ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive)
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಡಿ. ಎನ್. ಶಂಕರ ಬಟ್
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
KANNADAKKE BEEKU KANNADADDEE VYAAKARANA (Kannada needs its own grammar) by D.N.Shankara Bhat, Mungaravalli, Bhimanakone P.O, Honnesara, Sagara 577 417; Phone: 9449774956;
E-mail: bhatdns@rediffmail.com
ಮೊದಲನೆಯ ಅಚ್ಚು : 2000 ತಿದ್ದಿ ದೊಡ್ಡದು ಮಾಡಿರುವ ಏಳನೆಯ ಅಚ್ಚು : 2013
ಬಿ: ಬರಹಗಾರ
ಹೊರಪಡಿಕೆ : ಡಿ. ಎನ್. ಶಂಕರ ಬಟ್, ಮುಂಗರವಳ್ಳಿ, ಬೀಮನಕೋಣೆ ಅಂಚೆ, ಹೊನ್ನೇಸರ, ಸಾಗರತೀಥ್ರಹಳ್ಳಿ 577 417
ºÀAaPÉ : ನವಕರ್ನಾಟಕ ಪ್ರಕಾಶನ, 11, ಕ್ರೆಸೆಂಟ್ ರಸ್ತೆ, ಕೆ.ಪಿ.ಈಸ್್ಟ, ಬೆಂಗಳೂರು 560 001.
CZÀÄÑ : ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಕ್ರಾಸ್, ಜಯನಗರ, ಮೈಸೂರು 570 014.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನುಡಿ
ಈ ಪುಸ್ತಕಕ್ಕೆ ಎರಡು ಮುಖ್ಯವಾದ ಉದ್ದೇಶಗಳಿವೆ. ಪೌ್ರಢಶಾಲೆಗಳಲ್ಲಿ ವಿದ್ಯಾಥ್ರಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಿದ್ದಲ್ಲಿ ಎಂತಹ ವ್ಯಾಕರಣ ವನ್ನು ಕಲಿಸಬೇಕು ಎಂಬುದನ್ನು ಸೂಚಿಸುವುದು ಒಂದು ಉದ್ದೇಶ, ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಸಂಶೋಧನೆ ನಡೆಸುವವರು ಯಾವ ಮಾಗ್ರದಲ್ಲಿ ಹೋದರೆ ಸಫಲರಾಗಬಲ್ಲರು ಎಂಬುದನ್ನು ತಿಳಿಸುವುದು ಇನ್ನೊಂದು ಉದ್ದೇಶ.
ಪೌ್ರಢಶಾಲೆಗಳಲ್ಲಿ ವಿದ್ಯಾಥ್ರಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವ ಅವಶ್ಯಕತೆಯಿದೆ0iÉುೀ ಅಥವಾ ಇಲ್ಲವೇ? ಇದೆಯಾದರೆ ಅದನ್ನು ಯಾವ ರೀತಿ ಯಲ್ಲಿ ಕಲಿಸಬೇಕು? ನೇರವಾಗಿ ಕಲಿಸಬೇಕೇ ಅಥವಾ ಪದಗಳ ಮತ್ತು ವಾಕ್ಯ ಗಳ ಬಳಕೆಯನ್ನು ವಿವರಿಸುವುದರ ಮೂಲಕ ಪರೋಕ್ಷವಾಗಿ ಕಲಿಸಬೇಕೆ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಶಿಕ್ಷಣತಜ್ಞರೇ ಕೊಡಬೇಕು. ನಾನು ಶಿಕ್ಷಣ ತಜ್ಞನಲ್ಲ, ವೈಯಾಕರಣಿ ಮಾತ್ರ. ಹಾಗಾಗಿ, ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಹೇಳಲು ನಾನಿಲ್ಲಿ ಪ್ರಯತ್ನಿಸಿಲ್ಲ.
ಆದರೆ ಕನ್ನಡದ ಮಟ್ಟಿಗೆ ಎಂತಹ ವ್ಯಾಕರಣವನ್ನು ಕಲಿಸಬೇಕು? ಸದ್ಯಕ್ಕೆ ಪಠ್ಯಗಳಾಗಿರುವ ವ್ಯಾಕರಣ ಪುಸ್ತಕಗಳು ಈ ಕೆಲಸವನ್ನು ಸಮಪ್ರಕವಾಗಿ ನೆರವೇರಿಸುತ್ತಿವೆ0iÉುೀ? ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ಒಬ್ಬ ವೈಯಾ ಕರಣಿ ಮಾತ್ರ ಕೊಡಬಲ್ಲ. ಕನ್ರಾಟಕದಲ್ಲಿ ಶಿಕ್ಷಣ ತಜ್ಞರು ಈ ವಿಷಯದಲ್ಲಿ ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕನ್ನಡ ವ್ಯಾಕರಣವನ್ನು ಹೇಗೆ ಮತ್ತು ಎಷ್ಟು ಕಲಿಸಬೇಕು ಎಂಬುದನ್ನು ಮಾತ್ರವಲ್ಲದೆ, ಆ ಹೆಸರಿನಲ್ಲಿ ಏನು ಕಲಿಸ ಬೇಕು ಎಂಬುದನ್ನೂ ಅವರೇ ನಿಧ್ರರಿಸುತ್ತಿರುವ ಹಾಗೆ ಕಾಣಿಸುತ್ತದೆ.
ಕನ್ನಡ ವ್ಯಾಕರಣ ಎಂಬ ಹೆಸರಿನಲ್ಲಿ ಏನೇನೋ ಅನವಶ್ಯಕವಾದ ಮತ್ತು ತಪ್ಪು ತಪ್ಪಾದ ವಿಷಯಗಳನ್ನು ಕಲಿಸುವುದರ ಮೂಲಕ ಪೌ್ರಢಶಾಲೆಯ ವಿದ್ಯಾಥ್ರಿಗಳ ಅಮೂಲ್ಯವಾದ ಸಮಯವನ್ನು ಈ ಶಿಕ್ಷಣತಜ್ಞರು ಹಾಳು ಮಾಡುತ್ತಿದ್ದಾರೆ. ಇದು ಹೇಗೆ ಎಂಬುದನ್ನು ನಾನು ಈ ಪುಸ್ತಕದಲ್ಲಿ ವಿವರಿಸಿ ತೋರಿಸಿದ್ದೇನೆ. ಇದನ್ನವರು ಒಮ್ಮೆಯಾದರೂ ಓದಿನೋಡಿ ತಾವು ಎಂತಹ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲಿ ಎನ್ನುವುದು ನನ್ನ ಉದ್ದೇಶ. ವ್ಯಾಕರಣ ಶಿಕ್ಷಣದಲ್ಲಿ ಮತ್ತು ಕನ್ನಡ ವ್ಯಾಕರಣದಲ್ಲಿ ಆಸಕ್ತಿಯಿರುವ ಇತರರಿಗೂ ಈ ಪುಸ್ತಕ ರುಚಿಸಬಲ್ಲುದು.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ರಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಡೆಯು ತ್ತಿರುವ ಸಂಶೋಧನೆಗಳು ಹೊಸದೇನನ್ನೂ ಕಂಡುಹಿಡಿಯುವ ಹಾಗೆ ಕಾಣಿಸು ವುದಿಲ್ಲ. ಇದಕ್ಕೆ ಈ ಸಂಶೋಧನೆಗಳು ಹಾದಿ ತಪ್ಪಿರುವುದೇ ಕಾರಣವೆಂದು ನನ್ನ ಅಭಿಪ್ರಾಯ. ಕೇಶಿರಾಜನೇ ಮೊದಲಾದ ಹಿಂದಿನ ವೈಯಾಕರಣಿಗಳು ಕನ್ನಡ ವ್ಯಾಕರಣದ ಕುರಿತು ಏನು ಹೇಳಿದ್ದಾರೆ ಎಂಬುದನ್ನು ಅಥ್ರಮಾಡಿಕೊಂಡರೆ ಸಾಲದು. ಅವರು ಹೇಳಿರುವುದರಲ್ಲಿ ತಪ್ಪು ಇಲ್ಲವೇ ಅಸಾಂಗತ್ಯ ಏನಾದರೂ ಇದೆ0iÉುೀ? ಅವರು ಹೇಳದೇ ಇರುವಂತಹ ವಿಷಯಗಳೇನಾದರೂ ಇವೆ0iÉುೀ? ಎಂಬುದನ್ನು ಕಂಡುಹಿಡಿದಾಗ ಮಾತ್ರ ಅದು ಸಂಶೋಧನೆಯಾಗಬಲ್ಲುದು.
ಕನ್ನಡ ವ್ಯಾಕರಣದ ಮಟ್ಟಿಗೆ ನಮಗೆ ತಿಳಿಯದಿರುವ ಇಂತಹ ಸಾವಿರಾರು ವಿಷಯಗಳಿವೆ. ಇವು ಎಂತಹವು ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ಹಾಗಾಗಿ ಇದು ಸಂಶೋಧನೆ ಮಾಡ ಬೇಕೆಂದಿರುವವರಿಗೆ ಮಾಗ್ರದಶ್ರಿಯಾಗಬಲ್ಲುದು.
ಈ ಪುಸ್ತಕದ ಹಸ್ತಪ್ರತಿಯನ್ನೊಮ್ಮೆ ಓದಿ ನೋಡಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ಕೊಟ್ಟ ಗೆಳೆಯ ಡಾ. ಭ. ಮಲ್ಲಿಕಾಜ್ರುನ ಅವರಿಗೆ ನಾನು ಆಭಾರಿ. ಇದಲ್ಲದೆ ಈ ಪುಸ್ತಕದ ಪ್ರಕಟಣೆಗೆ ಅನುದಾನ ಕೊಟ್ಟಿರುವ ಭಾರತೀಯ ಭಾಷಾ ಸಂಸ್ಥಾನಕ್ಕೂ, ಇದನ್ನು ಬರೆಯುವುದಕ್ಕೆ ಮತ್ತು ಮುದ್ರಿಸುವುದಕ್ಕೆ `ಬರಹ' ತಂತ್ರಾಶವನ್ನು ಉಚಿತವಾಗಿ ಬಳಸಲು ಒಪ್ಪಿಗೆ ಕೊಟ್ಟಿರುವ ಶ್ರೀ ಶೇಶಾದ್ರಿವಾಸು ಚಂದ್ರಶೇಖರನ್ ಅವರಿಗೂ, ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ಶ್ರೀ ರಾ. ವೆಂ. ಶ್ರೀನಿವಾಸ ಮೂತ್ರಿ ಮತ್ತು ಅವರ ಸುಪುತ್ರ ಶ್ರೀ ರಾ. ಮೋಹನ ಮೂತ್ರಿ ಅವರಿಗೂ ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವಧ್ರನ ಅವರಿಗೂ ನಾನು ಆಭಾರಿ.
ಕನ್ನಡ ವ್ಯಾಕರಣದ ಮೇಲೆ
ಮೈಸೂರು ಜನವರಿ 25, 2000
ಡಿ. ಎನ್. ಶಂಕರ ಭಟ್
4 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನುಡಿ
ತಿದ್ದಿ ದೊಡ್ಡದು ಮಾಡಿದ ಎರಡನೆಯ ಅಚ್ಚು
ಈ ಪುಸ್ತಕದ ಮೊದಲನೆಯ ಮುದ್ರಣದ ಪ್ರತಿಗಳೆಲ್ಲ ಒಂದೇ ವಷ್ರದಲ್ಲಿ ತೀರಿ ಹೋದುವು. ಈ ಎರಡನೆಯ ಮುದ್ರಣದಲ್ಲಿ ಹಲಕೆಲವು ಬದಲಾವಣೆ ಗಳನ್ನು ಮಾಡಿದ್ದೇನೆ. ಇವು ಸಹೃದಯ ಓದುಗರಿಗೆ ಮೆಚ್ಚುಗೆಯಾಗಬಹುದೆಂದು ಭಾವಿಸುತ್ತೇನೆ.
ಮೈಸೂರು ಜುಲಾಯಿ 15, 2001
ಡಿ. ಎನ್. ಶಂಕರ ಭಟ್
ಇನ್ನೊಮ್ಮೆ ತಿದ್ದಿ ದೊಡ್ಡದು ಮಾಡಿದ ಮೂರನೆಯ ಅಚ್ಚು
ಈ ಮೂರನೆಯ ಮುದ್ರಣದಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಿದ್ದೇನೆ. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಎಂಬ ಹೆಸರಿನ ಪುಸ್ತಕವನ್ನು (ಭಟ್ 2005) ಬರೆಯುವ ಸಮಯದಲ್ಲಿ ಕನ್ನಡ ವ್ಯಾಕರಣದ ಕುರಿತು ನಾನು ಕಂಡುಹಿಡಿದ ಕೆಲವು ಹೊಸ ವಿಷಯಗಳನ್ನೂ ಈ ಪುಸ್ತಕದಲ್ಲಿ ಸೇರಿಸಿ ಕೊಂಡಿದ್ದೇನೆ. ಇದರಿಂದಾಗಿ ಈ ಪುಸ್ತಕದ ಉದ್ದೇಶ ಇನ್ನಷ್ಟು ಸ್ಪಷ್ಟವಾಗಿದೆ 0iÉುಂದು ನನಗೆ ಅನಿಸುತ್ತದೆ.
ಮೈಸೂರು ಫೆಬ್ರವರಿ 1, 2006
ಡಿ. ಎನ್. ಶಂಕರ ಭಟ್
5 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
M¼À¦r
ಅಧ್ಯಾಯ 1 : ಮುನ್ನೋಟ 1.1 ವ್ಯಾಕರಣ ಪರಂಪರೆ
1.2 ವ್ಯಾಕರಣದ ಉದ್ದೇಶ
1.3 ಕನ್ನಡದವಲ್ಲದ ಕನ್ನಡ ವ್ಯಾಕರಣಗಳು 1.4 ಹೊಸಗನ್ನಡಕ್ಕೆ ಅದರದೇ ವ್ಯಾಕರಣ 1.5 ದಾರಿ ಹೇಳುವ ಕ್ರಮ
1.6 ಈ ಪುಸ್ತಕದ ಉದ್ದೇಶ
ಅಧ್ಯಾಯ 2 : ಸೇರಿಕೆಯ ನಿಯಮಗಳು 2.1 ಮುನ್ನೋಟ
2.1.1 ಪಠ್ಯಪುಸ್ತಕಗಳಲ್ಲಿ ಸೇರಿಕೆಯ ನಿಯಮಗಳು 2.1.2 ಸಂಸ್ಕೃತ ನಿಯಮಗಳನ್ನು ತಿಳಿಸುವ ಕ್ರಮ 2.2 ಸೇರಿಕೆಯ ನಿಯಮಗಳಲ್ಲಿ ವ್ಯತ್ಯಾಸಗಳು
2.2.1 ಸ್ವರಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು 2.2.2 ವ್ಯಂಜನಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು 2.3 ನಾಮರೂಢಿಯಳಿಯುವ ಹಾಗಿದ್ದರೆ… 2.4 ಸಂದಭ್ರಗಳ ವಿಭಜನೆ
2.5 ಸೇರಿಕೆಯ ನಿಮಮಗಳ ಅನಿಯಮಿತತೆ 2.6 ವಣ್ರಗಳ ಪಟ್ಟಿ 2.6.1 ಸಂಸ್ಕೃತ ಸ್ವರಗಳ ಪಟ್ಟಿ 2.6.2 ಕನ್ನಡ ಸ್ವರಗಳ ಪಟ್ಟಿ 2.6.3 ವ್ಯಂಜನಗಳ ಪಟ್ಟಿ
2.7 ತಿರುಳು
ಅಧ್ಯಾಯ 3 : ಪದವಗ್ರಗಳು 3.1 ಮುನ್ನೋಟ
3.2 ನಾಮಪದಗಳು ಮತ್ತು ಗುಣಪದಗಳು 3.2.1 ವಿಶೇಷಣಗಳಾಗಿ ಗುಣಪದಗಳ ಬಳಕೆ
3.2.2 ವಿಶೇಷಣಗಳಾಗಿ ನಾಮಪದಗಳ ಬಳಕೆ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
13 13 15 18 19 22 24
27 27 28 29 30 31 33 35 37 41 42 43 44 46 47
49 49 50 51 53
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
3.2.3 ವಿಶೇಷಣ ಮತ್ತು ವಿಶೇಷ್ಯಗಳ ಜಾಗ 3.2.4 ಪದಕಂತೆ ಮತ್ತು ಜೋಡುಪದಗಳಲ್ಲಿ ಗುಣಪದಗಳು 3.2.5 ನಾಮಪದಗಳಾಗಿ ಗುಣಪದಗಳ ಬಳಕೆ
3.2.6 ಗುಣಪದಗಳ ಜಾಗ
3.2.7 ತಾರತಮ್ಯ ಸೂಚನೆ
3.2.8 ಕೃದಂತಗಳ ಬಳಕೆ
3.3 ಜೋಡುಪದಗಳ ರಚನೆ 3.4 ಪದಕಂತೆಗಳನ್ನು ತಯಾರಿಸಲು ಎರಡು ವಿಧಾನಗಳು
3.5 ಭಾಷೆಗಳೊಳಗಿನ ವೈವಿಧ್ಯ 3.6 ಬೇರೆ ಪದವಗ್ರಗಳು
3.7 ತತ್ಸಮ ಮತ್ತು ತದ್ಭವ ಪದಗಳು 3.8 ತಿರುಳು
ಅಧ್ಯಾಯ 4 : ಪದಗಳ ಒಳರಚನೆ
4.1 ಮುನ್ನೋಟ
4.1.1. ಹೆಸರಿಸುವುದು ಮತ್ತು ವಣ್ರಿಸುವುದು
4.1.2 ಜೋಡುಪದಗಳು ಮತ್ತು ಪದಕಂತೆಗಳು
4.2 ಕೃತ್ ಮತ್ತು ತದ್ಧಿತ ಪ್ರತ್ಯಯಗಳು 4.3 ಪದದ ಮೊದಲು ಮತ್ತು ಅನಂತರ ಬರುವ ಪ್ರತ್ಯಯಗಳು 4.4 ನಾಮಪದಗಳ ರಚನೆ
4.5 ಇಕೆ-ಇಗೆ ಪ್ರತ್ಯಯ 4.6 ಕ್ರಿಯಾಪದಗಳ ರಚನೆ
4.7 ಗುಣಪದಗಳ ರಚನೆ
4.8 ತಿರುಳು
54 54 57 59 62 64 65 67 69 71 72 73
75 75 76 79 81 85 85 87 91 93 95
96 ಅಧ್ಯಾಯ 5 : ಸಮಾಸಗಳು 96 5.1 ಮುನ್ನೋಟ
97 5.2 ಜೋಡುಪದಗಳು ಮತ್ತು ಪದಕಂತೆಗಳು
5.3 ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿನ ವ್ಯತ್ಯಾಸಗಳು 99 5.3.1 ಸಂಸ್ಕೃತದ ಜೋಡುಪದಗಳು
99 5.3.2 ಪದಕಂತೆಗಳಲ್ಲಿ ಗುಣಪದಗಳ ಬಳಕೆ
5.3.3 ಕೃದಂತಗಳ ಬಳಕೆ
5.3.4 ನಿದ್ರೇಶಕ ಪದಗಳ ಬಳಕೆ 5.3.5 ದ್ವಿತೀಯಾ ವಿಭಕ್ತಿಯ ಬಳಕೆ
5.3.6 ನಾಮಪದಗಳ ಬಳಕೆ
101
103
104
105
106
8 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
M¼À¦r
5.3.7 ಪದಗಳ ಸಂಖ್ಯೆ 5.3.8 ಜೋಡುಪದಗಳ ಅಥ್ರ 5.4 ಸಂಸ್ಕೃತ ಸಮಾಸಗಳ ವಿಭಜನೆ
5.5 ಕನ್ನಡ ಜೋಡುಪದಗಳ ಒಳರಚನೆ 5.5.1 ನಾಮಪದವಿರುವ ಜೋಡುಪದಗಳು 5.5.2 ಕ್ರಿಯಾಪದವಿರುವ ಜೋಡುಪದಗಳು 5.5.3 ಗುಣಪದವಿರುವ ಜೋಡುಪದಗಳು 5.5.4 ಕೆಲವು ಅಪವಾದಗಳು 5.6 ಸಂಸ್ಕೃತ ಸಮಾಸಗಳು ಕನ್ನಡದಲ್ಲಿವೆ0iÉುೀ?
5.6.1 ವಿಭಜನೆಯ ಆಧಾರ
5.6.2 ಒಳನುಡಿಗಳ ಬಳಕೆ
5.7 ಕನ್ನಡ ವೈಯಾಕರಣಿಗಳು ಹೇಳುವ ಸಮಾಸಗಳು 5.7.1 ತತ್ಪುರುಷ
5.7.2 ಕಮ್ರಧಾರಯ 5.7.3 ದ್ವಿಗು 5.7.4 ಅವ್ಯಯೀಭಾವ 5.7.5 ದ್ವಂದ್ವ
5.7.6 ಬಹುವ್ರೀಹಿ 5.7.7 ಕ್ರಿಯಾಸಮಾಸ 5.7.8 ಗಮಕ ಸಮಾಸ 5.8 ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳು 5.8.1 ಜೋಡುಪದಗಳ ಒಳನುಡಿಗಳು 5.8.2 ವಿಭಜನೆ
5.9 ತಿರುಳು
107
108
108
110
111
112
113
115
116 116 120 121 122 122 124 124 126 127 129 130 130 130 131 133
ಅಧ್ಯಾಯ 6 : ಲಿಂಗ ಮತ್ತು ವಚನಗಳು 6.1 ಮುನ್ನೋಟ
6.2 ಲಿಂಗಭೇದಗಳು 6.2.1 `ಲಿಂಗ’ ಪದದ ಬಳಕೆ 6.2.2 ಕನ್ನಡದಲ್ಲಿ ಲಿಂಗವಿಭಜನೆ 6.2.3 ಸಂಸ್ಕೃತದಲ್ಲಿ ಲಿಂಗವಿಭಜನೆ
6.2.4 ಭಾಷೆಗಳ ನಡುವಿನ ವ್ಯತ್ಯಾಸಗಳು 6.2.5 ಎಣಿಕೆಯಲ್ಲಿ ಲಿಂಗಭೇದ 6.3 ವಚನಭೇದಗಳು 6.3.1 ವಚನಗಳ ಸಂಖ್ಯೆ
134 134 135 135 136 137 140 141 141 141
9 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
6.3.2 ವಚನ ಮತ್ತು ವಿಭಕ್ತಿ 6.3.3 ಏಕವಚನದ ಸೂಚನೆ 6.3.4 ವಚನವನ್ನು ಸೂಚಿಸದಿರುವುದು 6.4 ತಿರುಳು
ಅಧ್ಯಾಯ 7 : ವಿಭಕ್ತಿಗಳು ಮತ್ತು ಕಾರಕಗಳು 7.1 ಮುನ್ನೋಟ
7.2 ವಿಭಕ್ತಿಗಳ ಕೆಲಸ 7.3 ಕಾರಕಗಳ ಕೆಲಸ 7.3.1 ಒಂದು ವಿಭಕ್ತಿಗೆ ಹಲವು ಅಥ್ರಗಳು
7.3.2 ಒಂದೇ ಅಥ್ರಕ್ಕೆ ಹಲವು ವಿಭಕ್ತಿಗಳು
7.3.3 ಬೇರೆ ಕಾರಣಗಳು
7.3.4 ಕಾರಕಗಳ ಮೂಲಕ ಸಂಬಂಧಿಸುವುದು
7.4 ಪಾಶ್ಚಾತ್ಯ ವ್ಯಾಕರಣಗಳಲ್ಲಿ ಕಲ್ಪಿತ ತತ್ವ 7.5 ಕನ್ನಡಕ್ಕೆ ಕಾರಕಗಳು ಬೇಕಾಗಿಲ್ಲದಿರುವುದು
7.5.1 ಎರಡು ರೀತಿಯ ಸಂಬಂಧಗಳು 7.5.2 ಕನ್ನಡ ವಾಕ್ಯಗಳಲ್ಲಿ ಸಬ್ಜೆಕ್್ಟ ಎಂಬ ತತ್ವ 7.5.3 ಎರಡು ವ್ಯವಸ್ಥೆಗಳು
7.5.4 ಕನ್ನಡದ ವೈಶಿಷ್ಟ್ಯ
7.5.5 ಎರಡು ರೀತಿಯ ವ್ಯಾಕರಣ ಕಾಯ್ರಗಳು 7.6 ತಿರುಳು
ಅಧ್ಯಾಯ 8 : ವಿಭಕ್ತಿಗಳು
8.1 ಮುನ್ನೋಟ
8.2 ವಿಭಕ್ತಿಗಳ ಹೆಸರು 8.3 ವಿಭಕ್ತಿ, ಲಿಂಗ ಮತ್ತು ವಚನ 8.4 ಪ್ರತ್ಯಯಗಳ ಅವಶ್ಯಕತೆ
8.5 ಪ್ರತ್ಯಯಗಳ ಸಂಖ್ಯೆ 8.5.1 ಪ್ರಥಮಾ ವಿಭಕ್ತಿ 8.5.2 ದ್ವಿತೀಯಾ ವಿಭಕ್ತಿ
8.5.3 ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು 8.5.4 ಚತುಥ್ರೀ ವಿಭಕ್ತಿ
8.5.5 ಷಷ್ಠೀ ವಿಭಕ್ತಿ 8.5.6 ಸಪ್ತಮೀ ವಿಭಕ್ತಿ 8.6 ತಿರುಳು
10 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
142 143 144 145
146 146 148 149 150 151 152 152 154 156 156 158 160 162 164 167
168 168 168 171 173 177 179 180 182 184 185 188 191
M¼À¦r
ಅಧ್ಯಾಯ 9 : ವಿಭಕ್ತಿಪಲ್ಲಟ 9.1 ಮುನ್ನೋಟ
9.2 ಕ್ರಿಯಾಪದದಲ್ಲಿ ಬದಲಾವಣೆಯಾಗದೆ ವಿಭಕ್ತಿಪಲ್ಲಟ
9.2.1 ಸಮಗ್ರತೆ
9.2.2 ಸ್ವೇಚ್ಛಾಪ್ರವೃತ್ತಿ 9.2.3 ಸಾನ್ನಿಧ್ಯ
9.2.4 ಬೇರೆ ಅಥ್ರಗಳು
9.3 ಸಂಸ್ಕೃತದಲ್ಲಿ ವಿಭಕ್ತಿಪಲ್ಲಟ 9.4 ಕ್ರಿಯಾಪದದಲ್ಲಿ ಬದಲಾವಣೆ 9.5 ತಿರುಳು
192 192 193 194 196 197 198 199 201 203
ಅಧ್ಯಾಯ 10 : ಸವ್ರನಾಮಗಳು ಮತ್ತು ಎಣಿಕೆಯ ಪದಗಳು 205 205 10.1 ಮುನ್ನೋಟ
205 10.2 ಸವ್ರನಾಮಗಳು 206 10.2.1 ಪುರುಷ ಪದಗಳು ಮತ್ತು ಸವ್ರಪದಗಳು 208 10.2.2 ಸವ್ರಪದಗಳ ಸ್ವರೂಪ 209 10.2.3 ಸಂಸ್ಕೃತದ ಸವ್ರನಾಮಗಳು
211 10.2.4 ಸಂಸ್ಕೃತದ ಸವ್ರಾದಿ ಪದಗಳು 212 10.3 ಎಣಿಕೆಯ ಪದಗಳು
212 10.3.1 ಬಳಕೆಯಲ್ಲಿ ವ್ಯತ್ಯಾಸ 214 10.3.2 ಒಳರಚನೆಯಲ್ಲಿ ವ್ಯತ್ಯಾಸ
216 10.4 ತಿರುಳು
ಅಧ್ಯಾಯ 11 : ಕ್ರಿಯಾರೂಪಗಳು
11.1 ಮುನ್ನೋಟ 11.2 ಕಾಲಸಂಬಂಧ ಮತ್ತು ಕಾಲವ್ಯವಸ್ಥೆ 11.2.1 ಕನ್ನಡದ ಕಾಲಸಂಬಂಧ 11.2.2 ಸಂಸ್ಕೃತದ ಕಾಲವ್ಯವಸ್ಥೆ 11.2.3 ಕಾಲರೂಪಗಳಲ್ಲಿ ವ್ಯತ್ಯಾಸ
11.2.4 ಘಟಕಗಳ ನಡುವಿನ ಕಾಲಭೇದ 11.3 ಅಖ್ಯಾತ ಪ್ರತ್ಯಯಗಳು 11.4 ಪರಸ್ಮೈಪದ ಮತ್ತು ಆತ್ಮನೇಪದ 11.5 ಕಮ್ರಣಿ ಪ್ರಯೋಗ
217 217 218 218 220 222 224 226 227 228
11 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
11.6 ಅಲ್ಲಗಳೆಯುವ ವಾಕ್ಯಗಳು 11.7 ಕೇಳುವ ವಾಕ್ಯಗಳು
11.8 ತಿರುಳು
ಅಧ್ಯಾಯ 12 : ಮುಕ್ತಾಯ 12.1 ವ್ಯತ್ಯಾಸಗಳ ಮೂಲ
12.2 ಹೊಸ ದೃಷ್ಟಿಕೋನ
12.3 ಶಾಲಾವ್ಯಾಕರಣಗಳು
12.4 ಕಾಲೇಜುಗಳಲ್ಲಿ ಬೋಧನೆ ಮತ್ತು ಸಂಶೋಧನೆ
ಆಕರಸೂಚಿ ವಿಷಯಸೂಚಿ
230 233 235
237 237 238 240 242
243 245
12 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
1. ಮುನ್ನೋಟ
1.1 ವ್ಯಾಕರಣ ಪರಂಪರೆ ಕನ್ನಡ ವ್ಯಾಕರಣದ ಕಲಿಕೆಗೆ ಒಂದು ಸಾವಿರ ವರ್ಶಗಳಿಗಿಂತಲೂ ಹೆಚ್ಚು ಉದ್ದವಾದ ಚರಿತ್ರೆಯಿದೆ. ಈ ಸಾವಿರ ವರ್ಶಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಬೇರೆ ಬೇರೆ ರೀತಿಯ ಮತ್ತು ಬೇರೆ ಬೇರೆ ಗಾತ್ರದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ಬಿಡಿ ಬರಹಗಳನ್ನು ಹೊರತರಲಾಗಿದೆ. ಇವು ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಶ್, ಸಂಸ್ಕ್ರುತ, ಮರಾಟಿ, ಹಿಂದಿ, ರಶ್ಯನ್ ಮೊದಲಾದ ಬೇರೆ ಕೆಲವು ನುಡಿಗಳಲ್ಲೂ ಬಂದಿವೆ.
ಇದಲ್ಲದೆ, ಈ ವ್ಯಾಕರಣಗಳು ಸೂತ್ರ ರೂಪದಲ್ಲಿ, ಸೂತ್ರದ ವ್ಯಾಕ್ಯಾನ ರೂಪದಲ್ಲಿ, ಪ್ರಶ್ನೋತ್ತರ ರೂಪದಲ್ಲಿ, ಪ್ರಬಂದ ರೂಪದಲ್ಲಿ, ಪಟ್ಯ ರೂಪದಲ್ಲಿ
- ಹೀಗೆ ಬೇರೆ ಬೇರೆ ರೂಪಗಳಲ್ಲಿ ತಯಾರಾಗಿವೆ. ಕನ್ನಡವನ್ನು ಕಲಿಯ ಬಯಸುವವರು, ಕನ್ನಡದ ಒಳಗುಟ್ಟನ್ನು ತಿಳಿಯ ಬಯಸುವವರು, ಕನ್ನಡವನ್ನು ಇತರ ದ್ರಾವಿಡ ಇಲ್ಲವೇ ಆರ್ಯ ನುಡಿಗಳೊಂದಿಗೆ ಹೋಲಿಸ ಬಯಸುವವರು, ಕನ್ನಡದ ಹಿನ್ನಡವಳಿ(ಚರಿತ್ರೆ)ಯನ್ನು ಅರಿಯ ಬಯಸುವವರು - ಹೀಗೆ ಬೇರೆ ಬೇರೆ ರೀತಿಯ ಓದುಗರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬರೆದಿರುವ ವ್ಯಾಕರಣಗಳೂ ಇವುಗಳಲ್ಲಿವೆ. ಕನ್ನಡ ವ್ಯಾಕರಣದ ಮೇಲೆ ಇಶ್ಟೆಲ್ಲಾ ಅರಕೆ ಮತ್ತು ಬರವಣಿಗೆಗಳು ನಡೆದಿವೆಯೆಂಬುದು ನಮಗೆ ಹಿಗ್ಗು ಮತ್ತು ಹೆಮ್ಮೆಗಳನ್ನು ತರಬಲ್ಲುದೇನೋ ನಿಜ. ಆದರೆ, ಈ ಪುಸ್ತಕಗಳು ಮತ್ತು ಬಿಡಿ ಬರಹಗಳು ನಿಜಕ್ಕೂ ಕನ್ನಡ ವ್ಯಾಕರಣದ ಒಳಗುಟ್ಟನ್ನು ತಿಳಿಸಿಕೊಡುವಲ್ಲಿ ಮತ್ತು ಅವನ್ನು ಬಳಸಿ ಬೇಡಿಕೆಗಳನ್ನು ಕೊಳ್ಳುವುದರ ಪೂರಯ್ಸುವುದರಲ್ಲಿ ಎಶ್ಟರ ಸಮರ್ತವಾಗಿವೆ ಎಂಬುದನ್ನು ಮಟ್ಟಿಗೆ ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಈ ಬರಹಗಳನ್ನು ಮೂರು ಮುಕ್ಯ ವ್ಯಾಕರಣಪರಂಪರೆಗಳಲ್ಲಿ ತಯಾರಾದವುಗಳೆಂಬುದಾಗಿ ವಿಂಗಡಿಸಿಕೊಳ್ಳಬಹುದು. ಸಂಸ್ಕ್ರುತದ ವ್ಯಾಕರಣ ಪರಂಪರೆಯಲ್ಲಿ ತಯಾರಾಗಿರುವ ಕೇಶಿರಾಜನ ಶಬ್ದಮಣಿದರ್ಪಣ, ಬಟ್ಟಾಕಳಂಕನ ಶಬ್ದಾನುಶಾಸನ ಮತ್ತು ಇನ್ನಿತರ ಹಲವಾರು ಹಳೆಗನ್ನಡ ವ್ಯಾಕರಣಗಳು ಒಂದು ಗುಂಪಿಗೆ ಸೇರುತ್ತವೆ. ಶಾಲಾಕಾಲೇಜುಗಳಲ್ಲಿ
ಮೂಲಕ ಓದುಗರ
ಬೇರೆ
ಬೇರೆ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ರಚಿಸಿರುವ
ಮುಕ್ಯವಾಗಿ
ಸೊಲ್ಲರಿಗರು
ಶತಮಾನದಿಂದೀಚೆಗೆ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪಟ್ಯಗಳಾಗಿ ಬಳಕೆಯಾಗುತ್ತಿರುವ ಹೆಚ್ಚಿನ ವ್ಯಾಕರಣಗಳೂ ಈ ಗುಂಪಿಗೆ ಸೇರುತ್ತವೆ. ಕ್ರಿಶ್ಚಿಯನ್ ಹತ್ತೊಂಬತ್ತನೇ ಮಿಶನರಿಗಳು ಇಂಗ್ಲಿಶ್ನಲ್ಲಿ ಬರೆದಿರುವ ಹೊಸಗನ್ನಡ ವ್ಯಾಕರಣಗಳು ಎರಡನೆಯ ಗುಂಪಿಗೆ ಸೇರುತ್ತವೆ. ಇವನ್ನೆಲ್ಲ ಯುರೋಪಿನ ವ್ಯಾಕರಣ ಪರಂಪರೆಯಲ್ಲಿ ರಚಿಸಲಾಗಿದೆ.
ಅದರಿಂದೀಚೆಗೆ ಇವತ್ತಿನ ಕನ್ನಡದ ವ್ಯಾಕರಣಗಳು ಮತ್ತು ಬಿಡಿ ಬರಹಗಳು ಮೂರನೆಯ ಗುಂಪಿಗೆ ಸೇರುತ್ತವೆ. ಇವನ್ನು ಮುಕ್ಯವಾಗಿ ಅಮೆರಿಕದ ಇಂಗ್ಲಿಶ್ ವ್ಯಾಕರಣ ಪರಂಪರೆಯಲ್ಲಿ ತಯಾರಿಸಲಾಗಿದೆ. ಕನ್ನಡದ ಈ ಮೂರು ಪರಂಪರೆಯ ವ್ಯಾಕರಣಗಳಲ್ಲೂ ನಮಗೆ ಕಂಡುಬರುವ ಒಂದು ಮುಕ್ಯವಾದ ಸಂಗತಿಯೇನೆಂದರೆ, ಇವು ಬೇರಾವುದೋ ಒಂದು ನುಡಿಯ ಎಂದರೆ, ಸಂಸ್ಕ್ರುತ, ಲ್ಯಾಟಿನ್ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣ ಪರಂಪರೆಯನ್ನು ಅನುಸರಿಸಲು ಪ್ರಯತ್ನಿಸಿವೆಯಲ್ಲದೆ ಕನ್ನಡಕ್ಕೆ ಅದರದ್ದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಬೆಳೆಸಿಕೊಡಲು ಪ್ರಯತ್ನಿಸಿಲ್ಲ. ಈ ಎಲ್ಲಾ ವ್ಯಾಕರಣಗಳಲ್ಲೂ ಇದೊಂದು ಎದ್ದು ಕಾಣುವ ಕೊರತೆ. ಸಂಸ್ಕ್ರುತ, ಲ್ಯಾಟಿನ್ ಮತ್ತು ಇಂಗ್ಲಿಶ್ – ಇವು ಮೂರೂ ಇಂಡೋ- ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು. ಇವು ಸ್ವತಂತ್ರವಾದ ನುಡಿಗಳಾಗಿದ್ದು ಒಂದರಿಂದೊಂದು ಸಾಕಶ್ಟು ಬೇರಾಗಿವೆಯಾದರೂ ಇವುಗಳಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ವಗಳು ಹೆಚ್ಚು ಕಡಿಮೆ ಒಂದೇ ರೀತಿಯವುಗಳಾಗಿವೆ. ಹಾಗಾಗಿ, ಈ ಮೂರು ವ್ಯಾಕರಣ ಪರಂಪರೆಗಳೂ ಒಂದೇ ಪರಂಪರೆಯ ಮೂರು ಪ್ರಬೇದಗಳೆಂದು ಹೇಳಲು ಬರುತ್ತದೆ. ಕನ್ನಡ ಇದಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿ. ಇದು ಬಳಸುವ ವ್ಯಾಕರಣದ ಮೂಲತತ್ವಗಳು ಸಂಸ್ಕ್ರುತ, ಲ್ಯಾಟಿನ್, ಇಂಗ್ಲಿಶ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳು ಬಳಸುವ ವ್ಯಾಕರಣದ ಮೂಲತತ್ವಗಳಿಗಿಂತ ತೀರ ಬೇರಾದವುಗಳು.
ಇಂತಹ ತೀರ ಬೇರಾಗಿರುವ ಮೂಲತ್ವಗಳನ್ನು ಬಳಸುವ ಕನ್ನಡ ವ್ಯಾಕರಣದ ವೈಶಿಶ್ಟ್ಯಗಳನ್ನು ವಿವರಿಸಬೇಕಿದ್ದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣ ಪರಂಪರೆಯಲ್ಲಿ ಬರೆದ ಪುಸ್ತಕಗಳು ಮತ್ತು ಬಿಡಿಬರಹಗಳು ಕನ್ನಡದವೇ ಆದ ವೈಶಿಶ್ಟ್ಯಗಳಿಗೆ ಹೆಚ್ಚಿನ ಗಮನ ಕೊಡಲಾರವು ಮತ್ತು ಕೊಟ್ಟಿಲ್ಲ.
14 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನೋಟ ವ್ಯಾಕರಣಗಳಲ್ಲೂ
ಹೆಚ್ಚಿನ
ವ್ಯಾಕರಣದ ಸಂಸ್ಕ್ರುತ ಕನ್ನಡದ ಕನ್ನಡ ವ್ಯಾಕರಣಕ್ಕೆ ಅಳವಡಿಸಿಕೊಳ್ಳಲು ಮೂಲತತ್ವಗಳನ್ನು ಹಾಗೆಯೇ ಪ್ರಯತ್ನಿಸಲಾಗಿದೆ. ಇಂತಹ ಪ್ರಯತ್ನ ಕನ್ನಡದ ಅತ್ಯಂತ ಪ್ರಾಚೀನವಾದ ವ್ಯಾಕರಣಗಳ ಕಾಲದಿಂದಲೂ ನಡೆದು ಬಂದಿದೆ.
ಕನ್ನಡದ ಈ ಪ್ರಾಚೀನ ವೈಯಾಕರಣಿಗಳು ಆ ರೀತಿ ಮಾಡಲು ಮುಕ್ಯವಾಗಿ ಎರಡು ಕಾರಣಗಳಿವೆ. ಪ್ರಾಕ್ರುತ, ಅಪಬ್ರಂಶ, ಪಾಲಿ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕ್ರುತದ ಒಂದು (ವಿಕ್ರುತ) ರೂಪವೆಂಬ ಭಾವನೆ ಅವರಲ್ಲಿದ್ದುದು ಒಂದು ಕಾರಣ; ವ್ಯಾಕರಣದ ಮೂಲತತ್ವಗಳ ಮಟ್ಟಿಗೆ ಒಂದು ನುಡಿ ಇನ್ನೊಂದರಿಂದ ತೀರ ಬೇರಾಗಿರಬಲ್ಲುದು ಎಂಬ ವಿಶಯ ಅವರ ಗಮನಕ್ಕೆ ಬಂದಿರಲಿಲ್ಲವೆಂಬುದು ಇನ್ನೊಂದು ಕಾರಣ.
ಕನ್ನಡ ಸಂಸ್ಕ್ರುತದ ವಿಕ್ರುತ ರೂಪವಲ್ಲ, ಅದಕ್ಕಿಂತ ತೀರ ಬೇರಾಗಿರುವ `ದ್ರಾವಿಡ’ ಎಂಬ ಹೆಸರಿನ ಬೇರೆಯೇ ಒಂದು ನುಡಿಕುಟುಂಬಕ್ಕೆ ಸೇರಿರುವ ನುಡಿ ಎಂಬ ವಿಶಯ ವೈಯಾಕರಣಿಗಳ ಅರಿವಿಗೆ ಬಂದುದು ಹತ್ತೊಂಬತ್ತನೆಯ ಶತಮಾನದ ನಡುಭಾಗದಲ್ಲಿ (ಕಾಲ್್ಡವೆಲ್ 1856). ಅನಂತರ ನಡೆದ ನುಡಿಗಳ ಕುರಿತಾದ ಅರಕೆಗಳು, ಅದರಲ್ಲೂ ಎಮೆನೋ ಮತ್ತು ಬರೋ ರಚಿಸಿದ ದ್ರಾವಿಡ ಜ್ನಾತಿಪದಕೋಶ (ಎಮೆನೋ ಮತ್ತು ಬರೋ 1961) ಮತ್ತು ಕ್ರುಶ್ಣಮೂರ್ತಿ ಇತ್ತೀಚೆಗೆ ಪ್ರಕಟಿಸಿದ ದ್ರಾವಿಡ ನುಡಿಗಳ ಹೋಲಿಕೆ (ಕ್ರುಶ್ಣಮೂರ್ತಿ 2003) ಈ ವಿಶಯದಲ್ಲಿ ಸ್ವಲ್ಪವೂ ಸಂದೇಹ ಉಳಿಯದ ಹಾಗೆ ಮಾಡಿವೆ.
wÃgÀ ಇದಲ್ಲದೆ, ಬೇರಾಗಿರಬಲ್ಲುದು ಎಂಬ ವಿಶಯವೂ ವೈಯಾಕರಣಿಗಳ ಗಮನಕ್ಕೆ ಬಂದುದು ಇಪ್ಪತ್ತನೆಯ ಶತಮಾನದಲ್ಲಿ. ಪ್ರಪಂಚದಲ್ಲಿ ಬಳಕೆಯಲ್ಲಿರುವ ನೂರಾರು ನುಡಿಗಳಿಗೆ ವ್ಯಾಕರಣಗಳನ್ನು ಬರೆಯಲು ಪ್ರಯತ್ನ ಮಾಡಿದಾಗ ಅವು ಬಹಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಬೇರಾಗಿರಬಲ್ಲುವು ಎಂಬ ವಿಶಯ ಸ್ಪಶ್ಟವಾಯಿತು.
ಹಾಗಾಗಿ, ಈ ಇಪ್ಪತ್ತೊಂದನೆಯ ಶತಮಾನದಲ್ಲೂ ನಮ್ಮ ಪ್ರಾಚೀನ ವೈಯಾಕರಣಿಗಳು ಮಾಡಿದ ತಪ್ಪನ್ನು ತಿದ್ದದೆ ಹಾಗೆಯೇ ಮುಂದುವರಿಸಿಕೊಂಡು ಹೋಗುವುದರಿಂದ ಯಾವ ಪುರುಶಾರ್ತವೂ ಸಿದ್ದಿಸಲಾರದು. ಸೂರ್ಯ ಮೂಡು ದಿಕ್ಕಿನಲ್ಲಿ ಮೂಡಿ ಪಡು ದಿಕ್ಕಿನಲ್ಲಿ ಮುಳುಗುತ್ತಾನೆಂಬ ಹಳೇ ಕಾಲದ ಅನಿಸಿಕೆಯನ್ನು ಸರಿ0iÉುಂಬುದಾಗಿ ಇವತ್ತಿಗೂ ಕಗೋಳ ವಿಜ್ನಾನದ ಕ್ಲಾಸಿನಲ್ಲಿ ಹೇಳಿ ಕೊಡುವುದು ಹೇಗೆ ತಪ್ಪಾಗುತ್ತದೆಯೋ ಹಾಗೆ0iÉುೀ ಇದೂ ಕೂಡ.
ವ್ಯಾಕರಣವೆಂಬುದು
ನುಡಿಯಿಂದ
ನುದಿಗೆ
1.2 ವ್ಯಾಕರಣದ ಉದ್ದೇಶ
15 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಒಂದು ನುಡಿಯಲ್ಲಿ ಬರುವ ಪದಗಳ, ಪದಕಂತೆಗಳ ಮತ್ತು ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ಆ ನುಡಿಯ ಮೇಲೆ ನಾವು ಬರೆಯಬಹುದಾದ ವ್ಯಾಕರಣದ ಮುಕ್ಯ ಉದ್ದೇಶ. ಈ ರಚನೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಹಾಗಾಗಿ ಬೇರೆ ಬೇರೆ ನುಡಿಗಳ ವ್ಯಾಕರಣಗಳೂ ಬೇರೆ ಬೇರೆ ತೆರನಾಗಿರುವುದು ಅತ್ಯವಶ್ಯ.
ನಿಜಕ್ಕೂ ಕನ್ನಡ ನುಡಿಯ ವ್ಯಾಕರಣವನ್ನು ನಾವೆಲ್ಲರೂ ಬಲ್ಲೆವು. ಇಲ್ಲವಾದರೆ ಕನ್ನಡ ನುಡಿಯಲ್ಲಿ ತಪ್ಪಿಲ್ಲದೆ ವಾಕ್ಯಗಳನ್ನು ರಚಿಸಲು ಮತ್ತು ಮನಸ್ಸಿಗೆ ನಮಗೆ ತೋರಿದ್ದನ್ನೆಲ್ಲ ಇನ್ನೊಬ್ಬರಿಗೆ ವಿವರಿಸಿ ಹೇಳಲು ಸಾದ್ಯವಾಗುತ್ತಿರಲಿಲ್ಲ. ಚಿಕ್ಕಂದಿನಲ್ಲಿ ನುಡಿಯನ್ನಾಡಲು ಕಲಿಯುವಾಗಲೇನೇ ಅದರ ವ್ಯಾಕರಣವನ್ನೂ ನಾವು ಈ ರೀತಿ ನಮಗೆ ತಿಳಿಯದಂತೆಯೇ ಕಲಿತುಕೊಂಡಿರುತ್ತೇವೆ.
ಆದರೆ ಈ ವ್ಯಾಕರಣದ ಅರಿವು ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ರೂಪದಲ್ಲಿ ತುಂಬಿಕೊಂಡಿರುತ್ತದೆ. ಅದನ್ನು ಬಳಸುವುದು ಹೇಗೆ ಎಂಬುದನ್ನು ನಾವು ತಿಳಿದಿರುವೆವಲ್ಲದೆ ಅದರ ಸ್ವರೂಪವೆಂತಹದು ಎಂಬುದನ್ನು ನಾವು ತಿಳಿದಿಲ್ಲ. ಎತ್ತುಗೆಗಾಗಿ ಕನ್ನಡದಲ್ಲಿ ಮಾತನಾಡುವಾಗ, ಮರದ ಪೆಟ್ಟಿಗೆ, ಕಲ್ಲಿನ ಗೋಡೆ, ಕೆರೆಯ ನೀರು, ಅದರ ಕಣ್ಣು, ಅಕ್ಕನ ಮನೆ ಎಂಬಂತಹ ಪದಕಂತೆಗಳನ್ನು ಕಶ್ಟವಿಲ್ಲದೆ ಬಳಸುತ್ತೇವೆ. ಆದರೆ ಈ ಪದಕಂತೆಗಳ ರಚನೆಯಲ್ಲಿ (1) ಎರಡು ಹೆಸರುಪದ'ಗಳು ಒಟ್ಟಿಗೆ ಸೇರಿವೆ; (2) ಅವನ್ನು ಈ ರೀತಿ ಒಟ್ಟಿಗೆ ಸೇರಿಸುವುದಕ್ಕಾಗಿ ಮೊದಲನೆಯ ಹೆಸರುಪದದೊಂದಿಗೆ ಅ ಎಂಬ ಒಟ್ಟನ್ನು ಬಳಸಬೇಕಾಗಿದೆ; ಮತ್ತು (3) ಹೀಗೆ ಬಳಸುವಾಗ ಆ ಹೆಸರುಪದದ ಸ್ವರೂಪವನ್ನನುಸರಿಸಿ ಅದರೊಂದಿಗೆ ದ್, ಇನ್, ಯ್, ರ್ ಮತ್ತು ನ್ ಎಂಬ ಆಗಮ’ಗಳನ್ನೂ ಬಳಸಬೇಕಾಗಿದೆ ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಅದು ನಮ್ಮ ಗಮನಕ್ಕೆ ಬಾರದಿದ್ದರೂ ಈ ಕೆಲಸವನ್ನು ನಾವು ಪ್ರತಿಯೊಂದು ಬಾರಿಯೂ ತಪ್ಪಿಲ್ಲದೆ ನಡೆಸಬಲ್ಲೆವು. ಎಲ್ಲಿ ರ್ ಬರಬೇಕು, ಎಲ್ಲಿ ದ್ ಬರಬೇಕು, ಎಲ್ಲಿ ಇನ್ ಇಲ್ಲವೇ ನ್ ಬರಬೇಕು ಎಂಬುದನ್ನು ನಾವು ವಿವರಿಸಲಾರೆವಾದರೂ ಅವನ್ನೆಲ್ಲ ಸರಿಯಾಗಿಯೇ ಬರಬೇಕಾದ ಕಡೆಗಳಲ್ಲಿ ಬಳಸಬಲ್ಲೆವು. ಈ ಬಳಕೆಗಳ ಹಿಂದೆ ವಿಶಿಶ್ಟವಾದೊಂದು ಕಟ್ಟಲೆಯಿದೆ0iÉುಂಬ ವಿಶಯವೂ ನಮ್ಮ ಗಮನಕ್ಕೆ ಬರುವುದಿಲ್ಲ. ಅಂತಹ ಕಟ್ಟಲೆಗಳನ್ನೆಲ್ಲ ನಾವು
ನಮ್ಮ ಅರಿವಿಗೆ ಎಟಕದ ರೂಪದಲ್ಲಿ ಮಾತ್ರ ಪಡೆದುಕೊಂಡಿರುವುದೇ ಇದಕ್ಕೆ PÁgÀt.
ಇಂತಹ ಅರಿವಿಗೆ ಬಾರದ' ಇಲ್ಲವೇ ಅರಿವಿಗೆ ಎಟಕದ’ ಅರಿವು ನಮ್ಮ ಇತರ ಶಾರೀರಿಕ ಚಟುವಟಿಕೆಗಳಿಗೂ ಅತ್ಯವಶ್ಯ. ಎತ್ತುಗೆಗಾಗಿ ನಮ್ಮ ಕಣ್ಣಿಗೆ
16 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಬೇರೆ
ಬೇರೆ
ಮಸೂರವನ್ನು
ಮುನ್ನೋಟ ಸಂಬಂಧಿಸಿದಂತಹ ಚಟುವಟಿಕೆಗಳನ್ನು ಗಮನಿಸಬಹುದು. ನಾವು ಹತ್ತಿರದ ವಸ್ತುಗಳನ್ನೂ ಗುರುತಿಸಬಲ್ಲೆವು, ದೂರದ ವಸ್ತುಗಳನ್ನೂ ಗುರುತಿಸಬಲ್ಲೆವು. ನಿಂತಿರುವ ಪ್ರಾಣಿಯನ್ನೂ ಗುರುತಿಸಬಲ್ಲೆವು, ವೇಗದಿಂದ ಚಲಿಸುತ್ತಿರುವ ಪ್ರಾಣಿಯನ್ನೂ ಗುರುತಿಸಬಲ್ಲೆವು. ಇಂತಹ ಹಲವು ಕಣ್ಣಿಗೆ ಸಂಬಂದಿಸಿದ ಚಟುವಟಿಕೆಗಳನ್ನು ನಾವು ನಡೆಸಬಲ್ಲೆವಾಗಿದ್ದು, ಅದಕ್ಕಾಗಿ ನಮ್ಮ ಕಣ್ಣಿನ ಗುಡ್ಡೆಗಳನ್ನು ಬೇರೆ ಬೇರೆ ರೀತಿಯಲ್ಲಿ ಚಲಿಸಬೇಕಾಗುತ್ತದೆ ಮತ್ತು ಆ ಗುಡ್ಡೆಯ ಮುಂಬಾಗದಲ್ಲಿರುವ ಆಕಾರಗಳಿಗೆ ಬದಲಿಸಬೇಕಾಗುತ್ತದೆ.
ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿದ್ದೇವೆ. ಆದರೆ ಆ ತಿಳುವಳಿಕೆ ಎಂತಹದು ಎಂಬುದು ನಮ್ಮ ಅರಿವಿಗೆ ಎಟಕದ ರೂಪದಲ್ಲಿದೆ. ಕಣ್ಣಿನಲ್ಲಿ ಎಂತಹ ಸ್ನಾಯುಗಳೆಲ್ಲ ಇವೆ, ಅವುಗಳಲ್ಲಿ ಕೆಲವನ್ನು ಹಿಗ್ಗಿಸಿ ಮತ್ತು ಇನ್ನು ಕೆಲವನ್ನು ಕುಗ್ಗಿಸಿ ನಮ್ಮ ಕಣ್ಣುಗಳನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತೇವೆ ಎಂಬ ವಿಶಯ ನಮಗೆ ತಿಳಿಯದು. ಕಣ್ಣಿನ ಒಳರಚನೆಯನ್ನು ಕಲಿತಿರುವ ಕಣ್ಣಿನ ಡಾಕ್ಟರರ ಮಿದುಳಿನಲ್ಲಿ ಮಾತ್ರ ಈ ವಿಶಯ ಅರಿವಿಗೆ ಎಟಕುವ ರೂಪದಲ್ಲಿದೆ.
ನುಡಿಯ ವಿಶಯವೂ ಹೀಗೆಯೇ. ಮಾತನಾಡುವುದು ಹೇಗೆಂದು ನಮಗೆ ಗೊತ್ತಿದೆ, ಎಂದರೆ ಮಾತನಾಡಲು ಬೇಕಾಗುವ ವ್ಯಾಕರಣಾಂಶಗಳೆಲ್ಲ ನಮ್ಮ ಮತ್ತು ತಲೆಯಲ್ಲಿ ಮಾತನಾಡುವಾಗ ಅವುಗಳಲ್ಲಿ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದನ್ನು ನಾವು ಇನ್ನೊಬ್ಬರಿಗೆ ವಿವರಿಸಿ ಹೇಳಲಾರೆವು. ಆ ಅರಿವು ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ.
ನುಡಿಯರಿಗರು ಇಲ್ಲವೇ ವೈಯಾಕರಣಿಗಳು ಈ ಅರಿವಿಗೆ ಎಟಕದ ಅರಿವು ಎಂತಹದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಆ ಅರಿವನ್ನು ಅರಿವಿಗೆ ಎಟಕಬಲ್ಲ ವ್ಯಾಕರಣ ಕಟ್ಟಲೆಗಳ ಮೂಲಕ ವಿವರಿಸಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಅರಿವಿಗೆ ಎಟಕದ ಅರಿವು ನಮ್ಮ ತಲೆಯೊಳಗೆ ಕಟ್ಟಲೆಗಳ ನರಗಳ ಒಂದು ವಿಶಿಶ್ಟವಾದ ರೂಪದಲ್ಲಿರುವುದಿಲ್ಲ. ಮಿದುಳಿನಲ್ಲಿರುವ ಜೋಡಣೆಯ ರೂಪದಲ್ಲಿ ಇಲ್ಲದಿರುವುದೇ ನಮ್ಮ ಅರಿವಿಗೆ ಎಟಕದಿರಲು ಮುಕ್ಯ ಕಾರಣ. ನುಡಿಯರಿಗರು ಈ ರೀತಿ ಒಂದು ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕಬಲ್ಲ ರೂಪದಲ್ಲಿ ಸಿದ್ದಪಡಿಸುವುದರಿಂದ, ಮತ್ತು ವಿದ್ಯಾರ್ತಿಗಳು ಅದನ್ನು ಕಲಿಯುವುದರಿಂದ ಪ್ರಯೋಜನವೇನಾದರೂ ಇದೆಯೇ ಎಂದು ಯಾರಾದರೂ
ಹುದುಗಿಕೊಂಡಿವೆ. ಆದರೆ ಅವು ಎಂತಹವು ಮತ್ತು
ರೂಪದಲ್ಲಿರುತ್ತದೆ. ಅದು
ಯಾವುದನ್ನು ಎಲ್ಲಿ
ಕಟ್ಟಲೆಗಳ
17 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೇಳಬಹುದು. ಆದರೆ ಈ ಪ್ರಶ್ನೆಯನ್ನು ನುಡಿಯ ವಿಶಯವಾಗಿ ಕೇಳುತ್ತಾರಲ್ಲದೆ, ಕಣ್ಣಿನ ವಿಶಯವಾಗಿ ಯಾರೂ ಕೇಳುವುದಿಲ್ಲ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಣ್ಣಿನಲ್ಲಿ ನೋವಾದಾಗ ಇಲ್ಲವೇ ಬೇರೆ ತೊಂದರೆಗಳುಂಟಾದಾಗ ಅದರ ಕುರಿತಾಗಿ ಅರಿವಿಗೆ ಎಟಕುವ ತಿಳಿವನ್ನು ಪಡೆದಿರುವವರ ಸಹಾಯ ನಮಗೆ ಅತ್ಯವಶ್ಯ. ಹಾಗಾದಾಗ ನಾವು ಕೂಡಲೇ ಕಣ್ಣಿನ ಡಾಕ್ಟರರಲ್ಲಿಗೆ ಓಡುತ್ತೇವೆ. ಆದರೆ ನುಡಿಯ ವಿಶಯವಾಗಿ ನಮಗೆ ಅಂತಹ ತೊಂದರೆ ಬರುವಂತೆ ತೋರುವುದಿಲ್ಲ. ಹಾಗಾಗಿ ವೈಯಾಕರಣಿಗಳ ಇಲ್ಲವೇ ನುಡಿಯರಿಗರ ಅವಶ್ಯಕತೆ ನಮಗೆ ಸಾಮಾನ್ಯವಾಗಿ ಬರುವುದಿಲ್ಲವೆಂದೇ ಹೇಳಬಹುದು.
ಇದು ನಿಜವಾದರೂ, ಹೊಸ ನುಡಿಯೊಂದನ್ನು ಕಲಿಯಬೇಕಿದ್ದಲ್ಲಿ ಇಲ್ಲವೇ ನಮ್ಮ ನುಡಿಯಲ್ಲೇನೇ ಹೊಸ ಬದಲಾವಣೆಗಳನ್ನೇನಾದರೂ ಮಾಡಬೇಕಿದ್ದಲ್ಲಿ (ಎತ್ತುಗೆಗಾಗಿ ವಿಜ್ನಾನದ ಪದಕೋಶವೊಂದನ್ನು ತಯಾರಿಸಬೇಕಿದ್ದಲ್ಲಿ) ನಮಗೆ ಇಂತಹ ಅರಿವಿಗೆ ಎಟಕುವ ವ್ಯಾಕರಣ ತಿಳಿವು ಪ್ರಯೋಜನಕ್ಕೆ ಬರುತ್ತದೆ. ಆದರೆ ಇದು ಕಣ್ಣಿನ ತೊಂದರೆಯ ಹಾಗೆ ಎಲ್ಲರನ್ನೂ ಕಾಡುವ ತೊಂದರೆಯಲ್ಲ, ಮತ್ತು ಪರಿಹಾರಕ್ಕಾಗಿ ಒಡನೆಯೇ ಓಡಬೇಕಾಗುವಂತಹ ತೊಂದರೆಯೂ ಅಲ್ಲ. ವ್ಯಾಕರಣದ ವಿಶಯದಲ್ಲಿ ನಾವು ಹೆಚ್ಚಿನ ಮಟ್ಟಿಗೆ ತಲೆಕೆಡಿಸಿಕೊಳ್ಳದಿರುವುದಕ್ಕೆ ಇದೇ ಕಾರಣವಿರಬೇಕು.
ಆದರೆ ಹಲವಾರು ಗಂಟೆಗಳಶ್ಟು ವಿದ್ಯಾರ್ತಿಗಳ ಕಾಲವನ್ನು ಕನ್ನಡ ವ್ಯಾಕರಣದ ಕಲಿಕೆಗಾಗಿ ನಮ್ಮ ಶಾಲೆಗಳಲ್ಲಿ ವೆಚ್ಚಮಾಡುವುದಿದ್ದಲ್ಲಿ, ಅದನ್ನು ಸರಿಯಾಗಿ ಅವರಿಗೆ ಏನಾದರೂ ಪ್ರಯೋಜನವಾಗುವ ಹಾಗೆ ವೆಚ್ಚಮಾಡುವುದು ಒಳ್ಳೆಯದಲ್ಲವೇ? ನುಡಿಯ ಸ್ವರೂಪವೆಂತಹದು ಎಂಬುದನ್ನು ಅವರಿಗೆ ಸ್ಪಶ್ಟವಾಗಿ ತಿಳಿಸುವುದಕ್ಕಾದರೂ ಇದನ್ನು ಬಳಸಬಹÅದಲ್ಲವೇ?
ಬೇರೇನಿಲ್ಲದಿದ್ದರೂ
ನಾವಾಡುವ
1.3 ಕನ್ನಡದವಲ್ಲದ ಕನ್ನಡ ವ್ಯಾಕರಣಗಳು ಕನ್ನಡ ವ್ಯಾಕರಣಗಳು ಕನ್ನಡ ನುಡಿಯ ಒಳರಚನೆಯನ್ನು, ಎಂದರೆ ಕನ್ನಡವನ್ನು ಬಳಸುವವರ ಮಿದುಳಿನಲ್ಲಿ ಅವರ ಅರಿವಿಗೆ ಎಟಕದ ಸ್ಥಿತಿಯಲ್ಲಿರುವ ವ್ಯಾಕರಣವನ್ನು, ಅರಿವಿಗೆ ಎಟಕುವ ಹಾಗೆ ವರ್ಣಿಸಿ ಹೇಳಲು ಪ್ರಯತ್ನಿಸಬೇಕು. ಕನ್ನಡದಲ್ಲಿ ಇದುವರೆಗೆ ಸಿದ್ದವಾಗಿರುವ ವ್ಯಾಕರಣಗಳು ಎಶ್ಟರ ಮಟ್ಟಿಗೆ ಈ ಕೆಲಸವನ್ನು ಮಾಡಲು ಸಮರ್ತವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ.
ಮೇಲೆ ಹೇಳಿದ ಹಾಗೆ, ಕನ್ನಡದ ಮೇಲೆ ಸಿದ್ದವಾಗಿರುವ ವ್ಯಾಕರಣಗಳೆಲ್ಲ ಸಂಸ್ಕ್ರುತ, ಲ್ಯಾಟಿನ್ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಮಾಡಿರುವ ಪ್ರಯತ್ನಗಳೇ ಹೊರತು
18 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನುಡಿಯಲ್ಲಿ ಬರೆಯಲು ಆ
ಮುನ್ನೋಟ ಕನ್ನಡದವೇ ಆದ ವ್ಯಾಕರಣದ ಕಟ್ಟಲೆಗಳನ್ನು ಕಂಡುಹಿಡಿಯಲು ಮಾಡಿರುವ ಪ್ರಯತ್ನಗಳಲ್ಲ.
ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಎಶ್ಟು ಮಾತ್ರಕ್ಕೂ ಕನ್ನಡಕ್ಕೆ ಅಳವಡಿಸಲು ಸಾದ್ಯವಿಲ್ಲವೆಂದಾದಾಗ ಮಾತ್ರ ಕನ್ನಡದಲ್ಲಿ ಅದರದೇ ಆದ ವ್ಯಾಕರಣದ ಕಟ್ಟಲೆಗಳೇನಾದರೂ ಇವೆಯೇ ಎಂಬುದನ್ನು ಕಂಡು ಹಿಡಿಯಲು ಈ ವ್ಯಾಕರಣಗಳು ಪ್ರಯತ್ನಿಸುತ್ತವೆ. ಹಾಗಾಗಿ, ಹೆಚ್ಚಿನ ಸಂದರ್ಬಗಳಲ್ಲೂ ಇವು ಕನ್ನಡ ನುಡಿಯ ವೈಶಿಶ್ಟ್ಯಗಳನ್ನು ವಿವರಿಸುವಲ್ಲಿ ತೀರಾ ಅಸಮರ್ತವಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಪಟ್ಯಪುಸ್ತಕ ಸಮಿತಿಯ ಆದೇಶದ ಮೇರೆಗೆ ರಚಿತವಾಗಿರುವ ಶಾಲಾ ವ್ಯಾಕರಣಗಳನ್ನು ಪರಿಶೀಲಿಸಿದಾಗ ಈ ವಿಶಯ ಬಹಳ ಸ್ಪಶ್ಟವಾಗಿ ಕಣ್ಣಿಗೆ ಹೊಡೆಯುತ್ತದೆ. ಶಾಲಾ ವಿದ್ಯಾರ್ತಿಗಳು ಬಳಸುವ ಇಲ್ಲವೇ ಅವರು ಓದಬೇಕಾಗಿರುವ ಪಟ್ಯಪುಸ್ತಕಗಳು ಬಳಸುವ ಕನ್ನಡ ನುಡಿಯನ್ನು ಈ ವ್ಯಾಕರಣಗಳು ವರ್ಣಿಸಿ ಹೇಳಿದಲ್ಲಿ ಅದು ವಿದ್ಯಾರ್ತಿಳಿಗೆ ಗೊತ್ತಾದೀತು ಮತ್ತು ಅಂತಹದೇ ವ್ಯಾಕರಣದಿಂದ ಅವರಿಗೆ ಸಹಾಯವಾದೀತು.
ಆದರೆ ಹಾಗೆ ಮಾಡುವ ಬದಲು, ಈ ಶಾಲಾ ವ್ಯಾಕರಣಗಳು ಸಂಸ್ಕ್ರುತ ವ್ಯಾಕರಣಗಳಲ್ಲಿ ಕಾಣಿಸುವ ವ್ಯಾಕರಣದ ಕಟ್ಟಲೆಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಲು ಪ್ರಯತ್ನಿಸುತ್ತವೆ ಮತ್ತು ಅವಕ್ಕೆ ಕನ್ನಡದಲ್ಲಿ ಎತ್ತುಗೆಗಳನ್ನು ಕೊಡಲು ಪ್ರಯತ್ನಿಸುತ್ತವೆ. ಹೀಗೆ ಮಾಡಲು ಕನ್ನಡದಲ್ಲಿ ಎತ್ತುಗೆಗಳು ಸಿಗದಿದ್ದಾಗ, ಕಟ್ಟಲೆಗಳನ್ನು ಬದಲಿಸುವ ಬದಲು, ಅವಕ್ಕೆ CAvÀºÀ ಸಂಸ್ಕ್ರುತದಿಂದ ಎತ್ತುಗೆಗಳನ್ನು ಹೆಕ್ಕಿ ಕೊಡುತ್ತವೆ. ಇದು ಕನ್ನಡ ವ್ಯಾಕರಣ ಹೇಗಾದೀತು? ಎತ್ತುಗೆಗಾಗಿ, ಈ ವ್ಯಾಕರಣಗಳು ಸಮಾಸವೆಂಬ ಅಧ್ಯಾಯದಲ್ಲಿ ಮೊದಲಿಗೆ ಸಂಸ್ಕ್ರುತದಲ್ಲಿ ಆರು ಸಮಾಸಗಳಿವೆಯೆಂದು ಹೇಳಿ, ಅನಂತರ ಅವಕ್ಕಿಂತ ಬೇರಾಗಿರುವ ಎರಡು ಸಮಾಸಗಳೂ ಕನ್ನಡದಲ್ಲಿ ಇವೆಯೆಂದು ಹೇಳುತ್ತವೆ. ಈ ಸಮಾಸಗಳಿಗೆ ಎತ್ತುಗೆಗಳನ್ನು ಕೊಡುವಾಗ ಕೆಲವಕ್ಕೆ ಸಂಸ್ಕ್ರುತದಿಂದ, ಕೆಲವಕ್ಕೆ ಹಳೆಗನ್ನಡದಿಂದ, ಮತ್ತು ಬೇರೆ ಕೆಲವಕ್ಕೆ ಹೊಸಗನ್ನಡದಿಂದ ಎತ್ತುಗೆಗಳನ್ನು ಆರಿಸಿ ಕೊಡುತ್ತವೆ. ಎಲ್ಲವಕ್ಕೂ ಹೊಸಗನ್ನಡದಿಂದ ಎತ್ತುಗೆಗಳನ್ನು ಕೊಡಲು ಸಾದ್ಯವಾಗದಿರುವುದೇ ಇದಕ್ಕೆ ಮುಕ್ಯ ಕಾರಣ.
ಕಲಸುಮೇಲೋಗರದಿಂದ ವಿದ್ಯಾರ್ತಿಗಳಿಗೆ ಏನು ಆದರೆ ಇಂತಹ ಪ್ರಯೋಜನ ದೊರಕೀತು? ಸಮಾಸದ ವಿಶಯ ವಿದ್ಯಾರ್ತಿಗಳಿಗೆ ಸರಿಯಾಗಿ ತಿಳಿಯಬೇಕಾದರೆ ಮೊದಲಿಗೆ ಹೊಸಗನ್ನಡದಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ತಿಳಿಸಿ ಅವಕ್ಕೆ ಹೊಸಗನ್ನಡದಿಂದಲೇ ಎತ್ತುಗೆಗಳನ್ನು ಕೊಟ್ಟು
ವ್ಯಾಕರಣದ
19 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಿವರಿಸಬೇಕು. ಅನಂತರ ಅಗತ್ಯವಿದ್ದರೆ ಹಳೆಗನ್ನಡದ ಸಮಾಸಗಳು ಇವಕ್ಕಿಂತ ಬೇರಾಗಿವೆಯೇ, ಇದ್ದರೆ ಹೇಗೆ ಬೇರಾಗಿವೆ ಎಂಬುದನ್ನಾಗಲೀ, ಇಲ್ಲವೇ ಸಂಸ್ಕ್ರುತದ ಸಮಾಸಗಳು ಎಂತಹವು, ಕನ್ನಡದ ಸಮಾಸಗಳಿಗಿಂತ ಅವು ಹೇಗೆ ಬೇರಾಗಿವೆ ಎಂಬುದನ್ನಾಗಲೀ ಎತ್ತುಗೆಗಳ ನೆರವಿನಿಂದ ವಿವರಿಸಬೇಕು. ಇದಲ್ಲವೇ ಸರಿಯಾದ ಕ್ರಮ?
ನುಡಿಯನ್ನು
1.4 ಹೊಸಗನ್ನಡಕ್ಕೆ ಅದರದೇ ವ್ಯಾಕರಣ ನಿಜಕ್ಕೂ ಹೊಸಗನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣವಿದೆ. ಇದು ಹಳೆಗನ್ನಡದ ವ್ಯಾಕರಣಕ್ಕಿಂತ ಸ್ವಲ್ಪಮಟ್ಟಿಗೆ ಬೇರಾಗಿದೆ. ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳ ವ್ಯಾಕರಣಗಳಿಗಿಂತ ಬಹಳಮಟ್ಟಿಗೆ ಬೇರಾಗಿದೆ. ಈ ವ್ಯಾಕರಣ ಹೊಸಗನ್ನಡವನ್ನು ಸರಿಯಾಗಿ ಆಡಬಲ್ಲ ಮತ್ತು ಅದರಲ್ಲಿ ತಪ್ಪಿಲ್ಲದೆ ಬರೆಯಬಲ್ಲ ಎಲ್ಲಾ ವ್ಯಕ್ತಿಗಳ ಮಿದುಳಿನಲ್ಲೂ ಅವರ ಅರಿವಿಗೆ ಎಟಕದ ರೂಪದಲ್ಲಿ ಅಡಗಿರುತ್ತದೆ.
ಹೊಸಗನ್ನಡ ಸರಿಯಾಗಿ ಬಳಸಬಲ್ಲವರು ಹಳೆಗನ್ನಡ ನುಡಿಯನ್ನಾಗಲಿ, ಇಲ್ಲವೇ ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳನ್ನಾಗಲಿ (ಅವನ್ನು ಪ್ರತ್ಯೇಕವಾಗಿ ಕಲಿಯದೆ) ಬಳಸಲಾರರು. ಇದೇ ರೀತಿಯಲ್ಲಿ ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ನುಡಿಗಳನ್ನು ಬಳಸಬಲ್ಲವರು ಪ್ರತ್ಯೇಕವಾಗಿ ಕಲಿಯದೆ ಹೊಸಗನ್ನಡ ನುಡಿಯನ್ನು ಬಳಸಲಾರರು ಇಲ್ಲವೇ ತಿಳಿಯಲಾರರು. ಈ ನುಡಿಗಳನ್ನು ಬಳಸಲು ಬೇಕಾಗುವ ಅರಿವಿಗೆ ಎಟಕದ ವ್ಯಾಕರಣಗಳು ಒಂದಕ್ಕಿಂತ ಒಂದು ಬೇರಾಗಿರುವುದೇ ಇದಕ್ಕೆ ಕಾರಣ.
ಹೊಸಗನ್ನಡ ನುಡಿಯ ಈ ಅರಿವಿಗೆ ಎಟಕದ ವ್ಯಾಕರಣದ ತಿಳಿವನ್ನು Cj«UÉ ಹೊಸಗನ್ನಡ ವೈಯಾಕರಣಿಗಳು ಮಾಡಬೇಕಾಗಿರುವ ಮುಕ್ಯ ಕೆಲಸ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವರು ಪದಕಂತೆಗಳು, ಹೊಸಗನ್ನಡದ ಮತ್ತುವಾಕ್ಯಗಳು ಎಂತಹವು ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸಿ ಅವುಗಳ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಬರೆಯಬೇಕು.
ಎತ್ತುಗೆಗಾಗಿ, ಹೊಸಗನ್ನಡ ಪದಗಳ ಒಳರಚನೆಯನ್ನು ತಿಳಿಯಲು ಆ ಪದಗಳಲ್ಲಿ ಎಂತಹ ಪದಗಳ ಬಳಕೆಯಾಗುತ್ತದೆ, ಎಂತಹ ಒಟ್ಟುಗಳ ಬಳಕೆಯಾಗುತ್ತದೆ, ಮತ್ತು ಈ ಒಟ್ಟುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಹೊಸಗನ್ನಡದಲ್ಲಿ ಬಳಕೆಯಾಗುವ ಸಂಗ್ರಹಿಸಿ ಪರಿಶೀಲಿಸಬೇಕಾಗುತ್ತದೆ.
ಬದಲಾಯಿಸುವುದೇ
ಎಚ್ಚರಿಕೆಯಿಂದ
ಪದಗಳನ್ನೆಲ್ಲ
ಪದಗಳು,
ಎಟಕುವ
ರೂಪಕ್ಕೆ
20 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮತ್ತು
ವಾಕ್ಯಗಳನ್ನು
ಪದಕಂತೆಗಳನ್ನು
ಮುನ್ನೋಟ ಸಂಸ್ಕ್ರುತ ವೈಯಾಕರಣಿಗಳು ಸಂಸ್ಕ್ರುತದ ಪದಗಳನ್ನೆಲ್ಲ ಈ ರೀತಿಯಲ್ಲಿ ಸಂಗ್ರಹಿಸಿ ಅವುಗಳ ಒಳರಚನೆಯ ಹಿಂದಿರುವ ಕಟ್ಟಲೆಗಳನ್ನು ಪಟ್ಟಿಮಾಡಿದ್ದಾರೆ. ಇಂಗ್ಲಿಶ್, ಲ್ಯಾಟಿನ್ ಮೊದಲಾದ ನುಡಿಗಳಲ್ಲೂ ಇಂತಹದೇ ಪರಿಶೀಲನೆ ನಡೆದಿದೆ. ಅವರು ಕಂಡುಹಿಡಿದಿರುವ ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳ ರಚನೆಯ ಹಿಂದಿರುವ ಕಟ್ಟಲೆಗಳನ್ನು ಹಾಗೆಯೇ ಹೊಸಗನ್ನಡದ ಪದಗಳಿಗೆ ಅಳವಡಿಸಲು ಸಾದ್ಯವಾಗದು. ಈ ಪದಗಳಿಗೆ ತಮ್ಮವೇ ಆದ ಕಟ್ಟಲೆಗಳಿದ್ದು, ಅವನ್ನು ಕಂಡುಹಿಡಿಯಲು ಬೇರೆಯೇ ಪ್ರಯತ್ನ ನಡೆಸಬೇಕು. ಇದೇ ರೀತಿಯಲ್ಲಿ ಹೊಸಗನ್ನಡದ ಪದಕಂತೆಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ತಿಳಿಯಲು, ಮತ್ತು ಆ ಒಳರಚನೆಯ ಹಿಂದಿರುವ ಕಟ್ಟಲೆಗಳಾವುವು ಎಂಬುದನ್ನು ಕಂಡುಹಿಡಿಯಲು ಹೊಸಗನ್ನಡದಲ್ಲಿ ಬಳಕೆಯಲ್ಲಿರುವ ಕಲೆಹಾಕಿ ಜಾಗ್ರತೆಯಿಂದ ಪರಿಶೀಲಿಸುವುದು ಅವಶ್ಯ.
ಮೇಲೆ ಹೇಳಿದ ಹಾಗೆ, ಈ ಕಟ್ಟಲೆಗಳ `ಅರಿವಿಗೆ ಎಟಕದ’ ತಿಳಿವು ನಮ್ಮೆಲ್ಲರಲ್ಲೂ ಇದೆ. ಹೊಸಗನ್ನಡದಲ್ಲಿ ನಾವು ಮಾತನಾಡಬಲ್ಲೆವು ಮತ್ತು ಇತರರು ಮಾತನಾಡಿದಾಗ ಅವರು ಏನು ಹೇಳುತ್ತಾರೆ ಎಂಬುದನ್ನು ಗೊತ್ತುಮಾಡಿಕೊಳ್ಳಬಲ್ಲೆವು ಎಂಬುದರಿಂದ ಈ ವಿಶಯ ಸ್ಪಶ್ಟವಾಗುತ್ತದೆ. ಇಂತಹ ತಿಳಿವು ನಮ್ಮಲ್ಲಿ ಇಲ್ಲವಾದರೆ ಈ ಎರಡು ಕೆಲಸಗಳನ್ನೂ ನಾವು ಮಾಡಲಾರೆವು ಎಂಬುದನ್ನು ಈ ಕೆಳಗಿನ ನಿದರ್ಶನ ನಮಗೆ ಬಹಳ ಸ್ಪಶ್ಟವಾಗಿ ತೋರಿಸಿಕೊಡುತ್ತದೆ.
ಎಣ್ಣುಕ(ಕಂಪ್ಯೂಟರ್)ಗಳು ಒಂದು ನುಡಿಯನ್ನು ಬಳಸಲು ಇಲ್ಲವೇ ಒಂದು ನುಡಿಯಿಂದ ಇನ್ನೊಂದು ನುಡಿಗೆ ವಾಕ್ಯಗಳನ್ನು ಅನುವಾದಿಸಲು ಸಾದ್ಯವಾಗ ಬೇಕಾದರೆ ಅವು ಯಾಂತ್ರಿಕವಾಗಿ ಬಳಸಬಲ್ಲ ವ್ಯಾಕರಣದ ಸಾಪ್್ಟವೇರನ್ನು (ಎಂದರೆ ಕಟ್ಟಲೆಗಳನ್ನು) ಅವುಗಳಲ್ಲಿ ಅಳವಡಿಸುವ ಅವಶ್ಯಕತೆಯಿದೆ. ಆದರೆ ಇಂತಹ ಸಾಫ್್ಟವೇರನ್ನು ತಯಾರಿಸಬೇಕಿದ್ದಲ್ಲಿ ಆ ನುಡಿಯ ವ್ಯಾಕರಣದ ತಿಳಿವನ್ನು ರೂಪಕ್ಕೆ ಬದಲಾಯಿಸಿಕೊಳ್ಳುವುದು ಅವಶ್ಯ.
ಮನುಶ್ಯನ ಮಿದುಳಿನಲ್ಲಿ ಅರಿವಿಗೆ ಎಟಕದ ಬಗೆಯಲ್ಲಿರುವ ವ್ಯಾಕರಣದ ತಿಳಿವು ಅತ್ಯಂತ ಜಟಿಲವಾದುದು. ಇಂಗ್ಲಿಶ್ನ ಮಟ್ಟಿಗೆ ಹೇಳುವುದಾದರೆ, ಸಾವಿರಾರು ವೈಯಾಕರಣಿಗಳ ಅಭ್ಯಾಸದ ನಂತರವೂ ಈ ತಿಳಿವಿನ ಒಂದು ಚಿಕ್ಕ ಅಂಶವನ್ನು ಮಾತ್ರ ಈ ರೀತಿ ಅರಿವಿಗೆ ಎಟಕುವ ರೂಪಕ್ಕೆ ಬದಲಾಯಿಸಲು ಸಾದ್ಯವಾಗಿದೆ ಮತ್ತು ಈ ಚಿಕ್ಕ ಅಂಶವನ್ನಶ್ಟೇ ಎಣ್ಣುಕಗಳಲ್ಲಿ ಅಳವಡಿಸಲು ಸಾದ್ಯವಾಗಿದೆ. ಹಾಗಾಗಿ ಎಣ್ಣುಕಗಳಿನ್ನೂ ಅನುವಾದಿಸುವ ಕೆಲಸದಲ್ಲಿ ಮತ್ತು ನುಡಿಯನ್ನು ಬಳಸುವ ಬೇರೆ ಕೆಲಸಗಳಲ್ಲಿ ಮೊದಲ ಹೆಜ್ಜೆಯನ್ನಶ್ಟೇ ಇಡುತ್ತಿವೆ.
ಮೊದಲಿಗೆ
ಎಟಕುವ
Cj«UÉ
ನಮ್ಮ
21 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕಲಿಸುತ್ತಿರುವ
ವ್ಯಾಕರಣದಿಂದ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಣ್ಣುಕದಲ್ಲಿ ಕನ್ನಡವನ್ನು ಅಳವಡಿಸಲು ಯಾರಾದರೂ ಪ್ರಯತ್ನಿಸಿದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣವನ್ನು ತಯಾರಿಸುವ ಅವಶ್ಯಕತೆಯೇನು ಎಂಬ ವಿಶಯ ಇದರಿಂದ ಸ್ಪಶ್ಟವಾದೀತು; ಈ ಕೆಲಸಕ್ಕೆ ಇವತ್ತು ನಮ್ಮ ಶಾಲೆಗಳಲ್ಲಿ ಯಾವ ಪಟ್ಯಪುಸ್ತಕಗಳ ಪ್ರಯೋಜನವೂ ಸಿಗಲಾರದು ಎಂಬ ವಿಶಯವೂ ಸ್ಪಶ್ಟವಾದೀತು.
ಮೇಲೆ ಸೂಚಿಸಿದ ಹಾಗೆ, ಈ ಶಾಲಾ ವ್ಯಾಕರಣಗಳು ಹೊಸಗನ್ನಡದಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆ ಎಂತಹದು ಎಂಬುದನ್ನು ವಿವರಿಸುವ ಬದಲು, ಸಂಸ್ಕ್ರುತ ವ್ಯಾಕರಣಗಳಲ್ಲಿ ಬರುವ ಪದರಚನೆಯ ಮತ್ತು ವಾಕ್ಯರಚನೆಯ ಕಟ್ಟಲೆಗಳನ್ನು ಕನ್ನಡಕ್ಕೆ ಅನ್ವಯಿಸುವುದು ಹೇಗೆ ಎಂಬುದನ್ನು ವರ್ಣಿಸುತ್ತವೆ.
ಆದರೆ ಎಣ್ಣುಕಕ್ಕೆ ಬೇಕಾಗಿರುವುದು ಹೊಸಗನ್ನಡ ಪದಗಳ ಮತ್ತು ವಾಕ್ಯಗಳ ಒಳರಚನೆಯ ಹಿಂದಿರುವ ಕಟ್ಟಲೆಗಳು ಮಾತ್ರ. ಅಂತಹ ಕಟ್ಟಲೆಗಳನ್ನು ಬಳಸಿ ತಯಾರಿಸಿರುವ ಸಾಫ್್ಟವೇರ್ ಮಾತ್ರ ಎಣ್ಣುಕಕ್ಕೆ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಅನುವಾದಿಸುವಲ್ಲಿ ಆದಾರವಾಗಬಲ್ಲುದು.
1.5 ದಾರಿ ಹೇಳುವ ಕ್ರಮ ಸಂಸ್ಕ್ರುತ ನುಡಿಗೆ ನಮ್ಮ ಜೀವನ, ಸಾಹಿತ್ಯ ಮತ್ತು ಸಂಸ್ಕ್ರುತಿಗಳಲ್ಲಿ ಒಂದು ಮುಕ್ಯವಾದ ಜಾಗವಿದೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬಾರತದ ಎಲ್ಲಾ ನುಡಿಗಳ ಮೇಲೂ ಅದು ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರಬಾವವನ್ನು ಬೀರಿದೆ. ಹಾಗಾಗಿ, ಅದರ ವ್ಯಾಕರಣದ ಸ್ವರೂಪವೆಂತಹದು ಎಂಬುದನ್ನು ತಿಳಿಯುವುದರಿಂದ ನಮಗೆಲ್ಲರಿಗೂ ಪ್ರಯೋಜನವಿದೆ.
ಬಾರತದಲ್ಲಿ ಬಳಕೆಯಲ್ಲಿರುವ ನುಡಿಗಳಲ್ಲಿ ಕೆಲವು ನುಡಿಗಳನ್ನಾಡುವವರಿಗೆ ಸಂಸ್ಕ್ರುತ ವ್ಯಾಕರಣವನ್ನು ತಿಳಿದುಕೊಳ್ಳುವುದರಿಂದ ಹೆಚ್ಚು ಪ್ರಯೋಜನ ಸಿಗಬಹುದು, ಮತ್ತು ಬೇರೆ ಕೆಲವು ನುಡಿಗಳನ್ನಾಡುವವರಿಗೆ ಸ್ವಲ್ಪ ಕಡಿಮೆ ಪ್ರಯೋಜನ ಸಿಗಬಹುದು. ಹಾಗಾಗಿ ವಿದ್ಯಾಥ್ರಿಗಳಿಗೆ ಸಂಸ್ಕ್ರುತ ವ್ಯಾಕರಣವನ್ನು ಕಲಿಸುವುದರಿಂದ ಪ್ರಯೋಜನವೇ ಇಲ್ಲವೆಂದೇನೂ ನಾನು ವಾದಿಸುವುದಿಲ್ಲ. ಆದರೆ ಅದನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಎಶ್ಟು ಕಲಿಸಬೇಕು ಎಂಬ ವಿಶಯದಲ್ಲಿ ಚರ್ಚೆಗೆ ಅವಕಾಶವಿದೆ. ಈ ವ್ಯಾಕರಣ ಕಲಿಕೆಯ ಸಮಸ್ಯೆಯನ್ನು ನಿಮ್ಮ ಮನೆಗೆ ದಾರಿ ಹೇಳುವ ಸಮಸ್ಯೆಗೆ ಹೋಲಿಸಿ ನೋಡಬಹುದು. ನಿಮ್ಮ ಮನೆಗೆ ಹೋಗಲು ದಾರಿ ಕೇಳಿದವರಿಗೆ ನಿಮ್ಮೂರಿನ ದೇವಸ್ತಾನಕ್ಕೆ ಹೋಗುವ ದಾರಿಯನ್ನು ಮೊದಲಿಗೆ ಹೇಳಿ, ಅನಂತರ ಅಲ್ಲಿಂದ ನಿಮ್ಮ ಮನೆಗೆ ಹೋಗುವ ದಾರಿಯನ್ನು
22 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನೋಟ CªÀjUÉ
CzÀÄ
ಶಾಸ್ತ್ರ
ಹೋಗುವ
ಸಾದ್ಯವಿದೆ,
ನೆರವಾಗಲೂ
ಗ್ರಂತಗಳು ಅದರಲ್ಲಿವೆ. ಅದನ್ನು
ಹೇಳಿದಿರಾದರೆ, ತೊಂದರೆಯನ್ನುಂಟುಮಾಡಲೂ ಸಾದ್ಯವಿದೆ.
ನಿಮ್ಮ ಮನೆ ದೇವಸ್ತಾನದ ಹತ್ತಿರ ಇದೆಯಾದರೆ, ಅಲ್ಲಿಗೆ ಹೋಗುವ ದಾರಿಯನ್ನು ಹೇಳುವುದರಿಂದ ನಿಮ್ಮ ಮನೆಗೆ ಬರಬೇಕೆಂದಿರುವವರಿಗೆ ಪ್ರಯೋಜನವಾಗಬಹುದು. ಆದರೆ ಅದು ದೇವಸ್ತಾನಕ್ಕಿಂತ ಬೇರೆಯೇ ಆದ ಒಂದು ದಿಕ್ಕಿನಲ್ಲಿ ಇದೆಯಾದರೆ, ಅನವಶ್ಯಕವಾಗಿ ತೊಂದರೆಯಾದೀತು. ಇಂತಹ ಸಂದರ್ಬಗಳಲ್ಲಿ ನಿಮ್ಮ ಮನೆಯ ದಾರಿಯನ್ನು ಮತ್ತು ದೇವಸ್ತಾನಕ್ಕೆ ಹೋಗುವ ದಾರಿಯನ್ನು ಬೇರೆ ಬೇರೆಯಾಗಿ ತಿಳಿಸುವುದೇ ಒಳ್ಳೆಯದಲ್ಲವೆ? ಸಂಸ್ಕ್ರುತ ಬಹಳ ಮುಕ್ಯವಾದ ಒಂದು ನುಡಿ. ಅತ್ಯುತ್ತಮವಾದ ಕಾವ್ಯ ದೇವನುಡಿ'ಯೆಂದೇ ಮತ್ತು ವ್ಯಾಕರಣವನ್ನು ಪರಿಗಣಿಸುವವರೂ ಹಲವರಿದ್ದಾರೆ. ಹಾಗಾಗಿ, ಅದರ ಕಲಿಯುವುದೆಂದರೆ ಯಾವುದೆಂದು zÁj ದೇವಸ್ತಾನಕ್ಕೆ ತಿಳಿಯುವಂತೆಯೇ ಎಂದು ಹೇಳಬಹುದು. ಪ್ರಾಕ್ರುತ, ಪಾಲಿ, ಅಪಬ್ರಂಶ ಮೊದಲಾದ ನುಡಿಗಳು ಸಂಸ್ಕ್ರುತಕ್ಕೆ ತೀರ ಹತ್ತಿರವಾದ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣವನ್ನು ಕಲಿಯುವುದಿದ್ದರೆ ಸಂಸ್ಕ್ರುತ ವ್ಯಾಕರಣವನ್ನು ಮೊದಲು ಕಲಿತು ಅನಂತರ ಅದಕ್ಕಿಂತ ಈ ನುಡಿಗಳ ವ್ಯಾಕರಣಗಳು ಹೇಗೆ ಬೇರಾಗಿವೆ ಎಂಬುದನ್ನು ತಿಳಿಯುವುದರ ಮೂಲಕ ಅವುಗಳ ವ್ಯಾಕರಣವನ್ನು ತಿಳಿದುಕೊಳ್ಳುವುದು ಹೆಚ್ಚು ಸುಲಬವಾಗಬಹುದು. ಇದು ದೇವಸ್ತಾನದ ಹತ್ತಿರವಿರುವ ಮನೆಗಳಿಗೆ ದಾರಿ ಹೇಳುವವರು ಮೊದಲು ಹೇಳಿ ಅನಂತರ ಅವರು ದಾರಿಯನ್ನು ದೇವಸ್ತಾನಕ್ಕೆ ಹೋಗಬೇಕಿರುವ ಮನೆಗೆ ಹೇಗೆ ಹೋಗುವುದೆಂದು ಹೇಳುವ ಹಾಗೆ ಎನ್ನಬಹುದು. ಹಿಂದಿ, ಮರಾಟಿ, ಬಂಗಾಲಿ, ಒಡಿಯಾ ಮೊದಲಾದ ಬಾರತದ ಹಲವು ಇವತ್ತಿನ ನುಡಿಗಳು ಇಂಡೋ-ಆರ್ಯನ್’ ಎಂಬ ನುಡಿಕುಟುಂಬಕ್ಕೆ ಸೇರುತ್ತವೆ. ಅವು ಪ್ರಾಕ್ರುತ, ಅಪಬ್ರಂಶ ಮೊದಲಾದವುಗಳಲ್ಲಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ರೂಪುಗೊಂಡ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣಗಳನ್ನು ತಿಳಿಯುವಲ್ಲೂ ಸಂಸ್ಕ್ರುತದ ವ್ಯಾಕರಣ ಸ್ವಲ್ಪ ಮಟ್ಟಿಗೆ ಸಹಾಯಕ್ಕೆ ಬರಬಲ್ಲುದು.
ಆದರೆ ಅವು ಸಂಸ್ಕ್ರುತಕ್ಕಿಂತ ಸಾಕಶ್ಟು ಬೇರಾಗಿವೆಯಾದ ಕಾರಣ, ಅವುಗಳ ಸಂಸ್ಕ್ರುತ ವ್ಯಾಕರಣಗಳನ್ನು ವಿದ್ಯಾರ್ತಿಗಳಿಗೆ ವ್ಯಾಕರಣದ ಮೂಲಕ ತಿಳಿಸಿಹೇಳುವುದು ಅಶ್ಟೊಂದು ಸಮರ್ಪಕವಾಗಲಾರದು. ಇದು ದೇವಸ್ತಾನಕ್ಕಿಂತ (ಆದರೂ ಅದೇ ದಿಕ್ಕಿನಲ್ಲಿರುವ) ಮನೆಗಳಿಗೆ ದಾರಿ ಹೇಳುವ ಹಾಗೆ. ದಾರಿ ತಪ್ಪಿದರೂ
ಸಾಕಶ್ಟು ದೂರ ಇರುವ
ಕಲಿಸಬೇಕಾದಾಗ ಅವನ್ನು
ಹೋಗುವ
23 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ತಮಿಳು,
ಮಲೆಯಾಳ,
ತೆಲುಗು ಮೊದಲಾದ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ದೇವಸ್ತಾನಕ್ಕೆ ಹೋಗಿ ಅಲ್ಲಿಂದ ಆ ಮನೆಗಳಿಗೆ ಹೋಗಬಹುದು, ಆದರೆ ನಿಜಕ್ಕೂ ನೇರವಾಗಿ, ದೇವಸ್ತಾನಕ್ಕೆ ಹೋಗದೆ ಆ ಮನೆಗಳಿಗೆ ಹೋಗುವುದೇ ಅನುಕೂಲ. ಕನ್ನಡ, ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು ಸಂಸ್ಕ್ರುತಕ್ಕಿಂತ ತೀರ ಬೇರಾಗಿರುವ ನುಡಿಗಳು. ಅವುಗಳ ವ್ಯಾಕರಣದ ಕಟ್ಟಲೆಗಳು ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳಿಗಿಂತ ತೀರ ಬೇರಾದವುಗಳು. ಸಂಸ್ಕ್ರುತಕ್ಕೂ ಅವಕ್ಕೂ ನಡುವಿರುವ ಸಂಬಂದ ದೇವಸ್ತಾನಕ್ಕೂ ಮತ್ತು ಊರಿನ ಬೇರೆಯೇ ಒಂದು ದಿಕ್ಕಿನಲ್ಲಿರುವ ಮನೆಗಳಿಗೂ ನಡುವಿರುವ ಸಂಬಂದದ ಹಾಗೆ ಎನ್ನಬಹುದು. ಹಾಗಾಗಿ, ಅವುಗಳ ವ್ಯಾಕರಣವನ್ನು ಸಂಸ್ಕ್ರುತ ವ್ಯಾಕರಣಕ್ಕೆ ಸಂಬಂದಿಸಲು ಹೋಗದೆ ಬೇರಾಗಿ ಕಲಿಸುವುದೇ ಒಳ್ಳೆಯದು. ಸಂಸ್ಕ್ರುತದ ಪ್ರಬಾವ ಮುಕ್ಯವಾಗಿ ಈ ನುಡಿಗಳ ಪದಕೋಶದಲ್ಲಿ ಕಾಣಿಸುತ್ತದೆ. ಹಾಗಾಗಿ, ಸಂಸ್ಕ್ರುತದಿಂದ ಎರವಲಾಗಿ ಬಂದಿರುವ ಪದಗಳನ್ನು ಪ್ರತ್ಯೇಕಿಸಿ, ಉಳಿದಿರುವ ಪದಗಳ ಮತ್ತು ವಾಕ್ಯಗಳ ಒಳರಚನೆಯನ್ನು ಮೊದಲಿಗೆ ಕಲಿಸಬೇಕು. ಅನಂತರ ಬೇಕಾದರೆ ಸಂಸ್ಕ್ರುತದಿಂದ ಎರವಲಾಗಿ ಬಂದಿರುವ ಪದಗಳ ಒಳರಚನೆಯೆಂತಹದು ಎಂಬುದನ್ನು, ಮತ್ತು ಅದು ಕನ್ನಡದವೇ ಆದ ಪದಗಳ ಒಳರಚನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿದ್ಯಾರ್ತಿಗಳಿಗೆ ಕಲಿಸಬಹುದು.
ಇಂತಹ ಸಂಸ್ಕ್ರುತದಿಂದ ಎರವಲಾಗಿ ಬಂದ ಪದಗಳ ಒಳರಚನೆಯಲ್ಲೂ ಕನ್ನಡ ತನ್ನದೇ ಆದ ಕಟ್ಟಲೆಗಳನ್ನು ಬಳಸುತ್ತಿದ್ದು, ಇವು ಸಂಸ್ಕ್ರುತದಲ್ಲಿ ಬಳಕೆಯಾಗುವ ಪದರಚನೆಯ ಕಟ್ಟಲೆಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ0iÉುಂಬುದನ್ನು ಮುಂದೆ ನೋಡಲಿರುವೆವು.
1.6 ಈ ಪುಸ್ತಕದ ಉದ್ದೇಶ ಸಂಸ್ಕ್ರುತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದುದರಿಂದಾಗಿ ಕನ್ನಡದ ಸ್ಪಶ್ಟವಾಗಿ ವ್ಯಾಕರಣದ ವೈಯಾಕರಣಿಗಳು ತಿಳಿಸಿಹೇಳುವಲ್ಲಿ ಹೇಗೆ ಸೋತುಹೋಗಿದ್ದಾರೆ ಎಂಬುದನ್ನು ಎತ್ತುಗೆಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಕ್ಯ ಉದ್ದೇಶ.
ಇತ್ತೀಚೆಗಿನ ಕೆಲವು ಕನ್ನಡ ವ್ಯಾಕರಣಗಳಲ್ಲಿ ಇಂಗ್ಲಿಶ್ ವ್ಯಾಕರಣ ಪರಂಪರೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಲಾಗಿದೆ. ಇದರಿಂದಾಗಿಯೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ವಿವರಿಸಿ ಹೇಳುವಲ್ಲಿ
ಕಟ್ಟಲೆಗಳನ್ನು
ಕನ್ನಡ
24 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನೋಟ ತೊಂದರೆಯುಂಟಾಗಿದೆ. ಈ ತೊಂದರೆ0iÉುಂತಹದು ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಅಂತಹ ಕೆಲವು ವ್ಯತ್ಯಾಸಗಳನ್ನೂ ಇಲ್ಲಿ ವಿವರಿಸಲಾಗಿದೆ.
ಮುಕ್ಯವಾಗಿ ಪುಸ್ತಕದ ಹೆಸರೇ ಸೂಚಿಸುವ ಹಾಗೆ ಕನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಿದ್ದಪಡಿಸುವ ಅವಶ್ಯಕತೆಯೇನು, ಮತ್ತು ಆ ಪರಂಪರೆಯ ಸ್ವರೂಪ ಎಂತಹದು ಎಂಬುದನ್ನು ತಿಳಿಸಿ ಹೇಳುವುದೇ ಈ ಪುಸ್ತಕದ ಉದ್ದೇಶ.
ನುಡಿಗಳಿಗೆ ಇಲ್ಲವೇ ನುಡಿಕುಟುಂಬಗಳಿಗಿರುವ ಅವುಗಳದೇ ಆದ ವ್ಯಾಕರಣ ಪರಂಪರೆಗಳನ್ನು ಈ ರೀತಿ ತಿಳಿದುಕೊಳ್ಳುವುದರಿಂದ ಬೇರೆಯೂ ಹಲವು ಪ್ರಯೋಜನಗಳು ನಮಗೆ ದೊರಕುತ್ತವೆ. ಈ ವ್ಯಾಕರಣ ಪರಂಪರೆಗಳು ಬೇರೆ ಬೇರೆ ನುಡಿಕುಟುಂಬಗಳು ಮಿಲಿಯಗಟ್ಟಲೆ ವರ್ಶಗಳಿಂದ ಬೆಳೆಸಿಕೊಂಡು ಬಂದಿರುವ ನುಡಿಯರಿವನ್ನು ಪ್ರತಿನಿದಿಸುತ್ತವೆಯೆಂಬುದನ್ನು ಗಮನಿಸಬೇಕು. ಅವು ಈ ನುಡಿಗಳನ್ನಾಡುವ ಜನರ ಮಿಲಿಯಗಟ್ಟಲೆ ವರ್ಶಗಳ ಅನುಬವದ ಸಾರ ಮತ್ತು ಒಟ್ಟು ಸಮಾಜಕ್ಕೆ ಅವರ ಕೊಡುಗೆ.
ದ್ರಾವಿಡ ನುಡಿಗಳ ವ್ಯಾಕರಣ ಪರಂಪರೆಯನ್ನು ಈ ನುಡಿಗಳನ್ನಾಡುವ ಜನರು ತಮ್ಮ ಮಿಲಿಯಗಟ್ಟಲೆ ವರ್ಶಗಳ ಅನುಬವದ ಮೂಲಕ ಬೆಳೆಸಿಕೊಂಡು ಬಂದಿದ್ದಾರೆ. ಅದು ದ್ರಾವಿಡ ಸಂಸ್ಕ್ರುತಿಯ ಒಂದು ಅಂಗ. ಹಾಗಾಗಿ ಅದನ್ನು ತಿಳಿಯದಿರುವುದೆಂದರೆ ಸಂಸ್ಕ್ರುತಿಯ ಒಂದು ಅಂಗವನ್ನು ತಿಳಿಯದಿರುವಂತೆಯೇ ಸರಿ. ಜಗತ್ತಿನಲ್ಲಿ ಸಾವಿರಾರು ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಬರುವ ವ್ಯಾಕರಣದ ಕಟ್ಟಲೆಗಳು ಎಶ್ಟರ ಮಟ್ಟಿಗೆ ಒಂದರಿಂದೊಂದು ಬೇರಾಗಿರಬಲ್ಲುವು ಎಂಬುದನ್ನು ವರ್ಶಗಳಿಂದ ನುಡಿಯರಿಗರು ಪ್ರಯತ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮಗುವಿನ ತಂದೆತಾಯಿಗಳು ಯಾವುದೇ ನುಡಿಯನ್ನಾಡುತ್ತಿರಲಿ, ಅದು ಬೆಳೆಯುತ್ತಿರುವ ಸಮಯದಲ್ಲಿ, ಎಂದರೆ ಆರು ತಿಂಗಳಿನಿಂದ ಎರಡೂವರೆ-ಮೂರು ವರ್ಶಗಳ ಒಳಗೆ ಅದರ ಸುತ್ತುಮುತ್ತ ಯಾವ ನುಡಿ ಬಳಕೆಯಲ್ಲಿದೆಯೋ ಅದನ್ನು ಆ ಮಗು ಬಹಳ ಸುಲಬವಾಗಿ ಮತ್ತು ಸಂಪೂರ್ಣವಾಗಿ ಕಲಿತುಕೊಳ್ಳಬಲ್ಲುದು.
ಎತ್ತುಗೆಗಾಗಿ, ಕನ್ನಡ ಮಾತನಾಡುವ ತಾಯಿತಂದೆಯರ ಮಗು ಆ ನುಡಿಗಿಂತ ತೀರಾ ಬೇರಾಗಿರುವ ಚೈನೀಸ್ ನುಡಿಯನ್ನಾಡುವ ಜನರ ಪರಿಸರದಲ್ಲಿ ಬೆಳೆಯುತ್ತಿದೆಯಾದರೆ, ನಮಗೆ ತೀರ ಕ್ಲಿಶ್ಟವಾಗಿ ಕಾಣಿಸುವಂತಹ ಆ ನುಡಿಯನ್ನೂ ತಾನಾಗಿಯೇ ಕಲಿತುಕೊಳ್ಳಬಲ್ಲುದು. ಅದಕ್ಕೆ ಆ ನುಡಿಯನ್ನು ಪ್ರತ್ಯೇಕವಾಗಿ ಕಲಿಸುವ ಅವಶ್ಯಕತೆಯೇ ಇಲ್ಲ. ಎಲ್ಲಾ ಮಕ್ಕಳೂ ಈ ರೀತಿ ಪ್ರಪಂಚದಲ್ಲಿರುವ ಯಾವುದೇ ನುಡಿಯನ್ನು ಬೇಕಿದ್ದರೂ ಸಂದರ್ಬವೊದಗಿ ಬಂದಲ್ಲಿ ತಾವಾಗಿ0iÉುೀ ಕಲಿತುಕೊಳ್ಳಬಲ್ಲರು.
ತಿಳಿಯಲು
ದ್ರಾವಿಡ
ಹಲವು
25 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ನುಡಿಯನ್ನು
ತಾವಾಗಿ0iÉುೀ
ಮಗು ಒಂದು
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಈ ರೀತಿ ಮಕ್ಕಳು ತಮ್ಮ ಬೆಳವಣೆಗೆಯ ಅಂಗವಾಗಿ ತಮ್ಮ ಪರಿಸರದಲ್ಲಿ ಕಲಿತುಕೊಳ್ಳಲು ಬಳಕೆಯಾಗುತ್ತಿರುವ ಸಾದ್ಯವಾಗುವಂತಹ ನುಡಿಯ ತಿಳಿವು' ಇಲ್ಲವೇ ವ್ಯಾಕರಣದ ತಿಳಿವೊ’ಂದನ್ನು J¯Áè ಪಡೆದು ಬಂದಿರುತ್ತವೆ0iÉುಂಬುದಾಗಿ ಮಕ್ಕಳೂ ಹುಟ್ಟಿನಿಂದಲೇ ನುಡಿಯರಿಗರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಈ ವ್ಯಾಕರಣದ ತಿಳಿವು ಎಂತಹದು? ಇದು ಅರಿವಿಗೆ ಎಟಕದ ರೂಪದಲ್ಲಿರುವ ತಿಳಿವೆಂಬುದರಲ್ಲಿ ಸಂಶಯವಿಲ್ಲ. ಇದರ ಬಳಕೆಯೂ ಅರಿವಿಗೆ ಎಟಕದ ರೂಪದಲ್ಲೇ ನಡೆಯುತ್ತದೆ. ಸುತ್ತುಮುತ್ತಲಿನ ಜನರು ಆಡುವ ಮಾತುಗಳನ್ನು ಕೇಳಿ ಮಗು ತಾನಾಗಿಯೇ ಆ ನುಡಿಯಲ್ಲಿ ನಿರರ್ಗಳವಾಗಿ ಮಾತನಾಡಲು ಬಹಳ ಬೇಗ (ಎಂದರೆ ಕೆಲವೇ ಕೆಲವು ತಿಂಗಳುಗಳಲ್ಲಿ) ಕಲಿತುಕೊಳ್ಳುತ್ತದೆ. ಅದಕ್ಕೆ ಯಾರೂ ಏನನ್ನೂ ಕಲಿಸುವ ಅವಶ್ಯಕತೆಯಿಲ್ಲ.
»ÃUÉ ಕಲಿತುಕೊಳ್ಳುವಾಗ, ಅದು ನುಡಿಯನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವ ವ್ಯಾಕರಣದ ತಿಳಿವಿಲ್ಲಿ ಹಲಕೆಲವು ಬದಲಾವಣೆಗಳುಂಟಾಗುತ್ತಿರುತ್ತವೆ. ಈ ಬದಲಾವಣೆಗಳ ಮೂಲಕ ಅದರ ಮಿದುಳಿನಲ್ಲಿ ಅದು ಕಲಿಯುತ್ತಿರುವ ನುಡಿಯದೇ ಆದ ವ್ಯಾಕರಣದ ತಿಳಿವು ತನ್ನಿಂದ ತಾನೇ ಸಿದ್ದಗೊಳ್ಳುತ್ತದೆ. ಇದು ಪ್ರಕ್ರುತಿಯ ವೈಚಿತ್ರ್ಯಗಳಲ್ಲೊಂದು. ಪ್ರಪಂಚದ ನುಡಿಗಳಿಗೆಲ್ಲ ಸಮಾನವಾಗಿರುವಂತಹ ವ್ಯಾಕರಣ ತತ್ವಗಳು ಯಾವುವು ಎಂಬುದನ್ನು ತಿಳಿಯುವುದರ ಮೂಲಕ ಚಿಕ್ಕ ಮಕ್ಕಳು ಹುಟ್ಟಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವು ಎಂತಹದು ಎಂಬುದನ್ನು ಊಹಿಸಲು ಬರುತ್ತದೆ. ಇದಲ್ಲದೆ, ಪ್ರಪಂಚದ ನುಡಿಗಳು ಒಂದರಿಂದೊಂದು ಯಾವ ಯಾವ ರೀತಿಯಲ್ಲೆಲ್ಲ ಬೇರಾಗಿರಬಲ್ಲುವು ಎಂಬುದನ್ನು ತಿಳಿಯುವುದರ ಮೂಲಕ, ಚಿಕ್ಕ ಮಕ್ಕಳು ಹುಟ್ಟಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವಿನಲ್ಲಿ ಎಂತೆಂತಹ ಬದಲಾವಣೆಗಳನ್ನೆಲ್ಲ ನಡೆಸಬಲ್ಲುವು ಎಂಬುದನ್ನೂ ಊಹಿಸಲು ಬರುತ್ತದೆ.
ಮಾತಿನಲ್ಲಿ ಕೊರತೆ ಕಾಣಿಸುವ ಕೆಲವು ಮಕ್ಕಳಿಗೆ ಮಾತನ್ನು ಕಲಿಸಲು ಇಂತಹ ತಿಳುವಳಿಕೆಯಿಂದ ಪ್ರಯೋಜನವಾಗಬಹುದು. ಆದರೆ ಈ ಮೇಲಿನ ಎರಡು ರೀತಿಯ ಕೆಲಸಗಳನ್ನು ನಡೆಸಬೇಕಿದ್ದರೂ ನುಡಿಗಳಿಗಿರುವ ಅವುಗಳದೇ ಆದ ವ್ಯಾಕರಣ ಎಂತಹದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಈ ರೀತಿ ನಮ್ಮೆಲ್ಲರ ಮಿದುಳಿನಲ್ಲೂ ಅರಿವಿಗೆ ಎಟಕದ ರೂಪದಲ್ಲಿರುವ ನಮ್ಮ ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕಬಲ್ಲ ರೂಪಕ್ಕೆ ಎಂದರೆ ವ್ಯಾಕರಣ ಹಲವಾರು ಪ್ರಯೋಜನಗಳಿವೆ. ಈ ಕೆಲಸವನ್ನು ಸರಿಯಾಗಿ ನಡೆಸಿಕೊಡುವುದೇ ಒಂದು ನುಡಿಯ ವ್ಯಾಕರಣದ ಮುಕ್ಯ ಉದ್ದೇಶ.
ರೂಪಕ್ಕೆ ಬದಲಾಯಿಸುವುದರಿಂದ
ಕಟ್ಟಲೆಗಳ
26 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುನ್ನೋಟ ಕನ್ನಡದ ಮಟ್ಟಿಗೆ ಈ ಕೆಲಸ ಹೇಗೆ ನಡೆಯಬೇಕು, ಸದ್ಯಕ್ಕೆ ಅದು ಹೇಗೆ ತಪ್ಪುದಾರಿಯಲ್ಲಿ ಸಾಗಿದೆ ಎಂಬುದನ್ನು ತೋರಿಸಿಕೊಡುವ ಒಂದು ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
27 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
2. ಸೇರಿಕೆಯ ನಿಯಮಗಳು
Pï
ವ್ಯಂಜನ
ಗ್ ಎಂದಾಗುತ್ತದೆ
2.1 ಮುನ್ನೋಟ ಒಂದು ಪದದೊಂದಿಗೆ ಇನ್ನೊಂದು ಪದವನ್ನು ಇಲ್ಲವೇ ಪ್ರತ್ಯಯವನ್ನು ಸೇರಿಸಿ ದಾಗ ಆ ಪದದಲ್ಲಿ ಇಲ್ಲವೇ ಪ್ರತ್ಯಯದಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ವೈಯಾಕರಣಿಗಳು ಸಂಧಿಕಾಯ್ರಗಳು' ಎಂಬುದಾಗಿ ಕರೆಯುತ್ತಾರೆ. ಇವನ್ನೇ ಇಲ್ಲಿ ಸೇರಿಕೆಯ ನಿಯಮಗಳೆ’ಂದು ಕರೆಯಲಾಗಿದೆ.
ಉದಾಹರಣೆಗಾಗಿ, ನೆಲ ನಾಮಪದಕ್ಕೆ ಕಡಲೆ ನಾಮಪದವನ್ನು ಸೇರಿಸಿ ನೆಲಗಡಲೆ ಎಂಬ ಜೋಡುಪದವನ್ನು ತಯಾರಿಸಿದಾಗ, ಎರಡನೆಯ ಪದದ (ನೆಲ+ಕಡಲೆ> ಸುರುವಿನಲ್ಲಿರುವ ನೆಲಗಡಲೆ). ಹಂಬಲ ನಾಮಪದಕ್ಕೆ ಇಸು ಪ್ರತ್ಯಯವನ್ನು ಸೇರಿಸಿ ಹಂಬಲಿಸು ಕ್ರಿಯಾಪದ ವನ್ನು ತಯಾರಿಸಿದಾಗ ಮೊದಲನೆಯ ಪದದ ಕೊನೆಯಲ್ಲಿರುವ ಅಕಾರ ಬಿದ್ದು ಹೋಗುತ್ತದೆ (ಹಂಬಲ+ಇಸು>ಹಂಬಲಿಸು).
ಇಂತಹ ಸೇರಿಕೆಯ ನಿಯಮಗಳು ಎಲ್ಲಾ ಭಾಷೆಗಳಲ್ಲೂ ಒಂದೇ ತೆರನಾಗಿ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗಾಗಿ, ಅಕಾರದಲ್ಲಿ ಕೊನೆಗೊಳ್ಳುವ ಒಂದು ಪದದೊಂದಿಗೆ ಅಕಾರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಸೇರಿಸಿದಾಗ, ಕನ್ನಡದಲ್ಲಿ ಮೊದಲನೆಯ ಅಕಾರ ಬಿದ್ದುಹೋಗಿ ಎರಡನೆಯದು ಉಳಿದುಕೊಳ್ಳು ತ್ತದೆ (ನನ್ನ+ಅಣ್ಣ>ನನ್ನಣ್ಣ, ಬಂದ+ಅಲ್ಲಿ>ಬಂದಲ್ಲಿ).
ಆದರೆ ಸಂಸ್ಕೃತದಲ್ಲಿ ಈ ರೀತಿ ಎರಡು ಅಕಾರಗಳು ಸೇರಿದಾಗ ಅವು ಗಳಲ್ಲಿ ಒಂದು ಬಿದ್ದುಹೋಗುವ ಬದಲು ಅವೆರಡೂ ಒಟ್ಟು ಸೇರಿ ಆಕಾರ ಕಾಣಿಸಿಕೊಳ್ಳುತ್ತದೆ (ಪದ+ಅಥ್ರ>ಪದಾಥ್ರ, ಮುಖ್ಯ+ಅಧಿಕಾರಿ> ಮುಖ್ಯಾ ¢üPÁj).
ಉಕಾರದ ಮುಂದೆ ಅಕಾರ ಬಂದಾಗ ಕನ್ನಡದಲ್ಲಿ ಉಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಬೆನ್ನು+ಅಟ್ಟು>ಬೆನ್ನಟ್ಟು, ಕಪ್ಪು+ಅಲ್ಲ>ಕಪ್ಪಲ್ಲ) ಆದರೆ ಸಂಸ್ಕೃತದಲ್ಲಿ ಉಕಾರದ ಬದಲು ವಕಾರ ಬರುತ್ತದೆ, ಮತ್ತು ಅದರ ಅನಂತರದ ಅಕಾರ ಉಳಿದಿರುತ್ತದೆ (ಮನು+ಅಂತರ>ಮನ್ವಂತರ, ಗುರು+ ಅಕ್ಷರ>ಗುವ್ರಕ್ಷರ).
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಸೇರಿಕೆಯ ನಿಯಮಗಳ ಮಟ್ಟಿಗೆ ಇಂತಹ ಹಲವಾರು ಮುಖ್ಯವಾದ ವ್ಯತ್ಯಾಸಗಳಿವೆ. ಪದರಚನೆ ಇಲ್ಲವೇ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಾಕ್ಯರಚನೆಯಲ್ಲಿ ಕಾಣಿಸುವ ವ್ಯತ್ಯಾಸಗಳಿಗಿಂತಲೂ ಸೇರಿಕೆಯ ನಿಯಮಗಳಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಬಹಳ ಸುಲಭವಾಗಿ ಕಣ್ಣಿಗೆ ಗೋಚರಿಸುತ್ತವೆ. ಈ ಕಾರಣಕ್ಕಾಗಿಯೋ ಏನೋ, ಕನ್ನಡದ ವೈಯಾಕರಣಿಗಳು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಹಾಗೆಯೇ ಕನ್ನಡದ ಮೇಲೆ ಹೇರಲು ಪ್ರಯತ್ನಿಸಿಲ್ಲ. ಅವರು ಬರೆದ ವ್ಯಾಕರಣಗಳಲ್ಲಿ ಕನ್ನಡಸಂಧಿ' ಮತ್ತು ಸಂಸ್ಕೃತಸಂಧಿ’ ಎಂಬುದಾಗಿ ಎರಡು ವಿಭಾಗಗಳಿರುವುದನ್ನು ಗಮನಿಸಬಹುದು.
2.1.1 ಪಠ್ಯಪುಸ್ತಕಗಳಲ್ಲಿ ಸೇರಿಕೆಯ ನಿಯಮಗಳು ಹೀಗಿದ್ದರೂ ಪೌ್ರಢಶಾಲೆಯ ವಿದ್ಯಾಥ್ರಿಗಳಿಗಾಗಿ ಬರೆಯಲಾಗಿರುವ ಕನ್ನಡ ವ್ಯಾಕರಣಗಳಲ್ಲಿ (ಪಠ್ಯಪುಸ್ತಕಗಳಲ್ಲಿ) ಕನ್ನಡಸಂಧಿ ಮತ್ತು ಸಂಸ್ಕೃತ ಸಂಧಿ ಎಂಬ ಈ ಎರಡು ರೀತಿಯ ಸೇರಿಕೆಯ ನಿಯಮಗಳನ್ನು ಕಲಿಸಿಕೊಡಲು ಬಳಸಿರುವ ಕ್ರಮ ಮಾತ್ರ ಅಷ್ಟೊಂದು ಸರಿಯಾದುದೆಂದು ನನಗೆ ತೋರುವು ದಿಲ್ಲ. ಇದಕ್ಕೆ ಕಾರಣಗಳು ಹಲವಿವೆ. ಮೊದಲನೆಯದಾಗಿ, ಕನ್ನಡದ ಈ ವ್ಯಾಕರಣ ಪಠ್ಯಪುಸ್ತಕಗಳಲ್ಲಿ ಕನ್ನಡ ಸಂಧಿಗಳು ಯಾವುವು ಮತ್ತು ಸಂಸ್ಕೃತ ಸಂಧಿಗಳು ಯಾವುವು ಎಂಬುದನ್ನು ಬೇರೆ ಬೇರೆಯಾಗಿ ಹೇಳಲಾಗಿದೆ. ಯಾವ ರೀತಿಯಲ್ಲಿ ಅವು ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂಬುದನ್ನು ವಿವರಿಸಲು ಯತ್ನಿಸಿಲ್ಲ.
ಎರಡನೆಯದಾಗಿ, ಕನ್ನಡಸಂಧಿಗಳು ಯಾವುವೆಂಬುದನ್ನು ವಿವರಿಸುವಾಗ ಹೊಸಗನ್ನಡ ಮತ್ತು ಹಳೆಗನ್ನಡಗಳ ನಡುವಿರುವ ವ್ಯತ್ಯಾಸವನ್ನು ಗಮನಿಸಿಲ್ಲ. ಮೊದಲಿಗೆ ಹೊಸಗನ್ನಡದ ಸೇರಿಕೆಯ (ಸಂಧಿ)ನಿಯಮಗಳು ಯಾವುವೆಂಬುದನ್ನು ಹೊಸಗನ್ನಡದವೇ ಆದ ಉದಾಹರಣೆಗಳ ಮೂಲಕ ವಿವರಿಸಿ ಹೇಳಿ, ಅನಂತರ ಬೇಕಿದ್ದರೆ ಅವಕ್ಕಿಂತ ಭಿನ್ನವಾಗಿರುವ ಸೇರಿಕೆಯ ನಿಯಮಗಳು ಹಳೆಗನ್ನಡದಲ್ಲಿ ಕಾಣಿಸಿಕೊಳ್ಳುತ್ತವೆ0iÉುೀ, ಕಾಣಿಸಿಕೊಳ್ಳುವುದಿದ್ದಲ್ಲಿ ಅವು ಎಂತಹವು ಎಂಬುದನ್ನು ವಿವರಿಸಿದಲ್ಲಿ ವಿದ್ಯಾಥ್ರಿಗಳಿಗೆ ಅವನ್ನು ಅಥ್ರಮಾಡಿಕೊಳ್ಳಲು ಹೆಚ್ಚು ಸುಲಭ ವಾಗಬಲ್ಲುದು. ಮೂರನೆಯದಾಗಿ, ನಿಜಕ್ಕೂ ಸಂಸ್ಕೃತದಲ್ಲಿ ಎಂತಹ ಸೇರಿಕೆಯ ನಿಯಮ ಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ನೇರವಾಗಿ ವಿವರಿಸುವ ಅವಶ್ಯಕತೆ ಇಲ್ಲ. ಕನ್ನಡಕ್ಕಿಂತ ಭಿನ್ನವಾದ ಸೇರಿಕೆಯ ನಿಯಮಗಳು ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಕಾಣಿಸುತ್ತಿದ್ದು, ಅವನ್ನೆಲ್ಲ ಹೇಗೆ ಕನ್ನಡ ವ್ಯಾಕರಣದಲ್ಲಿ ವಿವರಿಸುವ ಅವಶ್ಯಕತೆಯಿಲ್ಲವೋ ಹಾಗೆಯೇ ಸಂಸ್ಕೃತದ ಸೇರಿಕೆಯ ನಿಯಮಗಳನ್ನೂ ಕನ್ನಡದ ವ್ಯಾಕರಣದಲ್ಲಿ ವಿವರವಾಗಿ ತಿಳಿಸಿ ಹೇಳುವ ಅವಶ್ಯಕತೆಯಿಲ್ಲ.
28 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಹೀಗಿದ್ದರೂ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವಾರು ಪದ ಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಕಾರಣ ಅವುಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳೆಂತಹವು ಎಂಬುದನ್ನು ವಿವರಿಸುವುದರಿಂದ ವಿದ್ಯಾಥ್ರಿಗಳಿಗೆ ಪ್ರಯೋಜನವಾಗಬಲ್ಲುದು. ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದಲೂ ಕನ್ನಡಕ್ಕೆ ಹಲವು ಪದಗಳು ಎರವಲಾಗಿ ಬಂದಿವೆಯೇನೋ ನಿಜ; ಆದರೆ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೆ ಕನ್ನಡದಲ್ಲಿ ಇರುವಂತಹ ವಿಶಿಷ್ಟವಾದ ಸ್ಥಾನ ಆ ಪದಗಳಿಗಿಲ್ಲ.
ಉದಾಹರಣೆಗಾಗಿ, ಕನ್ನಡದಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಸೃಷ್ಟಿಸಬೇಕಿದ್ದಲ್ಲಿ ಸಾಮಾನ್ಯವಾಗಿ ನಾವು ಸಂಸ್ಕೃತದ ಮರೆಹೊಗುತ್ತೇವೆ. ಈ ಕಾರಣಕ್ಕಾಗಿಯೂ ಕನ್ನಡ ವ್ಯಾಕರಣದಲ್ಲಿ ಇತರ ಭಾಷೆಗಳ ಸೇರಿಕೆಯ ನಿಯಮ ಗಳಿಗಿಂತ ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಔಚಿತ್ಯವಿದೆ. ಆದರೆ ಸಂಸ್ಕೃತದ ಸೇರಿಕೆಯ ನಿಯಮಗಳ ವಣ್ರನೆಯನ್ನು ನೇರವಾಗಿ ಅದರ ವ್ಯಾಕರಣದಿಂದ ಎತ್ತಿ ಕನ್ನಡ ವ್ಯಾಕರಣದಲ್ಲಿ ಇರಿಸುವ ಬದಲು, ಕನ್ನಡ ವ್ಯಾಕರಣವನ್ನು ಕಲಿಯುವವರಿಗೆ ಅನುಕೂಲವಾಗುವ ಹಾಗೆ ಅದನ್ನು ಅಳವಡಿಸಿ ಕೊಂಡಲ್ಲಿ ಅದು ಹೆಚ್ಚು ಉಪಯುಕ್ತವಾಗಬಲ್ಲುದು.
2.1.2 ಸಂಸ್ಕೃತದ ನಿಯಮಗಳನ್ನು ತಿಳಿಸುವ ಕ್ರಮ ಸಂಸ್ಕೃತದಲ್ಲಿ ಬಳಕೆಯಾಗುವ ಸೇರಿಕೆಯ ನಿಯಮಗಳನ್ನು ಕನ್ನಡ ಕಲಿಯುವ ಮಕ್ಕಳಿಗೆ ಅಥ್ರವಾಗುವ ಹಾಗೆ ಮತ್ತು ಸಹಾಯಕವಾಗುವ ಹಾಗೆ ತಿಳಿಸಿ ಹೇಳಬೇಕಿದ್ದಲ್ಲಿ ಮೊದಲಿಗೆ ಸಂಸ್ಕೃತದಿಂದ ಹೊಸಗನ್ನಡಕ್ಕೆ ಎಂತಹ ಪದಗಳೆಲ್ಲ ಎರವಲಾಗಿ ಬಂದಿವೆ ಎಂಬುದನ್ನು ಪರಿಶೀಲಿಸಬೇಕು ಮತ್ತು ಆ ಪದಗಳಲ್ಲಿ ಕನ್ನಡದ ಸೇರಿಕೆಯ ನಿಮಮಗಳಿಗಿಂತ ಭಿನ್ನವಾಗಿರುವ ನಿಯಮಗಳು ಎಂತಹ ವೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕಂಡುಹಿಡಿಯಬೇಕು.
ಈ ಭಿನ್ನವಾಗಿರುವ ಸೇರಿಕೆಯ ನಿಯಮಗಳನ್ನು ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕೃತ ಪದಗಳನ್ನು ಮಾತ್ರವೇ ಉದಾಹರಣೆಗಳನ್ನಾಗಿ ಕೊಟ್ಟು ವಿವರಿಸಿ ಹೇಳಬೇಕು. ಅನಂತರ ಅವು ಕನ್ನಡದ ಸೇರಿಕೆಯ ನಿಯಮಗಳಿಗಿಂತ ಯಾವ ರೀತಿಯಲ್ಲಿ ಭಿನ್ನವಾಗಿವೆ ಎಂಬುದನ್ನು ವಿವರಿಸಿ ಹೇಳಬೇಕು. ಈ ರೀತಿ ಮಾಡಿದಲ್ಲಿ ವಿದ್ಯಾಥ್ರಿಗಳಿಗೆ ಅವನ್ನು ಅಥ್ರ ಮಾಡಿಕೊಳ್ಳಲು ಹೆಚ್ಚು ಸುಲಭ ವಾದೀತೆಂದು ನನಗೆ ಅನಿಸುತ್ತದೆ. ಕನ್ನಡ ವ್ಯಾಕರಣದ ಪಠ್ಯಪುಸ್ತಕಗಳಲ್ಲಿ ಕಾಣಿಸುವ ಹಾಗೆ ಗಂಗೋಮ್ರಿ, ಮೇಘೌಘ, ಮಹೌಜ, ನದಡ್ಡಮರುಕ, ಲಸತ್ಷೋಡಷ, ಆಯಷ್ಟಂಕ ಮೊದಲಾದ ಕನ್ನಡ ಬರಹಗಳಲ್ಲೆಲ್ಲೂ (ವ್ಯಾಕರಣದ ಪಠ್ಯಪುಸ್ತಕಗಳನ್ನು ಬಿಟ್ಟು)
29 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕಾಣಿಸದಿರುವಂತಹ ಸಂಸ್ಕೃತದ ಪದಗಳನ್ನು ಇಲ್ಲವೇ ಪದಕಂತೆಗಳನ್ನು ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಉದಾಹಣೆಗಳಾಗಿ ಕೊಟ್ಟಲ್ಲಿ ಕನ್ನಡವನ್ನು ಕಲಿಯಬೇಕೆಂದಿರುವ ವಿದ್ಯಾಥ್ರಿಗಳಿಗೆ ಅನವಶ್ಯಕವಾಗಿ ತೊಂದರೆಯುಂಟಾಗ ಬಲ್ಲುದಲ್ಲದೆ ಅದರಿಂದ ಅವರಿಗೆ ಯಾವ ಪ್ರಯೋಜನವೂ ಸಿಗಲಾರದು.
ಈ ಉದಾಹರಣೆಗಳು ಸೂಚಿಸುವ ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಎರವಲಾಗಿ ಬಂದಿರುವ ಪದ ಇಲ್ಲವೇ ಪದಕಂತೆಗಳಲ್ಲಿ ಕಾಣಿಸದಿರುವುದೇ ನಮ್ಮ ವೈಯಾಕರಣಿಗಳು ಹೀಗೆ ಮಾಡಲು ಕಾರಣವಿರಬಹುದು. ಹೀಗಿದ್ದಲ್ಲಿ, ಅಂತಹ ಸಂಸ್ಕೃತದ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ, ಅದರಲ್ಲೂ ಪೌ್ರಢ ಶಾಲೆಯ ವಿದ್ಯಾಥ್ರಿಗಳಿಗಾಗಿ ಬರೆದಿರುವ ವ್ಯಾಕರಣ ಪಠ್ಯದಲ್ಲಿ, ವಿವರಿಸುವ ಅವಶ್ಯಕತೆಯೇ ಇಲ್ಲ. ಇದಲ್ಲದೆ, ಕನ್ನಡಕ್ಕೆ ಎರವಲಾಗಿ ಬಂದಿರುವ ಮತ್ತು ಕನ್ನಡದ ಬರಹಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಸಂಸ್ಕೃತದ ಪದ ಮತ್ತು ಪದಕಂತೆಗಳಲ್ಲಿ ಬರುವ ಸೇರಿಕೆಯ ನಿಯಮಗಳನ್ನು ವಣ್ರಿಸುವಾಗ ಅವಕ್ಕೆ ಸಂಸ್ಕೃತದ ವೈಯಾಕರಣಿ ಗಳು ಕೊಡುವ ಪಾರಿಭಾಷಿಕ ಪದಗಳನ್ನು ಹಾಗೆಯೇ ಕನ್ನಡ ವ್ಯಾಕರಣಗಳಲ್ಲೂ ಬಳಸುವ ಅವಶ್ಯಕತೆಯಿಲ್ಲ.
ಕನ್ನಡದ ಶಾಲಾವ್ಯಾಕರಣಗಳಲ್ಲಿ ಸಂಸ್ಕೃತದ ಸೇರಿಕೆಯ ನಿಯಮಗಳನ್ನು
ಪರಿಚಯಿಸುವಾಗ ಶ್ಚುತ್ವ, ಷ್ಟುತ್ವ, ಜಸ್ತ್ವ, ಛತ್ವ, ಯಣ್, ಗುಣ, ವೃದ್ಧಿ, ಮೊದಲಾದ ಪಾರಿಭಾಷಿಕ ಪದಗಳನ್ನು ಹಾಗೆಯೇ ಸಂಸ್ಕೃತ ವ್ಯಾಕರಣದಿಂದ ಎತ್ತಿ ಹಾಕುವ ಸಂಪ್ರದಾಯ ಬೆಳೆದು ಬಂದಿದೆ. ವ್ಯಾಕರಣವೆಂದರೆ ಒಂದು ನಿಷ್ಪ್ರಯೋಜಕವಾದ ಕಗ್ಗಂಟು ಎಂಬ ಅಭಿಪ್ರಾಯ ವಿದ್ಯಾಥ್ರಿಗಳಲ್ಲಿ ಮೂಡಲು ಮಾತ್ರ ಇದು ಸಹಾಯಕವಾಗಬಲ್ಲುದು. ಈ ಪಾರಿಭಾಷಿಕ ಪದಗಳಿಂದ ಕನ್ನಡ ವ್ಯಾಕರಣವನ್ನು ಕಲಿಯುವಲ್ಲಿ ಯಾವ ಪ್ರಯೋಜನವೂ ದೊರಕಲಾರದೆಂದು ನನಗೆ ಅನಿಸುತ್ತದೆ. ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯುತ್ತು ಪದ ಶಕ್ತಿ ಪದದೊಡನೆ ಸೇರಿದಾಗ ವಿದ್ಯುಚ್ಛಕ್ತಿ ಎಂಬ ಜೋಡುಪದ ಸಿದ್ಧವಾಗುತ್ತದೆ. ಇಲ್ಲಿ ವಿದ್ಯುತ್ತು ಎಂಬುದರ ಕೊನೆಯ ಎರಡು ವಣ್ರಗಳು (ತ್ ಮತ್ತು ಉ) ಬಿದ್ದುಹೋಗಿ ವಿದ್ಯುತ್ ಎಂಬುದು ಉಳಿದಿದೆ ಮತ್ತು ಅದರ ಕೊನೆಯ ತಕಾರ ಚಕಾರವಾಗಿದೆ. ಇದಲ್ಲದೆ, ಈ ಪದದ ಅನಂತರ ಬಂದಿರುವ ಶಕ್ತಿ ಪದದ ಮೊದಲನೆಯ ವ್ಯಂಜನ ಶ್ ಎಂದಿದ್ದುದು ಛ್ ಎಂದಾಗಿದೆ.
ವಿದ್ಯುಚ್ಛಕ್ತಿ ಪದದಲ್ಲಿ ಕಾಣಿಸುವ ಸೇರಿಕೆಯ ನಿಯಮವನ್ನು ಈ ರೀತಿ ವಿದ್ಯಾಥ್ರಿಗಳಿಗೆ ಸುಲಭವಾಗಿ ಅಥ್ರವಾಗುವ ಹಾಗೆ ವಿವರಿಸಿ ಹೇಳುವ ಬದಲು ಆ ಪದದಲ್ಲಿ ಶ್ಚುತ್ವ ಮತ್ತು ಛತ್ವಗಳೆಂಬ ಎರಡು ಸಂಧಿಕಾಯ್ರಗಳು ನಡೆದಿವೆ ಎಂದು ಹೇಳುವುದರಿಂದ ಹೆಚ್ಚಿನ ಪ್ರಯೋಜನವೇನೂ ಸಿಗಲಾರದು. ಇದಲ್ಲದೆ
30 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಇಂತಹ ಹೇಳಿಕೆಯನ್ನು ವಿವರಿಸಬೇಕಾಗಿರುವ ಹಲವು ಮಂದಿ ಅಧ್ಯಾಪಕರಿಗೂ ಅದು ನಿಜಕ್ಕೂ ಏನು ತಿಳಿಸುತ್ತದೆ0iÉುಂಬುದು ಅಥ್ರವಾಗಿರುವುದಿಲ್ಲ.
2.2 ಸೇರಿಕೆಯ ನಿಯಮಗಳಲ್ಲಿ ವ್ಯತ್ಯಾಸಗಳು ಮೇಲೆಯೇ ಹೇಳಿದ ಹಾಗೆ, ಸೇರಿಕೆಯ ನಿಯಮಗಳ ಮಟ್ಟಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಪೌ್ರಢಶಾಲೆಯ ವಿದ್ಯಾಥ್ರಿಗಳಿಗೆ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ತಿಳಿಸುವುದಿದ್ದಲ್ಲಿ ಅವು ಕನ್ನಡದ ನಿಯಮಗಳಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಸಿದಲ್ಲಿ ಹೆಚ್ಚು ಸ್ಪಷ್ಟವಾಗಿ ಅಥ್ರವಾಗಬಲ್ಲುವು. ಇಂತಹ ಕೆಲವು ವ್ಯತ್ಯಾಸಗಳನ್ನು ಕೆಳಗೆ ವಿವರಿಸಲಾಗಿದೆ.
2.2.1 ಸ್ವರಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು ಸ್ವರಕ್ಕೆ ಸ್ವರ ಸೇರಿದಾಗ, ಸಂಸ್ಕೃತದಲ್ಲಿ ಸಾಮಾನ್ಯವಾಗಿ ಅವೆರಡರ ಬದಲು ಬೇರೊಂದು ಸ್ವರ ಬರುತ್ತದೆ ಇಲ್ಲವೇ ಅವುಗಳಲ್ಲಿ ಮೊದಲನೆಯದರ ಬದಲು ಒಂದು ವ್ಯಂಜನ ಬರುತ್ತದೆ. ಎಂದರೆ, ಸಂಸ್ಕೃದಲ್ಲಿ `ಆದೇಶ’ ಎಂಬ ಹೆಸರಿನ ಸೇರಿಕೆಯ ನಿಯಮ ಬರುವುದೇ ಜಾಸ್ತಿ. ಇದಕ್ಕೆ ಬದಲು ಕನ್ನಡದಲ್ಲಿ ಸಾಮಾನ್ಯವಾಗಿ ಎರಡು ಸ್ವರಗಳು ಒಟ್ಟಿಗೆ ಬಂದಾಗ ಅವುಗಳಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುವುದೇ ಜಾಸ್ತಿ. ಕೆಲವೇ ಕೆಲವು ಸಂದಭ್ರಗಳಲ್ಲಿ ಮಾತ್ರ ಈ ಎರಡು ಸ್ವರಗಳ ನಡುವೆ ವ್ಯಂಜನವೊಂದು ಸೇರಿಕೊಳ್ಳುತ್ತದೆ. ಎಂದರೆ, ಕನ್ನಡದಲ್ಲಿ ಲೋಪ ಹಾಗೂ ಆಗಮಗಳೆಂಬ ಸೇರಿಕೆಯ ನಿಯಮಗಳು ಬರುವುದೇ ಜಾಸ್ತಿ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಒಂದೇ ರೀತಿಯ ಎರಡು ಸ್ವರಗಳು ಒಟ್ಟು ಸೇರಿದಾಗ ಅವೆರಡರ ಬದಲು ಒಂದು ಉದ್ದ ಸ್ವರ ಆದೇಶವಾಗಿ ಬರುತ್ತದೆ (ಸವಣ್ರದೀಘ್ರ). ಆದರೆ ಕನ್ನಡದಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯ ಸ್ವರ ಹಾಗೆಯೇ ಬದಲಾಗದೆ ಉಳಿಯುತ್ತದೆ.
ಕನ್ನಡದಲ್ಲಿ ಈ ಸೇರಿಕೆಯ ನಿಯಮಕ್ಕೆ ಮತ್ತು ಕೆಳಗೆ ಕೊಟ್ಟಿರುವ ಬೇರೆ ಕೆಲವು ಸೇರಿಕೆಯ ನಿಯಮಗಳಿಗೆ ಹಲಕೆಲವು ಅಪವಾದಗಳಿವೆಯೆಂಬುದನ್ನು ಮುಂದೆ (2.3)ರಲ್ಲಿ ನೋಡಲಿರುವೆವು.
ಸಂಸ್ಕೃತದ ಬದಲಾವಣೆಗಳು ದೇಶ + ಅಭಿಮಾನ = ದೇಶಾಭಿಮಾನ ಚಿಕ್ಕ + ಅಮ್ಮ = ಚಿಕ್ಕಮ್ಮ ಅಲ್ಲಿ + ಇಲ್ಲ = ಅಲ್ಲಿಲ್ಲ ಕವಿ + ಇಂದ್ರ = ಕವೀಂದ್ರ ಕಲ್ಲು + ಉಪ್ಪು = ಕಲ್ಲುಪ್ಪು ಗುರು + ಉಪದೇಶ = ಗುರೂಪದೇಶ
ಕನ್ನಡದ ಬದಲಾವಣೆಗಳು
31 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಮೇಲೆ ಕೊಟ್ಟಿರುವ ಸಂಸ್ಕೃತ ಉದಾಹರಣೆಗಳಲ್ಲಿ ಅಕಾರಕ್ಕೆ ಅಕಾರ ಪರವಾದಾಗ ಅವೆರಡರ ಬದಲು ಆಕಾರವೂ, ಇಕಾರಕ್ಕೆ ಇಕಾರ ಪರವಾದಾಗ ಅವೆರಡರ ಬದಲು ಈಕಾರವೂ, ಮತ್ತು ಉಕಾರಕ್ಕೆ ಉಕಾರ ಪರವಾದಾಗ ಅವೆರಡರ ಬದಲು ಊಕಾರವೂ ಆದೇಶವಾಗಿ ಬಂದಿವೆ.
ಇದಕ್ಕೆ ಬದಲು, ಅವುಗಳ ಎದುರಿಗೆ ಕೊಟ್ಟಿರುವ ಕನ್ನಡದ ಉದಾಹರಣೆ ಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದುಹೋಗಿದೆ (ಲೋಪ ಗೊಂಡಿದೆ) ಮತ್ತು ಎರಡನೆಯ ಪದದ ಮೊದಲನೆಯ ಸ್ವರ ಬದಲಾಗದೆ ಹಾಗೆಯೇ ಉಳಿದಿದೆ.
ಈ ರೀತಿ ಒಟ್ಟು ಸೇರುವ ಒಂದೇ ರೀತಿಯ ಎರಡು ಸ್ವರಗಳಲ್ಲಿ ಒಂದು ಮೊದಲಿಗೇನೇ ಉದ್ದ (ದೀಘ್ರ) ಸ್ವರವಾಗಿತ್ತಾದರೆ, ಸಂಸ್ಕೃತದಲ್ಲಿ ಅದು ಹಾಗೆಯೇ ಉಳಿಯುತ್ತದೆ ಮತ್ತು ಅದರೊಡನೆ ಬಂದಿರುವ ಇನ್ನೊಂದು ಸ್ವರ ಬಿದ್ದುಹೋಗುತ್ತದೆ. ಎರಡೂ ಉದ್ದ ಸ್ವರಗಳಾಗಿರುವಲ್ಲೂ ಒಂದು ಉದ್ದ ಸ್ವರ ಉಳಿಯುತ್ತದೆ.
ಇಲ್ಲೂ ಕೂಡ ಮೇಲಿನ ಆದೇಶ ಸಂಧಿಯೇ ನಡೆಯುವುದೆಂದೂ (ಎಂದರೆ ಆ ಎರಡು ಸ್ವರಗಳ ಜಾಗದಲ್ಲಿ ಉದ್ದ ಸ್ವರವೊಂದು ಆದೇಶವಾಗಿ ಬರುವು ದೆಂದೂ) ಹೇಳಲು ಸಾಧ್ಯವಿದೆ.
ಕನ್ನಡದಲ್ಲಿ ಇಂತಹ ಸಂದಭ್ರಗಳಲ್ಲೂ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯದು ಉಳಿಯುತ್ತದೆ.
ಸಂಸ್ಕೃತದ ಬದಲಾವಣೆಗಳು ದೇವ + ಆಲಯ = ದೇವಾಲಯ ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ ಗಿರಿ + ಈಶ = ಗಿರೀಶ
ಲಕ್ಶ್ಮೀ + ಈಶ = ಲಕ್ಶ್ಮೀಶ
ಕನ್ನಡದ ಬದಲಾವಣೆಗಳು ಬಂದ + ಆಗ = ಬಂದಾಗ ಹುಡುಗ+ಆಟ = ಹುಡುಗಾಟ ಅಲ್ಲಿ + ಈಗ = ಅಲ್ಲೀಗ
ಸಂಸ್ಕೃತದಲ್ಲಿ ಅ, ಆಗಳ ಅನಂತರ (1) ಇ, ಈಗಳು ಬಂದರೆ ಅವೆರಡರ ಬದಲು ಏಕಾರ ಆದೇಶವಾಗಿ ಬರುತ್ತದೆ, (2) ಉ, ಊಗಳು ಬಂದರೆ ಅವೆರಡರ ಬದಲು ಓಕಾರ ಆದೇಶವಾಗಿ ಬರುತ್ತದೆ, (3) ಏ ಮತ್ತು ಓಗಳು ಬಂದರೆ ಅವೆರಡರ ಬದಲು ಅನುಕ್ರಮವಾಗಿ ಐ ಮತ್ತು ಔಗಳು ಆದೇಶವಾಗಿ ಬರುತ್ತವೆ, (4) ಋಕಾರ ಬಂದರೆ ಅದರ ಬದಲು ಅರ್ ಎಂಬುದು ಆದೇಶವಾಗಿ ಬರುತ್ತದೆ, ಮತ್ತು (5) ಐ ಮತ್ತು ಔಗಳು ಬಂದರೆ ಅವು ಹಾಗೆಯೇ ಉಳಿದು ಅವುಗಳೊಂದಿಗೆ ಬರುವ ಅಕಾರ ಇಲ್ಲವೇ ಆಕಾರ ಬಿದ್ದು ಹೋಗುತ್ತದೆ.
32 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಆದರೆ ಕನ್ನಡದಲ್ಲಿ ಇಂತಹ ಎಲ್ಲಾ ಸಂದಭ್ರಗಳಲ್ಲೂ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯ ಸ್ವರ ಹಾಗೆಯೇ ಉಳಿಯುತ್ತದೆ (ಮೇಲೆಯೇ ಸೂಚಿಸಿದ ಹಾಗೆ ಕನ್ನಡದಲ್ಲಿ ಈ ನಿಯಮಕ್ಕಿರುವ ಅಪವಾದವೊಂದನ್ನು ಮುಂದೆ ನೋಡಲಿರುವೆವು).
(1)
(2)
(3)
(4)
(5)
ಕನ್ನಡದ ಬದಲಾವಣೆಗಳು
ಸಂಸ್ಕೃತದ ಬದಲಾವಣೆಗಳು
ರಾಜ + ಇಂದ್ರ = ರಾಜೇಂದ್ರ ಅಲ್ಲಿಂದ+ಇಳಿದ = ಅಲ್ಲಿಂದಿಳಿದ ಗಣ + ಈಶ = ಗಣೇಶ ಅಲ್ಲಿಂದ + ಈಚೆ = ಅಲ್ಲಿಂದೀಚೆ ಸೂಯ್ರ+ಉದಯ=ಸೂಯ್ರೋದಯ ಕೊಟ್ಟ + ಉಡುಗೆ = ಕೊಟ್ಟುಡುಗೆ ಗಂಗಾ + ಉದಕ = ಗಂಗೋದಕ ನಮ್ಮ + ಊರು = ನಮ್ಮೂರು ಲೋಕ + ಏಕ = ಲೋಕೈಕ ಜಲ + ಓಘ = ಜಲೌಘ ದೇವ + ಋಷಿ = ದೇವಷ್ರಿ ಮಹಾ + ಋಷಿ = ಮಹಷ್ರಿ
ವಿಶ್ವ + ಐಕ್ಯ = ವಿಶ್ವೈಕ್ಯ ದಿವ್ಯ + ಔಷಧ = ದಿವೌ್ಯಷಧ
ನಮ್ಮ + ಎದುರು = ನಮ್ಮೆದುರು ಬಿದ್ದ + ಒಡನೆ = ಬಿದ್ದೊಡನೆ (ಕನ್ನಡದಲ್ಲಿ ಋಕಾರವಿಲ್ಲ)
ನೂರ + ಐವತ್ತು = ನೂರೈವತ್ತು ದೊಡ್ಡ + ಔತಣ = ದೊಡೌ್ಡತಣ
ಅಕಾರದ ಬದಲು ಬೇರೆ ಸ್ವರ ಮೊದಲಿನದಾದಲ್ಲಿ ಬೇರೆ0iÉುೀ ಸೇರಿಕೆಯ ಬದಲಾವಣೆಗಳು ಸಂಸ್ಕೃತದಲ್ಲಿ ನಡೆಯುತ್ತವೆ. (1) ಮೊದಲಿನ ಸ್ವರ ಇಕಾರ ವಾದಲ್ಲಿ ಅದರ ಬದಲು ಯಕಾರ ಬರುತ್ತದೆ, (2) ಉಕಾರವಾದಲ್ಲಿ ವಕಾರ ಬರುತ್ತದೆ ಮತ್ತು (3) ಋಕಾರವಾದಲ್ಲಿ ರಕಾರ ಬರುತ್ತದೆ. ಇವೆಲ್ಲವೂ ಆದೇಶ ಗಳು.
ಇಂತಹ ಸಂದಭ್ರಗಳಲ್ಲೂ ಕನ್ನಡದಲ್ಲಿ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
ಸಂಸ್ಕೃತದ ಬದಲಾವಣೆಗಳು ಅತಿ + ಅಲ್ಪ = ಅತ್ಯಲ್ಪ ಅತಿ + ಆಸೆ = ಅತ್ಯಾಸೆ ಅತಿ + ಉತ್ತಮ = ಅತ್ಯುತ್ತಮ ಪ್ರತಿ + ಏಕ = ಪ್ರತ್ಯೇಕ ಗುರು + ಅಕ್ಷರ = ಗುರ್ವಕ್ಷರ ಗುರು + ಆಜ್ಞೆ = ಗುರ್ವಾಜ್ಞೆ ಲಘು + ಇತಿ = ಲಘ್ವಿತಿ ಪಿತೃ + ಆಜ್ರಿತ = ಪಿತ್ರಾಜ್ರಿತ
(1)
(2)
(3)
ಕನ್ನಡದ ಬದಲಾವಣೆಗಳು ಅಲ್ಲಿ + ಅಲ್ಲಿ = ಅಲ್ಲಲ್ಲಿ ಬಾಯಿ + ಆರಿಕೆ = ಬಾಯಾರಿಕೆ ಅಲ್ಲಿ + ಉಳಿದ = ಅಲ್ಲುಳಿದ
ಬೆನ್ನು + ಅಟ್ಟು = ಬೆನ್ನಟ್ಟು ಕಾಡು + ಆನೆ = ಕಾಡಾನೆ ಕಾಡು + ಇಲ್ಲ = ಕಾಡಿಲ್ಲ
33 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ 2.2.2 ವ್ಯಂಜನಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು ಹೊಸಗನ್ನಡದ ಪದಗಳೆಲ್ಲವೂ ಸ್ವರದಲ್ಲಿಯೇ ಕೊನೆಗೊಳ್ಳುವುವಾದ ಕಾರಣ, ವ್ಯಂಜನಕ್ಕೆ ವ್ಯಂಜನ ಸೇರಿ ಆಗುವ `ವ್ಯಂಜನಸಂಧಿ’ಗಳಾವುವೂ ಹೊಸಗನ್ನಡ ದಲ್ಲಿಲ್ಲ. ಆದರೆ ಹಳೆಗನ್ನಡದಲ್ಲಿ ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳಿದ್ದು ವಾದ ಕಾರಣ ಹಳೆಗನ್ನಡದ ಕಾಲದಿಂದ ಉಳಿದು ಬಂದ ಕೆಲವು ಜೋಡುಪದ ಗಳಲ್ಲಿ ಮಾತ್ರ ಅಂತಹ ಸೇರಿಕೆಯ ನಿಯಮಗಳನ್ನು ಕಾಣಬಹುದು.
ಬೆನ್ನು (ಬೆನ್) + ಕಾವಲು = ಬೆಂಗಾವಲು
ಕರಿ (ಕರ್) + ಕಲ್ಲು = ಕಗ್ಗಲ್ಲು
ಹಿರಿ (ಹೆರ್) + ಬಾಗಿಲು = ಹೆಬ್ಬಾಗಿಲು
ಬೆಂಗಾವಲು ಎಂಬುದರಲ್ಲಿ ನಕಾರ ಅನುಸ್ವಾರ (ಇಲ್ಲವೇ ಙಕಾರ)ವಾಗಿದೆ ಮತ್ತು ಅದರ ಅನಂತರ ಬರುವ ಕಕಾರ ಗಕಾರವಾಗಿದೆ; ಕಗ್ಗಲ್ಲು ಎಂಬುದರಲ್ಲಿ ರಕಾರ ಗಕಾರವಾಗಿದೆ ಮತ್ತು ಅದರ ಅನಂತರ ಬರುವ ಕಕಾರವೂ ಗಕಾರ ವಾಗಿದೆ; ಹೆಬ್ಬಾಗಿಲು ಎಂಬುದರಲ್ಲಿ ರಕಾರ ಬಕಾರವಾಗಿದೆ.
ಇಂತಹ ಬದಲಾವಣೆಗಳನ್ನು ಬಿಟ್ಟರೆ ಹೊಸಗನ್ನಡದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳೆಂದರೆ ಅವು ಸ್ವರಗಳ ಅನಂತರ ಬಂದಾಗ ಅವುಗಳಲ್ಲಿ ನಡೆಯುವ ಕೆಲವು ಬದಲಾವಣೆಗಳು ಮಾತ್ರ. ಇವೂ ಕನ್ನಡದಲ್ಲಿ ಪದಗಳ ಒಳಗಡೆ ಎಂದರೆ ಪದಗಳ ಒಳರಚನೆಯಲ್ಲಿ ಮಾತ್ರ ಕಾಣಿಸುವ ಬದಲಾವಣೆಗಳು (ಮನೆಗೆಲಸ, ಸುಡುಗಾಡು, ನೆಲದಾವರೆ).
ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಬದಲಾವಣೆಗಳೂ ಸಾಕಷ್ಟು ಕಾಣಿಸಿಕೊಳ್ಳುತ್ತವೆ. ಇಲ್ಲೂ ಕೂಡ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳನ್ನು ಕಾಣಬಹುದು.
