲ್ಲದೆ ಜೋಡುಪದಗಳೆಂದೆನಿಸುವು ದಿಲ್ಲ. ಉದಾಹರಣೆಗಾಗಿ, ದೊಡ್ಡ ಮನೆ, ಅಡ್ಡಗೋಡೆ, ಬಿಳಿಕಲ್ಲು ಮೊದಲಾ ದವುಗಳು ಬರಿಯ ಪದಗುಚ್ಛಗಳು ಮಾತ್ರ.
ಇವು ಕನ್ನಡದಲ್ಲಿ ಜೋಡುಪದಗಳೆಂದೆನಿಸಬೇಕಾದರೆ, ಮೇಲೆ ಹೇಳಿದಂತೆ ಇವಕ್ಕೂ ಒಂದು ವಿಶಿಷ್ಟವಾದ ಅರ್ಥ ಲಭಿಸಬೇಕು ಮತ್ತು ಆ ಅರ್ಥದಲ್ಲಿ ಅವು ಬಳಕೆಗೆ ಬರಬೇಕು. ಆದರೆ ಈ ರೀತಿ ಪದಗುಚ್ಛಗಳು ಜೋಡುಪದಗಳಾಗಿ ಬದಲಾಗುವಾಗ ಇವುಗಳಲ್ಲಿ ಪ್ರತ್ಯಯಗಳಾವುವೂ ಬಿದ್ದುಹೋಗುವುದಿಲ್ಲ (ಇವು ಗಳಲ್ಲಿ ಬಿದ್ದುಹೋಗುವಂತಹ ಪ್ರತ್ಯಯಗಳೇ ಇಲ್ಲ) ಎಂಬುದೇ ಇವುಗಳಿಗೂ
215
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಮತ್ತು ಮೇಲೆ ಕೊಟ್ಟಿರುವ ಬೇರೆ ಎರಡು ರೀತಿಯ ಜೋಡುಪದಗಳಿಗೂ ನಡುವಿರುವ ವ್ಯತ್ಯಾಸ. ಆದರೆ ಇಂತಹ ಗುಣಪದಗಳಿರುವ ಜೋಡುಪದಗಳಲ್ಲಿ ಸಾಮಾನ್ಯವಾಗಿ ಪದಗುಚ್ಛಗಳಲ್ಲಿ ಕಾಣಿಸದಿರುವ ಕೆಲವು ಸಂಧಿಯ ನಿಯಮ ಗಳನ್ನು ಕಾಣಬಹುದು (ಉದಾ: ಬಿಳಿ-ಬೆಳ್, ಕಪ್ಪು-ಕರಿ, ಕರ್ ಇತ್ಯಾದಿ).
ಸಂಸ್ಕೃತದಲ್ಲಿ ಕಾಣಿಸುವ ಜೋಡುಪದಗಳ ಬಳಕೆ ಇದಕ್ಕಿಂತ ತೀರ ಭಿನ್ನ ವಾದುದು. ಅದರ ಕೆಲವು ಜೋಡುಪದಗಳಿಗೆ ಪದಗುಚ್ಛಗಳಿಗಿಂತ ಭಿನ್ನವಾದ ಅರ್ಥ ಇದೆಯಾದರೂ, ಅವನ್ನು ಅಂತಹ ಅರ್ಥದಲ್ಲಿ ಮಾತ್ರವಲ್ಲದೆ ಬರಿಯ ಪದಗುಚ್ಛದ ಅರ್ಥದಲ್ಲೂ ಬಳಸಲು ಸಾಧ್ಯವಿದೆ. ನಿಜಕ್ಕೂ ‘ಸಮಾಸ’ವೆಂಬ ವ್ಯಾಕರಣ ವಿಧಾನ ಸಂಸ್ಕೃತದಲ್ಲಿ ಎರಡು ಅಥವಾ ಜಾಸ್ತಿ ನಾಮಪದಗಳನ್ನು ಒಟ್ಟಿಗೆ ಸಂಕ್ಷಿಪ್ತ ರೂಪದಲ್ಲಿ ಬಳಸುವ ಒಂದು ಸಾಧನ ಮಾತ್ರ. ಅದನ್ನೊಂದು ಪದರಚನೆಯ ವಿಧಾನವನ್ನುನ್ನುವುದಕ್ಕಿಂತಲೂ ವಾಕ್ಯವನ್ನು ಸಂಕ್ಷಿಪ್ತಗೊಳಿಸುವ ಸಾಧನವೆಂದು ಹೇಳುವುದೇ ಹೆಚ್ಚು ಸಮಂಜಸವಾಗಬಲ್ಲುದು.
ಸಂಧಿಕಾರ್ಯಗಳ ಮೂಲಕ ಪದಗಳ ನಡುವೆ ಬರುವ ಅಕ್ಷರಗಳನ್ನು ತೆಗೆದು ಹಾಕಿ ಇಲ್ಲವೇ ಬದಲಾಯಿಸಿ ಆ ಪದಗಳು ಒಂದರೊಡನೊಂದು ಜೋಡಿಕೊಳ್ಳು ವಂತೆ ಮಾಡುವ ಹಾಗೆಯೇ ಸಂಸ್ಕೃತದಲ್ಲಿ ಸಮಾಸ ಕಾರ್ಯಗಳ ಮೂಲಕ ಪದಗಳ ನಡುವೆ ಬರುವ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ತೆಗೆದು ಹಾಕಿ ಅವು ಇನ್ನಷ್ಟು ಹತ್ತಿರ ಬಂದು ಜೋಡಿಕೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ. ಈ ಎರಡು ವ್ಯಾಕರಣ ಕ್ರಿಯೆಗಳಲ್ಲೂ ಸಂಸ್ಕೃತದಲ್ಲಿ ಪದಗಳ ಅನನ್ಯತೆ ನಷ್ಟ ವಾಗುವುದಿಲ್ಲ. ಸಂಸ್ಕೃತದ ಈ ಸಮಾಸ ವಿಧಾನ ಕನ್ನಡದಲ್ಲಿ ಕಾಣಿಸುವ ಸಮಾಸ ವಿಧಾನದಿಂದ ತೀರ ಭಿನ್ನವಾದುದು.
ಸಂಸ್ಕೃತದ ಜೋಡುಪದಗಳ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಎರಡು ಘಟ್ಟಗಳಿಲ್ಲ ಎಂಬ ವಿಷಯ ಬಾಣಭಟ್ಟನ ಕಾದಂಬರಿಯಲ್ಲಿ ಕಾಣಿಸಿ ಕೊಳ್ಳುವ ಜೋಡುಪದಗಳನ್ನು ಪರಿಶೀಲಿಸಿದಲ್ಲಿ ಬಹಳ ಸ್ಪಷ್ಟವಾಗಬಲ್ಲುದು. ಇಪ್ಪತ್ತು-ಮೂವತ್ತು ಪದಗಳನ್ನು ಒಟ್ಟುಸೇರಿಸಿ ತಯಾರಿಸಿದ ಉದ್ದುದ್ದವಾದ ಜೋಡುಪದಗಳು ಹಲವು ಆ ಗ್ರಂಥದಲ್ಲಿವೆ. ಇಂತಹ ಜೋಡುಪದಗಳಿಗೆ ತಯಾರಿಕೆಯೆಂಬ ಒಂದೇ ಒಂದು ಘಟ್ಟವಿರಲು ಸಾಧ್ಯವಿದೆಯಲ್ಲದೆ ಅದಕ್ಕಿಂತ ಭಿನ್ನವಾದ ಬಳಕೆಯೆಂಬ ಎರಡನೆಯ ಘಟ್ಟವಿರುವುದು ಅಸಾಧ್ಯ. ಯಾಕೆಂದರೆ ಅಂತಹ ಉದ್ದುದ್ದವಾಗಿರುವ ಜೋಡುಪದಗಳನ್ನು ಪುನಃ ಪುನಃ ಬಳಸುವ ಸಂದರ್ಭಗಳೇ ಬರಲಾರವು.
ಸಂಸ್ಕೃತ ಭಾಷೆಯಲ್ಲಿ ಈ ರೀತಿ ಹೊಸ ಹೊಸ ಪದಗಳನ್ನು ತಯಾರಿಸಿ ಹೇಳಲು ಮಾತಿನ ಬಳಕೆಯ ಆಧಾರ ಬೇಕಾಗಿಲ್ಲವಾದ ಕಾರಣ, ಮತ್ತು ಅಂತಹ ಪದಗಳಿಗೆ ಅರ್ಥ ಹೇಳಲು ಅವುಗಳ ಒಳರಚನೆ ಮಾತ್ರವೇ ಆಧಾರವಾಗಿರಲು ಸಾಧ್ಯವಿದೆಯಾದ ಕಾರಣ, ಕನ್ನಡದಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಬಳಸಬೇಕಾಗಿರುವ ಸಂದರ್ಭಗಳಲ್ಲೆಲ್ಲ ಸಂಸ್ಕೃತ ಭಾಷೆಗೆ ಮರೆಹೊಗುವ ಕ್ರಮ
216
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ರೂಢಿಗೆ ಬಂದಿದೆ. (ಇಂಗ್ಲಿಷ್‌ನಲ್ಲೂ ಇದೇ ರೀತಿಯಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಬಳಸಬೇಕಾದಾಗಲೆಲ್ಲ ಲ್ಯಾಟಿನ್ ಇಲ್ಲವೇ ಗ್ರೀಕ್ ಭಾಷೆಗೆ ಮರೆ ಹೊಗುವ ಕ್ರಮ ರೂಢಿಯಲ್ಲಿತ್ತೆಂಬುದನ್ನು ಇಲ್ಲಿ ಗಮನಿಸ ಬಹುದು.) ಪಾರಿಭಾಷಿಕ ಪದಗಳಿಗೆ ಅವುಗಳ ಒಳರಚನೆಯಿಂದಲೇನೇ ನೇರ ವಾಗಿ ಅರ್ಥ ಸಿಗುವಂತಿದ್ದರೆ ಒಳ್ಳೆಯದೆಂಬ ಅನಿಸಿಕೆಯೇ ಹೀಗೆ ಮಾಡಲು ಒಂದು ಕಾರಣವಿರಬೇಕು.
ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘವಾದ ಅವಧಿಯಲ್ಲಿ ಸಂಸ್ಕೃತ ಭಾಷೆ ಮಾತಿನ ಬಳಕೆಯ ಆಧಾರ ತಪ್ಪಿಹೋಗಿ ಬರಿಯ ಬರಹದ ಬಳಕೆಯ ಆಧಾರದ ಮೇಲೆ ಮತ್ತು ವಿದ್ವಾಂಸರು ರಚಿಸಿದ ವ್ಯಾಕರಣ ನಿಯಮ ಗಳ ಆಧಾರದ ಮೇಲೆ ಮಾತ್ರವೇ ನಿಲ್ಲಬೇಕಾಗಿ ಬಂದಿದೆ. ಈ ಕಾರಣಕ್ಕಾಗಿ ಈ ಭಾಷೆ ಹರಿವು ನಿಂತ ನೀರಿನ ಹಾಗೆ ಜಡವಾಗಿದೆ ಮತ್ತು ತನ್ನ ಜೀವಂತಿಕೆಯನ್ನು ಬಹಳ ಮಟ್ಟಿಗೆ ಕಳೆದುಕೊಂಡಿದೆ. ಅದರ ವ್ಯಾಕರಣದ ಹಲವು ಭಾಗಗಳಲ್ಲಿ ಇದರಿಂದಾಗಿ ಕೃತಕತೆ ಎದ್ದು ಕಾಣಿಸುತ್ತದೆ. ಮೇಲೆ ವಿವರಿಸಿದಂತೆ ತಯಾರಿಕೆ ಮತ್ತು ಬಳಕೆಗಳೆಂಬ ಎರಡು ಘಟ್ಟಗಳ ನಡುವಿರುವ ವ್ಯತ್ಯಾಸ ಅದರ ನಾಮ ಪದಗಳ ಬಳಕೆಯಲ್ಲಿ ಕಾಣಿಸದಿರುವುದು ಇಂತಹ ಕೃತಕತೆಗೆ ಒಂದು ಉದಾ ಹರಣೆ.
