KANNADA PADAGALA OLARACANE

ಕನ್ನಡ ಪದಗಳ ಒಳರಚನೆ

Part of DNS Bhat’s writings read by Malati Bhat

ಪರಿವಿಡಿ


ಅಧ್ಯಾಯ 1 — ಪೀಠಿಕೆ

Introduction

Part 1

Watch on YouTube

Note: This transcript has not been cleaned and may contain errors.

ಪೀಠಿಕೆ ಒಳ ರಚನೆ ಕನ್ನಡ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಪದಗಳು ಬಳಕೆಯಲ್ಲಿವೆ ಒಳ ರಚನೆ ಇರುವ ಪದಗಳು ಮತ್ತು ಒಳ ರಚನೆ ಇಲ್ಲದ ಪದಗಳು ಉದಾಹರಣೆಗಾಗಿ ಮುನ್ನುಡಿ ಎಂಬ ಪದಕ್ಕೆ ಒಳ ರಚನೆ ಇದೆ ಮುಂದೆ ಮತ್ತು ನುಡಿ ಎಂಬ ಎರಡು ಪದಗಳು ಒಟ್ಟು ಸೇರಿ ಈ ಮುನ್ನುಡಿ ಎಂಬ ಪದ ತಯಾರಾಗಿದೆ ಮತ್ತು ಹೀಗೆ ತಯಾರಾಗುವ ಮುಂದೆ ಎಂಬ ಪದ ಅದರ ಮುನ್ ಎಂಬ ಸಂಕ್ಷಿಪ್ತ ರೂಪದಲ್ಲಿ ಬಂದಿದೆ ಇದಕ್ಕೆ ವೈತಿರಿಕ್ತವಾಗಿ ತಲೆ ಎಂಬ ಪದಕ್ಕೆ ಒಳ ರಚನೆ ಎಂಬುದಿಲ್ಲ ಅದು ತಕಾರ ಅಕಾರ ಲಕಾರ ಮತ್ತು ಎಕಾರಗಳ ಸೇರಿಕೆಯಿಂದ ತಯಾರಾಗಿದೆ ಎನ್ನು ನಿಜ ಆದರೆ ಅದರ ಅಂಗಗಳಾಗಿ ಬರುವ ಈ ವರ್ಣಗಳನ್ನು ಮುನ್ನುಡಿ ಎಂಬ ಒಳ ರಚನೆ ಇರುವ

ಪದದಲ್ಲಿ ಕಾಣಿಸುವ ಹಾಗೆ ಎರಡು ಬೇರೆ ಬೇರೆ ಪದಗಳಾಗಿ ಇಲ್ಲವೇ ಕುಣಿತ ಎಂಬ ಇನ್ನೊಂದು ಒಳ ರಚನೆ ಇರುವ ಪದದಲ್ಲಿ ಕಾಣಿಸುವ ಹಾಗೆ ಒಂದು ಪದ ಕುಣಿ ಮತ್ತು ಒಂದು ಪ್ರತ್ಯಯ ತ ಎಂಬುದಾಗಿ ಒಡೆದು ಹೇಳಲು ಸಾಧ್ಯವಾಗದು ಈ ಪುಸ್ತಕದಲ್ಲಿ ಮುಖ್ಯವಾಗಿ ಒಳರಚನೆ ಇರುವ ಕನ್ನಡ ಪದಗಳು ಪರಿಶೀಲನೆಯನ್ನು ನಡೆಸಬೇಕಾಗಿದೆ ಎಂದರೆ ಅಂತಹ ಪದಗಳ ಅಂಗಗಳಾಗಿ ಬರುವ ಪದಗಳು ಮತ್ತು ಪ್ರತ್ಯಯಗಳು ಯಾವುವು ಅವುಗಳ ನಡುವೆ ಎಂತಹ ಸಂಬಂಧವಿದೆ ಮತ್ತು ಈ ರೀತಿ ಬೇರೊಂದು ಪದದ ಅಂಗಗಳಾಗಿ ಬರುವಾಗ ಅವುಗಳಲ್ಲಿ ಎಂತಹ ಬದಲಾವಣೆಗಳೆಲ್ಲ ನಡೆಯುತ್ತವೆ ಎಂಬಂತಹ ಪ್ರಶ್ನೆಗಳಿಗೆಲ್ಲ ಉತ್ತರಗಳನ್ನು ಕಂಡುಹಿಡಿಯಬೇಕಾಗಿದೆ ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಮುನ್ನುಡಿ ಎಂಬ ಪದದ ಅಂಗವಾಗಿ ಬಂದಿರುವ ನುಡಿ ಎಂಬುದು ಒಂದು ಕ್ರಿಯಾಪದವೇ ಅಥವಾ ಅದೇ ರೂಪದ

ಒಂದು ನಾಮಪದವೇ ಮುಂದೆ ಎಂಬುದಕ್ಕೂ ಅದಕ್ಕೂ ಈ ಪದದಲ್ಲಿ ಎಂತ ಸಂಬಂಧವಿದೆ ನುಡಿ ಎಂಬುದು ಕ್ರಿಯಾಪದವಾದರೆ ಅದರಿಂದ ಮುನ್ನುಡಿ ಎಂಬ ನಾಮಪದ ಹೇಗೆ ತಯಾರಾಗುತ್ತದೆ ಅದು ನಾಮಪದ ವಾದರೆ ಮುಂದೆ ಎಂಬ ಗುಣಪದದೊಂದಿಗೆ ಅದು ಹೇಗೆ ಸಂಬಂಧಿಸುತ್ತದೆ ಅವೆರಡರ ನಡುವೆ ಮುನ್ನುಡಿ ಎಂಬ ಪದದಲ್ಲಿ ಕಾಣಿಸದಿರುವ ಒಂದು ಅಥವಾ ಜಾಸ್ತಿ ಕ್ರಿಯಾಪದಗಳನ್ನು ಅನುಸರಿಸಿ ಮುಂದಾಗಿ ಹೇಳುವ ನುಡಿ ಎಂಬುದಾಗಿ ಅವನ್ನು ಸಂಬಂಧಿಸಬೇಕೆ ಅಥವಾ ಮುಂದೆ ಎಂಬುದನ್ನು ಮುಂದಿನ ಎಂಬುದಾಗಿ ಪರಿವರ್ತಿಸಿಕೊಳ್ಳಬೇಕೆ ಇಂತಹ ಹಲವಾರು ಪ್ರಶ್ನೆಗಳು ಈ ಪದದ ಒಳ ರಚನೆಯನ್ನು ಪರಿಶೀಲಿಸುವಾಗ ನಮ್ಮೆದುರು ನಿಲ್ಲುತ್ತವೆ ಒಳರಚನೆ ಇರುವ ಪದಗಳನ್ನು ವಾಕ್ಯಗಳಲ್ಲಿ ಬಳಸಬೇಕಾದಾಗಲೆಲ್ಲ ನಾವು ಆ ಒಳ ರಚನೆ ಎಂತಹದ್ದು ಎಂಬುದನ್ನು ತಿಳಿದಿರಲೇಬೇಕೆಂದೇನು ಇಲ್ಲ ಆ ಪದಗಳ ಅರ್ಥವೇನು ಮತ್ತು ವಾಕ್ಯಗಳಲ್ಲಿ ಅವುಗಳನ್ನು ಬಳಸುವ

ಬಗ್ಗೆ ಹೇಗೆ ಎಂದಿಷ್ಟನ್ನು ಮಾತ್ರ ತಿಳಿದಿದ್ದರೆ ಸಾಕು ಈ ವಿಷಯದಲ್ಲಿ ಒಳರಚನೆ ಇರುವ ಪದಗಳಿಗೂ ಮತ್ತು ಒಳರ ರಚನೆ ಇಲ್ಲದ ಪದಗಳಿಗೂ ನಡುವೆ ಹೆಚ್ಚಿನ ವ್ಯತ್ಯಾಸವೇನು ಇಲ್ಲ ಈ ಕಾರಣಕ್ಕಾಗಿ ಪದ ರಚನೆ ಎಂಬುದು ವ್ಯಾಕರಣದ ಅಂಗವಲ್ಲವೆಂದು ವಾದಿಸುವವರು ಕೆಲವರಿದ್ದಾರೆ ನಾಮಪದಗಳ ಬಳಕೆಯ ಮಟ್ಟಿಗೆ ಹೇಳುವುದಾದರೆ ಇದು ಒಂದು ರೀತಿಯಲ್ಲಿ ನಿಜವೆಂದು ಅನಿಸದಿರದು ಅವುಗಳ ಆಧುನಿಕ ಬಳಕೆಯನ್ನು ಇಲ್ಲವೇ ಅರ್ಥವನ್ನು ಒಳರಚನೆಯ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯವಾಗದು ಎಂಬುದನ್ನು ಮುಂದೆ ಮೂರನೇ ಅಧ್ಯಾಯದಲ್ಲಿ ನೋಡಲಿರುವೆವು ಹೀಗಿದ್ದರೂ ಕೂಡ ಹಲವಾರು ಸಂದರ್ಭಗಳಲ್ಲಿ ನಾಮಪದಗಳ ಅರ್ಥವನ್ನು ಮತ್ತು ವಾಕ್ಯಗಳಲ್ಲಿ ಅವನ್ನು ಬಳಸುವ ಕ್ರಮವನ್ನು ಅವುಗಳ ಒಳರಚನೆಯ ಸಹಾಯದಿಂದ ಊಹಿಸಿಕೊಳ್ಳಲು ಬರುತ್ತದೆ ಸಾಮಾನ್ಯವಾಗಿ ನಮ್ಮ ಭಾಷೆಯಲ್ಲಿ ಬಳಕೆಯಾಗುವ ಎಲ್ಲಾ ಪದಗಳನ್ನು ನಾವು ತಿಳಿದಿರುವುದಿಲ್ಲ ಇದಲ್ಲದೆ ಗೊತ್ತಿದ್ದರೂ

ನೆನಪಿನಲ್ಲಿ ಉಳಿಯುವ ಪದಗಳ ಸಂಖ್ಯೆ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ ನಮಗೆ ಗೊತ್ತಿಲ್ಲದ ಇಲ್ಲವೇ ನೆನಪಿನಲ್ಲಿ ಇಲ್ಲದ ಪದಗಳನ್ನು ಬೇರೆ ಯಾರಾದರೂ ಬಳಸಿದಲ್ಲಿ ಅದರ ಅರ್ಥವೇನಿರಬಹುದು ಎಂಬುದನ್ನು ಸ್ವಲ್ಪ ಮಟ್ಟಿಗೆ ಅದನ್ನು ಬಳಸಿದ ಸಂದರ್ಭದ ಸಹಾಯದಿಂದ ಊಹಿಸಿಕೊಳ್ಳಬಹುದು ಮತ್ತು ಇನ್ನು ಸ್ವಲ್ಪ ಮಟ್ಟಿಗೆ ಅದರ ಒಳ ರಚನೆ ಏನು ಎಂಬುದನ್ನು ಕಂಡುಹಿಡಿಯಲು ಸಾಧ್ಯವಿದೆಯಾದರೆ ಅದರಿಂದಲೂ ಊಹಿಸಿಕೊಳ್ಳಬಹುದು ಈ ರೀತಿ ಭಾಷೆಯ ಸಾಮಾನ್ಯ ಬಳಕೆಯಲ್ಲಿ ಅದರಲ್ಲಿ ಬರುವ ನಾಮಪದಗಳ ಒಳ ರಚನೆ ಎಂತಹದ್ದು ಎಂಬುದನ್ನು ತಿಳಿದುಕೊಳ್ಳುವುದರಿಂದ ಜಾಸ್ತಿ ಪ್ರಯೋಜನವಿಲ್ಲವಾದರೂ ಬೇರೆ ಕೆಲವು ವಿಶಿಷ್ಟವಾದ ಬಳಕೆಯಲ್ಲಿ ಈ ತಿಳುವಳಿಕೆಗೆ ಹೆಚ್ಚಿನ ಮಹತ್ವವಿದೆ ಉದಾಹರಣೆಗಾಗಿ ಪದಗಳಿಗೆ ಹೊಸ ಹೊಸ ಬಳಕೆಗಳನ್ನು ಸಾಧಿಸಿಕೊಡಲು ಬಯಸುವ ಸೃಜನ ಪ್ರಿಯ ಮತ್ತು ಬರಹಗಾರರಿಗೆ ಅವುಗಳ ಒಳರಚನೆಯ ಅರಿವು ಸಹಾಯಕವಾಗಬಲ್ಲುದು ಶಾಸ್ತ್ರಗಳಲ್ಲಿ ಸಂಶೋಧನೆ ಮಾಡುವವರು

ಹೊಸ ಹೊಸ ವಿಷಯಗಳನ್ನು ಮತ್ತು ವಿಧಾನಗಳನ್ನು ಕಂಡುಹಿಡಿದಾಗ ಅವನ್ನು ವರ್ಣಿಸಲು ಹೊಸ ಹೊಸ ಪಾರಿಭಾಷಿಕ ಪದಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ ಮತ್ತು ಬೇರೆ ಭಾಷೆಗಳಿಂದ ಶಾಸ್ತ್ರ ಗ್ರಂಥಗಳನ್ನು ಮತ್ತು ಇತರ ಗ್ರಂಥಗಳನ್ನು ಅನುವಾದ ಮಾಡುವಾಗ ಅವುಗಳನ್ನು ಬರುವ ಪಾರಿಭಾಷಿಕ ಪದಗಳಿಗೆ ಸರಿಹೊಂದುವ ಪಾರಿಭಾಷಿಕ ಪದಗಳನ್ನು ತಮ್ಮ ಭಾಷೆಯಲ್ಲಿ ರಚಿಸಿಕೊಳ್ಳಬೇಕಾಗುತ್ತದೆ ಇದಲ್ಲದೆ ಹೊಸ ಹೊಸ ವಾರ್ತೆಗಳನ್ನು ಶೀಘ್ರವಾಗಿ ಬರೆದುಕೊಡಬೇಕಾಗಿರುವ ದಿನಪತ್ರಿಕೆಗಳ ವರದಿಗಾರರಿಗೂ ಸಂದರ್ಭಕ್ಕನುಸಾರವಾಗಿ ಹೊಸ ಹೊಸ ಪದಗಳನ್ನು ರಚಿಸಿಕೊಳ್ಳುವ ಅವಶ್ಯಕತೆ ಆಗಾಗ ತೋರಿ ಬರುತ್ತದೆ ಇಂತಹ ಸಂದರ್ಭಗಳಲ್ಲೆಲ್ಲ ಭಾಷೆಯನ್ನು ಬಳಸುವವರಿಗೆ ತಮ್ಮ ಭಾಷೆಯಲ್ಲಿ ಬರುವ ಪದಗಳ ಒಳ ರಚನೆ ಎಂತಹದು ಮತ್ತು ಅದರ ಹಿಂದಿರುವ ನಿಯಮಗಳೆಂತಹದ್ದು ಎಂಬ ವಿಷಯ ತಿಳಿದಿದೆಯಾದರೆ ಅವರ ಕೆಲಸ ಹೆಚ್ಚು ಸುಲಭವಾಗಲ್ಲದು ಮತ್ತು ಹೆಚ್ಚು ಫಲಕಾರಿಯಾಗಬಲ್ಲದು ಒಳ ರಚನೆ ಮತ್ತು ಚರಿತ್ರೆ ಪದಗಳ

ಒಳ ರಚನೆ ಎಂಬುದು ಮುಖ್ಯವಾಗಿ ಆ ಪದಗಳ ಚರಿತ್ರೆಯ ಮೇಲೆ ಅವಲಂಬಿಸಿರುತ್ತದೆ ಉದಾಹರಣೆಗಾಗಿ ಮೇಲೆ ವಿಳಿಸಿರುವ ಬೇರೆ ಬೇರೆ ರೀತಿಯ ಸಂದರ್ಭಗಳಲ್ಲಿ ಭಾಷೆಯೊಂದನ್ನು ಬಳಸುವ ಜನರಿಗೆ ಅವರೆದುರಿರುವ ವಸ್ತುಗಳನ್ನು ಇಲ್ಲವೇ ಅವರ ಮನಸ್ಸಿನಲ್ಲಿರುವ ವಿಷಯಗಳನ್ನು ಹೆಸರಿಸಲು ಸರಿಯಾದ ಪದ ಸಿಗದಿದ್ದಾಗ ಅವರು ತಮ್ಮ ಮನಸ್ಸಿನಲ್ಲಿರುವ ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟು ಸೇರಿಸಿ ಇಲ್ಲವೇ ಪದ ಒಂದಕ್ಕೆ ಒಂದೊ ಎರಡೋ ಪ್ರತ್ಯಯಗಳನ್ನು ಸೇರಿಸಿ ಹೊಸ ಹೆಸರು ಗಳನ್ನು ತಯಾರು ಮಾಡಿರಬೇಕು ಮುಂದೆ ಆ ಹೆಸರುಗಳು ಬೇರೆ ಬೇರೆ ಜನರ ಮಾತಿನಲ್ಲಿ ಸೇರಿಕೊಂಡು ಭಾಷೆಯ ಪದಗಳಾಗಿ ರೂಡಿಗೆ ಬಂದಿರಬೇಕು ಭಾಷೆಯೊಂದರಲ್ಲಿ ಕಾಣಿಸುವ ಒಳ ರಚನೆ ಇರುವ ಪದಗಳೆಲ್ಲವೂ ಇದೇ ರೀತಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ರಚಿತವಾಗಿ ಅನಂತರ ಬಳಕೆಯ ಮೂಲಕ ರೂಡಿಗೆ ಬಂದಿರುವ ಪದಗಳೆಂಬುದರಲ್ಲಿ

ಸಂಶಯವಿಲ್ಲ ಹಾಗಾಗಿ ಅವುಗಳ ರಚನೆ ಎಂಬುದು ಯಾರು ಯಾವ ಕಾರಣಕ್ಕಾಗಿ ಯಾವ ರೀತಿಯಲ್ಲಿ ಅವನ್ನು ಮೇಲೆ ಹೇಳಿದಂತೆ ರಚಿಸಿ ಬಳಕೆಗೆ ತಂದರು ಎಂಬ ಚಾರಿತ್ರಿಕ ಅಂಶದ ಮೇಲೆ ಅವಲಂಬಿಸಿದೆ ಎಂದು ಹೇಳಬಹುದು ಪದ ಒಂದನ್ನು ಬಳಕೆಗೆ ತಂದ ಸಮಯದಲ್ಲಿ ಈ ರೀತಿ ಅದರ ಒಳ ರಚನೆ ಮತ್ತು ಅದರ ಚರಿತ್ರೆ ಇವೆರಡು ಒಂದೇ ಆಗಿರುತ್ತವೆ ಆದರೆ ಕಾಲಕ್ರಮೇಣ ಅದರ ಬಳಕೆಯಾಗುತ್ತಿದ್ದಂತೆ ಈ ಚರಿತ್ರೆಗೂ ಮತ್ತು ಒಳ ರಚನೆಗೂ ನಡುವೆ ಹಲ ಕೆಲವು ವ್ಯತ್ಯಾಸಗಳು ಮೂಡಿಬರಲು ಸಾಧ್ಯವಿದೆ ಒಳ ರಚನೆ ಎಂಬುದು ಪದ ಒಂದಕ್ಕೆ ಭಾಷೆಯಲ್ಲಿ ಇವತ್ತು ಎಂತಹ ಸ್ಥಾನವಿದೆ ಅದಕ್ಕೂ ಮತ್ತು ಭಾಷೆಯ ಇತರ ಪದಗಳಿಗೂ ನಡುವೆ ಇವತ್ತು ಎಂತಹ ಸಂಬಂಧವಿದೆ ಎಂಬುದರ ಮೇಲು ಅವಲಂಬಿಸಿರಲು ಸಾಧ್ಯವೆ ಎಂಬುದೇ ಇದಕ್ಕೆ ಕಾರಣ ಒಂದು

ಭಾಷೆಯಲ್ಲಿರುವ ಪದಗಳು ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಬದಲಾವಣೆಗಳಿಗೆ ಒಳಗಾಗುತ್ತಿರುತ್ತವೆ ಈ ಬದಲಾವಣೆಗಳ ಫಲವಾಗಿ ಅವುಗಳಲ್ಲಿ ಕೆಲವು ಪದಗಳ ಒಳ ರಚನೆಯಲ್ಲಿ ಬಳಕೆಯಾದ ಪದಗಳು ಸಂಕ್ಷಿಪ್ತಗೊಂಡು ಪ್ರತ್ಯಯ ರೂಪವನ್ನು ಪಡೆದಿರಲು ಸಾಧ್ಯವಿದೆ ಮತ್ತು ಬೇರೆ ಕೆಲವು ಪದ ಇಲ್ಲವೇ ಪ್ರತ್ಯಯಗಳು ತಮ್ಮ ಪ್ರತ್ಯೇಕತೆಯನ್ನೇ ತೆಗೆದುಕೊಂಡು ಅಂತಹ ಪದಗಳಿಗೆ ಒಳ ರಚನೆ ಇದೆ ಎಂಬ ವಿಷಯವೇ ಗೊತ್ತಾಗದಂತೆ ಆಗಲು ಸಾಧ್ಯವಿದೆ ಎಂದರೆ ಈ ಎರಡನೇ ರೀತಿಯ ಪದಗಳಿಗೆ ಒಳ ರಚನೆ ಇತ್ತು ಎಂಬುದನ್ನು ಸಾಧಿಸಲು ಆ ಭಾಷೆಯಲ್ಲಿ ಯಾವ ಆಧಾರವು ಇಲ್ಲದಾಗಲು ಸಾಧ್ಯವಿದೆ ಉದಾಹರಣೆಗಾಗಿ ಎಣ್ಣೆ ಎಂಬ ಪದವನ್ನು ಚಾರಿತ್ರಿಕವಾಗಿ ಎಳ್ಳು ಮತ್ತು ನೆಯ ಎಂಬ ಎರಡು ಪದಗಳ ಸೇರಿಕೆಯಿಂದ ಸಿದ್ಧವಾದುದೆಂದು ಹೇಳಲು ಆಧಾರಗಳಿವೆ ಆದರೆ ಹೊಸಗನ್ನಡದಲ್ಲಿ ಎಳ್ಳು ಎಂಬ ಪದದ ಅರ್ಥ

ಈ ಎಣ್ಣೆ ಎಂಬ ಪದದಲ್ಲಿ ಸ್ವಲ್ಪವೂ ಉಳಿದಿಲ್ಲವಾದ ಕಾರಣ ಅದನ್ನು ಎಣ್ಣೆ ಎಂಬುದರ ಒಳ ರಚನೆಯಲ್ಲಿ ಬರುವ ಪದವೆಂದು ಹೇಳುವುದು ಕಷ್ಟ ಇದೇ ರೀತಿಯಲ್ಲಿ ತಮ್ಮ ತಂಗಿ ತಾಯಿ ತಂದೆ ಎಂಬಂತಹ ತಕಾರ ದಿಂದ ಪ್ರಾರಂಭವಾಗುವ ಸಂಬಂಧ ಸೂಚಕ ಪದಗಳಿಗೆ ಒಳ ರಚನೆಯೊಂದಿದೆ ಎಂಬುದನ್ನು ಚಾರಿತ್ರಿಕ ಆಧಾರದ ಮೇಲೆ ಮಾತ್ರವೇ ಹೇಳಲು ಸಾಧ್ಯ ಕನ್ನಡದ ಸಹೋದರ ಭಾಷೆಯಾದ ತಮಿಳಿನಲ್ಲಿ ಈ ಪದಗಳಿಗೆ ಮೂರು ಬೇರೆ ಬೇರೆ ರೂಪಗಳಿದ್ದು ತಕಾರದಲ್ಲಿ ಪ್ರಾರಂಭಿಸುವವುಗಳು ಅವುಗಳಲ್ಲೊಂದು ಮಾತ್ರ ತಮಿಳು ಕನ್ನಡ ಎಂದೈ ನನ್ನ ತಂದೆ ನುಂಗೈ ನಿನ್ನ ತಂದೆ ತಂದೈ ಅವನ ತಂದೆ ಯಂಗೈ ನನ್ನ ತಂಗಿ ನುಂಗೈ ನಿನ್ನ ತಂಗಿ ತಂಗೈ ಅವನ ತಂಗಿ ಈ ವಿಷಯದ ಆಧಾರದ ಮೇಲೆ ಕನ್ನಡದಲ್ಲಿಯೂ ಚಾರಿತ್ರಿಕವಾಗಿ ತಂದೆ ತಂಗಿ

ತಮ್ಮ ತಾಯಿ ಮೊದಲಾದ ಪದಗಳ ಆದಿಯಲ್ಲಿ ಬರುವ ತಮ್ ಇಲ್ಲವೇ ತ ಎಂಬುದು ತಾನು ಎಂಬ ಸರ್ವನಾಮದ ಸಂಕ್ಷಿಪ್ತ ರೂಪ ಎಂದು ವಾದಿಸಲು ಬರುತ್ತದೆ ಆದರೆ ಹೊಸಗನ್ನಡದಲ್ಲಿ ಈತ ಕಾರ ತಂದೆ ತಂಗಿ ತಮ್ಮ ಮೊದಲಾದ ಪದಗಳಲ್ಲಿ ಅವನ ಎಂಬ ಅರ್ಥವನ್ನು ಕೊಡುವುದಿಲ್ಲ ಮೊದಲಿದ್ದ ಮೂರು ರೂಪಗಳಲ್ಲಿ ಒಂದೇ ಉಳಿದು ಅದನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸುವ ಹಾಗಾಗಿರುವುದೇ ಇದಕ್ಕೆ ಕಾರಣ ಹಾಗಾಗಿ ಈ ಪದಗಳಿಗೆ ಹೊಸಗನ್ನಡದಲ್ಲಿ ಮೇಲೆ ಸೂಚಿಸಿದ ಒಳ ರಚನೆ ಇದೆ ಎಂದು ಹೇಳುವುದು ಕಷ್ಟ ಸಾಧ್ಯ ಕನ್ನಡದಲ್ಲಿ ಬರುವ ಪದಗಳ ಚರಿತ್ರೆ ಏನೆಂಬುದನ್ನು ತಿಳಿಯಲು ಅವನ್ನು ಹಳೆಗನ್ನಡ ಮತ್ತು ನಡುಗನ್ನಡಗಳಲ್ಲಿ ಮತ್ತು ಕನ್ನಡದ ಬೇರೆ ಬೇರೆ ಆಧುನಿಕ ಪ್ರಭೇದಗಳಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ಮತ್ತು ಸಹೋದರ ಭಾಷೆಗಳಾದ ತಮಿಳು ಮಲಯಾಳ

ತೆಲುಗು ತೊಳು ಗೋಂಡಿ ಕುಡುಕ್ ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿ ಅವುಗಳ ಸ್ವರೂಪ ಮತ್ತು ಪ್ರಯೋಗ ಹೇಗಿದೆ ಎಂಬುದನ್ನು ತಿಳಿಯುವುದು ಅವಶ್ಯ ಆದರೆ ಕನ್ನಡ ಪದಗಳ ಒಳ ರಚನೆ ಏನು ಎಂಬುದನ್ನು ಮುಖ್ಯವಾಗಿ ಅವು ಕನ್ನಡದಲ್ಲಿ ಇವತ್ತು ಹೇಗೆ ಮತ್ತು ಎಂತಹ ರೂಪಗಳಲ್ಲಿ ಪ್ರಯುಕ್ತವಾಗುತ್ತವೆ ಎಂಬುದರ ಮೇಲೆನೇ ಆಧರಿಸಿ ಹೇಳಬೇಕಾಗುತ್ತದೆ ಪದಗಳ ಚರಿತ್ರೆಗೂ ಮತ್ತು ಅವುಗಳ ಒಳ ರಚನೆಗೂ ಇರುವ ಈ ವ್ಯತ್ಯಾಸವನ್ನು ಗಮನದಲ್ಲಿ ಇರಿಸಿಕೊಳ್ಳುವುದು ಅವಶ್ಯ

ಅಧ್ಯಾಯ ಆರು - ಕ್ರಿಯಾಪದಗಳ ರಚನೆ

ಕನ್ನಡದಲ್ಲಿ ಕ್ರಿಯಾಪದಗಳನ್ನು ನಾಮಪದಗಳಂತೆಯೇ ಮುಖ್ಯವಾಗಿ ಎರಡು ವರ್ಗಗಳಿಗೆ ವಿಂಗಡಿಸಬಹುದು. ಉದಾಹರಣೆಗೆ, ಮುಂದು ಕ್ರಿಯಾಪದ, ಮಂದ ಎಂಬ ಗುಣಪದ, ಆಗ ಕ್ರಿಯಾಪದ, ಸೇವೆ ನಾಮಪದ, ಅಮಲ ನಾಮಪದ, ಇತ್ಯಾದಿ. ಇಸು ಎ ಪ್ರತ್ಯಯಗಳನ್ನು ಸೇರಿಸಿದರೆ, ನಾಮಪದಗಳಿಂದ ಕ್ರಿಯಾಪದಗಳನ್ನು ರೂಪಿಸಬಹುದು. ಕ್ರಿಯಾಪದಗಳ ಮುಖ್ಯ ಲಕ್ಷಣವೆಂದರೆ ರಚನೆ. ಕ್ರಿಯಾಪದಗಳ ಅರ್ಥವನ್ನು ಸಂದರ್ಭಗಳಲ್ಲಿ ನಿರ್ಣಯಿಸಲು ಈ ಅಂಗಗಳು ಪ್ರಯೋಜನಕಾರಿಯಾಗಿವೆ.

ಕವಚದ ಅಪವಾದವನ್ನು ಹೊರತುಪಡಿಸಿ, ರಚನೆಯಲ್ಲಿ ನಾಮಪದಗಳಿಗಿಂತ ಜೋಡಪದಗಳು ಮತ್ತು ಪದಗುಚ್ಛಗಳು ಭಿನ್ನವಾಗಿರುತ್ತವೆ. ರಚನೆಯ ಕ್ರಿಯಾಪದಗಳೂ ಸಹ ಕೆಲಸ ಮಾಡುವ ಕ್ರಿಯಾಪದಗಳು, ಕೆಲಸ ನಾಮಪದ ಇತ್ಯಾದಿ. ಕ್ರಿಯಾಪದಗಳ ರಚನೆಯು ಮಹತ್ವಪೂರ್ಣವಾದ ವಿಷಯವಾಗಿದೆ. ವಾಕ್ಯದಲ್ಲಿ ನಿರ್ದಿಷ್ಟ ಕೆಲಸಗಳನ್ನು ವಿವರಿಸುವುದಕ್ಕೆ ಮುಖ್ಯ ಕಾರಣ, ನಾಮಪದಗಳು ವ್ಯಕ್ತಿ-ವಸ್ತುಗಳನ್ನು ಸೂಚಿಸುವ ಕಾರಣ, ಅವುಗಳ ಮತ್ತೊಂದು ವರ್ಣನೆಯ ವಿಧಾನವು ಸಾಮಾನ್ಯವಾಗಿ ಇರುತ್ತದೆ. ಅವುಗಳನ್ನು ನಿರ್ದಿಷ್ಟವಾಗಿ ಗುರುತಿಸುವ ಕೆಲಸವನ್ನು ಮಾಡಿದಾಗ, ಪದಗಳು ರೂಪದಲ್ಲಿ ವ್ಯಕ್ತವಾಗುತ್ತವೆ.

ಮೊದಲ ಅಧ್ಯಾಯದಲ್ಲಿ ನೋಡಿದಂತೆ, ವಾಕ್ಯಗಳಲ್ಲಿ ಕ್ರಿಯಾಪದಗಳನ್ನು ಕೆಲಸ ಮಾಡುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಇದೆ. ವಾಕ್ಯದ ಪ್ರಧಾನ ಪದವಾಗಿ ವಿವಿಧ ಘಟನೆಗಳ ವರ್ಣನೆ ಮಾಡುತ್ತದೆ. ಇವೆಲ್ಲವುಗಳಲ್ಲಿ ಮೊದಲಿಗೆ ವಿವಿಧ ಮಾತುಗಳು, ಕೆಲಸಗಳು ಇತ್ಯಾದಿ ಪ್ರಸ್ತುತಪಡಿಸುವ ಕ್ರಿಯಾಪದಗಳಿವೆ. ಉದಾಹರಣೆಗೆ: “ರಾಜು ಪೇಟೆಗೆ ಹೋಗಿದ್ದಾನೆ”, “ರಾಜು ಪೇಟೆಗೆ ಹೋಗಿದ್ದೊಬ್ಬ”, “ರಾಜು ಪೇಟೆಗೆ ಹೋಗಲಿ”, “ರಾಜು ಪೇಟೆಗೆ ಹೋಗಬಾರದು” - ಇಂತಹ ವಿವಿಧ ಮಾತುಗಳಲ್ಲಿ ಘಟನೆ, ವ್ಯಕ್ತಿ, ವಸ್ತುಗಳು ಬದಲಾಗುವುದಿಲ್ಲ, ಆದರೆ ಅವುಗಳ ರೂಪ ಬದಲಾಗುತ್ತದೆ.

ವ್ಯಕ್ತಿ-ವಸ್ತುಗಳಿಗೆ ನಾಮಪದಗಳು ಮೂಲವಾಗಿರುವ ಹಾಗೆ, ಘಟನೆಗಳಿಗೆ ಕ್ರಿಯಾಪದಗಳು ಮೂಲವಾಗಿವೆ. ಹೆಸರುಗಳನ್ನು ನೀಡುವುದು ಸಾಧ್ಯವಾದರೂ, ವರ್ಣನೆ ಮಾಡುವುದು ಅವುಗಳಿಗೆ ಬೇಕಾದ ವಿಧಾನ. ಕಾಲ, ವಚನ ಇತ್ಯಾದಿ ಕ್ರಿಯಾಪದದ ಅರ್ಥವನ್ನು ನಿರ್ದೇಶಿಸುವ ಸಂದರ್ಭಗಳಲ್ಲಿ ನಿರ್ಣಯಿಸುವ ಅಂಗಗಳಾಗಿ ಪ್ರತ್ಯಯಗಳು ಅರ್ಥಪೂರ್ಣವಾಗಿ ಬಳಸಲ್ಪಡುತ್ತವೆ.

ನಾಮಪದಗಳಲ್ಲಿ ಪ್ರಮುಖವಾಗಿ ಯಾಂತ್ರಿಕ ನಾಮಗಳು ಮತ್ತು ರೂಢ ನಾಮಗಳು ಎಂದು ಎರಡು ವರ್ಗಗಳಿಗೆ ವಿಂಗಡಿಸಲಾಗಿದೆ. ಪ್ರತಿ ವ್ಯಕ್ತಿ-ವಸ್ತುವಿಗೆ ವಿವಿಧ ಸಂದರ್ಭ ಸಂಬಂಧಿತವಾಗಿ ಯಾಂತ್ರಿಕ ನಾಮಗಳನ್ನು ಕೊಡಬಹುದು. ಆದರೆ ಸಂಬಂಧವಿಲ್ಲದೆ ರೂಢ ನಾಮಗಳು ಎಂಬ ಮಾತುಗಳಿವೆ. ಕ್ರಿಯಾಪದಗಳನ್ನು ಇದೇ ರೀತಿ ಯಾಂತ್ರಿಕ ಕ್ರಿಯೆ ಮತ್ತು ರೂಢ ಕ್ರಿಯೆ ಎಂದು ವಿಂಗಡಿಸಬಹುದು.

ಕ್ರಿಯಾಪದಗಳಿಗೆ ಕಾಲ ಸೂಚಿಸುವ ನಿರ್ದೇಶನದ ಕ್ರಿಯಾಪದಗಳ ರೂಪಗಳು ಮುಖ್ಯ ಕಾರಣ. ಕ್ರಿಯಾಸಮಾಸ - ಕನ್ನಡದಲ್ಲಿ ಕ್ರಿಯಾಸಮಾಸ ಎಂಬ ವಿಶಿಷ್ಟ ಸಮಾಸವಿದೆ. ಕನ್ನಡ ವ್ಯಾಕರಣಶಾಸ್ತ್ರಜ್ಞರ ಅಭಿಪ್ರಾಯದ ಆಧಾರದ ಮೇಲೆ ನೀಡಲಾದ ಉದಾಹರಣೆಗಳಿಂದ, ಜೋಡಪದಗಳು, ಬರಹದ ಪದಗುಚ್ಛಗಳಲ್ಲಿ ಮಾತ್ರ ಹಿಂದಿನ ಅಧ್ಯಾಯದಲ್ಲಿ (5.88ನೇ ಪುಟ) ನೋಡಿದ ಸಮಾಸ ವ್ಯಾಕರಣ ವಿಧಾನ ನಾಮಪದಗಳ ತಯಾರಿಕೆಗೆ ಮಾತ್ರ ಬಳಸುತ್ತದೆ.

ಕ್ರಿಯಾಪದಗಳ ಮೂಲ ಘಟನೆಗಳು ಸಸ್ಯಾಧಾತ ಕಾಲಕ್ಕೆ ವಿರುದ್ಧವಾದ ಕಾರಣ, ತಯಾರಿಕೆಯ ಸಮಾಸ ವಿಧಾನಕ್ಕೆ ಯಾವ ಸ್ಥಾನವಿಲ್ಲ. ಕ್ರಿಯಾಪದಗಳು ಘಟನೆ ಭಾವವಾಗಿ ವ್ಯಕ್ತಿ-ವಸ್ತುಗಳನ್ನು ಸೂಚಿಸುತ್ತವೆ. ಕನ್ನಡದಲ್ಲಿ ನಾಮಪದಗಳಿಗೆ ಅನುಸಾರ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಕ್ರಮ ಇದೆ. ಆದರೆ ಪ್ರತ್ಯಯಗಳಿರುವ ನಾಮಪದಗಳು ಕ್ರಿಯಾಪದಗಳಾಗುವಾಗ, ಕ್ರಿಯಾಪದಕ್ಕೆ ನಾಮಪದಕ್ಕೆ ನಿರ್ದಿಷ್ಟ ಸಂಬಂಧ ನಿರೂಪಿಸುವಂತಹ ಪ್ರತ್ಯಯಗಳು ನಾಶವಾಗುತ್ತವೆ.

ಜಾಸ್ತಿ ವ್ಯಕ್ತಿಗಳನ್ನು ಸೂಚಿಸುವ ನಾಮಪದಗಳಲ್ಲಿ ಮಾತ್ರ ಈ ರೀತಿ ಅನುಯಾಯಿ ಪ್ರತ್ಯಯಗಳು ನಾಶವಾಗುವುದಿಲ್ಲ. ರಾಜು, ಸರಳೆ, ಮಗು, ವಿನೀತ ಇತ್ಯಾದಿ; ಅವಳು, ಅವನು, ಮೈಸೂರಿನವರು ಇತ್ಯಾದಿ - ಇವುಗಳಲ್ಲಿ “ಅನು” ಎಂಬ ಪ್ರತ್ಯಯ, ವ್ಯಕ್ತಿಯನ್ನು ಸೂಚಿಸುವ “ಮಗು” ಎಂಬ ಪದ ಬಂದ ಕಾರಣ ಕ್ರಿಯಾಪದದೊಂದಿಗೆ “ಇ” ಸೇರಿ ಹೋಗುವುದಿಲ್ಲ. ಆದರೆ ಇಲ್ಲಿ “ಕಲ್ಲು”, “ಆನೆ” ಎಂಬ ಪದಗಳು “ಇ” ಸೇರಿ ಹೋಗುತ್ತವೆ.

ನಾಮಪದಗಳು ವಾಕ್ಯದಲ್ಲಿ ಬಂದಾಗ ವಿವಿಧ ಕರ್ಮಗಳನ್ನು ಸೂಚಿಸಲು “ಅ” ಎಂಬ ಪ್ರತ್ಯಯ ಅಥವಾ ಮತ್ತೊಂದು “ಉ” ಪ್ರತ್ಯಯ ಸೇರಿಸಲ್ಪಡುತ್ತದೆ. ಯಾವ ವಿಭಕ್ತಿ ಪ್ರತ್ಯಯ ಪುನಃ ಮರುಪ್ರವೇಶಿಸುತ್ತದೋ ಅದು ನೋಡಬೇಕು. ಉದಾಹರಣೆ: “ರಾಜುವಿಂದ ಓದುಗ”, “ರಾಜು ಓದುತ್ತಾನೆ”, “ರಾಜು ಕುದುರೆ ನೋಡಿದ”, “ರಾಜು ಸ್ವಲ್ಪ ಪಾಠ ಓದಿದ”, “ರಾಜು ಸ್ವಲ್ಪ ಹೊತ್ತು ಪಾವನೀ ಮಾಡಿದ”, “ರಾಜು ಸ್ವಲ್ಪ ಹೊತ್ತು ಪಾಠ ಓದಿದ”.

ಕನ್ನಡದಲ್ಲಿ ಕೈ, ಮುಗಿ, ಕಲ್ಲು, ಮರ, ವೇರು, ಮರನು ಕರೆ, ನೀಡು, ಕರೆಯಿಸು, ನೀಡಿಸು ಇತ್ಯಾದಿ ಕ್ರಿಯಾಪದಗಳಲ್ಲಿ ಅನುಸಾರ ವಿಭಕ್ತಿ ಪ್ರತ್ಯಯಗಳು ನಾಶವಾಗುವ ಸಮಾಸಪದ ರಚನೆ ನಿಯಮವಿದೆ. ಮೇಲೆ ಸೂಚಿಸಿರುವ ವಾಕ್ಯ ರಚನೆ ನಿಯಮವೂ ಇದೇ ಸಾಧ್ಯತೆಯಿಂದ. ನಾಮಪದ, ಇವೆಲ್ಲ ಗುಣಪದ, ಕ್ರಿಯಾಪದ ಸೇರಿ ಜೋಡಪದವಾಗುವುದಕ್ಕೆ ಕಾರಣ ಕನ್ನಡದ ಜೋಡಪದ ಕರೆ ಕಿತ್ತುಕೊಂಡ ಪದ ಬಳಸುವುದನ್ನು ಇಲ್ಲಿ ನೋಡಬಹುದು. ಜೋಡಪದಗಳ ಬಳಕೆಯು ಅತ್ಯಂತ ಪ್ರಾಮುಖ್ಯವಾದ ಗುಣಧರ್ಮಗಳಲ್ಲೊಂದು.

ಕೊಡಪದಗಳಿಂದ ಬೇರೆ ಕೆಲವು ಕಣ್ಣಿಸುವ ಅವುಗಳು ಜೋಡಪದಗಳಿಗೆ ಭಿನ್ನವಾದ ಪರಿಗಣನೆಗೆ ಕಾರಣ. ರಚನೆಯಲ್ಲಿ ಕ್ರಿಯಾಪದಗಳನ್ನು ಮೇಲೆ ಸೂಚಿಸಿದ ಕ್ರಿಯಾಪದ ರಚನೆ ಅಥವಾ ಇದೇ ರಚನೆ ಇರುವಂತಹ ಕಲ್ಲಿ ಮರೆ ಮಾಡಬಹುದು.

ಕ್ರಿಯಾಪದಗಳನ್ನು ಕ್ರಿಯಾಧಾತು ಕರೆಯುವ ಪದಗಳ ಸಂಖ್ಯೆ ಮತ್ತು ಸ್ವರೂಪಗಳ ಆಧಾರದ ಮೇಲೆ ಮತ್ತು ಅವುಗಳ ಸ್ವರ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ವಿಂಗಡಿಸಬಹುದು. ಇದನ್ನು ಅವುಗಳಿಗೆ ವಿವಿಧ ಪ್ರತ್ಯಯಗಳ ಸ್ವರೂಪವನ್ನು ನಿರ್ಧರಿಸುವ ರೀತಿ. ಪ್ರತ್ಯಯಗಳನ್ನು ಸೇರಿಸಿದಾಗ, ಇವೆಲ್ಲ ಪ್ರತ್ಯಯಗಳಲ್ಲಿ ಯಾವ ಬದಲಾವಣೆಗಳನ್ನು ವರ್ಣಿಸುವುದು ಸಹಾಯಕವಾಗುತ್ತದೆ.

ಕ್ರಿಯಾಧಾತುಗಳನ್ನು ಕಾರದಲ್ಲಿ ಕೊನೆಯಾಗುವ, ಇ ಕಾರದಲ್ಲಿ ಕೊನೆಯಾಗುವ, ಉ ಕಾರದಲ್ಲಿ ಕೊನೆಯಾಗುವವು ಮುಖ್ಯ ವರ್ಗಗಳಿಗೆ ವಿಂಗಡಿಸಲಾಗಿದೆ. ಕನ್ನಡದಲ್ಲಿ ಮತ್ತೊಂದು ಪ್ರಮುಖವಾದ ವಿಧಾನವೆಂದರೆ ಅ ಕಾರ ಮತ್ತು ಇ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳಲ್ಲಿ ಅವುಗಳ ಕೊನೆಯ ಅಕ್ಷರಗಳು ಲಘುವಾಗಿರುವವು ಅಥವಾ ಗುರುವಾಗಿರುವವು.

ಉದಾಹರಣೆಗೆ, ಅ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳು: ಅಗೆ, ನವದು, ಕೊರೆ, ಅಲೆ, ಮಸೆ, ವಗೆ, ತಡ, ನೆನೆ, ಮರೆ, ಬೆಲೆ, ಯಸೆ, ನೆಗೆ, ವಡೆ, ಬರೆ, ಕೊಲೆ, ಸವೆ. ಇ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳು: ಅಡಿ, ತನಿ, ಹರಿ, ಕಲಿ, ಸವಿ, ಜಿಗಿ, ಕುಡಿ, ಮುನಿ, ಮುರಿ, ಉಲಿ, ಕವಿ, ಬಗಿ, ಕುದಿ, ಹನಿ, ಬಸಿ, ತೀವಿ. ಉ ಕಾರಾಂತ ಕ್ರಿಯಾಧಾತುಗಳಲ್ಲಿ ಮಾತ್ರ ಅಕ್ಷರ ಸಂಖ್ಯೆ ಮತ್ತು ಸ್ವರೂಪದಲ್ಲಿ ಯಾವ ಅಕ್ಷರವೂ ಒಂದು ಅಕ್ಷರವೇ ಇರುವವು ಲಘುವಾಗಿರುವವು ಇವೆ. ಎಂದರೆ ಮೊದಲ ಅಕ್ಷರವು ಗುರುವಾಗಿರುವ ಯಾವುದೇ ಅ, ಉ ಸ್ವರವಾಗಿರುವ, ಆ



Part 2

Watch on YouTube

Note: This transcript has not been cleaned and may contain errors.

ಪದಗಳು ಮತ್ತು ಇತರ ವ್ಯಾಖ್ಯಾಂಗಗಳು ವಾಕ್ಯ ಒಂದನ್ನು ಬೇರೆ ಬೇರೆ ಪದಗಳನ್ನಾಗಿ ಒಡೆಯಲು ಸಾಧ್ಯವಿದೆಯಾದ ಕಾರಣ ಪದಗಳನ್ನು ವಾಕ್ಯಾಂಗಗಳು ಎಂದರೆ ವಾಕ್ಯದ ಅಂಗಗಳು ಎಂಬುದಾಗಿ ಪರಿಗಣಿಸಲು ಸಾಧ್ಯವಿದೆ ಆದರೆ ವಾಕ್ಯಗಳಲ್ಲಿ ಪದಗಳು ಮಾತ್ರವಲ್ಲದೆ ಬೇರೆ ಅಂಗಗಳು ಬರುತ್ತವೆ ಉದಾಹರಣೆಗಾಗಿ ಈ ಕೆಳಗಿನ ವಾಕ್ಯ ಒಂದನ್ನು ಗಮನಿಸಬಹುದು ಒಂದು ಬಡ ಮುದುಕನನ್ನು ರಾಜು ಬಿಸಿನೀರಿನಲ್ಲಿ ಮೆಲ್ಲಗೆ ಮುಳುಗಿಸಿದ ಒಂದನೇ ವಾಕ್ಯದಲ್ಲಿ ಬಡ ಮುದುಕ ರಾಜು ಬಿಸಿ ನೀರು ಮೆಲ್ಲಗೆ ಮತ್ತು ಮುಳುಗಿಸು ಎಂಬ ಏಳು ಪದಗಳು ಅದರ ಅಂಗಗಳಾಗಿ ಬಂದಿವೆ ಆದರೆ ಈ ಪದಗಳು ಮೋದಕ ಎಂಬುದರೊಂದಿಗೆ ಅನ್ನು ಎಂಬ ದ್ವಿತೀಯ ವಿಭಕ್ತಿ ಪ್ರತ್ಯಯವು ನೀರು ಎಂಬುದರೊಂದಿಗೆ ಅಲ್ಲಿ ಎಂಬ ಸಪ್ತಮಿ ವಿಭಕ್ತಿ ಪ್ರತ್ಯಯವು ಮತ್ತು ಮುಳುಗಿಸು ಎಂಬುದರೊಂದಿಗೆ ದ ಎಂಬ ಕಾಲವಾಚಕ ಪ್ರತ್ಯಯ

ಮತ್ತು ಅ ಎಂಬ ಆಖ್ಯಾತ ಪ್ರತ್ಯಯ ಇವೆರಡು ಬಂದಿವೆ ಎಂಬುದನ್ನು ಗಮನಿಸಬಹುದು ಈ ಪ್ರತ್ಯಯಗಳು ವಾಕ್ಯದಲ್ಲಿ ಬರುವ ಬೇರೆ ಬೇರೆ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸುತ್ತಿದ್ದು ಅವುಗಳ ಪ್ರಯೋಗ ವಾಕ್ಯ ರಚನೆಯ ನಿಯಮಗಳನ್ನು ಅವಲಂಬಿಸಿದೆ ವಾಕ್ಯಗಳಲ್ಲಿ ಪದಗಳೊಂದಿಗೆ ಬರುವ ಈ ಪ್ರತ್ಯಯಗಳು ಪದಗಳ ಬೇರೆ ಬೇರೆ ರೂಪಗಳನ್ನು ಸಾಧಿಸುವಲ್ಲಿ ಪ್ರಯುಕ್ತವಾಗುವವು ಆದ ಕಾರಣ ಅವನ್ನು ಪದರೂಪ ಪ್ರತ್ಯಯಗಳೆಂದು ಕರೆಯಬಹುದು ಒಂದನೇ ವಾಕ್ಯದಲ್ಲಿ ಬರುವ ಪದರೂಪಗಳಿಂದ ಈ ಬೇರ್ಪಡಿಸಿದಾಗ ಉಳಿಯುವ ಅಂಶಗಳೇ ಪದಗಳು ಇಂತಹ ಪದಗಳನ್ನು ಇನ್ನೂ ಚಿಕ್ಕ ಅಂಗಗಳಾಗಿ ಒಡೆಯಲು ಸಾಧ್ಯವಿದೆ ಉದಾಹರಣೆಗಾಗಿ ಮುದುಕ ಎಂಬ ಪದವನ್ನು ಮುದಿ ಎಂಬ ಗುಣಪದಕ್ಕೆ ಕ ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ ಆದ ಕಾರಣ ಅದನ್ನು ಮುದಿ ಮತ್ತು ಕ ಎಂಬುದಾಗಿ ಒಡೆಯಲು

ಸಾಧ್ಯವಿದೆ ಇದೇ ರೀತಿಯಲ್ಲಿ ಮೆಲ್ಲಗೆ ಎಂಬುದನ್ನು ಮತ್ತು ಗೆ ಎಂಬುದಾಗಿಯೂ ಮುಳುಗಿಸು ಎಂಬುದನ್ನು ಮುಳುಗು ಮತ್ತು ಇಸು ಎಂಬುದಾಗಿಯೂ ಒಡೆಯಬಹುದು ಆದರೆ ಇಂತಹ ಒಡೆಯುವಿಕೆಗಳು ವಾಕ್ಯದಲ್ಲಿ ಬರುವ ಪದಗಳ ಒಡೆಯುವಿಕೆಗಳಲ್ಲದೆ ವಾಕ್ಯದ ಒಡೆಯುವಿಕೆಗಳಲ್ಲ ಇವುಗಳಲ್ಲಿ ಕಾಣಿಸುವ ಪ್ರತ್ಯಯಗಳು ಬೇರೆ ಬೇರೆ ರೀತಿಯ ಪದಗಳನ್ನು ತಯಾರಿಸುವಲ್ಲಿ ಬಳಕೆಯಾಗುವಾದ ಕಾರಣ ಅವನ್ನು ಪದ ಪ್ರತ್ಯಯಗಳೆಂದು ಕರೆಯಬಹುದು ಅವುಗಳ ಬಳಕೆ ಮೇಲೆ ಹೇಳಿದ ವಾಕ್ಯ ರಚನೆಯ ನಿಯಮಗಳಿಂದ ಭಿನ್ನವಾಗಿರುವ ಪದ ರಚನೆಯ ನಿಯಮಗಳನ್ನು ಅವಲಂಬಿಸಿದೆ ವಾಕ್ಯಗಳನ್ನು ಈ ರೀತಿ ಬೇರೆ ಬೇರೆ ಪದಗಳಾಗಿ ಒಡೆಯುವ ಬದಲು ಪದಗುಚ್ಚಗಳಾಗಿಯೂ ಒಡೆಯಲು ಸಾಧ್ಯವಿದೆ ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಒಂದನೇ ವಾಕ್ಯವನ್ನು ಏಳು ಬೇರೆ ಬೇರೆ ಪದಗಳಾಗಿ ವಿಭಜಿಸುವ ಬದಲು ಬಡಮುದಕ ರಾಜು ಬಿಸಿನೀರು ಮತ್ತು ಮೆಲ್ಲಗೆ ಮುಳುಗಿಸು ಎಂಬ ನಾಲ್ಕು

ವಾಕ್ಯಾಂಗಗಳಾಗಿಯೂ ವಿಭಜಿಸಲು ಸಾಧ್ಯವಿದೆ ಇವುಗಳಲ್ಲಿ ಬಳ ಮುದುಕ ಮತ್ತು ಬಿಸಿನೀರು ಎಂಬವುಗಳೆರಡು ನಾಮಪದ ಗುಚ್ಚಗಳು ಮತ್ತು ಮೆಲ್ಲಗೆ ಮುಳುಗಿಸು ಎಂಬುದೊಂದು ಕ್ರಿಯಾಪದ ಗುಚ್ಚ ಈ ರೀತಿ ಪದಗಳು ಪದಗುಚ್ಚಗಳಾಗಿ ಸೇರಿಕೊಳ್ಳುವುದು ಕೂಡ ವಾಕ್ಯ ರಚನೆಯ ನಿಯಮಗಳ ಅವಲಂಬಿಸಿದೆ ನಮ್ಮೆದುರಿರುವ ಒಂದು ವಾಕ್ಯಾಂಗ ಪದವೇ ಅಥವಾ ಪದಗುಚ್ಚವೇ ಎಂಬ ವಿಷಯದಲ್ಲಿ ಸಂದೇಹ ಉಂಟಾಗಲು ಸಾಧ್ಯವಿದೆ ಉದಾಹರಣೆಗಾಗಿ ಬಿಸಿನೀರು ಎಂಬುದು ಮೇಲಿನ ವಾಕ್ಯದಲ್ಲಿ ಕಾಣಿಸುವಂತೆ ಪದಗುಚ್ಚವಾಗಿ ಬಂದಿರಲು ಸಾಧ್ಯವಿದೆ ಇಲ್ಲವೇ ಜೋಡು ಪದವಾಗಿದ್ದು ಒಂದು ಪದವಾಗಿಯೂ ಬಂದಿರಲು ಸಾಧ್ಯ ಸಾಧ್ಯವಿದೆ ಸಾಮಾನ್ಯವಾಗಿ ವಾಕ್ಯಗಳನ್ನು ಬಳಸಿರುವ ಸಂದರ್ಭಗಳೇ ಇಂತಹ ಸಂದೇಹಗಳನ್ನು ನಿವಾರಿಸಲು ಶಕ್ತವಾಗಿರುತ್ತವೆ ಇದಲ್ಲದೆ ನಮ್ಮೆದುರಿರುವ ಪ್ರತ್ಯಯ ಒಂದನ್ನು ಪದ ಪ್ರತ್ಯಯವೆಂದು ಹೇಳಬೇಕೆ ಅಥವಾ ಪದರೂಪ ಪ್ರತ್ಯಯವೆಂದು ಹೇಳಬೇಕೆ ಎಂಬ ವಿಷಯದಲ್ಲೂ ಸಂದೇಹ ಉಂಟಾಗಲು ಸಾಧ್ಯವಿದೆ ಆದರೆ

ಇದು ಮುಖ್ಯವಾಗಿ ಒಬ್ಬ ವಯಾಕರಣಿಯ ಮನಸ್ಸಿನಲ್ಲಿ ಹೇಳಬಹುದಾದ ಸಂದೇಹವಾಗಿದ್ದು ಅದನ್ನು ಆತನು ತಯಾರಿಸುವ ವ್ಯಾಕರಣವೇ ನಿವಾರಿಸಬೇಕು ಪದಗಳು ಮತ್ತು ಶಬ್ದಗಳು ಸಂಸ್ಕೃತ ವ್ಯಾಕರಣದಲ್ಲಿ ಪದ ಮತ್ತು ಶಬ್ದ ಎಂಬ ಎರಡು ಬೇರೆ ಬೇರೆ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸುವ ಕ್ರಮವಿದೆ ಈ ಬಳಕೆಯನ್ನೇ ಅನುಸರಿಸಿ ಕನ್ನಡ ವ್ಯಾಕರಣಗಳಲ್ಲೂ ಪದ ಮತ್ತು ಶಬ್ದ ಎಂಬ ಈ ಎರಡು ಪದಗಳು ಬಳಕೆಗೆ ಬಂದಿವೆ ಸಂಸ್ಕೃತದಲ್ಲಿ ಪದ ಎಂಬುದಕ್ಕೆ ಹೆಚ್ಚಿನ ಸಂದರ್ಭಗಳಲ್ಲೂ ಶಬ್ದ ಎಂಬುದರ ಅರ್ಥವೇ ಇದೆ ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಕೆಲವು ವಿಶಿಷ್ಟವಾದ ಪ್ರತ್ಯಯಗಳೊಂದಿಗೆ ಬರುವ ಶಬ್ದ ಎಂಬ ಪ್ರತ್ಯೇಕವಾದ ಅರ್ಥವಿದೆ ಉದಾಹರಣೆಗಾಗಿ ಸುಕ್ತಿ ನಂತಮ್ ಪದಂ ಎಂಬ ಸೂತ್ರದ ಪ್ರಕಾರ ವಿಭಕ್ತಿ ಪ್ರತ್ಯಯ ಇಲ್ಲವೇ ಆಖ್ಯಾತ ಪ್ರತ್ಯಯದೊಂದಿಗೆ ಬಂದಿರುವುಗಳು

ಮಾತ್ರ ಸಂಸ್ಕೃತದಲ್ಲಿ ಪದಗಳೆಂದೆನಿಸಬಲ್ಲುವು ಬೇರೆ ಬೇರೆ ಪ್ರತ್ಯಯಗಳೊಂದಿಗೆ ಬಂದಿರುವ ಪದಗಳನ್ನು ಪದ ರೂಪಗಳೆಂದು ಕರೆಯಲು ಸಾಧ್ಯವಿದೆಯಾದ ಕಾರಣ ಮೇಲೆ ವಿವರಿಸಿರುವ ವಿಶಿಷ್ಟವಾದ ಅರ್ಥವನ್ನು ಸೂಚಿಸುವುದಕ್ಕಾಗಿ ಪದ ಮತ್ತು ಶಬ್ದ ಎಂಬ ಎರಡು ಬೇರೆ ಬೇರೆ ಪಾರಿಭಾಷಿಕ ಪದಗಳನ್ನು ಬಳಸುವ ಅವಶ್ಯಕತೆ ಇಲ್ಲ ಹಾಗಾಗಿ ಈ ಪುಸ್ತಕದಲ್ಲಿ ಎಲ್ಲಾ ಕಡೆಯಲ್ಲೂ ಪದ ಎಂಬುದನ್ನೇ ಬಳಸಲಾಗಿದೆ ಮರ ಎಂಬುದೊಂದು ಪದ ಅದಕ್ಕೆ ಮರಗಳು ಮರವನ್ನು ಮರಕ್ಕೆ ಮೊದಲಾದ ಪದ ರೂಪಗಳಿವೆ ಪದ ಮತ್ತು ಪದರೂಪಗಳು ಎರಡು ಬೇರೆ ಬೇರೆ ಸ್ಥರಗಳಿಗೆ ಸೇರುವಾದ ಕಾರಣ ಮರವನ್ನು ಮರಕ್ಕೆ ಮೊದಲು ಆದವುಗಳ ಹಾಗೆ ಮರ ಎಂಬುದು ಕೂಡ ಒಂದು ಪದ ರೂಪವೆಂದು ಹೇಳಬೇಕಾಗುತ್ತದೆ ಇವೆಲ್ಲಕ್ಕಿಂತ ಭಿನ್ನವಾದ ಮತ್ತು ಬೇರೊಂದು ಸ್ಥರದಲ್ಲಿ ಬರುವ ಮರ ಎಂಬುದೇ ಈ ಎಲ್ಲಾ ಪದ

ರೂಪಗಳಿಗೂ ಮೂಲವಾಗಿರುವ ಪದ ಎಂಬುದಾಗಿ ಪದ ಮತ್ತು ಪದರೂಪಗಳನ್ನು ಸೂಚಿಸಲು ಬೇರೆ ಬೇರೆ ರೀತಿಯ ಅಕ್ಷರಗಳನ್ನು ಬಳಸಿದಲ್ಲಿ ಈ ವಿಷಯ ಹೆಚ್ಚು ಸ್ಪಷ್ಟವಾದೀತು ಇಂತಹ ವಿಧಾನ ವನ್ನು ಇಲ್ಲಿ ಬಳಸಲಿಲ್ಲವಾದರೂ ಪದ ಮತ್ತು ಪದರೂಪಗಳ ನಡುವೆ ಸ್ಥರದ ವಿಷಯದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳುವುದು ಅವಶ್ಯ ಅರ್ಥಗಳು ಬೇರೆ ಬೇರೆ ಇದ್ದು ರೂಪ ಒಂದೇ ಇರುವ ಪದಗಳು ಹಲವು ಕನ್ನಡದಲ್ಲಿವೆ ಉದಾಹರಣೆಗಾಗಿ ಕರೆ ಎಂಬ ಒಂದೇ ರೂಪದಲ್ಲಿ ಹಾಲನ್ನು ಕರೆ ಮತ್ತು ರಾಜುವನ್ನು ಕರೆ ಎಂಬ ಎರಡು ಪ್ರಯೋಗ ಗಳಲ್ಲಿ ಕಾಣಿಸುವಂತೆ ಬೇರೆ ಬೇರೆ ಅರ್ಥಗಳನ್ನು ಕೊಡುವ ಪದಗಳಿವೆ ಇದೇ ರೀತಿಯಲ್ಲಿ ಎಳೆ ಎಂಬ ರೂಪದಲ್ಲಿ ಎಳೆಯದು ಮತ್ತು ಎಳೆಯುವುದು ಎಂಬ ಎರಡು ಬೇರೆ ಬೇರೆ ಅರ್ಥಗಳನ್ನು ಕೊಡುವ ಪದಗಳಿವೆ ಇಂತಹ ಪದಗಳನ್ನು

ಕೆಲವು ಅರ್ಥಕೋಶ ಗಳಲ್ಲಿ ಒಂದೇ ಪದವೆಂದು ಕಾಣಿಸಿರಬಹುದು ಆದರೆ ಸಂಕ್ಷಿಪ್ತತೆಗಾಗಿ ಹೀಗೆ ಮಾಡಲಾಗುತ್ತದೆ ಅಲ್ಲದೆ ಇಂತಹವನ್ನು ಒಂದೇ ಪದವೆಂದು ಪರಿಗಣಿಸುವ ರೂಢಿ ಇಲ್ಲ ಇದಕ್ಕೆ ಬದಲು ಹಲವು ಅರ್ಥಗಳಿರುವ ಪದಗಳು ಕನ್ನಡದಲ್ಲಿ ಹಲವಿವೆ ನಿಜಕ್ಕೂ ಭಾಷೆಯೊಂದರಲ್ಲಿ ಬರುವ ಹೆಚ್ಚಿನ ಪದಗಳಿಗೂ ಒಂದಕ್ಕಿಂತ ಜಾಸ್ತಿ ಅರ್ಥಗಳಿವೆ ಎಂದು ಹೇಳಲು ಸಾಧ್ಯವಿದೆ ಆದರೆ ಎರಡು ಅರ್ಥಗಳಿರುವ ಒಂದು ಪದಕ್ಕೂ ಮತ್ತು ಒಂದೇ ರೂಪದಲ್ಲಿರುವ ಎರಡು ಪದಗಳಿಗೂ ನಡುವಿರುವ ವ್ಯತ್ಯಾಸ ಅಷ್ಟೊಂದು ಸ್ಪಷ್ಟವಾಗಿ ಆದುದ್ದೇನಲ್ಲ ಸಾಮಾನ್ಯವಾಗಿ ಒಂದು ಪದಕ್ಕೆ ಇರುವ ಎರಡು ಅರ್ಥಗಳನ್ನು ಸಂಬಂಧಿಸಲು ಸಾಧ್ಯವಾಗದಿದ್ದಲ್ಲಿ ಇಲ್ಲದೆ ಚಾರಿತ್ರಿಕವಾಗಿ ಅವು ಬೇರೆ ಬೇರೆ ಮೂಲಗಳಿಂದ ಬಂದಿವೆ ಆದಲ್ಲಿ ಅವನು ಬೇರೆ ಬೇರೆ ಪದಗಳಿಗೆ ಸೇರಿದವುಗಳೆಂದು ಹೇಳುವುದು ರೂಢಿ ಧಾತು ಎಂಬ ಇನ್ನೊಂದು ಪದವು ವ್ಯಾಕರಣಗಳಲ್ಲಿ ಪದಗಳನ್ನು ಹೆಸರಿಸಲು

ಪ್ರಯುಕ್ತವಾಗುತ್ತದೆ ಒಳರಚನೆ ಇಲ್ಲದ ಪದಗಳನ್ನು ಇತರ ಒಳರಚನೆ ಇರುವ ಪದಗಳಿಂದ ಪ್ರತ್ಯೇಕಿಸಲು ಈ ಧಾತು ಎಂಬ ಪಾರಿಭಾಷಿಕ ಪದವನ್ನು ಬಳಸಬಹುದು ಸಂಸ್ಕೃತದಲ್ಲಿ ಹೆಚ್ಚಿನ ಪದಗಳು ಕೆಲವರ ಅಭಿಪ್ರಾಯದಂತೆ ಎಲ್ಲಾ ಪದಗಳು ಕ್ರಿಯಾಪದಗಳಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಇಲ್ಲವೇ ಪದಗಳನ್ನು ಸೇರಿಸುವುದರ ಮೂಲಕ ಸಿದ್ಧವಾಗುವಾದ ಕಾರಣ ಆ ಭಾಷೆಯಲ್ಲಿ ಒಳ ರಚನೆ ಇಲ್ಲದ ಪದಗಳೆಲ್ಲವೂ ಕ್ರಿಯಾಪದಗಳೇ ಆಗಿದ್ದು ಧಾತು ಎಂಬ ಪದಕ್ಕೆ ಒಳ ರಚನೆ ಇಲ್ಲದ ಕ್ರಿಯಾಪದ ಎಂಬ ವಿಶಿಷ್ಟವಾದ ಅರ್ಥ ಸಿದ್ಧಿಸಿದೆ ಆದರೆ ಕನ್ನಡದಲ್ಲಿ ನಾಮಪದ ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬೇರೆ ಬೇರೆ ರೀತಿಯ ಒಳರಚನೆ ಇಲ್ಲದ ಪದಗಳಿವೆ ಆದ ಕಾರಣ ಧಾತು ಎಂಬ ಪದವನ್ನು ಬಳಸುವುದಿದ್ದರೆ ಅದನ್ನು ಈ ಮೂರು ರೀತಿಯ ಪದಗಳಿಗೂ ಅನ್ವಯಿಸುವಂತೆ ಬಳಸುವುದು ಅವಶ್ಯ ಇದಲ್ಲದೆ ಸಂಸ್ಕೃತದಲ್ಲಿ

ಕ್ರಿಯಾ ಧಾತುಗಳನ್ನು ಹಾಗೆಯೇ ವಾಕ್ಯಗಳಲ್ಲಿ ಬಳಸಲು ಬರುವುದಿಲ್ಲ ಇದಕ್ಕಾಗಿ ಅವಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆ ಇದೆ ಈ ಕಾರಣಕ್ಕಾಗಿ ಸಂಸ್ಕೃತ ವ್ಯಾಕರಣದಲ್ಲಿ ಕ್ರಿಯಾ ಧಾತುಗಳನ್ನು ಕ್ರಿಯಾಪದಕ್ಕಿಂತ ಭಿನ್ನವಾದುವೆಂದು ಪರಿಗಣಿಸುವ ಅವಶ್ಯಕತೆ ಕಂಡುಬರುತ್ತದೆ ಆದರೆ ಕನ್ನಡದಲ್ಲಿ ಕ್ರಿಯಾ ಧಾತು ನಾಮ ಧಾತು ಮತ್ತು ಗುಣ ಧಾತುಗಳನ್ನು ಅವಕ್ಕೆ ಯಾವ ಪ್ರತ್ಯಯವನ್ನು ಸೇರಿಸದೆ ಹಾಗೆಯೇ ಬಳಸಲು ಸಾಧ್ಯವಿದೆ ಹಾಗಾಗಿ ಒಳ ರಚನೆ ಇಲ್ಲದ ನಾಮಪದ ಕ್ರಿಯಾಪದ ಮತ್ತು ಗುಣಪದಗಳಿಗೂ ಮತ್ತು ನಾಮ ಧಾತು ಕ್ರಿಯಾ ಧಾತು ಮತ್ತು ಗುಣ ಧಾತುಗಳಿಗೂ ನಡುವೆ ಕನ್ನಡದಲ್ಲಿ ಯಾವ ವ್ಯತ್ಯಾಸವೂ ಇಲ್ಲ ನಿಜಕ್ಕೂ ಕನ್ನಡ ವ್ಯಾಕರಣದಲ್ಲಿ ಧಾತು ಎಂಬ ಈ ಪಾರಿಭಾಷಿಕ ಪದವನ್ನು ಬಳಸದಿರಲು ಸಾಧ್ಯವಿದೆ



Part 3

Watch on YouTube

ಈ ಭಾಗ ಪುಸ್ತಕದ ೧.೪: ಪದಗಳು ಮತ್ತು ಒಟ್ಟುಗಳು ಅನ್ನು ಆಧರಿಸಿದೆ.

ಪದವೊಂದರ ಅಂಗಗಳಾಗಿ ಎರಡು ಪದಗಳು ಬಂದಿರಬಹುದು (ಚಿಕ್ಕ+ಅಮ್ಮ > ಚಿಕ್ಕಮ್ಮ), ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು ಬಂದಿರಬಹುದು (ಎಚ್ಚರ+ಇಕೆ > ಎಚ್ಚರಿಕೆ) ಎಂಬುದನ್ನು ಮೇಲೆಯೇ ನೋಡಿರುವೆವು. ಇದಲ್ಲದೆ, ಪದವೊಂದರ ಅಂಗಗಳಾಗಿ ಎರಡು ಪದಗಳು ಮಾತ್ರವಲ್ಲದೆ ಒಂದು ಒಟ್ಟು ಬಂದಿರಬಹುದು (ಹಣೆ+ಕಣ್ಣು+ಅ > ಹಣೆಗಣ್ಣ). ಆದರೆ, ಎರಡಕ್ಕಿಂತ ಹೆಚ್ಚು ಪದಗಳು ಇಲ್ಲವೇ ಒಂದಕ್ಕಿಂತ ಹೆಚ್ಚು ಒಟ್ಟುಗಳು ಪದವೊಂದರ ಅಂಗಗಳಾಗಿ ಬರುವುದು ಕನ್ನಡದ ಮಟ್ಟಿಗೆ ಅಪರೂಪವೆಂದೇ ಹೇಳಬಹುದು. ಒಳರಚನೆಯಿರುವ ಒಂದು ಪದದಲ್ಲಿ ಎರಡು ಪದಗಳು ಒಟ್ಟುಸೇರಿವೆಯೇ ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು…



Part 4

Watch on YouTube

ಈ ಭಾಗ ಪುಸ್ತಕದ ೧.೫: ಪದದೊಟ್ಟುಗಳು ಮತ್ತು ಪದರಪದೊಟ್ಟುಗಳು ಅನ್ನು ಆಧರಿಸಿದೆ.

ನುಡಿಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಒಟ್ಟುಗಳು ಬಳಕೆಯಲ್ಲಿರುತ್ತವೆ: ಪದಗಳನ್ನು ತಯಾರಿಸುವಲ್ಲಿ (ಎಂದರೆ ಅವುಗಳ ಒಳರಚನೆಯಲ್ಲಿ) ಬರು ವವುಗಳು ಒಂದು ಬಗೆಯವುಗಳಾದರೆ, ಪದಗಳ ಬೇರೆ ಬೇರೆ ರೂಪಗಳನ್ನು ತಯಾರಿಸುವಲ್ಲಿ ಬರುವವುಗಳು ಇನ್ನೊಂದು ಬಗೆಯವು. ಇವನ್ನು ‘ಪದದೊಟ್ಟು’ ಮತ್ತು ‘ಪದರೂಪದೊಟ್ಟು’ ಎಂಬುದಾಗಿ ಕರೆಯಬಹುದು. ಎತ್ತುಗೆಗಾಗಿ ಕುಣಿತ ಪದದ ಒಳರಚನೆಯಲ್ಲಿ ಕಾಣಿಸುವ ತ ಎಂಬುದು ಪದವೊಂದನ್ನು ತಯಾರಿಸುವಲ್ಲಿ ಬಳಕೆಯಾಗುವ ಪದದೊಟ್ಟು. ಈ ಒಟ್ಟನ್ನು ಕುಣಿ ಎಸಕಪದಕ್ಕೆ ಸೇರಿಸುವ ಮೂಲಕ ಕುಣಿತ ಹೆಸರುಪದವನ್ನು ತಯಾರಿಸಲಾಗಿದೆ. ಮೆಟ್ಟಲು ಎಂಬುದರಲ್ಲಿ ಕಾಣಿಸುವ ಅಲು ಎಂಬುದು ಇನ್ನೊಂದು ಪದದೊಟ್ಟು. ಈ ಒಡ್ಡನ್ನು ಮೆಟ್ಟು ಎಸಕಪದಕ್ಕೆ…



Part 5

Watch on YouTube

ಈ ಭಾಗ ಪುಸ್ತಕದ ೧.೫: ಪದದೊಟ್ಟುಗಳು ಮತ್ತು ಪದರಪದೊಟ್ಟುಗಳು ಅನ್ನು ಆಧರಿಸಿದೆ.

ನುಡಿಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಒಟ್ಟುಗಳು ಬಳಕೆಯಲ್ಲಿರುತ್ತವೆ: ಪದಗಳನ್ನು ತಯಾರಿಸುವಲ್ಲಿ (ಎಂದರೆ ಅವುಗಳ ಒಳರಚನೆಯಲ್ಲಿ) ಬರು ವವುಗಳು ಒಂದು ಬಗೆಯವುಗಳಾದರೆ, ಪದಗಳ ಬೇರೆ ಬೇರೆ ರೂಪಗಳನ್ನು ತಯಾರಿಸುವಲ್ಲಿ ಬರುವವುಗಳು ಇನ್ನೊಂದು ಬಗೆಯವು. ಇವನ್ನು ‘ಪದದೊಟ್ಟು’ ಮತ್ತು ‘ಪದರೂಪದೊಟ್ಟು’ ಎಂಬುದಾಗಿ ಕರೆಯಬಹುದು. ಎತ್ತುಗೆಗಾಗಿ ಕುಣಿತ ಪದದ ಒಳರಚನೆಯಲ್ಲಿ ಕಾಣಿಸುವ ತ ಎಂಬುದು ಪದವೊಂದನ್ನು ತಯಾರಿಸುವಲ್ಲಿ ಬಳಕೆಯಾಗುವ ಪದದೊಟ್ಟು. ಈ ಒಟ್ಟನ್ನು ಕುಣಿ ಎಸಕಪದಕ್ಕೆ ಸೇರಿಸುವ ಮೂಲಕ ಕುಣಿತ ಹೆಸರುಪದವನ್ನು ತಯಾರಿಸಲಾಗಿದೆ. ಮೆಟ್ಟಲು ಎಂಬುದರಲ್ಲಿ ಕಾಣಿಸುವ ಅಲು ಎಂಬುದು ಇನ್ನೊಂದು ಪದದೊಟ್ಟು. ಈ ಒಡ್ಡನ್ನು ಮೆಟ್ಟು ಎಸಕಪದಕ್ಕೆ…



Part 6

Watch on YouTube

Note: This transcript has not been cleaned and may contain errors.

ಬಳಕೆಯಲ್ಲಿ ಇಲ್ಲದ ಪದಗಳು ಪದ ಪ್ರತ್ಯಯಗಳ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಈ ಎರಡು ಕಾರ್ಯಗಳು ಬೇರೆ ಬೇರೆಯಾಗಿವೆ ಆದ ಕಾರಣ ಅವನ್ನು ಒಳಗೊಂಡಿರುವ ಪದಗಳು ವ್ಯಾಕರಣದ ಮಟ್ಟಿಗೆ ನಿಯಮಬದ್ಧವಾಗಿವೆ ಆದರೂ ಬಳಕೆಯಲ್ಲಿ ಇಲ್ಲದವುಗಳಾಗಿರಲು ಸಾಧ್ಯವಿದೆ ಉದಾಹರಣೆಗಾಗಿ ಕನ್ನಡದಲ್ಲಿ ತ ಎಂಬ ಪದ ಪದ ಪ್ರತ್ಯಯವನ್ನು ಈ ಕಾರಾಂತ ಮತ್ತು ಏಕಾರಾಂತ ಕ್ರಿಯಾಪದಗಳಿಗೆ ಸೇರಿಸಿ ನಾಮಪದಗಳನ್ನು ರಚಿಸಲು ಸಾಧ್ಯವಿದೆ ಈ ವ್ಯಾಕರಣ ನಿಯಮದ ಪ್ರಕಾರ ಕುಡಿತ ದುಡಿತ ನೆಗೆ ತದೆ ತ ಮೊದಲಾದ ಬಳಕೆಯಲ್ಲಿರುವ ಪದಗಳನ್ನು ಮಾತ್ರವಲ್ಲದೆ ಅಗಿತ ಹುರಿತ ಕರೆತ ಅಳೆತ ಮೊದಲಾದ ಬಳಕೆಯಲ್ಲಿಲ್ಲದ ಪದಗಳನ್ನು ರಚಿಸಲು ಸಾಧ್ಯವಿದೆ ವ್ಯಾಕರಣದ ಒಟ್ಟಿಗೆ ಈ ಪದಗಳು ನಿಯಮಬದ್ಧಗಳೆಂದು ಹೇಳಲು ಸಾಧ್ಯವಿದೆಯಾದರೂ ಅವು ಬಳಕೆಯಲ್ಲಿ ಬಂದಿಲ್ಲವಾದ ಕಾರಣ ಸಾಮಾನ್ಯವಾಗಿ ನಾವು ಅವನ್ನು ನಮ್ಮ

ಭಾಷೆಯಲ್ಲಿ ಬಳಸುವುದಿಲ್ಲ ಈ ರೀತಿ ಪದ ಪ್ರತ್ಯಯಗಳನ್ನು ಬಳಸುವಲ್ಲಿ ಒಂದು ಬಳಕೆಯಲ್ಲಿರುವವುಗಳು ಕುಡಿತ ಎರಡು ಬಳಕೆಯಲ್ಲಿ ಇಲ್ಲದವುಗಳು ಹುರಿತ ಮತ್ತು ಮೂರು ನಿಯಮಬದ್ಧವಲ್ಲದವುಗಳು ನಡುತಾ ಕೊಲ್ಲುತಾ ಎಂಬುದಾಗಿ ಮೂರು ರೀತಿಯ ಪ್ರಯೋಗಗಳನ್ನು ಕಾಣಲು ಸಾಧ್ಯವಿದೆ ಆದರೆ ಪದರೂಪ ಪ್ರತ್ಯಯಗಳನ್ನು ಬಳಸುವಲ್ಲಿ ನಿಯಮಬದ್ಧವಾದವುಗಳು ಮತ್ತು ನಿಯಮಬದ್ಧ ವಲ್ಲದವುಗಳು ಎಂಬುದಾಗಿ ಎರಡು ರೀತಿಯ ಪ್ರಯೋಗಗಳನ್ನು ಮಾತ್ರ ಕಾಣಲು ಸಾಧ್ಯ ಉದಾಹರಣೆಗಾಗಿ ಅಲಿ ಎಂಬ ಪದ ರೂಪ ಪ್ರತ್ಯಯವನ್ನು ಕ್ರಿಯಾಪದಗಳಿಗೆ ಮಾತ್ರ ಸೇರಿಸಲು ಸಾಧ್ಯ ಎಂಬ ನಿಯಮ ಹೊಂದಿದೆ ಈ ನಿಯಮದ ಪ್ರಕಾರ ಹೋಗಲಿ ಬರಲಿ ಹೇಳಲಿ ಮೊದಲಾದ ಪದ ರೂಪಗಳು ನಿಯಮಬದ್ಧವಾದವುಗಳು ಇದೇ ಪ್ರತ್ಯಯವನ್ನು ನಾಮ ಪದಗಳಿಗೆ ಇಲ್ಲವೇ ಗುಣವಾಚಕ ಪದಗಳಿಗೆ ಸೇರಿಸಿದಲ್ಲಿ ಉದಾಹರಣೆಗೆ ಹಗಲಲಿ ಕೆಂಪಲಿ ಇತ್ಯಾದಿ ಅಂತಹ ಪದ ರೂಪಗಳನ್ನು ವ್ಯಾಕರಣದ ಮಟ್ಟಿಗೆ

ನಿಯಮಬದ್ಧವಲ್ಲದವೆಂದು ಹೇಳಬೇಕಾದೀತು ಈ ಪದರೂಪ ಪ್ರತ್ಯಯದ ಪ್ರಯೋಗದಲ್ಲಿ ಉತ್ಪಾದನೆ ಮತ್ತು ಬಳಕೆಯೊಳಗೆ ವ್ಯತ್ಯಾಸವಿಲ್ಲ ಉತ್ಪಾದಿಸಲು ಸಾಧ್ಯವಿರುವ ರೂಪಗಳೆಲ್ಲವೂ ಬಳಕೆಯಲ್ಲಿರುವವುಗಳೇ ಉತ್ಪಾದಕ ಮತ್ತು ಅನುತ್ಪಾದಕ ರಚನೆಗಳು ಪದಗಳ ಒಳ ರಚನೆ ಪದರೂಪಗಳ ಒಳ ರಚನೆಯಷ್ಟು ನಿಯಮಬದ್ಧವಲ್ಲವೆಂಬುದನ್ನು ಮೇಲೆ ನೋಡಿರುವೆವು ಹೀಗಿದ್ದರೂ ಪದಗಳಲ್ಲಿ ಕಾಣಿಸುವ ಒಳ ರಚನೆಗಳಲ್ಲಿ ಕೆಲವನ್ನು ಉತ್ಪಾದಕಗಳೆಂದು ಮತ್ತು ಇನ್ನು ಕೆಲವನ್ನು ಉತ್ಪಾದಕಗಳೆಂದು ವಿಭಜಿಸಿ ಹೇಳಲು ಸಾಧ್ಯವಿದೆ ಸಾಮಾನ್ಯವಾಗಿ ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸುವಂತಹ ಒಳ ರಚನೆಗಳು ಅನುತ್ಪಾದಕಗಳೆಂದು ಮತ್ತು ಜಾಸ್ತಿ ಪದಗಳಲ್ಲಿ ಕಾಣಿಸುವವುಗಳು ಉತ್ಪಾದಕಗಳೆಂದು ಹೇಳಬಹುದು ಹೊಸ ಹೊಸ ಪದಗಳನ್ನು ತಯಾರಿಸಬೇಕಾಗಿರುವ ಸಂದರ್ಭಗಳಲ್ಲಿ ಉದಾಹರಣೆಗಾಗಿ ಹೊಸ ಪಾರಿಭಾಷಿಕ ಪದಗಳನ್ನು ತಯಾರಿಸಬೇಕಾಗಿರುವ ಸಂದರ್ಭಗಳಲ್ಲಿ ಈ ರೀತಿ ಉತ್ಪಾದಕಗಳಾಗಿರುವ ಒಳ ರಚನೆಗಳನ್ನು ಬಳಸಿಕೊಂಡೆವಾದರೆ ಅಂತಹ ಪದಗಳು ಹೆಚ್ಚು ಸುಲಭವಾಗಿ ಭಾಷೆಯಲ್ಲಿ ಬಳಕೆಗೆ ಬರಲು ಸಾಧ್ಯವಿದೆ

ಅನುತ್ಪಾದಕ ರಚನೆಗಳನ್ನು ಬಳಸಿ ರಚಿಸಿದ ಪದಗಳು ಓದುಗರಿಗೆ ಸ್ವಲ್ಪ ಮಟ್ಟಿಗೆ ಕ್ಲಿಷ್ಟವಾದುವೆಂದು ತೋರಲು ಸಾಧ್ಯವಿದೆ ಮತ್ತು ಈ ಕಾರಣಕ್ಕಾಗಿ ಅವು ಭಾಷೆಯಲ್ಲಿ ರೂಡಿಗೆ ಬರದಿರಲು ಸಾಧ್ಯವಿದೆ ಉದಾಹರಣೆಗಾಗಿ ಕನ್ನಡದ ಜೋಡು ಪದಗಳಲ್ಲಿ ಎರಡಕ್ಕಿಂತ ಜಾಸ್ತಿ ಅಂಗಗಳಿರುವುದು ಬಹಳ ಅಪರೂಪ ಹಾಗಾಗಿ ಅಂತಹ ಜೋಡು ಪದಗಳ ಒಳ ರಚನೆ ಕನ್ನಡದ ಮಟ್ಟಿಗೆ ಅನುತ್ಪಾದಕವೆಂದು ಹೇಳಬಹುದು ಪಾರಿಭಾಷಿಕ ಪದಗಳನ್ನು ರಚಿಸುವವರು ಎರಡಕ್ಕಿಂತ ಜಾಸ್ತಿ ಪದಗಳನ್ನು ಸೇರಿಸಿ ಉದ್ದುದ್ದವಾದ ಪದಗಳನ್ನು ತಯಾರಿಸಿ ಹಾಕಿದಲ್ಲಿ ಅವು ಕನ್ನಡದಲ್ಲಿ ಬಳಕೆಗೆ ಬರುವುದು ಸ್ವಲ್ಪ ಕಷ್ಟ ಇದೇ ರೀತಿಯಲ್ಲಿ ಕನ್ನಡದಲ್ಲಿರುವ ಜೋಡು ಪದಗಳಲ್ಲಿ ಎರಡನೆಯ ಅಂಗ ನಾಮಪದವಾಗಿರುವುದೇ ಜಾಸ್ತಿ ಕ್ರಿಯಾಪದ ಇಲ್ಲವೇ ಗುಣಪದಗಳು ಅವುಗಳ ಎರಡನೇ ಅಂಗವಾಗಿ ಬರುವುದು ಅಪರೂಪ ಹಾಗಾಗಿ ಅಂತಹ ಜೋಡು ಪದಗಳ ಒಳ ರಚನೆ ಕನ್ನಡದ ಮಟ್ಟಿಗೆ

ಅನುತ್ಪಾದಕವೆಂದು ಹೇಳಬಹುದು ಪಾರಿಭಾಷಿಕ ಪದಗಳನ್ನು ತಯಾರಿಸುವವರು ಈ ವಿಷಯವನ್ನು ಗಮನಿಸದೆ ಕ್ರಿಯಾಪದ ಇಲ್ಲವೇ ಗುಣಪದಗಳನ್ನು ಎರಡನೇ ಅಂಗ ವಾಗಿ ಮಾಡಿ ಜೋಡು ಪದಗಳನ್ನು ರಚಿಸಿದಲ್ಲಿ ಅಂತಹ ಪದಗಳು ಅಷ್ಟೊಂದು ಸುಲಭವಾಗಿ ಕನ್ನಡದಲ್ಲಿ ಬಳಕೆಗೆ ಬರಲಾರವು ಪ್ರತ್ಯಯವಿರುವ ಪದಗಳಲ್ಲೂ ಇದೇ ರೀತಿ ಉತ್ಪಾದಕ ಮತ್ತು ಅನುತ್ಪಾದಕ ರಚನೆಗಳನ್ನು ಕಾಣಬಹುದು ಕನ್ನಡದಲ್ಲಿ ಇಕೆ ಇಗೆ ತೆ ಉ ಮೊದಲಾದ ಕೆಲವು ಪ್ರತ್ಯಯಗಳು ಉತ್ಪಾದಕಗಳಾಗಿದ್ದು ಅವನ್ನು ಬಳಸಿ ಹೊಸ ಪದಗಳನ್ನು ತಯಾರಿಸಿದಲ್ಲಿ ಅಂತಹ ಪದಗಳು ಸುಲಭವಾಗಿ ಭಾಷೆಯಲ್ಲಿ ರೂಡಿಗೆ ಬರಬಲ್ಲುವು ಬೇರೆ ಹಲವು ಪ್ರತ್ಯಯಗಳು ಒಂದೆರಡು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು ಉದಾಹರಣೆಗೆ ಡ ಇತ್ಯಾದಿ ಅವನ್ನು ಬಳಸಿ ತಯಾರಿಸಿದ ಪದಗಳು ಅಷ್ಟೊಂದು ಸುಲಭವಾಗಿ ಬಳಕೆಗೆ ಬರಲಾರವು ಪದಗಳ ಒಳ ರಚನೆಗೆ ಅವುಗಳ ದಿನನಿತ್ಯದ ಬಳಕೆಯಲ್ಲಿ ವಿಶೇಷವಾದ ಸ್ಥಾನವೇನು

ಇಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು ಹೆಚ್ಚಿನ ಸಂದರ್ಭಗಳಲ್ಲೂ ಪದಗಳನ್ನು ಬಳಸುವಾಗ ಅವುಗಳಿಗೆ ಒಳ ರಚನೆ ಎಂಬುದೊಂದಿದೆ ಎಂಬುದೇ ನಮ್ಮ ಗಮನಕ್ಕೆ ಬರುವುದಿಲ್ಲ ಆದರೆ ಈ ವಿಷಯದಲ್ಲಿ ಉತ್ಪಾದಕ ರಚನೆ ಇರುವ ಪದಗಳು ಅನುತ್ಪಾದಕ ರಚನೆ ಇರುವ ಪದಗಳಿಗಿಂತ ಸ್ವಲ್ಪ ಮಟ್ಟಿಗಾದರೂ ಭಿನ್ನವಾಗಿರಲು ಸಾಧ್ಯವಿದೆ ಉದಾಹರಣೆಗಾಗಿ ಕಟ್ಟಡ ತಿಂಡಿ ಬೀಳಲು ಬಿರುಕು ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳ ರಚನೆಯಲ್ಲಿ ಕಟ್ಟು ತಿನ್ನು ಬೀಳು ಬಿರಿ ಮೊದಲಾದ ಕ್ರಿಯಾಪದಗಳು ಬಳಕೆಯಾಗುವೆಂಬ ವಿಷಯ ನಮ್ಮ ಗಮನಕ್ಕೆ ಬಾರದಿದ್ದರೂ ಬಳಲಿಕೆ ನಂಬಿಕೆ ಹೋಲಿಕೆ ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳ ರಚನೆಯಲ್ಲಿ ಬಳಲು ನಂಬು ಹೋಲು ಮೊದಲಾದ ಕ್ರಿಯಾಪದಗಳಿರುವುದು ನಮ್ಮ ಗಮನಕ್ಕೆ ಬರುವ ಸಂಭವವಿದೆ ಈ ವ್ಯತ್ಯಾಸವನ್ನು ಆಧರಿಸಿ ಉತ್ಪಾದಕವಾದ ಒಳ ರಚನೆ ಇರುವ ಪದಗಳನ್ನು ಮಾತ್ರವೇ ವ್ಯಾಕರಣದಲ್ಲಿ

ಸಾಧಿಸಬೇಕು ಅನುತ್ಪಾದಕವಾದ ಒಳ ರಚನೆ ಇರುವುಗಳನ್ನು ಸಾಧಿಸಬೇಕಾಗಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ ಆದರೆ ಈ ಪುಸ್ತಕದಲ್ಲಿ ಇವೆರಡು ರೀತಿಯ ಪದಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದು ಎರಡಕ್ಕೂ ಒಳ ರಚನೆಗಳನ್ನು ಮುಖ್ಯವಾಗಿ ಚಾರಿತ್ರಿಕ ಅಂಶಗಳ ಆಧಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ ನಾಮಪದಗಳು ಮತ್ತು ಇತರ ಪದಗಳು ಪದಗಳ ಅರ್ಥವನ್ನು ತಿಳಿದುಕೊಳ್ಳುವಲ್ಲಿ ಒಳ ರಚನೆಯ ಪಾತ್ರವೆಂತಹದ್ದು ಎಂಬ ವಿಷಯದಲ್ಲಿ ನಾಮಪದಗಳಿಗೂ ಮತ್ತು ಇತರ ಪದಗಳಿಗೂ ಕ್ರಿಯಾಪದ ಮತ್ತು ಗುಣಪದಗಳಿಗೂ ನಡುವೆ ಮುಖ್ಯವಾದ ವ್ಯತ್ಯಾಸವಿದೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ ಪದಗಳ ಕುರಿತಾಗಿ ಮೇಲೆ ಹೇಳಿರುವ ಸಂಗತಿಗಳಲ್ಲಿ ಹೆಚ್ಚಿನವು ನಾಮಪದ ಗಳಿಗೆ ಮಾತ್ರ ಅನ್ವಯಿಸುವಂತಹವುಗಳು ಕ್ರಿಯಾಪದ ಇಲ್ಲವೇ ಗುಣಪದಗಳಿಗೆ ಅನ್ವಯಿಸುವಂತಹವುಗಳಲ್ಲ ಉದಾಹರಣೆಗಾಗಿ ಒಳ ರಚನೆ ಇರುವ ನಾಮಪದಗಳ ಅರ್ಥ ಹೆಚ್ಚಿನಡೆಗಳಲ್ಲೂ ಅವುಗಳ ಒಳರಚನೆಯಿಂದ ದೊರಕುವ ಅರ್ಥಕ್ಕಿಂತ ಭಿನ್ನವಾಗಿರುತ್ತದೆ ಆದರೆ

ಒಳ ರಚನೆ ಇರುವ ಕ್ರಿಯಾಪದ ಮತ್ತು ಗುಣಪದಗಳ ಅರ್ಥ ಹೆಚ್ಚಿನಡೆಗಳಲ್ಲೂ ಅವುಗಳ ಒಳ ರಚನೆಯಿಂದ ದೊರಕುವ ಅರ್ಥ ಆಗಿರುತ್ತದೆ ಹಾಗಾಗಿ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಒಳ ರಚನೆ ಇರುವ ಪದ ಮತ್ತು ಪದ ಗುಚ್ಚ ಎಂಬವುಗಳ ನಡುವಿರುವ ವ್ಯತ್ಯಾಸ ಕ್ರಿಯಾಪದ ಇಲ್ಲವೇ ಗುಣಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ ನಾಮಪದಗಳಿಗೂ ಮತ್ತು ಇತರ ಪದಗಳಿಗೂ ನಡುವೆ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳಲು ಮುಖ್ಯ ಕಾರಣವೇನೆಂದರೆ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ರೀತಿಯ ಗುರುತಿಸುವ ವಿಧಾನಗಳು ನಾಮಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವಲ್ಲದೆ ಕ್ರಿಯಾಪದ ಇಲ್ಲವೇ ಗುಣಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಯಾಕೆಂದರೆ ವ್ಯಕ್ತಿ ವಸ್ತು ಘಟನೆ ಗುಣಧರ್ಮ ಮೊದಲಾದವನ್ನು ಗುರುತಿಸುವ ಕೆಲಸವನ್ನು ನಾಮಪದಗಳು ಮಾತ್ರ ಮಾಡಬಲ್ಲುವು ಕ್ರಿಯಾಪದಗಳು ಘಟನೆಗಳನ್ನು ನಿರ್ದೇಶಿಸುತ್ತಲ್ಲದೆ ಗುರುತಿಸುವುದಿಲ್ಲ ಇದೇ ರೀತಿಯಲ್ಲಿ ಗುಣಪದಗಳು ಗುಣಧರ್ಮಗಳು ಸೂಚಿಸುತ್ತವಲ್ಲದೆ

ಗುರುತಿಸುವುದಿಲ್ಲ ಅವು ಸೂಚಿಸುವ ಗುಣಧರ್ಮಗಳ ಸಹಾಯದಿಂದ ವ್ಯಕ್ತಿ ವಸ್ತು ಘಟನೆ ಗುಣಧರ್ಮ ಮೊದಲಾದುವನ್ನು ಗುರುತಿಸುವ ಕೆಲಸವನ್ನು ನಾಮಪದಗಳು ನಡೆಸುತ್ತವೆ ಪದಗಳ ಒಳ ರಚನೆಯ ಕುರಿತಾಗಿ ಮೇಲೆ ಹೇಳಿರುವ ಗುಣಧರ್ಮಗಳಲ್ಲಿ ಹೆಚ್ಚಿನವು ಈ ರೀತಿ ಅವು ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವುದಕ್ಕೆ ಕಾಗಿ ಬಳಕೆಯಾಗುವ ಸಂದರ್ಭಗಳಲ್ಲಿ ಅವಕ್ಕೆ ಅನ್ವಯಿಸುವಂತಹವುಗಳು ಹಾಗಾಗಿ ಈ ಗುಣಧರ್ಮಗಳು ನಾಮಪದಗಳಿಗೆ ಮಾತ್ರ ಅನ್ವಯಿಸಬಲ್ಲುವು ಪದಗಳ ಗುಣಧರ್ಮಗಳನ್ನು ವಿವರಿಸುವಾಗ ಈ ರೀತಿ ನಾಮಪದ ಮತ್ತು ಇತರ ಪದಗಳ ನಡುವಿರುವ ವ್ಯತ್ಯಾಸವನ್ನು ಗಮನಕ್ಕೆ ತೆಗೆದುಕೊಳ್ಳದಿರಲು ಭಾಷೆಯಲ್ಲಿ ಬರುವ ಪದಗಳಲ್ಲಿ ಹೆಚ್ಚಿನವು ನಾಮಪದಗಳಾಗಿರುವುದೇ ಮುಖ್ಯ ಕಾರಣವೆಂದು ಹೇಳಬಹುದು ಪುಸ್ತಕದ ಸ್ವರೂಪ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳ ಒಳ ರಚನೆಯನ್ನು ಕನ್ನಡದವೇ ಆದ ವ್ಯಾಕರಣ ನಿಯಮಗಳ ಇಲ್ಲವೇ ಒಲವುಗಳ ಮೂಲಕ ವಿವರಿಸಿ ಹೇಳುವುದೇ

ಈ ಪುಸ್ತಕದ ಮುಖ್ಯ ಉದ್ದೇಶ ಇಂತಹ ನಿಯಮಗಳನ್ನು ಪ್ರಾಮುಖ್ಯವಾಗಿ ಕನ್ನಡಕ್ಕೆ ಮೂಲವಾಗಿರುವ ಭಾಷೆಯೊಂದರಿಂದ ಇಳಿದು ಬಂದಿರುವ ಪದಗಳಲ್ಲಿ ಮತ್ತು ಬೇರೆ ಭಾಷೆಗಳಿಂದ ಎರವಲಾಗಿ ಬಂದಿದ್ದರು ಬೇರೆ ಬೇರೆ ಬದಲಾವಣೆ ಮೂಲಕ ಕನ್ನಡದವೇ ಆಗಿರುವ ಪದಗಳಲ್ಲಿ ಕಾಣಬಹುದು ಕನ್ನಡದಲ್ಲಿ ಬರುವ ಇಂತಹ ಪದಗಳ ಒಳ ರಚನೆ ಎಂತಹದ್ದು ಎಂಬುದನ್ನು ತಿಳಿಯಲು ಅವನು ಬೇರೆ ಬೇರೆ ಪದವರ್ಗಗಳಲ್ಲಿ ವಿಂಗಡಿಸಿಕೊಳ್ಳುವುದು ಅವಶ್ಯ ಯಾಕೆಂದರೆ ಬೇರೆ ಬೇರೆ ಪದ ವರ್ಗಗಳಲ್ಲಿ ಬರುವ ಪದಗಳು ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸಬೇಕಾಗಿದ್ದು ಇದಕ್ಕನುಗುಣವಾಗಿ ಬೇರೆ ಬೇರೆ ಒಳ ರಚನೆಗಳನ್ನು ಪಡೆದಿರಬೇಕಾಗುತ್ತದೆ ಹಾಗಾಗಿ ಕನ್ನಡದ ಪದಗಳು ಮುಖ್ಯವಾಗಿ ಮೂರು ಪದ ವರ್ಗಗಳಲ್ಲಿ ಹೇಗೆ ಸೇರಿಕೊಳ್ಳುತ್ತವೆ ಎಂಬುದನ್ನು ಎರಡನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ ನಾಮಪದ ಕ್ರಿಯಾಪದ ಮತ್ತು ಗುಣಪದಗಳೆಂಬುದಾಗಿ ಮೂರು ಮುಖ್ಯ ಪದ

ವರ್ಗಗಳಲ್ಲಿ ಸೇರುವ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ ಇವುಗಳಲ್ಲಿ ನಾಮಪದವೆಂಬ ವರ್ಗಕ್ಕೆ ಸೇರುವ ಪದಗಳಲ್ಲೇನೆ ಹೆಚ್ಚಿನ ಒಳ ರಚನೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಮುಂದಿನ ಮೂರು ಅಧ್ಯಾಯಗಳಲ್ಲೂ ನಾಮಪದಗಳ ಒಳ ರಚನೆ ಎಂತಹದ್ದು ಎಂಬುದನ್ನೇ ವಿವರಿಸಲಾಗಿದೆ ಮೂರನೆಯ ಅಧ್ಯಾಯದಲ್ಲಿ ಇವುಗಳ ಒಳ ರಚನೆಯಲ್ಲಿ ಕಾಣಿಸುವ ಕೆಲವು ವೈಶಿಷ್ಟ್ಯಗಳನ್ನು ಪರಿಶೀಲಿಸಲಾಗಿದೆ ಮತ್ತು ಮುಂದಿನ ಎರಡು ಅಧ್ಯಾಯಗಳಲ್ಲಿ ಪ್ರತ್ಯಯಗಳನ್ನು ಬಳಸಿ ರಚಿಸಿ ನಾಮಪದಗಳನ್ನು ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ ರಚಿಸಿದ ನಾಮಪದಗಳನ್ನು ಬೇರೆ ಬೇರಾಗಿ ಪರಿಶೀಲಿಸಲಾಗಿದೆ ಕ್ರಿಯಾಪದ ಮತ್ತು ಗುಣಪದಗಳ ಒಳ ರಚನೆಯಲ್ಲಿ ಅಷ್ಟೊಂದು ವೈವಿಧ್ಯತೆ ಇಲ್ಲ ಅವುಗಳ ಒಟ್ಟು ಸಂಖ್ಯೆಯು ನಾಮಪದಗಳಿಗಿಂತ ಬಹಳ ಕಡಿಮೆ ಆರು ಮತ್ತು ಏಳನೇ ಅಧ್ಯಾಯಗಳಲ್ಲಿ ಈ ಎರಡು ವರ್ಗಗಳಿಗೆ ಸೇರುವ ಪದಗಳ ಒಳ ರಚನೆಯಲ್ಲಿ ಕಾಣಿಸುವ ಕೆಲವು ಪ್ರತ್ಯಯಗಳು ಬಳಕೆ

ಎಂತಹದ್ದು ಎಂಬುದನ್ನು ಪರಿಶೀಲಿಸಲಾಗಿದೆ ಬೇರೆ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಇತ್ತೀಚಿಗೆ ನಾವು ಅವನ್ನು ಎರವಲು ಕೊಟ್ಟಿರುವ ಭಾಷೆಯ ಹಲವು ವೈಶಿಷ್ಟ್ಯಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ ಬೇರೆ ಬೇರೆ ಬದಲಾವಣೆಗಳ ಮೂಲಕ ಅವು ಕನ್ನಡದವೇ ಎಂದೆನಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಹಾಗಾಗಿ ಇಂತಹ ಪದಗಳ ಒಳ ರಚನೆಯನ್ನು ಬೇರೆ ಕೆಲವು ನಿಯಮಗಳ ಮೂಲಕ ವರ್ಣಿಸಬೇಕಾಗುತ್ತದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಇಂತಹ ಹಲವು ಪದಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು ಅವುಗಳ ಒಳ ರಚನೆ ಎಂತಹದ್ದು ಎಂಬುದನ್ನು ಎಂಟನೇ ಅಧ್ಯಾಯದಲ್ಲಿ ವಿವರಿಸಲಾಗಿದೆ ಪುಸ್ತಕದ ಕೊನೆಯಲ್ಲಿ ಬರುವ ಒಂಬತ್ತನೇ ಅಧ್ಯಾಯದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ತಯಾರಿಸಿಕೊಡುವಲ್ಲಿ ಈ ಪುಸ್ತಕದ ಪಾತ್ರವೇನು ಎಂಬುದು ವಿವರಿಸಲಾಗಿದೆ ಇದಲ್ಲದೆ ಈ ಪುಸ್ತಕದ ತಯಾರಿಕೆಯಲ್ಲಿ ಸಹಾಯಕವಾದ ಕೆಲವು ಗ್ರಂಥಗಳ ಪಟ್ಟಿಯನ್ನು ಮತ್ತು ಈ

ಪುಸ್ತಕದಲ್ಲಿ ಬರುವ ಕೆಲವು ಮುಖ್ಯ ವಿಷಯಗಳ ಪಟ್ಟಿಯನ್ನು ಕೊನೆಯಲ್ಲಿ ಕಾಣಬಹುದು



ಅಧ್ಯಾಯ 2 — ಕನ್ನಡದ ಪದ ವರ್ಗಗಳು

Word Classes in Kannada

Part 7

Watch on YouTube

ಈ ಭಾಗ ಪುಸ್ತಕದ ೨.೧: ಮುನ್ನೋಟ ಅನ್ನು ಆಧರಿಸಿದೆ.

ನುಡಿಯೊಂದರಲ್ಲಿ ಬರುವ ಪದಗಳನ್ನು ಅವುಗಳ ಹುರುಳು ಮತ್ತು ಸೊಲ್ಲುಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ ಈ ಎರಡು ವಿಷಯಗಳ ಮೇಲೆ ಕೆಲವು ಮುಕ್ಯವಾದ ಗುಂಪುಗಳಲ್ಲಿ ಸೇರಿಸಿ ಹೇಳಬಹುದು. ಕನ್ನಡ ಸೊಲ್ಲುಗಳಲ್ಲಿ ಬರುವ ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದು, ಎಸಕಗಳನ್ನು ತಿಳಿಸುವುದು ಮತ್ತು ವ್ಯಕ್ತಿ, ವಸ್ತು ಮೊದಲಾದವುಗಳ ಇಲ್ಲವೇ ಅವು ನಡೆಸುವ ಎಸಕಗಳ ಪರಿಚೆಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಕ್ಯವಾದ ಕೆಲಸಗಳನ್ನು ನಡೆಸಬೇಕಾಗಿದೆ. ಹಾಗಾಗಿ, ಈ ಕೆಲಸಗಳ ಮೇಲೆ ಅವನ್ನು ಹೆಸರುಪದ, ಎಸಕಪದ, ಮತ್ತು ಪರಿಚೆಪದಗಳೆಂಬ ಮೂರು ಮುಕ್ಯ ಪದಗುಂಪುಗಳಾಗಿ ವಿಂಗಡಿಸಬಲ್ಲೆವು. ಎತ್ತುಗೆಗಾಗಿ, ರಾಜು, ಹುಡುಗಿ,…



Part 8

Watch on YouTube

ಈ ಭಾಗ ಪುಸ್ತಕದ ೨.೨: ಪದಗುಂಪುಗಳಲ್ಲಿ ವ್ಯತ್ಯಾಸಗಳು ಅನ್ನು ಆಧರಿಸಿದೆ.

ಮೇಲೆ ಹೇಳಿರುವಂತೆ, ಎಲ್ಲಾ ನುಡಿಗಳೂ ತಾವು ಬಳಸುವ ಪದಗಳನ್ನು ಒಂದೇ ರೀತಿಯಾಗಿ ಗುಂಪುಗೂಡಿಸುವುದಿಲ್ಲ. ಇದಕ್ಕೆ ಮುಕ್ಯ ಕಾರಣವೇನೆಂದರೆ, ಸೊಲ್ಲುಗಳ ರಚನೆ ನುಡಿಯಿಂದ ನುಡಿಗೆ ಬೇರೆ ಬೇರಾಗಿದ್ದು, ಅವುಗಳಲ್ಲಿ ಪದಗಳು ನಡೆಸಬೇಕಾಗಿರುವ ಕೆಲಸಗಳೂ ಬೇರೆ ಬೇರಾಗಿರುತ್ತವೆ. ನುಡಿಯೊಂದರಲ್ಲಿ ಪದಗಳು ಎಂತಹ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅದರಲ್ಲಿ ಬರುವ ಪದಗಳನ್ನು ಎಂತಹ ಗುಂಪುಗಳಲ್ಲಿ ಸೇರಿಸಿ ಹೇಳಬಹುದು ಎಂಬುದು ಅವಲಂಬಿಸಿದೆ. ಭಾರತದಲ್ಲಿ ದ್ರಾವಿಡ, ಆರ್ಯ (ಇಂಡೋ-ಆರ್ಯನ್), ಟಿಬೆಟೋ-ಬರ್ಮನ್ ಮತ್ತು ಆಸ್ಟೋ-ಏಶಿಯಾಟಿಕ್ ಎಂಬುದಾಗಿ ನಾಲ್ಕು ಮುಕ್ಯ ನುಡಿಕುಟುಂಬಗಳಿಗೆ ಸೇರಿದ ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸೊಲ್ಲುಗಳನ್ನು ಕಟ್ಟುವ ಹಮ್ಮುಗೆಗಳು ಬೇರೆ…



Part 9

Watch on YouTube

ಈ ಭಾಗ ಪುಸ್ತಕದ ೨.೩.೧: ನೇರವಾದ ಬಳಕೆ ಅನ್ನು ಆಧರಿಸಿದೆ.

ಸಾಮಾನ್ಯವಾಗಿ ಪದಗಳು ತಮ್ಮವೇ ಆದ ಕೆಲಸಗಳನ್ನು ನಡೆಸಬೇಕಾದಾಗಲೆಲ್ಲ ಯಾವ ಪ್ರತ್ಯಯವೂ ಸೇರಿರದ ‘ಪ್ರತ್ಯಯರಹಿತ’ ರೂಪದಲ್ಲಿ ಬರುತ್ತವೆ. ಆದರೆ ಬೇರೆ ಪದವರ್ಗಗಳಿಗೆ ಸೇರಿದ ಪದಗಳ ಕೆಲಸಗಳನ್ನು ನಡೆಸಬೇಕಾಗಿ ಬಂದಾಗ ಅವು ಬೇರೆ ಬೇರೆ ರೀತಿಯ ಪ್ರತ್ಯಯಗಳೊಂದಿಗೆ ಸೇರುವುದರ ಮೂಲಕ ಸಿದ್ಧವಾದ ‘ಪ್ರತ್ಯಯಯುಕ್ತ’ ರೂಪಗಳಲ್ಲಿ ಬರುತ್ತವೆ. ಕನ್ನಡದಲ್ಲಿ ಈ ರೀತಿ ಪ್ರತ್ಯಯರಹಿತ ರೂಪದಲ್ಲಿ ಬರಲು ಪದಗಳಿಗೆ ಮೂರು ಬೇರೆ ಬೇರೆ ಸಂದರ್ಭಗಳಿವೆ. ಈ ವಿಷಯವನ್ನು ಕನ್ನಡದಲ್ಲಿ ಹೆಸರುಪದ, ‘ಸಕಪದ ಮತ್ತು ಪರಿಚೆಪದಗಳೆಂಬ ಮೂರು ಬೇರೆ ಬೇರೆ ಪದವರ್ಗಗಳಿವೆಯೆಂಬುದಕ್ಕೆ ಆಧಾರ ವಾಗಿ ಕೊಡಬಹುದು. ಎತ್ತುಗೆಗಾಗಿ, ಹೆಸರುಪದಗಳನ್ನು ವಿಭಕ್ತಿಪ್ರತ್ಯಯಗಳೊಂದಿಗೆ, ‘ಸಕ…



Part 10

Watch on YouTube

ಈ ಭಾಗ ಪುಸ್ತಕದ ೨.೩.೨: ಅರ್ಥದಲ್ಲಿ ವ್ಯತ್ಯಾಸ ಅನ್ನು ಆಧರಿಸಿದೆ.

ಹೆಸರುಪದ, ‘ಸಕಪದ, ಮತ್ತು ಪರಿಚೆಪದಗಳ ನಡುವೆ ಅವು ಕೊಡುವ ಅರ್ಥ ದಲ್ಲೂ ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಸೊಲ್ಲುಗಳಲ್ಲಿ ಈ ಮೂರು ರೀತಿಯ ಪದಗಳು ನಡೆಸಿಕೊಡಬೇಕಾಗಿರುವ ಕೆಲಸಗಳು ಬೇರೆ ಬೇರಾಗಿರುವುದೇ ಅವಕ್ಕೆ ಈ ರೀತಿ ಬೇರೆ ಬೇರೆ ರೀತಿಯ ಅರ್ಥಗಳು ಬರಲು ಮುಖ್ಯ ಕಾರಣ. ಪರಿಚೆ ಪದಗಳು ಹೆಸರುಪದಗಳೊಂದಿಗೆ ಸೇರಿ ಅವುಗಳ ಅರ್ಥವನ್ನು ಸಂಕುಚಿತ ಗೊಳಿಸಬೇಕಾಗಿದೆ. ಹಾಗಾಗಿ, ಅವಕ್ಕೆ ಯಾವುದಾದರೂ ಒಂದು ನಿಶ್ಚಿತವಾದ ಪರಿಚೆಧರ್ಮವನ್ನು ಮಾತ್ರವೇ ಸೂಚಿಸುವಂತಹ ಅರ್ಥವಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಸರುಪದಗಳು ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸಬೇಕಾಗಿದೆ. ಹಾಗಾಗಿ, ಅವಕ್ಕೆ…



Part 11

Watch on YouTube

Note: This transcript has not been cleaned and may contain errors.

ಆಶ್ಚರ್ಯವನ್ನು ಸೂಚಿಸುವ ವಾಕ್ಯಗಳಲ್ಲಿ ಬಳಕೆ ಆಶ್ಚರ್ಯವನ್ನು ಸೂಚಿಸುವ ವಾಕ್ಯಗಳಿಗೆ ಆಧಾರವಾಗಿ ಗುಣಪದ ಒಂದರ ಅವಶ್ಯಕತೆ ಇದೆ ಎಂಬುದು ನಾಮಪದ ಮತ್ತು ಕ್ರಿಯಾಪದಗಳನ್ನು ಗುಣಪದಗಳಿಂದ ಬೇರ್ಪಡಿಸುವ ಇನ್ನೊಂದು ವಾಕ್ಯ ರಚನೆಯ ನಿಯಮ ಕನ್ನಡದಲ್ಲಿ ಎಷ್ಟು ಎಂಬ ಪದದ ಸಹಾಯದಿಂದ ಆಶ್ಚರ್ಯ ಸೂಚಕ ವಾಕ್ಯಗಳನ್ನು ರಚಿಸಬೇಕಾದಾಗಲೆಲ್ಲ ಅದರೊಂದಿಗೆ ಗುಣಪದ ಒಂದನ್ನು ಬಳಸುವ ಅವಶ್ಯಕತೆ ಇದೆ ಉದಾಹರಣೆಗಾಗಿ 13 15 ವಾಕ್ಯಗಳನ್ನು ಗಮನಿಸಬಹುದು 13 ಆನೆಯ ಕಿವಿ ಎಷ್ಟು ದೊಡ್ಡದು 14 ಅವಳು ಎಷ್ಟು ಜೋರಾಗಿ ಹಾಡುತ್ತಿದ್ದಾಳೆ 15 ಆ ಹುಡುಗಿಯದು ಎಷ್ಟು ಒಳ್ಳೆಯ ಗುಣ ಇದಲ್ಲದೆ ಏನು ಹೇಗೆ ಮತ್ತು ಎಂತಹ ಎಂಬ ಪದಗಳನ್ನು ಬಳಸಿಯೂ ಕನ್ನಡದಲ್ಲಿ ಆಶ್ಚರ್ಯವನ್ನು ಸೂಚಿಸುವ ವಾಕ್ಯಗಳನ್ನು ರಚಿಸಲು ಸಾಧ್ಯವಿದೆ ಇವುಗಳೊಂದಿಗೆ ಗುಣಪದ ಒಂದನ್ನು ಬಳಸದಿರಲು ಸಾಧ್ಯವಿದೆಯಾದರೂ ಅಂತಹ ಒಂದು ಪದದ

ಅರ್ಥ ಇವುಗಳಲ್ಲಿ ಧ್ವನಿತವಾಗದಿರುವುದಿಲ್ಲವೆಂಬುದನ್ನು 16 18 ವಾಕ್ಯಗಳಲ್ಲಿ ಕಾಣಬಹುದು 16 ಅವನು ಹೇಗೆ ಓಡಿದ ಜೋರಾಗಿ ಓಡಿದ 17 ಅವರು ಎಂತಹ ಮನೆ ಕಟ್ಟಿಸಿದ್ದಾರೆ ದೊಡ್ಡ ಮನೆ 18 ಏನು ಸಾಮರ್ಥ್ಯ ಅವನದು ಹೆಚ್ಚಿನ ಸಾಮರ್ಥ್ಯ ಆಶ್ಚರ್ಯಕ್ಕೆ ಯಾವುದಾದರೂ ಒಂದು ಗುಣಧರ್ಮ ಮೂಲವಾಗಿರಬೇಕು ಮತ್ತು ಅಂತಹ ಗುಣಧರ್ಮ ಒಂದನ್ನು ಗುಣಪದಗಳು ಮಾತ್ರವೇ ಪ್ರತ್ಯೇಕಿಸಿ ಸೂಚಿಸಬಲ್ಲುವು ಎಂಬುದೇ ಈ ನಿರ್ಬಂಧಕ್ಕೆ ಕಾರಣವಿರಬೇಕು ಮಾರ್ದನಿಸುವ ಪದಗಳ ಬಳಕೆ ಪದಗಳೊಂದಿಗೆ ಅವುಗಳ ಮಾರ್ದನಿಯಂತೆ ಕಾಣಿಸುವ ಇನ್ನೊಂದು ಪದವನ್ನು ಬಳಸುವ ಕ್ರಮ ಕನ್ನಡದಲ್ಲಿದೆ ಉದಾಹರಣೆಗಾಗಿ ಮನೆಗಿನಿ ಮಾರಾಟ ಗಿರಾಟ ಕಾಡು ಗೀಡು ಕುರಿಗಿರಿ ಎಮ್ಮೆಗಿಮ್ಮೆ ಕೋಲು ಗೀಲು ಮೊದಲಾದ ಬಳಕೆಗಳಲ್ಲಿ ಇಂತಹ ಮಾರ್ಧನಿಸುವ ಪದಗಳನ್ನು ಕಾಣಬಹುದು ಪದದ ಮೊದಲನೆಯ ಅಕ್ಷರಕ್ಕೆ ಬದಲಾಗಿ ಅದು ಗಿಡ್ಡ ಸ್ವರದೊಂದಿಗಿದ್ದರೆ ಗಿ ಎಂಬ

ಅಕ್ಷರವನ್ನು ಮತ್ತು ಉದ್ದ ಸ್ವರದೊಂದಿಗೆ ಇದ್ದರೆ ಗಿ ಎಂಬ ಅಕ್ಷರವನ್ನು ಬಳಸಿ ಈ ಮಾರ್ಧನಿಸುವ ಪದಗಳನ್ನು ರಚಿಸಬಹುದು ಒಂದು ಪದದೊಂದಿಗೆ ಇಂತಹ ಮಾರ್ಧನಿಸುವ ಪದವನ್ನು ಬಳಸಿದಾಗ ಆ ಪದವು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳ ವಿಷಯದಲ್ಲಿ ಅನಿಶ್ಚಿತತೆ ಇಲ್ಲವೇ ಅಸ್ಪಷ್ಟತೆ ಸೂಚಿತವಾಗುತ್ತದೆ ಉದಾಹರಣೆಗಾಗಿ ಈ 19 21 ವಾಕ್ಯಗಳಲ್ಲಿ ಬಂದಿರುವ ಇಂತಹ ಮಾರ್ಧನಿಸುವ ಪದಗಳ ಅರ್ಥವನ್ನು ಪರಿಶೀಲಿಸಬಹುದು 19 ಪೇಟೆಗೆ ಹೋಗಲು ಕಾರು ಗೀರು ಇದ್ದರೆ ಚೆನ್ನಾಗಿರುತ್ತದೆ 20 ಆ ಹಾದಿಯಲ್ಲಿ ಹಾವು ಗಿವು ಇರಬಹುದು 21 ಅವರು ಮನೆ ಗಿನ್ನೆಯಲ್ಲ ಕಳೆದುಕೊಂಡು ಕಷ್ಟದ ಇದ್ದಾರೆ 19ನೇ ವಾಕ್ಯದಲ್ಲಿ ಕಾರು ಎಂಬುದನ್ನು ಬಳಸುವ ಬದಲು ಕಾರು ಗೀರು ಎಂಬುದನ್ನು ಬಳಸಿದ್ದರಿಂದಾಗಿ ಅದು ಗುರುತಿಸುವ ವಸ್ತುವಿನ ರೂಪ ಅಸ್ಪಷ್ಟವಾಗಿದೆ ಎಂದು ಸೂಚಿತವಾಗುತ್ತದೆ ಕಾರು ಬೈಕ್

ಸ್ಕೂಟರ್ ಸೈಕಲ್ ಇತ್ಯಾದಿಗಳಲ್ಲಿ ಯಾವುದು ಇದ್ದರೂ ನಡೆದು ಹೋಗುವುದಕ್ಕಿಂತ ಇಲ್ಲವೇ ಬಸ್ಸಿಗೆ ಲೇಸು ಎಂಬ ಅರ್ಥ ಈ ವಾಕ್ಯಕ್ಕೆ ಬರುತ್ತದೆ ಕನ್ನಡದಲ್ಲಿ ಇಂತಹ ಮಾರ್ಧನಿಸುವ ಪದಗಳನ್ನು ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಉದಾಹರಣೆಗೆ ನೋಡಿ ಗೀಡಿ ತಿಂದರೆ ಗಿಂದರೆ ಹೊಡೆಯಲು ಗಿಡೆಯಲು ಇತ್ಯಾದಿ ಬಳಸಲು ಸಾಧ್ಯವಿದೆ ಅಲ್ಲದೆ ಗುಣಪದಗಳೊಂದಿಗೆ ಬಳಸಲು ಸಾಧ್ಯವಾಗದು ಇದಕ್ಕೆ ಕಾರಣವೇನೆಂದರೆ ಗುಣಪದಗಳು ಒಂದು ವಿಶಿಷ್ಟವಾದ ಗುಣಧರ್ಮವನ್ನು ಸೂಚಿಸುವುದರ ಮೂಲಕ ಅವುಗಳ ಅನಂತರ ಬರುವ ನಾಮಪದದ ಅರ್ಥವನ್ನು ಸಂಕುಚಿತಗೊಳಿಸಬೇಕಾಗುತ್ತದೆ ಇಲ್ಲವೇ ಬೇರೆ ರೀತಿಯಲ್ಲಿ ಬದಲಾಯಿಸಬೇಕಾಗುತ್ತದೆ ಅವುಗಳ ಈ ಕೆಲಸಕ್ಕೆ ಅವು ಸೂಚಿಸುವ ವಿಶಿಷ್ಟವಾದ ಗುಣಧರ್ಮ ಅತ್ಯಂತ ಪ್ರಾಮುಖ್ಯವಾದುದಾದ ಕಾರಣ ಅದನ್ನು ಅಸ್ಪಷ್ಟವಾಗಿ ಮಾಡಬಲ್ಲ ಮಾದನಿಸುವ ಪದ ಅದರೊಂದಿಗೆ ಬರಲಾರದು ಬಳಕೆಯಲ್ಲಿ ಸ್ವಾತಂತ್ರ್ಯ ನಾಮಪದ ಗಳಿಗೂ ಮತ್ತು ಗುಣಪದಗಳಿಗೂ ನಡುವೆ ಕಾಣಿಸುವ ಇನ್ನೊಂದು

ಪ್ರಾಮುಖ್ಯವಾದ ವ್ಯತ್ಯಾಸವೇನೆಂದರೆ ನಾಮಪದಗಳಿಗೆ ವಾಕ್ಯದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ ಆದರೆ ಗುಣಪದಗಳಿಗೆ ಇಂತಹ ಸ್ವಾತಂತ್ರ್ಯವಿಲ್ಲ ಅವು ಯಾವಾಗಲೂ ಒಂದು ನಾಮಪದದೊಂದಿಗೆ ನಾಮಪದ ಗುಚ್ಚದ ಅಂಗವಾಗಿ ಬರಬೇಕಾಗುತ್ತದೆ ಈ ರೀತಿ ಈ ಎರಡು ಪದ ವರ್ಗಗಳ ನಡುವೆ ಕನ್ನಡದಲ್ಲಿ ಅವುಗಳ ಸ್ವಾತಂತ್ರ್ಯದ ಮಟ್ಟಿಗಿರುವ ವ್ಯತ್ಯಾಸವನ್ನು ಕೆಳಗಿನ ವ್ಯಾಕರಣ ನಿಯಮಗಳು ಸ್ಪಷ್ಟಪಡಿಸುತ್ತವೆ ಒಂದು ಕೆಲವು ಪ್ರತ್ಯಯಗಳ ಬಳಕೆ ಒಂದು ಪದವನ್ನು ಒತ್ತಿ ಹೇಳಲು ಬಳಸುವ ಎಂಬ ಪ್ರತ್ಯಯ ಮತ್ತು ಎಂಬ ಅರ್ಥವನ್ನು ಕೊಡುವ ಉ ಎಂಬ ಪ್ರತ್ಯಯ ಮತ್ತು ಆದರೆ ಎಂಬ ಅರ್ಥವನ್ನು ಕೊಡುವ ಓ ಎಂಬ ಪ್ರತ್ಯಯ ಈ ಮೂರನ್ನು ಕನ್ನಡ ವಾಕ್ಯಗಳಲ್ಲಿ ಬರುವ ನಾಮಪದಗಳೊಂದಿಗೆ ಇಲ್ಲವೇ ನಾಮಪದ ಗುಚ್ಚಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿದೆ ಆದರೆ ನಾಮಪದ ಗುಚ್ಚಗಳಲ್ಲಿ ಬರುವ ಗುಣಪದಗಳೊಂದಿಗೆ ಸೇರಿಸಿ ಹೇಳಲು ಸಾಧ್ಯವಿಲ್ಲ

22 ರಾಜು ಹರಿಯನ್ನು ಮನೆಗೆ ಕರೆಯಲಿಲ್ಲ 23 ರಾಜು ಹರಿಯನ್ನೇ ಮನೆಗೆ ಕರೆಯಲಿಲ್ಲ 24 ರಾಜು ಹರಿಯನ್ನು ಮನೆಗೆ ಕರೆಯಲಿಲ್ಲ 25 ರಾಜು ಹರಿಯನ್ನು ರವಿಯನ್ನು ಮನೆಗೆ ಕರೆದಾನು 26 ರಾಜು ದೊಡ್ಡ ಕೋಲನ್ನು ಮುರಿದು ಹಾಕಿದ 26ನೇ ವಾಕ್ಯದಲ್ಲಿ ದೊಡ್ಡ ಕೋಲನ್ನು ಎಂಬ ಪದಗುಚ್ಚದೊಂದಿಗೆ ಊ ಎಂಬ ಪ್ರತ್ಯಯವನ್ನು ಸೇರಿಸಿ ಹೇಳಲಾಗಿದೆ ಆದರೆ ಈ ಪ್ರತ್ಯಯವನ್ನು ದೊಡ್ಡ ಎಂಬ ಗುಣಪದದೊಂದಿಗೆ ಸೇರಿಸಿ ಹೇಳಲು ಸಾಧ್ಯವಾಗದು ಇತರ ಎರಡು ಪ್ರತ್ಯಯಗಳು ಹೀಗೆ ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಈ ನಿಯಮಕ್ಕೆ ಕಾರಣವೇನೆಂದರೆ ಗುಣಪದಗಳು ನಾಮಪದಗಳೊಂದಿಗೆ ಅವಕ್ಕೆ ಸಹಾಯಕಗಳಾಗಿ ಬರುತ್ತವೆ ಮತ್ತು ಈ ಕಾರಣಕ್ಕಾಗಿ ಅವಕ್ಕೆ ವಾಕ್ಯದಲ್ಲಿ ಸ್ವತಂತ್ರವಾದ ಅಸ್ತಿತ್ವವಿಲ್ಲ ಮೇಲೆ ಕೊಟ್ಟ ಮೂರು ಪ್ರತ್ಯಯಗಳು ಅವನ್ನು ನಾಮಪದಗಳಿಂದ ಬೇರ್ಪಡಿಸಿ ಸ್ವತಂತ್ರ ಪದಗಳನ್ನಾಗಿ ಮಾಡಬಲ್ಲುವಾದ ಕಾರಣ

ಮತ್ತು ಹೀಗೆ ಮಾಡುವುದರಿಂದ ಅವುಗಳ ಎಂದರೆ ಗುಣಪದಗಳ ಮುಖ್ಯ ಕೆಲಸಕ್ಕೆ ಅಡ್ಡಿ ಉಂಟಾಗುವುದಾದ ಕಾರಣ ಕಾರಣ ಅವುಗಳೊಂದಿಗೆ ಈ ಪ್ರತ್ಯಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎರಡು ವಾಕ್ಯದ ಮೊದಲ ಸ್ಥಾನಕ್ಕೆ ತರುವುದು ವಾಕ್ಯದ ಬೇರೆ ಬೇರೆ ಭಾಗಗಳಲ್ಲಿ ಬರುವ ನಾಮಪದಗಳನ್ನು ಇಲ್ಲವೇ ನಾಮಪದ ಗುಚ್ಚಗಳನ್ನು ವಾಕ್ಯದ ಮೊದಲ ಸ್ಥಾನಕ್ಕೆ ತಂದಿರಿಸಲು ಸಾಧ್ಯವಿದೆ ಹೀಗೆ ಮಾಡುವುದರಿಂದ ಆ ನಾಮಪದವು ಗುರುತಿಸುವ ವ್ಯಕ್ತಿ ವಸ್ತು ಮೊದಲಾದುವಕ್ಕೆ ವಾಕ್ಯದ ಮುಖ್ಯ ವ್ಯಕ್ತಿ ಇಲ್ಲವೇ ವಸ್ತು ಎಂಬ ಅರ್ಥ ಲಭಿಸುತ್ತದೆ ಉದಾಹರಣೆಗಾಗಿ 27 29 ವಾಕ್ಯಗಳನ್ನು ಗಮನಿಸಬಹುದು 27 ರಾಜು ಮಧುಮಗನಿಗೆ ಕೆಂಪು ಹೂ ಕೊಟ್ಟ 28 ಮಧುಮಗನಿಗೆ ರಾಜು ಕೆಂಪು ಹೂ ಕೊಟ್ಟ 29 ಕೆಂಪು ಹೂವನ್ನು ರಾಜು ಮಧುಮಗನಿಗೆ ಕೊಟ್ಟ 27ನೇ ವಾಕ್ಯದಲ್ಲಿ ರಾಜು ಎಂಬ ನಾಮ

ಪದವು 28ನೇ ವಾಕ್ಯದಲ್ಲಿ ಮಧುಮಗ ಎಂಬ ನಾಮಪದವು ಮತ್ತು 29ನೇ ವಾಕ್ಯದಲ್ಲಿ ಕೆಂಪು ಹೂ ಎಂಬ ನಾಮಪದ ಗುಚ್ಚವು ಮೊದಲನೆಯ ಸ್ಥಾನದಲ್ಲಿ ಬಂದಿವೆ ಆದರೆ ಈ ರೀತಿ ವಾಕ್ಯದಲ್ಲಿರುವ ಗುಣಪದಗಳನ್ನು ಮೊದಲನೆಯ ಸ್ಥಾನಕ್ಕೆ ತಂದಿರಿಸಲು ಸಾಧ್ಯವಾಗದು ಅವು ಯಾವಾಗಲೂ ಅವಕ್ಕೆ ಸಂಬಂಧಿಸಿದ ನಾಮಪದದೊಂದಿಗೆ ಮಾತ್ರವೇ ಬರಬಲ್ಲುವು ಉದಾಹರಣೆಗಾಗಿ 29ನೇ ವಾಕ್ಯದಲ್ಲಿ ಕೆಂಪು ಎಂಬ ಗುಣಪದ ಹೂ ಎಂಬ ನಾಮಪದದೊಂದಿಗೆ ಮೊದಲನೆಯ ಸ್ಥಾನಕ್ಕೆ ಬಂದಿದೆ ಕೆಂಪು ಎಂಬುದನ್ನು ಮಾತ್ರವೇ ಈ ರೀತಿ ಮೊದಲನೆಯ ಸ್ಥಾನಕ್ಕೆ ತರಲು ಸಾಧ್ಯವಾಗದು ಎಂಬುದನ್ನು ಕನ್ನಡದ ವ್ಯಾಕರಣ ನಿಯಮಕ್ಕೆ ಒಳಪಡದ 30ನೇ ವಾಕ್ಯದಿಂದ ತಿಳಿಯಬಹುದು 30 ಕೆಂಪು ರಾಜು ಮಧುಮಗನಿಗೆ ಹೂ ಕೊಟ್ಟ ಮೂರು ವಾಕ್ಯ ಮುಗಿದ ಮೇಲೆ ಸೂಚಿಸುವುದು ನಾಮಪದ ಒಂದನ್ನು ಇಲ್ಲವೇ ನಾಮಪದ ಗುಚ್ಚ ಒಂದನ್ನು ವಾಕ್ಯದಲ್ಲಿ

ಸೂಚಿಸದೆ ವಾಕ್ಯದ ಅನಂತರ ಸೂಚಿಸಲು ಸಾಧ್ಯವಿದೆ ಆದರೆ ಗುಣಪದವನ್ನು ಈ ರೀತಿ ವಾಕ್ಯದ ಹೊರಗೆ ನಿಲ್ಲಿಸಿ ಹೇಳಲು ಸಾಧ್ಯವಾಗದು ಎಂಬುದನ್ನು 34ನೇ ವಾಕ್ಯ ವ್ಯಾಕರಣ ಸಮ್ಮತವಲ್ಲ ಎಂಬುದರಿಂದ ತಿಳಿಯಬಹುದು 31 ಮಧುಮಗನಿಗೆ ಕೆಂಪು ಹೂ ಕೊಟ್ಟಿದ್ದ ರಾಜು 32 ರಾಜು ಕೆಂಪು ಹೂ ಕೊಟ್ಟಿದ್ದ ಮಧುಮಗನಿಗೆ 33 ರಾಜು ಮಧುಮಗನಿಗೆ ಕೊಟ್ಟಿದ್ದ ಕೆಂಪು ಹೂ 34 ರಾಜು ಮಧುಮಗನಿಗೆ ಹೂ ಕೊಟ್ಟಿದ್ದ ಕೆಂಪು ನಾಲ್ಕು ವಾಕ್ಯದ ಎದುರು ನಿಲ್ಲಿಸುವುದು ನಾಮಪದ ಒಂದನ್ನು ವಾಕ್ಯದಿಂದ ಬೇರ್ಪಡಿಸಿ ಅದಕ್ಕೆ ಎದುರಾಗಿ ನಿಲ್ಲಿಸಲು ಕನ್ನಡದಲ್ಲೊಂದು ವಿಶಿಷ್ಟವಾದ ವಾಕ್ಯ ರೂಪದ ಬಳಕೆ ಇದೆ ಇದಕ್ಕಾಗಿ ವಾಕ್ಯದಲ್ಲಿ ಬರುವ ಕ್ರಿಯಾಪದವನ್ನು ಅದರ ವಿಶೇಷಣ ರೂಪಕ್ಕೆ ಬದಲಾಯಿಸಬೇಕಾಗುತ್ತದೆ ಆದರೆ ಗುಣಪದಗಳನ್ನು ಈ ರೀತಿ ಅವು ಬರುವ ವಾಕ್ಯದ ಎದುರು ನಿಲ್ಲಿಸಲು ಸಾಧ್ಯವಾಗದು

35 ಮಧುಮಗನಿಗೆ ಕೆಂಪು ಹೂ ಕೊಟ್ಟದ್ದು ರಾಜು 36 ರಾಜು ಕೆಂಪು ಹೂ ಕೊಟ್ಟದ್ದು ಮಧುಮಗನಿಗೆ 37 ರಾಜು ಮಧುಮಗನಿಗೆ ಕೊಟ್ಟದ್ದು ಕೆಂಪು ಹೂ 38 ರಾಜು ಮಧುಮಗನಿಗೆ ಹೂ ಕೊಟ್ಟದ್ದು ಕೆಂಪು ನಾಮಪದ ಮತ್ತು ಗುಣಪದಗಳ ನಡುವೆ ಕಾಣಿಸುವ ಈ ಎಲ್ಲಾ ವ್ಯತ್ಯಾಸಗಳು ವಾಕ್ಯದಲ್ಲಿ ನಾಮಪದಗಳಿಗೆ ಸ್ವತಂತ್ರವಾದ ಸ್ಥಾನವಿದೆ ಆದರೆ ಗುಣಪದಗಳಿಗೆ ಅಂತಹ ಸ್ವತಂತ್ರವಾದ ಸ್ಥಾನವಿಲ್ಲ ಅವು ನಾಮಪದಗಳಿಗೆ ಸಹಾಯಕಗಳಾಗಿ ಅವುಗಳ ಅಧೀನದಲ್ಲಿ ಬರುವವುಗಳು ಎಂಬುದರಿಂದ ಮೂಡಿಬಂದಿವೆ ಎಂಬುದನ್ನ ಇಲ್ಲಿ ಗಮನಿಸಬಹುದು ಸ್ಥಾಯಿ ಮತ್ತು ಅಸ್ಥಾಯಿ ನಾಮಪದ ಮತ್ತು ಕ್ರಿಯಾಪದಗಳ ನಡುವೆ ಕನ್ನಡದಲ್ಲಿ ಸ್ಥಾಯಿ ಮತ್ತು ಅಸ್ಥಾಯಿ ಎಂಬ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವನ್ನು ಕಾಣಲು ಸಾಧ್ಯವಿದೆ ನಾಮಪದಗಳು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳು ಬದಲಾಗದೆ ಉಳಿಯಬಲ್ಲವು ಮತ್ತು ಬದಲಾದರೂ ಅವುಗಳ ಮೂಲ

ರೂಪ ಹಾಗೆಯೇ ಉಳಿಯಬಲ್ಲುದು ಹಾಗಾಗಿ ಅವನು ಸ್ಥಾಯಿಗಳೆಂದು ಹೇಳಲು ಸಾಧ್ಯವಿದೆ ಆದರೆ ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳು ಸಾಮಾನ್ಯವಾಗಿ ನಡೆದು ಹೋಗುವಂತವುಗಳಾದ ಕಾರಣ ಅಸ್ಥಾಯಿಗಳಾಗಿರುತ್ತವೆ ಈ ವ್ಯತ್ಯಾಸಕ್ಕೆ ಅನುಸಾರವಾಗಿ ನಾಮಪದಗಳೊಂದಿಗೆ ಬರುವ ಗುಣಪದಗಳು ಸಾಮಾನ್ಯವಾಗಿ ಸ್ಥಾಯಿ ಗುಣಧರ್ಮಗಳನ್ನು ಸೂಚಿಸುತ್ತಿರುತ್ತವೆ ಮತ್ತು ಕ್ರಿಯಾಪದಗಳೊಂದಿಗೆ ಬರುವವುಗಳು ಸಾಮಾನ್ಯವಾಗಿ ಅಸ್ಥಾಯಿ ಗುಣಧರ್ಮಗಳನ್ನು ಸೂಚಿಸುತ್ತಿರುತ್ತವೆ ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳೆಲ್ಲ ನಡೆದು ಹೋಗುವಂತಹವುಗಳು ಅವುಗಳಲ್ಲಿ ಒಡೆ ಬಿಡು ಬಿರಿ ಮುರಿ ಮೊದಲಾದ ಕೆಲವು ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳು ಕ್ಷಣಿಕ ಘಟನೆಗಳಾದರೆ ಓದು ಓಡು ಬರೆ ಇಲಿ ಮೊದಲಾದ ಬೇರೆ ಕೆಲವು ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳು ಸ್ವಲ್ಪ ಕಾಲ ನಡೆಯಬಲ್ಲವಂತಹವುಗಳು ಆದರೆ ಈ ಎಲ್ಲಾ ಘಟನೆಗಳು ನಡೆದು ಹೋಗುವಂತಹವುಗಳೇ ಎಂಬುದನ್ನು ವಾಕ್ಯದಲ್ಲಿ ಅವನ್ನು ಬಳಸಬೇಕಾದಾಗಲೆಲ್ಲ ಸಾಮಾನ್ಯವಾಗಿ ಅವುಗಳೊಂದಿಗೆ ಕಾಲವಾಚಕ ಪ್ರತ್ಯಯಗಳನ್ನು ಬಳಸಬೇಕಾಗುತ್ತದೆ ಎಂಬುದರಿಂದ

ತಿಳಿಯಬಹುದು ಕನ್ನಡದಲ್ಲಿ ಸ್ಥಾಯಿ ಎನ್ನಿಸಬಹುದಾದ ಕ್ರಿಯಾಪದಗಳು ಬಹಳ ಅಪರೂಪ ಇರು ಎಂಬುದೊಂದು ಇಂತಹ ಸ್ಥಾಯಿ ಕ್ರಿಯಾಪದವೆಂದು ಹೇಳಬಹುದು ಇದಲ್ಲದೆ ಕನ್ನಡದಲ್ಲಿ ಕ್ರಿಯಾಪದ ಒಂದನ್ನು ಎರಡು ಮೂರು ಬೇರೆ ಬೇರೆ ವಾಕ್ಯಗಳಲ್ಲಿ ಪ್ರಯೋಗಿಸಿದೆ ಆದರೆ ಆ ಕ್ರಿಯಾಪದವು ನಿರ್ದೇಶಿಸುವ ಘಟನೆ ಎರಡು ಮೂರು ಬಾರಿ ನಡೆದಿದೆ ಎಂಬ ಅರ್ಥ ಬರುವುದಲ್ಲದೆ ಒಂದು ಬಾರಿ ನಡೆದ ಘಟನೆಯನ್ನು ಅದು ಮೂರು ಬಾರಿ ನಿರ್ದೇಶಿಸುವಂತಹ ಅರ್ಥ ಬರುವುದಿಲ್ಲ ಉದಾಹರಣೆಗಾಗಿ 39 ರಲ್ಲಿ ಬಂದಿರುವ ವಾಕ್ಯಗಳನ್ನು ಗಮನಿಸಬಹುದು 39 ರಾಜು ಮನೆಗೆ ಓಡಿದ ಅಲ್ಲಿಂದ ಅರ್ಧ ಗಂಟೆ ಬಿಟ್ಟು ಶಾಲೆಗೆ ಓಡಿದ 39 ರಲ್ಲಿ ಬಂದ ಓಡು ಎಂಬ ಕ್ರಿಯಾಪದದ ಎರಡು ಪ್ರಯೋಗಗಳು ಎರಡು ಬೇರೆ ಬೇರೆ ಘಟನೆಗಳನ್ನು ನಿರ್ದೇಶಿಸುತ್ತಿವೆ ಎಂಬುದನ್ನು ಗಮನಿಸಬಹುದು ಇದಕ್ಕೆ ವ್ಯತಿರಿಕ್ತವಾಗಿ ನಾಮಪದಗಳು ಗುರುತಿಸುವ

ವ್ಯಕ್ತಿ ವಸ್ತು ಮೊದಲಾದವುಗಳು ಸ್ಥಾಯಿಗಳಾಗಿದ್ದು ಅವುಗಳಲ್ಲಿ ಒಂದನ್ನು ಹಲವಾರು ಬಾರಿ ಬೇರೆ ಬೇರೆ ವಾಕ್ಯಗಳಲ್ಲಿ ಪುನಃ ಪುನಃ ಗುರುತಿಸಿ ಹೇಳಲು ಸಾಧ್ಯವಿದೆ 40 ರಾಜು ಕಳೆದ ವಾರ ಒಂದು ಮದುವೆಗೆ ಹೋಗಿದ್ದ ಅಲ್ಲಿ ರಾಜುವಿನ ತಂಗಿಯ ಕಚೇರಿ ಇತ್ತು 40 ರಲ್ಲಿ ಬಂದ ರಾಜು ಎಂಬ ಪದದ ಎರಡು ಪ್ರಯೋಗಗಳು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತವೆ ಎಂಬುದನ್ನು ಗಮನಿಸಬಹುದು ನಾಮಪದ ಒಂದು ಈ ರೀತಿ ಹಲವಾರು ಬಾರಿ ವಾಕ್ಯಗಳಲ್ಲಿ ಬಂದಾಗ ಅದು ಒಂದೇ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆಯೇ ಅಥವಾ ಬೇರೆ ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದೆಯೇ ಎಂಬುದನ್ನು ಸೂಚಿಸುವುದಕ್ಕಾಗಿ ಆ ಈ ಮೊದಲಾದ ನಿರ್ದೇಶಕ ಪದಗಳ ಇಲ್ಲವೇ ಸರ್ವನಾಮಗಳ ಬಳಕೆಯಾಗುತ್ತದೆ ಕ್ರಿಯಾಪದಗಳೊಂದಿಗೆ ನೇರವಾಗಿ ಬರಬಲ್ಲ ಸಮಯವನ್ನು ಸೂಚಿಸಿ ಸುವ ಪ್ರತ್ಯಯಗಳು ನಾಮಪದಗಳೊಂದಿಗೆ

ಬರಲಾರವು ಎಂಬ ನಿಯಮಕ್ಕೂ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಈ ವ್ಯತ್ಯಾಸವೇ ಕಾರಣವಿರಬೇಕು



Part 12

Watch on YouTube

Note: This transcript has not been cleaned and may contain errors.