ಉದಾಹರಣೆಗಾಗಿ, ಕನ್ನಡದಲ್ಲಿ ಕಕಾರ ಮತ್ತು ತಕಾರಗಳು ಸ್ವರದ ಅನಂತರ ಬಂದಾಗ ಅನುಕ್ರಮವಾಗಿ ಗಕಾರ ಮತ್ತು ದಕಾರಗಳಾಗುವುವಾದರೆ, ಸಂಸ್ಕೃತದಲ್ಲಿ ಕ, ತ, ಟ, ಪಗಳು ಸ್ವರಕ್ಕೆ ಮೊದಲು ಬಂದಾಗ (ಅಥವಾ ಬೇರೆ ಗ, ದ, ಡ, ಬಗಳಂತಹ `ಕೊರಳಿಸಿ'ದ (ಘೋಷ) ವ್ಯಂಜನಗಳ ಮೊದಲು ಬಂದಾಗ) ಅನುಕ್ರಮವಾಗಿ ಗ, ದ, ಡ, ಬಗಳಾಗುತ್ತವೆ.
ಎಂದರೆ, ಕನ್ನಡದಲ್ಲಿ ಬದಲಾಗುವ ವ್ಯಂಜನ ಎರಡನೆಯ ಪದದ ಸುರುವಿಗೆ ಬರುವುದಾದರೆ, ಸಂಸ್ಕೃತದಲ್ಲಿ ಬದಲಾಗುವ ವ್ಯಂಜನ ಮೊದಲನೆಯ ಪದದ ಕೊನೆಗೆ ಬರುತ್ತದೆ.
ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳಿಗೆ ಅಪವಾದಗಳಿರುವುದು ಬಹಳ ಕಡಿಮೆ. ಆದರೆ ಕನ್ನಡದಲ್ಲಿ ಬರುವ ವ್ಯಂಜನದ ಬದಲಾವಣೆಗಳಲ್ಲಿ ಕೆಲವು ಜೋಡುಪದಗಳಲ್ಲಿ ಮಾತ್ರ
34 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಅಪವಾದ ಇದ್ದೇ ಇರುತ್ತದೆ.
ಸಂಸ್ಕೃತದ ಬದಲಾವಣೆಗಳು ವಾಕ್ + ಈಶ = ವಾಗೀಶ ಚಿತ್ + ಆನಂದ = ಚಿದಾನಂದ
ಷಟ್ + ಆನನ = ಷಡಾನನ ಸತ್ + ಭಕ್ತ = ಸದ್ಭಕ್ತ ವಾಕ್ + ದಾನ = ವಾಗ್ದಾನ
ಕನ್ನಡದ ಬದಲಾವಣೆಗಳು ಮನೆ + ಕೆಲಸ = ಮೆನೆಗೆಲಸ ನೆಲ + ತಾವರೆ = ನೆಲದಾವರೆ ಸುಡು + ಕಾಡು = ಸುಡುಗಾಡು ಆನೆ + ಕಾಲು = ಆನೆಕಾಲು ತಲೆ + ತೆರಿಗೆ = ತಲೆತೆರಿಗೆ
ಕನ್ನಡದಲ್ಲಿ ಈ ಸೇರಿಕೆಯ ನಿಯಮಗಳು ವಿಕಲ್ಪವಾಗಿ ನಡೆಯುತ್ತವೆ ಎಂಬುದನ್ನು (ಎಂದರೆ ಎಲ್ಲಾ ಸಂದಭ್ರಗಳಲ್ಲೂ ನಡೆಯುವುದಿಲ್ಲವೆಂಬುದನ್ನು) ಕೊನೆಯ ಎರಡು ಉದಾಹರಣೆಗಳಿಂದ (ಆನೆಕಾಲು, ತಲೆತೆರಿಗೆ ಎಂಬವು ಗಳಿಂದ) ತಿಳಿಯಬಹುದು.
ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲೂ `ಅನುನಾಸಿಕ ಸಂಧಿ' ಎಂಬು ದೊಂದಿದೆ0iÉುಂದು ಹೇಳಲು ಸಾಧ್ಯವಿದೆಯಾದರೂ ಅವೆರಡರ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆ ಗಳಿಂದ ತಿಳಿಯಬಹುದು.
ಸಂಸ್ಕೃತದ `ಅನುನಾಸಿಕ ಸಂಧಿ’
ವಾಕ್ + ಮಯ = ವಾಙ್ಮಯ
ಸತ್ + ಮಾನ = ಸನ್ಮಾನ ಷಟ್ + ಮುಖ = ಷಣ್ಮುಖ ದಿಕ್ + ಮೂಢ = ದಿಙ್ಮೂಢ
ಕನ್ನಡದ `ಅನುನಾಸಿಕ ಸಂಧಿ’ ಹಿಂ + ಮೇಳ = ಹಿಮ್ಮೇಳ ಹಿಂ + ನೋಟ = ಹಿನ್ನೋಟ ಮುಂ + ನುಡಿ = ಮುನ್ನುಡಿ ಮುಂ + ನಡೆ = ಮುನ್ನಡೆ
ಮತ್ತು
ಮುಂದೆ
ಪದಗಳಿಗೆ
ಕನ್ನಡದಲ್ಲಿ ಹಿಂದೆ ಕೆಲವು ಜೋಡುಪದಗಳಲ್ಲಿ ಅನುಕ್ರಮವಾಗಿ ಹಿಂ ಮತ್ತು ಮುಂ ರೂಪಗಳಿವೆ. ಇವುಗಳ ಅನಂತರ ಅನು ನಾಸಿಕವೊಂದು ಬಂದಾಗ ಈ ಪದಗಳ ಕೊನೆಯ ಅನುಸ್ವಾರಕ್ಕೆ ಆ ಅನುನಾಸಿಕದ್ದೇ ರೂಪ ಬರುತ್ತದೆ. ಇದನ್ನು `ಅನುನಾಸಿಕ ಸಂಧಿ' ಎಂಬುದಾಗಿ ಕರೆಯಲು ಸಾಧ್ಯವಿದೆ.
ಆದರೆ, ಸಂಸ್ಕೃತದ ಅನುನಾಸಿಕ ಸಂಧಿ ಇದಕ್ಕಿಂತ ತೀರ ಭಿನ್ನವಾದುದು. ಯಾಕೆಂದರೆ, ಸಂಸ್ಕೃತದಲ್ಲಿ ಅನುನಾಸಿಕವಾಗಿ ಬದಲಾಗುವುದು ಕ, ಟ, ತ, ಪ, ಮೊದಲಾದ ಸ್ಪಶ್ರಗಳಲ್ಲದೆ ಅನುಸ್ವಾರವಲ್ಲ. ಇದಲ್ಲದೆ, ಈ ರೀತಿ ಅನುನಾಸಿಕ ಗಳಾಗಿ ಬದಲಾಗಿರುವ ಸ್ಪಶ್ರಗಳು ಸಂಸ್ಕೃತದಲ್ಲಿ ಅವುಗಳ ಅನಂತರ ಬರುವ ಅನುನಾಸಿಕಕ್ಕಿಂತ ಭಿನ್ನವಾಗಿಯೇ ಉಳಿಯುತ್ತವೆ.
35 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
2.3 ನಾಮರೂಢಿಯಳಿಯುವ ಹಾಗಿದ್ದರೆ.. ಮೇಲೆ ಸೂಚಿಸಿದ ಹಾಗೆ, ಕನ್ನಡದಲ್ಲಿ ಒಂದು ಪದದೊಂದಿಗೆ ಸ್ವರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಇಲ್ಲವೇ ಅಂತಹದೇ ಒಂದು ಪ್ರತ್ಯಯ ವನ್ನು ಸೇರಿಸಿದಾಗ, ಮೊದಲನೆಯ ಪದದ ಕೊನೆಯ ಸ್ವರ ಬಿದ್ದು ಹೋಗುತ್ತದೆ 0iÉುಂಬ ಸೇರಿಕೆಯ ನಿಯಮವಿದೆ. ಈ ನಿಯಮಕ್ಕೆ ಹಲಕೆಲವು ಅಪವಾದಗಳೂ ಇವೆ. ಕೆಲವು ಸಂದಭ್ರಗಳಲ್ಲಿ ಈ ರೀತಿ ಸ್ವರ ಬಿದ್ದು ಹೋಗುವ ಬದಲು ಅದರ ಮುಂದೆ ಯಕಾರ ಇಲ್ಲವೇ ವಕಾರ ಹೊಸದಾಗಿ ಸೇರಿಕೊಳ್ಳುತ್ತದೆ.
ಯ ಇಲ್ಲವೇ ವ ಸೇರಿಕೊಳ್ಳುವುದು ನಂಬಿಕೆ + ಇಡು = ನಂಬಿಕೆಯಿಡು ಮನೆ + ಒಂದು = ಮನೆಯೊಂದು ಕಪ್ಪೆ + ಉಂಟು = ಕಪ್ಪೆಯುಂಟು ಮಗು + ಇಗೆ = ಮಗುವಿಗೆ ರಾಜು + ಅಲ್ಲ = ರಾಜುವಲ್ಲ
ಸ್ವರ ಬಿದ್ದು ಹೋಗುವುದು
ಕೆಳಗೆ + ಇಡು = ಕೆಳಗಿಡು ಬೇರೆ + ಒಬ್ಬ = ಬೇರೊಬ್ಬ ಹಿಂದೆ + ಉಳಿ = ಹಿಂದುಳಿ ಕಾಡು + ಇಗೆ = ಕಾಡಿಗೆ ನಾನು + ಅಲ್ಲ = ನಾನಲ್ಲ ಮತ್ತು + ಒಂದು = ಮತ್ತೊಂದು ಮಗು+ ಒಂದು = ಮಗುವೊಂದು ಇತ್ತು + ಎಂದು = ಇತ್ತೆಂದು ಹಣದ + ಆಸೆ = ಹಣದಾಸೆ ಅಲ್ಲಿ + ಇಲ್ಲ = ಅಲ್ಲಿಲ್ಲ ಬಾಯಿ + ಆರು = ಬಾಯಾರು ಅಲ್ಲಿ + ಒಂದು = ಅಲ್ಲೊಂದು ಇದ್ದಾನೆ + ಎಂದು = ಇದ್ದಾನೆಂದು ಇದೆ + ಎಂದು = ಇದೆಯೆಂದು
ಇದೆ + ಎಂದು = ಇದೆಯೆಂದು ಖಂಡಿತ + ಆಗಿ = ಖಂಡಿತವಾಗಿ ಭೀತಿ + ಇಲ್ಲ = ಭೀತಿಯಿಲ್ಲ ಹುರಿ + ಆಗು = ಹುರಿಯಾಗು ನಾಯಿ+ಒಂದು= ನಾಯಿಯೊಂದು
ಕನ್ನಡದಲ್ಲಿ ಈ ರೀತಿ ಪದಗಳ ಅನಂತರ ಸ್ವರದಲ್ಲಿ ಸುರುವಾಗುವ ಪದ ಇಲ್ಲವೇ ಪ್ರತ್ಯಯ ಬಂದಾಗ ಎಂತಹ ಸಂದಭ್ರಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದು ಹೋಗುತ್ತದೆ (ಸ್ವರದ ಲೋಪವಾಗುತ್ತದೆ) ಮತ್ತು ಎಂತಹ ಸಂದಭ್ರಗಳಲ್ಲಿ ಆ ಎರಡು ಸ್ವರಗಳೂ ಬದಲಾಗದೆ ಉಳಿದು ಅವೆರಡರ ನಡುವೆ ಯಕಾರ ಇಲ್ಲವೇ ವಕಾರ ಆಗಮವಾಗಿ ಸೇರಿಕೊಳ್ಳುತ್ತದೆ ಎಂಬುದಕ್ಕೆ ಒಂದು ನಿಶ್ಚಿತವಾದ ನಿಯಮವನ್ನು ತಯಾರಿಸಿ ಕೊಡಲು ಕನ್ನಡದ ವೈಯಾಕರಣಿಗಳಿಗೆ ಸಾಧ್ಯವಾಗಿರಲಿಲ್ಲ.
ಹಾಗಾಗಿ `ನಾಮರೂಢಿ' ಇಲ್ಲವೇ `ನಾಮಭಾಗ' ಅಳಿಯದೆ ಇರುವ ಹಾಗಿದ್ದಲ್ಲಿ ಮಾತ್ರ ಲೋಪ ಮಾಡಬೇಕು (ಮತ್ತು ಅಳಿಯುವ ಹಾಗಿದ್ದಲ್ಲಿ ಲೋಪ ಮಾಡದೆ ಯಕಾರ ಇಲ್ಲವೇ ವಕಾರವನ್ನು ಸೇರಿಸಿಕೊಳ್ಳಬೇಕು ಅಥವಾ ಸಂಧಿ ಮಾಡದೆ ಇರಬೇಕು) ಎಂಬುದಾಗಿ ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಈ ಸಮಸ್ಯೆಗೆ ಸರಿಯಾದ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸದೆ ಜಾರಿಕೊಂಡಿದ್ದಾರೆ.
36 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಅನಂತರದ ಕನ್ನಡ ವೈಯಾಕರಣಿಗಳೆಲ್ಲರೂ ಇದನ್ನು ಹಾಗೆಯೇ ಗಿಳಿಪಾಠ ಮಾಡಿದ್ದಾರಲ್ಲದೆ ಈ ಪದಕಂತೆಗಳ ಹಿಂದೆ ಕನ್ನಡದ್ದೇ ಆದ ಸೇರಿಕೆಯ ನಿಯಮ ಗಳೇನಾದರೂ ಅಡಗಿವೆಯೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದಂತಿಲ್ಲ. ಬಿಳಿಗಿರಿಯವರ `ಆಲೋಕ’ (ಬಿಳಿಗಿರಿ 1969) ಇದಕ್ಕೊಂದು ಅಪವಾದವೆಂದು ಹೇಳಬಹುದು. ನಾಮರೂಪ ಅಳಿಯುವುದಿಲ್ಲವಾದಲ್ಲಿ ಮಾತ್ರ ಲೋಪಸಂಧಿಯನ್ನು ಬಳಸ ಬೇಕು ಎಂಬ ಹಳೆಗನ್ನಡ ವೈಯಾಕರಣಿಗಳ ಮಾತು ಅವರ ಜಾಣ್ಮೆಯನ್ನು ತೋರಿಸುತ್ತದೆ ಎಂಬುದಾಗಿ ಇವತ್ತಿನ ವೈಯಾಕರಣಿಗಳು ಕೆಲವರು ಭಾವಿಸಿರುವ ಹಾಗಿದೆ. ನಿಜಕ್ಕೂ ಇದು ಅವರ ಸೋಮಾರಿತನವನ್ನು ತೋರಿಸುತ್ತದಲ್ಲದೆ ಜಾಣ್ಮೆಯನ್ನಲ್ಲ.
ಯಾಕೆಂದರೆ, ವಾಕ್ಯದಲ್ಲಿ ಪದಗಳನ್ನು ಮತ್ತು ಪ್ರತ್ಯಯಗಳನ್ನು ಬಳಸುವಾಗ ಎಲ್ಲಿ ಸಂಧಿ ಮಾಡಬೇಕು, ಎಲ್ಲಿ ಸಂಧಿಮಾಡಬಾರದು ಮತ್ತು ಎಲ್ಲಿ ಎಂತಹ ಸಂಧಿಯನ್ನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳುವುದೇ ವೈಯಾಕರಣಿಯ ಕೆಲಸ (ಬಿಳಿಗಿರಿ 1969:173-8 ನೋಡಿ).
ನಾಮರೂಪ ಅಳಿಯುವಲ್ಲಿ ಲೋಪ ಮಾಡಬೇಡ ಎನ್ನಲು ಸಾಧ್ಯವಿದೆ ಯಾದರೆ, ವಾಕ್ಯರೂಪ ಅಳಿಯುವಲ್ಲಿ ಪದಗಳನ್ನು ಪ್ರಯೋಗಿಸಬೇಡ ಎಂದೂ ಹೇಳಲು ಸಾಧ್ಯವಿದೆ. ಹಾಗಿದ್ದರೆ ಈ ಎರಡೇ ವಾಕ್ಯಗಳಲ್ಲಿ ಇಡೀ ವ್ಯಾಕರಣವನ್ನು ಬರೆದು ಮುಗಿಸಿಬಿಡಬಹುದು!
ನಿಜಕ್ಕೂ ಮೇಲಿನ ಅಪವಾದಗಳ ಹಿಂದೆ ಎಂತಹ ನಿಯಮ ಅಡಗಿದೆ ಎಂಬುದನ್ನು ಕೆಳಗೆ (2.4)ರಲ್ಲಿ ಸೂಚಿಸಲಾಗಿದೆ.
2.4 ಸಂದಭ್ರಗಳ ವಿಭಜನೆ ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ತೆರನಾಗಿರುತ್ತವೆ. ಹಾಗಾಗಿ ಕನ್ನಡಲ್ಲಿ ಎಂತಹ ಸೇರಿಕೆಯ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳ ಬೇಕಾದರೆ ಈ ಸೇರಿಕೆಯ ನಿಯಮಗಳು ಕನ್ನಡದಲ್ಲಿ ಯಾವ ಯಾವ ಸಂದಭ್ರ ಗಳಲ್ಲೆಲ್ಲ ಭಿನ್ನವಾಗಿರುತ್ತವೆ ಎಂಬುದನ್ನು ಕಂಡುಹಿಡಿದು ಅದಕ್ಕನುಸಾರವಾಗಿ ಅವನ್ನು ವಿಭಜಿಸುವುದು ಅವಶ್ಯ.
ಮೊದಲನೆಯದಾಗಿ, ಕನ್ನಡದ ವೈಯಾಕರಣಿಗಳೇ ಹೇಳುವ ಹಾಗೆ, ಪದಮಧ್ಯದಲ್ಲಿ (ಎಂದರೆ ಪದಗಳ ಒಳರಚನೆಯಲ್ಲಿ) ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದಾಂತ್ಯದಲ್ಲಿ (ಎಂದರೆ ಪದಗಳನ್ನು ವಾಕ್ಯವೊಂದರಲ್ಲಿ ಬಳಸಿದಾಗ ಅವುಗಳ ನಡುವೆ) ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲಕೆಲವು ವ್ಯತ್ಯಾಸಗಳಿವೆ.
37 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಉದಾಹರಣೆಗಾಗಿ, ಕನ್ನಡದಲ್ಲಿ ವ್ಯಂಜನಗಳ ಬದಲಾವಣೆಗಳು ಪದಗಳ ನಡುವೆ ನಡೆಯುವುವಲ್ಲದೆ ಪದಗಳ ಕೊನೆಯಲ್ಲಿ ನಡೆಯುವುದಿಲ್ಲ ಎಂಬುದನ್ನು ನಾವು ಮೇಲೆ (2.2.2)ರಲ್ಲಿ ನೋಡಿರುವೆವು.
ಪದಗಳ ನಡುವೆ ನೆಲ + ಕಡಲೆ = ನೆಲಗಡಲೆ ಕೆಳ + ತುಟಿ = ಕೆಳದುಟಿ ಬೀಸು + ಕಲ್ಲು = ಬೀಸುಗಲ್ಲು ಊರು + ಕೋಲು = ಊರುಗೋಲು ದೊಡ್ಡ+ಕೋಲು=ದೊಡ್ಡ ಕೋಲು
ಪದಗಳ ಕೊನೆಯಲ್ಲಿ ನನ್ನ + ಕಾಲು = ನನ್ನ ಕಾಲು ದೊಡ್ಡ+ತುಂಡು=ದೊಡ್ಡ ತುಂಡು ಕೆಂಪು + ಕಲ್ಲು = ಕೆಂಪು ಕಲ್ಲು
ಪದಗಳ ನಡುವೆಯೂ ಈ ಬದಲಾವಣೆಗಳು ವಿಕಲ್ಪವಾಗಿ ಮಾತ್ರವೇ ನಡೆಯುತ್ತವಲ್ಲದೆ ಎಲ್ಲಾ ಸಂದಭ್ರಗಳಲ್ಲೂ ನಡೆಯುವುದಿಲ್ಲ ಎಂಬುದನ್ನು ಒಳಕೋಣೆ, ಆನೆಕಾಲು, ತಲೆತೆರಿಗೆ, ಕರಿತುಳಸಿ ಮೊದಲಾದ ಉದಾಹರಣೆ ಗಳಲ್ಲಿ ಕಾಣಬಹುದು.
ಸ್ವರಗಳ ಬದಲಾವಣೆಗಳಲ್ಲೂ ಪದಗಳ ನಡುವಿನ ಮತ್ತು ಕೊನೆಯ ಬದಲಾವಣೆಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕೆಲವು ಸಂದಭ್ರಗಳಲ್ಲಿ ಪದಗಳ ನಡುವೆ ಸ್ವರ ಬಿದ್ದು ಹೋಗುವುದಾದರೆ ಪದಗಳ ಕೊನೆಯಲ್ಲಿ ಯಕಾರ ಇಲ್ಲವೇ ವಕಾರ ಆಗಮವಾಗಿ ಬರುತ್ತದೆ.
ಪದಗಳ ನಡುವಿನ ಬದಲಾವಣೆ
ಕುಡಿ + ಇಸು = ಕುಡಿಸು ಬರು + ಇಸು = ಬರಿಸು ಚಿಕ್ಕ + ಅಮ್ಮ = ಚಿಕ್ಕಮ್ಮ ನೆನೆ + ಇಸು = ನೆನೆಸು
ಪದಗಳ ಕೊನೆಯ ಬದಲಾವಣೆ ಗತಿ + ಇಲ್ಲ = ಗತಿಯಿಲ್ಲ ಮಗು + ಇಲ್ಲದೆ = ಮಗುವಿಲ್ಲದೆ ಕಾರಣ + ಇಲ್ಲ = ಕಾರಣವಿಲ್ಲ ನಂಬಿಕೆ + ಇಡು = ನಂಬಿಕೆಯಿಡು
ಎರಡನೆಯದಾಗಿ, ಪದಗಳ ನಡುವಿನ ಬದಲಾವಣೆಯಲ್ಲಿಯೇ ಪದ ಪ್ರತ್ಯಯಗಳ (ಎಂದರೆ ಒಂದು ಪದದಿಂದ ಇನ್ನೊಂದು ಪದವನ್ನು ತಯಾರಿಸಲು ಬಳಸುವ ಪ್ರತ್ಯಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದರೂಪ ಪ್ರತ್ಯಯಗಳ (ಎಂದರೆ ಒಂದು ಪದದಿಂದ ಅದರ ಬೇರೆ ಬೇರೆ ರೂಪಗಳನ್ನು ತಯಾರಿಸಲು ಬಳಸುವ ಪ್ರತ್ಯಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ವ್ಯತ್ಯಾಸಗಳಿವೆ.
ಉದಾಹರಣೆಗಾಗಿ, ಉಕಾರಾಂತ ಕ್ರಿಯಾಪದಗಳಿಗೆ ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿದಾಗ ವಕಾರ ಆಗಮವಾಗಿ ಬರುತ್ತದೆ, ಆದರೆ ಇಕೆ ಎಂಬ ಪದಪ್ರತ್ಯಯವನ್ನು ಸೇರಿಸಿದಾಗ ಉಕಾರ ಬಿದ್ದು ಹೋಗುತ್ತದೆ (4.5 ನೋಡಿ).
38 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು
ಪದಪ್ರತ್ಯಯ
ಹೇಳು + ಇಕೆ = ಹೇಳಿಕೆ ಹೆದರು + ಇಕೆ = ಹೆದರಿಕೆ ನಂಬು + ಇಕೆ = ನಂಬಿಕೆ CAdÄ + EPÉ = CAfPÉ
ಪದರೂಪ ಪ್ರತ್ಯಯ ಹೇಳು + ಇಕೆ = ಹೇಳುವಿಕೆ ಹೆದರು + ಇಕೆ = ಹೆದರುವಿಕೆ ನಂಬು + ಇಕೆ = ನಂಬುವಿಕೆ ಅಂಜು + ಇಕೆ = ಅಂಜುವಿಕೆ
ಪದರೂಪ ಪ್ರತ್ಯಯಗಳಲ್ಲೂ ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸಿದಾಗ ಬೇರೆ ಬೇರೆ ರೀತಿಯ ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ, ಕ್ರಿಯಾಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಉಕಾರ ಬಿದ್ದುಹೋಗುತ್ತದೆ; ಆದರೆ ಇಕೆ ಪ್ರತ್ಯಯವನ್ನು ಸೇರಿಸಿದಾಗ ವಕಾರ ಆಗಮವಾಗಿ ಬರುತ್ತದೆ ಮತ್ತು ಉಕಾರ ಬಿದ್ದು ಹೋಗದೆ ಹಾಗೆ0iÉುೀ ಉಳಿಯುತ್ತದೆ.
ಇಸು ಪ್ರತ್ಯಯ ಪರವಾದಾಗ ಹಾಡು + ಇಸು = ಹಾಡಿಸು ನೋಡು + ಇಸು = ನೋಡಿಸು
ತಿನ್ನು + ಇಸು = ತಿನ್ನಿಸು ನುಂಗು + ಇಸು = ನುಂಗಿಸು
ಹೊರಡು + ಇಸು = ಹೊರಡಿಸು
ಇಕೆ ಪ್ರತ್ಯಯ ಪರವಾದಾಗ ಹಾಡು + ಇಕೆ = ಹಾಡುವಿಕೆ ನೋಡು + ಇಕೆ =ನೋಡುವಿಕೆ ತಿನ್ನು + ಇಕೆ = ತಿನ್ನುವಿಕೆ ನುಂಗು + ಇಕೆ = ನುಂಗುವಿಕೆ ಹೊರಡು + ಇಕೆ = ಹೊರಡುವಿಕೆ
ಮೂರನೆಯದಾಗಿ, ಎರಡು ಸ್ವರಗಳು ಒಟ್ಟಿಗೆ ಸೇರಿದಾಗ ಅವುಗಳಲ್ಲಿ ಮೊದಲನೆಯ ಸ್ವರ ಪ್ರಕೃತಿಯದೇ ಅಥವಾ ಪ್ರತ್ಯಯದ್ದೇ ಎಂಬ ಅಂಶದ ಮೇಲೂ ಪದಗಳ ಕೊನೆಯ ಸ್ವರ ಬಿದ್ದು ಹೋಗುವುದೇ ಅಥವಾ ಆಗಮ ಬರುವುದೇ ಎಂಬ ವಿಷಯ ಅವಲಂಬಿಸಿದೆ. ಮೊದಲನೆಯ ಸ್ವರ ಪ್ರಕೃತಿ ಯದ್ದಾದರೆ ಸಾಮಾನ್ಯವಾಗಿ ಅದು ಬಿದ್ದು ಹೋಗುವುದಿಲ್ಲ (ಇದಕ್ಕೆ ಒಂದು ಅಪವಾದವಿದೆಯೆಂಬುದನ್ನು ಕೆಳಗೆ ನೋಡಲಿರುವೆವು), ಆದರೆ ಅದು ಪ್ರತ್ಯಯ ದ್ದಾದರೆ ಬಿದ್ದು ಹೋಗುವುದೇ ಜಾಸ್ತಿ.
ಪ್ರಕೃತಿಯ ಸ್ವರ ದಾರಿ + ಇಲ್ಲ = ದಾರಿಯಿಲ್ಲ ಕೆಲಸ + ಉಂಟು = ಕೆಲಸವುಂಟು ದಪ್ಪ + ಆಗಿ = ದಪ್ಪವಾಗಿ ಮನೆ + ಒಂದು = ಮನೆಯೊಂದು ಅಂಜಿಕೆ + ಇತ್ತು = ಅಂಜಿಕೆಯಿತ್ತು ಮದುವೆ + ಇತ್ತು = ಮದುವೆಯಿತ್ತು ಓದದೆ + ಇದ್ದ = ಓದದಿದ್ದ ಅಡ್ಡ + ಆಗಿ = ಅಡ್ಡವಾಗಿ
ಪ್ರತ್ಯಯದ ಸ್ವರ ನಮ್ಮಲ್ಲಿ + ಇಲ್ಲ = ನಮ್ಮಲ್ಲಿಲ್ಲ ನಮ್ಮ + ಊರು = ನಮ್ಮೂರು ಅಲ್ಲಂದ + ಆಚೆ = ಅಲ್ಲಿಂದಾಚೆ ಅದಕ್ಕೆ + ಒಪ್ಪಿ = ಅದಕ್ಕೊಪ್ಪಿ ಗಂಜಿಗೆ + ಇಲ್ಲ = ಗಂಜಿಗಿಲ್ಲ
ಕಾಡಿನಲ್ಲಿ + ಆಗಿ = ಕಾಡಿನಲ್ಲಾಗಿ
39 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಮೇಲೆ ದಾರಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರಕೃತಿಯದ್ದಾದ ಕಾರಣ ಅದರ ಕೊನೆಯ ಸ್ವರ ಬಿದ್ದು ಹೋಗಿಲ್ಲ, ಆದರೆ ನಮ್ಮಲ್ಲಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರತ್ಯಯದ್ದಾದ ಕಾರಣ ಅದು ಬಿದ್ದು ಹೋಗಿದೆ. ಇತರ ಪದಗಳಲ್ಲೂ ಹೀಗೆಯೇ. ನಾಲ್ಕನೆಯದಾಗಿ, ಸ್ವರಕ್ಕೆ ಸ್ವರ ಸೇರಿದಾಗ ಆಗಮವಾಗಿ ಯಕಾರ ಬರುವುದೋ ಇಲ್ಲವೇ ವಕಾರ ಬರುವುದೋ ಎಂಬುದು ಅವುಗಳಲ್ಲಿ ಮೊದಲನೆಯ ಸ್ವರ ಎಂತಹದು ಎಂಬುದನ್ನವಲಂಬಿಸಿದೆ. ಮೊದಲನೆಯ ಸ್ವರ ಎಕಾರ ಇಲ್ಲವೇ ಇಕಾರವಾದರೆ ಆಗಮವಾಗಿ ಯಕಾರ ಬರುತ್ತದೆ, ಅಕಾರ ಇಲ್ಲವೇ ಉಕಾರವಾದರೆ ಆಗಮವಾಗಿ ವಕಾರ ಬರುತ್ತದೆ.
ಆಗಮವಾಗಿ ವಕಾರ ಕೆಲಸ + ಅಲ್ಲ = ಕೆಲಸವಲ್ಲ
ಆಗಮವಾಗಿ ಯಕಾರ ಕುದುರೆ + ಅಲ್ಲ = ಕುದುರೆಯಲ್ಲ ಸಂಜೆ + ಆಯಿತು = ಸಂಜೆಯಾಯಿತು ಇಲ್ಲ+ಆದರೂ = ಇಲ್ಲವಾದರೂ ನಂಬಿಕೆ + ಇಡು = ನಂಬಿಕೆಯಿಡು ನಂಬಿಕೆ + ಉಂಟು = ನಂಬಿಕೆಯುಂಟು ಇದೆ + ಎಂದು = ಇದೆಯೆಂದು ಮನೆ + ಒಂದು = ಮನೆಯೊಂದು
ಕಡಿ + ಅಕ್ಕಿ = ಕಡಿಯಕ್ಕಿ ಗುರಿ + ಆಗು = ಗುರಿಯಾಗು ಇಲಿ + ಇಲ್ಲ = ಇಲಿಯಿಲ್ಲ ನಾಯಿ + ಎಂದು = ನಾಯಿಯೆಂದು ವ್ಯಕ್ತಿ + ಒಬ್ಬ = ವ್ಯಕ್ತಿಯೊಬ್ಬ
ಕೆಲಸ + ಇಲ್ಲ = ಕೆಲಸವಿಲ್ಲ ಕೆಲಸ + ಉಂಟು = ಕೆಲಸವುಂಟು ಇಲ್ಲ + ಎಂದು = ಇಲ್ಲವೆಂದು ಕೆಲಸ + ಒಂದು = ಕೆಲಸವೊಂದು ಮಗು + ಅಲ್ಲ = ಮಗುವಲ್ಲ ಗುರು + ಆಗು = ಗುರುವಾಗು ಕರು + ಇಲ್ಲ = ಕರುವಿಲ್ಲ ಗುರು + ಎಂದು = ಗುರುವೆಂದು ಮಗು+ಒಂದು = ಮಗುವೊಂದು
ಐದನೆಯದಾಗಿ, ಪ್ರಕೃತಿಯ ಕೊನೆಯ ಸ್ವರ ಉಕಾರವಾಗಿದೆಯಾದರೆ ಮತ್ತು ಆ ಪ್ರಕೃತಿಯಲ್ಲಿ ಕಡಿಮೆ0iÉುಂದರೆ ಮೂರಾದರೂ ಛಂದೋಮಾತ್ರೆಗಳಿವೆಯಾದರೆ ಅದರ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಪ್ರಕೃತಿಯಲ್ಲಿ ಮೂರಕ್ಕಿಂತ ಕಡಿಮೆ (ಎಂದರೆ ಎರಡು) ಛಂದೋಮಾತ್ರೆಗಳಿವೆಯಾದರೆ ಉಕಾರ ಬಿದ್ದು ಹೋಗುವುದಿಲ್ಲ.
ಎರಡಕ್ಕಿಂತ ಜಾಸ್ತಿ ಮಾತ್ರೆಗಳು ಕಲ್ಲು + ಒಂದು = ಕಲ್ಲೊಂದು
ಕಾಡು + ಇಗೆ = ಕಾಡಿಗೆ ಬೆನ್ನು + ಅಟ್ಟು = ಬೆನ್ನಟ್ಟು ಹಣ್ಣು + ಆಗಿದೆ = ಹಣ್ಣಾಗಿದೆ
ಎರಡು ಮಾತ್ರೆಗಳು ಮಗು+ ಒಂದು = ಮಗುವೊಂದು ಕರು + ಇಗೆ = ಕರುವಿಗೆ ಗುರು + ಇನ = ಗುರುವಿನ ಕರು + ಆಗಿದೆ = ಕರುವಾಗಿದೆ
40 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಆರನೆಯದಾಗಿ, ಪ್ರಕೃತಿಯು ನಾಮಪದವೇ ಅಥವಾ ಕ್ರಿಯಾಪದವೇ ಎಂಬ ವಿಷಯವನ್ನಾಧರಿಸಿಯೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ ಪ್ರಕೃತಿಯು ಕ್ರಿಯಾಪದವಾಗಿದೆಯಾದರೆ, ಅದರಲ್ಲಿ ಎರಡೇ ಛಂದೋಮಾತ್ರೆಗಳಿದ್ದರೂ ಕೊನೆಯ ಉಕಾರ ಬಿದ್ದು ಹೋಗುತ್ತದೆ.
ನಾಮಪ್ರಕೃತಿಗಳಲ್ಲಿ ಲೋಪವಿಲ್ಲ
ಮಗು + ಅನ್ನು = ಮಗುವನ್ನು
ಕರು + ಇಗೆ = ಕರುವಿಗೆ ಹಸು + ಇನ = ಹಸುವಿನ
ಕ್ರಿಯಾಪ್ರಕೃತಿಗಳಲ್ಲಿ ಲೋಪ ಬಿಡು + ಅಲಿ = ಬಿಡಲಿ ಕೊಡು + ಇಸು = ಕೊಡಿಸು ಇರು + ಉತ್ತ = ಇರುತ್ತ
ಏಳನೆಯದಾಗಿ ಪ್ರಕೃತಿಯು ಕನ್ನಡದ್ದೇ ಅಥವಾ ಸಂಸ್ಕೃತದಿಂದ ಎರವಲಾಗಿ ಬಂದುದೇ ಎಂಬ ವಿಷಯದ ಮೇಲೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಸಂಸ್ಕೃತದ ಪ್ರಕೃತಿಗಳಲ್ಲಿ ಮೂರು ಅಥವಾ ಜಾಸ್ತಿ ಛಂದೋಮಾತ್ರೆಗಳಿದ್ದರೂ ಉಕಾರ ಬಿದ್ದುಹೋಗುವುದಿಲ್ಲ.
ಕನ್ನಡದ ಪ್ರಕೃತಿ ಮಾತು + ಅನ್ನು = ಮಾತನ್ನು
ಕಾಡು + ಇಗೆ = ಕಾಡಿಗೆ ಕಾಡು + ಇನ = ಕಾಡಿನ
ಸಂಸ್ಕೃತದ ಪ್ರಕೃತಿ ಧಾತು + ಅನ್ನು = ಧಾತುವನ್ನು ಸಾಧು + ಇಗೆ = ಸಾಧುವಿಗೆ ಸಾಧು + ಇನ = ಸಾಧುವಿನ
ಈ ರೀತಿ ಕನ್ನಡದಲ್ಲಿ ಎಲ್ಲಿ ಎಂತಹ ಸೇರಿಕೆಯ ನಿಯಮ ಕಾಣಿಸಿಕೊಳ್ಳು ತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ ಬರೆಯಲು ಹಲವಾರು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳುವ ಅವಶ್ಯಕತೆಯಿದೆ. ಇವನ್ನೆಲ್ಲ ಸರಿಯಾಗಿ ಗಮನಿಸಿ ಸೇರಿಕೆಯ ನಿಯಮಗಳನ್ನು ಬರೆದಲ್ಲಿ `ನಾಮರೂಪವಳಿಯದಿದ್ದಲ್ಲಿ' ಎಂಬಂತಹ ಪ್ರಯೋಗಗಳ ಮೂಲಕ ಜಾರಿಕೊಳ್ಳುವ ಅವಶ್ಯಕತೆಯಿಲ್ಲ.
2.5 ಸೇರಿಕೆಯ ನಿಯಮಗಳ ಅನಿಯಮಿತತೆ ಕನ್ನಡದಲ್ಲಿ ಸಾಮಾನ್ಯವಾಗಿ ಪದಗಳ ನಡುವೆ ಬರುವ ಸೇರಿಕೆಯ ನಿಯಮಗಳು, ಅದರಲ್ಲೂ ಜೋಡುಪದಗಳಲ್ಲಿ ಮತ್ತು ಪದಪ್ರತ್ಯಯಗಳ ಮೂಲಕ ಸಿದ್ಧ ವಾಗುವ ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಅನಿಯಮಿತ ವಾಗಿರುವುದೇ ಜಾಸ್ತಿ.
ಇದಕ್ಕೆ ಕಾರಣವೇನೆಂದರೆ, ಈ ಪದಗಳು ಅವುಗಳ ಅವಶ್ಯಕತೆ ತೋರಿ ಬಂದಾಗ ಒಂದೊಂದಾಗಿ ತಯಾರಾಗಿ ಭಾಷೆಯಲ್ಲಿ ಬಳಕೆಗೆ ಬಂದಂತಹವುಗಳು. ಇವು ಈ ರೀತಿ ಬೇರೆ ಬೇರೆ ಸಮಯಗಳಲ್ಲಿ ತಯಾರಾಗಿರಲು ಸಾಧ್ಯವಿದೆಯಾದ
41 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪಕಾರ
ನಡೆದಿದ್ದ
ಶತಮಾನದಲ್ಲೇನೇ
ಕಾಣಿಸುವ ಡಕಾರ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕಾರಣ, ಅವುಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ ಸಮಯದವಾಗಿರಲು ಸಾಧ್ಯವಿದೆ.
ಉದಾಹರಣೆಗಾಗಿ ಕಾಳ್ಗಿಚ್ಚು (ಕಾಡು + ಕಿಚ್ಚು `ಬೆಂಕಿ’) ಜೋಡುಪದ zÀ°è ಳಕಾರವಾಗುವ ಬದಲಾವಣೆ ಹಳೆಗನ್ನಡದ ಸಮಯದ್ದು. ಈ ಜೋಡುಪದ ಅಷ್ಟೊಂದು ಹಿಂದೆಯೇ ತಯಾರಾಗಿದ್ದು, ಇಂದಿಗೂ ಬದಲಾಗದೆ ಬಳಕೆಯಲ್ಲಿ ಉಳಿದುಕೊಂಡಿದೆ. ಇದೇ ರೀತಿಯಲ್ಲಿ, ಕೈಪಿಡಿ ಜೋಡುಪದದಲ್ಲಿ ಹಿಡಿ ಕ್ರಿಯಾಪದ (ಇಲ್ಲವೇ ನಾಮಪದ) ಪಿಡಿ ಎಂಬ ಹಳೆಗನ್ನಡದ ರೂಪದಲ್ಲಿದೆ. ಈ ಪದದಲ್ಲಿ ಬರುವ ಪದ ಹೊಸಗನ್ನಡದಲ್ಲಿ ಹಿಡಿ ರೂಪಕ್ಕೆ ಬದಲಾಗಿದ್ದು, ಇದಕ್ಕೆ ಹತ್ತು- ಹನ್ನೊಂದನೇ ಹಕಾರವಾಗುವ ಬದಲಾವಣೆ ಕಾರಣ (ಭಟ್ 1995:77 ನೋಡಿ). ಎಂದರೆ, ಹಳೆಗನ್ನಡದ ಕಾಲದಿಂದಲೂ ಪಿಡಿ ಎಂಬುದು ಈ ಜೋಡುಪದದಲ್ಲಿ ಬದಲಾವಣೆಯಾಗದೆ ಹಾಗೆಯೇ ಉಳಿದುಕೊಂಡಿದೆ.
ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳು ಹೊಸಗನ್ನಡದಲ್ಲಿ ಬಳಕೆಯಲ್ಲಿಲ್ಲ. ಹೀಗಿದ್ದರೂ ಬೆಂಬತ್ತು, ಕಣ್ಣೀರು, ಹೆದ್ದಾರಿ, ಕಗ್ಗಲ್ಲು, ಬೆಳ್ದಿಂಗಳು ಮೊದಲಾದ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಕಾಣಿಸುವ ಬೆಮ್, ಕಣ್, ಹೆರ್ (ಹೆದ್), ಕರ್ (ಕಗ್), ಬೆಳ್ ಮೊದಲಾದ ಪದಗಳು ವ್ಯಂಜನದಲ್ಲಿ ಕೊನೆಗೊಳ್ಳುತ್ತಿದ್ದು, ಅವುಗಳ ಕೊನೆಯ ವ್ಯಂಜನ ಎರಡನೆಯ ಅಂಗವಾಗಿರುವ ಪದದ ಸುರುವಿನ ವ್ಯಂಜನಕ್ಕೆ ಅನುಗುಣವಾಗಿ ಬದಲಾಗಿದೆ. ಇದೂ ಹಳೆಗನ್ನಡದ ಪಳೆಯಳಿಕೆ0iÉುೀ ಎಂಬುದರಲ್ಲಿ ಸಂಶಯವಿಲ್ಲ. ಪದಪ್ರತ್ಯಯಗಳ ಬಳಕೆಯಲ್ಲೂ ಇಂತಹ ಪಳೆಯಳಿಕೆಗಳನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಬೆಚ್ಚಗೆ (ಬಿಸಿ + ಅಗೆ), ಬೆಳ್ಳಗೆ (ಬಿಳಿ + ಅಗೆ) ಮೊದಲಾದ ಕೆಲವು ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳೆಲ್ಲ ಹಳೆಗನ್ನಡದವು.
ಬಿಳಿ ಪದ ಪೂವ್ರದ ಹಳೆಗನ್ನಡದಲ್ಲಿ ಬೆಳಿ ಎಂದಿದ್ದಿರಬೇಕು. ಎರಡನೆಯ ಅಕ್ಷರದಲ್ಲಿ ಇಕಾರ ಇಲ್ಲವೇ ಉಕಾರ ಬಂದಿದ್ದಾಗ ಅದರಲ್ಲಿದ್ದ ಎಕಾರ ಹಳೆಗನ್ನಡದ ಕಾಲದಲ್ಲಿ ಇಕಾರವಾಗಿ ಬದಲಾಗಿತ್ತು (ಬೆಳಿ>ಬಿಳಿ). ಬೆಚ್ಚಗೆ ಮತ್ತು ಬೆಳ್ಳಗೆ ಪದಗಳಲ್ಲಿ ಎರಡನೆಯ ಅಕ್ಷರವಾಗಿ ಇಕಾರ ಇಲ್ಲವೇ ಉಕಾರ ಇರಲಿಲ್ಲವಾದ ಕಾರಣ, ಮೊದಲನೆಯ ಅಕ್ಷರದ ಎಕಾರ ಹಳೆಗನ್ನಡದಲ್ಲಿ ಬದಲಾಗದೆ ಹಾಗೆ0iÉುೀ ಉಳಿದಿತ್ತು. ಅದೇ ರೂಪ ಇವತ್ತು ಹೊಸಗನ್ನಡದಲ್ಲೂ ಈ ಜೋಡುಪದಗಳಲ್ಲಿ ಉಳಿದುಕೊಂಡಿದೆ (ಭಟ್ 1995:63 ನೋಡಿ).
ಇದಲ್ಲದೆ, ಆಟ, ಓಟ, ಕೂಟ, ನೋಟ ಮೊದಲಾದ ಪದಗಳಲ್ಲಿ ಕಾಣಿಸುವ ಡಕಾರ ಟಕಾರವಾಗುವ ಸೇರಿಕೆಯ ನಿಯಮವೂ ಹಳೆಗನ್ನಡದಿಂದ
42 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಅಥವಾ ಅದಕ್ಕೂ ಹಿಂದಿನ ಕನ್ನಡ ಪ್ರಭೇದದಿಂದ ಉಳಿದು ಬಂದ ಪಳೆಯಳಿಕೆ ಯಿರಬೇಕು. ಪದರೂಪ ಪ್ರತ್ಯಯಗಳ ಬಳಕೆಯಲ್ಲೂ ಸೇರಿಕೆಯ ನಿಯಮಗಳ ಮಟ್ಟಿಗೆ ಅನಿಯಮಿತತೆ ಕಾಣಿಸುತ್ತಿದ್ದು ಇದಕ್ಕೂ ಪಳೆಯಳಿಕೆಗಳೇ ಕಾರಣವೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ ಕ್ರಿಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ದ ಪ್ರತ್ಯಯವನ್ನು ಸೇರಿಸಿದಾಗ ಆ ಕ್ರಿಯಾಪದಗಳಲ್ಲಿ ಮತ್ತು ಪ್ರತ್ಯಯದಲ್ಲಿ ಹಲಕೆಲವು ಬದಲಾವಣೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಅನಿಯಮಿತವಾಗಿರುತ್ತವೆ (ಬರು - ಬಂದ, ತೆರು - ತೆತ್ತ, ಇರು - ಇದ್ದ, ಕೊಡು - ಕೊಟ್ಟ, ಕಾಣು - ಕಂಡ, ಹೋಗು - ಹೋದ).
ಪದರೂಪ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಈ ಸೇರಿಕೆಯ ನಿಯಮದ ಅನಿಯಮಿತತೆಯೂ ಪದಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮದ ಅನಿಯಮಿತತೆಯ ಹಾಗೆಯೇ ಪಳೆಯಳಿಕೆಯ ಪರಿಣಾಮವೆಂದು ಹೇಳಬಹುದು.
2.6 ವಣ್ರಗಳ ಪಟ್ಟಿ ಸಂಸ್ಕೃತ ವೈಯಾಕರಣಿಗಳು ಸಿದ್ಧಪಡಿಸಿರುವ ವಣ್ರಗಳ ಪಟ್ಟಿಯನ್ನು ಅತ್ಯಂತ ವೈಜ್ಞಾನಿಕವಾದ ಪಟ್ಟಿ' ಎಂಬುದಾಗಿ ಹೆಚ್ಚಿನವರೂ ಹೇಳುತ್ತಾರೆ. ಆದರೆ ಹೇಗೆ ಇದು ವೈಜ್ಞಾನಿಕ ಎಂಬುದನ್ನು ಯಾರೂ ಸರಿಯಾಗಿ ವಿವೇಚಿಸಿದ ಹಾಗಿಲ್ಲ. ಸಂಸ್ಕೃತದ ವ್ಯಂಜನಗಳಲ್ಲಿ ವಗ್ರೀಯ ವ್ಯಂಜನಗಳನ್ನು (ಸ್ಪಶ್ರ ಮತ್ತು ಅನುನಾಸಿಕಗಳನ್ನು) ಅವುಗಳ ಉಚ್ಚಾರಣೆಯ ಆಧಾರದ ಮೇಲೆ ಪಟ್ಟಿ ಮಾಡ ಲಾಗಿದೆಯಾದ ಕಾರಣ ವೈಜ್ಞಾನಿಕತೆ ಕಾಣಿಸುತ್ತದೆ, ಆದರೆ ಅವಗ್ರೀಯ ವ್ಯಂಜನಗಳನ್ನಾಗಲಿ ಇಲ್ಲವೇ ಸ್ವರಗಳನ್ನಾಗಲಿ ಆ ರೀತಿ ಅವುಗಳ ಉಚ್ಚಾರಣೆಯ ಆಧಾರದ ಮೇಲೆ ಪಟ್ಟಿ ಮಾಡಿಲ್ಲ. ನಿಜಕ್ಕೂ ಸಂಸ್ಕೃತ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಸೂಚಿಸಲು ಸಾಧ್ಯವಾಗುವ ಹಾಗೆ ತಯಾರಿಸಿಕೊಂಡಿದ್ದಾರೆ. ಕನ್ನಡದ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದಿಂದ ಹಾಗೆ0iÉುೀ ಎತ್ತಿಕೊಂಡಿದ್ದಾರೆ. ಆದರೆ ಅದು ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸು ವಲ್ಲಿ ಸ್ವಲ್ಪವೂ ಅನುಕೂಲವಾಗಿಲ್ಲ. ಹಾಗಾಗಿ, ಕನ್ನಡದ ಮಟ್ಟಿಗಂತೂ ಅದು ನಿಜಕ್ಕೂ ವೈಜ್ಞಾನಿಕ’ವಲ್ಲ.
2.6.1 ಸಂಸ್ಕೃತ ಸ್ವರಗಳ ಪಟ್ಟಿ
43 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಸಂಸ್ಕೃತದ ವೈಯಾಕರಣಿಗಳು ಸ್ವರಗಳನ್ನು ಅ, ಇ, ಉ, ಋ, ಲೃ, ಏ, ಓ, ಐ, ಔ ಎಂಬುದಾಗಿ ಪಟ್ಟಿ ಮಾಡಿದ್ದಾರೆ. ಪಾಣಿನಿಯ ವ್ಯಾಕರಣದಲ್ಲಿ ಬಳಕೆಯಾಗುವ ಅಇಉಣ್, ಋಲೃಕ್, ಏಓಙõï, ಐಔಚ್ ಎಂಬ `ಮಾಹೇಶ್ವರ ಸೂತ್ರ’ಗಳಲ್ಲಿ ಈ ಪಟ್ಟಿಯ ಮೂಲವನ್ನು ಕಾಣಬಹುದು. ಮೇಲೆ ಸೂಚಿಸಿದ ಹಾಗೆ, ಸ್ವರಗಳ ಈ ಅನುಕ್ರಮಕ್ಕೆ ಸಂಸ್ಕೃತ ವ್ಯಾಕರಣ ದಲ್ಲಿ ಬೇರೆ0iÉುೀ ಒಂದು ಉದ್ದೇಶವಿದೆ. ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಹೇಳಲು ಅದು ಸಹಾಯಕವಾಗುತ್ತದೆ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಅ, ಇ ಮತ್ತು ಉ ಸ್ವರಗಳು (ಮತ್ತು ಋ, ಲೃ ಎಂಬವುಗಳು ಕೂಡ) ಗಿಡ್ಡ (ಹ್ರಸ್ವ) ಮತ್ತು ಉದ್ದ (ದೀಘ್ರ) ಎಂಬ ಎರಡು ರೂಪಗಳಲ್ಲಿ ಬರಬಲ್ಲುವು. ಸವಣ್ರದೀಘ್ರ ಎಂಬ ಸೇರಿಕೆಯ ನಿಯಮವೂ ಈ ಸ್ವರಗಳನ್ನು ಮಾತ್ರ ಬಾಧಿಸುತ್ತದೆ (2.2.1 ನೋಡಿ). ಹಾಗಾಗಿ ಅವನ್ನೆಲ್ಲ ಒಟ್ಟಾಗಿ ಪಟ್ಟಿಯಲ್ಲಿ ಮೊದಲಿಗೆ ಕೊಡಲಾಗಿದೆ. ಮೇಲಿನ ಮಾಹೇಶ್ವರ ಸೂತ್ರಗಳಲ್ಲಿ ಮೊದಲನೆಯ ಸೂತ್ರದ ಮೊದಲನೆಯ ಸ್ವರದೊಂದಿಗೆ ಎರಡನೆಯ ಸೂತ್ರದ ಕೊನೆಯ ವ್ಯಂಜನವನ್ನು ಸೇರಿಸಿ ರಚಿಸಿದ ಅಕ್ ಸಂಜ್ಞೆಯ ಮೂಲಕ ಈ ಸ್ವರಗಳನ್ನು ಒಟ್ಟಿಗೆ ಸಂಕ್ಷಿಪ್ತವಾಗಿ ಪಾಣಿನಿಯ ವ್ಯಾಕರಣದಲ್ಲಿ ಸೂಚಿಸಲಾಗುತ್ತದೆ.
ಉಳಿದ ಸ್ವರಗಳು ಸಂಸ್ಕೃತದಲ್ಲಿ ಉದ್ದ ರೂಪದಲ್ಲಿ ಮಾತ್ರ ಬರಬಲ್ಲುವು. ಇವುಗಳಲ್ಲಿ ಏಕಾರ-ಓಕಾರಗಳು ಒಂದು ರೀತಿಯವು, ಮತ್ತು ಐಕಾರ- ಔಕಾರಗಳು ಇನ್ನೊಂದು ರೀತಿಯವು. ಈ ವ್ಯತ್ಯಾಸವನ್ನು ಪಟ್ಟಿಯಲ್ಲಿರುವ ಅವುಗಳ ಜಾಗದ ಮೂಲಕ ಸೂಚಿಸಲಾಗಿದೆ. ಸೇರಿಕೆ(ಸಂಧಿ)ಯ ನಿಯಮಗಳಲ್ಲೂ ಏಕಾರ-ಓಕಾರಗಳು ಮತ್ತು ಐಕಾರ ಔಕಾರಗಳು ಅಕ್ ಸ್ವರಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತವೆ (2.2.1 ನೋಡಿ). ಹಾಗಾಗಿ, ಈ ಸ್ವರಗಳನ್ನು ಪಟ್ಟಿಯಲ್ಲಿ ಉಳಿದವುಗಳಿಗಿಂತ ಬೇರಾಗಿ ಹೇಳಿರುವುದು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಸಹಾಯಕ ವಾಗುತ್ತದೆ.
2.6.2 ಕನ್ನಡ ಸ್ವರಗಳ ಪಟ್ಟಿ ಕನ್ನಡದ ವೈಯಾಕರಣಿಗಳು ಮೇಲೆ ಕೊಟ್ಟಿರುವ ಸಂಸ್ಕೃತ ಸ್ವರಗಳ ಪಟ್ಟಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ (ಎ ಮತ್ತು ಒ ಸ್ವರಗಳನ್ನು ಅದಕ್ಕೆ ಸೇರಿಸಿ ಮತ್ತು ಐ ಸ್ವರವನ್ನು ಒ ಸ್ವರದ ಮೊದಲು ಇರಿಸಿ) ತಮ್ಮ ವ್ಯಾಕರಣ ಗಳಲ್ಲಿ ಬಳಸಿಕೊಂಡಿದ್ದಾರೆ.
44 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಆದರೆ ಸಂಸ್ಕೃತ ವೈಯಾಕರಣಿಗಳ ಹಾಗೆ ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮವನ್ನು ಕನ್ನಡ ವ್ಯಾಕರಣದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಬಳಸಿಕೊಳ್ಳಲು ಯಾವ ರೀತಿಯಲ್ಲೂ ಅವರಿಗೆ ಸಾಧ್ಯವಾಗಿಲ್ಲ.
ಎಂದರೆ, ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮ ಕನ್ನಡ ವ್ಯಾಕರಣದ ಮಟ್ಟಿಗೆ ಸಂಪೂಣ್ರವಾಗಿ ಅನುಪಯುಕ್ತವಾಗಿಯೇ ಉಳಿದಿದೆ. ನಿಜಕ್ಕೂ ಈ ಪಟ್ಟಿ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲದಿರುವುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಕನ್ನಡದಲ್ಲಿ ಅ, ಇ, ಉ ಎಂಬವುಗಳು ಮಾತ್ರವಲ್ಲದೆ ಎ, ಒ ಎಂಬವುಗಳೂ ಗಿಡ್ಡ ಮತ್ತು ಉದ್ದ ರೂಪಗಳಲ್ಲಿ ಬರಬಲ್ಲುವು. ಆದರೆ, ಐ ಮತ್ತು ಔ ಸ್ವರ'ಗಳಿಗೆ ಒಂದೇ ರೂಪವಿದೆ. ಹಾಗಾಗಿ, ಐ ಎಂಬುದನ್ನು ಒ ಎಂಬುದರ ಮೊದಲು ಇರಿಸಿರುವುದು ಕನ್ನಡದ ಮಟ್ಟಿಗೆ ಸರಿಯಲ್ಲ. ಇದಲ್ಲದೆ, ಐ ಮತ್ತು ಔಗಳಿಗೆ ಕನ್ನಡದಲ್ಲಿ ವಿಶಿಷ್ಟವಾದ ಸ್ಥಾನವೇ ಇಲ್ಲ. ಅವು ಅಕಾರದೊಂದಿಗೆ ಯಕಾರ ಮತ್ತು ವಕಾರಗಳು ಸೇರಿದಾಗ ಉಂಟಾಗುವ ಅಯ್ ಮತ್ತು ಅವ್ ಎಂಬ ಅಕ್ಷರಜೋಡಿಗಳಲ್ಲದೆ, ಸಂಸ್ಕೃತದಲ್ಲಿ ಕಾಣಿಸುವ ಹಾಗೆ ವಿಶಿಷ್ಟವಾದ ಸಂಧಿಸ್ವರ’ಗಳಲ್ಲ.
ಸಂಸ್ಕೃತದಲ್ಲಿ ಯಕಾರ ಮತ್ತು ವಕಾರಗಳನ್ನು ಬಳಸಿರುವ ಈ ಎರಡು ಅಕ್ಷರಜೋಡಿಗಳು ಮಾತ್ರ ಬಳಕೆಯಲ್ಲಿವೆ. ಆದರೆ ಕನ್ನಡದಲ್ಲಿ ಇವು ಮಾತ್ರ ವಲ್ಲದೆ ಎಯ್, ಒಯ್, ಆ0iÀiï, ಇವ್ ಮೊದಲಾದ ಬೇರೆಯೂ ಹಲವು ಅಂತಹವೇ ಅಕ್ಷರಜೋಡಿಗಳೂ (ಗೆ0iÉ್ಮು, ಕೊಯ್ಲು, ಆ0iÉ್ಕು, ಕಿವ್ಡು) ಬಳಕೆ ಯಲ್ಲಿವೆ. ಹಾಗಾಗಿ, ಮೇಲಿನ ಎರಡು ಅಕ್ಷರಜೋಡಿಗಳಿಗೆ (ಅ0iÀiï ಮತ್ತು ಅವ್ಗಳಿಗೆ) ಮಾತ್ರ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಕನ್ನಡದ ಮಟ್ಟಿಗೆ ಯಾವ ಔಚಿತ್ಯವೂ ಇಲ್ಲ. ಕನ್ನಡದ ಸೇರಿಕೆಯ ನಿಯಮಗಳಲ್ಲಿ ಇಕಾರ ಮತ್ತು ಎಕಾರಗಳು ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವುವಾದರೆ ಉಕಾರ, ಒಕಾರ ಮತ್ತು ಅಕಾರಗಳು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ ಇಕಾರ ಮತ್ತು ಎಕಾರಗಳ ಅನಂತರ ಯಕಾರ ಆಗಮವಾಗಿ ಬರುವುದಾದರೆ, ಉಕಾರ, ಒಕಾರ ಮತ್ತು ಅಕಾರಗಳ ಅನಂತರ ವಕಾರ ಆಗಮವಾಗಿ ಬರುತ್ತದೆ (2.3 ನೋಡಿ). ಈ ವಿಷಯದಲ್ಲೂ ಮೇಲಿನ ಸ್ವರಗಳ ಪಟ್ಟಿ ಕನ್ನಡ ವ್ಯಾಕರಣದ ಮಟ್ಟಿಗೆ ಅನುಕೂಲವಾಗಿಲ್ಲ.
ಸಂಸ್ಕೃತ ಪದಗಳಲ್ಲಿ ಕಾಣಿಸುವ ಏಕಾರ ಮತ್ತು ಓಕಾರಗಳು ನಿಜಕ್ಕೂ ಮೂಲಪದದಲ್ಲಿದ್ದ ಸ್ವರಗಳಲ್ಲ. ಯಾಕೆಂದರೆ, ಸಂಸ್ಕೃತದ ಮೂಲಭಾಷೆಯಾದ ಇಂಡೋ-ಯುರೋಪಿಯನ್ನಲ್ಲಿದ್ದ ಎಕಾರ-ಒಕಾರಗಳು ಸಂಸ್ಕೃತದಲ್ಲಿ ಅಕಾರ ವಾಗಿ ಬದಲಾಗಿವೆ ಮತ್ತು ಏಕಾರ-ಓಕಾರಗಳು ಆಕಾರವಾಗಿ ಬದಲಾಗಿವೆ.
45 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅದೇ ಮೂಲಭಾಷೆಯಲ್ಲಿದ್ದ ಅಇ, ಎಇ ಮತ್ತು ಒಇ ಸ್ವರಜೋಡಿಗಳು ಏಕಾರವಾಗಿ ಮತ್ತು ಅಉ, ಎಉ ಮತ್ತು ಒಉ ಸ್ವರ ಜೋಡಿಗಳು ಓಕಾರವಾಗಿ ಬದಲಾದುದರಿಂದಾಗಿ ಇವತ್ತು ಸಂಸ್ಕೃತ ವೇದ, ತೇ, ಓಜಸ್ ಮೊದಲಾದ ಪದಗಳಲ್ಲಿ ಈ ಎರಡು ಸ್ವರಗಳು ಕಾಣಿಸಿಕೊಳ್ಳುತ್ತಿವೆ (ಭಟ್ 2005:54 £ÉÆr). ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕವೂ ಇವು ಸಂಸ್ಕೃತ ಪದ ಗಳಲ್ಲಿ ಕಾಣಿಸಿಕೊಳ್ಳುವುವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ಈ ಎರಡು ಸ್ವರಗಳನ್ನು ಸಂಧ್ಯಕ್ಷರಗಳೆಂದು ಕರೆಯುತ್ತಾರೆ. ಉದಾಹರಣೆಗಾಗಿ, ಅಕಾರ ಮತ್ತು ಆಕಾರಗಳು ಇಕಾರ ಮತ್ತು ಈಕಾರಗಳೊಂದಿಗೆ ಸೇರಿದಾಗ ಏಕಾರವೂ, ಉಕಾರ ಮತ್ತು ಊಕಾರಗಳೊಂದಿಗೆ ಸೇರಿದಾಗ ಓಕಾರವೂ ಸಂಸ್ಕೃತದಲ್ಲಿ ಆದೇಶಗಳಾಗಿ ಬರುತ್ತವೆಯೆಂಬುದನ್ನು ನಾವು ಮೇಲೆ (2.2.1 ರಲ್ಲಿ) ನೋಡಿರುವೆವು.
ಏಕಾರ ಮತ್ತು ಓಕಾರಗಳನ್ನು ಅಕಾರ, ಇಕಾರ ಮತ್ತು ಉಕಾರಗಳಿಂದ ಪ್ರತ್ಯೇಕಿಸಿ ಪಟ್ಟಿ ಮಾಡುವುದರ ಮೂಲಕ ಸಂಸ್ಕೃತದ ವೈಯಾಕರಣಿಗಳು ಈ ವಿಷಯವನ್ನು ಸೂತ್ರರೂಪದಲ್ಲಿ ವಿವರಿಸಲು ಶಕ್ತರಾಗಿದ್ದಾರೆ.
ಕನ್ನಡದ ವ್ಯಾಕರಣಕ್ಕೆ ಅದರ ಸ್ವರಗಳ ಪಟ್ಟಿ ಅನುಕೂಲವಾಗಬೇಕಾದಲ್ಲಿ ಅದರಲ್ಲಿ ಬರುವ ಸ್ವರಗಳ ಸಂಖ್ಯೆಯನ್ನು ಮಾತ್ರವಲ್ಲದೆ ಜಾಗವನ್ನೂ ಬದಲಾಯಿಸಬೇಕು. ಎಂದರೆ, ಇ, ಈ, ಎ, ಏ, ಉ, ಊ, ಒ, ಓ ಮತ್ತು ಅ, ಆ ಎಂಬುದಾಗಿ ಇಕಾರ-ಈಕಾರಗಳನ್ನು ಎಕಾರ-ಏಕಾರಗಳೊಂದಿಗೆ ಮತ್ತು ಉಕಾರ-ಊಕಾರಗಳನ್ನು ಒಕಾರ-ಓಕಾರಗಳೊಂದಿಗೆ ಇರಿಸಿ ಪಟ್ಟಿ ಮಾಡಬೇಕು.
ಇದಲ್ಲದೆ, ಅಕಾರ-ಆಕಾರಗಳನ್ನು ಇಕಾರ ಮತ್ತು ಎಕಾರದೊಂದಿಗೆ ಇರಿಸುವ ಬದಲು ಉಕಾರ ಮತ್ತು ಒಕಾರದೊಂದಿಗೆ ಇರಿಸಬೇಕು. ಹೀಗೆ ಮಾಡಿದಲ್ಲಿ, ಈ ಸ್ವರಗಳ ಪಟ್ಟಿಯನ್ನು ಬಳಸಿ ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳನ್ನು ಸಂಸ್ಕೃತ ವ್ಯಾಕರಣಗಳಲ್ಲಿರುವ ಹಾಗೆ ಸೂತ್ರರೂಪ ದಲ್ಲಿ ತಿಳಿಸಿಹೇಳಲು ಸಾಧ್ಯವಾದೀತು. ಕನ್ನಡಕ್ಕೆ ಅವಶ್ಯವಿರುವ ಇಂತಹ ಸ್ವರಗಳ ಪಟ್ಟಿಗೆ ಉಚ್ಚಾರಣೆಯ ಆಧಾರವಿದೆ. ಇಕಾರ-ಎಕಾರಗಳು ನಾಲಿಗೆಯ ಮುಂಭಾಗದಲ್ಲಿ ಹುಟ್ಟುತ್ತವೆ ಮತ್ತು ಉಕಾರ, ಒಕಾರ ಮತ್ತು ಅಕಾರಗಳು ನಾಲಿಗೆಯ ಹಿಂಭಾಗದಲ್ಲಿ ಹುಟ್ಟುತ್ತವೆ (ಅಕಾರದ ಕೆಲವು ಪ್ರಭೇದಗಳು ಮಾತ್ರ ನಾಲಿಗೆಯ ನಡುಭಾಗದಲ್ಲಿ ಹುಟ್ಟುತ್ತವೆ). ಈ ವ್ಯತ್ಯಾಸವನ್ನು ಕೆಳಗೆ ಕಾಣಿಸಿದ ಹಾಗೆ ಚಿತ್ರಿಸಲು ಸಾಧ್ಯವಿದೆ.
ಬಾಯಿಯ ಜಾಗ
ನಾಲಿಗೆಯ ಭಾಗ ಮುಂದೆ
»AzÉ
46 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮೇಲೆ
ನಡುವೆ
ಕೆಳಗೆ
ಸೇರಿಕೆಯ ನಿಯಮಗಳು E, F
J, K
G, H M, N C, D
ಈ ರೀತಿ ಸ್ವರಗಳ ಹುಟ್ಟನ್ನಾಧರಿಸಿ ರಚಿಸಿದ ಪಟ್ಟಿ0iÉುೀ ಕನ್ನಡದ ಮಟ್ಟಿಗೆ ಹೆಚ್ಚು `ವೈಜ್ಞಾನಿಕ'ವಾದುದು. ಇದು ಮೇಲೆ ವಿವರಿಸಿದ ಸಂಸ್ಕೃತ ಸ್ವರಗಳ ಪಟ್ಟಿಯಿಂದ ತೀರ ಭಿನ್ನವಾಗಿದೆ0iÉುಂಬುದನ್ನು ಗಮನಿಸಬಹುದು.
2.6.3 ವ್ಯಂಜನಗಳ ಪಟ್ಟಿ ಸಂಸ್ಕೃತದ ವ್ಯಂಜನಗಳನ್ನು ವಗ್ರೀಯಗಳು (ಸ್ಪಶ್ರ ಮತ್ತು ಅನುನಾಸಿಕಗಳು) ಮತ್ತು ಅವಗ್ರೀಯಗಳು ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸ ಲಾಗಿದೆ. ಇವುಗಳಲ್ಲಿ ವಗ್ರೀಯಗಳನ್ನು ಅವುಗಳ ಉಚ್ಚಾರಣೆಯ ಜಾಗವನ್ನು ಆಧರಿಸಿ ಐದು ವಗ್ರಗಳಲ್ಲಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಪ್ರತಿಯೊಂದು ವಗ್ರದಲ್ಲೂ ಅಘೋಷ-ಅಲ್ಪಪ್ರಾಣ (ಕಚಟತಪ), ಅಘೋಷ-ಮಹಾಪ್ರಾಣ (ಖಛಠಥಫ), ಘೋಷ-ಅಲ್ಪಪ್ರಾಣ (ಗಜಡದಬ), ಘೋಷ-ಮಹಾಪ್ರಾಣ (ಘಝಢಧಭ) ಮತ್ತು ಅನುನಾಸಿಕ (ಙಞಣನಮ) ಎಂಬುದಾಗಿ ಐದು ರೀತಿಯ ವ್ಯಂಜನಗಳು ಕಾಣಿಸಿಕೊಳ್ಳುತ್ತವೆ. ಅವಗ್ರೀಯಗಳನ್ನು ಅಂತಸ್ಥ (ಯರಲವ) ಮತ್ತು ಊಷ್ಮ (ಸಶಷಹ) ಎಂಬುದಾಗಿ ವಿಂಗಡಿಸಲಾಗಿದೆ. ಕನ್ನಡದ ವ್ಯಂಜನಗಳನ್ನು ಈ ರೀತಿ ವಿಂಗಡಿಸುವ ಬದಲು ಬೇರೆ ರೀತಿಯಲ್ಲಿ ವಿಂಗಡಿಸುವುದರಿಂದ ಅದರ ಸೇರಿಕೆಯ ನಿಯಮಗಳನ್ನು ವಿವರಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲುದು. ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳಿಲ್ಲ. ಇದಲ್ಲದೆ, ಣನಮಗಳೆಂಬ ಮೂರು ಅನುನಾಸಿಕಗಳು ಮತ್ತು ಸಶಹಗಳೆಂಬ ಮೂರು ಊಷ್ಮಗಳು ಮಾತ್ರ ಕನ್ನಡದಲ್ಲಿ ಬಳಕೆಯಲ್ಲಿವೆ. ಈ ವ್ಯಂಜನಗಳನ್ನು ವಗ್ರೀಯ ಮತ್ತು ಅವಗ್ರೀಯಗಳೆಂದು ವಿಂಗಡಿಸುವ ಬದಲು, ಅವುಗಳ ಉಚ್ಚಾರಣೆಯನ್ನವಲಂಬಿಸಿ ಕೆಳಗೆ (47ನೇ ಪುಟದಲ್ಲಿ) ಕೊಟ್ಟಿರುವ ಹಾಗೆ ವಿಂಗಡಿಸುವುದು ಕನ್ನಡದ ಮಟ್ಟಿಗೆ ಹೆಚ್ಚು ಅನುಕೂಲ. ಉದಾಹರಣೆಗಾಗಿ, ಪಬಮವಗಳನ್ನು ಒಟ್ಟಾಗಿ ಒಂದೇ ಕಾಲಂನಲ್ಲಿ ಹೇಳಿರುವುದರಿಂದ ಅವುಗಳ ನಡುವಿರುವ ಹತ್ತಿರದ ಸಂಬಂಧವನ್ನು ಸೂಚಿಸಲು ಸಾಧ್ಯವಾಗುತ್ತದೆ. ಇತರ ಕಾಲಂಗಳಲ್ಲಿ ಬರುವ ವ್ಯಂಜನಗಳ ನಡುವೆ ಮತ್ತು ಬೇರೆ ಬೇರೆ ಸಾಲುಗಳಲ್ಲಿ ಬರುವ ವ್ಯಂಜನಗಳ ನಡುವೆಯೂ ಇಂತಹವೇ ಹತ್ತಿರದ ಸಂಬಂಧಗಳು ಕಂಡುಬರುತ್ತವೆ.
47 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಈ ಸಂಬಂಧಗಳು ಕನ್ನಡದ ಚರಿತ್ರೆಯಲ್ಲಿ ನಡೆದಿರುವ ಬದಲಾವಣೆಗಳಲ್ಲಿ ಮತ್ತು ಕನ್ನಡ ಪದಗಳ ಒಳರಚನೆಯಲ್ಲಿ ಬಳಕೆಯಾಗುವ ಸೇರಿಕೆಯ ನಿಯಮ ಗಳಲ್ಲಿ ಕಾಣಿಸಿಕೊಳ್ಳುತ್ತವೆ.
¥À § ªÀÄ ªÀ
ಕನ್ನಡ ವ್ಯಂಜನಗಳ ಪಟ್ಟಿ
vÀ zÀ £À
gÀ ® ¸À
PÀ UÀ
l ZÀ qÀ d t
0iÀÄ
¼À
±À
ºÀ
2.7 ತಿರುಳು ಕನ್ನಡದಲ್ಲಿ ಕಾಣಿಸುವ ಸೇರಿಕೆಯ (ಸಂಧಿ) ನಿಯಮಗಳಿಗೂ ಸಂಸ್ಕೃತದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲವು ಮುಖ್ಯವಾದ ವ್ಯತ್ಯಾಸ ಗಳಿವೆ. ಕನ್ನಡದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯಲು ಸಂಸ್ಕೃತದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ.
ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತ ದವೇ ಆದ ಕೆಲವು ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳುವುವಾದ ಕಾರಣ ಅವನ್ನು ವಿವರಿಸುವಲ್ಲಿ ಮಾತ್ರ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ ತಿಳಿಸಿಹೇಳುವ ಅವಶ್ಯಕತೆಯಿದೆ. ಕನ್ನಡದ ಸೇರಿಕೆಯ ನಿಯಮಗಳು ಪದಗಳ ನಡುವೆ ಮತ್ತು ಪದಗಳ ಕೊನೆ ಯಲ್ಲಿ ಬೇರೆ ಬೇರೆಯಾಗಿರುತ್ತವೆ. ಇದಲ್ಲದೆ, ಸೇರಿಕೆಯ ನಿಯಮಕ್ಕೆ ಒಳಪಡುವ ವಣ್ರ ಪ್ರಕೃತಿಯದೋ ಪ್ರತ್ಯಯದ್ದೋ, ಪದಪ್ರತ್ಯಯದ್ದೋ ಪದರೂಪ ಪ್ರತ್ಯಯ ದ್ದೋ, ಕ್ರಿಯಾಪ್ರಕೃತಿಯದೋ ನಾಮಪ್ರಕೃತಿಯದೋ, ಕನ್ನಡ ಪದದ್ದೋ ಸಂಸ್ಕೃತದಿಂದ ಎರವಲಾಗಿ ಬಂದ ಪದದ್ದೋ, ಪ್ರಕೃತಿಯಲ್ಲಿ ಛಂದೋ ಮಾತ್ರೆಗಳೆಷ್ಟಿವೆ, ಸೇರಿಕೆಯ ನಿಯಮಕ್ಕೆ ಒಳಪಡುವ ವಣ್ರದ ಸ್ವರೂಪವೇನು ಮೊದಲಾದ ಹಲವಾರು ವಿಷಯಗಳನ್ನು ಗಮನಿಸಿಕೊಳ್ಳದೆ ಕನ್ನಡದ ಸೇರಿಕೆಯ (ಸಂಧಿ)ನಿಯಮಗಳೆಂತಹವು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗದು. ಈ ವಿಷಯದಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
48 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸೇರಿಕೆಯ ನಿಯಮಗಳು ಸಂಸ್ಕೃತ ವಣ್ರಗಳ ಪಟ್ಟಿ ಸಂಸ್ಕೃತದ ಮಟ್ಟಿಗೆ `ವೈಜ್ಞಾನಿಕ’ವಾಗಿರುವುದು ನಿಜವಾದರೂ ಕನ್ನಡದ ಮಟ್ಟಿಗೆ ವೈಜ್ಞಾನಿಕವಲ್ಲ. ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸಲು ಅದರದೇ ಆದ ವ್ಯಾಕರಣ ವೊಂದನ್ನು ಸಿದ್ಧಪಡಿಸುವುದು ಎಷ್ಟು ಅವಶ್ಯ ಎಂಬ ವಿಷಯ ಇದರಿಂದ ಸ್ಪಷ್ಟ ವಾಗುತ್ತದೆ.
49 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
3. ಪದವಗ್ರಗಳು
3.1 ಮುನ್ನೋಟ ಭಾಷೆಯೊಂದರಲ್ಲಿ ಬರುವ ಪದಗಳನ್ನು ಅವುಗಳ ಅಥ್ರ ಮತ್ತು ವಾಕ್ಯಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ - ಈ ಎರಡು ವಿಷಯಗಳ ಆಧಾರದ ಮೇಲೆ ಕೆಲವು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು.
ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಬಳಕೆಯಾಗುವ ಪದಗಳನ್ನು ಅವುಗಳ ಅಥ್ರದ ಆಧಾರದ ಮೇಲೆ ಕೆಳಗೆ ಸೂಚಿಸಿದ ಹಾಗೆ ಮುಖ್ಯವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
ನಾಮಪದಗಳು: ರಾಜು, ಹುಡುಗಿ, ಮನೆ, ಆನೆ ಮೊದಲಾದ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ಪದಗಳು.
ಕ್ರಿಯಾಪದಗಳು: ಹೇಳು, ತಿನ್ನು, ಓಡು, ಬೀಳು, ಕೊಡು, ಮಾಡು
ಮೊದಲಾದ ಘಟನೆಗಳನ್ನು ನಿದ್ರೇಶಿಸುವ ಪದಗಳು.
ಗುಣಪದಗಳು: ದೊಡ್ಡ, ಚಿಕ್ಕ, ಬಿಳಿ, ಕಪ್ಪು, ಒಳ್ಳೆ, ಬಹಳ ಮೊದಲಾದ
ಗುಣಧಮ್ರಗಳನ್ನು ಸೂಚಿಸುವ ಪದಗಳು.
ಪದಗಳನ್ನು ವಿಂಗಡಿಸಲು ಈ ರೀತಿ ಅವುಗಳ ಅಥ್ರವನ್ನು ಮಾತ್ರವಲ್ಲದೆ ವಾಕ್ಯಗಳಲ್ಲಿ ಅವು ಎಂತಹ ಕೆಲಸಗಳನ್ನು ನಡೆಸುತ್ತವೆ ಎಂಬುದನ್ನೂ ತಿಳಿದು ಕೊಳ್ಳುವ ಅವಶ್ಯಕತೆಯಿದೆ. ಕನ್ನಡದಲ್ಲಿ ಮೇಲೆ ಕೊಟ್ಟಿರುವ ಮೂರು ರೀತಿಯ ಪದಗಳು ಮೂರು ರೀತಿಯ ಕೆಲಸಗಳನ್ನು ನಡೆಸುತ್ತವೆ ಎಂಬುದನ್ನು ಈ ಕೆಳಗಿನ ವಾಕ್ಯಗಳಿಂದ ತಿಳಿಯಬಹುದು.
ರಾಜು ಚಿಕ್ಕ ಹುಡುಗನಿಗೆ ಹಣ್ಣು ಕೊಟ್ಟ (1PÀ) (1ಖ) ಗಿರಿ ಕಪ್ಪು ಕಾಗದದಲ್ಲಿ ಚಿತ್ರ ಬಿಡಿಸಿದ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (1ಕ-ಖ) ವಾಕ್ಯಗಳಲ್ಲಿ ರಾಜು, ಹುಡುಗ, ಹಣ್ಣು, ಗಿರಿ, ಕಾಗದ ಮತ್ತು ಚಿತ್ರ ಎಂಬ ಆರು ಪದಗಳನ್ನು ಆರು ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುವು ದಕ್ಕಾಗಿ ಬಳಸಲಾಗಿದೆ. ಇವು ಕೊಡು ಮತ್ತು ಬಿಡಿಸು ಎಂಬ ಕ್ರಿಯಾಪದಗಳು ನಿದ್ರೇಶಿಸುವ ಎರಡು ಘಟನೆಗಳಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳಾಗಿವೆ.
ಇದಲ್ಲದೆ ಮೇಲಿನ ವಾಕ್ಯಗಳಲ್ಲಿ ಚಿಕ್ಕ ಹಾಗೂ ಕಪ್ಪು ಎಂಬ ಬೇರೆಯೂ ಎರಡು ಪದಗಳ ಬಳಕೆಯಾಗಿದ್ದು, ಅವುಗಳನ್ನು ಅವುಗಳ ಮುಂದಿರುವ ನಾಮಪದಗಳು (ಅನುಕ್ರಮವಾಗಿ ಹುಡುಗ ಮತ್ತು ಕಾಗದ ಎಂಬವುಗಳು) ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುಗಳ ಗುಣಧಮ್ರಗಳನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ.
ಕನ್ನಡದಲ್ಲಿ ಈ ರೀತಿ ವ್ಯಕ್ತಿ, ವಸ್ತು, ವಿಷಯ, ಮೊದಲಾದವುಗಳನ್ನು ಗುರುತಿಸುವುದು, ಘಟನೆಗಳನ್ನು ನಿದ್ರೇಶಿಸುವುದು ಮತ್ತು ಗುಣಧಮ್ರಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಖ್ಯ ಕೆಲಸಗಳನ್ನು ನಡೆಸುವುದಕ್ಕಾಗಿ ಮೇಲಿನ ಮೂರು ರೀತಿಯ ಪದಗಳನ್ನು ಬಳಸುತ್ತೇವೆ. ಇದು ಅವನ್ನು ಅನು ಕ್ರಮವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಪದ ವಗ್ರಗಳಲ್ಲಿ ವಿಂಗಡಿಸಲು ಇನ್ನೊಂದು ಆಧಾರ.
3.2 ನಾಮಪದಗಳು ಮತ್ತು ಗುಣಪದಗಳು ಪದಗಳನ್ನು ಪದವಗ್ರಗಳಾಗಿ ವಿಂಗಡಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆ ಗಳ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ, ಮೇಲೆ ಸೂಚಿಸಿದ ಹಾಗೆ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಗಳೆಂಬುದಾಗಿ ಮೂರು ಪದವಗ್ರಗಳಿವೆ; ಆದರೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಪದವಗ್ರಗಳು ಮಾತ್ರ ಇವೆ. ಗುಣಪದಗಳು ನಾಮಪದಗಳಿಂದ ಭಿನ್ನವಾದ ಮೂರನೆಯ ಪದವಗ್ರದಲ್ಲಿ ಬಾರದೆ ನಾಮಪದ ವಗ್ರದಲ್ಲೇನೇ ಬರುತ್ತವೆ. ಸಂಸ್ಕೃತದ ಪದಗಳನ್ನು ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬು ದಾಗಿ ಮೂರು ಗುಂಪುಗಳಲ್ಲಿ ವಿಂಗಡಿಸುವುದು ಅವಶ್ಯ ಎಂಬುದಾಗಿ ಅದರ ಕೆಲವು ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ; ಆದರೆ ಬೇರೆ ಕೆಲವರು ವೈಯಾಕರಣಿಗಳು ಇವುಗಳಲ್ಲಿ ಮೂರನೆಯದಾದ ಅವ್ಯಯ ಎಂಬುದನ್ನು ನಾಮ ಪದಗಳೊಂದಿಗೆ ಸೇರಿಸುವುದರ ಮೂಲಕ, ಸಂಸ್ಕೃತದ ಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡೇ ಎರಡು ಪದವಗ್ರಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದಾಗಿ ವಾದಿಸಿದ್ದಾರೆ.
ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ಸಂಸ್ಕೃತ ಪದಗಳ ಈ ಎರಡು ರೀತಿಯ ವಿಭಜನೆಗಳನ್ನು ಹಾಗೆಯೇ ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸ
50 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಲಾಗಿದೆ. ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬುದಾಗಿ ಮೂರು ರೀತಿಯ ಪದಗಳು ಕನ್ನಡದಲ್ಲಿವೆ0iÉುಂಬುದಾಗಿ ಕೆಲವು ವ್ಯಾಕರಣಗಳು ತಿಳಿಸು ತ್ತವೆ ಮತ್ತು ಬೇರೆ ಕೆಲವು ವ್ಯಾಕರಣಗಳು ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ರೀತಿಯ ಪದಗಳು ಮಾತ್ರ ಇವೆಯೆಂದು ತಿಳಿಸುತ್ತವೆ. ಸಂಸ್ಕೃತ ವ್ಯಾಕರಣದಲ್ಲಿ ಗುಣಪದ (ಗುಣವಾಚಕ ಪದ) ಮತ್ತು ನಾಮ ಪದಗಳನ್ನು ಒಂದೇ ಪದವಗ್ರದಲ್ಲಿ ಇರಿಸಲು ಕಾರಣವೇನೆಂದರೆ, ಅಥ್ರದ ಮಟ್ಟಿಗೆ ಈ ಎರಡು ರೀತಿಯ ಪದಗಳು ಭಿನ್ನವಾಗಿ ತೋರುವುವಾದರೂ ವಾಕ್ಯ ಗಳಲ್ಲಿ ಅವಕ್ಕೆ ಒಂದೇ ರೀತಿಯ ಬಳಕೆಯಿದೆ. ಆದರೆ, ಕನ್ನಡದಲ್ಲಿ ಗುಣಪದ ಗಳು ಮೇಲೆ ವಿವರಿಸಿದ ಹಾಗೆ ಅಥ್ರ ಮತ್ತು ಬಳಕೆಗಳೆರಡರಲ್ಲೂ ನಾಮಪದ ಗಳಿಗಿಂತ ತೀರಾ ಭಿನ್ನವಾಗಿವೆ.
ಹಾಗಾಗಿ, ಕನ್ನಡದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಾದ ಪದವಗ್ರದಲ್ಲಿ ಬರುತ್ತವೆ0iÉುಂದು ವಾದಿಸಲು ಹಲವು ಆಧಾರಗಳನ್ನು ಕೊಡ ಬಹುದು. ನಾಮಪದಗಳ ಹಾಗೆ ಅವು ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವುದಿಲ್ಲ ವೆಂಬುದು ಇವುಗಳಲ್ಲಿ ಮುಖ್ಯವಾದುದು. ಈ ವಿಷಯವನ್ನಾಧರಿಸಿ ಅವನ್ನು ಅವ್ಯಯಗಳೆಂದು ಹೆಸರಿಸಲು ಸಾಧ್ಯವಿದೆಯೇನೋ ನಿಜ. ಆದರೆ, ಇದರಿಂದ ಬೇರೆ ಕೆಲವು ಸಮಸ್ಯೆಗಳೇಳಲು ಸಾಧ್ಯವಿದೆ.
ಗುಣಪದಗಳಿಗಿಂತ ಭಿನ್ನವಾಗಿರುವ ಕೆಲವು ಕ್ರಿಯಾವಿಶೇಷಣಗಳನ್ನು ಮತ್ತು ನಿಪಾತಗಳನ್ನು ಮಾತ್ರ ಸಂಸ್ಕೃತದಲ್ಲಿ ಅವ್ಯಯಗಳೆಂದು ಕರೆಯುವುದು ರೂಢಿ. ಇಂತಹವು (ಅಯ್ಯೋ, ಓಹೋ, ಚೀ, ಥೂ, ಎಲವೋ ಮೊದಲಾದವುಗಳು) ಕನ್ನಡದಲ್ಲೂ ಇವೆಯಾದ ಕಾರಣ, ಅವಕ್ಕಿಂತ ಭಿನ್ನವಾಗಿರುವ ಕನ್ನಡದ ಗುಣ ಪದಗಳನ್ನು ಅವ್ಯಯಗಳೆಂದು ಕರೆದಲ್ಲಿ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗ ಬಲ್ಲುದು. ಹಾಗಾಗಿ, ಕನ್ನಡದಲ್ಲಿ ಅವನ್ನು ಬೇರೆಯೇ ಒಂದು ಪದವಗ್ರದಲ್ಲಿ ಇರಿಸುವುದು ಒಳ್ಳೆಯದು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯತ್ಯಾಸ ಒಂದು ಅತ್ಯಂತ ಮುಖ್ಯವಾದ ವ್ಯತ್ಯಾಸ. ವ್ಯಾಕರಣದ ಹಲವಾರು ಭಾಗಗಳಲ್ಲಿ ಈ ವ್ಯತ್ಯಾಸದಿಂದಾಗಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಒಂದಕ್ಕಿಂತ ಒಂದು ತೀರ ಭಿನ್ನವಾಗಿ ಕಾಣಿಸುವುವೆಂಬುದನ್ನು ಮುಂದೆ ನೋಡಲಿರುವೆವು. ಈ ವಿಷಯದಲ್ಲಿ ಕನ್ನಡ ಯಾಕೆ ಸಂಸ್ಕೃತದ ಹಾಗೆ ಅಲ್ಲ, ಕನ್ನಡದಲ್ಲಿ ಗುಣಪದಗಳನ್ನು ಬೇರೆಯೇ ಒಂದು ಪದವಗ್ರದಲ್ಲಿ ಯಾಕೆ ಪ್ರತ್ಯೇಕವಾಗಿ ಇರಿಸಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ಕೆಲವು ವಿಷಯಗಳನ್ನು ಪರಿಶೀಲಿಸಬಹುದು.
51 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ನಾಮಪದದ ವಿಶೇಷಣವನ್ನಾಗಿ
3.2.1 ವಿಶೇಷಣಗಳಾಗಿ ಗುಣಪದಗಳ ಬಳಕೆ ಗುಣಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡುವ ವಿಧಾನ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬೇರೆ ಬೇರಾಗಿದೆ. ಸಂಸ್ಕೃತದಲ್ಲಿ ಒಂದು ಗುಣಪದವನ್ನು ಮಾಡಬೇಕಿದ್ದಲ್ಲಿ, ಆ ನಾಮಪದದೊಂದಿಗೆ ಯಾವ ವಿಭಕ್ತಿ ಪ್ರತ್ಯಯ ಬರುತ್ತಿದೆಯೋ ಅದನ್ನು ಗುಣಪದದೊಂದಿಗೂ ಬಳಸುವ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಗುಣಪದ ಗಳೂ ನಾಮಪದಗಳೇ ಎನ್ನುವುದು ಇದೇ ಕಾರಣಕ್ಕಾಗಿ.
ಆದರೆ ಕನ್ನಡದಲ್ಲಿ ಆ ರೀತಿ ಗುಣಪದದೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಒಂದು ಗುಣಪದವನ್ನು ನಾಮಪದದ ವಿಶೇಷಣವಾಗಿ ಬಳಸಬೇಕಿದ್ದಲ್ಲಿ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ನೇರವಾಗಿ ಆ ನಾಮಪದದೊಂದಿಗೆ ಇರಿಸಬೇಕಾಗುತ್ತದೆ.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳನ್ನು ಮತ್ತು ಅವುಗಳ ಕನ್ನಡ ಅನುವಾದಗಳನ್ನು ಗಮನಿಸಬಹುದು.
(2PÀ)
ತತ್ರ ಏಕಃ ಕೃಷ್ಣಃ ಸಪ್ರಃ ಅಸ್ತಿ ಅಲ್ಲಿ ಒಂದು ಕಪ್ಪು ಹಾವು ಇದೆ' (2ಖ) ಹರಿಃ ಏಕಂ ಕೃಷ್ಣಂ ಸಪ್ರಂ ಅಪಶ್ಯತ್ ಹರಿ ಒಂದು ಕಪ್ಪು ಹಾವನ್ನು ನೋಡಿದ’ (2ಗ) ಹರಿಃ ಏಕೇನ ಕೃಷ್ಣೇನ ಸಪ್ರೇನ ದಷ್ಟಃ `ಹರಿಯನ್ನು ಒಂದು ಕಪ್ಪು ಹಾವು ಕಚ್ಚಿತು’
(2ಕ) ವಾಕ್ಯದಲ್ಲಿ ಏಕಃ ಕೃಷ್ಣಃ ಸಪ್ರಃ `ಒಂದು ಕಪ್ಪು ಹಾವು' ಎಂಬ ನಾಮಪದಕಂತೆ ಬಂದಿದ್ದು ಅದರಲ್ಲಿರುವ ಸಪ್ರ ನಾಮಪದ ಮಾತ್ರವಲ್ಲದೆ, ಅದರ ವಿಶೇಷಣಗಳಾದ ಏಕ ಮತ್ತು ಕೃಷ್ಣ ಪದಗಳೂ ವಿಭಕ್ತಿ ಪ್ರತ್ಯಯ ದೊಂದಿಗೆ (ಪುಲ್ಲಿಂಗ-ಏಕವಚನ-ಪ್ರಥಮಾ ವಿಭಕ್ತಿಯಲ್ಲಿ) ಬಂದಿವೆ.
ಇದೇ ನಾಮಪದಕಂತೆ (2ಖ) ಮತ್ತು (2ಗ) ವಾಕ್ಯಗಳಲ್ಲೂ ಬಂದಿದ್ದು, ಆ ಪದಕಂತೆಯಲ್ಲಿರುವ ಸಪ್ರ ನಾಮಪದದ ವಿಭಕ್ತಿ ಪ್ರತ್ಯಯ ಮಾತ್ರವಲ್ಲದೆ ಇತರ ಎರಡು ವಿಶೇಷಣ ಪದಗಳ (ಏಕ, ಕೃಷ್ಣ ಎಂಬವುಗಳ) ವಿಭಕ್ತಿ ಪ್ರತ್ಯಯವೂ ಬದಲಾಗಿರುವುದನ್ನು ಕಾಣಬಹುದು.
ಇವು ಮೂರೂ (2ಖ) ವಾಕ್ಯದಲ್ಲಿ ಪುಲ್ಲಿಂಗ-ಏಕವಚನ-ದ್ವಿತೀಯಾ ವಿಭಕ್ತಿಯಲ್ಲಿ (ಏಕಂ ಕೃಷ್ಣಂ ಸಪ್ರಂ ಎಂಬುದಾಗಿ) ಬಂದಿವೆ ಮತ್ತು (2ಗ)
52 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ವಾಕ್ಯದಲ್ಲಿ ಪುಲ್ಲಿಂಗ-ಏಕವಚನ-ತೃತೀಯಾ ವಿಭಕ್ತಿಯಲ್ಲಿ (ಏಕೇನ ಕೃಷ್ಣೇನ ಸಪ್ರೇನ ಎಂಬುದಾಗಿ) ಬಂದಿವೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ, ಸಪ್ರ ಹಾವು' ನಾಮಪದ ಮಾತ್ರವಲ್ಲದೆ ಅದರ ವಿಶೇಷಣವಾಗಿ ಬಂದಿರುವ ಕೃಷ್ಣ ಕಪ್ಪು’ ಗುಣಪದ (ಮತ್ತು ಏಕ ಒಂದು' ಎಣಿಕೆಯ ಪದ) - ಇವೆಲ್ಲವೂ ಸಂಸ್ಕೃತದಲ್ಲಿ ಲಿಂಗ-ವಚನ-ವಿಭಕ್ತಿ ಪ್ರತ್ಯಯದೊಂದಿಗೆ ಬರಬೇಕಾಗುತ್ತದೆ ಮತ್ತು ಒಂದೇ ಪದಕಂತೆಯ ಅಂಗಗಳಾಗಿರುವಾಗ ಇವೆಲ್ಲವೂ ಒಂದೇ ಲಿಂಗ- ವಚನ-ವಿಭಕ್ತಿಯಲ್ಲಿ ಬರಬೇಕಾಗುತ್ತದೆ. ಈ ಮೂರು ವಾಕ್ಯಗಳ ಕೆಳಗೇನೇ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸಿದಲ್ಲಿ, ಅದರ ಗುಣಪದಗಳು (ಮತ್ತು ಎಣಿಕೆಯ ಪದಗಳು) ಸಂಸ್ಕೃತದ ಗುಣಪದಗಳಿಗಿಂತ ಯಾಕೆ ಭಿನ್ನವಾದವುಗಳು ಎಂಬ ವಿಷಯ ಸ್ಪಷ್ಟವಾದೀತು. ಆ ವಾಕ್ಯಗಳಲ್ಲಿ ಬರುವ ಕಪ್ಪು ಗುಣಪದ ಮೂರು ವಾಕ್ಯಗಳಲ್ಲೂ ಒಂದೇ ರೂಪದಲ್ಲಿದೆ. ಅದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ *ಕಪ್ಪನ್ನು ಹಾವನ್ನು ಇಲ್ಲವೇ *ಕಪ್ಪಿನಿಂದ ಹಾವಿನಿಂದ ಎಂದು ಹೇಳಿದೆವಾದರೆ ಅದು ಕನ್ನಡ ವಾಗಲಾರದು. ಇದೇ ರೀತಿಯಲ್ಲಿ ಒಂದು ಎಂಬ ಎಣಿಕೆಯ ಪದವೂ ಕನ್ನಡದ ಈ ಮೂರು (2ಕ-ಗ) ವಾಕ್ಯಗಳಲ್ಲಿ ಒಂದೇ ರೂಪದಲ್ಲಿದೆ. ನಾಮಪದದೊಂದಿಗೆ ಬಳಸುವಾಗ ಅದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿ *ಒಂದನ್ನು ಹಾವನ್ನು ಇಲ್ಲವೇ *ಒಂದಕ್ಕೆ ಹಾವಿಗೆ ಎಂಬುದಾಗಿ ಹೇಳಲು ಕನ್ನಡದಲ್ಲಿ ಸಾಧ್ಯವಾಗದು. (ಭಾಷಾವಿಜ್ಞಾನಿಗಳು ಪದಕಂತೆ ಇಲ್ಲವೇ ವಾಕ್ಯದ ಮುಂದೆ *’ ಸಂಜ್ಞೆ ಯನ್ನು ಬಳಸುವುದರ ಮೂಲಕ ಅದು ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುತ್ತಾರೆ. ಇದೇ ಕ್ರಮವನ್ನು ಮೇಲೆ ಕೊಟ್ಟಿರುವ *ಕಪ್ಪನ್ನು ಹಾವನ್ನು, *ಕಪ್ಪಿನಿಂದ ಹಾವಿನಿಂದ *ಒಂದನ್ನು ಹಾವನ್ನು ಮೊದಲಾದ ಪದಕಂತೆಗಳು ಕನ್ನಡದಲ್ಲಿ ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ಬಳಸ ¯ÁVzÉ.)
3.2.2 ವಿಶೇಷಣಗಳಾಗಿ ನಾಮಪದಗಳ ಬಳಕೆ
ಸಂಸ್ಕೃತದಲ್ಲಿ ಗುಣಪದಗಳ ಹಾಗೆ ನಾಮಪದಗಳನ್ನೂ ಬೇರೆ ನಾಮಪದಗಳ ವಿಶೇಷಣಗಳನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. ಈ ರೀತಿ ಬಳಸಬೇಕಿದ್ದಲ್ಲಿ, ಗುಣಪದಗಳ ಹಾಗೆ ಆ ನಾಮಪದಗಳಿಗೂ ಅವುಗಳ ವಿಶೇಷ್ಯವಾಗಿರುವ ನಾಮ ಪದದ ಲಿಂಗ-ವಚನ-ವಿಭಕ್ತಿ ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ.
53 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಆದರೆ ಕನ್ನಡದಲ್ಲಿ ಒಂದು ನಾಮಪದವನ್ನು ಇನ್ನೊಂದು ನಾಮಪದದ ಸಂಬಂಧವಿದೆ ವಿಶೇಷಣವನ್ನಾಗಿ ಮಾಡಬೇಕಿದ್ದಲ್ಲಿ ಅವೆರಡರ ಎಂಬುದನ್ನು ಸೂಚಿಸುವ ಅ (ಷಷ್ಠೀ ವಿಭಕ್ತಿ') ಪ್ರತ್ಯಯವನ್ನು ಸೇರಿಸಬೇಕು (ಎಂದರೆ, ಅದನ್ನೊಂದು ಗುಣಪದ’ವಾಗಿ ಬದಲಾಯಿಸಬೇಕು).
ನಡುವೆ
(3ಕ) ಅಹಂ ಮೃತ್ತಿಕಂ ಘಟಂ ದೃಷ್ಟವಾನ್ `ನಾನು ಮಣ್ಣಿನ ಕೊಡವನ್ನು ನೋಡಿದೆ’
(3ಖ) ಅಹಂ ಮೃತ್ತಿಕೇನ ಘಟೇನ ಜಲಂ ಪಿಬಂ
`ನಾನು ಮಣ್ಣಿನ ಕೊಡದಿಂದ (ಕೊಡದಲ್ಲಿ) ನೀರು ಕುಡಿದೆ’
PÉÆqÀ
(3ಕ) ಮತ್ತು (3ಖ) ವಾಕ್ಯಗಳಲ್ಲಿ ಸಂಸ್ಕೃತದ ಮೃತ್ತಿಕ `ಮಣ್ಣು' ನಾಮಪದ ಎರಡು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳೊಂದಿಗೆ (ದ್ವಿತೀಯಾ ಮತ್ತು ತೃತೀಯಾ ವಿಭಕ್ತಿ ಪ್ರತ್ಯಯಗಳೊಂದಿಗೆ) ಬಳಕೆಯಾಗಿದೆ.
ಆದರೆ ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳೆರಡರಲ್ಲೂ ಮಣ್ಣು ನಾಮಪದ ಷಷ್ಠೀ ವಿಭಕ್ತಿ ಪ್ರತ್ಯಯದೊಂದಿಗೆ ಬಳಕೆಯಾಗಿದೆ. ಆ ನಾಮಪದದ ವಿಭಕ್ತಿ ನಾಮಪದವನ್ನು ಅದರ ವಿಶೇಷ್ಯವಾದ ಪ್ರತ್ಯಯದೊಂದಿಗೆ (ಎಂದರೆ ಅನ್ನು ಇಲ್ಲವೇ ಇಂದ ಪ್ರತ್ಯಯಗಳೊಂದಿಗೆ) ಬಳಸಲು ಕನ್ನಡದಲ್ಲಿ ಸಾಧ್ಯವಾಗದು.
ಸಂಸ್ಕೃತದ ವಿಶೇಷಣ ನಾಮಪದಗಳೊಂದಿಗೆ ಈ ರೀತಿ ಬಳಳಕೆಯಾಗುವ ವಿಭಕ್ತಿ ಪ್ರತ್ಯಯಗಳು ಅವುಗಳ ವಿಶೇಷ್ಯದೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳೇ ಆಗಿರಬೇಕೆಂಬ ನಿಯಮವಿದೆ. (3ಕ) ವಾಕ್ಯದಲ್ಲಿ ಇವೆರಡೂ ದ್ವಿತೀಯೆಯಲ್ಲಿವೆ ಮತ್ತು (3ಖ) ವಾಕ್ಯದಲ್ಲಿ ಇವೆರಡೂ ತೃತೀಯೆಯಲ್ಲಿವೆ ಎಂಬುದನ್ನು ಗಮನಿಸ ಬಹುದು.
ಈ ವಿಷಯದಲ್ಲಿ ಸಂಸ್ಕೃತದ ಈ ನಾಮಪದಗಳು (2ಕ-ಗ) ವಾಕ್ಯಗಳಲ್ಲಿ ಕಾಣಿಸುವ ಸಂಸ್ಕೃತದ ಗುಣಪದಗಳಿಗಿಂತ ಭಿನ್ನವಾಗಿಲ್ಲ. ಆ ಗುಣಪದಗಳೂ ಅವುಗಳ ವಿಶೇಷ್ಯಗಳಾಗಿ ಬಂದಿರುವ ನಾಮಪದಗಳ ವಿಭಕ್ತಿಯಲ್ಲಿ0iÉುೀ ಬಳಕೆ ಯಾಗಿವೆ.
ಆದರೆ (3ಕ-ಗ) ಕನ್ನಡ ವಾಕ್ಯಗಳಲ್ಲಿರುವ ನಾಮಪದಗಳು (2ಕ-ಗ) ವಾಕ್ಯ ಗಳಲ್ಲಿ ಕಾಣಿಸುವ ಗುಣಪದಗಳಿಗಿಂತ ಭಿನ್ನವಾಗಿವೆ. (2ಕ-ಗ) ವಾಕ್ಯಗಳಲ್ಲಿರುವ ಗುಣಪದಗಳಿಗೆ ಯಾವ ಪ್ರತ್ಯಯವೂ ಸೇರಿಲ್ಲ. ಆದರೆ (3ಕ-ಗ) ವಾಕ್ಯ ಗಳಲ್ಲಿರುವ ನಾಮಪದಗಳಿಗೆ ಷಷ್ಠೀ ವಿಭಕ್ತಿ ಪ್ರತ್ಯಯ ಸೇರಿದೆ. ಈ ರೀತಿ ಷಷ್ಠೀ ವಿಭಕ್ತಿ ಪ್ರತ್ಯಯ ಸೇರದೆ ಕನ್ನಡದ ನಾಮಪದಗಳು ಬೇರೊಂದು ನಾಮಪದದ ವಿಶೇಷಣಗಳಾಗಿ ಬರಲಾರವು.
54 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು
3.2.3 ವಿಶೇಷಣ ಮತ್ತು ವಿಶೇಷ್ಯಗಳ ಜಾಗ ಗುಣಪದಗಳ ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷ್ಯಗಳೊಂದಿಗೇನೇ ಬಳಸಬೇಕೆಂಬ ನಿಯಮವಿಲ್ಲ. ಅವೆರಡು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದಿರಲೂ ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿ ರುವ (4)ನೇ ವಾಕ್ಯವನ್ನು ಗಮನಿಸಬಹುದು.
ಕಟಂ ಕರೋತಿ ದಶ್ರನೀಯಂ (4) (4PÀ) *ಚಾಪೆಯನ್ನು ತಯಾರಿಸುತ್ತಿದ್ದಾನೆ ಸುಂದರವಾದ' (4ಖ) ಸುಂದರವಾದ ಚಾಪೆಯನ್ನು ತಯಾರಿಸುತ್ತಿದ್ದಾನೆ’
(4)ನೇ ಸಂಸ್ಕೃತ ವಾಕ್ಯದಲ್ಲಿ ದಶ್ರನೀಯಂ `ಸುಂದರ' ಗುಣಪದ ಅದರ ವಿಶೇಷ್ಯವಾಗಿರುವ ಕಟಂ `ಚಾಪೆ' ಎಂಬುದರೊಂದಿಗೆ ಬರುವ ಬದಲು ಆ ವಾಕ್ಯದ ಕ್ರಿಯಾಪದವಾಗಿರುವ ಕರೋತಿ `ಮಾಡುತ್ತಾನೆ' ಎಂಬುದರ ಅನಂತರ ಬಂದಿರುವುದನ್ನು ಗಮನಿಸಬಹುದು.
ಆದರೆ ಕನ್ನಡದಲ್ಲಿ ವಿಶೇಷಣವನ್ನು ಈ ರೀತಿ ವಿಶೇಷ್ಯದಿಂದ ದೂರ ಇರಿಸಿ ಹೇಳಲು ಸಾಧ್ಯವಿಲ್ಲ. ಉದಾಹರಣೆಗಾಗಿ, (4)ನೇ ಸಂಸ್ಕೃತ ವಾಕ್ಯದ ಕೆಳಗೆ ಕೊಟ್ಟಿರುವ ಮೊದಲನೆಯ (4ಕ) ಕನ್ನಡ ವಾಕ್ಯದಲ್ಲಿ ಸುಂದರವಾದ ಎಂಬು ದನ್ನು ಕ್ರಿಯಾಪದದ ಅನಂತರ ಇರಿಸಿದ ಕಾರಣ, ಆ ವಾಕ್ಯ ಸರಿಯಾಗಿಲ್ಲ. ಕನ್ನಡದಲ್ಲಿ ವಿಶೇಷಣಗಳು ವಿಶೇಷ್ಯದೊಂದಿಗೇನೇ ಇರುವುದು ಅವಶ್ಯ.
ಸಂಸ್ಕೃತದಲ್ಲಿ ವಿಶೇಷ್ಯ ಮತ್ತು ವಿಶೇಷಣಗಳು ಒಂದೇ ವಿಭಕ್ತಿ, ವಚನ ಮತ್ತು ಲಿಂಗಗಳಲ್ಲಿ ಬರುತ್ತವೆಯಾದ ಕಾರಣ, ಅವನ್ನು ಯಾವಾಗಲೂ ಒಟ್ಟಿಗೆ ಇರಿಸಬೇಕೆಂಬ ನಿಯಮವಿಲ್ಲ. ಅವು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದಿವೆ ಯಾದರೂ ವಾಕ್ಯವನ್ನು ಅಥ್ರ ಮಾಡಿಕೊಳ್ಳುವ ಸಮಯದಲ್ಲಿ ಲಿಂಗ-ವಿಭಕ್ತಿ- ವಚನಗಳ ಆಧಾರದ ಮೇಲೆ ಅವನ್ನು ಸುಲಭವಾಗಿ ಒಟ್ಟಿಗೆ ಸೇರಿಸಿ ಅಥ್ರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಆದರೆ ಕನ್ನಡದಲ್ಲಿ ವಿಶೇಷಣಗಳು ಲಿಂಗ, ವಚನ ಮತ್ತು ವಿಭಕ್ತಿ ಪ್ರತ್ಯಯ ಗಳೊಂದಿಗೆ ಬರುವುದಿಲ್ಲ. ಹಾಗಾಗಿ ಅವನ್ನು ಯಾವಾಗಲೂ ಅವುಗಳ ವಿಶೇಷ್ಯ ವಾಗಿರುವ ನಾಮಪದದ ಹತ್ತಿರವೇ ಇರಿಸಬೇಕಾಗುತ್ತದೆ; ವಾಕ್ಯದ ಬೇರೆ ಕಡೆ ಗಳಿಗೆ ವಗ್ರಾಯಿಸಲು ಸಾಧ್ಯವಾಗುವುದಿಲ್ಲ.
ನಿಜಕ್ಕೂ ಸಂಸ್ಕೃತದಲ್ಲಿ ವಿಶೇಷಣ ಮತ್ತು ವಿಶೇಷ್ಯಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಯಾಕೆಂದರೆ ಅದರ ಪದಕಂತೆಗಳಲ್ಲಿ ಬರುವ ಎರಡು
55 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (ಅಥವಾ ಜಾಸ್ತಿ) ಪದಗಳಲ್ಲಿ ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದಾಗಿ ಅವುಗಳ ನಡುವೆ ವ್ಯತ್ಯಾಸವನ್ನು ಸಾಧಿಸಲು ಯಾವ ಆಧಾರವೂ ಸಿಗುವುದಿಲ್ಲ.
ಆದರೆ ಕನ್ನಡದಲ್ಲಿ ವಿಶೇಷಣಗಳು ವಿಶೇಷ್ಯಗಳಿಂದ ತೀರ ಭಿನ್ನವಾಗಿರುತ್ತವೆ. ಯಾಕೆಂದರೆ, ಕನ್ನಡದ ಪದಕಂತೆಗಳಲ್ಲಿ ವಿಶೇಷ್ಯಗಳು ಮಾತ್ರ ವಿಭಕ್ತಿ ಪ್ರತ್ಯಯ ದೊಂದಿಗೆ ಬರಬಲ್ಲುವು. ವಿಶೇಷಣಗಳು ಗುಣಪದಗಳಾಗಿದ್ದಲ್ಲಿ ಹಾಗೆ0iÉುೀ ಬರುತ್ತವೆ ಮತ್ತು ನಾಮಪದಗಳಾಗಿದ್ದಲ್ಲಿ ಷಷ್ಠೀ ಪ್ರತ್ಯಯದೊಂದಿಗೆ ಬರುತ್ತವೆ. ಈ ಷಷ್ಠೀ ಪ್ರತ್ಯಯ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯವಲ್ಲ (8.5.5 ನೋಡಿ).
3.2.4 ಪದಕಂತೆ ಮತ್ತು ಜೋಡುಪದಗಳಲ್ಲಿ ಗುಣಪದಗಳು ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಬಳಸುವ ಬದಲು, ಒಂದು ಜೋಡುಪದದ (ಸಮಸ್ತಪದದ) ಅಂಗಗಳನ್ನಾಗಿ ಬಳಸಲೂ ಸಾಧ್ಯವಿದೆ. ಹೀಗೆ ಬಳಸುವಾಗ ಸಾಮಾನ್ಯವಾಗಿ ಅವುಗಳಲ್ಲಿ ಮೊದಲಿನದರ ವಿಭಕ್ತಿ ಪ್ರತ್ಯಯವನ್ನು ತೆಗೆದುಹಾಕಲಾಗುತ್ತದೆ. ಉದಾಹರಣೆ ಗಾಗಿ, ಕೃಷ್ಣಂ ಸಪ್ರಂ ಪದಕಂತೆಯನ್ನು ಈ ರೀತಿ ಕೃಷ್ಣಸಪ್ರಂ ಜೋಡುಪದ ವಾಗಿ ಬದಲಾಯಿಸಲು ಸಾಧ್ಯವಿದೆ.
ಇಂತಹ ಸಂಸ್ಕೃತದ ಜೋಡುಪದಗಳು ಮೇಲೆ ಕೊಟ್ಟಿರುವ ಕನ್ನಡದ ಪದ ಕಂತೆಗಳ ಹಾಗೆ (ಎಂದರೆ ಕಪ್ಪುಹಾವನ್ನು ಎಂಬುದರ ಹಾಗೆ) ಕಾಣಿಸುವುವಾದ ಕಾರಣ, ಕನ್ನಡದ ವೈಯಾಕರಣಿಗಳು ಕನ್ನಡದ ಕೆಲವು ಪದಕಂತೆಗಳನ್ನು ಜೋಡುಪದ(ಸಮಸ್ತಪದ)ಗಳೆಂದು ತಪ್ಪಾಗಿ ವಣ್ರಿಸಿದ್ದಾರೆ. ಉದಾಹರಣೆಗಾಗಿ ಕೆಳಗಿನ ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.
(5ಕ) ಹರಿಃ ಏಕಂ ಕೃಷ್ಣಸಪ್ರಂ ಅಪಶ್ಯತ್ `ಹರಿ ಒಂದು ಕಪ್ಪುಹಾವನ್ನು ನೋಡಿದ’ (5ಖ) ಹರಿಃ ಏಕೇನ ಕೃಷ್ಣಸಪ್ರೇಣ ದಷ್ಟಃ
`ಹರಿಯನ್ನು ಒಂದು ಕಪ್ಪುಹಾವು ಕಚ್ಚಿತು’
(5ಕ-ಖ) ಸಂಸ್ಕೃತ ವಾಕ್ಯಗಳಲ್ಲಿ ಕೃಷ್ಣಸಪ್ರಂ ಮತ್ತು ಕೃಷ್ಣಸಪ್ರೇಣ ಎಂಬುದಾಗಿ ಜೋಡುಪದವೊಂದು ಎರಡು ವಿಭಕ್ತಿ ರೂಪಗಳಲ್ಲಿ ಬಳಕೆ ಯಾಗಿದ್ದು, ಅದರ ಮೊದಲನೆಯ ಅಂಗವಾಗಿರುವ ಪದ (ಕೃಷ್ಣ ಎಂಬುದು) ಈ ಎರಡು ಬಳಕೆಗಳಲ್ಲೂ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿರುವುದನ್ನು ಕಾಣಬಹುದು.
56 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಇದೇ ರೀತಿಯಲ್ಲಿ ಇವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲೂ ಕಪ್ಪುಹಾವನ್ನು ಮತ್ತು ಕಪ್ಪುಹಾವು ಎಂಬ ಎರಡು ಬಳಕೆಗಳಲ್ಲಿ ಕಪ್ಪು ಎಂಬುದು ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿದೆ.
ಆದರೆ, ಇಲ್ಲಿ ಸಂಸ್ಕೃತದ ಬಳಕೆಗಳಿಗೂ ಕನ್ನಡದ ಬಳಕೆಗಳಿಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆಯೆಂಬುದನ್ನು ಗಮನಿಸುವುದು ಅವಶ್ಯ. ಸಂಸ್ಕೃತದ ಜೋಡುಪದಗಳಲ್ಲಿ ಮೊದಲಿದ್ದ ವಿಭಕ್ತಿ ಪ್ರತ್ಯಯವೊಂದು ಬಿದ್ದು ಹೋಗಿದೆ, ಆದರೆ ಕನ್ನಡದಲ್ಲಿ ಆ ರೀತಿ ವಿಭಕ್ತಿ ಪ್ರತ್ಯಯ ಬಿದ್ದುಹೋಗಿಲ್ಲ.
ಯಾಕೆಂದರೆ, ಮೊದಲಿಗೇನೇ ಕಪ್ಪು ಹಾವು ಎಂಬುದರಲ್ಲಿ ಕಪ್ಪು ಎಂಬುದರ ಮುಂದೆ ವಿಭಕ್ತಿ ಪ್ರತ್ಯಯ ಬಂದಿರಲಿಲ್ಲ, ಮತ್ತು ಕನ್ನಡದಲ್ಲಿ ಹಾಗೆ ಬರಲು ಸಾಧ್ಯವೂ ಇಲ್ಲ. ಈ ವಿಷಯ 3.2.1ನೇ ವಿಭಾಗದಲ್ಲಿ (2ಕ-ಗ) ವಾಕ್ಯಗಳನ್ನು ಪರಿಶೀಲಿಸುವಾಗ ಸ್ಪಷ್ಟವಾಗಿದೆ.
ಈ ಕಾರಣಕ್ಕಾಗಿ, ಸಂಸ್ಕೃತದ ಕೃಷ್ಣಸಪ್ರ ಎಂಬುದನ್ನು, ಅದರಲ್ಲಿ ವಿಭಕ್ತಿ ಪ್ರತ್ಯಯವೊಂದು ಬಿದ್ದು ಹೋಗಿರುವುದನ್ನು ಆಧಾರವಾಗಿ ಇರಿಸಿ, ಜೋಡು ಪದವೆಂದು ಪರಿಗಣಿಸಿದ ಹಾಗೆ ಕನ್ನಡದ ಕಪ್ಪು ಹಾವು ಎಂಬುದನ್ನು ಜೋಡು ಪದವೆಂದು ಪರಿಗಣಿಸಲು ಸಾಧ್ಯವಿಲ್ಲ. ಕಪ್ಪು ಹಾವು ಎಂಬುದರಲ್ಲಿ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿಲ್ಲ; ಯಕೆಂದರೆ, ಅದನ್ನಲ್ಲಿ ಬಳಸಲೇ ಇಲ್ಲ.
ನಿಜಕ್ಕೂ ಸಂಸ್ಕೃತದಲ್ಲಿ ಜೋಡುಪದಗಳಿಗೂ ಅವಕ್ಕೆ ಸಮನಾಗಿರುವ ಪದ ಕಂತೆಗಳಿಗೂ ನಡುವೆ ಅಥ್ರದ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ; ವಿಭಕ್ತಿ ಪ್ರತ್ಯಯದ ಲೋಪವೊಂದೇ ಅವುಗಳ ನಡುವೆ ಕಾಣಿಸುವ ವ್ಯತ್ಯಾಸ.
ಆದರೆ ಕನ್ನಡದಲ್ಲಿ ಜೋಡುಪದ ಮತ್ತು ಪದಕಂತೆಗಳ ನಡುವೆ ಅಥ್ರದ ಮಟ್ಟಿಗೂ ಮುಖ್ಯವಾದ ವ್ಯತ್ಯಾಸಗಳಿದ್ದು, ಅವನ್ನು ಬರಿಯ ವಿಭಕ್ತಿ ಪ್ರತ್ಯಯದ ಇರುವಿಕೆ ಇಲ್ಲವೇ ಇಲ್ಲದಿರುವಿಕೆಯ ಆಧಾರದ ಮೇಲೆ ಒಂದರಿಂದೊಂದನ್ನು ಪ್ರತ್ಯೇಕಿಸಲು ಸಾಧ್ಯವಾಗದೆಂಬುದನ್ನು ಮುಂದೆ ನಾಲ್ಕನೇ ಅಧ್ಯಾಯದಲ್ಲಿ ನೋಡ ಲಿರುವೆವು.
3.2.5 ನಾಮಪದಗಳಾಗಿ ಗುಣಪದಗಳ ಬಳಕೆ ಸಂಸ್ಕೃತದಲ್ಲಿ ಗುಣಪದಗಳನ್ನು (ಎಂದರೆ ಗುಣಪದದ ಅಥ್ರವಿರುವ ನಾಮಪದ ಗಳನ್ನು) ಬೇರೆ ನಾಮಪದಗಳ ವಿಶೇಷಣಗಳಾಗಿ ಮಾತ್ರವಲ್ಲದೆ ಸ್ವತಂತ್ರವಾದ ನಾಮಪದಗಳಾಗಿಯೂ ಬಳಸಲು ಸಾಧ್ಯವಿದೆ ಮತ್ತು ಹಾಗೆ ಬಳಸಿದಾಗ ಅವು ಎಲ್ಲಾ ರೀತಿಯ ವಿಭಕ್ತಿ ಪ್ರತ್ಯಯಗಳೊಂದಿಗೂ ಬರಬಲ್ಲುವು.
ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಹಾಗೆ0iÉುೀ ನಾಮಪದಗಳಾಗಿ ಬಳಸಲು ಸಾಮಾನ್ಯವಾಗಿ ಸಾಧ್ಯವಾಗದು. ಉದಾಹರಣೆಗಾಗಿ ಕನ್ನಡದ ದೊಡ್ಡ,
57 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಚಿಕ್ಕ, ಹೊಸ, ಹಳೆ ಮೊದಲಾದ ಗುಣಪದಗಳನ್ನು ನಾಮಪದಗಳ ಜಾಗದಲ್ಲಿ ಬಳಸಲು (ಎಂದರೆ ನೇರವಾಗಿ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು) ಸಾಧ್ಯವಾಗದು.
ಈ ನಿಯಮಕ್ಕೆ ಕನ್ನಡದಲ್ಲಿ ಕೆಲವು ಅಪವಾದಗಳಿರುವುದು ನಿಜ. ಉದಾ ಹರಣೆಗಾಗಿ, ಮೇಲೆ ಕೊಟ್ಟಿರುವ ಕಪ್ಪು ಗುಣಪದ ನಾಮಪದವಾಗಿಯೂ ಬಳಕೆ ಯಾಗಬಲ್ಲುದು (ಅದಕ್ಕೆ ಕಪ್ಪು ಹಾಕಿದ್ದು ಜಾಸ್ತಿಯಾಗಿದೆ) ಮತ್ತು ಗುಣಪದ ವಾಗಿಯೂ ಬಳಕೆಯಾಗಬಲ್ಲುದು (ಅದು ಕಪ್ಪು ಹಕ್ಕಿ). ಹೀಗಿದ್ದರೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬರಲಾರದ ಗುಣಪದಗಳು ಹಲವು ಕನ್ನಡದಲ್ಲಿವೆಯಾದ ಕಾರಣ ಅವುಗಳಿಗಾಗಿ ಬೇರೊಂದು ಪದವಗ್ರ ವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕನ್ನಡದಲ್ಲಿದೆ. ಆದರೆ ಇಂತಹ ಅವಶ್ಯಕತೆ ಸಂಸ್ಕೃತದಲ್ಲಿಲ್ಲ. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
(6ಕ) ಅಹಂ ಫಲಂ ಖಾದಾಮಿ
`ನಾನು ಹಣ್ಣನ್ನು ತಿನ್ನುತ್ತೇನೆ’ (6ಖ) ಅಹಂ ಶುಕ್ಲಂ ಖಾದಾಮಿ
`ನಾನು ಬಿಳಿಯದನ್ನು ತಿನ್ನುತ್ತೇನೆ’ (6ಗ) ಅಹಂ ಶುಕ್ಲಾಯ ಫಲಂ ದಾಸ್ಯಾಮಿ
`ನಾನು ಬಿಳಿಯವನಿಗೆ ಹಣ್ಣು ಕೊಡುತ್ತೇನೆ’
(6ಖ-ಗ) ವಾಕ್ಯಗಳಲ್ಲಿ ಸಂಸ್ಕೃತದ ಶುಕ್ಲ `ಬಿಳಿ' ಗುಣಪದವನ್ನು (6ಕ) ವಾಕ್ಯದಲ್ಲಿ ಬಂದಿರುವ ಫಲ `ಹಣ್ಣು' ನಾಮಪದದ ಹಾಗೆ0iÉುೀ ಬಳಸಲಾಗಿದೆ. ಅದು (6ಖ) ವಾಕ್ಯದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ಮತ್ತು (6ಗ) ವಾಕ್ಯದಲ್ಲಿ ಚತುಥ್ರೀ ವಿಭಕ್ತಿ ಪ್ರತ್ಯಯದೊಂದಿಗೆ ಸ್ವತಂತ್ರವಾಗಿ, ಎಂದರೆ ಫಲ ಎಂಬುದರ ಆಧಾರವಿಲ್ಲದೆ, ಬಳಕೆಯಾಗಿದೆ.
ಆದರೆ ಈ (6ಖ-ಗ) ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ ಬಿಳಿ ಗುಣಪದಕ್ಕೆ ಆ ರೀತಿ ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಸೇರಿಸಲು ಸಾಧ್ಯವಾಗಿಲ್ಲ. ಮೊದಲಿಗೆ ಅವಕ್ಕೆ ಸವ್ರನಾಮ ಪ್ರತ್ಯಯಗಳನ್ನು ಇಲ್ಲವೇ ಸವ್ರನಾಮಗಳನ್ನು (ದು ಇಲ್ಲವೇ ಅವನು ಎಂಬುದನ್ನು) ಸೇರಿಸಿ ಅನಂತರ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಾಗಿದೆ. ಕನ್ನಡದ ಗುಣಪದಗಳು ನಾಮಪದ ಗಳಿಗಿಂತ ಭಿನ್ನವಾದವುಗಳು ಎಂಬ ವಿಷಯ ಇದರಿಂದಲೂ ಸ್ಪಷ್ಟವಾಗುತ್ತದೆ.
58 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಕನ್ನಡದ ಗುಣಪದಗಳಲ್ಲಿ ಕೆಲವನ್ನು ಉದ್ದ-ಗಿಡ್ಡ, ಅಗಲ-ಸಪುರ, ಎತ್ತರ-ತಗ್ಗು, ದಪ್ಪ-ತೆಳು, ದೊಡ್ಡ-ಚಿಕ್ಕ, ಬಿಸಿ-ತಂಪು, ಭಾರ-ಹಗುರ, ಎಂಬಂತಹ ಜೋಡಿಗಳಾಗಿ ಸೇರಿಸಿ ಹೇಳಲು ಸಾಧ್ಯವಿದೆ. ಈ ಜೋಡಿಗಳಲ್ಲಿ ಮೊದಲನೆಯದನ್ನು ಮಾತ್ರ ನಾಮಪದವಾಗಿ ಬಳಸಲು ಸಾಧ್ಯವಿದ್ದು, ಅದು ಆ ಜೋಡಿಯ ಒಟ್ಟು ಅಥ್ರವನ್ನು ಸೂಚಿಸಬಲ್ಲುದು.
(7ಕ) ಈ ಗೋಡೆಯ ಎತ್ತರ ಆರು ಅಡಿ (7ಖ) *ಈ ಗೋಡೆಯ ತಗ್ಗು ಎರಡು ಅಡಿ (8ಕ) ಮೇಲೆ ಇರುವ ಹಗ್ಗದ ಉದ್ದ ಆರು ಅಡಿ (8ಖ) *ಮೇಲೆ ಇರುವ ಹಗ್ಗದ ಗಿಡ್ಡ ಎರಡು ಅಡಿ
(7ಕ) ವಾಕ್ಯದಲ್ಲಿ ಎತ್ತರ ಗುಣಪದ ನಾಮಪದವಾಗಿ ಬಳಕೆಯಾಗಿದೆ. ಗೋಡೆ ತಗ್ಗಾಗಿದ್ದರೂ ಎತ್ತರವಾಗಿದ್ದರೂ ಅದರ ಅಳತೆಯನ್ನು ತಿಳಿಸಲು ಎತ್ತರ ಪದವಿರುವ (7ಕ) ವಾಕ್ಯವನ್ನೇ ಬಳಸಲು ಸಾಧ್ಯ ಎಂಬುದನ್ನು ಗಮನಿಸಬಹುದು.
ಇದಕ್ಕೆ ಬದಲು ಗಿಡ್ಡ ಪದವನ್ನು ಬಳಸಿರುವ (7ಖ) ವಾಕ್ಯ ಸರಿಯಲ್ಲ ಎಂಬುದನ್ನೂ ಗಮನಿಸಬಹುದು. (8ಕ-ಖ) ವಾಕ್ಯಗಳಲ್ಲೂ ಹೀಗೆಯೇ.
ಇದಲ್ಲದೆ ಕನ್ನಡದಲ್ಲಿ ನಾಮಪದಗಳೊದಿಗೆ `ಮೊದಲಾದ' ಎಂಬ ಅಥ್ರ ವನ್ನು ಕೊಡುವುದಕ್ಕಾಗಿ ಅವುಗಳ ಪ್ರತಿಧ್ವನಿಯ ಹಾಗೆ ಕಾಣಿಸುವ ಪದವೊಂದನ್ನು ಸೇರಿಸಿ ಹೇಳಲು ಸಾಧ್ಯವಿದೆ. ಆದರೆ, ಗುಣಪದಗಳೊಂದಿಗೆ ಅಂತಹ ಪದವನ್ನು ಸೇರಿಸಿ ಹೇಳಲು ಸಾಧ್ಯವಾಗದು. ಸಾಮಾನ್ಯವಾಗಿ ಈ ಪ್ರತಿಧ್ವನಿಸುವ ಪದ ಕನ್ನಡದಲ್ಲಿ ಗಕಾರದಿಂದ ತೊಡಗುತ್ತದೆ.
(9ಕ) ನಿಮ್ಮ ದೊಡ್ಡಮ್ಮ ಗಿಡ್ಡಮ್ಮ ಎಲ್ಲ ಬಂದಿದ್ದಾರೆ (9ಖ) ಅವರು ಮನೆ ಗಿನೆ ಎಲ್ಲ ಕಳೆದುಕೊಂಡಿದ್ದಾರೆ (9ಗ) *ಅವನು ತನ್ನ ಚಿಕ್ಕ ಗಿಕ್ಕ ಮನೆಯನ್ನು ಮಾರಿದ್ದಾನೆ
(9ಕ) ವಾಕ್ಯದಲ್ಲಿ ದೊಡ್ಡಮ್ಮ ನಾಮಪದದೊಂದಿಗೆ ಅದರ ಪ್ರತಿಧ್ವನಿಯ ಹಾಗೆ ಕಾಣಿಸುವ ಗಿಡ್ಡಮ್ಮ ಎಂಬುದನ್ನು ಸೇರಿಸಿ ಹೇಳಲು ಸಾಧ್ಯವಾಗಿದೆ. ಇದೇ ರೀತಿಯಲ್ಲಿ (9ಖ) ವಾಕ್ಯದಲ್ಲಿ ಮನೆ ನಾಮಪದದೊಂದಿಗೆ ಗಿನೆ ಎಂಬುದನ್ನು ಸೇರಿಸಿ ಹೇಳಲು ಸಾಧ್ಯವಾಗಿದೆ.
ಆದರೆ (9ಗ)ದಲ್ಲಿ ಚಿಕ್ಕ ಗುಣಪದದೊಂದಿಗೆ ಅದರ ಪ್ರತಿಧ್ವನಿಯ ಹಾಗೆ ಕಾಣಿಸುವ ಗಿಕ್ಕ ಎಂಬುದನ್ನು ಸೇರಿಸಿ ಹೇಳಲು ಪ್ರಯತ್ನಿಸಿದುದರಿಂದಾಗಿ ಆ ವಾಕ್ಯ ಸರಿಯಿಲ್ಲವೆಂದು ಅನಿಸುತ್ತದೆ.
59 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ನಾಮಪದವೊಂದರ ಅಥ್ರಕ್ಕೆ ಒಂದು ನಿಶ್ಚಿತವಾದ ಗುಣಧಮ್ರವನ್ನು ಸೇರಿಸುವುದರ ಮೂಲಕ ಅದರ ವ್ಯಾಪ್ತಿಯನ್ನು ಕಡಿಮೆ ಮಾಡುವುದೇ ಗುಣ ಪದಗಳ ಮುಖ್ಯ ಕೆಲಸ. `ಮೊದಲಾದ’ ಎಂಬ ಅಥ್ರವನ್ನು ಕೊಡುವ ಪ್ರತಿ ಧ್ವನಿಸುವ ಪದಗಳನ್ನು ಅವುಗಳೊಂದಿಗೆ ಸೇರಿಸಿ ಹೇಳಿದಲ್ಲಿ ಅವು ಸೂಚಿಸುವ ಅಥ್ರ ಅನಿಶ್ಚಿತವಾಗಿಬಿಡುತ್ತದೆ ಮತ್ತು ಇದರಿಂದಾಗಿ ಅವುಗಳ ಮುಖ್ಯ ಕೆಲಸಕ್ಕೆ ಅಡ್ಡಿಯಾಗುತ್ತದೆ.
ಕನ್ನಡದಲ್ಲಿ ಪ್ರತಿಧ್ವನಿಸುವ ಪದಗಳನ್ನು ಗುಣಪದಗಳೊಂದಿಗೆ ಬಳಸಲು ಸಾಧ್ಯವಾಗದಿರುವುದಕ್ಕೆ ಅವು ಸೂಚಿಸುವ ಈ ಅನಿಶ್ಚಿತತೆ0iÉುೀ ಮುಖ್ಯ ಕಾರಣ.
ನಾಮಪದಗಳು ಮತ್ತು ಗುಣಪದಗಳು ಕನ್ನಡದಲ್ಲಿ ಬೇರೆ ಬೇರೆ ವಗ್ರ ಗಳಿಗೆ ಸೇರುತ್ತವೆ0iÉುಂಬುದಕ್ಕೆ ಮೇಲಿನ ಎರಡು ವ್ಯತ್ಯಾಸಗಳೂ ಆಧಾರವಾಗ ಬಲ್ಲುವು.
3.2.6 ಗುಣಪದಗಳ ಜಾಗ ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷ್ಯದ ಮೊದಲೂ ಹೇಳಬಹುದು, ಅನಂತರವೂ ಹೇಳಬಹುದು. ಆದರೆ ಕನ್ನಡದಲ್ಲಿ ಅವನ್ನು ವಿಶೇಷ್ಯದ ಮೊದಲೇ ಹೇಳಬೇಕೆಂಬ ನಿಯಮವಿದೆ. ಅವನ್ನು ವಿಶೇಷ್ಯದ ಅನಂತರ ಹೇಳಿದಲ್ಲಿ ಆ ರಚನೆ ಒಂದು ನಾಮಪದಕಂತೆಯಾಗಿ ಉಳಿಯುವ ಬದಲು ವಾಕ್ಯವಾದೀತು.
ಉದಾಹರಣೆಗಾಗಿ ಸಂಸ್ಕೃತದಲ್ಲಿ ಕೃಷ್ಣಃ ಸಪ್ರಃ ಎಂದರೂ ಸಪ್ರಃ ಕೃಷ್ಣಃ ಎಂದರೂ ಅಥ್ರ ಒಂದೇ. ಅವೆರಡೂ ಪದಕಂತೆಗಳಾಗಿಯೇ ಉಳಿಯುತ್ತವೆ. ಆದರೆ ಕನ್ನಡದಲ್ಲಿ ಕಪ್ಪು ಹಾವು ಎಂಬುದೊಂದು ಪದಕಂತೆ, ಮತ್ತು ಹಾವು ಕಪ್ಪು ಎಂಬುದೊಂದು ವಾಕ್ಯ. ಅವುಗಳ ನಡುವೆ ಅಥ್ರದಲ್ಲಿ ವ್ಯತ್ಯಾಸವಿದೆ. ಮೇಲೆ (3.2.3)ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ನಿಜಕ್ಕೂ ವಿಶೇಷಣ ಮತ್ತು ವಿಶೇಷ್ಯಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬುದು ಈ ಉದಾಹರಣೆಯಿಂದಲೂ ಸ್ಪಷ್ಟವಾಗುತ್ತದೆ. ಕೃಷ್ಣಃ ಸಪ್ರಃ ಎಂಬ ಪದಕಂತೆಯಲ್ಲಿ ಬರುವ ಎರಡು ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಸಂಸ್ಕೃತದಲ್ಲಿ ವಿಶೇಷಣವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಹಾಗಿಲ್ಲ. ಕಪ್ಪುಹಾವು ಎಂಬ ಪದಕಂತೆಯಲ್ಲಿ ಕಪ್ಪು ಎಂಬುದು ಮಾತ್ರವೇ ವಿಶೇಷಣವಾಗಬಲ್ಲುದಲ್ಲದೆ ಹಾವು ಎಂಬುದು ವಿಶೇಷಣವಾಗಲಾರದು. ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಬಳಸಿ ಒಂದು ವಾಕ್ಯವನ್ನು ರಚಿಸಲು ಸಾಧ್ಯವಿದೆ. ಕನ್ನಡದಲ್ಲೂ ಇದು ಸಾಧ್ಯ. ಇಂತಹ ವಾಕ್ಯಗಳ ಮೂಲಕ ಆ ನಾಮಪದಗಳು ಸೂಚಿಸುವ ವ್ಯಕ್ತಿ ಇಲ್ಲವೇ ವಸ್ತುಗಳೆರಡೂ ಒಂದೇ ಎಂಬ ಅಥ್ರವನ್ನು ಈ ಎರಡು ಭಾಷೆಗಳಲ್ಲೂ ಸೂಚಿಸಬಹುದು.
60 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಆದರೆ, ಸಂಸ್ಕೃತದಲ್ಲಿ ಇಂತಹ ವಾಕ್ಯಗಳನ್ನು ನಾಮಪದಗಳ ಬದಲು ಗುಣಪದವನ್ನು ಬಳಸಿಯೂ ರಚಿಸಲು ಸಾಧ್ಯವಿದೆ, ಮತ್ತು ಹೀಗೆ ರಚಿಸಿದ ವಾಕ್ಯಗಳು ರಚಿಸಿದ ವಾಕ್ಯಗಳಿಗಿಂತ ಯಾವ ರೀತಿಯಲ್ಲಿಯೂ ಭಿನ್ನವಾಗಿರುವುದಿಲ್ಲ.
ನಾಮಪದಗಳನ್ನು ಬಳಸಿ
(10ಕ) ರಾಮಃ ಅಧ್ಯಾಪಕಃ
`ರಾಮ ಅಧ್ಯಾಪಕ’
(10ಖ) ರಾಮಃ ಕೃಷ್ಣಃ `ಅವನು ಕಪ್ಪು’
ರಾಮ ನಾಮಪದದೊಂದಿಗೆ (10ಕ)ದಲ್ಲಿ ಅಧ್ಯಾಪಕ ಎಂಬ ಇನ್ನೊಂದು ನಾಮಪದದ ಬಳಕೆಯಾಗಿದೆ ಆದರೆ (10ಖ)ದಲ್ಲಿ ಅದರೊಂದಿಗೆ ಕೃಷ್ಣ ಗುಣಪದದ (ಗುಣಪದದ ಅಥ್ರವಿರುವ ನಾಮಪದದ) ಬಳಕೆಯಾಗಿದೆ. ಸಂಸ್ಕ್ರುತದಲ್ಲಿ ಈ ಎರಡು ರೀತಿಯ ವಾಕ್ಯಗಳ ನಡುವೆ ಯಾವ ವ್ಯತ್ಯಾಸವೂ E®è.
ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಬಳಸಿ ರಚಿಸಿದ ವಾಕ್ಯಗಳು ನಾಮಪದಗಳನ್ನು ಬಳಸಿ ರಚಿಸಿದ ವಾಕ್ಯಗಳಿಗಿಂತ ಭಿನ್ನವಾಗಿರುತ್ತವೆ. ಉದಾ ಹರಣೆಗಾಗಿ ಕೆಳಗೆ ಕೊಟ್ಟಿರುವ ಮೂರು ವಾಕ್ಯಗಳನ್ನು ಹೋಲಿಸಿ ನೋಡ ಬಹುದು.
(11ಕ) ಅಲ್ಲಿರುವ ಹೂ ಗುಲಾಬಿ (11ಖ) ಅಲ್ಲಿರುವ ಹೂ ಬಿಳಿದು (11ಗ) ಅಲ್ಲಿರುವ ಹೂ ಬಿಳಿ
(11ಕ) ವಾಕ್ಯದಲ್ಲಿ ಅಲ್ಲಿರುವ ಹೂ ನಾಮಪದಕಂತೆಯೊಂದಿಗೆ ಗುಲಾಬಿ ನಾಮಪದ ಬಂದಿದೆ ಮತ್ತು (11ಖ)ದಲ್ಲಿ ಅದೇ ನಾಮಪದಕಂತೆಯೊಂದಿಗೆ ಬಿಳಿ ಗುಣಪದದ ಬಿಳಿದು ನಾಮರೂಪ ಬಂದಿದೆ.
ಆದರೆ (11ಗ) ವಾಕ್ಯದಲ್ಲಿ ಅದೇ ನಾಮಪದಕಂತೆಯೊಂದಿಗೆ ಬಿಳಿ ಗುಣ ಪದ ಯಾವ ಪ್ರತ್ಯಯವೂ ಸೇರದೆ ನೇರವಾಗಿ ಗುಣಪದ ರೂಪದಲ್ಲೇ ಬಂದಿದೆ.
ಈ ರೀತಿ ನಾಮಪದಕಂತೆಯೊಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ ಗುಣಪದದ ನಾಮರೂಪವನ್ನು ಬಳಸುವುದಕ್ಕೂ ಗುಣಪದವನ್ನೇ ನೇರವಾಗಿ ಬಳಸುವುದಕ್ಕೂ ನಡುವೆ ಕನ್ನಡದಲ್ಲಿ ವ್ಯತ್ಯಾಸವಿದೆ. ಈ ಎರಡು ರೀತಿಯ ವಾಕ್ಯ
61 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಗಳನ್ನು ಅಲ್ಲಗಳೆಯಬೇಕಿದ್ದಲ್ಲಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸ ಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ.
ನಾಮಪದಕಂತೆಯೊಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ ಗುಣ ಪದದ ನಾಮರೂಪವನ್ನು ಬಳಸಿ ರಚಿಸಿದ (11ಕ) ಮತ್ತು (11ಖ) ವಾಕ್ಯ ಗಳನ್ನು ಅಲ್ಲಗಳೆಯಬೇಕಿದ್ದಲ್ಲಿ ಅಲ್ಲ ಪದವನ್ನು ಬಳಸಬೇಕಾಗುತ್ತದೆ, ಮತ್ತು ನಾಮಪದಕಂತೆಯೊಂದಿಗೆ ನೇರವಾಗಿ ಒಂದು ಗುಣಪದವನ್ನು ಬಳಸಿ ರಚಿಸಿದ (11ಗ) ವಾಕ್ಯವನ್ನು ಅಲ್ಲಗಳೆಯಬೇಕಿದ್ದಲ್ಲಿ ಇಲ್ಲ ಪದವನ್ನು ಬಳಸಬೇಕಾಗು vÀÛzÉ.
(12ಕ) ಅಲ್ಲಿರುವ ಹೂ ಗುಲಾಬಿ ಅಲ್ಲ (12ಖ) ಅಲ್ಲಿರುವ ಹೂ ಬಿಳಿದು ಅಲ್ಲ (12ಗ) ಅಲ್ಲಿರುವ ಹೂ ಬಿಳಿ ಇಲ್ಲ
ಈ ವಿಷಯದಲ್ಲಿ ಗುಣಪದವನ್ನು ಬಳಸಿರುವ ಮೂರನೆಯ (11ಗ) ವಾಕ್ಯ ಕ್ರಿಯಾಪದಗಳನ್ನು ಬಳಸಿರುವ ವಾಕ್ಯಗಳ ಹಾಗೆ0iÉುೀ ಇದೆ; ಯಾಕೆಂದರೆ, ನಾಮಪದ(ಕಂತೆ)ಯೊಂದಿಗೆ ಒಂದು ಕ್ರಿಯಾಪದವನ್ನು ಬಳಸಿರುವ ವಾಕ್ಯವನ್ನು ಅಲ್ಲಗಳೆಯಬೇಕಿದ್ದರೂ ಕನ್ನಡದಲ್ಲಿ ಇಲ್ಲ ಪದವನ್ನೇ ಬಳಸಬೇಕಾಗುತ್ತದೆ.
(13ಕ) ಅವನು ಮನೆಗೆ ಹೋದ (13ಖ) ಅವನು ಮನೆಗೆ ಹೋಗಲಿಲ್ಲ
ಮೇಲಿನ ವಿಷಯ ನಾಮಪದಗಳಿಗೂ ಗುಣಪದಗಳಿಗೂ ನಡುವೆ ಕನ್ನಡದಲ್ಲಿ ಇರುವ, ಮತ್ತು ಸಂಸ್ಕೃತದಲ್ಲಿ ಇಲ್ಲದಿರುವ ಇನ್ನೊಂದು ವ್ಯತ್ಯಾಸವನ್ನೂ ತೋರಿಸಿಕೊಡುತ್ತದೆ.
ಅದೇನೆಂದರೆ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ವಾಕ್ಯಗಳನ್ನೂ ನ ಪದವನ್ನು ಬಳಸುವುದರ ಮೂಲಕ ಅಲ್ಲಗಳೆಯಲು ಸಾಧ್ಯವಿದೆ. ಕನ್ನಡದ ಹಾಗೆ ನಾಮಪದ, ಕ್ರಿಯಾಪದ ಮತ್ತು ಗುಣಪದಗಳ ನಡುವೆ ಈ ವಿಷಯದಲ್ಲಿ ವ್ಯತ್ಯಾಸ ಇಲ್ಲ.
(14ಕ) ಮಾಂ ನ ಕಶ್ಚಿದ್ ಅಪಶ್ಯತ್ `ನನ್ನನ್ನು ಯಾರೂ ನೋಡಲಿಲ್ಲ’
(14ಖ) ಸಃ ನ ಅಧ್ಯಾಪಕಃ
`ಅವನು ಅಧ್ಯಾಪಕನಲ್ಲ’
(14ಗ) ಸಃ ನ ಕೃಷ್ಣಃ
62 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು
`ಅವನು ಕಪ್ಪಲ್ಲ/ ಅವನು ಕಪ್ಪಿಲ್ಲ’
ಮೇಲಿನ ಮೂರು ವಾಕ್ಯಗಳಲ್ಲೂ ನಿಷೇಧಾಥ್ರವನ್ನು ಸೂಚಿಸಲು ಸಂಸ್ಕೃತ ದಲ್ಲಿ ನ ಎಂಬ ಒಂದೇ ಒಂದು ಪದದ ಬಳಕೆಯಾಗಿದೆ. ಆದರೆ ಕನ್ನಡದ ಮೊದಲನೆಯ (14ಕ) ವಾಕ್ಯದಲ್ಲಿ ಇಲ್ಲ ಪದ ಬಳಕೆಯಾಗಿದೆ ಮತ್ತು ಎರಡನೆಯ (14ಖ) ವಾಕ್ಯದಲ್ಲಿ ಅಲ್ಲ ಪದ ಬಳಕೆಯಾಗಿದೆ.
ಮೂರನೆಯ (14ಗ) ವಾಕ್ಯದಲ್ಲಿ ಇಲ್ಲ ಮತ್ತು ಅಲ್ಲ ಎಂಬವುಗಳಲ್ಲಿ ಯಾವುದನ್ನು ಬೇಕಿದ್ದರೂ ಬಳಸಲು ಸಾಧ್ಯವಿದ್ದು ಅವು ಬೇರೆ ಬೇರೆ ಅಥ್ರಗಳನ್ನು ಕೊಡುತ್ತವೆ.
ಸಂಸ್ಕೃತದಲ್ಲಿ ನಾಮಪದ-ಗುಣಪದ ವ್ಯತ್ಯಾಸವಿಲ್ಲವಾದ ಕಾರಣ, ಇಂತಹ ಸಾಧ್ಯತೆಗಳಿಲ್ಲ.
3.2.7 ತಾರತಮ್ಯ ಸೂಚನೆ ತಾರತಮ್ಯವನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ತರ ಮತ್ತು ತಮ ಪ್ರತ್ಯಯ ಗಳನ್ನಾಗಲೀ ಇಲ್ಲವೇ ಈಯ ಮತ್ತು ಇಷ್ಠ ಪ್ರತ್ಯಯಗಳನ್ನಾಗಲೀ ಬಳಸುವ ಕ್ರಮವಿದೆ. ಇವನ್ನು ಗುಣಪದಗಳೊಂದಿಗೂ (ಗುಣಧಮ್ರವನ್ನು ಸೂಚಿಸುವ ಪದಗಳೊಂದಿಗೂ) ಬಳಸಬಹುದು ನಾಮಪದಗಳೊಂದಿಗೂ ಬಳಸಬಹುದು.
(15ಕ) ಪ್ರಿಯಃ
(15ಖ) ಸ್ರಕ್
ಪ್ರೇಯಃ
ಸ್ರಜೀಯಃ
ಪ್ರೇಷ್ಠಃ ಸ್ರಜಿಷ್ಠಃ
ಈಯ ಮತ್ತು ಇಷ್ಠ ಪ್ರತ್ಯಯಗಳನ್ನು (15ಕ)ದಲ್ಲಿ ಪ್ರಿಯ ಗುಣಪದ ದೊಂದಿಗೆ ಬಳಸಲಾಗಿದೆ ಮತ್ತು (15ಖ)ದಲ್ಲಿ ಸ್ರಕ್ `ಮಾಲೆ’ ನಾಮಪದ ದೊಂದಿಗೆ ಬಳಸಲಾಗಿದೆ. ಸ್ರಜೀಯ ಎಂದರೆ ಜಾಸ್ತಿ ಮಾಲೆಗಳನ್ನು ಹಾಕಿರುವವ ನೆಂದು ಮತ್ತು ಸ್ರಜಿಷ್ಠ ಎಂದರೆ ಎಲ್ಲರಿಗಿಂತಲೂ ಜಾಸ್ತಿ ಮಾಲೆಗಳನ್ನು ಹಾಕಿರು ವವನೆಂದು ಅಥ್ರ ಬರುತ್ತದೆ. ಇಂತಹದೇ ಬಳಕೆಯನ್ನು ಕೆಳಗಿನ ವಾಕ್ಯ ಗಳಲ್ಲಿಯೂ ಕಾಣಬಹುದು.
(16ಕ) ಗೋವಿಂದಾದ್ ರಾಮೋ ವಿದ್ವತ್ತರಃ
`ಗೋವಿಂದನಿಗಿಂತ ರಾಮ ಜಾಸ್ತಿ ವಿದ್ವಾಂಸ’ (16ಖ) ತಂ ಅಶ್ವತಮಂ ವಿಜ್ಞಾಯ ಅಧಿರೂಢಃ
`ಅದು ಕುದುರೆಗಳಲ್ಲೆಲ್ಲ ಅತ್ಯಂತ ಶ್ರೇಷ್ಠ ಎಂದು ತಿಳಿದು ಹತ್ತಿದ’
63 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ತಮ ಪ್ರತ್ಯಯ (16ಕ) ವಾಕ್ಯದಲ್ಲಿ ವಿದ್ವತ್ ಗುಣಪದದೊಂದಿಗೂ (16ಖ) ವಾಕ್ಯದಲ್ಲಿ ಅಶ್ವ `ಕುದುರೆ’ ನಾಮಪದದೊಂದಿಗೂ ಬಂದಿರುವುದನ್ನು ಗಮನಿಸಬಹುದು. ಕನ್ನಡದಲ್ಲಿ ಈ ರೀತಿ ತರ-ತಮಾಥ್ರಗಳನ್ನು ಕೊಡುವ ಪ್ರತ್ಯಯಗಳಿಲ್ಲ ವಾದರೂ, ಬಹಳ, ಬಾರೀ, ಒಳ್ಳೆ, ಮೊದಲಾದ ಕೆಲವು ವಿಶೇಷಣಗಳನ್ನು ಅಂತಹದೇ ಅಥ್ರ ಬರುವ ಹಾಗೆ ಬಳಸಲು ಸಾಧ್ಯವಿದೆ. ಆದರೆ ಈ ಪದಗಳನ್ನು ಗುಣಪದಗಳೊಂದಿಗೆ ಮಾತ್ರ ಬಳಸಲು ನಾಮಪದ ಗಳೊಂದಿಗೆ ಬಳಸಲು ಸಾಧ್ಯವಾಗದು.
ಕನ್ನಡದ ಕೆಲವು ಪ್ರಭೇದಗಳಲ್ಲಿ ಆ ರೀತಿ ಬಳಸಲು ಸಾಧ್ಯವಿದ್ದರೂ, ಅಂತಹ ನಾಮಪದಗಳ ಮೂಲಕ ಗುಣಪದವೊಂದರ ಅಥ್ರ ಧ್ವನಿತವಾಗುತ್ತದೆ. ತುಲನಾತ್ಮಕ ವಾಕ್ಯಗಳಲ್ಲೂ ಹೀಗೆಯೇ.
ಸಾಧ್ಯವಿದೆಯಲ್ಲದೆ
(17ಕ) ಅವನು ನನಗಿಂತ ದೊಡ್ಡ (17ಖ) ಅವನು ನನಗಿಂತ ತಮ್ಮ
ಕರಾವಳಿಯ ಕನ್ನಡದಲ್ಲಿ ಬಳಕೆಯಾಗುವ (17ಖ) ವಾಕ್ಯದಲ್ಲಿ ತಮ್ಮ ನಾಮಪದವನ್ನು ಹೋಲಿಕೆಯ ಅಥ್ರದಲ್ಲಿ ಬಳಸಲಾಗಿದೆಯಾದರೂ ಆ ವಾಕ್ಯ ದಲ್ಲಿ ಅದಕ್ಕೆ `ಚಿಕ್ಕವನು' ಎಂಬುದಾಗಿ ಒಂದು ಗುಣಪದದ ಅಥ್ರವಿದೆ.
ಕನ್ನಡದಲ್ಲಿ ಗುಣಪದಗಳು ಯಾವುದಾದರೂ ಒಂದು ಗುಣಧಮ್ರವನ್ನು ಮಾತ್ರ ಸೂಚಿಸುತ್ತವೆ. ಆದರೆ ನಾಮಪದಗಳು ಇದಕ್ಕೆ ವಿರುದ್ಧವಾಗಿ ಹಲವಾರು ಗುಣಧಮ್ರಗಳನ್ನು ಸೂಚಿಸುತ್ತವೆ. ಬಹಳ, ಒಳ್ಳೆ ಮೊದಲಾದ ತರ-ತಮಾ ಥ್ರಗಳನ್ನು ಕೊಡುವ ವಿಶೇಷಣಗಳನ್ನು ಬಳಸಬೇಕಿದ್ದಲ್ಲಿ ಅವುಗಳ ವಿಶೇಷ್ಯವಾಗಿ ಬರುವ ಪದ ಒಂದಕ್ಕಿಂತ ಜಾಸ್ತಿ ಗುಣಧಮ್ರಗಳನ್ನು ಸೂಚಿಸುತ್ತಿರಬಾರದೆಂಬ ನಿಯಮ ಕನ್ನಡದಲ್ಲಿದೆ. ಹಾಗಾಗಿ, ಕನ್ನಡದಲ್ಲಿ ಅವನ್ನು ಗುಣಪದಗಳೊಂದಿಗೆ ಮಾತ್ರ ಬಳಸಲು ಸಾಧ್ಯವಾಗುತ್ತದೆ.
ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳೆರಡೂ ಒಂದೇ ಪದವಗ್ರ ದಲ್ಲಿ ಬರುವುವಾದ ಕಾರಣ, ತರ-ತಮ ಪ್ರತ್ಯಯಗಳನ್ನು ಬಳಸುವ ವಿಷಯ ದಲ್ಲಿ ಕನ್ನಡದಲ್ಲಿರುವಂತಹ ನಿಬ್ರಂಧ ಆ ಭಾಷೆಯಲ್ಲಿಲ್ಲ.