ಕೆಲವರು ವಿದ್ವಾಂಸರು ಸಂಸ್ಕೃತದ ಈ ಕೃತಕತೆ ಆ ಭಾಷೆ ಇತರ ಇಲ್ಲಾ ಭಾಷೆಗಳಿಗಿಂತಲೂ ‘ಶ್ರೇಷ್ಠ’ವಾಗಿರುವುದರ ದ್ಯೋತಕವೆಂದು ಭ್ರಮಿಸಿದಂತಿದೆ. ಉದಾಹರಣೆಗಾಗಿ ಸಂಸ್ಕೃತವನ್ನು ಇತರ ಭಾಷೆಗಳಿಗಿಂತ ಹೆಚ್ಚು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆಯೆಂಬ ವಿಷಯವನ್ನು ಪರಿಶೀಲಿಸಬಹುದು. ಸಂಸ್ಕೃತದ ವ್ಯಾಕರಣವನ್ನು ವಿವರವಾಗಿ ಮತ್ತು ವಿಸ್ತಾರ ವಾಗಿ ವರ್ಣಿಸಲಾಗಿದೆಯೆಂಬುದು ಇದಕ್ಕೆ ಒಂದು ಕಾರಣವಾದರೆ, ಸಂಸ್ಕೃತದ ನಾಮಪದಗಳಲ್ಲಿ ಹೆಚ್ಚಿನವಕ್ಕೂ ಅವುಗಳ ಒಳರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯ ಎಂಬುದು ಇನ್ನೊಂದು ಕಾರಣ. ಇವುಗಳಲ್ಲಿ ಎರಡನೆ ಯದು ಆ ಭಾಷೆಯ ಶ್ರೇಷ್ಠತೆಯನ್ನು ತೋರಿಸುವ ಬದಲು ಅದರ ಜಡತ್ವವನ್ನು (ಇಲ್ಲವೇ ಜೀವಂತಿಕೆಯ ಅಭಾವವನ್ನು) ತೋರಿಸುತ್ತದೆ.
ಆ.೪ ಪ್ರತ್ಯಯವಿರುವ ಪದಗಳು
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೆ ಒಳರಚನೆಯಿದೆಯೇ ಅಥವಾ ಇಲ್ಲವೇ ಎಂಬುದನ್ನು, ಮತ್ತು ಇದೆಯಾದರೆ ಅದು ಎಂತಹದು ಎಂಬುದನ್ನು ಮುಖ್ಯವಾಗಿ ಈ ರೀತಿ ಎರವಲಾಗಿ ಬಂದಿರುವ ಪದಗಳ ನಡುವಿರುವ ಸಂಬಂಧವೆಂತಹದು ಎಂಬ ವಿಷಯದ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ. ಆ ಪದಗಳಿಗೆ ಸಂಸ್ಕೃತ
217
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ವ್ಯಾಕರಣದಲ್ಲಿ ಕೊಟ್ಟಿರುವ ಒಳರಚನೆಗಳನ್ನು ಹಾಗೆಯೇ ನೇರವಾಗಿ ಕನ್ನಡದ ವ್ಯಾಕರಣದಲ್ಲಿ ತಂದು ಸೇರಿಸುವುದು ಸುಲಭವಾದರೂ ಅದು ಸರಿಯಲ್ಲ.
ಸಂಸ್ಕೃತದಲ್ಲಿ ಹೆಚ್ಚು ಕಡಿಮೆ ಎಲ್ಲಾ ನಾಮಪದಗಳನ್ನೂ ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ, ಇಲ್ಲವೇ ಎರಡು ಅಥವಾ ಜಾಸ್ತಿ ನಾಮಪದಗಳನ್ನು ಒಟ್ಟಿಗೆ ಸೇರಿಸಿ ಜೋಡುಪದಗಳನ್ನು ರಚಿಸುವುದರ ಮೂಲಕ ತಯಾರಿಸಲಾಗಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಹಲವು ಕನ್ನಡದ ಮಟ್ಟಿಗೆ ಒಳರಚನೆಯಿಲ್ಲದ ಪದಗಳೆಂದೇ ಹೇಳಬೇಕಾಗುತ್ತದೆ. ಅವುಗಳೊಂದಿಗೆ ಸಂಬಂಧವನ್ನು ತೋರಿಸುವ ಬೇರೆ ಸಂಸ್ಕೃತ ಪದಗಳು ಕನ್ನಡಕ್ಕೆ ಎರವಲಾಗಿ ಬಂದಿಲ್ಲವೆಂಬುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಅನ್ನ ಎಂಬ ನಾಮಪದವನ್ನು ಸಂಸ್ಕೃತದಲ್ಲಿ ‘ತಿನ್ನು’ ಎಂಬ ಅರ್ಥದಲ್ಲಿರುವ ಅದ್ ಎಂಬ ಕ್ರಿಯಾಧಾತುವಿಗೆ ಕೃತ್‌ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ. ಆದರೆ, ಕನ್ನಡಕ್ಕೆ ಈ ಅದ್ ಎಂಬ ಕ್ರಿಯಾಪದ ಸಂಸ್ಕೃತದಿಂದ ಎರವಲಾಗಿ ಬಂದಿಲ್ಲವಾದ ಕಾರಣ (೮.೫ ನೋಡಿ), ಅನ್ನ ಎಂಬುದಕ್ಕೆ ಕನ್ನಡದಲ್ಲಿ ಒಳರಚನೆಯಿಲ್ಲವೆಂದೇ ಹೇಳಬೇಕಾಗುತ್ತದೆ. ಇದೇ ರೀತಿಯಲ್ಲಿ ಕ್ಷೀ ಎಂಬ ಧಾತುವಿನಿಂದ ತಯಾರಾದ ಕ್ಷೀಣ ಎಂಬ ನಾಮ ಪದ, ನದ್ ಎಂಬ ಧಾತುವಿನಿಂದ ತಯಾರಾದ ನದಿ ಎಂಬ ನಾಮಪದ, ಮುಹ್ ಎಂಬ ಧಾತುವಿನಿಂದ ತಯಾರಾದ ಮೂಢ ಎಂಬ ನಾಮಪದ, ಶುಧ್ ಎಂಬ ಧಾತುವಿನಿಂದ ತಯಾರಾದ ಶುದ್ಧ ಎಂಬ ನಾಮಪದ, ಮೊದಲಾದವು ಗಳಿಗೂ ಕನ್ನಡದಲ್ಲಿ ಒಳರಚನೆಯಿದೆಯೆಂದು ಹೇಳಲು ಆಧಾರ ಕಾಣಿಸುವುದಿಲ್ಲ.
ಆ.೪.೧ ಪೂರ್ವಪ್ರತ್ಯಯಗಳು
ಸಂಸ್ಕೃತದಲ್ಲಿ ಪೂರ್ವಪ್ರತ್ಯಯ (ಉಪಸರ್ಗ) ಮತ್ತು ಪರಪ್ರತ್ಯಯಗಳೆಂಬ ಎರಡು ರೀತಿಯ ಪ್ರತ್ಯಯಗಳನ್ನೊಳಗೊಂಡಿರುವ ಪದಗಳಿದ್ದು, ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲೂ ಈ ಎರಡು ರೀತಿಯ ಪ್ರತ್ಯಯಗಳನ್ನು ಕಾಣಬಹುದು. ಆದರೆ ಮೇಲೆ (೮.೩.೨ರಲ್ಲಿ) ಸೂಚಿಸಿರು ವಂತೆ, ಕನ್ನಡದವೇ ಆದ ಪದಗಳಲ್ಲಿ ಪೂರ್ವಪ್ರತ್ಯಯಗಳ ಬಳಕೆಯಿಲ್ಲವಾದ ಕಾರಣ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಪದಗಳಲ್ಲೂ ಕೆಲವು ಪೂರ್ವ ಪ್ರತ್ಯಯಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳ ಹಾಗೆ ಬಳಕೆಗೆ ಬಂದಿವೆ, ಮತ್ತು ಅಂತಹ ಪ್ರತ್ಯಯಗಳನ್ನೊಳಗೊಂಡಿರುವ ಪದಗಳು ಜೋಡು ಪದಗಳ ಹಾಗೆ ಕಾಣಿಸುತ್ತವೆ.
ಆದರೆ ಬೇರೆ ಕೆಲವು ಪೂರ್ವಪ್ರತ್ಯಯಗಳು ಪ್ರತ್ಯಯಗಳ ಹಾಗೆಯೇ ವರ್ತಿಸುತ್ತಿದ್ದು, ಅವನ್ನೊಳಗೊಂಡಿರುವ ಪದಗಳನ್ನು ಪ್ರತ್ಯಯವಿರುವ ಪದ ಗಳೆಂದು ಹೇಳಲು ಸಾಧ್ಯವಿದೆ. ಇಂತಹ ಪೂರ್ವಪ್ರತ್ಯಯಗಳಲ್ಲಿ ಅ, ನಿರ್, ವಿ, ಸಂ ಮತ್ತು ಸು ಎಂಬವುಗಳು ಮುಖ್ಯವಾದವುಗಳು.
218
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
- (೧) ಅ ಪ್ರತ್ಯಯ
- ಈ ಪ್ರತ್ಯಯವನ್ನು ಒಂದು ನಾಮಪದದೊಂದಿಗೆ ಬಳಸಿದಾಗ, ಆ ಪದದ
- ವಿರುದ್ಧಾರ್ಥ ಸಿಗುತ್ತದೆ. ಇದಕ್ಕೆ ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು
- ಅನ್ ಎಂಬ ರೂಪವಿದೆ. ಉದಾ:
- ಅ ಎಂಬ ರೂಪದಲ್ಲಿ
- ತೃಪ್ತಿ ಅತೃಪ್ತಿ
- ಸಾಧ್ಯ ಅಸಾಧ್ಯ
- ಹಿಂಸೆ ಅಹಿಂಸೆ
- ಕಾಲ ಅಶಾಲಿ
- ಜ್ಞಾನ ಅಜ್ಞಾನ
- ನ್ಯಾಯ ಅನ್ಯಾಯ
- (೨) ನಿರ್ ಪ್ರತ್ಯಯ
- ಈ ಪೂರ್ವಪ್ರತ್ಯಯ ಮೇಲಿನದರ ಹಾಗೆ ವಿರುದ್ಧಾರ್ಥವನ್ನು ಕೊಡುವ ಬದಲು
- ನಿಷೇಧಾರ್ಥವನ್ನು ಕೊಡುತ್ತದೆ. ಉದಾ:
- ದಯೆ ನಿರ್ದಯೆ
- ಭಯ ನಿರ್ಭಯ
- ಭಾಗ್ಯ ನಿರ್ಭಾಗ್ಯ
- ಜೀವಿ ನಿರ್ಜೀವಿ
- ಆಶ್ರಿತ ನಿರಾಶ್ರಿತ
- ಉದ್ಯೋಗಿ ನಿರುದ್ಯೋಗಿ
- ಅಪರಾಧಿ ನಿರಪರಾಧಿ
- ಉಪಯುಕ್ತ ನಿರುಪಯುಕ್ತ
- (೩) ವಿ ಪ್ರತ್ಯಯ
- ಇದು ಒಂದು ಪದಕ್ಕೆ ‘ವಿಶೇಷವಾದ’ ಇಲ್ಲವೇ ‘ಹೆಚ್ಚಿನ’ ಎಂಬ ಅರ್ಥವನ್ನು
- ಕೊಡಬಲ್ಲುದು. ಉದಾ:
- ಖ್ಯಾತ ವಿಖ್ಯಾತ
- ಜಿಯ ವಿಜಯ
- ಮುಕ್ತಿ ವಿಮುಕ್ತಿ
- ನಾಶ ವಿನಾಶ
- ಜ್ಞಾನ ವಿಜ್ಞಾನ
- ವಿಧ ವಿವಿಧ
- ಲೀನ ವಿಲೀನ
- ನೂತನ ವಿನೂತನ
- ಒಂದು ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು ಇದರ ಇಕಾರ ಯಕಾರ
- ವಾಗುತ್ತದೆ. ಉದಾ:
219
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ಅಖ್ಯಾನ | ವ್ಯಾಖ್ಯಾನ | ಅತಿರಿಕ್ತ | ವ್ಯತಿರಿಕ್ತ |
|---|---|---|---|
| ಉತ್ಪತ್ತಿ | ವ್ಯುತ್ಪತ್ತಿ | ಆಸಂಗ | ವ್ಯಾಸಂಗ |
- (೪) ಸಂ ಪ್ರತ್ಯಯ
- ಈ ಪ್ರತ್ಯಯಕ್ಕೆ ‘ಒಳ್ಳೆಯ’ ಇಲ್ಲವೇ ‘ಶುಭಕರವಾದ’ ಎಂಬ ಅರ್ಥವಿದೆ. ಉದಾ:
- ರಕ್ಷಣೆ ಸಂರಕ್ಷಣೆ ಪೂರ್ಣ ಸಂಪೂರ್ಣ
- ಘಟನೆ ಸಂಘಟನೆ ಗೀತ ಸಂಗೀತ
- ಬಂಧ ಸಂಬಂಧ ತಾಪ ಸಂತಾಪ
- (೫) ಸು ಪ್ರತ್ಯಯ
- ಈ ಪ್ರತ್ಯಯಕ್ಕೂ ಮೇಲಿನದರ ಹಾಗೆ ‘ಒಳ್ಳೆಯ’ ಇಲ್ಲವೇ ‘ಶುಭಕರವಾದ’
- ಎಂಬ ಅರ್ಥವಿದೆ. ಉದಾ:
- ಗಂಧ ಸುರಂಧ ರಕ್ಷಿತ ಸುರಕ್ಷಿತ
- ಪ್ರಭಾತ ಸುಪ್ರಭಾತ ವರ್ಣ ಸುವರ್ಣ
- ಸ್ವಾಗತ ಸುಸ್ವಾಗತ ಜನ ಸುಜನ
- ಶಿಕ್ಷಿತ ಸುಶಿಕ್ಷಿತ ಹೃದಯ ಸುಹೃದಯ
- ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು ಈ ಪ್ರತ್ಯಯದ ಉಕಾರ ವಕಾರ
- ವಾಗುತ್ತದೆ. ಉದಾ:
- ಅಲ್ಪ ಸ್ವಲ್ಪ
- ಆಗತ ಸ್ವಾಗತ
- ಮೇಲೆ ಕೊಟ್ಟಿರುವ ಅರ್ಥಗಳು ಈ ಪೂರ್ವಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ
- ಪ್ರಾಮುಖ್ಯವಾದ ಅರ್ಥಗಳು. ಕೆಲವು ಪದಗಳಲ್ಲಿ ಇವು ಯಾವ ವಿಶಿಷ್ಟವಾದ
- ಅರ್ಥವನ್ನೂ ಕೊಡುವುದಿಲ್ಲ. ಇನ್ನು ಕೆಲವು ಪದಗಳಲ್ಲಿ ಅನಿಯಮಿತವಾಗಿ ಬೇರೆ
- ಕೆಲವು ಅರ್ಥಗಳನ್ನೂ ಕೊಡಬಲ್ಲುವು ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ
- ಕಾಣಬಹುದು.