ಪದ ವರ್ಗಗಳ ಸದಸ್ಯತ್ವ ನಾಮಪದ ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಮುಖ್ಯ ಪದ ವರ್ಗಗಳು ಕನ್ನಡದಲ್ಲಿವೆ ಎಂಬುದನ್ನು ಈ ಮೂರು ರೀತಿಯ ಪದಗಳ ನಡುವೆ ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಮೇಲೆ ವಿವರಿಸಿದಂತಹ ವ್ಯತ್ಯಾಸಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ ನಾಮಪದ ಮತ್ತು ಗುಣ ಪದಗಳ ನಡುವೆ ಇಂತಹ ವ್ಯತ್ಯಾಸಗಳಾವುವು ಸಂಸ್ಕೃತದಲ್ಲಿ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ ಆ ಭಾಷೆಯಲ್ಲಿ ಈ ರೀತಿ ಎರಡು ಬೇರೆ ಬೇರೆ ಪದವರ್ಗಗಳಿರುವ ಬದಲು ನಾಮಪದವೆಂಬ ಒಂದೇ ಪದ ವರ್ಗ ಇದೆ ಎಂದು ಹೇಳುವ ಅವಶ್ಯಕತೆ ಇದೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಒಂದು ಪ್ರಾಮುಖ್ಯವಾದ ವ್ಯತ್ಯಾಸವೇ ಅವುಗಳ ಪದ ರಚನೆಯಲ್ಲಿ ಕಾಣಿಸುವ ಹಲವಾರು ವ್ಯತ್ಯಾಸಗಳಿಗೆ ಮೂಲ ಕಾರಣವೇ ಎಂಬುದನ್ನು ಮುಂದೆ ನೋಡಲಿರುವೆವು ಕನ್ನಡ ಪದಗಳನ್ನೆಲ್ಲ ಈ ರೀತಿ ಮೂರು ಮುಖ್ಯ

ಪದ ವರ್ಗಗಳಲ್ಲಿ ವಿಂಗಡಿಸ ಹೊರಟಾಗ ಯಾವ ಯಾವ ಪದಗಳನ್ನು ಯಾವ ಯಾವ ವರ್ಗಗಳಲ್ಲಿ ಸೇರಿಸಬೇಕು ಎಂಬ ವಿಷಯದಲ್ಲಿ ಸಂದೇಹ ಉಂಟಾಗಲು ಸಾಧ್ಯವಿದೆ ಇದಕ್ಕೆ ಒಂದು ಕಾರಣವೇನೆಂದರೆ ಕೆಲವು ಪದಗಳ ಬಳಕೆ ಒಂದು ಪದ ವರ್ಗಕ್ಕೆ ಮಾತ್ರವೇ ಸೀಮಿತವಾಗಿರದೆ ಎರಡು ಇಲ್ಲವೇ ಮೂರು ಪದ ವರ್ಗಗಳಿಗೂ ವಿಸ್ತರಿಸಿ ಇರಲು ಸಾಧ್ಯವಿದೆ ಉದಾಹರಣೆಗಾಗಿ ಉದ್ದ ಎಂಬ ಪದ ಒಂದು ವಾಕ್ಯದಲ್ಲಿ ಗುಣಪದವಾಗಿಯೂ ಬರಬಲ್ಲುದು ಉದಾಹರಣೆಗೆ ಉದ್ದ ಗೋಡೆ ಮತ್ತು ನಾಮಪದವಾಗಿಯೂ ಬರಬಲ್ಲುದು ಉದಾಹರಣೆಗೆ ಗೋಡೆಯ ಉದ್ದ ಹಾಡು ಎಂಬ ಪದ ನಾಮಪದವಾಗಿಯೂ ಬರಬಲ್ಲುದು ಉದಾಹರಣೆಗೆ ಅವನೊಂದು ಹಾಡನ್ನು ಬರೆದ ಕ್ರಿಯಾಪದವಾಗಿಯೂ ಬರಬಲ್ಲುದು ಉದಾಹರಣೆಗೆ ಅವನೊಂದು ಕವಿತೆಯನ್ನು ಹಾಡಿದ ಇನ್ನೊಂದು ಕಾರಣವೇನೆಂದರೆ ಕೆಲವು ಪದಗಳು ಕೆಲವು ವಿಷಯಗಳಲ್ಲಿ ಒಂದು ಪದ ವರ್ಗಕ್ಕೆ ಸೇರುವಂತಿದ್ದರೆ ಬೇರೆ ಕೆಲವು ವಿಷಯಗಳಲ್ಲಿ

ಇನ್ನೊಂದು ಪದ ವರ್ಗಕ್ಕೆ ಸೇರುವಂತಿರುತ್ತವೆ ಉದಾಹರಣೆಗಾಗಿ ನಾಲ್ಕು ಎಂಬ ಸಂಖ್ಯೆಯನ್ನು ಸೂಚಿಸುವ ಪದ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗಿದೆ ಉದಾಹರಣೆಗೆ ನಾಲ್ಕು ಪುಸ್ತಕ ಎಂಬಲ್ಲಿ ಅದು ನೇರವಾಗಿ ಎಂದರೆ ಸಂಬಂಧವನ್ನು ಸೂಚಿಸುವ ಅ ಎಂಬ ಪ್ರತ್ಯಯದ ಸಹಾಯವಿಲ್ಲದೆ ನಾಮಪದದ ಮುಂದೆ ಬಂದಿದೆ ಆದರೆ ಬೇರೆ ಕೆಲವು ವಿಷಯಗಳಲ್ಲಿ ಅದು ನಾಮಪದಗಳ ಹಾಗಿದೆ ಉದಾಹರಣೆಗೆ ನಾಲ್ಕಕ್ಕೆ ನಾಲ್ಕರಿಂದ ನಾಲ್ಕನ್ನು ಇತ್ಯಾದಿ ವಿಭಕ್ತಿ ರೂಪಗಳು ಅದಕ್ಕಿವೆ ಹಾಗಾಗಿ ಇಂತಹ ಪದಗಳನ್ನು ಯಾವ ಪದ ವರ್ಗದಲ್ಲಿ ಸೇರಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಸಂದೇಹ ಉಂಟಾಗಲು ಸಾಧ್ಯವಿದೆ ಆದರೆ ಇಂತಹ ಪರಿಸ್ಥಿತಿ ಇರುವುದು ಭಾಷೆಗಳಲ್ಲಿ ಬರುವ ಪದಗಳ ಸ್ವಾಭಾವಿಕವಾದ ಗುಣಧರ್ಮವೇ ಆಗಿದೆ ಪದವರ್ಗ ಒಂದರಲ್ಲಿ ಸೇರಿಕೊಳ್ಳುವ ಪದಗಳಲ್ಲಿ ಎಲ್ಲವೂ ಒಂದೇ ರೀತಿಯಾಗಿ ಆ ಪದ ವರ್ಗದ ಗುಣಧರ್ಮಗಳನ್ನು ತೋರಿಸುವುದಿಲ್ಲ ಕೆಲವು

ಪದಗಳು ಎಲ್ಲಾ ಗುಣಧರ್ಮಗಳನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು ಆ ಪದ ವರ್ಗದ ಮಾದರಿ ಪದಗಳೆಂದೆನಿಸಿಕೊಳ್ಳುತ್ತವೆ ಆದರೆ ಬೇರೆ ಕೆಲವು ಪದಗಳು ಅಂತಹ ಗುಣಧರ್ಮಗಳು ಗಳಲ್ಲಿ ಕೆಲವನ್ನು ಮಾತ್ರವೇ ತೋರಿಸಿಕೊಳ್ಳುತ್ತಿದ್ದು ಅವು ಆ ಪದ ವರ್ಗದ ಅಂಚಿನಲ್ಲಿ ನಿಲ್ಲುತ್ತುವುಗಳಾಗಿರುತ್ತವೆ ಹಾಗಾಗಿ ಪದವರ್ಗ ಒಂದರ ಗುಣಧರ್ಮಗಳು ಅದರ ಮಾದರಿ ಪದಗಳ ಗುಣಧರ್ಮಗಳು ಮಾತ್ರ ಆ ಪದವರ್ಗದಲ್ಲಿ ಸೇರುವ ಎಲ್ಲಾ ಪದಗಳು ತೋರಿಸುವ ಇಲ್ಲವೇ ತೋರಿಸಬೇಕಾಗಿರುವ ಗುಣಧರ್ಮಗಳಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ ಸಾರಾಂಶ ಕನ್ನಡದಲ್ಲಿ ಮುಖ್ಯವಾಗಿ ಮೂರು ವರ್ಗಗಳಿಗೆ ಸೇರುವ ಪದಗಳಿವೆ ಇವನ್ನು ನಾಮಪದ ಕ್ರಿಯಾಪದ ಮತ್ತು ಗುಣಪದಗಳೆಂದು ಕರೆಯಬಹುದು ಇವುಗಳಲ್ಲಿ ನಾಮಪದಗಳು ವ್ಯಕ್ತಿ ವಸ್ತು ವಿಷಯ ಮೊದಲಾದವುಗಳನ್ನು ಗುರುತಿಸುವುದಕ್ಕಾಗಿಯೂ ಮತ್ತು ಕ್ರಿಯಾಪದಗಳು ಘಟನೆಗಳನ್ನು ನಿರ್ದೇಶಿಸುವುದಕ್ಕಾಗಿಯೂ ವಾಕ್ಯಗಳಲ್ಲಿ ಬಳಕೆಯಾಗುತ್ತವೆ ನಾಮಪದ ಇಲ್ಲವೇ ಕ್ರಿಯಾಪದಗಳ ಅರ್ಥವನ್ನು ಹೆಚ್ಚಿಸಿ ಅವುಗಳ

ವ್ಯಾಪ್ತಿ ಕಡಿಮೆಯಾಗುವಂತೆ ಮಾಡಲು ಗುಣಪದಗಳು ಬಳಕೆಯಾಗುತ್ತವೆ ಪದ ವರ್ಗಗಳ ಸಂಖ್ಯೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆಯಾಗಿರುತ್ತದೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡೇ ಪದ ವರ್ಗಗಳಿದ್ದು ಕನ್ನಡದ ಗುಣಪದಗಳಿಗೆ ಸಮನಾದ ಪದಗಳು ಸಂಸ್ಕೃತದಲ್ಲಿ ನಾಮ ಪದ ವರ್ಗಕ್ಕೆ ಸೇರುತ್ತವೆ ಇದಕ್ಕೆ ಬದಲು ಈ ಪದಗಳು ಕ್ರಿಯಾಪದ ವರ್ಗಕ್ಕೆ ಸೇರುವ ಮಣಿಪುರಿಯಂತಹ ಭಾಷೆಗಳು ಮತ್ತು ಈ ಮೂರು ರೀತಿಯ ಪದಗಳು ಒಂದೇ ಪದ ವರ್ಗದಲ್ಲಿ ಬರುವ ಮುಂಡಾರಿಯಂತಹ ಭಾಷೆಗಳು ಭಾರತದಲ್ಲಿವೆ ಈ ಬೇರೆ ಬೇರೆ ಭಾಷೆಗಳಲ್ಲಿ ವಾಕ್ಯ ರಚನೆಯ ನಿಯಮಗಳು ಬೇರೆ ಬೇರೆಯಾಗಿದ್ದು ವಾಕ್ಯಗಳಲ್ಲಿ ಈ ಪದಗಳು ನಡೆಸಬೇಕಾಗುವ ಕೆಲಸಗಳು ಬೇರೆ ಬೇರೆಯಾಗಿರುವುದೇ ಈ ರೀತಿ ಅವುಗಳಲ್ಲಿ ಬರುವ ಪದವರ್ಗಗಳು ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಿಸಲು ಮುಖ್ಯ ಕಾರಣ ಈ ಮೂರು ಪದವರ್ಗಗಳಿಗೆ ಸೇರುವ

ಪದಗಳ ನಡುವೆ ಕನ್ನಡದಲ್ಲಿ ಹಲವು ರೀತಿಯ ವ್ಯತ್ಯಾಸಗಳಿರುವುದನ್ನು ಕಾಣಬಹುದು ಈ ವ್ಯತ್ಯಾಸಗಳು ವಾಕ್ಯಗಳಲ್ಲಿ ಈ ಪದಗಳು ನಡೆಸಬೇಕಾಗಿರುವ ಪ್ರಾಮುಖ್ಯವಾದ ಕೆಲಸಗಳು ಯಾವುವು ಎಂಬುದರ ಮೇಲೆ ಅವಲಂಬಿಸಿವೆ ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವುದಕ್ಕಾಗಿ ನಾಮಪದಗಳನ್ನು ಹಾಗೆಯೇ ನೇರವಾಗಿ ಬಳಸಲು ಸಾಧ್ಯವಿದೆ ಆದರೆ ಕ್ರಿಯಾಪದ ಇಲ್ಲವೇ ಗುಣಪದಗಳನ್ನು ಅವುಗಳದಲ್ಲದ ಈ ಕೆಲಸದಲ್ಲಿ ಬಳಸಲು ಅವಕ್ಕೆ ಕೆಲವು ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ ಇದೇ ರೀತಿಯಲ್ಲಿ ಕ್ರಿಯಾಪದಗಳ ಕೆಲಸದಲ್ಲಿ ನಾಮಪದ ಇಲ್ಲವೇ ಗುಣಪದಗಳನ್ನು ಮತ್ತು ಗುಣಪದಗಳ ಕೆಲಸದಲ್ಲಿ ನಾಮಪದ ಇಲ್ಲವೇ ಕ್ರಿಯಾಪದಗಳನ್ನು ನೇರವಾಗಿ ಬಳಸಲು ಸಾಧ್ಯವಾಗದು ಈ ಮೂರು ರೀತಿಯ ಪದಗಳ ನಡುವೆ ಅವುಗಳ ಅರ್ಥದಲ್ಲೂ ವ್ಯತ್ಯಾಸವಿದೆ ಗುಣಪದಗಳು ಒಂದೇ ಒಂದು ವಿಶಿಷ್ಟವಾದ ಗುಣಧರ್ಮವನ್ನಷ್ಟೇ ಸೂಚಿಸುವಾದರೆ ನಾಮಪದಗಳು ಹಲವು ಗುಣಧರ್ಮಗಳನ್ನು ಒಟ್ಟಾಗಿ ಸೂಚಿಸುತ್ತವೆ ಮತ್ತು ಇವುಗಳ ಮೂಲಕ ವ್ಯಕ್ತಿ ವಸ್ತು

ಮೊದಲಾದವುಗಳಲ್ಲೊಂದನ್ನು ಗುರುತಿಸುತ್ತವೆ ಗುಣಧರ್ಮಗಳನ್ನು ಸೂಚಿಸುವುದಕ್ಕಿಂತಲೂ ಅಂತಹ ಗುಣಧರ್ಮವನ್ನು ಪಡೆದಿರುವ ವ್ಯಕ್ತಿ ವಸ್ತು ಮೊದಲಾದವುಗಳಲ್ಲೊಂದನ್ನು ಗುರುತಿಸಿ ಸುವುದೇ ಇವುಗಳ ಮುಖ್ಯ ಕೆಲಸ ಹಾಗಾಗಿ ನಾಮಪದಗಳ ಬಳಕೆಯಲ್ಲಿ ಅವುಗಳ ಒಳ ರಚನೆಗೆ ಇಲ್ಲವೇ ಅಂತಹ ರಚನೆಯಿಂದ ದೊರಕುವ ಅರ್ಥಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲ ಕನ್ನಡದಲ್ಲಿ ಬರುವ ಪದಗಳ ಒಳ ರಚನೆ ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಅವು ಬರುವ ಈ ಮೂರು ಪದ ವರ್ಗಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಂಡಿರುವುದು ಅತ್ಯವಶ್ಯ



ಅಧ್ಯಾಯ 3 — ನಾಮಪದಗಳ ಒಳ ರಚನೆ

Internal Structure of Nouns

Part 13

Watch on YouTube

ಈ ಭಾಗ ಪುಸ್ತಕದ (೨) ಅಗಸ ಕತ್ತೆಗೆ ಹೊಡೆಯುತ್ತಿದ್ದಾನೆ. ಅನ್ನು ಆಧರಿಸಿದೆ.

ಈ (೨)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳು ಹೆಸರಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ. ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿರುವ ಗುಣಧರ್ಮವೊಂದನ್ನು ವರ್ಣಿಸು ವುದರ ಮೂಲಕ ಅವನ್ನು ಗುರುತಿಸುವಂತಹ ನಾಮಪದಗುಚ್ಛಗಳಲ್ಲೂ ಹೆಸರಿಸುವ ನಾಮಪದಗಳಿರಬಲ್ಲುವು. ಆದರೆ ಇವು ಬೇರೆ ಹೆಸರಿಸುವ ನಾಮ ಪದಗಳೊಂದಿಗೆ, ಇಲ್ಲವೇ ಗುಣಪದ, ಸಂಖ್ಯಾಪದ, ಸರ್ವನಾಮ ಮೊದಲಾದವು ಗಳೊಂದಿಗೆ ಸೇರಿಕೊಂಡು ಈ ರೀತಿ ವರ್ಣಿಸುವ ಕೆಲಸವನ್ನು ನಡೆಸುತ್ತವೆ. ಉದಾಹರಣೆಗಾಗಿ, ರಾಜುವಿನ ಅಣ್ಣ ಎಂಬ ನಾಮಪದಗುಚ್ಛದಲ್ಲಿ ಅಣ್ಣ ಎಂಬ ಹೆಸರಿಸುವ ನಾಮಪದ(ರೂಢನಾಮ)ವು ರಾಜು ಎಂಬ ಇನ್ನೊಂದು…



Part 14

Watch on YouTube

ಈ ಭಾಗ ಪುಸ್ತಕದ ೩.೨: ಜೋಡುಪದಗಳು ಮತ್ತು ನಾಮಪದಗುಚ್ಛಗಳು ಅನ್ನು ಆಧರಿಸಿದೆ.

ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನಗಳ ನಡುವಿನ ಮುಖ್ಯ ವ್ಯತ್ಯಾಸವೆಂತಹದು ಎಂಬುದನ್ನು ಹೆಸರಿಸುವ ವಿಧಾನವನ್ನು ಬಳಸುವ ‘ಜೋಡುಪದ’ಗಳಿಗೂ (ಎಂದರೆ ಎರಡು ಅಥವಾ ಜಾಸ್ತಿ ಪದಗಳನ್ನು ‘ಸಮಾಸ’ ವೆಂಬ ವಿಧಾನದ ಮೂಲಕ ಜೋಡಿಸುವುದರ ಮೂಲಕ ತಯಾರಾದ ಪದ ಗಳಿಗೂ) ಮತ್ತು ನಾಮಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವೆಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಕರಿಹಲಗೆ ಎಂಬ ಜೋಡುಪದದೊಂದಿಗೆ ಬಿಳಿಸೀರೆ ಎಂಬ ನಾಮಪದಗುಚ್ಛವನ್ನು ಹೋಲಿಸಿ ನೋಡಬಹುದು. ಇವೆರಡರ ನಡುವೆ ಬಳಕೆಯಲ್ಲಿ ಬಹಳ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬೇಕು. ಬಿಳಿ ಸೀರೆ ಎಂಬುದರ ಮೂಲಕ ಬೆಳ್ಳಗಿರುವ ಯಾವುದೇ ಸೀರೆಯನ್ನು ಬೇಕಿದ್ದರೂ ಗುರುತಿಸಿ…



Part 15

Watch on YouTube

Note: This transcript has not been cleaned and may contain errors.

ವ್ಯತ್ಯಾಸಗಳು ಮೇಲೆ ಸೂಚಿಸಿರುವಂತೆ ವ್ಯಕ್ತಿ ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಸರಿಸುವ ವಿಧಾನವನ್ನು ಬಳಸುವ ನಾಮಪದಗಳಿಗೂ ಮತ್ತು ವರ್ಣಿಸುವ ವಿಧಾನವನ್ನು ಬಳಸುವ ನಾಮಪದ ಗುಚ್ಚಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ ಅವುಗಳಿಗೆ ಅರ್ಥ ಹೇಳುವ ಕ್ರಮದಲ್ಲಿ ವಾಕ್ಯಗಳಲ್ಲಿ ಬಳಸಬೇಕಾದಾಗ ಅವನ್ನು ಆಯ್ದುಕೊಳ್ಳುವ ಕ್ರಮದಲ್ಲಿ ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳ ಸ್ವರೂಪದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ ಇವೆಲ್ಲವಕ್ಕೂ ಅವು ಬಳಸುವ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು ವಿಧಾನಗಳ ನಡುವಿರುವ ವ್ಯತ್ಯಾಸಗಳೇ ಮೂಲ ಕಾರಣವೆಂಬುದನ್ನು ಈ ವ್ಯತ್ಯಾಸಗಳ ಪರಿಶೀಲನೆಯಿಂದ ತಿಳಿಯಬಹುದು ತಯಾರಿಕೆ ಮತ್ತು ಬಳಕೆ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದ ಗುಚ್ಚಗಳಿಗೂ ನಡುವೆ ಅವುಗಳ ತಯಾರಿಕೆ ಮತ್ತು ಬಳಕೆಗಳಲ್ಲಿ ವ್ಯತ್ಯಾಸವಿದೆ ಹೆಸರಿಸುವ ನಾಮಪದಗಳಲ್ಲಿ ಪ್ರತಿಯೊಂದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳ ಅವಶ್ಯಕತೆ ತೋರಿ ಬಂದಾಗ

ಭಾಷೆಯನ್ನು ಬಳಸುವ ಒಬ್ಬ ವ್ಯಕ್ತಿ ತಯಾರಿಸಿರುತ್ತಾನೆ ಇಲ್ಲವೇ ಬೇರೆ ಭಾಷೆಯಿಂದ ಎರವಲಾಗಿ ಪಡೆದಿರುತ್ತಾನೆ ಅನಂತ ನಂತರ ಸಮಾಜದ ಮನ್ನಣೆ ಪಡೆದು ಇಂತಹ ಪದಗಳೆಲ್ಲವೂ ಒಂದೊಂದಾಗಿ ಭಾಷೆಯಲ್ಲಿ ಬಳಕೆಗೆ ಬಂದಿರುತ್ತವೆ ಇದಕ್ಕೆ ವಿರುದ್ಧವಾಗಿ ವರ್ಣಿಸುವ ನಾಮಪದ ಗುಚ್ಚಗಳು ಅವನ್ನು ಬಳಸಬೇಕಾಗಿರುವ ಪ್ರತಿಯೊಂದು ಸಂದರ್ಭದಲ್ಲೂ ವ್ಯಾಕರಣ ನಿಯಮಗಳಿಗೆ ಅನುಸಾರವಾಗಿ ಪುನಃ ಪುನಃ ರಚಿತವಾಗುತ್ತವೆ ಉದಾಹರಣೆಗಾಗಿ ಉಗಿಬಂಡಿ ಎಂಬ ಹೆಸರಿಸುವ ನಾಮಪದವನ್ನು ಶೀಲಿಸಬಹುದು ಅದು ಹೆಸರಿಸುವ ಸಾಧನ ನಮ್ಮ ಗಮನಕ್ಕೆ ಇಲ್ಲವೇ ಉಪಯೋಗಕ್ಕೆ ಬಂದಾಗ ಅವನ್ನು ಹೆಸರಿಸುವುದಕ್ಕಾಗಿ ಯಾರೋ ಒಬ್ಬರು ಆ ಪದವನ್ನು ರಚಿಸಿರಬೇಕು ಮತ್ತು ಅನಂತರ ಇತರರು ಆ ಪದ ಸರಿಯಾದುದೆಂದು ಅದನ್ನು ಬಳಸತೊಡಗಿದುದರಿಂದ ಅದು ನಮ್ಮ ಭಾಷೆಯಲ್ಲಿ ಬಳಕೆಗೆ ಬಂದಿರಬೇಕು ಇದಕ್ಕೆ ಬದಲಾಗಿ ಬಸ್ಸು ಎಂಬ ಪದ ಸೂಚಿಸುವ ಇಂತಹದೇ ಇನ್ನೊಂದು ಸಾಧನವನ್ನು ನಾವು

ಬಳಸತೊಡಗಿದಾಗ ಅದನ್ನು ಹೆಸರಿಸಲು ಇಂಗ್ಲಿಷ್ ಭಾಷೆಯಿಂದ ಪದ ಒಂದನ್ನು ಎರವಲಾಗಿ ಬಳೆದಿದ್ದು ಆ ಪದವೇ ರೂಡಿಗೆ ಬಂದಿರಬೇಕು ಇಂತಹ ಹೆಸರಿಸುವ ನಾಮಪದಗಳೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ತಯಾರಾಗಿ ಇಲ್ಲವೇ ಎರವಲಾಗಿ ಬೇರೆ ಭಾಷೆಗಳಿಂದ ಬಂದು ನಮ್ಮ ಭಾಷೆಯಲ್ಲಿ ರೂಢಿಯಾಗಿರುವ ಪದಗಳು ವರ್ಣಿಸುವ ನಾಮಪದ ಗುಚ್ಚ ಗಳ ಬಳಕ್ಕೆ ಈ ರೀತಿಯದಲ್ಲ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸಬೇಕಾದಾಗ ಅವುಗಳಲ್ಲಿ ಕಾಣಿಸುವ ಇಲ್ಲವೇ ಬೇರೆ ರೀತಿಯಲ್ಲಿ ನಮ್ಮ ಗೋಚರಕ್ಕೆ ಬರುವ ಗುಣಧರ್ಮಗಳಲ್ಲೊಂದನ್ನು ಆರಿಸಿ ಅದರ ಮೂಲಕ ಆ ವ್ಯಕ್ತಿ ಇಲ್ಲವೇ ವಸ್ತುವನ್ನು ವರ್ಣಿಸಿ ಹೇಳಲು ನಾಮಪದ ಗುಚ್ಚ ಒಂದನ್ನು ರಚಿಸಿಕೊಳ್ಳುತ್ತೇವೆ ಉದಾಹರಣೆಗಾಗಿ ಮೇಜಿನ ಮೇಲೆ ಮೂರು ನಾಲ್ಕು ಚೆಂಡುಗಳಿದ್ದು ಅವಲೊಂದನ್ನು ಗುರುತಿಸಿ ಹೇಳಲು ಎಂದರೆ ಇತರ ಚೆಂಡುಗಳಿಂದ ಅದನ್ನು ಪ್ರತ್ಯೇಕಿಸಿ ಹೇಳಲು ಆ

ಚೆಂಡಿನಲ್ಲಿ ಕಾಣಿಸುವ ಮತ್ತು ಇತರ ಚೆಂಡುಗಳಲ್ಲಿ ಕಾಣಿಸದಿರುವ ಗುಣಧರ್ಮ ಒಂದನ್ನು ಆರಿಸಿಕೊಳ್ಳುತ್ತೇವೆ ಮತ್ತು ಅದನ್ನು ಸೂಚಿಸುವಂತಹ ಪದಗುಚ್ಚ ಒಂದನ್ನು ರಚಿಸಿಕೊಳ್ಳುತ್ತೇವೆ ಈ ರೀತಿ ಸಂದರ್ಭಕ್ಕನುಸಾರವಾಗಿ ಕೆಂಪು ಚೆಂಡು ದೊಡ್ಡ ಚೆಂಡು ಒಡೆದ ಚೆಂಡು ಮೊದಲಾದ ಪದಗುಚ್ಚಗಳಲ್ಲೊಂದನ್ನು ರಚಿಸಿ ಅದು ಆ ಗುಣಧರ್ಮವನ್ನು ವರ್ಣಿಸುವುದರ ಮೂಲಕ ನಾವು ಗುರುತಿಸಬೇಕಾಗಿರುವ ಚೆಂಡನ್ನು ಗುರುತಿಸುವಂತೆ ಮಾಡುತ್ತೇವೆ ಗುಣಧರ್ಮದ ಆಯ್ಕೆ ಮೇಲೆ ಸೂಚಿಸಿರುವ ವ್ಯತ್ಯಾಸದ ಫಲವೇನೆಂದರೆ ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭದಲ್ಲಿ ಅವು ಗುರುತಿಸಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂದಿಲ್ಲ ಆದರೆ ವರ್ಣಿಸುವ ನಾಮಪದ ಗುಚ್ಚಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭಗಳಲ್ಲೆಲ್ಲ ಅವಶ್ಯವಾಗಿಯೂ ಅವು ಗುರುತಿಸಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂಬ ನಿಯಮವಿದೆ ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಆ ಹೆಸರನ್ನು ಉತ್ಪಾದಿಸುವ ಸಮಯದಲ್ಲಿ ಮಾತ್ರವೇ ಅವು ಗುರುತಿಸುವ

ವಸ್ತುವಿನಲ್ಲಿ ಇದ್ದಿರಲು ಸಾಧ್ಯವಿದೆ ಉದಾಹರಣೆಗಾಗಿ ಹೊಸ ಮನೆ ಎಂಬ ನಾಮಪದ ಒಂದು ವಠಾರದಲ್ಲಿ ಇರುವ ಒಂದು ಮನೆಗೆ ಆ ವಠಾರದವರು ಕೊಟ್ಟಿರುವ ಮತ್ತು ಅನಂತರ ರೂಡಿಗೆ ಬಂದಿರುವ ಹೆಸರಾಗಿರಲು ಸಾಧ್ಯವಿದೆ ಆ ಮನೆ ಹಳೆಯದಾದ ಮೇಲು ಅದನ್ನು ಅದೇ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ ಮತ್ತು ಬೇರೆ ಹಲವಾರು ಹೊಸ ಹೊಸ ಮನೆಗಳನ್ನು ಅದರ ಸುತ್ತಮುತ್ತ ಕಟ್ಟಲಾಗಿದೆಯಾದರೂ ಆ ಹಳೆಯದಾಗಿರುವ ಮನೆಯನ್ನೇ ಹೊಸ ಮನೆ ಎಂಬ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ ಮೇಲೆ ಕೊಟ್ಟಿರುವ ಕರಿಹಲಗೆ ಎಂಬ ಪದದ ಬಳಕೆಯು ಇದೇ ರೀತಿಯದು ಆ ಪದವನ್ನು ಮೊದಲ ಬಾರಿಗೆ ತಯಾರಿಸಿ ಬಳಸಿದ ಸಮಯದಲ್ಲಿ ಉಪಾಧ್ಯಾಯರು ಕ್ಲಾಸಿನಲ್ಲಿ ಬರೆಯಲು ಬಳಸುತ್ತಿದ್ದ ಸಾಧನ ಹಲಗೆಗೆ ಕಪ್ಪು ಬಣ್ಣ ಬಳಿಯುವುದರ ಮೂಲಕ ರಚಿತವಾಗಿದ್ದು ಆಗಿರಬೇಕು ಹಾಗಾಗಿ ಕರಿಹಲಗೆ ಎಂಬ ಹೆಸರು

ಇವತ್ತಿನ ಕಾಲದಲ್ಲಿ ಸರಿಯಾಗಿಯೇ ಆ ಸಾಧನದ ಗುಣಧರ್ಮವನ್ನು ಒಂದನ್ನು ಸೂಚಿಸುತ್ತಿತ್ತು ಆದರೆ ಅನಂತರ ಬೇರೆ ಬೇರೆ ಬಣ್ಣದ ಮತ್ತು ಬೇರೆ ಬೇರೆ ದ್ರವ್ಯಗಳಿಂದ ಮಾಡಿದ ಸಾಧನಗಳು ಆ ಕಾರ್ಯಕ್ಕಾಗಿ ಬಳಕೆಗೆ ಬಂದಿವೆ ಆದರೂ ಕರಿಹಲಗೆ ಎಂಬ ಆ ಸಾಧನದ ಹೆಸರು ಬದಲಾಗದೆ ಹಾಗೆಯೇ ರೂಢಯಲ್ಲಿ ಉಳಿದಿದೆ ಉದಾಹರಣೆಗಾಗಿ ಕರಿಹಲಗೆ ಎಂಬ ಪದವನ್ನು ಪ್ರಯೋಗಿಸಿದಾಗ ಒಂದು ವಿಶಿಷ್ಟವಾದ ಸಾಧನ ನಮ್ಮ ಮನಸ್ಸಿನಲ್ಲಿ ಬರುವುದಲ್ಲದೆ ಕಪ್ಪು ಬಣ್ಣ ಇಲ್ಲವೇ ಹಲಗೆಯಿಂದ ರಚಿತವಾದ ಸಾಧನ ಎಂಬ ಅಂಶಗಳು ನಮ್ಮ ಮನಸ್ಸಿಗೆ ಬರುವುದಿಲ್ಲ ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಮಾತ್ರ ಇವು ನಮ್ಮ ಗಮನಕ್ಕೆ ಬಂದು ಇಲ್ಲವೇ ಯಾರಾದರೂ ಇವನ್ನು ನಮ್ಮ ಗಮನಕ್ಕೆ ತಂದು ಅಂತಹ ಸಮಯದಲ್ಲಿ ಆ ಹೆಸರಿಗೂ ಮತ್ತು ಅದು ಗುರುತಿಸುವ ವಸ್ತುವಿಗೂ ನಡುವೆ ಗುಣಧರ್ಮದ ಮಟ್ಟಿಗೆ

ಅಸಾಂಗತ್ಯವಿದೆ ಎಂಬ ವಿಷಯ ನಮ್ಮ ಗಮನಕ್ಕೆ ಬರುತ್ತದೆ ಗುಣಧರ್ಮದ ಆಯ್ಕೆಯಲ್ಲಿ ಹೆಸರುಗಳಿಗೂ ಮತ್ತು ವರ್ಣನೆಗಳಿಗೂ ನಡುವೆ ಇನ್ನೊಂದು ವ್ಯತ್ಯಾಸವಿದೆ ಒಂದು ವಸ್ತುವನ್ನು ಹೆಸರಿಸುವಾಗ ಅದರಲ್ಲಿ ಕಾಣಿಸುವ ಹಲವಾರು ಗುಣಧರ್ಮಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ ಉದಾಹರಣೆಗಾಗಿ ಜಲಜನಕ ಎಂಬುದು ಒಂದು ವಿಶಿಷ್ಟವಾದ ಅನಿಲದ ಹೆಸರು ಇದು ನೀರಿನ ಒಂದು ಘಟಕವಾಗಿದ್ದು ಆಮ್ಲಜನಕವೆಂಬ ಇನ್ನೊಂದು ಅನಿಲದೊಡನೆ ಸೇರಿ ನೀರನ್ನುಂಟು ಮಾಡುವ ಗುಣಧರ್ಮ ಇದಕ್ಕಿದೆ ಈ ಗುಣಧರ್ಮದ ಆಧಾರದ ಮೇಲೆ ಇದನ್ನು ಜಲಜನಕ ಎಂಬ ಹೆಸರಿನಿಂದ ಕರೆಯಲಾಗಿದೆ ಈ ಒಂದು ಗುಣಧರ್ಮ ಮಾತ್ರವಲ್ಲದೆ ಬೇರೆಯು ಹಲ ಕೆಲವು ಗುಣಧರ್ಮಗಳು ಜಲಜನಕವೆಂಬ ಈ ಅನಿಲಕ್ಕಿವೆ ಉದಾಹರಣೆಗಾಗಿ ಇದು ಅತ್ಯಂತ ಹಗುರವಾದ ಬಣ್ಣವು ವಾಸನೆಯು ಇಲ್ಲದ ಕಣ್ಣಿಗೆ ಕಾಣಿಸದ ಒಂದು ಮೂಲ ಧಾತು ಇದನ್ನು ಹೆಸರಿಸಲು ಈ ಗುಣಧರ್ಮಗಳಲ್ಲಿ ಯಾವುದನ್ನು ಬೇಕಿದ್ದರೂ

ಆರಿಸಿಕೊಳ್ಳಬಹುದಿತ್ತು ಆದರೆ ನೀರಿನ ಘಟಕವೆಂಬ ಅಂಶ ಮುಖ್ಯವಾಗಿ ತೋರಿದ ಕಾರಣ ಅದನ್ನೇ ಆ ಹೆಸರನ್ನು ತಯಾರಿಸುವವರು ಆರಿಸಿಕೊಂಡಿರಬೇಕು ಸಾಮಾನ್ಯವಾಗಿ ಕಣ್ಣಿಗೆ ಅಥವಾ ಮನಸ್ಸಿಗೆ ಎದ್ದು ಕಾಣಿಸುವಂತಹ ಮತ್ತು ಶಾಶ್ವತವಾಗಿ ಉಳಿಯಬಹುದೆಂದು ಮನಸ್ಸಿಗೆ ಅನಿಸುವಂತಹ ಗುಣಧರ್ಮವನ್ನು ವಸ್ತು ಒಂದಕ್ಕೆ ಹೆಸರಿಡುವಾಗ ಆರಿಸಿಕೊಳ್ಳುವುದು ರೂಢ ಹೆಸರಿಸುವ ನಾಮಪದಗಳ ಉತ್ಪಾದನೆಯಲ್ಲಿ ಕಾಣಿಸುವ ಈ ಆಯ್ಕೆ ಎಂಬ ಅಂಶ ವರ್ಣಿಸುವ ನಾಮಪದ ಗುಚ್ಚಗಳ ಉತ್ಪಾದನೆ ಇಲ್ಲವೇ ಬಳಕೆಯಲ್ಲಿ ಕಾಣಿಸುವುದಿಲ್ಲ ಒಂದು ವಸ್ತುವಿನಲ್ಲಿ ಎಷ್ಟೆಲ್ಲಾ ಗುಣಧರ್ಮಗಳಿವೆಯೋ ಅವೆಲ್ಲವನ್ನು ಬೇರೆ ಬೇರೆ ವರ್ಣಿಸುವ ಪದಗುಚ್ಚಗಳ ಮೂಲಕ ಸೂಚಿಸಲು ಸಾಧ್ಯ ಸಾಧ್ಯವಿದೆ ಈ ಗುಣಧರ್ಮಗಳು ಶಾಶ್ವತವಿರಬಹುದು ಇಲ್ಲವೇ ಕ್ಷಣಿಕವಿರಬಹುದು ಕಣ್ಣಿಗೆ ಎದ್ದು ಕಾಣಿಸುವಂತಹ ಇರಬಹುದು ಇಲ್ಲವೇ ಅಸ್ಪಷ್ಟವಾದ ಆಗಿರಲು ಇದಲ್ಲದೆ ಹೆಸರಿಸುವುದಕ್ಕಾಗಿ ಗುಣಧರ್ಮ ಒಂದನ್ನು ಆರಿಸುವಾಗ ಹೆಸರಿಸಬೇಕಾಗಿರುವ ವ್ಯಕ್ತಿ ವಸ್ತು ಮೊದಲಾದವುಗಳನ್ನು ಅಂತಹವೇ

ಇತರ ವ್ಯಕ್ತಿ ವಸ್ತು ಮೊದಲಾದವುಗಳಿಗಿಂತ ಭಿನ್ನ ವಾದವುಗಳೆಂಬುದನ್ನು ತೋರಿಸಬಲ್ಲಂತಹ ಗುಣಧರ್ಮವನ್ನೇ ಆರಿಸಿಕೊಳ್ಳುವ ಕ್ರಮ ರೂಢಯಲ್ಲಿದೆ ಉದಾಹರಣೆಗಾಗಿ ಯುದ್ಧದಲ್ಲಿ ತೊಡಗಿರುವ ಸೈನಿಕರಲ್ಲಿ ಕಾಲಿನಲ್ಲಿ ಚಲಿಸಿ ಕಾದಾಡುವವರನ್ನು ಹೆಸರಿಸಲು ಕಾಲಾಳು ಎಂಬ ಪದ ರೂಡಿಗೆ ಬಂದಿದೆ ಈ ಹೆಸರು ಕುದುರೆಯ ಮೇಲೆ ಇಲ್ಲವೇ ಆನೆಯ ಮೇಲೆ ಕುಳಿತು ಕಾದಾಡುವ ಇತರ ಸೈನಿಕರಿಗಿಂತ ಅವರು ಭಿನ್ನರಾಗಿರುವುದನ್ನು ಸೂಚಿಸುತ್ತದೆ ಬೇರೆ ಸಂದರ್ಭಗಳಲ್ಲಿ ಕಾಲಿನಿಂದ ಚಲಿಸುವವರನ್ನು ಉದಾಹರಣೆಗೆ ರಸ್ತೆಯಲ್ಲಿ ಚಲಿಸುವವರನ್ನು ಕಾಲಾಳು ಎಂಬ ಈ ಪದ ಗುರುತಿಸಲಾರದು ಅವರು ಸೈಕಲ್ ಸ್ಕೂಟರ್ ಕಾರು ಮೊದಲಾದವುಗಳಲ್ಲಿ ಚಲಿಸುವವರಿಗಿಂತ ಬೇರೆ ಎಂಬುದನ್ನು ಸೂಚಿಸಲು ಪಾದಾಚಾರಿ ಎಂಬ ಸಂಸ್ಕೃತದಿಂದ ಎರಲಾಗಿ ಬಂದ ಬೇರೆಯೇ ಒಂದು ಹೆಸರು ರೂಡಿಗೆ ಬಂದಿದೆ ಅರ್ಥದಲ್ಲಿ ವ್ಯತ್ಯಾಸ ವರ್ಣಿಸುವ ನಾಮಪದ ಗುಚ್ಚಗಳಿಗೆ ಅರ್ಥ ಹೇಳುವುದು ಸುಲಭ ಅವುಗಳ ಅಂಗಗಳಾಗಿ ಬಂದಿರುವ

ಪದ ಮತ್ತು ಪ್ರತ್ಯಯಗಳಿಂದ ಸಿದ್ಧವಾಗುವ ಅರ್ಥವೇ ಅವುಗಳ ಅರ್ಥವು ಆಗಿರುವುದರಿಂದ ಈ ಕೆಲಸವನ್ನು ಭಾಷೆಯನ್ನು ಬಳಸುವವರೆಲ್ಲರೂ ಮಾಡಬಲ್ಲರು ಉದಾಹರಣೆಗಾಗಿ ಕೆಂಪು ಚೆಂಡು ಎಂಬ ವರ್ಣಿಸುವ ನಾಮಪದ ಗುಚ್ಚಕ್ಕೆ ಅರ್ಥ ಹೇಳುವುದು ಸುಲಭ ಕೆಂಪು ಮತ್ತು ಚೆಂಡು ಎಂಬ ಎರಡು ಪದಗಳ ಸೇರಿಕೆಯಿಂದ ಈ ಪದಗುಚ್ಚವನ್ನು ತಯಾರಿಸಲಾಗಿದ್ದು ಕೆಂಪಾಗಿರುವ ಚೆಂಡು ಎಂಬುದಾಗಿ ಇದಕ್ಕೆ ಅರ್ಥವನ್ನು ಹೇಳಬಹುದು ಹೆಸರಿಸುವ ನಾಮಪದಗಳು ಇವಕ್ಕಿಂತ ತೀರಾ ಭಿನ್ನವಾದವುಗಳು ಮೇಲೆ ಸೂಚಿಸಿದಂತೆ ಅವುಗಳ ಅರ್ಥವೇನೆಂಬುದನ್ನು ತಿಳಿಯಲು ಆ ಪದಗಳ ಒಳ ರಚನೆ ಸಹಾಯಕವಾಗಬಲ್ಲುದಾದರೂ ಅದೊಂದೇ ಅವು ಗಳ ಅರ್ಥಕ್ಕೆ ಆಧಾರವಾಗಲಾರದು ಹೆಸರಿಸುವ ನಾಮಪದ ಒಂದು ಎಂತಹ ವಸ್ತುಗಳನ್ನು ಇಲ್ಲವೇ ವ್ಯಕ್ತಿಗಳನ್ನು ಹೆಸರಿಸುತ್ತದೆ ಮತ್ತು ಅವುಗಳಲ್ಲಿ ಸಮಾನವಾಗಿರುವ ಗುಣಧರ್ಮಗಳು ಯಾವುವು ಎಂಬುದನ್ನು ಪರಿಶೀಲಿಸಿದ ಮೇಲೆನೇ ಆ ಪದಕ್ಕೆ ಸರಿಯಾದ ಅರ್ಥವನ್ನು ಹೇಳಲು

ಸಾಧ್ಯವಾದಿತು ಉದಾಹರಣೆಗಾಗಿ ಹೊಗೆಸೊಪ್ಪು ಎಂಬ ನಾಮಪದವನ್ನು ಪರಿಶೀಲಿಸಬಹುದು ಇದೊಂದು ಹೆಸರಿಸುವ ನಾಮಪದ ಹೊಗೆ ಮತ್ತು ಸೊಪ್ಪು ಎಂಬ ಎರಡು ಪದಗಳ ಜೋಡಣೆಯಿಂದ ಈ ಪದ ತಯಾರಾಗಿದೆ ಅದರ ಈ ಒಳ ರಚನೆ ಅದರ ಅರ್ಥವೇನೆಂಬುದನ್ನು ಸೂಕ್ಷ್ಮವಾಗಿ ತಿಳಿಸಬಲ್ಲುದು ಆದರೆ ಸ್ಪಷ್ಟವಾಗಿ ತಿಳಿಸಲಾರದು ಎಲ್ಲಾ ರೀತಿಯ ಎಲೆಗಳನ್ನು ಉರಿಸಿದಾಗಲೂ ಹೊಗೆ ಹೊರ ಬರುತ್ತದೆ ಆದರೆ ಅವನ್ನೆಲ್ಲ ನಾವು ಹೊಗೆಸೊಪ್ಪು ಎಂಬ ಹೆಸರಿನಿಂದ ಕರೆಯುವುದಿಲ್ಲ ಹೊಗೆ ಸೇದುವುದಕ್ಕಾಗಿ ಬೀಡಿ ಸಿಗರೆಟ್ ಮೊದಲಾದುವನ್ನು ತಯಾರಿಸಲು ಬಳಸುವ ಮತ್ತು ಹೊಗೆಯನ್ನು ಬರಿಸದೇನೆ ನೇರವಾಗಿ ಬಾಯಲ್ಲಿ ಇಟ್ಟು ಜಗಿಯುವ ಇಲ್ಲವೇ ಪುಡಿಮಾಡಿ ನಸ್ಯವಾಗಿ ಬಳಸುವ ಒಂದು ವಿಶಿಷ್ಟವಾದ ಗಿಡವನ್ನು ಮತ್ತು ಅದರ ಎಲೆಯನ್ನು ಮಾತ್ರವೇ ಅದು ಗುರುತಿಸುತ್ತದೆ ಈ ಗಿಡದ ಗುಣಧರ್ಮಗಳನ್ನು ಮಾತ್ರವೇ ಹೊಗೆಸೊಪ್ಪು ಎಂಬ ಪದಕ್ಕೆ ಅರ್ಥ ಹೇಳುವಾಗ

ಬಳಸಿಕೊಳ್ಳಲು ಸಾಧ್ಯ ಮೇಲೆ ಕೊಟ್ಟಿರುವ ಜಲಜ ಜನಕ ಎಂಬ ಪದದ ಅರ್ಥವು ಹೀಗೆಯೇ ನೀರನ್ನುಂಟು ಮಾಡುವ ಅನಿಲ ಎಂಬುದಾಗಿ ಬರಿಯ ಒಳ ರಚನೆಯ ಆಧಾರದ ಮೇಲೆ ಅದಕ್ಕೆ ಅರ್ಥ ಕೊಟ್ಟೆವಾದರೆ ಅದು ತಪ್ಪಾದೀತು ಯಾಕೆಂದರೆ ಆಮ್ಲಜನಕವೆಂಬ ಇನ್ನೊಂದು ಅನಿಲವು ಜಲಜನಕದ ಜೊತೆ ಸೇರಿ ನೀರನ್ನುಂಟು ಮಾಡಬಲ್ಲುದು ಜಲಜನಕವೆಂಬ ಹೆಸರು ರೂಢಯಲ್ಲಿ ಯಾವ ಅನಿಲವನ್ನು ಗುರುತಿಸುತ್ತದೆಯೋ ಆ ಅನಿಲದ ಬೇರೆ ಬೇರೆ ಗುಣಧರ್ಮಗಳ ಆಧಾರದ ಮೇಲೆ ಮಾತ್ರವೇ ಆ ಪದದ ಅರ್ಥವನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯ ಪ್ರತ್ಯವಿರುವ ಪದಗಳು ಹೆಸರಿಸುವ ವಿಧಾನದಲ್ಲಿ ಬಳಕೆಯಾಗುತ್ತಿವೆ ಆದರೆ ಅವಕ್ಕೆ ಅರ್ಥ ಹೇಳಬೇಕಿದ್ದರು ನಾವು ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಉದಾಹರಣೆಗಾಗಿ ಅಂಜಿಕೆ ನಂಬಿಕೆ ಹೊದಿಕೆ ಹೇಳಿಕೆ ಮೊಳಕೆ ಹಿಡಿಕೆ ಮೊದಲಾದ ನಾಮಪದಗಳು ಇಕೆ ಎಂಬ

ಪ್ರತ್ಯಯವನ್ನು ಅಂಜು ನಂಬು ಹೊದೆ ಹೇಳು ಮೊಳೆ ಹಿಡಿ ಮೊದಲಾದ ಬೇರೆ ಬೇರೆ ಕ್ರಿಯಾಪದಗಳಿಗೆ ಸೇರಿಸುವುದರ ಮೂಲಕ ಸಿದ್ಧವಾಗಿವೆ ಈ ಎಲ್ಲಾ ಪದಗಳದು ಒಳ ರಚನೆ ಒಂದೇ ರೀತಿಯದಾಗಿದೆಯಾದರೂ ಇವುಗಳಿಗಿರುವ ಅರ್ಥ ಒಂದೇ ರೀತಿಯದಾಗಿಲ್ಲ ಈ ಪದಗಳಲ್ಲಿ ಕೆಲವಕ್ಕೆ ಅವುಗಳ ಅಂಗವಾಗಿ ಬರುವ ಕ್ರಿಯಾಪದಕ್ಕೆ ಸಂಬಂಧಿಸಿದಂತಹ ಭಾವಾರ್ಥವಿದೆ ಉದಾಹರಣೆಗೆ ನಂಬಿಕೆ ಆದರೆ ಇನ್ನು ಕೆಲವಕ್ಕೆ ಅಂತಹ ಕ್ರಿಯೆಯಲ್ಲಿ ಬಳಸುವ ಉದಾಹರಣೆಗೆ ಹೊದಿಕೆ ಹಿಡಿಕೆ ಇಲ್ಲವೇ ಅಂತಹ ಕ್ರಿಯೆಯಿಂದ ದೊರಕುವ ಉದಾಹರಣೆಗೆ ಮೊಳಕೆ ವಿಶಿಷ್ಟವಾದ ವಸ್ತುಗಳನ್ನು ಗುರುತಿಸುವ ಅರ್ಥವಿದೆ ಹಾಗಾಗಿ ಜೋಡು ಪದಗಳ ಹಾಗೆ ಹೆಸರಿಸುವ ವಿಧಾನವನ್ನು ಬಳಸುವಂತಹ ಪ್ರತ್ಯಯವಿರು ಪದಗಳಿಗೂ ಅರ್ಥ ಹೇಳಬೇಕಿದ್ದಲ್ಲಿ ಭಾಷೆಯಲ್ಲಿ ಅವುಗಳ ಬಳಕೆ ಎಂತಹದು ಎಂಬುದನ್ನು ತಿಳಿಯುವುದು ಅತ್ಯವಶ್ಯ ಈ ಕಾರಣಕ್ಕಾಗಿ ಹೆಸರಿಸುವ ಪದಗಳ ಸರಿಯಾದ ಅರ್ಥವನ್ನು ಭಾಷಾ

ಶಾಸ್ತ್ರಜ್ಞರು ಮಾತ್ರವೇ ನಿರ್ಧರಿಸಿ ಹೇಳಬಲ್ಲರು ಭಾಷೆಯನ್ನು ಬಳಸುವ ಇತರ ಜನರಿಗೆ ಆ ಅರ್ಥ ತಿಳಿದಿದೆಯಾದರೂ ಅವರ ತಿಳುವಳಿಕೆ ಮಿದುಳಿನಲ್ಲಿ ಅರಿವಿಗೆ ಬಾರದಂತಹ ಆದರೂ ಪದಗಳ ಪ್ರಯೋಗವನ್ನು ಸರಿಯಾಗಿ ಮಾಡಲು ಸಹಾಯಕವಾಗುವಂತಹ ಸ್ಥಿತಿಯಲ್ಲಿರುತ್ತದೆ ಹೆಸರಿಸುವ ನಾಮಪದಗಳ ಅರ್ಥ ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರೆ ಆಗಿರಲು ಸಾಧ್ಯವಿದೆ ಕಾಲದಿಂದ ಕಾಲಕ್ಕೂ ಇದು ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ ಆದರೆ ವರ್ಣಿಸುವ ನಾಮಪದ ಗುಚ್ಚಗಳ ಅರ್ಥ ಈ ರೀತಿ ಊರಿಂದೂರಿಗೆ ವ್ಯತ್ಯಾಸಗೊಳ್ಳುವುದಿಲ್ಲ ಉದಾಹರಣೆಗಾಗಿ ಬಿಳಿ ಸೀರೆ ಎಂಬ ಪದ ಗುಚ್ಚಕ್ಕೆ ಎಲ್ಲಾ ಊರುಗಳಲ್ಲೂ ಬೆಳ್ಳಗಿನ ಬಣ್ಣವಿರುವ ಸೀರೆ ಎಂಬ ಒಂದೇ ಅರ್ಥವಿದೆ ವರ್ಣಿಸುವ ನಾಮಪದ ಗುಚ್ಚಗಳ ಅರ್ಥದಲ್ಲಿ ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳು ಕಾಣಿಸಿಕೊಳ್ಳಬೇಕಿದ್ದಲ್ಲಿ ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಹೆಸರಿಸುವ ನಾಮಪದಗಳ ಅರ್ಥದಲ್ಲಿ ಅಂತಹ

ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳಿರಬೇಕಾಗುತ್ತದೆ ಹೆಸರಿಸುವ ನಾಮ ಪದಗಳಲ್ಲಿ ರೂಢನಾಮ ಮತ್ತು ಅಂಕಿತ ನಾಮಗಳೆಂದು ಎರಡು ವಿಧವಿದ್ದು ಇವುಗಳ ನಡುವೆ ಅರ್ಥದಲ್ಲಿ ಕೆಲವು ವ್ಯತ್ಯಾಸಗಳಿವೆ ಎಂಬುದನ್ನು ಮುಂದೆ ನೋಡಲಿರುವೆವು ಆದರೆ ಈ ಎರಡು ರೀತಿಯ ನಾಮಪದಗಳಿಗೂ ಅರ್ಥ ಹೇಳಲು ಅವು ಎಂತಹ ವ್ಯಕ್ತಿ ವಸ್ತು ಮೊದಲಾದುವನ್ನು ಗುರುತಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ



Part 16

Watch on YouTube

Note: This transcript has not been cleaned and may contain errors.

ಪರಿಮಿತಿಯಲ್ಲಿ ವ್ಯತ್ಯಾಸ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದ ಗುಚ್ಚಗಳಿಗೂ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸವೇನೆಂದರೆ ಭಾಷೆಯೊಂದರಲ್ಲಿ ಬಳಕೆಯಲ್ಲಿರುವ ಹೆಸರಿಸುವ ನಾಮಪದಗಳಿಗೆ ಅವುಗಳ ಸಂಖ್ಯೆಯ ಮಟ್ಟಿಗೆ ಒಂದು ಪರಿಮಿತಿ ಇದೆ ಆದರೆ ವರ್ಣಿಸುವ ನಾಮಪದ ಗಳಿಗೆ ಇಂತಹ ಪರಿಮಿತಿ ಇಲ್ಲ ಹೊಸ ಹೊಸ ಸಂದರ್ಭಗಳಲ್ಲಿ ಹೊಸ ಹೊಸ ವರ್ಣನೆಗಳನ್ನು ಮಾತನಾಡುವವನೇ ರಚಿಸಿಕೊಳ್ಳಬೇಕಾಗುವುದಾದ ಕಾರಣ ಒಂದು ಭಾಷೆಯಲ್ಲಿ ವರ್ಣಿಸುವ ನಾಮಪದ ಗುಚ್ಚಗಳು ಇಷ್ಟೇ ಇವೆ ಎಂಬುದಾಗಿ ಅವುಗಳ ಸಂಖ್ಯೆಯ ಮೇಲೆ ಒಂದು ಪರಿಮಿತಿಯನ್ನು ಇರಿಸಿ ಹೇಳಲು ಸಾಧ್ಯವಾಗದು ಇದಲ್ಲದೆ ಮಾತನಾಡುವವನ ಕಲ್ಪನಾ ಶಕ್ತಿಯನ್ನು ಅನುಸರಿಸಿ ಹೊಸ ಹೊಸ ರೀತಿಯ ವರ್ಣನೆಗಳನ್ನು ತಯಾರಿಸಿ ಹೇಳಲು ಎಲ್ಲಾ ಭಾಷೆಗಳಲ್ಲೂ ಆಸ್ಪದವಿದ್ದೆ ಇರುತ್ತದೆ ಈ ಕಾರಣಕ್ಕಾಗಿಯೂ ವರ್ಣಿಸುವ ನಾಮಪದಗಳ ಸಂಖ್ಯೆ ಅಪರಿಮಿತವಾದುದೆ ಎಂದು ಹೇಳುವ ಅವಶ್ಯಕತೆ ಇದೆ ಹೆಸರಿಸುವ

ನಾಮಪದಗಳನ್ನು ಹೊಸದಾಗಿ ರಚಿಸಿಕೊಳ್ಳಲು ಸಾಧ್ಯವಿದೆಯೇನೋ ನಿಜ ಆದರೆ ಈ ರೀತಿ ಅವನ್ನು ರಚಿಸಿಕೊಳ್ಳುವುದು ಒಂದು ಭಾಷೆಯ ಆಗುವ ಬದಲಾವಣೆಯನ್ನು ಸೂಚಿಸುತ್ತದಲ್ಲದೆ ಅದರ ದಿನನಿತ್ಯದ ಬಳಕೆಯನ್ನಲ್ಲ ಭಾಷೆಯೊಂದನ್ನು ಬಳಸುತ್ತಿರುವ ಸಮಯದಲ್ಲಿ ಅದರಲ್ಲಿ ಆಗಲೇ ಅಚಿತವಾಗಿ ರೂಡಿಗೆ ಬಂದಿರುವ ನಾಮಪದಗಳನ್ನು ಮಾತ್ರವೇ ಆ ಭಾಷೆಯ ಹೆಸರಿಸುವ ನಾಮಪದಗಳೆಂದು ಪರಿಗಣಿಸಲು ಸಾಧ್ಯ ಇಂತಹ ನಾಮಪದಗಳ ಸಂಖ್ಯೆಗೆ ಒಂದು ಪರಿಮಿತಿ ಇದೆ ಭಾಷೆಯನ್ನು ಬಳಸುವವರ ನೆನಪಿನಲ್ಲಿ ಉಳಿಯಬಲ್ಲಷ್ಟು ನಾಮಪದಗಳು ಮಾತ್ರ ಈ ವಿಧಾನ ಮೂಲಕ ಪ್ರಯುಕ್ತವಾಗಬಲ್ಲುವಾದುದರಿಂದ ಭಾಷೆಯನ್ನು ಬಳಸುವವರ ನೆನಪಿನ ಶಕ್ತಿಯೇ ಈ ಸಂಖ್ಯೆಗೆ ಪರಿಮಿತಿಯನ್ನು ತಂದೊಡ್ಡುತ್ತದೆ ಆದರೆ ಇದು ಇಡೀ ಸಮಾಜದ ನೆನಪಿನ ಶಕ್ತಿಯನ್ನು ಅವಲಂಬಿಸಿರುತ್ತದೆ ಅಲ್ಲದೆ ಒಬ್ಬ ವ್ಯಕ್ತಿಯ ನೆನಪಿನ ಶಕ್ತಿಯನ್ನಲ್ಲ ಯಾಕೆಂದರೆ ಈ ನೆನಪಿನ ಶಕ್ತಿ ಒಂದು ಭಾಷೆಯನ್ನು ಬಳಸುವ ಎಲ್ಲಾ ಜನರಲ್ಲೂ ಒಂದೇ

ರೀತಿಯದಾಗಿರುವುದಿಲ್ಲ ಕೆಲವರಿಗೆ ಹೆಚ್ಚು ನೆನಪಿನ ಶಕ್ತಿ ಇರುತ್ತದೆ ಮತ್ತು ಕೆಲವರಿಗೆ ಕಡಿಮೆ ಇರುತ್ತದೆ ಹಾಗಾಗಿ ಕೆಲವರಿಗೆ ಜಾಸ್ತಿ ಹೆಸರಿಸುವ ನಾಮಪದಗಳ ಜ್ಞಾನವಿರುತ್ತದೆ ಮತ್ತು ಕೆಲವರಿಗೆ ಕಡಿಮೆ ಪದಗಳ ಜ್ಞಾನವಿರುತ್ತದೆ ನೆನಪಿನ ಶಕ್ತಿ ಕಡಿಮೆ ಇರುವವರು ತಮಗೆ ತಿಳಿಯದಿರುವ ಮತ್ತು ಭಾಷೆಯಲ್ಲಿ ಬಳಕೆಯಲ್ಲಿರುವ ನಾಮ ಪದಗಳನ್ನು ಬೇರಾದರೂ ಬಳಸಿದಾಗ ಅವುಗಳ ಅರ್ಥವೇನೆಂಬುದನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ ಇಲ್ಲವೇ ಆ ಭಾಷೆಗೆ ಅರ್ಥಕೋಶ ವಸ್ತುಕೋಶ ಮೊದಲಾದವುಗಳಿದ್ದಲ್ಲಿ ಅವುಗಳಲ್ಲಿ ನೋಡಿ ತಿಳಿದುಕೊಳ್ಳಬೇಕಾಗುತ್ತದೆ ಇದಲ್ಲದೆ ಬೇರೆ ಬೇರೆ ವ್ಯವಹಾರಗಳಲ್ಲಿರುವ ಜನರಲ್ಲಿ ಬೇರೆ ಬೇರೆ ರೀತಿಯ ಹೆಸರಿಸುವ ನಾಮಪದಗಳು ಬಳಕೆಯಲ್ಲಿದ್ದು ಈ ವಿಷಯದಲ್ಲೂ ಒಂದೇ ಭಾಷೆಯನ್ನಾಡುವ ಜನರೊಳಗೆ ವ್ಯತ್ಯಾಸ ತೋರಿ ಬರುತ್ತದೆ ಉದಾಹರಣೆಗಾಗಿ ಸಮುದ್ರದ ಬದಿಯಲ್ಲಿ ವಾಸಿಸುವ ಮೀನುಗಾರರ ಮಾತಿನಲ್ಲಿ ಮೀನಿಗೆ ಮತ್ತು ಸಮುದ್ರಕ್ಕೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ

ಇರುತ್ತವೆ ಮತ್ತು ಕಾಡಿನಲ್ಲಿ ಬೇಟೆಯಾಡಿ ಬದುಕುವ ಬೇಟೆಗಾರರ ಮಾತಿನಲ್ಲಿ ಕಾಡಿಗೆ ಮತ್ತು ಬೇಟೆಗೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ ಇರುತ್ತವೆ ಇಂತಹ ವ್ಯತ್ಯಾಸಗಳಾವು ವರ್ಣಿಸುವ ನಾಮಪದ ಗುಚ್ಚಗಳಲ್ಲಿ ಕಾಣಿಸುವುದಿಲ್ಲ ಬೇರೆ ಬೇರೆ ಶಾಸ್ತ್ರಗಳಿಗೆ ಸಂಬಂಧಿಸಿದಂತಹ ಹೆಸರಿಸುವ ನಾಮಪದಗಳು ಬೇರೆ ಬೇರೆಯಾಗಿದ್ದು ಅವನ್ನು ಆಯಾ ಶಾಸ್ತ್ರಗಳನ್ನು ಕಲಿಯುವವರು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಇಂತಹ ಹೆಸರಿಸುವ ನಾಮಪದಗಳಿಗೆ ಪಾರಿಭಾಷಿಕ ಪದಗಳೆಂಬ ಹೆಸರಿದೆ ಈ ಪದಗಳನ್ನು ಅವು ಹೆಸರಿಸುವ ವಸ್ತುಗಳನ್ನು ಕಂಡುಹಿಡಿದಾಗ ಇಲ್ಲವೇ ತಯಾರಿಸಿದಾಗ ಉತ್ಪಾದಿಸಿ ಬಳಕೆಗೆ ತರಲಾಗಿತ್ತು ಇಂತಹ ಪದಗಳನ್ನೆಲ್ಲ ಸಂಗ್ರಹಿಸಿ ಬೇರೆ ಬೇರೆ ಶಾಸ್ತ್ರಗಳಿಗೆ ಬೇರೆ ಬೇರೆ ಪಾರಿಭಾಷಿಕ ಪದಗಳ ಕೋಶಗಳನ್ನು ರಚಿಸಲು ಸಾಧ್ಯವಿದೆ ಎಂಬುದರಿಂದ ಅಂತಹ ಹೆಸರಿಸುವ ನಾಮಪದಗಳಿಗೂ ಒಂದು ಪರಿಮಿತಿ ಇದೆ ಎಂಬ ವಿಷಯ ಸ್ಪಷ್ಟವಾಗುತ್ತದೆ ಆದರೆ ಈ ಶಾಸ್ತ್ರಗಳಲ್ಲಿ ಬಳಕೆಯಾಗುವ ವರ್ಣಿಸುವ

ನಾಮಪದ ಗುಚ್ಚಗಳಿಗೆ ಇಂತಹ ಪರಿಮಿತಿ ಇಲ್ಲ ಮತ್ತು ಅವನ್ನು ಅರ್ಥಕೋಶಗಳಲ್ಲಿ ಸಂಗ್ರಹಿಸುವ ಅವಶ್ಯಕತೆಯು ಇಲ್ಲ ಸಾಧ್ಯತೆಯು ಇಲ್ಲ ಬದಲಾವಣೆಯಲ್ಲಿ ವ್ಯತ್ಯಾಸ ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ನಡೆಯುವ ಬದಲಾವಣೆಗಳು ಅದರಲ್ಲಿ ಬಳಕೆಯಾಗುವ ನಾಮಪದಗಳನ್ನು ಬಾಧಿಸುತ್ತವೆ ಆದರೆ ಈ ಬದಲಾವಣೆಗಳು ಎಂತಹವು ಎಂಬ ವಿಷಯದಲ್ಲಿ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದ ಗುಚ್ಚಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ ಈ ವ್ಯತ್ಯಾಸಗಳಿಗೂ ಅವುಗಳ ತಯಾರಿಕೆ ಮತ್ತು ಬಳಕೆಗಳ ನಡುವಿರುವ ವ್ಯತ್ಯಾಸಗಳೇ ಕಾರಣ ಎಂಬುದನ್ನು ಗಮನಿಸಬಹುದು ಹೆಸರಿಸುವ ನಾಮಪದಗಳಿಗೆ ಅರ್ಥ ಹೇಳಲು ಅವುಗಳ ಒಳ ರಚನೆ ಮುಖ್ಯವಲ್ಲ ಅವು ರೂಢಯಲ್ಲಿ ಎಂತಹ ವ್ಯಕ್ತಿ ವಸ್ತು ಮೊದಲಾದವುಗಳಿಗೆ ಅನ್ವಯಿಸುತ್ತವೆ ಎಂಬುದು ಮುಖ್ಯ ಎಂಬುದನ್ನು ನಾವು ಮೇಲೆಯೇ ನೋಡಿರುವೆವು ಈ ಕಾರಣಕ್ಕಾಗಿ ಅವುಗಳ ಒಳ ರಚನೆಯನ್ನು ಬದಲಾಗದಂತೆ ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲ

ಇದಲ್ಲದೆ ಹೆಸರಿಸುವ ನಾಮಪದಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಬಳಸಬೇಕಾಗಿದೆ ಆದ ಕಾರಣ ಅವು ಸಂಕ್ಷಿಪ್ತವಾಗಿ ಇದ್ದಷ್ಟು ಬಳಕೆಗೆ ಅನುಕೂಲ ಹಾಗಾಗಿ ಅಂತಹ ನಾಮಪದಗಳು ಸಮಯ ಕಳೆದಂತೆಲ್ಲ ಬದಲಾವಣೆಗಳ ಮೂಲಕ ಸಂಕ್ಷಿಪ್ತಗೊಳ್ಳುತ್ತಾ ಹೋಗುವುದನ್ನು ನಾವು ಕಾಣಬಹುದು ಪ್ರತ್ಯಯವಿರುವ ಪದಗಳ ನಲ್ಲಿರುವ ಪ್ರತ್ಯಯ ಮತ್ತು ಪದಗಳು ಒಟ್ಟು ಸೇರಿ ಪ್ರತ್ಯಯದ ಗುರುತಿಲ್ಲದಂತೆ ಆಗುತ್ತದೆ ಮತ್ತು ಏಳು ಪದಗಳ ಅಂಗಗಳಾಗಿ ಬಂದಿರುವ ಪದಗಳು ಒಂದಾಗಿ ಅವು ಬೇರೆ ಬೇರೆ ಪದಗಳಾಗಿದ್ದುವೆ ಎಂಬ ವಿಷಯವೇ ಗೋಚರಕ್ಕೆ ಬರೆದಂತಾಗುತ್ತದೆ ಇಂತಹ ಪದಗಳ ಅಂಗಗಳಲ್ಲಿ ಯಾವುದಾದರೂ ಒಂದು ಸಂಕ್ಷಿಪ್ತಗೊಂಡ ಪ್ರತ್ಯಯದ ಹಾಗೆ ಕಾಣಿಸತೊಡಗುವುದು ಇಂತಹ ಬದಲಾವಣೆಗಳಲ್ಲೊಂದು ಉದಾಹರಣೆಗಾಗಿ ಹೆಗ್ಗಡೆ ಹೆಜ್ಜೇನು ಹೆದ್ದಾರಿ ಹೆಬ್ಬಾವು ಮೊದಲಾದ ಪದಗಳಲ್ಲಿ ಹಿರಿ ಎಂಬ ಪದ ಪೆರ್ ಎಂಬುದು ಇದರ ಹಳೆಯ ರೂಪ ಮೊದಲನೆಯ ಅಂಗವಾಗಿ ಬಂದಿದೆ ಎಂಬ

ವಿಷಯ ಈ ಪದಗಳ ಚಾರಿತ್ರಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ ಆದರೆ ಈ ಪದಗಳ ಅರ್ಥವೇನೆಂಬುದನ್ನು ತಿಳಿಯಲು ಇವುಗಳ ಒಳ ರಚನೆ ಎಂತಹದು ಎಂಬುದನ್ನು ಇಲ್ಲವೇ ಆ ರಚನೆಯಲ್ಲಿ ಹಿರಿ ಎಂಬ ಪದ ಬಂದು ಇದೆ ಎಂಬುದನ್ನು ತಿಳಿಯುವ ಅವಶ್ಯಕತೆ ಇಲ್ಲ ಹಾಗಾಗಿ ಅವು ಮೇಲೆ ಸೂಚಿಸಿದಂತಹ ಬದಲಾವಣೆಗಳಿಗೆ ಒಳಗಾಗಲು ಸಾಧ್ಯವಾಗಿದೆ ಇದಕ್ಕೆ ವ್ಯತಿರಿಕ್ತವಾಗಿ ದೊಡ್ಡವನೇ ದೊಡ್ಡವರ ದೊಡ್ಡ ಹಾವು ಮೊದಲಾದ ವರ್ಣಿಸುವ ಪದಗುಚ್ಚಗಳಲ್ಲಿ ಅಂಗವಾಗಿ ಬರುವ ದೊಡ್ಡ ಎಂಬ ಪದ ಈ ರೀತಿ ಸಂಕ್ಷಿಪ್ತಗೊಳ್ಳದೆ ಪ್ರತ್ಯೇಕವಾಗಿಯೇ ಉಳಿಯಬೇಕಾಗುತ್ತದೆ ವರ್ಣಿಸುವ ಪದಗುಚ್ಚಗಳ ಅರ್ಥವೇನೆಂಬುದನ್ನು ಅವುಗಳ ಒಳ ರಚನೆಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯವಿದೆಯಾದ ಕಾರಣ ಅವುಗಳ ಒಳ ರಚನೆ ಯಾವಾಗಲೂ ಸ್ಪಷ್ಟವಾಗಿ ತಿಳಿಯುವಂತಿರಬೇಕಾಗುತ್ತದೆ ಈ ಕಾರಣಕ್ಕಾಗಿ ಅವು ಯಾವಾಗಲೂ ನಾಮಪದ ಗುಚ್ಚಗಳಾಗಿಯೇ ಉಳಿಯುತ್ತವಲ್ಲದೆ ಪದಗಳಾಗಿ ಸಂಕ್ಷಿಪ್ತಗೊಳ್ಳುವುದಿಲ್ಲ ಅವನ್ನು