3.2.8 ಕೃದಂತಗಳ ಬಳಕೆ ಕನ್ನಡದಲ್ಲಿ ತಯಾರಿಸಬಹುದಾದ ಕ್ರಿಯಾಪದಗಳ ಕೃದಂತ ರೂಪಗಳೆಲ್ಲ ನಾಮ ಪದಗಳ ವಿಶೇಷಣಗಳಾಗಿ ಮಾತ್ರವೇ ಬರಬಲ್ಲುವು. ಉದಾಹರಣೆಗಾಗಿ, ಮಾಡು ಕ್ರಿಯಾಪದದ ಮಾಡಿದ, ಮಾಡುವ, ಮತ್ತು ಮಾಡದ ಎಂಬ ರೂಪಗಳು
64 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಮಾಡಿದ ಕೆಲಸ, ಮಾಡುವ ಕೆಲಸ, ಮಾಡದ ಕೆಲಸ ಎಂಬಂತಹ ಪದಕಂತೆ ಗಳಲ್ಲಿ ಮಾತ್ರ ಬರಬಲ್ಲುವು.
ಆದರೆ ಸಂಸ್ಕೃತದಲ್ಲಿ ತಯಾರಿಸಬಹುದಾದ ಕೃದಂತ ರೂಪಗಳೆಲ್ಲ ನಾಮ ಪದಗಳಾಗಿದ್ದು ಅವು ಸ್ವತಂತ್ರವಾಗಿಯೂ ಬರಬಲ್ಲುವು ಮತ್ತು ಬೇರೆ ನಾಮಪದ ಗಳ ವಿಶೇಷಣಗಳಾಗಿಯೂ ಬರಬಲ್ಲುವು (18ಕ-ಖ ಮತ್ತು 19ಕ-ಖ ನೋಡಿ).
ಇದಲ್ಲದೆ ಕೃದಂತಗಳು ಈ ರೀತಿ ನಾಮಪದಗಳ ವಿಶೇಷಣಗಳಾಗಿ ಬರುವಾಗ ಅವುಗಳೊಂದಿಗೆ ಆ ನಾಮಪದಗಳ ವಿಭಕ್ತಿ ಪ್ರತ್ಯಯಗಳೂ ಬರ ಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ವಿಭಕ್ತಿ ಪ್ರತ್ಯಯ ಬಾರದಿದ್ದಲ್ಲಿ ಅವು ಆ ನಾಮಪದದೊಂದಿಗೆ ಸೇರಿ ಜೋಡುಪದ(ಸಮಸ್ತಪದ)ಗಳಾಗುತ್ತವೆ.
ಆದರೆ ಕನ್ನಡದಲ್ಲಿ ಕೃದಂತಗಳು ನಾಮಪದಗಳ ವಿಶೇಷಣಗಳಾಗಿ ಬಂದಾಗ ಅವುಗಳೊಂದಿಗೆ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯ ವಾಗದು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (18ಕ-ಖ) ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡ ಬಹುದು.
(18ಕ) ಅಹಂ ಏಕಂ ಭಗ್ನಂ ಘಟಂ ದೃಷ್ಟವಾನ್
`ನಾನು ಒಂದು ಒಡೆದ ಕೊಡವನ್ನು ನೋಡಿದೆ’
(18ಖ) ಅಹಂ ಏಕಂ ಭಗ್ನಘಟಂ ದೃಷ್ಟವಾನ್
`ನಾನು ಒಂದು ಒಡೆದ ಕೊಡವನ್ನು ನೋಡಿದೆ’
(18ಕ) ಸಂಸ್ಕೃತ ವಾಕ್ಯದಲ್ಲಿ ಭಗ್ನ `ಒಡೆದ' ಕೃದಂತ ಅದರ ವಿಶೇಷ್ಯ ವಾಗಿರುವ ಘಟ `ಕೊಡ' ಎಂಬುದರ ಹಾಗೆ ದ್ವಿತೀಯಾ ವಿಭಕ್ತಿ ಪ್ರತ್ಯಯ ದೊಂದಿಗೆ ಬಂದಿದೆ. (18ಖ) ವಾಕ್ಯದಲ್ಲಿ ಈ ವಿಭಕ್ತಿ ಪ್ರತ್ಯಯ ಲೋಪ ಗೊಂಡಿದ್ದು, ಭಗ್ನ ಕೃದಂತವು ಮುಂದಿರುವ ನಾಮಪದದೊಂದಿಗೆ ಸೇರಿ ಭಗ್ನಘಟ `ಒಡೆದ ಕೊಡ' ಎಂಬ ಜೋಡುಪದವಾಗಿ ಬಂದಿದೆ.
ಆದರೆ ಈ ಎರಡೂ ವಾಕ್ಯಗಳ ಕನ್ನಡ ಅನುವಾದಗಳಲ್ಲಿ ಕೃದಂತ ಪದ (ಒಡೆದ ಎಂಬುದು) ಒಂದೇ ರೂಪದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿದೆ. ನಿಜಕ್ಕೂ ಕನ್ನಡದಲ್ಲಿ ಕೃದಂತಗಳಿಗೆ ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು ಸಾಧ್ಯವಾಗದು.
65 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಸಂಸ್ಕೃತದ ಕೃದಂತಗಳು ನಾಮಪದಗಳಾಗಿರುವ ಕಾರಣ ಅವನ್ನು ಸ್ವತಂತ್ರ ವಾಗಿ, ಎಂದರೆ ಬೇರೆ ನಾಮಪದಗಳ ಆಧಾರವಿಲ್ಲದೆ, ವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ. ಆದರೆ ಕನ್ನಡದ ಕೃದಂತಗಳನ್ನು ವಿಶೇಷಣಗಳಾಗಿ ಮಾತ್ರ ಬಳಸಲು ಸಾಧ್ಯ.
ಅವನ್ನು ಸ್ವತಂತ್ರವಾಗಿ ಬಳಸಬೇಕಿದ್ದಲ್ಲಿ ಅವಕ್ಕೆ ಉದು ಪ್ರತ್ಯಯವನ್ನಾಗಲಿ ಇಲ್ಲವೇ ಅವನು, ಅವಳು ಮೊದಲಾದ ಸವ್ರನಾಮ(ಸವ್ರಪದ)ಗಳನ್ನಾಗಲಿ ಸೇರಿಸಿ ಹೇಳುವ ಅವಶ್ಯಕತೆಯಿದೆ. ನೇರವಾಗಿ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು.
(19ಕ) ಅಹಂ ಭಗ್ನಂ ಅಪಶ್ಯಂ
`ನಾನು ಒಡೆದುದನ್ನು ನೋಡಿದೆ’
(19ಖ) ಅಹಂ ಘಟಂ ಕುವ್ರಾಣಂ ಅಪಶ್ಯಂ
`ನಾನು ಕೊಡ ಮಾಡುವವನನ್ನು ನೋಡಿದೆ’
(19ಕ-ಖ) ಸಂಸ್ಕೃತ ವಾಕ್ಯಗಳಲ್ಲಿ ಭಗ್ನ `ಒಡೆದ' ಮತ್ತು ಕುವ್ರನ್ `ಮಾಡುವ' ಕೃದಂತಗಳು ನೇರವಾಗಿ ದ್ವಿತೀಯಾ ವಿಭಕ್ತಿಯೊಂದಿಗೆ (ಎಂದರೆ ಸ್ವತಂತ್ರವಾದ ನಾಮಪದಗಳಾಗಿ) ಬಂದಿವೆ.
ಆದರೆ ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ ಭಗ್ನ ಮತ್ತು ಕುವ್ರನ್ಗಳಿಗೆ ಸಮಾನವಾಗಿರುವ ಒಡೆದ ಮತ್ತು ಮಾಡುವ ಕೃದಂತಗಳು ಆ ರೀತಿ ನೇರವಾಗಿ ದ್ವಿತೀಯಾ ವಿಭಕ್ತಿಯೊಂದಿಗೆ ಬಂದಿಲ್ಲ; ಇದಕ್ಕೆ ಬದಲು ಅವು ಅನುಕ್ರಮವಾಗಿ ಉದು ಪ್ರತ್ಯಯದೊಂದಿಗೆ ಮತ್ತು ಅವನು ಸವ್ರನಾಮ (ಸವ್ರಪದ)ದೊಂದಿಗೆ ಸೇರಿ, ಅನಂತರ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ಪಡೆದಿವೆ.
3.3 ಜೋಡುಪದಗಳ ರಚನೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಈ ರೀತಿ ಗುಣಪದಗಳ ವಿಭಜನೆ ಯಲ್ಲಿ ಕಾಣಿಸುವ ವ್ಯತ್ಯಾಸದಿಂದಾಗಿ ಆ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ (ಸಮಸ್ತಪದಗಳ) ರಚನೆಯಲ್ಲೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.
ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಸಮಾಸಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿರುವರಾದ ಕಾರಣ, ಅವರು ಈ ವ್ಯತ್ಯಾಸಗಳನ್ನು ಗಮನಿಸಲು ಶಕ್ತರಾಗಲಿಲ್ಲ. ಇದನ್ನು ಮುಂದೆ ಐದನೇ ಅಧ್ಯಾಯ
66 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ದಲ್ಲಿ ವಿವರವಾಗಿ ಪರಿಶೀಲಿಸಲಿರುವೆವಾದ ಕಾರಣ, ಇಲ್ಲಿ ಪದವಗ್ರಗಳಿಗೆ ಸಂಬಂಧಿಸಿರುವಂತಹ ಒಂದು ವ್ಯತ್ಯಾಸವನ್ನು ಮಾತ್ರವೇ ಸೂಚಿಸಲಾಗಿದೆ. ಸಂಸ್ಕೃತದ ಸಮಾಸಗಳ ಒಳರಚನೆಯಲ್ಲಿ ನಾಮಪದ ಮತ್ತು ಗುಣಪದಗಳ ಬಳಕೆಯಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ. ಅದರಲ್ಲಿ ಬರುವ ಕಮ್ರಧಾರಯ ಮತ್ತು ತತ್ಪುರುಷ ಸಮಾಸಗಳಲ್ಲಿ ಮೊದಲನೆಯದು ಎರಡು ಪದಗಳ ನಡುವೆ ವಿಶೇಷಣ-ವಿಶೇಷ್ಯ ಸಂಬಂಧವನ್ನು ಮತ್ತುಎರಡನೆಯದು ಬೇರೆ ಬೇರೆ ರೀತಿಯ ಇತರ ಸಂಬಂಧಗಳನ್ನು ಸೂಚಿಸುವುವೆಂದು ಕೆಲವರು ವಣ್ರಿಸಿರುವ ರೇನೋ ನಿಜ.
ಆದರೆ, ಕಮ್ರಧಾರಯದಲ್ಲಿ ಮೊದಲನೆಯ ಪದ ಗುಣಪದವೇ ಆಗ ಬೇಕೆಂಬ ನಿಯಮವೇನೂ ಸಂಸ್ಕೃತದಲ್ಲಿಲ್ಲ. ಎರಡು ನಾಮಪದಗಳ ಸೇರುವಿಕೆ ಯಿಂದಲೂ ಕಮ್ರಧಾರಯ ಸಿದ್ಧವಾಗಲು ಸಾಧ್ಯವಿದೆ.
ಉದಾಹರಣೆಗಾಗಿ ಚಂದ್ರಮುಖಂ ಜೋಡುಪದದಲ್ಲಿ ಎರಡು ನಾಮಪದ ಗಳು ಬಳಕೆಯಾಗಿವೆಯಾದರೂ ಅದು ಕಮ್ರಧಾರಯ ಸಮಾಸಕ್ಕೆ ಉದಾಹರಣೆ ಯಾಗಬಲ್ಲುದು. ಈ ಕಾರಣಕ್ಕಾಗಿ ಮೇಲಿನ ಸಂಸ್ಕೃತ ಸಮಾಸಗಳನ್ನು ವಣ್ರಿಸು ವಾಗ, ಎರಡು ಪದಗಳೂ ಒಂದೇ ವಿಭಕ್ತಿಯಲ್ಲಿದ್ದರೆ ಕಮ್ರಧಾರಯ ಮತ್ತು ಬೇರೆ ಬೇರೆ ವಿಭಕ್ತಿಗಳಲ್ಲಿದ್ದರೆ ತತ್ಪುರುಷ ಎಂಬುದಾಗಿ ಹೇಳಬೇಕಾಗುತ್ತದೆ. ಕನ್ನಡದಲ್ಲಿ ನಾಮಪದ ಮತ್ತು ಗುಣಪದಗಳು ಒಂದಕ್ಕಿಂತ ಒಂದು ತೀರ ಭಿನ್ನವಾದವುಗಳೆಂಬ ವಿಷಯ ಕನ್ನಡದ ಸಮಾಸಗಳ ರಚನೆಯಲ್ಲೂ ವ್ಯಕ್ತವಾಗು ತ್ತದೆ. ಸಾಮಾನ್ಯವಾಗಿ ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಪದ ನಾಮಪದವಾಗಿರುತ್ತದೆ. ಮೊದಲನೆಯದು ನಾಮಪದವಿರ ಬಹುದು, ಗುಣಪದವಿರಬಹುದು, ಇಲ್ಲವೇ ಕ್ರಿಯಾಪದವಿರಬಹುದು. ಅದು ಗುಣಪದವಾಗಿದೆಯಾದರೆ ಕನ್ನಡದಲ್ಲಿ ಎರಡು ರೀತಿಯ ಸಮಾಸಗಳನ್ನು ಸಾಧಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಚಿಕ್ಕಾಸು ಮತ್ತು ನಡುಹಗಲು ಎಂಬ ಎರಡು ಜೋಡುಪದಗಳನ್ನು ಹೋಲಿಸಿ ನೋಡಬಹುದು. ಇವುಗಳಲ್ಲಿ ಮೊದಲನೆಯ ದನ್ನು ತಯಾರಿಸುವುದಕ್ಕಾಗಿ ಚಿಕ್ಕ ಗುಣಪದವನ್ನು ಕಾಸು ನಾಮಪದಕ್ಕೆ ವಿಶೇಷಣವಾಗಿ ಬಳಸಲಾಗಿದೆ. ಆದರೆ ಎರಡನೆಯದರಲ್ಲಿ ನಡು ಗುಣಪದವನ್ನು ಹಗಲು ನಾಮಪದಕ್ಕೆ ಆ ರೀತಿ ವಿಶೇಷಣವಾಗಿ ಮಾಡಿಲ್ಲ. ಇದಕ್ಕೆ ಬದಲು, ಆ ಜೋಡುಪದದಲ್ಲಿಲ್ಲದಿರುವ ಭಾಗ ಎಂಬ ಪದಕ್ಕೆ ಅದನ್ನು ವಿಶೇಷಣವಾಗಿ ಮಾಡಲಾಗಿದೆ.
ನಡುಹಗಲು ಎಂಬುದಕ್ಕೆ ಹಗಲಿನ ನಡುಭಾಗ' ಎಂಬ ಅಥ್ರವಿದೆಯಲ್ಲದೆ ಹಗಲಿನ ನಡುವೆ’ ಎಂಬ ಅಥ್ರವಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಇದೇ ರೀತಿಯಲ್ಲಿ ಮುಂಬಾಗಿಲು ಎಂಬುದಕ್ಕೆ `(ಮನೆಯ) ಮುಂದಿನ ಬಾಗಿಲು’
67 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಅಥ್ರವಿದೆಯಾದರೂ ಮುಂಗೈ ಎಂಬುದಕ್ಕೆ ಮುಂದಿನ ಕೈ' ಎಂಬ ಅಥ್ರವಿಲ್ಲ, ಕೈಯ ಮುಂದಿನ ಭಾಗ’ ಎಂಬ ಅಥ್ರವಿದೆ.
ಈ ರೀತಿ ಕನ್ನಡದಲ್ಲಿ ನಾಮಪದದೊಂದಿಗೆ ಗುಣಪದವೊಂದನ್ನು ಸೇರಿಸಿ ರಚಿಸಿದ ಜೋಡುಪದಕ್ಕೂ ಇನ್ನೊಂದು ನಾಮಪದವನ್ನು ಸೇರಿಸಿ ರಚಿಸಿದ ಜೋಡುಪದಕ್ಕೂ ನಡುವೆ ಮುಖ್ಯವಾದ ವ್ಯತ್ಯಾಸವಿದೆ. ಆದರೆ ಸಂಸ್ಕೃತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಈ ಕಾರಣಕ್ಕಾಗಿ ಸಂಸ್ಕೃತದಲ್ಲಿ ಕಮ್ರಧಾರಯವನ್ನು ತತ್ಪುರುಷದ ಒಂದು ಉಪಭೇದವೆಂದು ಪರಿಗಣಿಸಲು ಸಾಧ್ಯವಿದೆ, ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ.
3.4 ಪದಕಂತೆಗಳನ್ನು ತಯಾರಿಸಲು ಎರಡು ವಿಧಾನಗಳು ಮೇಲೆಯೇ ತಿಳಿಸಿರುವ ಹಾಗೆ, ಭಾಷೆಯೊಂದರಲ್ಲಿ ಯಾವ ಯಾವ ರೀತಿಯ ಪದವಗ್ರಗಳೆಲ್ಲ ಇವೆ ಎಂಬುದು ಪದಗಳು ಆ ಭಾಷೆಯ ವಾಕ್ಯಗಳಲ್ಲಿ ಯಾವ ಯಾವ ರೀತಿಯ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.
ಕನ್ನಡದಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದು, ಘಟನೆ ಗಳನ್ನು ನಿದ್ರೇಶಿಸುವುದು ಮತ್ತು ವ್ಯಕ್ತಿಗಳ ಗುಣಧಮ್ರಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಖ್ಯ ಕೆಲಸಗಳನ್ನು ಅದರ ಪದಗಳು ನಡೆಸ ಬೇಕಾಗುತ್ತದೆ. ಹಾಗಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಎಂಬುದಾಗಿ ಮೂರು ಮುಖ್ಯ ಪಂಗಡಗಳಲ್ಲಿ ವಿಂಗಡಿಸಬಲ್ಲ ಪದಗಳ ಅವಶ್ಯಕತೆ ಅದಕ್ಕಿದೆ.
ಆದರೆ ಸಂಸ್ಕೃತಕ್ಕೆ ಮುಖ್ಯವಾಗಿ ನಾಮಪದ ಮತ್ತುಕ್ರಿಯಾಪದ ಎಂಬು ದಾಗಿ ಎರಡು ಪದವಗ್ರಗಳಲ್ಲಿ ವಿಂಗಡಿಸಬಲ್ಲ ಪದಗಳಿದ್ದರೆ ಸಾಕು. ಗುಣಪದ ಎಂಬ ಮೂರನೆಯ ಪದವಗ್ರದ ಅವಶ್ಯಕತೆ ಅದಕ್ಕಿಲ್ಲ. ಈ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿರಲು ಕಾರಣವೇನೆಂದರೆ, ಅದರ ಪದಗಳು ಮೇಲೆ ಹೇಳಿದ ಕೆಲಸಗಳಲ್ಲಿ ವ್ಯಕ್ತಿ ಇಲ್ಲವೇ ವಸ್ತುಗಳ ಗುಣಧಮ್ರಗಳನ್ನು ತಿಳಿಸುವುದು ಎಂಬ ಮೂರನೆಯ ಕೆಲಸವನ್ನು ನಡೆಸಬೇಕಾಗಿಲ್ಲ. ಉದಾಹರಣೆಗಾಗಿ ಕನ್ನಡದ ಕಪ್ಪು ಹಾವು ಪದಕಂತೆಯನ್ನು ಸಂಸ್ಕೃತದ ಕೃಷ್ಣಃ ಸಪ್ರಃ ಪದಕಂತೆಯೊಂದಿಗೆ ಹೋಲಿಸಿ ನೋಡಬಹುದು. ಇವೆರಡೂ ಒಂದೇ ಅಥ್ರವನ್ನು ಕೊಡುವುವಾದರೂ ಆ ಅಥ್ರವನ್ನು ಅವು ಕೊಡುವ ಕ್ರಮ ಮಾತ್ರ ಬೇರೆ ಬೇರೆ.
ಕನ್ನಡದ ಕಪ್ಪು ಹಾವು ಎಂಬುದರಲ್ಲಿ ಬರುವ ಹಾವು ನಾಮಪದ ಒಂದು ಪ್ರಾಣಿಯನ್ನು ಗುರುತಿಸುತ್ತದೆ ಮತ್ತು ಕಪ್ಪು ಗುಣಪದ ಒಂದು ಗುಣಧಮ್ರ ವನ್ನು (ಎಂದರೆ ಒಂದು ವಿಶಿಷ್ಟವಾದ ಬಣ್ಣವನ್ನು) ಸೂಚಿಸುತ್ತದೆ. ಇವೆರಡನ್ನು ಒಟ್ಟು ಸೇರಿಸಿ ಒಂದೇ ಪದಕಂತೆಯಲ್ಲಿ ಕಪ್ಪು ಹಾವು ಎಂಬುದಾಗಿ
68 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಬಳಸುವುದರ ಮೂಲಕ ಒಂದು ವಿಶಿಷ್ಟವಾದ ಹಾವನ್ನು (ಕಪ್ಪುಬಣ್ಣದ ಹಾವನ್ನು) ಗುರುತಿಸಲಾಗುತ್ತದೆ. ಇದು ಕನ್ನಡದ ಪದಕಂತೆಗಳು ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ವಿಧಾನ. ಸಂಸ್ಕೃತದ ವಿಧಾನ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತದಲ್ಲಿ ಬರುವ ಕೃಷ್ಣಃ ಸಪ್ರಃ ಪದಕಂತೆಯಲ್ಲಿ ಕೃಷ್ಣಃ ಮತ್ತು ಸಪ್ರಃ ಎಂಬ ಎರಡು ನಾಮಪದಗಳು ಬಳಕೆಯಾಗಿವೆ. ಅವುಗಳಲ್ಲಿ ಕೃಷ್ಣಃ ಎಂಬುದು ಕಪ್ಪಾಗಿರುವ ಒಂದು ಪ್ರಾಣಿ ಇಲ್ಲವೇ ವಸ್ತುವನ್ನೂ ಸಪ್ರಃ ಎಂಬುದು `ಹಾವಾ’ಗಿರುವ ಒಂದು ಪ್ರಾಣಿಯನ್ನೂ ಗುರುತಿಸುತ್ತವೆ.
ಈ ಎರಡು ಪದಗಳನ್ನೂ ಒಟ್ಟಿಗೆ ಒಂದೇ ಪದಕಂತೆಯ ಅಂಗಗಳನ್ನಾಗಿ (ಎಂದರೆ ಒಂದೇ ಲಿಂಗ-ವಚನ-ವಿಭಕ್ತಿಗಳಲ್ಲಿ) ಬಳಸಿರುವ ಕಾರಣ, ವಾಕ್ಯ ವೊಂದರಲ್ಲಿ ಅವು ಗುರುತಿಸುವ ಪ್ರಾಣಿಗಳೆರಡೂ ಒಂದೇ ಎಂಬ ಅಥ್ರ ವ್ಯಕ್ತವಾಗುತ್ತದೆ ಮತ್ತು ಇದರಿಂದಾಗಿ ಈ ಪದಕಂತೆ ವಿಶಿಷ್ಟವಾದೊಂದು ಪ್ರಾಣಿಯನ್ನು (ಕಪ್ಪು ಬಣ್ಣದ ಹಾವನ್ನು) ಗುರುತಿಸುವಂತಾಗುತ್ತದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಮತ್ತು ಅದಕ್ಕಾಗಿ ಬಳಕೆಯಾಗುವ ಪದಕಂತೆಗಳನ್ನು ರಚಿಸುವುದಕ್ಕಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸುತ್ತಿವೆಯೆಂಬುದನ್ನು ಗಮನಿಸಬೇಕು.
ಕನ್ನಡದಲ್ಲಿ ಬರುವ ಹಾವು ನಾಮಪದ ಹಲವಾರು ರೀತಿಯ ಹಾವುಗಳನ್ನು ಗುರುತಿಸಬಲ್ಲುದು. ಅವುಗಳಲ್ಲಿ ಕೆಲವನ್ನು ಕಪ್ಪು ಹಾವು ಎಂಬ ಪದಕಂತೆ ಯಿಂದಲೂ, ಇನ್ನು ಕೆಲವನ್ನು ಹಸುರು ಹಾವು ಎಂಬ ಪದಕಂತೆಯಿಂದಲೂ, ಬೇರೆ ಕೆಲವನ್ನು ಉದ್ದ ಹಾವು ಎಂಬ ಪದಕಂತೆಯಿಂದಲೂ ಪ್ರತ್ಯೇಕಿಸಿ ಹೇಳಲು ಕನ್ನಡದಲ್ಲಿ ಸಾಧ್ಯ.
ಇಲ್ಲಿ ಕಪ್ಪು, ಹಸುರು, ಉದ್ದ ಮೊದಲಾದ ಗುಣಪದಗಳು ಬೇರೆ ಬೇರೆ ಗುಣಧಮ್ರಗಳನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಒಂದನ್ನು ಹಾವು ನಾಮಪದ ದೊಂದಿಗೆ ಬಳಸಿದಾಗ ಆ ಗುಣಪದ ಸೂಚಿಸುವ ಗುಣಧಮ್ರವನ್ನು ತೋರಿಸುವ ಹಾವನ್ನು ಮಾತ್ರವೇ ಆ ಪದಕಂತೆ ಗುರುತಿಸುವಂತಾಗುತ್ತದೆ. ಸಂಸ್ಕೃತ ಬಳಸುವ ವಿಧಾನ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತ ದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಲ್ಲ ಎಂಬುದನ್ನು ನಾವು ಮೇಲೆಯೇ ನೋಡಿರುವೆವು. ಕೃಷ್ಣಃ ಎಂಬುದೂ ಒಂದು ನಾಮಪದ, ಸಪ್ರಃ ಎಂಬುದೂ ಒಂದು ನಾಮಪದ. ಮೊದಲನೆಯದು ಕಪ್ಪುಬಣ್ಣವಿರುವ ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ಪ್ರಾಣಿ ಮೊದಲಾದುವನ್ನು (ಇದರಲ್ಲಿ ಹಾವುಗಳೂ ಸೇರುತ್ತವೆ) ಗುರುತಿಸುತ್ತದೆಯಾದರೆ, ಎರಡನೆಯದು ಬೇರೆ ಬೇರೆ ಬಣ್ಣದ
69 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಮತ್ತು ಆಕಾರದ ಹಾವುಗಳನ್ನು ಗುರುತಿಸುತ್ತದೆ (ಇದರಲ್ಲಿ ಕಪ್ಪು ಬಣ್ಣದ ಹಾವುಗಳೂ ಸೇರುತ್ತವೆ).
ಈ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಒಂದು ಪದಕಂತೆಯನ್ನಾಗಿ ಮಾಡಿ ಬಳಸಿದಾಗ, ಅದಕ್ಕೆ ಆ ಎರಡು ಪದಗಳು ಗುರುತಿಸುವವುಗಳಲ್ಲಿ ಸಮಾನವಾಗಿರುವಂತಹದನ್ನು (ಎಂದರೆ ಕಪ್ಪು ಬಣ್ಣದ ಹಾವನ್ನು) ಗುರುತಿಸಲು ಸಾಧ್ಯವಾಗುತ್ತದೆ. ಸಂಸ್ಕೃತದಲ್ಲಿ ಈ ರೀತಿ ಗುಣಧಮ್ರಗಳ ಅಥ್ರವನ್ನು ಕೊಡುವ ನಾಮ ಪದಗಳನ್ನು ಮಾತ್ರವಲ್ಲದೆ ಬೇರೆ ನಾಮಪದಗಳನ್ನೂ ಒಂದರೊಡನೊಂದನ್ನು ಸೇರಿಸಿ ಪದಕಂತೆಯನ್ನಾಗಿ ಮಾಡಿ ಬಳಸಲು ಸಾಧ್ಯವಿದೆ.
ಉದಾಹರಣೆಗಾಗಿ ಮೃತ್ತಿಕಂ ಘಟಂ ಪದಕಂತೆಯಲ್ಲಿ ಮೃತ್ತಿಕ ಮಣ್ಣು' ಮತ್ತು ಘಟ ಕೊಡ’ ಎಂಬ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಬಳಸಲಾಗಿದೆ. ಇವುಗಳಲ್ಲಿ ಮೊದಲನೆಯದು ಮಣ್ಣಾಗಿರುವ ಒಂದು ವಸ್ತು ವನ್ನೂ ಎರಡನೆಯದು ಕೊಡವಾಗಿರುವ ಒಂದು ವಸ್ತುವನ್ನೂ ಗುರುತಿಸುತ್ತಿದ್ದು, ಅವೆರಡೂ ಒಂದೇ ಪದಕಂತೆಯ ಅಂಗಗಳಾಗಿ ಬಂದಿರುವ ಕಾರಣ ಅದಕ್ಕೆ ಮಣ್ಣಿನ ಕೊಡವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಕನ್ನಡದಲ್ಲಿ ಈ ರೀತಿ ಎರಡು ನಾಮಪದಗಳನ್ನು ಒಂದೇ ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಲು ಸಾಧ್ಯವಿಲ್ಲ. ಮೇಲಿನ ಅಥ್ರವನ್ನು ಕೊಡಲು ಕನ್ನಡದಲ್ಲಿ ಮಣ್ಣಿನ ಕೊಡ ಎಂಬುದಾಗಿ ಹೇಳಬೇಕು; ಎಂದರೆ, ಮಣ್ಣಿಗೂ ಕೊಡಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವುದರ ಮೂಲಕ ಆ ವಿಶಿಷ್ಟವಾದ ವಸ್ತುವನ್ನು ಗುರುತಿಸಬೇಕು.
3.5 ಭಾಷೆಗಳ ನಡುವಿನ ವೈವಿಧ್ಯ ಈ ರೀತಿ ಗುಣಪದಗಳನ್ನು ಕನ್ನಡದಲ್ಲಿರುವ ಹಾಗೆ ಪ್ರತ್ಯೇಕವಾದೊಂದು ಪದವಗ್ರದಲ್ಲಿರಿಸುವ ಬದಲು ಇಲ್ಲವೇ ಸಂಸ್ಕೃತದಲ್ಲಿರುವ ಹಾಗೆ ನಾಮ ಪದಗಳ ವಗ್ರದಲ್ಲಿ ಸೇರಿಸುವ ಬದಲು ಕ್ರಿಯಾಪದಗಳ ವಗ್ರದಲ್ಲಿ ಸೇರಿಸಲೂ ಸಾಧ್ಯವಿದೆ. ಭಾರತದ ವಾಯವ್ಯ ಗಡಿಪ್ರದೇಶದಲ್ಲಿ ಬಳಕೆಯಲ್ಲಿರುವ ಕೆಲವು ಟಿಬೆಟೋ-ಬಮ್ರನ್ ಭಾಷೆಗಳಲ್ಲಿ ಈ ಮೂರನೆಯ ವಿಧಾನ ಬಳಕೆಯಲ್ಲಿದೆ.
ಉದಾಹರಣೆಗಾಗಿ, ಈ ಭಾಷಾಕುಟುಂಬಕ್ಕೆ ಸೇರಿರುವ ಮಣಿಪುರಿ ಭಾಷೆ ಯನ್ನು ಪರಿಶೀಲಿಸಬಹುದು. ಗುಣಪದ ಮತ್ತು ಕ್ರಿಯಾಪದಗಳ ನಡುವೆ ಈ ಭಾಷೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಓಡು, ಬೀಳು, ಒಡೆ, ಕೊಳೆ ಮೊದಲಾದ ಕ್ರಿಯಾಪದಗಳ ಹಾಗೆಯೇ ಬಿಳಿ, ಕಪ್ಪು, ದೊಡ್ಡ, ಚಿಕ್ಕ ಮೊದಲಾದ ಗುಣಪದಗಳನ್ನೂ ಈ ಭಾಷೆಯಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆ.
70 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಈ ಗುಣಪದಗಳನ್ನು ನಾಮಪದಗಳ ವಿಶೇಷಣಗಳಾಗಿ ಬಳಸಬೇಕಿದ್ದರೂ ಕ್ರಿಯಾಪದಗಳ ಹಾಗೆ ಅವುಗಳ ಕೃದಂತ ರೂಪಕ್ಕೆ ಬದಲಾಯಿಸಬೇಕಾಗುತ್ತದೆ.
ಮಣಿಪುರಿ ಭಾಷೆಯಲ್ಲಿ ಚಾ ತಿನ್ನು', ಚತ್ ಹೋಗು’, ಮೊದಲಾದ ಕ್ರಿಯಾಪದಗಳ ಹಾಗೆಯೇ ಸಾಙõï ಉದ್ದ', ಮೂ ಕಪ್ಪು’ ಮೊದಲಾದ ಗುಣ ಪದಗಳನ್ನೂ ಸಮಯವನ್ನು ಸೂಚಿಸುವ (ಕಾಲವಾಚಕ) ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯ ಎಂಬುದನ್ನು ಈ ಕೆಳಗಿನ ಪದರೂಪಗಳಿಂದ ತಿಳಿಯಬಹುದು.
ಚಾಗನಿ ತಿಂದಾನು' ಚತ್ಕನಿ ಹೋದಾನು’ ZÁj ZÀwè
wA¢vÀÄ' ಹೋಯಿತು’
ಸಾಙõïಗನಿ ಮೂಗನಿ
ಸಾಙÂÐ
ಮೂರಿ
ಉದ್ದವಿದ್ದಾನು' ಕಪ್ಪಿದ್ದಾನು’ ಉದ್ದವಾಯಿತು' ಕಪ್ಪಾಯಿತು’
ಮೇಲೆ ಕೊಟ್ಟಿರುವ ಪದರೂಪಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ ಗನಿ ಇಲ್ಲವೇ ಕನಿ ಪ್ರತ್ಯಯ ಮತ್ತು ಹಿಂದಿನ ಸಮಯವನ್ನು ಸೂಚಿಸುವ ಇ (ರಿ) ಪ್ರತ್ಯಯ - ಇವೆರಡೂ ಘಟನೆಯನ್ನು ನಿದ್ರೇಶಿಸುವ ಚಾ ಮತ್ತು ಚತ್ ಪದಗಳೊಂದಿಗೆ ಮಾತ್ರವಲ್ಲದೆ ಗುಣಧಮ್ರವನ್ನು ಸೂಚಿಸುವ ಸಾಙõï ಮತ್ತು ಮೂ ಪದಗಳೊಂದಿಗೂ ಬಂದಿವೆಯೆಂಬುದನ್ನು ಗಮನಿಸಬಹುದು.
ಆದರೆ ಕನ್ನಡದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯಗಳನ್ನು ಆ ರೀತಿ ನೇರವಾಗಿ ಗುಣಪದಗಳಿಗೆ ಸೇರಿಸಲು ಸಾಧ್ಯವಾಗದು. ಗುಣಪದಗಳ ಅನಂತರ ಇರು ಇಲ್ಲವೇ ಆಗು ಕ್ರಿಯಾಪದಗಳನ್ನು ಬಳಸಿ ಅವಕ್ಕೆ ಈ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (ಉದ್ದವಿದ್ದಾನು, ಉದ್ದವಾಯಿತು).
ಇದೇ ರೀತಿಯಲ್ಲಿ ಈ ಎರಡು ರೀತಿಯ ಪದಗಳನ್ನು ಮಣಿಪುರಿ ಭಾಷೆ ಯಲ್ಲಿ ನಾಮಪದದ ವಿಶೇಷಣವಾಗಿ ಬಳಸಬೇಕಿದ್ದಲ್ಲಿ ಅವಕ್ಕೆ ಅ ಪೂವ್ರ ಪ್ರತ್ಯಯ ಮತ್ತು ಪ ಇಲ್ಲವೇ ಬ ಪರಪ್ರತ್ಯಯ - ಇವೆರಡನ್ನೂ ಸೇರಿಸುವ ಮೂಲಕ ಕೃದಂತ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ.
`ತಿನ್ನುವ ಮನುಷ್ಯ’
ಅಚಾಬ ಮೀ ಅಚತ್ಪ ಮೀ ಹೋಗುವ ಮನುಷ್ಯ' ಅಸಾಙõïಬ ಮೀ ಉದ್ದ ಮನುಷ್ಯ’ ಅಮೂಬ ಮೀ `ಕಪ್ಪು ಮನುಷ್ಯ’
71 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಆದರೆ ಕನ್ನಡದಲ್ಲಿ ಕ್ರಿಯಾಪದಗಳನ್ನು ಮಾತ್ರ ಆ ರೀತಿ ಕೃದಂತ ರೂಪಕ್ಕೆ ಬದಲಾಯಿಸಬಹುದಲ್ಲದೆ ಗುಣಪದಗಳನ್ನು ಕೃದಂತ ರೂಪಕ್ಕೆ ಬದಲಾಯಿಸಲು ಸಾಧ್ಯವಾಗದು. ಇದಲ್ಲದೆ ಇನ್ನೂ ಹಲವಾರು ರೀತಿಯ ಸಂದಭ್ರಗಳಲ್ಲಿ ಕ್ರಿಯಾಪದ ಮತ್ತು ಗುಣಪದಗಳು ಮಣಿಪುರಿ ಭಾಷೆಯಲ್ಲಿ ಒಂದೇ ವಿಧವಾಗಿ ಬಳಕೆಯಾಗುತ್ತಿದ್ದು ಅವನ್ನು ಒಂದೇ ಪದವಗ್ರದಲ್ಲಿ ಸೇರಿಸಿ ಹೇಳುವ ಅವಶ್ಯಕತೆಯಿದೆ. ನಾಮಪದ ಗಳು ಮಾತ್ರ ಇವಕ್ಕಿಂತ ತೀರ ಭಿನ್ನವಾದವುಗಳು.
ಉದಾಹರಣೆಗಾಗಿ ಮಣಿಪುರಿ ಭಾಷೆಯಲ್ಲಿ ನಾಮಪದಗಳಿಗೆ ನೇರವಾಗಿ ಸಮಯವನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು. ಇದಲ್ಲದೆ ಒಂದು ನಾಮಪದವನ್ನು ಇನ್ನೊಂದು ನಾಮಪದಕ್ಕೆ ವಿಶೇಷಣವಾಗಿ ಮಾಡ ಬೇಕಿದ್ದಲ್ಲಿ ಅದಕ್ಕೆ ಕನ್ನಡದಲ್ಲಿರುವ ಹಾಗೆ ಗಿ/ಕಿ ಷಷ್ಠೀ ವಿಭಕ್ತಿಯನ್ನು ಸೇರಿಸ ಬೇಕಲ್ಲದೆ ಮೇಲೆ ಕೊಟ್ಟಿರುವ ಕೃದಂತ ಪ್ರತ್ಯಯಗಳನ್ನು ಸೇರಿಸಲು ಸಾಧ್ಯ ವಾಗದು (ಹೆಚ್ಚಿನ ವಿವರಗಳಿಗೆ ಭಟ್ ಮತ್ತು ನಿಂಗೊಂಬ 1997 ನೋಡಿ).
ªÁ ಬಿದಿರು' ಲಯ್ರಿಕ್ ಪುಸ್ತಕ’
ಅಯ್ `ನಾನು’
ವಾಗಿ ಸಂಬಲ್ ಬಿದಿರಿನ ಬೇಲಿ' ಲಯ್ರಿಕ್ಕಿ ಮಮನ್ ಪುಸ್ತಕದ ಬೆಲೆ’ CAiÀiïV ap
`ನನ್ನ ಪತ್ರ’
ಈ ಮೂರು ರೀತಿಯ ಭಾಷೆಗಳು ಮಾತ್ರವಲ್ಲದೆ ಗುಣಪದಗಳ ಮಟ್ಟಿಗೆ ನಾಲ್ಕನೇ ರೀತಿಯ ಭಾಷೆಗಳೂ ಕೆಲವಿವೆ. ಇವುಗಳಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ರೀತಿಯ ಅಥ್ರ ಕೊಡುವ ಪದಗಳೂ ಒಂದೇ ಪದವಗ್ರಕ್ಕೆ ಸೇರುತ್ತವೆ. ಎಂದರೆ, ಅವುಗಳಲ್ಲಿ ಯಾವುದನ್ನು ಬೇಕಿದ್ದರೂ ನೇರವಾಗಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದವಾಗಿ, ಕ್ರಿಯಾಪದ ವಾಗಿ ಇಲ್ಲವೇ ಗುಣಪದವಾಗಿ ಬಳಸಲು ಸಾಧ್ಯವಿದೆ.
ಭಾರತದಲ್ಲಿ ಬಳಕೆಯಲ್ಲಿರುವ ಮುಂಡಾರಿ ಎಂಬ ಆಸ್ಟ್ರೋ-ಏಶಿಯಾಟಿಕ್ ಭಾಷಾಕುಟುಂಬಕ್ಕೆ ಸೇರುವ ಭಾಷೆ ಇಂತಹದು (ಜಾಸ್ತಿ ವಿವರಗಳಿಗೆ ಭಟ್ 1994 ನೋಡಿ).
3.6 ಬೇರೆ ಪದವಗ್ರಗಳು ನಾಮಪದ, ಕ್ರಿಯಾಪದ ಮತ್ತು ಗುಣಪದಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಮುಖ್ಯವಾದ ಪದವಗ್ರಗಳು. ಕನ್ನಡ ಪದಕೋಶದಲ್ಲಿ ಕಾಣಸಿಗುವ ಪದಗಳಲ್ಲಿ ಹೆಚ್ಚಿನವನ್ನೂ ಈ ಮೂರು ಪದವಗ್ರಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ.
ಕನ್ನಡ ವಾಕ್ಯರಚನೆಯನ್ನು ವಿವರಿಸಲು ಈ ಮೂರು ಮುಖ್ಯವಾದ ಪದ ವಗ್ರಗಳು ಮಾತ್ರವಲ್ಲದೆ ಬೇರೆಯೂ ಕೆಲವು ಪದವಗ್ರಗಳ ಅವಶ್ಯಕತೆಯಿದೆ.
72 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಇಂತಹ ಅಮುಖ್ಯವಾದ ಪದವಗ್ರಗಳ ವಿಷಯದಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸವ್ರನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು ನಾಮಪದವಗ್ರದಲ್ಲೇ ಸೇರಿಸಿ ಹೇಳಲಾಗಿದೆ. ಆದರೆ ಕನ್ನಡದಲ್ಲಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇವುಗಳ ಸ್ವರೂಪ ವೇನೆಂಬುದನ್ನು ಮತ್ತು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಇವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಮುಂದೆ ಹತ್ತನೇ ಅಧ್ಯಾಯದಲ್ಲಿ ವಿವರಿಸಲಾಗುವುದು. ಇದಲ್ಲದೆ ಕನ್ನಡದ ಗುಣಪದಗಳಲ್ಲೂ ನಾಮಪದಕ್ಕೆ ವಿಶೇಷಣವಾಗಿ ಬರುವವುಗಳು ಮತ್ತು ಕ್ರಿಯಾಪದಕ್ಕೆ ವಿಶೇಷಣವಾಗಿ ಬರುವವು ಎಂಬುದಾಗಿ ಎರಡು ವಿಧದವುಗಳಿವೆ. ಇವುಗಳಲ್ಲಿ ಎರಡನೆಯ ಉಪವಗ್ರಕ್ಕೆ ಸೇರುವ ಪದಗಳನ್ನು ಸಂಸ್ಕೃತದಲ್ಲಿ (ನಾಮಪದ ವಗ್ರದಲ್ಲೇ ಬರುವ) ಅವ್ಯಯಗಳೆಂದು ಕರೆಯಲಾಗುತ್ತದೆ.
3.7 ತತ್ಸಮ ಮತ್ತು ತದ್ಭವ ಪದಗಳು ಕನ್ನಡದಲ್ಲಿ ಬಳಕೆಯಾಗುವ ಪದಗಳನ್ನು ಮೇಲೆ ವಿವರಿಸಿದ ಹಾಗೆ ಅವುಗಳ ಅಥ್ರವೇನು ಮತ್ತು ವಾಕ್ಯಗಳಲ್ಲಿ ಅವುಗಳ ಕೆಲಸವೆಂತಹದು ಎಂಬ ವಿಷಯದ ಮೇಲೆ ಮಾತ್ರವಲ್ಲದೆ, ಅವುಗಳ ಮೂಲ ಯಾವುದು (ದೇಶ್ಯ ಪದಗಳೇ ಅಥವಾ ಎರವಲು ಪದಗಳೇ) ಮತ್ತು ಅವುಗಳ ಸ್ವರೂಪವೆಂತಹದು (ಎರವಲಾಗಿ ಬಂದ ಮೇಲೆ ಈ ಪದಗಳು ಬದಲಾಗಿವೆ0iÉುೀ ಅಥವಾ ಹಾಗೆ0iÉುೀ ಉಳಿದಿವೆ0iÉುೀ) ಎಂಬ ವಿಷಯದ ಮೇಲೆಯೂ ವಿಂಗಡಿಸಲು ಸಾಧ್ಯವಿದೆ. ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ದೇಶ್ಯ, ತತ್ಸಮ ಮತ್ತು ತದ್ಭವ ಎಂಬ ಪದಗಳ ವಿಂಗಡಣೆ ಇಂತಹದೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡ ವೈಯಾಕರಣಿಗಳು ಈ ವಿಭಜನೆಯನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಮಾತ್ರವೇ ಅನ್ವಯಿಸುತ್ತಾರೆ. ಇಂಗ್ಲಿಷ್, ಹಿಂದಿ ಮೊದಲಾದ ಇತರ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳನ್ನು ತತ್ಸಮ ಮತ್ತು ತದ್ಭವ ಪದ ಗಳೆಂಬುದಾಗಿ ವಿಂಗಡಿಸುವುದಿಲ್ಲ. ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಈ ತತ್ಸಮ-ತದ್ಭವ ವಿಂಗಡಣೆ ಪಾಲಿ, ಪ್ರಾಕೃತ ಮೊದಲಾದ ಸಂಸ್ಕೃತಜನ್ಯ ಭಾಷೆಗಳ ವ್ಯಾಕರಣ ಗಳಲ್ಲಿ ಬಳಕೆಯಲ್ಲಿದ್ದ ವಿಭಜನೆಯನ್ನು ಕನ್ನಡ ವ್ಯಾಕರಣಕ್ಕೆ ಅಳವಡಿಸಲು ನಡೆಸಿದ ಪ್ರಯತ್ನವಲ್ಲದೆ ಬೇರೇನಲ್ಲ. ಕನ್ನಡ ಭಾಷೆ ಸಂಸ್ಕೃತಜನ್ಯ ಭಾಷೆ ಯಲ್ಲವಾದ ಕಾರಣ, ಪಾಲಿ-ಪ್ರಾಕೃತ ಭಾಷೆಗಳ ಈ ವಿಭಜನೆ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲ.
73 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪಾಲಿ, ಪ್ರಾಕೃತ ಮೊದಲಾದ ಭಾಷೆಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಪದಗಳನ್ನು ಕಾಣಬಹುದು. ವೇದಕಾಲದಿಂದ ಬುದ್ಧ ಮತ್ತು ಮಹಾವೀರರ ಕಾಲದ ವರೆಗೆ ಜನಸಾಮಾನ್ಯರ ಮಾತಿನಲ್ಲಿ ಬಳಕೆಯಲ್ಲಿದ್ದ ಭಾಷೆಯಲ್ಲಿ ಹಲವಾರು ಬದಲಾವಣೆಗಳು ನಡೆದಿದ್ದುವು. ಇವುಗಳ ಪರಿಣಾಮವನ್ನು ಈ ಭಾಷೆಗಳವೇ ಆದ ಪದಗಳಲ್ಲಿ ಕಾಣಬಹುದು. ಇಂತಹ ಬದಲಾವಣೆಗಳಾವುವೂ ಸಂಸ್ಕೃತದಲ್ಲಿ ನಡೆದಿರಲಿಲ್ಲವಾದ ಕಾರಣ ಅದರ ಪದಗಳು ಈ ಪದಗಳಿಗಿಂತ ತೀರ ಭಿನ್ನವಾಗಿ ಉಳಿದಿವೆ. ಇಂತಹ ಬದಲಾವಣೆಗಳ ಪರಿಣಾಮವನ್ನು ತೋರಿಸುವ ಪಾಲಿ ಮತ್ತು ಪ್ರಾಕೃತ ಪದಗಳನ್ನು ಅವುಗಳ ವ್ಯಾಕರಣಗಳಲ್ಲಿ ತದ್ಭವ' ಪದಗಳೆಂದು ಕರೆಯಲಾಗುತ್ತದೆ. ಅನಂತರದ ಕಾಲದಲ್ಲಿ, ಇವೇ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದ ಬೌದ್ಧ ಮತ್ತು ಜೈನ ಪಂಡಿತರು ಹಲವಾರು ಪದಗಳನ್ನು ನೇರವಾಗಿ ಸಂಸ್ಕೃತದಿಂದ ಎರವಲಾಗಿ ಪಡೆದಿದ್ದು, ಅವನ್ನು ತತ್ಸಮ’ ಪದಗಳೆಂದು ಕರೆಯಲಾಗುತ್ತದೆ. ಪಾಲಿ ಮತ್ತು ಪ್ರಾಕೃತ ಭಾಷೆಗಳಲ್ಲೇನೇ ಬಳಕೆಯಲ್ಲಿರುವ ಬೇರೆ ಕೆಲವು ಪದಗಳಿಗೆ ಸಂಸ್ಕೃತ ಪದಗಳೊಂದಿಗೆ ನೇರವಾಗಿ ಸಂಬಂಧವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇಂತಹ ಪದಗಳು ಇಂಡೋ-ಆಯ್ರನ್ ಮೂಲದಿಂದ ಲೇನೇ ಬಂದಿರಲು ಸಾಧ್ಯವಿದೆ, ಇಲ್ಲವೇ ಬೇರೆ ಮೂಲಗಳಿಂದ ಎರವಲಾಗಿ ಬಂದಿರಲು ಸಾಧ್ಯವಿದೆ. ಇವನ್ನು ಈ ಭಾಷೆಯ ವ್ಯಾಕರಣಗಳಲ್ಲಿ ದೇಶಿ' ಇಲ್ಲವೇ ದೇಶಜ’ ಪದಗಳೆಂದು ಕರೆಯಲಾಗುತ್ತದೆ. ಇಂತಹದೇ ಒಂದು ವಿಭಜನೆಯನ್ನು ಕನ್ನಡಕ್ಕೆ ಅಳವಡಿಸುವುದಿದ್ದಲ್ಲಿ, ಹಳೆಗನ್ನಡದಿಂದ ಹೊಸಗನ್ನಡದ ವರೆಗಿನ ಸಮಯದಲ್ಲಿ ನಡೆದ ಬದಲಾವಣೆಗಳ ಪರಿಣಾಮವನ್ನು ತೋರಿಸುವ ಹಾಲು (<ಪಾಲ್), ಹಣ್ಣು (<ಪಣ್), ನೂಕು (<ನೂಂಕು), ಹಬ್ಬು ತದ್ಭವಗಳೆಂದು ಕರೆಯಬೇಕು ಮತ್ತು ಅನಂತರದ ಕಾಲದಲ್ಲಿ ಹಳೆಗನ್ನಡದಿಂದ ಎರವಲಾಗಿ ಪಡೆದ ಪಾಡು, ಪಡೆ, ಪಾಲು, ಪೆಟ್ಟು ಮೊದಲಾದುವನ್ನು ತತ್ಸಮಗಳೆಂದು ಕರೆಯಬೇಕು. ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ತತ್ಸಮ-ತದ್ಭವ ವಿಭಜನೆ ಇದಕ್ಕಿಂತ ತೀರ ಭಿನ್ನವಾಗಿದ್ದು, ಪ್ರಾಕೃತ ಭಾಷೆಯ ವೈಯಾಕರಣಿಗಳು ನಡೆಸಿದ ವಿಭಜನೆಯ ನಕಲು ಮಾತ್ರ. ಅದರಿಂದ ಕನ್ನಡ ವ್ಯಾಕರಣ ನಿಯಮಗಳನ್ನು ರಚಿಸುವಲ್ಲಿ ಯಾವ ಪ್ರಯೋಜನವೂ ಸಿಗಲಾರದು (ಜಾಸ್ತಿ ವಿವರಗಳಿಗೆ ಭಟ್ 2005:88 ನೋಡಿ).
(<ಪಬ್ರು) ಮೊದಲಾದುವನ್ನು
3.8 ತಿರುಳು
74 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದವಗ್ರಗಳು ಮೇಲಿನ ಪರಿಶೀಲನೆಯಿಂದ ತಿಳಿಯುವುದೇನೆಂದರೆ, ಭಾಷೆಗಳು ಅವುಗಳಲ್ಲಿ ಕಾಣಿಸುವ ಪದವಗ್ರಗಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಭಿನ್ನವಾಗಿರಲು ಸಾಧ್ಯವಿದೆ. ಹೀಗೆ ಭಿನ್ನವಾಗಿರಲು ಅವು ವಾಕ್ಯರಚನೆಗಾಗಿ ಬಳಸುವ ವಿಧಾನಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದೇ ಮುಖ್ಯ ಕಾರಣ.
ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಸಂಸ್ಕೃತ ದಲ್ಲಿರುವ ಪದವಗ್ರಗಳೇ ಕನ್ನಡದಲ್ಲೂ ಇವೆಯೆಂದು ಹೇಳುವುದು ಸರಿಯಲ್ಲ. ಸಂಸ್ಕೃತಕ್ಕೆ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವಗ್ರಗಳನ್ನು ಕಲ್ಪಿಸಿಕೊಂಡರೆ ಸಾಕು. ಆದರೆ ಕನ್ನಡಕ್ಕೆ ಈ ಎರಡು ಪದ ವಗ್ರಗಳು ಮಾತ್ರವಲ್ಲದೆ ಗುಣಪದಗಳೆಂಬ ಮೂರನೆಯದೊಂದು ಮುಖ್ಯ ಪದ ವಗ್ರವನ್ನೂ ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ.
ಯಾಕೆಂದರೆ, ಗುಣಧಮ್ರವನ್ನು ಸೂಚಿಸುವ ಪದಗಳು ಸಂಸ್ಕೃತದಲ್ಲಿ ನಾಮಪದಗಳ ಹಾಗೆ0iÉುೀ ಬಳಕೆಯಾಗುತ್ತವೆ, ಆದರೆ ಕನ್ನಡದಲ್ಲಿ ಅವು ನಾಮ ಪದ ಗಳಿಗಿಂತ ತೀರ ಭಿನ್ನವಾಗಿರುವ ರೀತಿಯಲ್ಲಿ ಬಳಕೆಯಾಗುತ್ತವೆ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸದ ಪರಿಣಾಮವಾಗಿ ಈ ಎರಡು ಭಾಷೆಗಳ ನಡುವೆ ವ್ಯಾಕರಣದ ಮಟ್ಟಿಗೆ ಇನ್ನೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ ಎಂಬುದನ್ನು ನಾವು ಈ ಅಧ್ಯಾಯದಲ್ಲಿ ನೋಡಿರುವೆವು.
75 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
4. ಪದಗಳ ಒಳರಚನೆ
4.1 ಮುನ್ನೋಟ ಕನ್ನಡದಲ್ಲಿ ಮುಖ್ಯವಾಗಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣಪದ ಗಳು ಎಂಬುದಾಗಿ ಮೂರು ಪದವಗ್ರಗಳಿಗೆ ಸೇರುವ ಪದಗಳು ಬಳಕೆಯಲ್ಲಿವೆ 0iÉುಂಬುದನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ಇವುಗಳಲ್ಲಿ ಎರಡು ವಗ್ರಗಳಿಗೆ ಸೇರುವ ಪದಗಳು, ಎಂದರೆ ನಾಮಪದ ಗಳು ಮತ್ತು ಗುಣಪದಗಳು, ಸಂಸ್ಕೃತದಲ್ಲಿ ಒಂದೇ ಪದವಗ್ರಕ್ಕೆ ಸೇರುತ್ತವೆ. ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಕನ್ನಡದ ವೈಯಾಕರಣಿಗಳು ಈ ವಿಷಯವನ್ನು ಸರಿಯಾಗಿ ಗಮನಿಸದುದ ರಿಂದಾಗಿ ಕನ್ನಡ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಹೇಗೆ ಹಲವಾರು ಕಡೆ ಎಡವಿದ್ದಾರೆ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿದ್ದೇವೆ. ಕನ್ನಡದಲ್ಲಿ ಬರುವ ಈ ಮೂರು ರೀತಿಯ ಪದಗಳಲ್ಲಿ (ನಾಮಪದ, ಕ್ರಿಯಾಪದ ಮತ್ತು ಗುಣಪದಗಳಲ್ಲಿ) ಕೆಲವಕ್ಕೆ ಒಳರಚನೆಯೆಂಬುದಿದೆ, ಆದರೆ ಇನ್ನು ಕೆಲವಕ್ಕೆ ಅಂತಹ ಒಳರಚನೆಯೆಂಬುದಿಲ್ಲ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ನಾಮಪದ, ಗುಣಪದ ಮತ್ತು ಕ್ರಿಯಾಪದಗಳನ್ನು ಗಮನಿಸಬಹುದು.
UÁt + EUÀ ಊರು + ಕೋಲು
ತುಂಬು + ಆ ಕುಣಿ + ಇಸು
UÁtÂUÀ ಊರುಗೋಲು ತುಂಬಾ
ಕುಣಿಸು
ಗಾಣಿಗ, ಊರುಗೋಲು, ತುಂಬಾ ಮತ್ತು ಕುಣಿಸು ಪದಗಳನ್ನು ಪ್ರತ್ಯಯಗಳ ಇಲ್ಲವೇ ಬೇರೆ ಪದಗಳ ಸೇರಿಕೆಯ ಮೂಲಕ ತಯಾರಿಸಲಾಗಿದೆ. ಹಾಗಾಗಿ, ಅವನ್ನು ಒಳರಚನೆಯುಳ್ಳ ಪದಗಳೆಂದು ಹೇಳಲು ಸಾಧ್ಯವಿದೆ.
ಆದರೆ ಇವುಗಳ ತಯಾರಿಕೆಯಲ್ಲಿ ಬಳಕೆಯಾಗಿರುವ ಗಾಣ, ತುಂಬು, ಊರು, ಕೋಲು ಮತ್ತು ಕುಣಿ ಪದಗಳನ್ನಾಗಲೀ ಇಲ್ಲವೇ ಮರ, ಗಿಡ, ನೀರು, ಕೈ ಮೊದಲಾದ ಅಂತಹವೇ ಬೇರೆ ಹಲವಾರು ಪದಗಳನ್ನಾಗಲೀ ಈ ರೀತಿ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪ್ರತ್ಯಯ ಇಲ್ಲವೇ ಪದಗಳ ಸೇರಿಕೆಯಿಂದ ತಯಾರಿಸಿಲ್ಲ. ಹಾಗಾಗಿ, ಅವನ್ನೆಲ್ಲ ಒಳರಚನೆಯಿಲ್ಲದ ಪದಗಳೆಂದು ಹೇಳಬೇಕಾಗುತ್ತದೆ.
ಪದಗಳಿಗಿರಬಲ್ಲ ಈ ಒಳರಚನೆಯ ಮಟ್ಟಿಗೆ ನಾಮಪದ, ಕ್ರಿಯಾಪದ ಮತ್ತು ಗುಣಪದಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ನಾಮಪದಗಳ ಒಳರಚನೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳು ಬಳಕೆಯಾಗುತ್ತವೆ: ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ತಯಾರಿಸುವ ವಿಧಾನವೊಂದು, ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ ಬೇರೊಂದು ಪದವನ್ನಾಗಿ ಮಾಡುವ ವಿಧಾನ (ಸಮಾಸ) ಇನ್ನೊಂದು.
ಇವುಗಳಲ್ಲಿ ಮೊದಲನೆಯ ವಿಧಾನ ಮಾತ್ರ ಕ್ರಿಯಾಪದಗಳ ಮತ್ತು ಗುಣ ಪದಗಳ ಒಳರಚನೆಯಲ್ಲಿ ಬಳಕೆಯಾಗುತ್ತದೆ. ಎರಡನೆಯ ಸಮಾಸವೆಂಬ ವಿಧಾನ ನಾಮಪದಗಳ ಒಳರಚನೆಯಲ್ಲಿ ಬಳಕೆಯಾಗುವುದಲ್ಲದೆ ಕ್ರಿಯಾಪದ ಮತ್ತು ಗುಣಪದಗಳ ಒಳರಚನೆಯಲ್ಲಿ ಬಳಕೆಯಾಗುವುದಿಲ್ಲ.
ಕನ್ನಡದಲ್ಲಿ ಎರಡು ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಬಳಸಲು ಸಾಧ್ಯವಿದೆ ಯಾದರೂ (ಬಂದುಬಿಡು, ತಿಳಿಸಿಹೇಳು, ಮಾಡಿಕೊಡು) ಅದಕ್ಕಾಗಿ ಬಳಕೆ ಯಾಗುವ ವಿಧಾನ ಬೇರೆ ರೀತಿಯದಾಗಿದ್ದು, ಸಾಮಾನ್ಯವಾಗಿ ಅದು ಪದ ರಚನೆಯ ವಿಧಾನವಾಗಿರುವುದಿಲ್ಲ. ಗುಣಪದಗಳ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿದೆ. ಅದರಲ್ಲಿ ಗುಣಪದಗಳು ನಾಮಪದಗಳ ವಗ್ರದಲ್ಲಿ ಸೇರುವ ಕಾರಣ, ನಾಮಪದಗಳ ಹಾಗೆ ಅವನ್ನೂ ಸಮಾಸವೆಂಬ ವಿಧಾನದಿಂದ ಸಾಧಿಸಲು ಸಾಧ್ಯ. ಆದರೆ ಕನ್ನಡದಲ್ಲಿ ಅವು ಬೇರೆಯೇ ಒಂದು ಪದವಗ್ರದಲ್ಲಿ ಸೇರುವುವಾದ ಕಾರಣ ಇದು ಸಾಧ್ಯವಿಲ್ಲ.
4.1.1 ಹೆಸರಿಸುವುದು ಮತ್ತು ವಣ್ರಿಸುವುದು ನಾಮಪದ, ಕ್ರಿಯಾಪದ ಮತ್ತು ಗುಣಪದಗಳನ್ನು ಮುಖ್ಯವಾಗಿ ಮೂರು ರೀತಿಯ ಕೆಲಸಗಳನ್ನು ನಡೆಸುವುದಕ್ಕಾಗಿ ಕನ್ನಡದ ವಾಕ್ಯಗಳಲ್ಲಿ ಬಳಸುತ್ತೇವೆಂಬುದನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ನಾಮಪದಗಳನ್ನು ಬಳಸಲಾಗುತ್ತದೆ, ಘಟನೆಗಳನ್ನು ನಿದ್ರೇಶಿಸುವುದಕ್ಕಾಗಿ ಕ್ರಿಯಾಪದಗಳನ್ನು ಬಳಸ ಲಾಗುತ್ತದೆ ಮತ್ತು ಗುಣಧಮ್ರಗಳನ್ನು ಸೂಚಿಸುವುದಕ್ಕಾಗಿ ಗುಣಪದಗಳನ್ನು ಬಳಸಲಾಗುತ್ತದೆ ಎಂಬುದಾಗಿ ವಾಕ್ಯಗಳಲ್ಲಿ ಈ ಮೂರು ಪದವಗ್ರಗಳಿಗಿರುವ ಕೆಲಸಗಳನ್ನು ಸೂಕ್ಷ್ಮವಾಗಿ ಸೂಚಿಸಬಹುದು.
76 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ ಈ ಮೂರು ಕೆಲಸಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕಾಯ್ರವನ್ನು ಹೆಸರಿಸುವುದು ಮತ್ತು ವಣ್ರಿಸುವುದು ಎಂಬ ಎರಡು ವಿಧಾನಗಳ ಮೂಲಕ ನಡೆಸಲು ಸಾಧ್ಯವಿದೆ. ಆದರೆ ಉಳಿದ ಎರಡು ಕೆಲಸಗಳಲ್ಲಿ (ಎಂದರೆ ಘಟನೆಗಳನ್ನು ನಿದ್ರೇಶಿಸುವ ಮತ್ತು ಗುಣಧಮ್ರಗಳನ್ನು ಸೂಚಿಸುವ ಕೆಲಸ ಗಳಲ್ಲಿ) ಇಂತಹ ವೈವಿಧ್ಯತೆಯಿಲ್ಲ. (ಹೆಚ್ಚಿನ ವಿವರಗಳಿಗೆ ಭಟ್ 2002, 2004 ನೋಡಿ).
ಭಾಷೆಯಲ್ಲಿ ಬರುವ ನಾಮಪದಗಳೆಲ್ಲವೂ ವಿಶಿಷ್ಟವಾದೊಂದು ವ್ಯಕ್ತಿ, ವಸ್ತು ಇಲ್ಲವೇ ವಿಷಯದೊಂದಿಗೆ ರೂಢಿಯಿಂದ ಸಂಬಂಧಿಸಿರುತ್ತವೆ. ಹಾಗಾಗಿ, ಅವು ಹೆಸರಿಸುವ ವಿಧಾನದ ಮೂಲಕ ಮಾತ್ರವೇ ವ್ಯಕ್ತಿ, ವಸ್ತು ಮೊದಲಾದು ವನ್ನು ಗುರುತಿಸಬಲ್ಲುವು.
ಇದು ಒಳರಚನೆಯಿಲ್ಲದ ಮರ, ಕಲ್ಲು ಮೊದಲಾದ ನಾಮಪದಗಳಿಗೆ ಮಾತ್ರವಲ್ಲ, ಕಟ್ಟಡ, ಮೆಟ್ಟಲು, ಹೊದಿಕೆ, ಕಲ್ಲಿದ್ದಲು, ಚಿಕ್ಕಮ್ಮ ಮೊದಲಾದ ಒಳರಚನೆಯಿರುವ ನಾಮಪದಗಳಿಗೂ ಅನ್ವಯಿಸುವಂತಹ ಸಂಗತಿ. ಯಾಕೆಂದರೆ, ಒಳರಚನೆಯಿದ್ದರೂ ಅದರ ಮೂಲಕ ಈ ನಾಮಪದಗಳ ಅಥ್ರವನ್ನು ಸಂಪೂಣ್ರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಉದಾಹರಣೆಗಾಗಿ, ಚಿಕ್ಕಮ್ಮ ಪದಕ್ಕೆ ಒಳರಚನೆಯಿದ್ದು, ಚಿಕ್ಕ ಮತ್ತು ಅಮ್ಮ ಎಂಬ ಎರಡು ಪದಗಳು ಅದರ ಅಂಗಗಳಾಗಿ ಬಂದಿವೆ. ಆದರೆ, ಈ ಒಳರಚನೆಯ ಸಹಾಯದಿಂದ ಆ ಪದದ ಅಥ್ರವನ್ನು ಸಂಪೂಣ್ರವಾಗಿ ತಿಳಿಯಲು ಸಾಧ್ಯವಾಗದು.
ಕನ್ನಡದಲ್ಲಿ ಚಿಕ್ಕಮ್ಮ ಪದ ತಾಯಿಯ ತಂಗಿಯನ್ನು ಸೂಚಿಸುತ್ತದೆಯಲ್ಲದೆ, ತಾಯಿಗಿಂತ ಎಲ್ಲಾ ವಿಷಯಗಳಲ್ಲೂ ಚಿಕ್ಕವಳಾಗಿರುವ ಹೆಂಗಸನ್ನು ಸೂಚಿಸುವು ದಿಲ್ಲ. ಆಕೆ ನಂಟಿನಲ್ಲಿ ಮಾತ್ರ ತಾಯಿಗಿಂತ ಚಿಕ್ಕವಳಲ್ಲದೆ ವಯಸ್ಸಿನಲ್ಲಾಗಲೀ ಇಲ್ಲವೇ ಗಾತ್ರದಲ್ಲಾಗಲೀ ಚಿಕ್ಕವಳಾಗಿರಬೇಕಾಗಿಲ್ಲ.
ಹೆಸರಿಸುವುದು ಮತ್ತು ವಣ್ರಿಸುವುದು ಎಂಬ ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸವೆಂತಹದು ಎಂಬುದನ್ನು ತಿಳಿಯಲು ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು.
ರಾಜುವಿಗೆ ಒಂದು ಕೆಂಪು ಟೊಪ್ಪಿ ಸಿಕ್ಕಿದೆ
(1) (2) ಅಗಸ ಕತ್ತೆಗೆ ಹೊಡೆಯುತ್ತಿದ್ದಾನೆ
(1)ನೇ ವಾಕ್ಯದಲ್ಲಿ ಸಿಗು ಕ್ರಿಯಾಪದ ಒಂದು ಘಟನೆಯನ್ನು ಸೂಚಿಸುತ್ತದೆ. ರಾಜು ನಾಮಪದ ಆ ಘಟನೆಯಲ್ಲಿ ತೊಡಗಿರುವ (ಎಂದರೆ ಒಂದು ಟೊಪ್ಪಿ ಯನ್ನು ಪಡೆದಿರುವ) ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಟೊಪ್ಪಿ ನಾಮಪದ
77 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅದೇ ಘಟನೆಯಲ್ಲಿ ತೊಡಗಿರುವ (ಎಂದರೆ ರಾಜುವಿಗೆ ದೊರೆತಿರುವ) ಒಂದು ವಸ್ತುವನ್ನು ಗುರುತಿಸುತ್ತದೆ.
ಇದಲ್ಲದೆ ಅದೇ ವಾಕ್ಯದಲ್ಲಿ ಕೆಂಪು ಗುಣಪದ ಟೊಪ್ಪಿ ನಾಮಪದೊಂದಿಗೆ ಅದರ ವಿಶೇಷಣವಾಗಿ ಬಂದಿದ್ದು, ಒಂದು ಗುಣಧಮ್ರವನ್ನು ಸೂಚಿಸುತ್ತದೆ, ಮತ್ತು ಆ ಗುಣಧಮ್ರದ ಮೂಲಕ ಅದು ಆ ನಾಮಪದದ ಅಥ್ರವನ್ನು ಕಡಿಮೆ ಮಾಡುತ್ತದೆ. ಕೆಂಪು ಟೊಪ್ಪಿ ಎಂಬುದು ಕೆಲವು ಟೊಪ್ಪಿಗಳನ್ನು (ಕೆಂಪು ಬಣ್ಣದವುಗಳನ್ನು) ಮಾತ್ರ ವಣ್ರಿಸಬಲ್ಲುದಾದ ಕಾರಣ ಅದರ ವ್ಯಾಪ್ತಿ ಬರೀ ಟೊಪ್ಪಿ ಪದಕ್ಕಿರುವ ವ್ಯಾಪ್ತಿಗಿಂತ ಕಡಿಮೆ.
ಈ ಮೇಲಿನ ಕಾರಣಗಳಿಗಾಗಿ, (1)ನೇ ವಾಕ್ಯದಲ್ಲಿ ರಾಜು ನಾಮಪದ ಒಬ್ಬ ವ್ಯಕ್ತಿಯನ್ನು ಹೆಸರಿಸುವುದರ ಮೂಲಕ ಗುರುತಿಸುತ್ತದೆ ಮತ್ತು ಕೆಂಪು ಟೊಪ್ಪಿ ನಾಮಪದಕಂತೆ ಒಂದು ವಸ್ತುವನ್ನು ವಣ್ರಿಸುವುದರ ಮೂಲಕ ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಿದೆ.
ರಾಜು ಪದಕ್ಕೆ ಒಳರಚನೆಯೆಂಬುದಿಲ್ಲವಾದ ಕಾರಣ ಅದು ಒಬ್ಬ ವ್ಯಕ್ತಿಯನ್ನು ಹೆಸರಿಸಬಲ್ಲುದಲ್ಲದೆ ವಣ್ರಿಸಲಾರದು. ಆದರೆ ಕೆಂಪು ಟೊಪ್ಪಿ ಎಂಬುದಕ್ಕೆ ಒಳರಚನೆಯಿದ್ದು, ಅಂತಹ ರಚನೆಯ ಆಧಾರದ ಮೇಲೆ ಅದಕ್ಕೆ ಅಥ್ರ ಹೇಳಲು ಸಾಧ್ಯವಿದೆ. ಹಾಗಾಗಿ ಈ ಅಥ್ರದ ಮೂಲಕ ಅದು ಒಂದು ವಸ್ತುವನ್ನು ವಣ್ರಿಸಿ ಗುರುತಿಸಬಲ್ಲುದು.
ರಾಜು, ಹರಿ, ಬೆಂಗಳೂರು, ಅಜಿತ್, ಮೊದಲಾದ ಅಂಕಿತ ನಾಮಗಳು ಮಾತ್ರವಲ್ಲದೆ ಮರ, ಗಿಡ, ಕತ್ತೆ, ಕಲ್ಲು ಮೊದಲಾದ ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಮಾತ್ರವೇ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲುವು. ಯಾಕೆಂದರೆ, ಇಂತಹ ರೂಢನಾಮಗಳಿಗೂ ಒಳರಚನೆ ಯೆಂಬುದಿಲ್ಲವಾದ ಕಾರಣ ಅವುಗಳ ಮೂಲಕ ವಣ್ರನೆಯೊಂದನ್ನು ಪಡೆಯಲು ಸಾಧ್ಯವಾಗದು. ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (2)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಅನು ಕ್ರಮವಾಗಿ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ. ವಣ್ರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ಅದಕ್ಕಾಗಿ ಒಳರಚನೆಯಿರುವ ಪದಗಳನ್ನು ಬಳಸುವುದು ಅತ್ಯವಶ್ಯ. ಯಾಕೆಂದರೆ ಒಳರಚನೆಯಿರುವ ಪದಗಳ ಮೂಲಕ ಮಾತ್ರ ವಣ್ರನೆಯೊಂದನ್ನು ಪಡೆಯಲು ಸಾಧ್ಯ.
ಉದಾಹರಣೆಗಾಗಿ, ನಾಮಪದಗಳ ಜಾಗದಲ್ಲಿ ಕೆಲವು ಕ್ರಿಯಾಪದಗಳ ಇಲ್ಲವೇ ಗುಣಪದಗಳ ರೂಪಗಳನ್ನು ಬಳಸಲು ಸಾಧ್ಯವಿದ್ದು ಅವು ವಣ್ರಿಸುವ ವಿಧಾನದ ಮೂಲಕ ಗುರುತಿಸುವ ಕೆಲಸವನ್ನು ನಡೆಸಬಲ್ಲುವು.
78 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ
(4) ಅವನ ಬರೆಯುವಿಕೆ ಇನ್ನೂ ಮುಗಿದಿಲ್ಲ (5) ಅವನ ದೊಡ್ಡತನವನ್ನು ಎಲ್ಲರೂ ಬಲ್ಲರು
ಗುಣಪದದ
(4-5) ವಾಕ್ಯಗಳಲ್ಲಿ ಬರೆ ಕ್ರಿಯಾಪದದ ನಾಮರೂಪವಾಗಿರುವ ಬರೆಯು ವಿಕೆ ಎಂಬುದು ಮತ್ತು ದೊಡ್ಡ ನಾಮರೂಪವಾಗಿರುವ ದೊಡ್ಡತನ ಎಂಬುದು ವಣ್ರಿಸುವ ವಿಧಾನದ ಮೂಲಕ ಅನುಕ್ರಮವಾಗಿ ಒಂದು ಘಟನೆ ಯನ್ನು ಮತ್ತು ಒಂದು ಗುಣಧಮ್ರವನ್ನು ಗುರುತಿಸಿವೆ. ಈ ಪದಗಳ ಅಥ್ರವನ್ನು ಸಂಪೂಣ್ರವಾಗಿ ಅವುಗಳ ಒಳರಚನೆಯ ಸಹಾಯದಿಂದ ಪಡೆಯಲು ಸಾಧ್ಯ ವಿರುವ ಕಾರಣ, ಅವನ್ನು ಒಂದು ವಣ್ರನೆಯಲ್ಲಿ ತೊಡಗಿಸಲು ಸಾಧ್ಯವಾಗಿದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಪ್ರತ್ಯಯಗಳ ಮೂಲಕ ಇಲ್ಲವೇ ಸಮಾಸದ ಮೂಲಕ ಸಿದ್ಧವಾಗಿರುವ ನಾಮಪದಗಳಿಗೆ ಒಳರಚನೆಯಿದ್ದರೂ ಅವು ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ವಣ್ರಿಸುವ ವಿಧಾನದ ಮೂಲಕ ಗುರುತಿಸಲಾರವು. ಇದಕ್ಕೆ ಕಾರಣವೇನೆಂದರೆ, ಅವುಗಳ ಸರಿಯಾದ ಅಥ್ರವನ್ನು ಅವುಗಳ ಒಳರಚನೆಯನ್ನು ಪರಿಶೀಲಿಸುವುದರ ಮೂಲಕ ಮಾತ್ರವೇ ಕಂಡು ಹಿಡಿಯಲು ಸಾಧ್ಯವಾಗದು.
ನಾಮಪದಗಳ ಮೂಲಕ ವಣ್ರಿಸುವ ಕೆಲಸವನ್ನು ನಡೆಸಬೇಕಾಗಿದ್ದಲ್ಲಿ ಅವನ್ನು ಒಂದು ನಾಮಪದಕಂತೆಯ ಅಂಗವನ್ನಾಗಿ ಮಾಡಿ ಬಳಸುವ ಅವಶ್ಯಕತೆ ಯಿದೆ. ಮೇಲೆ (1)ನೇ ವಾಕ್ಯದಲ್ಲಿ ಕೊಟ್ಟಿರುವ ಕೆಂಪು ಟೊಪ್ಪಿ ಎಂಬ ನಾಮ ಪದಕಂತೆ ಈ ರೀತಿ ಒಂದು ವಣ್ರನೆಯನ್ನು ಕೊಟ್ಟು, ಅದರ ಮೂಲಕ ವಸ್ತು ವೊಂದನ್ನು ಗುರುತಿಸುತ್ತಿದೆ.
ನಾಮಪದಗಳ ಬಳಕೆಯಲ್ಲಿ ಹೆಸರಿಸುವುದು ಮತ್ತು ವಣ್ರಿಸುವುದು ಎಂಬ ಈ ಎರಡು ಗುರುತಿಸುವ ವಿಧಾನಗಳು ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಬೇಕಿದ್ದಲ್ಲಿ ಜೋಡುಪದ (ಸಮಸ್ತಪದ) ಗಳಿಗೂ ಪದಕಂತೆಗಳಿಗೂ ನಡುವಿರುವ ವ್ಯತ್ಯಾಸವೇನು ಎಂಬುದನ್ನು ತಿಳಿಯು ವುದು ಅವಶ್ಯ.
ಇವೆರಡನ್ನೂ ಎರಡು ಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಿಸಲಾಗಿದೆ0iÉುೀನೋ ನಿಜ; ಆದರೆ, ಜೋಡುಪದಗಳನ್ನು ತಯಾರಿಸುವಲ್ಲಿ ಸಮಾಸವೆಂಬ ಪದರಚನೆಯ ವಿಧಾನವನ್ನು ಬಳಸಲಾಗಿದೆ ಮತ್ತು ಪದಕಂತೆ ಗಳನ್ನು ತಯಾರಿಸುವಲ್ಲಿ ಇದಕ್ಕಿಂತ ತೀರ ಭಿನ್ನವಾಗಿರುವ ವಾಕ್ಯರಚನೆಯ ವಿಧಾನವನ್ನು ಬಳಸಲಾಗಿದೆ.
79 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
4.1.2 ಜೋಡುಪದಗಳು ಮತ್ತು ಪದಕಂತೆಗಳು ಕನ್ನಡದಲ್ಲಿ ಜೋಡುಪದಗಳು ಹೆಸರಿಸುವ ವಿಧಾನದಿಂದ ಮತ್ತು ಪದಕಂತೆಗಳು ವಣ್ರಿಸುವ ವಿಧಾನದಿಂದ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ.
ಈ ಎರಡು ವಿಧಾನಗಳ ನಡುವಿರುವ ವ್ಯತ್ಯಾಸವನ್ನು ಗಮನಿಸದ ಕನ್ನಡದ ವೈಯಾಕರಣಿಗಳು ಮಾವಿನ ಮರ, ನೆರೆಮನೆ ಸುದ್ದಿ, ಕೆಟ್ಟ ಬುದ್ಧಿ, ಬಿಳಿಯ ಬಟ್ಟೆ ಮೊದಲಾದವುಗಳನ್ನು ಸಮಸ್ತಪದ(ಜೋಡುಪದ)ಗಳೆಂದು ಕರೆದಿದ್ದಾರೆ. ನಿಜಕ್ಕೂ ಇವೆಲ್ಲ ಪದಕಂತೆಗಳಾಗಿದ್ದು ವಣ್ರಿಸುವ ವಿಧಾನದಲ್ಲಿ ಬಳಕೆಯಾಗು ತ್ತವಲ್ಲದೆ ಹೆಸರಿಸುವ ವಿಧಾನದಲ್ಲಿ ಬಳಕೆಯಾಗುವುದಿಲ್ಲ.
ನಾಮಪದಗಳಿಗಿರುವ ಒಳರಚನೆಯೆಂಬುದು ನಿಜಕ್ಕೂ ಅವುಗಳ ಚರಿತ್ರೆಗೆ ಸಂಬಂಧಿಸಿದ ವಿಷಯ. ಯಾವುದೋ ಒಂದು ಕಾಲದಲ್ಲಿ ಹೊಸ ಪದವೊಂದನ್ನು ಸೃಷ್ಟಿ ಮಾಡುವ ಅವಶ್ಯಕತೆ ಮೂಡಿಬಂದಾಗ ಭಾಷೆಯಲ್ಲಿ ಬಳಕೆಯಲ್ಲಿರುವ ಒಂದು ಪದಕ್ಕೆ ಪ್ರತ್ಯಯವೊಂದನ್ನು ಸೇರಿಸಿ, ಇಲ್ಲವೇ ಬೇರೊಂದು ಪದವನ್ನು ಸೇರಿಸಿ, ಹೊಸ ಪದವೊಂದನ್ನು ಸಿದ್ಧಗೊಳಿಸಿರಬೇಕು. ಅನಂತರ ಅದು ಜನರ ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಬಳಕೆಗೆ ಬಂದು ಭಾಷೆಯ ಪದವಾಗಿರ ಬೇಕು.
ನಿಜಕ್ಕೂ ಇಂತಹ ಒಳರಚನೆಯಿರುವ ಪದಗಳನ್ನು ಬಳಸುವವರಿಗೆ ಅವುಗಳ ಒಳರಚನೆಯೆಂತಹದು ಎಂಬ ವಿಷಯ ತಿಳಿದಿರಬೇಕೆಂದೇನೂ ಇಲ್ಲ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ ಈ ಪದಗಳ ಅಥ್ರವನ್ನು ಇತರ ಒಳರಚನೆಯಿಲ್ಲದ ಪದಗಳ ಹಾಗೆ ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳಬೇಕಾಗುತ್ತದಲ್ಲದೆ ಅವುಗಳ ಒಳರಚನೆಯ ಆಧಾರದ ಮೇಲೆ ನಿಧ್ರರಿಸುವುದು ಕಷ್ಟಸಾಧ್ಯ.
ಕೆಲವು ಸಂದಭ್ರಗಳಲ್ಲಿ ಮಾತ್ರ ಇಂತಹ ಒಳರಚನೆಯ ಸಹಾಯದಿಂದ ಒಂದು ಪದದ ಅಥ್ರವನ್ನು ಊಹಿಸಲು ಸಾಧ್ಯವಾಗಬಹುದು. ಉದಾಹರಣೆಗಾಗಿ, ಜಲಜನಕ ಪದಕ್ಕೆ ಒಳರಚನೆಯ ಆಧಾರದ ಮೇಲೆ ನೀರನ್ನು ಉಂಟು ಮಾಡುವಂತಹದು' ಎಂಬ ಅಥ್ರವನ್ನು ಕೊಡಲು ಸಾಧ್ಯವಿದೆ. ಆದರೆ ಬರಿಯ ಈ ಅಥ್ರದ ಸಹಾಯದಿಂದ ಅದು ಯಾವ ವಸ್ತುವನ್ನು ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಾಗದು. ಅದು ಒಂದು ರೀತಿಯ ಅನಿಲವನ್ನು ಸೂಚಿಸುತ್ತದೆ ಎಂಬ ವಿಷಯ ತಿಳಿದಿದೆ ಯಾದರೂ ಜಲಜನಕ ಮತ್ತು ಆಮ್ಲಜನಕಗಳೆಂಬ ಎರಡು ರೀತಿಯ ಅನಿಲಗಳು ಈ ನೀರನ್ನು ಉಂಟುಮಾಡುವ’ ಕೆಲಸದಲ್ಲಿ ಬಳಕೆಯಾಗುವುವಾದ ಕಾರಣ, ಜಲಜನಕ ಪದ ಆ ಎರಡು ಅನಿಲಗಳಲ್ಲಿ ಮೊದಲನೆಯದನ್ನು ಗುರುತಿಸುತ್ತದೆ
80 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ ಎಂಬುದನ್ನು ಕನ್ನಡದಲ್ಲಿ ಆ ಪದದ ಬಳಕೆಯೆಂತಹದು ಎಂಬುದನ್ನು ತಿಳಿದಿದ್ದರೆ ಮಾತ್ರ ಹೇಳಲು ಸಾಧ್ಯ.
ಪದಕಂತೆಗಳ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಅಥ್ರವನ್ನಾಧರಿಸಿ ಅದರ ಅಥ್ರ ವೇನೆಂಬುದನ್ನು ತಿಳಿಯಲು ಸಾಧ್ಯವಿದೆ ಮತ್ತು ಆ ಅಥ್ರವನ್ನವಲಂಬಿಸಿ ಅದು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿದೆ.
ಉದಾಹರಣೆಗಾಗಿ ಹೊಸಬಟ್ಟೆ ಎಂಬುದು ಕನ್ನಡದಲ್ಲಿ ಒಂದು ಪದಕಂತೆ ಯಾಗಿದ್ದು, ಅದು ವಣ್ರಿಸುವ ಕ್ರಿಯೆಯ ಮೂಲಕ ವಸ್ತುವೊಂದನ್ನು ಗುರುತಿಸು ತ್ತದೆ. ಹೊಸದಾಗಿರುವ ಯಾವ ಬಟ್ಟೆಯನ್ನು ಬೇಕಿದ್ದರೂ ಈ ಪದಕಂತೆಯ ಮೂಲಕ ಗುರುತಿಸಲು ಸಾಧ್ಯವಿದೆ. ಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಿದ್ಧವಾಗಿರುವ ಪದಗಳೂ ಈ ವಿಷಯದಲ್ಲಿ ಜೋಡುಪದಗಳ ಹಾಗೆಯೇ ಎಂದು ಹೇಳ ಬೇಕಾಗುತ್ತದೆ. ಯಾಕೆಂದರೆ, ಅವುಗಳ ಅಥ್ರವನ್ನು ಅವುಗಳ ಒಳರಚನೆಯ ಸಹಾಯದಿಂದ ಸಂಪೂಣ್ರವಾಗಿ ಮತ್ತು ಸರಿಯಾಗಿ ಪಡೆಯಲು ಸಾಧ್ಯವಾಗದು. ಭಾಷೆಯಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ತಿಳಿಯುವುದರ ಮೂಲಕ ಮಾತ್ರವೇ ಅವುಗಳ ಸರಿಯಾದ ಅಥ್ರವನ್ನು ಪಡೆಯಲು ಸಾಧ್ಯ.
ಉದಾಹರಣೆಗಾಗಿ ಮೆಟ್ಟಲು ಪದವನ್ನು ಮೆಟ್ಟು ಕ್ರಿಯಾಪದಕ್ಕೆ ಅಲು ಪ್ರತ್ಯಯವನ್ನು ಸೇರಿಸಿ ರಚಿಸಲಾಗಿದೆಯೆಂದು ನಮಗೆ ತಿಳಿದಿದ್ದರೂ ಅದರಿಂದ ಆ ಪದ ನಿಜಕ್ಕೂ ಸೂಚಿಸುವ ವಸ್ತು ಎಂತಹದು ಎಂಬುದನ್ನು ಸರಿಯಾಗಿ ಊಹಿಸಿ ಹೇಳಲು ಸಾಧ್ಯವಾಗದು. ಯಾಕೆಂದರೆ, ಅಲು ಪ್ರತ್ಯಯಕ್ಕೆ ಬೇರೆ ಬೇರೆ ಸಂದಭ್ರಗಳಲ್ಲಿ ಬೇರೆ ಬೇರೆ ಅಥ್ರಗಳನ್ನು ಕೊಡುವ ಶಕ್ತಿಯಿದೆ. ಮೆಟ್ಟಲು ಪದದಲ್ಲಿ ಈ ಅಲು ಪ್ರತ್ಯಯ ಒಂದು ಜಾಗವನ್ನು ಸೂಚಿಸು ತ್ತದೆ, ಕೆಮ್ಮಲು ಪದದಲ್ಲಿ ಒಂದು ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಬೀಳಲು ಪದದಲ್ಲಿ ಒಂದು ಕ್ರಿಯೆಯ ಮೂಲಕ ಪಡೆದಿರುವ ವಸ್ತುವನ್ನು ಸೂಚಿಸುತ್ತದೆ.
ಸಂಸ್ಕೃತದ ನಾಮಪದಗಳ ಬಳಕೆಯಲ್ಲಿ ಇಂತಹ ಹೆಸರಿಸುವ ಮತ್ತು ವಣ್ರಿಸುವ ವಿಧಾನಗಳ ನಡುವಿರುವ ವ್ಯತ್ಯಾಸ ಬಹಳ ಮಟ್ಟಿಗೆ ನಶಿಸಿಹೋಗಿದೆ. ಸಂಸ್ಕೃತ ಮಾತಿನ ಭಾಷೆಯಾಗಿ ಮುಂದುವರಿಯದೆ ಬರಿಯ ಬರಹದ ಭಾಷೆ ಯಾಗಿ ಉಳಿದಿರುವುದೇ ಇದಕ್ಕೆ ಕಾರಣವಿರಬೇಕು.
ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ಜೋಡುಪದ ಮತ್ತು ಪದಕಂತೆಗಳ ನಡುವೆ ಅಥ್ರದ ಮಟ್ಟಿಗೆ ಹೆಚ್ಚಿನ ಬಳಕೆಗಳಲ್ಲೂ ವ್ಯತ್ಯಾಸವೇನೂ ಕಾಣಿಸುವು ದಿಲ್ಲ. ಅಂಗಗಳಾಗಿ ಬರುವ ಪದಗಳಲ್ಲಿ ಕೊನೆಯದನ್ನು ಬಿಟ್ಟು ಉಳಿದವು
81 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳನ್ನು ಲೋಪಗೊಳಿಸಿ ಬಳಸಿದಾಗಲೆಲ್ಲ ಸಂಸ್ಕೃತದಲ್ಲಿ ಜೋಡುಪದ ಸಿದ್ಧಿಸುತ್ತದೆ.
4.2 ಕೃತ್ ಮತ್ತು ತದ್ಧಿತ ಪ್ರತ್ಯಯಗಳು ಸಂಸ್ಕೃತ ಭಾಷೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಬಳಕೆ ಯಾಗುವ ಪದಗಳಲ್ಲಿ ಹೆಚ್ಚು ಕಡಿಮೆ ಎಲ್ಲವನ್ನೂ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿದೆ. ಇದಕ್ಕೆ ದಿಶ್ ದಿಕ್ಕು', ಯುದ್್ಧ ಯುದ್ಧ’, ಪದ್ ಕಾಲು', ಮಹ್ ದೊಡ್ಡ’ ಮೊದಲಾದ ಕೆಲವೇ ಕೆಲವು ಅಪವಾದಗಳನ್ನು ಮಾತ್ರ ಕಾಣಲು ಸಾಧ್ಯವಿದೆ.
ಎಂದರೆ, ಒಳರಚನೆಯಿಲ್ಲದ ಪದಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಸಂಸ್ಕೃತ ದಲ್ಲಿ ಕ್ರಿಯಾಧಾತುಗಳಾಗಿವೆ. ಅಂತಹ ಪದಗಳಲ್ಲಿ ಕೆಲವು ಮಾತ್ರ (ಮೇಲೆ ಸೂಚಿಸಿದ ಹಾಗೆ) ನಾಮಪದಗಳಾಗಿ ಬಳಕೆಯಾಗುತ್ತವೆಯಾವಾದರೂ `ಸೊನ್ನೆ’ ಪ್ರತ್ಯಯವನ್ನು ಬಳಸುವ ಮೂಲಕ ಅವನ್ನೂ ಕ್ರಿಯಾಧಾತುಗಳಿಂದ ಪಡೆಯಲು ಸಾಧ್ಯವಿದೆ. ಹಾಗಾಗಿ ಸಂಸ್ಕೃತದಲ್ಲಿ ಧಾತು ಪದವನ್ನು ಕ್ರಿಯಾಧಾತು ಎಂಬ ಅಥ್ರದಲ್ಲೇನೇ ಬಳಸುವುದು ರೂಢಿ.
ಕನ್ನಡದಲ್ಲೂ ಹಲವಾರು ನಾಮಪದಗಳನ್ನು ಮತ್ತು ಗುಣಪದಗಳನ್ನು ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಪಡೆಯಲು ಸಾಧ್ಯ ವಿದೆಯಾದರೂ, ಆ ರೀತಿ ಪಡೆಯಲು ಸಾಧ್ಯವಿಲ್ಲದಂತಹ ನಾಮಪದಗಳು ಮತ್ತು ಗುಣಪದಗಳು ಕನ್ನಡದಲ್ಲಿ ಹಲವಿವೆ.
ಉದಾಹರಣೆಗಾಗಿ, ಮರ, ಹೂ, ಕಲ್ಲು, ಕರು, ಕಾಲು, ಹಲ್ಲು, ನಾರು, ನೊರೆ ಮೊದಲಾದ ಹಲವಾರು ನಾಮಪದಗಳನ್ನು ಮತ್ತು ಹಿರಿ, ಹಾಳು, ತೆಳು, ನಡು ಮೊದಲಾದ ಹಲವು ಗುಣಪದಗಳನ್ನು ಕನ್ನಡದಲ್ಲಿ ಕ್ರಿಯಾಧಾತುಗಳಿಂದ ಪಡೆಯಲು ಸಾಧ್ಯವಾಗದು.
ಹಾಗಾಗಿ, ಕನ್ನಡದ ಧಾತುಗಳನ್ನೆಲ್ಲ ಸಂಸ್ಕೃತದ ಹಾಗೆ ಕ್ರಿಯಾಧಾತುಗಳೆಂಬ ಒಂದೇ ವಗ್ರದಲ್ಲಿ ಸೇರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲು, ಅವನ್ನು ಸಂದಭ್ರಕ್ಕೆ ತಕ್ಕ ಹಾಗೆ ಕ್ರಿಯಾಧಾತು, ನಾಮಧಾತು, ಮತ್ತು ಗುಣ ಧಾತು ಎಂಬುದಾಗಿ ಮೂರು ವಗ್ರಗಳಲ್ಲಿ ವಿಂಗಡಿಸಬೇಕಾಗುತ್ತದೆ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ನಾಮಪದಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.
ನಾಮಪದಗಳು ಸ್ವಪ್ನ ಕ್ಷೇತ್ರ
ಕನಸು' UÀzÉÝ’
ಕ್ರಿಯಾಧಾತುಗಳು ಸ್ವಪ್ Që
ಕನಸು ಕಾಣು' ವಾಸವಾಗಿರು’
82 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ ² ದಕ್್ಷ ವೃದ್್ಧ WÀmï zsÀ£ï ವೃಹ್ CPïëö dÄgï
vÀÄ¢' ತೆಂಕ, ಬಲ’ ಮುದಿ' PÉÆqÀ’ ಬಿಲ್ಲು' ಮರ’ PÀtÄÚ' ಹಳೆ’
ಚೂಪು ಮಾಡು' ಸಮಥ್ರನಾಗಿರು’ ಬೆಳೆ' ತಯಾರಿಸು’ ಜೋರಾಗಿ ಹೋಗಿಸು' ಬೆಳೆ’ ಭೇಟಿ ಮಾಡು' ಹಳೆಯದಾಗು’
²RgÀ zÀQët ವೃದ್ಧ WÀl ಧನು ವೃಕ್ಷ CQë fÃtð
ಮೇಲೆ ಕೊಟ್ಟಿರುವ ಸಂಸ್ಕೃತದ ನಾಮಪದಗಳನ್ನೆಲ್ಲ ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ರಚಿಸಲಾಗಿದೆ. ಆದರೆ ಅವಕ್ಕೆ ಅಥ್ರಗಳಾಗಿ ಕೊಟ್ಟಿರುವ ಕನ್ನಡದ ನಾಮಪದ ಇಲ್ಲವೇ ಗುಣಪದಗಳಲ್ಲಿ ಒಂದನ್ನೂ ಈ ರೀತಿ ಕ್ರಿಯಾಧಾತುವಿನಿಂದ ತಯಾರಿಸಿಲ್ಲ.
ಸಂಸ್ಕೃತ ನಾಮಪದಗಳ ರಚನೆಯಲ್ಲಿ ಕಾಣಿಸುವ ಈ ಗುಣಧಮ್ರವನ್ನು ಆಧಾರವಾಗಿರಿಸಿ, ಅವನ್ನು ವೈಯಾಕರಣಿಗಳು ಕೃದಂತ, ತದ್ಧಿತಾಂತ ಮತ್ತು ಸಮಾಸ ಎಂಬುದಾಗಿ ಮೂರು ವಗ್ರಗಳಲ್ಲಿ ವಿಂಗಡಿಸುತ್ತಾರೆ. ಕ್ರಿಯಾಧಾತು ಗಳಿಗೆ ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಕೃದಂತಗಳು; ಆ ರೀತಿ ತಯಾರಾಗಿರುವ ನಾಮಪದಗಳಿಗೆ ಬೇರೊಂದು (ತದ್ಧಿತ) ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ತದ್ಧಿತಾಂತ ಗಳು; ಮತ್ತು ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಸಮಾಸಗಳು (ಜೋಡುಪದಗಳು).
ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಹೆಚ್ಚುಕಡಿಮೆ ಎಲ್ಲಾ ಪದಗಳನ್ನೂ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿದೆಯಾದ ಕಾರಣ ಇಂತಹ ವಿಭಜನೆ ಆ ಭಾಷೆಯ ವ್ಯಾಕರಣಕ್ಕೆ ಅನುಕೂಲವಾಗಿದೆ.
ಆದರೆ ಕನ್ನಡದ ನಾಮಪದ ಮತ್ತು ಗುಣಪದಗಳಲ್ಲಿ ಹಲವನ್ನು ಆ ರೀತಿ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಿಲ್ಲವಾದ ಕಾರಣ, ಕೃದಂತ, ತದ್ಧಿತಾಂತ ಮತ್ತು ಸಮಾಸಗಳೆಂಬ ನಾಮಪದಗಳ ವಿಭಜನೆ ಕನ್ನಡಕ್ಕೆ ಅನುಕೂಲವಾದು zÀ®è.
ಹೀಗಿದ್ದರೂ ಕನ್ನಡದ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಆ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಒಳಗಾಗದಂತಹ ಪದಗಳನ್ನು ಮಾತ್ರ ಕೆಲವರು ವೈಯಾಕರಣಿಗಳು ನಾಮ ಎಂಬ ನಾಲ್ಕನೆಯ ಪದವಗ್ರದಲ್ಲಿ ಸೇರಿಸಿ, ಕನ್ನಡದಲ್ಲಿ ಕೃದಂತ, ತದ್ಧಿತಾಂತ, ಸಮಾಸ ಮತ್ತು ನಾಮ ಎಂಬ ನಾಲ್ಕು ಪದವಗ್ರಗಳಿವೆ0iÉುಂದು ಹೇಳಿದ್ದಾರೆ.
83 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ತದ್ಧಿತ
ಸೇರುವ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕ್ರಿಯಾಪದಗಳಿಗೆ ಸೇರುವ ಪ್ರತ್ಯಯಗಳನ್ನೆಲ್ಲ ಕೃತ್ಪ್ರತ್ಯಯಗಳೆಂದು ಮತ್ತು ಪ್ರತ್ಯಯಗಳೆಂದು ಪ್ರತ್ಯಯಗಳನ್ನೆಲ್ಲ ನಾಮಪದಗಳಿಗೆ ಪರಿಗಣಿಸುವ ಇನ್ನೊಂದು ವಿಧಾನವನ್ನೂ ಕೆಲವರು ಕನ್ನಡ ವೈಯಾಕರಣಿಗಳು ಅನುಸರಿಸಿರುವುದು ಕಂಡುಬರುತ್ತದೆ.
ಇದೂ ಒಂದು ಮಟ್ಟಿಗೆ ಸಂಸ್ಕೃತ ವ್ಯಾಕರಣದ ಅನುಕರಣೆಯೇ. ಯಾಕೆಂದರೆ, ಸಂಸ್ಕೃತದಲ್ಲಿ ಹೆಚ್ಚುಕಡಿಮೆ ಎಲ್ಲಾ ನಾಮಪದಗಳನ್ನೂ ಕ್ರಿಯಾ ಧಾತುವಿಗೆ ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಹಾಗಾಗಿ, ಅವುಗಳ (ಎಂದರೆ ನಾಮಪದಗಳ) ಅನಂತರ ಬರುವ ಪ್ರತ್ಯಯಗಳೆಲ್ಲ ಸಂಸ್ಕೃತದಲ್ಲಿ ತದ್ಧಿತ ಪ್ರತ್ಯಯಗಳಾಗುತ್ತವೆ (ಎಂದರೆ `ಮೊದಲನೆಯ’ ಪ್ರತ್ಯಯವಾಗಿರುವುದಿಲ್ಲ).
ಆದರೆ ಕನ್ನಡದಲ್ಲಿ ಕ್ರಿಯಾಧಾತುಗಳಿಂದ ತಯಾರಿಸಿಲ್ಲವಾದ ನಾಮಪದ ಗಳೂ ಬೇಕಾದಷ್ಟಿವೆ. ಹಾಗಾಗಿ, ನಾಮಪದಗಳೊಂದಿಗೆ ಬರುವ ಪ್ರತ್ಯಯಗಳಲ್ಲಿ ಹೆಚ್ಚಿನವೂ ಕನ್ನಡದಲ್ಲಿ ಮೊದಲನೆಯ ಪ್ರತ್ಯಯಗಳೇ. ಎಂದರೆ, ಈ ಎರಡನೆಯ ವಿಧಾನವನ್ನು ಬಳಸುವವರು ಸಂಸ್ಕೃತದ ಕೃತ್ ಮತ್ತು ತದ್ಧಿತ ಎಂಬ ಪಾರಿಭಾಷಿಕ ಪದಗಳಿಗೆ ಮೊದಲನೆಯ ಮತ್ತು ಅನಂತರದ ಪ್ರತ್ಯಯಗಳೆಂಬ ಸಂಸ್ಕೃತ ವ್ಯಾಕರಣದಲ್ಲಿರುವ ಅಥ್ರಕ್ಕಿಂತ ಬೇರೆಯೇ ಅಥ್ರವನ್ನು ಕೊಡ ಬೇಕಾಗಿದೆ.
ಆದರೆ ಇಂತಹ ತೇಪೆ ಕೆಲಸ ಕನ್ನಡ ವ್ಯಾಕರಣದ ಮಟ್ಟಿಗೆ ತೀರಾ ಅಸಮಪ್ರಕವಾದುದೆಂಬುದರಲ್ಲಿ ಸಂಶಯವಿಲ್ಲ. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸವೂ ಮೇಲಿನ ವಿಭಜನೆ ಕನ್ನಡದ ಮಟ್ಟಿಗೆ ಅನುಕೂಲವಲ್ಲವೆಂಬುದನ್ನು ತೋರಿಸಿ ಕೊಡುತ್ತದೆ. ಕನ್ನಡದಲ್ಲಿ ಸಾಮಾನ್ಯವಾಗಿ ಬಡವ, ಕಳವು, ನೋವು, ಬರಹ, ಬಿರುಕು ಮೊದಲಾದ ಒಂದೇ ಒಂದು ಪ್ರತ್ಯಯವನ್ನೊಳಗೊಂಡಿರುವ ಸಾಧಿತ ಪದಗಳೇ ಜಾಸ್ತಿ. ಎರಡು ಅಥವಾ ಜಾಸ್ತಿ ಪ್ರತ್ಯಯಗಳನ್ನೊಳಗೊಂಡಿರುವ ತಿಳುವಳಿಕೆ, ಬರವಣಿಗೆ, ಬಿಲ್ಲುಗಾರಿಕೆ ಎಂಬಂತಹ ಸಾಧಿತ ಪದಗಳು ಕನ್ನಡದಲ್ಲಿ ಬಹಳ ಕಡಿಮೆ.
ಇದಕ್ಕೆ ವಿರುದ್ಧವಾಗಿ, ಸಂಸ್ಕೃತದಲ್ಲಿ ಎರಡು ಅಥವಾ ಜಾಸ್ತಿ ಪ್ರತ್ಯಯ ಗಳನ್ನೊಳಗೊಂಡಿರುವ ಪದಗಳು ಬೇಕಾದಷ್ಟಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ಪದಗಳನ್ನು ಗಮನಿಸಬಹುದು.
zsÁvÀÄ
PÀÈ ಮನ್
ಕೃದಂತ
ಕತ್ರೃ
ªÀÄw
ತದ್ಧಿತಾಂತ ಕತ್ರೃತ್ವ ಮತಿಮತ್
84 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
f ಶುಚ್
ಪೃಥ್ ¢ªï §Äzsï
eÁÕ ªÀZï
ಪದಗಳ ಒಳರಚನೆ dAiÀÄ
±ÀÄa ಪೃಥು
ದೇವ
ಬುದ್ಧಿ
ಜ್ಞಾನ
ªÁZï
dAiÀÄå ±ËZÀ ಪಾಥ್ರಿವ ದೈವ ಬುದ್ಧಿಮತ್ ಜ್ಞಾನಿನ್ ವಾಗ್ಮಿನ್
ಪದಗಳನ್ನು
ಸಂಸ್ಕೃತದಲ್ಲಿ ಬರುವ ಒಳರಚನೆಯಿರುವ ಕೃದಂತ, ತದ್ಧಿತಾಂತ ಮತ್ತು ಸಮಾಸ ಎಂಬುದಾಗಿ ವಿಂಗಡಿಸಿದಾಗ ಹೆಚ್ಚು ಕಡಿಮೆ ಒಂದೇ ಪ್ರಮಾಣದ ಮೂರು ಪದವಗ್ರಗಳು ಸಿದ್ಧವಾಗುತ್ತವೆ.
ಆದರೆ ಕನ್ನಡದಲ್ಲಿ ಪ್ರತ್ಯಯಗಳಿರುವ ಹೆಚ್ಚಿನ ಪದಗಳಲ್ಲೂ ಒಂದೇ ಪ್ರತ್ಯಯ ಕಾಣಿಸುವುದಾದ ಕಾರಣ, ಮೇಲಿನ ಸಂಸ್ಕೃತ ವ್ಯಾಕರಣದ ನಿಯಮ ವನ್ನು ಬಳಸಿದಲ್ಲಿ ಹೆಚ್ಚಿನ ಪದಗಳನ್ನೂ `ಕೃದಂತ' ಎಂಬ ಒಂದೇ ವಗ್ರದಲ್ಲಿ ಸೇರಿಸಬೇಕಾಗುತ್ತದೆ. ತದ್ಧಿತಾಂತ ಎಂಬ ವಗ್ರದಲ್ಲಿ ಸೇರಿಸಲು ಕೆಲವೇ ಕೆಲವು ಪದಗಳು ಮಾತ್ರ ಉಳಿಯುತ್ತವೆ. ಕನ್ನಡದ ನಾಮಪದಗಳನ್ನು ವಿಭಜಿಸಲು ಬೇರೆಯೇ ಆಧಾರವನ್ನು ಬಳಸುವುದು ಒಳ್ಳೆಯದೆನ್ನುವುದಕ್ಕೆ ಇದೂ ಒಂದು PÁgÀt.
4.3 ಪದದ ಮೊದಲು ಮತ್ತು ಅನಂತರ ಬರುವ ಪ್ರತ್ಯಯಗಳು ಕನ್ನಡದಲ್ಲಿ ಬರುವ ಪ್ರತ್ಯಯಗಳೆಲ್ಲವೂ ಪದದ ಅನಂತರ ಬರುವವುಗಳು (ಮೆಚ್ಚು-ಗೆ, ನಡ-ತೆ, ಅಳಿ-ವು, ಬಡ-ವ, ಗಾಣ್-ಇಗ). ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಸಂಸ್ಕೃತದಲ್ಲಿ ಪ್ರತ್ಯಯಗಳು ಪದದ ಮೊದಲೂ ಬರಬಲ್ಲುವು (ಪ್ರ-ಕೃತಿ, ಪ್ರ-ಭಾವ, ವಿ-ನಾಶ, ಅ- ಭಾವ, ಅ-ಸತ್ಯ), ಅನಂತರವೂ ಬರಬಲ್ಲುವು (ರಸ-ರಸಿಕ, ನಟ-ನಟಿ, ಪದ-ಪದ್ಯ, ಸನ್ಯಾಸಿ-ಸನ್ಯಾಸಿನಿ).
ಕನ್ನಡದಲ್ಲಿಯೂ ಹೆಜ್ಜೇನು, ಹಿಂಗಾಲು, ಕೆಮ್ಮಣ್ಣು, ಇನ್ನೂರು ಮೊದಲಾದ ಪದಗಳಲ್ಲಿ ಜೇನು, ಕಾಲು, ಮಣ್ಣು, ನೂರು ಮೊದಲಾದ ಪದಗಳ ಮೊದಲು ಬರುವ ಹೆಜ್, ಹಿಂ, ಕೆಂ, ಇನ್ ಎಂಬಂತಹ `ಪ್ರತ್ಯಯ’ಗಳಿವೆಯೆಂದು ಕೆಲವರು ವೈಯಾಕರಣಿಗಳು ವಾದಿಸಿದ್ದಾರೆ (ಶ್ರೀಧರ್ 1995 ನೋಡಿ).
85 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮೊದಲಾದವುಗಳು
ಜೋಡುಪದಗಳೆಂದು
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಆದರೆ ಇವನ್ನು ಪ್ರತ್ಯಯಗಳೆಂದು ಹೇಳುವ ಬದಲು ಪದಗಳೆಂದು ಹೇಳಿ, ಹೆಜ್ಜೇನು ಪರಿಗಣಿಸುವುದೇ ಒಳ್ಳೆಯದೆಂದು ಬೇರೆ ಕೆಲವರು ವಾದಿಸಿದ್ದಾರೆ (ತಿರುಮಲೇಶ್ 1997 ನೋಡಿ). ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳೂ ಹೀಗೆಯೇ ಹೇಳಿದ್ದಾರೆ.
ಇದಲ್ಲದೆ, ಇಂತಹ ಪದಗಳಲ್ಲಿ ಅವುಗಳ ಮೊದಲಿಗೆ ಬರುವ ಅಂಶಗಳು (ಹೆಜ್, ಹಿಂ, ಕೆಂ, ಇನ್ ಮೊದಲಾದವು) ಪ್ರತ್ಯಯಗಳೆಂದು ಹೇಳಿದಲ್ಲಿ ಇಬ್ಬರು ಎಂಬಂತಹ ಕೆಲವು ಪದಗಳು ಎರಡು ಪ್ರತ್ಯಯಗಳ ಸೇರಿಕೆಯಿಂದ (ಎಂದರೆ ಧಾತುವಿಲ್ಲದೆಯೇ) ತಯಾರಾಗಿವೆಯೆಂದು ಹೇಳಬೇಕಾದೀತು.
ಸಾಮಾನ್ಯವಾಗಿ ಪ್ರತ್ಯಯಗಳನ್ನು ಪದಗಳಿಗೆ ಇಲ್ಲವೇ ಧಾತುಗಳಿಗೆ ಸೇರಿಸಿ ಹೊಸ ಪದಗಳನ್ನು ತಯಾರಿಸುತ್ತೇವಲ್ಲದೆ ಎರಡು ಪ್ರತ್ಯಯಗಳನ್ನು ಮಾತ್ರವೇ ಒಂದರೊಡನೊಂದನ್ನು ಸೇರಿಸಿ ಪದಗಳನ್ನು ತಯಾರಿಸುವ ಕ್ರಮವಿಲ್ಲ.
4.4 ನಾಮಪದಗಳ ರಚನೆ ಕನ್ನಡದ ನಾಮಪದಗಳನ್ನು ಕ್ರಿಯಾಪದಗಳಿಗೆ, ಗುಣಪದಗಳಿಗೆ ಇಲ್ಲವೇ ಇತರ ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ ದಣಿ ಕ್ರಿಯಾಪದಕ್ಕೆ ವು ಪ್ರತ್ಯಯವನ್ನು ಸೇರಿಸಿ ದಣಿವು ನಾಮಪದವನ್ನೂ, ಬಡ ಗುಣಪದಕ್ಕೆ ವ ಪ್ರತ್ಯಯವನ್ನು ಸೇರಿಸಿ ಬಡವ ನಾಮಪದವನ್ನೂ, ಗಾಣ ನಾಮಪದಕ್ಕೆ ಇಗ ಪ್ರತ್ಯಯವನ್ನು ಸೇರಿಸಿ ಗಾಣಿಗ ನಾಮಪದವನ್ನೂ ತಯಾರಿಸಲಾಗಿದೆ. ಈ ರೀತಿ ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿರುವಂತಹ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಮೇಲೆ ಸೂಚಿಸಿರುವ ಹಾಗೆ, ನಾಮಪದಗಳ ಒಳರಚನೆಯೆಂಬುದು ಮುಖ್ಯ ವಾಗಿ ಅವುಗಳ ಚರಿತ್ರೆಯನ್ನವಲಂಬಿಸಿರುತ್ತದೆ. ಪದವೊಂದನ್ನು ಹೊಸದಾಗಿ ತಯಾರಿಸಿ ಬಳಕೆಗೆ ತಂದಾಗ ಎಂತಹ ಪದರಚನೆಯ ನಿಯಮವನ್ನು ಅನುಸರಿಸ ಲಾಗಿತ್ತು ಎಂಬುದೇ ಅದರ ಒಳರಚನೆಗೆ ಆಧಾರವಾಗುತ್ತದೆ.
ಸಾಮಾನ್ಯವಾಗಿ ನಾಮಪದಗಳನ್ನು ವಾಕ್ಯಗಳಲ್ಲಿ ಬಳಸುವಾಗ ಇಲ್ಲವೇ ಅವುಗಳ ಅಥ್ರವೇನೆಂಬುದನ್ನು ತಿಳಿಯಲು ಪ್ರಯತ್ನಿಸುವಾಗ ಅವುಗಳ ಒಳರಚನೆ ಹೆಚ್ಚಿನೆಡೆಗಳಲ್ಲೂ ಜಾಸ್ತಿ ಸಹಾಯಕವಾಗುವುದಿಲ್ಲ. ಪದಗಳಿಗೆ ರೂಢಿಯಲ್ಲಿ ಎಂತಹ ಅಥ್ರವಿದೆ ಎಂಬುದು ಮಾತ್ರವೇ ಅವುಗಳ ಬಳಕೆಗೆ ಮತ್ತು ಅಥ್ರಕ್ಕೆ ಆಧಾರವಾಗಬಲ್ಲುದು. ಉದಾಹರಣೆಗಾಗಿ ಹಾಸು ಕ್ರಿಯಾಪದಕ್ಕೂ ಹಾಸುಗೆ ನಾಮಪದಕ್ಕೂ ನಡು ವಿರುವ ಸಂಬಂಧ, ತೆರು ಕ್ರಿಯಾಪದಕ್ಕೂ ತೆರಿಗೆ ನಾಮಪದಕ್ಕೂ ನಡುವಿರುವ ಸಂಬಂಧ, ಇಲ್ಲವೇ ಮಿಡಿ ಕ್ರಿಯಾಪದಕ್ಕೂ ಮಿಡಿತೆ ನಾಮಪದಕ್ಕೂ
86 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಹೇಳ ಬಹುದು.
ಪದಗಳ ಒಳರಚನೆ ನಡುವಿರುವ ಸಂಬಂಧ ಈ ನಾಮಪದಗಳನ್ನು (ಹಾಸುಗೆ, ತೆರಿಗೆ ಮತ್ತು ಮಿಡಿತೆ ಎಂಬವು ಗಳನ್ನು) ಬಳಸುವಾಗ ನಮ್ಮ ಗಮನಕ್ಕೆ ಬರುವುದು ಅಪರೂಪವೆಂದೇ ರೂಢಿಮೂಲವಾದ ಅಥ್ರದ ಸಹಾಯದಿಂದಲೇನೇ ನಾವು ಅವನ್ನು ವಾಕ್ಯಗಳಲ್ಲಿ ಬಳಸುತ್ತೇವೆ ಮತ್ತು ಬೇರೆ ಯಾರಾದರೂ ಅವನ್ನು ಬಳಸಿದಾಗ ಅವಕ್ಕೆ ಅಥ್ರ ಕೊಡುತ್ತೇವೆ. ಈ ರೀತಿ ಪದಗಳ ಒಳರಚನೆ ಅವುಗಳ ದಿನನಿತ್ಯದ ಬಳಕೆಗೆ ಅವಶ್ಯ ವಿಲ್ಲವಾದ ಕಾರಣ, ಸಾಮಾನ್ಯವಾಗಿ ಅದು ಬಹಳ ಅನಿಯಮಿತವಾಗಿರುವುದೇ ಜಾಸ್ತಿ. ಇದಲ್ಲದೆ ನಾಮಪದಗಳಲ್ಲಿ ಬಳಕೆಯಾಗುವ ಪ್ರತ್ಯಯಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು, ಅವುಗಳ ಸ್ವರೂಪ ಮತ್ತು ಅಥ್ರ ಇವೆರಡೂ ಬಹಳ ಮಟ್ಟಿಗೆ ಅನಿಯಮಿತವಾಗಿರುತ್ತವೆ.
ಈ ಕಾರಣಕ್ಕಾಗಿ ಒಳರಚನೆಯಿರುವ ನಾಮಪದಗಳನ್ನು ವ್ಯಾಕರಣಗಳಲ್ಲಿ ವಣ್ರಿಸುವಾಗ ಅವುಗಳಲ್ಲಿ ಬರುವ ಪ್ರತ್ಯಯಗಳ ಪಟ್ಟಿಯನ್ನಷ್ಟೇ ಕೊಡಲು ಸಾಧ್ಯವಾಗುತ್ತದೆ. ಅಂತಹ ಪ್ರತ್ಯಯಗಳೊಂದಿಗೆ ಬರುವ ಪದಗಳು, ಆ ಪದಗಳಲ್ಲಿ ಇಲ್ಲವೇ ಪ್ರತ್ಯಯಗಳಲ್ಲಿ ಉಂಟಾಗುವ ಸೇರಿಕೆಯ ಬದಲಾವಣೆಗಳು, ಮತ್ತು ಅವುಗಳ ಮೂಲಕ ತಯಾರಾಗಬಲ್ಲ ಪದಗಳ ಅಥ್ರ ಇವೆಲ್ಲವನ್ನೂ ಪಟ್ಟಿ ಮಾಡಿಯೇ ಹೇಳಬೇಕಾಗುತ್ತದೆ. ಈ ಕಾರಣಕ್ಕಾಗಿ ಕೆಲವರು ವೈಯಾ ಕರಣಿಗಳು ಪದಗಳ ಒಳರಚನೆಯೆಂಬುದು ಅಥ್ರಕೋಶದ ಅಂಗವಲ್ಲದೆ ವ್ಯಾಕರಣದ ಅಂಗವಲ್ಲ ಎಂಬುದಾಗಿಯೂ ವಾದಿಸಿದ್ದಾರೆ. ಪ್ರತ್ಯಯಗಳ ಮೂಲಕ ಸಾಧಿತವಾಗುವ ನಾಮಪದಗಳ ಒಳರಚನೆ ಈ ರೀತಿ ಅನಿಯಮಿತವಾಗಿರುವುದಾದ ಕಾರಣ ಅದನ್ನು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳುವುದು ಕಷ್ಟಸಾಧ್ಯ. ಅವುಗಳ ಹಿಂದೆ ನಿಯಮಗಳಿರುವ ಬದಲು ಬರೇ ಕೆಲವು `ಒಲವು’ಗಳಿವೆಯೆಂದು ಹೇಳಬೇಕಾಗುತ್ತದೆ. ಈ ಒಲವುಗಳನ್ನು ನಿಯಮರೂಪದಲ್ಲಿ ವಣ್ರಿಸಿದರೂ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಅಪವಾದವಿಲ್ಲದೆ ಇರುವುದಿಲ್ಲ.
ವ್ಯಾಕರಣದ ಇತರ ರಚನೆಗಳಿಗಿಂತ ಸಾಧಿತ ಪದಗಳ ರಚನೆ ಈ ಒಂದು ವಿಷಯದಲ್ಲಿ ತೀರಾ ಭಿನ್ನವಾಗಿದೆ. ಸಾಧಿತ ನಾಮಪದಗಳನ್ನು ಮತ್ತು ಅವುಗಳ ಅಥ್ರವನ್ನು ಅಥ್ರಕೋಶಗಳಲ್ಲಿ ಕೊಡಬೇಕಾಗಿರುವುದು ಇದೇ ಕಾರಣಕ್ಕಾಗಿ. ಉದಾಹರಣೆಗಾಗಿ ಕನ್ನಡದ ಪದರಚನೆಯಲ್ಲಿ ಬಳಕೆಯಾಗುವ ಇಕೆ-ಇಗೆ ಪ್ರತ್ಯಯದ ಸ್ವರೂಪವೇನೆಂಬುದನ್ನು ಪರಿಶೀಲಿಸಬಹುದು.
4.5 ಇಕೆ-ಇಗೆ ಪ್ರತ್ಯಯ ಕನ್ನಡದ ನಾಮಪದಗಳ ರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳಲ್ಲಿ ಇಕೆ-ಇಗೆ ಎಂಬುದು ಮುಖ್ಯವಾದುದು. ಈ ಪ್ರತ್ಯಯದ ಮೂಲಕ ತಯಾರಾಗಬಲ್ಲ
87 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ನಾಮಪದಗಳು ಕನ್ನಡದಲ್ಲಿ ಹಲವಿದ್ದು, ಅವುಗಳ ಒಳರಚನೆಯಲ್ಲಿ ಕಾಣಿಸುವ ಒಲವನ್ನು ಕೆಲವು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳಲು ಸಾಧ್ಯವಿದೆ. ಆದರೆ ಮೇಲೆ ಸೂಚಿಸಿದ ಹಾಗೆ, ಇವು ನಿಜಕ್ಕೂ ನಿಯಮಗಳಲ್ಲ, ಒಲವುಗಳು ಮಾತ್ರ - ಎಂದರೆ ಅವುಗಳಲ್ಲಿ ಪ್ರತಿಯೊಂದಕ್ಕೂ ಸಾಕಷ್ಟು ಅಪವಾದಗಳಿವೆ ಎಂಬುದನ್ನು ಇಲ್ಲಿ ನೆನಪಿನಲ್ಲಿರಿಸಿಕೊಳ್ಳಬೇಕು.
ಈ ಪ್ರತ್ಯಯವನ್ನು ಮುಖ್ಯವಾಗಿ ಕ್ರಿಯಾಪದಗಳಿಗೆ ಸೇರಿಸುವುದರ ಮೂಲಕ ನಾಮಪದಗಳನ್ನು ತಯಾರಿಸಬಹುದು (ಬಳಲು-ಬಳಲಿಕೆ, ಒಪ್ಪು-ಒಪ್ಪಿಗೆ, ಹಿಡಿ-ಹಿಡಿಕೆ, ಕೊಡು-ಕೊಡುಗೆ). ಇದಕ್ಕೆ ಇಕೆ, ಇಗೆ, ಕೆ ಮತ್ತು ಗೆ ಎಂಬುದಾಗಿ ನಾಲ್ಕು ರೂಪಗಳಿವೆ. ಇವುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ನಿಯಮ(ಒಲವು)ಗಳ ಮೂಲಕ ವಿವರಿಸಬಹÅದು.
- ಸಾಮಾನ್ಯವಾಗಿ ಉಕಾರಾಂತ ಕ್ರಿಯಾಪದಗಳ ಅನಂತರ ಈ ಪ್ರತ್ಯಯಕ್ಕೆ ಇಕೆ ರೂಪವಿದೆ.
ಬಳಲು ಹೇಳು CAdÄ
ಬಳಲಿಕೆ ಹೇಳಿಕೆ CAfPÉ
- ಉಕಾರಾಂತ ಕ್ರಿಯಾಪದಗಳಲ್ಲಿ ಎರಡೇ ಅಕ್ಷರಗಳಿದ್ದು ಮೊದಲನೇ ಅಕ್ಷರದಲ್ಲಿ ಬರುವ ಸ್ವರ ಹ್ರಸ್ವವಾಗಿದೆಯಾದರೆ ಅವುಗಳ ಅನಂತರ ಬರುವ ಈ ಪ್ರತ್ಯಯಕ್ಕೆ ಇಗೆ ಇಲ್ಲವೇ ಗೆ ರೂಪವಿದೆ. ಆದರೆ, ಇವುಗಳಲ್ಲಿ ಇಗೆ ಎಂಬುದು ಎಲ್ಲಿ ಬರುತ್ತದೆ ಮತ್ತು ಗೆ ಎಂಬುದು ಎಲ್ಲಿ ಬರುತ್ತದೆ ಎಂಬ ವಿಷಯದಲ್ಲಿ ನಿಯಮವನ್ನು ಮಾಡಲು ಸಾಧ್ಯ ವಾಗುವುದಿಲ್ಲ.
vÉgÀÄ ಮುಚ್ಚು ಮುತ್ತು ಕೊಡು ಮೆಚ್ಚು GqÀÄ
vÉjUÉ ಮುಚ್ಚಿಗೆ ಮುತ್ತಿಗೆ ಕೊಡುಗೆ ಮೆಚ್ಚುಗೆ GqÀÄUÉ
ಮೇಲೆ ಕೊಟ್ಟಿರುವ ನಿಯಮಕ್ಕೆ ನಾಚು-ನಾಚುಗೆ, ಏಳು-ಏಳಿಗೆ ಎಂಬಂತಹ ಕೆಲವು ಅಪವಾದಗಳೂ ಇವೆ.
88 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ
- ಸು ಇಲ್ಲವೇ ಇಸು ಪ್ರತ್ಯಯದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಈ ಪ್ರತ್ಯಯಕ್ಕೆ ಕೆ ರೂಪವಿದೆ. ಈ ಕ್ರಿಯಾಪದಗಳ ಕೊನೆಯ ಸು ಅಕ್ಷರ ಮೇಲಿನ ಪ್ರತ್ಯಯ ಪರವಾದಾಗ ಲೋಪಗೊಳ್ಳುತ್ತದೆ.
ಬಯಸು
ಹರಸು ತುರಿಸು ಗದರಿಸು
ಬಯಕೆ ಹರಕೆ vÀÄjPÉ UÀzÀjPÉ
ಪ್ರತ್ಯಯ
ತಯಾರಿಸಲು
ನಾಮಪದಗಳನ್ನು
ಕೊನೆಯ ಎಕಾರ ಈ
- ಇಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ಗೆ ರೂಪವಿದೆ (ಸುಲಿ-ಸುಲಿಗೆ, ಹೊಲಿ-ಹೊಲಿಗೆ); ಆದರೆ, ಹಿಡಿಕೆ ಎಂಬುದರಲ್ಲಿ ಇದಕ್ಕೆ ಕೆ ರೂಪವಿದೆ.
- ಎಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ಕೆ ರೂಪವಿದ್ದು ಕ್ರಿಯಾಪದದ ಸೇರಿದಾಗ ಅಕಾರವಾಗುತ್ತದೆ (ಮೊಳೆ-ಮೊಳಕೆ); ಈ ನಿಯಮಕ್ಕೂ ಹೊದೆ- ಹೊದಿಕೆ, ನಡೆ-ನಡುಗೆ ಎಂಬಂತಹ ಅಪವಾದಗಳಿವೆ.
- ಈ ಪ್ರತ್ಯಯವನ್ನು ಕನ್ನಡದಲ್ಲಿ ಬರುವ ಎಲ್ಲಾ ಕ್ರಿಯಾಪದಗಳಿಗೂ ಸೇರಿಸಿ ಸಾಧ್ಯವಾಗದು. ಉದಾಹರಣೆಗಾಗಿ ಮಾಡು, ಕುದಿ, ಬರೆ, ದುಡುಕು, ತಿರುಗು ಮೊದಲಾದ ಹಲವಾರು ಕ್ರಿಯಾಪದಗಳಿಗೆ ಇದನ್ನು ಸೇರಿಸಿ ನಾಮ ಪದಗಳನ್ನು ಸಾಧಿಸಲು ಸಾಧ್ಯವಾಗದು. ಯಾವ ಕ್ರಿಯಾಪದಗಳೊಂದಿಗೆಲ್ಲ ಅದು ಈ ರೀತಿ ಸೇರುತ್ತದೆ, ಮತ್ತು ಯಾವ ಕ್ರಿಯಾಪದಗಳೊಂದಿಗೆ ಸೇರುವುದಿಲ್ಲ ಎಂಬುದನ್ನು ತಿಳಿಯಬೇಕಿದ್ದಲ್ಲಿ ಎಂತಹ ಪದಗಳೆಲ್ಲ ಕನ್ನಡದಲ್ಲಿ ಬಳಕೆಯಲ್ಲಿವೆ ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ.
- ಈ ಪ್ರತ್ಯಯದ ಮೂಲಕ ಸಿದ್ಧವಾದ ನಾಮಪದಗಳಿಗೆ ಎಂತಹ ಅಥ್ರವಿದೆ, ಅದಕ್ಕೂ ಕ್ರಿಯಾಪದದ ಅಥ್ರಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನೂ ರೂಢಿಯ ಆಧಾರದ ಮೇಲೆ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.
ಉದಾಹರಣೆಗಾಗಿ, ಅಂಜಿಕೆ ಎಂಬುದು ಒಂದು ಘಟನೆಯನ್ನು ಸೂಚಿಸುವುದಾದರೆ, ಮೊಳಕೆ ಎಂಬುದು ಒಂದು ಘಟನೆಯಿಂದ ಸಿದ್ಧವಾದ ವಸ್ತುವನ್ನು ಸೂಚಿಸುತ್ತದೆ ಮತ್ತು ಹೊದಿಕೆ ಎಂಬುದು
89 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಒಂದು ಘಟನೆಯನ್ನು ಸಾಧಿಸಲು ಬೇಕಾಗುವ ಕರಣವನ್ನು ಸೂಚಿಸು vÀÛzÉ.
- ಹೆಗ್ಗಳಿಕೆ, ತಿಳುವಳಿಕೆ ಮೊದಲಾದ ಕೆಲವು ಪದಗಳಲ್ಲಿ ಈ ಪ್ರತ್ಯಯ ವಳಿ ಎಂಬ ಬೇರೊಂದು ಪ್ರತ್ಯಯದ ಅನಂತರ ಬರುತ್ತದೆ.
-
ಬಿಲ್ಲುಗಾರಿಕೆ, ಶ್ರೀಮಂತಿಕೆ ಮೊದಲಾದವುಗಳಲ್ಲಿ ಕಾಣಿಸುವ ಇಕೆ ಪ್ರತ್ಯಯ ಮೇಲಿನ ಪ್ರತ್ಯಯಕ್ಕಿಂತ ಭಿನ್ನವಾದುದು. ಇದು ನಾಮಪದಗಳ ಅನಂತರ ಬರುತ್ತಿದ್ದು, ಸಂಸ್ಕೃತದ ಇಕ ಪ್ರತ್ಯಯಕ್ಕೆ (ಕ್ಷಣ-ಕ್ಷಣಿಕ, ತಕ್ರ-ತಾಕ್ರಿಕ) ಸಂಬಂಧಿಸಿದುದಿರಬೇಕು.
ಎಲ್ಲಾ ಕ್ರಿಯಾಪದಗಳಿಗೂ ಸೇರಿಸಲು ಸಾಧ್ಯವಿರುವಂತಹ ಇಕೆ ಎಂಬ ಇನ್ನೊಂದು ಪ್ರತ್ಯಯ ಕನ್ನಡದಲ್ಲಿದೆ. ಇದು ಮೇಲಿನ ಪ್ರತ್ಯಯಕ್ಕಿಂತ ಭಿನ್ನ ವಾದುದು. ಈ ಪ್ರತ್ಯಯವನ್ನು ಕ್ರಿಯಾಪದಕ್ಕೆ ಸೇರಿಸುವುದರ ಮೂಲಕ ಒಂದು ನಾಮಪದವನ್ನು ತಯಾರಿಸುವ ಬದಲು, ನಾಮಪದದ ಜಾಗದಲ್ಲಿ ಬರಬಲ್ಲ ಒಂದು ಕ್ರಿಯಾರೂಪವನ್ನು (ಕ್ರಿಯಾಪದದ ನಾಮರೂಪವನ್ನು) ತಯಾರಿಸುತ್ತೇವೆ ಎಂಬುದೇ ಇದಕ್ಕೂ ಮೇಲಿನ ಇಕೆ-ಇಗೆ ಪ್ರತ್ಯಯಕ್ಕೂ ನಡುವಿರುವ ಮುಖ್ಯ ವ್ಯತ್ಯಾಸ.
ಎಂದರೆ, ಈ ಇಕೆ ಎಂಬುದು ಒಂದುಪದರೂಪ' ಪ್ರತ್ಯಯ ಮತ್ತು ಮೇಲೆ ವಿವರಿಸಿದ ಇಕೆ-ಇಗೆ ಎಂಬುದು ಒಂದುಪದಪ್ರತ್ಯಯ’. ಈ ಕಾರಣಕ್ಕಾಗಿ, ಈ ಎರಡು ಪ್ರತ್ಯಯಗಳ ನಡುವೆ ಹಲವಾರು ವ್ಯತ್ಯಾಸಗಳಿವೆಯೆಂಬುದನ್ನು ಗಮನಿಸ ಬಹುದು.
ಕ. ಮೇಲೆ ಸೂಚಿಸಿದ ಹಾಗೆ, ಇಕೆ ಪದರೂಪ ಪ್ರತ್ಯಯವನ್ನು ಯಾವ ಕ್ರಿಯಾಪದದೊಂದಿಗೆ ಬೇಕಿದ್ದರೂ ಸೇರಿಸಿ ಹೇಳಬಹುದು (ಮಾಡು ವಿಕೆ, ಕುದಿಯುವಿಕೆ, ಬರೆಯುವಿಕೆ, ದುಡುಕುವಿಕೆ, ತಿರುಗುವಿಕೆ). ಸಂಸ್ಕೃತದಿಂದ ಎರವಲಾಗಿ ಬಂದಿರುವ ಕ್ರಿಯಾಪದಗಳೊಂದಿಗೂ ಅದನ್ನು ಸೇರಿಸಿ ಹೇಳಬಹುದು (ರಕ್ಷಿಸುವಿಕೆ, ಶಿಕ್ಷಿಸುವಿಕೆ, ಅನು ಮತಿಸುವಿಕೆ, ವಿರೋಧಿಸುವಿಕೆ). ಖ. ಎಲ್ಲಾ ಬಳಕೆಗಳಲ್ಲೂ ಅದಕ್ಕೆ ಇಕೆ ಎಂಬ ಒಂದೇ ರೂಪವಿದೆ. ಆದರೆ ಈ ಪ್ರತ್ಯಯ ಸೇರಿದಾಗ ಉಕಾರಾಂತ ಕ್ರಿಯಾಪದಗಳ ಕೊನೆ ಯಲ್ಲಿ ವಕಾರಾಗಮವೂ ಮತ್ತು ಎಕಾರಾಂತ ಹಾಗೂ ಇಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ಯುವ್ ಎಂಬುದರ ಆಗಮವೂ ಕಾಣಿಸು vÀÛzÉ.
90 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ
ಹೊಗಳುವಿಕೆ
ಹಾಸುವಿಕೆ ಹೇಳುವಿಕೆ
ಹಿಡಿಯುವಿಕೆ
ಇಳಿಯುವಿಕೆ ಕೊಳೆಯುವಿಕೆ
ಹೊಗಳು ಹಾಸು
ಹೇಳು
»r E½ ಕೊಳೆ
ಗ. ಎಲ್ಲಾ ಬಳಕೆಗಳಲ್ಲೂ ಅದಕ್ಕೆ ಕ್ರಿಯಾಪದವು ನಿದ್ರೇಶಿಸುವ ಘಟನೆಯನ್ನು ಗುರುತಿಸಿ ಹೇಳುವಂತಹ ಒಂದೇ ಅಥ್ರವಿದೆ. ಘ. ಈ ಪ್ರತ್ಯಯದ ಬಳಕೆಯನ್ನು ಒಂದು ವ್ಯಾಕರಣನಿಯಮದ ಮೂಲಕ ವಣ್ರಿಸಲು ಸಾಧ್ಯವಿದೆ. ಪದಪ್ರತ್ಯಯಗಳ ಹಾಗೆ ನಿಯಮದ ಬದಲು `ಒಲವ’ನ್ನು ಬಳಸುವ ಅವಶ್ಯಕತೆಯಿಲ್ಲ.
ಇಕೆ ಪದರೂಪ ಪ್ರತ್ಯಯಕ್ಕೂ ಇಕೆ-ಇಗೆ ಪದಪ್ರತ್ಯಯಕ್ಕೂ ನಡುವಿರುವ ಈ ವ್ಯತ್ಯಾಸಗಳನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.
ಕ್ರಿಯಾಪದ ಇಕೆ (ಪದರೂಪಪ್ರತ್ಯಯ) CAdÄ ಕೊಡು vÉgÀÄ ನಾಚು ಹೊಲಿ ಮೊಳೆ ಬಯಸು
ಕೆತ್ತು ಹಾಸು »r
CAdÄ«PÉ ಕೊಡುವಿಕೆ ತೆರುವಿಕೆ
ನಾಚುವಿಕೆ
ಹೊಲಿಯುವಿಕೆ ಮೊಳೆಯುವಿಕೆ ಬಯಸುವಿಕೆ ಕೆತ್ತುವಿಕೆ
ಹಾಸುವಿಕೆ
ಹಿಡಿಯುವಿಕೆ
ಇಕೆ-ಇಗೆ (ಪದಪ್ರತ್ಯಯ)
CAfPÉ ಕೊಡುಗೆ
vÉjUÉ ನಾಚುಗೆ ಹೊಲಿಗೆ ಮೊಳಕೆ ಬಯಕೆ PÉwÛUÉ ಹಾಸುಗೆ »rPÉ
ಕ್ರಿಯಾಪದಗಳಿಂದ ನಾಮಪದಗಳನ್ನು ಸಾಧಿಸಲು ಇಕೆ-ಇಗೆ ಎಂಬ ಈ ಪ್ರತ್ಯಯದ ಹಾಗೆಯೇ ಕನ್ನಡದಲ್ಲಿ ಬೇರೆಯೂ ಕೆಲವು ಪ್ರತ್ಯಯಗಳು ಬಳಕೆ ಯಾಗುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಕ್ರಿಯಾಪದ ಗಳೊಂದಿಗೆ ಮಾತ್ರಬರಬಲ್ಲುವು. ಇದಲ್ಲದೆ ಅವುಗಳ ಬಳಕೆ ಇಕೆ-ಇಗೆ ಎಂಬು ದಕ್ಕಿಂತಲೂ ಜಾಸ್ತಿ ಅನಿಯಮಿತವಾದುದು.
ಉದಾಹರಣೆಗಾಗಿ ತ ಪ್ರತ್ಯಯವನ್ನು ಇಕಾರಾಂತ ಕ್ರಿಯಾಪದದೊಂದಿಗೆ ಬಳಸಿ ಕುಣಿತ, ಹಿಡಿತ, ದುಡಿತ ಮೊದಲಾದ ನಾಮಪದಗಳನ್ನೂ, ಎಕಾರಾಂತ
91 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕ್ರಿಯಾಪದದೊಂದಿಗೆ ಬಳಸಿ ಅಲೆತ, ನೆಗೆತ, ಒದೆತ ಮೊದಲಾದುವನ್ನೂ ತಯಾರಿಸಬಹುದು; ಗು ಇಲ್ಲವೇ ಡು ಅಕ್ಷರದಲ್ಲಿ ಕೊನೆಗೊಳ್ಳುವ ಕ್ರಿಯಾ ಪದಗಳಿಗೆ ಅ ಪ್ರತ್ಯಯವನ್ನು ಸೇರಿಸಿ (ಕ್ರಿಯಾಪದದ ಕೊನೆಯ ಉಕಾರವನ್ನು ಲೋಪಗೊಳಿಸಿ ಮತ್ತು ಗಕಾರ-ಡಕಾರಗಳನ್ನು ಕಕಾರ-ಟಕಾರಗಳನ್ನಾಗಿ ಮಾಡಿ) ನಡುಕ, ತಿರುಕ, ಮರುಕ, ಆಟ, ಓಟ, ನೋಟ, ಹೋರಾಟ ಮೊದಲಾದ ಕೆಲವು ನಾಮಪದಗಳನ್ನು ತಯಾರಿಸಬಹುದು. (ಜಾಸ್ತಿ ವಿವರಗಳಿಗೆ ಭಟ್ 2002 ನೋಡಿ). ನಾಮಪದಗಳನ್ನು ಈ ರೀತಿ ಬೇರೆ ಬೇರೆ ರೀತಿಯ ಪದಪ್ರತ್ಯಯಗಳನ್ನು ಸೇರಿಸಿ ಕ್ರಿಯಾಪದಗಳಿಂದ ಮಾತ್ರವಲ್ಲದೆ ಗುಣಪದಗಳಿಂದ ಮತ್ತು ಇತರ ನಾಮಪದಗಳಿಂದಲೂ ತಯಾರಿಸಲು ಸಾಧ್ಯವಿದೆ (ಹೊಸ-ಹೊಸತು, ಜಾಣ- ಜಾಣ್ಮೆ, ಒಕ್ಕಲು-ಒಕ್ಕಲಿಗ, ಮೂಗು-ಮೂಗುತಿ).
4.6 ಕ್ರಿಯಾಪದಗಳ ರಚನೆ ಕನ್ನಡದ ನಾಮಪದಗಳ ಹಾಗೆ ಕ್ರಿಯಾಪದಗಳನ್ನೂ ಒಳರಚನೆಯಿರುವವುಗಳು ಮತ್ತು ಇಲ್ಲದವುಗಳು ಎಂಬುದಾಗಿ ಎರಡು ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇವುಗಳಲ್ಲಿ ಒಳರಚನೆಯಿರುವ ಕ್ರಿಯಾಪದಗಳ ಅಥ್ರವನ್ನು ಹೆಚ್ಚಿನ ಸಂದಭ್ರಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅಥ್ರದಿಂದ ಪಡೆಯಲು ಸಾಧ್ಯವಿದೆ.
ಉದಾಹರಣೆಗಾಗಿ ಹಂಗಿಸು, ಬಿಡಿಸು, ತುಂಡಿಸು, ಹೆಸರಿಸು ಮೊದಲಾದ ಒಳರಚನೆಯಿರುವ ಕ್ರಿಯಾಪದಗಳನ್ನು ಹಂಗು, ಬಿಡು, ತುಂಡು, ಹೆಸರು ಮೊದಲಾದ ನಾಮಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ರಚಿಸಲಾಗಿದ್ದು, ಅವುಗಳ ಅಥ್ರವನ್ನು ನೇರವಾಗಿ ಅವುಗಳ ಒಳರಚನೆಯಿಂದ ಪಡೆಯಬಹುದು. ಈ ನಿಯಮಕ್ಕೆ ಕೆಲವೇ ಕೆಲವು ಅಪವಾದಗಳಿರುವುದು ನಿಜವಾದರೂ ಅಂತಹ ಅಪವಾದಗಳನ್ನು ನುಡಿಗಟ್ಟು'ಗಳೆಂಬುದಾಗಿ ಪರಿಗಣಿಸಲು ಸಾಧ್ಯವಿದೆ. ಒಳರಚನೆಯಿರುವ ನಾಮಪದಗಳ ಬಳಕೆಯಲ್ಲಿ ಕಾಣಿಸುವ ಹೆಸರು ಮತ್ತು ವಣ್ರನೆ ಎಂಬ ಭೇದ ಒಳರಚನೆಯಿರುವ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸ ದಿರುವುದೇ ಅವುಗಳ ಬಳಕೆಯಲ್ಲಿ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಅನಿಯಮಿತತೆಯಿಲ್ಲದಿರಲು ಮುಖ್ಯ ಕಾರಣ. ಕನ್ನಡದಲ್ಲಿ ಕ್ರಿಯಾಸಮಾಸ’ವೆಂಬ ಒಂದು ವಿಶಿಷ್ಟವಾದ ಸಮಾಸವಿದೆ ಯೆಂದು ಕನ್ನಡದ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಆಬಿಪ್ರಾಯಕ್ಕೆ ಆಧಾರವಾಗಿ ಅವರು ಕೊಡುವ ಮರವೇರು, ಕೈಮುಗಿ, ಕನಸುಕಾಣು ಮೊದಲಾದ ಉದಾಹರಣೆಗಳು ನಿಜಕ್ಕೂ ಪದಕಂತೆಗಳು ಮಾತ್ರ, ಜೋಡುಪದ(ಸಮಸ್ತಪದ)ಗಳಲ್ಲ.
92 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ ಕಪ್ಪುಹಾವು, ಸತ್ತ ಹಾವು ಮೊದಲಾದ ಪದಕಂತೆಗಳಲ್ಲಿ ಮೊದಲನೆಯ ಪದದ ಅನಂತರ ವಿಭಕ್ತಿ ಪ್ರತ್ಯಯ ಬಾರದಿರುವುದನ್ನು ಕಂಡು ಅವನ್ನು ಸಮಾಸ ಗಳೆಂದು ತಪ್ಪಾಗಿ ಹೇಳಿರುವ ಹಾಗೆ ಇಲ್ಲೂ ಮೊದಲನೆಯ ಪದದ ಅನಂತರ (ಮರ, ಕೈ, ಕನಸು ಮೊದಲಾದವುಗಳ ಅನಂತರ) ವಿಭಕ್ತಿ ಪ್ರತ್ಯಯ ಬಾರದಿರುವುದನ್ನು ಕಂಡು ಅವನ್ನೂ ಸಮಾಸಗಳೆಂದು ಕರೆಯುವ ತಪ್ಪಾದ ನಿಣ್ರಯಕ್ಕೆ ಕನ್ನಡದ ವೈಯಾಕರಣಿಗಳು ಬಂದಿದ್ದಾರೆ.
ಕೈಮುಗಿ, ಮರವೇರು ಮೊದಲಾದ ಬಳಕೆಗಳಲ್ಲಿ ಮೊದಲನೆಯ ಪದದ ವಿಭಕ್ತಿ ಲೋಪಗೊಂಡಿರುವುದು ಕನ್ನಡದ ವಾಕ್ಯರಚನೆಯ ನಿಯಮದ ಆಧಾರದ ಮೇಲಲ್ಲದೆ, ವಾಕ್ಯರಚನೆಯ ಆಧಾರದ ಮೇಲಲ್ಲ. ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಜಾಗಗಳಿಗೆ ಕೊಂಡುಹೋದಾಗ (6ನೇ ವಾಕ್ಯ ನೋಡಿ), ಇಲ್ಲವೇ ಅವುಗಳೊಂದಿಗೆ ಒತ್ತಿಹೇಳುವ ಪ್ರತ್ಯಯವೊಂದನ್ನು ಬಳಸಿದಾಗ (7ನೇ ವಾಕ್ಯ ನೋಡಿ), ಆ ರೀತಿ ಲೋಪಗೊಂಡಿರುವ ವಿಭಕ್ತಿ ಪ್ರತ್ಯಯ ತಿರುಗಿ ಕಾಣಿಸಿಕೊಳ್ಳುತ್ತದೆ.
(6) (7)
ಮರವನ್ನು ರಾಜು ನಾಳೆ ಏರುತ್ತಾನೆ. ನಿನ್ನೆ ರಾಜು ಮರವನ್ನೂ ಏರಿದ.
ಕೈಪಿಡಿ, ಬಾನುಲಿ ಮೊದಲಾದ ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಕಡೆಗಳಿಗೆ ಕೊಂಡುಹೋಗಲು ಇಲ್ಲವೇ ಅವುಗಳ ನಡುವೆ ಒತ್ತಿಹೇಳುವ ಪ್ರತ್ಯಯವನ್ನು ಬಳಸಲು ಸಾಧ್ಯವಾಗದೆಂಬು ದನ್ನು ಇಲ್ಲಿ ಗಮನಿಸಬೇಕು.
ಕನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಪ್ರತ್ಯಯಗಳನ್ನು ಬಳಸಿರುವುದು ಬಹಳ ಅಪರೂಪ. ಚಾರಿತ್ರಿಕ ಅವಶೇಷಗಳಾಗಿರುವ ಇಂತಹ ಕೆಲವನ್ನು ಮಾತ್ರ ಕಳೆ-ಕಳಚು, ಎರೆ-ಎರಚು, ನುಣುಪು-ನುಣುಚು ಎಂಬಂತಹ ಕೆಲವು ಪದಯುಗ್ಮಗಳಲ್ಲಿ ಇಲ್ಲವೇ ತುರುಕು, ದೊರಕು, ನಿಲುಕು, ಕುಟುಕು ಎಂಬಂತಹ ಕೆಲವು ಕ್ರಿಯಾಪದಗಳಲ್ಲಿ ಕಾಣಲು ಸಾಧ್ಯವಿದೆ.
ಬೇರೆ ಕೆಲವು ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಪ್ರತ್ಯಯದ ಬಳಕೆ ಯನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ ಹೆಸರಿಸು, ಕನ್ನಡಿಸು, ಒತ್ತಾ ಯಿಸು ಮೊದಲಾದ ಕೆಲವು ಕ್ರಿಯಾಪದಗಳಿಗೂ ಹೆಸರು, ಕನ್ನಡ, ಒತ್ತಾಯ ನಾಮಪದಗಳಿಗೂ ನಡುವೆ ಇಂತಹ ಸಂಬಂಧವನ್ನು ಕಾಣಬಹುದು.
ಇದೇ ರೀತಿಯಲ್ಲಿ ಎತ್ತರಿಸು, ಬೋಳಿಸು, ತಂಪಿಸು ಕ್ರಿಯಾಪದಗಳಿಗೂ ಎತ್ತರ, ಬೋಳು, ತಂಪು ಗುಣಪದಗಳಿಗೂ ನಡುವೆ ಅಂತಹದೇ ಸಂಬಂಧ ವಿರುವ ಹಾಗೆ ಕಾಣಿಸುತ್ತದೆ. ಇದಲ್ಲದೆ, ಗಹಗಹಿಸು, ಬಡಬಡಿಸು, ಚಪ್ಪರಿಸು,
93 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೇಕರಿಸು ಮೊದಲಾದ ಬೇರೆ ಕೆಲವು ಕ್ರಿಯಾಪದಗಳನ್ನು ಅಣಕಿಸುವ ಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಹಾಗೆ ಕಾಣಿಸುತ್ತದೆ. ಆದರೆ ಚಾರಿತ್ರಿಕವಾಗಿ ಈ ಇಸು ಎಂಬುದು ಒಂದು ಕ್ರಿಯಾಪದದ ರೂಪವೇ. ಆಗು, ಆಡು, ಕೊಡು, ಬರು, ಬಿಡು, ಕಟ್ಟು, ಬೀಳು, ಮಾಡು, ಹಾಕು ಮೊದಲಾದ ಕೆಲವು ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದ (ಅಥವಾ ಕ್ರಿಯಾ ರೂಪ)ಗಳನ್ನಾಗಲೀ (ಕಂಡುಬರು, ಹೊಡೆದಾಡು, ಓಡಾಡು, ಓಡಿಬರು, ಇಲ್ಲವಾಗು) ಇಲ್ಲವೇ ನಾಮಪದ ಅಥವಾ ಗುಣಪದಗಳನ್ನಾಗಲೀ (ಸಿಟ್ಟಾಗು, ಬೇರುಬಿಡು, ಮಾತುಕೊಡು, ಅಡ್ಡಬೀಳು, ಕಪ್ಪಾಗು, ಸುಳ್ಳಾಗು) ಸೇರಿಸಿ ಸಂಯುಕ್ತ ಕ್ರಿಯಾಪದ'ಗಳನ್ನು ರಚಿಸುವ ಕ್ರಮ ಕನ್ನಡದಲ್ಲಿ ಬಳಕೆಯಲ್ಲಿದೆ. ಇಲ್ಲೂ ಸಾಮಾನ್ಯವಾಗಿ ಈ ರಚನೆಗಳ ಅಥ್ರವನ್ನು ಅವುಗಳ ಒಳರಚನೆಯ ಸಹಾಯದಿಂದಲೇನೇ ತಿಳಿದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಇವನ್ನೂ ಜೋಡು ಪದ(ಸಮಾಸ)ಗಳೆಂದು ಕರೆಯದೆ ಕೂಡುಪದ’ಗಳೆಂಬ ಬೇರೆ0iÉುೀ ಒಂದು ರೀತಿಯ ರಚನೆಗಳೆಂದು ಪರಿಗಣಿಸುವುದು ಉತ್ತಮ.
4.7 ಗುಣಪದಗಳ ರಚನೆ ಕ್ರಿಯಾಪದಗಳ ಬಳಕೆಯ ಹಾಗೆ ಗುಣಪದಗಳ ಬಳಕೆಯಲ್ಲೂ ಹೆಸರಿಸುವುದು ಮತ್ತು ವಣ್ರಿಸುವುದು ಎಂಬ ಪ್ರಯೋಗಭೇದವಿಲ್ಲ. ಆದುದರಿಂದ, ಸಾಮಾನ್ಯ ವಾಗಿ ಒಳರಚನೆಯಿರುವ ಗುಣಪದಗಳ ಅಥ್ರವನ್ನು ನೇರವಾಗಿ ಅವುಗಳ ಅಂಗ ಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಆಧಾರದ ಮೇಲೆ ನಿಧ್ರರಿಸಲು ಸಾಧ್ಯವಿದೆ.
ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವಂತಹ ಒಳರಚನೆಗಳನ್ನು ಪಡೆದಿರುವ ಕೆಲವು ಗುಣಪದಗಳನ್ನು ಮಾತ್ರ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಉದಾ ಹರಿಸಲು ಸಾಧ್ಯವಿದೆ (ಕೆಂಪು, ಕಪ್ಪು, ತಂಪು, ನುಣುಪು).
ಈ ರೀತಿ ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವ ಒಳರಚನೆಗಳನ್ನು ಬಿಟ್ಟರೆ, ಬೇರೆ ನಿಯಮಿತವಾದ ಒಳರಚನೆಯುಳ್ಳ ಗುಣಪದಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಲೂ ಸಾಧ್ಯವಿದೆ.
ಕ್ರಿಯಾಪದಗಳನ್ನು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳಿಗೆ ವಿಶೇಷಣಗಳನ್ನಾಗಿ ಮಾಡಿ) ಬಳಸಲು ಕನ್ನಡದಲ್ಲಿ ಕ್ರಿಯಾಪದಗಳಿಂದ ಗುಣಪದ ಗಳನ್ನು ತಯಾರಿಸಿ ಬಳಸುವ ಬದಲು ಅವುಗಳ ಕೃದಂತರೂಪಗಳನ್ನು ಬಳಸುವ ಕ್ರಮ ರೂಢಿಯಲ್ಲಿದೆ (ಬೇಯಿಸಿದ ಬಟಾಟೆ, ಒಣಗಿದ ಕಟ್ಟಿಗೆ, ಹಸಿದ ಹುಲಿ). ಇದೇ ರೀತಿಯಲ್ಲಿ ನಾಮಪದಗಳನ್ನು ಗುಣಪದಗಳ ಜಾಗದಲ್ಲಿ ಬಳಸಲು ಅವುಗಳ ಸಂಬಂಧ (ಷಷ್ಠೀ) ರೂಪಗಳನ್ನು ಬಳಸುವ ಕ್ರಮವೂ ಕನ್ನಡದಲ್ಲಿದೆ (ಮಣ್ಣಿನ ಕೊಡ, ಹತ್ತಿಯ ಬಟ್ಟೆ, ಕಲ್ಲಿನ ಮೂತ್ರಿ).