- ಆಯಾತ ನಿರ್ಯಾತ ಕ್ರಯ ವಿಕ್ರಯ
- ಜ್ಞಾನ ವಿಜ್ಞಾನ ರಸ ವಿರಸ
220
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
| ಯೋಗ | ವಿಯೋಗ | ವಾದ | ಸಂವಾದ |
|---|---|---|---|
| ಸ್ಥಾನ | ಸಂಸ್ಥಾನ | ಭಿಕ್ಷೆ | ಸುಭಿಕ್ಷೆ |
ಆ.೪.೨ ಪರಪ್ರತ್ಯಯಗಳು
ಸಂಸ್ಕೃತದಿಂದ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಕಾಣಿಸುವ ಪರ ಪ್ರತ್ಯಯಗಳಲ್ಲಿ ತೆ, ಇ, ಯ ಮತ್ತು ಇಕ ಎಂಬವುಗಳು ಪ್ರಾಮುಖ್ಯವಾದವು ಗಳು. ಇದಲ್ಲದೆ ಲಿಂಗಭೇದವನ್ನು ಸೂಚಿಸುವ ಕೆಲವು ಪ್ರತ್ಯಯಗಳೂ ಸಂಸ್ಕೃತ ದಿಂದ ಎರವಲಾಗಿ ಬಂದ ಪದಗಳಲ್ಲಿ ಕಾಣಿಸುತ್ತವೆ. ಈ ಪ್ರತ್ಯಯಗಳಲ್ಲಿ ಕೆಲವನ್ನು (ಪ್ರಾಮುಖ್ಯವಾಗಿ ಯ ಮತ್ತು ಇಕ ಎಂಬ ಪ್ರತ್ಯಯಗಳನ್ನು) ಬಳಸಿದಾಗ ಪದಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಗಳನ್ನು ಕೆಳಗೆ (೮.೪.೩ರಲ್ಲಿ) ವಿವರಿಸಲಾಗಿದೆ.
(೧) ತೆ ಪ್ರತ್ಯಯ
- (೧) ತ ಪ್ರತ್ಯಯ
- ಈ ಪ್ರತ್ಯಯದ ಮೂಲಕ ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾ
- ದವುಗಳ ಗುಣಧರ್ಮವನ್ನು ಹೆಸರಿಸುವಂತಹ ಬೇರೊಂದು ನಾಮಪದವನ್ನು
- ತಯಾರಿಸಬಹುದು. ಉದಾ:
- ಅಧ್ಯಕ್ಷ ಅಧ್ಯಕ್ಷತೆ
- ಕೃತಜ್ಞ ಕೃತಜ್ಞತೆ
- ಅರ್ಹ ಅರ್ಹತೆ
- ಅಸ್ಪೃಶ್ಯ ಅಸ್ಪೃಶ್ಯತೆ
- ಯೋಗ್ಯ ಯೋಗ್ಯತೆ
- ತೀಕ್ಷ್ಣ ತೀಕ್ಷ್ಣತೆ
- (೨) ಇ ಪ್ರತ್ಯಯ
- ಈ ಪ್ರತ್ಯಯಕ್ಕೆ ಎರಡು ರೀತಿಯ ಬಳಕೆಗಳಿವೆಯೆಂದು (ಇಲ್ಲವೇ ಇ ಎಂಬ
- ರೂಪದಲ್ಲಿರುವ ಎರಡು ಬೇರೆ ಬೇರೆ ಪ್ರತ್ಯಯಗಳಿವೆಯೆಂದು) ಹೇಳಲು
- ಸಾಧ್ಯವಿದೆ. ಈ ಎರಡು ಬಳಕೆಗಳಲ್ಲೂ ಇದು ಅಕಾರದಲ್ಲಿ ಕೊನೆಗೊಳ್ಳುವ
- ನಾಮಪದದೊಂದಿಗೆ ಅವುಗಳ ಕೊನೆಯ ಅಕಾರಕ್ಕೆ ಬದಲಾಗಿ ಬರುತ್ತದೆ.
- ವಸ್ತು, ವಿಷಯ ಮೊದಲಾದವುಗಳನ್ನು ಹೆಸರಿಸುವ ನಾಮಪದಗಳಿಗೆ ಈ
- ಪ್ರತ್ಯಯವನ್ನು ಸೇರಿಸಿ ಅವಕ್ಕೆ ಸಂಬಂಧಿಸಿರುವ ವ್ಯಕ್ತಿಗಳನ್ನು ಹೆಸರಿಸಲು ಸಾಧ್ಯ
- ವಿದೆ. ಇದು ಈ ಪ್ರತ್ಯಯಕ್ಕಿರುವ ಮೊದಲನೆಯ ಬಳಕೆ. ಉದಾ:
- ಅಧಿಕಾರ ಅಧಿಕಾರಿ ಜೀವ ಜೀವಿ
221
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಆರೋಪ ಆರೋಪಿ ಧನ ಧ್ವನಿ ಅಪರಾಧ ಅಪರಾಧಿ ಪ್ರಾಣ ಪ್ರಾಣಿ ವಿರಹ ವಿರಹಿ ರೋಗ ರೋಗಿ ವ್ಯಾಪಾರ ವ್ಯಾಪಾರಿ ದಾನ ದಾನಿ
ವ್ಯಕ್ತಿಗಳನ್ನು ಗುರುತಿಸುವ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ಅಂತಹ ವ್ಯಕ್ತಿಗಳ ಗುಣಧರ್ಮವನ್ನು ಹೆಸರಿಸಲು ಸಾಧ್ಯವಿದೆ. ಇದು ಈ ಪ್ರತ್ಯಯಕ್ಕಿರುವ ಎರಡನೆಯ ಬಳಕೆ. ಉದಾ:
| ಅತೃಪ್ತ | ಅತೃಪ್ತಿ | ಭಕ್ತ | ಭಕ್ತಿ |
| ಆಸಕ್ತ | ಆಸಕ್ತಿ | ಅಶಕ್ತ | ಅಶಕ್ತಿ |
| ನಿವೃತ್ತ | ನಿವೃತ್ತಿ | ತೃಪ್ತ | ತೃಪ್ತಿ |
ಈ ಎರಡನೆಯ ಬಳಕೆಯಲ್ಲಿ ಬರುವ ನಾಮಪದಗಳಲ್ಲೆಲ್ಲ ಕೊನೆಯ ವ್ಯಂಜನವಾಗಿ ತಕಾರ ಬಂದಿರುವುದನ್ನು ಗಮನಿಸಬಹುದು. ಹಾಗಾಗಿ ಈ ನಾಮಪದಗಳಲ್ಲಿ ವ್ಯಕ್ತಿಗಳನ್ನು ಗುರುತಿಸುವವುಗಳು ತ ಎಂಬ ಪ್ರತ್ಯಯ ದೊಂದಿಗೂ ಮತ್ತು ವ್ಯಕ್ತಿಗಳ ಗುಣಧರ್ಮವನ್ನು ಗುರುತಿಸುವವುಗಳು ತಿ ಎಂಬ ಪ್ರತ್ಯಯದೊಂದಿಗೂ ಬರುವುವೆಂದೂ ಕೂಡ ಹೇಳಲು ಸಾಧ್ಯವಿದೆ. ಇದೇ ರೀತಿಯಲ್ಲಿ ಇದಕ್ಕೆ ಹಿಂದೆ ಕೊಟ್ಟಿರುವ ನಾಮಪದಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವವುಗಳು ಅ ಎಂಬ ಪ್ರತ್ಯಯದೊಂದಿಗೂ ಮತ್ತು ಅಂತಹ ವ್ಯಕ್ತಿ, ವಸ್ತು ಮೊದಲಾದುವಕ್ಕೆ ಸಂಬಂಧಿಸಿದವರನ್ನು ಗುರುತಿಸು ವವುಗಳು ಇ ಎಂಬ ಪ್ರತ್ಯಯದೊಂದಿಗೂ ಬರುವುವೆಂದೂ ಕೂಡ ಹೇಳಲು ಸಾಧ್ಯವಿದೆ.
