KANNADA BHASHEYA KALPITA CARITRE

ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

Part of DNS Bhat’s writings read by Malati Bhat

ಪರಿವಿಡಿ


Part 1

Watch on YouTube

Note: This transcript has not been cleaned and may contain errors.

ಕನ್ನಡ ಭಾಷೆಯ ಕಲ್ಪಿತ ಚರಿತ್ರೆ ಡಿ ಎನ್ ಶಂಕರ್ ಭಟ್ ಮುನ್ನೋಟ ಎರಡು ವಿಧಾನಗಳು ಕನ್ನಡ ನುಡಿಯ ಚರಿತ್ರೆ ಎಂತಹದ್ದು ಎಂಬುದನ್ನು ಕಂಡುಹಿಡಿಯಲು ಲಿಖಿತ ಚರಿತ್ರೆ ಮತ್ತು ಕಲ್ಪಿತ ಚರಿತ್ರೆ ಎಂಬ ಎರಡು ವಿಧಾನಗಳನ್ನು ಬಳಸಲು ಬರುತ್ತದೆ ಮೊದಲನೆಯದಾಗಿ ಆ ಬೇರೆ ಬೇರೆ ಶತಮಾನಗಳಲ್ಲಿ ಬರೆದಿರುವ ಬರಹಗಳನ್ನು ಹೋಲಿಸಿ ನೋಡಿ ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಅವಲಂಬಿಸಿ ಅದರ ಚರಿತ್ರೆಯನ್ನು ಬರೆಯಬಹುದು ಇದನ್ನು ಕನ್ನಡ ನುಡಿಯ ಲಿಖಿತ ಚರಿತ್ರೆ ಎಂದು ಕರೆಯಬಹುದು ಎರಡನೆಯದಾಗಿ ಆ ನುಡಿಯೊಂದಿಗೆ ನಂಟನ್ನು ತೋರಿಸುವ ತಮಿಳು ತೆಲುಗು ಗೋಂಡಿ ಕುಡುಕ್ ಮೊದಲಾದ ಬೇರೆ ದ್ರಾವಿಡ ನುಡಿಗಳೊಂದಿಗೆ ಮತ್ತು ಅದರದೇ ಆದ ಒಳನುಡಿಗಳೊಂದಿಗೆ ಹೋಲಿಸಿ ನೋಡಿ ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಅವಲಂಬಿಸಿ ಅದರ ಚರಿತ್ರೆಯನ್ನು ಬರೆಯಬಹುದು ಇದನ್ನು ಕನ್ನಡ

ನುಡಿಯ ಕಲ್ಪಿತ ಚರಿತ್ರೆ ಎಂದು ಕರೆಯಬಹುದು ಈ ಎರಡು ಬಗೆಯ ಚರಿತ್ರೆಗಳು ಕನ್ನಡ ನುಡಿಯ ಚರಿತ್ರೆಯನ್ನು ಎರಡು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುತ್ತವೆ ಇವೆರಡರಲ್ಲೂ ಕೆಲವು ಗುಣಗಳಿವೆ ಮತ್ತು ಕೆಲವು ತೊಡಕುಗಳು ಇವೆ ಹಾಗಾಗಿ ಕನ್ನಡ ನುಡಿಯ ನಿಜವಾದ ಚರಿತ್ರೆ ಎಂತಹದ್ದು ಎಂಬುದನ್ನು ಕಂಡುಹಿಡಿಯುವಲ್ಲಿ ಇವೆರಡನ್ನು ಒಂದಕ್ಕೊಂದು ಪೂರಕವಾಗಿ ಬಳಸುವುದೇ ಒಳ್ಳೆಯದು ಕನ್ನಡ ನುಡಿಯ ಲಿಖಿತ ಚರಿತ್ರೆ ಇದನ್ನು ಬರೆಯಲು ಬೇರೆ ಬೇರೆ ಶತಮಾನಗಳಲ್ಲಿ ಮತ್ತು ಒಂದೊಂದು ಶತಮಾನದಲ್ಲೂ ಬೇರೆ ಬೇರೆ ದಶಕಗಳಲ್ಲಿ ಬರೆದಿರುವ ಕನ್ನಡ ಬರಹಗಳನ್ನು ಪದ್ಯ ಗದ್ಯ ಚಂಪು ನಾಟಕ ಶಾಸನ ಮೊದಲಾದವುಗಳನ್ನು ಅವುಗಳ ಕಾಲಕ್ಕನುಗುಣವಾಗಿ ವಿಂಗಡಿಸಿ ಹೋಲಿಸಿ ನೋಡಬೇಕು ಮತ್ತು ಕನ್ನಡ ನುಡಿ ಶತಮಾನದಿಂದ ಶತಮಾನಕ್ಕೆ ಹೇಗೆ ಮಾರ್ಪಡುತ್ತಾ ಬಂದಿದೆ ಎಂಬುದನ್ನು ಇವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಬಳಸಿ

ತಿಳಿದುಕೊಳ್ಳಬೇಕು ಕನ್ನಡದ ಲಿಖಿತ ಚರಿತ್ರೆಯನ್ನು ಈ ರೀತಿ ಬರೆಯಲು ನೆರವಾಗಬಲ್ಲ ಸಾಕಷ್ಟು ಬರಹಗಳೇನು ಇವೆ ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಹಿಂದಿನಿಂದಲೂ ಎಡಬಿಡದೆ ರಚಿತವಾಗುತ್ತಾ ಬಂದಿರುವ ಕನ್ನಡ ಶಾಸನಗಳು ಇಂತಹ ಕೆಲಸಕ್ಕೆ ನೆರವಾಗಬಲ್ಲವು ಇದಲ್ಲದೆ ಬೇರೆ ಬೇರೆ ರಾಜರುಗಳ ಕಾಲದಲ್ಲಿ ಬರೆಯಲಾಗಿದ್ದ ಕಾವ್ಯಗಳು ಮತ್ತು ಬೇರೆ ಬಗೆಯ ಬರಹಗಳು ಕನ್ನಡ ನುಡಿಯ ಬೇರೆ ಬೇರೆ ಹಂತಗಳನ್ನು ಇನ್ನಷ್ಟು ಆಳವಾಗಿ ತಿಳಿಯುವಲ್ಲಿ ನೆರವಾಗಬಲ್ಲವು ಕನ್ನಡ ನುಡಿಯ ಕಲ್ಪಿತ ಚರಿತ್ರೆ ಕನ್ನಡ ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯಲು ಮುಖ್ಯವಾಗಿ ಎರಡು ಬಗೆಯ ಆಧಾರಗಳನ್ನು ಬಳಸಲು ಬರುತ್ತದೆ ಒಂದು ಕನ್ನಡ ನುಡಿಯೊಂದಿಗೆ ನಂಟನ್ನು ತೋರಿಸುವ ತಮಿಳು ತೆಲುಗು ಮಲಯಾಳ ಕುಯಿ ಮೊದಲಾದ ಬೇರೆ ದ್ರಾವಿಡ ನುಡಿಗಳೊಂದಿಗೆ ಕನ್ನಡವನ್ನು ಹೋಲಿಸಿ ನೋಡಿ ಅವಕ್ಕೆಲ್ಲ ಮೂಲವಾದ ಮೂಲ ದ್ರಾವಿಡವೆಂಬ ನುಡಿಯೊಂದನ್ನು