94 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪದಗಳ ಒಳರಚನೆ ಈ ಕಾರಣಕ್ಕಾಗಿ, ನಿಯಮಿತವಾದ ಒಳರಚನೆಯುಳ್ಳ ಗುಣಪದಗಳನ್ನು ಕನ್ನಡದಲ್ಲಿ ಮುಖ್ಯವಾಗಿ ಸಂಸ್ಕೃತವೇ ಮೊದಲಾದ ಬೇರೆ ಕೆಲವು ಭಾಷೆಗಳಿಂದ ಎರವಲಾಗಿ ಬಂದ ಪದಗಳಲ್ಲಿ ಮಾತ್ರ ಕಾಣಲು ಸಾಧ್ಯ.
ಸಂಸ್ಕೃತದಲ್ಲಿ ನಾಮಪದಗಳು ಮತ್ತು ಗುಣಪದಗಳು ಎಂಬ ಈ ಎರಡು ರೀತಿಯ ಪದಗಳೂ ಒಂದೇ ಪದವಗ್ರಕ್ಕೆ ಸೇರುತ್ತವೆಯೆಂಬುದನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿರುವೆವು. ಆದರೆ, ಸಂಸ್ಕೃತದ ಪದಗಳು ಕನ್ನಡಕ್ಕೆ ಎರವಲಾಗಿ ಬಂದಾಗ ಅವುಗಳಲ್ಲಿ ಕೆಲವು ನಾಮಪದಗಳಾಗಿ ಬಳಕೆಯಾಗುತ್ತವೆ ಮತ್ತು ಬೇರೆ ಕೆಲವು ಗುಣಪದಗಳಾಗಿ ಬಳಕೆಯಾಗುತ್ತವೆ.
ಉದಾಹರಣೆಗಾಗಿ, ನೀಲಿ, ಮುಖ್ಯ, ಉತ್ತಮ, ಯೋಗ್ಯ ಮೊದಲಾದವು ಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಗ್ರಾಮ, ಕವಿ, ಪಾಠ, ವಿದ್ಯೆ, ಸೇವಕ, ಯಂತ್ರ ಮೊದಲಾದವುಗಳು ನಾಮಪದಗಳಾಗಿಯೂ ಬಳಕೆಯಾಗುತ್ತವೆ. ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಪದ ಪ್ರತ್ಯಯಗಳಲ್ಲೂ ಕೆಲವನ್ನು ಕನ್ನಡದಲ್ಲಿ ನಾಮಪದಗಳ ರಚನೆಯಲ್ಲಿ ಬಳಕೆ ಯಾಗುವ ಪ್ರತ್ಯಯಗಳೆಂದೂ ಮತ್ತು ಇನ್ನು ಕೆಲವನ್ನು ಗುಣಪದಗಳ ರಚನೆ ಯಲ್ಲಿ ಬಳಕೆಯಾಗುವ ಪ್ರತ್ಯಯಗಳೆಂದೂ ವಿಭಜಿಸಲು ಸಾಧ್ಯವಿದೆ. ಇಂತಹ ವ್ಯತ್ಯಾಸ ಸಂಸ್ಕೃತದಲ್ಲಿ ಇಲ್ಲದಿದ್ದರೂ ಅದು ಕನ್ನಡಕ್ಕೆ ಅವಶ್ಯವಾದ ಕಾರಣ, ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ತೆ (ಅಧ್ಯಕ್ಷ-ಅಧ್ಯಕ್ಷತೆ, ಕೃತಜ್ಞ-ಕೃತಜ್ಞತೆ, ಅಹ್ರ-ಅಹ್ರತೆ, ಅಸ್ಪೃಶ್ಯ- ಅಸ್ಪೃಶ್ಯತೆ), ಇ (ಅಧಿಕಾರ-ಅಧಿಕಾರಿ, ಆರೋಪ-ಆರೋಪಿ, ವಿರಹ- ವಿರಹಿ, ವ್ಯಾಪಾರ-ವ್ಯಾಪಾರಿ) ಮೊದಲಾದ ಕೆಲವು ಪ್ರತ್ಯಯಗಳಿರುವ ಸಂಸ್ಕೃತ ನಾಮಪದಗಳಾಗಿ ¥ÀzÀ ಬಳಕೆಯಾಗುತ್ತವೆ. ಇದಕ್ಕೆ ಬದಲು, ಇಕ (ದೇಹ-ದೈಹಿಕ, ಲೋಕ-ಲೌಕಿಕ, ವ್ಯವಹಾರ- ವ್ಯಾವಹಾರಿಕ, ವಷ್ರ-ವಾಷ್ರಿಕ, ಯಂತ್ರ-ಯಾಂತ್ರಿಕ), ಈಯ (ಸ್ಥಳೀಯ, ಪ್ರೇಕ್ಷಣೀಯ, ಶ್ಲಾಘನೀಯ, ರಾಷ್ಟ್ರೀಯ) ಮೊದಲಾದ ಬೇರೆ ಕೆಲವು ಪ್ರತ್ಯಯಗಳಿರುವ ಸಂಸ್ಕೃತ ಪದಗಳು ಕನ್ನಡದಲ್ಲಿ ಗುಣಪದಗಳಾಗಿ ಬಳಕೆ ಯಾಗುವುದೇ ಜಾಸ್ತಿ. ಈ ನಿಯಮಕ್ಕೂ ರಸಿಕ, ಮಾಂತ್ರಿಕ, ವೈದಿಕ, ತಾಕ್ರಿಕ ಮೊದಲಾದ ಕೆಲವು ಅಪವಾದಗಳಿವೆ.
ಸಾಮಾನ್ಯವಾಗಿ
ಕನ್ನಡದಲ್ಲಿ
ಗಳು
4.8 ತಿರುಳು ಪದಗಳ ಒಳರಚನೆಯಲ್ಲಿ ಸಂಸ್ಕೃತಕ್ಕಿಂತ ಕನ್ನಡ ಹಲವು ವಿಷಯಗಳಲ್ಲಿ ಭಿನ್ನ ವಾಗಿದೆ. ಪ್ರತ್ಯಯಗಳ ಮೂಲಕ ನಾಮಪದ, ಕ್ರಿಯಾಪದ ಮತ್ತು ಗುಣಪದ
95 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಗಳನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಬೇರೆ ಬೇರೆ ರೀತಿಯ ವಿಧಾನಗಳು ಬಳಕೆಯಲ್ಲಿವೆ.
ಕನ್ನಡ ವ್ಯಾಕರಣಗಳಲ್ಲಿ ಇಂತಹ ಪ್ರತ್ಯಯವಿರುವ ಪದಗಳನ್ನೆಲ್ಲ ಕೃತ್ ಮತ್ತು ತದ್ಧಿತ ಎಂಬ ಎರಡು ವಗ್ರಗಳಲ್ಲಿ ವಿಂಗಡಿಸುವುದು ರೂಢಿ. ಇದು ಸಂಸ್ಕೃತದ ಪದರಚನೆಯ ವಿಧಾನವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿದುದರ ¥sÀ®.
ನಿಜಕ್ಕೂ ಕನ್ನಡಕ್ಕೆ ಇದಕ್ಕಿಂತ ತೀರಾ ಭಿನ್ನವಾದ ವಗ್ರೀಕರಣದ ಅವಶ್ಯಕತೆ ಯಿದೆ. ನಾಮಪದಗಳನ್ನು ಮುಖ್ಯವಾಗಿ ಯಾವ ವಗ್ರದ ಪದಗಳಿಂದ ತಯಾರಿಸ ಲಾಗಿದೆ ಎಂಬ ವಿಷಯವನ್ನಾಧರಿಸಿ ವಗ್ರೀಕರಿಸುವುದೇ ಕನ್ನಡಕ್ಕೆ ಅನುಕೂಲ.
ಪದಗಳ ಒಳರಚನೆಯ ಕುರಿತು ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ ಒಳರಚನೆ ಎಂಬ ನನ್ನ ಪುಸ್ತಕವನ್ನು (ಭಟ್ 2002) ನೋಡಬಹುದು.
96 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
5. ಸಮಾಸಗಳು
5.1 ಮುನ್ನೋಟ ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಕನ್ನಡ ಸಮಾಸಗಳನ್ನು ವಣ್ರಿಸುವ ಸಂದಭ್ರದಲ್ಲಿ ಮೊದಲಿಗೆ ಸಂಸ್ಕೃತ ಸಮಾಸಗಳು ಯಾವುವು ಎಂಬುದನ್ನು ವಣ್ರಿಸುತ್ತಾರೆ. ಅನಂತರ ಅವಕ್ಕಿಂತ ಭಿನ್ನವಾಗಿರುವಂತಹ ಯಾವ ಸಮಾಸಗಳು ಕನ್ನಡದಲ್ಲಿವೆ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಾರೆ. ಸಂಸ್ಕೃತದ ಸಮಾಸಗ ಳೆಲ್ಲವೂ ಕನ್ನಡದಲ್ಲಿ ಹೇಗಿದ್ದರೂ ಇದ್ದೇ ಇರುತ್ತವೆ ಅಥವಾ ಇದ್ದೇ ಇರಬೇಕು ಎಂಬ ಭಾವನೆ ಅವರಲ್ಲಿರುವ ಹಾಗೆ ತೋರುತ್ತದೆ.
ಆದರೆ ಈ ಅಭಿಪ್ರಾಯಕ್ಕೆ ಯಾವ ಆಧಾರವೂ ಇಲ್ಲ. ಕನ್ನಡ ಭಾಷೆ ಸಂಸ್ಕೃತಕ್ಕಿಂತ ತೀರ ಭಿನ್ನವಾಗಿದ್ದು, ಅದರಲ್ಲಿ ಬಳಕೆಯಾಗುವ ಸಮಾಸಗಳ ರಚನೆ ಸಂಸ್ಕೃತ ಸಮಾಸಗಳ ರಚನೆಗಿಂತ ಬಹಳ ಭಿನ್ನವಾದುದು. ಕನ್ನಡದವೇ ಆದ ಪದಗಳಿಗೆ ಮಾತ್ರವಲ್ಲ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿರುತ್ತದೆ. ಹಾಗಾಗಿ, ಅಂತಹ ಪದ ಗಳಿಗೂ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳರಚನೆಯನ್ನು ಕನ್ನಡದಲ್ಲಿ ಕೊಡಲು ಸಾಧ್ಯವಾಗದು. ಸಂಸ್ಕೃತ ಸಮಾಸಗಳನ್ನು ಹಾಗೆಯೇ ಕನ್ನಡ ವ್ಯಾಕರಣದೊಳಕ್ಕೆ ತಂದು ತುರುಕಿಸಿರುವುದು ಕನ್ನಡ ವೈಯಾಕರಣಿಗಳು ಮಾಡಿರುವ ಒಂದು ತಪ್ಪಾದರೆ, ಕನ್ನಡದಲ್ಲಿ ಸಮಾಸ ಮತ್ತು ಪದಕಂತೆಗಳ ನಡುವೆ ವ್ಯತ್ಯಾಸವಿದೆ0iÉುಂಬುದನ್ನು ಗಮನಿಸದಿರುವುದು ಇನ್ನೊಂದು ತಪ್ಪು. ಇದಕ್ಕೂ ಈ ವೈಯಾಕರಣಿಗಳು ಬಹಳ ಮಟ್ಟಿಗೆ ಸಂಸ್ಕೃತ ವ್ಯಾಕರಣಗಳನ್ನು ಅವಲಂಬಿಸಿರುವುದೇ ಮುಖ್ಯ ಕಾರಣ.
ಸಮಾಸ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಕನ್ನಡದಲ್ಲಿರುವ ಹಾಗೆ ಸಂಸ್ಕೃತದಲ್ಲಿಲ್ಲ. ಈ ವಿಷಯವನ್ನು ಗಮನಿಸದೆ, ಸಂಸ್ಕೃತದ ಪದ ರಚನೆಯ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವುದರ ಮೂಲಕ ಈ ವೈಯಾಕರಣಿಗಳು ಆ ಹುಡುಗ, ಸತ್ತ ಹಾವು, ಕನಸು ಕಾಣು ಮೊದಲಾದ ಪದಕಂತೆಗಳನ್ನು ಸಮಾಸಗಳೆಂದು ಭ್ರಮಿಸಿ ವಣ್ರಿಸುತ್ತಾರೆ ಮತ್ತು ಕನ್ನಡದಲ್ಲಿ ಇಲ್ಲದ ಗಮಕಸಮಾಸ, ಕ್ರಿಯಾಸಮಾಸ ಮೊದಲಾದವುಗಳನ್ನು ಈ ಉದಾಹರಣೆ ಗಳಲ್ಲಿ ಕಾಣುತ್ತಾರೆ.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಸಮಾಸಗಳ ಮಟ್ಟಿಗೆ ಕನ್ನಡ ಸಂಸ್ಕೃತಕ್ಕಿಂತ ಹೇಗೆ ಭಿನ್ನವಾಗಿದೆ, ಮತ್ತು ಹಾಗೆ ಅದು ಭಿನ್ನವಾಗಿರಲು ಕಾರಣವೇನು ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗುವುದು. ಆದರೆ ಅದಕ್ಕೆ ಮೊದಲು ಸಮಾಸ ವೆಂದರೇನು, ಅದಕ್ಕೂ ಪದಕಂತೆಗೂ ನಡುವಿರುವ ವ್ಯತ್ಯಾಸಗಳೆಂತಹವು ಎಂಬು ದನ್ನು ತಿಳಿದುಕೊಳ್ಳುವುದು ಅವಶ್ಯ.
5.2 ಜೋಡುಪದಗಳು ಮತ್ತು ಪದಕಂತೆಗಳು ಸಮಾಸ' ಎಂಬ ಪದವನ್ನು ಎರಡು ಅಥ್ರಗಳಲ್ಲಿ ಬಳಸುವ ಕ್ರಮ ವ್ಯಾಕರಣ ಗಳಲ್ಲಿದೆ. ವೂದಲನೆಯದಾಗಿ, ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಲು ಬಳಸುವ ವ್ಯಾಕರಣ ವಿಧಾನವನ್ನು (ಇಲ್ಲವೇ ವ್ಯಾಕರಣ ಕ್ರಿಯೆಯನ್ನು) ಸಮಾಸವೆಂದು ಕರೆಯಲಾಗುತ್ತದೆ. ತತ್ಪುರುಷ, ಕಮ್ರಧಾರಯ, ಬಹುವ್ರೀಹಿ ಮೊದಲಾದವುಗಳು ಇಂತಹ ವ್ಯಾಕರಣಕ್ರಿಯೆಗಳನ್ನು ಸೂಚಿಸುವುವಾದ ಕಾರಣ, ಅವು ಸಮಾಸಗಳು. ಸಂಸ್ಕೃತ ದಲ್ಲಿ ನಾಲ್ಕು ಇಲ್ಲವೇ ಆರು ಸಮಾಸಗಳಿವೆ ಎಂಬ ಮಾತಿನಲ್ಲಿ ಸಮಾಸ ಪದ ಈ ಅಥ್ರದಲ್ಲಿ ಬಳಕೆಯಾಗಿದೆ. ಎರಡನೆಯದಾಗಿ, ಇಂತಹ ವ್ಯಾಕರಣ ಕ್ರಿಯೆಯ ಮೂಲಕ ತಯಾರಾಗಿರುವ ಪದಗಳನ್ನೂ ಸಮಾಸವೆಂಬ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗಾಗಿ, ಸಂಸ್ಕೃತದ ಕೃಷ್ಣಸಪ್ರಃ ಪದವನ್ನು ಕಮ್ರಧಾರಯವೆಂಬ ಒಂದು ಸಮಾಸ ಕ್ರಿಯೆಯ ಮೂಲಕ ತಯಾರಿಸಲಾಗಿದೆಯಾದ ಕಾರಣ, ಅದನ್ನೂ ಸಮಾಸವೆಂದು ಕರೆಯುವ ಪದ್ಧತಿಯಿದೆ. ಆದರೆ ಈ ರೀತಿ ಒಂದೇ ಪಾರಿಭಾಷಿಕ ಪದವನ್ನು ಎರಡು ಅಥ್ರಗಳಲ್ಲಿ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಗೊಂದಲವುಂಟಾಗಲು ಸಾಧ್ಯವಿದೆ. ಹಾಗಾಗಿ, ಈ ಪುಸ್ತಕದಲ್ಲಿ ಸಮಾಸ’ ಎಂಬ ಪದವನ್ನು ಮೇಲೆ ವಿವರಿಸಿರುವ ವ್ಯಾಕರಣ ಕ್ರಿಯೆಯನ್ನು ಹೆಸರಿಸಲು ಮಾತ್ರವೇ ಬಳಸಲಾಗಿದೆ.
ಅಂತಹ ಕ್ರಿಯೆಯಿಂದ ತಯಾರಾಗಿರುವ ಪದಗಳನ್ನು ಹೆಸರಿಸಲು ಜೋಡು ಪದ' ಎಂಬ ಬೇರೆಯೇ ಒಂದು ಪದವನ್ನು ಬಳಸಲಾಗಿದೆ. ಸಂಸ್ಕೃತದಲ್ಲಿ ಇದಕ್ಕೆ ಸಮಸ್ತಪದ’ ಎಂಬ ಹೆಸರೂ ಇದೆ. ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಜೋಡುಪದವೆಂದೂ, ಎರಡು ಪದಗಳನ್ನು ಬೇರೆ ಬೇರಾಗಿ, ಆದರೂ ಒಂದು ಘಟಕವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಪದಕಂತೆಯೆಂದೂ ಹೇಳಬಹುದು.
97 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಉದಾಹರಣೆಗಾಗಿ, ಕಗ್ಗಲ್ಲು ಎಂಬುದು ಒಂದು ಜೋಡುಪದ, ಆದರೆ ಕಪ್ಪುಕಲ್ಲು ಎಂಬುದು ಒಂದು ಪದಕಂತೆ. ಮೊದಲನೆಯದರಲ್ಲಿ ಕಪ್ಪು ಪದವನ್ನು (ಅದರ ಕಗ್ ರೂಪವನ್ನು) ಕಲ್ಲು ಎಂಬ ಇನ್ನೊಂದು ಪದದೊಂದಿಗೆ ಸೇರಿಸಿ ಒಂದೇ ಪದವನ್ನಾಗಿ ಮಾಡಲಾಗಿದೆ. ಆದರೆ ಎರಡನೆಯದರಲ್ಲಿ (ಕಪ್ಪುಕಲ್ಲು ಎಂಬುದರಲ್ಲಿ) ಅವನ್ನು ಆ ರೀತಿ ಒಟ್ಟು ಸೇರಿಸದೆ ಬೇರೆ ಬೇರೆ ಪದಗಳಾಗಿಯೇ ಉಳಿಸಲಾಗಿದೆ.
ಕಪ್ಪುಕಲ್ಲು ಎಂಬುದರಲ್ಲಿ ಈ ರೀತಿ ಕಪ್ಪು ಮತ್ತು ಕಲ್ಲು ಪದಗಳು ಎರಡು ಬೇರೆ ಬೇರೆ ಪದಗಳಾಗಿ ಉಳಿದಿವೆಯಾದರೂ ಅವು ಒಟ್ಟಿಗೆ ವಾಕ್ಯದ ಒಂದು `ಘಟಕ’ವಾಗಿ ಬಳಕೆಯಾಗಿರುತ್ತವೆ. ಈ ಕಾರಣಕ್ಕಾಗಿ ಕಪ್ಪುಕಲ್ಲು ಎಂಬುದನ್ನು ಒಂದು ಪದಕಂತೆ0iÉುಂದು ಕರೆಯಲಾಗುತ್ತದೆ.
ಕಗ್ಗಲ್ಲು ಎಂಬುದರಲ್ಲಿ ಕಪ್ಪು ಪದ ಕಗ್ ಎಂಬ ರೂಪಕ್ಕೆ ಬದಲಾಗಿದೆ. ಆದರೆ ಈ ರೀತಿ ಬದಲಾಗುವುದು ಜೋಡುಪದದ ರಚನೆಗೆ ಅವಶ್ಯವೇನೂ ಅಲ್ಲ. ಉದಾಹರಣೆಗಾಗಿ, ಅಡ್ಡದಾರಿ ಪದದಲ್ಲಿ ಅಂಗವಾಗಿ ಬಂದಿರುವ ಎರಡು ಪದಗಳೂ ಬದಲಾಗದೆ ಹಾಗೆ0iÉುೀ ಉಳಿದಿವೆ. ಹೀಗಿದ್ದರೂ ಕನ್ನಡದಲ್ಲಿ ಅದು ಒಂದು ಜೋಡುಪದವಲ್ಲದೆ ಪದಕಂತೆಯಲ್ಲ. ಒಂದು ಪದಕಂತೆಯ ಅಥ್ರವನ್ನು ಅದರ ಅಂಗಗಳಾಗಿ ಬಂದಿರುವ ಪದಗಳ ಅಥ್ರದ ಸಹಾಯದಿಂದ ಸಂಪೂಣ್ರವಾಗಿ ನಿಧ್ರರಿಸಲು ಸಾಧ್ಯವಿದೆ. ಆದರೆ ಒಂದು ಜೋಡುಪದದ ಅಥ್ರವನ್ನು ಆ ರೀತಿ ಅದರ ಅಂಗಗಳಾಗಿ ಬಂದಿರುವ ಪದಗಳ ಅಥ್ರದ ಸಹಾಯದಿಂದ ಸಂಪೂಣ್ರವಾಗಿ ನಿಧ್ರರಿಸಲು ಸಾಧ್ಯವಾಗದು. ಇದು ಈ ಎರಡು ರೀತಿಯ ಘಟಕಗಳ ನಡುವಿರುವ ಎರಡನೆಯ ವ್ಯತ್ಯಾಸ.
ಉದಾಹರಣೆಗಾಗಿ, ಕಗ್ಗಲ್ಲು ಎಂಬುದು ಕಪ್ಪು(ಕಗ್) ಮತ್ತು ಕಲ್ಲು ಎಂಬ ಎರಡು ಪದಗಳ ಜೋಡಣೆಯಿಂದ ಸಿದ್ಧವಾಗಿದೆ. ಆದರೆ ಅದು ಎಲ್ಲಾ ರೀತಿಯ ಕಪ್ಪು ಬಣ್ಣದ ಕಲ್ಲುಗಳನ್ನೂ ಗುರುತಿಸುವುದಿಲ್ಲ, ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಕಲ್ಲುಗಳನ್ನು ಮಾತ್ರ ಗುರುತಿಸುತ್ತದೆ. ಇದಕ್ಕೆ ಬದಲು, ಕಪ್ಪುಕಲ್ಲು ಪದಕಂತೆ ಎಲ್ಲಾ ರೀತಿಯ ಕಪ್ಪುಬಣ್ಣದ ಕಲ್ಲುಗಳನ್ನೂ ಗುರುತಿಸಬಲ್ಲುದು. ಜೋಡುಪದದ ಅಥ್ರವನ್ನು ತಿಳಿಯಲು ರೂಢಿಯಲ್ಲಿ ಅದು ಯಾವ ಅಥ್ರದಲ್ಲಿ ಬಳಕೆಯಾಗುತ್ತದೆ ಇಲ್ಲವೇ ರೂಢಿಯಲ್ಲಿ ಎಂತಹ ವ್ಯಕ್ತಿ ಅಥವಾ ವಸ್ತುವನ್ನು ಅದು ಗುರುತಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ ಕಗ್ಗಲ್ಲು ಪದ ಯಾವ ರೀತಿಯ ಕಲ್ಲುಗಳನ್ನು ಗುರುತಿಸುತ್ತದೆ ಎಂಬುದನ್ನು ರೂಢಿಯ ಬಳಕೆಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.
ಜೋಡುಪದ ಮತ್ತು ಪದಕಂತೆಗಳ ನಡುವಿರುವ ಈ ಎರಡು ವ್ಯತ್ಯಾಸ ಗಳನ್ನು ಎಲ್ಲಾ ರೀತಿಯ ಜೋಡುಪದ ಮತ್ತು ಪದಕಂತೆಗಳ ನಡುವೆಯೂ ಸ್ಪಷ್ಟ
98 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ವಾಗಿ ಕಾಣಲು ಸಾಧ್ಯವಾಗದಿರಬಹುದು. ಆದರೆ ಹೆಚ್ಚಿನೆಡೆಗಳಲ್ಲೂ ಅವೆರಡನ್ನು ಈ ವ್ಯತ್ಯಾಸಗಳ ಸಹಾಯದಿಂದ ಪ್ರತ್ಯೇಕಿಸಲು ಸಾಧ್ಯವಿದೆ.
ಇದಲ್ಲದೆ, ಜೋಡುಪದ ಮತ್ತು ಪದಕಂತೆಗಳ ನಡುವೆ ವಾಕ್ಯದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬ ವಿಷಯದಲ್ಲಿಯೂ ವ್ಯತ್ಯಾಸವಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕೆಲಸವನ್ನು ಈ ಎರಡು ರೀತಿಯ ಘಟಕಗಳೂ ನಡೆಸಬಲ್ಲು ವಾದರೂ, ಇದಕ್ಕಾಗಿ ಜೋಡುಪದಗಳು ಹೆಸರಿಸುವ' ವಿಧಾನವನ್ನು ಬಳಸುತ್ತವೆ ಮತ್ತು ಪದಕಂತೆಗಳು ವಣ್ರಿಸುವ’ ವಿಧಾನವನ್ನು ಬಳಸುತ್ತವೆ.
ಈ ವ್ಯತ್ಯಾಸಕ್ಕೆ ಜೋಡುಪದ ಮತ್ತು ಪದಕಂತೆಗಳ ನಡುವಿರುವ ಎರಡನೆಯ (ಅಥ್ರಕ್ಕೆ ಸಂಬಂಧಿಸಿದ) ವ್ಯತ್ಯಾಸವೇ ಮುಖ್ಯ ಕಾರಣ. ವಣ್ರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ವಣ್ರಿಸಲು ಬಳಸುವ ಘಟಕದ ಅಥ್ರವನ್ನು ಸಂಪೂಣ್ರವಾಗಿ ಅದರ ಒಳ ರಚನೆಯ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಿರಬೇಕು. ಜೋಡುಪದಗಳ ಅಥ್ರವನ್ನು ಈ ರೀತಿ ಪಡೆಯಲು ಸಾಧ್ಯವಿಲ್ಲವಾದ ಕಾರಣ ಅವು ವಣ್ರಿಸುವ ವಿಧಾನದಲ್ಲಿ ಬಳಕೆಯಾಗಲಾರವು.
ಜೋಡುಪದವನ್ನು ಒಂದು ಚಾರಿತ್ರಿಕ ಸೃಷ್ಟಿ ಎಂದು ಕರೆಯಬಹುದು. ಯಾವುದಾದರೂ ಒಂದು ವಸ್ತುವನ್ನು ಗುರುತಿಸಲು (ಹೆಸರಿಸಲು) ಭಾಷೆಯಲ್ಲಿ ಪದವಿಲ್ಲದಿರುವಾಗ, ಇಲ್ಲವೇ ಇರುವ ಪದ ನೆನಪಿಗೆ ಬಾರದಿರುವಾಗ, ಹೊಸ ಪದವೊಂದನ್ನು ತಯಾರಿಸಲು ಜನರು ಸಮಾಸವೆಂಬ ಈ ವ್ಯಾಕರಣ ಕ್ರಿಯೆಯನ್ನು ಬಳಸುತ್ತಾರೆ. ಈ ಕ್ರಿಯೆಯ ಮೂಲಕ ತಯಾರಾಗಿರುವ ಪದ ಅನಂತರ ಇತರರ ಮಾತಿನಲ್ಲೂ ಸೇರಿಕೊಂಡು ರೂಢಿಗೆ ಬಂದಾಗ ಮಾತ್ರ ಅದು ಭಾಷೆಯ ಪದ ವೆನಿಸಬಲ್ಲುದು.
ಆದರೆ ಪದಕಂತೆಗಳು ಆ ರೀತಿಯವಲ್ಲ. ಭಾಷೆಯನ್ನು ಬಳಸುವಾಗ ಅವನ್ನು ಬೇಕಾದ ಹಾಗೆ ಹೊಸದಾಗಿ ತಯಾರಿಸಿಕೊಂಡು ಬಳಸಲಾಗುತ್ತದೆ.
ಈ ಕಾರಣಕ್ಕಾಗಿ, ಒಂದು ಭಾಷೆಯ ಅಥ್ರಕೋಶವನ್ನು ತಯಾರಿಸುವಾಗ ಅದರಲ್ಲಿ ಆ ಭಾಷೆಯ ಎಲ್ಲಾ ಜೋಡುಪದಗಳನ್ನೂ ಕೊಡುವ ಅವಶ್ಯಕತೆಯಿದೆ; ಆದರೆ ಎಲ್ಲಾ ಪದಕಂತೆಗಳನ್ನೂ ಕೊಡುವ ಅವಶ್ಯಕತೆಯಿಲ್ಲ; ಹಾಗೆ ಕೊಡಲು ಸಾಧ್ಯವೂ ಆಗದು. ಯಾಕೆಂದರೆ, ಒಂದು ಭಾಷೆಯಲ್ಲಿರುವ ಜೋಡುಪದಗಳ ಸಂಖ್ಯೆ ಚಿಕ್ಕದು. ಆದರೆ ಪದಕಂತೆಗಳ ಸಂಖ್ಯೆ ಬಹಳ ದೊಡ್ಡದು. ಅದು ಅನಂತ ಎಂದೇ ಹೇಳಲೂ ಸಾಧ್ಯವಿದೆ.
5.3 ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿನ ವ್ಯತ್ಯಾಸ
99 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಜೋಡುಪದಗಳ ವಿಷಯದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿವೆ. ಇವನ್ನು ಸರಿಯಾಗಿ ತಿಳಿದುಕೊಳ್ಳದೆ ಸಂಸ್ಕೃತದ ಎಲ್ಲಾ ಸಮಾಸಗಳನ್ನೂ ಕನ್ನಡದಲ್ಲಿ ಕಾಣಲು ನಡೆಸಿದ ಕನ್ನಡ ವೈಯಾಕರಣಿಗಳ ಪ್ರಯತ್ನ ಹಲವು ರೀತಿಯ ಗೊಂದಲಗಳಿಗೆ ಎಡೆಮಾಡಿದೆ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯತ್ಯಾಸಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ.
5.3.1 ಸಂಸ್ಕೃತದ ಜೋಡುಪದಗಳು ಸಂಸ್ಕೃತದಲ್ಲಿ ಮೇಲೆ (5.2)ರಲ್ಲಿ ತಿಳಿಸಿರುವಂತಹ ಜೋಡುಪದ ಮತ್ತು ಪದಕಂತೆಗಳ ನಡುವೆ ಕಾಣಿಸಬೇಕಾದ ವ್ಯತ್ಯಾಸಗಳು ಬಹಳ ಮಟ್ಟಿಗೆ ಅಳಿದು ಹೋಗಿವೆ. ಆ ಭಾಷೆ ದಿನನಿತ್ಯದ ವ್ಯಾವಹಾರಿಕ ಭಾಷೆಯಾಗಿ ಉಳಿಯದೆ ಸುಮಾರು ಎರಡು ಸಾವಿರ ವಷ್ರಗಳಿಂದಲೂ ಬರಿಯ ಕಾವ್ಯಗಳ ಮತ್ತು ಶಾಸ್ತ್ರಗಳ ಭಾಷೆಯಾಗಿ ಮಾತ್ರವೇ ಉಳಿದುಕೊಂಡಿರುವುದೇ ಇದಕ್ಕೆ ಕಾರಣವಿರ ಬೇಕು.
ಎರಡು ಪದಗಳನ್ನು ಒಟ್ಟು ಸೇರಿಸಿದೊಡನೆ ಸಂಸ್ಕೃತದಲ್ಲಿ ಒಂದು ಜೋಡುಪದ (ಸಮಸ್ತಪದ) ಸಿದ್ಧವಾಗಿಬಿಡುತ್ತದೆ. ಅನಂತರ ಅವೆರಡು ಒಂದೇ ಪದವಾಗಿ ಆ ಭಾಷೆಯಲ್ಲಿ ರೂಢಿಗೆ ಬರಬೇಕಾದ ಅವಶ್ಯಕತೆಯೇ ಇಲ್ಲ.
ಹಾಗಾಗಿ, ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಸಂಸ್ಕೃತ ದಲ್ಲಿ ಮುಖ್ಯವಾಗಿ ವಿಭಕ್ತಿ ಪ್ರತ್ಯಯಗಳು ಯಾವ ಜಾಗಗಳಲ್ಲೆಲ್ಲ ಬರಬಲ್ಲುವು ಎಂಬುದರ ಮೇಲೆ ಅವಲಂಬಿಸಿದೆ. ಒಂದು ಘಟಕದ ಅಂಗಗಳಾಗಿ ಬರುವ ಪದಗಳೆಲ್ಲವೂ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತವೆಯಾದರೆ ಅದೊಂದು ಪದಕಂತೆ ಮತ್ತು ಕೊನೆಯ ಅಂಗ ಮಾತ್ರ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತದೆ ಯಾದರೆ ಅದೊಂದು ಜೋಡುಪದ ಎಂಬುದಾಗಿ ಸಂಸ್ಕೃತದಲ್ಲಿ ಒಂದು ನಿಯಮವನ್ನು ಮಾಡಲು ಸಾಧ್ಯವಿದೆ.
ಈ ನಿಯಮಕ್ಕೆ ಕೆಲವು ಅಪವಾದಗಳಿವೆಯಾದರೂ ಸಾಧಾರಣವಾಗಿ ಸಂಸ್ಕೃತದಲ್ಲಿ ವಿಭಕ್ತಿಪ್ರತ್ಯಯ ಲೋಪವಾದಾಗಲೆಲ್ಲ ಜೋಡುಪದ ಸಿದ್ಧಿಸುತ್ತದೆ 0iÉುಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತದ ಪದಕಂತೆಗಳನ್ನು ಮತ್ತು ಜೋಡುಪದಗಳನ್ನು ಹೋಲಿಸಿ ನೋಡ ಬಹುದು.
ಪದಕಂತೆ
ಮಾತ್ರಾ ಸದೃಶಃ ಸ್ವಗ್ರಾತ್ ಪತಿತಃ ಸ್ವಗ್ರಪತಿತಃ ಕಮ್ರಕುಶಲಃ ಕಮ್ರಣಿ ಕುಶಲಃ
ಜೋಡುಪದ ಮಾತೃಸದೃಶಃ
ತಾಯಿಯ ಹಾಗಿರುವವನು' ಸ್ವಗ್ರದಿಂದ ಬಿದ್ದವನು’ `ಕೆಲಸದಲ್ಲಿ ಕುಶಲನಾದವನು’
100 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು
ಗ್ರಾಮಂ ಗತಃ ರಾಜ್ಞಃ ಪುರುಷಃ
ಗ್ರಾಮಗತಃ ರಾಜಪುರುಷಃ
ಹಳ್ಳಿಗೆ ಹೋದವನು' ರಾಜನ ಜನ’
ಮೊದಲನೇ ಕಾಲಂನಲ್ಲಿ ಕೊಟ್ಟಿರುವ ಪದಕಂತೆಗಳಲ್ಲಿ ಎರಡು ಪದಗಳೂ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿವೆ, ಆದರೆ ಅವುಗಳ ಎದುರು ಎರಡನೇ ಕಾಲಂನಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಎರಡನೆಯ ಪದ ಮಾತ್ರ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿದೆ, ಮೊದಲನೆಯ ಪದ ವಿಭಕ್ತಿ ಪ್ರತ್ಯಯವಿಲ್ಲದೆ §A¢zÉ.
ಮೆಲೆ ಸೂಚಿಸಿದ ಹಾಗೆ, ಪದಕಂತೆ ಮತ್ತು ಜೋಡುಪದಗಳ ನಡುವೆ ಸಂಸ್ಕೃತದಲ್ಲಿ ಕಾಣಿಸುವ ಈ ವ್ಯತ್ಯಾಸವೇ ಕನ್ನಡದಲ್ಲೂ ಇರಬಹುದೆಂದು ಭಾವಿಸಿ, ಸಂಸ್ಕೃತದ ಈ ಪದರಚನೆಯ ನಿಯಮವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಕನ್ನಡದ ವೈಯಾಕರಣಿಗಳು ಪ್ರಯತ್ನಿಸಿದ್ದಾರೆ.
ಪದಕಂತೆಯೊಂದರಲ್ಲಿ ಎರಡು ಅಥವಾ ಜಾಸ್ತಿ ಪದಗಳು ಬಳಕೆಯಾಗಿವೆ ಯಾದರೆ, ಅವುಗಳಲ್ಲಿ ಪ್ರತಿಯೊಂದನ್ನೂ ವಿಭಕ್ತಿ ಪ್ರತ್ಯಯದೊಂದಿಗೆ ಬಳಸ ಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ಹಾಗಾಗಿ, ಆ ಪದಗಳಲ್ಲಿ ಯಾವುದಾದರೂ ಒಂದು ಪದದೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲವಾದರೆ, ಅದು ತನ್ನ ಅನಂತರ ಬಂದಿರುವ ಪದದೊಂದಿಗೆ ಸೇರಿ ಸಮಸ್ತಪದವಾಗಿದೆ0iÉುಂದೇ ಅಥ್ರ.
ಆದರೆ ಕನ್ನಡದಲ್ಲಿ ಇಂತಹ ನಿಯಮವಿಲ್ಲ. ಕನ್ನಡದ ಪದಕಂತೆಗಳಲ್ಲಿ ಬರುವ ಪದಗಳಲ್ಲಿ ಕೊನೆಯದಕ್ಕೆ ಮಾತ್ರ ವಿಭಕ್ತಿ ಪ್ರತ್ಯಯವನ್ನು ಸೇರಿಸಲು ಸಾಧ್ಯ. ಉಳಿದ ಪದಗಳು ನಾಮಪದಗಳಾಗಿವೆಯಾದರೆ ಷಷ್ಠಿಯಲ್ಲಿ ಬರುತ್ತವೆ, ಮತ್ತು ಗುಣಪದ, ಎಣಿಕೆಯ ಪದ ಇಲ್ಲವೇ ಕೃದಂತಗಳಾಗಿವೆಯಾದರೆ ಯಾವ ಪ್ರತ್ಯಯವೂ ಸೇರದೆ ಹಾಗೆಯೇ ಬರುತ್ತವೆ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸ ವನ್ನು ಕೆಳಗೆ (5.2.2-5)ನೇ ವಿಭಾಗಗಳಲ್ಲಿ ವಿವರಿಸಲಾಗಿದೆ.
5.3.2 ಪದಕಂತೆಗಳಲ್ಲಿ ಗುಣಪದಗಳ ಬಳಕೆ ಸಂಸ್ಕೃತದ ಪದಕಂತೆಗಳಲ್ಲಿ ಒಂದು ಗುಣಪದವನ್ನು ಬಳಸಬೇಕಿದ್ದಲ್ಲಿ ಅದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ ಮತ್ತು ಈ ವಿಭಕ್ತಿ ಪ್ರತ್ಯಯ ಅದರ ಅನಂತರ ಬರುವ ನಾಮಪದದ (ವಿಶೇಷ್ಯದ) ವಿಭಕ್ತಿ ಪ್ರತ್ಯಯವೇ ಆಗಿರ ಬೇಕಾಗುತ್ತದೆ (3.2.2 ನೋಡಿ). ಆದರೆ, ಕನ್ನಡದಲ್ಲಿ ಈ ರೀತಿ ಗುಣಪದಗಳಿಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿ ಹೇಳುವ ವಿಧಾನ ಬಳಕೆಯಲ್ಲಿಲ್ಲ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ
101 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಸಂಸ್ಕೃತ ಪದಕಂತೆಗಳನ್ನು ಅವುಗಳ ಕನ್ನಡ ರೂಪದೊಂದಿಗೆ ಹೋಲಿಸಿ ನೋಡ ಬಹುದು.
(1ಕ) ಏಕಂ ಕೃಷ್ಣಂ ಸಪ್ರಂ
`ಒಂದು ಕಪ್ಪು ಹಾವನ್ನು’
(1ಖ) ಏಕೇನ ಕೃಷ್ಣೇನ ಸಪ್ರೇಣ
ಒಂದು ಕಪ್ಪು ಹಾವಿನಿಂದ' (1ಗ) ಏಕಾಯ ಕೃಷ್ಣಾಯ ಸಪ್ರಾಯ ಒಂದು ಕಪ್ಪು ಹಾವಿಗೆ’
(1ಕ-ಗ) ಸಂಸ್ಕೃತ ಪದಕಂತೆಗಳಲ್ಲಿ ದ್ವಿತೀಯಾ, ತೃತೀಯಾ ಮತ್ತು ಚತುಥ್ರೀ ವಿಭಕ್ತಿ ಪ್ರತ್ಯಯಗಳು ಪದಕಂತೆಯ ಮೂರು ಪದಗಳೊಂದಿಗೂ ಬಂದಿವೆ. ಆದರೆ ಅವುಗಳ ಕನ್ನಡ ರೂಪಗಳಲ್ಲಿ ಪದಕಂತೆಯ ಕೊನೆಯ ಪದವಾಗಿರುವ ಹಾವು ಎಂಬುದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬಂದಿವೆ.
ಇವುಗಳಲ್ಲಿ ಕೃಷ್ಣ `ಕಪ್ಪು' ಪದವನ್ನು ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯ ವಿಲ್ಲದೆಯೂ ಬಳಸಲು ಸಾಧ್ಯವಿದೆ. ಹಾಗೆ ಮಾಡಿದಲ್ಲಿ ಅದು ಅದರ ಅನಂತರ ಬರುವ ಸಪ್ರ `ಹಾವು' ಪದದೊಂದಿಗೆ ಸೇರಿ ಕೃಷ್ಣಸಪ್ರ ಎಂಬ ಜೋಡುಪದ ವಾಗುತ್ತದೆ. ಆದರೆ ಕನ್ನಡದಲ್ಲಿ ಕಪ್ಪು ಪದ ಹೇಗಿದ್ದರೂ ವಿಭಕ್ತಿ ಪ್ರತ್ಯಯ ವಿಲ್ಲದೆಯೇ ಕಪ್ಪು ಹಾವು ಪದಕಂತೆಯಲ್ಲಿ ಬಂದಿರುವುದಾದ ಕಾರಣ ಅದನ್ನು ಆ ರೀತಿ ಜೋಡುಪದವಾಗಿ ಬದಲಾಯಿಸಲು ಸಾಧ್ಯವಾಗದು.
(2ಕ) ಏಕಂ ಕೃಷ್ಣಸಪ್ರಂ
`ಒಂದು ಕಪ್ಪು ಹಾವನ್ನು’ (2ಖ) ಏಕೇನ ಕೃಷ್ಣಸಪ್ರೇಣ
`ಒಂದು ಕಪ್ಪು ಹಾವಿನಿಂದ’ (2ಗ) ಏಕಾಯ ಕೃಷ್ಣಸಪ್ರಾಯ
`ಒಂದು ಕಪ್ಪು ಹಾವಿಗೆ’
ಮೇಲೆ ಕೊಟ್ಟಿರುವ (2ಕ-ಗ) ಪದಕಂತೆಗಳನ್ನು ಅದಕ್ಕೆ ಹಿಂದೆ ಕೊಟ್ಟಿರುವ (1ಕ-ಗ) ಪದಕಂತೆಗಳೊಂದಿಗೆ ಹೋಲಿಸಿ ನೋಡಿದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ವ್ಯತ್ಯಾಸ ಸ್ಪಷ್ಟವಾದೀತು.
102 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಸಂಸ್ಕೃತದ (1ಕ-ಗ) ಪದಕಂತೆಗಳಲ್ಲಿ ಕೃಷ್ಣ ಪದದೊಂದಿಗೆ ಬಂದಿದ್ದ ವಿಭಕ್ತಿ ಪ್ರತ್ಯಯಗಳು (2ಕ-ಗ) ಪದಕಂತೆಗಳಲ್ಲಿ ಲೋಪಗೊಂಡಿವೆ; ಆದರೆ ಅವಕ್ಕೆ ಸಮಾನವಾಗಿರುವ ಕನ್ನಡದ ಪದಕಂತೆಗಳಲ್ಲಿ ಯಾವ ರೀತಿಯ ವ್ಯತ್ಯಾಸವೂ ಆಗಿಲ್ಲ. ಇಂತಹ ಸಂದಭ್ರಗಳಲ್ಲಿ ಎರಡು ಪದಗಳು ಒಟ್ಟು ಸೇರಿ ಒಂದು ಜೋಡುಪದವಾಗಿದೆಯೆಂದು ಹೇಳಬೇಕಿದ್ದಲ್ಲಿ ಕನ್ನಡದಲ್ಲಿ ಅದಕ್ಕೆ ಒಂದು ವಿಶಿಷ್ಟವಾದ ಅಥ್ರವೂ ಬಂದಿರುವುದು ಅವಶ್ಯ. ಈ ಅಥ್ರ ಅದರ ಅಂಗಗಳಾಗಿ ಬಂದಿರುವ ಪದಗಳು ಕೊಡುವ ಅಥ್ರಕ್ಕಿಂತ ಭಿನ್ನವಾಗಿರಬೇಕು. ಉದಾಹರಣೆಗಾಗಿ, ಚಿಕ್ಕಮ್ಮ ಎಂಬುದು ಒಂದು ಜೋಡುಪದ; ಆದರೆ, ಚಿಕ್ಕಡಿಕೆ ಎಂಬುದು ಒಂದು ಪದಕಂತೆ. ಚಿಕ್ಕಮ್ಮ ಎಂಬುದು ಚಿಕ್ಕ ಅಮ್ಮನನ್ನು ಸೂಚಿಸುವುದಿಲ್ಲ; ಅಮ್ಮನ ತಂಗಿಯನ್ನು ಸೂಚಿಸುತ್ತದೆ; ಆದರೆ, ಚಿಕ್ಕಡಿಕೆ ಎಂಬುದು ಚಿಕ್ಕ ಅಡಿಕೆಯನ್ನೇ ಸೂಚಿಸುತ್ತದೆ. ಚಿಕ್ಕಮ್ಮ ಎಂಬುದರ ಬಳಕೆ ಯಲ್ಲಿ ಅಥ್ರದ ಬದಲಾವಣೆಯೂ ಸೇರಿಕೊಂಡಿದೆ; ಆದರೆ, ಚಿಕ್ಕಡಿಕೆ ಎಂಬು ದರಲ್ಲಿ ಅಂತಹ ಬದಲಾವಣೆ ಸೇರಿಕೊಂಡಿಲ್ಲ.
ಗುಣಪದವನ್ನು ನಾಮಪದದೊಂದಿಗೆ ಬಳಸಿರುವ ಸಂದಭ್ರದಲ್ಲಿ ಈ ರೀತಿ ಅಥ್ರದ ಬದಲಾವಣೆ ನಡೆದಿಲ್ಲವಾದರೆ ಅದನ್ನು ಕನ್ನಡದಲ್ಲಿ ಪದಕಂತೆಯೆಂದೇ ಪರಿಗಣಿಸಬೇಕಲ್ಲದೆ ಜೋಡುಪದವೆಂದು ಪರಿಗಣಿಸಲು ಯಾವ ಆಧಾರವೂ ಇರುವುದಿಲ್ಲ.
5.3.3 ಕೃದಂತಗಳ ಬಳಕೆ ಕೃದಂತಗಳನ್ನು ನಾಮಪದಕಂತೆಗಳಲ್ಲಿ ಬಳಸಬೇಕಿದ್ದರೂ ಸಂಸ್ಕೃತದಲ್ಲಿ ಅವಕ್ಕೆ ನಾಮಪದದ ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ವಿಭಕ್ತಿ ಪ್ರತ್ಯಯ ವೊಂದನ್ನು ಸೇರಿಸುವ ಅವಶ್ಯಕತೆಯಿದೆ. ಆದರೆ ಕನ್ನಡದಲ್ಲಿ ಆ ರೀತಿ ಕೃದಂತ ಗಳಿಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು. ಇದಕ್ಕೆ ಕಾರಣ ವೇನೆಂದರೆ, ಮೇಲೆ (5.3.2)ರಲ್ಲಿ ಸೂಚಿಸಿದ ಹಾಗೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ನಾಮಪದಕಂತೆಗಳ ಕೊನೆಯ ಪದದೊಂದಿಗೆ ಮಾತ್ರ ಬರುತ್ತವೆ.
(3ಕ) ಏಕಂ ಮೃತಂ ಸಪ್ರಂ `ಒಂದು ಸತ್ತ ಹಾವನ್ನು’ (3ಖ) ಏಕೇನ ಮೃತೇನ ಸಪ್ರೇಣ
ಒಂದು ಸತ್ತ ಹಾವಿನಿಂದ' (3ಗ) ಏಕಾಯ ಮೃತಾಯ ಸಪ್ರಾಯ ಒಂದು ಸತ್ತ ಹಾವಿಗೆ’
103 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸಂಸ್ಕೃತದಲ್ಲಿ ಇಂತಹ ಕೃದಂತಗಳನ್ನೂ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆ ಬಳಸಲು ಸಾಧ್ಯವಿದೆ. ಹಾಗೆ ಮಾಡಿದಾಗ ಅವು ಅವುಗಳ ಮುಂದಿರುವ ನಾಮ ಪದದೊಂದಿಗೆ ಸೇರಿ ಜೋಡುಪದಗಳಾಗುತ್ತವೆ. ಆದರೆ ಕನ್ನಡದ ಕೃದಂತಗಳು ಪದಕಂತೆಗಳಲ್ಲೇನೇ ವಿಭಕ್ತಿ ಪ್ರತ್ಯಯವಿಲ್ಲದೆ ಬರುತ್ತವೆ. ಹಾಗಾಗಿ, ಅವುಗ ಳೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲ ಎಂಬ ವಿಷಯದ ಆಧಾರದ ಮೇಲೆ ಅವು ಅನಂತರ ಬರುವ ನಾಮಪದಗಳೊಂದಿಗೆ ಸೇರಿ ಜೋಡುಪದಗಳಾಗಿವೆಯೆಂದು ಹೇಳಲು ಸಾಧ್ಯವಿಲ್ಲ.
(4ಕ) ಏಕಂ ಮೃತಸಪ್ರಂ
ಒಂದು ಸತ್ತ ಹಾವನ್ನು’
(4ಖ) ಏಕೇನ ಮೃತಸಪ್ರೇಣ `ಒಂದು ಸತ್ತ ಹಾವಿನಿಂದ’
(4ಗ) ಏಕಾಯ ಮೃತಸಪ್ರಾಯ
`ಒಂದು ಸತ್ತ ಹಾವಿಗೆ’
ಇಲ್ಲೂ (3ಕ-ಗ) ಮತ್ತು (4ಕ-ಗ) ಪದಕಂತೆಗಳ ನಡುವೆ ಸಂಸ್ಕೃತದಲ್ಲಿ ವಿಭಕ್ತಿಗಳ ಮಟ್ಟಿಗೆ ವ್ಯತ್ಯಾಸವಿದೆ, ಆದರೆ ಕನ್ನಡದಲ್ಲಿ ಯಾವ ವ್ಯತ್ಯಾಸವೂ ಇಲ್ಲ. (4ಕ-ಗ)ಗಳಲ್ಲಿ ಬರುವ ಮೃತಸಪ್ರ ಎಂಬುದನ್ನು ಸಂಸ್ಕೃತದಲ್ಲಿ ಜೋಡುಪದ ಎಂಬುದಾಗಿ ಪರಿಗಣಿಸಲು (3ಕ-ಗ)ಗಳಲ್ಲಿ ಮೃತ ಪದದ ಅನಂತರ ಕಾಣಿಸುತ್ತಿದ್ದ ವಿಭಕ್ತಿ ಪ್ರತ್ಯಯ ಇಲ್ಲವಾಗಿರುವುದನ್ನು ಆಧಾರವಾಗಿ ಕೊಡಲು ಸಾಧ್ಯವಿದೆ.
ಆದರೆ ಕನ್ನಡದ ಸತ್ತ ಪದ (4ಕ-ಗ)ಗಳಲ್ಲಿ ಮಾತ್ರವಲ್ಲದೆ (3ಕ- ಗ)ಗಳಲ್ಲೂ ವಿಭಕ್ತಿ ಪ್ರತ್ಯಯವಿಲ್ಲದೆ0iÉುೀ ಬಂದಿರುವ ಕಾರಣ, ಕನ್ನಡದಲ್ಲಿ ಸತ್ತ ಹಾವು ಎಂಬುದನ್ನು ಜೋಡುಪದ ಎಂಬುದಾಗಿ ಪರಿಗಣಿಸಲು ಯಾವ ಆಧಾರವೂ ಸಿಗುವುದಿಲ್ಲ.
5.3.4 ನಿದ್ರೇಶಕ ಪದಗಳ ಬಳಕೆ ಸಂಸ್ಕೃತದ ಪದಕಂತೆಗಳಲ್ಲಿ ಅಯಂ ಇವನು', ಸಃ ಅವನು’ ಮೊದಲಾದ ಮಾತನಾಡುವವನಿಗೂ ಮಾತಿನಲ್ಲಿ ಬರುವ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ `ಸ್ಥಾನೀಯ’ ಸಂಬಂಧವನ್ನು ಸೂಚಿಸುವ ನಿದ್ರೇಶಕ ಪದಗಳನ್ನು ಬಳಸಬೇಕಿದ್ದಲ್ಲಿ ಅವುಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆ ಯಿದೆ. ಹಾಗಾಗಿ ಅವು ಇಂತಹ ವಿಭಕ್ತಿ ಪ್ರತ್ಯಯಗಳಿಲ್ಲದೆ ಬಂದಾಗ ಅವುಗಳ
104 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಅನಂತರ ಬರುವ ನಾಮಪದಗಳೊಂದಿಗೆ ಸೇರಿ ಜೋಡುಪದಗಳಾಗಿವೆಯೆಂದು ಹೇಳಲು ಬರುತ್ತದೆ.
ಆದರೆ ಕನ್ನಡದಲ್ಲಿ ಇಂತಹ ಪದಗಳನ್ನು ಪದಕಂತೆಗಳಲ್ಲಿ ಬಳಸುವಾಗಲೆಲ್ಲ ಈ ಮತ್ತು ಆ ಎಂಬ ಸಂಕ್ಷಿಪ್ತ ರೂಪಗಳನ್ನು ಬಳಸುವ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಕ್ರಮ ಕನ್ನಡದಲ್ಲಿಲ್ಲ.
(5ಕ) ಇಮಂ ಘಟಂ
`ಈ ಕೊಡವನ್ನು’
(5ಖ) ಅಸ್ಮಾತ್ ಘಟಾತ್
`ಈ ಕೊಡದಿಂದ’
(5ಗ) ತಸ್ಮಾತ್ ಘಟಾತ್
ಆ ಕೊಡದಿಂದ' (5ಘ) ತಸ್ಮಿನ್ ಘಟೇ ಆ ಕೊಡದಲ್ಲಿ’
ಸಂಸ್ಕೃತದ ಇದಂ `ಈ' ಎಂಬುದು (5ಕ)ದಲ್ಲಿ ಇಮಂ ಎಂಬುದಾಗಿ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದೆ ಮತ್ತು (5ಖ)ದಲ್ಲಿ ಅಸ್ಮಾತ್ ಎಂಬುದಾಗಿ ತೃತೀಯಾ ವಿಭಕ್ತಿಯಲ್ಲಿ ಬಂದಿದೆ; ತತ್ `ಆ' ಎಂಬುದು (5ಗ)ದಲ್ಲಿ ತಸ್ಮಾತ್ ಎಂಬುದಾಗಿ ತೃತೀಯಾ ವಿಭಕ್ತಿಯಲ್ಲಿ ಬಂದಿದೆ ಮತ್ತು (5ಘ)ದಲ್ಲಿ ತಸ್ಮಿನ್ ಎಂಬುದಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಈ ಎಲ್ಲಾ ಬಳಕೆಗಳಲ್ಲೂ ಅವು ಅವುಗಳ ಅನಂತರ ಬರುವ ನಾಮಪದದ (ಘಟ ಎಂಬುದರ) ವಿಭಕ್ತಿಯಲ್ಲೇ ಬಂದಿರುವುದನ್ನು ಗಮನಿಸಬಹುದು.
ಆದರೆ ಕನ್ನಡದ ಈ ಮತ್ತು ಆ ಎಂಬವುಗಳು ಆ ರೀತಿ ವಿಭಕ್ತಿ ಪ್ರತ್ಯಯ ದೊಂದಿಗೆ ಬರುವುದಿಲ್ಲ. ಅವುಗಳ ಅನಂತರ ಬರುವ ನಾಮಪದ ಯಾವ ವಿಭಕ್ತಿಯಲ್ಲೇ ಇರಲಿ ಅವಕ್ಕೆ ಕನ್ನಡದಲ್ಲಿ ಒಂದೇ ರೂಪವಿರುತ್ತದೆ. ಇದು ಕನ್ನಡದಲ್ಲಿ ಪದಕಂತೆಗಳನ್ನು ರಚಿಸುವ ವಿಧಾನ.
ಸಂಸ್ಕೃತದಲ್ಲಿ ಮೇಲೆ ಕೊಟ್ಟಿರುವ ನಿದ್ರೇಶಕ ಪದಗಳನ್ನು ವಿಭಕ್ತಿ ಪ್ರತ್ಯಯವಿಲ್ಲದೆಯೂ (ತದ್ಘಟಾತ್ `ಆ ಕೊಡದಿಂದ', ತದ್ಘಟೇ `ಆ ಕೊಡ ದಲ್ಲಿ' ಮೊದಲಾದವುಗಳ ಹಾಗೆ) ಬಳಸಲು ಸಾಧ್ಯವಿದೆ ಮತ್ತು ಹಾಗೆ ಬಳಸಿ ದಾಗ ಸಂಸ್ಕೃತದಲ್ಲಿ ಜೋಡುಪದ ಸಿಗುತ್ತದೆ0iÉುಂದು ಹೇಳಲು ಸಾಧ್ಯವಿದೆ.
105 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಆದರೆ ಕನ್ನಡದಲ್ಲಿ ಈ ರೀತಿ ಜೋಡುಪದವನ್ನು ರಚಿಸಲು ಸಾಧ್ಯವಾಗದು. ಯಾಕೆಂದರೆ ಇಂತಹ ಪದಕಂತೆಗಳಲ್ಲಿ ಕನ್ನಡದ ನಿದ್ರೇಶಕ ಪದಗಳು ಆ ಕೊಡದಿಂದ, ಆ ಕೊಡದಲ್ಲಿ ಎಂಬವುಗಳಲ್ಲಿ ಕಾಣಿಸುವ ಹಾಗೆ ವಿಭಕ್ತಿ ಪ್ರತ್ಯಯವಿಲ್ಲದ ರೂಪದಲ್ಲಿ ಮಾತ್ರ ಬರಬಲ್ಲುವು.
ಕನ್ನಡದ ಕೆಲವು ವ್ಯಾಕರಣ ಪಠ್ಯಗಳಲ್ಲಿ ಆ ಹುಡುಗ ಎಂಬಂತಹ ಪದ ಕಂತೆಗಳನ್ನು ಜೋಡುಪದ (ಸಮಾಸ)ಗಳೆಂದು ತೋರಿಸಿಕೊಡುವುದಕ್ಕಾಗಿ ಅವಕ್ಕೆ ಅವನು ಹುಡುಗ ಎಂಬಂತಹ ಒಳನುಡಿ (ವಿಗ್ರಹವಾಕ್ಯ)ಗಳನ್ನು ಕೊಡಲಾಗಿದೆ.
ಆದರೆ ಇಲ್ಲೂ ಮೊದಲನೆಯ ಪದದಲ್ಲಿ ವಿಭಕ್ತಿ ಪ್ರತ್ಯಯವಿದೆಯೆಂದು ಹೇಳಲು ಸಾಧ್ಯವಾಗದು. ಯಾಕೆಂದರೆ ಕನ್ನಡದಲ್ಲಿ *ಅವನನ್ನು ಹುಡುಗನನ್ನು ಇಲ್ಲವೇ *ಅವನಿಂದ ಹುಡುಗನಿಂದ ಎಂಬುದಾಗಿ ಸಂಸ್ಕೃತದ ಇಮಂ ಘಟಂ, ಅಸ್ಮಾತ್ ಘಟಾತ್ ಎಂಬವುಗಳ ಹಾಗೆ ಪದಕಂತೆಯ ಮೊದಲನೆಯ ಪದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು.
ಇನ್ನೊಂದು ವಿಷಯವೇನೆಂದರೆ, ಕನ್ನಡದಲ್ಲಿ ಅವನು ಹುಡುಗ ಎಂಬುದು ಒಂದು ವಾಕ್ಯವಾಗುತ್ತದಲ್ಲದೆ ಪದಕಂತೆಯಾಗುವುದಿಲ್ಲ. ಹಾಗಾಗಿ ಆ ಹುಡುಗ ಎಂಬುದನ್ನು ಅವನು ಹುಡುಗ ಎಂಬುದರಿಂದ ಸಾಧಿಸುವುದೂ ಸರಿಯಲ್ಲ.
5.3.5 ದ್ವಿತೀಯಾ ವಿಭಕ್ತಿಯ ಬಳಕೆ
ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅಪ್ರಾಣಿ ವಾಚಕ ಪದಗಳು ಕ್ರಿಯಾಪದದ ಪಕ್ಕದಲ್ಲೇ ಇವೆಯಾದರೆ ಅವುಗಳೊಂದಿಗಿರುವ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ತೆಗೆದು ಹಾಕಲು ಸಾಧ್ಯವಿದೆ. ಆದರೆ ಆ ಪದವನ್ನು ವಾಕ್ಯದಲ್ಲಿ ಬೇರೆಡೆಗೆ ಸಾಗಿಸಿದಾಗ ಇಲ್ಲವೇ ಒತ್ತಿ ಹೇಳುವ ಊ ಪ್ರತ್ಯಯವನ್ನು ಅದಕ್ಕೆ ಸೇರಿಸಿದಾಗ ಆ ರೀತಿ ತೆಗೆದು ಹಾಕಿದ ದ್ವಿತೀಯಾ ವಿಭಕ್ತಿ ಪ್ರತ್ಯಯ ತಿರುಗಿ ಕಾಣಿಸಿಕೊಳ್ಳುತ್ತದೆ.
ರಾಜು ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಿಸಿದ್ದಾನೆ (6PÀ) (6ಖ) ರಾಜು ಬೆಂಗಳೂರಿನಲ್ಲಿ ಒಂದು ಮನೆಯನ್ನೂ ಕಟ್ಟಿಸಿದ್ದಾನೆ ರಾಜು ಒಂದು ಮನೆಯನ್ನು ಬೆಂಗಳೂರಿನಲ್ಲೂ ಕಟ್ಟಿಸಿದ್ದಾನೆ (6UÀ)
ಮನೆ ಪದದೊಂದಿಗಿದ್ದ ದ್ವಿತೀಯ ವಿಭಕ್ತಿ ಪ್ರತ್ಯಯ (6ಕ) ವಾಕ್ಯದಲ್ಲಿ ಬಿದ್ದುಹೋಗಿದೆ, ಆದರೆ (6ಖ-ಗ) ವಾಕ್ಯಗಳಲ್ಲಿ ಅದು ಉಳಿದುಕೊಂಡಿದೆ.
ಈ ರೀತಿ ಕ್ರಿಯಾಪದದ ಪಕ್ಕದಲ್ಲಿ ಅಪ್ರಾಣಿವಾಚಕ ನಾಮಪದಗಳು ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿರುವುದನ್ನು ನೋಡಿ, ಕನ್ನಡದ ವೈಯಾಕರಣಿಗಳು ಅಂತಹ ರಚನೆಗಳು (ಮನೆಕಟ್ಟು ಎಂಬಂತಹವುಗಳು) `ಕ್ರಿಯಾಸಮಾಸ'ವೆಂಬ ಕನ್ನಡಕ್ಕೆ
106 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ವಿಶಿಷ್ಟವಾಗಿರುವ ಸಮಾಸವೊಂದಕ್ಕೆ ಉದಾಹರಣೆಗಳಾಗುತ್ತವೆಯೆಂದು ವಾದಿಸಿ zÁÝgÉ.
ಆದರೆ ನಿಜಕ್ಕೂ ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯ ರಚನೆಯಲ್ಲಿ (ಎಂದರೆ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ) ಕಾಣಿಸುವ ಒಂದು ವ್ಯತ್ಯಾಸ ಮಾತ್ರ (8.4 ನೋಡಿ). ಇಲ್ಲಿ ಹೊಸ ಪದದ ರಚನೆಯಾಗಿಲ್ಲ.
5.3.5 ನಾಮಪದಗಳ ಬಳಕೆ ಕನ್ನಡದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಬೇಕಾಗಿದೆಯಾದರೆ ಅವೆರಡನ್ನು ಸಂಬಂಧಿಸಲು ಮೊದಲನೆಯದ ರೊಂದಿಗೆ ಷಷ್ಠೀ `ವಿಭಕ್ತಿ’ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ.
ಆದರೆ ಸಂಸ್ಕೃತದಲ್ಲಿ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ ಬಳಸ ಲಾಗುತ್ತದೆ. ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ವ್ಯತ್ಯಾಸವಿಲ್ಲದಿರುವುದೇ ಇದಕ್ಕೆ ಕಾರಣ.
(7ಕ) ಏಕಂ ಮೃತ್ತಿಕಂ ಘಟಂ
ಒಂದು ಮಣ್ಣಿನ ಕೊಡವನ್ನು' (7ಖ) ಏಕೇನ ಮೃತ್ತಿಕೇನ ಘಟೇನ ಒಂದು ಮಣ್ಣಿನ ಕೊಡದಿಂದ’
(7ಗ) ಏಕಾಯ ಮೃತ್ತಿಕಾಯ ಘಟಾಯ `ಒಂದು ಮಣ್ಣಿನ ಕೊಡಕ್ಕೆ’
ಮಣ್ಣಿನ
ಸೂಚಿಸುವ ಏಕ ಪದ (7ಕ-ಗ) ಪದಕಂತೆಗಳಲ್ಲಿ ಎಣಿಕೆಯನ್ನು ಮಾತ್ರವಲ್ಲದೆ ಮೃತ್ತಿಕ ನಾಮಪದವೂ ವಿಶೇಷ್ಯ ನಾಮಪದದ (ಘಟ ಎಂಬುದರ) ವಿಭಕ್ತಿಗಳಲ್ಲಿ ಬಂದಿದೆ. ಇಲ್ಲೂ ಈ ವಿಭಕ್ತಿ ಪ್ರತ್ಯಯಗಳನ್ನು ಲೋಪಮಾಡುವುದರ ಮೂಲಕ ಜೋಡುಪದಗಳನ್ನು ಸಾಧಿಸಲು ಸಾಧ್ಯವಿದೆ. (ಮೃತ್ತಿಕಘಟಂ ಮಣ್ಣಿನ ಕೊಡವನ್ನು', ಕೊಡದಿಂದ'). ಆದರೆ (7ಕ-ಗ) ಕನ್ನಡ ಪದಕಂತೆಗಳಲ್ಲಿ ಮಣ್ಣು ನಾಮಪದ ಆ ರೀತಿ ವಿಶೇಷ್ಯದ ವಿಭಕ್ತಿಗಳಲ್ಲಿ ಬರುವ ಬದಲು ಎಲ್ಲೆಡೆಯಲ್ಲೂ ಅದನ್ನು ವಿಶೇಷ್ಯ ದೊಂದಿಗೆ ಸಂಬಂಧಿಸಬಲ್ಲ ಅ ಪ್ರತ್ಯಯದೊಂದಿಗೆ (ಷಷ್ಠೀ ವಿಭಕ್ತಿಯಲ್ಲಿ) §A¢zÉ. ಇಂತಹ ಸಂದಭ್ರಗಳಲ್ಲಿ ಮಾತ್ರ ಕನ್ನಡದಲ್ಲೂ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯ’ ಲೋಪವಾಗುವುದರ ಮೂಲಕ ಜೋಡುಪದ ಸಿದ್ಧಿಸುತ್ತದೆ0iÉುಂದು
ಮೃತ್ತಿಕಘಟೇನ
107 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಅರಮನೆ ಅರಸನ ಮನೆ', ಮೂಗುದಾರ ಮೂಗಿನ ದಾರ’, ಕಣ್ಣೀರು `ಕಣ್ಣಿನ ನೀರು’ ಮೊದಲಾದವು ಗಳಲ್ಲಿ ಈ ರೀತಿ ಷಷ್ಠೀ ವಿಭಕ್ತಿಯ ಲೋಪವನ್ನು ಕಾಣಬಹುದು. ವಿಭಕ್ತಿಲೋಪದ ಮಟ್ಟಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸ್ವಲ್ಪವಾದರೂ ಸಮಾನತೆಯಿದೆಯಾದರೆ ಅದು ಇಲ್ಲಿ ಮಾತ್ರ. ಆದರೆ ನಿಜಕ್ಕೂ ಕನ್ನಡದಲ್ಲಿ ಷಷ್ಠೀ ವಿಭಕ್ತಿ0iÉುಂಬುದು ಒಂದು ವಿಭಕ್ತಿ ಪ್ರತ್ಯಯವಲ್ಲ ಎಂಬುದನ್ನು ಮುಂದೆ (8.5.5)ರಲ್ಲಿ ನೋಡಲಿರುವೆವು.
5.3.7 ಪದಗಳ ಸಂಖ್ಯೆ
ಸಂಸ್ಕೃತದಲ್ಲಿ ಎಷ್ಟು ಪದಗಳನ್ನು ಬೇಕಿದ್ದರೂ ಒಟ್ಟಿಗೆ ಸೇರಿಸಿ ಜೋಡುಪದ ಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಬಾಣಭಟ್ಟನ ಕಾದಂಬರಿ ಯಲ್ಲಿ ಬರುವ ಕೆಲವು ಜೋಡುಪದಗಳು ಒಂದು ಇಡೀ ಪುಟವನ್ನೇ ತುಂಬು ವಷ್ಟು ಉದ್ದವಾಗಿವೆ.
ವೇದ ಕಾಲದ ಸಂಸ್ಕೃತದಲ್ಲಿ ಈ ರೀತಿಯಿರಲಿಲ್ಲ. ಅದರಲ್ಲಿ ಬಳಕೆ ಯಾಗುವ ಜೋಡುಪದಗಳ ಸಂಖ್ಯೆಯೂ ಕಡಿಮೆಯಿತ್ತು ಮತ್ತು ಅವು ಜಾಸ್ತಿ ಉದ್ದವಾಗಿಯೂ ಇರಲಿಲ್ಲ. ಹೆಚ್ಚಿನ ಜೋಡುಪದಗಳಲ್ಲೂ ಎರಡಕ್ಕಿಂತ ಜಾಸ್ತಿ ಪದಗಳು ಅಂಗಗಳಾಗಿರಲಿಲ್ಲ. ಬಹುಶಃ ವೇದಕಾಲದಲ್ಲಿ ಸಂಸ್ಕೃತ ವ್ಯವಹಾರದ ಭಾಷೆಯಾಗಿದ್ದುದೇ ಇದಕ್ಕೆ ಕಾರಣವಿರಬೇಕು. ಇದೇ ರೀತಿಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ಜೋಡುಪದಗಳಲ್ಲಿ ಎರಡ ಕ್ಕಿಂತ ಜಾಸ್ತಿ ಅಂಗಗಳಿರುವ ಪದಗಳು ಬಹಳ ಕಡಿಮೆ. ಹೆಚ್ಚಿನವುಗಳಲ್ಲೂ ಎರಡು ಪದಗಳು ಮಾತ್ರ ಒಟ್ಟು ಸೇರಿರುತ್ತವೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ಸಮಸ್ತಪದ'ಗಳನ್ನು ಜೋಡುಪದ’ ಎಂಬ ಹೆಸರಿನಿಂದ ಕರೆಯುವುದು ಸರಿ 0iÀiÁVzÉ.
5.3.8 ಜೋಡುಪದಗಳ ಅಥ್ರ ಅಥ್ರದ ಮಟ್ಟಿಗೆ ಸಂಸ್ಕೃತದಲ್ಲಿ ಪದಕಂತೆ ಮತ್ತು ಜೋಡುಪದಗಳ ನಡುವೆ ವ್ಯತ್ಯಾಸವಿದೆ0iÉುಂದು ವೈಯಾಕರಣಿಗಳು ಹೇಳುವರಾದರೂ ಈ ವ್ಯತ್ಯಾಸ ಸ್ಪಷ್ಟ ವಾಗಿ ಕಾಣಿಸುವುದು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ. ಅನಂತರದ ಕಾವ್ಯ ಮತ್ತು ಶಾಸ್ತ್ರಗಳ ಸಂಸ್ಕೃತದಲ್ಲಿ ಇದು ಬಹಳ ಮಟ್ಟಿಗೆ ಅಳಿದು ಹೋಗಿದೆ.
ಕಾವ್ಯಗಳಲ್ಲಿ ಬಳಕೆಯಲ್ಲಿರುವ ಕೆಲವು ಜೋಡುಪದಗಳಲ್ಲಿ ಮಾತ್ರ ಇಂತಹ ಅಥ್ರವೈಶಿಷ್ಟ್ಯವನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ನೀಲೋತ್ಪಲ ಜೋಡುಪದಕ್ಕೆ `ನೀಲಿಬಣ್ಣದ ಕಮಲ’ ಎಂಬ ಅಥ್ರವನ್ನು ಕೊಟ್ಟರೆ ಅದು
108 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಸಾಧುವೆನಿಸದು. ಆ ಪದ ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಕಮಲವನ್ನು ಮಾತ್ರ ಸೂಚಿಸುತ್ತದೆ.
ಆದರೆ ಸಂಸ್ಕೃತದ ಹೆಚ್ಚಿನ ಜೋಡುಪದಗಳಲ್ಲೂ ಇಂತಹ ಅಥ್ರವೈಶಿಷ್ಟ್ಯ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಕೃಷ್ಣಃ ಸಪ್ರಃ ಪದಕಂತೆಗೂ ಕೃಷ್ಣಸಪ್ರಃ ಜೋಡುಪದಕ್ಕೂ ನಡುವೆ ಸಂಸ್ಕೃತದಲ್ಲಿ ಅಥ್ರದ ಮಟ್ಟಿಗೆ ಯಾವ ವ್ಯತ್ಯಾಸವೂ E®è. ಕನ್ನಡದಲ್ಲಿ ಮೇಲೆ (5.3.1)ರಲ್ಲಿ ಸೂಚಿಸಿದ ಹಾಗೆ ಹೆಚ್ಚಿನೆಡೆಗಳಲ್ಲೂ ಅಥ್ರವ್ಯತ್ಯಾಸ ಮೂಡಿಬಂದಿಲ್ಲವಾದರೆ ಎರಡು ಪದಗಳು ಒಟ್ಟಿಗೆ ಸೇರಿರುವ ಸಂದಭ್ರಗಳಲ್ಲಿ ಸಮಾಸ ನಡೆದಿದೆ0iÉುಂದು ಹೇಳಲು ಸಾಧ್ಯವಾಗದು.
5.4 ಸಂಸ್ಕೃತ ಸಮಾಸಗಳ ವಿಭಜನೆ ಸಂಸ್ಕೃತದಲ್ಲಿ ಮುಖ್ಯವಾಗಿ ತತ್ಪುರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವ್ರೀಹಿ ಎಂಬುದಾಗಿ ನಾಲ್ಕು ರೀತಿಯ ಸಮಾಸಗಳಿವೆಯೆಂದು ಅದರ ವೈಯಾಕರಣಿಗಳು ಹೇಳುತ್ತಾರೆ. ಇವನ್ನು ಬಳಸಿ ತಯಾರಿಸಿದ ಜೋಡುಪದ ಗಳಲ್ಲಿ ಪ್ರಧಾನ ಪದ' ಯಾವುದು ಎಂಬುದರ ಮೇಲೆ ಈ ವಿಭಜನೆ ಅವಲಂಬಿಸಿದೆ. ಜೋಡುಪದದ ಅಂಗಗಳಾಗಿ ಬರುವ ಎರಡು ಪದಗಳಲ್ಲಿ ಎರಡನೆಯದು ಆ ಪದಕ್ಕೆ ಪ್ರಧಾನ ಪದವಾಗಿದೆಯಾದರೆ ತತ್ಪುರುಷ, ಮೊದಲನೆಯದು ಪ್ರಧಾನ ಪದವಾಗಿದೆಯಾದರೆ ಅವ್ಯಯೀಭಾವ, ಎರಡೂ ಪ್ರಧಾನ ಪದಗಳಾಗಿವೆಯಾದರೆ ದ್ವಂದ್ವ, ಮತ್ತು ಎರಡೂ ಪ್ರಧಾನ ಪದವಲ್ಲವಾದರೆ ಬಹುವ್ರೀಹಿ. ಉದಾಹರಣೆಗಾಗಿ, ರಾಜಷ್ರಿ ಜೋಡುಪದದಲ್ಲಿ ರಾಜ ಮತ್ತು ಋಷಿ ಎಂಬ ಎರಡು ಅಂಗಗಳಿವೆ. ಆ ಪದ ಒಬ್ಬ ಋಷಿಯನ್ನು ಸೂಚಿಸುವ ಕಾರಣ, ಅದರ ಪ್ರಧಾನ ಪದ ಋಷಿ ಎಂದು ಹೇಳಬೇಕಾಗುತ್ತದೆ. ಹೀಗೆ ಈ ಪದದಲ್ಲಿ ಎರಡನೆಯ ಅಂಗ ಪ್ರಧಾನವಾಗಿರುವ ಕಾರಣ, ಅದು ತತ್ಪುರುಷ ಸಮಾಸಕ್ಕೆ ಉದಾಹರಣೆ. G¥ÀgÁdA ಸಂಸ್ಕೃತದಲ್ಲಿ ಅರಸನ ಹತ್ತಿರ’ ಜೋಡುಪದವನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಯಾಗಿ ಕೊಡಲಾಗುತ್ತದೆ. ಇದು ಯಾರ ಹತ್ತಿರ ಎಂಬುದನ್ನು ತಿಳಿಸುವ ಒಂದು ಕ್ರಿಯಾವಿಶೇಷಣ(ಅವ್ಯಯ)ವಾಗಿದ್ದು, ಅದರ ಅಂಗಗಳಾಗಿರುವ ಉಪ ಹತ್ತಿರ' ಮತ್ತುರಾಜ ಅರಸು’ ಎಂಬ ಎರಡು ಪದಗಳಲ್ಲಿ ಉಪ ಎಂಬ ಮೊದಲನೆಯ ಪದ ಪ್ರಧಾನವಾದುದು. ರಾಮಲಕ್ಷ್ಮಣೌ `ರಾಮಲಕ್ಷ್ಮಣರು’ ಜೋಡುಪದ ದ್ವಂದ್ವ ಸಮಾಸಕ್ಕೆ ಉದಾಹರಣೆ. ಇದರಲ್ಲಿ ರಾಮ ಮತ್ತು ಲಕ್ಷ್ಮಣ ಎಂಬ ಎರಡು ಪದಗಳು
109 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅಂಗಗಳಾಗಿ ಸೇರಿಕೊಂಡಿವೆ. ಇವುಗಳಲ್ಲಿ ಯಾವುದನ್ನೂ ಪ್ರಧಾನಪದವಲ್ಲ ಎಂದು ಹೇಳಲು ಸಾಧ್ಯವಿಲ್ಲವಾದ ಕಾರಣ, ಅದರ ಎರಡು ಅಂಗಗಳೂ ಪ್ರಧಾನ ಪದಗಳೇ ಎಂದು ಹೇಳಬೇಕಾಗುತ್ತದೆ. ಪೀತಾಂಬರಃ ಹಳದಿಬಟ್ಟೆಯ ವ್ಯಕ್ತಿ' ಎಂಬುದು ಬಹುವ್ರೀಹಿ ಸಮಾಸಕ್ಕೆ ಉದಾಹರಣೆ. ಇದರಲ್ಲಿ ಪೀತ ಹಳದಿ’ ಮತ್ತು ಅಂಬರ ಬಟ್ಟೆ' ಎಂಬ ಎರಡು ಪದಗಳು ಅಂಗಗಳಾಗಿ ಬಂದಿದ್ದು, ಅವುಗಳಲ್ಲಿ ಯಾವುದನ್ನೂ ಅದರ ಪ್ರಧಾನ ಪದವೆಂಬುದಾಗಿ ಹೇಳಲು ಸಾಧ್ಯವಾಗುವುದಿಲ್ಲ. ಆ ಜೋಡುಪದದ ಹೊರಗಿರುವ, ಎಂದರೆ ಅದರ ಅಂಗವಾಗಿ ಬಾರದಿರುವ ವ್ಯಕ್ತಿ ಎಂಬಂತಹ ಪದವೊಂದು ಅದರ ಪ್ರಧಾನ ಪದವೆಂದು ಹೇಳಬೇಕಾಗು ತ್ತದೆ. ಯಾಕೆಂದರೆ ಈ ಜೋಡುಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದಲ್ಲದೆ ಒಂದು ಬಣ್ಣ(ಪೀತ)ವನ್ನಾಗಲೀ ಇಲ್ಲವೇ ಒಂದು ಬಟ್ಟೆ(ಅಂಬರ)ವನ್ನಾಗಲೀ ಗುರುತಿಸುವುದಿಲ್ಲ. ತತ್ಪುರುಷ ಸಮಾಸದ ಉಪಭೇದಗಳಾಗಿ ಕಮ್ರಧಾರಯ ಮತ್ತುದ್ವಿಗು ಎಂಬ ಇನ್ನೂ ಎರಡು ರೀತಿಯ ಸಮಾಸಗಳನ್ನು ಸಂಸ್ಕೃತದಲ್ಲಿ ಗುರುತಿಸುವ ಕ್ರಮ ರೂಢಿಯಲ್ಲಿದೆ. (1) ತತ್ಪುರುಷ ಜೋಡುಪದದ ಅಂಗಗಳಾಗಿ ಬರುವ ಪದಗಳನ್ನು ಒಳ ನುಡಿಯ (ವಿಗ್ರಹವಾಕ್ಯದ) ಮೂಲಕ ಸಂಬಂಧಿಸುವಾಗ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ (ಎಂದರೆ ಪ್ರಥಮಾ ವಿಭಕ್ತಿಯಲ್ಲಿರಿಸಿ) ಸಂಬಂಧಿಸಲು ಸಾಧ್ಯ ವಿದೆಯಾದರೆ ಅದನ್ನು ಕಮ್ರಧಾರಯವೆಂಬ ಉಪವಿಭಾಗದಲ್ಲಿ ಸೇರಿಸುವುದು gÀÆrü. ಉದಾಹರಣೆಗಾಗಿ ಕೃಷ್ಣಸಪ್ರಃ ಕಪ್ಪುಹಾವು’ ಎಂಬುದರ ಅಂಗವಾಗಿರುವ ಪದಗಳನ್ನು ಕೃಷ್ಣಃ ಸಪ್ರಃ ಎಂಬುದಾಗಿ ಒಂದೇ ವಿಭಕ್ತಿಯಲ್ಲಿ (ಪ್ರಥಮಾ ವಿಭಕ್ತಿಯಲ್ಲಿ) ಇರಿಸಿ ಸಂಬಂಧಿಸಬಹುದು. ಹಾಗಾಗಿ ಅದು ಕಮ್ರಧಾರಯ ವಾಗುತ್ತದೆ.
ಆದರೆ, ವೃಕಭಯ ತೋಳನ ಹೆದರಿಕೆ' ಎಂಬ ಇನ್ನೊಂದು ಜೋಡುಪದ ತತ್ಪುರುಷಕ್ಕೆ ಉದಾಹರಣೆಯಾಗಬಲ್ಲುದಾದರೂ ಕಮ್ರಧಾರಯಕ್ಕೆ ಉದಾಹರಣೆ ಯಾಗಲಾರದು. ಯಾಕೆಂದರೆ, ಈ ಜೋಡುಪದದ ಅಂಗಗಳಾಗಿ ಬರುವ ವೃಕ ತೋಳ’ ಮತ್ತು ಭಯ `ಹೆದರಿಕೆ’ ಪದಗಳನ್ನು ಒಂದೇ ವಿಭಕ್ತಿಯಲ್ಲಿರಿಸಿ ಸಂಬಂಧಿಸಲು ಸಾಧ್ಯವಾಗದು. ವೃಕಾತ್ ಭಯಂ ಎಂಬುದಾಗಿ ಅವುಗಳಲ್ಲಿ ಮೊದಲನೆಯ ಪದವನ್ನು ಪಂಚಮೀ ವಿಭಕ್ತಿಯಲ್ಲಿ ಇರಿಸುವ ಅವಶ್ಯಕತೆ ಸಂಸ್ಕೃತದಲ್ಲಿದೆ.
110 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು (2) ತತ್ಪುರುಷ ಜೋಡುಪದದ ಅಂಗಗಳಾಗಿ ಬರುವ ಪದಗಳಲ್ಲಿ ಮೊದಲನೆಯದು ಎಣಿಕೆಯನ್ನು ಸೂಚಿಸುವ ಪದವಾಗಿದೆಯಾದರೆ ಅದನ್ನು ದ್ವಿಗು' ಎಂಬ ಉಪವಿಭಾಗದಲ್ಲಿ ಸೇರಿಸುವ ಕ್ರಮವಿದೆ. ಉದಾಹರಣೆಗಾಗಿ ತ್ರಿಲೋಕಂ ಮೂರು ಲೋಕಗಳು’ ಜೋಡುಪದದಲ್ಲಿ ಮೊದಲನೆಯ ಅಂಗವಾಗಿರುವ ತ್ರಿ `ಮೂರು’ ಎಂಬುದು ಎಣಿಕೆಯ ಪದವಾಗಿದೆ. ಹಾಗಾಗಿ, ಅದನ್ನು ತಯಾರಿಸುವಲ್ಲಿ ದ್ವಿಗು ಸಮಾಸದ ಬಳಕೆಯಾಗಿದೆಯೆಂದು ಹೇಳಬಹುದು.
5.5 ಕನ್ನಡ ಜೋಡುಪದಗಳ ಒಳರಚನೆ ಮೇಲೆ (5.1ರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದ ಆರು ಸಮಾಸಗಳೂ ಕನ್ನಡದಲ್ಲಿವೆಯೆಂಬುದಾಗಿ ಕನ್ನಡದ ವೈಯಾಕರಣಿಗಳು ಹೇಳುತ್ತಾರೆ. ಇದಲ್ಲದೆ, ಗಮಕ ಮತ್ತು ಕ್ರಿಯಾಸಮಾಸಗಳೆಂಬ ಬೇರೆ ಎರಡು ರೀತಿಯ ಕನ್ನಡದವೇ ಆದ ಸಮಾಸಗಳೂ ಕನ್ನಡದಲ್ಲಿವೆಯೆಂದು ಇವರು ಹೇಳುತ್ತಾರೆ.
ಆದರೆ ಇದು ಕನ್ನಡದ ಜೋಡುಪದಗಳನ್ನು ಸಂಸ್ಕೃತ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದುದರಿಂದಾಗಿ ಹುಟ್ಟಿಬಂದ ತಪ್ಪು ಕಲ್ಪನೆ. ಕನ್ನಡದ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಸಂಸ್ಕೃತದ ವಿಭಜನೆಗಿಂತ ತೀರ ಭಿನ್ನವಾಗಿರುವ ಬೇರೊಂದು ರೀತಿಯ ಕನ್ನಡದ್ದೇ ಆದ ವಿಭಜನೆ ನಮಗೆ ದೊರಕುತ್ತದೆ. ಹೊಸಗನ್ನಡದ ಜೋಡುಪದಗಳಲ್ಲಿ ಸಾಮಾನ್ಯವಾಗಿ ಎರಡನೆಯ ಅಂಗ ವಾಗಿ ಬರುವ ಪದ ನಾಮಪದವಾಗಿರುತ್ತದೆ. ಮೊದಲನೆಯದು ನಾಮಪದವಿರ ಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು.
ಈ ವಿಷಯದ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಕೆಳಗೆ ಸೂಚಿಸಿದ ಹಾಗೆ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ (ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ ಒಳರಚನೆ (ಭಟ್ 2002) ನೋಡಿ).
(1) ನಾಮಪದವಿರುವವು: ಬಯಲಾಟ, ನೆಲಗಡಲೆ, ಕೈಮಗ್ಗ
(2) ಕ್ರಿಯಾಪದವಿರುವು: ಕಡೆಗೋಲು, ಸಿಡಿಮದ್ದು, ತೂಗುದೀಪ
(3) ಗುಣಪದವಿರುವವು: ದೊಡ್ಡಮ್ಮ, ಕಿರುಬೆರಳು, ಕಗ್ಗಲ್ಲು
5.5.1 ನಾಮಪದವಿರುವ ಜೋಡುಪದಗಳು
111 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ `ನಾಮಪದವಿರುವ’ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಒಳನುಡಿಯನ್ನು (ವಿಗ್ರಹ ವಾಕ್ಯವನ್ನು) ಹೇಳುವಾಗ ಮೊದಲನೆಯ ಅಂಗವನ್ನು ಷಷ್ಠೀ ವಿಭಕ್ತಿಯಲ್ಲಿರಿಸುವ ಮೂಲಕ ಎರಡನೆಯ ಅಂಗದೊಂದಿಗೆ ಸಂಬಂಧಿಸಲು ಸಾಧ್ಯವಿದೆ.
ಒಳನುಡಿ
ಬೆಂಕಿಯ ಪೆಟ್ಟಿಗೆ
ನೆಲದ ಕಡಲೆ ಬಯಲಿನ ಆಟ
ಕಾಲಿನ ಮಣೆ ಕೈಯ ಮಗ್ಗ
ಜೋಡುಪದ ಬೆಂಕಿಪೆಟ್ಟಿಗೆ ನೆಲಕಡಲೆ ಬಯಲಾಟ ಕಾಲ್ಮಣೆ ಕೈಮಗ್ಗ
ಈ ನಿಯಮಕ್ಕೆ ಆನೆಕಾಲು, ಕೈಗಂಬ, ಇಲಿಕಿವಿ, ನೆಲದಾವರೆ ಮೊದಲಾದ ಕೆಲವು ಅಪವಾದಗಳಿವೆ. ಯಾಕೆಂದರೆ, ಮೇಲೆ ಕೊಟ್ಟಿರುವ ಜೋಡುಪದಗಳ ಹಾಗೆ ಇವುಗಳ ಎರಡು ಅಂಗಗಳನ್ನು ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಾಗದು.
ಉದಾಹರಣೆಗಾಗಿ ಆನೆಕಾಲು ಪದ `ಆನೆಯ ಕಾಲ'ನ್ನು ಸೂಚಿಸುವ ಬದಲು `ಆನೆಯ ಕಾಲಿನ ಹಾಗೆ ಕಾಲು ಬಾತುಕೊಳ್ಳುವ ಒಂದು ರೋಗ'ವನ್ನು ಸೂಚಿಸುತ್ತದೆ. ಇಂತಹ ಜೋಡುಪದಗಳಲ್ಲಿ ಮೊದಲನೆಯ ಅಂಗ, ಎರಡನೆಯ ಅಂಗ, ಇಲ್ಲವೇ ಎರಡೂ ಅಂಗಗಳು ಉಪಮಾನಗಳಾಗಿರಲು ಸಾಧ್ಯವಿದೆ.
ಜೋಡುಪದ ಕಲ್ಲೆದೆ
ನೆಲದಾವರೆ E°Q«
ಒಳನುಡಿ ಕಲ್ಲಿನ ಹಾಗೆ ಕಠಿಣವಾಗಿರುವ ಎದೆ ನೆಲದಲ್ಲಿ ಬೆಳೆಯುವ ತಾವರೆಯಂತಹ ಹೂ ಇಲಿಯ ಕಿವಿಯ ಹಾಗಿರುವ ಎಲೆಯಿರುವ ಗಿಡ
ಇದಲ್ಲದೆ, ಬೇರೆ ಕೆಲವು ಜೋಡುಪದಗಳ ಅಂಗಗಳನ್ನು ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಿದೆಯಾದರೂ ಅವುಗಳ ಅಥ್ರವನ್ನು ಸರಿಯಾಗಿ ಸೂಚಿಸುವ ಹಾಗೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ, ಮತ್ತು ಈ ಆಧಾರದ ಮೇಲೆ ಅವನ್ನು ಹಲವು ಉಪವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
ಸಾಮಾನ್ಯವಾಗಿ ಇಂತಹ ಒಳನುಡಿಗಳಲ್ಲಿ ಜೋಡುಪದದ ಅಂಗಗಳಾಗಿ ಬಂದಿರುವ ನಾಮಪದಗಳಲ್ಲಿ ಒಂದರೊಡನೊಂದನ್ನು ಸಂಬಂಧಿಸುವುದಕ್ಕಾಗಿ ಯಾವುದಾದರೊಂದು ಕ್ರಿಯಾಪದವನ್ನು ಬಳಸುವ ಅವಶ್ಯಕತೆಯಿರುತ್ತದೆ. ಈ
112 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಕ್ರಿಯಾಪದದ ಆಧಾರದ ಮೇಲೆಯೂ ಇಂತಹ ಜೋಡುಪದಗಳನ್ನು ವಿಂಗಡಿಸ ಬಹುದು.
ಜೋಡುಪದ ಕಾಲ್ಮಣೆ
ಅರಮನೆ ಜೇನುಹುಳ ಬೆಂಕಿಪೆಟ್ಟಿಗೆ ಕೈಕೊಡಲಿ ಕಣ್ಣುಸನ್ನೆ ತಪ್ಪುಕಾಣಿಕೆ ಮೂಗುದಾರ ಕಣ್ಣೀರು
ತಲೆಗೂದಲು
ಒಳನುಡಿ ಕಾಲು ಇರುವ ಮಣೆ
ಅರಸನು ವಾಸಿಸುವ ಮನೆ
ಜೇನನ್ನು ಸಂಗ್ರಹಿಸುವ ಹುಳ ಬೆಂಕಿಯನ್ನು ಹೊತ್ತಿಸಲು ಬಳಸುವ ಪೆಟ್ಟಿಗೆ ಕೈಯಿಂದ ಕಡಿಯಲು ಬಳಸುವ ಕೊಡಲಿ ಕಣ್ಣಿನಿಂದ ಮಾಡುವ ಸನ್ನೆ ತಪ್ಪಿಗೆ ಕೊಡುವ ಕಾಣಿಕೆ ಮೂಗಿಗೆ ಕಟ್ಟುವ ದಾರ ಕಣ್ಣಿನಲ್ಲಿ ಬರುವ ನೀರು ತಲೆಯಲ್ಲಿ ಬೆಳೆದ ಕೂದಲು
ಮೇಲೆ ಕೊಟ್ಟಿರುವ ಜೋಡುಪದಗಳೆಲ್ಲವನ್ನೂ ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದವನ್ನು ಷಷ್ಠೀ ವಿಭಕ್ತಿಯಲ್ಲಿರಿಸುವುದರ ಮೂಲಕ ಸಾಧಿಸಲು ಸಾಧ್ಯವಿದೆಯೆಂಬುದನ್ನು ಗಮನಿಸಬಹುದು (ಕಾಲಿನ ಮಣೆ, ಜೇನಿನ ಹುಳ, ಕೈಯ ಕೊಡಲಿ, ತಪ್ಪಿನ ಕಾಣಿಕೆ, ಕಣ್ಣಿನ ನೀರು).
5.5.2 ಕ್ರಿಯಾಪದವಿರುವ ಜೋಡುಪದಗಳು ಕ್ರಿಯಾಪದವಿರುವ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುತ್ತದೆ. ಈ ಕ್ರಿಯಾಪದಕ್ಕೂ ಎರಡನೆಯ ಅಂಗವಾಗಿ ಬಂದಿರುವ ನಾಮಪದಕ್ಕೂ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳಿರಲು ಸಾಧ್ಯವಿದೆ.
(1) ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ನಾಮಪದವು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತು ತೊಡಗಿಕೊಂಡಿರಬಹುದು. ಉದಾಹರಣೆಗಾಗಿ, ಸುಳಿಗಾಳಿ ಜೋಡುಪದದ ಎರಡನೆಯ ಅಂಗವಾಗಿ ಗಾಳಿ ನಾಮಪದ ಬಂದಿದ್ದು, ಇದು ಸುಳಿ ಘಟನೆಯಲ್ಲಿ ತೊಡಗಿದೆ; ಸಿಡಿಮದ್ದು ಎಂಬುದರಲ್ಲೂ ಹೀಗೆ0iÉುೀ.
(2) ಬೇರೆ ಯಾರಾದರೂ ಅದನ್ನು ಆ ಘಟನೆಯಲ್ಲಿ ತೊಡಗಿಸಿರಬಹುದು ಉದಾಹರಣೆಗಾಗಿ, ತೂಗುದೀಪ ಜೋಡುಪದದಲ್ಲಿ ಎರಡನೆಯ ಅಂಗ
113 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಾಗಿರುವ ದೀಪವನ್ನು ಯರೋ ತೂಗಲು ಬಳಸಿದ್ದಾರೆ; ಚುಚ್ಚುಮದ್ದು ಜೋಡುಪದವೂ ಇಂತಹದೇ.
(3) ಅದು ಆ ಘಟನೆಯ ಕರಣವಾಗಿರಬಹುದು. ಉದಾಹರಣೆಗಾಗಿ, ಬೀಸುಗಲ್ಲು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಲ್ಲು ಬೀಸುವ
ಘಟನೆಯ ಕರಣವಾಗಿದೆ; ಕಡೆಗೋಲು ಜೋಡುಪದದಲ್ಲೂ ಹೀಗೆ0iÉುೀ.
(4) ಅದು ಆ ಘಟನೆಯ ಆಕರವಾಗಿರಬಹುದು. ಉದಾಹರಣೆಗಾಗಿ, ಸುಡುಗಾಡು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಾಡು ನಾಮ ಪದವು ಸುಡು ಘಟನೆಯ ಆಕರವಾಗಿದೆ (ಸುಡುವುದೆಲ್ಲಿ ಎಂಬುದನ್ನು ಅದು ಸೂಚಿಸುತ್ತದೆ); ಜಾರುಬಂಡಿ ಜೋಡುಪದವೂ ಇಂತಹದೇ.
ಇದಲ್ಲದೆ, ಇಂತಹ ಜೋಡುಪದಗಳಲ್ಲಿ ಬರುವ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ಸೂಚಿಸಲು ಸಾಧ್ಯವಿದ್ದು, ಅವನ್ನವಲಂಬಿಸಿಯೂ ಇಂತಹ ಜೋಡುಪದಗಳನ್ನು ವಿಭಜಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಈ ಕ್ರಿಯಾಪದಗಳು ಸೂಚಿಸುವ ಘಟನೆ ಹಲವು ಬಾರಿ ನಡೆಯುವಂತಹದಿರಬಹುದು (ಸುರಿಮಳೆ, ಬೀಸುಗಲ್ಲು) ಇಲ್ಲವೇ ಒಮ್ಮೆ ಮಾತ್ರ ನಡೆಯುವಂತಹದಿರ ಬಹುದು (ಬಿಚ್ಚುಗತ್ತಿ, ಹುರಿಗಡಲೆ).
5.5.3 ಗುಣಪದವಿರುವ ಜೋಡುಪದಗಳು ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಗುಣಪದ ಬಂದಿದೆಯಾದಲ್ಲಿ ಅವಕ್ಕೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯವಿದೆ. ಅವುಗಳಲ್ಲಿ ಕೆಲವಕ್ಕೆ ಎರಡನೆಯ ಅಂಗವಾಗಿ ಬಂದಿರುವ ನಾಮಪದ ಪ್ರಧಾನ ಪದವಾಗಿರಬಲ್ಲುದು ಮತ್ತು ಬೇರೆ ಕೆಲವಕ್ಕೆ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವುದೂ ಪ್ರಧಾನ ಪದವಾಗಿರದೆ, ಜೋಡುಪದದಿಂದ ಹೊರಗಿರುವ ಪದವೊಂದು ಪ್ರಧಾನ ಪದವಾಗಿರಬಲ್ಲುದು.
ಕೆಳಗೆ ಕೊಟ್ಟಿರುವ (ಕ-ಖ) ಜೋಡುಪದಗಳ ನಡುವೆ ಈ ವ್ಯತ್ಯಾಸವನ್ನು ಕಾಣಬಹÅದು.
ಜೋಡುಪದ ಕಡೆಹಲ್ಲು (8PÀ) (8ಖ) ಕಡೆಗಣ್ಣು (9ಕ) ಮುಂಬಾಗಿಲು (9ಖ) ಮುಂಗೈ
(10ಕ) ನಡುಬೆರಳು (10ಖ) ನಡುಹಗಲು
ಒಳನುಡಿ (ಬಾಯಿಯ) ಕಡೆಯಲ್ಲಿರುವ ಹಲ್ಲು
ಕಣ್ಣಿನ ಕಡೆಯಲ್ಲಿರುವ ಭಾಗ
(ಮನೆಯ) ಮುಂದುಗಡೆಯಿರುವ ಬಾಗಿಲು ಕೈಯ ಮುಂದಿರುವ ಭಾಗ (ಕೈಯಲ್ಲಿ) ನಡುವೆ ಇರುವ ಬೆರಳು ಹಗಲಿನ ನಡುವೆ ಇರುವ ಭಾಗ
114 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
(11ಕ) ಚಿಕ್ಕಾಸು
(11ಖ) ಚಿಕ್ಕಮ್ಮ
ಸಮಾಸಗಳು ಚಿಕ್ಕದಾಗಿರುವ ಕಾಸು ಅಮ್ಮನಿಗಿಂತ ಚಿಕ್ಕವಳಾಗಿರುವ ಹೆಂಗಸು
(8-11) ಜೋಡುಪದಗಳಲ್ಲಿ (ಕ) ಮತ್ತು (ಖ)ಜೋಡುಪದಗಳ ನಡುವೆ ಪ್ರಧಾನ ಪದದ ಮಟ್ಟಿಗೆ ವ್ಯತಾಸವಿದೆಯೆಂಬುದನ್ನು ಗಮನಿಸಬಹುದು. ಇಲ್ಲಿ ಪ್ರತಿಯೊಂದರಲ್ಲೂ (ಕ)ಜೋಡುಪದಕ್ಕೆ ಎರಡನೆಯ ಅಂಗವಾಗಿ ಬಂದ ಪದ ಪ್ರಧಾನ ಪದವಾಗಿದೆಯಾದರೆ, (ಖ)ಜೋಡುಪದಕ್ಕೆ ಅದರ ಎರಡು ಅಂಗಗಳಲ್ಲಿ ಒಂದೂ ಪ್ರಧಾನ ಪದವಾಗಿರದೆ, ಜೋಡುಪದದ ಹೊರಗಿರುವ ಪದವೊಂದು ಪ್ರಧಾನ ಪದವಾಗಿದೆ.
ಉದಾಹರಣೆಗಾಗಿ, (8ಕ)ದಲ್ಲಿ ಬಂದಿರುವ ಕಡೆಹಲ್ಲು ಜೋಡುಪದಕ್ಕೆ ಅದರ ಎರಡನೆಯ ಅಂಗವಾಗಿರುವ ಹಲ್ಲು ಪದ ಪ್ರಧಾನ ಪದವಾಗಿದೆ. ಆದರೆ, (8ಖ)ದಲ್ಲಿ ಬಂದಿರುವ ಕಡೆಗಣ್ಣು ಜೋಡುಪದಕ್ಕೆ ಆ ಪದದ ಅಂಗವಾಗಿಲ್ಲದ (ಎಂದರೆ ಅದರ ಹೊರಗಿರುವ) ಭಾಗ ಪದ ಪ್ರಧಾನ ಪದವಾಗಿದೆ.
ಉಳಿದ (9-11) ಪದಯುಗ್ಮಗಳಲ್ಲೂ ಇಂತಹದೇ ವ್ಯತ್ಯಾಸವಿದೆಯೆಂಬು ದನ್ನು ಅವುಗಳ ಮುಂದೆ ಕೊಟ್ಟಿರುವ ಒಳನುಡಿಗಳಿಂದ ತಿಳಿಯಬಹುದು.
ಗುಣಪದವಿರುವ ಜೋಡುಪದಗಳ ನಡುವೆ ಇನ್ನೂ ಕೆಲವು ವ್ಯತ್ಯಾಸಗಳನ್ನು ಕಾಣಲು ಸಾಧ್ಯವಿದ್ದು, ಅವು ಬೇರೆ ಕೆಲವು ರೀತಿಯ ವಿಭಜನೆಗಳಿಗೆ ಆಧಾರ ವಾಗಬಲ್ಲುವು. ಉದಾಹರಣೆಗಾಗಿ, ಈ ಜೋಡುಪದಗಳ ಮೊದಲನೆಯ ಅಂಗ ವಾಗಿ ಬಂದಿರುವ ಗುಣಪದವು ನಾಮವಿಶೇಷಣವಾಗಿರಲೂ ಸಾಧ್ಯವಿದೆ, ಕ್ರಿಯಾ ವಿಶೇಷಣವಾಗಿರಲೂ ಸಾಧ್ಯವಿದೆ.
(12ಕ) ಗುಣಪದ ನಾಮವಿಶೇಷಣವಾಗಿರುವ ಜೋಡುಪದಗಳು:
ಚಿಕ್ಕಾಸು
PÉAzÁ½
ಕರಿತುಳಸಿ
ಚಿಕ್ಕ ಕಾಸು ಕೆಂಪು ತಾಳಿ (ತೆಂಗು) ಕರಿ (ಕಪ್ಪು) ತುಳಸಿ
(12ಖ) ಗುಣಪದ ಕ್ರಿಯಾವಿಶೇಷಣವಾಗಿರುವ ಜೋಡುಪದಗಳು: (ಕೆಲಸಕ್ಕೆ) ಮುಂದಾಗಿ ಕೊಡುವ ಕಡ ಅಡ್ಡಕ್ಕೆ ಹೋಗುವ ದಾರಿ (ಮನೆಯ) ಹೊರಗಿರುವ ಬಾಗಿಲು
ಮುಂಗಡ CqÀØzÁj ಹೊರಬಾಗಿಲು
ಇನ್ನೊಂದು ರೀತಿಯ ವ್ಯತ್ಯಾಸವೇನೆಂದರೆ, ಕೆಲವು ಗುಣಪದಗಳು ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧಮ್ರವನ್ನು ಸೂಚಿಸುವುವಾದರೆ,
115 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇನ್ನು ಕೆಲವು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿಗೂ ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವೆ ಅಂತಹ ಗುಣಧಮ್ರದ ಮಟ್ಟಿಗೆ ವ್ಯತ್ಯಾಸವೇನಿದೆ ಯೆಂಬುದನ್ನು ತಿಳಿಸುತ್ತವೆ.
ಉದಾಹರಣೆಗಾಗಿ, ಕರಿತುಳಸಿ ಎಂಬುದು ತುಳಸಿಯ ಒಂದು ಗುಣಧಮ್ರ ವನ್ನು ಸೂಚಿಸುವ ಮೂಲಕ ಬೇರೆ ರೀತಿಯ ತುಳಸಿಗಳಿಂದ ಅದನ್ನು ಬೇಪ್ರಡಿಸು ತ್ತದೆ. ಆದರೆ, ನಡುಬೆರಳು ಎಂಬುದು ಕೈಯಲ್ಲಿರುವ ಬೆರಳುಗಳ ನಡುವಿರುವ ಸಂಬಂಧವನ್ನು ಸೂಚಿಸುವುದರ ಮೂಲಕ ಅವುಗಳಲ್ಲಿ ಒಂದು ಬೆರಳನ್ನು ಗುರುತಿಸುತ್ತದೆ.
5.5.4 ಕೆಲವು ಅಪವಾದಗಳು ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಎರಡನೆಯ ಅಂಗವಾಗಿ ಒಂದು ನಾಮಪದ ಬಂದಿರುತ್ತದೆ0iÉುಂಬುದಾಗಿ ಮೇಲೆ ಸೂಚಿಸಲಾಗಿತ್ತು. ಇದಕ್ಕೆ ಅಪವಾದವಾಗಿ ಕೆಲವು ಜೋಡುಪದಗಳ ಒಳನುಡಿಯಲ್ಲಿ ಗುಣಪದ ಎರಡನೆಯ ಅಂಗವಾಗಿ ಬಂದಿರುವುದನ್ನು ಕಾಣಬಹುದು; ಆದರೆ, ಇಂತಹ ಸಂದಭ್ರಗಳಲ್ಲೂ ಜೋಡುಪದದಲ್ಲಿ ಅದು ಮೊದಲನೆಯ ಅಂಗವಾಗಿ ಬದಲಾಗಿರುತ್ತದೆ. ಎರಡನೆಯ ಅಂಗ ನಾಮಪದವೇ ಆಗಿರಬೇಕೆಂಬ ಕನ್ನಡ ಜೋಡುಪದಗಳ ಸಾಮಾನ್ಯ ಸ್ವರೂಪವನ್ನು ಇದು ಒತ್ತಿ ಹೇಳುತ್ತದೆ.
ಉದಾಹರಣೆಗಾಗಿ, ಕೈಯ ಮುಂದಿರುವ ಭಾಗ' ಎಂಬ ಒಳನುಡಿಯಲ್ಲಿ ಮುಂದೆ ಪದ ಎರಡನೆಯ ಅಂಗವಾಗಿದೆಯಾದರೂ ಅದರಿಂದ ತಯಾರಾದ ಮುಂಗೈ ಜೋಡುಪದದಲ್ಲಿ ಆ ಗುಣಪದ ಅದರ ಮೊದಲನೆಯ ಅಂಗವಾಗಿ ಬದಲಾಗಿರುವುದನ್ನು ಕಾಣಬಹುದು. ಈ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಬೇರೆ ಕೆಲವು ಜೋಡು ಪದಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಕೈಪಿಡಿ, ಬಾನುಲಿ, ಇಳಿಜಾರು, ಒಡಹುಟ್ಟು ಮೊದಲಾದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುವ ಹಾಗೆ ಕಾಣಿಸುತ್ತದೆ. ಆದರೆ ಇಲ್ಲಿ ಎರಡನೆಯ ಅಂಗಗಳಾಗಿ ಬಂದಿರುವ ಪಿಡಿ, ಉಲಿ, ಜಾರು, ಹುಟ್ಟು ಮೊದಲಾದವುಗಳು ಹಿಡಿ, ಕಟ್ಟು, ನಗು, ಓದು, ತಪ್ಪು, ಬದುಕು ಮೊದಲಾದವುಗಳ ಹಾಗೆ ಸೊನ್ನೆ’ ಪ್ರತ್ಯಯದ ಮೂಲಕ ತಯಾರಾಗಿರುವ ನಾಮಪದಗಳೆಂದು ಹೇಳಲು ಸಾಧ್ಯವಿದೆ.
ಕನ್ನಡದ ಜೋಡುಪದಗಳ ಈ ವಿಭಜನೆಯಲ್ಲಿ ಒಂದು ಮುಖ್ಯವಾದ ವಿಷಯವನ್ನು ಮನಸ್ಸಿನಲ್ಲಿರಿಸಿಕೊಳ್ಳುವುದು ಅವಶ್ಯ. ಪ್ರತ್ಯಯಗಳನ್ನು ಬಳಸಿ ತಯಾರಿಸಿರುವ ನಾಮಪದಗಳ ಹಾಗೆ ಸಮಾಸವೆಂಬ ವಿಧಾನವನ್ನು ಬಳಸಿ ತಯಾರಿಸಿರುವ ಈ ಜೋಡುಪದಗಳೂ ಹಲವಾರು ವಿಷಯಗಳಲ್ಲಿ ಅನಿಯಮಿತ
116 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ವಾಗಿರುತ್ತವೆ. ಹಾಗಾಗಿ, ಮೇಲೆ ವಿವರಿಸಿರುವ ವಿಭಜನೆಗಳಿಗೆ ಅಪವಾದಗಳನ್ನು ಕಂಡುಹಿಡಿಯುವುದೇನೂ ಕಷ್ಟವಲ್ಲ. ಎಂದರೆ, ಈ ವಿಭಜನೆಗಳು ಭಾಷೆಯ ಒಂದು `ಒಲವ’ನ್ನು ಸೂಚಿಸುತ್ತಿವೆಯಲ್ಲದೆ ತಕ್ರಬದ್ಧವಾದ ನಿಯಮವನ್ನಲ್ಲ.
5.6 ಸಂಸ್ಕೃತದ ಸಮಾಸಗಳು ಕನ್ನಡದಲ್ಲಿವೆಯೇ? ಹೊಸಗನ್ನಡದಲ್ಲಿ ಬರುವ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ದೃಷ್ಟಿಯಿಂದ ಪರಿಶೀಲಿಸಿದೆವಾದರೆ, ಮೇಲೆ ವಿವರಿಸಿದಂತಹ ಒಳರಚನೆ ಅವುಗಳಲ್ಲಿದೆಯೆಂಬ ವಿಷಯ ಸ್ಪಷ್ಟವಾಗುತ್ತದೆ. ಇದಲ್ಲದೆ ಆ ಒಳರಚನೆಯ ಆಧಾರದ ಮೇಲೆ ಅವನ್ನು ಮುಖ್ಯವಾಗಿ ನಾಮಪದವಿರುವವು, ಕ್ರಿಯಾಪದ ವಿರುವವು ಮತ್ತು ಗುಣಪದವಿರುವವು ಎಂಬ ಮೂರು ರೀತಿಯ ಸಮಾಸಗಳಲ್ಲಿ ವಿಭಜಿಸಲು ಸಾಧ್ಯ ಎಂಬ ವಿಷಯವೂ ಸ್ಪಷ್ಟವಾಗುತ್ತದೆ.
ಈ ವಿಭಜನೆ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಜೋಡುಪದಗಳ ವಿಭಜನೆ ಗಿಂತ ತೀರ ಭಿನ್ನವಾದುದು. ಜೋಡುಪದಗಳ ಅಂಗಗಳಾಗಿ ಬರುವ ಪದಗಳಲ್ಲಿ ಪ್ರಧಾನವಾಗಿರುವ ಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಸಂಸ್ಕೃತದ ವೈಯಾಕರಣಿಗಳು ಅದರ ಜೋಡುಪದಗಳನ್ನು ಮುಖ್ಯವಾಗಿ ತತ್ಪುರುಷ, ದ್ವಂದ್ವ, ಅವ್ಯಯೀಭಾವ ಮತ್ತು ಬಹುವ್ರೀಹಿ ಎಂಬುದಾಗಿ ವಿಂಗಡಿಸಿದ್ದಾರೆ. ಸಂಸ್ಕೃತದ ಈ ವಿಭಜನೆಯನ್ನು ಕನ್ನಡಕ್ಕೂ ಅಳವಡಿಸಲು ಸಾಧ್ಯ ಎಂಬುದು ಕನ್ನಡ ವೈಯಾಕರಣಿಗಳ ಅಭಿಪ್ರಾಯ. ಎಂದರೆ, ಮೇಲಿನ ನಾಲ್ಕು ಸಮಾಸ ಗಳಲ್ಲದೆ ತತ್ಪುರುಷದ ಉಪಭೇದಗಳಾಗಿರುವ ಕಮ್ರಧಾರಯ ಮತ್ತು ದ್ವಿಗು ಎಂಬ ಬೇರೆ ಎರಡು ಸಮಾಸಗಳನ್ನು ಮತ್ತು ಕನ್ನಡದವೇ ಆದ ಕ್ರಿಯಾಸಮಾಸ ಮತ್ತು ಗಮಕಸಮಾಸ ಎಂಬ ಇನ್ನೂ ಎರಡು ಸಮಾಸಗಳನ್ನು ಬಳಸುವುದರ ಮೂಲಕ ಕನ್ನಡ ಸಮಾಸಗಳನ್ನು ವಣ್ರಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯ. ಈ ಅಭಿಪ್ರಾಯ ಸರಿಯೇ ಎಂಬುದನ್ನು ಇಲ್ಲಿ ಪರಿಶೀಲಿಸುವುದು ಅವಶ್ಯ.
5.6.1 ವಿಭಜನೆಯ ಆಧಾರ ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಜೋಡುಪದಗಳನ್ನು ಮುಖ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಪದವಾಗಿ ನಿಲ್ಲುತ್ತದೆ ಎಂಬ ವಿಷಯದ ಆಧಾರದ ಮೇಲೆ ತತ್ಪುರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವ್ರೀಹಿ ಎಂಬ ನಾಲ್ಕು ಸಮಾಸಗಳಾಗಿ ವಿಂಗಡಿಸಲಾಗಿದೆ.
ಎರಡನೆಯ ಪದ ಪ್ರಧಾನವಾಗಿದೆಯಾದರೆ ತತ್ಪುರುಷ, ಮೊದಲನೆಯ ಪದ ಪ್ರಧಾನವಾಗಿದೆಯಾದರೆ ಅವ್ಯಯೀಭಾವ, ಎರಡು ಪದಗಳೂ ಪ್ರಧಾನವಾಗಿವೆ
117 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಯಾದರೆ ದ್ವಂದ್ವ ಮತ್ತು ಒಂದೂ ಪ್ರಧಾನವಾಗಿಲ್ಲವಾದರೆ ಬಹುವ್ರೀಹಿ ಎಂದು ಹೇಳುವುದು ಈ ವಿಭಜನೆಯ ಸಾರ.
ಈ ನಾಲ್ಕು ಸಮಾಸಗಳೊಳಗೆ ಬಹುವ್ರೀಹಿ ಸಮಾಸದಲ್ಲಿ ಮಾತ್ರ ಜೋಡು ಪದದ ಅಂಗವಾಗಿ ಬಂದಿರುವ ಪದಗಳಲ್ಲಿ ಯಾವುದೂ ಪ್ರಧಾನಪದವಾಗಿರದೆ ಜೋಡುಪದದ ಹೊರಗಿರುವ ಪದವೊಂದು ಪ್ರಧಾನಪದವಾಗಿರುತ್ತದೆ.
ಆದರೆ ಹೊಸಗನ್ನಡದ ಜೋಡುಪದಗಳನ್ನು ವಿಂಗಡಿಸುವಲ್ಲಿ ಈ ರೀತಿ ಪ್ರಧಾನಪದ ಯಾವುದು ಎಂಬ ವಿಷಯ ಅಷ್ಟೊಂದು ಮುಖ್ಯವಾದ ಪಾತ್ರವನ್ನು ವಹಿಸುವುದಿಲ್ಲ. ಯಾಕೆಂದರೆ, ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಪ್ರಧಾನಪದ ಎರಡನೆಯ ಅಂಗವಾಗಿರುತ್ತದೆ.
ಹಾಗಾಗಿ, ಮೇಲಿನ ವಿಷಯದ ಬದಲು ಜೋಡುಪದದ ಮೊದಲನೆಯ ಅಂಗವಾಗಿ ಬರುವ ಪದ ಯಾವ ಪದವಗ್ರಕ್ಕೆ ಸೇರುತ್ತದೆ - ಅದು ನಾಮಪದವೇ, ಕ್ರಿಯಾಪದವೇ, ಅಥವಾ ಗುಣಪದವೇ ಎಂಬ ವಿಷಯ ಕನ್ನಡದ ಜೋಡುಪದಗಳ ವಿಭಜನೆಯಲ್ಲಿ ಹೆಚ್ಚು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಕಾರಣಕ್ಕಾಗಿ, ಕನ್ನಡದ ಜೋಡುಪದಗಳನ್ನು ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಆರು (ಇಲ್ಲವೇ ನಾಲ್ಕು) ಸಮಾಸಗಳಾಗಿ ವಿಂಗಡಿಸಲು ಪ್ರಯತ್ನಿಸಿದಲ್ಲಿ ಗೊಂದಲವಲ್ಲದೆ ಬೇರೇನೂ ಸಿಗಲಾರದು. ಕನ್ನಡದ ಜೋಡುಪದಗಳಲ್ಲಿ ಗುಣಪದವುಳ್ಳವುಗಳನ್ನು ಮಾತ್ರ ಅವುಗಳ ಪ್ರಧಾನಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಎರಡು ಉಪ ವಿಭಾಗಗಳಾಗಿ ವಿಂಗಡಿಸಲು ಸಾಧ್ಯ. ಮೇಲೆ (5.6.3ರಲ್ಲಿ) ಸೂಚಿಸಿರುವ ಹಾಗೆ ಮುಂಬಾಗಿಲು ಮತ್ತು ಮುಂಗೈ ಎಂಬಂತಹ ಜೋಡುಪದಗಳ ನಡುವೆ ಇಂತಹ ವ್ಯತ್ಯಾಸವಿದೆ.
ಹಾಗಾಗಿ ಇವುಗಳಲ್ಲಿ ಮೊದಲನೆಯದನ್ನು (ಮುಂಬಾಗಿಲು ಎಂಬುದನ್ನು) ತತ್ಪುರುಷದ ಹಾಗೆ ಎರಡನೆಯ ಅಂಗ ಪ್ರಧಾನವಾಗಿರುವ ಸಮಾಸವೆಂದೂ ಎರಡನೆಯದನ್ನು (ಮುಂಗೈ ಎಂಬುದನ್ನು) ಬಹುವ್ರೀಹಿಯ ಹಾಗೆ ಯಾವ ಅಂಗವೂ ಪ್ರಧಾನವಾಗಿಲ್ಲದ ಸಮಾಸವೆಂದೂ ಪರಿಗಣಿಸಲು ಸಾಧ್ಯವಿದೆ.
ಆದರೆ ಕನ್ನಡ ವೈಯಾಕರಣಿಗಳು ಇವೆರಡನ್ನೂ ಅವ್ಯಯೀಭಾವದಲ್ಲಿ (ಅವು ಕನ್ನಡದಲ್ಲಿ ಅವ್ಯಯವಲ್ಲವಾದ ಕಾರಣ ಅವಕ್ಕೆ `ಅಂಶೀ’ ಎಂಬ ಬೇರೆಯೇ ಒಂದು ಹೆಸರನ್ನು ಕೊಟ್ಟು) ಸೇರಿಸಿದ್ದಾರೆ, ಮತ್ತು ಬಹುವ್ರೀಹಿಗೆ ಬೇರೆ ರೀತಿಯ ಜೋಡುಪದಗಳನ್ನು ಉದಾಹರಣೆಗಳನ್ನಾಗಿ ಕೊಟ್ಟು ಗೊಂದಲ ಇನ್ನೂ ಹೆಚ್ಚುವ ಹಾಗೆ ಮಾಡಿದ್ದಾರೆ. ಕಮ್ರಧಾರಯವನ್ನು ತತ್ಪುರುಷದ ಒಂದು ಉಪಭೇದವೆಂಬುದಾಗಿ ಪರಿಗಣಿ ಸಿರುವುದು ಸಂಸ್ಕೃತದಲ್ಲಿ ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬ ವಿಷಯದ ಆಧಾರದ ಮೇಲೆ ಎಂಬು
118 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ದನ್ನು ಮೇಲೆ (5.5ರಲ್ಲಿ) ನೋಡಿರುವೆವು. ಜೋಡುಪದಗಳ ಅಂಗಗಳನ್ನು ಪ್ರಥಮಾ ವಿಭಕ್ತಿಯ ಮೂಲಕ ಸಂಬಂಧಿಸಲಾಗಿದೆಯಾದರೆ ಅವು ಕಮ್ರ ಧಾರಯಕ್ಕೆ ಉದಾಹರಣೆಗಳಾಗುತ್ತವೆ ಮತ್ತು ಬೇರೆ ವಿಭಕ್ತಿಗಳ ಮೂಲಕ ಸಂಬಂಧಿಸಲಾಗಿದೆಯಾದರೆ ಅವು (ಕಮ್ರಧಾರಯವಲ್ಲದ) ತತ್ಪುರುಷಕ್ಕೆ ಉದಾ ಹರಣೆಗಳಾಗುತ್ತವೆ.
ಆದರೆ ಕನ್ನಡದಲ್ಲಿ ಇಂತಹದೇ ವಿಭಜನೆಯನ್ನು ಬಳಸುವುದು ಕಷ್ಟಸಾಧ್ಯ. ಯಾಕೆಂದರೆ ಮೊದಲನೆಯದಾಗಿ, ಸಂಸ್ಕೃತದಲ್ಲಿ ಕಮ್ರಧಾರಯ ಸಮಾಸದ ಮೂಲಕ ತಯಾರಾಗುವ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಪ್ರತಿಯಾಗಿ ಕನ್ನಡದಲ್ಲಿ ಗುಣಪದವನ್ನೊಳಗೊಂಡಿರುವಂತಹ ಜೋಡುಪದಗಳು ಬರುತ್ತವೆ. ಇದಲ್ಲದೆ, ಇವುಗಳಲ್ಲಿ ಬರುವ ಮೊದಲನೆಯ ಅಂಗ ಅವುಗಳ ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಯಾವ ವಿಭಕ್ತಿ ಪ್ರತ್ಯಯದೊಂದಿಗೂ ಸೇರದೆ ಬರುತ್ತವೆ (5.4 ನೋಡಿ).
ಹಾಗಾಗಿ, ಅವುಗಳನ್ನು ತತ್ಪುರುಷದ ಉಪಭೇದವೆಂದು ಪರಿಗಣಿಸುವ ಬದಲು ಗುಣಪದವಿರುವವುಗಳೆಂಬ ಬೇರೆಯೇ ಒಂದು ವಿಭಾಗದಲ್ಲಿ ಇರಿಸುವ ಅವಶ್ಯಕತೆಯಿದೆ. ಇಂತಹ ಗುಣಪದವಿರುವ ಜೋಡುಪದಗಳು ಕಮ್ರಧಾರಯವೆಂದೆನಿಸಲು (ಇಲ್ಲವೇ ತತ್ಪುರುಷದ ಒಂದು ಉಪವಿಭಾಗವೆಂದೆನಿಸಲು) ಅವುಗಳ ಎರಡು ಅಂಗಗಳೂ ಒಂದೇ ವಿಭಕ್ತಿಯಲ್ಲಿ ಬರುವುದು ಅವಶ್ಯ. ಈ ಅವಶ್ಯಕತೆಯನ್ನು ಪೂರೈಸುವುದಕ್ಕಾಗಿ ಕನ್ನಡದ ವೈಯಾಕರಣಿಗಳು ಇಂತಹ ಜೋಡುಪದಳಿಗೆ ಒಳನುಡಿಯನ್ನು ಹೇಳುವಾಗ ಗುಣಪದಗಳನ್ನು ಹಾಗೆಯೇ ಬಳಸದೆ, ಅವುಗಳ ನಾಮರೂಪದಲ್ಲಿ ಬಳಸುತ್ತಾರೆ (ಹೊಸದು ಕನ್ನಡ > ಹೊಸಗನ್ನಡ, ಕರಿದು ಮುಗಿಲು > ಕಮ್ರುಗಿಲು) ಎಂಬುದನ್ನು ಮೇಲೆ ನೋಡಿದ್ದೇವೆ. ಆದರೆ ಇಂತಹ ಒಳನುಡಿಗಳು ಕನ್ನಡದಲ್ಲಿ `ವಾಕ್ಯ’ (ಇಲ್ಲವೇ ವಾಕ್ಯಾಂಶ) ಗಳಾಗಲಾರವು. ಉದಾಹರಣೆಗಾಗಿ ಹೊಸದು ಎಂಬುದು ಕನ್ನಡದಲ್ಲಿ ಹೊಸ ಗುಣಪದವನ್ನು ಕ್ರಿಯಾಪದದ ಜಾಗದಲ್ಲಿ ಎಂದರೆ ವಾಕ್ಯದ ಕೊನೆಯಲ್ಲಿ ಇರಿಸ ಬೇಕಾದಾಗ ಬಳಸುವ ರೂಪ (ಈ ಪುಸ್ತಕ ಹೊಸದು ಎಂಬುದಾಗಿ). ಅದನ್ನು ಹೊಸದಕ್ಕೆ, ಹೊಸದರ ಎಂಬಂತಹ ವಿಭಕ್ತಿ ರೂಪದಲ್ಲೂ ಬಳಸಲು ಸಾಧ್ಯವಿದೆ.
ಆದರೆ, ನಾಮಪದದ ಮುಂದೆ ಇರಿಸಿ ಹೊಸದು ಪುಸ್ತಕ ಎಂಬುದಾಗಿ ಹೇಳಿದರೆ ಅದಕ್ಕೆ ಹೊಸ ಪುಸ್ತಕ ಎಂಬುದಕ್ಕಿಂತ ತೀರ ಭಿನ್ನವಾದ ಅಥ್ರ ಬರುತ್ತದೆ. ಇದಲ್ಲದೆ, *ಹೊಸದರ ಪುಸ್ತಕ ಎಂಬಂತಹ ಬಳಕೆಯೂ ಕನ್ನಡದಲ್ಲಿ ಇಲ್ಲವಾದುದರಿಂದ, ಈ ಗುಣಪದವುಳ್ಳ ಜೋಡುಪದಗಳನ್ನು
119 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳನ್ನು ಜೋಡಿಸುವುದರ ಮೂಲಕ ಪಡೆಯುವುದು ಕಷ್ಟ. ಅಂಗಗಳೆರಡು ವಿಶೇಷಣ-ವಿಶೇಷ್ಯ ಸಂಬಂಧದಿಂದ ಸೇರಿಕೊಂಡಿವೆಯಾದರೆ ಅಂತಹ ಜೋಡುಪದವನ್ನು ಕಮ್ರಧಾರಯವೆಂದು ಕರೆಯಬಹುದೆಂಬುದಾಗಿ ಬೇರೆಯೇ ಒಂದು ವಿಷಯವನ್ನು ಕೆಲವರು ವೈಯಾಕರಣಿಗಳು ತತ್ಪುರುಷದ ವಿಭಜನೆಗೆ ಆಧಾರವಾಗಿ ಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಅಂತಹ ವಿಭಜನೆಯ ವ್ಯಾಪ್ತಿಯಲ್ಲಿ ಕನ್ನಡದ ಗುಣಪದವಿರುವ ಜೋಡುಪದಗಳಲ್ಲಿ ಕೆಲವು ಮಾತ್ರ ಬರಬಲ್ಲುವಲ್ಲದೆ ಎಲ್ಲವೂ ಬರಲಾರವು.
ಉದಾಹರಣೆಗಾಗಿ, ಕನ್ನಡದ ನಡುಹಗಲು, ಚಿಕ್ಕಮ್ಮ ಮೊದಲಾದವುಗಳು ಗುಣಪದವಿರುವ ಜೋಡುಪದಗಳಾಗಿವೆ. ಆದರೆ ಅವುಗಳ ಅಂಗಗಳಾಗಿ ಬಂದಿರುವ ನಾಮಪದಗಳು (ಹಗಲು, ಅಮ್ಮ ಮೊದಲಾದವು) ಅವುಗಳಲ್ಲಿ ಬಂದಿರುವ ಗುಣಪದಗಳ (ನಡು, ಚಿಕ್ಕ ಮೊದಲಾದವುಗಳ) ವಿಶೇಷ್ಯಗಳಲ್ಲ. ಈ ಜೋಡುಪದಗಳ ಅಂಗಗಳಾಗಿಲ್ಲದಂತಹ ಭಾಗ, ಹೆಂಗಸು ಮೊದಲಾದ ಪದಗಳು ಅವುಗಳ ವಿಶೇಷ್ಯಗಳು (ಹಗಲಿನ ನಡುಭಾಗ > ನಡುಹಗಲು). ಹಾಗಾಗಿ ಅಂತಹ ಜೋಡುಪದಗಳಿಗೆ ವಿಶೇಷಣ-ವಿಶೇಷ್ಯ ಸಂಬಂಧ ಆಧಾರ ವಾಗಲಾರದು.
ಇನ್ನೊಂದು ವಿಷಯವೇನೆಂದರೆ, ಸಂಸ್ಕೃತದಲ್ಲಿ ಎರಡು ನಾಮಪದಗಳು ಅಂಗಗಳಾಗಿ ಬಂದಿರುವ ಚಂದ್ರಮುಖಂ, ಗೋಗಭ್ರಿಣೀ ಮೊದಲಾದ ಜೋಡುಪದಗಳಲ್ಲೂ ಕಮ್ರಧಾರಯ ಸಮಾಸವಿದೆಯೆಂದು ಹೇಳಬೇಕಾಗುತ್ತದೆ. ಈ ಪದಗಳಲ್ಲೂ ಪ್ರಥಮಾ ವಿಭಕ್ತಿಯ ಮೂಲಕ ಎರಡು ಅಂಗಗಳನ್ನು ಸಂಬಂಧಿಸಲಾಗಿದೆಯೆಂಬುದೇ ಇದಕ್ಕೆ ಕಾರಣ.
ಆದರೆ ಕನ್ನಡದಲ್ಲಿ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ರಚಿಸಿದ ಜೋಡುಪದಗಳು ಗುಣಪದವೊಂದನ್ನು ನಾಮಪದದೊಂದಿಗೆ ಸೇರಿಸಿ ರಚಿಸಿದ ಜೋಡುಪದಗಳಿಗಿಂತ ತೀರಾ ಭಿನ್ನವಾಗಿರುತ್ತವೆ (3.2-4 ನೋಡಿ). ಹಾಗಾಗಿ,
ಅಂತಹ ವಿಭಜನೆ ಕನ್ನಡದ ಮಟ್ಟಿಗೆ ಸಮಪ್ರಕವಾಗಲಾರದು. ತತ್ಪುರುಷ ಸಮಾಸದಲ್ಲಿ ಮೊದಲನೆಯ ಅಂಗವಾಗಿ ಬರುವ ಪದ ಎಣಿಕೆಯನ್ನು ಸೂಚಿಸುವ ಪದವಾಗಿದೆಯಾದರೆ ಅದನ್ನು ದ್ವಿಗು ಎಂಬ ಬೇರೊಂದು ಉಪವಿಭಾಗದಲ್ಲಿ ಇರಿಸುವ ಕ್ರಮ ಸಂಸ್ಕೃತದಲ್ಲಿ ರೂಢಿಯಲ್ಲಿದೆ. ಕನ್ನಡದಲ್ಲಿ ಇಂತಹ ಜೋಡುಪದಗಳು ತತ್ಪುರುಷದ ಅಂಗವಾಗಿ ಬರುವ ಬದಲು ಕಮ್ರಧಾರಯದ (ಎಂದರೆ ಗುಣಪದವಿರುವ ಸಮಾಸದ) ಅಂಗವಾಗಿ ಬರುತ್ತವೆ. ಯಾಕೆಂದರೆ, ಕನ್ನಡದಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ನಾಮಪದಗಳೊಂದಿಗೆ ಬರುವಾಗ ವಿಭಕ್ತಿ ಪ್ರತ್ಯಯವಿಲ್ಲದೆ ಬರುತ್ತವೆ.
120 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಉದಾಹರಣೆಗಾಗಿ, ಕನ್ನಡದಲ್ಲಿ ಮೂರು ಪುಸ್ತಕಗಳಿಂದ ಎನ್ನುತ್ತೇವಲ್ಲದೆ *ಮೂರರಿಂದ ಪುಸ್ತಕಗಳಿಂದ ಎಂದು ಹೇಳುವುದಿಲ್ಲ; ಆದರೆ ಸಂಸ್ಕೃತದಲ್ಲಿ ತ್ರಿಭ್ಯಃ ಪುಸ್ತಕೇಭ್ಯಃ `ಮೂರು ಪುಸ್ತಕಗಳಿಂದ’ ಎಂಬುದಾಗಿ ಭ್ಯಃ ವಿಭಕ್ತಿ ಪ್ರತ್ಯಯವನ್ನು ಪುಸ್ತಕ ನಾಮಪದಕ್ಕೆ ಮಾತ್ರವಲ್ಲದೆ, ತ್ರಿ ಎಣಿಕೆಯ ಪದಕ್ಕೂ ಸೇರಿಸಿ ಹೇಳಲಾಗುತ್ತದೆ (10.3 ನೋಡಿ).
ಈ ರೀತಿ ಜೋಡುಪದಗಳ ವಿಭಜನೆಗೆ ಕನ್ನಡದಲ್ಲಿ ಆಧಾರವಾಗಬಲ್ಲ ವಿಷಯಗಳು ಸಂಸ್ಕೃತದಲ್ಲಿ ಆಧಾರವಾಗಬಲ್ಲ ವಿಷಯಗಳಿಗಿಂತ ತೀರಾ ಭಿನ್ನ ವಾಗಿರುವುವಾದ ಕಾರಣ, ಜೋಡುಪದಗಳ (ಸಮಾಸಗಳ) ವಿಭಜನೆಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಹಾಗೆಯೇ ತಂದು ಅಳವಡಿಸಲು ಸಾಧ್ಯವಾಗದು.
5.6.2 ಒಳನುಡಿಗಳ ಬಳಕೆ ಜೋಡುಪದಗಳ ಒಳರಚನೆ ಎಂತಹದು ಎಂಬುದನ್ನು ಮತ್ತು ಅವುಗಳ ಅಂಗಗಳಾಗಿ ಬಂದಿರುವ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಅವುಗಳಿಗೆ ಎಂತಹ ಒಳನುಡಿ (ವಿಗ್ರಹವಾಕ್ಯ)ಗಳನ್ನು ಕೊಡಬೇಕಾಗುತ್ತದೆ ಅಥವಾ ಕೊಡಲು ಸಾಧ್ಯ ಎಂಬ ವಿಷಯದ ಆಧಾರದ ಮೇಲೆ ನಿಧ್ರರಿಸ ಬೇಕಾಗುತ್ತದೆ.
ಉದಾಹರಣೆಗಾಗಿ, ಮಿಂಚುಹುಳ ಜೋಡುಪದಕ್ಕೆ ಮಿಂಚುವ ಹುಳ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು ಅದನ್ನು ಈ ಹುಳ ಮಿಂಚುತ್ತದೆ ಎಂಬ ವಾಕ್ಯದಿಂದ ಪಡೆಯಲು ಸಾಧ್ಯವಿದೆ. ಈ ವಾಕ್ಯದಲ್ಲಿ ಜೋಡುಪದದ ಅಂಗಗಳಾಗಿ ಬಂದಿರುವ ಮಿಂಚು ಮತ್ತು ಹುಳ ಎಂಬ ಪದಗಳು ಅನುಕ್ರಮವಾಗಿ ಒಂದು ಘಟನೆಯನ್ನು ಸೂಚಿಸುವ ಕ್ರಿಯಾಪದ ಮತ್ತು ಆ ಘಟನೆಯನ್ನು ನಡೆಸುವ ಜಂತುಗಳಾಗಿವೆ.
ಇದೇ ರೀತಿಯಲ್ಲಿ ಕಣ್ಣುಸನ್ನೆ ಜೋಡುಪದಕ್ಕೆ ಕಣ್ಣಿನಿಂದ ಮಾಡಿದ ಸನ್ನೆ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರ ಅಂಗಗಳಾಗಿ ಬಂದಿರುವ ಕಣ್ಣು ಮತ್ತು ಸನ್ನೆ ಎಂಬ ಎರಡು ನಾಮಪದಗಳ ನಡುವೆ ತೃತೀಯಾ ವಿಭಕ್ತಿಯ ಮೂಲಕ ಸೂಚಿತವಾಗುವ ಕರಣ-ಕಾಯ್ರ ಸಂಬಂಧವಿದೆಯೆಂದು ಹೇಳಬಹುದು. ಸಾಮಾನ್ಯವಾಗಿ ಜೋಡುಪದಗಳ ಒಳನುಡಿಯನ್ನು ಅವುಗಳ ಅಥ್ರಕ್ಕನು ಸಾರವಾಗಿ ಕೊಡುವುದು ರೂಢಿ. ಆದರೆ ಕೆಲವೊಮ್ಮೆ ಅವುಗಳ ಅಥ್ರಕ್ಕೂ ಅವುಗಳ ಅಂಗಗಳಾಗಿ ಬಂದಿರುವ ಪದಗಳಿಗೂ ಹೊಂದಿಕೆಯಾಗದಿರಲು ಸಾಧ್ಯವಿದೆ. ಅಂತಹ ಸಂದಭ್ರಗಳಲ್ಲಿ ಒಂದು ಜೋಡುಪದದ ಒಳನುಡಿ ಅದರ ಅಥ್ರವನ್ನು ಸೂಚಿಸದಿರಲು ಸಾಧ್ಯವಿದೆ.
121 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಉದಾಹರಣೆಗಾಗಿ, ಹೊಸಮನೆ ಜೋಡುಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಗುರುತಿಸಲು ಸಾಧ್ಯವಿದೆಯಾದರೂ ಆ ಪದಕ್ಕೆ ಒಳನುಡಿ ಯನ್ನು ಕೊಡುವಾಗ ಹೊಸ ಎಂಬುದರ ಬದಲು ಹಳೆ ಎಂಬ ಗುಣಪದವನ್ನು ಬಳಸುವುದು ಸರಿಯಾಗದು.
ನಿಜಕ್ಕೂ ಜೋಡುಪದವೊಂದಕ್ಕೆ ಎರಡು ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ. ಆ ಪದವನ್ನು ಮೊದಲ ಬಾರಿಗೆ ಭಾಷೆಯಲ್ಲಿ ಬಳಸಿದಾಗ ಅದಕ್ಕೆ ಯಾವ ಅಥ್ರ ಇದ್ದಿರಬಹುದು ಎಂಬುದನ್ನು ಸೂಚಿಸುವ ಒಳನುಡಿ ಯೊಂದು, ಮತ್ತು ರೂಢಿಗೆ ಬಂದ ಮೇಲೆ ಅದು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಬದಲಾವಣೆಗಳಾದುದರಿಂದಾಗಿ ಅದರ ಅಥ್ರದಲ್ಲೂ ಮಾಪ್ರಾಟು ಗಳಾಗಿವೆಯಾದಲ್ಲಿ, ಅದರ ಈಗಿನ ಅಥ್ರವೇನೆಂಬುದನ್ನು ಸೂಚಿಸುವ ಒಳನುಡಿ ಯಿನ್ನೊಂದು.
ಸಾಮಾನ್ಯವಾಗಿ ಜೋಡುಪದದ ಅಂಗಗಳನ್ನು ಅದರ ಈಗಿನ ಅಥ್ರಕ್ಕೆ ಹೊಂದಿಕೆಯಾಗುವ ಹಾಗೆ ಅವುಗಳಲ್ಲಿ ಒಂದನ್ನು ಇನ್ನೊಂದರೊಂದಿಗೆ ಸಂಬಂಧಿಸುವಂತಹ ಒಳನುಡಿ ವೈಯಾಕರಣಿಗಳಿಗೆ ಒಪ್ಪಿಗೆಯಾಗುತ್ತದೆ. ಇದು ಈ ಎರಡು ರೀತಿಯ ಒಳನುಡಿಗಳ ಸಮ್ಮಿಳನವಾಗಿರಲೂ ಸಾಧ್ಯವಿದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಾಣಿಸುವ ಕೆಲವು ಜೋಡುಪದಗಳು ಮೇಲ್ನೋಟಕ್ಕೆ ಒಂದೇ ರೀತಿಯವಾಗಿ ಕಂಡುಬಂದರೂ ಅವುಗಳ ಒಳನುಡಿ ಗಳನ್ನು ಪರಿಶೀಲಿಸಿದಾಗ ಅವು ಒಂದಕ್ಕಿಂತ ಒಂದು ತೀರಾ ಭಿನ್ನವಾಗಿರುವುದು ಕಂಡುಬರುತ್ತದೆ. ಜೋಡುಪದಗಳ ವಿಭಜನೆಗೆ ಅವುಗಳ ಒಳನುಡಿ ಒಂದು ಕಡೆಗಣಿಸಲು ಮುಖ್ಯವಾದ ಆಧಾರವಾಗುವುದರಿಂದ ಈ ವ್ಯತ್ಯಾಸವನ್ನು ಸಾಧ್ಯವಿಲ್ಲ.
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದ ಜೋಡುಪದಗಳಿಗೂ ಕನ್ನಡದಲ್ಲಿ ಕೊಡಬೇಕಾಗುವ ಒಳನುಡಿ ಸಂಸ್ಕೃತದಲ್ಲಿ ಕೊಡುವ ಒಳನುಡಿಗಿಂತ ಭಿನ್ನವಾಗಿರಲು ಸಾಧ್ಯ ಎಂಬುದನ್ನು ಮುಂದೆ (5.9ರಲ್ಲಿ) ನೋಡಲಿರುವೆವು.
5.7 ಕನ್ನಡ ವೈಯಾಕರಣಿಗಳು ಹೇಳುವ ಸಮಾಸಗಳು ಸಂಸ್ಕೃತ ಜೋಡುಪದಗಳ ವಿಭಜನೆಯನ್ನು ಕನ್ನಡಕ್ಕೆ ಹಾಗೆಯೇ ಅಳವಡಿಸಲು ಕನ್ನಡ ವೈಯಾಕರಣಿಗಳು ಪ್ರಯತ್ನಿಸಿದ್ದಾರೆಂದು ಮೇಲೆ ಹೇಳಿದ್ದೆ. ಈ ಪ್ರಯತ್ನ ಕನ್ನಡದ ಅತೀ ಪ್ರಾಚೀನ ವ್ಯಾಕರಣ ಗ್ರಂಥಗಳ ಕಾಲದಿಂದಲೂ ನಡೆದು ಬಂದಿದೆ. ಪ್ರಾಕೃತ, ಅಪಭ್ರಂಶ, ಪಾಲಿ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕೃತದ ಒಂದು (ವಿಕೃತ) ರೂಪವೆಂಬ ತಪ್ಪು ಕಲ್ಪನೆ ಇದಕ್ಕೆ ಆಧಾರ ವಾಗಿದ್ದಿರಬೇಕು.
122 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಈ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ ಒಳರಚನೆ ಮೇಲೆ ವಿವರಿಸಿದ ಹಾಗೆ ಒಂದಕ್ಕಿಂತ ಒಂದು ತೀರಾ ಭಿನ್ನವಾಗಿದೆಯಾದ ಕಾರಣ, ಈ ಪ್ರಯತ್ನ ಸಫಲವಾಗುವುದು ಅಸಂಭವವೇ. ಹಾಗಿದ್ದರೂ ನಮ್ಮ ವೈಯಾಕರಣಿಗಳು ಅದನ್ನು ಇವತ್ತಿಗೂ, ಎಂದರೆ ಈ ಎರಡು ಭಾಷೆಗಳು ಬೇರೆ ಬೇರೆ ಭಾಷಾಕುಟುಂಬಗಳಿಗೆ ಸೇರಿದವುಗಳೆಂಬ ವಿಷಯ ತಿಳಿದಮೇಲೂ, ಹಾಗೆಯೇ ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಆಶ್ಚಯ್ರವನ್ನು ತರುವ ¸ÀAUÀw.
ಸಂಸ್ಕೃತದ ಆರು ಸಮಾಸಗಳನ್ನು (ತತ್ಪುರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವ್ರೀಹಿ ಎಂಬ ನಾಲ್ಕು ಮುಖ್ಯ ಸಮಾಸಗಳನ್ನು ಮತ್ತು ಅವುಗಳಲ್ಲಿ ಒಂದಾದ ತತ್ಪುರುಷದ ಎರಡು ಉಪಭೇದಗಳಾಗಿರುವ ಕಮ್ರಧಾರಯ ಮತ್ತು ದ್ವಿಗು ಎಂಬವುಗಳನ್ನು) ಕನ್ನಡಕ್ಕೆ ಅಳವಡಿಸುವುದರಲ್ಲಿ ಎಂತಹ ತೊಂದರೆಗಳೆಲ್ಲ ಇವೆ ಎಂಬುದನ್ನು, ಮತ್ತು ಅವುಗಳಿಗಿಂತ ಭಿನ್ನವಾದ ಹಾಗೂ ಕನ್ನಡದವೇ ಆದ ಕನ್ನಡದಲ್ಲಿವೆ0iÉುಂದು ಕ್ರಿಯಾಸಮಾಸ ಸಾಧಿಸುವುದು ಹೇಗೆ ಅಸಾಧ್ಯ ಎಂಬುದನ್ನು ಕೆಳಗೆ ವಿವರಿಸಲಾಗಿದೆ.
ಗಮಕಸಮಾಸಗಳೆಂಬವು
ಮತ್ತು
5.7.1 ತತ್ಪುರುಷ ಸಂಸ್ಕೃತದಲ್ಲಿ ರಾಜೇಂದ್ರ, ಇಂದ್ರಧನು ಮೊದಲಾದ ಜೋಡುಪದಗಳನ್ನು ತತ್ಪುರುಷ'ವೆಂಬ ಹೆಸರಿನಿಂದ ಕರೆಯಲಾಗುತ್ತದೆ. (5.5)ರಲ್ಲಿ ವಿವರಿಸಿದ ಹಾಗೆ, ಈ ಜೋಡುಪದಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವಾಗಿದೆ ಎಂಬ ವಿಷಯ ಇದಕ್ಕೆ ಆಧಾರವಾಗಿದೆ. ಆದರೆ ಕನ್ನಡದ ಜೋಡುಪದಗಳನ್ನು ಈ ವಿಷಯದ ಆಧಾರದ ಮೇಲೆ ಹೆಸರಿಸುವುದರಿಂದ ಯಾವ ಪ್ರಯೋಜನವೂ ದೊರಕಲಾರದು. ಯಾಕೆಂದರೆ, ಕನ್ನಡದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜೋಡುಪದಗಳಲ್ಲೂ ಎರಡನೆಯ ಅಂಗ ಪ್ರಧಾನ ಪದವಾಗಿರುತ್ತದೆ (5.6 ನೋಡಿ). ಹಾಗಾಗಿ, ಮೇಲಿನ ವಿಷಯವನ್ನು ಬಳಸಿದಲ್ಲಿ ಕನ್ನಡದ ಎಲ್ಲಾ ಜೋಡುಪದಗಳೂ ತತ್ಪುರುಷವೆಂಬ ಒಂದೇ ಸಮಾಸಕ್ಕೆ ಉದಾಹರಣೆಗಳಾಗಬಲ್ಲುವು. ಎಂದರೆ, ಮೇಲಿನ ವಿಷಯವನ್ನು ಬಳಸಿದಲ್ಲಿ ನಮಗೆ ಕನ್ನಡದಲ್ಲಿ ಜೋಡುಪದಗಳ ವಿಭಜನೆ0iÉುೀ ಸಿಗುವುದಿಲ್ಲ. ಉದಾಹರಣೆಗಾಗಿ, ಸಂಸ್ಕೃತದ ಅವ್ಯಯೀಭಾವಕ್ಕೆ ಸಮನಾಗಿರುವ (ಅಂಶಿ’ ಎಂಬ ಹೆಸರಿನ) ಸಮಾಸಕ್ಕೆ ಕನ್ನಡ ವ್ಯಾಕರಣಗಳಲ್ಲಿ ಉದಾಹರಣೆಗಳನ್ನಾಗಿ ಕೊಡುವ ಕೆಳದುಟಿ (ಕೆಳಗಿನ ತುಟಿ) ಹೊರಬಾಗಿಲು (ಹೊರಗಿನ ಬಾಗಿಲು) ಮೊದಲಾದವುಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವೆನ್ನಲು ಯಾವ ತೊಂದರೆಯೂ ಇಲ್ಲ.
123 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇದೇ ರೀತಿಯಲ್ಲಿ, ಕನ್ನಡದ ವೈಯಾಕರಣಿಗಳು ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವ ಹಣೆಗಣ್ಣ, ಚಲವಾದಿ ಮೊದಲಾದವುಗಳಲ್ಲೂ ಕೆಳಗೆ (5.8.6)ರಲ್ಲಿ ವಿವರಿಸಿರುವ ಹಾಗೆ ಎರಡನೆಯ ಅಂಗವಾಗಿ ಬರುವ ಪದ ಪ್ರಧಾನವೆಂದು ವಾದಿಸಲು ಸಾಧ್ಯವಿದೆ. ಇದಲ್ಲದೆ, ಕನ್ನಡ ವೈಯಾಕರಣಿಗಳು ಗಮಕ, ಕ್ರಿಯಾಸಮಾಸ ಮೊದಲಾದ ಇತರ ಹೆಸರುಗಳಿಂದ ಕರೆಯುವ ಜೋಡುಪದ ಇಲ್ಲವೆ ಪದಕಂತೆಗಳಲ್ಲೂ ಎರಡನೆಯ ಪದವೇ ಪ್ರಧಾನ ಪದವಾಗಿರುತ್ತದೆ. ಹಾಗಾಗಿ, ಕನ್ನಡದ ಮಟ್ಟಿಗೆ ತತ್ಪುರುಷ ಸಮಾಸ ಎಂಬುದು ಒಂದು ಅನವಶ್ಯಕವಾದ ಕಲ್ಪನೆ.
5.7.2 ಕಮ್ರಧಾರಯ ಕನ್ನಡ ವ್ಯಾಕರಣಗಳಲ್ಲಿ ಕಮ್ರಧಾರಯ ಸಮಾಸಕ್ಕೆ ಕೊಡುವ ಉದಾಹರಣೆ ಗಳಲ್ಲಿ ಹೆಚ್ಚಿನವೂ ಜೋಡುಪದಗಳೇ ಅಲ್ಲ. ಗುಣಪದಗಳನ್ನು ಕನ್ನಡದಲ್ಲಿ ಹಾಗೆಯೇ ಅವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆ ನಾಮಪದಗಳೊಂದಿಗೆ ಬಳಸುವ ಕ್ರಮವಿದೆಯಾದ ಕಾರಣ, ಸಂಸ್ಕೃತದ ಜೋಡುಪದಗಳೊಂದಿಗೆ ಹೋಲಿಸಿದಾಗ ಅವು ಜೋಡುಪದಗಳ ಹಾಗೆ ಕಾಣಿಸುತ್ತವೆ. ಆದರೆ ನಿಜಕ್ಕೂ ಕನ್ನಡದಲ್ಲಿ ಅವು ಪದಕಂತೆಗಳಲ್ಲದೆ ಜೋಡುಪದಗಳಲ್ಲವೆಂಬುದನ್ನು ಮೇಲೆ (5.3)ರಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ. ಕಮ್ರಧಾರಯಕ್ಕೆ ಕೊಟ್ಟಿರುವ ಬೇರೆ ಕೆಲವು ಜೋಡುಪದಗಳು (ಕಿರುಗೆಜ್ಜೆ, ಎಳನೀರು, ಹಳಗನ್ನಡ, ಬೆಳ್ಗಲ್ಲು ಮೊದಲಾದವುಗಳು) ಕನ್ನಡದಲ್ಲಿ ಜೋಡು ಪದಗಳಾಗಿವೆಯಾದರೂ ಅವನ್ನು ತತ್ಪುರುಷದ ಉಪವಿಭಾಗವೆಂದು ಹೇಳಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಈ ಜೋಡುಪದಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವಲ್ಲ. ಅದು ಗುಣಪದ ವೆಂಬ ಬೇರೆಯೇ ಒಂದು ಪದವಗ್ರಕ್ಕೆ ಸೇರುವ ಪದ.
ಹಾಗಾಗಿ, ಈ ಜೋಡುಪದಗಳು ಕಮ್ರಧಾರ ಸಮಾಸಕ್ಕೆ ಉದಾಹರಣೆ ಗಳೆಂದು ಹೇಳುವುದಿದ್ದಲ್ಲಿ, ಅದು ಸಂಸ್ಕೃತದ ಹಾಗೆ ತತ್ಪುರುಷದ ಅಂಗ ವಾಗಿರದೆ, ಬೇರೆಯೇ ಒಂದು ಸಮಾಸವಾಗಿದೆ0iÉುಂದು ವಾದಿಸಬೇಕಾಗುತ್ತದೆ. ಮೇಲೆ ಕೊಟ್ಟಿರುವ ಗುಣಪದವಿರುವ ಜೋಡುಪದಗಳನ್ನು ಅವುಗಳ ಅಂಗ ಗಳೆರಡು ಒಂದೇ ವಿಭಕ್ತಿಯಲ್ಲಿಲ್ಲದಿದ್ದರೂ ಕಮ್ರಧಾರಯವೆಂದು ಕರೆದಲ್ಲಿ ಬೇರೊಂದು ತೊಂದರೆ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ, ಅಂಗಗಳಾಗಿ ಬಂದಿರುವ ಪದಗಳಲ್ಲಿ ಎರಡೂ ಒಂದೇ ವಿಭಕ್ತಿಯಲ್ಲಿರುವಂತಹ ಎರಡು ನಾಮಪದಗಳನ್ನು ಸೇರಿಸಿ ರಚಿಸಿದ ಜೋಡುಪದಗಳೂ ಕನ್ನಡದಲ್ಲಿ ಕೆಲವಿವೆ.