(೩) ಯ ಪ್ರತ್ಯಯ
ಈ ಪ್ರತ್ಯಯಕ್ಕೂ ಎರಡು ಪ್ರಾಮುಖ್ಯವಾದ ಬಳಕೆಗಳಿವೆ. ಹೆಸರಿಸುವ ನಾಮ ಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ, ಅವುಗಳಿಗೆ ಸಂಬಂಧಿಸಿರುವ ವಸ್ತು, ವಿಷಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವ ನಾಮಪದವನ್ನು ತಯಾರಿಸು ವುದು ಈ ಪ್ರತ್ಯಯದ ಮೊದಲನೆಯ ಬಳಕೆ. ಉದಾ:
| ಕವಿ | ಕಾವ್ಯ | ವೇದ | ವೈದ್ಯ |
| ರಾಜ | ರಾಜ್ಯ | ದೇಶ | ದೇಶ್ಯ |
| ಗ್ರಾಮ | ಗ್ರಾಮ್ಯ | ಚರಿತ್ರೆ | ಚಾರಿತ್ರ್ಯ |
222
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಗುಣಧರ್ಮವನ್ನು ಸೂಚಿಸುವ ಗುಣಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ, ಅವು ಸೂಚಿಸುವ ಗುಣಧರ್ಮವನ್ನು ಹೆಸರಿಸುವಂತಹ ನಾಮಪದಗಳನ್ನು ತಯಾರಿಸುವುದು ಈ ಪ್ರತ್ಯಯದ ಎರಡನೆಯ ಬಳಕೆ. ಉದಾ:
| ಪ್ರಧಾನ | ಪ್ರಾಧಾನ್ಯ | ಶಿಥಿಲ | ಶೈಥಿಲ್ಯ |
| ಉಚಿತ | ಔಚಿತ್ಯ | ಸ್ವತಂತ್ರ | ಸ್ವಾತಂತ್ರ್ಯ |
| ಉನ್ನತ | ಔನ್ನತ್ಯ | ಪ್ರಮುಖ | ಪ್ರಾಮುಖ್ಯ |
| ಕ್ರೂರ | ಕ್ರೌರ್ಯ | ಸಮರ್ಥ | ಸಾಮರ್ಥ್ಯ |
ಮೇಲೆ ಕೊಟ್ಟಿರುವ ಗುಣಪದಗಳಲ್ಲಿ ಕೆಲವು (ಉದಾ: ತರುಣ, ಸಮರ್ಥ) ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಲ್ಲಿವೆಯಾದ ಕಾರಣ, ಅಂತಹ ಸಂದರ್ಭಗಳಲ್ಲಿ ಒಂದು ನಾಮಪದದಿಂದ ಇನ್ನೊಂದು ನಾಮಪದವನ್ನು ತಯಾರಿಸುವ ಮೊದಲನೆಯ ಬಳಕೆ ಬಂದಿದೆಯೆಂದೂ ಹೇಳಲು ಸಾಧ್ಯವಿದೆ. (ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತದಲ್ಲಿ ಇಂತಹ ಗುಣಪದ - ನಾಮಪದ ಭೇದವಿಲ್ಲವಾದ ಕಾರಣ ಇದು ಕನ್ನಡದಲ್ಲಿ ಕಾಣಿಸಿಕೊಳ್ಳುವ ವೈಶಿಷ್ಟ್ಯ ಮಾತ್ರ ಎಂಬುದನ್ನಿಲ್ಲಿ ಗಮನಿಸಬಹುದು).
ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನು ಸೇರಿಸುವುದರಿಂದ ನಾಮಪದಕ್ಕೆ ಯಾವ ಹೊಸ ಅರ್ಥವೂ ಸೇರಿಕೊಳ್ಳುವುದಿಲ್ಲ. ಉದಾ:
ಪದ ಪದ್ಯ ಪ್ರಾಂತ ಪ್ರಾಂತ್ಯ
(ಆ) ಇಕ ಪ್ರತ್ಯಯ
ಈ ಪ್ರತ್ಯಯ ಪ್ರಾಮುಖ್ಯವಾಗಿ ನಾಮಪದಗಳಿಂದ ಗುಣಪದಗಳನ್ನು ತಯಾರಿಸು ವುದಕ್ಕಾಗಿ ಕನ್ನಡದಲ್ಲಿ ಬಳಕೆಯಾಗುತ್ತದೆ. ಆದರೆ, ಕೆಲವು ನಾಮಪದಗಳು ಮಾತ್ರ ಈ ಪ್ರತ್ಯಯ ಸೇರಿದಾಗಲೂ ನಾಮಪದಗಳಾಗಿಯೇ ಉಳಿದುಕೊಳ್ಳುತ್ತವೆ. (ಸಂಸ್ಕೃತದಲ್ಲಿ ಈ ಪ್ರತ್ಯಯದ ಮೂಲಕ ತಯಾರಾಗುವ ಪದಗಳೆಲ್ಲವೂ ನಾಮ ಪದಗಳೇ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೆ!)
ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮ ವೊಂದನ್ನು ಅಂತಹ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಗುಣಪದಗಳು ಸೂಚಿಸುತ್ತವೆ. ಉದಾ:
| ಸಮಾಜ | ಸಾಮಾಜಿಕ | ಶಿಕ್ಷಣ | ಶೈಕ್ಷಣಿಕ |
|---|---|---|---|
| ಲೋಕ | ಲೌಕಿಕ | ಧರ್ಮ | ಧಾರ್ಮಿಕ |
223
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ನಿಸರ್ಗ | ನೈಸರ್ಗಿಕ | ವರ್ಷ | ವಾರ್ಷಿಕ |
|---|---|---|---|
| ದೇಹ | ದೈಹಿಕ | ವಿವಾಹ | |
| ವೈವಾಹಿಕ | ಯಂತ್ರ | ವ್ಯವಹಾರ | |
| ಯಾಂತ್ರಿಕ | ವ್ಯಾವಹಾರಿಕ | ||
ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನೊಳಗೊಂಡ ಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗಬಲ್ಲುವು ಮತ್ತು ಗುಣಪದಗಳಾಗಿಯೂ ಬಳಕೆಯಾಗಬಲ್ಲುವು. ಉದಾ:
| ರಸ | ರಸಿಕ | ವಿಮಾನ | ವೈಮಾನಿಕ |
| ಮಂತ್ರ | ಮಾಂತ್ರಿಕ | ವೇದ | ವೈದಿಕ |
| ಧರ್ಮ | ಧಾರ್ಮಿಕ | ಪ್ರಮಾಣ | ಪ್ರಾಮಾಣಿಕ |
| ಪೂರ್ವ | ಪೂರ್ವಿಕ | ತರ್ಕ | ತಾರ್ಕಿಕ |
ವೈದಿಕನ, ವೈದಿಕನಿಗೆ ಎಂಬಂತಹ ವಿಭಕ್ತಿ ಪ್ರತ್ಯಯವನ್ನೊಳಗೊಂಡಿರುವ ರೂಪಗಳಲ್ಲಿ ವೈದಿಕ ಎಂಬ ಪದ ನಾಮಪದವಾಗಿಯೂ ಮತ್ತು ವೈದಿಕ ವೃತ್ತಿ ಎಂಬ ಪದಗುಚ್ಛದಲ್ಲಿ ಅದು ಗುಣಪದವಾಗಿಯೂ ಬಂದಿರುವುದನ್ನು ಕಾಣ ಬಹುದು. ಇತರ ಪದಗಳ ಬಳಕೆಯೂ ಹೀಗೆಯೇ ಇದೆ.
(೫) ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳು
ಮೇಲೆ ವಿವರಿಸಿದ ಪ್ರತ್ಯಯಗಳು ಮಾತ್ರವಲ್ಲದೆ, ‘ಗಂಡಸು-ಹೆಂಗಸು’ ಎಂಬ ಅರ್ಥವ್ಯತ್ಯಾಸವನ್ನು ತೋರಿಸುವ ಕೆಲವು ಪದಯುಗ್ಮಗಳು ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿದ್ದು, ಅ ‘ಗಂಡಸು’ ಮತ್ತು ಇ ‘ಹೆಂಗಸು’ ಎಂಬ ಎರಡು ಪ್ರತ್ಯಯಗಳಲ್ಲಿ ಕೊನೆಗೊಳ್ಳುವುವು ಅವುಗಳಲ್ಲಿ ಪ್ರಾಮುಖ್ಯವಾದವುಗಳು.
| ತರುಣ | ತರುಣಿ | ಬಾಲಕ | ಬಾಲಕಿ |
| ನಟ | ನಟಿ | ಶಿಕ್ಷಕ | ಶಿಕ್ಷಕಿ |
| ಲೇಖಕ | ಲೇಖಕಿ | ಸುಂದರ | ಸುಂದರಿ |
| ಸೇವಕ | ಸೇವಕಿ | ಭಿಕ್ಷುಕ | ಭಿಕ್ಷುಕಿ |
ಈ ಅರ್ಥವ್ಯತ್ಯಾಸವನ್ನು ತೋರಿಸುವ ಬೇರೆಯೂ ಕೆಲವು ಪ್ರತ್ಯಯಗಳನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿ, ಸನ್ಯಾಸಿ- ಸನ್ಯಾಸಿನಿ, ಅಧ್ಯಕ್ಷ-ಅಧ್ಯಕ್ಷಿಣಿ, ಅಧಿಕಾರಿ-ಅಧಿಕಾರಿಣಿ, ಕತೆಗಾರ-ಕತೆ
224
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಗಾರಿ, ಬುದ್ಧಿವಂತ-ಬುದ್ಧಿವಂತೆ, ವೈದ್ಯ-ವೈದ್ಯೆ, ಮೊದಲಾದ ಪದಯುಗ್ಮ ಗಳಲ್ಲಿ ಕಾಣಬಹುದು.
- ೪.೩ ಪದಗಳಲ್ಲಿ ಬದಲಾವಣೆ
- ನಾಮಪದ ಇಲ್ಲವೇ ಗುಣಪದಗಳಿಗೆ ಯ ಇಲ್ಲವೇ ಇಕ ಎಂಬ ಪ್ರತ್ಯಯವನ್ನು
- ಸೇರಿಸಿದಾಗ ಅವುಗಳ ಮೊದಲನೆಯ ಅಕ್ಷರದಲ್ಲಿ ಬರುವ ಸ್ವರಗಳು
- ಅನಿಯಮಿತ ವಾಗಿ ಕೆಳಗೆ ಕೊಟ್ಟಿರುವ ಮೂರು ಮುಖ್ಯವಾದ ಬದಲಾವಣೆಗಳಿಗೆ
- ಒಳಗಾಗು ತ್ತವೆ.
- (೧) ಅಕಾರ ಆಕಾರವಾಗುವುದು
- ಮೊದಲನೆಯ ಅಕ್ಷರದಲ್ಲಿರುವ ಅಕಾರ ಕೆಲವು ಪದಗಳಲ್ಲಿ ಆಕಾರವಾಗಿ
- ಬದಲಾಗುತ್ತದೆ. ಉದಾ:
- ಯ ಪ್ರತ್ಯಯ
- ಚಪಲಿ ಚಾಪಲ್ಯ
- ಸಮೇಪ ಸಾಮೀಪ್ಯ
- ಸಮ ಸಾಮ್ಯ
- ಸದೃಶ ಸಾದೃಶ್ಯ
- ಮಲಿನ ಮಾಲಿನ್ಯ
- ಇಕ ಪ್ರತ್ಯಯ
- ಮಂತ್ರ ಮಾಂತ್ರಿಕ
- ಮರ್ಮ ಮಾರ್ಮಿಕ
- ಪ್ರಕೃತಿ ಪ್ರಾಕೃತಿಕ
- ಮನಸ್ಸು ಮಾನಸಿಕ
- ಯಂತ್ರ ಯಾಂತ್ರಿಕ
- ಆದರೆ ಬೇರೆ ಕೆಲವು ಪದಗಳಲ್ಲಿ ಈ ಅಕಾರ ಬದಲಾಗದೆ ಹಾಗೆಯೇ ಉಳಿದಿರು
- ವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
- ಪದ ಪದ್ಯ
- ವನ ವನ್ಯ
- ರಸ ರಸಿಕ
- ಕ್ಷಣ ಕ್ಷಣಿಕ
- (೨) ಇ, ಈ ಮತ್ತು ಏ ಎಂಬ ಸ್ವರಗಳು ಐ ಎಂದಾಗುವುದು
- ನಾಮಪದ ಇಲ್ಲವೇ ಗುಣಪದಗಳ ಮೊದಲನೆಯ ಅಕ್ಷರದಲ್ಲಿ ಬರುವ ಇ, ಈ
- ಮತ್ತು ಏ ಎಂಬ ಸ್ವರಗಳು ಆ ಪದಗಳೊಂದಿಗೆ ಯ ಇಲ್ಲವೇ ಇಕ ಎಂಬ
- ಪ್ರತ್ಯಯ ಸೇರಿದಾಗ, ಅನಿಯಮಿತವಾಗಿ ಐ ಎಂಬ ಸ್ವರವಾಗಿ ಬದಲಾಗುತ್ತವೆ.