ಬಾಧಿಸುವ ಬದಲಾವಣೆಗಳೆಂದರೆ ಅವುಗಳ ಒಳ ರಚನೆಯಲ್ಲಿ ಕಾಣಿಸುವ ಬೇರೆ ಬೇರೆ ಬೇರೆ ರೀತಿಯ ಪದಗಳನ್ನು ಮತ್ತು ಪ್ರತ್ಯಯಗಳನ್ನು ವೈಯಕ್ತಿಕವಾಗಿ ಬಾಧಿಸುವ ಬದಲಾವಣೆಗಳು ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳನ್ನು ಬಾಧಿಸುವ ಬದಲಾವಣೆಗಳು ಮಾತ್ರ ಒಳ ರಚನೆಯ ನಿಯಮಗಳಲ್ಲಿ ವ್ಯತ್ಯಾಸ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದ ಗುಚ್ಚಗಳಿಗೂ ನಡುವೆ ಅವುಗಳ ಒಳ ರಚನೆಯಲ್ಲಿ ಬರುವ ನಿಯಮಗಳ ಮಟ್ಟಿಗೂ ಹಲವಾರು ವ್ಯತ್ಯಾಸಗಳು ಕಾಣಿಸುತ್ತವೆ ವರ್ಣಿಸುವ ನಾಮಪದ ಗುಚ್ಚಗಳ ರಚನೆಯಲ್ಲಿ ಬರುವ ನಿಯಮಗಳು ವ್ಯವಸ್ಥಿತವಾಗಿದ್ದು ಕೆಲವೇ ಕೆಲವು ಸಾರ್ವತ್ರಿಕ ನಿಯಮಗಳ ಮೂಲಕ ಈ ಪದಗುಚ್ಚಗಳ ರಚನೆಯನ್ನು ವಿವರಿಸಿ ಹೇಳಲು ಸಾಧ್ಯವಿದೆ ಆದರೆ ಹೆಸರಿಸುವ ನಾಮಪದಗಳ ರಚನೆಯಲ್ಲಿ ಹಲವಾರು ನಿಯಮಗಳು ಬಳಕೆಯಲ್ಲಿದ್ದು ಅವುಗಳಲ್ಲಿ ಹೆಚ್ಚಿನವು ಬಹಳ ಅವ್ಯವಸ್ಥಿತವಾಗಿರುತ್ತವೆ ಮತ್ತು ತೊಡಕು ತೊಡಕಾಗಿರುತ್ತವೆ ಹಲವಾರು ನಾಮಪದಗಳಿಗೆ ಅವುಗಳವೇ ಆದ

ವಿಶಿಷ್ಟ ನಿಯಮಗಳ ಅವಶ್ಯಕತೆ ಇದ್ದು ಅವುಗಳ ರಚನೆ ಅನಿಯಮಿತವೆಂದೆ ಹೇಳಲು ಬರುತ್ತದೆ ಮೇಲೆ ತಿಳಿಸಿರುವಂತೆ ಹೆಸರಿಸುವ ನಾಮಪದಗಳ ರಚನೆ ಅವುಗಳ ಅರ್ಥವನ್ನು ತಿಳಿದುಕೊಳ್ಳುವಲ್ಲಿ ಅವಶ್ಯವಾದದ್ದಲ್ಲ ಮತ್ತು ಅವನ್ನು ಹಾಗೆಯೇ ನೆನಪಿನಲ್ಲಿ ಇರಿಸಿಕೊಂಡು ಬಳಸಬೇಕಾಗುತ್ತದೆ ಎಂಬ ಈ ಎರಡು ವಿಷಯಗಳು ಅವುಗಳ ಒಳ ರಚನೆ ಮೇಲೆ ಸೂಚಿಸಿದ ಹಾಗೆ ಭಾಷೆಯಲ್ಲಿ ಆಗುವ ಬೇರೆ ಬೇರೆ ಬದಲಾವಣೆಗಳ ಮೂಲಕ ಕ್ಲಿಷ್ಟವಾಗುತ್ತಾ ಹೋಗಲು ಸಾಧ್ಯವಾಗುವಂತೆ ಮಾಡುತ್ತದೆ ವರ್ಣಿಸುವ ನಾಮದ ಗುಚ್ಚಗಳನ್ನು ಪ್ರತಿಯೊಂದು ಬಾರಿ ಬಳಸುವಾಗಲೂ ಹೊಸದಾಗಿ ತಯಾರಿಸಿಕೊಳ್ಳಬೇಕಾಗಿದೆ ಆದ ಕಾರಣ ಮತ್ತು ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯಿಂದಲೇ ಸಾಧಿಸಿಕೊಳ್ಳಬೇಕಾಗುವುದಾದ ಕಾರಣ ಅವು ಇಂತಹ ಬದಲಾವಣೆಗಳಿಗೆ ಒಳಗಾಗದಿರುತ್ತವೆ ಉದಾಹರಣೆಗಾಗಿ ಪೂರ್ವದ ಹಳೆಗನ್ನಡದಲ್ಲಿ ಹೊಸಗನ್ನಡದ ಹಿರಿಯ ಎಂಬ ಪದ ಪಿರಿಯ ಎಂದಿತ್ತು ಎರಡನೆಯ ಅಕ್ಷರದಲ್ಲಿ ರಿ ಎಂಬುದರಲ್ಲಿ ಈ

ಕಾರ ಬಂದುದರಿಂದಾಗಿ ಆ ಪದದ ಮೊದಲನೆಯ ಅಕ್ಷರದ ಏ ಕಾರ ಈ ಕಾರವಾಯಿತು ಮತ್ತು ಹಾಗಾಗಿ ಅದು ಹಳೆಗನ್ನಡದಲ್ಲಿ ಪಿರಿಯ ಎಂದಾಯಿತು ಅನಂತರ ಅದರ ಮೊದಲನೆಯ ಅಕ್ಷರದಲ್ಲಿರುವ ಪಕಾರ ಹ ಕಾಕಾರವಾದುದ್ದರಿಂದಾಗಿ ಅದು ಅನಂತರ ಹೊಸಗನ್ನಡದಲ್ಲಿ ಹಿರಿಯ ಎಂದಾಯಿತು ಹೊಸಗನ್ನಡದ ನಾಮಪದ ಗುಚ್ಚಗಳಲ್ಲೆಲ್ಲ ಇದು ಈ ಹಿರಿಯ ಎಂಬ ಹೊಸ ರೂಪದಲ್ಲೇ ಬರುತ್ತದೆ ಉದಾಹರಣೆಗೆ ಹಿರಿಯ ಮಗ ಹಿರಿಯ ವಿದ್ವಾಂಸರು ಇತ್ಯಾದಿ ಆದರೆ ಕೆಲವು ಹೆಸರಿಸುವ ನಾಮಪದಗಳಲ್ಲಿ ಇದು ಇವತ್ತಿಗೂ ಅದರ ಹಳೆಯ ರೂಪವನ್ನು ಸ್ವಲ್ಪ ಮಟ್ಟಿಗೆ ಉಳಿಸಿಕೊಂಡಿದೆ ಉದಾಹರಣೆಗಾಗಿ ಹೆಬ್ಬಾವು ಎಂಬ ಪದದ ಎರಡನೇ ಅಕ್ಷರದಲ್ಲಿ ಈ ಕಾರವಿಲ್ಲದ ಕಾರಣ ಮೊದಲನೇ ಅಕ್ಷರದ ಏ ಕಾರ ಬದಲಾಗದೆ ಹಾಗೆಯೇ ಉಳಿದಿದೆ ಇದಲ್ಲದೆ ಎರಡನೇ ಅಕ್ಷರದಲ್ಲಿದ್ದ ರ ಕಾರವು ಮೂರನೇ ಅಕ್ಷರದ ವ್ಯಂಜನದೊಡನೆ

ಸೇರಿ ಸಮಾನತೆಯನ್ನು ಪಡೆದಿದೆ ಹೆಬ್ಬಾವು ಎಂಬ ಈ ಪದದೊಡನೆ ಹೆದ್ದಾರಿ ಹೆಜ್ಜೇನು ಹೆಗ್ಗಡೆ ಮೊದಲಾದ ಪದಗಳನ್ನು ಹೋಲಿಸಿ ನೋಡಿದಾಗ ಈ ಎರಡನೆಯ ವಿಷಯ ಸ್ಪಷ್ಟವಾಗುತ್ತದೆ ಇದೇ ರೀತಿಯಲ್ಲಿ ಹಳೆಗನ್ನಡದ ಪಕಾರ ಹ ಕಾರವಾಗದೆ ಉಳಿದಿರುವ ಅಂತಹ ಬೇರೆ ಕೆಲವು ಬಳಕೆಗಳು ಅನಿಯಮಿತವಾಗಿ ಹೆಸರಿಸುವ ನಾಮಪದಗಳಲ್ಲಿ ಕಾಣಿಸಿಕೊಳ್ಳುತ್ತವೆ ಕೈಪಿಡಿ ಎಂಬ ಪದದಲ್ಲಿ ಹಿಡಿ ಎಂಬ ಪದವು ಪಿಡಿ ಎಂಬ ಅದರ ಹಳೆಯ ರೂಪದಲ್ಲಿ ಉಳಿದಿದೆ ಕಂಬನಿ ಎಂಬುದರಲ್ಲೂ ಹನಿ ಎಂಬ ಪದ ಅದರ ಹಳೆಯ ಪಕಾರವನ್ನು ಹಕಾರವಾಗಿ ಮಾಡಿಕೊಳ್ಳದೆ ಬಕಾರವಾಗಿ ಮಾಡಿ ಉಳಿಸಿಕೊಂಡಿದೆ ಹೊಂಬಣ್ಣ ಬೆಂಗಾವಲು ಮೊದಲಾದ ಪದಗಳ ಅಂಗಗಳಾಗಿ ಬಂದಿರುವ ಹೊನ್ನು ಬೆನ್ನು ಮೊದಲಾದ ಪದಗಳು ಅವುಗಳ ಹಳೆಯ ಏಕಾಕ್ಷರ ರೂಪದಲ್ಲೇ ಉಳಿದಿವೆ ಹೊಸಗನ್ನಡದಲ್ಲಿ ಇವು ಉಕಾರದ ಸೇರಿಕೆಯಿಂದಾಗಿ ಎರಡಕ್ಷರದವುಗಳಾಗಿವೆ ಮತ್ತು ಹೊನ್ನಿನ

ಬಣ್ಣ ಬೆನ್ನಿನ ಕಾವಲು ಮೊದಲಾದ ವರ್ಣಿಸುವ ನಾಮಪದ ಗುಚ್ಚಗಳಲ್ಲಿ ಈ ಹೊಸ ಎರಡು ಅಕ್ಷರದ ರೂಪಗಳೇ ಕಾಣಿಸಿಕೊಳ್ಳುತ್ತವೆ



Part 17

Watch on YouTube

ಈ ಭಾಗ ಪುಸ್ತಕದ ೩.೩.೭: ನಾಮಪದಗಳು ಮತ್ತು ನಾಮಪದಗುಚ್ಛಗಳು ಅನ್ನು ಆಧರಿಸಿದೆ.

ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸು ವುದಕ್ಕಾಗಿ ನಾವು ನಾಮಪದಗುಚ್ಛಗಳನ್ನು ಬಳಸುತ್ತೇವಲ್ಲದೆ ಬರಿಯ ನಾಮಪದ ಗಳನ್ನು ಬಳಸುವುದಿಲ್ಲ ಎಂಬುದನ್ನು ಮೇಲೆಯೇ ನೋಡಿರುವೆವು. ಬರಿಯ ನಾಮಪದಗಳನ್ನು ವರ್ಣಿಸುವ ಕಾರ್ಯದಲ್ಲಿ ಬಳಸಬಲ್ಲೆವಾದರೂ, ವ್ಯಕ್ತಿ, ವಸ್ತು ಮೊದಲಾದುವನ್ನು ‘ಗುರುತಿಸ’ಬೇಕಾದಾಗಲೆಲ್ಲ ಅವನ್ನು ಹೆಸರಿಸುವ ವಿಧಾನ ದಲ್ಲಿ ಮಾತ್ರವೇ ಬಳಸುವುದು ರೂಢಿ. ಈ ಕಾರಣಕ್ಕಾಗಿ, ಮೇಲೆ ನಾಮಪದ ಮತ್ತು ನಾಮಪದಗುಚ್ಛಗಳ ನಡುವಿರುವ ವ್ಯತ್ಯಾಸವೆಂಂತಹದು ಎಂಬುದನ್ನು ತಿಳಿಯುವುದರ ಮೂಲಕ, ಹೆಸರಿಸುವ ವಿಧಾನಕ್ಕೂ ಮತ್ತು ವರ್ಣಿಸುವ ವಿಧಾನಕ್ಕೂ ನಡುವಿನ ವ್ಯತ್ಯಾಸಗಳೆಂತಹವು ಎಂಬುದನ್ನು ತಿಳಿಯಲು ಸಾಧ್ಯ ವಾಗಿತ್ತು. ಆದರೆ ಹೆಸರಿಸುವ ವಿಧಾನದ ಮೂಲಕ…



Part 18

Watch on YouTube

Note: This transcript has not been cleaned and may contain errors.

ಹೆಸರಿಸುವ ನಾಮಪದಗಳಲ್ಲಿ ವೈವಿಧ್ಯ ಹೆಸರಿಸುವ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತತ್ವಗಳ ಆಧಾರದ ಮೇಲೆ ವಿಭಜಿಸಲು ಸಾಧ್ಯವಿದೆ ಅವುಗಳಲ್ಲಿ ರೂಢ ನಾಮ ಮತ್ತು ಅಂಕಿತ ನಾಮಗಳೆಂಬ ವಿಭಜನೆ ಅತ್ಯಂತ ಪ್ರಾಮುಖ್ಯವಾದದ್ದು ಇದು ನಾಮಪದಗಳು ಅವು ಹೆಸರಿಗೆ ವ್ಯಕ್ತಿ ವಸ್ತು ಮೊದಲಾದವುಗಳೊಂದಿಗೆ ಯಾವ ರೀತಿಯಲ್ಲಿ ಸಂಬಂಧಿತವಾಗಿವೆ ಎಂದರೆ ಅವಕ್ಕೆ ಆ ಹೆಸರುಗಳು ಹೇಗೆ ಬಂದಿವೆ ಎಂಬುದರ ಮೇಲೆ ಅವಲಂಬಿಸಿದೆ ಅಂಕಿತ ನಾಮಗಳು ಅವು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳಲ್ಲಿ ಪ್ರತಿಯೊಂದಕ್ಕೂ ಬೇರೆ ಬೇರೆಯಾಗಿ ಸಂಬಂಧಿತವಾಗಿರುವಾದರೆ ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗಿರುತ್ತವೆ ಸಾಮಾನ್ಯವಾಗಿ ಅಂಕಿತ ನಾಮಗಳನ್ನು ಮಾತ್ರವೇ ಹೆಸರು ಎಂಬ ಪದದ ಮೂಲಕ ಗುರುತಿಸುವುದು ರೂಢ ಆದರೆ ಈ ಪುಸ್ತಕದಲ್ಲಿ ಹೆಸರಿಸು ಎಂಬ ಪದವನ್ನು ವರ್ಣಿಸು ಎಂಬ ಪದಕ್ಕೆ ಎದುರಾಗಿ ನಿಲ್ಲಿಸಿರುವ

ಕಾರಣ ಹೆಸರು ಎಂಬ ಪದಕ್ಕೆ ಈ ಎರಡು ರೀತಿಯ ನಾಮಪದಗಳನ್ನು ಗುರುತಿಸುವಂತಹ ಅರ್ಥ ಬಂದಿದೆ ಇದನ್ನು ಹೆಸರಿಸು ಮತ್ತು ಹೆಸರು ಎಂಬ ಪದಗಳ ಪಾರಿಭಾಷಿಕ ಪ್ರಯೋಗವೆಂದು ಪರಿಗಣಿಸಬಹುದು ಹೆಸರಿಸುವ ನಾಮಪದಗಳನ್ನು ಅವುಗಳ ಒಳರಚನೆಯ ಆಧಾರದ ಮೇಲು ವಿಭಜಿಸಲು ಸಾಧ್ಯವಿದೆ ಆದರೆ ಈ ವಿಭಜನೆ ಮೇಲೆ ಕೊಟ್ಟಿರುವ ರೂಢನಾಮ ಅಂಕಿತ ನಾಮ ಎಂಬ ವಿಭಜನೆಯನ್ನು ಅಡ್ಡಕ್ಕೆ ಕತ್ತರಿಸುತ್ತದೆ ಈ ವಿಭಜನೆಯಲ್ಲಿ ಯಾವ ಒಳ ರಚನೆಯನ್ನು ತೋರಿಸದಿರುವ ನೀರು ಗಿಡ ಮರ ಸೀತೆ ಮೊದಲಾದವುಗಳದು ಒಂದು ವಿಭಾಗವಾದರೆ ಯಾವುದಾದರೂ ಒಂದು ಪ್ರತ್ಯಯವನ್ನು ಸೇರಿಸುವುದರ ಮೂಲಕ ಸಿದ್ಧವಾದ ಪ್ರತ್ಯಯವಿರುವ ನಾಮಪದಗಳದು ಉದಾಹರಣೆಗೆ ಅಂಜಿಕೆ ಕುಣಿತ ಅಳಿವು ತಟ್ಟೆ ಇತ್ಯಾದಿ ಇನ್ನೊಂದು ವಿಭಾಗ ಮತ್ತು ಎರಡು ಅಥವಾ ಜಾಸ್ತಿ ಪದಗಳ ಸೇರಿಕೆಯಿಂದ ಎಂದರೆ ಸಮಾಸದಿಂದ ಸಿದ್ಧವಾದ ಜೋಡು ಪದಗಳದ್ದು

ಉದಾಹರಣೆಗೆ ಕಸಬರಿಕೆ ಕಣ್ಣೀರು ದೊಡ್ಡಮ್ಮ ಕೈಗಂಬ ಇತ್ಯಾದಿ ಮತ್ತೊಂದು ವಿಭಾಗ ಇದಲ್ಲದೆ ನಾಮಪದಗಳ ಅರ್ಥ ಅವು ವಾಕ್ಯದಲ್ಲಿ ನಡೆಸಬೇಕಾಗಿರುವ ಕೆಲಸ ಮೊದಲಾದವುಗಳನ್ನಾಧರಿಸಿಯೂ ಅವನ್ನು ಬೇರೆ ಬೇರೆ ಪಂಗಡಗಳಾಗಿ ವಿಂಗಡಿಸಲು ಸಾಧ್ಯವಿದೆ ಘಟನೆಗಳನ್ನು ಹೆಸರಿಸುವ ಭಾವನಾಮಗಳು ಗುಣಧರ್ಮಗಳನ್ನು ಹೆಸರಿಸುವ ಗುಣನಾಮಗಳು ಗಣ್ಯ ಮತ್ತು ಅಗಣ್ಯ ನಾಮಪದಗಳು ಸಜೀವಿ ಮತ್ತು ನಿರ್ಜೀವಿ ನಾಮಪದಗಳು ಮನುಷ್ಯ ಮನುಷ್ಯೇತರ ನಾಮಪದಗಳು ಸಂಖ್ಯಾ ಪದಗಳು ಸರ್ವನಾಮಗಳು ಇತ್ಯಾದಿ ವಿಭಜನೆಗಳನ್ನು ಇಲ್ಲಿ ಉದಾಹರಿಸಬಹುದು ಕ್ರಿಯಾಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ನಿರ್ದೇಶಿಸುವ ಕ್ರಿಯೆಯನ್ನು ಹೆಸರಿಸಲು ಸಾಧ್ಯವಿದೆ ಉದಾಹರಣೆಗಾಗಿ ಕುಣಿ ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಕುಣಿತ ಎಂಬ ನಾಮಪದ ಹೆಸರಿಸುತ್ತದೆ ಬೆದರು ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಬೆದರಿಕೆ ಎಂಬ ನಾಮಪದವು ಹೆಸರಿಸುತ್ತದೆ ಇಂತಹ ಪ್ರತ್ಯಯವಿರುವ ನಾಮಪದಗಳನ್ನು ಭಾವನಾಮಗಳೆಂದು ಕರೆಯುವ

ರೂಢಿ ಇದೆ ಇದೇ ರೀತಿಯಲ್ಲಿ ಗುಣಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ಸೂಚಿಸುವ ಗುಣಧರ್ಮಗಳನ್ನು ಹೆಸರಿಸುವಂತಹ ನಾಮಪದಗಳನ್ನು ರಚಿಸಲು ಸಾಧ್ಯವಿದೆ ಉದಾಹರಣೆಗಾಗಿ ಬಿಳಿ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಬಿಳುಪು ಎಂಬ ನಾಮಪದ ಹೆಸರಿಸುತ್ತದೆ ಜಾಣ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಜಾಣ್ಮೆ ಎಂಬ ನಾಮಪದ ಹೆಸರಿಸುತ್ತದೆ ಇಂತಹ ಪ್ರತ್ಯಯವಿರುವ ನಾಮಪದಗಳನ್ನು ಗುಣನಾಮಗಳೆಂದು ಕರೆಯಬಹುದು ಸಂಖ್ಯಾ ಪದಗಳೊಂದಿಗೆ ಬರುವ ಸಾಧ್ಯತೆಯನ್ನು ಅವಲಂಬಿಸಿ ನಾಮಪದಗಳನ್ನು ಗಣ್ಯ ಮತ್ತು ಅಗಣ್ಯಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಲು ಸಾಧ್ಯವಿದೆ ಆದರೆ ಈ ವಿಭಜನೆ ರೂಢ ನಾಮಗಳಿಗೆ ಮಾತ್ರ ಅನ್ವಯಿಸುತ್ತದೆ ಅಂಕಿತ ನಾಮಗಳೆಲ್ಲ ಗಣ್ಯ ನಾಮ ಪದಗಳಾಗಿ ಮಾತ್ರವೇ ಇರಬಲ್ಲುವೆ ಎಂಬುದನ್ನು ಮುಂದೆ ನೋಡಲಿರುವೆವು ಸಜೀವಿ ಮತ್ತು ನಿರ್ಜೀವಿ ಎಂಬುದಾಗಿ ನಾಮಪದಗಳು ಗುರುತಿಸುವ ವ್ಯಕ್ತಿ ವಸ್ತು ಪ್ರಾಣಿ ಮೊದಲಾದುವನ್ನು

ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದ್ದು ಅವನ್ನು ಹೆಸರಿಸುವ ನಾಮಪದಗಳನ್ನು ಈ ಎರಡು ವಿಭಾಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ ಇದಲ್ಲದೆ ಮನುಷ್ಯ ಮನುಷ್ಯೇತರ ಎಂಬ ಇನ್ನೊಂದು ಸಜೀವಿಗಳ ವಿಭಜನೆ ಮತ್ತು ಗಂಡುಹೆಣ್ಣು ಎಂಬ ಮತ್ತೊಂದು ಸಜೀವಿಗಳ ವಿಭಜನೆ ಇವು ಕೂಡ ಕನ್ನಡದ ನಾಮಪದಗಳಲ್ಲಿ ಕಾಣಿಸುತ್ತವೆ ವಾಕ್ಯದಲ್ಲಿ ನಾಮಪದಗಳು ನಡೆಸುವ ಕೆಲಸವನ್ನು ಆಧರಿಸಿಯೂ ಅವನ್ನು ಬೇರೆ ಬೇರೆ ವಿಭಜನೆಗಳಿಗೆ ಒಳಪಡಿಸಲು ಸಾಧ್ಯವಿದೆ ಉದಾಹರಣೆಗಾಗಿ ಗಣ್ಯ ವಸ್ತುಗಳ ಗಣನೆಯಲ್ಲಿ ಪ್ರಯುಕ್ತವಾಗುವ ಒಂದು ಎರಡು ಮೂರು ಮೊದಲಾದುವನ್ನು ಸಂಖ್ಯಾ ಪದಗಳೆಂಬ ವಿಭಾಗದಲ್ಲೂ ಮತ್ತು ಮಾತಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕೆಲಸಗಳನ್ನು ಸಾಧಿಸಿ ಕೊಡುವ ವ್ಯಕ್ತಿಗಳನ್ನು ಗುರುತಿಸುವ ನಾನು ನೀನು ಅವನು ತಾನು ಮೊದಲಾದವನ್ನು ಸರ್ವನಾಮಗಳೆಂಬ ವಿಭಾಗದಲ್ಲೂ ಸೇರಿಸಿ ಹೇಳಲು ಸಾಧ್ಯವಿದೆ ಇಂತಹ ವಿಭಜನೆಗಳು ರೂಢನಾಮಗಳಲ್ಲಿ ಮಾತ್ರ ಕಾಣಿಸುತ್ತವೆ

ನಾಮಪದಗಳ ಈ ಬೇರೆ ಬೇರೆ ರೀತಿಯ ವಿಭಜನೆಗಳಲ್ಲಿ ಅತ್ಯಂತ ಪ್ರಾಮುಖ್ಯವಾಗಿರುವ ರೂಢನಾಮ ಅಂಕಿತ ನಾಮ ಎಂಬ ವಿಭಜನೆಯನ್ನು ಈ ಕೆಳಗೆ ಸ್ವಲ್ಪ ವಿಸ್ತಾರವಾಗಿ ಪರಿಶೀಲನೆ ನಿಲ್ಲಿಸಲಾಗಿದೆ ರೂಢ ನಾಮಗಳು ಮತ್ತು ಅಂಕಿತ ನಾಮಗಳು ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ ವಸ್ತು ಮೊದಲಾದುವನ್ನು ಗುರುತಿಸಬಲ್ಲ ನಾಮಪದಗಳನ್ನು ರೂಢ ನಾಮಗಳು ಮತ್ತು ಅಂಕಿತ ನಾಮಗಳು ಎಂಬ ಎರಡು ಮುಖ್ಯ ಪಂಗಡಗಳಲ್ಲಿ ವಿಂಗಡಿಸಲು ಸಾಧ್ಯವೆಂಬುದನ್ನು ಮೇಲೆ ನೋಡಿರುವೆವು ಈ ಎರಡರ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ ಅಂಕಿತ ನಾಮಗಳು ಅವು ಹೆಸರಿಸುವ ಪ್ರತಿ ವಸ್ತು ಇಲ್ಲವೇ ಸ್ಥಳಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಂಬಂಧಿತವಾಗುತ್ತವೆ ಆದರೆ ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗುತ್ತವೆ ಉದಾಹರಣೆಗಾಗಿ ಬಸವಪ್ಪ ಎಂಬ ಅಂಕಿತ ನಾಮವನ್ನು ಪರಿಶೀಲಿಸಬಹುದು ಒಂದೇ ಊರಿನಲ್ಲಿ ಈ ಹೆಸರಿನವರು ಹಲವು ಮಂದಿ ಇರಲು

ಸಾಧ್ಯವಿದೆ ಆದರೆ ಇವರೆಲ್ಲರಿಗೂ ಒಂದೇ ಯಾರಿಗೆ ಈ ಹೆಸರನ್ನು ಕೊಟ್ಟಿಲ್ಲ ಪ್ರತಿಯೊಬ್ಬನಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಜನರು ಈ ಹೆಸರನ್ನು ಇಡಲು ನಿರ್ಧರಿಸಿರುತ್ತಾರೆ ಇದಲ್ಲದೆ ಹೆಸರು ಒಂದೇ ಆದರೂ ಈ ವ್ಯಕ್ತಿಗಳೊಳಗೆ ಬೇರೆ ಯಾವ ಸಾಮ್ಯತೆಯು ಇರಬೇಕಾಗಿಲ್ಲ ರೂಢ ನಾಮಗಳ ಬಳಕೆ ಇದರಿಂದ ತೀರ ಭಿನ್ನವಾದದ್ದು ಉದಾಹರಣೆಗಾಗಿ ಬಡಗಿ ಎಂಬ ರೂಢ ನಾಮವನ್ನು ಪರಿಶೀಲಿಸಬಹುದು ಒಂದೇ ಊರಿನಲ್ಲಿ ಈ ನಾಮ ಪದ ಹೆಸರಿಸುವ ವ್ಯಕ್ತಿಗಳು ಹಲವಾರು ಮಂದಿ ಇರಲು ಸಾಧ್ಯವಿದೆ ಏನೋ ನಿಜ ಆದರೆ ಇಂತಹ ವ್ಯಕ್ತಿಗಳನ್ನೆಲ್ಲ ಈ ಪದದ ಮೂಲಕ ಹೆಸರಿಸುವ ನಿರ್ಧಾರವನ್ನು ಕನ್ನಡ ಭಾಷೆಯನ್ನಾಡುವ ಸಮಾಜದಲ್ಲಿ ಯಾವಾಗಲೂ ಒಮ್ಮೆ ಮಾಡಿರಬೇಕು ಆ ನಿರ್ಧಾರದ ಫಲವಾಗಿ ಅವತ್ತು ಜೀವಿಸುತ್ತಿದ್ದ ಕೆಲವು ವಿಶಿಷ್ಟ ವ್ಯಕ್ತಿಗಳನ್ನು ಮಾತ್ರವಲ್ಲದೆ ಮುಂದೆ ಜೀವಿಸಲಿರುವ ಮತ್ತು

ಅದಕ್ಕಿಂತ ಹಿಂದೆ ಜೀವಿಸುತ್ತಿದ್ದ ಅಂತಹ ಇತರ ಎಲ್ಲಾ ವ್ಯಕ್ತಿ ಗಳನ್ನು ಅದು ಹೆಸರಿಸುವಂತಾಯಿತು ಈ ಪದ ಹೆಸರಿಸುವ ವ್ಯಕ್ತಿಗಳೊಳಗೆ ಒಂದು ರೀತಿಯ ಸಾಮ್ಯವು ಇದೆ ಅವರೆಲ್ಲ ಒಂದೇ ರೀತಿಯ ಮರದ ಕೆಲಸ ಮಾಡುವ ವೃತ್ತಿಯಲ್ಲಿರುವವರು ತಾನೇ ಅರ್ಥದಲ್ಲಿ ವ್ಯತ್ಯಾಸ ಆದರೆ ಈ ವ್ಯತ್ಯಾಸವನ್ನಾಧರಿಸಿ ರೂಢನಾಮಗಳಿಗೆ ಅರ್ಥವಿದೆ ಆ ಅರ್ಥವು ಅವು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳೊಳಗೆ ಸಮಾನವಾಗಿರುವ ಗುಣಧರ್ಮವನ್ನು ಅವಲಂಬಿಸಿರುತ್ತದೆ ಮತ್ತು ಅಂಕಿತ ನಾಮಗಳಿಗೆ ಅವು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳ ನಡುವೆ ಸಾಮ್ಯವಿರಬೇಕಾಗಿಲ್ಲ ಎಂಬುದರಿಂದಾಗಿ ಅರ್ಥವಿಲ್ಲ ಎಂದು ವಾದಿಸಿದೆವಾದರೆ ಅದು ತಪ್ಪಾದೀತು ಯಾಕೆಂದರೆ ಎರಡಕ್ಕೂ ಅವು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮಗಳನ್ನಾಧರಿಸಿ ಅರ್ಥ ಹೇಳಲು ಸಾಧ್ಯವಿದೆ ಮತ್ತು ಎರಡಕ್ಕೂ ನೇರವಾಗಿ ಅವುಗಳ ಒಳ ರಚನೆಯ ಆಧಾರದ ಮೇಲೆ ಅರ್ಥ ಹೇಳಲು

ಸಾಧ್ಯವಿಲ್ಲ ಅರ್ಥದ ಮಟ್ಟಿಗೆ ಈ ಎರಡು ರೀತಿಯ ನಾಮಪದಗಳ ನಡುವಿರುವ ವ್ಯತ್ಯಾಸವೇನೆಂದರೆ ಒಂದು ರೂಢ ನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಒಂದೇ ಬಾರಿಗೆ ಸಂಬಂಧಿತವಾಗುವುದಾದ ಕಾರಣ ಅವೆಲ್ಲವುಗಳಿಗೂ ಸಮಾನವಾಗಿರುವಂತಹ ಗುಣಧರ್ಮಗಳು ಅದರ ಅರ್ಥವಾಗಬಲ್ಲುವು ಆದರೆ ಒಂದು ಅಂಕಿತ ನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಬೇರೆ ಬೇರೆಯಾಗಿ ಸಂಬಂಧಿತವಾಗುವುದಾದ ಕಾರಣ ಅದು ಹೆಸರಿಸುವ ಪ್ರತಿಯೊಂದು ವ್ಯಕ್ತಿ ಇಲ್ಲವೇ ವಸ್ತುವಿಗೂ ಸಂಬಂಧಿಸಿದಂತೆ ಅದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳಿರುತ್ತವೆ ಈ ಎರಡು ರೀತಿಯ ನಾಮಪದಗಳ ಬಳಕೆಗೂ ಅರ್ಥದ ಅವಶ್ಯಕತೆ ಇದೆ ಎಂಬುದನ್ನು ಈ ಕೆಳಗಿನ ವಿಷಯ ಸ್ಪಷ್ಟಪಡಿಸುತ್ತದೆ ರೂಢ ನಾಮದ ಅರ್ಥವನ್ನಾಧರಿಸಿ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಲು ಸಾಧ್ಯವಿರುವಂತೆ ಅಂಕಿತ ನಾಮದ ಅರ್ಥವನ್ನು ಆಧರಿಸಿ ಅದು ಹೆಸರಿಸುವ

ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಲು ಸಾಧ್ಯವಿದೆ ಉದಾಹರಣೆಗಾಗಿ ನಳಿನಿ ಎಂಬ ಅಂಕಿತ ನಾಮ ನಮಗೆ ಪರಿಚಯವಿರುವ ಹುಡುಗಿಯೊಬ್ಬಳನ್ನು ಹೆಸರಿಸುವುದಿದ್ದಲ್ಲಿ ಆ ಹುಡುಗಿಯ ಕೆಲ ವಿಶಿಷ್ಟವಾದ ಗುಣಧರ್ಮಗಳನ್ನು ಅದರ ಅರ್ಥವೆಂದು ಪರಿಗಣಿಸಲು ಸಾಧ್ಯವಿದೆ ನಲಿನಿ ಎಂಬ ಪದದ ಮೂಲಕ ನಾವು ಆ ಹುಡುಗಿಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಆಕೆ ಲಿಂಗ ಹಾಕಿರುವಾಗ ಸೀರೆ ತೊಟ್ಟಿರುವಾಗ ಇಲ್ಲವೇ ಕಾಯಿಲೆಯಿಂದ ಬಹಳ ಕೃಷವಾಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ಗುರುತಿಸಬೇಕಿದ್ದಲ್ಲಿ ಈ ವಿಶಿಷ್ಟ ಗುಣಧರ್ಮಗಳು ಎಂದರೆ ನಳಿನಿ ಎಂಬ ಪದಕ್ಕೆ ನಾವು ಕೊಡಬಹುದಾದ ಅರ್ಥ ಸಹಾಯಕವಾಗುತ್ತದೆ ಹುಡುಗಿ ಎಂಬ ರೂಢನಾಮಕ್ಕೂ ಅದು ಹೆಸರಿಸುವ ವ್ಯಕ್ತಿಗಳಲ್ಲಿ ಕಾಣಿಸುವ ಕೆಲವು ವಿಶಿಷ್ಟವಾದ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳಬೇಕಾಗುತ್ತದೆ ಮತ್ತು ಈ ವ್ಯಕ್ತಿಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹುಡುಗಿ ಎಂಬ ಹೆಸರಿನ ಮೂಲಕ

ಗುರುತಿಸಬೇಕಾದಾಗ ಈ ಗುಣಧರ್ಮಗಳು ಎಂದರೆ ಅವನ್ನಾಧರಿಸಿ ಸಾಧಿಸಲಾಗಿರುವ ಹುಡುಗಿ ಎಂಬ ಪದದ ಅರ್ಥ ಸಹಾಯಕ್ಕೆ ಬರುತ್ತದೆ ಆದರೆ ಅಂಕಿತ ನಾಮದ ಹಾಗೆ ಇಲ್ಲಿ ಒಂದೇ ವ್ಯಕ್ತಿಯ ಗುಣಧರ್ಮದ ಆಧಾರದ ಮೇಲೆ ಅರ್ಥ ಹೇಳುವುದಿಲ್ಲ ಇದಕ್ಕೆ ಬದಲು ಆ ಪದ ಹೆಸರಿಸುವ ಬೇರೆ ಬೇರೆ ಹಲವಾರು ವ್ಯಕ್ತಿಗಳಿಗೆ ಸಮಾನವಾಗಿರುವ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳುತ್ತೇವೆ ಆದರೆ ಒಂದು ಅಂಕಿತ ನಾಮ ಈ ರೀತಿ ಹಲವಾರು ವ್ಯಕ್ತಿಗಳನ್ನು ಹೆಸರಿಸುತ್ತಿದೆ ಆದರೆ ಎಂದರೆ ನಳಿನಿ ಎಂಬ ಹೆಸರಿನ ಹುಡುಗಿಯರು ಹಲವರು ಇರುವರಾದರೆ ಅವರಲ್ಲಿ ಪ್ರತಿಯೊಬ್ಬರಿಗೂ ಸಂಬಂಧಿಸಿದಂತೆ ಆ ಪದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳನ್ನು ಸಾಧಿಸಿಕೊಳ್ಳಬೇಕಾದೀತು ಅಂಕಿತ ನಾಮವನ್ನು ಈ ವ್ಯಕ್ತಿಗಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯಾಗಿ ಸಂಬಂಧಿಸಲಾಗಿದೆ ಮತ್ತು ರೂಢ ನಾಮವನ್ನು ಒಂದೇ

ಸಂದರ್ಭದಲ್ಲಿ ಎಲ್ಲರಿಗೂ ಒಟ್ಟಾಗಿ ಸಂಬಂಧಿಸಲಾಗಿದೆ ಎಂಬುದೇ ಈ ವ್ಯತ್ಯಾಸಕ್ಕೆ ಮೂಲ ಕಾರಣ ರೂಢನಾಮದ ಅರ್ಥವನ್ನು ನೇರವಾಗಿ ಅದರ ಒಳರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದೆ ಎಂಬುದನ್ನು ಮೇಲೆ ನೋಡಿರುವೆವು ಕರಿ ಹಲಗೆ ಎಂಬ ರೂಢನಾಮವು ಗುರುತಿಸುವ ಸಾಧನ ಕಪ್ಪಾಗಿಯೂ ಇರಬೇಕಾಗಿಲ್ಲ ಹಲಗೆಯಿಂದ ತಯಾರಿಸಿದ್ದು ಆಗಬೇಕಾಗಿಲ್ಲ ಊಟದ ಸಮಯದಲ್ಲಿ ಕೊಡುವ ಬಿಸಿ ನೀರು ತಣ್ಣೀರಿಗಿಂತಲೂ ತಣ್ಣಗಾಗಿರಲು ಸಾಧ್ಯವಿದೆ ಚಿಕ್ಕಮ್ಮನು ಪ್ರಾಯದಲ್ಲಿ ಮತ್ತು ಗಾತ್ರದಲ್ಲಿ ಅಮ್ಮನಿಗಿಂತ ದೊಡ್ಡವಳಾಗಿರಲು ಸಾಧ್ಯವಿದೆ ಇಂತಹ ಹಲವಾರು ಉದಾಹರಣೆಗಳನ್ನು ಇದಕ್ಕೆ ಆಧಾರವಾಗಿ ಕೊಡಬಹುದು ಅಂಕಿತ ನಾಮದ ಅರ್ಥವನ್ನು ಇದೇ ರೀತಿಯಲ್ಲಿ ನೇರವಾಗಿ ಅವುಗಳ ಒಡರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದು ಉದಾಹರಣೆಗಾಗಿ ಕ್ಷೀರಸಾಗರ ಎಂಬ ಹೆಸರು ಅಂಕಿತ ನಾಮ ಇರುವ ಒಬ್ಬ ವ್ಯಕ್ತಿಯ ಮನೆಯಲ್ಲಿ ಸ್ವಲ್ಪವೂ ಹಾಲಿಲ್ಲದಿರಲು ಸಾಧ್ಯವಿದೆ ಕರಿಯಪ್ಪ ಎಂಬ

ಹೆಸರಿನ ವ್ಯಕ್ತಿ ಬೆಳ್ಳಿಯಪ್ಪ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿಗಿಂತ ಹೆಚ್ಚು ಬೆಳ್ಳಗಿರಲು ಸಾಧ್ಯವಿದೆ ವಿದ್ಯಾಶಾಸ್ತ್ರಿ ಎಂಬ ಹುಡುಗಿ ನಾಲ್ಕು ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿರಲು ಸಾಧ್ಯವಿದೆ ಇತ್ಯಾದಿ ಈ ಎರಡು ರೀತಿಯ ನಾಮಪದಗಳು ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವಾದ ಕಾರಣ ಅವುಗಳ ಅರ್ಥವನ್ನು ಅವು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಸಾಧಿಸಲು ಸಾಧ್ಯ ಈ ವಿಷಯದಲ್ಲಿ ರೂಢನಾಮ ಮತ್ತು ಅಂಕಿತ ನಾಮಗಳ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನಿಲ್ಲಿ ಗಮನಿಸಿಕೊಳ್ಳುವುದು ಅವಶ್ಯ



Part 19

Watch on YouTube

ಈ ಭಾಗ ಪುಸ್ತಕದ ೩.೬.೨: ಸಂಬಂಧದಲ್ಲಿ ವ್ಯತ್ಯಾಸ ಅನ್ನು ಆಧರಿಸಿದೆ.

ಒಂದು ಭಾಷೆಯಲ್ಲಿ ಬರುವ ರೂಢನಾಮಗಳ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಅಂಕಿತನಾಮಗಳ ನಡುವೆ ಇಂತಹ ಸಂಬಂಧಗಳಿರುವುದಿಲ್ಲ ಎಂಬುದು ಈ ಎರಡು ರೀತಿಯ ನಾಮಪದಗಳ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸ. ಇದಕ್ಕೂ ಕೂಡ ರೂಢನಾಮಗಳು ತಾವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದುವನ್ನು ಒಟ್ಟಾಗಿ ಹೆಸರಿಸುತ್ತವೆ, ಮತ್ತು ಅಂಕಿತನಾಮಗಳು ಅವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೆಸರಿಸುತ್ತವೆ ಎಂಬುದೇ ಮೂಲ ಕಾರಣ. ಒಬ್ಬ ವ್ಯಕ್ತಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಸಮಾನ ಗುಣಧರ್ಮಗಳನ್ನು ತೋರಿಸುತ್ತಿರಲು ಸಾಧ್ಯವಿದೆಯಾದ ಕಾರಣ, ಆ ವ್ಯಕ್ತಿಯನ್ನು ಬೇರೆ ಬೇರೆ ರೂಢನಾಮಗಳ ಮೂಲಕ…



ಅಧ್ಯಾಯ 4 — ಪ್ರತ್ಯಯವಿರುವ ನಾಮಪದಗಳು

Nouns with Suffixes

Part 20

Watch on YouTube

ಈ ಭಾಗ ಪುಸ್ತಕದ ೪.೧: ಪೀಠಿಕೆ ಅನ್ನು ಆಧರಿಸಿದೆ.

ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ಪ್ರತ್ಯಯವಿರುವ ನಾಮಪದಗಳು ಬಳಕೆಯಲ್ಲಿವೆ. ಇವು ಅನುಕ್ರಮವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಾಗಿರುತ್ತವೆ. ಉದಾಹರಣೆಗಾಗಿ ಗಾಣಿಗ ಎಂಬ ಪ್ರತ್ಯಯವಿರುವ ನಾಮ ಪದವು ಗಾಣ ಎಂಬ ನಾಮಪದಕ್ಕೆ ಇಗ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಅಗಲಿಕೆ ಎಂಬ ನಾಮಪದವು ಅಗಲು ಎಂಬ ಕ್ರಿಯಾ ಪದಕ್ಕೆ ಇಕೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಮತ್ತು ಬಡವ ಎಂಬ ನಾಮಪದವು ಬಡ ಎಂಬ ಗುಣಪದಕ್ಕೆ ವ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ…



Part 21

Watch on YouTube

ಈ ಭಾಗ ಪುಸ್ತಕದ (ಕ) ರೂಪಭೇದಗಳು ಅನ್ನು ಆಧರಿಸಿದೆ.

ಈ ಪ್ರತ್ಯಯಕ್ಕೆ ಇಕೆ, ಕೆ, ಇಗೆ ಮತ್ತು ಗೆ ಎಂಬುದಾಗಿ ನಾಲ್ಕು ಬೇರೆ ಬೇರೆ ರೂಪಗಳಿವೆ. ಇವುಗಳಲ್ಲಿ ಇಕೆ ಎಂಬುದು ಮುಖ್ಯವಾಗಿ ಉಕಾರದಲ್ಲಿ ಕೊನೆ ಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ ಮತ್ತು ಈ ಪ್ರತ್ಯಯ (ಹಾಗೂ ಇದರ ಇಗೆ ಎಂಬ ರೂಪ) ಸೇರಿದಾಗ ಕ್ರಿಯಾಪದದ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಉದಾ: ಬಳಲು ಬಳಲಿಕೆ ಹೇಳು ಹೇಳಿಕೆ ಬೆದರು ಬೆದರಿಕೆ ತೋರು ತೋರಿಕೆ ಹೊಗಳು ಹೊಗಳಿಕೆ ಅಂಜು ಅಂಜಿಕೆ ಅಗಲು ಅಗಲಿಕೆ ನಂಬು ನಂಬಿಕೆ ಮೇಲೆ ಕೊಟ್ಟಿರುವ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮೂರಕ್ಷರದವುಗಳು (ಮೊದಲನೆಯ ಕಾಲಂ)…



Part 22

Watch on YouTube

ಈ ಭಾಗ ಪುಸ್ತಕದ (ಫ) ಇಕೆ ಎಂಬ ಪದರೂಪ ಪ್ರತ್ಯಯ ಅನ್ನು ಆಧರಿಸಿದೆ.

ಮೇಲೆ ಕೊಟ್ಟಿರುವ ಇಕೆ-ಇಗೆ ಎಂಬ ಪ್ರತ್ಯಯದಿಂದ ಭಿನ್ನವಾಗಿರುವ ಮತ್ತು ಎಲ್ಲಾ ಸಂದರ್ಭಗಳಲ್ಲೂ ಇಕೆ ಎಂಬ ಒಂದೇ ರೂಪದಲ್ಲಿರುವ ಪದರೂಪ ಪ್ರತ್ಯಯವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಕ್ರಿಯಾಪದಗಳಿಗೆ ಸೇರಿಸಿ ಅವುಗಳ ಕ್ರಿಯಾರೂಪವೊಂದನ್ನು ತಯಾರಿಸಲು ಸಾಧ್ಯವಿದೆ. ಇದು ಕ್ರಿಯಾಪದ ಗಳು ನಿರ್ದೇಶಿಸುವ ಘಟನೆಗಳನ್ನು ವರ್ಣಿಸುತ್ತದಲ್ಲದೆ ಹೆಸರಿಸುವುದಿಲ್ಲ. ಉದಾ: ಅಂಜು ಅಂಜುವಿಕೆ ಬರೆ ಬರೆಯುವಿಕೆ ಮಾಡು ಮಾಡುವಿಕೆ ಕುಡಿ ಕುಡಿಯುವಿಕೆ ಹೊಗಳು ಹೊಗಳುವಿಕೆ ಇರು ಇರುವಿಕೆ ಬಯಸು ಬಯಸುವಿಕೆ ತಪ್ಪು ತಪ್ಪುವಿಕೆ ಈ ಪ್ರತ್ಯಯವನ್ನು ಸೇರಿಸಿದಾಗ ಉಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ವಕಾರ ಸೇರಿಕೊಳ್ಳುತ್ತದೆ, ಮತ್ತು ಇಕಾರಾಂತ ಮತ್ತು ಎಕಾರಾಂತ…



Part 23

Watch on YouTube

Note: This transcript has not been cleaned and may contain errors.

ತೆ ಪ್ರತ್ಯಯ ಈ ಕಾಕಾರ ಮತ್ತು ಏಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ತ ಇಲ್ಲವೇ ತೆ ಎಂಬ ರೂಪದಲ್ಲಿರುವ ಈ ಪ್ರತ್ಯಯವನ್ನು ಸೇರಿಸಿ ಕೆಲವು ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ ಈ ಎರಡು ರೂಪಗಳಲ್ಲಿ ತೆ ಎಂಬುದರ ಬಳಕೆ ಗಿಂತಲೂ ತ ಎಂಬುದರ ಬಳಕೆಯೇ ಜಾಸ್ತಿ ಆದರೆ ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬ ವಿಷಯದಲ್ಲಿ ನಿಯಮವೇನು ಇರುವ ಹಾಗೆ ಕಾಣಿಸುವುದಿಲ್ಲ ತೆ ಎಂಬುದರೊಂದಿಗೆ ಬಂದಾಗ ಕ್ರಿಯಾಪದಗಳ ಕೊನೆಯ ಏ ಕಾರ ಅ ಕಾರವಾಗುತ್ತದೆ ಉದಾಹರಣೆಗೆ ನಡೆ ನಡತೆ ಆದರೆ ತ ಎಂಬುದರೊಂದಿಗೆ ಬಂದಾಗ ಅದು ಹಾಗೆಯೇ ಬದಲಾಗದೆ ಉಳಿಯುತ್ತದೆ ಉದಾಹರಣೆಗೆ ಹೊಡೆ ಹೊಡೆತ ಈ ಪ್ರತ್ಯಯದ ಮೂಲಕ ತಯಾರಾದ ನಾಮಪದಗಳು ಸಾಮಾನ್ಯವಾಗಿ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಇಲ್ಲವೇ ಅದರಿಂದ ಸಿದ್ಧವಾಗುವ ಗುಣಧರ್ಮವನ್ನು ಹೆಸರಿಸುತ್ತವೆ ಉದಾಹರಣೆಗೆ

ಕುಣಿ ಕುಣಿತ ಕುಡಿ ಕುಣಿತ ಹಿಡಿ ಹಿಡಿತ ದುಡಿ ದುಡಿತ ಉರಿ ಉರಿತ ತುಳಿ ತುಳಿತ ಕುದಿ ಕುದಿತ ಅಲೆ ಅಲೆತ ನೆಗೆ ನೆಗೆತ ಒದೆ ಒದೆತ ಎಸೆ ಎಸೆತ ಮೊರೆ ಮೊರೆತ ಸವೆ ಸವೆತ ಅಗೆ ಅಗೆತ ಅಳೆ ಅಳತೆ ಅಗೆ ಅಗತೆ ನಡೆ ನಡತೆ ಮಿಡಿ ಮಿಡಿತೆ ಅನಿಯಮಿತವಾಗಿ ಇಂತಹ ನಾಮಪದಗಳು ಕ್ರಿಯಾಪದವು ನಿರ್ದೇಶಿಸುವ ಘಟನೆಯಲ್ಲಿ ಬರುವ ವಸ್ತು ಪ್ರಾಣಿ ಮೊದಲಾದವನ್ನು ಹೆಸರಿಸುತ್ತಿರಲು ಸಾಧ್ಯವಿದೆ ಉದಾಹರಣೆಗೆ ಮಿಡಿ ಮಿಡಿತೆ ತಪ್ಪು ತಪ್ಪಿತ ಎಂಬುದರಲ್ಲಿ ಈ ಪ್ರತ್ಯಯ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೂ ಬಂದಿರುವ ಹಾಗೆ ಕಾಣಿಸುತ್ತದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಕೆಲವು ನಾಮಪದಗಳಲ್ಲಿ ತೆ ಎಂಬ ಪ್ರತ್ಯಯ ಒಂದು ಕಾಣಿಸುತ್ತದೆ ಉದಾಹರಣೆಗೆ ಅಧ್ಯಕ್ಷ ಅಧ್ಯಕ್ಷತೆ ಅರ್ಹ ಅರ್ಹತೆ ಕವಿ ಕವಿತೆ ದಕ್ಷ

ದಕ್ಷತೆ ಆದರೆ ಈ ತೆ ಎಂಬ ಪ್ರತ್ಯಯವನ್ನು ನಾಮಪದಗಳ ಅಲ್ಲದೆ ಕ್ರಿಯಾಪದಗಳಿಗೆ ಸೇರಿಸುವುದಿಲ್ಲ ವ್ಯಕ್ತಿಯೊಬ್ಬನನ್ನು ಹೆಸರಿಸುವ ನಾಮಪದದಿಂದ ಆ ವ್ಯಕ್ತಿಯ ಗುಣಧರ್ಮವನ್ನು ಹೆಸರಿಸುವ ಬೇರೊಂದು ನಾಮಪದವನ್ನು ಸಾಧಿಸಲು ಈ ಪ್ರತ್ಯಯದ ಬಳಕೆಯಾಗುತ್ತದೆ ಇದು ಸಂಸ್ಕೃತದ ತ ಎಂಬ ಪ್ರತ್ಯಯದ ಕನ್ನಡ ರೂಪ ಮೇಲೆ ವಿವರಿಸಿರುವ ತೆ ಇದಕ್ಕಿಂತ ಭಿನ್ನವಾದದ್ದು ಅ ಪ್ರತ್ಯಯ ಇದು ಮುಖ್ಯವಾಗಿ ಗು ಇಲ್ಲವೇ ಡು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿರುವ ಗು ಮತ್ತು ಡು ಎಂಬ ಅಕ್ಷರಗಳು ಕ ಮತ್ತು ಟ ಎಂದಾಗುತ್ತವೆ ಎಂದರೆ ಗ ಕಾರ ಡ ಕಾರಗಳು ಕರ ಟ ಕಾರಗಳಾಗುತ್ತವೆ ಮತ್ತು ಅವುಗಳ ನಂತರ ಬರುವ ಉಕಾರ ಬಿದ್ದು ಹೋಗುತ್ತದೆ ನಡುಗು ನಡುಕ

ತಿರುಗು ತಿರುಕ ಮುರುಗು ಮುರುಕ ತೂಗು ತೂಕ ಆಡು ಆಟ ಓಡು ಓಟ ನೋಡು ನೋಟ ಕಾಡು ಕಾಟ ಮಾಡು ಮಾಟ ಕೂಡು ಕೋಟ ಆಡು ಎಂಬುದರಲ್ಲಿ ಕೊನೆಗೊಳ್ಳುವ ಹಲವು ಕೂಡು ಕ್ರಿಯಾಪದಗಳು ಕನ್ನಡದಲ್ಲಿದ್ದು ಅವುಗಳಲ್ಲಿ ದಲ್ಲಿ ಕೆಲವು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬರಬಲ್ಲದು ಇಂತಹ ಬಳಕೆಯಲ್ಲೂ ಕ್ರಿಯಾಪದದ ಕೊನೆಯ ಡು ಎಂಬ ಅಕ್ಷರ ಟ ಎಂದಾಗುತ್ತದೆ ಉದಾಹರಣೆಗೆ ಹೋರಾಡು ಹೋರಾಟ ತಿರುಗಾಡು ತಿರುಗಾಟ ಓಡಾಡು ಓಡಾಟ ಒದ್ದಾಡು ಒದ್ದಾಟ ಆದರೆ ಈ ಪ್ರತ್ಯಯ ಇಂತಹ ಎಲ್ಲಾ ಕೂಡು ಕ್ರಿಯಾಪದಗಳೊಂದಿಗೂ ನಿಯಮಿತವಾಗಿ ಬರುವುದಿಲ್ಲ ಉದಾಹರಣೆಗಾಗಿ ಬಿಸಾಡು ನಗಾಡು ಮಾತನಾಡು ಮೊದಲಾದವುಗಳೊಂದಿಗೆ ಇದು ಬರುವುದಿಲ್ಲ ಮತ್ತು ಈ ಪ್ರತ್ಯಯವನ್ನೊಳಗೊಂಡಿರುವ ಮಾರಾಟ ಹುಡುಗಾಟ ಮೊದಲಾದ ಬೇರೆ ಕೆಲವು ನಾಮಪದಗಳಿಗೆ ಸಮನಾದ ಕೂಡು ಕ್ರಿಯಾಪದ ಕನ್ನಡದಲ್ಲಿ ಬಳಕೆಯಲ್ಲಿಲ್ಲ

ಇದಲ್ಲದೆ ತಲೆ ತಿರುಕ ದಾರಿ ಹೋಕ ಮೊದಲಾದ ಬೇರೆ ಕೆಲವು ನಾಮಪದ ಗಳಲ್ಲಿ ಈ ಪ್ರತ್ಯಯ ಬಂದಿರುವ ಹಾಗೆ ಕಾಣಿಸುತ್ತದೆ ಆದರೆ ಇವನ್ನು ತಯಾರಿಸಲು ಬೇಕಾಗುವ ಕೂಡು ಕ್ರಿಯಾಪದಗಳು ಕನ್ನಡದಲ್ಲಿ ಬಳಕೆಯಲ್ಲಿಲ್ಲ ಊದು ಎಂಬ ಕ್ರಿಯಾಪದಕ್ಕೆ ಇದೇ ಪ್ರತ್ಯಯವನ್ನು ಸೇರಿಸಿ ಊತ ಎಂಬ ಪದವನ್ನು ತಯಾರಿಸಿರುವಲ್ಲಿ ದ ಕಾರ ತಕಾರವಾಗಿರುವುದನ್ನು ಕಾಣಬಹುದು ಈ ಪ್ರತ್ಯಯದ ಮೂಲಕ ತಯಾರಾಗುವ ನಾಮಪದಗಳ ಅರ್ಥವು ಅನಿಯಮಿತವಾದದ್ದು ಹೆಚ್ಚಿನ ಗಳಲ್ಲೂ ಇದು ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಹೆಸರಿಸುತ್ತದೆ ಉದಾಹರಣೆಗೆ ನಡುಗು ನಡುಕ ಮರುಗು ಮರುಕ ಆದರೆ ಕೆಲವೆಡೆಗಳಲ್ಲಿ ಒಂದು ವಿಶಿಷ್ಟವಾದ ಘಟನೆಯನ್ನು ಮಾತ್ರವೇ ಹೆಸರಿಸುತ್ತದೆ ಉದಾಹರಣೆಗೆ ಮಾಡು ಮಾಟ ಮತ್ತು ಬೇರೆ ಕೆಲವು ಕಡೆಗಳಲ್ಲಿ ಅಂತಹ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಹೆಸರಿಸುತ್ತದೆ ಉದಾಹರಣೆಗೆ ತಿರುಗು ತಿರುಕ ಅಗಲು ಅಗಲ

ಮತ್ತು ತೀರು ತೀರ ಎಂಬವುಗಳಲ್ಲಿ ಇದೇ ಪ್ರತ್ಯಯ ಋ ಮತ್ತು ಲು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬಂದಿರುವುದನ್ನು ಕಾಣಬಹುದು ಒಳಿ ಪ್ರತ್ಯಯ ಕ್ರಿಯಾಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಏ ಕಾರ ಅ ಕಾರವಾಗುತ್ತದೆ ಮತ್ತು ಈ ಕಾರ ಉಕಾರವಾಗುತ್ತದೆ ಆದರೆ ಉಕಾರ ಮಾತ್ರ ಬದಲಾಗದೆ ಹಾಗೆಯೇ ಉಳಿಯುತ್ತದೆ ಇದಲ್ಲದೆ ಉದಾಹರಣೆಗೆ ಹಿಡಿ ಹಿಡುವಳಿಕೆ ತಿಳಿ ತಿಳುವಳಿಕೆ ಅಳಿ ಅಳಿವು ದಣಿ ದಣಿವು ಹಸಿ ಹಸಿವು ತಿಳಿ ತಿಳಿವು ಅರಿ ಅರಿವು ಹರಿ ಹರಿವು ಮರೆ ಮರೆವು ಕಳೆ ಕಳವು ನೆರೆ ನೆರವು ತೆರೆ ತೆರವು ಸೆಳೆ ಸೆಳವು ಒಲವು ಎಂಬ ಪದದಲ್ಲಿ ಅದರ ಒಳ ರಚನೆಯಲ್ಲಿ ಬರುವ ಓಲಿ ಎಂಬ ಕ್ರಿಯಾಪದದ ಕೊನೆಯ ಈ ಕಾರವು ಅಕಾರವಾಗಿರುವ

ಹಾಗೆ ಕಾಣಿಸುತ್ತದೆ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲೂ ಕೆಲವು ಈ ಪ್ರತ್ಯಯದೊಂದಿಗೆ ಸೇರಿ ನಾಮಪದಗಳಾಗಿವೆ ಆದರೆ ಇಂತಹ ಪದಗಳಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಉದಾಹರಣೆಗಾಗಿ ಯು ಎಂಬ ಅಕ್ಷರದಲ್ಲಿ ಕೊನೆಗೊಳ್ಳುವ ಮತ್ತು ಅದರ ಹಿಂದೆ ಉದ್ದ ಸ್ವರವಿರುವ ಕೆಲವು ಕ್ರಿಯಾಪದ ಗಳೊಂದಿಗೆ ಈ ಪ್ರತ್ಯಯ ಬರಲು ಸಾಧ್ಯವಿದ್ದು ಹಾಗೆ ತಯಾರಾಗಿರುವ ಪದಗಳಲ್ಲಿ ಆ ಕ್ರಿಯಾಪದದ ಎರಡನೆಯ ಅಕ್ಷರ ಬಿದ್ದುಹೋಗಿದೆ ಸಾಯು ಸಾವು ನೋಯು ನೋವು ಕಾಯು ಕಾವು ಮೇಯು ಮೇವು ಉಕಾರದಲ್ಲಿ ಕೊನೆಗೊಳ್ಳುವ ನಿಲ್ಲು ಮತ್ತು ಗೆಲ್ಲು ಎಂಬ ಬೇರೆ ಎರಡು ಕ್ರಿಯಾಪದಗಳೊಂದಿಗೂ ಈ ಪ್ರತ್ಯಯ ಬರುತ್ತಿದ್ದು ಈ ಪದಗಳಲ್ಲಿರುವ ಒತ್ತಕ್ಷರದ ಒಂದು ವ್ಯಂಜನ ಈ ಪ್ರತ್ಯಯ ಸೇರಿದಾಗ ಬಿದ್ದುಹೋಗಿದೆ ನಿಲ್ಲು ನಿಲುವು ಗೆಲ್ಲು ಗೆಲುವು ಇದಲ್ಲದೆ ಇರುವು ಎಂಬುದರ ಒಳ ರಚನೆಯಲ್ಲಿ ಇರು

ಎಂಬ ಕ್ರಿಯಾಪದದ ಕೊನೆಯ ಉಕಾರ ಅಕಾರವಾಗಿದೆ ಮತ್ತು ತಿರುವು ಎಂಬುದರಲ್ಲಿ ತಿರುವು ಎಂಬ ಕ್ರಿಯಾಪದದ ಮೂರನೆಯ ಅಕ್ಷರ ಬಿದ್ದು ಹೋಗಿದೆ ಬಿಡುವು ಎಂಬುದರಲ್ಲಿ ಮಾತ್ರ ಈ ಪ್ರತ್ಯಯ ಬಿಡು ಎಂಬ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೆ ಯಾವ ಬದಲಾವಣೆಯನ್ನು ಮಾಡದೆ ಬಂದಿದೆ ಅರ್ಥದ ಮಟ್ಟಿಗೆ ಈ ಪ್ರತ್ಯಯದ ಬಳಕೆಯಲ್ಲೂ ಅನಿಯಮಿತ ಇದೆ ಎಂಬುದನ್ನು ಗಮನಿಸಬಹುದು ಸಾವು ನೋವು ಮರೆವು ಮೊದಲಾದವುಗಳು ಘಟನೆಗಳನ್ನು ಹೆಸರಿಸುವಾದರೆ ಮೇವು ಎಂಬುದು ಘಟನೆಯ ಸಾಧನವನ್ನು ಮತ್ತು ತಿರುವು ಎಂಬುದು ಘಟನೆಯ ಸ್ಥಾನವನ್ನು ಹೆಸರಿಸುತ್ತವೆ ಒಳಿ ಪ್ರತ್ಯಯ ಕ್ರಿಯಾಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಏ ಕಾರ ಅಕಾರವಾಗುತ್ತದೆ ಮತ್ತು ಈ ಕಾರ ಉಕಾರವಾಗುತ್ತದೆ ಆದರೆ ಉಕಾರ ಮಾತ್ರ ಬದಲಾಗದೆ ಹಾಗೆಯೇ ಉಳಿಯುತ್ತದೆ ಇದಲ್ಲದೆ ಉದಾಹರಣೆಗೆ ಹಿಡಿ ಹಿಡುವಳಿ

ತಿಳಿ ತಿಳುವಳಿಕೆ ನಡೆ ನಡವಳಿಕೆ ಸಾಗು ಸಾಗುವಳಿ ಹುಟ್ಟು ಹುಟ್ಟುವಳಿ ಆಳು ಆಡಳಿತ ತಿಳುವಳಿಕೆ ಮತ್ತು ನಡವಳಿಕೆ ಎಂಬ ಎರಡು ಪದಗಳಲ್ಲಿ ಈ ಪ್ರತ್ಯಯ ಕೆ ಎಂಬ ಇನ್ನೊಂದು ಪ್ರತ್ಯಯದೊಂದಿಗೆ ಬಂದಿದೆ ಮತ್ತು ಆಡಳಿತ ಎಂಬ ಪದದಲ್ಲಿ ತ ಎಂಬ ಪ್ರತ್ಯಯದೊಂದಿಗೆ ಬಂದಿದೆ ಇದಲ್ಲದೆ ಆಡಳಿತ ಎಂಬ ಪದದಲ್ಲಿ ಕ್ರಿಯಾಪದದಲ್ಲಿದ್ದ ಳ ಕಾರ ಡ ಕಾರವಾಗಿದೆ ಮತ್ತು ವಳಿ ಪ್ರತ್ಯಯದ ವ ಕಾರ ಬಿದ್ದು ಹೋಗಿದೆ ಗೊತ್ತು ಎಂಬ ಆಖ್ಯಾತ ಪದದೊಂದಿಗೂ ಈ ಪ್ರತ್ಯಯ ಬಂದಿರುವುದನ್ನು ಗೊತ್ತುವಳಿ ಎಂಬ ನಾಮಪದದಲ್ಲಿ ಕಾಣಬಹುದು ದಬ್ಬಾಳಿಕೆ ಎಂಬುದರಲ್ಲೂ ಇದೇ ಪ್ರತ್ಯಯ ದಬ್ಬು ಎಂಬ ಕ್ರಿಯಾಪದದೊಂದಿಗೆ ಬಂದಿರಲು ಸಾಧ್ಯವಿದ್ದು ಇಲ್ಲಿ ಇದಕ್ಕೆ ಆಳಿ ಎಂಬ ರೂಪವಿದೆ ಅಳಿ ಎಂಬ ರೂಪದಲ್ಲಿರುವ ಪ್ರತ್ಯಯ ಒಂದು ಆಕಳಿಸು ಅಪ್ಪಳಿಸು ಅಪ್ಪಳಿಸು

ಬಿಕ್ಕಳಿಸು ಮೊದಲಾದ ಕೆಲವು ಕ್ರಿಯಾಪದಗಳಲ್ಲಿ ಬರುವುದೆಂಬುದನ್ನು ಮುಂದೆ ಆರನೇ ಅಧ್ಯಾಯದಲ್ಲಿ ನೋಡಲಿರುವೆವು ಅದು ಈ ಪ್ರತ್ಯಯಕ್ಕೆ ಸಂಬಂಧಿಸಿರಲು ಸಾಧ್ಯವಿದೆ ಇದೇ ಪ್ರತ್ಯಯ ಹೆಗ್ಗಳಿಕೆ ಎಂಬ ಪದದಲ್ಲಿ ಹಿರಿ ಎಂಬ ಗುಣಪದದ ಹೆಗ್ ಎಂಬ ರೂಪದೊಂದಿಗೆ ಬಂದಿದೆ اللہ



Part 24

Watch on YouTube

Note: This transcript has not been cleaned and may contain errors.