124 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಉದಾಹರಣೆಗಾಗಿ ಅರಮನೆ (ಅರಸನು ಇರುವ ಮನೆ), ಕಾಲ್ಮಣೆ (ಕಾಲು ಇರಿಸುವ ಮಣೆ) ಮೊದಲಾದ ಜೋಡುಪದಗಳಲ್ಲಿ ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳು ಒಟ್ಟಿಗೆ ಸೇರಿವೆ. ಆದರೆ ಇವುಗಳ ಮೊದಲನೆಯ ಪದ ಗುಣಪದವಲ್ಲವಾದ ಕಾರಣ, ಮೇಲೆ ಸೂಚಿಸಿದ ಅಭಿಪ್ರಾಯದ ಮೇರೆಗೆ ಅವು ಕಮ್ರಧಾರಯವಾಗಲಾರವು. ಅಂತೂ ಕಮ್ರಧಾರಯವನ್ನು ಸಂಸ್ಕೃತದ ಹಾಗೆಯೇ ಕನ್ನಡಕ್ಕೆ ಅಳವಡಿಸುವುದು ಅಸಾಧ್ಯ.
ಮೇಲೆ (5.5.2)ನೇ ವಿಭಾಗದಲ್ಲಿ ಕ್ರಿಯಾಪದವಿರುವ ಜೋಡುಪದ ಗಳೆಂದು ಕರೆದಿರುವ ಹುರಿಗಡಲೆ, ಸಿಡಿಮದ್ದು, ಕಡೆಗೋಲು ಎಂಬಂತಹ ಕಮ್ರಧಾರಯವೆಂದು ಕೆಲವರು ವೈಯಾಕರಣಿಗಳು ಜೋಡುಪದಗಳನ್ನು ಪರಿಗಣಿಸಿದ್ದಾರೆ (ಶ್ರೀಕಂಠಯ್ಯ 1952 ನೋಡಿ). ಇಂತಹ ಜೋಡುಪದಗಳಿಗೆ ಹುರಿದ ಕಡಲೆ, ಸಿಡಿಯುವ ಮದ್ದು, ಕಡೆಯುವ ಕೋಲು ಎಂಬುದಾಗಿ ಕ್ರಿಯಾ ಪದದ ಕೃದಂತರೂಪವೊಂದನ್ನು ಬಳಸಿರುವ ಒಳನುಡಿ(ವಿಗ್ರಹವಾಕ್ಯ)ವನ್ನು ಕೊಡುವುದರ ಮೂಲಕ ಇದನ್ನು ಸಮಥ್ರಿಸಲಾಗಿದೆ.
ಆದರೆ ಇಲ್ಲೂ ಜೋಡುಪದದ ಅಂಗಗಳಾಗಿ ಬಂದಿರುವ ಪದಗಳಲ್ಲಿ ಮೊದಲನೆಯದು ನಾಮಪದವಲ್ಲ (ಒಳನುಡಿಯಲ್ಲೂ ಮೊದಲನೆಯದು) ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲಿ ಕೃದಂತಗಳು ನಾಮಪದಗಳಾಗಿ ಬಳಕೆಯಾಗುತ್ತವೆ. ಯಾಕೆಂದರೆ, ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಕೃದಂತಗಳು ನಾಮಪದಗಳಲ್ಲ; ಅವು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳ ವಿಶೇಷಣಗಳಾಗಿ) ಬಳಕೆ ಯಾಗಬಲ್ಲ ಕ್ರಿಯಾರೂಪಗಳು ಮಾತ್ರ.
5.7.3 ದ್ವಿಗು ತತ್ಪುರುಷ ಸಮಾಸಕ್ಕೆ ಸೇರಿದ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಒಂದು ಎಣಿಕೆಯ ಪದ ಬಂದಿದೆಯಾದರೆ, ಅವನ್ನು ಸಂಸ್ಕೃತದ ವೈಯಾ ಕರಣಿಗಳು ದ್ವಿಗು ಎಂಬ ಒಂದು ಉಪವಿಭಾಗದಲ್ಲಿ ವಗ್ರೀಕರಿಸುತ್ತಾರೆ. ಸಂಸ್ಕೃತದಲ್ಲಿ ಎಣಿಕೆಯ ಪದಗಳು ಇತರ ನಾಮಪದಗಳ ಹಾಗೆಯೇ ಬಳಕೆಯಾಗುವುವಾದ ಕಾರಣ ಈ ಸಮಾಸವನ್ನು ಸಂಸ್ಕೃತದಲ್ಲಿ ತತ್ಪುರುಷದ ಒಂದು ಉಪವಿಭಾಗವೆಂದು ಪರಿಗಣಿಸುವುದರಲ್ಲಿ ತಪ್ಪಿಲ್ಲ.
ಆದರೆ ಕನ್ನಡದಲ್ಲಿ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮ ಪದಗಳ ಹಾಗೆ ಬಳಕೆಯಾಗುತ್ತವೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಬೇರೆ ನಾಮಪದ ಗಳೊಂದಿಗೆ ಬಳಸಿದಾಗ ಅವು ಕನ್ನಡದಲ್ಲಿ ನಾಮಪದಗಳ ಹಾಗೆ ಷಷ್ಠೀ ವಿಭಕ್ತಿ ಯಲ್ಲಿ ಬರುವುದಿಲ್ಲ. ಇದಕ್ಕೆ ಬದಲು ಗುಣಪದಗಳ ಹಾಗೆ ಯಾವ ಪ್ರತ್ಯಯ
125 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ದೊಂದಿಗೂ ಸೇರದೆ ಹಾಗೆಯೇ ಬರುತ್ತವೆ (ಮೂರು ಪುಸ್ತಕಗಳನ್ನು, ಮೂರು ಪುಸ್ತಕಗಳಿಗೆ).
ನಾಮಪದಗಳ ಜಾಗದಲ್ಲಿ ಬರುವಾಗ ಮಾತ್ರ ಅವು ಇತರ ನಾಮಪದಗಳ ಹಾಗೆ ವಿಭಕ್ತಿ ಪ್ರತ್ಯಯಗಳೊಂದಿಗೆ ಬರುತ್ತವೆ (ಮೂರನ್ನು ಇಲ್ಲಿ ಕೊಡು).
ಇಬ್ಭಾಗ, ಇಮ್ಮಡಿ, ಮುನ್ನೂರು, ನಲುವತ್ತು ಮೊದಲಾದ ಜೋಡು ಪದಗಳ ಒಳರಚನೆಯಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ವಿಭಕ್ತಿ ಪ್ರತ್ಯಯವಿಲ್ಲದೆ ಬಳಕೆಯಾಗಿವೆಯಾದ ಕಾರಣ ಅಂತಹ ಜೋಡುಪದಗಳನ್ನು ಗುಣಪದವಿರುವ ಜೋಡುಪದಗಳ ವಿಭಾಗದಲ್ಲಿ ಸೇರಿಸುವುದೇ ಒಳ್ಳೆಯದು.
ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳು ಸಮಾನ (ಇಲ್ಲವೇ ಅಸಮಾನ) ವಿಭಕ್ತಿಯಲ್ಲಿರುವವುಗಳೆಂದು ಹೇಳಲು ಸಾಧ್ಯವಿಲ್ಲವಾದ ಕಾರಣ (ಅವು ಯಾವ ವಿಭಕ್ತಿಯಲ್ಲೂ ಇಲ್ಲವಾದ ಕಾರಣ) ಅವನ್ನು ತತ್ಪುರುಷದಲ್ಲಿ ಸೇರಿಸುವುದು ಕನ್ನಡದ ಮಟ್ಟಿಗಂತೂ ಕಷ್ಟಸಾಧ್ಯ.
5.7.4 ಅವ್ಯಯೀಭಾವ ಸಂಸ್ಕೃತದಲ್ಲಿ ಯಥಾಶಕ್ತಿ, ಉಪಕೃಷ್ಣಂ, ಪ್ರತಿದಿನಂ, ಪರೋಕ್ಷಂ ಮೊದಲಾದ ಜೋಡುಪದಗಳನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆ ಗಳನ್ನಾಗಿ ಕೊಡುವುದು ಕ್ರಮ. ಇವುಗಳಲ್ಲಿ ಅವ್ಯಯದೊಂದಿಗೆ ನಾಮಪದವನ್ನು ಸೇರಿಸಲಾಗಿದೆ, ಮತ್ತು ಈ ಜೋಡುಪದಗಳನ್ನು ವಾಕ್ಯಗಳಲ್ಲಿ ಅವ್ಯಯಗಳಾಗಿ ಬಳಸಲಾಗುತ್ತದೆ. ಆದರೆ ಕನ್ನಡದಲ್ಲಿ ಈ ರೀತಿ ಅವ್ಯಯಕ್ಕೆ ನಾಮಪದಗಳನ್ನು ಸೇರಿಸಿ ರಚಿಸಿದ ಮತ್ತು ವಾಕ್ಯಗಳಲ್ಲಿ ಅವ್ಯಯಗಳಾಗಿ ಬಳಕೆಯಾಗುವ ಜೋಡುಪದಗಳು ಕಾಣಿಸುವುದಿಲ್ಲವಾದ ಕಾರಣ, ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದ ಗಳಲ್ಲಿ ಕಾಣಿಸುವ ಇನ್ನೊಂದು ಅಂಶವನ್ನು ಆಧಾರವಾಗಿರಿಸುವ ಮೂಲಕ, ಕನ್ನಡದಲ್ಲಿ ಅವ್ಯಯೀಭಾವಕ್ಕೆ ಉದಾಹರಣೆಗಳನ್ನು ಹುಡುಕಿ ಹಿಡಿಯಲಾಗಿದೆ.
ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದಗಳಲ್ಲಿ ಮೊದಲನೆಯ ಅಂಗ ವಾಗಿ ಬಂದಿರುವ ಪದ ಪ್ರಧಾನವಾಗಿದ್ದು, ಈ ವಿಷಯದಲ್ಲಿ ಅದು ಇತರ ಜೋಡುಪದಗಳಿಗಿಂತ ಭಿನ್ನವಾಗಿದೆ. ಉದಾಹರಣೆಗಾಗಿ, ಯಥಾಶಕ್ತಿ ಜೋಡು ಪದದಲ್ಲಿ ಶಕ್ತಿ ಎಂಬುದು ಪ್ರಧಾನ ಪದವಲ್ಲ, ಯಥಾ ಎಂಬುದೇ ಪ್ರಧಾನ ಪದ. `ಎಷ್ಟು ಶಕ್ತಿಯಿದೆಯೋ ಅಷ್ಟು’ ಎಂಬುದಾಗಿ ಇದು ಶಕ್ತಿಯ ಪ್ರಮಾಣ ವನ್ನು ಸೂಚಿಸುವ ಜೋಡುಪದ.
ಇದೇ ರೀತಿಯಲ್ಲಿ, ಕನ್ನಡದಲ್ಲಿ ಬರುವ ತುದಿನಾಲಿಗೆ, ಅಂಗೈ, ಹೊರ ಮೈ, ಹಿಂಗಾಲು ಮೊದಲಾದವುಗಳ ಮೊದಲನೆಯ ಅಂಗ ಪ್ರಧಾನ
126 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಭಾವಿಸಿ, ಅವನ್ನು ಈ
0iÉುಂಬುದಾಗಿ
ಪದವಾಗಿದೆ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕನ್ನಡ ವ್ಯಾಕರಣಗಳಲ್ಲಿ ಕೊಡಲಾಗಿದೆ (ಇದು ಯಾಕೆ ತಪ್ಪು ಎಂಬುದನ್ನು ಕೆಳಗೆ ವಿವರಿಸಲಾಗಿದೆ).
ಇದಲ್ಲದೆ, ಈ ಜೋಡುಪದಗಳು ಕನ್ನಡದಲ್ಲಿ ಅವ್ಯಯಗಳಾಗಿ ಬಳಕೆ ಯಾಗುವುದಿಲ್ಲವಾದ ಕಾರಣ ಕೆಲವರು ವೈಯಾಕರಣಿಗಳು ಅವನ್ನು ಅವ್ಯಯೀ ಭಾವವೆಂದು ಕರೆಯದೆ ಅಂಶಿ' ಎಂದು ಕರೆಯುತ್ತಾರೆ. ಇವುಗಳಲ್ಲಿ ಅಂಶವನ್ನು ಅಂಶಿಯೊಂದಿಗೆ ಸಂಬಂಧಿಸಲಾಗುತ್ತದೆಯೆಂಬುದೇ ಇದಕ್ಕೆ ಆಧಾರ. ಉದಾಹರಣೆಗಾಗಿ, ತುದಿನಾಲಿಗೆ ಜೋಡುಪದದಲ್ಲಿ ತುದಿ ಎಂಬುದು ನಾಲಿಗೆಯ ಒಂದು ಅಂಶವನ್ನು ಸೂಚಿಸುತ್ತದೆ; ಈ ಅಂಶವನ್ನು ಪಡೆದಿರುವ ನಾಲಿಗೆ ಪದದೊಂದಿಗೆ (ಎಂದರೆ ಅಂಶಿಯೊಂದಿಗೆ) ತುದಿ ಎಂಬ ಅದರ ಅಂಶವನ್ನು ಸೂಚಿಸುವ ಪದವನ್ನು ಸೇರಿಸಿ ತುದಿನಾಲಿಗೆ ಪದವನ್ನು ತಯಾರಿಸ ¯ÁVzÉ. ಆದರೆ ಮೆಲೆ ಸೂಚಿಸಿದ ಹಾಗೆ, ಇಂತಹ ಜೋಡುಪದಗಳಲ್ಲಿ ಎಲ್ಲವಕ್ಕೂ ಮೊದಲನೆಯ ಅಂಗ ಪ್ರಧಾನ ಪದವಾಗಿರುತ್ತದೆ ಎಂದು ಹೇಳುವುದು ಕಷ್ಟ. ಉದಾಹರಣೆಗಾಗಿ ಹೊರಬಾಗಿಲು ಎಂಬುದಕ್ಕೆ ಬಾಗಿಲಿನ ಹೊರಗು’ (ಅಥವಾ ಬಾಗಿಲಿನ ಹೊರಗೆ') ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅಥ್ರವನ್ನು ಸರಿಯಾಗಿ ಸೂಚಿಸಲಾರದು. ಹೊರಬಾಗಿಲು ಎಂಬುದು ಹೊರಗಿನ ಬಾಗಿಲನ್ನು ಸೂಚಿಸುವುದಾದ ಕಾರಣ, ಅದರಲ್ಲಿ ಎರಡನೆಯ ಪದ ಪ್ರಧಾನ ವಾಗಿದೆಯಲ್ಲದೆ ಮೊದಲನೆಯದಲ್ಲ. ಇದೇ ರೀತಿಯಲ್ಲಿ ಕೆಳದುಟಿ ಜೋಡುಪದಕ್ಕೆ ತುಟಿಯ ಕೆಳಗು’ ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅಥ್ರವನ್ನು ಸರಿಯಾಗಿ ಸೂಚಿಸಲಾರದು. ನಿಜಕ್ಕೂ ಈ ಜೋಡುಪದ ಕೆಳಗಿನ ತುಟಿ'ಯನ್ನು ಸೂಚಿಸುವ ಕಾರಣ, ಕಮ್ರಧಾರಯಕ್ಕೆ ಮಾತ್ರವೇ ಉದಾಹರಣೆಯಾಗಬಲ್ಲುದು. ಇದಲ್ಲದೆ, ಇದೇ ಅಂಶಿ ಸಮಾಸಕ್ಕೆ ಕನ್ನಡದ ವೈಯಾಕರಣಿಗಳು ಉದಾ ಹರಣೆಗಳನ್ನಾಗಿ ಕೊಡುವ ಹಿಂಗಾಲು, ಹೊರಮೈ, ನಡುಹಗಲು ಮೊದಲಾದ ಬೇರೆ ಕೆಲವು ಜೋಡುಪದಗಳಲ್ಲಿ ಕಾಣಿಸುವ ಅಂಗಗಳಲ್ಲಿ ಯಾವುದೂ ಪ್ರಧಾನ ಪದವಾಗಿ ಇಲ್ಲದಿರುವುದನ್ನು ಗಮನಿಸಬಹುದು. ಉದಾಹರಣೆಗಾಗಿ, ನಡುಹಗಲು ಎಂಬುದು ಹಗಲಿನ ನಡು ಭಾಗ’ವನ್ನು ಸೂಚಿಸುವುದಾದ ಕಾರಣ ಅದರ ಅಂಗಗಳಾಗಿ ಬಂದಿರುವ ನಡು ಮತ್ತು ಹಗಲು ಎಂಬ ಎರಡು ಪದಗಳಲ್ಲಿ ಯಾವುದೂ ಅದರ ಪ್ರಧಾನ ಪದವಾಗಿರದೆ, ಆ ಜೋಡುಪದದ ಹೊರಗಿರುವ ಭಾಗ ಎಂಬ ಪದ ಅದರ ಪ್ರಧಾನ ಪದವೆಂದು ಹೇಳಬೇಕಾಗುತ್ತದೆ.
127 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಹಾಗಾಗಿ ಈ ಪದಗಳನ್ನು ಅಂಶಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವ ಬದಲು ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದೇ ಯೋಗ್ಯ ವೆಂದು ತೋರುತ್ತದೆ. `ಅಂಶಿ’ ಪಾರಿಭಾಷಿಕ ಪದವೂ ಕನ್ನಡದ ಈ ಜೋಡುಪದಗಳನ್ನು ವಣ್ರಿಸಲು ಸಮಪ್ರಕವಾದುದಲ್ಲ. ಯಾಕೆಂದರೆ, ಅಂಶ ಮತ್ತು ಅಂಶಿಗಳ ನಡುವಿರುವ ಸಂಬಂಧವನ್ನು ಸೂಚಿಸದಿರುವಂತಹ ಚಿಕ್ಕಮ್ಮ, ದೊಡ್ಡಪ್ಪ ಮೊದಲಾದ ಜೋಡುಪದಗಳಲ್ಲೂ ಇಂತಹದೇ ರಚನೆ ಕಾಣಿಸುತ್ತದೆ (5.5.3 ನೋಡಿ).
5.7.5 ದ್ವಂದ್ವ ದ್ವಂದ್ವ ಸಮಾಸಕ್ಕೆ ಕನ್ನಡದಲ್ಲಿ ಕೊಟ್ಟಿರುವ ಉದಾಹರಣೆಗಳೆಲ್ಲ ಪದಕಂತೆ ಗಳಲ್ಲದೆ ಜೋಡುಪದಗಳಲ್ಲ. ಸಂಸ್ಕೃತದಲ್ಲಿ ರಾಮಲಕ್ಷ್ಮಣೌ, ಮಾತಾ ಪಿತರೌ ಮೊದಲಾದವುಗಳನ್ನು ಜೋಡುಪದಗಳೆಂದು ಕರೆಯಲು ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಕೊನೆಯದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬಂದಿವೆ0iÉುಂಬುದೇ ಮುಖ್ಯ ಕಾರಣ. ಇಂತಹ ಜೋಡುಪದಗಳಲ್ಲಿ ಎರಡೇ ಅಂಗಗಳಿರಬೇಕೆಂದೇನಿಲ್ಲ. ಉದಾ ಹರಣೆಗಾಗಿ, ರೋಗಶೋಕಪರಿತಾಪಬಂಧನವ್ಯಸನಾನಿ ಎಂಬ ಜೋಡುಪದ ದಲ್ಲಿ ಒಟ್ಟು ಐದು ಅಂಗಗಳಿವೆ.
ಆದರೆ ಕನ್ನಡದಲ್ಲಿ ಜೋಡುಪದಗಳನ್ನು ವಿಭಕ್ತಿ ಪ್ರತ್ಯಯದ ಬಳಕೆ ಯಾಗಿದೆ0iÉುೀ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ವಣ್ರಿಸಲು ಇಲ್ಲವೇ ವಿಭಜಿಸಲು ಸಾಧ್ಯವಿಲ್ಲವೆಂಬುದನ್ನು ನಾವು ಮೇಲೆ (5.3)ರಲ್ಲಿ ನೋಡಿರುವೆವು. ಹಾಗಾಗಿ, ದ್ವಂದ್ವವೆಂಬ ಸಮಾಸ ಕನ್ನಡದಲ್ಲಿ ಇಲ್ಲವೆಂದು ಹೇಳುವುದೇ ಒಳ್ಳೆಯದು.
5.7.6 ಬಹುವ್ರೀಹಿ ಸಂಸ್ಕೃತದಲ್ಲಿ ಚಕ್ರಪಾಣಿ ಕೈಯಲ್ಲಿ ಚಕ್ರವನ್ನು ಹಿಡಿದವನು', ಪೀತಾಂಬರ ಹಳದಿ ಬಟ್ಟೆಯನ್ನುಟ್ಟವನು’, ದತ್ತಧನ ಹಣವನ್ನು ಕೊಟ್ಟವನು' ಮೊದಲಾದ ಜೋಡುಪದಗಳನ್ನು ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವ ಪದವೂ ಅದರ ಪ್ರಧಾನ ಪದವಾಗಿಲ್ಲದಿರುವುದೇ ಅವನ್ನು ಬಹುವ್ರೀಹಿಯೆಂದು ಕರೆಯಲು ಕಾರಣ. ಉದಾಹರಣೆಗಾಗಿ, ಚಕ್ರಪಾಣಿ ಜೋಡುಪದದಲ್ಲಿ ಚಕ್ರ ಮತ್ತು ಪಾಣಿ ಕೈ’ ಎಂಬ ಎರಡು ಪದಗಳು ಒಟ್ಟು ಸೇರಿದ್ದು, ಆ ಪದಗಳಿಗಿಂತ ಭಿನ್ನವಾದ ಸ:
128 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು `ಅವನು’ ಇಲ್ಲವೇ ವ್ಯಕ್ತಿ ಎಂಬ ಪದ ಅದರ ಪ್ರಧಾನ ಪದವಾಗಿದೆ. ಎಂದರೆ, ಚಕ್ರಪಾಣಿ ಎಂಬುದು ಚಕ್ರವನ್ನಾಗಲಿ, ಕೈಯನ್ನಾಗಲಿ ಹೆಸರಿಸದೆ, ಕೈಯಲ್ಲಿ ಚಕ್ರವನ್ನು ಹಿಡಿದಿರುವ ಒಬ್ಬ ವ್ಯಕ್ತಿಯನ್ನು (ಕೃಷ್ಣನನ್ನು) ಹೆಸರಿಸುತ್ತದೆ.
ಕನ್ನಡ ವ್ಯಾಕರಣಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳಾಗಿ ಕೊಡುವ ಹಣೆಗಣ್ಣ, ಚಲವಾದಿ, ಗೆಡ್ಡೆಮೂಗ, ಹಣಾಹಣಿ ಮೊದಲಾದ ಜೋಡುಪದಗಳಲ್ಲಿ ಈ ರೀತಿ ಅವುಗಳ ಅಂಗಗಳಾಗಿರುವ ಪದಗಳಲ್ಲಿ ಯಾವುದೂ ಪ್ರಧಾನ ಪದವಲ್ಲ ಎಂದು ವಾದಿಸುವುದು ಕಷ್ಟಸಾಧ್ಯ.
ಉದಾಹರಣೆಗಾಗಿ, ಚಲವಾದಿ ಎಂಬುದರಲ್ಲಿ ಎರಡನೆಯ ಅಂಗವಾಗಿ ಬಂದಿರುವ ವಾದಿ ಪದವನ್ನು ಪ್ರಧಾನ ಪದವೆಂದು ಪರಿಗಣಿಸಲು ಸಾಧ್ಯವಿದೆ. ಕನ್ನಡದ ವೈಯಾಕರಣಿಗಳು ಬಹುವ್ರೀಹಿಗೆ ಉದಾಹರಣೆಯಾಗಿ ಕೊಡುವ ಇತರ ಹಲವಾರು ಜೋಡುಪದಗಳೂ ಸಂಸ್ಕೃತದ ಬಹುವ್ರೀಹಿ ಪದಗಳಿಗಿಂತ ಒಂದು ಮುಖ್ಯವಾದ ವಿಷಯದಲ್ಲಿ ಭಿನ್ನವಾಗಿವೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ನಾಮಪದಗಳ ಲಿಂಗ, ವಚನ, ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುತ್ತವೆ ಎಂಬುದನ್ನು ನಾವು ಮುಂದೆ ಏಳನೇ ಅಧ್ಯಾಯದಲ್ಲಿ ನೋಡಲಿರುವೆವು. ಆದರೆ ಕನ್ನಡದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯಯಗಳಿವೆ.
ಉದಾಹರಣೆಗಾಗಿ, ಸಂಸ್ಕೃತದ ಗುರುಭ್ಯಃ ಎಂಬುದರಲ್ಲಿ ಬಂದಿರುವ ಭ್ಯಃ ವಿಭಕ್ತಿಪ್ರತ್ಯಯ ಪುಲ್ಲಿಂಗ, ಬಹುವಚನ ಮತ್ತು ಚತುಥ್ರೀ ವಿಭಕ್ತಿ - ಈ ಮೂರನ್ನೂ ಒಟ್ಟಾಗಿ ಸೂಚಿಸುತ್ತದೆ. ಆದರೆ ಇದಕ್ಕೆ ಸಮನಾಗಿ ಕನ್ನಡದಲ್ಲಿ ಬರುವ ಗುರುಗಳಿಗೆ ನಾಮಪದರೂಪದಲ್ಲಿ ಗಳು ಪ್ರತ್ಯಯ ಬಹುವಚನವನ್ನು ಮಾತ್ರ ಸೂಚಿಸುತ್ತದೆ; ಚತುಥ್ರೀ ವಿಭಕ್ತಿಯನ್ನು ಸೂಚಿಸುವುದಕ್ಕಾಗಿ ಈ ಪದರೂಪದಲ್ಲಿ ಬಹುವಚನ ಪ್ರತ್ಯಯಕ್ಕಿಂತ ಭಿನ್ನವಾಗಿರುವ ಇಗೆ ಪ್ರತ್ಯಯ §A¢zÉ.
ಸಂಸ್ಕೃತದ ಪೀತಾಂಬರ ಜೋಡುಪದವನ್ನು (ಅಥವಾ ಬೇರೆ ಯಾವುದೇ ನಾಮಪದವನ್ನು) ಸಂಸ್ಕೃತ ವಾಕ್ಯದಲ್ಲಿ ಪ್ರಯೋಗಿಸಬೇಕಾದಾಗ ಅದಕ್ಕೆ ಲಿಂಗ, ವಚನ ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುವಂತಹ ವಿಭಕ್ತಿ ಪ್ರತ್ಯಯ ವೊಂದನ್ನು ಸೇರಿಸಲೇಬೇಕೆಂಬ ನಿಯಮವಿದೆ. ಆದರೆ ಕನ್ನಡದಲ್ಲಿ ಚಲವಾದಿ ಜೋಡುಪದವನ್ನು (ಇಲ್ಲವೇ ಇತರ ಯಾವುದೇ ನಾಮಪದವನ್ನು) ವಾಕ್ಯದಲ್ಲಿ ಹಾಗೆಯೇ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸಲು ಸಾಧ್ಯ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸ.
129 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(14ಕ) ಪೀತಾಂಬರಃ ಕುತ್ರ ಗತಃ
`ಹಳದಿ ಬಟ್ಟೆಯುಟ್ಟವನು ಎಲ್ಲಿಗೆ ಹೋದ? ‘
(14ಖ) ಚಲವಾದಿ ಎಲ್ಲಿಗೆ ಹೋದ?
ಮೇಲೆ ಕೊಟ್ಟಿರುವ (14ಕ) ಸಂಸ್ಕೃತ ವಾಕ್ಯದಲ್ಲಿ ಪೀತಾಂಬರ ಪದವನ್ನು ಅದಕ್ಕೆ ಪುಲ್ಲಿಂಗ-ಏಕವಚನ-ಪ್ರಥಮಾ ವಿಭಕ್ತಿ ಪ್ರತ್ಯಯವಾದ ಅಸ್ ಎಂಬು ದನ್ನು (ವಿಸಗ್ರರೂಪದಲ್ಲಿ) ಸೇರಿಸಿ ಬಳಸಲಾಗಿದೆ. ಆದರೆ (14ಖ) ಕನ್ನಡ ವಾಕ್ಯದಲ್ಲಿ ಚಲವಾದಿ ಪದವನ್ನು ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಹಾಗೆಯೇ ಬಳಸಲಾಗಿದೆ.
ಸಂಸ್ಕೃತದ ಪೀತಾಂಬರ ಜೋಡುಪದದಲ್ಲಿ ಪೀತ ಮತ್ತು ಅಂಬರ ಎಂಬ ಎರಡು ಪದಗಳು ಮಾತ್ರ ಆ ಜೋಡುಪದದ ಅಂಗಗಳಾಗಿ ಬಂದಿವೆ. ಅವುಗಳ ಅನಂತರ ಬರುವ ಅಸ್ ಎಂಬುದು ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯ (ಇದು ಇಲ್ಲಿ ವಿಸಗ್ರರೂಪದಲ್ಲಿದೆ). ಈ ಪ್ರತ್ಯಯ ಪೀತಾಂಬರ ಪದದ ಅಂಗವಲ್ಲ; ಆ ಪದವನ್ನು ವಾಕ್ಯದಲ್ಲಿ ಪ್ರಯೋಗಿಸುವಾಗ ಅದರೊಂದಿಗೆ ಬಳಸಬೇಕಾಗಿರುವ ಪ್ರತ್ಯಯ ಮಾತ್ರ.
ಆದರೆ ಕನ್ನಡದ ಚಲವಾದಿ ಪದದಲ್ಲಿ ಚಲ ಮತ್ತು ವಾದ ಎಂಬೆರಡು ಪದಗಳು ಮಾತ್ರವಲ್ಲದೆ ಇ ಪ್ರತ್ಯಯವೂ ಆ ಪದದ ಅಂಗವಾಗಿ ಬಂದಿದೆ. ಪೀತಾಂಬರಃ ಎಂಬುದರಲ್ಲಿ ಬರುವ ಅಸ್ ಪ್ರತ್ಯಯದ ಹಾಗೆ ಚಲವಾದಿ ಎಂಬುದರಲ್ಲಿ ಬರುವ ಇ ಪ್ರತ್ಯಯವನ್ನು ಕನ್ನಡದಲ್ಲಿ ಒಂದು ಪದರೂಪ ಪ್ರತ್ಯಯವೆಂದು ಪರಿಗಣಿಸಲು ಯಾವ ಆಧಾರವೂ ಇಲ್ಲ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ವಾದ ಪದದ ಅನಂತರ ಬರುವ ಇ ಪ್ರತ್ಯಯ ಕನ್ನಡದಲ್ಲಿ ಪದರಚನೆಗೆ ಸಂಬಂಧಿಸಿದು ದಲ್ಲದೆ ಪದರೂಪದ ರಚನೆಗೆ (ಇಲ್ಲವೇ ವಾಕ್ಯರಚನೆಗೆ) ಸಂಬಂಧಿಸಿದುದಲ್ಲ. ಹಾಗಾಗಿ, ಈ ಜೋಡುಪದವನ್ನು ಎರಡು ರೀತಿಯಲ್ಲಿ ವಣ್ರಿಸಲು ಸಾಧ್ಯವಿದೆ.
(1) ಚಲ ಮತ್ತು ವಾದಿ ಎಂಬ ಎರಡು ಪದಗಳು ಅದರ ಅಂಗಗಳೆಂದು ಹೇಳಬಹುದು; ಇಲ್ಲವೇ
(2) ಚಲ ಮತ್ತು ವಾದ ಎಂಬ ಎರಡು ಪದಗಳು ಮತ್ತು ಇ ಎಂಬ ಪ್ರತ್ಯಯ - ಈ ಮೂರು ಅದರ ಅಂಗಗಳೆಂದು ಹೇಳಬಹುದು.
ಮೊದಲನೆಯ ವಣ್ರನೆಯ ಪ್ರಕಾರ, ವಾದಿ ಎಂಬುದು ಚಲವಾದಿ ಜೋಡುಪದದ ಪ್ರಧಾನ ಪದವೆನಿಸುತ್ತದೆ ಮತ್ತು ಈ ಕಾರಣಕ್ಕಾಗಿ ಅದು ಬಹುವ್ರೀಹಿಗೆ ಉದಾಹರಣೆಯಾಗಲಾರದು.
130 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಎರಡನೆಯ ವಿಧಾನದ ಪ್ರಕಾರ, ಪದ ಮತ್ತು ಪ್ರತ್ಯಯಗಳೆರಡೂ ಈ ಜೋಡುಪದದ ಒಳರಚನೆಯಲ್ಲಿ ಬಳಕೆಯಾಗಿವೆಯಾದ ಕಾರಣ, ಅದನ್ನು ಜೋಡುಪದಗಳಿಗಿಂತ ಭಿನ್ನವಾಗಿರುವ ಬೇರೆಯೇ ಒಂದು ವಗ್ರದಲ್ಲಿ ಸೇರಿಸುವ ಅವಶ್ಯಕತೆಯಿದೆ. ಎಂದರೆ, ಕಮ್ರಧಾರಯ ಸಮಾಸದಿಂದ ಸಿದ್ಧವಾದ ಚಲವಾದ ಜೋಡು ಪದಕ್ಕೆ ಇ ಪ್ರತ್ಯಯವನ್ನು ಸೇರಿಸುವುದರ ಮೂಲಕ ಚಲವಾದಿ ಪದವನ್ನು ತಯಾರಿಸಲಾಗಿದೆ0iÉುಂದು ಹೇಳಬೇಕಾಗುತ್ತದೆ.
5.7.7 ಕ್ರಿಯಾಸಮಾಸ ಕನ್ನಡದಲ್ಲಿ ಸಂಸ್ಕೃತದಲ್ಲಿಲ್ಲದ ಕ್ರಿಯಾಸಮಾಸವೆಂಬ ಹೊಸದೊಂದು ರೀತಿಯ ಸಮಾಸವಿದೆಯೆಂದು ಕನ್ನಡ ವೈಯಾಕರಣಿಗಳು ಹೇಳಿರುವುದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಬಳಕೆಯಲ್ಲಿರುವ ವ್ಯತ್ಯಾಸವನ್ನು ಸರಿ ಯಾಗಿ ತಿಳಿದುಕೊಳ್ಳದುದರಿಂದಾಗಿ ಎಂಬುದನ್ನು ನಾವು ಮೇಲೆ (5.3.5ರಲ್ಲಿ) ನೋಡಿರುವೆವು.
ಮರವೇರು, ಕೈಮುಗಿ, ಮರೆಹೊಗು, ಬಿಲ್ಲೆತ್ತು, ನಿದ್ದೆಮಾಡು ಮೊದಲಾ ದವುಗಳನ್ನು ಇವರು ಕ್ರಿಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಟ್ಟಿದ್ದಾರೆ. ಇಂತಹ ಬಳಕೆಗಳಲ್ಲಿ ನಾಮಪದದ ವಿಭಕ್ತಿ ಪ್ರತ್ಯಯ (ದ್ವಿತೀಯಾ ವಿಭಕ್ತಿ ಪ್ರತ್ಯಯ) ಲೋಪಗೊಂಡಿರುವುದು ನಿಜವಾದರೂ ಅದು ಕನ್ನಡದ ಒಂದು ವಾಕ್ಯರಚನೆಯ ನಿಯಮದ ಮೂಲಕ ಲೋಪಗೊಂಡಿದೆಯಲ್ಲದೆ ಪದರಚನೆಯ ನಿಯಮದ ಮೂಲಕವಲ್ಲ. ಇದಕ್ಕೆ ಬದಲು ಮೊದಲನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುವ ಚುಚ್ಚುಮದ್ದು, ಸುಳಿಗಾಳಿ, ಬೀಸುಗಲ್ಲು ಮೊದಲಾದ ಕನ್ನಡಕ್ಕೆ ವಿಶಿಷ್ಟ ಜೋಡುಪದಗಳನ್ನೇ ಕ್ರಿಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ವಾಗಿರುವ ಕೊಡುವುದು ಒಳ್ಳೆಯದು (5.5.2 ನೋಡಿ).
5.7.8 ಗಮಕ ಸಮಾಸ ಕನ್ನಡದ ಇನ್ನೊಂದು ವಿಶಿಷ್ಟ ಸಮಾಸವೆಂದು ಪರಿಗಣಿಸಲ್ಪಟ್ಟಿರುವ ಗಮಕ ಸಮಾಸವೂ ಇದೇ ರೀತಿಯದು. ಕನ್ನಡ ವ್ಯಾಕರಣಗಳಲ್ಲಿ ಇದಕ್ಕೆ ಉದಾಹರಣೆ ಗಳನ್ನಾಗಿ (1) ಮೊದಲನೆಯ ಅಂಗದಲ್ಲಿ ಷಷ್ಠೀ ವಿಭಕ್ತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಬಿಸಿಯ ಹಾಲು, ಕಿರಿಯ ಮಗ ಮೊದಲಾದವುಗಳನ್ನು, (2) ಕೃತ್ ಪ್ರತ್ಯಯವನ್ನು ಹಾಗೆಯೇ ಉಳಿಸಿಕೊಂಡಿರುವ ತೂಗುವ ತೊಟ್ಟಿಲು, ಕಂಡ ವಿಚಾರ ಮೊದಲಾದವುಗಳನ್ನು ಮತ್ತು (3) ಮೊದಲನೆಯ ಅಂಗದಲ್ಲಿ
131 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಿಭಕ್ತಿ ಪ್ರತ್ಯಯವಿಲ್ಲದೆ ಬರುವ ಆ ಮರ, ಈ ಹುಡುಗ ಮೊದಲಾದವುಗಳನ್ನು ಕೊಡುವುದು ರೂಢಿ.
ಆದರೆ ನಿಜಕ್ಕೂ ಇವು ಕನ್ನಡದಲ್ಲಿ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಮೇಲೆ (5.3.3-4)ರಲ್ಲಿ ವಿವರಿಸಿರುವ ಹಾಗೆ, ಕೃದಂತಗಳು ಮತ್ತು ಆ, ಈ ಮೊದಲಾದ ಜಾಗವನ್ನು ಸೂಚಿಸುವ ಪದಗಳು ಪದಕಂತೆಗಳಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬರುತ್ತವೆ0iÉುಂಬುದು ಕನ್ನಡ ಭಾಷೆಯ ವಾಕ್ಯರಚನೆಯ ನಿಯಮವಲ್ಲದೆ ಪದರಚನೆಯ ನಿಯಮವಲ್ಲ. ಹಾಗಾಗಿ ಇಂತಹ ರಚನೆಗಳನ್ನು ಪದಕಂತೆಗಳೆಂದು ಹೇಳಬೇಕಲ್ಲದೆ ಜೋಡುಪದಗಳೆಂದು ಹೆಸರಿಸುವುದಕ್ಕೆ ಕನ್ನಡದಲ್ಲಿ ಯಾವ ಆಧಾರವೂ ಇಲ್ಲ (ಸೇಡಿಯಾಪು ಕೃಷ್ಣಭಟ್ಟ 1992:269 ನೋಡಿ).
5.8 ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳು ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಪದಗಳು ಎರವಲಾಗಿ ಬಂದಿದ್ದು ಇವುಗಳಲ್ಲಿ ಜೋಡುಪದಗಳೂ ಹಲವಿವೆ. ಈ ಜೋಡುಪದಗಳು ಎಂತಹವು, ಅವನ್ನು ವಣ್ರಿಸುವುದಕ್ಕಾಗಿ ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಧಾನವನ್ನೇ ಕನ್ನಡ ವ್ಯಾಕರಣದಲ್ಲೂ ಬಳಸಲು ಸಾಧ್ಯವೇ? ಎಂದರೆ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಜೋಡುಪದಗಳಲ್ಲಿ ಸಂಸ್ಕೃತದ ನಾಲ್ಕು (ಇಲ್ಲವೇ ಆರು) ಸಮಾಸಗಳನ್ನು ಕಾಣಲು ಸಾಧ್ಯವೇ ಎಂಬುದನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆಯಿದೆ.
5.8.1 ಜೋಡುಪದಗಳ ಒಳನುಡಿಗಳು ಈ ಪದಗಳು ಸಂಸ್ಕೃತದಿಂದ ಎರವಲಾಗಿ ಬಂದಿವೆಯಾದರೂ ಕನ್ನಡದಲ್ಲಿ ಅವಕ್ಕೆ ಕನ್ನಡದ್ದೇ ಆದ, ಎಂದರೆ ಕನ್ನಡದ ವ್ಯಾಕರಣ ನಿಯಮಗಳಿಗೆ ಹೊಂದಿಕೊಳ್ಳುವಂತಹ ಬಳಕೆಗಳಿವೆ. ಹಾಗಾಗಿ, ಅವುಗಳ ಒಳರಚನೆಯನ್ನು ಕನ್ನಡದವೇ ಆದ ನಿಯಮಗಳ ಮೂಲಕ ವಣ್ರಿಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ಈ ಜೋಡುಪದಗಳಿಗೆ ಒಳನುಡಿ(ವಿಗ್ರಹವಾಕ್ಯ)ವನ್ನು ಹೇಳುವಾಗ ಅದನ್ನು ಕನ್ನಡದಲ್ಲಿ ಹೇಳಬೇಕಲ್ಲದೆ ಸಂಸ್ಕೃತದಲ್ಲಿ ಹೇಳಿದರೆ ಅದು ಕನ್ನಡದಲ್ಲಿ ಆ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿಸ ಲಾರದು. ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೆ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳ ನುಡಿಗಳನ್ನು ಹಾಗೆಯೇ ಕನ್ನಡದಲ್ಲೂ ಕೊಟ್ಟಿದ್ದಾರೆ. ಇದು ಸರಿಯಲ್ಲ. ಸಂಸ್ಕೃತದಿಂದ ಎರವಲಾಗಿ ಬಂದಿರುವ ಎಲ್ಲಾ ಜೋಡುಪದಗಳಿಗೂ ಕನ್ನಡದಲ್ಲಿ ಒಳರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೆಂಬುದನ್ನು ಇಲ್ಲಿ
132 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಗಮನಿಸುವುದು ಅವಶ್ಯ. ಆದರೆ ಇದು ಕನ್ನಡದವೇ ಆದ ಪದಗಳಿಗೂ ಅನ್ವಯಿಸುವಂತಹ ಸಂಗತಿ.
ಉದಾಹರಣೆಗಾಗಿ, ಕನ್ನಡದ ಎಣ್ಣೆ ಪದ ಎಳ್ಳು ಮತ್ತು ನೆಯ್ ಎಂಬ ಎರಡು ಪದಗಳು ಒಟ್ಟಿಗೆ ಸೇರಿದುದರಿಂದಾಗಿ ಸಿದ್ಧವಾದ ಜೋಡುಪದವೆಂದು ಹೇಳುವುದಕ್ಕೆ ಚಾರಿತ್ರಿಕ ಆಧಾರವಿದೆ. ಆದರೆ ಹೊಸಗನ್ನಡದಲ್ಲಿ ಈ ಪದವನ್ನು ಈ ರೀತಿ ಒಳರಚನೆಯಿರುವ ಪದವೆಂದು ಪರಿಗಣಿಸಲು ಅಷ್ಟೊಂದು ಸಮಪ್ರಕ ವಾದ ಆಧಾರವಿಲ್ಲ. ಹಾಗಾಗಿ, ಹೊಸಗನ್ನಡದ ಮಟ್ಟಿಗೆ ಎಣ್ಣೆ ಎಂಬ ಪದವನ್ನು ಒಳರಚನೆಯಿಲ್ಲದ ಪದವೆಂದು ಪರಿಗಣಿಸುವುದೇ ಮೇಲು.
ಇದೇ ರೀತಿಯಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಕೆಲವನ್ನು ಜೋಡುಪದಗಳೆಂದು ಪರಿಗಣಿಸುವ ಬದಲು ಕನ್ನಡದ ಮಟ್ಟಿಗೆ ಒಳರಚನೆ ಯಿಲ್ಲದ ಪದಗಳೆಂದು ಪರಿಗಣಿಸುವ ಅವಶ್ಯಕತೆ ಕಂಡುಬಂದೀತು. ಇದಕ್ಕೆ ಕಾರಣವೇನೆಂದರೆ, ಸಾಧಿಸಲು ಆಧಾರವಿದ್ದರೂ ಆ ಪದದೊಂದಿಗೆ ಅಂತಹ ಆಧಾರ ಕನ್ನಡಕ್ಕೆ ಎರವಲಾಗಿ ಬಾರದಿರಲು ಸಾಧ್ಯವಿದೆ. ಇದು ನಾವು ವಣ್ರಿಸುತ್ತಿರುವ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರಲೂ ಸಾಧ್ಯವಿದೆ.
ಸಂಸ್ಕೃತದಲ್ಲಿ ಅವಕ್ಕೆ ಒಳರಚನೆಯನ್ನು
5.8.2 ವಿಭಜನೆ ಸಂಸ್ಕೃತದಿಂದ ಎರವಲಾಗಿ ಬಂದು ಹೊಸಗನ್ನಡದಲ್ಲಿ ಬಳಕೆಗೆ ಬಂದಿರುವ ಜೋಡುಪದಗಳಿಗೆ ಕನ್ನಡದವೇ ಆದ ಒಳನುಡಿಗಳನ್ನು ಕೊಟ್ಟು ಪರಿಶೀಲಿಸಿದಲ್ಲಿ, ಅವನ್ನು ಎರಡು ಮುಖ್ಯ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯ ಎಂಬ ವಿಷಯ ಸ್ಪಷ್ಟವಾಗುತ್ತದೆ. ಮೊದಲನೆಯ ಅಂಗವಾಗಿ (1) ನಾಮಪದವಿರುವವು ಮತ್ತು (2) ಗುಣಪದವಿರುವವುಗಳು ಎಂಬವುಗಳೇ ಈ ಎರಡು ವಗ್ರಗಳು.
ಇವು ಮೇಲೆ ಕನ್ನಡದವೇ ಆದ ಜೋಡುಪದಗಳನ್ನು ವಿಭಜಿಸುವಲ್ಲಿ ಬಳಸಿದ ವಗ್ರಗಳೇ ಎಂಬುದನ್ನು ಗಮನಿಸಬಹುದು. ಮೊದಲನೆಯ ಅಂಗವಾಗಿ ಕ್ರಿಯಾಪದವಿರುವವು ಎಂಬ ಮೂರನೇ ವಗ್ರ ಮಾತ್ರ ಈ ಎರವಲಾಗಿ ಬಂದಿರುವ ಜೋಡುಪದಗಳಲ್ಲಿ ಕಾಣಿಸುವುದಿಲ್ಲ. ನಾಮಪದವಿರುವ ಜೋಡುಪದಗಳ ಎರಡು ಅಂಗಗಳನ್ನು ಕನ್ನಡದವೇ ಆದ ಜೋಡುಪದಗಳ ಹಾಗೆ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.
ಒಳನುಡಿ
ಮಾನದ ಹಾನಿ
ಯುಗದ ಆದಿ
ಜೋಡುಪದ ಮಾನಹಾನಿ ಯುಗಾದಿ
133 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಲಗ್ನದ ಪತ್ರಿಕೆ ಜಗತ್ತಿನ ಗುರು
ಭೂಮಿಯ ಕಂಪ
ಲಗ್ನಪತ್ರಿಕೆ ಜಗದ್ಗುರು ಭೂಕಂಪ
ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳಲ್ಲಿ ಎಲ್ಲವನ್ನೂ ಈ ರೀತಿ ಷಷ್ಠೀ ವಿಭಕ್ತಿಯ ಮೂಲಕ ಸಾಧಿಸಲು ಸಾಧ್ಯವಾಗದು. ಕೆಲವು ಜೋಡು ಪದಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಮೊದಲನೆಯದು ಕನ್ನಡದಲ್ಲಿ ನಾಮಪದವಾಗಿ ಬಳಕೆಯಲ್ಲಿಲ್ಲದಿರುವುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಕೃಷ್ಣಸಪ್ರ, ಗಾಢನಿದ್ರೆ, ಮೂಲನಿವಾಸಿ, ಶುಭ ಕಾಯ್ರ, ಮಹಾನಗರ, ದೃಢಮನಸ್ಸು, ಪೂಣ್ರವಿರಾಮ, ದೀಘ್ರಾಯುಷ್ಯ ಮೊದಲಾದವುಗಳ ಅಂಗಗಳನ್ನು ಮೇಲೆ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಹಾಗೆ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಾಗದು.
ಇಂತಹ ಜೋಡುಪದಗಳಲ್ಲಿ ಕೆಲವಕ್ಕೆ ಒಳನುಡಿಯನ್ನು ಕೊಡುವಾಗ ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದವನ್ನು ಆಗು ಕ್ರಿಯಾಪದದ ವಿಶೇಷಣವನ್ನಾಗಿ ಮಾಡಿ ಹೇಳಲು ಸಾಧ್ಯವಿದೆ.
ಜೋಡುಪದ
ಒಳನುಡಿ
ಗಾಢವಾದ ನಿದ್ರೆ
ದೃಢವಾದ ಮನಸ್ಸು
ದೃಢಮನಸ್ಸು
ದೀಘ್ರವಾದ ಆಯುಷ್ಯ ದೀಘ್ರಾಯುಷ್ಯ
ಗಾಢನಿದ್ರೆ
ಆದರೆ ಬೇರೆ ಕೆಲವಕ್ಕೆ (ಕೃಷ್ಣಸಪ್ರ, ಪರಲೋಕ, ಮೂಲನಿವಾಸಿ ಮೊದಲಾದವುಗಳಿಗೆ) ಈ ರೀತಿ ಆಗು ಕ್ರಿಯಾಪದವನ್ನು ಬಳಸಿ ಒಳನುಡಿಯನ್ನು ಹೇಳಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಈ ಗುಣಪದವಿರುವ ಜೋಡುಪದಗಳಿಗೆ ಕ್ರಿಯಾವಿಶೇಷಣ ಮತ್ತು ನಾಮವಿಶೇಷಣ ಎಂಬುದಾಗಿ ಎರಡು ಮೂಲಗಳಿವೆ.
ಕ್ರಿಯಾವಿಶೇಷಣ ಮೂಲವಾಗಿರುವ ಜೋಡುಪದಗಳಿಗೆ ಒಳನುಡಿಯನ್ನು ಹೇಳಬೇಕಿದ್ದಲ್ಲಿ ಅವುಗಳ ಮೊದಲನೆಯ ಅಂಗವನ್ನು ಆಗು ಕ್ರಿಯಾಪದದ ವಿಶೇಷಣವನ್ನಾಗಿ ಮಾಡಿ ಹೇಳಲು ಸಾಧ್ಯವಾಗುತ್ತದೆ, ಆದರೆ ನಾಮವಿಶೇಷಣ ಮೂಲವಾಗಿರುವ ಜೋಡುಪದಗಳಿಗೆ ಅಂತಹ ಒಳನುಡಿಯನ್ನು ಹೇಳಲು ಸಾಧ್ಯವಾಗುವುದಿಲ್ಲ.
5.9 ತಿರುಳು
134 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸಮಾಸಗಳು ಕನ್ನಡದ ಜೋಡುಪದಗಳಿಗೆ ಕನ್ನಡದವೇ ಆದ ಒಳರಚನೆಗಳಿವೆಯಾದ ಕಾರಣ, ಸಂಸ್ಕೃತದ ಸಮಾಸ ವಿಧಾನಗಳನ್ನು ಕನ್ನಡ ವ್ಯಾಕರಣದಲ್ಲಿ ಹಾಗೆಯೇ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೂ ಕನ್ನಡದಲ್ಲಿ ಇಂತಹ ಕನ್ನಡದವೇ ಆದ ಒಳರಚನೆಗಳು ಇವೆಯಲ್ಲದೆ ಸಂಸ್ಕೃತದಲ್ಲಿರುವಂತಹ ಒಳರಚನೆಗಳಿಲ್ಲ.
ಸಂಸ್ಕೃತ ವ್ಯಾಕರಣದಲ್ಲಿ ಜೋಡುಪದಗಳನ್ನು ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದು ಕ್ರಮ. ಎರಡನೆಯ ಅಂಗ ಪ್ರಧಾನವಾದರೆ ತತ್ಪುರುಷ, ಮೊದಲನೆಯದು ಪ್ರಧಾನವಾದರೆ ಅವ್ಯಯೀಭಾವ, ಎರಡೂ ಪ್ರಧಾನವಾದರೆ ದ್ವಂದ್ವ, ಮತ್ತು ಒಂದೂ ಪ್ರಧಾನವಲ್ಲವಾದರೆ (ಎಂದರೆ ಹೊರಗಿನ ಪದವೊಂದು ಪ್ರಧಾನವಾಗಿದೆಯಾದರೆ) ಬಹುವ್ರೀಹಿ ಎಂಬುದಾಗಿ ಅದರ ಜೋಡುಪದಗಳನ್ನು ವಿಭಜಿಸಲಾಗುತ್ತದೆ. ಆದರೆ ಕನ್ನಡದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಎರಡನೆಯ ಪದ ಪ್ರಧಾನವಾಗಿರುತ್ತದೆ. ಹಾಗಾಗಿ ಅವುಗಳ ವಿಭಜನೆಯನ್ನು ಸಂಸ್ಕೃತದ ಹಾಗೆ ಅಂಗವಾಗಿ ಬಂದಿರುವ ಪದಗಳ ಪ್ರಾಧಾನ್ಯತೆಯ ಆಧಾರದ ಮೇಲೆ ಸಾಧಿಸುವುದರಿಂದ ತೃಪ್ತಿಕರವಾದ ವಿಭಜನೆ ಸಿಗಲಾರದು.
ಈ ಜೋಡುಪದಗಳಲ್ಲಿ ಎರಡನೆಯ ಅಂಗ ಹೆಚ್ಚಿನವುಗಳಲ್ಲೂ ನಾಮಪದ ವಾಗಿದ್ದು, ಮೊದನೆಯದು ನಾಮಪದ, ಗುಣಪದ ಇಲ್ಲವೇ ಕ್ರಿಯಾಪದವಾಗಿರಲು ಸಾಧ್ಯವಿದೆ. ಹಾಗಾಗಿ ಕನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಅಂಗದ ಪದವಗ್ರವನ್ನಾಧರಿಸಿ ಮೂರು ಮುಖ್ಯ ವಿಭಾಗಗಳಲ್ಲಿ (ನಾಮಪದ ವಿರುವವು, ಗುಣಪದವಿರುವವು ಮತ್ತು ಕ್ರಿಯಾಪದವಿರುವವು ಎಂಬುದಾಗಿ) ವಿಂಗಡಿಸುವುದು ಕನ್ನಡ ವ್ಯಾಕರಣದ ಮಟ್ಟಿಗೆ ಅತ್ಯಂತ ಸಮಪ್ರಕವಾದ ವಿಧಾನ ವೆಂದು ಹೇಳಬಹುದು. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದ ಜೋಡು ಪದಗಳಿಗೂ ಈ ವಿಭಜನೆ ಅನ್ವಯಿಸುತ್ತದೆ.
135 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
6. ಲಿಂಗ ಮತ್ತು ವಚನಗಳು
6.1 ಮುನ್ನೋಟ ಕನ್ನಡ ವಾಕ್ಯಗಳ ಒಳರಚನೆಯಲ್ಲಿ ಲಿಂಗ ಮತ್ತು ವಚನ ಎಂಬ ಈ ಎರಡು ವ್ಯಾಕರಣತತ್ವಗಳಿಗೆ ಮುಖ್ಯವಾದ ಸ್ಥಾನವಿದೆ. ವಾಕ್ಯದಲ್ಲಿ ಬಳಕೆಯಾಗುವ ನಾಮ ಪದಗಳನ್ನು ಮೂರು ಉಪವಗ್ರಗಳಲ್ಲಿ ವಿಂಗಡಿಸುವ ಕೆಲಸವನ್ನು ಅವುಗಳ ಲಿಂಗ' ನಡೆಸುತ್ತದೆ ಮತ್ತು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆ0iÉುಂತಹದು ಎಂಬುದನ್ನು ಅವುಗಳ ವಚನ’ ತಿಳಿಸುತ್ತದೆ.
ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಮೂರು ಲಿಂಗಗಳಿವೆ. ಇವು ಗಂಡು, ಹೆಣ್ಣು ಮತ್ತು ಇತರ ಎಂಬುದಾಗಿ ನಾಮ ಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವರೂಪವನ್ನನುಸರಿಸಿ ನಾಮಪದಗಳನ್ನು ವಿಂಗಡಿಸುತ್ತವೆ.
ಇದಲ್ಲದೆ, ಏಕವಚನ ಮತ್ತು ಬಹುವಚನ ಎಂಬುದಾಗಿ ಕನ್ನಡದಲ್ಲಿ ಎರಡು ವಚನಗಳಿವೆ. ಇವು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವು ಗಳು ಒಂದೇ ಅಥವಾ ಒಂದಕ್ಕಿಂತ ಜಾಸ್ತಿಯೇ ಎಂಬುದಾಗಿ ಅವುಗಳ ಎಣಿಕೆ ಯನ್ನು ಸೂಚಿಸುತ್ತವೆ. ನಾಮಪದವನ್ನು ಅದರ ಪ್ರಕೃತಿ ರೂಪದಲ್ಲಿ, ಎಂದರೆ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸಿದರೆ ಏಕವಚನ ಮತ್ತು ರು ಇಲ್ಲವೇ ಗಳು ಪ್ರತ್ಯಯದೊಂದಿಗೆ ಬಳಸಿದರೆ ಬಹುವಚನ.
ಲಿಂಗ ಮತ್ತು ವಚನಗಳೆಂಬ ಈ ಎರಡು ವ್ಯಾಕರಣತತ್ವಗಳೂ ನಾಮಪದ ಗಳ ಬಳಕೆಗೆ ಸಂಬಂಧಿಸಿದವುಗಳು ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ. ಕ್ರಿಯಾಪದಗಳ ಬಳಕೆಯಲ್ಲೂ ಇವನ್ನು ಕಾಣಲು ಸಾಧ್ಯವಿದೆಯಾದರೂ ಅಲ್ಲಿ ಅವುಗಳ ಸ್ವರೂಪ ಕ್ರಿಯಾಪದಗಳೊಂದಿಗೆ ಬರುವ ನಾಮಪದಗಳ ಸ್ವರೂಪ ವನ್ನವಲಂಬಿಸಿದೆಯಲ್ಲದೆ ಕ್ರಿಯಾಪದಗಳ ಸ್ವರೂಪವನ್ನವಲಂಬಿಸಿಲ್ಲ.
ಉದಾಹರಣೆಗಾಗಿ, ಬರುತ್ತಾರೆ ಎಂದಾಗ ಹಲವು ಮಂದಿ ವ್ಯಕ್ತಿಗಳು ಬರುತ್ತಾರೆ' ಎಂಬ ಅಥ್ರ ಬರುವುದಲ್ಲದೆ ಬರುವ ಕ್ರಿಯೆಯನ್ನು ಒಬ್ಬ ವ್ಯಕ್ತಿ ಹಲವು ಬಾರಿ ಮಾಡುತ್ತಾನೆ (ಎಂದರೆ ಹಲವು ಬಾರಿ ಬಂದು ಹೋಗಿ ಮಾಡು ತ್ತಾನೆ)’ ಎಂಬ ಅಥ್ರ ಬರಲಾರದು. ಹಾಗಾಗಿ, ಬರುತ್ತಾರೆ ಕ್ರಿಯಾಪದದಲ್ಲಿ ಬಂದಿರುವ ಬಹುವಚನ ಆ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಲಿಂಗ ಮತ್ತು ವಚನಗಳು ಕ್ರಿಯಾಪದಗಳಲ್ಲಿ ಕಾಣಿಸುವ ಲಿಂಗ ವ್ಯತ್ಯಾಸವೂ ಇದೇ ರೀತಿಯಲ್ಲಿ ನಾಮ ಪದಕ್ಕೆ ಸಂಬಂಧಿಸಿದುದಲ್ಲದೆ ನೇರವಾಗಿ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.
(1) (2) (3)
ನಿನ್ನೆ ಜಾನಕಿ ಪುತ್ತೂರಿಗೆ ಹೋಗಿದ್ದಳು ರಾಜು ಸಂತೆಯಲ್ಲಿ ಯಾರನ್ನು ಕಂಡಿದ್ದ? ನಾಯಿ ಏನು ಮಾಡುತ್ತದೆ?
(1-3)ನೇ ವಾಕ್ಯಗಳಲ್ಲಿ ಕ್ರಿಯಾಪದಗಳು ಮೂರು ಬೇರೆ ಬೇರೆ ಲಿಂಗ ಗಳಲ್ಲಿ ಬಂದಿವೆಯೆಂಬುದನ್ನು ಗಮನಿಸಬಹುದು. (1)ನೇ ವಾಕ್ಯದ ಹೋಗಿ ದ್ದಳು ಕ್ರಿಯಾಪದ ಸ್ತ್ರೀಲಿಂಗದಲ್ಲಿದೆ, (2)ನೇ ವಾಕ್ಯದ ಕಂಡಿದ್ದ ಕ್ರಿಯಾಪದ ಪುಲ್ಲಿಂಗದಲ್ಲಿದೆ ಮತ್ತು (3)ನೇ ವಾಕ್ಯದ ಮಾಡುತ್ತದೆ ಕ್ರಿಯಾಪದ ನಪುಂಸಕ ಲಿಂಗದಲ್ಲಿದೆ.
ಆದರೆ ಕ್ರಿಯಾಪದಗಳಲ್ಲಿ ಕಾಣಿಸುವ ಈ ಲಿಂಗಭೇದ ಅವುಗಳೊಂದಿಗೆ ಆ ವಾಕ್ಯಗಳಲ್ಲಿ ಬಂದಿರುವ ಜಾನಕಿ, ರಾಜು ಮತ್ತು ನಾಯಿ ಎಂಬವುಗಳಲ್ಲಿ ಕಾಣಿಸುವ ಲಿಂಗ ವ್ಯತ್ಯಾಸವನ್ನವಲಂಬಿಸಿದೆಯಲ್ಲದೆ ಕ್ರಿಯಾಪದವು ಸೂಚಿಸುವ ಘಟನೆಯ ಸ್ವರೂಪವನ್ನವಲಂಬಿಸಿಲ್ಲ.
ನಾಮಪದಗಳಿಗೆ ಸಂಬಂಧಿಸಿದ ಹಾಗೆ ಸಾಮಾನ್ಯವಾಗಿ `ಪುರುಷ' ಎಂಬ ಇನ್ನೊಂದು ವ್ಯಾಕರಣ ತತ್ವವನ್ನೂ ಹೆಸರಿಸುವ ಕ್ರಮ ರೂಢಿಯಲ್ಲಿದೆ. ಆದರೆ, ನಿಜಕ್ಕೂ ಈ ವ್ಯಾಕರಣತತ್ವ ನಾಮಪದಗಳಿಗೆ ಸಂಬಂಧಿಸಿದುದಲ್ಲ. ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವ `ಪುರುಷಪದ' ಎಂಬ ಬೇರೆ0iÉುೀ ಒಂದು ಪದವಗ್ರಕ್ಕೆ ಸೇರುವ ಪದಗಳಿಗೆ ಸಂಬಂಧಿಸಿದ ಹಾಗೆ ಈ ತತ್ವ ಬಳಕೆ ಯಲ್ಲಿದೆ (10.2.1 ನೋಡಿ).
6.2 ಲಿಂಗಭೇದಗಳು 6.2.1 ಲಿಂಗ' ಪದದ ಬಳಕೆ ಕನ್ನಡ ವ್ಯಾಕರಣಗಳಲ್ಲಿ ಲಿಂಗ’ ಪದವನ್ನು ಎರಡು ಅಥ್ರಗಳಲ್ಲಿ ಬಳಸಲಾಗಿದೆ. ವಿಭಕ್ತಿಗಳನ್ನು ಪಡೆಯಬಲ್ಲ ನಾಮಪ್ರಕೃತಿಗಳು' ಎಂಬುದು ಅದರ ಒಂದು ಅಥ್ರ; ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳೆಂಬ ನಾಮಪ್ರಕೃತಿಗಳ ವಗ್ರಗಳು (ಇಲ್ಲವೇ ಪ್ರಭೇದಗಳು)’ ಎಂಬುದು ಅದರ ಇನ್ನೊಂದು ಅಥ್ರ.
ಹೀಗೆ ಒಂದೇ ಪಾರಿಭಾಷಿಕ ಪದವನ್ನು ಎರಡು ಭಿನ್ನವಾದ ಅಥ್ರಗಳಲ್ಲಿ ಬಳಸುವುದರಿಂದ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗಲು ಸಾಧ್ಯವಿದೆ. ಹಾಗಾಗಿ, ಮೊದಲನೆಯ ಅಥ್ರದಲ್ಲಿ `ನಾಮಪ್ರಕೃತಿ’ (ಇಲ್ಲವೇ ನಾಮಪದ) ಪದವನ್ನೇ
135 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಉಪಯೋಗಿಸಿ, ಲಿಂಗ' ಪದವನ್ನು ಎರಡನೆಯ ಅಥ್ರದಲ್ಲಿ ಮಾತ್ರ ಉಳಿಸಿ ಕೊಳ್ಳುವುದು ಒಳ್ಳೆಯದು. ಇದಲ್ಲದೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ನಾಮಪ್ರಕೃತಿಗಳನ್ನು ವಾಕ್ಯದಲ್ಲಿ ಬಳಸುವಾಗಲೆಲ್ಲ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿಯೇ ಬಳಸಬೇಕೆಂಬ ನಿಯಮ ವಿಲ್ಲ (8.4 ನೋಡಿ). ಅವಶ್ಯವಿಲ್ಲದಲ್ಲಿ ಅವಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸದೆ ಹಾಗೆಯೇ ಪ್ರಕೃತಿರೂಪದಲ್ಲೂ ಬಳಸಲು ಸಾಧ್ಯವಿದೆ. ಹಾಗಾಗಿ, ಸಂಸ್ಕೃತದ ಹಾಗೆ ಕನ್ನಡದಲ್ಲಿ ನಾಮಪದ’ ಮತ್ತು ನಾಮ ಪ್ರಕೃತಿ' (ಇಲ್ಲವೇ ಪ್ರಾತಿಪದಿಕ’) ಎಂಬುದಾಗಿ ಎರಡು ಪಾರಿಭಾಷಿಕ ಪದಗಳನ್ನು ಬಳಸುವ ಅವಶ್ಯಕತೆಯೂ ಇಲ್ಲ, ಮತ್ತು ಈ ಕಾರಣಕ್ಕಾಗಿ ಮೇಲೆ ಕೊಟ್ಟಿರುವ ಮೊದಲನೆಯ ಅಥ್ರದಲ್ಲಿ `ಲಿಂಗ’ ಪದವನ್ನು ಬಳಸುವ ಅವಶ್ಯಕತೆಯೂ ಇಲ್ಲ.
6.2.2 ಕನ್ನಡದಲ್ಲಿ ಲಿಂಗವಿಭಜನೆ `ಲಿಂಗ’ ಎಂಬುದು (ಮೇಲೆ ಕೊಟ್ಟಿರುವ ಎರಡನೆಯ ಅಥ್ರದಲ್ಲಿ) ನಾಮಪದ ಗಳನ್ನು ವಿಭಜಿಸುವಲ್ಲಿ ಬಳಕೆಯಾಗುವ ಒಂದು ವ್ಯಾಕರಣತತ್ವ ಎಂದು ಹೇಳ ಬಹುದು. ಹೆಚ್ಚಿನ ಭಾಷೆಗಳಲ್ಲೂ ನಾಮಪದಗಳನ್ನು ಗಂಡು, ಹೆಣ್ಣು ಮತ್ತು ಇತರ ಎಂಬ ವ್ಯತ್ಯಾಸದ ಆಧಾರದ ಮೇಲೇನೇ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ವಿಭಜಿಸುವುದು ರೂಢಿ. ಕನ್ನಡದಲ್ಲೂ ಹೀಗೆ0iÉುೀ. ನಾಮಪದಗಳ ಲಿಂಗವನ್ನು ಕನ್ನಡದಲ್ಲಿ ಮುಖ್ಯವಾಗಿ ಅವುಗಳ ಅಥ್ರ ದಿಂದಲೇನೇ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಕೆಲವು ನಾಮಪದಗಳಲ್ಲಿ ಈ ವ್ಯತ್ಯಾಸವನ್ನು ಸೂಚಿಸುವ ಪ್ರತ್ಯಯಗಳು ಕಾಣಿಸಿಕೊಳ್ಳುವುವಾದರೂ ಹೆಚ್ಚಿನೆಡೆ ಗಳಲ್ಲೂ ನಾಮಪದಗಳ ಅಥ್ರವೇ ಈ ವಿಭಜನೆಯ ಆಧಾರವಾಗಿರುತ್ತದೆ.
ಉದಾಹರಣೆಗಾಗಿ, ಹುಡುಗ-ಹುಡುಗಿ, ಅಜ್ಜ-ಅಜ್ಜಿ, ಗೆಳೆಯ-ಗೆಳತಿ ಮೊದಲಾದ ಕೆಲವು ನಾಮಪದಗಳಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯಯಗಳು ಬಂದಿವೆ. ಆದರೆ ಅಣ್ಣ, ಅಕ್ಕ, ಮರ, ಹೆಂಗಸು, ಗಂಡಸು ಮೊದಲಾದ ಪದಗಳಲ್ಲಿ ಅಂತಹ ಪ್ರತ್ಯಯಗಳಿಲ್ಲ. ಅವುಗಳ ಲಿಂಗವನ್ನು ಅಥ್ರದಿಂದಲೇನೇ ತಿಳಿಯಬೇಕಾಗುತ್ತದೆ.
ಇದಲ್ಲದೆ, ಕನ್ನಡದಲ್ಲಿ ಗಂಡು ಮತ್ತು ಹೆಣ್ಣು ಎಂಬ ಲಿಂಗಭೇದ ಮನುಷ್ಯರನ್ನು ಗುರುತಿಸುವ ನಾಮಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿ ಕೊಳ್ಳುತ್ತದೆ. ಇತರ ಪ್ರಾಣಿಗಳಲ್ಲೂ ಗಂಡು-ಹೆಣ್ಣು ಎಂಬ ಭೇದವನ್ನು ಕಾಣಲು ಸಾಧ್ಯವಿದೆಯಾದರೂ ಅವನ್ನು ಗುರುತಿಸುವ ನಾಮಪದಗಳನ್ನೆಲ್ಲ ಕನ್ನಡದಲ್ಲಿ ಮನುಷ್ಯೇತರರನ್ನು ಸೂಚಿಸುವ ನಪುಂಸಕಲಿಂಗದಲ್ಲಿ ಸೇರಿಸುವುದೇ ರೂಢಿ.
(4)
ಮನುಷ್ಯ
ಮನುಷ್ಯೇತರ
136 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಹುಡುಗ ಬಂದ
ಹುಡುಗಿ ಬಂದಳು
ಲಿಂಗ ಮತ್ತು ವಚನಗಳು ದನ ಬಂತು ಎತ್ತು ಬಂತು
ಕನ್ನಡದಲ್ಲಿ ಕಾಣಿಸುವ ಲಿಂಗಭೇದದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಪುಂ-ಸ್ತ್ರೀ ಲಿಂಗಭೇದ ಏಕವಚನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಈ ಕಾರಣಕ್ಕಾಗಿ, ಬಹುವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬ ಲಿಂಗಭೇದದ ಬದಲು ಮನುಷ್ಯ-ಮನುಷ್ಯೇತರ ಎಂಬ ಲಿಂಗಭೇದ ಕನ್ನಡದಲ್ಲಿದೆ.
(5ಕ) ಏಕವಚನ ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ ಎತ್ತು ಬಂತು
ಹುಡುಗ ಬಂದ
ಹುಡುಗಿ ಬಂದಳು
(5ಖ) ಬಹುವಚನ
ಮನುಷ್ಯ
ಮನುಷ್ಯೇತರ
ಹುಡುಗರು ಬಂದರು ಹುಡುಗಿಯರು ಬಂದರು ಎತ್ತುಗಳು ಬಂದುವು
6.3.3 ಸಂಸ್ಕೃತದ ಲಿಂಗ ವಿಭಜನೆ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ನಾಮಪದಗಳ ಲಿಂಗ ವಿಭಜನೆ ಕನ್ನಡದ ಲಿಂಗ ವಿಭಜನೆಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ.
(1) ಸಂಸ್ಕೃತದಲ್ಲಿ ಈ ವಿಭಜನೆಗೆ ಅಥ್ರದ ಆಧಾರ ಬಹಳ ಕಡಿಮೆ. ಪದಗಳ ಕೊನೆಯ ವಣ್ರವನ್ನಾಧರಿಸಿ ಅವುಗಳ ಲಿಂಗ ಯಾವುದು ಎಂಬುದನ್ನು ನಿಧ್ರರಿಸಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗುವುದಾದರೂ ಹೆಚ್ಚಿನೆಡೆಗಳಲ್ಲೂ ನಾಮ ಪದಗಳ ಲಿಂಗವನ್ನು ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳುವ ಅವಶ್ಯಕತೆ ಸಂಸ್ಕೃತದಲ್ಲಿದೆ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ನಾಮಪದಗಳೂ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕಲಿಂಗದಲ್ಲಿ ಬರಬಲ್ಲುವು: ವಣ್ರಃ ಬಣ್ಣ' ಎಂಬುದು ಪುಲ್ಲಿಂಗ, ಮತಿ ಬುದ್ಧಿ’ ಎಂಬುದು ಸ್ತ್ರೀಲಿಂಗ ಮತ್ತು ಮಧು ಜೇನು' ಎಂಬುದು ನಪುಂಸಕ ಲಿಂಗ; ಹೆಂಡತಿ’ ಎಂಬ ಅಥ್ರವಿರುವ ದಾರಾ ಪದ ಪುಲ್ಲಿಂಗ, ಪತ್ನೀ ಪದ ಸ್ತ್ರೀಲಿಂಗ ಮತ್ತು ಕಲತ್ರಂ ಪದ ನಪುಂಸಕಲಿಂಗ.
137 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಹೆಚ್ಚಿನ ನಾಮಪದಗಳಿಗೂ ಸಂಸ್ಕೃತದಲ್ಲಿ ಒಂದು ನಿಶ್ಚಿತವಾದ ಲಿಂಗ ವಿರುತ್ತದೆ. ಆದರೆ ಕೆಲವನ್ನು ಸಂದಭ್ರಕ್ಕನುಸಾರವಾಗಿ ಎರಡು ಇಲ್ಲವೇ ಮೂರು ಲಿಂಗಗಳಲ್ಲೂ ಬಳಸಲು ಸಾಧ್ಯವಿದೆ. ಹಾಗಾಗಿ, ಸಂಸ್ಕೃತದ ಅಥ್ರಕೋಶಗಳಲ್ಲಿ ನಾಮಪದಗಳ ಅಥ್ರವನ್ನು (ಮತ್ತು ಪದವಗ್ರವನ್ನು) ಕೊಡಬೇಕಾಗುತ್ತದೆ ಮಾತ್ರವಲ್ಲ, ಪ್ರತಿಯೊಂದು ನಾಮಪದದ ಎದುರಿಗೂ ಅದು ಒಂದೇ ಲಿಂಗದಲ್ಲಿ ಬರುವಂತಹದೋ ಇಲ್ಲವೇ ಎರಡು ಅಥವಾ ಮೂರು ಲಿಂಗಗಳಲ್ಲಿ ಬರುವಂತಹದೋ ಎಂಬುದನ್ನು ಮತ್ತು ಯಾವ ಲಿಂಗದಲ್ಲಿ (ಅಥವಾ ಲಿಂಗಗಳಲ್ಲಿ) ಬರುವಂತಹದು ಎಂಬುದನ್ನು ಸ್ಪಷ್ಟ ವಾಗಿ ಸೂಚಿಸಬೇಕಾಗುತ್ತದೆ.
(6ಕ) ಯಾವಾಗಲೂ ಒಂದೇ ಲಿಂಗದಲ್ಲಿ ಬರುವ ಪದಗಳು
ಪುಲ್ಲಿಂಗ: ಪಿತೃ, ತಿಲಕ, ಧೀ, ತಡಿ ಏಟು', ಚೋಲ ರವಿಕೆ’, ತಕ್ರ, ತಿಮಿಂಗಿಲ, ತಿರಸ್ಕಾರ, ಆತ್ಮನ್, ನಿಧಿ, ಇತ್ಯಾದಿ. ಸ್ತ್ರೀಲಿಂಗ: ಮಾತೃ, ನದೀ, ನೌ, ಶ್ರೀ, ಲಿಪಿ, ನಿದ್ರಾ, ಮಹಾನವಮೀ, ಚಚ್ರಾ, ಕಾದಂಬರೀ, ಇತ್ಯಾದಿ. ನಪುಂಸಕಲಿಂಗ: ಹೃದಯ, ಚಿತ್ರ, ತಾಂಬೂಲ, ಮಧು, ಅಸ್ಥಿ, ಯಕೃತ್, ಬ್ರಹ್ಮನ್, ಇತ್ಯಾದಿ.
(6ಖ) ಎರಡು ಅಥವಾ ಮೂರು ಲಿಂಗಗಳಲ್ಲಿ ಬರಬಲ್ಲ ಪದಗಳು
ಪುಂ-ಸ್ತ್ರೀಲಿಂಗ: ತಿಥಿ, ವಜ್ರ, ಕೀಲ ಕೀಲು', ಕುಟ ಮನೆ’, EvÁå¢. ಪುಂ-ನಪುಂಸಕಲಿಂಗ: ಕತ್ರೃ, ತಂಡುಲ, ಮೋದಕ, ಮೂಲ, ಕಷಾಯ, ಕಿರೀಟ, ಕುಟುಂಬ, ಅಭ್ರಕ, ಇತ್ಯಾದಿ. ಸ್ತ್ರೀ-ನಪುಂಸಕಲಿಂಗ: ಔಚಿತ್ಯ(ತೀ), ಶಾಲ(ಲಾ), ನೃಸೇನ(ನಾ), EvÁå¢. ಪುಂ-ಸ್ತ್ರೀ-ನಪುಂಸಕಲಿಂಗ: ಶುಚಿ, ಗುರು, ನಿತ್ಯ, ನಿದ್ರಿತ, ಪ್ರಕಾ ಶಕ, ಪರಕೀಯ, ಇತ್ಯಾದಿ.
ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಎಲ್ಲಾ ನಾಮಪದಗಳ ಲಿಂಗವನ್ನೂ ಅವುಗಳ ಅಥ್ರದ ಆಧಾರದ ಮೇಲೇನೇ ಊಹಿಸಿಕೊಳ್ಳಲು ಸಾಧ್ಯವಿದೆಯಾದ ಕಾರಣ, ಅವುಗಳ ಲಿಂಗವನ್ನು ಕನ್ನಡದ ಅಥ್ರಕೋಶದಲ್ಲಿ ಸೂಚಿಸುವ ಅವಶ್ಯಕತೆಯಿಲ್ಲ.
138 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಲಿಂಗ ಮತ್ತು ವಚನಗಳು ಸಂಸ್ಕೃತದಲ್ಲಿ ನಾಮಪದಗಳ ಲಿಂಗವನ್ನು ತಿಳಿದುಕೊಳ್ಳುವುದು ಬಹಳ ಕಷ್ಟದ ಕೆಲಸವಾದ ಕಾರಣ ಅದರ ವೈಯಾಕರಣಿಗಳು ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ಮಾತ್ರವಲ್ಲದೆ ಪುಂಸ್ತ್ರೀ ಲಿಂಗ, ಪುನ್ನಪುಂಸಕಲಿಂಗ, ಸ್ತ್ರೀನಪುಂಸಕಲಿಂಗ ಇತ್ಯಾದಿ ಯಾಗಿ ಬೇರೆ ಕೆಲವು ವಗ್ರಗಳಲ್ಲೂ ವಿಂಗಡಿಸಲು ಪ್ರಯತ್ನಿಸಿದ್ದಾರೆ. ಕನ್ನಡದ ವೈಯಾಕರಣಿಗಳು ಸಂಸ್ಕೃತದ ಈ ಕ್ಲಿಷ್ಟವಾದ ಲಿಂಗವಿಭಜನೆ ಯನ್ನು ಕನ್ನಡಕ್ಕೂ ಅಳವಡಿಸಹೋಗಿ ಅನವಶ್ಯಕವಾಗಿ ಅದು ಇರುವುದಕ್ಕಿಂತ ಹೆಚ್ಚು ಕ್ಲಿಷ್ಟವಾಗಿ ಕಾಣುವ ಹಾಗೆ ಮಾಡಿದ್ದಾರೆ ಮತ್ತು ಗೊಂದಲವನ್ನೂ ತಂದು ಹಾಕಿದ್ದಾರೆ. (2) ಸಂಸ್ಕೃತದಲ್ಲಿ ಪುಂ-ಸ್ತ್ರೀ ಲಿಂಗಭೇದ ಕನ್ನಡದ ಹಾಗೆ ಏಕವಚನದಲ್ಲಿ ಮಾತ್ರವಲ್ಲದೆ (6.3.2 ನೋಡಿ), ದ್ವಿವಚನ ಮತ್ತು ಬಹುವಚನಗಳಲ್ಲೂ ಕಾಣಿಸಿಕೊಳ್ಳುತ್ತದೆ.
(7) ಅವನು' ಅವಳು’
`CzÀÄ’
ಏಕವಚನ ¸ÀB ¸Á vÀvï
ದ್ವಿವಚನ
vË vÉÃ vÉÃ
ಬಹುವಚನ vÉà vÁB vÁ¤
(3) ಕನ್ನಡದಲ್ಲಿ ನಾಮಪದಗಳ ಲಿಂಗಭೇದವನ್ನು ಕ್ರಿಯಾರೂಪಗಳಲ್ಲೂ ಸೂಚಿಸುವ ಕ್ರಮವಿದೆ; ಆದರೆ ಸಂಸ್ಕೃತದ ಕ್ರಿಯಾರೂಪಗಳು ಪುರುಷ ಮತ್ತು ವಚನ ಭೇದಗಳನ್ನು ಮಾತ್ರ ಸೂಚಿಸುತ್ತವೆಯಲ್ಲದೆ ಲಿಂಗಭೇದವನ್ನು ಸೂಚಿಸು ವುದಿಲ್ಲ. ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸ.
(8)
ಸಂಸ್ಕೃತದ ಕ್ರಿಯಾರೂಪಗಳು
ತತ್ರ ರಾಮಃ ಅಸ್ತಿ
ತತ್ರ ಸೀತಾ ಅಸ್ತಿ
ತತ್ರ ಗೃಹಂ ಅಸ್ತಿ
ಕನ್ನಡದ ಕ್ರಿಯಾರೂಪಗಳು ಅಲ್ಲಿ ರಾಮ ಇದ್ದಾನೆ ಅಲ್ಲಿ ಸೀತೆ ಇದ್ದಾಳೆ ಅಲ್ಲಿ ಮನೆ ಇದೆ
(8)ರಲ್ಲಿ ಕನ್ನಡದ ಇರು ಕ್ರಿಯಾಪದಕ್ಕೆ ಅದರೊಂದಿಗೆ ಬರುವ ನಾಮ ಪದದ ಲಿಂಗವನ್ನನುಸರಿಸಿ ಇದ್ದಾನೆ, ಇದ್ದಾಳೆ ಮತ್ತು ಇದೆ ಎಂಬ ಮೂರು
139 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ರೂಪಗಳಿವೆ; ಆದರೆ ಸಂಸ್ಕೃತದ ಅಸ್ ಕ್ರಿಯಾಪದಕ್ಕೆ ಎಲ್ಲಾ ಸಂದಭ್ರಗಳಲ್ಲೂ ಅಸ್ತಿ ಎಂಬ ಒಂದೇ ರೂಪವಿದೆ. ಕನ್ನಡದ ಕ್ರಿಯಾರೂಪಗಳಲ್ಲಿ ಈ ಲಿಂಗಭೇದ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರ ವ್ಯಕ್ತಿಗಳನ್ನು (ಇಲ್ಲವೇ ವಸ್ತುಗಳನ್ನು) ಸೂಚಿಸುವಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸಂದಭ್ರಗಳಲ್ಲಿ ಅದು ಸಂಸ್ಕೃತದ ಹಾಗೆ ವಚನ ಭೇದವನ್ನು ಮಾತ್ರ ಸೂಚಿಸುತ್ತದೆ.
(9ಕ) ಅಹಂ ಗಚ್ಛಾಮಿ
`ನಾನು ಹೋಗುತ್ತೇನೆ’
(9ಖ) ತ್ವಂ ಗಚ್ಛಸಿ
`ನೀನು ಹೋಗುತ್ತೀ’
(9ಕ) ವಾಕ್ಯವನ್ನಾಡಿದ ವ್ಯಕ್ತಿ ಗಂಡಸಾಗಿರಬಹುದು ಇಲ್ಲವೇ ಹೆಂಗಸಾಗಿರ ಬಹುದು. ಈ ವ್ಯತ್ಯಾಸವನ್ನು ಸಂಸ್ಕೃತದ ಗಚ್ಛಾಮಿ ಕ್ರಿಯಾರೂಪ ಇಲ್ಲವೇ ಕನ್ನಡದ ಹೋಗುತ್ತೇನೆ ಕ್ರಿಯಾರೂಪ ಸೂಚಿಸಲಾರದು. (9ಖ) ವಾಕ್ಯದಲ್ಲೂ ಹೀಗೆ0iÉುೀ.
6.3.4 ಭಾಷೆಗಳ ನಡುವಿನ ವ್ಯತ್ಯಾಸಗಳು ಮೇಲೆ ಸೂಚಿಸಿದ ಹಾಗೆ, ಹೆಚ್ಚಿನ ಭಾಷೆಗಳಲ್ಲೂ ನಾಮಪದಗಳ ವಿಭಜನೆ ನಿಜ ಜೀವನದ ಲಿಂಗಭೇದವನ್ನು ಅವಲಂಬಿಸಿರುತ್ತದೆಯಾದ ಕಾರಣ, ಅದನ್ನು `ಲಿಂಗ ವಿಭಜನೆ’0iÉುಂಬುದಾಗಿ ಕರೆಯುವುದರಲ್ಲಿ ತಪ್ಪಿಲ್ಲ. ಆದರೆ, ನಿಜಕ್ಕೂ ಇದು ಮುಖ್ಯವಾಗಿ ನಾಮಪದಗಳನ್ನು ವಿಭಜಿಸುವುದಕ್ಕಾಗಿ ಬಳಕೆಯಾಗುವ ಒಂದು ವ್ಯಾಕರಣ ವಿಧಾನ ಮಾತ್ರ ಎಂಬುದನ್ನು ಮರೆಯಬಾರದು. ಯಾಕೆಂದರೆ, ಕೆಲವು ಭಾಷೆಗಳಲ್ಲಿ ಈ ವಿಭಜನೆ ನಿಜ ಜೀವನದ ಲಿಂಗಭೇದಕ್ಕಿಂತ ತೀರ ಭಿನ್ನವಾ ಗಿರಲೂ ಸಾಧ್ಯವಿದೆ.
ಉದಾಹರಣೆಗಾಗಿ, ಹಿಂದಿ ಭಾಷೆಯಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎಂಬ ಎರಡು ವಗ್ರಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅದರಲ್ಲಿ ನಿಜ್ರೀವ ವಸ್ತುಗಳನ್ನು ಸೂಚಿಸುವ ಪದಗಳನ್ನೂ ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳಾಗಿ ವಿಂಗಡಿಸಲಾಗಿದ್ದು ಅದಕ್ಕೆ ಅಥ್ರದ ಆಧಾರ ಬಹಳ ಕಡಿಮೆ. ಈ ರೀತಿ ಎರಡು ಲಿಂಗಗಳನ್ನು ಮಾತ್ರ ಬಳಸುವ ಬೇರೆಯೂ ಕೆಲವು ಭಾಷೆಗಳು ಭಾರತದಲ್ಲಿವೆ.
ಬೇರೆ ಕೆಲವು ಭಾಷೆಗಳು (ಉದಾಹರಣೆಗಾಗಿ, ಪಾಜ್ರಿ ಎಂಬ ದ್ರಾವಿಡ ಭಾಷೆ) ಗಂಡು ಮತ್ತು ಇತರ ಎಂಬ ಲಿಂಗವಿಭಜನೆಯನ್ನು ಬಳಸುತ್ತದೆ ಮತ್ತು
140 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಲಿಂಗ ಮತ್ತು ವಚನಗಳು ಆಸ್ಟ್ರೇಲಿಯಾದ ದಿಯಾರಿ ಭಾಷೆ ಹೆಣ್ಣು ಮತ್ತು ಇತರ ಎಂಬ ಲಿಂಗ ವಿಭಜನೆ ಯನ್ನು ಬಳಸುತ್ತದೆ. ಗಂಡು, ಹೆಣ್ಣು ಮತ್ತು ಇತರ ಎಂಬ ಈ ವ್ಯತ್ಯಾಸದ ಬದಲು ಬೇರೆ ವ್ಯತ್ಯಾಸಗಳನ್ನು ನಾಮಪದಗಳ ವಿಭಜನೆಗೆ ಆಧಾರವಾಗಿ ಬಳಸುವ ಭಾಷೆಗಳೂ ಹಲವಿವೆ. ಉದಾಹರಣೆಗಾಗಿ, ಆಸ್ಟ್ರೇಲಿಯಾದ ದ್ಯಿಬ್ರಾಲ್ ಭಾಷೆಯಲ್ಲಿ (1) ಹೆಂಗಸರು, (2) ಗಂಡಸರು ಮತ್ತು ಇತರ ಪ್ರಾಣಿಗಳು, (3) ಮಾಂಸವಜ್ರಿತ ಆಹಾರ ಮತ್ತು (4) ಇತರ ಎಂಬುದಾಗಿ ನಾಲ್ಕು ವಿಧದ ಲಿಂಗಗಳಿವೆ.
ಬೇರೆ ಕೆಲವು ಭಾಷೆಗಳಲ್ಲಿ ಚಿಕ್ಕ ವಸ್ತು, ಪ್ರಾಣಿ ಮೊದಲಾದವುಗಳಿಗಾಗಿ ಬೇರೆಯೇ ಒಂದು ಲಿಂಗವಿರುತ್ತದೆ. ಆಫ್ರಿಕಾದ ಕೆಲವು ಭಾಷೆಗಳಲ್ಲಿ ನಾಮಪದ ಗಳನ್ನು ಮನುಷ್ಯರು, ಚಿಕ್ಕವು, ದೊಡ್ಡವು, ಉದ್ದದವು, ಕ್ರಿಯೆ, ಭಾವನೆ ಮೊದ ಲಾದ 20-25 ಲಿಂಗಗಳಲ್ಲಿ ವಿಭಜಿಸುವ ಕ್ರಮವಿದೆ. ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ನಾಮಪದಗಳನ್ನು ವಿಭಜಿಸುವ ಕ್ರಮ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಕನ್ನಡದ ಲಿಂಗವಿಭಜನೆಯನ್ನು ಕನ್ನಡದ್ದೇ ಆದ ದೃಷ್ಟಿಕೋನದ ಮೂಲಕ ಪರಿಶೀಲಿಸಿದಲ್ಲಿ ಮಾತ್ರ ಅದರ ನಿಜವಾದ ಸ್ವರೂಪ ನಮಗೆ ಗೊತ್ತಾಗುತ್ತದೆ.
6.2.5 ಎಣಿಕೆಯ ಪದಗಳಲ್ಲಿ ಲಿಂಗಭೇದ ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬಳಕೆಯಾಗುತ್ತವೆ 0iÉುಂಬುದನ್ನು ನಾವು ಮುಂದೆ (10.3)ರಲ್ಲಿ ನೋಡಲಿರುವೆವು.
ನಾಮಪದಗಳ ಜಾಗದಲ್ಲಿ ಬಳಕೆಯಾಗುವ ಸಂದಭ್ರದಲ್ಲಿ ಅವು ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಬಲ್ಲುವು. ಈ ವಿಷಯದಲ್ಲೂ ಅವು ನಾಮಪದಗಳನ್ನು ಹೋಲುತ್ತವೆ. ಒಬ್ಬನು, ಒಬ್ಬಳು ಮತ್ತು ಒಂದು ಎಂಬ ಪದಗಳು ಏಕವಚನದ ಮೂರು ರೂಪಗಳಾಗಿವೆ. ಕನ್ನಡದಲ್ಲಿ ಒಬ್ಬರು ಎಂಬ ಬಹುವಚನ ರೂಪವಿದೆಯಾದರೂ ಅದಕ್ಕೆ ಸಾಮಾನ್ಯವಾಗಿ ಗೌರವಾಥ್ರದಲ್ಲಿ ಏಕವಚನದ ಅಥ್ರವೇ ಇದೆ. ಎರಡರಿಂದ ಐದರ ವರೆಗಿನ ಪದಗಳಿಗೆ ಬಹುವಚನದ ಎರಡೆರಡು (ಮನುಷ್ಯ-ಮನುಷ್ಯೇತರ) ಲಿಂಗರೂಪಗಳಿವೆ (ಇಬ್ಬರು-ಎರಡು, ಮೂವರು- ಮೂರು, ನಾಲ್ವರು-ನಾಲ್ಕು, ಐವರು-ಐದು). ಉಳಿದ ಪದಗಳಿಗೂ ಹಳೆಗನ್ನಡ ದಲ್ಲಿ ಲಿಂಗರೂಪಗಳಿದ್ದುವು. ಆದರೆ ಹೊಸಗನ್ನಡದಲ್ಲಿ ಅವುಗಳ ಬಳಕೆಯಿಲ್ಲ.
6.3 ವಚನಭೇದಗಳು
141 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸುವುದಕ್ಕಾಗಿ ವಚನ ಎಂಬ ವ್ಯಾಕರಣ ತತ್ವ ಬಳಕೆಯಲ್ಲಿದೆ. ಕನ್ನಡದಲ್ಲಿ ನಾಮಪದಗಳನ್ನು ಅವಕ್ಕೆ ವಚನ ಪ್ರತ್ಯಯವನ್ನು ಸೇರಿಸದೆ ಹಾಗೆ0iÉುೀ ಬಳಸಿದಲ್ಲಿ ಅವು ಗುರುತಿಸುವ ಸಂಖ್ಯೆ ಒಂದು (ಇಲ್ಲವೇ ಅನಿದ್ರಿಷ್ಟ) ಎಂಬ ಅಥ್ರ ಬರು ತ್ತದೆ. ಅವುಗಳೊಂದಿಗೆ ಬಹುವಚನ ಪ್ರತ್ಯಯವನ್ನು ಬಳಸಿದಲ್ಲಿ ಅವುಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿ ಎಂಬ ಅಥ್ರ ಬರುತ್ತದೆ.
ವಚನಗಳ ಮಟ್ಟಿಗೆ ಸಂಸ್ಕೃತ ಕನ್ನಡಕ್ಕಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ವ್ಯತ್ಯಾಸಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಕನ್ನಡದ ವೈಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆ0iÉುೀ ಕನ್ನಡಕ್ಕೆ ಅಳವಡಿಸಹೋಗಿ ಗೊಂದಲಕ್ಕೆಡೆಮಾಡಿದ್ದಾರೆ.
6.3.1 ವಚನಗಳ ಸಂಖ್ಯೆ ಸಂಸ್ಕೃತದಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನ ಎಂಬುದಾಗಿ ಮೂರು ವಚನಗಳಿವೆ. ಆದರೆ ಕನ್ನಡದಲ್ಲಿ ಏಕವಚನ ಮತ್ತು ಬಹುವಚನಗಳೆಂಬ ಎರಡು ವಚನಗಳು ಮಾತ್ರ ಇವೆ. ಸಂಸ್ಕೃತದ ವಚನರೂಪಗಳನ್ನು ಕನ್ನಡದ ವಚನ ರೂಪಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ.
(10) ಏಕಃ ಪುಸ್ತಕಃ ದೌ್ವ ಪುಸ್ತಕೌ ತ್ರಯಃ ಪುಸ್ತಕಾಃ
ಒಂದು ಪುಸ್ತಕ ಎರಡು ಪುಸ್ತಕಗಳು ಮೂರು ಪುಸ್ತಕಗಳು
ಪುಸ್ತಕ ಪದಕ್ಕೆ ಸಂಸ್ಕೃತದಲ್ಲಿ ಮೂರು ವಚನ ರೂಪಗಳಿವೆ; ಆದರೆ ಕನ್ನಡದಲ್ಲಿ ಈ ಪದಕ್ಕೆ ಎರಡು ವಚನ ರೂಪಗಳು ಮಾತ್ರ ಇವೆ ಎಂಬುದನ್ನು ಮೇಲಿನ ಉದಾಹರಣೆಯಿಂದ ತಿಳಿಯಬಹುದು. ಪುಸ್ತಕಗಳ ಸಂಖ್ಯೆ ಎರಡಾಗಿರಲಿ ಇಲ್ಲವೇ ಅದಕ್ಕಿಂತ ಜಾಸ್ತಿ ಇರಲಿ, ಕನ್ನಡದಲ್ಲಿ ಬಹುವಚನವನ್ನು ಸೂಚಿಸುವ ಗಳು ಪ್ರತ್ಯಯವೇ ಬಳಕೆಯಾಗುತ್ತದೆ.
ಕನ್ನಡದ ವೈಯಾಕರಣಿಗಳಲ್ಲಿ ಕೆಲವರು ಸಂಸ್ಕೃತದ ವ್ಯಾಕರಣವನ್ನು ಕನ್ನಡಕ್ಕೆ ಅಳವಡಿಸುವ ಭರದಲ್ಲಿ, ಕನ್ನಡದಲ್ಲೂ ಕಾಲ್ಗಳ್, ಕೈಗಳ್ ಮೊದಲಾದ ಪದಗಳಲ್ಲಿ ದ್ವಿವಚನವನ್ನು ಕಂಡುಕೊಂಡಿದ್ದಾರೆ. ಈ ಪದಗಳು ಎರಡು ವಸ್ತುಗಳನ್ನು ಸೂಚಿಸುವುದು ನಿಜವಾದರೂ ಇವುಗಳೊಂದಿಗೆ ಬಹುವಚನದ ಗಳು ಪ್ರತ್ಯಯವೇ ಬಂದಿರುವ ಕಾರಣ ಅವುಗಳಲ್ಲಿ ದ್ವಿವಚನವಿದೆ0iÉುನ್ನುವುದಕ್ಕೆ ಕನ್ನಡದಲ್ಲಿ ಯಾವ ಆಧಾರವೂ ಇಲ್ಲ.
142 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಲಿಂಗ ಮತ್ತು ವಚನಗಳು ಇದಲ್ಲದೆ, ಕನ್ನಡದಲ್ಲಿ ಎರಡೇ ವಚನಗಳಿವೆ0iÉುಂಬುದು ಒಂದು ಕೊರತೆ ಯಲ್ಲ ಮತ್ತು ಸಂಸ್ಕೃತದಲ್ಲಿ ಮೂರು ವಚನಗಳಿವೆ0iÉುಂಬುದು ಒಂದು ಹೆಗ್ಗಳಿಕೆಯೂ ಅಲ್ಲ. ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸು ವಲ್ಲಿ ಭಾಷೆಗಳು ಒಂದಕ್ಕಿಂತ ಒಂದು ಭಿನ್ನವಾಗಿರಲು ಸಾಧ್ಯ ಎಂಬುದನ್ನಷ್ಟೇ ಇದು ಸೂಚಿಸುತ್ತದೆ.
ಯಾಕೆಂದರೆ, ಮೂರಕ್ಕಿಂತ ಜಾಸ್ತಿ ವಚನಭೇದವನ್ನು ತೋರಿಸುವ ಭಾಷೆ ಗಳೂ ಕೆಲವಿವೆ. ಉದಾಹರಣೆಗಾಗಿ ಫಿಜಿ ಭಾಷೆಯಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನಗಳು ಮಾತ್ರವಲ್ಲದೆ ತ್ರಿವಚನ ಎಂಬುದೂ ಇದೆ. ಇದಲ್ಲದೆ, ಕೆಲವು ಎಂಬುದನ್ನು ಸೂಚಿಸುವ ಐದನೆಯದೊಂದು ವಚನವೂ ಈ ಭಾಷೆ ಯಲ್ಲಿದೆ. ಸುರ್ಸುರುಂಗ ಎಂಬ ಇನ್ನೊಂದು ಭಾಷೆಯಲ್ಲಿ ತ್ರಿವಚನ ಮಾತ್ರವಲ್ಲದೆ ಚತುವ್ರಚನವೂ ಇದೆ. ನಾಮಪದಗಳಲ್ಲಿ ಯಾವ ವಚನಭೇದವನ್ನೂ ತೋರಿಸ ದಿರುವ ಖ್ಮೇರ್ ನಂತಹ ಭಾಷೆಗಳೂ ಕೆಲವಿವೆ.
6.3.2 ವಚನ ಮತ್ತು ವಿಭಕ್ತಿ ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿ ಇವೆರಡನ್ನೂ ಒಂದೇ ಪ್ರತ್ಯಯ ಸೂಚಿಸು ತ್ತದೆ. ಆದರೆ ಕನ್ನಡದಲ್ಲಿ ಇವೆರಡನ್ನು ಸೂಚಿಸಲು ಬೇರೆ ಬೇರೆ ಪ್ರತ್ಯಯಗಳಿವೆ. ಉದಾಹರಣೆಗಾಗಿ, ಸಂಸ್ಕೃತದ ನದೀಭಿಃ ನದಿಗಳಿಂದ' ಎಂಬ ಪದರೂಪ ದಲ್ಲಿ ಬಂದಿರುವ ಭಿಃ ಪ್ರತ್ಯಯ ಬಹುವಚನ ಮತ್ತು ತೃತೀಯಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ. ಇದೇ ರೀತಿಯಲ್ಲಿ, ನದೀಷು ನದಿಗಳಲ್ಲಿ’ ಎಂಬ ಪದರೂಪದಲ್ಲಿ ಬಂದಿರುವ ಷು ಪ್ರತ್ಯಯ ಬಹುವಚನ ಮತ್ತು ಸಪ್ತಮೀ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ. ಆದರೆ ಮೇಲೆ ಈ ಪದಗಳ ಎದುರು ಕೊಟ್ಟಿರುವ ಕನ್ನಡದ ನದಿಗಳಿಂದ ಮತ್ತು ನದಿಗಳಲ್ಲಿ ಎಂಬ ಪದರೂಪಗಳಲ್ಲಿ ಬಹುವಚನವನ್ನು ಸೂಚಿಸಲು ಗಳ್ ಪ್ರತ್ಯಯ ಬಂದಿದೆ ಮತ್ತು ವಿಭಕ್ತಿಗಳನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂದ (ತೃತೀಯಾ) ಮತ್ತು ಅಲ್ಲಿ (ಸಪ್ತಮೀ) ಪ್ರತ್ಯಯಗಳು ಬಂದಿವೆ. ಸಂಸ್ಕೃತದಲ್ಲಿ ಈ ರೀತಿ ವಿಭಕ್ತಿ ಮತ್ತು ವಚನಗಳನ್ನು ಒಂದೇ ಪ್ರತ್ಯಯ ಸೂಚಿಸುವ ಕಾರಣ, ಅದರಲ್ಲಿ ವಿಭಕ್ತಿಯನ್ನು ಸೂಚಿಸುವ ಅವಶ್ಯಕತೆಯಿಲ್ಲ ದಿರುವಲ್ಲೂ ವಚನವನ್ನು ಸೂಚಿಸುವುದಕ್ಕಾಗಿ ವಿಭಕ್ತಿ' ಪ್ರತ್ಯಯಗಳನ್ನು ಬಳಸ ಬೇಕಾಗುತ್ತದೆ; ಕನ್ನಡದಲ್ಲಿ ಈ ಅವಶ್ಯಕತೆಯಿಲ್ಲ. ಈ ಕಾರಣಕ್ಕಾಗಿ, ಸಂಸ್ಕೃತಕ್ಕೆ ಪ್ರಥಮಾ ವಿಭಕ್ತಿ’ ಎಂಬುದು ಬೇಕಾಗುತ್ತದೆ; ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ ಎಂಬುದನ್ನು ಮುಂದೆ (8.5.1)ರಲ್ಲಿ ನೋಡ ಲಿರುವೆವು.
143 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
6.3.3 ಏಕವಚನದ ಸೂಚನೆ ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಒಂದೇ ಪ್ರತ್ಯಯ ಸೂಚಿಸುವ ಕಾರಣ, ಅದರಲ್ಲಿ ದ್ವಿವಚನ ಮತ್ತು ಬಹುವಚನಗಳನ್ನು ಮಾತ್ರವಲ್ಲದೆ ಏಕ ವಚನವನ್ನು ಸೂಚಿಸುವುದಕ್ಕಾಗಿಯೂ ಪ್ರತ್ಯಯಗಳಿವೆ0iÉುಂದು ಹೇಳಲು ಸಾಧ್ಯ ವಾಗುತ್ತದೆ. ಉದಾಹರಣೆಗಾಗಿ, ಪುಸ್ತಕಃ ಪದರೂಪದಲ್ಲಿ ಬರುವ ಅಸ್ (ಅಃ) ಪ್ರತ್ಯಯ ಏಕವಚನ ಮತ್ತು ಪ್ರಥಮಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸು ತ್ತದೆ0iÉುಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಬೇರೆ ಬೇರೆ ಪ್ರತ್ಯಯಗಳು ಸೂಚಿಸುವ ಕಾರಣ, ಏಕವಚನವನ್ನು ಸೂಚಿಸುವುದಕ್ಕಾಗಿ ಪ್ರತ್ಯಯವೊಂದನ್ನು ಬಳಸುವ ಅವಶ್ಯಕತೆಯಿಲ್ಲ. ಬಹುವಚನವನ್ನು ಸೂಚಿಸಬೇಕಾದಾಗ ಮಾತ್ರ ವಚನ ಪ್ರತ್ಯಯವನ್ನು ಬಳಸಿದರೆ ಸಾಕು. ಕನ್ನಡದಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯಯ ಕೆಲವು ಸಂದಭ್ರಗಳಲ್ಲಿ ವಚನವನ್ನೂ ಸೂಚಿಸಬಲ್ಲುದು. ಉದಾಹರಣೆಗಾಗಿ, ಅವನು ಸವ್ರನಾಮದಲ್ಲಿ ನು ಎಂಬುದು ಪುಲ್ಲಿಂಗವನ್ನು ಮಾತ್ರವಲ್ಲದೆ ಏಕವಚನವನ್ನೂ ಸೂಚಿಸುತ್ತಿದೆ; ಇದಕ್ಕೆ ಬದಲು, ಅವರು ಸವ್ರನಾಮದಲ್ಲಿ ರು ಎಂಬುದು ಪುಂ-ಸ್ತ್ರೀ (ಮನುಷ್ಯ) ಲಿಂಗದೊಂದಿಗೆ ಬಹುವಚನವನ್ನೂ ಸೂಚಿಸುತ್ತಿದೆ.
ಇಂತಹ ಸಂದಭ್ರಗಳಲ್ಲಿ ಮಾತ್ರ ಕನ್ನಡದಲ್ಲಿ ಏಕವಚನವನ್ನು ಸೂಚಿಸುವ ಪ್ರತ್ಯಯವಿದೆ0iÉುಂದು ಹೇಳಲು ಸಾಧ್ಯವಿದೆ.
6.3.4 ವಚನವನ್ನು ಸೂಚಿಸದಿರುವುದು ವಸ್ತುಗಳನ್ನು ಸೂಚಿಸುವ ಪದಗಳನ್ನು ಅವು ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಗುರುತಿಸುತ್ತಿದ್ದರೂ ಬಹುವಚನ ಪ್ರತ್ಯಯವಿಲ್ಲದೇನೇ ಬಳಸುವ ಕ್ರಮ ಕನ್ನಡ ದಲ್ಲಿ ರೂಢಿಯಲ್ಲಿದೆ. ಅವುಗಳ ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಸಬೇಕಾದಲ್ಲಿ ಮಾತ್ರ ಬಹುವಚನ ಪ್ರತ್ಯಯವನ್ನು ಬಳಸಿದರೆ ಸಾಕು.
(11) ಎಲ್ಲಾ ಪುಸ್ತಕಗಳನ್ನೂ ಮೇಜಿನ ಮೇಲಿರಿಸಿದ್ದೇನೆ (12) ನಾಲ್ಕು ಪುಸ್ತಕ ಸಿಕ್ಕಿತು
ಪುಸ್ತಕ ಪದ (11)ನೇ ವಾಕ್ಯದಲ್ಲಿ ಗಳು ಬಹುವಚನ ಪ್ರತ್ಯಯದೊಂದಿಗೆ ಬಂದಿದೆ; ಆದರೆ (12)ನೇ ವಾಕ್ಯದಲ್ಲಿ ಅದು ಆ ಪ್ರತ್ಯಯವಿಲ್ಲದೆ ಬಂದಿದೆ. ಹೀಗಿದ್ದರೂ ಅದು ಈ ಎರಡು ವಾಕ್ಯಗಳಲ್ಲೂ ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಸೂಚಿಸುತ್ತದೆ.
144 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಲಿಂಗ ಮತ್ತು ವಚನಗಳು ಸಂಸ್ಕೃತದಲ್ಲಿ ಈ ರೀತಿ ವಚನ ಪ್ರತ್ಯಯವನ್ನು ಬಳಸದೆ ಇರಲು ಸಾಧ್ಯ ವಾಗದು. ಎಣಿಕೆಯ ಪದ ಬಂದಿರುವ ಕಡೆಗಳಲ್ಲೂ ಅದರಲ್ಲಿ ವಚನವನ್ನು ಸೂಚಿಸಬೇಕಾಗುತ್ತದೆ.
(13ಕ) ಏಕಃ ವೃಕ್ಷಃ ಅಪತತ್ `ಒಂದು ಮರ ಬಿತ್ತು’
(13ಖ) ದೌ್ವ ವೃಕೌ್ಷ ಅಪತತಾಂ
`ಎರಡು ಮರಗಳು ಬಿದ್ದುವು/ಎರಡು ಮರ ಬಿತ್ತು’
(13ಗ) ತ್ರೀಣಿ ವೃಕ್ಷಾನಿ ಅಪತನ್
`ಮೂರು ಮರಗಳು ಬಿದ್ದುವು/ಮೂರು ಮರ ಬಿತ್ತು’
(13ಕ-ಗ) ವಾಕ್ಯಗಳಲ್ಲಿ ವೃಕ್ಷ `ಮರ' ಪದ ಮಾತ್ರವಲ್ಲದೆ ಅದರೊಂದಿಗೆ ಬಂದಿರುವ ಎಣಿಕೆಯ ಪದಗಳೂ ಆ ಪದದ ವಚನವನ್ನು ಸೂಚಿಸುತ್ತಿವೆ.
ಸಂಸ್ಕೃತದಲ್ಲಿ ಈ ರೀತಿ ಕನ್ನಡದ ಹಾಗೆ ಅವಶ್ಯಕತೆಯಿಲ್ಲದಲ್ಲಿ ವಚನ ಪ್ರತ್ಯಯವನ್ನು ತೆಗೆದುಹಾಕಲು ಸಾಧ್ಯವಾಗದಿರುವುದಕ್ಕೆ ಅದರಲ್ಲಿ ವಚನ ಮತ್ತು ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತಿರುವುದೇ ಮುಖ್ಯ ಕಾರಣ. ವಚನವನ್ನು ಸೂಚಿಸುವ ಅವಶ್ಯಕತೆಯಿಲ್ಲದಲ್ಲೂ ವಿಭಕ್ತಿಯನ್ನು ಸೂಚಿಸಬೇಕಾಗು ತ್ತದೆ ತಾನೆ!
6.4 ತಿರುಳು ಲಿಂಗ ಮತ್ತು ವಚನಗಳೆಂಬ ಈ ಎರಡು ವ್ಯಾಕರಣತತ್ವಗಳ ಬಳಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಕೆಲವು ಭಾಷೆಗಳಲ್ಲಿ ಲಿಂಗ ಮತ್ತು ವಚನಗಳ ಬಳಕೆಯಾಗದೇ ಇರಲೂ ಸಾಧ್ಯವಿದೆ.
ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆ ಯಾದ ಕಾರಣ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲಿ ಅಳವಡಿಸಿಕೊಳ್ಳಲು ಇಲ್ಲವೇ ಅವುಗಳಲ್ಲಿ ಅಲ್ಪ ಸ್ವಲ್ಪ ಬದಲಾ ವಣೆಗಳನ್ನು ಮಾಡಿ ಉಪಯೋಗಿಸಿಕೊಳ್ಳಲು ಸಾಧ್ಯವಾಗದು.
ಹಾಗಾಗಿ, ಈ ಎರಡು ವ್ಯಾಕರಣ ತತ್ವಗಳು ಕನ್ನಡದಲ್ಲಿ ಯಾವ ರೀತಿ ಯಲ್ಲೆಲ್ಲ ಬಳಕೆಯಾಗುತ್ತವೆ ಎಂಬುದನ್ನು ಪೂತ್ರಿಯಾಗಿ ಅಭ್ಯಾಸ ಮಾಡಿ ಅದರ ಆಧಾರದ ಮೇಲೆ ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯವಶ್ಯ.
145 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಎಂತಹವು ಎಂಬುದನ್ನು ಈ ಎರಡು ವ್ಯಾಕರಣ ತತ್ವಗಳು ಸೂಕ್ಷ್ಮವಾಗಿ ಸೂಚಿಸುತ್ತವೆ. ಈ ವಿಷಯವನ್ನು ನಾಮಪದಗಳಲ್ಲಿ ಮಾತ್ರವಲ್ಲದೆ, ಕ್ರಿಯಾಪದಗಳಲ್ಲಿ, ನಾಮ ಪದಗಳ ವಿಶೇಷಣಗಳಲ್ಲಿ ಮತ್ತು ಸವ್ರನಾಮ(ಪದ)ಗಳಲ್ಲೂ ಸೂಚಿಸುವ ಕ್ರಮವಿದೆ.
ಈ ವಿಷಯದಲ್ಲೂ ಬೇರೆ ಬೇರೆ ಭಾಷೆಗಳು ಬೇರೆ ಬೇರೆ ತೆರನಾಗಿರ ಬಲ್ಲುವಾದ ಕಾರಣ, ಪ್ರತಿಯೊಂದು ಭಾಷೆಯ ವ್ಯಾಕರಣದಲ್ಲೂ ಆ ಭಾಷೆಯಲ್ಲಿ ಕಾಣಿಸುವ ಬಳಕೆ ಎಂತಹದು ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿವರಿಸು ವುದು ಅವಶ್ಯ.
146 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
7. ವಿಭಕ್ತಿಗಳು ಮತ್ತು ಕಾರಕಗಳು
7.1 ಮುನ್ನೋಟ ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬುದಾಗಿ ಎರಡು ವ್ಯಾಕರಣ ತತ್ವಗಳು ಬಳಕೆಯಾಗುತ್ತವೆ. ಪ್ರಥಮಾ, ದ್ವಿತೀಯಾ, ತೃತೀಯಾ, ಚತುಥ್ರೀ, ಪಂಚಮೀ, ಷಷ್ಠೀ ಮತ್ತು ಸಪ್ತಮೀ ಎಂಬುದಾಗಿ ಏಳು ವಿಭಕ್ತಿ ಗಳನ್ನು ಮತ್ತು ಇದಕ್ಕಿಂತ ಭಿನ್ನವಾದ ಕತ್ರೃ, ಕಮ್ರ, ಕರಣ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣ ಎಂಬುದಾಗಿ ಆರು ಕಾರಕಗಳನ್ನು ಈ ವ್ಯಾಕರಣ ಗಳಲ್ಲಿ ಬಳಸಲಾಗುತ್ತದೆ.
ಕನ್ನಡದ ವೈಯಾಕರಣಿಗಳು ಇವೆಲ್ಲವನ್ನೂ ಹಾಗೆಯೇ ಎತ್ತಿಕೊಂಡು ಕನ್ನಡ ವ್ಯಾಕರಣಕ್ಕೆ ಹೊಂದಿಸಿಕೊಂಡಿದ್ದಾರೆ. ಹಾಗೆ ಹೊಂದಿಸಿಕೊಳ್ಳಲು ಸಾಧ್ಯವಾಗದ ಕೆಲವು ಕಡೆಗಳಲ್ಲಿ ಕನ್ನಡದಲ್ಲಿಲ್ಲದಂತಹ ವಿಭಕ್ತಿರೂಪಗಳನ್ನು (ಮರದತ್ತಣಿಂ, ರಾಮನ ದೆಸೆಯಿಂದ) ಮತ್ತು ವಿಭಕ್ತಿ ಪ್ರಯೋಗಗಳನ್ನು (ಕಮ್ರಣಿ ಪ್ರಯೋಗ) ಕನ್ನಡದ ಮೇಲೆ ಹೊರಿಸಿದ್ದಾರೆ. ಇಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಅವಶ್ಯಕತೆಯಿದೆ. ಕನ್ನಡ ವ್ಯಾಕರಣಕ್ಕೆ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ವ್ಯಾಕರಣ ತತ್ವಗಳ ಅವಶ್ಯಕತೆಯಿದೆಯೇ ಎಂಬುದು ಇವುಗಳಲ್ಲಿ ಮೊದಲನೆಯ ಪ್ರಶ್ನೆ. ಸಂಸ್ಕೃತ ವ್ಯಾಕರಣವನ್ನು ಬರೆಯುವಲ್ಲಿ ಈ ಎರಡು ತತ್ವಗಳ ಅವಶ್ಯಕತೆ ಯಿದೆಯೆಂಬುದನ್ನು ಅದರ ವೈಯಾಕರಣಿಗಳು ಸ್ಪಷ್ಟವಾಗಿಯೇ ತೋರಿಸಿಕೊಟ್ಟಿ zÁÝgÉ.
ಆದರೆ ಕನ್ನಡ ವ್ಯಾಕರಣಕ್ಕೂ ಅವುಗಳ ಅವಶ್ಯಕತೆಯಿದೆಯೇ ಎಂಬುದನ್ನು ಕನ್ನಡ ವೈಯಾಕರಣಿಗಳು ಪರಿಶೀಲಿಸಿದ ಹಾಗಿಲ್ಲ. ಸಂಸ್ಕೃತ ವ್ಯಾಕರಣದಲ್ಲಿ ಈ ಎರಡು ವ್ಯಾಕರಣತತ್ವಗಳನ್ನು ಬಳಸಿದ್ದಾರೆ, ಹಾಗಾಗಿ ಕನ್ನಡ ವ್ಯಾಕರಣದಲ್ಲೂ ಅವನ್ನು ಬಳಸಬೇಕಾಗುತ್ತದೆ ಎಂಬುದಾಗಿ ಅವರು ನಿಧ್ರರಿಸಿದ ಹಾಗಿದೆ. ಎಲ್ಲಾ ಭಾಷೆಗಳ ವ್ಯಾಕರಣದಲ್ಲೂ ಈ ಎರಡು ವ್ಯಾಕರಣತತ್ವಗಳು ಇರಲೇಬೇಕೆಂದಿಲ್ಲ ಎಂಬುದನ್ನು ಅವರು ಗಮನಿಸಿದ ಹಾಗಿಲ್ಲ.
ಹಾಗಾಗಿ, ನಾವು ಮೊದಲಿಗೆ ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುತ್ತಿರುವ ಕಾರಕ ಮತ್ತು ವಿಭಕ್ತಿಗಳೆಂಬ ಈ ಎರಡು ತತ್ವಗಳ ನಡುವೆ ಎಂತಹ ವ್ಯತ್ಯಾಸ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಗಳಿವೆ ಮತ್ತು ಆ ವ್ಯಾಕರಣದಲ್ಲಿ ಅವು ಎಂತಹ ಕಾಯ್ರಗಳನ್ನು ಸಾಧಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.
ಅನಂತರ, ಕನ್ನಡ ವ್ಯಾಕರಣದಲ್ಲಿ ಅಂತಹ ಕಾಯ್ರಗಳನ್ನು ಸಾಧಿಸಬೇಕಾದ ಸಂದಭ್ರಗಳಿವೆಯೇ? ಇವೆಯಾದರೆ ಆ ಸಂದಭ್ರಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ತತ್ವಗಳನ್ನು ಬಳಸಲೇ ಬೇಕಾಗುತ್ತದೆಯೇ? ಎಂಬುದನ್ನು, ಎಂದರೆ ನಿಜಕ್ಕೂ ಈ ಎರಡು ತತ್ವಗಳ ಅವಶ್ಯಕತೆ ಕನ್ನಡ ವ್ಯಾಕರಣಕ್ಕಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಕನ್ನಡದ ವೈಯಾಕರಣಿಗಳು ಮಾತ್ರವಲ್ಲದೆ ಭಾರತದ ಇತರ ಭಾಷೆಗಳ ವೈಯಾಕರಣಿಗಳೂ ಇದೇ ರೀತಿಯಲ್ಲಿ ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಅನುಸರಿಸುತ್ತ ವಿಭಕ್ತಿ ಮತ್ತು ಕಾರಕಗಳೆಂಬ ಈ ಎರಡು ವ್ಯಾಕರಣತತ್ವಗಳನ್ನು ಅವು ಅವಶ್ಯವೇ ಅಥವಾ ಅನವಶ್ಯವೇ ಎಂಬುದನ್ನು ಪರಿಶೀಲಿಸದೆ ಹಾಗೆಯೇ ತಮ್ಮ ಭಾಷೆಯ ವ್ಯಾಕರಣಗಳಿಗೆ ಅಳವಡಿಸಿಕೊಂಡಿದ್ದಾರೆ. ಮತ್ತು ಹಾಗೆ ಮಾಡುವುದರ ಮೂಲಕ ಹಲವೆಡೆಗಳಲ್ಲಿ ಆ ವ್ಯಾಕರಣಗಳು ಬಹಳ ಕ್ಲಿಷ್ಟವಾಗು ವಂತೆಯೂ ಮಾಡಿದ್ದಾರೆ.
ಈ ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀಲಿಸಿದಲ್ಲಿ, ಕನ್ನಡ ವ್ಯಾಕರಣಕ್ಕೆ ವಿಭಕ್ತಿಯೆಂಬ ಒಂದು ವ್ಯಾಕರಣತತ್ವ ಮಾತ್ರ ಇದ್ದರೆ ಸಾಕು, ಅದಕ್ಕಿಂತ ಭಿನ್ನವಾ ಗಿರುವ ಕಾರಕವೆಂಬ ವ್ಯಾಕರಣತತ್ವ ಅವಶ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ. ಇದನ್ನು ನಾನು ಬೇರೊಂದು ಪುಸ್ತಕದಲ್ಲಿ (ಭಟ್ 1991) ಕೂಲಂಕಶವಾಗಿ ಚಚ್ರಿಸಿದ್ದೇನೆ.
ಸಂಸ್ಕೃತದಲ್ಲಿ ವಿಭಕ್ತಿಗಳನ್ನು ನೇರವಾಗಿ ಅವುಗಳ ಅಥ್ರದೊಂದಿಗೆ ಸಂಬಂಧಿಸಲು ಸಾಧ್ಯವಾಗದೆ ಇರುವ ಕಾರಣ, ಅದರ ವೈಯಾಕರಣಿಗಳು ಕಾರಕ ವೆಂಬ ತತ್ವವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯುಂಟಾಗಿತ್ತು. ಆದರೆ ಕನ್ನಡದಲ್ಲಿ ವಿಭಕ್ತಿಗಳನ್ನು ನೇರವಾಗಿ ಅಥ್ರದೊಂದಿಗೆ ಸಂಬಂಧಿಸಲು ಸಾಧ್ಯ ವಿದೆ. ಹಾಗಾಗಿ ಅದಕ್ಕೆ ಕಾರಕಗಳೆಂಬ ಕಲ್ಪಿತ ತತ್ವಗಳ ಅವಶ್ಯಕತೆ ಇಲ್ಲ.
ಇದಲ್ಲದೆ, ಇಂತಹ ಅವಶ್ಯವಿಲ್ಲದ ವ್ಯಾಕರಣ ತತ್ವಗಳನ್ನು ಕಲ್ಪಿಸಿಕೊಳ್ಳುವು ದರಿಂದಾಗಿ ಕನ್ನಡ ವ್ಯಾಕರಣ ಅನವಶ್ಯಕವಾಗಿ ಜಾಸ್ತಿ ಕ್ಲಿಷ್ಟವಾಗುತ್ತದೆ. ನಾವಿಲ್ಲಿ ಪರಿಶೀಲಿಸಬೇಕಾಗಿರುವ ಎರಡನೆಯ ಪ್ರಶ್ನೆಯೇನೆಂದರೆ, ಸಂಸ್ಕೃತ ದಲ್ಲಿ ಬರುವ ಏಳು ವಿಭಕ್ತಿಗಳು ಕನ್ನಡದಲ್ಲೂ ಬರುವ ಅವಶ್ಯಕತೆಯಿದೆಯೇ, ಮತ್ತು ಅವು ನಿಜಕ್ಕೂ ಕನ್ನಡದಲ್ಲಿ ಬರುತ್ತಿವೆಯೇ ಎಂಬುದು. ಈ ವಿಷಯದ ಮಟ್ಟಿಗೆ ಕನ್ನಡದ ವೈಯಾಕರಣಿಗಳಲ್ಲಿ ಅಭಿಪ್ರಾಯಭೇದವಿದ್ದು ಸ್ವಲ್ಪ ಮಟ್ಟಿಗೆ ಸಂಶೋಧನೆಯೂ ನಡೆದಿದೆಯೆಂದು ಹೇಳಬಹುದು. ಆದರೂ ಸಂಸ್ಕೃತ ವ್ಯಾಕರಣದ ಪ್ರಭಾವದಿಂದ ಪೂತ್ರಿಯಾಗಿ ಹೊರಬಂದು ಕನ್ನಡ ವಿಭಕ್ತಿಗಳನ್ನು ಕನ್ನಡದ್ದೇ ಆದ ಸ್ವಭಾವವನ್ನನುಸರಿಸಿ ವಿವರಿಸುವ ಕೆಲಸ ಇನ್ನೂ ನಡೆದಿಲ್ಲ.
147 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಈ ವಿಷಯವನ್ನು ನಾನು ಮುಂದಿನ ಅಧ್ಯಾಯದಲ್ಲಿ ಪರಿಶೀಲಿಸಲಿದ್ದು, ಈ ಅಧ್ಯಾಯದಲ್ಲಿ ಕನ್ನಡಕ್ಕೆ ಕಾರಕ ಇಲ್ಲವೇ ಅಂತಹದೇ ಆದ ಬೇರೆ ಕಲ್ಪಿತವಾದ ವ್ಯಾಕರಣತತ್ವ ಯಾಕೆ ಅವಶ್ಯವಿಲ್ಲ ಎಂಬುದನ್ನು ಸ್ವಲ್ಪ ವಿಸ್ತಾರವಾಗಿ ವಿವರಿಸಲು ಯತ್ನಿಸುತ್ತೇನೆ.
7.2 ವಿಭಕ್ತಿಗಳ ಕೆಲಸ ವಾಕ್ಯವೊಂದರಲ್ಲಿ ಸಾಮಾನ್ಯವಾಗಿ ಒಂದು ಕ್ರಿಯಾಪದ ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚು ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬಳಕೆಯಾಗು ತ್ತವೆ. ಕ್ರಿಯಾಪದಗಳು ಯಾವುದಾದರೂ ಒಂದು ಘಟನೆಯನ್ನು ತಿಳಿಸುತ್ತವೆ ಮತ್ತು ನಾಮಪದಗಳು ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.
(1)
ರಾಜು ಹರಿಯನ್ನು ಒಂದು ಮರಕ್ಕೆ ಕಟ್ಟಿದ
(1)ನೇ ವಾಕ್ಯದಲ್ಲಿ ಬಂದಿರುವ ಕಟ್ಟು ಕ್ರಿಯಾಪದ ಒಂದು ಘಟನೆಯನ್ನು ತಿಳಿಸುತ್ತದೆ. ಅದೇ ವಾಕ್ಯದಲ್ಲಿ ಬಂದಿರುವ ರಾಜು, ಹರಿ ಮತ್ತು ಮರ ನಾಮ ಪದಗಳು ಆ ಘಟನೆಯಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತಿಸು ತ್ತವೆ.
ವಾಕ್ಯವೊಂದರಲ್ಲಿ ಈ ರೀತಿ ಕ್ರಿಯಾಪದದೊಂದಿಗೆ ಒಂದಕ್ಕಿಂತ ಜಾಸ್ತಿ ನಾಮಪದಗಳು ಬಂದಾಗ, ಅವುಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಾಗುತ್ತದೆ ಮಾತ್ರವಲ್ಲ, ಆ ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ಅವು ಯಾವ ಯಾವ ಕೆಲಸಗಳಲ್ಲಿ ತೊಡಗಿವೆ ಎಂಬುದನ್ನೂ ತಿಳಿಸಬೇಕಾಗು vÀÛzÉ.
ಉದಾಹರಣೆಗಾಗಿ, *ರಾಜು ಹರಿ ಮರ ಕಟ್ಟಿದ ಎಂದಿಷ್ಟೇ ಹೇಳಿದರೆ, `ಯಾರು ಯಾರನ್ನು ಯಾವುದಕ್ಕೆ ಕಟ್ಟಿದ್ದು' ಎಂಬ ವಿಷಯ ಸ್ಪಷ್ಟವಾಗಲಾರದು. ಇದನ್ನು ಸ್ಪಷ್ಟಪಡಿಸುವುದಕ್ಕಾಗಿ ವಾಕ್ಯದಲ್ಲಿ ಬರುವ ಈ ನಾಮಪದಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಅವಶ್ಯಕತೆಯಿದೆ.
ಮೇಲೆ ಕೊಟ್ಟಿರುವ (1)ನೇ ವಾಕ್ಯದಲ್ಲಿ ಮರ ಪದದ ಅನಂತರ ಕ್ಕೆ ವಿಭಕ್ತಿ ಪ್ರತ್ಯಯ ಬಂದಿದ್ದು, `ಕಟ್ಟಿ ಹಾಕಿದ್ದು ಯಾವುದಕ್ಕೆ' ಎಂಬುದನ್ನು ಅದು ತಿಳಿಸುತ್ತದೆ; ಹರಿ ನಾಮಪದದ ಅನಂತರ ಅನ್ನು ವಿಭಕ್ತಿ ಪ್ರತ್ಯಯ ಬಂದಿದ್ದು `ಮರಕ್ಕೆ ಯಾರನ್ನು ಕಟ್ಟಿ ಹಾಕಿದ್ದು' ಎಂಬುದನ್ನು ಅದು ತಿಳಿಸುತ್ತದೆ.
148 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಈ ರೀತಿ ನಾಮಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗೂ ಕ್ರಿಯಾ ಪದವು ತಿಳಿಸುವ ಘಟನೆಗೂ ನಡುವಿರುವ ಸಂಬಂಧವೇನೆಂಬುದನ್ನು ತಿಳಿಸಲು ವಿಭಕ್ತಿ ಪ್ರತ್ಯಯಗಳ (ಅಥವಾ ಬೇರಾವುದಾದರೂ ಸಾಧನಗಳ) ಅವಶ್ಯಕತೆಯಿದೆ. ಕನ್ನಡದಂತಹ ಕೆಲವು ಭಾಷೆಗಳಲ್ಲಿ ಈ ಕೆಲಸಕ್ಕಾಗಿ ವಿಭಕ್ತಿ ಪ್ರತ್ಯಯಗಳ ಬಳಕೆ ಯಾಗುತ್ತದೆ. ಆದರೆ ಬೇರೆ ಭಾಷೆಗಳಲ್ಲಿ ಬೇರೆ ಸಾಧನಗಳ ಬಳಕೆಯಾಗುವುದೂ ಇದೆ. ಉದಾಹರಣೆಗಾಗಿ ಇಂಗ್ಲಿಷ್ ಭಾಷೆಯ ವಾಕ್ಯಗಳಲ್ಲಿ ಪದಗಳ ಜಾಗವೂ ಈ ಕೆಲಸವನ್ನು ನಡೆಸಬಲ್ಲುದು.
(2PÀ) Raju tied Hari to the tree
`ರಾಜು ಹರಿಯನ್ನು ಮರಕ್ಕೆ ಕಟ್ಟಿದ’
(2R) Hari tied Raju to the tree
`ಹರಿ ರಾಜುವನ್ನು ಮರಕ್ಕೆ ಕಟ್ಟಿದ’
(2ಕ) ಮತ್ತು (2ಖ) ವಾಕ್ಯಗಳ ನಡುವೆ ಕಾಣಿಸುವ ಅಥ್ರ ವ್ಯತ್ಯಾಸ ಖಚಿರಿu ಮತ್ತು ಊಚಿಡಿi ಎಂಬ ಈ ಎರಡು ಪದಗಳು ವಾಕ್ಯದಲ್ಲಿ ಎಲ್ಲಿ ಬಂದಿವೆ ಎಂಬುದರ ಮೇಲೆ, ಎಂದರೆ ವಾಕ್ಯದಲ್ಲಿ ಅವುಗಳ ಜಾಗ ಯಾವುದು ಎಂಬುದರ ಮೇಲೆ ಅವಲಂಬಿಸಿದೆ. ಈ ವಾಕ್ಯಗಳಲ್ಲಿ ಕ್ರಿಯಾಪದಕ್ಕಿಂತ ಮೊದಲು ಬಂದಿರುವ ನಾಮಪದ `ಕಟ್ಟಿದವರು ಯಾರು' ಎಂಬುದನ್ನು ತಿಳಿಸುತ್ತದೆ ಮತ್ತು ಕ್ರಿಯಾ ಪದದ ಅನಂತರ ಬಂದಿರುವ ನಾಮಪದ `ಯಾರನ್ನು ಕಟ್ಟಿದ್ದು' ಎಂಬುದನ್ನು ತಿಳಿಸುತ್ತದೆ.
ಇದಲ್ಲದೆ, ಈ ಎರಡು ವಾಕ್ಯಗಳಲ್ಲೂ `ಯಾವುದಕ್ಕೆ ಕಟ್ಟಿದ್ದು' ಎಂಬುದನ್ನು ತಿಳಿಸಲು ಣo ಎಂಬ ಉಪಸಗ್ರದ ಬಳಕೆಯಾಗಿದೆ.
ಕನ್ನಡದಲ್ಲಿ ಇಂತಹ ಕೆಲಸಗಳನ್ನೆಲ್ಲ ಮುಖ್ಯವಾಗಿ ವಿಭಕ್ತಿ ಪ್ರತ್ಯಯಗಳೇ ನಡೆಸುವುವಾದ ಕಾರಣ, ಅವು ಯಾವುವೆಲ್ಲ ಇವೆ ಮತ್ತು ವಾಕ್ಯಗಳಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ವಿಸ್ತಾರವಾಗಿ ವಿವರಿಸುವ ಅವಶ್ಯಕತೆಯಿದೆ.
7.3 ಕಾರಕಗಳ ಕೆಲಸ ಮೇಲೆಯೇ ಸೂಚಿಸಿರುವ ಹಾಗೆ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಎಂಬ ವ್ಯಾಕರಣ ತತ್ವ ಮಾತ್ರವಲ್ಲದೆ `ಕಾರಕ’ ಎಂಬ ಇನ್ನೊಂದು ವ್ಯಾಕರಣ ತತ್ವವೂ ಬಳಕೆಯಾಗುತ್ತದೆ. ಕಾರಕಗಳೆಂಬ ಈ ವ್ಯಾಕರಣ ತತ್ವವು ನಡೆಸುವ ಕೆಲಸ ವಿಭಕ್ತಿಗಳು ನಡೆಸುವ ಕೆಲಸಕ್ಕಿಂತ ತೀರ ಭಿನ್ನವಾದುದು.
149 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅವು ವಿಭಕ್ತಿಗಳ ಹಾಗೆ ನಿಜಕ್ಕೂ ವಾಕ್ಯಗಳಲ್ಲಿ ಕಾಣಿಸುವ ಅಂಗಗಳಲ್ಲ; ಸಂಸ್ಕೃತ ವೈಯಾಕರಣಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡಿರುವ ವೈಯಾಕರಣಿಕ ಪರಿಕಲ್ಪನೆಗಳು ಮಾತ್ರ.
ಅವರು ಈ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳಲು ಕಾರಣವೇನೆಂದರೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವು ಸೂಚಿಸಬೇಕಾಗಿರುವ ಅಥ್ರ ದೊಂದಿಗೆ ನೇರವಾಗಿ ಸಂಬಂಧಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ, ವಿಭಕ್ತಿಗಳನ್ನು ಕಾರಕಗಳೊಂದಿಗೆ ಸಂಬಂಧಿಸಿ, ಅನಂತರ ಅಂತಹ ಕಾರಕಗಳ ಮೂಲಕ ವಾಕ್ಯದ ಅಥ್ರ ವೇನೆಂಬುದನ್ನು ವಿವರಿಸಿ ಹೇಳಲು ಸಂಸ್ಕೃತದ ವೈಯಾಕರಣಿಗಳು ಪ್ರಯತ್ನಿಸ ಬೇಕಾಗಿದೆ. ಸಂಸ್ಕೃತದಲ್ಲಿ ಈ ರೀತಿ ವಿಭಕ್ತಿಗಳಿಗೂ ಅವುಗಳ ಅಥ್ರಕ್ಕೂ ನೇರವಾದ ಸಂಬಂಧವಿಲ್ಲದಿರಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ.
ಕಲ್ಪಿಸಿಕೊಂಡಿರುವ
ಮೊದಲು
ತಾವು
7.3.1 ಒಂದು ವಿಭಕ್ತಿಗೆ ಹಲವು ಅಥ್ರಗಳು ಸಂಸ್ಕೃತದಲ್ಲಿ ಪ್ರಥಮಾ ವಿಭಕ್ತಿಗೆ ಒಂದು ನಿಶ್ಚಿತವಾದ ಅಥ್ರವನ್ನು ಕೊಡಲು ಸಾಧ್ಯವಾಗದು. ಯಾಕೆಂದರೆ, ಒಂದು ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ ಆ ಘಟನೆಯಲ್ಲಿ ತೊಡಗಿರುವ ಇತರ ವ್ಯಕ್ತಿ, ವಸ್ತು ಮೊದಲಾ ದವುಗಳನ್ನೂ ಪ್ರಥಮಾ ವಿಭಕ್ತಿಯ ಮೂಲಕ ಸಂಸ್ಕೃತದಲ್ಲಿ ಸೂಚಿಸಲು ಸಾಧ್ಯ «zÉ.
(3PÀ)
ರಾಮಃ ಸ್ಥಾಲ್ಯಾಂ ಓದನಂ ಕಾಷ್ಠೈಃ ಪಚತಿ `ರಾಮನು ಮಡಕೆಯಲ್ಲಿ ಅನ್ನವನ್ನು ಕಟ್ಟಿಗೆಯನ್ನು ಬಳಸಿ ಬೇಯಿಸು ತ್ತಾನೆ’ (3ಖ) ಸ್ಥಾಲೀ ಪಚತಿ
(3UÀ)
ಮಡಕೆಯಲ್ಲಿ (ಅನ್ನವನ್ನು) ಬೇಯಿಸುತ್ತಾನೆ' ಕಾಷ್ಠಂ ಪಚತಿ ಕಟ್ಟಿಗೆಯನ್ನು ಬಳಸಿ (ಅನ್ನವನ್ನು) ಬೇಯಿಸುತ್ತಾನೆ’
(3ಕ-ಗ)ದಲ್ಲಿ ಕೊಟ್ಟಿರುವ ಮೂರು ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಗೆ ಮೂರು ಬೇರೆ ಬೇರೆ ಅಥ್ರಗಳಿವೆ0iÉುಂಬುದನ್ನು ಗಮನಿಸಬಹುದು. (3ಕ) ವಾಕ್ಯದಲ್ಲಿ ಅದು ಬೇಯಿಸುವ ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಸೂಚಿಸುತ್ತದೆ; ಆದರೆ, (3ಖ) ವಾಕ್ಯದಲ್ಲಿ ಅದು ಆ ಘಟನೆಯನ್ನು ನಡೆಸಲು
150 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಬಳಸಿದ ಪಾತ್ರೆಯನ್ನು ಸೂಚಿಸುತ್ತದೆ ಮತ್ತು (3ಗ) ವಾಕ್ಯದಲ್ಲಿ ಅದಕ್ಕಾಗಿ ಬಳಸ ಲಾಗಿರುವ ಕಟ್ಟಿಗೆಯನ್ನು ಸೂಚಿಸುತ್ತದೆ.
(3ಖ) ಮತ್ತು (3ಗ) ವಾಕ್ಯಗಳಲ್ಲಿ ಬೇಯುವ ಪದಾಥ್ರ ಮತ್ತು ಬೇಯಿಸುವ ವ್ಯಕ್ತಿ ಇವೆರಡನ್ನು ಹೆಸರಿಸಿಲ್ಲವಾದ ಕಾರಣ, ಸ್ಥಾಲೀ ಮಡಿಕೆ' ಎಂಬುದನ್ನು (3ಖ) ವಾಕ್ಯದಲ್ಲಿಯೂ ಕಾಷ್ಠಂ ಕಟ್ಟಿಗೆ’ ಎಂಬುದನ್ನು (3ಗ) ವಾಕ್ಯದಲ್ಲಿಯೂ ಪ್ರಥಮಾ ವಿಭಕ್ತಿಯಲ್ಲಿ ಬಳಸಲು ಸಾಧ್ಯವಾಗಿದೆ. ಇದು ಸಂಸ್ಕೃತದ ವೈಶಿಷ್ಟ್ಯ.
ಹೀಗೆ ಪ್ರಥಮಾ ವಿಭಕ್ತಿಗೆ ಈ ಮೂರು (3ಕ-ಗ) ವಾಕ್ಯಗಳಲ್ಲಿ ಮೂರು ಬೇರೆ ಬೇರೆ ಅಥ್ರಗಳಿವೆ.
7.3.2 ಒಂದೇ ಅಥ್ರಕ್ಕೆ ಹಲವು ವಿಭಕ್ತಿಗಳು ಸಂಸ್ಕೃತದಲ್ಲಿ ಈ ರೀತಿ ಒಂದೇ ವಿಭಕ್ತಿ ಪ್ರತ್ಯಯವನ್ನು ಹಲವು ಅಥ್ರಗಳಲ್ಲಿ ಬಳಸಲು ಸಾಧ್ಯವಿದೆ ಮಾತ್ರವಲ್ಲ, ಒಂದೇ ಅಥ್ರವನ್ನೂ ಹಲವು ವಿಭಕ್ತಿಗಳ ಮೂಲಕ ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಮೇಲೆ ಸೂಚಿಸಿರುವ ಅಥ್ರಗಳಲ್ಲಿ ಮೊದಲನೆಯದನ್ನು, ಎಂದರೆ ಘಟನೆಯನ್ನು ನಡೆಸುವುದು ಯಾರು ಎಂಬುದನ್ನು, ಸಂಸ್ಕೃತದಲ್ಲಿ ಪ್ರಥಮಾ ವಿಭಕ್ತಿಯ ಮೂಲಕವೂ ಸೂಚಿಸಬಹುದು, ತೃತೀಯಾ ವಿಭಕ್ತಿಯ ಮೂಲಕವೂ ಸೂಚಿಸಬಹುದು (4ಕ-ಖ ನೋಡಿ).
ಸಂಸ್ಕೃತದಲ್ಲಿ ಕತ್ರರಿ' ಮತ್ತು ಕಮ್ರಣಿ’ ಎಂಬುದಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಘಟನೆಯೊಂದನ್ನು ನಡೆಸುವ ವ್ಯಕ್ತಿಯನ್ನು ಕತ್ರರಿ ವಾಕ್ಯದಲ್ಲಿ ಪ್ರಥಮಾ ವಿಭಕ್ತಿಯ ಮೂಲಕ ಮತ್ತು ಕಮ್ರಣಿ ವಾಕ್ಯದಲ್ಲಿ ತೃತೀಯಾ ವಿಭಕ್ತಿಯ ಮೂಲಕ ಸೂಚಿಸಲಾಗುತ್ತದೆ.
(4ಕ) ದೇವದತ್ತಃ ಗ್ರಂಥಂ ಪಠತಿ
`ದೇವದತ್ತನು ಪುಸ್ತಕವನ್ನು ಓದುತ್ತಾನೆ’
(4ಖ) ದೇವದತ್ತೇನ ಗ್ರಂಥಃ ಪಠ್ಯತೇ
`ದೇವದತ್ತನು ಪುಸ್ತಕವನ್ನು ಓದುತ್ತಾನೆ’
(4ಕ) ಮತ್ತು (4ಖ) ವಾಕ್ಯಗಳೆರಡಕ್ಕೂ ಸಂಸ್ಕೃತದಲ್ಲಿ ಅಥ್ರ ಒಂದೇ; ಹೀಗಿದ್ದರೂ ಘಟನೆಯನ್ನು ನಡೆಸುವ (ಓದುವ) ವ್ಯಕ್ತಿಯನ್ನು (4ಕ)ದಲ್ಲಿ ಪ್ರಥಮಾ ವಿಭಕ್ತಿಯ ಮೂಲಕ ಸೂಚಿಸಲಾಗಿದೆ ಮತ್ತು (4ಖ)ದಲ್ಲಿ ತೃತೀಯಾ ವಿಭಕ್ತಿಯ ಮೂಲಕ ಸೂಚಿಸಲಾಗಿದೆ. ಎಂದರೆ, ಈ ಎರಡು ವಾಕ್ಯಗಳಲ್ಲಿ
151 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಒಂದೇ ಅಥ್ರವನ್ನು ಎರಡು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳ ಮೂಲಕ ಸೂಚಿಸಲಾಗಿದೆ. ಕನ್ನಡ ವ್ಯಾಕರಣಗಳಲ್ಲಿ (4ಖ) ವಾಕ್ಯವನ್ನು ದೇವದತ್ತನಿಂದ ಪುಸ್ತಕ ಓದಲ್ಪಡುತ್ತದೆ' ಎಂಬುದಾಗಿ ಅನುವಾದಿಸುವುದು ರೂಢಿ. ಆದರೆ ಇಂತಹ ವಾಕ್ಯ ಕನ್ನಡದಲ್ಲಿ ಸಂಸ್ಕೃತದ ಪ್ರಭಾವದಿಂದ ಬಂದಿದ್ದು, ಹೊಸಗನ್ನಡದಲ್ಲಿ ಇಲ್ಲವೇ ಮಾತಿನಲ್ಲಿ ಇದು ಇಲ್ಲವೆಂದೇ ಹೇಳಬಹುದು. ಇದೇ ರೀತಿಯಾಗಿ ದ್ವಿತೀಯಾ ಮತ್ತು ಸಪ್ತಮೀ ವಿಭಕ್ತಿಗಳನ್ನು ಒಂದೇ ಅಥ್ರದಲ್ಲೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಕುಳಿತಿದ್ದಾನೆ’ ಎಂಬ ಅಥ್ರ ಕೊಡುವ ಆಸ್ತೇ ಮತ್ತು ಅಧ್ಯಾಸ್ತೇ ಎಂಬ ಎರಡು ಕ್ರಿಯಾಪದಗಳ ಬಳಕೆಯನ್ನು ಗಮನಿಸಬಹುದು.
(5ಕ) ಪವ್ರತೇ ಆಸ್ತೇ
ಗುಡ್ಡದಲ್ಲಿ ಕುಳಿತಿದ್ದಾನೆ' (5ಖ) ಪವ್ರತಂ ಅಧ್ಯಾಸ್ತೇ ಗುಡ್ಡದಲ್ಲಿ ಕುಳಿತಿದ್ದಾನೆ’
(5ಕಖ) ವಾಕ್ಯಗಳೆರಡರಲ್ಲೂ ಗುಡ್ಡವು ಕುಳಿತುಕೊಳ್ಳುವ ಜಾಗವಾಗಿದೆ. ಹೀಗಿದ್ದರೂ, (5ಕ) ವಾಕ್ಯದಲ್ಲಿ ಅದು ಸಪ್ತಮಿಯಲ್ಲಿ ಬಂದಿದೆ, ಮತ್ತು (5ಖ) ದಲ್ಲಿ ದ್ವಿತೀ0iÉುಯಲ್ಲಿ ಬಂದಿದೆ.
7.3.3 ಬೇರೆ ಕಾರಣಗಳು ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅಥ್ರಕ್ಕೂ ನಡುವೆ ನೇರವಾದ ಸಂಬಂಧವಿಲ್ಲದಿರಲು ಬೇರೆಯೂ ಕೆಲವು ಕಾರಣಗಳಿವೆ. ಉದಾಹರಣೆಗಾಗಿ, ಕೆಲವು ಸಂದಭ್ರಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯ ಗಳಿಗೆ ಸಂಸ್ಕೃತದಲ್ಲಿ ವಿಶಿಷ್ಟವಾದ ಅಥ್ರವೇ ಇರುವುದಿಲ್ಲ.
ಇದಲ್ಲದೆ, ಈ ವಿಭಕ್ತಿ ಪ್ರತ್ಯಯಗಳು ವಿಭಕ್ತ್ಯಥ್ರವನ್ನು ಮಾತ್ರವಲ್ಲದೆ, ನಾಮಪದದ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ನಾಮಪದಗಳ ಕೊನೆಯ ಅಕ್ಷರಗಳನ್ನನುಸರಿಸಿಯೂ ಸಂಸ್ಕೃತದ ವಿಭಕ್ತಿ ಪ್ರತ್ಯಯಗಳಲ್ಲಿ ಕೆಲವು ವ್ಯತ್ಯಾಸ ಗಳು ಕಾಣಿಸಿಕೊಳ್ಳುತ್ತವೆ. (ವಿವರಗಳಿಗೆ 8.3 ನೋಡಿ). ಇಂತಹ ವ್ಯತ್ಯಾಸಗಳೂ ಸಂಸ್ಕೃತದ ವಿಭಕ್ತಿ ಪ್ರತ್ಯಯಗಳನ್ನು ಅವುಗಳ ಅಥ್ರದೊಂದಿಗೆ ಸಂಬಂಧಿಸುವ ಕೆಲಸ ಹೆಚ್ಚು ಕ್ಲಿಷ್ಟವಾಗುವಂತೆ ಮಾಡಿವೆ.
7.3.4 ಕಾರಕಗಳ ಮೂಲಕ ಸಂಬಂಧಿಸುವುದು
152 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಮೇಲೆ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸ ಬೇಕಾಗಿರುವ ಅಥ್ರಗಳಿಗೂ ನಡುವೆ ನೇರವಾದ ಸಂಬಂಧವಿಲ್ಲವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ವಾಕ್ಯದ ರಚನೆಯನ್ನು ಮತ್ತು ಅದರಲ್ಲಿ ಬಳಕೆ ಯಾಗುವ ವಿಭಕ್ತಿಗಳ ಸ್ವರೂಪವನ್ನು ಮೊದಲಿಗೆ ಕಾರಕಗಳ ಮೂಲಕ ವಿವರಿಸಿ, ಅನಂತರ ಆ ರಚನೆಯನ್ನು ಅದರ ಅಥ್ರದೊಂದಿಗೆ ಸಂಬಂಧಿಸಬೇಕಾಗಿದೆ. ನಿಜಕ್ಕೂ ಭಾಷೆಯಲ್ಲಿರುವುದು ವಿಭಕ್ತಿ ಪ್ರತ್ಯಯಗಳು ಮತ್ತು ಅವು ಸೂಚಿಸ ಬೇಕಾಗಿರುವ ಅಥ್ರ (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧ) ಇವೆರಡು ಮಾತ್ರ. ಮೇಲೆ ಸೂಚಿಸಿದ ಹಾಗೆ, ಕಾರಕಗಳೆಂಬುವು ಸಂಸ್ಕೃತದ ವೈಯಾಕರಣಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡಿರುವ ಕಾಲ್ಪನಿಕ ತತ್ವಗಳು ಮಾತ್ರ. ಅವು ಆ ಭಾಷೆಯಲ್ಲಿ ವಿಭಕ್ತಿಗಳ ಬಳಕೆ ಒಂದು ವಿಶಿಷ್ಟವಾದ ರೀತಿಯಲ್ಲಿದೆಯಾದ ಕಾರಣ ಮಾತ್ರ ಬೇಕಾಗಿವೆ.
ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (3ಕ-ಗ) ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಯಲ್ಲಿ ಬಂದಿರುವ ಪದಗಳನ್ನು ಮತ್ತು (4ಖ) ವಾಕ್ಯದಲ್ಲಿ ತೃತೀಯಾ ವಿಭಕ್ತಿಯಲ್ಲಿ ಬಂದಿರುವ ಪದವನ್ನು ಸಂಸ್ಕೃತದ ವೈಯಾಕರಣಿಗಳು ಕತ್ರೃ ಕಾರಕವೆಂದು ಪರಿಗಣಿಸುತ್ತಾರೆ. ಇದಕ್ಕೆ ಬದಲು, (4ಖ) ವಾಕ್ಯದಲ್ಲಿ ಪ್ರಥಮೆ ಯಲ್ಲಿ ಬಂದಿರುವ ಪದವನ್ನು ಕಮ್ರಕಾರಕವೆಂದು ಪರಿಗಣಿಸುತ್ತಾರೆ.
ವಿಭಕ್ತಿ ಮತ್ತು ಅವುಗಳ ಅಥ್ರಗಳ ನಡುವೆ ಮಾತ್ರವಲ್ಲ, ವಿಭಕ್ತಿ ಮತ್ತು ಕಾರಕಗಳ ನಡುವೆಯೂ ಸಂಸ್ಕೃತದಲ್ಲಿ ನೇರವಾದ ಸಂಬಂಧವಿಲ್ಲ. ಇದಕ್ಕೆ ಕಾರಣವೇನೆಂದರೆ, ವಿಭಕ್ತಿಗಳು ಸೂಚಿಸಬೇಕಾಗಿರುವ ಅಥ್ರವನ್ನು ವಿವರಿಸು ವುದಕ್ಕಾಗಿ ಮಾತ್ರವಲ್ಲದೆ, ವ್ಯಾಕರಣದ ಬೇರೆ ಕೆಲವು ನಿಯಮಗಳನ್ನು ಸಂಕ್ಷಿಪ್ತ ವಾಗಿ ವಣ್ರಿಸುವುದಕ್ಕಾಗಿಯೂ ಸಂಸ್ಕೃತದ ವೈಯಾಕರಣಿಗಳು ಈ ಕಾರಕ ಗಳನ್ನು ಬಳಸುತ್ತಾರೆ.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (6-7) ವಾಕ್ಯಗಳನ್ನು ಪರಿಶೀಲಿಸ ಬಹುದು.