- ಉದಾ:
- ಯ ಪ್ರತ್ಯಯ
- ಶಿವ ಶೈವ
- ವಿಚಿತ್ರ ವೈಚಿತ್ರ
- ಇಕ ಪ್ರತ್ಯಯ
- ನಿಸರ್ಗ ನೈಸರ್ಗಿಕ
- ಲಿಂಗ ಲೈಂಗಿಕ
225
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ದೀನ | ದೈನ್ಯ | ನೀತಿ | ನೈತಿಕ |
| ಶೀತ | ಶೈತ್ಯ | ವೀಣೆ | ವೈಣಿಕ |
| ಚೇತನ | ಚೈತನ್ಯ | ದೇಹ | ದೈಹಿಕ |
| ಏಕ | ಐಕ್ಯ | ದೇವ | ದೈವಿಕ |
ಇಂತಹ ಬದಲಾವಣೆ ಎಲ್ಲಾ ಪದಗಳಲ್ಲೂ ಕಾಣಿಸುವುದಿಲ್ಲವೆಂಬುದಕ್ಕೆ ದೇಶ- ದೇಶ್ಯ, ದಿವ-ದಿವ್ಯ ಎಂಬಂತಹ ಬಳಕೆಗಳನ್ನು ಉದಾಹರಣೆಯಾಗಿ ಕೊಡ ಬಹುದು.
(೩) ಉ, ಊ ಮತ್ತು ಔ ಎಂಬ ಸ್ವರಗಳು ಔ ಎಂದಾಗುವುದು
ನಾಮಪದ ಇಲ್ಲವೇ ಗುಣಪದಗಳ ಮೊದಲನೆಯ ಅಕ್ಷರದಲ್ಲಿರುವ ಉ, ಊ ಮತ್ತು ಓ ಎಂಬ ಸ್ವರಗಳು ಆ ಪದಗಳೊಂದಿಗೆ ಯ ಇಲ್ಲವೇ ಇಕ ಎಂಬ ಪ್ರತ್ಯಯ ಸೇರಿದಾಗ ಅನಿಯಮಿತವಾಗಿ ಔ ಎಂಬ ಸ್ವರವಾಗಿ ಬದಲಾಗುತ್ತವೆ. ಉದಾ:
ಯ ಪ್ರತ್ಯಯ ಇಕ ಪ್ರತ್ಯಯ ಉದಾರ ಔದಾರ್ಯ ಪುರಾಣ ಪೌರಾಣಿಕ ಸುಖ ಸೌಖ್ಯ ಮುಖ ಮೌಖಿಕ ಮೂಲ ಮೌಲ್ಯ ಪೂರ್ವಾಹ್ನ ಪೂರ್ವಾಹ್ನಿಕ ಸೋಮ ಸೌಮ್ಯ ಲೋಕ ಲೌಕಿಕ ದೂತ ದೌತ್ಯ ದೇವ ದೈವಿಕ
ಈ ಬದಲಾವಣೆಗಳೂ ಅನಿಯಮಿತ ಎಂಬುದಕ್ಕೆ ಪೂಜೆ-ಪೂಜ್ಯ ಮತ್ತು ಪೂರ್ವ-ಪೂರ್ವಿಕ ಎಂಬವುಗಳನ್ನು ಉದಾಹರಣೆಗಳನ್ನಾಗಿ ಕೊಡಬಹುದು.
೮.೫ ಕ್ರಿಯಾಪದಗಳು
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಇದಕ್ಕೆ ಬದಲಾಗಿ, ಅವುಗಳಿಂದ ತಯಾರಾದ ನಾಮಪದಗಳಿಗೆ ಕನ್ನಡದ ಇಸು ಎಂಬ ಪ್ರತ್ಯಯವನ್ನು ನೇರವಾಗಿ ಸೇರಿಸಿ ಇಲ್ಲವೇ ಅವುಗಳ ಕೊನೆಯಲ್ಲಿ ಕಾಣಿಸುವ ಪ್ರತ್ಯಯದ ಬದಲು ಈ ಪ್ರತ್ಯಯ ವನ್ನು ಬಳಸಿ, ಕ್ರಿಯಾಪದಗಳನ್ನು ತಯಾರಿಸಬೇಕಾಗುತ್ತದೆ.
ಉದಾಹರಣೆಗಾಗಿ, ಅನೆ ಇಲ್ಲವೇ ಅಣೆ ಎಂಬ ಪ್ರತ್ಯಯದಲ್ಲಿ ಕೊನೆ ಗೊಳ್ಳುವ ಹಲವು ನಾಮಪದಗಳು ಆ ಪ್ರತ್ಯಯದ ಬದಲು ಇಸು ಎಂಬ ಪ್ರತ್ಯಯದಲ್ಲಿ ಕೊನೆಗೊಂಡಾಗ ನಾಮಪದಗಳಾಗಿ ಕಾಣಿಸಿಕೊಳ್ಳುತ್ತವೆ. ಉದಾ:
226
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
| ಆಲೋಚಿಸು | ಆಲೋಚನೆ | ಆಕರ್ಷಿಸು | ಆಕರ್ಷಣೆ |
| ಉತ್ಪಾದಿಸು | ಉತ್ಪಾದನೆ | ಆಚರಿಸು | ಆಚರಣೆ |
| ಕಲ್ಪಿಸು | ಕಲ್ಪನೆ | ನಿರಾಕರಿಸು | ನಿರಾಕರಣೆ |
| ಚಲಿಸು | ಚಲನೆ | ಪ್ರಕಟಿಸು | ಪ್ರಕಟಣೆ |
| ನಟಿಸು | ನಟನೆ | ಮನ್ನಿಸು | ಮನ್ನಣೆ |
| ಪ್ರಾರ್ಥಿಸು | ಪ್ರಾರ್ಥನೆ | ವಿಚಾರಿಸು | ವಿಚಾರಣೆ |
| ಭಜಿಸು | ಭಜನೆ | ಸ್ವೀಕರಿಸು | ಸ್ವೀಕರಣೆ |
| ಸಹಿಸು | ಸಹನೆ | ಸ್ಮರಿಸು | ಸ್ಮರಣೆ |
| ವರ್ಣಿಸು | ವರ್ಣನೆ | ರಕ್ಷಿಸು | ರಕ್ಷಣೆ |
ಈ ಎರಡು ರೀತಿಯ ಪ್ರತ್ಯಯಗಳಲ್ಲಿ ನಕಾರ ಎಲ್ಲಿ ಬರುತ್ತದೆ ಮತ್ತು ಣಕಾರ ಎಲ್ಲಿ ಬರುತ್ತದೆ ಎಂಬುದಕ್ಕೆ ಸಂಸ್ಕೃತದಲ್ಲಿ ನಿಶ್ಚಿತವಾದ ನಿಯಮವಿದೆ. ಆದರೆ ಈ ನಿಯಮ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಅಷ್ಟೊಂದು ನಿಶ್ಚಿತವಾಗಿ ಉಳಿದಿಲ್ಲ. ಸಾಮಾನ್ಯವಾಗಿ ಪ್ರತ್ಯಯದ ಎಡಗಡೆಗೆ ರಕಾರ ಇಲ್ಲವೇ ಷಕಾರ ಬಂದಿದೆಯಾದರೆ ಪ್ರತ್ಯಯದಲ್ಲಿ ನಕಾರದ ಬದಲು ಣಕಾರ ಬರುತ್ತದೆ ಎಂಬುದಾಗಿ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಒಂದು ನಿಯಮ ಇಲ್ಲವೇ ಒಲವನ್ನು ಕಾಣಲು ಸಾಧ್ಯವಿದೆ. ಆದರೆ ಮನ್ನಣೆ ಮತ್ತು ಪ್ರಕಟಣೆ ಎಂಬವುಗಳಲ್ಲಿ ಕಾಣಿಸುವ ಣಕಾರ ಈ ನಿಯಮಕ್ಕೆ ಅಪವಾದವಾಗಬಲ್ಲುದು.
ಎರವಲಾಗಿ ಬಂದ ನಾಮಪದಗಳಿಗೆ ನೇರವಾಗಿ ಇಸು ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ಕ್ರಿಯಾಪದಗಳನ್ನು ತಯಾರಿಸುವಲ್ಲಿ ಎರಡು ವಿಧಾನ ಗಳಿವೆ. ಆ ಪದಗಳ ಕೊನೆಯ ಅಕ್ಷರದ ಹಿಂದಿನ ಅಕ್ಷರದಲ್ಲಿ (ಎಂದರೆ ಅವುಗಳ ಉಪಾಂತಾಕ್ಷರದಲ್ಲಿ) ಉದ್ದಸ್ವರವಿದ್ದಲ್ಲಿ ಅದನ್ನು ಗಿಡ್ಡಸ್ವರವನ್ನಾಗಿ ಮಾಡಿ ಅನಂತರ ಇಸು ಪ್ರತ್ಯಯವನ್ನು ಸೇರಿಸುವುದು ಒಂದು ವಿಧಾನ; ಮತ್ತು ಅಂತಹ ಯಾವ ಬದಲಾವಣೆಯನ್ನೂ ಮಾಡದೆ ನೇರವಾಗಿ ಇಸು ಪ್ರತ್ಯಯವನ್ನು ಸೇರಿಸು ವುದು ಇನ್ನೊಂದು ವಿಧಾನ. ಉದಾ:
227
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
| ಮೊದಲನೆಯ ವಿಧಾನ | ಎರಡನೆಯ ವಿಧಾನ | ||
|---|---|---|---|
| ಉಪಚಾರ | ಉಪಚರಿಸು | ಉಪಯೋಗ | ಉಪಯೋಗಿಸು |
| ವ್ಯವಹಾರ | ವ್ಯವಹರಿಸು | ಅನುವಾದ | ಅನುವಾದಿಸು |
| ಪರಿಣಾಮ | ಪರಿಣಮಿಸು | ಅನುಮಾನ | ಅನುಮಾನಿಸು |
| ಸಂಚಾರ | ಸಂಚರಿಸು | ಸಂತೋಷ | ಸಂತೋಷಿಸು |
| ಉಚ್ಚಾರ | ಉಚ್ಚರಿಸು | ಸನ್ಮಾನ | ಸನ್ಮಾನಿಸು |
| ನಿರ್ಧಾರ | ನಿರ್ಧರಿಸು | ವಿಭಾಗ | ವಿಭಾಗಿಸು |
| ವಿಸ್ತಾರ | ವಿಸ್ತರಿಸು | ನಿರ್ದೇಶ | ನಿರ್ದೇಶಿಸು |
| ನಾಶ | ನಶಿಸು | ವಾಸ | ವಾಸಿಸು |
| ಲಾಭ | ಲಭಿಸು | ವಾದ | ವಾದಿಸು |
ಸಂಸ್ಕೃತದಲ್ಲಿ ಕೃ ‘ಮಾಡು’ ಎಂಬ ಕ್ರಿಯಾಪದದಿಂದ ತಯಾರಾದ ಹಲವು ಪದಗಳು ಕನ್ನಡದ ನಾಮಪದಗಳಲ್ಲಿ ಕಾರ ಎಂಬುದರಲ್ಲೂ ಮತ್ತು ಕ್ರಿಯಾಪದ ಗಳಲ್ಲಿ ಕರ ಎಂಬುದರಲ್ಲೂ ಕೊನೆಗೊಳ್ಳುತ್ತವೆ. ಉದಾ:
| ಅಲಂಕಾರ | ಅಲಂಕರಿಸು | ಉಪಕಾರ | ಉಪಕರಿಸು |
| ನಮಸ್ಕಾರ | ನಮಸ್ಕರಿಸು | ಬಲಾತ್ಕಾರ | ಬಲಾತ್ಕರಿಸು |
| ಸತ್ಕಾರ | ಸತ್ಕರಿಸು | ಸ್ವೀಕಾರ | ಸ್ವೀಕರಿಸು |
ಆದರೆ, ಅನೆ ಇಲ್ಲವೇ ಅಣೆ ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ನಾಮ ಪದಗಳಲ್ಲಿ ಇಂತಹ ಪದಗಳೂ ಕರ ಎಂಬ ರೂಪದಲ್ಲೇ ಬರುತ್ತವೆ. ಉದಾ:
ಅನುಕರಣೆ ಅನುಕರಿಸು ನಿರಾಕರಣೆ ನಿರಾಕರಿಸು ನಿಷ್ಕ್ರಮಣ ನಿಷ್ಕ್ರಮಿಸು
ಇಸು ಎಂಬ ಪ್ರತ್ಯಯ ಸೇರಿದಾಗಲೆಲ್ಲ ನಾಮಪದಗಳ ಕೊನೆಯ ಸ್ವರ ಬಿದ್ದುಹೋಗುವುದೆಂಬುದನ್ನು ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಮತ್ತು ಕೆಳಗೆ ಕೊಟ್ಟಿರುವ ಬೇರೆ ಕೆಲವು ಉದಾಹರಣೆಗಳಲ್ಲಿ ಕಾಣಬಹುದು. ಈ ಸ್ವರ ಅಕಾರ, ಇಕಾರ ಇಲ್ಲವೇ ಎಕಾರವಾಗಿರಲು ಸಾಧ್ಯ.