ಕಲ್ಪಿಸಿಕೊಳ್ಳಬೇಕು ಆಮೇಲೆ ಆ ಮೂಲನುಡಿ ಕವಲೊಡೆದು ಬೇರೆ ಬೇರಾದ ಬಳಿಕ ಅವುಗಳಲ್ಲೊಂದು ಕಾವಲಿನಿಂದ ಕನ್ನಡ ನುಡಿ ಹೇಗೆ ಇಳಿದು ಬಂದಿರಬಹುದು ಎಂಬುದನ್ನು ಕಲ್ಪಿಸಿ ಹೇಳಬೇಕು ಇದಕ್ಕಾಗಿ ಮೂಲ ದ್ರಾವಿಡ ನುಡಿಯಲ್ಲಿ ಹಲವು ಬಗೆಯ ಮಾರ್ಪಾಡುಗಳು ನಡೆದಿವೆ ಎಂದು ಕಲ್ಪಿಸಿಕೊಂಡು ಅವುಗಳಲ್ಲಿ ಒಂದು ಬಗೆಯ ಮಾರ್ಪಾಡುಗಳು ಮೂಲ ದ್ರಾವಿಡದಿಂದ ಕನ್ನಡ ನುಡಿ ಬೆಳೆದು ಬರಲು ಹೇಗೆ ಕಾರಣವಾಗಿವೆ ಎಂಬುದನ್ನು ತೋರಿಸಿಕೊಡಬೇಕು ಎರಡು ಕರಾವಳಿಯ ಕನ್ನಡ ಬೀದರಿನ ಕನ್ನಡ ಧಾರವಾಡದ ಕನ್ನಡ ಮೈಸೂರಿನ ಕನ್ನಡ ಮೊದಲಾದ ಬೇರೆ ಬೇರೆ ಕನ್ನಡದ ಒಳನುಡಿಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಪಟ್ಟಿ ಮಾಡಬೇಕು ಮತ್ತು ಅವೆಲ್ಲ ಹೇಗೆ ಕನ್ನಡ ನುಡಿಯ ಚರಿತ್ರೆಯಲ್ಲಿ ನಡೆದ ಬೇರೆ ಬೇರೆ ಮಾರ್ಪಾಡುಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು ಈ ತಿಳಿವನ್ನು ಬಳಸಿ ಮೂಲ

ಕನ್ನಡವೆಂಬ ಎಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳಬೇಕು ಮತ್ತು ಈ ಕಲ್ಪಿತ ನುಡಿ ಬೇರೆ ಬೇರೆ ಕವಲುಗಳಾಗಿ ಒಡೆದುಕೊಂಡಿದೆ ಎಂದು ಮತ್ತು ಕನ್ನಡದ ಒಳನುಡಿಗಳು ಅದರ ಇಂತಹ ಕವಲುಗಳೆಂದು ಕಲ್ಪಿಸಿಕೊಂಡು ಅವುಗಳ ನಡುವಿರುವ ವ್ಯತ್ಯಾಸಗಳನ್ನು ಬಳಸಿಕೊಂಡು ಮೂಲ ಕನ್ನಡಕ್ಕೂ ಕನ್ನಡದ ಇಂದಿನ ಒಳನುಡಿಗಳಿಗೂ ನಡುವೆ ಇರುವ ಚರಿತ್ರೆಯನ್ನು ಬರೆಯಬೇಕು ಈ ರೀತಿ ಮೂಲ ದ್ರಾವಿಡದಿಂದ ಮೂಲ ಕನ್ನಡ ಕನ್ನಡಕ್ಕೂ ಮೂಲ ಕನ್ನಡದಿಂದ ಇವತ್ತಿನ ಒಳನುಡಿಗಳಿಗೂ ನಡುವಿರುವ ಸಂಬಂಧವನ್ನು ಅವುಗಳಲ್ಲಿ ನಡೆದಿರಬಹುದಾದ ಮಾರ್ಪಾಡುಗಳನ್ನು ಬಳಸಿ ವಿವರಿಸಿದಾಗ ಕನ್ನಡದ ಕಲ್ಪಿತ ಚರಿತ್ರೆ ದೊರೆಯುತ್ತದೆ ಇದರಲ್ಲಿ ಎರಡನೆಯ ಕೆಲಸಕ್ಕೆ ಎಂದರೆ ಮೂಲ ಕನ್ನಡದಿಂದ ಅದರ ಇವತ್ತಿನ ಒಳನುಡಿಗಳನ್ನು ಪಡೆಯುವ ಕೆಲಸಕ್ಕೆ ಕನ್ನಡ ನುಡಿಯ ಬರಹದ ಚರಿತ್ರೆಯು ನೆರವಾಗಬಲ್ಲದು ಲಿಖಿತ ಚರಿತ್ರೆಯ ಕೊರತೆಗಳು ಕನ್ನಡದ ಬರಹಗಳನ್ನು ಅವಲಂಬಿಸಿ ಅದರ ಚರಿತ್ರೆಯನ್ನು ಬರೆಯಬೇಕಿದ್ದಲ್ಲಿ