(6ಕ) ಅಕ್ಷಾಂ ದೀವ್ಯತಿ
`ಪಗಡೆಗಳಲ್ಲಿ ಜೂಜಾಡುತ್ತಾನೆ’
(6ಖ) ಅಕ್ಷೈಃ ದೀವ್ಯತಿ
(7ಕ) ಆಜ್ಯಂ ಜುಹೋತಿ
`ತುಪ್ಪದಲ್ಲಿ ಹೋಮ ಮಾಡುತ್ತಾನೆ’
(7ಖ) ಆಜ್ಯೇನ ಜುಹೋತಿ
153 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಪರಿಗಣಿಸದಿರಲು
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (6) ಮತ್ತು (7)ನೇ ವಾಕ್ಯಗಳೆರಡರಲ್ಲೂ ನಾಮಪದವನ್ನು ದ್ವಿತೀಯಾ ವಿಭಕ್ತಿಯಲ್ಲಾಗಲಿ ಇಲ್ಲವೇ ತೃತೀಯಾ ವಿಭಕ್ತಿಯಲ್ಲಾಗಲಿ ಬಳಸಲು ಸಾಧ್ಯ ವಿದೆ. ಅಕ್ಷ ಪಗಡೆ' ಎಂಬುದು (6ಕ)ದಲ್ಲಿ ದ್ವಿತೀ0iÉುಯಲ್ಲಿ ಬಂದಿದೆ ಮತ್ತು (6ಖ)ದಲ್ಲಿ ತೃತೀ0iÉುಯಲ್ಲಿ ಬಂದಿದೆ; ಆಜ್ಯ ತುಪ್ಪ’ ಎಂಬುದು (7ಕ)ದಲ್ಲಿ ದ್ವಿತೀ0iÉುಯಲ್ಲಿ ಬಂದಿದೆ ಮತ್ತು (7ಖ)ದಲ್ಲಿ ತೃತೀ0iÉುಯಲ್ಲಿ ಬಂದಿದೆ. ಆದರೆ ಸಂಸ್ಕೃತದ ವೈಯಾಕರಣಿಗಳು (6)ರ ವಾಕ್ಯಗಳಲ್ಲಿ ಅಕ್ಷ ನಾಮ ಪದ ದ್ವಿತೀಯೆಯಲ್ಲಿ ಬಂದರೆ ಕಮ್ರವನ್ನು ಸೂಚಿಸುತ್ತದೆ ಮತ್ತು ತೃತೀಯೆ ಯಲ್ಲಿ ಬಂದರೆ ಕರಣವನ್ನು ಸೂಚಿಸುತ್ತದೆ ಎಂಬುದಾಗಿ ಹೇಳುತ್ತಾರೆ ಮತ್ತು ಅಂತಹದೇ (7)ರ ವಾಕ್ಯಗಳಲ್ಲಿ ಆಜ್ಯ ತುಪ್ಪ' ನಾಮಪದ ದ್ವಿತೀಯೆಯಲ್ಲಿ ಬಂದರೂ ಕಮ್ರವೇ, ತೃತೀಯೆಯಲ್ಲಿ ಬಂದರೂ ಕಮ್ರವೇ ಎಂಬುದಾಗಿ ಹೇಳುತ್ತಾರೆ. ಅವರು ಈ ರೀತಿ (7ಖ) ವಾಕ್ಯದಲ್ಲಿ ಆಜ್ಯ ನಾಮಪದ ತೃತೀಯೆಯಲ್ಲಿ ಮೇಲೆ ಕರಣವೆಂದು ಬಂದಿದೆಯಾದರೂ ಅದನ್ನು ಹೇಳಿದಂತಹ ಎರಡನೆಯ ಅವಶ್ಯಕತೆ0iÉುೀ (ವ್ಯಾಕರಣ ನಿಯಮಗಳನ್ನು ಸಂಕ್ಷಿಪ್ತ ವಾಗಿ ಬರೆಯಬೇಕೆಂಬುದೇ) ಮುಖ್ಯ ಕಾರಣ. ಸಂಸ್ಕೃತದಲ್ಲಿ ಕ್ರಿಯಾಪದಕ್ಕೆ ಅನ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಪದದ ಮೂಲಕ ಅದರ ಕರಣವನ್ನು ಸೂಚಿಸಲು ಸಾಧ್ಯ ಎಂಬ ವ್ಯಾಕರಣ ನಿಯಮವೊಂದಿದೆ. ಈ ನಿಯಮದ ಪ್ರಕಾರ, ಶಾತ್ ತುಂಡು ಮಾಡು’ ಕ್ರಿಯಾ ಪದದಿಂದ ಸಿದ್ಧವಾಗುವ ಶಾತನ ಪದದ ಮೂಲಕ ಅದರ ಕರಣವಾಗಿರುವ ಚೂರಿ'ಯನ್ನು ಸೂಚಿಸಲು ಸಾಧ್ಯವಿದೆ. ಹು ಹೋಮ ಮಾಡು’ ಕ್ರಿಯಾಪದದೊಂದಿಗೆ (6ನೇ ವಾಕ್ಯದಲ್ಲಿ ಬಂದಿರುವ ಜುಹೋತಿ ಹೋಮ ಮಾಡುತ್ತಾನೆ' ಎಂಬುದು ಆ ಕ್ರಿಯಾಪದದ ಒಂದು ರೂಪ) ತೃತೀಯಾ ವಿಭಕ್ತಿಯಲ್ಲಿ ಬರುವ ಆಜ್ಯ ತುಪ್ಪ’ ನಾಮಪದ ವನ್ನು ಕರಣ ಎಂಬುದಾಗಿ ಪರಿಗಣಿಸಿದಲ್ಲಿ, ಆ ಕ್ರಿಯಾಪದದಿಂದ ಸಿದ್ಧವಾಗುವ ಹವನ ಪದಕ್ಕೂ ಅದು ಸೂಚಿಸುವ ಕ್ರಿಯೆಯ ಕರಣವಾದ ತುಪ್ಪ' ಎಂಬ ಅಥ್ರವನ್ನು ಕೊಡಬೇಕಾದೀತು. ಆದರೆ ನಿಜಕ್ಕೂ ಸಂಸ್ಕೃತದಲ್ಲಿ ಹವನ ಎಂಬುದರ ಅಥ್ರ ಆಹುತಿಯಾಗಿ ತುಪ್ಪವನ್ನು ಹೋಮದಲ್ಲಿ ಹಾಕಲು ಬಳಸುವ ಸಾಧನ’ ಎಂಬುದು. ಹೋಮ ಮಾಡುವುದು' ಎಂಬ ಅಥ್ರವೂ ಅದಕ್ಕಿದೆ. ಆಹುತಿಯಾಗಿ ಬಳಸುವ ತುಪ್ಪ ಎಂಬ ಅಥ್ರ ಅದಕ್ಕಿಲ್ಲ. ಹಾಗಾಗಿ, ಸಂಸ್ಕೃತ ವೈಯಾಕರಣಿಗಳು ಆಜ್ಯ ತುಪ್ಪ’ ಎಂಬುದನ್ನು ಹು ಕ್ರಿಯಾಪದದ ಕರಣವೆಂದು ಪರಿಗಣಿಸುವುದಿಲ್ಲ.
154 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಸಂಸ್ಕೃತ ವ್ಯಾಕರಣದಲ್ಲಿ ಕಾಣಿಸುವ ಇಂತಹ ಹಲವು ಸಮಸ್ಯೆಗಳಿಂದಾಗಿ ಅದರ ವೈಯಾಕರಣಿಗಳಿಗೆ ವಿಭಕ್ತಿಗಳನ್ನು ಅಥ್ರದೊಂದಿಗೆ ಮಾತ್ರವಲ್ಲದೆ ಕಾರಕಗಳೊಂದಿಗೂ ನೇರವಾಗಿ ಸಂಬಂಧಿಸಲು ಸಾಧ್ಯವಾಗುವುದಿಲ್ಲ.
7.4 ಪಾಶ್ಚಾತ್ಯ ವ್ಯಾಕರಣಗಳಲ್ಲಿ ಕಲ್ಪಿತ ತತ್ವ ಕೆಲವು ಪಾಶ್ಚಾತ್ಯ ಭಾಷೆಗಳ ವ್ಯಾಕರಣಗಳಲ್ಲಿಯೂ ಇಂತಹದೇ ವ್ಯಾಕರಣ ತತ್ವ ವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕಂಡುಬಂದಿದೆ. ಇದನ್ನು ವ್ಯಾಕರಣ ಸಂಬಂಧ (gಡಿಚಿmmಚಿಣiಛಿಚಿಟ ಡಿeಟಚಿಣioಟಿ) ಎಂಬುದಾಗಿ ಕರೆಯುವುದು ರೂಢಿ.
ಸಬ್ಜೆಕ್್ಟ (subರಿeಛಿಣ), ಡೈರೆಕ್್ಟ ಆಬ್ಜೆಕ್್ಟ (ಜiಡಿeಛಿಣ obರಿeಛಿಣ), ಮತ್ತು ಇಂಡೈರೆಕ್್ಟ ಆಬ್ಜೆಕ್್ಟ (iಟಿಜiಡಿeಛಿಣ obರಿeಛಿಣ) ಎಂಬವುಗಳು ಇಂತಹ ವ್ಯಾಕರಣ ಸಂಬಂಧಗಳು.
ಸಂಸ್ಕೃತ ವ್ಯಾಕರಣದ ಕತ್ರೃ, ಕಮ್ರ ಮೊದಲಾದ ಕಾರಕಗಳ ಹಾಗೆಯೇ ಪಾಶ್ಚಾತ್ಯ ವ್ಯಾಕರಣಗಳ ಸಬ್ಜೆಕ್್ಟ, ಆಬ್ಜೆಕ್್ಟ ಮೊದಲಾದ ವ್ಯಾಕರಣ ಸಂಬಂಧ ಗಳೂ ಕಲ್ಪಿತ ತತ್ವಗಳಾಗಿವೆ. ಇದಲ್ಲದೆ, ಅವನ್ನು ಕಲ್ಪಿಸಿಕೊಂಡಿರುವುದಕ್ಕೆ ಕಾರಣವೂ ಸಂಸ್ಕೃತ ವ್ಯಾಕರಣದಲ್ಲಿರುವಂತಹದೇ.
ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅಥ್ರಕ್ಕೂ ನಡುವೆ ಈ ಭಾಷೆಗಳಲ್ಲಿ ನೇರವಾದ ಹೊಂದಾಣಿಕೆಯಿಲ್ಲವಾದ ಕಾರಣ, ಅವುಗಳ ವ್ಯಾಕರಣ ಗಳಲ್ಲಿ ಸಬ್ಚೆಕ್್ಟ, ಆಬ್ಜೆಕ್್ಟ ಮೊದಲಾದ ಈ ವ್ಯಾಕರಣ ಸಂಬಂಧಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಒಂದು ಘಟನೆಯನ್ನು ನಡೆಸಿ ಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ, ಆ ಘಟನೆಯ ಕರಣ, ಕಾರಣ ಮತ್ತು ಜಾಗ (ಅಧಿಕರಣ) ಈ ಮೂರನ್ನೂ ಕ್ರಿಯಾಪದದ ಮುಂದಿರುವ ಜಾಗದಲ್ಲಿ (ಎಂದರೆ ಪ್ರಥಮಾ ವಿಭಕ್ತಿಯಲ್ಲಿ ಬರುವ ನಾಮಪದದ ಜಾಗದಲ್ಲಿ) ಇರಿಸಲು ಸಾಧ್ಯವಿದೆ.
(8PÀ)
John opened the door with a key `ಜೋನ್ ಬಾಗಿಲನ್ನು ಒಂದು ಕೀಲಿಯಿಂದ ತೆರೆದ’
(8R) The key opened the door
`ಒಂದು ಕೀಲಿಯಿಂದ ಬಾಗಿಲನ್ನು ತೆರೆಯಲಾಯಿತು’
(8UÀ) The wind opened the door
`ಗಾಳಿಗೆ ಬಾಗಿಲು ತೆರೆಯಿತು’ The garden is swarming with bees
(9)
155 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
`ತೋಟದಲ್ಲಿ ಜೇನುಹುಳಗಳು ಗುಂಪಾಗಿ ಹಾರುತ್ತಿವೆ’
(8ಕ-ಗ) ಮತ್ತು (9)ನೇ ಇಂಗ್ಲಿಷ್ ವಾಕ್ಯಗಳಲ್ಲಿ ಜೋನ್ ಎಂಬುದು (8ಕ)ದಲ್ಲಿ, ಕೀ ಎಂಬುದು (8ಖ)ದಲ್ಲಿ, ವಿಂಡ್ `ಗಾಳಿ' ಎಂಬುದು (8ಗ)ದಲ್ಲಿ ಮತ್ತು ಗಾಡ್ರನ್ ಎಂಬುದು (9)ರಲ್ಲಿ ಕ್ರಿಯಾಪದದ ಮುಂದಿರುವ ಜಾಗದಲ್ಲಿ (ಎಂದರೆ `ಪ್ರಥಮೆ'ಯಲ್ಲಿ) ಬಂದಿರುವುದನ್ನು ಗಮನಿಸಬಹುದು.
ಈ ಕಾರಣಕ್ಕಾಗಿ, ಇಂಗ್ಲಿಷ್ ವಾಕ್ಯಗಳಲ್ಲಿ ಕ್ರಿಯಾಪದದ ಮುಂದಿರುವ ನಾಮ ಪದವನ್ನು ನೇರವಾಗಿ ಕ್ರಿಯೆಯನ್ನು ನಡೆಸಿಕೊಡುವವನು ಎಂಬ ಅಥ್ರದೊಂದಿಗೆ, ಇಲ್ಲವೇ ಬೇರೆ ಯಾವುದಾದರೂ ಒಂದು ನಿಶ್ಚಿತವಾದ ಅಥ್ರದೊಂದಿಗೆ ಸಂಬಂಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಜಾಗವನ್ನು ಸಬ್ಜೆಕ್್ಟ ಜಾಗ ಎಂಬುದಾಗಿ ಕರೆದು ಅನಂತರ ಬೇರೆ ನಿಯಮಗಳ ಮೂಲಕ ಅದನ್ನು ಅಥ್ರ ದೊಂದಿಗೆ ಸಂಬಂಧಿಸಬೇಕಾಗಿದೆ.
7.5 ಕನ್ನಡಕ್ಕೆ ಕಾರಕಗಳು ಬೇಕಾಗಿಲ್ಲದಿರುವುದು ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವುಗಳು ಸೂಚಿಸಬೇಕಾಗಿರುವ ಅಥ್ರ ದೊಂದಿಗೆ ನೇರವಾಗಿ ಸಂಬಂಧಿಸಲು ಸಾಧ್ಯವಿದೆ. ಈ ವಿಷಯದಲ್ಲಿ ಕನ್ನಡ ಭಾಷೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗಿಂತ ತೀರ ಭಿನ್ನವಾದುದು.
ಉದಾಹರಣೆಗಾಗಿ, ಕನ್ನಡದಲ್ಲಿ ಒಂದು ನಾಮಪದವನ್ನು ದ್ವಿತೀಯಾ ವಿಭಕ್ತಿಯಲ್ಲಿ ಬಳಸಬೇಕೆಂದಿದ್ದಲ್ಲಿ ಅದು ಕ್ರಿಯಾಪದವು ತಿಳಿಸುವ ಘಟನೆಯ ಪರಿಣಾಮವನ್ನು ಒಂದಲ್ಲ ಒಂದು ರೀತಿಯಲ್ಲಿ ತೋರಿಸಲೇಬೇಕೆಂಬ ನಿಯಮ ವಿದೆ. ಇದಲ್ಲದೆ, ಅದು ಗುರುತಿಸುವ ವ್ಯಕ್ತಿ ಸ್ವೇಚ್ಛೆಯಿಂದ ಆ ಘಟನೆಯಲ್ಲಿ ತೊಡಗಿರಬಾರದೆಂಬ ನಿಯಮವೂ ಇದೆ.
ಇದೇ ರೀತಿಯಲ್ಲಿ ಒಂದು ನಾಮಪದವನ್ನು ಸಪ್ತಮೀ ವಿಭಕ್ತಿಯಲ್ಲಿ ಬಳಸ ಬೇಕೆಂದಿದ್ದಲ್ಲಿ ಅದು ಒಂದಲ್ಲ ಒಂದು ರೀತಿಯಲ್ಲಿ ಘಟನೆ ನಡೆಯುವ ಜಾಗವನ್ನು ಸೂಚಿಸುತ್ತಿರಬೇಕೆಂಬ ನಿಯಮವಿದೆ.
7.5.1 ಎರಡು ರೀತಿಯ ಸಂಬಂಧಗಳು
ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವುಗಳ ಅಥ್ರಕ್ಕೂ ನಡುವೆ ನೇರವಾದ ಸಂಬಂಧವಿದ್ದು ಇಂಗ್ಲಿಷ್ನಲ್ಲಿ ಅಂತಹ ಸಂಬಂಧವಿಲ್ಲದಿರಲು ಬೇರೆಯೂ ಒಂದು ಮುಖ್ಯವಾದ ಕಾರಣವಿದೆ.
ವಾಕ್ಯವೊಂದರಲ್ಲಿ ಬರುವ ನಾಮಪದಗಳಿಗೂ ಕ್ರಿಯಾಪದಕ್ಕೂ ನಡುವೆ ಎರಡು ರೀತಿಯ ಸಂಬಂಧಗಳಿರಲು ಸಾಧ್ಯವಿದೆ. ಮೇಲೆ ವಿವರಿಸಿದಂತಹ ಅಥ್ರ ಸಂಬಂಧವೊಂದು; ಮತ್ತು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು
156 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಮೊದಲಾದವುಗಳಲ್ಲಿ ಮಾತನಾಡುತ್ತಿದ್ದೇವೆ, ಯಾವುದರ ವಿಷಯವಾಗಿ ಯಾವುದನ್ನು ಹೊಸತಾಗಿ ಗುರುತಿಸುತ್ತಿದ್ದೇವೆ ಎಂಬಂತಹ `ಭಾಷಾವ್ಯವಹಾರ’ಕ್ಕೆ ಸಂಬಂಧಿಸಿದಂತಹ ವಿಷಯಗಳನ್ನು ಸೂಚಿಸುವ ಸಂಬಂಧ ಇನ್ನೊಂದು.
ಕನ್ನಡದಲ್ಲಿ ಈ ಎರಡು ರೀತಿಯ ಸಂಬಂಧಗಳನ್ನು ಸೂಚಿಸಲು ಬೇರೆ ಬೇರೆ ಸಾಧನಗಳಿವೆ. ಆದರೆ ಇಂಗ್ಲಿಷ್ನಲ್ಲಿ ಇವೆರಡನ್ನೂ ಒಂದೇ ಸಾಧನದ ಮೂಲಕ ಸೂಚಿಸಬೇಕಾಗಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (10ಕ-ಖ) ಇಂಗ್ಲಿಷ್ ವಾಕ್ಯಗಳನ್ನು ಅವುಗಳ ಭಾಷಾಂತರಗಳಾಗಿ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.
(10PÀ) The boy pushed the old man ಹುಡುಗ ಮುದುಕನನ್ನು ದೂಡಿದ' (10R) The old man was pushed by the boy ಮುದುಕನನ್ನು ಹುಡುಗ ದೂಡಿದ’
(10ಕ) ಮತ್ತು (10ಖ) ವಾಕ್ಯಗಳ ನಡುವಿರುವ ವ್ಯತ್ಯಾಸವೇನೆಂದರೆ, (10ಕ)ದಲ್ಲಿ ಆಡುಗನು ಒಬ್ಬ ಹುಡುಗನ ವಿಷಯವಾಗಿ ಮಾತನಾಡುತ್ತಿದ್ದಾನೆ, ಆದರೆ (10ಖ)ದಲ್ಲಿ ಆತ ಒಬ್ಬ ಮುದುಕನ ವಿಷಯವಾಗಿ ಮಾತನಾಡು ತ್ತಿದ್ದಾನೆ.
ಇಂಗ್ಲಿಷ್ನಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಬದಲು ಇನ್ನೊಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು `ಮಾತನಾಡುವ ವಿಷಯ'ವನ್ನಾಗಿ ಮಾಡಿ ವಾಕ್ಯವನ್ನು ರಚಿಸಬೇಕಿದ್ದಲ್ಲಿ ಅವುಗಳ ಜಾಗವನ್ನು ಅದಲು ಬದಲು ಮಾಡುವುದರೊಂದಿಗೆ ಕ್ರಿಯಾರೂಪವನ್ನೂ ಬದಲಿಸಬೇಕಾಗುತ್ತದೆ. ಕನ್ನಡದಲ್ಲಿ ಇದು ಅವಶ್ಯವಲ್ಲ. (10ಖ)ದಲ್ಲಿ ಕಾಣಿಸಿದ ಹಾಗೆ ನಾಮಪದಗಳ ಜಾಗವನ್ನು ಅದಲು ಬದಲು ಮಾಡಿದರೆ ಸಾಕು.
ಇಂಗ್ಲಿಷ್ನಲ್ಲಿ ಈ ಕಾರಣಕ್ಕಾಗಿ ಕತ್ರರಿ ಮತ್ತು ಕಮ್ರಣಿ ಎಂಬುದಾಗಿ ಎರಡು ಬಗೆಯ ವಾಕ್ಯಗಳ ಅವಶ್ಯಕತೆಯಿದೆ. ಆದರೆ ಕನ್ನಡದಲ್ಲಿ ಇದು ಅವಶ್ಯ ವಿಲ್ಲ. ಮೇಲೆ (7.3.2)ರಲ್ಲಿ ಸೂಚಿಸಿದ ಹಾಗೆ, ಕನ್ನಡ ವ್ಯಾಕರಣಗಳಲ್ಲಿ *ಮುದುಕನು ಹುಡುಗನಿಂದ ದೂಡಲ್ಪಡುತ್ತಾನೆ ಎಂಬಂತಹ ವಾಕ್ಯಗಳನ್ನು ಕಮ್ರಣಿ ಪ್ರಯೋಗಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ನಿಜವಾದರೂ ಅಂತಹ ವಾಕ್ಯಗಳು ಇಂಗ್ಲಿಷ್ (ಇಲ್ಲವೇ ಸಂಸ್ಕೃತ) ವಾಕ್ಯಗಳ ಭಾಷಾಂತರಗಳು ಮಾತ್ರ. ಬರಹದಲ್ಲಿ ಅವುಗಳ ಬಳಕೆ ಬಹಳ ಅಪರೂಪ; ಮಾತಿನಲ್ಲಂತೂ ಇಲ್ಲವೇ ಇಲ್ಲವೆಂದು ಹೇಳಬಹುದು. ನಿಜಕ್ಕೂ ಕನ್ನಡಕ್ಕೆ ಅಂತಹ ವಾಕ್ಯಗಳ ಅವಶ್ಯಕತೆಯೂ ಇಲ್ಲ.
157 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಾಗುವ ಈ ಎರಡು ರೀತಿಯ ವಾಕ್ಯಗಳಲ್ಲಿ ಪದಗಳ ಜಾಗವನ್ನು ಅದಲು ಬದಲು ಮಾಡುವುದರೊಂದಿಗೆ ಬೇರೆ ಬದಲಾವಣೆ ಗಳನ್ನೂ ಮಾಡಬೇಕಾಗುತ್ತದೆ ಎಂಬುದು ಅವುಗಳಲ್ಲಿ ಸವ್ರನಾಮಗಳನ್ನು ಬಳಸಿದಾಗ ಸ್ಪಷ್ಟವಾಗುತ್ತದೆ.
(11PÀ) He pushed her
ಅವನು ಅವಳನ್ನು ದೂಡಿದ' (11R) She was pushed by him ಅವಳನ್ನು ಅವನು ದೂಡಿದ’
(11ಕ) ವಾಕ್ಯದಲ್ಲಿ he `ಅವನು' ಮತ್ತು heಡಿ `ಅವಳನ್ನು' ಎಂಬ ಎರಡು ಸವ್ರನಾಮಗಳನ್ನು ಬಳಸಲಾಗಿದೆ; ಆ ವಾಕ್ಯದ ಕಮ್ರಣಿ ರೂಪವಾದ (11ಖ) ವಾಕ್ಯದಲ್ಲಿ ಈ ಎರಡು ಸವ್ರನಾಮಗಳ ಜಾಗವನ್ನು ಬದಲಾಯಿಸಲಾಗಿದೆ ಮಾತ್ರವಲ್ಲ, ಅವುಗಳ ವಿಭಕ್ತಿರೂಪಗಳನ್ನೂ ಬದಲಾಯಿಸಲಾಗಿದೆ.
(11ಖ) ವಾಕ್ಯದಲ್ಲಿ ಇಂಗ್ಲಿಷ್ನ he ಎಂಬುದು him ಎಂದಾಗಿದೆ ಮತ್ತು heಡಿ ಎಂಬುದು she ಎಂದಾಗಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿ ರೂಪಗಳ ಬದಲಾವಣೆ ಅವಶ್ಯವಿಲ್ಲ. ಮೇಲೆ (11ಖ) ವಾಕ್ಯದ ಕನ್ನಡ ರೂಪದಲ್ಲಿ ಅವನು ಮತ್ತು ಅವಳನ್ನು ಎಂಬ ಎರಡು ಸವ್ರನಾಮಗಳು ಸ್ವಲ್ಪವೂ ಬದಲಾಗದೆ (11ಕ) ವಾಕ್ಯದಲ್ಲಿರುವಂತೆಯೇ ಉಳಿದುಕೊಂಡಿವೆ. ಅವುಗಳ ಜಾಗ ಮಾತ್ರ ಬದಲಾಗಿದೆ.
ಕನ್ನಡದಲ್ಲಿ ಈ ರೀತಿ ಅಥ್ರ ಸಂಬಂಧ ಮತ್ತು ಭಾಷಾವ್ಯವಹಾರ ಸಂಬಂಧ ಗಳನ್ನು ಬೇರೆ ಬೇರೆಯಾಗಿ ಮತ್ತು ಸ್ವತಂತ್ರವಾಗಿ ಸೂಚಿಸುವ ವಿಧಾನ ಬಳಕೆಯಲ್ಲಿದೆ. ಪದಗಳ ಜಾಗದ ಮೂಲಕ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸಲಾಗುತ್ತದೆ ಮತ್ತು ವಿಭಕ್ತಿ ಪ್ರತ್ಯಯಗಳ ಮೂಲಕ ಅಥ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸಲಾಗುತ್ತದೆ.
ಹಾಗಾಗಿ, ಕನ್ನಡದ ವಾಕ್ಯಗಳಲ್ಲಿ ಭಾಷಾವ್ಯವಹಾರಕ್ಕೆ ಸಂಬಂಧಿಸಿದಂತಹ ಬದಲಾವಣೆಗಳನ್ನು ಮಾಡಲು ಅವುಗಳಲ್ಲಿ ಬರುವ ಪದಗಳ ಜಾಗವನ್ನು ಮಾತ್ರ ಬದಲಾಯಿಸಿದರೆ ಸಾಕು, ಇಂಗ್ಲಿಷ್ನಲ್ಲಿ ಕಾಣಿಸುವ ಹಾಗೆ, ವಿಭಕ್ತಿರೂಪಗಳನ್ನು ಮತ್ತು ಕ್ರಿಯಾರೂಪಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ.
ಅಥ್ರಸಂಬಂಧಗಳನ್ನು ಮತ್ತು ಭಾಷಾವ್ಯವಹಾರ ಸಂಬಂಧಗಳನ್ನು ಈ ರೀತಿ ಒಟ್ಟಿಗೆ ಸೇರಿಸದೆ ಬೇರೆ ಬೇರಾಗಿ ಇರಿಸಿರುವ ಕಾರಣ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅಥ್ರಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ.
158 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಈ ಕಾರಣಕ್ಕಾಗಿ, ಕನ್ನಡದ ವಾಕ್ಯರಚನೆಯನ್ನು ಮತ್ತು ಅದರಲ್ಲಿ ಬಳಕೆ ಯಾಗುವ ವಿಭಕ್ತಿ ಪ್ರತ್ಯಯಗಳನ್ನು ವಣ್ರಿಸುವಾಗ ಕತ್ರೃ, ಕಮ್ರ, ಕರಣ ಮೊದಲಾದ ಕಾರಕಗಳನ್ನಾಗಲಿ ಇಲ್ಲವೇ ಸಬ್ಜೆಕ್್ಟ, ಡೈರೆಕ್್ಟ ಆಬ್ಜೆಕ್್ಟ, ಇಂಡೈರೆಕ್್ಟ ಆಬ್ಜೆಕ್್ಟ ಮೊದಲಾದ ಬೇರೆ ರೀತಿಯ ವ್ಯಾಕರಣ ಸಂಬಂಧ ಗಳನ್ನಾಗಲಿ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ (`ಭಾಷಾವ್ಯವಹಾರ’ದ ಕುರಿತು ಹೆಚ್ಚಿನ ವಿವರಗಳಿಗೆ ತಿರುಮಲೇಶ್ 1979 ನೋಡಿ).
7.5.2 ಕನ್ನಡ ವಾಕ್ಯಗಳಲ್ಲಿ ಸಬ್ಜೆಕ್್ಟ ಎಂಬ ತತ್ವ ಅವಶ್ಯವಿಲ್ಲದ ಕಲ್ಪಿತ ವ್ಯಾಕರಣ ತತ್ವಗಳನ್ನು ಬಳಸುವುದರಿಂದ ಕನ್ನಡ ವ್ಯಾಕರಣ ಹೇಗೆ ಅನವಶ್ಯಕವಾಗಿ ಕ್ಲಿಷ್ಟವಾಗುತ್ತದೆ ಎಂಬುದನ್ನು ಇತ್ತೀಚೆಗೆ ಪಾಶ್ಚಾತ್ಯ ವ್ಯಾಕರಣ ಪರಂಪರೆಯಲ್ಲಿ ಬರೆದ ಕನ್ನಡ ವ್ಯಾಕರಣಗಳು ಬಹಳ ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.
ಈ ಕನ್ನಡ ವ್ಯಾಕರಣಗಳಲ್ಲಿ ಪಾಶ್ಚಾತ್ಯ ವ್ಯಾಕರಣಗಳಲ್ಲಿ ಬರುವ ಸಬ್ಜೆಕ್್ಟ, ಡೈರೆಕ್್ಟ ಆಬ್ಜೆಕ್್ಟ ಮತ್ತು ಇಂಡೈರೆಕ್್ಟ ಆಬ್ಜೆಕ್್ಟ ಎಂಬ ವ್ಯಾಕರಣ ಸಂಬಂಧ ಗಳನ್ನು ಬಳಸಬೇಕಾಗುತ್ತದೆ. ಆದರೆ, ಕನ್ನಡದ ಮಟ್ಟಿಗೆ ಇದು ಕೆಲವು ಪರಿಹರಿಸ ಲಾಗದ ಸಮಸ್ಯೆಗಳನ್ನೂ ತಂದುಹಾಕಿದೆ.
ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಯಾವ ನಾಮಪದವನ್ನು ಸಬ್ಜೆಕ್್ಟ ಎಂಬುದಾಗಿ ಹೆಸರಿಸಬೇಕು ಎಂಬುದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ಬಹಳ ಚಚ್ರೆ ನಡೆದಿದೆ. ಮೊದಲನೆಯ ನಾಮಪದ ಪ್ರಥಮಾ ವಿಭಕ್ತಿಯಲ್ಲಿ ಬರುವ ಬದಲು ಚತುಥ್ರೀ ವಿಭಕ್ತಿಯಲ್ಲಿ ಬರುವಂತಹ ಕೆಲವು ಕನ್ನಡ ವಾಕ್ಯಗಳು ಈ ಸಂದಭ್ರದಲ್ಲಿ ವೈಯಾಕರಣಿಗಳಿಗೆ ತೊಂದರೆಯನ್ನು ಕೊಡುತ್ತವೆ.
ಸಾಮಾನ್ಯವಾಗಿ, ಕೆಲವು ಮಾನಸಿಕ ಇಲ್ಲವೇ ದೈಹಿಕ ಅವಸ್ಥೆಗಳನ್ನು ಅನುಭವಿಸುವ (ಇಲ್ಲವೇ ಅನುಭವಿಸಿದ) ವ್ಯಕ್ತಿಯನ್ನು ಈ ರೀತಿ ಚತುಥ್ರೀ ವಿಭಕ್ತಿಯ ಮೂಲಕ ಸೂಚಿಸುವುದು ಕನ್ನಡದ ವ್ಯಾಕರಣ ನಿಯಮ.
(12) ರಾಜುವಿಗೆ ಹಾವನ್ನು ಕಂಡು ಹೆದರಿಕೆಯಾಯಿತು (13) ರಾಜುವಿಗೆ ಹೆಂಡತಿಯ ನೆನಪಾಯಿತು (14) ರಾಜುವಿಗೆ ಒಂದು ಹಾಡು ಕೇಳಿಸಿತು
(12-14)ರಂತಹ ವಾಕ್ಯಗಳಲ್ಲಿ ಚತುಥ್ರೀ ವಿಭಕ್ತಿಯಲ್ಲಿ ಬಂದಿರುವ ಪದ (ರಾಜುವಿಗೆ ಎಂಬುದು) ಸಬ್ಜೆಕ್್ಟ ಎಂದು ಕೆಲವರು ಹೇಳುತ್ತಾರೆ ಮತ್ತು ವಿಭಕ್ತಿ ಪ್ರತ್ಯಯವಿಲ್ಲದಿರುವ ಪದ (ಹೆದರಿಕೆ, ನೆನಪು ಇಲ್ಲವೇ ಹಾಡು ಎಂಬುದು) ಸಬ್ಜೆಕ್್ಟ ಎಂದು ಬೇರೆ ಕೆಲವರು ವಾದಿಸುತ್ತಾರೆ (ಶ್ರೀಧರ್ 1976 ನೋಡಿ).
159 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಈ ಎರಡು ಅಭಿಪ್ರಾಯಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳುವುದು ಕಷ್ಟ. ಯಾಕೆಂದರೆ, (12-14) ವಾಕ್ಯಗಳಲ್ಲಿ ಯಾವುದನ್ನು ಸಬ್ಜೆಕ್್ಟ ಎಂಬುದಾಗಿ ಆರಿಸಿಕೊಂಡರೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಇಂತಹ ವಾಕ್ಯಗಳಲ್ಲಿ ಸಾಮಾನ್ಯವಾಗಿ ವಿಭಕ್ತಿ ಪ್ರತ್ಯಯದೊಂದಿಗೆ ಬಾರ ದಿರುವ ಪದ ಕ್ರಿಯಾಪದದೊಂದಿಗೆ ಸೇರಿ ವಾಕ್ಯವು ತಿಳಿಸುವ ಘಟನೆಯನ್ನು ಸೂಚಿಸುವುದಾದ ಕಾರಣ, ಅದನ್ನು ಸಬ್ಜೆಕ್್ಟ ಎಂದು ಹೇಳುವುದು ಅಷ್ಟೊಂದು ಉಚಿತವೆಂದು ತೋರುವುದಿಲ್ಲ.
ಉದಾಹರಣೆಗಾಗಿ, (12)ನೇ ವಾಕ್ಯದಲ್ಲಿ ನಿಜಕ್ಕೂ ಹೆದರಿಕೆ ಎಂಬುದು ಕ್ರಿಯಾಪದದ ಭಾಗ ಮಾತ್ರ. ಹೆದರಿಕೆಯಾಗುವುದು ಎಂಬುದೇ ಇಲ್ಲಿ ನಡೆ ದಿರುವ ಘಟನೆ. ಹಾಗಾಗಿ ಹೆದರಿಕೆ ಎಂಬುದನ್ನು ವಾಕ್ಯದ ಸಬ್ಜೆಕ್್ಟ ಎಂಬುದಾಗಿ ಹೆಸರಿಸುವುದು ಸ್ವಲ್ಪ ವಿಚಿತ್ರವಾಗಿ ತೋರುತ್ತದೆ. ಇದಕ್ಕೆ ಬದಲು, ಈ (12)ನೇ ವಾಕ್ಯ ರಾಜುವಿಗೆ ಏನಾಯಿತು ಎಂಬುದನ್ನು ತಿಳಿಸುತ್ತಿದೆಯಾದ ಕಾರಣ, ಅದರಲ್ಲಿ ರಾಜು ಪದವೇ ಸಬ್ಜೆಕ್್ಟ ಎಂದು ಹೇಳಿದಲ್ಲಿ ಬೇರೆಯೇ ತೊಂದರೆ ಕಾಣಿಸಿಕೊಳ್ಳುತ್ತದೆ.
ಇಂತಹ ವಾಕ್ಯಗಳಲ್ಲಿ ಕ್ರಿಯಾಪದದ ಕೊನೆಯಲ್ಲಿ ಬರುವ `ಆಖ್ಯಾತ’ ಪ್ರತ್ಯಯಗಳು ಚತುಥ್ರೀ ವಿಭಕ್ತಿಯಲ್ಲಿರುವ ಪದದ ಪುರುಷ-ಲಿಂಗ-ವಚನ ಗಳನ್ನು ಸೂಚಿಸುವ ಬದಲು, ವಿಭಕ್ತಿ ಪ್ರತ್ಯಯವಿಲ್ಲದಿರುವ ಪದದ ಪುರುಷ- ಲಿಂಗ-ವಚನಗಳನ್ನು ಸೂಚಿಸುತ್ತವೆ.
ಉದಾಹರಣೆಗಾಗಿ, (12)ನೇ ವಾಕ್ಯದಲ್ಲಿ ಬಂದಿರುವ ಆಗು ಕ್ರಿಯಾರೂಪದ ಪುರುಷ-ಲಿಂಗ-ವಚನಗಳನ್ನು DSÁåvÀ ಸೂಚಿಸುತ್ತದೆ ಯಲ್ಲದೆ ಪುರುಷ-ಲಿಂಗ-ವಚನಗಳನ್ನು ಸೂಚಿಸುವುದಿಲ್ಲ. ಇದೇ ರೀತಿಯಲ್ಲಿ (14)ನೇ ವಾಕ್ಯದಲ್ಲಿ ಕೇಳಿಸಿತು ಕ್ರಿಯಾರೂಪದ ಆಖ್ಯಾತ ಪ್ರತ್ಯಯ ಹಾಡು ಪದದ ಪುರುಷ-ಲಿಂಗ- ವಚನಗಳನ್ನು ಸೂಚಿಸುತ್ತದೆ. ಹಾಗಾಗಿ, (12)ನೇ ವಾಕ್ಯದಲ್ಲಿ ರಾಜು ಪದ ಸಬ್ಜೆಕ್್ಟ ಎಂದು ಹೇಳಿದಲ್ಲಿ ಅಂತಹ ವಾಕ್ಯಗಳಲ್ಲಿ ಬರುವ ಕ್ರಿಯಾಪದದ ಆಖ್ಯಾತ ಪ್ರತ್ಯಯ ವಾಕ್ಯದ ಸಬ್ಜೆಕ್ಟನ್ನು ಅವಲಂಬಿಸಿಲ್ಲ ಎಂದು ಹೇಳಬೇಕಾಗುತ್ತದೆ. ಇದೂ ಒಂದು ಸಮಸ್ಯೆ0iÉುೀ.
ಕನ್ನಡ ವಾಕ್ಯಗಳಲ್ಲಿ ಸಬ್ಜೆಕ್್ಟ ಯಾವುದು ಎಂಬುದನ್ನು ನಿಧ್ರರಿಸುವಲ್ಲಿ ಬೇರೆಯೂ ಕೆಲವು ತೊಂದರೆಗಳನ್ನು ವೈಯಾಕರಣಿಗಳು ಎದುರಿಸಬೇಕಾಗಿದೆ. ಉದಾಹರಣೆಗಾಗಿ, ಇಂಗ್ಲಿಷ್ ಮೊದಲಾದ ಪಾಶ್ಚಾತ್ಯ ಭಾಷೆಗಳ ವ್ಯಾಕರಣದಲ್ಲಿ
ಹೆದರಿಕೆ gÁdÄ
ಪದದ ಪದದ
ಪ್ರತ್ಯಯ
160 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಸಕಮ್ರಕ ಮತ್ತು ಅಕಮ್ರಕ ಎಂಬ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಬಹಳ ಮಹತ್ವವಿದೆ. ಇದಕ್ಕೆ ವಿರುದ್ಧವಾಗಿ ಕನ್ನಡ ವ್ಯಾಕರಣದಲ್ಲಿ ಐಚ್ಛಿಕ ಮತ್ತು ಅನೈಚ್ಛಿಕ ಘಟನೆಗಳನ್ನು ಸೂಚಿಸುವ ಬೇರೆಯೇ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಹೆಚ್ಚಿನ ಮಹತ್ವವಿದೆ.
ಸಬ್ಜೆಕ್್ಟ ಎಂಬ ವ್ಯಾಕರಣ ತತ್ವವನ್ನು ಮುಖ್ಯವಾಗಿ ಸಕಮ್ರಕ-ಅಕಮ್ರಕ ವಾಕ್ಯಭೇದದ ಆಧಾರದ ಮೇಲೆ ಸಾಧಿಸಲಾಗಿದೆಯಾದ ಕಾರಣ, ಮತ್ತು ಈ ವಾಕ್ಯಭೇದ ಕನ್ನಡದಲ್ಲಿ ಅಷ್ಟೊಂದು ಮಹತ್ವವಾದುದಲ್ಲವಾದ ಕಾರಣ, ಸಬ್ಜೆಕ್್ಟ ತತ್ವವನ್ನು ಕನ್ನಡಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಕೆಳಗಿನ (7.5.3)ನೇ ವಿಭಾಗದಲ್ಲಿ ವಿವರಿಸಲಾಗಿದೆ.
7.5.3 ಎರಡು ವ್ಯವಸ್ಥೆಗಳು ಸಕಮ್ರಕ-ಅಕಮ್ರಕ ವ್ಯತ್ಯಾಸಕ್ಕೆ ಮಹತ್ವವನ್ನು ಕೊಡುವ ಭಾಷೆಗಳಲ್ಲೂ ಒಂದು ಮುಖ್ಯ ವ್ಯತ್ಯಾಸವಿದೆ. ಈ ವ್ಯತ್ಯಾಸ ಅಕಮ್ರಕ ವಾಕ್ಯಗಳಲ್ಲಿ ಬರುವ ನಾಮಪದವು ಸಕಮ್ರಕ ವಾಕ್ಯಗಳಲ್ಲಿ ಬರುವ ಎರಡು ನಾಮಪದಗಳಲ್ಲಿ ಯಾವುದಕ್ಕೆ ಸಮಾನವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಈ ವ್ಯತ್ಯಾಸದ ಸ್ವರೂಪವೇನೆಂಬುದನ್ನು ತಿಳಿಯಲು ಮೊದಲಿಗೆ ಸಕಮ್ರಕ ಮತ್ತು ಅಕಮ್ರಕ ವಾಕ್ಯಗಳಲ್ಲಿ ಬರುವ ನಾಮಪದಗಳನ್ನು ಬೇರೆ ಬೇರಾಗಿ ಗುರುತಿಸಿಕೊಳ್ಳುವುದು ಅವಶ್ಯ.
ಅಕಮ್ರಕ ವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಸಾಮಾನ್ಯವಾಗಿ ಒಂದೇ ಒಂದು ಮುಖ್ಯವಾದ ನಾಮಪದ ಬರುತ್ತಿದ್ದು ಅದನ್ನು ಸ' ಎಂಬುದಾಗಿ ಗುರುತಿಸಬಹುದು. ಇದಕ್ಕೆ ಬದಲು ಸಕಮ್ರಕ ವಾಕ್ಯಗಳಲ್ಲಿ ಎರಡು ಮುಖ್ಯ ನಾಮಪದಗಳು ಬರುತ್ತಿದ್ದು ಅವನ್ನು ನಿ’ ಮತ್ತು `ಕ’ ಎಂಬುದಾಗಿ ಗುರುತಿಸ ಬಹುದು. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಅಕಮ್ರಕ ಮತ್ತು ಸಕಮ್ರಕ ವಾಕ್ಯಗಳನ್ನು ಪರಿಶೀಲಿಸಬಹುದು:
(15) ರಾಜು ಅತ್ತ (16) ರಾಜು ಹರಿಯನ್ನು ದೂಡಿದ
(15)ನೇ ವಾಕ್ಯ ಅಕಮ್ರಕವಾಗಿದ್ದು ಅದರಲ್ಲಿ ಕ್ರಿಯಾಪದದೊಂದಿಗೆ ರಾಜು ಎಂಬ ಒಂದೇ ಒಂದು ಮುಖ್ಯ ನಾಮಪದ (`ಸ' ಎಂಬುದು) ಬಂದಿದೆ.
(16)ನೇ ವಾಕ್ಯ ಸಕಮ್ರಕವಾಗಿದ್ದು ಅದರಲ್ಲಿ ಕ್ರಿಯಾಪದದೊಂದಿಗೆ ಎರಡು ಮುಖ್ಯ ನಾಮಪದಗಳು ಬಂದಿವೆ. ಇವುಗಳಲ್ಲಿ ಮೊದಲನೆಯದನ್ನು (ರಾಜು ಎಂಬುದನ್ನು) `ನಿ' ಎಂಬುದಾಗಿ ಮತ್ತು ಎರಡನೆಯದನ್ನು (ಹರಿ ಎಂಬು
161 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ದನ್ನು) ಕ' ಎಂಬುದಾಗಿ ಪರಿಗಣಿಸಬಹುದು. ಇವುಗಳಲ್ಲಿ ನಿ’ ಎಂಬುದು ಸಾಮಾನ್ಯವಾಗಿ ಒಂದು ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುತ್ತದೆ ಮತ್ತು ಕ' ಎಂಬುದು ಅಂತಹ ಘಟನೆಯಿಂದ ಯಾವುದಾದರೊಂದು ರೀತಿಯಲ್ಲಿ ಪ್ರಭಾವಿತನಾಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ. ಕೆಲವು ಭಾಷೆಗಳಲ್ಲಿ ಅಕಮ್ರಕ ವಾಕ್ಯದ ಸ’ ನಾಮಪದಕ್ಕೆ ಸಕಮ್ರಕ ವಾಕ್ಯದ ನಿ' ನಾಮಪದ ಸಮಾನವಾಗಿರುವುದಾದರೆ, ಬೇರೆ ಕೆಲವು ಭಾಷೆಗಳಲ್ಲಿ ಕ’ ನಾಮಪದ ಸಮಾನವಾಗಿರುತ್ತದೆ. ಈ ಸಮಾನತೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯ, ಅವಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧ, ಮೊದಲಾದವುಗಳನ್ನು ಅವಲಂಬಿಸಿದೆ.
ಕೆಲವು ಭಾಷೆಗಳಲ್ಲಿ ಈ ಎರಡು ರೀತಿಯ ವ್ಯವಸ್ಥೆಗಳೂ ಒಟ್ಟಾಗಿ ಕಾಣಿಸಿ ಕೊಳ್ಳುತ್ತವೆ. ಉದಾಹರಣೆಗಾಗಿ, ಹಿಂದೀ ಭಾಷೆಯಲ್ಲಿ ಅಪೂಣ್ರ ಸಮಯದ ವಾಕ್ಯಗಳಲ್ಲಿ ಮೊದಲನೆಯ ವ್ಯವಸ್ಥೆ ಕಾಣಿಸುತ್ತದೆ ಮತ್ತು ಪೂಣ್ರ ಸಮಯದ ವಾಕ್ಯಗಳಲ್ಲಿ ಎರಡನೆಯ ವ್ಯವಸ್ಥೆ ಕಾಣಿಸುತ್ತದೆ.
(ಅ) ಮೊದಲನೆಯ ವ್ಯವಸ್ಥೆಗೆ ಉದಾಹರಣೆ:
(17ಕ) ರಾಮ್ ಸೋತಾ ಹೈ ರಾಮ ನಿದ್ರಿಸುತ್ತಿದ್ದಾನೆ' (18ಕ) ರಾಮ್ ಕಿತಾಬ್ ಪಢ್ತಾ ಹೈ ರಾಮ ಪುಸ್ತಕ ಓದುತ್ತಿದ್ದಾನೆ’
(18ಕ) ಸಕಮ್ರಕ ವಾಕ್ಯದಲ್ಲಿ `ನಿ' ನಾಮಪದವಾಗಿ ಬಂದಿರುವ ರಾಮ್ ಎಂಬುದು (17ಕ) ಅಕಮ್ರಕ ವಾಕ್ಯದಲ್ಲಿ `ಸ' ನಾಮಪದವಾಗಿ ಬಂದಿರುವ ರಾಮ್ ಪದಕ್ಕೆ ಸಮನಾಗಿದೆಯೆಂದು ಹೇಳಬಹುದು. ಯಾಕೆಂದರೆ, (17ಕ) ವಾಕ್ಯದ ಕ್ರಿಯಾಪದವು `ಸ' ನಾಮಪದದ ಪುರುಷ-ಲಿಂಗ-ವಚನಗಳನ್ನು ತೋರಿಸುತ್ತದೆ ಮತ್ತು (18ಕ) ವಾಕ್ಯದ ಕ್ರಿಯಾಪದವು `ನಿ' ನಾಮಪದದ (ರಾಮ್ ಎಂಬುದರ) ಪುರುಷ-ಲಿಂಗ-ವಚನಗಳನ್ನು ತೋರಿಸುತ್ತದೆ.
(ಆ) ಎರಡನೆಯ ವ್ಯವಸ್ಥೆಗೆ ಉದಾಹರಣೆ:
(17ಖ) ರಾಮ್ ಸೋಯಾ
`ರಾಮ ನಿದ್ದೆಮಾಡಿದ’ (18ಖ) ರಾಮ್ ನೇ ಕಿತಾಬ್ ಪಢೀ
`ರಾಮ ಪುಸ್ತಕ ಓದಿದ’
162 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು (18ಖ) ಸಕಮ್ರಕ ವಾಕ್ಯದಲ್ಲಿ ನಿ' ನಾಮಪದವಾಗಿ ಬಂದಿರುವ ರಾಮ್ ಎಂಬುದು (17ಖ) ಅಕಮ್ರಕ ವಾಕ್ಯದ ಸ’ ನಾಮಪದಕ್ಕೆ (ರಾಮ್ ಎಂಬು ದಕ್ಕೆ) ಸಮನಾಗಿಲ್ಲ ಎಂಬುದನ್ನು ಗಮನಿಸಬಹುದು. ಅದು ನೇ ಎಂಬ ವಿಶಿಷ್ಟವಾದ ವಿಭಕ್ತಿ ಪ್ರತ್ಯಯ(ಉಪಸಗ್ರ)ದೊಂದಿಗೆ ಬಂದಿದೆ, ಮತ್ತು ಆ ವಾಕ್ಯದ ಕ್ರಿಯಾಪದ ಅದರ ಲಿಂಗ-ವಚನಗಳನ್ನು ತೋರಿಸುತ್ತಿಲ್ಲ.
ಇದಕ್ಕೆ ಬದಲು, (18ಖ) ವಾಕ್ಯದ ಕ್ರಿಯಾಪದ ಆ ವಾಕ್ಯದ ಕ' ನಾಮ ಪದವಾಗಿ ಬಂದಿರುವ ಕಿತಾಬ್ ಎಂಬುದರ ಲಿಂಗ-ವಚನಗಳನ್ನು ಸೂಚಿಸುತ್ತದೆ. ಎಂದರೆ, ಈ (17ಖ-18ಖ) ವಾಕ್ಯಗಳಲ್ಲಿ ಅಕಮ್ರಕ ವಾಕ್ಯದ ಸ’ ನಾಮ ಪದಕ್ಕೆ (ಕಿತಾಬ್ ಎಂಬುದಕ್ಕೆ) ಸಕಮ್ರಕ ವಾಕ್ಯದ ಕ' ನಾಮಪದ (ರಾಮ್ ಎಂಬುದು) ಸಮನಾಗಿದೆ. ಮೊದಲನೆಯ ವ್ಯವಸ್ಥೆಯನ್ನು ಬಳಸುವ ಸಕಮ್ರಕ ವಾಕ್ಯಗಳಲ್ಲಿ ನಿ’ ನಾಮ ಪದವನ್ನು ಸಬ್ಜೆಕ್್ಟ ಎಂದೂ ಎರಡನೆಯ ವ್ಯವಸ್ಥೆಯನ್ನು ಬಳಸುವ ಸಕಮ್ರಕ ವಾಕ್ಯಗಳಲ್ಲಿ ಕ' ನಾಮಪದವನ್ನು ಸಬ್ಜೆಕ್್ಟ ಎಂದೂ ಪರಿಗಣಿಸಬೇಕೆಂಬುದು ಕೆಲವರ ಅಭಿಪ್ರಾಯ. ಆದರೆ, ಬೇರೆ ಕೆಲವರ ಅಭಿಪ್ರಾಯದಂತೆ ಈ ಎರಡು ರೀತಿಯ ವ್ಯವಸ್ಥೆಗಳಲ್ಲೂ ಸಕಮ್ರಕ ವಾಕ್ಯದ ನಿ’ ನಾಮಪದವನ್ನೇ ಸಬ್ಜೆಕ್್ಟ ಎಂಬುದಾಗಿ ಪರಿಗಣಿಸಬೇಕು (ಜಾಸ್ತಿ ವಿವರಗಳಿಗೆ ಡಿಕ್ಸನ್ 1994 ನೋಡಿ).
7.5.4 ಕನ್ನಡದ ವೈಶಿಷ್ಟ್ಯ ಕನ್ನಡದ ಮಟ್ಟಿಗೆ ಹೇಳುವುದಾದರೆ, ಅದರ ವಾಕ್ಯಗಳು ಈ ಎರಡು ವ್ಯವಸ್ಥೆ ಗಳಿಗೂ ಸೇರದೆ ಅವುಗಳಿಂದ ಹೊರಗೆ ನಿಲ್ಲುತ್ತವೆ. ಹಾಗಾಗಿ ಅವುಗಳಲ್ಲಿ ಯಾವ ನಾಮಪದವನ್ನು ಸಬ್ಜೆಕ್್ಟ ಎಂಬುದಾಗಿ ಪರಿಗಣಿಸಬೇಕು ಎಂಬ ವಿಷಯ ದಲ್ಲಿ ನಿಧ್ರಾರಕ್ಕೆ ಬರಲು ತೊಂದರೆಯಾಗಿದೆ.
ಉದಾಹರಣೆಗಾಗಿ, ಕನ್ನಡದಲ್ಲಿ ಅನೈಚ್ಛಿಕ ಘಟನೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಆ ಘಟನೆಯ ಮೂಲಕ ಒಂದು ಅನುಭವವನ್ನು ಪಡೆಯುವಂತಿದ್ದರೆ ಅವನ್ನು ಚತುಥ್ರೀ ವಿಭಕ್ತಿಯ ಮೂಲಕ ಸೂಚಿಸುವ ಕ್ರಮವಿದೆ. ಹಾಗಾಗಿ ಅದರ ಅಕಮ್ರಕ ಮತ್ತು ಸಕಮ್ರಕ ವಾಕ್ಯಗಳೆರಡೂ ಎರಡು ಬೇರೆ ಬೇರೆ ರೀತಿ ಯವುಗಳಾಗಿ ಕಾಣಿಸಿಕೊಳ್ಳುತ್ತವೆ.
(19ಕ) ಅವನು ಹೆದರಿದ (19ಖ) ಅವನಿಗೆ ಹೆದರಿತು (20ಕ) ಅವನು ಕತೆ ಮರೆತ (20ಖ) ಅವನಿಗೆ ಕತೆ ಮರೆತಿತು
163 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಮೇಲೆ (19ಕ) ಮತ್ತು (20ಕ) ವಾಕ್ಯಗಳಲ್ಲಿ `ಪ್ರಥಮಾ’ ವಿಭಕ್ತಿಯಲ್ಲಿ ಬಂದಿರುವ ಅವನು ಪದವನ್ನು ಸಬ್ಜೆಕ್್ಟ ಎಂದು ಕರೆಯಬಹುದು, ಆದರೆ (19ಖ) ಮತ್ತು (20ಖ) ವಾಕ್ಯಗಳಲ್ಲಿ ಚತುಥ್ರೀ ವಿಭಕ್ತಿಯಲ್ಲಿ ಬಂದಿರುವ ಅವನಿಗೆ ಪದವನ್ನೂ ಹಾಗೆ ಕರೆಯಲು ಸಾಧ್ಯವೇ?
ಈ ಪ್ರಶ್ನೆಗೆ ಉತ್ತರ ಕೊಡುವುದು ಯಾಕೆ ಕಷ್ಟ ಎಂಬುದನ್ನು ಮೇಲೆಯೇ ನೋಡಿರುವೆವು. (20ಖ) ವಾಕ್ಯದಲ್ಲಿ ಕತೆ ಎಂಬುದನ್ನು ಸಬ್ಜೆಕ್್ಟ ಎಂದು ಪರಿಗಣಿಸಲು ಸಾಧ್ಯ, ಆದರೆ (19ಖ) ವಾಕ್ಯದಲ್ಲಿ ಯಾವುದು ಸಬ್ಜೆಕ್್ಟ? ಅದರಲ್ಲಿ ಸಬ್ಜೆಕ್್ಟ ಎಂಬುದೇ ಇಲ್ಲ ಎಂದು ಹೇಳಿದೆವಾದರೆ, ಮೇಲೆ ವಿವರಿಸಿದ ಅಕಮ್ರಕ-ಸಕಮ್ರಕ ವಾಕ್ಯ ವಿಭಜನೆಗೆ ಅದು ಅಪವಾದವಾಗಿ ನಿಲ್ಲುತ್ತದೆ. ನಿಜಕ್ಕೂ ಇಲ್ಲಿ ಗಮನಿಸಬೇಕಾಗಿರುವ ಸಂಗತಿಯೇನೆಂದರೆ, ಕನ್ನಡ ವಾಕ್ಯಗಳ ಒಳರಚನೆಯನ್ನು ವಿವರಿಸುವಲ್ಲಿ ಸಕಮ್ರಕ ಮತ್ತು ಅಕಮ್ರಕ ಎಂಬ ವಿಭಜನೆ ಗಿಂತಲೂ ಐಚ್ಛಿಕ ಮತ್ತು ಅನೈಚ್ಛಿಕ ಎಂಬ ವಿಭಜನೆಯೇ ಹೆಚ್ಚು ಸಹಾಯಕ ವಾಗುತ್ತದೆ. ಇವುಗಳಲ್ಲಿ ಎರಡನೆಯ ವಿಭಜನೆ ಮೊದಲನೆಯದನ್ನು ಅಡ್ಡಕ್ಕೆ ಕತ್ತರಿಸುವ ಕಾರಣ, ಅವುಗಳಲ್ಲಿ ಯಾವುದಾದರೂ ಒಂದನ್ನು ಮುಖ್ಯ ವಿಭಜನೆ ಯಾಗಿ ಆರಿಸಿಕೊಳ್ಳುವ ಅವಶ್ಯಕತೆಯಿದೆ.
ಕನ್ನಡದ ಮಟ್ಟಿಗೆ ಐಚ್ಛಿಕ-ಅನೈಚ್ಛಿಕ ವಿಭಜನೆಯೇ ಮುಖ್ಯವಾದ ವಿಭಜನೆ (ಇದನ್ನು ಬೆಂಬಲಿಸುವ ಬೇರೊಂದು ವಿಷಯಕ್ಕೆ (7.5.5) ನೋಡಿ). ಹಾಗಾಗಿ, ಸಕಮ್ರಕ-ಅಕಮ್ರಕ ವಿಭಜನೆಯ ಆಧಾರದ ಮೇಲೆ ನಿಂತಿರುವ ಸಬ್ಜೆಕ್್ಟ ಎಂಬ ವ್ಯಾಕರಣತತ್ವವನ್ನು ಕನ್ನಡಕ್ಕೆ ಅನ್ವಯಿಸಲು ಸಾಧ್ಯವಿಲ್ಲವೆಂದೇ ಹೇಳ ಬೇಕಾಗುತ್ತದೆ. ನಿಜಕ್ಕೂ ಅದು ಕನ್ನಡಕ್ಕೆ ಅವಶ್ಯವೂ ಇಲ್ಲ.
7.5.5 ಎರಡು ರೀತಿಯ ವ್ಯಾಕರಣ ಕಾಯ್ರಗಳು ಕನ್ನಡ ವಾಕ್ಯಗಳಲ್ಲಿ ಕಾಣಿಸುವ ವ್ಯಾಕರಣ ಕಾಯ್ರಗಳನ್ನು ಎರಡು ವಗ್ರಗಳಾಗಿ ವಿಂಗಡಿಸಲು ಸಾಧ್ಯವಿದೆ. ಅವುಗಳಲ್ಲಿ ಮೊದಲನೆಯ ವಗ್ರಕ್ಕೆ ಸೇರಿದ ವ್ಯಾಕರಣ ಕಾಯ್ರಗಳನ್ನು ವಿವರಿಸಲು ನಾಮಪದಗಳ ವಿಭಕ್ತಿರೂಪಗಳನ್ನು (ಎಂದರೆ ವಿಭಕ್ತಿರೂಪಗಳು ಸೂಚಿಸುವಂತಹ ನಾಮಪದಗಳಿಗೂ ಕ್ರಿಯಾಪದಕ್ಕೂ ನಡು ವಿರುವ ಸಂಬಂಧವನ್ನು) ಬಳಸಿಕೊಳ್ಳುವ ಅವಶ್ಯಕತೆಯಿದೆ.
ಎರಡನೆಯ ವಗ್ರಕ್ಕೆ ಸೇರಿದ ವ್ಯಾಕರಣ ಕಾಯ್ರಗಳು ಇವುಗಳಿಗಿಂತ ತೀರ ಭಿನ್ನವಾಗಿದ್ದು, ಅವನ್ನು ವಿವರಿಸಲು ಭಾಷಾವ್ಯವಹಾರದಲ್ಲಿ ನಾಮಪದಗಳ ಸ್ಥಾನ ವೇನು ಎಂಬ ವಿಷಯವನ್ನು ಬಳಸಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಕ್ರಿಯಾಪದಗಳ `ಜೋಡಿಸುವ’ ರೂಪದ ಸಹಾಯದಿಂದ ಕನ್ನಡದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲು ಸಾಧ್ಯವಿದೆ. ಇದು ಮೊದಲನೆಯ ವಗ್ರಕ್ಕೆ ಸೇರುವ ವ್ಯಾಕರಣ ಕಾಯ್ರ.
164 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು
(21ಕ) ಅವನು ಕಾಡಿಗೆ ಹೋದ (21ಖ) ಅವನು ಕಟ್ಟಿಗೆ ತಂದ (22) ಅವನು ಕಾಡಿಗೆ ಹೋಗಿ ಕಟ್ಟಿಗೆ ತಂದ
(21ಕ) ಮತ್ತು (21ಖ) ವಾಕ್ಯಗಳನ್ನು ಜೋಡಿಸುವುದರ ಮೂಲಕ (22)ನೇ ವಾಕ್ಯವನ್ನು ತಯಾರಿಸಲಾಗಿದೆ ಮತ್ತು ಇದಕ್ಕಾಗಿ (21ಕ) ವಾಕ್ಯದಲ್ಲಿ ಬಂದಿರುವ ಹೋದ ಕ್ರಿಯಾಪದವನ್ನು ಹೋಗಿ ಎಂಬುದಾಗಿ ಅದರ ಜೋಡಿ ಸುವ ರೂಪಕ್ಕೆ ಬದಲಾಯಿಸಲಾಗಿದೆ. ಎಂತಹ ವಾಕ್ಯಗಳನ್ನು ಈ ರೀತಿ ಜೋಡಿಸಲು ಸಾಧ್ಯ ಎಂಬುದು ಅವುಗಳಲ್ಲಿ ಬರುವ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಅವಲಂಬಿಸಿದೆ.
ಜೋಡಿಕೊಳ್ಳುವ ವಾಕ್ಯಗಳೆರಡರಲ್ಲೂ ಒಂದು ಘಟನೆಯಲ್ಲಿ ಸ್ವೇಚ್ಛೆಯಿಂದ ತೊಡಗಿರುವಂತಹ ವ್ಯಕ್ತಿಯನ್ನು ಗುರುತಿಸಲಾಗಿದೆಯಾದರೆ, ಅವೆರಡೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿರಬೇಕು ಎಂಬ ನಿಯಮ ಕನ್ನಡದಲ್ಲಿದೆ. ಕೆಳಗೆ ಕೊಟ್ಟಿರುವ (23-26) ವಾಕ್ಯಗಳು ಈ ವಿಷಯವನ್ನು ಸ್ಪಷ್ಟಪಡಿಸುತ್ತವೆ.
(23ಕ) ರಾಜು ಅಕ್ಕಿ ತಂದು ಬೇಯಿಸಿದ (23ಖ) *ರಾಜು ಅಕ್ಕಿ ತಂದು ಹರಿ ಬೇಯಿಸಿದ (24ಕ) ರಾಜು ಆ ನಾಯಿಯನ್ನು ಹಿಡಿಸಿ ಕೊಲ್ಲಿಸಿದ (24ಖ) *ರಾಜು ಆ ನಾಯಿಯನ್ನು ಹಿಡಿಸಿ ಹರಿ ಕೊಲ್ಲಿಸಿದ (25) ಮರ ಬಿದ್ದು ಮಾಡು ಮುರಿಯಿತು (26)
ರಾಜು ಬೊಬ್ಬೆ ಹಾಕಿ ಮಗುವಿಗೆ ಎಚ್ಚರವಾಯಿತು
(23ಕ-ಖ) ಮತ್ತು (24ಕ-ಖ) ವಾಕ್ಯಗಳಲ್ಲಿ ಒಟ್ಟು ಸೇರಿರುವ ಎರಡು ಉಪವಾಕ್ಯಗಳಲ್ಲೂ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. (23ಕ) ಮತ್ತು (24ಕ) ವಾಕ್ಯಗಳಲ್ಲಿ ಇವು ಒಬ್ಬನೇ ವ್ಯಕ್ತಿ ಯನ್ನು (ರಾಜುವನ್ನು) ಸೂಚಿಸುವುವಾದ ಕಾರಣ ಆ ವಾಕ್ಯಗಳು ವ್ಯಾಕರಣ ಸಮ್ಮತವಾಗಿವೆ.
ಆದರೆ (23ಖ) ಮತ್ತು(24ಖ) ವಾಕ್ಯಗಳಲ್ಲಿ ಅವು ಬೇರೆ ಬೇರೆ ವ್ಯಕ್ತಿ ಗಳನ್ನು (ರಾಜು ಮತ್ತು ಹರಿ ಎಂಬವರನ್ನು) ಸೂಚಿಸುತ್ತವೆ. ಹಾಗಾಗಿ, ಆ ವಾಕ್ಯಗಳು ವ್ಯಾಕರಣಸಮ್ಮತವಾಗಿಲ್ಲ.
(25)ನೇ ವಾಕ್ಯದಲ್ಲಿ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವಂತಹ ಯಾವ ವ್ಯಕ್ತಿಯನ್ನೂ ಗುರುತಿಸಿಲ್ಲವಾದ ಕಾರಣ ಆ ವಾಕ್ಯ ವ್ಯಾಕರಣ ಸಮ್ಮತ
165 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಾಗಿದೆ; ಮರ ಮತ್ತು ಮಾಡು ಇವೆರಡೂ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವವುಗಳಲ್ಲ.
(26)ನೇ ವಾಕ್ಯದ ಮೊದಲನೆಯ ಉಪವಾಕ್ಯದಲ್ಲಿ ಮಾತ್ರ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವ ವ್ಯಕ್ತಿಯನ್ನು (ರಾಜುವನ್ನು) ಗುರುತಿಸಲಾಗಿದೆ; ಎರಡನೆಯ ವಾಕ್ಯದಲ್ಲಿ ಬಂದಿರುವ ಮಗು ಎಂಬುದು ಎಚ್ಚರವಾಗುವ ಘಟನೆ ಯಲ್ಲಿ ತೊಡಗಿದ್ದು, ಅದು ಸ್ವೇಚ್ಛೆಯಿಂದ ತೊಡಗುವ ಘಟನೆಯಲ್ಲ. ಹಾಗಾಗಿ, ಆ ವಾಕ್ಯ ವ್ಯಾಕರಣಸಮ್ಮತವಾಗಿದೆ. ಕನ್ನಡದಲ್ಲಿ ಈ ರೀತಿ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಅಥ್ರಸಂಬಂಧವನ್ನು ಬಳಸಿಕೊಳ್ಳುವ ವ್ಯಾಕರಣ ಕಾಯ್ರಗಳು ಇನ್ನೂ ಹಲವಿವೆ. ಇದಕ್ಕೆ ಬದಲು, ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯವನ್ನು ಬಳಸುವ ಎರಡನೇ ರೀತಿಯ ವ್ಯಾಕರಣ ಕಾಯ್ರಗಳೂ ಕನ್ನಡದಲ್ಲಿ ಹಲವಿವೆ.
ಉದಾಹರಣೆಗಾಗಿ, ಒಂದು ವಾಕ್ಯದಲ್ಲಿ ಬಂದಿರುವ ಅವನು, ಇವನು ಮೊದಲಾದ ಸವ್ರನಾಮ(ಪದ)ಗಳು ಯಾವ ನಾಮಪದದೊಂದಿಗೆ ಸಂಬಂಧಿಸಿವೆ ಎಂಬುದು ಆ ವಾಕ್ಯದಲ್ಲಿ ಅವು ಎಲ್ಲಿ ಬರುತ್ತವೆ ಎಂಬುದರ ಮೇಲೆ, ಎಂದರೆ ಯಾರ ವಿಷಯವಾಗಿ ಆ ವಾಕ್ಯವನ್ನು ಹೇಳಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅವಲಂಬಿಸಿದೆ.
(27ಕ) ರಾಜು ಹರಿಯನ್ನು ಕರೆಯಲಿಲ್ಲ, ಯಾಕೆಂದರೆ ಅವನು ಬರುವಾಗ
ಬಹಳ ತಡವಾಗಿತ್ತು.
(27ಖ) ಹರಿಯನ್ನು ರಾಜು ಕರೆಯಲಿಲ್ಲ, ಯಾಕೆಂದರೆ ಅವನು ಬರುವಾಗ
ಬಹಳ ತಡವಾಗಿತ್ತು.
ಅವನು ಸವ್ರನಾಮವು (27ಕ)ದಲ್ಲಿ ರಾಜುವನ್ನು ಗುರುತಿಸುತ್ತದೆ, ಆದರೆ (27ಖ)ದಲ್ಲಿ ಅದು ಹರಿಯನ್ನು ಗುರುತಿಸುತ್ತದೆ. ಈ ವ್ಯತ್ಯಾಸಕ್ಕೆ ಕಾರಣ ವೇನೆಂದರೆ, (27ಕ)ದ ಮೊದಲನೆಯ ಉಪವಾಕ್ಯ ರಾಜುವಿನ ಕುರಿತಾಗಿ ಒಂದು ಸಂಗತಿಯನ್ನು ತಿಳಿಸುತ್ತದೆ, ಆದರೆ (27ಖ)ದ ಮೊದಲನೆಯ ಉಪವಾಕ್ಯ ಇದನ್ನು ಹರಿಯ ಕುರಿತಾಗಿ ತಿಳಿಸುತ್ತದೆ.
ಈ ರೀತಿ ಜೋಡಿಸಿರುವ ಎರಡು ವಾಕ್ಯಗಳಲ್ಲಿ ಮೊದಲನೆಯದನ್ನು ಯಾರ ವಿಷಯವಾಗಿ ಹೇಳಲಾಗಿದೆ ಎಂಬ `ಭಾಷಾವ್ಯವಹಾರ'ಕ್ಕೆ ಸಂಬಂಧಿಸಿದಂತಹ ವಿಷಯವೇ ಅದರಲ್ಲಿ ಬರುವ ಎರಡು ನಾಮಪದಗಳಲ್ಲಿ ಯಾವುದರೊಂದಿಗೆ ಎರಡನೆಯ ವಾಕ್ಯದಲ್ಲಿ ಬರುವ ಸವ್ರನಾಮವನ್ನು ಸಂಬಂಧಿಸಬೇಕು ಎಂಬು ದನ್ನು ನಿಧ್ರರಿಸುವಲ್ಲಿ ಆಧಾರವಾಗುತ್ತದೆ.
166 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮತ್ತು ಕಾರಕಗಳು ಈ ಎರಡು (27ಕ-ಖ) ವಾಕ್ಯಗಳ ನಡುವೆ ವಿಭಕ್ತಿ ಪ್ರತ್ಯಯಗಳ ಬಳಕೆ ಯಲ್ಲಿ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲವಾದುದರಿಂದ, ಅವುಗಳ ನಡುವಿನ ವ್ಯತ್ಯಾಸಕ್ಕೆ ಅಥ್ರ ಸಂಬಂಧ'ದಲ್ಲಿರುವ ವ್ಯತ್ಯಾಸ ಕಾರಣವಾಗಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳು ಈ ವಿಷಯದಲ್ಲಿ ಕನ್ನಡಕ್ಕಿಂತ ಭಿನ್ನವಾಗಿವೆ. ಯಾಕೆಂದರೆ, ಈ ಎರಡು ಭಾಷೆಗಳಲ್ಲೂ ಮೇಲೆ ವಿವರಿಸಿದಂತಹ ಎರಡು ರೀತಿಯ ವ್ಯಾಕರಣ ಕಾಯ್ರಗಳನ್ನು ಕನ್ನಡದ ಹಾಗೆ ಬೇಪ್ರಡಿಸಲು ಸಾಧ್ಯವಾಗದು. ಹಾಗಾಗಿ, ಅವುಗಳಲ್ಲಿ ಬಳಕೆಯಾಗುವ ಎಲ್ಲಾ ರೀತಿಯ ವ್ಯಾಕರಣ ಕಾಯ್ರಗಳನ್ನೂ ಕಲ್ಪಿತವಾದ ವ್ಯಾಕರಣ ಸಂಬಂಧಗಳ ಮೂಲಕವೇ ವಿವರಿಸಬೇಕಾಗುತ್ತದೆ. ಇಂಗ್ಲಿಷ್ ವ್ಯಾಕರಣಗಳಲ್ಲಿ ಸಬ್ಜೆಕ್್ಟ’ ಎಂಬ ಕಲ್ಪಿತವಾದ ವ್ಯಾಕರಣ ಸಂಬಂಧವನ್ನು ಆ ಭಾಷೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾಯ್ರಗಳ ಠಿivoಣ ಎಂದರೆ ನಿಯಂತ್ರಕ' ಎಂಬುದಾಗಿ ಪರಿಗಣಿಸುವ ಅವಶ್ಯಕತೆ ಕಂಡುಬಂದಿದೆ. ಸಂಸ್ಕೃತದಲ್ಲಿಯೂ ಕತ್ರೃಕಾರಕ’ ಎಂಬ ಕಲ್ಪಿತವಾದ ವ್ಯಾಕರಣ ಸಂಬಂಧ ವನ್ನು ಆ ಭಾಷೆಯಲ್ಲಿ ಬಳಕೆಯಾಗುವ ಹೆಚ್ಚಿನ ವ್ಯಾಕರಣ ಕಾಯ್ರಗಳಿಗೂ ನಿಯಂತ್ರಕವಾಗಿ ಬಳಸಬೇಕಾಗಿದೆ.
ಆದರೆ ಕನ್ನಡದಲ್ಲಿ ಬಳಕೆಯಾಗುವ ವ್ಯಾಕರಣ ಕಾಯ್ರಗಳನ್ನು ಮೇಲೆ ವಿವರಿಸಿದ ಹಾಗೆ ನೇರವಾಗಿ (1) ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳ ಮೂಲಕ ಇಲ್ಲವೇ (2) ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಆಧಾರದ ಮೇಲೆ ವಣ್ರಿಸಲು ಸಾಧ್ಯವಿದೆಯಾದ ಕಾರಣ ಅದಕ್ಕೆ ವ್ಯಾಕರಣ ಸಂಬಂಧಗಳ (ಸಬ್ಜೆಕ್್ಟ, ಆಬ್ಜೆಕ್್ಟ ಮೊದಲಾದವುಗಳ ಇಲ್ಲವೇ ಕತ್ರೃ, ಕಮ್ರ ಮೊದಲಾದ ಕಾರಕಗಳ) ಅವಶ್ಯಕತೆಯಿಲ್ಲ (ಜಾಸ್ತಿ ವಿವರಗಳಿಗೆ ಭಟ್ 1991 ನೋಡಿ).
7.6 ತಿರುಳು ಕನ್ನಡದ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಎರಡು ವ್ಯಾಕರಣ ತತ್ವಗಳನ್ನು ಬಳಸುವುದು ರೂಡಿ. ಸ್ವಲ್ಪ ಆಳವಾಗಿ ವಿಚಾರಿಸಿದಾಗ, ಈ ಎರಡು ವ್ಯಾಕರಣ ತತ್ವಗಳು ಸಂಸ್ಕೃತಕ್ಕೆ ಅವಶ್ಯವೆಂಬುದು ನಿಜವಾದರೂ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ, ಎಂದರೆ ವಿಭಕ್ತಿ ಮಾತ್ರ ಅವಶ್ಯ, ಕಾರಕ ಎಂಬುದರ ಅವಶ್ಯಕತೆಯಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಕನ್ನಡದಲ್ಲಿ ವಿಭಕ್ತಿಗಳನ್ನು ಅವು ಸೂಚಿಸಬೇಕಾಗಿರುವ ಅಥ್ರದೊಂದಿಗೆ (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬ
167 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ವಿಷಯದೊಂದಿಗೆ) ನೇರವಾಗಿ ಸಂಬಂಧಿಸಲು ಸಾಧ್ಯ ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ ಎಂಬುದೇ ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ.
ವಾಕ್ಯರಚನೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾಯ್ರಗಳನ್ನು ವಣ್ರಿಸು ವಲ್ಲೂ ಸಂಸ್ಕೃತಕ್ಕೆ ಕಾರಕಗಳ ಅವಶ್ಯಕತೆಯಿದೆ ಆದರೆ ಕನ್ನಡಕ್ಕೆ ಇದರ ಅವಶ್ಯಕತೆಯಿಲ್ಲ. ಇಂಗ್ಲಿಷ್ ಮೊದಲಾದ ಕೆಲವು ಪಾಶ್ಚಾತ್ಯ ಭಾಷೆಗಳಿಗೂ ಸಂಸ್ಕೃತದ ಹಾಗೆ ಎರಡು ವಿಧವಾದ ವ್ಯಾಕರಣ ತತ್ವಗಳು (ವಿಭಕ್ತಿಗಳು ಮತ್ತು ಸಬ್ಜೆಕ್್ಟ, ಆಬ್ಜೆಕ್್ಟ ಮೊದಲಾದ ವ್ಯಾಕರಣ ಸಂಬಂಧಗಳು) ಮೇಲೆ ವಿವರಿಸಿದ ಕಾರಣಕ್ಕಾಗಿಯೇ ಅವಶ್ಯವೆಂದು ಕಂಡುಬಂದಿದೆ. ಆದರೆ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ ಎಂದರೆ ವಿಭಕ್ತಿಗಳು ಮಾತ್ರ ಇದ್ದರೆ ಸಾಕು. ಸಬ್ಜೆಕ್್ಟ, ಆಬ್ಜೆಕ್್ಟ, ಮೊದಲಾದ ವ್ಯಾಕರಣ ಸಂಬಂಧಗಳ ಅವಶ್ಯಕತೆ ಕನ್ನಡಕ್ಕಿಲ್ಲ.
ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಅಂತಹ ವ್ಯಾಕರಣ ತತ್ವಗಳನ್ನು ಕಲ್ಪಿಸಿ ಕೊಳ್ಳಲು ಪ್ರಯತ್ನಿಸಿದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
168 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
8. ವಿಭಕ್ತಿಗಳು
8.1 ಮುನ್ನೋಟ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಬಳಕೆಯಲ್ಲಿ ಕಾಣಿಸುವ ಒಂದು ಮುಖ್ಯವಾದ ವ್ಯತ್ಯಾಸವನ್ನು ಹಿಂದಿನ ಅಧ್ಯಾಯದಲ್ಲಿ ಪರಿಶೀಲಿಸ ಲಾಗಿತ್ತು. ಅದೇನೆಂದರೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವುಗಳ ಅಥ್ರಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ, ಆದರೆ ಸಂಸ್ಕೃತದಲ್ಲಿ ಆ ರೀತಿ ನೇರವಾದ ಹೊಂದಾಣಿಕೆಯಿಲ್ಲ.
ಈ ವ್ಯತ್ಯಾಸದ ಆಧಾರದ ಮೇಲೆ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಪ್ರತ್ಯಯಗಳ ಬಳಕೆಯನ್ನು ವಿವರಿಸುವುದಕ್ಕಾಗಿ ಕಾರಕ'ವೆಂಬ ವ್ಯಾಕರಣ ತತ್ವ ವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಯಾಕೆ ಇದೆ, ಮತ್ತು ಕನ್ನಡದಲ್ಲಿ ಅಂತಹ ಅವಶ್ಯಕತೆ ಯಾಕೆ ಇಲ್ಲ ಎಂಬುದನ್ನು ಅಲ್ಲಿ ವಿವರಿಸಲಾಗಿತ್ತು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಸಂಖ್ಯೆಯಲ್ಲಿ ಮತ್ತು ಅವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಶೀಲಿಸಲಾಗಿದೆ ಮತ್ತು ವಿಭಕ್ತಿ ಪಲ್ಲಟ’ ವೆಂಬ ವ್ಯಾಕರಣ ಪರಿಕಲ್ಪನೆಯನ್ನು ಈ ಎರಡು ಭಾಷೆಗಳ ವ್ಯಾಕರಣಗಳಲ್ಲಿ ಹೇಗೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಎಲ್ಲಾ ವ್ಯತ್ಯಾಸಗಳನ್ನೂ ಪರಿಶೀಲಿಸಿದಾಗ ಒಂದು ವಿಷಯವಂತೂ ಸ್ಪಷ್ಟ ವಾಗುತ್ತದೆ. ಸಂಸ್ಕೃತ ವ್ಯಾಕರಣಗಳಲ್ಲಿ ಕಾಣಿಸುವ ವಿಭಕ್ತಿ ಪ್ರತ್ಯಯಗಳ ವ್ಯವಸ್ಥೆ ಯನ್ನು ಹಾಗೆ0iÉುೀ ಕನ್ನಡ ವ್ಯಾಕರಣದಲ್ಲಿ ತಂದಿರಿಸುವ ಕನ್ನಡ ವೈಯಾಕರಣಿಗಳ ಪ್ರಯತ್ನ ಸಫಲವಾಗಲು ಸಾಧ್ಯವೇ ಇಲ್ಲ.
8.2 ವಿಭಕ್ತಿಗಳ ಹೆಸರು ಸಂಸ್ಕೃತದ ವಿಭಕ್ತಿಗಳನ್ನು ಒಂದು ಕ್ರಮದಲ್ಲಿ ಪಟ್ಟಿಮಾಡಿ ಅವಕ್ಕೆ ಪ್ರಥಮಾ, ದ್ವಿತೀಯಾ, ತೃತೀಯಾ, ಚತುಥ್ರೀ, ಪಂಚಮೀ, ಷಷ್ಠೀ ಮತ್ತು ಸಪ್ತಮೀ (ಎಂದರೆ ಅನುಕ್ರಮವಾಗಿ ಒಂದನೇ, ಎರಡನೇ, ಮೂರನೇ, ನಾಲ್ಕನೇ, ಐದನೇ, ಆರನೇ ಮತ್ತು ಏಳನೇ) ವಿಭಕ್ತಿಗಳೆಂದು ಹೆಸರು ಕೊಡಲಾಗಿದೆ. ಈ ಹೆಸರುಗಳನ್ನು ಕನ್ನಡ ವೈಯಾಕರಣಿಗಳು ಸಂಸ್ಕೃತದಿಂದ ಹಾಗೆಯೇ ಕನ್ನಡಕ್ಕೆ ವಗ್ರಾಯಿಸಿಕೊಂಡಿದ್ದಾರೆ.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಸಂಸ್ಕೃತದಲ್ಲಿ ವಿಭಕ್ತಿಗಳನ್ನು ಈ ರೀತಿ ಪ್ರಥಮಾ, ದ್ವಿತೀಯಾ, ತೃತೀಯಾ ಮೊದಲಾಗಿ ಪಟ್ಟಿಮಾಡಿ ಹೆಸರಿಸಲು ಒಂದು ಉತ್ತಮವಾದ ಕಾರಣವಿದೆ. ಅದರಲ್ಲಿ ಬರುವ ವಿಭಕ್ತಿಗಳಲ್ಲಿ ಯಾವುವಕ್ಕೆಲ್ಲ ಒಂದೇ ರೂಪದಲ್ಲಿರುವ ಪ್ರತ್ಯಯಗಳಿವೆ ಎಂಬುದನ್ನು ಸುಲಭವಾಗಿ ವಿವರಿಸಿ ಹೇಳಲು ಮೇಲಿನ ಕ್ರಮ ಅತ್ಯಂತ ಯೋಗ್ಯವಾದುದು. ಬೇರೆ ಯಾವ ರೀತಿಯಲ್ಲಿ ಈ ವಿಭಕ್ತಿಗಳನ್ನು ಪಟ್ಟಿಮಾಡಿ ಹೇಳಿದರೂ ಆ ರೀತಿ ಒಂದೇ ರೂಪದಲ್ಲಿ ಬರುವ ಪ್ರತ್ಯಯಗಳನ್ನು ಅಷ್ಟೊಂದು ಸುಲಭವಾಗಿ (ಎಂದರೆ ಒಟ್ಟೊಟ್ಟಾಗಿ) ಸೂಚಿಸಲು ಸಾಧ್ಯವಾಗದು. ಉದಾಹರಣೆಗಾಗಿ, ದೇವಃ ನಾಮಪದಕ್ಕೆ ದ್ವಿವಚನದ ಪ್ರಥಮಾ ಮತ್ತು ದ್ವಿತೀಯಾ ವಿಭಕ್ತಿಗಳೆರಡರಲ್ಲಿ ದೇವೌ ಎಂಬ ಒಂದೇ ರೂಪವಿದೆ, ತೃತೀಯಾ, ಚತುಥ್ರೀ ಮತ್ತು ಪಂಚಮಿಗಳೆಂಬ ಮೂರು ವಿಭಕ್ತಿಗಳಲ್ಲಿ ದೇವಾಭ್ಯಂ ಎಂಬ ಒಂದೇ ರೂಪವಿದೆ, ಮತ್ತು ಷಷ್ಠೀ ಹಾಗೂ ಸಪ್ತಮೀ ವಿಭಕ್ತಿಗಳೆರಡರಲ್ಲಿ ದೇವಯೋಃ ಎಂಬ ಒಂದೇ ರೂಪವಿದೆ.
ದ್ವಿವಚನ
ಪ್ರಥಮಾ-ದ್ವಿತೀಯಾ ತೃತೀಯಾ-ಚತುಥ್ರೀ-ಪಂಚಮೀ ದೇವಾಭ್ಯಾಂ ದೇವಯೋಃ ಷಷ್ಠೀ-ಸಪ್ತಮೀ
ದೇವೌ
ಬಹುವಚನ
ಚತುಥ್ರೀ-ಪಂಚಮೀ
ದೇವೇಭ್ಯಃ
ಇದೇ ರೀತಿಯಲ್ಲಿ ಅಗ್ನಿ ನಾಮಪದಕ್ಕೆ (1) ಏಕವಚನದ ಪಂಚಮಿ- ಷಷ್ಠಿಗಳಲ್ಲಿ, (2) ದ್ವಿವಚನದ ಪ್ರಥಮಾ-ದ್ವಿತೀಯೆಗಳಲ್ಲಿ, ತೃತೀಯಾ- ಚತುಥ್ರೀ-ಪಂಚಮಿಗಳಲ್ಲಿ ಮತ್ತು ಷಷ್ಠೀ-ಸಪ್ತಮಿಗಳಲ್ಲಿ, ಹಾಗೂ (3) ಬಹುವಚನದ ಚತುಥ್ರೀ-ಪಂಚಮಿಗಳಲ್ಲಿ ಸಮಾನವಾದ ರೂಪಗಳಿವೆ.
ಏಕವಚನ
ಪಂಚಮೀ-ಷಷ್ಠೀ
CUÉßÃB
ದ್ವಿವಚನ
ಪ್ರಥಮಾ-ದ್ವಿತೀಯಾ ತೃತೀಯಾ-ಚತುಥ್ರೀ-ಪಂಚಮೀ ಅಗ್ನಿಭ್ಯಾಂ ಅಗ್ನಯೋಃ ಷಷ್ಠೀ-ಸಪ್ತಮೀ
CVßÃ
ಬಹುವಚನ
ಚತುಥ್ರೀ-ಪಂಚಮೀ
ಅಗ್ನಿಭ್ಯಃ
169 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸಂಸ್ಕೃತದ ವಿಭಕ್ತಿಗಳನ್ನು ಮೇಲೆ ಸೂಚಿಸಿದ ಹಾಗೆ ಪಟ್ಟಿ ಮಾಡಿದಲ್ಲಿ ಒಂದೇ ರೂಪವಿರುವ ವಿಭಕ್ತಿಗಳೆಲ್ಲ ಒಟ್ಟೊಟ್ಟಿಗೆ ಬರುತ್ತವೆ; ಬೇರೆ ಯಾವ ಕ್ರಮದಲ್ಲಿ ಅವನ್ನು ಪಟ್ಟಿ ಮಾಡಿದರೂ ಅವು ಆ ರೀತಿ ಒಟ್ಟೊಟ್ಟಿಗೆ ಬರಲಾರವು ಮತ್ತು ಈ ಕಾರಣಕ್ಕಾಗಿ ಅವುಗಳ ನಡುವಿರುವ ರೂಪಸಾದೃಶ್ಯವನ್ನು ಅಷ್ಟೊಂದು ಸುಲಭವಾಗಿ ವಿವರಿಸಿ ಹೇಳಲು ಸಾಧ್ಯವಾಗದು.
ಎಂದರೆ, ರೂಪಸಾದೃಶ್ಯವನ್ನು ತೋರಿಸುವ ಸಂಸ್ಕೃತದ ವಿಭಕ್ತಿ ರೂಪಗಳು ಈ ರೀತಿ ಒಟ್ಟೊಟ್ಟಾಗಿ ನಾಮಪದಗಳ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳ ಬೇಕಿದ್ದಲ್ಲಿ ಅವನ್ನು ಸಂಸ್ಕೃತ ವ್ಯಾಕರಣದಲ್ಲಿ ಮೇಲೆ ಕಾಣಿಸಿದ ಹಾಗೆ ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ವಿಂಗಡಿಸುವುದು ಅವಶ್ಯ.
ಕನ್ನಡದ ವಿಭಕ್ತಿಗಳನ್ನು ಮೇಲಿನ ಸಂಸ್ಕೃತ ವಿಭಕ್ತಿಗಳ ಕ್ರಮವನ್ನನುಸರಿಸಿ ಪ್ರಥಮಾ, ದ್ವಿತೀಯಾ, ತೃತೀಯಾ ಮೊದಲಾಗಿ ಹೆಸರಿಸುವುದರಿಂದ ಇಂತಹ ಪ್ರಯೋಜನವೇನೂ ಸಿಗಲಾರದು. ಯಾಕೆಂದರೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ಒಂದೇ ರೂಪವಿರುವ ವಿಭಕ್ತಿಗಳೇ ಇಲ್ಲ.
ಸಂಸ್ಕೃತದ ಏಳು ವಿಭಕ್ತಿಗಳನ್ನು ಕನ್ನಡದಲ್ಲೂ ಕಾಣಲು ಪ್ರಯತ್ನಿಸಿದಲ್ಲಿ ಮಾತ್ರ ಅದರಲ್ಲಿ ಕೆಲವು ಒಂದೇ ರೂಪವಿರುವ ವಿಭಕ್ತಿಗಳಿವೆಯೆಂದು ಹೇಳಲು ಸಾಧ್ಯ. ಆದರೆ ಅಂತಹ ಪ್ರಯತ್ನದಲ್ಲಿ ತೃತೀಯಾ-ಪಂಚಮಿಗಳು (ನಡುವಿರುವ ಚತುಥ್ರಿಯನ್ನು ಬಿಟ್ಟು) ಇಂದ ಎಂಬ ಒಂದೇ ರೂಪದವಾಗಿ ಕಾಣಿಸುತ್ತವೆ. ಹಾಗಾಗಿ, ಪ್ರತ್ಯಯಗಳನ್ನು ಹೆಸರಿಸುವ ಈ ಮೇಲಿನ ಸಂಸ್ಕೃತದ ಕ್ರಮ ಕನ್ನಡಕ್ಕೆ ಅನುಕೂಲವಾಗುವ ಬದಲು ಪ್ರತಿಕೂಲವಾಗುತ್ತದೆ.
ನಿಜಕ್ಕೂ ಕನ್ನಡದ ವಿಭಕ್ತಿಗಳನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಮೊದ ಲಾಗಿ ಕರೆಯುವ ಬದಲು, ವಾಕ್ಯಗಳಲ್ಲಿ ಬಳಸಿದಾಗ ಅವಕ್ಕೆ ಎಂತಹ ಅಥ್ರ ಬರುತ್ತದೆ ಎಂಬುದನ್ನು ಸೂಚಿಸುವಂತಹ ಹೆಸರುಗಳನ್ನು ಕೊಡುವುದೇ ಉತ್ತಮ. ಇದರಿಂದ ಅವನ್ನು ಕಲಿಯಬೇಕೆಂದಿರುವ ವಿದ್ಯಾಥ್ರಿಗಳಿಗೂ ಅವನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿರುವ ಇತರರಿಗೂ ಪ್ರಯೋಜನವಾದೀತು.
ಉದಾಹರಣೆಗಾಗಿ, ಇಂದ ಪ್ರತ್ಯಯ ಕನ್ನಡದಲ್ಲಿ ಮುಖ್ಯವಾಗಿ ಒಂದು ಚಲನೆಯ ಮೂಲ(ಸುರು)ವನ್ನು ಸೂಚಿಸುತ್ತದೆ ಮತ್ತು ಗೆ ಪ್ರತ್ಯಯ ಚಲನೆಯ ಕೊನೆ ಇಲ್ಲವೇ ಗುರಿಯನ್ನು ಸೂಚಿಸುತ್ತದೆ. ಈ ವಿಭಕ್ತಿಗಳನ್ನು `ತೃತೀಯಾ' (ಇಲ್ಲವೇ `ಪಂಚಮೀ') ಮತ್ತು `ಚತುಥ್ರೀ' ಎಂಬುದಾಗಿ ಹೆಸರಿಸುವ ಬದಲು ಅವುಗಳ ಈ ಪ್ರಧಾನವಾದ ಅಥ್ರವನ್ನು ಸೂಚಿಸುವ ಹಾಗೆ `ಸುರು' ವಿಭಕ್ತಿ ಮತ್ತು `ಕೊನೆ' ವಿಭಕ್ತಿ ಎಂಬುದಾಗಿ ಹೆಸರಿಸಿದಲ್ಲಿ ವಾಕ್ಯದಲ್ಲಿ ಅವುಗಳ ಬಳಕೆ ಯೆಂತಹದು ಎಂಬುದನ್ನು ವಿವರಿಸುವ ಕೆಲಸ ಸುಲಭವಾದೀತು.
170 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಇದೇ ರೀತಿಯಲ್ಲಿ, ಕನ್ನಡದ ಅನ್ನು ಪ್ರತ್ಯಯ ಮುಖ್ಯವಾಗಿ ಒಂದು ಘಟನೆ ಯಿಂದ ಬಾಧಿತವಾಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ ಮತ್ತು ಅಲ್ಲಿ ಪ್ರತ್ಯಯ ಒಂದು ಘಟನೆ ನಡೆದಿರುವ ಜಾಗವನ್ನು ಸೂಚಿಸುತ್ತದೆ. ಹಾಗಾಗಿ ಇವೆರಡನ್ನು ಯಾವ ವಿಶಿಷ್ಟವಾದ ಅಥ್ರವನ್ನೂ ಕೊಡದ ದ್ವಿತೀಯಾ' ಮತ್ತು ಸಪ್ತಮೀ’ ವಿಭಕ್ತಿಗಳೆಂಬ ಹೆಸರುಗಳಿಂದ ಕರೆಯುವ ಬದಲು, ಅವುಗಳ ಮುಖ್ಯ ಅಥ್ರವನ್ನು ಸ್ಪಷ್ಟವಾಗಿ ಸೂಚಿಸುವ ಬಾಧಿತ' ಇಲ್ಲವೇ ಆಗುಗ’ ವಿಭಕ್ತಿ ಮತ್ತು `ಜಾಗ’ ವಿಭಕ್ತಿ ಎಂಬುದಾಗಿ ಹೆಸರಿಸುವುದೇ ಕನ್ನಡದ ಮಟ್ಟಿಗೆ ಉತ್ತಮವಾದ ಕ್ರಮ. ಆದರೆ ಇಷ್ಟರವರೆಗೆ ಸಂಸ್ಕೃತದ ಹೆಸರುಗಳನ್ನೇ ಬಳಸಿ ಅಭ್ಯಾಸವಾಗಿರುವ ವ್ಯಾಕರಣ ಪಂಡಿತರಿಗೆ ಮಾತ್ರ ಇದು ಸ್ವಲ್ಪ ತೊಂದರೆ ಕೊಡಬಹುದು.
ಕನ್ನಡದ ವೈಯಾಕರಣಿಗಳು ಸಂಸ್ಕೃತದಲ್ಲಿ ಕಾಣಿಸುವ ಇತರ (ಪ್ರಥಮಾ, ಪಂಚಮೀ ಮೊದಲಾದ) ವಿಭಕ್ತಿಗಳಿಗೆ ಸಮನಾದ ವಿಭಕ್ತಿಗಳೂ ಕನ್ನಡದಲ್ಲಿವೆ ಯೆಂದು ಹೇಳುತ್ತಾರಾದರೂ ನಿಜಕ್ಕೂ ಕನ್ನಡದಲ್ಲಿ ಅದಕ್ಕೆ ಆಧಾರವಿಲ್ಲವೆಂಬು ದನ್ನು ಮುಂದೆ ನೋಡಲಿರುವೆವು.
8.3 ವಿಭಕ್ತಿ, ಲಿಂಗ ಮತ್ತು ವಚನ ಹಿಂದೆ ಆರನೆಯ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ಕನ್ನಡದಲ್ಲಿ ಬರುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅಥ್ರವನ್ನು (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧವನ್ನು) ಮಾತ್ರ ಸೂಚಿಸುತ್ತವೆ; ಲಿಂಗ ಮತ್ತು ವಚನ ಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಇವಕ್ಕಿಂತ ತೀರ ಭಿನ್ನವಾದ ಪ್ರತ್ಯಯ ಗಳು ಬಳಕೆಯಾಗುತ್ತವೆ.
ಆದರೆ, ಸಂಸ್ಕೃತದಲ್ಲಿ ಬರುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅಥ್ರ ವನ್ನು ಮಾತ್ರವಲ್ಲದೆ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಒಂದು ಮುಖ್ಯವಾದ ವ್ಯತ್ಯಾಸ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಪುಲ್ಲಿಂಗದ ದೇವ, ಸ್ತ್ರೀಲಿಂಗದ ದೇವಿ ಮತ್ತು ನಪುಂಸಕಲಿಂಗದ ಜಗತ್ ಪದಗಳಿಗೆ ದ್ವಿತೀಯಾ ವಿಭಕ್ತಿಯ ಏಕವಚನ, ದ್ವಿವಚನ ಮತ್ತು ಬಹುವಚನಗಳಲ್ಲಿ ಬರುವ ವಿಭಕ್ತಿರೂಪಗಳನ್ನು ಗಮನಿಸ ಬಹುದು.
ನಾಮಪದ
ಏಕವಚನ
ದೇವ (ಪುಲ್ಲಿಂಗ) ದೇವಂ
ದೇವಿ (ಸ್ತ್ರೀಲಿಂಗ) ದೇವೀಂ
ದ್ವಿತೀಯಾ ವಿಭಕ್ತಿಯ ರೂಪಗಳು ದ್ವಿವಚನ
ದೇವೌ
ದೇವೌ್ಯ
ಬಹುವಚನ ದೇವಾನ್ ದೇವೀ
171 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಜಗತ್ (ನಪುಂಸಕ ಜಗತ್ °AUÀ)
dUÀwÃ
dUÀAw
ಮೇಲೆ ದೇವಂ ಪದದಲ್ಲಿ ಅಂ ಪ್ರತ್ಯಯ ಬಂದಿದೆ. ಇದು ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಪುಲ್ಲಿಂಗ ಮತ್ತು ಏಕವಚನಗಳನ್ನೂ ಸೂಚಿಸುತ್ತದೆ 0iÉುಂದು ಹೇಳಬೇಕಾಗುತ್ತದೆ. ಯಾಕೆಂದರೆ, ದೇವೀಂ ಪದದಲ್ಲಿ ದ್ವಿತೀಯಾ ವಿಭಕ್ತಿಯನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂ ಪ್ರತ್ಯಯ ಬಂದಿದೆ. ಈ ಪ್ರತ್ಯಯಕ್ಕೂ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಸ್ತ್ರೀಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಅಥ್ರವಿದೆ0iÉುಂದು ಹೇಳಬೇಕಾಗುತ್ತದೆ. ಜಗತ್ ಪದದಲ್ಲಿ `ಶೂನ್ಯ' ಪ್ರತ್ಯಯ ಬಂದಿದ್ದು, ಅದರ ಮೇಲೆ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ನಪುಂಸಕಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಕೆಲಸನ್ನೂ ಹೊರಿಸಬೇಕಾಗಿದೆ.
ಇದೇ ರೀತಿಯಲ್ಲಿ ಪುಲ್ಲಿಂಗ ದ್ವಿವಚನವನ್ನು ಸೂಚಿಸಲು ಔ ಪ್ರತ್ಯಯ, ಪುಲ್ಲಿಂಗ ಬಹುವಚನವನ್ನು ಸೂಚಿಸಲು ಅನ್ ಪ್ರತ್ಯಯ, ಸ್ತ್ರೀಲಿಂಗ ಬಹುವಚನ ವನ್ನು ಸೂಚಿಸಲು ಇ ಪ್ರತ್ಯಯ, ನಪುಂಸಕ ದ್ವಿವಚನವನ್ನು ಸೂಚಿಸಲು ಈ ಪ್ರತ್ಯಯ ಮೊದಲಾದವು ಬಂದಿರುವುದನ್ನು ಇದೇ ದ್ವಿತೀಯಾ ವಿಭಕ್ತಿಯಲ್ಲಿ ಕಾಣಬಹುದು. ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಲಿಂಗ ಪ್ರತ್ಯಯಗಳಿಂದ ಇಲ್ಲವೇ ವಚನ ಪ್ರತ್ಯಯಗಳಿಂದ ಬೇಪ್ರಡಿಸಲು ಸಾಧ್ಯ ವಾಗುವುದಿಲ್ಲ.
ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅಥ್ರವನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯಯಗಳು ಬರುತ್ತವೆ. ಇವುಗಳಲ್ಲಿ ಲಿಂಗ ಪ್ರತ್ಯಯಗಳು ಹುಡುಗ-ಹುಡುಗಿ, ಅಜ್ಜ-ಅಜ್ಜಿ ಮೊದಲಾದ ಕೆಲವೇ ಕೆಲವು ನಾಮಪದ ಗಳೊಂದಿಗೆ ಮಾತ್ರ ಬರುತ್ತವೆ; ಉಳಿದೆಡೆಗಳಲ್ಲೆಲ್ಲ ನಾಮಪದಗಳ ಲಿಂಗವನ್ನು ಅವುಗಳ ಅಥ್ರದಿಂದಲೇನೇ ತಿಳಿದುಕೊಳ್ಳಬೇಕಾಗುತ್ತದೆ (6.3.2 ನೋಡಿ). ಅದಕ್ಕಾಗಿ ಪ್ರತ್ಯಯಗಳ ಬಳಕೆಯಿಲ್ಲ.
ಕನ್ನಡದ ವಚನ ಪ್ರತ್ಯಯಗಳು ಕೆಲವು ಸಂದಭ್ರಗಳಲ್ಲಿ ಲಿಂಗಭೇದವನ್ನೂ ಸೂಚಿಸಬಲ್ಲುವು. ಉದಾಹರಣೆಗಾಗಿ, ಬಹುವಚನದ ರು ಪ್ರತ್ಯಯ ಮನುಷ್ಯ (ಪುಂ-ಸ್ತ್ರೀ) ಲಿಂಗವನ್ನೂ ಸೂಚಿಸಬಲ್ಲುದು ಮತ್ತು ವು ಪ್ರತ್ಯಯ ಮನುಷ್ಯೇತರ (ನಪುಂಸಕ) ಲಿಂಗವನ್ನೂ ಸೂಚಿಸಬಲ್ಲುದು. ಆದರೆ ಎಲ್ಲಾ ಸಂದಭ್ರಗಳಲ್ಲೂ ಈ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಿಗಿಂತ ಭಿನ್ನವಾಗಿರುತ್ತವೆ.
ಕನ್ನಡದಲ್ಲಿ ಲಿಂಗ ಮತ್ತು ವಚನ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಿಗಿಂತ ಬೇರೆಯಾಗಿರುವುದನ್ನು ಕೆಳಗಿನ ಪದರೂಪಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
172 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು
ನಾಮಪದ
ಏಕವಚನ
ಹುಡುಗ (ಪುಲ್ಲಿಂಗ) ಹುಡುಗನನ್ನು ಹುಡುಗಿ (ಸ್ತ್ರೀಲಿಂಗ) ಹುಡುಗಿಯನ್ನು ಕಲ್ಲು (ನಪುಂಸಕ °AUÀ)
ಕಲ್ಲನ್ನು
ದ್ವಿತೀಯಾ ವಿಭಕ್ತಿಯ ರೂಪಗಳು ಬಹುವಚನ ಹುಡುಗರನ್ನು ಹುಡುಗಿಯರನ್ನು ಕಲ್ಲುಗಳನ್ನು
ಮೇಲೆ ಕೊಟ್ಟಿರುವ ಎಲ್ಲಾ ಪದರೂಪಗಳಲ್ಲೂ ಅನ್ನು ಪ್ರತ್ಯಯ ಬಂದಿದ್ದು ಅದು ದ್ವಿತೀಯಾ ವಿಭಕ್ತಿಯನ್ನು ಮಾತ್ರವೇ ಸೂಚಿಸುತ್ತದೆ. ಲಿಂಗ ಮತ್ತು ವಚನ ಗಳನ್ನು ಸೂಚಿಸುವುದಕ್ಕಾಗಿ ಈ ಪದರೂಪಗಳಲ್ಲಿ ಅ (ಅನ್), ಇ, ರು ಮತ್ತು ಗಳು ಪ್ರತ್ಯಯಗಳು ಬಂದಿದ್ದು, ಅವನ್ನು ವಿಭಕ್ತಿ ಪ್ರತ್ಯಯದಿಂದ ಬೇಪ್ರಡಿಸಲು ಯಾವ ತೊಂದರೆಯೂ ಇಲ್ಲ.
ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ಮೇಲೆ ಸೂಚಿಸಿದ ಹಾಗೆ ನಾಮಪದದ ವಿಭಕ್ತಿ, ಲಿಂಗ ಮತ್ತು ವಚನಗಳನ್ನನುಸರಿಸಿ ಮಾತ್ರವಲ್ಲದೆ ಅವುಗಳ ಕೊನೆಯ ಅಕ್ಷರವನ್ನನುಸರಿಸಿಯೂ ಭಿನ್ನವಾಗಿರುತ್ತವೆ.
ಉದಾಹರಣೆಗಾಗಿ, ಪುಲ್ಲಿಂಗದಲ್ಲಿರುವ ಅಗ್ನಿ ಮತ್ತು ಗುರು ಎಂಬ ಎರಡು ನಾಮಪದಗಳಿಗೆ ತೃತೀಯಾ ವಿಭಕ್ತಿ ಏಕವಚನದಲ್ಲಿ ಅಗ್ನಿನಾ ಮತ್ತು ಗುರುಣಾ ಎಂಬ ರೂಪಗಳಿವೆ. ಗುರು ಪದದ ಕೊನೆಯ ಅಕ್ಷರದಲ್ಲಿರುವ ರಕಾರದಿಂದಾಗಿ ತೃತೀಯಾ ಏಕವಚನದ ನಾ ಎಂಬುದು ಣಾ ಎಂದಾಗಿದೆ. ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಸಂಸ್ಕೃತದ ವಿಭಕ್ತಿ ಪ್ರತ್ಯಯಗಳಲ್ಲಿ ಕಾಣಿಸುತ್ತಿವೆಯಾದ ಕಾರಣ, ಅದರ ನಾಮಪದಗಳಿಗಿರುವ ವಿಭಕ್ತಿ ರೂಪಗಳನ್ನು ಕಲಿಯುವುದು ಒಂದು ಬಹಳ ಕಷ್ಟವಾದ ಕೆಲಸವಾಗಿದೆ.
ಕನ್ನಡದಲ್ಲಿಯೂ ನಾಮಪದಗಳ ಸ್ವರೂಪವನ್ನವಲಂಬಿಸಿ ವಿಭಕ್ತಿ ಪ್ರತ್ಯಯ ದಲ್ಲಿ ಕೆಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ಚತುಥ್ರೀ ಪ್ರತ್ಯಯಕ್ಕಿರುವ ಇಗೆ, ಗೆ ಮತ್ತು ಕ್ಕೆ ರೂಪಗಳು ಮುಖ್ಯವಾಗಿ ನಾಮಪದದ ಸ್ವರೂಪವನ್ನವಲಂಬಿಸಿವೆ. ಆದರೆ, ಸಂಸ್ಕೃತಕ್ಕೆ ಹೋಲಿಸಿದೆವಾದರೆ ಕನ್ನಡದಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಅತ್ಯಲ್ಪವೆಂದೇ ಹೇಳಬಹುದು.
8.4 ಪ್ರತ್ಯಯಗಳ ಅವಶ್ಯಕತೆ ಮೇಲೆ ವಿವರಿಸಿದ ಹಾಗೆ, ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರವಲ್ಲದೆ ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸಬೇಕಾ ಗಿದೆಯಾದ ಕಾರಣ, ನಾಮಪದವೊಂದನ್ನು ವಾಕ್ಯದಲ್ಲಿ ಬಳಸುವಾಗಲೆಲ್ಲ ಅದಕ್ಕೆ
173 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಯಾವುದಾದರೊಂದು ವಿಭಕ್ತಿ ಪ್ರತ್ಯಯವನ್ನು ಸೇರಿಸಿ0iÉುೀ ಬಳಸಬೇಕೆಂಬುದಾಗಿ ಸಂಸ್ಕೃತ ವ್ಯಾಕರಣದಲ್ಲಿ ನಿಯಮವೊಂದನ್ನು ಮಾಡಲು ಸಾಧ್ಯವಾಗಿದೆ.
ಆದರೆ ಕನ್ನಡದಲ್ಲಿ ಇಂತಹ ನಿಯಮವನ್ನು ಮಾಡಲು ಸಾಧ್ಯವಾಗದು. ಯಾಕೆಂದರೆ, ಕನ್ನಡದ ನಾಮಪದಗಳು ಅವಶ್ಯವಿದ್ದಲ್ಲಿ ಮಾತ್ರ ವಿಭಕ್ತಿ ಪ್ರತ್ಯಯ ದೊಂದಿಗೆ ಬರುತ್ತವೆ. ಇಲ್ಲವಾದಲ್ಲಿ ಅವು ಯಾವ ವಿಭಕ್ತಿ ಪ್ರತ್ಯಯದೊಂದಿಗೂ ಸೇರಿಕೊಳ್ಳದೆ ಪ್ರಕೃತಿರೂಪದಲ್ಲೇನೇ ಬಳಕೆಯಾಗುತ್ತವೆ.
ಯಾವ ಸಂದಭ್ರದಲ್ಲಿ ಈ ರೀತಿ ಕನ್ನಡ ನಾಮಪದಗಳೊಂದಿಗೆ ವಿಭಕ್ತಿ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ ಮತ್ತು ಯಾವ ಸಂದಭ್ರದಲ್ಲಿ ಅದರ ಅವಶ್ಯಕತೆಯಿಲ್ಲ ಎಂಬುದು ಆ ನಾಮಪದಗಳನ್ನು ಬಳಸಬೇಕಾಗಿರುವ ವಾಕ್ಯದ ಸ್ವರೂಪವನ್ನವಲಂಬಿಸಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಾಕ್ಯ ಗಳಲ್ಲಿ ಸಾಮಾನ್ಯವಾಗಿ ಒಂದು ಕ್ರಿಯಾಪದ ಮತ್ತು ಒಂದು ಅಥವಾ ಜಾಸ್ತಿ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬರುತ್ತವೆ. ಇವುಗಳಲ್ಲಿ ಕ್ರಿಯಾಪದವು ಒಂದು ಘಟನೆಯನ್ನು ಸೂಚಿಸುತ್ತದೆ ಮತ್ತು ಅದರೊಂದಿಗೆ ಬರುವ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುತ್ತವೆ.
ಈ ವ್ಯಕ್ತಿ, ವಸ್ತು ಮೊದಲಾದವುಗಳು ಯಾವ ಕೆಲಸದಲ್ಲಿ ತೊಡಗಿಕೊಂಡಿವೆ ಎಂಬುದನ್ನು - ಎಂದರೆ ಅವನ್ನು ಗುರುತಿಸುವ ನಾಮಪದಗಳಿಗೂ ಕ್ರಿಯಾ ಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು - ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ತಿಳಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.
(1)
ರಾಜು ತನ್ನ ಕಾರನ್ನು ಹರಿಗೆ ಮಾರಿದ
(1)ನೇ ವಾಕ್ಯದಲ್ಲಿ ರಾಜು, ಹರಿ ಮತ್ತು ಕಾರು ಎಂಬ ಮೂರು ನಾಮಪದಗಳು ಬಂದಿದ್ದು, ಅವು ಮಾರು ಕ್ರಿಯಾಪದವು ಸೂಚಿಸುವ (ಎಂದರೆ ಮಾರುವ) ಘಟನೆಯಲ್ಲಿ ತೊಡಗಿಕೊಂಡಿರುವ ಎರಡು ವ್ಯಕ್ತಿಗಳನ್ನು ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ.
ಇವುಗಳಲ್ಲಿ ಹರಿ ನಾಮಪದದೊಂದಿಗೆ ಚತುಥ್ರೀ ವಿಭಕ್ತಿ ಪ್ರತ್ಯಯ ಗೆ ಬಂದಿದ್ದು, ಅದು `ಮಾರಿದ್ದು ಯಾವ ವ್ಯಕ್ತಿಗೆ' ಎಂಬುದನ್ನು (ಹರಿಗೆ ಎಂಬು ದಾಗಿ) ತಿಳಿಸುತ್ತದೆ ಮತ್ತು ಕಾರು ನಾಮಪದದೊಂದಿಗೆ ದ್ವಿತೀಯಾ ವಿಭಕ್ತಿ ಪ್ರತ್ಯಯ ಅನ್ನು ಬಂದಿದ್ದು, ಅದು `ಮಾರಿದ್ದು ಯಾವುದನ್ನು' ಎಂಬುದನ್ನು (ಕಾರನ್ನು ಎಂಬುದಾಗಿ) ತಿಳಿಸುತ್ತದೆ.
174 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಮಾರಿದ್ದು ಯಾರು ಎಂಬುದನ್ನು ಸೂಚಿಸಲು ಕನ್ನಡದಲ್ಲಿ ಇವೆರಡಕ್ಕಿಂತ ಭಿನ್ನವಾದ ಪ್ರತ್ಯಯದ ಅವಶ್ಯಕತೆಯಿಲ್ಲ. ಯಾಕೆಂದರೆ, ಮೇಲಿನ ಎರಡು ವಿಭಕ್ತಿ ಪ್ರತ್ಯಯಗಳೂ ಇಲ್ಲದಿರುವ ಮೂರನೆಯ ನಾಮಪದವೇ ಆ ವ್ಯಕ್ತಿಯನ್ನು ಸೂಚಿಸುವುದೆಂಬುದಾಗಿ ತಿಳಿದುಕೊಳ್ಳಲು ಸಾಧ್ಯವಿದೆ.
ಬೇರೆ ಬೇರೆ ರೀತಿಯ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ಸೂಚಿಸಬಲ್ಲುವಾದ ಕಾರಣ, ಅವುಗಳಲ್ಲಿ ತೊಡಗಿಕೊಂಡಿರಬೇಕಾದ ವ್ಯಕ್ತಿ, ವಸ್ತು ಮೊದಲಾದವುಗಳೂ ಬೇರೆ ಬೇರೆ ರೀತಿಯವಾಗಿರುತ್ತವೆ. ಉದಾಹರಣೆ ಗಾಗಿ, ಅಳು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಭಾಗವಹಿಸಬಲ್ಲ; ಆದರೆ, ಬೀಳು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ತೊಡಗಿಕೊಂಡಿರಲು ಸಾಧ್ಯವಿದೆ.
ರಾಜು ಅತ್ತ
(2PÀ) (2ಖ) *ಪುಸ್ತಕ ಅತ್ತಿತು
ರಾಜು ಬಿದ್ದ
(3PÀ) (3ಖ) ಪುಸ್ತಕ ಬಿತ್ತು
ಬಯ್ಯು, ದೂಡು, ಹೊಗಳು, ಕೊಲ್ಲು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆಗಳಲ್ಲಿ ಅವನ್ನು ನಡೆಸುವ ವ್ಯಕ್ತಿ ಮತ್ತು ಅವುಗಳಿಂದ ಬಾಧಿತವಾಗುವ ವ್ಯಕ್ತಿ ಎಂಬುದಾಗಿ ಇಬ್ಬರು ವ್ಯಕ್ತಿಗಳು ಭಾಗವಹಿಸಬಲ್ಲರು.
ಹಾಗಾಗಿ, ಇಂತಹ ಕ್ರಿಯಾಪದಗಳಿರುವ ವಾಕ್ಯಗಳಲ್ಲಿ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯಿಂದ ಬೇಪ್ರಡಿಸುವುದಕ್ಕಾಗಿ ವಿಭಕ್ತಿ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ. ಕನ್ನಡದಲ್ಲಿ ಇದಕ್ಕಾಗಿ ಘಟನೆಗಳಿಂದ ಬಾಧಿತನಾಗುವ ವ್ಯಕ್ತಿ ಯನ್ನು ಅನ್ನು ಪ್ರತ್ಯಯದ ಮೂಲಕ ಸೂಚಿಸಲಾಗುತ್ತದೆ.
(4ಕ) ಹರಿ ರಾಜುವನ್ನು ದೂಡಿದ (4ಖ) ಹರಿಯನ್ನು ರಾಜು ದೂಡಿದ
(4ಕ-ಖ) ವಾಕ್ಯಗಳಲ್ಲಿ `ದೂಡಿದ್ದು ಯಾರನ್ನು' ಎಂಬುದನ್ನು ಸೂಚಿಸುವು ದಕ್ಕಾಗಿ ಅನ್ನು ವಿಭಕ್ತಿ ಪ್ರತ್ಯಯವಿರುವ ಪದವನ್ನು ಬಳಸಲಾಗಿದೆ. ಆದರೆ `ದೂಡಿದ್ದುಯಾರು' ಎಂಬುದನ್ನು ಸೂಚಿಸುವುದಕ್ಕಾಗಿ ರಾಜು ಪದವನ್ನು ಅದಕ್ಕೆ ಯಾವ ವಿಭಕ್ತಿ ಪ್ರತ್ಯಯವನ್ನೂ ಸೇರಿಸದೆ ಬಳಸಲಾಗಿದೆ.
175 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕನ್ನಡ ವಾಕ್ಯಗಳಲ್ಲಿ ಈ ರೀತಿ ಘಟನೆಗಳನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯಯವನ್ನೂ ಬಳಸುವುದಿಲ್ಲ. ನಿಜಕ್ಕೂ ಅಂತಹ ಪ್ರತ್ಯಯದ ಅವಶ್ಯಕತೆ0iÉುೀ ಇಲ್ಲ; ಯಾಕೆಂದರೆ ಅನ್ನು ವಿಭಕ್ತಿ ಪ್ರತ್ಯಯದ ಮೂಲಕ ಸೂಚಿಸದಿರುವ ವ್ಯಕ್ತಿ0iÉುೀ ಘಟನೆಗಳನ್ನು ನಡೆಸುವವನು ಎಂಬುದಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಇಂತಹ ವಾಕ್ಯಗಳು ತಿಳಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತು ಭಾಗವಹಿಸುತ್ತಿವೆಯಾದರೆ ಅವುಗಳಲ್ಲಿ ಎರಡಕ್ಕೂ ವಿಭಕ್ತಿ ಪ್ರತ್ಯಯವನ್ನು ಸೇರಿಸದಿರಲು ಸಾಧ್ಯವಿದೆ. ಯಾಕೆಂದರೆ, ಅವುಗಳಲ್ಲಿ ಯಾವುದಕ್ಕೆ ಯಾವ ಕೆಲಸ ಎಂಬುದನ್ನು ಸಾಮಾನ್ಯವಾಗಿ ಸಂದಭ್ರದಿಂದಲೇ ಊಹಿಸಿಕೊಳ್ಳಲು ಸಾಧ್ಯವಾಗು vÀÛzÉ. ಉದಾಹರಣೆಗಾಗಿ, ಕಟ್ಟಿಸುವ ಕೆಲಸವನ್ನಾಗಲಿ ಇಲ್ಲವೇ ಎತ್ತುವ ಕೆಲಸ ವನ್ನಾಗಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮಾಡಬಲ್ಲನಲ್ಲದೆ ಒಂದು ವಸ್ತುವಲ್ಲ. ಹಾಗಾಗಿ, ಅಂತಹ ಕ್ರಿಯಾಪದವಿರುವ ವಾಕ್ಯಗಳಲ್ಲಿ ಎರಡು ನಾಮಪದಗಳನ್ನೂ ವಿಭಕ್ತಿ ಪ್ರತ್ಯಯವನ್ನು ಸೇರಿಸದೆ ಬಳಸಲು ಸಾಧ್ಯವಿದೆ.
(5) (6)
ರಾಜು ಒಂದು ಮನೆ ಕಟ್ಟಿಸಿದ ಹರಿ ಕೈ ಎತ್ತಿದ
(5) ನೇ ವಾಕ್ಯದಲ್ಲಿ ಕಟ್ಟಿಸು ಕ್ರಿಯಾಪದದೊಂದಿಗೆ ರಾಜು ಮತ್ತು ಮನೆ ಎಂಬ ಎರಡು ನಾಮಪದಗಳು ಬಂದಿದ್ದು ಅವೆರಡೂ ವಿಭಕ್ತಿ ಪ್ರತ್ಯಯವಿಲ್ಲದೆ ಬಳಕೆಯಾಗಿವೆ. ಈ ನಾಮಪದಗಳು ಗುರುತಿಸುವ ವ್ಯಕ್ತಿ ಮತ್ತು ವಸ್ತುಗಳ ಕೆಲಸವೇನು ಎಂಬುದನ್ನು ತಿಳಿಯಲು ವಿಭಕ್ತಿ ಪ್ರತ್ಯಯದ ಅವಶ್ಯಕತೆಯಿಲ್ಲ ದಿರುವುದೇ ಇದಕ್ಕೆ ಕಾರಣ.
(5)ನೇ ವಾಕ್ಯಕ್ಕೆ `ಕಟ್ಟಿಸಿದ್ದು ಮನೆಯನ್ನು' ಎಂಬ ಅಥ್ರ ಬರಬಲ್ಲುದಲ್ಲದೆ `ಕಟ್ಟಿಸಿದ್ದು ರಾಜುವನ್ನು' ಎಂಬ ಅಥ್ರ ಬರುವುದು ಕಷ್ಟಸಾಧ್ಯ. (6)ನೇ ವಾಕ್ಯ ದಲ್ಲೂ ಹೀಗೆ0iÉುೀ.
ವಾಕ್ಯದಲ್ಲಿ ಬರುವ ನಾಮಪದಗಳೆರಡೂ ವಸ್ತುಗಳನ್ನು ಸೂಚಿಸುತ್ತಿದ್ದಲ್ಲಿ ಅಥವಾ ನಾಮಪದಗಳಿಗೆ ಕ್ರಿಯಾಪದದೊಂದಿಗಿರುವ ಸಂಬಂಧವನ್ನು ಜಾಸ್ತಿ ಸ್ಪಷ್ಟವಾಗಿ ತಿಳಿಸಬೇಕಿದ್ದಲ್ಲಿ ವಿಭಕ್ತಿ ಪ್ರತ್ಯಯದ ಅವಶ್ಯಕತೆ ಕಂಡುಬಂದೀತು. ಅಂತಹ ಸಂದಭ್ರಗಳಲ್ಲಿ ಅನ್ನು ಪ್ರತ್ಯಯ ಕಾಣಿಸಿಕೊಳ್ಳುತ್ತದೆ.
(7) ಬಿರುಗಾಳಿ ಮರವನ್ನು ಉರುಳಿಸಿತು (8)
ನನ್ನ ಕೈ ಹರಿಯನ್ನು ಎತ್ತಿ ಹಿಡಿದಿದೆ
176 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು (7)ನೇ ವಾಕ್ಯದಲ್ಲಿ ಎರಡು ನಾಮಪದಗಳೂ ವಸ್ತುಗಳನ್ನು ಸೂಚಿಸುತ್ತಿವೆ. ಹಾಗಾಗಿ, ಅವುಗಳಲ್ಲಿ ಬಾಧಿತವಾಗಿರುವ ನಾಮಪದದೊಂದಿಗೆ ಅನ್ನು ಪ್ರತ್ಯಯ ವನ್ನು ಬಳಸಬೇಕಾಗಿದೆ. ಇದಕ್ಕೆ ಬದಲು (8)ನೇ ವಾಕ್ಯದಲ್ಲಿ ಒಂದು ನಾಮಪದ (ಕಂತೆ) ವ್ಯಕ್ತಿಯನ್ನು ಸೂಚಿಸುತ್ತಿದ್ದು ಇನ್ನೊಂದು ವಸ್ತುವನ್ನು ಸೂಚಿಸುತ್ತಿದೆ ಯಾದರೂ, ಅವೆರಡರ ನಡುವೆ ಬಾಧಿತವಾಗಿರುವುದು ವ್ಯಕ್ತಿಯಾದ ಕಾರಣ, ಅದರೊಂದಿಗೆ ಅನ್ನು ಪ್ರತ್ಯಯವನ್ನು ಬಳಸಬೇಕಾಗಿದೆ. ಕನ್ನಡದಲ್ಲಿ ಈ ರೀತಿ ಅವಶ್ಯವಿರುವಲ್ಲಿ ಮಾತ್ರ ವಿಭಕ್ತಿ ಪ್ರತ್ಯಯವನ್ನು ಬಳಸಿ ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ. ಆದರೆ ಸಂಸ್ಕೃತ ದಲ್ಲಿ ಅವಶ್ಯವಿರಲಿ ಅಥವಾ ಇಲ್ಲದಿರಲಿ, ವಾಕ್ಯದಲ್ಲಿ ನಾಮಪದವನ್ನು ಬಳಸು ವಲ್ಲೆಲ್ಲ ಅದರೊಂದಿಗೆ ಖಡ್ಡಾಯವಾಗಿಯೂ ವಿಭಕ್ತಿ ಪ್ರತ್ಯಯವನ್ನು ಬಳಸಲೇ ಬೇಕೆಂಬ ನಿಯಮವಿದೆ.
ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಸೂಚಿಸಲು ಕನ್ನಡದ ಹಾಗೆ ಬೇರೆ ಬೇರೆ ಪ್ರತ್ಯಯಗಳಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ವಿಭಕ್ತಿಯನ್ನು ಸೂಚಿಸಬೇಕಾಗಿಲ್ಲದಲ್ಲೂ ವಚನವನ್ನು ಸೂಚಿಸ ಬೇಕಾಗುತ್ತದೆಯಾದ ಕಾರಣ, ವಿಭಕ್ತಿ ಪ್ರತ್ಯಯವನ್ನು ಅವಶ್ಯವಿಲ್ಲದಲ್ಲೂ ಬಳಸ ಬೇಕಾಗುತ್ತದೆ.
8.5 ಪ್ರತ್ಯಯಗಳ ಸಂಖ್ಯೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯಯಗಳ ಸಂಖ್ಯೆಯಲ್ಲೂ ಬಹಳ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಎಷ್ಟು ವಿಭಕ್ತಿಗಳಿವೆಯೋ ಅಷ್ಟೇ ಕನ್ನಡದಲ್ಲೂ ಇರಬೇಕೆಂದು ಕನ್ನಡದ ವೈಯಾಕರಣಿಗಳು ಭಾವಿಸಿರುವಂತಿದೆ. ಇದಕ್ಕಾಗಿ ರಾಮನ ದೆಸೆಯಿಂದ ಎಂಬಂತಹ ಕನ್ನಡದ ಪದಕಂತೆಯನ್ನೂ ಅವರು ವಿಭಕ್ತಿರೂಪವೆಂದು ಪರಿಗಣಿಸಿದ್ದಾರೆ.
ಆದರೆ ನಿಜಕ್ಕೂ ವಿಭಕ್ತಿಗಳ ಸಂಖ್ಯೆ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಒಂದೇ ಒಂದು ವಿಭಕ್ತಿ ಪ್ರತ್ಯಯವನ್ನೂ ಬಳಸದ ಭಾಷೆಗಳೂ ಹಲವಿವೆ. ಸಂಸ್ಕೃತಕ್ಕಿಂತ ಎಷ್ಟೋ ಜಾಸ್ತಿ, ಎಂದರೆ ಹತ್ತಿಪ್ಪತ್ತು ವಿಭಕ್ತಿ ಪ್ರತ್ಯಯಗಳಿರುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ, ಉರಾಲಿಕ್ ಭಾಷಾಕುಟುಂಬಕ್ಕೆ ಸೇರಿದ ಪೆರ್ಮ್ಯಾಕ್ ಭಾಷೆಯಲ್ಲಿ ಒಟ್ಟು 28 ವಿಭಕ್ತಿ ಪ್ರತ್ಯಯಗಳಿವೆ! ವಾಕ್ಯದಲ್ಲಿ ಬರುವ ನಾಮಪದಗಳನ್ನು (ಇಲ್ಲವೇ ನಾಮಪದಕಂತೆಗಳನ್ನು) ಕ್ರಿಯಾಪದದೊಂದಿಗೆ ಸಂಬಂಧಿಸುವುದೇ ವಿಭಕ್ತಿ ಪ್ರತ್ಯಯಗಳ ಮುಖ್ಯ ಕೆಲಸ ವೆಂಬುದನ್ನು ನಾವು ಮೇಲೆ ನೋಡಿರುವೆವು. ಆದರೆ ಈ ಕೆಲಸವನ್ನು ವಿಭಕ್ತಿ ಪ್ರತ್ಯಯಗಳ ಮೂಲಕವೇ ಮಾಡಬೇಕೆಂದೇನೂ ನಿಯಮವಿಲ್ಲ. ಬೇರೆ ಸಾಧನ
177 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಗಳನ್ನು ಬಳಸಿಯೂ ನಾಮಪದಗಳಿಗೆ ಕ್ರಿಯಾಪದದೊಂದಿಗೆ ಎಂತಹ ಸಂಬಂಧ ವಿದೆಯೆಂಬುದನ್ನು ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಈ ಕೆಲಸವನ್ನು ಒಂದು ನಾಮಪದ ವಾಕ್ಯದಲ್ಲಿ ಕ್ರಿಯಾಪದದ ಮೊದಲು ಬಂದಿದೆಯೇ ಅಥವಾ ಅನಂತರ ಬಂದಿದೆಯೇ ಎಂಬ ವಿಷಯವೂ ನಡೆಸಬಲ್ಲುದು.
(9PÀ) Raju pushed Hari
`ರಾಜು ಹರಿಯನ್ನು ದೂಡಿದ’
(9R) Hari pushed Raju
`ರಾಜುವನ್ನು ಹರಿ ದೂಡಿದ’
(9ಕ-ಖ) ಇಂಗ್ಲಿಷ್ ವಾಕ್ಯಗಳಲ್ಲಿ `ಯಾರು ದೂಡಿದ್ದು' ಎಂಬುದನ್ನು ಠಿush `ದೂಡು' ಕ್ರಿಯಾಪದದ ಮೊದಲು ಬಂದಿರುವ ನಾಮಪದ ಗುರುತಿಸುತ್ತದೆ ಮತ್ತು `ಯಾರನ್ನು ದೂಡಿದ್ದು' ಎಂಬುದನ್ನು ಅದರ ಅನಂತರ ಬಂದಿರುವ ನಾಮಪದ ಗುರುತಿಸುತ್ತದೆ. (9ಕ) ವಾಕ್ಯದಲ್ಲಿ ಖಚಿರಿu ನಾಮಪದ ಕ್ರಿಯಾಪದದ ಮೊದಲು ಬಂದಿದೆಯಾದ ಕಾರಣ, ದೂಡಿದವನು ರಾಜು; ಇದಕ್ಕೆ ಬದಲು, (9ಖ) ವಾಕ್ಯದಲ್ಲಿ ಊಚಿಡಿi ನಾಮಪದ ಮೊದಲು ಬಂದಿದೆಯಾದ ಕಾರಣ, ದೂಡಿದವನು ಹರಿ.
ಆದರೆ ಈ ಇಂಗ್ಲಿಷ್ ವಾಕ್ಯಗಳ ಕೆಳಗೆ ಕೊಟ್ಟಿರುವ ಎರಡು ಕನ್ನಡ ವಾಕ್ಯಗಳಲ್ಲೂ `ಯಾರು ದೂಡಿದ್ದು' ಎಂಬುದನ್ನು ವಿಭಕ್ತಿ ಪ್ರತ್ಯಯವಿಲ್ಲದ ನಾಮಪದ ಸೂಚಿಸುತ್ತದೆ ಮತ್ತು `ಯಾರನ್ನು ದೂಡಿದ್ದು' ಎಂಬುದನ್ನು ದ್ವಿತೀಯಾ ವಿಭಕ್ತಿಯಲ್ಲಿರುವ ನಾಮಪದ ಸೂಚಿಸುತ್ತದೆ. ಇಂಗ್ಲಿಷ್ನ ಹಾಗೆ ಅವು ಯಾವ ಜಾಗದಲ್ಲಿ ಬಂದಿವೆ ಎಂಬುದಕ್ಕೆ ಈ ಅಥ್ರವನ್ನು ಕೊಡುವ ಶಕ್ತಿ ಕನ್ನಡದಲ್ಲಿಲ್ಲ.
ಇದೇ ಕೆಲಸವನ್ನು ನಡೆಸಲು ಮುಂಡಾರಿ ಭಾಷೆಯಲ್ಲಿ ಬೇರೊಂದು ವ್ಯವಸ್ಥೆ ಬಳಕೆಯಲ್ಲಿದೆ. ಈ ಭಾಷೆಯ ಕ್ರಿಯಾಪದಗಳಲ್ಲೇನೇ ಅವು ಸೂಚಿಸುವ ಘಟನೆ ಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಲು ಕೆಲವು ಆಖ್ಯಾತ ಪ್ರತ್ಯಯ ಗಳು ಬಳಕೆಯಾಗುತ್ತವೆ. ಈ ಪ್ರತ್ಯಯಗಳ ಜಾಗವೇ ಅವಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸುತ್ತದೆ.
(10) ದಲ್-ಕೆದ್-ಕೊ-ಅ-ಎ
ಹೊಡೆ-ಭೂತಕಾಲ-ಅವರು-ಕ್ರಿಯಾಪದ-ಅವನು `ಅವನು ಅವರಿಗೆ ಹೊಡೆದ’
178 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು
(10)ನೇ ವಾಕ್ಯದಲ್ಲಿ ಒಂದು ಕ್ರಿಯಾಪದ ಮಾತ್ರ ಬಂದಿದೆಯಾದರೂ ಅದಕ್ಕೆ ಒಂದು ಇಡೀ ವಾಕ್ಯದ ಅಥ್ರವಿದೆ. ಅದರಲ್ಲಿ ಬಂದಿರುವ ದಲ್ `ಹೊಡೆ' ಎಂಬುದು ಘಟನೆಯನ್ನು ಸೂಚಿಸುವುದಾದರೆ, ಅದರ ಅನಂತರ ಬಂದಿರುವ ಕೆದ್ ಪ್ರತ್ಯಯ ಭೂತಕಾಲವನ್ನೂ, ಕೊ `ಅವರು' ಪ್ರತ್ಯಯ ಹೊಡೆದುದು ಯಾರಿಗೆ ಎಂಬುದನ್ನೂ, ಎ `ಅವನು' ಪ್ರತ್ಯಯ ಹೊಡೆದುದು ಯಾರು ಎಂಬು ದನ್ನೂ ತಿಳಿಸುತ್ತವೆ.
ಕೊ ಮತ್ತು ಎ ಎಂಬ ಈ ಎರಡು ಪ್ರತ್ಯಯಗಳ ಜಾಗವೇ ಅವುಗಳಲ್ಲಿ ಹೊಡೆಯುವ ವ್ಯಕ್ತಿಯನ್ನು ಸೂಚಿಸುವ ಪ್ರತ್ಯಯ ಯಾವುದು ಮತ್ತು ಹೊಡೆತ ತಿಂದ ವ್ಯಕ್ತಿಯನ್ನು ಸೂಚಿಸುವ ಪ್ರತ್ಯಯ ಯಾವುದು ಎಂಬ ವಿಷಯವನ್ನು ಸ್ಪಷ್ಟಪಡಿಸುತ್ತದೆ.
ಕನ್ನಡದಲ್ಲಿ ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ನಾಲ್ಕು ವಿಭಕ್ತಿ ಪ್ರತ್ಯಯಗಳು ಮಾತ್ರ ಬಳಕೆಯಲ್ಲಿವೆ. ಇವುಗಳನ್ನು ದ್ವಿತೀಯಾ, ತೃತೀಯಾ, ಚತುಥ್ರೀ ಮತ್ತು ಸಪ್ತಮಿಗಳೆಂದು ಕರೆಯುವುದು ರೂಢಿ.
ಸಂಸ್ಕೃತದ ಈ ಹೆಸರುಗಳು ಕನ್ನಡದ ಮಟ್ಟಿಗೆ ಅಷ್ಟೊಂದು ತೃಪ್ತಿಕರ ವಾಗಿಲ್ಲವೆಂಬುದನ್ನು ಮೇಲೆ (8.2)ರಲ್ಲಿ ನೋಡಿರುವೆವು. ಅಥ್ರ ಮತ್ತು ಬಳಕೆ ಗಳ ಮಟ್ಟಿಗೂ ಸಂಸ್ಕೃತದಲ್ಲಿ ಈ ಹೆಸರಿನಿಂದ ಗುರುತಿಸಲಾಗುವ ವಿಭಕ್ತಿಗಳಿಗೂ ಕನ್ನಡದ ವಿಭಕ್ತಿಗಳಿಗೂ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ.
ಆದರೆ, ಈ ಪುಸ್ತಕದ ಓದುಗರಿಗೆ ಸಂಸ್ಕೃತ ಹೆಸರುಗಳೇ ರೂಢಿಯಾಗಿವೆ ಯಾದ ಕಾರಣ, ಅನವಶ್ಯಕವಾಗಿ ಅವರಲ್ಲಿ ಗೊಂದಲವುಂಟಾಗದ ಹಾಗೆ ಆ ಹೆಸರುಗಳನ್ನೇ ಇಲ್ಲೂ ಬಳಸಲಾಗಿದೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಅಥ್ರದಲ್ಲಿ ಮತ್ತು ಬಳಕೆಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಪರಿಶೀಲಿಸುವುದರ ಮೂಲಕ ಅವುಗಳ ಸಂಖ್ಯೆಯಲ್ಲೂ ವ್ಯತ್ಯಾಸ ಹೇಗೆ ಕಾಣಿಸಿ ಕೊಳ್ಳುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
8.5.1 ಪ್ರಥಮಾ ವಿಭಕ್ತಿ ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯೆಂಬುದಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ವಿಷಯಗಳನ್ನು ಕಾರಣಗಳೆಂದು ಪರಿಗಣಿಸಬಹುದು.
(1) ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ, ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ.
179 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (2) ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರವಲ್ಲದೆ, ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರ, ಎಂದರೆ ನಾಮಪದಕ್ಕೂ ಕ್ರಿಯಾ ಪದಕ್ಕೂ ನಡುವಿರುವ ಸಂಬಂಧವನ್ನು ಮಾತ್ರ ಸೂಚಿಸುತ್ತವೆ.
ಈ ಎರಡು ಕಾರಣಗಳಿಗಾಗಿ ಸಂಸ್ಕೃತಕ್ಕೆ ಪ್ರಥಮಾ ಎಂಬ ವಿಭಕ್ತಿ ಪ್ರತ್ಯಯ ಬೇಕಾಗುತ್ತದೆ, ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ. ಪ್ರಥಮಾ ವಿಭಕ್ತಿಯನ್ನು ಬಳಸಬೇಕಾಗಿರುವ ಸಂದಭ್ರಗಳಲ್ಲಿ ಕನ್ನಡದ ನಾಮಪದಗಳು ಯಾವ ಪ್ರತ್ಯಯ ವನ್ನೂ ಪಡೆಯದೆ ಹಾಗೆ0iÉುೀ ಬಳಕೆಯಾಗುತ್ತವೆ. ಕನ್ನಡದ ವೈಯಾಕರಣಿಗಳು ಸಂಸ್ಕೃತದ ಹಾಗೆ ಕನ್ನಡದಲ್ಲೂ ಪ್ರಥಮಾ ವಿಭಕ್ತಿಯೆಂಬುದಿರಬೇಕು ಎಂಬುದಾಗಿ ಭಾವಿಸಿರುವ ಕಾರಣ ಅದಕ್ಕೆ ಅನುರೂಪ ವಾದ ಒಂದು ಪ್ರತ್ಯಯವನ್ನು ಹುಡುಕಬೇಕಾಗಿದೆ. ಹಳೆಗನ್ನಡದಲ್ಲಿ ಂ (ಸೊನ್ನೆ ಇಲ್ಲವೇ ಅನುಸ್ವಾರ)ವನ್ನು ಮತ್ತು ಹೊಸಗನ್ನಡದಲ್ಲಿ ಉ ಎಂಬುದನ್ನು ಇದಕ್ಕಾಗಿ ಆರಿಸಿಕೊಳ್ಳಲಾಗಿದೆ.
ಆದರೆ ಇವು ಅಕಾರಾಂತ ಪದಗಳೊಂದಿಗೆ ಮಾತ್ರ ಬರುವುವಾದ ಕಾರಣ, ಉಳಿದ ಕಡೆಗಳಲ್ಲಿ ಪ್ರಥಮಾ ವಿಭಕ್ತಿ ಪ್ರತ್ಯಯ ಲೋಪ ಹೊಂದುತ್ತದೆಯೆಂದು ಅವರು ಹೇಳಬೇಕಾಗಿದೆ. ಇದಲ್ಲದೆ, ಹೊಸಗನ್ನಡದಲ್ಲಿ ಅಕಾರಾಂತ ಪದಗಳೂ ಇಂತಹ ಉಕಾರವನ್ನು ಪಡೆಯದೆ ಬರಬಲ್ಲುವಾದ ಕಾರಣ, ಅಲ್ಲೂ ಪ್ರತ್ಯಯ ಲೋಪವನ್ನು ಕಾಣಬೇಕಾಗಿದೆ.
(11ಕ) ಹುಡುಗನು ಮನೆಗೆ ಹೋಗಿದ್ದಾನೆ (11ಖ) ಹುಡುಗ ಮನೆಗೆ ಹೋಗಿದ್ದಾನೆ (12ಕ) ?ತಾಯಿಯು ಅಡುಗೆ ಮಾಡುತ್ತಿದ್ದಾಳೆ (12ಖ) ತಾಯಿ ಅಡುಗೆ ಮಾಡುತ್ತಿದ್ದಾಳೆ
ಕನ್ನಡದಲ್ಲಿ ಸಾಮಾನ್ಯವಾಗಿ ಮೇಲೆ (ಖ) ವಾಕ್ಯಗಳಲ್ಲಿ ಕೊಟ್ಟಿರುವಂತಹ ಪ್ರಯೋಗಗಳೇ ಜಾಸ್ತಿ ಎಂಬುದನ್ನು ಇಲ್ಲಿ ಗಮನಿಸಬಹುದು.
ಶಾಸ್ತ್ರೀಯ ಗ್ರಂಥಗಳಲ್ಲಿ ಬಳಕೆಯಾಗುವ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯ ವಿಲ್ಲದೆ ಬರುವ ನಾಮಪದಗಳ ಮುಂದೆ (ಅವು ಅಕಾರದಲ್ಲಿ ಮಾತ್ರವಲ್ಲದೆ ಇತರ ಸ್ವರಗಳಲ್ಲಿ ಕೊನೆಗೊಂಡಿವೆಯಾದರೂ) ವ್ಯಾಕರಣವು, ಪ್ರತ್ಯಯವು, ಹರಿಯು ಎಂಬುದಾಗಿ ಉಕಾರವನ್ನು ಸೇರಿಸಿ ಹೇಳುವುದು ಸ್ವಲ್ಪ ಜಾಸ್ತಿ.
ಇದಕ್ಕೆ ಕಾರಣವೇನೆಂದರೆ, ಇಂತಹ ಬರವಣಿಗೆಗಳಲ್ಲಿ ಕ್ಲಿಷ್ಟವಾಗಿರುವ ವಾಕ್ಯಗಳನ್ನು ಬಳಸುವುದು ಸ್ವಲ್ಪ ಜಾಸ್ತಿ. ಅಂತಹ ವಾಕ್ಯಗಳಲ್ಲಿ ವಿಭಕ್ತಿ ಪ್ರತ್ಯಯ ವಿಲ್ಲದೆ ಬಂದಿರುವ ನಾಮಪದಗಳನ್ನು ಇತರ ಪದಗಳಿಂದ (ಉದಾಹರಣೆಗಾಗಿ,
180 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಇನ್ನೊಂದು ನಾಮಪದಕಂತೆಯ ಅಂಗವಾಗಿ ಬಂದಿರುವ ಪದಗಳಿಂದ) ಬೇರೆ ಮಾಡಲು ಈ ಉಕಾರ ಪ್ರಯೋಜನಕ್ಕೆ ಬರುತ್ತದೆ.
8.5.2 ದ್ವಿತೀಯಾ ವಿಭಕ್ತಿ ಕನ್ನಡದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವಾದ ಅನ್ನು ಎಂಬುದನ್ನು ಅವಶ್ಯ ವಿದ್ದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ನಾಮಪದವನ್ನು ಪ್ರಕೃತಿರೂಪ ದಲ್ಲೇನೇ ಬಳಸಲು ಸಾದ್ಯವಿದೆ. ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ. ದ್ವಿತೀಯಾ ವಿಭಕ್ತಿ ಬರಬೇಕಾದ ಸಂದಭ್ರಗಳಲ್ಲೆಲ್ಲ ಕಡ್ಡಾಯವಾಗಿಯೂ ಆ ಪ್ರತ್ಯಯವನ್ನು ಬಳಸಲೇಬೇಕು ಎಂಬ ನಿಯಮ ಸಂಸ್ಕೃತದಲ್ಲಿದೆ (8.4 ನೋಡಿ).
ಇದಲ್ಲದೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ದ್ವಿತೀಯಾ ವಿಭಕ್ತಿಯ ಬಳಕೆಯಲ್ಲಿ ಬೇರೆಯೂ ಕೆಲವು ವ್ಯತ್ಯಾಸಗಳಿವೆ. (1) ಒಂದು ಚಲನೆಯ ಗುರಿ ಯಾವುದು ಎಂಬುದನ್ನು ಸೂಚಿಸಲು ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯವಿದೆ. ಆದರೆ, ಕನ್ನಡದಲ್ಲಿ ಇದು ಸಾಧ್ಯವಿಲ್ಲ. ಇಂತಹ ಸಂದಭ್ರಗಳಲ್ಲೆಲ್ಲ ಕನ್ನಡದಲ್ಲಿ ಚತುಥ್ರೀ ವಿಭಕ್ತಿಯನ್ನೇ ಬಳಸಬೇಕಾಗುತ್ತದೆ.
(13) ಸಃ ಗ್ರಾಮಂ ಗಚ್ಛತಿ (13ಕ) `ಅವನು ಹಳ್ಳಿಗೆ ಹೋಗುತ್ತಾನೆ’ (13ಖ) *ಅವನು ಹಳ್ಳಿಯನ್ನು ಹೋಗುತ್ತಾನೆ
(13)ನೇ ಸಂಸ್ಕೃತ ವಾಕ್ಯದಲ್ಲಿ ಹೋಗುವುದು ಎಲ್ಲಿಗೆ (ಹಳ್ಳಿಗೆ) ಗ್ರಾಮಂ ಸೂಚಿಸಬೇಕಾದಲ್ಲಿ ದ್ವಿತೀಯಾ ವಿಭಕ್ತಿಯನ್ನು ಎಂಬುದನ್ನು `ಹಳ್ಳಿಯನ್ನು' ಎಂಬಲ್ಲಿ ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಇದು ಅಸಾಧ್ಯ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (13ಖ) ವಾಕ್ಯ ಸ್ಪಷ್ಟಪಡಿಸುತ್ತದೆ.
(2) ಯಾರೊಡನೆ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿಸುವುದಕ್ಕಾಗಿ ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯ, ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುಥ್ರೀ ವಿಭಕ್ತಿಯನ್ನು ಇಲ್ಲವೇ ಒಡನೆ ಪದವನ್ನು ಬಳಸ ಬೇಕಾಗುತ್ತದಲ್ಲದೆ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯವಿಲ್ಲ.
(14) ಸಃ ಪಿತರಂ ಉವಾಚ (14ಕ) `ಅವನು ತಂದೆಯೊಡನೆ ಮಾತನಾಡಿದ’
181 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(14ಖ) `ಅವನು ತಂದೆಗೆ ಹೇಳಿದ’ (14ಗ) *ಅವನು ತಂದೆಯನ್ನು ಹೇಳಿದ
(14)ನೇ ಸಂಸ್ಕೃತ ವಾಕ್ಯದಲ್ಲಿ ಯಾರೊಡನೆ ಮಾತನಾಡಿದ್ದು ಎಂಬುದನ್ನು ಸೂಚಿಸಲು ಪಿತರಂ `ತಂದೆಯನ್ನು' ಎಂಬುದಾಗಿ ದ್ವಿತೀಯಾ ವಿಭಕ್ತಿಯನ್ನು ಬಳಸಲಾಗಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (14ಗ) ವಾಕ್ಯ ಸ್ಪಷ್ಟಪಡಿಸುತ್ತದೆ.
(3) ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ವಾಕ್ಯದಲ್ಲಿ ಬಂದಿರುವ ಎರಡು ನಾಮಪದಗಳೊಂದಿಗೆ, ಅವು ಬೇರೆ ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದ್ದರೂ, ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯ «®è.
(15) ಸೂದಃ ತಂಡುಲಾನ್ ಓದನಂ ಪಚತಿ (15ಕ) ಅಡುಗೆಯವನು ಅಕ್ಕಿಯನ್ನು ಬೇಯಿಸುತ್ತಾನೆ' (15ಖ) ಅಡುಗೆಯವನು ಅನ್ನವನ್ನು ಬೇಯಿಸುತ್ತಾನೆ’ (15ಗ) *ಅಡುಗೆಯವನು ಅಕ್ಕಿಯನ್ನು ಅನ್ನವನ್ನು ಬೇಯಿಸುತ್ತಾನೆ (16) ಬಾಲಾ ಅಂಧಂ ಗೃಹಂ ನಯತಿ (16ಕ) ಹುಡುಗಿ ಕುರುಡನನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ' (16ಖ) *ಹುಡುಗಿ ಕುರುಡನನ್ನು ಮನೆಯನ್ನು ಕರೆದುಕೊಂಡು ಹೋಗುತ್ತಾಳೆ (17) ಇಂದ್ರಃ ಕಣ್ರಂ ಕವಚಂ ಯಾಚತೇ (17ಕ) ಇಂದ್ರನು ಕಣ್ರನ ಹತ್ತಿರ ಕವಚವನ್ನು ಯಾಚಿಸುತ್ತಾನೆ’ (17ಖ) *ಇಂದ್ರನು ಕಣ್ರನನ್ನು ಕವಚವನ್ನು ಯಾಚಿಸುತ್ತಾನೆ
(15-17) ಸಂಸ್ಕೃತ ವಾಕ್ಯಗಳಲ್ಲಿ ಎರಡು ಬೇರೆ ಬೇರೆ ನಾಮಪದಗಳು ದ್ವಿತೀಯಾ ವಿಭಕ್ತಿಯಲ್ಲಿ ಬಂದಿರುವುದನ್ನು ಕಾಣಬಹುದು. ಆದರೆ ಇವುಗಳ ಕನ್ನಡ ರೂಪದಲ್ಲಿ ದ್ವಿತೀಯಾ ವಿಭಕ್ತಿಯನ್ನು ಅವುಗಳಲ್ಲಿ ಒಂದರೊಡನೆ ಮಾತ್ರ ಬಳಸಲು ಸಾಧ್ಯವಾಗಿದೆಯಲ್ಲದೆ ಎರಡರೊಡನೆಯೂ ಬಳಸಲು ಸಾಧ್ಯವಾಗಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (15ಗ), 16ಖ) ಮತ್ತು (17ಖ) ವಾಕ್ಯಗಳು ಸ್ಪಷ್ಟಪಡಿಸುತ್ತವೆ.
(4) ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಿತವಾದ ಅಥ್ರವನ್ನು ಕೊಡಲು ಅದರ ವೈಯಾಕರಣಿಗಳಿಗೆ ಸಾಧ್ಯವಾಗಿಲ್ಲ. ಇತರ ವಿಭಕ್ತಿ ಪ್ರತ್ಯಯ ಗಳು ಸೂಚಿಸದಿರುವಂತಹ ಅಥ್ರ ದ್ವಿತೀಯೆಯದು ಎಂಬುದಾಗಿ ಅದಕ್ಕೊಂದು ನಿಷೇಧ ರೂಪದ ಅಥ್ರವನ್ನಷ್ಟೇ ಕೊಡಲು ಸಾಧ್ಯವಾಗಿದೆ (ತಾರಾಪೆÇರೆವಾಲಾ
182 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು 1967 ನೋಡಿ). ಮೇಲೆ ಸೂಚಿಸಿದ ಹಾಗೆ ಒಂದೇ ವಾಕ್ಯದಲ್ಲಿ ಎರಡು ಕ್ರಿಯಾ ಸಂಬಂಧಗಳನ್ನು ಅದು ಸೂಚಿಸಬಲ್ಲುದೆಂಬುದೂ ಈ ಸಮಸ್ಯೆಗೆ ಒಂದು ಕಾರಣ ವಿರಬಹುದು.
ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಅದರಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಿತವಾದ ಅಥ್ರವಿದ್ದು, ಅದು ಘಟನೆಯೊಂದರಲ್ಲಿ ಸ್ವೇಚ್ಛೆಯಿಂದ ತೊಡಗದಿರುವ ಮತ್ತು ಇನ್ನೊಬ್ಬ ವ್ಯಕ್ತಿಯ ಕಾಯ್ರದಿಂದಾಗಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಸೂಚಿಸುತ್ತದೆ. ಇದೇ ಅಥ್ರದಲ್ಲಿ ಅದನ್ನು ಮೇಲೆ (8.2)ರಲ್ಲಿ ಆಗುಗ' ಇಲ್ಲವೇ ಬಾಧಿತ’ ಎಂಬುದಾಗಿ ಹೆಸರಿಸಲಾಗಿದೆ.
8.5.3 ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು ಸಂಸ್ಕೃತದಲ್ಲಿ ತೃತೀಯಾ ಮತ್ತು ಪಂಚಮೀ ಎಂಬ ಎರಡು ವಿಭಕ್ತಿ ಪ್ರತ್ಯಯ ಗಳಿದ್ದು, ಕನ್ನಡದಲ್ಲಿ ಇವಕ್ಕನುಗುಣವಾಗಿ ಇಂದ ಎಂಬ ಒಂದೇ ವಿಭಕ್ತಿ ಪ್ರತ್ಯಯ ಬಳಕೆಯಲ್ಲಿದೆ. ಕನ್ನಡದ ಕೆಲವು ವೈಯಾಕರಣಿಗಳು ದೆಸೆಯಿಂದ ಎಂಬುದನ್ನು ಪಂಚಮೀ ವಿಭಕ್ತಿ ಪ್ರತ್ಯಯವೆಂದು ಕರೆದಿದ್ದಾರೇನೋ ನಿಜ. ಆದರೆ ಇದು ಒಂದು ನಾಮಪದವಲ್ಲದೆ ಪ್ರತ್ಯಯವಲ್ಲ.
ºÁUÉ, ಸೇಡಿಯಾಪು ದೆಸೆಯಿಂದ ಎಂಬುದು ಇಂದ ಪ್ರತ್ಯಯವನ್ನು ಅಂಟಿಸಿಕೊಂಡಿರುವ ದಿಶಾ ಎಂಬ ಸಂಸ್ಕೃತ ಪದದ ತದ್ಭವ ರೂಪ ಮಾತ್ರ. ರಾಮನ ದೆಸೆಯಿಂದ ಎಂಬಂತಹ ಬಳಕೆಯಲ್ಲಿ ಒಂದು ಪದಕಂತೆ ಬಂದಿದೆಯಲ್ಲದೆ ರಾಮ ನಾಮಪದದ ವಿಭಕ್ತಿರೂಪ ಬಂದಿಲ್ಲ. ಕನ್ನಡದಲ್ಲಿ ಇಂದ ಪ್ರತ್ಯಯಕ್ಕಿರುವ ಅತಿ ಮುಖ್ಯವಾದ ಬಳಕೆ0iÉುಂದರೆ, ಚಲನೆ ಯಾವ ದಿಕ್ಕಿನಿಂದ ನಡೆಯಿತು ಎಂಬುದಾಗಿ ಚಲನೆಯ ಮೂಲವನ್ನು ಸೂಚಿಸುವುದು.