| ಕೋಪ | ಕೋಪಿಸು | ದ್ವೇಷ | ದ್ವೇಷಿಸು |
| ಜಪ | ಜಪಿಸು | ಸ್ಪರ್ಷ | ಸ್ಪರ್ಷಿಸು |
228
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
| ಸೃಷ್ಟಿ | ಸೃಷ್ಟಿಸು | ಪ್ರೀತಿ | ಪ್ರೀತಿಸು |
| ಸ್ತುತಿ | ಸ್ತುತಿಸು | ರುಚಿ | ರುಚಿಸು |
| ಪೂಜೆ | ಪೂಜಿಸು | ಶಿಕ್ಷೆ | ಶಿಕ್ಷಿಸು |
| ಚರ್ಚೆ | ಚರ್ಚಿಸು | ಕ್ಷಮಮೆ | ಕ್ಷಮಿಸು |
೮.೬ ಜೋಡುಪದಗಳು
ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಜೋಡುಪದಗಳೂ ಎರವಲಾಗಿ ಬಂದಿವೆ. ಮೇಲೆ (೮.೨)ರಲ್ಲಿ ಸೂಚಿಸಿರುವಂತೆ, ಈ ಪದಗಳ ಒಳರಚನೆಯನ್ನು ಕನ್ನಡ ದಲ್ಲಿ ಇವುಗಳ ಅಂಗಗಳಾಗಿ ಬರುವ ಪದಗಳಿಗೆ ಎಂತಹ ಬಳಕೆಗಳಿವೆ ಎಂಬುದರ ಆಧಾರದ ಮೇಲೆ ಹೇಳಬೇಕಲ್ಲದೆ, ಸಂಸ್ಕೃತ ವ್ಯಾಕರಣಗಳಲ್ಲಿ ಇವಕ್ಕೆ ಎಂತಹ ಒಳರಚನೆಯನ್ನು ಕಲ್ಪಿಸಿಕೊಡಲಾಗಿದೆ ಎಂಬುದರ ಆಧಾರದ ಮೇಲೆ ಹೇಳುವುದು ಸರಿಯಲ್ಲ.
ಈ ಕಾರಣಕ್ಕಾಗಿ ಕನ್ನಡದಲ್ಲಿ ಕಾಣಿಸುವ ಕೆಲವು ಎರವಲಾಗಿ ಬಂದ ಪದ ಗಳು ಸಂಸ್ಕೃತದಲ್ಲಿ ಜೋಡುಪದಗಳಾಗಿವೆಯಾದರೂ (ಕನ್ನಡದಲ್ಲಿ ಅವುಗಳ ಅಂಗಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳಾಗಿ ಬಳಕೆಯಲ್ಲಿಲ್ಲವಾದರೆ) ಅವನ್ನು ಜೋಡುಪದಗಳೆಂದು ಕರೆಯದೆ ಒಳರಚನೆಯಿಲ್ಲದ ಪದಗಳೆಂದೇ ಕರೆಯಬೇಕಾಗುತ್ತದೆ.
ಒಳರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರುವಂತಹ ಎರವಲಾಗಿ ಬಂದ ಪದಗಳು ಕನ್ನಡದಲ್ಲಿ ಪ್ರಾಮುಖ್ಯವಾಗಿ ಎರಡು ವರ್ಗಗಳಲ್ಲಿ ಕಾಣಿಸುತ್ತವೆ. ಮೊದಲನೆಯ ಅಂಗ ನಾಮಪದವಾಗಿರುವವುಗಳು ಮತ್ತು ಮೊದಲನೆಯ ಅಂಗ ಗುಣಪದವಾಗಿರುವವುಗಳು ಎಂಬುದಾಗಿ ಮೇಲೆ (೨.೬.೫)ರಲ್ಲಿ ಕನ್ನಡದ ಜೋಡುಪದಗಳನ್ನು ಹೆಸರಿಸಿದ ಹಾಗೆಯೇ ಇವನ್ನೂ ಹೆಸರಿಸಲು ಸಾಧ್ಯವಿದೆ.
ಇವುಗಳಲ್ಲಿ ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು ಅವುಗಳ ಎರಡು ಅಂಗಗಳನ್ನು ಸಂಬಂಧಕ ಪ್ರತ್ಯಯದ ಮೂಲಕ ಜೋಡಿಸಿದವು ಗಳಾಗಿರುತ್ತವೆ, ಮತ್ತು ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದ ಗಳು ಅಂತಹ ಗುಣಪದವನ್ನು ನಾಮಪದದ ಎಡಕ್ಕೆ ನಿಲ್ಲಿಸಿ ತಯಾರಿಸಿದವುಗಳಾ ಗಿರುತ್ತವೆ. ಉದಾ:
(೧) ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು
ಮಾನಹಾನಿ ಮಾನದ ಹಾನಿ ಮೂರ್ತಿಪೂಜೆ ಮೂರ್ತಿಯ ಪೂಜೆ ಲಗ್ನಪತ್ರಿಕೆ ಲಗ್ನದ ಪತ್ರಿಕೆ ವಿದ್ಯಾಭ್ಯಾಸ ವಿದ್ಯೆಯ ಅಭ್ಯಾಸ
229
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
| ಕನ್ನಡ ಪದಗಳ ಒಳರಚನೆ | |
|---|---|
| ಯುಗಾದಿ | ಯುಗದ ಆದಿ |
| ಸೂರ್ಯಗ್ರಹಣ | ಸೂರ್ಯನ ಗ್ರಹಣ |
| ದೇಹಾವಸಾನ | ದೇಹದ ಅವಸಾನ |
| ಗ್ರಾಮದೇವತೆ | ಗ್ರಾಮದ ದೇವತೆ |
| ಪಾದಪೂಜೆ | ಪಾದದ ಪೂಜೆ |
| ಗ್ರಂಥಕರ್ತೃ | ಗ್ರಂಥದ ಕರ್ತೃ |
| ಚಂದ್ರೋದಯ | ಚಂದ್ರನ ಉದಯ |
| ಜಗದ್ಗುರು | ಜಗತ್ತಿನ ಗುರು |
(೨) ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದಗಳು
| ಕೃಷ್ಣಸರ್ಪ | ಗಾಢನಿದ್ರೆ |
| ಪರಮಾತ್ಮ | ದೀರ್ಘಾಯುಷ್ಯ |
| ಪರಲೋಕ | ದೃಢಮನಸ್ಸು |
| ವಕ್ರಬುದ್ಧಿ | ಪೂರ್ಣವಿರಾಮ |
| ಮೂಲವ್ಯಾಧಿ | ಮೂಲನಿವಾಸಿ |
| ಮಹಾನಗರ | ಮಂದಬುದ್ಧಿ |
| ಶುಭಕಾರ್ಯ | ಸದ್ಗುಣ |
ಈ ಜೋಡುಪದಗಳಲ್ಲಿ ಕೆಲವಕ್ಕೆ ಆದ ಎಂಬ ಕ್ರಿಯಾರೂಪವನ್ನು ಬಳಸಿ ವಿಗ್ರಹ ವಾಕ್ಯವನ್ನು ಹೇಳಲು ಸಾಧ್ಯವಿದೆ (ಉದಾ: ದೃಢವಾದ ಮನಸ್ಸು, ಗಾಢವಾದ ನಿದ್ರೆ). ಆದರೆ ಇಂತಹ ಒಳರಚನೆಯಲ್ಲೂ ಮೊದಲನೆಯ ಅಂಗವಾಗಿ ಒಂದು ಗುಣಪದವೇ ಕಾಣಿಸಿಕೊಳ್ಳುತ್ತದೆ. ಅದು ವಿಗ್ರಹವಾಕ್ಯದಲ್ಲಿ ನೇರವಾಗಿ ನಾಮಪದ ದೆದುರು ಬರುವ ಬದಲು ಆಖ್ಯಾತದ ಸ್ಥಾನದಲ್ಲಿ ಬಂದಿದೆ, ಅಷ್ಟೆ.
ಎರಡಕ್ಕಿಂತ ಜಾಸ್ತಿ ಪದಗಳಿಂದ ತಯಾರಾಗಿರುವ ಜೋಡುಪದಗಳ ಬಳಕೆ ಕನ್ನಡದಲ್ಲಿ ಬಹಳ ಅಪರೂಪ. ಆದರೆ ಸಂಸ್ಕೃತದಲ್ಲಿ ಇಂತಹ ಜೋಡುಪದ ಗಳು ಹೇರಳವಾಗಿದ್ದು, ಅವುಗಳಲ್ಲಿ ಕೆಲವು ಕನ್ನಡಕ್ಕೂ ಎರವಲಾಗಿ ಬಂದಿವೆ. ಇವು ಸಾಮಾನ್ಯವಾಗಿ ಎರಡೆರಡು ಪದಗಳನ್ನು ಸೇರಿಸುವಂತಹ ಎರಡು ಅಥವಾ ಜಾಸ್ತಿ ಸ್ತರಗಳಲ್ಲಿ ತಯಾರಾಗುತ್ತವೆ.
ಉದಾಹರಣೆಗಾಗಿ, ಅರಿಷಡ್ವರ್ಗ ಎಂಬ ಪದವನ್ನು ಪರಿಶೀಲಿಸಬಹುದು. ಮೊದಲನೆಯ ಸ್ತರದಲ್ಲಿ ಷಟ್ ‘ಆರು’ ಮತ್ತು ವರ್ಗ ‘ಗುಂಪು’ ಎಂಬೆರಡು ಪದಗಳನ್ನು ಸೇರಿಸಿ ಷಡ್ವರ್ಗ ಎಂಬ ಪದವನ್ನು ತಯಾರಿಸಿ, ಅನಂತರ ಎರಡನೆಯ ಸ್ತರದಲ್ಲಿ ಆ ಪದಕ್ಕೆ ಅರಿ ‘ಶತ್ರು’ ಎಂಬ ಪದವನ್ನು ಸೇರಿಸಿ ಈ ಪದವನ್ನು ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ.
230
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಎರವಲು ಪದಗಳ ಒಳರಚನೆ
ಇದೇ ರೀತಿಯಲ್ಲಿ ಕುಶಾಗ್ರಮತಿ ಎಂಬ ಪದವನ್ನು ಮೊದಲಿಗೆ ಕುಶಾಗ್ರ ಎಂಬ ಪದವನ್ನು ತಯಾರಿಸಿ, ಅನಂತರ ಎರಡನೆಯ ಸ್ತರದಲ್ಲಿ ಅದಕ್ಕೆ ಮತಿ ಎಂಬ ಪದವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ.
ಅ.೭ ಸಾರಾಂಶ
ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನು ಕನ್ನಡದ ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ಅವಕ್ಕೆ ಸಂಸ್ಕೃತ ವ್ಯಾಕರಣಗಳಲ್ಲಿ ಕೊಟ್ಟಿರುವ ಒಳರಚನೆಗಳನ್ನೇ ಕೊಟ್ಟು ವಿವರಿಸುವುದು ರೂಢಿ. ಆದರೆ ಇದು ಸರಿಯಲ್ಲ. ಈ ಪದಗಳಿಗೆ ಕನ್ನಡದಲ್ಲಿ ಕನ್ನಡದವೇ ಆದ ಒಳರಚನೆಗಳಿವೆ.