ನಾವು ಬರಹಗಳ ಕಾಲಾನುಕ್ರಮವನ್ನು ಬಳಸಿಕೊಳ್ಳಬೇಕಾಗುತ್ತದೆ ಉದಾಹರಣೆಗೆ 12ನೇ ಶತಮಾನದ ಶಾಸನ ಒಂದನ್ನು 13ನೇ ಶತಮಾನದ ಶಾಸನದೊಂದಿಗೆ ಹೋಲಿಸಿ ನೋಡಿ ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಕನ್ನಡ ನುಡಿ ಆ ಎರಡು ಶಾಸನಗಳ ಕಾಲದಲ್ಲಿ ಬದಲಾದುದೇ ಕಾರಣವೆಂದು ಕಲ್ಪಿಸಿಕೊಳ್ಳಬೇಕಾಗುತ್ತದೆ ಆದರೆ ಶಾಸನಗಳ ನಡುವಿನ ಕಾಲಾನುಕ್ರಮವೇ ಅವುಗಳಲ್ಲಿ ಕಾಣಿಸುವ ಕನ್ನಡ ನುಡಿಯ ಕಾಲಾನುಕ್ರಮವು ಆಗಲೇಬೇಕೆಂದೇನು ಇಲ್ಲ ಒಂದು ನುಡಿಯ ಕಾಲಾನುಕ್ರಮವು ಅದರ ಶಾಸನಗಳ ಕಾಲಾನುಕ್ರಮಕ್ಕಿಂತ ತೀರಾ ಬೇರೆಯಾಗಿರಬಲ್ಲುದು ಹೀಗಾಗಲು ಮುಖ್ಯ ಕಾರಣವೇನೆಂದರೆ ಕನ್ನಡ ನುಡಿ ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರೆಯಾಗಿರುತ್ತದೆ ಧಾರವಾಡ ಮೈಸೂರು ಮಂಗಳೂರು ಮೊದಲಾದ ಊರುಗಳಲ್ಲಿ ಅದು ಬೇರೆ ಬೇರೆಯಾಗಿದೆ ಮತ್ತು ಒಂದೇ ಊರಿನಲ್ಲೂ ಒಕ್ಕಲಿಗರು ಬ್ರಾಹ್ಮಣರು ಲಿಂಗಾಯತರು ಮೊದಲಾದ ಜಾತಿ ಇಲ್ಲವೇ ಪಂಗಡಗಳಲ್ಲೂ ಅದು ಬೇರೆ ಬೇರೆಯಾಗಿದೆ ಕನ್ನಡದಲ್ಲಿ

ಕಾಣಿಸುವ ಈ ಒಳನುಡಿಗಳ ನಡುವಿರುವ ವ್ಯತ್ಯಾಸಗಳು ಬೇರೆ ಬೇರೆ ಶತಮಾನಗಳಲ್ಲಿ ಬರೆದಿರುವ ಕಾವ್ಯಗಳ ಇಲ್ಲವೇ ಶಾಸನಗಳ ನಡುವೆ ಕಾಣಿಸುವ ವ್ಯತ್ಯಾಸಗಳ ಹಾಗೆಯೇ ಇವೆ ಎರಡರಲ್ಲೂ ಒಂದೇ ಬಗೆ ಸ್ವರ ವ್ಯಂಜನ ಮತ್ತು ವ್ಯಾಕರಣಗಳ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಎರಡು ಬೇರೆ ಬೇರೆ ಶತಮಾನಗಳಲ್ಲಿ ರಚಿತವಾದ ಕಾವ್ಯಗಳ ಇಲ್ಲವೇ ಶಾಸನಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಅವನ್ನು ರಚಿಸಿದ ಜನರ ನಡುವಿದ್ದ ಊರುಗಳ ಇಲ್ಲವೇ ಪಂಗಡಗಳ ನಡುವಿನ ವ್ಯತ್ಯಾಸಗಳೇ ಇಲ್ಲವೇ ಆ ಶತಮಾನಗಳ ನಡುವಿನ ಸಮಯದಲ್ಲಿ ನಡೆದ ಮಾರ್ಪಾಡುಗಳಿಂದಾಗಿ ಉಂಟಾದವು ಎಂಬುದನ್ನು ಖಚಿತವಾಗಿ ತಿಳಿಯಲು ಬರುವುದಿಲ್ಲ ಯಾಕೆಂದರೆ ಈ ಕಾವ್ಯಗಳಲ್ಲಿ ಮತ್ತು ಶಾಸನಗಳಲ್ಲಿ ಯಾವಾಗಲೂ ಒಂದೇ ಊರಿನ ಮತ್ತು ಒಂದೇ ಪಂಗಡದ ನುಡಿಯೇ ಬಳಕೆಯಾಗಿರಬೇಕೆಂದೇನು ಇಲ್ಲ ಅದರಲ್ಲಿ ಬಳಕೆಯಾಗಿರುವ ನುಡಿ ಆ ಶಾಸನದ ಊರಿನ ನುಡಿ

ಇರಬಹುದು ಶಾಸನವನ್ನು ರಚಿಸಿದವನ ಊರಿನ ಮತ್ತು ಪಂಗಡದ ನುಡಿ ಇರಬಹುದು ಇಲ್ಲವೇ ಅವನನ್ನು ಬರೆಸಿದ ರಾಜನ ನುಡಿ ಇರಬಹುದು ಇದಲ್ಲದೆ ಎಲ್ಲಾ ಬರಹಗಾರರು ಒಂದೇ ಬಗೆಯ ನುಡಿಯನ್ನು ಇಂತಹ ಬರಹಗಳಲ್ಲಿ ಬಳಸ ಹೋಗಿರುವಲ್ಲೂ ಅವರ ಊರಿನ ಮತ್ತು ಪಂಗಡದ ಒಳನುಡಿ ಅವುಗಳ ಮೇಲೆ ಸ್ವಲ್ಪವಾದರೂ ಪ್ರಭಾವವನ್ನು ಬೀರದಿರುವುದಿಲ್ಲ ಸಾಮಾನ್ಯವಾಗಿ ಬರಹಗಳಲ್ಲಿ ಬಳಕೆಯಾಗುವ ನುಡಿ ಮಾತಿನಲ್ಲಿ ಬಳಕೆಯಾಗುವ ನುಡಿಗಿಂತ ಸ್ವಲ್ಪ ಹಿಂದಿನ ಕಾಲದಾಗಿರುತ್ತದೆ ಮಾದಿನಲ್ಲಿ ಕಾಣಿಸುವ ಮಾರ್ಪಾಡುಗಳು ಬರಹಗಳಲ್ಲಿ ಕಾಣಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುವುದೇ ಇದಕ್ಕೆ ಕಾರಣ ಬರಹಗಾರನ ಕಾಲವನ್ನು ಅವಲಂಬಿಸಿ ಆತನ ಬರಹದ ಕಾಲವನ್ನು ತಿಳಿಯುವುದು ಈ ಕಾರಣಕ್ಕಾಗಿ ಅಷ್ಟೊಂದು ಭರವಸೆಯ ವಿಧಾನವಲ್ಲ ಇದಲ್ಲದೆ ಬರಹಗಾರನೊಬ್ಬನು ಬೇರೆ ಬೇರೆ ಕಾರಣಗಳಿಗಾಗಿ ಬೇರೊಂದು ಕಾಲದಲ್ಲಿ ಬಳಕೆಯಲ್ಲಿದ್ದ ಒಳನುಡಿಯಲ್ಲಿ ತನ್ನ ಬರಹವನ್ನು ಉದಾಹರಣೆಗೆ ಬುದ್ದಣ್ಣನು ಹೊಸಗನ್ನಡದ