ಒನ್ ಪ್ರತ್ಯಯ ಈ ಪ್ರತ್ಯಯ ಅದರ ಎಲ್ಲಾ ಬಳಕೆಯಲ್ಲೂ ಮೇಲೆ ವಿವರಿಸಿದ ಇಕೆ ಇಗೆ ಪ್ರತ್ಯಯದ ಹೀಗೆ ಎಂಬ ರೂಪದೊಂದಿಗೆ ಬರುತ್ತದೆ ಕ್ರಿಯಾಪದದ ಕೊನೆಯ ಏ ಕಾರ ಈ ಪ್ರತ್ಯಯ ಸೇರಿದಾಗ ಅಕಾರವಾಗುತ್ತದೆ ಮತ್ತು ಉಕಾರ ಬಿದ್ದು ಹೋಗುತ್ತದೆ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದೊಂದು ಇದು ಅಣ್ ಎಂಬ ರೂಪದಲ್ಲಿ ಬರುತ್ತದೆ ಬರೆ ಬರವಣಿಗೆ ಮೆರೆ ಮೆರವಣಿಗೆ ಬೆಳೆ ಬೆಳವಣಿಗೆ ಬೀಸು ಬೀಸಣಿಗೆ ಬಾಚು ಬಾಚಣಿಗೆ ಮಧುವಣಿಗ ಎಂಬ ನಾಮಪದದಲ್ಲಿ ಈ ಪ್ರತ್ಯಯ ಕ್ರಿಯಾಪದದೊಂದಿಗೆ ಬರುವ ಬದಲು ಮದುವೆ ಎಂಬ ಬೇರೊಂದು ನಾಮಪದದೊಂದಿಗೆ ಮತ್ತು ಈಗ ಎಂಬ ಪ್ರತ್ಯಯದೊಂದಿಗೆ ಬಂದಿರುವುದನ್ನು ಕಾಣಬಹುದು ತಿರುಗಣೆ ಸಾಗಣೆ ಮತ್ತು ಬದಲಾವಣೆ ಎಂಬ ಪದಗಳಲ್ಲಿ ಕಾಣಿಸುವ ಅಣೆ ಎಂಬ ಪ್ರತ್ಯಯ ಮತ್ತು ಹೊಂದಾಣಿಕೆ ಸಾಗಾಣಿಕೆ ತಿದ್ದಾಣಿಕೆ ಮೊದಲಾದ ಪದಗಳಲ್ಲಿ

ಕಾಣಿಸುವ ಆನ್ ಎಂಬ ಪ್ರತ್ಯಯ ಇವುಗಳು ಈ ಪ್ರತ್ಯಯಕ್ಕೆ ಸಂಬಂಧಿಸಿದವುಗಳಾಗಿರಲು ಸಾಧ್ಯವಿದೆ ಎ ಪ್ರತ್ಯಯ ಉಕಾರದಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳಿಗೆ ಎಂಬ ಈ ಪ್ರತ್ಯಯವನ್ನು ಸೇರಿಸಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ ಆದರೆ ಬಾಳು ಎಂಬ ಕ್ರಿಯಾಪದದಲ್ಲಿ ಮಾತ್ರ ಅದು ವಕಾರವಾಗಿ ಬದಲಾಗುತ್ತದೆ ಇದಲ್ಲದೆ ಕೊಲ್ಲು ಎಂಬ ಕ್ರಿಯಾಪದದಲ್ಲಿ ಬರುವ ಒತ್ತಕ್ಷರದಿಂದ ಒಂದು ವ್ಯಂಜನವು ಬಿದ್ದುಹೋಗುತ್ತದೆ ಉದಾಹರಣೆಗೆ ಕಟ್ಟು ಕಟ್ಟೆ ತಟ್ಟು ತಟ್ಟೆ ಹುಲ್ಲು ಕೊಲೆ ಹರಟು ಹರಟೆ ನಗು ನಗೆ ಹೊರು ಹೊರೆ ಬಾಳು ಬಾಳ್ವೆ ನೆಲೆ ಎಂಬ ಪದದಲ್ಲೂ ಈ ಪ್ರತ್ಯಯ ಬಂದಿದ್ದು ಅದರಲ್ಲಿ ನಿಲ್ಲು ಇಲ್ಲವೇ ನೆಲ ಎಂಬ ಪದ ಬಳಕೆಯಾಗಿರಬೇಕು ಅಲು ಪ್ರತ್ಯಯ ಈ ಪ್ರತ್ಯಯ ಪ್ರಾಮುಖ್ಯವಾಗಿ

ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ ಸಿಡಿ ಎಂಬುದರಿಂದ ತಯಾರಾದ ಸಿಡಿಲು ಎಂಬುದು ಮಾತ್ರ ಇದಕ್ಕೆ ಅಪವಾದವಾಗಿರುವ ಹಾಗೆ ಕಾಣಿಸುತ್ತದೆ ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಉಕಾರ ಬಿದ್ದುಹೋಗುತ್ತದೆ ಉದಾಹರಣೆಗೆ ಕೆಮ್ಮು ಕೆಮ್ಮಲು ಮೆಟ್ಟು ಮೆಟ್ಟಲು ಬೀಳು ಬೀಳಲು ಮಾಸು ಮಾಸಲು ಅಳು ಅಳಲು ಮೂಡು ಮೂಡಲು ಕೆಲವು ಕ್ರಿಯಾಪದಗಳೊಂದಿಗೆ ಇದಕ್ಕೆ ಇಲು ಎಂಬ ರೂಪವಿದೆ ಕೊಯ್ಯು ಮಿಗು ಮಿಗಿಲು ಮಡಿಸು ಎಂಬ ಕ್ರಿಯಾಪದದೊಂದಿಗೆ ಇದು ಈ ಎರಡು ರೂಪಗಳಲ್ಲೂ ಬರಲು ಸಾಧ್ಯವಿದ್ದು ಇದರಿಂದ ತಯಾರಾಗುವ ನಾಮಪದಗಳಿಗೆ ಬೇರೆ ಬೇರೆ ಅರ್ಥಗಳಿವೆ ಅಲು ಎಂಬುದನ್ನು ಸೇರಿಸಿ ತಯಾರಿಸಿದ ಮಡಲು ಎಂಬ ಪದಕ್ಕೆ ತೆಂಗಿನ ಗರಿ ಎಂಬ ಅರ್ಥವು ಮತ್ತು ಇಲು ಎಂಬುದನ್ನು ಸೇರಿಸಿ ತಯಾರಿಸಿದ ಮಡಿಲು ಎಂಬುದಕ್ಕೆ ಉಡಿ ಎಂಬ ಅರ್ಥವು

ಬರುತ್ತದೆ ಬಿಸಿಲು ಎಂಬ ಪದದಲ್ಲಿ ಈ ಪ್ರತ್ಯಯ ಬಿಸಿ ಎಂಬ ಗುಣಪದದೊಂದಿಗೆ ಬಂದಿದೆ ಕು ಪ್ರತ್ಯಯ ಈ ಪ್ರತ್ಯಯವನ್ನು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ಸೇರಿಸಿ ನಾಮಪದಗಳನ್ನು ತಯಾರಿಸಬಹುದು ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಈ ಕಾರ ಉಕಾರವಾಗುತ್ತದೆ ಮತ್ತು ಏ ಕಾರ ಅಕಾರವಾಗುತ್ತದೆ ಇದಲ್ಲದೆ ಕೆಲವು ಕ್ರಿಯಾಪದಗಳು ಗಳೊಂದಿಗೆ ಇದಕ್ಕೆ ಕಂಬ ಅಕಾರದಲ್ಲಿ ಕೊನೆಗೊಳ್ಳುವ ರೂಪವಿದೆ ಉದಾಹರಣೆಗೆ ಬಿರಿಬಿರುಕು ಹರಿಹರುಕು ಮುರಿ ಮುರುಕು ಕುಡಿ ಕುಡುಕು ಒಡೆ ಒಡಕು ಕೊಳೆ ಕೊಳಕು ಕರಿ ಕರಕು ಎರೆ ಎರಕ ಸೊನ್ನೆ ಪ್ರತ್ಯಯ ಕನ್ನಡದಲ್ಲಿ ಕೆಲವು ಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನು ಮಾಡದೆ ನಾಮಪದಗಳನ್ನ ಇಲ್ಲವೇ ಕ್ರಿಯಾಪದಗಳನ್ನಾಗಿ ಬಳಸಲು ಸಾಧ್ಯವಿದೆ ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು ಎರಡು ಕವಳು

ಒಂದು ಹಾಡನ್ನು ಹಾಡಿದಳು ಎರಡು ಕ ಗುಡುಗು ಉಡುಗಿತು ಮಿಂಚು ಮಿಂಚಿತು ಎರಡು ಕವನು ಕಟ್ಟಿದ ಕಟ್ಟು ಸಡಿಲಾಗಿದೆ ಎರಡು ಕ ದಲ್ಲಿ ಹಾಡು ಎಂಬ ಪದ ಎರಡು ಬಾರಿ ಬಂದಿದ್ದು ಮೊದಲನೆಯ ಬಳಕೆಯಲ್ಲಿ ಅದು ನಾಮಪದವಾಗಿಯೂ ಮತ್ತು ಎರಡನೆಯ ಬಳಕೆಯಲ್ಲಿ ಕ್ರಿಯಾಪದವಾಗಿಯೂ ಬಂದಿದೆ ಇದೇ ರೀತಿಯಲ್ಲಿ ಎರಡು ಕ ದಲ್ಲಿ ಗುಡುಗು ಮತ್ತು ಮಿಂಚು ಎಂಬ ಪದಗಳು ಮತ್ತು ಎರಡು ಗ ದಲ್ಲಿ ಕಟ್ಟು ಎಂಬ ಪದ ಯಾವ ರೀತಿಯ ಬದಲಾವಣೆಗೂ ಒಳಗಾಗದೆ ನಾಮಪದ ಮತ್ತು ಕ್ರಿಯಾಪದಗಳಾಗಿ ಬಂದಿರುವುದನ್ನು ಕಾಣಬಹುದು ಇಂತಹ ಪದಗಳು ಮೂಲದಲ್ಲಿ ಕ್ರಿಯಾಪದಗಳೆಂದು ಮತ್ತು ಅವಕ್ಕೊಂದು ಸೊನ್ನೆ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅವುಗಳಿಂದ ನಾಮಪದಗಳನ್ನು ತಯಾರಿಸಲಾಗಿದೆ ಎಂದು ಹೇಳುವ ಕ್ರಮವಿದೆ ಕನ್ನಡದಲ್ಲಿ ಸಾಮಾನ್ಯವಾಗಿ ಕ್ರಿಯಾಪದಗಳಿಂದ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳನ್ನು

ತಯಾರಿಸುವುದೇ ಜಾಸ್ತಿ ಇಸು ಎಂಬ ಪ್ರತ್ಯಯವನ್ನು ಬಳಸಿ ನಾಮಪದಗಳಿಂದ ಕ್ರಿಯಾಪದಗಳನ್ನು ತಯಾರಿಸಲು ಸಾಧ್ಯವಿದೆಯೇನೋ ನಿಜ ಆದರೆ ಇದಕ್ಕೆ ಕನ್ನಡದ ನಾಮಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿದೆ ಬಂದ ನಾಮಪದಗಳನ್ನು ಬಳಸುವುದೇ ಜಾಸ್ತಿ ಇದಕ್ಕಿಂತ ಭಿನ್ನವಾದ ಪ್ರತ್ಯಯಗಳು ಕನ್ನಡದ ಕ್ರಿಯಾಪದಗಳಲ್ಲಿ ಚಾರಿತ್ರಿಕ ಅವಶೇಷಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ ಈ ವಿಷಯಗಳ ಆಧಾರದ ಮೇಲೆ ನಾಮಪದ ಮತ್ತು ಕ್ರಿಯಾಪದಗಳ ನಡುವೆ ಸಂಬಂಧವಿರುವಲ್ಲೆಲ್ಲ ಕ್ರಿಯಾಪದವೇ ಮೂಲವೆಂದು ಮತ್ತು ನಾಮಪದ ಕ್ರಿಯಾಪದಕ್ಕೆ ಯಾವುದಾದರೊಂದು ಪ್ರತ್ಯಯವನ್ನು ಇಲ್ಲವೇ ಪದವನ್ನು ಸೇರಿಸುವುದರ ಮೂಲಕ ತಯಾರಾಗುವಂತಹದೆಂದು ವಾದಿಸಲು ಸಾಧ್ಯವಿದೆ ಈ ರೀತಿ ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ಒಂದೇ ರೂಪವಿರುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು ನಗು ಓಡು ಮಿಂಚು ಅಳು ಹಾಡು ಗುಡುಗು ನುಡಿ ಕೆಮ್ಮು ಬೆವರು ಉರಿ ತಪ್ಪು ಬದುಕು ಬೆಳೆ ಕಟ್ಟು ಉಗುಳು ಕರೆ

ಗುದ್ದು ಉರುಳು ಇಂತಹ ಪದಗಳ ಪ್ರಯೋಗದಲ್ಲಿ ಕ್ರಿಯಾಪದಗಳು ನಿಯಮಿತವಾಗಿ ಒಂದು ಘಟನೆಯನ್ನು ನಿರ್ದೇಶಿಸುವುದರೆ ನಾಮಪದಗಳು ಅನಿಯಮಿತವಾಗಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡುತ್ತವೆ ಉದಾಹರಣೆಗಾಗಿ ಓದು ಅಳು ಕೆಮ್ಮು ಮೊದಲಾದ ನಾಮಪದಗಳು ಅದೇ ರೂಪದ ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳನ್ನು ಹೆಸರಿಸುವುದರೆ ಹಾಡು ಬೇಳೆ ಬೆವರು ಮೊದಲಾದ ನಾಮಪದಗಳು ಅಂತಹ ಘಟನೆಗಳಿಂದ ದೊರೆಯುವ ಫಲಿತಾಂಶವನ್ನು ಹೆಸರಿಸುತ್ತವೆ ಅರ್ಥದಲ್ಲಿ ಅನಿಯಮಿತತೆ ಮತ್ತು ವೈವಿಧ್ಯವನ್ನು ನಾವು ಸಾಮಾನ್ಯವಾಗಿ ಪ್ರತ್ಯಯವಿರೂಪ ನಾಮಪದಗಳಲ್ಲಿ ಕಾಣುವೆವಾದ ಕಾರಣ ಇಂತಹ ನಾಮಪದಗಳಲ್ಲಿ ಕ್ರಿಯಾಪದಗಳೊಂದಿಗೆ ಒಂದು ಸೊನ್ನೆ ಪ್ರತ್ಯಯ ಬಂದಿದೆ ಎಂಬ ಮೇಲಿನ ವಾದಕ್ಕೆ ಈ ನಾಮಪದಗಳ ಅರ್ಥದಲ್ಲಿ ಕಾಣಿಸುವ ಅನಿಯಮಿತತೆಯು ಒಂದು ಆಧಾರವಾಗಬಲ್ಲುದು ಬೇರೆ ಕೆಲವು ಪ್ರತ್ಯಯಗಳು ಮೇಲೆ ವಿವಿಧಿಸಿರುವ ಪ್ರತ್ಯಯಗಳು ಮಾತ್ರವಲ್ಲದೆ ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಬೇರೆಯು ಕೆಲವು ಪ್ರತ್ಯಯಗಳು

ಕನ್ನಡದಲ್ಲಿ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುತ್ತವೆ ಇವನ್ನು ಬೇರೆ ಬೇರೆಯಾಗಿ ವರ್ಣಿಸುವ ಬದಲು ಪಟ್ಟಿ ಮಾಡಿ ಹೇಳುವುದೇ ಸುಲಭ ಆದುದರಿಂದ ಅಂತಹ ಪ್ರತ್ಯಯಗಳಿರುವ ಪದಗಳ ಪಟ್ಟಿಯೊಂದನ್ನು ಕೆಳಗೆ ಕೊಡಲಾಗಿದೆ ಪ್ರತ್ಯಯ ಕ್ರಿಯಾಪದ ನಾಮಪದ ಒಂದು ಡ ಕಟ್ಟು ಕಟ್ಟಡ ಒತ್ತು ಒತ್ತಡ ಹಚ್ಚು ಹಚ್ಚಡ ಎರಡು ಪು ಹೊಳೆ ಹೊಳಪು ಉಡು ಉಡುಪು ನೆನೆ ನೆನಪು ತೀರು ತೀರ್ಪು ಮೂರು ಅನೆ ಕೆತ್ತು ಕೆತ್ತನೆ ಬಿತ್ತು ಬಿತ್ತನೆ ನಾಲ್ಕು ಗ ಕೇಳು ಕೇಳುಗ ಓದು ಓದುಗ ನೋಡು ನೋಡುಗ ಐದು ಮೇ ತಾಳು ತಾಳ್ಮೆ ದುಡಿ ದುಡಿಮೆ ಉಳು ಉಳುಮೆ ನಲಿ ನಲ್ಮೆ ಆರು ಅಳ ಮುಚ್ಚು ಮುಚ್ಚಳ ಹೆಚ್ಚು ಹೆಚ್ಚಳ ಏಳು ಹ ಬರೆ ಬರಹ ಎಂಟು ಎಂಟು ಗಳು ಬೈಯು

ಬೈಗಳು ಒಂಬತ್ತು ಚು ಗೀರು ಗೀಚು ಹತ್ತು ಇಸು ತಿನ್ನು ತಿನಿಸು ಮುನಿ ಮುನಿಸು 11 ಆಯ ಒತ್ತು ಒತ್ತಾಯ 12 ಅಂದ ಒಪ್ಪು ಒಪ್ಪಂದ 13 ಡಿ ತಿನ್ನು ತಿಂಡಿ ಹೆದರು ಹೇಡಿ 14 ಇಂಡು ಹಿಂಡಿ ಏಳು ಏರಿ 15 ದಿ ಹಾಯು ಹಾದಿ 16 ಗೆ ನೇಯು ನೆಗೆ 17 ಪೇ ತಿರುಗು ತಿರುಪೆ ಇದಲ್ಲದೆ ಕೇಡು ಎಂಬ ನಾಮಪದವನ್ನು ಕೇಡು ಎಂಬ ಕ್ರಿಯಾಪದದಿಂದ ಅದರ ಮೊದಲನೆಯ ಅಕ್ಷರದಲ್ಲಿ ಬರುವ ಸ್ವರವನ್ನು ಉದ್ದ ಸ್ವರವಾಗಿ ಮಾಡುವುದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ಗಮನಿಸಬಹುದು اللہ



Part 25

Watch on YouTube

ಈ ಭಾಗ ಪುಸ್ತಕದ ೪.೪: ನಾಮಪದಗಳಿಂದ ತಯಾರಾದ ನಾಮಪದಗಳು ಅನ್ನು ಆಧರಿಸಿದೆ.

ಕನ್ನಡದಲ್ಲಿ ನಾಮಪದಗಳನ್ನು ಬೇರೆ ನಾಮಪದಗಳಿಗೆ ಯಾವುದಾದರೊಂದು ಪ್ರತ್ಯಯವನ್ನು ಸೇರಿಸುವುದರ ಮೂಲಕವೂ ತಯಾರಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ಗಾಣಿಗ ಎಂಬ ನಾಮಪದವನ್ನು ಗಾಣ ಎಂಬ ಬೇರೊಂದು ನಾಮ ಪದಕ್ಕೆ ಇಗ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ ಮತ್ತು ಮೂಗುತಿ ಎಂಬ ನಾಮಪದವನ್ನು ಮೂರು ಎಂಬ ಬೇರೊಂದು ನಾಮಪದಕ್ಕೆ ತಿ ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ. ಆದರೆ ಕನ್ನಡದಲ್ಲಿ ಈ ರೀತಿ ತಯಾರಿಸಲಾಗಿರುವ ನಾಮಪದಗಳ ಸಂಖ್ಯೆ ಜಾಸ್ತಿ ಇಲ್ಲ. ಸಾಮಾನ್ಯವಾಗಿ ನಾಮಪದಗಳನ್ನು ಬೇರೆ ನಾಮಪದಗಳೊಂದಿಗೆ ಇಲ್ಲವೇ ಕ್ರಿಯಾಪದ ಅಥವಾ ಗುಣಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ತಯಾರಿಸುವುದೇ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ…



Part 26

Watch on YouTube

ಈ ಭಾಗ ಪುಸ್ತಕದ ೪.೫.೧: ನೇರವಾದ ಬಳಕೆ ಅನ್ನು ಆಧರಿಸಿದೆ.

ಕನ್ನಡದಲ್ಲಿ ಬರುವ ಗುಣಪದಗಳಲ್ಲಿ ಹಲವನ್ನು ಅವುಗಳಲ್ಲಿ ಯಾವ ಬದಲಾ ವಣೆಯನ್ನೂ ಮಾಡದೆ ನೇರವಾಗಿ ನಾಮಪದಗಳ ಸ್ಥಾನದಲ್ಲಿ ಬಳಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಕೆಂಪು ಎಂಬ ಪದ ಗುಣಪದವಾಗಿಯೂ ಬಳಕೆಯಾಗ ಬಲ್ಲುದು ಮತ್ತು ನಾಮಪದವಾಗಿಯೂ ಬಳಕೆಯಾಗಬಲ್ಲುದು. ಉದಾ: (೩ಕ) ಈ ಗೋಡೆಗೆ ಕೆಂಪು ಬಣ್ಣ ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು. (೩ಖ) ಈ ಗೋಡೆಗೆ ಕೆಂಪು ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು. (೩ಕ)ದಲ್ಲಿ ಕೆಂಪು ಎಂಬುದು ಗುಣಪದವಾಗಿ ಬಂದಿದೆ ಮತ್ತು (೩ಖ)ದಲ್ಲಿ ಅದೇ ಪದ ಯಾವ ಬದಲಾವಣೆಯೂ ಇಲ್ಲದೆ ನಾಮಪದವಾಗಿ ಬಂದಿದೆ. ಈ ರೀತಿ ಗುಣಧರ್ಮವನ್ನು ಹೆಸರಿಸುವ ಬದಲು…



ಅಧ್ಯಾಯ 5 — ಜೋಡುಪದಗಳು

Compound Nouns

Part 27

Watch on YouTube

ಈ ಭಾಗ ಪುಸ್ತಕದ ೫.೨: ಜೋಡುಪದಗಳು ಮತ್ತು ಪದಗುಚ್ಛಗಳು ಅನ್ನು ಆಧರಿಸಿದೆ.

ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಾಗಿ ಜೋಡಿಸಿ ಒಂದೇ ಪದವಾಗಿ ಮಾಡುವ ವಿಧಾನಕ್ಕೆ ಸಮಾಸವೆಂದೂ ಮತ್ತು ಅಂತಹ ವಿಧಾನದ ಮೂಲಕ ತಯಾರಾದ ಪದವನ್ನು ಜೋಡುಪದವೆಂದೂ ಕರೆಯಬಹುದು. ಉದಾಹರಣೆ ಗಾಗಿ, ಕೆಳದುಟಿ ಎಂಬುದು ಒಂದು ಜೋಡುಪದ. ಯಾಕೆಂದರೆ, ಇದರಲ್ಲಿ ಕೆಳಗೆ ಮತ್ತು ತುಟಿ ಎಂಬ ಎರಡು ಪದಗಳನ್ನು ಒಟ್ಟಾಗಿ ಜೋಡಿಸಿ ಬೇರೆಯೇ ಒಂದು ಪದವನ್ನು ತಯಾರಿಸಲಾಗಿದೆ, ಮತ್ತು ಈ ಪದದ ಮೂಲಕ ಬಾಯಲ್ಲಿ ರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಹೆಸರಿಸಲಾಗಿದೆ. ಕನ್ನಡದಲ್ಲಿ ಸಾಮಾನ್ಯ ವಾಗಿ ಇಂತಹ ಪದಗಳಲ್ಲಿ ಎರಡು ಪದಗಳು ಮಾತ್ರವೇ ಸೇರಿರುತ್ತವೆಯಾದ ಕಾರಣ, ಜೋಡುಪದ…



Part 28

Watch on YouTube

Note: This transcript has not been cleaned and may contain errors.

ಜೋಡು ಪದಗಳು ಮತ್ತು ಪ್ರತ್ಯಯವಿರುವ ಪದಗಳು ಜೋಡುಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ವ್ಯತ್ಯಾಸವು ಕೆಲವು ವಿಷಯದಲ್ಲಿ ಮೇಲಿನ ವ್ಯತ್ಯಾಸದ ಹಾಗೆಯೇ ಅಸ್ಪಷ್ಟವಾಗಿದೆ ಆದರೆ ಇದಕ್ಕೆ ಬೇರೆ ಒಂದು ಕಾರಣವಿದೆ ಒಂದು ಪದಕ್ಕೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಪ್ರತ್ಯಯವಿರುವ ಪದ ತಯಾರಾಗುತ್ತದೆ ಮತ್ತು ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡುವುದರ ಮೂಲಕ ಜೋಡು ಪದ ತಯಾರಾಗುತ್ತದೆ ಎಂಬುದಾಗಿ ಇವುಗಳ ನಡುವಿರುವ ವ್ಯತ್ಯಾಸವೇನೋ ಸ್ಪಷ್ಟವಾಗಿದೆ ಆದರೆ ಪದ ಮತ್ತು ಪ್ರತ್ಯಯಗಳ ನಡುವಿರುವ ವ್ಯತ್ಯಾಸ ಅಷ್ಟೊಂದು ಸ್ಪಷ್ಟವಾದುದಲ್ಲ ಉದಾಹರಣೆಗಾಗಿ ಹಿಂಗಾಲು ಎಂಬ ಪದದಲ್ಲಿರುವ ಹಿಮ್ ಎಂಬುದು ಹಿಂದು ಅಥವಾ ಹಿಂದೆ ಎಂಬುದರ ಗಿಡ್ಡ ರೂಪವೆಂದು ಹೇಳಿದಲ್ಲಿ ಅದೊಂದು ಪದವೆನಿಸುತ್ತದೆ ಇದಕ್ಕೆ ಬದಲು ಅದು ಚಾರಿತ್ರಿಕವಾಗಿ ಮಾತ್ರ

ಹಿಂದೆ ಎಂಬುದಕ್ಕೆ ಸಂಬಂಧಿಸಿದೆ ಎಂದು ಬಾಧಿಸಿದಲ್ಲಿ ಅದೊಂದು ಪ್ರತ್ಯಯವೆನಿಸುತ್ತದೆ ಇದೇ ರೀತಿಯಲ್ಲಿ ಹೆಜ್ಜೆನು ಹೆಂಗಣ್ಣು ಇಬ್ಬದಿ ಮೊದಲಾದ ಪದಗಳಲ್ಲಿ ಕಾಣಿಸುವ ಹೆಜ್ ಕೆ ಇಬ್ ಮೊದಲಾದ ಅಂಶಗಳು ಪದಗಳೇ ಅಥವಾ ಪ್ರತ್ಯಯಗಳೇ ಎಂಬ ವಿಷಯದಲ್ಲಿ ಅಭಿಪ್ರಾಯ ಭೇದಗಳು ಕಾಣಿಸಲು ಸಾಧ್ಯವಿದೆ ಪದ ಮತ್ತು ಪ್ರತ್ಯಯಗಳ ನಡುವಿರುವ ವ್ಯತ್ಯಾಸ ಈ ರೀತಿ ಅಸ್ಪಷ್ಟವಾಗಿ ಕಾಣಿಸಲು ಮತ್ತು ವಿವಾದಕ್ಕೆ ಎಡೆಮಾಡಿಕೊಡಲು ಮುಖ್ಯ ಕಾರಣವೇನೆಂದರೆ ಚಾರಿತ್ರಿಕವಾಗಿ ಹೆಚ್ಚಿನ ಪ್ರತ್ಯಯಗಳು ಪದಗಳಿಂದ ಬೆಳೆದು ಬಂದವುಗಳು ಮೊದಲಿಗೆ ಸ್ವತಂತ್ರವಾಗಿದ್ದ ಈ ಪದಗಳು ಕ್ರಮೇಣ ಗಿಡ್ಡವಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ ಮತ್ತು ಪ್ರತ್ಯಯಗಳಾಗಿ ಬದಲಾಗುತ್ತವೆ ಸಾಮಾನ್ಯವಾಗಿ ಇಂತಹ ಪದಗಳು ಬೇರೆ ಸಂದರ್ಭಗಳಲ್ಲಿ ತಮ್ಮ ಉದ್ದ ರೂಪದಲ್ಲಿ ಬರುವಾದರೆ ಅವನ್ನು ಪ್ರತ್ಯಯಗಳೆಂದು ಹೇಳದೆ ಪದಗಳೆಂದು ಹೇಳುವುದೇ ರೂಢಿ ಉದಾಹರಣೆಗಾಗಿ ಹಳೆ ಕನ್ನಡದಲ್ಲಿ ಇಸು

ಎಂಬುದು ಒಂದು ಸ್ವತಂತ್ರ ಪದ ಕ್ರಿಯಾಪದ ಪದವಾಗಿ ಬಳಕೆಯಲ್ಲಿತ್ತು ಅದಕ್ಕಿದ್ದ ಅರ್ಥಗಳಲ್ಲಿ ಅನುಮತಿಸು ಎಂಬುದು ಒಂದು ಎಂಬುದನ್ನು ಕಾಣಲಿಸದೆ ಸೇರಲಿಸಿದರೆ ಮೊದಲಾದ ಬಳಕೆಗಳಿಂದ ತಿಳಿಯಬಹುದು ನೇರವಾಗಿ ಬೇರೆ ಕ್ರಿಯಾಪದಗಳೊಂದಿಗೆ ಸೇರಿ ಕೂಡು ಪದಗಳಾಗಿ ಬಂದಾಗಲೂ ಉದಾಹರಣೆಗೆ ಮಾಡಿಸು ಬರೆಸು ತಿನ್ನಿಸು ಇತ್ಯಾದಿ ಇದಕ್ಕೆ ಈ ಅರ್ಥಕ್ಕೆ ಸಂಬಂಧಿಸಿದಂತಹ ಅರ್ಥವೇ ಬರುತ್ತದೆ ಹಾಗಾಗಿ ಹಳೆ ಕನ್ನಡದ ಮಟ್ಟಿಗೆ ಹೀಗೆ ಮಾಡಿಸು ತಿನ್ನಿಸು ಮೊದಲಾದ ಕ್ರಿಯಾ ರೂಪಗಳಲ್ಲಿ ಬರುವ ಇಸು ಎಂಬುದನ್ನು ಒಂದು ಪ್ರತ್ಯಯವೆಂದು ಹೇಳುವ ಬದಲು ಕ್ರಿಯಾಪದವೆಂದು ಹೇಳುವುದೇ ಸರಿ ಆದರೆ ಹೊಸ ಕನ್ನಡದಲ್ಲಿ ಇಸು ಇಲ್ಲವೇ ಸು ಎಂಬುದಕ್ಕೆ ಸ್ವತಂತ್ರ ಕ್ರಿಯಾಪದವಾಗಿ ಬಳಕೆ ಇಲ್ಲ ಬೇರೆ ಕ್ರಿಯಾಪದಗಳೊಂದಿಗೆ ಬರೆಸು ಕರೆಸು ಮಾಡಿಸು ಮೊದಲಾದ ಕ್ರಿಯಾ ರೂಪಗಳಲ್ಲಿ ಮಾತ್ರವೇ ಅದು ಬರಬಲ್ಲದು ಹಾಗಾಗಿ ಹೊಸ

ಕನ್ನಡದ ಮಟ್ಟಿಗೆ ಅದೊಂದು ಪ್ರತ್ಯಯ ಮಾತ್ರ ಎಂದು ಹೇಳಬೇಕಾಗುತ್ತದೆ ಮೇಲೆ ಸೂಚಿಸಿದಂತೆ ಚಾರಿತ್ರಿಕವಾಗಿ ಒಂದು ಪದದ ಅಂಶ ಇನ್ನೊಂದು ಪದದ ಗಿಡ್ಡ ರೂಪವಾಗಿದೆಯಾದರೂ ವರ್ತಮಾನ ಕಾಲದಲ್ಲಿ ಅವೆರಡರೊಳಗೆ ಯಾವ ಸಂಬಂಧವೂ ಇಲ್ಲ ಎಂಬುದಾಗಿಯೂ ವಾದಿಸಲು ಸಾಧ್ಯವಿದೆ ಉದಾಹರಣೆಗಾಗಿ ಮೇಲೆ ಮೊದಲನೆಯ ಅಧ್ಯಾಯದಲ್ಲಿ ಸೂಚಿಸಿದಂತೆ ಎಣ್ಣೆ ಎಂಬ ಪದದ ಎಣ್ ಎಂಬ ಅಂಶ ಚಾರಿತ್ರಿಕವಾಗಿ ಎಳ್ಳು ಎಂಬ ಪದಕ್ಕೆ ಸಂಬಂಧಿಸಿದೆ ಆದರೆ ಕನ್ನಡದ ಆಧುನಿಕ ರೂಪದಲ್ಲಿ ಇವೆರಡಕ್ಕೆ ಸಂಬಂಧವನ್ನು ಕಲ್ಪಿಸಿ ಎಣ್ಣೆ ಎಂಬುದು ಜೋಡು ಪದ ಎಂದು ಹೇಳಲು ಸಾಧ್ಯವಾಗದು ಆದರೆ ಇಂತಹ ವಿವಾದವಿರುವ ಸಂದರ್ಭಗಳಲ್ಲೆಲ್ಲ ವಯಾಕರಣಿಗಳು ಯಾವುದಾದರೊಂದು ನಿರ್ಧಾರಕ್ಕೆ ಬರುವ ಅವಶ್ಯಕತೆ ಇದೆ ಹಾಗಾಗಿ ಅವರು ಅಂತಹ ಒಂದು ನಿರ್ಧಾರಕ್ಕೆ ಬಂದಾಗ ಪದ ಮತ್ತು ಪ್ರತ್ಯಯಗಳ ನಡುವೆ ಕಾಣಿಸುವ ಈ ಅಸ್ಪಷ್ಟತೆ ಮಾಯವಾಗುತ್ತದೆ

ಮತ್ತು ಅದರೊಂದಿಗೆ ಜೋಡು ಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ಅಸ್ಪಷ್ಟತೆಯು ಮಾಯವಾಗುತ್ತದೆ ಜೋಡು ಪದ ಮತ್ತು ಪ್ರತ್ಯಯವಿರುವ ಪದಗಳ ನಡುವೆ ಇನ್ನೊಂದು ರೀತಿಯ ಅಸ್ಪಷ್ಟತೆ ಇರುವುದನ್ನು ಇಲ್ಲಿ ಗಮನಿಸಬಹುದು ಕೆಲವು ಜೋಡು ಪದಗಳ ಅಂಗಗಳು ಗಳಾಗಿ ಎರಡು ಅಥವಾ ಜಾಸ್ತಿ ಪದಗಳು ಮಾತ್ರವಲ್ಲದೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳು ಬಂದಿರಲು ಸಾಧ್ಯವಿದೆ ಉದಾಹರಣೆಗಾಗಿ ಕಸಬರಿಕೆ ಎಂಬ ಪದದಲ್ಲಿ ಕಸ ಮತ್ತು ಬರಿದು ಎಂಬ ಎರಡು ಪದಗಳು ಮಾತ್ರವಲ್ಲದೆ ಕೆ ಎಂಬ ಪ್ರತ್ಯಯವು ಬಂದಿದೆ ಹಾವಾಡಿಗ ಎಂಬ ಪದದಲ್ಲಿ ಹಾವು ಮತ್ತು ಆಡು ಎಂಬ ಎರಡು ಪದಗಳು ಮಾತ್ರವಲ್ಲದೆ ಈಗ ಎಂಬ ಪ್ರತ್ಯಯವು ಸೇರಿಕೊಂಡಿದೆ ಇಂತಹ ಪದಗಳನ್ನು ಜೋಡು ಪದಗಳೆಂದು ಹೇಳಬಹುದು ಇಲ್ಲವೇ ಪ್ರತ್ಯಯವಿರುವ ಪದಗಳೆಂದು ಹೇಳಬಹುದು ಆದರೆ ಸಾಮಾನ್ಯವಾಗಿ ವ್ಯಾಕರಣಗಳಲ್ಲಿ ಈ

ರೀತಿ ಒಂದಕ್ಕಿಂತ ಜಾಸ್ತಿ ಪದಗಳಿರುವವುಗಳನ್ನೆಲ್ಲ ಅವುಗಳೊಂದಿಗೆ ಪ್ರತ್ಯಯಗಳು ಬಂದಿರಲಿ ಅಥವಾ ಬಾರದಿರಲಿ ಜೋಡು ಪದಗಳೆಂದೇ ಕರೆಯುವುದು ರೂಢಿ ಜೋಡು ಪದಗಳ ಗುಣಧರ್ಮಗಳು ಜೋಡು ಪದಗಳ ಎರಡು ಮುಖ್ಯವಾದ ಗುಣಧರ್ಮಗಳನ್ನು ನಾವು ಮೇಲೆ ನೋಡಿರುವೆವು ಪದ ರಚನೆಯ ನಿಯಮಗಳಿಗೆ ಅನುಸಾರವಾಗಿ ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿ ಒಂದೇ ಪದವಾಗಿವೆ ಎಂಬುದು ಅವುಗಳ ಒಂದು ಗುಣಧರ್ಮ ಮತ್ತು ಹೀಗೆ ತಯಾರಾದ ಪದಗಳ ಅರ್ಥವನ್ನು ಅವು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯ ಎಂಬುದು ಅವುಗಳ ಇನ್ನೊಂದು ಗುಣಧರ್ಮ ಜೋಡುಪದಗಳನ್ನು ವ್ಯಕ್ತಿ ವಸ್ತು ಮೊದಲಾದವನ್ನು ಹೆಸರಿಸಿ ಬಳಸಬೇಕಾಗಿದೆಯಾದ ಕಾರಣ ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳ ರಚನೆಯ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಾಗುವುದಿಲ್ಲ ಈ ಎರಡು ಮುಖ್ಯವಾದ

ಗುಣಧರ್ಮಗಳು ಮಾತ್ರವಲ್ಲದೆ ಬೇರೆಯೂ ಕೆಲವು ಗುಣಧರ್ಮಗಳನ್ನು ಜೋಡು ಪದಗಳಲ್ಲಿ ಕಾಣಲು ಸಾಧ್ಯವಿದೆ ಇಂತಹ ಗುಣಧರ್ಮಗಳು ಜೋಡು ಪದಗಳನ್ನು ಪದಗುಚ್ಚಗಳಿಂದ ಬೇರ್ಪಡಿಸಲು ಸಹಾಯಕವಾಗಬಲ್ಲವು ಸಾಮಾನ್ಯವಾಗಿ ಉಚ್ಚಗಳಲ್ಲಿ ಬರುವ ಪದಗಳು ಬೇರೆ ಬೇರೆ ಸ್ವತಂತ್ರ ಪದಗಳಾಗಿರುತ್ತವಲ್ಲದೆ ಒಂದೇ ಪದವಾಗಿ ಒಟ್ಟು ಸೇರುವುದಿಲ್ಲ ಹಾಗಾಗಿ ಅವುಗಳ ನಡುವೆ ಬೇರೆ ಪದಗಳನ್ನು ಸೇರಿಸಿ ಹೇಳಲು ಸಾಧ್ಯವಿದೆ ಆದರೆ ಜೋಡು ಪದಗಳಲ್ಲಿ ಬರುವ ಪದಗಳು ಒಟ್ಟು ಸೇರಿ ಒಂದೇ ಪದವಾಗಿದ್ದು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ ಹಾಗಾಗಿ ಅವುಗಳ ನಡುವೆ ಬೇರೆ ಪದಗಳನ್ನು ನುಗ್ಗಿಸಿ ಹೇಳಲು ಸಾಧ್ಯವಾಗದು ಉದಾಹರಣೆಗಾಗಿ ಕೆಳಗಿನ ತುಟಿ ಎಂಬ ಪದಗುಚ್ಚದಲ್ಲಿ ಕೆಳಗಿನ ಮತ್ತು ತುಟಿ ಎಂಬ ಎರಡು ಸ್ವತಂತ್ರವಾದ ಪದಗಳು ಒಟ್ಟಿಗೆ ಬಂದಿವೆ ಆದರೂ ಬೇರೆ ಬೇರೆ ಪದಗಳಾಗಿ ಉಳಿದಿವೆ ಹಾಗಾಗಿ ಅವುಗಳ ನಡುವೆ ಕೆಂಪು ಒಡೆದ

ಮೊದಲಾದ ಬೇರೆ ಪದಗಳನ್ನು ಇರಿಸಿ ಕೆಳಗಿನ ಕೆಂಪು ತುಟಿ ಕೆಳಗಿನ ಒಡೆದ ತುಟಿ ಮೊದಲಾದ ಅವುಗಳಿಗಿಂತ ಜಾಸ್ತಿ ಉದ್ದವಾದ ಪದಗುಚ್ಚಗಳನ್ನು ತಯಾರಿಸಿ ಹೇಳಲು ಸಾಧ್ಯವಿದೆ ಇದಕ್ಕೆ ವೈತಿರಿಕ್ತವಾಗಿ ಕೆಳದು ಎಂಬ ಜೋಡು ಪದದಲ್ಲಿ ಕೆಳಗೆ ಮತ್ತು ದುಟಿ ತುಟಿ ಎಂಬ ಎರಡು ಪದಗಳು ಸ್ವತಂತ್ರ ಪದಗಳಾಗಿ ಉಳಿದಿಲ್ಲ ಮತ್ತು ಈ ಕಾರಣಕ್ಕಾಗಿ ಅವುಗಳ ನಡುವೆ ಬೇರೆ ಪದಗಳನ್ನು ಇರಿಸಲು ಸಾಧ್ಯವಾಗದು ಹೆಚ್ಚಿನ ಪದಗುಚ್ಚಗಳು ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುತ್ತವೆ ಆದರೆ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಪದಗುಚ್ಚಗಳು ಹೆಸರಿಸುವ ವಿಧಾನದಲ್ಲೂ ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವಲ್ಲಿ ಬಳಕೆಯಾಗುತ್ತವೆ ಎಂಬುದನ್ನು ನಾವು ಮೇಲೆ ಮೂರನೇ ಅಧ್ಯಾಯದಲ್ಲಿ ನೋಡಿರುವೆವು ಈ ರೀತಿ ಹೆಸರಿಸುವ ವಿಧಾನದಲ್ಲಿ ಬಳಕೆಯಾಗಿರುವ ಪದಗುಚ್ಚಗಳ ನಡುವೆಯು

ಬೇರೆ ಪದಗಳನ್ನು ಸೇರಿಸಲು ಸಾಧ್ಯವಾಗದು ಉದಾಹರಣೆಗಾಗಿ ಹೂವಿನ ಗಿಡ ಎಂಬುದು ಒಂದು ಒಂದು ಪದಗುಚ್ಚವಾಗಿದೆಯಾದರೂ ಅದನ್ನು ಒಂದು ವಿಶಿಷ್ಟವಾದ ಗಿಡವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸುವುದಕ್ಕಾಗಿ ಬಳಸಲಾಗುತ್ತದೆ ಹಾಗಾಗಿ ಅದರಲ್ಲಿ ಬರುವ ಹೂವಿನ ಮತ್ತು ಗಿಡ ಎಂಬ ಎರಡು ಪದಗಳ ನಡುವೆ ಬೇರೆ ಪದಗಳನ್ನು ಉದಾಹರಣೆಗೆ ದೊಡ್ಡ ಎಂಬುದನ್ನು ಸೇರಿಸಿ ಹೇಳಲು ಹೂವಿನ ದೊಡ್ಡ ಗಿಡ ಎಂಬುದಾಗಿ ಹೇಳಲು ಸಾಧ್ಯವಾಗದು ಆದರೆ ಇನ್ನೊಂದು ವಿಷಯದಲ್ಲಿ ಇಂತಹ ಹೆಸರಿಸುವ ಪದಗುಚ್ಚಗಳು ಜೋಡು ಪದಗಳಿಗಿಂತ ಭಿನ್ನವಾಗಿವೆ ಅವುಗಳಲ್ಲಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಗುಣಪದಗಳ ಸಹಾಯದಿಂದ ಬದಲಾಯಿಸಲು ಸಾಧ್ಯವಿದೆ ಆದರೆ ಜೋಡು ಪದಗಳಲ್ಲಿ ಬಂದಿರುವ ಪದಗಳ ಅರ್ಥವನ್ನು ಈ ರೀತಿ ಬೇರೆ ಬೇರಾಗಿ ಬದಲಾಯಿಸಲು ಸಾಧ್ಯವಾಗದು ಉದಾಹರಣೆಗಾಗಿ ಹೂವಿನ ಗಿಡ ಎಂಬ ಪದಗುಚ್ಚಕ್ಕೆ ಬೇರೆ

ಪದಗಳನ್ನು ಸೇರಿಸುವುದರ ಮೂಲಕ ಅದರಲ್ಲಿ ಬಂದಿರುವ ಎರಡು ಪದಗಳಲ್ಲಿ ಯಾವುದರ ಅರ್ಥವನ್ನು ಬೇಕಿದ್ದರೂ ಬದಲಾಯಿಸಲು ಸಾಧ್ಯವಿದೆ ಎರಡು ಕೆಂಪು ಹೂವಿನ ಗಿಡ ಎರಡು ಕಮ್ಮ ಹೂವಿನ ಗಿಡ ಎರಡು ಗ ದೊಡ್ಡ ಹೂವಿನ ಗಿಡ ಎರಡು ಕ ದಲ್ಲಿ ಬಂದಿರುವ ಕೆಂಪು ಎಂಬ ಪದ ಹೂವಿನ ಗಿಡ ಎಂಬ ಪದಗುಚ್ಚದ ಮೊದಲನೆಯ ಪದದ ಅರ್ಥವನ್ನು ಹೆಚ್ಚಿಸಿದೆ ಅದು ಒಂದು ಗಿಡದ ಹೂ ಕೆಂಪಾಗಿದೆ ಎಂದು ತಿಳಿಸುತ್ತದಲ್ಲದೆ ಗಿಡವೇ ಕೆಂಪಾಗಿದೆ ಎಂದು ತಿಳಿಸುವುದಿಲ್ಲ ಆದರೆ ಎರಡು ಕ ದಲ್ಲಿ ನಮ್ಮ ಎಂಬ ಪದದ ಮೂಲಕ ಅದೇ ಪದಗುಚ್ಚದ ಎರಡನೆಯ ಪದದ ಅರ್ಥವನ್ನು ಬದಲಾಯಿಸಲು ಸಾಧ್ಯವಾಗಿದೆ ಎರಡು ಕ ಕ್ಕೆ ನಮ್ಮ ಗಿಡ ಎಂಬ ಅರ್ಥವಿದೆ ಅಲ್ಲದೆ ನಮ್ಮ ಹೂವು ಎಂಬ ಅರ್ಥವಿಲ್ಲ ಎರಡು ಗ

ದಲ್ಲಿ ಈ ಎರಡು ರೀತಿಯ ಅರ್ಥಗಳು ಬರಲು ಸಾಧ್ಯವಿದೆ ಅದಕ್ಕೆ ದೊಡ್ಡ ಹೂವು ಬಿಡುವ ಗಿಡ ಎಂಬ ಅರ್ಥವಾಗಲಿ ಇಲ್ಲವೇ ಹೂ ಬಿಡುವ ದೊಡ್ಡ ಗಿಡ ಎಂಬ ಅರ್ಥವಾಗಲಿ ಬರಲು ಸಾಧ್ಯವಿದ್ದು ಇಲ್ಲಿ ಅರ್ಥ ಸಂದಿಗ್ದತೆ ಇದೆ ಆದರೆ ಜೋಡುಪದಗಳ ಬಳಕೆಯಲ್ಲಿ ಇಂತಹ ಅರ್ಥ ಸಂದಿಗ್ದತೆಗಳಿಗೆ ಅವಕಾಶವಿಲ್ಲ ಎಂಬುದನ್ನು ಗಮನಿಸಬಹುದು ಇದಕ್ಕೆ ಕಾರಣವೇನೆಂದರೆ ಜೋಡುಪದದೊಂದಿಗೆ ಬರುವ ಪದಗಳು ಆ ಪದದ ಒಟ್ಟು ಅರ್ಥವೇನಿದೆಯೋ ಅದನ್ನು ಮಾತ್ರ ಬದಲಾಯಿಸಬಲ್ಲುವಲ್ಲದೆ ಅದರ ಅಂಗಗಳನ್ನು ಆಗಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಬದಲಾಯಿಸಲಾರವು ಉದಾಹರಣೆಗಾಗಿ ಮುಳ್ಳು ಹಂದಿ ಎಂಬ ಜೋಡು ಪದಕ್ಕೆ ಚೂಪಾದ ಎಂಬ ಪದವನ್ನು ಸೇರಿಸಿ ಆ ಜೋಡು ಪದದ ಅಂಗವಾಗಿ ಬಂದಿರುವ ಮುಳ್ಳು ಎಂಬ ಪದದ ಅರ್ಥವನ್ನು ಹೆಚ್ಚಿಸಲು ಸಾಧ್ಯವಾಗದು ಇದೇ ರೀತಿಯಲ್ಲಿ

ಕಣ್ಣೀರು ಎಂಬ ಜೋಡು ಪದಕ್ಕೆ ಕೆಂಪು ಎಂಬ ಗುಣಪದವನ್ನು ಸೇರಿಸಿದಲ್ಲಿ ಅದು ಇಡೀ ಪದವು ಸೂಚಿಸುವ ಅರ್ಥವನ್ನು ಕೆಂಪಾಗಿರುವ ಕಣ್ಣೀರು ಎಂಬುದಾಗಿ ಬದಲಾಯಿಸಬಲ್ಲುದಲ್ಲದೆ ಆ ಪದದ ಒಂದು ಅಂಗ ಸೂಚಿಸುವ ಅರ್ಥವನ್ನು ಮಾತ್ರವೇ ಬದಲಾಯಿಸಲಾರದು ಕೆಂಪು ಕಣ್ಣೀರು ಎಂಬುದಕ್ಕೆ ಕೆಂಪಾಗಿರುವ ಕಣ್ಣಿನ ನೀರು ಎಂಬ ಅರ್ಥ ಬರಲಾರದು



Part 29

Watch on YouTube

ಈ ಭಾಗ ಪುಸ್ತಕದ ೫.೫: ಜೋಡುಪದಗಳ ಒಳರಚನೆ ಅನ್ನು ಆಧರಿಸಿದೆ.

ಪ್ರತ್ಯಯವಿರುವ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಮುಖ್ಯವಾಗಿ ಎರಡು ಸಂಗತಿಗಳನ್ನು ಪರಿಶೀಲಿಸಿದರೆ ಸಾಕಾಗಿತ್ತು. ಅವುಗಳಲ್ಲಿ ಯಾವ ಪ್ರತ್ಯಯಗಳನ್ನು ಬಳಸಲಾಗಿದೆ ಎಂಬುದನ್ನೂ ಮತ್ತು ಈ ಪ್ರತ್ಯಯಗಳನ್ನು ಯಾವ ವರ್ಗಕ್ಕೆ ಸೇರಿದ ಪದಗಳೊಂದಿಗೆ (ಎಂದರೆ ನಾಮಪದ, ಕ್ರಿಯಾಪದ ಇಲ್ಲವೇ ಗುಣಪದ ಗಳೊಂದಿಗೆ) ಬಳಸಲಾಗಿದೆ ಎಂಬುದನ್ನೂ ಪರಿಶೀಲಿಸಿದರೆ ಸಾಕಾಗಿತ್ತು. ಕೆಲವು ಪ್ರತ್ಯಯವಿರುವ ಪದಗಳಲ್ಲಿ ಹೀಗೆ ಪದ ಮತ್ತು ಪ್ರತ್ಯಯಗಳನ್ನು ಒಟ್ಟಿಗೆ ಸೇರಿಸು ವಾಗ ಅವುಗಳಲ್ಲಿ ಕೆಲವು ಬದಲಾವಣೆಗಳು ನಡೆಯುವುವಾದ ಕಾರಣ, ಇಂತಹ ಬದಲಾವಣೆಗಳನ್ನೂ ‘ಸೇರಿಕೆಯ ನಿಯಮ’ಗಳು (ಇಲ್ಲವೇ ಸಂಧಿನಿಯಮಗಳು) ಎಂಬ ಹೆಸರಿನಲ್ಲಿ ವರ್ಣಿಸುವ ಅವಶ್ಯಕತೆಯಿತ್ತು. ಜೋಡುಪದಗಳ ಒಳರಚನೆಯನ್ನು ವಿವರಿಸುವಾಗ ಈ…



Part 30

Watch on YouTube

Note: This transcript has not been cleaned and may contain errors.

ಜೋಳು ಪದಗಳ ವಿಭಜನೆ ಕನ್ನಡದ ಜೋಳು ಪದಗಳನ್ನು ಅವುಗಳಲ್ಲಿ ಕಾಣಿಸುವ ವ್ಯತ್ಯಾಸಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ ಸಾಮಾನ್ಯವಾಗಿ ಅವುಗಳ ಒಳ ರಚನೆಯಲ್ಲಿ ಕಾಣಿಸುವ ವ್ಯತ್ಯಾಸಗಳನ್ನೇ ಇಂತಹ ವಿಭಜನೆಗೆ ಆಧಾರವಾಗಿ ತೆಗೆದುಕೊಳ್ಳುವುದು ರೂಢಿ ಜೋಡು ಪದಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆ ಮತ್ತು ಪದ ವರ್ಗ ಈ ಪದಗಳ ನಡುವಿರುವ ಸಂಬಂಧ ಮತ್ತು ಜೋಡು ಪದಗಳ ಕೇಂದ್ರಬಿಂದು ಅವುಗಳ ಒಳಗೆಯೇ ಇದೆಯೇ ಅಥವಾ ಹೊರಗಿದೆಯೇ ಒಳಗಿದೆಯಾದರೆ ಯಾವ ಪದದ ಮೇಲಿದೆ ಮೊದಲಿನದರ ಮೇಲೆಯೇ ಅಥವಾ ಕೊನೆಯದರ ಮೇಲೆಯೇ ಎಂಬಂತಹ ವಿಷಯಗಳ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಹೇಳಲು ಸಾಧ್ಯವಿದೆ ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯ ಅಂಶವೇನೆಂದರೆ ಜೋಡುಪದಗಳ ಈ ವಿಭಜನೆಗಳೆಲ್ಲ ಅವುಗಳ

ಒಳ ರಚನೆಯ ಮೇಲೆ ಮತ್ತು ಅಂತಹ ರಚನೆಯಲ್ಲಿ ಬಳಕೆಯಾಗುವ ಪದಗಳ ಸ್ವಭಾವದ ಮೇಲೆ ಅವಲಂಬಿಸಿದೆ ಆದ ಕಾರಣ ಇವು ಜೋಡು ಪದಗಳ ಚರಿತ್ರೆಗೆ ಸಂಬಂಧಿಸಿದ ವಿಭಜನೆಗಳಲ್ಲದೆ ಅವುಗಳ ಈಗಿನ ಬಳಕೆಗೆ ಸಂಬಂಧಿಸಿದು ಅಲ್ಲ ಬಳಕೆಗೆ ಸಂಬಂಧಿಸಿದಂತೆ ಕನ್ನಡದ ನಾಮಪದಗಳನ್ನು ಹೇಗೆ ವಿಭಜಿಸಬಹುದೆಂಬುದನ್ನು ನಾವು ಮೇಲೆಯೇ ನೋಡಿರುವೆವು ಜೋಡು ಪದಗಳನ್ನು ಇದೇ ವಿಧಾನದ ಮೂಲಕ ಅಂಕಿತ ನಾಮ ರೂಢನಾಮ ಇತ್ಯಾದಿಯಾಗಿ ವಿಂಗಡಿಸಲು ಸಾಧ್ಯವಿದೆ ಆದರೆ ಇದು ಜೋಡು ಪದಗಳಿಗೆ ಮಾತ್ರ ಅನ್ವಯಿಸುವ ವಿಭಜನೆಯಾಗಲಾರದು ಮತ್ತು ಜೋಡು ಪದಗಳ ವಿಶಿಷ್ಟ ಗುಣಗಳ ಮೇಲೆ ಅವಲಂಬಿಸುವ ವಿಭಜನೆಯು ಆಗಲಾರದು ಕನ್ನಡದಲ್ಲಿ ಕ್ರಿಯಾ ಸಮಾಸ ಎಂಬೊಂದು ಸಮಾಸವಿದೆ ಎಂದು ಕೇಶಿರಾಜನಿಂದ ಆರಂಭಿಸಿ ಹಲವಾರು ವಯ್ಯಾಕರಣಿಗಳು ಹೇಳುತ್ತಿದ್ದಾರೆ ಹಾಗಾಗಿ ಕನ್ನಡದ ಜೋಡುಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ವಿಧದವುಗಳೆಂದು

ವಿಂಗಡಿಸಲು ಸಾಧ್ಯ ಎಂಬ ಅಭಿಪ್ರಾಯ ಕೆಲವರದಿರಬಹುದು ಆದರೆ ಈ ಕ್ರಿಯಾ ಸಮಾಸದಿಂದ ತಯಾರಾಗುವ ವಾಕ್ಯಾಂಶಗಳೆಲ್ಲ ಪದಗುಚ್ಚಗಳಲ್ಲದೆ ಜೋಡು ಪದಗಳಲ್ಲ ಎಂಬುದನ್ನು ಮುಂದೆ ನೋಡಲಿರುವೆವು ಹಾಗಾಗಿ ಕ್ರಿಯಾ ಸಮಾಸವೆಂಬುದು ಕನ್ನಡದಲ್ಲಿ ಸಮಾಸವಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಜೋಡುಪದಗಳಿಗೂ ಮತ್ತು ಪದಗುಚ್ಚಗಳಿಗೂ ನಡುವಿರುವ ವ್ಯತ್ಯಾಸವನ್ನು ನಾಮಪದಗಳಲ್ಲಿ ಮಾತ್ರ ಕಾಣಬಲ್ಲೆವಲ್ಲದೆ ಕ್ರಿಯಾಪದ ಇಲ್ಲವೇ ಗುಣಪದಗಳಲ್ಲಿ ಕಾಣಲಾರೆವೆಂಬುದೇ ಈ ರೀತಿ ಏಳು ಪದಗಳು ನಾಮಪದಗಳಾಗಿ ಮಾತ್ರ ಬರಬಲ್ಲವೆಂಬುದಕ್ಕೆ ಮುಖ್ಯ ಕಾರಣ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಸಮಾಸಗಳೆಂಬ ಹೆಸರಿನ ಜೋಡುಪದಗಳ ವಿಭಜನೆಗೆ ಮೇಲೆ ಸೂಚಿಸಿದ ವ್ಯತ್ಯಾಸಗಳಲ್ಲಿ ಹಲವನ್ನು ಒಟ್ಟಾಗಿ ಬಳಸಲಾಗುತ್ತದೆ ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲಾಗಿದೆ ಆದಕಾರಣ ಕನ್ನಡದ ಮಟ್ಟಿಗೆ ಇದು ಸ್ವಲ್ಪವೂ ತೃಪ್ತಿಕರವಾಗಿಲ್ಲ ಎಂಬುದನ್ನು ನಾವು ಮುಂದಿನ ಒಂದು ವಿಭಾಗದಲ್ಲಿ ನೋಡಲಿರುವೆವು ಸಂಖ್ಯೆಯನ್ನು ಬಳಸುವ

ವಿಭಜನೆ ಜೋಡ ಪದಗಳನ್ನು ಅವುಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆಯ ಆಧಾರದ ಮೇಲೆ ವಿಂಗಡಿಸಿ ಹೇಳಲು ಸಾಧ್ಯವಿದೆ ಆದರೆ ಕನ್ನಡದಲ್ಲಿ ಬರುವ ಜೋಡು ಪದಗಳಲ್ಲಿ ಹೆಚ್ಚಿನವು ಎರಡು ಪದಗಳ ಸೇರಿಕೆಯಿಂದ ಮಾತ್ರವೇ ತಯಾರಾದವುಗಳಾದ ಕಾರಣ ಕಾರಣ ಇಂತಹ ವಿಭಜನೆ ಕನ್ನಡದ ಮಟ್ಟಿಗೆ ಜಾಸ್ತಿ ಉಪಯುಕ್ತವಲ್ಲ ಎರಡಕ್ಕಿಂತ ಜಾಸ್ತಿ ಪದಗಳಿಂದ ತಯಾರಾದ ಜೋಡು ಪದಗಳು ಕನ್ನಡದಲ್ಲಿ ಬಹಳ ಅಪರೂಪ ಜೋಡು ಪದಗಳ ಒಡ ರಚನೆಯಲ್ಲಿ ಪದಗಳು ಮಾತ್ರವಲ್ಲದೆ ಪ್ರತ್ಯಯಗಳು ಬರಲು ಸಾಧ್ಯವಿದ್ದು ಇಂತಹ ಜೋಡು ಪದಗಳನ್ನು ಉಳಿದ ಜೋಡು ಪದಗಳಿಂದ ಬೇರ್ಪಡಿಸಿ ಹೇಳಲು ಸಾಧ್ಯವಿದೆ ಉದಾಹರಣೆಗಾಗಿ ದಾರಿ ಹೋಕ ಎಂಬುದರಲ್ಲಿ ದಾರಿ ಮತ್ತು ಹೋಗು ಎಂಬೆರಡು ಪದಗಳು ಮಾತ್ರವಲ್ಲದೆ ಅ ಎಂಬ ಪ್ರತ್ಯಯವು ಕಾಣಿಸುತ್ತದೆ ಈ ಪ್ರತ್ಯಯ ಸೇರಿದಾಗ ಹೋಗು ಎಂಬುದರ ಕೊನೆಯ ಉಕಾರ

ಬಿದ್ದು ಹೋಗುತ್ತದೆ ಮತ್ತು ಗ ಕಾರ ಕರವಾಗುತ್ತದೆ ಇದೇ ರೀತಿಯಲ್ಲಿ ಹಾವಾಡಿಗ ಎಂಬುದರಲ್ಲಿ ಹಾವು ಮತ್ತು ಆಡು ಎಂಬ ಪದಗಳು ಮಾತ್ರವಲ್ಲದೆ ಈಗ ಎಂಬ ಪ್ರತ್ಯಯವು ಕಾಣಿಸುತ್ತದೆ ಕನ್ನಡದ ದಲ್ಲಿ ಹೋಕ ಮತ್ತು ಆಡಿಗ ಎಂಬವುಗಳು ಸ್ವತಂತ್ರ ಪದಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ ಈ ರೀತಿ ಮೇಲಿನ ಜೋಡು ಪದಗಳಲ್ಲಿ ಎರಡು ಪದಗಳೊಂದಿಗೆ ಒಂದು ಪ್ರತ್ಯಯವು ಸೇರಿಕೊಂಡಿದೆ ಎಂದು ಹೇಳುವ ಅವಶ್ಯಕತೆ ಉಂಟಾಗುತ್ತದೆ ಆದರೆ ಬೇರೆ ವಿಷಯಗಳಲ್ಲಿ ಇವು ಎರಡು ಪದಗಳಿಂದ ತಯಾರಾದ ಇತರ ಜೋಡು ಪದಗಳ ಹಾಗೆಯೇ ಉದಾಹರಣೆಗೆ ಬಯಲಾಟ ತಲೆತಿರುಕ ಇತ್ಯಾದಿ ಕಾಣಿಸುವ ಆದ ಕಾರಣ ಇವು ತಯಾರಾಗುವ ಸಮಯದಲ್ಲಿ ಹೋಕ ಆಡಿಗ ಮೊದಲಾದವುಗಳು ಸ್ವತಂತ್ರ ಪದಗಳಾಗಿದ್ದು ಎಂದು ಕಲ್ಪಿಸಿಕೊಳ್ಳಲು ಸಾಧ್ಯವಿದೆ ಪದವರ್ಗಗಳನ್ನು ಬಳಸುವ ವಿಭಜನೆ ಜೋಡುಪದಗಳನ್ನು ತಯಾರಿಸಲು ಬಳಸಿರುವ ಪದಗಳು

ಯಾವ ಪದವರ್ಗಕ್ಕೆ ಸೇರಿವೆ ಎಂಬ ವಿಷಯದ ಆಧಾರದ ಮೇಲೆ ಅವನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ ಕನ್ನಡದ ಹೆಚ್ಚಿನ ಜೋಡು ಪದಗಳಲ್ಲೂ ಎರಡನೆಯ ಅಂಗ ನಾಮಪದವಾಗಿರುತ್ತದೆ ಮೊದಲನೆಯದು ಮಾತ್ರ ನಾಮಪದವಿರಬಹುದು ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು ಈ ಕಾರಣಕ್ಕಾಗಿ ಕನ್ನಡದ ಹೆಚ್ಚಿನ ಜೋಡುಪದಗಳನ್ನು ಅವುಗಳ ಮೊದಲನೆಯ ಅಂಗವಾಗಿ ಬರುವ ಪದಗಳ ವರ್ಗವನ್ನು ಆಧರಿಸಿ ನಾಮಪದವಿರುವವು ಕ್ರಿಯಾಪದವಿರುವವು ಮತ್ತು ಗುಣಪದವಿರುವವು ಎಂಬುದಾಗಿ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿ ಹೇಳಬಹುದು ಮೊದಲನೇ ಅಂಗವಾಗಿ ನಾಮಪದ ಬಂದಿರುವ ಜೋಡು ಪದಗಳು ಆನೆಕಾಲು ಬೆಂಕಿ ಬೆಟ್ಟಿಗೆ ಕಾಲ್ಮಣೆ ಬಯಲಾಟ ಕೈಮಗ್ಗ ನೆಲಗಡಲೆ ಮೊದಲನೇ ಅಂಗವಾಗಿ ಕ್ರಿಯಾಪದ ಬಂದಿರುವ ಜೋಡು ಪದಗಳು ಊರುಗೋಲು ತೂಗುದೀಪ ಸಿಡಿಮದ್ದು ಕಡೆಗೋಲು ಅರಳುಮೊಗ್ಗು ಬಿಚ್ಚುಕತ್ತಿ ಮೊದಲನೆಯ ಅಂಗವಾಗಿ ಗುಣಪದ ಬಂದಿರುವ ಜೋಡು ಪದಗಳು ದೊಡ್ಡಮ್ಮ

ಬಿಸಿನೀರು ಮುಂಗಾಲು ಬೆಳ್ಳುಳ್ಳಿ ಕಿರುಬೆರಳು ಹಿಮ್ಮೇಳ ಜೋಡು ಪದಗಳಲ್ಲಿ ಎರಡನೇ ಅಂಗವಾಗಿ ಬರುವ ಪದ ನಾಮಪದವಾಗಿರುವ ಬದಲು ಕ್ರಿಯಾಪದವಾಗಿರಲು ಸಾಧ್ಯವಿದೆ ಎಂಬುದನ್ನು ಉದಾಹರಣೆಗೆ ಕೈಪಿಡಿ ಬಾನುಲಿ ಮುಂದೆ ನೋಡಲಿರುವೆವು ಅದಕ್ಕೆ ಮೊದಲು ಕನ್ನಡದಲ್ಲಿ ಮುಖ್ಯವಾಗಿ ಬರುವ ಮೇಲೆ ಹೇಳಿದ ಮೂರು ರೀತಿಯ ಜೋಡು ಪದಗಳ ಸ್ವರೂಪವೆಂತಹದು ಎಂಬುದನ್ನು ಈ ಕೆಳಗೆ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ



Part 31

Watch on YouTube

ಈ ಭಾಗ ಪುಸ್ತಕದ (ಕ) ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು ಅನ್ನು ಆಧರಿಸಿದೆ.

ಎರಡು ನಾಮಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಾಗಿರುವ ಜೋಡುಪದಗಳು ಕನ್ನಡದಲ್ಲಿ ಹಲವಿವೆ. ಇವುಗಳಲ್ಲಿ ಹೆಚ್ಚಿನವೂ ಅ ಎಂಬ ಸಂಬಂಧಕ ಪ್ರತ್ಯಯದ ಮೂಲಕ ಎರಡು ನಾಮಪದಗಳನ್ನು ಒಟ್ಟು ಸೇರಿಸುವು ದರ ಮೂಲಕ ತಯಾರಾದವುಗಳು. ಉದಾ: <table> <thead> <tr> <th>ಒಳನುಡಿ</th> <th>ಜೋಡುಪದ</th> </tr> </thead> <tbody> <tr> <td>ಬಯಲಿನ ಆಟ</td> <td>ಬಯಲಾಟ</td> </tr> <tr> <td>ಬೆಂಕಿಯ ಪೆಟ್ಟಿಗೆ</td> <td>ಬೆಂಕಿಪೆಟ್ಟಿಗೆ</td> </tr> <tr> <td>ನೆಲದ ಕಡಲೆ</td> <td>ನೆಲಿಕಡಲೆ</td> </tr> <tr> <td>ಕಾಲಿನ ಮಣೆ</td> <td>ಕಾಲ್ಮಣಿ</td> </tr> <tr> <td>ಕೈಯ ಮಗ್ಗ</td> <td>ಕೈಮಗ್ಗ</td> </tr> </tbody> </table> ಈ…



Part 32

Watch on YouTube

ಈ ಭಾಗ ಪುಸ್ತಕದ ೫.೬.೩: ಎರಡನೆಯ ಅಂಗದಲ್ಲಿ ವೈವಿಧ್ಯ ಅನ್ನು ಆಧರಿಸಿದೆ.

ಮೇಲೆ ವಿವರಿಸಿದ ಜೋಡುಪದಗಳಲ್ಲೆಲ್ಲ ಎರಡನೆಯ ಅಂಗವಾಗಿ ನಾಮಪದ ಮಾತ್ರವೇ ಬಳಕೆಯಾಗಿದ್ದು, ಮೊದಲನೆಯ ಅಂಗವಾಗಿ ಮಾತ್ರ ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದದ ಬಳಕೆಯಾಗಿದೆ. ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿಯೂ ನಾಮಪದ ಮಾತ್ರವಲ್ಲದೆ ಕ್ರಿಯಾಪದ ಮತ್ತು ಗುಣಪದಗಳು ಬರಬಲ್ಲವೇ ಎಂಬ ಪ್ರಶ್ನೆಯನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆ ಯಿದೆ. ಗುಣಪದಗಳಿರುವ ಜೋಡುಪದಗಳಿಗೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯ ಎಂಬುದನ್ನು ನಾವು ಹಿಂದಿನ ವಿಭಾಗದಲ್ಲಿ ನೋಡಿರುವೆವು. ಈ ವ್ಯತ್ಯಾಸ ವನ್ನು ಅವುಗಳಿಗಿ ಕೊಡಬಹುದಾದ ಒಳನುಡಿಗಳಲ್ಲಿ ಕಾಣಬಹುದು. ಉದಾ ಹರಣೆಗಾಗಿ, ಮುಂಬಾಗಿಲು ಎಂಬ ಜೋಡುಪದಕ್ಕೆ (ಮನೆಯ) ಮುಂದಿರುವ ಬಾಗಿಲು ಎಂಬುದಾಗಿ ಒಳನುಡಿಯನ್ನು…



Part 33

Watch on YouTube

ಈ ಭಾಗ ಪುಸ್ತಕದ ೫.೬.೪: ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ ಅನ್ನು ಆಧರಿಸಿದೆ.

ಜೋಡುಪದಗಳು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತವೆ ಎಂಬು ದರ ಆಧಾರದ ಮೇಲೆ ಅವುಗಳಿಗೊಂದು ಕೇಂದ್ರ ಬಿಂದುವನ್ನು ಕಲ್ಪಿಸಿಕೊಳ್ಳಲು ಬರುತ್ತದೆ. ಈ ಕೇಂದ್ರ ಬಿಂದು ಜೋಡುಪದದ ಒಳಗೇನೇ ಇರಬಹುದು ಇಲ್ಲವೇ ಅದರೆ ಹೊರಗಿರಬಹುದು. ಜೋಡುಪದದ ಒಳಗೇನೇ ಇದೆಯಾದರೆ, ಅದರ ಮೊದಲನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು ಇಲ್ಲವೇ ಎರಡನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು. ಈ ಬೇರೆ ಬೇರೆ ಸಾಧ್ಯತೆಗಳ ಆಧಾರದ ಮೇಲೆ ಜೋಡುಪದಗಳನ್ನು ಬೇರೆ ಬೇರೆ ವರ್ಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದಕ್ಕೆ ಕೆಳಗಿರುವ ತುಟಿ ಎಂಬ ಒಳನುಡಿಯನ್ನು…



Part 34

Watch on YouTube

ಈ ಭಾಗ ಪುಸ್ತಕದ ೫.೨.೧: ಎರಡನೆಯ ಪದದಲ್ಲಿ ನಡೆಯುವ ಬದಲಾವಣೆಗಳು ಅನ್ನು ಆಧರಿಸಿದೆ.

ಜೋಡುಪದಗಳ ಎರಡನೆಯ ಪದದಲ್ಲಿ ಒಂದು ಮುಖ್ಯವಾದ ಬದಲಾವಣೆ ಮಾತ್ರ ಕಾಣಿಸಿಕೊಳ್ಳುವುದಾದ ಕಾರಣ, ಅದನ್ನು ಮೊದಲಿಗೆ ಪರಿಶೀಲಿಸಬಹುದು. ಈ ಪದಗಳ ಮೊದಲಿಗೆ ಬರುವ ಕ್, ತ್, ಪ್ ಇಲ್ಲವೇ ಸ್ ಎಂಬ ವ್ಯಂಜನ ಗ್, ದ್, ಬ್ ಇಲ್ಲವೇ ಜ್ ಎಂಬುದಾಗಿ ಬದಲಾಗುವುದೇ ಈ ಬದಲಾವಣೆ. ಈ ಬದಲಾವಣೆಯ ಮೂಲಕ ಕಕಾರ ಗಕಾರವಾಗುವುದನ್ನು ಹಲವಾರು ಜೋಡು ಪದಗಳಲ್ಲಿ ಕಾಣಬಹುದು. ತಕಾರ ದಕಾರವಾಗುವುದೂ ಉಳಿದ ಎರಡು ಬದಲಾವಣೆಗಳಿಗಿಂತ ಜಾಸ್ತಿ ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. (೧) ಜೋಡುಪದದಲ್ಲಿ ಬರುವ ಮೊದಲನೆಯ ಪದದ ಕೊನೆಯ ಅಕ್ಷರ ಬಿದ್ದುಹೋಗಿ, ಸೊನ್ನೆ ಮಾತ್ರ ಉಳಿದಿದೆಯಾದರೆ,…



Part 35

Watch on YouTube

ಈ ಭಾಗ ಪುಸ್ತಕದ ೫.೮.೨: ಪದವರ್ಗಗಳ ಸಂಖ್ಯೆ ಅನ್ನು ಆಧರಿಸಿದೆ.

ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡುಪದಗಳ ವಿಭಜನೆಗಳು ಪದವರ್ಗ ಗಳ ವಿಷಯದಲ್ಲಿ ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವಿರುವ ಪ್ರಾಮುಖ್ಯ ವಾದ ಒಂದು ವ್ಯತ್ಯಾಸವನ್ನು ಸರಿಯಾಗಿ ಗಮನಿಸದಿರುವುದರಿಂದಾಗಿ ಬಹಳ ಮಟ್ಟಿಗೆ ತಪ್ಪು ಹಾದಿ ಹಿಡಿದಿವೆ. ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದ ಗಳೆಂಬ ಎರಡೇ ಎರಡು ಮುಖ್ಯ ಪದವರ್ಗಗಳಿದ್ದು, ಗುಣಪದಗಳ ಅರ್ಥ ಕೊಡುವ ಪದಗಳಲ್ಲಿ ಹೆಚ್ಚಿನವೂ ನಾಮಪದವೆಂಬ ಪದವರ್ಗದಲ್ಲೇನೇ ಸೇರಿ ಕೊಳ್ಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬೇರೆ ಬೇರೆ ಮುಖ್ಯ ಪದವರ್ಗಗಳಿವೆ ಎಂಬುದನ್ನು ನಾವು ಮೇಲೆ ಎರಡನೆಯ ಅಧ್ಯಾಯದಲ್ಲಿ (೨.೨ರಲ್ಲಿ) ನೋಡಿರುವೆವು.…



Part 36

Watch on YouTube

ಈ ಭಾಗ ಪುಸ್ತಕದ ೫.೮.೪: ಸುಬಂತ ಪ್ರತ್ಯಯ ಅನ್ನು ಆಧರಿಸಿದೆ.

ಸಂಸ್ಕೃತದ ನಾಮಪದಗಳು ಮನುಷ್ಯರನ್ನು ಗುರುತಿಸುತ್ತಿರಲಿ, ಇಲ್ಲವೇ ಬೇರೆ ಪ್ರಾಣಿ, ಮರ-ಗಿಡ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುತ್ತಿರಲಿ, ಅವುಗಳ ಲಿಂಗವೆಂಬುದು ಆ ಪದಗಳ ಕೊನೆಯ ಅಕ್ಷರವೆಂತಹದು ಮತ್ತು ಅವುಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಗೆ ಎಂತಹ ರೂಪವಿದೆ ಎಂಬ ವಿಷಯದ ಮೇಲೆ ಅವಲಂಬಿಸಿದೆ. ಆ ಪದಗಳ ಅರ್ಥವೇನು ಎಂಬುದು ಇಲ್ಲಿ ಪ್ರಾಮುಖ್ಯವಾದ ವಿಷಯವಲ್ಲ. ಕೆಳಗೆ ಕೊಟ್ಟಿರುವ ಸಂಸ್ಕೃತದ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗದ ಪದಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾದೀತು. ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗ ನೃಪಃ ‘ಅರಸು’ ಜನನೀ ‘ತಾಯಿ’ ಜ್ಞಾನಂ ‘ತಿಳುವಳಿಕೆ’ ವೃಕ್ಷಃ…



Part 37

Watch on YouTube

ಈ ಭಾಗ ಪುಸ್ತಕದ ೫.೮.೫: ಅವ್ಯಯೀಭಾವ ಸಮಾಸ ಅನ್ನು ಆಧರಿಸಿದೆ.