ಸಂಸ್ಕೃತದಲ್ಲಿ ಪೂರ್ವಪ್ರತ್ಯಯವಿರುವ ಪದಗಳು ಕನ್ನಡದಲ್ಲಿ ಜೋಡು ಪದಗಳಾಗಿ ಕಾಣಿಸಿಕೊಳ್ಳಬಹುದು, ಇಲ್ಲವೇ ಪ್ರತ್ಯಯವಿರುವವುಗಳಾಗಿ ಕಾಣಿಸಿ ಕೊಳ್ಳಬಹುದು. ಪರಪ್ರತ್ಯಯವಿರುವ ಪದಗಳನ್ನು ಸಂಸ್ಕೃತದಲ್ಲಿ ಕೃತ್ ಮತ್ತು ತದ್ದಿತ ಪ್ರತ್ಯಯವಿರುವವುಗಳೆಂದು ವಿಂಗಡಿಸುವುದು ರೂಢಿ. ಆದರೆ ಕನ್ನಡದ ಮಟ್ಟಿಗೆ ಈ ವಿಂಗಡಣೆಗಿಂತಲೂ ನಾಮಪದ ಇಲ್ಲವೇ ಗುಣಪದಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸಿ ನಾಮಪದವನ್ನು ತಯಾರಿಸಲಾಗಿದೆಯೇ ಅಥವಾ ಗುಣಪದವನ್ನು ತಯಾರಿಸಲಾಗಿದೆಯೇ ಎಂಬ ವಿಷಯದ ಆಧಾರದ ಮೇಲೆ ಈ ಪದಗಳನ್ನು ವರ್ಣಿಸುವುದೇ ಹೆಚ್ಚು ಉಪಯುಕ್ತವಾದ ವಿಧಾನ.
ಜೋಡುಪದಗಳನ್ನು ಸಂಸ್ಕೃತದಲ್ಲಿ ಪ್ರಾಮುಖ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಪ್ರಧಾನ ಪದ ಯಾವುದು (ಎಂದರೆ, ಕೇಂದ್ರ ಬಿಂದು ಯಾವ ಅಂಗದ ಮೇಲೆ ಬೀಳುತ್ತದೆ) ಎಂಬ ವಿಷಯದ ಆಧಾರದ ಮೇಲೆ, ತತ್ಪುರುಷ, ಬಹುವ್ರೀಹಿ, ಅವ್ಯಯೀಭಾವ, ದ್ವಂದ್ವ ಮೊದಲಾದ ಸಮಾಸಗಳಾಗಿ ವಿಂಗಡಿಸುವುದು ರೂಢಿ. ಆದರೆ, ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕೃತದ ಜೋಡುಪದಗಳನ್ನು ಈ ರೀತಿ ವಿಂಗಡಿಸುವ ಬದಲು, ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವೇ ಅಥವಾ ಗುಣಪದವೇ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದೇ ಹೆಚ್ಚು ತೃಪ್ತಿಕರವಾದ ವಿಧಾನ.
231
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಅಧ್ಯಾಯ ಒಂಬತ್ತು
ಮುಕ್ತಾಯ
ಪ್ರತಿಯೊಂದು ಭಾಷೆಗೂ ಅದರದೇ ಆದ ವ್ಯಾಕರಣ ಪರಂಪರೆಯೊಂದು ಬೆಳೆದು ಬರುವ ಅವಶ್ಯಕತೆಯಿದೆ. ಇಲ್ಲವಾದರೆ ಅದರ ವ್ಯಾಕರಣದ ಮೇಲೆ ಬರೆದ ಬರಹಗಳು ಆ ಭಾಷೆಯ ಮೂಲಸೂತ್ರಗಳನ್ನು ಪ್ರತಿಬಿಂಬಿಸುವ ಬದಲು ಬೇರೆ ಭಾಷೆಯ ಮೂಲಸೂತ್ರಗಳನ್ನು ಅದರ ಮೇಲೆ ಹೇರುವಂತಾಗುತ್ತದೆ. ಇಂತಹ ಮೂಲಸೂತ್ರಗಳು ಬೇರೊಂದು ಭಾಷಾಕುಟುಂಬಕ್ಕೆ ಸೇರಿರುವ ಭಾಷೆ ಯವಾಗಿದ್ದರೆ ಅವುಗಳಿಂದಾಗುವ ತೊಂದರೆ ಇನ್ನಷ್ಟು ಹೆಚ್ಚಿನದು.
ಕನ್ನಡ ವ್ಯಾಕರಣದ ಮೇಲೆ ಬರೆದ ಬರಹಗಳಲ್ಲಿ ಹೆಚ್ಚಿನವೂ ಇಂತಹ ತೊಂದರೆಗೆ ಸಿಲುಕಿಕೊಂಡಿವೆ. ಅವು ಪ್ರಾಮುಖ್ಯವಾಗಿ ಸಂಸ್ಕೃತ ಭಾಷೆಯ ವ್ಯಾಕರಣ ಪರಂಪರೆಯಿಂದ ಪ್ರಭಾವಿತವಾಗಿರುವುದೇ ಇದಕ್ಕೆ ಕಾರಣ. ಸಂಸ್ಕೃತ ಭಾಷೆ ಇಂಡೋ-ಆರ್ಯನ್ ಎಂಬ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ, ಮತ್ತು ಕನ್ನಡ ಇದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ. ಈ ಎರಡು ಭಾಷೆಗಳ ವ್ಯಾಕರಣಗಳು ಬಹಳ ಮಟ್ಟಿಗೆ ಒಂದರಿಂದ ಒಂದು ಭಿನ್ನವಾಗಿರುವುವಾದ ಕಾರಣ, ಸಂಸ್ಕೃತದ ವ್ಯಾಕರಣ ಪರಂಪರೆಯಲ್ಲಿ ಬರೆದಿರುವ ಈ ಬರಹಗಳೆಲ್ಲ ಕನ್ನಡ ವ್ಯಾಕರಣದ ನಿಜಸ್ವರೂಪ ವನ್ನು ತಿಳಿಸಿ ಹೇಳುವಲ್ಲಿ ಬಹಳ ಮಟ್ಟಿಗೆ ಅಸಮರ್ಥವಾಗಿವೆ.
ಈ ಪುಸ್ತಕದಲ್ಲಿ ನಾನು ಪ್ರಯತ್ನಿಸಿರುವ ಕನ್ನಡ ಪದಗಳ ಒಳರಚನೆಯ ಪರಿಶೀಲನೆ, ಅದರಲ್ಲೂ ಕನ್ನಡದಲ್ಲಿ ಬರುವ ಜೋಡುಪದಗಳ ಒಳರಚನೆಯ ಪರಿಶೀಲನೆ, ಈ ವಿಷಯವನ್ನು ಸ್ಪಷ್ಟಮಾಡಿಕೊಟ್ಟಿದೆ. ಸಂಸ್ಕೃತಕ್ಕೂ ಕನ್ನಡಕ್ಕೂ ನಡುವಿರುವ ವ್ಯತ್ಯಾಸಗಳಲ್ಲಿ ಪದವರ್ಗಗಳಿಗೆ ಸಂಬಂಧಿಸಿದ ವ್ಯತ್ಯಾಸ ಬಹಳ ಪ್ರಾಮುಖ್ಯವಾದುದು. ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಗಳೆಂಬ ಮೂರು ಮುಖ್ಯ ಪದವರ್ಗಗಳಿವೆ; ಆದರೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡೇ ಎರಡು ಮುಖ್ಯ ಪದವರ್ಗಗಳು ಮಾತ್ರ ಇವೆ. ಕನ್ನಡದ ಪದಗಳನ್ನು ಸಂಸ್ಕೃತಕ್ಕೆ ಅನುವಾದಿಸುವಾಗ, ಅದರಲ್ಲಿರುವ
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಗುಣಪದಗಳಲ್ಲಿ ಹೆಚ್ಚಿನವನ್ನೂ ನಾಮಪದಗಳಾಗಿಯೇ ಅನುವಾದಿಸಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ.
ಈ ಪ್ರಾಮುಖ್ಯವಾದ ವ್ಯತ್ಯಾಸದ ಪರಿಣಾಮವನ್ನು ಈ ಎರಡು ಭಾಷೆಗಳಲ್ಲಿ ಕಾಣಿಸುವ ಪದಗಳ ಒಳರಚನೆಯಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು. ಉದಾ ಹರಣೆಗಾಗಿ, ಸಂಸ್ಕೃತದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವೂ ಎರಡು (ಅಥವಾ ಜಾಸ್ತಿ) ನಾಮಪದಗಳನ್ನು ಒಟ್ಟು ಸೇರಿಸಿ ತಯಾರಿಸಿದಂತಹವುಗಳು. ಆದರೆ ಕನ್ನಡದಲ್ಲಿ ನಾಮಪದಗಳೊಂದಿಗೆ ಬೇರೆ ನಾಮಪದಗಳನ್ನು ಮಾತ್ರ ವಲ್ಲದೆ ಕ್ರಿಯಾಪದ ಮತ್ತು ಗುಣಪದಗಳನ್ನು ಸೇರಿಸಿಯೂ ಜೋಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಕಾರಣಕ್ಕಾಗಿ ಪದವರ್ಗಗಳ ಆಧಾರದ ಮೇಲೆ ತಯಾರಿಸಿದ ಜೋಡುಪದಗಳ ವಿಭಜನೆ ಸಂಸ್ಕೃತದ ಮಟ್ಟಿಗೆ ಅಷ್ಟೊಂದು ಪ್ರಾಮುಖ್ಯವೆಂದು ತೋರುವುದಿಲ್ಲವಾದರೂ ಕನ್ನಡದ ಮಟ್ಟಿಗೆ ಇದು ಅತ್ಯಂತ ಪ್ರಾಮುಖ್ಯವಾದ ವಿಭಜನೆ.
ಸಂಸ್ಕೃತದಲ್ಲಿ ಜೋಡುಪದಗಳನ್ನು ಪದಗುಚ್ಛಗಳಿಂದ ಬೇರ್ಪಡಿಸಲು ಹೆಚ್ಚಿ ನೆಡೆಗಳಲ್ಲೂ ಅವುಗಳ ಅಂಗಗಳಾಗಿ ಬಂದಿರುವ ನಾಮಪದಗಳಲ್ಲಿ ಕೊನೆಯ ದನ್ನು ಬಿಟ್ಟು ಇತರ ನಾಮಪದಗಳೊಂದಿಗೆ) ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯ ಬಂದಿದೆಯೇ ಅಥವಾ ಇಲ್ಲವೇ ಎಂಬ ವಿಷಯವನ್ನು ಆಧಾರವಾಗಿ ಇರಿಸಿಕೊಳ್ಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇದು ಹೆಚ್ಚಿನೆಡೆ ಗಳಲ್ಲೂ ಸಾಧ್ಯವಾಗದು. ಗುಣಪದಗಳು ಕನ್ನಡದ ಪದಗುಚ್ಛಗಳಲ್ಲಿ ನೇರವಾಗಿ (ಎಂದರೆ ಪ್ರತ್ಯಯಗಳ ಸಹಾಯವಿಲ್ಲದೆ) ನಾಮಪದಗಳೊಂದಿಗೆ ಬರುವುವಾದ ಕಾರಣ, ಅಂತಹ ಪದಗುಚ್ಛಗಳನ್ನು ಜೋಡುಪದಗಳಿಂದ ಬೇರ್ಪಡಿಸಲು ಬೇರೆಯೇ ವಿಧಾನಗಳನ್ನು ಬಳಸಬೇಕಾಗುತ್ತದೆ. ಕನ್ನಡ ಮತ್ತು ಸಂಸ್ಕೃತಗಳ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದ ಕನ್ನಡದ ವೈಯಾಕರಣಿಗಳು ಕನ್ನಡದ ಪದಗುಚ್ಛಗಳಲ್ಲಿ ಹಲವನ್ನು ಜೋಡುಪದಗಳೆಂದು ಕರೆಯಹೋಗಿ ಗೊಂದಲಕ್ಕೆಡೆಮಾಡಿದ್ದಾರೆ (೫.೬.೫ ನೋಡಿ).