ಕಾಲದವನಾದರೂ ಹಳೆಗನ್ನಡದಲ್ಲಿ ತನ್ನ ಕೃತಿಗಳನ್ನು ರಚಿಸಿದ್ದನಲ್ಲವೇ ಕನ್ನಡ ನುಡಿಯ ಚರಿತ್ರೆಯನ್ನು ಲಿಖಿತ ವಿಧಾನವನ್ನು ಬಳಸಿ ಬರೆಯುವಾಗ ಈ ಕೊರತೆಯಿಂದಾಗಿ ನಾವು ತೊಂದರೆಗೀಡಾಗಬಲ್ಲೆವು ಬರಹ ರೂಪದಲ್ಲಿ ಉಳಿದು ಬಂದಿರುವ ಕಾವ್ಯಗಳು ಮತ್ತು ಶಾಸನಗಳು ನುಡಿಯ ಒಂದು ಚಿಕ್ಕ ಅಂಶವನ್ನಷ್ಟೇ ನಮಗೆ ತಿಳಿಸಿಕೊಡಬಲ್ಲ ಅವುಗಳ ಪರಿಮಾಣ ಮಾತ್ರವಲ್ಲ ಅವು ಬಳಸುವ ವಾಕ್ಯಗಳ ಬಗೆಗಳು ಮತ್ತು ಅವು ತಿಳಿಸುವ ವಿಷಯಗಳ ಬಗೆಗಳು ಕೂಡ ಅವುಗಳ ಮೂಲಕ ಉಳಿದು ಬರಬಹುದಾದ ವ್ಯಾಕರಣಾಂಶದ ಎಣಿಕೆಯ ಮೇಲೆ ಬಹಳಷ್ಟು ನಿರ್ಬಂಧಗಳನ್ನು ಹೇರಬಲ್ಲುವು ಯಾವುದೇ ಒಂದು ಕಾಲದಲ್ಲಿ ಬಳಕೆಯಲ್ಲಿದ್ದ ಒಳನುಡಿಗಳಲ್ಲಿ ಕೆಲವೇ ಕೆಲವು ಮಾತ್ರ ಇಂತಹ ಬರಹಗಳಲ್ಲಿ ಕಾಣಿಸಿಕೊಳ್ಳಬಲ್ಲುವು ಎಂಬುದು ಕೂಡ ಇಲ್ಲೊಂದು ಮುಖ್ಯವಾದ ನಿರ್ಬಂಧವಾಗಿದೆ ಬರಹಗಳನ್ನು ಅವಲಂಬಿಸಿ ಬರೆದ ಲಿಖಿತ ಚರಿತ್ರೆಯ ಇನ್ನೊಂದು ಕೊರತೆ ಏನೆಂದರೆ ಈ ಬರಹಗಳನ್ನು ಬರೆಯುವಲ್ಲಿ ಬಳಕೆಯಾಗಿರುವ

ಕನ್ನಡ ಲಿಪಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ನುಡಿಯ ಸ್ವರ ಮತ್ತು ವ್ಯಂಜನಗಳನ್ನು ಎಷ್ಟರ ಮಟ್ಟಿಗೆ ತೋರಿಸಿಕೊಡಬಲ್ಲದು ಎಂಬುದನ್ನು ಖಚಿತವಾಗಿ ಹೇಳಲು ಬರುವುದಿಲ್ಲ ಇವತ್ತು ಬಳಕೆಯಲ್ಲಿರುವ ಲಿಪಿಯಲ್ಲೂ ಮಾತಿನಲ್ಲಿ ಕಾಣಿಸಿ ಕೊಳ್ಳುವ ಎಲ್ಲಾ ಬಗೆಯ ಸ್ವರ ಮತ್ತು ವ್ಯಂಜನಗಳ ವ್ಯತ್ಯಾಸವನ್ನು ಸರಿಯಾಗಿ ಕಾಣಿಸಲು ಬರುವುದಿಲ್ಲ ಹಾಗಾಗಿ ಹಳೆಯ ಕಾಲದ ಬರಹಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಅವಲಂಬಿಸಿ ಅವು ಬಳಸಿರುವ ನುಡಿಯಲ್ಲಿ ಎಂತಹ ಮಾರ್ಪಾಡುಗಳೆಲ್ಲ ನಡೆದಿರಬಹುದೆಂದು ತೀರ್ಮಾನಿಸುವುದು ಸುಲಭದ ಕೆಲಸವೇನಲ್ಲ



Part 2

Watch on YouTube

Note: This transcript has not been cleaned and may contain errors.

ಕನ್ನಡ ಭಾಷೆಯ ಕಲ್ಪಿತ ಚರಿತ್ರೆ ಡಿ ಎನ್ ಶಂಕರ್ ಭಟ್ ಕಲ್ಪಿತ ಚರಿತ್ರೆಯ ಸ್ವರೂಪ ಕನ್ನಡ ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯಲು ಮುಖ್ಯವಾಗಿ ಎರಡು ಬಗೆಯ ವಿಧಾನಗಳನ್ನು ಬಳಸಲು ಬರುತ್ತದೆ ಇವನ್ನು ತುಲನಾತ್ಮಕ ವಿಧಾನ ಮತ್ತು ಆಂತರಿಕ ವಿಧಾನ ಎಂಬುದಾಗಿ ಹೆಸರಿಸಲಾಗುತ್ತದೆ ಇವುಗಳಲ್ಲಿ ತುಲನಾತ್ಮಕ ವಿಧಾನವನ್ನೇ ಹೆಚ್ಚಾಗಿ ಬಳಸಲಾಗುತ್ತದೆ ಅದರಲ್ಲೂ ಲಿಖಿತ ವಿಧಾನದ ಹಾಗೆ ಕೆಲವು ಕೊರತೆಗಳಿವೆ ಆದರೆ ಇವು ಲಿಖಿತ ವಿಧಾನದಲ್ಲಿ ಕಾಣಿಸಿಕೊಳ್ಳುವ ಕೊರತೆಗಳಿಂದ ತೀರಾ ಬೇರಾದವುಗಳು ಹಾಗಾಗಿ ಈ ಎರಡು ಬಗೆಯ ವಿಧಾನಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸುವುದರ ಮೂಲಕ ಈ ಕೊರತೆಗಳನ್ನು ಸ್ವಲ್ಪ ಮಟ್ಟಿಗೆ ಇಲ್ಲವಾಗಿಸಲು ಬರುತ್ತದೆ ಆಂತರಿಕ ವಿಧಾನ ಇವೆರಡಕ್ಕಿಂತಲೂ ಬೇರೆಯಾಗಿದ್ದು ಅದನ್ನು ಕೆಲವೆಡೆಗೆ ಗಳಲ್ಲಷ್ಟೇ ಬಳಸಲು ಬರುತ್ತದೆ ಒಂದು ನುಡಿಯ ಪದಗಳ ರೂಪದಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳನ್ನು ಅವಲಂಬಿಸಿ