(1992:164)
ಕೃಷ್ಣಭಟ್ಟರು
ಹೇಳುವ
(18ಕ) ರಾಜು ಮನೆಯಿಂದ ಬಂದ (18ಖ) ಸೀತೆ ಬಾವಿಯಿಂದ ನೀರೆತ್ತಿದಳು (19) ರಾಮು ಹರಿಯಿಂದ ಪುಸ್ತಕವನ್ನು ಕಸಿದುಕೊಂಡ
(18-19)ನೇ ವಾಕ್ಯಗಳಲ್ಲಿ ಕಾಣಿಸುವ ಹಾಗೆ, ಇಂದ ಪ್ರತ್ಯಯಕ್ಕೆ ಕನ್ನಡ ದಲ್ಲಿ ಮುಖ್ಯವಾಗಿ ಅಪಾದಾನಾಥ್ರ (ಇಲ್ಲವೇ ಅಪಕಷ್ರಾಥ್ರ)ವಿದ್ದು, ಇದಕ್ಕೆ ವಿರುದ್ಧವಾದ ಸಂಪ್ರದಾನಾಥ್ರ (ಇಲ್ಲವೇ ಸಹಯೋಗಾಥ್ರ)ವನ್ನು ಕೊಡುವ ಶಕ್ತಿ ಇಗೆ (ಚತುಥ್ರೀ) ಪ್ರತ್ಯಯಕ್ಕಿದೆ.
183 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಯಾವ ದಿಕ್ಕಿನಿಂದ ಇಲ್ಲವೇ ಯಾವ ಜಾಗದಿಂದ ಚಲನೆ ನಡೆಯುತ್ತದೆ ಎಂಬುದನ್ನು ಇಂದ ಪ್ರತ್ಯಯ ಸೂಚಿಸುತ್ತದೆ ಮತ್ತು ಯಾವ ದಿಕ್ಕಿಗೆ ಇಲ್ಲವೇ ಜಾಗಕ್ಕೆ ಚಲನೆ ನಡೆಯುತ್ತದೆ ಎಂಬುದನ್ನು ಇಗೆ ಪ್ರತ್ಯಯ ಸೂಚಿಸುತ್ತದೆ.
ರಾಜು ಮನೆಗೆ ಹೋದ
(20) (21) ಸೀತೆ ಕಟ್ಟೆಗೆ ನೀರು ಸುರಿಯುತ್ತಿದ್ದಾಳೆ (22) ಹುಡುಗರು ಶಾಲೆಯಿಂದ ಮನೆಗೆ ಓಡಿದರು
ಸಹಯೋಗಾಥ್ರವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ (23)ನೇ ವಾಕ್ಯವೂ ಸ್ಪಷ್ಟ ಪಡಿಸುತ್ತದೆ.
(23) ದೇವೋ ದೇವೇಭಿರ್ ಆಗಮತ್ `ದೇವನು ದೇವತೆಗಳೊಂದಿಗೆ ಬಂದ’
ಇದೇ ರೀತಿಯಲ್ಲಿ ಸಮಾನ ಇಲ್ಲವೇ ಸದೃಶ ಎಂಬ ಅಥ್ರದಲ್ಲೂ ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗವಿದೆ. ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುಥ್ರೀ ವಿಭಕ್ತಿಯ ಪ್ರಯೋಗವಿದೆ.
(24) ಅನೇನ ಸದೃಶೋ ಲೋಕೇ ನ ಭೂತೋ ನ ಭವಿಷ್ಯತಿ
`ಇವನಿಗೆ ಸದೃಶನಾದವನು ಜಗತ್ತಿನಲ್ಲಿ ಹುಟ್ಟಿಯೂ ಇಲ್ಲ, ಹುಟ್ಟು ವುದೂ ಇಲ್ಲ’
(24)ನೇ ಸಂಸ್ಕೃತ ವಾಕ್ಯದಲ್ಲಿ ಅನೇನ ಎಂಬುದು ತೃತೀ0iÉುಯಲ್ಲಿ ಬಂದಿದೆ, ಆದರೆ ಕನ್ನಡದಲ್ಲಿ ಅವನಿಗೆ ಎಂಬುದಾಗಿ ಚತುಥ್ರೀ ಪದರೂಪದ ಬಳಕೆಯಾಗಿದೆ. ಅವನಿಂದ ಎಂಬುದನ್ನು ಇಲ್ಲಿ ಬಳಸಲು ಸಾಧ್ಯವಾಗದು.
ಸಂಸ್ಕೃತದಲ್ಲಿ ಸಹಯೋಗವನ್ನು ತೃತೀಯಾ ವಿಭಕ್ತಿ ಸೂಚಿಸುತ್ತದೆ ಮತ್ತು ವಿಯೋಗವನ್ನು ಪಂಚಮೀ ವಿಭಕ್ತಿ ಸೂಚಿಸುತ್ತದೆ. ಆದರೆ ಕನ್ನಡದಲ್ಲಿ ಇದಕ್ಕೆ ವಿರುದ್ಧವಾದ ಪ್ರಯೋಗವಿದ್ದು, ತೃತೀಯಾ ವಿಭಕ್ತಿ ವಿಯೋಗವನ್ನು ಸೂಚಿಸು vÀÛzÉ.
(25) ವೃಕ್ಷಾತ್ ಫಲಂ ಪತತಿ
`ಮರದಿಂದ ಹಣ್ಣು ಬೀಳುತ್ತದೆ’
(26) ಅಹಂ ಅಸ್ಮಾತ್ ವನಾತ್ ಗಂತುಮಿಚ್ಛಾಮಿ
184 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು
`ನನಗೆ ಈ ಕಾಡಿನಿಂದ (ಹೊರಗೆ) ಹೋಗಬೇಕು’
(25)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ವೃಕ್ಷಾತ್ ಪದರೂಪ ಬಂದಿದೆ; ಆದರೆ ಕನ್ನಡದಲ್ಲಿ ತೃತೀ0iÉುಯ ಮರದಿಂದ ಎಂಬುದು ಬಂದಿದೆ. ಇದೇ ರೀತಿಯಲ್ಲಿ (26)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ಅಸ್ಮಾತ್ ವನಾತ್ ಪದಕಂತೆ ಬಂದಿದೆ; ಆದರೆ ಕನ್ನಡದಲ್ಲಿ ತೃತೀ0iÉುಯ ಈ ಕಾಡಿನಿಂದ ಪದಕಂತೆ ಬಂದಿದೆ.
ಕನ್ನಡದಲ್ಲಿ ಈ ರೀತಿ ಇಂದ ಪ್ರತ್ಯಯಕ್ಕೆ ವಿಯೋಗವೇ ಮುಖ್ಯವಾದ ಆಥ್ರವಾದ ಕಾರಣ, ಅದನ್ನು ತೃತೀಯಾ ಎಂದು ಕರೆಯುವ ಬದಲು ಪಂಚಮೀ ಎಂದು ಕರೆಯುವುದೇ ಯೋಗ್ಯ ಎಂಬುದಾಗಿ ಸೇಡಿಯಾಪು ಕೃಷ್ಣಭಟ್ಟರು (1992:178) ವಾದಿಸಿದ್ದಾರೆ.
ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯನ್ನು ಕರಣಾಥ್ರದಲ್ಲೂ ಬಳಸುವ ಕ್ರಮವಿದೆ. ಕನ್ನಡದಲ್ಲೂ ಕರಣವನ್ನು ಸೂಚಿಸುವುದಕ್ಕಾಗಿ ಇಂದ ವಿಭಕ್ತಿಯ ಬಳಕೆ0iÉುೀ ಬರುತ್ತದೆ0iÉುಂದು ಭಾವಿಸಿ ಕನ್ನಡದ ವೈಯಾಕರಣಿಗಳು ಅದನ್ನು ತೃತೀಯಾ ವಿಭಕ್ತಿಯೆಂದು ಕರೆದಿದ್ದಾರೆ.
ಆದರೆ ನಿಜಕ್ಕೂ ಇದು ಸರಿಯಲ್ಲ. ಕೃಷ್ಣಭಟ್ಟರು (1992) ತೋರಿಸಿ ಕೊಟ್ಟಿರುವ ಹಾಗೆ, ಕನ್ನಡದಲ್ಲಿ ಕರಣಾಥ್ರಕ್ಕೆ ಸಪ್ತಮಿಯನ್ನು ಬಳಸುವುದೇ ಜಾಸ್ತಿ (8.5.6 ನೋಡಿ).
8.5.4 ಚತುಥ್ರೀ ವಿಭಕ್ತಿ ಸಂಸ್ಕೃತದಲ್ಲಿ ಚಲನೆಯ ಗುರಿ ಇಲ್ಲವೇ ಉದ್ದೇಶಕ್ಕೆ ಸಂಬಂಧಿಸಿದ ಹಾಗೆ ದ್ವಿತೀಯಾ (8.5.2 ನೋಡಿ), ಚತುಥ್ರೀ ಮತ್ತು ಸಪ್ತಮೀ ಎಂಬ ಈ ಮೂರು ವಿಭಕ್ತಿಗಳನ್ನೂ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ಸಂದಭ್ರ ಗಳಲ್ಲಿ ಚತುಥ್ರಿಯನ್ನು ಮಾತ್ರ ಬಳಸಲು ಸಾಧ್ಯ.
(27ಕ) ರಾಮಃ ಗ್ರಾಮಂ ಗಚ್ಛತಿ
`ರಾಮ ಊರಿಗೆ ಹೋಗುತ್ತಾನೆ’
(27ಖ) ರಾಮಃ ಗ್ರಾಮಾಯ ಗಚ್ಛತಿ
`ರಾಮ ಊರಿಗೆ (ಊರಿನ ಕಡೆಗಾಗಿ) ಹೋಗುತ್ತಾನೆ’
(27ಗ) ರಾಮಃ ಗ್ರಾಮೇ ಗಚ್ಛತಿ
`ರಾಮ ಊರಿಗೆ ಹೋಗುತ್ತಾನೆ (ಹೋಗಿ ಊರನ್ನು ಸೇರುತ್ತಾನೆ)’
185 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಸಂಸ್ಕೃತದ ಗ್ರಾಮ ಪದ (27ಕ) ವಾಕ್ಯದಲ್ಲಿ ದ್ವಿತೀಯೆಯಲ್ಲಿ, (27ಖ) ವಾಕ್ಯದಲ್ಲಿ ಚತುಥ್ರಿಯಲ್ಲಿ ಮತ್ತು (27ಗ) ವಾಕ್ಯದಲ್ಲಿ ಸಪ್ತಮಿಯಲ್ಲಿ ಬಂದಿದೆ. ಆದರೆ ಕನ್ನಡದ ಊರು ಪದ ಮೇಲಿನ ಮೂರು ವಾಕ್ಯಗಳಲ್ಲೂ ಚತುಥ್ರೀ ವಿಭಕ್ತಿಯಲ್ಲೇ ಬಂದಿದೆ. ಸಂಸ್ಕೃತದಲ್ಲಿ ಸಂಪ್ರದಾನ `ಕೊಡುವುದು’ ಎಂಬುದೇ ಚತುಥ್ರೀ ವಿಭಕ್ತಿಯ ಮುಖ್ಯವಾದ ಅಥ್ರ ಎಂಬುದಾಗಿ ವಿದ್ವಾಂಸರು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಈ ವಿಭಕ್ತಿಗೆ ಚಲನೆಯ ಗುರಿ (ಇಲ್ಲವೇ ಕೊನೆ)ಯನ್ನು ಸೂಚಿಸುವುದೇ ಮುಖ್ಯ ವಾದ ಅಥ್ರ. ಅದು ತೃತೀಯಾ ವಿಭಕ್ತಿಯ ವಿರುದ್ಧ ನಿಲ್ಲುತ್ತದೆ ಮಾತ್ರವಲ್ಲ, ತೃತೀಯಾ ವಿಭಕ್ತಿಯೊಂದಿಗೆ ಸೇರಿ ಸಪ್ತಮೀ ವಿಭಕ್ತಿಯ ವಿರುದ್ಧವೂ ನಿಲ್ಲುತ್ತದೆ.
ಕನ್ನಡದಲ್ಲಿ ತೃತೀಯಾ ಮತ್ತು ಚತುಥ್ರೀ ವಿಭಕ್ತಿಗಳ ಬಳಕೆಯಲ್ಲಿ ಚಲನೆಯ ಅಥ್ರ ಬರುತ್ತದೆ, ಸಪ್ತಮಿಯ ಬಳಕೆಯಲ್ಲಿ ಬರುವುದಿಲ್ಲ. ಆದರೆ, ಸಂಸ್ಕೃತದಲ್ಲಿ ಚಲನೆಯ ಅಥ್ರ ಚತುಥ್ರೀ ವಿಭಕ್ತಿಯಲ್ಲಿ ಮಾತ್ರವಲ್ಲದೆ ಸಪ್ತಮೀ ವಿಭಕ್ತಿಯಲ್ಲೂ ಬರಬಲ್ಲುದು (27ಗ ನೋಡಿ).
8.5.5 ಷಷ್ಠೀ ವಿಭಕ್ತಿ ಕನ್ನಡದ ಅ ಪ್ರತ್ಯಯವನ್ನು ಷಷ್ಠೀ ವಿಭಕ್ತಿಯೆಂದು ಕರೆಯುವ ರೂಢಿಯಿದೆ. ಆದರೆ ನಿಜಕ್ಕೂ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯಯವಾಗಿ ಬಳಕೆಯಲ್ಲಿಲ್ಲ. ಈ ವಿಷಯದಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಅ ಪ್ರತ್ಯಯದ ಮೂಲಕ ಕನ್ನಡದಲ್ಲಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆಯಲ್ಲದೆ ಕ್ರಿಯಾಪದದೊಂದಿಗೆ ಸಂಬಂಧಿಸಲು ಸಾಧ್ಯವಾಗದು. ಹಾಗಾಗಿ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯಯ ವಲ್ಲ.
ಆದರೆ ಸಂಸ್ಕೃತದಲ್ಲಿ ಷಷ್ಠೀ ಪ್ರತ್ಯಯ ಒಂದು ವಿಭಕ್ತಿ0iÉುೀ. ಯಾಕೆಂದರೆ, ಆ ಪ್ರತ್ಯಯದ ಮೂಲಕ ನಾಮಪದಗಳನ್ನು ಕ್ರಿಯಾಪದದೊಂದಿಗೂ ನೇರವಾಗಿ ಸಂಬಂಧಿಸಲು ಸಂಸ್ಕೃತದಲ್ಲಿ ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (28-30) ಸಂಸ್ಕೃತ ವಾಕ್ಯಗಳನ್ನು ಪರಿಶೀಲಿಸಬಹುದು.
(28) ನೇಯಂ ಮಮ ಮಹೀ ದುಲ್ರಭಃ
`ನನಗೆ ಈ ಭೂಮಿಯನ್ನು ಗೆಲ್ಲುವುದು ಕಷ್ಟವಲ್ಲ’
(29) ಭೀಮಸ್ಯ ಅನುಕರಿಷ್ಯಾಮಿ (29ಕ) `(ನಾನು) ಭೀಮನನ್ನು ಅನುಕರಿಸುತ್ತೇನೆ’ (29ಖ) *ನಾನು ಭೀಮನ ಅನುಕರಿಸುತ್ತೇನೆ’ (30) ಮಮ ಪ್ರೀತಿಃ ಸಂಜಾತಃ
186 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು
(30ಕ) `ನನಗೆ ಪ್ರೀತಿಯುಂಟಾಯಿತು’ (30ಖ) *ನನ್ನ ಪ್ರೀತಿಯುಂಟಾಯಿತು’
(28-30) ಸಂಸ್ಕೃತ ವಾಕ್ಯಗಳಲ್ಲಿ ನಾಮಪದಗಳ ಷಷ್ಠೀ ರೂಪಗಳನ್ನು (ಮಮ ಮತ್ತು ಭೀಮಸ್ಯ ಎಂಬವುಗಳನ್ನು) ನೇರವಾಗಿ ಕ್ರಿಯಾಪದಗಳೊಂದಿಗೆ ಸಂಬಂಧಿಸಲು ಬಳಸಲಾಗಿದೆ. ಆದರೆ ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ ಈ ರೀತಿ ಷಷ್ಠೀ ರೂಪಗಳನ್ನು ಬಳಸಲು ಸಾಧ್ಯವಾಗಿಲ್ಲ.
(28) ಮತ್ತು (30)ನೇ ವಾಕ್ಯಗಳಲ್ಲಿ ಷಷ್ಠೀ ವಿಭಕ್ತಿಯಲ್ಲಿರುವ ಸಂಸ್ಕೃತದ ಮಮ `ನನ್ನ' ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ಚತುಥ್ರೀ ವಿಭಕ್ತಿಯಲ್ಲಿರುವ ನನಗೆ ರೂಪವೂ (29)ನೇ ವಾಕ್ಯದಲ್ಲಿ ಷಷ್ಠೀ ವಿಭಕ್ತಿಯಲ್ಲಿರುವ ಸಂಸ್ಕೃತದ ಭೀಮಸ್ಯ `ಭೀಮನ' ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯಲ್ಲಿರುವ ಭೀಮನನ್ನು ರೂಪವೂ ಬಂದಿರುವುದನ್ನು ಗಮನಿಸಬಹುದು.
ಈ ಮೂರು ಬಳಕೆಗಳಲ್ಲೂ ಸಂಸ್ಕೃತದಲ್ಲಿ ನಾಮಪದವನ್ನು ಕ್ರಿಯಾಪದ ದೊಂದಿಗೆ ಸಂಬಂಧಿಸುವುದಕ್ಕಾಗಿ ಅದರ ಷಷ್ಠೀ ರೂಪವನ್ನು ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಹೀಗೆ ಸಂಬಂಧಿಸಲು ಷಷ್ಠೀರೂಪವನ್ನು (ನನ್ನ ಇಲ್ಲವೇ ಭೀಮನ ಎಂಬವುಗಳನ್ನು) ಬಳಸುವ ಬದಲು ಚತುಥ್ರಿ ಇಲ್ಲವೇ ದ್ವಿತೀಯಾ ರೂಪವನ್ನು ಬಳಸಬೇಕಾಗಿದೆ. ಕನ್ನಡದಲ್ಲಿ ಈ ಕೆಲಸಕ್ಕಾಗಿ ಷಷ್ಠೀ ರೂಪವನ್ನು ಬಳಸಲು ಸಾಧ್ಯವಾಗದು.
ಹಾಗಾಗಿ, ಕನ್ನಡದಲ್ಲಿ ಅ ಪ್ರತ್ಯಯವನ್ನು ಬಳಸಿ ತಯಾರಿಸಿದ ಷಷ್ಠೀ ರೂಪವನ್ನು ಒಂದು `ವಿಭಕ್ತಿ' ರೂಪವೆಂದು ಪರಿಗಣಿಸುವುದು ಸರಿಯಲ್ಲ. ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸುವುದಕ್ಕಾಗಿ ಆ ನಾಮಪದವನ್ನು ಅದರ `ವಿಶೇಷಣ' ರೂಪಕ್ಕೆ ಬದಲಾಯಿಸುವುದೇ ಕನ್ನಡದಲ್ಲಿ ಈ ಷಷ್ಠೀ ಪ್ರತ್ಯಯಕ್ಕಿರುವ ಕೆಲಸ.
ಸಂಸ್ಕೃತದಲ್ಲಿ ವಿಶೇಷಣವೆಂಬುದಿಲ್ಲವಾದ ಕಾರಣ ಅದಕ್ಕೆ ನಾಮಪದವನ್ನು ವಿಶೇಷಣರೂಪಕ್ಕೆ ಪರಿವತ್ರಿಸುವ ಪ್ರತ್ಯಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಂಸ್ಕೃತದಲ್ಲಿ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿ ಬಳಸುವುದು ಕ್ರಮ (3.2.2 ನೋಡಿ).
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ (31)ನೇ ವಾಕ್ಯದಲ್ಲಿ ಕಾಣಬಹುದು.
(31) ಮೃತ್ತಿಕಂ ಘಟಂ ಆನಯ `ಮಣ್ಣಿನ ಕೊಡವನ್ನು ತಾ’
187 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(31)ನೇ ಸಂಸ್ಕೃತ ವಾಕ್ಯದಲ್ಲಿ ಮೃತ್ತಿಕ ಮತ್ತು ಘಟ ಎಂಬ ಎರಡು ನಾಮಪದಗಳು ಒಂದೇ ವಿಭಕ್ತಿಯಲ್ಲಿ (ದ್ವಿತೀಯೆಯಲ್ಲಿ) ಬಂದಿದ್ದು ಅವು ಒಂದರೊಡನೊಂದು ಸಂಬಂಧಿಸಿವೆ. ಆದರೆ ಕನ್ನಡದಲ್ಲಿ ಮೊದಲನೆಯದು ಷಷ್ಠಿಯಲ್ಲಿ ಬಂದಿದ್ದು, ಆ ಪ್ರತ್ಯಯದ ಮೂಲಕ ಅದು ಎರಡನೆಯದರೊಂದಿಗೆ ಸಂಬಂಧಿಸಿದೆ.
ನಾಮಪದಗಳೆರಡನ್ನು ಸಂಸ್ಕೃತ ಭಾಷೆಯಲ್ಲೂ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಿದೆ. ಆದರೆ, ಅವಯವಗಳು, ಸ್ವಾಮ್ಯ, ನಂಟು, ಮೊದಲಾದ ಕೆಲವು ವಿಶಿಷ್ಟವಾದ ಸಂಬಂಧಗಳನ್ನು ಮಾತ್ರ ಈ ರೀತಿ ಷಷ್ಠಿಯ ಮೂಲಕ ಸಂಬಂಧಿಸಲು ಸಾಧ್ಯ.
(32) ಮಮ ಪುಸ್ತಕಂ ಇಹ ಅಸ್ತಿ
`ನನ್ನ ಪುಸ್ತಕ ಇಲ್ಲಿ ಇದೆ’
(33) ಪಶೂನಾಂ ರಾಜಾ ಸಿಂಹಃ `ಪಶುಗಳ ರಾಜ ಸಿಂಹ’
(34) ಸಃ ಮಮ ಪಿತೃಃ ಭ್ರಾತಾ
`ಅವನು ನನ್ನ ತಂದೆಯ ಅಣ್ಣ’
ಇದಕ್ಕೆ ಬದಲು, ಎರಡು ನಾಮಪದಗಳ ನಡುವೆ ಎಂತಹ ಸಂಬಂಧ ಗಳನ್ನೆಲ್ಲ ಕಲ್ಪಿಸಲು ಸಾಧ್ಯವೋ ಅವೆಲ್ಲವನ್ನೂ ಕನ್ನಡದಲ್ಲಿ ಅ ಪ್ರತ್ಯಯದ ಮೂಲಕ ಸಂಬಂಧಿಸಬಹುದು. ಇದಲ್ಲದೆ ಕೆಲವು ಗುಣಪದಗಳನ್ನೂ ಕನ್ನಡದಲ್ಲಿ ಈ ಪ್ರತ್ಯಯದ ಮೂಲಕ ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆ (ದಪ್ಪದ ಹಲಿಗೆ, ಎತ್ತರದ ಗೋಡೆ, ಕೋಪದ ಹುಡುಗಿ, ಎಳೆಯ ಮಿಡಿ).
ಕನ್ನಡದ ಅ ಪ್ರತ್ಯಯಕ್ಕೂ ಕನ್ನಡದ್ದೇ ಆದ ಅನ್ನು, ಇಂದ, ಗೆ ಮತ್ತು ಅಲ್ಲಿ `ವಿಭಕ್ತಿ' ಪ್ರತ್ಯಯಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವನ್ನೆಲ್ಲ ಪರಿಶೀಲಿಸಿದಾಗ ನಿಜಕ್ಕೂ ಕನ್ನಡದಲ್ಲಿ ಅ ಪ್ರತ್ಯಯ ಯಾಕೆ ಒಂದು ವಿಭಕ್ತಿ ಪ್ರತ್ಯಯವಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ. (1) ಕನ್ನಡದ ಅ ಪ್ರತ್ಯಯ ಗುಣಪದಗಳನ್ನು ಮತ್ತು ಕ್ರಿಯಾಪದಗಳ ಕೃದಂತ ರೂಪಗಳನ್ನು ಹೋಲುತ್ತದೆ. ಈ ಮೂರೂ ಕನ್ನಡದಲ್ಲಿ ನಾಮಪದಗಳ ವಿಶೇಷಣಗಳಾಗಿ ಬರಬಲ್ಲ ಪದ(ರೂಪ)ಗಳೆಂಬುದನ್ನು ಇಲ್ಲಿ ಗಮನಿಸಬಹುದು.
ಗುಣಪದ
ದೊಡ್ಡ ಮನೆ
ಕೃದಂತರೂಪ ಅ ಪ್ರತ್ಯಯ ಮುರಿದ ಮನೆ ಅರಸನ ಮನೆ
188 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು
ಕಪ್ಪು ಕಲ್ಲು ಉದ್ದ ಹಗ್ಗ ಹುಚ್ಚು ನಾಯಿ ಹಸಿದ ನಾಯಿ
ಬಿದ್ದ ಕಲ್ಲು ಕಟ್ಟಿದ ಹಗ್ಗ
ಗುಡ್ಡದ ಕಲ್ಲು ಹುಲ್ಲಿನ ಹಗ್ಗ ನಮ್ಮ ನಾಯಿ
(2) `ಮತ್ತು' ಎಂಬ ಅಥ್ರವನ್ನು ಕೊಡುವ ಊ ಪ್ರತ್ಯಯವನ್ನು ಕನ್ನಡದಲ್ಲಿ ಎಲ್ಲಾ ವಿಭಕ್ತಿರೂಪಗಳೊಂದಿಗೂ ಬಳಸಲು ಸಾಧ್ಯವಿದೆ (ಮನೆಯನ್ನೂ, ಮನೆ ಯಿಂದಲೂ, ಮನೆಗೂ, ಮನೆಯಲ್ಲೂ); ಆದರೆ ಅ ಪ್ರತ್ಯಯವಿರುವ ನಾಮ ಪದಗಳೊಂದಿಗೆ ಅದನ್ನು ಬಳಸಲು ಸಾಧ್ಯವಾಗದು.
ಇದೇ ರೀತಿಯಲ್ಲಿ ಗುಣಪದಗಳೊಂದಿಗಾಗಲಿ ಇಲ್ಲವೇ ಕ್ರಿಯಾಪದಗಳ ಕೃದಂತ ರೂಪದೊಂದಿಗಾಗಲಿ ಈ ಪ್ರತ್ಯಯವನ್ನು ಬಳಸಲು ಸಾಧ್ಯವಾಗದು. ಈ ವಿಷಯದಲ್ಲೂ ಅ ಪ್ರತ್ಯಯವಿರುವ ನಾಮಪದಗಳ ಬಳಕೆ ಗುಣಪದ ಮತ್ತು ಕೃದಂತಗಳ ಹಾಗಿದೆಯಲ್ಲದೆ, ವಿಭಕ್ತಿರೂಪಗಳ ಬಳಕೆಯ ಹಾಗಿಲ್ಲ.
(3) ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಗುಣಪದಗಳು, ಕ್ರಿಯಾಪದಗಳ ಕೃದಂತ ರೂಪಗಳು ಮತ್ತು ನಾಮಪದಗಳ ಷಷ್ಠೀ ರೂಪ ಇವು ಮೂರೂ ಕನ್ನಡದಲ್ಲಿ ಪದಕಂತೆಗಳನ್ನು ತಯಾರಿಸು ವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತವೆ. ಅವು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಅನ್ನು, ಇಂದ, ಗೆ ಮತ್ತು ಅಲ್ಲಿ ಪ್ರತ್ಯಯಗಳು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆ ಯಾಗುತ್ತವೆ.
ಪದಕಂತೆಗಳ ತಯಾರಿಕೆ0iÉುಂಬುದು ವಾಕ್ಯಗಳ ತಯಾರಿಕೆಗಿಂತ ಕೆಳಗಿನ ಸ್ತರ ದಲ್ಲಿ ಬರುವ ವ್ಯಾಕರಣ ಕಾಯ್ರ. ಕನ್ನಡದ ಷಷ್ಠೀ ಪ್ರತ್ಯಯ ಈ ಕೆಳಗಿನ ಸ್ತರದಲ್ಲಿ ಮಾತ್ರವೇ ಬರಬಲ್ಲುದು.
ಇದಕ್ಕೆ ಬದಲು, ಅನ್ನು, ಇಂದ ಮೊದಲಾದ ವಿಭಕ್ತಿ ಪ್ರತ್ಯಯಗಳು ಅದಕ್ಕಿಂತ ಮೇಲಿರುವ ವಾಕ್ಯರಚನೆಯ ಸ್ತರದಲ್ಲಿ ಬಳಕೆಯಾಗುತ್ತವೆ. ಹಾಗಾಗಿ, ಕನ್ನಡದ ಷಷ್ಠೀ ಪ್ರತ್ಯಯವನ್ನು ಇತರ `ವಿಭಕ್ತಿ' ಪ್ರತ್ಯಯಗಳೊಂದಿಗೆ ಒಂದೇ ಗುಂಪಿನಲ್ಲಿ ಇರಿಸಿ ಹೇಳುವುದು ಸರಿಯಲ್ಲ.
8.5.6 ಸಪ್ತಮೀ ವಿಭಕ್ತಿ ಸಪ್ತಮೀ ವಿಭಕ್ತಿ ಪ್ರತ್ಯಯ ಸಂಸ್ಕೃತ ಮತ್ತು ಕನ್ನಡಗಳೆರಡರಲ್ಲೂ ಬಳಕೆ ಯಾಗುತ್ತದೆ. ಆದರೆ ಅದರ ಬಳಕೆಯಲ್ಲಿ ಈ ಎರಡು ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ.
(1) ಮೇಲೆ (8.5.4ರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಸಪ್ತಮಿಯ ಮೂಲಕ ಒಂದು ಚಲನೆಯ ಕೊನೆ ಯಾವುದು (ಯಾವ ಜಾಗದಲ್ಲಿ ಚಲನೆ
189 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಮುಕ್ತಾಯವಾಯಿತು) ಎಂಬುದನ್ನು ಸೂಚಿಸಲು ಸಾಧ್ಯ; ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುಥ್ರಿಯನ್ನು ಬಳಸಬೇಕಾಗುತ್ತದೆ.
(35) ಪುರೇಷು ಪ್ರೇಷಯಾಮಾಸ ದೂತಾನ್ `ದೂತರನ್ನು ನಗರಗಳಿಗೆ ಕಳುಹಿಸಿದ’
(35)ನೇ ಸಂಸ್ಕೃತ ವಾಕ್ಯದಲ್ಲಿ ಸಪ್ತಮಿಯ ಪುರೇಷು `ನಗರಗಳಲ್ಲಿ' ಬಂದಿದೆ; ಆದರೆ ಕನ್ನಡದಲ್ಲಿ ಚತುಥ್ರಿಯ ನಗರಗಳಿಗೆ ಬಂದಿದೆ.
(2) ಕನ್ನಡದಲ್ಲಿ ಸಪ್ತಮಿಯನ್ನು ಬಳಸಬೇಕಿದ್ದಲ್ಲಿ ಅದು ಚಲನೆಯ ಜಾಗ ವಾಗಿರಬೇಕಲ್ಲದೆ ಕೊನೆಯಾಗಿರಬಾರದು. ಸಪ್ತಮಿಗೂ ಚತುಥ್ರಿಗೂ ನಡುವೆ ಕನ್ನಡದಲ್ಲಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
(36ಕ) ರಾಜು ಕಾಡಿಗೆ ಓಡಿದ (36ಖ) ರಾಜು ಕಾಡಿನಲ್ಲಿ ಓಡಿದ
ಓಡುವ ಚಲನೆ ಕಾಡಿನ ದಿಕ್ಕಿಗಾಗಿ ಎಂದರೆ ಕಾಡಿನಲ್ಲಿ ಕೊನೆಗೊಳ್ಳುವಂತೆ ನಡೆದಿದೆಯಾದರೆ, (36ಕ)ದಲ್ಲಿ ಕಾಣಿಸಿದಂತೆ ಕನ್ನಡದಲ್ಲಿ ಚತುಥ್ರಿಯನ್ನು ಬಳಸಬೇಕಾಗುತ್ತದೆ; ಅದು ಕಾಡಿನೊಳಗೇನೇ (ಎಂದರೆ ಕಾಡು ಆ ಚಲನೆಯ ಜಾಗವಾಗಿರುವಂತೆ) ನಡೆದಿದೆಯಾದರೆ (36ಖ)ದಲ್ಲಿ ಕಾಣಿಸಿದಂತೆ ಸಪ್ತಮಿ ಯನ್ನು ಬಳಸಬೇಕಾಗುತ್ತದೆ.
(3) ಕನ್ನಡದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಘಟನೆಯಲ್ಲಿ ಬಳಕೆ ಯಾಗುವ ಕರಣ, ದ್ರವ್ಯ, ಕಾಲ ಮೊದಲಾದ ಬೇರೆ ಕೆಲವು ಸಂಬಂಧಗಳನ್ನು ಸೂಚಿಸುವುದಕ್ಕಾಗಿಯೂ ಅದರಲ್ಲಿ ಸಪ್ತಮಿಯನ್ನು ಬಳಸಲು ಸಾಧ್ಯವಿದೆ.
(37) ರಾಜು ಚಮಚದಲ್ಲಿ ಊಟ ಮಾಡಿದ (38) ಜಾನಕಿ ಒಂದು ಮೂತ್ರಿಯನ್ನು ಮಣ್ಣಿನಲ್ಲಿ ಮಾಡಿದಳು (38) ಆಕೆ ಐದೇ ಮಿನಿಟಿನಲ್ಲಿ ಊಟ ಮುಗಿಸಿದಳು
(4) ಸಂಸ್ಕೃತದಲ್ಲಿ ಸಪ್ತಮೀ ವಿಭಕ್ತಿಯನ್ನು ಎಲ್ಲಾ ರೀತಿಯ ನಾಮಪದ ಗಳೊಂದಿಗೂ `ಜಾಗ' ಎಂಬ ಅಥ್ರದಲ್ಲಿ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಅದನ್ನು ಈ ಅಥ್ರದಲ್ಲಿ ಬಳಸಲು ಸಾಧ್ಯವಿಲ್ಲ.
(39) ಪೌರೇಷು ಪ್ರೇಷಯಾಮಾಸ ದೂತಾನ್
190 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಗಳು ಪೌರರಲ್ಲಿಗೆ ದೂತರನ್ನು ಕಳುಹಿಸಿದ' ತಸ್ಮಿನ್ ಖಡ್ಗೇನ ಪ್ರಹರನ್ ಮುನೌ ಅವನು ಮುನಿಗೆ ಖಡ್ಗದಲ್ಲಿ ಹೊಡೆದ’
(40)
ಸಂಸ್ಕೃತದ (39)ನೇ ವಾಕ್ಯದಲ್ಲಿ ಪೌರೇಷು `ಪೌರರಲ್ಲಿ' ಎಂಬುದಾಗಿ ಮನುಷ್ಯರನ್ನು ಸೂಚಿಸುವ ಪದವೊಂದು ನೇರವಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಆದರೆ, ಕನ್ನಡದಲ್ಲಿ ಈ ರೀತಿ ಸಪ್ತಮೀ ರೂಪವನ್ನು ಮಾತ್ರವೇ ಬಳಸಲು ಸಾಧ್ಯವಾಗದು.
(39)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಪೌರರಲ್ಲಿಗೆ ಎಂಬುದು ಬಂದಿದೆ. ಇದರಲ್ಲಿ ಜಾಗವನ್ನು ಸೂಚಿಸುವುದಕ್ಕಾಗಿ ಅಲ್ಲಿಗೆ ಪದವನ್ನು ಬಳಸ ಲಾಗಿದ್ದು, ಅದರೊಂದಿಗೆ ಪೌರರು ಪದವನ್ನು ಸಂಬಂಧಿಸುವುದಕ್ಕಾಗಿ ಅದರ ವಿಶೇಷಣ ರೂಪವನ್ನು (ಪೌರರ ಎಂಬ ಅ ಪ್ರತ್ಯಯವನ್ನು ಸೇರಿಸಿರುವ ರೂಪ ವನ್ನು) ಬಳಸಲಾಗಿದೆ.
ಇದಕ್ಕೆ ಬದಲು, (40)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಸಪ್ತಮಿಯ ಬದಲು ಚತುಥ್ರಿಯನ್ನು (ಮುನಿಗೆ ಎಂಬುದನ್ನು) ಬಳಸಲಾಗಿದೆ.
ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಬರುವ ಸಪ್ತಮೀ ವಿಭಕ್ತಿಗೆ ನೇರವಾಗಿ ಜಾಗದ ಅಥ್ರವಿಲ್ಲ. ರಾಮನಲ್ಲಿ ಎಂದರೆ ರಾಮನ ಬಳಿಯಲ್ಲಿ ಎಂಬ ಅಥ್ರ ಮಾತ್ರ ಬರುತ್ತದೆ.
ಕನ್ನಡದಲ್ಲಿ ಬಳಕೆಯಾಗುವ ನಾಲ್ಕು ವಿಭಕ್ತಿ ಪ್ರತ್ಯಯಗಳಿಗೆ ಎಂತಹ ಬಳಕೆಗಳೆಲ್ಲ ಇವೆ ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸುವ ಕೆಲಸ ಇನ್ನೂ ನಡೆದಿಲ್ಲ. ಸಂಸ್ಕೃತದ ವಿಭಕ್ತಿಗಳನ್ನು ಮತ್ತು ಅವುಗಳ ಬಳಕೆಗಳನ್ನು ಕನ್ನಡ ದಲ್ಲೂ ಕಾಣುವ ಪ್ರಯತ್ನವಷ್ಟೇ ನಡೆದಿದೆ.
ಸಂಸ್ಕೃತಕ್ಕಿಂತ ಕನ್ನಡ ಈ ವಿಷಯದಲ್ಲಿ ತೀರ ಭಿನ್ನವಾಗಿರಲು ಸಾಧ್ಯ ಎಂಬುದನ್ನು ಗಮನದಲ್ಲಿರಿಸಿಕೊಂಡು ಕನ್ನಡದ ವಿಭಕ್ತಿಗಳನ್ನು ನೇರವಾಗಿ ಪರಿಶೀಲಿಸಿದಲ್ಲಿ ಮಾತ್ರ ಕನ್ನಡ ವಿಭಕ್ತಿಗಳ ನಿಜವಾದ ಸ್ವರೂಪ ಎಂತಹದು ಎಂಬ ವಿಷಯ ಸ್ಪಷ್ಟವಾದೀತು.
8.6 ತಿರುಳು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯಯಗಳ ಸಂಖ್ಯೆ, ಅವುಗಳ ಅಥ್ರ ಮತ್ತು ಅವುಗಳ ಬಳಕೆ - ಇವೆಲ್ಲದರಲ್ಲೂ ಹಲವಾರು ರೀತಿಯ ವ್ಯತ್ಯಾಸಗಳಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುವ ಮೂಲಕ ಕನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹದು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗದು.
191 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇದಲ್ಲದೆ, ಕನ್ನಡದ ವಿಭಕ್ತಿಗಳಿಗೆ ದ್ವಿತೀಯಾ, ತೃತೀಯಾ, ಚತುಥ್ರೀ ಮತ್ತು ಸಪ್ತಮೀ ಎಂಬ ಕನ್ನಡದ ಮಟ್ಟಿಗೆ ಅಥ್ರಹೀನವಾಗಿರುವ ಹೆಸರುಗಳನ್ನು ಕೊಡುವ ಬದಲು, ಕನ್ನಡದಲ್ಲಿ ಅವುಗಳಿಗಿರುವ ಮುಖ್ಯವಾದ ಬಳಕೆಯೆಂತಹದು ಎಂಬುದನ್ನು ಸೂಚಿಸುವ ಆಗುಗ, ಸುರು, ಕೊನೆ ಮತ್ತು ಜಾಗ ಎಂಬ (ಇಲ್ಲವೇ ಅಂತಹವೇ ಬೇರೆ) ಹೆಸರುಗಳನ್ನು ಕೊಟ್ಟಲ್ಲಿ ಆ ಹೆಸರುಗಳನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಭವಾಗಬಲ್ಲುದು.
ಕನ್ನಡದಲ್ಲಿ ಪ್ರಥಮಾ ವಿಭಕ್ತಿಯೆಂಬುದಿಲ್ಲ. ದ್ವಿತೀಯೆಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವ ಅನುಕೂಲತೆ ಕನ್ನಡದಲ್ಲಿದೆ. ತೃತೀಯಾ, ಚತುಥ್ರೀ ಮತ್ತು ಸಪ್ತಮಿಗಳು ಕನ್ನಡದಲ್ಲಿ ಮುಖ್ಯವಾಗಿ ಜಾಗವನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಮೊದಲನೆಯ ಎರಡು ವಿಭಕ್ತಿಗಳು ಚಲನೆಗೆ ಸಂಬಂಧಿಸಿದ ಜಾಗವನ್ನು ಸೂಚಿಸು ತ್ತವೆ ಮತ್ತು ಮೂರನೆಯದು ಬರಿಯ ಜಾಗವನ್ನು ಸೂಚಿಸುತ್ತದೆ.
ತೃತೀಯೆಗಿಂತ ಭಿನ್ನವಾದ ಪಂಚಮಿಯೆಂಬ ವಿಭಕ್ತಿ ಕನ್ನಡದಲ್ಲಿಲ್ಲ. ಸಂಸ್ಕೃತ ವಿಭಕ್ತಿಗಳ ಅಥ್ರಕ್ಕೆ ಹೋಲಿಸಿದೆವಾದರೆ ಕನ್ನಡದ ತೃತೀಯೆಯನ್ನು ಪಂಚಮಿಯೆಂದು ಕರೆಯುವುದೇ ಒಳ್ಳೆಯದು.
ಕನ್ನಡದಲ್ಲಿ ಬಳಕೆಯಾಗುವ ಷಷ್ಠೀ ಪ್ರತ್ಯಯಕ್ಕೆ ವಿಭಕ್ತಿಯಾಗಿ ಬಳಕೆಯಿಲ್ಲ. ಯಾಕೆಂದರೆ, ಅದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸು ತ್ತದೆಯಲ್ಲದೆ ನಾಮಪದ ಮತ್ತು ಕ್ರಿಯಾಪದ ನಡುವಿರುವ ಸಂಬಂಧವನ್ನು ಸೂಚಿಸುವುದಿಲ್ಲ.
192 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
9. ವಿಭಕ್ತಿಪಲ್ಲಟ
9.1 ಮುನ್ನೋಟ ಕನ್ನಡ ವ್ಯಾಕರಣಗಳಲ್ಲಿ ವಿಭಕ್ತಿಪಲ್ಲಟ' ಎಂಬ ವಿಭಾಗವೊಂದಿರುತ್ತದೆ. ಒಂದೇ ಅಥ್ರದಲ್ಲಿ ಎರಡು ಅಥವಾ ಜಾಸ್ತಿ ವಿಭಕ್ತಿಗಳು ಬಳಕೆಯಾಗುವ ಕೆಲವು ಸಂದಭ್ರಗಳನ್ನು ಸಾಮಾನ್ಯವಾಗಿ ಈ ವಿಭಾಗದಲ್ಲಿ ವಿವರಿಸಲಾಗುತ್ತದೆ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಈ ಸಂದಭ್ರಗಳನ್ನು ಪರಿಶೀಲಿಸಿದಾಗ, ಅವು ಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳಿಗೆ ಕನ್ನಡದಲ್ಲಿ ಒಂದೇ ಅಥ್ರವಲ್ಲ, ಬೇರೆ ಬೇರೆ ಅಥ್ರಗಳಿವೆಯೆಂಬ ವಿಷಯ ಸ್ಪಷ್ಟವಾಗುತ್ತದೆ. ಎಂದರೆ, ವೈಯಾ ಕರಣಿಗಳು ತಿಳಿಸುವ ಹಾಗೆ ಅವು ಒಂದೇ ಅಥ್ರದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳಲ್ಲ. ಸಂಸ್ಕೃತ ವ್ಯಾಕರಣಗಳಲ್ಲಿಯೂ ವಿಭಕ್ತಿಪಲ್ಲಟ’ಗಳನ್ನು ವಣ್ರಿಸುವ ಕ್ರಮ ವಿದೆ. ಆದರೆ, ಅವುಗಳಲ್ಲಿ ಕೆಲವೇ ಕೆಲವಕ್ಕೆ ಮಾತ್ರ ಕನ್ನಡದ ಹಾಗೆ ಅಥ್ರಭೇದ ವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಹೆಚ್ಚಿನೆಡೆಗಳಲ್ಲೂ ಅವನ್ನು ಒಂದು ವಿಭಕ್ತಿಯ ಅಥ್ರದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ0iÉುಂಬು ದಾಗಿ ವಣ್ರಿಸಲು ಸಾಧ್ಯವಿದೆ.
ಕನ್ನಡದಲ್ಲಿ ಎಲ್ಲಾ ವಿಭಕ್ತಿ ಪ್ರತ್ಯಯಗಳಿಗೂ ಅಥ್ರದೊಂದಿಗೆ ನೇರವಾದ ಸಂಬಂಧವಿದೆ ಮತ್ತು ಸಂಸ್ಕೃತದಲ್ಲಿ ಇಲ್ಲ ಎಂಬುದೇ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವುಗಳ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸಕ್ಕೆ ಮೂಲ ಕಾರಣ. ಕನ್ನಡದಲ್ಲಿ ಮುಖ್ಯವಾಗಿ ಇಂತಹ ಎರಡು ರೀತಿಯ `ವಿಭಕ್ತಿಪಲ್ಲಟ’ಗಳನ್ನು ಕಾಣಬಹುದು.
(1) ಕ್ರಿಯಾಪದವನ್ನು ಹಾಗೆಯೇ ಉಳಿಸಿ, ಅದರೊಂದಿಗೆ ಬರುವ ನಾಮಪದಗಳನ್ನು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯ ಎಂಬುದು ಒಂದು ರೀತಿಯ ವಿಭಕ್ತಿಪಲ್ಲಟ.
(2) ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದಾಗ ಅದರೊಂದಿಗೆ ಬರುವ ನಾಮಪದಗಳ ವಿಭಕ್ತಿಗಳಲ್ಲೂ ಕೆಲವು
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ
ಬದಲಾವಣೆಗಳನ್ನು ಮಾಡಬೇಕಾಗುವುದೆಂಬುದು ಇನ್ನೊಂದು ರೀತಿಯ ವಿಭಕ್ತಿಪಲ್ಲಟ.
ಈ ಎರಡು ರೀತಿಯ ವಿಭಕ್ತಿಪಲ್ಲಟಗಳಲ್ಲೂ ಕನ್ನಡ ವಾಕ್ಯಗಳಲ್ಲಿ ಅಥ್ರ ಬದಲಾಗದೆ ಉಳಿಯುವುದಿಲ್ಲ. ಸಂಸ್ಕೃತದಲ್ಲೂ ಈ ಎರಡು ರೀತಿಯ ವಿಭಕ್ತಿ ಪಲ್ಲಟಗಳನ್ನು ಕಾಣಬಹುದು. ಆದರೆ ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಈ ವಿಭಕ್ತಿಪಲ್ಲಟವನ್ನು ಕನ್ನಡದ ಹಾಗೆ ಅಥ್ರವ್ಯತ್ಯಾಸದೊಂದಿಗೆ ಹೆಚ್ಚಿನೆಡೆಗಳಲ್ಲೂ ಹೊಂದಿಸಿಕೊಳ್ಳಲು ಸಾಧ್ಯವಾಗದು.
9.2 ಕ್ರಿಯಾಪದದಲ್ಲಿ ಬದಲಾವಣೆಯಾಗದೆ ವಿಭಕ್ತಿಪಲ್ಲಟ ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಿಭಕ್ತಿ ಪ್ರತ್ಯಯಗಳು ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧ ಎಂತಹದು ಎಂಬುದನ್ನು ತಿಳಿಸುತ್ತವೆ; ಎಂದರೆ, ನಾಮಪದಗಳು ಗುರುತಿಸುವಂತಹ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳು ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ಎಂತಹ ಕೆಲಸವನ್ನು ನಡೆಸುತ್ತವೆ ಎಂಬುದನ್ನು ಅವು ಸೂಚಿಸುತ್ತವೆ.
ಈ ವಿಷಯದಲ್ಲಿ ಕನ್ನಡದ ಕ್ರಿಯಾಪದಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. (1) ಕೆಲವು ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಒಂದು ವಿಶಿಷ್ಟವಾದ ರೀತಿಯಲ್ಲಿ ಮಾತ್ರ ಸಂಬಂಧಿಸಲು ಸಾಧ್ಯವಿದೆ. ಆದರೆ (2) ಬೇರೆ ಕೆಲವು ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಸಂಬಂಧಿಸಲು ಸಾಧ್ಯವಿದೆ.
ಎರಡನೆಯ ಗುಂಪಿಗೆ ಸೇರಿರುವ ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಅವು ಸೂಚಿಸಬಲ್ಲ ಸಂಬಂಧಗಳನ್ನನುಸರಿಸಿ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಜೋಡಿಗಳನ್ನು ಪರಿಶೀಲಿಸಬಹುದು.
ರಾಜು ಪುಸ್ತಕಗಳನ್ನು ಕಪಾಟಿನಲ್ಲಿ ತುಂಬಿಸಿದ (1PÀ) (1ಖ) ರಾಜು ಕಪಾಟನ್ನು ಪುಸ್ತಕಗಳಿಂದ ತುಂಬಿಸಿದ (2ಕ) ಹರಿ ಪಾಠವನ್ನು ಮರೆತಿದ್ದಾನೆ (2ಖ) ಹರಿಗೆ ಪಾಠ ಮರೆತಿದೆ (3ಕ) ಜಾನಕಿ ಏಣಿಯಿಂದ ಮರವನ್ನು ಹತ್ತಿದಳು (3ಖ) ಜಾನಕಿ ಏಣಿಯಿಂದ ಮರಕ್ಕೆ ಹತ್ತಿದಳು
(1-3) ವಾಕ್ಯಜೋಡಿಗಳಲ್ಲಿ ಬಂದಿರುವ (ಕ-ಖ) ವಾಕ್ಯಗಳಲ್ಲಿ ಕ್ರಿಯಾ ರೂಪಗಳು ಬದಲಾಗದೆ ಉಳಿದಿವೆಯಾದರೂ ಅವುಗಳೊಂದಿಗೆ ಬಂದಿರುವ
193 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ನಾಮಪದಗಳ ವಿಭಕ್ತಿಗಳು ಬದಲಾಗಿವೆ. ಉದಾಹರಣೆಗಾಗಿ, ಪುಸ್ತಕ ನಾಮ ಪದ (1ಕ)ದಲ್ಲಿ ದ್ವಿತೀಯೆಯಲ್ಲಿ ಬಂದಿದೆ, ಆದರೆ (1ಖ)ದಲ್ಲಿ ತೃತೀಯೆಯಲ್ಲಿ ಬಂದಿದೆ. ಇದಲ್ಲದೆ, (1ಕ)ದಲ್ಲಿ ಸಪ್ತಮಿಯಲ್ಲಿದ್ದ ಕಪಾಟು ನಾಮಪದ (1ಖ) ದಲ್ಲಿ ದ್ವಿತೀ0iÉುಯಲ್ಲಿ ಬಂದಿದೆ.
ಉಳಿದ (ಕ-ಖ) ವಾಕ್ಯಗಳಲ್ಲೂ ಕ್ರಿಯಾಪದ ಬದಲಾಗದೆ ಉಳಿದಿದೆ; ಆದರೆ ಅದರೊಂದಿಗೆ ಬಂದಿರುವ ಒಂದು ಅಥವಾ ಜಾಸ್ತಿ ನಾಮಪದಗಳು ಅವುಗಳ ವಿಭಕ್ತಿ ಪ್ರತ್ಯಯದಲ್ಲಿ ಬದಲಾಗಿವೆ.
ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಕನ್ನಡದಲ್ಲಿ ಇಂತಹ ವಿಭಕ್ತಿಪಲ್ಲಟಗಳು' ಅಥ್ರವಿಲ್ಲದ ಬದಲಾವಣೆಗಳಲ್ಲ. ಅವುಗಳಲ್ಲಿ ಮುಖ್ಯವಾಗಿ ಸಮಗ್ರತೆ’, ಸ್ವೇಚ್ಛೆ' ಮತ್ತು ಸಾನ್ನಿಧ್ಯ’ ಎಂಬುದಾಗಿ ಮೂರು ರೀತಿಯ ಅಥ್ರವ್ಯತ್ಯಾಸಗಳನ್ನು ಕಾಣಲು ಸಾಧ್ಯ (ಜಾಸ್ತಿ ವಿವರಗಳಿಗೆ ಭಟ್ 1978, 2004 ನೋಡಿ).
9.2.1 ಸಮಗ್ರತೆ ಕನ್ನಡದ ಕ್ರಿಯಾಪದಗಳನ್ನು ಅವು ಸೂಚಿಸುವ ಘಟನೆ ಒಂದು ವಸ್ತುವನ್ನು ಸಮಗ್ರವಾಗಿ ಬಾಧಿಸುವುದೇ ಅಥವಾ ಅಸಮಗ್ರವಾಗಿ ಬಾಧಿಸುವುದೇ ಎಂಬ ವಿಷಯದ ಮೇಲೆ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
ಈಜು, ದಾಟು, ತುಂಬು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆ ಒಂದು ವಸ್ತುವನ್ನು ಸಮಗ್ರವಾಗಿ ಬಾಧಿಸುತ್ತದೆ; ಆದರೆ ಮುಟ್ಟು, ಕತ್ತರಿಸು, ಹರಿ, ನೋಡು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆ ಒಂದು ವಸ್ತುವನ್ನು ಅಸಮಗ್ರವಾಗಿ ಬಾಧಿಸುತ್ತದೆ.
(4) (5)
ಹರಿ ಮೇಜನ್ನು ಮುಟ್ಟಿದ ಹರಿ ನದಿಯನ್ನು ಈಜಿದ
ಹರಿ ಮೇಜಿನ ತುದಿಯನ್ನು ಮಾತ್ರವೇ ಮುಟ್ಟಿರುವನಾದರೂ (4)ನೇ ವಾಕ್ಯವನ್ನು ಬಳಸಲು ಸಾಧ್ಯವಿದೆ; ಆದರೆ (5)ನೇ ವಾಕ್ಯವನ್ನು ಬಳಸಬೇಕಿದ್ದಲ್ಲಿ ಅವನು ನದಿಯನ್ನು ಸಮಗ್ರವಾಗಿ, ಎಂದರೆ ಒಂದು ದಡದಿಂದ ಇನ್ನೊಂದು ದಡದವರೆಗೆ ಈಜಿ ದಾಟಿರಬೇಕಾಗುತ್ತದೆ.
ಸಮಗ್ರವಾಗಿ ಬಾಧಿಸುವ ಕ್ರಿಯಾಪದಗಳಲ್ಲಿ ಕೆಲವಕ್ಕೆ ಸಮಗ್ರ ಮತ್ತು ಅಸಮಗ್ರ ಎಂಬ ಈ ಎರಡು ರೀತಿಯ ಅಥ್ರಗಳೂ ಬರಲು ಸಾಧ್ಯವಿದ್ದು, ಇದು ಅವುಗಳೊಂದಿಗೆ ಬರುವ ನಾಮಪದದ ವಿಭಕ್ತಿಯನ್ನವಲಂಬಿಸಿದೆ.
194 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ ಉದಾಹರಣೆಗಾಗಿ, ಇಂತಹ ಕೆಲವು ಕ್ರಿಯಾಪದಗಳು ದ್ವಿತೀಯಾ ವಿಭಕ್ತಿ ಯಲ್ಲಿರುವ ನಾಮಪದದೊಂದಿಗೆ ಬಂದಾಗ ಸಮಗ್ರಾಥ್ರವನ್ನು ಕೊಡುತ್ತವೆ ಮತ್ತು ನಾಮಪದದೊಂದಿಗೆ ಬಂದಾಗ ಚತುಥ್ರೀ ವಿಭಕ್ತಿಯಲ್ಲಿರುವ ಅಸಮಗ್ರಾಥ್ರವನ್ನು ಕೊಡುತ್ತವೆ (6ಕ-ಖ ನೋಡಿ). ಹಾಗಾಗಿ, ಅಂತಹ ಎರಡು ಬಳಕೆಗಳನ್ನು ದ್ವಿತೀಯಾ-ಚತುಥ್ರೀ ವಿಭಕ್ತಿ ಪಲ್ಲಟಕ್ಕೆ ಉದಾಹರಣೆಯಾಗಿ ಕೊಡಲು ಸಾಧ್ಯವಿದೆಯಾದರೂ ಅಲ್ಲಿ ದ್ವಿತೀಯಾ ಮತ್ತು ಚತುಥ್ರೀ ವಿಭಕ್ತಿಗಳು ಒಂದೇ ಅಥ್ರದಲ್ಲಿ ಬಂದಿವೆ ಎಂದು ಹೇಳುವುದು ಸರಿಯಲ್ಲ. ಯಾಕೆಂದರೆ ಆ ಎರಡು ವಿಭಕ್ತಿಗಳು ಬೇರೆ ಬೇರೆ ಅಥ್ರಗಳನ್ನು ಕೊಡುವುದಕ್ಕಾಗಿ ಬಳಕೆಯಾಗುತ್ತವೆ.
(6ಕ) ಬೆಕ್ಕು ಮರವನ್ನು ಹತ್ತಿತು (6ಖ) ಬೆಕ್ಕು ಮರಕ್ಕೆ ಹತ್ತಿತು
ಬೆಕ್ಕು ಮರಕ್ಕೆ ಬುಡದಿಂದಲೇನೇ ಹತ್ತಿದೆಯಾದರೆ (6ಕ)ವನ್ನು ಮತ್ತು ಮಾಡಿನಿಂದ ಮರಕ್ಕೆ ಹತ್ತಿದೆಯಾದರೆ (6ಖ)ವನ್ನೂ ಬಳಸಲು ಸಾಧ್ಯವಿದೆ. ಮರದ ಮಟ್ಟಿಗೆ ಮೊದಲನೆಯದು ಸಮಗ್ರಾಥ್ರವನ್ನು ಕೊಡುವುದಾದರೆ ಎರಡನೆಯದು ಅಸಮಗ್ರಾಥ್ರವನ್ನು ಕೊಡುತ್ತದೆ. ಈ ಅಥ್ರ ವ್ಯತ್ಯಾಸವನ್ನು (7ಕ-ಗ) ವಾಕ್ಯಗಳಲ್ಲೂ ಕಾಣಬಹುದು.
(7ಕ) ಜಾನಕಿ ಏಣಿಯಿಂದ ಮರವನ್ನು ಹತ್ತಿದಳು (7ಖ) ಜಾನಕಿ ಏಣಿಯಿಂದ ಮರಕ್ಕೆ ಹತ್ತಿದಳು (7ಗ) ಜಾನಕಿ ಮಾಡಿನಿಂದ ಮರಕ್ಕೆ ಹತ್ತಿದಳು
(7ಕ)ದಿಂದ ಜಾನಕಿ ಏಣಿಯನ್ನು ಬಳಸಿ (ನೆಲದಿಂದ) ಮರವನ್ನೇರಿದಳೆಂಬ ಅಥ್ರ ಸಿಗುವುದಾದರೆ, (7ಖ)ದಿಂದ ಆಕೆ, ಏಣಿಯ ಮೇಲೆ ನಿಂತಿದ್ದವಳು, ಅಲ್ಲಿಂದ ಮರಕ್ಕೆ ಹತ್ತಿದಳೆಂಬ ಅಥ್ರ ಸಿಗುತ್ತದೆ. ಮರದ ಬುಡದಿಂದಲೇ ಹತ್ತಿದಳೆಂಬ ಅಥ್ರ (7ಖ) ವಾಕ್ಯಕ್ಕೆ ಬರಲಾರದು. ಅಂತಹ ಅಥ್ರ (7ಗ) ವಾಕ್ಯಕ್ಕೂ, ಅದರಲ್ಲಿ ಮರ ನಾಮಪದ ಚತುಥ್ರಿಯಲ್ಲಿ ಬಂದಿರುವ ಕಾರಣ, ಬರಲಾರದು.
ಕನ್ನಡದಲ್ಲಿ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟವೂ ಇದೇ ರೀತಿಯಲ್ಲಿ ಸಮಗ್ರ ಮತ್ತು ಅಸಮಗ್ರಾಥ್ರಗಳನ್ನು ಕೊಡಬಲ್ಲುದು.
(8ಕ) ಆತ ಕಾವೇರಿ ನದಿಯನ್ನು ಈಜಿದ (8ಖ) ಆತ ಕಾವೇರಿ ನದಿಯಲ್ಲಿ ಈಜಿದ
195 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (9ಕ) ಅವನು ಒಂದು ಪುಸ್ತಕ(ವನ್ನು) ಬರೆದಿದ್ದಾನೆ (9ಖ) ಅವನು ಒಂದು ಪುಸ್ತಕದಲ್ಲಿ (ಒಂದು ಕತೆ) ಬರೆದಿದ್ದಾನೆ
ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿದನೆಂಬ ಅಥ್ರ ನದಿ ಪದ ದ್ವಿತೀಯೆಯಲ್ಲಿರುವ (8ಕ) ವಾಕ್ಯಕ್ಕಿದೆ ಮತ್ತು ನದಿಯಲ್ಲೇ ಎಲ್ಲೋ ಒಂದು ಕಡೆ ಈಜಿದನೆಂಬ ಅಥ್ರ ನದಿ ಪದ ಸಪ್ತಮಿಯಲ್ಲಿರುವ (8ಖ) ವಾಕ್ಯಕ್ಕಿದೆ ಎಂಬುದನ್ನು ಗಮನಿಸಬಹುದು.
ಇದೇ ರೀತಿಯಲ್ಲಿ (9ಕ) ವಾಕ್ಯಕ್ಕೆ ಅವನೊಂದು ಇಡೀ ಪುಸ್ತಕವನ್ನು ಬರೆದಿದ್ದಾನೆಂಬ ಸಮಗ್ರಾಥ್ರ ಬರುತ್ತದೆ. ಅದರಲ್ಲಿ ಪುಸ್ತಕ ಪದ ದ್ವಿತೀ0iÉು ಯಲ್ಲಿರುವುದೇ ಇದಕ್ಕೆ ಕಾರಣ. ಇದಕ್ಕೆ ಬದಲು, (9ಖ) ವಾಕ್ಯಕ್ಕೆ ಅವನು ಪುಸ್ತಕದ ಒಂದು ಭಾಗದಲ್ಲಿ ಬರೆದಿದ್ದಾನೆಂಬ ಅಸಮಗ್ರಾಥ್ರ ಬರುತ್ತದೆ. ಅದರಲ್ಲಿ ಪುಸ್ತಕ ಪದ ಸಪ್ತಮಿಯಲ್ಲಿರುವುದೇ ಇದಕ್ಕೆ ಕಾರಣ. ಈ ಅಥ್ರ ವ್ಯತ್ಯಾಸವನ್ನು (9ಖ)ದಲ್ಲಿ ಕಂಸದೊಳಗೆ ಕೊಟ್ಟಿರುವ ಪದ ಸ್ಪಷ್ಟಪಡಿಸುತ್ತದೆ.
ಮೇಲೆ 9.2ರಲ್ಲಿ (1ಕ-ಖ) ವಾಕ್ಯಗಳಲ್ಲಿ ಇಂತಹ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟ ಮಾತ್ರವಲ್ಲದೆ, ದ್ವಿತೀಯಾ-ತೃತೀಯಾ ವಿಭಕ್ತಿ ಪಲ್ಲಟವೂ ಇದೆ. ಈ ವಾಕ್ಯಗಳನ್ನು ಕೆಳಗೆ ಪುನಃ ಕೊಡಲಾಗಿದೆ.
ಕೊಟ್ಟಿರುವ
ರಾಜು ಪುಸ್ತಕಗಳನ್ನು ಕಪಾಟಿನಲ್ಲಿ ತುಂಬಿಸಿದ (1PÀ) (1ಖ) ರಾಜು ಕಪಾಟನ್ನು ಪುಸ್ತಕಗಳಿಂದ ತುಂಬಿಸಿದ
(1ಕ) ವಾಕ್ಯದ ಪ್ರಕಾರ ತನ್ನಲ್ಲಿರುವ ಪುಸ್ತಕಗಳೆಲ್ಲವನ್ನೂ ರಾಜು ಕಪಾಟಿ ನಲ್ಲಿ ತುಂಬಿಸಿದನೆಂಬ ಅಥ್ರ ಬರುತ್ತದೆ, ಆದರೆ ಕಪಾಟು ತುಂಬಿತೆಂಬ ಅಥ್ರ ಬರುವುದಿಲ್ಲ. (1ಕ) ವಾಕ್ಯದ ಪ್ರಕಾರ ಕಪಾಟಿನಲ್ಲಿ ಇನ್ನೂ ಸ್ವಲ್ಪ ಜಾಗ ಉಳಿದಿರಲು ಸಾಧ್ಯವಿದೆ.
(1ಖ) ವಾಕ್ಯ ಇದಕ್ಕಿಂತ ಭಿನ್ನವಾಗಿದೆ. ಆ ವಾಕ್ಯದ ಪ್ರಕಾರ, ಕಪಾಟು ಪುಸ್ತಕದಿಂದ ತುಂಬಿತೆಂಬ ಅಥ್ರ ಬರುತ್ತದೆ, ಆದರೆ ರಾಜುವಿಗೆ ತನ್ನಲ್ಲಿರುವ ಪುಸ್ತಕಗಳೆಲ್ಲವನ್ನೂ ಆ ಕಪಾಟಿನಲ್ಲಿ ತುಂಬಿಸಲು ಸಾಧ್ಯವಾಯಿತೆಂಬ ಅಥ್ರ ಬರುವುದಿಲ್ಲ. ಈ ವಾಕ್ಯದ ಪ್ರಕಾರ, ಕಪಾಟು ತುಂಬಿದ ಮೇಲೂ ಸ್ವಲ್ಪ ಪುಸ್ತಕ ರಾಜುವಿನ ಹತ್ತಿರ ಉಳಿದಿರಲು ಸಾಧ್ಯವಿದೆ.
(1ಕ-ಖ) ವಾಕ್ಯಗಳಲ್ಲಿ ಕಾಣಿಸಿದ ಹಾಗೆ, ಮತ್ತು ಇದರಂತೆ0iÉುೀ (9ಕ-ಖ) ವಾಕ್ಯಗಳಲ್ಲೂ ಕಾಣಿಸಿದ ಹಾಗೆ, ಸಮಗ್ರಾಥ್ರವನ್ನು ಕೊಡುವ ಕ್ರಿಯಾಪದ ಗಳೊಂದಿಗೆ ದ್ವಿತೀ0iÉುಯಲ್ಲಿ ಬರುವ ನಾಮಪದವನ್ನು ಬಳಸಿದಾಗ ಆ ಕ್ರಿಯಾ ಪದಗಳು ಸೂಚಿಸುವ ಘಟನೆಯು ನಾಮಪದವು ಸೂಚಿಸುವ ವಸ್ತುವನ್ನು ಸಮಗ್ರ
196 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ ವಾಗಿ ಬಾಧಿಸುತ್ತದೆ0iÉುಂಬುದು ಕನ್ನಡ ವಾಕ್ಯರಚನೆಯ ಒಂದು ಸಾಮಾನ್ಯ ನಿಯಮ.
9.2.2 ಸ್ವೇಚ್ಛಾಪ್ರವೃತ್ತಿ ನಾಮಪದವೊಂದನ್ನು ಪ್ರಕೃತಿ (ಪ್ರಥಮಾ) ರೂಪದಲ್ಲಿ ಬಳಸುವ ಬದಲು ಚತುಥ್ರಿಯಲ್ಲಿ ಬಳಸಿದಾಗ, ಆ ನಾಮಪದವು ಗುರುತಿಸುವ ವ್ಯಕ್ತಿ ಘಟನೆಯಲ್ಲಿ ಸ್ವೇಚ್ಛೆಯಿಂದ ಪ್ರವೃತ್ತವಾಗಿಲ್ಲ ಎಂಬ ಅಥ್ರ ಸಿಗುತ್ತದೆ. ಇಲ್ಲೂ ವಿಭಕ್ತಿಪಲ್ಲಟ ಕಾಣಿಸುವುದು ನಿಜವಾದರೂ `ಪ್ರಥಮಾ’ ಮತ್ತು ಚತುಥ್ರೀ ವಿಭಕ್ತಿಗಳು ಒಂದೇ ಅಥ್ರದಲ್ಲಿ ಬಂದಿವೆಯೆಂದು ಹೇಳುವುದು ಸರಿಯಲ್ಲ.
(10ಕ) ಸನ್ಯಾಸಿ ತಲೆ ತುರಿಸಿದ (10ಖ) ಸನ್ಯಾಸಿಗೆ ತಲೆ ತುರಿಸಿತು (11ಕ) ಹುಲಿಯನ್ನು ಕಂಡು ಹರಿ ಹೆದರಿದ (11ಖ) ಹುಲಿಯನ್ನು ಕಂಡು ಹರಿಗೆ ಹೆದರಿತು (12ಕ) ಪುಸ್ತಕವನ್ನು ತರಲು ಅವನು ಮರೆತಿದ್ದಾನೆ (12ಖ) ಪುಸ್ತಕವನ್ನು ತರಲು ಅವನಿಗೆ ಮರೆತಿದೆ
ಗುರುತಿಸುವ
ನಾಮಪದವು
(10-12) ವಾಕ್ಯಗಳಲ್ಲಿ ನಾಮಪದವನ್ನು ಚತುಥ್ರಿಯಲ್ಲಿ ಬಳಸಿದಾಗ ಕ್ರಿಯಾಪದವು ತಿಳಿಸುವ ಘಟನೆಗೆ ವ್ಯಕ್ತಿ ಜವಾಬ್ದಾರನಲ್ಲ (ಎಂದರೆ ಆ ಘಟನೆ ಆತನ ಹತೋಟಿಯಲ್ಲಿರಲಿಲ್ಲ) ಎಂಬ ಅಥ್ರ ಸಿಗುತ್ತದೆ. ಆದರೆ ಅದೇ ನಾಮಪದವನ್ನು ಯಾವ ವಿಭಕ್ತಿ ಪ್ರತ್ಯಯವನ್ನೂ ಸೇರಿಸದೆ (`ಪ್ರಥಮೆ'ಯಲ್ಲಿ) ಬಳಸಿದಾಗ ಅದು ಗುರುತಿಸುವ ವ್ಯಕ್ತಿ ಘಟನೆಗೆ ಜವಾಬ್ದಾರನೆಂಬ ಅಥ್ರ ಸಿಗುತ್ತದೆ.
ಪ್ರೇರಣಾಥ್ರವನ್ನು ಕೊಡುವ ವಾಕ್ಯಗಳಲ್ಲಿ ಪ್ರೇರಿತನಾಗಿರುವ ವ್ಯಕ್ತಿಯನ್ನು ದ್ವಿತೀಯೆಯಿಂದಲೂ ಸೂಚಿಸಬಹುದು ಮತ್ತು ಕೈಯಲ್ಲಿ ಎಂಬ ಪದದೊಡನೆ ಬಂದಿರುವ ಷಷ್ಠಿಯಿಂದಲೂ ಸೂಚಿಸಬಹುದು. ಇಲ್ಲೂ ಪ್ರೇರಿತನಾಗಿರುವ ವ್ಯಕ್ತಿ ಸ್ವೇಚ್ಛೆಯಿಂದ ಮತ್ತು ಸ್ವಶಕ್ತಿಯಿಂದ ಕಾಯ್ರದಲ್ಲಿ ತೊಡಗಿರುವನೋ ಇಲ್ಲವೋ ಎಂಬ ವಿಷಯ ಆತನನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.
(13ಕ) ನಳಿನಿಯು ಹುಡುಗನನ್ನು ಮರಕ್ಕೆ ಹತ್ತಿಸಿದಳು (13ಖ) ನಳಿನಿಯು ಹುಡುಗನ ಕೈಯಲ್ಲಿ ಮರಕ್ಕೆ ಹತ್ತಿಸಿದಳು
197 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (13ಕ) ವಾಕ್ಯದಿಂದ ನಳಿನಿ ಹುಡುಗನನ್ನು ಕೈಯಿಂದ ಎತ್ತಿ ಮರಕ್ಕೆ ಹತ್ತಿಸಿದಳೆಂಬ ಅಥ್ರವೂ (13ಖ) ವಾಕ್ಯದಿಂದ ನಳಿನಿ ಆತನನ್ನು ಮರಕ್ಕೆ ಹತ್ತುವಂತೆ ಪ್ರೇರೇಪಿಸಿದಳೆಂಬ ಅಥ್ರವೂ ಸಿಗುತ್ತದೆ. ಹುಡುಗನು ಸ್ವೇಚ್ಛೆಯಿಂದ ಮರಕ್ಕೆ ಹತ್ತಿದನೆಂಬ ಅಥ್ರ ಎರಡನೆಯ ವಾಕ್ಯದಲ್ಲಿ ಮಾತ್ರ ಸಿಗುತ್ತದೆ.
9.2.3 ಸಾನ್ನಿಧ್ಯ ಬಯ್ಯು ಕ್ರಿಯಾಪದದೊಂದಿಗೆ ಬೈಗಳನ್ನು ತಿನ್ನುವ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯೆಯಲ್ಲೂ ಬರಬಲ್ಲುದು ಚತುಥ್ರಿಯಲ್ಲೂ ಬರಬಲ್ಲುದು. ಇಲ್ಲೂ ದ್ವಿತೀಯಾ-ಚತುಥ್ರೀ ವಿಭಕ್ತಿಪಲ್ಲಟಕ್ಕೆ ಕನ್ನಡದಲ್ಲಿ ಅಥ್ರ ವ್ಯತ್ಯಾಸ ವನ್ನು ಸೂಚಿಸುವ ಶಕ್ತಿಯಿದೆ.
(14ಕ) ಮಾಲಿನಿ ರವಿಯನ್ನು ಚನ್ನಾಗಿ ಬೈದಳು (14ಖ) ಮಾಲಿನಿ ರವಿಗೆ ಚನ್ನಾಗಿ ಬೈದಳು
(14ಕ) ವಾಕ್ಯದಲ್ಲಿ ರವಿ ಪದ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಹಿಂದಿನಿಂದ ಎಂದರೆ ಅವನಿಲ್ಲದಾಗ ಅವನ ತಾಯಿಯ ಹತ್ತಿರ ಅಥವಾ ಬೇರೆ ಯಾರಾದರೂ ಒಬ್ಬನ ಹತ್ತಿರ ಬೈದಿದ್ದಾಳೆ ಎಂಬ ಅಥ್ರ ಬರುತ್ತದೆ.
(14ಖ)ದಲ್ಲಿ ಅದೇ ಪದ ಚತುಥ್ರಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಆತನ ಎದುರಿಗೇನೇ ಬೈದಿದ್ದಾಳೆ ಎಂಬ ಅಥ್ರ ಬರುತ್ತದೆ.
ಕನ್ನಡದಲ್ಲಿ ದೂರು ಕ್ರಿಯಾಪದವು ಸೂಚಿಸುವ ಘಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೇನೇ ಮಾಡುವುದಿಲ್ಲವಾದ ಕಾರಣ ಆ ವ್ಯಕ್ತಿ ಯನ್ನು ಗುರುತಿಸುವ ನಾಮಪದ ಚತುಥ್ರಿಯಲ್ಲಿ ಬರುವುದಿಲ್ಲ.
ಇದಕ್ಕೆ ಬದಲು, ಹೇಳು ಕ್ರಿಯಾಪದವು ತಿಳಿಸುವ ಘಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೆ ಮಾತ್ರವೇ ನಡೆಸುವ ಕಾರಣ, ಆ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯೆಯಲ್ಲಿ ಬರುವುದಿಲ್ಲ.
(15) ಮಾಲಿನಿ ರವಿಯನ್ನು ದೂರಿದಳು (16) ಮಾಲಿನಿ ರವಿಗೆ ಹೇಳಿದಳು
ಕನ್ನಡದಲ್ಲಿ ಚತುಥ್ರೀ ವಿಭಕ್ತಿಗೆ ಈ ರೀತಿ `ಸಮ್ಮುಖದಲ್ಲಿ' ಎಂಬ ಅಥ್ರ ಬರಲು ಆ ವಿಭಕ್ತಿಗೆ ಒಂದು ಅನುಭವವನ್ನು ಪಡೆಯುವ ವ್ಯಕ್ತಿಯನ್ನು
198 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ ಸೂಚಿಸುವ ಅಥ್ರವಿರುವುದೇ ಮುಖ್ಯ ಕಾರಣ. ಒಬ್ಬನ ಸಮ್ಮುಖದಲ್ಲಿ ಬೈದರೆ ಮಾತ್ರವೇ ಆತನಿಗೆ ಆ ಬೈಗಳಿನ ಅನುಭವವಾಗಬಲ್ಲುದು ತಾನೇ!
9.2.4 ಬೇರೆ ಅಥ್ರಗಳು ಮೇಲೆ ಸೂಚಿಸಿದ ಆಥ್ರಭೇದಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಅಥ್ರ ಭೇದಗಳನ್ನು ಕನ್ನಡದಲ್ಲಿ ಈ ರೀತಿ `ವಿಭಕ್ತಿಪಲ್ಲಟ’ದ ಮೂಲಕ ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ ಬೀಳು ಕ್ರಿಯಾಪದದೊಂದಿಗೆ ಬಿದ್ದಿರುವ ಜಾಗವನ್ನು ಸೂಚಿಸುವ ಪದವನ್ನು ಚತುಥ್ರಿಯಲ್ಲಿಯೂ ಬಳಸಲು ಸಾಧ್ಯವಿದೆ, ಸಪ್ತಮಿ ಯಲ್ಲಿಯೂ ಬಳಸಲು ಸಾಧ್ಯವಿದೆ.
(17ಕ) ಸುರೇಶನ ಚೆಂಡು ನೀರಿಗೆ ಬಿದ್ದಿದೆ (17ಖ) ಸುರೇಶನ ಚೆಂಡು ನೀರಿನಲ್ಲಿ ಬಿದ್ದಿದೆ
ಆದರೆ ಈ ಎರಡು ವಾಕ್ಯಗಳಲ್ಲಿ ಚತುಥ್ರೀ ಮತ್ತು ಸಪ್ತಮೀ ವಿಭಕ್ತಿಗಳು ಒಂದೇ ಅಥ್ರದಲ್ಲಿ ಬಂದಿಲ್ಲ ಎಂಬುದನ್ನು ಗಮನಿಸಬಹುದು. ಕನ್ನಡದಲ್ಲಿ ಚತುಥ್ರೀ ವಿಭಕ್ತಿಯ ಬಳಕೆಯಾದಾಗಲೆಲ್ಲ ಚಲನೆಯ ಅಥ್ರ ಬರುತ್ತದೆ, ಆದರೆ ಸಪ್ತಮೀ ವಿಭಕ್ತಿಯ ಬಳಕೆಯಾದಾಗ ಅಂತಹ ಚಲನೆಯ ಅಥ್ರ ಬರಬೇಕಾಗಿಲ್ಲ.
ಮೇಲೆ (17ಕ) ವಾಕ್ಯವು ಚೆಂಡು ನೀರಿಗೆ ಹೋಗಿ ಬಿದ್ದಿದೆಯೆಂಬುದನ್ನೂ ಮತ್ತು (17ಖ) ವಾಕ್ಯವು ಅದು ನೀರಿನಲ್ಲಿ ಬಿದ್ದುಕೊಂಡಿದೆಯೆಂಬುದನ್ನೂ ತಿಳಿಸುತ್ತಿದ್ದು ಮೊದಲನೆಯದರಲ್ಲಿ ಮಾತ್ರ ಚಲನೆಯ ಅಥ್ರ ಕಾಣಿಸುತ್ತದೆ.
9.3 ಸಂಸ್ಕೃತದಲ್ಲಿ ವಿಭಕ್ತಿಪಲ್ಲಟ ಕನ್ನಡದಲ್ಲಿ ಸಾಮಾನ್ಯವಾಗಿ ವಿಭಕ್ತಿ ವ್ಯತ್ಯಾಸವಿರುವಲ್ಲೆಲ್ಲ ಅಥ್ರವ್ಯತ್ಯಾಸವನ್ನೂ ಕಾಣಲು ಸಾಧ್ಯ ಎಂಬುದಾಗಿ ಒಂದು ನಿಯಮವನ್ನು ಮಾಡಬಹುದು. ಇದಲ್ಲದೆ ಈ ಅಥ್ರ ವ್ಯತ್ಯಾಸ ವಿಭಕ್ತಿಯ ಮುಖ್ಯ ಅಥ್ರದಿಂದಲೇನೇ ಸಾಧಿಸಲು ಸಾಧ್ಯ ವಾಗುವಂತಹ ವ್ಯತ್ಯಾಸವೂ ಆಗಿರುತ್ತದೆ ಎಂಬುದು ಕನ್ನಡದ ವೈಶಿಷ್ಟ್ಯ.
ಸಂಸ್ಕೃತದಲ್ಲೂ ಕೆಲವು ಸಂದಭ್ರಗಳಲ್ಲಿ ವಿಭಕ್ತಿಪಲ್ಲಟಗಳಿಗೆ ಈ ರೀತಿ ಅಥ್ರವನ್ನು ಹೊಂದಿಸಿ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದಗಳೂ ಹಲವಿವೆ.
(18ಕ) ರಾಮಃ ಗ್ರಾಮಂ ಗಚ್ಛತಿ
`ರಾಮ ಹಳ್ಳಿಗೆ ಹೋಗುತ್ತಾನೆ’
199 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(18ಖ) ರಾಮಃ ಗ್ರಾಮಾಯ ಗಚ್ಛತಿ
`ರಾಮ ಹಳ್ಳಿಗೆ (ಹಳ್ಳಿಯ ಕಡೆಗಾಗಿ) ಹೋಗುತ್ತಾನೆ’
(18ಗ) ರಾಮಃ ಗ್ರಾಮೇ ಗಚ್ಛತಿ
`ರಾಮ ಹಳ್ಳಿಗೆ ಹೋಗುತ್ತಾನೆ (ಹೋಗಿ ಹಳ್ಳಿಯನ್ನು ಸೇರುತ್ತಾನೆ)’
(18ಕ-ಗ) ವಾಕ್ಯಗಳಲ್ಲಿ ಗಚ್ಛತಿ ಕ್ರಿಯಾರೂಪದೊಂದಿಗೆ ಗ್ರಾಮ ನಾಮ ಪದ ಮೂರು ಬೇರೆ ಬೇರೆ ವಿಭಕ್ತಿಗಳಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಈ ಮೂರು ಬಳಕೆಗಳಿಗೆ ಹೆಚ್ಚು ಕಡಿಮೆ ಒಂದೇ ಅಥ್ರವಿದೆಯೆಂದು ಹೇಳಲು ಸಾಧ್ಯವಿದೆಯಾದರೂ ಅವುಗಳ ನಡುವೆ ಅಥ್ರದಲ್ಲಿ ಸೂಕ್ಷ್ಮವಾದ ವ್ಯತ್ಯಾಸ ಗಳೂ ಇವೆ. ಇವನ್ನು ಮೇಲೆ ಅವುಗಳ ಕನ್ನಡ ಅನುವಾದದಲ್ಲಿ ಕಂಸಗಳೊಳಗೆ ಕೊಟ್ಟಿರುವ ಪದಗಳು ಸೂಚಿಸುತ್ತಿವೆ.
ದ್ವಿತೀಯೆಯು ಒಂದು ದಿಕ್ಕಿನಲ್ಲಿ ಚಲನೆ ನಡೆಯುತ್ತಿದೆಯೆಂದಿಷ್ಟೇ ಸೂಚಿಸು ವುದಾದರೆ, ಆ ದಿಕ್ಕು ಯಾವುದು ಎಂಬುದನ್ನು ಚತುಥ್ರಿ ತಿಳಿಸುತ್ತದೆ ಮತ್ತು ಚಲನೆಯ ಮೂಲಕ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಯಾವ ಸ್ಥಾನದಲ್ಲಿ ಬಂದು ನಿಲ್ಲುತ್ತದೆ ಎಂಬುದನ್ನು ಸಪ್ತಮಿ ತಿಳಿಸುತ್ತದೆ (ತಾರಾಪೆÇರೆವಾಲಾ 1967).
ಆದರೆ ಸಂಸ್ಕೃತದಲ್ಲಿ ಕಾಣಿಸುವ ಬೇರೆ ಹಲವು ವಿಭಕ್ತಿಪಲ್ಲಟಗಳಿಗೆ ಈ ರೀತಿ ಅಥ್ರವ್ಯತ್ಯಾಸವನ್ನು ಹೊಂದಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಪ್ರೇರಣಾಥ್ರಕ ಕ್ರಿಯಾಪದಗಳೊಂದಿಗೆ ಪ್ರೇರಿತನಾಗುವಂತಹ ವ್ಯಕ್ತಿಯನ್ನು ಗುರುತಿಸುವ ನಾಮಪದವೊಂದು ಬರುತ್ತಿದ್ದು, ಅದನ್ನು ಸಂಸ್ಕೃತದಲ್ಲಿ ದ್ವಿತೀಯೆ ಯಲ್ಲೂ ಬಳಸಬಹುದು, ತೃತೀಯೆಯಲ್ಲೂ ಬಳಸಬಹುದು. ಈ ವಿಭಕ್ತಿ ಪಲ್ಲಟಕ್ಕೆ ಹೊಂದಿಕೆಯಾಗುವಂತಹ ಅಥ್ರವ್ಯತ್ಯಾಸವಾವುದೂ ಸಂಸ್ಕೃತದಲ್ಲಿ ಇರುವ ಹಾಗೆ ಕಾಣಿಸುವುದಿಲ್ಲ.
(19ಕ) ದೇವದತ್ತೇನ ಘಟಂ ಕಾರಯತಿ
`ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’
(19ಖ) ದೇವದತ್ತಂ ಘಟಂ ಕಾರಯತಿ
`ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’
(19)ನೇ ಸಂಸ್ಕೃತ ವಾಕ್ಯದಲ್ಲಿ ಕಾರಯತಿ `ಮಾಡಿಸುತ್ತಾನೆ' ಕ್ರಿಯಾಪದವು ಸೂಚಿಸುವ ಘಟನೆಯಿಂದ ಪ್ರೇರಿತನಾಗುವ ವ್ಯಕ್ತಿ ದೇವದತ್ತ. ಆತನನ್ನು ಗುರುತಿಸುವ ನಾಮಪದ (19ಕ)ದಲ್ಲಿ ತೃತೀ0iÉುಯಲ್ಲಿ ಬಂದಿದೆ ಮತ್ತು
200 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ (19ಖ)ದಲ್ಲಿ ದ್ವಿತೀ0iÉುಯಲ್ಲಿ ಬಂದಿದೆ. ಆದರೆ ಈ ವಿಭಕ್ತಿ ವ್ಯತ್ಯಾಸಕ್ಕೆ ಹೊಂದಿಕೆಯಾಗುವಂತಹ ಅಥ್ರವ್ಯತ್ಯಾಸ ಈ ವಾಕ್ಯಗಳಲ್ಲಿಲ್ಲ.
ಇದೇ ರೀತಿಯಲ್ಲಿ, ಕಾರಣವನ್ನು ಸೂಚಿಸುವ ಪದ ಸಂಸ್ಕೃತದಲ್ಲಿ ಕಾರಣೇನ ಎಂಬುದಾಗಿ ತೃತೀ0iÉುಯಲ್ಲೂ ಬರಬಲ್ಲುದು, ಕಾರಣಾತ್ ಎಂಬು ದಾಗಿ ಪಂಚಮಿಯಲ್ಲೂ ಬರಬಲ್ಲುದು;
ಯಾರೊಂದಿಗೆ ಮಾತನಾಡಿದುದು ಎಂಬುದನ್ನು ಸೂಚಿಸುವ ಪದ ಚತುಥ್ರಿ ಯಲ್ಲೂ ಬರಬಲ್ಲುದು, ದ್ವಿತೀ0iÉುಯಲ್ಲೂ ಬರಬಲ್ಲುದು;
ಯಾರಿಗೆ ಕೊಟ್ಟದ್ದು ಎಂಬುದನ್ನು ಸೂಚಿಸುವ ಪದ ಚತುಥ್ರಿಯಲ್ಲೂ ಬರಬಲ್ಲುದು, ಷಷ್ಠಿ ಇಲ್ಲವೇ ಸಪ್ತಮಿಯಲ್ಲೂ ಬರಬಲ್ಲುದು (ಸ್ಪೀಜರ್ 1886 ನೋಡಿ). ಇವನ್ನೆಲ್ಲ ವಿಭಕ್ತಿಪಲ್ಲಟವೆಂದು ಕರೆಯುವುದಕ್ಕೂ ಮೇಲೆ ವಿವರಿಸಿದಂತಹ ಕನ್ನಡದ ಬಳಕೆಗಳನ್ನು ವಿಭಕ್ತಿಪಲ್ಲಟವೆಂದು ಕರೆಯುವುದಕ್ಕೂ ನಡುವೆ ವ್ಯತ್ಯಾಸ ವಿದೆ0iÉುಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.
9.3 ಕ್ರಿಯಾಪದದಲ್ಲಿ ಬದಲಾವಣೆ ಕ್ರಿಯಾಪದದಲ್ಲಿ ಬದಲಾವಣೆಗಳನ್ನು ಮಾಡುವುದರ ಮೂಲಕ ಅದು ಸೂಚಿಸುವ ಘಟನೆಯಲ್ಲಿ ಬಳಕೆಯಾಗುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಜಾಸ್ತಿಯೂ ಮಾಡಬಹುದು ಇಲ್ಲವೇ ಕಡಿಮೆಯೂ ಮಾಡಬಹುದು.
ಉದಾಹರಣೆಗಾಗಿ, ಒಂದು ಕ್ರಿಯಾಪದಕ್ಕೆ ಪ್ರೇರೇಪಿಸು ಎಂಬ ಅಥ್ರವನ್ನು ಕೊಡುವ ಇಸು ಪ್ರತ್ಯಯವನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಯಲ್ಲಿ ಪ್ರೇರೇಪಿಸುವ ವ್ಯಕ್ತಿಯೂ ಸೇರುವನಾದ ಕಾರಣ ಅದರೊಂದಿಗೆ ಬರಬಲ್ಲ ವ್ಯಕ್ತಿ ಗಳ ಸಂಖ್ಯೆ ಜಾಸ್ತಿಯಾಗುತ್ತದೆ.
ಇದಕ್ಕೆ ಬದಲು, ಆತ್ಮಾಥ್ರಕವಾದ ಕೊಳ್ಳು ಎಂಬುದನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಗೆ ಸಂಬಂಧಿಸಿದಂತಹ ಎರಡು ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ವಹಿಸುವಂತಾಗುವ ಕಾರಣ, ಅದರೊಂದಿಗೆ ಬರಬಲ್ಲ ವ್ಯಕ್ತಿಗಳ ಸಂಖ್ಯೆ ಕಡಿಮೆ ಯಾಗುತ್ತದೆ.
(20ಕ) ರಾಜು ಓಡಿದ (20ಖ) ಹರಿ ರಾಜುವನ್ನು ಓಡಿಸಿದ (21ಕ) ನಾನು ರಾಜುವಿಗೆ ಹರಿಯ ಕೈಯಲ್ಲಿ ಪಾಠ ಹೇಳಿಸಿದೆ (21ಖ) ನಾನು ಹರಿಯ ಕೈಯಲ್ಲಿ ಪಾಠ ಹೇಳಿಸಿಕೊಂಡೆ
201 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (20ಕ) ವಾಕ್ಯದಲ್ಲಿ ಬಂದಿರುವ ಓಡು ಕ್ರಿಯಾಪದಕ್ಕೆ (20ಖ) ವಾಕ್ಯದಲ್ಲಿ ಪ್ರೇರಣಾಥ್ರಕವಾದ ಇಸು ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದು ಸೂಚಿಸುವ ಘಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗಿದೆ (ರಾಜು ಮತ್ತು ಹರಿ).
ಆದರೆ, (21ಕ) ವಾಕ್ಯದಲ್ಲಿ ಬಂದಿರುವ ಹೇಳಿಸು ಕ್ರಿಯಾಪದದೊಂದಿಗೆ (21ಖ) ವಾಕ್ಯದಲ್ಲಿ ಆತ್ಮಾಥ್ರಕವಾದ ಕೊಳ್ಳು ಎಂಬುದನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದರಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ; (21ಕ)ದಲ್ಲಿದ್ದ ರಾಜು (21ಖ)ದಲ್ಲಿ ಬಂದಿಲ್ಲ. (20ಕ) ವಾಕ್ಯದಲ್ಲಿ ಇಬ್ಬರು ಮಾಡುವ ಕೆಲಸವನ್ನು (20ಖ)ದಲ್ಲಿ ಒಬ್ಬನೇ ನಡೆಸುತ್ತಿದ್ದಾನೆ ಎಂಬುದನ್ನು ಗಮನಿಸಬಹುದು. ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳ ಸಂಖ್ಯೆ ಹೆಚ್ಚುಕಡಿಮೆ ಯಾದಾಗ, ಕೆಲವೊಮ್ಮೆ ಅವುಗಳಲ್ಲಿ ಮೊದಲಿಗೆ ಬಳಕೆಯಾಗಿದ್ದ ನಾಮಪದಗಳ ವಿಭಕ್ತಿಯಲ್ಲಿ ಬದಲಾವಣೆಯಾಗಲು ಸಾಧ್ಯವಿದೆ.
ಉದಾಹರಣೆಗಾಗಿ, (20ಕ)ದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿದ್ದ ರಾಜು ನಾಮಪದ (20ಖ)ದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿದೆ. ಹೊಸತಾಗಿ ಸೇರಿದ ಹರಿ ಪದವನ್ನು ಆ ವಾಕ್ಯದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬಳಸಬೇಕಾಗಿದೆಯೆಂಬುದೇ ಇದಕ್ಕೆ ಕಾರಣ.
(20ಕ)ದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ (`ಪ್ರಥಮೆ’ಯಲ್ಲಿ) ಬಂದಿದ್ದ ರಾಜು ಪದ (20ಖ)ದಲ್ಲಿ ದ್ವಿತೀಯಾ ವಿಭಕ್ತಿಗೆ ಬದಲಾದುದನ್ನು ವಿಭಕ್ತಿಪಲ್ಲಟವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿಗಳ ಬದಲಾವಣೆಗಳೂ ಅಥ್ರ ವ್ಯತ್ಯಾಸವನ್ನು ಸೂಚಿಸುತ್ತವೆ. (20ಖ) ಸೂಚಿಸುವ ಘಟನೆಯನ್ನು ರಾಜು ಸ್ವೇಚ್ಛೆಯಿಂದ ನಡೆಸುವುದಿಲ್ಲ.
ಇದಕ್ಕೆ ಬದಲು, ಸಂಸ್ಕೃತದಲ್ಲಿ ಕಾಣಿಸುವ ಇಂತಹ ಹಲವು ವಿಭಕ್ತಿಗಳ ಬದಲಾವಣೆಗಳಿಗೆ ಅಥ್ರವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ.
ಉದಾಹರಣೆಗಾಗಿ, ಕನ್ನಡದ ಪ್ರೇರಣಾಥ್ರಕ ವಾಕ್ಯಗಳಲ್ಲಿ ಪ್ರೇರಿತನಾಗುವ ವ್ಯಕ್ತಿಯನ್ನು ಗುರುತಿಸುವ ನಾಮಪದವನ್ನು ದ್ವಿತೀಯೆಯಲ್ಲೂ ಬಳಸಬಹುದು ಇಲ್ಲವೇ ಕೈಯಲ್ಲಿ ಪದದೊಂದಿಗೆ ಷಷ್ಠಿಯಲ್ಲೂ ಬಳಸಬಹುದು. ದ್ವಿತೀಯೆ ಯಲ್ಲಿ ಬಳಸಿದಾಗ ಪ್ರೇರಿತನಾದ ವ್ಯಕ್ತಿ ಸ್ವೇಚ್ಛೆಯಿಂದ ಕೆಲಸವನ್ನು ನಡೆಸಿಲ್ಲ ಎಂಬ ಅಥ್ರ ಬರುತ್ತದೆ ಆದರೆ ಕೈಯಲ್ಲಿ ಎಂಬುದರೊಂದಿಗೆ ಷಷ್ಠಿಯಲ್ಲಿ ಬಳಸಿದಾಗ ಆ ಅಥ್ರ ಬರುವುದಿಲ್ಲ.
(22ಕ) ನಾನು ರಾಜುವನ್ನು ಮೂರು ಮೈಲು ಓಡಿಸಿದೆ (22ಖ) ನಾನು ರಾಜುವಿನ ಕೈಯಲ್ಲಿ ಮೂರು ಮೈಲು ಓಡಿಸಿದೆ
202 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ವಿಭಕ್ತಿಪಲ್ಲಟ
(22ಕ) ವಾಕ್ಯಕ್ಕೆ ನಾನೂ ರಾಜುವಿನ ಹಿಂದೆಯೇ ಓಡಿ ಅವನು ಮೂರು ಮೈಲು ಓಡುವ ಹಾಗೆ ಮಾಡಿದೆ ಎಂಬ ಅಥ್ರ ಬರಲು ಸಾಧ್ಯವಿದೆ. ಆದರೆ, (22ಖ) ವಾಕ್ಯಕ್ಕೆ ಆ ಅಥ್ರವಿಲ್ಲ. ಹಾಗಾಗಿ, (22ಕ) ವಾಕ್ಯಕ್ಕಿಂತ (22ಖ) ವಾಕ್ಯದಲ್ಲಿ ರಾಜುವಿಗೆ ಹೆಚ್ಚಿನ ಸ್ವೇಚ್ಛಾಪ್ರವೃತ್ತಿಯಿದೆ ಎಂದು ಹೇಳಲು ಸಾಧ್ಯ «zÉ.
ಸಂಸ್ಕೃತದಲ್ಲಿ ಕತ್ರರಿ ಮತ್ತು ಕಮ್ರಣಿ ಎಂಬ ಎರಡು ಪ್ರಯೋಗಗಳಿದ್ದು ಇವುಗಳಲ್ಲಿ ನಾಮಪದಗಳ ವಿಭಕ್ತಿಪಲ್ಲಟವನ್ನು ಕಾಣಬಹುದು. ಆದರೆ ಈ ವಿಭಕ್ತಿ ಪಲ್ಲಟಕ್ಕೆ ಅಥ್ರವ್ಯತ್ಯಾಸವನ್ನು ಹೊಂದಿಸಿ ಹೇಳುವುದು ಕಷ್ಟಸಾಧ್ಯ.
(23ಕ) ಶಿಶುಪಾಲಃ ಕೃಷ್ಣಂ ನಿಂದತಿ
`ಶಿಶುಪಾಲ ಕೃಷ್ಣನನ್ನು ನಿಂದಿಸುತ್ತಾನೆ’
(23ಖ) ಕೃಷ್ಣಃ ಶಿಶುಪಾಲೇನ ನಿಂದ್ಯತೇ
`ಶಿಶುಪಾಲ ಕೃಷ್ಣನನ್ನು ನಿಂದಿಸುತ್ತಾನೆ’
ಮೇಲೆ ಕೊಟ್ಟಿರುವ (23ಕ) ಮತ್ತು (23ಖ) ವಾಕ್ಯಗಳ ನಡುವೆ ಅಥ್ರ ದಲ್ಲಿ ವ್ಯತ್ಯಾಸವಿಲ್ಲ ಎಂಬುದನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದ ಗಳು ಸ್ಪಷ್ಟಪಡಿಸುತ್ತವೆ. (23ಖ) ವಾಕ್ಯವನ್ನು ಕೆಲವರು `ಕೃಷ್ಣನು ಶಿಶು ಪಾಲನಿಂದ ನಿಂದಿಸಲ್ಪಡುತ್ತಾನೆ' ಎಂಬುದಾಗಿ ಅನುವಾದಿಸುತ್ತಾರೇನೋ ನಿಜ. ಆದರೆ ಇಲ್ಲಿ ಅಥ್ರ ವ್ಯತ್ಯಾಸವಿಲ್ಲ.
ಸಂಸ್ಕೃತದ ಕೆಲವು ಕ್ರಿಯಾಪದಗಳಿಗೆ ಉಪಸಗ್ರಗಳನ್ನು ಸೇರಿಸಿದಾಗಲೂ ಅವುಗಳೊಂದಿಗೆ ಬರುವ ನಾಮಪದದ ವಿಭಕ್ತಿಯನ್ನು ಕೆಲವೊಮ್ಮೆ ಬದಲಿಸ ಬೇಕಾಗುತ್ತದೆ. ಇಂತಹ ವಿಭಕ್ತಿಪಲ್ಲಟಕ್ಕೂ ಸಂಸ್ಕೃತದಲ್ಲಿ ಎಲ್ಲೆಡೆಗಳಲ್ಲೂ ಅಥ್ರಭೇದವನ್ನು ಹೊಂದಿಸಲು ಸಾಧ್ಯವಾಗದು.
(24ಕ) ಹರಿಃ ಶಿಲಾಪಟ್ಟೇ ತಿಷ್ಠತಿ
`ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’
(24ಖ) ಹರಿಃ ಶಿಲಾಪಟ್ಟಂ ಅಧಿತಿಷ್ಠತಿ
`ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’
(24ಕ) ವಾಕ್ಯದಲ್ಲಿ ತಿಷ್ಠತಿ `ಕುಳಿತುಕೊಳ್ಳುತ್ತಾನೆ' ಕ್ರಿಯಾರೂಪದೊಂದಿಗೆ ಕುಳಿತುಕೊಂಡ ಜಾಗವನ್ನು ಗುರುತಿಸುವ ನಾಮಪದ ಸಪ್ತಮಿಯಲ್ಲಿ ಬಂದಿದೆ. ಆದರೆ (24ಖ)ದಲ್ಲಿ ಅದೇ ಕ್ರಿಯಾಪದವನ್ನು ಅಧಿ ಉಪಸಗ್ರದೊಂದಿಗೆ
203 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಬಳಸಿರುವ ಕಾರಣ, ಕುಳಿತಿರುವ ಜಾಗವನ್ನು ಸೂಚಿಸುವ ಪದವನ್ನು ದ್ವಿತೀಯೆ ಯಲ್ಲಿ ಬಳಸಬೇಕಾಗಿದೆ. ಇಲ್ಲಿ ಕಾಣಿಸುವ ವಿಭಕ್ತಿಪಲ್ಲಟ ಅಥ್ರ ವ್ಯತ್ಯಾಸವನ್ನು ಸೂಚಿಸುವುದಿಲ್ಲ.
ಕ್ರಿಯಾಪದದೊಂದಿಗೆ ಉಪಸಗ್ರಗಳನ್ನು ಬಳಸಿದಾಗ ಸಂಸ್ಕೃತದಲ್ಲಿ ಇಂತಹ ಹಲವು ರೀತಿಯ ವಿಭಕ್ತಿಪಲ್ಲಟಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವನ್ನು ಉಪಸಗ್ರದ ಅಥ್ರದೊಂದಿಗೆ ಸಂಬಂಧಿಸಲು ಸಾಧ್ಯವಿದೆ0iÉುೀನೋ ನಿಜ; ಆದರೆ ಹೆಚ್ಚಿನೆಡೆಗಳಲ್ಲೂ ಇದು ಕಷ್ಟಸಾಧ್ಯ.
9.4 ತಿರುಳು ಸಂಸ್ಕೃತದ ಹಾಗೆ ಕನ್ನಡದಲ್ಲೂ ವಾಕ್ಯದಲ್ಲಿ ಬರುವ ನಾಮಪದಗಳೊಂದಿಗೆ ಒಂದು ವಿಭಕ್ತಿಯ ಬದಲು ಇನ್ನೊಂದು ವಿಭಕ್ತಿಯನ್ನು ಬಳಸುವ ಸಾಧ್ಯತೆಯಿದೆ. ವೈಯಾಕರಣಿಗಳು ಇದನ್ನು `ವಿಭಕ್ತಿಪಲ್ಲಟ’ವೆಂದು ಕರೆಯುತ್ತಾರೆ.
ನಾಮಪದದ ವಿಭಕ್ತಿಯಲ್ಲಿ ಕಾಣಿಸುವ ಈ ಬದಲಾವಣೆ ಕ್ರಿಯಾಪದದಲ್ಲಿ ಯಾವುದಾದರೂ ಒಂದು ಬದಲಾವಣೆಯನ್ನು ಮಾಡಿದುದರಿಂದಾಗಿ ನಡೆದಿರ ಬಹುದು, ಇಲ್ಲವೇ ಕ್ರಿಯಾಪದದಲ್ಲಿ ಯಾವ ರೀತಿಯ ಬದಲಾವಣೆಯನ್ನು ಮಾಡಿರದಿದ್ದರೂ ಅದು ನಡೆದಿರಬಹುದು. ಈ ಎರಡು ರೀತಿಯ ವಿಭಕ್ತಿ ಪಲ್ಲಟಗಳೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ಈ ಎರಡು ಭಾಷೆಗಳ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಕಾಣಿಸುವ ವಿಭಕ್ತಿಪಲ್ಲಟಗಳಲ್ಲಿ ಹೆಚ್ಚಿನವಕ್ಕೂ ಅನುರೂಪವಾದ ಅಥ್ರವ್ಯತ್ಯಾಸವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವನ್ನು ಒಂದು ವಿಭಕ್ತಿಯ ಅಥ್ರದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ ಎಂಬುದಾಗಿ ವಣ್ರಿಸುವುದು ಸರಿ.
ಆದರೆ, ಕನ್ನಡದಲ್ಲಿ ವಿಭಕ್ತಿಪಲ್ಲಟ ಕಾಣಿಸುವಲ್ಲೆಲ್ಲ ಅದಕ್ಕೆ ಅನುರೂಪ ವಾದ ಅಥ್ರವ್ಯತ್ಯಾಸವೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಕನ್ನಡದ ವಿಭಕ್ತಿಪಲ್ಲಟ ವನ್ನು ಒಂದು ವಿಭಕ್ತಿಯ ಅಥ್ರದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ ಎಂಬುದಾಗಿ ವಿವರಿಸುವುದು ಸರಿಯಲ್ಲ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸವನ್ನು ಕನ್ನಡದ ವೈಯಾಕರಣಿಗಳು ಗಮನಿಸಿದಂತಿಲ್ಲ.
204 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
10. ಸವ್ರನಾಮಗಳು ಮತ್ತು ಎಣಿಕೆಯ ಪದಗಳು
10.1 ಮುನ್ನೋಟ ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬುದಾಗಿ ಎರಡು ಮುಖ್ಯ ಪದ ವಗ್ರಗಳು ಮಾತ್ರವಲ್ಲದೆ ಗುಣಪದಗಳೆಂಬ ಇನ್ನೊಂದು ಪದವಗ್ರವೂ ಇದೆ ಯೆಂಬುದನ್ನು ನಾವು ಮೂರನೇ ಅಧ್ಯಾಯದಲ್ಲಿ ನೋಡಿರುವೆವು. ಸಂಸ್ಕೃತದಲ್ಲಿ ಗುಣಪದಗಳು ನಾಮಪದಗಳ ಹಾಗೆ0iÉುೀ ಬಳಕೆಯಾಗುವುವಾದ ಕಾರಣ, ಅದರಲ್ಲಿ ಕನ್ನಡದ ಹಾಗೆ ಗುಣಪದಗಳೆಂಬ ಮೂರನೆಯದೊಂದು ಪದವಗ್ರ ವಿದೆಯೆಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ.
ಈ ಎರಡು ಭಾಷೆಗಳಲ್ಲೂ ಮೇಲಿನ ಪದವಗ್ರಗಳಿಗೆ ಸೇರದ ಬೇರೆ ಕೆಲವು ಪದಗಳಿದ್ದು, ಅವನ್ನು ಅವ್ಯಯಗಳೆಂಬ ಇನ್ನೊಂದು ವಗ್ರದಲ್ಲಿ ಸೇರಿಸಿ ಹೇಳುವುದು ರೂಢಿ. ಸಂಸ್ಕೃತದ ವೈಯಾಕರಣಿಗಳು ಕೆಲವರು ಇವನ್ನೂ ನಾಮ ಪದಗಳ ವಗ್ರದಲ್ಲೇ ಸೇರಿಸಿದ್ದಾರೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಾಗದು.
ಸಂಸ್ಕೃತದಲ್ಲಿ ಸವ್ರನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು) ನಾಮಪದಗಳ ವಗ್ರದಲ್ಲೇನೇ ಸೇರಿಸಿ ಹೇಳುವುದು ರೂಢಿ. ಆದರೆ, ಕನ್ನಡದಲ್ಲಿ ಹೀಗೆ ಮಾಡಲು ಸಾಧ್ಯವಾಗದು. ಕನ್ನಡದ ಸವ್ರನಾಮಗಳು ಎರಡು ಮುಖ್ಯ ಗುಂಪುಗಳಲ್ಲಿ ಬರುತ್ತಿದ್ದು, ಅವು ನಾಮಪದಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿವೆ. ಎಣಿಕೆಯ ಪದಗಳೂ ಕೆಲವು ವಿಷಯಗಳಲ್ಲಿ ನಾಮ ಪದಗಳ ಹಾಗಿಲ್ಲ.
10.2 ಸವ್ರನಾಮಗಳು ಹೆಚ್ಚಿನ ಕನ್ನಡ ವ್ಯಾಕರಣಗಳಲ್ಲೂ ಎರಡು ರೀತಿಯ ಪದಗಳನ್ನು ಒಟ್ಟಾಗಿ `ಸವ್ರ ನಾಮ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಆಡುಗ(ಉತ್ತಮಪುರುಷ) ಮತ್ತು ಕೇಳುಗ(ಮಧ್ಯಮಪುರುಷ)ಗಳನ್ನು ಸೂಚಿಸುವ ನಾನು, ನಾವು ಮತ್ತು ನೀನು, ನೀವು ಎಂಬವುಗಳು ಮತ್ತು ವಾಕ್ಯದಲ್ಲೇನೇ ಬೇರೆ ಕಡೆಯಲ್ಲಿ ಗುರುತಿಸಿರುವ ವ್ಯಕ್ತಿಯನ್ನು ಸೂಚಿಸುವ ತಾನು, ತಾವು ಎಂಬವುಗಳು ಒಂದು ರೀತಿಯವುಗಳು.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇತರ (ಪ್ರಥಮಪುರುಷ) ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ ಅವನು, ಅವಳು ಮೊದಲಾದವುಗಳು ಮತ್ತು ಮುಖ್ಯವಾಗಿ ಕೇಳ್ವಿ (ಪ್ರಶ್ನಾ ಥ್ರಕ') ವಾಕ್ಯಗಳಲ್ಲಿ ಬರುವ ಯಾವನು, ಯಾವಳು ಮೊದಲಾದವುಗಳು ಇನ್ನೊಂದು ರೀತಿಯವುಗಳು. ಈ ಎರಡು ರೀತಿಯ ಸವ್ರನಾಮಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ನಿಜಕ್ಕೂ ಇವನ್ನೆಲ್ಲ ಸವ್ರನಾಮ’ ಎಂಬ ಒಂದೇ ಪದವಗ್ರದಲ್ಲಿ ಸೇರಿಸಿ ಹೇಳುವುದು ಸ್ವಲ್ಪ ಕಷ್ಟ.
10.2.1 ಪುರುಷಪದಗಳು ಮತ್ತು ಸವ್ರಪದಗಳು ಮೇಲೆ ವಿವರಿಸಿದ ಪದಗಳನ್ನೆಲ್ಲ ಸಾಮಾನ್ಯವಾಗಿ ನಾಮಪದಗಳಿಗೆ ಬದಲಾಗಿ ಬರಬಲ್ಲುವೆಂಬ ಒಂದು ವಿಷಯದ ಆಧಾರದ ಮೇಲೆ `ಸವ್ರನಾಮ’ ಎಂಬ ಪದವಗ್ರದಲ್ಲಿ ಇರಿಸುವುದು ರೂಢಿ.
ಆದರೆ ನಿಜಕ್ಕೂ ಆಡುಗ ಮತ್ತು ಕೇಳುಗರನ್ನು ಸೂಚಿಸುವ ನಾನು, ನೀನು ಮೊದಲಾದ ಪದಗಳು ಬೇರೆ ನಾಮಪದಗಳಿಗೆ ಬದಲಾಗಿ ಬರುವಂತಹ ಪದ ಗಳಲ್ಲ. ಅವಕ್ಕೆ ತಮ್ಮದೇ ಆದ ಒಂದು ವ್ಯಾಕರಣ ಕಾಯ್ರವಿದೆ. (1ಕ, ಖ) ವಾಕ್ಯಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾದೀತು.
(1PÀ) (1R
ನಾನು ನಿಮಗೆ ಹತ್ತು ರುಪಾಯಿ ಕೊಡುತ್ತೇನೆ ರಾಜು ಹರಿಗೆ ಹತ್ತು ರುಪಾಯಿ ಕೊಡುತ್ತಾನೆ
(1ಕ) ವಾಕ್ಯ ಒಂದು ವಾಗ್ದಾನ ಇಲ್ಲವೇ ಮಾತು ಕೊಡುವ ಕಾಯ್ರವನ್ನು ನಡೆಸಬಲ್ಲುದು, ಆದರೆ (1ಖ) ವಾಕ್ಯ ಬರೇ ಒಂದು ವಿಷಯವನ್ನು ಮಾತ್ರ ತಿಳಿಸಬಲ್ಲುದು. ಯಾಕೆಂದರೆ, ವಾಕ್ಯವೊಂದರಲ್ಲಿ ಅದರ ಆಡುಗನನ್ನು ಸೂಚಿಸುವ ನಾನು ಪದದ ಬಳಕೆಯಾಗದೆ ಅದು `ವಾಗ್ದಾನ'ವಾಗಲಾರದು.
ಇಂತಹ ನಿಬ್ರಂಧಗಳಿಗೆ ಕಾರಣವೇನೆಂದರೆ, ಒಂದು ವಾಕ್ಯವನ್ನು ಆಡಿರುವ ವ್ಯಕ್ತಿಯನ್ನು ಆ ವಾಕ್ಯದಲ್ಲಿ ಬಂದಿರುವ ನಾನು ಎಂಬ ಪದ ಮಾತ್ರವೇ ಸೂಚಿಸಬಲ್ಲುದು ಮತ್ತು ಯಾರನ್ನುದ್ದೇಶಿಸಿ ಆ ವಾಕ್ಯವನ್ನು ಆಡಲಾಗಿದೆಯೋ ಆ ವ್ಯಕ್ತಿಯನ್ನು ನೀನು ಎಂಬ ಪದ ಮಾತ್ರವೇ ಸೂಚಿಸಬಲ್ಲುದು. ಈ ಎರಡು ಕೆಲಸಗಳನ್ನು ಕನ್ನಡದಲ್ಲಿ ಬೇರೆ ಯಾವ ಪದವೂ ಮಾಡಲಾರದು.
ನಾನು ರೂಪಳನ್ನು ಮೆಚ್ಚಿದ್ದೇನೆ (2PÀ) (2ಖ) ನಿನಗೆ ಈ ಪುಸ್ತಕ ಮೆಚ್ಚಿಗೆಯಾಗಿದೆ0iÉುೀ?
206 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು (2ಕ) ವಾಕ್ಯದಲ್ಲಿರುವ ನಾನು ಪದಕ್ಕೆ ಆ ವಾಕ್ಯವನ್ನು ಆಡಿರುವ ವ್ಯಕ್ತಿ ಯನ್ನು ಸೂಚಿಸುವ ಕೆಲಸವಿದೆ. ಆ ವಾಕ್ಯವನ್ನು ರಾಜು ಹೆಸರಿನ ವ್ಯಕ್ತಿ ಆಡಿರುವ ನಾದರೆ, ಅದರಲ್ಲಿ ಬಂದಿರುವ ನಾನು ಪದ ರಾಜುವನ್ನು ಸೂಚಿಸುತ್ತಿದೆ 0iÉುಂದೇನೋ ಹೇಳಬಹುದು. ಆದರೆ (2ಕ)ದಲ್ಲಿ ನಾನು ಪದದ ಬದಲು ರಾಜು ಪದವನ್ನು ಬಳಸಿದಲ್ಲಿ ಅದು ಆ ವಾಕ್ಯದ ಆಡುಗನನ್ನು ಸೂಚಿಸಲಾರದು.
(2UÀ)
ರಾಜು ಜಾನಕಿಯನ್ನು ಮೆಚ್ಚಿದ್ದಾನೆ
ನೀನು ಪದದ ಬಳಕೆಯೂ ಇದೇ ರೀತಿಯಲ್ಲಿ (2ಖ)ದಲ್ಲಿ ಕಾಣಿಸಿದ ಹಾಗೆ ತನ್ನದೇ ಆದ ಒಂದು ಕೆಲಸವನ್ನು ಕನ್ನಡ ವಾಕ್ಯಗಳಲ್ಲಿ ನಡೆಸುತ್ತದೆ.
ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸವ್ರನಾಮಗಳ ಇನ್ನೊಂದು ವೈಶಿಷ್ಟ್ಯವೇನೆಂದರೆ, ಸಾಮಾನ್ಯವಾಗಿ ಅವು ಸೂಚಿಸುವ ವ್ಯಕ್ತಿ ಎಂತಹವನು ಎಂಬುದನ್ನು ಆ ಪದಗಳು ನೇರವಾಗಿ ತಿಳಿಸಲಾರವು. ಇದಕ್ಕಾಗಿ ಅವುಗಳೊಂದಿಗೆ ಬೇರೆ ನಾಮಪದಗಳನ್ನು ಬಳಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ಒಬ್ಬ ವ್ಯಕ್ತಿ ಬಾಗಿಲನ್ನು ತಟ್ಟಿದಾಗ ಒಳಗಿದ್ದವನು ಯಾರು? ಎಂದು ಪ್ರಶ್ನಿಸಬಹುದು. ಆಗ ಹೊರಗಿದ್ದವನು ನಾನು ಎಂದಿಷ್ಟೇ ಹೇಳಿದಲ್ಲಿ ಅದು ಯಾರೆಂದು ಒಳಗಿದ್ದವನಿಗೆ ಗೊತ್ತಾಗದಿರಲು ಸಾಧ್ಯವಿದೆ.
ಇಂತಹ ಸಂದಭ್ರಗಳಲ್ಲಿ ಆಡುಗ ಸವ್ರನಾಮಕ್ಕೆ ನೇರವಾಗಿ ವಿಶೇಷಣ ಗಳನ್ನು ಸೇರಿಸಿ ಹೇಳಲು ಸಾಧ್ಯವಾಗದು. ಅದರೊಂದಿಗೆ ಹೊರಗಿದ್ದವನು ತನ್ನ ಹೆಸರನ್ನೂ ಸೇರಿಸಿ ನಾನು ರಾಜು ಎಂಬುದಾಗಿ ಹೇಳುವುದೊಂದೇ ಇಲ್ಲಿ ಉಳಿದಿರುವ ದಾರಿ.
ಆದರೆ ಇತರ ಸವ್ರನಾಮಗಳ ಬಳಕೆಯಲ್ಲಿ ಇಂತಹ ತೊಂದರೆಯಿಲ್ಲ. ಉದಾಹರಣೆಗಾಗಿ, ಆಡುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರ ವ್ಯಕ್ತಿಗಳನ್ನು ಸೂಚಿಸುವ ಅವನು ಸವ್ರನಾಮದೊಂದಿಗೆ ವಿಶೇಷಣಗಳನ್ನು ಸೇರಿಸಿ ದೊಡ್ಡವನು, ಮೊದಲಿನವನು, ಮನೆಗೆ ಹೋದವನು ಮೊದಲಾದ ರೂಪಗಳನ್ನು ತಯಾರಿಸಿ ಬಳಸಲು ಸಾಧ್ಯವಿದೆ.
ಇನ್ನೊಂದು ವ್ಯತ್ಯಾಸವೇನೆಂದರೆ, ಆಡುಗ ಮತ್ತು ಕೇಳುಗ ಸವ್ರನಾಮಗಳು ವ್ಯಕ್ತಿಸೂಚಕಗಳಾಗಿ ನಾಮಪದಗಳ ಹಾಗೆ ಮಾತ್ರ ಬರಬಲ್ಲುವು. ಆದರೆ, ಇತರ ಸವ್ರನಾಮಗಳು ಅವನು, ಅವಳು, ಅದು ಮೊದಲಾದ ರೂಪಗಳಲ್ಲಿ ನಾಮ ಪದಗಳ ಹಾಗೆ ಮಾತ್ರವಲ್ಲದೆ ಆ, ಈ, ಯಾವ ಮೊದಲಾದ ರೂಪಗಳಲ್ಲಿ ಗುಣಪದಗಳ ಹಾಗೆಯೂ ಅಷ್ಟು, ಎಷ್ಟು, ಹೇಗೆ ಮೊದಲಾದ ರೂಪಗಳಲ್ಲಿ ಕ್ರಿಯಾಗುಣಪದಗಳ ಹಾಗೆಯೂ ಬರಬಲ್ಲುವು (ಹೆಚ್ಚಿನ ವಿವರಗಳಿಗೆ ಭಟ್ 2003, 2004 ನೋಡಿ).
207 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಇಂತಹ ಹಲವು ಕಾರಣಗಳಿಗಾಗಿ, ನಾನು, ನಾವು, ನೀನು, ನೀವು, ತಾನು ಮತ್ತು ತಾವು ಎಂಬವುಗಳನ್ನು ಪುರುಷಪದ'ಗಳೆಂಬ ಪದವಗ್ರದಲ್ಲಿ ಮತ್ತು ಅವನು, ಅವಳು, ಅದು, ಇವನು, ಈಕೆ, ಯಾರು, ಎಷ್ಟು, ಎಲ್ಲಿ, ಯಾವಾಗ ಮೊದಲಾದುವನ್ನು ಅದಕ್ಕಿಂತ ತೀರ ಭಿನ್ನವಾದ ಸವ್ರಪದ’ಗಳೆಂಬ ಪದವಗ್ರದಲ್ಲಿ ಇರಿಸಿ ಹೇಳುವುದೇ ಕನ್ನಡ (ಮತ್ತು ಇತರ ಹಲವು ಭಾಷೆಗಳ) ವ್ಯಾಕರಣಗಳ ಮಟ್ಟಿಗೆ ಯೋಗ್ಯವಾದ ವಿಧಾನ.
10.2.2 ಸವ್ರಪದಗಳ ಸ್ವರೂಪ
ಮೇಲೆ ಸೂಚಿಸಿದ ಹಾಗೆ, ಪುರುಷಪದ ಮತ್ತು ಸವ್ರಪದಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕನ್ನಡದಲ್ಲಿ ಪುಂ-ಸ್ತ್ರೀ- ನಪುಂಸಕ ಲಿಂಗಭೇದ ಸವ್ರಪದಗಳಲ್ಲಿ ಮಾತ್ರ ಕಾಣಿಸುತ್ತದೆಯಲ್ಲದೆ ಪುರುಷ ಪದಗಳಲ್ಲಿ ಕಾಣಿಸುವುದಿಲ್ಲ.
ನಾನು ಎಂಬುದನ್ನು ಹೆಂಗಸರು ಮಾತನಾಡುವುದಿದ್ದರೂ ಬಳಸಬಹುದು, ಗಂಡಸರು ಮಾತನಾಡುವುದಿದ್ದರೂ ಬಳಸಬಹುದು. ನೀನು ಮತ್ತು ತಾನು ಎಂಬವುಗಳನ್ನೂ ಇದೇ ರೀತಿಯಲ್ಲಿ ಲಿಂಗಭೇದವನ್ನು ಗಮನಕ್ಕೆ ತೆಗೆದುಕೊಳ್ಳದೆ ಬಳಸಲು ಸಾಧ್ಯವಿದೆ.
ಆದರೆ ಅವನು, ಅವಳು ಮೊದಲಾದ ಸವ್ರಪದಗಳು ಮೇಲೆ ವಿವರಿಸಿದ ಪುರುಷಪದಗಳಿಗಿಂತ ಭಿನ್ನವಾಗಿದ್ದು ಲಿಂಗಭೇದವನ್ನು ತೋರಿಸುತ್ತವೆ.
ಇದಲ್ಲದೆ ಬಹುವಚನರೂಪ, ಷಷ್ಠೀರೂಪ ಮೊದಲಾದವುಗಳಲ್ಲೂ ಸವ್ರ ಪದಗಳು ಪುರುಷಪದಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.
ಏಕವಚನ ರೂಪ
ಪುರುಷಪದ ನಾನು ನೀನು ತಾನು
ಸವ್ರಪದ ಅವನು
CzÀÄ
ಬಹುವಚನ ರೂಪ ಷಷ್ಠೀರೂಪ ನಾವು
ನೀವು
ತಾವು
ಅವರು
ಅವು(ಗಳು)
ನನ್ನ
ನಿನ್ನ
ತನ್ನ
ಅವನ
CzÀgÀ
ಇದಕ್ಕಿಂತಲೂ ಮುಖ್ಯವಾಗಿ, ಅವನು, ಅವಳು, ಅವರು, ಅದು ಮೊದಲಾದ ಸವ್ರಪದಗಳು ಇವನು, ಇವಳು, ಇವರು, ಇದು ಮೊದಲಾದ ಬೇರೆ ಕೆಲವು ಸವ್ರಪದಗಳೊಂದಿಗೆ ಮತ್ತು ಯಾವನು, ಯಾವಳು, ಯಾರು,
208 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು ಯಾವುದು ಮೊದಲಾದ ಪ್ರಶ್ನಾಥ್ರಕ' ಸವ್ರಪದಗಳೊಂದಿಗೆ ಒಂದು ರೂಪಾ ವಳಿಯಲ್ಲಿ ಬರುತ್ತವೆ. ಈ ರೂಪಾವಳಿಯಲ್ಲಿ ನಾಮಪದಗಳಾಗಿ ಬರುವ ಸವ್ರಪದಗಳು ಮಾತ್ರ ವಲ್ಲದೆ ಗುಣಪದಗಳಾಗಿ ಮತ್ತು ಅವ್ಯಯಗಳಾಗಿ ಬರುವ ಸವ್ರಪದಗಳೂ ಇವೆ. ಉದಾಹರಣೆಗಾಗಿ, ಈ ಪಟ್ಟಿಯಲ್ಲಿ ಬರುವ ಪದಗಳಲ್ಲಿ ಅಂತಹ, ಹಾಗೆ, ಎಷ್ಟು, ಯಾವ ಮೊದಲಾದವುಗಳನ್ನು ಕನ್ನಡದ ಮಟ್ಟಿಗೆ ಸವ್ರನಾಮ’ಗಳೆಂದು ಕರೆಯುವುದು ಕಷ್ಟಸಾಧ್ಯ. ಯಾಕೆಂದರೆ ಅವುಗಳಲ್ಲಿ ಎಲ್ಲವೂ `ನಾಮ’ಪದ ಗಳಲ್ಲ; ಕೆಲವು ಗುಣಪದಗಳು ಮತ್ತು ಬೇರೆ ಕೆಲವು ಅವ್ಯಯಗಳು. ಹೀಗಿದ್ದರೂ ಈ ಪಟ್ಟಿಯಲ್ಲಿರುವ ಎಲ್ಲಾ ಪದಗಳೂ ಒಂದೇ ವಗ್ರದಲ್ಲಿ ಸೇರುತ್ತವೆ0iÉುಂಬು ದರಲ್ಲಿ ಸಂಶಯವಿಲ್ಲ.
ಅವನು ಇವನು ಅವಳು ಇವಳು CzÀÄ ಅವರು ಇವರು CªÀÅ D
EªÀÅ F
EzÀÄ
ಯಾವನು
ಯಾವಳು
ಯಾವುದು
ಯಾರು ಯಾವುವು
ಯಾವ
E°è C°è FUÀ
DUÀ ಇಷ್ಟು ಅಷ್ಟು ºÁUÉ »ÃUÉ ಅಂತಹ ಇಂತಹ ಎಂತಹ
J°è ಯಾವಾಗ ಎಷ್ಟು ಹೇಗೆ
ಕನ್ನಡದಲ್ಲಿ ಮೇಲಿನ ಪದಗಳು ಮಾತ್ರವಲ್ಲದೆ, ಏನು ಮತ್ತು ಯಾಕೆ ಎಂಬ ಬೇರೆಯೂ ಎರಡು ಸವ್ರಪದಗಳಿದ್ದು ಅವು ಈ ರೂಪಾವಳಿಯಿಂದ ಹೊರಗೆ ನಿಲ್ಲುತ್ತವೆ. ಈ ಎಲ್ಲಾ ಪದಗಳನ್ನೂ ಅ, ಇ ಮತ್ತು ಯಾ ಎಂಬ ಮೂರು ಧಾತುಗಳನ್ನು ಬಳಸಿ ತಯಾರಿಸಲಾಗಿದೆ0iÉುಂಬುದನ್ನು ಗಮನಿಸಬಹುದು.
ಹಳೆಗನ್ನಡದಲ್ಲಿ ಉ ಧಾತುವಿನಿಂದ ತಯಾರಿಸಿರುವ ಉವಂ, ಉವಳ್, ಉದು ಮೊದಲಾದ ಪದಗಳನ್ನೊಳಗೊಂಡಿರುವ ಇಂತಹದೇ ಬೇರೊಂದು ರೂಪಾವಳಿಯೂ ಬಳಕೆಯಲ್ಲಿತ್ತು. ಆದರೆ ಹೊಸಗನ್ನಡದಲ್ಲಿ ಇದು ನಷ್ಟವಾಗಿದೆ. ಇವುಗಳಲ್ಲಿ ಇಕಾರದ ಪದಗಳು ಮಾತನಾಡುವವನ ಹತ್ತಿರದ ವ್ಯಕ್ತಿ, ವಸ್ತು ಮೊದಲಾದುವನ್ನೂ, ಅಕಾರದವು ಅವನಿಗಿಂತ ಮತ್ತು ಉಕಾರದವು ಇವೆರಡರ ನಡುವಿನವನ್ನೂ ಸೂಚಿಸುತ್ತಿದ್ದುವೆಂದು ತೋರುತ್ತದೆ.
ದೂರದವನ್ನೂ
10.2.3 ಸಂಸ್ಕೃತದ ಸವ್ರನಾಮಗಳು ಸಂಸ್ಕೃತದಲ್ಲಿಯೂ ಕನ್ನಡದ ಹಾಗೆ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರನ್ನು ಸೂಚಿಸುವ (ಪ್ರಥಮಪುರುಷ) ಸವ್ರನಾಮಗಳು ಎರಡನೆಯ ವಿಭಾಗದಲ್ಲಿ (ಸವ್ರಪದಗಳಾಗಿ) ಬರುತ್ತಿದ್ದು, ಅಹಂ ನಾನು', ತ್ವಂ ನೀನು’ ಮೊದಲಾದ ಪುರುಷಪದಗಳಿಗಿಂತ ಭಿನ್ನವಾಗಿವೆ. ಈ ವಿಷಯದಲ್ಲಿ ಸಂಸ್ಕೃತ
209 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕನ್ನಡದ ಹಾಗೆ ಎಂದು ಹೇಳಲು ಸಾಧ್ಯವಿದೆಯಾದರೂ ಸಂಸ್ಕೃತದಲ್ಲಿ ಈ ಪದಗಳು ಕನ್ನಡಕ್ಕಿಂತ ಜಾಸ್ತಿ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಏಷಃ ಇವನು', ಏಷಾ ಇವಳು’, ಏತತ್ ಇದು' ಮೊದಲಾದವುಗಳು ಆಡುಗನ ಹತ್ತಿರದವರನ್ನು ಸೂಚಿಸುವುವಾದರೆ, ಅಸೌ ಅವನು, ಅವಳು’, ಅದಃ ಅದು' ಮೊದಲಾದವುಗಳು ಆಡುಗನಿಂದ ದೂರ ಇರುವವರನ್ನು ಸೂಚಿಸುತ್ತವೆ. ಇದಲ್ಲದೆ ಎದುರಿಗೆ ಇರುವವರು ಮತ್ತು ಇಲ್ಲದವರು ಎಂಬ ವ್ಯತ್ಯಾಸವನ್ನು ಸೂಚಿಸುವ ಬೇರೆ ಎರಡು ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಅಯಂ ಇವನು’, ಇಯಂ ಇವಳು', ಇದಂ ಇದು’ ಮೊದಲಾದವುಗಳು ಮಾತನಾಡು ವವನ ಸಾನ್ನಿಧ್ಯದಲ್ಲಿ ಇರುವವರನ್ನು ಸೂಚಿಸುತ್ತವೆ ಮತ್ತು ಸಃ ಅವನು', ಸಾ ಅವಳು’, ತತ್ ಅದು' ಮೊದಲಾದವುಗಳು ಸಾನ್ನಿಧ್ಯದಲ್ಲಿ ಇಲ್ಲದವರನ್ನು ಸೂಚಿಸುತ್ತವೆ. (ಸಂಸ್ಕೃತದಲ್ಲಿ ಮೊದಲಿಗೆ ಇದ್ದ ಈ ವ್ಯತ್ಯಾಸ ಅನಂತರ ಇಲ್ಲವಾಗಿದೆ). ಈ ನಾಲ್ಕು ರೂಪಾವಳಿಗಳು ಮಾತ್ರವಲ್ಲದೆ ಕಕಾರದಿಂದ ಸುರುವಾಗುವ ಕಃ ಯಾವನು’, ಕಾ ಯಾವಳು' ಮೊದಲಾದ ಪ್ರಶ್ನಾಥ್ರಕ ರೂಪಾವಳಿ ಮತ್ತು ಯಕಾರದಿಂದ ಸುರುವಾಗುವ ಯಃ ಯಾವನು’, ಯಾ ಯಾವಳು' ಮೊದಲಾದ ಸಂಬಂಧಕ ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಆದರೆ ಕನ್ನಡದಲ್ಲಿ ಈ ಎರಡು ರೂಪಾವಳಿಗಳ ಸ್ಥಾನದಲ್ಲಿ ಒಂದೇ ರೂಪಾವಳಿಯಿದೆ. ಕನ್ನಡದಲ್ಲಿ ವಾಕ್ಯಗಳನ್ನು ಒಂದು ನಾಮಪದದ ವಿಶೇಷಣವನ್ನಾಗಿ ಮಾಡಿ ಬಳಸಬೇಕಿದ್ದಲ್ಲಿ ಪ್ರಶ್ನಾಥ್ರಕ ಸವ್ರಪದಗಳನ್ನು ಹಾಗೆಯೇ ಸಂಬಂಧಕ’ ಸವ್ರ ಪದಗಳನ್ನಾಗಿ ಬಳಸುವ ರೂಢಿಯಿದೆ. ಆದರೆ ಸಂಸ್ಕೃತದಲ್ಲಿ ಇದಕ್ಕಾಗಿ ಬೇರೆಯೇ ಒಂದು ಸವ್ರಪದಗಳ ರೂಪಾವಳಿಯನ್ನು ಬಳಸಬೇಕಾಗುತ್ತದೆ.
ಪ್ರಶ್ನಾಥ್ರಕ ಸವ್ರಪದಗಳು ಸಂಸ್ಕೃತದಲ್ಲಿ ಕಕಾರದಿಂದ ಆರಂಭವಾಗುವು ವಾದರೆ ಈ `ಸಂಬಂಧಕ’ ಸವ್ರಪದಗಳು ಯಕಾರದಿಂದ ಪ್ರಾರಂಭಿಸುತ್ತವೆ. ಇದು ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಇನ್ನೊಂದು ವ್ಯತ್ಯಾಸ.
(3PÀ)
ಕಃ ನೃಪಾಯ ಪತ್ರಂ ಲಿಖತಿ? `ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೆ?’ (3ಖ) ಯಃ ನೃಪಾಯ ಪತ್ರಂ ಲಿಖತಿ ಸಃ ತತ್ರ ತಿಷ್ಠತಿ
`ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೋ ಅವರು ಅಲ್ಲಿ ನಿಂತಿದ್ದಾರೆ’
210 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು ಮೇಲೆ ಸಂಸ್ಕೃತದ ಕೇಳ್ವಿಯಲ್ಲಿ (3ಕದಲ್ಲಿ) ಕಃ ಯಾರು' ಪ್ರಶ್ನಾಥ್ರಕ ಪದ ಬಂದಿದೆಯಾದರೆ, ಸಂಬಂಧಕ ವಾಕ್ಯದಲ್ಲಿ (3ಖದಲ್ಲಿ) ಯಃ ಯಾರು’ ಸಂಬಂಧಕ ಪದ ಬಂದಿದೆ. ಆದರೆ ಕನ್ನಡದಲ್ಲಿ ಇವೆರಡು ವಾಕ್ಯಗಳಲ್ಲೂ ಒಂದೇ ಪದ, ಎಂದರೆ ಯಾರು ಎಂಬುದೇ ಬಂದಿದೆ ಎಂಬುದನ್ನು ಗಮನಿಸಬಹುದು. ಸಂಸ್ಕೃತದಲ್ಲಿ ಆಡುಗ ಮತ್ತು ಕೇಳುಗ ಪುರುಷಪದಗಳಿಗೆ ದ್ವಿತೀಯಾ, ಚತುಥ್ರೀ ಮತ್ತು ಷಷ್ಠೀ ವಿಭಕ್ತಿಗಳಲ್ಲಿ ಸಂಕ್ಷಿಪ್ತ ರೂಪಗಳಿವೆ. ಉದಾಹರಣೆ ಗಾಗಿ, ಬಹುವಚನದಲ್ಲಿ ಆಡುಗನನ್ನು ಸೂಚಿಸುವ ಅಸ್ಮಾನ್ ನಮ್ಮನ್ನು', ಅಸ್ಮಭ್ಯಂ ನಮಗೆ’ ಮತ್ತು ಅಸ್ಮಾಕಂ ನಮ್ಮ' ಎಂಬ ಮೂರು ರೂಪಗಳಿಗೂ ನಃ ಎಂಬ ಸಂಕ್ಷಿಪ್ತ ರೂಪವಿದೆ, ಮತ್ತು ಕೇಳುಗನನ್ನು ಸೂಚಿಸುವ ಯುಷ್ಮಾನ್ ನಿಮ್ಮನ್ನು’, ಯುಷ್ಮಭ್ಯಂ ನಿಮಗೆ' ಮತ್ತು ಯುಷ್ಮಾಕಂ ನಿಮ್ಮ’ ಎಂಬ ಮೂರು ರೂಪಗಳಿಗೂ ವಃ ಎಂಬ ಸಂಕ್ಷಿಪ್ತರೂಪವಿದೆ. ಈ ಪದಗಳನ್ನು ಒತ್ತಿ ಹೇಳದಿರುವ ಸಂದಭ್ರದಲ್ಲಿ ಈ ಸಂಕ್ಷಿಪ ರೂಪಗಳನ್ನು ಬಳಸಬಹುದು.
ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸವ್ರನಾಮಗಳು (ಪುರುಷ ಪದಗಳು) ಇತರ ಸವ್ರನಾಮಗಳಿಗಿಂತ (ಸವ್ರಪದಗಳಿಗಿಂತ) ಭಿನ್ನವಾದುವು ಎಂಬುದಕ್ಕೆ ಇದೂ ಒಂದು ಆಧಾರವಾಗಬಲ್ಲುದು. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸುವುದು ಅವಶ್ಯ. ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಎಂಬುದಾಗಿ ಮೂರು ಪದವಗ್ರ ಗಳಿವೆಯಾದ ಕಾರಣ, ಮತ್ತು ಅವ್ಯಯವೆಂಬ ನಾಲ್ಕನೆಯದೊಂದು ಪದವಗ್ರ ವನ್ನೂ ಕಂಡುಕೊಳ್ಳಲು ಸಾಧ್ಯವಿದೆಯಾದ ಕಾರಣ, ಮೇಲೆ ವಿವರಿಸಿರುವ ಎಲ್ಲಾ ರೀತಿಯ ಪದಗಳನ್ನೂ ಸವ್ರನಾಮಗಳೆಂದು ಕರೆಯುವುದರಲ್ಲಿ ತೊಂದರೆಯಿದೆ.
ಆದರೆ ಸಂಸ್ಕೃತದಲ್ಲಿ ಈ ತೊಂದರೆಯಿಲ್ಲ. ಯಾಕೆಂದರೆ ಸಂಸ್ಕೃತದ ವೈಯಾಕರಣಿಗಳು ಅದರ ಪದಗಳನ್ನೆಲ್ಲ ಕ್ರಿಯಾಪದ ಮತ್ತು ನಾಮಪದ ಎಂಬುದಾಗಿ ಎರಡೇ ಎರಡು ಪದವಗ್ರಗಳಲ್ಲಿ ವಿಭಜಿಸಲು ಶಕ್ತರಾಗಿದ್ದಾರೆ. ಹಾಗಾಗಿ, ಮೇಲೆ ಕೊಟ್ಟಿರುವ ಪದಗಳನ್ನೆಲ್ಲ `ಸವ್ರನಾಮ’ಗಳೆಂದು ಕರೆಯುವು ದರಲ್ಲಿ ಸಂಸ್ಕೃತದ ಮಟ್ಟಿಗೆ ತೊಂದರೆಯೇನೂ ಇಲ್ಲ. ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸವ್ರನಾಮಗಳ ಮಟ್ಟಿಗಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸ ಎಂಬುದನ್ನು ಗಮನಿಸಬಹುದು.
10.2.4 ಸಂಸ್ಕೃತದ ಸವ್ರಾದಿ' ಪದಗಳು ಸಂಸ್ಕೃತ ವ್ಯಾಕರಣಗಳಲ್ಲಿ ಸವ್ರ, ವಿಶ್ವ, ಏಕ, ತದ್, ಏತದ್, ಇದಂ, ಕಿಂ, ಇತರ, ಕತರ, ಉಭಯ, ಅಲ್ಪ ಮೊದಲಾದ ಮೂವತ್ತೈದು ಪದಗಳನ್ನು ಒಟ್ಟಿಗೆ ಸೇರಿಸಿ ಸವ್ರಾದಿ’ ಎಂಬ ಪಟ್ಟಿಯಲ್ಲಿ ಇರಿಸಲಾಗಿದೆ. ಅವುಗಳೊಂದಿಗೆ
211 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಬರುವ ವಿಭಕ್ತಿ ಪ್ರತ್ಯಯಗಳು ಬೇರೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಂದ ಭಿನ್ನವಾಗಿವೆ0iÉುಂಬುದೇ ಈ ಪಟ್ಟಿಗೆ ಆಧಾರ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸವ್ರ ರೂಪದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ಒಂದಕ್ಕೆ ಎಲ್ಲ' ಎಂಬ ಅಥ್ರವಿದ್ದು, ಅದು ಒಂದು ಸವ್ರನಾಮ ವಾಗಿ ಬಳಕೆಯಲ್ಲಿದೆ; ಇನ್ನೊಂದಕ್ಕೆ ಶಿವ’ ಎಂಬ ಅಥ್ರವಿದ್ದು, ಅದು ಸವ್ರ ನಾಮವಲ್ಲದ ಒಂದು ನಾಮಪದವಾಗಿ ಬಳಕೆಯಲ್ಲಿದೆ. ಈ ಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳ ರೂಪದಲ್ಲಿ ಹಲವು ವ್ಯತ್ಯಾಸಗಳಿವೆ.
ಪ್ರಥಮಾ-ಬಹುವಚನ ಚತುಥ್ರೀ-ಏಕವಚನ ಪಂಚಮೀ-ಏಕವಚನ ಸಪ್ತಮೀ-ಏಕವಚನ ಷಷ್ಠೀ-ಬಹುವಚನ
ಸವ್ರ `ಎಲ್ಲ’ ಸವ್ರೇ
ಸವ್ರಸ್ಮೈ ಸವ್ರಸ್ಮಾತ್ ಸವ್ರಸ್ಮಿನ್ ಸವ್ರೇಷಾಂ
ಸವ್ರ `ಶಿವ’ ಸವ್ರಾಃ ಸವ್ರಾಯ ಸವ್ರಾತ್ ಸವ್ರೇ ಸವ್ರಾಣಾಂ
ಸವ್ರ ಪಟ್ಟಿಯಲ್ಲಿ ಬಂದಿರುವ ಇತರ ಪದಗಳಿಗೂ ಮೇಲೆ ಕೊಟ್ಟಿರುವ ಸವ್ರ `ಎಲ್ಲ' ಪದದ ಹಾಗೆಯೇ ಇರುವಂತಹ ವಿಭಕ್ತಿ ರೂಪಗಳಿವೆ. ಈ ವಿಷಯವನ್ನು ಸಂಕ್ಷಿಪ್ತವಾಗಿ ಸೂಚಿಸಲು ಸಂಸ್ಕೃತದ ವೈಯಾಕರಣಿಗಳು ಇವನ್ನೆಲ್ಲ `ಸವ್ರಾದಿ' ಪಟ್ಟಿಯಲ್ಲಿ ಸೇರಿಸಿ ಹೇಳಿದ್ದಾರೆ.
ಕನ್ನಡದಲ್ಲಿ ನಾನು, ನೀನು ಮತ್ತು ತಾನು ಎಂಬವುಗಳನ್ನು ಬಿಟ್ಟು ಉಳಿದುವಕ್ಕೆ ಈ ರೀತಿ ವಿಶಿಷ್ಟವಾದ ವಿಭಕ್ತಿ ರೂಪಗಳಿಲ್ಲ. ಹಾಗಾಗಿ, ಸಂಸ್ಕೃತದ ಸವ್ರನಾಮಗಳ ಹಾಗೆ ಕನ್ನಡದ ಎಲ್ಲಾ ಸವ್ರನಾಮಗಳನ್ನೂ ಒಟ್ಟಿಗೆ ಒಂದು ವಗ್ರದಲ್ಲಿ ಸೇರಿಸಿ ಹೇಳಲು ಅಂತಹ ವಿಭಕ್ತಿ ರೂಪದ ಆಧಾರವೂ ಸಿಗುವು ¢®è.
10.3 ಎಣಿಕೆಯ ಪದಗಳು ಕನ್ನಡದ ಎಣಿಕೆಯ ಪದಗಳು ಹಲವು ವಿಷಯಗಳಲ್ಲಿ ಸಂಸ್ಕೃತದ ಎಣಿಕೆಯ (ಸಂಖ್ಯಾವಾಚಕ) ಪದಗಳಿಂದ ಭಿನ್ನವಾಗಿವೆ. ಹಾಗಾಗಿ ಅವನ್ನು ಸಂಸ್ಕೃತದ ಹಾಗೆ ನಾಮಪದಗಳ ಪದವಗ್ರದಲ್ಲಿ ಇರಿಸುವುದು ಸರಿಯಲ್ಲ.
ಸಂಸ್ಕೃತದ ಎಣಿಕೆಯ ಪದಗಳು ನಾಮಪದ ವಗ್ರದಲ್ಲಿ ಬರುತ್ತವೆ. ಆದರೆ ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಬಳಕೆಯಾಗುತ್ತವೆ, ಆದರೆ ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ
212 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು ಬಳಕೆಯಾಗುತ್ತವೆ. ಹಾಗಾಗಿ ಅವನ್ನು ಬೇರೆ0iÉುೀ ಪದವಗ್ರದಲ್ಲಿ ಇರಿಸುವ ಅವಶ್ಯಕತೆಯಿದೆ.
ಇದಲ್ಲದೆ, ಒಳರಚನೆಯಲ್ಲೂ ಕನ್ನಡದ ಎಣಿಕೆಯ ಪದಗಳು ಸಂಸ್ಕೃತದ ಎಣಿಕೆಯ ಪದಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿವೆ.
10.3.1 ಬಳಕೆಯಲ್ಲಿ ವ್ಯತ್ಯಾಸ ಕನ್ನಡದ ಎಣಿಕೆಯ ಪದಗಳನ್ನು ಒಂದು ನಾಮಪದದ ವಿಶೇಷಣವಾಗಿ ಬಳಸಿ ದಾಗ, ಅವು ಗುಣಪದಗಳ ಹಾಗೆ ಯಾವ ಪ್ರತ್ಯಯವನ್ನೂ ಪಡೆಯದೆ ಬರುತ್ತವೆ. ಆದರೆ ನಾಮಪದಗಳು ಈ ಜಾಗದಲ್ಲಿ ಷಷ್ಠೀ ಪ್ರತ್ಯಯದೊಂದಿಗೆ ಬರುತ್ತವೆ.
ನಾಮಪದ ಮಣ್ಣಿನ ಕೊಡ ಮರದ ಪೆಟ್ಟಿಗೆ
ಕಲ್ಲಿನ ಮನೆ
ಎಣಿಕೆಯ ಪದ ಮೂರು ಕೊಡ ಎಂಟು ಪೆಟ್ಟಿಗೆ ನಾಲ್ಕು ಮನೆ
ಗುಣಪದ ಕಪ್ಪು ಕೊಡ ದೊಡ್ಡ ಪೆಟ್ಟಿಗೆ ಹೊಸ ಮನೆ
(4PÀ) (4R) (4UÀ)
(4ಕ-ಗ)ದ ಮೊದಲನೇ ಕಾಲಂನಲ್ಲಿ ಕೊಟ್ಟಿರುವ ನಾಮಪದಗಳು ಷಷ್ಠೀ ವಿಭಕ್ತಿಯಲ್ಲಿ ಬಂದಿವೆ, ಆದರೆ ಎರಡನೇ ಕಾಲಂನಲ್ಲಿ ಕೊಟ್ಟಿರುವ ಎಣಿಕೆಯ ಪದಗಳು ಮತ್ತು ಮೂರನೇ ಕಾಲಂನಲ್ಲಿ ಕೊಟ್ಟಿರುವ ಗುಣಪದಗಳು ವಿಭಕ್ತಿ ಪ್ರತ್ಯಯವಿಲ್ಲದೆ ಹಾಗೆಯೇ ಬಂದಿವೆ.
ಈ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಆ ಭಾಷೆಯ ಎಣಿಕೆಯ ಪದಗಳನ್ನು ಒಂದು ನಾಮಪದದ ವಿಶೇಷಣವಾಗಿ ಬಳಸಿ ದಾಗ, ಅವು ಆ ನಾಮಪದದ ವಿಭಕ್ತಿ ಪ್ರತ್ಯಯದೊಂದಿಗೆ ಬರುತ್ತವೆ. ಇದೇ ರೀತಿಯಲ್ಲಿ ಸಂಸ್ಕೃತದ ನಾಮಪದಗಳನ್ನು (ಇಲ್ಲವೇ ಗುಣಪದಗಳನ್ನು) ಬೇರೊಂದು ನಾಮಪದದೊಂದಿಗೆ ವಿಶೇಷಣವಾಗಿ ಬಳಸಿದಾಗಲೂ ಅವು ಆ ನಾಮಪದದ ವಿಭಕ್ತಿ ಪ್ರತ್ಯಯವನ್ನು ಪಡೆಯುತ್ತವೆ.
(5)
ನಾಮಪದ
ಮೃತ್ತಿಕಃ ಘಟಃ
`ಮಣ್ಣಿನ ಕೊಡ’
ಎಣಿಕೆಯ ಪದ KPÀB WÀlB
`ಒಂದು ಕೊಡ’
ಗುಣಪದ ಕೃಷ್ಣಃ ಘಟಃ `ಕಪ್ಪು ಕೊಡ’
(5)ರಲ್ಲಿ ಕೊಟ್ಟಿರುವ ಸಂಸ್ಕೃತದ ಪದಕಂತೆಗಳಲ್ಲಿ ಮೃತ್ತಿಕ, ಏಕ ಮತ್ತು ಕೃಷ್ಣ ಇವು ಮೂರೂ ಅವುಗಳ ಮುಂದಿರುವ ಘಟ ಎಂಬುದರ ಲಿಂಗ-ವಚನ- ವಿಭಕ್ತಿಯನ್ನೇ ಪಡೆದಿವೆ. ಈ ಕಾರಣಕ್ಕಾಗಿ ಸಂಸ್ಕೃತದ ನಾಮಪದ, ಎಣಿಕೆಯ
213 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಪದ ಮತ್ತು ಗುಣಪದಗಳನ್ನು ಒಂದೇ ಪದವಗ್ರದಲ್ಲಿ ಇರಿಸುವುದು ಸರಿ. ಆದರೆ ಕನ್ನಡದಲ್ಲಿ ಆ ರೀತಿ ಮಾಡುವುದು ಸರಿಯಲ್ಲ.
ಕನ್ನಡದ ಎಣಿಕೆಯ ಪದಗಳನ್ನು ನಾಮಪದದ ಜಾಗದಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಹಾಗೆ0iÉುೀ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಬಳಸಲು ಸಾಧ್ಯವಿದೆ (6ಕ-ಖ ನೋಡಿ). ಆದರೆ ಗುಣಪದಗಳನ್ನು ಆ ರೀತಿ ಬಳಸಲು ಸಾಧ್ಯವಿಲ್ಲ (3.2.5 ನೋಡಿ).
ಈ ವಿಷಯದಲ್ಲಿ ಕನ್ನಡದ ಎಣಿಕೆಯ ಪದಗಳು ಸಂಸ್ಕೃತದ ಎಣಿಕೆಯ ಪದಗಳನ್ನು ಹೋಲುತ್ತವೆ. ಯಾಕೆಂದರೆ, ಸಂಸ್ಕೃತದಲ್ಲೂ ಎಣಿಕೆಯ ಪದ ಗಳನ್ನು ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ.
(6ಕ) ಅಹಂ ಏಕಂ ಫಲಂ ಖಾದಾಮಿ
`ನಾನು ಒಂದು ಹಣ್ಣನ್ನು ತಿನ್ನುತ್ತೇನೆ
(6ಖ) ಅಹಂ ಏಕಂ ಖಾದಾಮಿ
`ನಾನು ಒಂದನ್ನು ತಿನ್ನುತ್ತೇನೆ
(6ಖ)ದಲ್ಲಿ ಸಂಸ್ಕೃತದ ಏಕಂ ಎಣಿಕೆಯ ಪದ ಮತ್ತು ಕನ್ನಡದ ಒಂದನ್ನು ಎಣಿಕೆಯ ಪದ ಇವೆರಡೂ ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ನಾಮಪದದ (ಫಲಂ ಎಂಬುದರ ಇಲ್ಲವೇ ಹಣ್ಣನ್ನು ಎಂಬುದರ) ಜಾಗದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು.
10.3.2 ಒಳರಚನೆಯಲ್ಲಿ ವ್ಯತ್ಯಾಸ ಕನ್ನಡದಲ್ಲಿ ಹನ್ನೊಂದು, ಹನ್ನೆರಡು, ಹದಿಮೂರು ಮೊದಲಾದ ಇಪ್ಪತ್ತರ ವರೆಗಿನ ಎಣಿಕೆಯ ಪದಗಳನ್ನು ಹತ್ತು ಪದದ ಷಷ್ಠೀ ರೂಪಕ್ಕೆ ಒಂದು, ಎರಡು, ಮೂರು ಮೊದಲಾದವುಳನ್ನು ಸೇರಿಸಿ ರಚಿಸಲಾಗಿದೆ (ಹತ್ತಿನ + ಒಂದು - ಹನ್ನೊಂದು). ಇದಕ್ಕೆ ಬದಲು ಇಪ್ಪತ್ತು, ಮೂವತ್ತು, ನಲು ವತ್ತು, ಐವತ್ತು ಮೊದಲಾದವುಗಳನ್ನು ಎರಡು, ಮೂರು, ನಾಲ್ಕು, ಐದು ಮೊದಲಾದವುಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ರಚಿಸಲಾಗಿದೆ.
ಈ ರೀತಿ ಕನ್ನಡದಲ್ಲಿ ಈ ಎರಡು ರೀತಿಯ ಎಣಿಕೆಯ ಪದಗಳ ಒಳರಚನೆ ಯಲ್ಲಿ ವ್ಯತ್ಯಾಸವಿದೆ. ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಪದಗಳನ್ನೂ ಒಂದೇ ರೀತಿಯಲ್ಲಿ, ಎಂದರೆ ಏಕ, ದ್ವಾ, ತ್ರಯ, ಚತುರ್ ಮೊದಲಾದುವನ್ನು `ಹತ್ತು’ ಎಂಬಥ್ರದ ಪದಕ್ಕೆ ಸೇರಿಸಿ ರಚಿಸಲಾಗಿದೆ.