ಸಂಸ್ಕೃತದಲ್ಲಿ ಒಂದು ಅವ್ಯಯದೊಂದಿಗೆ ನಾಮಪದವೊಂದನ್ನು ಸೇರಿಸಿ ರಚಿಸಿದ ಯಥಾಶಕ್ತಿ, ಉಪಕೃಷ್ಣಂ, ಪ್ರತಿದಿನಂ, ಪರೋಕ್ಷಂ ಮೊದಲಾದ ಜೋಡುಪದ ಗಳನ್ನು ಅವ್ಯಯಿಭಾವವೆಂಬ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳು ಅವ್ಯಯಗಳಾಗಿ ಬಳಕೆಯಾಗುವುವಾದ ಕಾರಣ, ಅವುಗಳ ಕೇಂದ್ರ ಬಿಂದು ಅವುಗಳ ಮೊದಲನೆಯ ಅಂಗವಾಗಿರುವ ಅವ್ಯಯದ ಮೇಲೆ ಬೀಳುತ್ತದೆಯೆಂದು ಹೇಳಬಹುದು. ಉದಾಹರಣೆಗಾಗಿ, ಉಪಕೃಷ್ಣಂ ಎಂಬ ಪದಕ್ಕೆ ‘ಕೃಷ್ಣನ ಹತ್ತಿರ’ ಎಂಬ ಅರ್ಥವಿದ್ದು, ಅದರ ಕೇಂದ್ರ ಬಿಂದು ಉಪ ‘ಹತ್ತಿರ’ ಎಂಬ ಪದದ (ಅವ್ಯಯದ) ಮೇಲೆ ಬೀಳುತ್ತದೆ. ಕನ್ನಡದಲ್ಲಿ ಈ ರೀತಿ ‘ಅವ್ಯಯ’ಗಳಾಗಿ ಬರುವ ಹಾಗೂ ಕೇಂದ್ರ ಬಿಂದು ಮೊದಲನೆಯ…



Part 38

Watch on YouTube

Note: This transcript has not been cleaned and may contain errors.

ದ್ವಂದ್ವ ಸಮಾಸ ಕನ್ನಡ ವ್ಯಾಕರಣಗಳಲ್ಲಿ ದ್ವಂದ್ವ ಎಂಬ ಸಮಾಸಕ್ಕೆ ಕೊಟ್ಟಿರುವ ಉದಾಹರಣೆಗಳೆಲ್ಲ ಪದಗುಚ್ಚಗಳಲ್ಲದೆ ಜೋಡು ಪದಗಳಲ್ಲ ಸಂಸ್ಕೃತದಲ್ಲಿ ರಾಮ ಲಕ್ಷ್ಮಣ ಮಾತಾ ಪಿತರೌ ಮೊದಲಾದವುಗಳನ್ನು ಜೋಡು ಪದಗಳೆಂದು ಕರೆಯಲು ಅವುಗಳ ಅಂಗಗಳನ್ನು ಆಗಿರುವ ಪದಗಳಲ್ಲಿ ಕೊನೆಯದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬರುವೆಂಬುದೇ ಕಾರಣ ಕನ್ನಡದ ರಾಮಲಕ್ಷ್ಮಣರು ಅಣ್ಣತಮ್ಮಂದಿರು ಎಂಬಂತವುಗಳಲ್ಲಿ ಇದೇ ರೀತಿಯಲ್ಲಿ ವಿಭಕ್ತಿ ಪ್ರತ್ಯಯ ಕೊನೆಯ ಪದದೊಂದಿಗೆ ಮಾತ್ರ ಬರುವುದಾದ ಕಾರಣ ಉದಾಹರಣೆಗೆ ರಾಮಲಕ್ಷ್ಮಣರನ್ನು ಅವನ್ನು ದ್ವಂದ್ವ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ ಆದರೆ ಕನ್ನಡದಲ್ಲಿ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯದ ಬಳಕೆಯ ಆಧಾರದ ಮೇಲೆ ಜೋಡು ಪದಗಳನ್ನು ಪದಗುಚ್ಚಗಳಿಂದ ಬೇರ್ಪಡಿಸಲು ಸಾಧ್ಯವಾಗದೆ ಎಂಬುದನ್ನು ನಾವು ಮೇಲೆಯೇ ನೋಡಿರುವೆವು ಕನ್ನಡದ ರಾಮಲಕ್ಷ್ಮಣರು ಎಂಬಂತಹ ಬಳಕೆಗಳಲ್ಲಿ ಎರಡು ನಾಮಪದಗಳನ್ನು ಒಟ್ಟು ಸೇರಿಸಿ ಬಹುವಚನ ಪ್ರತ್ಯಯದೊಂದಿಗೆ ಹೇಳಲಾಗಿದೆ

ಅಲ್ಲದೆ ಅವನ್ನು ಒಂದೇ ಪದವಾಗಿ ಪರಿವರ್ತಿಸಿಲ್ಲ ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳ ರಚನೆಯಿಂದಲೇನೆ ಪಡೆಯಲು ಸಾಧ್ಯವಿದೆ ಹಾಗಾಗಿ ಇವು ಜೋಡು ಪದಗಳಲ್ಲ ಗಮಕ ಸಮಾಸ ಕನ್ನಡಕ್ಕೇನೆ ವಿಶಿಷ್ಟವಾದವೆಂದು ಹೇಳುವ ಗಮಕ ಮತ್ತು ಕ್ರಿಯಾ ಸಮಾಸಗಳ ಅವಸ್ಥೆಯು ಇದೇ ರೀತಿಯದು ಅವುಗಳಿಗೆ ವಯಾಕರಣಿಗಳು ಕೊಡುವ 20 25 ಕಿರಿಯ ಮಗ ತೂಗುವ ತೊಟ್ಟಿಲು ಕಂಡ ವಿಚಾರ ಮೊದಲಾದ ಉದಾಹರಣೆಗಳೆಲ್ಲ ಬರಿಯ ಪದಗುಚ್ಚಗಳಲ್ಲದೆ ಜೋಡು ಪದಗಳಲ್ಲ ಅವುಗಳಲ್ಲಿ ಎರಡು ಪದಗಳು ಒಟ್ಟಿಗೆ ಬಂದಿವೆ ಏನೋ ನಿಜ ಆದರೆ ಅವು ಒಟ್ಟು ಸೇರಿ ಒಂದೇ ಪದವಾಗಿಲ್ಲ ಎಂದರೆ ಅವು ಕನ್ನಡದ ವಾಕ್ಯ ರಚನೆಯ ನಿಯಮಗಳಿಗೆ ಅನುಸಾರವಾಗಿ ಒಟ್ಟು ಸೇರಿವೆ ಅಲ್ಲದೆ ಪದ ರಚನೆಯ ನಿಯಮಗಳಿಗೆ ಅನುಸಾರವಾಗಿ ಒಟ್ಟು ಸೇರಿಲ್ಲ ಕನ್ನಡದ ವಯ್ಯಾಕರಣಿಗಳು ಇಲ್ಲಿಯೂ ಮೇಲೆ ಕರ್ಮಧಾರೆಯ

ಸಮಾಸದ ವಿಷಯದಲ್ಲಿ ಮಾಡಿರುವಂತಹ ತಪ್ಪನ್ನೇ ಮಾಡಿದ್ದಾರೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯ ರಚನೆಯಲ್ಲಿ ಕಾಣಿಸುವ ಅತ್ಯಂತ ಪ್ರಾಮುಖ್ಯವಾದ ವ್ಯತ್ಯಾಸ ಒಂದನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬುದೇ ಇದಕ್ಕೆ ಕಾರಣ ಕ್ರಿಯಾಪದಗಳ ಸಂಬಂಧಕ ರೂಪವನ್ನು ಮಾಡುವ ಮಾಡಿದ ಮಾಡದ ಎಂಬಂತಹ ಕ್ರಿಯಾ ರೂಪಗಳನ್ನು ಬಳಸುವಲ್ಲಿ ಈ ಎರಡು ಭಾಷೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಕೆಳಗಿನ ವಾಕ್ಯಗಳಿಂದ ತಿಳಿಯಬಹುದು 12 ಕತ್ರ ಏಕಹ ಮೃತಹ ಸರ್ಪಹ ಅಸ್ತಿ ಅಲ್ಲಿ ಒಂದು ಸತ್ತ ಹಾವು ಇದೆ 13 ಕ ರಾಮಃ ಏಕಂ ಮೃತಂ ಸರ್ಪಂ ಅಪಶ್ಯತ್ ರಾಮ ಒಂದು ಸತ್ತ ಹಾವನ್ನು ನೋಡಿದ 14 ಕ ರಾಮ ಏಕೇನ ಮೃತೇನ ಸರ್ಪೇನ ಭೀತಹ ರಾಮ ಒಂದು ಸತ್ತ ಹಾವಿಗೆ ಹೆದರಿದ 15 ರಾಮಹ ಏಕಸ್ಯ

ಮೃತಸ್ಯ ಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್ ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ ಮೇಲಿನ ವಾಕ್ಯಗಳಲ್ಲಿ ಮೃತಹ ಎಂಬುದು ಸಂಸ್ಕೃತದ ಕೃದಂತ ಎಂಬ ಹೆಸರಿನ ಸಂಬಂಧಕ ಕ್ರಿಯಾ ರೂಪ ಅದು ಸಾಯುವ ಘಟನೆಯನ್ನು ಸರ್ಪ ಹಾವು ಎಂಬುದರೊಂದಿಗೆ ಸಂಬಂಧಿಸುತ್ತದೆ ಇದೇ ಕೆಲಸವನ್ನು ಮಾಡುವುದಕ್ಕಾಗಿ ಕನ್ನಡದಲ್ಲಿ ಸತ್ತ ಎಂಬ ರೂಪ ಬಳಕೆಯಲ್ಲಿದೆ ಇವುಗಳಲ್ಲಿ ಸಂಸ್ಕೃತದ ಮೃತಹ ಎಂಬುದು ಬೇರೆ ಬೇರೆ ವಾಕ್ಯಗಳಲ್ಲಿ ಬೇರೆ ಬೇರೆ ಲಿಂಗ ವಚನ ವಿಭಕ್ತಿಗಳೊಂದಿಗೆ ಬಂದಿದೆ ಆದರೆ ಕನ್ನಡದ ಸತ್ತ ಎಂಬುದು ಎಲ್ಲಾ ವಾಕ್ಯಗಳಲ್ಲೂ ಒಂದೇ ರೂಪದಲ್ಲಿ ಬಂದಿದೆ ಕನ್ನಡದಲ್ಲಿ ಸಂಸ್ಕೃತದ ಹಾಗೆ ಸಂಬಂಧಕಗಳಿಗೆ ಲಿಂಗ ವಚನ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆ ಇಲ್ಲ ಮಾತ್ರವಲ್ಲ ಹಾಗೆ ಸೇರಿಸಲು ಸಾಧ್ಯವೂ ಇಲ್ಲ ಇದಕ್ಕೆ ಕಾರಣವೇನೆಂದರೆ ಕನ್ನಡದಲ್ಲಿ ಸಂಬಂಧಕಗಳು ಗುಣಪದಗಳ

ಹಾಗೆ ಬಳಕೆಯಾಗುತ್ತವಲ್ಲದೆ ಸಂಸ್ಕೃತದಲ್ಲಿರುವಂತೆ ನಾಮಪದಗಳ ಹಾಗೆ ಬಳಕೆಯಾಗುವುದಿಲ್ಲ ನಾಮಪದಗಳ ಹಾಗೆ ಬಳಕೆಯಾಗಲು ಅವಕ್ಕೆ ಅವನು ಅದು ಮೊದಲಾದ ಸರ್ವನಾಮಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ ಉದಾಹರಣೆಗೆ ಸತ್ತುದನ್ನು ಸತ್ತುದಕ್ಕೆ ಸತ್ತುದರಿಂದ ಸತ್ತುದರಲ್ಲಿ ಇತ್ಯಾದಿ ಸಂಸ್ಕೃತದ ಸಂಬಂಧಕ ಕ್ರಿಯಾ ರೂಪಗಳನ್ನು ಅವಕ್ಕೆ ಲಿಂಗ ವಚನ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆಯೂ ಬಳಸಲು ಸಾಧ್ಯವಿದೆ ಆದರೆ ಅಂತಹ ಬಳಕೆಗಳನ್ನು ಮೇಲೆ ಕೊಟ್ಟಿರುವ ಬಳಕೆಗಳಿಂದ ಭಿನ್ನವಾದವುಗಳೆಂದು ತೋರಿಸುವುದಕ್ಕಾಗಿ ಜೋಡಿ ಪದಗಳೆಂದು ಪರಿಗಣಿಸುವ ಅವಶ್ಯಕತೆ ಇದೆ ಇಂತಹ ಬಳಕೆಗಳನ್ನು ಕೆಳಗಿನ ಕ ವಾಕ್ಯಗಳಲ್ಲಿ ಕಾಣಬಹುದು 12 ಖ ತತ್ರ ಏಕಹ ಮೃತಸರ್ಪಹ ಅಸ್ತಿ ಅಲ್ಲಿ ಒಂದು ಸತ್ತ ಹಾವು ಇದೆ 13 ಕ ರಾಮಃ ಏಕಂ ಮೃತಸರ್ಪಂ ಅಪಶ್ಯತ್ ರಾಮ ಒಂದು ಸತ್ತ ಹಾವನ್ನು ನೋಡಿದ 14 ಕ ರಾಮಃ ಏಕೇನ್ ಮೃತಸರ್ಪೇನ್ ಭೀತಹ

ರಾಮ ಒಂದು ಸತ್ತ ಹಾವಿಗೆ ಹೆದರಿದ 15 ಕ ರಾಮಹ ಏಕಸ್ಯ ಮೃತ ಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್ ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ ಮೇಲೆ 12 ಕ ಇಂದ 15 ಕ ಗಳಲ್ಲಿ ಕೊಟ್ಟಿರುವ ಎಲ್ಲಾ ಸಂಸ್ಕೃತ ವಾಕ್ಯಗಳಲ್ಲೂ ಮೃತ ಎಂಬ ಸಂಬಂಧಕ ಕೃದಂತ ರೂಪ ಲಿಂಗ ವಚನ ವಿಭಕ್ತಿ ಪ್ರತ್ಯಯ್ಯವಿಲ್ಲದೆ ನೇರವಾಗಿ ಸರ್ಪ ಎಂಬ ನಾಮಪದದೊಂದಿಗೆ ಬಂದಿರುವುದನ್ನು ಕಾಣಬಹುದು ಇದಕ್ಕೆ ಮೊದಲೇ ಕೊಟ್ಟಿರುವ 12 ಕಿಂದ 15 ಕ ವಾಕ್ಯಗಳಲ್ಲಿ ಈ ಪದದೊಂದಿಗೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳು ಬಂದಿದ್ದು ಅವು ಇಲ್ಲಿ ಬಿದ್ದುಹೋಗಿರುವುದು ಸಂಸ್ಕೃತದ ಮಟ್ಟಿಗೆ ಒಂದು ಪದರಚನೆಯ ನಿಯಮವೆಂದು ವಯಾಕರಣಿಗಳು ಅಭಿಪ್ರಾಯ ಪಟ್ಟಿದ್ದಾರೆ ಮತ್ತು ಈ ಕಾರಣಕ್ಕಾಗಿ ಮೃತಸರ್ಪ ಎಂಬ ಪದದಲ್ಲಿ ಮತ್ತು ಸರ್ಪ

ಎಂಬ ಎರಡು ಪದಗಳು ಸಮಾಸವೆಂಬ ಪದ ರಚನೆಯ ವಿಧಾನದ ಮೂಲಕ ಒಟ್ಟು ಸೇರಿವೆ ಎಂದು ಅವರು ವಾದಿಸುತ್ತಾರೆ ಕನ್ನಡದ ಸತ್ತ ಹಾವು ಎಂಬುದು 12 ಖ ಇಂದ 15 ಖ ಗಳಲ್ಲಿ ಇದರ ಹಾಗೆಯೇ ಕಾಣಿಸುವುದಾದರೂ ಅದು ಒಂದು ಪದಗುಚ್ಚವಲ್ಲದೆ ಜೋಡು ಪದವಲ್ಲ ಯಾಕೆಂದರೆ ಇಲ್ಲಿ ಸತ್ತ ಎಂಬ ಪದ ಲಿಂಗ ವಚನ ವಿಭಕ್ತಿ ಪ್ರತ್ಯಯಗಳೊಂದಿಗೆ ಬಾರದಿರುವುದಕ್ಕೆ ಮೇಲೆ ಸೂಚಿಸಿರುವಂತೆ ಕಾರಣ ಬೇರೆಯೇ ಇದೆ ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಈ ಪ್ರಾಮುಖ್ಯವಾದ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಈ ರೀತಿ ಕ್ರಿಯಾಪದಗಳ ಸಂಬಂಧಕ ರೂಪಗಳನ್ನು ಒಳಗೊಂಡಿರುವ ಪದಗುಚ್ಚಗಳನ್ನು ಗಮಕ ಸಮಾಸದಲ್ಲಿ ಬಂದಿರುವ ಜೋಡುಪದಗಳೆಂದು ಭಾವಿಸಲು ಕಾರಣವಿರಬೇಕು ಕ್ರಿಯಾ ಸಮಾಸ ಸಂಸ್ಕೃತದಲ್ಲಿ ಇಲ್ಲದ ಕ್ರಿಯಾ ಸಮಾಸವೆಂಬ ಇನ್ನೊಂದು ರೀತಿಯ ಪದರಚನೆಯ ವಿಧಾನವು ಕನ್ನಡದಲ್ಲಿದೆ ಎಂದು ಅದರ

ವಯಾಕರಣಿಗಳು ಹೇಳಿರುವುದು ಇಂತಹದೇ ಕಾರಣದಿಂದ ಎಂದು ಹೇಳಬಹುದು ಮರವೇರು ಕೈಮುಗಿ ನಿದ್ದೆ ಮಾಡು ಮೊದಲಾದವುಗಳನ್ನು ಈ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ ಆದರೆ ಇಲ್ಲಿ ಮೊದಲನೆಯ ಪದದೊಂದಿಗೆ ಬಂದಿದ್ದ ಅನ್ನು ಎಂಬ ವಿಭಕ್ತಿ ಪ್ರತ್ಯಯ ಬಿದ್ದುಹೋಗಿರುವುದು ಕನ್ನಡದ ಒಂದು ವಾಕ್ಯ ರಚನೆಯ ನಿಯಮದ ಆಧಾರದ ಮೇಲಲ್ಲದೆ ಪದ ರಚನೆಯ ನಿಯಮದ ಆಧಾರದ ಮೇಲಲ್ಲ ಇದಲ್ಲದೆ ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಸ್ಥಾನಗಳಿಗೆ ವರ್ಗಾಯಿಸಿದಾಗ ಇಲ್ಲವೇ ಅವುಗಳೊಂದಿಗೆ ಒತ್ತಿ ಹೇಳುವ ಅರ್ಥವಿರುವ ಉ ಎಂಬ ಪ್ರತ್ಯಯವನ್ನು ಬಳಸಿದಾಗ ಹೀಗೆ ಬಿದ್ದುಹೋದ ಎಂಬ ಪ್ರತ್ಯಯ ಪುನಃ ಕಾಣಿಸಿಕೊಳ್ಳುತ್ತದೆ ಉದಾಹರಣೆಗೆ 16 ಕ ರಾಜು ನಿನ್ನೆ ಸರಿಯಾಗಿ ನಿದ್ದೆ ಮಾಡಿರಲಿಲ್ಲ 16 ಕ ರಾಜು ನಿನ್ನೆ ನಿದ್ದೆಯನ್ನು ಸರಿಯಾಗಿ ಮಾಡಿರಲಿಲ್ಲ 17 ಕ ರಾಜು ದೇವರಿಗೆ

ಹೂ ಹಾಕಿ ಕೈ ಮುಗಿದ 17 ಕ ರಾಜು ದೇವರಿಗೆ ಹೂವನ್ನು ಹಾಕಿದ ಕೈಯನ್ನು ಮುಗಿದ ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಸ್ಥಾನಗಳಿಗೆ ವರ್ಗಾಯಿಸಲು ಇಲ್ಲವೇ ಅವುಗಳಲ್ಲಿ ಮೊದಲಿನದರೊಂದಿಗೆ ಉ ಎಂಬ ಒತ್ತಿ ಹೇಳುವ ಪ್ರತ್ಯಯವನ್ನು ಸೇರಿಸಿ ಬಳಸಲು ಸಾಧ್ಯವಾಗದೆಂಬುದನ್ನು ಇಲ್ಲಿ ಗಮನಿಸಬಹುದು ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಕೆಲವು ಕ್ರಿಯಾಪದಗಳಲ್ಲಿ ಉದಾಹರಣೆಗೆ ಮರೆಹೋಗು ಈ ರೀತಿ ಮೊದಲನೆಯ ಅಂಗದೊಂದಿಗೆ ಎಂಬ ಪ್ರತ್ಯಯವನ್ನು ಬಳಸಲು ಸಾಧ್ಯವಾಗದಿರಬಹುದು ಆದರೆ ಇವನ್ನು ಜೋಡು ಪದಗಳೆಂದು ಪರಿಗಣಿಸದೆ ನುಡಿಗಟ್ಟುಗಳೆಂದು ಪರಿಗಣಿಸುವುದೇ ಉತ್ತಮ ಸಮಾಸವೆಂಬ ಪದ ರಚನೆಯ ವಿಧಾನದ ಮೂಲಕ ಜೋಡು ಕ್ರಿಯಾಪದಗಳನ್ನು ತಯಾರಿಸದಿರಲು ಕಾರಣವೇನೆಂಬುದನ್ನು ಆರನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ ಸಾರಾಂಶ ಎರಡು ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡಿರುವ ನಾಮಪದಗಳನ್ನು ಜೋಡು

ಪದಗಳೆಂದು ಕರೆಯಬಹುದು ಕನ್ನಡದಲ್ಲಿ ಇಂತಹ ಪದಗಳು ಹಲವಿದ್ದು ಅವುಗಳಲ್ಲಿ ಎರಡನೆಯ ಅಂಗ ಹೆಚ್ಚಿನ ಕಡೆಗಳಲ್ಲೂ ನಾಮಪದವಾಗಿರುತ್ತದೆ ಮೊದಲನೆಯ ಅಂಗ ಮಾತ್ರ ನಾಮಪದವಿರಬಹುದು ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು ಈ ವಿಷಯವನ್ನು ಬಳಸಿ ಕನ್ನಡದ ಜೋಡುಪದಗಳನ್ನು ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಲು ಸಾಧ್ಯವಿದೆ ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡು ಪದಗಳ ವರ್ಣನೆಗಳು ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಿರುವ ಸಮಾಸ ಎಂಬ ಪದ ರಚನೆಯ ವಿಧಾನದ ವರ್ಣನೆಗಳು ಈ ವಿಷಯಕ್ಕೆ ಜಾಸ್ತಿ ಗಮನ ಕೊಟ್ಟಿಲ್ಲ ಇದಕ್ಕೆ ಬದಲು ಸಂಸ್ಕೃತ ವ್ಯಾಕರಣಗಳನ್ನು ಅನುಸರಿಸಿ ಜೋಡು ಪದದ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವುದು ಪ್ರಧಾನ ಪದ ಎಂಬ ವಿಷಯಕ್ಕೆ ಅವು ಹೆಚ್ಚಿನ ಗಮನ ಕೊಟ್ಟಿವೆ ಇದರಿಂದಾಗಿ ಅವುಗಳಲ್ಲಿ ಬರುವ ಜೋಡು ಪದಗಳ ವರ್ಣನೆ ಕನ್ನಡದ ಮಟ್ಟಿಗೆ ಅಷ್ಟೊಂದು ತೃಪ್ತಿಕರವಾಗಿಲ್ಲ



Part 39

Watch on YouTube

ಅಧ್ಯಾಯ ಆರು - ಕ್ರಿಯಾಪದಗಳ ರಚನೆ

ಕನ್ನಡದಲ್ಲಿ ಕ್ರಿಯಾಪದಗಳನ್ನು ನಾಮಪದಗಳಂತೆಯೇ ಮುಖ್ಯವಾಗಿ ಎರಡು ವರ್ಗಗಳಿಗೆ ವಿಂಗಡಿಸಬಹುದು. ಉದಾಹರಣೆಗೆ, ಮುಂದು ಕ್ರಿಯಾಪದ, ಮಂದ ಎಂಬ ಗುಣಪದ, ಆಗ ಕ್ರಿಯಾಪದ, ಸೇವೆ ನಾಮಪದ, ಅಮಲ ನಾಮಪದ, ಇತ್ಯಾದಿ. ಇಸು ಎ ಪ್ರತ್ಯಯಗಳನ್ನು ಸೇರಿಸಿದರೆ, ನಾಮಪದಗಳಿಂದ ಕ್ರಿಯಾಪದಗಳನ್ನು ರೂಪಿಸಬಹುದು. ಕ್ರಿಯಾಪದಗಳ ಮುಖ್ಯ ಲಕ್ಷಣವೆಂದರೆ ರಚನೆ. ಕ್ರಿಯಾಪದಗಳ ಅರ್ಥವನ್ನು ಸಂದರ್ಭಗಳಲ್ಲಿ ನಿರ್ಣಯಿಸಲು ಈ ಅಂಗಗಳು ಪ್ರಯೋಜನಕಾರಿಯಾಗಿವೆ.

ಕವಚದ ಅಪವಾದವನ್ನು ಹೊರತುಪಡಿಸಿ, ರಚನೆಯಲ್ಲಿ ನಾಮಪದಗಳಿಗಿಂತ ಜೋಡಪದಗಳು ಮತ್ತು ಪದಗುಚ್ಛಗಳು ಭಿನ್ನವಾಗಿರುತ್ತವೆ. ರಚನೆಯ ಕ್ರಿಯಾಪದಗಳೂ ಸಹ ಕೆಲಸ ಮಾಡುವ ಕ್ರಿಯಾಪದಗಳು, ಕೆಲಸ ನಾಮಪದ ಇತ್ಯಾದಿ. ಕ್ರಿಯಾಪದಗಳ ರಚನೆಯು ಮಹತ್ವಪೂರ್ಣವಾದ ವಿಷಯವಾಗಿದೆ. ವಾಕ್ಯದಲ್ಲಿ ನಿರ್ದಿಷ್ಟ ಕೆಲಸಗಳನ್ನು ವಿವರಿಸುವುದಕ್ಕೆ ಮುಖ್ಯ ಕಾರಣ, ನಾಮಪದಗಳು ವ್ಯಕ್ತಿ-ವಸ್ತುಗಳನ್ನು ಸೂಚಿಸುವ ಕಾರಣ, ಅವುಗಳ ಮತ್ತೊಂದು ವರ್ಣನೆಯ ವಿಧಾನವು ಸಾಮಾನ್ಯವಾಗಿ ಇರುತ್ತದೆ. ಅವುಗಳನ್ನು ನಿರ್ದಿಷ್ಟವಾಗಿ ಗುರುತಿಸುವ ಕೆಲಸವನ್ನು ಮಾಡಿದಾಗ, ಪದಗಳು ರೂಪದಲ್ಲಿ ವ್ಯಕ್ತವಾಗುತ್ತವೆ.

ಮೊದಲ ಅಧ್ಯಾಯದಲ್ಲಿ ನೋಡಿದಂತೆ, ವಾಕ್ಯಗಳಲ್ಲಿ ಕ್ರಿಯಾಪದಗಳನ್ನು ಕೆಲಸ ಮಾಡುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಇದೆ. ವಾಕ್ಯದ ಪ್ರಧಾನ ಪದವಾಗಿ ವಿವಿಧ ಘಟನೆಗಳ ವರ್ಣನೆ ಮಾಡುತ್ತದೆ. ಇವೆಲ್ಲವುಗಳಲ್ಲಿ ಮೊದಲಿಗೆ ವಿವಿಧ ಮಾತುಗಳು, ಕೆಲಸಗಳು ಇತ್ಯಾದಿ ಪ್ರಸ್ತುತಪಡಿಸುವ ಕ್ರಿಯಾಪದಗಳಿವೆ. ಉದಾಹರಣೆಗೆ: “ರಾಜು ಪೇಟೆಗೆ ಹೋಗಿದ್ದಾನೆ”, “ರಾಜು ಪೇಟೆಗೆ ಹೋಗಿದ್ದೊಬ್ಬ”, “ರಾಜು ಪೇಟೆಗೆ ಹೋಗಲಿ”, “ರಾಜು ಪೇಟೆಗೆ ಹೋಗಬಾರದು” - ಇಂತಹ ವಿವಿಧ ಮಾತುಗಳಲ್ಲಿ ಘಟನೆ, ವ್ಯಕ್ತಿ, ವಸ್ತುಗಳು ಬದಲಾಗುವುದಿಲ್ಲ, ಆದರೆ ಅವುಗಳ ರೂಪ ಬದಲಾಗುತ್ತದೆ.

ವ್ಯಕ್ತಿ-ವಸ್ತುಗಳಿಗೆ ನಾಮಪದಗಳು ಮೂಲವಾಗಿರುವ ಹಾಗೆ, ಘಟನೆಗಳಿಗೆ ಕ್ರಿಯಾಪದಗಳು ಮೂಲವಾಗಿವೆ. ಹೆಸರುಗಳನ್ನು ನೀಡುವುದು ಸಾಧ್ಯವಾದರೂ, ವರ್ಣನೆ ಮಾಡುವುದು ಅವುಗಳಿಗೆ ಬೇಕಾದ ವಿಧಾನ. ಕಾಲ, ವಚನ ಇತ್ಯಾದಿ ಕ್ರಿಯಾಪದದ ಅರ್ಥವನ್ನು ನಿರ್ದೇಶಿಸುವ ಸಂದರ್ಭಗಳಲ್ಲಿ ನಿರ್ಣಯಿಸುವ ಅಂಗಗಳಾಗಿ ಪ್ರತ್ಯಯಗಳು ಅರ್ಥಪೂರ್ಣವಾಗಿ ಬಳಸಲ್ಪಡುತ್ತವೆ.

ನಾಮಪದಗಳಲ್ಲಿ ಪ್ರಮುಖವಾಗಿ ಯಾಂತ್ರಿಕ ನಾಮಗಳು ಮತ್ತು ರೂಢ ನಾಮಗಳು ಎಂದು ಎರಡು ವರ್ಗಗಳಿಗೆ ವಿಂಗಡಿಸಲಾಗಿದೆ. ಪ್ರತಿ ವ್ಯಕ್ತಿ-ವಸ್ತುವಿಗೆ ವಿವಿಧ ಸಂದರ್ಭ ಸಂಬಂಧಿತವಾಗಿ ಯಾಂತ್ರಿಕ ನಾಮಗಳನ್ನು ಕೊಡಬಹುದು. ಆದರೆ ಸಂಬಂಧವಿಲ್ಲದೆ ರೂಢ ನಾಮಗಳು ಎಂಬ ಮಾತುಗಳಿವೆ. ಕ್ರಿಯಾಪದಗಳನ್ನು ಇದೇ ರೀತಿ ಯಾಂತ್ರಿಕ ಕ್ರಿಯೆ ಮತ್ತು ರೂಢ ಕ್ರಿಯೆ ಎಂದು ವಿಂಗಡಿಸಬಹುದು.

ಕ್ರಿಯಾಪದಗಳಿಗೆ ಕಾಲ ಸೂಚಿಸುವ ನಿರ್ದೇಶನದ ಕ್ರಿಯಾಪದಗಳ ರೂಪಗಳು ಮುಖ್ಯ ಕಾರಣ. ಕ್ರಿಯಾಸಮಾಸ - ಕನ್ನಡದಲ್ಲಿ ಕ್ರಿಯಾಸಮಾಸ ಎಂಬ ವಿಶಿಷ್ಟ ಸಮಾಸವಿದೆ. ಕನ್ನಡ ವ್ಯಾಕರಣಶಾಸ್ತ್ರಜ್ಞರ ಅಭಿಪ್ರಾಯದ ಆಧಾರದ ಮೇಲೆ ನೀಡಲಾದ ಉದಾಹರಣೆಗಳಿಂದ, ಜೋಡಪದಗಳು, ಬರಹದ ಪದಗುಚ್ಛಗಳಲ್ಲಿ ಮಾತ್ರ ಹಿಂದಿನ ಅಧ್ಯಾಯದಲ್ಲಿ (5.88ನೇ ಪುಟ) ನೋಡಿದ ಸಮಾಸ ವ್ಯಾಕರಣ ವಿಧಾನ ನಾಮಪದಗಳ ತಯಾರಿಕೆಗೆ ಮಾತ್ರ ಬಳಸುತ್ತದೆ.

ಕ್ರಿಯಾಪದಗಳ ಮೂಲ ಘಟನೆಗಳು ಸಸ್ಯಾಧಾತ ಕಾಲಕ್ಕೆ ವಿರುದ್ಧವಾದ ಕಾರಣ, ತಯಾರಿಕೆಯ ಸಮಾಸ ವಿಧಾನಕ್ಕೆ ಯಾವ ಸ್ಥಾನವಿಲ್ಲ. ಕ್ರಿಯಾಪದಗಳು ಘಟನೆ ಭಾವವಾಗಿ ವ್ಯಕ್ತಿ-ವಸ್ತುಗಳನ್ನು ಸೂಚಿಸುತ್ತವೆ. ಕನ್ನಡದಲ್ಲಿ ನಾಮಪದಗಳಿಗೆ ಅನುಸಾರ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಕ್ರಮ ಇದೆ. ಆದರೆ ಪ್ರತ್ಯಯಗಳಿರುವ ನಾಮಪದಗಳು ಕ್ರಿಯಾಪದಗಳಾಗುವಾಗ, ಕ್ರಿಯಾಪದಕ್ಕೆ ನಾಮಪದಕ್ಕೆ ನಿರ್ದಿಷ್ಟ ಸಂಬಂಧ ನಿರೂಪಿಸುವಂತಹ ಪ್ರತ್ಯಯಗಳು ನಾಶವಾಗುತ್ತವೆ.

ಜಾಸ್ತಿ ವ್ಯಕ್ತಿಗಳನ್ನು ಸೂಚಿಸುವ ನಾಮಪದಗಳಲ್ಲಿ ಮಾತ್ರ ಈ ರೀತಿ ಅನುಯಾಯಿ ಪ್ರತ್ಯಯಗಳು ನಾಶವಾಗುವುದಿಲ್ಲ. ರಾಜು, ಸರಳೆ, ಮಗು, ವಿನೀತ ಇತ್ಯಾದಿ; ಅವಳು, ಅವನು, ಮೈಸೂರಿನವರು ಇತ್ಯಾದಿ - ಇವುಗಳಲ್ಲಿ “ಅನು” ಎಂಬ ಪ್ರತ್ಯಯ, ವ್ಯಕ್ತಿಯನ್ನು ಸೂಚಿಸುವ “ಮಗು” ಎಂಬ ಪದ ಬಂದ ಕಾರಣ ಕ್ರಿಯಾಪದದೊಂದಿಗೆ “ಇ” ಸೇರಿ ಹೋಗುವುದಿಲ್ಲ. ಆದರೆ ಇಲ್ಲಿ “ಕಲ್ಲು”, “ಆನೆ” ಎಂಬ ಪದಗಳು “ಇ” ಸೇರಿ ಹೋಗುತ್ತವೆ.

ನಾಮಪದಗಳು ವಾಕ್ಯದಲ್ಲಿ ಬಂದಾಗ ವಿವಿಧ ಕರ್ಮಗಳನ್ನು ಸೂಚಿಸಲು “ಅ” ಎಂಬ ಪ್ರತ್ಯಯ ಅಥವಾ ಮತ್ತೊಂದು “ಉ” ಪ್ರತ್ಯಯ ಸೇರಿಸಲ್ಪಡುತ್ತದೆ. ಯಾವ ವಿಭಕ್ತಿ ಪ್ರತ್ಯಯ ಪುನಃ ಮರುಪ್ರವೇಶಿಸುತ್ತದೋ ಅದು ನೋಡಬೇಕು. ಉದಾಹರಣೆ: “ರಾಜುವಿಂದ ಓದುಗ”, “ರಾಜು ಓದುತ್ತಾನೆ”, “ರಾಜು ಕುದುರೆ ನೋಡಿದ”, “ರಾಜು ಸ್ವಲ್ಪ ಪಾಠ ಓದಿದ”, “ರಾಜು ಸ್ವಲ್ಪ ಹೊತ್ತು ಪಾವನೀ ಮಾಡಿದ”, “ರಾಜು ಸ್ವಲ್ಪ ಹೊತ್ತು ಪಾಠ ಓದಿದ”.

ಕನ್ನಡದಲ್ಲಿ ಕೈ, ಮುಗಿ, ಕಲ್ಲು, ಮರ, ವೇರು, ಮರನು ಕರೆ, ನೀಡು, ಕರೆಯಿಸು, ನೀಡಿಸು ಇತ್ಯಾದಿ ಕ್ರಿಯಾಪದಗಳಲ್ಲಿ ಅನುಸಾರ ವಿಭಕ್ತಿ ಪ್ರತ್ಯಯಗಳು ನಾಶವಾಗುವ ಸಮಾಸಪದ ರಚನೆ ನಿಯಮವಿದೆ. ಮೇಲೆ ಸೂಚಿಸಿರುವ ವಾಕ್ಯ ರಚನೆ ನಿಯಮವೂ ಇದೇ ಸಾಧ್ಯತೆಯಿಂದ. ನಾಮಪದ, ಇವೆಲ್ಲ ಗುಣಪದ, ಕ್ರಿಯಾಪದ ಸೇರಿ ಜೋಡಪದವಾಗುವುದಕ್ಕೆ ಕಾರಣ ಕನ್ನಡದ ಜೋಡಪದ ಕರೆ ಕಿತ್ತುಕೊಂಡ ಪದ ಬಳಸುವುದನ್ನು ಇಲ್ಲಿ ನೋಡಬಹುದು. ಜೋಡಪದಗಳ ಬಳಕೆಯು ಅತ್ಯಂತ ಪ್ರಾಮುಖ್ಯವಾದ ಗುಣಧರ್ಮಗಳಲ್ಲೊಂದು.

ಕೊಡಪದಗಳಿಂದ ಬೇರೆ ಕೆಲವು ಕಣ್ಣಿಸುವ ಅವುಗಳು ಜೋಡಪದಗಳಿಗೆ ಭಿನ್ನವಾದ ಪರಿಗಣನೆಗೆ ಕಾರಣ. ರಚನೆಯಲ್ಲಿ ಕ್ರಿಯಾಪದಗಳನ್ನು ಮೇಲೆ ಸೂಚಿಸಿದ ಕ್ರಿಯಾಪದ ರಚನೆ ಅಥವಾ ಇದೇ ರಚನೆ ಇರುವಂತಹ ಕಲ್ಲಿ ಮರೆ ಮಾಡಬಹುದು.

ಕ್ರಿಯಾಪದಗಳನ್ನು ಕ್ರಿಯಾಧಾತು ಕರೆಯುವ ಪದಗಳ ಸಂಖ್ಯೆ ಮತ್ತು ಸ್ವರೂಪಗಳ ಆಧಾರದ ಮೇಲೆ ಮತ್ತು ಅವುಗಳ ಸ್ವರ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ವಿಂಗಡಿಸಬಹುದು. ಇದನ್ನು ಅವುಗಳಿಗೆ ವಿವಿಧ ಪ್ರತ್ಯಯಗಳ ಸ್ವರೂಪವನ್ನು ನಿರ್ಧರಿಸುವ ರೀತಿ. ಪ್ರತ್ಯಯಗಳನ್ನು ಸೇರಿಸಿದಾಗ, ಇವೆಲ್ಲ ಪ್ರತ್ಯಯಗಳಲ್ಲಿ ಯಾವ ಬದಲಾವಣೆಗಳನ್ನು ವರ್ಣಿಸುವುದು ಸಹಾಯಕವಾಗುತ್ತದೆ.

ಕ್ರಿಯಾಧಾತುಗಳನ್ನು ಕಾರದಲ್ಲಿ ಕೊನೆಯಾಗುವ, ಇ ಕಾರದಲ್ಲಿ ಕೊನೆಯಾಗುವ, ಉ ಕಾರದಲ್ಲಿ ಕೊನೆಯಾಗುವವು ಮುಖ್ಯ ವರ್ಗಗಳಿಗೆ ವಿಂಗಡಿಸಲಾಗಿದೆ. ಕನ್ನಡದಲ್ಲಿ ಮತ್ತೊಂದು ಪ್ರಮುಖವಾದ ವಿಧಾನವೆಂದರೆ ಅ ಕಾರ ಮತ್ತು ಇ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳಲ್ಲಿ ಅವುಗಳ ಕೊನೆಯ ಅಕ್ಷರಗಳು ಲಘುವಾಗಿರುವವು ಅಥವಾ ಗುರುವಾಗಿರುವವು.

ಉದಾಹರಣೆಗೆ, ಅ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳು: ಅಗೆ, ನವದು, ಕೊರೆ, ಅಲೆ, ಮಸೆ, ವಗೆ, ತಡ, ನೆನೆ, ಮರೆ, ಬೆಲೆ, ಯಸೆ, ನೆಗೆ, ವಡೆ, ಬರೆ, ಕೊಲೆ, ಸವೆ. ಇ ಕಾರದಲ್ಲಿ ಕೊನೆಯಾಗುವ ಕ್ರಿಯಾಧಾತುಗಳು: ಅಡಿ, ತನಿ, ಹರಿ, ಕಲಿ, ಸವಿ, ಜಿಗಿ, ಕುಡಿ, ಮುನಿ, ಮುರಿ, ಉಲಿ, ಕವಿ, ಬಗಿ, ಕುದಿ, ಹನಿ, ಬಸಿ, ತೀವಿ. ಉ ಕಾರಾಂತ ಕ್ರಿಯಾಧಾತುಗಳಲ್ಲಿ ಮಾತ್ರ ಅಕ್ಷರ ಸಂಖ್ಯೆ ಮತ್ತು ಸ್ವರೂಪದಲ್ಲಿ ಯಾವ ಅಕ್ಷರವೂ ಒಂದು ಅಕ್ಷರವೇ ಇರುವವು ಲಘುವಾಗಿರುವವು ಇವೆ. ಎಂದರೆ ಮೊದಲ ಅಕ್ಷರವು ಗುರುವಾಗಿರುವ ಯಾವುದೇ ಅ, ಉ ಸ್ವರವಾಗಿರುವ, ಆ



ಅಧ್ಯಾಯ 6 — ಕ್ರಿಯಾಪದಗಳ ಒಳ ರಚನೆ

Internal Structure of Verbs

Part 40

Watch on YouTube

ಈ ಭಾಗ ಪುಸ್ತಕದ ೬.೪: ಇಸು ಎಂಬ ಪ್ರತ್ಯಯದ ಬಳಕೆ ಅನ್ನು ಆಧರಿಸಿದೆ.

ಮೇಲೆ ಕೊಟ್ಟಿರುವಂತಹ ಪಳೆಯಳಿಕೆಗಳಾಗಿ ಉಳಿದಿರುವ ಪ್ರತ್ಯಯಗಳನ್ನು ಬಿಟ್ಟರೆ, ಕನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಪ್ರತ್ಯಯಗಳ ಬಳಕೆಯೇ ಇಲ್ಲವೆಂದೂ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದವಾಗಿ, ಕನ್ನಡದ ಕೆಲವು ಕ್ರಿಯಾಪದಗಳಲ್ಲಿ ಇಸು ಎಂಬ ಒಂದು ಪ್ರತ್ಯಯ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಪ್ರತ್ಯಯವನ್ನು ಸಂಸ್ಕೃತದಿಂದ ಎರವಲಾಗಿ ಬಂದ ನಾಮ ಪದಗಳನ್ನು ಕ್ರಿಯಾಪದಗಳ ಸ್ಥಾನದಲ್ಲಿ ಇರಿಸುವುದಕ್ಕಾಗಿ ಬಳಸಲಾಗುತ್ತದೆ ಯಾದರೂ (೮.೩.೬ ನೋಡಿ), ಕನ್ನಡದವೇ ಆದ ಕ್ರಿಯಾಪದಗಳಲ್ಲೂ ಕೆಲ ವೊಂದು ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಕಾಣಬಹುದು. ಉದಾ: <table> <tbody> <tr> <td>ಅಬ್ಬರ</td> <td>ಅಬ್ಬರಿಸು</td> <td>ಹಂಗು</td> <td>ಹಂಗಿಸು</td> </tr> <tr> <td>ಹಂಬಲ</td>…



Part 41

Watch on YouTube

Note: This transcript has not been cleaned and may contain errors.

ಕೂಡು ಪದಗಳು ಆಗು ಆಡು ಕೊಡು ಬಿಡು ಕಚ್ಚು ಬೀಳು ಮಾಡು ಹಾಕು ಮೊದಲಾದ ಕೆಲವು ವಿಶಿಷ್ಟವಾದ ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದಗಳನ್ನು ಸೇರಿಸಿ ಕೂಡು ಪದಗಳನ್ನು ತಯಾರಿಸುವ ವಿಧಾನ ಒಂದು ಕನ್ನಡದಲ್ಲಿ ಬಳಕೆಯಲ್ಲಿದೆ ಈ ಕ್ರಿಯಾಪದಗಳೊಂದಿಗೆ ಬೇರೆ ಕ್ರಿಯಾಪದಗಳನ್ನು ಮಾತ್ರವಲ್ಲದೆ ನಾಮಪದ ಇಲ್ಲವೇ ಗುಣಪದಗಳನ್ನು ಸೇರಿಸಿಯು ಇಂತಹ ಕೂಡು ಪದಗಳನ್ನು ತಯಾರಿಸಲು ಸಾಧ್ಯವಿದೆ ಈ ಕೆಳಗಿನ ಕೆಲವು ಒಳ ರಚನೆ ಇರುವ ಕ್ರಿಯಾಪದಗಳನ್ನು ಈ ವಿಧಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು ಹೊಡೆದಾಡು ಕಂಡುಬರು ಓಡಾಡು ಬೊಬ್ಬೆ ಹಾಕು ಮಾತು ಕೊಡು ಬೀರುಬಿಡು ಅಡ್ಡ ಬೀಳು ಮುಂದೂಡು ಹಾಳಾಗು ಕೂಡು ಪದಗಳು ಮತ್ತು ಜೋಡು ಪದಗಳು ಇಂತಹ ಒಳ ರಚನೆ ಇರುವ ಕ್ರಿಯಾಪದಗಳನ್ನು ಜೋಡು ಪದಗಳೆಂದು ಕರೆಯದೆ ಕೂಡು ಪದಗಳೆಂಬ ಬೇರೆ ಒಂದು ಹೆಸರಿನಿಂದ ಕರೆಯಲು

ಜೋಡು ಪದಗಳಿಗೂ ಮತ್ತು ನಾಮಪದ ಗುಚ್ಚಗಳಿಗೂ ನಡುವೆ ಅರ್ಥದಲ್ಲಿ ಇಲ್ಲವೇ ಬಳಕೆ ಯಲ್ಲಿ ಕಾಣಿಸುವಂತಹ ವ್ಯತ್ಯಾಸಗಳು ಈ ಕ್ರಿಯಾಪದಗಳಿಗೂ ಮತ್ತು ಕ್ರಿಯಾಪದ ಗುಚ್ಚಗಳಿಗೂ ನಡುವೆ ಕಾಣಿಸದೆ ಇರುವುದೇ ಮುಖ್ಯ ಕಾರಣ ನಿಜಕ್ಕೂ ಇವನ್ನು ಕ್ರಿಯಾಪದಗಳೆಂದು ಕರೆಯದೆ ಕ್ರಿಯಾಪದ ಗುಚ್ಚಗಳೆಂದು ಕರೆಯಲು ಸಾಧ್ಯವಿದೆ ಮೇಲೆ ಮೂರನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಜೋಡು ಪದಗಳ ಅರ್ಥವನ್ನು ನೇರವಾಗಿ ಅವುಗಳ ಒಳ ರಚನೆಯ ಆಧಾರದ ಮೇಲೆ ನಿರ್ಧರಿಸಿ ಹೇಳಲು ಸಾಧ್ಯವಾಗದು ಅವು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಅವುಗಳ ಅರ್ಥವನ್ನು ನಿರ್ಧರಿಸಲು ಸಾಧ್ಯ ಆದರೆ ಕೂಡು ಪದಗಳಾಗಿ ಬರುವ ಕ್ರಿಯಾಪದಗಳ ಅರ್ಥವನ್ನು ನಿರ್ಧರಿಸುವಲ್ಲಿ ಇಂತಹ ಸಮಸ್ಯೆ ಇಲ್ಲ ಹೆಚ್ಚಿನಡೆಗಳಲ್ಲೂ ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳ ರಚನೆಯ ಆಧಾರದ ಮೇಲೆನೇ ನಿರ್ಧರಿಸಿ ಹೇಳಲು

ಸಾಧ್ಯವಿದೆ ಇದಕ್ಕೆ ಕೆಲವು ಅಪವಾದಗಳಿವೆನೋ ನಿಜ ಆದರೆ ಇಲ್ಲೂ ಜೋಡು ಪದ ಮತ್ತು ಪದಗುಚ್ಚಗಳ ನಡುವೆ ಅವುಗಳ ಬಳಕೆಯಲ್ಲಿ ಕಾಣಿಸುವಂತಹ ವ್ಯತ್ಯಾಸವಿಲ್ಲ ಕ್ರಿಯಾಪದಗಳ ಒಡ ರಚನೆಯಲ್ಲಿ ಈ ರೀತಿ ಜೋಡು ಪದಗಳಿಗಿಂತ ಭಿನ್ನವಾದ ಕೂಡು ಪದ ಎಂಬುದರ ಬಳಕೆ ಕಾಣಿಸುವುದಕ್ಕೆ ನಾಮಪದಗಳ ಹಾಗೆ ಅವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳಲ್ಲಿ ಬಳಸಲು ಸಾಧ್ಯವಾಗದಿರುವುದೇ ಮುಖ್ಯ ಕಾರಣ ಕ್ರಿಯಾಪದಗಳು ಘಟನೆಗಳನ್ನು ನಿರ್ದೇಶಿಸುತ್ತವಲ್ಲದೆ ಗುರುತಿಸುವುದಿಲ್ಲ ಅವು ಏನಾಯಿತು ಯಾವ ಘಟನೆ ಜರಗಿತು ಎಂಬುದನ್ನು ನೇರವಾಗಿ ತಿಳಿಸುತ್ತವಲ್ಲದೆ ಘಟನೆಯೊಂದನ್ನು ಗುರುತಿಸಿ ಹೆಸರಿಸಿ ಇಲ್ಲವೇ ವರ್ಣಿಸಿ ಅನಂತರ ಆ ಘಟನೆಯ ಕುರಿತಾಗಿ ಏನಾಯಿತು ಅದು ನಡೆಯಿತೆ ನಡೆಯಲಿಲ್ಲವೇ ನಡೆಯಬಹುದೇ ಇತ್ಯಾದಿಯಾಗಿ ಎಂಬುದನ್ನು ತಿಳಿಸಲು ಪ್ರಯತ್ನಿಸುವುದಿಲ್ಲ ಹಾಗಾಗಿ ಅವುಗಳ ಬಳಕೆಯಲ್ಲಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ವ್ಯತ್ಯಾಸ

ಕಾಣಿಸಲು ಸಾಧ್ಯವಿಲ್ಲ ಕೂಡು ಪದಗಳ ರಚನೆ ಕೂಡು ಪದಗಳಲ್ಲಿ ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿರುತ್ತವೆ ಇವುಗಳಲ್ಲಿ ಯಾವಾಗಲೂ ಕೊನೆಯ ಪದ ಕ್ರಿಯಾಪದವಾಗಿರುವುದು ಅವಶ್ಯ ಮೇಲೆಯೇ ಸೂಚಿಸಿರುವಂತೆ ಇವುಗಳ ಮೊದಲನೆಯ ಪದ ಕ್ರಿಯಾಪದವಿರಬಹುದು ನಾಮಪದವಿರಬಹುದು ಇಲ್ಲವೇ ಗುಣಪದವಿರಬಹುದು ಇದಲ್ಲದೆ ಇವುಗಳ ಮೊದಲನೆಯ ಅಂಗವಾಗಿ ಬಂದಿರುವ ಕ್ರಿಯಾಪದವು ಧಾತು ರೂಪದಲ್ಲಿ ಇರಬಹುದು ಇಲ್ಲವೇ ಅದರ ಯಾವುದಾದರೊಂದು ಕ್ರಿಯಾಪದ ರೂಪದಲ್ಲಿ ಇರಬಹುದು ಉದಾಹರಣೆಗಾಗಿ ಕುಣಿದಾಡು ಕಂಡುಬರು ತೇಲಿಬಿಡು ಹೋಗಲಾಡಿಸು ಮೊದಲಾದ ಕೂಡು ಪದಗಳಲ್ಲಿ ಕುಣಿದು ಕಂಡು ತೇಲಿ ಹೋಗಲು ಮೊದಲಾದ ಕ್ರಿಯಾಪದ ರೂಪಗಳು ಮೊದಲನೆಯ ಅಂಗವಾಗಿ ಬಂದಿವೆ ಅಪರೂಪವಾಗಿ ನಾಮಪದಗಳು ಅವುಗಳ ವಿಭಕ್ತಿ ರೂಪದಲ್ಲಿ ಇಂತಹ ಕೂಡು ಪದಗಳ ಮೊದಲನೆಯ ಅಂಗವಾಗಿ ಬರಬಲ್ಲು ಎಂಬುದಕ್ಕೆ ಮಾತನಾಡು ಮಾತನ್ನು ಆಡು ಎಂಬ ಉದಾಹರಣೆಯನ್ನು ಕೊಡಬಹುದು ಕೂಡು

ಪದಗಳ ಮೊದಲನೆಯ ಅಂಗವಾಗಿ ಬರುವ ನಾಮಪದ ಕನ್ನಡದ್ದೇ ಇರಬಹುದು ಅಥವಾ ಇಂಗ್ಲಿಷ್ ಮೊದಲಾದ ಬೇರೆ ಭಾಷೆಗಳಿಂದ ಎರವಲಾಗಿ ಬಂದುದಿರಬಹುದು ಬಂದಾಗು ಸ್ಟಾರ್ಟ್ ಮಾಡು ದುಃಖವಾಗು ಮೊದಲಾದವನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು ಈ ರೀತಿ ಅರವಲಾಗಿ ಬಂದ ಪದಗಳು ಬಹಳ ಸುಲಭವಾಗಿ ಇಂತಹ ಕೂಡು ಪದಗಳಲ್ಲಿ ಸೇರಿಕೊಳ್ಳುತ್ತವೆ ಎಂಬುದು ಅವಕ್ಕೂ ಮತ್ತು ಜೋಡು ಪದಗಳಿಗೂ ನಡುವಿರುವ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸ ಕನ್ನಡದಲ್ಲಿ ಬಳಕೆಯಲ್ಲಿರುವ ಕೂಡು ಪದಗಳನ್ನು ಈ ಕೆಳಗೆ ಅವುಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳ ಪರಿಶೀಲನೆಯ ಮೂಲಕ ವಿವರಿಸಲು ಯತ್ನಿಸಲಾಗಿದೆ ಕ ಹಾಗೂ ಈ ಕ್ರಿಯಾಪದವನ್ನು ಮುಖ್ಯವಾಗಿ ನಾಮಪದ ಮತ್ತು ಗುಣಪದಗಳೊಂದಿಗೆ ಬಳಸಿ ಕೂಡು ಪದಗಳನ್ನು ರಚಿಸಲು ಸಾಧ್ಯವಿದೆ ಇಂತಹ ಕೂಡು ಪದಗಳಲ್ಲೆಲ್ಲ ಆಗು ಎಂಬ ಕ್ರಿಯಾಪದಕ್ಕೆ ಅದರದ್ದೇ ಅರ್ಥವಿದ್ದು ಕೂಡು ಪದಗಳ ಅರ್ಥವನ್ನು

ನೇರವಾಗಿ ಅವುಗಳ ಒಳ ರಚನೆಯ ಸಹಾಯದಿಂದಲೇನೆ ಪಡೆಯಲು ಸಾಧ್ಯ ಎಂಬುದನ್ನು ಗಮನಿಸಬಹುದು ಉಕಾರದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಈ ಕ್ರಿಯಾಪದ ಬಂದಾಗ ಅವುಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗುತ್ತದೆ ಆದರೆ ಇತರ ಪದಗಳೊಂದಿಗೆ ಬಂದಾಗ ಈ ರೀತಿ ಕೊನೆಯ ಸ್ವರ ಬಿದ್ದು ಹೋಗುವುದಿಲ್ಲ ಇದಕ್ಕೆ ಬದಲು ಅವುಗಳ ಕೊನೆಯಲ್ಲಿ ಈ ಕಾರ ಇಲ್ಲವೇ ಎಕಾರವಿದೆಯಾದಲ್ಲಿ ಆ ಎರಡು ಪದಗಳ ನಡುವೆ ಯ ಕಾರ ಬಂದು ಸೇರಿಕೊಳ್ಳುತ್ತದೆ ಮತ್ತು ಅವುಗಳ ಕೊನೆಯಲ್ಲಿ ಅ ಕಾರವಿದೆಯಾದಲ್ಲಿ ವ ಕಾರ ಸೇರಿ ಕೊಳ್ಳುತ್ತದೆ ಗುಣಪದಗಳೊಂದಿಗೆ ಈ ಕ್ರಿಯಾಪದ ಬಂದಿರುವಾಗ ಮಾತ್ರ ಕೆಲವೊಮ್ಮೆ ಈ ನಿಯಮಕ್ಕೆ ಅಪವಾದವಾಗಿ ಗುಣಪದಗಳ ಕೊನೆಯ ಅಕಾರ ಇಲ್ಲವೇ ಎಕಾರ ಬಿದ್ದು ಹೋಗುವುದನ್ನು ಕಾಣಬಹುದು ಒಂದು ನಾಮಪದಗಳೊಂದಿಗೆ ಬಳಕೆ ಪೆಟ್ಟಾಗು ಸಿಟ್ಟಾಗು ಬಲಿಯಾಗು ಗುರಿಯಾಗು ಗುಣವಾಗು

ತಡವಾಗು ನೀರಾಗು ಒಂದಾಗು ಎಡೆಯಾಗು ಮಾಯವಾಗು ಎರಡು ಗುಣಪದಗಳೊಂದಿಗೆ ಬಳಕೆ ಹಾಳಾಗು ಕಪ್ಪಾಗು ಇದಿರಾಗು ಬಡವಾಗು ಕಪ್ಪಗಾಗು ಅಡ್ಡಾಗು ಮುಂದಾಗು ಮೇಲಾಗು ಮೂರು ಇತರ ಪದಗಳೊಂದಿಗೆ ಬಳಕೆ ಆಗು ಎಂಬ ಈ ಕ್ರಿಯಾಪದ ಸಾಮಾನ್ಯವಾಗಿ ಬೇರೆ ಕ್ರಿಯಾಪದ ಪದಗಳೊಂದಿಗೆ ಕೂಡು ಪದಗಳಲ್ಲಿ ಬಳಕೆಯಾಗುವುದಿಲ್ಲ ಆದರೆ ಅನಿಯಮಿತ ರೂಪಗಳಿರುವ ಬೇಕು ಬೇಡ ಸಾಕು ಇಲ್ಲ ಎಂಬಂತವುಗಳೊಂದಿಗೆ ಮತ್ತು ಕ್ರಿಯಾಪದಗಳ ಸ್ಥಾನದಲ್ಲಿ ಬರುವ ಸರಿ ತಪ್ಪು ಸುಳ್ಳು ಎಂಬಂತಹವುಗಳೊಂದಿಗೆ ಸೇರಿ ಇದು ಕೂಡು ಪದಗಳಲ್ಲಿ ಬರಬಲ್ಲದು ಉದಾಹರಣೆಗೆ ಬೇಕಾಗು ಸಾಕಾಗು ಬೇಡವಾಗು ಇಲ್ಲವಾಗು ಕಪ್ಪಾಗು ಸರಿಯಾಗು ಸುಳ್ಳಾಗು ಉಂಟಾಗು ಇಂಗ್ಲಿಷ್ನಂತಹ ಬೇರೆ ಭಾಷೆಗಳಿಂದ ಎರವಲಾಗಿ ಬಂದ ಕ್ರಿಯಾಪದಗಳನ್ನು ಕ್ರಿಯಾಪದದ ಸ್ಥಾನದಲ್ಲಿ ಬಳಸುವುದಕ್ಕಾಗಿ ಕನ್ನಡದಲ್ಲಿ ಅವುಗಳೊಂದಿಗೆ ಆಗು ಮತ್ತು ಮಾಡು ಎಂಬ ಎರಡು ಕ್ರಿಯಾಪದಗಳನ್ನು ಸೇರಿಸಿ ಕೂಡು

ಪದಗಳಾಗಿ ಮಾಡಿ ಬಳಸುವ ವಿಧಾನ ಬಳಕೆಯಲ್ಲಿದೆ ಇವುಗಳಲ್ಲಿ ಆಗು ಎಂಬುದು ಒಂದು ಘಟನೆಯನ್ನು ಮತ್ತು ಮಾಡು ಎಂಬುದು ಒಂದು ಕೆಲಸವನ್ನು ತಿಳಿಸುತ್ತವೆ ಉದಾಹರಣೆಗೆ ಸ್ಟಾರ್ಟ್ ಆಗು ಸ್ಟಾರ್ಟ್ ಮಾಡು ಡಿಪ್ರೆಸ್ ಆಗು ಕೌಂಟ್ ಮಾಡು ಇತ್ಯಾದಿ ಖ ಆಡು ಈ ಕ್ರಿಯಾಪದವನ್ನು ಬಳಸಿ ರಚಿಸುವ ಕೂಡು ಪದಗಳನ್ನು ಕ್ರಿಯಾಪದ ನಾಮಪದ ಇಲ್ಲವೇ ಗುಣಪದಗಳಿಂದ ತಯಾರಿಸಲು ಸಾಧ್ಯವಿದೆ ಕ್ರಿಯಾಪದಗಳನ್ನು ಸಾಮಾನ್ಯವಾಗಿ ಅವುಗಳ ಭೂತನ್ಯೂನ ರೂಪದಲ್ಲಿ ಬಳಸುವುದು ರೂಢಿ ಇಂತಹ ಕೂಡು ಪದಗಳಲ್ಲಿ ಆಡು ಎಂಬ ಕ್ರಿಯಾಪದಕ್ಕೆ ಒಂದು ಘಟನೆ ಹಲವು ಬಾರಿ ಅಥವಾ ಬಹಳ ಹೊತ್ತು ನಡೆಯುವುದೆಂಬ ಅರ್ಥ ಬರುತ್ತದೆ ಸಾಮಾನ್ಯವಾಗಿ ಇದು ಚಲನೆಯನ್ನು ಸೂಚಿಸುವಂತಹ ನಲಿ ಕುಣಿ ತಿರುಗು ಹಾರು ಓಡು ತೇಲು ತೂಗು ಹೊರಳು ಮೊದಲಾದ ಕ್ರಿಯಾಪದಗಳೊಂದಿಗೆ ಬರುತ್ತದೆ ಉದಾಹರಣೆಗೆ ಕುಣಿ

ಕುಣಿದಾಡು ಸುಳಿ ಸುಳಿದಾಡು ನಲಿ ನಲಿದಾಡು ಎಳೆ ಎಳೆದಾಡು ಅಲೆ ಅಲೆದಾಡು ಹೊಡೆ ಹೊಡೆದಾಡು ಉಕಾರದಲ್ಲಿ ಕೊನೆಗೊಳ್ಳುವ ಓಡು ತಿರುಗು ಹೊರಳು ಮೊದಲಾದ ಕ್ರಿಯಾಪದಗಳಿಗೆ ಇಕಾರದಲ್ಲಿ ಕೊನೆಗೊಳ್ಳುವ ಓಡಿ ತಿರುಗಿ ಹೊರಳಿ ಎಂಬಂತಹ ಭೂತ ನ್ಯೂನ ರೂಪಗಳಿದ್ದು ಈ ಕ್ರಿಯಾಪದಗಳೊಂದಿಗೆ ಆಡು ಎಂಬ ಪದ ಸೇರಿದಾಗ ಅವುಗಳ ಕೊನೆ ಈ ಕಾಕಾರ ಬಿದ್ದುಹೋಗುತ್ತದೆ ಹಾಗಾಗಿ ಈ ಕ್ರಿಯಾಪದಗಳಿಂದ ತಯಾರಾದ ಕೂಡು ಪದಗಳಲ್ಲಿ ಇವು ನೇರವಾಗಿ ಧಾತು ರೂಪದಲ್ಲೇ ಬಂದಿವೆ ಏನೋ ಎಂದು ತೋರುತ್ತದೆ ಉದಾಹರಣೆಗೆ ಓಡು ಓಡಾಡು ತೂಗು ತೂಗಾಡು ಕಚ್ಚು ಕಚ್ಚಾಡು ಗುದ್ದು ಗುದ್ದಾಡು ತಿರುಗು ತಿರುಗಾಡು ಹೊರಳು ಹೊರಳಾಡು ಹೆಣಗು ಹೆಣಗಾಡು ಹುಡುಗು ಹುಡುಕಾಡು ಆದರೆ ನಗು ಎಂಬ ಕ್ರಿಯಾಪದಕ್ಕೆ ನಕ್ಕು ಎಂಬ ಭೂತನ್ಯೂನ ರೂಪವಿದೆಯಾದರೂ ಅದರ ಕೂಡು ಪದವಾದ

ನಗಾಡು ಎಂಬುದರಲ್ಲಿ ಅದು ಧಾತು ರೂಪದಲ್ಲೇ ಬಂದಿರುವುದನ್ನು ಗಮನಿಸಬಹುದು ಆಡು ಎಂಬ ಈ ಕ್ರಿಯಾಪದವನ್ನು ಕೆಲವು ನಾಮಪದಗಳೊಂದಿಗೂ ಬಳಸಿ ಕೂಡು ಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸಿ ಸುತ್ತವೆ ಆದರೆ ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಬಳಸಿದಾಗ ದೊರೆಯುವ ಅರ್ಥ ಹಲವು ಬಾರಿ ಇಲ್ಲವೇ ಬಹಳ ಹೊತ್ತು ಎಂಬುದು ಅದಕ್ಕೆ ಈ ಬಳಕೆಯಲ್ಲಿ ಬರುವುದಿಲ್ಲ ಉದಾಹರಣೆಗೆ ಜೂಜು ಜೂಜಾಡು ಉಸಿರು ಉಸಿರಾಡು ಜಗಳ ಜಗಳಾಡು ಮಾತನಾಡು ಎಂಬ ಕೂಡು ಪದದಲ್ಲಿ ಮಾತು ಎಂಬ ನಾಮಪದ ಅನ್ನು ಅನ್ ಎಂಬ ವಿಭಕ್ತಿ ಪ್ರತ್ಯಯದೊಂದು ಬಂದಿರುವುದನ್ನು ಕಾಣಬಹುದು ಇದೊಂದು ಅನಿಯಮಿತವಾದ ಬಳಕೆ ಹಾಡು ಎಂಬ ಕ್ರಿಯಾಪದ ಗುಣಪದಗಳೊಂದಿಗೂ ಕೂಡು ಪದಗಳಲ್ಲಿ ಬರಬಲ್ಲುದು ಎಂಬುದಕ್ಕೆ ಕೆಳಗಿನ ಉದಾಹರಣೆಗಳನ್ನು ಕೊಡಬಹುದು ಅಡ್ಡ ಅಡ್ಡಾಡು ಒಡನೆ ಒಡನಾಡು



Part 42

Watch on YouTube

Note: This transcript has not been cleaned and may contain errors.