ಆ ನುಡಿಯ ಹಿಂದಿನ ಹಂತ ಒಂದನ್ನು ಕಲ್ಪಿಸಿಕೊಳ್ಳುವುದೇ ಈ ವಿಧಾನದ ಮೂಲ ಉದ್ದೇಶ ತುಲನಾತ್ಮಕ ವಿಧಾನವನ್ನು ಮೊದಲಿಗೆ ವಿವರವಾಗಿ ತಿಳಿದುಕೊಂಡು ಆಮೇಲೆ ಈ ಆಂತರಿಕ ವಿಧಾನದ ಸ್ವರೂಪವೇನು ಎಂಬುದನ್ನು ತಿಳಿದುಕೊಳ್ಳಬಹುದು ತುಲನಾತ್ಮಕ ವಿಧಾನ ತುಲನಾತ್ಮಕ ವಿಧಾನದಲ್ಲಿ ಒಂದರೊಡನೊಂದು ನಂಟಸ್ಥನವನ್ನು ತೋರಿಸುವ ಎರಡು ನುಡಿಗಳನ್ನು ಹೋಲಿಸಿ ನೋಡಿ ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಲಾಗುತ್ತದೆ ಮತ್ತು ಆ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಹಿಂದಿನ ರೂಪದಲ್ಲಿ ನಡೆದ ಮಾರ್ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲಾಗುತ್ತದೆ ಉದಾಹರಣೆಗೆ ಕನ್ನಡ ಮತ್ತು ತಮಿಳು ನುಡಿಗಳನ್ನು ಹೋಲಿಸಿ ನೋಡಿ ಅವುಗಳ ನಡುವೆ ಹಲವಾರು ವ್ಯತ್ಯಾಸಗಳಿರುವುದು ಕಂಡುಬರುತ್ತದೆ ಕನ್ನಡದ ಕರವು ತಮಿಳಿನ ಹಲವಾರು ಪದಗಳಲ್ಲಿ ಚಕಾರವಾಗಿ ಕಾಣಿಸುವುದು ಇಂತಹ ವ್ಯತ್ಯಾಸಗಳಲ್ಲಿ ಒಂದು ಕೆಳಗೆ ಕೊಟ್ಟಿರುವ ಕನ್ನಡ ಮತ್ತು ತಮಿಳು ಪದಗಳಲ್ಲಿ

ಈ ವ್ಯತ್ಯಾಸವನ್ನು ಕಾಣಬಹುದು ಕನ್ನಡ ತಮಿಳು ಕೆತ್ತು ಚೆತ್ತು ಕೇರಿ ಚೇರಿ ಕೇನೆ ಚೇನೆ ಕೆಲವು ಚಿಲ ಕೆರೆ ಚಿರೈ ಕಿಲುಬು ಚಿಲುಂಪು ಕನ್ನಡ ಮತ್ತು ತಮಿಳು ನುಡಿಗಳ ನಡುವಿರುವ ಈ ವ್ಯತ್ಯಾಸವನ್ನು ತುಲನಾತ್ಮಕ ವಿಧಾನದ ಮೂಲಕ ವಿವರಿಸಲು ಕನ್ನಡ ಮತ್ತು ತಮಿಳು ನುಡಿಗಳ ಮೊದಲಿಗಿದ್ದ ಮೂಲ ತೆಂಕು ದ್ರಾವಿಡ ಎಂಬ ಕಲ್ಪಿತ ನುಡಿಯಲ್ಲಿ ಈ ಪದಗಳ ಮೊದಲಿನ ವ್ಯಂಜನ ಕರವಾಗಿತ್ತೆ ಇಲ್ಲವೇ ಚಕಾರವಾಗಿತ್ತೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಕ ಔ ಕಾರವೆಂದು ನಿರ್ಧರಿಸಿದಲ್ಲಿ ತಮಿಳಿನ ಚರಿತ್ರೆಯಲ್ಲಿ ಪದಗಳ ಮೊದಲಿನ ಕರ ಚ ಕಾರವಾಗಿದೆ ಎಂದು ಹೇಳಬೇಕಾಗುತ್ತದೆ ಮತ್ತು ಚ ಅವು ಚ ಕಾರವೆಂದು ನಿರ್ಧರಿಸಿದಲ್ಲಿ ಕನ್ನಡದ ಚರಿತ್ರೆಯಲ್ಲಿ ಪದಗಳ ಮೊದಲಿನ ಚ ಕಾರ ಕಾರವಾಗಿದೆ ಎಂದು ಹೇಳಬೇಕಾಗುತ್ತದೆ ಈ ಪದಗಳೆಲ್ಲ ಅವುಗಳ ಮೊದಲಿನ

ಕ ಕಾರ ಇಲ್ಲವೇ ಚಕಾರದ ಬಳಿಕ ಇಲ್ಲವೇ ಎ ಸ್ವರಗಳು ಬಂದಿವೆ ನಾಲಿಗೆಯ ಮುಂಭಾಗದ ಮೂಲಕ ಉಚ್ಚರಿಸುವ ಈ ಸ್ವರಗಳು ಅವುಗಳ ಮೊದಲು ಬರುವ ಕರವನ್ನು ಚಕಾರವನ್ನಾಗಿ ಮಾಡಬಲ್ಲವು ಯಾಕೆಂದರೆ ಕರವನ್ನು ನಾಲಿಗೆಯ ಹಿಂಭಾಗದಿಂದ ಮತ್ತು ಚಕಾರವನ್ನು ನಾಲಿಗೆಯ ಮುಂಭಾಗದಿಂದ ಉಚ್ಚರಿಸಲಾಗುತ್ತದೆ ಕರ ಚ ಕಾರವಾದಾಗ ಅದರ ಬಳಿಕ ಬರುವ ಈ ನಾಲ್ಕು ಸ್ವರಗಳನ್ನು ಅವುಗಳ ಮುಂದಿರುವ ವ್ಯಂಜನದ ಜಾಗದಲ್ಲೇ ನಾಲಿಗೆಯ ಮುಂಭಾಗದಲ್ಲಿ ಉಚ್ಚರಿಸುವಂತಾಗುತ್ತದೆ ಮತ್ತು ಹಾಗಾಗಿ ಇದೊಂದು ಸಹಜವಾದ ಮಾರ್ಪಾಡು ಈ ವಿಷಯವನ್ನು ಬಳಸಿ ಮೇಲಿನ ಪದಗಳಲ್ಲಿ ಕಾಣಿಸುವ ಕನ್ನಡ ಮತ್ತು ತಮಿಳುಗಳ ನಡುವಿನ ವ್ಯತ್ಯಾಸಕ್ಕೆ ತಮಿಳಿನ ಚರಿತ್ರೆಯಲ್ಲಿ ಕರದ ಬಳಿಕ ಇ ಮತ್ತು ಎಂಬ ಸ್ವರಗಳು ಬಂದಿರುವ ಪದಗಳಲ್ಲಿ ಕರ ಚ ಕಾರವಾಗುವ ಈ ಸ್ವಾಭಾವಿಕವೆನಿಸುವ ಮಾರ್ಪಾಡು ನಡೆದಿರುವುದೇ ಕಾರಣವೆಂದು