ಸಂಸ್ಕೃತದಲ್ಲಿ ಬರುವ ಒಳರಚನೆಯಿಲ್ಲದ ಪದಗಳೆಲ್ಲವೂ ಕ್ರಿಯಾಧಾತು ಗಳೇ. ಅದರಲ್ಲಿ ಬರುವ ನಾಮಪದಗಳಲ್ಲಿ ಹೆಚ್ಚಿನವನ್ನೂ ಇಂತಹ ಕ್ರಿಯಾ ಧಾತುಗಳಿಗೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಿಸಬೇಕಾಗುತ್ತದೆ. ಹಾಗಾಗಿ, ಸಂಸ್ಕೃತದಲ್ಲಿ ಬರುವ ಪ್ರತ್ಯಯಗಳನ್ನು ಕೃತ್‌ಪ್ರತ್ಯಯ (ಎಂದರೆ ಕ್ರಿಯಾಧಾತುವಿನೊಂದಿಗೆ ನೇರವಾಗಿ ಸೇರುವ ಪ್ರತ್ಯಯ) ಮತ್ತು ತದ್ದಿತ ಪ್ರತ್ಯಯ (ಎಂದರೆ ಹಾಗೆ ಸೇರುವುದರ ಮೂಲಕ ತಯಾರಾ ಗಿರುವ ಪದಗಳೊಂದಿಗೆ ಬರುವ ಪ್ರತ್ಯಯ) ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸುವುದರ ಮೂಲಕ ಅದರ ಪದಗಳ ಒಳರಚನೆಯನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗುತ್ತದೆ.
232
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುಕ್ತಾಯ
ಆದರೆ ಕನ್ನಡದಲ್ಲಿ ಕ್ರಿಯಾಧಾತು, ನಾಮಧಾತು ಮತ್ತು ಗುಣಧಾತು ಎಂಬುದಾಗಿ ಮೂರು ಬೇರೆ ಬೇರೆ ರೀತಿಯ ಧಾತುಗಳಿದ್ದು, ಅವು ಮೂರಕ್ಕೂ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಕ್ರಿಯಾಪದ, ನಾಮಪದ ಮತ್ತು ಗುಣಪದಗಳನ್ನು ತಯಾರಿಸಲು ಸಾಧ್ಯವಿದೆ. ಹೀಗೆ ತಯಾ ರಿಸುವಾಗ ಒಂದು ವರ್ಗದ ಧಾತುವಿನಿಂದ ಇನ್ನೊಂದು ವರ್ಗದ ಪದವನ್ನೂ (ಉದಾ: ಕ್ರಿಯಾಧಾತುವಿನಿಂದ ನಾಮಪದವನ್ನು ಇಲ್ಲವೇ ಗುಣಧಾತುವಿನಿಂದ ಕ್ರಿಯಾಪದವನ್ನು) ಪಡೆಯಲು ಸಾಧ್ಯವಿದೆ. ಹಾಗಾಗಿ, ಕನ್ನಡದ ಪ್ರತ್ಯಯಗಳನ್ನು ಸಂಸ್ಕೃತದ ಪ್ರತ್ಯಯಗಳ ಹಾಗೆ ಕೃತ್ ಮತ್ತು ತದ್ದಿತ ಎಂಬ ಎರಡು ವರ್ಗ ಗಳಲ್ಲಿ ವಿಭಜಿಸುವುದು ಅದರ ಪದಗಳ ಒಳರಚನೆಯ ವರ್ಣನೆಗೆ ಅಷ್ಟೊಂದು ಉಪಯುಕ್ತವಾಗುವ ವಿಭಜನೆಯಲ್ಲ.
ಸಂಸ್ಕೃತದ ವ್ಯಾಕರಣ ಪರಂಪರೆಯ ಹಾಗೆಯೇ ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಗಳೂ ಆ ಭಾಷೆಗಳ ವ್ಯಾಕರಣಗಳನ್ನು ವರ್ಣಿಸು ವಲ್ಲಿ ಉಪಯೋಗಕ್ಕೆ ಬರಬಲ್ಲಲ್ಲದೆ ಕನ್ನಡದ ವ್ಯಾಕರಣವನ್ನು ವರ್ಣಿಸುವಲ್ಲಿ ಹೆಚ್ಚಿಗೆ ಪ್ರಯೋಜನಕ್ಕೆ ಬರಲಾರವು. ಕನ್ನಡ ವ್ಯಾಕರಣದಲ್ಲಿ ಅದರದೇ ಆದ ಹಲವಾರು ವೈಶಿಷ್ಟ್ಯಗಳಿದ್ದು, ಅವನ್ನು ಕಂಡುಕೊಳ್ಳಲು ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ.
ಮನುಷ್ಯರು ಪ್ರಾಣಿಗಳಿಂದ ಭಿನ್ನವಾದ ವ್ಯಕ್ತಿಗಳಾಗಿ ವಿಕಾಸಗೊಂಡಾಗ ಅವರೊಂದಿಗೆ ಅವರ ಭಾಷೆಯೂ ವಿಕಾಸಗೊಂಡಿರಬೇಕು; ಮತ್ತು ಮನುಷ್ಯರು ಅನಂತರ ಬೇರೆ ಬೇರೆ ಸಮಾಜಗಳಾಗಿ ವಿಭಜಿತರಾದಾಗ ಇದರೊಂದಿಗೆ ಅವರಾಡುವ ಭಾಷೆಯೂ ಬೇರೆ ಬೇರೆ ಭಾಷೆಗಳಾಗಿ ವಿಭಜಿತವಾಗಿರಬೇಕು. ಹಾಗಾಗಿ, ಮನುಷ್ಯರೊಳಗೆಲ್ಲ ಹೇಗೆ ಸಾಮ್ಯವಿದೆಯೋ ಹಾಗೆಯೇ ಅವರಾಡುವ ಭಾಷೆಗಳ ನಡುವೆಯೂ ಸಾಮ್ಯವಿದ್ದೇ ಇರಬೇಕು. ಈ ಕಾರಣಕ್ಕಾಗಿ, ಕನ್ನಡ, ಸಂಸ್ಕೃತ, ಲ್ಯಾಟಿನ್, ಇಂಗ್ಲಿಷ್ ಮಾತ್ರವಲ್ಲದೆ ಜಗತ್ತಿನಲ್ಲಿರುವ ಇತರ ಸಾವಿರಾರು ಭಾಷೆಗಳ ನಡುವೆಯೂ ಬೇರೆ ಬೇರೆ ರೀತಿಯ ಸಾಮ್ಯಗಳನ್ನು ಕಾಣಲು ಸಾಧ್ಯವಿದೆ. ಇಂತಹ ಸಾಮ್ಯಗಳ ಆಧಾರದ ಮೇಲೆ ಈ ಎಲ್ಲಾ ಸಾವಿರಾರು ಭಾಷೆಗಳಿಗೂ ಅನ್ವಯಿಸುವಂತಹ ವ್ಯಾಕರಣ ಪರಂಪರೆಯೊಂದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಇಂತಹ ವ್ಯಾಕರಣ ಪರಂಪರೆಯನ್ನು ಕಲ್ಪಿಸಿಕೊಳ್ಳುವ ಪ್ರಯತ್ನ ಈಗ ಹಲವು ದಶಕಗಳಿಂದಲೂ ನಡೆಯುತ್ತಾ ಇದೆ.
ಆದರೆ ಈ ಭಾಷೆಗಳೊಳಗೆ ಸಾಮ್ಯ ಮಾತ್ರವಲ್ಲದೆ ವ್ಯತ್ಯಾಸವೂ ಇದೆಯಾದ ಕಾರಣ, ಅವುಗಳ ನಡುವಿರುವ ಸಾಮ್ಯವನ್ನು ಪ್ರತಿನಿಧೀಕರಿಸುವ ವ್ಯಾಕರಣ ಪರಂಪರೆ ಮಾತ್ರವಲ್ಲದೆ ವ್ಯತ್ಯಾಸವನ್ನು ತೋರಿಸಿಕೊಡುವ ವ್ಯಾಕರಣ ಪರಂಪರೆ ಯೂ ಅತ್ಯವಶ್ಯ. ಕನ್ನಡದ ಮಟ್ಟಿಗೆ ಈ ಎರಡನೇ ರೀತಿಯ ವ್ಯಾಕರಣ ಪರಂಪರೆಯಿನ್ನೂ ಸಿದ್ಧವಾಗಿಲ್ಲ. ಅದಕ್ಕಾಗಿ ನಾವು ಹೆಚ್ಚಿನ ಗಮನ ಕೊಡುವ
233
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡ ಪದಗಳ ಒಳರಚನೆ
ಅವಶ್ಯಕತೆಯಿದೆಯೆಂಬುದೇ ಈ ಪುಸ್ತಕವನ್ನು ಬರೆಯುವುದರಲ್ಲಿದ್ದ ಮೂಲ ಉದ್ದೇಶ.
234
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
[Type text]
ಆಕರಸೂಚಿ
ಕಿಟ್ಟೆಲ್, ಎಫ್. ೧೯೦೩. A grammar of Kannada. ಮಂಗಳೂರು: ಬಾಸೆಲ್ ಮಿಶನ್. —- ೧೮೯೪. A Kannada dictionary. ಮಂಗಳೂರು: ಬಾಸೆಲ್ ಮಿಶನ್. ಕುಳ್ಳಿ, ಜೆ.ಎಸ್. ೧೯೭೬. Keshiraja’s Shabdamanidarpana. ಧಾರವಾಡ: ಕರ್ಣಾಟಕ ವಿಶ್ವವಿದ್ಯಾನಿಲಯ. ಗೋಪಾಲಕೃಷ್ಣ ಭಟ್, ತೆಕ್ಕುಂಜೆ. ೧೯೭೦. ಕನ್ನಡ ಸಮಾಸಗಳು. ಮೈಸೂರು: ಡಿ.ವಿ.ಕೆ. ಮೂರ್ತಿ. ನರಸಿಂಹಾಚಾರ್, ಆರ್. ೧೯೨೪. History of Kannada language. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ. ಭಟ್, ಡಿ.ಎನ್.ಎಸ್. ೧೯೭೮. ಕನ್ನಡ ವಾಕ್ಯಗಳು. ಮೈಸೂರು: ಗೀತಾ ಬುಕ್ ಹೌಸ್. —- ೧೯೭೮. The referents of noun phrases. ಪುಣೆ: ಡೆಕ್ಕನ್ ಕಾಲೇಜ್. —- ೧೯೯೪. The adjectival category. Amsterdam: John Benjamins. —- ೧೯೯೫. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ. ಹಂಪಿ: ಕನ್ನಡ ವಿಶ್ವ ವಿದ್ಯಾಲಯ.
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಆಕರಸೂಚಿ
—- ೨೦೦೦. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಮೈಸೂರು: ಭಾಷಾ ಪ್ರಕಾಶನ. ರಾಮಚಂದ್ರರಾವ್, ಬಿ. ೧೯೭೨. A descriptive analysis of Pampa Bharata. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ. ರಾಜಗೋಪಾಲಾಚಾರ್ಯ, ಎಂ. ೧೯೯೦. ಶುದ್ಧಾಶುದ್ಧ ಕನ್ನಡ. ಮುಂಬಯಿ: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ. ಕೆದಿಲಾಯ, ಎ.ಎಸ್. ೧೯೭೦. Foreign loan words in Kannada. ಚೆನ್ನೈ: University of Madras. ವಾಸು, ಶ್ರೀ ಚಂದ್ರ. ೧೯೬೨. ಭಟ್ಟೋಜಿ ದೀಕ್ಷಿತರ ಸಿದ್ಧಾಂತ ಕೌಮುದಿಯ ಇಂಗ್ಲಿಷ್ ಭಾಷಾಂತರ. ದಿಲ್ಲಿ: ಮೋತಿಲಾಲ್ ಬನಾರ್ಸೀದಾಸ್. ಶ್ರೀಕಂಠಯ್ಯ, ತೀ. ನಂ. ೧೯೫೨. ಕನ್ನಡ ಮಧ್ಯಮ ವ್ಯಾಕರಣ. ಮೈಸೂರು: ವಿದ್ಯಾಭ್ಯಾಸದ ಇಲಾಖೆ. ಶ್ರೀಧರ್, ಎಸ್. ಎನ್. ೧೯೯೫. ಇಂದಿನ ಕನ್ನಡ: ರಚನೆ ಮತ್ತು ಬಳಕೆ. ಹಂಪಿ: ಕನ್ನಡ ವಿಶ್ವವಿದ್ಯಾಲಯ. ಸೀತಾರಾಮಯ್ಯ, ಎಂ.ವಿ. ಪ್ರಾಚೀನ ಕನ್ನಡ ವ್ಯಾಕರಣಗಳು. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
235
© ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.