214 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು ಏಕಾದಶ ಹನ್ನೊಂದು', ದ್ವಾದಶ ಹನ್ನೆರಡು’, ತ್ರಯೋದಶ ಹದಿ ಮೂರು', ಚತುದ್ರಶ ಹದಿನಾಲ್ಕು’ ಮೊದಲಾದವುಗಳಲ್ಲಿ ಇದಕ್ಕಾಗಿ ದಶ ಹತ್ತು' ಪದ ಬಂದಿದೆಯಾದರೆ, ವಿಂಶತಿ ಇಪ್ಪತ್ತು’, ತ್ರಿಂಶತ್ ಮೂವತ್ತು', ಚತ್ವಾರಿಂಶತ್ ನಲುವತ್ತು’, ಪಂಚಾಶತ್ ಐವತ್ತು' ಮೊದಲಾದವುಗಳಲ್ಲಿ *ದಶತಿ ಎಂಬುದರಿಂದ ಬಂದಿರಬಹುದಾದ ಶತಿ ಇಲ್ಲವೇ ಶತ್ ಪದ ಬಂದಿದೆ. ಇನ್ನೊಂದು ವ್ಯತ್ಯಾಸವೇನೆಂದರೆ, ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದುವಕ್ಕೆ ಒಂದು, ಎರಡು, ಮೂರು ಮೊದಲಾದವುಗಳನ್ನು ಸೇರಿಸಿ ಹೇಳಬೇಕಾದಾಗ ಕನ್ನಡದಲ್ಲಿ ಮೊದಲಿನವನ್ನು ಷಷ್ಠೀ ರೂಪದಲ್ಲಿ ಬಳಸುವ ಕ್ರಮವಿದೆ. ಒಂದು, ಎರಡು ಮೊದಲಾದವುಗಳು ಅವುಗಳ ಅನಂತರ ಬರುತ್ತವೆ. ಕನ್ನಡದ ಇಪ್ಪತ್ತಮೂರು, ನಲುವತ್ತನಾಲ್ಕು, ಅರುವತ್ತಮೂರು ಮೊದಲಾ ದವುಗಳಲ್ಲೂ, ಮತ್ತು ನೂರಮೂವತ್ತಾರು, ಸಾವಿರದ ಇನ್ನೂರ ನಲುವತ್ತ ಮೂರು ಮೊದಲಾದವುಗಳಲ್ಲೂ ಇದೇ ವ್ಯಾಕರಣ ವಿಧಾನ ಬಳಕೆಯಾಗಿದೆ. ಆದರೆ ಸಂಸ್ಕೃತದಲ್ಲಿ ಒಂದು, ಎರಡು, ಮೂರು ಮೊದಲಾದುವನ್ನು ಸೂಚಿಸುವ ಪದಗಳು ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದುವನ್ನು ಸೂಚಿಸುವ ಪದಗಳ ಮೊದಲು ಬರುತ್ತವೆ. ಉದಾಹರಣೆಗಾಗಿ, ಪಂಚಸಪ್ತತಿ ಎಪ್ಪತ್ತೈದು’ ಪದದಲ್ಲಿ ಪಂಚ ಐದು' ಪದ ಮೊದಲು ಬಂದಿದೆ ಮತ್ತು ಸಪ್ತತಿ ಎಪ್ಪತ್ತು’ ಪದ ಅನಂತರ ಬಂದಿದೆ. ಇಲ್ಲಿ ಪದಗಳ ಅನುಕ್ರಮದಲ್ಲಿ ಬದಲಾವಣೆಯಾಗಿದೆ0iÉುಂಬುದನ್ನು ಗಮನಿಸಬಹುದು. ಕನ್ನಡದ ಎಣಿಕೆಯ ಪದಗಳನ್ನು ಪದಗಳ ರೂಪದಲ್ಲಿ ಬರೆಯಲಿ ಇಲ್ಲವೇ ಅಂಕೆಗಳ ರೂಪದಲ್ಲಿ ಬರೆಯಲಿ, ಅವುಗಳ ಒಳರಚನೆಯಲ್ಲಿ ಬರುವ ಅಂಕೆಗಳ ಅನುಕ್ರಮದಲ್ಲಿ ವ್ಯತ್ಯಾಸವೇನೂ ಕಾಣಿಸುವುದಿಲ್ಲ.
ಇಪ್ಪತ್ತಮೂರು
23 ನಲುವತ್ತನಾಲ್ಕು
44 136 ನೂರಮೂವತ್ತಾರು
1243 ಸಾವಿರದ ಇನ್ನೂರ
ನಲುವತ್ತಮೂರು
2 (ಹತ್ತು) 3 4 (ಹತ್ತು) 4 1 (ನೂರು) 3 (ಹತ್ತು) 6 1 (ಸಾವಿರ) 2 (ನೂರು)
4 (ಹತ್ತು) 3
ಆದರೆ ಸಂಸ್ಕೃತದ ಎಣಿಕೆಯ ಪದಗಳನ್ನು ಪದರೂಪದಲ್ಲಿ ಬರೆದಾಗ ಅವುಗಳ ಒಳರಚನೆಯಲ್ಲಿ ಬರುವ ಅಂಕೆಗಳ ಅನುಕ್ರಮ ಒಂದು ರೀತಿಯಲ್ಲಿ ಇರುತ್ತದೆ ಮತ್ತು ಅಂಕೆಗಳ ರೂಪದಲ್ಲಿ ಬರೆದಾಗ ಇನ್ನೊಂದು ರೀತಿಯಲ್ಲಿ ಇರುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳು ಈ ವಿಷಯವನ್ನು ಸ್ಪಷ್ಟಪಡಿಸು ತ್ತವೆ.
215 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
34
ಚತುಸ್ತ್ರಿಂಶತ್ 4-3 (ಹತ್ತು) ಪಂಚಸಪ್ತತಿ 5-7 (ಹತ್ತು) 217 ಸಪ್ತದಶಂ ದ್ವಿಶತಂ
75
7 (ಹತ್ತು) 2 (ನೂರು)
ಮೂವತ್ತನಾಲ್ಕು' 3 (ಹತ್ತು) 4 ಎಪ್ಪತ್ತೈದು’ 7 (ಹತ್ತು) 5 ಇನ್ನೂರ ಹದಿನೇಳು' 2 (ನೂರು) (1) (ಹತ್ತು) 7
ಮೇಲೆ ಮೊದಲನೇ ಕಾಲಂನಲ್ಲಿ ಕೊಟ್ಟಿರುವ ಅಂಕೆಯ ರೂಪದಲ್ಲಿರುವ ಸಂಖ್ಯೆಯ ಒಳರಚನೆಗೂ ಮತ್ತು ಎರಡನೇ ಕಾಲಂನಲ್ಲಿ ಕೊಟ್ಟಿರುವ ಪದರೂಪ ದಲ್ಲಿರುವ ಅದೇ ಸಂಖ್ಯೆಯ ಒಳರಚನೆಗೂ ನಡುವೆ ಹಲವು ವ್ಯತ್ಯಾಸಗಳಿರುವು ದನ್ನು ಗಮನಿಸಬಹುದು.
ಉದಾಹರಣೆಗಾಗಿ, ಮೊದಲನೆಯ ಕಾಲಂನಲ್ಲಿ ಅಂಕೆಯ ರೂಪದಲ್ಲಿರುವ 34 ಸಂಖ್ಯೆಯಲ್ಲಿ 3 ಮೊದಲು ಬಂದಿದೆ ಮತ್ತು 4 ಅನಂತರ ಬಂದಿದೆ; ಆದರೆ, ಎರಡನೆಯ ಕಾಲಂನಲ್ಲಿ ಪದರೂಪದಲ್ಲಿರುವ ಚತುಸ್ತ್ರಿಂಶತ್ ಸಂಖ್ಯೆಯಲ್ಲಿ 3 (ತ್ರಿಂಶತ್) ಅನಂತರ ಬಂದಿದೆ ಮತ್ತು 4 (ಚತುರ್) ಅದಕ್ಕಿಂತ ಮೊದಲು ಬಂದಿದೆ. ಇತರ ಸಂಖ್ಯೆಗಳಲ್ಲೂ ಹೀಗೆ0iÉುೀ.
ಆದರೆ ಮೂರನೇ ಕಾಲಂನಲ್ಲಿ ಬಂದಿರುವ ಈ ಸಂಖ್ಯೆಗಳ ಕನ್ನಡ ಪದ ರೂಪಗಳಿಗೂ ಮತ್ತು ಮೊದಲನೆಯ ಕಾಲಂನಲ್ಲಿ ಅಂಕೆಯ ರೂಪದಲ್ಲಿರುವ ಅವೇ ಸಂಖ್ಯೆಗಳಿಗೂ ನಡುವೆ ಇಂತಹ ವ್ಯತ್ಯಾಸಗಳಿಲ್ಲ. ಕನ್ನಡದ ಮೂವತ್ತ ನಾಲ್ಕು ಎಂಬುದರಲ್ಲಿ 34 ಎಂಬುದರಲ್ಲಿರುವ ಹಾಗೆ 3 (ಮೂವತ್ತ) ಮೊದಲು ಬಂದಿದೆ ಮತ್ತು 4 (ನಾಲ್ಕು) ಅನಂತರ ಬಂದಿದೆ.
10.4 ತಿರುಳು ಕನ್ನಡದಲ್ಲಿ ಆಡುಗ (ಉತ್ತಮ) ಮತ್ತು ಕೇಳುಗ (ಮಧ್ಯಮ) ಪುರುಷದ ನಾನು, ನಾವು, ನೀನು, ನೀವು ಎಂಬವುಗಳು ಮತ್ತು ಇತರ (ಪ್ರಥಮ) ಪುರುಷದ ತಾನು, ತಾವು ಎಂಬವುಗಳು ಒಂದು ವಗ್ರದಲ್ಲಿ ಸೇರುವುವಾದರೆ, ಇತರ ಸವ್ರನಾಮಗಳು ಬೇರೊಂದು ವಗ್ರದಲ್ಲಿ ಸೇರುತ್ತವೆ. ಸಂಸ್ಕೃತದ ಹಾಗೆ ಇವೆಲ್ಲವನ್ನೂ `ಸವ್ರನಾಮ’ (ಇಲ್ಲವೇ ಸವ್ರಾದಿ) ಎಂಬ ಒಂದೇ ವಗ್ರದಲ್ಲಿ ಸೇರಿಸಿ ಹೇಳಲು ಕನ್ನಡ ವ್ಯಾಕರಣದಲ್ಲಿ ಯಾವ ಆಧಾರವೂ ಇಲ್ಲ.
ಬೇರೆ ಕೆಲವು ವಿಷಯಗಳಲ್ಲೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬರುವ ಸವ್ರನಾಮಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.
216 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಸವ್ರನಾಮಗಳು ಮತ್ತು ಎಣಿಕೆಯ ಪದಗಳು ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಬರುವುವಾದರೂ ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬರುತ್ತವೆ.
217 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
11. ಕ್ರಿಯಾರೂಪಗಳು
11.1 ಮುನ್ನೋಟ ಕನ್ನಡದ ಕ್ರಿಯಾರೂಪಗಳು ಸಂಸ್ಕೃತದ ಕ್ರಿಯಾರೂಪಗಳಿಗಿಂತ ಹಲವು ವಿಷಯ ಗಳಲ್ಲಿ ಭಿನ್ನವಾಗಿವೆಯಾದ ಕಾರಣ, ಅವನ್ನು ವಿವರಿಸುವಲ್ಲಿ ಕನ್ನಡದ ವೈಯಾ ಕರಣಿಗಳಿಗೆ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಜಾಸ್ತಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿದ್ದರೂ ಸಂಸ್ಕೃತ ವ್ಯಾಕರಣದ ನೆರಳನ್ನು ಇಲ್ಲೂ ಹಲವು ಕಡೆಗಳಲ್ಲಿ ಕಾಣಬಹುದು.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ಬರುವ ತಿಙõï ಎಂಬ ಹೆಸರಿನ ಆಖ್ಯಾತ ಪ್ರತ್ಯಯಗಳು ಪುರುಷ ಮತ್ತು ವಚನಭೇದಗಳನ್ನು ಮಾತ್ರ ಸೂಚಿಸುತ್ತವಲ್ಲದೆ ಲಿಂಗ ಭೇದವನ್ನು ಸೂಚಿಸುವುದಿಲ್ಲ. ಆದರೆ ಕನ್ನಡದ ಆಖ್ಯಾತ ಪ್ರತ್ಯಯಗಳು ಪುರುಷ-ವಚನ ಭೇದಗಳನ್ನು ಮಾತ್ರವಲ್ಲದೆ ಪ್ರಥಮ ಪುರುಷದಲ್ಲಿ ಲಿಂಗ ಭೇದವನ್ನೂ ಸೂಚಿಸುತ್ತವೆ.
ಪುರುಷ ಏಕವಚನದ ರೂಪಗಳು ಹೋಗುತ್ತಾನೆ ಪ್ರಥಮ ಹೋಗುತ್ತಾಳೆ ಹೋಗುತ್ತದೆ
UÀZÀÒw
ಬಹುವಚನದ ರೂಪಗಳು ಲಿಂಗ ಗಚ್ಛಂತಿ ಹೋಗುತ್ತಾರೆ (ಪುಲ್ಲಿಂಗ) ,, (ಸ್ತ್ರೀಲಿಂಗ) ಹೋಗುತ್ತವೆ (ನಪುಂಸಕಲಿಂಗ)
ಮಧ್ಯಮ ಗಚ್ಛಸಿ ಉತ್ತಮ ಗಚ್ಛಾಮಿ ಹೋಗುತ್ತೇನೆ
ಹೋಗುತ್ತೀ
ಗಚ್ಛಥ ಹೋಗುತ್ತೀರಿ ಗಚ್ಛಾಮಃ ಹೋಗುತ್ತೇವೆ
ಕನ್ನಡದ ವೈಯಾಕರಣಿಗಳು ಕನ್ನಡದ ಆಖ್ಯಾತ ಪ್ರತ್ಯಯಗಳನ್ನು ವಣ್ರಿಸು ವಾಗ, ಮೊದಲಿಗೆ ಅವು ಸಂಸ್ಕೃತದ ಹಾಗೆ ಪುರುಷ ಮತ್ತು ವಚನ ಭೇದ ಗಳನ್ನು ಮಾತ್ರ ಸೂಚಿಸುತ್ತವೆ0iÉುಂದು ಹೇಳಿ ಅನಂತರ ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳು ಆಖ್ಯಾತ ಪ್ರತ್ಯಯಗಳಿಗೆ ಆದೇಶಗಳಾಗಿ ಬರುತ್ತವೆ ಎಂಬುದಾಗಿ ವಣ್ರಿಸುತ್ತಾರೆ. ಇದರಿಂದಾಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗಿದೆ.
ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ತಿಙõï ಪ್ರತ್ಯಯವನ್ನು ಮಾತ್ರ ಬಳಸ ಬೇಕಾಗುತ್ತದೆ. ಈ ಪ್ರತ್ಯಯ ಪುರುಷ-ವಚನಭೇದವನ್ನು ಮಾತ್ರವಲ್ಲದೆ ಕಾಲ ಭೇದವನ್ನೂ ಸೂಚಿಸುತ್ತದೆ. ಉದಾಹರಣೆಗಾಗಿ, ಯಾತಿ `ಹೋಗುತ್ತಾನೆ' ಎಂಬ
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಭೇದವನ್ನು
ಕ್ರಿಯಾರೂಪದಲ್ಲಿ ಯಾ ಹೋಗು' ಕ್ರಿಯಾಪದದೊಂದಿಗೆ ತಿ ಪ್ರತ್ಯಯ (ತಿಙõï ಪ್ರತ್ಯಯ) ಮಾತ್ರ ಬಂದಿದೆ. ಆದರೆ ಕನ್ನಡದ ಕ್ರಿಯಾಪದಗಳೊಂದಿಗೆ ಎರಡು ಪ್ರತ್ಯಯಗಳು ಬರುತ್ತಿದ್ದು ಕಾಲಭೇದವನ್ನು ಮತ್ತು ಎರಡನೆಯದು ಅವುಗಳಲ್ಲಿ ಮೊದಲನೆಯದು ಪುರುಷ-ಲಿಂಗ-ವಚನ ಸೂಚಿಸುತ್ತವೆ. ಉದಾಹರಣೆಗಾಗಿ, ಹೋಗುತ್ತಾನೆ ಕ್ರಿಯಾರೂಪದಲ್ಲಿ ಹೋಗು ಕ್ರಿಯಾಪದದೊಂದಿಗೆ ಕಾಲವನ್ನು ಸೂಚಿಸುವ ಉತ್್ತ ಪ್ರತ್ಯಯ ಮತ್ತು ಪುರುಷ-ವಚನ-ಲಿಂಗಗಳನ್ನು ಸೂಚಿಸುವ ಆನೆ ಪ್ರತ್ಯಯ ಇವೆರಡೂ ಬಂದಿವೆ. ಕನ್ನಡದ ವೈಯಾಕರಣಿಗಳು ಈ ಎರಡು ಪ್ರತ್ಯಯಗಳಲ್ಲಿ ಎರಡನೆಯದನ್ನು ಮಾತ್ರ ಪ್ರತ್ಯಯ’ವೆಂದು ಕರೆದು, ಮೊದಲನೆಯದನ್ನು ಆಗಮವೆಂದು ವಣ್ರಿಸಿ ದ್ದಾರೆ. ಉದಾಹರಣೆಗಾಗಿ, ಬರುತ್ತಾನೆ ಕ್ರಿಯಾರೂಪದಲ್ಲಿ ಬರು ಎಂಬುದನ್ನು ಕ್ರಿಯಾಧಾತುವೆಂದೂ ಆನೆ ಎಂಬುದನ್ನು ಪ್ರತ್ಯಯವೆಂದೂ ಮತ್ತು ಉತ್ತ ಎಂಬುದನ್ನು ಆ ಪ್ರತ್ಯಯದೊಂದಿಗೆ ಬರುವ ಆಗಮವೆಂದೂ ಕನ್ನಡದ ವೈಯಾಕರಣಿಗಳು ವಣ್ರಿಸುತ್ತಾರೆ.
ಇಲ್ಲೂ ಅವರು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಹೊರಿಸ ಹೋಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗುವ ಹಾಗೆ ಮಾಡಿದ್ದಾರೆ.
11.2 ಕಾಲಸಂಬಂಧ ಮತ್ತು ಕಾಲವ್ಯವಸ್ಥೆ ಕ್ರಿಯಾರೂಪಗಳ ಮೂಲಕ ಕಾಲಭೇದವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಕನ್ನಡದ ಕ್ರಿಯಾರೂಪಗಳಲ್ಲಿ ಹಿಂದಿನ ಕಾಲ (ಭೂತ ಕಾಲ) ಮತ್ತು ಮುಂದಿನ ಇಲ್ಲವೇ ಈಗಿನ ಕಾಲ (ಭವಿಷ್ಯತ್ ಇಲ್ಲವೇ ವತ್ರಮಾನ ಕಾಲ) ಎಂಬಂತಹ ಕಾಲ ಸಂಬಂಧದ' ಭೇದ ಕಾಣಿಸುತ್ತದೆ; ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಮುಗಿದ (ಪೂಣ್ರ) ಮತ್ತು ಮುಗಿಯದ (ಅಪೂಣ್ರ) ಘಟನೆ ಎಂಬಂತಹ ಕಾಲ ವ್ಯವಸ್ಥೆಯ’ ಭೇದ ಕಾಣಿಸುತ್ತದೆ.
ಈ ವಿಷಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ಹಾಗಿದೆಯಾದರೆ ಸಂಸ್ಕೃತ ಅದಕ್ಕಿಂತ ತೀರಾ ಭಿನ್ನವಾಗಿದೆ.
11.2.1 ಕನ್ನಡದ ಕಾಲಸಂಬಂಧ ಕನ್ನಡದ ಕಾಲ ಪ್ರತ್ಯಯಗಳು ಒಂದು ವಾಕ್ಯವು ತಿಳಿಸುವ ಘಟನೆಗೂ ಆ ವಾಕ್ಯವನ್ನು ಬಳಸುವ ಸಮಯಕ್ಕೂ ನಡುವಿರುವ ಸಂಬಂಧವನ್ನು ತಿಳಿಸುತ್ತದೆ. ಉದಾಹರಣೆಗಾಗಿ, ರಾಜು ಮನೆಗೆ ಹೋದ ಎಂಬ ವಾಕ್ಯ ಹಿಂದಿನ ಕಾಲ ದಲ್ಲಿದೆ, ಎಂದರೆ ಆ ವಾಕ್ಯ ತಿಳಿಸುವ (ರಾಜು ಮನೆಗೆ ಹೋಗಿದ್ದಾನೆಂಬ) ಘಟನೆ ಅದನ್ನಾಡುವ ಸಮಯಕ್ಕಿಂತ ಮೊದಲೇ ನಡೆದಿದೆ.
218 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ರಾಜು ಮನೆಗೆ ಹೋಗುತ್ತಾನೆ ವಾಕ್ಯ ಮುಂದಿನ (ಇಲ್ಲವೇ ಈಗಿನ) ಕಾಲದಲ್ಲಿದೆ, ಎಂದರೆ ಅದು ತಿಳಿಸುವ ಘಟನೆ ಆ ವಾಕ್ಯವನ್ನಾಡುವ ಸಮಯದ ಅನಂತರ ನಡೆಯುವಂತಹದು (ಅಥವಾ ಈಗಿನ ಕಾಲದಲ್ಲಿ (ರೂಢಿಯಲ್ಲಿ) ಜರಗುವಂತಹದು).
ಕನ್ನಡದ ಕ್ರಿಯಾರೂಪಗಳಲ್ಲಿ ಈ ರೀತಿ ಹಿಂದಿನ ಕಾಲ ಮತ್ತು ಮುಂದಿನ ಕಾಲ ಎಂಬುದಾಗಿ ಎರಡು ರೀತಿಯ ಕಾಲಗಳನ್ನು ಸೂಚಿಸುವ ದ ಮತ್ತು ಉತ್ತ ಪ್ರತ್ಯಯಗಳು ಬಳಕೆಯಾಗುತ್ತವೆ. ಬಂದ-ಬರುತ್ತಾನೆ, ತಿಂದ-ತಿನ್ನುತ್ತಾನೆ, ಹಾಡಿದ-ಹಾಡುತ್ತಾನೆ ಮೊದಲಾದ ಕ್ರಿಯಾರೂಪಗಳಲ್ಲಿ ಈ ಎರಡು ಪ್ರತ್ಯಯಗಳ ಬಳಕೆಯನ್ನು ಕಾಣಬಹುದು.
ಕನ್ನಡದ ವೈಯಾಕರಣಿಗಳು ಕನ್ನಡದಲ್ಲಿ ಭೂತ, ವತ್ರಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ಕಾಲಸೂಚಕ ಪ್ರತ್ಯಯಗಳಿವೆಯೆಂದು ಹೇಳು ತ್ತಾರೆ. ಹಳೆಗನ್ನಡದಲ್ಲಿ ಇವು ದ, ದಪ ಮತ್ತು ವ ಎಂಬವುಗಳು ಮತ್ತು ಹೊಸಗನ್ನಡದಲ್ಲಿ ದ, ಉತ್ತ ಮತ್ತು ವ ಎಂಬವುಗಳು ಎಂಬುದು ಇವರ ಅಭಿಪ್ರಾಯ.
ಆದರೆ ನಿಜಕ್ಕೂ ಹೊಸಗನ್ನಡದಲ್ಲಿ ಉತ್ತ ಪ್ರತ್ಯಯಯವೇ ವತ್ರಮಾನ ಮತ್ತು ಭವಿಷ್ಯದಥ್ರಗಳೆರಡರಲ್ಲೂ ಬಳಕೆಯಾಗುತ್ತಿದ್ದು, ವ ಪ್ರತ್ಯಯದ ಬಳಕೆ ಬಹಳ ಅಪರೂಪವೆಂದೇ ಹೇಳಬಹುದು.
ಇದಲ್ಲದೆ, ಹಳೆಗನ್ನಡದಲ್ಲಿ ದಪ ಎಂಬುದು ನಿಜಕ್ಕೂ ಒಂದು ಪ್ರತ್ಯಯ ವಲ್ಲ. ಅದರಲ್ಲಿ ಕಾಣಿಸುವ ದ ಎಂಬುದು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವಾಗಿದ್ದು ಪ ಎಂಬುದು ಅದಕ್ಕಿಂತ ಭಿನ್ನವಾಗಿರುವ ಮುಂದಿನ ಸಮಯ ವನ್ನು ಸೂಚಿಸುವ ಪ್ರತ್ಯಯವಾಗಿದೆ.
ಉದಾಹರಣೆಗಾಗಿ, ಬಂದಪಂ ಕ್ರಿಯಾರೂಪವನ್ನು ಬರು ಕ್ರಿಯಾಪದದ ಬಂದ ರೂಪಕ್ಕೆ ಆಗು ಕ್ರಿಯಾಪದದ ಅಪ್ಪಂ ರೂಪವನ್ನು ಸೇರಿಸಿ ರಚಿಸಲಾಗಿದೆ. ಸಂಧಿಯಲ್ಲಿ ಈ ಎರಡನೆಯ ರೂಪ ಅಪಂ ಎಂದಾಗಿದೆ ಮತ್ತು ಅನಂತರ ಅದರ ಅಕಾರ ಲೋಪಗೊಂಡು ಪಂ ಎಂದಿಷ್ಟೇ ಉಳಿದಿದೆ (ಬಂದವನ್ ಅಪ್ಪನ್ - ಬಂದಪಂ).
ಹಳೆಗನ್ನಡದಲ್ಲಿ ದಪ ಮತ್ತು ವ `ಪ್ರತ್ಯಯ'ಗಳ ಬಳಕೆ0iÉುಂತಹದು ಎಂಬುದನ್ನು ಪರಿಶೀಲಿಸಿದಾಗಲೂ ಮೇಲೆ ಕೊಟ್ಟಿರುವ ಕನ್ನಡ ವೈಯಾಕರಣಿಗಳ ಅಭಿಪ್ರಾಯ ತಪ್ಪೆಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗಾಗಿ, ಪಂಪಭಾರತ zÀ°è ಮಾತ್ರವಲ್ಲದೆ ಭವಿಷ್ಯದಥ್ರದಲ್ಲೂ ಬಳಕೆಯಾಗುತ್ತದೆ.
ಇದಲ್ಲದೆ, ವ ಪ್ರತ್ಯಯವೂ ಪಂಪಭಾರತದಲ್ಲಿ ಭವಿಷ್ಯದಥ್ರದಲ್ಲಿ ಮಾತ್ರ ವಲ್ಲದೆ ವತ್ರಮಾನಾಥ್ರದಲ್ಲೂ ಬಳಕೆಯಾಗುತ್ತದೆ. ಹಾಗಾಗಿ, ದಪ ಮತ್ತು ವ ಪ್ರತ್ಯಯಗಳ ನಡುವಿನ ವ್ಯತ್ಯಾಸಕ್ಕೆ ಕಾಲಭೇದವನ್ನು ಸೂಚಿಸುವ ಬದಲು
ವತ್ರಮಾನಾಥ್ರದಲ್ಲಿ
ಪ್ರತ್ಯಯ
zÀ¥À
219 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಬೇರೆ0iÉುೀ ಕೆಲಸವಿದೆ0iÉುಂದು ಹೇಳಬೇಕಾಗುತ್ತದೆ (ಜಾಸ್ತಿ ವಿವರಗಳಿಗೆ ಭಟ್ 2005:200 ನೋಡಿ).
ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯವಾದ ವಿಷಯವೇನೆಂದರೆ ಸಾಮಾನ್ಯವಾಗಿ ಘಟನೆಗಳ ಕಾಲವನ್ನು ತಿಳಿಸುವಾಗ ಅವು ಮಾತನಾಡುವ ಸಮಯಕ್ಕಿಂತ ಮೊದಲೇ ನಡೆದವುಗಳು (ಎಂದರೆ ಹಿಂದಿನ ಕಾಲದವು) ಮತ್ತು ಮಾತನಾಡುವ ಸಮಯದ ಅನಂತರ ನಡೆಯುವವುಗಳು (ಎಂದರೆ ಮುಂದಿನ ಕಾಲದವು) ಎಂಬುದಾಗಿ ಎರಡು ವಿಧದವುಗಳೆಂದು ವಿಭಜಿಸುವುದೇ ಸುಲಭ.
ಯಾಕೆಂದರೆ, ಅವು ಮಾತನಾಡುವ ಕಾಲದಲ್ಲಿ ನಡೆಯುತ್ತಿವೆಯೆಂಬುದಾಗಿ (ಎಂದರೆ ಈಗಿನ (ವತ್ರಮಾನ) ಕಾಲದವು ಎಂಬುದಾಗಿ) ಹೇಳಬೇಕಿದ್ದಲ್ಲಿ ನಿರಂತರವಾಗಿ ನಡೆಯುವ ಇಲ್ಲವೇ ರೂಢಿಯಲ್ಲಿ ನಡೆಯುವ ಘಟನೆಗಳಾಗಿರ ಬೇಕಾಗುತ್ತದೆ.
ಕನ್ನಡದಲ್ಲಿ ರೂಢಿಯಲ್ಲಿ ಜರಗುವ ಘಟನೆಗಳನ್ನು ಮೇಲೆ ಸೂಚಿಸಿದ ಹಾಗೆ ಉತ್ತ ಪ್ರತ್ಯಯದ ಮೂಲಕವೇ ಸೂಚಿಸಲಾಗುತ್ತದೆ. ಆದರೆ ನಿರಂತರವಾಗಿ ನಡೆಯುವ ಘಟನೆಗಳನ್ನು ಸೂಚಿಸಬೇಕಾದಲ್ಲಿ ಅದಕ್ಕಾಗಿ ಮಾಡುತ್ತಾ ಇದ್ದಾನೆ ಎಂಬಂತಹ ನಿರಂತರಾಥ್ರದ ಕ್ರಿಯಾರೂಪವನ್ನು ಬಳಸಲಾಗುತ್ತದೆ. ಈ ಕ್ರಿಯಾ ರೂಪದ ಮೂಲಕ ಘಟನೆಯ ಕಾಲವನ್ನು ಮಾತ್ರವಲ್ಲದೆ ಕಾಲ ವ್ಯವಸ್ಥೆಯನ್ನೂ (ಅದು ನಿರಂತರವಾದುದು ಎಂಬುದಾಗಿ) ಸೂಚಿಸಲಾಗುತ್ತದೆ (ಜಾಸ್ತಿ ವಿವರ ಗಳಿಗೆ ಭಟ್ 2004 ನೋಡಿ).
11.2.2 ಸಂಸ್ಕೃತದ ಕಾಲವ್ಯವಸ್ಥೆ ಸಂಸ್ಕೃತದ ಕ್ರಿಯಾರೂಪಗಳನ್ನು ನಾಲ್ಕು ಮುಖ್ಯ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಆ ಭಾಷೆಯ ವ್ಯಾಕರಣಗಳಲ್ಲಿ ಇವನ್ನು ಲಟ್, ಲಿಟ್, ಲುಙõï ಮತ್ತು ಲೃಟ್ ಎಂಬ ನಾಲ್ಕು ಲಕಾರಗಳೆಂದು ಹೆಸರಿಸುವುದು ರೂಢಿ. ಸಂಸ್ಕೃತದ ವೈಯಾಕರಣಿಗಳು ಇವು ಬೇರೆ ಬೇರೆ `ಕಾಲ’ಗಳನ್ನು ಸೂಚಿಸು ತ್ತವೆ0iÉುಂದು ಹೇಳುತ್ತಾರಾದರೂ ನಿಜಕ್ಕೂ ಅವು ಕಾಲವ್ಯವಸ್ಥೆಯ ಭೇದವನ್ನು ಸೂಚಿಸುತ್ತವೆ (ಬರೋ 1955 ನೋಡಿ).
®mï °mï ಲುಙõï ಅಕರತ್ ಕರಿಷ್ಯತಿ ®Èmï
ಕರೋತಿ ಮಾಡುತ್ತಾನೆ' ಚಕಾರ ಮಾಡಿದ’
ಮಾಡಿದ' ಮಾಡುತ್ತಾನೆ’
ಭವತಿ ಆಗುತ್ತದೆ' ಬಭೂವ ಆಯಿತು’ ಅಭೂತ್ ಆಯಿತು' ಭವಿಷ್ಯತಿ ಆಗುತ್ತದೆ’
ಈ ಕ್ರಿಯಾರೂಪಗಳ ಭಾಷಾಂತರಗಳನ್ನು ಗಮನಿಸಿದಾಗ, ಲಟ್ ಹಾಗೂ ಲೃಟ್ ರೂಪಗಳು ಮುಂದಿನ ಕಾಲವನ್ನು ಮತ್ತು ಲಿಟ್ ಹಾಗೂ ಲುಙõï ರೂಪಗಳು ಹಿಂದಿನ ಕಾಲವನ್ನು ಸೂಚಿಸುವ ಹಾಗೆ ಕಾಣಿಸುತ್ತದೆ. ಆದರೆ
220 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಪೂಣ್ರ
ನಿಜಕ್ಕೂ ಇವುಗಳಲ್ಲಿ ಲಿಟ್ ಎಂಬುದು ಘಟನೆ ಮುಗಿದಿರುವುದನ್ನು ಸೂಚಿಸುತ್ತದೆ ಮತ್ತು ಉಳಿದ ರೂಪಗಳು (ಲಟ್, ಲುಙõï ಮತ್ತು ಲೃಟ್ಗಳು) ಅದು ಮುಗಿಯದಿರುವುದನ್ನು ಸೂಚಿಸುತ್ತವೆ.
ಹಾಗಾಗಿ, ಇವುಗಳ ನಡುವಿನ ವ್ಯತ್ಯಾಸವನ್ನು ಕನ್ನಡದ ಹಾಗೆ ಹಿಂದಿನ ಮತ್ತು ಮುಂದಿನ ಕಾಲದ ಘಟನೆಗಳ ನಡುವಿನ ಕಾಲಸಂಬಂಧದ ವ್ಯತ್ಯಾಸ ವೆಂದು ವಿವರಿಸುವ ಬದಲು, ಮತ್ತು ಅಪೂಣ್ರಗಳೆಂಬ ಕಾಲವ್ಯವಸ್ಥೆಯ ವ್ಯತ್ಯಾಸವೆಂದು ಹೇಳುವ ಅವಶ್ಯಕತೆಯಿದೆ.
ಕಾಲಸಂಬಂಧಕ್ಕೂ ಕಾಲವ್ಯವಸ್ಥೆಗೂ ನಡುವೆ ಬಹಳ ಮುಖ್ಯವಾದ ವ್ಯತ್ಯಾಸ ವಿದೆ. ಉದಾಹರಣೆಗಾಗಿ, ಕ್ರಿಯಾಪದದ ಪೂಣ್ರರೂಪ ಅದು ತಿಳಿಸುವ ಘಟನೆ ಯನ್ನು ಆ ಘಟನೆಯ ಪೂಣ್ರಗೊಂಡ ಅವಸ್ಥೆಯಲ್ಲಿ ಸೂಚಿಸುತ್ತದೆ ಮತ್ತು ಅಪೂಣ್ರರೂಪ ಆ ಘಟನೆಯ ಒಳವ್ಯವಸ್ಥೆಯನ್ನು (ಅದರ ಆದಿ, ಅಂತ್ಯ, ಸೂಚಿಸುತ್ತದೆ. ನಿರಂತರತೆ, ಇವೆರಡೂ ಮುಂದಿನ ಕಾಲದಲ್ಲಿರಬಹುದು. ಸಂಸ್ಕೃತದಲ್ಲಿ ಕಾಲಸಂಬಂಧವನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪದ ಮುಂದೆ ಅ ಪ್ರತ್ಯಯವನ್ನು ಸೇರಿಸುವ ಕ್ರಮವಿದೆ. ಮೇಲೆ ಸೂಚಿಸಿದ ನಾಲ್ಕು ರೀತಿಯ ಕ್ರಿಯಾರೂಪಗಳಿಗೂ ಇಂತಹ ಅ ಪ್ರತ್ಯಯವನ್ನು ಸೇರಿಸಿ ಅವಕ್ಕೆ ಹಿಂದಿನ ಕಾಲದ ಅಥ್ರ ಬರುವ ಹಾಗೆ ಮಾಡಬಹುದು.
ಉದಾಹರಣೆಗಾಗಿ, ಇಂತಹ ಅ ಪ್ರತ್ಯಯವನ್ನು ಕ್ರಿಯಾಪದದ ಲಟ್ ರೂಪಕ್ಕೆ ಸೇರಿಸಿ ಲಙõï ರೂಪವನ್ನು ಪಡೆಯಲು ಸಾಧ್ಯವಿದೆ ಮತ್ತು ಲೃಟ್ ರೂಪಕ್ಕೆ ಸೇರಿಸಿ ಲೃಙõï ರೂಪವನ್ನು ಪಡೆಯಲು ಸಾಧ್ಯವಿದೆ.
ಮೊದಲಾದವುಗಳಲ್ಲೊಂದನ್ನು) ಕಾಲದಲ್ಲಿರಬಹುದು
ಕ್ಷಣಿಕತೆ ಹಿಂದಿನ
ಇಲ್ಲವೇ
ಲಟ್ ಕರೋತಿ ಮಾಡುತ್ತಾನೆ' ಲಙõï ಅಕರೋತ್ ಮಾಡಿದ’ ಲೃಟ್ ಕರಿಷ್ಯತಿ ಮಾಡುತ್ತಾನೆ' ಲೃಙõï ಅಕರಿಷ್ಯತ್ ಮಾಡಿದ, ಮಾಡುತ್ತಿದ್ದ’
ಮೇಲೆ ಕೊಟ್ಟಿರುವ ಉಳಿದ ಎರಡು ಕ್ರಿಯಾರೂಪಗಳಲ್ಲಿ ಲಿಟ್ ರೂಪಕ್ಕೆ ಅ ಪ್ರತ್ಯಯವನ್ನು ಸೇರಿಸಿ ರಚಿಸಿದ ರೂಪಗಳನ್ನು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ ಕಾಣಬಹುದು. ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಂತಹ ರೂಪಗಳು ಉಳಿದಿಲ್ಲ.
ಇದಕ್ಕೆ ಬದಲು ಲುಙõï ರೂಪ ಕಾವ್ಯಗಳ ಕಾಲದಲ್ಲಿ ಅ ಪ್ರತ್ಯಯದೊಂದಿಗೆ ಮಾತ್ರವೇ ಬಳಕೆಯಾಗುತ್ತದೆ. ಆದರೆ ವೇದ ಕಾಲದ ಸಂಸ್ಕೃತದಲ್ಲಿ ಅ ಪ್ರತ್ಯಯ ಸೇರಿದ ಮತ್ತು ಸೇರದಿರುವ ಎರಡು ರೀತಿಯ ರೂಪಗಳೂ ಬಳಕೆ ಯಲ್ಲಿದ್ದುವು. ಕಾವ್ಯಗಳ ಕಾಲದ ಸಂಸ್ಕೃತದಲ್ಲೂ ಮಾ ಭೂತ್ ಎಂಬಂತಹ ಅಲ್ಲಗಳೆಯುವ ಪದರೂಪಗಳಲ್ಲಿ ಇಂತಹ ಅ ಪ್ರತ್ಯಯ ಸೇರಿರದ ಲುಙõï ರೂಪಗಳನ್ನು ಕಾಣಬಹುದು.
221 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸಂಸ್ಕತದಲ್ಲಿ ಹಿಂದಿನ ಕಾಲವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸದೆಯೂ ಮೇಲಿನ ಕ್ರಿಯಾರೂಪಗಳನ್ನು ಹಿಂದಿನ ಸಮಯದ ಘಟನೆ ಯೊಂದನ್ನು ಸೂಚಿಸುವುದಕ್ಕಾಗಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.
(1)
ಕಸ್ಮಿಂಶ್ಚಿತ್ ವೃಕ್ಷೇ ಪುರಾ ಅಹಂ ವಸಾಮಿ `ನಾನು ಹಿಂದೆ ಯಾವುದೋ ಒಂದು ಮರದಲ್ಲಿ ವಾಸಿಸುತ್ತಿದ್ದೆ’
(1)ನೇ ವಾಕ್ಯದಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಕ್ರಿಯಾವಿಶೇಷಣ ವೊಂದು (ಪುರಾ `ಹಿಂದೆ' ಎಂಬುದಾಗಿ) ಬಂದಿರುವ ಕಾರಣ, ಅದರಲ್ಲಿರುವ ಲಟ್ ರೂಪಕ್ಕೆ (ವಸಾಮಿ ಎಂಬುದಕ್ಕೆ) ಅ ಪ್ರತ್ಯಯವನ್ನು ಸೇರಿಸಿಲ್ಲವಾದರೂ `ವಾಸಿಸುತ್ತಿದ್ದೆ' ಎಂಬ ಹಿಂದಿನ ಸಮಯದ ಅಥ್ರ ದೊರೆತಿದೆ. ಸಂಸ್ಕೃತದಲ್ಲಿ ಕಾಲಸಂಬಂಧದ ಭೇದಕ್ಕಿಂತಲೂ ಕಾಲವ್ಯವಸ್ಥೆಯ ಭೇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆಯೆಂಬುದು ಈ ವಿಷಯದಿಂದಲೂ ಸ್ಪಷ್ಟವಾಗುತ್ತದೆ.
ಆದರೆ ಹಿಂದೆ ವೇದಗಳ ಕಾಲದ ಸಂಸ್ಕೃತದಲ್ಲಿ ಬಳಕೆಯಲ್ಲಿದ್ದ ಕ್ರಿಯಾ ರೂಪಗಳ ಈ ಕಾಲವ್ಯವಸ್ಥೆ ಕಾವ್ಯಗಳ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಬಹಳ ಮಟ್ಟಿಗೆ ನಷ್ಟವಾಗಿದೆ. ಮೇಲೆ ಸೂಚಿಸಿದ ಹಾಗೆ, ವೇದ ಕಾಲದಲ್ಲಿದ್ದ ಹಲವು ಕ್ರಿಯಾರೂಪಗಳು ಅನಂತರದ ಕಾಲದಲ್ಲಿ ಬಳಕೆಯಲ್ಲಿ ಉಳಿದಿಲ್ಲ ಮಾತ್ರವಲ್ಲ, ಉಳಿದಿರುವ ಕ್ರಿಯಾರೂಪಗಳೂ ಹಲಕೆಲವು ಬದಲಾವಣೆಗಳಿಗೊಳ UÁVªÉ.
ಇದಲ್ಲದೆ, ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಕತ್ರರಿ ಪ್ರಯೋಗಕ್ಕಿಂತಲೂ ಕಮ್ರಣಿ ಪ್ರಯೋಗವೇ ಜಾಸ್ತಿಯಾಗಿದೆ ಮತ್ತು ವಾಕ್ಯಗಳಲ್ಲಿ ಕ್ರಿಯಾರೂಪಗಳ ಬದಲು ಕೃದಂತ ರೂಪಗಳನ್ನು ಬಳಸುವುದೂ ಜಾಸ್ತಿಯಾಗಿದೆ. ಇಂತಹ ಹಲವು ಕಾರಣಗಳಿಂದಾಗಿ ಮೇಲೆ ಸೂಚಿಸಿದ ಕ್ರಿಯಾಪದಗಳ ಕಾಲವ್ಯವಸ್ಥೆ ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಷ್ಟೊಂದು ಸ್ಪಷ್ಟವಾಗಿ ಗೋಚರಿಸುವುದಿಲ್ಲ (ಭಟ್ 2000:100 ನೋಡಿ).
11.2.3 ಕಾಲರೂಪಗಳಲ್ಲಿ ವ್ಯತ್ಯಾಸ
ಕ್ರಿಯಾಪದಗಳಿಗಿರುವ ಕಾಲರೂಪಗಳ ಒಳರಚನೆಯಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಮೇಲೆ ಸೂಚಿಸಿದ ಹಾಗೆ ಸಂಸ್ಕೃತದಲ್ಲಿ ಕ್ರಿಯಾಪದಗಳಿಗೆ ಆಖ್ಯಾತ (ತಿಙõï) ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಕಾಲರೂಪಗಳನ್ನು ಪಡೆಯಬಹುದು.
ಆದರೆ ಕನ್ನಡದಲ್ಲಿ ಇದಕ್ಕಾಗಿ ಕ್ರಿಯಾಪದಗಳಿಗೆ ಆಖ್ಯಾತ ಪ್ರತ್ಯಯಗಳನ್ನು ಮಾತ್ರವಲ್ಲದೆ ಕಾಲ ಪ್ರತ್ಯಯಗಳನ್ನೂ ಸೇರಿಸಬೇಕಾಗುತ್ತದೆ.
222 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಸಂಸ್ಕೃತದ ಕ್ರಿಯಾಧಾತುಗಳಿಗಿರುವ ಪೂಣ್ರ ರೂಪಗಳನ್ನು (ಎಂದರೆ ಲಿಟ್ ಲಕಾರದಲ್ಲಿರುವ ರೂಪಗಳನ್ನು) ತಯಾರಿಸುವುದು ಬಹಳ ಸುಲಭ. ಇದಕ್ಕಾಗಿ ಧಾತುವಿನ ದ್ವಿತ್ವ ರೂಪವನ್ನು ಬಳಸಬೇಕು ಮತ್ತು ಅದರ ಸ್ವರ ಮತ್ತು ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅಷ್ಟೆ.
ಧಾತುಗಳು
PÀÈ ¨sÀÆ ¨sÀÈ gÀÄzsï ¥ÀZï
ಮಾಡು' DUÀÄ’ ಹೊರು' vÀqÉ’ `ಅಡುಗೆ ಮಾಡು’
ಲಿಟ್ ರೂಪಗಳು ಚಕಾರ ಮಾಡಿದ' ಬಭೂವ ಆಯಿತು’ ಬಭಾರ ಹೊತ್ತ' ರುರೋಧ ತಡೆದ’ ಪಪಾಚ `ಅಡುಗೆ ಮಾಡಿದ’
DzÀgÉ ಸಂಸ್ಕೃತದ ಕ್ರಿಯಾಧಾತುಗಳಿಗಿರುವ ಅಪೂಣ್ರರೂಪಗಳನ್ನು ತಯಾರಿಸಬೇಕಿದ್ದಲ್ಲಿ ಆ ಧಾತುಗಳಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳು ಬಹಳ ಕ್ಲಿಷ್ಟವಾದುವಾದ ಕಾರಣ ಅವನ್ನು ವಣ್ರಿಸುವುದಕ್ಕಾಗಿ ಸಂಸ್ಕೃತದ ವೈಯಾಕರಣಿಗಳು ಸಂಸ್ಕೃತದ ಕ್ರಿಯಾಧಾತುಗಳನ್ನು ಹತ್ತು ವಗ್ರ(ಗಣ)ಗಳಲ್ಲಿ ವಿಂಗಡಿಸಬೇಕಾಗಿದೆ.
ಇವುಗಳಲ್ಲಿ ಕೆಲವು ಧಾತುಗಳು ದ್ವಿತ್ವ ರೂಪದಲ್ಲಿ ಬರುತ್ತವೆ, ಕೆಲವು ಸ್ವರದಲ್ಲಿ ಬದಲಾವಣೆಗಳನ್ನು ತೋರಿಸುತ್ತವೆ, ಕೆಲವಕ್ಕೆ ಸ್ವರಾಗಮದ ಅವಶ್ಯಕತೆ ಯಿದೆ, ಕೆಲವಕ್ಕೆ ಯ ಪ್ರತ್ಯಯದ ಅವಶ್ಯಕತೆಯಿದೆ, ಕೆಲವಕ್ಕೆ ಧಾತುವಿನೊಳಗೆ ನಕಾರವೊಂದನ್ನು ಇರಿಸಬೇಕಾಗುತ್ತದೆ, ಇತ್ಯಾದಿ.
ಧಾತುಗಳು
¨sÀÈ PÀÈ ¨sÀÆ ಕುಪ್ ಮುಚ್
ಹೊರು' ಮಾಡು’
DUÀÄ' ಕೋಪಿಸು’
`©qÀÄ’
ಲಟ್ ರೂಪಗಳು ಬಿಭತ್ರಿ ಹೊರುತ್ತಾನೆ' ಕರೋತಿ ಮಾಡುತ್ತಾನೆ’ ಭವತಿ ಕುಪ್ಯತಿ ಕೋಪಿಸುತ್ತಾನೆ' ಮುಂಚತಿ ಬಿಡುತ್ತಾನೆ’
`ಆಗುತ್ತದೆ’
ಇದಕ್ಕೆ ಬದಲು, ಕನ್ನಡದಲ್ಲಿ ಬಳಕೆಯಾಗುವ ಕ್ರಿಯಾಪದಗಳ ಮುಂದಿನ ಕಾಲದ ರೂಪವನ್ನು ವಣ್ರಿಸುವುದು ಬಹಳ ಸುಲಭ. ಕ್ರಿಯಾಪ್ರಕೃತಿಗೆ ಈ ಕಾಲ ವನ್ನು ಸೂಚಿಸುವ ಉತ್ತ ಪ್ರತ್ಯಯವನ್ನು ಸೇರಿಸಿ, ಅನಂತರ ಅದಕ್ಕೆ ಪುರುಷ- ಲಿಂಗ-ವಚನಗಳನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಸೇರಿಸಿದಾಗ ಈ ರೂಪ ಸಿದ್ಧಿಸುತ್ತದೆ. (ಮಾಡು-ಮಾಡುತ್ತಾನೆ, ಕೊಡು-ಕೊಡುತ್ತಾನೆ, ತಿನ್ನು-ತಿನ್ನುತ್ತಾನೆ, ಕುಡಿ-ಕುಡಿಯುತ್ತಾನೆ, ಬರೆ-ಬರೆಯುತ್ತಾನೆ).
ಹಿಂದಿನ ಕಾಲವನ್ನು ಸೂಚಿಸುವ ಕ್ರಿಯಾರೂಪಗಳನ್ನು ವಣ್ರಿಸುವುದು ಇದಕ್ಕಿಂತ ಸ್ವಲ್ಪ ಕಷ್ಟ. ಇಲ್ಲೂ ಕ್ರಿಯಾಪ್ರಕೃತಿಗೆ ಕಾಲವನ್ನು ಸೂಚಿಸುವ ದ
223 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಪ್ರತ್ಯಯವನ್ನು ಸೇರಿಸಿ, ಅನಂತರ ಅದಕ್ಕೆ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಸೇರಿಸಬೇಕು (ಕುಡಿ-ಕುಡಿದ, ಬರೆ-ಬರೆದ, ಮಾಡು-ಮಾಡಿದ, ಹೇಳು- ಹೇಳಿದ).
ಆದರೆ ಈ ಹಿಂದಿನ ಕಾಲದ ರೂಪಗಳಲ್ಲಿ ಬರುವ ಕ್ರಿಯಾಪ್ರಕೃತಿಗಳಲ್ಲಿ ಮತ್ತು ಹಲಕೆಲವು ಬದಲಾವಣೆಗಳಾಗುವು ವಾದ ಕಾರಣ (ಬರು-ಬಂದ, ಕಾಣು-ಕಂಡ, ಕೊಲ್ಲು- ಕೊಂದ, ಸಾಯು-ಸತ್ತ, ಹೊಗು-ಹೊಕ್ಕ, ಇತ್ಯಾದಿ) ಮುಂದಿನ ಕಾಲದ ಕ್ರಿಯಾರೂಪಗಳ ವಣ್ರನೆ ಗಿಂತ ಹಿಂದಿನ ಕಾಲದ ಕ್ರಿಯಾರೂಪಗಳ ವಣ್ರನೆ ಕನ್ನಡದಲ್ಲಿ ಸ್ವಲ್ಪ ಕ್ಲಿಷ್ಟ ವಾದುದು. ಆದರೂ ಸಂಸ್ಕೃತದ ಕ್ರಿಯಾರೂಪಗಳಿಗೆ ಹೋಲಿಸಿದೆವಾದರೆ ಈ ಕ್ಲಿಷ್ಟತೆ ಅತ್ಯಲ್ಪವೆಂದೇ ಹೇಳಬಹುದು.
ಪ್ರತ್ಯಯದಲ್ಲಿ
ಸೂಚಿಸುವ
ಕಾಲವನ್ನು
11.2.4 ಘಟನೆಗಳ ನಡುವಿನ ಕಾಲಭೇದ ಒಂದೇ ವಾಕ್ಯದಲ್ಲಿ ಎರಡು ಘಟನೆಗಳನ್ನು ಸೂಚಿಸಬೇಕಾದಾಗ, ಅವುಗಳಲ್ಲಿ ಒಂದನ್ನು ಸೂಚಿಸುವುದಕ್ಕಾಗಿ ಜೋಡಿಸುವ ಕ್ರಿಯಾರೂಪವನ್ನು ಬಳಸಲು ಸಾಧ್ಯ ವಿದೆ. ಕನ್ನಡದಲ್ಲಿ ಇದಕ್ಕಾಗಿ ನಾಲ್ಕು ರೀತಿಯ ಜೋಡಿಸುವ ಕ್ರಿಯಾರೂಪಗಳು (ಮಾಡುತ್ತಾ, ಮಾಡಿ, ಮಾಡಲು, ಮಾಡದೆ) ಬಳಕೆಯಲ್ಲಿವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು.
(2ಕ) ಅವನು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ (2ಖ) ಅವನು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ (2ಗ) ಅವನು ಊಟ ಮಾಡಲು ನಮ್ಮಲ್ಲಿಗೆ ಬಂದ (2ಘ) ಅವನು ಊಟ ಮಾಡದೆ ನಮ್ಮಲ್ಲಿಗೆ ಬಂದ
(2ಕ) ವಾಕ್ಯದಲ್ಲಿ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆದುವು ಎಂಬುದನ್ನು ಸೂಚಿಸುವುದಕ್ಕಾಗಿ ಮಾಡುತ್ತಾ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ; ಇದಕ್ಕೆ ಬದಲು (2ಖ)ದಲ್ಲಿ ಮೊದಲು ತಿಳಿಸಿರುವ ಘಟನೆ ಎರಡನೆಯದಕ್ಕಿಂತ ಮೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಗಿ ಮಾಡಿ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ.
(2ಗ)ದಲ್ಲಿ ಮೊದಲನೆಯ ಘಟನೆ ಎರಡನೆಯದರ ಅನಂತರ ನಡೆದಿದೆ ಎಂಬುದನ್ನು ಸೂಚಿಸಬೇಕಾಗಿದೆ, ಮತ್ತು ಇದಕ್ಕಾಗಿ ಮಾಡಲು ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ. ಇದಕ್ಕೆ ಬದಲು (2ಘ)ದಲ್ಲಿ ಎರಡನೆಯ ಘಟನೆ ನಡೆಯುವ ಸಮಯದಲ್ಲಿ ಮೊದಲಿನದು ನಡೆದಿರಲಿಲ್ಲ ಎಂಬುದನ್ನು ಸೂಚಿಸಬೇಕಾಗಿದೆ ಮತ್ತು ಇದಕ್ಕಾಗಿ ಮಾಡದೆ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ.
224 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ºÁUÉ,
ವಾಕ್ಯದ
(11.2.1)ರಲ್ಲಿ ವಿವರಿಸಿದ
ಕನ್ನಡದಲ್ಲಿ ಈ ರೀತಿ ನಾಲ್ಕು ಜೋಡಿಸುವ ಕ್ರಿಯಾರೂಪಗಳಿದ್ದು, ಅವು ಗಳಲ್ಲಿ ಕಾಣಿಸುವ ಕಾಲಭೇದ ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ಕಾಣಿಸುವ ಕಾಲಭೇದಕ್ಕಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಮೇಲೆ ಕೊನೆಯ ಕ್ರಿಯಾರೂಪಗಳಲ್ಲಿ `ಹಿಂದಿನ ಕಾಲ' ಮತ್ತು `ಮುಂದಿನ ಕಾಲ' ಎಂಬುದಾಗಿ ಎರಡು ಕಾಲಪ್ರತ್ಯಯ ಗಳು ಮಾತ್ರ ಬಳಕೆಯಾಗುತ್ತವೆ. ಇವು ವಾಕ್ಯದ ಆಡುಗನ ಸಮಯ ಮತ್ತು ವಾಕ್ಯ ತಿಳಿಸುವ ಘಟನೆಯ ಸಮಯಗಳ ನಡುವಿರುವ ಕಾಲಸಂಬಂಧವನ್ನು ಸೂಚಿಸುತ್ತವೆ.
ಆದರೆ, ಜೋಡಿಸುವ ಕ್ರಿಯಾರೂಪಗಳಲ್ಲಿ ಮೊದಲಿನ ಘಟನೆ, ಅನಂತರದ ಘಟನೆ ಮತ್ತು ಒಂದೇ ಸಮಯದ ಘಟನೆ ಎಂಬುದಾಗಿ ಮೂರು ರೀತಿಯ ಕಾಲಭೇದಗಳನ್ನು ಸೂಚಿಸಬೇಕಾಗಿದ್ದು, ಅದಕ್ಕಾಗಿ ಮೂರು ಕಾಲಪ್ರತ್ಯಯಗಳನ್ನು ಬಳಸಬೇಕಾಗಿದೆ (ಇದಲ್ಲದೆ ನಾಲ್ಕನೆಯ ಅಲ್ಲಗಳೆಯುವ ಪ್ರತ್ಯಯವೂ ಈ ಜೋಡಿಸುವ ಕ್ರಿಯಾರೂಪಗಳಲ್ಲಿ ಬಳಕೆಯಾಗುತ್ತದೆ).
ಸಂಸ್ಕೃತದಲ್ಲಿ ಕನ್ನಡದ ಹಾಗೆ ವಿಶಿಷ್ಟವಾದ ಜೋಡಿಸುವ ಕ್ರಿಯಾರೂಪಗಳ ಬಳಕೆಯಾಗುವುದಿಲ್ಲ. ಹೆಚ್ಚಿನೆಡೆಗಳಲ್ಲೂ ಈ ರೀತಿ ವಾಕ್ಯಗಳನ್ನು ಜೋಡಿಸ ಬೇಕಾದಲ್ಲಿ ಕ್ರಿಯಾಪದಗಳ ನಾಮರೂಪ(ಕೃದಂತ)ಗಳನ್ನಾಗಲಿ ಇಲ್ಲವೇ `ಸತಿ ಸಪ್ತಮಿ' ಎಂಬ ರಚನೆಯನ್ನಾಗಲಿ ಬಳಸಬೇಕಾಗುತ್ತದೆ.
(3) ಅಹಂ ದಕ್ಷಿಣಾರಣ್ಯೇ ಚರನ್ ಮೃಗಮೇಕಂ ಅಪಶ್ಯಂ
(4)
ನಾನು ದಕ್ಷಿಣಾರಣ್ಯದಲ್ಲಿ ನಡೆಯುತ್ತಾ ಮೃಗವೊಂದನ್ನು ನೋಡಿದೆ' ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್ ಅವನು ರಾಜನಾಗಿರುವಾಗ ಭೂಮಂಡಲವನ್ನು ಯಾರು ಗೆದ್ದಾರು?’
(3)ನೇ ವಾಕ್ಯದಲ್ಲಿ ಚರನ್ ನಾಮಪದವನ್ನು ಜೋಡಿಸುವ ಕ್ರಿಯಾರೂಪ ವನ್ನಾಗಿ ಬಳಸಲಾಗಿದೆ ಮತ್ತು (4)ನೇ ವಾಕ್ಯದಲ್ಲಿ ತಸ್ಮಿ ರಾಜ್ಞಿ ಸತಿ ಎಂಬು ದಾಗಿ ಸತಿಸಪ್ತಮಿ ರಚನೆಯನ್ನು ಬಳಸಲಾಗಿದೆ.
ಇದಕ್ಕೆ ಅಪವಾದವಾಗಿ, ತ್ವಾ ಇಲ್ಲವೇ ಯ ಪ್ರತ್ಯಯವನ್ನು ಬಳಸಿ ರಚಿಸಿದ ಜೋಡಿಸುವ ಕ್ರಿಯಾರೂಪವೊಂದು ಸಂಸ್ಕೃತದಲ್ಲಿ ಬಳಕೆಯಲ್ಲಿದೆ. ಇದು ಮೊದಲನೆಯ ಘಟನೆ ಎರಡನೆಯದಕ್ಕಿಂತ ಮೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಕ್ರಿಯಾರೂಪ. ಸಂಸ್ಕೃತದ ಈ ಕ್ರಿಯಾರೂಪ ದ್ರಾವಿಡ ಭಾಷೆಗಳ ಸಂಪಕ್ರದಿಂದಾಗಿ ಬೆಳೆದು ಬಂದಿದೆ0iÉುಂದು ವಿದ್ವಾಂಸರ HºÉ.
(4ಕ) ಛಾಗಂ ತ್ಯಕ್ತ್ವಾ ಸ್ವಗೃಹಂ ಯಯೌ
`ಆಡನ್ನು ತ್ಯಜಿಸಿ (ಅವನು) ತನ್ನ ಮನೆಗೆ ಹೋದ’
225 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(4ಖ) ನರಾಃ ಶಾಸ್ತ್ರಂ ಅಧೀತ್ಯ ಪಂಡಿತಾಃ ಭವಂತಿ
`ಮಾನವರು ಶಾಸ್ತ್ರಗಳನ್ನು ಓದಿ ಪಂಡಿತರಾಗುತ್ತಾರೆ’
jÃw
ವಾಕ್ಯಗಳನ್ನು
ಸಂಸ್ಕೃತದಲ್ಲಿ ಈ ಜೋಡಿಸುವುದಕ್ಕಾಗಿ ಬಳಕೆಯಾಗುವ ಕ್ರಿಯಾರೂಪಗಳಲ್ಲಿ ಒಂದು ನಿಶ್ಚಿತವಾದ ವ್ಯವಸ್ಥೆಯಿಲ್ಲ. ಹಾಗಾಗಿ, ಅದರ ವ್ಯಾಕರಣಗಳಲ್ಲಿ ಇವುಗಳ ಬಳಕೆಯನ್ನು ವ್ಯವಸ್ಥಿತವಾಗಿ ವಿವರಿಸುವ ಅವಶ್ಯಕತೆ ಕಂಡುಬಂದಿಲ್ಲ.
ಆದರೆ ಕನ್ನಡದಲ್ಲಿ ಜೋಡಿಸುವ ಕ್ರಿಯಾರೂಪಗಳ ಬಳಕೆಯಲ್ಲಿ ಒಂದು ಅಚ್ಚುಕಟ್ಟು ಕಾಣಿಸುತ್ತದೆ. ಸಂಸ್ಕೃತ ವ್ಯಾಕರಣದ ಅಂಧಾನುಕರಣ ಮಾಡಿರುವ ಕನ್ನಡ ವೈಯಾಕರಣಿಗಳಿಗೆ ಈ ಅಚ್ಚುಕಟ್ಟನ್ನು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯವಾಗಲಿಲ್ಲ (ಜಾಸ್ತಿ ವಿವರಗಳಿಗೆ ಭಟ್ 2005 ನೋಡಿ).
11.3 ಆಖ್ಯಾತ ಪ್ರತ್ಯಯಗಳು ಸಂಸ್ಕೃತ ಕ್ರಿಯಾಪದದ ಪೂಣ್ರ ರೂಪಗಳಲ್ಲಿ ಬಳಕೆಯಾಗುವ ಆಖ್ಯಾತ ಪ್ರತ್ಯಯಗಳು ಅಪೂಣ್ರ ರೂಪಗಳಲ್ಲಿ ಬಳಕೆಯಾಗುವ ಆಖ್ಯಾತ ಪ್ರತ್ಯಯಗಳಿ ಗಿಂತ ಭಿನ್ನವಾಗಿರಬೇಕಾಗುತ್ತದೆ.
ಯಾಕೆಂದರೆ, ಕಾಲವ್ಯವಸ್ಥೆಯನ್ನು ಸೂಚಿಸುವುದಕ್ಕಾಗಿ ಈ ಕ್ರಿಯಾರೂಪ ಗಳಲ್ಲಿ ಆಖ್ಯಾತ ಪ್ರತ್ಯಯಗಳೊಂದಿಗೆ ಬೇರೆ ಪ್ರತ್ಯಯಗಳು ಬರುವುದಿಲ್ಲ. ಹಾಗಾಗಿ, ಅವುಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳ ನಡುವಿರುವ ವ್ಯತ್ಯಾಸ (ಮತ್ತು ಕ್ರಿಯಾಧಾತುಗಳಲ್ಲಿ ಕಾಣಿಸುವ ವ್ಯತ್ಯಾಸ) ಇವುಗಳೇ ಪೂಣ್ರ ಮತ್ತು ಅಪೂಣ್ರ ಎಂಬ ಎರಡು ಕಾಲವ್ಯವಸ್ಥೆಗಳ ನಡುವಿರುವ ವ್ಯತ್ಯಾಸವನ್ನೂ ಸೂಚಿಸಬೇಕಾಗಿದೆ.
ಲಟ್ರೂಪದ ಪ್ರತ್ಯಯಗಳು
ಪುರುಷ ಏಕವಚನ ದ್ವಿವಚನ ಬಹುವಚನ ಕರೋತಿ ಕುರುತಃ ಕುವ್ರಂತಿ
ಪ್ರಥಮ ಮಧ್ಯಮ ಕರೋಷಿ ಕುರುಥಃ ಕುರುಥ ಉತ್ತಮ ಕರೋಮಿ ಕುವ್ರಃ
ಕುಮ್ರಃ
ಲಿಟ್ರೂಪದ ಪ್ರತ್ಯಯಗಳು ಏಕವಚನ ದ್ವಿವಚನ ಬಹುವಚನ ಚಕಾರ ಚಕ್ರತುಃ ಚಕ್ರುಃ ಚಕಥ್ರ ಚಕ್ರಥುಃ ಚಕ್ರ ಚಕಾರ ಚಕ್ರವ ಚಕ್ರಮ
ಮೇಲೆ ಪ್ರಥಮಪುರುಷ ಏಕವಚನದ ಲಟ್ರೂಪದಲ್ಲಿ (ಎಂದರೆ ಅಪೂಣ್ರ ರೂಪದಲ್ಲಿ) ತಿ ಆಖ್ಯಾತ ಪ್ರತ್ಯಯ ಬಂದಿದೆ; ಆದರೆ, ಲಿಟ್ (ಪೂಣ್ರ) ರೂಪ ದಲ್ಲಿ ಅ ಪ್ರತ್ಯಯ ಬಂದಿದೆ. ಮಧ್ಯಮ ಪುರುಷ ಏಕವಚನದ ಲಟ್ ರೂಪದಲ್ಲಿ ಸಿ(ಷಿ) ಅಖ್ಯಾತ ಪ್ರತ್ಯಯ ಬಂದಿದೆ; ಆದರೆ ಲಿಟ್ ರೂಪದಲ್ಲಿ ಥ ಪ್ರತ್ಯಯ ಬಂದಿದೆ. ಇತರ ರೂಪಗಳಲ್ಲೂ ಇಂತಹವೇ ವ್ಯತ್ಯಾಸಗಳನ್ನು ಕಾಣಬಹುದು.
226 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಕನ್ನಡದಲ್ಲೂ ಮುಂದಿನ ಮತ್ತು ಹಿಂದಿನ ಕಾಲಗಳನ್ನು ಸೂಚಿಸುವ ಕ್ರಿಯಾ ರೂಪಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳ ನಡುವೆ ಕೆಲವು ವ್ಯತ್ಯಾಸಗಳಿವೆ ಯೆಂಬುದನ್ನು ಈ ಕೆಳಗಿನ ರೂಪಾವಳಿಗಳಲ್ಲಿ ಕಾಣಬಹುದು:
ಮುಂದಿನ ಕಾಲದ ಕ್ರಿಯಾರೂಪಗಳು
ಮಾಡುತ್ತಾರೆ ,, ಮಾಡುತ್ತವೆ
ಹಿಂದಿನ ಕಾಲದ ಕ್ರಿಯಾರೂಪಗಳು ಮಾಡಿದರು ಮಾಡಿದ
,, ಮಾಡಿದಳು ಮಾಡಿತು
ಮಾಡುತ್ತೀರಿ ಮಾಡುತ್ತೇವೆ
ಮಾಡಿದೆ
ಮಾಡಿದೆ
ಮಾಡಿದಿರಿ ಮಾಡಿದೆವು
ಪ್ರಥಮ ಮಾಡುತ್ತಾನೆ ಮಾಡುತ್ತಾಳೆ ಮಾಡುತ್ತದೆ ಮಾಡಿದುವು ಮಧ್ಯಮ ಮಾಡುತ್ತೀ ಉತ್ತಮ ಮಾಡುತ್ತೇನೆ
ಮುಂದಿನ ಕಾಲವನ್ನು ಸೂಚಿಸುವ ಉತ್ತಮಪುರುಷ ಮತ್ತು ಏಕವಚನದ ಕ್ರಿಯಾರೂಪದಲ್ಲಿ ಏನೆ ಆಖ್ಯಾತ ಪ್ರತ್ಯಯವಿದೆ; ಆದರೆ ಅದಕ್ಕೆ ಸಮನಾಗಿರುವ ಹಿಂದಿನ ಕಾಲದ ಕ್ರಿಯಾರೂಪದಲ್ಲಿ ಎ ಆಖ್ಯಾತ ಪ್ರತ್ಯಯವಿದೆ. ಇತರ ರೂಪ ಗಳಲ್ಲೂ ಇಂತಹವೇ ವ್ಯತ್ಯಾಸಗಳಿರುವುದನ್ನು ಕಾಣಬಹುದು.
ಆದರೆ ಕನ್ನಡದ ಈ ಕ್ರಿಯಾರೂಪಗಳಲ್ಲಿ ಆಖ್ಯಾತ ಪ್ರತ್ಯಯಗಳು ಮಾತ್ರ ವಲ್ಲದೆ ಉತ್ತ ಇಲ್ಲವೇ ದ ಕಾಲಪ್ರತ್ಯಯಗಳೂ ಬರುವುವಾದ ಕಾರಣ, ಕಾಲ ಭೇದವನ್ನು ಸೂಚಿಸುವ ಕೆಲಸವನ್ನು ಆಖ್ಯಾತ ಪ್ರತ್ಯಯಗಳ ನಡುವಿನ ವ್ಯತ್ಯಾಸದ ಮೇಲೆ ಹೊರಿಸುವ ಅವಶ್ಯಕತೆಯಿಲ್ಲ. ಅವನ್ನು ನೇರವಾಗಿ ಕಾಲಪ್ರತ್ಯಯಗಳಾದ ಉತ್ತ ಮತ್ತು ದ ಪ್ರತ್ಯಯಗಳ ಮೇಲೆಯೇ ಹೊರಿಸಬಹುದು.
11.4 ಪರಸ್ಮೈಪದ ಮತ್ತು ಆತ್ಮನೇಪದ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಪರಸ್ಮೈಪದ ಮತ್ತು ಆತ್ಮನೇಪದ ಎಂಬುದಾಗಿ ಇನ್ನೊಂದು ಮುಖ್ಯವಾದ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಆ ಭಾಷೆಯ ಕ್ರಿಯಾರೂಪಗಳಲ್ಲಿ ಎರಡು ರೀತಿಯ ಆಖ್ಯಾತ ಪ್ರತ್ಯಯಗಳನ್ನು ಬಳಸಲಾಗುತ್ತದೆ.
ಕ್ರಿಯಾಪದವು ತಿಳಿಸುವ ಘಟನೆಯನ್ನು ಒಬ್ಬ ವ್ಯಕ್ತಿ ತನ್ನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಆತ್ಮನೇಪದದ ರೂಪಗಳನ್ನು ಬಳಸಬೇಕು ಮತ್ತು ಬೇರೊಬ್ಬನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಪರಸ್ಮೈಪದದ ರೂಪಗಳನ್ನು ಬಳಸಬೇಕು ಎಂಬುದು ಈ ವ್ಯತ್ಯಾಸದ ಮೂಲ ಉದ್ದೇಶವಾಗಿತ್ತು.
ಆದರೆ ಸಂಸ್ಕೃತದಲ್ಲಿ ಈ ಮೂಲ ಉದ್ದೇಶ ಬಹಳ ಮಟ್ಟಿಗೆ ನಷ್ಟವಾಗಿದೆ. ಇದಕ್ಕೆ ಕಾರಣವೇನೆಂದರೆ, ಆ ಭಾಷೆಯ ಕೆಲವು ಕ್ರಿಯಾಪದಗಳು ಯಾವಾಗಲೂ ಆತ್ಮನೇಪದದ ಆಖ್ಯಾತ ಪ್ರತ್ಯಯಗಳೊಂದಿಗೇನೇ ಬರುತ್ತವೆ ಮತ್ತು ಇನ್ನು ಕೆಲವು ಕ್ರಿಯಾಪದಗಳು ಯಾವಾಗಲೂ ಪರಸ್ಮೈಪದದ ಆಖ್ಯಾತ ಪ್ರತ್ಯಯಗ
227 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಳೊಂದಿಗೇನೇ ಬರುತ್ತವೆ. ಹಾಗಾಗಿ ಅವುಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸ ಅಥ್ರಭೇದವನ್ನು ಸೂಚಿಸಲಾರದು.
ಆದರೆ ಬೇರೆ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ಆಖ್ಯಾತ ಪ್ರತ್ಯಯಗಳೊಂದಿಗೂ ಬರಲು ಸಾಧ್ಯವಿದ್ದು, ಅಂತಹ ಕ್ರಿಯಾಪದಗಳಲ್ಲಿ ಕೆಲವು ಮಾತ್ರ ಮೇಲಿನ ಅಥ್ರ ವ್ಯತ್ಯಾಸವನ್ನು ತೋರಿಸುತ್ತವೆ.
(5ಕ) ದೇವದತ್ತಃ ಪಚತಿ
`ದೇವದತ್ತ ಅಡಿಗೆ ಮಾಡುತ್ತಾನೆ’
(5ಖ) ದೇವದತ್ತಃ ಪಚತೇ
`ದೇವದತ್ತ ಅಡಿಗೆ ಮಾಡಿಕೊಳ್ಳುತ್ತಾನೆ’
ಪಚ್ `ಅಡಿಗೆ ಮಾಡು' ಕ್ರಿಯಾಪದ (5ಕ) ವಾಕ್ಯದಲ್ಲಿ ಪಚತಿ ಎಂಬುದಾಗಿ ಪರಸ್ಮೈಪದದಲ್ಲಿ ಬಳಕೆಯಾಗಿದೆ ಮತ್ತು (5ಖ) ವಾಕ್ಯದಲ್ಲಿ ಪಚತೇ ಎಂಬು ದಾಗಿ ಆತ್ಮನೇಪದದಲ್ಲಿ ಬಳಕೆಯಾಗಿದೆ. ಅಡಿಗೆ ಮಾಡುತ್ತಿರುವುದು ತನಗಾಗಿ ಎಂಬ ಅಥ್ರ ಈ (5ಖ) ವಾಕ್ಯಕ್ಕಿದೆ; ಆದರೆ (5ಕ) ವಾಕ್ಯಕ್ಕೆ ಅಂತಹ ಅಥ್ರ «®è.
ಕನ್ನಡದಲ್ಲಿ ಈ ಅಥ್ರವನ್ನು ಆಖ್ಯಾತ ಪ್ರತ್ಯಯದ ಮೂಲಕ ಸೂಚಿಸುವ ಬದಲು ಕ್ರಿಯಾಪದದೊಂದಿಗೆ ಕೊಳ್ಳು ಎಂಬುದನ್ನು ಬಳಸುವುದರ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ಮೇಲೆ (5ಖ) ವಾಕ್ಯದ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯದಲ್ಲಿ ಕಾಣಬಹುದು.
11.5 ಕಮ್ರಣಿ ಪ್ರಯೋಗ ಸಂಸ್ಕೃತದಲ್ಲಿ ಕತ್ರರಿ, ಕಮ್ರಣಿ ಮತ್ತು ಭಾವೇ ಎಂಬುದಾಗಿ ಮೂರು ರೀತಿಯ ವಾಕ್ಯಗಳಿವೆ. ವೈಯಾಕರಣಿಗಳು ಇವನ್ನು ಮೂರು `ಪ್ರಯೋಗ’ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕಮ್ರಣಿ ಪ್ರಯೋಗದ ಮೂಲ ಉದ್ದೇಶ ಭಾಷಾ ವ್ಯವಹಾರಕ್ಕೆ ಸಂಬಂಧಿಸಿದುದಾಗಿತ್ತು.
ವಾಕ್ಯವು ಸೂಚಿಸುವ ಘಟನೆಯ ಸ್ವರೂಪ ಮತ್ತು ಅದಕ್ಕೂ ಅದರಲ್ಲಿ ಭಾಗ ವಹಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂಧ -
ಇವೆರಡೂ ಕಮ್ರಣಿ ಪ್ರಯೋಗದಲ್ಲಿ ಬದಲಾಗದೆ ಹಾಗೆಯೇ ಉಳಿಯುತ್ತವೆ. ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಯಾವುದನ್ನು ಮುಖ್ಯ ವಿಷಯವಾಗಿ ಆರಿಸಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ಅಂಶ ಮಾತ್ರ ಬದಲಾಗುತ್ತದೆ.
ಕತ್ರರಿ-ಕಮ್ರಣಿ ಪ್ರಯೋಗಗಳ ನಡುವಿದ್ದ ಈ ಮೂಲ ಉದ್ದೇಶ ಸಂಸ್ಕೃತದಲ್ಲಿ ಉಳಿದಿಲ್ಲ. ಆದರೆ ಇಂತಹದೇ ಪ್ರಯೋಗ ವ್ಯತ್ಯಾಸವನ್ನು
228 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಹೊಂದಿರುವ ಇಂಗ್ಲಿಷ್ ಭಾಷೆಯಲ್ಲಿ ಈ ಅಥ್ರ ವ್ಯತ್ಯಾಸ ಉಳಿದುಕೊಂಡಿದೆ. ಇದನ್ನು ಕೆಳಗೆ ಕೊಟ್ಟಿರುವ (6ಕ-ಖ) ವಾಕ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
(6PÀ) She praised him
`ಅವಳು ಅವನನ್ನು ಹೊಗಳಿದಳು’
(6R) He was praised by her
`ಅವನನ್ನು ಅವಳು ಹೊಗಳಿದಳು’
(6ಕ) ವಾಕ್ಯದಲ್ಲಿ she `ಅವಳು' ಎಂಬುದು ಮುಖ್ಯ ವಿಷಯವಾಗಿದೆ; ಆದರೆ, (6ಖ)ದಲ್ಲಿ ಅದರ ಬದಲು he `ಅವನು' ಎಂಬುದು ಮುಖ್ಯ ವಿಷಯ ವಾಗಿ ಬಂದಿದೆ. ಕನ್ನಡದಲ್ಲಿ ಈ ರೀತಿ ವಾಕ್ಯದ ಮುಖ್ಯ ವಿಷಯವನ್ನು ಬದಲಿಸಬೇಕಾದಲ್ಲಿ ಅದರಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಿಸಿದರೆ ಸಾಕು; ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆ ಯಿಲ್ಲ; ಇದನ್ನು ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದ ವಾಕ್ಯಗಳಲ್ಲಿ ಕಾಣಬಹುದು.
ಇಂಗ್ಲಿಷ್ನಲ್ಲಿ ಮೇಲಿನ ಅಥ್ರವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಪದಗಳ ಜಾಗವನ್ನು ಬದಲಾಯಿಸುವುದರೊಂದಿಗೆ ಬೇರೆ ಬದಲಾವಣೆಗಳನ್ನೂ ಮಾಡ ಬೇಕಾಗಿದೆ; ಇದಕ್ಕಾಗಿ ವಾಕ್ಯದ ಕ್ರಿಯಾಪದವನ್ನು `ಕಮ್ರಣಿ' ರೂಪಕ್ಕೆ ಬದಲಿಸ ಬೇಕಾಗುತ್ತದೆ (ಠಿಡಿಚಿiseಜ ಎಂಬುದನ್ನು ತಿಚಿs ಠಿಡಿಚಿiseಜ ಎಂಬುದಾಗಿ ಬದಲಿಸಿ ಕೊಳ್ಳಬೇಕಾಗುತ್ತದೆ) ಮತ್ತು ಸವ್ರನಾಮಗಳ ಜಾಗವನ್ನು ಬದಲಾಯಿಸುವು ದಿದ್ದಲ್ಲಿ ಅವುಗಳ ವಿಭಕ್ತಿರೂಪವನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಆದರೆ, ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಕತ್ರರಿ ಮತ್ತು ಕಮ್ರಣಿ ವಾಕ್ಯಗಳ ನಡುವೆ `ಅಥ್ರ'ದಲ್ಲಿ ಈ ವ್ಯತ್ಯಾಸ ಉಳಿದಿಲ್ಲವಾದ ಕಾರಣ, ಅದರಲ್ಲಿ ಕಾಣಿಸುವ ವಿಭಕ್ತಿಪಲ್ಲಟಕ್ಕೆ ಇಂಗ್ಲಿಷ್ನಲ್ಲಿರುವ ಹಾಗೆ ಆಥ್ರ ವ್ಯತ್ಯಾಸವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದು.
ಸಂಸ್ಕೃತ ವಾಕ್ಯಗಳಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಾಯಿಸಲು ವಾಕ್ಯದ ಕ್ರಿಯಾರೂಪದಲ್ಲಿ ಇಲ್ಲವೇ ನಾಮಪದಗಳ ವಿಭಕ್ತಿಯಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ. ಹಾಗಾಗಿ, ಮೇಲಿನ ಉದ್ದೇಶ ಕ್ಕಾಗಿ ಕಮ್ರಣಿ ಪ್ರಯೋಗವನ್ನು ಬಳಸುವ ಅವಶ್ಯಕತೆ ಸಂಸ್ಕೃತದಲ್ಲಿಲ್ಲ ಎಂಬುದು ಸ್ಪಷ್ಟ. ಸಂಸ್ಕೃತದಿಂದ ಬೆಳೆದು ಬಂದ ಹಿಂದಿ, ಮರಾಠಿ ಮೊದಲಾದ ಆಧುನಿಕ ಭಾಷೆಗಳಲ್ಲೂ ಕಮ್ರಣಿ ಪ್ರಯೋಗವಿದ್ದು ಅದಕ್ಕೆ ಬೇರೆಯೇ ಒಂದು ಉದ್ದೇಶವಿದೆ.
ಹಿಂದಿಯಲ್ಲಿ ಕ್ರಿಯಾಪದದ ಭೂತಕೃದಂತ ರೂಪದೊಂದಿಗೆ ಜಾ `ಹೋಗು' ಕ್ರಿಯಾಪದದ ರೂಪವೊಂದನ್ನು ಬಳಸಿದಾಗ ಕಮ್ರಣಿ ಪ್ರಯೋಗ ಸಿದ್ಧಿಸುತ್ತದೆ.
229 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಇಂತಹ ಕಮ್ರಣಿ ವಾಕ್ಯದಲ್ಲಿ ಕತ್ರೃಪದವನ್ನು ಕರಣಾಥ್ರದ ಸೇ ಎಂಬುದ ರೊಂದಿಗೆ ಬಳಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕಮ್ರಣಿ ವಾಕ್ಯವನ್ನು ಹಿಂದಿಯಲ್ಲಿ ಕತ್ರೃವಿಗೆ ಘಟನೆಯನ್ನು ನಡೆಸಲು ಸಾಧ್ಯವಾಗಲಿಲ್ಲ ಎಂಬ ಅಥ್ರದಲ್ಲಿ ನಿಷೇಧಾಥ್ರಕ ವಾಕ್ಯವಾಗಿ ಬಳಸುವುದೇ ಜಾಸ್ತಿ.
(7PÀ)
ರಾಮ್ ರೋಟೀ ನಹೀಂ ಖಾಯಾ `ರಾಮ ರೊಟ್ಟಿ ತಿನ್ನಲಿಲ್ಲ’
(7ಖ) ರಾಮ್ ಸೇ ರೋಟೀ ನಹೀಂ ಖಾಯೀ ಗಯೀ
`ರಾಮನಿಗೆ ರೊಟ್ಟಿ ತಿನ್ನಲು ಸಾಧ್ಯವಾಗಲಿಲ್ಲ’
ಆದರೆ ಕತ್ರೃಪದವನ್ನು ವಾಕ್ಯದಲ್ಲಿ ಬಳಸದಿದ್ದಲ್ಲಿ ಇಂತಹ `ಸಾಧ್ಯವಾಗ ಲಿಲ್ಲ' ಎಂಬ ಅಥ್ರವಿಲ್ಲದೆಯೂ ಹಿಂದಿಯಲ್ಲಿ ಕಮ್ರಣಿ ವಾಕ್ಯವನ್ನು ಬಳಸಲು ಸಾಧ್ಯವಿದೆ.
(8)
ಚೋರ್ ಪಕಡ್ ಲಿಯೇ ಗಯೇ `ಕಳ್ಳರನ್ನು ಹಿಡಿಯಲಾಯಿತು’
11.6 ಅಲ್ಲಗಳೆಯುವ ವಾಕ್ಯಗಳು ವಾಕ್ಯಗಳನ್ನು ಅಲ್ಲಗಳೆಯುವ ರೂಪಕ್ಕೆ (ಎಂದರೆ ನಿಷೇಧರೂಪಕ್ಕೆ) ಬದಲಾ ಯಿಸುವಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಸಂಸ್ಕೃತದಲ್ಲಿ ಘಟನೆಯನ್ನು ವರದಿ ಮಾಡುವ ಯಾವುದೇ ಒಂದು ವಾಕ್ಯವನ್ನೂ ಅಲ್ಲಗಳೆಯುವ ನ ಪದ ವನ್ನು ಸೇರಿಸುವುದರ ಮೂಲಕ ಅಲ್ಲಗಳೆಯುವ ವಾಕ್ಯವನ್ನಾಗಿ ಬದಲಾಯಿಸಲು ಸಾಧ್ಯವಿದೆ.
ಆದರೆ ಕನ್ನಡದಲ್ಲಿ ಇಲ್ಲ ಮತ್ತು ಅಲ್ಲ ಎಂಬ ಎರಡು ಅಲ್ಲಗಳೆಯುವ ಪದಗಳಿದ್ದು ಇವುಗಳಲ್ಲಿ ಮೊದಲನೆಯದನ್ನು ಕ್ರಿಯಾಪದವಿರುವ ವಾಕ್ಯಗಳನ್ನು ಅಲ್ಲಗಳೆಯುವುದಕ್ಕಾಗಿ ಮತ್ತು ಎರಡನೆಯದನ್ನು ಎರಡು ನಾಮಪದ (ಇಲ್ಲವೇ ನಾಮಪದಕಂತೆ)ಗಳಿಂದ ಸಿದ್ಧವಾದ (ಕ್ರಿಯಾಪದವಿಲ್ಲದ) ವಾಕ್ಯಗಳನ್ನು ಅಲ್ಲಗಳೆ ಯುವುದಕ್ಕಾಗಿ ಬಳಸುವ ಅವಶ್ಯಕತೆಯಿದೆ. ಇದಲ್ಲದೆ, ಕನ್ನಡದಲ್ಲಿ ಕ್ರಿಯಾಪದವಿರುವ ವಾಕ್ಯಗಳಿಗೆ ಇಲ್ಲ ಪದವನ್ನು ಸೇರಿಸುವ ಮೊದಲು ಅವುಗಳ ಕ್ರಿಯಾಪದವನ್ನು ಸಂಬಂಧಿಸುವ ರೂಪಕ್ಕೆ ಇಲ್ಲವೇ ನಾಮರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಹಿಂದಿನ ಸಮಯದ ಅಥ್ರವನ್ನು ಕೊಡಲು ಕ್ರಿಯಾಪದದ ಸಂಬಂಧಿಸುವ ರೂಪವನ್ನು ಮತ್ತು ಮುಂದಿನ ಸಮಯದ ಅಥ್ರವನ್ನು ಕೊಡಲು ನಾಮರೂಪವನ್ನು ಬಳಸು ವುದು ಕನ್ನಡದಲ್ಲಿ ರೂಢಿ.
230 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಆದರೆ ಸಂಸ್ಕೃತದಲ್ಲಿ ಅಲ್ಲಗಳೆಯುವ ನ ಪದವನ್ನು ಬಳಸಲು ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ.
(9)
ತೇ ಪುಸ್ತಕಾನಿ ನ ಪಠಂತಿ `ಅವರು ಪುಸ್ತಕಗಳನ್ನು ಓದುವುದಿಲ್ಲ’ (10) ವಿಶ್ವಾಮಿತ್ರಃ ಅಯೋಧ್ಯಾಂ ನ ಅಗಚ್ಛತ್
`ವಿಶ್ವಾಮಿತ್ರ ಅಯೋಧ್ಯೆಗೆ ಹೋಗಲಿಲ್ಲ’
ಕ್ರಿಯಾಪದಗಳ ಕೃದಂತ (ಗುಣ)ರೂಪವನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡ ದಲ್ಲಿ ಅದ ಎಂಬ ಬೇರೆಯೇ ಒಂದು ಅಲ್ಲಗಳೆಯುವ ಪ್ರತ್ಯಯದ ಬಳಕೆಯಿದೆ. ಆದರೆ ಸಂಸ್ಕೃತದಲ್ಲಿ ಇಂತಹ ಸಂದಭ್ರಗಳಲ್ಲೂ ನ ಪದದ ಬಳಕೆಯೇ ಕಾಣಿಸುತ್ತದೆ.
ಕನ್ನಡದಲ್ಲಿ ಈ ರೀತಿ ಅದ ಪ್ರತ್ಯಯವನ್ನು ಬಳಸಿ ರಚಿಸಿದ ಕ್ರಿಯಾರೂಪ ಗಳು ಕಾಲವ್ಯತ್ಯಾಸವನ್ನು ಸೂಚಿಸಲಾರವು. ಆದರೆ ಸಂಸ್ಕೃತದಲ್ಲಿ ಕನ್ನಡದ ಹಾಗೆ ಪ್ರತ್ಯಯವನ್ನು ಬಳಸದೆ ನ ಪದವನ್ನೇ ಬಳಸುವ ಕಾರಣ, ಅದರ ಕೃದಂತ ರೂಪಗಳು ಕಾಲವ್ಯತ್ಯಾಸವನ್ನೂ ಸೂಚಿಸಬಲ್ಲುವು.
(11ಕ) ಭೋಜನಂ ನ ಕರಿಷ್ಯಮಾಣಃ ನರಃ `ಊಟಮಾಡದ ಮನುಷ್ಯ’
(11ಖ) ಭೋಜನಂ ನ ಚಕ್ರಾಣಃ ನರಃ
`ಊಟಮಾಡದ ಮನುಷ್ಯ’
(11ಕ)ದಲ್ಲಿ ಯಾರು ಊಟ ಮಾಡುವುದಿಲ್ಲವೋ ಆತನನ್ನು ಸೂಚಿಸ ಲಾಗಿದೆ ಮತ್ತು (11ಖ)ದಲ್ಲಿ ಯಾರು ಊಟ ಮಾಡಲಿಲ್ಲವೋ ಆತನನ್ನು ಸೂಚಿಸಲಾಗಿದೆ. ಈ ಎರಡು ಸಂದಭ್ರಗಳಲ್ಲೂ ಕನ್ನಡದಲ್ಲಿ ಮಾಡದ ಎಂಬ ಒಂದೇ ಕ್ರಿಯಾರೂಪ ಬಳಕೆಯಾಗುತ್ತದೆ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸ ವೇನೆಂದರೆ, ಸಂಸ್ಕೃತದಲ್ಲಿ ವಾಕ್ಯಗಳನ್ನು ಮಾತ್ರವಲ್ಲದೆ ಪದಗಳನ್ನೂ ಅ ಇಲ್ಲವೇ ಅನ್ ಉಪಸಗ್ರದ ಮೂಲಕ ಅಲ್ಲಗಳೆಯಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಈ ರೀತಿ ಪದಗಳನ್ನು ಅಲ್ಲಗಳೆಯುವ ವಿಧಾನವಿಲ್ಲ. ಸಂಸ್ಕೃತದಿಂದ ಎರವಲಾಗಿ ಬಂದ ಇಂತಹ ಅಲ್ಲಗಳೆಯುವ ಉಪಸಗ್ರಗಳಿರುವ ಪದಗಳು ಕೆಲವು ಕನ್ನಡದಲ್ಲಿರುವುದು ನಿಜವಾದರೂ ಕನ್ನಡದವೇ ಆದ ಪದಗಳಿಗೆ ಅಂತಹ ಅಲ್ಲಗಳೆಯುವ ರೂಪಗಳಿಲ್ಲ.
231 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸತ್ಯ DZÁgÀ
KPÀ ಜ್ಞಾನ
CxÀð
ನ್ಯಾಯ
ಅಸತ್ಯ ಅನಾಚಾರ ಅನೇಕ ಅಜ್ಞಾನ ಅನಥ್ರ ಅನ್ಯಾಯ
ಆದರೆ, ವಾಕ್ಯವೊಂದನ್ನು ಪೂತ್ರಿಯಾಗಿ ಅಲ್ಲಗಳೆಯುವ ಬದಲು ಅದರ ಒಂದು ಅಂಗವನ್ನು ಮಾತ್ರ ಅಲ್ಲಗಳೆಯಲು ಕನ್ನಡದಲ್ಲಿ ಬೇರೆಯೇ ಒಂದು ವ್ಯಾಕರಣ ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ಅಲ್ಲ ಪದವನ್ನು ಅಲ್ಲಗಳೆಯ ಬೇಕಾಗಿರುವ ವಾಕ್ಯಾಂಗದೊಂದಿಗೆ ಸೇರಿಸಿ ಹೇಳಬೇಕು ಮತ್ತು ವಾಕ್ಯದಲ್ಲಿ ಬರುವ ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಿಕೊಳ್ಳಬೇಕು.
(12ಕ) ಹರಿ ರಾಮುವಿಗೆ ಒಂದು ಪುಸ್ತಕ ಕೊಟ್ಟ (12ಖ) ಹರಿ ರಾಮುವಿಗೆ ಒಂದು ಪುಸ್ತಕ ಕೊಡಲಿಲ್ಲ (12ಗ) ಹರಿಯಲ್ಲ ರಾಮುವಿಗೆ ಒಂದು ಪುಸ್ತಕ ಕೊಟ್ಟದ್ದು (12ಘ) ಹರಿ ರಾಮುವಿಗಲ್ಲ ಒಂದು ಪುಸ್ತಕ ಕೊಟ್ಟದ್ದು (12ಙ) ಹರಿ ರಾಮುವಿಗೆ ಒಂದು ಪುಸ್ತಕವನ್ನಲ್ಲ ಕೊಟ್ಟದ್ದು (12ಚ) ಹರಿ ರಾಮುವಿಗೆ ಒಂದು ಪುಸ್ತಕ ಕೊಟ್ಟದ್ದಲ್ಲ (ಮಾರಿದ್ದು)
(12ಖ) ವಾಕ್ಯದಲ್ಲಿ (12ಕ) ವಾಕ್ಯವನ್ನು ಪೂತ್ರಿಯಾಗಿ ಅಲ್ಲಗಳೆಯ ಲಾಗಿದೆ. ಆದರೆ, (12ಗ)ದಲ್ಲಿ ಅದರ ಒಂದು ಭಾಗವನ್ನು ಮಾತ್ರ, ಎಂದರೆ ರಾಮುವಿಗೆ ಪುಸ್ತಕವನ್ನು ಕೊಟ್ಟವನು ಹರಿ ಎಂಬುದನ್ನು ಮಾತ್ರ ಅಲ್ಲಗಳೆಯ ಲಾಗಿದೆ. ವಾಕ್ಯದ ಇತರ ಭಾಗವನ್ನು, ಎಂದರೆ ಯಾರೋ ರಾಮುವಿಗೆ ಒಂದು ಪುಸ್ತಕ ಕೊಟ್ಟಿದ್ದಾರೆ ಎಂಬುದನ್ನು ಈ ವಾಕ್ಯದಲ್ಲಿ ಅಲ್ಲಗಳೆಯಲಾಗಿಲ್ಲ ಎಂಬುದನ್ನು ಗಮನಿಸಬಹÅದು. ಇತರ (12ಘ-ಚ) ವಾಕ್ಯಗಳಲ್ಲೂ ಹೀಗೆಯೇ ಘಟಕಗಳನ್ನು ಅಲ್ಲಗಳೆಯಲಾಗಿದೆ.
ಆಜ್ಞೆ ಮಾಡುವ ವಾಕ್ಯಗಳನ್ನು ಅಲ್ಲಗಳೆಯಲು ಸಂಸ್ಕೃತದಲ್ಲಿ ನ ಎಂಬುದರ ಬದಲು ಮಾ ಎಂಬುದನ್ನು ಬಳಸುವ ಕ್ರಮವಿದೆ. ಕನ್ನಡದಲ್ಲಿ ಇದಕ್ಕಾಗಿ ಇಲ್ಲ ಎಂಬುದರ ಬದಲು ಬೇಡ ಎಂಬ ಪದವನ್ನು ಬಳಸುವ ಕ್ರಮವಿದೆ.
ವಾಕ್ಯದ
ಬೇರೆ
ಬೇರೆ
(13) ಭೋಜನಸಮಯೇ ಜಲಂ ಮಾ ಪಿಬ
`ಊಟದ ಸಮಯದಲ್ಲಿ ನೀರು ಕುಡಿಯಬೇಡ’
232 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಇಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅಲ್ಲಗಳೆಯುವ ಅಥ್ರವನ್ನು ಸೂಚಿಸುವಲ್ಲಿ ಕಾಣಿಸುವ ವ್ಯತ್ಯಾಸವೇನೆಂದರೆ ಕನ್ನಡದಲ್ಲಿ ಈ ಅಥ್ರವನ್ನು ಒಂದು ಕ್ರಿಯಾರೂಪ ಸೂಚಿಸುತ್ತದೆ; ಆದರೆ, ಸಂಸ್ಕೃತದಲ್ಲಿ ಅದನ್ನು ಒಂದು ಉಪಸಗ್ರ ಇಲ್ಲವೇ ಅವ್ಯಯ ಸೂಚಿಸುತ್ತದೆ.
11.7 ಕೇಳುವ ವಾಕ್ಯಗಳು ಕೇಳುವ (ಪ್ರಶ್ನಾಥ್ರಕ) ವಾಕ್ಯಗಳ ರಚನೆಯಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಇಂತಹದೇ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ವಾಕ್ಯವೊಂದನ್ನು ಕೇಳ್ವಿ (ಪ್ರಶ್ನೆ)ಯನ್ನಾಗಿ ಬದಲಾಯಿಸಬೇಕಿದ್ದಲ್ಲಿ ಕಿಂ ಪದವನ್ನು ಅದರಲ್ಲಿ ಸೇರಿಸಿದರೆ ಸಾಕು. ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ.
ಆದರೆ ಕನ್ನಡದಲ್ಲಿ ಇದಕ್ಕಾಗಿ ಓ ಪ್ರತ್ಯಯದ ಬಳಕೆಯಿದ್ದು ಇದನ್ನು ಕ್ರಿಯಾಪದದ ಕೊನೆಯಲ್ಲಿ ಬಳಸುವುದಾದರೆ ಮಾತ್ರ ವಾಕ್ಯದಲ್ಲಿ ಬೇರೆ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿಲ್ಲ. ವಾಕ್ಯದಲ್ಲಿ ಬರುವ ಬೇರೆ ಪದಗಳೊಂದಿಗೆ ಅದನ್ನು ಬಳಸಬೇಕಿದ್ದಲ್ಲಿ ಕ್ರಿಯಾಪದವನ್ನು ಅದರ ನಾಮ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ.
(14ಕ) ವ್ಯಾಧಾಃ ವನೇಸ್ಮಿನ್ ಸಂಚರಂತಿ
`ಈ ಕಾಡಿನಲ್ಲಿ ಬೇಟೆಗಾರರು ಸಂಚರಿಸುತ್ತಾರೆ’
(14ಖ) ಕಿಂ ವ್ಯಾಧಾಃ ವನೇಸ್ಮಿನ್ ಸಂಚರಂತಿ?
`ಈ ಕಾಡಿನಲ್ಲಿ ಬೇಟೆಗಾರರು ಸಂಚರಿಸುತ್ತಾರೋ?’ (14ಗ) ಬೇಟೆಗಾರರು ಈ ಕಾಡಿನಲ್ಲೋ ಸಂಚರಿಸುವುದು? (14ಘ) ಬೇಟೆಗಾರರೋ ಈ ಕಾಡಿನಲ್ಲಿ ಸಂಚರಿಸುವುದು?
ಕನ್ನಡದಲ್ಲಿಕೇಳ್ವಿಯ ಅಥ್ರವನ್ನು ಕೊಡುವ ಓ ಪ್ರತ್ಯಯವನ್ನು ವಾಕ್ಯ ದಲ್ಲಿರುವ ನಾಮಪದಗಳಲ್ಲಿ ಒಂದರೊಡನೆ ಬಳಸಿದಾಗ ಅದು ಸೂಚಿಸುವ ಕೇಳ್ವಿ ಆ ಪದವನ್ನು ಮಾತ್ರ ಬಾಧಿಸುತ್ತದೆ ಎಂಬುದನ್ನು ಗಮನಿಸಬಹುದು. ಮೇಲೆ (14ಗ) ವಾಕ್ಯ ಕಾಡಿನಲ್ಲಿ ಯಾರಾದರೂ ಸಂಚರಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಪ್ರಯತ್ನಿಸುವ ಬದಲು ಸಂಚರಿಸುವುದು ಈ ಕಾಡಿನಲ್ಲೋ ಎಂದು ಕೇಳುತ್ತದೆ ಮತ್ತು (14ಘ) ವಾಕ್ಯ ಸಂಚರಿಸುವವರು ಯಾರು (ಬೇಟೆಗಾರರೋ) ಎಂದು ಕೇಳುತ್ತದೆ.
ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳಲ್ಲಿ ಒಂದರ ಕುರಿತಾಗಿ ಮಾತ್ರ ವಿಷಯವನ್ನು ತಿಳಿಯುವುದಕ್ಕಾಗಿ ಸವ್ರನಾಮವನ್ನು ಬಳಸಲು ಸಾಧ್ಯವಿದೆ.
233 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
(14ಙ) ಕೇ ವನೇಸ್ಮಿನ್ ಸಂಚರಂತಿ?
`ಈ ಕಾಡಿನಲ್ಲಿ ಯಾರು ಸಂಚರಿಸುತ್ತಾರೆ?’
(15) ಕ್ವ ಭವತಾಂ ನಿವಾಸಃ?
`ನಿಮ್ಮ ಮನೆ ಎಲ್ಲಿ?’
ಕನ್ನಡದ `ಕೇಳ್ವಿ' ಪದಗಳಿಗೆ ಓ, ಊ ಮತ್ತು ಏ ಎಂಬ ಮೂರು ಪ್ರತ್ಯಯಗಳಲ್ಲಿ ಯಾವುದಾದರೂ ಒಂದನ್ನು ಸೇರಿಸುವುದರ ಮೂಲಕ ಅವನ್ನು ಅನಿಶ್ಚಿತವಾದ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಸೂಚಿಸುವ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.
ಸಂಸ್ಕೃತದಲ್ಲಿಯೂ ಇದೇ ರೀತಿಯಲ್ಲಿ ಅಪಿ, ಚ, ಚನ, ಚಿದ್, ವಾ ಮೊದಲಾದವುಗಳಲ್ಲಿ ಒಂದನ್ನು ಬಳಸಿ ಕೇಳ್ವಿ ಪದಗಳನ್ನು ಅನಿಶ್ಚಯಾಥ್ರದ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.
(16) ನ ಮಾಂ ಕಶ್ಚಿತ್ ಅಪಶ್ಯತ್ `ನನ್ನನ್ನು ಯಾರೂ ನೋಡಲಿಲ್ಲ’
(17) ನ ಕಿಂಚಿತ್ ಉಕ್ತವಾನ್
`ಅವನು ಏನೂ ಹೇಳಲಿಲ್ಲ’
ಆದರೆ ಕನ್ನಡದಲ್ಲಿ ಮೇಲೆ ಕೊಟ್ಟಿರುವ ಮೂರು ಪ್ರತ್ಯಯಗಳಿಂದ ಸಿದ್ಧ ವಾದ ಅನಿಶ್ಚಯಾಥ್ರದ ಪದಗಳಿಗೆ ಮೂರು ಭಿನ್ನವಾದ ಅಥ್ರಗಳಿವೆ. ಓ ಪ್ರತ್ಯಯಕ್ಕೆ ಬೇರೆ ಬಳಕೆಗಳಲ್ಲಿ ವಿಕಲ್ಪಾಥ್ರವಿದೆಯಾದ ಕಾರಣ, ಅದರಿಂದ ಸಿದ್ಧವಾದ ಅನಿಶ್ಚಯಾಥ್ರದ ಪದಕ್ಕೆ ಏಕದೇಶಾಥ್ರ ಮತ್ತು ಅಸ್ತಿತ್ವಾಥ್ರಗಳಿವೆ.
ಇದಕ್ಕೆ ವಿರುದ್ಧವಾಗಿ ಊ ಪ್ರತ್ಯಯಕ್ಕೆ ಸಮುಚ್ಚಯಾಥ್ರವಿದೆಯಾದ ಕಾರಣ, ಅದರಿಂದ ಸಿದ್ಧವಾದ ಪದಕ್ಕೆ ಸಾವ್ರತ್ರಿಕಾಥ್ರವಿದೆಯಲ್ಲದೆ ಅಸ್ತಿತ್ವಾಥ್ರವಿಲ್ಲ. ಈ ವ್ಯತ್ಯಾಸವನ್ನು ಈ ಅನಿಶ್ಚಯಾಥ್ರದ ಪದಗಳ ಬಳಕೆಯಲ್ಲಿ ಕಾಣಬಹುದು.
ಉದಾಹರಣೆಗಾಗಿ, ಈ ಎರಡು ರೀತಿಯ ಪದಗಳನ್ನೂ ಒಂದು ಘಟನೆ ನಡೆದಿಲ್ಲವೆಂದು ತಿಳಿಸುವ ಅಲ್ಲಗಳೆಯುವ ವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ, ಆದರೆ ಒಂದು ಘಟನೆ ನಡೆದಿದೆಯೆಂದು ತಿಳಿಸುವ ವಾಕ್ಯಗಳಲ್ಲಿ ಓ ಪ್ರತ್ಯಯದ ಮೂಲಕ ಸಾಧಿತವಾಗಿರುವ ಪದಗಳನ್ನು ಮಾತ್ರ ಬಳಸಲು ಸಾಧ್ಯ.
(17ಕ) ನಿನ್ನೆ ಆತ ಯಾರನ್ನೋ ಕಂಡಿರಲಿಲ್ಲ (17ಖ) ನಿನ್ನೆ ಆತ ಯಾರನ್ನೂ ಕಂಡಿರಲಿಲ್ಲ (18) ನಿನ್ನೆ ಆತ ಯಾರನ್ನೋ ಕಂಡಿದ್ದ
234 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕ್ರಿಯಾರೂಪಗಳು
ಇದಕ್ಕೆ ಬದಲು ವಿಧ್ಯಥ್ರಕ ವಾಕ್ಯಗಳಲ್ಲಿ ಊ ಪ್ರತ್ಯಯದಿಂದ ಸಾಧಿತ ವಾಗಿರುವ ಪದಗಳನ್ನು ಬಳಸಲು ಸಾಧ್ಯವಿದೆ, ಆದರೆ ಓ ಪ್ರತ್ಯಯದಿಂದ ಸಾಧಿತವಾಗಿರುವ ಪದಗಳನ್ನು ಬಳಸಲು ಸಾಧ್ಯವಿಲ್ಲ (ಜಾಸ್ತಿ ವಿವರಗಳಿಗೆ ಭಟ್ 1978, 2003 ನೋಡಿ).
(19) ಎಲ್ಲಿಗೂ ಹೋಗು (20) ಯಾರನ್ನು ಬೇಕಿದ್ದರೂ ಕೇಳು
ಸಂಸ್ಕೃತದ ಕೇಳ್ವಿ ಪದಗಳೊಂದಿಗೆ ಬರಬಲ್ಲ ಚ, ಅಪಿ, ವಾ ಮೊದಲಾ ದವುಗಳ ಬಳಕೆಯಲ್ಲಿ ಇಂತಹ ಅಥ್ರ ವ್ಯತ್ಯಾಸವಿರುವ ಹಾಗೆ ಕಾಣಿಸುವುದಿಲ್ಲ. ಬಹುಶಃ ಮೊದಲಿಗೆ ಅಂತಹ ವ್ಯತ್ಯಾಸವಿದ್ದು ಅನಂತರ ಆ ಭಾಷೆಯಲ್ಲಿ ಅದು ನಷ್ಟವಾಗಿರಲು ಸಾಧ್ಯವಿದೆ.
11.8 ತಿರುಳು ಕ್ರಿಯಾರೂಪಗಳ ಒಳರಚನೆಯಲ್ಲಿ ಮತ್ತು ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಕನ್ನಡದಲ್ಲಿ ಮುಖ್ಯವಾಗಿ ಹಿಂದಿನ ಮತ್ತು ಮುಂದಿನ ಕಾಲದವುಗಳೆಂಬುದಾಗಿ ಕಾಲಸಂಬಂಧ'ದ ಭೇದ ಕಾಣಿಸು ತ್ತದೆ; ಆದರೆ, ಸಂಸ್ಕೃತದಲ್ಲಿ ಮುಗಿದ (ಪೂಣ್ರ) ಮತ್ತು ಮುಗಿಯದ (ಅಪೂಣ್ರ) ಎಂಬುದಾಗಿ ಕಾಲವ್ಯವಸ್ಥೆ’ಯ ಭೇದ ಕಾಣಿಸುತ್ತದೆ.
ಕನ್ನಡದಲ್ಲಿರುವಂತಹ ಕಾಲಸಂಬಂಧದ ಭೇದಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ಅದನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಕ್ರಿಯಾಪದದ ಮೊದಲಿಗೆ ಅ ಉಪಸಗ್ರವನ್ನು ಸೇರಿಸಲಾಗುತ್ತದೆ. ಆದರೆ ಇದನ್ನು ಬಳಸಲೇ ಬೇಕೆಂಬ ನಿಯಮವಿಲ್ಲ, ಅವಶ್ಯವಿದ್ದಲ್ಲಿ ಮಾತ್ರ ಬಳಸಿದರೆ ಸಾಕು.
ಕನ್ನಡದಲ್ಲಿ ಕಾಲಸಂಬಂಧವನ್ನು ಸೂಚಿಸುವ ಪ್ರತ್ಯಯಗಳು ಪುರುಷ- ವಚನ-ಲಿಂಗಗಳನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳಿಂದ ಭಿನ್ನವಾದವುಗಳು, ಆದರೆ ಸಂಸ್ಕೃತದಲ್ಲಿ ಕಾಲವ್ಯವಸ್ಥೆಯನ್ನು ಮತ್ತು ಪುರುಷ-ವಚನಗಳನ್ನು ಒಟ್ಟಾಗಿ ಆಖ್ಯಾತ ಪ್ರತ್ಯಯಗಳೇ ಸೂಚಿಸುತ್ತವೆ.
ಕನ್ನಡದ ಕ್ರಿಯಾರೂಪಗಳಲ್ಲಿ ಲಿಂಗಭೇದವನ್ನು ಸೂಚಿಸಲಾಗುತ್ತದೆ, ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಲಿಂಗಭೇದದ ಸೂಚನೆಯಿಲ್ಲ. ಕನ್ನಡದಲ್ಲಿ ಆತ್ಮಾಥ್ರವನ್ನು ಸೂಚಿಸುವುದಕ್ಕಾಗಿ ಕೊಳ್ಳು ಎಂಬುದರ ಬಳಕೆ ಯಾಗುತ್ತದೆ. ಸಂಸ್ಕೃತದಲ್ಲಿ ಮೊದಲಿಗೆ ಇದನ್ನು ಆಖ್ಯಾತ ಪ್ರತ್ಯಯಗಳಲ್ಲೇನೇ ಕಾಣಿಸುವ ಪರಸ್ಮೈಪದ-ಆತ್ಮನೇಪದ ವ್ಯತ್ಯಾಸದ ಮೂಲಕ ಸೂಚಿಸಲಾಗು ತ್ತಿತ್ತು; ಆದರೆ ಕಾವ್ಯಗಳ ಕಾಲದಲ್ಲಿ ಈ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಅಥ್ರಹೀನ ªÁVzÉ.
235 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸಮನಾದ
ಇದೇ ರೀತಿಯಲ್ಲಿ, ಸಂಸ್ಕೃತದಲ್ಲಿ ಮೊದಲಿಗೆ ಬಳಕೆಯಲ್ಲಿದ್ದ ಕತ್ರರಿ- ಕಮ್ರಣಿ ಪ್ರಯೋಗಭೇದವೂ ಕಾವ್ಯಗಳ ಕಾಲದಲ್ಲಿ ತನ್ನ ಮೂಲ ಉದ್ದೇಶವನ್ನು ಪ್ರಯೋಗಭೇದ ಪ್ರಯೋಗಭೇದಕ್ಕೆ ಕಳೆದುಕೊಂಡಿದೆ. ಈ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಬರವಣಿಗೆಗಳಲ್ಲಿ ಮಾತ್ರ ಕಾಣಿಸುತ್ತದೆ.
ಅಲ್ಲಗಳೆಯುವ ಮತ್ತು ಕೇಳುವ (ಪ್ರಶ್ನಿಸುವ) ವಾಕ್ಯಗಳ ರಚನೆಯಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಕ್ರಿಯಾರೂಪಗಳ ಒಳರಚನೆಯಲ್ಲಿ ಈ ರೀತಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಸಂಸ್ಕೃತದ ವ್ಯಾಕರಣ ನಿಯಮ ಗಳನ್ನು ಹಾಗೆ0iÉುೀ ಕನ್ನಡಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತಕ್ಕಿಂತ ತೀರ ಭಿನ್ನವಾಗಿರುವ ಕನ್ನಡದ್ದೇ ಆದ ನಿಯಮಗಳನ್ನು ತಯಾರಿಸಿಕೊಂಡಲ್ಲಿ ಮಾತ್ರ ಕನ್ನಡದ ಈ ಕ್ರಿಯಾರೂಪಗಳನ್ನು ವಿವರಿಸಲು ಸಾಧ್ಯ.
236 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
12. ಮುಕ್ತಾಯ
12.1 ವ್ಯತ್ಯಾಸಗಳ ಮೂಲ ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳುವುದೇ ಈ ಪುಸ್ತಕದ ಮುಖ್ಯ ಉದ್ದೇಶ.
ಕನ್ನಡದಲ್ಲಿ ಇದುವರೆಗೆ ತಯಾರಾಗಿರುವ ವ್ಯಾಕರಣಗಳಲ್ಲಿ ಹೆಚ್ಚಿನವೂ ಸಂಸ್ಕೃತದ ವ್ಯಾಕರಣ ಪರಂಪರೆಯನ್ನೇ ಅವಲಂಬಿಸಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸುವುದು ಹೇಗೆ ಎಂಬುದನ್ನು ಮಾತ್ರ ಈ ವ್ಯಾಕರಣಗಳು ಪರಿಶೀಲಿಸಿವೆ. ಆದರೆ, ನಿಜಕ್ಕೂ ಕನ್ನಡದ ಪದಗಳ ಮತ್ತು ವಾಕ್ಯಗಳ ಒಳರಚನೆಯಲ್ಲಿ ಬಳಕೆಯಾಗುವ ನಿಯಮಗಳು ಸಂಸ್ಕೃತದಲ್ಲಿ ಬಳಕೆಯಾಗುವ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆ. ಈ ಪದಗಳನ್ನು ಮತ್ತು ವಾಕ್ಯಗಳನ್ನು ಕನ್ನಡದ್ದೇ ಆದ ದೃಷ್ಟಿಕೋನದಿಂದ ಪರಿಶೀಲಿಸಿದಾಗ ಮಾತ್ರ, ಅವುಗಳ ಹಿಂದಿರುವ ವ್ಯಾಕರಣ ನಿಯಮಗಳ ನಿಜವಾದ ಸ್ವರೂಪವೇನು ಎಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತದ ವ್ಯಾಕರಣದ ದೃಷ್ಟಿಕೋನದಿಂದ ಪರಿಶೀಲಿಸಿದಲ್ಲಿ ಅವು ಅಸ್ಪಷ್ಟವಾಗಿ ಮಾತ್ರವೇ ಕಾಣಿಸಬಲ್ಲುವು.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವು ಬಳಸುವ ವ್ಯಾಕರಣ ನಿಯಮಗಳಲ್ಲಿ ಕಾಣಿಸುವ ಇಂತಹ ಹಲವು ರೀತಿಯ ವ್ಯತ್ಯಾಸಗಳನ್ನು ನಾನು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ.
ಆದರೆ, ಈ ಎರಡು ಭಾಷೆಗಳ ನಡುವಿರುವ ವ್ಯತ್ಯಾಸಗಳನ್ನೆಲ್ಲ ಕೂಲಂಕಶ ವಾಗಿ ಪಟ್ಟಿಮಾಡಿ ಹೇಳುವುದು ಈ ಪುಸ್ತಕದ ಉದ್ದೇಶವಲ್ಲ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಹೋದರೆ ಹೇಗೆ ತೊಂದರೆ ಯುಂಟಾಗಬಲ್ಲುದು ಎಂಬುದನ್ನು ಮನಮುಟ್ಟುವಂತೆ ತೋರಿಸಿ ಕೊಡುವುದಷ್ಟೇ ನನ್ನ ಉದ್ದೇಶ. ಹಾಗಾಗಿ ಈ ಉದ್ದೇಶವನ್ನು ಸಾಧಿಸುವುದಕ್ಕೆ ಬೇಕಾಗುವಷ್ಟು ವಿಷಯಗಳನ್ನು ಮಾತ್ರ ನಾನು ಇಲ್ಲಿ ಕೊಟ್ಟಿದ್ದೇನೆ.
ಸಂಸೃತ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿರುವುದೇ ಅವುಗಳ ವ್ಯಾಕರಣ ನಿಯಮಗಳಲ್ಲಿ ಇಷ್ಟೊಂದು ವ್ಯತ್ಯಾಸಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ. ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಮೂಲದಿಂದ ಬೆಳೆದು ಬಂದಿದೆ; ಆದರೆ ಕನ್ನಡ ಭಾಷೆ ಅದಕ್ಕಿಂತ ತೀರ ಭಿನ್ನ ವಾಗಿರುವ ದ್ರಾವಿಡ ಮೂಲದಿಂದ ಬೆಳೆದು ಬಂದಿದೆ (ಭಟ್ 2005ಕ ನೋಡಿ).
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಮನಸ್ಸಿನಲ್ಲಿರುವ ಇಂಗಿತವನ್ನು ಇನ್ನೊಬ್ಬರಿಗೆ ತಿಳಿಸುವುದಕ್ಕಾಗಿ ಮತ್ತು ಪ್ರಶ್ನಿಸುವುದು, ವಿಧಿಸುವುದು, ಸಂಶಯಿಸುವುದು ಮೊದಲಾದ ಹಲವು ರೀತಿಯ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ನಾವು ಭಾಷೆಯನ್ನು ಬಳಸುತ್ತೇವೆ. ಇವನ್ನು ನಡೆಸಲು ಎಲ್ಲಾ ಭಾಷೆಗಳೂ ಒಂದೇ ಬಗೆಯ ವ್ಯಾಕರಣ ವಿಧಾನ ಗಳನ್ನು ಬಳಸುವುದಿಲ್ಲ, ಬೇರೆ ಬೇರೆ ಬಗೆಯ ವ್ಯಾಕರಣ ವಿಧಾನಗಳನ್ನು ಬಳಸು ತ್ತವೆ.
ಇದಕ್ಕಾಗಿ ಇಂಡೋ-ಯುರೋಪಿಯನ್ ಮತ್ತು ದ್ರಾವಿಡ ಭಾಷಾಮೂಲ ಗಳು ಬೇರೆ ಬೇರೆ ವಿಧಾನಗಳನ್ನು ಆರಿಸಿಕೊಂಡಿದ್ದಿರಬೇಕು ಮತ್ತು ಹಾಗಾಗಿ, ಪ್ರಾರಂಭದಲ್ಲೇನೇ ಅವು ಒಂದಕ್ಕಿಂತ ಒಂದು ತೀರಾ ಭಿನ್ನವಾಗಿದ್ದಿರಬೇಕು. ಅನಂತರ ಈ ವಿಧಾನಗಳು ಆ ಎರಡು ಮೂಲಗಳಿಂದ ಬೆಳೆದು ಬಂದಿರುವ ಸಂಸ್ಕೃತ, ಕನ್ನಡ ಮೊದಲಾದ ಭಾಷೆಗಳ ಸಾವಿರಾರು ವಷ್ರಗಳ ಚರಿತ್ರೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಬದಲಾಗುತ್ತಾ ಬಂದಿರಬೇಕು.
ಅನಂತರದ ಕಾಲದಲ್ಲಿ ಕನ್ನಡ ಭಾಷೆ ಸಂಸ್ಕೃತದ ಸಂಪಕ್ರಕ್ಕೆ ಬಂದುದ ರಿಂದಾಗಿ ಕೆಲವು ವಿಷಯಗಳಲ್ಲಿ ಸಂಸ್ಕೃತದೊಂದಿಗೆ ಹೋಲಿಕೆಯನ್ನು ಪಡೆದಿದೆ ಯಾದರೂ ಹೆಚ್ಚಿನ ವಿಷಯಗಳಲ್ಲೂ ಅದು ತನ್ನ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆ.
ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರಿರುವ ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸುವ ಬದಲು ಬೇರೆ ಯಾವುದಾದರೂ ಒಂದು ದ್ರಾವಿಡ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸಿ ಕನ್ನಡದ ವ್ಯಾಕರಣವನ್ನು ರಚಿಸಿದಲ್ಲಿ ಅದು ಕನ್ನಡದ ಪದರಚನೆಯ ಮತ್ತು ವಾಕ್ಯರಚನೆಯ ನಿಯಮಗಳನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸರಿಯಾಗಿ ತಿಳಿಸಬಲ್ಲುದು.
ಆದರೆ ಅಂತಹ ವ್ಯಾಕರಣ ಪರಂಪರೆಯಿನ್ನೂ ಸಿದ್ಧವಾಗಿಲ್ಲ. ತಮಿಳು, ತೆಲುಗು ಮೊದಲಾದ ಇತರ ದ್ರಾವಿಡ ಭಾಷೆಗಳ ವ್ಯಾಕರಣಗಳೂ ಬಹಳ ಮಟ್ಟಿಗೆ ಸಂಸ್ಕೃತ ಇಲ್ಲವೇ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲೇನೇ ತಯಾ ರಾಗಿದ್ದು ಅವೂ ಕನ್ನಡದ ವ್ಯಾಕರಣಗಳ ಹಾಗೆಯೇ ಅಸಮಪ್ರಕಗಳಾಗಿವೆ. ಹಾಗಾಗಿ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ತಯಾರಿಸಿ ಕೊಳ್ಳುವುದೊಂದೇ ನಮಗೆ ಉಳಿದಿರುವ ದಾರಿ.
12.2 ಹೊಸ ದೃಷ್ಟಿಕೋನ ಕನ್ನಡ ವ್ಯಾಕರಣದ ಮೇಲೆ ಲೇಖನ ಇಲ್ಲವೇ ಪುಸ್ತಕಗಳನ್ನು ಬರೆಯುವವರು ಈ ಕಾರಣಕ್ಕಾಗಿ ಒಂದು ಹೊಸ ದೃಷ್ಟಿಕೋನವನ್ನು ಬಳಸಿಕೊಳ್ಳುವ ಅವಶ್ಯಕತೆ ಯಿದೆ. ಕನ್ನಡದ ಲೇಖಕರಲ್ಲಿ ಸಾಮಾನ್ಯವಾಗಿ ವ್ಯಾಖ್ಯಾನಕಾರರ ದೃಷ್ಟಿಕೋನವೇ ಕಾಣಿಸುತ್ತಿದೆ. ನಾಗವಮ್ರ, ಕೇಶಿರಾಜ ಮೊದಲಾದ ಕನ್ನಡದ ವೈಯಾಕರಣಿಗಳು
238 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುಕ್ತಾಯ
ನಿಜಕ್ಕೂ ಏನು ಹೇಳಿದ್ದರು, ಅವರ ಹೇಳಿಕೆಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಪಟ್ಟಿಮಾಡಿ ವಿವರಿಸುವುದೇ ಇವರು ಇವತ್ತು ಮಾಡುತ್ತಿರುವ `ಸಂಶೋಧನೆ’ಗಳು.
ಈ ರೀತಿ ಹಿಂದಿನ ವೈಯಾಕರಣಿಗಳ ಗ್ರಂಥಗಳನ್ನು ವಿಮಶ್ರಿಸುವುದು ಅವಶ್ಯವಾದರೂ ಕನ್ನಡ ವ್ಯಾಕರಣದ ಮಟ್ಟಿಗೆ ಅವು ನಮ್ಮನ್ನು ಹೆಚ್ಚು ಮುಂದಕ್ಕೆ ಕೊಂಡೊಯ್ಯಲಾರವು. ಯಾಕೆಂದರೆ, ಕನ್ನಡದ ಹಳೆಯ ವ್ಯಾಕರಣಗಳೆಲ್ಲ ಸಂಸ್ಕೃತ ವ್ಯಾಕರಣದ ದೃಷ್ಟಿಕೋನವನ್ನಿರಿಸಿಕೊಂಡಿವೆ; ಹಾಗಾಗಿ, ಅವು ಕನ್ನಡ ವ್ಯಾಕರಣದ ನಿಜವಾದ ಸ್ವರೂಪವನ್ನು ವಿವರಿಸಿ ಹೇಳಲಾರವು.
ಉದಾಹರಣೆಗಾಗಿ, ನಮ್ಮ ವೈಯಾಕರಣಿಗಳು ಕನ್ನಡದಲ್ಲಿ ಎಂತಹ ಸಮಾಸ ಗಳೆಲ್ಲ ಇವೆ ಎಂಬುದನ್ನು ವಣ್ರಿಸುವ ಕ್ರಮ ಹೇಗೆ ಎಂಬುದನ್ನು ಗಮನಿಸ ಬಹುದು. ಮೊದಲಿಗೆ ಸಂಸ್ಕೃತದಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ವಿವರಿಸಿ ಅವಕ್ಕೆ ಕನ್ನಡದಿಂದ ಉದಾಹರಣೆಗಳನ್ನು ಕೊಡಲು ಅವರು ಪ್ರಯತ್ನಿಸು ತ್ತಾರೆ. ಅನಂತರ ಈ ಸಮಾಸಗಳಲ್ಲಿ ಒಂದಕ್ಕೂ ಉದಾಹರಣೆಯಾಗಲಾರದ ಜೋಡುಪದಗಳು ಕನ್ನಡದಲ್ಲಿ ಕಾಣಿಸುತ್ತಿವೆಯಾದರೆ ಅವು ಎಂತಹ ಸಮಾಸ ಗಳಿಗೆ ಉದಾಹರಣೆಗಳಾಗಬಲ್ಲುವು ಎಂಬ ಪ್ರಶ್ನೆಗೆ ಇಳಿಯುತ್ತಾರೆ.
ಇದರಿಂದಾಗಿ ಕನ್ನಡ ವ್ಯಾಕರಣ ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ಒಂದು ತೇಪೆಕೆಲಸವಾಗಿದೆ. ಈ ಸಂಸ್ಕೃತ ವ್ಯಾಕರಣದ ದೃಷ್ಟಿಕೋನವನ್ನು ಬಿಟ್ಟು ಕೊಟ್ಟು, ನೇರವಾಗಿ ಕನ್ನಡದ ಜೋಡುಪದಗಳನ್ನು ಒಂದೆಡೆ ಕಲೆಹಾಕಿ ಅವುಗಳಲ್ಲಿ ಎಂತಹ ಸಮಾಸಗಳೆಲ್ಲ ಇವೆ ಎಂಬುದನ್ನು ಮಾತ್ರವೇ ಪರಿಶೀಲಿಸಿದೆ ವಾದರೆ ನಮಗೆ ಕನ್ನಡದ ನಿಜವಾದ ಸಮಾಸಗಳಾವುವು ಎಂಬ ಪ್ರಶ್ನೆಗೆ ಸರಿ ಯಾದ ಮತ್ತು ಸ್ಪಷ್ಟವಾದ ಉತ್ತರ ದೊರೆತೀತು (ಭಟ್ 2002 ನೋಡಿ). ಇದೇ ರೀತಿಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ಹಲವು ರೀತಿಯ ವಾಕ್ಯ ಗಳನ್ನು ಒಂದೆಡೆ ಸಂಗ್ರಹಿಸಿ, ಅವುಗಳಲ್ಲಿ ಬರುವ ನಾಮಪದಗಳನ್ನು ಕ್ರಿಯಾಪದ ಗಳೊಂದಿಗೆ ಸಂಬಂಧಿಸಲು ಎಂತಹ ಪ್ರತ್ಯಯಗಳೆಲ್ಲ ಬೇಕಾಗುತ್ತವೆ, ಮತ್ತು ಈ ಪ್ರತ್ಯಯಗಳು ಎಂತಹ ಸಂಬಂಧಗಳನ್ನೆಲ್ಲ ಸೂಚಿಸಬಲ್ಲುವು ಎಂಬುದನ್ನು ಪರಿಶೀಲಿಸಿದಲ್ಲಿ ಕನ್ನಡದಲ್ಲಿ ಎಷ್ಟು ವಿಭಕ್ತಿಗಳು ಬಳಕೆಯಲ್ಲಿವೆ ಮತ್ತು ಅವುಗಳ ಕಾಯ್ರವೆಂತಹದು ಎಂಬ ವಿಷಯ ಸ್ಪಷ್ಟವಾದೀತು (ಭಟ್ 1978, 2004 ನೋಡಿ).
ಇದಕ್ಕೆ ಬದಲು ನಮ್ಮ ವೈಯಾಕರಣಿಗಳು ಮಾಡುವ ಹಾಗೆ ಸಂಸ್ಕೃತದ ವಿಭಕ್ತಿಗಳಾವುವು, ಅವುಗಳ ಕಾಯ್ರವೇನು, ಕಾರಕಗಳಿಗೂ ಅವಕ್ಕೂ ನಡುವೆ ಎಂತಹ ಸಂಬಂಧವಿದೆ, ಮೊದಲಾದ ವಿಷಯಗಳನ್ನು ಮೊದಲು ತಿಳಿದುಕೊಂಡು ಅನಂತರ ಕನ್ನಡಕ್ಕೆ ಅವನ್ನು ಹೊಂದಿಸುವ ಬಗೆ ಹೇಗೆ ಎಂಬುದಾಗಿ ಆಲೋಚಿಸಿ ದಲ್ಲಿ ಕನ್ನಡದ ಮಟ್ಟಿಗೆ ಒಂದು ತೀರಾ ವಿಚಿತ್ರವಾದ ವ್ಯಾಕರಣ ಸಿದ್ಧವಾದೀತು (ಮತ್ತು ಸಿದ್ಧವಾಗಿದೆ).
239 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಒಂದು ಭಾಷೆಯ ವ್ಯಾಕರಣವನ್ನು ಅಥ್ರಮಾಡಿಕೊಳ್ಳುವ ಸಂದಭ್ರದಲ್ಲಿ ಇನ್ನೊಂದು ಭಾಷೆಯ ವ್ಯಾಕರಣ ಹೇಗಿದೆಯೆಂದು ತಿಳಿದುಕೊಳ್ಳುವುದರಿಂದ ಸ್ವಲ್ಪವೂ ಪ್ರಯೋಜನವಿಲ್ಲವೆಂದೇನೂ ನಾನು ಹೇಳುತ್ತಾ ಇಲ್ಲ. ಹೆಚ್ಚು ಹೆಚ್ಚು ಭಾಷೆಗಳ ವ್ಯಾಕರಣಗಳನ್ನು ಅಭ್ಯಾಸ ಮಾಡಿದಷ್ಟೂ ನಮ್ಮ ಭಾಷೆಯ ವ್ಯಾಕರಣ ವನ್ನು ತಿಳಿದುಕೊಳ್ಳುವ ಕೆಲಸ ಹೆಚ್ಚು ಹೆಚ್ಚು ಸುಲಭವಾಗಬಲ್ಲುದು.
ಆದರೆ ಬೇರೆ ಬೇರೆ ಭಾಷೆಗಳ ವ್ಯಾಕರಣಗಳು ಬೇರೆ ಬೇರಾಗಿರಲು ಸಾಧ್ಯ ಎಂಬ ವಿಷಯವನ್ನು ಮರೆಯದಿರುವುದು ಅವಶ್ಯ. ಹಲವು ಭಾಷೆಗಳ ವ್ಯಾಕರಣ ಗಳನ್ನು ಅಭ್ಯಾಸ ಮಾಡಿದಾಗ ವ್ಯಾಕರಣಗಳು ಹೇಗಿರಬಹುದು ಎಂಬ ವಿಷಯ ನಮಗೆ ತಿಳಿಯುತ್ತದೆ. ಈ ತಿಳುವಳಿಕೆಯ ಆಧಾರದ ಮೇಲೆ ನಮ್ಮ ಭಾಷೆಯ ವ್ಯಾಕರಣ ಹೇಗಿದೆ ಎಂಬುದನ್ನು ತಿಳಿಯಲು ನಾವು ಪ್ರಯತ್ನಿಸಬೇಕು.
ಈ ಹೊಸ ದೃಷ್ಟಿಕೋನದ ಅವಶ್ಯಕತೆಯನ್ನು ಮುಖ್ಯವಾಗಿ ಎರಡು ಸಂದಭ್ರಗಳಲ್ಲಿ ಕಾಣಬಹುದು. ಪೌ್ರಢಶಾಲೆಗಳಲ್ಲಿ ಓದುವ ವಿದ್ಯಾಥ್ರಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಕ್ಕಾಗಿ ವ್ಯಾಕರಣ ಪಠ್ಯಪುಸ್ತಕಗಳನ್ನು ತಯಾ ರಿಸುವುದು ಒಂದು ಸಂದಭ್ರ.
ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಆಳವಾಗಿ ಅಭ್ಯಾಸ ಮಾಡುವ ವಿದ್ಯಾಥ್ರಿಗಳಿಗೆ ಪಠ್ಯವನ್ನೊದಗಿಸಬೇಕಾಗಿರುವುದು ಮತ್ತು ಕನ್ನಡ ವ್ಯಾಕರಣದ ಮೇಲೆ ಸಂಶೋಧನೆಯನ್ನು ಮಾಡಬೇಕೆಂದಿರುವ ವಿದ್ಯಾಥ್ರಿಗಳಿಗೆ ಮಾಗ್ರ ದಶ್ರನವನ್ನು ಮಾಡಬೇಕಾಗಿರುವುದು ಎರಡನೆಯ ಸಂದಭ್ರ. ಈ ಎರಡು ಸಂದಭ್ರಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳೇಳುವುವಾದ ಕಾರಣ ಅವನ್ನು ಬೇರೆ ಬೇರೆಯಾಗಿ ಪರಿಶೀಲಿಸುವುದು ಅವಶ್ಯ.
12.3 ಶಾಲಾ ವ್ಯಾಕರಣಗಳು ಕನ್ನಡದ ಮಟ್ಟಿಗೆ ಹೇಳುವುದಾದರೆ, ಇವತ್ತು ಶಾಲೆಗಳಲ್ಲಿ ಕಲಿಸುವುದಕ್ಕಾಗಿ ಬಳಕೆಯಲ್ಲಿರುವ ವ್ಯಾಕರಣದ ಪಠ್ಯಪುಸ್ತಕಗಳನ್ನು ಪೂತ್ರಿಯಾಗಿ ಬದಲಾಯಿಸು ವುದು ಅವಶ್ಯ. ಅವುಗಳಲ್ಲಿ ಕಾಣಿಸುವ ಸಂಸ್ಕೃತ ವ್ಯಾಕರಣದ ಅಂಶಗಳೆಲ್ಲ ವನ್ನೂ ಪೂತ್ರಿಯಾಗಿ ತೆಗೆದು ಹಾಕಬೇಕು ಮತ್ತು ಹಳೆಗನ್ನಡದ ಪದರಚನೆ ಮತ್ತು ಪದರೂಪ ರಚನೆಗಳ ಕುರಿತು ಅವುಗಳಲ್ಲಿ ಬರುವ ಎಲ್ಲಾ ಅಂಶಗಳನ್ನೂ ತೆಗೆದು ಹಾಕಬೇಕು.
ಹೊಸಗನ್ನಡದಲ್ಲಿ ಕಾಣಿಸುವ ಪದಗಳ, ಪದರೂಪಗಳ, ಪದಕಂತೆಗಳ ಮತ್ತು ವಾಕ್ಯಗಳ ಒಳರಚನೆಯನ್ನಷ್ಟೇ ಈ ವ್ಯಾಕರಣಗಳಲ್ಲಿ ವಿವರಿಸಿ ಹೇಳಿದಲ್ಲಿ ವಿದ್ಯಾಥ್ರಿಗಳಿಗೆ ಅವನ್ನು ಅಥ್ರಮಾಡಿಕೊಳ್ಳಲು ಕಷ್ಟವಾಗಲಾರದು. ಇದಲ್ಲದೆ ಇಂತಹ ವ್ಯಾಕರಣಗಳ ಸಹಾಯದಿಂದ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಬಳಸಿಕೊಳ್ಳುವಲ್ಲಿ ಅವರಿಗೆ ಸ್ವಲ್ಪವಾದರೂ ಪ್ರಯೋಜನವಾದೀತು.
240 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಮುಕ್ತಾಯ
ತೀ. ನಂ. ಶ್ರೀಕಂಠಯ್ಯನವರ ಕನ್ನಡ ಮಧ್ಯಮ ವ್ಯಾಕರಣ ಈ ದಿಕ್ಕಿನಲ್ಲಿ ಮಾಡಿದ ಒಂದು ಉತ್ತಮ ಪ್ರಯತ್ನವೆಂದು ಹೇಳಬಹುದು. ಇದರಲ್ಲಿ ಹೊಸ ಗನ್ನಡದ ಪ್ರಯೋಗಗಳನ್ನು ಮಾತ್ರವೇ ವಿವರಿಸುವುದರ ಮೂಲಕ ವ್ಯಾಕರಣದ ನಿಯಮಗಳನ್ನು ವಿದ್ಯಾಥ್ರಿಗಳು ಸುಲಭವಾಗಿ ಅಥ್ರಮಾಡಿಕೊಳ್ಳಲು ಸಾಧ್ಯವಾಗು ವಂತೆ ಮಾಡಲಾಗಿದೆ. ಇದಲ್ಲದೆ ವ್ಯಾಕರಣ ನಿಯಮಗಳನ್ನೂ ಸುಲಭವಾಗಿ ಅಥ್ರವಾಗುವಂತೆ ಇದರಲ್ಲಿ ಬರೆಯಲಾಗಿದೆ.
ಆದರೆ ಕನ್ನಡಕ್ಕೆ ಅವಶ್ಯವಲ್ಲದ ಮತ್ತು ಕನ್ನಡಕ್ಕೆ ಹೊಂದಿಕೆಯಾಗದ ಸಂಸ್ಕೃತ ಪರಂಪರೆಯ ಕೆಲವು ವ್ಯಾಕರಣ ನಿಯಮಗಳು ಇದರಲ್ಲೂ ಹಾಗೆಯೇ ಉಳಿದುಕೊಂಡಿವೆ. ಉದಾಹರಣೆಗಾಗಿ, ಕನ್ನಡದ ಸಮಾಸಗಳನ್ನು ವಿಭಜಿಸುವು ದಕ್ಕಾಗಿ ಸಂಸ್ಕೃತದ ಹಾಗೆ ಜೋಡುಪದದ ಎರಡು ಅಂಗಗಳಲ್ಲಿ ಪ್ರಧಾನ ವಾದುದು ಯಾವುದು ಎಂಬ ಅಂಶವನ್ನೇ ಬಳಸಲಾಗಿದೆ. ಕನ್ನಡದಲ್ಲಿ ಇದಕ್ಕಿಂತಲೂ ಮೊದಲನೆಯ ಅಂಗ ಯಾವ ವಗ್ರಕ್ಕೆ ಸೇರುತ್ತದೆ ಎಂಬ ಅಂಶವೇ ಯೋಗ್ಯ ಎಂಬುದನ್ನು ನಾವು ಮೇಲೆ ಐದನೇ ಅಧ್ಯಾಯದಲ್ಲಿ ನೋಡಿರುವೆವು.
ಗುಣಪದಗಳನ್ನು ನಾಮಪದಗಳ ವಗ್ರದಲ್ಲಿ ಸೇರಿಸಿದುದರಿಂದಾಗಿ ಅವಕ್ಕೆ ವಿಶೇಷಣ ರೂಪ ಮತ್ತು ಕಾರಕ ರೂಪ ಎಂಬುದಾಗಿ ಎರಡು ರೂಪಗಳಿವೆ ಯೆಂದು ಹೇಳಬೇಕಾಗಿದೆ. ಆದರೆ ನಿಜಕ್ಕೂ ದೊಡ್ಡವನು, ಚಿಕ್ಕವಳು, ಹಿರಿಯವರು ಮೊದಲಾದವುಗಳು ಗುಣಪದಗಳಲ್ಲ, ವ್ಯಕ್ತಿವಾಚಕ ಪದಕಂತೆಗಳು. ಅವುಗಳಲ್ಲಿ ದೊಡ್ಡ, ಚಿಕ್ಕ, ಹಿರಿ ಮೊದಲಾದ ಗುಣಪದಗಳು ಅವನು, ಅವಳು, ಅವರು ಮೊದಲಾದ ಸವ್ರನಾಮ (ಸವ್ರಪದ)ಗಳೊಂದಿಗೆ ವಿಶೇಷಣ ಗಳಾಗಿ ಬಳಕೆಯಾಗಿವೆ ಅಷ್ಟೆ.
ಇದೇ ರೀತಿಯಲ್ಲಿ, ಎಣಿಕೆಯ ಪದಗಳಿಗೆ ಮತ್ತು ಕೃದಂತನಾಮಗಳಿಗೆ (ಹೋಗುವವನು, ಬರುವವರು, ಹಾಡಿದವಳು) ವಿಶೇಷಣ ರೂಪ ಮತ್ತು ಕಾರಕ ರೂಪಗಳಿವೆಯೆಂದು ಹೇಳಲಾಗಿದೆ. ಆದರೆ ಇಲ್ಲೂ ಕನ್ನಡದಲ್ಲಿರುವುದು ಪದಕಂತೆಗಳಲ್ಲದೆ ಪದರೂಪಗಳಲ್ಲ. ಇಂತಹ ಬೇರೆಯೂ ಕೆಲವು ಕನ್ನಡಕ್ಕೆ ಹೊಂದಿಕೆಯಾಗದ ವಿಷಯಗಳು ಈ ವ್ಯಾಕರಣದಲ್ಲಿದ್ದು ಇವನ್ನು ತೆಗೆದು ಹಾಕುವ ಇಲ್ಲವೇ ಬದಲಾಯಿಸುವ ಅವಶ್ಯಕತೆಯಿದೆ.
12.4 ಕಾಲೇಜುಗಳಲ್ಲಿ ಬೋಧನೆ ಮತ್ತು ಸಂಶೋಧನೆ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಆಳವಾಗಿ ಅಭ್ಯಾಸ ಮಾಡುವ ಮತ್ತು ಕನ್ನಡ ವ್ಯಾಕರಣದ ಮೇಲೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ವಿದ್ಯಾಥ್ರಿ ಗಳಿಗೆ ಮೇಲೆ ವಿವರಿಸಿದ ಹೊಸ ದೃಷ್ಟಿಕೋನವನ್ನು ಒದಗಿಸಿಕೊಡುವುದು ಒಂದು ಅತ್ಯಂತ ಮುಖ್ಯವಾದ ಕೆಲಸವೆಂದು ನನ್ನ ಅಭಿಪ್ರಾಯ. ಕನ್ನಡದ ಪದರಚನೆ ಮತ್ತು ವಾಕ್ಯರಚನೆಗಳನ್ನು ನೇರವಾಗಿ ಪರಿಶೀಲಿಸುವ ಪ್ರವೃತ್ತಿ ಅವರಲ್ಲಿ ಬೆಳೆಯಬೇಕು.
241 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಇದಲ್ಲದೆ ಕನ್ನಡದ ವ್ಯಾಕರಣ ಪುಸ್ತಕಗಳಲ್ಲಿ ಬರುವ ವ್ಯಾಕರಣ ನಿಯಮ ಗಳನ್ನು ಹಾಗೆಯೇ ಉರುಹೊಡೆಯುವ ಬದಲು ಅವನ್ನು ಸರಿಯಾಗಿ ಅಥ್ರಮಾಡಿ ಕೊಂಡು ನಿಜಕ್ಕೂ ಅವು ಕನ್ನಡದ ಪದರಚನೆಯನ್ನು ಮತ್ತು ವಾಕ್ಯರಚನೆಯನ್ನು ಸರಿಯಾಗಿ ವಿವರಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರವೃತ್ತಿ ಅವರಲ್ಲಿ ಬೆಳೆಯುವಂತೆ ಮಾಡಬೇಕು.
ಇಂತಹ ಪ್ರವೃತ್ತಿ ನಮ್ಮ ಕನ್ನಡ ವಿದ್ಯಾಥ್ರಿ-ಸಂಶೋಧಕರಲ್ಲಿ ಇಲ್ಲವೇ ಇಲ್ಲವೆಂದು ಹೇಳಿದರೂ ತಪ್ಪಾಗಲಾರದು. ಇಲ್ಲವಾದರೆ ನಾನು ಈ ಪುಸ್ತಕದಲ್ಲಿ ವಿವರಿಸಿದಂತಹ ಮತ್ತು ಕಣ್ಣಿಗೆ ಹೊಡೆದು ಕಾಣಿಸುವಂತಹ ಅಸಮಪ್ರಕ ವ್ಯಾಕರಣ ನಿಯಮಗಳು ಕನ್ನಡ ವ್ಯಾಕರಣದಲ್ಲಿ ತುಂಬಿ ತುಳುಕುತ್ತಿರುವುದನ್ನು ಈ ವಿದ್ಯಾಥ್ರಿ-ಸಂಶೋಧಕರಲ್ಲಿ ಒಬ್ಬಿಬ್ಬರಾದರೂ ಗಮನಿಸದಿರಲು ಸಾಧ್ಯವೆ?
ಉದಾಹರಣೆಗಾಗಿ, ಹಳೆಗನ್ನಡದಲ್ಲಿ ದಪ ಪ್ರತ್ಯಯಕ್ಕೆ ವತ್ರಮಾನಾಥ್ರವಿದೆ ಮತ್ತು ವ ಪ್ರತ್ಯಯಕ್ಕೆ ಭವಿಷ್ಯದಥ್ರವಿದೆ0iÉುಂದು ಕನ್ನಡ ವೈಯಾಕರಣಿಗಳು ಕಳೆದ ಸಾವಿರ ವಷ್ರಗಳಿಂದಲೂ ಹೇಳುತ್ತಾ ಬಂದಿದ್ದಾರೆ. ನಿಜಕ್ಕೂ ಇದು ನಿಜವೇ, ಹಳೆಗನ್ನಡ ಕಾವ್ಯಗಳಲ್ಲಿ ಈ ಪ್ರತ್ಯಯಗಳನ್ನೊಳಗೊಂಡಿರುವ ಪದಗಳು ನಿಜಕ್ಕೂ ಈ ಅಥ್ರಭೇದವನ್ನು ಸೂಚಿಸುತ್ತಿವೆ0iÉುೀ ಎಂಬುದನ್ನು ಒಬ್ಬನೇ ಒಬ್ಬ ಸಂಶೋಧಕನೂ ಪರಿಶೀಲಿಸಲು ಹೋಗಿಲ್ಲವೆಂದರೆ ಆಶ್ಚಯ್ರವಾಗುವುದಿಲ್ಲವೆ?
ನಾನು ಮೇಲೆಯೇ ಹೇಳಿರುವಂತೆ, ವ್ಯಾಖ್ಯಾನಕಾರನ ಮನೋಭಾವವನ್ನು ಬಿಟ್ಟುಕೊಟ್ಟು ಸಂಶೋಧಕನ ಮನೋಭಾವವನ್ನು ಅಳವಡಿಸಿಕೊಂಡರೇನೇ ನಮ್ಮ ಜ್ಞಾನವನ್ನು ಹೆಚ್ಚಿಸಲು ಸಾಧ್ಯ. ಹಿಂದಿನ ವಿದ್ವಾಂಸರು ಏನು ಹೇಳಿದ್ದರು ಎಂಬುದನ್ನು ವಿವರಿಸುವುದು ಮಾತ್ರವೇ ವ್ಯಾಖ್ಯಾನಕಾರನ ಉದ್ದೇಶ. ಹಿಂದಿನವರ ಹೇಳಿಕೆಯಲ್ಲಿ ತಪ್ಪಿದೆಯೇ? ಇದೆಯಾದರೆ ಅದನ್ನು ಸರಿಪಡಿಸುವುದು ಹೇಗೆ? ಹಿಂದಿನವರು ಹೇಳಿರದಂತಹ ವಿಷಯಗಳೇನಾದರೂ ಇವೆಯೇ? ಎಂಬುದನ್ನು ಕಂಡುಹಿಡಿಯುವುದೇ ಸಂಶೋಧಕನ ಕೆಲಸ.
ಹಿಂದಿನವರು ಹೇಳಿದುದನ್ನು ಸರಿಯಾಗಿ ಅಥ್ರಮಾಡಿಕೊಂಡರೆ ನಮಗೆ ಆ ವಿಷಯದ ಜ್ಞಾನ ಲಭಿಸುತ್ತದೆ. ಆದರೆ ಆ ವಿಷಯದ ಕುರಿತಾಗಿ ನಮ್ಮ ಸಮಾಜದಲ್ಲಿರುವ ಜ್ಞಾನ ಹೆಚ್ಚುವುದಿಲ್ಲ. ಹಿಂದಿನವರು ಹೇಳಿದುದರಲ್ಲಿ ಅಸಾಂಗತ್ಯವೇನಾದರೂ ಇದೆಯಾದರೆ ಅದನ್ನು ಕಂಡುಕೊಳ್ಳುವುದರ ಮೂಲಕ ಮಾತ್ರವೇ ನಮ್ಮ ಸಮಾಜದ ಜ್ಞಾನನಿಧಿ ಹೆಚ್ಚಬಲ್ಲುದು.
ಕನ್ನಡ ವ್ಯಾಕರಣದ ಮೇಲೆ ಸಂಶೋಧನೆಯನ್ನು ನಡೆಸಬೇಕೆಂದಿರುವವರಲ್ಲಿ ಇಂತಹ ಸಂಶೋಧಕ ಪ್ರವೃತ್ತಿ ಬೆಳೆಯುವಂತೆ ಮಾಡುವಲ್ಲಿ ಮತ್ತು ಶಾಲಾ ವಿದ್ಯಾಥ್ರಿಗಳಿಗಾಗಿ ವ್ಯಾಕರಣ ಪಠ್ಯಪುಸ್ತಕಗಳನ್ನು ರಚಿಸುವ ವಿದ್ವಾಂಸರಲ್ಲಿ ಒಂದು ಹೊಸ ದೃಷ್ಟಿಕೋನವುಂಟಾಗುವಂತೆ ಮಾಡುವಲ್ಲಿ ಈ ಪುಸ್ತಕ ಸ್ವಲ್ಪ ವಾದರೂ ಸಹಾಯಕವಾಗವಾಗಲಿ ಎಂಬುದೇ ನನ್ನ ಹಾರೈಕೆ.
242 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಆಕರಸೂಚಿ
PÁ¯ïتɯï, Dgï. 1913. A comparative grammar of the Dravidian or South-Indian family of languages. London: Kegan, Paul, Trench, Trubner and Co. Ltd.
ಕೃಷ್ಣ ಭಟ್ಟ, ಸೇಡಿಯಾಪು. 1992. ವಿಚಾರ ಪ್ರಪಂಚ. ಪುತ್ತೂರು: ಕಣ್ರಾಟಕ
¸ÀAWÀ.
ಕೃಷ್ಣಮೂತ್ರಿ, ಭ. 2003. ಖಿhe ಆಡಿಚಿviಜiಚಿಟಿ ಐಚಿಟಿguಚಿge. ಅಚಿmbಡಿiಜge:
Cambridge University Press.
ಡಿಕ್ಸನ್, ಆರ್. ಎಮ್. ಡಬ್ಲ್ಯು. 1994. ಇಡಿgಚಿಣiviಣಥಿ. ಅಚಿmbಡಿiಜge:
Cambridge University Press.
ತಾರಾಪೆÇರೆವಾಲಾ, ಐ. ಜೆ. ಎಸ್. 1967. Sಚಿಟಿsಞಡಿiಣ sಥಿಟಿಣಚಿx. ಆeಟhi:
Munshiram Manoharlal.
ತಿರುಮಲೇಶ್, ಕೆ.ವಿ. 1979. (= ಭಟ್, ಕೆ.ವಿ.ಟಿ.) ಖeoಡಿಜeಡಿiಟಿg ಡಿuಟes iಟಿ Kannada and English. Dissertation, Central Institute of English and Foreign Languages, Hyderabad.
ತಿರುಮಲೇಶ್, ಕೆ.ವಿ. 1997. ಏಚಿಟಿಟಿಚಿಜಚಿ ಠಿಡಿeಜಿixಚಿಣioಟಿ. PIಐಅ ಎouಡಿಟಿಚಿಟ oಜಿ
Dravidian Studies 7, 201-8.
§gÉÆÃ, n. 1955. The Sanskrit language. London: Faber and
Faber.
ಬರೋ, ಟಿ. ಮತ್ತು ಎಮೆನೋ, ಎಮ್. ಬಿ. 1961. ಖಿhe ಆಡಿಚಿviಜiಚಿಟಿ
Etymological Dictionary. Oxford: The Clarendon Press.
ಬಿಳಿಗಿರಿ, ಎಚ್. ಎಸ್. 1969. ಆಲೋಕ, ಭಾಗ 1. ಸಾಗರ: ಅಕ್ಷರ
ಪ್ರಕಾಶನ.
ಭಟ್, ಡಿ. ಎನ್. ಶಂಕರ 1978. ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು
ಅಥ್ರವ್ಯವಸ್ಥೆ. ಮೈಸೂರು: ಗೀತಾ ಬುಕ್ ಹೌಸ್.
¨sÀmï, r. J£ï. ±ÀAPÀgÀ 1991. Grammatical relations: Evidence their necessity and universality. London:
against Routledge.
ಭಟ್, ಡಿ. ಎನ್. ಶಂಕರ 1995. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ. ಹಂಪಿ:
ಕನ್ನಡ ವಿಶ್ವವಿದ್ಯಾಲಯ.
ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
¨sÀmï, r. J£ï. ±ÀAPÀgÀ 2000. Introducing grammatical notions. Pune: Center for Advanced Study in Sanskrit, Pune University.
ಭಟ್, ಡಿ. ಎನ್. ಶಂಕರ 2002. ಕನ್ನಡ ಪದಗಳ ಒಳರಚನೆ. ಮೈಸೂರು:
ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ 2003. ಕನ್ನಡದ ಸವ್ರನಾಮಗಳು. ಮೈಸೂರು:
ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ 2004. ಕನ್ನಡ ವಾಕ್ಯಗಳ ಒಳರಚನೆ. ಮೈಸೂರು:
ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ 2005. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?.
ಮೈಸೂರು: ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ 2005ಕ. ಕನ್ನಡ ಬರಹವನ್ನು ಸರಿಪಡಿಸೋಣ.
ಮೈಸೂರು: ಭಾಷಾಪ್ರಕಾಶನ.
ಭಟ್, ಡಿ. ಎನ್. ಶಂಕರ ಮತ್ತು ನಿಂಗೊಂಬ, ಎಮ್. ಎಸ್. 1997.
Manipuri Grammar. Munich: Lincom Europa.
²æÃzsÀgï, J¸ï. J£ï. 1976. Dative subjects, rule government and relational grammar. Studies in Linguistic Sciences 6, 130-
ಶ್ರೀಧರ್, ಎಸ್. ಎನ್. 1995. ಇಂದಿನ ಕನ್ನಡ: ರಚನೆ ಮತ್ತು ಬಳಕೆ. ಹಂಪಿ:
ಕನ್ನಡ ವಿಶ್ವವಿದ್ಯಾಲಯ.
ಶ್ರೀಕಂಠಯ್ಯ, ತೀ. ನಂ. 1952. ಕನ್ನಡ ಮಧ್ಯಮ ವ್ಯಾಕರಣ. ಮೈಸೂರು:
ವಿದ್ಯಾಭ್ಯಾಸದ ಇಲಾಖೆ.
¹àÃdgï, eÉ. J¸ï. 1886. Sanskrit syntax. Reprinted in 1973 by
Motilal Banarsidass, Delhi.
244 ಬಿ ಡಾ. ಡಿ. ಎನ್ ಶಂಕರ ಬಟ್. ಎಲ್ಲಾ ಹಕ್ಕುಗಳನ್ನೂ ಕಾದಿರಿಸಿದೆ.