ಹೇಳಲು ಬರುತ್ತದೆ ಈ ಹೇಳಿಕೆಯನ್ನು ಬೆಂಬಲಿಸುವ ಇನ್ನೊಂದು ವಿಷಯವು ಇದೆ ಕನ್ನಡದಲ್ಲಿ ಪದಗಳ ಮೊದಲಿನ ಕರದ ಬಳಿಕ ಮಾತ್ರವಲ್ಲದೆ ಚಕಾರದ ಬಳಿಕವು ಇ ಮತ್ತು ಎಂಬ ಸ್ವರಗಳು ಬರುತ್ತವೆ ಮತ್ತು ಇಂತಹ ಪದಗಳಲ್ಲಿ ತಮಿಳಿನಲ್ಲೂ ಚ ಕಾರದ ಬಳಿಕ ಇ ಈ ಮತ್ತು ಎಂಬ ಸ್ವರಗಳು ಬರುತ್ತವೆ ಕನ್ನಡದಲ್ಲಿ ಈ ಎರಡು ಬಗೆಯ ಪದಗಳ ಮೊದಲಿನ ಚ ಕಾರಗಳು ವಿಕಲ್ಪವಾಗಿ ಸ ಕಾರ ಇಲ್ಲವೇ ಜ ಕಾರವಾಗಿವೆ ಎಂಬುದನ್ನು ಮುಂದೆ 23 ರಲ್ಲಿ ತಿಳಿಸಲಾಗಿದೆ ಕನ್ನಡ ತಮಿಳು ಚಿಲ್ಲರೆ ಚಿಲ್ಲರೆ ಚಿನ್ನ ಚಿನ್ನ ಚೀಪು ಚೀಪು ಚೆಂಡು ಚೆಂಟು ಸೇರು ಚೇರ್ ಕನ್ನಡದ ಚರಿತ್ರೆಯಲ್ಲಿ ಚಕಾರದ ಬಳಿಕ ಇ ಮತ್ತು ಎಂಬ ಸ್ವರಗಳು ಬಂದಿರುವಲ್ಲಿ ಅದು ಕರವಾಗಿದೆ ಎಂದು ಹೇಳಲು ಮೇಲಿನ ಪದಗಳು

ತೊಡಕುಗಳಾಗಿರುತ್ತವೆ ಆದರೆ ತಮಿಳಿನ ಚರಿತ್ರೆಯಲ್ಲಿ ಕರ ಚ ಕಾರವಾಗಿದೆ ಎಂದು ಹೇಳುವುದಕ್ಕೆ ಅವು ತೊಡಕುಗಳಾಗುವುದಿಲ್ಲ ಇದಲ್ಲದೆ ತಮಿಳಿನಲ್ಲಿ ಪದಗಳ ಮೊದಲಿನ ಕರದ ಬಳಿಕ ಇ ಈ ಮತ್ತು ಎಂಬ ಸ್ವರಗಳು ಬರುವುದಿಲ್ಲ ಈ ಸ್ವರಗಳ ಬಳಿಕ ಒಂದು ಪ್ರತಿವೇಷ್ಟಿತಾಕ್ಷರವಿದ್ದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ ಎಂಬುದು ಮೇಲಿನ ಮಾರ್ಪಾಡು ತಮಿಳಿನ ಚರಿತ್ರೆಯಲ್ಲಿ ನಡೆದಿದೆ ಎಂದು ಹೇಳುವುದನ್ನು ಬೆಂಬಲಿಸುತ್ತದೆ ಈ ಎರಡು ವಿಷಯಗಳನ್ನು ಅವಲಂಬಿಸಿ ಮೇಲೆ ತಿಳಿಸಿದ ಕನ್ನಡ ಮತ್ತು ತಮಿಳು ನುಡಿಗಳ ನಡುವಿನ ವ್ಯತ್ಯಾಸ ತಮಿಳಿನ ಚರಿತ್ರೆಯಲ್ಲಾದ ಕರ ಚ ಕಾರವಾಗುವ ಮಾರ್ಪಾಡೇ ಕಾರಣವೆಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ ಎರಡು ನುಡಿಗಳನ್ನು ಮಾತ್ರವಲ್ಲದೆ ಎರಡು ಒಳನುಡಿಗಳನ್ನು ಹೋಲಿಸಿ ನೋಡಿ ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಈ ರೀತಿ ತುಲನಾತ್ಮಕ ವಿಧಾನದ ಮೂಲಕ ವಿವರಿಸಿ ಹೇಳಲು