ಗ ಕೊಡು ಈ ಕ್ರಿಯಾಪದವನ್ನು ನಿಯಮಿತವಾಗಿ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಕೂಡು ಪದಗಳಲ್ಲಿ ಬಳಸಲು ಸಾಧ್ಯವಿದೆ ಆದರೆ ಒಂದು ಕೆಲಸವನ್ನು ಇನ್ನೊಬ್ಬನ ಹಿತಕ್ಕಾಗಿ ಮಾಡುವುದೆಂಬ ಅರ್ಥ ಇದಕ್ಕಿದೆ ಆದ ಕಾರಣ ಅಂತಹ ಅರ್ಥವನ್ನು ಕೊಡಬಲ್ಲ ಕ್ರಿಯಾಪದ ಗಳೊಂದಿಗೆ ಮಾತ್ರ ಇದು ಬರಬಲ್ಲದು ಇದರೊಂದಿಗೆ ಕ್ರಿಯಾಪದಗಳು ಅವುಗಳ ಭೂತನ್ಯೂನ ರೂಪದಲ್ಲಿ ಬರುತ್ತವೆ ಉದಾಹರಣೆಗೆ ಮಾಡು ಮಾಡಿಕೊಡು ಹುಡುಕು ಹುಡುಕಿಕೊಡು ತಿದ್ದು ತಿದ್ದಿಕೊಡು ತರು ತಂದು ಕೊಡು ಬರೆ ಬರೆದು ಕೊಡು ಸುಲಿ ಸುಲಿದು ಕೊಡು ಇದಲ್ಲದೆ ಅನಿಯಮಿತವಾಗಿ ಬೀಳ್ಕೊಡು ಎಂಬುದರಲ್ಲಿ ಇದು ನೇರವಾಗಿ ಒಂದು ಕ್ರಿಯಾ ಧಾತುವಿನೊಂದಿಗೂ ಬರಗೋಡು ಎಂಬುದರಲ್ಲಿ ಬರು ಎಂಬ ಕ್ರಿಯಾಪದದ ಬರಲು ಎಂಬ ರೂಪದೊಂದಿಗೂ ಮತ್ತು ಕಿವಿಗೊಡು ಬೆಲೆ ಕೊಡು ಎಂಬವುಗಳಲ್ಲಿ ನಾಮಪದಗಳೊಂದಿಗೂ ಬಂದಿರುವುದನ್ನು ಕಾಣಬಹುದು ಘ ಕೊಳ್ಳು ಕನ್ನಡದಲ್ಲಿ

ಈ ಕ್ರಿಯಾಪದಕ್ಕೆ ಸ್ವತಂತ್ರವಾದ ಬಳಕೆ ಇಲ್ಲ ಆದರೆ ಕೂಡು ಪದಗಳಲ್ಲಿ ಇದನ್ನು ಹೆಚ್ಚು ಕಡಿಮೆ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಬಳಸಲು ಸಾಧ್ಯವಿದೆ ಇಂತಹ ಕೂಡು ಪದಗಳಲ್ಲಿ ಕ್ರಿಯಾಪದಗಳು ಅವುಗಳ ಭೂತನ್ಯೂನ ರೂಪದಲ್ಲಿ ಬರುತ್ತವೆ ಮತ್ತು ಈ ಕೂಡು ಪದಗಳಿಗೆ ಒಂದು ಘಟನೆ ತಾನಾಗಿ ನಡೆದಿದೆ ಇಲ್ಲವೇ ಒಂದು ಕೆಲಸವನ್ನು ಒಬ್ಬ ವ್ಯಕ್ತಿ ತಾನಾಗಿ ನಡೆಸಿದ್ದಾನೆ ಎಂಬ ಅರ್ಥ ಬರುತ್ತದೆ ಉದಾಹರಣೆಗೆ ಮಾಡು ಮಾಡಿಕೊಳ್ಳು ತಿನ್ನು ತಿಂದುಕೊಳ್ಳು ಅಡಗು ಅಡಗಿಕೊಳ್ಳು ಬರೆ ಬರೆದುಕೊಳ್ಳು ಕುಡಿ ಕುಡಿದುಕೊಳ್ಳು ಇಡು ಇಟ್ಟುಕೊಳ್ಳು ಕೊಳ್ಳು ಎಂಬ ಅಸ್ವತಂತ್ರ ಕ್ರಿಯಾಪದವು ಕೊಂಡುಕೊಳ್ಳು ಎಂಬ ಕೂಡು ಪದದಲ್ಲಿ ಮೊದಲನೆಯ ನ್ಯೂನ್ ರೂಪದ ಕ್ರಿಯಾಪದವಾಗಿ ಬಂದಿರುವುದನ್ನು ಕಾಣಬಹುದು ಇದಲ್ಲದೆ ಬೇರೆಯೂ ಕೆಲವು ಕ್ರಿಯಾಪದಗಳು ಈ ರೀತಿ ಅಸ್ವತಂತ್ರ ಕ್ರಿಯಾಪದಗಳಾಗಿ ಇಂತಹ ಕೂಡು ಪದಗಳಲ್ಲಿ

ಬಂದಿರುವುದನ್ನು ಕದ್ದುಕೊಳ್ಳು ಕುಳಿತುಕೊಳ್ಳು ಎಂಬಂತಹವುಗಳಲ್ಲಿ ಕಾಣಬಹುದು ಕೆಲವು ನಾಮಪದ ಮತ್ತು ಗುಣಪದಗಳೊಂದಿಗೂ ಕೊಳ್ಳು ಎಂಬ ಈ ಕ್ರಿಯಾಪದವನ್ನು ಸೇರಿಸಿ ಕೂಡು ಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ ನೆಲೆ ನೆಲೆಗೊಳ್ಳು ಮೋಸ ಮೋಸಗೊಳ್ಳು ಸಿಟ್ಟು ಸಿಟ್ಟುಗೊಳ್ಳು ಕೈ ಕೈ ಗೊಳ್ಳು ಇದಿರು ಇದಿರುಗೊಳ್ಳು ಹದಗೊಳಿಸು ಮತ್ತು ಸಜ್ಜುಗೊಳಿಸು ಎಂಬವುಗಳಲ್ಲಿ ಕಾಣಿಸುವ ಕೂಡು ಪದಗಳು ಇಸು ಎಂಬ ಪ್ರತ್ಯಯದೊಂದಿಗೆ ಮಾತ್ರ ಬರಬಲ್ಲವು ನ ಬರು ಈ ಕ್ರಿಯಾಪದವನ್ನು ಬೇರೆ ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಸೇರಿಸಿ ಕೂಡು ಪದಗಳನ್ನು ತಯಾರಿಸಲು ಸಾಧ್ಯವಿದೆ ಕೆಲವು ಬಳಕೆಗಳನ್ನು ಗಳಲ್ಲಿ ಬರು ಎಂಬುದಕ್ಕೆ ಅದರ ನೇರವಾದ ಅರ್ಥವಿದೆಯಾದರೆ ಇನ್ನು ಕೆಲವು ಬಳಕೆಗಳಲ್ಲಿ ಈ ಅರ್ಥಕ್ಕೆನೆ ಸಂಬಂಧಿಸಿದ ಬೇರೆ ಅರ್ಥಗಳು ಬಂದಿವೆ ಉದಾಹರಣೆಗೆ ಓಡು ಓಡಿ ಬರು ಇಳಿ

ಇಳಿದು ಬರು ಬೆಳೆ ಬೆಳೆದು ಬರು ಕಾಣು ಕಂಡು ಬರು ಕೂಡು ಕೂಡಿ ಬರು ತೋರು ತೋರಿ ಬರು ಕೆಲವು ನಾಮಪದ ಮತ್ತು ಗುಣಪದಗಳು ಗಳೊಂದಿಗೂ ಈ ಕ್ರಿಯಾಪದವನ್ನು ಸೇರಿಸಿ ಕೂಡು ಪದಗಳನ್ನು ತಯಾರಿಸಲು ಸಾಧ್ಯವಿದೆ ಉದಾಹರಣೆಗೆ ಹೆಸರು ಹೆಸರು ಬರು ಅಡ್ಡಿ ಅಡ್ಡಿ ಬರು ಅಡ್ಡ ಅಡ್ಡ ಬರು ಮುಂದೆ ಮುಂದೆ ಬರು ಬರಬರುತ್ತಾ ಎಂಬುದರಲ್ಲಿ ಈ ಕ್ರಿಯಾಪದದೊಂದಿಗೆ ಬರು ಎಂಬ ಕ್ರಿಯಾಪದವೇ ಅದರ ಬರಲು ಎಂಬ ರೂಪದಲ್ಲಿ ಬಂದಿದೆ ಬೇರೆ ಕೆಲವು ಕ್ರಿಯಾಪದಗಳ ಇಂತಹ ಕೂಡು ಪದಗಳಲ್ಲಿ ಎರಡನೆಯ ಕ್ರಿಯಾಪದವಾಗಿ ಕಾಣಿಸುವ ಇತರ ಕ್ರಿಯಾಪದಗಳಲ್ಲಿ ಪ್ರಾಮುಖ್ಯವಾದವುಗಳು ಈ ಕೆಳಗಿನವು ಇವುಗಳಲ್ಲಿ ಕೆಲವು ಉದಾಹರಣೆಗೆ ಮಾಡು ಕೆಡು ಎತ್ತು ನಾಮಪದ ಮತ್ತು ಗುಣಪದಗಳೊಂದಿಗೆ ಮಾತ್ರ ಬರಬಲ್ಲುವೆಂದು ತೋರುತ್ತದೆ ಬಿಡು ಬೀಳು ಮಾಡು

ಕಟ್ಟು ಹಾಕು ಎತ್ತು ಇಡು ಕೆಡು ಹೋಗು ಗೂಡು ಪದಗಳಲ್ಲಿ ಈ ಕ್ರಿಯಾಪದಗಳ ಬಳಕೆಯನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು ಕೈಬಿಡು ಬಾಯಿ ಬಿಡು ತೇಲಿಬಿಡು ಎಡೆಬಿಡದೆ ಅಡ್ಡಕಟ್ಟು ಬೆಲೆಕಟ್ಟು ಹೆಪ್ಪುಗಟ್ಟು ಎತ್ತಿಕಟ್ಟು ಕಣ್ಣಿಡು ಹೆಸರಿಡು ಮುಚ್ಚಿಡು ಬರೆದಿಡು ಅಡ್ಡ ಬೀಳು ಹಿಂದೆ ಬೀಳು ಗಂಟು ಬೀಳು ತಿರುಗಿ ಬೀಳು ಬೊಬ್ಬೆ ಹಾಕು ತೆಗೆದು ಹಾಕು ತೂಗ ಹಾಕು ಕೈ ಹಾಕು ಅಂದಗೆಡು ಕಂಗೆಡು ಎದೆಗೆಡು ಹದಗೆಡು ಕೈ ಮಾಡು ಹಾಳು ಮಾಡು ತಡಮಾಡು ಊಟ ಮಾಡು ಉಸಿರೆತ್ತು ಕಣ್ಣೆತ್ತು ತಲೆಯೆತ್ತು ಕೈಯೆತ್ತು ಮೋಸ ಹೋಗು ಓಡಿ ಹೋಗು ಸೋತು ಹೋಗು ಸತ್ತು ಹೋಗು ಈ ಕ್ರಿಯಾಪದಗಳಲ್ಲಿ ಕೆಡು ಎಂಬುದರ ಮೊದಲನೆಯ ಅಕ್ಷರದಲ್ಲಿರುವ ಕರ ಗ ಕಾರವಾಗಿರುವುದನ್ನು ಗಮನಿಸಬಹುದು ಇಂತಹ ಸೇರಿಕೆಯ ಬದಲಾವಣೆಗಳು ಬೇರೆ

ಕೆಲವು ಕೂಡು ಪದಗಳಲ್ಲೂ ಕಾಣಿಸುತ್ತವೆ ಕೆಲವು ಕ್ರಿಯಾಪದಗಳಲ್ಲಿ ಇವು ನಿಯಮಿತವಾಗಿ ಎಲ್ಲಾ ಕೂಡು ಪದಗಳಲ್ಲೂ ಕಾಣಿಸುವುದರೆ ಉದಾಹರಣೆಗೆ ಕಾಣುಗ ಕಾಣು ಕುಟ್ಟು ಗುಟ್ಟು ಕೆದರು ಗೆದರು ಬೇರೆ ಕೆಲವು ಕ್ರಿಯಾಪದಗಳಲ್ಲಿ ಅನಿಯಮಿತವಾಗಿ ಕಾಣಿಸಿಕೊಳ್ಳುತ್ತವೆ ಉದಾಹರಣೆಗೆ ಕಟ್ಟು ಗಟ್ಟು ಕಳೆಗಳೆ ತಿರುಗು ತಿರುಗು ಉದಾಹರಣೆಗೆ ಕಿರುಗುಟ್ಟು ಬುಸುಗುಟ್ಟು ಕೊನೆಗಾಣು ಮನಗಾಣು ಕಳೆಗುಂಡು ಎದೆಗುಂದು ಒಳಂಬಡು ಒಳಪಡು ತಡೆಗಟ್ಟು ಅಡ್ಡಕಟ್ಟು ಹಿಂದಿರುಗು ತಲೆ ತಿರುಗು ಮೇಲೆ ಕೊಟ್ಟಿರುವ ಕ್ರಿಯಾಪದಗಳು ಮಾತ್ರವಲ್ಲದೆ ಬೇರೆಯೂ ಹಲವಾರು ಕ್ರಿಯಾಪದಗಳು ಇಂತಹ ಕೂಡು ಪದಗಳ ಎರಡನೆಯ ಪದವಾಗಿ ಬರಬಲ್ಲುವೆ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು ಬಾಯಾರು ಕೈಯಿಕ್ಕು ಕುಳ್ಳಿರಿಸು ಬೇರೂರು ಈಡೇರು ಗುಲ್ಲೆಬ್ಬಿಸು ಕವಲೊಡೆ ಕಂಡುಹಿಡಿ ಕೈ ಹಾಕು ಕೈಯೊಡ್ಡು ಜಗಳ ಕಾಯು ಹಲ್ಲು ಕಿರಿ ಕಸಗುಡಿಸು ಹರಟೆ ಕೊಚ್ಚು

ತಲೆ ಕೊಡು ಕೈ ಚಾಚು ಕೈ ಸೇರು ಹಿಮ್ಮೆಟ್ಟು ಕಾಲ ತಳ್ಳು ತಲೆದೂಗು ಮುಂದೂಡು ಮುನ್ನಡೆ ಹಾರಿ ನೋಡು ತಲೆಬಾಗು ಕೈಮುಗಿ ಹೊರೆಹಚ್ಚು ಮೊರೆ ಹೋಗು ಸಾರಾಂಶ ಕನ್ನಡದ ಕ್ರಿಯಾಪದಗಳ ಅವಳ ರಚನೆಯಲ್ಲಿ ಇಸು ಎಂಬುದನ್ನು ಬಿಟ್ಟರೆ ಬೇರೆ ಪ್ರತ್ಯಯಗಳ ಬಳಕೆ ಬಹಳ ಅಪರೂಪ ಪಳೆಯ ಅಳಿಕೆಗಳಾಗಿರುವ ಕೆಲವು ಪ್ರತ್ಯಯಗಳನ್ನು ಮಾತ್ರ ಅವುಗಳಲ್ಲಿ ಕಾಣಲು ಸಾಧ್ಯವಿದೆ ಇದಲ್ಲದೆ ನಾಮಪದಗಳ ಒಳ ರಚನೆಯಲ್ಲಿ ಕಾಣಿಸುವಂತಹ ಜೋಡು ಪದಗಳ ಬಳಕೆಯು ಕ್ರಿಯಾಪದಗಳಲ್ಲಿಲ್ಲ ಕನ್ನಡ ವಯ್ಯಾಕರಣಿಗಳು ವರ್ಣಿಸುವ ಕ್ರಿಯಾ ಸಮಾಸವೆಂಬವುಗಳು ನಿಜಕ್ಕೂ ಪದಗುಚ್ಚಗಳಲ್ಲದೆ ಜೋಡುಪದ ಸಮಸ್ತ ಪದಗಳಲ್ಲ ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಮತ್ತು ಕೆಲವು ನಾಮಪದ ಮತ್ತು ಗುಣಪದಗಳೊಂದಿಗೆ ಕೆಲವು ವಿಶಿಷ್ಟವಾದ ಕ್ರಿಯಾಪದಗಳನ್ನು ಬಳಸಿ ಕೂಡು ಪದಗಳೆಂಬ ಅಡಕವಾದ ಪದಗುಚ್ಚಗಳನ್ನು ತಯಾರಿಸಿ ಬಳಸುವುದು ಕನ್ನಡದ ಕ್ರಿಯಾಪದಗಳ ಇನ್ನೊಂದು

ವೈಶಿಷ್ಟ್ಯ



ಅಧ್ಯಾಯ 7 — ಗುಣಪದಗಳ ಒಳ ರಚನೆ

Internal Structure of Qualifiers

Part 43

Watch on YouTube

Note: This transcript has not been cleaned and may contain errors.

ಅಧ್ಯಾಯ ಏಳು ಗುಣಪದಗಳ ಒಳ ರಚನೆ ಪೀಠಿಕೆ ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿರುವ ಗುಣಪದಗಳೆಂಬ ಬೇರೆಯೇ ಒಂದು ಪದ ವರ್ಗಕ್ಕೆ ಸೇರುವ ಪದಗಳು ಕನ್ನಡದಲ್ಲಿವೆ ಎಂಬುದನ್ನು ನಾವು ಎರಡನೇ ಅಧ್ಯಾಯದಲ್ಲಿ ನೋಡಿರುವೆವು ಈ ಪದಗಳು ವಾಕ್ಯದಲ್ಲಿ ಬರುವ ವಿಧಾನ ತೆಗೆದುಕೊಳ್ಳುವ ಪ್ರತ್ಯಯಗಳು ಮತ್ತು ಸೂಚಿಸುವ ಅರ್ಥ ಎಂಬ ಈ ಮೂರು ವಿಷಯಗಳಲ್ಲೂ ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆ ಎಂಬುದನ್ನು ನೋಡಿರುವೆವು ಒಳ ರಚನೆಯಲ್ಲೂ ಈ ಪದಗಳು ನಾಮಪದ ಮತ್ತು ಕ್ರಿಯಾಪದಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿರುವೆವು ಕನ್ನಡ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಗುಣಪದಗಳು ಬಳಕೆಯಾಗುತ್ತವೆ ಅವುಗಳಲ್ಲಿ ಕೆಲವು ನಾಮಪದಗಳೊಂದಿಗೆ ಬರಬಲ್ಲವು ಮತ್ತು ಇನ್ನು ಕೆಲವು ಕ್ರಿಯಾಪದಗಳೊಂದಿಗೆ ಬರಬಲ್ಲವು ನಾಮಪದಗಳೊಂದಿಗೆ ಬರಬಲ್ಲ ಉದ್ದ ಬಿಳಿ ದೊಡ್ಡ ಮೊದಲಾದ ಗುಣಪದಗಳು ನಾಮಪದಗಳು ಗುರುತಿಸುವ

ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮಗಳನ್ನು ಸೂಚಿಸುವುದರೆ ಕ್ರಿಯಾಪದಗಳೊಂದಿಗೆ ಬರಬಲ್ಲ ಮೇಲೆ ಹಿಂದೆ ಮೆಲ್ಲಗೆ ಮೊದಲಾದ ಗುಣಪದಗಳು ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳ ಗುಣಧರ್ಮಗಳನ್ನು ಸೂಚಿಸುತ್ತವೆ ಒಂದು ದೊಡ್ಡ ಪೆಟ್ಟಿಗೆಯನ್ನು ಕೆಳಗೆ ಇರಿಸಿದ್ದೇನೆ ಎರಡು ಹೊಸ ಬಟ್ಟೆಯನ್ನು ಹಳೆ ಬಟ್ಟೆಯ ಹಾಗೆ ಜಾಸ್ತಿ ನೆನೆಸಬೇಡ ಮೇಲೆ ಕೊಟ್ಟಿರುವ ಒಂದು ಎರಡು ವಾಕ್ಯಗಳಲ್ಲಿ ದೊಡ್ಡ ಹೊಸ ಮತ್ತು ಹಳೆ ಎಂಬ ಗುಣಪದಗಳು ಅವುಗಳ ಅನಂತರ ಬಂದಿರುವ ನಾಮಪದಗಳ ಗುಣಧರ್ಮಗಳನ್ನು ಮತ್ತು ಕೆಳಗೆ ಮತ್ತು ಜಾಸ್ತಿ ಎಂಬ ಗುಣಪದಗಳು ಅವುಗಳ ಅನಂತರ ಬರೆದಿರುವ ಕ್ರಿಯಾಪದಗಳ ಗುಣಧರ್ಮಗಳನ್ನು ಸೂಚಿಸುತ್ತವೆ ಈ ಎರಡು ರೀತಿಯ ಗುಣಪದಗಳ ನಡುವೆ ಅವುಗಳ ಅರ್ಥದಲ್ಲಿ ಮಾತ್ರವಲ್ಲದೆ ಒಳ ರಚನೆಯಲ್ಲಿ ಮತ್ತು ವಾಕ್ಯದ ದಲ್ಲಿ ಅವಕ್ಕಿರುವ ಸ್ವಾತಂತ್ರ್ಯದಲ್ಲಿ ವ್ಯತ್ಯಾಸಗಳಿವೆ ಎಂಬುದನ್ನು ಮುಂದೆ ನೋಡಲಿರುವೆವು ಇದಲ್ಲದೆ ಗುಣಪದಗಳೊಂದಿಗೆ ಬರಬಲ್ಲ

ಬಹಳ ಬರಿ ಬಲು ಮೊದಲಾದ ಬೇರೆ ಕೆಲವು ಗುಣಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ ಇವು ಗುಣಪದಗಳು ಸೂಚಿಸುವ ಗುಣಧರ್ಮಗಳ ಪ್ರಮಾಣವನ್ನು ತಿಳಿಸುತ್ತವೆ ಉದಾಹರಣೆಗೆ ಮೂರು ಈ ಬಟ್ಟೆ ಬಹಳ ತೆಳ್ಳಗಿದೆ ನಾಲ್ಕು ಅವನ್ನು ಭಾರಿ ದೊಡ್ಡ ಮನೆ ಕಟ್ಟಿಸುತ್ತಿದ್ದಾನೆ ಆದರೆ ಇಂತಹ ಗುಣಪದಗಳ ಸಂಖ್ಯೆ ಜಾಸ್ತಿ ಇಲ್ಲ ಇದಲ್ಲದೆ ಇವುಗಳ ಒಣ ರಚನೆಯಲ್ಲಿ ಹೇಳುವಂತಹ ವಿಶಿಷ್ಟವಾದ ಸಂಗತಿ ಏನು ಇಲ್ಲವಾದ ಕಾರಣ ನಾಮಪದ ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಎರಡು ರೀತಿಯ ಗುಣಪದಗಳ ಒಳ ರಚನೆಯನ್ನು ಮಾತ್ರವೇ ಈ ಅಧ್ಯಾಯದಲ್ಲಿ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ ಕೆಲವು ವ್ಯತ್ಯಾಸಗಳು ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಸಾಮಾನ್ಯವಾಗಿ ಬೇಗನೆ ಬದಲಾಗದಿರುವ ಸ್ಥಾಯಿ ಗುಣಧರ್ಮಗಳನ್ನು ಮತ್ತು ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳು ಅಷ್ಟೊಂದು ಸ್ಥಿರವಲ್ಲದಿರುವ ಅಸ್ಥಾಯಿ ಗುಣಧರ್ಮಗಳನ್ನು ಸೂಚಿಸುತ್ತವೆ ವ್ಯಕ್ತಿ ವಸ್ತು ಮೊದಲಾದವುಗಳ

ಆಕಾರ ಉದ್ದ ಎತ್ತರ ತೆಳು ಅಗಲ ಇತ್ಯಾದಿ ಭೌತಿಕ ಮತ್ತು ಮಾನಸಿಕ ಅವಸ್ಥೆಗಳು ಚಿಕ್ಕ ಗಟ್ಟಿ ಒಣ ಮೆದು ಕುರುಡು ಜಾಣ ಇತ್ಯಾದಿ ಬಣ್ಣ ಕೆಂಪು ಬಿಳಿ ಕಪ್ಪು ಇತ್ಯಾದಿ ಪ್ರಾಯ ಹೊಸ ಹಿರಿ ಇತ್ಯಾದಿ ಮೊದಲಾದವುಗಳನ್ನು ಸೂಚಿಸುವ ಗುಣಪದಗಳು ನಾಮಪದಗಳೊಂದಿಗೆ ಬರುತ್ತವೆ ಮತ್ತು ಘಟನೆಗಳ ವಿಧಾನ ಸಮಯ ಮತ್ತು ಜಾಗಗಳನ್ನು ಸೂಚಿಸುವ ಗಿರ್ರನೆ ಸರ್ರನೆ ತಟಕ್ಕನೆ ಮೆಲ್ಲನೆ ಮೇಲೆ ಮುಂಚೆ ಹಿಂದೆ ಮೊದಲಾದ ಗುಣಪದಗಳು ಕ್ರಿಯಾಪದಗಳೊಂದಿಗೆ ಬರುತ್ತವೆ ಕನ್ನಡದಲ್ಲಿ ಈ ರೀತಿ ಮುಖ್ಯವಾಗಿ ಎರಡು ರೀತಿಯ ಗುಣಪದಗಳಿವೆ ಆದರೂ ಸಾಮಾನ್ಯವಾಗಿ ಗುಣಪದ ಇಲ್ಲವೇ ಗುಣವಾಚಕ ಪದ ಎಂಬುದನ್ನು ಈ ಎರಡು ರೀತಿಯ ಗುಣಪದಗಳನ್ನು ಒಟ್ಟಿಗೆ ಸೂಚಿಸುವುದಕ್ಕಿಂತಲೂ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ಮಾತ್ರವೇ ಸೂಚಿಸುವುದಕ್ಕಾಗಿ ಬಳಸುವುದು ಜಾಸ್ತಿ ಮೇಲೆ ಎರಡನೆಯ ಅಧ್ಯಾಯದಲ್ಲಿ ಕೊಟ್ಟಿರುವ

ಗುಣಪದಗಳ ಗುಣಧರ್ಮಗಳಲ್ಲಿ ಎಲ್ಲವನ್ನು ತೋರಿಸುವುದು ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳು ಮಾತ್ರ ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳು ಅವುಗಳಲ್ಲಿ ಕೆಲವನ್ನು ಮಾತ್ರ ತೋರಿಸುತ್ತವೆ ಉದಾಹರಣೆಗಾಗಿ ನಾಮಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ನಾಮಪದಗಳಿಂದ ಬೇರೆ ಪಡಿಸಿ ವಾಕ್ಯದಲ್ಲೇನೆ ಬೇರೆ ಕಡೆಗಳಿಗೆ ವರ್ಗಾಯಿಸಲು ಸಾಧ್ಯವಾಗದು ಆದರೆ ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳನ್ನು ವಾಕ್ಯದಲ್ಲಿ ಎಲ್ಲಿ ಬೇಕಿದ್ದರೂ ಬಳಸಲು ಸಾಧ್ಯವಿದೆ ಅವು ಕ್ರಿಯಾಪದದ ಹತ್ತಿರವೇ ಇರಬೇಕೆಂಬ ನಿಯಮವಿಲ್ಲ ಉದಾಹರಣೆಗೆ ಐದು ಕರಾಜು ಮಡಿಕೆಯನ್ನು ನೆಲದ ಮೇಲೆ ಮೆಲ್ಲಗೆ ಇರಿಸಿದ ಐದು ಕರಾಜು ಮಡಿಕೆಯನ್ನು ಮೆಲ್ಲಗೆ ನೆಲದ ಮೇಲೆ ಇರಿಸಿದ ಐದುಗ ರಾಜು ಮಡಿಕೆಯನ್ನು ನೆಲದ ಮೇಲೆ ಇರಿಸಿದ ಮೆಲ್ಲಗೆ ಮೆಲ್ಲಗೆ ಎಂಬ ಗುಣಪದ ಮಡಿಕೆಯನ್ನು ಇರಿಸುವುದು ಹೇಗೆ ಎಂಬುದಾಗಿ ಇರಿಸುವಿಕೆ ಎಂಬ ಒಂದು ಘಟನೆಯ ಗುಣಧರ್ಮವನ್ನು ತಿಳಿಸುತ್ತಿದೆಯಾದರೂ ಅದು ಐದು ಕ ದಲ್ಲಿ

ಮಾತ್ರ ಆ ಕ್ರಿಯಾಪದದ ಹತ್ತಿರ ಬಂದಿದೆ ಐದು ಕ ದಲ್ಲಿ ಅದು ನೆಲದ ಎಂಬುದು ಅದರೊಂದಿಗೂ ಮತ್ತು ಐದು ಗ ದಲ್ಲಿ ವಾಕ್ಯದ ಹೊರಗೂ ಬಂದಿರುವುದನ್ನು ಕಾಣಬಹುದು ಕ್ರಿಯಾಪದಗಳೊಂದಿಗೆ ಬರಬಲ್ಲ ಗುಣಪದಗಳಿಗಿರುವ ಈ ಸ್ವಾತಂತ್ರ್ಯವನ್ನು ಬೇರೆಯೂ ಕೆಲವು ವಿಷಯಗಳಲ್ಲಿ ಕಾಣಬಹುದು ಉದಾಹರಣೆಗಾಗಿ ಅವಕ್ಕೆ ಒತ್ತುಕೊಟ್ಟು ಅವನ್ನು ವಾಕ್ಯದಿಂದ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ ಆದರೆ ನಾಮಪದಗಳೊಂದಿಗೆ ಬರುವ ಗುಣಪದಗಳನ್ನು ಈ ರೀತಿ ಪ್ರತ್ಯೇಕಿಸಿ ಹೇಳಲು ಸಾಧ್ಯವಾಗದು ಆರುಕ ರಾಜು ಮಡಿಕೆಯನ್ನು ನೆಲದ ಮೇಲೆ ಮೆಲ್ಲಗೂ ಇರಿಸಬಲ್ಲ ಆರು ರಾಜು ಮಡಿಕೆಯನ್ನು ಇರಿಸಿದ್ದು ಮೆಲ್ಲಗೆ ಗುಣಪದಗಳ ಸ್ವರೂಪ ಕನ್ನಡದಲ್ಲಿ ಒಳ ರಚನೆ ಇಲ್ಲದ ಗುಣಪದ ಧಾತುಗಳು ಹಲವಿವೆ ಇವುಗಳಲ್ಲಿ ಒಂದೇ ಅಕ್ಷರವಿರುವ ಧಾತುಗಳೆಲ್ಲ ಅಸ್ವತಂತ್ರ ಪದಗಳಾಗಿದ್ದು ಜೋಡು ಪದಗಳಲ್ಲಿ ನಾಮಪದಗಳಾಗಿ ಇಲ್ಲವೇ ಪ್ರತ್ಯಯವಿರುವ ಪದಗಳಲ್ಲಿ ಗುಣಪದಗಳಾಗಿ

ಬಳಕೆಯಾಗುತ್ತವೆ ಉದಾಹರಣೆಗಾಗಿ ಕೆಮ್ ಎಂಬ ಅಸ್ವತಂತ್ರ ಗುಣಧಾತು ಕೆಂದಾಳಿ ಕೆಮ್ಮಣ್ಣು ಮೊದಲಾದ ಜೋಡು ಪದಗಳಲ್ಲಿ ಬೇರೆ ಪದಗಳೊಂದಿಗೆ ಸೇರಿ ನಾಮಪದವಾಗಿ ಬಳಕೆಯಾಗುತ್ತದೆ ಮತ್ತು ಕೆಂಪು ಮತ್ತು ಕೆಂಚು ಎಂಬವುಗಳಲ್ಲಿ ಪ್ರತ್ಯಯಗಳೊಂದಿಗೆ ಸೇರಿ ಗುಣಪದವಾಗಿ ಬಳಕೆ ಆಗುತ್ತದೆ ಹಿನ್ ತಣ್ ಮುನ್ ನುಣ್ ಹೆರ್ ಹಿರಿ ಮೊದಲಾದವುಗಳು ಇಂತಹ ಒಂದಕ್ಷರವಿರುವ ಗುಣಧಾತುಗಳು ಒಂದಕ್ಕಿಂತ ಜಾಸ್ತಿ ಅಕ್ಷರವಿರುವ ಗುಣಧಾತುಗಳು ಕನ್ನಡದಲ್ಲಿ ಹಲವಿವೆ ಚಾರಿತ್ರಿಕವಾಗಿ ಈ ಧಾತುಗಳು ಒಂದಕ್ಷರ ಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಿದ್ಧವಾದವುಗಳೆಂದು ಹೇಳಲು ಸಾಧ್ಯವಿದೆ ಉದಾಹರಣೆಗಾಗಿ ಬಿಳಿ ಬಿಸಿ ಮತ್ತು ಕರಿ ಎಂಬವುಗಳ ಕೊನೆಯ ಈ ಕಾಕಾರ ಸಿಹಿ ಮತ್ತು ಕಹಿ ಎಂಬವುಗಳಲ್ಲಿ ಬರುವ ಹಿ ಎಂಬ ಎರಡನೆಯ ಅಕ್ಷರ ಎಳೆ ಹಳೆ ಒಳ್ಳೆ ಮೊದಲಾದವುಗಳ ಕೊನೆಯಲ್ಲಿ ಬರುವ ಏಕಾರ ಮೊದಲಾದವುಗಳು ಈ

ರೀತಿ ಪ್ರತ್ಯಯಗಳಾಗಿರಲು [ಪ್ರಶಂಸೆ] ಸಾಧ್ಯವಿದೆ ಕನ್ನಡದಲ್ಲಿ ಧಾತು ಮತ್ತು ನಾಮ ಧಾತುಗಳಿಗಿಂತ ಭಿನ್ನವಾಗಿರುವ ಹಲವಾರು ಗುಣಧಾತುಗಳಿವೆ ಎಂಬುದನ್ನು ಕೆಳಗಿನ ಕೆಲವು ಉದಾಹರಣೆಗಳಿಂದ ತಿಳಿಯಬಹುದು ಕರಿ ಬಿಳಿ ಸಿಹಿ ಕಹಿ ಒಳ ಹೊರ ಎಡ ಬಲ ಎಳೆ ಹಳೆ ತೆಳು ನಡು ತೋರ ನೇರ ಕೀಳು ಮೇಲು ಅಡ್ಡ ಉದ್ದ ದೊಡ್ಡ ದಪ್ಪ ಮೊಂಡು ದುಂಡು ಡೊಂಕು ಕುಂಟು ನಾಮಪದಗಳ ಬದಲು ಕ್ರಿಯಾಪದಗಳ ವಿಶೇಷಣಗಳಾಗಿ ಬರಬಲ್ಲ ಗುಣ ಧಾತುಗಳು ಕನ್ನಡದಲ್ಲಿ ಜಾಸ್ತಿ ಇಲ್ಲ ಆದರೆ ಶಬ್ದ ಇಲ್ಲವೇ ಅನುಭವವನ್ನು ಅಣಕಿಸಿ ಹೇಳುವ ಹಲವು ಪದಗಳು ಅನೇ ಇಲ್ಲವೇ ನೇ ಎಂಬ ಪ್ರತ್ಯಯದೊಂದಿಗೆ ಸೇರಿ ಈ ರೀತಿ ಕ್ರಿಯಾಪದಗಳ ವಿಶೇಷಣಗಳಾಗಿ ಬರಬಲ್ಲವು ಇವನ್ನು ಅಸ್ವತಂತ್ರ ಗುಣಧಾತುಗಳೆಂದು ಪರಿಗಣಿಸಲು ಸಾಧ್ಯವಿದೆ ಇವು ಮುಖ್ಯವಾಗಿ ಮೂರು ರೀತಿಯ ರೂಪಗಳಲ್ಲಿ

ಬರುವೆ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು ಸರ್ರನೆ ಗಿರ್ರನೆ ಬರ್ರನೆ ಜಮ್ಮನೆ ತಟ್ಟನೆ ದೊಪ್ಪನೆ ಬಗ್ಗನೆ ದಿಗ್ಗನೆ ಜಗ್ಗನೆ ಸರಕ್ಕನೆ ಕಿಸಕ್ಕನಿ ಗಬಕ್ಕನಿ ತಟಕ್ಕನಿ ಗುಳಕ್ಕನಿ ಪಚಕ್ಕನೆ ಸರಸರನೆ ಮಿರಮಿರನೆ ಕತಕತನೆ ಗಡಗಡನೆ ಗಣಗಣನೆ ಕಿಲಕಿಲನೆ ಕೆಲವು ಅಣಕಿಸುವ ಪದಗಳು ಈ ರೀತಿ ಅನೇ ಎಂಬ ಪ್ರತ್ಯಯದ ಸಹಾಯವಿಲ್ಲದೆಯೂ ನೇರವಾಗಿ ಕ್ರಿಯಾಪದಗಳೊಂದಿಗೆ ಅವುಗಳ ವಿಶೇಷಣಗಳಾಗಿ ಬರಬಲ್ಲುವು ಉದಾಹರಣೆಗಾಗಿ ಗಡಗಡ ನಡುವು ಗುಸುಗುಸು ಮಾತನಾಡು ಪಳಪಳ ಹೊಳೆ ಮೊದಲಾದ ಬಳಕೆಗಳನ್ನು ಗಮನಿಸಬಹುದು ಇದಲ್ಲದೆ ಎಂದು ಎಂಬ ಪದದ ಸಹಾಯದಿಂದ ಅಣಕಿಸುವ ಕೆಲವು ಪದಗಳನ್ನು ಎತ್ತಿ ಹೇಳಲು ಸಾಧ್ಯವಿದೆ ಉದಾಹರಣೆಗೆ ಜೋ ಜೋ ಎಂದು ಹಾಡು ಆದರೆ ಈ ಎರಡನೆಯ ವಿಧಾನದಲ್ಲಿ ಬರುವ ಅಣಕಿಸುವ ಪದಗಳನ್ನು ಗುಣಪದಗಳೆಂದು ಕರೆಯುವುದು ಕಷ್ಟ ಕೆಲವು ಅಣಕಿಸುವ ಪದಗಳು ಅನೇ

ಎಂಬ ಪ್ರತ್ಯಯದ ಸಹಾಯದಿಂದ ಗುಣಪದಗಳಾಗಿಯೂ ಮತ್ತು ಇಸು ಎಂಬ ಪ್ರತ್ಯಯದ ಸಹಾಯದಿಂದ ಕ್ರಿಯಾಪದಗಳಾಗಿಯೂ ಬಳಕೆಯಾಗಬಲ್ಲವು ಇಂತಹ ಅಸ್ವತಂತ್ರ ಧಾತುಗಳು ಕ್ರಿಯಾ ಧಾತುಗಳೇ ಅಥವಾ ಗುಣ ಧಾತುಗಳೇ ಎಂಬುದನ್ನು ನಿಷ್ಕೃಷ್ಟವಾಗಿ ಹೇಳಲು ಸಾಧ್ಯವಿಲ್ಲ ಗಮಗಮನೆ ಗಮಗಮಿಸು ತಳತಳನೆ ತಳತಳಿಸು ಬಡಬಡನೆ ಬಡಬಡಿಸು ಗಹಗಹನೆ ಗಹಗಹಿಸು ಕನ್ನಡದಲ್ಲಿ ಬಳಕೆಯಾಗುವಂತಹ ಅಣಕಿಸುವ ಪದಗಳ ಅಕ್ಷರ ಸ್ವರೂಪದಲ್ಲಿ ಕೆಲವು ವೈಶಿಷ್ಟ್ಯಗಳಿವೆ ಇವುಗಳಲ್ಲೆಲ್ಲ ಮೊದಲಿಗೆ ಒಂದು ವ್ಯಂಜನ ಬಂದಿರುತ್ತದೆ ಮೊದಲಿಗೆ ಸ್ವರ ಬಂದಿರುವ ಅಣಕಿಸುವ ಪದ ಕನ್ನಡದಲ್ಲಿ ಬಹುಶಃ ಇಲ್ಲವೆಂದೇ ಹೇಳಲು ಸಾಧ್ಯವಿದೆ ಇದಲ್ಲದೆ ಜೋಡಿಯಾಗಿ ಬರುವ ಪದಗಳಲ್ಲಿ ಉದಾಹರಣೆಗೆ ಕಟಕಟನೆ ಚಟಚಟನೆ ಇತ್ಯಾದಿ ಒತ್ತಕ್ಷರವಾಗಲಿ ಉದ್ದ ಸ್ವರವಾಗಲಿ ಕಾಣಿಸುವುದಿಲ್ಲ ಮತ್ತು ಈ ರೀತಿ ಜೋಡಿಯಾಗಿ ಬಾರದಿರುವ ಪದಗಳಲ್ಲಿ ಉದಾಹರಣೆಗೆ ಬರ್ರನೆ ಡಬ್ಬನೆ ಪಠಾರನೆ ಕಬಕ್ಕನೆ ಸರಕ್ಕನೆ ಇತ್ಯಾದಿ ಒತ್ತಕ್ಷರವಾಗಲಿ

ಉದ್ದ ಸ್ವರವಾಗಲಿ ಕಾಣಿಸದಿರುವುದಿಲ್ಲ



Part 44

Watch on YouTube

ಈ ಭಾಗ ಪುಸ್ತಕದ ೭.೪: ಪ್ರತ್ಯಯಗಳ ಬಳಕೆ ಅನ್ನು ಆಧರಿಸಿದೆ.

ಅಸ್ವತಂತ್ರ ಗುಣಧಾತುಗಳಿಂದ ಗುಣಪದಗಳನ್ನು ತಯಾರಿಸುವುದಕ್ಕಾಗಿ ಕೆಲವು ಪ್ರತ್ಯಯಗಳು ಅನಿಯಮಿತವಾಗಿ ಬಳಕೆಯಾಗುತ್ತವೆ. ಕೆಂ-ಕೆಂಪು, ಕರಿ-ಕಪ್ಪು, ತಣ್-ತಂಪು ಎಂಬವುಗಳಲ್ಲಿ ಕಾಣಿಸುವ ಪು ಎಂಬ ಪ್ರತ್ಯಯ ಇಂತಹದು. ಆದರೆ, ಹೊಳೆ-ಹೊಳಪು, ಬಿಳಿ-ಬಿಳುಪು, ಮುದಿ-ಮುಪ್ಪು ಎಂಬವುಗಳಲ್ಲಿ ಇದೇ ಪ್ರತ್ಯಯ ಗುಣಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗಿದೆ ಎಂಬು ದನ್ನು ಗಮನಿಸಬಹುದು. ಕೆಂ-ಕೆಂಚು ಎಂಬುದರಲ್ಲಿ ಚು ಎಂಬ ಪ್ರತ್ಯಯ ಬಳಕೆಯಾಗಿದೆ, ಮತ್ತು ಇದೇ ಪ್ರತ್ಯಯ ಮುನೆ-ಮೊನಚು ಎಂಬುದರಲ್ಲಿ ನಾಮಪದದಿಂದ ಗುಣಪದ ವೊಂದನ್ನು ತಯಾರಿಸಲು ಬಳಕೆಯಾಗಿದೆ. ಮುಂ-ಮುಂಚೆ ಎಂಬುದರಲ್ಲಿ ಚೆ ಎಂಬ ಇನ್ನೊಂದು ಪ್ರತ್ಯಯ ಬಳಕೆಯಾಗಿದೆ, ಮತ್ತು ಇದೇ ಪ್ರತ್ಯಯ ಕೊಳೆ- ಕೊಳಚೆ ಎಂಬುದರಲ್ಲಿ…



ಅಧ್ಯಾಯ 8 — ಎರವಲಾಗಿ ಬಂದ ಪದಗಳ ಒಳ ರಚನೆ

Internal Structure of Loanwords

Part 45

Watch on YouTube

Note: This transcript has not been cleaned and may contain errors.

ಅಧ್ಯಾಯ ಎಂಟು ಎರವಲು ಪದಗಳ ಒಳ ರಚನೆ ಎರವಲಿನ ಸ್ವರೂಪ ಕನ್ನಡದಲ್ಲಿ ಸಂಸ್ಕೃತ ಇಂಗ್ಲಿಷ್ ಹಿಂದಿ ಪರ್ಷಿಯನ್ ಮೊದಲಾದ ಬೇರೆ ಬೇರೆ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಹಲವಿದೆ ಇವುಗಳ ಒಳ ರಚನೆ ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದ ಕನ್ನಡ ಪದಗಳ ಒಳ ರಚನೆಗಿಂತ ಭಿನ್ನವಾಗಿ ಆದ ಕಾರಣ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಅವಶ್ಯಕತೆ ಇದೆ ಅಂತಹ ಪರಿಶೀಲನೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ ಭಾಷೆಗಳೊಳಗೆ ಎರವಲಿನಲ್ಲಿ ವೈವಿಧ್ಯ ಎಲ್ಲಾ ಭಾಷೆಗಳಿಗೂ ಒಂದಲ್ಲ ಒಂದು ವಿಧದಲ್ಲಿ ಬೇರೆ ಭಾಷೆಗಳೊಂದಿಗೆ ಸಂಪರ್ಕವಿದ್ದೆ ಇರುತ್ತದೆ ಆದಕಾರಣ ಎಲ್ಲಾ ಭಾಷೆಗಳಲ್ಲೂ ಎರಲಾಗಿ ಬಂದ ಪದಗಳು ಇರುತ್ತವೆ ಕೆಲವು ಭಾಷೆಗಳಲ್ಲಿ ಇಂತಹ ಪದಗಳು ಜಾಸ್ತಿ ಇರುತ್ತವೆ ಮತ್ತು ಬೇರೆ ಕೆಲವು ಭಾಷೆಗಳಲ್ಲಿ ಕಡಿಮೆ ಇರುತ್ತವೆ ಎಂಬುದೇ ಈ ವಿಷಯದಲ್ಲಿ ಬೇರೆ ಬೇರೆ

ಭಾಷೆಗಳ ನಡುವೆ ಇರುವ ವ್ಯತ್ಯಾಸ ಈ ವ್ಯತ್ಯಾಸಕ್ಕೆ ಹಲವು ಕಾರಣಗಳಿವೆ ಪದಗಳನ್ನು ಎರವಲು ಕೊಡುವ ಭಾಷೆಗೂ ಮತ್ತು ಎರವಲು ಪಡೆಯುವ ಭಾಷೆಗೂ ನಡುವೆ ಬಹಳ ಹತ್ತಿರದ ಸಂಪರ್ಕವಿದೆಯಾದರೆ ಮತ್ತು ಎರವಲು ಕೊಡುವ ಭಾಷೆ ಹೆಚ್ಚು ಪ್ರತಿಷ್ಠೆಯದಾದರೆ ಹೆಚ್ಚು ಹೆಚ್ಚು ಪದಗಳು ಅದರಿಂದ ಎರವಲಾಗಿ ಬಂದು ಎರವಲು ಪಡೆಯುವ ಭಾಷೆಯಲ್ಲಿ ಸೇರಿಕೊಳ್ಳಲು ಸಾಧ್ಯವಿದೆ ಕನ್ನಡದ ಮಟ್ಟಿಗೆ ಸಂಸ್ಕೃತ ಬಹಳ ಪ್ರತಿಷ್ಠೆಯ ಭಾಷೆಯಾಗಿ ಗಿತ್ತಾದ ಕಾರಣ ಅದರಿಂದ ದೊಡ್ಡ ಸಂಖ್ಯೆಯಲ್ಲಿ ಪದಗಳು ಕನ್ನಡಕ್ಕೆ ಎರಲಾಗಿ ಬಂದಿವೆ ಇವತ್ತು ಇಂಗ್ಲಿಷ್ ಭಾಷೆ ಅಂತಹದೇ ಪ್ರತಿಷ್ಠೆಯ ಸ್ಥಾನದಲ್ಲಿದೆ ಆದ ಕಾರಣ ಅದರಿಂದಲೂ ಪದಗಳು ಹೆಚ್ಚಿನ ಸಂಖ್ಯೆಯಲ್ಲಿ ಎರಲಾಗಿ ಬರುತ್ತಿವೆ ಇದಲ್ಲದೆ ಒಂದು ಭಾಷೆಯನ್ನಾಡುವ ಜನರ ಮನಸ್ಥಿತಿ ಎಂತಹದ್ದು ಅವರು ಸುಲಭವಾಗಿ ಪದಗಳ ಎರವಲಿಗೆ ಮೊರೆ ಹೋಗುವವರೇ ಅಥವಾ ಹೊಸ

ಹೊಸ ಪದಗಳನ್ನು ಬಳಸಬೇಕಾಗುವ ಸಂದರ್ಭ ಬಂದಾಗಲೆಲ್ಲ ತಮ್ಮದೇ ಆದ ಪದಗಳನ್ನು ಸೃಷ್ಟಿಸಿಕೊಳ್ಳುವವರೇ ಎಂಬುದು ಈ ವ್ಯತ್ಯಾಸಕ್ಕೆ ಇನ್ನೊಂದು ಆಧಾರವಾಗುತ್ತದೆ ತಮ್ಮ ಭಾಷೆಯ ಕುರಿತಾಗಿ ಜಾಸ್ತಿ ಅಭಿಮಾನವನ್ನು ಹೊಂದಿರುವ ಮಂದಿ ಎರವಲಿಗಿಂತಲೂ ಹೊಸ ಪದಗಳ ತಯಾರಿಕೆಗೆನೆ ಕೈ ಹಾಕುವುದು ಜಾಸ್ತಿ ಭಾಷೆಯಲ್ಲಿ ಇಲ್ಲದ ಹೊಸ ಪದಗಳ ಅವಶ್ಯಕತೆ ಬೇರೆ ಬೇರೆ ಕಾರಣಗಳಿಗಾಗಿ ಕಾಣಿಸಿಕೊಳ್ಳುತ್ತದೆ ಬೇರೊಂದು ಭಾಷೆಯನ್ನು ಆಡುವ ಜನರಲ್ಲಿ ಬಳಕೆಯಲ್ಲಿರುವ ವಸ್ತುಗಳು ನಮ್ಮಲ್ಲಿ ಬಳಕೆಗೆ ಬಂದಾಗ ಅಂತಹ ವಸ್ತುಗಳನ್ನು ಹೆಸರಿಸುವುದಕ್ಕಾಗಿ ನಮಗೆ ಹೊಸ ಪದಗಳ ಅವಶ್ಯಕತೆ ಕಂಡುಬರುತ್ತದೆ ಇಂತಹ ಸಂದರ್ಭಗಳಲ್ಲಿ ಆ ವಸ್ತುಗಳೊಂದಿಗೆ ಅವುಗಳ ಹೆಸರುಗಳನ್ನು ನಾವು ಆಮದು ಮಾಡಿಕೊಳ್ಳಬಹುದು ಇಲ್ಲವೇ ನಮ್ಮವೇ ಆದ ಹೆಸರುಗಳನ್ನು ತಯಾರಿಸಿ ಅದಕ್ಕೆ ಕೊಡಬಹುದು ಉದಾಹರಣೆಗಾಗಿ ಇಂಗ್ಲಿಷ್ ಭಾಷೆಯನ್ನು ಆಡುವ ಸಮಾಜದಿಂದ ನಾವು ರೇಡಿಯೋ ಟಿವಿ ಬಸ್ಸು ಕಾರು

ಪೆನ್ನು ರೈಲು ಕಂಪ್ಯೂಟರ್ ಮೊದಲಾದ ಹಲವಾರು ವಸ್ತುಗಳನ್ನು ಬಳಕೆಗೆ ಪಡೆದಿದ್ದು ಅವುಗಳೊಂದಿಗೆ ಆ ವಸ್ತುಗಳ ಹೆಸರುಗಳನ್ನು ಎರವಲಾಗಿ ಪಡೆದುಕೊಂಡಿದ್ದೇವೆ ಇಂತಹ ವಸ್ತುಗಳಲ್ಲಿ ಕೆಲವಕ್ಕೆ ಉದಾಹರಣೆಗೆ ಉಗಿಬಂಡಿ ನಮ್ಮವೇ ಆದ ಹೆಸರುಗಳನ್ನು ಕೊಟ್ಟಿರುವೆವಾದರೂ ಬೇರೆ ಕೆಲವಕ್ಕೆ ಅವುಗಳ ಹೆಸರುಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಉಳಿಸಿಕೊಂಡಿದ್ದೇವೆ ಈ ರೀತಿ ಹೊಸ ಹೊಸ ರೀತಿಯ ವಸ್ತುಗಳನ್ನು ಬಳಕೆಗೆ ಪಡೆದುಕೊಳ್ಳುವುದು ಮಾತ್ರವಲ್ಲ ಹೊಸ ಹೊಸ ವಿಷಯಗಳನ್ನು ನಾವು ಬೇರೆ ಭಾಷೆಗಳನ್ನಾಡುವ ಜನರಿಂದ ತಿಳಿದುಕೊಳ್ಳುವೆವಾದ್ದರಿಂದ ಅಂತಹ ವಿಷಯಗಳನ್ನು ಹೆಸರಿಸುವ ಪದಗಳು ನಮ್ಮ ಭಾಷೆಗೆ ಎರವಲಾಗಿ ಬರುತ್ತವೆ ಈ ರೀತಿಯಲ್ಲಿ ಎರವಲಾಗಿ ಬಂದಿರುವ ನೂರಾರು ಪದಗಳನ್ನು ಶಾಸ್ತ್ರೀಯ ಗ್ರಂಥಗಳಲ್ಲಿ ಕಾಣಬಹುದು ನಮ್ಮ ದಿನನಿತ್ಯದ ಬಳಕೆಯಲ್ಲಿರುವ ಭಾಷೆಯಲ್ಲೂ ಇಂತಹ ಹಲವಾರು ಪದಗಳು ಬೇರೆ ಭಾಷೆಗಳಿಂದ ಎರವಲಾಗಿ ಬಂದು ಸೇರಿಕೊಂಡಿರುತ್ತವೆ ತತ್ಸಮ ಮತ್ತು ತದ್ಭವ

ಪದಗಳು ಈ ರೀತಿ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತ ಭಾಷೆಯಿಂದ ಬಂದವುಗಳನ್ನು ಮಾತ್ರ ಅವುಗಳ ಸ್ವರೂಪವನ್ನು ಆಧರಿಸಿ ತತ್ಸಮ ಮತ್ತು ತದ್ಭವ ಎಂಬುದಾಗಿ ವಿಂಗಡಿಸಿ ಹೇಳುವ ಕ್ರಮ ಕನ್ನಡದ ವ್ಯಾಕರಣಗಳಲ್ಲಿ ಮತ್ತು ಅರ್ಥಕೋಶಗಳಲ್ಲಿ ಬಳಕೆಯಲ್ಲಿದೆ ಸಂಸ್ಕೃತದಲ್ಲಿ ಇರುವ ಹಾಗೆಯೇ ಬಳಕೆಯಾಗುವ ಪದಗಳು ಎಂದರೆ ಸಂಸ್ಕೃತದ ಪದಗಳಿಗೆ ಸಮಾನವಾದ ಪದಗಳು ತತ್ಸಮಗಳು ಮತ್ತು ಅಂತಹ ಪದಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ಅವುಗಳಿಗಿಂತ ಭಿನ್ನವಾಗಿರುವ ಪದಗಳು ತದ್ಭವಗಳು ಎಂದರೆ ಸಂಸ್ಕೃತದಿಂದ ಜನಿಸಿದ ಪದಗಳು ಎಂಬುದಾಗಿ ಈ ವಿಭಜನೆಯನ್ನು ವರ್ಣಿಸಬಹುದು ಆದರೆ ಸಾಮಾನ್ಯವಾಗಿ ಪದಗಳ ಕೊನೆಯ ಭಾಗದಲ್ಲಿ ಮಾತ್ರವೇ ಬದಲಾವಣೆಯಾಗಿದೆಯಾದರೆ ಅಂತಹ ಪದಗಳನ್ನು ತದ್ಭವಗಳೆಂದು ಹೇಳದೆ ತತ್ಸಮಗಳೆಂದು ಹೇಳುವುದೇ ರೂಢಿ ಶ್ರೀಕಂಠಯ್ಯ 1952 196 ನೋಡಿ ಉದಾಹರಣೆಗಾಗಿ ಯಾವ ಬದಲಾವಣೆಯನ್ನು ತೋರಿಸದಿರುವ ಸತ್ಯ ಧರ್ಮ ಅಧಿಕಾರಿ

ಕಪ್ಪಿ ಮೊದಲಾದವುಗಳನ್ನು ಮತ್ತು ಕೊನೆಯಲ್ಲಿ ಮಾತ್ರವೇ ಬದಲಾವಣೆಯನ್ನು ತೋರಿಸುವ ಶಾಲೆ ಶಾಲಾ ಜನನಿ ಜನನಿ ಮನಸ್ಸು ಮನಸ್ಸು ಮೊದಲು ಆದವುಗಳನ್ನು ತತ್ಸಮ ಪದಗಳೆಂದು ಮತ್ತು ಇತರ ಭಾಗಗಳಲ್ಲಿ ಬದಲಾವಣೆಗಳನ್ನು ತೋರಿಸುವ ಆಸೆ ಆಶಾ ನಿದ್ದೆ ನಿದ್ರಾ ಹುಣ್ಣಿಮೆ ಪೂರ್ಣಿಮಾ ಭತ್ತಿ ವರ್ತಿ ಮೊದಲಾದ ಪದಗಳನ್ನು ತದ್ಭವ ಪದಗಳೆಂದು ಕರೆಯುವ ಕ್ರಮ ರೂಢಿಯಲ್ಲಿದೆ ಇಂತಹ ಪದಗಳ ವಿಭಜನೆ ಇಂಡೋ ಆರ್ಯನ್ ಎಂಬ ಭಾಷಾ ಕುಟುಂಬಕ್ಕೆ ಸೇರಿರುವ ಪ್ರಾಕೃತ ಪಾಲಿ ಹಿಂದಿ ಮರಾಠಿ ಗುಜರಾತಿ ಮೊದಲಾದ ಭಾಷೆಗಳ ವ್ಯಾಕರಣ ಮತ್ತು ಅರ್ಥಕೋಶಗಳ ಮಟ್ಟಿಗೆ ಬಹಳ ಉಪಯುಕ್ತವಾದುದೆಂದು ಹೇಳಲು ಸಾಧ್ಯವಿದೆ ನಿಜಕ್ಕೂ ಈ ಭಾಷೆಗಳಲ್ಲಿ ತತ್ಸಮ ಮತ್ತು ತದ್ಭವ ಎಂಬ ಎರಡು ರೀತಿಯ ಪದಗಳು ಮಾತ್ರ ಇವೆ ಇವುಗಳಲ್ಲಿ ತದ್ಭವ ಪದಗಳೆಲ್ಲ ಚಾರಿತ್ರಿಕವಾಗಿ ಸಂಸ್ಕೃತಕ್ಕೂ ಮತ್ತು ಅವಕ್ಕೂ

ಒಟ್ಟಿಗೆ ಮೂಲ ಭಾಷೆಯಾಗಿರುವ ಇಂಡೋ ಆರ್ಯನ್ ನಿಂದ ಬೆಳೆದು ಬಂದವುಗಳು ಸಂಸ್ಕೃತದ ಪದಗಳಿಗಿಂತ ಭಿನ್ನವಾಗಿಲ್ಲದಿರುವ ತತ್ಸಮ ಪದಗಳು ಮಾತ್ರ ನೇರವಾಗಿ ಸಂಸ್ಕೃತದಿಂದ ಎರವಲಾಗಿ ಬಂದವುಗಳು ಎಂಬುದಾಗಿ ಪರಿಗಣಿಸಲು ಸಾಧ್ಯವಿದೆ ಆದರೆ ಕನ್ನಡ ಭಾಷೆ ಇದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಕಾರಣ ಅದರಲ್ಲಿ ತತ್ಸಮ ಮತ್ತು ತದ್ವ ಪದಗಳು ಮಾತ್ರವಲ್ಲದೆ ಮೂಲ ಭಾಷೆಯಿಂದ ಬೆಳೆದು ಬಂದಿರುವ ದ್ರಾವಿಡ ಪದಗಳು ಹಲವಿವೆ ನಿಜಕ್ಕೂ ಕನ್ನಡದಲ್ಲಿ ಕಾಣಿಸುವ ತತ್ಸಮ ಮತ್ತು ತದ್ಭವ ಪದಗಳೆರಡು ಸಂಸ್ಕೃತದಿಂದ ಎರವಲಾಗಿ ಬಂದ ಪದಗಳೇ ಅವುಗಳ ನಡುವಿರುವ ವ್ಯತ್ಯಾಸವೇನೆಂದರೆ ತತ್ಸಮ ಪದಗಳಲ್ಲಿ ಕಡಿಮೆ ಬದಲಾವಣೆಗಳು ನಡೆದಿವೆ ಮತ್ತು ತದ್ಭವ ಪದಗಳಲ್ಲಿ ಜಾಸ್ತಿ ಬದಲಾವಣೆಗಳು ನಡೆದಿವೆ ಹಾಗಾಗಿ ಕನ್ನಡದ ವ್ಯಾಕರಣ ಇಲ್ಲವೇ ಅರ್ಥಕೋಶದ ಮಟ್ಟಿಗೆ ತತ್ಸಮ ತದ್ಭವವೆಂಬ ಎರವಲು ಪದಗಳ

ವಿಭಜನೆಯಿಂದ ವಿಶಿಷ್ಟವಾದ ಪ್ರಯೋಜನವೇನು ಇಲ್ಲ ಕನ್ನಡದ ಮಟ್ಟಿಗೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನೆಲ್ಲ ಒಂದೇ ವಿಭಾಗದಲ್ಲಿ ಇರಿಸಿ ಪರಿಶೀಲಿಸಿದರೆ ಸಾಕಾಗುತ್ತದೆ



Part 46

Watch on YouTube

ಈ ಭಾಗ ಪುಸ್ತಕದ ಆ.೧.೩ ಬದಲಾವಣೆಗಳಿಗೆ ಕಾರಣಗಳು ಅನ್ನು ಆಧರಿಸಿದೆ.

ಎರವಲಾಗಿ ಬಂದ ಪದಗಳು ಬೇರೆ ಬೇರೆ ಕಾರಣಗಳಿಗಾಗಿ ಬದಲಾವಣೆಗಳಿಗೆ ಒಳಗಾಗುತ್ತವೆ. ಅವನ್ನು ಎರವಲಾಗಿ ಕೊಟ್ಟ ಭಾಷೆಗೂ ಮತ್ತು ಎರವಲಾಗಿ ಪಡೆದುಕೊಂಡ ಭಾಷೆಗೂ ನಡುವೆ ವರ್ಣಗಳ ಸಂಖ್ಯೆಯ ಮಟ್ಟಿಗೆ ಮತ್ತು ವರ್ಣಗಳು ಪದಗಳಲ್ಲಿ ಬರುವ ಕ್ರಮದ ಮಟ್ಟಿಗೆ ವ್ಯತ್ಯಾಸಗಳಿವೆಯಾದರೆ, ಪದಗಳನ್ನು ಎರವಲಾಗಿ ಪಡೆಯುವ ಭಾಷೆ ತನ್ನ ವರ್ಣವ್ಯವಸ್ಥೆಗೆ ಹೊಂದಿ ಕೊಳ್ಳುವಂತೆ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಉದಾಹರಣೆ ಗಾಗಿ ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಮೂಲತಃ ಇರಲಿಲ್ಲವಾದುದರಿಂದ, ಸಂಸ್ಕೃತದಿಂದ ಎರವಲಾಗಿ ಬಂದ ಹಲವಾರು ಪದಗಳಲ್ಲಿ ಮಹಾಪ್ರಾಣಕ್ಷರಗಳು ಅಲ್ಪಪ್ರಾಣಾಕ್ಷರಗಳಾಗಿ ಬದಲಾಗಿವೆ. ಉದಾ: ಬೀದಿ (ವೀಥಿ), ಸಂತೆ (ಸಂಸ್ಥಾ), ದಾರೆ (ಧಾರಾ), ಬಂದಿ…



Part 47

Watch on YouTube

Note: This transcript has not been cleaned and may contain errors.

ಎರಲಾಗಿ ಬಂದ ಪದಗಳ ಒಳ ರಚನೆ ಪದ ಒಂದರ ಒಳ ರಚನೆ ಎಂತಹದ್ದು ಎಂಬುದನ್ನು ನಿರ್ಧರಿಸುವಲ್ಲಿ ಸಾಮಾನ್ಯವಾಗಿ ಅದನ್ನು ತಯಾರಿಸುವುದಕ್ಕಾಗಿ ಎಂಥ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬ ಚಾರಿತ್ರಿಕ ಅಂಶಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಬೇಕಾಗುತ್ತದೆ ಎಂಬುದನ್ನು ನಾವು ಮೇಲೆ ಮೂರನೇ ಅಧ್ಯಾಯದಲ್ಲಿ ನೋಡಿರುವೆವು ಕ್ರಿಯಾಪದ ಮತ್ತು ಗುಣಪದಗಳ ಒಳ ರಚನೆಗಿಂತಲೂ ನಾಮಪದಗಳ ಒಳ ರಚನೆಯಲ್ಲಿ ಈ ವಿಷಯ ಎದ್ದು ಕಾಣಿಸುತ್ತದೆ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ರೀತಿಯ ಬಳಕೆಗೆ ನಾಮಪದಗಳು ಮಾತ್ರ ಒಳಗಾಗುತ್ತವೆ ಎಂಬುದೇ ಇದಕ್ಕೆ ಮುಖ್ಯ ಕಾರಣ ಒಳ ರಚನೆಯಲ್ಲಿ ವ್ಯತ್ಯಾಸ ಆದರೆ ಎರಲಾಗಿ ಬಂದ ಪದಗಳಿಗೂ ಮತ್ತು ಭಾಷೆಯಲ್ಲಿಯೇ ಬೆಳೆದು ಬಂದ ಪದಗಳಿಗೂ ನಡುವೆ ಈ ವಿಷಯದಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ ಮೇಲೆ ಸೂಚಿಸಿರುವಂತೆ ಎರವಲಾಗಿ ಬಂದ ಪದಗಳಿಗೆ ಅವುಗಳನ್ನು

ಎರವಲಾಗಿ ಕೊಟ್ಟಿರುವ ಭಾಷೆಯಲ್ಲಿ ಒಳ ರಚನೆ ಇದೆ ಆದರೂ ಎರವಲಾಗಿ ಪಡೆದಿರುವ ಭಾಷೆಯಲ್ಲಿ ಅವು ಒಳ ರಚನೆ ಇಲ್ಲದ ಪದಗಳ ಹಾಗೆ ಬಳಕೆಯಾಗುವುದೇ ಜಾಸ್ತಿ ಉದಾಹರಣೆಗಾಗಿ ರುಜುವಾತು ಎಂಬ ಪದ ಪರ್ಷಿಯನ್ ಭಾಷೆಯಲ್ಲಿ ರುಜು ಎಂಬ ಪದಕ್ಕೆ ವಾತ್ ಎಂಬ ಬಹುವಚನ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯಾದರೂ ಕನ್ನಡದಲ್ಲಿ ಅದು ಒಳ ರಚನೆ ಇಲ್ಲದ ಪದದ ಹಾಗೆಯೇ ಬಳಕೆಯಾಗುತ್ತದೆ ಆ ಪದಕ್ಕೆ ಬಹುವಚನಾರ್ಥವು ಕನ್ನಡದಲ್ಲಿ ಇಲ್ಲ ಎರವಲಾಗಿ ಕೊಡುವ ಭಾಷೆಯಲ್ಲಿ ಒಳ ರಚನೆ ಇರುವ ಹಲವಾರು ಪದಗಳು ಈ ರೀತಿ ಇನ್ನೊಂದು ಭಾಷೆಗೆ ಎರವಲಾಗಿ ಬಂದಿವೆಯಾದರೆ ಅಂತಹ ಪದಗಳ ನಡುವಿರುವ ಸಂಬಂಧವನ್ನು ಪರಿಶೀಲಿಸುವುದರ ಮೂಲಕ ಅವಕ್ಕೆ ಒಳ ರಚನೆಯನ್ನು ಎರವಲು ಪಡೆದ ಭಾಷೆಯಲ್ಲೂ ಕಲ್ಪಿಸಿಕೊಳ್ಳುವ ಅವಶ್ಯಕತೆ ಕಾಣಿಸಬಹುದು ಉದಾಹರಣೆಗಾಗಿ ಇಂಗ್ಲಿಷ್ನಿಂದ ಆಕ್ಟರ್ ಆಕ್ಟ್

ಮಾಡುವವನು ಡ್ಯಾನ್ಸರ್ ಡ್ಯಾನ್ಸ್ ಮಾಡುವವನು ಶೇವರ್ ಶೇವ್ ಮಾಡುವ ಸಾಧನ ಮೊದಲಾದ ಹಲ ಕೆಲವು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿದ್ದು ಅವನ್ನು ಆಕ್ಟ್ ಡ್ಯಾನ್ಸ್ ಶೇವ್ ಮೊದಲಾದ ಆಖ್ಯಾತ ಪದಗಳಿಗೆ ಅರ್ ಎಂಬ ಪತ್ಯವನ್ನು ಸೇರಿಸುವುದರ ಮೂಲಕ ತಯಾರಾದವುಗಳೆಂದು ಹೇಳಲು ಸಾಧ್ಯವಿದೆ ಆದರೆ ಕನ್ನಡದಲ್ಲಿ ಆಕ್ಟ್ ಡ್ಯಾನ್ಸ್ ಶೇವ್ ಮೊದಲಾದವುಗಳು ಕ್ರಿಯಾಪದಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ ಅವು ಮಾಡು ಎಂಬ ಕ್ರಿಯಾಪದದೊಂದಿಗೆ ಆಖ್ಯಾತ ಪದಗಳಾಗಿ ಮಾತ್ರ ಬಳಕೆಯಾಗುವಾದ ಕಾರಣ ಇಂಗ್ಲಿಷ್ನಲ್ಲಿರುವಂತೆ ಕನ್ನಡದಲ್ಲೂ ಅವುಗಳ ಒಳ ರಚನೆಯಲ್ಲಿ ಕ್ರಿಯಾಪದಗಳಿವೆ ಎಂದು ಹೇಳಲು ಸಾಧ್ಯವಾಗದು ಎಂದರೆ ಚಾರಿತ್ರಿಕವಾಗಿ ಈ ಪದಗಳ ತಯಾರಿಕೆಯಲ್ಲಿ ಎಂತಹ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬುದಕ್ಕಿಂತಲೂ ಸದ್ಯಕ್ಕೆ ಈ ಪದಗಳಲ್ಲಿ ಎಂತಹ ರಚನೆ ಕಾಣಿಸುತ್ತಿದೆ ಎಂಬುದೇ ಇಲ್ಲಿ ಮುಖ್ಯವಾದ ಸಂಗತಿ ಇದೇ ರೀತಿಯಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ

ಎರವಲಾಗಿ ಬಂದಿರುವ ಪದಗಳ ಒಳ ರಚನೆ ಎಂತಹದ್ದು ಎಂಬುದನ್ನು ತಿಳಿಯಲು ಅವು ಸಂಸ್ಕೃತದಿಂದಲೇನೆ ಎರವಲಾಗಿ ಬಂದಿರುವ ಬೇರೆ ಪದಗಳೊಂದಿಗೆ ಸಂಬಂಧಗಳನ್ನು ತೋರಿಸುತ್ತಿವೆಯೇ ಮತ್ತು ಹಾಗೆ ತೋರಿಸುತ್ತಿವೆ ಆದರೆ ಆ ಸಂಬಂಧಗಳು ಎಂತಹವು ಎಂಬುದೇ ಆಧಾರವಾಗಬಲ್ಲುದಲ್ಲದೆ ಅಂತಹ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತ ಭಾಷೆಯಲ್ಲಿ ಅವಕ್ಕೆ ಎಂತಹ ಒಳ ರಚನೆ ಇದೆ ಎಂಬುದು ಆಧಾರವಾಗಲಾರದು ಉದಾಹರಣೆಗಾಗಿ ಕೃಷ್ಣ ಸರ್ಪ ಎಂಬ ಪದಕ್ಕೆ ಸಂಸ್ಕೃತದಲ್ಲಿ ಒಂದೇ ವಿಭಕ್ತಿ ಇರುವ ಎರಡು ನಾಮಪದಗಳನ್ನು ಕೃಷ್ಣಹ ಮತ್ತು ಸರ್ಪಹ ಎಂಬವುಗಳನ್ನು ಕರ್ಮಧಾರೆಯವೆಂಬ ಸಮಾಸದ ಮೂಲಕ ಸೇರಿಸಿ ತಯಾರಿಸಿರುವಂತಹ ಜೋಡು ಪದ ಎಂಬುದಾಗಿ ಒಳ ರಚನೆಯನ್ನು ಹೇಳಲು ಸಾಧ್ಯವಿದೆ ಆದರೆ ಕನ್ನಡದಲ್ಲಿ ಈ ಪದಕ್ಕೆ ಕೊಡಬಹುದಾದ ಒಳ ರಚನೆ ಇದಕ್ಕಿಂತ ತೀರ ಭಿನ್ನವಾದದ್ದು ಇದಕ್ಕೆ ಕಾರಣವೇನೆಂದರೆ ಕನ್ನಡದಲ್ಲಿ ಕಪ್ಪು ಎಂಬ

ಅರ್ಥದ ಕೃಷ್ಣ ಎಂಬ ಪದ ಗುಣವಾಚಕವಾಗಿ ಬಳಕೆಯಲ್ಲಿದೆ ಅಲ್ಲದೆ ನಾಮಪದವಾಗಿ ಬಳಕೆಯಲ್ಲಿಲ್ಲ ಸಂಸ್ಕೃತದ ಹಾಗೆ ಕನ್ನಡದಲ್ಲಿ ಇದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು ಹಾಗಾಗಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಕೃಷ್ಣ ಸರ್ಪ ಎಂಬ ಜೋಡು ಪದದಲ್ಲಿ ಕೃಷ್ಣ ಎಂಬ ಒಂದು ಗುಣಪದವು ಮತ್ತು ಸರ್ಪ ಎಂಬ ಒಂದು ನಾಮಪದವು ಸೇರಿಕೊಂಡಿವೆ ಕನ್ನಡ ಕನ್ನಡದಲ್ಲಿ ಈ ರೀತಿ ಇಂಗ್ಲಿಷ್ ಸಂಸ್ಕೃತ ಹಿಂದಿ ಮರಾಠಿ ಮೊದಲಾದ ಹಲವಾರು ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಬಳಕೆಯಲ್ಲಿದ್ದು ಅವೆಲ್ಲವೂ ಎರವಲಾಗಿ ಬಂದಮೇಲೆ ಕನ್ನಡದವೇ ಆಗಿಬಿಟ್ಟಿವೆ ಹಾಗಾಗಿ ಅವುಗಳ ಒಳ ರಚನೆಯನ್ನು ವರ್ಣಿಸುವಾಗ ಕನ್ನಡದವೇ ಆದ ಪದ ರಚನೆಯ ನಿಯಮಗಳನ್ನು ಅನುಸರಿಸಬೇಕಲ್ಲದೆ ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಬೇರೆ ಬೇರೆ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದ ರಚನೆಯ ನಿಯಮ ಅನುಸರಿಸುವುದು ಸರಿಯಲ್ಲ

ಆದರೆ ಇಂತಹ ಎರವಲಾಗಿ ಬಂದ ಪದಗಳಿಂದಾಗಿ ಕನ್ನಡದ ಪದ ರಚನೆಯ ನಿಯಮಗಳು ಬೇರೆ ಬೇರೆ ರೀತಿಯಲ್ಲಿ ಬದಲಾಗಿರುವುದನ್ನು ಮತ್ತು ಅವುಗಳೊಂದಿಗೆ ಬೇರೆ ಕೆಲವು ಹೊಸ ಪದ ರಚನೆಯ ನಿಯಮಗಳು ಸೇರಿಕೊಂಡಿರುವುದನ್ನು ಗಮನಿಸುವುದು ಅವಶ್ಯ ಎರವಲು ಕೊಟ್ಟಿರುವ ಭಾಷೆಯ ನಿಯಮಗಳು ಎರವಲಾಗಿ ಬಂದಿರುವ ಪದಗಳ ಮೂಲಕ ಭಾಷೆಯೊಂದರಲ್ಲಿ ಈ ರೀತಿ ಹೊಸ ವದ ರಚನೆಯ ನಿಯಮಗಳು ಸೇರಿಕೊಂಡಿವೆಯಾದರೆ ಅವುಗಳ ಸ್ವರೂಪವೇನು ಎಂಬುದನ್ನು ತಿಳಿಯಲು ಅಂತಹ ಪದಗಳ ಒಳ ರಚನೆ ಎರವಲು ಕೊಟ್ಟಿರುವ ಭಾಷೆಯಲ್ಲಿ ಹೇಗಿತ್ತು ಎಂಬುದನ್ನು ತಿಳಿಯುವುದು ಸ್ವಲ್ಪ ಮಟ್ಟಿಗೆ ಸಹಾಯಕವಾಗಬಲ್ಲದು ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವು ಪದಗಳಲ್ಲಿ ಅಣೆ ಮತ್ತು ಅಣೆ ಎಂಬ ಎರಡು ಬೇರೆ ಬೇರೆ ರೂಪಗಳಲ್ಲಿರುವ ಪ್ರತ್ಯಯ ಒಂದು ಒಂದನ್ನು ಕಾಣಬಹುದು ಉದಾಹರಣೆಗೆ ಪ್ರಾರ್ಥನೆ ಪ್ರಕಟಣೆ ವರ್ಣನೆ ಸ್ಮರಣೆ

ಕಲ್ಪನೆ ರಕ್ಷಣೆ ಆಲೋಚನೆ ಆಕರ್ಷಣೆ ಇತ್ಯಾದಿ ಈ ಎರಡು ರೂಪಗಳ ಹಿಂದಿರುವ ನಿಯಮವೇನು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತದ ವಯ್ಯಾಕರಣಿಗಳು ಈ ಪದಗಳ ಒಳ ರಚನೆಯನ್ನು ಹೇಗೆ ವಿವರಿಸಿದ್ದಾರೆ ಎಂಬುದನ್ನು ತಿಳಿದುಕೊಂಡಲ್ಲಿ ಸುಲಭವಾದೀತು ಇದೇ ರೀತಿಯಲ್ಲಿ ಸಂಸ್ಕೃತದಲ್ಲೇನೆ ಎರವಲಾಗಿ ಬಂದಿರುವ ರಾಜ್ಯ ಶೌರ್ಯ ವೈಚಿತ್ರ್ಯ ಮೊದಲಾದ ಬೇರೆ ಕೆಲವು ಪದಗಳಲ್ಲಿ ಯ ಎಂಬ ಒಂದು ಪ್ರತ್ಯಯದ ಬಳಕೆಯನ್ನು ಕಾಣಬಹುದು ಈ ಪ್ರತ್ಯಯ ಸೇರಿದಾಗ ಕೆಲವು ಪದಗಳ ಸ್ವರದಲ್ಲಿ ಉದಾಹರಣೆಗೆ ಶೂರ ಶೌರ್ಯ ಮಲಿನ ಮಾಲಿನ್ಯ ಇತ್ಯಾದಿ ಬದಲಾವಣೆಯಾಗುತ್ತದೆ ಆದರೆ ಬೇರೆ ಕೆಲವು ಪದಗಳ ಸ್ವರದಲ್ಲಿ ರಾಜ ರಾಜ್ಯ ಪದ ಪದ್ಯ ಇತ್ಯಾದಿ ಯಾವ ಬದಲಾವಣೆಯು ಆಗುವುದಿಲ್ಲ ಈ ಕಂಬ ಪ್ರತ್ಯಯದ ಬಳಕೆಯಲ್ಲೂ ಇದೇ ಪರಿಸ್ಥಿತಿ ಇದೆ ಉದಾಹರಣೆಗೆ ನಿಸರ್ಗ ನೈಸರ್ಗಿಕ ಮಂತ್ರ ಮಾಂತ್ರಿಕ ಲೋಕ

ಲೌಕಿಕ ಇತ್ಯಾದಿ ಈ ಬದಲಾವಣೆಗಳ ಹಿಂದಿರುವ ಪದ ರಚನೆಯ ನಿಯಮವೆಂತಹದ್ದು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತ ವ್ಯಾಕರಣಗಳ ಪರಿಶೀಲನೆ ಸಹಾಯಕವಾಗಬಲ್ಲುದು ಪದಗಳ ವಿಭಜನೆ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಎಂಥಹದ್ದು ಎಂಬುದನ್ನು ಪರಿಶೀಲಿಸುವ ಮೊದಲು ಅವನ್ನು ಯಾವ ಯಾವ ಭಾಷೆಗಳಿಂದ ಎರವಲಾಗಿ ಪಡೆಯಲಾಗಿದೆ ಎಂಬ ವಿಷಯದ ಆಧಾರದ ಮೇಲೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿಕೊಳ್ಳುವುದು ಅವಶ್ಯ ಯಾಕೆಂದರೆ ಒಂದರೊಡನೊಂದು ಸಂಬಂಧವನ್ನು ತೋರಿಸುವ ಪದಗಳೆಲ್ಲವೂ ಒಂದೇ ಭಾಷೆಯಿಂದ ಎರವಲಾಗಿ ಬಂದವುಗಳಾಗಿರುವುದೇ ಜಾಸ್ತಿ ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು ಅವುಗಳೊಳಗೇನೆ ಒಂದರೊಡನೊಂದು ಸಂಬಂಧಿಸಿರಲು ಸಾಧ್ಯವಿದೆ ಅಲ್ಲದೆ ಇಂಗ್ಲಿಷ್ ಇಲ್ಲವೇ ಪರ್ಷಿಯನ್ ನಿಂದ ಎರವಲಾಗಿ ಬಂದಿರುವ ಪದಗಳೊಂದಿಗೆ ಸಂಬಂಧವನ್ನು ತೋರಿಸುವುದು ಬಹಳ ಅಪರೂಪವೆಂದೇ ಹೇಳಬಹುದು ಪದಗಳ ಒಳ ರಚನೆಯನ್ನು ಇಂತಹ ಸಂಬಂಧಗಳ ಆಧಾರದ ಮೇಲೆ ಸಾಧಿಸಬೇಕಾಗಿದೆಯಾದ

ಕಾರಣ ಎರವಲು ಕೊಟ್ಟ ಭಾಷೆಗಳ ಆಧಾರದ ಮೇಲೆ ಅವನ್ನು ವಿಂಗಡಿಸಿಕೊಳ್ಳುವುದರಿಂದ ಅವುಗಳನ್ನು ವರ್ಣಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲದು ಕೆಳಗಿನ ಕೆಲವು ವಿಭಾಗಗಳಲ್ಲಿ 84 ರಿಂದ ಆರರಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಕನ್ನಡದಲ್ಲಿ ಎಂತಹ ಒಳ ರಚನೆ ಇದೆ ಎಂಬುದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ ಇದಕ್ಕೆ ಮೊದಲು ಕನ್ನಡದಲ್ಲಿ ಈ ಪದಗಳಿಗಿರುವ ಒಳ ರಚನೆ ಅವಕ್ಕೆನೆ ಸಂಸ್ಕೃತ ದಲ್ಲಿರುವ ಒಳ ರಚನೆಗಿಂತ ಯಾಕೆ ಭಿನ್ನವಾಗಿದೆ ಎಂಬುದನ್ನು 83 ರಲ್ಲಿ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ ಇಂಗ್ಲಿಷ್ ಹಿಂದಿ ಮರಾಠಿ ಪರ್ಷಿಯನ್ ತಮಿಳು ಮೊದಲಾದ ಬೇರೆ ಹಲವು ಭಾಷೆಗಳಿಂದಲೂ ಕನ್ನಡಕ್ಕೆ ಪದಗಳು ಎರವಲಾಗಿ ಬಂದಿದ್ದು ಇವನ್ನು ಇದೇ ರೀತಿಯಲ್ಲಿ ಬೇರೆ ಬೇರಾಗಿ ಪರಿಶೀಲಿಸುವ ಅವಶ್ಯಕತೆ ಇದೆ ಆದರೆ ಅಂತಹ ಪ್ರಯತ್ನವನ್ನು ಈ ಪುಸ್ತಕಕ್ಕಾಗಿ ನಡೆಸಲು ಸಾಧ್ಯವಾಗಲಿಲ್ಲ



Part 48

Watch on YouTube

Note: This transcript has not been cleaned and may contain errors.

ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ಕನ್ನಡದಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ಹಲವಿವೆ ಇವುಗಳ ಸಂಖ್ಯೆ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿದೆ ಶಾಸ್ತ್ರೀಯ ಬರಹಗಳಲ್ಲಿ ಇಂತಹ ಪದಗಳು ಜಾಸ್ತಿ ಇವೆ ಆದರೆ ಬೇರೆ ರೀತಿಯ ಬರಹಗಳಲ್ಲಿ ಕಡಿಮೆ ಇವೆ ಆಗಿ ಬಂದ ಈ ಪದಗಳ ಸ್ವರೂಪವು ಪ್ರಭೇದದಿಂದ ಪ್ರಭೇದಕ್ಕೆ ಭಿನ್ನ ಭಿನ್ನವಾಗಿದೆ ಕೆಲವು ಪ್ರಭೇದಗಳಲ್ಲಿ ಇವು ಮೂಲ ಸಂಸ್ಕೃತ ರೂಪದಲ್ಲಿ ಉಳಿದಿವೆಯಾದರೆ ಇನ್ನು ಕೆಲವು ಪ್ರಭೇದಗಳಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗುವುದರ ಮೂಲಕ ಮೂಲ ಸಂಸ್ಕೃತ ಪದಗಳಿಗಿಂತ ತೀರ ಭಿನ್ನವಾಗಿವೆ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳೆಲ್ಲವೂ ಸಂಸ್ಕೃತದಲ್ಲಿ ಒಳ ರಚನೆಯು ಉಳ್ಳವುಗಳೇ ಆಗಿರುತ್ತವೆ ಎಂದು ಹೇಳಬಹುದು ಅವೆಲ್ಲಕ್ಕೂ ಮೂಲದಲ್ಲಿ ಬೇರೆ ಬೇರೆ ಕ್ರಿಯಾ ಧಾತುಗಳೇ ಆಧಾರವಾಗಿದ್ದು ಆ ಧಾತುಗಳಿಗೆ ಬೇರೆ

ಬೇರೆ ಪ್ರತ್ಯಯಗಳನ್ನು ಇಲ್ಲವೇ ಇತರ ಧಾತುಗಳನ್ನು ಸೇರಿಸುವುದರ ಮೂಲಕ ಸಂಸ್ಕೃತದಲ್ಲಿ ಈ ಪದಗಳನ್ನು ರಚಿಸಲಾಗಿದೆ ಆದರೆ ಕನ್ನಡದ ಮಟ್ಟಿಗೆ ಇವುಗಳಲ್ಲಿ ಕೆಲವನ್ನು ಮಾತ್ರ ಒಳ ರಚನೆ ಇರುವವುಗಳೆಂದು ಪರಿಗಣಿಸಲು ಸಾಧ್ಯವಿದೆ ಯಾಕೆಂದರೆ ಈ ರೀತಿ ಎರವಲಾಗಿ ಬಂದಿರುವ ಪದ ಒಂದಕ್ಕೆ ಒಳ ರಚನೆ ಇದೆ ಎಂದು ಹೇಳಬೇಕಾದರೆ ಕನ್ನಡದಲ್ಲೇನೆ ಬೇರೆ ಪದಗಳೊಂದಿಗೆ ಅದು ರೂಪ ಮತ್ತು ಅರ್ಥಗಳಲ್ಲಿ ಸಂಬಂಧವನ್ನು ತೋರಿಸುತ್ತಿರುವುದು ಅವಶ್ಯ ಈ ಕಾರಣಕ್ಕಾಗಿ ಎರವಲಾಗಿ ಬಂದಿರುವ ಒಂದು ಪದಕ್ಕೆ ಒಳ ರಚನೆ ಇದೆಯೇ ಅಥವಾ ಇಲ್ಲವೇ ಎಂಬುದು ನಾವು ಪರಿಶೀಲಿಸುತ್ತಿರುವ ಕನ್ನಡದ ಪ್ರಭೇದವನ್ನು ಅನುಸರಿಸಿ ಬೇರೆ ಬೇರೆ ಆಗಿರಲು ಸಾಧ್ಯವಿದೆ ಉದಾಹರಣೆಗಾಗಿ ಸತ್ಯ ಎಂಬ ಪದಕ್ಕೆ ಕೆಲವು ಪ್ರಭೇದಗಳಲ್ಲಿ ಒಳ ರಚನೆ ಇಲ್ಲ ಎಂದು ಹೇಳಲು ಸಾಧ್ಯವಿದೆ ಆದರೆ ಬೇರೆ ಕೆಲವು

ಪ್ರಭೇದಗಳಲ್ಲಿ ಎಂದರೆ ಸತ್ ಎಂಬ ಪದವನ್ನು ಎರವಲಾಗಿ ಪಡೆದಿದ್ದು ಅದಕ್ಕೆ ಯ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ಸತ್ಯ ಎಂಬ ಪದವನ್ನು ತಯಾರಿಸಲು ಸಾಧ್ಯವಿರುವಂತಹ ಪ್ರಭೇದದಲ್ಲಿ ಅದಕ್ಕೆ ಒಳ ರಚನೆ ಇದೆ ಎಂದು ಸಾಧಿಸಲು ಸಾಧ್ಯವಾದೀತು ಸಂಸ್ಕೃತದಿಂದ ಜಾಸ್ತಿ ಪದಗಳನ್ನು ಎರವಲಾಗಿ ಪಡೆದಿರುವ ಕನ್ನಡದ ಪ್ರಭೇದಗಳಲ್ಲಿ ಜಾಸ್ತಿ ಪದಗಳಿಗೆ ಒಳ ರಚನೆ ಇದೆ ಎಂದು ಪರಿಗಣಿಸಲು ಸಾಧ್ಯ ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ ಹೀಗಿದ್ದರೂ ಮೇಲೆ ಸೂಚಿಸಿದಂತೆ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಅವಕ್ಕೆ ಮೂಲ ಭಾಷೆಯಲ್ಲಿ ಎಂದರೆ ಸಂಸ್ಕೃತದಲ್ಲಿ ಇರುವ ಒಳ ರಚನೆಗಿಂತ ತೀರ ಭಿನ್ನವಾಗಿರಲು ಸಾಧ್ಯವಿದೆಯಾದ ಕಾರಣ ಕನ್ನಡದ ವ್ಯಾಕರಣದಲ್ಲಿ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅವಶ್ಯ ಮತ್ತು ಅಂತಹ ಪರಿಶೀಲನೆಯ ಆಧಾರದ ಮೇಲೆ ಅವಕ್ಕೆ ಕನ್ನಡದವೇ ಆದ ಪದ

ರಚನೆಯ ನಿಯಮಗಳನ್ನು ತಯಾರಿಸಿಕೊಳ್ಳುವುದು ಅವಶ್ಯ ಸಂಸ್ಕೃತದ ವಯ್ಯಾಕರಣಿಗಳು ಕೊಡುವ ಪದ ರಚನೆಯ ನಿಯಮಗಳನ್ನು ಹಾಗೆಯೇ ಕನ್ನಡದ ವ್ಯಾಕರಣದೊಳಗೆ ತಂದು ಹಾಕಿದಲ್ಲಿ ಅವು ಈ ಎರವಲಾಗಿ ಬಂದ ಪದಗಳ ಒಳ ರಚನೆಯನ್ನು ಸರಿಯಾಗಿ ತಿಳಿಸಿ ಹೇಳಲಾರವು ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳ ನಡುವೆ ಹಲವಾರು ಪ್ರಾಮುಖ್ಯವಾದ ವ್ಯತ್ಯಾಸಗಳಿದ್ದು ಎರವಲಾಗಿ ಬಂದ ಪದಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಅನುಸರಿಸುವುದೇ ಹೀಗೆ ಮಾಡಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣ ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಪದ ರಚನೆಗೆ ಸಂಬಂಧಿಸಿದಂತಹ ವ್ಯತ್ಯಾಸಗಳಲ್ಲಿ ಪ್ರಾಮುಖ್ಯವಾದ ಕೆಲವನ್ನು ಕೆಳಗಿನ ವಿಭಾಗಗಳಲ್ಲಿ ಪರಿಚಯಿಸಲಾಗಿದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಕನ್ನಡದಲ್ಲಿ ಸಂಸ್ಕೃತದಲ್ಲಿ ಇರುವುದಕ್ಕಿಂತ ಯಾಕೆ ಭಿನ್ನವಾಗಿದೆ ಮತ್ತು ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ತಿಳಿಯಲು ಈ ವ್ಯತ್ಯಾಸಗಳ ಅರಿವು ಸಹಾಯಕವಾಗಬಲ್ಲದು

ಪದವರ್ಗದಲ್ಲಿ ವ್ಯತ್ಯಾಸ ಕನ್ನಡದಲ್ಲಿ ನಾಮಪದ ಕ್ರಿಯಾಪದ ಮತ್ತು ಗುಣಪದಗಳ ಎಂಬುದಾಗಿ ಮೂರು ಮುಖ್ಯವಾದ ಪದ ವರ್ಗಗಳಿವೆ ಎಂದು ಮತ್ತು ಇವುಗಳಲ್ಲಿ ಗುಣಪದಗಳು ನಾಮಪದಗಳೊಂದಿಗೆ ಸೇರಿ ಹೋಗುವವಾದ ಕಾರಣ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರ ಇವೆ ಎಂದು ನಾವು ಎರಡನೇ ಅಧ್ಯಾಯದಲ್ಲಿ ನೋಡಿರುವೆವು ಸಂಸ್ಕೃತಕ್ಕೂ ಮತ್ತು ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸದ ಪರಿಣಾಮವಾಗಿ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳು ಗಳಲ್ಲಿ ಹಲವಕ್ಕೆ ಸಂಸ್ಕೃತದಲ್ಲಿ ಕಾಣಿಸುವ ಒಳ ರಚನೆಗಿಂತ ಭಿನ್ನವಾದ ಒಳ ರಚನೆಯನ್ನು ಕಲ್ಪಿಸಿಕೊಡುವ ಅವಶ್ಯಕತೆ ಕಂಡುಬರುತ್ತದೆ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಹೆಚ್ಚಿನವು ನಾಮಪದಗಳೇ ಅವುಗಳಲ್ಲಿ ಕೆಲವು ಗುಣಪದಗಳಾಗಿಯೂ ಮತ್ತು ಬೇರೆ ಕೆಲವು ನಾಮಪದಗಳಾಗಿಯೂ ಕನ್ನಡದಲ್ಲಿ ಬಳಕೆಯಾಗುತ್ತವೆ ಉದಾಹರಣೆಗಾಗಿ ನೀಲಿ ಬೇಗ ವೇಗ ಮುಖ್ಯ

ಉತ್ತಮ ಯೋಗ್ಯ ಮೊದಲಾದ ಸಂಸ್ಕೃತದ ನಾಮಪದಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಮತ್ತು ಗ್ರಾಮ ಕವಿ ಪಾಠ ವಿದ್ಯೆ ಸೇವಕ ಯಂತ್ರ ಮೊದಲಾದ ನಾಮಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗುತ್ತವೆ ಸಂಸ್ಕೃತದ ಕ್ರಿಯಾಪದಗಳು ನೇರವಾಗಿ ಕ್ರಿಯಾಪದಗಳಾಗಿಯೇ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ ಇದಕ್ಕೆ ಬದಲು ಅವು ಭೂತ ಕೃದಂತ ಸಂಬಂಧಕ ರೂಪದಲ್ಲಿ ಗುಣಪದಗಳಾಗಿ ನಾಮಪದಗಳೊಂದಿಗೆ ಉದಾಹರಣೆಗೆ ದೃಢ ಮನಸ್ಸು ಗುಪ್ತ ಜೀವನ ಭಗ್ನ ಕನಸು ಶಾಂತ ಚಹರೆ ಇತ್ಯಾದಿ ಇಲ್ಲವೇ ಇರು ಎಂಬ ಕ್ರಿಯಾಪದದೊಂದಿಗೆ ಉದಾಹರಣೆಗೆ ದೃಢವಾಗು ಗುಪ್ತವಾಗು ಶಾಂತವಾಗು ಹಿತವಾಗು ಇತ್ಯಾದಿ ಬರುತ್ತವೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರವಲ್ಲದೆ ಅವ್ಯಯವೆಂಬ ಇನ್ನೊಂದು ಅಮುಖ್ಯ ಪದವರ್ಗವು ಇದೆ ಈ ಪದವರ್ಗಕ್ಕೆ ಸೇರಿದ ಪದಗಳು ಕನ್ನಡಕ್ಕೆ ಗುಣಪದಗಳಾಗಿ ಎರವಲಾಗುತ್ತವೆ ಉದಾಹರಣೆಗೆ ಪುನಃ ಉರುತ

ನಾನ ಇತ್ಯಾದಿ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಎಂತಹದ್ದು ಎಂಬುದನ್ನು ನಿರ್ಧರಿಸುವಲ್ಲೂ ಪದವರ್ಗಗಳ ಮಟ್ಟಿಗೆ ಇವುಗಳ ನಡುವೆ ಕಾಣಿಸುವ ಈ ವ್ಯತ್ಯಾಸವನ್ನು ಪರಿಗಣಿಸುವ ಅವಶ್ಯಕತೆ ಇದೆ ಇದನ್ನು ಮುಖ್ಯವಾಗಿ ಜೋಡು ಪದಗಳ ಒಳ ರಚನೆಯಲ್ಲಿ ಕಾಣಬಹುದು ಸಂಸ್ಕೃತದ ಜೋಡು ಪದಗಳಿಗೆ ತತ್ಪುರುಷ ಕರ್ಮಧಾರೆಯ ದ್ವಿಗು ದ್ವಂದ್ವ ಬಹುವ್ರೀಹಿ ಮತ್ತು ಅವ್ಯಹಿ ಭಾವಗಳೆಂಬ ಆರು ಮುಖ್ಯವಾದ ಒಳ ರಚನೆ ಸಮಾಸಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಂಸ್ಕೃತದ ವಯ್ಯಾಕರಣಿಗಳು ಅಭಿಪ್ರಾಯ ಪಟ್ಟಿದ್ದಾರೆ ಆದರೆ ಕನ್ನಡದ ಜೋಡು ಪದಗಳಿಗೆ ಇದಕ್ಕಿಂತ ತೀರ ಭಿನ್ನವಾದ ಒಳ ರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನು ನಾವು ಮೇಲೆ ಆರನೇ ಅಧ್ಯಾಯದಲ್ಲಿ ನೋಡಿದ್ದೇವೆ ಕನ್ನಡದ ಜೋಡು ಪದಗಳಿಗೆ ಮಾತ್ರವಲ್ಲದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡು ಪದಗಳಿಗೂ

ಕನ್ನಡದಲ್ಲಿ ಸಂಸ್ಕೃತದ ಆರು ಒಳ ರಚನೆ ಸಮಾಸಗಳಿಗಿಂತ ಭಿನ್ನವಾಗಿರುವ ಒಳ ರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಇದೆ ಉದಾಹರಣೆಗಾಗಿ ಸಂಸ್ಕೃತದಿಂದ ತತ್ಪುರುಷ ಮತ್ತು ಕರ್ಮಧಾರೆಯಗಳೆಂಬ ಎರಡು ರೀತಿಯ ಜೋಡು ಪದಗಳ ನಡುವಿರುವ ವ್ಯತ್ಯಾಸವೇನೆಂದರೆ ತತ್ಪುರುಷ ಸಮಾಸದಲ್ಲಿ ಒಟ್ಟು ಸೇರುವ ನಾಮಪದಗಳು ಬೇರೆ ಬೇರೆ ವಿಭಕ್ತಿಗಳಲ್ಲಿ ಇರುತ್ತವೆ ರಾಜ್ಞಹ ರಾಜನ ಪುರುಷಃ ಜನ ರಾಜಪುರುಷಃ ಮತ್ತು ಕರ್ಮಧಾರೆಯದಲ್ಲಿ ಒಟ್ಟು ಸೇರುವ ನಾಮಪದಗಳು ಒಂದೇ ವಿಭಕ್ತಿಯಲ್ಲಿರುತ್ತವೆ ಕೃಷ್ಣಹ ಕಪ್ಪು ಸರ್ಪಹ ಹಾವು ಕೃಷ್ಣ ಸರ್ಪಹ ಆದರೆ ಕನ್ನಡಕ್ಕೆ ಎರವಲಾಗಿ ಬಂದಿರುವ ಇಂತಹ ಜೋಡು ಪದಗಳಲ್ಲಿ ಕರ್ಮಧಾರೆಯ ಸಮಾಸವನ್ನು ತೋರಿಸುವ ಹಲವು ಪದಗಳಿಗೆ ಕನ್ನಡದಲ್ಲಿ ಬೇರೆಯೇ ಒಂದು ಒಳ ರಚನೆಯನ್ನು ಕಲ್ಪಿಸಿಕೊಡಬೇಕಾಗುತ್ತದೆ ಯಾಕೆಂದರೆ ವಿಭಕ್ತಿಯೊಂದಿಗೆ ಬರಲಾರದ ಗುಣಪದದೊಂದಿಗೆ ನಾಮಪದ ಒಂದನ್ನು ಸೇರಿಸುವಂತಹ ಒಳ ರಚನೆ ಇವುಗಳಿಗಿದೆ ಮೇಲೆ ಕೊಟ್ಟಿರುವ

ಕೃಷ್ಣ ಸರ್ಪ ಎಂಬ ಪದ ಮಾತ್ರವಲ್ಲದೆ ಪರಮಾನ್ನ ಸದ್ಗುಣ ಮಂದ ಬುದ್ಧಿ ಮೂಲಧನ ಶುಕ್ಲ ಪಕ್ಷ ಮೊದಲಾದವುಗಳು ಕನ್ನಡದಲ್ಲಿ ಇಂತಹ ಒಳ ರಚನೆಯನ್ನು ತೋರಿಸುತ್ತವೆ ಪೂರ್ವ ಮತ್ತು ಪರ ಪ್ರತ್ಯಯಗಳು ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಪದಗಳಲ್ಲಿ ಹೆಚ್ಚಿನವನ್ನು ಕೆಲವರ ಅಭಿಪ್ರಾಯದಂತೆ ಎಲ್ಲಾ ಪದಗಳನ್ನು ಕ್ರಿಯಾಪದವೆಂಬ ಒಂದೇ ಒಂದು ಪದ ವರ್ಗ ಸೇರಿದ ಧಾತುಗಳಿಂದ ತಯಾರಿಸಲಾಗಿದೆ ಬಹುಶಃ ಇದೇ ಕಾರಣಕ್ಕಾಗಿ ಸಂಸ್ಕೃತದ ಪದಗಳಲ್ಲಿ ಕಾಣಿಸಿಕೊಳ್ಳುವ ಪ್ರತ್ಯಯಗಳ ಸಂಖ್ಯೆ ಬಹಳ ದೊಡ್ಡದು ಈ ಪ್ರತ್ಯಯಗಳು ಧಾತುವಿನ ಎಡಕ್ಕೆ ಸೇರುವವಾದರೆ ಅವನ್ನು ಪೂರ್ವ ಪ್ರತ್ಯಯ ಇಲ್ಲವೇ ಉಪಸರ್ಗ ಗಳೆಂದು ಮತ್ತು ಬಲಕ್ಕೆ ಸೇರುವವಾದರೆ ಅವನ್ನು ಪರ ಪ್ರತ್ಯಯಗಳೆಂದು ಕರೆಯುವುದು ರೂಢಿ ಒಂದು ಪೂರ್ವ ಪ್ರತ್ಯಯಗಳ ಬಳಕೆ ಹಾಸ್ಯ ಅಪಹಾಸ್ಯ ಅಪರಾಧಿ ನಿರಪರಾಧಿ ವಿವೇಕಿ ಅವಿವೇಕಿ ನಗರ ಉಪನಗರ ಶಬ್ದ

ನಿಶಬ್ದ ಎರಡು ಪರ ಪ್ರತ್ಯಯಗಳ ಬಳಕೆ ಅಧಿಕಾರ ಅಧಿಕಾರಿ ಪ್ರಾಂತ ಪ್ರಾಂತ್ಯ ಕೃತಜ್ಞ ಕೃತಜ್ಞತೆ ಕ್ಷಣ ಕ್ಷಣಿಕ ವಿದ್ಯಾರ್ಥಿ ವಿದ್ಯಾರ್ಥಿನಿ ಕನ್ನಡದಲ್ಲಿ ನಾಮ ಕ್ರಿಯೆ ಮತ್ತು ಗುಣಗಳೆಂಬ ಮೂರು ಬೇರೆ ಬೇರೆ ಬೇರೆ ಪದವರ್ಗಗಳಿಗೆ ಸೇರುವ ಧಾತುಗಳಿವೆ ಆದ ಕಾರಣ ಅದಕ್ಕೆ ಅಷ್ಟೊಂದು ಪ್ರತ್ಯಯಗಳ ಅವಶ್ಯಕತೆ ಇಲ್ಲವೆಂದು ಹೇಳಲು ಸಾಧ್ಯವಿದೆ ಇದಲ್ಲದೆ ಕನ್ನಡದಲ್ಲಿ ಪರ ಪ್ರತ್ಯಯಗಳು ಮಾತ್ರ ಇವೆಲ್ಲದೆ ಪೂರ್ವ ಪ್ರತ್ಯಯಗಳಿಲ್ಲ ಈ ಕಾರಣಕ್ಕಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಪೂರ್ವ ಪ್ರತ್ಯಯವಿರುವವುಗಳು ಕನ್ನಡದಲ್ಲಿ ಬೇರೆ ಬೇರೆ ರೀತಿಯ ಒಳ ರಚನೆಗಳನ್ನು ತೋರಿಸುತ್ತವೆ ಇಂತಹ ಪದಗಳಲ್ಲಿ ಕೆಲವನ್ನು ಕನ್ನಡದಲ್ಲಿ ಜೋಡುಪದಗಳೆಂದು ಕರೆಯುವುದೇ ಒಳ್ಳೆಯದೆಂದು ತೋರುತ್ತದೆ ಇವು ಕನ್ನಡದಲ್ಲಿ ಗುಣಪದ ಮತ್ತು ನಾಮಪದಗಳನ್ನು ಒಟ್ಟು ಸೇರಿಸಿ ರಚಿಸಿದ ಜೋಡು ಪದಗಳ ಹಾಗೆ ಕಾಣಿಸುವುದೇ ಇದಕ್ಕೆ

ಮುಖ್ಯ ಕಾರಣ ಉದಾಹರಣೆಗಾಗಿ ಸಂಸ್ಕೃತದ ಅತಿ ಎಂಬ ಪೂರ್ವ ಪ್ರತ್ಯಯ ಕನ್ನಡದಲ್ಲಿ ಅತಿ ದೊಡ್ಡ ಅತಿಯಾಗಿ ಮೊದಲಾದ ಕಡೆಗಳಲ್ಲಿ ಗುಣಪದದ ಹಾಗೆ ಸ್ವತಂತ್ರವಾಗಿ ಬಳಕೆಯಾಗುತ್ತದೆ ಹಾಗಾಗಿ ಅತಿ ಕ್ರಮಣ ಅತ್ಯಾಸೆ ಅತ್ಯಂತ ಮೊದಲಾದವುಗಳಲ್ಲಿ ಸಂಸ್ಕೃತದಲ್ಲಿರುವಂತೆ ಪದ ಒಂದಕ್ಕೆ ಪೂರ್ವ ಪ್ರತ್ಯಯ ಸೇರಿದೆ ಎಂದು ಹೇಳುವ ಬದಲು ಗುಣಪದ ಒಂದಕ್ಕೆ ನಾಮಪದ ಸೇರಿ ಜೋಡು ಪದವಾಗಿದೆ ಎಂದು ಹೇಳುವುದೇ ಕನ್ನಡದ ಮಟ್ಟಿಗೆ ಹೆಚ್ಚು ಸರಿ ಇದೇ ರೀತಿಯಲ್ಲಿ ಪ್ರತಿ ಎಂಬ ಪೂರ್ವ ಪ್ರತ್ಯಯವು ಕನ್ನಡದಲ್ಲಿ ಒಂದು ಸ್ವತಂತ್ರವಾದ ಪದವಾಗಿ ಬಳಕೆಯಲ್ಲಿದ್ದು ಉದಾಹರಣೆಗೆ ಪ್ರತಿಯ ಆಗಿ ಪ್ರತಿಯೊಬ್ಬ ಅದರೊಂದಿಗೆ ಬರುವ ಪದಗಳನ್ನು ಜೋಡು ಪದಗಳೆಂದು ಕರೆಯಲು ಸಾಧ್ಯವಿದೆ ಈ ರೀತಿ ಸ್ವತಂತ್ರವಾಗಿ ಬರದಿದ್ದರೂ ಪದಗಳ ಹಾಗೆ ಮುಖ್ಯವಾದ ಅರ್ಥವನ್ನೇ ಕೊಡಬಲ್ಲ ಉಪ ದುರ್ ಸ್ವ ಮೊದಲಾದವುಗಳನ್ನು

ಕನ್ನಡದಲ್ಲಿ ಅಸ್ವತಂತ್ರ ಪದಗಳೆಂದು ಕರೆಯಲು ಸಾಧ್ಯವಿದ್ದು ಅವನ್ನೊಳಗೊಂಡಿರುವ ಪದಗಳನ್ನು ಕನ್ನಡದಲ್ಲಿ ಸಂಸ್ಕೃತದ ಹಾಗೆ ಪೂರ್ವ ಪ್ರತ್ಯಯಗಳಿರುವ ಪದ ಎಂದು ಹೇಳದೆ ಜೋಡು ಪದಗಳೆಂದು ಹೇಳಲು ಸಾಧ್ಯವಿದೆ ಉದಾಹರಣೆಗೆ ಪ್ರತಿ ಕ್ರಿಯೆ ಪ್ರತಿಕ್ರಿಯೆ ಸ್ಥಾಪನೆ ಪ್ರತಿಷ್ಠಾಪನೆ ಧ್ವನಿ ಪ್ರತಿಧ್ವನಿ ಪಾಲನೆ ಪ್ರತಿಪಾಲನೆ ಕೃತಿ ಪ್ರತಿಕೃತಿ ಉಪ ಗೃಹ ಉಪಗೃಹ ನಗರ ಉಪನಗರ ಆಹಾರ ಉಪಾಹಾರ ಜಾತಿ ಉಪಜಾತಿ ಭಾಷೆ ಉಪಭಾಷೆ ದುರ್ ಅಭಿಮಾನ ದುರಭಿಮಾನ ಆಲೋಚನೆ ದುರಾಲೋಚನೆ ಅಹಂಕಾರ ದುರಹಂಕಾರ ಬುದ್ಧಿ ದುರ್ಬುದ್ಧಿ ಭಾಗ್ಯ ದುರ್ಭಾಗ್ಯ ಸ್ವ ರೂಪ ಸ್ವರೂಪ ಆಧೀನ ಸ್ವಾಧೀನ ಇಚ್ಛೆ ಸ್ವೇಚ್ಛೆ ರಾಜ್ಯ ಸ್ವರಾಜ್ಯ ದೇಶ ಸ್ವದೇಶ ಆದರೆ ಇತರ ಕೆಲವು ಎರವಲಾಗಿ ಬಂದ ಪದಗಳನ್ನು ಪೂರ್ವ ಪ್ರತ್ಯಯ್ಯವಿರುವ ಪದಗಳೆಂದು ಹೇಳುವುದೇ ಒಳ್ಳೆಯದೆಂದು ತೋರುತ್ತದೆ ಉದಾಹರಣೆಗಾಗಿ ಪ್ರಖ್ಯಾತ ಪ್ರಯತ್ನ ಮೊದಲಾದವನ್ನು

ಖ್ಯಾತ ಯತ್ನ ಮೊದಲಾದವುಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳ ಮೊದಲನೆಯ ಅಂಗವಾದ ಪ್ರ ಎಂಬುದು ಒಂದು ಪೂರ್ವ ಪ್ರತ್ಯಯವಾಗಿ ಕಾಣಿಸಿಕೊಳ್ಳುತ್ತದೆ ಇದೇ ರೀತಿಯಲ್ಲಿ ವಿಖ್ಯಾತ ವಿವಾದ ವಿಜ್ಞಾನ ವಿನಾಶ ವಿಯೋಗ ಮೊದಲಾದವುಗಳನ್ನು ಖ್ಯಾತ ವಾದ ಜ್ಞಾನ ನಾಶ ಮೊದಲಾದವುಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳಲ್ಲೂ ವಿ ಎಂಬ ಮೊದಲನೆಯ ಅಂಗ ಪೂರ್ವ ಪ್ರತ್ಯಯವಾಗಿ ಕಾಣಿಸಿಕೊಳ್ಳುತ್ತದೆ ಕನ್ನಡದಲ್ಲಿ ಇವನ್ನು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳೆಂದು ಹೇಳುವುದು ಕಷ್ಟವಾದ ಕಾರಣ ಇವುಗಳಿಂದಾಗಿ ಕನ್ನಡದಲ್ಲಿ ಇಲ್ಲದ ಪೂರ್ವ ಪ್ರತ್ಯಯಗಳು ಎರವಲಿನಿಂದಾಗಿ ಬಂದಿವೆ ಎಂದು ಹೇಳಬೇಕಾಗುತ್ತದೆ اللہ



Part 49

Watch on YouTube

ಈ ಭಾಗ ಪುಸ್ತಕದ ಆ.ವಿ.ಆ ತಯಾರಿಕೆ ಮತ್ತು ಬಳಕೆ ಅನ್ನು ಆಧರಿಸಿದೆ.

ಕನ್ನಡ ಮತ್ತು ಸಂಸ್ಕೃತ ಪದಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕನ್ನಡದ ನಾಮಪದಗಳಿಗೆ ತಯಾರಿಕೆ ಮತ್ತು ಬಳಕೆ ಎಂಬುದಾಗಿ ಎರಡು ಭಿನ್ನ ಭಿನ್ನವಾದ ಅವಸ್ಥೆಗಳಿದ್ದು, ಈ ಪದಗಳು ಯಾವುದಾದರೊಂದು ಸಂದರ್ಭದಲ್ಲಿ ತಯಾರಾದ ಬಳಿಕ, ಬಳಕೆಗೆ ಬಂದು ಉಳಿದರೆ ಮಾತ್ರ ಭಾಷೆಯ ಪದಗಳೆಂದೆನಿಸಬಲ್ಲುವು (೧.೬.೧ ನೋಡಿ). ಈ ಕಾರಣಕ್ಕಾಗಿ, ಒಳರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಕಾಣಿಸುವ ಪ್ರತ್ಯಯವಿರುವ ನಾಮಪದ ಇಲ್ಲವೇ ಜೋಡುಪದಗಳೆಲ್ಲವೂ ಕನ್ನಡದಲ್ಲಿ ಭಾಷೆಯ ಪದಗಳಾಗುವುದಿಲ್ಲ. ಅಂತಹ ಪದಗಳು ಒಂದು ನಿಶ್ಚಿತವಾದ ಅರ್ಥದಲ್ಲಿ ರೂಢಿಗೆ ಬಂದಾಗ ಮಾತ್ರ ಅವು ಭಾಷೆಯ ಪದಗಳೆಂದೆನಿಸಬಲ್ಲುವು. ಇದಲ್ಲದೆ, ಭಾಷೆಯಲ್ಲಿ ರೂಢಿಗೆ ಬಂದಿರುವ…



Part 50

Watch on YouTube

ಈ ಭಾಗ ಪುಸ್ತಕದ ಆ.ವಿ.ಆ ತಯಾರಿಕೆ ಮತ್ತು ಬಳಕೆ ಅನ್ನು ಆಧರಿಸಿದೆ.

ಕನ್ನಡ ಮತ್ತು ಸಂಸ್ಕೃತ ಪದಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕನ್ನಡದ ನಾಮಪದಗಳಿಗೆ ತಯಾರಿಕೆ ಮತ್ತು ಬಳಕೆ ಎಂಬುದಾಗಿ ಎರಡು ಭಿನ್ನ ಭಿನ್ನವಾದ ಅವಸ್ಥೆಗಳಿದ್ದು, ಈ ಪದಗಳು ಯಾವುದಾದರೊಂದು ಸಂದರ್ಭದಲ್ಲಿ ತಯಾರಾದ ಬಳಿಕ, ಬಳಕೆಗೆ ಬಂದು ಉಳಿದರೆ ಮಾತ್ರ ಭಾಷೆಯ ಪದಗಳೆಂದೆನಿಸಬಲ್ಲುವು (೧.೬.೧ ನೋಡಿ). ಈ ಕಾರಣಕ್ಕಾಗಿ, ಒಳರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಕಾಣಿಸುವ ಪ್ರತ್ಯಯವಿರುವ ನಾಮಪದ ಇಲ್ಲವೇ ಜೋಡುಪದಗಳೆಲ್ಲವೂ ಕನ್ನಡದಲ್ಲಿ ಭಾಷೆಯ ಪದಗಳಾಗುವುದಿಲ್ಲ. ಅಂತಹ ಪದಗಳು ಒಂದು ನಿಶ್ಚಿತವಾದ ಅರ್ಥದಲ್ಲಿ ರೂಢಿಗೆ ಬಂದಾಗ ಮಾತ್ರ ಅವು ಭಾಷೆಯ ಪದಗಳೆಂದೆನಿಸಬಲ್ಲುವು. ಇದಲ್ಲದೆ, ಭಾಷೆಯಲ್ಲಿ ರೂಢಿಗೆ ಬಂದಿರುವ…



Part 51

Watch on YouTube

ಈ ಭಾಗ ಪುಸ್ತಕದ ಆ.೪.೧ ಪೂರ್ವಪ್ರತ್ಯಯಗಳು ಅನ್ನು ಆಧರಿಸಿದೆ.

ಸಂಸ್ಕೃತದಲ್ಲಿ ಪೂರ್ವಪ್ರತ್ಯಯ (ಉಪಸರ್ಗ) ಮತ್ತು ಪರಪ್ರತ್ಯಯಗಳೆಂಬ ಎರಡು ರೀತಿಯ ಪ್ರತ್ಯಯಗಳನ್ನೊಳಗೊಂಡಿರುವ ಪದಗಳಿದ್ದು, ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲೂ ಈ ಎರಡು ರೀತಿಯ ಪ್ರತ್ಯಯಗಳನ್ನು ಕಾಣಬಹುದು. ಆದರೆ ಮೇಲೆ (೮.೩.೨ರಲ್ಲಿ) ಸೂಚಿಸಿರು ವಂತೆ, ಕನ್ನಡದವೇ ಆದ ಪದಗಳಲ್ಲಿ ಪೂರ್ವಪ್ರತ್ಯಯಗಳ ಬಳಕೆಯಿಲ್ಲವಾದ ಕಾರಣ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಪದಗಳಲ್ಲೂ ಕೆಲವು ಪೂರ್ವ ಪ್ರತ್ಯಯಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳ ಹಾಗೆ ಬಳಕೆಗೆ ಬಂದಿವೆ, ಮತ್ತು ಅಂತಹ ಪ್ರತ್ಯಯಗಳನ್ನೊಳಗೊಂಡಿರುವ ಪದಗಳು ಜೋಡು ಪದಗಳ ಹಾಗೆ ಕಾಣಿಸುತ್ತವೆ. ಆದರೆ ಬೇರೆ ಕೆಲವು ಪೂರ್ವಪ್ರತ್ಯಯಗಳು ಪ್ರತ್ಯಯಗಳ ಹಾಗೆಯೇ ವರ್ತಿಸುತ್ತಿದ್ದು,…



Part 52

Watch on YouTube

Note: This transcript has not been cleaned and may contain errors.

ಪರ ಪ್ರತ್ಯಯಗಳು ಸಂಸ್ಕೃತದಿಂದ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಕಾಣಿಸುವ ಪರ ಪ್ರತ್ಯಯಗಳಲ್ಲಿ ತೆ ಇ ಯ ಮತ್ತು ಇಕ ಎಂಬವುಗಳು ಪ್ರಾಮುಖ್ಯವಾದವುಗಳು ಇದಲ್ಲದೆ ಲಿಂಗ ಭೇದವನ್ನು ಸೂಚಿಸುವ ಕೆಲವು ಪ್ರತ್ಯಯಗಳು ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಕಾಣಿಸುತ್ತವೆ ಈ ಪ್ರತ್ಯಯಗಳಲ್ಲಿ ಕೆಲವು ವನ್ನು ಪ್ರಾಮುಖ್ಯವಾಗಿ ಯ ಮತ್ತು ಇಕ ಎಂಬ ಪ್ರತ್ಯಯಗಳನ್ನು ಬಳಸಿದಾಗ ಪದಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ ಈ ಬದಲಾವಣೆಗಳನ್ನು ಕೆಳಗೆ ವಿವರಿಸಲಾಗಿದೆ ಒಂದು ತೆ ಪ್ರತ್ಯಯ ಈ ಪ್ರತ್ಯಯದ ಮೂಲಕ ನಾಮಪದಗಳು ಹೆಸರಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮವನ್ನು ಹೆಸರಿಸುವಂತಹ ಬೇರೊಂದು ನಾಮಪದವನ್ನು ತಯಾರಿಸಬಹುದು ಉದಾಹರಣೆಗಾಗಿ ಅಧ್ಯಕ್ಷ ಅಧ್ಯಕ್ಷ ಕೃತಜ್ಞ ಕೃತಜ್ಞತೆ ಅರ್ಹ ಅರ್ಹತೆ ಅಸ್ಪೃಶ್ಯ ಅಸ್ಪೃಶ್ಯತೆ ಯೋಗ್ಯ ಯೋಗ್ಯತೆ ತೀಕ್ಷ್ಣ ತೀಕ್ಷ್ಣತೆ ಅಧಿಕಾರ ಅಧಿಕಾರಿ ಆರೋಪ ಆರೋಪಿ ಅಪರಾಧ ಅಪರಾಧಿ

ವಿರಹ ವಿರಹಿ ವ್ಯಾಪಾರ ವ್ಯಾಪಾರಿ ಜೀವ ಜೀವಿ ಧನ ಧನಿ ಪ್ರಾಣ ಪ್ರಾಣಿ ರೋಗ ರೋಗಿ ದಾನ ದಾನಿ ವ್ಯಕ್ತಿಗಳನ್ನು ಗುರುತಿಸುವ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ಅಂತಹ ವ್ಯಕ್ತಿಗಳ ಗುಣಧರ್ಮವನ್ನು ಹೆಸರಿಸಲು ಸಾಧ್ಯವಿದೆ ಇದು ಈ ಪ್ರತ್ಯಯಕ್ಕೆ ಇರುವ ಎರಡನೆಯ ಬಳಕೆ ಉದಾಹರಣೆಗೆ ಅತೃಪ್ತ ಅತೃಪ್ತಿ ಆಸಕ್ತ ಆಸಕ್ತಿ ನಿವೃತ್ತ ನಿವೃತ್ತಿ ಭಕ್ತ ಭಕ್ತಿ ಅಶಕ್ತ ಅಶಕ್ತಿ ತೃಪ್ತ ತೃಪ್ತಿ ಈ ಎರಡನೆಯ ಬಳಕೆ ಯಲ್ಲಿ ಬರುವ ನಾಮಪದಗಳಲ್ಲಿ ಕೊನೆಯ ವ್ಯಂಜನವಾಗಿ ತಾರ ಬಂದಿರುವುದನ್ನು ಗಮನಿಸಬಹುದು ಹಾಗಾಗಿ ಈ ನಾಮಪದಗಳಲ್ಲಿ ವ್ಯಕ್ತಿಗಳನ್ನು ಗುರುತಿಸುವವುಗಳು ತ ಎಂಬ ಪ್ರತ್ಯಯದೊಂದಿಗೆ ಮತ್ತು ವ್ಯಕ್ತಿಗಳ ಗುಣಧರ್ಮವನ್ನು ಗುರುತಿಸುವವುಗಳು ತಿ ಎಂಬ ಪ್ರತ್ಯಯದೊಂದಿಗೂ ಬರುವವೆಂದು ಕೂಡ ಹೇಳಲು ಸಾಧ್ಯವಿದೆ ಇದೇ ರೀತಿಯಲ್ಲಿ ಇದಕ್ಕೆ ಹಿಂದೆ ಕೊಟ್ಟಿರುವ ನಾಮಪದಗಳಲ್ಲಿ

ವ್ಯಕ್ತಿ ವಸ್ತು ಮೊದಲಾದವನ್ನು ಗುರುತಿಸುವವುಗಳು ಅ ಎಂಬ ಪ್ರತ್ಯಯದೊಂದಿಗೂ ಮತ್ತು ಅಂತಹ ವ್ಯಕ್ತಿ ವಸ್ತು ಮೊದಲಾದವುಕ್ಕೆ ಸಂಬಂಧಿಸಿದವರನ್ನು ಗುರುತಿಸುವವುಗಳು ಈ ಎಂಬ ಪ್ರತ್ಯಯದೊಂದಿಗೂ ಬರುವೆಂದು ಕೂಡ ಹೇಳಲು ಸಾಧ್ಯವಿದೆ ಮೂರು ಯ ಪ್ರತ್ಯಯ ಈ ಪ್ರತ್ಯಯಕ್ಕೂ ಎರಡು ಪ್ರಾಮುಖ್ಯವಾದ ಬಳಕೆಗಳಿವೆ ಹೆಸರಿಸುವ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ಅವುಗಳಿಗೆ ಸಂಬಂಧಿಸಿರುವ ವಸ್ತು ವಿಷಯ ಇಲ್ಲವೇ ಗುಣಧರ್ಮ ಹೆಸರಿಸುವ ನಾಮಪದವನ್ನು ತಯಾರಿಸುವುದು ಈ ಪ್ರತ್ಯಯದ ಮೊದಲನೆಯ ಬಳಕೆ ಉದಾಹರಣೆಗೆ ಕವಿ ಕಾವ್ಯ ರಾಜ ರಾಜ್ಯ ಗ್ರಾಮ ಗ್ರಾಮ್ಯ ವೇದ ವೈದ್ಯ ದೇಶ ದೇಶ್ಯ ಚರಿತ್ರೆ ಚಾರಿತ್ರ್ಯ ಗುಣಧರ್ಮವನ್ನು ಸೂಚಿಸುವ ಗುಣಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ಅವು ಸೂಚಿಸುವ ಗುಣಧರ್ಮವನ್ನು ಹೆಸರಿಸುವಂತಹ ನಾಮಪದಗಳನ್ನು ತಯಾರಿಸುವುದು ಈ ಪ್ರತ್ಯಯದ ಎರಡನೆಯ ಬಳಕೆ ಉದಾಹರಣೆಗೆ ಪ್ರಧಾನ ಪ್ರಾಧಾನ್ಯ ಉಚಿತ

ಔಚಿತ್ಯ ಉನ್ನತ ಔನತ್ಯ ಕ್ರೂರ ಕ್ರೌರ್ಯ ಶಿಥಿಲ ಶೈತಿಲ್ಯ ಸ್ವತಂತ್ರ ಸ್ವಾತಂತ್ರ್ಯ ಪ್ರಮುಖ ಪ್ರಾಮುಖ್ಯ ಸಮರ್ಥ ಸಾಮರ್ಥ್ಯ ಮೇಲೆ ಕೊಟ್ಟಿರುವ ಗುಣಪದಗಳಲ್ಲಿ ಕೆಲವು ಉದಾಹರಣೆಗೆ ತರುಣ ಸಮರ್ಥ ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಲ್ಲಿವೆಯಾದ ಕಾರಣ ಅಂತಹ ಸಂದರ್ಭಗಳಲ್ಲಿ ಒಂದು ನಾಮಪದದಿಂದ ಇನ್ನೊಂದು ನಾಮಪದವನ್ನು ತಯಾರಿಸುವ ಮೊದಲನೆಯ ಬಳಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿದೆ ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತದಲ್ಲಿ ಇಂತಹ ಗುಣಪದ ನಾಮಪದ ಭೇದವಿಲ್ಲವಾದ ಕಾರಣ ಇದು ಕನ್ನಡದಲ್ಲಿ ಕಾಣಿಸಿಕೊಳ್ಳುವ ವೈಶಿಷ್ಟ್ಯ ಮಾತ್ರ ಎಂಬುದನ್ನಿಲ್ಲಿ ಗಮನಿಸಬಹುದು ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನು ಸೇರಿಸಿ ನಾಮಪದಕ್ಕೆ ಯಾವ ಹೊಸ ಅರ್ಥವು ಸೇರಿಕೊಳ್ಳುವುದಿಲ್ಲ ಉದಾಹರಣೆಗೆ ಪದ ಪದ್ಯ ಪ್ರಾಂತ ಪ್ರಾಂತ್ಯ ನಾಲ್ಕು ಇಕ ಪ್ರತ್ಯಯ ಈ ಪ್ರತ್ಯಯ ಪ್ರಾಮುಖ್ಯವಾಗಿ ನಾಮಪದಗಳಿಂದ ಗುಣಪದಗಳನ್ನು ತಯಾರಿಸುವುದಕ್ಕಾಗಿ ಕನ್ನಡದಲ್ಲಿ ಬಳಕೆಯಾಗುತ್ತದೆ

ಆದರೆ ಕೆಲವು ನಾಮಪದಗಳು ಮಾತ್ರ ಈ ಪ್ರತ್ಯಯ ಸೇರಿದಾಗಲೂ ನಾಮಪದಗಳಾಗಿಯೇ ಉಳಿದುಕೊಳ್ಳುತ್ತವೆ ಸಂಸ್ಕೃತದಲ್ಲಿ ಈ ಪ್ರತ್ಯಯದ ಮೂಲಕ ತಯಾರಾಗುವ ಪದಗಳೆಲ್ಲವೂ ನಾಮಪದಗಳೇ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೇ ನಾಮಪದಗಳು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಗುಣಧರ್ಮ ಒಂದನ್ನು ಅಂತಹ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಗುಣಪದಗಳು ಸೂಚಿಸುತ್ತವೆ ಉದಾಹರಣೆಗೆ ಸಮಾಜ ಸಾಮಾಜಿಕ ಲೋಕ ಲೌಕಿಕ ಶಿಕ್ಷಣ ಶೈಕ್ಷಣಿಕ ಧರ್ಮ ಧಾರ್ಮಿಕ ನಿಸರ್ಗ ನೈಸರ್ಗ ದೇಹ ದೈಹಿಕ ಯಂತ್ರ ಯಾಂತ್ರಿಕ ವರ್ಷ ವಾರ್ಷಿಕ ವಿವಾಹ ವೈವಾಹಿಕ ವ್ಯವಹಾರ ವ್ಯಾವಹಾರಿಕ ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನು ಒಳಗೊಂಡ ಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗಬಲ್ಲವು ಮತ್ತು ಗುಣಪದಗಳಾಗಿಯೂ ಬಳಕೆಯಾಗಬಲ್ಲವು ಉದಾಹರಣೆಗೆ ರಸ ರಸಿಕ ಮಂತ್ರ ಮಾಂತ್ರಿಕ ಧರ್ಮ ಧಾರ್ಮಿಕ ಪೂರ್ವ ಪೂರ್ವಿಕ ವಿಮಾನ ವೈಮಾನಿಕ ವೇದ ವೈದಿಕ

ಪ್ರಮಾಣ ಪ್ರಾಮಾಣಿಕ ತರ್ಕ ತಾರ್ಕಿಕ ವೈದಿಕನ ವೈದಿಕನಿಗೆ ಎಂಬಂತಹ ವಿಭಕ್ತಿ ಪ್ರತ್ಯಯವನ್ನು ಒಳಗೊಂಡಿರುವ ರೂಪಗಳಲ್ಲಿ ವೈದಿಕ ಎಂಬ ಪದ ನಾಮಪದವಾಗಿಯೂ ಮತ್ತು ವೈದಿಕ ವೃತ್ತಿ ಎಂಬ ಪದಗುಚ್ಚದಲ್ಲಿ ಅದು ಗುಣಪದವಾಗಿಯೂ ಬಂದಿರುವುದನ್ನು ಕಾಣಬಹುದು ಇತರ ಪದಗಳ ಬಳಕೆಯು ಹೀಗೆಯೇ ಇದೆ ಐದು ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳು ಮೇಲೆ ವಿವರಿಸಿದ ಪ್ರತ್ಯಯಗಳು ಮಾತ್ರವಲ್ಲದೆ ಗಂಡಸು ಹೆಂಗಸು ಎಂಬ ಅರ್ಥ ವ್ಯತ್ಯಾಸವನ್ನು ತೋರಿಸುವ ಕೆಲವು ಪದಯುಗ್ಮಗಳು ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿದ್ದು ಅ ಗಂಡಸು ಮತ್ತು ಈ ಹೆಂಗಸು ಎಂಬ ಎರಡು ಪ್ರತ್ಯಯಗಳಲ್ಲಿ ಕೊನೆಗೊಳ್ಳುವವು ಅವುಗಳಲ್ಲಿ ಪ್ರಾಮುಖ್ಯವಾದವುಗಳು ತರುಣ ತರುಣಿ ನಟ ನಟಿ ಲೇಖಕ ಲೇಖಕಿ ಸೇವಕ ಸೇವಕಿ ಬಾಲಕ ಬಾಲಕಿ ಶಿಕ್ಷಕ ಶಿಕ್ಷಕಿ ಸುಂದರ ಸುಂದರಿ ಭಿಕ್ಷುಕ ಭಿಕ್ಷುಕಿ ಈ ಅರ್ಥ ವ್ಯತ್ಯಾಸವನ್ನು ತೋರಿಸುವ

ಬೇರೆಯೂ ಕೆಲವು ಪ್ರತ್ಯಯಗಳನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿ ಸನ್ಯಾಸಿ ಸನ್ಯಾಸಿನಿ ಅಧ್ಯಕ್ಷ ಅಧ್ಯಕ್ಷಿಣಿ ಅಧಿಕಾರಿ ಅಧಿಕಾರಿನಿ ಕಥೆಗಾರ ಗಾರ್ತಿ ಬುದ್ಧಿವಂತ ಬುದ್ಧಿವಂತೆ ವೈದ್ಯ ವೈದ್ಯೆ ಮೊದಲಾದ ಪದಯುಗ್ಮಗಳಲ್ಲಿ ಕಾಣಬಹುದು



Part 53

Watch on YouTube

ಈ ಭಾಗ ಪುಸ್ತಕದ ೮.೫: ಕ್ರಿಯಾಪದಗಳು ಅನ್ನು ಆಧರಿಸಿದೆ.

ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಇದಕ್ಕೆ ಬದಲಾಗಿ, ಅವುಗಳಿಂದ ತಯಾರಾದ ನಾಮಪದಗಳಿಗೆ ಕನ್ನಡದ ಇಸು ಎಂಬ ಪ್ರತ್ಯಯವನ್ನು ನೇರವಾಗಿ ಸೇರಿಸಿ ಇಲ್ಲವೇ ಅವುಗಳ ಕೊನೆಯಲ್ಲಿ ಕಾಣಿಸುವ ಪ್ರತ್ಯಯದ ಬದಲು ಈ ಪ್ರತ್ಯಯ ವನ್ನು ಬಳಸಿ, ಕ್ರಿಯಾಪದಗಳನ್ನು ತಯಾರಿಸಬೇಕಾಗುತ್ತದೆ. ಉದಾಹರಣೆಗಾಗಿ, ಅನೆ ಇಲ್ಲವೇ ಅಣೆ ಎಂಬ ಪ್ರತ್ಯಯದಲ್ಲಿ ಕೊನೆ ಗೊಳ್ಳುವ ಹಲವು ನಾಮಪದಗಳು ಆ ಪ್ರತ್ಯಯದ ಬದಲು ಇಸು ಎಂಬ ಪ್ರತ್ಯಯದಲ್ಲಿ ಕೊನೆಗೊಂಡಾಗ ನಾಮಪದಗಳಾಗಿ ಕಾಣಿಸಿಕೊಳ್ಳುತ್ತವೆ. ಉದಾ: <table> <tbody> <tr> <td>ಆಲೋಚಿಸು</td> <td>ಆಲೋಚನೆ</td> <td>ಆಕರ್ಷಿಸು</td> <td>ಆಕರ್ಷಣೆ</td> </tr> <tr>…



Part 54

Watch on YouTube

Note: This transcript has not been cleaned and may contain errors.

ಜೋಡು ಪದಗಳು ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಜೋಡು ಪದಗಳು ಎರವಲಾಗಿ ಬಂದಿವೆ ಮೇಲೆ 82 ರಲ್ಲಿ ಸೂಚಿಸಿರುವಂತೆ ಈ ಪದಗಳ ಒಣ ರಚನೆಯನ್ನು ಕನ್ನಡ ದಲ್ಲಿ ಇವುಗಳ ಅಂಗಗಳಾಗಿ ಬರುವ ಪದಗಳಿಗೆ ಎಂತಹ ಬಳಕೆಗಳಿವೆ ಎಂಬುದರ ಆಧಾರದ ಮೇಲೆ ಹೇಳಬೇಕಲ್ಲದೆ ಸಂಸ್ಕೃತ ವ್ಯಾಕರಣಗಳಲ್ಲಿ ಇವಕ್ಕೆ ಎಂತಹ ಒಳರಚನೆಯನ್ನು ಕಲ್ಪಿಸಿಕೊಡಲಾಗಿದೆ ಎಂಬುದರ ಆಧಾರದ ಮೇಲೆ ಹೇಳುವುದು ಸರಿಯಲ್ಲ ಈ ಕಾರಣಕ್ಕಾಗಿ ಕನ್ನಡದಲ್ಲಿ ಕಾಣಿಸುವ ಕೆಲವು ಎರವಲಾಗಿ ಬಂದ ಪದಗಳು ಸಂಸ್ಕೃತದಲ್ಲಿ ಜೋಡು ಪದಗಳಾಗಿವೆ ಆದರೂ ಕನ್ನಡದಲ್ಲಿ ಅವುಗಳ ಅಂಗಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳಾಗಿ ಬಳಕೆಯಲ್ಲಿ ಇಲ್ಲವಾದರೆ ಅವನ್ನು ಜೋಡು ಪದಗಳೆಂದು ಕರೆಯದೆ ಒಳ ರಚನೆ ಇಲ್ಲದ ಪದಗಳೆಂದೆ ಕರೆಯಬೇಕಾಗುತ್ತದೆ ಒಳ ರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರುವಂತಹ ಎರವಲಾಗಿ ಬಂದ ಪದಗಳು ಕನ್ನಡದಲ್ಲಿ ಪ್ರಾಮುಖ್ಯವಾಗಿ ಎರಡು

ವರ್ಗಗಳಲ್ಲಿ ಕಾಣಿಸುತ್ತವೆ ಮೊದಲನೆಯ ಅಂಗ ನಾಮಪದವಾಗಿರುವವುಗಳು ಮತ್ತು ಮೊದಲನೆಯ ಅಂಗ ಗುಣಪದವಾಗಿರುವವುಗಳು ಎಂಬುದಾಗಿ ಮೇಲೆ 265 ರಲ್ಲಿ ಕನ್ನಡದ ಜೋಡುಪದಗಳನ್ನು ಹೆಸರಿಸಿದ ಹಾಗೆಯೇ ಇವನ್ನು ಹೆಸರಿಸಲು ಸಾಧ್ಯವಿದೆ ಇವುಗಳಲ್ಲಿ ಮೊದಲನೆಯ ಅಂಗ ನಾಮಪದವಾಗಿರುವ ಜೋಡು ಪದಗಳು ಅವುಗಳ ಎರಡು ಅಂಗಗಳನ್ನು ಸಂಬಂಧಕ ಪ್ರತ್ಯಯದ ಮೂಲಕ ಜೋಡಿಸಿದವುಗಳಾಗಿರುತ್ತವೆ ಮತ್ತು ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದಗಳು ಅಂತಹ ಗುಣಪದವನ್ನು ನಾಮಪದದ ಎಡಕ್ಕೆ ನಿಲ್ಲಿಸಿ ತಯಾರಿಸಿದವುಗಳಾಗಿರುತ್ತವೆ ಉದಾಹರಣೆಗೆ ಒಂದು ಮೊದಲನೆಯ ಅಂಗ ನಾಮಪದವಾಗಿರುವ ಜೋಡು ಪದಗಳು ಮಾನಹಾನಿ ಹಾನಿ ಮೂರ್ತಿ ಪೂಜೆ ಮೂರ್ತಿಯ ಪೂಜೆ ಲಗ್ನ ಪತ್ರಿಕೆ ಲಗ್ನದ ಪತ್ರಿಕೆ ವಿದ್ಯಾಭ್ಯಾಸ ವಿದ್ಯೆಯ ಅಭ್ಯಾಸ ಯುಗಾದಿ ಯುಗದ ಆದಿ ಸೂರ್ಯ ಗ್ರಹಣ ಸೂರ್ಯನ ಗ್ರಹಣ ದೇಹಾವಸಾನ ದೇಹದ ಅವಸಾನ ಗ್ರಾಮ ದೇವತೆ ಗ್ರಾಮದ ದೇವತೆ ಪಾದ ಪೂಜೆ

ಪಾದದ ಪೂಜೆ ಗ್ರಂಥ ಕರ್ತೃ ಗ್ರಂಥದ ಕರ್ತೃ ಚಂದ್ರೋದಯ ಚಂದ್ರ ಉದಯ ಜಗದ್ಗುರು ಜಗತ್ತಿನ ಗುರು ಎರಡು ಮೊದಲನೆಯ ಅಂಗ ಗುಣಪದವಾಗಿರುವ ಜೋಡು ಪದಗಳು ಕೃಷ್ಣ ಸರ್ಪ ಪರಮಾತ್ಮ ಪರಲೋಕ ವಕ್ರ ಬುದ್ಧಿ ಮೂಲವ್ಯಾಧಿ ಮಹಾನಗರ ಶುಭಕಾರ್ಯ ಗಾಡ ನಿದ್ರೆ ದೀರ್ಘಾಯುಷ್ಯ ದೃಢ ಮನಸ್ಸು ಪೂರ್ಣ ವಿರಾಮ ಮೂಲ ನಿವಾಸಿ ಮಂದ ಬುದ್ಧಿ ಸದ್ಗುಣ ಈ ಜೋಡು ಪದಗಳಲ್ಲಿ ಕೆಲವಕ್ಕೆ ಆದ ಎಂಬ ಕ್ರಿಯಾ ರೂಪವನ್ನು ಬಳಸಿ ವಿಗ್ರಹ ವಾಕ್ಯವನ್ನು ಹೇಳಲು ಸಾಧ್ಯವಿದೆ ಉದಾಹರಣೆಗೆ ದೃಢವಾದ ಮನಸ್ಸು ಗಾಡವಾದ ನಿದ್ರೆ ಆದರೆ ಇಂತಹ ಒಳ ರಚನೆಯಲ್ಲೂ ಮೊದಲನೆಯ ಅಂಗವಾಗಿ ಒಂದು ಗುಣಪದವೇ ಕಾಣಿಸಿಕೊಳ್ಳುತ್ತದೆ ಅದು ವಿಗ್ರಹ ವಾಕ್ಯದಲ್ಲಿ ನೇರವಾಗಿ ನಾಮಪದದೆರು ಬರುವ ಬದಲು ಆಖ್ಯಾತ ಸ್ಥಾನದಲ್ಲಿ ಬಂದಿದೆ ಅಷ್ಟೇ ಎರಡಕ್ಕಿಂತ ಜಾಸ್ತಿ ಪದಗಳಿಂದ

ತಯಾರಾಗಿರುವ ಜೋಡು ಪದಗಳ ಬಳಕೆ ಕನ್ನಡದಲ್ಲಿ ಬಹಳ ಅಪರೂಪ ಆದರೆ ಸಂಸ್ಕೃತದಲ್ಲಿ ಇಂತಹ ಜೋಡು ಪದಗಳು ಹೇರಳವಾಗಿದ್ದು ಅವುಗಳಲ್ಲಿ ಕೆಲವು ಕನ್ನಡಕ್ಕೂ ಎರವಲಾಗಿ ಬಂದಿವೆ ಇವು ಸಾಮಾನ್ಯವಾಗಿ ಎರಡೆರಡು ಪದಗಳನ್ನು ಸೇರಿಸುವಂತಹ ಎರಡು ಅಥವಾ ಜಾಸ್ತಿ ಸ್ಥರಗಳಲ್ಲಿ ತಯಾರಾಗುತ್ತವೆ ಉದಾಹರಣೆಗಾಗಿ ಅರಿಷಡ್ ವರ್ಗ ಎಂಬ ಪದವನ್ನು ಪರಿಶೀಲಿಸಬಹುದು ಮೊದಲನೆಯ ಸ್ಥರದಲ್ಲಿ ಷಟ್ ಆರು ಮತ್ತು ವರ್ಗ ಗುಂಪು ಎಂಬೆರಡು ಪದಗಳನ್ನು ಸೇರಿಸಿ ಷಡ್ ವರ್ಗ ಎಂಬ ಪದವನ್ನು ತಯಾರಿಸಿ ಅನಂತರ ಎರಡನೆಯ ಸ್ಥರದಲ್ಲಿ ಆ ಪದಕ್ಕೆ ಅರಿ ಶತ್ರು ಎಂಬ ಪದವನ್ನು ಸೇರಿಸಿ ಈ ಪದವನ್ನು ತಯಾರಿಸಲಾಗಿದೆ ಎಂದು ಹೇಳಲು ಸಾಧ್ಯವಿದೆ ಇದೇ ರೀತಿಯಲ್ಲಿ ಕುಶಾಗ್ರಮತಿ ಎಂಬ ಪದವನ್ನು ಮೊದಲಿಗೆ ಕುಶಾಗ್ರ ಎಂಬ ಪದವನ್ನು ತಯಾರಿಸಿ ಅನಂತರ ಎರಡನೇ ಅದಕ್ಕೆ ಮತಿ ಎಂಬ

ಪದವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ ಎಂದು ಹೇಳಲು ಸಾಧ್ಯವಿದೆ ಸಾರಾಂಶ ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನು ಕನ್ನಡದ ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ಅವಕ್ಕೆ ಸಂಸ್ಕೃತ ವ್ಯಾಕರಣಗಳಲ್ಲಿ ಕೊಟ್ಟಿರುವ ಒಳ ರಚನೆಗಳನ್ನೇ ಕೊಟ್ಟು ವಿವರಿಸುವುದು ರೂಢಿ ಆದರೆ ಇದು ಸರಿಯಲ್ಲ ಈ ಪದಗಳಿಗೆ ಕನ್ನಡದಲ್ಲಿ ಕನ್ನಡದವೇ ಆದ ಒಳ ರಚನೆಗಳಿವೆ ಸಂಸ್ಕೃತದಲ್ಲಿ ಪೂರ್ವ ಪ್ರತ್ಯಯವಿರುವ ಪದಗಳು ಕನ್ನಡದಲ್ಲಿ ಜೋಡು ಪದಗಳಾಗಿ ಕಾಣಿಸಿಕೊಳ್ಳಬಹುದು ಇಲ್ಲವೇ ಪ್ರತ್ಯಯವಿರುವವುಗಳಾಗಿ ಕಾಣಿಸಿಕೊಳ್ಳಬಹುದು ಪರ ಪ್ರತ್ಯಯವಿರುವ ಪದಗಳನ್ನು ಸಂಸ್ಕೃತದಲ್ಲಿ ಕೃತ್ ಮತ್ತು ತದ್ದಿತ ಪ್ರತ್ಯಯವಿರುವವುಗಳೆಂದು ವಿಂಗಡಿಸುವುದು ರೂಢಿ ಆದರೆ ಕನ್ನಡದ ಮಟ್ಟಿಗೆ ಈ ವಿಂಗಡಣೆಗಿಂತಲೂ ನಾಮಪದ ಇಲ್ಲವೇ ಗುಣಪದಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸಿ ನಾಮಪದವನ್ನು ತಯಾರಿಸಲಾಗಿದೆಯೇ ಅಥವಾ ಗುಣಪದವನ್ನು ತಯಾರಿಸಲಾಗಿದೆಯೇ ಎಂಬ ವಿಷಯದ ಆಧಾರದ ಮೇಲೆ ಈ ಪದಗಳನ್ನು

ವರ್ಣಿಸುವುದೇ ಹೆಚ್ಚು ಉಪಯುಕ್ತವಾದ ವಿಧಾನ ಜೋಡು ಪದಗಳನ್ನು ಸಂಸ್ಕೃತದಲ್ಲಿ ಪ್ರಾಮುಖ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಪ್ರಧಾನ ಪದ ಯಾವುದು ಎಂದರೆ ಕೇಂದ್ರಬಿಂದು ಯಾವ ಅಂಗದ ಮೇಲೆ ಬೀಳುತ್ತದೆ ಎಂಬ ವಿಷಯದ ಆಧಾರದ ಮೇಲೆ ತತ್ಪುರುಷ ಬಹುವ್ರೀಹಿ ಅವ್ಯಯಿ ಭಾವ ದ್ವಂದ್ವ ಮೊದಲಾದ ಸಮಾಸಗಳಾಗಿ ವಿಂಗಡಿಸುವುದು ರೂಢಿ ಆದರೆ ಕನ್ನಡಕ್ಕೆ ಎರಲಾಗಿ ಬಂದಿರುವ ಸಂಸ್ಕೃತದ ಜೋಡು ಪದಗಳನ್ನು ಈ ರೀತಿ ವಿಂಗಡಿಸುವ ಬದಲು ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವೇ ಅಥವಾ ಗುಣಪದವೇ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದೇ ಹೆಚ್ಚು ತೃಪ್ತಿಕರವಾದ ವಿಧಾನ اللہ



ಅಧ್ಯಾಯ 9 — ಮುಕ್ತಾಯ

Conclusion

Part 55

Watch on YouTube

ಈ ಭಾಗ ಪುಸ್ತಕದ ಅಧ್ಯಾಯ ಒಂಬತ್ತು ಅನ್ನು ಆಧರಿಸಿದೆ.

ಮುಕ್ತಾಯ ಪ್ರತಿಯೊಂದು ಭಾಷೆಗೂ ಅದರದೇ ಆದ ವ್ಯಾಕರಣ ಪರಂಪರೆಯೊಂದು ಬೆಳೆದು ಬರುವ ಅವಶ್ಯಕತೆಯಿದೆ. ಇಲ್ಲವಾದರೆ ಅದರ ವ್ಯಾಕರಣದ ಮೇಲೆ ಬರೆದ ಬರಹಗಳು ಆ ಭಾಷೆಯ ಮೂಲಸೂತ್ರಗಳನ್ನು ಪ್ರತಿಬಿಂಬಿಸುವ ಬದಲು ಬೇರೆ ಭಾಷೆಯ ಮೂಲಸೂತ್ರಗಳನ್ನು ಅದರ ಮೇಲೆ ಹೇರುವಂತಾಗುತ್ತದೆ. ಇಂತಹ ಮೂಲಸೂತ್ರಗಳು ಬೇರೊಂದು ಭಾಷಾಕುಟುಂಬಕ್ಕೆ ಸೇರಿರುವ ಭಾಷೆ ಯವಾಗಿದ್ದರೆ ಅವುಗಳಿಂದಾಗುವ ತೊಂದರೆ ಇನ್ನಷ್ಟು ಹೆಚ್ಚಿನದು. ಕನ್ನಡ ವ್ಯಾಕರಣದ ಮೇಲೆ ಬರೆದ ಬರಹಗಳಲ್ಲಿ ಹೆಚ್ಚಿನವೂ ಇಂತಹ ತೊಂದರೆಗೆ ಸಿಲುಕಿಕೊಂಡಿವೆ. ಅವು ಪ್ರಾಮುಖ್ಯವಾಗಿ ಸಂಸ್ಕೃತ ಭಾಷೆಯ ವ್ಯಾಕರಣ ಪರಂಪರೆಯಿಂದ ಪ್ರಭಾವಿತವಾಗಿರುವುದೇ ಇದಕ್ಕೆ ಕಾರಣ. ಸಂಸ್ಕೃತ ಭಾಷೆ ಇಂಡೋ-ಆರ್ಯನ್ ಎಂಬ…