ಬರುತ್ತದೆ ಮತ್ತು ಅಂತಹ ವಿವರಣೆಗಳ ಮೂಲಕ ಆ ಎರಡು ಒಳನುಡಿಗಳ ಕಲ್ಪಿತ ಚರಿತ್ರೆಯನ್ನು ಬರೆಯಲು ಬರುತ್ತದೆ ಉದಾಹರಣೆಗೆ ನಂಜನಗೂಡಿನ ಒಕ್ಕಲಿಗರ ಕನ್ನಡವನ್ನು ಪುತ್ತೂರಿನ ಹವ್ಯಕರ ಕನ್ನಡದೊಂದಿಗೆ ಹೋಲಿಸಿ ನೋಡಿದಾಗ ಅವುಗಳ ನಡುವೆ ಕೆಲವು ವ್ಯತ್ಯಾಸಗಳಿರುವುದು ಕಂಡುಬರುತ್ತದೆ ನಂಜನಗೂಡಿನ ಒಕ್ಕಲಿಗರ ಕನ್ನಡದ ಕೆಲವು ಪದಗಳ ಮೊದಲನೆಯ ಅಕ್ಷರದಲ್ಲಿರುವ ಈ ಕಾರ ಮತ್ತು ಉಕಾರಗಳ ಬದಲು ಪುತ್ತೂರಿನ ಹವ್ಯಕರ ಕನ್ನಡದಲ್ಲಿ ಏ ಕಾರ ಮತ್ತು ಓ ಕಾರಗಳು ಕಾಣಿಸಿಕೊಳ್ಳುತ್ತವೆ ಎಂಬುದು ಇಂತಹ ವ್ಯತ್ಯಾಸಗಳಲ್ಲಿ ಒಂದು ನಂಜನಗೂಡು ಪುತ್ತೂರು ಇಲಿ ಎಲಿ ಸಿಡಿ ಸೆಡಿ ಕುದಿ ಕೊದಿ ಕುಣಿ ಕೊಣಿ ತುಳಿ ತೊಳಿ ಈ ಎಲ್ಲಾ ಪದಗಳಲ್ಲೂ ಎರಡನೆಯ ಅಕ್ಷರದಲ್ಲಿ ಈ ಕಾಕಾರ ಬಂದಿರುವುದನ್ನು ಕಾಣಬಹುದು ಈ ಪದಗಳ ಮೂಲ ರೂಪದಲ್ಲಿ ಮೊದಲನೆಯ ಅಕ್ಷರ ನಂಜನಗೂಡಿನ ಒಳನುಡಿಗಳಲ್ಲಿರುವ

ಹಾಗೆ ಈ ಕಾಕಾರ ಮತ್ತು ಉಕಾರಗಳಾಗಿ ಇದ್ದವೆ ಇಲ್ಲವೇ ಪುತ್ತೂರಿನ ಒಳನುಡಿಗಳಲ್ಲಿರುವ ಹಾಗೆ ಏ ಕಾರ ಮತ್ತು ಓ ಕಾರಗಳಾಗಿದ್ದುವೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಬೇಕಾಗಿದೆ ಕ ನಂಜನಗೂಡಿನ ಒಕ್ಕಲಿಗರ ಮಾತಿನಲ್ಲಿರುವ ಹಾಗೆ ಮೂಲ ರೂಪದಲ್ಲೂ ಈ ಕಾಕಾರ ಮತ್ತು ಉಕಾರಗಳಿದ್ದು ಎಂದು ಹೇಳಿದೆವಾದರೆ ಪುತ್ತೂರಿನ ಹವ್ಯಕರ ಮಾತಿನಲ್ಲಿ ಮಾರ್ಪಾಡು ನಡೆದಿದೆ ಎಂದು ಹೇಳಬೇಕಾಗುತ್ತದೆ ಮತ್ತು ಚ ಪುತ್ತೂರಿನ ಹವ್ಯಕರ ಮಾತಿನಲ್ಲಿರುವ ಹಾಗೆ ಮೂಲ ರೂಪದಲ್ಲೂ ಏಕಾರ ಮತ್ತು ಓಕಾರಗಳಿದ್ದು ಎಂದು ಹೇಳಿದೆವಾದರೆ ನಂಜನಗೂಡಿನ ಒಕ್ಕಲಿಗರ ಮಾತಿನಲ್ಲಿ ಮಾರ್ಪಾಡು ನಡೆದಿದೆ ಎಂದು ಹೇಳಬೇಕಾಗುತ್ತದೆ ಮೊದಲನೆಯ ಕೇಳಿಕೆಯ ಪ್ರಕಾರ ಪುತ್ತೂರಿನ ಹವ್ವೇಕರ ಮಾತಿನಲ್ಲಿ ಮೊದಲನೆಯ ಅಕ್ಷರದ ಈ ಕಾರ ಮತ್ತು ಉಕಾರಗಳು ಅವುಗಳ ಬಳಿಕ ಈ ಕಾರ ಬಂದಿರುವಲ್ಲಿ ಏ ಕಾರ ಮತ್ತು ಓ

ಕಾರಗಳಾಗಿವೆ ಎಂದು ತಿಳಿಯ ಬೇಕಾಗುತ್ತದೆ ಇದಕ್ಕೆ ಬದಲು ಎರಡನೆಯ ಚಳಿಕೆಯ ಪ್ರಕಾರ ನಂಜನಗೂಡಿನ ಒಕ್ಕಲಿಗರ ಮಾತಿನಲ್ಲಿ ಮೊದಲನೆಯ ಅಕ್ಷರದ ಏ ಕಾರ ಮತ್ತು ಓ ಕಾರಗಳು ಅವುಗಳ ಬಳಿಕ ಈ ಕಾರ ಬಂದಿರುವಲ್ಲಿ ಈ ಕಾರ ಮತ್ತು ಉಕಾರಗಳಾಗಿವೆ ಎಂದು ತಿಳಿಯಬೇಕಾಗುತ್ತದೆ ಇವುಗಳಲ್ಲಿ ಏ ಕಾರ ಮತ್ತು ಓ ಕಾರಗಳು ಅವುಗಳ ಬಳಿಕ ಈ ಕಾರ ಬಂದಿರುವಲ್ಲಿ ಈ ಕಾರ ಮತ್ತು ಉಕಾರಗಳಾಗುವ ಎರಡನೆಯ ಮಾರ್ಪಾಡೆ ಹೆಚ್ಚು ಸಹಜವಾದ ಮಾರ್ಪಾಡು ಎಂದು ಹೇಳಲು ಬರುತ್ತದೆ ಯಾಕೆಂದರೆ ಈ ಮಾರ್ಪಾಡಿನಲ್ಲಿ ಬಾಯಿಯ ನಡುಭಾಗದಲ್ಲಿ ಉಚ್ಚಾರವಾಗುವ ಏ ಕಾರ ಮತ್ತು ಓ ಕಾರಗಳು ಅವುಗಳ ಬಳಿಕ ಬಾಯಿಯ ಮೇಲ್ಭಾಗದಲ್ಲಿ ಉಚ್ಚಾರವಾಗುವ ಈ ಕಾರ ಬಂದಿರುವಲ್ಲಿ ಅದಕ್ಕೆ ಹೊಂದಿಕೆಯಾಗುವಂತೆ ಬಾಯಿಯ ಮೇಲ್ಭಾಗದಲ್ಲೇನೆ ಉಚ್ಚಾರವಾಗುವ ಈ ಕಾರ ಮತ್ತು

ಉಕಾರಗಳಾಗಿವೆ ಇದಲ್ಲದೆ ಈ ಎರಡು ನುಡಿಗಳಲ್ಲೂ ಬೇರೆ ಕೆಲವು ಪದಗಳಲ್ಲಿ ಮೊದಲನೆಯ ಅಕ್ಷರದಲ್ಲಿ ಈ ಕಾಕಾರ ಮತ್ತು ಉಕಾರಗಳಿದ್ದು ಎರಡನೆಯ ಅಕ್ಷರದಲ್ಲಿ ಈ ಕಾಕಾರ ಬಂದಿರುವುದನ್ನು ಕಾಣಬಹುದು ನಂಜನಗೂಡು ಪುತ್ತೂರು ಇಳಿ ಇಳಿ ಗಿಣಿ ಗಿಳಿ ಕುಡಿ ಕುಡಿ ಸುಳಿ ಸುಳಿ ಇಂತಹ ಪದಗಳು ಮೇಲೆ ಕೊಟ್ಟಿರುವ ಕೇಳಿಕೆಗೆ ಅಪವಾದಗಳಾಗುತ್ತವೆ ಪುತ್ತೂರಿನ ಹವ್ಯಕದಲ್ಲಿ ಪದಗಳ ಮೊದಲನೆಯ ಅಕ್ಷರದ ಈ ಇಕಾರ ಮತ್ತು ಉಕಾರಗಳು ಅವುಗಳ ಬಳಿಕ ಇಕಾರ ಬಂದಿರುವಲ್ಲಿ ಏಕಾರ ಮತ್ತು ಓ ಕಾರಗಳಾಗಿವೆ ಎಂದು ಹೇಳಿದಲ್ಲಿ ಮೇಲಿನ ಪದಗಳಲ್ಲಿ ಅವು ಯಾಕೆ ಆ ರೀತಿ ಮಾರ್ಪಟ್ಟಿಲ್ಲ ಎಂಬುದನ್ನು ವಿವರಿಸಬೇಕಾಗುತ್ತದೆ ಈ ಎರಡು ವಿಷಯಗಳನ್ನು ಅವಲಂಬಿಸಿ ಮೇಲೆ ಕೊಟ್ಟಿರುವ ಮಾರ್ಪಾಡನ್ನು ವಿವರಿಸುವಲ್ಲಿ ಎರಡನೆಯ ಚಳಿಕೆಯೇ ಸರಿ ಎಂದು ತುಲನಾತ್ಮಕ ವಿಧಾನವನ್ನು ಬಳಸಿ ಹೇಳಲು

ಬರುತ್ತದೆ ಇದನ್ನು ಬೆಂಬಲಿಸುವ ಬೇರೊಂದು ವಿಷಯವು ಇದೆ ಐದು ಆರನೇ ಶತಮಾನದ ಪೂರ್ವದ ಹಳೆಗನ್ನಡದಲ್ಲಿ ಬರುವ ಈ ರೀತಿಯ ಪದಗಳಲ್ಲಿ ಏಕಾರ ಮತ್ತು ಓ ಕಾರಗಳಿವೆ ಅಲ್ಲದೆ ಇಕಾರ ಮತ್ತು ಉಕಾರಗಳಿಲ್ಲ ಪೂರ್ವದ ಹಳೆಗನ್ನಡ ಹಳೆಗನ್ನಡ ಕೆಸು ಕಿಸು ಪೆರಿಯ ಪಿರಿಯ ಹಿರಿಯ ಎದಿರ್ ಇದಿರ್ ಇದಿರು ತೋರು ತುರು ಹಸು ಪೊಗು ಪುಗು ಒಳಹೋಗು ಪೊರುಳ್ ಪುರುಳ್ ಯೋಗ್ಯತೆ ಇಲ್ಲಿ ಕೊನೆಯ ಮೂರು ಪದಗಳ ಎರಡನೆಯ ಅಕ್ಷರದಲ್ಲಿ ಇಕಾರದ ಬದಲು ಉಕಾರವಿದೆ ಕನ್ನಡದ ಕೆಲವು ಒಳನುಡಿಗಳಲ್ಲಿ ನಡೆದ ಏ ಕಾರ ಈ ಕಾರವಾಗುವ ಮತ್ತು ಓ ಕಾರ ಉಕಾರವಾಗುವ ಈ ಮಾರ್ಪಾಡು ಅವುಗಳ ಬಳಿಕ ಎರಡನೆಯ ಅಕ್ಷರದಲ್ಲಿ ಉಕಾರವಿರುವಲ್ಲೂ ನಡೆದಿದೆ ಉದಾಹರಣೆಗೆ ಕನ್ನಡದ ಇರುವೆ ಎಂಬ ಪದ ಅವೇಕದಲ್ಲಿ ಎರುಗು ಎಂಬ

ರೂಪದಲ್ಲಿದೆ ಈ ಮಾರ್ಪಾಡಿನ ಕುರಿತು ಹೆಚ್ಚಿನ ವಿವರಗಳನ್ನು 321 ರಲ್ಲಿ ಕೊಡಲಾಗಿದೆ ಪೂರ್ವದ ಹಳೆಗನ್ನಡದಲ್ಲಿ ಈ ಬಗೆಯ ಪದಗಳಲ್ಲಿದ್ದ ಏ ಕಾಕಾರ ಮತ್ತು ಓ ಕಾರಗಳು ಕರಾವಳಿಯ ಒಳನುಡಿಗಳಲ್ಲಿ ಮಾರ್ಪಡದೆ ಉಳಿದಿವೆ ಮತ್ತು ಬೇರೆ ಒಳನುಡಿಗಳಲ್ಲಿ ಈ ಕಾರ ಮತ್ತು ಉಕಾರಗಳಾಗಿ ಮಾರ್ಪಟ್ಟಿವೆ ಎಂಬುದಾಗಿ ಈ ಎಲ್ಲಾ ವಿಷಯಗಳನ್ನು ಅವಲಂಬಿಸಿ ಒಂದು ಚಾರಿತ್ರ ತೀರ್ಮಾನಕ್ಕೆ ಬರಲು ಸಾಧ್ಯವಿದೆ ತುಲನಾತ್ಮಕ ವಿಧಾನವನ್ನು ಬಳಸಿ ಒಂದು ನುಡಿಯ ಕಲ್ಪಿತ ಚರಿತ್ರೆಯನ್ನು ಬರೆಯುವುದು ಹೇಗೆ ಮತ್ತು ಈ ಕೆಲಸಕ್ಕೆ ನೆರವಾಗುವಂತೆ ಲಿಖಿತ ವಿಧಾನದಿಂದ ದೊರಕುವ ವಿಷಯಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಈ ಎರಡು ಉದಾಹರಣೆಗಳು ತುಂಬಾ ಚೆನ್ನಾಗಿ ತೋರಿಸಿಕೊಡುತ್ತವೆ